೧೦೨ ಕಿ.ಮೀ. ಉದ್ದದ ರಸ್ತೆಗೆ ೨ ಕಿ.ಮೀ. ಮಾತ್ರ ಕಾಂಕ್ರೀಟ್‌ಚರಂಡಿ ವ್ಯವಸ್ಥೆ!
Posted by JAYAKIRANA Kirana on Monday, 20 May 2013 | 0 comments | Leave a comment...
ಮಾಜಿ ಸಿಎಂ ಮೊಲಿ ಸತತ ಆರು ಬಾರಿ ಪ್ರತಿನಿಧಿಸಿದ ಕ್ಷೇತ್ರದ ಕಥೆ-ವ್ಯಥೆ
ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು ೧೦೨ ಕಿ.ಮೀ ಉದ್ದದ ರಸ್ತೆ ಇದೆ. ಇವುಗಳಲ್ಲಿ ೯೫ ಕಿ.ಮೀ ಪುರಸಭಾ ಅಧೀನಕ್ಕೊಳಪಟ್ಟರೆ, ೨ ಕಿ.ಮೀ ರಾಷ್ಟ್ರೀಯ ಹೆದ್ದಾರಿ ಇಲಾ ಖೆಗೆ ಒಳಪಟ್ಟಿದೆ. ೫ ಕಿ.ಮೀ ಜಿ.ಪಂ. ಹಿಡಿತದಲ್ಲಿದೆ. ಇಷ್ಟು ಉದ್ದದ ರಸ್ತೆ ಇದ್ದರೂ ಮಳೆನೀರು ಹರಿದು ಹೋಗಲು ಕಾಂಕ್ರೀಟೀಕರಣ ಚರಂಡಿ ವ್ಯವಸ್ಥೆ ಇರುವುದು ಕೇವಲ ೨ ಕಿ.ಮೀ ದೂರದವರೆಗೆ ಮಾತ್ರ. ಕೆಲವಡೆಗಳಲ್ಲಿ ತಾತ್ಕಾಲಿಕವಾಗಿ ತೋಡುಗಳನ್ನು ನಿರ್ಮಿಸಿದರೆ, ಉಳಿದೆಡೆಗಳಲ್ಲಿ ಊಳು ತುಂಬಿಹೋಗಿರುವುದರಿಂದ ತೋಡು ಗಳ ನೆಲಸಮವಾಗಿದೆ. ರಸ್ತೆ ಮೇಲ್ಬಾ ಗದಲ್ಲಿ ಮಳೆನೀರು ಹರಿದುಹೋಗು ತ್ತಿರುವುದರಿಂದ ಹಾಕಲಾಗಿದ್ದ ಡಾಂಬರು ಕಿತ್ತು ಹೋಗಿ ರಸ್ತೆ ದುಸ್ಥಿತಿಗೆ ತಲುಪಲು ಪ್ರಮುಖ ಕಾರಣವಾಗಿದೆ.
ಇದು ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿರುವ ಚರಂಡಿ ದುರವಸ್ಥೆಯ ಇಣುಕು ನೋಟವಷ್ಟೇ. ರಾಜ್ಯದ ಮುಖ್ಯಮಂತ್ರಿ ಪಟ್ಟಕ್ಕೇರಲು ಅನುವು ಮಾಡಿಕೊಟ್ಟಂತಹ ಕ್ಷೇತ್ರದ ಮುಖ್ಯ ಕೇಂದ್ರಭಾಗ ಕಾರ್ಕಳ ಪುರಸಭೆಯಾ ಗಿದೆ. ಮಾತ್ರವಲ್ಲದೇ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಇಲ್ಲಿ ಅಧಿಕಾರ ನಡೆಸಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಅಭಿವೃದ್ಧಿ ಮಂತ್ರ ರಾಜಕಾರಣಿಗಳು ಬಾಯಿಂದ ಕೇಳಿಬರುತ್ತಿದೆಯಾದರೂ ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಂಡಿಲ್ಲವೆಂದರೂ ತಪ್ಪಾಗಲಾರದು. ಇದುಲೋಕಸತ್ಯವಾಗಿದೆ.
ರಸ್ತೆ ಅಗಲೀಕರಣವಾಗಲಿಲ್ಲ ಚರಂಡಿ ಕಾಮಗಾರಿ ಪೂರ್ಣಗೊಳ್ಳಲಿಲ್ಲ
ಪೊನ್ನುರಾಜ್ ಅವರು ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕಾರ್ಕಳ ಪುರಸಭಾ ವ್ಯಾಪ್ತಿಯ ಪ್ರಮುಖ ರಸ್ತೆ ಎಂದೇ ಗುರುತಿಸಲಾ ಗಿದ್ದ ಅನಂತ ಶಯನದಿಂದ ಸಾಲ್ಮರ ತನಕ ರಸ್ತೆ ಅಗಲೀಕರಣಕ್ಕೆ ಪೀಠಿಕೆ ಹಾಕಿದ್ದರು. ಇದನ್ನು ಕಾರ್ಯಗತಗೊಳಿಸಲು ಮುಂದಾಗಿ ವಿಫಲ ಗೊಂಡವರೆಂದರೆ ಜಿಲ್ಲಾಧಿಕಾರಿ ಹೇಮಲತಾ. ಪೊನ್ನುರಾಜ್ ಅವರ ಪತ್ನಿಯಾಗಿರುವ ಹೇಮಲತಾ ಕಾನೂನು ಚೌಕಟ್ಟಿ ನೊಳಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾ ಗದೇ ಭೂಮಾಲಕರೊಂದಿಗೆ ಒಡಂಬಡಿಕೆ ಮಾಡಿರು ವುದೇ ಈ ಎಲ್ಲಾ ಸಮಸ್ಯೆಗೆ ಕಾರಣವಾಗಿದೆ.
ಸ್ವಇಚ್ಛೆಯಿಂದ ಜಾಗ ಬಿಟ್ಟುಕೊಡುವ ಸೌಜನ್ಯಕ್ಕೆ ಮುಂದಾಗದೇ ಇದ್ದ ಸ್ಥಳದ ವಾರಿಸುದಾರರು ಹೆಸರಿಗಷ್ಟೇ ಎರಡರಿಂದ ಐದು ಅಡಿ ಜಾಗ ಬಿಟ್ಟುಕೊಟ್ಟು ಅದರ ಪಕ್ಕ ದಲ್ಲಿಯೇ ಬಹುಮಹಡಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಕೆಲ ಮಂದಿ ಸ್ಥಳವಾರಿಸುದಾರು ಒಂದು ತುಂಡು ಜಾಗ ವನ್ನು ಬಿಟ್ಟುಕೊಡದೇ ಇರುವುದರಿಂದ ರಸ್ತೆ ಅಗಲೀಕರಣ ಯೋಜನೆ ಮೊಟಕುಗೊಳ್ಳಲು ಕಾರಣವಾಗಿದೆ. ಇದರಿಂದ ರಸ್ತೆ ಅಭಿವೃದ್ಧಿಯಾಗಲಿಲ್ಲ. ಚರಂಡಿ ಪೂರ್ಣಗೊಳಲಿಲ್ಲ.
ಅರೆಬರೆ ಕಾಮಗಾರಿಗೆ ಜಿಲ್ಲಾಡಳಿತವೇ ಹೊಣೆ!
ಜಾಗದ ಮಾಲಕರು ಒಂದಿಷ್ಟು ಜಾಗ ಬಿಟ್ಟು ಕೊಟ್ಟಿರುವುದರಿಂದ ಹಾಗೂ ಕೆಲವೆಡೆಗಳಲ್ಲಿ ಹಳೆಯದಾದ ಕಟ್ಟಡ ಕಡವಿ ನೂತನ ಕಟ್ಟದ ನಿರ್ಮಿಸಿರುವುದರಿಂದಾಗಿ ತೀರಾ ಹಳೆಯದಾಗಿದ್ದ ಚರಂಡಿಯು ಅಸ್ತವ್ಯಸ್ಥ ಗೊಂಡಿ ತ್ತಲ್ಲದೆ ಕಳೆದ ಮಳೆಗಾಲ ಸಂದರ್ಭದಲ್ಲಿ ನಗರದಲ್ಲಿ ಕೃತಕ ನೆರೆ ಹಾವಳಿ ತಲೆದೋರಿತ್ತು. ಇದೇ ಸಂದರ್ಭದಲ್ಲಿ ಕಾರ್ಕಳ ಪುರಸಭೆಯು ಚರಂಡಿ ಕಾಮಗಾರಿ ನಡೆಸಲು ಮುಂದಾಗಿತ್ತು. ೨ ಕೋಟಿ ರೂಪಾಯಿ ವೆಚ್ಚದಲ್ಲಿ ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದು ನಿರ್ಮಿತಿ ಕೇಂದ ಸಂಸ್ಥೆ.
ಆಯಾಯ ಜಿಲ್ಲಾಧಿಕಾರಿಗಳು ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿರುತ್ತಾರೆ. ಹೆಸರಿಗಷ್ಟೇ ನಿರ್ಮಿತಿ ಕೇಂದ್ರ ಸಂಸ್ಥೆಯು ಕಾಮಗಾರಿ ನಡೆಸುತ್ತಿದೆ ಎಂಬುದು ಕಂಡು ಬಂದರೂ, ಸ್ಥಳೀಯ ಕಂಟ್ರಾಕ್ಟರ್‌ದಾರರಿಗೆ ನೇರವಾಗಿ ಕಾಮಗಾರಿಯ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರ ಸಂಸ್ಥೆ ವಹಿಸಿಕೊಡುತ್ತದೆ. ಜಿಲ್ಲಾಧಿಕಾರಿ ಅಧೀನದಲ್ಲಿ ಸಂಸ್ಥೆ ಇರುವು ದರಿಂದರಿಂದ ಕಾಮಗಾರಿಯ ಬಗ್ಗೆ ತಲೆಕೆಡಿಸಿಕೊಳ್ಳಲು ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿ ಮುಂದಾಗುವುದಿಲ್ಲ. ಆದುದರಿಂದಲೇ ಕಾಮಗಾರಿಯ ಗುಣಮಟ್ಟ ತೃಪ್ತಿಕರ ವಾಗಿರುವುದಿಲ್ಲ ಎಂಬ ಆರೋಪವು ಜನಸಾಮಾನ್ಯರಿಂದ ಕೇಳಿಬರುತ್ತಿದೆ.
ಇಲ್ಲೂ ಅದೇ ನಡೆದಿರುತ್ತದೆ. ಮೂರು ಕಿ.ಮೀ. ಉದ್ದದ ಚರಂಡಿ ನಿರ್ಮಾಣದ ಕಾಮಗಾರಿಯು ಕಳೆದ ಒಂದು ವರ್ಷದಿಂದ ಆಮೆನಡಿಗೆಯಲ್ಲಿ ಸಾಗುತ್ತಾ ಬಂದಿದೆ. ಜಾಗದ ಮಾಲಿಕರು ತಾವು ಸ್ವಇಚ್ಛೆಯಂತೆ ಜಾಗವನ್ನು ರಸ್ತೆ ಅಗ ಲೀಕರಣಕ್ಕೆ ಪುರಸಭೆಗೆ ಬಿಟ್ಟುಕೊಟ್ಟಿದ್ದೇವೆಂದು ಒಪ್ಪಂದ ಪತ್ರದಲ್ಲಿ ಲಿಖಿತವಾಗಿ ದಾಖಲಿಸಿಕೊಟ್ಟಲ್ಲಿ ಮಾತ್ರವೇ ಅಂತಹ ಜಾಗದಲ್ಲಿ ಕಾಮಗಾರಿ ಮುಂದುವರಿದಿದೆ. ಸುಮಾರು ೧.೪ ಕಿ.ಮೀ ಮಾತ್ರವೇ ಕಾಂಕ್ರಿಟೀಕರಣದ ಚರಂಡಿ ನಿರ್ಮಾಣಗೊಂಡಿದೆ. ಉಳಿದ ೧.೬ ಕಿ.ಮೀ ಉದ್ದ ದಲ್ಲಿ ಕಾಮಗಾರಿ ನಡೆಯಲು ಬಾಕಿ ಇದೆ. ಕಾಂಕ್ರಿಟೀಕರಣ ಚರಂಡಿಯ ಒಂದು ತುದಿಯು ಮತ್ತೊಂದು ತುದಿಯನ್ನು ಜೋಡಿಸದೇ ಹೋದುದರಿಂದ ಮಳೆ ನೀರು ಹರಿದು ಹೋಗದೇ ಶೇಖರಣೆಗೊಂಡು ಸಾಂಕ್ರಮಿಕ ರೋಗ ಹರಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ರೂಪುರೇಷೆ ಇಲ್ಲದೇ ಇರುವಂತಹ ಯೋಜನೆಗಳು ಅನುಷ್ಠಾನಗೊಂಡರೇ ಅದ್ದರಿಂದ ಅಗುವಂತಹ ತೊಂದ ರೆಗಳಿಗೆ ಕಾರ್ಕಳ ನಗರದಲ್ಲಿ ಕೈಗೊಂಡಿರುವ ಚರಂಡಿ ಕಾಮಗಾರಿ ತಾಜಾ ಉದಾಹರಣೆ.
ಸಂಪರ್ಕ ಕಲ್ಪಿಸಲಾಗುತ್ತದೆ: ಪುರಸಭಾ ಮುಖ್ಯಾಧಿಕಾರಿ
ಚರಂಡಿ ನಿರ್ಮಾಣದಲ್ಲಿ ತೃಪ್ತಿಕರವಿಲ್ಲದಿದ್ದರೂ, ಈ ಸಾಲಿನ ಮಳೆಗಾಲದೊಳಗಾಗಿ ಮಳೆ ನೀರು ಹರಿದು ಹೋಗಲು ಸಮರ್ಪಕ ರೀತಿಯಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಕೆಲವೆಡೆಗಳಲ್ಲಿ ಜಾಗ ತೆರವುಗೊಳಿಸದೇ ಇರುವುದರಿಂದ ಚರಂಡಿ ಹಾದು ಹೋಗುವ ಮಧ್ಯೆಭಾಗದಲ್ಲಿ ಅಂಗಡಿಗಳು ಇದ್ದುದರಿಂದ ಅಂಗಡಿಯ ಮುಂಭಾಗದಲ್ಲಿ ಚರಂಡಿ ನಿರ್ಮಿಸಿ ಸಂಪರ್ಕ ಕಲ್ಪಿಸುವುದರೊಂದಿಗೆ ಸಮಸ್ಯೆ ಇತ್ಯರ್ಥಪಡಿಸುವ ಯೋಜನೆ ಇದೆ.



You can subscribe by e-mail to receive news updates and breaking stories.