ಉಡುಪಿ: ಹ್ಯಾಟ್ರಿಕ್ ಗೆಲುವಿನತ್ತ ಬಿಜೆಪಿ ಸುಧಾಕರ ಶೆಟ್ಟರ ಪರ ಬದಲಾದ ಟ್ರೆಂಡ್


ಉಡುಪಿ:
ಪ್ರತಿಷ್ಟಿತ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಬಹುಕೋಟಿ ಕೈಗಾರಿಕೋದ್ಯಮಿ ಪ್ರಮೋದ್ ಮಧ್ವರಾಜ್ ಹಾಗೂ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಹೊಟೇಲ್ ಉದ್ಯಮಿ ಬಿ.ಸುಧಾಕರ ಶೆಟ್ಟಿಯವರ ನಡುವೆ ಇಲ್ಲಿ ಜಿದ್ದಾಜಿದ್ದು ಏರ್ಪಟ್ಟಿದೆ.
ಆರಂಭಕ್ಕೆ ಇಲ್ಲಿ ಕಾಂಗ್ರೆಸ್ ಪರ ವಾದ ಟ್ರೆಂಡ್ ಇತ್ತಾದರೂ, ಬದಲಾದ ಪರಿಸ್ಥಿತಿಯಲ್ಲಿ ಅಂತಿಮ ಈ ಹಂತದಲ್ಲಿ ಟ್ರೆಂಡ್ ಬಿಜೆಪಿ ಪರವಾಗಿರುವುದು ವಿಶೇಷ. ಈ ಟ್ರೆಂಡ್ ಇದೇ ರೀತಿ ಇನ್ನೆರಡು ದಿನ ಮುಂದುವರಿದದ್ದೇ ಆದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿದಂತಾಗಲಿದೆ.
 ಬಿಜೆಪಿಯ ಸುಧಾಕರ ಶೆಟ್ಟಿ ಕ್ಷೇತ್ರದ ಮತದಾರರಿಗೆ ಅಪರಿಚಿತರೇನೂ ಅಲ್ಲ. ದಶಕದ ಹಿಂದೆ ಪಕ್ಷದಿಂದ ಸ್ಪರ್ಧಿಸಿ ಸೋತವರು. ಎರಡನೇ ಬಾರಿ ಪಕ್ಷೇತರ ರಾಗಿಯೂ ಸ್ಪರ್ಧಿಸಿ ಸೋಲುಂಡವರು. ಎರಡೂ ಸಲದ ಸೋತವರು, ಮೂರನೇ ಬಾರಿಯಾದರೂ ಶೆಟ್ಟರು  ಗೆಲ್ಲಬೇಕೆಂಬ ಅನುಕಂಪ ಮತದಾರ ರಲ್ಲಿ ಕಂಡುಬರುತ್ತಿದೆ. ಸುಧಾಕರ ಶೆಟ್ಟರ ಮೇಲೆ ಹೀಗೊಂದು ಅನುಕಂಪವಿದ್ದರೆ, ಇನ್ನೊಂದೆಡೆ  ಶಾಸಕ ಕೆ.ರಘುಪತಿ ಭಟ್ಟರ ಮೇಲಿನ ಅನುಕಂಪವೂ ಶೆಟ್ಟರಿಗೆ ವರದಾನವಾಗಿ ಪರಿಣಮಿಸಿದೆ. ಎರಡು ಬಾರಿ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮ ಗಳನ್ನು ಮಾಡಿರುವ ರಘುಪತಿ ಭಟ್ಟರು ಮೂರನೇ ಬಾರಿ ಅಭ್ಯರ್ಥಿಯಾಗುವ ಅಂತಿಮ ಹಂತದಲ್ಲಿ ಅವರ ವಿರೋಧಿಗಳು ಅವರದ್ದು ಎನ್ನಲಾದ ಸಿಡಿಯೊಂದನ್ನು ಬಹಿರಂಗಪಡಿಸಿದರು. ಇದರಿಂದಾಗಿ ಪಕ್ಷ ಅವರಿಗೆ ಮರಳಿ ಸ್ಪರ್ಧಿಸುವ ಅವಕಾಶ ವನ್ನು ನಿರಾಕರಿಸಬೇಕಾಗಿ ಬಂತು. ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರದಲ್ಲಿ ಭಟ್ಟರು ಜನಪ್ರತಿನಿಧಿಯಾಗಿ ಮಾಡಿದ ಸಾಧನೆ ಕಡಿಮೆಯದ್ದೇನೂ ಅಲ್ಲ. ಈ ಹತ್ತೂ ವರ್ಷಗಳಲ್ಲಿ ಭಟ್ಟರು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಲ್ಲಿನ ಒಂದೇ ಒಂದು ಭ್ರಷ್ಟಾಚಾರದ ಪ್ರಕರಣವನ್ನೂ ಬೊಟ್ಟು ಮಾಡಿ ತೋರಿಸುವ ಕನಿಷ್ಟ ಕೆಲಸವನ್ನಾಗಲೀ, ಭಟ್ಟರ ಭ್ರಷ್ಟಾಚಾರದ ವಿರುದ್ಧ ಒಂದು ಸಶಕ್ತ ಹೋರಾಟವನ್ನು ಸಂಘಟಿಸುವ ಪ್ರಯತ್ನವನ್ನಾಗಲೀ ಮಾಡಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವೇ ಆಗಿರಲಿಲ್ಲ. ಜಿಲ್ಲಾಧಿಕಾರಿಯವರ ನೇರ ಉಸ್ತುವಾರಿಯಲ್ಲಿ ನಡೆದ ಮಲ್ಪೆಯ ರೇವ್‌ಪಾರ್ಟಿಯನ್ನು ಭಟ್ಟರ ಕುತ್ತಿಗೆಗೆ ಕಟ್ಟುವ ಕೆಲಸವನ್ನು  ಮಾತ್ರ ಕಾಂಗ್ರೆಸ್ ಮಾಡಿತು. ಸೆಕ್ಸ್ ಸಿಡಿಯನ್ನು ಮತದಾರರಿಗೆ ವ್ಯವಸ್ಥಿತವಾಗಿ ತಲುಪಿಸುವ ಕೆಲಸವನ್ನೂ ಕಾಂಗ್ರೆಸ್ ನಾಯಕರು ವ್ಯಾಪಕವಾಗಿ ಮಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷವಾಗಿ ಮಾಡಬೇಕಾದ ಯಾವೊಂದು ಕೆಲಸವನ್ನೂ ಮಾಡದೆ, ಇಂಥ ಕೆಲಸಕ್ಕೆ ಬಾರದ ಕೆಲಸಗಳನ್ನಷ್ಟೇ ಕಾಂಗ್ರೆಸ್ ನಾಯಕರು ಮಾಡಿದರು. ಇದೆಲ್ಲವೂ ಕಾಂಗ್ರೆಸ್‌ಗೆ ಲಾಭವಾಗುವುದರ ಬದಲಾಗಿ ನಷ್ಟವಾಗಿ ಪರಿಣಮಿಸಿದೆ. ಇದು ಇದೀಗ ಬಿಜೆಪಿಯ ಸುಧಾಕರ ಶೆಟ್ಟಿಯವರಿಗೆ ಸಹಾನುಭೂತಿ ಯನ್ನು ಸೃಷ್ಟಿಸಿದೆ. ವಿಧಾನ ಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಪ್ರಮೋದ್ ಮಧ್ವರಾಜ್ ಉಡುಪಿ ಕ್ಷೇತ್ರದ ಮತದಾರರಿಗೆ ಲಕ್ಷಾಂತರ ರು ಹಣ ಮತ್ತು ಲಕ್ಷಾಂತರ ರು. ಮೌಲ್ಯದ ಸಾಮಾಗ್ರಿಗಳನ್ನು ಹಂಚಿದರು ಎಂಬುದು ಇದೀಗ ಬಯಲಾಗುತ್ತಿರುವುದು. ಹಾಗೇ ಇದೇ ವಿಷಯ ಇದೀಗ ಕ್ಷೇತ್ರದಾದ್ಯಂತ ಮತದಾರರ ನಡುವೆ ಚರ್ಚೆಗೀಡಾಗುತ್ತಿರುವುದು ಪ್ರಮೋದ್‌ಗೆ ಮೈನೆಸ್ ಆಗಿ ಪರಿಣಮಿಸಿದೆ. ಮತಯಾಚನೆ ಮಾಡುತ್ತಾ ಹೋದೆಡೆಗಳಲ್ಲಿ ಪ್ರಮೋದರು, ತಾನು ಹಿಂದೆ ಹಣ ಯಾರಿಗೆ ಕೊಟ್ಟಿದ್ದರೋ, ಅಂಥವರು ಸಿಕ್ಕಾಗಲೆಲ್ಲಾ, ಹಣ ಕೊಟ್ಟದ್ದನ್ನು ನೆನಪಿಸಿ, ಮತ ಯಾಚಿಸಿದ್ದು, ಇದು ಹಣ ಪಡೆದುಕೊಂಡವರಿಗೆ ಪ್ರಮೋದರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಸ್ವಾಭಿಮಾನೀ ಮತದಾರರು ಪ್ರಮೋದರ ಈ ರೀತಿಯ ಅನುಚಿತ ವರ್ತನೆಯಿಂದ ನೊಂದುಕೊಂಡಿರುವುದು ಬೆಳಕಿಗೆ ಬಂದಿದೆ. ಹೇಗಾದರೂ ಮಾಡಿ ಒಂದು ಸಲ ಎಂಎಲ್‌ಎ ಆಗಲೇಬೇ ಕೆಂಬ ಹಠಕ್ಕೆ ಬಿದ್ದಿರುವ ಪ್ರಮೋದ್ ಮದ್ವರಾಜ್ ಚುನಾವಣೆ ನೀತಿ ಸಂಹಿತೆ ಜ್ಯಾರಿಯಾದ ಬಳಿಕ ಹಣ ಹಂಚೋದು ಕಷ್ಟವಾದೀತು ಎಂಬುದನ್ನು ಅರಿತು, ಓಟಿಗಾಗಿಯೇ ಕೋಟ್ಯಂತರ ರು. ಹಣ ಮತ್ತು ವಸ್ತುಗಳನ್ನು ಮತದಾರರಿಗೆ ಹಂಚಿದರು. ಮುಖ್ಯವಾಗಿ ಮತ್ತು ಹೆಚ್ಚಾಗಿ ಕ್ರಿಕೆಟ್ ಟೂರ್ನಿ ಮತ್ತು ಮನೋರಂ ಜನಾ ಕಾರ್ಯಕ್ರಮಗಳಿಗೇ ಹಣ ಹಂಚಿದರೆನ್ನಲಾಗಿದೆ. ನಗರಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಹುಮತ ಪಡೆಯಲು ಸಹಕಾರಿಯಾದುದು ಇದಲ್ಲದೆ ಮತ್ತೇನೂ ಅಲ್ಲ ಎಂಬ ವಾದ ಕೇಳಿಬರುತ್ತಿದೆ. ನಗರ ಸಭೆಯ ಬಿಜೆಪಿ ಆಡಳಿತದ ವಿರುದ್ಧ ವಿರೋಧ ಪಕ್ಷವಾಗಿ ಏನೊಂದೂ ಹೋರಾಟವನ್ನು ಹಮ್ಮಿಕೊಳ್ಳದ ಕಾಂಗ್ರೆಸ್‌ಗೆ ಮತದಾರರು ಒಲವು ವ್ಯಕ್ತಪಡಿಸಿದರು ಅಂದರೆ, ಅದಕ್ಕೆ ಮತದಾರರಿಗೆ ಬಿಜೆಪಿ ಮೇಲಿದ್ದ ಅಸಮಾಧಾನವೇ ಕಾರಣವೆಂದು ವ್ಯಾಖ್ಯಾನಿಸಲಾಗುತ್ತಿದೆ. ನಗರಸಭೆಯ ಬಿಜೆಪಿ ಸದಸ್ಯರ ದುರಹಂಕಾರಕ್ಕೆ ಮತದಾರರು ಅಂದು ಪಾಠ ಕಲಿಸಿದರು. ಇದೀಗ ಕೇಳಿ ಬರುತ್ತಿರುವ ಮತ್ತೊಂದು ಮಾತೆಂದರೆ, ಪ್ರಮೋದ ಮಧ್ವರಾಜರಿಗೆ ಶಾಸಕನಾಗುವ ಮೊದಲೇ ದುರಹಂಕಾರ ಬಂದಿದೆ, ಇನ್ನು ಶಾಸಕನಾದರೆ ಹೇಗಿರಬಹುದು ಎಂದು !
 ವಿಶ್ವಕರ್ಮ ಸಮುದಾಯದ ಬಹುತೇಕ ಮತದಾರರು ಬಿಜೆಪಿ ಕಡೆ ಒಲವು ಉಳ್ಳವರು. ಬಿಜೆಪಿ ಓಟನ್ನು ಒಡೆಯುವ ಉದ್ಧೇಶದಿಂದಲೇ ಪ್ರಮೋದ್ ವಿಶ್ವಕರ್ಮ ಸಮಾಜದ ಮುಖಂಡ ಅಲೆವೂರು ಯೋಗೀಶ್ ಆಚಾರ್ಯರನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದರೆನ್ನುವ ಸಂಶಯವೂ ಹಲವರಲ್ಲಿದೆ.
 ಆದರೆ, ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರು ಈ ಬಾರಿ ತಮ್ಮದೇ ಸಮುದಾಯಕ್ಕೆ ಸೇರಿದ ತಮ್ಮ ಪಕ್ಷ ಎಂಬ ನೆಲೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ದ ಆನೆ ಚಿಹ್ನೆಯಲ್ಲಿ ಸ್ಪರ್ಧಿಸುತ್ತಿರುವ ನ್ಯಾಯವಾದಿ ಮಂಜುನಾಥರಿಗೆ ದೊಡ್ಡ ಪ್ರಮಾಣದಲ್ಲಿ ಮತ ಹಾಕುವ ಸ್ವಾಭಿಮಾನ ಪ್ರದರ್ಶಿಸುವ ಸಾಧ್ಯತೆ ಹೆಚ್ಚಿದೆ. ದಲಿತ ಸಂಘರ್ಷ ಸಮಿತಿಯ ವಿವಿಧ ಸಂಘಟನೆಗಳು ಬಿಎಸ್ಪಿಗೆ ಈಗಾಗಲೇ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ವಿವಿಧ ಇದೇ ರೀತಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಎಸ್‌ಡಿಪಿಐ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ವುಮನ್ಸ್ ಫ್ರೆಂಟ್ ಆಫ್ ಇಂಡಿಯಾ ಮೊದಲಾದ ಸಂಘ ಟನೆಗಳು ಈ ಬಾರಿ ಕಾಂಗ್ರೆಸ್‌ಗೆ ಪಾಠ ಕಲಿಸಲು ಧೃಡ ನಿರ್ಧಾರ ಕೈಗೊಂಡಿದ್ದು, ಇವುಗಳು ಬಿಎಸ್‌ಪಿಗೆ ಅಧಿಕೃತವಾಗಿಯೇ ಬೆಂಬಲ ವ್ಯಕ್ತಪಡಿಸಿವೆ,
 ಬಂಟ ಸಮುದಾಯದ ಬಹು ದೊಡ್ಡ ಪ್ರಮಾಣದ ಓಟು ಸುಧಾಕರ ಶೆಟ್ಟರಿಗೆ ಸಿಗೋದರಲ್ಲಿ ಯಾವುದೇ ಅನುಮಾನ ಇಲ್ಲ. ಬಿಲ್ಲದ ಸಮಾಜದ ಮತ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ವಿಭಜನೆಯಾಗಿ ಹೋಗಲಿದೆ. ಇದರಲ್ಲಿ ಬಹುಪಾಲು ಮತ ಜೆಡಿಎಸ್‌ನ ಅಭ್ಯರ್ಥಿ ಬಾರ್ಕೂರು ಸತೀಶ್ ಪೂಜಾರಿಗೆ ಬೀಳುವುದು ಗ್ಯಾರಂಟಿ. ಮೊಗವೀರರು ಈ ಹಿಂದಿನಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದವರು. ಮೊಗವೀರ ಮುಂದಾಳು ಯಶಪಾಲ್ ಸುವರ್ಣ ಬಿಜೆಪಿಯಲ್ಲಿ ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿರುವು ದರಿಂದ ಸಹಜವಾಗಿ ಇವರ ಮತಗಳು ವ್ಯಾಪಕವಾಗಿ ಬಿಜೆಪಿಗೆ ಲಭಿಸಲಿದೆ. ಇನ್ನುಳಿದ ಬ್ರಾಹ್ಮಣ, ಜಿಎಸ್‌ಬಿ,  ಆರ್‌ಎಸ್‌ಬಿ ಮತಗಳು ಸಹಜವಾಗಿಯೇ ಬಿಜೆಪಿ ಪಾಲಾಗಲಿದೆ. ತಾಯಿ ಮನೋರಮಾ ಮದ್ವರಾಜ್ ಅವರೇ ಇದುವರೆಗೂ ಮಗ ಪ್ರಮೋದ್ ಪರವಾಗಿ ಮತಯಾಚನೆ ಮಾಡದಿರುವುದು, ಭಟ್ಟರ ಸಿಡಿಯ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ ಎಂಬ ಶಂಕೆ ಮತದಾರರಲ್ಲಿ ವ್ಯಾಪಕವಾಗಿ ಹರಡಿರುವುದು, ವಿರೋದ ಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್ ನಾಯಕರು ಸಂಪೂಣ್ವಾಗಿ ಸೋತಿರುವುದು, ಅನೇಕ ದಲಿತ ಹಾಗೂ ಇತರ ಸಮುದಾಯಕ್ಕೆ ಸೇರಿದ  ಬಡವರು ದೌರ್ಜನ್ಯಕ್ಕೆ ಒಳಗಾದಾಗ ಪ್ರಮೋದ್ ಸಹಿತ ಕಾಂಗ್ರೆಸ್ ನಾಯಕರು ದೌರ್ಜನ್ಯ ನಡೆಸಿದವರ ಪರವಾಗಿ ನಿಂತು ತೆರೆಮರೆಯಲ್ಲಿ ಕೆಲಸ ಮಾಡಿದ್ದು ಇತ್ಯಾದಿ ಅನೇಕ ವಿದ್ಯಮಾನಗಳು ಈ ಬಾರಿ ಪ್ರಮೋದ್ ಮಧ್ವರಾಜರ ಹ್ಯಾಟ್ರಿಕ್ ಸೋಲಿಗೆ ಕಾರಣಗಳಾಗುವ ಸಾಧ್ಯತೆ ಇದೆ.

,

0 comments

Write Down Your Responses