ಜೊಕೊವಿಕ್, ಫೆಡರರ್, ಶರಪೋವಾ ಶುಭಾರಂಭ

Posted by JAYAKIRANA Kirana on Monday, 25 June 2012 | 0 comments | Leave a comment...



ವಿಂಬಲ್ಡನ್ ಟೆನಿಸ್: ವೀನಸ್‌ಗೆ ಆಘಾತಕಾರಿ ಸೋಲುಣಿಸಿದ ವೆಸ್ನಿನಾ
ಲಂಡನ್: ಪ್ರತಿಷ್ಟಿತ ವಿಂಬಲ್ಡನ್ ಕೂಟಕ್ಕೆ ನಿನ್ನೆ ಚಾಲನೆ ಸಿಕ್ಕಿದೆ: ಹಲವು ಘಟಾನುಘಟಿಗಳು ಸಾಮನ್ಯವಾಗಿ ತಮ್ಮ ಪ್ರಥಮ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಆದರೆ ಅಮೆರಿಕಾದ ಮಾಜಿ ಅಗ್ರಶ್ರೇಯಾಂಕದ ವೀನಸ್ ವಿಲಿಯಮ್ಸ್ ಮಾತ್ರ ಪ್ರಥಮ ಸುತ್ತಿನಲ್ಲೇ ಹೊರಬಿದ್ದು, ಅಚ್ಚರಿ ಮೂಡಿಸಿದ್ದಾರೆ. ಇನ್ನುಳಿದಂತೆ ನೊವಾಕ್ ಜೊಕೊವಿಕ್, ರೋಜರ್ ಫೆಡರರ್, ಮರಿಯಾ ಶರಪೋವಾ, ಸಬೀನೆ ಲಿಸಿಕ್ಕಿ ಹಾಗೂ ಲೀ ನಾ ಸೇರಿದಂತೆ ಹಲವರು ಎರಡನೇ ಸುತ್ತಿಗೆ ಅರ್ಹತೆ ಪಡೆಕೊಂಡರು.
ಇಲೆನಾ ವೆಸ್ನಿನಾ ವಿರುದ್ಧ ೬-೧, ೬-೩ರ ಅಂತರದಲ್ಲಿ ಸೋತ ವೀನಸ್ ಟೂರ್ನಿಯ ಅಚ್ಚರಿಯ ಫಲಿಂತಾಶಕ್ಕೆ ಕಾರಣರಾದರು. ಅಲ್ಬರ್ಟ್ ರಾಮೋಸ್ ವಿರುದ್ಧ ೬-೧, ೬-೧, ೬-೧ರ ನೇರ ಅಂತರದಲ್ಲಿ ಗೆಲುವು ಸಾಧಿಸಿದ ಫೆಡರರ್ ಆರು ಬಾರಿಯ ವಿಂಬಲ್ಡನ್ ಚಾಂಪಿಯನ್ ಫೆಡರರ್, ಜುವಾನ್ ಕಾರ‍್ಲೋಸ್ ವಿರುದ್ಧ ೬-೩, ೬-೩, ೬-೧ರ ಅಂತರದ ಗೆಲುವುಂಡ ಜೊಕೊವಿಕ್ ಕೂಡ ದ್ವಿತೀಯ ಸುತ್ತಿಗೆ ಪ್ರವೇಶಿಸಿದರು. ಇನ್ನು ಮಹಿಳಾ ವಿಭಾಗದಲ್ಲಿ ಹೊಸದಾಗಿ ಅಗ್ರಶ್ರೇಯಾಂಕವನ್ನು ಅಲಂಕರಿಸಿರುವ ಮರಿಯಾ ಶರಪೋವಾ ಆಸೀಸ್‌ನ ರೊಡಿನೊವಾಗೆ ೬-೨, ೬-೩ರ ಅಂತರದಲ್ಲಿ ಸೋಲಿಸಿ ತನ್ನ ಸ್ಥಾನಕ್ಕೆ ತಕ್ಕಂತೆ ಆಡಿದರು. ಮಾರ್ಟಿಕ್‌ಗೆ ಸಬೀನೆ ೬-೪, ೬-೨ ಅಂತರದಲ್ಲಿ ಸೋಲಿನ ರುಚಿ ತೋರಿಸಿದ್ದಾರೆ. ಚೀನಾದ ಲೀ ನಾ ಕೂಡ ಎರಡನೇ ಸುತ್ತಿಗೇರಿದ್ದಾರೆ. ಇನ್ನು ಬೆಲ್ಜಿಯಂನ ಕ್ಲೈಸ್ಟರ‍್ಸ್ ಕೂಡ ಗೆಲುವಿನ ರುಚಿ ಕಂಡಿದ್ದಾರೆ.

ಬೃಹತ್ ಅಂತರದಲ್ಲಿ ಸೋಲೊಪ್ಪಿಕೊಂಡ ಪಾಕ್

Posted by JAYAKIRANA Kirana on | 0 comments | Leave a comment...

ಪ್ರಥಮ ಟೆಸ್ಟ್: ಮುಂದುವರೆದ ಲಂಕಾ ಬೌಲರ್‌ಗಳ ಅಬ್ಬರ
ಗಾಲ್: ಪ್ರಥಮ ಟೆಸ್ಟ್‌ನ ಆರಂಭ ದಿಂದಲೂ ಮೇಲುಗೈ ಸಾಧಿಸುತ್ತಾ ಬಂದಿದ್ದ ಲಂಕಾ ಬೌಲರ್‌ಗಳ ಅಬ್ಬರ ನಿನ್ನೆ ಕೂಡ ಮುಂದುವರೆದಿದೆ. ಸೂರ ಜ್ ರಾಂದೀವ್ ಹಾಗೂ ನುವಾನ್ ಕುಲಶೇಕರ ಮಾರಕ ದಾಳಿಗೆ ಕಂಗೆಟ್ಟ ಪಾಕ್ ಪ್ರಥಮ ಟೆಸ್ಟ್ ಪಂದ್ಯವನ್ನು ೨೦೯ ರನ್‌ಗಳ ಬೃಹತ್ ಅಂತರದಿಂದ ಸೋತು ಮೂರು ಪಂದ್ಯಗಳ ಸರಣಿ ಯಲ್ಲಿ ೧-೦ಯಿಂದ ಹಿನ್ನೆಡೆ ಕಂಡಿದೆ.
ಮೂರನೇ ದಿನದಂತ್ಯಕ್ಕೆ ೧೫ ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ೩೬ ರನ್ ಗಳಿಸಿದ್ದ ಪಾಕ್ ಅಂತಿಮವಾಗಿ ೧೧೪ ಓವರ್‌ಗಳಲ್ಲಿ ೩೦೦ ರನ್ ಗಳಿಸಿದ್ದ ವೇಳೆ ಸರ್ವಪತನಗೊಂಡು ಹೀನಾಯ ಸೋಲುಂಡಿತು. ತಂಡದ ಪರ ಯೂನಿ ಸ್ ಖಾನ್ (೮೭) ಹಾಗೂ ಅಸದ್ ಶಫೀಕ್ (೮೦) ಉತ್ತಮ ಆಟ ಪ್ರದರ್ಶಿಸಿ ದ್ದರೂ ಉಳಿದ ದಾಂಡಿಗರು ವಿಫಲ ಗೊಂಡರು. ಅದ್ನಾನ್ ಅಕ್ಮಲ್ (೪೦) ಕೂಡ ಕೆಲಹೊತ್ತು ಕ್ರೀಸ್ ಕಾಯ್ದು ಕೊಂಡಿದ್ದರು. ಲಂಕಾ ಪರ ಮಾರಕ ಬೌಲಿಂಗ್ ದಾಳಿ ಸಂಘಟಿಸಿದ ರಾಂದೀ ವ್ ಹಾಗೂ ಕುಲಶೇಕರ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ೧೯೯ ರನ್ ಸಿಡಿಸಿದ್ದ ಕುಮಾರ ಸಂಗಕ್ಕರ ಅಂತಿಮ ವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನ ರಾದರು.
ನಿನ್ನೆ ಬ್ಯಾಟಿಂಗ್ ಆರಂಭಿಸಿದ ಪಾಕ್ ನಾಲ್ಕನೇ ದಿನದಲ್ಲಿ ಎರಡು ಸೇರಿಸುವಷ್ಟರಲ್ಲಿ ಕ್ರೀಸ್ ಕಾಯ್ದು ಕೊಂಡಿದ್ದ ನೈಟ್‌ವಾಚ್ ಮೆನ್ ಅಜ್ಮಲ್ (೧೨) ವಿಕೆಟ್ ಕಳಕೊಂಡ ರು. ನಂತರ ಜೊತೆಗೂಡಿದ ಅಸದ್ ಹಾಗೂ ಯೂನಿಸ್ ಐದನೇ ವಿಕೆಟ್‌ಗೆ ೧೫೧ ರನ್ ಗಳನ್ನು ಒಟ್ಟುಗೂಡಿಸಿ ದಾಗ ಪಾಕ್ ತಂಡದಲ್ಲಿ ಹೊಸ ಚೈತನ್ಯ ಮೂಡಿತು. ಆದರೆ ಈ ಜೋಡಿ ನಂತರ ಹೆಚ್ಚು ಹೊತ್ತು ನಿಲ್ಲಲಿಲ್ಲ. ಶತಕದತ್ತ ಮುನ್ನುಗುತ್ತಿದ್ದ ಅಸದ್‌ಗೆ ಸ್ಪಿನ್ನರ್ ಹೆರಾತ್ ಪೆವಿಲಿಯನ್ ದಾರಿ ತೋರಿಸಿದರು. ನಂತರ ಪಾಕ್ ಕುಸಿತ ಕಾಣಲು ಆರಂಭಿಸಿ ತು. ಆದರೂ ಏಳನೇ ವಿಕೆಟ್‌ಗೆ ಅಯೂ ಬ್ ಹಾಗೂ ಅಕ್ಮಲ್ ೩೧ ರನ್‌ಗಳನ್ನು ಜೋಡಿಸಿದರು.

ಮೆಸ್ಸಿ ಜೊತೆ ಹೋಲಿಕೆ ಬೇಡ: ಫ್ಯಾಬ್ರಿಗಾಸ್

Posted by JAYAKIRANA Kirana on | 0 comments | Leave a comment...

ಕೀವ್: ಅರ್ಜೆಂಟೀನಾದ ಲಿಯೊ ನೆಲ್ ಮೆಸ್ಸಿ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ ಎಂದು ಸ್ಪೇನ್ ಫುಟ್ಬಾಲ್ ತಂಡ ಪ್ರಮುಖ ಆಟಗಾರ ಸೆಸ್ ಫ್ಯಾಬ್ರಿಗಾಸ್ ನಿನ್ನೆ ತಿಳಿಸಿದ್ದಾರೆ. ಮುಂದೆ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ಕಠಿಣ ಎದುರಾಳಿ ಪೋರ್ಚು ಗಲ್ ವಿರುದ್ಧ ಕಾದಾಟ ನಡೆಸಲಿದೆ. ಮೆಸ್ಸಿ ಹಾಗೂ ಫ್ಯಾಬ್ರಿಗಾಸ್ ಇಬ್ಬರೂ ದೇಶದ ಪರ ಆಡುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರದಿದ್ದರೂ ಕ್ಲಬ್‌ನಲ್ಲಿ ಮಾತ್ರ ಭರ್ಜರಿ ಆಟ ಪ್ರದರ್ಶಿಸುತ್ತಾರೆ.
ನಾನೊಬ್ಬ ವಿಭಿನ್ನ ರೀತಿಯ ಆಟಗಾರನಾಗಿದ್ದು, ಬೇರೆಯವರ ಜೊತೆ ಹೋಲಿಕೆ ಮಾಡುವುದು ಸರಿ ಯಲ್ಲ. ಹೋಲಿಕೆ ಮಾಡುವುದು ಹಾಸ್ಯದಾಯಕವಾಗಿ ಕೂಡ ಕಾಣುತ್ತದೆ. ಬಾಸ್ ನಿರ್ದೇಶನದ ಮೇರೆಗೆ ನಾನು ಆಡುತ್ತೇನೆ. ಯಾರನ್ನೂ ಅನುಕರಿಸು ವುದಿಲ್ಲ. ಮೆಸ್ಸಿ ಆಟದ ಪ್ರಕಾರ ನನಗೆ ತಿಳಿದಿಲ್ಲ, ಮುಖ್ಯವಾಗಿ ಆತ ಯುರೋ ಕಪ್‌ನಲ್ಲಿ ಆಡುತ್ತಿಲ್ಲ. ಹಿಂದಿನ ಆಟಗಾರ ರನ್ನು ಮಾತ್ರ ಅನುಕರಿಸಲು ನಾನು ಇಚ್ಛೆ ಹೊಂದಿದ್ದೇನೆ ಎಂದು ಫ್ಯಾಬ್ರಿಗಾಸ್ ತಿಳಿಸಿದರು.

ಡಿಆರ್‌ಎಸ್ ಕಡ್ಡಾಯಕ್ಕೆ ಸಿಇಸಿ ಸಲಹೆ; ಬಿಸಿಸಿಐ ನಿಲುವು ಅಚಲ

Posted by JAYAKIRANA Kirana on | 0 comments | Leave a comment...

ಐಸಿಸಿ ವಾರ್ಷಿಕ ಸಮ್ಮೇಳನ
ಕ್ವಾಲಾಲಂಪೂರ್: ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅಂಪಾಯರ್ ಪರಾಮಶ್ರೆ ನಿಯಮ (ಡಿಆರ್‌ಎಸ್)ವನ್ನು ಕಡ್ಡಾಯಗೊಳಿಸಲು ಮುಖ್ಯಕಾರ್ಯನಿರ್ವಹಣಾಧಿಕಾರಿ ಸಮಿತಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಸಲಹೆ ನೀಡಿದೆ. ಅಲ್ಲದೆ ಉದ್ಘಾಟನಾ ಬಾಂಗ್ಲಾ ಕ್ರಿಕೆಟ್ ಲೀಗ್‌ನಲ್ಲಿ ನಡೆದಿದೆನ್ನಲಾದ ಅವ್ಯವಹಾರದ ಕುರಿತು ಕೂಡ ಚರ್ಚೆ ನಡೆಸಲಾಗಿದೆ. ಇಲ್ಲಿ ನಡೆದ ಎರಡು ದಿನಗಳ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ.
ಅಲ್ಲದೆ ಹಾಟ್‌ಸ್ಪಾಟ್ ತಂತ್ರಜ್ಞಾನದಲ್ಲಿ ಎರಡು ಕ್ಯಾಮೆರಾಗಳನ್ನು ಉಪಯೋಗಿಸಕೊಳ್ಳಬೇಕಿದ್ದು, ಹಾಗೂ ಬಾಲ್ ಟ್ರ್ಯಾಕಿಂಗ್ ತಂತ್ರಜ್ಞಾನ ಹಾಗೂ ಎಲ್‌ಬಿ ನಿಯಮದಲ್ಲಿ ಕೂಡ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆ ಮಾಡಬೇಕು ಎಂದು ನಿನ್ನೆ ಸಿಇಸಿ ಸಲಹೆ ನೀಡಿದೆ. ಆದರೆ ಡಿಆರ್‌ಎಸ್ ನಿಯಮಕ್ಕೆ ಈ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿರುವ ಬಿಸಿಸಿಐ ನಿನ್ನೆ ಕೂಡ ತನ್ನ ನಿರ್ಧಾರವನ್ನು ಅಚಲಗೊಳಿಸಿದೆ. ಸಭೆಯಲ್ಲಿ ಈ ಬಗ್ಗೆ ಚರ್ಚೆಯಾದ ಬಗ್ಗೆ ನಮಗೆ ಸಂತಸವಿದೆ. ಡಿಆರ್‌ಎಸ್ ನಿಯಮಕ್ಕೆ ನಾವು ಹಿಂದಿನಿಂದಲೂ ವಿರೋಧಿ ಸುತ್ತಿದ್ದು, ಮುಂದೆ ಕೂಡ ವಿರೋಧಿಸುತ್ತೇವೆ. ಆದರೆ ಸರಣಿಯಲ್ಲಿ ಈ ನಿಯಮವನ್ನು ಅಳವಡಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ಆಯಾ ಬೋರ್ಡ್ ನಿರ್ಧರಿಸಲಿ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಳೆ ನಿನ್ನೆ ತಿಳಿಸಿದ್ದಾರೆ. ಇನ್ನು ಬಿಪಿಎಲ್‌ನಲ್ಲಿ ಭ್ರಷ್ಟಾಚಾರ ನಡೆದ ಆರೋಪದ ಬಗ್ಗೆ ಕೂಡ ಚರ್ಚೆ ನಡೆಯಿತು. ಈ ಬಗ್ಗೆ ನಾವು ವರದಿ ನೀಡುವಂತೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಬಳಿ ತಿಳಿಸಿದ್ದೇವೆ ಎಂದು ಸಿಇಸಿ ಐಸಿಸಿ ಬಳಿ ಹೇಳಿಕೆ ನೀಡಿದೆ.

26-06-2012

Posted by JAYAKIRANA Kirana on | 0 comments | Leave a comment...

ನೆಲ್ಯಾಡಿಯಿಂದ ಮಂಗಳೂರಿಗೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿರುವ ಘಟನೆ ಪಡೀಲ್ ಕೊಡೇಕಲ್ ಬಳಿ ನಿನ್ನೆ ರಾತ್ರಿ ಸಂಭವಿಸಿದೆ.

ಕಾಪು: ಟೆಂಪೋ ರಿಕ್ಷಾ-ಕಾರ್ ಡಿಕ್ಕಿ; ಮೂವರಿಗೆ ಗಾಯ

Posted by JAYAKIRANA Kirana on | 0 comments | Leave a comment...

ಕಾಪು: ಇಲ್ಲಿನ ಠಾಣಾ ವ್ಯಾಪ್ತಿಯ ಉಳಿಯಾರಗೋಳಿ ದಂಡತೀರ್ಥ ಶಾಲೆಯ ಎದುರು ರಾ.ಹೆ ೬೬ರಲ್ಲಿ ಟೆಂಪೊ ರಿಕ್ಷಾ ಮತ್ತು ಕಾರಿನ ಮಧ್ಯೆ ನಡೆದ ಡಿಕ್ಕಿಯಲ್ಲಿ ಮೂವರು ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಉಳಿಯಾರಗೋಳಿ ಗ್ರಾ.ಪಂ.ನ ನೌಕರರು ವಿದ್ಯುತ್ ಉಪಕರಣ ಗಳನ್ನು ಸಾಗಿಸುತ್ತಿದ್ದ ಟೆಂಪೋ ರಿಕ್ಷಾಕ್ಕೆ ಮಂಗಳೂರಿನಿಂದ ಗೋವಾಗೆ ಹೋಗುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ ಸುಧಾಕರ, ಪಂಚಾಯತ್ ನೌಕರರಾದ ಹರೀಶ್ ಮತ್ತು ಸದಾನಂದ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕನ ಕೊಲೆ ಶಂಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಯುವಕನೋರ್ವನ ಶವ ತನ್ನ ಸ್ವಗೃಹದಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಬಗಂಬಿಲದ ಸತ್ಯನಾರಾಯಣ ನಗರ ದಲ್ಲಿ ನಿನ್ನೆ ಸಂಜೆ ವೇಳೆ ಪತ್ತೆಯಾಗಿದ್ದು, ಇದೊಂದು ಕೊಲೆ ಎಂಬ ಶಂಕೆಯನ್ನು ಸಂಬಂಧಿಕರು ವ್ಯಕ್ತಪಡಿಸಿದ್ದಾರೆ. ವೃತ್ತಿಯಲ್ಲಿ ಪೈಂಟರ್ ಆಗಿರುವ ದೀಕ್ಷಿತ್ ಅಮೀನ್ (೨೦) ಮೃತದೇಹ ಕೈಗಳನ್ನು ಕಟ್ಟಿ ಹಾಕಿ ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಸಂಜೆ ಬಗಂಬಿಲದ ಮನೆಯಲ್ಲಿ ಪತ್ತೆಯಾಗಿದೆ. ತಂದೆ ಹಾಗೂ ಸಹೋದರಿ ತೀರಿಕೊಂಡ ಬಳಿಕ ದೀಕ್ಷಿತ್ ಹಾಗೂ ತಾಯಿ ಇಬ್ಬರೇ ಮನೆಯಲ್ಲಿ ವಾಸವಿದ್ದರು. ತಾಯಿ ಕೆಲಸದಿಂದ ಮರಳಿ ಮನೆಗೆ ಬಂದಾಗ ಮಗನ ಶವ ಪತ್ತೆಯಾಗಿತ್ತು. ಮೃತ ದೀಕ್ಷಿತ್‌ನೊಂದಿಗೆ ಸದಾ ಯುವಕನೋರ್ವ ಜಗಳ ಮಾಡುತ್ತಿದ್ದನೆನ್ನಲಾಗಿದ್ದು, ಆತನೇ ಕೃತ್ಯವೆಸಗಿರುವ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ವಿಚಿತ್ರ ಶಿಕ್ಷಣದ ಎಸ್ವಿಪಿಎಸ್ ಸಂಸ್ಥೆಗೆ ಪೊಲೀಸ್ ದಾಳಿ

Posted by JAYAKIRANA Kirana on | 0 comments | Leave a comment...

ಯುವಜನತೆಯನ್ನು ಆಕರ್ಷಿಸಿ ಹಣ ಸುಲಿಗೆ ಆರೋಪ
ಪುತ್ತೂರು: ಪುತ್ತೂರಿನ ಶೇಕಮಲೆ ಕಟ್ಟಡದಲ್ಲಿ ಕಳೆದ ಕೆಲ ದಿನಗಳಿಂದ ಕಾರ್ಯಾಚರಿಸುತ್ತಾ ಯುವ ಜನೆತೆಯನ್ನು ಆಕರ್ಷಿಸುತ್ತಿದ್ದ ಸಂಸ್ಥೆಯೊಂದಕ್ಕೆ ವ್ಯಕ್ತಿಯೊಬ್ಬರ ದೂರು ಮಾಹಿತಿಯ ಮೇರೆಗೆ ಪುತ್ತೂರು ನಗರ ಪೊಲೀಸರು ಸೋಮವಾರ ಸಂಜೆ ದಾಳಿ ನಡೆಸಿ ಅಲ್ಲಿದ್ದ ಕೆಲ ಮಂದಿಯನ್ನು ವಿಚಾರಣೆ ನಡೆಸಿದ್ದಾರೆ.
ಶೇಕಮಲೆ ಕಟ್ಟಡದಲ್ಲಿ ೧೫ ದಿನದಿಂದ ಕೊಠಡಿಯನ್ನು ಬಾಡಿಗೆಗೆ ತಾತ್ಕಾಲಿಕ ನೆಲೆಯಲ್ಲಿ ಪಡೆದುಕೊಂಡು ಕಾರ್ಯಾಚರಿಸುತ್ತಿದ್ದ ಡೆಲ್ಲಿ ಮೂಲದ ಎಸ್ವಿಪಿಎಸ್ ಲಿಮಿಡೆಡ್ ಎಂಬ ಸಂಸ್ಥೆಯಲ್ಲಿ ಶಿಕ್ಷಣ, ಆರೋಗ್ಯ ಕಾರ್ಯಕ್ರಮ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಎಂಬ ಹೆಸರಿನಲ್ಲಿ ಯುವ ಜನತೆಯನ್ನು ಆಕರ್ಷಿಸಿ ಕಂಪ್ಯೂಟರ್ ಶಿಕ್ಷಣದ ಸರ್ಟಿಫಿಕೇಟ್ ನೀಡುವ ಭರವಸೆ ನೀಡಿ ಅವರಿಂದ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಸಂಸ್ಥೆಯವರು ಕಂಪ್ಯೂಟರ್ ಶಿಕ್ಷಣ ನೀಡುವುದಾಗಿ ಮತ್ತು ತರಬೇತಿ ವೇಳೆ ಮಾಡಿದ ಕೆಲಸದ ಆಧಾರದಲ್ಲಿ ಹಣ ಗಳಿಸುವ ಭರವಸೆ ನೀಡಿ ಯುವ ಸಮುದಾಯವನ್ನು ಆಕರ್ಷಿಸುತ್ತಾ ತಲಾ ಒಬ್ಬರಿಂದ ರೂ.೮ ಸಾವಿರದಿಂದ ೯ ಸಾವಿರ ತನಕ ಹಣ ಕಬಳಿಸುವ ದಂಧೆ ನಡೆಸುತ್ತಿದ್ದರೆಂಬ ಆರೋಪ ಕೇಳಿ ಬರುತ್ತಿದೆ.
ಸೋಮವಾರ ಸಂಸ್ಥೆಗೆ ಸೇರಿದ ವಿದ್ಯಾರ್ಥಿ ನೂತನ್ ಸಾಲ್ಯಾನ್ ಎಂಬವರಿಂದ ಅಲ್ಲಿನ ನಕಲಿ ವಂಚನೆ ಬಯಲಾಗಿದ್ದು, ಈ ಕುರಿತು ಅವರ ತಂದೆ ಕೊಡಗು ಜಿಲ್ಲಾ ಬಹುಜನ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷ ಬಿ.ಎ. ಮೋಹನ್ ಅವರು ಪುತ್ತೂರು ನಗರ ಪೊಲೀಸರಿಗೆ ಮೌಖಿಕ ದೂರು ನೀಡಿದ್ದಾರೆ. ತಾನು ನೀಡಿರುವ ಹಣವನ್ನು ಹಿಂದಕ್ಕೆ ನೀಡುವಂತೆ ಅವರು ಪೊಲೀಸರ ಮುಂದೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸರು ಸಂಸ್ಥೆಯ ಕಚೇರಿಗೆ ಸೋಮವಾರ ಸಂಜೆ ದಾಳಿ ನಡೆಸಿ ಅಲ್ಲಿದ್ದ ಮಂದಿಯ ವಿಚಾರಣೆ ನಡೆಸಿದ್ದಾರೆ. ಮಾತ್ರವಲ್ಲದೆ ಹಣವನ್ನು ಹಿಂತಿರುಗಿಸುವಂತೆ ಸಂಸ್ಥೆಯವರಿಗೆ ಸೂಚಿಸಿದ್ದಾರೆ. ವಾರಿಸುದಾರರೇ ಇಲ್ಲ
ಕಚೇರಿಯಲ್ಲಿ ಯಾರೂ ಜವಾಬ್ದಾರಿಯುತರಿಲ್ಲದೆ ಕೇವಲ ತರಬೇತಿ ಪಡೆದ ವಿದ್ಯಾರ್ಥಿಗಳೇ ಅಲ್ಲಿ ಕಾರುಬಾರು ನಡೆಸುತ್ತಿದ್ದುದು ಕಂಡು ಬಂದಿದೆ. ಪುತ್ತೂರಿನಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಆರಂಭಗೊಂಡ ಈ ಸಂಸ್ಥೆಯಲ್ಲಿ ಏನು ನಡೆಯುತ್ತಿದೆ ಎಂಬುವುದು ಕೂಡ ಯಾರಿಗೂ ಗೊತ್ತಿಲ್ಲ . ದಿನ ನಿತ್ಯ ಹಲವಾರು ಮಂದಿ ವಿದ್ಯಾರ್ಥಿಗಳ ಸಹಿತ ಯುವ ಜನತೆ ಸಂಸ್ಥೆಗೆ ಸೇರ‍್ಪಡೆ ಗೊಳ್ಳುತ್ತಿದ್ದು , ಡಿ.ಡಿ.. ಮೂಲಕ ಹಣ ಪಡೆಯಲಾಗುತ್ತಿತ್ತು . ಈ ಹಣವನ್ನು ಯಾರು ಪಡೆಯುತ್ತಿದ್ದಾರೆ ಎಂಬುವುದು ಯಾರಿಗೂ ಗೊತ್ತಿಲ್ಲ.
ಹಲವಾರು ಬ್ಲೇಡ್ ಸಂಸ್ಥೆಗಳು ಜನತೆಯನ್ನು ವಂಚಿಸುತ್ತಿರುವ ಈ ಸಂದರ್ಭದಲ್ಲಿ ಇಲ್ಲಿನ ಈ ಸಂಸ್ಥೆಯ ಶಿಕ್ಷಣ ವಿಚಿತ್ರ ವೆನಿಸಿದೆ. ಯುವ ಜನತೆಯಿಂದ ಲಕ್ಷಾಂತರ ಹಣ ದೋಚುವ ಪಂಗನಾಮ ಶಿಕ್ಷಣ ಇದಾಗಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ೧೫ ದಿನಗಳಿಗಾಗಿ ಬಾಡಿಗೆ ಕೊಠಡಿ ಪಡೆದವರು ಮೂರು , ಆರು ತಿಂಗಳ ಶಿಕ್ಷಣ ನೀಡುವುದಾದರೂ ಹೇಗೆ , ಇವರು ನೀಡುವ ಕಂಪ್ಯೂಟರ್ ಬೇಸಿಕ್ ಶಿಕ್ಷಣದಿಂದ ಉತ್ತಮ ಸಂಬಳ ಬರುವ ಉದ್ಯೋಗ ಸಿಗುವುದಾದರೂ ಹೇಗೆ ಎಂಬ ಪ್ರಶ್ನೆಗೆ ಸಂಸ್ಥೆಯವರೇ ಉತ್ತರ ನೀಡಬೇಕಿದೆ.
ಸಂಸ್ಥೆಯಲ್ಲಿನ ಶಿಕ್ಷಣದ ಕುರಿತು ಈ ಹಿಂದೆಯೇ ಕೆಲವರು ಶಂಕೆ ವ್ಯಕ್ತಪಡಿಸಿದ್ದರು. ಹಣ ಗಳಿಸುವ ಶಿಕ್ಷಣ ಏನು ಎಂಬ ಕುತೂಹಲ ಹೊಂದಿದ್ದರು. ಇದೀಗ ಸಾರ್ವಜನಿಕರೊಬ್ಬರ ದೂರು ಈ ಕುತೂಹಲವನ್ನು ಮತ್ತಷ್ಟು ಇಮ್ಮಡಿಸಿದೆ. ಸಂಸ್ಥೆಯ ವಿರುದ್ದ ದೂರು ನೀಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

‘ಕಸಾಯಿಖಾನೆಯಿಂದ ಪೊಲೀಸರಿಗೆ ಒಂದು ಲಕ್ಷ ರೂ. ಮಾಮೂಲು’

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ಗುರುವಾಯನಕೆರೆ ಸನಿಹದ ಶಕ್ತಿನಗರ ಎಂಬಲ್ಲಿನ ಕಸಾಯಿಖಾನೆಯಿಂದ ಸ್ಥಳೀಯ ಪೊಲೀಸ್ ಠಾಣೆಗೆ ಪ್ರತಿ ತಿಂಗಳು ಒಂದು ಲಕ್ಷ ರೂ. ಸಂದಾಯವಾಗುತ್ತಿದೆ. ಹೀಗಾಗಿ ಪೊಲೀಸರು ಅಕ್ರಮ ಗೋಸಾಗಾ ಟವನ್ನು ಪತ್ತೆ ಹಚ್ಚಿಕೊಟ್ಟಲ್ಲಿ ಕೇಸು ದಾಖಲಿಸಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬಜರಂಗ ದಳದ ಜಿಲ್ಲಾ ಸಹ ಸಂಚಾಲಕ ಭಾಸ್ಕರ ಧರ್ಮಸ್ಥಳ ಆರೋಪಿಸಿದ್ದಾರೆ.
ಅವರು ಸೋಮವಾರ ಇಲ್ಲಿನ ವಾರ್ತಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಇತ್ತೀಚೆಗೆ ತಾಲೂಕಿನಲ್ಲಿ ಕಾನೂನು ಬಾಹಿರ ಅಕ್ರಮವಾಗಿ ಗೋವುಗಳನ್ನು ಕಸಾಯಿ ಖಾನೆಗೆ ಸಾಗಿಸುವುದು ಅವ್ಯಾಹತ ವಾಗಿ ನಡೆಯುತ್ತಿದೆ. ಪೊಲೀಸರಿಗೆ ಇದರ ಸುಳಿವು ಕೊಟ್ಟರೂ ಅವರ ತಡವಾಗಿ ಬಂದು ಸಾಗಾಟಗಾರರು ತಪ್ಪಿಸಿಕೊಳ್ಳಲು ನೆರವಾ ಗುತ್ತಿದ್ದಾರೆ. ಅಲ್ಲದೆ ಗುರುವಾಯನಕೆರೆಯಲ್ಲಿ ಅಕ್ರಮ ಕಸಾಯಿಖಾನೆಯ ಮಾಲಕತ್ವ ಯಾರ ಹೆಸರಿನಲ್ಲಿದೆ ಎಂಬುದು ಇನ್ನೂ ನಿಗೂಢವಾ ಗಿದೆ. ಇಲ್ಲಿಂದ ಪೊಲೀಸರಿಗೆ ಮಾಮೂಲು ಹೋಗುತ್ತಿರುವುದರಿಂದ ಅಕ್ರಮಗಳನ್ನು ತಡೆಯಲು ಹಿಂದೇಟು ಹಾಕುತ್ತಿದ್ದಾರೆ ಮತ್ತು ತಪ್ಪಿಸಿಕೊಳ್ಳಲು ಪರೋಕ್ಷವಾಗಿ ನೆರವಾಗುತ್ತಿ ದ್ದಾರೆ ಎಂದು ಭಾಸ್ಕರ್ ಆರೋಪಿಸಿದರು.
ಇತ್ತೀಚೆಗೆ ನಾರಾವಿ ಎಂಬಲ್ಲಿಂದ ಅಕ್ರಮ ಸಾಗಾಟ ನಡೆಯುತ್ತಿರುವುದರ ಬಗ್ಗೆ ಸುಳಿವನ್ನು ಪೊಲೀಸರಿಗೆ ನೀಡಿದ್ದೇವಾದರೂ ಅವರು ಕಾರ್ಯಾಚರಣೆ ನಡೆಸಲಿಲ್ಲ. ಬಳಿಕ ನಾವೇ ಕಾರ್ಯಾಚರಣೆಗೆ ಇಳಿಯಬೇಕಾಯಿತು. ಅಂದು ಘಟನೆ ನಡೆದಿರುವುದು ಬೆಳಿಗ್ಗೆ ೧೦.೩೦ ಕ್ಕೆ. ಘಟನೆಯಲ್ಲಿ ಹಲ್ಲೆಗೊಳಗಾದವರನ್ನು ಪೊಲೀಸರು ಆಸ್ಪತ್ರೆಯಲ್ಲಿ ಸಂಜೆ ೪.೩೦ ಕ್ಕೆ ನೋಡಿದ್ದಾರೆ. ಹೀಗಿದ್ದರೂ ಪ್ರಕರಣ ದಾಖಲಿಸಲಿಲ್ಲ. ಕೊನೆಗೆ ನಮ್ಮ ಒತ್ತಾಯಕ್ಕೆ ರಾತ್ರಿ ೯-೩೦ ಕ್ಕೆ ಎಫ್ ಐಆರ್ ದಾಖಲಿಸಿ ಕೊಂಡಿದ್ದಾರೆ. ಅಂದು ತಡೆಯಲು ಹೋದ ಕಾರ್ಯಕರ್ತರಿಗೆ ಗೋ ಸಾಗಾಟದಾರರು ಮಾರಾಕಾಯುಧಗಳನ್ನು ತೋರಿಸಿ ಬೆದರಿಸಿದ್ದಾರೆ. ಕಾನೂನು ಬಾಹಿರವಾಗಿ ಜಾನುವಾರುಗಳನ್ನು ಸಾಗಿಸುವ ವಾಹನದಲ್ಲೇ ಮಾರಕಾಸ್ತ್ರಗಳನ್ನು ಇಟ್ಟುಕೊಳ್ಳುವ ವಾಹನಗಳ ಮೇಲೆ ಪೊಲೀಸರು ಯವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದಿದ್ದಾರೆ. ಅಕ್ರಮ ಗೋ ಸಾಗಾಟದ ವಿರುದ್ಧ್ದ ಜನರನ್ನು ಜಾಗೃತಗೊಳಿಸಲು ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವ ವರನ್ನು ಮತ್ತು ಇದಕ್ಕೆ ಪೂರಕವಾಗಿ ಬೆಂಬಲ ನೀಡುವ ಪೊಲೀಸ್ ಸಿಬ್ಬಂದಿ ಯನ್ನು ಎಚ್ಚರಿಸಲು ಜು.೩ ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾಸ್ಕರ ಈ ಸಂದರ್ಭ ಪ್ರಕಟಿಸಿದರು.
ಗೋಷ್ಠಿಯಲ್ಲಿ ವಿ.ಹಿಂ.ಪ.ನ ತಾಲೂಕಾಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು, ಬಜರಂಗದಳ ವೇಣೂರು ಪ್ರಖಂಡ ಸಂಚಾಲಕ ಕೇಶವ ಬಂಗೇರ, ನಾವುರ ಬಜರಂಗದಳ ಗ್ರಾಮ ಸಮಿತಿ ಅಧ್ಯಕ್ಷ ನಿತ್ಯಾನಂದ ನಾವೂರ್, ಗಿರೀಶ್ ಪಿಲ್ಯ, ದೇವದಾಸ್, ವಿಜಿತ್ ಇದ್ದರು.

ಮೊಬೈಲ್ ಮೆಸೇಜ್ ನಂಬಿ ೫೧ ಲಕ್ಷ ರೂ. ಕಳೆದುಕೊಂಡರು!

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೋಟಿ ರೂ.ಗಳ ಲಾಟರಿ ಬಹುಮಾನ ಬಂದಿದೆ ಎಂದು ಮೊಬೈಲ್‌ಗೆ ಮೆಸೇಜ್ ಬಂದಿದ್ದನ್ನೇ ನಂಬಿದ ಯುವಕ ಬರೋಬ್ಬರಿ ೫೧ ಲಕ್ಷ ಕಳೆದುಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ವಂಚನೆಗೀಡಾದವರು ಧರ್ಮಸ್ಥಳ ಧರ್ಮಾಧಿಕಾರಿ ಯವರಿಗೆ ಮನವಿ ಮಾಡಿದ್ದಾರೆ. ಶಿವಮೊಗ್ಗದ ವ್ಯಕ್ತಿ ಯೊಬ್ಬರ ಮೊಬೈಲ್ ಐಸಿಸಿ ಕ್ರಿಕೆಟ್‌ನಲ್ಲಿ ಕೋಟಿ ರೂ.ಗಳ ಬಹುಮಾನ ಬಂದಿದೆ ಎಂದು ಮೆಸೇಜ್ ಬಂದಿತ್ತು. ಸರಕಾರಿ ಉದ್ಯೋಗಿಯಾಗಿದ್ದ ಅವರು, ಸಂದೇಶವನ್ನು ನಂಬಿ ವಂಚಕರ ಖಾತೆಗೆ ಹಣ ತುಂಬುತ್ತಾ ಬಂದರೆನ್ನಲಾಗಿದೆ. ಹೀಗೆ ಒಂದೂವರೆ ವರ್ಷ ಕಳೆದ ಬಳಿಕ ಅವರಿಗೆ ಮೋಸ ಹೋಗಿದ್ದು ಅರಿವಾಗಿದೆ.
ನಾಲ್ಕು ಎಕರೆ ಜಾಗ ಹಾಗೂ ಇದ್ದ ಮನೆಯನ್ನು ಮಾರಿದ್ದರಿಂದ ಸಿಕ್ಕ ೫೨ ಲಕ್ಷ ರೂ. ಹಣವನ್ನು ವಂಚಕರ ಖಾತೆಗೆ ತುಂಬಿದ್ದರಿಂದ ಬೀದಿಗೆ ಬೀಳುವಂತಾಗಿದೆ ಎಂದು ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರಿಗೆ ಲಿಖಿತ ಮನವಿ ಮಾಡಿದ್ದಾರೆ.

ವ್ಯಾನ್‌ನಡಿಗೆ ಬಿದ್ದು ಶಾಲಾ ಬಾಲಕಿ ಗಂಭೀರ

Posted by JAYAKIRANA Kirana on | 0 comments | Leave a comment...

ಸುಳ್ಯ: ಶಾಲಾ ಆವರಣದಲ್ಲಿ ವ್ಯಾನ್ ಹಿಮ್ಮುಖವಾಗಿ ಚಲಿಸುವಾಗ ಅದರಡಿಗೆ ಬಿದ್ದು, ಐದು ವರ್ಷದ ಬಾಲಕಿ ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ. ಇಲ್ಲಿನ ಸೇಂಟ್ ಜೋಸೆಫ್ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿನಿ ನಿರೀಕ್ಷಾ(೫) ಗಂಭೀರ ಗಾಯಗೊಂಡಿದ್ದು, ಆಕೆಯನ್ನು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ‍್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಖಾಸಗಿ ಮ್ಯಾಕ್ಸಿಕ್ಯಾಬ್ ಶಾಲಾ ಆವರಣಕ್ಕೆ ಬಂದು ಹಿಮ್ಮುಖವಾಗಿ ಚಲಿಸುವಾಗ ಬಾಲಕಿ ಅದರಡಿಗೆ ಬಿದ್ದಿದ್ದಾಳೆ. ಗಂಭೀರ ಗಾಯಗೊಂಡ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈಕೆ ಅಡ್ಕಾರಿನ ಗೀತಾ ಮತ್ತು ಪುರುಷೋತ್ತಮ ದಂಪತಿ ಪುತ್ರಿ.

ನೈತಿಕ ಪೊಲೀಸರ ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹಿಂದೂ ಯುವತಿ ಜೊತೆ ಚಕ್ಕಂದವಾಡುತ್ತಿದ್ದ ಮುಸ್ಲಿಂ ಹುಡುಗನಿಗೆ ಥಳಿಸಿದ ಆರೋಪದ ಮೇಲೆ ನಾಲ್ವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದು ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಕಾಲ್ ಸೆಂಟರ್ ಉದ್ಯೋಗಿ, ಹಿಂದೂ ಯುವತಿ ಜೊತೆ ಬಂಟ್ವಾಳ ನಿವಾಸಿ ತಸ್ಲೀಮ್ ಎಂಬಾತ ನಿರ್ಜನ ಪ್ರದೇಶದಲ್ಲಿ ಇರುವುದನ್ನು ಕಂಡ ಹಿಂದೂ ಸಂಘಟನೆ ಕಾರ್ಯಕರ್ತರು ಯುವಕನಿಗೆ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು. ಈ ಬಗ್ಗೆ ಪಾಂಡೇಶ್ವರ ಠಾಣೆಗೆ ತಸ್ಲೀಮ್ ತಂದೆ ದೂರು ನೀಡಿದ್ದು, ಹಿಂದೂ ಯುವತಿ ಜೊತೆ ನನ್ನ ಮಗ ಮಾತನಾಡುತ್ತಿದ್ದ ವೇಳೆ ನಿಶಿತ್, ಪುರುಷೋತ್ತಮ, ಮತ್ತು ಸಂದೀಪ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದರು. ಇದರ ಆಧಾರದಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಈ ನಡುವೆ ಮೋರ್ಗನ್ಸ್‌ಗೇಟ್‌ನ ಎಂಫಾಸಿಸ್ ಕಾಲ್‌ಸೆಂಟರ್ ಆಸುಪಾಸು ಪ್ರತಿನಿತ್ಯ ಯುವಕರು ಕಾಲ್‌ಸೆಂಟರ್‌ನ ಹುಡುಗಿಯರ ಸ್ನೇಹ ಗಳಿಸಲು ತಾಮುಂದು ನಾ ಮುಂದು ಎಂದು ಮುಗಿ ಬೀಳುತ್ತಿದ್ದಾರೆ. ಇನ್ನೂ ಕೆಲವರು ಮೊಬೈಲ್ ನಂಬರ್ ಪಡೆದುಕೊಂಡು ಪಟಾಯಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಸ್ಥಳೀಯರು ಹೊರಗೆಡವಿದ್ದಾರೆ.

ಅಪಹರಿಸಲೆತ್ನಿಸಿದ ಆರೋಪಿಗಳು ಪರಾರಿ

Posted by JAYAKIRANA Kirana on | 0 comments | Leave a comment...

ಕಾರ್ ಚಾಲಕ ಸೆರೆ, ಮಹಿಳೆ-ಮಕ್ಕಳು ಸೇಫ್!
ಮೂಡುಬಿದಿರೆ: ಇಲ್ಲಿಯ ಸಮೀಪದ ಮಾಂಟ್ರಾಡಿಯಲ್ಲಿ ಕಲ್ಲಿನ ಕೋರೆ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆ ಹಾಗೂ ಮೂವರು ಮಕ್ಕಳನ್ನು ಅಪಹರಣ(?)ಕ್ಕೆ ಯತ್ನಿಸಿದ್ದ ಕಾರಿನ ಚಾಲಕನನ್ನು ಪೊಲೀ ಸರು ವಶಕ್ಕೆ ತೆಗೆದುಕೊಂಡಿದ್ದರೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಮೂಲತಃ ಶಿವಮೊಗ್ಗದವರಾದ ಪ್ರಸ್ತುತ ಮೂಡುಬಿದಿರೆಯ ಮಾಂಟ್ರಾಡಿಯಲ್ಲಿ ವಾಸವಾಗಿರುವ ಕನಕ (೨೬) ಮತ್ತು ಆಕೆಯ ಮೂವರು ಮಕ್ಕಳಾದ ಲೀಲಾ (೧೨), ಲತಾ (೮) ಹಾಗೂ ಯೋಗಿನಿ (೪) ಅಪಹರಣ ಯತ್ನಕ್ಕೆ ಒಳಗಾದವರು.
ಶಿವಮೊಗ್ಗ ನಿವಾಸಿಗಳಾದ ಆರೋಪಿ ಗಳಲ್ಲಿ ಕಾರು ಚಾಲಕ ಸಿದ್ದೇಶನನ್ನು ಪೊಲೀ ಸರು ವಶಕ್ಕೆ ತೆಗೆದುಕೊಂಡಿದ್ದರೆ ಅಯಪ್ಪ, ನವೀನ ಹಾಗೂ ಇನ್ನೊಬ್ಬ ಆರೋಪಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಹಿನ್ನೆಲೆ: ಮೂಲತಃ ಶಿವ ಮೊಗ್ಗದವಳಾದ ಕನಕ ಸುಮಾರು ೧೬ ವರ್ಷದ ಹಿಂದೆ ಮೂಡುಬಿದಿರೆಯ ಮಾಂಟ್ರಾಡಿಯಲ್ಲಿ ವಾಸವಿದ್ದು, ಮುನಿಯ ಎಂಬಾತನನ್ನು ಮದುವೆಯಾಗಿ ಮೂವರು ಮಕ್ಕಳಿಗೆ ತಾಯಿಯಾಗಿದ್ದಳು. ಶಿವಮೊ ಗ್ಗದಲ್ಲಿ ಇರುವ ವೇಳೆ ಅಯಪ್ಪ ಎಂಬಾತನ ಪರಿಚಯವಾಗಿ ‘ಪ್ರೇಮ ವ್ಯವಹಾರ ನಡೆಯುತ್ತಿತ್ತು ಎನ್ನಲಾಗಿದೆ. ಈ ಮಧ್ಯೆ ಮಾಂಟ್ರಾಡಿಯಲ್ಲಿ ವಾಸವಾಗಿರುವಾಗಲೂ ಕನಕ ಯಾವಾಗಲೊಮ್ಮೆ ಶಿವಮೊಗ್ಗಕ್ಕೆ ಹೋಗಿ ಪ್ರಿಯಕರ ಅಯಪ್ಪನನ್ನು ‘ಭೇಟಿಯಾಗಿ ಬರುತ್ತಿದ್ದಳು ಎನ್ನಲಾಗಿದೆ.

ಆಗಿದ್ದೇನು?
ಧರ್ಮಸ್ಥಳಕ್ಕೆ ಯಾತ್ರೆ ಹೋಗಲು ಇದೆ ಎಂದು ಅಯಪ್ಪ, ನವೀನ ಹಾಗೂ ಇನ್ನೋರ್ವನೊಂದಿಗೆ ಅಪರಿಚಿತನಾದ ಸಿದ್ದೇಶನ ಕಾರನ್ನು ಗೊತ್ತು ಪಡಿಸಿ ಹೊರಟಿದ್ದರು. ಇಲ್ಲಿ ಕನಕ ಮಕ್ಕಳೊಂದಿಗೆ ಉಡುಗೆ ತರಲೆಂದು ಹತ್ತಿರದ ಹೊಸ್ಮಾರಿಗೆ ತೆರಳಿ ರಿಕ್ಷಾದಲ್ಲಿ ವಾಪಸಾಗುತ್ತಿದ್ದಾಗ ಹಿಂದಿನಿಂದ ಹಿಂಬಾಲಿಸಿಕೊಂಡು ಈ ಕಾರು ಬರುತ್ತಿತ್ತು ಎನ್ನಲಾಗಿದೆ. ಮಾಂಟ್ರಾಡಿಯಲ್ಲಿ ರಿಕ್ಷಾ ನಿಲ್ಲಿಸುತ್ತಿದ್ದಂತೆ ಆರೋಪಿಗಳೆನ್ನಲಾದ ತಂಡ ಮಹಿಳೆ ಹಾಗೂ ಮೂವರು ಮಕ್ಕಳನ್ನು ಕಾರಿಗೆ ಕರೆದೊಯ್ದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಮೂಡುಬಿದಿರೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾರ‍್ಯಪ್ರವೃತ್ತರಾದ ಪೊಲೀಸರು ಜೈನ ಪೇಟೆ ಸಮೀಪ ಸಂಶಯಾಸ್ಪದವಾಗಿ ನಿಲ್ಲಿಸಲಾಗಿದ್ದ ಕಾರಿನ ಬಳಿ ತೆರಳಿದ್ದಾರೆ. ಈ ವೇಳೆ ಆರೋಪಿಗಳಾದ ನವೀನ ಹಾಗೂ ಅಯಪ್ಪ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರೆ ವಿಷಯ ಅರಿಯದ ಕಾರು ಚಾಲಕ ಸಿದ್ದೇಶ ಪೊಲೀಸರ ವಶವಾಗಿದ್ದಾನೆ. ಕಾರಿನಲ್ಲಿದ್ದ ಮಹಿಳೆ ಹಾಗೂ ಮಕ್ಕಳನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಜುಗಾರಿ ಅಡ್ಡೆಗೆ ದಾಳಿ

Posted by JAYAKIRANA Kirana on | 0 comments | Leave a comment...

ವಿಟ್ಲ: ಜುಗಾರಿ ಅಡ್ಡೆಗೆ ದಾಳಿ ನಡೆಸಿದ ವಿಟ್ಲ ಪ್ರೊಬೆಷನರಿ ಎಎಸ್‌ಪಿ ಡಾ. ದಿವ್ಯಾ ವಿ ಗೋಪಿನಾಥ್ ನೇತೃತ್ವದ ತಂಡ ನಗದು ಸಹಿತ ಮೂವರು ಆರೋಪಿಗಳನ್ನು ಬಂಧಿಸಿ ಘಟನೆ ಮಾಣಿ ಸಮೀಪದ ಮಿತ್ತೂರು ಎಂಬಲ್ಲಿ ನಿನ್ನೆ ನಡೆದಿದೆ. ಇಡ್ಕಿದು ಗ್ರಾಮದ ಮಿತ್ತೂರು ನಿವಾಸಿ ರಜನಿಸ್(೨೧), ಅಶ್ರಫ್(೨೮), ಪುರುಷೋತ್ತಮ(೩೫) ಬಂಧಿತರು. ಇವರು ಮಿತ್ತೂರು ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ವೇಳೆ ದಾಳಿ ನಡೆಸಿದ ತಂಡ ಅವರನ್ನು ಅಲ್ಲಿಂದ ಬಂಧಿಸಿದ್ದು, ಅವರಿಂದ ೭೦೦ ರೂಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಳ್ನೀರ್‌ನ ಎರಡು ಮನೆಗಳಲ್ಲಿ ಕಳ್ಳತನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪಾಂಡೇಶ್ವರ ಠಾಣಾ ವ್ಯಾಪ್ತಿಯ ಫಳ್ನೀರ್‌ನಲ್ಲಿ ಮೊನ್ನೆ ರಾತ್ರಿಯಿಂದ ನಿನ್ನೆ ಬೆಳಿಗ್ಗಿನ ಜಾವ ಎರಡು ಮನೆಗಳಲ್ಲಿ ಕಳ್ಳತನ ನಡೆದಿದೆ.
ಇಲ್ಲಿರುವ ಶಶಿಕಲಾ ಕರ್ಕೇರ ಅವರ ಮನೆಗೆ ನುಗ್ಗಿರುವ ಕಳ್ಳರು ೧೫ ಸಾವಿರ ರೂ.ವನ್ನು ಎಗರಿಸಿದ್ದಾರೆ. ಅದೇ ವೇಳೆ ಅವರ ಮನೆಯ ಮೇಲಿನ ಮಹಡಿಯಲ್ಲಿ ಬಾಡಿಗೆಗೆ ಇದ್ದ ಟ್ರಾನ್ಸ್ ಪೋರ್ಟ್ ಕಂಪೆನಿ ಮಾಲಕ ನಾಗ್ಪುರದ ಬಲ್ವಿಂದರ್ ಸಿಂಗ್ ಮನೆಗೂ ಕಳ್ಳರು ಲಗ್ಗೆ ಹಾಕಿದ್ದಾರೆ.
ಬಲ್ವಿಂದರ್ ಅವರ ಅಣ್ಣನ ಮಗನ ಮದುವೆಯಿದ್ದ ಕಾರಣ ಅವರು ಕುಟುಂಬ ಸಮೇತರಾಗಿ ನಾಗ್ಪುರಕ್ಕೆ ಹೋಗಿದ್ದರು. ಇದೇ ಸಂದರ್ಭ ಕಳ್ಳತನ ನಡೆದಿದೆ. ಎದುರಿನ ಬಾಗಿಲು ಮುರಿದ ಕಳ್ಳರು ಮನೆಯೊಳಗೆ ನುಗ್ಗಿ ನಕಲಿ ಬೀಗದ ಕೀ ಬಳಸಿ ಕಪಾಟು ಮುರಿದು ಚಿನ್ನಾಭರಣಗಳನ್ನು ದೋಚಿದ್ದಾರೆ. ಆದರೆ ಈ ಬಗ್ಗೆ ನಿಖರ ಮಾಹಿತಿ ತಿಳಿಯಲು ಬಲ್ವಿಂದರ್ ಅವರು ಮಂಗಳೂರಿಗೆ ಬರುವವರೆಗೆ ಕಾಯ ಲಾಗುತ್ತಿದೆ.

ವರ ನಾಪತ್ತೆ ಪ್ರಕರಣ: ಮದುವೆಯಲ್ಲಿ ಸುಖಾಂತ್ಯ

Posted by JAYAKIRANA Kirana on | 0 comments | Leave a comment...

ಮೂಡುಬಿದಿರೆ: ಭಾನುವಾರ ಕಟೀಲು ದೇವಸ್ಥಾನದಲ್ಲಿ ನಡೆಯ ಬೇಕಿದ್ದ ಮದುವೆಯು ವರ ನಾಪತ್ತೆ ಯಾದ ಕಾರಣ ನಿಂತು ಹೋಗಿತ್ತು. ಭಾನುವಾರ ವರ ಮರಳಿ ಬಂದಿದ್ದು ಸೋಮವಾರ ವೇಣೂರಿನ ಮಹಾಲಿಂ ಗೇಶ್ವರ ದೇವಸ್ಥಾನದಲ್ಲಿ ಮದುವೆ ನಡೆದಿದೆ.
ಪಡ್ಯಾರಬೆಟ್ಟು ಎಂಬಲ್ಲಿನ ವಿನೋ ದಳ ವಿವಾಹವು ದಾವಣಗೆರೆಯ ಕತ್ತಲ ಗೆರೆಯ ಮಂಜುನಾಥ ಜತೆ ಭಾನುವಾರ ಕಟೀಲು ದೇವಸ್ಥಾನದಲ್ಲಿ ನಡೆಯಬೇ ಕಿತ್ತು. ಆದರೆ ವರ ನಾಪತ್ತೆಯಾದ ಕಾರಣ ನಿಂತುಹೋಗಿತ್ತು. ಭಾನುವಾರ ತಡರಾತ್ರಿ ವಧುವಿನ ಮನೆಗೆ ಬಂದ ಮಂಜುನಾಥ್ ವಿನೋದಳನ್ನು ಮದುವೆ ಯಾಗಲು ನಿರಾಕರಿಸಿದ್ದ. ಎರಡು ಕುಟುಂಬಗಳ ಮಾತುಕತೆ ನಡೆದಿದ್ದು, ಆ ವೇಳೆ ಮಂಜುನಾಥ್ ತನಗೆ ಎಚ್‌ಐವಿ ಪರೀಕ್ಷೆ ಮಾಡಿಸಿ ಅಪಮಾನ ಮಾಡಿದ್ದೇ ತಾನು ಹೋಗಲು ಕಾರಣ ಎಂದು ತಿಳಿಸಿದ್ದಾನೆ.

ಅಪಘಾತ: ಬೈಕ್ ಸವಾರ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೈಕಿಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ಕಾವೂರು ಸಚಿತಾ ಬಾರ್ ಬಳಿ ಸಂಭವಿಸಿದೆ.
ಕಾವೂರು ಪ್ರಾಥಮಿಕ ಶಾಲಾ ಬಳಿಯ ನಿವಾಸಿ ದಯಾನಂದ್ ಎಂಬಾತ ಮನೆ ಸಮೀಪದ ನಿವಾಸಿ ಚೇತನ್ ಜೊತೆ ಬೈಕಿನಲ್ಲಿ ಕೂಳೂರು ಕಡೆ ಬರುತ್ತಿದ್ದ ವೇಳೆ, ಇವರ ಹಿಂದಿ ನಿಂದ ಅತೀ ವೇಗವಾಗಿ ಬಂದ ಟಿಪ್ಪರ್ ಬೈಕನ್ನು ಹಿಂದಿಕ್ಕುವ ಭರದಲ್ಲಿ ಬೈಕಿಗೆ ತಾಗಿಕೊಂಡು ಸಾಗಿದೆ. ಪರಿಣಾಮ ಬೈಕ್ ಸಮತೋಲನ ಕಳೆದುಕೊಂಡು ಸವಾರರು ರಸ್ತೆಗೆಸೆಯಲ್ಪಟ್ಟಿದ್ದರು. ದಯಾನಂದ ನೇರವಾಗಿ ಟಿಪ್ಪರ್ ಮುಂಭಾಗದ ಚಕ್ರದಡಿಗೆ ಸಿಲುಕಿ ಸ್ಥಳ ದಲ್ಲೇ ಮೃತ ಪಟ್ಟರೇ ಚೇತನ್ ಗಾಯ ಗೊಂಡಿದ್ದಾರೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಣಂತಿ ಪತ್ನಿ ಹಂತಕನಿಗೆ ನ್ಯಾಯಾಂಗ ಬಂಧನ

Posted by JAYAKIRANA Kirana on | 0 comments | Leave a comment...

ಮೂಡುಬಿದಿರೆ: ಬಾಣಂತಿ ಪತ್ನಿ ಯನ್ನು ಕೊಲೆಗೈದು ತಲೆ ಮರೆಸಿ ಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಎಡ ಪದವು ಸಮೀಪದ ಹೊಲದಲ್ಲಿ ಪತ್ತೆ ಯಾಗಿದ್ದ ಆರೋಪಿ ಗುಣ ಮುಖ ವಾಗಿರುವ ಜಯಂತ ಮೂಡುಬಿದಿರೆ ಪೊಲೀಸರ ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಜಯಂತಿ ಎಂಬಾಕೆಯನ್ನು ಮದುವೆಯಾದ ನಂತರ ಸುಮಾರು ಒಂದು ತಿಂಗಳ ಕಾಲ ಪತ್ನಿ ಮನೆಯಲ್ಲಿ ವಾಸವಾಗಿ ನಂತರ ಪತ್ನಿಯನ್ನು ಬಿಟ್ಟು ಮಂಗಳೂರಿಗೆ ತೆರಳಿದ್ದ. ಮೊನ್ನೆ ಬುಧವಾರ ಅಲ್ಲಿಂದ ಬಂದ ಜಯಂತ ಮೂಡುಬಿದಿರೆ ಆಸ್ಪತ್ರೆಯಲ್ಲಿ ಪತ್ನಿ ಜಯಂತಿಯನ್ನು ವಿಚಾರಿಸುವ ನೆಪದಲ್ಲಿ ಆಸ್ಪತ್ರೆಗೆ ನುಗ್ಗಿ ಕೊಲೆಗೈದಿದ್ದ. ಮೂರು ದಿನ ತಲೆಮರೆಸಿಕೊಂಡ ಜಯಂತ ಶನಿವಾರ ಎಡಪದವು ಸಮೀಪದ ಹೊಲವೊಂದರಲ್ಲಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆಸ್ಪತ್ರೆಗೆ ದಾಖಲಾಗಿ ಗುಣ ಮುಖ ನಾಗಿದ್ದ ಜಯಂತನನ್ನು ನಿನ್ನೆ ಮೂಡು ಬಿದಿರೆ ಪೊಲೀಸರು ವಶಕ್ಕೆ ತೆಗೆದು ಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮರಳು ಲಾರಿ ವಶಕ್ಕೆ

Posted by JAYAKIRANA Kirana on | 0 comments | Leave a comment...

ವಿಟ್ಲ: ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಿಸುತ್ತಿದ್ದ ಲಾರಿಯನ್ನು ಪತ್ತೆ ಹಚ್ಚಿದ ಪ್ರೊಬೆಷನರಿ ಎ ಎಸ್ ಪಿ ದಿವ್ಯಾ ವಿ ಗೋಪಿನಾಥ್ ನೇತೃತ್ವದ ತಂಡ ಸಾಲೆತ್ತೂರು ಸಮೀಪ ವಶಕ್ಕೆ ತೆಗೆದುಕೊಂಡಿದೆ.
ಪ್ರಕರಣವನ್ನು ಗಣಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಲಾರಿ ಸಾಲೆ ತ್ತೂರು ಬೊಳ್ಮಾರು ನಿವಾಸಿ ಉಸ್ಮಾನ್ ಹಾಜಿ ಎಂಬವರಿಗೆ ಸೇರಿದ್ದಾಗಿದೆ.

ವಿದ್ಯುತ್ ಶಾಕ್: ಯುವಕ ಬಲಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೆಲಸದ ವೇಳೆ ವಿದ್ಯುತ್ ಶಾಕ್ ತಗುಲಿದ ಪರಿಣಾ ಮವಾಗಿ ಕೊಲ್ಯ ಸರಸ್ವತಿ ಕಾಲನಿ ನಿವಾಸಿ ವಿನೋದ್(೨೦) ಎಂಬವರು ದುರ್ಮರಣಕ್ಕೀಡಾಗಿದ್ದಾರೆ. ಎರಡು ವರ್ಷಗಳ ಹಿಂದೆ ಪದವಿ ಮುಗಿಸಿ ಮನೆಯಲ್ಲೇ ಇದ್ದ ಅವರು ಸೋಮ ವಾರ ಪ್ರಥಮ ಬಾರಿಗೆ ಟೈಲ್ಸ್ ಸೆಟ್ಟಿಂಗ್ ಕೆಲಸಕ್ಕೆ ಹೋಗಿದ್ದರು. ಸಂಜೆ ಕೆಲಸ ಮುಗಿಯುವ ಹಂತದಲ್ಲಿದ್ದಾಗ ವಿದ್ಯುತ್ ಶಾಕ್‌ಗೆ ಅವರು ಸಾವನ್ನಪ್ಪಿದ್ದಾರೆ.

ಅಕ್ರಮ ಸಾಗಾಟದ ಮರ ಪತ್ತೆ: ಆರೋಪಿ ಬಂಧನ

Posted by JAYAKIRANA Kirana on | 0 comments | Leave a comment...

ಪುತ್ತೂರು: ಅಕ್ರಮವಾಗಿ ನಡೆಯುತ್ತಿದ್ದ ಮರ ಸಾಗಾಟ ಪ್ರಕರಣವೊಂದನ್ನು ಪುತ್ತೂರು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಮುಕ್ವೆ ಎಂಬಲ್ಲಿ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿ ಆರೋಪಿ ಸಕಲೇಶಪುರದ ನಿವಾಸಿ ಮಂಜು (೩೨) ಎಂಬಾತನನ್ನು ಬಂಧಿಸಿದ್ದಾರೆ. ಮರದ ದಿಮ್ಮಿಗಳನ್ನು ಸಾಗಾಟಕ್ಕೆ ಬಳಸಿದ ಲಾರಿ ಸಮೇತ ಅಧಿಕಾರಿಗಳು ವಶಪಡಿಸಿಕೊಂಡಿದ್ದು ವಶಪಡಿಸಿಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ ರೂ. ಐದು ಲಕ್ಷ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹಾವು ಕಚ್ಚಿ ಅಣ್ಣ-ತಂಗಿ ಮೃತ್ಯು

Posted by JAYAKIRANA Kirana on | 0 comments | Leave a comment...

ಯಾದಗಿರಿ: ರಾತ್ರಿ ನಿದ್ದೆಯಲ್ಲಿದ್ದ ವೇಳೆ ಮನೆಯೊಳಗೆ ನುಗ್ಗಿದ ವಿಷದ ಹಾವೊಂದು ಕಚ್ಚಿ ಅಣ್ಣ-ತಂಗಿಯನ್ನು ಬಲಿ ತೆಗೆದುಕೊಂಡ ಘಟನೆ ಯಾದಗಿರಿಯ ಪಸ್ಪುಲ್ ಗ್ರಾಮದಲ್ಲಿ ನಿನ್ನೆ ರಾತ್ರಿ ಘಟಿಸಿದೆ.
ಗಣೇಶ್ (೧೨) ಹಾಗೂ ಈಶಮ್ಮ (೯) ಎಂಬವರೇ ಸಾವಿನಲ್ಲೂ ಒಂದಾದ ಅಣ್ಣ ತಂಗಿಯರಾಗಿದ್ದು, ಬಾಗಿಲ ಸಂದಿಯಲ್ಲಿ ಒಳನುಗ್ಗಿದ ವಿಷದ ಹಾವು ಕೋಣೆಯಲ್ಲಿ ಮಲಗಿದ್ದ ಗಣೇಶ್ ಹಾಗೂ ಈಶಮ್ಮಳಿಗೆ ಕಚ್ಚಿದೆ. ನಿದ್ದೆಯಲ್ಲಿದ್ದ ಅಣ್ಣ ತಂಗಿ ಚಿರನಿದ್ರೆಗೆ ಜಾರಿದ್ದು ಮಾತ್ರ ವಿಪರ‍್ಯಾಸ.

ಆನೆಗಳ ಹಿಂಡಿನಿಂದ ಕೃಷಿಗೆ ದಾಳಿ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ತಾಲೂಕಿನ ದುರ್ಗಮ ಗಡಿ ಪ್ರದೇಶವಾದ ಎಳನೀರು ಎಂಬಲ್ಲಿ ಆನೆಗಳ ಹಿಂಡೊಂದು ದಾಳಿ ಮಾಡಿ ಅಪಾರ ಅಡಿಕೆ ಕೃಷಿಗೆ ಹಾನಿ ಉಂಟು ಮಾಡಿದೆ. ಸೋಮವಾರ ಸುಮಾರು ೭ ಆನೆಗಳ ಹಿಂಡೊಂದು ಪ್ರದೇಶದ ಧರಣೇಂದ್ರ ಕುಮಾರ್ ಮತ್ತು ಶಾಂತಿ ಪ್ರಸಾದ್ ಎಂಬುವರ ಅಡಿಕೆ ತೋಟಕ್ಕೆ ನುಗ್ಗಿ ಒಟ್ಟು ಸುಮಾರು ೨೦೦ ಅಡಿಕೆ ಗಿಡಗಳನ್ನು ಉರುಳಿಸಿ ದಾಂದಲೆ ಎಬ್ಬಿ ಸಿವೆ. ಸ್ಥಳೀಯರು ಅರಣ್ಯ ಇಲಾಖೆ ಯವರಿಗೆ ದೂರು ನೀಡಿದ್ದಾರೆ. ಈ ಪ್ರದೇಶಕ್ಕೆ ತಿಂಗಳ ಹಿಂದೆಯೂ ದಾಳಿ ಮಾಡಿದ್ದವು.

ಇತ್ತಂಡಗಳಿಂದ ಪರಸ್ಪರ ಹಲ್ಲೆ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ಒಂದೇ ಕೋಮಿನ ಇತ್ತಂಡಗಳು ಪರಸ್ಪರ ಹಲ್ಲೆ ನಡೆಸಿದ ಘಟನೆ ಸೋಮವಾರ ಗೇರುಕಟ್ಟೆಯಲ್ಲಿ ನಡೆದಿದೆ. ಕೆ.ಎಸ್ ಯಾಕೂಬ್ ಎಂಬವರ ಮೇಲೆ ಅಬ್ದುಲ್ ಕರೀಮ್, ಮಹಮ್ಮದ್ ಶರೀಫ್, ಜಿಯಾಬ್ ಎಂಬವರು ಕೈಯಿಂದ, ತಲವಾ ರಿನಿಂದ, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಇತ್ತ ಅಬ್ದುಲ್ ಕರೀಮ್ ಎಂಬವರ ಮೇಲೆ ಯಾಕೂಬ್, ಪುತ್ತುಮೋನು, ಹಸನಬ್ಬ ಮತ್ತು ಇನ್ನಿಬ್ಬರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸುಳ್ಯ: ಹೊಡೆದಾಟ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ನೆರೆಕರೆಯವರು ಜಗಳ ಮಾಡಿ ಹೊಡೆದಾಡಿಕೊಂಡ ಘಟನೆ ಸುಳ್ಯ ಸಮೀಪದ ಜಾಲ್ಸೂರಿನಲ್ಲಿ ನಡೆದಿದೆ. ಜಾಲ್ಸೂರಿನ ವಿನೋದ ಹಾಗೂ ರಾಮಕೃಷ್ಣ ಅವರು ಶೀಲಾವತಿ ಎಂಬವರ ಮನೆಗೆ ಬಂದು ನಿಂದಿಸಿ ಮಾತನಾಡಿ ಅವರ ಪುತ್ರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಎಂಡೋಗೆ ಬಲಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಎಂಡೋಸಲ್ಫಾನ್ ದುಷ್ಪರಿಣಾಮಕ್ಕೀಡಾಗಿ ಉಕ್ಕಿನಡ್ಕ ಬಳಿಯ ನೆಲ್ಲಿಕುಂಜೆ ನಿವಾಸಿ ಕುಂಞಕಣ್ಣ(೬೨) ಮೃತಪಟ್ಟಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ಮೃತಪಟ್ಟಿದ್ದಾರೆ.

ಬಾಲಕಿಯ ಅತ್ಯಾಚಾರ: ಓರ್ವ ಸೆರೆ, ಇನ್ನೋರ್ವ ಪರಾರಿ

Posted by JAYAKIRANA Kirana on | 0 comments | Leave a comment...

ಆನೇಕಲ್: ಮಾವಿನ ತೋಟದಲ್ಲಿ ಆಟವಾಡುತ್ತಿದ್ದ ಐದರ ಹರೆಯದ ಬಾಲಕಿ ಮೇಲೆ ಇಬ್ಬರು ಕಾಮುಕರು ಅತ್ಯಾಚಾರವೆಸಗಿದ ಪ್ರಕರಣ ಅನೇಕಲ್ ತಾಲೂಕಿನ ಅಬ್ಬಯ್ಯನ ಪಾಳ್ಯದಲ್ಲಿ ನಿನ್ನೆ ನಡೆದಿದೆ.
ತೀವ್ರ ಅಸ್ವಸ್ಥಗೊಂಡಿರುವ ಬಾಲಕಿ ಸಂಜನಾ(೫)ಳನ್ನು ಸಮೀಪದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧು ಹಾಗೂ ವಿಜಯ್ ಅತ್ಯಾಚಾರವೆಸಗಿದ ಕಾಮುಕರಾಗಿದ್ದು, ವಿಜಯ ಪರಾರಿಯಾಗಿದ್ದರೆ ಮಧು ಅತ್ತಿಬೆಲೆ ಠಾಣಾ ಪೊಲೀಸರ ವಶದಲ್ಲಿದ್ದಾನೆ. ಆಟವಾಡಲೆಂದು ಸಮೀಪದ ಮಾವಿನತೋಟಕ್ಕೆ ತೆರಳಿದ್ದ ಸಂಜನಾಳನ್ನು ನೋಡಿದ ಮಾವಿನ ತೋಟದಲ್ಲೇ ಕೆಲಸ ಮಾಡುತ್ತಿದ್ದ ಮಧು ಹಾಗೂ ವಿಜಯ್ ಅತ್ಯಾಚಾರವೆಸಗಿರುವುದಾಗಿ ಆರೋಪಿಸಲಾಗಿದೆ.

ಟೆಂಪೋ ಡಿಕ್ಕಿ: ಬೈಕ್ ಸವಾರ ಗಂಭೀರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಮುಲ್ಕಿಯಲ್ಲಿ ನಡೆದಿದೆ. ಬೆಳಿಗ್ಗೆ ಸುಮಾರು ೭.೧೫ರ ವೇಳೆಗೆ ಈ ಘಟನೆ ಸಂಭವಿಸಿದ್ದು ಗಾಯಾಳುವನ್ನು ತಲಪಾಡಿಯ ಸಂತೋಷ್(೨೫) ಎಂದು ಹೆಸರಿಸಲಾಗಿದೆ.ಇವರು ತನ್ನ ಬೈಕ್‌ನಲ್ಲಿ ಹೋಗುತ್ತಿದ್ದಾಗ ಪಡುಬಿದ್ರಿಯಿಂದ ಬೈಕಂಪಾಡಿಗೆಯತ್ತ ಧಾವಿಸುತ್ತಿದ್ದ ಟೆಂಪೋ ಅತೀ ವೇಗದಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ರಸ್ತೆಗೆ ಎಸೆಯಲ್ಪಟ್ಟ ಸಂತೋಷ್ ಕೈ. ಭುಜ ಹಾಗೂ ಸೊಂಟಕ್ಕೆ ತೀವ್ರ ಗಾಯಗಳಾಗಿದ್ದು ಖಾಸಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಲ್ಕಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಶುಭಕಾರ್ಯ ಮುಗಿಸಿ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಮಹಿಳೆ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ ತಳಂಗರೆ ಪಟೇಲ್ ರಸ್ತೆಯ ತಮ್ಮ ಸ್ವಗೃಹದಲ್ಲಿ ಕುಸಿದು ಬಿದ್ದು ನಗರದ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ನಫೀಜಾ(೪೫) ಎಂಬ ಮಹಿಳೆ ಮೃತಪಟ್ಟಿದಾರೆ. ಇವರು ಇದ್ದೀನ್ ಕುಂಞಿ ಅವರ ಪತ್ನಿಯಾಗಿದ್ದಾರೆ.

ಪುತ್ತೂರು: ತಮ್ಮನನ್ನು ಕೊಲೆಗೈದ ಆರೋಪಿ ಅಣ್ಣನಿಗೆ ಜಾಮೀನು

Posted by JAYAKIRANA Kirana on | 0 comments | Leave a comment...

ಪುತ್ತೂರು: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನಿಡ್ಲೆಯಲ್ಲಿ ಆರು ತಿಂಗಳ ಹಿಂದೆ ತನ್ನ ಸಹೋದರನನ್ನು ಕತಿ ಯಿಂದ ಕಡಿದು ಕೊಲೆಗೈದ ಆರೋಪ ಎದುರಿಸುತ್ತಿರುವ ಆರೋಪಿ ಅಣ್ಣನಿಗೆ ಪುತ್ತೂರಿನ ತ್ವರಿತಗತಿ ನ್ಯಾಯಾಲಯ ಶರ್ತಬದ್ಧ ಜಾಮೀನು ನೀಡಿದೆ.
 ನಿಡ್ಲೆ ಗ್ರಾಮದ ಬೂಡುಜಾಲು ನಿವಾಸಿಯಾಗಿದ್ದ ಲಕ್ಷ್ಮೀಶ (೨೫) ಅವರನ್ನು ಕತ್ತಿಯಿಂದ ಕಡಿದು ಕೊಲೆ ಗೈದಿದ್ದ ಆರೋಪದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟು ನ್ಯಾಯಾಂಗ ಬಂಧನ ದಲ್ಲಿದ್ದ ಆತನ ಸಹೋದರ ಸೋಮ ಶೇಖರ್‌ಗೆ ನ್ಯಾಯಾಲಯ ಶರ್ತಬದ್ಧ ಜಾಮೀನು ನೀಡಿದೆ. ಆರೋಪಿ ಸೋಮಶೇಖರ್ ಪರವಾಗಿ ವಕೀಲರಾದ ಮಹೇಶ್ ಕಜೆ, ಕಿಶೋರ್ ಕೊಳತ್ತಾಯ, ಪ್ರಸಾದ್ ಕುಮಾರ್ ರೈ ವಾದಿಸಿದ್ದರು.

ಪಂಚಾಯತ್ ಸದಸ್ಯ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ, ಕಾಂಗ್ರೇಸ್ ನೇತಾರ ಬಿ.ಕುಮಾರನ್ (೫೦) ಸೋಮವಾರ ಸ್ಥಳೀಯ ಬಸ್ ತಂಗುದಾಣದಲ್ಲಿ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ.
ಅವರನ್ನು ತಕ್ಷಣ ಚೆಂಗಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಕಾಗ್ರೇಸ್‌ನ ಮಂಡಲ ಸಮಿತಿ ಮಾಜಿ ಅಧ್ಯಕ್ಷರಾಗಿರುವ ಇವರು ಮಗಳನ್ನು ಶಾಲೆಗೆ ಕಳುಹಿಸಲು ಬಸ್ ಪ್ರಯಾಣಿಕರ ತಂಗುದಾಣಕ್ಕೆ ಬಂದಿದ್ದರು. ಇವರು ಜನಶ್ರೀ ಸಂಘಟನೆಯ ಮಂಡಕ ಸಮಿತಿ ಅಧ್ಯಕ್ಷರಾಗಿದ್ದರು.

ಪತ್ತೆಯಾಗದ ಬಾಲಕನ ದೇಹ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸೂರಿಂಜೆ ಬಳಿ ನಂದಿನಿ ನದಿ ಶಾಖೆಯಲ್ಲಿ ಈಜಲು ತೆರಳಿ ನೀರುಪಾಲಾಗಿದ್ದ ಪಕ್ಷಿಕೆರೆಯ ಹೊಸಕಾಡು ನಿವಾಸಿ ರೋಹಿತ್(೧೮) ಎಂಬ ಬಾಲಕನ ಮೃತದೇಹ ಇಂದು ಮುಂಜಾನೆಯವರೆಗೂ ಪತ್ತೆಯಾಗಿಲ್ಲ.
ಆತ ನದಿಗೆ ಹಾರಿದ ಕಡೆಯಿಂದ ಮೃತದೇಹ ಪಾವಂಜೆ ಕಡೆಗೆ ಹೋಗುವ ಸಾಧ್ಯತೆಯಿಲ್ಲ, ಯಾಕೆಂದರೆ ಆ ಕಡೆ ನೀರು ಕಡಿಮೆಯಿದೆ. ಒಂದು ವೇಳೆ ಹೋಗಿದ್ದಲ್ಲಿ ಅದು ಸಸಿಹಿತ್ಲು ಮೂಲಕ ಸಮುದ್ರ ಸೇರಿರುವ ಸಾದ್ಯತೆಯಿದೆ ಎಂದು ಪೊಲಿಸರು ತಿಳಿಸಿದ್ದಾರೆ. ಹುಡುಕಾಟ ಮುಂದುವರಿದಿದೆ.

ದೇವಳದಿಂದ ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮೂಡಬಿದ್ರಿಯ ತೆಂಕಮಿಜಾರು ಗ್ರಾಮದ ಅಶ್ವಥಪುರ ಶಂಕರಾಚಾರ್ಯ ಮಠಕ್ಕೆ ನುಗ್ಗಿದ ಕಳ್ಳರು ಸುಮಾರು ೧.೫೦ ಲಕ್ಷ ರೂ. ಮೊತ್ತದ ೬೫ಗ್ರಾಂ ಚಿನ್ನ ಹಾಗೂ ೫ ಸಾವಿರ ರೂ.ನಗದು ದೋಚಿದ್ದಾರೆ.
ಮಠದ ಎದುರಿನ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು ದೇವರ ವಿಗ್ರಹಕ್ಕೆ ತೊಡಿಸಿದ್ದ ೪೫ಗ್ರಾಂ ಚಿನ್ನದ ಸರ ಮತ್ತು ಶಾರದಾ ದೇವಿಯ ೨೦ ಗ್ರಾಂ ಚಿನ್ನದ ಮೂರ್ತಿಯನ್ನು ಕಳವುಗೈದಿದ್ದಾರೆ.

ಫ್ಯಾಕ್ಟರಿಯಲ್ಲಿ ಕಳವು: ಆರೋಪಿಗೆ ನ್ಯಾ.ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪುತ್ತೂರಿನಲ್ಲಿರುವ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಿಂದ ನಾನಾ ಸೊತ್ತುಗಳನ್ನು ಐವರು ಆರೋಪಿಗಳಿಗೆ ಪುತ್ತೂರು ನ್ಯಾಯಾಯ ಜುಲೈ ೪ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕಿದ್ದ ಪುರುಷರಕಟ್ಟೆ ಪ್ರಶಾಂತ್, ಹೇಮಮತ್ ಸುಳ್ಯ, ಪ್ರದೀಪ್ ಬಲ್ನಾಡು, ಹರೀಶ್ ನಾಯ್ಕ ಮತ್ತು ರಿಶಿಕೇಶ ಅವರು ಗೊದಾಮಿನಿಂದ ತುಪ್ಪ,ಬೆಣ್ಣೆ,ಸಕ್ಕರೆ, ತೂಕದ ಯಂತ್ರ, ಯುಪಿಎಸ್, ಬ್ಯಾಟರಿ,ಚಾಕಲೇಟ್ ಸೇರಿದಂತೆ ೩೭.೫೦ ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ ಎಂದು ಆರೋಪಿಸಲಾಗಿದೆ.

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲು ಕಸರತ್ತು

Posted by JAYAKIRANA Kirana on | 0 comments | Leave a comment...

ಸಿ.ಎಂ. ಮಾಡಿ ಇಲ್ಲವೇ ರಾಜ್ಯಾಧ್ಯಕ್ಷ ನೀಡಿ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಸದಾನಂದಗೌಡರನ್ನು ಬದಲಾವಣೆ ಮಾಡುವುದು ಖಚಿತವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಾವೇ ಸ್ಥಾನಕ್ಕೆ ಅರ್ಹ ವ್ಯಕ್ತಿಯೆಂದು ಪ್ರಕಟಿಸಿದ್ದಾರೆ. ಪಂಚಾಯತ್ ರಾಜ್ ಸಚಿವ ಜಗದೀಶ್‌ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಎಂದು ಬಿಂಬಿಸುತ್ತಿದ್ದ ಯಡಿಯೂರಪ್ಪ ಇದೀಗ ತಾವೇ ಅಭ್ಯರ್ಥಿ ಎಂದು ಹೇಳಿದ್ದಾರೆ.
 ನಾಯಕತ್ವ ಬದಲಾವಣೆ ಸಂಬಂಧ ಚರ್ಚೆ ನಡೆಸಲು ರಾಜ್ಯಾಧ್ಯಕ್ಷ ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ತಮ್ಮ ಹಕ್ಕು ಒತ್ತಾಯಿಸಿದ್ದಾರೆ. ನನಗೆ ಅಧಿಕಾರ ಬೇಕೇ ಬೇಕು. ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ನೀಡಲು ಸಾಧ್ಯವಾಗದಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಭ್ರಷ್ಟಾಚಾರ ಆರೋಪದ ಮೇಲೆ ತನಗೆ ಆ ಸ್ಥಾನ ನೀಡದಿದ್ದರೆ ನೀವೇ ಮುಖ್ಯಮಂತ್ರಿಯಾಗಿ ಎಂದು ಈಶ್ವರಪ್ಪರಿಗೆ ಹೇಳಿರುವ ಯಡಿಯೂರಪ್ಪ ರಾಜ್ಯಾಧ್ಯಕ್ಷ ಸ್ಥಾನ ತನಗೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಹಗರಣದ ಕುರಿತು ಸಿಬಿಐನಿಂದ ತನಿಖೆ ನಡೆಯುತ್ತಿದ್ದರೂ ಮೋದಿ ಜೈಲಲ್ಲಿದ್ದದ್ದು ಸೇರಿದಂತೆ ಹಲವು ಮಂದಿ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. ಮತ್ತೆ ತಾನು ಮುಖ್ಯಮಂತ್ರಿ ಯಾಗುವುದರಲ್ಲಿ ಏನು ತಪ್ಪು ಇದೆ ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ಪಕ್ಷಕ್ಕೆ ಮುಜುಗರ ಆಗುತ್ತದೆ ಎನ್ನುವುದಾದರೆ ಅಧ್ಯಕ್ಷ ಸ್ಥಾನ ನೀಡಿ ಎಂದು ಒತ್ತಾಯಿಸಿದ್ದಾರೆ. ನಾಯಕತ್ವ ಬದಲಾವಣೆ ಮಾಡುವ ವಿಚಾರ ಮುಖಂಡರೊಂದಿಗೆ ಸಮಾಲೋಚನೆ ನಡೆಸಲು ಧರ್ಮೇಂದ್ರ ಪ್ರದಾನ್ ಜೂ.೨೮ರಂದು ನಗರಕ್ಕೆ ಆಗಮಿಸಲಿ ದ್ದಾರೆ. ಆ ನಂತರ ಅರುಣ್ ಜೇಟ್ಲಿ ಧಾವಿಸಿ ಹೊಸ ನಾಯಕ ಯಾರೆಂದು ಪ್ರಕಟಿಸಲಿದ್ದಾರೆ. ಈ ಅಂತಿಮ ಘಟ್ಟದಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಯಾಗಲು ಪ್ರಯತ್ನ ನಡೆಸಿದ್ದಾರೆ.

ಜಿಲ್ಲಾಡಳಿತದ ವಿರುದ್ಧ ಸಿಪಿಐಎಂ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಂತೂರು ಹೈ ಪೊಂಟ್ ನಿರ್ವಸಿತ ಕೊರಗ ಕುಟುಂ ಬಗಳಿಗೆ ಪಾವತಿಸಬೇಕಾದ ಬಾಡಿಗೆ ಯನ್ನು ನೀಡದೆ ಜಿಲ್ಲಾಡಳಿತ ವಂಚಿಸಿದೆ ಎಂದು ಆರೋಪಿಸಿ ಸಿಪಿಐಎಂ ಜಿಲ್ಲಾ ಸಮಿತಿಯಿಂದ ನಿನ್ನೆ ದ.ಕ. ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.
ಎರಡು ವರ್ಷಗಳ ಹಿಂದೆ ಮಂಗ ಳೂರು-ಬಿ.ಸಿ.ರೋಡು ಚತುಷ್ಪತ ರಸ್ತೆ ಕಾಮಗಾರಿ ಆರಂಭಗೊಂಡಾಗ ೮೦ ವರ್ಷಗಳಿಂದ ನಂತೂರಿನಲ್ಲಿ ವಾಸವಿದ್ದ ಆರು ಆದಿವಾಸಿ ದಲಿತ ಕುಟುಂಬಗಳು ಮನೆ ನಿವೇಶನವನ್ನು ಕಳೆದುಕೊಂಡಿ ದ್ದವು. ಇದರ ವಿರುದ್ಧ ಸಂಘಟನೆ ನಡೆ ಸಿದ ಹೋರಾಟದ ಫಲವಾಗಿ ಸರಿಪಳ್ಳ ದಲ್ಲಿ ಐದು ಸೆಂಟ್ಸ್ ಜಾಗ ಹಾಗೂ ಮನೆ ಕಟ್ಟಲು ಧನಸಹಾಯದ ಜೊತೆಗೆ ಪ್ರಾರಂಭದ ಮೂರು ತಿಂಗಳು ತಲಾ ಎರಡು ಸಾವಿರದಂತೆ ನಿರಾಶ್ರಿತ ಕುಟುಂ ಬಗಳು ವಾಸಿಸುವ ಮನೆಗೆ ಬಾಡಿಗೆ ನೀಡಲು ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ತೀರ್ಮಾನಿಸಿತ್ತು.
ಇದಕ್ಕೆ ಸಂಬಂಧಿಸಿ ೨೦೧೧ ಫೆಬ್ರವ ರಿಯಲ್ಲಿ ಸರಕಾರಕ್ಕೆ ಕಡ ಸಲ್ಲಿಸ ಲಾಗಿದ್ದರೂ ಭೂಮಂಜೂರಾತಿಗಾಗಿ ಪ್ರಯತ್ನಿಸಿಲ್ಲ. ಅಲ್ಲದೆ ಬಾಡಿಗೆ ಹಣ ವನ್ನೂ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾ ಡಳಿತ ಉಡಾಫೆಯ ಉತ್ತರ ನೀಡಿತ್ತು ಎಂದು ದೂರಲಾಗಿದೆ. ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಆದಿ ವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ದಲಿತ ಹಕ್ಕುಗಳ ಮಂಗಳೂರು ಸಮಿತಿ, ರಾಷ್ಟ್ರೀಯ ಪರಿಶಿಷ್ಟ ಹಕ್ಕುಗಳ ಅಯೋಗಕ್ಕೆ ದೂರು ನೀಡಿತ್ತು.
ಇದುವರೆಗೆ ಬಾಕಿಯಿಡಲಾಗಿರುವ ಬಾಡಿಗೆ ಹಣ ಹಾಗೂ ಭೂಮಿಯನ್ನು ಮಂಜೂರು ಮಾಡುವಂತೆ ಅಯೋ ಗವು ಮೇ ತಿಂಗಳಲ್ಲಿಯೇ ಆದೇಶ ನೀಡಿತ್ತು. ಆದರೆ ಆಯೋಗದ ಆದೇಶ ಇದುವರೆಗೂ ಜಾರಿಗೆ ಬಾರದ ಹಿನ್ನೆಲೆ ಯಲ್ಲಿ ನಿನ್ನೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಮುಖಂಡರು ಅಯೋಗದ ಆದೇಶವನ್ನು ಜಾರಿಗೆ ತರದಿದ್ದಲ್ಲಿ ಹೋರಾಟವನ್ನು ತೀವ್ರ ಗೊಳಿಸುವ ಎಚ್ಚರಿಕೆ ನೀಡಿದರು.

ನಾಗರಿಕರೇ ರಸ್ತೆ ರಿಪೇರಿ ಮಾಡಿದರು!

Posted by JAYAKIRANA Kirana on | 0 comments | Leave a comment...

ಸುಳ್ಯ: ಸಂಚಾರಕ್ಕೆ ತೀರ ಸಂಕಷ್ಟ ವನ್ನು ಅನುಭವಿಸುತ್ತಿರುವ ಸುಳ್ಯ-ಆಲೆಟ್ಟಿ-ಬಡ್ಡಡ್ಕ ಅಂತಾರಾಜ್ಯ ರಸ್ತೆಯಲ್ಲಿ ಸಾರ್ವಜನಿಕರೇ ಶ್ರಮದಾನ ಮಾಡಿ ದುರಸ್ಥಿ ಮಾಡಿದ್ದಾರೆ. ಆಲೆಟ್ಟಿ ಮತ್ತು ಪರಿಸರದ ಯುವಕರು ಸೇರಿ ಕಲ್ಲು ಮಣ್ಣು ಡಾಮರು ಮಿಶ್ರಿತವನ್ನು ತಂದು ಹೊಂಡದಲ್ಲಿ ತುಂಬಿದ್ದಾರೆ. ಪಯಸ್ವಿನಿ ಸೇತುವೆಯ ಬಳಿಯಿಂದ ನಾರ್ಕೋಡು ವರೆಗೆ ಈ ರೀತಿ ದುರಸ್ಥಿ ಕಾಮಗಾರಿ ನಡೆಸಿದ್ದಾರೆ. ಈ ರಸ್ತೆಯಲ್ಲಿ ಹೊಂಡ ಗುಂಡಿ ತುಂಬಿ ಸಂಚಾರಕ್ಕೆ ತೀವೃ ಅಡಚಣೆ ಉಂಟಾಗಿದೆ. ಇವರ ಶ್ರಮದಾ ನದಿಂದ ಸಾರ್ವಜನಿಕರು ಸ್ವಲ್ಪ ಮಟ್ಟಿನ ನಿಟ್ಟುಸಿರು ಬಿಡುವಂತಾಗಿದೆ. ಮುಖ್ಯ ಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಇಧಿಯಿಂದ ಅನುದಾನ ಬಿಡುಗಡೆ ಮಾಡಿದ್ದರೂ ಕಲ್ಲು ಮತ್ತು ಮಣ್ಣು ತುಂಬಿ ದುರಸ್ಥಿ ನಡೆಸಿ ಆಲೆಟ್ಟಿ-ಬಡ್ಡಡ್ಕ ರಸ್ತೆ ಭಾರೀ ಸುದ್ದಿಗೆ ಗ್ರಾಸವಾಗಿತ್ತು.

ಪುತ್ತೂರು ತಾಲೂಕು ಕಚೇರಿಯಲ್ಲಿ ಮಸ್ತ್ ಮಜಾ!

Posted by JAYAKIRANA Kirana on | 0 comments | Leave a comment...

ಪುತ್ತೂರು: ತಮ್ಮನ್ನು ಸರಿಯಾಗಿ ನೋಡುತ್ತಿಲ್ಲವೆಂದು ಹಾಸನದಿಂದ ಹೆಂಡತಿ, ಮಗಳು ಹಾಗೂ ಅಳಿಯ ಇಲ್ಲಿಯ ತಾಲೂಕು ಕಚೇರಿಗೆ ಬಂದು ಪತಿ ದ್ವಿತೀಯ ದರ್ಜೆ ಸರ್ವೇಯರ್ ನನ್ನು ತಗಾದೆ ತೆಗೆದು ರಾದ್ದಾಂತವೆಬ್ಬಿ ಸಿದ ಘಟನೆ ಇಲ್ಲಿಯ ತಾಲೂಕು ಕಚೇರಿ ಯಲ್ಲಿ ನಿನ್ನೆ ನಡೆದಿದೆ.
ಹಾಸನ ಮೂಲದ ವೆಂಕಟ ಎಂಬವರು ಪುತ್ತೂರು ತಾಲೂಕು ಕಚೇರಿಯಲ್ಲಿ ದ್ವಿತೀಯ ಡಿವಿಜನ್ ಸರ್ವೇ ಯರ್ ಆಗಿ ಕಾರ‍್ಯ ನಿರ್ವಹಿಸುತ್ತಿದ್ದು, ನಿನ್ನೆ ತಾಲೂಕು ಕಚೇರಿಗೆ ಆಗಮಿಸಿ ವೆಂಕಟ ಅವರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ವೇಳೆ ಮದ್ಯ ಕುಡಿದು ನಶೆ ಏರಿಸಿಕೊಂಡಿದ್ದ ಸರ್ವೇಯರ್, ಇಲ್ಲಿಂದ ನಡೆಯಿರಿ ಇಲ್ಲದಿದ್ದರೆ ನಿಮ್ಮನ್ನು ಕೊಲ್ಲುತ್ತೇನೆ ಎಂದೆಲ್ಲ ಬೆದರಿ ಸಿದ್ದು, ಗಂಡ-ಹೆಂಡತಿ ಜಗಳ ಇಲ್ಲಿ ನೆರೆದಿದ್ದವರಿಗೆ ಉಚಿತ ಮನೋರಂಜನೆ ನೀಡಿತು. ಅಲ್ಲದೆ ಈತ ಈ ಹಿಂದೆ ನಾಲ್ಕು ಮದುವೆಯಾಗಿರುವ ಬಗ್ಗೆಯೂ ತಿಳಿದು ಬಂತು. ಬಂಟ್ವಾಳದಲ್ಲಿ ಕೆಲಸ ನಿರ್ವಹಿ ಸುತ್ತಿದ್ದ ಸಂದರ್ಭ ಒಬ್ಬಳನ್ನು ಮದುವೆ ಯಾಗಿದ್ದರೆ ಉಪ್ಪಿನಂಗಡಿಯ ಲ್ಲೊಂದು ಹಾಗೂ ಹಾಸನದಲ್ಲಿಯೂ ಮದುವೆ ಯಾಗಿ ವಿಚ್ಛೇದನ ನೀಡಿರುವ ಬಗ್ಗೆಯೂ ಕೇಳಿ ಬಂತು. ನಂತರ ತಹಶೀಲ್ದಾರರ ಹೇಳಿಕೆಯಂತೆ ಪೊಲೀ ಸರಿಗೆ ಒಪ್ಪಿಸಿದರು.
ಅಲ್ಲಿ ಆತ ಕ್ಷಮೆ ಯಾಚಿಸಿದ್ದಲ್ಲದೆ ಮಡದಿ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದಾಗಿ ತಿಳಿಸಿದ್ದು, ಪ್ರಕರಣಕ್ಕೆ ತೆರೆ ಬಿದ್ದಿದೆ.

ಶಾಲಾ ಪಠ್ಯದಲ್ಲಿ ಕೇಸರೀಕರಣದ ವಿರುದ್ಧ ಮುಸ್ಲಿಂಲೀಗ್ ರಾಜ್ಯಪಾಲರಿಗೆ ಮನವಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಭಾರತೀಯ ಜನತಾಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ನವರು ಶಿವಮೊಗ್ಗದಲ್ಲಿ ನಡೆದ ಸಮಾ ರಂಭದಲ್ಲಿ ಶಾಲಾ ಪಠ್ಯಪುಸ್ತಕದಲ್ಲಿ ಕೇಸರೀಕರಣವನ್ನು ಪ್ರತಿಪಾದಿಸಿದ್ದನ್ನು ಖಂಡಿಸಿರುವ ಇಂಡಿಯನ್ ಯೂನಿ ಯನ್ ಮುಸ್ಲಿಂ ಲೀಗ್‌ನ ನಿಯೋಗ ದ.ಕ.ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಸೌಹಾರ್ದತೆಗೆ ಹೆಸರಾಗಿರುವ ರಾಜ್ಯದ ಪಠ್ಯಪುಸ್ತಕಗಳಲ್ಲಿ ಕೇಸರೀಕ ರಣಕ್ಕೆ ಅವಕಾಶ ನೀಡಿದರೆ ಅನಾಹುತ ಆಗಲಿದೆ. ಈ ಹಿನ್ನೆಲೆಯಲ್ಲಿ ದೇಶ ಹಾಗೂ ನಾಡಿಗಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದವರ ಚರಿತ್ರೆಯನ್ನು ಅಳ ವಡಿಸುವಂತೆ ಮನವಿಯಲ್ಲಿ ವಿನಂ ತಿಸಿದೆ.
ಯಾಂತ್ರೀಕೃತ ಮೀನುಗಾರಿಕೆ ನಿಷೇಧಕ್ಕೆ ಒತ್ತಾಯ
ಇದೇ ವೇಳೆ ದ.ಕ.ಜಿಲ್ಲಾಧಿಕಾರಿಗೆ ಮನವಿ ಮಾಡಿರುವ ಮುಸ್ಲಿಂ ಲೀಗ್, ಮೀನುಗಳ ಸಂತತಿ ರಕ್ಷಣೆ ಹಾಗೂ ಬೋಟು ದುರಂತದಲ್ಲಿ ಸಂಭವಿಸುವ ಮೀನುಗಾರರ ಜೀವ ರಕ್ಷಣೆಯ ದೃಷ್ಟಿ ಯಿಂದ ಮೂರು ತಿಂಗಳು ಯಾಂತ್ರೀ ಕೃತ ಮೀನುಗಾರಿಗೆ ಕಡ್ಡಾಯವಾಗಿ ನಿಷೇಧ ಹೇರಬೇಕೆಂದು ವಿನಂತಿಸಿದೆ. ನಿಯೋಗದಲ್ಲಿ ಅಹ್ಮದ್ ಜಮಾಲ್, ಹಾಜಿ ಸೈಯ್ಯದ್ ಬಾಷಾ ತಂಙಳ್, ಮುಂತಾದವರು ಉಪಸ್ಥಿತರಿದ್ದರು.

ಗುವಾಹಟಿ: ಮೀನು ಹಿಡಿಯಲು ಹೋದವರಿಗೆ ಸಾವಿರದ ನೋಟು!

Posted by JAYAKIRANA Kirana on | 0 comments | Leave a comment...

ಗುವಾಹಟಿ: ಇಲ್ಲಿಗೆ ಸಮೀಪದ ಚಾಚಲ್ ಎಂಬಲ್ಲಿನ ಕೆರೆ ಮೀನುಗಾರಿಕೆ ಫೇಮಸ್. ಇಲ್ಲಿ ಪ್ರತಿನಿತ್ಯ ನೂರಾರು ಮಂದಿ ಬಡ ಮೀನುಗಾರರು ಮೀನು ಹಿಡಿದು ತಮ್ಮ ಹೊಟ್ಟೆ ತುಂಬಿಸಿಕೊಳ್ಳು ತ್ತಿದ್ದರು. ಆದರೆ ನಿನ್ನೆ ಮೀನು ಹಿಡಿದು ಕೆರೆಗಿಳಿದ ಮೀನುಗಾರರಿಗೆ ಅಚ್ಚರಿ ಯೋ ಅಚ್ಚರಿ! ಕಾರಣ, ಮೀನು ಹಿಡಿಯಲು ಹಾಕಿದ್ದ ಬಲೆಗೆ ಮೀನಿನ ಬದಲು ಐದುನೂರು, ಸಾವಿರ ರೂ.ಗಳ ನೋಟುಗಳೇ ಬಿದ್ದಿತ್ತು.
ಬೃಹತ್ ಕೆರೆಯಲ್ಲಿ ನೋಟುಗಳ ಕಂತೆ-ಕಂತೆಯೇ ಸಿಕ್ಕಿದೆ ಎಂಬ ಸುದ್ದಿ ತಿಳಿದ ಜನರು ಪಕ್ಕದ ಊರು, ಜಿಲ್ಲೆಗಳಿಂದ ಆಗಮಿಸಿ ಕೆರೆಯಲ್ಲಿ ಮುಳುಗಿ ನೋಟಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಹೀಗೆ ನದಿಗಿಳಿದ ಬಹುತೇಕ ಮಂದಿಗೆ ಕೆಲವು ಸಾವಿರ ರೂ.ನಿಂದ ಹಿಡಿದು ೬೦ ಸಾವಿರ ರೂ.ವರೆಗೆ ಸಿಕ್ಕಿದೆ. ಮೀನು ಸಿಗಬೇಕಾದ ನದಿಯಲ್ಲಿ ನೋಟುಗಳ ಕಂತೆಗಳು ತೇಲಿ ಬರುತ್ತಿರುವುದು ಪೊಲೀಸರಿಗೂ ಅಚ್ಚರಿ ತರಿಸಿದೆ. ಸಂಜೆಯ ವೇಳೆ ನೋಟುಗಳ ಕಂತೆ ನೀರಿನಲ್ಲಿ ತೇಲಿಬರುತ್ತಿತ್ತು ಎನ್ನಲಾಗಿದೆ. ಎಲ್ಲವೂ ಅಸಲಿ ನೋಟುಗಳೇ ಆಗಿದ್ದು, ನೋಟುಗಳ ರಹಸ್ಯ ಮಾತ್ರ ಇನ್ನೂ ತಿಳಿದುಬಂದಿಲ್ಲ.

೩೦೦ ಏರ್‌ಇಂಡಿಯಾ ಪೈಲಟ್‌ಗಳ ಉಪವಾಸ ಸತ್ಯಾಗ್ರಹ

Posted by JAYAKIRANA Kirana on | 0 comments | Leave a comment...

ಮುಂಬಯಿ: ಏರ್ ಇಂಡಿಯಾ ವಿಮಾನಯಾನದ ಸುಮಾರು ೩೦೦ ಪೈಲಟ್‌ಗಳು ಸೋಮವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಮೇ ಎಂಟರಿಂದಲೇ ಮುಷ್ಕರ ಆರಂಭಿ ಸಿರುವ ಪೈಲಟ್‌ಗಳ ಬೇಡಿಕೆಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಭಾನುವಾರ ದೆಹಲಿಯಲ್ಲಿ ೧೦೦ ಪೈಲಟ್‌ಗಳು ಉಪವಾಸ ಸತ್ಯಾಗ್ರಹ ಆರಂಭಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಡ್ರೀಮ್ ಲೈನರ್ ಬೋಯಿಂಗ್-೭೮೭ ವಿಮಾನದ ತರಬೇತಿ ವೇಳಾಪಟ್ಟಿ ಕುರಿತು ಏರ್ ಇಂಡಿಯಾ ಹಾಗೂ ಪೈಲಟ್‌ಗಳ ನಡುವೆ ಮಾತುಕತೆ ಒಮ್ಮತಕ್ಕೆ ಬರದ ಹಿನ್ನೆಲೆಯಲ್ಲಿ ಪೈಲಟ್ ಗಳು ಅನಾರೋಗ್ಯದ ಕಾರಣ ನೀಡಿ ಮುಷ್ಕರಕ್ಕೆ ಮುಂದಾ ಗಿದ್ದರು. ಪೈಲಟ್ ಗಳ ಮುಷ್ಕರ ಕಾನೂ ನು ಭಾಹಿರ ಎಂದು ದೆಹಲಿ ಹೈಕೋ ರ್ಟ್ ತೀರ್ಪು ನೀಡಿದ್ದರೂ ಮುಷ್ಕರ ಮುಂದುವರಿಸಿದ್ದಾರೆ.

ಎರಡನೇ ಹಂತದ ಆಪರೇಷನ್ ಕಮಲಕ್ಕೆ ಕೈ ಹಾಕಿದ ಬಿಜೆಪಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಬಿಜೆಪಿ ಎರಡನೇ ಹಂತದ ಆಪರೇಷನ್ ಕಮಲಕ್ಕೆ ಕೈ ಹಾಕಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದು ಹಳೇ ಮೈಸೂರು ಭಾಗದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರತ್ತ ದೃಷ್ಟಿ ಹಾಯಿಸಿದೆ.
ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಆಂತರಿಕ ಕಲಹದ ಲಾಭ ಪಡೆದು ಅಲ್ಲಿರುವ ನಾಯಕರನ್ನು ತಮ್ಮತ್ತ ಸೆಳೆಯಲು ವಿಧಾನಪರಿಷತ್ ಸ್ಥಾನ, ಮುಂದಿನ ಚುನಾ ವಣೆಯಲ್ಲಿ ಟಿಕೆಟ್ ಸೇರಿದಂತೆ ಇತರೆ ನೆರವು ನೀಡುವ ವಾಗ್ಧಾನದೊಂದಿಗೆ ಪಕ್ಷಕ್ಕೆಲಾಭ ಮಾಡಿಕೊಡಬಲ್ಲ ನಾಯಕರ ಪಟ್ಟಿ ಮಾಡಿದೆ.ಕೇಂದ್ರದ ಮಾಜಿ ಸಚಿವ ಒಕ್ಕಲಿಗ ಸಮುದಾಯದ ವರ್ಚಸ್ವೀ ನಾಯಕ ನಟ ಅಂಬರೀಷ್, ದಲಿತ ಸಮುದಾಯದ ವಿ.ಶ್ರೀನಿವಾಸಪ್ರಸಾದ್, ಹಾಸನ ಚೆನ್ನರಾಯಪಟ್ಟಣದ ಜೆಡಿಎಸ್ ಶಾಸಕ ಪುಟ್ಟೇಗೌಡ ಸೇರಿದಂತೆ ಹಲವಾರು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ. ನಟ ಅಂಬರೀಷ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸ್ವತಃ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರೇ ಆಸಕ್ತಿ ವಹಿಸಿದ್ದು, ಔತಣಕೂಟದ ನೆಪದಲ್ಲಿ ಮನೆಗೆ ಕರೆದು ಚರ್ಚಿಸಿದ್ದಾರೆ.ಪ್ರಸ್ತುತ ವಿಧಾನಪರಿಷತ್‌ಗೆ ಮೂವರು ಸದಸ್ಯರನ್ನು ನಾಮಕರಣ ಮೂಲಕ ನೇಮಕ ಮಾಡುವ ಅವಕಾಶವಿದ್ದು, ಕಲಾವಿದರ ಕೋಟಾದಡಿ ಅಂಬರೀಷ್ ಅವರನ್ನು ವಿಧಾನಪರಿಷತ್‌ಗೆ ನೇಮಕ ಮಾಡಿ ಸಚಿವರನ್ನಾಗಿಸುವ ಭರವಸೆಯನ್ನೂ ನೀಡಿದ್ದಾರೆ. ಬಿಜೆಪಿಯಲ್ಲಿನ ಬಣ ರಾಜಕೀಯ ಸರಿಪಡಿಸಿಕೊಳ್ಳಿ ಆಮೇಲೆ ತಮ್ಮ ಸೇರ್ಪಡೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿಯವರಿಗೆ ಅಂಬರೀಷ್ ಹೇಳಿದ್ದಾರೆ ಎಂದುಮೂಲಗಳು ತಿಳಿಸಿವೆ.

26-06-2012

Posted by JAYAKIRANA Kirana on | 0 comments | Leave a comment...

ಶಿಕ್ಷಣವನ್ನು ಕೇಸರೀಕರಣ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿ ರಾಜ್ಯ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ‍್ಯಕರ್ತರು ಈಶ್ವರಪ್ಪ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.

ನರ್ಸ್ ಅತ್ಯಾಚಾರ: ಆರೋಪಿ ಡಾಕ್ಟರ್ ಪರಾರಿ

Posted by JAYAKIRANA Kirana on | 0 comments | Leave a comment...

ಕೊಲ್ಕತ್ತಾ: ಮದುವೆಯಾಗು ವುದಾಗಿ ನಂಬಿಸಿ ನರ್ಸ್ ಮೇಲೆ ಅತ್ಯಾಚಾರವೆಸಗಿದ ವೈದ್ಯ ಮಹಾಶಯ ಇದೀಗ ಪರಾರಿಯಾಗಿದ್ದಾನೆ.
ಕೊಲ್ಕತ್ತಾ ಮಹಾನಗರದ ಸುಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ಕಿರಿಯ ವೈದ್ಯನಾಗಿ ಸೇವೆ ಸಲ್ಲಿಸಿರುವ ವಿದ್ಯಾರ್ಥಿ ಹಷೀಬುಲ್ ಮುಲ್ಲಿಕ್(೨೮) ಎಂಬಾ ತನೇ ಆರೋಪಿಯಾಗಿದ್ದು, ಇದೀಗ ಪರಾರಿಯಾಗಿದ್ದಾನೆ.
ಬಾಧಿತ ಯುವತಿ ನಾಡಿಯಾದ ನಕಾಶಿಪಾಡಾದ ನಿವಾಸಿ, ಇದೇ ಕೊಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ ೩ ವರ್ಷಗಳಿಂದ ಆರೋಪಿ ವೈದ್ಯ ನರ್ಸ್ ಜತೆ ಸಂಬಂಧ ಹೊಂದಿದ್ದು, ಮದುವೆ ಯಾಗುವುದಾಗಿ ನಂಬಿಸಿದ್ದ ಎನ್ನಲಾಗಿದೆ. ಈ ವಿಷಯ ಎರಡೂ ಕಡೆಯ ಕುಟುಂಬಸ್ಥರಿಗೆ ತಿಳಿದಿತ್ತು ಎಂದು ಅತ್ಯಾಚಾರ ಕ್ಕೊಳ ಗಾದ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಕಂಕನಾಡಿ: ಪುಸ್ತಕ ವಿತರಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಂಕನಾಡಿ ಯುವಕವೃಂದದ ಅಧ್ಯಕ್ಷರಾದ ಶಶಿರಾಜ್ ಅಂಬಟ್‌ರವರ ಅಧ್ಯಕ್ಷತೆ ಯಲ್ಲಿ ಗರೋಡಿಯಲ್ಲಿ ಬಡ ಕುಟುಂಬದ ವಿದ್ಯಾರ್ಥಿ ಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.
 ಹಿರಿಯರಾದ ಕೇಶವ ಗರೋಡಿಯವರು ಹಿತವಚನ ನುಡಿದರು. ಅಧ್ಯಕ್ಷರಾದ ಶಶಿರಾಜ್ ಅಂಬಟ್‌ರವರು ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು. ಸಭೆಯಲ್ಲಿ ಹಿರಿಯ ಸದಸ್ಯರಾದ ಜನಾರ್ದನ್ ಗರೋಡಿ, ವಿಶ್ವನಾಥ್, ಜಯರಾಜ್, ಹೇಮಂತ್, ಸತೀಶ್ ಕುಮಾರ್ ಸೀತಾವಾಮ, ರಾಮದಾಸ್, ಅನಿಲ್, ಪ್ರವೀಣ್ ಕುಮಾರ್, ದೀಪರಾಜ್, ವರುಣ್‌ರಾಜ್, ಸುಂದರ ಉಪಸ್ಥಿತರಿದ್ದರು. ತೇಜಪಾಲ್ ಬಂಗೇರರ ಕಾರ್ಯಕ್ರಮ ನಿರೂಪಿಸಿದರು.

ಬಂಟರ ಸಂಘದ ಪದಾಧಿಕಾರಿಗಳ ಪದಗ್ರಹಣ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಂಟರ ಸಂಘ ಉಳ್ಳಾಲ ವಲಯ(ರಿ) ೨೦೧೨-೧೪ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅಂಬಿಕಾರೋಡ್‌ನಲ್ಲಿರುವ ಗಟ್ಟಿ ಸಮಾಜಭವನದಲ್ಲಿ ಉಳ್ಳಾಲ ವಲಯ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ಕೆ. ಚಂದ್ರಹಾಸ ಅಡ್ಯಂತಾಯ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಆಸರೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ಕಾರ್ಯಕ್ರಮ ಉದ್ಘಾಟಿಸಿದರು. ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಮಾತನಾಡಿದ ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕಲ್ಲೆಕ್ಕಾರು ಗುತ್ತು ರವೀಂದ್ರ ಶೆಟ್ಟಿ ಅವರು ಮಾತನಾಡಿ ಬಂಟರ ಸಂಘಕ್ಕೆ ಈಗಾಗಲೇ ಧನ ಸಹಾಯಕ್ಕಾಗಿ ಹಲವು ಪತ್ರಗಳು ಬಂದಿವೆ.
 ಈ ಬಗ್ಗೆ ಅಂತಿಮ ನಿರ್ಧಾರ ತಳೆದು ಸಹಕರಿಸಲಾಗು ವುದು. ಸಂಘದ ಅಭಿವೃದ್ಧಿಯೇ ನಮ್ಮ ಗುರಿ. ಅದಕ್ಕಾಗಿ ನಮ್ಮ ನಿರಂತರ ಸೇವೆ ಇರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ. ಮೋನಪ್ಪ ಭಂಡಾರಿ, ಎಚ್.ಎಂ.ಎಸ್. ರಾಜ್ಯಾಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ತನಿಷ್ಕ್ ಆಭರಣ ಮಳಿಗೆ ಕಾರ್ಯಾರಂಭ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಬಲ್ಮಠ ರಸ್ತೆಯಲ್ಲಿ ಹೊಸದಾಗಿ ಆರಂಭಿಸಿರುವ ತನಿಷ್ಕ್ ವಜ್ರ ಮತ್ತು ಚಿನ್ನಾಭರಣ ಮಳಿಗೆ ಬುಧವಾರ ಆರಂಭಗೊಂಡಿದ್ದು, ನಗರದ ಚಿನ್ನದ ಅಂಗಡಿಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.
ಟೈಟಾನ್ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್ ಅವರು ಮಳಿಗೆ ಉದ್ಘಾಟಿಸಿದರು. ಇದು ದೇಶದ ೧೩೮ನೇ ಮಳಿಗೆಯಾಗಿದ್ದು, ರಾಜ್ಯದಲ್ಲಿನ ೧೦ನೇ ಮಳಿಗೆ ಗುಣಮಟ್ಟದಲ್ಲಿ ರಾಜಿ ಇಲ್ಲ. ಒಟ್ಟು ಆರು ಸಾವಿರ ಬಗೆಯ ವಿನ್ಯಾಸದ ಆಭರಣಗಳನ್ನು ಇಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದರು.
ಇದೇ ೨೪ರವರೆಗೆ ಆರಂಭಿಕ ಕೊಡುಗೆಯಾಗಿ ಎಂಟು ಗ್ರಾಂ ಚಿನ್ನ ಕೊಂಡವರಿಗೆ ಮತ್ತು ಎಂಟು ಸಾವಿರ ರೂಪಾಯಿ ಮೌಲ್ಯದ ವಜ್ರದ ಆಭರಣ ಖರೀದಿಸಿದವರಿಗೆ ೨೫೦ ಮಿ.ಗ್ರಾಂ.ನ ಉಚಿತ ಚಿನ್ನದ ನಾಣ್ಯ ನೀಡಲಾಗುವುದು ಮುಂಗಡವಾಗಿ ಕಂತಿನಲ್ಲಿ ಹಣ ನೀಡಿ ಆಭರಣ ಖರೀದಿಸುವ ಯೋಜನೆಯೂ ಇಲ್ಲಿದೆ ಎಂದರು. ತನಿಷ್ಕ್‌ನ ಹಿರಿಯ ವ್ಯವಸ್ಥಾಪಕರಾದ ಸುಧೀರ್ ಮಿತ್ರ, ಅಂಬಲ್, ಮಳಿಗೆಯ ವ್ಯವಸ್ಥಾಪಕ ವಿಕ್ರಂ ಬೆಂಗ್ರೆ ಫ್ರಾಂಚೈಸಿ ಇಸ್ಮಾಯಿಲ್ ಅರುಲ್ ಮತ್ತು ಇತರರು ಇದ್ದರು.

ಉಸಿರುಗಟ್ಟಿಸಿ ಮಹಿಳೆಯ ಕೊಲೆ

Posted by JAYAKIRANA Kirana on | 0 comments | Leave a comment...

ಉಡುಪಿ: ಸ್ಕೂಟಿಯಲ್ಲಿ ಬಂದ ಆರೋಪಿಗಳಿಬ್ಬರು ಮಹಿಳೆಯನ್ನು ಕೊಲೆ ಗೈದು ಪರಾರಿಯಾಗಿರುವ ಘಟನೆ ನಿನ್ನೆ ಇಲ್ಲಿಯ ಕೆಮ್ಮಣ್ಣುವಿನ ಗುಡ್ಯಾಂ ಎಂಬಲ್ಲಿ ಸಂಭವಿಸಿದೆ.
ಉಡುಪಿಯ ಹೇರೂರು ನಿವಾಸಿ ಶಕುಂತಳಾ (೩೫) ಎಂಬವರೇ ಹತ್ಯೆಯಾದವ ರಾಗಿದ್ದು, ಇವರ ಪತಿ ಆಶೋಕ್ ಪೂಜಾರಿ ಮಸ್ಕತ್‌ನಲ್ಲಿ ಉದ್ಯೋಗ ಹೊಂದಿದ್ದಾರೆ. ಶಕುಂತಳಾ ಪ್ರಸ್ತುತ ಮಕ್ಕಳೊಂದಿಗೆ ಹೇರೂ ರುವಿನಲ್ಲಿ ವಾಸವಾಗಿದ್ದು, ಕೆಮ್ಮಣ್ಣುವಿನಲ್ಲಿ ಹೊಸದಾಗಿ ಜಾಗ ಖರೀದಿಸಿ ಹೊಸಮನೆ ನಿರ್ಮಿಸಿ ಎ.೧೫ಕ್ಕೆ ಗೃಹ ಪ್ರವೇಶ ನಡೆದಿತ್ತು. ಇವರು ಹೊಸಮನೆಯಿದ್ದ ಕೆಮ್ಮಣ್ಣುವಿಗೆ ಹೋಗಿ ಬರುತ್ತಿದ್ದರು ಎನ್ನಲಾಗಿದೆ.
ಸೋಮವಾರ ಮಕ್ಕಳನ್ನು ಶಾಲೆಗೆ ಕಳು ಹಿಸಿ ಎಂದಿನಂತೆ ತಮ್ಮ ಹೊಸಮನೆಯಿದ್ದ ಕೆಮ್ಮಣ್ಣುವಿಗೆ ಬ್ಯಾಂಕ್ ವ್ಯವಹಾರ ಮುಗಿಸಿ ಬಂದಿದ್ದರು. ಈ ಮಧ್ಯೆ ಮಧ್ಯಾಹ್ನ ಸುಮಾರು ೨.೩೦ರ ವೇಳೆಗೆ ಸ್ಕೂಟಿಯಲ್ಲಿ ಇಬ್ಬರು ಯುವಕರು ಮನೆಗೆ ಬಂದಿರುವುದನ್ನು ಸ್ಥಳೀ ಯರು ನೋಡಿದ್ದಾರೆ. ಸಂಜೆ ಶಾಲೆಯಿಂದ ಬಂದ ಮಗಳು ತಾಯಿಯನ್ನು ಹುಡುಕಿದಾಗ ಬೆಡ್‌ರೂಮ್‌ನಲ್ಲಿ ಕವಚಿಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ೧೦೮ ಅಂಬ್ಯುಲೆ ನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ದೇಹವನ್ನು ಪರೀಕ್ಷಿಸಿದ ವೈದ್ಯರು ಸುಮಾರು ಒಂದು ತಾಸು ಮುಂಚೆಯೇ ಶಕುಂತಳಾ ಮೃತಪಟ್ಟಿದ್ದಾಗಿ ದೃಢಪಡಿಸಿದ್ದಾರೆ.
ಚೂಡಿದಾರ ಶಾಲುವಿನಿಂದ ಕುತ್ತಿಗೆಗೆ ಬಿಗಿದು ಶಕುಂತಳಾ ಅವರನ್ನು ಕೊಲೆಗೈದಿರು ವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅಡುಗೆ ಕೋಣೆಯಲ್ಲಿ ಎರಡು ಶರಬತ್ತು ನೀಡಿದ ಗ್ಲಾಸ್‌ಗಳಿದ್ದು, ಪ್ರಕರಣ ಕುತೂಹಲ ಕೆರಳಿಸಿದೆ.

ಮಲ್ಲಿಗೆಯಂಗಡಿ: ವಿನುತಾ ಪ್ರಾಣಕ್ಕೆರವಾಯಿತು ಹುಚ್ಚು ಪ್ರೀತಿ!

Posted by JAYAKIRANA Kirana on | 0 comments | Leave a comment...

ಮಂಗಳೂರು: ಆಕೆ ಕೊಡೆತ್ತೂರು-ಮಲ್ಲಿಗೆಯಂಗಡಿಯ ಬಂಟರ ಹುಡುಗಿ. ವಯೋಸಹಜ ಬಯಕೆಯಂತೆ ಆಕೆಯೂ ಒಬ್ಬನನ್ನು ಪ್ರೀತಿಸಿದಳು. ಆದರೆ ಆಕೆ ಇಷ್ಟಪಟ್ಟು ಪ್ರೀತಿಸಿದ ಆತನಿಗೆ ಆಕೆಯ ಮಲ್ಲಿಗೆ ಮನಸ್ಸಿನ ಅವಶ್ಯಕತೆ ಇರಲಿಲ್ಲ. ಅಂಥ ಪ್ರೀತಿ ಸಂಪಾದಿಸುವುದೂ ಆತನಿಗೆ ಕಷ್ಟವಿರಲಿಲ್ಲ. ಪ್ರೀತಿಯಲ್ಲಿ ಚೆಲ್ಲಾಟವಾಡಿದ ಆತನನ್ನೇ ತನ್ನ ಸರ್ವಸ್ವ ಎಂದು ಎಲ್ಲವನ್ನೂ ಧಾರೆಯೆರೆ ಯಲು ಆಕೆ ಮುಂದಾಗಿದ್ದೇ ಆಕೆಯ ಪ್ರಾಣಕ್ಕೆ ಎರವಾಯಿತು! ಕೆಲಸ ಮಾಡುವಲ್ಲಿ, ಮನೆಯಲ್ಲಿ ಸ್ನೇಹಿತರ ಬಳಗದಲ್ಲಿ ಎಲ್ಲರೊಂದಿಗೆ ಬೆರೆಯುತ್ತಿದ್ದ ಆಕೆ ಇಂದು ನೆನಪು ಮಾತ್ರ. ಹುಚ್ಚು ಪ್ರೀತಿ ಆಕೆಯ ಮನೆಮಂದಿಯನ್ನು ಕಣ್ಣೀರಿಡುವಂತೆ ಮಾಡಿದೆ. ಇದು ಆದಿತ್ಯವಾರ ನೇಣಿಗೆ ಕೊರಳೊಡ್ಡಿ ಇಹಲೋಕ ತ್ಯಜಿಸಿದ ವಿನುತಾಳ ಟ್ರ್ಯಾಜಿಡಿ ಸ್ಟೋರಿ.
ಘಟನೆಯ ವಿವರ: ಬಜ್ಪೆ ಠಾಣಾ ವ್ಯಾಪ್ತಿಯ ಮಲ್ಲಿಗೆಯಂಗಡಿ ನಿವಾಸಿ ವಿನುತಾ ಶೆಟ್ಟಿ(೨೫) ಬಡಕುಟುಂಬದ ಹಿನ್ನೆಲೆ ಹೊಂದಿದವಳು. ಮನೆಮಂದಿಯ ಕಷ್ಟಕ್ಕೆ ನೆರವಾಗಲೆಂದು ಮುಕ್ಕದ ಪೆಟ್ರೋಲ್ ಪಂಪ್‌ನಲ್ಲಿ ಕೆಲಸಕ್ಕೆ ಸೇರಿದ್ದಳು. ಇಲ್ಲಿಯೇ ಬಿಲ್ಲವ ಸಮುದಾಯದ ರಾಜೇಶ(೨೫) ಎಂಬಾತನ ಪರಿಚಯವಾಗಿದೆ. ಆತ ಹಳೆಯಂಗಡಿ ಬಳಿಯ ಪಡುಪಣಂಬೂರಿನ ನಿವಾಸಿ. ವೆಲ್ಡರ್ ಆಗಿದ್ದ ರಾಜೇಶ, ಆಗೊಮ್ಮೆ-ಈಗೊಮ್ಮೆ ಗೆಳೆಯರ ಬೈಕ್ ಅನ್ನು ಎರವಲು ಪಡೆದು ಪೆಟ್ರೋಲ್ ತುಂಬಿ ಸಲು ಮುಕ್ಕಕ್ಕೆ ಹೋಗುತ್ತಿದ್ದ. ಅದ್ಹೇಗೋ ವಿನುತಾಳ ಮೊಬೈಲ್ ನಂಬರ್ ಸಂಪಾ ದಿಸಿದ್ದ ರಾಜೇಶ ಆಕೆಯ ಬಳಿ ಪ್ರೇಮಭಿಕ್ಷೆ ಬೇಡಿದ್ದಾನೆ. ಜೋಡಿ ಬಯಸುವ ವಯ ಸ್ಸದು. ಆಕೆಯೂ ಈತನ ಪೂರ್ವಾಪರ ಅರಿ ಯದೆ ‘ಯೆಸ್ ಅಂದಿದ್ದಾಳೆ. ಆನಂತರ ಪಾರ್ಕ್, ಬೀಚ್ ಎಂದು ಸುತ್ತಾಡುತ್ತಿದ್ದ ಈ ಜೋಡಿ, ನಂತರದ ದಿನಗಳಲ್ಲಿ ಮತ್ತೂ ಮುಂದುವರಿದು ತಮ್ಮ ಭೇಟಿಯನ್ನು ರಾತ್ರಿಯ ವೇಳೆ ಫಿಕ್ಸ್ ಮಾಡಿಕೊಂಡು ವಿನುತಾಳ ಮನೆಗೇ ಶಿಫ್ಟ್ ಮಾಡಿತ್ತು ಎನ್ನುತ್ತಾರೆ ರಾಜೇಶನನ್ನು ಹತ್ತಿರದಿಂದ ಬಲ್ಲವರು. ವಿನುತಾಳನ್ನು ಪುಸಲಾಯಿಸುತ್ತಿದ್ದ ರಾಜೇಶ ಆಗಾಗ ಆಕೆಯ ಮನೆಗೆ ಭೇಟಿಕೊಟ್ಟು, ಮಧ್ಯರಾತ್ರಿಯ ನಂತರ ವಾಪಸ್ ಆಗುತ್ತಿದ್ದ. ಇದಕ್ಕಾಗಿ ಪದೇ ಪದೇ ತನ್ನ ಸಂಬಂಧಿ ಹಳೆಯಂಗಡಿಯ ಶರತ್ ಎಂಬಾತನ ಬೈಕ್ ಅನ್ನು ಪಡೆದು ಮೆಹಂ ದಿಯೋ, ನೇಮವೋ, ಜಾತ್ರೆಯೋ ಎಂದು ನೆಪ ಹೇಳಿ ತೆರಳುತ್ತಿದ್ದ.
ಕಳೆದ ಶನಿವಾರವೂ ಇದೇ ರೀತಿ ರಾತ್ರಿ ಒಂಬತ್ತು ಗಂಟೆಯ ನಂತರ ತನ್ನ ಸಂಬಂಧಿಯನ್ನು ಮರಳುಗೊಳಿಸಿ ಬೈಕ್ ಅನ್ನು ಪಡೆದಿದ್ದ ರಾಜೇಶ ಸೀದಾ ವಿನುತಾ ಮನೆಗೆ ತೆರಳಿದ್ದಾನೆ. ಅಲ್ಲಿ ಮನೆಮಂದಿ ಮಲಗಿದ ಸೂಚನೆ ಸಿಕ್ಕಿದ ಕೂಡಲೇ ವಿನು ತಾಳನ್ನು ಪುಸಲಾಯಿಸಿ, ತನ್ನ ಪ್ಯಾಂಟ್, ಶರ್ಟ್ ಹಾಗೂ ಬಂದಿದ್ದ ಬೈಕ್ ಅನ್ನು ಪೊದೆಯ ನಡುವೆ ನಿಲ್ಲಿಸಿ ಹಿಂಬದಿ ಬಾಗಿಲಿನ ಮೂಲಕ ನೇರವಾಗಿ ಆಕೆಯ ಮಲಗುವ ಕೋಣೆಗೆ ಪ್ರವೇಶ ಪಡೆದಿದ್ದ ಸರಿಸುಮಾರು ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆ ವಿನುತಾ ಮನೆಮಂದಿ ಅದೇನು ಸದ್ದು ಕೇಳಿ ಎಚ್ಚರ ಗೊಂಡಿದ್ದಾರೆ, ಕಳ್ಳರ ಹಾವಳಿಯೆಂದು ಭಾವಿಸಿ ಮನೆಯ ದೀಪಗಳನ್ನೆಲ್ಲ ಉರಿಸಿ ದ್ದಾರೆ. ಈ ವೇಳೆ ಇನ್ನೊಂದು ಬಾಗಿಲಿನ ಮೂಲಕ ಚಡ್ಡಿಯಲ್ಲೇ ಓಟಕ್ಕಿತ್ತ ರಾಜೇಶ ಮನೆಯವರ ಕಣ್ಣಿಗೆ ಬಿದ್ದಿದ್ದ. ಆನಂತರ ರಾಜೇಶನಿಗಾಗಿ ಪಕ್ಕದ ಗುಡ್ಡದಲ್ಲಿ ಹುಡುಕಾಟ ನಡೆದಿದೆ. ರಾಜೇಶನೇನಾದರೂ ಸಿಕ್ಕಿಬಿದ್ದಿದ್ದರೆ ಆತನ ಕಥೆಯೇ ಮುಗಿಯುತ್ತಿತ್ತೋ ಏನೋ? ಆದರೆ ಮಹಾನ್ ಕಿಲಾಡಿ ರಾಜೇಶ ಸಿಗಲೇ ಇಲ್ಲ. ಇತ್ತ ಮನೆಯಲ್ಲಿ ವಿನುತಾಳನ್ನು ವಿಚಾರಿಸಿದಾಗ ಪ್ರೇಮ ವ್ಯವಹಾರ ಬಯಲಾಗಿದೆ. ಮರ್ಯಾದೆ ಹೋಯಿತೆಂದು ವಿನುತಾ ರಾತ್ರಿ ತನ್ನ ಕೋಣೆ ಸೇರಿದವಳು ಮುಂಜಾನೆ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇತ್ತ ರಾಜೇಶ ಬೆಳಕು ಹರಿಯುವ ತನಕ ಅಲ್ಲೇ ಇದ್ದು, ಬಳಿಕ ತನ್ನ ಗೆಳೆಯನೊಬ್ಬನ ಮನೆಗೆ ತೆರಳಿ ಆತನ ಬಟ್ಟೆಯನ್ನು ಪಡೆದು ಆತನ ಬೈಕ್‌ನಲ್ಲಿ ಹಳೆಯಂಗಡಿ ಸೇರಿದ್ದಾನೆ ಎನ್ನಲಾಗುತ್ತಿದೆ. ಮುಂಜಾನೆ ಬೇಗನೆ ಎದ್ದು ಮನೆಗೆಲಸ ಮಾಡುತ್ತಿದ್ದ ವಿನುತಾ ಇನ್ನೂ ಏನು ಏಳಿಲ್ಲ ಎಂದು ಬಾಗಿಲು ಬಡಿದವರಿಗೆ ಆಕೆಯ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. ಆದರೆ ಎಲ್ಲಕ್ಕೂ ಕಾರಣನಾದ ಯುವಕ ಆರಾಮಾಗಿ ಹಳೆಯಂಗಡಿ ತಲುಪಿ, ಬೈಕ್ ಎಲ್ಲಿ ಎಂದು ಕೇಳಿದ ಸಂಬಂಧಿಯಲ್ಲಿ ಬೇರೆಯೇ ಕಥೆ ಕಟ್ಟಿದ್ದ ಎನ್ನಲಾಗುತ್ತಿದೆ.
ಇದೀಗ ವಿನುತಾ ಆತ್ಮಹತ್ಯೆಯ ಫೈಲ್ ಬಜ್ಪೆ ಠಾಣೆಯಲ್ಲಿ ಬಿದ್ದುಕೊಂಡಿದೆ. ‘ವಿನುತಾ ಆತ್ಮಹತ್ಯೆಯ ಹಿಂದಿನ ಕಾರಣ ತಿಳಿದಿದ್ದರೂ ಏನೂ ಮಾಡುವಂತಿಲ್ಲ. ಕಾರಣ, ವಿನುತಾ ಮನೆಮಂದಿ ಯಾರ ಮೇಲೂ ದೂರು ನೀಡಿಲ್ಲ. ದೂರು ನೀಡದೇ ಹೋದರೆ ನಾವಾದರೂ ಏನು ಮಾಡುವುದು? ಎಂದು ಕೈಚೆಲ್ಲಿದ್ದಾರೆ ಬಜ್ಪೆ ಪೊಲೀಸರು. ವಿನುತಾ ಆತ್ಯಹತ್ಯೆ ನಡೆದ ಬಳಿಕ ಶವಸಂಸ್ಕಾರವಾಗುವವರೆಗೆ ಸ್ಥಳದಲ್ಲೇ ಇದ್ದ ಜನಪ್ರತಿನಿಧಿಗಳು ವಿನುತಾ ಕುಟುಂಬಕ್ಕೆ ನ್ಯಾಯ ಒದಗಿಸುವ ಮನಸ್ಸು ಹೊಂದಿದ್ದರೆ ‘ನಕಲಿ ಪ್ರೇಮಿ ಜೈಲಿನ ಕಂಬಿ ಎಣಿಸಬಹುದು. ಆದರೆ ಜಾತಿ ಬೇರೆಯಾದರೂ ಮೃತಳು ಮತ್ತು ಅದಕ್ಕೆ ಕಾರಣವಾದ ಯುವಕ ಒಂದೇ ಕೋಮಿನವರಾಗಿರುವ ಕಾರಣ ತನಿಖೆ ನಡೆಯುವುದು ಸಂದೇಹ ಎನ್ನುತ್ತಾರೆ ಸ್ಥಳೀಯರ.
‘ಆಕೆ ಸಾಯುತ್ತಾಳೆಂದು ಗೊತ್ತಿದ್ದರೆ...
‘ಆಕೆ ಸಾಯುತ್ತಾಳೆಂದು ಮೊದಲೇ ಗೊತ್ತಿದ್ದರೆ, ನಾನೇ ಆಕೆಯನ್ನು ಮದುವೆ ಯಾಗುತ್ತಿದ್ದೆ. ಇಷ್ಟು ಚಿಕ್ಕ ಕಾರಣಕ್ಕೆ ಆಕೆ ಸಾಯುತ್ತಾಳೆಂದು ನನಗೇನು ಗೊತ್ತು? ಎಂದು ಘಟನೆಯ ಬಗ್ಗೆ ಕೇಳಿದವರಿಗೆ ‘ನಕಲಿ ಪ್ರೇಮಿ ಉತ್ತರಿಸುತ್ತಿರುವ ಬಗ್ಗೆಯೂ ಪತ್ರಿಕೆಗೆ ಮಾಹಿತಿ ಲಭಿಸಿದೆ. ಇಲ್ಲಿ ರಾಜೇಶನಷ್ಟೇ ಯುವತಿಯದ್ದೂ ತಪ್ಪಿರಬಹುದು. ಆದರೆ ಅಂತಿಮವಾಗಿ ಯುವತಿ ಮಾತ್ರ ಇಹಲೋಕ ತ್ಯಜಿಸಿದ್ದಾಳೆ. ಇಷ್ಟೆಲ್ಲ ಆದರೂ ಮಹತ್ಸಾಧನೆ ಮಾಡಿದಂತೆ ಬೀಗುತ್ತಿರುವ ಇಂಥ ನಕಲಿ ಪ್ರೇಮಿಗಳಿಗೆ ಪೊಲೀಸ್ ಇಲಾಖೆ ಮೂಗುದಾರ ತೊಡಿಸದಿದ್ದರೆ ಸಮಾಜದಲ್ಲಿ ಅಶಾಂತಿ ತಪ್ಪಿದ್ದಲ್ಲ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು. ಕೆಲವು ತಿಂಗಳ ಹಿಂದಷ್ಟೇ ಹಳೆಯಂಗಡಿ ಪಿಯು ಕಾಲೇಜ್‌ನ ಯುವತಿ ಸ್ಥಳೀಯ ಯುವಕನ ಜೊತೆಗಿನ ಪ್ರೇಮ ವ್ಯವಹಾರ ಬಯಲಾದ ಹಿನ್ನೆಲೆಯಲ್ಲಿ ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಈ ವೇಳೆ ಸುದ್ದಿಯಲ್ಲಿದ್ದ ಹಳೆಯಂಗಡಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಹುಚ್ಚು ಪ್ರೀತಿಗೆ ಕಟ್ಟುಬಿದ್ದು, ಎಲ್ಲವನ್ನೂ ತ್ಯಜಿಸಿ ಜನರ ಕಣ್ಣಲ್ಲಿ ಬೆತ್ತಲಾಗುವ ಹೆಣ್ಣುಮಕ್ಕಳು ಇನ್ನಾದರೂ ನಕಲಿ ಪ್ರೇಮಿಗಳ ಬೆನ್ನುಬಿದ್ದು, ಅವಾಂತರ ಮಾಡಿ ಕೊಳ್ಳುವ ಮುನ್ನ ಎಚ್ಚರವಹಿಸಬೇಕಿದೆ. ಹಾಗೆಯೇ ಪೊಲೀಸ್ ಇಲಾಖೆಯೂ ‘ದೂರು ಕೊಟ್ಟರೆ ಮಾತ್ರ ಕ್ರಮ’ ಎಂಬ ನಿಯಮವನ್ನು ಬದಿಗಿಟ್ಟು ಸ್ವಯಂಪ್ರೇರಿತರಾಗಿ ಇಂಥವರ ಮೇಲೆ ಕ್ರಮ ಜರುಗಿಸಲಿ ಎನ್ನುವುದು ಜನರ ಆಗ್ರಹವಾಗಿದೆ.

ಪ್ರಾರ್ಥನಾ ಮಂದಿರದ ಬಳಿಯಿದ್ದ ಹೂದಾನಿಗಳಿಗೆ ಪುಂಡರಿಂದ ಹಾನಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಂಕನಾಡಿ ಠಾಣಾ ವ್ಯಾಪ್ತಿಗೊಳಪಟ್ಟ ನಂತೂರು ಸಮೀಪ ಪ್ರಾರ್ಥನಾ ಮಂದಿರದ ಹೊರಗಡೆ ಶಿಲುಬೆ ಕೆಳಗಡೆ ಇದ್ದ ಹೂದಾನಿಗಳಿಗೆ ಹಾನಿ ಮಾಡ ಲಾಗಿದ್ದು, ಪುಂಡರು ಅಥವಾ ಕುಡುಕರು ಈ ಕೃತ್ಯ ನಡೆಸಿರಬಹುದು ಎಂದು ಶಂಕಿ ಸಲಾಗಿದೆ.
ನಂತೂರು ಹೋಲಿಹಿಲ್ ರಸ್ತೆಯ ಪ್ರಾರ್ಥನಾ ಮಂದಿರದ ಎದುರು ಏಸುಕ್ರಿಸ್ತನ ಶಿಲುಬೆ ಬಳಿಯಿದ್ದ ಎರಡು ಹೂದಾನಿಗಳಿಗೆ ಹಾನಿ ಮಾಡಲಾಗಿದೆ. ಶಿಲುಬೆಗೆ ಅಳವಡಿ ಸಲಾಗಿದ್ದ ದೀಪಗಳನ್ನು ಕದಲಿಸಿ ಇಡಲಾ ಗಿದ್ದು ವಯರಿಂಗ್‌ಗೂ ಹಾನಿ ಮಾಡ ಲಾಗಿದೆ. ಆದರೆ ಮೂರ್ತಿ, ಶಿಲುಬೆ ಹಾಗೂ ಅದಕ್ಕೆ ಅಳವಡಿಸಲಾಗಿದ್ದ ಗಾಜುಗಳಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಮೊನ್ನೆ ರಾತ್ರಿ ವೇಳೆ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು ನಿನ್ನೆ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದಾಗ ದಾರಿಯಲ್ಲಿ ಹೋಗುವ ಕುಡುಕರು ಅಥವಾ ಪುಂಡರು ಈ ಕೃತ್ಯ ನಡೆಸಿರಬೇಕೆಂದು ಶಂಕಿಸಲಾಗಿದೆ. ಕಂಕನಾಡಿ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ಪ್ರೇಮಿಗಳಿಗೆ ಹೈಕೋರ್ಟ್‌ನ ಅಭಯ

Posted by JAYAKIRANA Kirana on | 0 comments | Leave a comment...

ಮಂಗಳೂರು: ತಿಂಗಳ ಹಿಂದೆ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಬಸ್ ಮಾಲೀಕ ಹಾಗೂ ಮುಸ್ಲಿಂ ಯುವತಿ ನಿನ್ನೆ ಹೈಕೋರ್ಟ್‌ನಲ್ಲಿ ಹಾಜ ರಾಗಿದ್ದು, ಅಂತಾರ್ಜಾತಿ ವಿವಾಹವಾಗಿರುವ ಜೋಡಿಗೆ ಕೋರ್ಟ್ ಸಮ್ಮತಿ ನೀಡಿದೆ.
ಖಾಸಗಿ ಬಸ್ ಮಾಲೀಕ ವಿನ್ಸೆಂಟ್ ತಿಂಗಳ ಹಿಂದೆ ಮಂಜನಾಡಿಯ ರಹೀನಾ ಎಂಬಾಕೆಯೊಂ ದಿಗೆ ನಾಪತ್ತೆಯಾಗಿದ್ದರು. ನಾಪತ್ತೆಯಾಗುವ ಮುನ್ನ ಕೊಣಾಜೆ ಪೊಲೀಸ್ ಠಾಣೆಗೆ ಬರೆದಿರುವ ಪತ್ರದಲ್ಲಿ ತಾನು ಸ್ವ ಇಚ್ಛೆಯಿಂದ ತೆರಳುತ್ತಿರುವುದಾಗಿ ಹಾಗೂ ವಿನ್ಸೆಂಟ್‌ನನ್ನು ಪ್ರೀತಿಸುತ್ತಿರುವುದಾಗಿ ರಹೀನಾ ತಿಳಿಸಿದ್ದಳು. ಆದರೆ ನಿಶ್ಚಿತಾರ್ಥಗೊಂಡಿದ್ದ ರಹೀನಾ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದಾತನೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಆಕ್ರೋಶಿತ ಗುಂಪು ವಿನ್ಸೆಂಟ್ ಸೇರಿದ ಬಸ್ಸನ್ನು ತೌಡುಗೋಳಿಯಲ್ಲಿ ಪುಡಿಗೈದಿತ್ತು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ರಹೀನಾ ತಂದೆ ಹಸೈನಾರ್ ನಾಪತ್ತೆ ದೂರು ದಾಖಲಿಸಿದ್ದು, ಬಳಿಕ ಪತ್ತೆಯಾಗದೇ ಇದ್ದ ಸಂದರ್ಭ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದರೆ ಇದೆಲ್ಲವನ್ನು ತಿರಸ್ಕರಿಸಿದ ಹೈಕೋರ್ಟ್ ಪ್ರೇಮಿಗಳ ವಿವಾಹವನ್ನು ಸಮ್ಮತಿಸಿದೆ.
ಟಿ.ವಿ ಸಂದರ್ಶನದಲ್ಲಿ ಜೋಡಿ
 ಹೈಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ಖಾಸಗಿ ಚಾನೆಲ್ಲೊಂದರ ನೇರ ಸಂದರ್ಶನದಲ್ಲಿ ಜೋಡಿ ಭಾಗವಹಿಸಿತ್ತು. ಈ ವೇಳೆ ಬಹಳ ದಿನಗಳ ಬಳಿಕ ಮಗಳು ರಹೀನಾ ಸಂದರ್ಶಕನ ವಿನಂತಿಯಂತೆ ಕ್ಷಮೆ ಕೋರಿದ ಸಮಯದಲ್ಲಿ ತಂದೆ ಹಸೈನಾರ್ ಅವಾಚ್ಯವಾಗಿ ತನ್ನ ಮಗಳನ್ನು ನಿಂದಿಸಿದ ಕ್ಷಣಗಳು ಬಿತ್ತರಗೊಂಡವು. ಇದೇ ಸಂದರ್ಭದಲ್ಲಿ ತಮಗೆ ಸೈಯ್ಯದ್ ಇಸ್ತಿಯಾಕ್ ಎಂಬ ವ್ಯಕ್ತಿಯಿಂದ ಜೀವ ಬೆದರಿಕೆಯಿರುವುದಾಗಿ ದೂರಿಕೊಂಡ ಜೋಡಿ ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿಯನ್ನು ಸರಿಪಡಿಸುವ ಪ್ರಯತ್ನ ವ್ಯರ್ಥ

Posted by JAYAKIRANA Kirana on | 0 comments | Leave a comment...

ಮಾಜಿ ಶಾಸಕ ರಾಮ ಭಟ್ ಕಳವಳ

  • ನಾನಿನ್ನು ಬಿಜೆಪಿ ಹಿರಿಯರ ವೇದಿಕೆಯಲ್ಲೂ ಇಲ್ಲ -ಸ್ವಾಭಿಮಾನಿ ವೇದಿಕೆಯಲ್ಲೂ ಇಲ್ಲ

ಪುತ್ತೂರು: ಬಿಜೆಪಿಯನ್ನು ಸರಿದಾ ರಿಗೆ ತರುವ ಉದ್ದೇಶದಿಂದ ಹಿರಿಯರ ವೇದಿಕೆಯ ಮೂಲಕ ಸರಿಮಾಡಲು ಪ್ರಯತ್ನಿಸಿದ್ದೆವು. ಆದರೆ ನಮ್ಮ ಹೋರಾಟ ವ್ಯರ್ಥವಾಯಿತು. ಇನ್ನು ಬಿಜೆಪಿಯನ್ನು ಸರಿಮಾಡಲು ಸಾಧ್ಯ ವಿಲ್ಲದ ಪರಿಸ್ಥಿತಿ ಹದೆಗೆಟ್ಟಿದೆ, ಈ ಹಿನ್ನೆಲೆಯಲ್ಲಿ ತಾನು ಇನ್ನು ಮುಂದೆ ಬಿಜೆಪಿ ಹಿರಿಯರ ವೇದಿಕೆಯಲ್ಲಿ ಮತ್ತು ಸ್ವಾಭಿಮಾನಿ ವೇದಿಕೆಯಲ್ಲಿ ಇರಲು ಇಷ್ಟ ಪಡುವುದಿಲ್ಲ ಎಂದು ಮಾಜಿ ಶಾಸಕ ಕೆ.ರಾಮ ಭಟ್ ತಿಳಿಸಿದರು.
ಪುತ್ತೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಈಗ ಹಿಂದಿನ ಬೆಜೆಪಿ ಯಾಗಿ ಉಳಿದಿಲ್ಲ. ಪಕ್ಷದ ಸ್ಥಿತಿ ಹೀನಾಯ ಹಂತಕ್ಕೆ ತಲುಪಿದೆ. ಪಕ್ಷ ಸರಿಯಾಗಲಿ ಎಂದು ಕಳೆದ ಬಾರಿಯ ವಿಧಾನ ಸಭಾ ಚುನಾವಣೆ ಸಂದರ್ಭ ದಲ್ಲಿ ತಾನು ಸ್ವಾಭಿಮಾನಿ ವೇದಿಕೆಯ ಮೂಲಕ ಸ್ಪರ್ಧೆ ನೀಡಿದೆ. ಆದರೂ ಅವರಿಗೆ ಬುದ್ದಿ ಬರಲಿಲ್ಲ. ಬಿಜೆಪಿ ಅಧಿ ಕಾರಕ್ಕೆ ಬಂದ ಬಳಿಕವಂತೂ ಭ್ರಷ್ಟಾ ಚಾರ ಎಸಗಿ ಹಲವರು ಜೈಲು ಸೇರಿ ದರು ಎಂದು ಅವರು ತಮ್ಮ ನೋವು ತೋಡಿಕೊಂಡರು. ನಾವು ನಾಲ್ಕು ಮಂದಿ ಹಿರಿಯರಿಂದ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಸಂಘದ ಹಸ್ತಕ್ಷೇಪ ಸರಿಯಲ್ಲ
ನಾನು ಪ್ರಾರಂಭದಿಂದಲೇ ಸಂಘ ಪರಿವಾರದಲ್ಲಿ ಗುರುತಿಸಿ ಕೊಂಡಿದ್ದ ವ್ಯಕ್ತಿ. ಸಂಘವು ಬಿಜೆಪಿಗೆ ಸಲಹೆ ಸೂಚ ನೆಗಳನ್ನು ನೀಡಬೇಕಲ್ಲದೆ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಹೀಗಿದ್ದರೂ ಸಂಘ ಪರಿವಾರದವರು ಇದೀಗ ಬಿಜೆಪಿ ಪಕ್ಷದಲ್ಲಿ ನೇರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದಾಗಿ ಪಕ್ಷದೊ ಳಗಿನ ಭಿನ್ನಮತ ಸಂಘ ಪರಿವಾರದೊ ಳಗೂ ಅಂಟಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
೧೯೫೧ ರಲ್ಲಿ ಜನಸಂಘದ ಕಾಲದಿಂ ದಲೇ ನಾನು ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ಆ ಪಕ್ಷದಡಿಯಲ್ಲಿ ಶಾಸಕ ನಾಗಿದ್ದೇನೆ. ಆದರೆ ಶಿಸ್ತಿನ ಪಕ್ಷವಾಗಿದ್ದ ಬಿಜೆಪಿಗೆ ಈ ಹೀನಾಯ ಸ್ಥಿತಿ ಬಂದೊ ದಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದ ಅವರು ಇನ್ನು ಮುಂದೆ ನಾನು ಸ್ವಾಭಿಮಾನಿ ವೇದಿಕೆಯಲ್ಲೂ ಇಲ್ಲ. ಬಿಜೆಪಿ ಹಿರಿಯರ ವೇದಿಕೆಯಲ್ಲೂ ಇಲ್ಲ. ನಾನೊಬ್ಬ ಬಿಜೆಪಿ ಕಾರ್ಯಕರ್ತ ಅಷ್ಟೇ. ನನ್ನನ್ನು ಬಿಜೆಪಿಯವರು ಪಕ್ಷದಿಂದ ಹೊರಗೆ ಹಾಕಿದರೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಅವರು ತಮ್ಮ ಅಂತರಾಳದ ನೋವನ್ನು ಬಿಚ್ಚಿಟ್ಟರು.

ಮೋದಿ ಪ್ರಧಾನಿಯಾದರೆ ಬಿಜೆಪಿಗೆ ಮತ್ತೆ ಕಾಯಕಲ್ಪ
ಬಿಜೆಪಿ ಪಕ್ಷ ಇನ್ನು ಸರಿದಾರಿಗೆ ಬರಬೇಕಾದಲ್ಲಿ ಗುಜರಾತ್‌ನ ಮುಖ್ಯ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಬೇಕು. ಇಂತಹ ವ್ಯಕ್ತಿಗಳ ನಾಯಕತ್ವ ಇದೀಗ ಬಿಜೆಪಿಗೆ ಅಗತ್ಯವಾಗಿದೆ ಎಂದ ರಾಮ ಭಟ್ ಅವರು ಮೋದಿ ಪ್ರಧಾನಿಯಾದರೆ ರಾಷ್ಟ್ರ ವ್ಯಾಪ್ತಿ ಬಿಜೆಪಿಯಲ್ಲಿರುವ ಸಮಸ್ಯೆಗಳಿಗೆಲ್ಲಾ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂಬ ನಂಬಿಕೆ ವ್ಯಕ್ತ ಪಡಿಸಿದರು.
ಮೋದಿ ಅವರು ಪಕ್ಷದೊಳಗೆ ಹಸ್ತಕ್ಷೇಪ ನಡೆಸಲು ಸಂಘ ಪರಿವಾರಕ್ಕೆ ಅವಕಾಶ ನೀಡುವುದಿಲ್ಲ. ಇದರಿಂದಾಗಿ ಗುಜರಾತ್ ಅಭಿವೃದ್ಧಿಯತ್ತ ಸಾಗಿ ವಿಶ್ವದಲ್ಲೇ ಗುರುತಿಸಲ್ಪಡುವ ರಾಜ್ಯವಾಗಿ ಮಾರ್ಪಟ್ಟಿದೆ. ಮೋದಿ ಅವರು ಪ್ರಾಮಾಣಿಕರಾದ ಕಾರಣಕ್ಕೆ ಗುಜ ರಾತಿನ ಮುಸ್ಲಿಮರು ಅವರನ್ನು ಬೆಂಬಲಿಸುತ್ತಿದ್ದಾರೆ. ಮುಸ್ಲಿಂ ಬಾಹುಳ್ಯ ವುಳ್ಳ ಅಹಮ್ಮದಾಬಾದ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಇವರ ಉತ್ತಮ ನಾಯಕತ್ವಕ್ಕೆ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯವೋ ಅಲ್ಲವೇ ಬಿಜೆಪಿ ಪಕ್ಷ ಮುಖ್ಯವೋ ಎಂಬ ಪ್ರಶ್ನೆ ಎದುರಾ ಗಿದೆ. ಪಕ್ಷಕ್ಕಾಗಿ ದುಡಿಯುವ ನಿಷ್ಟಾ ವಂತ ಕಾರ್ಯಕರ್ತರಿಗೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ ಎಂದು ಅವರು ಬಿಜೆಪಿ ಪಕ್ಷ ಹೀನಾಯಸ್ಥಿತಿ ಯತ್ತ ಸಾಗುತ್ತಿರುವುದಕ್ಕೆ ಕಳವಳ ವ್ಯಕ್ತ ಪಡಿಸಿದರು.

ವಿಟ್ಲ: ರಸ್ತೆ ಅಗಲೀಕರಣ ವಿರೋಧದ ಹಿಂದೆ ಕಾಣದ ಕೈಗಳ ಕೈವಾಡ; ಆರೋಪ

Posted by JAYAKIRANA Kirana on | 0 comments | Leave a comment...

ವಿಟ್ಲ: ಇಲ್ಲಿಯ ಮುಖ್ಯ ರಸ್ತೆ ವಿಸ್ತರಣೆಗೆ ಸಂಬಂಧಿಸಿ ಜಂಕ್ಷನ್‌ನ ಅಂಗಡಿ ಹಾಗೂ ಕಟ್ಟಡಗಳನ್ನು ತೆರವು ಗೊಳಿಸಲು ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಮಾಲಕರಿಗೆ ಜುಲೈ೧೫ ರೊಳಗೆ ಅಂತಿಮ ಗಡುವು ನೀಡಿದ್ದು, ಜಂಕ್ಷನ್‌ನ ಅಂಗಡಿ ಮಾಲಕರು ಅದಕ್ಕೆ ಒಪ್ಪಿಗೆ ಸೂಚಿಸಿದ್ದು, ಇಲಾಖೆ ಇದೀಗ ೭.೫೦ ಮೀ ನಿಂದ ೬ಮೀ ಅಗಲಕ್ಕೆ ಇಳಿಸಲು ಮುಂದಾಗಿದ್ದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂಬ ಶಂಕೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ವಿಟ್ಲದ ಜನತೆಯ ಹಲವು ವರ್ಷದ ಬೇಡಿಕೆಯಾಗಿದ್ದ, ವಿಟ್ಲ ರಸ್ತೆ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಇದರ ಪರಿಣಾಮವಾಗಿ ಹಲವು ಅಂಗಡಿ ಮಾಲಕರಿಗೆ ಅನ್ಯಾಯವಾಗಿದೆ ಎಂದು ಅವರು ಆರೋಪಿಸುತ್ತಿದ್ದಾರೆ.
ವಿಟ್ಲ ರಸ್ತೆ ವಿಸ್ತರಣೆಗೆ ವಿಟ್ಲ ಮುಖ್ಯ ರಸ್ತೆ ಕೆಲವು ಅಂಗಡಿಗಳ ಮಾಲಕರು ತಮ್ಮ ಅಂಗಡಿಗಳನ್ನು ಸ್ವಇಚ್ಚೆಯಿಂದ ವರ್ಷದ ಹಿಂದೆಯೇ ಅರ್ಧ ಭಾಗ ವನ್ನು ರಸ್ತೆಗೆ ಬಿಟ್ಟುಕೊಟ್ಟಿದ್ದರು. ಆದರೆ ನಾಲ್ಕು ಮಾರ್ಗ ಜಂಕ್ಷನ್‌ನ ಬೆರಳೆಣೆಕೆಯಷ್ಟು ಮಂದಿ ತಮ್ಮ ಅಂಗಡಿ ಗಳನ್ನು ತೆರವುಗೊಳಿಸಲು ಹಿಂದೇಟು ಹಾಕಿದ್ದರು. ವಿಟ್ಲ ರಸ್ತೆ ವಿಸ್ತರಣೆಗೆ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ೭.೫೦ಮೀ ಅಗಲಗೊಳಿಸಬೇಕೆಂದು ಎಂಬ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕೊನೆಯದಾಗಿ ಜಂಕ್ಷನ್‌ನ ಬೆರಳೆಣಿಕೆ ಮಂದಿ ಅದಕ್ಕೆ ಒಪ್ಪಿಗೆ ಸೂಚಿಸಿದ್ದರು. ಅದಕ್ಕೆ ಅವರಿಗೆ ತಕ್ಕು ದಾದ ಮೌಲ್ಯವನ್ನು ಕೊಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದರು. ಆದರೆ ರಸ್ತೆ ವಿಸ್ತರಣೆಗೆ ತಮ್ಮ ಅಂಗಡಿಯನ್ನು ಪೂರ್ತಿಯಾಗಿ ಬಿಟ್ಟುಕೊಡಲು ಮಾಲ ಕರ ಒಪ್ಪಿಗೆ ಇರಲಿಲ್ಲ ಎನ್ನಲಾಗಿದೆ. ಸೋಮವಾರ ಜಿಲ್ಲಾಧಿಕಾರಿ ಅವರು ವಿಟ್ಲದಲ್ಲಿ ಸಮಾಲೋಚನಾ ಸಭೆ ನಿಗದಿ ಗೊಳಿಸಿದ್ದರು. ಇದರ ನಡುವೆ ರಾತ್ರೋ ರಾತ್ರಿ ಬೆರಳೆಣೆಕೆ ಮಂದಿ ವ್ಯಕ್ತಿಯೊಬ್ಬರ ಸಹಕಾರದಿಂದ ಅವರ ಮನೆಯಲ್ಲಿ ಗುಪ್ತ ವಾಗಿ ಸಭೆ ಕರೆದು ೭.೫೦ಮೀ ನಿಂದ ೬ಮೀ ಅಗಲಕ್ಕೆ ಇಳಿಸಲು ಜಿಲ್ಲಾಧಿ ಕಾರಿಗೆ ಹಾಗೂ ವಿವಿಧ ಇಲಾಖೆಯ ಅದಿ ಕಾರಿಗಳಿಗೆ ಒತ್ತಡ ಹಾಕಲು ಕುತಂತ್ರ ರೂಪಿಸಿದ್ದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನೀರಿಗಾಗಿ ಪಂಚಾಯಿತಿಗೆ ಮುತ್ತಿಗೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮುಡಿಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾ ಗಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಸ್ಥಳೀಯರು ಕುರ್ನಾಡು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಪ್ರದೇಶದಲ್ಲಿ ೭೫ರಷ್ಟು ಮನೆಗಳಿವೆ. ಇಲ್ಲಿನ ನಿವಾಸಿಗಳು ಪಂಚಾಯಿತಿ ಪೈಪ್‌ಲೈನ್ ನೀರನ್ನೇ ನಂಬಿಕೊಡಿದ್ದಾರೆ. ಆದರೆ ಕಳೆದ ಮೂರ‍್ನಾಲ್ಕು ತಿಂಗಳುಗಳಿಂದ ನೀರಿನ ಪೂರೈಕೆ ಇಲ್ಲದೆ ಜನ ಕಂಗಾಲಾ ಗಿದ್ದಾರೆ.
ಇದರಿಂದ ಬೇಸತ್ತ ಸ್ಥಳೀಯರು ಸೋಮವಾರ ಪಂಚಾಯಿತಿಗೆ ಮುತ್ತಿಗೆ ಹಾಕಿದರು. ಇಲ್ಲಿನ ನೀರಿನ ವ್ಯವಸ್ಥೆ ಇದ್ದರೂ ನೀರು ಸರಬರಾಜುದಾರ ನಿರ್ಲಕ್ಷ್ಯ ತಾಳಿದ್ದಾರೆ. ಈ ಬಗ್ಗೆ ಪಂಚಾ ಯಿತಿ ಸದಸ್ಯರಿಗೆ ಮಾಹಿತಿ ನೀಡದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಜನರು ಮಳೆ ನೀರನ್ನೇ ಬಳಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿ ಸಿದರು. ಈ ಸಂದರ್ಭ ಅಧಕ್ಷ ಝುಬೇರ್ ಅವರು ಸಮಸ್ಯೆಯನ್ನು ಬಗೆಹರಿಸುವು ದಾಗಿ ಭರವಸೆ ನೀಡಿದರು. ಆದರೆ ಪ್ರತಿಭಟನಾಕಾರರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ಸ್ಥಳಕ್ಕೆ ತೆರಳಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸಿದರು. ಸಂಜೀವ, ಸುರೇಶ್ ಬಂಗುಲೆ, ವಿಶ್ವನಾಥ, ಗಿರೀಶ್, ಬಾಬು, ಬಾಲಕೃಷ್ಣ, ಮಮತಾ, ಲೀಲಾ, ರೋಹಿಣಿ, ಬೇಬಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

ಕಾಂಡೋಂ ಬಳಸದೆ ಸೇರಿರುವುದು ಪ್ರಾಣಾಪಾಯ ತರಬಲ್ಲುದು

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
   ಸಮಸ್ಯೆ: ನಾನು ೨೮ ವರ್ಷದ ಯುವಕ. ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ವಿವಾಹಿತ ಮಹಿಳೆಯೊಬ್ಬರ ಜತೆ ಸಂಬಂಧ ಹೊಂದಿದ್ದೇನೆ. ಆಕೆಗೆ ೪೨ ವರ್ಷ ವಯಸ್ಸು. ಆಕೆಯ ಗಂಡನಿಗೆ ನಿಮಿರುವಿಕೆ ಸಮಸ್ಯೆ ಇದೆಯಂತೆ. ನಾವು ಗುಟ್ಟಾಗಿ ಆಗಾಗ ಜತೆ ಸೇರುತ್ತಿದ್ದೇವೆ. ಆಕೆಗೆ ಮಕ್ಕಳಾಗದಂತೆ ಅಪರೇಷನ್ ಮಾಡಿಸಿಕೊಂಡಿದ್ದಾರೆ. ಆಕೆಗೆ ಗರ್ಭ ನಿಲ್ಲುವ ಭಯವಿಲ್ಲ. ಆದರೆ ಸೆಕ್ಸ್ ಮಾಡುವ ವೇಳೆ ಆಕೆ ನನ್ನನ್ನು ನಿರೋಧ್ ಧರಿಸಲು ಬಿಡುವುದಿಲ್ಲ. ಆಕೆ ನೋಡಲು ಚೆನ್ನಾಗಿದ್ದಾರೆ. ಆಕೆಯನ್ನು ನೋಡುತ್ತಾ ಇದ್ದರೆ ನನಗೆ ಕಂಟ್ರೋಲ್ ಮಾಡಲು ಸಾಧ್ಯವಾಗುವುದಿಲ್ಲ. ನಾನು ಆಕೆ ಹೇಳಿದ ಹಾಗೆ ಕೇಳುತ್ತೇನೆ. ನಾನು ನಿರೋಧ್ ಬಳಸದೆ ಆಕೆಯೊಂದಿಗೆ ಸಂಪರ್ಕ ಮಾಡುತ್ತೇನೆ. ನಿರೋಧ್ ಬಳಸೋಣ ಎಂದರೆ ಆಕೆ, ನನಗೆ ಸುಖ ಸಿಗುವುದಿಲ್ಲ ಎನ್ನುತ್ತಾರೆ. ನಾವಿಬ್ಬರೂ ಆರೋಗ್ಯವಾಗಿದ್ದೇವೆ. ನನಗೆ ಭಯ ಕಾಡಲಾರಂಭಿಸಿದೆ. ಖಾಯಿಲೆ ಬಂದಿರಬಹುದೇ ಎಂದು ಹೇಗೆ ತಿಳಿಯಲಿ? ಪರೀಕ್ಷೆಯ ಫಲಿತಾಂಶಕ್ಕಾಗಿ ಎಷ್ಟು ಸಮಯ ಕಾಯಬೇಕು? ನಾನು ಪ್ರತಿನಿತ್ಯ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ನಾನು ಗೊಂದಲದಲ್ಲಿದ್ದೇನೆ. ನನಗೆ ಸಲಹೆ ಕೊಡಿ.
ಸಲಹೆ: ನೀವು ಹೆಚ್‌ಐವಿ ಅಥವಾ ಏಡ್ಸ್ ರೋಗದ ಬಗ್ಗೆ ಸರಿಯಾಗಿ ತಿಳಿದುಕೊಂಡಿಲ್ಲ. ಹೆಚ್‌ಐವಿ ರೋಗಾಣು ಪೀಡಿತ ಮಹಿಳೆ ಅಥವಾ ಗಂಡಸಿನ ಜತೆ ನಿರೋಧ್ ಬಳಸದೆ ಸೇರಿದರೆ ಮಾತ್ರ ಇದು ಹರಡುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ರಕ್ತ ತೆಗೆದುಕೊಳ್ಳುವ ಸಂದರ್ಭ ಸೂಜಿ, ಬ್ಲೇಡ್, ಸಿರಿಂಜ್ ಬಳಕೆ ಮಾಡುವಾಗ ಹೆಚ್‌ಐವಿ ಪೀಡಿತ ವ್ಯಕ್ತಿಯ ರಕ್ತ ದೇಹವನ್ನು ಸೇರಿದರೆ ಹೆಚ್‌ಐವಿ ಹರಡುವ ಸಾಧ್ಯತೆಯಿರುತ್ತದೆ. ಸುಖ ವಂಚಿತೆ ಹೆಂಗಸಿನ ಜತೆ ಕೂಡಿದ್ದೀರಿ. ಯಾಕೆಂದರೆ ಹೆಚ್‌ಐವಿ ಪೀಡಿತರು ಮೇಲ್ನೋಟಕ್ಕೆ ಆರೋಗ್ಯವಾಗಿಯೇ ಇರುತ್ತಾರೆ. ಆಕೆಯ ಸಂಗ ಬಿಟ್ಟಿದ್ದು ಒಳ್ಳೆಯದಾಯಿತು. ನೀವಿಬ್ಬರೂ ಆರೋಗ್ಯವಾಗಿರುವುದರಿಂದ ಅನಗತ್ಯ ಭಯ ಬೇಡ. ನೀವು ಹೆಚ್‌ಐವಿ ಅಥವಾ ಏಡ್ಸ್ ರೋಗಾಣು ನಿಮ್ಮ ಶರೀರಕ್ಕೆ ತಗಲಿದೆ ಯೇ ಎಂದು ಪರೀಕ್ಷೆ ನಡೆಸಬೇಕಾದ್ದು ಅತ್ಯವಶ್ಯ. ಹೆಚ್‌ಐವಿ ಪರೀಕ್ಷೆಯನ್ನು ಯಾವುದೇ ಸರಕಾರಿ ಆಸ್ಪತ್ರೆ ಅಥವಾ ಸರಕಾರದಿಂದ ಮಾನ್ಯತೆ ಪಡೆದ ಕೇಂದ್ರ(ಐಸಿಟಿಸಿ)ಗಳಲ್ಲಿ ಮಾಡುತ್ತಾರೆ. ಸರಕಾರಿ ಆಸ್ಪತ್ರೆಯಲ್ಲಿ ಈ ಸೌಲಭ್ಯ ಪೂರ್ತಿ ಉಚಿತ ವಾಗಿರುತ್ತದೆ. ಅಲ್ಲಿಗೆ ಹೋದ ತಕ್ಷಣ ಅಲ್ಲಿರುವ ಸಮಾಲೋಚಕರು ಹೆಚ್‌ಐವಿ ಬಗ್ಗೆ ಪೂರ್ಣ ಮಾಹಿತಿ ಕೊಟ್ಟು ಸಮಾಲೋಚನೆ ಆರಂಭಿಸುತ್ತಾರೆ. ಆ ಬಳಿಕ ನಿಮ್ಮ ಸಹಿಯನ್ನು ಸಮ್ಮತಿ ಪತ್ರ ಅಂದರೆ ‘ನಾನು ಪರೀಕ್ಷೆಗೆ ಒಪ್ಪಿದ್ದೇನೆ’ ಎನ್ನುವ ಅರ್ಥದಲ್ಲಿ ಪಡೆಯ ಲಾಗುತ್ತದೆ. ಕೊನೆಗೆ ರಕ್ತ ಪರೀಕ್ಷೆ ಮತ್ತು ಹೆಚ್‌ಐವಿ ಪರೀಕ್ಷೆ ನಡೆಸುತ್ತಾರೆ. ಪರೀಕ್ಷೆಯ ಫಲಿತಾಂಶ ರಿಯಾಕ್ಟಿವ್ ಎಂದಿದ್ದರೆ ಹೆಚ್‌ಐವಿ ಇದೆ ಎಂದು ಅರ್ಥ. ನಾನ್ ರಿಯಾಕ್ಟಿವ್ ಎಂದಿದ್ದರೆ ಹೆಚ್‌ಐವಿ ನೆಗೆಟಿವ್ ಅಥವಾ ಹರಡಿಲ್ಲ ಎಂದರ್ಥ. ಒಂದು ವೇಳೆ ಹೆಚ್‌ಐವಿ ಪಾಸಿಟಿವ್ ಎಂದು ಫಲಿತಾಂಶ ಬಂದಿದ್ದರೆ ಇನ್ನೊಮ್ಮೆ ಬೇರೊಂದು ಕಿಟ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಇದರಿಂದ ಹೆಚ್‌ಐವಿ ಹರಡಿದೆ ಯೇ, ಇಲ್ಲವೇ ಎನ್ನುವುದು ತಿಳಿಯುತ್ತದೆ. ಒಂದು ವೇಳೆ ಹೆಚ್‌ಐವಿ ನೆಗೆಟಿವ್ ಎಂದು ಫಲಿತಾಂಶ ಬಂದಿದ್ದರೆ ಮತ್ತೆ ಮೂರು ತಿಂಗಳ ನಂತರ ಬಂದು ಪರೀಕ್ಷಿಸುವಂತೆ ಸೂಚಿಸುತ್ತಾರೆ. ಈ ಎಲ್ಲಾ ಸಮಯದಲ್ಲಿ ಹೆಚ್‌ಐವಿ ನೆಗೆಟಿವ್ ಎಂದೇ ಫಲಿ ತಾಂಶ ಬಂದರೆ ನೀವು ಯಾವುದೇ ರೀತಿಯಲ್ಲಿ ವ್ಯಾಧಿಗೆ ಬಲಿಯಾಗದೆ ಆರೋಗ್ಯ ವಾಗಿದ್ದೀರಿ ಎಂದರ್ಥ. ಕೆಲವೊಮ್ಮೆ ಹೆಚ್‌ಐವಿ ಇದೆಯೇ, ಇಲ್ಲವೇ ಎಂದು ತಿಳಿಯಲು ಆರು ತಿಂಗಳಿನಿಂದ ಮೂರು ವರ್ಷದ ತನಕ ಹಿಡಿಯಬಹುದು.

ಡೆನ್ಮಾರ್ಕ್‌ಗೆ ಸರಿಸಮಾನವಾದ ಕಾಂತಪುರಂ ಧರ್ಮ

Posted by JAYAKIRANA Kirana on | 0 comments | Leave a comment...

ಟಿ.ಇಸ್ಮಾಯಿಲ್, ತಲಪಾಡಿ
ಜೂ. ೪ರ ಚಾವಡಿಯಲ್ಲಿ ಪ್ರವಾದಿಯನ್ನು ನಿಂದಿಸಿದ ಬಗ್ಗೆ ಲೇಖನ ಬರೆಯುವುದರ ಜೊತೆಯಲ್ಲಿ ಭಾರತ ದೇಶದಲ್ಲಿ ಕಾಂತಪುರಂ ಧರ್ಮವು ಪ್ರವಾದಿಯನ್ನು ನಿಂದಿಸುತ್ತಾರೆ ಎಂದು ಬರೆದಿದ್ದೆ.
ಆದರೆ ಇದಕ್ಕೆ ಯು.ಟಿ. ಫಾರೂಕ್‌ರವರು ಲಂಡನ್ ಲೇಖನಕ್ಕೆ ಪ್ರತ್ಯುತ್ತರ ಎಂಬ ತಲೆಬರಹದಡಿಯಲ್ಲಿ ಜೂ. ೧೩ರಂದು ತಮ್ಮ ವಾದವನ್ನು ಸಮರ್ಥಿಸಿ ಕೊಂಡಿದ್ದಾರೆ.
ಡೆನ್ಮಾರ್ಕ್‌ನಲ್ಲಿ ನಡೆದ ವಿಷಯವನ್ನು ಓದಿ ನಗು ಬಂತು ಎಂದು ಹೇಳಿದ ಫಾರೂಕ್‌ರವರಿಗೆ ಪ್ರವಾದಿಯವರ ಮೇಲೆಷ್ಟು ಪ್ರೀತಿ ಇದೆ ಎಂದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್‌ರವರು ೨೧ನೇ ಶತಮಾನದ ಶೈಕ್ಷಣಿಕ ಹರಿಕಾರ ಸಾವಿರಾರು ಪಂಡಿತರನ್ನು ಸಮುದಾಯಕ್ಕೆ ಸಮರ್ಪಿಸಿದ ಚಿಂತಕ, ಅಹ್ಲುಸುನ್ನತ್‌ಗೆ ಮರ್ಯಾದೆ ತಂದವರು ಮಾತ್ರವಲ್ಲ ಕಮರುಲ್ ಉಲೆಮಾ ಕೂಡಾ ಹಾಗಿದ್ದಾರೆ. ಇಂತಹ ಒಬ್ಬ ಮಹಾಪುರುಷರನ್ನು ನಾನು ನಿಂದಿಸಿದ್ದೇನೆ ಎಂದು ಫಾರೂಕ್ ಆರೋಪಿಸಿದ್ದಾರೆ.  
ಫಾರೂಕ್‌ರವರೇ ಮೇಲೆ ತಿಳಿಸಿದ ವಿಷಯವೆಲ್ಲಾ ಇಸ್ಲಾಂ ಧರ್ಮಕ್ಕಾಗಿ ಮಾಡಿದ್ದರೆ ಖಂಡಿತ ನಾನು ಇವರ ಬಗ್ಗೆ ಇಂತಹಾ ವಿಷಯ ಬರೆಯುತ್ತಿರಲಿಲ್ಲ. ಆದರೆ ವಿಷಯವು ಇಸ್ಲಾಮ್ ಧರ್ಮಕ್ಕೆ ವಿರುದ್ಧವಾಗಿದ್ದರಿಂದ ಈ ರೀತಿ ಬರೆಯಲು ಕಾರಣವಾಯಿತು. 
ಡೆನ್ಮಾರ್ಕ್‌ನಲ್ಲಿ ಪ್ರವಾದಿಯ ಕಾರ್ಟೂನ್ ವಿವಾದವನ್ನು ಇಡೀ ಪ್ರಪಂಚದ ಮುಸ್ಲಿಮರು ಖಂಡಿಸಿದ್ದಾರೆ ಎಂದು ನೀವು ಒಪ್ಪಿಕೊಂಡಿದ್ದೀರಿ. ಮತ್ಯಾಕೆ ನೀವು ಪ್ರವಾದಿಯ ಕೇಶ ಎಂದು ಸುಳ್ಳು ಹೇಳಿ ನಡೆಯುವ ಕಾಂತಪುರಂ ಧರ್ಮದ ಜೊತೆ ಕೈ ಜೋಡಿಸಿದ್ದು? ನಾನು ಲೇಖನ ಬರೆಯುವಾಗ ಡೆನ್ಮಾಕ್ ಎಂದು ಬರೆಯುವ ಬದಲು ತಪ್ಪಿ ಲಂಡನ್ ಎಂದು ಒಂದು ಪದ ಬದಲಾಗಿದ್ದನ್ನು ಕಂಡು ಹಿಡಿದ ನಿಮಗೆ ಕಾಂತಪುರಂ ಧರ್ಮ ಮಾಡುವ ಅನಿಸ್ಲಾಮಿಕ ತಪ್ಪನ್ನು ಕಂಡು ಹಿಡಿಯಲು ಸಾಧ್ಯವಾಗದಿದ್ದದ್ದು ವಿಪರ್ಯಾಸ. 
ಡೆನ್ಮಾರ್ಕ್‌ನಲ್ಲಿ ನಡೆದ ಘಟನೆಯ ಸಂದರ್ಭದಲ್ಲಿ ಜಗತ್ತಿನಾದ್ಯಂತ ಮುಸ್ಲಿಮರು ಸ್ಟೇಜ್ - ಪೇಜ್‌ಗಳಲ್ಲಿ ಖಂಡಿಸಿದ್ದಾರೆ ಎಂದು ಫಾರೂಕ್ ಹೇಳಿದ್ದಾರೆ. ಆದರೆ ಫಾರೂಕ್‌ರವರೇ ಡೆನ್ಮಾರ್ಕ್‌ನಲ್ಲಿ ಮಾಡಿದ್ದಕ್ಕಿಂತ ನೀಚವಾಗಿ ಕಾಂತಪುರಂ ಧರ್ಮ ನಿಂದಿಸುವಾಗ ನೀವೇನು ನಿದ್ರೆ ಮಾಡುತ್ತಿದ್ದೀರಾ? 
ಪ್ರವಾದಿಯ ಮೊದಲನೆ ಕೇಶವು ಮುಂಬೈಯಲ್ಲಿರುವ ಇಕ್‌ಬಾಲ್ ಔಲಿ ಯಾರವರಿಗೆ ಹಾಗೂ ಎರಡನೇ ಕೇಶ ಅಬುದಾಬಿಯ ಶೈಕ್ ಕರ್ರೂಜ್ ಮೂಲಕ ತಲುಪಿದ್ದೆಂದು ತಿಳಿದರೆ ಸಾಕು, ಬೇರೆ ಯಾವ ಆಧಾರವೂ ಅಗತ್ಯವಿಲ್ಲ ಎಂದು ಫಾರೂಕ್‌ರವರು ಹೇಳಿದ್ದಾರೆ. ಫಾರೂಕ್‌ರವರೇ ಆದ್ದರಿಂದಲೇ ಹೇಳಿದ್ದು ಇದು ಇಸ್ಲಾಮ್ ಧರ್ಮವಲ್ಲ, ಬದಲಾಗಿ ಕಾಂತಪುರಂ ಧರ್ಮ ಎಂದು.
ಇಸ್ಲಾಮ್ ಧರ್ಮದಲ್ಲಿ ಪ್ರವಾದಿಯ ಕೇಶವನ್ನು ಮಾರಾಟ ಮಾಡಿ ಹಣ ಸಂಪಾದನೆ ಮಾಡುವುದಕ್ಕೆ ಯಾವುದೇ ಪುರಾವೆ ಇಲ್ಲ. ಇಸ್ಲಾಂ ಧರ್ಮದಲ್ಲಿ ಪ್ರತಿಯೊಂದಕ್ಕೂ ಪವಿತ್ರ ಕುರಾನ್ ಹಾಗೂ ಪ್ರವಾದಿಯವರ ಚರ್ಯೆ ಬೇಕು.
ಫಾರೂಕ್‌ರವರ ಮತ್ತೊಂದು ಹೇಳಿಕೆ ನಾವು ಕೇಶವನ್ನು ತಂದು ಆ ಮೂಲಕ ಹಣ ಸಂಪಾದನೆ ಮಾಡುವಾಗ ಟಿ. ಇಸ್ಮಾಯಿಲ್‌ರಂತಹ ವಹ್ಹಾಬಿಗಳಿಗೆ ಹೊಟ್ಟೆ ಉರಿಯುತ್ತಿದೆ ಎಂದು ಬರೆದಿದ್ದಾರೆ. ಫಾರೂಕರೇ ನೀವೇನು ಬೇಕಾದರೂ ಮಾಡಿ ಹಣ ಸಂಪಾದನೆ ಮಾಡಿ ನಮಗೇನೂ ಹೊಟ್ಟೆ ಉರಿ ಇಲ್ಲ. ಆದರೆ ಇಸ್ಲಾಮ್ ಧರ್ಮದ ಹೆಸರಲ್ಲಿ ಇಂತಹ ನೀಚ ಕೆಲಸವನ್ನು ಮಾಡದಿರಿ. ಬದಲಾಗಿ ನೀವು ಇನ್ನು ಮುಂದೆ ಇಂತಹ ಕೇಶ ವ್ಯಾಪಾರವನ್ನು ಮುಂದುವರಿಸುವುದಾದರೆ ನಿಮ್ಮ ಧರ್ಮಕ್ಕೆ ಕಾಂತಪುರಂ ಧರ್ಮ ಎಂದು ನಾಮಕರಣ ಮಾಡಿ. ಕಾಂತಪುರಂ ಧರ್ಮದಿಂದ ಒಂದು ಸಾವಿರ ಪಂಡಿತರಲ್ಲ ಒಂದು ಕೋಟಿ ಪಂಡಿತರು ಬಂದರೂ ಕೇಶ ವ್ಯಾಪಾರ ಮತ್ತು ಶವ ವ್ಯಾಪಾರ ಗಟ್ಟಿ ಮಾಡಲಿಕ್ಕೇ ಹೊರತು ಇಸ್ಲಾಮ್ ಧರ್ಮಕ್ಕೆ ಇದರಿಂದ ಯಾವುದೇ ಪ್ರಯೋಜನವಾಗದು. 
ಅಲ್ಲಾಹನನ್ನು ಮಾತ್ರ ಕರೆದು ಪ್ರಾರ್ಥಿಸಿರಿ ಮತ್ತು ನೈಜ ಇಸ್ಲಾಮನ್ನು ಕಲಿಸುವ ನೂರು ಪಂಡಿತರು ಇದ್ದರೆ ನಮ್ಮ ದೇಶದ ನೂರು ಕೋಟಿ ಜನರಿಗೆ ಸಾಕು. ಫಾರೂಕ್‌ರವರು ಬರೆದ ಲೇಖನಕ್ಕೆ ಸಂಕ್ಷಿಪ್ತವಾಗಿ ಉತ್ತರ ಬರೆದಿದ್ದೇನೆ. ಫಾರೂಕ್‌ರವರ ಮತ್ತೊಂದು ವಾದ-ಪ್ರತಿವಾದ ಎರಡೂ ಕಡೆಯ ಪಂಡಿತರು ನಡೆಸಲಿ ಎಂದು. ಇದು ನಿಮ್ಮ ಡೊಂಕು ಬುದ್ದಿ. ಕೇಳಿದ ಪ್ರಶ್ನೆಗೆ ಉತ್ತರವಿಲ್ಲದಾಗ ವಾದ-ಪ್ರತಿವಾದಕ್ಕೆ ಇದ್ದೀರಾ ಎಂದು ಹೇಳುವ ನೀವು ಎಷ್ಟೋ ವಾದ-ಪ್ರತಿವಾದಗಳನ್ನು ಮೊಟಕು ಗೊಳಿಸಿದ್ದೀರಿ.    
 ಆದ್ದರಿಂದ ಆ ವಿಷಯವನ್ನು ನಾನು ಮತ್ತೆ ಎತ್ತದೆ, ಬರೆದ ಲೇಖನಕ್ಕೆ ಪುರಾವೆ ಸಹಿತ ಮರುತ್ತರ ಬರೆಯಿರಿ. ಜನರು ಅದರ ಮೂಲಕ ಮನವರಿಕೆ ಮಾಡಲಿ. ಕೆಲವು ಅನಿಸ್ಲಾಮಿಕವಾದ ಆಚಾರ ಅನಾಚಾರದ ಬಗ್ಗೆ ಪವಿತ್ರ ಕುರಾನ್ ಹಾಗೂ ಪ್ರವಾದಿಯವರ ಚರ್ಯೆ ಪ್ರಕಾರ ಆಧಾರ ಕೊಡಿ ಎಂದು ಬರೆದಿದ್ದೆ. ಆದರೆ ನೀವು ಇದರಿಂದ ನುಣುಚಿಕೊಳ್ಳುವ ಹಾಗೆ ಕಾಣುತ್ತಿದೆ. ಸದ್ಯಕ್ಕೆ ನನ್ನ ಉತ್ತರವೇ ಸಾಕು ಎಂದಿದ್ದೀರಿ. ಫಾರೂಕರೇ ಖಂಡಿತಾ ನೀವು ಕೊಡುವ ಉತ್ತರ ಪವಿತ್ರ ಕುರಾನ್ ಹಾಗೂ ಪ್ರವಾದಿಯವರ ಚರ್ಯೆ ಆಧಾರ ಪ್ರಕಾರ ಇದ್ದರೆ ಖಂಡಿತಾ ನಾನು ನಿಮ್ಮ ಮಾತನ್ನು ಆಲಿಸುವೆ. ನೀವು ಬರೆದ ಉತ್ತರ ಇಸ್ಲಾಮ್ ಧರ್ಮಕ್ಕೆ ವಿರುದ್ಧವಾಗಿದ್ದರಿಂದ ಈ ವಿಷಯದಲ್ಲಿ ತಮ್ಮ ಮಾತನ್ನು ಆಲಿಸಲು ಸಾಧ್ಯವಿಲ್ಲ. ಮನುಷ್ಯನಾದ ನಾವು ಪರಸ್ಪರ ಕಷ್ಟ ಸುಖದಲ್ಲಿ ಆಚೆ ಈಚೆ ಸಹಾಯ ಅಥವಾ ನೆರವು ಪಡೆಯಬಹುದೇ ಹೊರತು ಧರ್ಮದ ವಿಷಯದಲ್ಲಿ ಪುರಾವೆಗಳೇ ಬೇಕಾಗಿದೆ. ತಮ್ಮ ಉತ್ತರವನ್ನು ಪುರಾವೆ ಸಹಿತ ನಿರೀಕ್ಷಿಸುತ್ತೇನೆ.  

ಜನರ ಸಮಸ್ಯೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳಿಗೆ ಅವಕಾಶ ಕೊಡಬೇಡಿ

Posted by JAYAKIRANA Kirana on | 0 comments | Leave a comment...



ತಾನು ಮೆಚ್ಚಿದ ಅಭ್ಯರ್ಥಿಯನ್ನು ಮತದಾರ ಆಯ್ಕೆ ಮಾಡುತ್ತಾನೆ. ಮತದಾರನಿಗೆ ಮೊದಲು ಕೃತಜ್ಞತೆಯನ್ನು ಸಲ್ಲಿಸಬೇಕಾದವ, ತಾನು ಆಯ್ಕೆಯಾದ ನಂತರ ಮತದಾರರಿಗೆ ಅಪರಿಚಿತನಾಗುತ್ತಾನೆ. ಪುನಹ ಓಟು ಬಂದಾಗ ಹತ್ತಿರವಾಗು ತ್ತಾನೆ. ಹರಿಜನ ಕೇರಿಗಳಲ್ಲೋ, ಅಲ್ಪಸಂಖ್ಯಾತರ ಕೇರಿಗಳಲ್ಲೋ ತಿಂದುಂಡೂ ಸ್ವಲ್ಪ ಸುದ್ದಿ ಮಾಡುತ್ತಾನೆ. ನಮ್ಮಂತಹ ಮುರ್ಖರೂ ಇವರ ಮಾತಿಗೆ ಮರುಳಾಗಿ ಮತ್ತೆ ಆಯ್ಕೆ ಮಾಡುತ್ತೇವೆ.
ಆಯ್ಕೆಯಾದ ಅಭ್ಯರ್ಥಿ ಮತ್ತೆ ಎಂದೂ ತಿರುಗಿ ನೋಡದೆ ಬೆಂಗಳೂರಿನಲ್ಲೋ, ದಿಲ್ಲಿಯಲ್ಲೋ ಕಾಲ ಕಳೆಯುತ್ತಾನೆ. ಪುನಹ ಚುನಾವಣೆ ಬಂದಾಗ ಸಮಾರಂಭ ಉದ್ಘಾಟನೆಗಳಲ್ಲೋ ಬಂದು ಸುದ್ದಿ ಮಾಡುತ್ತಾ ಹತ್ತಿರವಾಗುತ್ತಾರೆ. ಆದರೆ ಈ ಸಲದ ಚುನಾವಣೆಯಲ್ಲಿ ಮತದಾರರು ಅಭ್ಯರ್ಥಿಗಳ ರಕ್ತವನ್ನು ಕುಡಿ ಯದೇ ಇರಲಾರರು.
ಮಾನ್ಯ ಶಾಸಕರುಗಳೇ, ಇತ್ತೀಚೆಗೆ ‘ಜಯಕಿರಣ’ ಪತ್ರಿಕೆಯ ವಾರಾಂತ್ಯ ವಿಭಾಗದಲ್ಲಿ ನಮ್ಮ ಅಧ್ಯಾಪಕರಾದ ದಿ.ಪಿ.ಪುತ್ತಬ್ಬನವರ ಬಗ್ಗೆ ಬರಹವೊಂದು ಪ್ರಕಟಗೊಂಡಿತ್ತು. ನಮಗೆ ಪತ್ರಿಕೆ ಸಿಗದಿದ್ದರೂ ಇಂಟರ್‌ನೆಟ್ ಮುಖಾಂತರ ಎಲ್ಲ ವಿಷಯವನ್ನು ಓದುತ್ತೇವೆ. ಪತ್ರಿಕೆಯಲ್ಲಿ ಬರುವ ವಿಷಯವನ್ನು ಪ್ರಪಂಚದ ಯಾವ ಮೂಲೆಯಲ್ಲೂ ಬೇಕಾದರೂ ನೋಡಿ ತಿಳಿಯಬಹುದು. ನಾವು ಪತ್ರಿಕೆಗೆ ಪ್ರತಿಕ್ರಿಯೆಯನ್ನು ಬರೆದು ಕಳುಹಿಸಿದೆವು. ಇತ್ತೀಚೆಗೆ ಜಯಕಿರಣ ಪತ್ರಿಕೆಯ ನಿಮ್ಮಿಂದ ವಿಭಾಗದಲ್ಲಿ ‘ಶಿಕ್ಷಣ ಇಲಾಖೆಗೆ ಪುತ್ತಬ್ಬರ ಶಾಪ ತಟ್ಟದೆ ಇದ್ದೀತೇ?’ ಈ ರೀತಿ ಪ್ರತಿಕ್ರಿಯಿಸಿದೆವು. ನಾವು ಊರಲ್ಲಿ ಇಲ್ಲದಿದ್ದರೂ ನೆಟ್ ಮುಖಾಂತರ ನೋಡಿದೆವು.
ಅದೇ ರೀತಿ ಇತ್ತೀಚೆಗೆ ಮುಖಪುಟದಲ್ಲಿ ಪ್ರಕಟವಾದ ‘ಮನವಿ ಪತ್ರಕ್ಕೆ ಉತ್ತರಿಸುವ ಔದಾರ್ಯತೆ ತೋರದ ಶಾಸಕರು’ ಎಂಬ ಬಹಿರಂಗ ಪತ್ರದ ಬರಹವು ಪ್ರಕಟಗೊಂಡಿತ್ತು. ಪತ್ರಿಕೆಯಲ್ಲಿ ಬರೆದ ಹಾಗೆ ಮುಂದೆ ಯಾರಿಗೆ ಓಟು ಕೊಡಬೇಕು ಎನ್ನುವುದಕ್ಕಿಂತ ಯಾರಿಗೆ ಓಟು ಕೊಡಬಾರದು ಎಂಬುದನ್ನು ಆಲೋಚಿಸಬೇಕಾಗಿದೆ. ಇವರು ಸತ್ಯವನ್ನೇ ಬರೆದಿದ್ದಾರೆ.
ಕೆ. ಅಭಯಚಂದ್ರ ಜೈನ್, ಬಿ.ರಮಾನಾಥ ರೈ ಹಾಗೂ ಯು.ಟಿ. ಖಾದರ್‌ರವರೇ ನಿಮಗೆ ನಾಚಿಕೆಯಾಗಬೇಕು. ಒಂದು ಹೆಂಗಸು ಬರೆದ ಮನವಿಗೆ ನೀವು ಸ್ಪಂದಿಸದೆ ಇರದವರು ನಿಮ್ಮಿಂದ ಯಾವುದನ್ನು ನಿರೀಕ್ಷಿಸಬಹುದು ಹೇಳಿ ಶಾಸಕರೇ? ಭ್ರಷ್ಟ ಇಲಾಖೆಯೊಂದಿಗೆ ಹೋರಾ ಡುವ ಈ ಆಸಿಯಮ್ಮನವರು, ಅವರ ಕ್ಷೇತ್ರಕ್ಕೆ ಸಂಬಂಧ ಪಡದ ಜೆ.ಕೃಷ್ಣಪಾಲೆಮಾರ್‌ರವರಿಗಿರುವಷ್ಟು ಮಾನವೀಯತೆ ನಿಮಗ್ಯಾಕಿಲ್ಲ ಶಾಸಕರೇ? ಸದಾ ಕುರ್ಚಿಗಾಗಿ ಆಸೆ ಪಡುವ ನೀವು ಒಬ್ಬರು ಇನ್ನೊ ಬ್ಬರನ್ನು ದೂಷಿಸುವುದರಲ್ಲೇ ಕಾಲ ಕಳೆಯುತ್ತೀರಿ. 
ಸರಕಾರಿ ನೌಕರರೋರ್ವರಿಗೆ ಸರಕಾರಿ ಅಧಿಕಾರಿಗಳಿಂದಲೇ ಇಂತಹ ಕಿರುಕುಳ ನೀಡಿದ್ದು ದೊಡ್ಡ ಅಪರಾಧ. ಮೃತರ ಪತ್ನಿಯ ವರು ಶಿಕ್ಷಣ ಇಲಾಖೆಯ ಬಗ್ಗೆ ಪತ್ರಿಕೆಯಲ್ಲಿ ಬಂದ ವರದಿಯನ್ನು ಲಗತ್ತಿಸಿ ನಿಮಗೆಲ್ಲರಿಗೂ ಪತ್ರದ ಮೂಲಕ ರವಾನಿಸಿದ್ದಾರೆಂಬುದು ಕಳೆದ ಪತ್ರಿಕೆಯಲ್ಲಿ ನೋಡಿ ತಿಳಿಯಿತು. ಆ ಪತ್ರಕ್ಕೆ ಉತ್ತರ ಕೊಡುವಂತಹ ಔದಾರ್ಯತೆಯೂ ಇಲ್ಲದಿರುವುದು ತೀರಾ ಖಂಡನೀಯ ಅಥವಾ ಶಿಕ್ಷಣ ಇಲಾಖೆಗೆ ತನಿಖೆಗೆ ಆದೇಶ ನೀಡಲು ಹಿಂಜರಿಕೆಯೇ? ರಾಜ್ಯದಲ್ಲಿ ನಿಮಗೆ ಅಧಿಕಾರ ಇರದಿದ್ದರೂ ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ ತಾನೆ? ಅಧಿಕಾರ ಅವರಿಗೆ, ಜವಾಬ್ದಾರಿ ಮೇಲಿನವರಿಗೆ ಎಂದರೆ ಅದಕ್ಕೆ ಅರ್ಥವಿದೆಯೇ ಶಾಸಕರೇ?
ಮತದಾರರೇ ಪ್ರತಿಭಟಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸದ ಈ ಶಾಸಕರುಗಳಿಗೆ ಸೀಟು ನೀಡಲೇಬಾರದು. ಈಗಿಂದಿಗಲೇ ಹೈಕಮಾಂಡ್‌ಗೆ ಒತ್ತಡ ಹೇರಲೇಬೇಕು. ಈ ಬಗ್ಗೆ ನಮ್ಮ ಚಿಕ್ಕ ಸಂಘಟನೆಯ ಮುಖಂಡರೊಂದಿಗೆ ಚರ್ಚಿಸಿ, ಕರಪತ್ರ ಮುದ್ರಿಸಿ ಎಲ್ಲಾ ಮಸೀದಿಗಳಿಗೂ ಅಂಚೆಯ ಮೂಲಕ ರವಾನಿಸಲಾಗುವುದು ಹಾಗೂ ಕ್ರೈಸ್ತ ಮುಖಂಡರೊಂದಿಗೂ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಆಸಿಯಮ್ಮರವರಿಗೆ ಈ ಶಾಸಕರಿಂದ ಸಹಕಾರ ಸಿಗದಿದ್ದರೂ ಕೆಲವು ಬಿಜೆಪಿ ಶಾಸಕರೊಂದಿಗೆ ಸಂಪರ್ಕದಲ್ಲಿದ್ದೇವೆ.
ಕೊನೆಯದಾಗಿ ನಾವು ವಿನಮ್ರವಾಗಿ ವಿನಂತಿಸಿ ಕೊಳ್ಳುವುದೇನೆಂದರೆ, ಆಸಿಯಮ್ಮನವರಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಆದ ಅನ್ಯಾಯ ಇನ್ಯಾರಿಗೂ ಹಾಗೆ ಆಗದಿರಲು ಎಲ್ಲಾ ಸಂಘಟನೆಗಳಿಗೂ, ಸಂಘ-ಸಂಸ್ಥೆಗಳಿಗೂ, ಬಳಕೆದಾರರ ವೇದಿಕೆಗೂ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಗಳೂ ಕೂಡಾ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು, ಶಿಕ್ಷಣ ವೃತ್ತಿಯಲ್ಲಿ ಅನೇಕ ವರುಷಗಳಿಂದ ಸೇವೆ ಮಾಡಿ ತನ್ನ ಸಂಬಳದಲ್ಲಿ ಕಡಿತ ಮಾಡಿದ ಭವಿಷ್ಯನಿಧಿಯ ಹಣವನ್ನಾದರೂ ಮಂಜೂರು ಮಾಡುವಂತೆ ಶಿಕ್ಷಣ ಇಲಾಖೆಗೆ ವಿನಂತಿಸುತಿದ್ದೇವೆ.
ಎ.ಕೆ.ಮೊಹಮ್ಮದ್ ಶರೀಫ್, ಆರ್.ಖಲಂದರ್, ಪಿ.ಎಂ.ಅಫ್‌ನಾನ್, ಎ.ಶೀನಾನ್, ಪೆಟ್ರೋಜೆಟ್ ಕಂಪೆನಿ-ಕತ್ತಾರ್ ಬಳಗ

ಸುರತ್ಕಲ್ ಎಕ್ಸ್‌ಪ್ರೆಸ್ ಬಸ್ ನಿಲ್ದಾಣ ನಿರ್ಮಿಸಿ

Posted by JAYAKIRANA Kirana on | 0 comments | Leave a comment...

ಸುರತ್ಕಲ್‌ನಲ್ಲಿ ಫ್ಲೈ ಓವರ್ ನಿರ್ಮಾಣವಾದ ಬಳಿಕ ಎಕ್ಸ್‌ಪ್ರೆಸ್ ಬಸ್‌ಗಳೆಲ್ಲ ಫ್ಲೈ ಓವರ್ ಮೇಲ್ಗಡೆಯೇ ಸಂಚರಿಸುತ್ತದೆ. ಆದರೆ ಬಸ್ ಪ್ರಯಾಣಿಕರು ಬಿಸಿಲು-ಮಳೆಗೆ ರಸ್ತೆ ಬದಿಯಲ್ಲೇ ನಿಂತು ಬಸ್ ಕಾಯಬೇಕಾಗಿದೆ. ಸುರತ್ಕಲ್ ಅಂಚೆ ಕಚೇರಿ ಹತ್ತಿರ ಬಸ್‌ಗಳನ್ನು ನಿಲ್ಲಿಸಿದರೂ ಇಲ್ಲಿ ಸೂಕ್ತ ಬಸ್ ತಂಗುದಾಣ ಇನ್ನೂ ನಿರ್ಮಾಣವಾಗಿಲ್ಲ. ಇದರಿಂದ ಬಸ್ ಪ್ರಯಾಣಿಕರು ಪರದಾಡುವಂತಾಗಿದೆ. ಸುರತ್ಕಲ್ ಜಂಕ್ಷನ್‌ನಲ್ಲಿ ಉಡುಪಿ ಕಡೆಯ ಪ್ರಯಾಣಿಕರಿಗೆ ಮನಪಾ ವತಿಯಿಂದ ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣವಾಗಿದೆ. ಆದರೆ ಮಂಗಳೂರು ಕಡೆಯ ಬಸ್ ಪ್ರಯಾಣಿಕರಿಗೆ ಮಾತ್ರ ಬಸ್ ತಂಗುದಾಣ ನಿರ್ಮಿಸಲಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಇನ್ನೂ ಗಮನಹರಿಸಿಲ್ಲ. ಎಕ್ಸ್‌ಪ್ರೆಸ್ ಬಸ್‌ಗಳು ಫ್ಲೈಓವರ್ ಮೇಲೆ ಸಂಚರಿಸುವುದು ಸರಿ, ಆದರೆ ಬಸ್ ಪ್ರಯಾಣಿಕರಿಗೆ ನಿಲ್ಲಲು ಸೂಕ್ತ ಸ್ಥಳವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಈ ಬಗ್ಗೆ ಮಹಾನಗರ ಪಾಲಿಕೆ, ಸ್ಥಳೀಯ ಕಾರ್ಪೊರೇಟರ್‌ಗಳು ಇನ್ನಾದರೂ ಗಮನಿಸುವರೇ?
 ಕಿಶೋರ್, ಸುರತ್ಕಲ್

ಬಿಜೈ ಮ್ಯೂಸಿಯಂ ತಂಗುದಾಣದ ಸಮಸ್ಯೆ

Posted by JAYAKIRANA Kirana on | 0 comments | Leave a comment...

ಬಿಜೈ ಮ್ಯೂಸಿಯಂ ಜಂಕ್ಷನ್‌ನಲ್ಲಿ ಬಸ್ ತಂಗುದಾಣ ನಿರ್ಮಿಸದೆ ಪ್ರಯಾ ಣಿಕರು ಪರದಾಡುತ್ತಿದ್ದರು. ಈ ಬಗ್ಗೆ ಅನೇಕ ಬಾರಿ ಓದುಗರು ಪತ್ರಿಕೆಗೆ ಪತ್ರ ವನ್ನೂ ಬರೆದಿದ್ದರು. ಕೊನೆಗೂ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಇಲ್ಲಿ ಇತ್ತೀಚೆಗೆ ಬಸ್ ತಂಗುದಾಣ ನಿರ್ಮಿಸಿದೆ. ಆದರೆ ಇದರ ಇನ್ನೂ ಒಂದು ಸಮಸ್ಯೆಯೆಂದರೆ ಇಲ್ಲಿ ಬಸ್ ಕಾಯುತ್ತಿದ್ದರೆ ಬಸ್‌ಗಳು ಬಂದಿದ್ದೇ ತಿಳಿಯುವುದಿಲ್ಲ. ಮಳೆ-ಬಿಸಿಲಿಗೆ ಪ್ರಯಾಣಿಕರು ನಿಲ್ದಾಣದೊಳಗೆ ನಿಂತರೆ ಅಲ್ಲಿಯೇ ಬಾಕಿ ಯಾಗಬೇಕಾಗುತ್ತದೆ. ಬಸ್ ಚಾಲಕ ಪ್ರಯಾಣಿಕರು ಕಾಣುವುದಿಲ್ಲ ಎಂದು ವೇಗವಾಗಿ ಬಸ್ಸನ್ನು ಮುಂದಕ್ಕೆ ಚಲಾಯಿಸುತ್ತಾನೆ. ಬಸ್ ನಿಲ್ದಾಣವನ್ನು ರಸ್ತೆಯ ತೀರಾ ಬದಿಯಲ್ಲಿ ನಿರ್ಮಿಸಿರುವುದೇ ಇದಕ್ಕೆ ಕಾರಣ. ಬಸ್ ನಿಲ್ದಾಣವನ್ನು ಕುರುಚಲು ಪೊದೆ ಆವರಿಸಿರುವ ಕಾರಣ ಚಾಲಕನಿಗೆ ಬಸ್ ನಿಲ್ದಾಣದಲ್ಲಿ ನಿಂತವರು ಕಾಣಿಸುವುದಿಲ್ಲ, ಬಸ್ ನಿಲ್ದಾಣದಲ್ಲಿ ನಿಂತವರಿಗೂ ಬಸ್ ಬರುವುದು ಕಾಣಿಸುವುದಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟ ಮಹಾನಗರ ಪಾಲಿಕೆ ಇತ್ತ ಗಮನಿಸಿ ಬಸ್ ತಂಗುದಾಣಕ್ಕೆ ತಾಗಿಕೊಂಡೇ ಇರುವ ಕುರುಚಲು ಪೊದೆ ಹಾಗೂ ಮರದ ಗೆಲ್ಲುಗಳನ್ನು ಕಡಿಯಬೇಕಾಗಿ ವಿನಂತಿ.
 ರೆಹಮಾನ್, ಬಂದರ್

ಕಾಂಕ್ರೀಟ್ ರಸ್ತೆಯಲ್ಲೇ ಪಾರ್ಕಿಂಗ್!

Posted by JAYAKIRANA Kirana on | 0 comments | Leave a comment...

  ಮಂಗಳೂರಿನ ಹೆಚ್ಚಿನ ಎಲ್ಲಾ ರಸ್ತೆಗಳು ಕಾಂಕ್ರೀಟಿಕರಣಗೊಂಡಿದ್ದರೂ ಇಲ್ಲಿ ಇನ್ನೊಂದು ಸಮಸ್ಯೆ ಆರಂಭವಾಗಿದೆ. ಕಾಂಕ್ರೀಟ್ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಟ್ರಾಫಿಕ್ ಜಾಂ ಸಾಮಾನ್ಯವಾಗಿದೆ. ಕೆಲವು ಕಟ್ಟಡ, ಅಂಗಡಿ ಮಳಿಗೆಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಗ್ರಾಹಕರು ತಮ್ಮ ವಾಹನ ಗಳನ್ನು ಕಾಂಕ್ರೀಟ್ ರಸ್ತೆಯಲ್ಲಿ ಅರ್ಧ ಜಾಗವನ್ನು ಆಕ್ರಮಿಸಿ ಪಾರ್ಕಿಂಗ್ ಮಾಡುತ್ತಾರೆ. ಪಾರ್ಕಿಂಗ್ ಮಾಡಿದ ವರು ವಾಹನವನ್ನು ಹಿಂದೆಗೆಯುವಾಗ, ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾ ರಕ್ಕೆ ಸಮಸ್ಯೆಯಾಗುತ್ತದೆ. ಸಿಟಿ ಹಾಸ್ಪಿ ಟಲ್, ಬಿಕರ್ನಕಟ್ಟೆ, ಪಿವಿಎಸ್ ಸಿಗ್ನಲ್ ಬಳಿ ಹೀಗೆ ನಗರದ ಅನೇಕ ಕಡೆ ಹೀಗೆ ರಸ್ತೆಯನ್ನು ಆಕ್ರಮಿಸಿಕೊಂಡೇ ವಾಹನಗಳನ್ನು ನಿಲ್ಲಿಸುವುದರಿಂದ ಕಾಂಕ್ರಿಟೀಕರಣ ಮಾಡಿಯೂ ಪ್ರಯೋಜ ನವಿಲ್ಲದಂತಾಗಿದೆ. ಟ್ರಾಫಿಕ್ ಪೊಲೀಸರು ಇದನ್ನು ನೋಡಿದರೂ ನೋಡ ದಂತೆ ವರ್ತಿಸುವುದು ಸರಿಯಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನಿಸಿ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಾಗಿ ವಿನಂತಿ.                     ಪ್ರಜಾ, ಮಂಗಳೂರು

ಪೊಲೀಸರೇ, ಬಟ್ಟೆಯಂಗಡಿಗಳ ಕಡೆ ಗಮನವಿರಲಿ

Posted by JAYAKIRANA Kirana on | 0 comments | Leave a comment...

ಮಂಗಳೂರಿನ ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್ ಪರಿಸರದಲ್ಲಿ ರಸ್ತೆಬದಿ ಪೆಂಡಾಲ್ ಹಾಕಿ ತಲೆಯೆತ್ತಿರುವ ಅನೇಕ ಬಟ್ಟೆಯಂಗಡಿಗಳಿವೆ. ಇವುಗ ಳಲ್ಲಿ ಮೀಸೆ ಮೂಡದ ಅನೇಕ ಮಂದಿ ಯುವಕರು ಕೆಲಸ ಮಾಡು ತ್ತಿದ್ದಾರೆ. ಇವರೆಲ್ಲರೂ ಸ್ಥಳೀಯರಲ್ಲ. ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ ಮೂಲದವರು. ಆದರೆ ಇಲ್ಲಿ ಕೆಲಸ ಮಾಡುವ ಹೆಣ್ಮಕ್ಕಳು ಮಾತ್ರ ಸ್ಥಳೀಯರೇ ಆಗಿರುತ್ತಾರೆ. 
ಒಂದು ಸಣ್ಣ ಬಟ್ಟೆಯಂಗಡಿ ಯಲ್ಲಿ ಹತ್ತಾರು ಹೆಣ್ಮಕ್ಕಳು ಅಲ್ಲಲ್ಲಿ ನಿಂತುಕೊಂಡಿರುತ್ತಾರೆ. ಇಲ್ಲಿ ವ್ಯವಹಾರವಾಗುವುದು, ಗ್ರಾಹಕರು ಬಂದು-ಹೋಗುವುದು ಕಾಣಿಸುವು ದಿಲ್ಲ. ಅಲ್ಲಲ್ಲಿ ಗಂಡು-ಹೆಣ್ಣು ಜೋಡಿಯಾಗಿ ಮಾತಾಡುವುದು ಕಂಡುಬರುತ್ತದೆ. ಅದೂ ತೀರಾ ಅಶ್ಲೀಲ ಭಾಷೆಯಲ್ಲಿ ಮಾತಾಡು ವುದೂ ನಡೆಯುತ್ತದೆ. ಇಲ್ಲಿ ಹೆಣ್ಮಕ್ಕಳಿಗೆ ಕೊಡುವ ಸಂಬಳ ಒಂದರಿಂದ ಎರಡು ಸಾವಿರ ರೂ. ಮಾತ್ರ. ಹೀಗಾ ದರೆ ಇವರು ಇಲ್ಲಿ ಮಾಡುವುದೇನು?
ಹೆಣ್ಮಕ್ಕಳ ಪ್ರೇಮ ಪ್ರಕರಣ, ಪರಾರಿ ಪ್ರಕರಣಕ್ಕೆ ಇಂಥ ಘಟನೆಗಳೂ ಕಾರಣವಾಗುತ್ತವೆ. ಆದ್ದರಿಂದ ಪೊಲೀಸ್ ಇಲಾಖೆ ಇನ್ನಾದರೂ ಇತ್ತ ಕಡೆ ಅವಶ್ಯ ಗಮನಹರಿಸಬೇಕು. 
  ನಿತ್ಯಾನಂದ
    ಕಾರ್‌ಸ್ಟ್ರೀಟ್

ಪರಸ್ಪರ ಸಂಬಂಧ ದೂರವಿದ್ದಷ್ಟು ಸಂಸ್ಕಾರ-ಸಂಸ್ಕೃತಿ ನಾಶವಾಗುತ್ತದೆ

Posted by JAYAKIRANA Kirana on | 0 comments | Leave a comment...

ಕುಟುಂಬವು ಖಂಡಿತವಾಗಿಯೂ ಭವ್ಯ ಸಮಾಜದ ಮೂಲಭೂತ ಅಂಗ. ಹಲವಾರು ಕುಟುಂಬಗಳು ಸೇರಿದಾಗ ಅದು ಸಮಾಜವೆನಿಸುತ್ತದೆ. ವಿವಾಹ ಬಂಧನದಿಂದ ಅಥವಾ ರಕ್ತ ಸಂಬಂಧದಿಂದ ಬೆಸೆದ ಜನ ಸಮೂಹವೇ ಕುಟುಂಬ. ಕುಟುಂಬವು ತನ್ನದೇ ಆದ ನಂಬುಗೆ, ಸಂಸ್ಕೃತಿ ಮತ್ತು ಧಾರ್ಮಿಕ ಆಚಾರ-ವಿಚಾರಗಳನ್ನು ಹೊಂದಿರುವ ವಿವಿಧ ಜನರ ಸಮೂಹ. ಜನರಿಗೆ ಅರಿವಿದ್ದೋ ಇಲ್ಲದೆಯೋ ಬೇರೆ-ಬೇರೆ ಜನ ಸಮು ದಾಯ ಒಂದುಗೂಡುವಾಗ ಕಾನೂನು, ಪದ್ಧತಿ ಮತ್ತು ಸಂಪ್ರದಾ  ಯಗಳು ಜನ್ಮ ತಳೆಯುತ್ತವೆ. ಕುಟುಂಬವನ್ನು ರಚಿಸಲು ದಂಪತಿ ಗಳೇ ಕಾರಣರು. ಅವರು ಸಮಾಜದಲ್ಲಿನ ಪದ್ಧತಿ ಮತ್ತು ಸಂಪ್ರದಾಯಗಳ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಒಳ್ಳೆಯ ಪದ್ಧತಿ ಗಳನ್ನು ಪಾಲಿಸಿ ಕುಟುಂಬವನ್ನು ಮುನ್ನಡೆಸಲು ಅವರು ಅನೇಕ ಜವಾಬ್ದಾರಿಗಳನ್ನು ಹೊರಬೇಕಾಗಿದೆ. ಆ ಜವಾಬ್ದಾರಿಗಳು ಯಾವುದೆಂದರೆ, ಮಕ್ಕಳ ಪಾಲನೆ, ಪೋಷಣೆ, ವಿದ್ಯಾಭ್ಯಾಸ, ಹಿರಿಯರ ಆರೈಕೆ, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವುದು, ಕುಟುಂಬದ ಅವಶ್ಯಕತೆಗಳನ್ನು ಪೂರೈಸುವುದು, ಕುಟುಂಬದ ಸದಸ್ಯರ ನಡುವೆ ಸೌಹಾರ್ದವನ್ನು ಕಾಪಾಡುವುದು ಮತ್ತು ಕುಟುಂಬದ ಸಂಪತ್ತಿನ ರಕ್ಷಣೆ, ಇತ್ಯಾದಿ. ಇವೆಲ್ಲವೂ ಒಬ್ಬ ಸಾಮಾನ್ಯ ಮನುಷ್ಯನಿಗೆ ಮತ್ತು ನಾಗರಿಕ ಸಮಾಜಕ್ಕೆ ಅನ್ವಯಿ ಸುತ್ತದೆ. ಆ ಸಾಮಾಜಿಕ ಒತ್ತಡಗಳು ಪ್ರತಿಯೊಂದು ಕುಟುಂಬ ವನ್ನು ಒಂದುಗೂಡಿಸಲು ಸಹಕಾರಿಯಾಗಿವೆ. ಕುಟುಂಬಗಳಿಂದ ಸಮಾಜದ ಈ ಬೇಡಿಕೆಯನ್ನು ಸಾಮಾಜಿಕ ಪರಿಣಾಮ ವೆನ್ನ ಬಹುದು. ಸಮಾಜವು ನಿರ್ದಿಷ್ಟ ರೀತಿಯಲ್ಲಿ ಕಾರ್ಯನಿರ್ವ ಹಿಸುವಂತೆ, ಸಮಾಜದಲ್ಲಿ ಚಾಲ್ತಿಯಲ್ಲಿರುವ ಆಚಾರ-ವಿಚಾರ, ಸಂಪ್ರದಾಯಗಳು ಮತ್ತು ಅದರ ಮೇಲೆ ಬೀರುವ ಪರಿಣಾಮ ಗಳನ್ನು ಸಾಮಾಜಿಕ ಪರಿಣಾಮವೆನ್ನಬಹುದು. ಕುಟುಂಬವು ಸಮಾಜದ ಆಡಳಿತಕ್ಕೆ ಒಳಪಟ್ಟಿರುತ್ತದೆ.
ಸಮಾಜವು ಕುಟುಂಬಗಳು ನಿರ್ವಹಿಸತಕ್ಕ ಕರ್ತವ್ಯಗಳನ್ನು ನಿರ್ದೇ ಶಿಸುತ್ತದೆ. ಸಾಮಾನ್ಯವಾಗಿ ಸಮಾಜದಲ್ಲಿರುವ ಪದ್ಧತಿಗಳನ್ನು ಮತ್ತು ಸಂಪ್ರದಾಯಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಪತಿ-ಪತ್ನಿಯರು ಪಾಲಿಸುವುದಾಗಿರುತ್ತದೆ. ಸತಿ-ಪತಿಯರು ಜೊತೆಯಲ್ಲಿರುವಾಗ ಈ ಎಲ್ಲಾ ಜವಾಬ್ದಾರಿಗಳನ್ನು ಜೊತೆಯಲ್ಲಿಯೇ ನಿರ್ವಹಿಸುತ್ತಾರೆ. ಆದರೆ ಪತಿ ವಲಸೆ ಹೋದ ಸಂದರ್ಭದಲ್ಲಿ ಪತ್ನಿಯು ಕುಟುಂಬದ ಜವಾಬ್ದಾರಿ ಯನ್ನು ಒಂಟಿಯಾಗಿ ಅಥವಾ ಕುಟುಂಬದ ಇತರ ಸದಸ್ಯರೊಡನೆ ಸೇರಿ ನಿರ್ವಹಿಸಬೇಕಾಗುತ್ತದೆ. ಕುಟುಂಬದ ಸದಸ್ಯರಿಂದ ಎಷ್ಟು ನೆರವು ದೊರಕಿದರೂ ತನ್ನ ಪತಿ ವಲಸೆ ಹೋದ ನಿಮಿತ್ತ ತೆರವಾದ ಜಾಗವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲದಂತೆ ಅವಳಿಗೆ ಭಾಸವಾಗುತ್ತದೆ. ಆದುದರಿಂದ ಪತಿಯ ವಲಸೆಯಿಂದಾಗಿ ಖಂಡಿತ ವಾಗಿಯೂ ಪತ್ನಿಯ ಜವಾಬ್ದಾರಿ ಮತ್ತು ಒತ್ತಡ ಹೆಚ್ಚುತ್ತದೆ.
ಕೊಲ್ಲಿ ರಾಷ್ಟ್ರಗಳಿಗೆ ವಲಸೆಯಿಂದ ಉಂಟಾಗುವ ಸಾಮಾಜಿಕ ಪರಿಣಾಮಗಳು ಸಂಸ್ಕೃತಿ ಮಾತ್ರವಲ್ಲದೆ, ವಲಸೆಗಾರನ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಗುಣಮಟ್ಟ, ಕುಟುಂಬ ಜೀವನದ ಕಾಲಚಕ್ರ ಮತ್ತು ಊರಿನಲ್ಲಿರುವ ಕುಟುಂಬದವರಿಗೆ ದೊರಕು ವಂತಹ ಸಾಮಾಜಿಕ ಸ್ಥಾನಮಾನಗಳಲ್ಲಿ ಬಹಳಷ್ಟು ಬದಲಾವ ಣೆಗಳನ್ನು ಉಂಟುಮಾಡಿವೆ ಮತ್ತು ಇವುಗಳನ್ನು ವಿವಿಧ ಸೂಚಕಗಳ ಮೂಲಕ ವಿಶ್ಲೇಷಿಸಲಾಗಿದೆ.
ವಿವಾಹವು ಬಹಳಷ್ಟು ಜನರ ಜೀವನವನ್ನು ಉಜ್ವಲವಾ ಗಿಸಿದೆ. ಆದರೆ ಅದು ಕೆಲವರ ಜೀವನದಲ್ಲಿ ಅಡ್ಡಿ ಮತ್ತು ತೊಂದರೆಗಳನ್ನು ಕೂಡಾ ಉಂಟುಮಾಡಿದೆ. ವಲಸೆಗಾರರ ಕರ್ತವ್ಯನಿಷ್ಠೆ ಮತ್ತು ಅಲ್ಪಾವಧಿಯ ಬಿಡುವಿನಿಂದಾಗಿ ವಿವಾಹದ ಬಳಿಕ ಆದಷ್ಟು ಶೀಘ್ರವಾಗಿ ಕರ್ತವ್ಯಕ್ಕೆ ಮರುಹಾಜರಾಗುವುದು ಅನಿವಾರ್ಯವಾಗಿದೆ. ವಿವಾಹದ ಬಳಿಕ ನವದಂಪತಿಗಳ ಕಡಿಮೆ ಅಂತರದ ವಾಸ ಬಹಳಷ್ಟು ಸಮಸ್ಯೆಗೆ ಮತ್ತು ಮಾನಸಿಕ ಉದ್ವೇಗಕ್ಕೆ ಕಾರಣವಾಗಿದೆ ಹಾಗೂ ಈ ಕಡಿಮೆ ಅಂತರದಿಂದ ನವದಂಪತಿಗಳಿಗೆ ಒಬ್ಬರನ್ನೊಬ್ಬರು ಅರಿತು ಬೆರೆಯಲು ಸಾಧ್ಯ ವಾಗುವುದಿಲ್ಲ. ಇದರಿಂದಾಗಿ ಸತಿ-ಪತಿಯರಿಬ್ಬರೂ ಪರಸ್ಪರ ಅಪರಿಚಿತರಂತೆ ಇರಬೇಕಾಗಿದೆ. ಮಾತ್ರವಲ್ಲದೆ ನವವಧುವಿಗೆ ಅವಳ ಪತಿಯನ್ನು ಮತ್ತು ಪತಿಯ ಮನೆಯ ವರನ್ನು ಅರ್ಥ ಮಾಡಿಕೊಳ್ಳಲು ಅಸಾಧ್ಯವಾಗಿದೆ.
ಆದುದರಿಂದ ಪತಿಯ ವಲಸೆಯ ಬಳಿಕ ಆತನ ಮನೆ ಯಲ್ಲಿ ನವವಧುವಿನ ವಸತಿ ಅಹಿತಕರವಾಗಿದೆ. ಇದು ಆಕೆ ತನ್ನv ವರಿಗೆ ಹಿಂತಿರುಗಿ ಬರಲು ಪ್ರೇರಣೆಯಾಗಿದೆ. ನವವಧು ತವರು ಮನೆಯಲ್ಲಿರುವುದು ಬಹಳಷ್ಟು ಗೊಂದಲಕ್ಕೆ ಕಾರಣ ವಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಇದು ವಿಚ್ಛೇದ ನಕ್ಕೆ ಕೂಡಾ ಎಡೆಮಾಡಿಕೊಟ್ಟಿದೆ. ಈ ಕಡಿಮೆ ಅಂತರದ ವಾಸ ದಿಂದಾಗಿ ನವದಂಪತಿಗಳಿಗೆ ವಿವಾಹ ಎಂಬುದು ನುಂಗಲಾಗದ ಬಿಸಿ ತುಪ್ಪವಾಗಿದೆ. ಬಹಳಷ್ಟು ಜನರು ಸಮಾಜದ ನಿಯಮದಿಂದ ಬೇರ್ಪಟ್ಟಿದ್ದಾರೆ. ಇದು ಸಮಾಜದಲ್ಲಿ ಅಶಿಸ್ತು ಉಂಟಾಗಲು ಕಾರಣವಾಗಿದೆ.
ವಾಲ್ಟರ್ ಡಿಸೋಜ, ಮಂಗಳೂರು

ಅಗ್ನಿಶಾಮಕ ಠಾಣೆ ಯಾವಾಗ?

Posted by JAYAKIRANA Kirana on | 0 comments | Leave a comment...

ಮುಲ್ಕಿ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ. ಇಲ್ಲಿ ಎಲ್ಲಾ ಸೌಲಭ್ಯಗಳಿ ದ್ದರೂ ಇಲ್ಲಿಗೊಂದು ಅಗ್ನಿಶಾಮಕ ಠಾಣೆಯನ್ನು ಮಾತ್ರ ಇನ್ನೂ ಒದಗಿಸ ಲಾಗಿಲ್ಲ. ಇದರಿಂದ ಇಲ್ಲಿ ಬೆಂಕಿ ಅನಾಹುತ, ಮತ್ತಿತರ ಅವಘಡಗಳು ಸಂಭವಿಸಿದಲ್ಲಿ ಮಂಗಳೂರಿನ ಅಗ್ನಿಶಾಮಕ ವಾಹನ ಬರುವವರೆಗೆ ಕಾಯ ಬೇಕು. ಹೆದ್ದಾರಿಯಲ್ಲಿ ಅಗ್ನಿಶಾಮಕ ವಾಹನ ಸಾಗಿಬರಲು ಏನಿಲ್ಲವೆಂದರೂ ಅರ್ಧ ಗಂಟೆ ಹಿಡಿಯುತ್ತದೆ. ಮುಲ್ಕಿಯಲ್ಲೇ ಅಗ್ನಿಶಾಮಕ ಠಾಣೆ ನಿರ್ಮಾಣ ವಾಗಿದ್ದರೆ ಜನರಿಗೆ ಬಹಳ ಉಪಯೋಗವಿತ್ತು. ಮುಲ್ಕಿ, ಕಿನ್ನಿಗೋಳಿ ಹಾಗೂ ಸುತ್ತಲಿನ ಸ್ಥಳಗಳಿಗೆ ಸೇವೆಯ ತುರ್ತು ಸೌಲಭ್ಯವೂ ಲಭಿಸುತ್ತಿತ್ತು. ಆದರೆ ಈ ಬಗ್ಗೆ ಸ್ಥಳೀಯ ಶಾಸಕರ ಸಮೇತ ಯಾರೂ ಮನಸ್ಸು ಮಾಡಿಲ್ಲ ಎಂದೇ ಹೇಳಬೇಕು. ಮುಲ್ಕಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಭಾರೀ ಪ್ರಯತ್ನಗಳು ನಡೆಯುತ್ತಿದೆ. ಈ ನಡುವೆ ಇಲ್ಲಿ ಅಗ್ನಿಶಾಮಕ ಠಾಣೆ ಯನ್ನು ನಿರ್ಮಿಸಲು ಸಂಬಂಧಪಟ್ಟವರು ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ.                             ಲಾರೆನ್ಸ್, ಮುಲ್ಕಿ

ಬಂಧೀಖಾನೆ ಸಚಿವರು ಏನು ಮಾಡುತ್ತಿದ್ದಾರೆ?

Posted by JAYAKIRANA Kirana on | 0 comments | Leave a comment...

ಉಡುಪಿಯ ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹ ಹಾಗೂ ಮಂಗಳೂರಿನ ಜಿಲ್ಲಾ ಕಾರಾಗೃಹಗಳಲ್ಲಿ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಆಗಾಗ ಪತ್ರಿಕೆ, ಚಾನೆಲ್‌ಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಈ ಬಗ್ಗೆ ರಾಜ್ಯ ಬಂಧೀಖಾನೆ ಸಚಿವರು ಇನ್ನೂ ಯೋಗ್ಯ ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ. ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಕೂಡಾ ಜೈಲಿನ ಅವ್ಯವಸ್ಥೆ ಬಗ್ಗೆ ಯೋಗ್ಯ ಕ್ರಮ ಕೈಗೊಂಡಿಲ್ಲ. ಶಾಸಕರಾಗಲೀ, ಸಚಿವರಾಗಲೀ ಇತ್ತ ಕಡೆ ಗಮನ ಕೊಟ್ಟು ಜೈಲುಗಳಲ್ಲಿ ಖೈದಿಗಳ ಸ್ಥಿತಿ ಸುಧಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಖೈದಿಗಳು ನರಕವಾಸ ಮಾಡುತ್ತಿದ್ದಾರೆ. ರಾಜ್ಯ ಬಂಧಿಖಾನೆ ಸಚಿವರು ಇಲ್ಲಿಗೆ ಯಾವತ್ತೋ ಒಮ್ಮೆ ಭೇಟಿ ನೀಡಿರುವುದನ್ನು ಬಿಟ್ಟರೆ ಇನ್ನುಳಿದಂತೆ ಇತ್ತ ತಿರುಗಿಯೂ ನೋಡಿಲ್ಲ. ಜೈಲುಗಳಲ್ಲಿ ಮಾದಕ ದ್ರವ್ಯ ಸೇವನೆ, ಕುಡಿತ, ಮೊಬೈಲ್ ಫೋನ್‌ಗಳ ಬಳಕೆ ಸಾಮಾನ್ಯವಾಗಿದ್ದು ಖೈದಿಗಳ ಮೇಲೆ ಹಲ್ಲೆ, ಕೊಲೆಯಂತಹ ಗಂಭೀರ ಪ್ರಕರಣಗಳೂ ನಿರಂತರ ವಾಗಿ ನಡೆಯುತ್ತಿವೆ. ಇನ್ನಾದರೂ ಜೈಲುಗಳ ಸ್ಥಿತಿಯನ್ನು ಸುಧಾ ರಿಸಲು ಕ್ರಮ ಕೈಗೊಳ್ಳಿ.         ಸುರೇಂದ್ರ, ಮಣಿಪಾಲ

ಹದಗೆಟ್ಟ ಕಲ್ಕಟ್ಟ ಪ್ರೌಢಶಾಲೆಯ ರಸ್ತೆ

Posted by JAYAKIRANA Kirana on | 0 comments | Leave a comment...

ಮಂಜನಾಡಿ ಗ್ರಾಮದ ಕಲ್ಕಟ್ಟ ಪ್ರೌಢಶಾಲೆಗೆ ಹೋಗುವ ರಸ್ತೆಗೆ ಸುಮಾರು ಆರು ವರ್ಷಗಳ ಹಿಂದೆ ರಸ್ತೆ ಕಾಮಗಾರಿ ಎಂದು ಹೇಳಿ ಜಲ್ಲಿಕಲ್ಲು ಹಾಕಿಸಿ ಹೋದ ಅಧಿಕಾರಿಗಳು ಮತ್ತೆಂದೂ ಈ ಕಡೆ ಮುಖ ಮಾಡಿಲ್ಲ. ಇದೀಗ ಈ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಬಿಡಿ, ಪಾದಚಾರಿ ಗಳೂ, ಶಾಲಾ ವಿದ್ಯಾರ್ಥಿಗಳೂ ಸಂಚರಿಸಲು ಹರಸಾಹಸ ಪಡ ಬೇಕಾಗಿದೆ. 
ಅದೆಷ್ಟೋ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಅಪಘಾತ ನಡೆದ ಎಷ್ಟೋ ನಿದರ್ಶನಗಳಿವೆ. ಅದೆಷ್ಟೋ ವಿದ್ಯಾರ್ಥಿಗಳು ಬಿದ್ದು ಮೈಕೈ ಗಾಯ ಮಾಡಿಕೊಂಡಿದ್ದಾರೆ. ಮಳೆಗಾಲದ ಈ ಸಮಯದಲ್ಲಿ ವಿದ್ಯಾರ್ಥಿಗಳು ಕೆಸರು ನೀರು ಮೆತ್ತಿಕೊಂಡೇ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಇದೇ ಶಾಲೆಯಲ್ಲಿ ಇಲ್ಲಿಯ ಮತದಾನದ ಚಟುವಟಿಕೆಗಳು ನಡೆಯುವುದರಿಂದ ಮುಂದಿನ ಚುನಾವಣೆಯನ್ನು ಇಲ್ಲಿಯ ನಾಗರಿಕರು ಬಹಿಷ್ಕರಿಸಿದರೆ ಅಚ್ಚರಿ ಪಡಬೇಕಾಗಿಲ್ಲ.        ನಾಗರಿಕರು, ಮಂಜನಾಡಿ

ಸತ್ಯವಿಚಾರದ ಅನ್ವೇಷಣೆ ಮುಖ್ಯ

Posted by JAYAKIRANA Kirana on | 0 comments | Leave a comment...

ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗ ಬಹುದು, ನಿಧಾನದಲ್ಲಿ ವಿಚಾರಿಸಿದಾಗ ಸತ್ಯ ತಿಳಿಯುವುದು. ಈ ತನಕ ಮಾಧ್ಯಮದಲ್ಲಿ ಬಂದ ನಿತ್ಯಾನಂದ ಸ್ವಾಮಿಗಳ ಬಗೆಗಿನ ವಿಚಾರಗಳು ಎಷ್ಟರಮಟ್ಟಿಗೆ ಸತ್ಯವಾಗಿದೆ? ಸುಳ್ಳು ಅದರಲ್ಲಿ ತುಂಬಿದೆಯೇ? ಕಪೋಲಕಲ್ಪಿತ ಒತ್ತಡ, ರಾಜ ಕೀಯ ಗುಂಪುಗಾರಿಕೆ, ಬೆದರಿಕೆ ಇವೆಲ್ಲ ಅದರಲ್ಲಿ ತುಂಬಿ ಕೊಂಡಿದೆಯೇ? ಈತನಕ ಬಂದ ವಿದ್ಯಮಾನಗಳನ್ನೆಲ್ಲ್ಲಾ ಕಲ್ಪಿಸಿ, ತೋರಿಸಿ ಹೇಳಲು ಸಾಧ್ಯವೇ? ನಮ್ಮ ಮುಂದೆ ಉತ್ತರ ಸಿಗದ ಇನ್ನೂ ಹಲವು ಪ್ರಶ್ನೆಗಳಿವೆ.
ಎಷ್ಟೋ ವರ್ಷದಿಂದ ಇದ್ದ ಈ ಆಶ್ರಮ ಈಗ ಒಮ್ಮೆಂ ದೊಮ್ಮೆಲೇ ಹೇಗೆ ಅನಾವರಣಗೊಂಡಿತು? ಸ್ವಾಮಿಗಳು ಸಿದ್ಧಿಪುರುಷರೇ? ಅಷ್ಟು ಜನ ಭಕ್ತರು, ಡೊಂಬರಾಟದ  ದೃಶ್ಯವನ್ನು ನೋಡಿದ ಹಾಗೆ ನೋಡಲು ಅವರೆಲ್ಲರೂ ಮೂಢರೇ? ಅನುಕೂಲವಿಲ್ಲದೆ, ಅನುಗ್ರಹವಿಲ್ಲದೆ, ನೆಮ್ಮದಿ, ಶಾಂತಿ ಇಲ್ಲದೆ ಎಷ್ಟೋ ಸಾವಿರ ಭಕ್ತರು ಸುಮ್ಮನೆ ಅನುಯಾ ಯಿಗಳಾಗುವುದೆಂದರೆ ಏನರ್ಥ? ಎಲ್ಲವೂ ಸರಿ ಅಲ್ಲ ಎಂಬದಂತೂ ಸತ್ಯ. ಎಷ್ಟು ಸರಿ, ಎಷ್ಟು ಸುಳ್ಳು ಎನ್ನುವುದನ್ನು ವಿಮರ್ಶಿಸಬೇಕಾದವರು ಪೂರ್ವಾಗ್ರಹ ರಹಿತರಾದ  ಪೊಲೀಸರು. ನ್ಯಾಯಾಲಯ ವಂಚನೆ ಮಾಡಿದವರನ್ನು ಗುರುತಿಸಬೇಕು. ಇಂದು ಎಷ್ಟೋ ಕಡೆ ಬೇಕಾದ ಹಾಗೆ ಸಾಕ್ಷಿ ಸೃಷ್ಟಿಯಾಗುತ್ತದೆ. ಸಾಕ್ಷಿಗಳ ನಾಶವೂ ಆಗುತ್ತದೆ. ಇಂದಿನ ವ್ಯವಸ್ಥೆಯಲ್ಲಿ ತಪ್ಪಿತಸ್ಥನನ್ನು ಗುರುತಿಸುವುದು ಸುಲಭದ ಕೆಲಸ ಅಲ್ಲ. ತಪ್ಪಿನ ಹೊಣೆಗಾರಿಕೆ ಹೊರಲು ಯಾರೂ ಸಿದ್ಧರಿರುವುದಿಲ್ಲ. ಕೊಳಕು ವ್ಯವಸ್ಥೆ-ಯಿಂದ ಸಭ್ಯರು ದೂರ ಇರುತ್ತಾರೆ. ಆದರೆ ಎಲ್ಲಾ ಕಡೆ ಹಾಗಾ ಗುವುದಿಲ್ಲ. ಇನ್ನು ಎಷ್ಟೋ ಕಡೆ ಹಲವು ತಪ್ಪಿನ ಸಂಗತಿ ಗಳು ನಡೆಯುತ್ತಲೇ ಇರುತ್ತವೆ. ಬಹಳ ರಹಸ್ಯವಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಈ ವ್ಯವಹಾರಗಳು ನಡೆದು ಹೋಗುತ್ತದೆ. 
ಒಟ್ಟಿನಲ್ಲಿ ಜನಸಾಮಾನ್ಯರು ಬಣ್ಣದ ಪ್ರಪಂಚಕ್ಕೆ ಬಲಿಯಾಗಬಾರದು. ಸಿಕ್ಕಿ ಹಾಕಿಕೊಳ್ಳುವವರೆಗೆ ಎಲ್ಲರೂ ಸಾಚಾನೇ ಆಗಿರುತ್ತಾರೆ. ಗೋಮುಖ ವ್ಯಾಘ್ರರನ್ನು ಹುಡುಕುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು. ನಿತ್ಯಾನಂದನ ಸೆರೆಯ ನಂತರವಾದರೂ ಒಳ್ಳೆಯ ದಿನ ಗಳನ್ನು ನಿರೀಕ್ಷಿಸೋಣ.
 ಮಧೂರು ಮೋಹನ ಕಲ್ಲೂರಾಯ

ವೇಣೂರು ಬಿಎಸ್ಸೆನ್ನೆಲ್ ‘ನಾಟ್ ರಿಚೇಬಲ್!

Posted by JAYAKIRANA Kirana on | 0 comments | Leave a comment...

ವೇಣೂರು ಜನತೆಯ ಕೈಯಲ್ಲಿ ಮೊದಲ ಬಾರಿಗೆ ಮೊಬೈಲ್ ರಾರಾಜಿಸುವಂತೆ ಮಾಡಿದ ಮೊದಲ ನೆಟ್‌ವರ್ಕ್ ಬಿಎಸ್‌ಎನ್‌ಎಲ್ ಅನ್ನು ಇಲ್ಲಿಯ ಜನತೆ ಮರೆಯು ವಂತಿಲ್ಲ. ಈಗಲೂ ಇಲ್ಲಿನ ಹೆಚ್ಚಿನ ಗ್ರಾಹಕರಲ್ಲಿ ಬಿಎಸ್ ಎನ್‌ಎಲ್ ಸಿಮ್ ಕಾರ್ಡ್‌ಗಳೇ ಇರುವುದರಿಂದ ಇದು ಹೆಚ್ಚಿನ ಸಮಯಗಳಲ್ಲಿ ನಾಟ್ ರಿಚೇ ಬಲ್ ಆಗಿರುತ್ತದೆ.
ಇದರಿಂದಾಗಿ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಮುದ್ದಾಡಿ, ತುಂಬೆದಲೆಕ್ಕಿ, ಗುಂಡೂರಿ ಪರಿಸರದಲ್ಲಿ ಸರಿಯಾಗಿ ನೆಟ್‌ವರ್ಕ್ ಸಿಗದೆ ಸ್ಥಗಿತಗೊಳ್ಳುವುದು ಮಾತ್ರವಲ್ಲದೆ ಕೆಲವೊಮ್ಮೆ ವೇಣೂರು ಟವರ್ ಕೆಳಭಾಗದಲ್ಲೂ ನಿಂತರೂ ನೆಟ್‌ವರ್ಕ್ ಸಿಗುತ್ತಿಲ್ಲ. ಮಳೆಗಾಲದಲ್ಲಿ ಹಾಗೂ ಮೋಡವಿದ್ದರೂ ನೆಟ್‌ವರ್ಕ್ ತನ್ನ ಕೆಲಸವನ್ನು ಸ್ಥಗಿತಗೊಳಿಸುತ್ತದೆ. ಗ್ರಾಮೀಣ ಪ್ರದೇಶಗಳಿಗೆ ತನ್ನ ವ್ಯಾಪ್ತಿ ವಿಸ್ತರಿಸಿ ಪ್ರಸಿದ್ದಿ ಪಡೆದಿರುವ ಬಿಎಸ್‌ಎನ್‌ಎಲ್ ಈ ಬಗ್ಗೆ ತುರ್ತು ಗಮನಿಸಲಿ. 
ಪಿ.ಬಿ. ಕುಲಾಲ್, ಬಜಿರೆ

ಸಂಸ್ಕೃತಿ ನಾಶ ಬೇಡ

Posted by JAYAKIRANA Kirana on | 0 comments | Leave a comment...

ಇಂದು ಮನರಂಜನೆಗಾಗಿ ದೇಶದ ಸಂಸ್ಕೃತಿ ಯನ್ನೇ ನಾಶ ಮಾಡುತ್ತಿರುವುದನ್ನು ಕಾಣುತ್ತೇವೆ. ಸಿನಿಮಾ, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಪ್ರೇಕ್ಷಕರಿಗೆ ಮನರಂಜನೆ ಒದಗಿಸುವ ಉದ್ದೇಶದಿಂದ ನಟ-ನಟಿಯರು ವಿವಿಧ ವಿನ್ಯಾಸದ ಬಟ್ಟೆ-ಬರೆ ಧರಿಸುತ್ತಾರೆ. ಇದನ್ನು ವೀಕ್ಷಿಸುವವರು ತಮ್ಮ ನಿಜಜೀವನದಲ್ಲಿಯೂ ಇದನ್ನು ಅಳವಡಿಸಿ ಕೊಳ್ಳುವುದನ್ನು ನಾವು ಕಾಣುತ್ತೇವೆ. ಸಂಸ್ಕೃತಿಭರಿತ ಜಾನಪದ ಹಾಡುಗಳನ್ನು ತಮ್ಮದೇ ಆದ ರೀತಿ ಯಲ್ಲಿ ವಕ್ರವಾಗಿ ಹಾಡುತ್ತಾರೆ. ಚಲನಚಿತ್ರಗಳತ್ತ ದೃಷ್ಟಿ ಹಾಯಿಸಿದರೆ ಇದರಲ್ಲಿ ನಟ-ನಟಿಯರು ಹಾಕುವ ಡ್ರೆಸ್‌ನಿಂದ ಹಿಡಿದು ಚಿತ್ರದಲ್ಲಿ ಕೊಲೆಗೆ ಬಳಸುವ ಪ್ಲಾನ್, ಹೊಡೆದಾಟದ ದೃಶ್ಯ ಇದ್ಯಾ ವುದೂ ವೀಕ್ಷಕನ ಮನಸ್ಸಿನಿಂದ ಬೇಗನೆ ಅಳಿಸಿ ಹೋಗುವುದಿಲ್ಲ. ಪ್ರೇಕ್ಷಕ ಮನೋರಂಜನೆಗಾಗಿ ಮಾಧ್ಯಮದಲ್ಲಿ ಬರುವ ಒಳ್ಳೆಯ ವಿಚಾರ ಗಳ ಬಗ್ಗೆ ಗಮನ ಹರಿಸುವುದಿಲ್ಲ. ಆದ್ದರಿಂದ ಯಾವುದೇ ಮನರಂಜನೆಗಳಲ್ಲಿ ಅಪರಾಧ ಕೃತ್ಯಗಳಿ ಗಿಂತ ನೀತಿ ಪಾಠಗಳೇ ಹೆಚ್ಚಾಗಿರಲಿ. ಇದರಿಂದ ದೇಶದ ಸಂಸ್ಕೃತಿ ಉಳಿದೀತು. 
            ಕಿರಣ್, ಮಂಗಳೂರು

ಎಂಡೋಸಲ್ಫಾನ್ ಸಂಪೂರ್ಣ ನಿಷೇಧಿಸಿ

Posted by JAYAKIRANA Kirana on | 0 comments | Leave a comment...

ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ಜನರಿಗೆ ಮಾರಕವಾಗಿ ಪರಿಣಮಿಸಿರುವ ಎಂಡೋಸಲ್ಫಾನ್ ಕೀಟನಾಶಕವನ್ನು ಸಂಪೂರ್ಣ ನಿಷೇಧ ಮಾಡಲು ಕೇಂದ್ರ ಸರಕಾರ ಇನ್ನೂ ಮುಂದಾಗಿಲ್ಲ. ಹಂತ-ಹಂತವಾಗಿ ನಿಷೇಧ ಮಾಡಲಾಗುತ್ತದೆ ಎಂದು ತಿಳಿಸಿರುವ ಸರಕಾರ ಹಾಗೂ ಕೃಷಿ ಸಚಿವಾಲಯ ಜನರನ್ನು ಸಾವಿನಂಚಿಗೆ ಕೊಂಡೊ ಯ್ಯಲು ಸಿದ್ಧತೆ ನಡೆಸುತ್ತಿದೆ. 
ಈಗಾಗಲೇ ಮಾರಕ ಕೀಟನಾಶಕದ ಹಾವಳಿಗೆ ಅನೇಕ ಮಂದಿ ಬಲಿಯಾಗಿದ್ದಾರೆ. ಕಡಿಮೆ ದರಕ್ಕೆ ಸಿಗುತ್ತದೆ ಎಂಬ ಕಾರಣಕ್ಕೆ ಎಂಡೋಸಲ್ಫಾನ್ ನಿಷೇಧ ಮಾಡದೆ ಜನರ ಜೀವದ ಜತೆ ಚೆಲ್ಲಾಟ ವಾಡುತ್ತಿರುವ ಕೇಂದ್ರ ಸರಕಾರಕ್ಕೆ ಜನರೇ ಧಿಕ್ಕಾರ ಕೂಗಬೇಕು. ಎಂಡೋಸಲ್ಫಾನ್ ವಿರೋಧಿಸಿ ಎಂದು ನಡೆಯುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪವನ್ನು ಪಡೆಯುವಂತಾಗಬೇಕು. ಜೀವ ಹಾನಿಕಾರಕ ಕೀಟನಾಶಕವನ್ನು ಸಂಪೂರ್ಣ ನಿಷೇಧ ಮಾಡುವವರೆಗೆ ಹೋರಾಟ ಮುಂದುವರಿಯಬೇಕು. ಆಗ ಮಾತ್ರ ತಕ್ಕ ಪ್ರತಿಫಲ ಸಿಗಲಿದೆ.   
                     ರವೀಂದ್ರ ಕೆ, ಮಂಜೇಶ್ವರ

ಕೇಂದ್ರ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ

Posted by JAYAKIRANA Kirana on | 0 comments | Leave a comment...

ನವದೆಹಲಿ: ಕೇಂದ್ರ ಸಚಿವ ವೀರಭದ್ರ ಸಿಂಗ್ ಮತ್ತು ಅವರ ಪತ್ನಿ ಪ್ರತಿಭಾ ವಿರುದ್ಧ ಭ್ರಷ್ಟಾಚಾರದ ಆರೋಪದಡಿ ಕೇಸು ದಾಖಲಿಸುವಂತೆ ಹಿಮಾಚಲ ಪ್ರದೇಶ ನ್ಯಾಯಾಲಯ ಆದೇಶಿಸಿದೆ.
೧೯೮೯ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ  ಭ್ರಷ್ಟಾಚಾರ ವೆಸಗಿದ್ದಾರೆ ಎಂದು ದೂರಲಾಗಿದೆ. ಹಣಕಾಸು ಅಸ್ಥಿರತೆ ಬಗ್ಗೆ ಅಂದು ನಡೆಸಿರುವ ಸಂವಾದದ ಸಿಡಿವೊಂದನ್ನು ರಾಜಕೀಯ ವಿರೋಧಿ ವಿಜಯ್ ಸಿಂಗ್ ಮನ್‌ಕೋಟಿಯಾ ೨೦೦೭ರಲ್ಲಿ ಬಹಿರಂಗಗೊಳಿಸಿದ್ದರು.

೭ ಭಾರತೀಯ ಮೀನುಗಾರರು ಕಣ್ಮರೆ

Posted by JAYAKIRANA Kirana on | 0 comments | Leave a comment...

ದುಬಾಯಿ: ಮೀನುಗಾರಿಕೆಯ ಬೋಟ್‌ನಲ್ಲಿದ್ದ ಏಳು ಭಾರತೀಯರು ಕಣ್ಮರೆಯಾದ ಘಟನೆ ಒಮನ್‌ನ ಸಿಮಿರಾಹ್ ಜಲ ಪ್ರದೇಶದಲ್ಲಿ ನಡೆದಿದ್ದು, ಅವರನ್ನು ಅಪಹರಿಸಲಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ.
ವರದಿಯ ಪ್ರಕಾರ, ತಟ ರಕ್ಷಣಾ ಪಡೆಯವರು ಈ ಬಗ್ಗೆ ಮಾಹಿತಿ ವರಾನಿಸಿದ್ದು, ಹುಡುಕಾಟ ಪ್ರಾರಂಭವಾಗಿದೆ. ನಾಪತ್ತೆಯಾಗಿರುವ ಎಲ್ಲಾ ಭಾರತೀಯರು ತಮಿಳುನಾಡಿನವರಾಗಿದ್ದಾರೆ ಎಂದು ತಿಳಿದುಬಂದಿದೆ.
“ಮಾಮೂಲಿಯಂತೆ ಮೀನುಗಾರಿಕೆಯ ಬಳಿಕ ಹಿಂದಿರುಗುತ್ತಿದ್ದರು. ಆದರೆ ಈವರೆಗೂ ಬಂದಿಲ್ಲ. ಸಮುದ್ರಚೋರರು ಅಪಹರಿಸಿರುವ ಅನುಮಾನಗಳು ಕಾಡುತ್ತಿವೆ” ಎಂದು ಬೋಟಿನ ಮಾಲಿಕ ಸಯೀದ್ ರಶೀದ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಗುರುವಾರ ಸಂಜೆ ವೇಳೆ ಬೋಟ್ ಅಲ್-ಅಶಾಕರದ ಕರಾವಳಿಯಲ್ಲಿ ಕಣ್ಮರೆಯಾಗಿದೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4042) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2496) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (262) ln (1) lnews (3669) lokayukta (3) madikeri (1) maleria (1) mangalore (579) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (411) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (271) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (797) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (949) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (46) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)