ಪ್ರವಾಸಿ ಸ್ಥಳವಾಗಿ ಗುರುತಿಸಿಕೊಂಡಿರುವ ವೇಣೂರು ಎನ್ನುವ ಸುಂದರ ಊರಿಗೆ ಸುಸಜ್ಜಿತ ಬಸ್ ನಿಲ್ದಾಣ ಇನ್ನೂ ನಿರ್ಮಾಣವಾಗಿಲ್ಲ.
ಬೆಳ್ತಂಗಡಿಯಿಂದ ವೇಣೂರಿಗೆ ಬಂದು ಮೂಡಬಿದ್ರೆ ಕಡೆಗೆ ಮುಂದುವರಿಯುವ ಬಸ್‌ಗಳು ವೇಣೂರು ಸೇತುವೆ ದಾಟಿ ಹೆದ್ದಾರಿ ನಡುವಿನ ತಿರುವಿನಲ್ಲಿ ಪ್ರಯಾಣಿಕರನ್ನು ಹತ್ತಿಸಿ ಮುಂದು ವರಿಯುತ್ತಿವೆ. ಇದು ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ ಯಲ್ಲದೆ ಅಪಘಾತಕ್ಕೂ ಆಹ್ವಾನ ನೀಡಿದಂತಾಗುತ್ತಿದೆ. ಇದಕ್ಕೂ ಮುಂಚೆ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರವೂ ಬಸ್ ಅನ್ನು ಹೆದ್ದಾರಿಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿ-ಇಳಿಸುವುದು ಸಮಸ್ಯೆಗೆ ಕಾರಣವಾಗಿದೆ. ಇಷ್ಟೇ ಅಲ್ಲದೆ ಬಿ.ಸಿ. ರೋಡ್‌ನಿಂದ ಬಂದು ವೇಣೂರಿನಿಂದ ನಾರಾವಿಗೆ ಸಂಚರಿಸುವ ಬಸ್‌ಗಳು ಸ್ಥಳಾವಕಾಶ ಕೊರತೆಯಿಂದಾಗಿ ವೇಣೂರು ಕೆಳಗಿನ ಪೇಟೆಯ ರಿಕ್ಷಾ ಪಾರ್ಕಿಂಗ್ ಮಧ್ಯೆ ತಂಗುವುದರಿಂದ ಸ್ಥಳೀಯ ರಿಕ್ಷಾ ಪಾರ್ಕಿಂಗ್‌ಗೂ ಅಡಚಣೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಬಿ.ಸಿ.ರೋಡ್‌ನಿಂದ ಸಿದ್ದಕಟ್ಟೆಯಾಗಿ ವೇಣೂರಿಗೆ ಬರುವ ಬಸ್‌ಗಳು ಕೆಲವೊಮ್ಮೆ ಕೆಳಗಿನ ಪೇಟೆಗೆ ಬಾರದೆ ಮುಂದುವರಿ ಯುತ್ತವೆ. ಇದರಿಂದ ಕೆಳಗಿನ ಪೇಟೆಯಲ್ಲಿ ಬಸ್‌ಗಾಗಿ ಕಾದು ಕುಳಿತಿರುವ ಪ್ರಯಾಣಿಕರು ಪರದಾಡುವಂತಾಗಿದೆ. ಈ ಬಗ್ಗೆ ಪ್ರಯಾಣಿಕರು ಹಲವಾರು ಬಾರಿ ಸಂಬಂಧಪಟ್ಟ ಬಸ್ ಸಿಬ್ಬಂದಿಗೆ ಮನವಿ ನೀಡಿದ್ದರೂ ಬಸ್ ಚಾಲಕರು ಮಾತ್ರ ತಮ್ಮದೇ ಸರಿ ಯೆಂಬಂತೆ ಪೇಟೆ ಪ್ರವೇಶಿಸದೆ ವೇಣೂರು ಜಂಕ್ಷನ್‌ನಿಂದಲೇ ವಾಪಸ್ ಚಲಾಯಿಸುತ್ತಾರೆ.
ಬಸ್ ಸಿಬ್ಬಂದಿಯ ಈ ಸಮಸ್ಯೆಯಿಂದಾಗಿ ಗುಂಡೂರಿ, ಆರಂಬೋಡಿ, ಸಿದ್ದಕಟ್ಟೆ ಕಡೆಗೆ ಸಂಚರಿಸುವ ಪ್ರಯಾಣಿಕರು ೫೦-೧೦೦-೧೫೦ ರೂಪಾಯಿ ತೆತ್ತು ಅನಿವಾರ್ಯವಾಗಿ ರಿಕ್ಷಾದಲ್ಲಿ ಸಂಚರಿಸಬೇಕಾಗಿದೆ. ಇಲ್ಲಿ ಯೋಗ್ಯ ಬಸ್ ನಿಲ್ದಾಣ ನಿರ್ಮಿಸಿದರೆ ಈ ಎಲ್ಲಾ ಸಮಸ್ಯೆಗೆ ಫುಲ್‌ಸ್ಟಾಪ್ ಸಿಗಲಿದೆ. ವೇಣೂರು ಹೃದಯ ಭಾಗದಲ್ಲಿನ ಖಾಸಗಿ ಜಾಗವನ್ನಾದರೂ ಖರೀದಿಸಿ ಯೋಗ್ಯ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ ಬೆಳ್ತಂಗಡಿ ಶಾಸಕರು, ಜಿಲ್ಲಾ ಪಂಚಾಯತ್ ಅಗತ್ಯ ಗಮನ ಹರಿಸಿದರೆ ಜನರ ಬಹುದಿನಗಳ ಕನಸು ನನಸಾದೀತು.
ಮೂಡಬಿದ್ರೆಯಿಂದ ವೇಣೂರು ಮಾರ್ಗ ವಾಗಿ ಬೆಳ್ತಂಗಡಿಗೆ ಹಾಗೂ ಧರ್ಮಸ್ಥಳಕ್ಕೆ ತೆರಳಲು ಅನುಕೂಲವಾಗುವಂತೆ ಸರ್ಕಾರಿ ಬಸ್ಸನ್ನು ನೇಮಿಸುವಲ್ಲಿ ಸಂಬಂಧಿತ ಅಧಿಕಾರಿಗಳು ಆಶಕ್ತಿ ತೋರಲಿ. ಕೆಲವೇ ಗಂಟೆಗಳಿಗೊಮ್ಮೆ ಇರುವ ಸರ್ಕಾರಿ ಬಸ್‌ಗಳು ವೇಣೂರಿನಲ್ಲಿ ಕೆಲವೊಮ್ಮೆ ಸ್ಟಾಪ್ ಕೊಡದೇ ಚಲಿಸುತ್ತದೆ. ನಿಯಮಿಯ ಸ್ಪಾಪ್ ಇರುವ ಸರ್ಕಾರಿ ಬಸ್ ವೇಣೂರಿನಲ್ಲಿ ಸ್ಟಾಪ್ ನೀಡಿದರೆ ಪ್ರಯಾಣಿಕರಿಗೆ ಅನುಕೂಲವಾಗಬಹುದು.
ಪಿ.ಬಿ. ಕುಲಾಲ್, ಬಜಿರೆ
Tagged with
bahiranga
ಪರಶುರಾಮ ಸೃಷ್ಟಿಯ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಂಜಲ್‌ಪಲ್ಕೆ ಎಂಬಲ್ಲಿ ರಾಜರೋಷವಾಗಿ ದಿನ ನಿತ್ಯ ಗೋವುಗಳ ವಧೆಯಾಗು ತ್ತಿದ್ದು, ಕೇಳುವವರು ಯಾರೂ ಇಲ್ಲದಂತಾಗಿದೆ. ಊರಿನ ಆಸು ಪಾಸುನಿಂದ ನಿರಂತರ ದನ ಗಳನ್ನು ಕಡಿಯುವ ತಂಡವೇ ಮಂಜಲ್‌ಪಲ್ಕೆಯಲ್ಲಿ ಇದ್ದು, ಕದಿಯುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಮಂಜಲ್‌ಪಲ್ಕೆ ಯಲ್ಲಿನ ಕಸಾಯಿಖಾನೆಯ ಸುತ್ತಮುತ್ತ ಮುಸ್ಲಿಂ ಮನೆ ಇದ್ದು, ಇವರ ಬೆಂಬಲವೇ ಕಸಾಯಿಖಾನೆ ನಡೆಸಲು ಸಹಕಾರವಾಗಿದೆ. ಮಂಜಲ್‌ಪಲ್ಕೆಯಲ್ಲಿ ಹಿಂದೂ ಧರ್ಮದ ಧ್ಯೋತಕವಾಗಿ ಹನುಮನ್ ಭಜನಾ ಮಂದಿರವಿದ್ದು, ಇಲ್ಲಿ ಪ್ರತೀ ವಾರ ಭಜನೆ ನಡೆಯುತ್ತದೆ. ಇದನ್ನು ಸಂಘಟಿಸಿದ ಹಿಂದು ಧರ್ಮ ವನ್ನು ಕಾಯುವ ಬಲಿಷ್ಠ ಹಿಂದು ಯುವಕರ ಕಣ್ಣಿಗೆ ಕಸಾಯಿಖಾನೆ ಬಿದ್ದಿಲ್ಲವೋ ಎಂಬುದು ಸಂಶಯ ವಾಗಿದೆ. ಹೆಸರಾಂತ ರಾಜಕಾರಣಿ, ಮಾನ್ಯ ಘನತೆವೆತ್ತ ಸರಕಾರದ ಓರ್ವ ಸದಸ್ಯರು ಇಲ್ಲಿನ ಮುಸ್ಲಿಮರನ್ನು ಓಟ್ ಬ್ಯಾಂಕ್ ಮಾಡಿಕೊಂಡಿರಬಹುದೇ ಅಥವಾ ಇವರಿಗೆ ಮಾಮೂಲು ಹೋಗುತ್ತಿದೆಯೇ ತಿಳಿಯುತ್ತಿಲ್ಲ.
ಏನೇ ಆಗಿರಲಿ, ಕಾನೂನು ರಕ್ಷಣೆ ಮಾಡುವ ಪೊಲೀಸರು ಅಕ್ರಮ ಕಸಾಯಿಖಾನೆಯ ಬಗ್ಗೆ ಕ್ರಮ ಕೈಗೊಳ್ಳದಿರಲು ಕಾರಣವೇನು? ಇವರಿಗೂ ಮಾಮೂಲಿ ಸಿಗುತ್ತಿರುವುದು ಸ್ಪಷ್ಟ. ಗೋಮಾತೆಯನ್ನು ಪೂಜಿಸುವ ಹಿಂದುಗಳು ಅಕ್ರಮ ಕಸಾಯಿಖಾನೆಯ ವಿರುದ್ಧ ಹೋರಾಡಬೇಕು. ಹನುಮಾನ್ ಮಂದಿರದ ಬಳಿ ದಿನನಿತ್ಯ ರಕ್ತಪಾತ ಆಗುತ್ತಿರುವುದು ಹಿಂದುಗಳಿಗೆ ಒಳ್ಳೆಯ ಸಂಕೇತ ಅಲ್ಲ. ಗೊತ್ತಿದ್ದೂ, ಸುಮ್ಮನೆ ಕುಳಿತರೆ ಹಿಂದುಗಳಿಗೆ, ರಾಜಕಾರಣಿಗಳಿಗೆ ಕೆಟ್ಟ ಕಾಲ ಬರುವುದು ಗ್ಯಾರಂಟಿ. ಪೊಲೀಸರು ಕೂಡಾ ಕುಡಿಯುವುದು ಪವಿತ್ರ ಗೋಮಾತೆಯ ಹಾಲನ್ನೇ ಹೊರತು ಕಳ್ಳಿ ಗಿಡದ ಹಾಲನ್ನು ಅಲ್ಲ ಎನ್ನುವುದನ್ನು eಪಿಸುವ ಅಗತ್ಯವಿದೆ. ಸಮಸ್ತ ಹಿಂದುಗಳ ಅಭಿ ಪ್ರಾಯದಂತೆ ಮಂಜಲ್‌ಪಲ್ಕೆಯ ಅಕ್ರಮ ಕಸಾಯಿ ಖಾನೆಯ ವಿರುದ್ಧ ಹೋರಾಟ ಮಾಡಿ ಹೆತ್ತತಾಯಿಗೆ ಸಮಾನವಾದ ಗೋವುಗಳನ್ನು ಜನರೇ ಒಂದಾಗಿ ರಕ್ಷಿಸೋಣ.
ಓರ್ವ ಗೋರಕ್ಷಕ, ಮಂಜಲ್‌ಪಲ್ಕೆ
Tagged with
nimminda
ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳುವುದರ ಮೇಲೆ ವಿಧಿಸಲಾಗಿದ್ದ ತೆರಿಗೆ ಯನ್ನು ಕೇಂದ್ರ ಸರಕಾರ ತೆಗೆದು ಹಾಕಿದೆ. ಇದರಿಂದ ಸಂಕಷ್ಟದಲ್ಲಿರುವ ರೈತರ ಮೈ ಮೇಲೆ ಬರೆ ಎಳೆದಂತಾಗಿದೆ. ಮಲೇಷಿಯಾ, ಥಾಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಿಂದ ಭಾರತಕ್ಕೆ ಅಡಿಕೆ ಆಮದು ಮಾಡಿಕೊಂಡಲ್ಲಿ ದೇಶೀ ಅಡಿಕೆ ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಹಿಂದೆ ಇದೇ ಕಾರಣಕ್ಕಾಗಿ ಒತ್ತಡ ಹೇರಿದ ಪರಿಣಾಮ ಕೇಂದ್ರ ಸರಕಾರ ಈ ಅಡಿಕೆ ಮೇಲೆ ಶೇ.೧೦೮ರಷ್ಟು ತೆರಿಗೆ ವಿಧಿಸಿತ್ತು. ಈಗ ಮತ್ತೆ ಯಾವುದೋ ಒತ್ತಡಕ್ಕೆ ಮಣಿದು ತೆರಿಗೆಯನ್ನು ಹಿಂದಕ್ಕೆ ಪಡೆದು ಅಡಿಕೆ ಆಮದನ್ನು ಮುಕ್ತಗೊಳಿಸಿದೆ.
ಈಗಾಗಲೇ ಬೆಲೆಕುಸಿತ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಅಡಿಕೆ ಬೆಳೆಗಾರರ ಮೇಲೆ ಕೇಂದ್ರದ ಈ ನಿರ್ಧಾರ ಗಂಭೀರ ಪರಿಣಾಮ ಬೀರುತ್ತದೆ. ರಾಜ್ಯ ಸರಕಾರ ಈ ಬಗ್ಗೆ ತುರ್ತಾಗಿ ಗಮನಹರಿಸಬೇಕು. ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಈ ಹಿಂದಿನಂತೆ ವಿದೇಶಿ ಅಡಿಕೆ ಆಮದಿಗೆ ತೆರಿಗೆ ವಿಧಿಸುವಂತಾಗಬೇಕು.
ರಾಜಶೇಖರ್.ವಿ.ಎಸ್., ಬೆಳ್ತಂಗಡಿ
Tagged with
nimminda
ಪಿಎಫ್‌ಐ ಸಂಘಟನೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಜನತೆಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿದವರು ಸಮಾಜದ್ರೋಹಿಗಳಾಗಿರುತ್ತಾರೆ. ಪಿಎಫ್‌ಐ ಸಂಘಟನೆಯು ಸಾರ್ವ ಜನಿಕವಾಗಿ ನಡೆಸುತ್ತಿರುವಂಥ ಕಾರ್ಯಕ್ರಮವು ಅಲ್ಲಲ್ಲಿ ಕಾಣುತ್ತಿದೆ. ಮಾತ್ರವಲ್ಲ ಪಿಎಫ್‌ಐಯ ಸದಸ್ಯರು ೨೦೧೧ರಲ್ಲಿ ನಡೆಸಲು ಉದ್ದೇಶಿಸಿದ ಸ್ವಾತಂತ್ರ್ಯೋತ್ಸವಕ್ಕೆ ಪೊಲೀಸರು ಮತ್ತು ಜಿಲ್ಲಾಧಿಕಾರಿಯವರು ಅವ ಕಾಶ ಮಾಡಿಕೊಡಲಿಲ್ಲ. ಇದ ರಿಂದಲೇ ಇವರು ಆರ್‌ಎಸ್‌ಎಸ್ ನಂತಹ ಭಯೋತ್ಪಾದಕ ಸಂಘಟನೆ ಯ ಗುಲಾಮರು ಎನ್ನುವುದು ಎಲ್ಲ ರಿಗೂ ತಿಳಿದುಬರುತ್ತದೆ. ರಾಷ್ಟ್ರ ದ್ರೋಹಿ ಸಂಘಟನೆಯನ್ನು ಇನ್ನಾ ದರೂ ಸರಕಾರ ನಿಷೇಧಿಸಲಿ ಎಂದು ನಾನು ಆಗ್ರಹಿಸುತ್ತೇನೆ.
ಮಾಝಿಕ್, ಕೃಷ್ಣಾಪುರ
Tagged with
nimminda
ಸುರತ್ಕಲ್ ಸಮೀಪದ ಸೂರಜ್ ಹೋಟೆಲ್‌ನಿಂದ ಬಂಟರ ಸಂಘಕ್ಕೆ ತೆರಳುವ ರಸ್ತೆಯಲ್ಲಿ ಡಾಮರು ಮಾಯ ವಾಗಿದ್ದು, ಸಂಚಾರಕ್ಕೆ ತೀರಾ ಹದ ಗೆಟ್ಟಿದೆ. ಬೈಕ್ ಸವಾರರು, ಕಾರು ಚಾಲ ಕರು ಸಂಚರಿಸಲು ಪ್ರಯಾಸ ಪಡುವ ಸ್ಥಿತಿ ಬಂದೊದಗಿದೆ. ರಸ್ತೆಯ ಬದಿಯಲ್ಲಿನ ಚರಂಡಿಯಲ್ಲಿ ಹೂಳು ತುಂಬಿಕೊಂಡಿದ್ದು, ಮಳೆಗಾಲಕ್ಕೂ ಮುನ್ನ ಚರಂಡಿ ಕ್ಲೀನ್ ಮಾಡಿರದ ಕಾರಣ ಮಳೆಯ ನೀರು ಇಲ್ಲಿನ ತಗ್ಗು ಪ್ರದೇಶದಲ್ಲಿ ಹರಿಯುತ್ತದೆ. ಇದರಿಂದ ಪರಿಸರದ ವಾಸಿಗಳಿಗೂ ಸಮಸ್ಯೆ ತಪಿ ದ್ದಲ್ಲ. ಬಂಟರ ಸಂಘದಿಂದ ಮುಂದೆ ಚೊಕ್ಕಬೆಟ್ಟು ಕಡೆ ಸಂಚರಿಸುವ ರಸ್ತೆಯನ್ನು ಇತ್ತೀಚೆಗೆ ಡಾಮರೀಕರಣ ಮಾಡಲಾಗಿದೆ. ಆದರೆ ಕೆಲವೇ ಮೀಟರ್ ಉದ್ದದ ಬಂಟರ ಸಂಘದ ರಸ್ತೆಯನ್ನು ಹಾಗೆಯೇ ಬಿಡಲಾಗಿದೆ. ಇದು ಸರಿಯೇ? ಮಹಾನಗರ ಪಾಲಿಕೆ ಅಧಿಕಾರಿಗಳು, ಆರೋಗ್ಯ ಇಲಾಖೆ, ಸ್ಥಳೀಯ ಕಾರ್ಪೊರೇಟರ್‌ಗಳು ಇಲ್ಲಿನ ಸಮಸ್ಯೆಯನ್ನು ಇನ್ನಾದರೂ ಗಮನಿಸಿ ಪರಿಹಾರ ಸೂಚಿಸುವರೇ ವಿನಂತಿ.
ನಿಶಾಂತ್ ಶೆಟ್ಟಿ, ಚೊಕ್ಕಬೆಟು
Tagged with
nimminda
ಬೀಡಿ ಕಾರ್ಮಿಕರಿಗೆ ಮಾಲಕರು ಯೋಗ್ಯ ಮಜೂರಿ ನೀಡದೆ ವಂಚಿಸು ತ್ತಿದ್ದಾರೆ ಎಂದು ಇತ್ತೀಚೆಗೆ ಬೀಡಿ ಕಾರ್ಮಿಕರು ಕಾರ್ಮಿಕ ಸಂಘಟನೆಗಳ ನೆರವಿನೊಂದಿಗೆ ಪ್ರತಿಭಟಿಸಿದರು. ಈ ವೇಳೆ ಅನೇಕ ಕಡೆಗಳಲ್ಲಿ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಬೀಡಿಯ ಬಂಡಲ್‌ಗೆ ಬೆಂಕಿ ಹಚ್ಚಿ ರೋಷ ವ್ಯಕ್ತಪಡಿಸಿದ್ದಾರೆ. ಹೋರಾಟದ ಅಂಗವಾಗಿ ಇದನ್ನು ಸರಿ ಎನ್ನಬಹು ದಾದರೂ ಬೀಡಿಗೆ ಬೆಂಕಿಯಿಡುವ ಮನೋಸ್ಥಿತಿಯನ್ನು ಸರಿಯೆನ್ನ ಲಾಗದು. ಯಾಕೆಂದರೆ ಇಂದು ನಮ್ಮ ದೇಶದಲ್ಲಿ ಕೋಟ್ಯಂತರ ಮಂದಿ ಬೀಡಿಯನ್ನೇ ವೃತ್ತಿಯನ್ನಾಗಿ ಅವ ಲಂಬಿಸಿದ್ದಾರೆ. ಅವರಿಗೆ ಬೀಡಿ ಸುತ್ತಿ ದರೆ ಮಾತ್ರ ಹೊಟ್ಟೆಗೆ ಗಂಜಿ ಸಿಗು ತ್ತದೆ. ಹೀಗಿರುವಾಗ ಅನ್ನ ನೀಡುವ ಬೀಡಿಯನ್ನೇ ಬೆಂಕಿಯಿಟ್ಟು ಹೊತ್ತಿಸು ವುದು ಎಲ್ಲಿಯ ನ್ಯಾಯ? ಇದು ಅನ್ನ ಕೊಟ್ಟು ಸಾಕಿ ಸಲಹಿದವರನ್ನೇ ಕೊಂದ ಪಾಪಕ್ಕೆ ಸಮ ವಲ್ಲವೇ? ಪ್ರತಿಭಟನೆಯ ಸಂದರ್ಭದಲ್ಲಿ ಸಂಘಟನೆಗಳ ಕಾರ್ಯಕರ್ತರು ಭಾವಾವೇಶಕ್ಕೆ ಒಳಗಾಗಿ ಇಂಥ ಕೃತ್ಯಗಳನ್ನು ಎಸಗದಂತೆ ಮುಖಂಡರು ಗಮನಿಸ ಬೇಕಿತ್ತು. ಯಾಕೆಂದರೆ ಇಂಥ ಘಟನೆ ಗಳಿಂದ ಬೀಡಿ ಕಾರ್ಮಿಕರ ಮನಸ್ಸಿಗೆ ನೋವಾಗುವುದಲ್ಲದೆ ಸಂಘಟನೆಯ ಮೇಲೆ ಕೆಟ್ಟ ಅಭಿಪಾ ಯ ಬರುವುದು ಸಹಜವೇ ಆಗಿದೆ. ಇನ್ನಾದರೂ ಸಂಘಟನೆಯ ಕಾರ್ಯ ಕರ್ತರು ಇದನ್ನೆಲ್ಲ ಅರ್ಥ ಮಾಡಿ ಕೊಂಡು ಬೀಡಿ ಕಾರ್ಮಿಕರ ಪರ ಹೋರಾ ಡುವರೇ?
ಶಶಿಕಾಂತ್, ರಥಬೀದಿ
Tagged with
nimminda
ಸೌತ್ ಕೆನರಾ ನ್ಯೂಸ್ ವಾರ ಪತ್ರಿಕೆಯ ೨೪-೪-೨೦೦೨ರ ಸಂಚಿಕೆ ಯಲ್ಲಿ ಕಾರ್‌ಸ್ಟ್ರೀಟ್‌ನ ಶ್ರೀವೆಂಕಟರ ಮಣ ದೇವಸ್ಥಾನದ ಮೂವರು ಅರ್ಚಕರ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ಈ ವರದಿಯ ಬಗ್ಗೆ ಅರ್ಚಕರ ಕುಟುಂಬ ತೀವ್ರವಾಗಿ ನೊಂದುಕೊಂಡಿತ್ತು. ಅಂದು ದೇವ ಸ್ಥಾನಕ್ಕೆ ಸಂಬಂಧಪಟ್ಟ ಎರಡು ಗುಂಪುಗಳ ನಡುವಿನ ಷಡ್ಯಂತ್ರದಲ್ಲಿ ಅಮಾಯಕರಾದ ಅರ್ಚಕರು ಬಲಿಪ ಶುವಾದರು ಎಂದು ತಿಳಿಸಲು ವಿಷಾ ದಿಸುತ್ತೇವೆ. ವೈದಿಕ ವೃತ್ತಿ ನಡೆಸುತ್ತಿದ್ದ ಅರ್ಚಕರ ಬಗ್ಗೆ ಪ್ರಕಟವಾದ ವರದಿ ಯನ್ನು ಅವರ ವಿರೋಧಿ ಗುಂಪು ಜೆರಾಕ್ಸ್ ಮಾಡಿ ಹಂಚಿ ಸಂಭ್ರಮ ಪಟ್ಟಿತು. ಆದರೆ ಇಂದು ಅದರ ಫಲ ವನ್ನು ಅಂದರೆ ತಾವು ಮಾಡಿದ ಅನ್ಯಾಯದ ಫಲವನ್ನು ಅವರು ಉಣ್ಣುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪತ್ರಿಕೆಗೂ ತಪ್ಪು ಮಾಹಿತಿ ಕೊಟ್ಟು ಅರ್ಚಕರ ಬಗ್ಗೆ ಕೀಳು ಅಭಿಪ್ರಾಯ ಸಮಾಜದಲ್ಲಿ ಸೃಷ್ಟಿಯಾಗುವಂತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಚಕರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಆಗಿರುವ ಮಾನಸಿಕ ವ್ಯಥೆಯ ಬಗ್ಗೆ ನಮ್ಮ ವಿಷಾದವಿದೆ ಎಂದು ಈ ಮೂಲಕ ತಿಳಿಸುತ್ತೇವೆ. ವ್ಯವಸ್ಥಾಪಕರು
ಸೌತ್ ಕೆನರಾ ನ್ಯೂಸ್ ವಾರಪತ್ರಿಕೆ
Tagged with
nimminda
ಪರಿಸರ ಪ್ರೇಮಿ ಸಂಘಟನೆಯೊಂದು ಕರಾ ವಳಿಯ ಅವಳಿ ಜಿಲ್ಲೆಗಳಲ್ಲಿ ಕಂಪೆನಿಗಳ ಪರ ವಕಾ ಲತ್ತು ವಹಿಸುತ್ತಾ ಹತ್ತಾರು ಬೃಹತ್ ಉದ್ದಿಮೆಗಳು ಹಾಗೂ ನೂರಾರು ಸಣ್ಣಪುಟ್ಟ ಪರಿಸರವಿನಾಶಿ ಉದ್ದಿ ಮೆಗಳನ್ನು ಸ್ಥಾಪಿಸಲು ಅವಕಾಶ ನೀಡುತ್ತಾ ಬಂದಿ ರುವುದು ಇಂದು-ನಿನ್ನೆಯ ಸಂಗತಿಯಲ್ಲ. ಈಗಾ ಗಲೇ ಉಡುಪಿ ಜಿಲ್ಲೆಯ ನಂದಿಕೂರು ಹಾಗೂ ಪಡುಬಿದ್ರಿಯಲ್ಲಿ ಎರಡು ಬೃಹತ್ ಕಂಪೆನಿಗಳ ಸ್ಥಾಪ ನೆಗೆ ಶ್ರಮಿಸಿರುವ ಕೀರ್ತಿಯು ಸದ್ರಿ ಸಂಘ ಟನೆಗೆ ಸಲ್ಲುತ್ತದೆ. ಧಾರಣಾ ಸಾಮರ್ಥ್ಯವಿರದ ಎರಡು ಬೃಹತ್ ಕಂಪೆನಿಗಳಿಂದ ಜಿಲ್ಲೆಯ ಜನರು ಹೈರಾ ಣಾಗಿ ಹೋಗಿದ್ದಾರೆ. ಕಂಪೆನಿ ಕಡೆಯಿಂದ ಹಣದ ಸೂಟ್‌ಕೇಸ್ ಪಡೆದು ಬಳಿಕ ನಾಗರಿಕರ ಸಭೆ ಕರೆ ಯುವ ಲೆಟರ್‌ಹೆಡ್ ಸಂಘಟನೆಯು ಜನರನ್ನು ಉದ್ಯೋಗ, ಐಷಾರಾಮಿ ಜೀವನ ಎಂದೆಲ್ಲ ನಂಬಿಸಿ ವಂಚಿಸುತ್ತಿದೆ.
ನಾಗಾರ್ಜುನ ಕಂಪೆನಿಯಿಂದ ಸ್ಥಳೀಯ ನಿವಾಸಿಗಳಿಗೆ ಎಷ್ಟೊಂದು ಸಮಸ್ಯೆಯಾಗುತ್ತಿದ್ದರೂ ಪರಿಸರ ಪ್ರೇಮಿ ಸಮಿತಿ ಮಾತ್ರ ಸುಮ್ಮನಾಗಿದೆ. ಹಾರು ಬೂದಿ ಸ್ಥಾವರದಿಂದ ಪರಿಸರ ವಿನಾಶಕ್ಕೆ ತಲುಪಿ ಸಂಘಟನೆಯ ಪ್ರಮುಖರ ಕಾಲಬುಡಕ್ಕೆ ನೀರು ಬಂದಾಗ ಇವರು ಮಾತಾಡುತ್ತಾರೋ ಏನೋ? ಯಾವುದಕ್ಕೂ ಇಂಥವರ ಬಗ್ಗೆ ಜಿಲ್ಲೆಯ ಜನರು ಎಚ್ಚರದಿಂದಿರಲೇಬೇಕು.
ಕೇಶವ, ಪಡುಬಿದ್ರಿ
Tagged with
nimminda
ಮುಲ್ಕಿಯಲ್ಲಿ ಏರ್‌ಟೆಲ್ ನೆಟ್ ವರ್ಕ್ ಸರಿಯಾಗಿ ಸಿಗುತ್ತದೆ. ಆದರೆ ಅದರ ಸುತ್ತಲಿನ ಕೆಲವು ಪ್ರದೇಶಗಳಲ್ಲಿ ಏರ್‌ಟೆಲ್ ಮೊಬೈಲ್ ಸದಾ ನಾಟ್ ರೀಚೇಬಲ್ ಆಗಿರುತ್ತದೆ. ತೋಕೂರು, ಎಸ್.ಕೋಡಿ, ಕೆರೆಕಾಡು, ಕೊಲ್ನಾಡು ಪರಿಸರದಲ್ಲಿ ಮನೆಯೊಳಗಿದ್ದರೆ ಏರ್ ಟೆಲ್ ಮೊಬೈಲ್ ನೆಟ್‌ವರ್ಕ್ ಸ್ಥಗಿತ ಗೊಳ್ಳುತ್ತದೆ. ಮನೆಯಿಂದ ಹೊರಗೆ ಬಂದರೆ ಅಲ್ಪಸ್ವಲ್ಪ ಸಿಗುತ್ತದೆ. ಇದೇಕೆ ಹೀಗೆ? ಏರ್‌ಟೆಲ್ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿದ್ದರೂ ಇಂಥ ಸ್ಥಿತಿ ಏಕೆ ಬಂತೆಂದೇ ತಿಳಿಯುವುದಿಲ್ಲ. ಈ ಕಾರಣಕ್ಕಾಗಿಯೇ ನನ್ನಂಥ ಅನೇಕ ಚಂದಾದಾರರು ಬೇರೆ ನೆಟ್‌ವರ್ಕ್‌ಗೆ ಶರಣಾಗುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುವರೇ?
ನೊಂದ ಗ್ರಾಹಕ, ಕೆರೆಕಾಡು
Tagged with
nimminda
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಇದರ ವತಿಯಿಂದ ಶ್ರೀ ರಾಮ್ ಭಜನಾ ಮಂದಿರ ಕಾಮಾಜೆ ದೈಪಾಲ ಇಲ್ಲಿ ಡಾ| ಶ್ಯಾಂ ಪ್ರಸಾದ್ ಮುಖರ್ಜಿಯವರ ಪುಣ್ಯ ದಿನಾಚರಣೆಯ ಅಂಗವಾಗಿ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಬಳಿಕ ಮಂದಿರದ ವಠಾರದಲ್ಲಿ ಸಸಿ ನೆಡಲಾಯಿತು. ಈ ಸಂದರ್ಭ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಕಾರ್ಯದರ್ಶಿ ರಾಮ್‌ದಾಸ್ ಬಂಟ್ವಾಳ, ತಾ.ಪಂ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಪುಷ್ಪಲತಾ ಗಟ್ಟಿ, ಸ್ಥಳೀಯ ಪುರಸಭಾ ಸದಸ್ಯರಾದ ಭಾಸ್ಕರ ಟೈಲರ್, ಶ್ರೀನಿವಾಸ ಮಲ್ಲಿ, ಗುತ್ತಿಗೆದಾರ ಪ್ರಮೋದ್ ಕುಮಾರ್. ತಾ.ಪಂ ಸದಸ್ಯ ಆನಂದ್ ಶಂಭೂರು , ಮಾಜಿ ಪುರಸಭಾ ಅಧ್ಯಕ್ಷೆ ಯಶೋಧ ಬಿ, ಶ್ರೀ ರಾಮ್ ಭಜನಾ ಮಂದಿರದ ಅಧ್ಯಕ್ಷ ಕೇಶವ ದೈಪಾಲ ಉಪಸ್ಥಿತರಿದ್ದರು.
Tagged with
bridge,
lnews
ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಜರ್ಮನಿ
ಗ್ನಾನ್‌ಸ್ಕ್: ಎದುರಾಳಿ ತಂಡ ಯಾವುದೇ ಇರಲಿ ಭರ್ಜರಿ ಗೆಲುವು ಸಾಧಿಸುವ ಜರ್ಮನಿಯ ಅಭಿಯಾನ ನಿನ್ನೆ ಗ್ರೀಸ್ ವಿರುದ್ಧ ಕೂಡ ಮುಂದುವರೆದಿದೆ.
ನಿನ್ನೆ ಗ್ರೀಸ್ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ೪-೨ರ ಭರ್ಜರಿ ಗೆಲುವು ಸಾಧಿಸುವ ಮೂಲಕ ಜರ್ಮನಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಸೆಮೀಸ್‌ನಲ್ಲಿ ಜರ್ಮನಿ ಇಂಗ್ಲೆಂಡ್ ಅಥವಾ ಇಟಲಿ ವಿರುದ್ಧ ಕಾದಾಡಲಿದೆ.
೩೯ನೇ ನಿಮಿಷದಲ್ಲಿ ಪಿಲಿಪ್ ಲಾಮ್ ದಾಖಲಿಸಿದ ಏಕೈಕ ಗೋಲು ಬಿಟ್ಟರೆ ಇತ್ತಂಡಗಳ ಯಾವುದೇ ಆಟಗಾರ ಪ್ರಥಮಾರ್ಧದಲ್ಲಿ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಹಾಕಲು ವಿಫಲನಾದನು. ಆದರೆ ದ್ವಿತಿಯಾರ್ಧ ಅದಕ್ಕಿಂತ ಭಿನ್ನವಾಗಿತ್ತು. ಇಲ್ಲಿ ಒಟ್ಟಾರೆಯಾಗಿ ಎರಡೂ ತಂಡಗಳು ಐದು ಗೋಲುಗಳನ್ನು ದಾಖಲಿಸಿದವು. ದ್ವಿತಿಯಾರ್ಧದ ಹತ್ತು ನಿಮಿಷದಲ್ಲಿ (೫೫) ಜಾರ್ಜ್ ಸಮ್ರಾಸ್ ಗಳಿಸಿದ ಗೋಲು ಗ್ರೀಸ್ ಪಂದ್ಯದಲ್ಲಿ ಸಮಬಲ ಸಾಧಿಸುವಂತೆ ಮಾಡಿತು. ಆದರೆ ಸಮಿ ಖೆದಿರಾ ೬೧ನೇ ಹಾಗೂ ಮಿರೊಸ್ಲಾವ್ ಕ್ಲೊಸ್ ೬೮ನೇ ನಿಮಿಷದಲ್ಲಿ ಗಳಿಸಿದ ಗೋಲು ಜರ್ಮನಿ ಪಂದ್ಯದಲ್ಲಿ ಮೇಲುಗೈ (೩-೧) ಸಾಧಿಸುವಂತೆ ಮಾಡಿದವು. ೭೪ನೇ ಅವಧಿಯಲ್ಲಿ ಮಾರ್ಕೊ ಗೋಲು ಜರ್ಮನಿಗೆ ೪-೧ರ ಭರ್ಜರಿ ಮುನ್ನಡೆ ತಂದಿತು. ಆದರೆ ೮೯ನೇ ನಿಮಿಷದಲ್ಲಿ ಸಲ್ಪಿಂಗಿದಿಸ್ ಪೆನಾಲ್ಟಿ ಗೋಲು ಗ್ರೀಸ್‌ನ ಸೋಲಿನ ಅಂತರವನ್ನು ಕಡಿಮೆ ಮಾಡಿತು.
Tagged with
tnews