೨೬/೧೧ ಮುಂಬಯಿ ದಾಳಿ
ನವದೆಹಲಿ: ೨೬/೧೧ರ ಮುಂಬಯಿ ದಾಳಿಗೆ ಸಂಬಂಧಿಸಿದಂತೆ ಪೊಲೀಸರ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವ ಸಯ್ಯದ್ ಝಬಿವುದ್ದೀನ್ ಅನ್ಸಾರಿ ಯಾನೆ ಅಬು ಹಂಝಾನನ್ನು ದೆಹಲಿ ಪೊಲೀಸರು ಜೂನ್ ೨೧ರಂದು ಬಂಧಿಸಿದ್ದಾರೆ. ಆದರೆ ಎಲ್ಲಿ ಮತ್ತು ಹೇಗೆ ಬಂಧಿಸಲಾಗಿದೆ ಎನ್ನುವುದು ದೃಢಪಟ್ಟಿಲ್ಲ. ಮೂಲಗಳ ಪ್ರಕಾರ, ಸೌದಿ ಅರೇಬಿಯನ್ ಗುಪ್ತಚರ ಅಧಿಕಾರಿಗಳ ಜೊತೆ ಭಾರತ ನಿಕಟ ಸಂಬಂಧ ಹೊಂದಿದ್ದು, ಆತನನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದಿದೆ.
ಅನ್ಸಾರಿ ಮೂಲತಃ ಲಷ್ಕರ್-ಇ-ತೊಯಿಬಾ (ಎಲ್‌ಇಟಿ) ಸಂಘಟನೆಯಲ್ಲಿ ಸಕ್ರಿಯನಾಗಿದ್ದು, ಕರಾಚಿಯಿಂದ ಸಮುದ್ರ ಮಾರ್ಗವಾಗಿ ಮುಂಬಯಿಗೆ ಪ್ರಯಾಣಿಸಿ ಮುಂಬಯಿ ದಾಳಿಯನ್ನು ನಡೆಸಿದ್ದ ಎನ್ನಲಾಗಿದೆ. ದಾಳಿಕೋರರಿಗೆ ಆತ ಹಿಂದಿಯಲ್ಲಿ ಕಲಿಸುತ್ತಿದ್ದ ಎನ್ನುವುದು ಭಾರತೀಯ ಗುಪ್ತಚರ ಇಲಾಖೆಯ ಅನಿಸಿಕೆ. ದಾಳಿಕೋರರ ಮತ್ತು ಅನ್ಸಾರಿ ಮಧ್ಯೆ ನಡೆದಿರುವ ಹಿಂದಿಯಲ್ಲಿ ಸಂಭಾಷಣೆಯಲ್ಲಿ, ‘ಇದು ಕೇವಲ ಟ್ರೈಲರ್, ನಿಜಾಂಶ ಇನ್ನೂ ಬಾಕಿ ಇದೆ’ ಮುದ್ರಿತವಾಗಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಜಿಯೋರಾಯ್ ಪರಿಸರದವನಾಗಿದ್ದ ಅನ್ಸಾರಿ (೩೦), ೧೮೦ ಪ್ರಯಾಣಿಕರ ಪ್ರಾಣಕ್ಕೆ ಎರವಾದ ೨೦೦೬ರ ಮುಂಬಯಿ ರೈಲು ದುರಂತದಲ್ಲಿ ಪೊಲೀಸರಿಗೆ ಬೇಕಾಗಿದ್ದವನಾಗಿದ್ದ.
Tagged with
feature,
nnews
ಮನೆ ಚಾವಡಿಗೆ
ಮನೆ-ಮನೆಗಳ ಚಾವಡಿಯಲ್ಲಿ ಯಕ್ಷಲೋಕದ ಅನಾವರಣ ತನುಮನ ಅರಳಿಸುತ್ತದೆ.
ಶತಮಾನದ ಸನಿಹದಲ್ಲಿರುವ ಪೆರ್ಮುದೆಯ ಶ್ರೀಶಾರದಾ ಯಕ್ಷಗಾನ ಮಂಡಳಿ ಆಶ್ರಯದಲ್ಲಿ ಶ್ರೀ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿ, ದೀಪ ಪ್ರಜ್ವಲನ ಗೊಳಿಸಿ ಮಳೆಗಾಲದ ಮನೆ-ಮನೆ ತಿರುಗಾಟ, ಚಿಕ್ಕಮೇಳದ ಶುಭಾರಂಭ ಇತ್ತೀಚೆಗೆ ನಡೆಯಿತು.
ಬಜಪೆ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಶಾರದಾ ಯಕ್ಷಗಾನ ಮಂಡಳಿ ಅಧ್ಯಕ್ಷ ಶ್ರೀಧರ ಶೆಟ್ಟಿ ಪೆರ್ಮುದೆ ಗ್ರಾ.ಪಂ. ಸದಸ್ಯ ದೀಪಕ್ ಪೆರ್ಮುದೆ ಉಪಸ್ಥಿತ ರಿದ್ದರು.
ಚಿಕ್ಕಮೇಳವನ್ನು ರಾಧಾಕೃಷ ಕುಣಿತ ಅಂತಲೂ ಕರೆಯುತ್ತಾರೆ. ಮನೆಯ ಅಂಗಳದಲ್ಲಿ ಕುಣಿಯುವ ಕ್ರಮ ಇಲ್ಲ, ಒಳಗಡೆ ಚಾವಡಿಯಲ್ಲಿ ಸಾಂಪ್ರದಾಯಿಕವಾಗಿ ದೇವರನ್ನಿಟ್ಟು ಪೂಜಿಸಿ ಚೆಂಡೆ, ಮದ್ದಳೆ ಸಂಗೀತ ಭಾಗವತಿಕೆ ಸಹಿತ ರಾಧಾಕೃಷ್ಣ ವೇಷಧಾರಿಗಳ ಕುಣಿತ, ಮಾತುಗಳಿಂದ ಮನೆಯ ದೋಷಗಳು ನಿವಾರಣೆ ಯಾಗುವುದು ಎಂಬುದು ತುಳುವರ ಬಲವಾದ ನಂಬಿಕೆಯಾಗಿದೆ.
ಸಂಜೆ ಆರು ಗಂಟೆಯಿಂದ ರಾತ್ರಿ ೧೧ರ ಮಧ್ಯೆ ಮನೆ-ಮನೆಗಳಿಗೆ ತೆರಳಿ ತಂಡ ಯಕ್ಷಸೇವೆ ನಡೆಸುತ್ತದೆ.
ಚಿಕ್ಕಮೇಳದ ಆಟ ಮಾಡಿಸುವ ಮನೆಗಳವರು ಪೂಜೆಗೆ ಬೇಕಾದ ಹೂವುಗಳು, ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ, ವೀಳ್ಯದೆಲೆ, ಅಡಕೆ, ದೀಪಕ್ಕೆ ಬೇಕಾದ ಪರಿಕರ ಹಾಗೂ ವೀಳ್ಯದ ಕಾಣಿಕೆ ನೀಡಬೇಕಾಗುತ್ತದೆ.
ಡಿ.ಮಾಧವ ಬಂಗೇರ ಸಂಚಾ ಲಕರಾಗಿ, ಬಾಬುಗೌಡ ಪೆರ್ಮುದೆ ವ್ಯವಸ್ಥಾಪಕರಾಗಿರುವ ಚಿಕ್ಕಮೇಳದ ಭಾಗವತರಾಗಿ ಸತೀಶ್ ಭಟ್ ಕಾರ್ಕಳ, ಹಿಮ್ಮೇಳ-ನಿರಂಜನ ಕುಮಾರ್ ಬೆಳ್ಳೂರು, ಚಿದಾನಂದ ಗೌಡ ಮರ್ಕಂಜ, ಕೃಷ್ಣ -ನಾಗಚಂದ್ರ ತೀರ್ಥಹಳ್ಳಿ, ರಾಧೆ-ರಮೇಶ್ ಗೌಡ ಪಟ್ರಮೆ ಅವರು ನಿತ್ಯ ಮನೆ-ಮನೆ ತಿರುಗಾಟದ ತಂಡದಲ್ಲಿದ್ದಾರೆ.
ಚೆಂಡೆ ಮದ್ದಳೆ ನಿನಾದದೊಂದಿಗೆ ಮನೆಯೊಳಗೆ ನಾನಾ ಪ್ರಸಂಗಗಳ ಯಕ್ಷಲೋಕ ಅನಾವರಣಗೊಳ್ಳುತ್ತದೆ. ಪ್ರಮುಖವಾಗಿ ಕಲ್ಯಾಣ ಪ್ರಸಂಗವನ್ನೇ ಆಯ್ದುಕೊಳ್ಳಲಾಗುತ್ತದೆ. ಪ್ರತಿನಿತ್ಯ ೨೦-೨೫ ಮನೆಗಳಲ್ಲಿ ಆಟ, ಕನಿಷ್ಠ ೧೦ರಿಂದ ೧೫ ನಿಮಿಷಗಳ ಅವಧಿಯದ್ದು, ಬೆಳಗ್ಗೆ ಎಲ್ಲ ಮನೆಗಳಿಗೆ ಭೇಟಿ ನೀಡಿ ವಿಚಾರ ತಿಳಿಸಿರುವುದರಿಂದ ಮನೆಯ ಮಂದಿ ಚಿಕ್ಕಮೇಳದ ಸ್ವಾಗತಕ್ಕೆ ಕಾಯುತ್ತಿರುತ್ತಾರೆ. ಆರಂಭದ ದಿನ ೨೧ ಮನೆಗಳಲ್ಲಿ ಯಕ್ಷಸೇವೆ ನಡೆದಿದೆ.
ಡಿ.ಮಾಧವ ಬಂಗೇರ, ಚಿಕ್ಕಮೇಳದ ಸಂಚಾಲಕರು
ಶ್ರೀ ಶಾರದಾ ಯಕ್ಷಗಾನ ಮಂಡಳಿಯಲ್ಲಿ ಯಕ್ಷಗಾನ, ತಾಳಮದ್ದಳೆ ಸೇವೆ ಪ್ರಸಿದ್ಧ. ಪ್ರಸ್ತುತ ಹಾಗೂ ವಿಶ್ರಾಂತ ದಿಗ್ಗಜ ಕಲಾವಿದರನೇಕರು ಇಲ್ಲಿ ಸೇವೆ ನೀಡಿದವರೇ. ಇದೀಗ ಚಿಕ್ಕಮೇಳ ಪ್ರಾಥಮಿಕವಾಗಿ ಪೆರ್ಮುದೆ ಬಳಿಕ ಆಸುಪಾಸಿನ ಗ್ರಾಮಗಳಿಗೆ ತಿರುಗಾಟ ನಡೆಸಲಿದೆ.
ಉಲ್ಲಾಸ್ ಆರ್.ಶೆಟ್ಟಿ, ಯಕ್ಷಗಾನ ಕಲಾವಿದ, ಮಾಜಿ ಅಧ್ಯಕ್ಷ ಶ್ರೀ ಶಾರದಾ ಯಕ್ಷಗಾನ ಮಂಡಳಿ
Tagged with
kalakirana
ಶ್ರೀನಗರ: ಶ್ರೀನಗರದ ಖಾನ್‌ಯಾನ್ ಪರಿಸರದಲ್ಲಿರುವ ಸುಮಾರು ೧೦೦ ವರ್ಷಗಳ ಇತಿಹಾಸವಿರುವ ದಸ್ತ್‌ಗೀರ್ ಸಾಹಿಬ್ ಮಂದಿರಕ್ಕೆ ಅಗ್ನಿಸ್ಪರ್ಶವಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿದ್ದಾರೆ. ಬಹುತೇಕ ಹಳೇಯ ಕಾಲದ ಪಳೆಯುಳಿಕೆಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದ್ದು, ಅವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇಂದು ಬೆಳಿಗ್ಗೆ ೬.೩೦ರ ಸುಮಾರಿಗೆ ಪ್ರಾರ್ಥನೆ ಮುಗಿಸಿದ ತಕ್ಷಣವೇ ಅಗ್ನಿಸ್ಪರ್ಶವಾಗಿದೆ ಎಂದು ಪ್ರತ್ಯಕ್ಷ್ಯದರ್ಶಿಗಳು ತಿಳಿಸಿದ್ದಾರೆ. ನೋಡುನೋಡುತ್ತಿದ್ದಂತೆಯೇ ಇಡೀ ಕಾಂಪ್ಲೆಕ್ಸ್‌ಗೇ ಬೆಂಕಿ ಹರಡಿಕೊಂಡಿದೆ.
ಸಾವಿರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿರುವ ಸ್ಥಳಿಯರು, ಬೆಂಕಿಗಾಹುತಿಯಗುವುದನ್ನು ನೋಡಿ ಕಣ್ಣೀರಿಟ್ಟರು.
ಸುಮಾರು ೧೧ ಶತಮಾನದ ಹಳೆಯದಾದ ಮಂದಿರದ ಮೇಲೆ ಕಾಶ್ಮೀರದಾದ್ಯಂದ ಜನರಿಗೆ ಪೂಜ್ಯಭಾವನೆ ಮೂಡಿತ್ತು. ಮುಸ್ಲಿಮರು ಇದನ್ನು ಘವುಸ್-ಇ-ಆಜಾಮ್ ಎಂದು ಕರೆದರೆ, ಹಿಂದುಗಳು, ಕಹ್‌ನೂವ್ ಎಂದು ಕರೆಯುತ್ತಿದ್ದರು.
Tagged with
nnews
ಆಂಗ್ಲರಿಗೆ ಮತ್ತೆ ಮುಳುವಾದ ಪೆನಾಲ್ಟಿ ಶೂಟೌಟ್
ಕೀವ್: ಮಹತ್ವದ ಟೂರ್ನಿಯ ಪೆನಾಲ್ಟಿ ಶೂಟೌಟ್ ಮೂಲಕ ಸೋಲುಣ್ಣುವ ಇಂಗ್ಲೆಂಡ್ ಖಯಾಲಿ ನಿನ್ನೆ ಕೂಡ ಅಚ್ಚರಿಯ ರೀತಿಯಲ್ಲಿ ಮುಂದುವರೆದಿತ್ತು. ಇಟಲಿ ವಿರುದ್ಧದ ಪಂದ್ಯದಲ್ಲಿ ೪-೨ರ ಅಂತರದ ಪೆನಾಲ್ಟಿ ಶೂಟೌಟ್ ಮೂಲಕ ಇಂಗ್ಲೆಂಡ್ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದೆ. ೨೦೦೪ರ ಯೂರೋಕಪ್ ಹಾಗೂ ೨೦೦೬ರ ವಿಶ್ವಕಪ್‌ನಲ್ಲೂ ಇಂಗ್ಲೆಂಡ್ ಇದೇ ರೀತಿ ಸೋಲುಂಡಿತ್ತು. ಇನ್ನು ಅತ್ತ ಗೆಲುವು ದಾಖಲಿಸಿದ ಇಟಲಿ ಗುರುವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಕಾದಾಡಲಿದೆ.
ನಿಗದಿತ ೯೦ ನಿಮಿಷಗಳ ನಂತರ ಇತ್ತಂಡಗಳು ಗೋಲು ಗಳಿಸಲು ವಿಫಲವಾದವು. ಅದರಲ್ಲೂ ಇಟಲಿ ಚೆಂಡನ್ನು ತನ್ನ ನಿಯಂತ್ರಣದಲ್ಲಿ ಹೆಚ್ಚು ಬಾರಿ ಇರಿಸಿದ್ದರೂ ಇಂಗ್ಲೆಂಡ್‌ನ ಬಲಿಷ್ಠ ಡಿಫೆಂಡಿಂಗ್ ಲೈನನ್ನು ಹೊಕ್ಕುವಲ್ಲಿ ವಿಫಲವಾಯಿತು. ಪರಿಣಾಮ ನಿಗದಿತ ೯೦ ನಿಮಿಷದಲ್ಲಿ ಯಾವುದೇ ಗೋಲು ಕಾಣಲು ಸಿಗಲಿಲ್ಲ. ಇಟಲಿಯ ಗೋಲ್‌ಕೀಪರ್ ಬಫೋನ್ ಹಾಗೂ ಇಂಗ್ಲೆಂಡ್‌ನ ಜೋಹಾರ್ಟ್ ಅದ್ಭುತ ರಕ್ಷಣೆಯನ್ನು ಮಾಡಿದರು. ಅಲ್ಲದೆ ಹೆಚ್ಚುವರಿ ೩೦ ನಿಮಿಷಗಳನ್ನು ನೀಡಿದಾಗಲು ಗೋಲು ಮಾತ್ರ ಮರೀಚಿಕೆಯಾಯಿತು. ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ಗೆ ಮೊರೆಹೋಗಲಾಯಿತು. ಇಂಗ್ಲೆಂಡ್ ಪರ ನಾಯಕ ಜೆರಾರ‍್ಡ್, ವೇಯ್ನ್ ರೂನಿ ಗೋಲು ಗಳಿಸಿದರೆ ಆಶ್ಲೆ ಕೋಲ್ ಹಾಗೂ ಆಶ್ಲೆ ಯಂಗ್ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಹಾಕಲು ವಿಫಲರಾದರು. ಅದರಲ್ಲೂ ಕೋಲ್ ಶಾಟ್‌ನ್ನು ಬಫೋನ್ ಅದ್ಭುತ ರೀತಿಯಲ್ಲಿ ಹಿಡಿದರು. ಇಟಲಿ ಪರ ಬಯೊಟೆಲ್ಲಿಟ್, ಪಿರ‍್ಲೊ, ಅಂಟಾನಿಯೊ ಹಾಗೂ ಡಿಮಾಂಟಿ ಗೋಲು ಗಳಿಸಿದ್ದರು. ಆದರೆ ಇಟಲಿಯ ಮಂಟೊಲಿವೊ ತನ್ನ ಅವಕಾಶವನ್ನು ಕಳಕೊಂಡರೂ ಅದರ ಮುನ್ನಡೆಯನ್ನು ಪಡೆಯಲು ಆಂಗ್ಲರು ವಿಫಲರಾದರು. ಈ ಮೂಲಕ ಆಂಗ್ಲ ನಿರಾಶೆಯ ಕಡಲಲ್ಲಿ ಮುಳುಗಿತು.
Tagged with
tnews
ಇಂದು ವಿಂಬಲ್ಡನ್ ಟೆನಿಸ್‌ಗೆ ಚಾಲನೆ
ಲಂಡನ್: ಇಂದಿನಿಂದ ಪ್ರತಿಷ್ಟಿತ ವಿಂಬಲ್ಡನ್ ಟೆನಿಸ್ ಆರಂಭವಾಗ ಲಿದ್ದು, ಮುಂಬರುವ ಒಲಿಂಪಿಕ್ಸ್‌ಗೆ ಪೂರ್ವತಯಾರಿ ಎಂಬಂತೆ ಆಟಗಾ ರರು ಟೂರ್ನಿಯನ್ನು ಹೆಚ್ಚು ನಿರೀಕ್ಷೆ ಯಿಂದ ಎದುರು ನೋಡುತ್ತಿದ್ದಾರೆ. ಆದರೆ ಭಾರತೀಯ ಪಾಳಯದಲ್ಲಿ ಗೊಂದಲ ಮಾತ್ರ ಇನ್ನೂ ಕೊನೆ ಗೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ.
ತಮ್ಮ ಬೇಡಿಕೆಯಂತೆ ಜೊತೆ ಯಾಗಿ ಆಡಲು ಎಐಟಿಎ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಟೂರ್ನಿಯನ್ನು ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿದ್ದರೆ, ಸದ್ಯ ಒಲಿಂಪಿಕ್ಸ್‌ನಲ್ಲಿ ಆಡುವ ಬಗ್ಗೆ ಗೊಂದಲಕ್ಕೆ ಸಿಲುಕಿರುವ ಲಿಯಾಂ ಡರ್ ಪೇಸ್ ಕೂಡ ಟೂರ್ನಿಯನ್ನು ಅಸಮಾಧಾನದಿಂದಲೇ ಆರಂಭಿಸಲಿ ದ್ದಾರೆ. ಮುಖ್ಯವಾಗಿ ಜೊತೆಯಾಗಿ ಕಣಕ್ಕಿಳಿದ ನಂತರ ಪ್ರಸಕ್ತ ಋತುವಿನಲ್ಲಿ ರೋಹನ್ ಹಾಗೂ ಭೂಪತಿ ಜೋಡಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅಲ್ಲದೆ ಇತ್ತೀಚಿಗೆ ದುಬೈನಲ್ಲಿ ನಡೆದ ಎಟಿಪಿ ಟೂರ್ನಿಯನ್ನು ಗೆದ್ದುಕೊಂಡಿದ್ದ ಜೋಡಿ, ಮತ್ತೊಂದು ಪಂದ್ಯಾವಳಿ ಯಲ್ಲಿ ಸೆಮೀಸ್‌ಗೆ ಪ್ರವೇಶಿಸಿತ್ತು. ವಿಂಬಲ್ಡನ್‌ನಲ್ಲಿ ಏಳನೇ ಶ್ರೇಯಾಂಕ ಹೊಂದಿರುವ ಈ ಜೋಡಿ ತನ್ನ ಪ್ರಥಮ ಪಂದ್ಯವನ್ನು ಉರುಗ್ವೆಯ ಮಾರ್ಸೆಲ್ ಫೆಲ್ಡರ್ ಹಾಗೂ ಟ್ಯುನೀ ಶಿಯಾದ ಮಾಲೆಕ್ ಜಾಜಿರಿ ವಿರುದ್ಧ ಆಡಲಿದ್ದಾರೆ. ರ‍್ಯಾಡೆಕ್ ಸ್ಪೆಪ್ನೆಕ್ ಹಾಗೂ ಪೇಸ್ ತಮ್ಮ ಪ್ರಥಮ ಪಂದ್ಯವನ್ನು ಕೊಲಂಬಿಯಾದ ಶ್ರೇಯಾಂಕ ರಹಿತ ಅಲೆಜೆಂಡ್ರೊ ಫಲ್ಲಾ ಹಾಗೂ ಸ್ಯಾಂಟಿಗೊ ಗಿರಾಲ್ಡೊ ವಿರುದ್ಧ ಆಡಲಿ ದ್ದಾರೆ. ಒಟ್ಟಿನಲ್ಲಿ ಟೂರ್ನಿ ಎರಡೂ ತಂಡಕ್ಕೂ ಪ್ರತಿಷ್ಠೆಯ ವಿಷಯವಾಗಿ ರುವುದಂತೂ ನಿಜ. ಇನ್ನು ಮಿಶ್ರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಹಾಗೂ ಭೂಪತಿ ಜೊತೆಯಾಗಿ ಕೋರ್ಟ್ ಹಂಚಲಿದ್ದಾರೆ. ಇತ್ತೀಚಿಗೆ ಮುಗಿದ ಫ್ರೆಂಚ್ ಓಪನ್ ಗೆದ್ದುಕೊಂಡಿದ್ದ ಈ ಜೋಡಿ ಇಲ್ಲಿ ಹೇಗೆ ಪ್ರದರ್ಶನ ನೀಡ ಲಿದೆ ಎಂದು ಕಾದು ನೋಡಬೇಕಿದೆ.
Tagged with
tnews
ಪಾಕ್ ಗೆಲುವಿಗೆ ಬೇಕಿದೆ ಇನ್ನೂ ೪೭೪ ರನ್
ಗಾಲ್: ಶ್ರೀಲಂಕಾ ಬೌಲರ್‌ಗಳು ನಡೆಸಿದ ಮಾರಕ ದಾಳಿಗೆ ಕಂಗೆಟ್ಟ ಪಾಕಿಸ್ತಾನ ತನ್ನ ಪ್ರಥಮ ಇನ್ನಿಂಗ್ಸನ್ನು ೧೦೦ ರನ್‌ಗೆ ಮುಕ್ತಾಯಗೊಳಿಸಿದೆ. ಲಂಕಾ ೧೩೭ ರನ್‌ಗೆ ತನ್ನ ದ್ವಿತೀಯ ಇನ್ನಿಂಗ್ಸ್‌ಗೆ ಡಿಕ್ಲೇರ್ ಘೋಷಿಸಿದ್ದು, ಹಾಗಾಗಿ ದಿನದಂತ್ಯಕ್ಕೆ ಪಾಕ್ ೩೬ ರನ್‌ಗೆ ಮೂರು ವಿಕೆಟ್ ಕಳಕೊಂಡು ಸಂಕಷ್ಟದಲ್ಲಿದೆ. ಪ್ರವಾಸಿ ಪಾಕ್ ಗೆಲುವಿಗೆ ಇನ್ನೂ ೪೭೪ ರನ್ ಅಗತ್ಯವಿದ್ದು, ಕೇವಲ ಏಳು ವಿಕೆಟ್ ಮಾತ್ರ ಬತ್ತಳಿಕೆಯಲ್ಲಿದೆ.
ಮೂರನೇ ದಿನದಂತ್ಯಕ್ಕೆ ಪಾಕ್ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ೧೫ ಓವರ್‌ಗಳಲ್ಲಿ ೩೬ ರನ್‌ಗೆ ಮೂರು ವಿಕೆಟ್ ಕಳಕೊಂಡು ಸೋಲಿನ ಭೀತಿಗೆ ಸಿಲುಕಿಕೊಂಡಿದ್ದು, ಯೂನಿಸ್ ಖಾನ್ (೦) ಹಾಗೂ ಸಯೀದ್ ಅಜ್ಮಲ್ (೧೧) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಎರಡನೇ ದಿನದಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ ೪೮ ರನ್ ಗಳಿಸಿದ್ದ ಪಾಕ್ ಅಂತಿಮವಾಗಿ ೧೦೦ ರನ್‌ಗೆ ಸರ್ವಪತನಗೊಂಡಿತು. ಪಾಕ್ ಪರ ಯೂನಿಸ್ (೨೯) ಸರ್ವಾಧಿಕ ಮೊತ್ತ ಪೇರಿಸಿ ದರು. ಮೊಹ್ಮದ್ ಅಯೂಬ್ ಕೂಡ ಕೆಲಹೊತ್ತು ಕ್ರೀಸ್‌ನಲ್ಲಿದ್ದರು. ಲಂಕಾ ಪರ ಸೂರಜ್ ರಾಂದೀವ್ ಮೂರು ಹಾಗೂ ಹೇರತ್ ಎರಡು ವಿಕೆಟ್ ಪಡೆದು ಮಿಂಚಿದರು. ಆದರೆ ಪಾಕ್ ಮೇಲೆ ಲಂಕಾ ಫಾಲೋಆನ್ ಹೇರಲಿಲ್ಲ. ಹಾಗಾಗಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಲಂಕಾ ೪೧ ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೧೩೭ ರನ್ ಗಳಿಸಿದ್ದ ವೇಳೆ ಇನ್ನಿಂಗ್ಸ್‌ಗೆ ಡಿಕ್ಲೇರ್ ಘೋಷಿಸಿತು. ಇಲ್ಲಿ ತಿಲಕರತ್ನೆ ದಿಲ್ಶಾನ್ (೫೬) ಆಕರ್ಷಕ ಅರ್ಧಶತಕ ಸಿಡಿಸಿದರು. ಒಟ್ಟಾರೆಯಾಗಿ ೫೦೭ ರನ್‌ಗಳ ಗುರಿ ಪಡೆದ ಪಾಕ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲೂ ಆರಂಭದಲ್ಲೇ ಮುಗ್ಗರಿಸಿದೆ. ತಂಡದ ಮೊತ್ತ ೨೫ ಆಗಿದ್ದಾಗ ಮೊಹ್ಮದ್ ಹಫೀಸ್ (೪), ತೌಫೀಕ್ ಉಮರ್ (೧೦) ಹಾಗೂ ಅಜರ್ ಅಲಿ (೭) ತಮ್ಮ ವಿಕೆಟ್‌ನ್ನು ಅಗ್ಗವಾಗಿ ಕಳಕೊಂ ಡರು. ಕುಲಶೇಕರ ಎರಡು ವಿಕೆಟ್ ಪಡೆದರು.
Tagged with
tnews
ಪುತ್ತೂರು ಹಂತಕ ಇನ್ನೂ ನಾಪತ್ತೆ
ಮಂಗಳೂರು: ನಾಲ್ಕು ಜೀವಗಳನ್ನು ಅನಾಮತ್ತಾಗಿ ಹತ್ಯೆಗೈದ ಆರೋಪದ ಮೇಲೆ ಪೊಲೀಸರ ತನಿಖೆಯ ಕೇಂದ್ರ ಬಿಂದುವಾ ಗಿರುವ ವೆಂಕಟ್ರಣ ಭಟ್ ಪತ್ತೆ ಇನ್ನೂ ಇಲಾಖೆಯಿಂದ ಸಾಧ್ಯವಾ ಗಿಲ್ಲ. ತಂಡ ರಚಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲೆಯ ಪೊಲೀಸ್ ಇಲಾಖೆ ಹೇಳುತ್ತಿದ್ದರೂ ಭಟ್ಟನ ಪತ್ತೆಯಿಲ್ಲ. ಇಷ್ಟು ದೊಡ್ಡ ಪ್ರಕರಣದಲ್ಲಿ ಇಲಾಖೆ ನಿರ್ಲಕ್ಷ್ಯ ಭಾವ ತಾಳಿದೆ ಎಂಬ ಆಕ್ರೋಶದ ಮಾತುಗಳು ಜಿಲ್ಲೆಯ ನಾಗರಿಕರಿಂದ ಕೇಳಿ ಬರುತ್ತಿದೆ.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತೀ ದಿನ ಒಂದಲ್ಲ ಒಂದು ಅಪರಾಧ ಕೃತ್ಯಗಳು ನಡೆಯುತ್ತಲೇ ಇವೆ. ಆದರೆ ಜಿಲ್ಲೆಯ ಪೊಲೀಸ್ ಇಲಾಖೆ ಮಾತ್ರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾ ಗಿರುವುದು ಏನೇನೂ ಸಾಲದು ಎಂಬ ಮಾತು ಕೇಳಿ ಬಂದಿದೆ. ಕೊಲೆಗಳು ನಡೆದಾಗ ಪೊಲೀಸರ ತಂಡ ರಚಿಸಿ ಒಂದೆರೆಡು ದಿನ ಫೀಲ್ಡಿಗಿಳಿದು ತನಿಖೆ ನಡೆಸುವ ಪೊಲೀಸ್ ಇಲಾಖೆ ನಂತರದ ದಿನಗಳಲ್ಲಿ ಪ್ರಕರಣಗಳ ಬೆನ್ನತ್ತುವ ಕೈಂಕರ್ಯಕ್ಕೆ ಎಳ್ಳುನೀರು ಬಿಡುತ್ತಿವೆ ಎಂಬ ಆರೋಪಗಳೂ ಇವೆ. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ನಿಲ್ಲುವುದು ಪಂಜಿಮೊಗರಿನ ಜೋಡಿ ಕೊಲೆ ಪ್ರಕರಣ. ಕೊಲೆ ನಡೆದು ವರ್ಷ ಸಂದರೂ ಆರೋಪಿಗಳ ಪತ್ತೆಯಾಗಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರಕರಣದ ಫೈಲ್ ಕ್ಲೋಸ್ ಮಾಡಿದರೂ ಇಲಾಖೆಯ ಕೆಲಸಕ್ಕೆ ಆಶ್ಚರ್ಯ ಪಡಬೇಕಿಲ್ಲ. ಯಾಕೆಂದರೆ ದ.ಕ ಜಿಲ್ಲೆಯಲ್ಲಿ ಇದೇ ರೀತಿ ಹಳ್ಳಹಿಡಿದು ಇತಿಹಾಸದ ಪುಟ ಸೇರುತ್ತಿರುವ ಪ್ರಕರಣಗಳು ಸಾಕಷ್ಟಿವೆ ಎನ್ನುವುದು ಇಲಾಖೆಯ ಇತಿಹಾಸ ಬಲ್ಲವರ ಮಾತು. ಪುತ್ತೂರಿನಲ್ಲಿ ನಡೆದ ನಾಲ್ಕು ಕೊಲೆಗಳ ಜಾಡು ಹಿಡಿದು ಹೊರಟ ಪೊಲೀಸರಿಂದ ಸದ್ಯಕ್ಕಂತೂ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇಲಾಖೆ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಯಾವ ರೀತಿ ತನಿಖೆ ನಡೆಸುತ್ತದೆ ಎನ್ನುವುದೇ ಈಗಿರುವ ಪ್ರಶ್ನೆ. ಈ ನಡುವೆ ನಾಲ್ಕು ಕೊಲೆ ಆರೋಪಿ ವೆಂಕಟ್ರಮಣಭಟ್‌ನನ್ನು ಅಪಹರಿಸಲಾಗಿದೆ ಎಂಬ ಸುದ್ದಿ ಪುತ್ತೂರಿನಾದ್ಯಂತ ಹರಿದಾಡುತ್ತಿದೆ. ಆದರೆ ಯಾರೊಬ್ಬರಿಗೂ ಆರೋಪಿಯ ಸುಳಿವಿನ ಬಗ್ಗೆ ಸ್ಪಷ್ಟತೆ ಇಲ್ಲ. ಈ ಹಿಂದೆ ಆರೋಪಿ ಬೆಂಗಳೂರಿನಲ್ಲಿ ಕಾಣ ಸಿಕ್ಕಿದ್ದ ಎಂಬ ಮಾಹಿತಿ ಇತ್ತಾದರೂ ಯಾವುದರ ಬಗ್ಗೆಯೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಅಂತಿಮವಾಗಿ ಈ ಎಲ್ಲಾ ಊಹಾಪೋಹಗಳಿಗೆ ತೆರೆಎಳೆಯುವ ಕೆಲಸವನ್ನು ಜಿಲ್ಲೆಯ ಪೊಲೀಸ್ ಇಲಾಖೆ ಮಾಡಬೇಕಿದೆ. ಪ್ರಕರಣದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿ, ನಾಲ್ಕು ಕೊಲೆಗಳ ಹಿಂದಿರುವ ರಹಸ್ಯವನ್ನು ಪತ್ತೆಹಚ್ಚಲಿ ಎಂಬ ಆಗ್ರಹ ಜಿಲ್ಲೆಯ ಶಾಂತಿಪ್ರಿಯ ನಾಗರಿಕರದ್ದು.
Tagged with
bettampady,
cnews,
mlore
ಕಪಾಟು ಖರೀದಿ ವ್ಯವಹಾರ ತಕರಾರು
ಪುತ್ತೂರು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಗಳಿಬ್ಬರು ಪರಸ್ಪರ ಹೊಡೆ ದಾಡಿಕೊಂಡ ಘಟನೆ ಪುತ್ತೂರು ಪೇಟೆಯ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿಯಲ್ಲಿ ಭಾನುವಾರ ನಡೆದಿದೆ.
ಕೆಮ್ಮಾಯಿ ನಿವಾಸಿ ರಾಜು ಯಾನೆ ಪೆಟ್ಟಿ ರಾಜು ಎಂಬವರಿಂದ ಸ್ಥಳೀಯ ಹೊಟೇಲ್ ಮಾಲೀಕ ಹಸೈನಾರ್ ಎಂಬವರು ಸ್ಟೀಲು ಕಪಾಟು ಖರೀದಿಸಿದ್ದು , ಕಪಾಟು ಮಾರಾ ಟಕ್ಕೆ ಸಂಬಂಧಿಸಿದ ಬಾಕಿ ಹಣವನ್ನು ಹಿಂತಿ ರುಗಿಸುವಂತೆ ರಾಜು ಅವರು ಹಸೈನಾರ್‌ನಲ್ಲಿ ಹೇಳಿದಾಗ ಮಾತಿಗೆ ಮಾತು ಬೆಳೆದು ಹೊಡೆ ದಾಟ ನಡೆಯಿತೆಂದು ತಿಳಿದು ಬಂದಿದೆ.
ರಾಜು ತನ್ನ ತಲೆಗೆ ಕಬ್ಬಿಣದ ಸರಳಿ ನಿಂದ ಹಲ್ಲೆ ನಡೆಸಿರುವುದಾಗಿ ಹಸೈನಾರ್ ಆರೋಪಿಸಿದ್ದಾರೆ. ಹಸೈನಾರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ತನಗೆ ಚಪ್ಪಲಿಯಿಂದ ಹೊಡೆದಿರುವುದಾಗಿ ರಾಜು ಆರೋಪಿಸಿದ್ದಾರೆ. ಪುತ್ತೂರು ನಗರ ಪೊಲೀಸರು ಇತ್ತಂಡದ ದೂರು ದಾಖಲಿಸಿಕೊಂಡಿದ್ದಾರೆ.
Tagged with
cnews,
puttur
ಮೂಡಬಿದಿರೆ: ದೂರದೂರಿನಿಂದ ವಧುವಿನ ಮನೆಗೆ ಬಂದ ವರಮಹಾಶಯನೊಬ್ಬ ಮದುವೆಯ ಹಿಂದಿನ ದಿನ ನಾಪತ್ತೆಯಾದ ಪ್ರಕರಣ ಮೂಡಬಿದಿರೆ ಸಮೀಪದ ಪೆರಿಂಜೆ ಪಡ್ಯಾರಬೆಟ್ಟುವಿನಲ್ಲಿ ರವಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ನಾಪತ್ತೆಯಾಗಿರುವ ವರನನ್ನು ದಾವಣಗೆರೆ ಜಿಲ್ಲೆಯ ಚೆನ್ನೆಗೆರೆ ತಾಲೂಕಿನ ಕತ್ತಲಗೆರೆ ಹನುಮಂತಪ್ಪ ಎಂಬವರ ಪುತ್ರ ಮಂಜು ಯಾನೆ ಮಂಜುನಾಥ ಎಂದು ಗುರುತಿಸ ಲಾಗಿದೆ.
ಮಂಜುನಾಥನಿಗೆ ಪೆರಿಂಜೆಯ ವಿನೋದಳ ಜೊತೆ ಜೂ.೨೪ ರವಿವಾರದಂದು ಕಟೀಲಿನಲ್ಲಿ ವಿವಾಹ ನಿಗದಿಪಡಿಸಲಾಗಿತ್ತು. ಮದುವೆ ನಿಶ್ಚಯದ ಸಮಯದಲ್ಲಿ ತನ್ನ ಸ್ನೇಹಿತನ ಜತೆ ಬಂದಿದ್ದು, ಆಗ ತನಗೆ ತಂದೆ ತಾಯಿ ಯಾರೂ ಇಲ್ಲ ಎಂದು ತಿಳಿಸಿದ್ದ. ಇದೀಗ ಮದುವೆಗೆ ಎರಡುದಿನಗಳ ಮೊದಲೇ ನಾಲ್ಕು ಜನರ ಜತೆ ವಧುವಿನ ಮನೆಗೆ ಬಂದಿದ್ದ. ಶುಕ್ರವಾರ ರಾತ್ರಿ ಮೆಹಂದಿ ಕಾರ್ಯಕ್ರಮದಲ್ಲಿ ಆತ ಭಾಗಿಯಾಗಿದ್ದು, ಶನಿವಾರ ಬೆಳಿಗ್ಗೆ ಮೂಡಬಿದಿರೆ ಕಡೆಗೆ ಹೋದವ ನಾಪತ್ತೆಯಾಗಿದ್ದು, ಮೊಬೈಲ್‌ಗೆ ಸ್ವಿಚ್ಚ್ ಆಫ್ ಆಗಿದೆ.
ಹುಡುಗ ಒಳ್ಳೆಯವನು: ಈ ಬಗ್ಗೆ ಹುಡುಗಿಯ ಸಹೋದರಿ ಈ ಬಗ್ಗೆ ಮಾಹಿತಿ ನೀಡುತ್ತಾ ‘ಹುಡುಗ ಮಂಜುನಾಥ್ ತುಂಬಾ ಒಳ್ಳೆಯವನು. ಶುಕ್ರವಾರ ಬಂದಾಗ ಸ್ವಲ್ಪ ಡಲ್ ಆಗಿದ್ದ. ಯಾಕೆಂದು ಕೇಳಿದರೆ ತನಗೆ ಆರಾಮ ಇಲ್ಲ ಎಂದಿದ್ದ. ಆದರೆ ಗುರುವಾರ ಸಂಜೆಯ ವೇಳೆಗೆ ಶಿವಮೊಗ್ಗದಿಂದ ಸುರೇಶ್ ಎಂಬವ ನನ್ನ ಮೊಬೈಲ್‌ಗೆ ಕರೆಮಾಡಿ ಮಂಜುನಾಥನಿಗೆ ಕುಡಿಯುವ ಚಟ, ಹುಡುಗಿಯರ ಸಹವಾಸ ಇದೆ. ಆತನಿಗೆ ಕೆಲಸವಿಲ್ಲ ಹಾಗೂ ಎಚ್‌ಐವಿ ಇದೆ ಎಂದು ಎಚ್ಚರಿಸಿದ್ದ. ಆಗ ತಾನು ನನಗೆ ಈ ಬಗ್ಗೆ ನಂಬಿಕೆಯಿಲ್ಲ ಎಂದು ಉತ್ತರಿಸಿದ್ದೆ. ಎಂದ ಅವರು ಫೋನ್ ಕರೆಯ ಧ್ವನಿ ಮಂಜುನಾಥನ ಹೋಲುತ್ತಿತು ಎಂದಿದ್ದಾರೆ.
ಎಚ್‌ಐವಿ ಇದೆ ಅಂದಿದ್ದ!
ಈ ಮಧ್ಯೆ ವಿನೋದಳ ಬಳಿ ಆತ ಶುಕ್ರವಾರ ಪರ್ಸನಲ್ ಆಗಿ ಸ್ವಲ್ಪ ಹೊತ್ತು ಮಾತನಾಡಿದ್ದ. ಆಗ ಆಕೆಯ ಬಳಿ ತನಗೆ ಈ ಹಿಂದೆ ಮದುವೆ ಆಗಿದೆ, ನನಗೆ ಎಚ್‌ಐವಿ ಇದೆ. ನೀನು ಮದುವೆಯಾಗಲು ಸಿದ್ಧಳಿದ್ದೀಯಾ? ಎಂದು ಕೇಳಿದ್ದ. ಆಗ ವಿನೋದ ಮದುವೆಯಾಗುವುದಾದರೆ ನಿನ್ನನ್ನೇ ಎಂದು ಹೇಳಿದ್ದಳು.
ಎಚ್‌ಐವಿ ಇದೆ ಎಂದು ಹೇಳಿದಾಗ ಮಂಜುನಾಥನನ್ನು ಜಿ.ಪಂ. ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ರಕ್ತ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿತ್ತು. ನಂತರ ತನ್ನ ರಕ್ತವನ್ನು ಪರೀಕ್ಷೆ ಮಾಡಿಸಿ ಅವಮಾನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಎಂದು ತಿಳಿದು ಬಂದಿದೆ.
ಬಿ.ಎ ವರೆಗೆ ಓದಿರುವ ತನಗೆ ಕೆಲಸ ಸಿಗದ ಕಾರಣ ಸ್ವಲ್ಪ ಸಮಯ ಬಸ್ಸಿನಲ್ಲಿ ದುಡಿಯುತ್ತಿದ್ದ. ಈ ವೇಳೆ ಸುಂದರ್ ಎಂಬವರ ಪರಿಚಯವಾಗಿ ತನಗೆ ಮದುವೆಯಾಗಲು ಹುಡುಗಿ ಇದ್ದರೆ ತಿಳಿಸು ಎಂದಾಗ ವಿನೋದಳನ್ನು ಪರಿಚಯಿಸಿದ್ದರು.
Tagged with
cnews,
missing,
moodabidri
ಉಡುಪಿ: ಪ್ರತ್ಯೇಕ ಎರಡು ಘಟನೆಗಳಲ್ಲಿ ಉಡುಪಿ ನಗರ ವ್ಯಾಪ್ತಿಗೆ ಸೇರಿದ ಇಬ್ಬರು ವಿವಾಹಿತರು ನಾಪತ್ತೆಯಾದ ಪ್ರಕರಣಗಳು ನಡೆದಿವೆ.
ಕುಕ್ಕಿಕಟ್ಟೆ ಅನುಗ್ರಹ ಸಭಾ ಭವನದ ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸ ವಾಗಿದ್ದ ಕಪಿಲೇಶ್ವರ ಎಂಬವರ ಪತ್ನಿ ಸಂಗೀತಾ (೨೦) ಎಂಬಾಕೆ ಕೆಲಸಕ್ಕೆ ಬೆಂಗ ಳೂರಿಗೆ ಹೋಗುವುದಾಗಿ ಹೇಳಿ ಹೋದ ವಳು ಕಾಣೆಯಾಗಿದ್ದಾಳೆ.
ಜೂನ್ ೧೯ ರಂದು ಬೆಳಗ್ಗೆ ಹಸಿರು ಚೂಡಿದಾರ ಧರಿಸಿ ಮನೆಯಿಂದ ಹೊರಟ ಸಂಗೀತಾ, ಗೋಧಿ ಮೈ ಬಣ್ಣದವಳಾಗಿದ್ದು ೫ ಅಡಿ ಎತ್ತರವಿದ್ದಾಳೆ. ಕಂಡವರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಕೊಡವೂರು ಗ್ರಾಮದ ಕಾನಂಗಿ ನಿವಾಸಿ ಸುನಿಲ್ ಪೂಜಾರಿ (೪೭) ಎಂಬಾತ ಜೂನ್ ೭ ರಂದು ಬೆಳಗ್ಗೆ ೧೦ ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು ಮನೆಗೆ ಮರಳದೆ ಕಾಣೆ ಯಾಗಿದ್ದಾರೆ.
ಗೋಧಿ ಮೈ ಬಣ್ಣದ, ೫ ಅಡಿ ಎತ್ತರದ ಸುನಿಲ್ ಕನ್ನಡ, ಮರಾಠಿ, ಹಿಂದಿ ಮತ್ತು ತುಳು ಮಾತನಾಡಬಲ್ಲವರಾಗಿದ್ದು, ಬಲ ತೋಳಿನಲ್ಲಿ ನಾಗರ ಹಾವಿನ ಅಚ್ಚು ಹಾಕಿಸಿಕೊಂಡಿದ್ದಾರೆ. ಕಂಡವರು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಕೋರಲಾಗಿದೆ.
Tagged with
cnews,
missing,
upi
ಉಡುಪಿ: ಮಹಿಳೆಯೊಬ್ಬಳೇ ಇರುವ ಸಂದರ್ಭದಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿದ ಐವರ ತಂಡ ಬಾಗಿಲಿಗೆ ಬಡಿದು, ಮಹಿಳೆಯ ಗಂಡನನ್ನು ಅವಾಚ್ಯ ಶಬ್ದಗಳಿಂದ ಬೈದು, ಕೈ ಕಾಲು ಮುರಿದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ ಪ್ರಕರಣ ಗುರುವಾರ ರಾತ್ರಿ ಬಡಗುಬೆಟ್ಟು ಗ್ರಾಮದ ಬೈಲೂರು ಟ್ಯಾಂಕ್ ರಸ್ತೆಯಲ್ಲಿ ನಡೆದಿದೆ.
ಈ ಬಗ್ಗೆ ಕೀರ್ತಿ ಕುಮಾರ್ ಅವರ ಪತ್ನಿ ಸುಜಾತಾ (೪೦) ಎಂಬವರು ನೀಡಿದ ದೂರಿನಂತೆ ಜಯವೀರ ಫೆಡ್ರಿಕ್ಸ್ ಹಾಗೂ ಇವರ ನಾಲ್ವರು ಮಿತ್ರರ ವಿರುದ್ದ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
Tagged with
cnews,
upi
ಮಂಗಳೂರು: ರಸ್ತೆ ಬದಿಯಲ್ಲಿ ಕಟ್ಟಿಗೆ ಹೊತ್ತು ಸಾಗುತ್ತಿದ್ದ ವೇಳೆ ಹಿಂದಿನಿಂದ ಬಂದ ಸುಮೋ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಪೆರಿಯಶಾಂತಿ-ದರ್ಮಸ್ಥಳ ರಸ್ತೆಯ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಸರೋಜ(೩೫) ಎಂದು ಗುರುತಿಸಲಾಗಿದೆ. ಈಕೆ ಇತರ ನಾಲ್ಕು ಸ್ಥಳೀಯ ಹೆಂಗಸರೊಂದಿಗೆ ರಸ್ತೆ ಬದಿಯಲ್ಲಿ ಕಟ್ಟಿಗೆ ಹೊತ್ತು ತರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೃತರ ಸಹೋದರಿ ಪುಷ್ಪಾ ಎಂಬಾಕೆಗೂ ಗಾಯಗಳಾಗಿದ್ದು, ಕೊಕ್ಕಡ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿ ಹೊಡೆದು ಪರಾರಿಯಾದ ವಾಹನವನ್ನು ಸಾರ್ವಜನಿಕರು ಧರ್ಮಸ್ಥಳದಲ್ಲಿ ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ.
Tagged with
cnews,
mlore
ಬೆಳ್ತಂಗಡಿ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಮಹಿಳೆ ಯೋರ್ವರು ರಬ್ಬರ್ ಹಾಳೆಗೆ ಉಪಯೋಗಿಸುವ ಬೋರ್ಮಿಕ್ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಮೇರ್ಲದಲ್ಲಿ ವಡೆದಿದೆ.
ಎಂ.ಬಿ. ಸುಬ್ರಹ್ಮಣ್ಯ ಎಂಬವರ ಪತ್ನಿ ರಮಣಿ ಎಂಬ ವರೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಮಾನಸಿಕ ವಾಗಿ ನೊಂದಿದ್ದ ಇವರು ಶನಿವಾರ ಆತ್ಮಹತ್ಯೆಗೆ ಯತ್ನಿಸಿ ದ್ದರು. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಫಲಕಾರಿಯಾಗಲಿಲ್ಲ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
belthangady,
cnews
ವಿಟ್ಲ: ಟೈಮಿಂಗ್ ವಿವಾದಕ್ಕೆ ಸಂಬಂಧಿಸಿ ಖಾಸಗಿ ಹಾಗೂ ಸರ್ಕಾರಿ ಬಸ್ ಚಾಲಕರ ನಡುವೆ ಮಾತಿನ ಚಕಮಕಿ ನಡೆದು, ಇತ್ತಂಡ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ವಿಟ್ಲ ದಲ್ಲಿ ನಿನ್ನೆ ನಡೆದಿದೆ.
ಪುತ್ತೂರಿನಿಂದ ವಿಟ್ಲ ಮಾರ್ಗವಾಗಿ ಪಂಕಳಕುಂಜಕ್ಕೆ ತೆರಳಬೇಕಿದ್ದ ಸರ್ಕಾರಿ ಬಸ್ಸು ವಿಟ್ಲಕ್ಕೆ ನಿನ್ನೆ ಸಂಜೆ ನಿಗದಿತ ಸಮಯಕ್ಕಿಂತ ೫ ನಿಮಿಷ ತಡವಾಗಿ ಬಂದಿತ್ತು. ಪಕಳಕುಂಜ ಕಡೆ ತೆರಳ ಬೇಕಾಗಿದ್ದ ಖಾಸಗಿ ಬಸ್ಸು ನಿಗದಿತ ಸಮಯಗಿಂತ ೧೦ ನಿಮಿಷ ಮುಂಚೆ ಯೇ ಪಂಕಳಕುಂಜಕ್ಕೆ ತೆರಳಿತ್ತು ಎನ್ನಲಾಗಿದೆ. ಪುತ್ತೂರಿನಿಂದ ಬಂದ ಸರ್ಕಾರಿ ಬಸ್ಸಿನ ಚಾಲಕ ಖಾಸಗಿ ಬಸ್ಸು ನಿಲ್ದಾಣದ ಮುಂಭಾಗ ಬೇಕಾ ಬಿಟ್ಟಿ ಜನರನ್ನು ತುಂಬಿಸುತ್ತಿದ್ದ. ಇದ ರಿಂದ ರೊಚ್ಚಿಗೆದ್ದ ಖಾಸಗಿ ಬಸ್ಸಿನ ನಿರ್ವಾ ಹಕರೊಬ್ಬರು ಸರ್ಕಾರಿ ಬಸ್ಸಿನ ಚಾಲಕನಲ್ಲಿ ಈ ಬಗ್ಗೆ ಪ್ರಶ್ನಿಸಿದ್ದರು ಎನ್ನಲಾಗಿದೆ. ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು ಇಬ್ಬರು ಹಲ್ಲೆಗೆ ಮುಂದಾಗಿದ್ದಾರೆ. ಪರಿಣಾಮ ವಿಟ್ಲ ಸ್ವಲ್ಪ ಹೊತ್ತು ಟ್ರಾಫಿಕ್ ಸಮಸ್ಯೆ ಉಂಟಾಯಿತು.
Tagged with
cnews,
vittla
ಕರ್ತವ್ಯದಲ್ಲಿರುವಾಗಲೇ ಮೃತ ಪಟ್ಟ ಪೊಲೀಸ್ ಸಿಬ್ಬಂದಿ ರಾಧಾಕೃಷ್ಣ ಅವರಿಗೆ ಪೊಲೀಸ್ ಇಲಾಖೆ ಗೌರವ ವಂದನೆ ಸಲ್ಲಿಸಿತು.
Tagged with
gallery
ಮಂಗಳೂರು: ರಸ್ತೆ ಬದಿ ಸಂಚರಿಸುತ್ತಿದ್ದ ಪಾದಚಾರಿಯೋರ್ವ ರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಕೊಕ್ಕಡ ಧರ್ಮಸ್ಥಳ ಮಧ್ಯೆ ಕಾಪಿಬಾಗಿಲುವಿನಲ್ಲಿ ನಡೆದಿದೆ. ಧರ್ಮಪ್ಪ ಅವರ ಪತ್ನಿ ಸರೋಜಾ (೪೦) ಮೃತಪಟ್ಟವರಾಗಿದ್ದು, ಇನ್ನೋರ್ವ ಮಹಿಳೆ ಪುಷ್ಪಾ (೩೦) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
Tagged with
cnews,
mlore
ಮಂಜೇಶ್ವರ: ಅಪಘಾತದಿಂದ ಗಾಯಗೊಂಡಿದ್ದ ವೃದ್ಧರೋರ್ವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಇಲ್ಲಿನ ಗುಡ್ಡೆ ನಿವಾಸಿ ರಮೀಝ್ ಮಂಜಿಲ್‌ನ ಮಹಮ್ಮದ್ (೬೦) ಮೃತ ವ್ಯಕ್ತಿ.
Tagged with
cnews,
kgod
ಮಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಪರಿಚಯದವರಿಗೆ ನಗು ಬೀರಿದ್ದನ್ನೇ ತಪ್ಪಾಗಿ ಅರ್ಥೈಸಿದ ಮನೆ ಮಾಲಿಕನೊಬ್ಬ ತನ್ನ ಮನೆಯಲ್ಲಿ ಕೆಲಸಕ್ಕಿದ ೧೪ರ ಹರೆಯದ ಬಾಲೆಯನ್ನು ಮನೆಯಿಂದ ಹೊರ ಹಾಕಿ ಅಮಾನವೀ ಯತೆ ತೋರಿದ ಘಟನೆ ಅತ್ತಾವರದಲ್ಲಿ ನಡೆದಿದೆ.
ದಾವಣಗೆರೆ ಮೂಲದ ಮುಬಿನಾ (೧೪) ಎಂಬಾಕೆ ಅತ್ತಾವರ ಆದಾಯ ತೆರಿಗೆ ಇಲಾಖಾ ಕಚೇರಿ ಬಳಿ ಇರುವ ಫ್ಲ್ಯಾಟೊಂದರಲ್ಲಿ ಕೆಲಸಕ್ಕಿದ್ದಳು. ಈಕೆ ಯನ್ನು ಈಕೆಯ ತಂದೆ ಕೆಲ ಸಮ ಯದ ಹಿಂದೆ ಇಲ್ಲಿ ಕೆಲಸಕ್ಕೆ ಸೇರಿಸಿ ಹಣ ಪಡೆದುಕೊಂಡು ಹೋಗಿದ್ದ. ಇಲ್ಲಿ ಮನೆ ಕೆಲಸ ಮಾಡುತ್ತಿದ್ದ ಈಕೆ ನಿನ್ನೆ ಮುಂಜಾನೆ ಯಾರೋ ಪರಿಚಯದವರ ಜೊತೆ ನಗು ಬೀರಿದ್ದಳು. ಇದನ್ನು ಗಮನಿಸಿದ ಮನೆ ಮಾಲಿಕ ಈಕೆಯನ್ನು ನೀನಿಲ್ಲಿ ಕೆಲಸ ಮಾಡಬೇಡ ನಡಿ ಎಂದು ಮನೆಯಿಂದ ಹೊರ ಹಾಕಿ ಬಿಟ್ಟಿದ್ದ. ಮನೆಯಿಂದ ಹೊರ ಬಂದ ಹುಡುಗಿ ದಾರಿ ಬದಿ ನಿಂತು ಅಳುತ್ತಿದ್ದಳು.
ಈಕೆಯನ್ನು ಕಂಡ ದಾರಿ ಹೋಕರು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದು ಅವರು ಮುಬಿನಾಳನ್ನು ಪಾಂಡೇಶ್ವರ ಠಾಣೆಗೆ ಹಾಜರುಪಡಿಸಿ ಬಳಿಕ ಮಕ್ಕಳ ಮನೆಗೆ ಸೇರಿಸಿದ್ದಾರೆ.
Tagged with
cnews,
mlore
ಪುತ್ತೂರು: ಪುತ್ತೂರಿನ ಮಹಾ ಲಿಂಗೇಶ್ವರ ದೇವಾಲಯದ ನವೀ ಕರಣ ಕಾಮಗಾರಿಯ ವೇಳೆ ಇಲ್ಲಿನ ಇತಿಹಾಸಕ್ಕೆ ಸಂಬಂಧಿಸಿದ ಹಲವಾರು ಕೆತ್ತನೆ, ಲಿಪಿಗಳನ್ನೊಳಗೊಂಡ ಶಿಲಾ ಶಾಸನ ಪತ್ತೆಯಾಗಿದೆ.
ದೇವಾಲಯದ ಒಳಾಂಗಣದ ನೈರುತ್ಯ ಭಾಗದಲ್ಲಿರುವ ಅಯ್ಯಂಗಾಯಿ ಶಿಲೆ ಕಲ್ಲಿನ ಅಡಿಭಾಗದಲ್ಲಿ ಕೆತ್ತನೆ ಚಿತ್ರಗಳು, ಶಿಲಾ ಲಿಪಿಗಳನ್ನೊಳಗೊಂ ಡ ಶಾಸನ ಪತ್ತೆಯಾಗಿದೆ. ದೇವಾ ಲಯದ ವಾಯುವ್ಯ ಭಾಗದಲ್ಲಿದ್ದ ಗುಳಿನ ಕಲ್ಲಿನ ಅಡಿ ಭಾಗ, ಕೊಡಿ ಮರ(ಧ್ವಜ ಸ್ತಂಭ)ದ ಅಡಿ ಭಾಗದಲ್ಲೂ ಇಂತಹ ಕೆತ್ತನೆ ಶಾಸನಗ ಳಿರಬಹುದು ಎಂದು ದೇವಳದ ಕಾಮಗಾರಿ ಇಂಜಿನಿ ಯರ್ ಪಿ.ಜಿ.ಜಗನ್ನಿ ವಾಸ್ ರಾವ್ ತಿಳಿಸಿ ದ್ದಾರೆ. ಸಿಕ್ಕಿದ ಹಳೆ ಕುರುಹುಗಳನ್ನು ಸುರಕ್ಷಿತ ವಾಗಿಡಲಾಗುವುದು ಎಂದು ತಿಳಿಸಿದ್ದಾರೆ.
Tagged with
cnews,
puttur
ಮಂಗಳೂರು: ತಮ್ಮ ಮನೆಗೆ ನೀರು ಬಿಡಲಿಲ್ಲವೆಂದು ಆರೋಪಿಸಿ ವಾಟರ್ ಮೆನ್‌ಗೆ ಹಲ್ಲೆ ನqಸುತ್ತಿ ದ್ದುದನ್ನು ತಡೆಯಲು ಹೋದ ಪಂಚಾಯತ್ ಸದಸ್ಯೆಗೆ ಗ್ರಾಮಸ್ಥ ನೋರ್ವ ಹಲ್ಲೆ ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲ ಲಕ್ಷ್ಮೀಗುಡ್ಡೆಯಲ್ಲಿ ನಡೆದಿದೆ.
ಘಟನಾ ಹಿನ್ನೆಲೆ: ನೀರಿನ ವ್ಯವಸ್ಥೆ ಸರಿಯಿಲ್ಲವೆಂದು ಆರೋಪಿಸಿ ಕಳೆದ ವಾರ ಲಕ್ಷ್ಮೀಗುಡ್ಡೆ ಗ್ರಾಮಸ್ಥರು ಸೋಮೇಶ್ವರ ಪಂಚಾಯತ್‌ಗೆ ಮುತ್ತಿಗೆ ಹಾಕಿದ್ದರು. ಮುತ್ತಿಗೆಗೆ ಮಣಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೇರೊಂದು ಬೋರ್‌ವೆಲ್‌ಗೆ ಕನೆಕ್ಷನ್ ನೀಡುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಪಂಚಾಯತ್ ಸದಸ್ಯನೋರ್ವ ವಿರೋಧ ವ್ಯಕ್ತಪಡಿಸಿದ್ದರಿಂದ ಪಂಚಾ ಯತ್ ವತಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡ ಲಾಗುತಿತ್ತು. ಕೆಲವೊಂದು ಕಾರಣ ಗಳಿಂದ ಟ್ಯಾಂಕರ್ ನಿಂತಿದ್ದರಿಂದಾಗಿ ಮತ್ತೆ ಬೋರ್‌ವೆಲ್‌ನಿಂದಲೇ ಗ್ರಾಮಕ್ಕೆ ನೀರು ನೀಡಲಾಗುತಿತ್ತು. ನಿನ್ನೆ ವಾಟರ್ ಮೆನ್ ಆಗಿರುವ ವಾಸು ಎಂಬವರು ನೀರು ಬಿಡಲೆಂದು ಪಂಪ್ ಶೆಡ್ ಬಳಿ ಬಂದಿದ್ದರು. ಈ ಸಂದರ್ಭ ಶೇಖರ ಎಂಬವರು ನಮ್ಮ ಲೈನ್‌ಗೆ ನೀರು ಏಕೆ ಬಿಡುವುದಿಲ್ಲ ಎಂದು ಗದರಿಸಿ ಪಂಪ್‌ಶೆಡ್ ಬೀಗ ಒಡೆಯಲು ಹೋಗಿದ್ದರು. ಇದಕ್ಕೆ ಅಡ್ಡಬಂದ ವಾಸು ಎಂಬವರಿಗೆ ಹಲ್ಲೆ ನಡೆಸಿರು ವುದಲ್ಲದೆ ಗಲಾಟೆ ತಡೆಯಲು ಬಂದ ಪಂಚಾಯತ್ ಸದಸ್ಯೆ ಪುಷ್ಪಾವತಿ ಎಂಬವರ ಮೇಲೆಯೂ ಹಲ್ಲೆ ನಡೆಸಿ ದ್ದಾರೆನ್ನಲಾಗಿದೆ. ನಡೆದಿರುವ ಹಲ್ಲೆ ಯಿಂದಾಗಿ ಪುಷ್ಪಾವತಿ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ನೀರು ಬಿಡುವಲ್ಲಿ ರಾಜಕೀಯ
ಗ್ರಾಮದಲ್ಲಿ ಎರಡು ಪಕ್ಷಗಳು ಮುಂಚೂಣಿಯಲ್ಲಿದ್ದು, ಆದ್ದರಿಂದ ಒಂದು ಪಕ್ಷದ ಕಡೆಯವರಿರುವ ಒಂದು ಲೈನ್‌ಗೆ ಮಾತ್ರ ನೀರು ಬಿಡಲಾಗುತ್ತಿದೆ. ಇದರಿಂದ ಹಲವು ಮನೆಯ ವರು ನೀರಿಲ್ಲದೆ ತೊಂದರೆ ಅನುಭವಿಸುವಂ ತಾಗಿದೆ ಎಂಬುದು ಗ್ರಾಮಸ್ಥರ ಆರೋಪ.
Tagged with
cnews,
mlore
ಶಿರ್ವ: ಇಲ್ಲಿನ ಠಾಣಾ ವ್ಯಾಪ್ತಿಯ ಕಳತ್ತೂರು ಗ್ರಾಮದ ಪುಂಚಲಕಾಡು ಎಂಬಲ್ಲಿಯ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಶಿರ್ವ ಪೊಲೀಸರು ಆರು ಮಂದಿಯನ್ನು ಬಂಧಿಸಿ, ಜುಗಾರಿಗೆ ಬಳಸಿದ ವಸ್ತುಗಳನ್ನು ವಶ ಪಡಿಸಿಕೊಂ ಡಿದ್ದಾರೆ. ಖಚಿತ ಮಾಹಿತಿಯಾಧರಿಸಿ ದಾಳಿ ನಡೆಸಿದ ಶಿರ್ವ ಠಾಣಾಧಿಕಾರಿ ಕೆ.ಆರ್. ನಾಯಕ್ ಅವರ ತಂಡ ಕಳತ್ತೂರಿನ ಸುರೇಶ್ ಮೂಲ್ಯ, ಪುಂಚಲಕಾಡಿನ ಸ್ಟೀಫನ್, ಸಾಂತೂರು ಕೊಪ್ಲದ ನಾಗೇಶ ಕುಲಾಲ್, ಕಳತ್ತೂರಿನ ಉದಯ ದೇವಾಡಿಗ, ಕುತ್ಯಾರಿನ ಸಂದೀಪ್ ಶೆಟ್ಟಿ, ಪೆಜತ್ತಕಟ್ಟೆಯ ಪ್ರಶಾಂತ್ ದೇವಾಡಿಗ ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Tagged with
cnews,
shirva
ಮಂಗಳೂರು: ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮರದ ದಿಮ್ಮಿಗಳನ್ನು ಸಿದ್ದಕಟ್ಟೆ-ಬಂಟ್ವಾಳ ರಸ್ತೆಯ ಅಣ್ಣಳಿಕೆಯಲ್ಲಿ ಅರಣ್ಯ ಸಂಚಾರಿ ದಳದ ಪೊಲೀಸರು ಪತ್ತೆ ಹಚ್ಚಿದ್ದು, ಲಾರಿ ಸಹಿತ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಬಂಟ್ವಾಳ ತಾಲೂಕು ಉಳಿ ಗ್ರಾಮದ ಅಕ ಪೂಜಾರಿ (೨೬) ಎಂಬವರನ್ನು ಪೊಲೀಸರು ಬಂಧಿಸಿದ್ದು, ವಶಪಡಿಸಿಕೊಂಡ ದಿಮ್ಮಿಗಳ ಮೌಲ್ಯ ಒಂದು ಲಕ್ಷ ಎಂದು ಅಂದಾಜಿಸಲಾಗಿದೆ.
Tagged with
cnews,
mlore
ಮಂಗಳೂರು: ಇಲ್ಲಿನ ಹಳೆ ಬಂದರು ಪ್ರದೇಶದ ಮಂಜಿಯೊಂ ದರಲ್ಲಿ ಜೂಜಾಡುತ್ತಿದ್ದ ೧೩ ಜನರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಫೈಸಲ್ ನಗರದ ಸುಬ್ರಹ್ಮಣ್ಯ(೨೬), ಬಂಟ್ವಾಳ ಪಜೀರ್ ಬದಿಯಗುಡ್ಡೆಯ ಮಹಮ್ಮದ್ ಅನ್ಸಾರ್(೨೨), ಕುಲಶೇಖರ ನೀತಿನಗರದ ಫ್ರಾನ್ಸೀಸ್ ಬಾಬಾ(೫೦), ಆಕಾಶಭವನದ ನ ಪುರದ ಗೋಪಾಲಕೃಷ್ಣ(೩೮), ಬಲ್ಲಾಳ್‌ಬಾಗ್‌ನ ಮಧು(೩೬), ಜೆಪ್ಪು ಮಾರ್ಗನ್ಸ್‌ಗೇಟ್‌ನ ರಾಜು ಶೆಟ್ಟಿ(೩೯), ಮುಲ್ಲಕಾಡ್‌ನ ರವಿ(೫೯), ಕುಂಜತ್‌ಬೈಲ್ ದೇವಿನಗರದ ಶೇಖ್ ಮಜೀದ್(೪೨), ಶಕ್ತಿನಗರ ರಾಜೀವನಗರದ ಮಹದೇವು(೪೦), ಬಂಟ್ವಾಳ ಕರಿಂಜೆಯ ಶೇಖರ್ ಶೆಟ್ಟಿ(೨೮), ಫರಂಗಿಪೇಟೆ ಮಾರಿಪಳ್ಳದ ಸದ್ದಾಂ ಹುಸೇನ್(೨೨), ಕಾವೂರು ಜ್ಯೋತಿನಗರದ ರವಿ ಮೂಲ್ಯ(೨೩) ಬೋಳಾರ ಫೆರಿ ರೋಡ್‌ನ ಚರಣ್‌ರಾಜ್ ಬಂಧಿತರು.
ಚೇತನ್ ಆಕಾಶ್‌ಭವನ, ರಾಜೇಶ್ ಉರ್ವಸ್ಟೋರ್ ಮತ್ತು ಪ್ರವೀಣ್ ಎಂಬವರು ತಲೆ ಮರೆಸಿಕೊಂಡಿದ್ದಾರೆ. ಆಟಕ್ಕೆ ಬಳಸಿದ ನೋಕಿಯಾ ಮೊಬೈಲ್ ಫೋನ್,ಆಟೋರಿಕ್ಷ, ಹೊಂಡಾ ಆಕ್ಟಿವಾ ಸಹಿತ ೧.೩೦ ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews,
mlore
ಮಂಗಳೂರು: ರಿಯಾದ್ (ಸೌದಿ ಅರೇಬಿಯಾ)ನ ಬದಿಯಾ ಎಂಬಲ್ಲಿ ಮದ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತಪಟ್ಟ ವ್ಯಕ್ತಿಯನ್ನು ತಲಪಾಡಿ ಉಚ್ಚಿಲ ನಿವಾಸಿ ಹಸೈನಾರ್(೫೫) ಎಂದು ಗುರುತಿಸಲಾಗಿದ್ದು, ಶುಕ್ರವಾರದಂದು ಸಂಜೆ ಕಾರ್ಗೋ ಮುಖಾಂತರ ಸಾಮಾನುಗಳನ್ನು ಊರಿಗೆ ಕಳಿಸಲು ತಯಾರಿ ನಡೆಸುವ ಸಂದರ್ಭ ಕುಸಿದು ಬಿದ್ದು ಹೃದಯಾಘಾತದಿಂದ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಸೌದಿ ಅರೇಬಿಯಾದಲ್ಲಿ ಸುಮಾರು ೩೨ ವರ್ಷದಿಂದ ಬದಿಯಾ ಎಂಬಲ್ಲಿ ಇವರು ಕೆಲಸ ನಿರ್ವಹಿಸುತಿದ್ದರು. ಮೃತದೇಹವನ್ನು ರಿಯಾದನ ಸಿಮೇಸಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
Tagged with
cnews,
mlore
ಮಂಗಳೂರು: ಕುಂದಾಪುರ ನಾವುಂದ ಗ್ರಾಮದ ಸಿಲ್ವರ್ ಕಾಲನಿಯ ಅರೆಹೊಳೆ ಕ್ರಾಸ್ ಬಳಿ ನಿವಾಸಿ ಪ್ರೀತಿ (೨೧) ಕಾಣೆಯಾದ ಬಗ್ಗೆ ಬೈಂದೂರು ಪೊಲೀಸರಿಗೆ ದೂರು ನೀಡಲಾಗಿದೆ.
ಕುಂದಾಪುರ ಅಂಗಡಿಯೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದ ಈಕೆ ಕೆಲಸಕ್ಕೆಂದು ಹೋದವಳು ಮನೆಗೆ ವಾಪಸಾಗಲಿಲ್ಲ. ಗೋಧಿ ಮೈಬಣ್ಣ ಹೊಂದಿರುವ ಪ್ರೀತಿ ಕೆಲಸಕ್ಕೆಂದು ಹೋದ ದಿನ ಹಸಿರು ಮಿಶ್ರಿತ ಗೋಲ್ಡನ್ ಟಾಪ್, ಹಸಿರು ಪ್ಯಾಂಟ್ ಧರಿಸಿದ್ದಳು ಎಂದು ದೂರಿನಲ್ಲಿ ವಿವರಿಸಲಾಗಿದೆ.
Tagged with
cnews,
mising,
mlore
ಪುತ್ತೂರು: ಪುತ್ತೂರಿನ ಮರೀಲ್ ನಲ್ಲಿರುವ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಿಂದ ರೂ. ೩೭ ಸಾವಿರ ಮೌಲ್ಯದ ಬೆಣ್ಣೆ ಹಾಗೂ ಇನ್ನಿತರ ಸೊತ್ತುಗಳನ್ನು ಕಳವುಗೈದ ನಾಲ್ವರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ ಭಾನುವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿ ಸಿದ್ದಾರೆ. ನ್ಯಾಯಾಧೀಶರು ಆರೋಪಿ ಗಳಿಗೆ ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಸಂಸ್ಥೆಯ ಮ್ಯಾನೇಜರ್ ನೀಡಿದ ದೂರಿನನ್ವಯ ಕಾರ್ಖಾನೆಯಲ್ಲಿ ೩ನೇ ಶಿಫ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರಿಮೊಗ್ರು ಗ್ರಾಮದ ಪುರುಷರ ಕಟ್ಟೆ ನಿವಾಸಿ ಪ್ರಶಾಂತ್, ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿಗಳಾದ ಹೇಮಂತ್ ಮತ್ತು ಹೃಷಿಕೇಶ್ ಹಾಗೂ ಬಲ್ನಾಡು ನಿವಾಸಿ ಹರೀಶ್ ನಾಯ್ಕ ಬಂಧಿತ ಆರೋಪಿಗಳು.
Tagged with
cnews,
puttur
ಮಂಗಳೂರು: ಬಜಪೆಯಲ್ಲಿ ನಿರ್ಮಾಣ ಹಂತದಲ್ಲಿರುವ ಎಮ್‌ಎಸ್‌ಇಝಡ್ ಸೈಟ್‌ನಿಂದ ಕಬ್ಬಿಣ ಕಳವು ಮಾಡುತ್ತಿದ್ದ ಮೂವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಟಿಪ್ಪರ್ ಚಾಲಕ ಬಸವರಾಜ್ ಬಾಗಲಕೋಟೆ, ಹಿಟಾಚಿ ಆಪರೇಟರ್, ಸತೀಶ್ ಮಂಡ್ಯ, ಸಹಾಯಕ ಮೈಸೂರಿನ ಹರೀಶ್ ಬಂಧಿತರು.
ಇವರೆಲ್ಲರು ಗುತ್ತಿಗೆ ಕಾರ್ಮಿಕರಾಗಿದ್ದು ಸೈಟ್‌ನಿಂದ ಕಳವು ಮಾಡಿದ ಕಬ್ಬಿಣವನ್ನು ಗಾಡಿಯಲ್ಲಿ ಸುರತ್ಕಲ್‌ಗೆ ಸಾಗಿಸಿ, ಅಲ್ಲಿ ಶರೀಫ್ ಎಂಬವರ ಗುಜರಿ ಅಂಗಡಿಗೆ ಮಾರಾಟ ಮಾಡುತ್ತಿದ್ದರು.
Tagged with
cnews,
mlore
ಉಡುಪಿ: ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದಾಗಿ ದಿಢೀರನೇ ಬ್ರೇಕ್ ಹಾಕಿದ ಕಾರಣ ಬೈಕ್ ಬಿದ್ದು ಬೈಕ್‌ನ ಹಿಂಬದಿ ಸವಾರ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಹಳುವಳ್ಳಿ- ಪೆರ್ಡೂರು ರಸ್ತೆಯ ಬುಕ್ಕಿಗುಡ್ಡೆ ಬಾಳೆಬೈಲು ಶಾಲೆಗೆ ಸಮೀಪದ ಮೋರಿ ಬಳಿ ಸಂಭವಿಸಿದೆ.
ಇಂದ್ರಾಳಿಯ ಬುಡ್ನಾರು ನಿವಾಸಿ ಚಂದ್ರಶೇಖರ್ (೨೮) ಎಂಬವರು ಅಪಘಾತದಿಂದಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಗಾಯಾಳುವಿನ ತಮ್ಮ ರವಿ ನಾಯ್ಕ ನೀಡಿದ ದೂರಿನಂತೆ ಬೈಕ್ ಸವಾರ ಸಂದೀಪ್ ವಿರುದ್ದ ಹಿರಿಯಡ್ಕ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
Tagged with
cnews,
upi
ಉಡುಪಿ: ಮಾರುತಿ ಓಮ್ನಿ ಡಿಕ್ಕಿ ಹೊಡೆದ ಪರಿಣಾಮವಾಗಿ ರಸ್ತೆ ಬದಿ ನಿಂತಿದ್ದ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ತೆಂಕ ನಿಡಿಯೂರು ಗ್ರಾಮದ ಲಕ್ಷ್ಮೀ ನಗರದಲ್ಲಿ ಸಂಭವಿಸಿದೆ.
ಲಕ್ಷ್ಮೀ ನಗರ ನಿವಾಸಿ ನಾಝೀರಾ ಎಂಬವರು ಗಾಯಗೊಂಡವರು. ಈ ಬಗ್ಗೆ ಗಾಯಾಳುವಿನ ಪತಿ ಫಝಲ್ ನೀಡಿದ ದೂರಿನಂತೆ ಮಲ್ಪೆ ಠಾಣೆಯ ಪೊಲೀಸರು ಓಮ್ನಿ ಚಾಲಕನ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
Tagged with
cnews,
upi
ಮಂಗಳೂರು: ಹಟ್ಟಿಯಲ್ಲಿ ಕಟ್ಟಿಹಾಕಲಾಗಿದ್ದ ಎರಡು ಜರ್ಸಿ ದನಗಳನ್ನು ಕಳವುಗೈದಿರುವ ಘಟನೆ ಉಳ್ಳಾಲದ ಅರಸುಹಿತ್ಲುವಿನಲ್ಲಿ ನಡೆದಿದೆ.
ನಮ್ಮ ಕುಡ್ಲ ಚಾನೆಲ್‌ನ ಜಯಂತ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಎರಡು ದನಗಳ ಬೆಲೆ ರೂ. ೮೦,೦೦೦ ಆಗಿದೆ. ಶನಿವಾರ ರಾತ್ರಿ ಕಳ್ಳತನ ನಡೆದಿದ್ದು, ನಿನ್ನೆ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
Tagged with
cnews,
mlore
ಪುತ್ತೂರು: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ಮೂರು ವರ್ಷದ ಹಿಂದೆ ಕೋವಿಯಿಂದ ಗುಂಡು ಹಾರಿಸಿ ವ್ಯಕ್ತಿಯೊಬ್ಬರನ್ನು ಕೊಲೆಗೈದಿದ್ದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಇಬ್ಬರನ್ನು ಪುತ್ತೂರಿನ ತ್ವರಿತಗತಿ ನ್ಯಾಯಾಲಯ ಖುಲಾಸೆಗೊಳಿಸಿದೆ.
ನೆರಿಯ ಗ್ರಾಮದ ಪುತ್ತೇಟು ಪಡವಿಲ್ ಗಂಡಿಬಾಗಿಲು ನಿವಾಸಿ ಥೋಮಸ್ ಅವರ ಪುತ್ರ ಜೋಬಿ ಜಾರ್ಜ್ ಕಳೆದ ೨೪- ೪-೨೦೦೯ರಂದು ಸಂಜೆ ಬಿದಿರು ತರಲೆಂದು ಕಾಡಿಗೆ ಹೋದವರು ನಾಪತ್ತೆಯಾಗಿದ್ದರು. ಅವರ ಶವ ಮರುದಿನ ನೆರಿಯ ಕಾಡಿನ ಬಿದಿರಿನ ಪೊದೆಯೊಂದರಲ್ಲಿ ಪತ್ತೆಯಾ ಗಿತ್ತು. ಯಾರೋ ಶಿಕಾರಿಗೆ ಬಂದಿದ್ದ ವ್ಯಕ್ತಿಗಳು ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಮೃತರ ತಂದೆ ಥೋಮಸ್ ಪೊಲೀ ಸರಿಗೆ ದೂರು ನೀಡಿದ್ದರು. ನೆರೆಯ ಬೇಬಿ ಚೆಂಗನಾಡ್ ಮತ್ತು ದೇವಸ್ಯ ಅವರ ವಿರುದ್ದ ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದರು. ಪೊಲೀಸರು ಬೇಬಿ ಚೆಂಗನಾಡ್ ಮತ್ತು ದೇವಸ್ಯ ಅವರ ವಿರುದ್ದ ಕೊಲೆ ಪ್ರಕರಣ ದಾಖಲಿಸಿ ಕೊಂಡು ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದರು. ಆದರೆ ಇದೀಗ ನ್ಯಾಯಾಲಯ ಆರೋಪಿ ಗಳನ್ನು ದೋಷಮುಕ್ತಗೊಳಿಸಿದೆ. ಆರೋಪಿಗಳ ಪರವಾಗಿ ವಕೀಲರಾದ ಕೆ.ಆರ್.ಆಚಾರ್ಯ ಮತ್ತು ಮಾಧವ ಪೂಜಾರಿ ವಾದಿಸಿದ್ದರು.
Tagged with
cnews,
puttur
ಪುತ್ತೂರು : ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿನ ಶಿರಾಡಿ ಗ್ರಾಮದಲ್ಲಿ ಲಾರಿ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ. ಕಾರಿನಲ್ಲಿದ್ದ ಬಾಬು ತೋಮಸ್, ಅವರ ಹೆಂಡತಿ ಮೋಳಿ ಹಾಗೂ ಅವರ ತಂದೆ ತೋಮಸ್ ಗಾಯ ಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
Tagged with
cnews,
puttur
ಶ್ರೀನಿವಾಸ ಬಜಾಲ್ ಇವರ ಹತ್ತನೇ ವರುಷದ ಹುತಾತ್ಮರ ದಿನವನ್ನು ಡಿವೈಎಫ್‌ಐ ಸಂಘಟನೆ ನಿನ್ನೆ ಬಜಾಲ್‌ನಲ್ಲಿ ಆಚರಿಸಿತು.
Tagged with
gallery
ಮೋಟಮ್ಮ ಕರೆ
ಸುಳ್ಯ: ಇಂದು ಜನರಿಗೆ ಹತ್ತಾರು ಮೂಲಭೂತ ಸಮಸ್ಯೆಗಳು ಇವೆ. ಅದರ ಪರಿಹಾರಕ್ಕೆ ಪ್ರಯತ್ನ ನಡೆಸಿದಾಗ ಜನರಲ್ಲಿ ನಮ್ಮ ಬಗ್ಗೆ ವಿಶ್ವಾಸ ಮೂಡು ವುದರ ಜೊತೆಗೆ ಪ್ರತಿಯೊಬ್ಬರಲ್ಲೂ ನಾಯಕತ್ವ ಗುಣವೂ ಬೆಳೆಯುತ್ತದೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯೆ ಮೋಟಮ್ಮ ಹೇಳಿದ್ದಾರೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬೆಂಬಲಿತ ಗ್ರಾ. ಪಂ. ಸದಸ್ಯರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ನಾಯಕತ್ವ ಮತ್ತು ಪಕ್ಷ ಸಂಘಟನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಜನಾರ್ದನ ಪೂಜಾರಿ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಜನರಿಗೆ ಅಧಿಕಾರವನ್ನು ನೀಡಿ ಜನರಿಗೆ ಶಕ್ತಿ ತುಂಬಲಾಗಿದೆ. ಜನಪ್ರತಿನಿ ಧಿಗಳು, ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ಪ್ರಜಾ ಪ್ರಭುತ್ವ ಉಳಿಯಲು ಸಾಧ್ಯ ಎಂದು ಹೇಳಿದರು.
Tagged with
dk,
lnews
ಬಂಟ್ವಾಳ: ಯುವ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡ ೧೦ಕ್ಕೂ ಅಧಿಕ ಮಂದಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿ ಪಿಐ)ಕ್ಕೆ ಸೇರ್ಪಡೆಗೊಂಡಿದ್ದಾರೆ.
ಇತ್ತೀಚೆಗೆ ಪರ್ಲಿಯಾದಲ್ಲಿ ನಡೆದ ಪಕ್ಷದ ವಾರ್ಡ್ ಸಮ್ಮಿಲನ ಕಾರ್ಯ ಕ್ರಮದಲ್ಲಿ ಎಸ್‌ಡಿಪಿಐ ಬಂಟ್ವಾಳ ವಿಧಾನ ಸಭಾಧ್ಯಕ್ಷ ಎಸ್.ಪಿ. ಶಾಹುಲ್ ಹಮೀದ್ ಪಕ್ಷದ ಧ್ವಜವನ್ನು ಹಸ್ತಾಂತರಿಸುವ ಮೂಲಕ ಪಕ್ಷಕ್ಕೆ ಬರಮಾಡಿ ಕೊಂಡರು. ಪಕ್ಷದ ರಾಜ್ಯ ಸಮಿತಿ ಸದಸ್ಯ ಹನೀಫ್ ಖಾನ್ ಕೊಡಾಜೆ, ಜಿಲ್ಲಾಧ್ಯಕ್ಷ ಜಲೀಲ್. ಕೆ, ಜಿಲ್ಲಾ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ಈ ಸಂದರ್ಭ ಉಪಸ್ಥಿತ ರಿದ್ದರು.
Tagged with
dk,
lnews
ಮಂಗಳೂರು: ಪಾಣೆಮಂಗ ಳೂರು ವಿದ್ಯುತ್ ಸರಬರಾಜು ಕೇಂದ್ರ ವ್ಯಾಪ್ತಿಯ ಪಾಣೆಮಂಗಳೂರು, ನಂದಾವರ, ಅಕ್ಕರಗುಂಡಿ ಪ್ರದೇಶಗ ಳಲ್ಲಿಯ ವಾಸಿಗಳು ಕಳೆದ ಎರಡು ಮೂರು ತಿಂಗಳುಗಳಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ. ಆದರೂ ಮೆಸ್ಕಾಂ ನವರು ಇಲ್ಲಿಯ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿಲ್ಲ.
ಇದೇನು ಅಚ್ಚರಿ ಎನಿಸುತ್ತಿಲ್ಲವೇ!
ಇದು ಅಚ್ಚರಿಯಾದರೂ ಪೂರ್ಣ ಸತ್ಯವಲ್ಲ. ಈ ಪ್ರದೇಶಗಳ ವಿದ್ಯುತ್ ಗ್ರಾಹಕರ ಕೈಗೆ ಎರಡು ಮೂರು ತಿಂಗ ಳುಗಳಿಂದ ಸಾವಿರಾರು ರೂ. ಬಾಕಿ ಇರುವ ವಿದ್ಯುತ್ ಬಿಲ್ ಸಿಗುತ್ತಿರುವು ದಂತೂ ಸತ್ಯ. ಆದರೆ ಅದು ಗ್ರಾಹಕರಿಟ್ಟ ಬಾಕಿ ಅಲ್ಲ. ಬದಲಿಗೆ ಮೆಸ್ಕಾಂ ಸಿಬ್ಬಂದಿ ಮತ್ತು ಮೆಸ್ಕಾಂ ಆಡಳಿತ ನಿರ್ವಹಣೆ ಯಲ್ಲಿಯ ದೋಷ. ಇಲ್ಲಿಯ ಗ್ರಾಹಕರು ಈ ದೋಷದ ಬಲಿಪಶುಗಳಷ್ಟೇ.
ಪಾಣೆಮಂಗಳೂರು ಕೇಂದ್ರದಲ್ಲಿ ವಿದ್ಯುತ್ ಬಿಲ್ ಪಾವತಿಸಿದರೆ ಗ್ರಾಹಕರು ಬಾಕಿಗಂಟಿಯೇ ಇರಬೇಕಾಗುತ್ತದೆ. ಇದೇ ಗ್ರಾಹಕರು ತಮ್ಮ ಬಿಲ್‌ನ್ನು ಬಿ.ಸಿ.ರೋಡ್‌ನಲ್ಲಿರುವ ಕೇಂದ್ರದಲ್ಲಿ ಪಾವತಿಸಿದರೆ ಬಾಕಿಯ ರಗಳೆಯೇ ಇರುವುದಿಲ್ಲ. ಇದೆಂತಹ ಸಮಸ್ಯೆ ಎಂಬುದು ಗ್ರಾಹಕರಿಗೆ ಅರ್ಥವಾಗು ತ್ತಿಲ್ಲ. ಮೆಸ್ಕಾಂನವರಿಗೆ ಗೊತ್ತಿದ್ದರೂ ಅದನ್ನು ಸರಿಪಡಿಸುವ ಗೋಜಿಗೆ ಅವರು ಹೋಗುತ್ತಿಲ್ಲ.
ಎರಡು ಮೂರು ತಿಂಗಳ ಬಾಕಿ ಸೇರಿಸಿ ಬಿಲ್ ಬಂದಿದ್ದರೆ ಕೆಲವರು ಭಯದಿಂದ ಬಿಲ್ ಪಾವತಿಸಿದ್ದೂ ಇದೆ. ಕೆಲವರು ಪಾಣೆಮಂಗಳೂರು ಕೇಂದ್ರಕ್ಕೆ ಹೋಗಿ ಸಿಬ್ಬಂದಿಯನ್ನು ದಬಾಯಿಸಿ ಸರಿಪಡಿಸಿಕೊಂಡು ಬರುತ್ತಾರೆ. ಮುಂದೇನು ಎಂಬುದು ಗೊತ್ತಾಗದೆ ಹೌಹಾರಿ ತಲೆಗೆ ಕೈ ಇಟ್ಟು ಕುಳಿತ ಗ್ರಾಹಕರ ಸಂಖ್ಯೆಯೇ ಹೆಚ್ಚು.
ವಾಸ್ತವ ಏನೆಂದರೆ ಬಿಲ್ ರೀಡರ್ ಗಳು ಬರುವುದು ಬಿ.ಸಿ. ರೋಡ್‌ನಿಂದ ಪಾಣೆಮಂಗಳೂರು ಕೇಂದ್ರದಲ್ಲಿ ಬಿಲ್ ಪಾವತಿಯಾಗಿದ್ದರೆ ಅದರ ಮಾಹಿತಿ ಯನ್ನು ಬಿ.ಸಿ.ರೋಡ್ ಕೇಂದ್ರಕ್ಕೆ ರವಾ ನಿಸಬೇಕಾದುದು ಪಾಣೆಮಂಗಳೂರು ಸಿಬ್ಬಂದಿಯ ಕರ್ತವ್ಯ. ಆದರೆ ಬಿಲ್ ಪಾವತಿಯ ವಿವರ ರವಾನಿಸುವ ವ್ಯವಸ್ಥೆಯೇ ಮಾಡಿ ಕೊಳ್ಳದೆ ಗ್ರಾಹಕರು ಪರದಾಡುವಂತೆ ಮಾಡಿದ್ದಾರೆ ಮೆಸ್ಕಾಂ ಆಡಳಿತಗಾರರು. ಪಾಣೆಮಂಗಳೂರಿ ನಲ್ಲಿ ಬಿಲ್ ಪಾವತಿ ಸಿದರೆ ಅದು ಮೀಟರ್ ರೀಟರ್‌ಗಳ ರೀಡಿಂಗ್ ಮೆಷಿನ್‌ಲ್ಲಿ ಅಪ್‌ಡೇಟ್ ಆಗುವುದೇ ಇಲ್ಲ. ಮೀಟರ್ ರೀಡರ್‌ಗೆ ಕೇಳಿದರೆ ನನಗ ಮಾಹಿತಿ ಇಲ್ಲ. ಬಂದಷ್ಟು ಬಿಲ್ ತುಂಬಿ ಎಂದು ಉಡಾಪೆಯ ಉತ್ತರ ನೀಡಿ ತೆರಳು ತ್ತಾರೆ. ಕಚೇರಿಗೆ ಹೋಗಿ ಕೇಳಿದರೆ ಸಮಸ್ಯೆಗೆ ಸ್ಪಂದಿಸುವವರೇ ಸಿಗುವುದಿಲ್ಲ. ಗ್ರಾಹಕರು ತಮ್ಮದಲ್ಲದ ತಪ್ಪಿಗೆ ಬಾಕಿ ಹಣದ ದಂಡ ಮತ್ತು ಬಡ್ಡಿಯನ್ನು ಪಾವತಿಸಬೇಕಾಗಿದೆ. ಕಳೆದ ಅರ್ಧ ವರ್ಷದಿಂದ ಈ ಸಮಸ್ಯೆ ಇದೆ ಯಾದರೂ, ಸಮಸ್ಯೆ ನಿವಾರಣೆ ಯತ್ತ ಮೆಸ್ಕಾಂ ಅಧಿಕಾರಿಗಳು ಗಮನ ಹರಿಸು ತ್ತಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.
Tagged with
dk,
lnews
ಸುಳ್ಯ: ಕೆರೆಗೆ ಬಿದ್ದು ಪ್ರಾಣ ಭಯ ದಿಂದ ವಿಲವಿಲನೆ ಒದ್ದಾಡುತ್ತಿದ್ದ ಕಾಳಿಂಗ ಸರ್ಪಕ್ಕೆ ಮರುಜೀವ ನೀಡಲಾ ಗಿದೆ. ಸುಳ್ಯ ತಾಲೂಕಿನ ಬಾಳಿಲದ ನಾರಾಯಣ ಪರವ ಎಂಬವರ ಕೆರೆಗೆ ಆಹಾರ ಅರಸಿಕೊಂಡು ಬಂದ ಕಾಳಿಂಗ ಸರ್ಪ ಬಿದ್ದಿತ್ತು. ಈ ಬಗ್ಗೆ ಅರಣ್ಯ ಇಲಾಖಾ ಸಿಬ್ಬಂದಿಗೆ ಮಾಹಿತಿ ನೀಡ ಲಾಯಿತು. ಅರಣ್ಯ ಇಲಾಖಾ ಸಿಬ್ಬಂದಿ ಪುತ್ತೂರಿನ ಉರಗತಜ್ಞ ಡಾ.ರವೀಂದ್ರ ನಾಥ ಐತಾಳರನ್ನು ಕರೆಯಿಸಿ ಕೆರೆ ಯಿಂದ ಕಾಳಿಂಗ ಸರ್ಪವನ್ನು ಸುರಕ್ಷಿತ ವಾಗಿ ಮೇಲೆತ್ತಿದರು. ಆ ಬಳಿಕ ಬಿಸಿಲೆ ರಕ್ಷಿತಾರಣ್ಯದಲ್ಲಿ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಬಿಡಲಾಯಿತು. ಸುಮಾರು ೧೧ ಅಡಿ ಉದ್ದದ ಕಾಳಿಂಗ ಸರ್ಪಕ್ಕೆ ೧೦ ವರ್ಷ ಪ್ರಾಯ ಇರಬಹುದು ಎಂದು ಐತಾಳ್ ಅಭಿಪ್ರಾಯಪಟ್ಟಿದ್ದಾರೆ. ಕೆರೆಗೆ ಕಾಳಿಂಗ ಸರ್ಪ ಬಿದ್ದಿ ರುವುದನ್ನು ತಿಳಿದು ಕುತೂಹಲಿಗರ ದಂಡೇ ಸೇರಿತ್ತು.
Tagged with
dk,
lnews
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೨೦೧೧ನೇ ಸಾಲಿನ ಗೌರವ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಬೋಲ ಚಿತ್ತರಂಜನದಾಸ್ ಶೆಟ್ಟಿ, ರಂಗಭೂಮಿಯಲ್ಲಿ ಸೀತಾರಾಮ ಶೆಟ್ಟಿ, ಸಿನಿಮಾದಲ್ಲಿ ಟಿ.ಎ.ಶ್ರೀನಿವಾಸ್ ಪಡೆದರು. ಬನ್ನಂಜೆ ಬಾಬು ಅಮೀನ್, ನಳಿನ್‌ಕುಮಾರ್ ಕಟೀಲ್, ಕೃಷ್ಣ ಜೆ.ಪಾಲೇಮಾರ್, ಗಣೇಶ್ ಕಾರ್ಣಿಕ್, ರಾಮ್‌ಶೆಟ್ಟಿ ಕೋಟ ಶ್ರೀನಿವಾಸ ಪೂಜಾರಿ, ಗುಲ್ಜಾರ್‌ಬಾನು, ಹಂಪ ನಾಗರಾಜಯ್ಯ, ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಉಪಸ್ಥಿತಿಯಲ್ಲಿ ಮಹನೀಯರನ್ನು ಸನ್ಮಾನಿಸಲಾಯಿತು.
Tagged with
gallery
ಮಂಗಳೂರು: ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಮಹತ್ವದ ಮಂಗಳೂರು ನಗರ ಮಾಪನ ಯೋಜನೆ (ಯುಪಿಓಆರ್) ಜಾರಿಗೊಳಿಸುವಲ್ಲಿ ನಗರದ ಜನತೆ ಪೂರ್ಣ ಪ್ರಮಾಣದ ಸಹಕಾರ ನೀಡಬೇಕೆಂದು ನಗರ ಮಾಪನ ಯೋಜನಾಧಿಕಾರಿ ಮತ್ತು ಭೂ ದಾಖಲೆಗಳ ಉಪನಿರ್ದೇಶಕರಾದ ಬಿ.ಕೆ.ಕುಸುಮಾಧರ ಅವರು ಮನವಿ ಮಾಡಿಕೊಂಡರು. ಹಳೇ ತಾಲೂಕು ಕಚೇರಿ ಆವರಣದಲ್ಲಿರುವ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ನಗರ ಮಾಪನ ಯೋಜನೆಯ ಗ್ರಾಹಕರ ಸೌಲಭ್ಯ ಕೆಂದ್ರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಭೆಯ ಅಧ್ಯಕ್ಷತೆಯನ್ನು ನಗರ ಮಾಪನ ಯೋಜನೆಯ ಇನ್ಫೋಟೆಕ್ ಕಂಪೆನಿಯ ಅಧಿಕಾರಿ ಬಿ.ಶ್ರೀನಿವಾಸ ರಾವ್ ವಹಿಸಿದ್ದರು. ಪ್ರಾರಂಭದಲ್ಲಿ ನಗರ ಮಾಪನ ಅಧೀಕ್ಷಕರಾದ ವೇಣು ಗೋಪಾಲ್ ಸ್ವಾಗತಿಸಿದರು ಹಾಗೂ ಸಭೆಯ ಕೊನೆಗೆ ನಗರ ಮಾಪನ ಅಧೀಕ್ಷಕರಾದ ಜಯರಾಮು ಅವರು ಭಾಗವಹಿಸಿದ ಅತಿಥಿಗಳಿಗೆ ವಂದನಾ ರ್ಪನೆಗೈದರು.
Tagged with
briefs
ಮಂಗಳೂರು: ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ಹಾಗೂ ಡಿ.ವೈ.ಎಫ್.ಐ. ಜಪ್ಪಿನಮೊಗರು ಘಟಕ ಇದರ ಜಂಟಿ ಆಶ್ರಯದಲ್ಲಿ ಪುಸ್ತಕ ವಿತರಣಾ ಸಮಾರಂಭ ಇತ್ತೀಚೆಗೆ ನಡೆಯಿತು.ಮುಖ್ಯ ಅತಿಥಿಯಾಗಿ ಕಾರ್ಮಿಕ ಮುಖಂಡ ಜೆ.ಬಾಲಕೃಷ್ಣ ಶೆಟ್ಟಿ ಭಾಗವಹಿಸಿದ್ದರು. ಅಧ್ಯಕ್ಷತೆ ಯನ್ನು ಯುವಕ ಮಂಡಲದ ಅಧ್ಯಕ್ಷ ರಾದ ಉದಯಚಂದ್ರ ರೈ ವಹಿಸಿ ದ್ದರು. ಅತಿಥಿಯಾಗಿ ಶ್ರೀ ವೀರನಾರಾ ಯಣ ದೇವಸ್ಥಾನ ಕುಲಶೇಖರ ಇದರ ಸೇವಾ ಸಮಿತಿ ಸದಸ್ಯರಾದ ರವಿ ಉದಯನಗರ, ಲಯನ್ ನಾಗೇಶ್ ಎನ್.ಜೆ., ಜಪ್ಪಿನ ಮೊಗರು ಜುಮ್ಮ ಮಸೀದಿ ಗೌರವ ಅಧ್ಯಕ್ಷ ರಾದ ಜೆ.ಇಸ್ಮಾಯಿಲ್, ಡಿ.ವೈ. ಎಫ್.ಐ ನಗರ ಸಮಿತಿ ಅಧ್ಯಕ್ಷ ರಾದ ಇಮ್ತಿಯಾಜ್, ವಿಜಯ ಕುಮಾರ್ ಬಜಾಲ್, ಡಿ.ವೈ.ಎಫ್.ಐ. ಜಪ್ಪಿನ ಮೊಗರು ಘಟಕದ ಅಧ್ಯಕ್ಷ ರಾದ ಜೆ.ಹನೀಫ್, ಮಂಡಲದ ಮಾಜಿ ಅಧ್ಯಕ್ಷರಾದ ಸದಾಶಿವ ಕಾರ್ಪೆಂಟರ್ ಹಾಗೂ ಸೀತಾರಾಮ ಶೆಟ್ಟಿ ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ದಿನೇಶ್ ಅಂಚನ್ ಸ್ವಾಗತಿಸಿ, ಮನೋಜ್ ಶೆಟ್ಟಿ ವಂದಿಸಿದರು. ಚಂದ್ರಹಾಸ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
Tagged with
briefs
ಬೆಂಗಳೂರು: ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಸುರೇಶ್ ಕುಮಾರ್ ವಿರುದ್ಧ ತನಿಖೆಗೆ ಮುಖ್ಯಮಂತ್ರಿ ಸದಾನಂದ ಗೌಡರು ಆದೇಶಿಸಿದ್ದಾರೆ. ನಾಗ್ಪುರಕ್ಕೆ ತೆರಳುವ ಮುನ್ನ ಸುರೇಶ್ ಕುಮಾರ್ ಎರಡು ಮನೆ ಮತ್ತು ನಿವೇಶನ ಹೊಂದಿರುವುದಕ್ಕೆ ಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಪ್ರದಾನ ಕಾರ್ಯದರ್ಶಿಗಳಿಗೆ ಆದೇಶಿಸಿದ್ದಾರೆ.
ವರದಿ ಎರಡು ಮೂರು ದಿನಗಳಲ್ಲಿ ತಲುಪಬೇಕಾಗಿದ್ದು ಈ ವರದಿ ಬಂದ ನಂತರವಷ್ಟೇ ಅವರ ರಾಜಿನಾಮೆಯನ್ನು ಅಂಗೀಕರಿಸುವ ಇಲ್ಲವೇ ಕೈ ಬಿಡುವ ಬಗ್ಗೆ ಡಿ.ವಿ. ನಿರ್ಧಾರ ಕೈಗೊಳ್ಳಲಿದ್ದಾರೆ. ಸುರೇಶ್‌ಕುಮಾರ್ ಅಕ್ರಮವಾಗಿ ನಿವೇಶನ ಇಲ್ಲವೇ ಮನೆ ಖರೀದಿ ಮಾಡಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದರೂ ಸಾರ್ವಜನಿಕರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ತನಿಖೆಗೆ ಅದೇಶಿಸಲಾಗಿದೆ. ಜತೆಗೆ ತನಿಖಾ ವರದಿ ಆಧರಿಸಿ ಅವರನ್ನು ಸಂಪುಟದಲ್ಲಿಯೇ ಮುಂದುವರಿಸುವ ಉದ್ದೇಶವೂ ಡಿ.ವಿ.ಗೆ ಇದೆ. ಎಲ್ಲದಕ್ಕೂ ಮಿಗಿಲಾಗಿ ಸುರೇಶ್ ಕುಮಾರ್ ಆಡಳಿತದ ವಿಚಾರದಲ್ಲಿ ತಮಗೆ ಪೂರ್ಣ ಭಾಗಿಯಾಗಿದ್ದಾರೆ. ಅವರನ್ನು ಕೈ ಬಿಡಲು ಮುಖ್ಯಮಂತ್ರಿಯವರಿಗೆ ಇಷ್ಟವಿಲ್ಲ. ಈ ಕಾರಣಕ್ಕಾಗಿ ತನಿಖೆಗೆ ಆದೇಶಿಸಿದ್ದು ವರದಿ ಇನ್ನೆರಡು ದಿನಗಳಲ್ಲಿ ಪ್ರಕಟಗೊಳ್ಳಲಿದೆ. ಅದಾದ ನಂತರ ಸುರೇಶ್ ಕುಮಾರ್ ಮತ್ತೆ ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆ ಇದೆ.
Tagged with
snews,
sureshkumar
ಬೆಂಗಳೂರು: ರಾಜ್ಯದಲ್ಲಿ ಹೊಸ ನಾಯಕತ್ವದ ಅನ್ವೇಷಣೆಗಾಗಿ ದೆಹಲಿಯ ಬಿಜೆಪಿಯ ವರಿಷ್ಟರು ಒಂದೆರಡು ದಿನಗಳಲ್ಲಿ ನಗರಕ್ಕೆ ಧಾವಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಕುಟುಂಬದ ಸಮಾರಂಭ ನಿನ್ನೆ ಪೂರ್ಣಗೊಂಡಿದ್ದು ಇದರಲ್ಲಿ ಭಾಗವಹಿಸಿದ ದೆಹಲಿಯ ನಾಯಕರು ಈಗ ರಾಜ್ಯದ ಗಮನ ಹರಿಸಲಿದ್ದಾರೆ. ಅವಧಿಗೂ ಮುನ್ನವೇ ಎದುರಾಗುತ್ತಿರುವ ಸಾರ್ವತ್ರಿಕ ಚುನಾವಣೆ ಗಮನದಲ್ಲಿಟ್ಟುಕೊಂಡು ವರ್ಚಸ್ಸಿನ ನಾಯಕನ ಆಯ್ಕೆಗಾಗಿ ಈ ಅನ್ವೇಷಣೆ ನಡೆಯಲಿದೆ. ಇದರಿಂದ ಸದಾನಂದ ಗೌಡರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದ್ದು ಅವರಿಗೆ ಪರ್ಯಾಯ ಅಧಿಕಾರ ನೀಡುವ ಸಾಧ್ಯತೆಯೂ ಇದೆ.
Tagged with
bjp,
snews
ಮಂಗಳೂರು: ಮಕ್ಕಳಿಗೆ ಸಂಬಂ ಧಿಸಿದ ಪ್ರಕರಣಗಳ ನಿರ್ವಹಣೆಗೆ ಪ್ರತ್ಯೇಕ ಪೊಲೀಸ್ ವ್ಯವಸ್ಥೆ ಹೊಂದಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ನಗರ ಪ್ರದೇಶಗಳಲ್ಲಿ ಇರುವ ಮಹಿಳಾ ಠಾಣೆಗಳಂತೆ ಮಕ್ಕಳಿಗೆ ಸಂಬಂಧಿಸಿದ ದೂರುಗಳನ್ನೆಲ್ಲ ಮಕ್ಕಳ ಪೊಲೀಸರೇ ನಿರ್ವಹಿಸಲಿದ್ದಾರೆ.
ಮಕ್ಕಳ ಪ್ರಕರಣಗಳ ನಿರ್ವಹಣೆಗೆ ಬರುವ ಪೊಲೀಸ್ ವ್ಯವಸ್ಥೆಗೆ ಮಕ್ಕಳ ರಕ್ಷಣಾ ಸೇವೆ (ಸಿಪಿಎಸ್)ಎಂದು ಹೆಸರಿಸಲಾಗಿದೆ. ರಾಜ್ಯದಲ್ಲಿರುವ ಎಲ್ಲ ಪೊಲೀಸ್ ಕಮೀಷನರ್ ಕಚೇರಿಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮಕ್ಕಳ ರಕ್ಷಣಾ ಸೇವೆ(ಸಿಪಿಎಸ್)ತಂಡಗಳು ಕಾರ್ಯನಿರ್ವಹಿಸಲಿವೆ.
ಭಿಕ್ಷಾಟನೆಯಲ್ಲಿ ತೊಡಗಿರುವ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾ ಗಿರುವ, ಮಾನವ ಕಳ್ಳಸಾಗಾಣೆಯಿಂದ ರಕ್ಷಿಸಲ್ಪಟ್ಟಿರುವ ಬಾಲಕಾರ್ಮಿಕ, ಜೀತ ಕ್ಕೊಳಗಾಗಿರುವವರು, ಅನಾಥರು, ವಿಕಲ ಚೇತನ, ಲೈಂಗಿಕ ದೌರ್ಜನ್ಯ ಕ್ಕೊಳಗಾದ ಮಕ್ಕಳ ಹೀಗೆ ನಮ್ಮ ನಿಮ್ಮ ಮಕ್ಕಳಿಗಿಂತ ಭಿನ್ನವಾದ ಜೀವನ ಸ್ಥಿತಿಯಲ್ಲಿರುವ ಮಕ್ಕಳ ಪ್ರಕರಣಗಳ ನಿರ್ವಹಣೆಯನ್ನು ಸಿಪಿಎಸ್ ಮಾಡ ಲಿದೆ.
ನಾಪತ್ತೆಯಾದ ಮಕ್ಕಳ ದೂರು ಗಳು ಸದ್ಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿವೆ. ಪೊಲೀಸ್ ಠಾಣೆಯ ಲ್ಲಿರುವ ನೂರಾರು ಪ್ರಕರಣಗಳ ನಡುವೆ ಪೊಲೀಸರು ಮಕ್ಕಳ ಪತ್ತೆಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಆದುದರಿಂದ ಮಕ್ಕಳ ಪತ್ತೆ-ನಾಪತ್ತೆಯೂ ಸೇರಿದಂತೆ ಮಕ್ಕಳ ಅಪರಾಧ ಪ್ರಕರಣಗಳ ಎಫ್‌ಐಆರ್. ವಿಚಾರಣೆ ಎಲ್ಲವನ್ನು ಸಿಪಿಎಸ್ ನಿರ್ವಹಿಸಲಿದೆ.
ಪೋಷಕರಿಂದ ನಿರ್ಲಕ್ಷ್ಯ, ದೌರ್ಜ ನ್ಯಕ್ಕೊಳಗಾಗಿರುವ ಪ್ರಕರಣಗಳ ವಿಚಾ ರಣೆಯನ್ನೂ ಸಿಪಿಎಸ್ ನಿರ್ವಹಿಸಲಿದೆ. ಮಕ್ಕಳಿಗಿರುವ ಸಮಸ್ಯೆಗಳ ಬಗ್ಗೆ ಕುಟುಂಬದವರೊಂದಿಗೆ ಚರ್ಚೆ, ಮಕ್ಕಳಿಗೆ ಮತ್ತು ಪೊಷಕರಿಗೆ ಸಹಾ ಯಕ ಆಗುವ ಸಲಹೆ ನೀಡುವುದು. ಸಂಘ ಸಂಸ್ಥೆಗಳ ಸಹಾಯ ಪಡೆದು ತೊಂದರೆಗಿಡಾಗಿರುವ ಮಕ್ಕಳ ಕಾಳಜಿ ವಹಿಸುವುದು ಸಿಪಿಎಸ್‌ನ ಕಾರ್ಯವಾ ಗಲಿದೆ. ಪೊಲೀಸ್ ಇಲಾಖೆಯಲ್ಲಿ ಸಿಸಿಬಿ (ಕ್ರೈಂ ಬ್ರಾಂಚ್) ಸಿಐಡಿ(ವಿಶೇಷ ತನಿಖಾ ತಂಡ)ಗಳಂತೆಯೇ ಸಿಪಿಎಸ್ ಸ್ವತಂತ್ರ ತನಿಖಾ ತಂಡವಾಗಿ ಕಾರ್ಯ ನಿರ್ವಹಿಸಲಿದೆ. ಸಿಪಿಎಸ್ ಆರಂಭ ದೊಂದಿಗೆ ಮಕ್ಕಳಿಗೆ ಸಂಬಂಧಿಸಿದ ಪ್ರಕರಗಳ ಶೀಘ್ರ ಇತ್ಯರ್ಥದ ನಿರೀಕ್ಷೆ ಹೊಂದಲಾಗಿದೆ. ಇದಕ್ಕಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಠಾಣೆ ಹಾಗೂ ಠಾಣೆಗೋರ್ವ ಇನ್‌ಸ್ಪೆಕ್ಟರ್ ಮಕ್ಕಳ ವಿಷಯದಲ್ಲೇ ತರಬೇತಿಗೊಂಡ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ.
Tagged with
dk,
lnews
ಮಂಗಳೂರು: ಭಾನುವಾರದ ರಜೆಯನ್ನು ಕಳೆಯಲೆಂದು ಸ್ನೇಹಿತರ ಜೊತೆ ನೀರಾಟವಾಡಲು ಹೋಗಿದ್ದ ಯುವಕನೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ಸೂರಿಂಜೆ ಪುಚ್ಚಾಡಿ ಎಂಬಲ್ಲಿ ಸಂಭವಿಸಿದೆ.
ಕಿನ್ನಿಗೋಳಿ ಬಳಿಯ ಹೊಸಕಾಡು ನಿವಾಸಿ ರೋಹಿತ್ (೧೭)ಎಂಬಾತನೇ ಮೃತಪಟ್ಟಿರುವ ಯುವಕನಾಗಿದ್ದಾನೆ. ಐಟಿಐ ಕಲಿತು ತರಬೇತಿಗಾಗಿ ಅರವಿಂದ ಮೋಟರ‍್ಸ್‌ಗೆ ಹೋಗುತ್ತಿದ್ದ ರೋಹಿತ್, ಭಾನುವಾರದ ರಜೆಯನ್ನು ಕಳೆಯಲೆಂದು ಮನೆ ಸಮೀಪದ ನಾಲ್ವರು ಸ್ನೇಹಿತರ ಜೊತೆ ಪುಚ್ಚಾಡಿ ನಂದಿನಿ ನದಿಗೆ ಬಂದಿದ್ದ. ಐವರೂ ನೀರಿನಲ್ಲಿ ಆಟವಾಡುತ್ತಿದ್ದರು. ಕಳೆದ ಕೆಲ ಸಮಯದಿಂದ ಧಾರಾಕಾರವಾಗಿ ಮಳೆ ಬರುತ್ತಿದ್ದ ಕಾರಣ ನದಿಯಲ್ಲಿ ನೀರಿನ ಮಟ್ಟ ಅಧಿಕವಾಗಿತ್ತು. ಈ ವೇಳೆ ನೀರಿನಲ್ಲಿ ಸ್ನಾನಮಾಡುವುದು ಅಪಾಯವಾಗಿದ್ದರೂ ಈ ಸೂಚನೆ ಗಣನೆಗೆ ತೆಗೆದುಕೊಳ್ಳದ ಯುವಕರು ನದಿಗಿಳಿದಿದ್ದರು. ಹೀಗಾಗಿ ಸೆಳೆತಕ್ಕೆ ಸಿಲುಕಿದ ರೋಹಿತ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಇದನ್ನು ಗಮನಿಸಿದ ಇತರ ಸ್ನೇಹಿತರು ರೋಹಿತ್ ಮನೆಗೆ ಸುದ್ದಿ ಮುಟ್ಟಿಸಿ ತಾವು ಮನೆ ಸೇರಿದ್ದಾರೆ. ನಿನ್ನೆ ತಡರಾತ್ರಿವರೆಗೆ ಹುಡುಕಾಡಿದರೂ ರೋಹಿತ್ ಶವ ಪತ್ತೆಯಾಗಿಲ್ಲ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews,
feature,
mlore
ದೇವರ ಸರ, ಕೈಗೆ ಕೇಸರಿ ನೂಲು ಕಟ್ಟಿಕೊಂಡ ಮುಸ್ಲಿಂ ಯುವಕ!
ಮಂಗಳೂರು : ಹಿಂದೂ ಯುವತಿ ಜೊತೆ ಚಕ್ಕಂದವಾಡಲು ಹೋದ ಮುಸ್ಲಿಂ ಯುವಕನೊಬ್ಬ ಹಿಂದೂ ಸಂಘಟನೆಯವರ ಕೈಗೆ ಸಿಕ್ಕಿ ಬಿದ್ದು ಹಿಗ್ಗಾಮುಗ್ಗಾ ಥಳಿಸಿಕೊಂಡಿರುವ ಘಟನೆ ನಿನ್ನೆ ಸಂಜೆ ಮೊರ್ಗನ್ಸ್‌ಗೇಟ್ ಬಳಿ ನಡೆದಿದೆ.
ಯುವಕನನ್ನು ಬಂಟ್ವಾಳ ನಿವಾಸಿ ತಸ್ಲೀಮ್ ಎಂದು ಗುರುತಿ ಸಲಾಗಿದೆ. ಆಕೆ ಶಕ್ತಿನಗರದ ನಿವಾಸಿ. ಕಾಲ್‌ಸೆಂಟರ್‌ನಲ್ಲಿ ದುಡಿಯುತ್ತಿದ್ದಳು, ಅದೊಂದು ದಿನ ತಪ್ಪಿ ಬಂದಿದ್ದ ಮಿಸ್ಡ್ ಕಾಲ್ ಇಬ್ಬರನ್ನೂ ಒಂದುಗೂಡಿಸಿತ್ತು. ಪರಿಚಯ, ಆತ್ಮೀಯತೆಗೆ ತಿರುಗಿ ಅಲ್ಲಿಂದ ಮತ್ತೂ ಮುಂದುವರಿದಿತ್ತು. ಯುವತಿ ಕೆಲಸ ಬಿಟ್ಟು ಬರುವ ಸಮಯಕ್ಕೆ ಯುವಕ ದಿನಾ ಮೊರ್ಗನ್ಸ್‌ಗೇಟ್ ಬಳಿ ಹಾಜರಿರುತ್ತಿದ್ದ. ಇಲ್ಲೇ ಸಮೀಪ ಇರುವ ನಿರ್ಜನ ಪ್ರದೇಶದಲ್ಲಿ ಇಬ್ಬರೂ ಸಂಧಿಸಿ ಬಳಿಕ ಮನೆಗೆ ತೆರಳುತ್ತಿದ್ದರು. ಇದು ಹಿಂದೂ ಸಂಘಟನೆಗೆ ಗೊತ್ತಾಗಿ ಯುವಕನ ಪೂರ್ವಾಪರ ಕೆದಕಿದಾಗ, ಆತ ಮುಸ್ಲಿಂ ಯುವಕನೆಂದೂ ಯುವತಿ ಹಿಂದೂ ಸಮುದಾಯದವಳೆಂದೂ ತಿಳಿದು ಬಂದಿತ್ತು. ಹೀಗಾಗಿ ತಸ್ಲಿಮ್‌ಗೆ ಬುದ್ದಿ ಕಲಿಸಲು ಹೊಂಚು ಹಾಕಿದ್ದ ಸಂಘಟನೆ ಕಾರ್ಯಕರ್ತರು ನಿನ್ನೆ ಇಬ್ಬರೂ ಒಟ್ಟಗೂಡಿ ಹೋಗುತ್ತಿರುವಾಗ ಹಿಂಬಾಲಿಸಿದ್ದರು. ಆದರೆ ಪೊದೆಯ ಹಿಂದೆ ತಸ್ಲಿಮ್‌ನ ಬೈಕ್ ಸಿಕ್ಕಿತೇ ಹೊರತು ಜೋಡಿ ಪತ್ತೆಯಾಗಿರಲಿಲ್ಲ. ಹೀಗಾಗಿ ಬೈಕ್ ಬಳಿ ಸಂಘಟನೆ ಕಾರ್ಯಕರ್ತರು ಕಾದು ಕುಳಿತಿದ್ದು, ಎಲ್ಲಾ ಮುಗಿಸಿ ಬರುತ್ತಿದ್ದ ಜೋಡಿಯನ್ನು ಹಿಡಿದು ಥಳಿಸಿದ್ದಾರೆ. ಈ ವೇಳೆ ಯುವಕ ತನ್ನ ಹೆಸರು ರಾಹುಲ್ ಎಂದು ಪರಿಚಯಿಸಿಕೊಂಡ ಅಲ್ಲದೆ ಹಿಂದೂವಿನಂತೆ ಕಾಣಲು ದೇವರ ಸರ ಮತ್ತು ಕೈಗೆ ನೂಲು ಕಟ್ಟಿಕೊಂಡಿದ್ದ ಎಂದು ತಿಳಿದು ಬಂದಿದೆ. ಜೋಡಿಗೆ ಥಳಿಸಿದ ಸಂಘಟನೆ ಕಾರ್ಯಕರ್ತರು ಬಳಿಕ ಇಬ್ಬರನ್ನೂ ಪಾಂಡೇಶ್ವರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಇಬ್ಬರ ಮನೆ ಮಂದಿಯನ್ನೂ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.
Tagged with
cnews,
feature,
mlore
ಪ್ಲ್ಯಾಗ್ ಮೀಟರ್ ಅಳವಡಿಕೆ ವಿಚಾರ
ಕಾರ್ಕಳ: ರಾಜ್ಯವ್ಯಾಪ್ತಿಯಲ್ಲಿ ಬಾಡಿಗೆ ರಿಕ್ಷಾಗಳಿಗೆ ಪ್ಲ್ಯಾಗ್ ಮೀಟರ್ ಕಡ್ಡಾಯವಾಗಿ ಅಳವಡಿಸುವಂತೆ ಸರಕಾರ ನೀಡಿದ ಅದೇಶದ ಬೆನ್ನಲ್ಲೇ ಕಾರ್ಕಳ ರಿಕ್ಷಾ ಚಾಲಕ-ಮಾಲಕ ಸಂಘದ ಸದಸ್ಯರೊಳಗೆ ಭಿನ್ನಾಭಿಪ್ರಾಯ ತಲೆದೋರಿ ಸಂಘವು ಇಬ್ಬಾಗವಾ ಗುವ ಸಾಧ್ಯತೆಗಳ ನಡುವೆ ಸಂಘದ ಅಧ್ಯಕ್ಷ ನ್ಯಾ.ಬಾಲಕೃಷ್ಣ ಶೆಟ್ಟಿ ಅವರು ತನ್ನ ಕಚೇರಿಯಲ್ಲಿ ಹಠಾತ್ ಪತ್ರಿಕಾಗೋಷ್ಠಿ ಕರೆದು ಸರಕಾರದ ನಿರ್ಧಾರಕ್ಕೆ ತನ್ನ ಸಹಮತ ತೋರ‍್ಪಡಿಸಿದರು.
ಪ್ಲಾಗ್ ಮೀಟರ್ ಹೆಸರಿನಲ್ಲಿ ಸಂಘವನ್ನು ಇಬ್ಬಾಗ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದು, ಇದಕ್ಕೆ ಸಂಘದ ಸದಸ್ಯರು ಅವಕಾಶ ನೀಡದಂತೆ ಕೋರಿದರು. ಪ್ಲಾಗ್ ಮೀಟರ್ ಅಳವಡಿಸುವುದರಿಂದ ರಿಕ್ಷಾ ಚಾಲಕರಿಗೆ ನ್ಯಾಯೋಚಿತವಾಗಿ ದುಡಿಯಲು ಅವಕಾಶ ಸಿಗುತ್ತದೆ. ರಿಕ್ಷಾ-ಚಾಲಕ ಮಾಲಕರು ಆರ್ಥಿಕವಾಗಿ ಹಿಂಜರಿದವರಾಗಿರುವುದರಿಂದ ಸಮಯಾವಕಾಶ ಕೋರಿ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಪತ್ರ ಬರೆಯಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.
ತಾಲೂಕು ವ್ಯಾಪ್ತಿಯಲ್ಲಿ ಸುಮಾರು ೧೨೦೦ ರಿಕ್ಷಾಗಳಿದ್ದು, ಅದರ ಬಹುಪಾಲು ಚಾಲಕ- ಮಾಲಿಕರು ಸಂಘದೊಂದಿಗೆ ಗುರುತಿಸಿಕೊಂಡ ವರಾಗಿದ್ದಾರೆ. ಬೆರಳೆಣಿಕೆ ಸಂಖ್ಯೆಯಲ್ಲಿ ಹೊಸಸಂಘದೊಂದಿಗೆ ಗುರುತಿಸಿಕೊಳ್ಳಲು ಕೆಲವರು ಮುಂದಾಗಿದ್ದಾರೆ. ಅಂತವರು ಇದುವರೆಗೆ ಸಂಘದ ಸದಸ್ಯರಾಗಿರಲಿಲ್ಲ. ಕೆಲ ಚಾಲಕರಿಗೆ ಲೈಸನ್ಸ್ ಕೂಡಾ ಇಲ್ಲ. ಇನ್ನೂ ಕೆಲ ರಿಕ್ಷಾಗಳಿಗೆ ಇನ್ಸೂರೆನ್ಸ್ ಇಲ್ಲದಿರುವ ವಿಚಾರವನ್ನು ಅವರು ಇದೇ ವೇಳೆಗೆ ಬಹಿರಂಗಪಡಿಸಿದರು.
ಈ ಎಲ್ಲಾ ಬೆಳವಣಿಗೆಯ ನಡುವೆ ದಲಿತ ಸಂಘಟನೆಯ ಮುಖಂಡ ಗಣೇಶ್‌ರಾಣೆ ಅವರು ನಗರದ ಹೋಟೆಲ್‌ವೊಂದರಲ್ಲಿ ಪ್ರತಿಕಾಗೋಷ್ಠಿ ನಡೆಸಿ ಕಾರ್ಕಳದಂತ ಕಿರಿದಾದ ಪೇಟೆಯಲ್ಲಿ ರಿಕ್ಷ್ಷಾಗಳಿಗೆ ಪ್ಲಾಗ್ ಮೀಟರ್ ಅಗತ್ಯವಿಲ್ಲ. ಇದು ಬಡ ರಿಕ್ಷಾಚಾಲಕರಿಗೆ ಹೊಣೆಯಾಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Tagged with
auto,
dk,
feature,
lnews
ಮಂಗಳೂರು:ಅವಿಭಜಿತ ದ.ಕ. ಜಿಲ್ಲೆಯ ಬಿಜೆಪಿಯ ಕೇಂದ್ರ ಎನಿಸುತ್ತದೆ. ರಾಜ್ಯದಲ್ಲಿ ಎಲ್ಲೂ ಇಲ್ಲದಷ್ಟು ಏಕಶಿಲೆಯಲ್ಲಿ ಕಡಿದಂ ತಿರುವ ಕಾರ್ಯಕರ್ತರು ಇಲ್ಲಿದ್ದಾರೆ. ಸಂಘದ ಮೂಲಕ ಬಿಜೆಪಿಗೆ ಮಾರ್ಗದರ್ಶನವಾ ಗುವುದೂ ಇಲ್ಲಿಂದಲೇ ಎಂದೆಲ್ಲ ಪ್ರತಿಬಿಂಬಿ ತವಾಗುವ ಈ ಪ್ರದೇಶದಲ್ಲಿನ ಹಾಲಿ ಬಿಜೆಪಿಯ ಶಾಸಕರು ಡೋಲಾಯಮಾನ ಸ್ಥಿತಿ ಅನುಭವಿಸುತ್ತಿದ್ದಾರೆ.
ದ.ಕ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಿಜೆಪಿಯ ಪಾಲಿಗಿದೆ. ಉಡುಪಿಯ ಐದು ಕ್ಷೇತ್ರಗಳಲ್ಲಿ ನಾಲ್ಕು ಬಿಜೆಪಿಯ ತೆಕ್ಕೆಯಲ್ಲಿವೆ. ದ.ಕ. ಜಿಲ್ಲೆಯಲ್ಲಿ ನಾಲ್ಕನ್ನು ಆರಕ್ಕೆ ಏರಿಸುವ ಹಾಗೂ ಉಡುಪಿ ಯಲ್ಲಿ ನಾಲ್ಕನ್ನು ಉಳಿಸಿಕೊಳ್ಳುವ ಹೊಣೆಗಾ ರಿಕೆಯನ್ನು ಸ್ವಯಂ ಹೇರಿಕೊಂಡಿರುವ ಬಿಜೆಪಿಯ ಸ್ಥಳಿಯ ಸಂಘಟಕರು ಹಾಲಿ ಶಾಸಕರಲ್ಲಿ ಹಲವರಿಗೆ ಕೈಕೊಟ್ಟು ಹೊಸಬರಿಗೆ ಅವಕಾಶ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಎರಡು ಅವಧಿಗೆ ಶಾಸಕರಾಗಿರುವ ರಘುಪತಿ ಭಟ್ಟ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದಾರೆ ಆದರೆ ಬಿಜೆಪಿ ಶಕ್ತಿ ಕೇಂದ್ರದಿಂದ ಬಂದ ಮಾಹಿತಿಯಂತೆ ರಘುಪತಿ ಭಟ್ಟರು ಮತ್ತೆ ಸ್ಫರ್ಧೆಗೆ ಇಳಿಯುವ ಅವಕಾಶ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯ ಬಳಿಕ ಪತ್ನಿ ಪದ್ಮಪ್ರಿಯ ಕಾಣೆಯಾದ ಮತ್ತು ಆಕೆಯ ಆತ್ಮಹತ್ಯೆ ಪ್ರಕರಣ ಹಾಗೂ ಅದರ ಹಿಂದಿನ ಹಗರಣ ಜನ ಮರೆತಿಲ್ಲ. ಜನರು ಮರೆತೆನೆಂದರೂ ಕಾಂಗ್ರೆಸಿಗರು ಅದನ್ನು ಮರೆಯಲು ಬಿಡುತ್ತಿಲ್ಲ. ಇತ್ತೀಚೆಗೆ ನಡೆದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್‌ಕುಮಾರ್ ಉಡುಪಿ ವಲಯದಲ್ಲಿ ಕಡಿಮೆ ಮತಗಳಿಸುವಂತಾಗಲು ಪದ್ಮಪ್ರಿಯ ಪ್ರಕರಣವೂ ಕಾರಣ ಎಂಬುದನ್ನು ಮನಗಂಡಿರುವ ಬಿಜೆಪಿ ನಾಯಕರು ರಘುಪತಿ ಭಟ್ಟರಿಗೆ ಟಿಕೆಟ್ ಕೊಟ್ಟರೆ ಭಜನೆ ಮಾಡುತ್ತ ಕುಳಿತುಕೊಳ್ಳಬೇಕಾಗುತ್ತದೆ ಎಂದು ಸಂದೇಶ ರವಾನಿಸಿ ದ್ದಾರೆ.
ಇನ್ನು ಕಾಪು ಕ್ಷೇತ್ರಕ್ಕೆ ಬಂದರೆ ಲಾಲಾಜಿ ಮೆಂಡನ್ ಬಗ್ಗೆ ಬಿಜೆಪಿಯಲ್ಲಿ ಆಂತರಿಕವಾಗಿ ಭಾರಿ ಅಸಮಾಧನಾವೇ ಕೇಳಿ ಬರುತ್ತಿದೆ. ಚುನಾವಣೆಯ ಹೊತ್ತಿಗೆ ಅಸಮಾಧಾನ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪರ್ಯಾಯ ಅಭ್ಯರ್ಥಿಯ ಹುಡುಕಾಟ ಈಗಿನಿಂದಲೆ ಆರಂಭವಾಗಿದೆ.
ಕಾರ್ಕಳದಲ್ಲಿ ಬಿಜೆಪಿಯ ಮಟ್ಟಿಗೆ ಸುನಿಲ್‌ಕುಮಾರ್ ಸೂಕ್ತ ಆಯ್ಕೆ ಎಂಬ ಅಭಿಪ್ರಾಯ ಇದೆಯಾದರೂ ಪರಿಸ್ಥಿತಿ ಅವರಿಗೆ ಪೂರಕವಾಗಿಲ್ಲ ಎಂಬುದನ್ನು ಕಡೆಗಣಿಸುವಂತಿಲ್ಲ. ಕಳೆದ ಲೋಕಸಭೆಯ ಉಪಚುನಾವಣೆಯಲ್ಲಿ ಸುನಿಲ್ ಕಡಿಮೆ ಮತ ಪಡೆದ ಕ್ಷೇತ್ರಗಳಲ್ಲಿ ಕಾರ್ಕಳವೂ ಇದೆ ಎಂಬುದು ನಿರ್ಲಕ್ಷಿಸುವಂತಿಲ್ಲ. ಆದರೆ ಇಲ್ಲಿ ಸುನಿಲ್‌ಗೆ ಪರ್ಯಾಯ ಕಾಣುತ್ತಿಲ್ಲ.
ಇನ್ನು ದ.ಕ. ಜಿಲ್ಲೆಗೆ ಬಂದರೆ ಇಲ್ಲಿ ಪ್ರತಿಷ್ಠಿತ ಕ್ಷೇತ್ರ ಎನಿಸುವ ಬಂಟ್ವಾಳದಲ್ಲಿ ನಾಗರಾಜ ಶೆಟ್ಟರು ಇನ್ನೊಂದು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇಲ್ಲಿ ಜಿತೇಂದ್ರ ಕೊಟ್ಟಾರಿ ಎಂಬ ಯುವಕ ಒಕ್ಕರಿಸಿಯಾಗಿದೆ. ಬಿಜೆಪಿಯಲ್ಲಿ ನಾಗರಾಜ ಶೆಟ್ಟರಿಗೆ ಹಿಂದಿನಂತಹ ಹಿಡಿತವೂ ಇಲ್ಲ. ಕಲ್ಲಡ್ಕ ಪ್ರಭಾಕರ ಭಟ್ಟರು ಜಿತೇಂದ್ರ ಕೊಟ್ಟಾರಿಗೆ ಅಶೀರ್ವಾದ ಮಾಡುವ ಸಾಧ್ಯತೆಯೇ ಹೆಚ್ಚು ಎನ್ನುವುದು ಈಗಿನ ಪರಿಸ್ಥಿತಿಯ ಅವಲೋಕನ.
ಬೆಳ್ತಂಗಡಿಯಲ್ಲಿ ತನ್ನದೇ ಸಹೋದರನನ್ನು ಸೋಲಿಸಿ ಶಾಸಕನಾಗಲೇ ಬೇಕು ಎಂಬ ಪ್ರಭಾಕರ ಬಂಗೇರರ ಕನಸು ಒಮ್ಮೆ ಈಡೇರಿದೆ. ಮತ್ತೆ ವಸಂತ ಬಂಗೇರರು ಸ್ಪರ್ಧಿಸುವ ಸಾಧ್ಯತೆ ಇಲ್ಲದೆ ಇರುವುದರಿಂದ ಪ್ರಭಾಕರ ಬಂಗೇರರ ವೈಯಕ್ತಿಕ ಜಿದ್ದಿಗೆ ಅವಕಾಶ ಇರಲಿಕ್ಕಿಲ್ಲ. ಪ್ರಭಾಕರ ಬಂಗೇರರು ಆಸೆಪಟ್ಟರೂ ಗಂಗಾಧರ ಗೌಡರು ಬಿಡಲಾರರು. ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಹೋಗಿ ಈಗ ಬಿಜೆಪಿಯ ತೆಕ್ಕೆಯಲ್ಲಿರವ ಗಂಗಾಧರ ಗೌಡರು ಬಿಜೆಪಿಗೆ ಬಂದಿರುವುದೇ ಮಗ ರಂಜನ್ ಗೌಡರ ರಾಜಕೀಯ ಭವಿಷ್ಯಕ್ಕಾಗಿ.
ಈ ಬಾರಿ ರಂಜನ್ ಗೌಡರಿಗೆ ಟಿಕೆಟ್ ದೊರೆಯಲೇ ಬೇಕು ಗೆಲವು ಸಾಧಿಸಲೇ ಬೇಕು ಎಂಬ ಹೋರಾಟದಲ್ಲಿ ಗಂಗಾಧರ ಗೌಡರಿದ್ದಾರೆ. ಅವರು ಈ ಹೋರಾಟದಲ್ಲಿ ಯಶ ಗಳಿಸುವ ಲಕ್ಷಣಗಳೂ ಗೋಚರಿಸುತ್ತಿವೆ.
ಒಂದು ಕಾಲದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಪ್ರತಿನಿಧಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈಗ ಬಿಜೆಪಿಯ ಸ್ಥಿತಿ ಪೇಲವವಾಗಿದೆ. ಇದಕ್ಕೆ ಹಾಲಿ ಶಾಸಕಿ ಮಲ್ಲಿಕಾ ಪ್ರಸಾದರ ಕಾರ್ಯವೈಖರಿಯೇ ಕಾರಣ ಎಂಬ ಅಸಮಾಧಾನದ ಮಾತುಗಳು ಈಗಲೇ ಕೇಳಿ ಬರುತ್ತಿರುವುದು ಹಾಗೂ ಸದಾನಂದ ಗೌಡ ಮತ್ತು ನಳಿನ್‌ಕುಮಾರ್ ಕಟಿಲ್ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದು ಮಲ್ಲಿಕಾ ಪ್ರಸಾದರ ಟಿಕೆಟ್ ಆಕಾಂಕ್ಷೆಗೆ ತಣ್ಣೀರೆರೆಚುವ ಸಾಧ್ಯತೆ ಇದೆ.
ಸುಳ್ಯ ಕ್ಷೇತ್ರದಲ್ಲಿ ಅಂಗಾರರಲ್ಲದೆ ಬಿಜೆಪಿಗೆ ಬೇರೆ ಆಯ್ಕೆಯೇ ಇಲ್ಲ. ಅಂಗಾರರಂತೆಯೇ ಮಂಗಳೂರಿನ ದಕ್ಷಿಣದಲ್ಲಿ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಯೋಗೀಶ್ ಭಟ್ಟರನ್ನು ಸ್ಥಾನ ಪಲ್ಲಟ ಗೊಳಿಸಲು ಅಂತರಿಕ ಪ್ರಯತ್ನ ನಡೆಯುತ್ತಿರುವುದು ಬಹಿರಂಗ ಸತ್ಯ. ಆದರೆ ಯೋಗೀಶ್ ಭಟ್ಟರು ತಮ್ಮ ಸ್ಥಾನ ಭದ್ರ ಪಡಿಸಿಕೊಂಡಿರುವ ಲಕ್ಷಣಗಳು ಗೋಚರಿಸುತ್ತಿವೆ. ಶ್ರೀಕರ ಪ್ರಭು ಶಾಸಕರಾಗುವ ಕನಸು ಸದ್ಯಕ್ಕೆ ನನಸಾಗುವ ಲಕ್ಷಣಗಳಿಲ್ಲ ಎಂದೆನಿಸುತ್ತದೆ. ಇನ್ನುಳಿದಂತೆ ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬೈಂದೂರಿನಲ್ಲಿ ಲಕ್ಷ್ಮೀನಾರಾಯಣರ ಸೀಟು ಭದ್ರವಾಗಿದೆ.
ಮಂಗಳೂರು ಉತ್ತರ (ಸುರತ್ಕಲ್) ಕ್ಷೇತ್ರದಲ್ಲಿ ಕೃಷ್ಣ ಪಾಲೇಮಾರ್ ಅವರಿಗೆ ಟಿಕೇಟು ನೀಡಿದರೆ ಮಾತ್ರ ಇಲ್ಲಿ ಬಿಜೆಪಿ ಗೆಲ್ಲುತ್ತದೆಂಬ ಮಾತು ಅವರ ಬೆಂಬಲಿಗರಿಂದ ಕೇಳಿ ಬರುತ್ತಿದೆ. ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಬಿಜೆಪಿಯಿಂದ ಸಂತೋಷ್ ಶೆಟ್ಟಿ ಬೊಳಿಯಾರ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಅದೇ ರೀತಿ ಮುಲ್ಕಿ-ಮೂಡಬಿದ್ರೆ ಕ್ಷೇತ್ರದಿಂದ ಸ್ಪರ್ಧಿಸಲು ಸತ್ಯಜಿತ್ ಸುರತ್ಕಲ್, ಜಗದೀಶ್ ಅಧಿಕಾರಿ , ಸುಚರಿತ ಶೆಟ್ಟಿ ಮೊದಲಾದವರ ಹೆಸರು ಚಾಲ್ತಿಯಲ್ಲಿದೆ.
Tagged with
bjp,
dk,
feature,
lnews
ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಚುಂಬನದಲ್ಲಿ ತಲ್ಲೀನರಾಗಿದ್ದ ದೆಹಲಿಯ ಮೂವರು ತರುಣ ಹಾಗೂ ತರುಣಿಯ ರನ್ನು ಪೊಲೀಸರು ವಶಕ್ಕೆ ತೆಗೆದುಕೊಂ ಡಿದ್ದು, ಅವರಿಗೀಗ ಮೂರು ತಿಂಗಳ ಜೈಲುವಾಸ ವಿಧಿಸಲಾಗಿದೆ.
ಗುರುವಾರ ಇಬ್ಬರು ಯುವತಿಯರು ಮತ್ತು ಒಬ್ಬ ತರುಣ ರಸ್ತೆ ಮೇಲೆಯೇ ಚುಂಬನಗಳ ವಿನಿಮಯದಲ್ಲಿ ತೊಡಗಿ ದ್ದರು. ಜತೆಗೆ ಆ ಮೂವರೂ ಕುಡಿದಿದ್ದ ರಿಂದ ಅವರ ವಿರುದ್ಧ ಪ್ರಕರಣ ದಾಖಲಿಸ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆ.೨೯೪ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯದಲ್ಲಿ ತೊಡಗುವುದಾಗಲಿ, ಹಾಡುವುದಾಗಲಿ, ಘೋಷಣೆ ಕೂಗುವುದಾಗಲಿ, ಬಯ್ಗುಳ ಪ್ರಯೋಗಿಸುವುದಾಗಲಿ ಮಾಡಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.
ವಾಣಿಜ್ಯ ಸಂಕೀರ್ಣವೊಂದರಿಂದ ಹೊರಬಂದ ಇಬ್ಬರು ಹುಡುಗಿಯರು ಮತ್ತು ಒಬ್ಬ ಯುವಕ ಪರಸ್ಪರ ಚುಂಬನದಲ್ಲಿ ತೊಡಗಿದರು. ತಕ್ಷಣ ನಾವು ಅವರನ್ನು ಬಂಧಿಸಿ, ಜೈಲಿಗಟ್ಟಿದೆವು ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ನನ್ನ ವ್ಯಾಪ್ತಿಯಲ್ಲಿ ಕಾರ‍್ಯ ರೂಪಕ್ಕೆ ತರಲ್ಲ!: ಪ್ರಕರಣಕ್ಕೆ ಸಂಬಂಧಿಸಿ ರಾಜಧಾನಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲವಾಗಿ ನಡೆದುಕೊಂಡರೆ, ಚುಂಬನಗಳನ್ನು ಕೊಟ್ಟುಕೊಂಡರೆ ಕಾನೂನು ಪ್ರಕಾರ ಖಂಡಿತ ದಂಡಿಸಬಹುದು. ಆದರೆ ನನ್ನ ವ್ಯಾಪ್ತಿಯಲ್ಲಿ ಇದನ್ನು ಕಾರ್ಯರೂಪಕ್ಕೆ ತರುವುದಿಲ್ಲ. ಯಾರನ್ನೂ ಬಂಧಿಸುವುದಿಲ್ಲ. ಏಕೆಂದರೆ ಮುತ್ತು ಕೊಡೋದು ಈಗ ಸಾಮಾನ್ಯವಾಗಿಬಿಟ್ಟಿದೆ. ಆದ್ದರಿಂದ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ರಾಜನ್ ಭಗತ್ ಹೇಳಿರುವುದಾಗಿ ತಿಳಿದು ಬಂದಿದೆ.
Tagged with
feature,
nnews
ಪುತ್ತೂರು ದರ್ಬೆಯ ಜನಪ್ರತಿನಿಧಿಗಳು ಎಲ್ಲಿದ್ದಾರೆ?
ಪುತ್ತೂರು: ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ಅಪಾಯ ಗ್ಯಾರಂಟಿ. ಅಪ್ಪಿತಪ್ಪಿ ಎಲ್ಲಾದರೂ ಈ ಗುಂಡಿಗೆ ಬಿದ್ದು ಬಿಟ್ಟರೆ ಬೆಂಗಳೂರಿನ ಮೋರಿ ಗಳಲ್ಲಿ ಕಾಣೆಯಾದ ಬಾಲಕರ ಸ್ಥಿತಿಯೇ ಬರಬಹುದು. ಇಂತಹ ಒಂದು ಅಪಾಯಕಾರಿ ಡ್ರೈನೇಜ್ ಗುಂಡಿ ಇಲ್ಲಿನ ದರ್ಬೆಯಲ್ಲಿದೆ. ಪುತ್ತೂರು ಪುರಸಭೆಯ ವ್ಯಾಪ್ತಿಗೆ ಬರುವ ಈ ಗುಂಡಿಗೆ ಮುಚ್ಚಳಿಕೆ ಹಾಕಿ ಅಂತ ಈ ಭಾಗದ ಜನರು ಅದೆಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದ್ದಾರೋ ಗೊತ್ತಿಲ್ಲ! ಆದರೆ ಗುಂಡಿ ಮಾತ್ರ ಈಗಲೂ ಹಾಗೆಯೇ ಇದೆ.
ಸಾಮೆತ್ತಡ್ಕದಿಂದ ಎಳ್ಮುಡಿಗೆ ಸೇರುವ ಒಂದು ತೋಡಿಗೆ ದರ್ಬೆ ಅಂಕಲ್ ಸ್ವೀಟ್ಸ್ ಬಳಿ ಮೋರಿ ನಿರ್ಮಿ ಸಲಾಗಿದೆ, ಇದು ತುಂಬಾ ಹಳೆಯ ಕಥೆ. ಈ ಮೋರಿಯ ಪಕ್ಕದಲ್ಲೇ ಮುಖ್ಯ ರಸ್ತೆಯ ಫುಟ್‌ಪಾತ್‌ಗೆ ತಾಗಿಕೊಂಡೆ ಒಂದು ಗುಂಡಿಯನ್ನು ಕೂಡ ಮಾಡಲಾಗಿದೆ. ಬೇಸಿಗೆ ಕಾಲದಲ್ಲಂತೂ ಇಲ್ಲಿ ನಿಂತುಕೊಳ್ಳಲು ಆಗದಷ್ಟು ದುರ್ವಾಸನೆ ಬರುತ್ತದೆ. ಎಲ್ಲಾ ಕಡೆಯ ಮನೆ ಹಾಗೂ ಹೊಟೇಲ್ ತ್ಯಾಜ್ಯಗಳು ಈ ತೋಡಿನಲ್ಲಿ ಬಂದು ಇಲ್ಲಿ ಸಂಗ್ರಹ ವಾಗುತ್ತದೆ. ಇನ್ನು ಮಳೆಗಾಲದಲ್ಲಿ ಈ ಗುಂಡಿಯಲ್ಲಿ ನೀರು ತುಂಬಿ ರಸ್ತೆಯ ಮೇಲೆಲ್ಲಾ ಹರಿಯುತ್ತದೆ. ಮೋರಿ ಯಲ್ಲಿ ಹೂಳು ಹಾಗೂ ಹೊಯ್ಗೆ ತುಂಬಿಕೊಂಡು ಮೋರಿ ಬ್ಲಾಕ್ ಆಗಿ ದ್ದರಿಂದ ನೀರು ಸರಾಗವಾಗಿ ಹರಿದು ಹೋಗದೇ ತುಂಬಾ ಸಮಸ್ಯೆಯಾ ಗುತ್ತಿದೆ. ರಾತ್ರಿ ಸಮಯದಲ್ಲಿ ಗುಂಡಿ ಸ್ಪಷ್ಟವಾಗಿ ಕಾಣದೆ ಬೈಕ್ ಸವಾರ ಬೈಕ್ ಸಮೇತ ಗುಂಡಿಗೆ ಬಿದ್ದು ಗಾಯಗೊಂಡದ್ದು ಅಲ್ಲದೆ ದನಗಳು ಈ ಗುಂಡಿಗೆ ಬಿದ್ದು ಸಾವನ್ನಪ್ಪಿವೆ.
ರೋಗ ಭೀತಿ: ಈ ತೋಡಿನಲ್ಲಿ ತ್ಯಾಜ್ಯಗಳು ಬರುತ್ತಿರುವುದರಿಂದ ವಿಪರೀತ ಸೊಳ್ಳೆಗಳು ಈ ಭಾಗದಲ್ಲಿ ತುಂಬಿಕೊಂಡಿವೆ. ಇದರಿಂದ ಮಲೇರಿಯಾ, ಡೆಂಗ್ಯೂನಂತಹ ಮಾರಕ ರೋಗಗಳು ಬರುವ ಅಪಾ ಯವೂ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಜನಪ್ರತಿ ನಿಧಿಗಳು ಸ್ಪಂದಿಸುತ್ತಿಲ್ಲ ಎನ್ನುವುದು ಇಲ್ಲಿನ ಜನರ ಆರೋಪ. ಒಟ್ಟಿನಲ್ಲಿ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತು ಕೊಂಡು ಕಾರ‍್ಯಪ್ರವೃತ್ತರಾಗಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
Tagged with
dk,
feature,
lnews
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಕಾರ್ಯಕ್ರಮ ದಲ್ಲಿ ಬಿಡುಗಡೆಗೊಂಡ ಪ್ರಸಾದ್ ಪಬ್ಲಿಷರ‍್ಸ್ ಪ್ರಕಟಿಸಿದ ಪುರುಷ ಪ್ರಕಾಶಂ ಕೃತಿಯಲ್ಲಿ ದಲಿತರನ್ನು ನಿಂದಿಸಲಾಗಿದೆ ಎಂಬ ಆರೋಪ ಪೊಲೀಸ್ ಕಮಿಷ ನರ್ ಸೀಮಂತ್‌ಕುಮಾರ್ ಸಿಂಗ್‌ರ ಅಧ್ಯಕ್ಷತೆಯಲ್ಲಿ ನಡೆದ ದಲಿತರ ಕುಂದು ಕೊರತೆ ಪರಿಶೀಲನಾ ಸಭೆಯಲ್ಲಿ ಕೇಳಿ ಬಂತು.
ಅಂಬೇಡ್ಕರ್ ನಿಗಮದಲ್ಲಿ ದಲಿತರ ಸಲ್ಲಿಸುವ ಅರ್ಜಿಗೆ ಫಲ ಸಿಗುತ್ತಿಲ್ಲ. ಎಷ್ಟೋ ದಲಿತ ಬಡ ಕುಟುಂಬಗಳು ಕೆಲ ತಿಂಗಳ ಹಿಂದೆಯೇ ಅರ್ಜಿ ಹಾಕಿ ನೇರ ಸಾಲಕ್ಕಾಗಿ ಕಾದು ಕುಳಿತಿದೆ. ಆದರೆ ಇನ್ನೂ ಅವರಿಗೆ ಸಾಲ ಸಿಕ್ಕಿಲ್ಲ. ಈ ಬಗ್ಗೆ ನ್ಯಾಯ ಒದಗಿಸಬೇಕು ಎಂದು ಎಸ್.ಪಿ ಆನಂದ ಆಗ್ರಹಿಸಿದರು.
ಕಾವೂರು ಠಾಣಾ ವ್ಯಾಪ್ತಿಯ ಮುಲ್ಲ ಕಾಡಿನ ದಲಿತ ಯುವಕ ಕುಮಾರ್‌ರ ಕೊಲೆಗೆ ಸಂಬಂಧಿಸಿದಂತೆ ಪ್ರಥಮ ಆರೋಪಿಯನ್ನು ಉದ್ದೇಶ ಪೂರ್ವಕ ವಾಗಿ ಕೈ ಬಿಡಲಾಗಿದೆ ಎಂದು ರಮೇಶ್ ಕೋಟ್ಯಾನ್ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಎಸಿಪಿ ಪುಟ್ಟಮಾದಯ್ಯ ಪ್ರಕರಣದ ತನಿಖೆ ಯನ್ನು ಖುದ್ದು ತಾನೇ ನಡೆಸುತ್ತಿದ್ದು, ದೂರುದಾರರು ಮರು ಹೇಳಿಕೆ ನೀಡಿದರೆ ಪರಿಶೀಲಿಸಲಾಗುವುದು ಎಂದರು. ಸಭೆಯಲ್ಲಿ ಡಿಸಿಪಿ ಮುತ್ತು ರಾಯ, ಎಸಿಪಿ ಸುಬ್ರಹ್ಮಣ್ಯ ಉಪಸ್ಥಿ ತರಿದ್ದರು.
ಎಸಿಪಿ ಜಗನ್ನಾಥ್ ಬಿಸಿ ಬಿಸಿ
ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಲ್ಲಿ ಮೂರು ತಲವಾರು ಹೂತಿ ಟ್ಟಿರುವುದು ಪತ್ತೆಯಾಗಿದು, ಈ ಬಗ್ಗೆ ಶಂಕೆ ಇರುವ ಮೂವರ ಹೆಸರನ್ನು ಪೊಲೀಸರ ಗಮನಕ್ಕೆ ತಂದರೂ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಗಿರೀಶ್ ಕುಮಾರ್ ಸಭೆಯಲ್ಲಿ ಆರೋಪಿಸಿದರು. ಈ ಮಾತು ಕೇಳಿ ಎಸಿಪಿ ಟಿ.ಆರ್.ಜಗನ್ನಾಥ್ ಬಿಸಿ ಬಿಸಿ ಆದರು.
ಸಂಶಯದ ಮೇಲೆ ಮೂವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡಲಾಗಿದೆ. ನಾವಿನ್ನೇನು ಮಾಡಬೇಕಾಗಿತ್ತು?. ಕಾಲು ಮುರಿಯಬೇಕಾಗಿತ್ತಾ?. ಯುವಕರೀಗ ಕಲ್ತಿದ್ದಾರೆ. ಪೊಲೀಸರು ಕಾನೂನು ಮೀರಿ ನಡೆದರೆ, ಆಯೋಗಕ್ಕೆ ದೂರು ಹೋಗುತ್ತದೆ. ರಾತ್ರಿ ೧೦ ಗಂಟೆಗೆ ರಸ್ತೆ ಬದಿ ನಿಂತಿದ್ದಾರೆ ಅಂದ ಮಾತ್ರಕ್ಕೆ ಠಾಣೆಗೆ ಕರೆಯಿಸಿ ಹಿಂಸೆ ಕೊಡಲಿಕ್ಕೆ ಆಗುತ್ತಾ? ಪೊಲೀಸರನ್ನು ನೀಚರನ್ನಾಗಿ ಕಾಣಬೇಡಿ ಎಂದು ಜಗನ್ನಾಥ್ ಖಾರವಾಗಿ ನುಡಿದರು.
Tagged with
dalit,
dk,
feature,
lnews
ಡೊನೆಟ್‌ಸ್ಕ್: ಕಳೆದ ಬಾರಿಯ ಯೂರೋ ಕಪ್ ಚಾಂಪಿಯನ್ ಸ್ಪೇನ್ ಕೂಡ ನಿನ್ನೆ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿದೆ. ನೂರನೇ ಅಂತಾರಾ ಷ್ಟ್ರೀಯ ಪಂದ್ಯವಾಡುತ್ತಿರುವ ಕ್ಷಾಬಿ ಅಲೊನ್ಸೊ ದಾಖಲಿಸಿದ ಎರಡು ಗೋಲಿನ ನೆರವಿನಿಂದ ಕಠಿಣ ಫ್ರಾನ್ಸ್ ವಿರುದ್ಧದ ಪಂದ್ಯವನ್ನು ಸ್ಪೇನ್ ೨-೦ ಅಂತರದಿಂದ ಗೆದ್ದುಕೊಂಡು ಸೆಮೀ ಸ್‌ಗೆ ಲಗ್ಗೆಯಿಟ್ಟಿದೆ. ಇನ್ನು ಬುಧವಾರ ನಡೆ ಯುವ ಸೆಮೀಫೈನಲ್ ಪಂದ್ಯದಲ್ಲಿ ಸ್ಪೇನ್ ಪೋರ್ಚುಗಲ್ ವಿರುದ್ಧ ಹೋರಾಟ ನಡೆಸಲಿದೆ.
ಪ್ರಬಲ ತಂಡವಾಗಿರುವ ಸ್ಪೇನ್ ಆರಂ ಭದಿಂದಲೇ ಫ್ರಾನ್ಸ್ ಮೇಲೆ ಮುಗಿಬಿಟ್ಟಿತ್ತು. ರಕ್ಷಣಾತ್ಮಕ ವಿಭಾಗವನ್ನು ಸುಲಭವಾಗಿ ಒಳಹೊಕ್ಕುತ್ತಿದ್ದ ಸ್ಪೇನ್ ಆಟಕ್ಕೆ ಕಡಿವಾಣ ಹಾಕಲು ಫ್ರಾನ್ಸ್ ವಿಫಲವಾಯಿತು. ಅದರಲ್ಲೂ ಪಂದ್ಯದ ೧೯ನೇ ನಿಮಿಷದಲ್ಲಿ ಅಲೊನ್ಸೊ ಹೆಡ್ ಮೂಲಕ ದಾಖಲಿಸಿದ ಅದ್ಭುತ ಗೋಲ್ ಡಿಫೆಂಡಿಂಗ್ ಚಾಂಪಿಯನ್‌ಗಳಿಗೆ ೧-೦ ಅಂತ ರದ ಮುನ್ನಡೆಯನ್ನು ತಂದುಕೊಟ್ಟಿತ್ತು. ನಂತರ ಪ್ರಥಮಾ ರ್ಧದಲ್ಲಿ ಇತ್ತಂಡಗಳು ಗೋಲು ದಾಖ ಲಿಸಿಲು ವಿಫಲವಾದರೂ ಸ್ಪೇನ್‌ನ ಅದ್ಭುತ ಆಟವನ್ನು ನಿಯಂತ್ರಿಸಲು ಫ್ರಾನ್ಸ್ ವಿಫಲವಾಯಿತು. ಆದರೂ ಫ್ರಾನ್ಸ್ ಕೂಡ ಸ್ಪೇನ್‌ಗೆ ಸುಲಭವಾಗಿ ಗೋಲು ಗಳಿಸಲು ಬಿಡಲಿಲ್ಲ. ಆದರೆ ೯೦ನೇ ನಿಮಿಷದಲ್ಲಿ ಅಲೊನ್ಸೊ ಮತ್ತೆ ತಂಡದ ಮುನ್ನಡೆಯನ್ನು ಏರಿಸಿದರು. ಪೆನಾಲ್ಟಿ ಕಾರ್ನರ್ ಮೂಲಕ ದಾಖಲಿಸಿದ ಗೋಲು ತಂಡಕ್ಕೆ ೨-೦ಯ ಭರ್ಜರಿ ಗೆಲುವನ್ನು ತಂದುಕೊಟ್ಟಿತು.
Tagged with
tnews
ಪಡುಬಿದ್ರಿ: ಹಿಂದಿನ ಸರಕಾರದಲ್ಲಿ ರಾಜ್ಯ ಸರಕಾರ ಭಾರೀ ಪ್ರಚಾರ ದೊಂದಿಗೆ ಅನುಷ್ಠಾನಕ್ಕೆ ತಂದಿದ್ದ ಸಂಧ್ಯಾ ಸುರಕ್ಷಾ ಯೋಜನೆ ಪೊಳ್ಳಾ ಗಿದೆ. ಈ ಯೋಜನೆಯಡಿಯಲ್ಲಿ ಒಂದೂವರೆ ಸಾವಿರ ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದ್ದಾಗಿ ರಾಜ್ಯ ಸರಕಾರ ಕೇಂದ್ರ ಸರಕಾಕ್ಕೆ ಸಲ್ಲಿಸಿರುವ ಅಫಿದಾವಿತ್ ಸುಳ್ಳೆಂದು ಮೊನ್ನೆಯ ದೆಹಲಿ ಭೇಟಿಯಲ್ಲಿ ನನಗೆ ತಿಳಿದು ಬಂದಿದೆ. ಈ ಬಗ್ಗೆ ರಾಜ್ಯ ಸರಕಾರದ ಸಂಬಂಧಿತ ಹಿರಿಯ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ, ‘ಸಾವಿರ ಕೋಟಿ ಇರಲಿ; ಒಂದು ರೂಪಾ ಯಿಯೂ ವಿನಿಯೋಗವಾಗಿಲ್ಲ. ಕೇವಲ ದಾಖಲೆಗಳಿಗಾಗಿ ಮಾತ್ರ ಅಫಿದಾವಿತ್ ಸಲ್ಲಿಸಲಾಗಿತ್ತು ಎಂದು ತಿಳಿಸಿದರೆಂದು ಉಡುಪಿ ಚಿಕ್ಕ ಮಗಳೂರು ಕ್ಷೇತ್ರದ ಸಂಸದ ಜಯ ಪ್ರಕಾಶ ಹೆಗ್ಡೆ ನಿನ್ನೆ ಪಡುಬಿದ್ರಿಯಲ್ಲಿ ಹೇಳಿದರು.
ಕಾಪು ಕ್ಷೇತ್ರದ ವಿವಿಧ ಪಂಚಾ ಯತ್ ವ್ಯಾಪ್ತಿಯ ಕಾರ್ಯಕರ್ತರ ಸಭೆಯ ಸಂದರ್ಭದಲ್ಲಿ ಅವರು ಪಡುಬಿದ್ರಿಯಲ್ಲಿ ಮಾತಾಡುತ್ತಿದ್ದರು.
ಹೆಜಮಾಡಿ ಕೋಡಿಯ ಬಂದರಿನ ಎರಡನೇ ಹಂತದ ವಿಸ್ತರ ಣೆಗೆ ಅರುವತ್ತು ಕೋಟಿ ರೂಪಾಯಿ ಗಳನ್ನು ಬಿಡುಗಡೆ ಮಾಡಿತ್ತೆಂಬುದು ಹಸಿ ಸುಳ್ಳೆಂದ ಹೆಗ್ಡೆ, ಕೇಂದ್ರ ಸರಕಾರದ ೪೦ ಕೋಟಿ ಮತ್ತು ರಾಜ್ಯ ಸರಕಾರದ ೨೦ ಕೋಟಿಯ ಬಿಡುಗಡೆಗೆ ಇಂದು ಕಡತ ವಿಲೇವಾರಿ ನಡೆಯುತ್ತಿದೆ ಎಂದು ಅವರು ಹೇಳಿದರು.
Tagged with
lnews
ಮಂಗಳೂರು: ರಾಜ್ಯ ಸರಕಾರ ಶಿಕ್ಷಕರಿಗೆ ವೇತನ ಕೊಟ್ಟೇ ಕೊಡುತ್ತದೆ. ಆದರೆ ಕೆಲವೊಮ್ಮೆ ವಿಳಂಬವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ವೇತನ ಬಾಕಿಯಿಡ ಲಾಗುತ್ತಿದೆ ಎಂದು ಭಾವಿಸುವುದು ಸರಿ ಯಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ ಶಿಕ್ಷಕರಿಗೆ ಕಿವಿಮಾತು ಹೇಳಿ ದ್ದಾರೆ. ಈ ಬಾರಿ ನೂತನ ಪಠ್ಯ ಪುಸ್ತಕ ಗಳು ಬಂದಿದ್ದು ಶಿಕ್ಷಕರಿಗೆ ಅರ್ಥವಾಗು ತ್ತಿಲ್ಲ ಎನ್ನುವ ದೂರು ಕೇಳಿ ಬಂದಿದೆ. ಆದರೆ ಪಠ್ಯವನ್ನು ನುರಿತ ಶಿಕ್ಷಕರು ತಯಾ ರಿಸಿದ್ದಾರೆಯೇ ಹೊರತು ಸಚಿವರು ತಯಾರಿಸಿಲ್ಲ. ಈ ಹಿನ್ನೆಲೆಯಲ್ಲಿ ತರಬೇತಿ ನೀಡುವ ಯೋಜನೆಯೂ ಇದೆ ಎಂದರು.
ಜು.೫ರಂದು ಕಳೆದ ವರ್ಷದಂತೆ ಈ ಬಾರಿಯೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶಾಲೆಗಾಗಿ ನಾವು, ನೀವು ಎನ್ನುವ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಇದರಲ್ಲಿ ಎಲ್ಲಾ ಜನಪ್ರತಿನಿ ಧಿಗಳು ಹಾಗೂ ಮಕ್ಕಳ ಪೋಷಕರು ಪಾಲ್ಗೊಳ್ಳಬೇಕು. ಸರಕಾರಿ ಶಾಲೆಯ ಜೊತೆ ಮಕ್ಕಳ ಪೋಷಕರು ಉತ್ತಮ ಸಂಬಂಧ ಬೆಳೆಸಿಕೊಳ್ಳುವ ಸಲುವಾಗಿ ಈ ಕಾರ್ಯಕ್ರಮ ಅಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ರಾಜಕೀಯ ಪ್ರಶ್ನೆಗಳಿಗೆ ಬ್ರೇಕ್
ಪತ್ರಿಕಾಗೋಷ್ಟಿಯ ವೇಳೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ಸಚಿವರು, ಈ ವಿಷಯ ಸಾರ್ವಜನಿಕರಿಗೆ ತಿಳಿಸ ಬೇP ಗಿದೆ. ಈ ಹಿನ್ನೆಲೆಯಲ್ಲಿ ರಾಜ ಕೀಯಕ್ಕೆ ಸಂಬಂಧಪಟ್ಟ ಯಾವುದೇ ಪ್ರಶ್ನೆಗಳನ್ನು ಕೇಳಬೇಡಿ. ಇದರಿಂದ ಪ್ರಮುಖ ಶಿಕ್ಷಣಕ್ಕೆ ಸಂಬಂಧಪಟ್ಟ ವಿಷ ಯಗಳೇ ಮರೆಯಾಗುತ್ತದೆ ಎಂದು ಸಚಿವರು ಆರಂಭದಲ್ಲೇ ಪತ್ರಕರ್ತರಿಗೆ ಮನವಿ ಮಾಡಿದ ಪ್ರಸಂಗ ನಡೆಯಿತು.
Tagged with
lnews
ಉಡುಪಿ: ರಿಕ್ಷಾವೊಂದು ಸೈಕಲ್‌ನ ಹಿಂಬದಿಗೆ ಡಿಕ್ಕಿ ಹೊಡೆದು ಪರಾರಿ ಯಾದ ಘಟನೆ ಹೇರೂರು ಗ್ರಾಮದ ಎನ್.ಎಚ್-೬೬ ರ ಬಳಿ ಗುರುವಾರ ರಾತ್ರಿ ಸಂಭವಿಸಿದೆ.
ಅಪಘಾತದಿಂದಾಗಿ ಸೈಕಲ್ ಸವಾರ ಬ್ರಹ್ಮಾವರದ ಇಂದಿರಾ ನಗರ ನಿವಾಸಿ ರಂಜನ್ ಗಾಯ ಗೊಂಡಿ ದ್ದಾರೆ. ಈ ಬಗ್ಗೆ ಗಾಯಾಳು ನೀಡಿದ ದೂರಿನಂತೆ ರಿಕ್ಷಾ ಚಾಲಕ ಸಂತೋಷ್ ವಿರುದ್ದ ಬ್ರಹ್ಮಾವರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿ ಕೊಂಡಿದ್ದಾರೆ.
Tagged with
lnews
ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿನ ರಾಗಿದಕುಮೇರಿ ಶಾಲಾ ರಸ್ತೆಯ ಅವ್ಯವಸ್ಥೆ ಮತ್ತು ಚರಂಡಿಗಳ ದುರವಸ್ಥೆಯನ್ನು ವಿರೋಧಿಸಿ ಮತ್ತು ದುರಸ್ಥಿಗಾಗಿ ಆಗ್ರಹಿಸಿ ಎಸ್‌ಡಿಪಿಐ ನೇತೃತ್ವದಲ್ಲಿ ಶನಿವಾರ ಬಪ್ಪಳಿಗೆಯಲ್ಲಿ ಸ್ಥಳೀಯರ ಸಹಕಾರದೊಂದಿಗೆ ರಸ್ತೆ ತಡೆ ಪ್ರತಿಭಟನೆ ನಡೆಯಿತು.
Tagged with
lnews
ಉಡುಪಿ: ರಿಕ್ಷಾವೊಂದು ಸೈಕಲ್‌ನ ಹಿಂಬದಿಗೆ ಡಿಕ್ಕಿ ಹೊಡೆದು ಪರಾರಿ ಯಾದ ಘಟನೆ ಹೇರೂರು ಗ್ರಾಮದ ಎನ್.ಎಚ್-೬೬ ರ ಬಳಿ ಗುರುವಾರ ರಾತ್ರಿ ಸಂಭವಿಸಿದೆ.
ಅಪಘಾತದಿಂದಾಗಿ ಸೈಕಲ್ ಸವಾರ ಬ್ರಹ್ಮಾವರದ ಇಂದಿರಾ ನಗರ ನಿವಾಸಿ ರಂಜನ್ ಗಾಯ ಗೊಂಡಿ ದ್ದಾರೆ. ಈ ಬಗ್ಗೆ ಗಾಯಾಳು ನೀಡಿದ ದೂರಿನಂತೆ ರಿಕ್ಷಾ ಚಾಲಕ ಸಂತೋಷ್ ವಿರುದ್ದ ಬ್ರಹ್ಮಾವರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿ ಕೊಂಡಿದ್ದಾರೆ.
Tagged with
lnews
ಕಾರ್ಕಳ: ಕಾರ್ಕಳದ ಮುಂಡ್ಲಿ ಯಲ್ಲಿರುವ ಜಲವಿದ್ಯುತ್ ಕಂಪೆನಿಗೆ ಬ್ಲ್ಯಾಕ್‌ಮೇಲ್ ಮಾಡಿ ಸ್ಥಳೀಯ ತಾ.ಪಂ ಸದಸ್ಯನೊಬ್ಬ ಏಳು ಲಕ್ಷ ಕಪ್ಪ ಪಡೆದಿರುವ ಪ್ರಕರಣ ತಿರುವು ಪಡೆದಿದ್ದು, ನಾವು ಏಳು ಲಕ್ಷವನ್ನು ಯಾರಿಗೂ ನೀಡಿಲ್ಲ ಎಂದು ಕಂಪೆನಿ ಸ್ಪಷ್ಟ ಪಡಿಸಿದೆ.
ಇಲ್ಲಿನ ಮುಂಡ್ಲಿ ಡ್ಯಾಂ ಬತ್ತಿ ಹೋಗಲು ಜಲವಿದ್ಯುತ್ ಘಟಕದಲ್ಲಿ ಬಳಸುತ್ತಿರುವ ಸ್ಪೋಟಕ ಕಾರಣ ಎಂದು ಹೇಳಲಾಗಿತ್ತು. ಇದರಿಂದ ಇಲ್ಲಿನ ನಾಗರಿಕರು ಕಂಪೆನಿಯ ವಿರುದ್ದ ಆಕ್ರೋಶಗೊಂಡಿದ್ದಾರೆ, ಪ್ರತಿಭಟನೆ ಮಾಡುತ್ತಾರೆ. ಇದನ್ನು ತಾನು ಹೇಗಾದರೂ ಮಾಡಿ ತಡೆಯುತ್ತೇ ನೆಂದು ಹೇಳಿಕೊಂಡ ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯನೊಬ್ಬ ಕಂಪೆನಿ ಬಳಿ ಏಳು ಲಕ್ಷ ರುಪಾಯಿ ಕಪ್ಪ ಪಡೆದಿದ್ದ ಎಂಬ ವಿಚಾರ ಸ್ಥಳೀಯ ವಾಗಿ ಪ್ರಚಲಿತದಲ್ಲಿತ್ತು. ಇದು ಹಲವು ಊಹಾಪೋಹಗಳಿಗೂ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಕುತೂಹಲ ಕೆರಳಿಸಿತ್ತು.
ಆದರೆ ಇದೀಗ ಕಂಪೆನಿ ಈ ಆರೋಪವನ್ನು ನಿರಾಕರಿಸಿದೆ. ನಮ್ಮ ಬಳಿ ಯಾವ ತಾಲೂಕು ಪಂಚಾಯತ್ ಸದಸ್ಯನೂ ಬಂದಿಲ್ಲ. ನಾವು ಯಾರಿಗೂ ಏಳು ಲಕ್ಪ ನೀಡಿಲ್ಲ ಎಂದು ಅದು ಸ್ಪಷ್ಟ ಪಡಿಸಿದ್ದು ಪ್ರಕರಣಕ್ಕೆ ಅಂತ್ಯ ಹಾಡಿದೆ.
Tagged with
lnews
ಕಾರ್ಕಳ: ಇಲ್ಲಿಗೆ ಸಮೀಪದ ಪಳ್ಳಿ ಗ್ರಾಮದಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೈದಿದ್ದಾನೆ.
ಜಾನ್ ಡಿ.ಅಲ್ಮೇಡಾ (೩೨) ಎಂಬಾತ ಬದುಕಿಗೆ ಅಂತ್ಯ ಹೇಳಿ ದವನು. ಕಳೆದ ೧೦ವರ್ಷಗಳಿಂದ ಈತ ಮಾನಸಿಕ ಕಾಯಿಲೆಯಿಂದ ಬಳಲುತ್ತಿ ದ್ದನಲ್ಲದೇ ಉಡುಪಿಯ ಖಾಸಗಿ ಆಸ್ಪತ್ರೆ ಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೆಂದು ತಿಳಿದುಬಂದಿದೆ. ಶುಕ್ರವಾರ ರಾತ್ರಿ ವೇಳೆಗೆ ಕೀಟನಾಶಕ ಸೇವಿಸಿದ್ದ ಆತನನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ಯತ್ತಿರುವ ದಾರಿ ಮಧ್ಯೆ ಮೃತ ಪಟ್ಟಿದ್ದಾನೆಂದು ತಿಳಿದುಬಂದಿದೆ.
Tagged with
lnews
ಉಡುಪಿ: ಲಾರಿಯೊಂದು ಬೈಕ್‌ನ ಹಿಂಬದಿಗೆ ಡಿಕ್ಕಿ ಹೊಡೆದು ಪರಾರಿ ಯಾದ ಪ್ರಕರಣ ಶುಕ್ರವಾರ ಮಧ್ಯಾಹ್ನ ಯಡ್ತಾಡಿ ಗ್ರಾಮದ ಕಾವಡಿ ಕ್ರಾಸ್ ಬಳಿ ಸಂಭವಿಸಿದೆ.
ಸೈಬ್ರಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಸಂಚರಿಸುತ್ತಿದ್ದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬೈಕ್ ಸವಾರ ಕಾವಡಿಯ ಹವರಾಲು ತೋಟ ನಿವಾಸಿ ಜೀವನ್ ಕುಮಾರ್ ಶೆಟ್ಟಿ (೨೫) ಹಾಗೂ ಇವರ ಮಾವ ಗೋಪಾಲ ಶೆಟ್ಟಿ ಗಾಯಗೊಂಡಿ ದ್ದಾರೆ.
ಗಾಯಾಳು ನೀಡಿದ ದೂರಿನ ಪ್ರಕಾರ ಲಾರಿ ಚಾಲಕ ರಾಮೇಗೌಡ ವಿರುದ್ಧ ಬ್ರಹ್ಮಾವರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿ ಕೊಂಡಿದ್ದಾರೆ.
Tagged with
lnews
ಪುತ್ತೂರು: ಪುತ್ತೂರು ಪೇಟೆಯ ಹೊರವಲಯದ ಕೆಮ್ಮಿಂಜೆಯಲ್ಲಿರುವ ಚಾಕಲೇಟ್ ಕಾರ್ಖಾನೆಯಿಂದ ಚಾಕಲೇಟ್ ತಯಾರಿಗೆ ಬಳಸಲಾಗುತ್ತಿದ್ದ ಬೆಣ್ಣೆ ಕಳವಾದ ಕುರಿತು ಮ್ಯಾನೇಜರ್ ಎಚ್.ಎಂ. ಕೃಷ್ಣಕುಮಾರ್ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರ್ಖಾನೆಯಲ್ಲಿನ ಗುತ್ತಿಗೆದಾರರೊಬ್ಬರು ಕಾರ್ಖಾ ನೆಯ ಆವರಣದಲ್ಲಿ ಸಂಶಯಾಸ್ಪದವಾಗಿ ತಿರುಗಾಡು ತ್ತಿದ್ದುದ್ದನ್ನು ಗಮನಿಸಿದ ಕಾವಲುಗಾರ ತನಗೆ ಮಾಹಿತಿ ನೀಡಿದ್ದರು. ಆ ಮಾಹಿತಿಯನ್ನಾಧರಿಸಿ ತಾನು ಕಾರ್ಯಾ ಚರಣೆ ನಡೆಸಿದ ವೇಳೆ ೧೫ಕೆ.ಜಿ. ಬೆಣ್ಣೆ ಕಳವಾಗಿರುವುದು ಕಂಡು ಬಂದಿತ್ತು. ಕಾರ್ಖಾನೆಯ ಕೆಲಸಗಾರ ಹರೀಶ್ ನಾಯ್ಕ ಮತ್ತು ಅವರ ತಂಡ ಈ ಕೃತ್ಯ ಎಸಗಿರುವ ಸಂಶಯವಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕಳವಾದ ಬೆಣ್ಣೆಯ ಮೌಲ್ಯ ೪ಸಾವಿರ ಎಂದು ದೂರಿ ನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
Tagged with
cnews
ಬೆಂಗಳೂರು: ಗಣಿ ಕಪ್ಪ ಪ್ರಕರಣ ದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ದೊರೆಯುತ್ತಿದ್ದಂತೆ ನಾಯ ಕತ್ವ ಬದಲಾವಣೆ ಪಟ್ಟು ತೀವ್ರಗೊ ಳಿಸಿರುವ ಅವರ ಬೆಂಬಲಿಗ ಸಚಿವರು ಸೋಮವಾರ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ.
ಸದಾನಂದಗೌಡರು ಜೆಡಿಎಸ್ ಸೂಚನೆಯಂತೆ ಸರ್ಕಾರ ನಡೆಸುತ್ತಿ ದ್ದಾರೆ ಶಾಸಕರ ಮಾತಿಗೆ ಬೆಲೆ ನೀಡು ತ್ತಿಲ್ಲ ಎಂಬ ಏಕೈಕ ಆರೋಪ ಮುಂದಿ ಟ್ಟುಕೊಂಡು ನಾಯಕತ್ವ ಬದಲಾವಣೆಗೆ ಒತ್ತಡ ತರುತ್ತಿರುವ ಸಚಿವರು, ಸೋಮ ವಾರ ಖುದ್ದು ಸದಾನಂದ ಗೌಡರನ್ನೇ ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮೂಲಕ ಸದಾನಂದಗೌಡರ ಕುರ್ಚಿಗೆ ಮತ್ತೆ ಕಂಟಕ ಒದಗಿಬರುವ ಲಕ್ಷಣಗಳು ಕಂಡುಬರುತ್ತಿದ್ದು, ಅಷಾಡ ಮಾಸವಿದ್ದರೂ ನಾಯಕತ್ವ ಬದಲಾವಣೆ ಆಗಲೇಬೇಕು ಎಂಬ ಸಂದೇಶ ಹೈಕ ಮಾಂಡ್‌ಗೆ ಕಳುಹಿಸಲು ನಿರ್ಧರಿಸಿ ದ್ದಾರೆ.
ಉನ್ನತ ಮೂಲಗಳ ಪ್ರಕಾರ, ಸದಾ ನಂದಗೌಡರನ್ನು ಪದಚ್ಯುತ ಗೊಳಿಸದೇ ಇದ್ದರೆ ಸರ್ಕಾರವೇ ಉರುಳುವ ಆತಂಕವಿದ್ದು ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್‌ನ ಹಲ ನಾಯಕರು ನಾಯಕತ್ವ ಬದಲಾವಣೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
Tagged with
snews
ಮಂಗಳೂರು: ನಗರದ ವಾಹನ ನಿಬಿಡ ಪ್ರದೇಶವಾಗಿರುವ ಕುಂಟಿ ಕಾನ ಏಕಮುಖ ರಸ್ತೆಯ ಮಧ್ಯದಲ್ಲೇ ಶಾಲಾ ಮಿನಿ ಬಸ್ಸೊಂದು ಅಪಘಾತ ಕ್ಕೀಡಾಗಿ ನಿಂತಿದ್ದು, ೧೫ ದಿನ ಕಳೆದ ನಂತರ ತೆರವುಗೊಳಿಸಿದ್ದು ಅದೂ ಕೂಡ ಪೊಲೀಸರಿಗೆ ‘ಜಯಕಿರಣ’ ದಿಂದ ಕರೆ ಮಾಡಿದ ಬಳಿಕ ಎನ್ನು ವುದು ವಿಶೇಷವಾಗಿದೆ.
ಇಲ್ಲಿರುವ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ೧೫ ದಿನಗಳ ಹಿಂದೆ ಯೇ ಖಾಸಗಿ ಶಾಲೆಗೆ ಸೇರಿದ ಹೊಸ ಮಿನಿಬಸ್ಸೊಂದು ಅಪಘಾತಕ್ಕೀಡಾ ಗಿತ್ತು. ಇದು ಏಕಮುಖ ಸಂಚಾರ ರಸ್ತೆಯಾಗಿದ್ದರೂ ವಾಹನವನ್ನು ತೆರವುಗೊಳಿಸದ ಕಾರಣ ಇತರ ವಾಹ ನಗಳ ಸಂಚಾರಕ್ಕೆ ತೊಂದರೆ ಯಾಗು ತ್ತಿದೆ ಎಂಬ ಆರೋಪ ಕೇಳಿ ಬರುತ್ತಿತ್ತು.
ಈ ಪ್ರದೇಶವು ಕಾವೂರು ಠಾಣಾ ವ್ಯಾಪ್ತಿಗೊಳಪಡುತ್ತದೆ. ಅಪಘಾತದ ಬಗ್ಗೆ ಇಲ್ಲಿನ ಪೊಲೀಸರಿಗೆ ಮಾಹಿತಿ ಯಿದ್ದರೂ ರಸ್ತೆಯಿಂದ ವಾಹನ ತೆರವು ಗೊಳಿಸಿರಲಿಲ್ಲ. ಈ ಬಗ್ಗೆ ಕೇಳಿದರೆ ವಾಹನ ಯಾವ ಶಾಲೆಯದ್ದೆಂದು ಇನ್ನೂ ಗೊತ್ತಾಗಿಲ್ಲ. ಅಪಘಾತ ನಡೆದ ಬಳಿಕ ಸಂಬಂಧಪಟ್ಟವರು ದೂರು ನೀಡದೆ ರಸ್ತೆಯಲ್ಲೇ ವಾಹನ ಬಿಟ್ಟು ಹೋಗಿರುವ ಕಾರಣ ತೆರವುಗೊಳಿಸಿ ರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ವಾಹನಕ್ಕೆ ಸಂಬಂಧಪಟ್ಟವರು ಸ್ಥಳಕ್ಕೆ ಧಾವಿಸಿ ರಸ್ತೆಯಿಂದ ತೆರವುಗೊಳಿಸಿದ್ದು ವಾಹನ ಯಾರದ್ದೆಂದು ಗೊತ್ತಿಲ್ಲ ಎಂದ ಪೊಲೀಸರೇ ಅವರಿಗೆ ಮಾಹಿತಿ ನೀಡಿರಬಹುದು ಎನ್ನುವ ಅನುಮಾನ ಕಾಡುವಂತಾಗಿದೆ.
ಕರೆ ಮಾಡಿದ್ದಕ್ಕೆ ಗುರ್ರ್
ಎಂದ ಎಚ್.ಸಿ.!
ಕಳೆದ ೧೫ ದಿನಗಳಿಂದ ರಸ್ತೆಯಲ್ಲೇ ಅಪಘಾತಕ್ಕೀಡಾದ ಶಾಲಾ ವಾಹನ ಇದ್ದು ಇದರಿಂದ ತೊಂದರೆ ಅನುಭವಿ ಸುತ್ತಿರುವ ಇತರ ವಾಹನಗಳ ಸವಾ ರರು ಪತ್ರಿಕೆಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಟ್ರಾಫಿಕ್ ಉಸ್ತುವಾರಿ ಹೊಂದಿ ರುವ ಬಂದರ್ ಠಾಣೆಯ ಟ್ರಾಫಿಕ್ ಹೆಡ್ ಕಾನ್‌ಸ್ಟೇಬಲ್ ಧನಂಜಯ ಅವ ರನ್ನು ಸಂಪರ್ಕಿಸಿದಾಗ ಬಸ್ ಬಗ್ಗೆ ಮಾಹಿತಿ ನೀಡಲು ಅಭ್ಯಂತರವಿಲ್ಲ. ಆದರೆ ನನ್ನ ನಂಬರ್ ನಿಮಗೆ ನೀಡಿ ದವರು ಯಾರು ಎಂದು ಪ್ರಶ್ನಿಸಿ ಕರೆ ಕಟ್ ಮಾಡಿದ್ದು, ಈ ಮೂಲಕ ಅವರು ಸಾರ್ವಜನಿಕ ವಿಷಯದ ಬಗ್ಗೆ ಹೊಂದಿ ರುವ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಯಿತು.
Tagged with
lnews
ವಿಟ್ಲ: ಅಕ್ರಮವಾಗಿ ಮರದ ದಿಮ್ಮಿ ಗಳನ್ನು ಸಾಗಾಟ ಮಾಡುತ್ತಿದ್ದ ಜಾಲ ವನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಕೇಪು ಗ್ರಾಮದ ಎರಡು ಕಡೆಗಳಲ್ಲಿ ಶುಕ್ರವಾರ ನಡೆದಿದೆ.
ಕೇಪು ಗ್ರಾಮದ ಅಡ್ಕಮರಕ್ಕಿಣಿ ನಿವಾಸಿ ಆಲಿ ಎಂಬವರ ಜಾಗದಿಂದ ೦.೯೬೩ ಘನ ಮೀಟರ್‌ನ ಎರಡು ಮಾವಿನ ಮರದ ದಿಮ್ಮಿ ಮತ್ತು ೨ ಘನ ಮೀಟರ್ ಕಟ್ಟಿಗೆಯನ್ನು ಹಾಗೂ ಕೇಪು ಗ್ರಾಮದ ಕುದ್ದುಪದವು ನಿವಾಸಿ ಇಬ್ರಾಯಿ ಎಂಬವರ ಜಾಗದಿಂದ ೦.೭೩೩ ಘನ ಮೀಟರ್‌ನ ಹಲಸು ಮತ್ತು ಅಕೇಶಿಯಾ ಮರದ ೧೫ ದಿಮ್ಮಿಗಳನ್ನು ಮತ್ತು ೨ ಘನ ಮೀಟರ್ ಕಟ್ಟಿಗೆಯನ್ನು ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮತ್ತು ಕೇಪು ಪರಿಸರ ಅರಣ್ಯ ರಕ್ಷಕ ರಾಜೇಂದ್ರ ಕುಮಾರ್ ಅವರ ತಂಡ ಸ್ಥಳಕ್ಕೆ ದಾಳಿ ನಡೆಸಿ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಎರಡು ಪ್ರಕರಣದ ವಿರುದ್ಧ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
lnews
ಬೆಂಗಳೂರು: ಸುಳ್ಳು ಮಾಹಿತಿ ನೀಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ತಾಯಿ, ಮಗಳ ಹೆಸರಿನಲ್ಲಿ ನಿವೇಶನ ಪಡೆದ ಆರೋಪದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಮತ್ತು ನಗರಾಭಿವೃದ್ಧಿ ಸಚಿವ ಸುರೇಶ್‌ಕುಮಾರ್ ತಮ್ಮ ಸ್ಥಾನಕ್ಕೆ ನಿನ್ನೆ ರಾಜೀನಾಮೆ ಸಲ್ಲಿಸಿದ್ದಾರೆ.
ಪತ್ರಿಕೆಗಳಲ್ಲಿ ಮಾಹಿತಿ ಬರುತ್ತಿದ್ದಂತೆ ಸುರೇಶ್ ಕುಮಾರ್ ಮುಖ್ಯಮಂತ್ರಿ ಸದಾನಂದಗೌಡರಿಗೆ ತಮ್ಮ ರಾಜೀನಾಮೆ ಪತ್ರ ನೀಡಿದ್ದಲ್ಲದೆ, ಸರ್ಕಾರಿ ಕಾರು ಮತ್ತು ಸವಲತ್ತು ತ್ಯಜಿಸಿ ಹೊರಟರು. ಮುಖ್ಯಮಂತ್ರಿಯವರು ಈ ಸಂಬಂಧ ಸುರೇಶ್ ಕುಮಾರ್ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಯಶಸ್ವಿಯಾಗಲಿಲ್ಲ.
ರಾಜೀನಾಮೆ ಪತ್ರ ಸಲ್ಲಿಸಿ ನೇರವಾಗಿ ತಮ್ಮ ಬಸವೇಶ್ವರನಗರ ನಿವಾಸಕ್ಕೆ ಖಾಸಗಿ ಕಾರಿನಲ್ಲಿ ತೆರಳಿದ ಸುರೇಶ್‌ಕುಮಾರ್ ಪತ್ರಿಕಾಗೋಷ್ಠಿ ನಡೆಸಿ, ರಾಜೀನಾಮೆ ನಿರ್ಧಾರ ಅಚಲ. ಅದನ್ನು ಅಂಗೀಕರಿಸುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದರು.
ನಾನು ಕಾನೂನುಬಾಹಿರವಾಗಿ ಯಾವುದೇ ನಿವೇಶನ ಪಡೆದುಕೊಂಡಿಲ್ಲ. ಆದರೆ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ವಾಗಬಾರದೆಂಬ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಆರೋಪಗಳಿಗೆ ಗುರಿಯಾಗಿರಲಿಲ್ಲ. ವಿನಾಕಾರಣ ತಮ್ಮ ವಿರುದ್ದ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಇದರಿಂದ ಮನನೊಂದು ರಾಜೀನಾಮೆ ಸಲ್ಲಿಸಿದ್ದೇನೆ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಚರ್ಚಿಸಿಯೇ ತೀರ್ಮಾನ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದರು.
ಗಳಗಳನೆ ಅತ್ತ ರಾಮದಾಸ್: ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸುರೇಶ್ ಕುಮಾರ್ ಅವರ ಪರವಾಗಿ ಸಂತಾಪದ ಸುರಿಮಳೆಯೇ ಹರಿದುಬರುತ್ತಿದ್ದು, ರಾಜೀನಾಮೆ ವಾಪಾಸು ಪಡೆಯಬೇಕೆಂದು ಒಕ್ಕೊರಲಿನಿಂದ ಕೂಗುತ್ತಿದ್ದಾರೆ.
‘ಸುರೇಶ್ ಕುಮಾರ್ ಅವರು ಕಳೆದ ೩೦ ವರ್ಷಗಳಿಂದ ಕಳಂಕಮುಕ್ತ ರಾಜಕಾರಣ ಮಾಡಿಕೊಂಡು ಬಂದಿದ್ದು, ಅವರ ಮೇಲೆ ಸಲ್ಲದ ಆರೋಪ ಹೊರಿಸುವುದು ಸರ್ವಥಾ ಸಲ್ಲ ಎಂದು ಗದ್ಗದಿತರಾಗಿ ಕಣ್ಣೀರುಗರೆದರು.
ಒಂದು ಸಣ್ಣ ಆರೋಪ ಬಂದ ಕೂಡಲೇ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುವ ಸಜ್ಜನ ರಾಜಕಾರಣಿಗಳ ಬಣ ಒಂದೆಡೆಯಾದರೆ, ಮೈತುಂಬ ಆರೋಪಗಳನ್ನು ಹೊತ್ತರೂ ಕೂಡ ರಾಜೀನಾಮೆ ನೀಡಲು ನಿರಾಕರಿಸುವಂತಹ ದುರ್ಜನ ರಾಜಕಾರಣಿಗಳ ಬಣ ಇನ್ನೊಂದೆಡೆ ನಮ್ಮ ದೇಶದಲ್ಲಿ ಇದೆ ಎಂದು ರಾಮದಾಸ್ ಪರೋಕ್ಷವಾಗಿ ಭ್ರಷ್ಟ ರಾಜಕಾರಣಿಗಳ ವಿರುದ್ಧ ಮಾತಿನ ಪ್ರಹಾರ ಮಾಡಿದರು.
ಸಹಿ ಸಂಗ್ರಹ: ಈ ನಡುವೆ, ತಮ್ಮ ರಾಜಾಜಿನಗರ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಸುರೇಶ್ ಕುಮಾರ್ ಅವರು ರಾಜೀನಾಮೆ ನೀಡ ಬಾರದೆಂದು ಅವರನ್ನು ಬೆಂಬಲಿಸುತ್ತಿರುವ ಕಾರ್ಯಕರ್ತರು ಸಾರ್ವಜನಿಕರಿಂದ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಪ್ರಾಮಾಣಿಕತೆಯ ಪ್ರತೀಕವಾಗಿರುವ ಸುರೇಶ್ ಕುಮಾರ್ ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯ ಬಾರದು ಎಂದು ಪಟ್ಟು ಹಿಡಿದಿದ್ದಾರೆ.
ಇದೊಂದು ನಾಟಕ: ಎಚ್‌ಡಿಕೆ ವ್ಯಂಗ್ಯ
ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕೂಡ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಮತ್ತೆ ವಾಪಸ್ ಪಡೆದಿದ್ದರು. ಹಾಗೆಯೇ ಸಚಿವ ಸುರೇಶ್ ಕುಮಾರ್ ರಾಜೀನಾಮೆ ಕೂಡ ಒಂದು ನಾಟಕವಾಗಿದ್ದು, ಈ ಬಗ್ಗೆ ಸಂಜೆವರೆಗೆ ಕಾದುನೋಡಿ.. ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಬೆಳಗಾವಿಯ ಅಥಣಿಯಲ್ಲಿ ರಾಜೀನಾಮೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಎಚ್.ಡಿ.ಕೆ., ಸುರೇಶ್ ಕುಮಾರ್ ಅವರ ರಾಜೀನಾಮೆ ನಾಟಕ. ಬೇಕಾದರೆ ನೀವೇ ಕಾದು ನೋಡಿ ಎಂದಿದ್ದಾರೆ.
ಪೆಟ್ರೋಲ್ ಮೇಲಿನ ಸೆಸ್ ಇಳಿಸುವ
ಮಾತೇ ಇಲ್ಲ: ಡಿವಿ
ಬೆಂಗಳೂರು:ಪೆಟ್ರೋಲ್ ಮೇಲೆ ವಿಧಿಸಿದ ಸೆಸ್‌ನ್ನು ಕಡಿಮೆಗೊಳಿಸುವ ಇಂಗಿತ ವ್ಯಕ್ತಪಡಿಸುತ್ತಾ ಜನರ ಮೂಗಿಗೆ ತುಪ್ಪ ಹಚ್ಚುತ್ತಿದ್ದ ಮುಖ್ಯಮಂತ್ರಿ ಸದಾ ನಂದಗೌಡ ಇದೀಗ ಏಕಾಏಕಿಯಾಗಿ ಉಲ್ಟಾ ಹೊಡೆದಿದ್ದು, ಕೇಂದ್ರ ಸರ್ಕಾರ ದರ ಇಳಿಕೆ ನಿರ್ಧಾರ ಕೈಗೊಳ್ಳುವವರೆಗೆ ಸರ್ಕಾರ ಈ ಕುರಿತು ತೀರ್ಮಾನ ಕೈಗೊಳ್ಳುವ ಮಾತೇ ಇಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್ ದರವನ್ನು ಎಷ್ಟು ಕಡಿತಗೊಳಿಸುತ್ತದೆ ಎಂಬುದನ್ನು ಕಾದು ನೋಡಿದ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
Tagged with
nnews
ಬಂಟ್ವಾಳ: ಕಾಂಗ್ರೆಸ್ ಜಿಲ್ಲಾ ವಕ್ತಾರ ಫಾರೂಕ್ ಉಳ್ಳಾಲ್ ಜೆಡಿಎಸ್ ಪಕ್ಷವನ್ನು ತುಳುನಾಡಿನ ನೈಯ್ಯಪ್ಪ ಎಂದ ಹೇಳಿಕೆಗೆ ಜೆಡಿಎಸ್ ಮುಖಂಡರು ತೀರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಮುಖಂಡರು ನಿನ್ನೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್‌ನಲ್ಲಿ ಆಯೋ ಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಯುವ ಮುಖಂಡ ಡಿ.ಎ. ಅಬೂಬಕ್ಕರ್, ಫಾರೂಕ್ ಉಳ್ಳಾಲ ಹೇಳಿಕೆಗೆ ತೀವ್ರ ಖಂಡನೆ ಸೂಚಿಸಿದರು. ಫಾರೂಕ್‌ಗೆ ರಾಜಕೀಯ ಮನ್ನಣೆ ಕೊಟ್ಟದ್ದು ಜೆಡಿಎಸ್. ಅದೇ ಪಕ್ಷದ ಮುಖೇನ ಅವರು ಬೆಳೆದಿದ್ದಾರೆ. ಈಗ ಕಾಂಗ್ರೆಸ್‌ಗೆ ಸೇರಿದ ಮಾತ್ರಕ್ಕೆ ಈ ರೀತಿ ಹೇಳಿಕೆ ಕೊಡುವುದು ಸರಿಯಾ? ಜೆಡಿಎಸ್ ಬಡವರಿಗೆ ಸಾಮಾಜಿಕ ನ್ಯಾಯ ಕೊಟ್ಟ ಪಕ್ಷ. ಹಾಗಾಗಿ ಅದು ಬಡವರ ಪಾಲಿಗೆ ನೈಯ್ಯಪ್ಪ ಆಗಿದೆ. ಅದನ್ನು ಕೇಳಲು, ಪ್ರಶ್ನಿಸಲು ಇವರ‍್ಯಾರು? ಇವರಿಗೆ ಅಧಿಕಾರ ಕೊಟ್ಟವ ರಾರು ಎಂದು ಮರು ಪ್ರಶ್ನೆ ಹಾಕಿದರು.
ರೈಗೆ ತಿರುಗೇಟು: ಜೆಡಿಎಸ್ ಆಟ ಕ್ಕುಂಟು ಲೆಕ್ಕಿಲ್ಲದ ಪಕ್ಷ ಎಂದಿರುವ ರಮಾನಾಥ್ ರೈ ಹೇಳಿಕೆಗೆ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ವಿಟ್ಲ ಮಹಮ್ಮದ್ ಕುಂಞ ವಿರೋಧವ್ಯಕ್ತಪಡಿಸಿದ್ದಾರೆ. ರೈ ಹೇಳಿಕೆ ನಮ್ಮ ಪಕ್ಷದ ವರಿಷ್ಠರಿಗೂ ನೋವುಂಟು ಮಾಡಿದೆ. ಜಿಲ್ಲೆಯಲ್ಲಿ ಪಕ್ಷವನ್ನು ಸದೃಢ ಗೊಳಿಸುವ ಸವಾಲನ್ನು ಸ್ವೀಕರಿಸುವಂತೆ ಮಾಡಿದೆ ಎಂದವರು ಪ್ರತಿಕ್ರಿಯಿಸಿದರು. ಪುತ್ತೂರು ಕ್ಷೇತ್ರದ ಶಾಸಕರ ಚುನಾವಣೆಯಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿಯನ್ನು ಸೋಲಿಸಿದ್ದು, ಬಿಜೆಪಿಯವರಲ್ಲ. ಕಾಂಗ್ರೆಸ್‌ನ ನಾಯಕರೇ ಅವರಿಗೆ ಮುಳು ವಾದರು ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ ಎಂದರು.
ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಎಸ್.ಮಹಮ್ಮದ್ ಶಫಿ, ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಪುರಸಭೆ ಮಾಜಿ ಉಪಾಧ್ಯಕ್ಷ ಬಿ.ಮೋಹನ್ ಮತ್ತಿತರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Tagged with
lnews
ಸುಳ್ಯ: ನಿರಂತರವಾಗಿ ರಾತ್ರಿಯ ವೇಳೆ ವಿದ್ಯುತ್ ವ್ಯತ್ಯಯ ಆಗುತ್ತಿರುವುದನ್ನು ಪ್ರತಿಭಟಿಸಿ ಸಂಪಾಜೆಯಲ್ಲಿ ಸಾರ್ವಜನಿಕರು ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಕಳೆದ ೧೫ ದಿನಗಳಿಂದ ಸಂಪಾಜೆ ಭಾಗ ದಲ್ಲಿ ರಾತ್ರಿಯ ಸಮಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿತ್ತು. ಇದನ್ನು ಪ್ರತಿಭಟಿಸಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಿ.ಕೆ. ಹಮೀದ್, ಜಗದೀಶ್ ರೈ, ಎ.ಕೆ.ಹನೀಫ್, ಕೇಶವ ಬಂಗ್ಲೆಗುಡ್ಡೆ ಮತ್ತಿತರರ ನೇತೃತ್ವದಲ್ಲಿ ೧೫೦ ಹೆಚ್ಚು ಮಂದಿ ಕಲ್ಲುಗುಂಡಿ ಹೊರ ಠಾಣೆಯ ಎದುರಿನಲ್ಲಿ ಪ್ರತಿಭಟನೆ ನಡೆಸಿದರು. ಮೆಸ್ಕಾಂ ಎಂಜಿನಿಯರ್ ಸ್ಥಳಕ್ಕೆ ಆಗಮಿಸಿ ಸರಿಪಡಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯ ಲಾಯಿತು. ಸಂಪಾಜೆ ಭಾಗದಲ್ಲಿ ಕಾರ್ಯ ನಿರ್ವಹಿಸುವ ಲೈನ್‌ಮ್ಯಾನ್‌ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಯಾವುದೇ ಕ್ರಮ ಮತ್ತು ವಿದ್ಯುತ್ ಸಮಸ್ಯೆ ಪರಿಹರಕ್ಕೆ ಕ್ರಮ ಕೈಗೊಂಡಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.
ಗ್ರಾಮ ಸಭೆ ಮುಂದೂಡಲಾಗಿತ್ತು: ವಿದ್ಯುತ್ ಸಮಸ್ಯೆಯ ಬಗ್ಗೆ ವಿವರ ನೀಡಲು ಮೆಸ್ಕಾಂ ಎಂಜಿನಿಯರ್‌ನ್ನು ಗುರುವಾರ ನಿಶ್ಚಯವಾಗಿದ್ದ ಗ್ರಾಮ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಮೆಸ್ಕಾಂ ಎಂಜಿನಿಯರ್ ಸಭೆಗೆ ಹಾಜರಾಗಿರ ಲಿಲ್ಲ. ಹಾಗಾಗಿ ನಡೆಯಬೇಕಾಗಿದ್ದ ಗ್ರಾಮ ಸಭೆಯನ್ನೂ ಮುಂದೂಡಲಾಗಿತ್ತು.
Tagged with
lnews
ಮಂಗಳೂರು: ಕಾಟಿಪಳ್ಳದಲ್ಲಿರುವ ‘ಪಣಂಬೂರು ಮುಸ್ಲಿಂ ಜಮಾತ್ ಮಸೀದಿ ಯಲ್ಲಿ ಲೆಕ್ಕಪತ್ರ ಹಾಗೂ ಕಾಮಗಾರಿಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿ ಆಪಾದಿತರ ವಿರುದ್ಧ ಪ್ರಕರಣ ದಾಖಲಿಸುವಂತೆ ಹೈ ಕೋರ್ಟ್ ಆದೇಶ ನೀಡಿದೆ.
ಆಪಾದಿತರ ವಿರುದ್ಧ ರಾಜ್ಯ ವಕ್ಫ್ ಮಂಡಳಿ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದುದರಿಂದ ಜಮಾತ್‌ನ ಸದಸ್ಯರಾದ ಪಿಇ ಮೊದಿನ್ ಅವರು ವಕ್ಫ್ ಮಂಡಳಿ ವಿರುದ್ಧ ನ್ಯಾಯಾಲಯ ನಿಂದನೆ ಕೇಸು ದಾಖಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ವಕ್ಫ್ ಮಂಡಳಿಗೆ ಅವ್ಯವಹಾರದಲ್ಲಿ ಪಾಲ್ಗೊಂಡ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ವಿರುದ್ಧ ಹಣವನ್ನು ವಸೂಲು ಮಾಡಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ.
Tagged with
lnews
ಮಂಗಳೂರು: ದ.ಕ. ಜಿಲ್ಲಾ ಪಂಚಾಯತ್ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಿನ್ನೆ ಅಯೋಜಿ ಸಲಾಗಿದ್ದು, ಈ ಸಭೆಗೆ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಹಣಾ ಅಧಿಕಾರಿ ಆಗಮನ ವಿಳಂಬವಾದ ಕಾರಣ ಅಧಿಕಾರಿಗಳು ಹಾಗೂ ಪತ್ರಕರ್ತರು ಸುಸ್ತಾದರು.
ಸಭೆಯ ಬಗ್ಗೆ ಕಳೆದ ತಿಂಗಳೇ ದಿನಾಂಕ ಹಾಗೂ ಸಮಯವನ್ನು ನಿಗದಿಗೊಳಿಸಲಾಗಿತ್ತು. ಎಂದಿನಂತೆ ಬೆಳಿಗ್ಗೆ ೧೧ ಗಂಟೆಗೆ ಸಭೆ ನಡೆಯ ಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಇತರ ಇಲಾಖೆಯ ಅಧಿಕಾರಿಗಳು ಹಾಗೂ ಪತ್ರಕರ್ತರು ನಿಗದಿತ ಸಮಯಕ್ಕೆ ಸಭಾಂಗಣದಲ್ಲಿ ಹಾಜರಾಗಿದ್ದರು. ಆದರೆ ೧೧.೩೦ರವರೆಗೂ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾ ಅಧಿಕಾರಿ ಪತ್ತೆಯಿರಲಿಲ್ಲ. ಈ ಸಂದರ್ಭ ಅವರು ಎಕ್ಕೂರಿನಲ್ಲಿ ಅಯೋಜಿಸಲಾಗಿದ್ದ ಹಲಸಿನ ಮೇಳದಲ್ಲಿ ಭಾಗವಹಿಸಿರುವ ಬಗ್ಗೆ ಮಾಹಿತಿ ನೀಡಿದ ಸಿಬ್ಬಂದಿ ೧೨ ಗಂಟೆಗೆ ಸಭೆ ಆರಂಭವಾಗಲಿದೆ ಎನ್ನುವ ಮಾಹಿತಿ ನೀಡಿದರು.
ಆ ಸಮಯಕ್ಕೂ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾ ಅಧಿಕಾ ರಿಯ ಪತ್ತೆಯೇ ಇರಲಿಲ್ಲ. ಈ ಸಂದರ್ಭ ಸಭೆ ರದ್ದುಪಡಿಸಲಾಗಿದೆ ಎನ್ನುವ ಸುದ್ದಿಯೂ ಹರಡಿತು. ಆದರೆ ೧೨.೨೦ಕ್ಕೆ ಇಬ್ಬರೂ ಸಭಾಂಗಣಕ್ಕೆ ಆಗ ಮಿಸಿದ ಬಳಿಕ ಸಭೆ ಆರಂಭಗೊಂಡಿತು.
ಈ ಸಂದರ್ಭ ಮಾತನಾಡಿದ ಕಾರ್ಯನಿರ್ವಹಣಾ ಅಧಿಕಾರಿ ವಿಜಯಪ್ರಕಾಶ್, ಹಲಸಿನ ಹಣ್ಣಿನ ಮೇಳದಲ್ಲಿ ಭಾಗವಹಿಸಿದ್ದ ಕಾರಣ ಸಭೆ ವಿಳಂಬವಾಗಿದೆ ಎನ್ನುವ ಮಾಹಿತಿ ನೀಡಿದರು. ಬಳಿಕ ಮಾತನಾ ಡಿದ ಅಧ್ಯಕ್ಷೆ ಶೈಲಜಾ ಭಟ್, ರಾಜ್ಯದ ವಿವಿಧ ಭಾಗಗಳಿಂದ ರೈತರು ಹಲಸಿನ ಹಣ್ಣಿನ ಮೇಳಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ರೈತರಿಗೆ ನಿರಾಸೆಯಾ ಗಬಾರದೆನ್ನುವ ಉದ್ದೇಶದಿಂದ ಮೇಳದಲ್ಲಿ ಭಾಗವಹಿಸಲಾಗಿತ್ತು ಎಂದರು. ಅವರಿಬ್ಬರೂ ಉತ್ತಮ ಉದ್ದೇಶದಿಂದಲೇ ಮೇಳದಲ್ಲಿ ಭಾಗವ ಹಿಸಿದ್ದರು. ಆದರೆ ಕೆಡಿಬಿ ಸಭೆಯನ್ನು ೧೧ ಗಂಟೆಗೆ ನಿಗದಿಗೊಳಿಸಿದ್ದಾದರೂ ಏಕೆನ್ನುವ ಪ್ರಶ್ನೆ ಉತ್ತರ ಸಿಗದಾಯಿತು.
Tagged with
feature,
lnews
ಮಂಗಳೂರು: ಅನಿಲ ಸೋರಿ ಕೆಯ ಅರಿವಿಲ್ಲದೆ ದೇವರಿಗೆ ದೀಪ ಹಚ್ಚಲು ಬೆಂಕಿ ಕಡ್ಡಿ ಗೀರಿದ ಪರಿಣಾಮ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಅಜ್ಜಿ ಮತ್ತು ಮೊಮ್ಮಗಳು ಗಾಯಗೊಂಡಿರುವ ಘಟನೆ ಶನಿವಾರ ಮುಂಜಾನೆ ಕಾಟಿಪಳ್ಳ ಗಣೇಶ್‌ಪುರದಲ್ಲಿ ನಡೆದಿದೆ.
ಮುಖ ಮತ್ತು ದೇಹದ ಬಹುಭಾಗ ಸುಟ್ಟು ಹೋಗಿ ಗಂಭೀರವಾಗಿ ಗಾಯ ಗೊಂಡಿರುವ ಶೀಲ (೭೫)ಮತ್ತು ಮಲ್ಲಿಕಾ (೨೩) ಇಬ್ಬರನ್ನೂ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಗಣೇಶ್‌ಪುರ ದೇವಸ್ಥಾನದ ಅರ್ಚಕ ರಾಘವೇಂದ್ರ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು ಈ ವೇಳೆ ಇವರು ಪೂಜೆಗಾಗಿ ಮಗನ ಜೊತೆ ದೇವಸ್ಥಾನಕ್ಕೆ ತೆರಳಿದ್ದರು. ರಾಘವೇಂದ್ರ ಅವರ ಮನೆಗೆ ಸುರತ್ಕಲ್ ಶಶಿ ಮಂಗಳ ಗ್ಯಾಸ್ ಏಜೆನ್ಸಿ ಯವರು ಶುಕ್ರವಾರ ಎರಡು ಸಿಲಿಂಡರ್ ಗ್ಯಾಸ್ ಪೂರೈಕೆ ಮಾಡಿದ್ದರು. ಆದರೆ ಈ ಪೈಕಿ ಒಂದು ಸಿಲಿಂಡರ್ ಸೋರಿಕೆ ಯಾಗುತ್ತಿತ್ತು. ಗ್ಯಾಸ್ ಸೋರಿಕೆಯಾಗು ತ್ತಿರುವುದು ಮನೆ ಮಂದಿಯ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ. ಎಂಆರ್‌ಪಿಎಲ್ ಮತ್ತು ಬಿಎಎಸ್‌ಎಫ್ ಘಟಕದಿಂದಲೂ ಒಮ್ಮೊಮ್ಮೆ ರಾಸಾಯನಿಕ ಸೋರಿಕೆ ಯಾದರೆ ಅದು ಗ್ಯಾಸ್ ವಾಸನೆಯನ್ನೇ ಹೊಂದಿದ್ದ ಕಾರಣ ಯಾವುತ್ತೂ ಈ ವಾಸನೆ ಸೇವಿಸುತ್ತಿದ್ದ ಮನೆ ಮಂದಿಗೆ ಗ್ಯಾಸ್ ಸೋರಿಕೆಯಾವುದು ಅರಿವಿಗೆ ಬಂದಿರಲಿಲ್ಲ. ಈ ಬಗ್ಗೆ ಸುರತ್ಕಲ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Tagged with
feature,
lnews