ದಿಲ್ಶಾನ್-ಸಂಗಕ್ಕರ ಶತಕದಾಟ
ಗಾಲ್: ಇಲ್ಲಿ ಆರಂಭವಾದ ಪಾಕಿಸ್ತಾನ ವಿರುದ್ಧದ ಪ್ರಥಮ ಟೆಸ್ಟ್‌ನ ಮೊದಲ ದಿನದಲ್ಲಿ ಆತಿಥೇಯ ಶ್ರೀಲಂಕಾ ಮೇಲುಗೈ ಸಾಧಿಸಿದೆ. ತಿಲಕರತ್ನೆ ದಿಲ್ಶಾನ್ ಹಾಗೂ ಕುಮಾರ ಸಂಗಾಕ್ಕರ ಸಿಡಿಸಿದ ಶತಕದ ನೆರವಿನಿಂದ ತಂಡ ಮೊದಲ ದಿನದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ ೩೦೦ ರನ್ ಗಳಿಸಿದೆ. ಸಂಗಾಕ್ಕರ (೧೧೧) ಹಾಗೂ ಜಯವರ್ಧನೆ (೫೫) ದಿನದಂತ್ಯಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಟಾಸ್ ಗೆದ್ದ ಲಂಕಾ ಮೊದಲ ಬ್ಯಾಟಿಂಗ್ ನಡೆಸುವ ನಿರ್ಧಾರ ತೆಗೆದು ಕೊಂಡಿತು. ಅಂತೆಯೇ ಮೊದಲ ವಿಕೆಟ್‌ಗೆ ದಿಲ್ಶಾನ್ ಹಾಗೂ ಪರಣವಿತಣ ಜೋಡಿ ಮೊದಲ ವಿಕೆಟ್‌ಗೆ ೬೩ ರನ್‌ಗಳನ್ನು ಒಟ್ಟುಗೂಡಿಸಿತು. ಆದರೆ ಈ ವೇಳೆ ೨೪ ರನ್ ಗಳಿಸಿ ಆಡುತ್ತಿದ್ದ ಪರಣವಿತಣ ಸ್ಪಿನ್ನರ್ ಸಯೀದ್ ಅಜ್ಮಲ್ ಎಸೆತದಲ್ಲಿ ಸ್ಪಂಪ್ಡ್ ಔಟಾದರು. ನಂತರ ಜೊತೆಯಾದ ದಿಲ್ಶಾನ್ ಹಾಗೂ ಸಂಗಾಕ್ಕರ ಎರಡನೇ ವಿಕೆಟ್‌ಗೆ ೧೨೪ ರನ್‌ಗಳನ್ನು ಗಳಿಸಿ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಿದರು. ಈ ವೇಳೆ ದಿಲ್ಶಾನ್ ತನ್ನ ಟೆಸ್ಟ್ ಜೀವನದ ೧೩ನೇ ಶತಕ ದಾಖಲಿಸಿ ಬಳಿಕ ಅಜ್ಮಲ್‌ಗೆ ವಿಕೆಟ್ ಒಪ್ಪಿಸಿದ್ದರು ೧೮೦ ಎಸೆತ ಎದುರಿಸಿದ್ದ ದಿಲ್ಶಾನ್ ತನ್ನ ಶತಕದ ಇನ್ನಿಂಗ್ಸ್‌ನಲ್ಲಿ ೧೩ ಬೌಂಡರಿ ಹಾಗೂ ಒಂದು ಸಿಕ್ಸ್ ಸಿಡಿಸಿದ್ದರು. ಆದರೆ ಇನ್ನೊಂದು ಬದಿಯಲ್ಲಿ ಕ್ರೀಸ್ ಕಾಯ್ದುಕೊಂಡಿದ್ದ ಸಂಗಾಕ್ಕರ ಹಾಗೂ ಜಯವರ್ಧನೆ ಮತ್ತೆ ಪಾಕ್ ಔಲರ್‌ಗಳನ್ನು ದಂಡಿಸಿದರು. ಈ ಜೋಡಿ ಕೂಡ ತಂಡಕ್ಕೆ ಉತ್ತಮ ಮುನ್ನಡೆ ತಂದಿತು. ಸಂಗಾಕ್ಕರ ಈ ವೇಳೆ ಶತಕವನ್ನು ಪೂರೈಸಿದರು. ಮತ್ತೊಂದು ಬದಿಯಲ್ಲಿದ್ದ ಜಯವರ್ಧನೆ ಅರ್ಧಶತಕ ದಾಖಲಿಸಿ ಸಂಗಾಕ್ಕರ ಜೊತೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಾಕ್ ಪರ ಸಯೀದ್ ಅಜ್ಮಲ್ ಎರಡು ವಿಕೆಟ್ ಪಡೆದರು.
Tagged with
tnews
ದೆಹಲಿ: ಕಿರುಚಾಡುವ ಮೂಲಕ ನನ್ನ ಅಭಿಪ್ರಾಯ ಅಥವಾ ಇರಾದೆ ಗಳನ್ನು ರಾಜ್ಯಸಭೆಯಲ್ಲಿ ವ್ಯಕ್ತಪಡಿಸಲ್ಲ, ಬದಲಾಗಿ ಶಾಂತರೂಪದಲ್ಲೇ ಇದರ ಪರಿಹಾರಕ್ಕೆ ನೋಡುತ್ತೇನೆ ಎಂದು ಭಾರತೀಯ ಕ್ರಿಕೆಟ್ ತಂಡದ ಆಟ ಗಾರ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ನೂರು ಶತಕ ದಾಖಲಿಸಿದ ಹಿನ್ನೆಲೆ ಯಲ್ಲಿ ಭಾರತ ಸರ್ಕಾರ ದಿಗ್ಗಜ ಆಟಗಾರನ ಹೆಸರನ್ನು ರಾಜ್ಯಸಭೆಗೆ ಅನುಮೋದಿಸಿತ್ತು. ನಂತರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಚಿನ್ ಹೆಸರನ್ನು ಪುರಸ್ಕರಿಸಿತು. ಚರ್ಚೆಯಲ್ಲಿ ಬೊಬ್ಬೆ ಹೊಡೆ ಯುವ ಅಗತ್ಯವಿದೆ ಎಂದು ನನಗೆ ಅನ್ನಿಸುವುದಿಲ್ಲ, ಅಲ್ಲದೆ ಯಾರೂ ಕೂಡ ನನ್ನನ್ನು ಈ ರೀತಿ ಮಾಡಲಾ ರರು. ಸಹನೆಯಿಂದಲೇ ನನ್ನ ಅಭಿಪ್ರಾಂiಗಳನ್ನು ಮಂಡಿಸುವತ್ತ ಗಮನ ಹರಿಸುತ್ತೇನೆ. ಮುಂಬರುವ ಒಲಿಂಪಿಕ್ಸ್‌ನಲ್ಲಿ ಭಾರತ ಹೆಚ್ಚಿನ ಪದಕ ಗೆದ್ದುಕೊಳ್ಳಲಿ, ಉತ್ತಮ ಪ್ರದರ್ಶನ ನೀಡಲು ಅಥ್ಲೀಟ್ಸ್‌ಗಳಿಗೆ ಭಗವಂತ ಶಕ್ತಿಯುನ್ನೂ ಕರುಣಿಸಲಿ ಎಂದು ಬೇಡುತ್ತೇನೆ ಎಂದು ಸಚಿನ್ ಇದೇ ವೇಳೆ ತಿಳಿಸಿದರು.
Tagged with
tnews
ಮಂಗಳೂರು: ಸಂಗೀತ ತರಬೇತಿ ತರಗತಿಯ ಪರವಾನಿಗೆ ನವೀಕರಣ ಹಾಗೂ ಉದ್ಯೋಗ ಮಾಹಿತಿ ಕೇಂದ್ರಕ್ಕೆ ಹೊಸ ಪರವಾನಿಗೆ ನೀಡಲು ಲಂಚ ಕೇಳಿದ ಮನಪಾ ಆರೋಗ್ಯ ಇಲಾಖೆಯ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಇನ್ಸ್‌ಪೆಕ್ಟರ್ ಭರತ್ ಕುಮಾರ್ ಎಂಬ ವರೇ ಲೋಕಾಯುಕ್ತ ಪೊಲೀಸ್ ಕೈಗೆ ಸಿಕ್ಕಿಬಿದ್ದವರು. ಬಲ್ಮಠ ಕಾಂಪ್ಲೆಕ್ಸ್‌ನಲ್ಲಿ ರುವ ಎಲೀಸಿಯಂ ಸಂಗೀತ ತರಬೇತಿ ಶಾಲೆಯ ಪರವಾನಿಗೆ ನವೀಕ ರಣಕ್ಕೆ ಹಾಗೂ ಅದೇ ಕಚೇರಿಯಲ್ಲಿ ಉದ್ಯೋಗ ಮಾಹಿತಿ ಕೇಂದ್ರ ಆರಂಭಿ ಸುವ ಉದ್ದೇಶದಿಂದ ಪರವಾನಿಗೆಗಾಗಿ ಮಾಲಕ ಆಶ್ಲೇ ಎಂಬವರು ಎಪ್ರಿಲ್ ತಿಂಗಳಲ್ಲೇ ಪಾಲಿ ಕೆಗೆ ಅರ್ಜಿ ಹಾಕಿ ದ್ದರು. ಆದರೆ ಪರವಾನಿಗೆ ನೀಡಲು ೨೫೦೦ ಲಂಚ ನೀಡಬೇಕೆಂದು ಹೆಲ್ತ್ ಇನ್ಸ್‌ಪೆಕ್ಟರ್ ಭರತ್ ಕುಮಾರ್ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿದ ಆಶ್ಲೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರನ್ನು ಆಧರಿಸಿ ಕ್ರಮ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು ಹಣಕ್ಕೆ ರಾಸಾಯನಿಕ ಲೇಪಿಸಿ ದೂರುದಾರ ರಿಗೆ ನೀಡಿದ್ದರು. ಆಶ್ಲೆ ನಿನ್ನೆ ಭರತ್‌ಗೆ ಹಣ ನೀಡುತ್ತಿದ್ದಂತೆಯೇ ಲೋಕಾ ಯುಕ್ತ ಪೊಲೀಸರು ದಾಳಿ ಮಾಡಿ ಅಧಿಕಾರಿಯನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಆದರೆ ಈ ಲಂಚ ಆರೋ ಪದ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಬಗ್ಗೆ ಮನಪಾ ಸಿಬ್ಬಂದಿ ಯಿಂದಲೇ ಶಂಕೆ ವ್ಯಕ್ತವಾಗಿದೆ. ಇನ್ಸ್ ಪೆಕ್ಟರ್ ಭರತ್‌ಕುಮಾರ್ ಮನಪಾಕ್ಕೆ ಬಂದ ಬಳಿಕ ಅನಧಿಕೃತ ಮತ್ತು ಶುಚಿತ್ವ ಕಾಪಾಡದ ವಿವಿಧ ಹೊಟೇಲುಗಳಿಗೆ ದಾಳಿ ನಡೆಸಿದ್ದರು. ಇದರಲ್ಲಿ ನಗರದ ಪಂಚತಾರಾ ಹೊಟೇಲುಗಳೂ ಸೇರಿ ದ್ದವು. ಇದಲ್ಲದೆ ಎರಡು ವಾರದ ಹಿಂದೆ ಅಕ್ರಮ ಕಸಾಯಿ ಖಾನೆಗೂ ದಾಳಿ ನಡೆಸಿ ಬೀಗ ಜಡಿದಿದ್ದರು. ಈ ಸೇಡನ್ನು ಹೊಂದಿರುವ ವ್ಯಕ್ತಿಗಳು ಆರೋ ಗ್ಯಾಧಿಕಾರಿಗೆ ಬುದ್ದಿ ಕಲಿಸಲು ಈ ತಂತ್ರ ರೂಪಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಪರವಾನಿಗೆ ನವೀ ಕರಣ ಕ್ಕೆಂದು ನೀಡಿದ ಹಣವನ್ನೇ ಲಂಚ ಎಂದು ಬಿಂಬಿಸುವ ಪ್ರಯತ್ನ ವನ್ನು ಮಾಡಿ ಅಧಿಕಾರಿಯನ್ನು ಸುಲಭವಾಗಿ ಖೆಡ್ಡಾಕ್ಕೆ ಕೆಡವಲಾಗಿದೆ ಎಂದು ಸಿಬ್ಬಂದಿಯೇ ಹೇಳುತ್ತಿದ್ದಾರೆ. ನಗರದ ಬೃಹತ್ ಹೊಟೇಲುಗಳ ಮೇಲೆ ಯಾವುದೇ ಮುಲಾಜಿಲ್ಲದೆ ದಾಳಿ ನಡೆಸಿದ್ದ ಈ ಅಧಿಕಾರಿ ಲಂಚ ಪಡೆ ಯುವುದಾದರೆ ಅಲ್ಲಿಯೂ ಪಡೆಯ ಬಹುದಿತ್ತು ಎನ್ನುತ್ತಿರುವ ಕೆಲ ಅಧಿ ಕಾರಿಗಳು ಈ ಪ್ರಕರಣದಲ್ಲಿ ಯಾವುದೋ ‘ಕೈ ಕೆಲಸ ಮಾಡಿದೆ ಎನ್ನುವ ಶಂಕೆ ವ್ಯಕ್ತ ಪಡಿಸಿದ್ದಾರೆ.
Tagged with
cnews,
mcc,
mlore
ಕಾಸರಗೋಡು: ಹಾವಾಡಿಗನ ಚಮ ತ್ಕಾರಗಳ ನಡುವೆ ನೆಲದಲ್ಲಿ ಹರಿದ ವಿಷ ಪೂರಿತ ಹಾವಿನ ಕಡಿತಕ್ಕೊಳಗಾಗಿ ವ್ಯಾಪಾರಿ ಯೋರ್ವರು ಗಂಭೀರ ಸ್ಥಿತಿ ತಲುಪಿರುವ ಘಟನೆ ಉಪ್ಪಳ ಪೇಟೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಉಪ್ಪಳ ಮೂಸೋಡಿ ನಿವಾಸಿ ಹಾಗೂ ತರಕಾರಿ ವ್ಯಾಪಾರಿಯಾಗಿರುವ ಉಮ್ಮರ್ ಫಾರೂಕ್ (೨೭) ಹಾವಿನ ಕಡಿತಕ್ಕೊಳಗಾಗಿ ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿರುವ ಉದ್ಯಮಿ. ಉಪ್ಪಳ ಮೂಸೋಡಿಯ ಮನೆ ಯೊಂದರಲ್ಲಿ ಮೊನ್ನೆ ಸಂಜೆ ವಿಷಪೂರಿತ ಹಾವೊಂದು ಕಂಡು ಬಂದಿತ್ತು. ಈ ಬಗ್ಗೆ ಹಾವು ಹಿಡಿಯುವ ವ್ಯಕ್ತಿಯೊಬ್ಬನಿಗೆ ಮಾಹಿತಿ ನೀಡಲಾಗಿ ಆತ ತಲುಪಿ ಹಾವನ್ನು ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಕಾಡಿನಲ್ಲಿ ಬಿಡಲೆಂದು ತೆರಳಿದ್ದ. ಆದರೆ, ಉಪ್ಪಳ ಪೇಟೆಗೆ ತಲುಪಿದಾತ ತನ್ನ ಬಳಿಯಿದ್ದ ಹಾವನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಿ ಸಾಮರ್ಥ್ಯ ಮೆರೆದಿದ್ದ. ಅಷ್ಟರಲ್ಲಿ ಹಾವಿನ ಜೊತೆಗಿನ ಆಟ ಕಾಣಲು ಜನರೂ ಸೇರಿದ್ದರು. ಈ ವೇಳೆ ಅದೇಗೋ ಈತನ ಕೈಯಿಂದ ಕೆಳಗಿಳಿದ ಹಾವು ಅಲ್ಲಿ ನಿಂತಿದ್ದ ಫಾರೂಕ್‌ನ ಕೈಗೆ ಕಚ್ಚಿತ್ತು.
Tagged with
cnews,
kgod
ಸುಳ್ಯ: ಬೆಳ್ಳಾರೆ ಮಸೀದಿಯಲ್ಲಿ ಮೊಯಿ ಲಾರ್(ಮುಖ್ಯಗುರು) ಆಗಿರುವ ಜಲೀಲ್ ಎಂಬವರು ಸ್ಥಳೀಯ ಹಸನ್ ಎಂಬ ಯುವ ಕನಿಗೆ ಹಲ್ಲೆ ನಡೆಸಿದ್ದು, ಬಳಿಕ ಮಾತುಕತೆಯಲ್ಲಿ ವಿವಾದವನ್ನು ಮುಗಿಸಲಾಗಿದೆ ಎಂದು ತಿಳಿದು ಬಂದಿದೆ. ಮೊಯಿಲಾರ್ ಕುರಿತು ಹಸನ್ ಏನೆಲ್ಲಾ ಹೇಳಿಕೊಂಡು ತಿರುಗಾಡುತ್ತಿದ್ದ ಎನ್ನಲಾಗಿದೆ. ಶುಕ್ರವಾರದ ಪ್ರಾರ್ಥನೆ ವೇಳೆ ಮುಖ್ಯ ಗುರು ಗಳು ತನ್ನ ವಿರುದ್ಧ ಕೆಲವರು ಪೇಟೆಯಲ್ಲಿ ಹೇಳಿಕೊಂಡು ತಿರುಗುತ್ತಿದ್ದಾರೆ. ಪೇಟೆಯಲ್ಲಿ ಹೇಳುವುದಕ್ಕಿಂತ ತನ್ನ ಎದುರು ಅವರು ಹೇಳಬೇಕು ಎಂದರು. ಇದರಿಂದ ಆಕ್ರೋಶಗೊಂಡ ಹಸನ್ ಮುಖ್ಯಗುರುಗಳಲ್ಲಿ ಈ ಕುರಿತು ಪ್ರಶ್ನೆ ಮಾಡಿ ದ್ದಾನೆ. ಇದರಿಂದ ಸಿಟ್ಟಾದ ಜಲೀಲ್ ಹಸನ್‌ಗೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಆಡಳಿತ ಮಂಡಳಿಯವರು ಸೇರಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಮಾಡಿದ್ದಾರೆ.
Tagged with
cnews,
sullia
ಉಡುಪಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವಳನ್ನು ತಡೆದು ನಿಲ್ಲಿಸಿದ ಅಪರಿಚಿತ ಯುವಕರಿ ಬ್ಬರು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸೆಳೆದು ಬೈಕ್‌ನಲ್ಲಿ ಪರಾರಿಯಾದ ಘಟನೆ ಹೆರ್ಗ ಗ್ರಾಮದ ಎಸ್.ಡಿ.ಎಂ.ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ನಡೆದಿದೆ.
ಹಿರಿಯಡ್ಕದ ಹೆಬ್ರಿ ಮುಖ್ಯ ರಸ್ತೆಯ ಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಬಳಿಯ ನಿವಾಸಿ ಉದಯ ಶೆಟ್ಟಿ ಅವರ ಪತ್ನಿ ಅರುಣಾ ಎಂಬಾಕೆ ಈ ಬಗ್ಗೆ ಮಣಿ ಪಾಲ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ, ತನಿಖೆಗಾಗಿ ಹಿರಿಯಡ್ಕ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
Tagged with
cnews,
upi
ಪಡುಬಿದ್ರಿ: ಕೊಂಕಣ ರೆಲ್ವೆಯ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಥಾನಾದಿಂದ ಮುಲ್ಕಿಗೆ ಬರುತ್ತಿದ್ದ ಹಳೆಯಂಗಡಿಯ ಪ್ರಯಾಣಿಕರೋರ್ವರನ್ನು ರತ್ನಗಿರಿ ಗೋವಾ ನಡುವಣ ಮತ್ತು ಬರಿಸುವ ಪಾನೀಯ ನೀಡಿ ನಗ-ನಗದು ದೋಚಿದ ಘಟನೆ ಜೂನ್ ೨೧ರ ರಾತ್ರಿ ನಡೆದಿದೆ.
ದೊಂಬಿವಿಲಿ(ಪ) ಪುಲೇ ರಸ್ತೆಯ ನಿವಾಸಿ, ಮೂಲತ: ಹಳೆಯಂಗಡಿ ಸಮೀಪದ ಚೇಳಾರು ಬಡಗು ಮನೆಯವರಾದ ಶೇಖರ ಆಳ್ವ ಎಂಬುವವರು ಲೂಟಿಗೊಳಗಾದ ವರಾಗಿದ್ದು, ಹೊಟೇಲ್ ಮ್ಯಾನೇಜರ್ ಆಗಿದ್ದ ಅವರು ಅನಾರೊಗ್ಯ ಪೀಡಿತ ಸಂಬಂಧಿ ಯೋರ್ವರನ್ನು ಕಾಣಲು ಏಕಾಂಗಿಯಾಗಿ ಊರಿಗೆ ಬರುತ್ತಿದ್ದರು.
ಥಾನಾದಲ್ಲಿ ರೈಲು ಹತ್ತಿದ ಶೇಖರ್ ಆಳ್ವಾರವರ ಬೋಗಿಗೆ ಹರ‍್ಯಾಣದಿಂದ ಗೋವಾಕ್ಕೆ ವಿಹಾರಾರ್ಥಿಯಾಗಿ ಪ್ರಯಾಣಿಸುತ್ತಿದ್ದರೆನ್ನಲಾದ ಓರ್ವ ಗಂಡಸು ಮತ್ತು ಮೂವರು ಮಹಿಳೆಯರಿದ್ದ ಸಿಖ್ ಕುಟುಂಬವೊಂದು ಹತ್ತಿತೆನ್ನಲಾಗಿದೆ. ಥಾನಾ ದಾಟಿ ರೈಲು ರತ್ನಗಿರಿ ಗೋವಾ ನಡುವೆ ಬರುತ್ತಿದ್ದಂತೆ ಬೋಗಿಯೊಳಗೆ ಚಹಾ ತಂದವನೊಬ್ಬನಿಂದ ಹಣ ನೀಡಿ ಚಹಾ ಪಡೆದ ಸಿಖ್ ಕುಟುಂಬದ ವ್ಯಕ್ತಿ ತಾನು ಚಹಾ ಪಡೆದನಲ್ಲದೆ ಆಳ್ವಾರಿಗೂ ಒತ್ತಾಯಪೂರ್ವಕ ಕೊಡಿಸಿದನೆನ್ನಲಾಗಿದೆ.
ಚಹಾ ಕುಡಿದ ಮರುಕ್ಷಣದಿಂದಲೇ ನಿದ್ರೆಯ ಜೋಂಪಿಗೊಳಗಾದ ಶೇಖರ್ ಆಳ್ವಾ ಕಣ್ಣು ತೆರೆದಾಗ ಮರುದಿನ ಬೆಳಿಗ್ಗೆ ಮುಲ್ಕಿಯ ರೈಲು ನಿಲ್ದಾಣದ ಸನಿಹ ತಲುಪಿದ್ದರು. ಅವರನ್ನು ಸಹ ಪ್ರಯಾಣಿಕರು ಎಚ್ಚರಿಸಿ ಮುಂದೆ ಮುಲ್ಕಿ ನಿಲ್ದಾಣವೆಂದರೆನ್ನಲಾಗಿದೆ. ಆ ಸಂದರ್ಭದಲ್ಲಿ ಆಳ್ವಾ ಬ್ಯಾಗಿಗೆ ತಡಕಾಡಿದಾಗ ಬಟ್ಟೆಬರೆ ತುಂಬಿದ್ದ ಬ್ಯಾಗಿಲ್ಲದೆ ಎಡಗೈಯಲ್ಲಿದ್ದ ಅರ್ಧ ಪವನ್ ತೂಕದ ಚಿನ್ನದುಂಗುರ, ಪ್ಯಾಂಟು ಸೊಂಟದಲ್ಲಿದ್ದ ೧೫೦೦೦ ರೂ.ನಗದು, ಸುಮಾರು ೫೦೦೦ ರೂ.ಮೌಲ್ಯದ ನೋಕಿಯಾ ಮೊಬೈಲ್ ಹಾಂಡ್‌ಸೆಟ್ ಸಹಿತ ಒಟ್ಟು ೪೦ಸಾವಿರ ರೂ.ಮೌಲ್ಯದ ಸೊತ್ತು ಲೂಟಿಯಾಗಿರುವುದು ತಿಳಿದುಬಂದಿತ್ತು. ಮಂಪರಿನಲ್ಲಿದ್ದ ಶೇಖರ ಆಳ್ವಾರನ್ನು ಕಂಡ ರಿಕ್ಷಾ ಚಾಲಕರೋರ್ವರು ಅವರನ್ನು ಕಾರ್ನಾಡಿನ ಖಾಸಗಿ ನರ್ಸಿಂಗ್ ಹೋಮ್ ಒಂದಕ್ಕೆ ದಾಖಲಿಸಿದ್ದು ನಿನ್ನೆ ಸಂಜೆ ಬಿಡುಗಡೆಗೊಂಡಿದ್ದಾರೆ.
ಪೊಲೀಸರ ಅಸಹಾಯಕತೆ?
ಘಟನೆಯ ಬಗ್ಗೆ ನಿನ್ನೆ ಸಂಜೆಯೇ ಸಂಬಂಧಿಯ ಮೂಲಕ ಕೊಂಕಂ ರೈಲ್ವೆಯ ಮಣಿಪಾಲದಲ್ಲಿರುವ ಪೊಲೀಸ್ ಠಾಣೆಗೆ ದಾಖಲೆ ಸಹಿತ ಆಳ್ವಾ ದೂರು ಸಲ್ಲಿಸಲು ಹೋದರೂ ಘಟನೆ ನಡೆದ ಸ್ಥಳ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಪ್ರದೇಶ ವಾಗಿರುವುದರಿಂದ ನಿರ್ದಿಷ್ಟವಾಗಿ ಎಲ್ಲಿ ಎಂದು ತಿಳಿಯದಿರುವುದರಿಂದ ಮಣಿಪಾಲದಲ್ಲಿರುವ ಕೊಂಕಣ ರೈಲ್ವೆ ಠಾಣೆಯಲ್ಲಿ ತಾಂತ್ರಿಕ ಕಾರಣದಿಂದ ದೂರು ದಾಖಲಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಸಹಾಯಕತೆ ವ್ಯಕ್ತವಾಗಿದೆ ಎಂದು ಮಣಿಪಾಲ ಠಾಣಾ ಉಪನಿರೀಕ್ಷಕರು ತಿಳಿಸಿದ್ದಾರೆ.
Tagged with
cnews,
mlore
ಮಂಗಳೂರು: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ತೆರಳಿ ವಾಪಸ್ ಆಗುತ್ತಿದ್ದ ಮಹಿಳೆಗೆ ಆಕೆಯ ಪತಿಯ ಸಂಬಂಧಿ ಕಾರು ಡಿಕ್ಕಿ ಹೊಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.
ಬಾಯಾರು ನಿವಾಸಿ ಪೊಡಿಯಬ್ಬ ಎಂಬವರ ಪುತ್ರಿ ರಮ್ಲಾ(೨೪) ಗಾಯಗೊಂಡವರು.
ರಮ್ಲಾ ಹಾಗೂ ಆಕೆಯ ಪತಿ ಕುಂಜತ್ತೂರು ನಿವಾಸಿ ಅಬಿದ್ ನಡುವೆ ಕಾಸರಗೋಡಿನ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಂಡು ವಾಪಸ್ ಆಗುತ್ತಿದ್ದ ಸಂದರ್ಭ ಕಾರು ಡಿಕ್ಕಿ ಹೊಡೆಸಿದ್ದಾರೆ ಎಂದು ರಮ್ಲಾ ದೂರಿದ್ದಾರೆ.
Tagged with
cnews,
mlore
ಬಂಟ್ವಾಳ: ದಾರಿಗೆ ಅಡ್ಡಿ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿ ಸಜೀಪಮೂಡ ಗ್ರಾ. ಪಂ ಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ ವಿರುದ್ಧ ಮಹಿಳೆ ನೀಡಿರುವ ದೂರಿಗೆ ಪ್ರತಿಯಾಗಿ ಠಾಣೆ ಯಲ್ಲಿ ಇನ್ನೊಂದು ದೂರು ದಾಖಲಾ ಗಿದೆ. ಸಜೀಪ ಮೂಡ ಗ್ರಾಮದ ಬೇಂಕೆ ನಿವಾಸಿ ರಮೇಶ್ ಪೂಜಾರಿ ವಿರುದ್ಧ ದೇವಿಪ್ರಸಾದ್ ಪೂಂಜಾ ಠಾಣಾಧಿಕಾ ರಿಯವರಿಗೆ ನೀಡಲಾದ ದೂರಿನಲ್ಲಿ ರಮೇಶ್ ಹಾಗೂ ಸುಜಾತ ತನ್ನ ವಿರುದ್ಧ ದುರುದ್ದೇಶ ಪೂರಿತವಾಗಿ ದೂರು ನೀಡಿರುವುದಾಗಿ ಆರೋಪಿಸಿ ದ್ದಾರೆ.
ರಮೇಶ್ ಪೂಜಾರಿ, ಗದ್ದೆಪುಣಿ ಜಾಗವನ್ನು ಜಮೀನುದಾರರಿಗೆ ಪೂರ್ವ ಮಾಹಿತಿ ನೀಡದೆ ರಾತ್ರಿ ಹೊತ್ತು ಸಮ ತಟ್ಟು ಮಾಡಿದ್ದು, ಇದರ ಫೋಟೋ ಗಳನ್ನು ಕ್ಲಿಕ್ಕಿಸುತ್ತಿದ್ದ ಸಂದರ್ಭ ತಾನು ಆಕ್ಷೇಪಿಸಿದ್ದನು. ದಾರಿಗೆ ಸಂಬಂಧಿಸಿ ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಟಿಸಿ ಕೋರ್ಟಿಗೆ ದಾವೆ ಹೂಡಲು ಅವರು ಯತ್ನಿಸಿದ್ದು, ಅವರು ದುರುದ್ದೇಶವನ್ನು ತಾನು ಕಾನೂನು ಪ್ರಕಾರ ತಡೆದಿರುದ್ದೇನೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ. ರಮೇಶ್ ಅವರ ಮನೆಗೆ ಹೋಗಲು ಪ್ರತ್ಯೇಕ ದಾರಿಯ ವ್ಯವಸ್ಥೆ ಇದ್ದರೂ, ಕೃಷಿ ಭೂಮಿಯ ನಡುವೆ ದಾರಿ ನಿರ್ಮಿಸಿರುವ ಅವರಲ್ಲಿ ಪ್ರಶ್ನಿ ಸಿದ್ದು, ಇದನ್ನೇ ಮುಂದಿಟ್ಟು ರಮೇಶ್ ಹಾಗೂ ಅವರ ಪತ್ನಿ ಸುಜಾತ ಪೊಲೀಸ್ ಅಧಿಕಾರಿಗಳಿಗೆ ಸುಳ್ಳು ದೂರು ನೀಡಿದ್ದು, ದೂರಿಗೆ ಸಂಬಂಧಿಸಿ ಅವರು ಖುದ್ಧು ತನಿಖೆ ಮಾಡಬೇಕು. ಅವರಿಗೆ ವಾಸ್ತವಾಂಶ ತಿಳಿಯುತ್ತದೆ ಎಂದವರು ದೂರಿನಲ್ಲಿ ಆರೋಪಿ ಸಿದ್ದಾರೆ.
ಕೊಲೆ ಬೆದರಿಕೆ ಒಡ್ಡಿಲ್ಲ: ಸುಜಾತ ದೂರಿನಲ್ಲಿ ನಮಗೆ ಮೊದಲಿಂದಲೂ ಜಾಗದ ತಕರಾರು ಇದೆ ಎಂದು ತಿಳಿ ಸಿದ್ದು, ಅದೂ ಸತ್ಯದ ಮಾತಲ್ಲ ಎಂದಿ ರುವ ದೇವಿ ಪ್ರಸಾದ್, ಈ ಸಂಬಂಧ ತಾನು ಸುಜಾತ ಹಾಗೂ ರಮೇಶ್‌ಗೆ ಯಾವುದೇ ಕೊಲೆ ಬೆದರಿಕೆ ಒಡ್ಡಿರಲಿಲ್ಲ. ಅಶ್ಲೀಲ ವಾಗಿಯೂ ವರ್ತಿಸಿರಲಿಲ್ಲ. ಆದರೆ ನನ್ನ ವಿರುದ್ಧ ಅವರು ವೈಯುಕ್ತಿಕ ದ್ವೇಷ ಸಾಧಿಸಲು ಹೊರಟಿದ್ದಾರೆ ಎಂದಿ ದ್ದಾರೆ. ದಾರಿಯ ಹಕ್ಕು ಸ್ಥಾಪನೆಯ ಉದ್ದೇಶವನ್ನು ಇಟ್ಟುಕೊಂಡು ನ್ಯಾಯಾ ಲಯಕ್ಕೆ ದಾವೆ ಹೂಡಲು ದಂಪತಿಗಳು ಈ ಉಪಾಯ ಹೂಡಿದ್ದಾರೆ. ಅವರ ಸುಳ್ಳು ಆರೋಪ ದಿಂದ ನನ್ನ ಗೌರವ ಹಾಗೂ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾ ಗಿರುವು ದಾಗಿ ಅವರು ಪ್ರತಿಕ್ರಿಯಿಸಿದ್ದಾರೆ.
Tagged with
bantwal,
cnews
ಮಂಗಳೂರು: ಬೆಳ್ತಂಗಡಿಯ ಉಜಿರೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ಸಂಬಂಧಿಸಿ ದಂತೆ ಮತ್ತೊಬ್ಬ ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿದೆ. ಬಂಧಿತರಾದ ಕಾರ್ಕಳದ ವಿಶ್ವನಾಥ ಆಚಾರ್ಯ ಹಾಗೂ ಉಜಿರೆ ಯ ಗುಲಾಬಿ ಅವರಿಗೆ ಸಂಪರ್ಕ ಕಲ್ಪಿಸಿದ್ದ ನಾಗರಾಜ್ ಜೈನ್ ಬಂಧಿತನಾಗಿದ್ದು, ಜು.೩ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ವಿಶ್ವನಾಥ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು ಮತ್ತೆ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಈತನ ಮೇಲೆ ಯುವತಿಯ ಮಾರಾಟದ ಆರೋಪವಿದ್ದರೆ ಗುಲಾಬಿಯವರಿಗೆ ಈಗಾಗಲೇ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.
ನೇಣು ಬಿಗಿದು ಆತ್ಮಹತ್ಯೆ: ಕುಂದಾಪುರದ ಆನಗಳ್ಳಿ ನಿವಾಸಿ ಸುರೇಶ್ (೪೦) ಎಂಬವರು ಶುಕ್ರವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಕುಂದಾಪುರದಲ್ಲಿ ಚಿಕ್ಕ ಅಂಗಡಿ ನಡೆಸುತ್ತಿದ್ದ ಇವರು ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮೃತರು ವಿವಾಹಿತ ರಾಗಿದ್ದು ಪತ್ನಿ ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ.
Tagged with
cnews,
mlore
ಉಡುಪಿ: ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳಿಗೆ ಡಿಕ್ಕಿ ಹೊಡೆದ ನೀಲಿ ಬಣ್ಣದ ಸ್ಪ್ಲೆಂಡರ್ ಬೈಕ್ ಪರಾರಿಯಾದ ಘಟನೆ ಪುತ್ತೂರು ಗ್ರಾಮದ ಸಂತೆಕಟ್ಟೆಯ ಭಾರತ್ ಬೀಡಿ ಗೋಡೌನ್ ಎದುರು ಸಂಭವಿಸಿದೆ. ಸ್ಥಳೀಯ ಗೋರಟ್ಟಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಸಂತೆಕಟ್ಟೆಯ ನಯಂಪಳ್ಳಿ ನಿವಾಸಿ ಚೈತ್ರಾ ಗಾಯಗೊಂಡಾಕೆ.
Tagged with
cnews,
upi
ಮಂಗಳೂರು: ಚೆಂಗಳ ಪಂಚಾಯತ್ ವ್ಯಾಪ್ತಿಯ ಮಾವಿನ ಕಟ್ಟೆಯ ಬೆಳ್ಳಿಪ್ಪಾಡಿ ಸ್ಟೋರ್ಸ್‌ನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ೭೦ ಲೀಟರ್ ಸೀಮೆಎಣ್ಣೆ ಹಾಗೂ ಅಳತೆಯ ಸಾಮಾಗ್ರಿಗಳನ್ನು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
Tagged with
cnews,
mlore
ಕಾರ್ಕಳ: ನಿಟ್ಟೆ ದೂಪದಕಟ್ಟೆ ಬೆರೊ ದೊಟ್ಟುವಿನಲ್ಲಿ ಪತ್ನಿ ಕೊಲೆಗೈದು ಆತ್ಮಹತ್ಯೆಗೈದ ಪತಿ ಪ್ರಕರಣಕ್ಕೆ ಸಂಬಂ ಧಿಸಿ ಸ್ಥಳೀಯ ಯುವಕ ಸುರೇಶ್ ಅಲಿಯಾಸ್ ಕೋಳಿಬಾಳ್ ಕೋಟಿ ಎಂಬಾತನನ್ನು ಪೊಲೀಸರು ವಿಚಾರ ಣೆಗೆ ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ತಿಳಿದುಬಂದಿದೆ.
ಅರ್ಲಪದವಿನ ಜಗನ್ನಾಥ ಪೂಜಾರಿ ತನ್ನ ಪತ್ನಿ ಮಾಲಿನಿ ಶೆಡ್ತಿ ಎಂಬಾಕೆಯನ್ನು ಕೊಲೆಗೈದು ಬಳಿಕ ನೇಣುಬಿಗಿದು ಆತ್ಮಹತ್ಯೆಗೈದಿದ್ದನು.
ಕೈನೆಟಿಕ್ ಹೊಂಡಾ ಹಿನ್ನೆಲೆ
ಘಟನೆ ನಡೆದಿರುವ ಮನೆಯ ಮುಂದೆ ದಂಪತಿಗೆ ಸೇರದ ಕೈನೆಟಿಕ್ ಹೋಂಡಾ ಇರುವಿಕೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೋಳಿ ಸುರೇಶನನ್ನು ವಿಚಾರಣೆಗೆ ಒಳಪಡಿಸಿ ದ್ದಾರೆ. ಕೈನೆಟಿಕ್ ಕೋಳಿ ಸುರೇಶನಿಗೆ ಸೇರಿದಾಗಿದೆ. ಹತ್ಯೆಯಾದ ಮಾಲಿನಿ ಶೆಡ್ತಿಯ ಕಿರಿಯ ಸಹೋದರಿ ಸೀಮಾ ಎಂಬಾಕೆಯ ಪತಿ ಹಾಗೂ ಸುರೇಶ ಸ್ನೇಹಿತರು. ಇಬ್ಬರೂ ಕೋಳಿ ಅಂಕ ಪ್ರಿಯರಾಗಿದ್ದಾರೆ. ಆ ಸಂದರ್ಭ ಮನೆಗೆ ಬರುತ್ತಿದ್ದ ಸುರೇಶನ ಪರಿಚಯ ಸೀಮಾಳಿಗೆ ಆಗಿತ್ತು. ಇದರೊಂದಿಗೆ ಆತ್ಮಹತ್ಯೆಗೈದ ಸುರೇಶನಿಗೆ ಜಗನ್ನಾಥ ಪೂಜಾರಿಯ ಪರಿಚಯವೂ ಆಗಿತ್ತು.
ಮಂಗಳವಾರ ಮಂಗಳೂರು ಯೆಯ್ಯಾಡಿ ಪದವಿನಲ್ಲಿರುವ ತವರು ಮನೆಯಲ್ಲಿ ಮಾಲಿನಿಶೆಡ್ತಿ ಹಾಗೂ ಜಗ ನ್ನಾಥನ ನಡುವೆ ಜಗಳ ಉಂಟಾಗಿತ್ತು. ಆ ಸಂದರ್ಭ ಪತ್ನಿಯ ಮೊಬೈಲ್‌ನ್ನು ಜಗನ್ನಾಥ ನೆಲಕ್ಕೆ ಎಸೆದಿದ್ದ. ಅದಕ್ಕೆ ಅಳವಡಿಸಿದ್ದ ಸಿಮ್‌ಕಾರ್ಡ್‌ನ್ನು ಘಟನೆ ನಡೆದಂದು ಬೆಳಿಗ್ಗೆ ನಿಟ್ಟೆ ಬೆರೊದೊಟ್ಟು ಬಾಡಿಗೆ ಮನೆಗೆ ಬಂದಿದ್ದ ಸುರೇಶನಿಗೆ ನೀಡಿದ್ದಳು. ಇದು ಜಗನ್ನಾಥನ ಗಮ ನಕ್ಕೂ ಬಂದಿತ್ತೆಂದು ತಿಳಿದುಬಂದಿದೆ. ಇದೇ ವಿಚಾರದಲ್ಲಿ ಉಂಟಾದ ಜಗಳ ಪತಿ-ಪತ್ನಿಯ ಸಾವಿನೊಂದಿಗೆ ಅಂತ್ಯ ಗೊಂಡಿದೆ ಎಂದು ಪೊಲೀಸರ ವಿಚಾರಣೆ ಸಂದರ್ಭ ಬಯಲಾಗಿದೆ.
ನಾಪತ್ತೆಯಾದ ಮಗ ಹೆಣವಾಗಿ ಬಂದ
ಐದು ವರ್ಷಗಳಿಂದ ಮನೆಮಂದಿ ಯರಿಂದ ದೂರ ಉಳಿದಿದ್ದ ಜಗನ್ನಾಥ ಪೂಜಾರಿಯ ಬಗ್ಗೆ ಮನೆ ಮಂದಿ ಸ್ಥಳೀಯ ಜೋತಿಷ್ಯರೊಬ್ಬರಲ್ಲಿ ಭವಿಷ್ಯ ಕೇಳಿದಾಗ ಆತ ಜೀವಂತವಿದ್ದಾನೆ. ಅಂತರ್ಜಾತಿ ವಿವಾಹವಾಗಿದ್ದಾನೆ ಎಂಬ ಉತ್ತರ ಸಿಕ್ಕಿದ್ದರಿಂದ ನಿಟ್ಟಿಸಿರು ಬಿಟ್ಟು ಸುಮ್ಮನಾಗಿದ್ದರು. ಆದರೆ ಕೊನೆಗೆ ಆತ ಹೆಣವಾಗಿ ಪತ್ತೆಯಾಗಿದ್ದಾನೆ.
Tagged with
cnews,
karkala
ಮಂಗಳೂರು:ರೂಮಿಗೆ ಬಂದ ಕಾವಲುಗಾರನನ್ನು ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಚಾಲಕ ಕಟ್ಟಡದಿಂದ ದೂಡಿ ಹಾಕಿ ಕೊಲೆಗೆ ಯತ್ನಿಸಿರುವ ಘಟನೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್‌ನ ಪೊಂಪೈ ಎಂಟರ್‌ಪ್ರೈಸಸ್ ನಲ್ಲಿ ಮೊನ್ನೆ ತಡರಾತ್ರಿ ನಡೆದಿದೆ.
ಪೊಂಪೈ ಎಂಟರ್‌ಪ್ರೈಸಸ್‌ನಲ್ಲಿ ಕಾವಲುಗಾರನಾಗಿರುವ ಸ್ಥಳೀಯ ನಿವಾಸಿ ಲಕ್ಷ್ಮಣ್ ಎಂಬವರನ್ನು ಚಾಲಕ ರಝಾಕ್ ಎಂಬಾತ ಕಟ್ಟಡದಿಂದ ದೂಡಿ ಕೊಲೆಗೆ ಯತ್ನಿಸಿದ್ದಾನೆ.
ಮೊನ್ನೆ ರಾತ್ರಿ ವೇಳೆ ಮಹಡಿ ಯಲ್ಲಿರುವ ಚಾಲಕ ರಝಾಕ್ ರೂಮಿಗೆ ಕಾವಲುಗಾರ ಲಕ್ಷ್ಮಣ್ ಹೋಗಿದ್ದರು. ಈ ಸಂದರ್ಭ ರಝಾಕ್ ಲಕ್ಷ್ಮಣ್ ನನ್ನು ಪ್ರಶ್ನಿಸಿ ಕಟ್ಟಡ ಕಾಯುವ ಬದಲು ರೂಮಿಗೆ ಯಾಕೆ ಬರುತ್ತೀಯಾ ಎಂದು ದಬಾಯಿಸಿದ್ದನು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ರಝಾಕ್ ಲಕ್ಷ್ಮಣ್‌ನನ್ನು ಕಟ್ಟಡದಿಂದ ಕೆಳಗೆ ದೂಡಿ ಹಾಕಿದ್ದಾನೆ. ಇದರಿಂದ ಗಾಯಗೊಂಡಿರುವ ಲಕ್ಷ್ಮಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ.
Tagged with
cnews,
mlore
ಕಾಸರಗೋಡು: ನಿಗೂಢ ರೀತಿ ಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಶವ ಶಿರಿಯಾ ಸಮುದ್ರ ತೀರದಲ್ಲಿ ನಿನ್ನೆ ಸಂಜೆ ವೇಳೆ ಪತ್ತೆಯಾಗಿದೆ.
ಶಿರಿಯಾ ಕಡಪ್ಪುರ ನಿವಾಸಿ, ಕೊಲ್ಲಿ ಉದ್ಯೋಗಿ ಮುಹಮ್ಮದ್ ಎಂಬವರ ಪತ್ನಿ ಬೀಫಾತಿಮ (೩೪) ಎಂಬವರು ಒಂದು ದಿನದ ಹಿಂದೆ ನಿಗೂಢವಾಗಿ ಕಣ್ಮರೆಯಾಗಿದ್ದು, ಮನೆಮಂದಿ ಹುಡುಕಾಡಿದಾಗ ಶವ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿರು ವುದಾಗಿ ಶಂಕಿಸಲಾಗಿದೆ.
Tagged with
cnews,
kgod
ಮಣಿಪಾಲ: ಮನೆಗೆ ನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಬೆಲೆಬಾಳುವ ಸೊತ್ತುಗಳನ್ನು ದೋಚಿರುವ ಘಟನೆ ಮಣಿಪಾಲದ ಇಂದ್ರಾಳಿ ಹೈಗ್ರೀವ ನಗರದಲ್ಲಿ ನಿನ್ನೆ ಬೆಳಕಿಗೆ ಬಂದಿದೆ.
ಇಲ್ಲಿನ ಏಳನೇ ಕ್ರಾಸ್ ನಿವಾಸಿ ಡಾ| ಅಶೋಕ್ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಡಾ. ಅಶೋಕ್ ಕುಟುಂಬ ಜೂ.೮ ರಂದು ಮನೆಯಿಂದ ಹೊರಹೋಗಿದ್ದರು. ನಿನ್ನೆ ಇವರ ಮನೆ ಕೆಲಸದಾಕೆ ಸುಗುಣ ಎಂಬವರು ಮುಂಬಾಗಿಲು ತೆರೆದಿರುವ ಸ್ಥಿತಿಯಲ್ಲಿ ದ್ದುದನ್ನು ಕಂಡು ಮಾಲಕರಿಗೆ ವಿಷಯ ಮುಟ್ಟಿಸಿದರು. ಮನೆಯಲ್ಲಿದ್ದ ರೂ. ೫ ಲಕ್ಷ ೭೦,೦೦೦ ರೂ ಮೌಲ್ಯದ ಚಿನ್ನಾ ಭರಣ ಹಾಗೂ ಬೆಳ್ಳಿ, ರೂ.೬೦,೦೦೦ ನಗದು ಹಾಗೂ ೨೦೦ ಡಾಲರ್ ಹಣ ವನ್ನು ಕಳವುಗೈದಿದ್ದಾರೆ.
Tagged with
cnews,
manipal

ಮಂಗಳೂರು: ಯುವ ಮುತ್ಸದ್ದಿ, ಶಿಕ್ಷಣ ತಜ್ಞ, ಶ್ರೀಎಸ್. ಗಣೇಶ್ ರಾವ್‌ರವರಿಂದ ೧೯೯೬ರಲ್ಲಿ ಭಾರತ ದಲ್ಲೇ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಪ್ರಥಮ ಡಿಸೈನಿಂಗ್ ಕಾಲೇಜೆಂಬ ಹೆಗ್ಗಳಿಕೆಯೊಂದಿಗೆ ಪ್ರಾರಂಭಗೊಂಡ ಕರಾವಳಿ ಕಾಲೇಜ್‌ಗಳ ಸಮೂಹ ಪ್ರಸ್ತುತ ತನ್ನ ಶಿಸ್ತುಬದ್ಥ, ವೈಶಿಷ್ಠ್ಯ ಪೂರ್ಣ ಮತ್ತು ಧನಾತ್ಮಕ ಸಾಧನೆಗಳಿಂದ ಭಾರತದ ಪ್ರತಿಷ್ಠಿತ ಕಾಲೇಜ್‌ಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿ ಸಲ್ಪಟ್ಟ ಬಿ.ಎಸ್ಸಿ. ಇಂಟೀರಿಯರ್ ಡಿಸೈನ್, ಬಿ.ಎಸ್ಸಿ, ಫ್ಯಾಶನ್ ಡಿಸೈನ್, ಬಿ.ಸಿ.ಎ., ಬಿ.ಎಸ್ಸಿ, ಹಾಸ್ಪಿಟಾಲಿಟಿ ಸೈನ್ಸ್ (ಹೋಟೆಲ್ ಮ್ಯಾನೇಂಜ್‌ಮೆಂಟ್), ಬಿ.ಬಿ.ಎಂ, ಎಂ.ಎಸ್.ಡಬ್ಲ್ಯೂ, ಬಿ.ಎಡ್, ಬ್ಯಾಚುಲರ್ ಇನ್ ಹೋಟೇಲ್ ಮ್ಯಾನೇಜ್‌ಮೆಂಟ್ (ಬಿ.ಹೆಚ್.ಎಂ),ಡಿ.ಎಡ್, ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯದ ಸಂಯೋಜನೆ ಗೊಳಪಟ್ಟ ಎಂ.ಎಸ್ಸಿ, ನರ್ಸಿಂಗ್, ಬಿ.ಎಸ್ಸಿ ನರ್ಸಿಂಗ್, ಪಿ.ಸಿ. ಬಿ.ಎಸ್ಸಿ, ನರ್ಸಿಂಗ್, ಬಿ.ಫಾರ್ಮ, ಫಾರ್ಮ ಡಿ, ಎಮ್. ಫಾರ್ಮ, ಪದವಿಗಳನ್ನು ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆ ಗೊಳಪಟ್ಟ, ಎಮ್-ಟೆಕ್ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ, ಎಮ್-ಟೆಕ್ ಇಂಡಸ್ಟ್ರಿಯಲ್ ಆಟೋಮೆಷಿನ್ ಎಂಡ್ ರೋಬೋಟಿಕ್ಸ್, ಎಂ.ಬಿ.ಎ, ಬಿ.ಇ ಏರೋನಾಟಿಕಲ್, ಬಿ.ಇ. ಇನ್‌ಫಾರ್ಮೆಷನ್ ಸೈನ್ಸ್ ಆಂಡ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ಟಾನಿಕ್ಸ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್, ಅಂಡ್ ಕಮ್ಯುನಿಕೇಷನ್ ಇಂಜಿನಿ ಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಡಿಪ್ಲೋಮಾ ಇನ್ ಏರೋನಾಟಿಕಲ್, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್, ಇಲೆಕಾನಿಕ್ಸ, ಮೆಕ್ಯಾನಿಕಲ್, ಸಿವಿಲ್ ಮತ್ತು ಇಲೆಕ್ಟ್ರಿಕಲ್ ಕೋರ್ಸುಗಳನ್ನು ಕರಾವಳಿ ಕಾಲೇಜುಗಳ ಸಮೂಹಗಳಲ್ಲಿ ನೀಡಲಾಗುತ್ತಿದೆ. ಅಲ್ಲದೇ ಕಾಲೇಜು ತನ್ನದೇ ಆದ ಎರಡು ವರ್ಷಗಳ ಡಿಪ್ಲೋಮಾ ಇನ್ ಇಂಟೀರಿಯರ್ ಡಿಸೈನ್, ಡಿಪ್ಲೋಮಾ ಇನ್ ಫ್ಯಾಶನ್ ಡಿಸೈನ್ ಮತ್ತು ಡಿಪ್ಲೋಮಾ ಇನ್ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳನ್ನು ಸಹ ನಡೆಸುತ್ತಿದೆ. ಕರಾವಳಿ ಕಾಲೇಜ್‌ಗಳ ಸಮೂಹವು ಇಂಡಿಯನ್ ನರ್ಸಿಂಗ್ ಕೌನ್ಸಿಲ್ (Iಓಅ) ನ್ಯಾಶನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಶನ್ (ಓಅಖಿಇ) ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್(ಂIಅಖಿಇ) ಮತ್ತು ಫಾರ್ಮಾಸಿ ಕೌನ್ಸಿಲ್ ಆಫ್ ಇಂಡಿಯಾ (PಅI)ಗಳ ರಾಷ್ಟ್ರೀಯ ಮಾನ್ಯತೆಯನ್ನು ಪಡೆದಿದೆ. ಕರಾವಳಿ ಕಾಲೇಜ್‌ಗಳ ಸಮೂಹ ಮಂಗ ಳೂರಿನ ಕೊಟ್ಟಾರ ಚೌಕಿ, ವಾಮಂ ಜೂರು ಮತ್ತು ನೀರುಮಾರ್ಗದಲ್ಲಿ ಮೂರು ಸ್ವಂತ ಕ್ಯಾಪಸ್‌ಗಳನ್ನು ಹೊಂದಿದ್ದು, ಸುಸಜ್ಜಿತ ಕಟ್ಟಡಗ ಳೊಂದಿಗೆ ಅತ್ಯುತ್ತಮ ಅಂತಾ ರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಗಳನ್ನು ಹೊಂದಿದೆ. ಕಾಲೇಜ್ ದೇಶದ ಶ್ರೇಷ್ಠ ಪ್ರಯೋಗಾಲಯಗಳಿಗೆ ಸರಿಸಮಾನವಾದ ಅಂತಾರಾಷ್ಟ್ರೀಯ ಗುಣಮಟ್ಟದ ಲ್ಯಾಬ್‌ಗಳನ್ನು ಹೊಂದಿ ರುತ್ತದೆ. ದೇಶ-ವಿದೇಶಗಳ ಪುಸ್ತಕ ಮತ್ತು ಮ್ಯಾಗಜಿನ್‌ಗಳಿರುವ ಗ್ರಂಥಭಂಡಾರವನ್ನು ಹೊಂದಿದೆ. ತಜ್ಞ ಉಪನ್ಯಾಸಕರ ತಂಡವನ್ನು ಹೊಂದಿರುವುದು ಕಾಲೇಜಿನ ಈಗಿನ ಉನ್ನತಿಗೆ ಕಾರಣವಾಗಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಎಲ್ಲಾ ಸೌಕರ್ಯ ಗಳನ್ನೊಳಗೊಂಡ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಕ್ಯಾಂಪಸ್‌ಗಳಲ್ಲೇ ಇರುವುದು ಇಲ್ಲಿನ ಹೆಗ್ಗಳಿಕೆಯೂ ಹೌದು.
Tagged with
college,
dk,
lnews
ಮಂಗಳೂರು: ನಕ್ಸಲ್ ಆರೋಪದಲ್ಲಿ ಬಂಧಿತನಾಗಿರುವ ವಿಠಲ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆಯಲಿದೆ.
ನಕ್ಸಲರ್ ಬೆಂಬಲದ ಆರೋಪದಲ್ಲಿ ಮಾರ್ಚ್ ೧ರಂದು ಬೆಳ್ತಂಗಡಿ ಕುತ್ಲೂರು ನಿವಾಸಿ ಲಿಂಗಣ್ಣ ಎಂಬವರನ್ನು ಬಂಧಿಸಿತ್ತು. ಅಂದು ಕೊಣಾಜೆ ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿದ್ದ ವಿಠಲ ಮರುದಿನ ಮನೆಗೆ ಹೋಗಿ ದ್ದರು. ಆ ವೇಳೆ ಆತನನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಇಂದಿಗೂ ಅವರಿಬ್ಬರು ಮಂಗಳೂರಿನ ಸಬ್ ಜೈಲಿನಲ್ಲಿದ್ದಾರೆ. ಈ ಸಂದರ್ಭ ವಿಠಲ ಪತ್ರಿಕೋದ್ಯಮ ಪರೀಕ್ಷೆ ಬರೆದಿದ್ದು ಮೊದಲ ಬಾರಿ ಪರೀಕ್ಷಾ ಹಾಲ್‌ಗೆ ಕರೆದೊಯ್ಯುವಾಗ ಕೈಕೋಳ ಹಾಕಿದ್ದು ಚರ್ಚೆಗೆ ಗ್ರಾಸವಾಗಿತ್ತು. ಅವರ ಬಂಧನವನ್ನು ವಿರೋಧಿಸಿ ಎಡಪಕ್ಷಗಳು, ಅದರ ಬೆಂಬಲಿತ ಸಂಘಟನೆಗಳು, ವಿಚಾರವಾದಿಗಳು, ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರಗತಿಪರರು ಹಾಗೂ ಎಡಪಕ್ಷ ಬೆಂಬಲಿತ ಸಂಘಟನೆಗಳು ನಡೆಸಿದ ಸಭೆ, ಸಮಾರಂಭಗಳಲ್ಲಿ ವಿಠಲನ ಬಗ್ಗೆ ಪ್ರಸ್ತಾಪಗೊಂಡಿದ್ದವು. ಇದೇ ವಿಚಾರದಲ್ಲಿ ಗೋಷ್ಟಿಗಳೂ ನಡೆದವು.
ಕೇರಳದ ಯುವ ಸಂಸದ ಸಿಪಿಐಎಂನ ರಾಜೇಶ್, ಸಿಪಿಐಎಂ ಪಕ್ಷದ ರಾಷ್ಟ್ರೀಯ ಮುಖಂಡ ಪ್ರಕಾಶ್ ಕಾರಟ್, ವಿಚಾರವಾದಿ ಗೋವಿಂದ ರಾವ್ ಸಹಿತ ಘಟಾನುಘಟಿ ನಾಯಕರು ಸಬ್‌ಜೈಲ್‌ನಲ್ಲಿ ವಿಠಲ ಹಾಗೂ ಲಿಂಗಣ್ಣ ಅವರನ್ನು ಭೇಟಿಯಾದರು. ರಾಜ್ಯಸಭಾ ಸದಸ್ಯೆ ಬೃಂದಾ ಕಾರಟ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆಯನ್ನೂ ನಡೆಸುವ ಮೂಲಕ ರಾಜ್ಯ ಸರಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನ ನಡೆಸಲಾಯಿತು. ಆದರೂ ಇದುವರೆಗೆ ಯವುದೇ ಪ್ರಯೋಜನವಾಗಿಲ್ಲ.
ಕಳೆದ ಮೂರು ತಿಂಗಳುಗಳಿಂದ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯದ ಬೆನ್ನತ್ತಿ ಹೋದ ಸಿಪಿಐಎಂ, ನ್ಯಾಯವಾದಿ ರವಿವರ್ಮ ಕುಮಾರ್ ಮೂಲಕ ಜಾಮೀನಿಗಾಗಿ ರಾಜ್ಯ ಹೈಕೋರ್ಟ್‌ನಲ್ಲಿ ಅಫೀಲು ಸಲ್ಲಿಸಿತ್ತು. ಮೊನ್ನೆ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು ಕೆಳ ನ್ಯಾಯಾಲಯ ಜಾಮೀನು ನೀಡಬಹುದಾಗಿದೆ ಎಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು ಕುತೂಹಲಕ್ಕೆ ಕಾರಣವಾಗಿದೆ.
Tagged with
dk,
lnews,
vittala
ಉಪ್ಪಿನಂಗಡಿ: ಕುಡಿಯುವ ನೀರು ಸಮ ರ್ಪಕವಾಗಿ ಒದಗಿಸುವಲ್ಲಿ ವಿಫಲಗೊಂಡಿ ರುವ ಹಿರೇಬಂಡಾಡಿ ಗ್ರಾ.ಪಂ ವಿರುದ್ಧ ಶುಕ್ರವಾರ ಎಸ್‌ಡಿಪಿಐ ವತಿಯಿಂದ ಪ್ರತಿಭ ಟನೆ ನಡೆಸಲಾಯಿತು.
ಹಿರೇಬಂಡಾಡಿ ಗ್ರಾಮದ ಬೋಳಮೆ ಹಾಗೂ ಮುರ ಪರಿಸರ ದಲ್ಲಿ ಕಳೆದ ಹಲವು ದಿನಗಳಿಂದ ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದು, ಗ್ರಾ. ಪಂ ಈ ಬಗ್ಗೆ ಸ್ಪಂದನೆ ತೋರ ದಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಯ ನೇತೃತ್ವ ವನ್ನು ಎಸ್‌ಡಿಪಿಐ ವಲಯಾಧ್ಯಕ್ಷ ಅಬ್ದುಲ್ ಅಝೀಜ್ ನಿನ್ನಿಕಲ್ಲು ಬಜತ್ತೂರು ಗ್ರಾ.ಪಂ ಸದಸ್ಯ ಅನ್ವರ್ ಸಾದಾತ್, ಅಬ್ದುಲ್ ರಜಾಕ್ ಸೀಮಾ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ೪೮ಗಂಟೆಯೊಳಗೆ ನೀರು ಒದಗಿಸುವಂತೆ ಆಗ್ರಹಿಸಿದರು.
Tagged with
dk,
lnews,
water
ಬೆಂಗಳೂರು: ವಿಧಾನಪರಿಷತ್ ಚುನಾ ವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗೇ ಸೋಲುಂಟಾಗಿ ಮರ್ಮಾಘಾತ ಅನುಭವಿಸಿದ ಕಾಂಗ್ರೆಸ್, ಅಡ್ಡ ಮತದಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾ ನಿಸಿದ್ದು, ಐವರು ಶಾಸಕರನ್ನು ಪಕ್ಷದಿಂದಲೇ ಉಚ್ಚಾಟಿಸಲು ನಿರ್ಧರಿಸಿದೆ.
ಪಕ್ಷವು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಸ್ಥಿತಿ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಅಡ್ಡ ಮತದಾನ ಮಾಡಿ ಪಕ್ಷಕ್ಕೆ ತೀವ್ರ ಮುಖಭಂಗ ಉಂಟಾಗುವಂತೆ ಮಾಡಿ ರುವ ಈ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷದಲ್ಲಿಟ್ಟುಕೊಳ್ಳುವುದು ಬೇಡ. ಜತೆಗೆ ಮುಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಡುವುದು ಬೇಡ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರೇ ಸೂಚಿಸಿದ್ದಾರೆ.
ಶಾಸಕರಾದ ಬಿ.ಸಿ.ಪಾಟೀಲ್, ಅಮರೇ ಗೌಡ ಬಯ್ಯಾಪುರ, ವೆಂಕಟಸ್ವಾಮಿ, ಸಂತೋಷ್ ಲಾಡ್, ಖಾಖಾ ಸಾಹೇಬ್ ಪಾಟೀಲ್ ಅಡ್ಡ ಮತದಾನ ಮಾಡಿದವರು ಎಂದು ಗುರುತಿಸಿದ್ದು ಅವರನ್ನು ಅಧಿಕೃತ ವಾಗಿ ಉಚ್ಚಾಟಿಸುವ ಕಾರ್ಯ ನಡೆಯಬೇಕಿದೆ. ಈ ಪೈಕಿ ವೆಂಕಟಸ್ವಾಮಿ ವೀರಪ್ಪ ಮೊಯಿಲಿ ಬೆಂಬಲಿಗರಾದರೆ, ಸಂತೋಷ್ ಲಾಡ್, ಅಮರೇಗೌಡ ಬಯ್ಯಾಪುರ ಸಿದ್ದರಾಮಯ್ಯ ಆಪ್ತರು.
ಅಡ್ಡ ಮತದಾನ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಉದ್ದೇಶದಿಂದ ವಿ.ಅರ್.ಸುದರ್ಶನ್, ಬಿ.ಎಲ್. ಶಂಕರ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿ ರಚಿಸಿದ್ದು ಆ ಸಮಿತಿ ಅಧಿಕೃತವಾಗಿ ಇದೇ ೩೦ ರಂದು ವರದಿ ನೀಡಲಿದೆ. ಆದರೆ, ಈಗಾಗಲೇ ಅಡ್ಡ ಮತದಾನ ಮಾಡಿದವರು ಯಾರು ಎಂಬುದು ಪತ್ತೆಯಾಗಿದೆ. ಇಂಥವರನ್ನು ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಉಳಿಸಿಕೊಳ್ಳಬಾರದು ಎಂದು ಹೈಕಮಾಂಡ್ ಆದೇಶ ಮಾಡಿದೆ.
Tagged with
snews
ದಲಿತ ಸಂಘಟನೆಯಿಂದ ಪ್ರತಿಭಟನೆಯ ಎಚ್ಚರಿಕೆ
ಪುತ್ತೂರು: ಪುತ್ತೂರು ತಾಲೂಕಿನ ಕಡಬ ಠಾಣಾ ವ್ಯಾಪ್ತಿಯಲ್ಲಿ ಬರುವ ನೂಜಿ ಬಾಳ್ತಿಲ ಗ್ರಾಮದ ಕುಬಲಾಡಿ ಎಂಬಲ್ಲಿನ ಮನೆಯೊಂದರಲ್ಲಿ ಪತ್ತೆಯಾಗಿದ್ದ ಜಿಂಕೆ ಕೋಡು ಪ್ರಕರಣಕ್ಕೆ ಸಂಬಂಧಿಸಿ ದಲಿತ ಮುಖಂಡರೊಬ್ಬರ ಹೆಸರನ್ನು ಪಂಜ ವಲಯ ಅರಣ್ಯಾಧಿಕಾರಿಗಳು ಆಧಾರರ ಹಿತವಾಗಿ ಬಹಿರಂಗಪಡಿಸಿ ಅವರ ತೇಜೋ ವಧೆ ಮಾಡುತ್ತಿದ್ದಾರೆ ಎಂದು ಆರೋಪಿ ಸಿರುವ ದಲಿತ ಸಂಘಟನೆಯ ಮುಖಂಡರು ಪ್ರಕರಣದ ನಿಜಾಂಶವನ್ನು ಮೂರು ದಿನದೊಳಗಾಗಿ ಬಹಿರಂಗಪಡಿಸದಿದ್ದರೆ ಅಧಿಕಾರಿಯ ವಿರುದ್ಧ ದಲಿತ ಸಂಘರ್ಷ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸು ವುದಾಗಿ ಎಚ್ಚರಿಸಿದ್ದಾರೆ.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಎಂ.ಕೂಸಪ್ಪ, ಸಂಘಟನೆಯ ಮುಖಂಡರಾದ ಸೇಸಪ್ಪ ನೆಕ್ಕಿಲು, ಆನಂದ ಮಿತ್ತಬೈಲು, ತಾಲೂಕು ಸಂಚಾಲಕ ಬಾಬು ಎನ್. ಅವರು ಶುಕ್ರವಾರ ಪತ್ರಿಕಾ ಹೇಳಿಕೆಯ ಮೂಲಕ ಈ ಎಚ್ಚರಿಕೆ ನೀಡಿದ್ದಾರೆ.
ಜೂನ್ ಆರರಂದು ಪಂಜ ವಲಯ ಅರಣ್ಯಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ ನೂಜಿಬಾಳ್ತಿಲ ಗ್ರಾಮದ ಕುಬಲಾಡಿ ಎಂಬಲ್ಲಿನ ಸರ್ಕಾರಿ ಅಧೀನದ ಸ್ಥಳದಲ್ಲಿ ಒಂದು ಜಿಂಕೆ ಪ್ರಾಣಿಯ ಕೋಡನ್ನು ಸಾಗಾಟಕ್ಕಾಗಿ ಇಟ್ಟಿರುವುದಾಗಿ, ಆದರೆ ಅಪರಾಧಿಗಳ ಪತ್ತೆಯಾಗಿರುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಅದೇ ಅಧಿಕಾರಿಯು ದಲಿತ ಸಂಘಟನೆಯ ಪ್ರಮುಖ ಆರೋಪಿಯೆಂದು ಪತ್ರಿಕಾ ಮಾಧ್ಯಮಗಳಿಗೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಅರಣ್ಯ ಸಂಚಾರಿದಳದವರು ಮಾರುವೇಷದಲ್ಲಿ ಗಿರಾಕಿಗಳ ಸೋಗಿನಲ್ಲಿ ಹೋಗಿ ಆರೋಪಿಯಿಂದ ರೂ.೨೫ ಸಾವಿರಕ್ಕೆ ವ್ಯವಹಾರ ಕುದುರಿಸಿದ್ದಾಗಿಯೂ, ತಮ್ಮ ಮನೆಯಲ್ಲಿ ಜಿಂಕೆಕೋಡು ಇದ್ದು ಅದನ್ನು ತಂದು ಕೊಡುವುದಾಗಿ ಹೇಳಿ ಹೋದವರು ಪರಾರಿಯಾಗಿದ್ದಾರೆ ಎಂದು ಮಾಧ್ಯಮಗಳಿಗೆ ಒಂದು ಬಾರಿ ಮಾಹಿತಿ ನೀಡಿರುವ ಅಧಿಕಾರಿ ಮತ್ತೊಂದು ಬಾರಿ ಅರಣ್ಯ ಸಂಚಾರಿದಳದವರು ಕುಬಲಾಡಿ ಎಂಬಲ್ಲಿನ ಮನೆಗೆ ದಾಳಿ ನಡೆಸಿ ಜಿಂಕೆಯ ಕೋಡನ್ನು ವಶಪಡಿಸಿಕೊಂಡಿರುವುದಾಗಿ ಮತ್ತು ಪ್ರಕರಣದ ಪ್ರಮುಖ ಆರೋಪಿ ದಲಿತ ಸಂಘಟನೆಯ ಮುಖಂಡ ಗುರುವಪ್ಪ ಎಂದು ಮಾಹಿತಿ ನೀಡಿದ್ದಾರೆ. ಆರೋಪಿಯು ಪತ್ತೆಯಾಗಿಲ್ಲ ಎಂದು ನ್ಯಾಯಾಲಯಕ್ಕೆ ನೀಡಿರುವ ವರದಿ ಮತ್ತು ಪ್ರಮುಖ ಆರೋಪಿ ಗುರುವಪ್ಪ ಎಂಬ ಹೇಳಿಕೆ ದ್ವಂದ್ವ ಹೇಳಿಕೆಗಳಾಗಿದ್ದು, ಇದರಲ್ಲಿ ಸರಿ ಯಾವುದು ಎಂಬುವುದನ್ನು ಅಧಿಕಾರಿಗಳು ಬಹಿರಂಗ ಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
Tagged with
dk,
lnews
ಬೆಂಗಳೂರು: ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅವರ ಪುತ್ರರು ಹಾಗೂ ಅಳಿಯನಿಗೆ ರಾಜ್ಯ ಹೈ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿರು ವುದನ್ನು ಪ್ರಶ್ನಿಸಿ, ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಲೇರಲು ತೀರ್ಮಾನಿಸಿದೆ.
ಈ ಸಂಬಂಧ ಕಾನೂನು ತಜ್ಞರೊಟ್ಟಿಗೆ ಸಮಾಲೋಚನೆ ನಡೆಸಿದ ಸಿಬಿಐ ಅಧಿಕಾರಿಗಳು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
Tagged with
snews,
yeddi
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಸದಾನಂದ ಗೌಡರನ್ನು ಕೆಳಗಿಳಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ.
ಅವಧಿಗೂ ಮುನ್ನವೇ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ವರ್ಚಸ್ಸಿನ ನಾಯಕನಿಗೆ ಹೊಣೆಗಾರಿಕೆ ನೀಡುವ ಉದ್ದೇಶದಿಂದ ಪಕ್ಷ ಈ ನಿರ್ಣಯ ಕೈಗೊಂಡಿದೆ. ಸದಾನಂದ ಗೌಡರ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಇಲ್ಲವೇ ಕೆ.ಎಸ್.ಈಶ್ವರಪ್ಪ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಲಿದ್ದು ಈ ಸ್ಥಾನ ಪ್ರಮುಖ ಜನಾಂಗಕ್ಕೆ ದೊರೆಯಲಿದೆ.
ಹೊಸ ನಾಯಕನ ಅನ್ವೇಷನೆಗಾಗಿ ಬಿಜೆಪಿಯ ಹಿರಿಯ ಮುಖಂಡರಾದ ಅರುಣ್ ಜೇಟ್ಲಿ, ಧರ್ಮೇಂದ್ರ ಪ್ರಧಾನ್, ರಾಜನಾಥ ಸಿಂಗ್, ಮುಂದಿನ ವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರು ಎರಡು ದಿನಗಳ ಕಾಲ ರಾಜ್ಯದಲ್ಲಿಯೇ ಉಳಿದು ಹೊಸ ನಾಯಕನ ಅನ್ವೇಷಣೆಯ ಜತೆಗೆ ಹೊಸ ಮಂತ್ರಿಮಂಡಲವನ್ನು ರಚಿಸಿ ಹಿಂತಿರುಗಲಿದ್ದಾರೆ. ಶಾಸಕಾಂಗ ಸಭೆಯನ್ನು ಕರೆಯದೆ ಮುಖಂಡರೊಳಗೆ ಸಮಾಲೋಚನೆ ನಡೆಸಿ, ನಾಯಕನ ಆಯ್ಕೆ ಪೂರ್ಣಗೊಳಿಸಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ವರ್ಚಸುಳ್ಳ ನಾಯಕನ ಮೂಲಕ ಮತ್ತೆ ಅಧಿಕಾರ ಪಡೆಯುವ ಉದ್ದೇಶ ರಾಷ್ಟ್ರೀಯ ಬಿಜೆಪಿಗೆ ಇದೆ. ಈ ಉದ್ದೇಶದಿಂದ ಒಕ್ಕಲಿಗ ಹಾಗೂ ಹಿಂದುಳಿದ ಸಾಮೂಹಿಕ ನಾಯಕರಿಗೆ ಪ್ರಮುಖ ಪಟ್ಟ ಕಲ್ಪಿಸಲಿದ್ದಾರೆ. ಸಾಮಾಜಿಕ ನಾಯಕತ್ವದಲ್ಲಿ ಚುನಾವಣೆಗೆ ತೆರಳಲಿದ್ದು ಈ ಸಂದರ್ಭದಲ್ಲಿ ಪ್ರಮುಖ ಜನಾಂಗದ ಈ ಮುಖಂಡರನ್ನು ಮುಂದಿಟ್ಟುಕೊಂಡು ಮತ ಪಡೆಯುವ ಯತ್ನಕ್ಕೆ ಕೈ ಹಾಕದೆ ಅವಧಿಗೂ ಮುನ್ನವೇ ಚುನಾವಣೆ ಬರುತ್ತಿರುವುದರಿಂದ ಗೌಡರು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ. ಇವರಿಗೆ ಒಂದು ವರ್ಷ ಪೂರ್ಣಗೊಳಿಸಲು ಅವಕಾಶ ನೀಡುತ್ತಿಲ್ಲ.
Tagged with
dvs,
snews
ಮಂಗಳೂರು: ಬಂಟರ ಸಂಘ ಉಳ್ಳಾಲ ವಲಯ (ರಿ)ಇದರ ೨೦೧೨-೧೪ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇಂದು (ಜೂ.೨೩)ಸಂಜೆ ನಾಲ್ಕು ಗಂಟೆಗೆ ತೊಕ್ಕೊಟ್ಟು ಅಂಬಿಕಾರೋಡ್ ಬಳಿ ಇರುವ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿ ರುವ ಕೆ. ರವೀಂದ್ರಶೆಟ್ಟಿ ಉಳಿದೊಟ್ಟು ಹರೇಕಳ ಮತ್ತು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ಕೆ. ಚಂದ್ರಹಾಸ್ ಅಡ್ಯಂತಾಯ ಅವರು ವಹಿಸಲಿದ್ದಾರೆ. ಡಾ. ಆಶಾ ಜ್ಯೋತಿ ರೈ ಜ್ಯೊತಿ ಪ್ರಜ್ವಲನೆ ಮಾಡ ಲಿದ್ದು, ನ್ಯಾಯವಾದಿ ಕೆ. ಮೋನಪ್ಪ ಭಂಡಾರಿ, ಎಂ. ಸುರೇಶ್ಚಂದ್ರ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Tagged with
dk,
lnews
ಮಂಗಳೂರು: ಅದೊಂದು ಬಡ ಕುಟುಂಬ. ತಂದೆ ಕೂಲಿ ಕೆಲಸಕ್ಕೆ ಹೋದರೆ, ತಾಯಿ ಮನೆಯಲ್ಲಿ ಬೀಡಿ ಸುತ್ತುತ್ತಾರೆ. ಮನೆಗೆ ಆಸರೆಯಾಗಿ ಇರಬೇಕಿದ್ದ ಇಬ್ಬರು ಗಂಡು ಮಕ್ಕಳು ಎಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದಾರೆ. ಇವರಲ್ಲಿ ಹಿರಿಯ ಮಗ ಲಿಂಗಪ್ಪ(೨೫) ಕಿಡ್ನಿ ಖಾಯಿಲೆಗೆ ತುತ್ತಾಗಿದ್ದು, ಕುಟುಂಬ ಮುಂದಿನ ದಾರಿ ಕಾಣದೆ ದಿಕ್ಕೆಟ್ಟು ಕೂತಿದೆ.
ಲಿಂಗಪ್ಪರು ಕಳೆದ ಮೂರು ವರ್ಷಗಳಿಂದ ಕಿಡ್ನಿ ಖಾಯಿಲೆಗೆ ತುತ್ತಾಗಿದ್ದಾರೆ. ಪ್ರಾರಂಭದಲ್ಲಿ ಮಂಗಳಾ ಕಿಡ್ನಿ ಫೌಂಡೇಶನ್ ಬಳಿಕ ಆಯು ರ್ವೇದ ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದ ಲಿಂಗಪ್ಪರು ಈಗಾಗಲೇ ಎರಡೂವರೆ ಲಕ್ಷ ರೂಪಾಯಿಗಳನ್ನು ಚಿಕಿತ್ಸೆಗಾಗಿ ವ್ಯಯಿಸಿದ್ದಾರೆ. ಮೂರು ದಿನಗಳಿಗೊಮ್ಮೆ ಡಯಾಲಿಸಿಸ್ ಮಾಡಬೇಕು ಎಂದು ವೈದ್ಯರು ತಿಳಿಸಿದ್ದು, ಅದರಂತೆ ಮಂಗ ಳೂರಿನ ತಾರಾ ಕ್ಲಿನಿಕ್‌ನಲ್ಲಿ ಡಯಾ ಲಿಸಿಸ್ ಮಾಡುತ್ತಿದ್ದಾರೆ. ವೈದ್ಯರು ಕಿಡ್ನಿ ಬದಲಿಸಬೇಕು ಎಂದಿದ್ದು, ಅದರಂತೆ ಲಿಂಗಪ್ಪರ ತಾಯಿ ಕಿಡ್ನಿ ನೀಡಲು ಮುಂದೆ ಬಂದಿದ್ದಾರೆ. ವೈದ್ಯರು ಪರೀಕ್ಷಿಸಿ ಕಿಡ್ನಿ ತಾಳೆಯಾಗುತ್ತದೆ ಎಂದಿದ್ದು, ಶಸ್ತ್ರಚಿಕಿತ್ಸೆಗೆ ಐದು ಲಕ್ಷ ರೂ. ವ್ಯಯ ವಾಗುತ್ತದೆ ಎಂದು ಹೇಳಿದ್ದಾರೆ.
ಲಿಂಗಪ್ಪರು ಈಗಾಗಲೇ ತಮ್ಮ ಚಿಕಿತ್ಸೆಗಾಗಿ ಲಕ್ಷಾಂತರ ರೂ. ಸಾಲ ಮಾಡಿದ್ದಾರೆ. ಲಿಂಗಪ್ಪರ ಸಹೋದ್ಯೋಗಿ ಗಳು, ಮಾಲಕರು ಚಿಕಿತ್ಸೆಗಾಗಿ ನೆರ ವಾಗಿದ್ದಾರೆ. ಪ್ರತೀ ತಿಂಗಳು ಡಯಾಲಿ ಸಿಸ್‌ಗೆ ೧೦,೦೦೦ ರೂ. ಖರ್ಚಾಗು ತ್ತಿದ್ದು, ಆ ಹಣವನ್ನು ಹೊಂದಿಸಲು ಲಿಂಗಪ್ಪರು ಕಷ್ಟಪಡುತ್ತಿದ್ದಾರೆ. ಒಂದು ವರ್ಷದ ಒಳಗೆ ಶಸ್ತ್ರಚಿಕಿತ್ಸೆ ನಡೆಸದಿದ್ದರೆ ಪ್ರಾಣಕ್ಕೆ ಅಪಾಯವಿರುವ ಕಾರಣ ಲಿಂಗಪ್ಪರು ಪತ್ರಿಕೆಯ ಸಹೃದಯಿ ಓದುಗರು, ಕೊಡುಗೈ ದಾನಿಗಳು, ಸಂಘ-ಸಂಸ್ಥೆಗಳ ಎದುರು ಕೈಮುಗಿದು ನಿಂತಿದ್ದಾರೆ. ಆರ್ಥಿಕ ಸಹಾಯವನ್ನು ನೀಡಲು ಅವರನ್ನು ಕೆಳಗಿನ ವಿಳಾಸದಲ್ಲಿ ಸಂಪರ್ಕಿಸಬಹುದು.
ಲಿಂಗಪ್ಪ ಪೂಜಾರಿ, ನೂಯಿ-ಇಂದಿರಾನಗರ ಮನೆ, ಅಡ್ಡೂರು ಅಂಚೆ ಮತ್ತು ಗ್ರಾಮ ಮಂಗಳೂರು. ಖಾತೆ ಸಂಖ್ಯೆ-೦೧೨೪೨೨೦೦೦೬೯೯೧೯
ಮೊಬೈಲ್-೯೮೪೫೮೭೫೯೯೬
ಜಯಕಿರಣ ಮನವಿ
ಲಿಂಗಪ್ಪರಿಗೆ ಆರ್ಥಿಕ ನೆರವನ್ನು ನೀಡಲು ಪತ್ರಿಕೆಯ ಓದುಗರು, ದಾನಿ ಗಳು, ಸಂಘ-ಸಂಸ್ಥೆಗಳಲ್ಲಿ ಪತ್ರಿಕೆಯು ಕಳಕಳಿಯ ಮನವಿ ಮಾಡಿದೆ.
Tagged with
dk,
help,
lnews
ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮ ಗಾರಿ ಯಿಂದಾಗಿ ನಂತೂರಿನಲ್ಲಿ ಪ್ರತಿದಿನವೂ ಟ್ರಾಫಿಕ್ ಜಾಂ ಮಾಮೂ ಲಿಯಾಗಿದ್ದು ಇದರ ಪರಿಣಾಮವನ್ನು ಸಾರ್ವಜನಿಕರು ಎದುರಿ ಸಬೇಕಾಗಿದೆ.
ನಂತೂರಿನಿಂದ ತಲಪ್ಪಾಡಿಗೆ ಚತುಷ್ಪಥ ರಸ್ತೆ ಕಾಮಗಾರಿ ಆರಂಭಗೊಂಡು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ನಂತೂರಿನಲ್ಲಿ ಟ್ರಾಫಿಕ್ ಜಾಂ ಆಗುತ್ತಿದೆ. ಈ ಸಂದರ್ಭ ಕುಲಶೇಖರ, ಕದ್ರಿ, ಪಂಪ್‌ವೆಲ್ ಹಾಗೂ ಮಲ್ಲಕಟ್ಟೆಯವರೆಗೆ ವಾಹನಗಳ ಸರತಿ ಸಾಲು ಕಂಡು ಬರುತ್ತ್ತಿದೆ. ಈ ಅವಧಿಯಲ್ಲಿ ೩೦ರಿಂದ ೬೦ ನಿಮಿಷಗಳಷ್ಟು ಸಮಯ ವ್ಯತ್ಯಯ ವಾಗುತ್ತದೆ.ಆದರೆ ಜಿಲ್ಲಾಡಳಿತ ಇದುವರೆಗೂ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಈ ಸಮಯದಲ್ಲಿ ಸ್ಥಳದಲ್ಲಿ ಟ್ರಾಫಿಕ್ ಪೊಲೀಸರು ಇದ್ದರೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇಲ್ಲಿ ಲಘು ವಾಹನಗಳು ಅಡ್ಡಾದಿಡ್ಡಿಯಾಗಿ ಚಲಾಯಿಸುವ ಕಾರಣ ಮತ್ತಷ್ಟು ಬ್ಲಾಕ್ ಉಂಟಾಗಲು ಕಾರಣ ವಾಗುತ್ತಿದ್ದು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
Tagged with
dk,
lnews,
traffic
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ, ಕುದ್ರೆಬೆಟ್ಟು ಎಂಬಲ್ಲಿ ನಿನ್ನೆ ಕೆ.ಎಸ್. ಆರ್.ಟಿ.ಸಿ. ಬಸ್‌ಗಳೆರಡು ಪರಸ್ಪರ ಡಿಕ್ಕಿ ಯಾಗಿದ್ದು, ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವ ಸುಮಾರು ೩೦ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಮಡಿಕೇರಿ ಕೆ.ಎಸ್.ಆರ್.ಟಿ.ಸಿ. ಡಿಪೋದ ದಿನ ಕೂಲಿ ನೌಕರ ಗೋವಿಂದ ರಾಜು (೫೦)ಎಂಬವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಬಸ್ ಚಾಲಕ ಹಾಗೂ ನಿರ್ವಾಹಕರ ಸಹಿತ ೧೦ ಮಂದಿ ಗಂಭೀರ ಗಾಯಗೊಂ ಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಅವರನ್ನು ತುರ್ತು ಚಿಕಿತ್ಸೆಗೆ ಒಳಪಡಿಸಲಾಗಿದೆ. ಗಾಯಾಳುಗಳನ್ನು ಪೊಳಲಿಯ ದಿವಾಕರ ಆಚಾರ್ಯ(೬೦), ಬಸ್ ಚಾಲಕ ಬೆಳಗಾವಿಯ ವಿಜಯ ಕುಮಾರ್(೩೨), ಸುಳ್ಯದ ಸತ್ಯ ನಾರಾಯಣ(೫೦), ಕೊಣಾಜೆಯ ಪಿ.ಕೆ. ಹಸನಬ್ಬ (೫೫), ಬಸ್ ನಿರ್ವಾಹಕ ಅರಸೀ ಕೆರೆಯ ದಯಾನಂದ (೨೬), ಬಿಜಾಪುರದ ನವಾಫ್ (೩೦), ಚಾಲಕ ನಿಜಲಿಂಗಪ್ಪ (೩೮), ಮಡಿಕೇರಿ ನವ್ಯಾ (೨೦), ಮಡಿಕೇರಿಯ ರಮ್ಯಾ(೨೧), ಕಾರ್ಕಳದ ಅಭಿಷೇಕ್(೨೧) ಎಂದು ಗುರುತಿಸಲಾಗಿದೆ.
ಸುಳ್ಯ, ಕೀನ್ಯಾದ ಕೃಷ್ಣ ನಾಕ್(೨೬), ಸುಳ್ಯ, ಬೆಟ್ಟಂಪಾಡಿಯ ಮಹಮ್ಮದ್ (೪೧), ಸುಳ್ಯ ಟೈಲಾರ್‌ನ ಶಿವ(೨೩), ಪುತ್ತೂರು, ಅರಿಯಡ್ಕದ ರಮೇಶ್ (೩೬), ಮಡಿಕೇರಿ, ಸೋಮವಾರ ಪೇಟೆಯ ವಿಜಯ ಕುಮಾರ್ (೩೫) ಅವರ ಪತ್ನಿ ಛಾಯಾ(೨೭), ನರಿಂಗಾನದ ಮೊದಿನ್ (೪೮), ದಯಾನಂದ ಶೆಣೈ (೮೦), ಮಾಣಿಯ ಸಂಜೀವ ಪೂಜಾರಿ(೫೦), ಪುತ್ತೂರಿನ ಶ್ರೀಜಲ(೧೮), ಕಡೇಶ್ವಾಲ್ಯದ ಸುಮಿತ್ರ(೨೬), ಯಾದವ (೨೫) ಎಂಬವರು ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗೀಡಾಗಿದ್ದು, ಚಿಕಿತ್ಸೆಗೆ ಒಳಗಾಗಿದ್ದರು. ಮಡಿಕೇರಿ ಕೆ.ಎಸ್.ಆರ್.ಟಿ.ಸಿ. ಡಿಪೋಕ್ಕೆ ಸೇರಿದ ಕೆಎ.೧೯ಎಫ್. ೨೫೦೯ ಬಸ್ ಪುತ್ತೂರು ಡಿಪೋಕ್ಕೆ ಕೆಎ೧೭ ಎಫ್.೧೪೧೪ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಿಂದಾಗಿ ಎರಡೂ ಬಸ್‌ಗಳೂ ಭಾಗಶಃ ಹಾನಿಗೀಡಾಗಿದ್ದವು. ಘಟನೆಯಿಂದಾಗಿ ರಾ.ಹೆ.ಯಲ್ಲಿ ಬಹಳ ಹೊತ್ತು ಸಾರಿಗೆ ಸ್ಥಗಿತ ಉಂಟಾಗಿದ್ದು, ಘಟನೆಗೆ ಪುತ್ತೂರು ಡಿಪೋ ಬಸ್ ಚಾಲಕ ನಿಜಲಿಂಗಪ್ಪ ಎಂಬವರ ಅಜಾಗ ರೂಕತೆಯೇ ಕಾರಣ ಎನ್ನಲಾಗಿದ್ದು, ಸಂಜೀವ ಪೂಜಾರಿ ನೀಡಿದ ದೂರಿನ್ವಯ ಚಾಲಕನ ಪ್ರಕರಣ ದಾಖಲಿಸಲಾಗಿದೆ.
Tagged with
accident,
bantwal,
cnews,
feature
ಎಸ್ಪಿಗೆ ದೂರಿತ್ತ ಮಹಿಳೆ
ಚಿಕ್ಕಮಗಳೂರು: ರಾತ್ರಿ ಒಬ್ಬಂಟಿ ಯಾಗಿದ್ದ ವೇಳೆ ಮನೆಗೆ ನುಗ್ಗಿದ ಗೋಣಿಬೀಡು ಠಾಣಾ ಎಸ್‌ಐ ಹಾಗೂ ಇಬ್ಬರು ಪೊಲೀಸರು ಹಲ್ಲೆ ನಡೆಸಿ ಅತ್ಯಾ ಚಾರಕ್ಕೆ ಯತ್ನಿಸಿದ್ದಾರೆಂದು ಮೂಡಿಗೆರೆ ತಾಲೂಕಿನ ಗೋಣಿಬೀಡು ನಿವಾಸಿ ಆರತಿ ಎಂಬವರು ಎಸ್ಪಿಗೆ ದೂರು ನೀಡಿದ್ದಾರೆ.
ಮೂಡಿಗೆರೆ ತಾಲೂಕಿನ ಗೋಣಿ ಬೀಡು ಠಾಣೆಯ ಎಸ್‌ಐ ಸುಧಾಕರ್ ಹಾಗೂ ಇಬ್ಬರು ಪೊಲೀಸ್ ಪೇದೆಗಳು ಮಕ್ಕಳು ಚಿಕ್ಕಮ್ಮನ ಮನೆಗೆ ತೆರಳಿದ್ದ ವೇಳೆ ಮನೆಗೆ ಅಕ್ರಮ ಪ್ರವೇಶಗೈದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ಗಂಡನಿಗೆ ಡೈವೋರ್ಸ್ ನೀಡಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯು ತ್ತಿದೆ. ಈಗ ನಾನು ಮಕ್ಕಳೊಂದಿಗೆ ಬದುಕು ತ್ತಿದ್ದು, ಮಕ್ಕಳಿಲ್ಲದ ವೇಳೆ ಪೊಲೀಸರು ಕೃತ್ಯ ಎಸಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
Tagged with
feature,
nnews
ಮುಲ್ಕಿ: ಜಿಲ್ಲೆಯ ಇಬ್ಬರು ಯುವಕರು ಸಮುದ್ರ ಪಾಲಾಗಿರುವ ಘಟನೆ ಕುವೈತ್‌ನ ಫಹಲೀಲ್ ಸಮೀಪದ ಮೆಹಬುಲ್ಲಾ ಸಮುದ್ರ ತೀರದಲ್ಲಿ ಗುರುವಾರ ಸಂಜೆ ೬.೩೦ ರ ಸುಮಾರಿಗೆ ಸಂಭವಿಸಿದೆ.
ಕಿನ್ನಿಗೋಳಿ-ಕಾಪಿಕಾಡ್‌ನ ಸಂತೋಷ್ ಸಾಲ್ಯಾನ್ (೨೬) ಮತ್ತು ಕಾವೂರಿನ ಯೋಗೀಶ್ ಪೂಜಾರಿ (೨೫) ಸಮುದ್ರ ಪಾಲಾದ ಯುವಕರು. ಕುವೈತ್‌ನ ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಹೊಂದಿರುವ ಇಬ್ಬರು ೧೧ ಮಂದಿ ತಂಡದೊಂದಿಗೆ ಗುರುವಾರ ಸಂಜೆ ಮೆಹಬುಲ್ಲಾ ಸಮುದ್ರ ತೀರಕ್ಕೆ ವಿಹಾರಕ್ಕೆ ತೆರಳಿದ್ದರು.
ವಿವರಗಳಿಗಾಗಿ ಇಂದಿನ (೨೩/೦೬/೨೦೧೨) ಜಯಕಿರಣ ಪತ್ರಿಕೆ ಓದಿರಿ
Tagged with
feature,
inews
ಮೂಡುಬಿದಿರೆ: ಬಾಣಂತಿ ಪತ್ನಿಯನ್ನು ಕೊಚ್ಚಿ ಕೊಲೆಗೈದ ಹಂತಕ ಪರಾರಿಯಾಗಿದ್ದು, ಯಾವುದೇ ಮಹತ್ವದ ಸುಳಿವು ಭ್ಯವಾಗಿಲ್ಲ. ಈ ನಡುವೆ ಆತನ ಸಂಗಡಿಗರೆನ್ನಲಾದ ಹಲವ ರನ್ನು ಮತ್ತು ಆತನ ಪ್ರೇಯಸಿ ಎನ್ನಲಾದ ಯುವತಿಯೊಬ್ಬಳನ್ನು ಮೂಡುಬಿದಿರೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕೊಲೆಗಾರ ಜಯಂತನಿಗೆ ಕೊಲೆಯಾದ ಜಯಂತಿಯ ಪರಿಚಯಕ್ಕೂ ಮೊದಲು ಅದೇ ಪರಿಸರದ ಯುವತಿಯೊಬ್ಬಳೊಂದಿಗೆ ಪ್ರೇಮ ಸಂಬಂಧವಿತ್ತೆನ್ನಲಾಗಿದೆ. ಆಕೆ ಕೂಡಾ ಜಯಂತಿ ಕೆಲಸ ಮಾಡುತ್ತಿದ್ದ ತೋಡಾರಿನ ಮೈಟ್ ಇಂಜಿನಿಯರಿಂಗ್ ಕಾಲೇಜಿನಲ್ಲೇ ಕೆಲಸಕ್ಕಿದ್ದಳು.
ಜಯಂತಿ ನಾಲ್ಕು ತಿಂಗಳ ಗರ್ಭವತಿ ಯಾಗಿದ್ದು, ಆ ಬಳಿಕ ಪೊಲೀಸರ ಮಧ್ಯಸ್ಥಿಕೆ ಯಲ್ಲಿ ಜಯಂತನೊಂದಿಗೆ ಮದುವೆಯಾ ದದ್ದು ಒಂದೆಡೆಯಾದರೆ, ಜಯಂತ ನೊಂದಿಗೆ ಪ್ರೇಮ ಸಂಬಂಧವಿತ್ತೆನ್ನಲಾದ ಹುಡುಗಿ ಮತ್ತೆ ಪ್ರೇಮ ಸಂಬಂಧ ಮುಂದು ವರಿಸಿದ್ದಾಳಾ ಎನ್ನುವುದು ತಿಳಿದು ಬಂದಿಲ್ಲ.
ಜಯಂತಿಗೆ ಬೇರೆ ಕೆಲ ಯುವಕ ರೊಂದಿಗೂ ದೈಹಿಕ ಸಂಬಂಧ ಇತ್ತೆಂದು ತಗಾದೆ ತೆಗೆಯುತ್ತಿದ್ದ ಜಯಂತ ಮದುವೆ ಸಂದರ್ಭದಲ್ಲಿ ಅದೇ ಕಾರಣ ನೀಡಿ ಮದುವೆಗೆ ನಿರಾಕರಿಸುತ್ತಿದ್ದ. ಆದರೆ ಕೆಲ ಯುವಕರು ಬೆನ್ನು ಬಿಡದ ಕಾರಣ ಪೊಲೀಸ ರೆದುರು ಆತನ ಮದುವೆ ನೆರವೇರಿಸಿದ್ದರು. ಜಯಂತಿಯೊಂದಿಗೆ ಮದುವೆ ಯಾಗಿದ್ದ ಆರಂಭದ ಕೆಲ ದಿನ ಒಟ್ಟಿಗಿರುವ ನಾಟಕವಾಡಿದ್ದನೇ ವಿನಃ ಮತ್ತೆ ಸಂಪರ್ಕವೇ ಬಿಟ್ಟಿದ್ದ. ತನ್ನ ಮಾನ ಮರ್ಯಾದೆಯನ್ನು ಬೀದಿಪಾಲು ಮಾಡಿದ ಜಯಂತಿಗೆ ಪ್ರತೀಕಾರ ತೀರಿಸಬೇಕೆಂದು ಕಾಯುತ್ತಿದ್ದ ಜಯಂತ ಜೂನ್ ೨೦ರ ರಾತ್ರಿ ಮೂಡಬಿದ್ರೆ ಸರಕಾರಿ ಆಸ್ಪತ್ರೆಗೆ ಬಂದು ಜಯಂತಿಯನ್ನು ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ. ಜಯಂತ ಹಾಗೂ ಆತನ ಬೈಕಿನಲ್ಲಿ ಬಂದಿದ್ದಾರೆಂದು ಹೇಳಲಾಗಿರುವ ಬೈಕ್ ಪತ್ತೆಯಾದರೆ ಆರೋಪಿಯ ಪತ್ತೆಯೂ ಸುಲಭವಾಗಬಹುದು ಮೂಡಬಿದ್ರೆ ಪೊಲಿಸರು ಅದೇ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.
Tagged with
cnews,
feature,
moodabidri
ವಿಟ್ಲ: ಇಲ್ಲಿಗೆ ಸಮೀಪದ ಅಡ್ಯನಡ್ಕ ಎಂಬಲ್ಲಿಯ ರಸ್ತೆ ಬದಿಯೂ ಕುಸಿದು ಬಿದ್ದ ಪರಿಣಾಮ ಅಲ್ಲಿ ಹೊಂಡ ನಿರ್ಮಾಣ ವಾಗಿದ್ದು, ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಇದು ಮೃತ್ಯುಕೂಪ ವಾಗಿ ಪರಿಣಮಿಸಿದೆ.
ಕಳೆದ ಎರಡು ವರ್ಷಗಳಿಂದ ಇಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ದಿನೇ ದಿನೇ ಈ ಹೊಂಡ ವಿಚಿತ್ರ ಸ್ವರೂಪ ವನ್ನು ಪಡೆದುಕೊಳ್ಳುತ್ತಿದೆ. ಕರ್ನಾಟಕ-ಕೇರಳ ಗಡಿ ಪ್ರದೇಶವಾದ ಅಡ್ಯನಡ್ಕ ಮೂಲಕ ಸಾರಡ್ಕ, ಪೆರ್ಲ, ಬದಿಯಡ್ಕ, ಕುಂಬಳೆ, ಕಾಸರಗೋಡು, ಪಾಣಾಜೆ, ಪುತ್ತೂರು ಮುಂತಾದ ಕಡೆಗಳಿಗೆ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದೆ. ಪರಸ್ಪರ ವಾಹನಗಳು ಸೈಡ್ ಕೊಡುವ ಸಂದರ್ಭ ಈ ಹೊಂಡ ವಾಹನ ಚಾಲಕರಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಯಾವುದೇ ರೀತಿಯ ಸ್ಪಂದನೆ ಕೊಡುತ್ತಿಲ್ಲವೆಂಬುದು ಸಾರ್ವಜನಿಕರ ಆರೋಪವಾಗಿದೆ. ಕಲ್ಲಡ್ಕ-ಸಾರಡ್ಕ ರಸ್ತೆ ಮರು ಡಾಮರೀಕರಣ ಇತ್ತೀಚೆಗೆಷ್ಟೇ ನಡೆದಿದ್ದು, ಈ ಸಂದರ್ಭ ಅಧಿಕಾರಿಗಳು ಇದನ್ನು ಗಮನಿಸದೇ ಇರುವುದು ವಿಪರ‍್ಯಾಸವೇ ಸರಿ.
Tagged with
dk,
feature,
lnews
ಯಾವ ವಾಹನದಲ್ಲಿ ಠಾಣೆಗೆ ಬರಬೇಕು?
ಮಂಗಳೂರು: ಕೇಂದ್ರ ಸರಕಾರ ಸಮಗ್ರ ಆರ್ಥಿಕ ನೀತಿ ರೂಪಿಸುವಲ್ಲಿ ವಿಫಲಗೊಂಡಿದೆ ಎಂದು ಆರೋಪಿಸಿ ರಾಷ್ಟ್ರಾದ್ಯಂತ ನಿನ್ನೆ ಭಾರತೀಯ ಜನತಾ ಪಕ್ಷ ಜೈಲ್‌ಭರೋ ಕಾರ್ಯಕ್ರಮದ ಹಮ್ಮಿಕೊಳ್ಳುವ ಮೂಲಕ ಪ್ರತಿಭಟಿಸಿದ್ದು ಮಂಗಳೂರಿನಲ್ಲೂ ನಡೆಯಿತು.
ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಪಂಪ್‌ವೆಲ್ ವೃತ್ತದ ಬಳಿ ರಸ್ತೆ ತಡೆ ನಡೆಸಲಾಯಿತು. ಈ ಸಂದರ್ಭ ಪೊಲೀಸರು, ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿದರು. ಅದೇ ರೀತಿ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಸಭೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಭಟನಾ ಸಭೆ ನಡೆಸಿ ರಸ್ತೆತಡೆ ನಡೆಸಿದರು.
ಈ ಸಂದರ್ಭ ಪೊಲೀಸರು ರಸ್ತೆಯನ್ನು ತೆರವುಗೊಳಿಸುವಂತೆ ಕೇಳಿ ಕೊಂಡಿದ್ದು ಆ ವೇಳೆ ಮುಖಂಡರು ಕಾಲಾವಕಾಶ ಕೇಳಿದಾಗ ಪೊಲೀಸರೇ ಮೌನವಾದರು. ೧೦ ನಿಮಿಷದಲ್ಲೇ ವಾಹನಗಳ ಮಾರುದ್ದದ ಸಾಲು ಕಂಡು ಬಂತು. ಇದೇ ವೇಳೆ ಪೊಲೀಸರು ಓರ್ವ ಮುಖಂಡರನ್ನು ಬಂಧಿಸು ತ್ತಿದ್ದಂತೆಯೇ ಇತರರು ಯಾವ ವಾಹನದಲ್ಲಿ ಠಾಣೆಗೆ ಬರಬೇಕು ಎಂದು ಕೇಳಿ ಸ್ವತಃ ವಾಹನ ಹತ್ತಿದರು. ಇದು ಒಂದು ರೀತಿಯಲ್ಲಿ ನಾಟಕದಂತೆ ಕಂಡು ಬಂದಿದ್ದು ಸಾರ್ವಜನಿಕರ ಅಪಹಾಸ್ಯಕ್ಕೂ ಕಾರಣವಾಯಿತು.
ಸುಳ್ಯದಲ್ಲಿ ಜೈಲ್‌ಭರೋ
ಸುಳ್ಯ: ಕೇಂದ್ರ ಸರ್ಕಾರದ ಆರ್ಥಿಕ ನೀತಿ ಹಾಗೂ ತಪ್ಪು ರಾಜಕೀಯ ನಿರ್ಧಾರಗಳನ್ನು ವಿರೋಧಿಸಿ ಬಿಜೆಪಿ ಮಂಡಲ ಸಮಿತಿ ವತಿಯಿಂದ ಶುಕ್ರವಾರ ಜೈಲ್ ಭರೋ ಕಾರ್ಯಕ್ರಮ ನಡೆಯಿತು.
ಶಾಲಾ ಬಸ್ ಬಳಕೆ: ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರನ್ನು ಬಂಧಿಸಲು ಒಂದು ಪೊಲೀಸ್ ವ್ಯಾನ್ ಮಾತ್ರವಿತ್ತು. ರಸ್ತೆ ತಡೆ ಆರಂಭಿಸುತ್ತಿದ್ದಂತೆ ಅದರಲ್ಲಿ ಕೆಲವು ಮುಖಂಡರನ್ನು ತುಂಬಿಸಲಾಯಿತು. ಉಳಿದಂತೆ ೨ ಖಾಸಗಿ ಸರ್ವೀಸ್ ಬಸ್, ಸರ್ವೀಸ್ ಮಾಡುವ ೨ ಮ್ಯಾಕ್ಷಿಕ್ಯಾಬ್‌ಗಳಲ್ಲಿ ಕಾರ್ಯಕರ್ತರನ್ನು ತುಂಬಿಸಲಾಯಿತು. ಮತ್ತೂ ಸ್ವಲ್ಪ ಕಾರ್ಯಕರ್ತರು ಉಳಿದ್ದು, ಅಲ್ಲಿಗೆ ಬಂದ ಶಾಲಾ ಮಕ್ಕಳ ಮಿನಿ ಬಸ್‌ನ್ನು ತಡೆದ ಪೊಲೀಸರು ಅದರಲ್ಲಿ ಪ್ರತಿಭಟನಾಕಾರರನ್ನು ತುಂಬಿಸಿ ಕರೆದೊಯ್ದರು.
ಪುತ್ತೂರು ಬಸ್ ನಿಲ್ದಾಣದ ಬಳಿ ಮುಖ್ಯ ರಸ್ತೆಯನ್ನು ತಡೆ ಮಾಡಿ ಪ್ರತಿಭಟಿಸಿದ ಶಾಸಕಿ ಮಲ್ಲಿಕಾ ಪ್ರಸಾದ್ ಸೇರಿದಂತೆ ಒಟ್ಟು ೧೦೩ ಮಂದಿಯನ್ನು ನಗರ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.
Tagged with
bjp,
dk,
feature,
lnews
ಮುಲ್ಕಿ: ಕಾಮಗಾರಿಯೊಂದರ ಬಗ್ಗೆ ವಾದ ವಿವಾದ ಉಂಟಾಗಿ ಇಬ್ಬರು ಸದಸ್ಯರು ಅದನ್ನು ಸಮರ್ಥಿಸಿ ಕೊಳ್ಳುವ ಭರದಲ್ಲಿ ರಂಪಾಟ, ತಳ್ಳಾಟ ನಡೆದು ಕೊನೆಗೆ ಘರ್ಷಣೆ ಹಂತಕ್ಕೆ ಬಂದು ಗ್ರಾಮ ಸಭೆಯೇ ರದ್ದು ಗೊಂಡ ಘಟನೆ ಮುಲ್ಕಿ ಹೋಬಳಿಯ ಕೆಮ್ರಾಲ್ ಗ್ರಾಮ ಸಭೆಯಲ್ಲಿ ಶುಕ್ರವಾರ ಸಂಭವಿಸಿತು.
ಕೆಮ್ರಾಲ್ ಗಾ.ಪಂ.ನ ಅಧ್ಯಕ್ಷೆ ಕೂಸುರವರ ಅಧ್ಯಕ್ಷತೆಯಲ್ಲಿ ಕೆಮ್ರಾಲ್ ಗ್ರಾಮದ ಅತ್ತೂರು, ಪಂಜ, ಕೊಕುಡೆ ಗ್ರಾಮ ವ್ಯಾಪ್ತಿಯ ಗ್ರಾಮ ಸಭೆಯು ಕೆಮ್ರಾಲ್ ಸಮುದಾಯ ಭವನದಲ್ಲಿ ಬುಧವಾರ ನಡೆದಿತ್ತು. ಆರಂಭದಲ್ಲಿ ಹಲವಾರು ಇಲಾಖೆಯ ಬಗ್ಗೆ ದೂರು ಗಳು ಕೇಳಿ ಬಂದಿದ್ದು, ಇಂಜಿನಿಯರ್ ಪ್ರಶಾಂತ್ ಆಳ್ವಾ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಿದ್ದಾಗ ಗ್ರಾಮಸ್ಥರೊಬ್ಬರು ಹೊಸಕಾವೇರಿ ಬಳಿಯಲ್ಲಿ ನಡೆದ ಮೋರಿ ಕಾಮಗಾರಿಯ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದರು.
ವಿವರಗಳಿಗಾಗಿ ಇಂದಿನ (೨೩/೦೬/೨೦೧೨) ಜಯಕಿರಣ ಪತ್ರಿಕೆ ಓದಿರಿ
Tagged with
dk,
feature,
lnews
ಮಂಗಳೂರು: ನಗರದಲ್ಲಿ ಹರಡುತ್ತಿರುವ ಡೆಂಗ್ಯು, ಮಲೇರಿಯಾ ರೋಗ ನಿಯಂತ್ರಣಕ್ಕೆ ಮಹಾನಗರಪಾಲಿಕೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ ತುರ್ತು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎನ್.ಎಸ್. ಚನ್ನಪ್ಪಗೌಡ ನಿರ್ದೇಶನ ನೀಡಿದ್ದಾರೆ.
ಈ ಸಂಬಂಧ ಜೂ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗಕ್ಕೆ ನಗರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳು ಹಾಗೂ ಕಾರ್ಮಿಕರು ಕಾರಣಕ್ಕೆ ಎಂದಾದರೆ ತಕ್ಷಣವೇ ಅಂತಹ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು. ಪಾಲಿಕೆ ಆರೋಗ್ಯ ವಿಭಾಗದಿಂದ ೪೨ ಜನ ಹಾಗೂ ಆರೋಗ್ಯ ಇಲಾಖೆಯಿಂದ ೩೦ ಕಿರಿಯ ಆರೋಗ್ಯ ಸಹಾಯಕರು ಗ್ರಾಮೀಣ ಪ್ರದೇಶದಿಂದ ನಿಯೋಜಿಸಿ, ೩೦ ಸ್ವಯಂ ಸೇವಕರು ಜುಲೈ ಒಂದರಿಂದ ತಂಡ ಪ್ರತೀ ಮನೆ ಮನೆಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗವನ್ನು ಪತ್ತೆ ಹಚ್ಚಲಿದೆ. ಈ ಕಾರ್ಯಕ್ರಮ ಆಂದೋಲನ ಮಾದರಿ ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ರೋಗ ಪತ್ತೆಯಾದ ಪ್ರದೇಶದ ಮನೆಗಳ ರಕ್ತ ಪರೀಕ್ಷೆ ಹಾಗೂ ಆರೋಗ್ಯ ಶಿಕ್ಷಣ ಮತ್ತು ಸೊಳ್ಳೆ ಉತ್ಪತ್ತಿ ಕೇಂದ್ರ ನಾಶಕ್ಕೆ ಒತ್ತು ನೀಡಿ, ಜನರಿಗೆ ತಿಳುವಳಿಕೆ ರೂಪಿಸುವ ಹೊಣೆ ಇಲಾಖೆಗಳದ್ದು ಎಂದು ಜಿಲ್ಲಾಧಿಕಾರಿಗಳು ನುಡಿದರು.
ಪಾಲಿಕೆಯ ಆರೋಗ್ಯ ವಿಭಾಗದಲ್ಲಿ ವೈದ್ಯರು ಅಲಭ್ಯವಿರುವ ಕಾರಣ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕವಾಗಿ ದಕ್ಷ ವೈದ್ಯರೊಬ್ಬರನ್ನು ನಿಯೋಜಿಸಿ ಹೆಚ್ಚುವರಿ ಪ್ರಭಾರ ನೀಡಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು ಡಿಎಚ್‌ಒ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಡಿ ಎಚ್ ಒಒ ಆರ್ ಶ್ರೀರಂಗಪ್ಪ, ಡಿ ಎಂ ಒ ಡಾ ಅರುಣ್, ಎಂಟಮೋಲಾಜಿಸ್ಟ್(ಕೀಟ ಶಾಸ್ತ್ರ ತಜ್ಞೆ) ಮುಕ್ತಾ, ಡಾ ಸುದರ್ಶನ್, ಹಿರಿಯ ಆರೋಗ್ಯ ನಿರೀಕ್ಷಕ ಜಯರಾಂ ಸೇರಿದಂತೆ ಪಾಲಿಕೆ ಪರಿಸರ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
Tagged with
briefs,
lnews
ಹೆಸರು; ಬೇಡ: ಊರು;ಬೇಡ
ಸಮಸ್ಯೆ: ನಾನು ೨೬ ವರ್ಷದ ಯುವಕ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಸಮಸ್ಯೆಯೇನೆಂದರೆ ನಾನು ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ನನ್ನ ಕ್ಲಾಸ್‌ಮೇಟ್ ಒಬ್ಬಳನ್ನು ಇಷ್ಟಪಟ್ಟಿದ್ದೆ. ಆದರೆ ಆಕೆಯಲ್ಲಿ ನನ್ನ ಪ್ರೀತಿಯನ್ನು ಹೇಳಲು ಧೈರ್ಯವಿರಲಿಲ್ಲ. ಆಕೆ ನನ್ನ ಜೊತೆ ತುಂಬಾ ಕ್ಲೋಸ್ ಆಗಿ ಮಾತಾಡುತ್ತಿದ್ದಳು. ಆದರೆ ನನಗೆ ಆಕೆಯಲ್ಲಿ ಹೇಗೆ ನನ್ನ ಲವ್ ಬಗ್ಗೆ ಹೇಳುವುದೆಂದು ಗೊತ್ತಾಗಲಿಲ್ಲ. ಆನಂತರ ಆಕೆ ಪಿಯು ಕಲಿಯಲು ಬೇರೆ ಕಾಲೇಜಿಗೆ ಸೇರಿದಳು. ಇದರಿಂದ ಆಕೆ ನನಗೆ ಸಿಗುತ್ತಿರಲಿಲ್ಲ. ಮತ್ತೆ ನಾನು ಆಕೆಯ ಹಿಂದೆ ಬಿದ್ದು ಹುಡುಕುವ ಪ್ರಯತ್ನ ಮಾಡಿರಲಿಲ್ಲ. ಆದರೆ ಕಳೆದ ಎರಡು ತಿಂಗಳ ಹಿಂದೆ ಆಕೆ ನನಗೆ ಮತ್ತೆ ಸಿಕ್ಕಿದ್ದಾಳೆ. ಆಕೆ ಕಂಪ್ಯೂಟರ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಒಮ್ಮೆ ನನಗೆ ಸಿಕ್ಕಿದವಳು ಮಾತನಾಡಿ ಒಟ್ಟಿಗೇ ಹೋಟೆಲ್‌ಗೆ ಹೋಗಿದ್ದೇವೆ. ಆಗ ಆಕೆಯೇ ನನಗೆ ಮೊಬೈಲ್ ನಂಬರ್ ಕೊಟ್ಟಿದ್ದಾಳೆ. ನಾನು ಆಕೆಯೊಂದಿಗೆ ಈಗ ಪೋನ್‌ನಲ್ಲಿ ಮಾತಾಡುತ್ತೇನೆ. ಆಕೆ ನನಗೆ ಆಗಾಗ ಮೆಸೇಜ್, ಚಾಟಿಂಗ್ ಮಾಡುತ್ತಾಳೆ. ನಾನೂ ಆಕೆಗೆ ಮೆಸೇಜ್ ಮಾಡುತ್ತೇನೆ. ಈಗ ನನಗೆ ಆಕೆಯನ್ನು ಮತ್ತೆ ಪ್ರೀತಿಸಲು ಮನಸ್ಸಿದೆ. ಆದರೆ ಆಕೆಗೆ ಬೇರೆ ‘ಲವ್’ ಇರಬಹುದೇ ಎಂದು ಸಂದೇಹವಾಗುತ್ತಿದೆ. ಆಕೆ ಆಕರ್ಷಕವಾಗಿದ್ದಾಳೆ. ಆದರೆ ಹುಡುಗರ ವಿಚಾರದಲ್ಲಿ ಫಾಸ್ಟ್ ಇರುವ ಹಾಗೆ ಅನಿಸುವುದಿಲ್ಲ. ಆಕೆ ಬೇರೆ ಯಾರನ್ನೋ ಪ್ರೀತಿಸುತ್ತಿದ್ದು, ನಾನು ಆಕೆಯನ್ನು ಪ್ರೀತಿಸುವುದಾಗಿ ಹೇಳಿದರೆ ಸ್ನೇಹಕ್ಕೆ ಧಕ್ಕೆಯಾಗುವುದಿಲ್ಲವೇ? ನನಗೆ ಆಕೆಯ ಪ್ರೀತಿಯನ್ನು ಪಡೆಯಲು ಆಸೆ, ಏನು ಮಾಡಲಿ? ನನಗೆ ಸರಿಯಾದ ಸಲಹೆ ಕೊಡಿ.
ಸಲಹೆ: ನೀವು ಆಕೆಯನ್ನು ಇಷ್ಟಪಟ್ಟಿದ್ದರಲ್ಲಿ ಏನೂ ತಪ್ಪಿಲ್ಲ. ಯಾಕೆಂದರೆ ಆಕೆ ನಿಮ್ಮ ಬಾಲ್ಯದ ಗೆಳತಿ. ಆದರೆ ಈಗ ಆಕೆ ಕೆಲಸ ಮಾಡುತ್ತಿದ್ದಾಳೆ, ನೀವೂ ಸಣ್ಣ ಹುಡುಗನಲ್ಲ. ನಿಮಗೂ ಸಾಕಷ್ಟು ಜವಾಬ್ದಾರಿಗಳಿವೆ. ಆಕೆ ನಿಮ್ಮನ್ನು ಶಾಲಾ ದಿನಗಳ ಸ್ನೇಹಿತ ಎಂಬ ನೆಲೆಯಲ್ಲಿ ನಂಬರ್ ಕೊಟ್ಟು ಮಾತಾ ಡುತ್ತಿರಬಹುದು. ಆಕೆಯ ವೈಯಕ್ತಿಕ ಬದುಕು, ಕನಸು, ಆಕಾಂಕ್ಷೆ ಬೇರೆಯೇ ಇರಬಹುದು. ನೀವು ಆಕೆಯ ಗೆಳೆತನ ಮುಖ್ಯವೋ ಅಥವಾ ಆಕೆಯ ಪ್ರೀತಿ ಮುಖ್ಯವೋ ಎನ್ನುವುದನ್ನು ಈಗಲೇ ತೀರ್ಮಾನಿಸಿ. ಗೆಳೆತನ ಮುಖ್ಯವಾದರೆ ಆಕೆಯೇ ಸ್ವತ: ಆಕೆಯ ಸ್ವಂತ ವಿಚಾರ ಅಂದರೆ ಪ್ರೀತಿ-ಪ್ರೇಮ ಈ ಬಗ್ಗೆ ಹೇಳುವ ತನಕ ಸುಮ್ಮನಿರಿ. ಪ್ರೀತಿ ಮುಖ್ಯವಾದರೆ ಆಕೆಯನ್ನು ಆದಷ್ಟು ಬೇಗನೇ ಕೇಳಿಬಿಡಿ. ಆಕೆಗೆ ಆಸಕ್ತಿ ಇರದಿದ್ದರೆ ಅಥವಾ ಬೇರೆ ‘ಲವ್’ ಇದ್ದರೆ, ಸ್ನೇಹಿತರಂತೆಯೇ ಇರೋಣ ಎಂದು ಹೇಳಿಬಿಡಿ. ಆಕೆಗೆ ಯಾವು ದಕ್ಕೂ ಒತ್ತಡ ಹೇರುವುದು ಬೇಡ. ನಿಮ್ಮೊಳಗಿನ ಸಂಶಯವನ್ನು ಆಕೆಯ ಜತೆ ನೇರವಾಗಿ ನಿವಾರಿಸಿಕೊಳ್ಳಿ. ಆಕೆಯ ಪ್ರೀತಿ ಪಡೆದೇ ತೀರಬೇಕು ಎಂದು ಆಕೆಯ ಮೇಲೆ ಯಾವುದೇ ರೀತಿಯ ಒತ್ತಡ ಹೇರುವುದು ಬೇಡ. ಆಕೆ ಒಂದು ವೇಳೆ ಫ್ರೆಂಡ್ಸ್‌ಗಳಾಗಿಯೇ ಇರೋಣ ಎಂದು ಹೇಳಿ ದರೆ ನಿಮ್ಮ ಮನಸ್ಸಿನಲ್ಲಿನ ಪ್ರೀತಿ-ಪ್ರೇಮ ಬದಿಗಿಟ್ಟು ಒಳ್ಳೆಯ ಫ್ರೆಂಡ್ಸ್ ಆಗಿರಿ.
Tagged with
gupta
ರಿಕ್ಷಾ ಚಾಲಕ ತನ್ನ ಮನೆಯಿಂದ ರಿಕ್ಷಾವನ್ನು ದುಡಿಮೆಯ ದಾರಿಗೆ ತರುವ ಹೊತ್ತು ಅವನ ಮನಸ್ಸು ಮನೆಯವರು ಕೊಟ್ಟಿರುವ ಅಂದಿನ ದಿನ ಖರ್ಚಿನ ಹತ್ತಾರು ಬಗೆಯ ಪಟ್ಟಿಯೊಂದಿಗೆ ಮಾತಾಡುತ್ತದೆ. ತಾಯಿ, ತಂದೆಯರಿಗೆ, ಮನೆ ದೇವರಿಗೆ ನಮಸ್ಕರಿಸಿ ಹೊರಡುವ ರಿಕ್ಷಾಚಾಲಕ ರಿಕ್ಷಾಕ್ಕೆ ಒದೆಕೊಟ್ಟು ಲಕ್ಷ ಡರುಗುಟ್ಟುತ್ತ ಹೊರಟಂತೆ, ಅಂದಿನ ಬಾಡಿಗೆಯ ಲೆಕ್ಕಾಚಾರ ಮತ್ತು ಕೊಡು ಕೊಳ್ಳುವ ಬಾಕಿಗಳತ್ತ ಮನಸ್ಸು ಓಡಿಸುತ್ತಾನೆ. ಕ್ಷಣ ಮನಸ್ಸು ಅಳುಕುತ್ತದೆ. ಅಳು ತೋರಿಸುತ್ತದೆ.
ಅಲ್ಲಿಂದ ಯುವಕನಾದ ಅವನಲ್ಲಿ ಒಂದು ಹುರುಪು ತುಂಬಿ ಕೊಳ್ಳುತ್ತದೆ. ಅವನ ಕನಸು ಒಂದೇ ಹಾಡು ಹಾಡುತ್ತದೆ - ಕುಲಶೇಖರದಿಂದ ಕೆ.ಎಸ್. ರಾವ್ ರೋಡ್, ಅಲ್ಲಿಂದ ಕೊಟ್ಟಾರ, ಕೊಟ್ಟಾರದಿಂದ ಪಂಪ್‌ವೆಲ್, ಪಂಪ್‌ವೆಲ್‌ನಿಂದ ಲಾಲ್‌ಭಾಗ್, ಲಾಲ್‌ಭಾಗ್‌ನಿಂದ ಪಿವಿಎಸ್. ಕೆ.ಎಸ್.ಆರ್.ಟಿಸಿ. ಪುರುಸೊತ್ತಿಲ್ಲದ ಬಾಡಿಗೆ, ಬಾಡಿಗೆ ದುಡ್ಡು ಒಂದು ಸಾವಿರ ಜಮಾ ಆಯಿತು ರೈಟ್ ಮನೆಗೆ ಎನ್ನಬೇಕು ಎಂದು ಬೆಳಗ್ಗೆ ಹೇಳಿಕೊಳ್ಳುತ್ತಾನೆ.
ಆದರೆ ಅವನು ಎಣಿಸಿದಂತೆ ಯಾವತ್ತೂ ಸಾವಿರ ರೂಪಾಯಿ ಬಾಡಿಗೆ ಆಗಿಲ್ಲ. ಅದರ ಬದಲಿಗೆ ನೂರಾರು ಬಗೆಯ ತಾಪತ್ರಯಗಳು ಖಂಡಿತಾ ಬಂದೊದಗುತ್ತದೆ. ಎಂಟಾಣೆ, ರೂಪಾಯಿ, ಚಿಲ್ಲರೆ ಜಗಳ, ಕುಡುಕರ ರಂಪಾಟ, ಪೊಲೀಸರ ಕಾಟ, ಕಾಯಿದೆ ಕಾನೂನುಗಳ ಭಾಷಣ, ಗ್ಯಾಸಿಲ್ಲ, ಪೆಟ್ರೋಲಿಲ್ಲ. ಸೀಮೆಎಣ್ಣೆ ಕಲಬೆರಕೆ, ಮೀಟರ್ ಸರಿಯಿಲ್ಲ, ತಲೆ ಚಿಟ್ಟು ಹಿಡಿದು ಹೋಗುವಂ ತಹಾ ನೂರಾರು ತರಲೆಗಳು. ಇದು ಮಂಗಳೂರು ರಿಕ್ಷಾದವರಿಗೆ ಮಾತ್ರ. ಯಾಕೆಂದರೆ ಅವರು ಲಕ್ಷ ಮೀಟರಿನ ಪ್ರಾಮಾಣಿಕ ದರಕ್ಕೆ ಸರಿಯಾಗಿ ಪ್ರಯಾಣಿಕರನ್ನು ಸಾಗಿಸುತ್ತಾರೆ. ಬೆಂಗಳೂರಿನಲ್ಲಿ ಹಾಗಲ್ಲ ತಗಾದೆಯೇ ತಗಾದೆ. ಮಂಗಳೂರಿನ ಹದಿನೇಳು ರೂ. ಬಾಡಿಗೆ ಬದಲಿಗೆ ಅಲ್ಲಿ ಮೂವತ್ತು... ಅಲ್ಲ ಐವತ್ತು ರೂಪಾಯಿ ಕಸಿದುಕೊಳ್ಳುತ್ತಾರೆ. ಇಲ್ಲಿಯ ಜನ ಅಲ್ಲಿ ಹೋದರೆ ಪಿಟ್ಟೆ ನ್ನದೆ ಕೊಟ್ಟು ಬರುತ್ತಾರೆ.
ಮಂಗಳೂರಿನ ಬುದ್ದಿವಂತರು ನಮ್ಮನ್ನಾಳುವ ರಾಜಕಾರಣಿಗಳು ಸಹಸ್ರಾರು ಕೋಟಿ ಲಂಚ ಪಡೆದ ಅನ್ಯಾಯವನ್ನು ಪತ್ರಿಕೆಯವರು ಕೆಂಪು ಬರಹದಲ್ಲಿ ಬರೆದರೂ ಅದನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ರಿಕ್ಷದವ ಒಂದು ರೂಪಾಯಿ ಚಿಲ್ಲರೆ ಇಲ್ಲ ಎಂದೊಡನೆ ರಿಕ್ಷಾದವರು ಲೂಟಿ ಹೊಡೆಯುತ್ತಾರೆ ಎಂದು ಬೊಬ್ಬಿಡುತ್ತಾರೆ.
ಹೊಟೇಲ್ ಸಪ್ಲೈಯರ್‌ಗೆ ಒಂದು ಪೆಗ್ ವಿಸ್ಕಿ ಅಥವಾ ರಮ್ ಸಪ್ಲಾಯ್ ಮಾಡಿದರೆ ನೂರು ರೂಪಾಯಿ ಟಿಪ್ಸ್ ಕೊಡುವ ಹಲವರು, ರಿಕ್ಷಾದಲ್ಲಿ ಕುಳಿ ತೊಡನೆ ರಿಕ್ಷಾದವನ ಮೀಟರನ್ನು ದುರುಗುಟ್ಟಿ ನೋಡುತ್ತಿರುತ್ತಾರೆ. ಯಾಕೆ ಹೀಗೆ? ಪ್ರಾಮಾಣಿಕ ರಿಕ್ಷಾದವರಿಗೆ ಜನರಿಂದ ಯಾಕೆ ಸಮಾಧಾನದ ಮಾತುಗಳು ಸಿಗುತ್ತಿಲ್ಲ?
ರಿಕ್ಷಾದವರು ತಮ್ಮ ರಿಕ್ಷಾದಲ್ಲಿ ಕುಳಿತ, ಮುದುಕರಿಗೆ, ಅಂಗವಿಕಲರಿಗೆ, ಕುರುಡರಿಗೆ, ಕಾಸು ಕಡಿಮೆ ಇದೆ ಎಂಬ ಬಡವರಿಗೆ, ಮೂರು ಜನ ಕುಳಿತು ಕೊಳ್ಳುವ ರಿಕ್ಷಾದಲ್ಲಿ ನಾಲ್ಕು ಜನರಿರುವ ಕುಟುಂಬಕ್ಕೆ ಜಾಗ ಇಲ್ಲ ಎಂದರೆ ಅಣ್ಣಾ ಹೇಗಾದರೂ ಕರೆದುಕೊಂಡು ಹೀಗಿ ಎಂದು ವಿನಂತಿಸಿದರೆ ‘ಇಲ್ಲ... ಆಗದು’ ಎನ್ನುವುದಿಲ್ಲ. ಜನ ರಿಕ್ಷಾದಲ್ಲಿ ಅಮೂಲ್ಯ ವಸ್ತುಗಳನ್ನು ಬಿಟ್ಟು ಹೋದರೆ, ಅವರನ್ನು ಹುಡುಕಿ ಕೊಟ್ಟು ಬರುತ್ತಾರೆ. ರಿಕ್ಷಾದವರು ಯಾರು? ಅವರೂ ನಮ್ಮ ನಿಮ್ಮಂತವರ ಮನೆ ಮಕ್ಕಳಲ್ಲವೇ? ಯಾಕೆ ನಿಮಗೆ ಅವರಲ್ಲಿ ಮಮತೆ ಹುಟ್ಟುವುದಿಲ್ಲ? ನೀವು ರಿಕ್ಷಾ ಚಾಲಕರಲ್ಲಿ ಹೊಟೇಲ್ ಸಪ್ಲಾಯರ್ ಅಥವಾ ಸೆಕ್ಯೂರಿಟಿ ಗಾರ್ಡ್ ಕೊಡುವ ಸೆಲ್ಯೂಟ್ ಬಯಸುತ್ತೀರಾ? ಆದರೆ ಅದು ವ್ಯರ್ಥ. ಆದರೆ ಅದು ಏನೇ ಆಗಲಿ ರಿಕ್ಷಾ ಚಾಲಕರನ್ನು ಕೆಕ್ಕರಿಸಿ ನೋಡದೆ ದಯಾಭಾವನೆಯಿಂದ ನೋಡಿ. ಅವರ ಮೀಟರ್ ದುಡಿಮೆಯನ್ನು ಅವರಿಗೆ ಸಂತೋಷದಿಂದ ಕೊಟ್ಟುಬಿಡಿ. ಅವರ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಬೆಲೆ ಏರಿಕೆಯ ಬಿಸಿಯಲ್ಲಿ ಅವರ ಕುಟುಂಬದ ಆರೋಗ್ಯ ಕ್ಷೀಣಿಸುತ್ತಿದೆ. ಎಲ್ಲವೂ ತುಟ್ಟಿ ಎಂಬ ಕಾಲದಲ್ಲಿ ಹಣ್ಣು, ಬಿಸ್ಕತ್, ತಿನ್ನಲಾಗದಿದ್ದರೂ ಕುಚ್ಚಲಕ್ಕಿ ಗಂಜಿಯನ್ನು ಸಂತೋಷದಿಂದ ಉಣ್ಣುವ ಸಹಕಾರ ನೀಡಿ. ರಿಕ್ಷಾ ಚಾಲಕರೊಡನೆ ಸರಕಾರ, ಸಾರ್ವಜನಿಕರು ಮೃದು ಧೋರಣೆ ತಾಳದಿದ್ದರೆ ಅದೊಂದು ವರ್ಗ ಯಾವಾಗಲೂ ಜನರತ್ತ ಇವರು ಕಟುಕರು, ಭ್ರಷ್ಟಾಚಾರಿಗಳು, ದಲ್ಲಾಳಿಗಳು, ಸಿಕ್ಕಿದ್ದನ್ನು ಮುಕ್ಕುವವರು, ನಮ್ಮ ಮೀಟರ್ ಹಣಕ್ಕೂ ಮೋಸ ಮಾಡುವ ಭಾವನೆ ಉಳ್ಳವರು ಎಂದು ಶಪಿಸುತ್ತಾರೆ.
ರಿಕ್ಷಾ ಚಾಲಕರ ನೌಕರಿ, ಅದು ಸರ್ಕಾರ ಕೊಟ್ಟದ್ದಲ್ಲ. ಚಾಲಕನ ಕುಟುಂಬ ಮನೆ ಮಗನ ಬೇಡಿಕೆಗಾಗಿ ಸ್ವತಂತ್ರವಾಗಿ, ಹಂಗಿಲ್ಲದೆ ದುಡಿಮೆ ಮಾಡು ಎಂದು ಹಾಕಿಕೊಟ್ಟಿರುವ ರಾಮರಾಜ್ಯದ ರಾಜ ಮಾರ್ಗವದು.
ಬೋಲ ಚಿತ್ತರಂಜನ್‌ದಾಸ ಶೆಟ್ಟಿ
Tagged with
chavadi
ದಕ್ಷಿಣ ಕನ್ನಡ ಜಿಲ್ಲೆಯ ಜನರು ಉದ್ಯಮಶೀಲರು ಎಂದು ಕರೆಸಿಕೊಂಡಿದ್ದಾರೆ. ಬುದ್ದಿ ವಂತರು ಎಂಬುದರ ಜೊತೆಗೆ ಉದ್ಯಮದಲ್ಲಿ ಹೆಸರು ಗಳಿಸುವವರು ಎಂಬ ಹೆಗ್ಗಳಿಕೆ ನಮ್ಮ ನಾಡಿನ ವರಿಗೆ ಬಂದಿದೆ. ಈ ಹೆಸರು ಸುಮ್ಮನೆ ಸುಮ್ಮನೆ ಬಂದಿಲ್ಲ. ಹೊಟೇಲು, ಬ್ಯಾಂಕು, ಸಿನಿಮಾ ಇತ್ಯಾದಿ ಇತ್ಯಾದಿಗಳಲ್ಲಿ ನಮ್ಮ ಜಿಲ್ಲೆಯ ಜನರು ವಿಶ್ವವಿಖ್ಯಾತರಾ ಗಿದ್ದಾರೆ. ಈಗೀಗ ನಮ್ಮ ಜಿಲ್ಲೆಯೆ ಎಲ್ಲಾ ವಿಷಯ ಗಳಿಗೂ ಉದ್ಯಮದ ‘ಟಚ್’ ನೀಡಲಾಗುತ್ತಿದೆ. ಕಡಿಮೆ ಕೆಲಸದಲ್ಲಿ ಹೆಚ್ಚು ಗಳಿಸುವುದು ಹೇಗೆ ಎಂದು ಯೋಚಿಸ ಲಾಗುತ್ತಿದೆ. ಇದರಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಶಿಕ್ಷಣವು ಸೇರಿರುವುದು ವಿಷಾದನೀಯವಾದ ಅಂಶವಾ ಗಿದೆ.
ಶಾಲಾ ಕಾಲೇಜುಗಳಿಗೆ ಎಡ್ಮಿಶನ್ ಈಗ ಕೊನೆಯ ಹಂತದಲ್ಲಿದೆ. ಪ್ರತಿಯೊಂದು ಖಾಸಗೀ ಕಾಲೇಜಿನ ಎದುರು ಭಾಗದಲ್ಲಿ ದೊಡ್ಡ ದೊಡ್ಡ ಫ್ಲೆಕ್ಸ್ ಬ್ಯಾನರ್‌ಗಳು ಎದ್ದು ನಿಂತಿವೆ. ಅದರಲ್ಲಿ ಉನ್ನತ ಮಟ್ಟದ ‘ಡಿಸ್ಟಿಂಕ್ಷನ್’ ನಲ್ಲಿ ಪಾಸಾದವರ ಫೋಟೋಗಳು ರಾರಾಜಿಸುತ್ತಿವೆ. ಈ ಎಲ್ಲಾ ಫೋಟೋಗಳು ಈ ಹಿಂದೆ ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟವಾ ಗಿರುವುದನ್ನು ನಾವು ಗಮನಿಸಿದ್ದೇವೆ.
ಕೆಲವು ದಶಕಗಳ ಹಿಂದೆ ರ‍್ಯಾಂಕ್ ಹಂಚುವ ಪದ್ಧತಿ ಇತ್ತು. ಪ್ರಥಮ ರ‍್ಯಾಂಕ್, ದ್ವಿತೀಯ ರ‍್ಯಾಂಕ್ ಇತ್ಯಾದಿ ಇತ್ಯಾದಿಯಾಗಿ ಹತ್ತು ಅಥವಾ ಇಪ್ಪತ್ತು ರ‍್ಯಾಂಕ್‌ಗಳನ್ನು ಹಂಚಲಾಗುತ್ತಿತ್ತು. ಉಳಿದವರು ಏನಿದ್ದರೂ ಫಸ್ಟ್ ಕ್ಲಾಸ್, ಸೆಕೆಂಡ್ ಮತ್ತು ಥರ್ಡ್ ಕ್ಲಾಸ್. ಮೊದಲ ರ‍್ಯಾಂಕ್ ಬಂದವರಿಗೆ ಸನ್ಮಾನವೋ ಸನ್ಮಾನ! ಆನಂತರ ಈ ರೀತಿಯ ರ‍್ಯಾಂಕ್ ಹಂಚಿಕೆ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಉಂಟಾಗುತ್ತದೆ ಎಂಬ ವಿಚಾರದಲ್ಲಿ ಕೆಲವು ವರ್ಷಗಳ ಕಾಲ ಚರ್ಚೆ ನಡೆದು. ‘ಕೀಳರಿಮೆಯನ್ನು ತೊಡೆದು ಹಾಕುವ’ ಉದ್ದೇಶದಿಂದ ರ‍್ಯಾಂಕ್ ಹಂಚಿಕೆಯ ಪದ್ಧತಿಯನ್ನು ಬಿಟ್ಟುಕೊಟ್ಟು ಶ್ರೇಣಿಯ ವ್ಯವಸ್ಥೆಯನ್ನು ಮಾಡಲಾಯಿತು.
ಈಗ ಏನಾಗುತ್ತಿದೆ ಎಂಬುದು ನಮ್ಮ ಕಣ್ಣ ಮುಂದೆ ಇದೆ. ಈಗ ರಾಜ್ಯಕ್ಕೆ ಪ್ರಥಮದ ಜತೆ ಶಾಲೆಗೆ, ಜಿಲ್ಲೆಗೆ, ತಾಲೂಕಿಗೆ ಪ್ರಥಮ ಎಂಬುದು ಎಲ್ಲಾ ಕಡೆ ಕಂಡು ಬರುತ್ತಿದೆ. ಪ್ರತಿಯೊಂದು ಶಾಲೆಯೂ ತಮ್ಮ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಜಾಹೀರಾತುಗಳನ್ನು ಶಾಲೆಯ ಮುಂದೆ ಪ್ರಕಟಿಸಿ ನಮ್ಮ ಶಾಲೆ ಅತ್ಯುತ್ತಮ ವಾದ ಶಾಲೆ, ಎಲ್ಲಾ ಸೀಟುಗಳು ಭರ್ತಿಯಾಗಿದೆ, ಕೊನೆಯದಾಗಿ ಕೆಲವೇ ಸೀಟುಗಳು ಉಳಿದಿವೆ ಎಂಬುದಾಗಿ ವಾಣಿಜ್ಯೀಕೃತವಾದ ಅಗೋಚರ ಉದ್ದೇಶದ ಜಾಹೀರಾತುಗಳನ್ನು ನೀಡುತ್ತಿವೆ.
ಈ ಬಾರಿ ನನ್ನ ಮಿತ್ರರೊಬ್ಬರಿಗೆ ಆದ ಅನುಭವ ಬಹಳ ವಿಚಿತ್ರವಾ ಗಿದೆ. ಇವರು ತಮ್ಮ ಮಗಳ ಎಡ್ಮಿಷನ್‌ಗೆ ಮಂಗಳೂರು ನಗರಪಾಲಿಕೆಯ ವ್ಯಾಪ್ತಿಯಿಂದ ಹೊರಭಾಗದಲ್ಲಿರುವ ಒಂದು ಶಾಲೆಗೆ ಹೋದರು. ಶಾಲೆಯ ಹೆಸರು ಬೇಡ ಎಲ್ಲಾ ಖಾಸಗೀ ಶಾಲೆಗಳು ಹಣೆಬರಹವೂ ಇಷ್ಟೇ. ಆಗಿನ್ನೂ ‘ಪ್ರಾಸ್ಪೆಕ್ಟಸ್’ ವಿತರಣೆಯ ಹಂತ. ಇವರು ಪಿಯುಸಿಗೆ ಪ್ರಾಸ್ಪೆಕ್ಟಸ್ ಕೇಳಿದ್ದರು. ತಕ್ಷಣ ಅಲ್ಲಿನ ಸಿಬ್ಬಂದಿಗಳಿಂದ ಅಚ್ಚರಿ, ಭೀತಿ, ಹೆದರಿಕೆ ಹುಟ್ಟಿಸುವ ಪ್ರತಿಕ್ರಿಯೆ ‘ನೀವು ಈಗ ಬರುವುದಾ? ಆಗಲೇ ಸೀಟುಗಳು ಭರ್ತಿಯಾಗಿಬಿಟ್ಟಿದೆ. ಈಗ ಬಂದು ಪ್ರಾಸ್ಪೆಕ್ಟಸ್ ಬೇಕು ಅಂತೀರಲ್ಲಾ. ಆದಷ್ಟು ಬೇಗ ಮಾರ್ಕ್ಸ್ ಕಾರ್ಡ್ ತಂದು ಕೊಡಿ. ಎಲ್ಲಾದರೂ ಬಾಕಿ ಇದ್ದರೆ ಒಂದು ಸೀಟು ಸಿಕ್ಕೀತು. ತಡಮಾಡಬೇಡಿ’ ಎನ್ನುತ್ತಲೇ ಪ್ರಾಸ್ಪೆಕ್ಟಸ್‌ಗೆ ಐನೂರು ಪಡೆದು ಕೈಗೆ ಕೊಟ್ಟು ಬಿಟ್ಟರು.
ಇವರು ಮನೆಗೆ ಓಡಿದವರೇ ಕೂಡಲೇ ರಿಕ್ಷಾ ಮಾಡಿಕೊಂಡು ಮಾರ್ಕ್ಸ್ ಕಾರ್ಡ್ ಹಿಡಿದು ಆ ಕಾಲೇಜಿಗೆ ಧಾವಿಸಿದರು. ಅಲ್ಲಿ ಸಂಬಂಧಪಟ್ಟವರನ್ನು ಭೇಟಿಯಾದಾಗ ಮತ್ತಷ್ಟು ಹೆದರಿಕೆ ಹುಟ್ಟಿಸುವ ಮಾತು. ‘ನೋಡಿ ನೀವು ಬಂದದ್ದು ತುಂಬಾ ತಡವಾಯಿತು. ಮಾರ್ಕ್ಸ್ ಕಾರ್ಡ್ ಕೊಡಿ, ‘ಕ್ರೀಡಾ ಮೀಸಲಾತಿ’ಯಲ್ಲಿ ಉಳಿದ ಒಂದು ಸೀಟು ಕೊಡುತ್ತಿದ್ದೇವೆ ಅದೂ ಕೂಡಾ ಕಂಡೀಷನ್ ಮೇಲೆ. ಯಾರಾದರೂ ಬಂದರೆ ನೀವು ಬಿಟ್ಟುಕೊಡಬೇಕಾಗುತ್ತದೆ. ಕೂಡಲೇ ಫೀಸು, ಡೊನೇಶನ್ ಎಲ್ಲಾ ಕಟ್ಟಿ ಹೋಗಿ’
ಇವರು ಎಲ್ಲೆಲ್ಲೋ ಹಣ ಜೋಡಿಸಿಕೊಂಡು ಫೀಸು, ಡೊನೇಶನ್ ಕಟ್ಟಿ ಅಲ್ಲಿಂದಲೇ ‘ಕ್ರೀಡಾ ಮೀಸಲಾತಿ’ಯವರು ಯಾರೂ ಬರದಿರಲಪ್ಪಾ ದೇವರೇ ಎಂದು ದೇವರಿಗೆ ಕೈಮುಗಿದು ಹರಕೆ ಹೇಳಿ ಮನೆಗೆ ಬಂದು ಬಿಟ್ಟರು.
ಮರುದಿನ ತನ್ನ ಮಗಳಿಗೊಂದು ಸೀಟು ದೊರಕಿದ ಬಗ್ಗೆ ಎಲ್ಲರಲ್ಲೂ ಹೇಳಿಕೊಳ್ಳುತ್ತಾ. ಕ್ರೀಡಾ ಮೀಸಲಾತಿಯವರು ಬಂದರೆ ನನ್ನ ಮಗಳಿಗೆ ಬೇರೆ ಯೋಚನೆ ಮಾಡಬೇಕು ಎಂದರು. ಕೆಲವು ಕಡೆ ಇವರಿಗೆ ಸಿಕ್ಕ ಪ್ರತಿಕ್ರಿಯೆ ಇವರಿಗೆ ಮತ್ತಷ್ಟು ಸೋಜಿಗ ಹುಟ್ಟಿಸಿತು. ಜತೆಗೆ ತಾನು ಮೋಸ ಹೋಗಿ ಭೀತಿಗೊಳಗಾದದ್ದೂ ಅರಿವಾಯಿತು. ಯಾಕೆಂದರೆ ಹೆಚ್ಚಿನೆಲ್ಲಾ ಖಾಸಗಿ ಶಾಲೆಗಳ ಕಥೆ ಹೀಗೆಯೇ. ಮೊದಲನೆಯ ವಿದ್ಯಾರ್ಥಿಯ ಎಡ್ಮಶನ್‌ಗೆ ಈ ರೀತೀ ಭೀತಿ ಹುಟ್ಟಿಸಿಯೇ ಮಾಡಿರುವುದು ಗಮನಕ್ಕೆ ಬಂದಿತ್ತು. ನಮ್ಮ ನಾಡಿನಲ್ಲಿ ‘ನಾಯಿಸಂತೆ’ ಶಾಲೆಗಳು ಇರುವಾಗ ಯಾವುದೇ ಶಾಲೆಯಲ್ಲಿ ಸೀಟು ಇಲ್ಲ ಎನ್ನುವುದಕ್ಕೆ ಇಂದಿನ ದಿನಗಳಲ್ಲಿ ಅರ್ಥವೇ ಇಲ್ಲ. ಸೀಟುಗಳು ಸಿಗದಷ್ಟು ಉತ್ತಮ ದರ್ಜೆಯ ಶಾಲೆಗಳು ಎಂದಿಗೂ ತಮ್ಮ ಶಾಲೆಗಳ ಮುಂದೆ ಜಾಹೀರಾತುಗಳನ್ನು ಹಾಕುವುದಿಲ್ಲ. ಈ ರೀತಿ ಜಾಹೀರಾತು ಹಾಕುವ ಶಾಲೆಗಳು ಖಂಡಿತವಾಗಿಯೂ ಶಾಲೆಗಳಲ್ಲ. ಅದು ‘ಶಿಕ್ಷಣ ಮಾರಾಟದ ಕೇಂದ್ರ’ವಾಗಿದೆ.
ನನಗೆ ಇಂದಿಗೂ ಒಂದು ವಿಚಾರ ನೆನಪಿದೆ. ನಾನು ಕಾಲೇಜು ಮುಗಿಸಿದ ಎರಡು ವರ್ಷಗಳ ನಂತರ ಒಬ್ಬ ಹುಡುಗನ ಸೀಟಿಗೆ ಬೇಕಾಗಿ ಕಾಲೇಜಿಗೆ ಹೋಗಿದ್ದೆ. ಅಲ್ಲಿ ಸೀಟು ಕೊಡಲು ಬಿಲ್‌ಕುಲ್ ನಿರಾಕರಿಸಿದ್ದರು. ಹುಡುಗ ಸೀಟು ಕೊಡಲಾರದಷ್ಟು ದಡ್ಡನಾಗಿರಲಿಲ್ಲ. ಸೀಟು ಸಿಗಲು ಯಾರ ಶಿಫಾರಸ್ಸೂ ಅಗತ್ಯವಿಲ್ಲ ಎಂದು ನನಗೆ ಅಂದು ಅನಿಸಿತ್ತು. ‘ಸೀಟುಗಳು ಭರ್ತಿಯಾಗಿದೆ, ಇನ್ನು ಅಂಗವಿಕಲ ಕೋಟ, ಕ್ರೀಡಾ ಕೋಟ ಇತ್ಯಾದಿ ಕೋಟಾಗಳ ಸೀಟುಗಳು ಮಾತ್ರ ಉಳಿದಿವೆ. ಕೊಡುವುದಕ್ಕೆ ಆಗುವುದಿಲ್ಲ. ಅಲ್ಲಿ ಸೀಟುಗಳು ಭರ್ತಿಯಾಗಿಲ್ಲ ಎಂಬುದು ಒಂದು ‘ಬಹಿರಂಗ ಸತ್ಯವೇ’ ಆಗಿತ್ತು. ನಾನು ನನ್ನ ಜತೆ ಬಂದ ಹುಡುಗನಿಗೆ ‘ನನ್ನಿಂದ ಆಗುವುದಿಲ್ಲಪ್ಪಾ’ ಎಂದು ಬಿಟ್ಟಿದ್ದೆ ಆತ ಬೇರೆ ರೀತಿಯಲ್ಲಿ ತನ್ನ ಪ್ರಯತ್ನ ಮುಂದುವರಿಸಿದ.
ಆತನಿಗೆ ಅದೇ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು ಆತ ಸಿಕ್ಕಿದಾಗ ‘ಹೇಗೆ ಸಿಕ್ಕಿತು?’ ಎಂದು ಕೇಳಿದೆ. ಆತ ಓರ್ವ ವ್ಯಕ್ತಿಯ ಹೆಸರು ಹೇಳಿದ. ಆತನ ಮೂಲಕ ನನಗೆ ಸೀಟು ಸಿಕ್ಕಿತು ಎಂದ. ಅದೇ ಕಾಲೇಜಿನಲ್ಲಿ ಕಲಿತ ನನಗೆ ನಾನು ಮೆಚ್ಚಿ ಆದರ್ಶ ಎಂದು ಭಾವಿಸಿದ್ದ ವ್ಯಕ್ತಿಯೇ ಅಂದು ಪ್ರಿನ್ಸಿಪಾಲರಾಗಿದ್ದರು. ಅಂದು ನನಗೆ ಅವರ ಮೇಲೆ ಹುಟ್ಟಿದ ಜಿಗುಪ್ಸೆ ಅವರು ತೀರಿ ಹೋಗಿ ಇಂದಿಗೆ ಹಲವು ವರ್ಷಗಳು ಸಂದರೂ ಇನ್ನೂ ನಿವಾರಣೆಯಾಗಿಲ್ಲ. ಯಾಕೆಂದರೆ ಸೀಟಿಗಾಗಿ ಶಿಫಾರಸ್ಸು ಮಾಡಿದ ವ್ಯಕ್ತಿ ಯಾವುದೇ ಕಾರಣಕ್ಕೂ ಒಳ್ಳೆಯ ಕೆಲಸ ಮಾಡಿ ಪ್ರತಿಷ್ಠಿತನಾಗಿರಲಿಲ್ಲ. ನನಗಿಂತ ಸಾಧಾರಣ ಒಂದು ಒಂದೂವರೆ ವರ್ಷ ಹೆಚ್ಚಿನ ಪ್ರಾಯದ ಆತ ತಾನು ಮಾಡಿದ ಘನಾಂದಾರಿ ಕೆಲಸಗಳಿಗಾಗಿ ಹಲವಾರು ಬಾರಿ ಪೊಲೀಸ್‌ಠಾಣೆಯ ಮೆಟ್ಟಿಲು ಹತ್ತಿದ ಗೌರವ ಪಡೆದವನಾಗಿದ್ದ. ಆತನಿಗೆ ಹೆಸರು ಬಂದದ್ದೂ ಅದಕ್ಕಾಗಿಯೇ ಆಗಿತ್ತು. ಆತನ ಒಂದೇ ಒಂದು ಶಿಫಾರಸ್ಸ್ಸು (ಆವಾಜ್)ಗೆ ಸೀಟು ಸಿಕ್ಕಿಬಿಟ್ಟಿತ್ತು!
ಅಂದಿನ ಈ ಘಟನೆ ಇಂದಿನ ನನ್ನ ಮಿತ್ರರಿಗಾದ ಅನುಭವದ ಘಟನೆಗೆ ತಾಳೆ ಹಾಕಿ ನೋಡಿದಾಗ ಇಂದಿನ ದಿನಗಳಲ್ಲಿ ದುಡ್ಡು ಎಂಬುದು ಎಲ್ಲವನ್ನೂ ಮೀರಿ ನಿಂತು ಯಾವ ರೀತಿ ಪ್ರಾಬಲ್ಯವನ್ನು ಪಡೆಯುತ್ತಿದೆ ಎಂಬುದಕ್ಕೆ ಒಂದು ಸ್ಪಷ್ಟವಾದ ಉದಾಹರಣೆ ಇದು. ಕಿಸೆಯಲ್ಲಿ ಒಂದಷ್ಟು ದುಡ್ಡು ಇದ್ದರೆ ಇಂದಿನ ದಿನಗಳಲ್ಲಿ ಯಾವ ಪುಟಗೋಸಿ ನನ್ಮಗಂದೂ ಶಿಫಾರಸ್ಸು ಅಗತ್ಯವಿಲ್ಲ.
ಆರ್.ಕೆ. ದಿನಚರಿ
Tagged with
lekhana
ನಕ್ಸಲ್ ನಿಗ್ರಹ ದಳ ಬಂಧಿಸಿರುವ ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲನಿಗೆ ಹೈಕೋರ್ಟ್‌ನಿಂದಲೂ ಜಾಮೀನು ದೊರಕದೇ ಇರುವುದು ವ್ಯವಸ್ಥಿತ ಷಡ್ಯಂತ್ರದ ಭಾಗವೆಂದರೆ ತಪ್ಪಾಗದು. ಯಾಕೆಂದರೆ ದೇಶದಲ್ಲಿ ಎಂತೆಂಥ ಗಂಭೀರ ಪ್ರಮಾಣದ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡವರಿಗೆ ಕೆಲವೇ ನಿಮಿಷಗಳಲ್ಲಿ ಜಾಮೀನು ಸಿಗುತ್ತದೆ. ಉಗ್ರರು, ದಾಳಿಕೋರರು, ಹಂತಕರು, ಭ್ರಷ್ಟರು ಜೈಲಿನಲ್ಲಿ ಒಂದೆರಡು ದಿನಗಳು ಇದ್ದರೆ ವಿಚಿತ್ರವೇ ಸರಿ. ಯಾಕೆಂದರೆ ಅವರಿಗೆ ಜಾಮೀನು ಕೊಡಿಸುವ ವ್ಯವಸ್ಥೆ ವೇಗವಾಗಿ ಕೆಲಸ ಮಾಡುತ್ತದೆ. ಸರಕಾರಿ ಹಿರಿ-ಕಿರಿಯ ಅಧಿಕಾರಿಗಳಿಗೆ ಹಣದ ಥೈಲಿ ಕ್ಷಣಮಾತ್ರದಲ್ಲೇ ರವಾನೆಯಾಗು ತ್ತದೆ. ಹೀಗಾಗಿ ಜಾಮೀನು ಪಡೆಯುವುದು ನೀರು ಕುಡಿದಷ್ಟೇ ಸಲೀಸಾಗಿ ಆಗುತ್ತದೆ. ಆದರೆ ವಿದ್ಯಾರ್ಥಿ ವಿಠಲನ ವಿಚಾರದಲ್ಲಿ ಮಾತ್ರ ಈ ಎಲ್ಲ ಯೋಚನೆಗಳೂ ತಲೆಕೆಳಗಾಗಿವೆ. ಯಾಕೆಂದರೆ ಆತ ಮಾಡಬಾರದ ತಪ್ಪಿಗೆ ಪರಿತಪಿಸುತ್ತಾ ಜೈಲಿನಲ್ಲಿ ದಿನ ದೂಡುವಂತಾಗಿದೆ.
ಬಾಲ್ಯಕಾಲದಲ್ಲಿ ನಕ್ಸಲರ ಸಭೆ(?)ಯಲ್ಲಿ ಪಾಲ್ಗೊಂಡಿದ್ದ ಎಂಬ ಏಕೈಕ ಕಾರಣಕ್ಕೆ ಆತನನ್ನು ವಶಕ್ಕೆ ಪಡೆದುಕೊಂಡ ನಕ್ಸಲ್ ನಿಗ್ರಹ ದಳ ಆತನ ಮನೆಯಿಂದ ಸಕ್ಕರೆ, ಚಹಾಪುಡಿ, ಅಭ್ಯಾಸಕ್ಕೆ ಅಗತ್ಯವಿದ್ದ ಪುಸ್ತಕಗಳನ್ನು ಹಿಡಿದು ಆತನಿಗೂ-ನಕ್ಸಲರಿಗೂ ನೇರ ಲಿಂಕ್ ಇದೆ ಎಂದು ಬೊಬ್ಬಿಟ್ಟಿತು. ಬಹುಷಃ ಇದರಿಂದ ಆದಿವಾಸಿಗಳಾದ ಮಲೆಕುಡಿಯರನ್ನು ಒಕ್ಕಲೆಬ್ಬಿಸುವ ಯತ್ನಕ್ಕೆ ಸರಕಾರವೂ ಸಾಥ್ ನೀಡಿರಬಹುದು. ಹೀಗೆ ಕಾರಣವಲ್ಲದ ಕಾರಣಕ್ಕೆ ಸೂಕ್ತ ದಾಖಲೆ, ಪುರಾವೆಗಳು ಇಲ್ಲದಿದ್ದರೂ ವಿಠಲ ಮಲೆಕುಡಿಯ ಕತ್ತಲ ಕೋಣೆಯೊಳಗೆ ನರಳುವಂತಾಯಿತು. ಇದು ನಮ್ಮ ವ್ಯವಸ್ಥೆ. ಇಂಥ ವ್ಯವಸ್ಥೆಯನ್ನು ಬೆಂಬಲಿಸುವ ಜನರು ತಮಗರಿವಿಲ್ಲದೆ ತಪ್ಪು ಮಾಡುತ್ತಿದ್ದಾರೆ.
ವಿಠಲ ಮಲೆಕುಡಿಯ ಜೈಲಿನಲ್ಲಿ ೯೦ ದಿನಗಳನ್ನು ಕಳೆದಿದ್ದಾನೆ. ಬಂಧಿಸಿರುವ ಪೊಲೀಸರೂ ಈ ಅವಧಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸದಿರುವ ಕಾರಣ ಆತನನ್ನು ಬೇಷರತ್ ಆಗಿ ಬಿಡುಗಡೆ ಮಾಡಬಹುದು. ಆದರೆ ಪೊಲೀಸ್ ಇಲಾಖೆ, ಸರಕಾರ ವಿಠಲನ ಪ್ರಕರಣದಲ್ಲಿ ಮಾತ್ರ ತೀರಾ ಭಿನ್ನವಾಗಿ ವರ್ತಿಸುತ್ತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ವಿಠಲನ ವಿಚಾರಧಾರೆ ನಕ್ಸಲ್ ಪರ ಇದ್ದರೂ ಅದನ್ನು ಬದಲಿಸುವುದು, ಆತನ ಮನಪರಿವರ್ತನೆ ಮಾಡುವುದು ಕಷ್ಟವಾಗಿರಲಿಲ್ಲ, ಆತನಿಗೆ ಹದಿವಯಸ್ಸೂ ದಾಟಿರಲಿಲ್ಲ. ಆದರೆ ಪೊಲೀಸ್ ಇಲಾಖೆ ಆತನನ್ನು ಬಂಧನದಲ್ಲೇ ಇಟ್ಟು ನಕ್ಸಲರ ಮೇಲೆ ಕಠಿಣ ಕ್ರಮ ಜರುಗಿಸುವ ಪ್ರಹಸನವಾಡುತ್ತಿದೆ. ಇದೆಂಥ ವಿಪರ್ಯಾಸವಲ್ಲವೇ?
ವಿಠಲ ಮಲೆಕುಡಿಯನಿಗೆ ಜಾಮೀನು ನೀಡುವುದು, ಬಿಡುವುದು ಸ್ಥಳೀಯ ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಎಂದು ಹೈಕೋರ್ಟ್ ಹೇಳಿರುವುದರ ಹಿಂದೆಯೂ ರಾಜಕೀಯ ಕೆಲಸ ಮಾಡಿರುವ ಸಾಧ್ಯತೆಯಿದೆ. ಯಾಕೆಂದರೆ ವಿಠಲನಿಗೆ ಜಾಮಿನು ಕೊಡಲು ಸಾಧ್ಯವೇ ಇಲ್ಲ ಎನ್ನುವಂಥ ತಪ್ಪೇನೂ ಆತ ಮಾಡಿಲ್ಲ. ಹೀಗಾಗಿ ಸರಕಾರ ಅವಾವಶ್ಯಕ ಗೊಂದಲ ಸೃಷ್ಟಿಸುತ್ತಿದೆ ಎನ್ನಲಡ್ಡಿಯಿಲ್ಲ.
ಬಂಧಿತ ವಿಠಲ ಮಲೆಕುಡಿಯ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿ ಗುರುತಿಸಿಕೊಂಡಿರುವವನಲ್ಲ. ಆತನ ತಲೆಗೆ ರಾಜ್ಯ ಸರಕಾರ ದೊಡ್ಡ ಮೊತ್ತದ ಬಹುಮಾನವನ್ನೂ ಪ್ರಕಟಿಸಿಲ್ಲ. ಹೀಗಿದ್ದರೂ ವಿಠಲನನ್ನು ಕುಖ್ಯಾತ ನಕ್ಸಲ್ ನಾಯಕನೆಂಬಂತೆ ಬಿಂಬಿಸುತ್ತಿರುವುದು ಇನ್ನಷ್ಟು ಮಂದಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬಹುದಾಗಿದೆ. ನಕ್ಸಲ್ ಚಳುವಳಿಯ ಕಡೆ ಆಕರ್ಷಿತರಾದ ವಿದ್ಯಾರ್ಥಿಗಳು ಊರು ತೊರೆದು ಕಾಡು ಸೇರಬಹುದು. ಆಗ ಇದೆಲ್ಲದಕ್ಕೂ ಕಾರಣ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಯೇ ಹೊಣೆ ಆಗಲಿದೆ.
ಬಂಧಿತ ವಿದ್ಯಾರ್ಥಿ ಒಂದು ವೇಳೆ ದೇಶದ್ರೋಹಿ ಕೃತ್ಯದೆಡೆಗೆ ಆಕರ್ಷಿತನಾಗಿದ್ದರೂ ಆತನನ್ನು ಮರಳಿ ಸರಿದಾರಿಗೆ ತರುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿತ್ತು. ಆದರೆ ಇದನ್ನು ಮಾಡದೆ ಸರಕಾರ, ಇಲಾಖೆ ಏಕ ಪಕ್ಷೀಯ ನಿರ್ಧಾರ ತಳೆದಿ ರುವುದು ಖಂಡಿತಾ ಸರಿಯಲ್ಲ. ವಿಠಲನದ್ದು ತಪ್ಪೇನೇ ಇದ್ದರೂ ಆತ ಬದಲಾಗಲು ಅವಕಾಶ ಮಾಡಿಕೊಡಬೇಕು. ಯಾರದ್ದೋ ತಪ್ಪಿಗೆ ಆತನಿಗೆ ಶಿಕ್ಷೆ ನೀಡುವ ಬದಲು ಆತನನ್ನು ಬಿಡುಗಡೆ ಮಾಡಿ ಮನಪರಿವರ್ತನೆ ಮಾಡಲು ಸರಕಾರ ಮುಂದಾಗಬೇಕಿದೆ.
ರವಿಪ್ರಕಾಶ್, ನಾರಾವಿ
Tagged with
bahiranga
ಬಿ.ಸಿ.ರೋಡ್-ಕೋಣಾಜೆ-ಮಂಗ ಳೂರು ಮಾರ್ಗವಾಗಿ ಓಡಾಡುವ ಹಲವು ಬಸ್‌ಗಳು ಬಿ.ಸಿ.ರೋಡ್-ಮಂಗಳೂರು ಎಂದೂ ಇನ್ನೂ ಕೆಲವು ಬಸ್‌ಗಳು ಬಿ.ಸಿ. ರೋಡ್-ಕಂಕನಾಡಿ ಎಂದು ಬೋರ್ಡ್ ಹಾಕಿ ಸಂಚರಿಸುತ್ತವೆ. ಇದರ ನಿರ್ವಾಹಕ ರಸ್ತೆಯುದ್ದಗಲಕ್ಕೂ ಪ್ರಯಾಣಿಕರನ್ನು ಸ್ಟೇಟ್‌ಬ್ಯಾಂಕ್... ಸ್ಟೇಟ್‌ಬ್ಯಾಂಕ್... ಎಂದು ಬೊಬ್ಬೆ ಹಾಕಿ ಕರೆಯುತ್ತಾ ಬಸ್ಸನ್ನು ಪಂಪ್ ವೆಲ್‌ನಲ್ಲಿ ತಂದು ನಿಲ್ಲಿಸಿ ಸ್ಟೇಟ್‌ಬ್ಯಾಂಕ್‌ಗೆ ಹೋಗುವವರು ಮುಂದಿನ ಬಸ್‌ನಲ್ಲಿ ಹೋಗಿ ಎಂದು ಹೇಳಿ ಅರ್ಧದಲ್ಲೇ ಇಳಿಸಿ ಹೋಗು ತ್ತಾನೆ. ಸದರಿ ಬಸ್ಸಿನವರು ತಪ್ಪು ಮಾಡುವುದು ಇಲ್ಲಿಯೇ. ಇವರುಗಳು ಕಂಕನಾಡಿ... ಕಂಕನಾಡಿ... ಎಂದು ಕರೆದರೆ ಹಲವಾರು ಪ್ರಯಾಣಿಕರು ಈ ಬಸ್‌ನಲ್ಲಿ ಸಂಚರಿಸದೇ ಇದ್ದು, ಇಂಥ ಸಂಕಷ್ಟದಿಂದ ಪಾರಾಗಬಹುದು. ಬಸ್‌ನಿಂದ ಇಳಿದ ಪ್ರಯಾಣಿಕರು ಕಂಗಾಲಾಗಿ ಅದರಲ್ಲೂ ವಿಶೇಷವಾಗಿ ಪರವೂರಿನ ಪ್ರಯಾಣಿ ಕರು, ವೃದ್ಧರು, ಮಹಿಳೆಯರು ಮತ್ತು ದೇರಳ ಕಟ್ಟೆ ಆಸ್ಪತ್ರೆಯಿಂದ ಬಂದ ರೋಗಿಗಳು ಏನೂ ತೋಚದೆ ಗಲಿಬಿಲಿ ಗೊಂಡು ಪೇಚಾಡುವಂಥ ಪರಿಸ್ಥಿತಿ ಉಂಟಾಗುತ್ತದೆ. ‘ಕ್ರಾಸಿಂಗ್’ಗಾಗಿ ನಿಲ್ಲಿ ಸಿದ ಬಸ್ ಅರ್ಧ ಜನರನ್ನು ಅಲ್ಲಿಯೇ ಬಿಟ್ಟು ಮುಂದೆ ಸಂಚಾರ ಮಾಡುತ್ತದೆ.
ಕೆಲವು ಬಡವರಾದ ವೃದ್ಧರು ಏನೂ ಗೊತ್ತಾಗದೆ ಸಿಕ್ಕಿದ ಬಸ್ ಹತ್ತಿ ಕಂಗಾಲಾಗಿದ್ದೂ ಉಂಟು ಹಾಗೂ ಹಲವಾರು ವ್ಯಕ್ತಿಗಳ ಪಿಕ್ ಪಾಕೆಟ್ ಆಗಿದ್ದೂ ಇದೆ. ಇಂಥ ಗೊಂದಲ ಕಾರಿ ಸನ್ನಿವೇಶಕ್ಕೆ ಪ್ರಯಾಣಿಕರು ಸಿಲುಕಿ ದಾರಿ ಕಾಣದೆ ಪರದಾಡುವಂತಾಗುತ್ತದೆ. ಇದನ್ನು ಈಗಾಗಲೇ ಸಾರಿಗೆ ಅದಾಲತ್‌ನಲ್ಲಿ ತಿಳಿಸಿದ್ದರೂ ಇದುವರೆಗೂ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮವನ್ನು ಕೈಗೊಂಡಿರುವುದಿಲ್ಲ.
ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಪಂಪ್‌ವೆಲ್ ನಿಲ್ದಾಣಕ್ಕೆ ಕಳುಹಿಸಿ ಪ್ರಯಾಣಿಕರು ಎದುರಿಸುವ ಸಂಕ ಷ್ಟದ ಪರಿಸ್ಥಿತಿಯನ್ನು ಕಣ್ಣಾರೆ ಕಾಣ ಬೇಕಾಗಿ ವಿನಂತಿ. ದಯವಿಟ್ಟು ತಾವುಗಳು ತತ್‌ಕ್ಷಣವೇ ಇದರ ಬಗ್ಗೆ ಗಮನಹರಿಸಿ ಪ್ರಯಾ ಣಿಕರಿಗೆ ಆಗುವ ಹಿಂಸೆಯನ್ನು ತಪ್ಪಿಸಬೇಕಾಗಿ ಪತ್ರಿಕೆಯ ಮೂಲಕ ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿ ಕೊಳ್ಳುತ್ತೇನೆ.
ಮಹಮ್ಮದ್ ನಾಸಿರ್, ಮಂಗಳೂರು
Tagged with
nimminda
ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚಾಗಿ ನಡೆಯು ತ್ತಿರುವ ಕೆಲವು ಪ್ರಕರಣಗಳಲ್ಲಿ ಬಹುಮುಖ್ಯವಾಗಿ ಕಾಣುವುದು ಅಕ್ರಮ ದನಸಾಗಾಟ. ಅಕ್ರಮ ದನ ಸಾಗಾಟಕ್ಕೆ ಕಡಿವಾಣ ಹಾಕುವ ಪ್ರಯತ್ನಗಳನ್ನು ಪೊಲೀಸ್ ಇಲಾಖೆ ಮಾಡಿದರೂ ಅದು ಸರಿಯಾದ ರೀತಿಯಲ್ಲಿ ಉಪಯೋಗಕ್ಕೆ ಬರುತ್ತಿಲ್ಲ. ದುಡಿದು ಮಾಡುವ ಸಂಪತ್ತಿಗಿಂತಲೂ ಕಳ್ಳತನದಿಂದ ಆಗುವ ಸಂಪತ್ತು ಜಾಸ್ತಿ ಸುಖ ನೀಡುತ್ತದೆ ಎಂದುಕೊಂಡೇ ಈ ರೀತಿಯ ಕೆಲಸಕ್ಕೆ ಕಾಲಿಡುತ್ತಿದ್ದಾರೆ. ಪುರಾಣದಲ್ಲಿ ಶ್ರೀಕೃಷ್ಣ ದೇವರ ಬಾಲ್ಯದ ಕಥೆಗಳಿಂದಾಗಿ ಹಿಂದೂ ಸಮಾಜದಲ್ಲಿ ಗೋವುಗಳನ್ನು ದೇವರೆಂದು ಪೂಜಿಸು ತ್ತಾರೆ. ಆದರೆ ಅದೇ ಗೋಮಾತೆಯನ್ನು ಕೆಲವು ಗೋಮುಖ ವ್ಯಾಘ್ರರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ಈ ರೀತಿಯ ಅನ್ಯಾಯ, ಅನಾಚಾರ ಗಳಿಂದಾಗಿಯೇ ನಮ್ಮ ಇಡೀ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತಿದೆ.
ದುಡಿದು ತಿಂದು ನೆಮ್ಮದಿಯಿಂದ ಬದುಕುವ ಸುಖ ಯಾರಿಗೂ ಬೇಕಿಲ್ಲ. ಕಳ್ಳತನ, ಅನ್ಯಾಯದ ರೀತಿಯಲ್ಲಿ ಹಣವನ್ನು ಗಳಿಸುವ ಕೆಲಸ ಮಾಡಿದರೆ ಅದು ಯಾವತ್ತೂ ಶಾಶ್ವತ ಅಲ್ಲ. ಮನುಷ್ಯ ಎಷ್ಟು ವರ್ಷ ಬದುಕಿದ್ದಾನೆ ಅನ್ನುವುದು ಮುಖ್ಯವಲ್ಲ. ಅವನು ಹುಟ್ಟಿನಿಂದ ಸಾಯುವ ಮಧ್ಯದಲ್ಲಿ ಏನೆಲ್ಲ ಮಾಡಿದ್ದಾನೆ ಅನ್ನುವುದು ಮುಖ್ಯ. ಕಳ್ಳತನದಿಂದ ಮಾಡಿದ ಅಂತಸ್ತು ಶಾಶ್ವತವಲ್ಲ. ನಮಗೆ ಬೇರೆಯವರು ಬುದ್ಧಿ ಹೇಳುವು ದಕ್ಕಿಂತ ನಮ್ಮ ಸ್ವಂತ ತಿಳುವಳಿಕೆಯಿಂದ ಬದುಕಿದರೆ ಇಂತಹ ಘಟನೆಗಳು ಮರುಕಳಿಸದಂತೆ ಮಾಡ ಬಹುದು. ಅಕ್ರಮ ದನ ಸಾಗಾಟವನ್ನು ಪೊಲೀಸ್ ಇಲಾಖೆ ಕಾನೂನುಬದ್ಧವಾಗಿ ತಡೆಹಿಡಿದು ಸಾಮಾ ಜಿಕ ಶಾಂತಿ ಕಾಪಾಡಲಿ.
ಕಿರಣ್ ಬಿ.ಎಸ್., ಮಂಗಳೂರು
Tagged with
nimminda
ನಂತೂರು ಬಳಿಯ ಪದುವಾ ಜಂಕ್ಷನ್‌ನಲ್ಲಿ ಮುಂಜಾನೆ ಮತ್ತು ಸಂಜೆಯ ವೇಳೆ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡಬೇಕಾಗುತ್ತದೆ. ಈಗ ಶಾಲೆಯೂ ಆರಂಭಗೊಂಡಿರುವುದರಿಂದ ಇಲ್ಲಿ ಮಕ್ಕಳ ಸಂಖ್ಯೆ ಹೆಚ್ಚೇ ಇರುತ್ತದೆ. ರಾಷ್ಟ್ರೀಯ ಹೆದ್ದಾರಿಯಾದ್ದರಿಂದ ವಾಹನಗಳು ಅಪರಿಮಿತ ವೇಗದಲ್ಲಿ ಸಾಗುತ್ತವೆ. ಈ ವೇಳೆ ಅಪಘಾತ ಸಂಭವಿಸುವ ಭಯವೂ ಇದೆ. ಹೆದ್ದಾರಿಯ ಇಕ್ಕೆಲಗಳಲ್ಲಿ ರಸ್ತೆ ದಾಟಲು ನಿಲ್ಲುವ ಪಾದಚಾರಿಗಳು ಭಯ ಭೀತರಾಗಿಯೇ ಇರುತ್ತಾರೆ. ಈ ಬಗ್ಗೆ ಸಮೀಪದ ಠಾಣಾ ಪೊಲೀಸರು ಅವಶ್ಯ ಕ್ರಮಕೈಗೊಳ್ಳಬೇಕು. ಇಲ್ಲಿ ದಿನದ ನಿರ್ದಿಷ್ಟ ಅವಧಿಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಿ ಸುವ ಮೂಲಕ ಪಾದಚಾರಿಗಳು ಸುಗಮವಾಗಿ ರಸ್ತೆ ದಾಟು ವಂತೆ ನೋಡಿಕೊಳ್ಳಬೇಕಾಗಿ ವಿನಂತಿ.
ಯಶ್, ಕೆಪಿಟಿ
Tagged with
nimminda
ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲೆಯ ಸೂಡ ಗ್ರಾಮದ ಕಲ್ಲಿನ ಕೋರೆ ಯೊಂದರಲ್ಲಿ ಸ್ಫೋಟಕ ಒಡೆದು ಕಾರ್ಮಿಕ ಮಹಿಳೆಯರಿಬ್ಬರು ಸ್ಥಳದಲ್ಲೇ ಸಾವಿಗೀಡಾ ದರು. ಇವರ ಸಾವಿಗೆ ಕಲ್ಲಿನ ಕೋರೆಯ ಮಾಲಕನೇ ನೇರ ಹೊಣೆಯಾಗಿದ್ದಾನೆ. ಸ್ಫೋಟಕವನ್ನು ಎಲ್ಲೆಂದರಲ್ಲಿ ದಾಸ್ತಾನು ಇರಿಸುವುದು, ಕಾರ್ಮಿಕರನ್ನು ಸುರಕ್ಷತೆ, ಭದ್ರತೆ ಇಲ್ಲದ ಸ್ಥಳದಲ್ಲಿ ದುಡಿಸುವುದು ಮಾಲಕರಿಗೆ ಅಭ್ಯಾಸವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆಯೂ ಸೂಕ್ತ ಕ್ರಮ ಕೈಗೊಳ್ಳುವುದಿಲ್ಲ. ಮಾಲಕರನ್ನು ಬಂಧಿಸಿ ಬಿಡುಗಡೆ ಮಾಡುತ್ತಾರೆ. ಇದು ಅವರನ್ನು ಮತ್ತಷ್ಟು ಅಕ್ರಮ ಕೃತ್ಯಗಳಿಗೆ ಪ್ರೇರೇಪಿ ಸುತ್ತದೆ. ಸೂಡದಲ್ಲಿ ನಡೆದಿರುವಂಥ ಘಟನೆ ಈಗಾಗಲೇ ಉಡುಪಿ ಜಿಲ್ಲೆಯ ವಿವಿಧೆಡೆ ಕಲ್ಲಿನ ಕೋರೆಗಳಲ್ಲಿ ನಡೆದಿದೆ. ಇಂಥ ಘಟನೆ ಮರುಕಳಿಸದಂತೆ ಜಿಲ್ಲಾಧಿಕಾರಿ ಕಠಿಣ ಕ್ರಮ ಕೈಗೊಳ್ಳಲಿ.
ನಾಗರಿಕರು, ಸೂಡ
Tagged with
nimminda
ಸುವರ್ಣ ಚಾನೆಲ್‌ನಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತಿದ್ದ ‘ಕನ್ನಡದ ಕೋಟ್ಯಧಿಪತಿ’ ರಿಯಾಲಿಟಿ ಶೋ ಇದೀಗ ಕಾಮಿಡಿ ಶೋ ಆಗಿದೆ. ಇದಕ್ಕೆ ಕಾರಣ ಕಳೆದ ಒಂದು ವಾರದಿಂದ ಹಾಟ್‌ಸೀಟ್‌ನಲ್ಲಿ ಕುಳಿತು ಕೊಳ್ಳುತ್ತಿರುವ ವಿವಿಧ ಸೀರಿಯಲ್‌ಗಳ ಕಲಾ ವಿದರು. ಸುವರ್ಣ ಚಾನೆಲ್ ತನ್ನಲ್ಲಿ ಪ್ರಸಾರವಾಗುವ ಸೀರಿಯಲ್‌ಗಳ ಕಲಾವಿದರನ್ನು ಒಂದು ವಾರ ಕಾಲ ಆಟ ಆಡಿಸಲು ಮುಂದಾಗಿತ್ತು. ಇದಕ್ಕಾಗಿ ವಿವಿಧ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದ ಅನೇಕ ಮಂದಿ ನಟ-ನಟಿಯರು ಕೋಟ್ಯಧಿಪತಿಯಲ್ಲಿ ಸೇರಿದ್ದರು. ಇಲ್ಲಿ ಸೀರಿಯಲ್‌ಗಳನ್ನು ಇಷ್ಟಪಡುವ ಒಂದು ವರ್ಗಕ್ಕೆ ಮಾತ್ರ ಇವರ ಅಭಿನಯ, ಹಾಸ್ಯ ಮೆಚ್ಚುಗೆ ಯಾದರೆ, ಕಾರ್ಯಕ್ರಮವನ್ನು ಪ್ರಾರಂಭವಾದ ದಿನದಿಂದಲೂ ಗಂಭೀರವಾಗಿ ತೆಗೆದುಕೊಂಡಿದ್ದ ಕೋಟ್ಯಂತರ ವೀಕ್ಷಕರಿಗೆ ಬೋರ್ ಹೊಡೆಸಿದೆ. ಕನ್ನಡದ ಕೋಟ್ಯಧಿಪತಿಗೆ ತನ್ನದೇ ಆದ ಗತ್ತು, ಘನತೆ ಇದ್ದು, ಇದೆಲ್ಲ ಸೀರಿಯಲ್ ಕಲಾವಿದರ ಬೇಕಾಬಿಟ್ಟಿ ನಟನೆಯಿಂದ ಹಾಳಾಗಿದೆ ಎನ್ನುವುದು ನನ್ನ ಅನಿಸಿಕೆ. ರಿಯಾಲಿಟಿ ಶೋಗಳನ್ನು ಗಂಭೀರ ವಾಗಿ ವೀಕ್ಷಿಸುವ ಪ್ರೇಕ್ಷಕ ವರ್ಗಕ್ಕೆ ಇನ್ನಾದರೂ ಬೇಸರವಾಗದ ರೀತಿಯಲ್ಲಿ ಕಾರ್ಯಕ್ರಮ ಮೂಡಿ ಬರಲಿ ಎಂದು ಆಶಿಸುತ್ತೇನೆ.
ಸುನೀತಾ ರಾಮಕೃಷ್ಣ, ಯೆಯ್ಯಾಡಿ
Tagged with
nimminda
ಮೊನ್ನೆ ಓರ್ವ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ನನ್ನಲ್ಲಿ ಚಿಲ್ಲರೆಗಾಗಿ ಜಗಳವಾಡಿದ್ದಾನೆ. ಟಿಕೆಟ್ ದರಕ್ಕೆ ಸೂಕ್ತ ಚಿಲ್ಲರೆ ಇರದಿದ್ದರೆ ೫೦ ಪೈಸೆ ಯನ್ನೂ ಬಿಡದ ಕಂಡಕ್ಟರ್‌ಗಳು ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ. ಇವರಿಗಿಂತ ಖಾಸಗಿ ಬಸ್ ಕಂಡಕ್ಟರ್‌ಗಳೇ ವಾಸಿ.
ಓರ್ವ ಪ್ರಯಾಣಿಕ, ಕಲ್ಲಡ್ಕ
Tagged with
nimminda
ಇಂದು ಎಲ್ಲಾ ಬಗೆಯ ತರ ಕಾರಿಗಳನ್ನೂ ವಿಷಯುಕ್ತ ರಾಸಾ ಯನಿಕವನ್ನು ಬಳಸಿಯೇ ಬೆಳೆಯ ಲಾಗುತ್ತದೆ. ತರಕಾರಿಯ ಬೀಜ ಬಿತ್ತುವಲ್ಲಿಂದ ಹಿಡಿದು ಕಟಾವು ಮಾಡುವವರೆಗೆ ಕೀಟನಾಶಕವನ್ನು ಯಥೇಚ್ಫವಾಗಿ ಬಳಸಿದರೆ, ಸಂರಕ್ಷಣೆ ಗೂ ಕೆಮಿಕಲ್ ಬಳಕೆಯಾಗುತ್ತದೆ. ಹೀಗಿರುವಾಗ ಪೊಟ್ಯಾಶಿಯಂ, ಯೂರಿಯಾ, ಎಂಡೋಸಲ್ಫಾನ್ ನಂಥ ವಿಷಯುಕ್ತ ರಾಸಾಯನಿಕ ನಮಗೆ ತಿಳಿಯದೆ ನಮ್ಮ ದೇಹವನ್ನು ಸೇರುತ್ತವೆ. ಇದರಿಂದ ಕ್ಯಾನ್ಸರ್‌ನಂಥ ಮಾರಕ ರೋಗಗಳು ಬಲುಬೇಗನೆ ನಮ್ಮ ದೇಹವನ್ನು ಆವರಿಸಿಕೊಳ್ಳು ತ್ತದೆ. ತರಕಾರಿ ಬಳಕೆಯ ಬಗ್ಗೆ ಸರಿ ಯಾಗಿ ತಿಳಿದುಕೊಳ್ಳದೇ ಇದ್ದರೆ ನಮ್ಮ ದೇಹ ಕೆಲವೇ ಸಮಯದಲ್ಲಿ ಕಾಯಿಲೆಗಳ ಗೂಡಾಗುವುದರಲ್ಲಿ ಸಂಶಯವಿಲ್ಲ. ಆದಷ್ಟು ಮನೆಯಲ್ಲೇ ಬೆಳೆಸುವ ಸಾವಯವ ತರಕಾರಿ ಬಳಕೆಗೆ ಒತ್ತು ಕೊಡೋಣ.
ನಿರಂಜನ್, ಕಾರ್ಕ
Tagged with
nimminda
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಿ ದಶಮಾನೋತ್ಸವ ಸಮಾರಂಭ ಮತ್ತು ಸ್ವಸಹಾಯ ಸಂಘಗಳ ಲಾಭಾಂಶ ವಿತರಣೆ ಕಾರ‍್ಯಕ್ರಮವು ಶುಕ್ರವಾರ (ಜೂ. ೨೨) ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆಯಿತು. ಈ ವೇಳೆ ಧರ್ಮಸ್ಥಳದ ಧರ್ಮಾದಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
Tagged with
briefs,
feature,
lnews