ವಿಂಬಲ್ಡನ್ ಟೆನಿಸ್: ಹೆವಿಟ್‌ಗೆ ಟಿಸೊಂಗಾ ಆಘಾತ; ಸಾನಿಯಾ ಜೋಡಿ ಮುನ್ನಡೆ
ಲಂಡನ್: ಪ್ರತಿಷ್ಟಿತ ವಿಂಬಲ್ಡನ್ ಓಪನ್ ಟೂರ್ನಿಯ ದ್ವಿತೀಯ ದಿನದಲ್ಲಿ ಕೂಡ ಹಲವಾರು ದಿಗ್ಗಜ ಆಟಗಾರರು ಮುನ್ನಡೆ ಸಾಧಿಸಿದ್ದಾರೆ. ಮುಂಬರುವ ಲಂಡನ್ ಒಲಿಂಪಿಕ್ಸ್‌ಗೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದುಕೊಂಡಿರುವ ಸಾನಿಯಾ ಮಿರ್ಜಾ ಡಬಲ್ಸ್‌ನಲ್ಲಿ ಸಹಆಟಗಾರ ಮಾಟೆಕ್ ಜೊತೆ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇನ್ನುಳಿದಂತೆ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ, ಅಮೆರಿಕಾದ ಸೆರೆನಾ ವಿಲಿಯಮ್ಸ್, ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಇಂಗ್ಲೆಂಡ್ ಆಂಡಿ ಮರ್ರೆ ಸೇರಿದಂತೆ ಹಲವರು ಎರಡನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಇನ್ನು ಎರಡನೇ ದಿನದಲ್ಲಿ ಅಚ್ಚರಿಯ ಫಲಿತಾಂಶವೆಂದರೆ ಆಸ್ಟ್ರೇಲಿಯಾ ಲೇಟನ್ ಹೆವಿಟ್ ಸೋಲು. ಫ್ರಾನ್ಸ್‌ನ ವಿಲ್ಫ್ರೆಡ್ ಟಿಸೊಂಗಾ ವಿರುದ್ಧ ೬-೩, ೬-೩ ಹಾಗೂ ೬-೪ರ ಸೋಲು ಕಾಣುವ ಮೂಲಕ ನಿರ್ಗಮಿಸಿದರು.
ಇನ್ನು ವೀನಸ್ ವಿಲಿಯಮ್ಸ್ ಮೊದಲ ಸುತ್ತಿನಲ್ಲೇ ಆಘಾತ ಕಂಡರೂ ಸೆರೆನಾ ಮಾತ್ರ ದ್ವಿತೀಯ ಸುತ್ತಿಗೇರಿದರು. ಸೆರೆನಾಗೆ ಜೆಕ್‌ನ ಬಾರ್ಬರಾ ವಿರುದ್ಧ ೬-೨, ೬-೪ರ ಗೆಲುವು. ಎದುರಾಳಿ ಜೋಡಿ ಕುಂದ್ರತ್ಸೇವಾ ಹಾಗೂ ಸ್ಪೇಪನ್ ಜೋಡಿಯ ವಿರುದ್ಧ ಸಾನಿಯಾ-ಮಾಟೆಕ್ ೬-೪, ೬-೨ರ ನೇರ ಅಂತರದಲ್ಲಿ ಗೆಲ್ಲುವ ಮೂಲಕ ಶುಭಾರಂಭಗೈದರು. ಪೆಟ್ರಾ ಕೂಡ ಮುನ್ನಡೆದಿದ್ದಾರೆ.
ಅಕ್‌ಗುಲ್ ಅಮನ್‌ಮುರುಡೊವಾ ವಿರುದ್ಧ ೬-೪, ೬-೪ರಲ್ಲಿ ಗೆಲುವು ಸಾಧಿಸಿದರು. ಇನ್ನು ಮೂರನೇ ವಿಂಬಲ್ಡನ್‌ನತ್ತ ಕಣ್ಣಿಟ್ಟಿರುವ ನಡಾಲ್ ಬ್ರಿಜಿಲ್‌ನ ಎದುರಾಳಿ ಥೋಮಜ್ ವಿರುದ್ಧ ೭-೬, ೬-೨, ೬-೩ರ ಅಂತರದಲ್ಲಿ ಶುಭಾರಂಭ ಮಾಡಿದರು. ರಶ್ಯಾದ ನಿಕೊಲಾಸ್ ಡೆವ್ಯಡೆಂಕೊ ವಿರುದ್ಧ ೬-೧, ೬-೧, ೬-೪ರ ಅತ್ಯುತ್ತಮ ಜಯ ಸಾಧಿಸಿದ ಇಂಗ್ಲೆಂಡ್ ಮರ್ರೆ ಕೂಡ ತಾನು ಕೂಡ ವಿಂಬಲ್ಡನ್ ಗೆಲ್ಲುವ ರೇಸ್‌ನಲ್ಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
Tagged with
tnews
ಯೂರೋಕಪ್: ಇಂದು ಪ್ರಥಮ ಸೆಮಿಫೈನಲ್
ಕೀವ್: ಯೂರೋಕಪ್‌ನಲ್ಲಿ ಇಂದು ಪ್ರಥಮ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ನೆರೆಹೊರೆಯ ದೇಶಗಳಾದ ವಿಶ್ವಕಪ್ ಚಾಂಪಿಯನ್ಸ್ ಸ್ಪೇನ್ ಹಾಗೂ ಚಾಕಚಕ್ಯತೆಯ ಆಟಗಾರ ಕ್ರಿಸ್ತಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ನಡುವೆ ರೋಚಕ ಹಣಾಹಣಿ ನಡೆಯಲಿದೆ. ಎರಡೂ ತಂಡಗಳು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅದನ್ನು ಉಪಾಂತ್ಯದ ಪಂದ್ಯದಲ್ಲೂ ಮುಂದುವರೆಸುವ ಇರಾದೆಯಲ್ಲಿದೆ.
೨೦೦೮ರ ಯೂರೋಕಪ್ ಟೂರ್ನಿಯನ್ನು ಗೆದ್ದ ಆಟವನ್ನೇ ಇಲ್ಲಿಯೂ ಪ್ರದರ್ಶಿಸುವಲ್ಲಿ ಸ್ಪೇನ್ ಇರಾದೆ ಹೊಂದಿದ್ದರೆ ಅತ್ತ ಎದುರಾಳಿ ತಂಡಗಳಿಗೆ ಅಚ್ಚರಿಯ ಸೋಲುಣಿಸಿ ಅಂತಿಮ ನಾಲ್ಕರ ಘಟ್ಟರ ಹಂತಕ್ಕೇರಿ ರುವ ಪೋರ್ಚುಗಲ್ ಕೂಡ ತಾನೇನು ವಿಶ್ವಚಾಂಪಿಯನ್ಸ್‌ಗಳಿಗೆ ಕಡಿಮೆ ಇಲ್ಲ ಎಂಬುದನ್ನು ತೋರಿ ಸಲು ಸನ್ನದ್ದವಾಗಿದೆ. ಮುಖ್ಯವಾಗಿ ಪೋರ್ಚುಗಲ್ ತಂಡದಲ್ಲಿ ಸ್ವತಹ ನಾಯಕ ಕ್ರಿಸ್ತಿಯಾನೊ ರೊನಾಲ್ಡೊ ರಂಥ ಆಟಗಾರನಿರುವುದು ಅದಕ್ಕೆ ಹೆಚ್ಚಿನ ನಿರೀಕ್ಷೆಯನ್ನು ತಂದಿದೆ. ಅಲ್ಲದೆ ನಾನಿ, ಬ್ರೋನೋ ಆಲ್ವಿಸ್, ಪೆಪೆ, ಪೋಸ್ಟಿಗಾ ಕೂಡ ಯಾವುದೇ ಸಂದರ್ಭದಲ್ಲೂ ಪಂದ್ಯದ ಗತಿಯನ್ನು ಬದಲಾಯಿಸಬಲ್ಲ ಸಾಮರ್ಥ ಹೊಂದಿ ದ್ದಾರೆ. ಫ್ಯಾಬಿಯೊ ಕೂಡ ಅತ್ಯುತ್ತಮ ಆಟಗಾರನಾಗಿದ್ದು, ತನ್ನ ಸಾಮರ್ಥ ಪ್ರದರ್ಶಿಸುವಲ್ಲಿ ತುದಿಗಾಲಲ್ಲಿ ನಿಂತಿ ದ್ದಾರೆ. ಅಲ್ಲದೆ ತಂಡ ಶಿಸ್ತಿನ ಆಟವನ್ನು ಆಡುತ್ತಿದ್ದು, ಇದೇ ಯಶಸ್ಸಿನ ಗುಟ್ಟೆಂದರೆ ತಪ್ಪಿಲ್ಲ. ಇನ್ನು ಸ್ಪೇನ್ ಘಟಾನುಘಟಿ ಆಟಗಾರರಿಂದಲೇ ತುಂಬಿರುವ ತಂಡ. ಪಂದ್ಯದಲ್ಲಿ ಗೆಲ್ಲುವ ಫೆವರೇಟ್‌ಗಳೆನ್ನ ಬಹುದು. ಒಂದರ್ಥದಲ್ಲಿ ತಂಡಕ್ಕೆ ಮಿಡ್‌ಫೀಲ್ಡರ್‌ಗಳ ಆಟವೇ ಪ್ರಧಾನವೆನ್ನ ಬಹುದು. ೨೦೧೦ರ ವಿಶ್ವಕಪ್ ಫೈನಲ್ ನಲ್ಲಿ ಮಿಂಚಿದ್ದ ಆಂಡ್ರೆ ಇನಿಯೆಸ್ಟಾ, ಕ್ಷಾವಿ ಹರ್ನಾಂಡೆಜ್, ಸೆಸ್ ಫ್ಯಾಬ್ರಿ ಗಾಸ್, ಕ್ಷಾವಿ ಅಲೋನ್ಸೊ ಹಾಗೂ ಡೇವಿಡ್ ಸಿಲ್ವಾ ತಂಡದ ಪ್ರಮುಖ ಆಟಗಾರರು. ಫಾವರ್ಡ್‌ನಲ್ಲಿ ಫರ್ನಾಂಡೋ ಟೋರಸ್, ನೆಗ್ರೆಡೊ ಪ್ರಮುಖ ಟ್ರಂಪ್‌ಕಾರ್ಡ್‌ಗಳಾಗಿದ್ದಾರೆ. ಅಲ್ಲದೆ ತಂಡಕ್ಕೆ ವಿಶ್ವಶ್ರೇಷ್ಠ ಗೋಲ್ ಕೀಪರ್ ಎಂದೇ ಬಣ್ಣಿಸಲಾಗುವ ಐಕಾಸ್ ಕ್ಯಾಸಿಲ್ಲಾಸ್ ಎದುರಾಳಿಗಳಿಗೆ ಸಿಂಹಸ್ವಪ್ನರಾಗಬಹುದು. ಎರಡೂ ತಂಡವನ್ನು ಹೋಲಿಸಿದರೆ ಸ್ಪೇನ್ ಗೆಲ್ಲುವ ತಂಡವೆಂದು ಹೇಳಿದರೂ ಅಚ್ಚರಿಯ ಫಲಿತಾಂಶವನ್ನು ಒಂದು ವೇಳೆ ಪೋರ್ಚುಗಲ್ ನೀಡಿದರೆ ಪರಮಾಶ್ಚರ್ಯ ಪಡಬೇಕಿಲ್ಲ. ಒಟ್ಟಿನಲ್ಲಿ ಅಭಿಮಾನಿಗಳಿಗೆ ಮಾತ್ರ ಉತ್ತಮ ಮನೊರಂಜನೆ ಒದಗಿಸುವುದರಲ್ಲಿ ಸಂಶಯವಿಲ್ಲ.
Tagged with
tnews
ವಿಕಾಸ್ ದಾಳಿಗೆ ನೇಪಾಳ ಧೂಳೀಪಟ
ಕ್ವಾಲಾಲಂಪೂರ್: ವಿಕಾಸ್ ಮಿಶ್ರಾ ನಡೆಸಿದ ಮಾರಕ ಬೌಲಿಂಗ್ ದಾಳಿಗೆ ಕಂಗೆಟ್ಟ ನೇಪಾಳ ಇಲ್ಲಿ ನಡೆ ಯುತ್ತಿರುವ ಅಂಡರ್-೧೯ ವಿಶ್ವಕಪ್ ನಿಂದ ಹೊರಬಿದ್ದಿದೆ. ಅತ್ತ ಡಕ್ ವರ್ತ್ ಲೂಹಿಸ್ ನಿಯಮದ ಪ್ರಕಾರ ೮೧ ರನ್‌ಗಳ ಭರ್ಜರಿ ಗೆಲುವು ಸಾಧಿಸಿ ರುವ ಭಾರತ ಟೂರ್ನಿಯ ಸೆಮಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ೪೫.೨ ಓವರ್‌ಗಳಲ್ಲಿ ೧೭೬ ರನ್‌ಗಳಿಗೆ ಸರ್ವಪತನಗೊಂಡಿತು. ಆದರೆ ಮಳೆ ಪಂದ್ಯಕ್ಕೆ ಅಡ್ಡಿಯುಂಟು ಮಾಡಿದ ಹಿನ್ನೆಲೆಯಲ್ಲಿ ನೇಪಾಳ ೪೭ ಓವರ್‌ಗಳಲ್ಲಿ ೧೭೩ ರನ್ ಗಳಿಸಬೇಕಾಗಿ ಬಂತು. ಆದರೆ ಭಾರತದ ಉದಯೋ ನ್ಮುಖ ಬೌಲರ್ ವಿಕಾಸ್ ಮಿಶ್ರಾ ಅದಕ್ಕೆ ಆಸ್ಪದ ಮಾಡಿಕೊಡಲಿಲ್ಲ. ವಿಕಾಸ್ ದಾಳಿಗೆ ಅಚ್ಚರಿಯ ರೀತಿಯಲ್ಲಿ ಕುಸಿದ ನೇಪಾಳ ೨೭.೩ ಓವರ್‌ಗಳಲ್ಲಿ ಕೇವಲ ೯೧ ರನ್‌ಗಳಿಗೆ ಸರ್ವಪತನಗೊಂಡು ಹೀನಾಯ ಸೋಲುಂಡಿತು. ನೇಪಾಳ ಪರ ಬುವನ್ ಕರ್ಕಿ (೨೪) ಹಾಗೂ ಪುಲಾಮಿ ಮಗರ್ (೧೭) ಕೆಲಹೊತ್ತು ಕ್ರೀಸ್‌ನಲ್ಲಿದ್ದರು. ಮಿಶ್ರಾ ತನ್ನ ಎಂಟು ಓವರ್‌ಗಳಲ್ಲಿ ೩೩ ರನ್ ನೀಡಿ ನಾಲ್ಕು ವಿಕೆಟ್ ಪಡೆದುಕೊಂಡು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಹಿಂದೆ ಬ್ಯಾಟಿಂಗ್ ನಡೆಸಿದ್ದ ಭಾರತ ಪರ ಬಾಬಾ ಅಪರಜಿತ್ (೫೫) ಅರ್ಧಶತಕ ಸಿಡಿಸಿದರು. ಚಾಂದ್ (೪೭) ಕೂಡ ತಂಡಕ್ಕೆ ನೆರವಾಗಿದ್ದರು. ಈ ಜೋಡಿ ಎರಡನೇ ವಿಕೆಟ್‌ಗೆ ಅಮೂಲ್ಯ ೬೪ ರನ್ ಒಟ್ಟುಗೂಡಿಸಿತ್ತು. ನೇಪಾಳ ಪರ ಕರ್ಕಿ ಮೂರು ವಿಕೆಟ್ ಪಡೆದರು.
Tagged with
tnews
ಬಿಜೈಯಲ್ಲಿ ಕಂಪೆನಿಯೊಂದು ನೂತನ ಬಹುಮಹಡಿ ಕಟ್ಟಡ ಕಾಮಗಾರಿ ಯನ್ನು ಆರಂಭಿಸಿದು, ಈ ಹಿನ್ನೆಲೆಯಲ್ಲಿ ರಸ್ತೆಯ ಬದಿಗೆ ಹಾಕಲ್ಪಟ್ಟಿದ್ದ ಭಾರೀ ಗಾತ್ರದ ಜಾಹೀರಾತು ಫಲಕದ ಕಬ್ಬಿಣದ ಪೈಪ್ ತುಂಡಾಗಿ ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
Tagged with
gallery
ಮಾದಕದ್ರವ್ಯ ವಿರೋಧಿ ದಿನಾಚರಣೆಯಂಗವಾಗಿ ಪಡುಬಿದ್ರಿ ಪೊಲೀಸ್ ವತಿಯಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾವು ಪಡುಬಿದ್ರಿ ಪೇಟೆಯಲ್ಲಿ ನಡೆಯಿತು. ಪಡುಬಿದ್ರಿ ಲಯನ್ಸ್‌ನ ಡಾ. ಯನ್.ಟಿ. ಅಂಚನ್, ಠಾಣಾ ಉಪ ನಿರೀಕ್ಷಕ ಮಹಾದೇವ ಶೆಟ್ಟಿ ಮತ್ತು ಪತ್ರಕರ್ತರು ಭಾಗವಹಿಸಿದ್ದರು.
Tagged with
gallery
ಮಂಗಳೂರು: ಕಿನ್ನಿಗೋಳಿ ರೋಟರಿಯ ೨೦೧೨-೧೩ನೆ, ಸಾಲಿನ ಅಧ್ಯಕ್ಷರಾಗಿ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಆಯ್ಕೆ ಯಾಗಿದ್ದಾರೆ. ಉಳಿದಂತೆ ಇತರೆ ಪದಾಧಿಕಾರಿಗಳು, ನಿಕಟಪೂರ್ವಾಧ್ಯಕ್ಷ: ಜಯರಾಮ ಪೂಂಜಾ, ಕಾರ್ಯದರ್ಶಿ: ಯಶವಂತ ಐಕಳ, ಕೋಶಾಧಿಕಾರಿ: ವೇದವ್ಯಾಸ ಉಡುಪ, ಉಪಾಧ್ಯಕ್ಷ: ರಾಬರ್ಟ್ ರೊಸಾರಿಯೊ, ಜೊತೆ ಕಾರ್ಯದರ್ಶಿ: ತ್ಯಾಗರಾಜ ಆಚಾರ್ಯ ಆಯ್ಕೆಯಾಗಿದ್ದಾರೆ.
Tagged with
gallery
ಮಂಗಳೂರು: ಕಿನ್ನಿಗೋಳಿ ರೋಟರ‍್ಯಾಕ್ಟ್ ಸಂಸ್ಥೆಯ ೨೦೧೨-೧೩ ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಕೆಂಚನಕೆರೆ ಆಯ್ಕೆಯಾಗಿದ್ದಾರೆ.
Tagged with
gallery
ಕಿನ್ನಿಗೋಳಿ: ಕಿನ್ನಿಗೋಳಿ ಇನ್ನರ್ ವೀಲ್ ಸಂಸ್ಥೆಯ ೨೦೧೨-೧೩ನೇ ಸಾಲಿನ ಅಧ್ಯಕ್ಷರಾಗಿ ಮಮತಾ ಶರತ್ ಶೆಟ್ಟಿ ಆಯ್ಕೆಯಾಗಿ ದ್ದಾರೆ. ಉಪಾಧ್ಯಕ್ಷೆ: ವೀಣಾ ಶೆಟ್ಟಿ, ಕಾರ್ಯದರ್ಶಿ: ಸಿಂಥಿಯಾ ಕುಟಿನ್ಹೋ, ಕೋಶಾಧಿಕಾರಿ: ಸವಿತಾ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
Tagged with
gallery
ಪುನರೂರು ಭಾರತಮಾತಾ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಅರಣ್ಯಾಧಿಕಾರಿ ಎಂ. ಎಂ. ಯೋಗೇಶ್ವರ್, ಶಂಕರ್, ಸೇಷಪ್ಪ, ರಾಘವೇಂದ್ರ ರಾವ್ ಮತ್ತಿತರರಿದ್ದರು.
Tagged with
gallery
ಕಾಸರಗೋಡು: ಮಿಸ್ಡ್‌ಕಾಲ್ ಮೂಲಕ ಪರಿಚಯವಾಗಿದ್ದ ಯುವತಿಯನ್ನು ಮೂವರು ಯುವಕರು ಸೇರಿ ನಿರಂತರ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿ ಗಳನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದು, ರಿಮಾಂಡ್ ವಿಧಿಸಲಾಗಿದೆ.
ಬದಿಯಡ್ಕದ ಮಾರ್ಪನಡ್ಕ ನಿವಾಸಿ ಸುಧಾಕರ (೩೪) ಹಾಗೂ ನೀರ್ಜಾಲು ಬೇಲ ನಿವಾಸಿ ರವಿಚಂದ್ರ ಶೆಟ್ಟಿ (೨೪) ಬಂಧಿತ ರಾಗಿದ್ದರೆ ಇನ್ನೋರ್ವ ಆರೋಪಿ ಪರಾರಿ ಯಾಗಿದ್ದಾನೆ. ಟೈಲರಿಂಗ್ ಇನ್ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿಗೆ ೨೦೦೯ರಲ್ಲಿ ಸುಧಾಕರನಿಂದ ಮಿಸ್ಡ್‌ಕಾಲ್ ಬಂದಿತ್ತು. ಇದರಿಂದ ಇವರಲ್ಲಿ ಪರಿಚಯ ಉಂಟಾಗಿ ಅದು ಪ್ರೇಮಕ್ಕೆ ತಿರುಗಿತ್ತು. ೨೦೧೨ ಜೂ. ೧೦ರವರೆಗೆ ಸುಧಾಕರ ಹಾಗೂ ಈತನ ಮಿತ್ರರು ಯುವತಿಯನ್ನು ದೈಹಿಕವಾಗಿ ಬಳಸಿ ಕೊಂಡು ನಿರಂತರ ಅತ್ಯಾಚಾರಗೈದಿದ್ದರು. ಈ ಮಧ್ಯೆ ೨೦೧೨ರ ಜೂ. ೧೦ರಂದು ಈಕೆ ಯನ್ನು ಪೊದೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಗೈದಿದ್ದಾರೆ. ಈ ವೇಳೆ ಈಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ್ದಾರೆ. ಇದರಿಂದ ನೊಂದ ಯುವತಿ ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು, ಕಾಸರಗೋಡಿನ ಸರ್ಕಲ್ ಇನ್ಸ್‌ಪೆಕ್ಟರ್ ಬಾಬು ಪೆರಿಂಗಾಡ್ ನೇತೃತ್ವದ ಪೊಲೀಸರು ಇಬ್ಬರನ್ನು ನಿನ್ನೆ ಸಂಜೆ ಬದಿ ಯಡ್ಕದಲ್ಲಿ ಬಂಧಿಸಿದ್ದಾರೆ.
Tagged with
cnews,
kgod
ಕಾರ್ಕಳ: ನಂಬಿಕೆ ದ್ರೋಹವೆಸಗಿದ ನಾಲ್ವರ ವಿರುದ್ಧ ಕಾರ್ಕಳ ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಅದೇಶ ದಂತೆ ಗ್ರಾಮಾಂತರ ಠಾಣಾ ಪೊಲೀಸರು ಕೇಸು ದಾಖಲಿಸಿದ್ದಾರೆ.
ಗೋವರ್ಧನ ಬಾಬು, ಮಹಾಂತೇಶ, ಶಾಜಿ, ನಂದಕುಮಾರ್ ಪ್ರಕರಣದ ಆರೋಪಿಗಳಾಗಿದ್ದಾರೆ. ೨೦೦೯ರಲ್ಲಿ ಬೆಳಗಾವಿ ರಾಮದುರ್ಗ ತಾಲೂಕಿಗೆ ತೆರಳಿದ ಆರೋಪಿ ಗಳು ಸೋಮಪ್ಪ ಪಾಂಡಪ್ಪ ಲಮಾಣಿ ಎಂಬ ವರೊಂದಿಗೆ ವ್ಯವಹಾರ ಕುದುರಿಸಿ, ನಿಟ್ಟೆ ಪರಪ್ಪಾಡಿಯಲ್ಲಿರುವ ಕ್ರಶರಿಗೆ ಟ್ರಾಕ್ಟರ್, ಟ್ರೇಲರ್ ತರುವಂತೆ ಸೂಚಿಸಿದರು. ಅದರಂತೆ ಟ್ರೇಲರ್‌ನ್ನು ನಿಟ್ಟೆ ಪರಪ್ಪಾಡಿಯಲ್ಲಿರುವ ಕ್ರಶರ್‌ಗೆ ತರಲಾಗಿತ್ತು. ಕರಾರಿನಂತೆ ಪಿರ್ಯಾ ಧಿದಾರರಿಗೆ ಆರೋಪಿಗಳು ಟ್ರಾಕ್ಟರ್, ಟ್ರೇಲರ್‌ನ ಬಾಡಿಗೆಯನ್ನು ನೀಡಿದರಾದರೂ, ನಂತರದ ದಿನಗಳಲ್ಲಿ ಬಾಡಿಗೆ ಕೊಡದೇ ಟ್ರಾಕ್ಟರ್, ಟ್ರೇಲರ್‌ನ್ನು ತಮ್ಮಲ್ಲಿರಿಸಿಕೊಂಡಿ ದ್ದರೆನ್ನಲಾಗಿದೆ. ೧೫ ದಿನಗಳ ಹಿಂದೆ ಪಿರ್ಯಾದಿದಾರರು ಊರಿನ ಹಿರಿಯರೊಂದಿಗೆ ಸೇರಿ ನಿಟ್ಟೆ ಪರಪ್ಪಾಡಿಯ ಕ್ರಶರ್‌ಗೆ ಬಂದು ಆರೋಪಿಗಳಲ್ಲಿ ವಾಹನದ ಬಾಡಿಗೆ ಹಣವನ್ನು ಮತ್ತು ವಾಹನವನ್ನು ಹಿಂತಿರುಗಿಸುವಂತೆ ಕೇಳಿಕೊಂಡಾಗ ೨ನೇ ಆರೋಪಿ ಮಹಾಂತೇಶ್ ನಮ್ಮಲ್ಲಿಂದ ಎಲ್ಲಿಗೋ ಹೋಗಿದ್ದಾನೆ. ಆತನನ್ನು ಕರೆದು ತಂದಲ್ಲಿ ನಿಮ್ಮ ವಾಹನ ಹಾಗೂ ಸಂದಾಯವಾಗಬೇಕಾದ ಹಣವನ್ನು ಹಿಂತಿರುಗಿಸುತ್ತೇವೆ. ಇಲ್ಲದೇ ಹೋದಲ್ಲಿ ಪರಿಸ್ಥಿತಿಯೇ ಬೇರೆಯಾಗುತ್ತದೆ ಎಂದು ಜೀವಬೆದರಿಕೆಯೊಡ್ಡಿರುವುದಾಗಿ ಸೋಮಪ್ಪ ಪಾಂಡಪ್ಪ ಲಮಾಣಿ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಗ್ರಾಮಾಂತರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೇಸು ದಾಖಲಾಗಿದೆ.
Tagged with
cnews,
karkala
ಮಂಜೇಶ್ವರ: ಪತಿ ಮನೆಯ ಬಾವಿಗೆ ಬಿದ್ದು ನಿಗೂಢ ರೀತಿಯಲ್ಲಿ ಪತ್ನಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಪತಿ ಮಹಾಶಯನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಬಾಯರು ಬಳಿಯ ಚೇರಾಲ ನಿವಾಸಿ ಅಶ್ರಫ್ ಎಂಬವರ ಪತ್ನಿ ಶಮೀಮಾ ಮೃತ ಮಹಿಳೆಯಾಗಿದ್ದಾರೆ. ಇವರ ಶವ ಈ ತಿಂಗಳ ೧೯ ರಂದು ಮನೆ ಬಳಿಯ ಬಾವಿ ಯಲ್ಲಿ ಪತ್ತೆಯಾಗಿತ್ತು. ಹಿಂದಿನ ದಿನ ರಾತ್ರಿ ಊಟ ಮಾಡಿ ಮಲಗಿದ್ದ ಅವರು ಮರುದಿನ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ನಾಗರಿಕರು ಹಾಗು ಸಮೀಮಾರವರ ಸಂಬಂ ಧಿಕರು ಈಕೆಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶವವನ್ನು ಪರಿಯರಂ ವೈದ್ಯಕೀಯ ಕಾಲೇಜು ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಲ್ಲಿನ ವರದಿಯಲ್ಲಿ ಇದೊಂದು ಅಸಹಜ ಸಾವು ಎಂದು ತಿಳಿಸಲಾಗಿತ್ತು. ಆದರೂ ಹೆಚ್ಚಿನ ಮಾಹಿತಿ ಸಂಗ್ರಹಣೆಗಾಗಿ ಅಶ್ರಫ್ ರವರನ್ನು ಪೊಲೀಸರು ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಿ ಬಿಟ್ಟಿದ್ದಾರೆ.
Tagged with
cnews,
kgod
ಕೊಲ್ಲಂ: ಇಲ್ಲಿನ ಪಾರಿಪ್ಪ ಕಳಮಡ ಜಂಕ್ಷನ್ ಬಳಿ ತಡರಾತ್ರಿ ತಪಾಷಣೆ ನಡೆಸುತ್ತಿದ್ದ ಪೊಲೀಸರೊಬ್ಬರನ್ನು ದುಷ್ಕರ್ಮಿಗಳ ತಂಡ ಇರಿದು ಹತ್ಯೆ ಮಾಡಿದ ಘಟನೆ ತಡರಾತ್ರಿ ನಡೆದಿದೆ.
ಪಾರಿಪಳ್ಳ ಪೊಲೀಸ್ ಠಾಣೆಯ ಜೀಪು ಚಾಲಕ ಮಣಿಯನ್ ಪಿಳ್ಳೆ (೪೭) ಎಂಬವರೇ ಹತ್ಯೆಯಾದವರಾಗಿದ್ದು, ಜತೆಗಿದ್ದ ಎಸ್‌ಐ ಜೋಯ್ (೫೪) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಿದ್ದಾರೆ. ಕಳಮಡ ಜಂಕ್ಷನ್ ಬಳಿ ಶಂಕಿತ ಓಮ್ನಿ ಕಾರನ್ನು ತಪಾಷಣೆ ನಡೆಸಿದಾಗ ಸೂಕ್ತ ದಾಖಲೆಗಳಿಲ್ಲದ ಕಾರಣ ಕಾರಿನಲ್ಲಿದ್ದ ಮೂವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಮುಂದಾದರು ಎನ್ನಲಾಗಿದೆ. ಈ ವೇಳೆ ಮುಗಿಬಿದ್ದ ದುಷ್ಕರ್ಮಿಗಳು ಮಾರಕಾಯುಧಗಳಿಂದ ಇರಿದು ಪರಾರಿಯಾಗಿದ್ದಾರೆ. ಓಮ್ನಿ ಕಾರನ್ನು ವರ್ಕಳ ಬಳಿ ಪೊಲೀಸರು ತಡೆದಾಗ ಮಾರಕಾಸ್ತ್ರದಿಂದ ಪೊಲೀಸರನ್ನು ಬೆದರಿಸಿ ಕಾರನ್ನು ತೊರೆದು ತಂಡ ಪರಾರಿಯಾಗಿದೆ.
Tagged with
cnews,
kgod
ಮಂಗಳೂರು: ಮಾಬುಕಳದ ಸೀತಾನದಿಯ ಚತುಷ್ಪಥ ಸೇತುವೆಯ ಕಾಂಕ್ರೀಟ್ ತೂಲೆ ಜೋಡಣೆ ಕಾಮಗಾರಿ ವೇಳೆ ಯಂತ್ರದ ಆಪರೇಟರ್ ಮೃತರಾಗಿದ್ದಾರೆ.
ನವಯುಗ ಕಂಪೆನಿಯ ಉದ್ಯೋಗಿ ಆಂಧ್ರಪ್ರದೇಶದ ಜಿ. ಭಾಸ್ಕರ್ ರಾವ್ (೪೫) ಮೃತರಾದವರಾಗಿದ್ದು, ತಲಪಾಡಿಯಿಂದ ಕುಂದಾಪುರ ತನಕ ರಾಷ್ಟ್ರೀಯ ಹೆದ್ದಾರಿ ೬೬ ಚತುಷ್ಪಥ ಕಾಮಗಾರಿ ಅಂಗವಾಗಿ ಮಾಬುಕಳದ ಸೀತಾನದಿ ಸೇತುವೆಗೆ ಪಿಲ್ಲರ್ ಕಾಮಗಾರಿ ನಡೆಯುತ್ತಿತ್ತು.
೨೫ ಅಡಿ ಮೇಲಕ್ಕೆ ೪೦ ತೂಲೆಗಳನ್ನು ಜೋಡಣೆ ಮಾಡುವ ಸಂದರ್ಭ ತೂಲೆ ಜೋಡಣೆಯ ಪ್ರೇಮೊಂದು ಆಪರೇಟರ್ ಮೇಲೆ ಕುಸಿದು ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಮಣಿಪಾಲದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews,
mlore
ಮಂಜೇಶ್ವರ: ಅಕ್ರಮ ಸಾರಾಯಿ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಕಾಸರ ಗೋಡು ನ್ಯಾಯಾಲಯ ಖುಲಾಸೆ ಗೊಳಿಸಿದೆ.
ಬಂಗ್ರ ಮಂಜೇಶ್ವರ ಸಮೀಪದ ಕೊಪ್ಪಲ ನಿವಾಸಿ ಸದಾಶಿವ ಎಂಬವರೇ ಖುಲಾಸೆಗೊಂಡವರು. ೨೦೦೭ ಎ. ೧೧ರಂದು ಹೊಸಂಗಡಿ ಜಂಕ್ಷನ್ ಬಳಿ ಯಿಂದ ಕುಂಬಳೆ ಅಬಕಾರಿ ಅಧಿಕಾರಿ ಗಳು ದಾಳಿ ನಡೆಸಿ ೧೦೦ ಎಂಎಲ್‌ನ ೭೦ ತೊಟ್ಟೆ ಸಾರಾಯಿಗಳನ್ನು ವಶಪಡಿಸಿಕೊಂಡು ಸದಾಶಿವ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದರು.
ವಿಚಾರಣೆ ಕೈಗೆತ್ತಿಕೊಂಡ ಕಾಸರಗೋಡು ಅಸಿಸ್ಟೆಂಟ್ ಸೆಷನ್ಸ್ ನ್ಯಾಯಾಲಯ ಆರೋಪಿ ಮೇಲಿನ ಆರೋಪದಲ್ಲಿ ಉರುಳಿಲ್ಲ ಎಂದು ತೀರ್ಪು ನೀಡಿ ಆರೋಪಿ ಸದಾಶಿವ ಎಂಬವರನ್ನು ಖುಲಾಸೆಗೊಳಿಸಿದೆ.
Tagged with
cnews,
kgod
ಮೂಡಬಿದಿರೆ: ವಿವಾಹಿತ ಮಹಿಳೆ ಯನ್ನು ಅಪಹರಣ ಮಾಡಲು ಬಂದು ಪೊಲೀಸರ ಅತಿಥಿಯಾದ ಕಾರು ಚಾಲಕನಿಗೆ ಜಾಮೀನು ನೀಡಲು ಯಾರೊಬ್ಬರೂ ಬಾರದೆ ಇದ್ದುದರಿಂದ ಆತ ಜೈಲಿನಲ್ಲೇ ಕಳೆಯುವಂತಾಗಿದ್ದು, ಈ ಕಿಡ್ನಾಪ್ ಪ್ರಹಸನದ ಸೂತ್ರಧಾರಿ ಸಹಿತ ಇತರ ಇಬ್ಬರು ತಲೆಮರೆಸಿ ಕೊಂಡಿದ್ದಾರೆ.
ಮಾಂಟ್ರಾಡಿಯ ಕಲ್ಲಿನಕೋರೆ ಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕನಕ (೨೬) ಹಾಗೂ ಆಕೆಯ ಮೂವರು ಮಕ್ಕಳನ್ನು ಕಾರಿನಲ್ಲಿ ಬಂದ ತಂಡವೊಂದು ಅಪಹರಿಸಿಕೊಂಡು ಹೋಗಿತ್ತು. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅರ್ಧಗಂಟೆ ಯೊಳಗೆ ಮಹಿಳೆ ಮತ್ತು ಮೂವರು ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾ ಗಿದ್ದರು. ಈ ಸಂದರ್ಭದಲ್ಲಿ ಕಾರು ಚಾಲಕ ಹೊಸದುರ್ಗದ ಸಿದ್ದೇಶ ಎಂಬಾತ ಮಾತ್ರ ಸಿಕ್ಕಿಬಿದ್ದಿದ್ದ. ಕಿಡ್ನಾಪ್ ಪ್ರಕರಣದ ಸೂತ್ರಧಾರಿ ಹೊಸ ದುರ್ಗಾದ ಅಯ್ಯಪ್ಪ ಮತ್ತು ನವೀನ ಎಂಬವರು ತಲೆಮರೆಸಿಕೊಂಡವರು.
ಅಮಾಯಕ ಸಿಕ್ಕಿಬಿದ್ದ : ಹೊಸ ದುರ್ಗದ ಸಿದ್ದೇಶನ ಇಂಡಿಕಾ ಕಾರನ್ನು ಬಾಡಿಗೆಗೆಂದು ಗೊತ್ತುಪಡಿಸಿದ ಅಯ್ಯಪ್ಪ ಧರ್ಮಸ್ಥಳಕ್ಕೆ ಹೋಗಲಿದೆ ಎಂದೇ ನಂಬಿಸಿದ್ದ. ಹೊಸ್ಮಾರಿನಲ್ಲಿ ಕನಕಾ ತನ್ನ ಪತಿ ಹಾಗೂ ಮಕ್ಕಳೊಂದಿಗೆ ರಿಕ್ಷಾದಲ್ಲಿ ಮಾಂಟ್ರಾಡಿ ಕಡೆ ಹೊರಟಿದ್ದಳು. ಈ ವೇಳೆ ಇಂಡಿಕಾ ಕಾರು ಕನಕ ಇದ್ದ ರಿಕ್ಷಾವನ್ನು ಹಿಂಬಾಲಿಸಿದೆ. ಮಾಂಟ್ರಾಡಿ ಯಲ್ಲಿ ಕನಕ ಇಳಿದ ಕೂಡಲೇ ಕಾರಿಗೆ ಹತ್ತಿಸಿಕೊಡು ಹೋಗಿದ್ದರು. ಇದು ಕಿಡ್ನಾಪ್ ಎಂದು ಹೇಳಲಾದರೂ ಇದರ ಹಿಂದೆ ಕನಕಾ-ಅಯ್ಯಪ್ಪರ ನಡುವಿನ ಪ್ರೇಮ ಸಂಬಂಧ ಇತ್ತೆಂದೂ ಹೇಳಲಾ ಗುತ್ತಿದೆ. ಅಂತೂ ಬಾಡಿಗೆ ಗೆಂದು ಕರೆಸಿ ಕೊಂಡು ಬಂದವರು ತನ್ನನ್ನು ಬಿಟ್ಟು ಓಡಿಹೋಗಿದ್ದು, ಅಮಾಯಕ ಸಿದ್ದೇಶ ಮಾತ್ರ ಜೈಲಿಗೆ ಹೋಗುವಂತಾಗಿದೆ.
Tagged with
cnews,
moodabidri
ಮುಲ್ಕಿ: ನಂದಿನಿ ನದಿಯಲ್ಲಿ ಸ್ನೇಹಿತರೊಂದಿಗೆ ಈಜಾಡಲು ತೆರಳಿದ್ದ ಕಿನ್ನಿಗೋಳಿಯ ಹೊಸಕಾಡು ನಿವಾಸಿ ರೋಹಿತ್ (೧೭) ಎಂಬಾತನ ಶವ ಪಂಜ ಬ್ರಹ್ಮರಗುಂಡಿ ಸಮೀಪ ನಿನ್ನೆ ಪತ್ತೆಯಾಗಿದೆ.
ಸ್ಥಳೀಯರು ಶವಕ್ಕಾಗಿ ಎರಡು ದಿನಗಳಿಂದ ಹುಡುಕಾಟ ನಡೆಸುತ್ತಿದ್ದು ನಿನ್ನೆ ಪತ್ತೆ ಹಚ್ಚುವಲ್ಲಿ ಯಶಸ್ವಿ ಯಾಗಿದ್ದಾರೆ.
Tagged with
cnews,
mlore
ಮಂಗಳೂರು: ನಗರದ ಬಿಜೈ ಕಾಪಿಕಾಡ್ ಒಂದನೇ ಅಡ್ಡರಸ್ತೆಯಲ್ಲಿ ರಾಮ್‌ರಾಜ್ ಎಂಬವರ ನಿರ್ಮಾಣ ಹಂತದಲ್ಲಿದ್ದ ಮನೆಯ ಮೊದಲ ಮಹಡಿಯಿಂದ ಬಿದ್ದು ಮಂಗಳವಾರ ಮಧ್ಯಾಹ್ನ ಕಾರ್ಮಿಕರೊಬ್ಬರು ಮೃತರಾಗಿದಾರೆ. ಎಕ್ಕೂರು ನಿವಾಸಿ ತ್ರಿಮೋನ್ (೩೩) ಮೃತಪಟ್ಟ ಕಾರ್ಮಿಕನಾಗಿದ್ದು, ನಿನ್ನೆ ಮಧ್ಯಾಹ್ನ ಕುರ್ಚಿ ಮೇಲೆ ಹತ್ತಿ ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದರು. ತಲೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews,
mlore
ಪುತ್ತೂರು: ಅಕ್ಕಸಾಲಿಗ ವೃತ್ತಿ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಆವರಣ ಗೋಡೆಯಿಲ್ಲದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬಲ್ಲಿ ಸಂಭವಿಸಿದೆ.
ಇಲ್ಲಿನ ನಿವಾಸಿ ಕೊರಗಪ್ಪ ಆಚಾರ್ಯ ಅವರ ಪುತ್ರ ಹರಿಶ್ಚಂದ್ರ ಆಚಾರ್ಯ (೩೫) ಮೃತಪಟ್ಟ ವ್ಯಕ್ತಿ.
Tagged with
cnews,
puttur
ಬೆಂಗಳೂರು: ನಾಯಕತ್ವ ಬದಲಾವಣೆಗಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವರಿಷ್ಠರ ಮುಂದಿಟ್ಟ ಬೇಡಿಕೆ ಇದೀಗ ಬಿಜೆಪಿ ತ್ರಿಮೂರ್ತಿಗಳ ನಡುವಿನ ಕಾಳಗವಾಗಿ ಮಾರ್ಪಟ್ಟಿದೆ.
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಆ ಕುರ್ಚಿ ಖಾಲಿಯಾದರೆ ಅಲ್ಲಿ ಪ್ರತಿಷ್ಠಾಪನೆಗೊಳ್ಳಲು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ. ಜೂ.೨೮ ರಂದು ರಾಜ್ಯ ಉಸ್ತುವಾರಿ ಹೊತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಧಮೇಂದ್ರ ಪ್ರಧಾನ್ ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಕ್ಕಾಗಿಯೇ ಆಗಮಿಸುತ್ತಿರುವುದು ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಮೂವರು ನಾಯಕರು ಬಲಾಬಲ ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ.ಇಷ್ಟು ದಿನ ಸದಾನಂದಗೌಡರಿಗೆ ರಕ್ಷಕರಾಗಿ ನಿಂತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರೇ ಸಿಗುವುದಾದರೆ ತಮಗೇ ಮುಖ್ಯಮಂತ್ರಿ ಸ್ಥಾನ ಸಿಗಲಿ ಎಂಬ ಜಿದ್ದಿಗೆ ಬಿದ್ದವರಂತೆ ತೆರೆಮರೆಯ ಕಸರತ್ತುಗಳಲ್ಲಿ ತೊಡ ಗಿದ್ದಾರೆ.
Tagged with
dvs,
snews
ಬೆಂಗಳೂರು:ಕಾನೂನು ಬಾಹಿರವಾಗಿ ನಿವೇಶನ ಖರೀದಿ ಮಾಡಿದ್ದ ಆರೋಪಕ್ಕೆ ಗುರಿ ಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾನೂನು ಮತ್ತು ನಗರಾಭಿವೃದ್ಧಿ ಸಚಿವ ಸುರೇಶ್‌ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ವೊಕೇಟ್ ಜನರಲ್ ನೀಡಿದ ಕ್ಲೀನ್‌ಚಿಟ್ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆಯನ್ನು ವಾಪಾಸ್ ಪಡೆದಿದ್ದಾರೆ.
ಅಲ್ಲದೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ರಾಜ್‌ಮಹಲ್ ವಿಲಾಸ್ ಬಡಾವಣೆಯ ಎರಡನೇ ಹಂತದಲ್ಲಿ ಮಂಜೂರು ಮಾಡಿದ್ದ ನಿವೇಶನವನ್ನು ಹಿಂತಿರುಗಿಸಲು ಅವರು ನಿರ್ಧರಿಸಿದ್ದಾರೆ.
Tagged with
snews,
sureshkumar
ಕಾಸರಗೋಡು: ಪ್ರಪಂಚ ಏನೆಂದು ಅರಿ ಯುವ ಮುನ್ನವೇ, ರಕ್ಷಕರನ್ನು ಕಳಕೊಂಡು ತಬ್ಬಲಿಗಳಾಗಿದ್ದಾರೆ ಈ ಪುಟ್ಟ ಕಂದಮ್ಮರು. ಇವರ ಮುಂದಿನ ಬದುಕೇನು? ಆಸ್ಪತ್ರೆ ಮಂಚದಲ್ಲಿ ಮಲಗಿರುವ ಎರಡರ ಹರೆಯದ ಹೆಣ್ಣು ಮಗು ಹಾಗೂ ಕೇವಲ ಏಳು ತಿಂಗಳು ಪ್ರಾಯದ ಗಂಡು ಹಸುಗೂಸಿನ ಕರುಣಾಜನಕ ದೃಶ್ಯ ಎಂಥವರ ಕರುಳನ್ನೂ ಹಿಂಡುವಂಥದ್ದು. ಇದೀಗ ಕಾಸರ ಗೋಡು ಜನರಲ್ ಆಸ್ಪತ್ರೆ ದಾದಿಯರ ಆರೈಕೆಯಲ್ಲಿ ಏನೊಂದೂ ಅರಿಯದೆ ಈ ಎಳೆ ಕೂಸುಗಳಿವೆ.
ಮೂಲತ: ತಮಿಳ್ನಾಡು ನಿವಾಸಿಯಾಗಿರುವ, ಸದ್ಯ ಕುಂಬಳೆ ಪೆರುವಾಡಿನ ಸುನಾಮಿ ಕಾಲನಿಯ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಹಸೀನಾ(೨೮) ಎಂಬ ಯುವತಿಯ ಕಂದರಿವರು. ವರ್ಷಗಳ ಹಿಂದೆ ಇವರು ಕೇರಳಕ್ಕೆ ಬಂದಿದ್ದರು. ಕಲ್ಲಿಕೋಟೆಯ ನಿವಾಸಿ ಶಾಫಿ ಎಂಬಾತನ ಜೊತೆ ಇವರ ವಿವಾಹ ವಾಗಿದ್ದರೂ ಗಂಡನಿಂದ ದೂರವಾಗಿ ತನ್ನಿಬ್ಬರು ಕರುಳ ಕುಡಿಗಳೊಂದಿಗೆ ಪೆರುವಾಡಿನ ಗುಡಿಸಲಿ ನಲ್ಲಿ ದಿನ ದೂಡುತ್ತಿದ್ದರು. ಹೀಗಿರುವಾಗ ಹಸೀನಾ ರಿಗೆ ಏನಾಯಿತೆಂದು ಗೊತ್ತಿಲ್ಲ.
ಮೊನ್ನೆ ಭಾನುವಾರ ಪೆರುವಾಡು ಕಾಲನಿ ನಿವಾಸಿಯೇ ಆಗಿರುವ ನಫೀಸಾ ಎಂಬವರು ಹಸೀನಾ ರನ್ನು ಕರೆದುಕೊಂಡು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ಬಂದಿದ್ದರು. ಮುಖ ಊದಿಕೊಂಡಿತ್ತು. ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ಹಸೀನಾ ಮುಸ್ಸಂಜೆ ವೇಳೆ ಕೊನೆಯುಸಿರೆಳೆದಿದ್ದರು. ಮೂತ್ರಕೋಶದ ಕಾಯಿಲೆ ಎಂಬುದು ಅಧಿಕೃತ ಸ್ಪಷ್ಟನೆ. ಆದರೆ, ಇವರಿಗೆ ಈ ರೀತಿಯ ತೊಂದರೆಯಿರುವುದಾಗಿ ಯಾರಿಗೂ ಗೊತ್ತಿಲ್ಲ.
ಮರಣದಲ್ಲಿ ಊರ ನಾಗರಿಕರು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೃತದೇಹವನ್ನು ಉನ್ನತ ಶವ ಮಹಜರಿಗಾಗಿ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಈಕೆಯ ಮುಖದಲ್ಲಿ ಗಾಯದ ಕುರುಹುಗಳಿತ್ತೆಂದೂ, ಒಂದು ವಾರದ ಹಿಂದೆ ಇವರ ಮನೆಯನ್ನು ಆಕ್ರಮಿಸಿದ ತಂಡವೊಂದು ಗಂಭೀರ ಥಳಿಸಿರುವುದನ್ನೂ ಶಂಕೆಗೆ ಕಾರಣವಾಗಿ ನಾಗರಿಕರು ಮುಂದಿಡುತ್ತಾರೆ. ಅಂತೂ ಮಹಿಳೆ ಸಾವಿನಿಂದ ಮಕ್ಕಳು ಅನಾಥರಾಗಿದ್ದಾರೆ. ಇವರ ಸಂಬಂಧಿಕರ ಬಗ್ಗೆ ಯಾರಿಗೂ ತಿಳಿದಿಲ್ಲ ವಾಗಿದೆ. ಈ ಕಾರಣದಿಂದಾಗಿ ತಬ್ಬಲಿ ಮಕ್ಕಳನ್ನು ಮೊನ್ನೆ ರಾತ್ರಿ ವೇಳೆ ಯಾರೋ ತಂದು ಜನರಲ್ ಆಸ್ಪತ್ರೆಯ ಅಮ್ಮ ತೊಟ್ಟಿಲು (ಅನಾಥ ಶಿಶುಗಳನ್ನು ಇಲ್ಲಿ ಉಪೇಕ್ಷಿಸಿದಲ್ಲಿ ಅವರ ಸಂರಕ್ಷಣೆ ಸರಕಾರಿ ಶಿಶು ಕೆಂದ್ರಕ್ಕಿದೆ) ಎಂದು ಬಿಟ್ಟಿದ್ದಾರೆ. ದಾದಿಯರು ತಲುಪಿ ಮಕ್ಕಳನ್ನು ತೆಗೆದು ಆರೈಕೆ ಮಾಡಿದ್ದಾರೆ. ಮಕ್ಕಳನ್ನು ಶಿಶು ಸಂರಕ್ಷಣಾ ಕೇಂದ್ರಕ್ಕೆ ಬಿಡುವ ಸಿದ್ಧತೆ ನಡೆದಿದೆ.
Tagged with
kasaragod,
lnews
ವಿಟ್ಲ: ವಿಟ್ಲದ ಪುರಭವನ ಬಳಿಯ ಪೊಲೀಸ್ ವಸತಿ ಗೃಹದ ಕೊಳಚೆ ನೀರು ಯೂತ್ ಬಿಲ್ಲವ ಎಸೋಸಿಯೇಶನ್ ನಿವೇ ಶನಕ್ಕೆ ಹರಿಯುವ ಪರಿಣಾಮ ಇಡೀ ಪರಿಸರ ದುರ್ನಾತ ಬೀರುತ್ತಿದೆ ಎಂದು ಸಂಘದ ಸದಸ್ಯರು ಆರೋಪಿಸಿದ್ದಾರೆ.
ಆರು ತಿಂಗಳ ಹಿಂದೆ ವಿಟ್ಲ ಪುರಭವನ ಬಳಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಂಡಿದ್ದ ಈ ಪೊಲೀಸ್ ವಸತಿ ಗೃಹದ ಕೊಳಚೆ ನೀರು ಸಮರ್ಪಕವಾಗಿ ಹರಿದು ಹೋಗಲು ಜಾಗವಿಲ್ಲದೆ ಪಕ್ಕದ ಯೂತ್ ಬಿಲ್ಲವ ಎಸೋಸಿಯೇಶನ್ ನಿವೇಶನಕ್ಕೆ ಹರಿಯುತ್ತಿದೆ. ಬಿಲ್ಲವ ಎಸೋಸಿಯೇಶನ್ ನಿವೇಶನದಲ್ಲಿ ಧಾರ್ಮಿಕ ಕಾರ್ಯ ಗಳು ನಡೆಯುತ್ತಿರುತ್ತದೆ. ಈ ಸಂದರ್ಭ ಕೊಳಚೆ ನೀರು ಹರಿದು ನಿವೇಶನಕ್ಕೆ ನುಗ್ಗುತ್ತಿದ್ದರೆ ಕಾರ್ಯಕ್ರಮ ನಡೆಸಲು ಕಷ್ಟವಾಗುತ್ತಿದೆ ಎಂದು ಅವರು ಅಳಲು ವ್ಯಕ್ತಪಡಿಸಿದ್ದಾರೆ. ಸದ್ಯ ವಸತಿ ನಿಲಯದ ಕಡೆಯಿಂದ ನೀರು ಹರಿಯದಂತೆ ಮಾಡಿದ್ದರೂ ಆ ನೀರು ವಸತಿ ನಿಲಯದ ಕುಡಿಯುವ ನೀರಿನ ಬಾವಿಗೆ ಬೀಳುತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ಎಚ್ಚೆತ್ತು ಯೂತ್ ಬಿಲ್ಲವ ಎಸೋಸಿಯೇಶನ್ ನಿವೇಶನದಲ್ಲಿ ನೆಮ್ಮದಿಯಿಂದ ಧಾರ್ಮಿಕ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡಬೇಕೆಂದು ಸಂಘದ ಸದಸ್ಯರು ಆಗ್ರಹಿಸಿದ್ದಾರೆ.
Tagged with
dk,
lnews
ಪುತ್ತೂರು: ತುಳು ನಾಟಕರಂಗದ ಕಲಾವಿದ ಪುತ್ತೂರಿನ ಸುಂದರ ರೈ ಮಂದಾರ ಮಲಯಾಳಂ ಚಲನಚಿತ್ರವೊಂ ದರಲ್ಲಿ ನಟಿಸುತ್ತಿದ್ದಾರೆ. ಚಲನಚಿತ್ರ ನಿರ್ದೇಶಕ ಶಶಿಕುಮಾರ್ ಅವರ ನಿರ್ದೇಶನದ ರೋಮಾಂಚನ ವಾರಿಯಾ ಕೊಲ್ಲಂ -೪ ಚಿತ್ರದಲ್ಲಿ ಸುಂದರ ರೈ ನಟಿಸು ತ್ತಿದ್ದು, ಕೇರಳದ ಬಾಬು ನಂಬೂ ದಿರಿ, ನಡುಮುಡಿ ವೇಣು, ಗೋಮತಿ ಮಹಾ ದೇವನ್, ಊರ್ವಶಿ ನಟಿಸುತ್ತಿದ್ದಾರೆ. ತುಳು ನಾಟಕ ರಂಗದ ಕಲಾವಿದರೊಬ್ಬರು ಮೊ ದಲ ಬಾರಿಗೆ ಹಾಸ್ಯ ನಟರಾಗಿ ಮಲ ಯಾಳಂ ಚಲನಚಿತ್ರದಲ್ಲಿ ಅಭಿನಯಿಸು ತ್ತಿದ್ದಾರೆ.
Tagged with
dk,
lnews
ಮಂಗಳೂರು: ಹರೇಕಳ ಗ್ರಾಮದ ಬೈತಾರ್ ಎಂಬಲ್ಲಿರುವ ಮಸೀದಿಗೆ ಖಾಝಿ ಸ್ವೀಕಾರ ಸಮಾರಂಭ ನಡೆದಿದ್ದು ಆಡಳಿತ ಸಮಿತಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆಯಲ್ಲದೆ ವಕ್ಫ್ ಮಂಡಳಿಯ ಆದೇಶವನ್ನು ಧಿಕ್ಕರಿಸಿದೆ ಎನ್ನುವ ಆರೋಪ ಕೇಳಿಬಂದಿದೆ.
ಬೈತಾರ್ ಮೊಹಿಯುದ್ದೀನ್ ಜುಮಾ ಮಸೀದಿ ವ್ಯಾಪ್ತಿಯಲ್ಲಿ ೧೩೦ ಮನೆಗಳಿವೆ. ಹಿಂದೆ ಇಲ್ಲಿ ಸಮಸ್ತ ಕೇರಳ ಜಂಇಯತ್ತುಲ್ ಉಲಮಾದ ಅಧೀನದಲ್ಲಿ ಮಸೀದಿ ಹಾಗೂ ಮದ್ರಸಾ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ. ೧೫ ವರ್ಷಗಳ ಹಿಂದೆ ಇ.ಕ.ಎ ಸಿಲೆಬಸ್ ಬದಲಾಯಿಸಿ ಎ.ಪಿ. ಸಿಲೆಬಸ್ ಅಂಗೀಕರಿಸಲಾಗಿದ್ದು ಇದಕ್ಕೆ ಮದ್ರಸಾಕ್ಕೆ ಬಂದ ಎ.ಪಿ. ಪಂಗಡದ ಮೌಲ್ವಿಗಳೇ ಕಾರಣ ಎಂದು ಎಸ್‌ಕೆಎಸ್‌ಎಸ್‌ಎಫ್ ಆರೋಪಿಸಿದೆ. ಇದುವರೆಗೆ ಇಲ್ಲಿ ಎ.ಪಿ. ಸಿಲೆಬಸ್ ಮುಂದು ವರಿದಿದ್ದರೂ ಯಾವುದೇ ವಿವಾದ ಇರಲಿಲ್ಲ ಎನ್ನಲಾಗಿದೆ. ಪ್ರಸ್ತುತ ಜಮಾತ್‌ನಲ್ಲಿ ೯೦ ಮನೆಗಳು ಇ.ಕೆ. ಪಂಗಡವನ್ನು ಬೆಂಬಲಿಸು ತ್ತಿದ್ದರೂ ಸಮಿತಿಯಲ್ಲಿ ಎ.ಪಿ. ಬಣದವರ ಪ್ರಾಬಲ್ಯ ಇದೆಯೆನ್ನಲಾಗಿದ್ದು, ಈ ಹಿನ್ನೆಲೆ ಯಲ್ಲಿ ಕಮಿಟಿಯು ಜಮಾಅತ್‌ಗೆ ಖಾಝಿ ಯನ್ನಾಗಿ ಉಳ್ಳಾಲ ತಂಙಳ್‌ರನ್ನು ಅಂಗೀ ಕರಿಸಿತ್ತು ಎನ್ನಲಾಗಿದೆ.
ಕಳೆದ ಗುರುವಾರ (ದಿ.೧೪) ಖಾಝಿ ಸ್ವೀಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ತೀರ್ಮಾನ ಕೈಗೊಳ್ಳುವ ಮೊದಲು ಜಮಾಅತಿನವರ ಅಭಿಪ್ರಾಯ ಸಂಗ್ರಹಿಸದೆ ಸಮಿತಿ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದೆ ಎಂದು ಆಕ್ಷೇಪ ಎತ್ತಿದ ಇ.ಕೆ. ಬಣ, ರಾಜ್ಯ ವಕ್ಫ್ ಮಂಡಳಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಖಾಝಿ ಸ್ವೀಕಾರ ಸಮಾರಂಭಕ್ಕೆ ತಡೆ ನೀಡಿ ವಕ್ಫ್ ಮಂಡಳಿ ದಿ.೧೩ರಂದೇ ಆದೇಶ ನೀಡಿತ್ತು.
ಆದರೆ ಗುರುವಾರ ನಡೆಯಬೇಕಾಗಿದ್ದ ಖಾಝಿ ಸ್ವೀಕಾರ ಸಮಾರಂಭ ನಡೆಸಲಾ ಗಿದ್ದು ವಕ್ಫ್ ಮಂಡಳಿಯ ಆದೇಶದ ಉಲ್ಲಂ ಘನೆಯಾಗಿದೆ ಎಂದು ಎಸ್‌ಕೆಎಸ್‌ಎಸ್‌ಎಫ್ ಆರೋಪಿಸಿದೆ. ಅಲ್ಲದೆ ಸೋಮವಾರದ ಕಾಯಕ್ರಮದ ಬಗ್ಗೆ ಜಮಾತ್‌ನವರ ಗಮನಕ್ಕೆ ತಾರದೆ ತರಾತುರಿಯಲ್ಲಿ ನಡೆಸಲಾ ಗಿದೆ ಎನ್ನುವ ಮಾತುಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಖಾಝಿ ಸ್ವೀಕಾರ ವಿವಾದಕ್ಕೆ ಕಾರಣವಾಗಿದ್ದು ವಕ್ಫ್ ಮಂಡಳಿ ಕೈಗೊಳ್ಳಲಿರುವ ತೀರ್ಮಾನ ಕುತೂಹಲ ಕೆರಳಿಸಿದೆ.
Tagged with
dk,
lnews
ಅತ್ಯಾಚಾರ-ಅನೈತಿಕತೆ-ಹಗರಣ-ಭ್ರಷ್ಟಾಚಾರ-ಬ್ಲೂಫಿಲಂ
ಪುತ್ತೂರು: ಸ್ನೇಹಿತನ ಪತ್ನಿಯನ್ನೇ ಅತ್ಯಾಚಾರ ಎಸಗಿರುವ ಹಾಲಪ್ಪ , ನರ್ಸ್ ಜೊತೆ ಅನೈತಿಕವಾಗಿ ನಡೆದು ಕೊಂಡ ರೇಣುಕಾಚಾರ್ಯ , ಭ್ರಷ್ಟಾ ಚಾರದಲ್ಲಿ ಮುಳುಗಿರುವ ಯಡಿ ಯೂರಪ್ಪ, ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ, ಹಗರಣದಲ್ಲಿ ಮುಳುಗಿರುವ ಮಂದಿಯಿರುವ ಬಿಜೆಪಿ ಸಂಸ್ಕೃತಿ ನಮಗೆ ಬೇಕೇ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟ ನೆಯ ರಾಜ್ಯಾಧ್ಯಕ್ಷ ಮಹಮ್ಮದ್ ತುಫೈಲ್ ಪ್ರಶ್ನಿಸಿದರು. ಇಂಥವರು ಶಿಕ್ಷಣ ಕೇಸರೀಕರಣದ ಮೂಲಕ ಯಾವ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಕಲಿಸಿಯಾರು ಎಂದು ಅವರು ಲೇವಡಿ ಮಾಡಿದರು.
ಶಿಕ್ಷಣ ಕೇಸರೀಕರಣದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘ ಟನೆಯ ಪುತ್ತೂರು ಘಟಕದ ನೇತೃತ್ವದಲ್ಲಿ ಮಂಗಳವಾರ ಸಂಜೆ ಪುತ್ತೂರು ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬುದ್ಧಿವಂತರ ಜಿಲ್ಲೆಯ ಇಲ್ಲಿನ ಬುದ್ಧಿಮಾಂದ್ಯ ಸಂಸದರು ಶಿಕ್ಷಣ ಕೇಸರೀಕರಣದ ಪರವಹಿಸಿ ಮಾತನಾ ಡುತ್ತಿದ್ದಾರೆ. ತುಳು ಭಾಷೆಯ ಮಮತೆ ಯಿಂದ ಲೋಕಸಭೆಯಲ್ಲಿ ತುಳುವಿನಲ್ಲೇ ಮಾತನಾಡಿದ್ದೇನೆಂದು ಹೆಮ್ಮೆ ಕೊಚ್ಚಿಕೊಳ್ಳುತ್ತಿದ್ದಾರೆ. ವಿಧ್ಯಾಬ್ಯಾಸ ಇಲ್ಲದ ಇರುವ ಇದಕ್ಕಿಂತ ಹೆಚ್ಚು ಬೇರೇನು ಮಾಡಲು ಸಾಧ್ಯ ಎಂದು ಅವರು ಲೇವಡಿ ಮಾಡಿದರು. ಶಿಕ್ಷಣ ಕೇಸರೀಕರಣ ಮಾಡಲು ಹೊರಟಿರುವ ಈಶ್ವರಪ್ಪ , ಸಚಿವ ಕಾಗೇರಿ ಅವರ ಶಾಸಕತ್ವವನ್ನು ರದ್ದುಗೊಳಿಸುವ ಜೊತೆಗೆ ಮುಂದಿನ ಚುನಾವಣೆಯಲ್ಲಿ ಅವರಿಗೆ ಸ್ಪರ್ಧಿಸಲು ಅವಕಾಶ ನೀಡದಂತೆ ಮಾಡ ಬೇಕು ಎಂದು ಅವರು ರಾಜ್ಯಪಾಲ ರನ್ನು ಆಗ್ರಹಿಸಿದರು. ಶಿಕ್ಷಣದ ಕೇಸರಿ ಕರಣ ಕೈ ಬಿಡುವ ತನಕ ಹೋರಾಟ ಮುಂದುವರೆಯಲಿದೆ ಎಂದರು.
Tagged with
dk,
lnews
ಬೆಂಗಳೂರು: ಮುಖ್ಯಮಂತ್ರಿ ಸದಾನಂದಗೌಡರನ್ನು ಬದಲಾವಣೆ ಮಾಡಿದರೆ ಸಚಿವ ಜಾರಕಿಹೊಳಿ ಬಣ ತಮ್ಮ ಬೆಂಬಲವನ್ನು ಹಿಂದೆ ಪಡೆಯುವ ಸಾಧ್ಯತೆ ಇದೆ. ಗೌಡರನ್ನು ಬದಲಾವಣೆ ಮಾಡಿದಲ್ಲಿ ಆ ಸ್ಥಾನಕ್ಕೆ ಯಡಿಯೂರಪ್ಪ ಸೂಚಿಸುವ ವ್ಯಕ್ತಿಯನ್ನು ತರಬಾರದೆಂದು ಜಾರಕಿಹೊಳಿ ಬಣ ಪಟ್ಟು ಹಿಡಿದಿದೆ. ಒಂದು ವೇಳೆ ಅವರು ನೀಡಿದ ಅಭ್ಯರ್ಥಿಯನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ತಂದಲ್ಲಿ ನಾವು ಸಾಮೂಹಿಕ ರಾಜೀನಾಮೆ ಕೊಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಇದರಿಂದ ಬಿಜೆಪಿ ವರಿಷ್ಠರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಜಾರಕಿಹೊಳಿ ಬಣದಲ್ಲಿ ಇಬ್ಬರು ಸಚಿವರು ಸೇರಿದಂತೆ ೧೫ ಶಾಸಕರು ಇದ್ದು ಅವರು ಕಠಿನ ನಿಲುವು ಕೈಗೊಂಡರೆ ಸರಕಾರವೇ ಉರುಳಲಿದೆ. ಹೀಗಾಗಿ ಮುಂದೇನು ಮಾಡಬೇಕೆಂದು ದೆಹಲಿಯ ನಾಯಕರು ಚಿಂತನೆ ನಡೆಸಿರುವುದಲ್ಲದೆ ಜಗದೀಶ್ ಶೆಟ್ಟರ್ ಪಕ್ಷದ ಅಭ್ಯರ್ಥಿ. ಅವರು ಯಾವುದೇ ಬಣಕ್ಕೂ ಸೇರಿದವರಲ್ಲ ಎಂಬ ಅಂಶವನ್ನು ಮುಂದಿಟಿದ್ದಾರೆ, ತಮ್ಮ ರಾಜಕೀಯ ಲಾಭಕ್ಕಾಗಿ ಯಡಿಯುರಪ್ಪ ಶೆಟ್ಟರವರನ್ನು ಮುಂದಿಡುವ ಪ್ರಯತ್ನ ಮಾಡಿದ್ದಾರೆ.
Tagged with
dvs,
snews
ಕಾರ್ಕಳ: ಬೆಳ್ಮಣ್ ಸಮೀಪದ ಸೂಡಾದ ಕರಿಕಲ್ಲಿನ ಕೋರೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಿಡಿಲಿನ ಅಘಾತ ಕಾರಣವಲ್ಲವೆಂಬ ಮಹತ್ವದ ಅಂಶವೊಂದು ತಹಶೀಲ್ದಾರ್ ಜಗನ್ನಾಥರಾವ್ ಅವರು ನೀಡಿರುವ ವರದಿಯಲ್ಲಿ ಬೆಳಕಿಗೆ ಬಂದಿದೆ. ಇದೇ ತಿಂಗಳ ೧೯ರ ಮಧ್ಯಾಹ್ನ ಸುಮಾರು ೩.೩೦ರ ವೇಳೆಗೆ ಸೂಡಾದ ಕೋರೆಯಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಬಾಗಲಕೋಟೆಯ ಮಲ್ಲವ್ವ ಹನುಮಂತಪ್ಪ(೩೫), ಕೊಪ್ಪಳದ ಅಂಬಿಕಾ ಮಲ್ಲೇಶ್(೨೪) ದಾರುಣ ರೀತಿಯಲ್ಲಿ ಮೃತಪಟ್ಟವರು.
ಮಾಳದ ಜೋಯ್‌ಯ ಮಗ ಕಿರಣ್ ಕುಮಾರ್‌ಗೆ ಸೇರಿದ ಕೋರೆ ಅದಾಗಿತ್ತೆಂದು ತಿಳಿದುಬಂದಿದೆ. ಗೋದಾಮಿನಲ್ಲಿ ಶೇಖರಿಸಲ್ಪಟ್ಟಿದ್ದ ಸ್ಫೋಟಕಗಳು ಸ್ಫೋಟಿಸಿರುವುದಕ್ಕೆ ನಿಖರ ಕಾರಣ ತಿಳಿಯುವ ಮೊದಲೇ ಸಿಡಿಲಿನ ಅಘಾತದಿಂದಲೇ ಘಟನೆ ಸಂಭವಿಸಿದೆ ಎಂದು ಪ್ರಚಾರಪಡಿಸಲಾ ಗಿತ್ತು. ಇದರ ಹಿಂದೆ ಪ್ರಕರಣವನ್ನು ಮುಚ್ಚಿಹಾಕುವ ಸಂಚು ಹಾಗೂ ಪ್ರಾಕೃತಿಕ ವಿಕೋಪದಡಿಯಲ್ಲಿ ಪರಿಹಾರ ಧನ ಪಡೆಯುವ ದುರುದ್ದೇಶ ಇತ್ತೆಂದು ಪತ್ರಿಕೆ ವರದಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸ್ಫೋಟ ಸಂಭವಿಸಿದ ವೇಳೆಯಲ್ಲಿ ಯಾ ಅದಕ್ಕೂ ಮುಂಚಿತವಾಗಿ ಪರಿಸರದಲ್ಲಿ ಗುಡುಗು, ಸಿಡಿಲು ಅಥವಾ ಮಳೆ ಸುರಿದ ಯಾವುದೇ ಮಾಹಿತಿ ಕಂದಾಯ ಇಲಾಖೆಯಿಂದ ವರದಿಯಾಗಿರಲಿಲ್ಲ. ಮುನ್ನೆಚ್ಚರಿಕೆ ಕ್ರಮವಹಿಸದೇ ಇದ್ದುದರಿಂದ ಘಟನೆ ಸಂಭವಿಸಿದೆ ಎಂಬ ಮಹತ್ವದ ಅಂಶವು ತಹಶೀಲ್ದಾರ್ ಕಚೇರಿ ಮೂಲಗಳಿಂದ ಬಹಿರಂಗಗೊಂಡಿದೆ.
Tagged with
lnews,
udupi
ಮಂಗಳೂರು: ಕಳೆದ ನಾಲ್ಕು ಅವಧಿಗಳಲ್ಲಿ ಕುಂದಾಪುರ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿಯ ಶ್ರೀನಿವಾಸ ಶೆಟ್ಟರ ಪ್ರಾಬಲ್ಯವನ್ನು ತಡೆಯುವ ನಾಯಕರು ಕಾಂಗ್ರೆಸ್‌ನಲ್ಲಿ ಈವರೆಗೆ ಬೆಳೆದು ಬಂದಿಲ್ಲ. ಮುಂದೆ ಹೇಗೆ ಎಂಬುದಕ್ಕೂ ಕಾಂಗ್ರೆಸ್‌ನಲ್ಲಿ ಸ್ಪಷ್ಟ ಉತ್ತರ ಸಿಗುತ್ತಿಲ್ಲ.
ಹಾಲಾಡಿ ಶ್ರೀನಿವಾಸ ಶೆಟ್ಟರು ತಮ್ಮ ಕಾರ್ಯ ವೈಖರಿಯಿಂದಲೇ ಜನಪ್ರಿಯರಾಗಿರುವ ನಾಯಕ. ಇವರು ಪಕ್ಷದ ಹಂಗಿಲ್ಲದೆ ಬೆಳೆದವರು. ಇವರಂತೆಯೇ ಜನಮನದ ನಾಯಕರಾಗಿರುವವರು ಜಯಪ್ರಕಾಶ ಹೆಗ್ಡೆ.
ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಇಬ್ಬರೂ ಜನನಾಯಕರಲ್ಲಿ ಕುಂದಾಪುರ ನಾಗರಿಕರು ಆಯ್ದು ಕೊಂಡಿದ್ದು ಶ್ರೀನಿವಾಸ ಶೆಟ್ಟರನ್ನೇ. ನಾಲ್ಕು ಬಾರಿ ಶಾಸಕರಾಗಿದ್ದರೂ ಸಚಿವ ಸ್ಥಾನಕ್ಕಾಗಿ ಹಾತೊರೆಯದೆ, ಬಿಜೆಪಿಯ ಆಂತರಿಕ ಭಿನ್ನಮತ, ಗೊಂದಲ ಮತ್ತು ಹಗರಣಗಳಿಗೆ ಸಿಲುಕದಂತೆ ತನ್ನ ಪಾಡಿಗೆ ತಾನು ಪ್ರತಿನಿಧಿಸುವ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟರ ಪ್ರಾಬಲ್ಯಕ್ಕೆ ಎದುರಾಗಿ ನಿಲ್ಲುವ ಸಾಮರ್ಥ್ಯ ಪ್ರದರ್ಶಿಸುವ ತಾಕತ್ತು ಕಾಂಗ್ರೆಸ್‌ನಲ್ಲಿ ಇದೆ ಎಂದು ತೋರುವ ನಾಯಕ ಜಯಪ್ರಕಾಶ್ ಹೆಗ್ಡೆ ಮಾತ್ರ. ಆದರೆ ಅವರೀಗ ಸಂಸದರಾಗಿದ್ದಾರೆ. ಮತ್ತೆ ವಿಧಾನಸಭೆಯತ್ತ ಮುಖ ಮಾಡುವ ಸಾಧ್ಯತೆಗಳು ಕಡಿಮೆ. ಇಂತಹ ಸಂದಭsದಲ್ಲಿ ಕಾಂಗ್ರೆಸ್ ಮುಂದಿನ ವಿಧಾನಸಭೆಗೆ ಅಣಿಯಾಗಬೇಕಿದೆ. ಶ್ರೀನಿವಾಸ ಶೆಟ್ಟರಿಗೆ ಟಕ್ಕರ್ ನೀಡಬಲ್ಲ ಕಾಂಗ್ರೆಸ್ ಅಭsರ್ಥಿಯ ಹುಡುಕಾಟ ಅರಂಭsವಾಗಿದೆ.
ದರ್ಪದ ರಾಜಕಾರಣ ಮಾಡಿಯೆ ಜನರಿಂದ ದೂರವಾದ ಪ್ರತಾಪ್‌ಚಂದ್ರ ಶೆಟ್ಟರು ಎರಡು ಬಾರಿ ಶ್ರೀನಿವಾಸ ಶೆಟ್ಟರ ಎದುರು ಸ್ಪರ್ಧಿಸಿ ಸೋತರು. ನಿರಂತರ ಎರಡು ಸೋಲುಗಳಿಂದ ವಾಸ್ತವವನ್ನು ಅರಿತ ಪ್ರತಾಪ್‌ಚಂದ್ರ ಶೆಟ್ಟಿ ಕುಂದಾಪುರದಿಂದ ಜಾಗ ಖಾಲಿ ಮಾಡಿದವರು ಮತ್ತೆ ಅತ್ತ ಮುಖಮಾಡಲಿಲ್ಲ. ಆಸ್ಕರ್ ಫೆರ್ನಾಂಡಿಸ್‌ರ ಕೈಕಾಲು ಹಿಡಿದು ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದರೂ ಅವರು ಪ್ರತಿನಿಧಿಸುವ ವಿಧಾನ ಪರಿಷತ್ ಕ್ಷೇತ್ರದ ಮತದಾರರ ಧsನಿಯಾಗಿದ್ದೂ ಇಲ್ಲ. ಜನರ ಸಮಸ್ಯೆಯನ್ನು ಆಲಿಸಿ ಸ್ಪಂಧಿಸಿದ್ದೂ ಇಲ್ಲ. ಆದುದರಿಂದ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಹೊಸ ನಾಯಕನನ್ನು ಎದುರಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ.
ಪ್ರತಾಪ್‌ಚಂದ್ರ ಶೆಟ್ಟರ ರಾಜಕಾರಣದಿಂದಾಗಿ ಬದಿಗೆ ಸರಿಸಲ್ಪಟ್ಟ ಮಾಜಿ ಶಾಸಕ ಎಸ್.ಎಸ್. ಹೆಗ್ಡೆ ಕೊಳ್ಕೆಬೈಲ್‌ರ ಪುತ್ರ ಕಿಶನ್ ಹೆಗ್ಡೆ ಈಗ ತನ್ನ ಅಸ್ತಿತ್ವ ತೋರಿಸಲು ಸಿದ್ಧರಾಗಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಕಿಶನ್ ಹೆಗ್ಡೆ ಕಾಂಗ್ರೆಸ್ ಕಾರ್ಯಕರ್ತರ ವಿಶ್ವಾಸವನ್ನೂ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ.
ತನಗೆ ದಕ್ಕದ್ದು ಇನ್ಯಾರಿಗೂ ದಕ್ಕಬಾರದು ಎಂಬ ಕಾಂಗ್ರೆಸ್‌ನ ಹಳೆ ನಾಯಕರು ಹೊಟ್ಟೆಕಿಚ್ಚಿನ ಪ್ರವೃತ್ತಿ ಮುಂದುವರಿಯದೇ ಹೋದರೆ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಭsವಿಷ್ಯದ ನಾಯಕರಾಗಿ ಮೂಡಿ ಬರುವ ಸಾಧsತೆಗಳು ಹೆಚ್ಚಾಗಿವೆ.
Tagged with
dk,
lnews,
srinivasshetty
ಮಂಜೇಶ್ವರ: ಉದ್ದೇಶಿತ ಕೊಚ್ಚಿ-ಮಂಗಳೂರು ಗ್ಯಾಸ್ ಪೈಪ್‌ಲೈನ್ ಅಳವಡಿಕೆಗಾಗಿ ಕೇರಳ-ಕರ್ನಾಟಕ ಗಡಿ ಪ್ರದೇಶವಾದ ವರ್ಕಾಡಿ ಪಂಚಾ ಯತ್‌ನ ನಂದಾರ್‌ಪದವಿನಲ್ಲಿ ನಿನ್ನೆ ಅಂತಿಮ ಸರ್ವೆಗಾಗಿ ಆಗಮಿ ಸಿದ್ದ ಗೈಲ್ ಹಾಗೂ ಕಂದಾಯ ಅಧಿಕಾರಿ ಗಳಿಗೆ ಸಂತ್ರಸ್ಥ ಗ್ರಾಮಸ್ಥರು ದಿಗ್ಬಂಧನ ಹಾಕಿದ ಘಟನೆ ನಡೆದಿದೆ.
ಕರ್ನಾಟಕ ಗಡಿ ಪ್ರದೇಶವಾದ ವರ್ಕಾಡಿ ನಂದಾರ್‌ಪದವಿನಿಂದ ನಿನ್ನೆ ಬೆಳಿಗ್ಗೆ ಸರ್ವೇ ಪ್ರಕ್ರಿಯೆಗೆ ಚಾಲನೆ ನೀಡಲು ತೀರ್ಮಾನಿಸಿದ್ದರು. ಅದರಂತೆ ಸಂತ್ರಸ್ತರಿಗೆ ನೋಟೀಸು ಕೂಡಾ ಜಾರಿ ಮಾಡಿದ್ದರು. ಮಾಹಿತಿಯನ್ನರಿತ ಗ್ರಾಮಸ್ಥರು ಹಾಗೂ ಗ್ಯಾಸ್ ಪೈಪ್‌ಲೈನ್ ಹೋರಾಟ ಸಮಿತಿಯ ಪದಾಧಿಕಾರಿ ಗಳು ನಂದಾರ್‌ಪದವಿನಲ್ಲಿ ಬೆಳಿಗ್ಗೆ ಯಿಂದಲೇ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿಗಾಗಮಿಸಿದ ಗೈಲ್ ಹಾಗೂ ಕಂದಾಯ ಅಧಿಕಾರಿಗಳನ್ನು ಮುತ್ತಿಗೆ ಹಾಕಿದ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಹರ್ಷಾದ್ ವರ್ಕಾಡಿ, ಕೃಷಿ ಭೂಮಿಯ ಮೂಲಕ ಹಾದು ಹೋಗುವ ಅಪಾಯಕಾರಿ ಗ್ಯಾಸ್ ಪೈಪ್‌ಲೈನನ್ನು ಯಾವ ಕಾರಣಕ್ಕೂ ಅಳವಡಿಸಲು ಬಿಡುವುದಿಲ್ಲ, ಯಾವ ಬೆಲೆ ತೆತ್ತಾದರೂ ಇದನ್ನು ವಿರೋಧಿಸುತ್ತೇವೆ. ಜನರ ಬದುಕಿಗೆ ಕೊಳ್ಳಿ ಇಡುವ ಪೈಪ್‌ಲೈನ್ ನಮಗೆ ಅಗತ್ಯವಿಲ್ಲ. ಕೇವಲ ಕೈಗಾರಿಕ ಉದ್ದೇಶಗಳಿಗೆ ಈ ಗ್ಯಾಸ್ ಪೈಪ್‌ಲೈನ್ ಹಾಕಲಾಗುತ್ತಿದೆ ಎಂದು ಆರೋಪಿಸಿ ದರು. ಬಳಿಕ ಮಾತನಾಡಿದ ಹೋರಾಟ ಸಮಿತಿ ಮುಖಂಡ ಟಿ. ದೂಮಪ್ಪ ಶೆಟ್ಟಿ, ಪೈಪ್‌ಲೈನ್ ವಿರುದ್ಧ ಎಲ್ಲಾ ಗ್ರಾಮಸ್ಥರೂ ಸಂಘಟಿತರಾಗಿ ಹೋರಾ ಟಕ್ಕಿಳಿಯುವಂತೆ ಕರೆ ನೀಡಿದರು. ಪ್ರತಿಭಟನೆಯಲ್ಲಿ ವರ್ಕಾಡಿ ಗ್ರಾ.ಪಂ. ಸದಸ್ಯೆ ಶ್ರೀಮತಿ ಫೌಝಿಯಾ, ಹೋರಾಟ ಸಮಿತಿಯ ಪ್ರಮುಖರಾದ ವಿಠಲ ಶೆಟ್ಟಿ ತಾಮಾರು, ಮೊಹಮ್ಮದ್ ಆಸನಬೈಲು, ತಾರಾನಾಥ ಕೂಟತ್ತಜೆ, ಅಬ್ದುಲ್ ರಹ್ಮಾನ್ ಕಿನ್ಯ.ಜೆ, ಅಶ್ರಫ್ ಕೆ.ಕೆ., ಅಬ್ಬಾಸ್ ಓಡಂಗಲ್ಲು, ವಿ.ಕೆ. ಭಾಸ್ಕರ, ಸತೀಶ ಕೂಟತ್ತಜೆ ಮುಂತಾ ದವರು ನೇತೃತ್ವ ವಹಿಸಿದ್ದರು. ಕಂದಾಯ ಅಧಿಕಾರಿಯನ್ನು ಭೇಟಿ ಯಾದ ಗ್ರಾಮಸ್ಥರು ಪೈಪ್‌ಲೈನ್ ವಿರೋಧಿಸಿ ಮನವಿಯನ್ನು ಸಲ್ಲಿಸಿದರು.
Tagged with
kasaragod,
lnews
ಮಂಗಳೂರು: ಹೋಲಿಹಿಲ್ ಪ್ರಾರ್ಥನಾ ಮಂದಿರದ ಮೂರ್ತಿಯ ಎದುರು ಇದ್ದ ಹೂದಾನಿಗಳ ನಾಶ ಪ್ರಕರಣದ ಹಿಂದೆ ರಾಜಕೀಯ ಆರಂಭ ವಾಗಿದೆ. ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ ಪೂಜಾರಿ, ಇದೊಂದು ವ್ಯವಸ್ಥಿತ ಪೂರ್ವನಿಯೋಜಿತ ಕೃತ್ಯ. ಕೋಮು ಗಲಭೆಗೆ ಹುನ್ನಾರ. ರಾಜ್ಯದ ಬೇರೆ ಕಡೆಗಳಲ್ಲೂ ಇಂತಹ ಪ್ರಕರಣಗಳು ನಡೆದರೂ ಸರಕಾರ ತನಿಖೆ ನಡೆಸದ ಕಾರಣ ಪ್ರಕರಣಗಳು ಮುಂದುವರಿದಿದೆ. ಈಗ ನಡೆದಿರುವ ಕೃತ್ಯದ ಬಗ್ಗೆ ಪೊಲೀ ಸರು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ತನಿಖೆಗೆ ಆದೇಶ: ಯೋಗೀಶ್ ಭಟ್
ಇದೇ ವೇಳೆ ವಿಧಾನಸಭಾ ಉಪ ಸಭಾಪತಿ ಯೋಗೀಶ್ ಭಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃತ್ಯದ ಹಿಂದೆ ದುಷ್ಕರ್ಮಿಗಳ ಕೈವಾಡ ಇದೆ. ಇಂತಹ ಪ್ರಕರಣಗಳು ಮರುಕಳಿ ಸದಂತೆ ಕ್ರಮ ಕೈಗೊಳ್ಳಲು ಪೊಲೀ ಸರಿಗೆ ಸೂಚಿಸಲಾಗಿದ್ದು, ಈಗ ನಡೆದಿ ರುವ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Tagged with
dk,
lnews
ಮಂಗಳೂರು: ಕಳೆದ ಆದಿತ್ಯವಾರ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಿಗೆಯಂಗಡಿ ಎಂಬಲ್ಲಿ ಸಂಭವಿಸಿದ್ದ ವಿನುತಾ ಶೆಟ್ಟಿ(೨೫) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪ್ರಿಯಕರ ಎನ್ನಲಾದ ಹಳೆಯಂಗಡಿ-ಪಡುಪಣಂಬೂರು ನಿವಾಸಿ ರಾಜೇಶ್ ಪೂಜಾರಿ(೨೪) ಎಂಬಾತನನ್ನು ಬಜ್ಪೆ ಪೊಲೀಸರು ನಿನ್ನೆ ಹಳೆಯಂಗಡಿ ಬಳಿ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ಜುಲೈ ೧೦ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆಯ ಹಿನ್ನೆಲೆ: ಮಲ್ಲಿಗೆಯಂಗಡಿ ನಿವಾಸಿ ವಿನುತಾ ಶೆಟ್ಟಿ ಮುಕ್ಕದ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಪಡುಪಣಂಬೂರು ನಿವಾಸಿ, ಬೈಕಂಪಾಡಿಯಲ್ಲಿ ವೆಲ್ಡರ್ ವೃತ್ತಿಯಲ್ಲಿರುವ ರಾಜೇಶನ ಪ್ರೀತಿಗೆ ಬಿದ್ದಿದ್ದಳು. ಆಕೆಯನ್ನು ಪುಸಲಾಯಿಸಿ ರಾಜೇಶ ಪದೇ ಪದೇ ಆಕೆಯ ಮನೆಗೆ ರಾತ್ರಿ ವೇಳೆ ಹೋಗಿ ಬರುತ್ತಿದ್ದ. ತನ್ನ ಸ್ವಂತ ಬೈಕ್ ಇದ್ದರೂ ಇದಕ್ಕಾಗಿ ಸಂಬಂಧಿಗಳ, ಸ್ನೇಹಿತರ ಬೈಕ್ ಪಡೆದು ತೆರಳುತ್ತಿದ್ದ ಎನ್ನುತ್ತಾರೆ ಈತನನ್ನು ಬಲ್ಲವರು. ಇದೇ ರೀತಿ ಕಳೆದ ಶನಿವಾರವೂ ವಿನುತಾ ಮನೆಗೆ ರಾತ್ರಿ ೧೦ ಗಂಟೆಯ ನಂತರ ತನ್ನ ಸಂಬಂಧಿ ಹಳೆಯಂಗಡಿಯ ಶರತ್ ಎಂಬಾತನ ಬೈಕ್ ಅನ್ನು ಎರವಲು ಪಡೆದು ತೆರಳಿದ್ದ. ಪ್ಯಾಂಟ್, ಶರ್ಟ್ ಅನ್ನು ಎಂದಿನಂತೆ ಬಂದಿದ್ದ ಬೈಕ್‌ನಲ್ಲೇ ಇರಿಸಿ ಚಡ್ಡಿಯಲ್ಲೇ ವಿನುತಾ ಮನೆಯ ಹಿಂಬಾಗಿಲ ಮೂಲಕ ಒಳಪ್ರವೇಶಿಸಿದ್ದ ಆರೋಪಿಯ ಗ್ರಹಚಾರ ಕೆಟ್ಟಿತ್ತು. ಮನೆಮಂದಿ ಯಾವುದೋ ಸದ್ದಿನಿಂದ ಎಚ್ಚೆತ್ತು ಮನೆಯ ದೀಪ ಉರಿಸುತ್ತಲೇ ಆರೋಪಿ ಮನೆಯವರನ್ನು ದೂಡಿಹಾಕಿ ಪರಾರಿಯಾಗುವಲ್ಲಿ ಸಫಲನಾಗಿದ್ದ. ಆದರೆ ತಾನು ಬಂದಿದ್ದ ಬೈಕ್ ಹಾಗೂ ಬಟ್ಟೆಬರೆಗಳನ್ನು ಅಲ್ಲಿಯೇ ಬಿಟ್ಟುಬಂದಿದ್ದ.
ಈ ಘಟನೆಯಿಂದ ನೊಂದ ವಿನುತಾ ರಾತ್ರಿ ತನ್ನ ಮಲಗುವ ಕೋಣೆ ಪ್ರವೇಶಿಸಿದಾಕೆ ಮುಂಜಾನೆ ಶವವಾಗಿ ಪತ್ತೆಯಾಗಿದ್ದಳು. ಆರೋಪಿ ಹಳೆಯಂಗಡಿ ಪರಿಸರದಲ್ಲಿ ಆರಾಮಾಗಿ ತಿರುಗಾಡಿಕೊಂಡಿದ್ದು, ತನ್ನ ಮತ್ತು ಆಕೆಯ ಸಂಬಂಧದ ಬಗ್ಗೆ ಸ್ನೇಹಿತರಲ್ಲಿ ವರ್ಣರಂಜಿತ ಕಥೆ ಕಟ್ಟಿ, ಆಕೆಯ ಸಾವಿಗೆ ಆಕೆಯೇ ಕಾರಣ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದ್ದ. ಇತ್ತ ಬಡಕುಟುಂಬದ ಹಿನ್ನೆಲೆಯ ವಿನುತಾ ಮನೆಯವರು ಮರ್ಯಾದೆಗಂಜಿ ಆರೋಪಿಯ ವಿರುದ್ಧ ದೂರು ನೀಡದೇ ಇರುವುದೂ ರಾಜೇಶನಿಗೆ ವರದಾನವಾಗಿತ್ತು. ಪತ್ರಿಕೆ ನಿನ್ನೆ ಸಾಮಾಜಿಕ ಕಳಕಳಿಯಲ್ಲಿ ಈ ಬಗ್ಗೆ ಸವಿವರವಾಗಿ ವರದಿ ಪ್ರಕಟಿಸಿ ಪೊಲೀಸ್ ಇಲಾಖೆಯನ್ನು ಎಚ್ಚರಿಸುವ ಪ್ರಯತ್ನ ಮಾಡಿತ್ತು.
ವಿನುತಾ ತಾಯಿ ವಿಶಾಲಾಕ್ಷಿ ಶೆಟ್ಟಿ ಬಜ್ಪೆ ಠಾಣೆಗೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ, ಆರೋಪಿಯ ವಿರುದ್ಧ ಸೆಕ್ಷನ್ ೩೦೬ರನ್ವಯ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡು, ಬಜ್ಪೆ ಇನ್ಸ್‌ಪೆಕ್ಟರ್ ದಿನಕರ್ ಶೆಟ್ಟಿ, ಅನಂತ ಮುರ್ಡೇಶ್ವರ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಹಳೆಯಂಗಡಿ ಬಳಿ ವಶಕ್ಕೆ ಪಡೆದು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದನೇ?
ವಿನುತಾ ಆತ್ಮಹತ್ಯೆಯ ಬಗ್ಗೆ ಕಟ್ಟುಕಥೆ ಕಟ್ಟಿ ಜನರನ್ನು ಯಾಮಾರಿಸಲು ಹೊರಟಿದ್ದ ರಾಜೇಶ್ ಪೂಜಾರಿಯ ಬಗ್ಗೆ ಸ್ಥಳೀಯವಾಗಿ ಯಾರಲ್ಲೂ ಒಳ್ಳೆಯ ಅಭಿಪ್ರಾಯವಿಲ್ಲ. ತನ್ನ ಬೈಕ್ ಇದ್ದರೂ ಸ್ನೇಹಿತರ, ಸಂಬಂಧಿಗಳ ಬೈಕ್ ಪಡೆದು ಎಲ್ಲೆಂದರಲ್ಲಿ ತಿರುಗಾಡಿಕೊಂಡಿದ್ದ ಈತ ಕೆಲವೊಂದು ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ವಿನುತಾ ಆತ್ಮಹತ್ಯೆಗೈದ ದಿನ ಸ್ಥಳದಲ್ಲಿ ಸೇರಿದ್ದ ಸಂಘಟನೆಯೊಂದರ ಪ್ರಮುಖರು ಆರೋಪಿಯ ಪರವಹಿಸಿ ಮಾತಾಡಿ ಪ್ರಕರಣದಲ್ಲಿ ರಾಜಿಯಲ್ಲಿ ಮುಗಿಸಲು ಯತ್ನಿಸಿದ್ದರೆಂಬ ಅಂಶವೂ ಬಯಲಾಗಿದೆ. ಸಾಮಾಜಿಕ ಸಂಘಟನೆಯಲ್ಲಿ ತೊಡಗಿಕೊಂಡಿರುವ ಸ್ಥಳೀಯ ಜನಪ್ರತಿನಿಧಿಗಳು ರಾಜೇಶನನ್ನು ಬಚಾವ್ ಮಾಡಲು ಹೊರಟಿದ್ದೂ ಸುದ್ದಿಯಾಗಿತ್ತು.
ನಕಲಿ ಪ್ರೇಮಿಯ ಬಗ್ಗೆ ನಿನ್ನೆಯ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ನಂತರ, ಆರೋಪಿ ತನ್ನ ಗೆಳೆಯರ ಬಳಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಎನ್ನಲಾಗಿದೆ. ಫೋನ್ ಕಾಲ್, ಮೆಸೇಜ್ ಮೂಲಕ ಎಲ್ಲರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದ ಆರೋಪಿ ಕೆಲಹೊತ್ತಿನಲ್ಲೇ ಹಳೆಯಂಗಡಿಯಲ್ಲಿ ಪ್ರತ್ಯಕ್ಷನಾಗಿದ್ದ. ಆತ್ಮಹತ್ಯೆಯ ಬಗ್ಗೆ ವಿಚಾರಿಸಿದ್ದವರಲ್ಲಿ, ತಾನು ಬಪ್ಪನಾಡು ಸೇತುವೆ ತನಕ ಸಾಯಲೆಂದೇ ಹೋಗಿರುವುದಾಗಿಯೂ, ಮನಸ್ಸು ಬಾರದೆ ವಾಪಸ್ ಬಂದಿರುವುದಾಗಿಯೂ ಹೇಳುತ್ತಾ ಯಾಮಾರಿಸಿದ್ದ ಎನ್ನಲಾಗಿದೆ.
ಕೆಲವು ಸಮಯದ ಹಿಂದೆ ಹಳೆಯಂಗಡಿ ಕಾಲೇಜ್‌ನ ಪಿಯುಸಿ ವಿದ್ಯಾರ್ಥಿನಿ ಶ್ವೇತಾ ಆತ್ಮಹತ್ಯೆಗೂ ಸ್ಥಳೀಯ ಸೆಲೂನ್ ಕಾರ್ಮಿಕ ಯುವಕನ ಪ್ರೇರಣೆಯೇ ಕಾರಣವಾಗಿದ್ದರೂ, ಸಂಘಟನೆಯೊಂದರ ಮುಂದಾಳುಗಳು ಆತನನ್ನು ಕಾನೂನಿನ ಕೈಯಿಂದ ಬಚಾವ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಹಳೆಯಂಗಡಿ ಪರಿಸರದಲ್ಲಿ ನಡೆಯುತ್ತಿರುವ ಎರಡನೇ ಪ್ರಕರಣ ಇದಾಗಿರುವ ಕಾರಣ ಸ್ಥಳೀಯರು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ರಕ್ಷಣೆಗೆ ನಿಂತ ಸಂಘಟನೆಯ ನಾಯಕರ ಕೃತ್ಯವನ್ನು ಖಂಡಿಸಿದ್ದರು. ಆದರೆ ಬಜ್ಪೆ ಪೊಲೀಸರು ಯಾವುದೇ ಒತ್ತಡಕ್ಕೂ ಮಣಿಯದೆ ಸಕಾಲಿಕ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿ, ಜೈಲಿನ ಕಂಬಿ ಎಣಿಸುವಂತೆ ಮಾಡಿದ್ದಾರೆ. ಈ ಮೂಲಕ ಜನಾಭಿಪ್ರಾಯಕ್ಕೆ ಸ್ಪಂದಿಸಿರುವ ಬಜ್ಪೆ ಪೊಲೀಸರು ಶ್ಲಾಘನೀಯ ಕೆಲಸ ಮಾಡಿದ್ದಾರೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.
Tagged with
cnews,
feature,
mlore,
vinuthashetty
ಮಣಿಪಾಲ: ಉಸಿರುಗಟ್ಟಿಸಿ ವಿವಾಹಿತ ಮಹಿಳೆಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಆರೋಪಿಗಳ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ಸ್ಥಳೀಯ ರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿ ರುವುದಾಗಿ ತಿಳಿದುಬಂದಿದೆ.
ಉಡುಪಿ ಹೇರೂರು ನಿವಾಸಿ ಅಶೋಕ್ ಪೂಜಾರಿ ಎಂಬವರ ಪತ್ನಿ ಶಕುಂತಳಾ (೩೫) ಎಂಬವರನ್ನು ಸ್ವಗೃಹದಲ್ಲೇ ಕುತ್ತಿಗೆಗೆ ಶಾಲು ಬಿಗಿದು ಹತ್ಯೆಗೈಯ್ಯಲಾಗಿತ್ತು.
ಕೊಲೆಗೆ ಮುನ್ನ ಶಕುಂತಳಾ ಮನೆಗೆ ಸ್ಕೂಟಿಯಲ್ಲಿ ಇಬ್ಬರು ವ್ಯಕ್ತಿಗಳು ಬಂದಿದ್ದ ರೆಂಬ ಮಾಹಿತಿ ಸ್ಥಳೀಯರಿಂದ ತಿಳಿದು ಬಂದಿತ್ತು. ಪರಿಚಯಸ್ಥರೇ ಇಲ್ಲಿಗೆ ಆಗಮಿ ಸಿದ್ದರು ಹಾಗೂ ಇಬ್ಬರಿಗೂ ಜ್ಯೂಸ್ ಕೊಟ್ಟಿ ರುವ ಗ್ಲಾಸುಗಳು ಹತ್ಯೆಯಾದ ಮನೆಯ ಅಡುಗೆ ಕೋಣೆಯಲ್ಲಿರುವುದು ಇದಕ್ಕೆ ಸಾಕ್ಷಿ ಯಾಗಿತ್ತು. ಶಕುಂತಳಾ ಪತಿ ವಿದೇಶದಲ್ಲಿದು, ಅವರು ಅಕೌಂಟಿಗೆ ಹಾಕಿದ್ದ ಹಣವನ್ನು ನೋಡಿ ವಾಪಸ್ಸಾದ ಬಳಿಕ ಕೃತ್ಯ ನಡೆದಿದೆ. ಮನೆಯಲ್ಲಿ ಹಣ, ಚಿನ್ನ ಹಾಗೇ ಇದ್ದುದರಿಂದ ಇದು ದರೋಡೆಗಾಗಿ ನಡೆದಿರುವ ಕೃತ್ಯವಲ್ಲವೆಂದು ಮೇಲ್ನೋಟಕ್ಕೆ ಕಂಡುಬಂದಿದೆ. ಇದೊಂದು ಕೌಟುಂಬಿಕ ಕಲಹದಿಂದ ನಡೆದಿರುವ ಕೃತ್ಯವಾಗಿರಬಹುದೆಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇಬ್ಬರು ಮಕ್ಕಳು ಶಾಲೆಯಿಂದ ವಾಪಸ್ಸಾದಾಗ ಕೃತ್ಯ ಬಹಿರಂಗಗೊಂಡಿದೆ. ನಿನ್ನೆ ವಿದೇಶದಿಂದ ವಾಪಸ್ಸಾಗಿರುವ ಪತಿ ಅಶೋಕ್ ಪೂಜಾರಿ ಪತ್ನಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.
Tagged with
cnews,
feature,
upi
ಮಂಗಳೂರು: ಮೀನುಗಾರಿಕೆಗೆ ತೆರಳುವ ವೇಳೆ ಸಿಆರ್‌ಝೆಡ್ ಅಧಿಕಾರಿಗಳು ಕಿರುಕುಳ ನೀಡುತ್ತಾರೆ. ಆದರೆ ಅವರ ಮನೆಗೆ ಪದಾರ್ಥಕ್ಕೆ ಮೀನು ನೀಡಿದರೆ ಅದನ್ನು ಹಿಡಿದುಕೊಂಡು ವಾಪಸ್ ಹೋಗುತ್ತಾರೆ. ಇಂತಹ ಒಂದು ಆರೋಪ ನಿನ್ನೆ ಮೊಗವೀರ ಪಟ್ಣದಲ್ಲಿ ಕರಾವಳಿ ಕಾವಲು ಪಡೆ ಮೀನು ಗಾರರ ಜೊತೆ ನಡೆಸಿದ ಮಾಹಿತಿ ವಿನಿಮಯ ಕಾರ್ಯಕ್ರಮದಲ್ಲಿ ಕೇಳಿ ಬಂತು.
ನಿನ್ನೆ ಬೆಳಿಗ್ಗೆ ಕರಾವಳಿ ಕಾವಲು ಪಡೆ ಯವರು ಕರಾವಳಿ ಜೀವರಕ್ಷಕ ಈಜುಗಾರರ ಸಂಘದ ಕಚೇರಿಯಲ್ಲಿ ಮಾಹಿತಿ ವಿನಿ ಮಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಮಾಂಡೆಂಟ್ ಕೆ.ಎಲ್.ಅರುಣ್, ಎಸ್. ಉಪಾಧ್ಯಾಯ್, ವೈ.ಎಸ್.ದೋಗ್ರಾ ಮುಂತಾದವರು ಲೈಫ್ ಜಾಕೆಟ್ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಮಾತನಾಡಿದ ಮೀನುಗಾರರಾದ ಗಣಪತಿ ಕೋಟ್ಯಾನ್, ಇದುವರೆಗೆ ನಮ್ಮ ಜೀವದ ಹಂಗು ತೊರೆದು ಸಮುದ್ರ ಪಾಲಾಗಲಿದ್ದ ಸುಮಾರು ೫೦೦ ಮಂದಿಯನ್ನು ಜಾತಿ ಭೇದವಿಲ್ಲದೆ ರಕ್ಷಿಸಲಾಗಿದೆ. ಕೆಲವು ಸಮಯಗಳ ಹಿಂದೆ ರಕ್ಷಣೆಯಲ್ಲಿ ನಿರತರಾದ ಮೀನುಗಾರರೊಬ್ಬರಿಗೆ ಗಾಯವಾಗಿ ಮೂರು ಲಕ್ಷ ಖರ್ಚಾಗಿದೆ. ಆದರೂ ಸರಕಾರ ಇದುವರೆಗೂ ಸಹಕಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಮೀನುಗಾರಿಕಾ ಇಲಾಖೆಯ ಅಧಿಕಾರಿ ವಿಜಯ್‌ಕುಮಾರ್, ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿರುವ ಮೀನುಗಾರರು ಕೆಲಸದ ವೇಳೆ ಮೃತಪಟ್ಟರೆ ತಕ್ಷಣ ೫೦ ಸಾವಿರ ಹಾಗೂ ವಿಮೆಯ ಮೂಲಕ ಒಂದು ಲಕ್ಷ ಪರಿಹಾರ ನೀಡಲಾಗುತ್ತದೆ. ಅದು ಬಿಟ್ಟು ಮೋಜಿಗಾಗಿ ಸಮುದ್ರದ ಬಳಿ ಬಂದು ನೀರುಪಾಲಾದವರನ್ನು ರಕ್ಷಿಸಲು ಹೋದವರಿಗೆ ಪರಿಹಾರ ಕೊಡುವ ಅವಕಾಶ ಇಲ್ಲ ಎಂದರು.
ಇದೇ ವೇಳೆ ಮೀನುಗಾರರೊಬ್ಬರು ಅಧಿಕಾರಿಗಳ ಮೀನು ಪುರಾಣದ ಬಗ್ಗೆ ಹೇಳಿದರು. ಈ ಸಂದರ್ಭ ಮಾತನಾಡಿದ ಕಮಾಂಡೆಂಟ್ ಕೆ.ಎಲ್.ಅರುಣ್, ಅಂತಹ ಅಧಿಕಾರಿಗಳು ಇರುವ ದೋಣಿಯ ಹೆಸರು ಅಥವಾ ನಂಬರ್ ಗುರುತಿಸಿ ದೂರು ನೀಡಿದರೆ ತನಿಖೆ ನಡೆಸಲಾಗುತ್ತದೆ ಎಂದರು.
Tagged with
dk,
feature,
lnews
ಆಲೆಟ್ಟಿ-ಬಡ್ಡಡ್ಕ ರಸ್ತೆಯಲ್ಲಿ ಪ್ರಯಾಣಿಕರ ಪರದಾಟ
ಸುಳ್ಯ: ಮಣ್ಣು ಮತ್ತು ಜಲ್ಲಿ ತುಂಬಿ ದುರಸ್ಥಿ ನಡೆಸಿದ ಅಂತಾರಾಜ್ಯ ರಸ್ತೆಯಾದ ಸುಳ್ಯ-ಆಲೆಟ್ಟಿ-ಬಡ್ಡಡ್ಕ ರಸ್ತೆಯ ಸ್ಥಿತಿ ಮಳೆಗಾಲ ಆರಂಭಗೊಂಡಾಗ ಅಯೋಮಯವಾಗಿದ್ದು, ಪೂರ್ತಿ ಕೆಸರು ರಾಡಿ ತುಂಬಿ ಸಂಚಾರಕ್ಕೆ ಸಂಚಕಾರ ತಂದಿದೆ.
ದುರಸ್ಥಿ ಕಾರ್ಯಕ್ಕಾಗಿ ಮುಖ್ಯಮಂತ್ರಿಯ ಗ್ರಾಮೀಣ ಅಭಿವೃದ್ಧಿ ನಿಧಿಯಿಂದ ೨೫ ಲಕ್ಷ ರೂಗಳನ್ನು ಸಿಎಂ ಸದಾನಂದ ಗೌಡರು ಬಿಡುಗಡೆ ಮಾಡಿದ್ದರು. ಆದರೆ ಬೇಸಿಗೆಯಲ್ಲಿ ಡಾಮರು ಬಳಸದೆ ಹೊಂಡಗಳಲ್ಲಿ ದೊಡ್ಡ ಜಲ್ಲಿ ಮತ್ತು ಮಣ್ಣು ತುಂಬಿ ಮುಚ್ಚಲಾಗಿತ್ತು. ಸುಳ್ಯದ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಸಮ್ಮತಿಯೊಂದಿಗೆ ಈ ರೀತಿಯ ಕಾಟಾಚಾರದ ದುರಸ್ಥಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕೂರ್ನಡ್ಕದಿಂದ ಬಡ್ಡಡ್ಕದವರೆಗೆ ಡಾಮರು ಬಳಸಿ ಅಲ್ಲಲ್ಲಿ ದುರಸ್ಥಿ ಮಾಡಲಾಗಿದೆ. ಬಡ್ಡಡ್ಕದಿಂದ ಎಲಿಕ್ಕಳದವರೆಗೆ ಮಣ್ಣು ಮತ್ತು ಜಲ್ಲಿ ತುಂಬಿ ದುರಸ್ಥಿ ಮಾಡಲಾಗಿದ್ದು, ಈ ಕಡೆಗಳಲ್ಲಿ ಕೆಸರು ತುಂಬಿ ವಾಹನ ಚಾಲಕರು ಪರದಾಡುತ್ತಿದ್ದಾರೆ. ವಾಹನಗಳು ಬ್ರೇಕ್ ಹೊಡೆದರೆ ಜಾರಿ ಅಲ್ಲೇ ಪಲ್ಟಿ ಹೊಡೆಯುವ ಸ್ಥಿತಿ ಇದೆ. ಕಿರಿದಾದ ಮತ್ತು ಕೆಸರು ಮುದ್ದೆ ಯಾಗಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲಕರು ಮತ್ತು ಚಿಕ್ಕ ವಾಹನಗಳ ಚಾಲಕರು ಜೀವವನ್ನು ಕೈಯಲ್ಲಿ ಹಿಡಿದು ಅಪಾಯವನ್ನು ಎದುರು ನೋಡುತ್ತಾ ವಾಹನ ಚಲಾವಣೆ ಮಾಡಬೇಕಾದ ಸ್ಥಿತಿ ಒದಗಿದೆ. ಎರಡೂ ಬದಿಯಲ್ಲಿ ಚರಂಡಿ ತೆಗೆದು ಅರ್ಧಕ್ಕೆ ಬಿಟ್ಟ ಕಾರಣ ಮೊದಲೇ ಕಿರಿದಾಗಿದ್ದ ರಸ್ತೆ ಮತ್ತಷ್ಟು ಚಿಕ್ಕದಾಗಿದೆ.
ಬೇಸಿಗೆಯಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯರ್ ಸತ್ಯನಾರಾಯಣ ರಸ್ತೆಯ ಸ್ಥಿತಿಯನ್ನು ನೋಡಿ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದು ಕೊಂಡಿದ್ದರು. ಆದರೆ ಗುತ್ತಿಗೆದಾರರು ಕೆಲವೇ ಕೆಲವು ಮೀಟರ್ ರಸ್ತೆಯನ್ನು ಮಾತ್ರ ಡಾಮರೀಕರಣ ನಡೆಸಿ ಮಳೆಯ ನೆಪ ಹೇಳಿ ಕೆಲಸಕ್ಕೆ ಮತ್ತೆ ಪೂರ್ಣ ವಿರಾಮ ಹಾಕಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಡ್ಡಡ್ಕದ ಅಮರ ಕ್ರೀಡಾ ಮತ್ತು ಕಲಾ ಸಂಘದ ನೇತೃತ್ವದಲ್ಲಿ ಸಾರ್ವಜನಿಕರು ಮುಖ್ಯಮಂತ್ರಿಗೆ ಈಗಾಗಲೇ ದೂರು ನೀಡಿದ್ದಾರೆ. ಮುಂದಿನ ತಿಂಗಳು ಮುಖ್ಯಮಂತ್ರಿ ಸುಳ್ಯಕ್ಕೆ ಆಗಮಿ ಸುವ ಸಂದರ್ಭದಲ್ಲಿ ಇನ್ನಷ್ಟು ದೂರುಗಳನ್ನು ನೀಡುವ ಸಾಧ್ಯತೆ ಇದೆ.
Tagged with
dk,
feature,
lnews,
road
ಮಂಗಳೂರು: ಸಂಸದ ನಳಿನ್‌ಕುಮಾರ್ ಕಟೀಲ್ ಸಮಗ್ರ ದ.ಕ. ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ಯೋಚಿಸುತ್ತಾರೆ. ಯೋಗೀಶ್ ಭಟ್ಟರ ವ್ಯಾಪ್ತಿ ಮಂಗಳೂರು ನಗರದಿಂದಾಚೆ ಸರಿಯುವುದೇ ಇಲ್ಲ. ಆದರೆ ಯೋಗೀಶ್ ಭಟ್ಟರು ಹಿರಿಯ ನಾಯಕರಾದುದರಿಂದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಅವರ ಅಭಿಪ್ರಾಯಕ್ಕೆ ಆದ್ಯತೆ ನೀಡಲೇ ಬೇಕಾಗುತ್ತದೆ. ಇಂತಹ ಆದ್ಯತೆಯ ವಿಷಯವೇ ಈಗ ನಳಿನರು ಜಿಲ್ಲೆಯಲ್ಲಿ ತರಬಯಸುವ ಬದಲಾವಣೆಗೆ ತೊಡಕಾಗಿದೆ.
ಚುನಾವಣೆ ಸಮೀಪಸುತ್ತಿರುವ ಈ ಸಂದರ್ಭದಲ್ಲಿ ದ.ಕ. ಜಿಲ್ಲೆಯ ಆಡಳಿತ ಚುರುಕುಗೊಳಿಸುವ ಯೋಚನೆ ನಳಿನರದ್ದಾದರೆ, ಅಂಕಿ ಅಂಶಗಳನ್ನೇ ಹೇಳಿ ದಿನ ಕಳೆಯುವ ಯೋಗೀಶ್ ಭಟ್ಟರದು ತಾಳ್ಮೆಯಿಂದ ಕಾರ್ಯನಿರ್ವಹಿಸುವ ಮನಸು.
ದ.ಕ. ಜಿಲ್ಲೆಗೆ ಉಸ್ತುವಾರಿ ಸಚಿವರಿಲ್ಲದೆ ಇರುವುದು ಇವರಿಬ್ಬರ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಉಸ್ತುವಾರಿ ಸಚಿವರು ಇದ್ದಿದ್ದರೆ ಇವರಿಬ್ಬರ ಅಭಿಪ್ರಾಯಗಳನ್ನೂ ಕೇಳಿ ಮಧ್ಯಮ ಮಾರ್ಗ ಅನುಸರಿಸುವ ಅವಕಾಶಗಳು ಇದ್ದವು. ರಾಜಕೀಯ ಜಂಜಾಟದಿಂದ ಪಾಲೇಮಾರರು ಹೊರಗಿದ್ದಾರೆ. ಮಾತ್ರವಲ್ಲದೆ ಬಿಜೆಪಿಯ ಹಿರಿಯರೆನಿಸಿದವರು ಪಾಲೇಮಾರರೊಂದಿಗೆ ಚರ್ಚಿಸುವ ಸೌಜನ್ಯವನ್ನೂ ಮರೆತಿರುವುದರಿಂದ ಜಿಲ್ಲೆಯಲ್ಲಿ ಬದಲಾವಣೆ ಕಠಿಣವಾಗುತ್ತ ಸಾಗಿದೆ.
ಮಂಗಳೂರು ನಗರಕ್ಕೆ ಭರ್ಜರಿ ಸರ್ಜರಿ ಮಾಡಿದ್ದ ಭರತ್‌ಲಾಲ್ ಮೀನಾರಂತೆಯೇ ಜಿಲ್ಲಾಧಿಕಾರಿ ತಮ್ಮ ಅಧಿಕಾರ ಬಳಸುವಂತಾಗಬೇಕು. ಅಭಿವೃದ್ದಿ ಕಾರ್ಯಗಳಿಗೆ ಮರು ಚಾಲನೆ ದೊರೆಯಬೇಕು ಎಂಬುದು ನಳಿನರ ಬಯಕೆ. ಈಗಿರುವ ಸ್ಥಿತಿ ಏನಾಗಿದೆ, ಅಭಿವೃದ್ಧಿಯ ಹೆಸರಿನಲ್ಲಿ ಜನರ ವಿರೋಧ ಕಟ್ಟಿಕೊಳ್ಳುವುದು ಬೇಡ ಎಂಬ ನಿಲುವು ನಳಿನರಿಗೆ ಎದುರಾಗಿರುವ ಬಿಜೆಪಿ ನಾಯಕರ ನಿಲುವಾಗಿದೆ. ಅದೇಕೋ ನಳಿನ್‌ರಿಗೆ ಸಮೀರ್ ಶುಕ್ಲಾ ಎಂಬ ಅಧಿಕಾರಿಯನ್ನು ಜಿಲ್ಲೆಗೆ ತರಬೇಕು ಎಂಬ ಆಸೆ ಮೂಡಿದೆ. ಐದು ವರ್ಷಗಳ ಹಿಂದೆ ಮಂಗಳೂರು ಉಪವಿಭಾಗಾಧಿಕಾರಿಯಾಗಿದ್ದ ಸಮೀರ್ ಶುಕ್ಲ, ಒಂದು ವರ್ಷದ ಬಳಿಕ ಮಂಗಳೂರು ಮಹಾನಗರ ಪಾಲಿಕೆಯ ಹೆಚ್ಚುರಿ ಆಯುಕ್ತರಾಗಿ ಬಂದವರು ೨೦೦೯ರಲ್ಲಿ ಪಾಲಿಕೆಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಈ ಸಮಯದಲ್ಲಿ ಮಂಗಳೂರು ನಗರದಲ್ಲಿ ಹಲವು ಬದಲಾವಣೆ ತಂದಿದ್ದರು. ಶುಕ್ಲಾ ಮತ್ತೆ ನಮ್ಮ ಜಿಲ್ಲೆಗೆ ಬರಲಿ ಎಂಬುದು ನಳಿನ್‌ರ ಅಭಿಪ್ರಾಯ.
ಶುಕ್ಲಾ ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಮನ್ನಣೆ ನೀಡುವುದಿಲ್ಲ. ಅವರನ್ನು ಇಲ್ಲಿಗೆ ತರುವುದಕ್ಕಿಂತ ಈಗ ಇರುವವರನ್ನೆ ಸರಿಯಾಗಿ ಬಳಸಿಕೊಳ್ಳಬಹುದಲ್ಲ ಎಂಬುದು ಇನ್ನೊಂದು ಅಭಿಪ್ರಾಯ.
ಈ ಬೇಕು ಬೇಡ ಕೇವಲ ಒಬ್ಬ ಅಧಿಕಾರಿಗೆ ಸೀಮಿತವಾದುದಲ್ಲ. ಅಭಿವೃದ್ದಿ ಕಾರ್ಯಗಳಲ್ಲೂ ಇಂತಹದ್ದೇ ತೊಳಲಾಟಗಳು ಮುಂದುವರಿದಿವೆ.
Tagged with
dk,
feature,
lnews,
nalin,
yogishbhat
ಮಂಗಳೂರು: ನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಜೋಗಿಮಠ ಬಳಿಯ ಸ್ಮಶಾನ ಮೊದಲ ಮಳೆಗೇ ಸೋರುತ್ತಿದೆ. ಇದರಿಂದ ಇಲ್ಲಿ ಹೆಣ ಸುಡಲು ಸಾಧ್ಯ ವಾಗುತ್ತಿಲ್ಲ, ಪರಿಣಾಮ ಇಲ್ಲಿಗೆ ತರುವ ಹೆಣಗಳಿಗೆ ಶಕ್ತಿನಗರ, ನಂದಿಗುಡ್ಡೆ ಸ್ಮಶಾನದ ದಾರಿ ತೋರಿಸಲಾ ಗುತ್ತಿದೆ. ಕಳೆದ ಮೂರು ವರ್ಷಗಳಿಂದ ಇದೇ ಸ್ಥಿತಿ ಇಲ್ಲಿಯದ್ದಾಗಿರುವ ಕಾರಣ ಸ್ಥಳೀಯ ಜನ ಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ.
ಕದ್ರಿ ಸ್ಮಶಾನ ಕಾಂಗ್ರೆಸ್ ಕಾರ್ಪೊರೇಟರ್ ವಾರ್ಡ್‌ನಲ್ಲಿ ಬರುತ್ತದೆ. ಪ್ರತೀ ಬಾರಿ ಜನರು ಸಮಸ್ಯೆಯ ಬಗ್ಗೆ ದೂರುವಾಗಲೂ ಇಲ್ಲಿಗೆ ಬರುವ ಜನಪ್ರತಿನಿಧಿಗಳು ಮೇಲ್ಗಡೆ ಸೋರುವ ಛಾವಣಿ ಯನ್ನು ದಿಟ್ಟಿಸಿ, ‘ಕೂಡಲೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ವಾಪಸ್ ಹೋಗುತ್ತಾರೆ. ಬೇಸಿಗೆ ಕಾಲವನ್ನು ಹೀಗೆಯೇ ಕಳೆದಿದ್ದರೆ, ಮಳೆ ಗಾಲದಲ್ಲಿ ಹೆಣ ಸುಡುವುದಕ್ಕೂ ಅಸಾಧ್ಯ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಜೋರಾಗಿ ಮಳೆ ಬಂದರೆ ಶವಸಂ ಸ್ಕಾರಕ್ಕೆ ಬಂದವರು ಕೊಡೆ ಹಿಡಿದು ನಿಲ್ಲಬೇಕು. ಶವವನ್ನು ಸುಡುವ ಚಿತೆ ನಾದುರಸ್ತಿಯಲ್ಲಿದ್ದು, ಮಳೆ ಬಂದರೆ ಮೇಲಿನಿಂದ ಧಾರಾಕಾರವಾಗಿ ನೀರು ಸುರಿಯುತ್ತದೆ. ಹೀಗಾಗಿ ಅನಿವಾರ್ಯ ವಾಗಿ ಇಲ್ಲಿಗೆ ಬರುವ ಹೆಣಗಳನ್ನು ಬೇರೆಡೆ ಕಳುಹಿಸುವಂತಾಗುತ್ತದೆ ಎನ್ನುತ್ತಾರೆ ಇಲ್ಲಿ ಶವ ಸುಡುವ ಕಾಯಕ ಮಾಡುತ್ತಿರುವ ಅಮರನಾಥ ಅವರು.
‘ಇಲ್ಲಿನ ಸ್ಮಶಾನವನ್ನು ಅಭಿವೃದ್ಧಿ ಪಡಿಸು ವುದಕ್ಕೂ ರಾಜಕೀಯ ತಡೆಯಾಗಿರುವ ಸಾಧ್ಯತೆ ಇದೆ. ಕನಿಷ್ಟ ಒಂದೂವರೆ ಲಕ್ಷ ರೂ.ನಲ್ಲಿ ಸ್ಮಶಾನವನ್ನು ಸುಸ್ಥಿತಿಗೆ ತರಬಹುದಾದರೂ ಜನಪ್ರತಿನಿಧಿಗಳು ಈ ಬಗ್ಗೆ ಅಸಡ್ಡೆ ಮುಂದುವರಿಸಿದ್ದಾರೆ. ಮಳೆಗಾಲದಲ್ಲಿ ಸ್ಮಶಾನ ಸೋರುವ ಕಾರಣ ಇಲ್ಲಿಗೆ ತರುವ ಹೆಣಗಳನ್ನು ಇಲ್ಲಿಂದ ಮತ್ತೆ ಬೇರೆಡೆ ಸಾಗಿಸುತ್ತಾರೆ. ಇದು ಮೃತರ ಮನೆಯವರಿಗೆ ಮತ್ತಷ್ಟು ಸಂಕಷ್ಟದ ವಿಚಾರ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಹರೀಶ್.
ಕದ್ರಿ ದೇವಳದ ತೀರಾ ಸಮೀಪದಲ್ಲಿ ರುವ ಸ್ಮಶಾನವನ್ನು ಅಭಿವೃದ್ಧಿಪಡಿಸಲು ಆಡಳಿತಗಾರರನ್ನು ಕಾಯಬೇಕಿಲ್ಲ. ಕದ್ರಿ ದೇವಳಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಇಲ್ಲಿ ಸ್ಮಶಾನವನ್ನು ಅಭಿವೃದ್ಧಿಪಡಿಸುವ ಸಣ್ಣ ಕಾಯಕಕ್ಕೆ ಆಡಳಿತ ಮಂಡಳಿಯಲ್ಲಿ ಹಣವಿಲ್ಲವೆಂ ದೇನಲ್ಲ. ಆದರೆ ಹಿತಾಸಕ್ತಿಯ ಕೊರತೆ ಎದ್ದು ಕಾಣುತ್ತದೆ. ವರ್ಷಕ್ಕೊಂದು ಬಾರಿ ಭಾರೀ ಗೌಜಿಯಿಂದ ಕೃಷ್ಣ ಜನ್ಮಾಷ್ಟಮಿ ನಡೆಸುವ ಕದ್ರಿಯಲ್ಲಿ, ಹಣವನ್ನು ದುಂದುವೆಚ್ಚ ಮಾಡುವುದೂ ನಡೆಯು ತ್ತದೆ. ಭಾರೀ ಗೌಜಿಯಿಂದ ಹಗಲು-ರಾತ್ರಿ ‘ಮಂಡಲ’ ನಡೆಯುತ್ತದೆ. ಹೀಗಿರುವಾಗ ಪಕ್ಕದಲ್ಲೇ ಪಾಳು ಬಿದ್ದಿರುವ ಸ್ಮಶಾನದ ಸುಧಾರಣೆ ಕಷ್ಟವಲ್ಲ ಎನ್ನುವುದು ನಾಗರಿಕರ ಅಭಿಪ್ರಾಯವಾಗಿದೆ.
ಬೋಳೂರಿನಲ್ಲೂ...
ಸ್ಮಶಾನದ ಪರಿಸ್ಥಿತಿ ಕದ್ರಿಯಲ್ಲಿ ಮಾತ್ರವೇ ಹೀಗೆ ಎಂದರೆ ತಪ್ಪಾಗುತ್ತದೆ. ಯಾಕೆಂದರೆ ನಗರದ ಬೋಳೂರಿನ ಸ್ಮಶಾನದ ಪರಿಸ್ಥಿತಿ ಹೇಳಿ ಮುಗಿಯದ ಕಥೆ. ಇಲ್ಲಿ ಹೆಣ ಹೊತ್ತಿಸುವಲ್ಲಿ ಮೇಲ್ಭಾಗದ ಛಾವಣಿಯೂ ಇಲ್ಲ, ಹೆಣ ಸುಡುವಲ್ಲಿ ಮಳೆಯಿಂದ ಆಶ್ರಯ ಪಡೆಯಲು ಬೇರೆ ವ್ಯವಸ್ಥೆಯೂ ಇಲ್ಲ. ಹೆಣ ಸುಡುವ ಚಿತೆಯೂ ತುಕ್ಕು ಹಿಡಿದಿದ್ದು, ಇನ್ನೇನು ಮುರಿದು ಬೀಳುವ ಹಂತ ತಲುಪಿದೆ. ಕದ್ರಿ ಸ್ಮಶಾನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ರೋಟರಿ, ಲಯನ್ಸ್ ಕ್ಲಬ್ ಮತ್ತಿತರ ಸಂಘಟನೆಗಳು ಮುಂದೆ ಬಂದಲ್ಲಿ ಜನರ ಪ್ರೀತಿ-ವಿಶ್ವಾಸಕ್ಕೂ ಪಾತ್ರವಾಗಲಿವೆ. ನಗರಪಾಲಿಕೆ ವ್ಯಾಪ್ತಿಯ ಇನ್ನೂ ಹಲವಾರು ಕಡೆ ಇಂಥದ್ದೇ ಸ್ಮಶಾನಗಳಿದ್ದು, ಮನಪಾ ಆಡಳಿತ, ಜನಪ್ರತಿನಿಧಿಗಳು ಕಣ್ತೆರೆಯಬೇಕಾದ ಅಗತ್ಯವಿದೆ.
Tagged with
dk,
feature,
lnews
ಕಮರಿ ಹೋಗುತ್ತಿದೆ ಮನೋಹರ ಬದುಕು
ಮಂಗಳೂರು: ಮೊನ್ನೆ ಮೊನ್ನೆಯವರೆಗೆ ಲವಲವಿಕೆ ಯಿಂದ ಓಡಾಡುತ್ತಿದ್ದ ಹುಡುಗ ಇಂದು ಕೃಶವಾದ ಶರೀರವನ್ನು ಹೊತ್ತು ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ಬೆಡ್ ಮೇಲೆ ಸೂರು ದಿಟ್ಟಿಸುತ್ತಾ ಮಲಗಿದ್ದಾನೆ, ಆತ ಭವಿಷ್ಯದ ಕನಸುಗಳನ್ನೇ ಮರೆತಿದ್ದಾನೆ. ಹೊಸತನದ ಆಸೆಯೊಂದಿಗೆ ಮೊದಲ ಬಾರಿಗೆ ಕೆಲಸಕ್ಕೆ ಸೇರಿದ್ದ ಹುಡುಗ ದುಡಿಯಲು ಆರಂಭಿಸಿದ ನಾಲ್ಕೇ ತಿಂಗಳಿಗೆ ಆಸ್ಪತ್ರೆ ಸೇರಿ ಮನೆಯವರನ್ನೇ ಆಶ್ರಯಿಸುವಂತಾಗಿದೆ. ಮೂರು ತಿಂಗಳಲ್ಲಿ ಆತನಿಗೆ ಬರೊಬ್ಬರಿ ಮೂರು ಲಕ್ಷ ಖರ್ಚಾಗಿದೆ, ಇನ್ನು ಇಪ್ಪತ್ತು ಲಕ್ಷದ ಅಗತ್ಯತೆ ಇದೆ. ಕೂಲಿ ಕೆಲಸ ಮಾಡಿ ಬದುಕುವ ಹೆತ್ತ ಮನಸ್ಸುಗಳು ಒಟ್ಟುಗೂಡಿಸುವ ೨೦ ಲಕ್ಷದಲ್ಲಿ ಒಂದು ಜೀವದ ಉಸಿರು ನಿಂತಿದೆ.
ಆತನೇ ಮನೋಹರ. ತನ್ನ ಬದುಕಿನ ಬಗ್ಗೆ ಮನೋಹರವಾದ ಕನಸುಗಳನ್ನು ಕಂಡು ಆಗಷ್ಟೇ ವೃತ್ತಿಗೆ ಸೇರಿದ ೧೮ರ ಹರೆಯದ ಯುವಕ. ದೇವರು ಪ್ರತಿಯೊಬ್ಬರ ಬದುಕನ್ನೂ ಅಲೆದು ತೂಗಿ ನೋಡುತ್ತಾನೆ, ಆತನ ಪರೀಕ್ಷೆಯನ್ನು ಗೆದ್ದು ಬಂದರೆ ಜೀವನದಲ್ಲಿ ಪರಿಪೂರ್ಣತೆ ಯನ್ನು ಕಾಣುತ್ತೇವೆ ಎನ್ನುತ್ತಾರೆ ಬಲ್ಲವರು. ಆದರೆ ದೇವರ ಆಟದಲ್ಲಿ ಸತತ ಸೋಲುಂಡವನೇ ಮನೋಹರ. ಏಕಾಏಕಿ ಉಂಟಾದ ಅನಾರೋಗ್ಯದ ಪರಿಣಾಮ ತನ್ನೆರಡೂ ಕಿಡ್ನಿ ಗಳನ್ನೂ ಕಳೆದುಕೊಂಡು ನಿಲ್ಲಲೂ ಆಗದ ಸ್ಥಿತಿಗೆ ತಲುಪಿ ದ್ದಾನೆ. ಸದ್ಯದ ಪರಿಸ್ಥಿತಿಯಲ್ಲಿ ಈತನಿಗೆ ಡಯಾಲಿಸಿಸ್‌ನ ಅಗತ್ಯವನ್ನು ವೈದ್ಯರು ಶಿಫಾರಸ್ಸು ಮಾಡಿದ್ದಾರೆ. ಹೀಗಾಗಿ ವಾರಕ್ಕೆ ಮೂರುದಿನ ಡಯಾಲಿಸಿಸ್ ಮಾಡಲೇ ಬೇಕಾಗಿದೆ. ಒಂದು ಡಯಾಲಿಸಿಸ್‌ಗೆ ಕನಿಷ್ಠ ಎಂದರೆ ಎರಡು ಸಾವಿರ ತಗುಲುತ್ತಿದೆ, ಡಯಾಲಿಸಿಸ್ ಕಿಡ್ನಿಯನ್ನು ಬದಲಾವಣೆ ಮಾಡುವವರೆಗೂ ನಡೆಯ ಬೇಕಾಗಿದೆ. ಎರಡೂ ಕಿಡ್ನಿಯನ್ನು ಬದಲಾವಣೆ ಮಾಡ ಬೇಕಾದರೆ ೨೦ ಲಕ್ಷ ಅಗತ್ಯವಾಗಿ ಬೇಕು ಎಂದಿದ್ದಾರೆ ಬೆಂಗಳೂರಿನ ವೈದ್ಯರು. ಆದರೆ ಅಷ್ಟು ಹಣ ಹೊಂದಿಸ ಲಾಗದೆ, ಮಗನಿಗೆ ಚಿಕಿತ್ಸೆಯನ್ನೂ ನೀಡಲಾಗದೆ ಹೆತ್ತ ಬಡ ಜೀವಗಳು ಮಗನನ್ನು ಊರಿಗೆ ಕರೆ ತಂದಿದ್ದಾರೆ. ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮನೋಹರ ನಿಗೆ ಸದ್ಯದ ಚಿಕಿತ್ಸೆಯನ್ನು ಕೊಡಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ.
ಕರಿಯಂಗಳ ಅಯರ್‌ಮಾರ್ ಬಡಕಬೈಲ್ ನಿವಾಸಿ ನಾರಾಯಣ ಪೂಜಾರಿ ಮತ್ತು ಮಾಲತಿ ಇವರ ಕೊನೆಯ ಮಗನಾದ ಮನೋಹರ, ಎಸ್‌ಎಸ್‌ಎಲ್‌ಸಿವರೆಗೆ ವಿದ್ಯಾಭ್ಯಾಸವನ್ನು ನಡೆಸಿ ಬಳಿಕ ಐಟಿಐ ಅಭ್ಯಸಿಸಿ ಫಾದರ್‌ಮುಲ್ಲರ‍್ಸ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದ. ಅದೆಷ್ಟೋ ಆಸೆಗಳು ಮೊದಲ ಕೆಲಸಕ್ಕೆ ಸೇರುವ ದಿನದಲ್ಲಿ ಮನೋ ಹರನ ಮನದಲ್ಲಿ ಮೂಡಿತ್ತು. ಆದರೆ ಆ ಆಸೆ ಹೆಚ್ಚು ದಿನ ಉಳಿಯಲೇ ಇಲ್ಲ. ಅದೊಂದು ದಿನ ಮನೋಹರ ಕೆಲಸ ಮಾಡುತ್ತಿದ್ದ ಸಮಯದಲ್ಲೇ ಕುಸಿದು ಬಿದ್ದಿದ್ದ.
ಈತನನ್ನು ಕಂಡ ಸಹೊದ್ಯೋಗಿಗಳು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆ ವೇಳೆಗೆ ಆತನ ಸ್ಥಿತಿ ಚಿಂತಾ ಜನಕವಾಗಿತ್ತು. ಹೀಗಾಗಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆತನನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ಮನೆ ಮಂದಿ ಆತನನ್ನು ಕೆಎಂಸಿಗೆ ದಾಖಲಿಸಿದರಾದರೂ ಅಲ್ಲಿಂದಲೂ ಉನ್ನತ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯುವಂತೆ ವೈದ್ಯರು ಸೂಚಿಸಿದ ಕಾರಣ ಬೆಂಗಳೂರಿಗೆ ಮನೋಹರನನ್ನು ಕರೆದೊಯ್ಯ ಲಾಯಿತು. ಅಲ್ಲಿ ಈತನನ್ನು ಪರೀಕ್ಷಿಸಿದ ವೈದ್ಯರು ಮನೋ ಹರನ ಎರಡೂ ಕಿಡ್ನಿ ಕೆಲಸ ನಿಲ್ಲಿಸುವ ಹಂತಕ್ಕೆ ಬಂದಿರುವ ಕಾರಣ ಕೂಡಲೇ ಕಿಡ್ನಿ ಬದಲಾವಣೆ ಮಾಡುವಂತೆ ಸೂಚಿಸಿದರಲ್ಲದೇ ಅಲ್ಲಿಯವರೆಗೆ ಡಯಾಲಿಸಿಸ್ ಮಾಡು ವಂತೆಯೂ ಸಲಹೆ ನೀಡಿದರು.
ಹೀಗಾಗಿ ಮೊದಲ ಹಂತದಲ್ಲಿ ಎಂಟು ದಿನ ಬೆಂಗಳೂರಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಯಿತು. ಆದರೆ ಅಲ್ಲಿನ ಬಿಲ್ ೬೦ ಸಾವಿರ ದಾಟಿದಾಗ ಕೂಲಿ ಕೆಲಸ ಮಾಡಿಯೇ ಜೀವನ ಸಾಗಿಸುತ್ತಿದ್ದ ನಾರಾಯಣ ಪೂಜಾರಿಗೆ ಮಗನಿಗೆ ಮುಂದಿನ ಚಿಕಿತ್ಸೆ ಬೆಂಗಳೂರಿನಲ್ಲಿ ನೀಡುವುದು ಅಸಾಧ್ಯ ಎಣಿಸಿ ಮಗನನ್ನು ಕರೆದುಕೊಂಡು ಊರಿಗೆ ಬಂದು ವೆನ್ಲಾಕ್‌ಗೆ ದಾಖಲಿಸಿದ್ದಾರೆ. ಮನೋಹರ ಈಗ ಮೊದಲಿನ ಉತ್ಸಾಹದಲ್ಲಿಲ್ಲ ಅದೇನೋ ಅವ್ಯಕ್ತ ನೋವು ಕಾಡುತ್ತಿದೆ. ಇನ್ನಷ್ಟೇ ಸಾಮಾಜಿಕ ಜವಾಬ್ದಾರಿ ವಹಿಸಿಕೊಳ್ಳ ಬೇಕಾದ ಮನಸ್ಸೊಂದು ಕಮರಿ ಹೋಗುವ ಮುನ್ನ ನಾವೆಲ್ಲ ಸಹಾಯ ನೀಡಬೇಕಾಗಿದೆ. ಓದುಗರೇ ಜಯಕಿರಣ ಪತ್ರಿಕೆಯ ಮನವಿಗೆ ಹಿಂದಿನಿಂದಲೂ ಸ್ಪಂದಿಸಿದವರು ನೀವು. ಇದಕ್ಕೂ ಸ್ಪಂದಿಸುತ್ತೀರಿ ಎಂದು ನಂಬಿದ್ದೇವೆ. ನಿಮ್ಮ ಸಹಾಯವನ್ನು ವಿಜಯ ಬ್ಯಾಂಕ್ ಪೊಳಲಿ ಶಾಖೆಯ ಉಳಿತಾಯ ಖಾತೆ ಸಂಖ್ಯೆ ೧೧೭೫೦೧೧೧೦೦೦೦೦೯೮ ಕಳುಹಿಸಿಕೊಡಬಹುದು ಅಥವಾ ೯೮೪೫೭೦೧೦೨೫ ಈ ದೂರವಾಣಿಯನ್ನು ಸಂಪರ್ಕಿಸಬಹುದು.
ಬಿಲ್ಲವರ ಸಂಘಟನೆ ಗಮನಿಸಲಿ
ತಮ್ಮದೇ ಸಮುದಾಯದ ಬಡ ಯುವಕನೊಬ್ಬ ತನ್ನೆರಡೂ ಕಿಡ್ನಿಗಳನ್ನು ಕಳೆದುಕೊಂಡು ಆಸ್ಪತ್ರೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಸೂರು ದಿಟ್ಟಿಸುತ್ತಿದ್ದರೂ ಬಿಲ್ಲವ ಸಂಘಟನೆಗಳು ಗಮನ ಹರಿಸದಿರುವುದು ಶೋಚನೀಯ. ಇನ್ನಾದರೂ ಬಿಲ್ಲವ ನಾಯಕರು ಎಚ್ಚೆತ್ತು ಮನೋಹರನಿಗೆ ಸಹಾಯ ಹಸ್ತ ನೀಡುತ್ತಾರೋ ಎಂದು ಕಾಯಬೇಕಾಗಿದೆ. ಇದೇ ಸಂದರ್ಭ ಮನೋಹರನ ಬಡ ಹೆತ್ತವರು ತಮ್ಮ ಸಂಘಟನೆಯ ಸಹಾಯಕ್ಕಾಗಿ ಅಂಗಲಾಚಿದ್ದಾರೆ.
ಜಯಕಿರಣ ಮನವಿ
ಎರಡೂ ಕಿಡ್ನಿ ಕಳೆದುಕೊಂಡು ಆಸ್ಪತ್ರೆಯಲ್ಲಿ ನರಳುತ್ತಿರುವ ಬಡ ಮನೋಹರನಿಗೆ ಜನಪ್ರತಿನಿಧಿಗಳು, ಓದುಗರು, ಅಭಿಮಾನಿಗಳು, ಸಂಘ ಸಂಸ್ಥೆಗಳು ಕೈಲಾದ ಸಹಾಯ ಮಾಡ ಬೇಕೆಂದು ಜಯಕಿರಣ ಪತ್ರಿಕೆ ಕಳಕಳಿ ಯಿಂದ ಮನವಿ ಮಾಡಿದೆ.
Tagged with
dk,
feature,
help,
lnews
ಬಂಟ್ವಾಳ: ರಾಜ್ಯ ಸರಕಾರ ನೂತನವಾಗಿ ಜಾರಿಗೆ ತಂದಿರುವ ಕರ್ನಾಟಕ ನಾಗರಿಕ ಸೇವಾ ಖಾತ್ರಿ ಮಸೂದೆ-೨೦೧೧( ಸಕಾಲ ) ರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಕಾಲ ಜನಜಾಗೃತಿ ನಾಟಕ ಬಂಟ್ವಾಳ ತಾಲೂಕಿನಾದ್ಯಂತ ನಡೆಯುತ್ತಿದೆ. ದ.ಕ.ಜಿಲ್ಲಾ ವಾರ್ತಾಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಈ ನಾಟಕವನ್ನು ಬಿ.ಸಿ.ರೋಡಿನ ಸಂಸಾರ ಜೋಡುಮಾರ್ಗ ತಂಡ ಅಭಿನಯಿಸುತ್ತಿದ್ದು, ಈಗಾಗಲೇ ೧೦ಕ್ಕೂ ಅಧಿಕ ಗ್ರಾ.ಪಂ.ವ್ಯಾಪ್ತಿಯಲ್ಲಿ ತನ್ನ ಪ್ರದರ್ಶನವನ್ನು ನೀಡಿದೆ.
ಬಂಟ್ವಾಳ ತಾಲೂಕಿನ ಬಾಳೆಪುಣಿಯಲ್ಲಿ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ಪ್ರಕಾಶ್ ರವರಿಂದ ಉದ್ಘಾಟಿಸಲ್ಪಟ್ಟ ಈ ಜನಜಾಗೃತಿ ನಾಟಕವು ಈಗಾಗಲೇ ಬಾಳೆಪುಣಿ, ಪಿಲಾತಬೆಟ್ಟು, ಕಾವಳಮೂಡೂರು, ನಾವೂರು, ಸರಪಾಡಿ, ಕುರ್ನಾಡು, ಕಣಂತೂರು, ಮಂಚಿ, ಬಿ.ಸಿ.ರೋಡು, ಇರಾ, ಗೋಳ್ತಮಜಲು, ಬಾಳ್ತಿಲ ಹಾಗೂ ಮಾಣಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ತನ್ನ ಪ್ರದರ್ಶನಗಳನ್ನು ನೀಡಿದೆ.
ಮೂರು ತಿಂಗಳ ಕಾಲ ನಡೆಯುವ ಈ ಜನಜಾಗೃತಿ ಅಭಿಯಾನದ ಮೂಲಕ ಸಂಸಾರ ತಂಡವು ಜಿಲ್ಲೆಯಾದ್ಯಂತ ೬೦ಪ್ರದರ್ಶನಗಳನ್ನು ನೀಡಲಿದೆ.
Tagged with
briefs,
lnews
ಜಾತ್ಯಾತೀತ ಜನತಾದಳ ಇದರ ತಾಲೂಕು ಮಟ್ಟದ ಕಾರ್ಯಕರ್ತರ ಸಮಾವೇಶ ಬಿ.ಸಿ.ರೋಡ್ ಕೃಷ್ಣಿಮಾ ಹೋಟೇಲಿನ ಕಳಶ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ರಾಜ್ಯ ಉಪಾಧ್ಯಕ್ಷ ಅಮರನಾಥ ಶೆಟ್ಟಿ, ರಾಷ್ಟ್ರೀಯ ಸಮಿತಿ ಸದಸ್ಯ ಹೈದರ್ ಪರ್ತಿಪ್ಪಾಡಿ, ದ.ಕ. ಜಿ. ಜಾತ್ಯಾತೀತ ಜನತಾದಳ ಕಾರ‍್ಯಾಧ್ಯಕ್ಷ ಬಿ.ಮಹಮ್ಮದ್ ಕುಂಞ, ವಿಟ್ಲ, ದ.ಕ. ಜಿ. ಜಾತ್ಯಾತೀತ ಜನತಾದಳ ಮಹಾಪ್ರಧಾನ ಕಾರ‍್ಯದರ್ಶಿ ವಸಂತ್ ಪೂಜಾರಿ, ಮಾಜಿ ತಾ.ಪಂ.ಸದಸ್ಯ ಸೇಸಪ್ಪ ಗೌಡ, ಪುಷ್ಪರಾಜ ಶೆಟ್ಟಿ, ಎಸ್. ಮಹಮ್ಮದ್ ಶಫಿ, ಬಿ.ಮೋಹನ್ ಉಪಸ್ಥಿತರಿದ್ದರು.
ಚಿತ್ರ: ಕಾರ್ತಿಕ್ ಸ್ಟುಡಿಯೋ, ಬಿಸಿ ರೋಡ್
Tagged with
briefs,
lnews
ಹೆಬ್ರಿ : ಛಲ ಬಿಡದೆ ಓದಿ ಯಶಸ್ಸಿನತ್ತ ಹೆಜ್ಜೆ ಇಡುತ್ತ ಸಗುತ್ತ ಬಂದ ಬಾಲೆ ಸುಕೃತಿಗೆ ಈಗ ವಿದೇಶ ಪ್ರವಾಸದ ಯೋಗ ಕೂಡಿ ಬಂದಿದೆ.
ಹೆಬ್ರಿಯ ಚಾರದ ಜವಾಹರ್ ನವೋದಯ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಾರ್ಕಳ ತಾಲ್ಲೂಕು ಕಛೇರಿ ಬಳಿಯ ನಿವಾಸಿ ಕೃಷ್ಣ ಆಚಾರ್ಯ ಮತ್ತು ಸುಲೋಚನಾ ಕೆ. ಅವರ ಪುತ್ರಿ.
ಭಾರತ ಸರ್ಕಾರದ ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ, ಮಾನವ ಸಂಪನ್ಮೂಲ ಸಚಿವಾಲಯವು ಜಪಾನ್ ಸರ್ಕಾರದ ಸಹಯೋಗ ಪಡೆದು ವಿದ್ಯಾರ್ಥಿಗಳಿಗೆ ೧೪ ದಿನಗಳ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳುತ್ತದೆ. ಭಾರತದಿಂದ ಒಟ್ಟು ೫೮೦ ವಿದ್ಯಾರ್ಥಿಗಳು ಜಪಾನ್ ಪ್ರವಾಸವನ್ನು ೫ ಹಂತದಲ್ಲಿ ಕ್ಥಗೊಳ್ಳುತ್ತಿದ್ದು, ಜವಾಹರ್ ನವೋದಯ ವಿದ್ಯಾಲಯದ ೨೦೦ ವಿದ್ಯಾರ್ಥಿಗಳಿಗೆ ಅವಕಾಶವಿದೆ.
ದೇಶದ ಜವಾಹರ್ ನವೋದಯ ವಿದ್ಯಾಲಯದ ಹೈದರಾಬಾದ್ ರೀಜನ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ಜಪಾನ್ ಪ್ರವಾಸಕ್ಕೆ ಆಯ್ಕೆ ಮಾಡಿದ್ದು ಈಕೆ ಕರ್ನಾಟಕದ ಐಕೈಕ ವಿದ್ಯಾರ್ಥಿನಿ. ಈ ಅಧ್ಯಯನ ಪ್ರವಾಸಕ್ಕೆ ಆಯ್ಕೆ ಅತ್ಯಂತ ಕ್ಲಿಷ್ಟಕರವಾಗಿದ್ದು, ಸುಕೃತಿಯ ಆಯ್ಕೆ ನಮಗೆಲ್ಲ ಅತ್ಯಂತ ಹೆಮ್ಮೆ ತಂದಿದೆ. ಅತೀ ಶೀಘ್ರವಾಗಿ ಪಾಸ್‌ಪೋರ್ಟ್ ಪಡೆಯಬೇಕಾಗಿದ್ದು, ವಿದ್ಯಾಲಯದ ಅಭಿಮಾನಿಯಾಗಿರುವ ಶಾಸಕರಾದ ಗೋಪಾಲ ಭಂಡಾರಿಯವರು ವಿಶೇಷ ಮುತುವರ್ಜಿಯಿಂದ ಪಾಸ್‌ಪೋರ್ಟ್ ಮಾಡಿಸಲು ಸಹಕರಿಸಿದ್ದಾರೆ ಎಂದು ವಿದ್ಯಾಲಯದ ಪ್ರಾಂಶುಪಾಲರಾದ ಕೆ. ವಿ. ಸುರೇಶ್ ತಿಳಿಸಿದರು.
ಜೂನ್ ೨ ರಂದು ಬೆಂಗಳೂರಿನಿಂದ ಈಕೆ ಜಪಾನ್ ಪ್ರವಾಸ ಕೈಗೊಂಡಿದ್ದಾಳೆ. ವಿದ್ಯಾರ್ಥಿ ಜೊತೆಗೆ ಈಕೆಯ ಪೋಷಕರು ಪ್ರವಾಸಕ್ಕೆ ತೆರಳುವುದಾದರೆ ಪ್ರವಾಸ ಮತ್ತು ಇತರ ಎಲ್ಲಾ ಖರ್ಚುಗಳನ್ನು ಸರ್ಕಾರವೇ ಭರಿಸುತ್ತದೆ. ಹಾಗೂ ವಿದ್ಯಾರ್ಥಿಗಳಿಗೆ ಇದೊಂದು ಭಾಗ್ಯ ಎಂದು ಪ್ರಾಂಶುಪಾಲರು ಖುಷಿಯಿಂದ ಮಾಹಿತಿ ನೀಡಿದರು. ನವೋದಯ ವಿದ್ಯಾಲಯದ ಅಧ್ಯಕ್ಷ ಉಡುಪಿ ಜಿಲ್ಲಾಧಿಕಾರಿ ಡಾ. ಎಂ. ಟಿ. ರೇಜು, ಶಾಸಕ ಎಚ್. ಗೋಪಾಲ ಭಂಡಾರಿ, ಪ್ರಾಂಶುಪಾಲ ಕೆ.ವಿ.ಸುರೇಶ್,ಸಂಸ್ಥೆಯ ವಿದ್ಯಾಲಯದ ಪಿಟಿಸಿಯ ಮುಖ್ಯಸ್ಥರು ಸೇರಿದಂತೆ ಎಲ್ಲರೂ ಸುಕೃತಿಯ ಜಪಾನ್ ಪ್ರವಾಸಕ್ಕೆ ಶುಭ ಹಾರೈಸಿದ್ದಾರೆ.
Tagged with
briefs,
lnews
ಉಡುಪಿ: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ವತಿಯಿಂದ ಉಡುಪಿ ತಾಲೂಕಿನ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಶೇ.೯೦ಕ್ಕಿಂತಲೂ ಅಧಿಕ ಅಂಕ ಗಳಿಸಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ರವಿವಾರ ಉಡುಪಿಯ ಡೊನ್‌ಬಾಸ್ಕೋ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.
ಎಸೆಸೆಲ್ಸಿಯ ೩೫ ಹಾಗೂ ಪಿಯುಸಿಯ ೨೪ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿ ಗಳಾದ ತೋನ್ಸೆ ಹೆಲ್ತ್ ಸೆಂಟರ್‌ನ ವೈದ್ಯಾಧಿಕಾರಿ ಡಾ.ರಫೀಕ್ ಹಾಗೂ ತಾಪಂ ಸದಸ್ಯ ರಹಮತುಲ್ಲಾ ಪುರಸ್ಕಾರವನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯ ಮಾಜಿ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂm ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಡಾ.ರಫೀಕ್, ಶಿಕ್ಷಣಕ್ಕೆ ಸಂಬಂಧಿಸಿದಂತೆ ಪೋಷಕರು ಹಾಗೂ ಸಮಾಜದಿಂದ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಒಳ್ಳೆಯ ಪ್ರೋತ್ಸಾಹ ನೀಡುವ ಕಾರ್ಯ ನಡೆಯುತ್ತಿದೆ. ಉನ್ನತ ಶಿಕ್ಷಣಕ್ಕೆ ನಗರಕ್ಕೆ ಹೋಗುವ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆತ್ತವರು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಟಿವಿ ನೋಡವುದಕ್ಕಿಂತ ಮಕ್ಕಳನ್ನು ಆಟ ಆಡಲು ಬಿಡುವುದು ಉತ್ತಮ ಎಂದು ಹೇಳಿದರು.
ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಪ್ರೊ.ಸಿರಿಲ್ ಮಥಾಯಿಸ್ ಉಪಸ್ಥಿತರಿ ದ್ದರು. ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್ ಸ್ವಾಗತಿಸಿದರು. ಕೋಶಾಧಿಕಾರಿ ಕಾಸಿಂ ಬಾರಕೂರು ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಲೂವಿಸ್ ಡಿಅಲ್ಮೇಡಾ ವಂದಿಸಿದರು. ಆಲ್ಫೋನ್ಸ್ ಡಿಕೋಸ್ತ ಕಾರ್ಯಕ್ರಮ ನಿರೂಪಿಸಿದರು.
Tagged with
briefs,
lnews
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಆರ್ಥಿಕ ಸಂಕಷ್ಟದಲ್ಲಿದ್ದಾಗ ಮೀನುಗಾರಿಕಾ ಇಲಾಖೆಯಿಂದ ವ್ಯವಸ್ಥಾಪಕ ನಿರ್ದೇಶಕರಾಗಿ ನಿಗಮಕ್ಕೆ ನೇಮಕಗೊಂಡಿದ್ದ ಎಂ.ಡಿ. ಪ್ರಸಾದ್ ಎಂಬ ಅಧಿಕಾರಿ, ನಿಗಮದಲ್ಲಿ ವೇತನ ಸರಿಯಾಗಿ ಸಿಗುತ್ತಿಲ್ಲ ವೆಂದು ಮನಗಂಡು ತನ್ನ ಜಾತಿ ಟ್ರಂಪ್‌ಕಾರ್ಡ್ ಮತ್ತು ಹಣದ ಬಲದಿಂದ ೨೪ ಗಂಟೆಯಲ್ಲಿ ಬೆಳಗಾಂಗೆ ವರ್ಗಾವಣೆ ಬದಲಿಸುವಲ್ಲಿ ಯಶಸ್ವಿಯಾಗಿದ್ದರು.
ತದನಂತರ ರಾಜ್ಯ, ಕೇಂದ್ರ ಸರಕಾರದ ಯೋಜನೆಯಲ್ಲಿ ಮೀನುಗಾರಿಕೆಗೆ ಕೋಟ್ಯಂತರ ರೂಪಾಯಿ ಅನುದಾನ ಹರಿದು ಬಂದಾಗ ಈ ವ್ಯಕ್ತಿಯು ಮೀನುಗಾರಿಕಾ ಇಲಾಖೆಯಲ್ಲಿ ಕಳೆದ ೧೦ ವರ್ಷಗಳಿಂದ ಉತ್ಸವಮೂರ್ತಿಯಾಗಿ ಬೇರುಬಿಟ್ಟ ವೀರಪ್ಪ ಎಂಬ ಚೋರಗುರು ಮತ್ತು ಮೀನುಗಾರಿಕಾ ಇಲಾಖೆಗೆ ನೇಮಕವಾದ ೩೬ ವರ್ಷಗಳಿಂದ ಅವಿಭಜಿತ ದಕ್ಷಣ ಕನ್ನಡ ಜಿಲ್ಲೆಯಲ್ಲೇ ತನ್ನ ದುಡ್ಡಿನ ಬಲದಿಂದ ಕೊಳೆಯುತ್ತಿರುವ ಜಂಟಿ ನಿರ್ದೇಶಕ ಶೆಟ್ಟಿ ಎಂಬ ಗೋಮುಖ ವ್ಯಾಘ್ರರ ಕೃಪಾ ಕಟಾಕ್ಷದಿಂದ ನಿಗಮಕ್ಕೆ ವಕ್ಕರಿಸಿದ. ಈ ಮನುಷ್ಯ ಇಲ್ಲಿ ಕಾಲಿರಿಸಿದ್ದೇ ತಡ ಶುರುವಾಯ್ತು, ಆಡಳಿತ ನೌಕರರ ಸಂಘರ್ಷ, ಕೇಂದ್ರ ಕಚೇರಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ, ಸಿಬ್ಬಂದಿಯು ಪರಸ್ಪರ ಮಾತಾಡುತ್ತಿಲ್ಲ.
ನಿಗಮದ ಕಾರ್ಯದರ್ಶಿ ಅಬ್ದುಲ್ ಅಜೀಜ್ ಎಂಬ ಹಿರಿಯ ಅಧಿಕಾರಿಯ ಮೂಲೆಗುಂಪು, ನೌಕರರಿಗೆ ಸಿಗಬೇಕಾದ ನ್ಯಾಯೋಚಿತ ತುಟ್ಟಿ ಭತ್ಯೆ, ಭಡ್ತಿ, ವಿವಿಧ ಸವಲತ್ತುಗಳಿಗೆ ಕತ್ತರಿ, ನಿಗಮದಲ್ಲಿ ಅರ್ಹ ಹಿರಿಯ ನೌಕರರನ್ನು ಕಡೆಗಣಿಸಿ ತನಗೆ ಬೇಕಾದ ೧೬ ಮಂದಿಯನ್ನು ಬ್ಯಾಕ್‌ಲಾಗ್‌ನಲ್ಲಿ ನೇಮಕಾತಿ, ನೌಕರರಿಗೆ ಬಾಕಿ ಇರುವ ಹಳೇ ತುಟ್ಟಿ ಭತ್ಯೆ ಇತ್ಯಾದಿಗಳನ್ನು ಬ್ಯಾಲೆನ್ಸ್‌ಶೀಟ್‌ನಲ್ಲಿ ನಮೂದಿಸಲಾಗಿಲ್ಲ. ಹೀಗೆ ಸಾಗಿದೆ ಇವರ ಕಪ್ಪು ಮನಸ್ಸಿನ ಕಾರುಬಾರು.
ತಾನು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ದ.ಕ.ಜಿಲ್ಲಾ ಮೀನು ಮಾರಾಟ ಫೆಡರೇಶನ್‌ನಲ್ಲಿ ತನ್ನ ಜೊತೆ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಬ್ಬಳನ್ನು ನಿಗಮದಲ್ಲಿ ನೇಮಕಾತಿ ಮಾಡಲು ಯಶಸ್ವಿಯಾಗಿದ್ದಾರೆ. ಇಬ್ಬರೊಳಗೆ ಹಲವು ವರ್ಷದಿಂದ ಗುಪ್ತ ಸರಿಗಮಪ. ಕಚೇರಿಯಲ್ಲಿ ಸಿಬ್ಬಂದಿಯೊಳಗೆ ಗುಸುಗುಸು. ಹೀಗೂ ಉಂಟೇ? ಈತ ನೇಮಕವಾದ ಸೆಪ್ಟೆಂಬರ್ ೨೦೦೮ರಲ್ಲಿ ನಿಗಮವು ಒದಗಿಸಿದ ಮನೆ ಸ್ಥಿರ ದೂರವಾಣಿಗೆ ಕಂಪ್ಯೂಟರ್ ಮೂಲಕ ಇಂಟರ್‌ನೆಟ್ ಅಳವಡಿಸಿ ಬ್ಲ್ಯೂಫಿಲ್ಮ್ ನೋಡಿ ಆನಂದಿಸಿ, ಒಂದೇ ತಿಂಗಳಲ್ಲಿ ನಿಗಮಕ್ಕೆ ರೂ. ೧೦,೦೦೦ ದುಬಾರಿ ಬಿಲ್ ಹೊರೆ ಹೊರಿಸಿದ ಚಮತ್ಕಾರಿ ವ್ಯಕ್ತಿ ಈತ. ಇವರ ಚಡ್ಡಿ ದೋಸ್ತಿ ಶೆಟ್ಟಿಯಿಂದ ತನಿಖಾ ರಹಿತ ಬಿಲ್ ಮಂಜೂರಾತಿ. ಹೇಗಿದೆ ದುಷ್ಟಕೂಟ?
ಕರ್ನಾಟಕದಾದ್ಯಂತ ನಿಗಮದ ವತಿಯಿಂದ ನಿರ್ಮಾಣವಾ ಗುತ್ತಿರುವ ಎಲ್ಲಾ ಕಳಪೆ ಕಾಮಗಾರಿಯಲ್ಲಿ ಪ್ರಸಾದನಿಗೆ ಪ್ರಸಾದ! ತನ್ನ ಪ್ರಭಾವದಿಂದ ಸುಮಾರು ೩೦ ಮಂದಿಯನ್ನು ಮೀನುಗಾರಿಕಾ ಇಲಾಖೆಯಿಂದ ನಿಗಮದಲ್ಲಿ ಗರಿಷ್ಠ ವೇತನದಲ್ಲಿ ಪ್ರತೀ ನಿಯೋಜನೆ ನೆಲೆಯಲ್ಲಿ ನೇಮಕಾತಿ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಸದ್ರಿ ಯವರಿಂದ ಶೇಕಡಾವಾರು ಹಣ ಪಡೆಯಲಾಗಿದೆ. ಕ.ಮೀ.ಅ. ನಿಗಮದಲ್ಲಿ ಚತುಷ್ಟಕೂಟದ ಕಾರುಬಾರು. ಅಧ್ಯಕ್ಷ ನಿತಿನ್ ಕುಮಾರ್, ವಿ.ಕೆ. ಶೆಟ್ಟಿ, ಅಮರನಾಥ್ ಜೈನ್, ಎಂ.ಡಿ.ಪ್ರಸಾದ್ ಇವರುಗಳ ಬಗ್ಗೆ ಕರ್ನಾಟಕ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಸರಕಾರ ನೇಮಿಸಿದ ಸತ್ಯಶೋಧನಾ ಸಮಿತಿ ತನ್ನ ವರದಿ ಸಲ್ಲಿಸಿದೆ. ಹಣ, ಅಧಿಕಾರ, ರಾಜಕೀಯ, ಜಾತಿ ಪ್ರಭಾವ ಬಳಸಿ ವರದಿ ಮುಚ್ಚಿಡುವ ಪ್ರಯತ್ನ ಯಾವುದೇ ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ.
ಇಷ್ಟೆಲ್ಲಾ ಹಗರಣಗಳ ಸತ್ಯಾಂಶವನ್ನು ಮನಗಂಡು ಸರಕಾರ ಎಂ.ಡಿ.ಪ್ರಸಾದ್‌ರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆದರೆ ಲಂಚಕೋರ ವ್ಯವಸ್ಥಾಪಕ ನಿರ್ದೇಶಕ ಭಟ್ಟ(ಸರಕಾರದ ಆದೇಶ ಉಲ್ಲಂಘಿಸಿದ್ದಕ್ಕಾಗಿ ಈತನ ಮೇಲೆ ಕರ್ನಾಟಕ ನಾಗರಿಕ ಸೇವಾ ಕಾಯಿದೆಯನ್ವಯ ಶಿಸ್ತು ಕ್ರಮ ಕೈಗೊಳ್ಳಬೇಕು) ಮತ್ತು ರಾಜಕೀಯ ಮರಿಪುಡಾರಿ ಅಧ್ಯಕ್ಷ ನಿತಿನ್ ಕುಮಾರ್ ಇಲ್ಲಸಲ್ಲದ ಸರ್ಕಸ್ ಮಾಡಿ ತನ್ನ ಸ್ವಾರ್ಥ ಕ್ಕಾಗಿ ವರ್ಗಾವಣೆ ರದ್ದತಿಗಾಗಿ ಹರಸಾಹಸ ಮಾಡು ತ್ತಿದ್ದಾರೆ. ಸಂಘಪರಿವಾರದ ಹಿರಿಯ ನೇತಾರರೊಬ್ಬರಲ್ಲಿ ಅಂಗಲಾಚಿ ಛೀಮಾರಿಗೊಳಗಾಗಿದ್ದಾರೆ. ಹೇಗಿದೆ ಇವರ ನಡುವಿನ ಆಟ? ಇವರನ್ನು ಕಂಡು ನಗಬೇಕೋ, ಅಳಬೇಕೋ ಎಂದು ತಿಳಿಯದೆ ಜನರಿದ್ದಾರೆ.
ಮೌಲ್ಯಾಧಾರಿತ ರಾಜಕೀಯ ಸಿದ್ಧಾಂತಗಳ ಸೇನಾ ನಿಗಳಾದ ನಮ್ಮ ಸಂಘಪರಿವಾರ, ಭಾಜಪ ಕಾರ್ಯ ಕ ರ್ತರೇ, ಮೀನುಗಾರರ, ಮೀನುಗಾರಿಕೆಯ ಸಮಗ್ರಹಿತ ದೃಷ್ಟಿಯಿಂದ ಸ್ವಯಂ ಘೋಷಿತ ಮೀನುಗಾರ ಮುಖಂಡ ಸರಕಾರಿ ಆದೇಶವನ್ನು ತಡೆಹಿಡಿಯುವ ಅಧ್ಯಕ್ಷ ನಿತಿನ್ ಕುಮಾರರ ಅಧಿಕಾರ ದರ್ಪವನ್ನು ನಿಲ್ಲಿಸುವಿರಾ? ಅವರನ್ನು ಪದವಿ ಗದ್ದುಗೆಯಿಂದ ಕೆಳಗಿಳಿಸುವಿರಾ? ಎಂದು ಈ ಮೂಲಕ ಪ್ರಶ್ನೆ ಮಾಡುತ್ತಿದ್ದೇನೆ.
ಶಶಿಕಾಂತ್ ಸಾಲ್ಯಾನ್, ಹೊಗೆಬಜಾರ್-ಮಂಗಳೂರು
Tagged with
bajaranga
ಉಳ್ಳಾಲ, ಸೋಮೇಶ್ವರ ಪ್ರದೇಶದಲ್ಲಿ ಪ್ರತೀಬಾರಿಯ ಮಳೆಗಾಲದಲ್ಲೂ ಕಡಲ್ಕೊರೆತದಿಂದಾಗಿ ಜನಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ಇಲ್ಲಿ ಹಲವಾರು ವರ್ಷಗಳಿಂದ ಮನೆ ಮಾಡಿಕೊಂಡು ಉಳಿದಿರುವವರು ಮಳೆಗಾಲ ಆರಂಭ ವಾದಂತೆ ಬೆಚ್ಚಿಬೀಳುತ್ತಾರೆ. ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲು ಜಿಲ್ಲಾಡಳಿತ, ಸರಕಾರ ಇನ್ನೂ ಮುಂದಾಗದೇ ಇರುವುದು ನಾಚಿಕೆಗೇಡು. ಕಡಲ್ಕೊರೆತ ಆರಂಭವಾಗುತ್ತಿದ್ದಂತೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಬಂದು ಇಲ್ಲಿ ಫೊಟೋಗೆ ಪೋಸ್ ನೀಡಿ ಹೋಗುತ್ತಾರೆಯೇ ವಿನಹ ಯಾವೊಂದು ಕೆಲಸವನ್ನೂ ಮಾಡುವುದಿಲ್ಲ. ಇದರಿಂದ ಕಡಲ್ಕೊರೆತ ಎನ್ನುವುದು ಸಮಸ್ಯೆ ಯಾಗಿಯೇ ಕಾಡುತ್ತಿದೆ. ಜಿಲ್ಲೆಯವರೇ ಆದ ಮುಖ್ಯಮಂತ್ರಿಗಳು ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವರೇ? ಅಸ್ಲಾಂ, ಉಳ್ಳಾಲ
Tagged with
nimminda
ವಿಧಾನಸಭೆ ರಾಜ್ಯದ ಶಕ್ತಿಕೇಂದ್ರ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಭೂಮಿಕೆ ತಯಾರಾಗಬೇಕಾದದ್ದು ವಿಧಾನಸೌಧದಿಂದ ಎಂಬುದು ಸರ್ವವಿಧಿತ. ಆದರೆ ಬದಲಾದ ಸನ್ನಿವೇಶದಲ್ಲಿ ವಿಧಾನಸಭೆಯು ವಿಲಕ್ಷಣ ಹಾಗೂ ಅನಪೇಕ್ಷಿತ ಸನ್ನಿವೇಶಗಳಿಗೆ ಸಾಕ್ಷಿಯಾ ಗುತ್ತಿದೆ. ಈ ನಡುವೆ ಕರಾವಳಿಯ ಯುವ ಶಾಸಕರೊಬ್ಬರು ವಿಧಾನಸಭೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪ್ರಶ್ನೆ ಕೇಳುವ ಮೂಲಕ ಮಂಗಳೂರು ಶಾಸಕ ಯು.ಟಿ. ಅಬ್ದುಲ್ ಖಾದರ್ ಅವರು ಸದನಕ್ಕೆ, ರಾಜ್ಯಕ್ಕೆ, ಕ್ಷೇತ್ರದ ಜನತೆಗೆ ಘನತೆ ತಂದುಕೊಟ್ಟಿದ್ದಾರೆ. ನಿಷ್ಪಕ್ಷಮತಿ ಗಳಾಗಿ ನಿರೂಪಿಸುವುದಾದರೆ ಯು.ಟಿ. ಅಬ್ದುಲ್ ಖಾದರ್ ನಿಷ್ಕಳಂಕ ಮನೋ ಭಾವದ ಸಹೃದಯಿ ಶಾಸಕ. ತನ್ನ ತಂದೆ ದಿ.ಯು.ಟಿ. ಫರೀದ್‌ರವರ ನ್ಯಾಯ ಮಾರ್ಗದಲ್ಲಿ ಅಭಿವೃದ್ಧಿಯ ಹರಿಕಾರ ರಾಗಿ ಮರೆಯುತ್ತಿದ್ದಾರೆ. ಅಂದಿನ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಂಜನಾಡಿಗೆ ಬಂದಿದ್ದಾಗ ಯು.ಟಿ. ಖಾದರ್ ರಾಜ್ಯದ ಅತ್ಯುತ್ತಮ ಶಾಸಕ ಎಂದು ಘೋಷಿಸಿದ್ದರು. ಇದೀಗ ಅದು ಸಾಕ್ಷಾತ್ಕಾರ ಗೊಂಡಿದೆ. ಎಲ್ಲಾ ವರ್ಗದ ಜನರನ್ನು ಪಕ್ಷ, ಜಾತಿ, ಭೇದವಿಲ್ಲದೆ ಹತ್ತಿರದಿಂದ ಮಾತಾಡಿಸಿ ಅವರ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುವುದು ಯು.ಟಿ.ಖಾದರ್‌ರವರ ವೈಶಿಷ್ಟ್ಯತೆ ಯಾಗಿದೆ. ಇಂಥ ಜನಪ್ರತಿನಿಧಿಗಳು ನಾಡಿನೆಲ್ಲೆಡೆ ಮತ್ತಷ್ಟು ಸಂಖ್ಯೆಯಲ್ಲಿ ಹುಟ್ಟಿಬರಲಿ. ಇವರು ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ಉನ್ನತ ಸ್ಥಾನ ಅಲಂಕರಿಸಲಿ. ಈ ಮೂಲಕ ಇನ್ನಷ್ಟು ಸಮಾಜಸೇವೆ ಮಾಡುವಂತಾಗಲಿ ಎಂದು ಮನದಾಳದ ಹಾರೈಕೆ.
ಕೆ.ಎ.ಅಬ್ದುಲ್ ಅಝೀಝ್,
ಪುಣಚ-ಬಂಟ್ವಾಳ
Tagged with
nimminda
ಕಾರ್ಕಳ ಮಾರಿಗುಡಿ ಪಕ್ಕದಲ್ಲಿರುವ ‘ವಿಶಾಲ್ ಟೂರಿಸ್ಟ್’ ಹೆಸರಿನ ಕಚೇರಿಯಲ್ಲಿ ಗ್ರಾಹಕರಿಗೆ ಬೆಲೆ ಇಲ್ಲದಂ ತಾಗಿದೆ. ಇಲ್ಲಿ ಬೆಳಿಗ್ಗೆಯಿಂದ ಸಂಜೆಯವರಿಗೆ ಹಿರಿಯರ ಗುಂಪೊಂದು ಪಂಚಾಯತಿ ಮಾಡುವುದು ಇಲ್ಲಿಗೆ ಬರುವಂಥ ಗ್ರಾಹಕರಿಗೆ ಮುಜುಗರ ಉಂಟುಮಾಡುತ್ತದೆ. ಇವರಿಂದಾಗಿ ಪರಿಸರದ ಮಹಿಳೆಯರು ಅಗತ್ಯ ಕೆಲಸ ಗಳಿಗಾಗಿ ದೂರದಲ್ಲಿರುವ ಇನ್ನೊಂದು ಕಚೇರಿಯನ್ನು ಅವಲಂಬಿಸಬೇಕಾಗುತ್ತದೆ. ಇದು ಕೇವಲ ಒಂದಿಬ್ಬರು ಗ್ರಾಹಕರ ಸಮಸ್ಯೆಯಲ್ಲ.
ದಿನಂಪ್ರತಿ ಇಲ್ಲಿ ನಡೆಯುವ ಸತ್ಯ ಸಂಗತಿ. ಈ ಪಂಚಾಯತಿ ಕಟ್ಟೆಯ ವಿಷಯ ಸಂಬಂಧಪಟ್ಟ ಬಸ್ ಸಂಸ್ಥೆಯ ಮಾಲಿಕರಿಗೆ ಇನ್ನೂ ತಿಳಿಯದಿರುವುದು ವಿಪ ರ್ಯಾಸವೇ ಸರಿ. ಮಾಲಿಕರು ಸಾಮಾಜಿಕ ಜೀವನದಲ್ಲಿ ಘನತೆಯನ್ನು ಹೊಂದಿದ್ದು, ಜಿಲ್ಲೆಯಲ್ಲಿ ಸಂಸ್ಥೆ ಉತ್ತಮ ಸೇವಾ ದಕ್ಷತೆ ಹೊಂದಿದೆ. ಹಾಗಾಗಿ ಕೂಡಲೇ ಗಮನ ಹರಿಸಿದಲ್ಲಿ ತಮ್ಮಲ್ಲಿಗೆ ಬರುವ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿ ಕೊಳ್ಳಬಹುದು. ಇಲ್ಲದೇ ಹೋದಲ್ಲಿ ಗ್ರಾಹಕರು ಸಂಸ್ಥೆ ಯಿಂದ ದೂರವಾಗುವುದು ಖಚಿತ.
ಗಣೇಶ್ ಕುಮಾರ್, ಕಾರ್ಕಳ
Tagged with
nimminda
ಮುಲ್ಕಿಯ ರೈಲು ನಿಲ್ದಾಣಕ್ಕೆ ಲಿಂಗಪ್ಪಯ್ಯಕಾಡು ಮಾರ್ಗವಾಗಿ ಬರುವ ರಸ್ತೆಯ ಪರಿಸ್ಥಿತಿ ತೀರಾ ಹದಗೆಟ್ಟಿದೆ. ರಸ್ತೆಯ ಡಾಮರು ಮಾಯವಾಗಿ ಜಲ್ಲಿಕಲ್ಲು ಮೇಲೆದ್ದಿದ್ದು, ದ್ವಿಚಕ್ರ-ಕಾರ್ ಚಾಲಕರು ಸಂಚರಿಸಲು ಕಷ್ಟಪಡುತ್ತಿದ್ದಾರೆ. ದಿನಂಪ್ರತಿ ಅನೇಕ ರೈಲುಗಳು ಇಲ್ಲಿ ನಿಲುಗಡೆ ಘೋಷಿಸುವ ಕಾರಣ ಸಾವಿರಾರು ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಾರೆ. ಆದರೆ ರಸ್ತೆಯನ್ನು ಇನ್ನೂ ಮೇಲ್ದರ್ಜೆಗೆ ಏರಿಸದಿರುವುದು ಸಮಸ್ಯೆಗೆ ಕಾರಣವಾಗಿದೆ. ರೈಲು ಬರಲು ಟೈಂ ಆಯಿತು ಎಂದು ಈ ರಸ್ತೆಯಲ್ಲಿ ವೇಗವಾಗಿ ಸಂಚ ರಿಸುವಂತಿಲ್ಲ. ಯಾಕೆಂದರೆ ಮರುದಿನ ವಾಹನ ಗ್ಯಾರೇಜ್‌ನಲ್ಲಿ ಇಡಬೇಕಾಗುತ್ತದೆ. ಈ ಬಗ್ಗೆ ಸಂಬಂಧ ಪಟ್ಟವರಲ್ಲಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆಗೆ ಶೀಘ್ರ ಡಾಮರೀಕರಣ ನಡೆಸುವ ಮೂಲಕ ರೈಲು ಪ್ರಯಾಣಿಕರನ್ನು ಸಮಸ್ಯೆಯಿಂದ ಪಾರು ಮಾಡಬೇಕಾಗಿ ವಿನಂತಿ.
ಕೃಷ್ಣದಾಸ್, ಮೂಡಬಿದ್ರೆ
Tagged with
nimminda