ಮಣಿಪಾಲ: ಹಿರೇಬೆಟ್ಟು ಕಂಚಿನಬೈಲಿನಲ್ಲಿ ನಿರ್ಮಾಣ ಹಂತದಲ್ಲಿರುವ ಟಿಸಿಸಿಸಿಎಲ್ ಕಂಪೆನಿಯ ಸ್ಥಾಪನೆಯಿಂದ ಆಗುವ ತೊಂದರೆಗಳನ್ನು ವಿರೋಧಿಸಿ ಇಲ್ಲಿನ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಕಂಪೆನಿ ಸ್ಥಾಪನೆಯಿಂದ ಹಿರೇಬೆಟ್ಟುವಿನಲ್ಲಿರುವ ಕೃಷಿ ಭೂಮಿಗೆ ಸಿಮೆಂಟಿನ ನೀರು ಹರಿಯುತ್ತದೆ. ಭತ್ತ, ತೆಂಗು, ಅಡಿಕೆ ಧೂಳಿನಿಂದ ತುಂಬಿ ಕೃಷಿ ಹಾನಿಯಾಗುತ್ತತ್ತೀ ನಡುವೆ ಹೈನುಗಾರಿಕೆಗೆ ಸಂಬಂಧಿಸಿದ ಹಸಿರು ಹುಲ್ಲು ಸಂಪೂರ್ಣವಾಗಿ ನಾಶವಾಗುತ್ತಿದೆ. ಸುಮಾರು ೫೦೦ ಎಕ್ರೆಗಿಂತೂ ಹೆಚ್ಚಿನ ಭೂಮಿ ವಾಯುಮಾಲಿನ್ಯಕ್ಕೆ ಒಳಗಾಗುತ್ತಿದೆ. ಸಿಮೆಂಟ್ ಮಿಶ್ರಿತ ನೀರಿನಿಂದ ಜಾನುವಾರುಗಳಿಗೂ ತೊಂದರೆಯಾಗಲಿದೆ. ಪ್ರದೇಶದಲ್ಲಿ ಐದು ಬೋರ್‌ವೆಲ್ ಅಳವಡಿಸಿರುವುದರಿಂದ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಪಂಚಾಯತ್ ವ್ಯಾಪ್ತಿಗೊಳಪಟ್ಟ ಕಿರಿದಾದ ರಸ್ತೆಯಲ್ಲಿ ಘನವಾಹನಗಳು ಸಂಚರಿಸುವುದರಿಂದ ಅಪಘಾತ ಸಂಭವಿಸಲಿದ್ದು, ರಸ್ತೆಯೂ ಸಂಪೂರ್ಣವಾಗಿ ಹದಗೆಟ್ಟುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹಿರಿಯಬೆಟ್ಟಿನ ನೆಲ್ಲಿಕಟ್ಟೆ ಆರ್ಯದುರ್ಗ ಸಭಾಭವನದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಇದಕ್ಕೂ ಮೊದಲು ಸ್ಥಳೀಯರು ಕಂಪೆನಿ ಸ್ಥಾಪಿಸಲು ಉದ್ದೇಶಿಸಿರುವ ಪ್ರದೇಶಕ್ಕೆ ಭೇಟಿ ಸ್ಥಗಿತಗೊಳಿಸುವಂತೆ ಅಗ್ರಹಿಸಿದರು.
Tagged with
lnews,
udupi
ಮಂಗಳೂರು: ಭೂಗತ ಲೋಕದಲ್ಲಿ ಗುರುತಿಕೊಳ್ಳುವ ಮೂಲಕ ಪಾಸ್ ಪೋರ್ಟ್ ರದ್ದು ಗೊಂಡು ಕಳೆದ ಹತ್ತು ವರ್ಷಗಳಿಂದ ಭಾರತ ದಲ್ಲೇ ಇದ್ದ ಮುತ್ತಪ್ಪ ರೈ ನಿನ್ನೆ ಬೆಳಿಗ್ಗೆ ಧಿಡೀರನೆ ವಿದೇಶಕ್ಕೆ ಪ್ರಯಾಣಿಸಿದ್ದಾರೆ.
ಹಿಂದೆ ಭೂಗತ ಲೋಕದಲ್ಲಿ ಗುರುತಿಸಿ ಕೊಂಡಿದ್ದ ಮುತ್ತಪ್ಪ ರೈ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆ ಯಲ್ಲಿ ೧೦ ವರ್ಷಗಳ ಹಿಂದೆಯೇ ಅವರ ಪಾಸ್‌ಪೋರ್ಟನ್ನು ಕೇಂದ್ರ ಸರಕಾರ ರದ್ದು ಪಡಿಸಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಭೂಗತ ಚಟುವಟಿಕೆಗಳಿಂದ ಹೊರ ಬಂದಿದ್ದ ಅವರು ಜಯ ಕರ್ನಾಟಕ ಎನ್ನುವ ಕನ್ನಡಪರ ಸಂಘಟನೆಯನ್ನು ಸ್ಥಾಪಿಸಿ ಸಾಮಾಜಿಕ ಹಾಗೂ ಕನ್ನಡಪರ ಚಟುವಟಿಕೆಗಳಲ್ಲಿ ಗುರುತಿಸಿ ಕೊಂಡಿದ್ದರು. ಇದೇ ವೇಳೆ ರೈ ಅವರ ವಿರುದ್ಧ ದೇಶಾದ್ಯಂತ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ವಿಚಾರಣೆ ನಡೆದು ನ್ಯಾಯಾಲಯದಿಂದ ರದ್ದುಗೊಂಡಿತ್ತು. ಎರಡು ವರ್ಷಗಳ ಹಿಂದೆ ಅವರು ಮತ್ತೆ ಪಾಸ್‌ಪೋರ್ಟ್‌ಗಾಗಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ನಿನ್ನೆ ಬೆಳಿಗ್ಗೆ ಅವರು ಧಿಡೀರನೆ ವಿದೇಶದ ವಿಮಾನ ಹತ್ತಿದ್ದು, ಮೂರು ದಿನಗಳ ಹಿಂದೆ ಅವರಿಗೆ ಪಾಸ್ ಪೋರ್ಟ್ ನೀಡಲಾಗಿತ್ತು ಎಂದು ಹೇಳಲಾಗಿದೆ.
ಮುತ್ತಪ್ಪ ರೈ ಎರಡು ವರ್ಷಗಳ ಹಿಂದೆ ಅವರಿಗೆ ಚೆನ್ನೈನಲ್ಲಿ ಶಸ್ರ್ತಚಿಕಿತ್ಸೆ ನಡೆಸಲಾಗಿದ್ದು, ಇದನ್ನು ಪರೀಕ್ಷಿಸಬೇಕು ಎಂದು ಅಲ್ಲಿನ ವೈದ್ಯರು ಸೂಚನೆ ಯನ್ನೂ ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪಾಸ್‌ಪೋರ್ಟ್ ಗಾಗಿ ಕೇಂದ್ರಕ್ಕೆ ಮನವಿ ಮಾಡಿದ್ದು ಮೂರು ದಿನಗಳ ಹಿಂದೆ ಪಾಸ್‌ಪೋರ್ಟ್ ಲಭಿಸಿದ್ದರಿಂದ ತಕ್ಷಣವೇ ವಿದೇಶಕ್ಕೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ.
ಆದರೆ ಅವರಿಗೆ ಜೀವಭಯ ಇರುವ ಕಾರಣ ಯಾವ ದೇಶಕ್ಕೆ ಹೋಗಿರ ಬಹುದು ಎನ್ನುವ ಬಗ್ಗೆ ಖಚಿತ ಮಾಹಿತಿ ನೀಡಲಾಗಿಲ್ಲ. ಆದರೂ ಆರೋಗ್ಯ ತಪಾಸಣೆಯ ಹಿನ್ನೆಲೆಯಲ್ಲಿ ಲಂಡನ್‌ಗೆ ಪ್ರಯಾಣಿಸರಬಹುದು ಎಂದು ಹೇಳಲಾಗಿದೆ. ಕೆಲವು ದಿನಗಳಲ್ಲೇ ಅವರು ವಾಪಸ್ ಭಾರತಕ್ಕೆ ಬರುವ ನಿರೀಕ್ಷೆಯಿದೆ.
Tagged with
dk,
lnews,
muttappa
ಪುತ್ತೂರು: ಕಕ್ಕೂರು ಕೊಲೆ ಪ್ರಕರ ಣಕ್ಕೆ ಸಂಬಂಧಿಸಿ ಶಂಕಿತ ಆರೋಪಿ ವೆಂಕಟರಮಣ ಭಟ್ ಸಹೋದರ ಮುಂಬೈನಲ್ಲಿರುವ ನಾರಾಯಣ ಭಟ್ ಅವರನ್ನು ಪುತ್ತೂರಿಗೆ ಕರೆಸಿದ್ದು, ಎರಡನೇ ಸುತ್ತಿನ ಮರುತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ಸುಳ್ಯ ತಾಲೂಕಿನ ಉಬರಡ್ಕ ಶಾಲೆ ಯಲ್ಲಿ ಶಿಕ್ಷಕಿಯಾಗಿದ್ದ ಕೊಲೆಗೀಡಾದ ಸಂಧ್ಯಾ.ವಿ.ಭಟ್ ಅವರು ಅಲ್ಲೇ ತನ್ನ ಹಿರಿಯ ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದು, ವಾರಕ್ಕೊಮ್ಮೆ ಕಕ್ಕೂರಿನ ಗಂಡನ ಮನೆಗೆ ಬಂದು ಹೋಗುತ್ತಿದ್ದರು. ಹತ್ಯೆಯಾಗುವ ಕೆಲ ದಿನಗಳ ಮುನ್ನ ನಡೆದಿದ್ದ ಕೌನ್ಸಿಲಿಂಗ್ ನಲ್ಲಿ ಸಂಧ್ಯಾ ಅವರಿಗೆ ಪುತ್ತೂರು ತಾಲೂಕಿನ ಕುಂಟಿಕಾನ ಹಿ.ಪ್ರಾ. ಶಾಲೆಗೆ ವರ್ಗಾವಣೆ ನಡೆದಿತ್ತು. ಇನ್ನಷ್ಟೇ ಬಾಡಿಗೆ ರೂಮನ್ನು ಖಾಲಿ ಮಾಡುವವರಿದ್ದರು. ಅಷ್ಟರಲ್ಲಿ ಕೊಲೆ ನಡೆದಿತ್ತು.
ಇದೀಗ ವೆಂಕಟರಮಣ ಭಟ್ ಸಹೋದರ ನಾರಾಯಣ ಭಟ್ ಅವರನ್ನು ಉಬರಡ್ಕದ ರೂಂ ಹಾಗೂ ಕಕ್ಕೂರಿನ ಮನೆಯಲ್ಲಿರುವ ಕೆಲ ಸೊತ್ತುಗಳನ್ನು ಖಾಲಿ ಮಾಡಲು ಪೊಲೀಸರು ತಿಳಿಸಿರುವುದಾಗಿ ತಿಳಿದು ಬಂದಿದೆ. ಮನೆಯ ಕೀಲಿ ಕೈಯನ್ನು ವೆಂಕಟರಮಣ ಭಟ್ ಕೆಲಸಕ್ಕೆ ಇಟ್ಟುಕೊಂಡಿದ್ದ ವಿಮಲ ನಾಯ್ಕ್ ಅವರಲ್ಲಿದ್ದು, ನಾರಾಯಣ ಭಟ್ ಮನೆಗೆ ಬಂದಲ್ಲಿ ಕೀಲಿ ಕೈಯನ್ನು ಅವರಿಗೆ ನೀಡಲು ಪೊಲೀಸರು ನಿರ್ದೇಶಿಸಿ ರುವುದಾಗಿ ತಿಳಿದುಬಂದಿದೆ.
Tagged with
dk,
lnews
ಮೂಡಬಿದಿರೆ: ಪಡುಮಾರ್ನಾಟು ಗ್ರಾ.ಪಂ. ವ್ಯಾಪ್ತಿಯ ಕೆಂಪುಲು ರಸ್ತೆ ಸಂಚಾರ ಯೋಗ್ಯ ಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ಪ್ರತಿ ಭಟನೆ ನಡೆಸಿದರು. ಕಳೆದ ಹಲವಾರು ವರ್ಷಗಳಿಂದ ಕೆಂಪುಲಿ ರಸ್ತೆ ನಿವಾಸಿ ಗಳು ರಸ್ತೆ ದುರಸ್ತಿ ಮಾಡಿಕೊಡುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ವಿನಂತಿ ಮಾಡಿಕೊಂಡಿದ್ದರು. ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ಪ್ರತಿಭಟನೆ ಅನಿವಾರ್ಯ ವಾಯಿತು ಎಂದು ಗ್ರಾಮಸ್ಥರ ಪರವಾಗಿ ಶಿವರಾಮ ಜೆ. ಶೆಟ್ಟಿ ಹೇಳಿದರು. ಜನ ಸಂಚಾರಕ್ಕೆ ಅಡೆತಡೆಯಾಗಿದ್ದು ಕೂಡಲೇ ಪಂಚಾಯತ್ ರಸ್ತೆ ದುರಸ್ತಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದ ವರು ಇದೇ ಸಂದರ್ಭ ಹೇಳಿದರು.
ಪ್ರತಿಭಟನೆಯ ನೇತೃತ್ವವನ್ನು ಗ್ರಾಮಸ್ಥರಾದ ಶಿವರಾಮ ಜೆ. ಶೆಟ್ಟಿ ಹಾಗೂ ಬಾಲಕೃಷ್ಣ ಸಾಮಾನಿ ವಹಿಸಿದ್ದರು.
Tagged with
dk,
lnews
ಪುತ್ತೂರು: ಪುತ್ತೂರಿನ ಬೈಪಾಸ್ ನಲ್ಲಿರುವ ಮಕ್ಕಳ ಮಂಟಪದ ಬಳಿ ವಿನ್ಯಾಸ್ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಸೇರಿದ ತ್ಯಾಜ್ಯವನ್ನು ಲಾರಿಯೊಂದರಲ್ಲಿ ತಂದು ಹಾಕುತ್ತಿರು ವುದನ್ನು ಪುರಸಭೆಯ ಅಧಿಕಾರಿಗಳು ಗುರು ವಾರ ಪತ್ತೆ ಮಾಡಿ ಅವರಿಂದಲೇ ತ್ಯಾಜ್ಯ ತೆರವುಗೊಳಿಸಿದ ಘಟನೆ ನಡೆದಿದೆ.
ಅನಧಿಕೃತವಾಗಿ ತ್ಯಾಜ್ಯ ತಂದು ಹಾಕು ತ್ತಿದ್ದ ಕಾರಣ ಪರಿಸರದಲ್ಲಿ ದುರ್ವಾಸನೆ ಬೀರಲಾರಂಭಿಸಿತ್ತು. ಇದ ರಿಂದ ನೊಂದ ಅಲ್ಲಿನ ಸ್ಥಳೀಯರು ಪುರಸಭೆಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಪುರಸಭಾ ಮುಖ್ಯಾ ಧಿಕಾರಿ ಸುಧಾಕರ್ ಅವರ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳ ತಂಡ ಗುರು ವಾರ ಪತ್ತೆ ಕಾರ್ಯಾಚರಣೆ ನಡೆಸಿದೆ. ವಿನ್ಯಾಸ್ ಕನ್‌ಸ್ಟ್ರಕ್ಷನ್ ಸಂಸ್ಥೆಯವರು ಗುರುವಾರ ಸಂಸ್ಥೆಗೆ ಸೇರಿದ ತ್ಯಾಜ್ಯ ಗಳನ್ನು ಲಾರಿಯೊಂದರಲ್ಲಿ ತಂದು ಸುರಿಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮುಖ್ಯಾಧಿಕಾರಿ ಎಚ್ಚರಿಕೆ
ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಕಟ್ಟಡ ಕಾಮಗಾರಿ ನಿರ್ವ ಹಿಸುವ ಕನ್‌ಸ್ಟ್ರಕ್ಷನ್‌ದಾರರು ಇಲ್ಲವೇ ಇಂಜಿನಿಯರುಗಳು ಕಟ್ಟಡದ ತ್ಯಾಜ್ಯ ವನ್ನು ಎಲ್ಲಿ ಹಾಕಬೇಕೆಂಬ ಬಗ್ಗೆ ಮೊದಲೇ ಪುರಸಭೆಗೆ ಮನವಿ ಸಲ್ಲಿಸಿ ದರೆ ನಾವೇ ಅವರಿಗೆ ಜಾಗ ತೋರಿಸು ತ್ತೇವೆ ಎಂದು ಪುರಸಭಾ ಮುಖ್ಯಾ ಧಿಕಾರಿಯವರು ತಿಳಿಸಿದ್ದಾರೆ.
ಪುರಸಭೆಯ ಅನುಮತಿ ಇಲ್ಲದೆ ತ್ಯಾಜ್ಯವನ್ನು ಬೇಕಾಬಿಟ್ಟಿಯಾಗಿ ಸಿಕ್ಕಿದಲ್ಲೆಲ್ಲಾ ತಂದು ಹಾಕುವವರ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗು ವುದು ಮಾತ್ರವಲ್ಲದೆ ತ್ಯಾಜ್ಯ ತಂದು ಹಾಕಲು ಬಳಸುವ ಲಾರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗು ವುದು ಎಂದು ಎಚ್ಚರಿಸಿದ್ದಾರೆ.
Tagged with
dk,
lnews
ಮಂಗಳೂರು: ದ.ಕ.ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿ ಗಳಿಗಾಗಿ ಹೆಚ್ಚುವರಿ ವಸತಿ ನಿಲಯ ಗಳನ್ನು ಮಂಜೂರು ಮಡುವಂತೆ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ನಿಯೋಗ ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ದ.ಕ.ಜಿಲ್ಲೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕಾಗಿ ಹೊರಜಿಲ್ಲೆಗಳ ಬಡ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ಅವರಿಗೆ ಉಳಿದುಕೊಳ್ಳಲು ಸರಕಾರಿ ಹಾಸ್ಟೆಲ್‌ಗಳ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಹಾಸ್ಟೆಲ್ ನವರು ಮೆಸ್ ಹೆಸರಲ್ಲಿ ಬಡ ವಿದ್ಯಾರ್ಥಿಗಳಿಂದ ದುಬಾರಿ ಹಣವನ್ನು ಪಡೆದುಕೊಳ್ಳುತ್ತಿರುವ ಕಾರಣ ವಿದ್ಯಾಭ್ಯಾಸ ಅರ್ಧಕ್ಕೇ ಮೊಟಕುಗೊಳ್ಳುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Tagged with
dk,
lnews
ಮಂಗಳೂರು: ರಾಜ್ಯಾಡಳಿತ ಕೈಗೆತೆಗೆದುಕೊಂಡ ಬಿಜೆಪಿಯ ಆಡಳಿತ ಅವಧಿಯಲ್ಲಿ ಪಕ್ಷದ ನಾಯಕರು ಸಾಲು ಸಾಲಾಗಿ ಜೈಲು ಸೇರಿದ್ದಾಗಿದೆ. ಇನ್ನು ಉಳಿದಿರುವುದು ಕಾರ್ಯಕರ್ತರು ಅವರಿಗೂ ಜೈಲಿನ ರುಚಿ ತೋರಿಸಲು ಬಿಜೆಪಿ ಜೈಲ್ ಭರೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಡಾ ವ್ಯಂಗ್ಯವಾಡಿದ್ದಾರೆ.
ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಜೈಲ್ ಭರೋ ಕಾರ್ಯಕ್ರಮವನ್ನು ಟೀಕಿಸಿದ ಐವನ್ ಬೆಲೆಯ ಏರಿಕೆಯನ್ನು ಪ್ರಶ್ನಿಸುವ ನೈತಿಕತೆ ಇವರಿಗೆ ಬಿಜೆಪಿಗಿಲ್ಲ ದೇಶದಲ್ಲಿ ಎನ್‌ಡಿಎ ಅಧಿಕಾರದಲ್ಲಿರುವಾಗ ಆರು ಬಾರಿ ಪೆಟ್ರೋಲ್ ದರ ಏರಿಸಲಾಗಿದೆ. ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಪೆಟ್ರೋಲ್ ಮೇಲೆ ರಾಜ್ಯ ಸರಕಾರ ವಿಧಿಸಿರುವ ತೆರಿಗೆ ಕಡಿತ ಮಾಡಬಹು ದಿತ್ತು ಎಂದರು.
ಪೆಟ್ರೋಲ್ ದರ ಏರಿಕೆ ಆಂತಾ ರಾಷ್ಟ್ರೀಯ ಮಾರುಕಟ್ಟೆಯ ಏರಿಳಿತ ವನ್ನವಲಂಬಿಸಿದೆ ಆದರೆ ರಾಜ್ಯದಲ್ಲಿ ಉತ್ಪಾದಿಸುವ ವಿದ್ಯುತ್ ದರವನ್ನು ಯಾವ ಮುಲಾಜೂ ಇಲ್ಲದೆ ಬಿಜೆಪಿ ಏರಿಸಿದೆ ಅದೇ ರೀತಿ ನೀರಿನ ದರವನ್ನು ೬೦ರಿಂದ ೧೦೦ ರೂ.ಗೆ ಏರಿಸಿ ದ್ದಾರೆ. ಇದೀಗ ಪ್ರಚಾರದ ಅಮಲೇರಿಸಿಕೊಂಡು ಜೈಲ್ ಭರೋ ಕಾರ್ಯಕ್ರಮ ಹಮ್ಮಿಕೊಂ ಡಿದ್ದಾರೆ ಎಂದು ಐವನ್ ಪತ್ರಿಕಾಗೋಷ್ಟಿ ಯಲ್ಲಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಕೆ. ಅಶ್ರಫ್, ಡಿಸಿಸಿ ಕಾರ್ಯದರ್ಶಿ ಟಿ.ಕೆ. ಸುಧೀರ್, ಮಂಗಳೂರು ಯುವಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವಾ ಮತ್ತಿತರರಿದ್ದರು.
Tagged with
dk,
ivan,
lnews
ಮಂಗಳೂರು: ವಿವಾದಕ್ಕೆ ಕಾರಣ ವಾಗಿದ್ದ ತೊಕ್ಕೊಟ್ಟು ಬಸ್ ತಂಗುದಾಣದ ನೂತನ ರಿಕ್ಷಾ ಪಾರ್ಕ್‌ಗೆ ನಿನ್ನೆ ನಡೆದ ಸಭೆಯ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ.
ಪುರಸಭಾ ನಿರ್ಣಯದನ್ವಯ ಉಳ್ಳಾಲ ಠಾಣೆಗೆ ತೆರವುಗೊಳಿಸುವಂತೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀ ಸರು ಪಾರ್ಕ್ ತೆರವುಗೊಳಿಸಿದ್ದರು. ಇದನ್ನು ಖಂಡಿಸಿ ರಿಕ್ಷಾ ಚಾಲಕರು ಠಾಣೆಗೆ ಮುತ್ತಿಗೆ ಹಾಕಿದ್ದು ಬಿ.ಜೆ.ಪಿ. ಮುಖಂಡರು ಹಾಗೂ ಪುರಸಭಾಧ್ಯಕ್ಷರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸ ಲಾಗಿತ್ತು. ಗುರುವಾರ ತೊಕ್ಕೊಟ್ಟಿನಲ್ಲಿ ರುವ ಖಾಸಗಿ ಸಭಾಂಗಣದಲ್ಲಿ ಎರ ಡನೇ ಬಾರಿಗೆ ಬಿ.ಜೆ.ಪಿ. ಮುಖಂಡರು, ಎರಡು ನಿಲ್ದಾಣಗಳ ರಿಕ್ಷಾ ಚಾಲಕರು, ಪೊಲೀಸರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಒಂದು ತಿಂಗಳ ಮಟ್ಟಿಗೆ ನಿಲ್ದಾಣ ವನ್ನು ಮುಂದುವರಿಸುವ ತೀರ್ಮಾನ ವನ್ನು ಕೈಗೊಂಡ ಇನ್ಸ್‌ಪೆಕ್ಟರ್, ಸದ್ಯಕ್ಕೆ ಐದು ರಿಕ್ಷಾಗಳನ್ನು ಮಾತ್ರವೇ ಪಾರ್ಕ್ ಮಾಡುವಂತೆ ಚಾಲಕರಿಗೆ ಸೂಚನೆ ನೀಡಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮುಂದೆ ತಂಗುದಾಣ ವನ್ನು ಶಾಶ್ವತಗೊಳಿಸಲು ಪ್ರಯತ್ನಿಸುವು ದಾಗಿ ಇದೇ ಸಂದರ್ಭ ಅವರು ಚಾಲಕ ರಿಗೆ ಭರವಸೆ ನೀಡಿದರು. ಈ ಅವಧಿ ಯಲ್ಲಿ ಚಾಲಕರ ವಿರುದ್ಧ ಸಾರ್ವ ಜನಿಕರಿಂದ ದೂರುಗಳು ಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಲ್ಲದೆ ಪಾರ್ಕ್ ತೆರವುಗೊಳಿಸುವುದಾಗಿ ಇದೇ ವೇಳೆ ಅವರು ಎಚ್ಚರಿಕೆಯನ್ನೂ ನೀಡಿದರು.
Tagged with
dk,
lnews
ಮಂಜೇಶ್ವರ: ಇದು ಕಂಬಳ ಗದ್ದೆಯೆಂದುಕೊಂಡಿರಾ? ಖಂಡಿತಾ ಅಲ್ಲ ಸ್ವಾಮಿ. ಇದು ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯ ಸಿಟಿ ಬಸ್ ನಿಲ್ದಾಣ. ಮೊನ್ನೆಯಿಂದ ಸುರಿ ಯುತ್ತಿರುವ ಧಾರಾಕಾರ ಮಳೆ ಯಿಂದಾಗಿ ಕಲಕಂಬಳವಾಗಿ ಮಾರ್ಪಾಟ್ಟು ಪ್ರಯಾಣಿಕರಿಗೆ ಮಾತ್ರ ಚಿತ್ರಹಿಂಸೆಯಾಗಿ ಪರಿಣಮಿಸಿದೆ.
ಬೇಸಿಗೆ ಕಾಲದಲ್ಲಿ ಧೂಳಿನಿಂದ ಅವೃತವಾಗಿದ್ದ ಈ ಬಸ್ಸು ನಿಲ್ದಾಣ ಮಳೆಗಾಲ ಅರಂಭವಾದಾಗಿನಿಂದ ಕೆಸರಿನಿಂದ ಕೂಡಿದೆ. ಮಂಗಳೂರು ತಲಪಾಡಿ ಮಧ್ಯೆ ಸಂಚರಿಸುವ ಸಿಟಿ ಬಸ್ಸುಗಳು ಮತ್ತು ಕಾಸರಗೋಡಿನಿಂದ ತಲಪಾಡಿವರೆಗೆ ಸಂಚರಿಸುವ ಬಸ್ಸುಗಳು ಇಲ್ಲಿ ಬಂದು ಜನರನ್ನು ಇಳಿಸಿ ಹೋಗುತ್ತಿವೆ. ದಿನಂಪ್ರತಿ ವಿದ್ಯಾರ್ಥಿ ಗಳ ಸಹಿತ ನೂರಾರು ಪ್ರಯಾಣಿಕರು ಕೆಸರಿನಲ್ಲಿ ನಡೆದಾಡಲಾಗದೆ ತೊಂದರೆ ಅನುಭವಿಸುವಂತಾಗಿದೆ. ಈ ಕೆಸರಿನಲ್ಲಿ ನಡೆದಾಡುವಾಗ ಕಾಲು ಜಾರಿ ಬಿದ್ದು ಅಥವಾ ಇತರ ವಾಹನಗಳಿಂದ ಎರಚಲ್ಪಟ್ಟ್ಟ ಕೆಸರಿನ ಅಭಿಷೇಕವಾಗಿ ಮನೆಕಡೆ ಹಿಡಿಶಾಪ ಹಾಕುತ್ತ ಹೋಗು ತ್ತಿರುವುದು ಸರ್ವೇ ಸಾಮಾನ್ಯವಾಗಿ ಹೋಗಿದೆ. ಪ್ರತಿ ವರ್ಷವು ಇಲ್ಲಿನ ಪರಿಸ್ಥಿತಿ ಇದೆ ತೆರನಾಗಿದ್ದರೂ ಈ ಬಾರಿ ಹೆದ್ದಾರಿ ಚತುಷ್ಪದ ಕಾಮಾಗಾರಿ ನಡೆಯುತ್ತಿರುವುದರಿಂದಾಗಿ ಹೆದ್ದಾರಿ ಬದಿಗೆ ಮಣ್ಣು ಹಾಕುತ್ತಿದ್ದಾರೆ. ಇದರಿಂದ ಸಮಸ್ಯೆ ಮತ್ತಷ್ಟು ಜಟಿಲ ಗೊಳ್ಳಲು ಕಾರಣವಾಗಿದೆ. ಇನ್ನಾ ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳ ಬೇಕೆಂದು ನಾಗರಿಕರು ಒಕ್ಕೊರಳಿ ನಿಂದ ಆಗ್ರಹಿಸಿದ್ದಾರೆ.
Tagged with
kasaragod,
lnews
ಭಾರತ್ ನಿರ್ಮಾಣ ಸೇವಕರ ಕಾರ್ಯಸಾಧನೆ
ಕಾರ್ಕಳ: ಜನಪ್ರತಿನಿಧಿಗಳ ಬೊಗಳೆ ಆಶ್ವಾಸನೆಗೆ ಭಾರತ್ ನಿರ್ಮಾಣ ಸೇವಕರು ತಕ್ಕ ಉತ್ತರ ನೀಡಿ ಸ್ವಯಂ ಪ್ರೇರಿತರಾಗಿ ೮೦ ಅಡಿ ಉದ್ದದ ಕಾಲುಸೇತುವೆಯೊಂದನ್ನು ನಕ್ಸಲ್ ಪೀಡಿತ ಪ್ರದೇಶವಾಗಿರುವ ಮಾಳಗ್ರಾಮದಲ್ಲಿ ನಿರ್ಮಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸೂರೆಂಟೆ ಪ್ರದೇಶದ ಜನರು ಹಲವು ಜನಪ್ರತಿನಿಧಿಗಳಿಗೆ ಮೊರೆಹೋಗಿ ಪರಿಸರದಲ್ಲಿ ಹಾದು ಹೋಗಿರುವ ಹೊಳೆಗೆ ಕಾಲು ಸೇತುವೆ ನಿರ್ಮಿಸು ವಂತೆ ಕೇಳಿಕೊಂಡಿದ್ದರು. ಜನಪ್ರತಿನಿಧಿ ಗಳು ನೀಡಿದ ಆಶ್ವಾಸನೆಗಳು ಕೇವಲ ಬೊಗಳೆಯಾಗಿರುವುದರಿಂದಾಗಿ ಕಾಲುಸೇತುವೆ ನಿರ್ಮಾಣಗೊಂಡಿ ರಲಿಲ್ಲ.
ಮಾಳ ಗ್ರಾಮಕ್ಕೆ ನಿಯುಕ್ತಿಗೊಂ ಡಿರುವ ೧೫ ಮಂದಿ ಭಾರತ್ ನಿರ್ಮಾಣ ಸೇವಕರು ಬಹುವರ್ಷಗಳ ಬೇಡಿಕೆಗೆ ಅನುಗುಣವಾಗಿ ತಾತ್ಕಾಲಿಕ ಮರದ ಸೇತುವೆ ನಿರ್ಮಿಸಿದ್ದಾರೆ. ದಾನಿಗಳು ನೀಡಿರುವ ಪರಿಕರಗಳನ್ನು ಒಟ್ಟು ಮಾಡಿ ೪೦ ಅಡಿ ಉದ್ದದ ನಾಲ್ಕು ದಿಮ್ಮಿಗಳನ್ನು ಜೋಡಿಸುವ ಮೂಲಕ ಕಾಲು ಸೇತುವೆ ನಿರ್ಮಾಣಗೊಳಿಸಿದ್ದಾರೆ.
ಕಾಲುಸೇತುವೆಯ ಒಂದು ಬದಿ ಯಲ್ಲಿ ಪಾದಚಾರಿಗಳ ಅನುಕೂಲತೆಗೆ ಅನುಗುಣವಾಗಿ ತಡೆಬೇಲಿಯನ್ನು ನಿರ್ಮಿಸಲಾಗಿದೆ. ಕಾಲುಸೇತುವೆಯ ಮೇಲ್ಭಾಗದಲ್ಲಿ ಸುಮಾರು ೨೦೦ಕ್ಕೂ ಮಿಕ್ಕಿ ತೆಳುವಾದ ಮರದ ಪಟ್ಟಿಯನ್ನು ಜೋಡಿಸಲಾಗಿದೆ. ಸೇತುವೆ ಹತ್ತಲು ಇಕ್ಕೆಡೆಗಳಲ್ಲಿ ಇಳಿಜಾರುಗಳನ್ನು ನಿರ್ಮಿಸಲಾಗಿದೆ. ಈ ಕಾಲುಸೇತುವೆ ನಿರ್ಮಾಣದಿಂದ ಮಳೆಗಾಲದ ಸಂದರ್ಭದಲ್ಲಿ ಸ್ಥಳೀಯರಿಗೆ ಎರಡು ಕಿ.ಮೀ ಕ್ರಮಿಸುವುದು ಕಡಿಮೆಯಾಗಿದೆ. ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿ ಗಾಗಿ ಸರಕಾರವು ಹಲವು ಯೋಜನೆ ಗಳನ್ನು ತಂದಿದ್ದರೂ ಇನ್ನೂ ಕೂಡಾ ಅದು ಅನುಷ್ಠಾನಗೊಳ್ಳದೇ ಇರುವುದಕ್ಕೆ ಮಾಳದ ಸೂರೆಂಟ್ ಪ್ರದೇಶ ಒಂದು ಸಾಕ್ಷ್ಯಧಾರವಾಗಿದೆ.
Tagged with
lnews,
udupi
ಮೂಡುಬಿದಿರೆ: ಹಮಾಲಿ ಕಾರ್ಮಿ ಕರ ಮೂಡಬಿದಿರೆ ವಲಯ ಸಮಿತಿ ಯವರು ಮತ್ತು ಪದ್ಮಾವತಿ ಮಾರ್ಬಲ್ ಗಾಂಧಿನಗರ ಇದರ ಕಾರ್ಮಿಕರು ಕನಿಷ್ಟ ೧೫೦-೨೦೦ ಕನಿಷ್ಟ ಕೂಲಿ ಹೆಚ್ಚಳಕ್ಕೆ ಆಗ್ರಹಿಸಿ ಪದ್ಮಾವತಿ ಮಾರ್ಬಲ್ ವಿರುದ್ಧ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಸುನೀಲ್ ಕುಮಾರ್ ಬಜಾಲ್, ಬೀಡಿ ಕಾರ್ಮಿಕರ ಜಿಲ್ಲಾ ಕಾರ್ಯದರ್ಶಿ ರಮಣಿ, ಅಕ್ಷರ ದಾಸೋಹದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಗಿರಿಜಾ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶಂಕರ್ ವಾಲ್ಪಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Tagged with
dk,
lnews
ಬೆಂಗಳೂರು : ಮುಖ್ಯಮಂತ್ರಿ ಸದಾನಂದಗೌಡರು ಜೆಡಿಎಸ್ ಅಣತಿಯಂತೆ ಸರ್ಕಾರ ನಡೆಸುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದ ಹೇಳಿಕೆಗಳ ವಿರುದ್ಧ ಇದೇ ಮೊದಲ ಬಾರಿಗೆ ಮೌನಮುರಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಡಬಾರದ ತಪ್ಪು ಮಾಡಿ ಅಧಿಕಾರ ಕಳೆದುಕೊಂ ಡವರು ಅಸ್ತಿತ್ವ ಉಳಿಸಿಕೊಳ್ಳಲು ವಿನಾಕಾರಣ ನಮ್ಮ ಹೆಸರು ಎಳೆದು ತರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನ ಪದ್ಮನಾಭನಗರ ದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸದಾನಂದ ಗೌಡರು ನನ್ನ ಮಾತು ಕೇಳಿ ಸರ್ಕಾರ ನಡೆಸುತ್ತಿಲ್ಲ. ಅಥವಾ ಅವರ ಮೇಲೆ ಪ್ರಭಾವ ಬೀರಿ ಜೆಡಿಎಸ್ ಬೆಳೆಸುವ ಅನಿವಾರ್ಯತೆಯೂ ನನಗಿಲ್ಲ ಎಂದು ಹರಿಹಾಯ್ದರು.
ನಾಲ್ಕು ತಿಂಗಳಿಂದ ನಾನು ಸದಾನಂದಗೌಡರ ಮುಖವನ್ನೂ ನೋಡಿಲ್ಲ. ದೂರವಾಣಿಯ ಮೂಲಕ ಅವರೊಂದಿಗೆ ಮಾತುಕತೆ ಕೂಡಾ ನಡೆಸಿಲ್ಲ. ಆದರೂ ಮಾಜಿ ಮುಖ್ಯ ಮಂತ್ರಿಯೊಬ್ಬರು ವಿನಾಕಾರಣ ಸದಾನಂದಗೌಡ ನನ್ನ ಮಾತು ಕೇಳಿ ಸರ್ಕಾರ ನಡೆಸುತ್ತಿದ್ದಾರೆ ಎಂದು ದೂರುತ್ತಿರುವುದು ಸರಿಯಲ್ಲ ಎಂದು ನುಡಿದರು.
ಮಾಡಬಾರದ ತಪ್ಪು ಮಾಡಿ ಅಧಿಕಾರ ಕಳೆದುಕೊಂಡಿರುವ ಯಡಿಯೂರಪ್ಪ ತಮ್ಮ ಉಳಿವಿಗಾಗಿ ಯಾವ್ಯಾವ ಅಧಿಕಾರಿಗಳನ್ನು ಎಲ್ಲೆಲ್ಲಿ ನೇಮಕ ಮಾಡಿಸಲು ಯತ್ನಿಸಿದರು ಎಂಬುದು ನನಗೆ ಗೊತ್ತಿದೆ.ಇಂತವರು ಮುಖ್ಯಮಂತ್ರಿ ಸದಾನಂದಗೌಡ ನನ್ನ ಹಿಡಿತದಲ್ಲಿದ್ದಾರೆ ಎಂದು ಆರೋಪಿಸುತಿ ರುವುದು ಅರ್ಥಹೀನ ಎಂದರು.
ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಪ್ರಣಬ್ ಮುಖರ್ಜಿ ಅವರಿಗೆ ಬೆಂಬಲ ನೀಡುವುದಾಗಿ ಇದೇ ಸಂದರ್ಭದಲ್ಲಿ ಪ್ರಕಟಿಸಿದ ಅವರು, ಖುದ್ದು ಪ್ರಧಾನಿ ಮನ್‌ಮೋಹನ್‌ಸಿಂಗ್ ಹಾಗೂ ರಾಷ್ಟ್ರಪತಿ ಅಭ್ಯರ್ಥಿ ಪ್ರಣಬ್ ಮುಖರ್ಜಿ ಅವರು ದೂರವಾಣಿಯ ಮೂಲಕ ತಮ್ಮ ಪಕ್ಷದ ಬೆಂಬಲ ಕೋರಿದ್ದಾರೆ. ನಾನು ಪಕ್ಷದ ನಾಯಕರ ಜತೆ ಚರ್ಚಿಸಿ ಬೆಂಬಲದ ಭರವಸೆ ನೀಡಿದ್ದೇನೆ ಎಂದು ನುಡಿದರು.
Tagged with
devegowda,
snews
ಮಂಗಳೂರು: ಬುಧವಾರದಂದು ಮೂಡಿಗೆರೆಯ ಕಳಸದಲ್ಲಿ ನಡೆದ ಅವಘಡದಲ್ಲಿ ಗಾಯಗೊಂಡ ಯುವತಿಯ ಚಿನ್ನಾಭರಣಗಳನ್ನು ಅವಳ ತಾಯಿಗೆ ಜೋಪಾನವಾಗಿ ಒಪ್ಪಿಸುವ ಮೂಲಕ ೧೦೮ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮೋಜಿಗೆಂದು ಗೆಳೆಯರ ಜೊತೆ ತೆರಳಿದ್ದಾಗ ಬೈಕ್ ಸ್ಕಿಡ್ ಆಗಿ ಯುವತಿಗೆ ಗಂಭೀರ ಗಾಯಗಳಾಗಿದ್ದವು. ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಆಕೆ ತನ್ನ ಚಿನ್ನಾಭರಣಗಳನ್ನು ೧೦೮ ಸಿಬ್ಬಂದಿ ಗುರುರಾಜ್ ಕೈಗೆ ನೀಡಿದ್ದಳು. ಅದನ್ನು ಯುವತಿಯ ತಾಯಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
Tagged with
dk,
lnews
ಬೆಂಗಳೂರು: ಸಚಿವರಾದ ಬಾಲಚಂದ್ರ ಜಾರಕಿಹೋಳಿ, ಆನಂದ ಆಸ್ನೋಟಿಕರ್, ಸೇರಿದಂತೆ ಮೂವತ್ತಕ್ಕೂ ಹೆಚ್ಚು ಶಾಸಕರಿಗೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಟಿಕೇಟು ನಿರಾಕರಿಸಲಿದೆ.
ಪಕ್ಷ ವಿರೋಧಿ ಚಟುವಟಿಕೆ, ಭ್ರಷ್ಟಾಚಾರ ಹಗರಣಗಳು ಹಾಗೂ ಕ್ಷೇತ್ರಗಳನ್ನು ಕಡೆಗಣಿಸಿದ್ದಾರೆಂಬ ಆರೋಪದ ಮೇಲೆ ಇಂತಹ ಸದಸ್ಯರಿಗೆ ಮತ್ತೆ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡುತ್ತಿಲ್ಲ. ಇಂತಹ ಸದಸ್ಯರ ಕ್ಷೇತ್ರಗಳಲ್ಲಿ ಈಗಾಗಲೇ ಪಕ್ಷ ಪರ್ಯಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆಯ್ಕೆ ಮಾಡಿದೆ.
ಬ್ಲೂಫಿಲಂ ಹಗರಣದಲ್ಲಿ ಸಿಲುಕಿರುವ ಕೆಲವರಿಗೆ ಟಿಕೇಟು ದೊರಯುವುದಿಲ್ಲ. ಸುಮಾರು ೨೦ಕ್ಕೂ ಹೆಚ್ಚು ಸದಸ್ಯರು, ಜೆಡಿಎಸ್‌ನ ಕುಮಾರಸ್ವಾಮಿ ಜತೆ ಸಂಪರ್ಕ ಹೊಂದಿದ್ದರೆ, ಮೂರು ಮಂದಿ ಕಾಂಗ್ರೆಸ್ ಜತೆ ಕೈಜೋಡಿಸಲು ಹೊರಟಿದ್ದಾರೆ. ಇನ್ನೂ ಕೆಲವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅದರಲ್ಲಿ ಉಡುಪಿ ಮತ್ತು ಮಂಗಳೂರು ಜಿಲ್ಲಾ ವ್ಯಾಪ್ತಿಯ ಮೂವರಿಂದ ನಾಲ್ವರಿಗೆ ಟಿಕೇಟು ನಿರಾಕರಿಸುವ ಸಾಧ್ಯತೆ ಇದೆ.
ಪಕ್ಷ ಸಂಘಟನೆಯಿಂದ ದೂರ ಉಳಿದಿದ್ದಾರೆ ಎಂಬ ಆರೋಪವೂ ಇವರ ಮೇಲಿದೆ. ಮತ್ತೆ ಕೆಲವರಿಗೆ ಬಿಜೆಪಿಯಲ್ಲೇ ಮುಂದುವರಿದರೆ ವಿಧಾನ ಸಭೆಗೆ ಮತ್ತೊಂದು ಅವಧಿಗೆ ಜನ ಸ್ವೀಕರಿಸುತ್ತಾರೆಂಬ ಉದ್ದೇಶದಿಂದ ತಾವಾಗಿಯೇ ಪಕ್ಷದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಇಂತವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದು, ಆ ಪಕ್ಷದಲ್ಲಿ ಟಿಕೇಟು ದೊರೆಯದಿದ್ದರೆ ಬೇರೊಂದು ಪಕ್ಷ ಇಲ್ಲವೇ ಸ್ವತಂತ್ರವಾಗಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ. ಒಟ್ಟಾರೆ ಶಿಸ್ತಿನ ಪಕ್ಷದಲ್ಲಿ ಶಿಸ್ತಿಲ್ಲದಂತಾಗಿ ಯಾರ ವಿರುದ್ಧ ಯಾರು ಹೇಳಿಕೆ ನೀಡಿದರೂ ಸರಕಾರ ಉಳಿದರೆ ಸಾಕು ಎಂಬ ಭಾವನೆಯಲ್ಲಿ ಬಿಜೆಪಿ ವರಿಷ್ಟರು ಇದ್ದಾರೆ. ಈ ಹಿನ್ನೆಲೆಯಲ್ಲಿ ದಿನನಿತ್ಯ ನಾಯಕತ್ವಕ್ಕೂ ಬೆಲೆ ಇಲ್ಲದಂತಾಗಿದೆ. ಮುಖ್ಯಮಂತ್ರಿ ಸದಾನಂದ ಗೌಡರ ಮೇಲೆ ಶಾಸಕ ಹರೀಶ್ ಮತ್ತು ಸಚಿವ ರೇಣುಕಾಚರ್ಯ ದಿನನಿತ್ಯ ಅವರ ವಿರುದ್ಧ ಹರಿಹಾಯ್ದರೂ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಶಿಸ್ತಿನ ಪಕ್ಷ ಬಿಜೆಪಿಗೆ ಉಂಟಾಗಿರುವ ಪರಿಸ್ಥಿತಿಯಾಗಿದೆ.
Tagged with
snews
ಭೂಪತಿ-ಬೋಪಣ್ಣ ಒತ್ತಡಕ್ಕೆ ಮಣಿದ ಎಐಟಿಎ
ದೆಹಲಿ: ಟೆನಿಸ್ ವಲಯದಲ್ಲಿ ಕಾಣಸಿಕೊಂಡಿರುವ ಅಸಮಾಧಾನದ ಹೊಗೆಗೆ ಎಐಟಿಎ ಅಚ್ಚರಿಯ ಪರಿಹಾರವನ್ನು ಕಂಡುಕೊಂಡಿದೆ. ಮುಂದಿನ ತಿಂಗಳು ನಡೆಯಲಿರುವ ಒಲಿಂಪಿಕ್ಸ್ ಕೂಟಕ್ಕೆ ಪುರುಷರ ಎರಡು ಡಬಲ್ಸ್ ಟೆನಿಸ್ ತಂಡ ಕಳುಹಿಸಲು ಅಖಿಲ ಭಾರತ ಟೆನಿಸ್ ಮಹಾ ಮಂಡಲಿ (ಎಐಟಿಎ) ನಿರ್ಧರಿಸಿದ್ದು, ವಿಶ್ವವಿಖ್ಯಾತ ಆಟಗಾರ ಲಿಯಾಂಡರ್ ಪೇಸ್ ಜೊತೆ ಕೆಳಕ್ರಮಾಂಕದ ವಿಷ್ಣುವರ್ಧನ್‌ರನ್ನು ಜೋಡಿಯಾಗಿ ಆಯ್ಕೆಮಾಡಿದೆ. ಮತ್ತೊಂದು ತಂಡವಾಗಿ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಟೂರ್ನಿಯಲ್ಲಿ ಜೊತೆಯಾಗಿ ಆಡಲಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಈ ನಿರ್ಧಾರವು ನಮಗೆ ಹೆಚ್ಚು ಸೂಕ್ತವೆಂದು ತೋರುತ್ತದೆ. ೨೦ ವರ್ಷಗಳಷ್ಟು ಕಾಲ ಟೆನಿಸ್‌ನಲ್ಲಿ ತನ್ನದೇ ಆದ ಅಧಿಪತ್ಯ ಸ್ಥಾಪಿಸಿರುವ ಪೇಸ್ ಜೊತೆ ಡೇವಿಸ್ ಕಪ್‌ನಲ್ಲಿ ಅತೀ ಹೆಚ್ಚು ಬಾರಿ ಕಾಣಿಸಿಕೊಂಡಿ ರುವ ವಿಷ್ಣುವರ್ಧನ್‌ರನ್ನು ಜೊತೆ ಯಾಗಿ ಆಯ್ಕೆಮಾಡಿದ್ದೇವೆ. ಆದರೆ ಇದು ಪೇಸ್ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಇರಾದೆಯಲ್ಲ. ಭೂಪತಿ-ಬೋಪಣ್ಣ ನಡುವಿನ ವಿವಾದವನ್ನು ಮರೆತುಬಿಡು ವಂತೆ ನಾವೀಗಲೇ ಅವರಲ್ಲಿ ಕೇಳಿಕೊಂ ಡಿದ್ದೇವೆ. ಆದರೆ ಕೆಳಕ್ರಮಾಂಕದ ವಿಷ್ಣು ಜೊತೆ ಪೇಸ್‌ರನ್ನು ಆಯ್ಕೆಮಾಡಿಕೊಂ ಡಿರುವ ಬಗ್ಗೆ ಕೆಲವು ಕಡೆ ಅಸಮಾಧಾನ ಕೇಳಿಬಂದಿದೆ. ಆದರೆ ಇದು ಶಮನ ಗೊಳ್ಳಲಿದೆ ಎಂದು ಎಐಟಿಎ ಅಧ್ಯಕ್ಷ ಅನಿಲ್ ಖನ್ನಾ ತಿಳಿಸಿದರು. ಇನ್ನು ಮಿಕ್ಡ್‌ಡ್ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೊತೆ ಕೂಡ ಲಿಯಾಂಡರ್ ರನ್ನು ಆಡಿಸುವ ನಿರ್ಧಾರವನ್ನು ಎಐಟಿಎ ಇದೇ ವೇಳೆ ತೆಗೆದುಕೊಂಡಿದೆ. ಒಂದು ವೇಳೆ ಸಾನಿಯಾ ಜೂನ್ ೨೮ರಂದು ಒಲಿಂಪಿಕ್ಸ್‌ಗೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದುಕೊಂಡರೆ, ಆಗ ಪೇಸ್ ಜೊತೆ ಆಡಬೇಕಿದೆ. ಭೂಪತಿ-ಬೋಪಣ್ಣ ಜೋಡಿ ಅತ್ಯುತ್ತಮ ಜೋಡಿ ಯಲ್ಲದಿದ್ದರೂ ಪರಿಸ್ಥಿತಿಯ ಹಿತಾಸಕ್ತಿ ಯಲ್ಲಿ ಸರಿಯಾದ ನಿರ್ಧಾರ ಎಂದು ಖನ್ನಾ ತಿಳಿಸಿದರು.
ಎಐಟಿಎ ನಿರ್ಧಾರಕ್ಕೆ ಪೇಸ್ ತಂದೆ ಅಸಮಾಧಾನ
ಲಿಯಾಂಡರ್ ಪೇಸ್‌ರನ್ನು ಕೆಳಕ್ರಮಾಂಕದ ವಿಷ್ಣುವರ್ಧನ್ ಜೊತೆ ಆಡಿಸುವ ನಿರ್ಧಾರವನ್ನು ತೆಗೆದುಕೊಂ ಡಿರುವ ಎಐಟಿಎ ಬಗ್ಗೆ ೧೯೭೨ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಹಾಕಿ ಮಿಡ್‌ಫೀಲ್ಡರ್, ಪೇಸ್ ತಂದೆ ವೆಸ್ ಪೇಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಐಟಿಎ ನಿರ್ಧಾರ ಪೇಸ್‌ಗೆ ಬೇಸರ ತರಿಸಿದ್ದು, ಇದು ಯಾವ ದೃಷ್ಟಿಕೋನದಿಂದಲೂ ಸರಿಯಾದ ನಿರ್ಧಾರವಲ್ಲ. ಹಾಗಾಗಿ ಪೇಸ್ ಈ ನಿರ್ಧಾರವನ್ನು ವಿರೋಧಿಸುವ ಸಾಧ್ಯತೆಯಿದೆ. ಆತ ತುಂಬಾ ಭಾವುಕ ಆಟಗಾರನಾಗಿದ್ದು, ಆದರೆ ನಿರ್ಧಾರ ಅವನನ್ನು ಯಾವ ಕಡೆ ಕೊಂಡು ಹೋಗಲಿದೆ ಎಂದು ಕಾದುನೋಡ ಬೇಕಿದೆ. ನಿರ್ಧಾರವನ್ನು ಪೇಸ್ ಸ್ವೀಕರಿ ಸುತ್ತಾರೆ ಎಂದು ನನಗೆ ಅನ್ನಿಸುತ್ತಿಲ್ಲ. ದೇಶಕ್ಕಾಗಿ ಆಡುವಲ್ಲಿ ಪೇಸ್ ಯಾವಾಗಲೂ ಪರಿಸ್ಥಿತಿಗೆ ಒಗ್ಗುತ್ತಿ ದ್ದರು. ಆದರೆ ಈಗ ಆತ ಅದರಿಂದ ರೋಸಿ ಹೋಗಿದ್ದಾನೆ ಎಂದು ವೆಸ್ ಅಸಮಾಧಾನದ ಮಾತನ್ನಾಡಿದ್ದಾರೆ.
Tagged with
tnews
ದೆಹಲಿ: ಕೆಳಕ್ರಮಾಂಕದ ವಿಷ್ಣುವರ್ಧನ್ ಜೊತೆ ಆಡುವ ಪರಿಸ್ಥಿತಿಗೆ ಸಿಲುಕಿರುವ ದಿಗ್ಗಜ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಈಗ ಮುಂಬರುವ ಲಂಡನ್ ಒಲಿಂಪಿಕ್ಸ್‌ಗೆ ಬಹಿಷ್ಕಾರ ಹಾಕುವ ಎಲ್ಲಾ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಒಂದು ವೇಳೆ ವಿಷ್ಣು ಜೊತೆ ನನ್ನನ್ನು ಆರಿಸಿ ಕೊಂಡರೆ ಅದಕ್ಕಿಂತ ಕೆಟ್ಟ ನಿರ್ಧಾರ ಮತ್ತೊಂದಿಲ್ಲ, ಅದು ಸ್ವೀಕೃತವಲ್ಲ ಕೂಡ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕಾದರೆ ಅತ್ಯುತ್ತಮ ಜೊತೆಗಾರನನ್ನು ನನ್ನ ಜೊತೆ ಕಳುಹಿಸಿ ಎಂದು ಮಂಗಳವಾರ ಎಐಟಿಎಗೆ ಬರೆದ ಪತ್ರದಲ್ಲಿ ಪೇಸ್ ತಿಳಿಸಿದ್ದರು. ಅಲ್ಲದೆ ಲಿಯಾಂಡರ್ ತಂದೆ ಕೂಡ ಇದೇ ರೀತಿಯ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಹಾಗಾಗಿ ಒಲಿಂಪಿಕ್ಸ್‌ನಿಂದ ಪೇಸ್ ಹಿಂದೆಸರಿಯುವ ಸಾಧ್ಯತೆ ನಿಚ್ಚಲವಾಗಿ ಇದೆ. ಒಂದು ವೇಳೆ ಪೇಸ್ ಈ ನಿರ್ಧಾರವನ್ನು ತೆಗೆದುಕೊಂಡರೆ ಆಗ ಲಂಡನ್ ಟೂರ್ನಿಯಲ್ಲಿ ಭಾರತದ ಪದಕ ಗೆಲ್ಲುವ ಆಸೆಗೆ ಬಹುದೊಡ್ಡ ಹೊಡೆತ ಬೀಳುವುದರಲ್ಲಿ ಸಂಶಯವಿಲ್ಲ.
Tagged with
tnews
ಅಂತಿಮ ನಾಲ್ಕರ ಘಟ್ಟಕ್ಕೇರಿದ ಪೋರ್ಚುಗಲ್
ವಾರ‍್ಸಾ: ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬನಾಗಿರುವ ಕ್ರಿಸ್ತಿಯಾನೊ ರೊನಾಲ್ಡೊ ಮತ್ತೆ ತನ್ನ ತಂಡಕ್ಕೆ ವರವಾಗಿ ಪರಿಣಮಿಸಿದ್ದಾರೆ. ಪಂದ್ಯ ಮುಗಿಯಲು ಇನ್ನೇನು ೧೧ ನಿಮಿಷಗಳ ಅವಧಿ ಇರುವಾಗ ಕ್ರಿಸ್ತಿಯಾನೊ ರೊನಾಲ್ಡೊ ದಾಖಲಿಸಿದ ಏಕೈಕ ಅದ್ಭುತ ಗೋಲ್ ಜೆಕ್ ರಿಪಬ್ಲಿಕ್ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ೧-೦ ಯ ಅಂತರದಲ್ಲಿ ಗೆಲುವು ಸಾಧಿಸಿದ್ದು, ಈ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ೨೦೦೪ರ ನಂತರ ಇದೇ ಮೊದಲ ಬಾರಿಗೆ ಪೋರ್ಚುಗಲ್ ಸೆಮೀಸ್ ಪ್ರವೇಶಿಸಿದೆ.
ಪ್ರಥಮಾವಧಿಯಲ್ಲಿ ಎರಡೂ ತಂಡಗಳು ಕಠಿಣ ಹೋರಾಟ ಎದುರಿಸಿದ ಪರಿಣಾಮ ಗೋಲು ಗಳಿಸಲು ವಿಫಲವಾದವು. ಈ ವೇಳೆ ಇತ್ತಂಡಗಳು ಹಲವಾರು ಅವಕಾಶವನ್ನು ಕೈಚಿಲ್ಲಿತ್ತು. ಅದರಲ್ಲೂ ರೊನಾಲ್ಡೊಗೆ ಹಲವು ಅವಕಾಶ ಸಿಕ್ಕರೂ ಅದನ್ನು ಮಿಸ್ ಮಾಡಿಕೊಂಡರು. ಕೊನೆಹಂತದಲ್ಲಿ ಪೋರ್ಚುಗಲ್ ವೇಗದ ಆಟಕ್ಕೆ ಒತ್ತು ನೀಡಿತ್ತು. ಹಾಗೆ ಅಧಿಕೃತ ಅವಧಿ ಮುಗಿಯಲು ೧೧ ನಿಮಿಷ ಬಾಕಿ ಇರುವಾಗ ರೊನಾಲ್ಡೊ ದಾಖಲಿಸಿದ ಗೋಲು ತಂಡವನ್ನು ಸೆಮೀಸ್‌ಗೇರಿಸಿತು. ಜೂನ್ ೨೭ರಂದು ನಡೆಯವ ಸೆಮೀಸ್‌ನಲ್ಲಿ ಸ್ಪೇಯ್ನ್ ಅಥವಾ ಫ್ರಾನ್ಸ್ ತಂಡದ ವಿರುದ್ಧ ಪೋರ್ಚುಗಲ್ ಕಾದಾಡಲಿದೆ.
Tagged with
tnews
ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಮರಳು ಮಾಫಿಯಾಗಳ ಅಟ್ಟಹಾಸ ಹೆಚ್ಚಾಗುತ್ತಿದ್ದು, ಗುರುವಾರ ಬೆಳಿಗ್ಗೆ ವಿಟ್ಲ ಸಮೀಪದ ಕುದ್ದು ಪದವು ಎಂಬಲ್ಲಿ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಐದು ಲಾರಿ ಯನ್ನು ಪತ್ತೆ ಹಚ್ಚಿದ ಪುತ್ತೂರು ಪ್ರೊಬೆಷನರಿ ಎ.ಎಸ್‌ಪಿ ಡಾ.ದಿವ್ಯಾ ವಿ ಗೋಪಿನಾಥ್ ನೇತೃ ತ್ವದ ಪೊಲೀಸ್ ತಂಡ ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಬಿ.ಸಿ ರೋಡ್ ನಿವಾಸಿ ಅಬ್ದುಲ್ ಲತೀಫ್ ಅವರಿಗೆ ಸೇರಿದ ಎರಡು ಲಾರಿ ಒಕ್ಕೆತ್ತೂರು ನಿವಾಸಿ ಅಬೂಬಕ್ಕರ್ ಅವರ ಒಂದು ಲಾರಿ, ಬಿ.ಸಿ ರೋಡ್ ನಿವಾಸಿ ಶರೀಫ್ ಅವರ ಒಂದು ಲಾರಿ ಹಾಗೂ ವಿಟ್ಲ ಸಮೀಪದ ನಿವಾಸಿ ಸೂರಾಜ್ ಅವರ ಒಂದು ಲಾರಿ ಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಐದು ಲಾರಿಯಲ್ಲಿ ಗುರುವಾರ ಬೆಳಿಗ್ಗೆ ಮಂಗಳೂರು ಸಮೀಪದ ಅಡ್ಯಾರ್-ಕಣ್ಣೂರಿನಿಂದ ಮರಳುಗಳನ್ನು ತುಂಬಿಸಿ ವಿಟ್ಲ ಮಾರ್ಗವಾಗಿ ಕೇರಳಕ್ಕೆ ಸಾಗಟ ಮಾಡ ಲಾಗುತ್ತಿತ್ತು ಎನ್ನಲಾಗಿದೆ. ಲಾರಿ ಚಾಲಕರಲ್ಲಿ ಸರಿಯಾದ ಯಾವುದೇ ರೀತಿಯ ದಾಖಲೆಗಳು ಇಲ್ಲವಾಗಿದ್ದು, ಲಾರಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಪ್ರಕರಣವನ್ನು ಗಣಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.
Tagged with
cnews,
vittla
ಉಡುಪಿ: ಕಲ್ಯಾಣಪುರ ಸಂತೆಕಟ್ಟೆಯಿಂದ ಯುವ ಜೋಡಿಯೊಂದು ನಾಪತ್ತೆಯಾಗಿದ್ದು, ಈ ಸಂಬಂಧ ಅಪರಿ ಚಿತ ವ್ಯಕ್ತಿಯೊಬ್ಬ ಮೊಬೈಲ್ ಕರೆ ಮಾಡಿ ನಾಪತ್ತೆಯಾದವರ ಬಿಡುಗಡೆಗೆ ಒಂದು ಲಕ್ಷದ ಬೇಡಿಕೆ ಮುಂದಿಟ್ಟ ಪ್ರಕರಣ ನಡೆದಿದೆ.
ಸಂತೆಕಟ್ಟೆ ಗ್ಯಾರೇಜ್ ಬಳಿ ವಾಸವಾಗಿರುವ ಪುಟ್ಟಮ್ಮ ಎಂಬವರ ಮಗ ಸುರೇಶ್ ಹಾಗೂ ಇವರ ಸಂಬಂಧಿಕರೇ ಆದ ಪಾರ್ವತಮ್ಮ ಎಂಬವರ ಮಗಳು ಶರಣಮ್ಮ ಎಂಬವರು ಜೂನ್ ೧೮ ರಂದು ನಾಪತ್ತೆಯಾಗಿದ್ದರು. ಇಬ್ಬರ ಮನೆಗಳೂ ಅಕ್ಕಪಕ್ಕದಲ್ಲಿಯೇ ಇದ್ದು, ಸುರೇಶ್ ಜೂ.೧೮ ರಂದು ಶಿವ ಮೊಗ್ಗದಲ್ಲಿರುವ ತಂದೆಯ ಮನೆಗೆಂದು ಹೋದವನು ಕಾಣೆ ಯಾಗಿದ್ದನು. ಶರಣಮ್ಮ ಸಹ ಇದೇ ಸಂದರ್ಭ ನಾಪತ್ತೆಯಾಗಿ ದ್ದಳು. ಈ ನಡುವೆ ಅಪರಿಚಿತನೋರ್ವ ಪುಟ್ಟಮ್ಮ ಅವರ ಸಂಬಂಧಿ ರಮೇಶ್ ಎಂಬವರ ಮೊಬೈಲ್‌ಗೆ ಕರೆ ಮಾಡಿ ಸುರೇಶ್ ಹಾಗೂ ಶರಣಮ್ಮರನ್ನು ಬಿಡುಗಡೆ ಮಾಡಬೇಕಾದರೆ ಒಂದು ಲಕ್ಷ ನೀಡಬೇಕೆಂದು ಬೇಡಿಕೆ ಮುಂದಿಟ್ಟ ಪ್ರಕರಣ ನಡೆದಿದೆ. ಈ ಸಂಬಂಧ ಉಡುಪಿ ನಗರ ಠಾಣೆಗೆ ದೂರು ನೀಡಲಾಗಿದೆ.
Tagged with
cnews,
upi
ಬಂಟ್ವಾಳ: ಕೊಲೆ ಬೆದರಿಕೆ, ಅಶ್ಲೀಲ ವರ್ತನೆ ಹಾಗೂ ದಾರಿಗೆ ಅಡ್ಡಿ ಉಂಟು ಮಾಡಿದ ಆರೋಪಗಳಿಗೆ ಸಂಬಂಧಿಸಿ ಮಹಿಳೆ ಯೋರ್ವರು ತಾಲೂಕಿನ ಸಜೀಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಬಂಟ್ವಾಳ ನಗರ ಠಾಣೆಯಲ್ಲಿ ಸಂಭವಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಜೀಪಮೂಡ ನಿವಾಸಿ ರಮೇಶ್ ಪೂಜಾರಿ ಎಂಬವರ ಪತ್ನಿ ಸುಜಾತ ಎಂಬವರು ನೀಡಿದ ದೂರಿನನ್ವಯ ಸ್ಥಳೀಯ ನಿವಾಸಿ, ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಸದಾನಂದ ಪೂಂಜಾ ಅವರ ಮಗ ದೇವಿ ಪ್ರಸಾದ್ ಪೂಂಜಾ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆಗೆ ಹೋಗುವ ಮಾಮೂಲಿ ದಾರಿಯ ವಿಚಾರಕ್ಕೆ ಸಂಬಂಧಿಸಿ ದೇವಿ ಪ್ರಸಾದ್ ಪೂಂಜಾ ಆಕ್ಷೇಪಿಸಿದ್ದು, ಇದನ್ನು ರಮೇಶ್ ಪೂಜಾರಿ ಪ್ರಶ್ನಿಸಿದ್ದರೆನ್ನಲಾಗಿದೆ. ದಾರಿ ವಿವಾದಕ್ಕೆ ಸಂಬಂಧಿಸಿ ಹಲವು ಬಾರಿ ಬೆದರಿಕೆ ನೀಡಲಾಗಿತ್ತೆಂದು ಸುಜಾತ ದೂರಿನಲ್ಲಿ ತಿಳಿಸಿದ್ದಾರೆ. ನಿನ್ನೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ತಡೆದು ನಿಲ್ಲಿಸಿ ಈ ದಾರಿಯಲ್ಲಿ ಹೋಗಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದು, ಈ ಹಿನ್ನೆಲೆಯಲ್ಲಿ ದೇವಿ ಪ್ರಸಾದ್ ಪೂಂಜಾ ಹಾಗೂ ರಮೇಶ್ ಪೂಜಾರಿ ನಡುವೆ ಮಾತು ಬೆಳೆದಿತ್ತು. ಇದೇ ಸಂದರ್ಭ ಘಟನಾ ಸ್ಥಳಕ್ಕೆ ಬಂದಿದ್ದ ರಮೇಶ್ ಪತ್ನಿ ಸುಜಾತರಿಗೂ ಬೆದರಿಕೆ ಒಡ್ಡಲಾಗಿರುವುದಾಗಿ ದೂರಲಾಗಿದೆ. ಬಡವರಾದ ನಮಗೆ ಜೀವ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯ ಬೇಕೆಂದು ದೂರಿನಲ್ಲಿ ಕೇಳಿಕೊಂಡಿದ್ದಾರೆ.
ಕಡೆಯವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ದಾರಿ ಸಂಬಂಧ ವಿವಾದವನ್ನು ಮೂಲ ದಾಖಲೆ ಪತ್ರಗಳ ಆಧಾರದಲ್ಲಿ ಇತ್ಯರ್ಥಗೊಳಿಸುವುದಾಗಿ ಪರಿಹಾರ ಸೂಚಿಸಿದ್ದಾರೆ.
Tagged with
bantwal,
cnews
ಮಂಗಳೂರು: ಕಳೆದ ಏಳು ದಿನಗಳ ಹಿಂದೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಚಾಡಿ ಫೋರ‍್ತ್‌ಮೈಲ್ ಬಳಿ ಬಳಿ ನಡೆದಿದ್ದ ಕುಮಾರ(೧೯) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸಂತು ಎಂಬಾತನನ್ನು ನಿನ್ನೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎರಡು ಗುಂಪುಗಳ ನಡುವಿನ ಕ್ಷುಲ್ಲಕ ವಿವಾದಕ್ಕೆ ಕುಮಾರನನ್ನು ಚೂರಿಯಿಂದ ಇರಿದು ಕೊಲೆಗೈಯಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಬಜಾಲ್ ನಿವಾಸಿ ಗೌರೀಶ್(೨೧), ಆಕಾಶಭವನದ ಗೌತಮ್(೨೨), ಕುಲಶೇಖರ ನಿವಾಸಿ ಹರ್ಷರಾಜ್(೨೦) ಎಂಬವರನ್ನು ಈಗಾಗಲೇ ಬಂಧಿಸಲಾಗಿದ್ದರೆ, ಸಂತು ಹಾಗೂ ಇನ್ನೋರ್ವ ತಲೆಮರೆಸಿದ್ದರು. ಸಂತು ತಂಡದ ನಾಯಕನೆಂದು ಹೇಳಲಾಗಿದ್ದು, ಆತನೇ ಕುಮಾರ್‌ಗೆ ಚೂರಿಯಿಂದ ಇರಿದು ಕೊಲೆಗೈದಿದ್ದ ಎಂದು ಹೇಳಲಾಗಿದೆ. ನಿನ್ನೆ ಪೊಲೀಸರು ಸಂತುವನ್ನು ವಶಕ್ಕೆ ಪಡೆದಿದ್ದು, ಇನ್ನೋರ್ವನ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
Tagged with
cnews,
mlore
ಮಂಜೇಶ್ವರ: ವಾರದ ಹಿಂದೆ ನಾಪತ್ತೆ ಯಾಗಿದ್ದ ನವ ವಿವಾಹಿತೆಯೊಬ್ಬಳನ್ನು ಆಕೆಯ ಸಂಬಂಧಿಕರ ಮನೆಯಿಂದ ಪತ್ತೆ ಹಚ್ಚಿ ಮಂಜೇಶ್ವರ ಪೊಲೀಸರು ನ್ಯಾಯಾಲ ಯಕ್ಕೆ ಹಾಜರು ಪಡಿಸಿದರು. ಈ ಸಂದರ್ಭ ಆಕೆ ಪತಿಯನ್ನು ತಿರಸ್ಕರಿಸಿ ತನ್ನ ಸಹೋ ದರನ ಜತೆ ತೆರಳಿದ ಪ್ರಸಂಗ ನಡೆಯಿತು.
ಜೂನ್ ೮ರಂದು ಕುಂಜತ್ತೂರು ಪದವು ನಿವಾಸಿ ಮಂಜುನಾಥ ಎಂಬವರ ಪತ್ನಿ ಬಿ. ಮಿನಿ ಯಾನೆ ಉಷಾ (೨೩)ಎಂಬವರು ನಾಪತ್ತೆಯಾಗಿದ್ದರು. ಈ ಬಗ್ಗೆ ಮಂಜೇಶ್ವರ ಠಾಣೆಗೆ ಪತಿ ದೂರು ನೀಡಿದ್ದರು. ಕೇಸು ದಾಖಲಿಸಿದ ಪೊಲೀಸರು ಈಕೆಯ ಪತ್ತೆಗೆ ಹುಡುಕಾಟ ನಡೆಸುತಿದ್ದಂತೆ ಆಕೆ ಕಾಞಂ ಗಾಡ್ ಠಾಣಾ ಬಳಿಯ ಕಲ್ಯಾಣ ರಸ್ತೆಯಲ್ಲಿ ರುವ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿ ದ್ದು ಆಕೆಯನ್ನು ಕಾಸರಗೋಡಿನ ನ್ಯಾಯಾ ಲಯಕ್ಕೆ ಹಾಜರುಪಡಿಸಿದರು.
Tagged with
cnews,
kgod
ಸುಳ್ಯ: ಜಾನುವಾರು ಕಳವು ಮಾಡಿ ಕಸಾಯಿಖಾನೆಗೆ ಸರಬರಾಜು ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿರುವ ಸುಳ್ಯ ಪೊಲೀಸರು ಕಳವು ಮಾಡಲು ಬಳಸುತ್ತಿದ್ದ ಟಾಟಾ ಸುಮೋ ವಾಹನ ಸಹಿತ ಓರ್ವನನ್ನು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಬುಧವಾರ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಉಬರಡ್ಕ ರಸ್ತೆಯಲ್ಲಿ ಟಾಟಾ ಸುಮೋ (ಕೆಎ ೦೫ ಎಂಡಿ-೩೯೫೬) ವಾಹನ ವನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಅಕ್ರಮವಾಗಿ ಮರದ ತುಂಡುಗಳನ್ನು ಸಾಗಿಸುತ್ತಿರುವ ವಿಷಯ ತಿಳಿಯಿತು. ಪೊಲೀಸರು ವಾಹನವನ್ನು ನಿಲ್ಲಿಸುತ್ತಿದ್ದಂತೆ ಬಂಟ್ವಾಳ ತಾಲೂಕು ತುಂಬೆಯ ನವಾಜ್(೨೪), ಪಾಣೆಮಂಗಳೂರಿನ ಇರ್ಫಾನ್(೨೫), ಹಾಗೂ ಪರಂಗಿಪೇಟೆಯ ಅಬ್ದುಲ್ ಲತೀಫ್(೨೪) ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಫರಂಗಿಪೇಟೆಯ ತಸ್ಲಿಮ್(೨೯) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಜಾನುವಾರು ಕಳವು ಪ್ರಕರಣಗಳು ಬಯಲಿಗೆ ಬಂದಿವೆ. ಜಾನುವಾರು ಸಿಗದೇ ಇರುವುದರಿಂದ ತಾವು ಮರದ ತುಂಡುಗಳನ್ನು ಕಳವು ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ೫.೨೫ ಲಕ್ಷ ರೂಪಾಯಿ ಮೌಲ್ಯದ ಮರ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ತಾಲೂಕಿನಲ್ಲಿ ಕಳೆದ ಕೆಲವು ತಿಂಗಳಿಂದ ನಿರಂತರ ಜಾನುವಾರು ಕಳ್ಳತನ ನಡೆಯುತ್ತಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಗಳು ಬೆಳಿಗ್ಗೆ ನೋಡುವಾಗ ಕಾಣೆಯಾಗಿರುತ್ತಿದ್ದವು. ಕಳ್ಳರ ಜಾಲವೊಂದು ಈ ಕೃತ್ಯದ ಹಿಂದೆ ಇದೆ ಎಂದರಿತ ಬಜರಂಗದಳ ಇದರ ಹಿಂದೆ ಬಿದ್ದಿತ್ತು. ಕಳೆದ ಫೆ.೨೧ರಂದು ಟಾಟಾ ಸುಮೋ ವಾಹನದಲ್ಲಿ ಸಾಗಿಸುತ್ತಿದ್ದ ಕಳವು ಮಾಡಲಾದ ಜಾನುವಾರುಗಳ ರಕ್ಷಣೆಗೆ ಯತ್ನಿಸಿದಾಗ ವಾಹನ ಅಪಘಾತ ಸಂಭವಿಸಿ ತೀವ್ರ ಗಾಯಗೊಂಡಿದ್ದ ಬಜರಂಗ ದಳ ಕಾರ್ಯಕರ್ತ ಮರ್ಕಂಜದ ಗುರುಕೃಷ್ಣ ಮೃತಪಟ್ಟಿದ್ದರು.
Tagged with
cnews,
sullia
ಉಡುಪಿ: ತಂದೆ-ಮಗ ಹಾಗೂ ಸ್ಥಳೀಯರೊಬ್ಬರು ಮೀನು ಹಿಡಿಯ ಲೆಂದು ಬುಧವಾರ ತೆರಳಿದ್ದವರು ವಾಪಸಾಗದೆ ನಾಪತ್ತೆಯಾಗಿದ್ದು, ಒಂದು ದಿನದ ಬಳಿಕ ನಿನ್ನೆ ಅವರ ಮೃತದೇಹ ಸ್ಥಳೀಯ ಕೆರೆಯ ನೀರಿನಲ್ಲಿ ಪತ್ತೆಯಾಗಿದೆ.
ಉಡುಪಿಯ ಮೂಡುಗುಳಿ ಯೂರು ನಿವಾಸಿಗಳಾದ ರಾಜ್ ಇವರ ಮಗ ಕಿರಣ್ ಹಾಗೂ ಸ್ಥಳೀಯ ನಿವಾಸಿ ನರಸಿಂಹ ಬುಧವಾರ ಸಂಜೆ ಮೀನು ಹಿಡಿಯಲೆಂದು ಹತ್ತಿರದ ಗದ್ದೆಯಲ್ಲಿರುವ ಕೆರೆಗೆ ಹೋಗಿದ್ದರು. ತಡರಾತ್ರಿಯವರೆಗೂ ವಾಪಸಾಗದೇ ಇದ್ದಾಗ ಗಾಬರಿಗೊಂಡ ಮನೆ ಯವರು ಆಸುಪಾಸಿನಲ್ಲಿ ಹಾಗೂ ಕೆರೆ ಸಮೀಪ ಹುಡುಕಾಟ ನಡೆಸಿದ್ದು, ಯಾವುದೇ ಸುಳಿವು ಲಭಿಸಿರಲಿಲ್ಲ. ಭಾರೀ ಹುಡು ಕಾಟದ ಬಳಿಕ ನಿನ್ನೆ ಅವರ ಶವ ಕೆರೆಯಲ್ಲಿ ಪತ್ತೆಯಾಗಿದೆ.
Tagged with
cnews,
upi
ಪುತ್ತೂರು: ಗ್ಯಾಸ್ ಸಿಲಿಂಡರ್ ಕಳವು ಮಾಡಿದಾತ ಸಿಕ್ಕಿ ಬಿದ್ದ ಬಳಿಕ ತಪ್ಪೊಪ್ಪಿಕೊಂಡು ಅದನ್ನು ಹಿಂತಿ ರುಗಿಸಿದ ಪ್ರಸಂಗ ಪುತ್ತೂರು ತಾಲೂ ಕಿನ ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಎಂಬಲ್ಲಿ ನಡೆದಿದೆ.
ಬುಳೇರಿಕಟ್ಟೆಯಲ್ಲಿ ಜಿನಸು ಅಂಗಡಿ ಹೊಂದಿರುವ ಚಂದ್ರಕಾಂತ್ ಎಂಬವರು ತನ್ನ ಕಾರು ಶೆಡ್‌ನಲ್ಲಿ ರಿಸಿದ್ದ ಗ್ಯಾಸ್ ಸಿಲಿಂಡರ್ ಮಂಗಳವಾರ ಕಳವಾಗಿತ್ತು. ಅನುಮಾನಗೊಂಡ ಅವರು ನೆರೆಮನೆಯ ರಿಕ್ಷಾ ಚಾಲಕ ಅಶ್ರಫ್ ಎಂಬವರ ಮನೆಗೆ ಹೋಗಿ ಆತನ ಸಹೋದರನನ್ನು ಕರೆಸಿ ಹುಡುಕಾಡಿದಾಗ ಕಳವಾಗಿದ್ದ ಗ್ಯಾಸ್ ಸಿಲಿಂಡರ್ ಅಲ್ಲಿ ಪತ್ತೆಯಾಗಿತ್ತು.
ಗ್ಯಾಸ್ ಸಿಲಿಂಡರ್ ಕಳವುಗೈದಿದ್ದ ಆರೋಪಿ ಅಶ್ರಫ್ ತಪ್ಪೊಪ್ಪಿಕೊಂಡು ಬಳಿಕ ಸಿಲಿಂಡರ್ ಅನ್ನು ಚಂದ್ರ ಕಾಂತರ ಕಾರು ಶೆಡ್‌ನಲ್ಲಿ ತಂದಿರಿಸಿ ರುವುದಾಗಿ ತಿಳಿದು ಬಂದಿದೆ.
ಘಟನೆಯ ಕುರಿತು ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಲಾ ಗಿದೆ.
Tagged with
cnews,
puttur
ವಿಟ್ಲ: ಮೇ೧೯ ರಂದು ನಾಪತ್ತೆ ಯಾಗಿದ್ದ ಮಾಣಿ ಸಮೀಪದ ಬುಡೋಳಿ ಅಶ್ವಥಾಡಿ ಎಂಬಲ್ಲಿಯ ತಾಯಿ ಮಗಳು ಮಾಣಿ ಸಮೀಪದ ಕಡೇಶ್ವಾಲ್ಯ ಎಂಬಲ್ಲಿ ಪತ್ತೆಯಾಗಿದ್ದಾರೆ.
ಬುಡೋಳಿ ಅಶ್ವಥಾಡಿ ನಿವಾಸಿ ದಿ. ಸೋಮನಾಯ್ಕ ಅವರ ಎರಡನೇ ಪತ್ನಿ ಚೆಲುವಮ್ಮ (೮೦) ಮತ್ತು ಪುತ್ರಿ ರಾಜೀವಿ (೨೭) ಎಂಬವರೇ ಪತ್ತೆಯಾದ ತಾಯಿ ಮಗಳು.
ಇವರು ಮೇ೧೯ರಂದು ಬೆಳಗ್ಗೆ ಮೂರ್ಖಜೆಗೆ ಕೂಲಿ ಕೆಲಸಕ್ಕೆ ಹೋಗುವುದಾಗಿ ತೆರಳಿದವರು ನಾಪತ್ತೆ ಯಾಗಿದ್ದರು. ಈ ಬಗ್ಗೆ ಸೋಮನಾಯ್ಕ ಅವರ ಮೊದಲ ಪತ್ನಿಯ ಪುತ್ರ ಪಾಂಡುನಾಯ್ಕ ವಿಟ್ಲ ಠಾಣೆಯಲ್ಲಿ ಮೇ೨೫ರಂದು ದೂರು ನೀಡಿದ್ದರು. ಅವರು ಕಡೇಶ್ವಾಲ್ಯ ಎಂಬಲ್ಲಿಯ ಮನೆಯೊಂದರಲ್ಲಿ ಕೆಲಸಕಿದ್ದು, ಅಲ್ಲಿಯೇ ಇರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Tagged with
cnews,
vittla
ಸುಳ್ಯ: ಮನೆಯಲ್ಲಿ ಮಹಿಳೆಯೊಬ್ಬರೇ ಇರುವಾಗ ಆಗಮಿಸಿದ ಆಗಂತುಕನೊಬ್ಬ ವಂಚಿಸಿ ಹಣವನ್ನು ದೋಚಲು ಯತ್ನಿಸಿದ ಘಟನೆ ಗುರುವಾರ ಬೆಳ್ಳಾರೆಯಲ್ಲಿ ನಡೆದಿದ್ದು, ಮಹಿಳೆ ದಿಟ್ಟ ನಿಲುವು ತಳೆದು ಇದಕ್ಕೆ ಅವಕಾಶ ನೀಡಲಿಲ್ಲ ಎನ್ನಲಾಗಿದೆ.
ಬೆಳ್ಳಾರೆಯ ರಾಮಕೃಷ್ಣ ಎಂಬವರು ತಮ್ಮ ಪತ್ನಿಯ ತವರು ಮನೆಯಾದ ವಿರಾಜಪೇಟೆಗೆ ಬುಧವಾರ ಹೋಗಿದ್ದರು. ಮನೆಯಲ್ಲಿ ಅವರ ತಾತಿ ಚಂದ್ರಾವತಿ ಮಾತ್ರ ಇದ್ದರು. ಗುರುವಾರ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಆಗಮಿಸಿದ ಆಗಂತುಕನೊಬ್ಬ ತಾನು ನಿಮ್ಮ ಮಗನ ಮಿತ್ರ ಎಂದು ಪರಿಚಯಿಸಿಕೊಂಡು ಅರ್ಜೆಂಟ್ ಗೋಡೌನ್ ಕೀ ನೀಡುವಂತೆ ಕೇಳಿದ್ದು, ನಮ್ಮಲ್ಲಿ ಗೋಡೌನ್ ಇಲ್ಲ ಎಂದು ಮಹಿಳೆ ಹೇಳಿದ್ದಾರೆ. ಆಗ ಆತ ಗೋಡ್ರೆಜ್ ಕೀ ನೀಡುವಂತೆ ಒತ್ತಾಯಿಸಿದ್ದಾನೆ. ಆದರೆ ಮಗನಿಲ್ಲದೆ ತಾನು ಕೀ ನೀಡುವುದಿಲ್ಲ ಎಂದು ಮಹಿಳೆ ಕೀ ನೀಡದೇ ಆತನನ್ನು ಹೊರಗೆ ಕಳುಹಿಸಿದ್ದಾರೆ.
ತನ್ನ ಮೊಬೈಲ್‌ನಲ್ಲಿ ಏನೋ ಮಾತನಾಡಿದಂತೆ ನಾಟಕ ಮಾಡಿದ ಆತ ಮತ್ತೆ ಒಳಗೆ ಬಂದು ಮಗನಿಗೆ ಅರ್ಜೆಟ್ ಹಣ ಬೇಕಾಗಿದ್ದು, ತರುವಂತೆ ತಿಳಿಸಿದ್ದಾಗಿ ಹೇಳಿದ್ದಾನೆ. ಆದರೂ ಮಹಿಳೆ ಕೀ ನೀಡಲಿಲ್ಲ. ಆದರೆ ಗೋಡ್ರೆಜ್ ಕೀ ಬಾಗಿಲ ಬದಿಯ ಗೋಡೆಗೆ ಮೊಳೆ ಹೊಡೆದು ಅದರಲ್ಲಿ ನೇತು ಹಾಕಿತ್ತು. ಇದು ಆತನ ಕಣ್ಣಿಗೆ ಬಿದ್ದು ಅದರಿಂದ ಆತ ಕವಾಟಿನ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಆದರೆ ಮಗ ಬಾರದೇ ತಾನು ಬಾಗಿಲು ತೆಗೆಯಲು ಬಿಡುವುದಿಲ್ಲ ಎಂದು ಮಹಿಳೆ ದಿಟ್ಟ ನಿಲುವು ತಾಳಿದ್ದು, ಬಳಿಕ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ರಾಮಕೃಷ್ಣರು ತಮ್ಮ ಜಮೀನಿನ ಸ್ವಲ್ಪ ಭಾಗವನ್ನು ೧೨ ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ಆದರೆ ಅದರಲ್ಲಿ ಕೇವಲ ನಾಲ್ಕು ಲಕ್ಷ ಮಾತ್ರ ಅವರಿಗೆ ಸಿಕ್ಕಿತ್ತು. ಉಳಿದ ೮ ಲಕ್ಷ ಸಿಗಲು ಬಾಕಿ ಇತ್ತು ಎನ್ನಲಾಗಿದೆ. ಜಮೀನು ಮಾರಾಟ ಮಾಡಿದ ಎಲ್ಲಾ ಹಣ ಬೀರುವಿನಲ್ಲಿ ಇದೆ ಎಂದು ತಿಳಿದವನೇ ಈ ಕೃತ್ಯ ನಡೆಸಿ ರಬೇಕೆಂದು ಶಂಕಿಸಲಾಗಿದೆ.
Tagged with
cnews,
sullia
ಮಂಗಳೂರು: ಅನಾರೋಗ್ಯ ದಿಂದ ಬಳಲುತ್ತಿದ್ದ ನಿವೃತ್ತ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀರಿ ಕೋಟೆಕಾರು ಸಮೀಪ ಗುರು ವಾರ ನಡೆದಿದೆ.
ರಾಧಾಕೃಷ್ಣ (೭೦) ಆತ್ಮಹತ್ಯೆ ಮಾಡಿ ಕೊಂಡವರು. ವಿಟ್ಲ, ಮೂಡಬಿದ್ರೆ ಹಾಗೂ ಅರಣ್ಯ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಬಳಿಕ ಮನೆಯಲ್ಲೇ ಉಳಿದುಕೊಂಡಿದ್ದರು.
Tagged with
cnews,
mlore
ಕಾಸರಗೋಡು: ಬಸ್ಸಿನ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ನಾಲ್ಕರ ಹರೆಯದ ಕಂದಮ್ಮ ದಾರುಣ ವಾಗಿ ಮೃತಪಟ್ಟು ತಾಯ್ತಂದೆ ಗಂಭೀರ ಜಖಂಗೊಂಡ ಘಟನೆ ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬಳೆ ಸಮೀಪದ ಆರಿಕ್ಕಾಡಿ ಶ್ರೀವೀರಾಂಜ ನೇಯ ಕ್ಷೇತ್ರ ಬಳಿಯಲ್ಲಿ ನಿನ್ನೆ ಸಂಜೆ ಅಪಘಾತ ನಡೆದಿದೆ. ಮೃತ ಬಾಲಕಿ ಯನ್ನು ಕಳತ್ತೂರು ಜಾರ ನಿವಾಸಿ ಗಳಾದ ಮುಸ್ತಾಫ-ರಸೀನಾ ದಂಪತಿ ಯರ ಪುತ್ರಿ ಫಾತಿಮತ್ ರಿಂಜಾನಾ ಎಂದು ಗುರುತಿಸಲಾಗಿದೆ.
ಅನಾರೋಗ್ಯದ ಕಾರಣ ಮಗಳನ್ನು ಕರೆದುಕೊಂಡು ಬೈಕಿನಲ್ಲಿ ಕುಂಬಳೆಗೆ ಬಂದು ಮರಳುತ್ತಿದ್ದಾಗ ದುರಂತ ಸಂಭ ವಿಸಿದೆ. ಆರಿಕ್ಕಾಡಿ ಬಳಿ ಎದುರಿನಲ್ಲಿದ್ದ ಬಸ್ಸು ದಿಢೀರನೆ ನಿಲ್ಲಿಸಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್, ಬಸ್ಸಿನ ಹಿಂಬದಿಗೆ ಬಡಿದಿತ್ತು. ಬೈಕ್‌ನ ಮುಂಬ ದಿಯಲ್ಲಿ ಕುಳಿತಿದ್ದ ರಿಂಜಾನಾಳ ತಲೆ ಬಸ್ಸಿನ ಹಿಂಬದಿಗೆ ಬಡಿದು ಕೆಳ ಬಿದ್ದ ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಳು. ಮುಸ್ತಾಫ ಹಾಗೂ ರಸೀನಾ ಆಸ್ಪತ್ರೆಯಲ್ಲಿ ಚೇತರಿಸಿದ್ದಾರೆ. ಕುಂಬಳೆ ಪೊಲೀಸರು ಬಸ್ಸು ಚಾಲಕನ ವಿರುದ್ಧ ಕೇಸು ದಾಖಲಿಸಿದ್ದಾರೆ.
Tagged with
cnews,
kgod
ಕಾಸರಗೋಡು: ಶಾಲೆ ಬಿಟ್ಟು ಮನೆಗೆ ಮರಳಿದ ಒಂಭತ್ತನೇ ತರಗತಿ ವಿದ್ಯಾರ್ಥಿ ಮನೆಯ ಬಚ್ಚಲು ಕೋಣೆ ಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿ ದ್ದಾನೆ. ಕಾಸರಗೋಡು ನಗರದ ಅಡ್ಕತ್ತಬೈಲು ಬೀಚ್ ನೆಲ್ಲಿಕುಂಜೆ ನಿವಾಸಿ ಉತ್ತಂದಾಸ ಎಂಬವರ ಪುತ್ರ ಸಚಿನ್ ದಾಸ್(೧೫) ಎಂಬಾತ ಆತ್ಮಹತ್ಯೆಗೈದ ಬಾಲಕ.
ಬಚ್ಚಲು ಕೋಣೆಗೆ ಹೋಗಿ ಬಹಳ ಹೊತ್ತಾದರೂ ಹೊರಬಾರದೇ ಇದ್ದುದರಿಂದ ಮನೆ ಮಂದಿ ತೆರಳಿ ದಾಗ ಬಾಗಿಲಿನ ಚಿಲಕ ಹಾಕಲಾಗಿತ್ತು. ಬಾಗಿಲು ಮುರಿದು ನೋಡಿದಾಗ ಬಚ್ಚಲು ಕೋಣೆಯ ಸೀಲಿಂಗ್‌ನ ಕುಣಿಕೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಚೆಮ್ನಾಡು ಜಮಾಯತ್ ಹೈಯರ್ ಸೆಕೆಂಡರಿ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿಯಾದ ಸಚಿನ್‌ದಾಸ್ ತಾಯಿ ಸರಳಾ, ಸಹೋದರ ಶಮೀನ್ ದಾಶ್, ಸಹೋದರಿ ಸಾಂದ್ರಾ ಎಂಬವರನ್ನು ಹೊಂದಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
Tagged with
cnews,
kgod
ಮಂಗಳೂರು: ಸರಕಾರಿ ಜಾಗ ವನ್ನು ಅತಿಕ್ರಮಿಸಿ ಮನೆ ಕಟ್ಟಲಾಗಿದೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮೂಡಬಿದ್ರೆ ತಹಶೀಲ್ದಾರ್, ಠಾಣಾಧಿಕಾರಿ ಸಹಿತ ಇತರರು ಮನೆಗೆ ಅಕ್ರಮವಾಗಿ ಪ್ರವೇ ಶಿಸಿ ದೌರ್ಜನ್ಯ ನಡೆಸಿದ್ದಾರೆ ಎಂದು ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಮೂಡಬಿದ್ರೆ, ಮಾರ್ಪಾಡಿ ಗ್ರಾಮದ ಗಾಂಧಿನಗರ ನಿವಾಸಿ ಸಂಜೀವ ಎಂಬವರೇ ದೂರು ನೀಡಿ ದವರು. ಅವರು ಕಳೆದ ೨೭ ವರ್ಷ ಗಳಿಂದ ಪ್ರಸ್ತುತ ಗ್ರಾಮದ ಸ.ನಂ. ೧೫೮ರಲ್ಲಿರುವ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಟುಂಬ ಸಮೇತ ವಾಸವಿದ್ದಾರೆ. ಆದರೆ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿರುವ ಕಾರಣ ಏಳು ದಿನಗಳಲ್ಲಿ ಮನೆ ತೆರವುಗೊಳಿಸುವಂತೆ ತಹ ಶೀಲ್ದಾರ್ ಮುರಳೀಧರ್ ಜೂ.೧೧ ರಂದು ತನಗೆ ನೋಟಿಸ್ ನೀಡಿದ್ದು ಅದಕ್ಕೆ ಜೂ.೧೫ರಂದು ಉತ್ತರ ನೀಡಿ ರುವುದಾಗಿ ಸಂಜೀವ ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಉತ್ತರ ನೀಡಿದ ದಿನವೇ ತಹಶೀಲ್ದಾರ್, ಮೂರು ದಿನಗಳಲ್ಲಿ ಮನೆಯನ್ನು ತೆರವುಗೊಳಿಸುವಂತೆ ಇನ್ನೊಂದು ನೋಟಿಸ್ ಜಾರಿಗೊಳಿಸಿ ದ್ದಾರೆ. ಜೂ.೧೭ರಂದು ಮಧ್ಯಾಹ್ನ ತಹಶೀಲ್ದಾರ್ ಮುರಳೀಧರ್, ಎಸ್.ಐ.ರಮೇಶ್ ಮತ್ತು ಆಲ್ವಿನ್ ವಾಲ್ಟರ್ ಡಿ.ಸೋಜ ಎಂಬವರು ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮನೆ ಯೊಳಗಿದ್ದ ವಸ್ತುಗಳನ್ನು ಹೊರಕ್ಕೆ ಸೆದಿದ್ದು ೭೫ ಸಾವಿರ ನಷ್ಟವುಂಟು ಮಾಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ನನ್ನ ವಿರುದ್ಧ ಸುಳ್ಳು ದೂರು ನೀಡಲಾಗಿದ್ದು ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳಾದ ನೀಲಯ್ಯ, ಸುಂದರ ಮತ್ತು ಹೊನ್ನಯ್ಯ ಎಂಬವರೂ ಶಾಮೀಲಾಗಿದ್ದು ಎಲ್ಲರ ವಿರುದ್ಧ ಕ್ರಮ ಕೈಗೊಂಡು ತೆರವುಗೊಳಿಸಿರುವ ಮನೆಯನ್ನು ಮತ್ತೆ ದೊರಕಿಸಿ ಕೊಡಬೇಕಾಗಿ ಸಂಜೀವ ಅವರು ಜಿಲ್ಲಾಧಿಕಾರಿಗೆ ನೀಡಿರುವ ಮನವಿಯಲ್ಲಿ ಅಲವತ್ತುಕೊಂಡಿದ್ದಾರೆ.
Tagged with
cnews,
mlore
ಕಾಸರಗೋಡು: ಚಲಿಸುತ್ತಿದ್ದ ಆಮ್ನಿ ವ್ಯಾನ್ ಅಕಸ್ಮಾತ್ ಬೆಂಕಿಗಾಹುತಿಯಾ ಗಿದ್ದು, ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿ ಹೋಗಿದೆ. ಮೊನ್ನೆ ತಡರಾತ್ರಿ ೧೦ ಗಂಟೆಯ ವೇಳೆಗೆ ಉಪ್ಪಳ ಲಾಲ್ ಬಾಗ್‌ನ ಕೊಮ್ಮೆಂಗಳದಲ್ಲಿ ಘಟನೆ ಸಂಭವಿಸಿದೆ.
ಮಂಜೇಶ್ವರ ಉದ್ಯಾವರ ನಿವಾಸಿ ಪ್ರವೀಣ ಎಂಬವರ ಆಮ್ನಿ ವ್ಯಾನ್ ಕೊಮ್ಮೆಂಗಳ ಮೂಲಕ ಚಲಿಸುತ್ತಿದ್ದಂತೆ ದಿಢೀರನೆ ಬೆಂಕಿ ವ್ಯಾಪಿಸುತ್ತಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಆಮ್ನಿಯನ್ನು ನಿಲ್ಲಿಸಿದ ಪ್ರವೀಣ್ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದರು.
Tagged with
cnews,
kgod
ವಿಟ್ಲ: ವಿಟ್ಲದ ಪ್ರಮುಖ ಹೋಟೆಲ್‌ಗಳಿಗೆ ದಾಳಿ ನಡೆಸಿದ ಬಂಟ್ವಾಳ ಆಹಾರ ಇಲಾಖೆ ನಿರೀಕ್ಷಕರು ನಾಲ್ಕು ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ನಿನ್ನೆ ನಡೆದಿದೆ.
ಗುರುವಾರ ಸಂಜೆ ಹೊತ್ತಿಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪ್ರಮುಖ ನಾಲ್ಕು ಹೋಟೆಲ್‌ಗಳಿಗೆ ದಾಳಿ ನಡೆಸಿದ ಅವರು ತಲಾ ಒಂದರಂತೆ ಒಟ್ಟು ನಾಲ್ಕು ಗೃಹೊಪಯೋಗಿ ಅಡುಗೆ ಅನಿಲಗಳನ್ನು ಮೊಟ್ಟುಗೋಳು ಹಾಕಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Tagged with
cnews,
vittla
ಸುಳ್ಯ: ಎಡಮಂಗಲ ಗ್ರಾಮದ ಬೀಡುಮನೆ ಪದ್ಮಯ್ಯನಾಯ್ಕ ಎಂಬವರ ಪತ್ನಿ ಕಮಲ(೫೦) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಇವರು ನಾಲ್ಕು ವರ್ಷದಿಂದ ಚಿಕೂನ್ ಗುನ್ಯ ಕಾಯಿಲೆಯಿಂದ ಬಳಲುತ್ತಿದ್ದು ಗಂಟು ನೋವಿನಿಂದ ಬೇಸತ್ತಿದ್ದರು. ಬುಧವಾರ ರಾತ್ರಿ ೯.೦೦ಘಂಟೆಗೆ ವಿಷ ಸೇವಿಸಿದರು. ವಿಷಯ ತಿಳಿದ ಮನೆಯವರು ಅವರನ್ನು ತಕ್ಷಣ ಕಡಬ ಆಸ್ಪತ್ರೆಗೆ ಕರೆದೊಯ್ದ ಬಳಿಕ ಪುತ್ತೂರಿನ ಮಹಾವೀರ ಆಸ್ಪತ್ರೆ ಕರೆದೊಯ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
Tagged with
cnews,
sullia
ಸುಳ್ಯ: ಸುಬ್ರಹ್ಮಣ್ಯ ಕಾಶಿಕಟ್ಟೆ ಕೇಶವ ಎಂಬವರ ಮನೆಗೆ ಸೆಲ್ಕೋ ಸೋಲರ್ ಅಳವಡಿಸುವ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿ ಟೆಕ್ನೀಶಿಯನ್ ಅರಂತೋಡಿನ ಅಡ್ತಲೆಯ ರವಿಪ್ರಸಾದ್ ಎಂಬವರು ಸಾವೀಗಿಡಾದ ಘಟನೆ ವರದಿಯಾಗಿದೆ.
Tagged with
cnews,
sullia
ಸುಳ್ಯ: ದುಗಲಡ್ಕದಲ್ಲಿ ಪಿಕಪ್ ವಾಹನ ಹಾಗೂ ಇಕೋ ವ್ಯಾನ್ ಡಿಕ್ಕಿಯಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಎಲಿಮಲೆಯ ಸೋಮಣ್ಣ ಎಂಬವರ ಪಿಕಪ್ ದುಗ್ಗಲಡ್ಕದ ಕುಮರೇಸ್ ಎಂಬವರ ಇಕೋಗೆ ಡಿಕ್ಕಿ ಹೊಡೆದಿದ್ದು, ಇಕೋದ ಬಾಗಿಲು ಪುಡಿಯಾಗಿದೆ.
Tagged with
cnews,
sullia
ಪುತ್ತೂರು: ಸ್ಯಾಂಟ್ರೋ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಪುತ್ತೂರು ಪೇಟೆಯ ಬೊಳುವಾರು ಸಮೀಪದ ಕರ್ಮಲ ದಲ್ಲಿ ಬುಧವಾರ ರಾತ್ರಿ ಸಂಭವಿ ಸಿದೆ.
ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ದರ್ಖಾಸು ನಿವಾಸಿ ಹರೀಶ್ ಗೌಡ ಗಾಯ ಗೊಂಡವರು.
ಅವರನ್ನು ತಕ್ಷಣ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆ ಯೊಂದಕ್ಕೆ ದಾಖಲಿಸಲಾಗಿದೆ.
ಬೊಳುವಾರು ಕಡೆಗೆ ಬರುತ್ತಿದ್ದ ಬೈಕ್ ಮತ್ತು ಕೆದಿಲ ಕಡೆಗೆ ಸಾಗುತ್ತಿದ್ದ ಕಾರು ನಡುವೆ ಡಿಕ್ಕಿ ಸಂಭವಿಸಿತ್ತು.
Tagged with
cnews,
puttur
ಮಂಗಳೂರು: ನೂಜಿಬಾಳ್ತಿಲ ಸಮೀಪದ ಕುಬಲಾಡಿ ಎಂಬಲ್ಲಿ ಇತ್ತೀಚೆಗೆ ಅರಣ್ಯ ಸಂಚಾರಿ ದಳದ ಪೊಲೀಸರು ಪತ್ತೆಹಚ್ಚಿರುವ ಜಿಂಕೆ ಕೊಂಬು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಶೀಘ್ರವೇ ಬಂಧಿಸ ಲಾಗುವುದು ಎಂದು ಅರಣ್ಯಾಧಿ ಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕುಬಲಾಡಿಯಲ್ಲಿ ಜಿಂಕೆ ಕೊಂಬು ಹಾಗೂ ಚರ್ಮ ಇರುವ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಮೂರು ವಾರಗಳ ಹಿಂದೆ ಪುತ್ತೂರು ಅರಣ್ಯ ಸಂಚಾರಿ ದಳದ ಎಸ್.ಐ.ಸುಬ್ಬಣ್ಣ ನಾಯ್ಕ್ ನೇತೃತ್ವದ ತಂಡ ದಾಳಿ ನಡೆಸಿದಾಗ ಆರೋಪಿಗಳು ಪರಾರಿಯಾಗಿದ್ದರು.
ಈ ಸಂದರ್ಭ ಜಿಂಕೆ ಕೊಂಬುಗಳು ಪತ್ತೆಯಾಗಿದ್ದು, ನೂಜಿಬಾಳ್ತಿಲ ಗ್ರಾಮದ ಕುಬಲಾಡಿ ನಿವಾಸಿ ಗುರುವಪ್ಪ ಹಾಗೂ ಡೆಪ್ಪಾಜೆ ನಿವಾಸಿ ಡೀಕಯ್ಯ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಅರಣ್ಯ ಸಂಚಾರಿ ದಳದವರು ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.
Tagged with
cnews,
mlore
ಮಂಗಳೂರು: ಕಾಸರಗೋಡು ಪರವನಡ್ಕದ ಬಾಲಾಪರಾಧ ಕೇಂದ್ರ (ಜುವೆನೈಲ್ ಹೋಂ)ದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಾಲ್ಕು ಮಂದಿ ಬಾಲಪರಾಧಿಗಳು ಪರಾರಿಯಾಗಿ ರುವುದಾಗಿ ತಿಳಿದು ಬಂದಿದೆ.
ಕಣ್ಣೂರು, ತಮಿಳ್ನಾಡು ಹಾಗೂ ಗುಜರಾತ್ ಮೂಲಕ ಬಾಲಕರು ಪರಾರಿಯಾದವರಾಗಿದ್ದು, ಪರವನಡ್ಕದ ಜುವೈನೆಲ್ ಜೋಂ ಮೇಲ್ವೀಚಾರಕ ಜೋಯಿ ಎಂ. ಜೋಸೆಫ್ ಅವರ ದೂರಿನ ಮೇರೆಗೆ ನಗರ ಠಾಣಾ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಈ ಹಿಂದೆ ಕಲ್ಲಿಕೋಟೆ ಬಾಲ ಪರಾಧ ಕೇಂದ್ರದಿಂದ ತಪ್ಪಿಸಿಕೊಂಡು ಪಳ್ಳಿಕೆರೆಯಲ್ಲಿ ಕಳವಿಗೆ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಸಿಕ್ಕಿ ಬಿದ್ದಿದ್ದರು.
Tagged with
cnews,
mlore
ಮಂಗಳೂರು: ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮ ಮೊಡಂಕಾಪು ಎಂಬಲ್ಲಿ ಹಾಡುಹಗಲೇ ಮನೆಯ ಹಿಂಬದಿ ಬಾಗಿಲು ಮುರಿದು ೨೮ಗ್ರಾಂ ಚಿನ್ನದ ಬಳೆಮತ್ತು ರೂ.೫೫೦ ನಗದು ಕಳವು ಮಾಡಿರುವ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೊಡಂಕಾಪು ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ರವೀಂದ್ರ ಶೆಟ್ಟಿಯವರು ಕರ್ತವ್ಯಕ್ಕೆ ಹೋಗಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಅವರು ಹಿಂತಿರುಗಿ ಬಂದ ನಂತರವಷ್ಟೇ ವಿಷಯ ಬೆಳಕಿಗೆ ಬಂದಿದೆ. ಸುಮಾರು ಮೂರು ವರ್ಷಗಳ ಹಿಂದೆಯೂ ಈ ಮನೆಯಲ್ಲಿ ಇದೇ ಮಾದರಿ ಕಳ್ಳತನ ನಡೆದಿತ್ತು.
Tagged with
cnews,
mlore
ಮಂಗಳೂರು: ನಗರದ ಗೂಡ್ಸ್‌ಶೆಡ್ ಬಳಿಯಿರುವ ಬಾರ್ ಮಾಲೀಕ ಚಂದ್ರಶೇಖರ ಶೆಟ್ಟಿ ಎಂಬವರನ್ನು ಬಂಧಿಸಿರುವ ಪಾಂಡೇಶ್ವರ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಪರವಾನಿಗೆಯಲ್ಲಿ ನಮೂದಿಸಿದ ಸಮಯವನ್ನು ಉಲ್ಲಂಘಿಸಿ ವ್ಯವಹಾರ ನಡೆಸುತ್ತಿದ್ದ ಆರೋಪ ಅವರ ಮೇಲಿದೆ. ಸಾಮಾನ್ಯವಾಗಿ ಬೆಳಿಗ್ಗೆ ೧೧ ಗಂಟೆಯಿಂದ ರಾತ್ರಿ ೧೧ ಗಂಟೆವರೆ ತೆರೆದಿರಬೇಕಾಗಿದ್ದ ಬಾರ್ ಬೆಳಗ್ಗೆಯಿಂಲೇ ತೆರೆದಿರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Tagged with
cnews,
mlore
ಮಂಗಳೂರು: ಸಿಇಟಿಗೆ ಸಂಬಂಧಿಸಿದ ಒಂದು ತಿಂಗಳ ತರಬೇತಿ ನೀಡುತ್ತೇವೆ ಎಂದು ಶುಲ್ಕ ಪಡೆದು ೨೦ ದಿನದ ತರಬೇತಿ ನೀಡಿ ಬ್ರೈಟ್ ಸಂಸ್ಥೆ ವಂಚಿಸಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಶ್ರೀರಾಮ ಸೇನೆ ಜೊತೆ ಸೇರಿ ಪ್ರತಿಭಟನೆ ನಡೆಸಿದ ಘಟನೆ ನಿನ್ನೆ ಕರಾವಳಿ ಕಾಲೇಜ್ ಆವರಣದಲ್ಲಿ ನಡೆದಿದೆ.
ಬನವಾಸಿ ಎಂಬವರ ಸಂಚಾಲಕತ್ವದಲ್ಲಿ ರುವ ಬ್ರೈಟ್ ಎಂಬ ಸಂಸ್ಥೆ ಕರಾವಳಿ ಕಾಲೇಜಿ ನಲ್ಲಿ ಸಿಇಟಿ ತರಬೇತಿ ಕೇಂದ್ರ ಆರಂಭಿಸಿತ್ತು. ೩೦ ದಿನದ ಅವಧಿಯ ಈ ಕೋರ್ಸಿಗೆ ರಾಜ್ಯಾ ದ್ಯಂತ ೮೦೦ ವಿದ್ಯಾರ್ಥಿಗಳು ಪ್ರವೇಶ ಪಡೆದು ಕೊಂಡಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿ ಯಿಂದ ಏಳು ಸಾವಿರ ಶುಲ್ಕ ಪಡೆದುಕೊಳ್ಳ ಲಾಗಿದ್ದು, ಇದರಲ್ಲೇ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು. ಈಗಾ ಗಲೇ ೨೨ ದಿನದ ತರಬೇತಿ ಮುಗಿದಿದ್ದು, ಎಂಟು ದಿನದ ತರಬೇತಿ ಬಾಕಿ ಉಳಿದಿದ್ದವು. ನಗರದಲ್ಲಿ ಇಂದಿನಿಂದ ಬಿಜೆಪಿಯ ಜೈಲ್ ಭರೋ ಚಳವಳಿ ನಡೆಯುವ ಹಿನ್ನೆಲೆಯಲ್ಲಿ ಸಮಸ್ಯೆಯಾಗಬಹುದೆಂದು ಬ್ರೈಟ್ ಸಂಸ್ಥೆ ವಿದ್ಯಾರ್ಥಿಗಳಿಗೆ ರಜೆ ನೀಡಿತ್ತು. ಒಂದು ವಾರದ ಬಳಿಕ ಮತ್ತೆ ತರಗತಿಗೆ ಹಾಜರಾಗುವಂತೆ ಸೂಚನೆಯನ್ನು ನೀಡಿತ್ತು. ಆದರೆ ವಿದ್ಯಾರ್ಥಿಗಳು ಮಾತ್ರ ಸಂಸ್ಥೆ ನಮ್ಮನ್ನು ವಂಚಿಸುತ್ತಿದೆ ಎಂದು ಆರೋಪಿಸಿ ಗದ್ದಲ ಉಂಟು ಮಾಡಿ ಕಾಲೇಜು ಬಸ್ ಚಾಲಕನಿಗೆ ಹಲ್ಲೆ ನಡೆಸಿದ್ದರು.
ಬ್ರೈಟ್ ನಮ್ಮಿಂದ ಏಳು ಸಾವಿರ ಹಣ ಪಡೆದು ವಸತಿ, ಊಟ ಯಾವುದನ್ನೂ ಸರಿಯಾಗಿ ನೀಡದೆ ವಂಚಿಸಿದ್ದಲ್ಲದೆ ಇದೀಗ ೨೨ ದಿನದ ತರಬೇತಿ ನೀಡಿ ಕೈ ತೊಳೆದು ಕೊಳ್ಳುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದ ವಿದ್ಯಾರ್ಥಿಗಳು, ಶ್ರೀರಾಮ ಸೇನೆಗೆ ದೂರು ನೀಡಿದ್ದರು. ಶ್ರೀರಾಮ ಸೇನೆ ಬ್ರೈಟ್ ತರಬೇತಿ ಕೇಂದ್ರಕ್ಕೆ ಆಗಮಿಸಿ ಅದರ ನೇತೃತ್ವ ವಹಿಸಿಕೊಂಡಿದ್ದ ಡಾ. ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಪ್ರತಿಕ್ರಿಯಿಸಿದ ಪ್ರಸಾದ್ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ನೀಡಲಾಗಿದೆಯೇ ಹೊರತು ವಂಚಿಸಿಲ್ಲ. ಪ್ರತಿಭಟನೆ ನಡೆಯುವ ಕಾರಣ ಈ ರೀತಿ ರಜೆ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆದರೆ ವಿದ್ಯಾರ್ಥಿಗಳು ಈ ರಜೆಗೆ ಆಕ್ಷೇಪ ವ್ಯಕ್ತ ಪಡಿಸಿದರು. ಬಳ್ಳಾರಿ, ದಾವಣಗೆರೆ, ಬೆಂಗಳೂರು ಮುಂತಾದ ಕಡೆಗಳಿಂದ ಬಂದಿರುವ ವಿದ್ಯಾರ್ಥಿಗಳು ಮತ್ತೆ ಊರಿಗೆ ಹೋಗಿ ಬರುವುದು ತ್ರಾಸದಾಯಕ, ಹೀಗಾಗಿ ರಜೆ ಬೇಡ ಎಂದರು. ಈ ವೇಳೆ ಕಾಲೇಜಿನ ಬಸ್ ಚಾಲಕ ಶ್ರೀರಾಮ ಸೇನೆಯವರ ಅಧಿಕ ಪ್ರಸಂಗತನ ಎನ್ನುವ ಹೇಳಿಕೆ ನೀಡಿದ್ದ. ಇದನ್ನು ಕೇಳಿಸಿಕೊಂಡ ರಾಮ ಸೇನೆ ಕಾರ್ಯಕರ್ತರು ಬಸ್ ಚಾಲಕನಿಗೆ ಥಳಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕರಾವಳಿ ಕಾಲೇಜು ಆಡಳಿತ ಮಂಡಳಿ ಈ ಘಟನೆ ಆಕಸ್ಮಿಕ ಮಾತ್ರ, ನಾವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬ್ರೈಟ್‌ಗೆ ನಮ್ಮ ಕ್ಯಾಂಪಸ್‌ನಲ್ಲಿ ಅವಕಾಶ ನೀಡಿದ್ದೇವೆ. ಅವರು ವಿದ್ಯಾರ್ಥಿಗಳನ್ನು ವಂಚಿಸಿಲ್ಲ. ಇದು ತಪ್ಪು ಕಲ್ಪನೆಯಿಂದ ಉಂಟಾಗಿರುವಂತಹುದು ಎಂದಿದ್ದಾರೆ.
Tagged with
cnews,
feature,
mlore

ಕುಂದಾಪುರ: ಅಧಿಕೃತವಾಗಿ ಆತ ಬರೋಬ್ಬರಿ ನಾಲ್ಕು ಮದುವೆಯಾಗಿದ್ದಾನೆ. ನಾಲ್ವರು ಹೆಂಡತಿ ಯರಿಗೂ ತಲಾ ಎರಡರಂತೆ ೮ ಮಕ್ಕಳನ್ನು ಕರು ಣಿಸಿದ್ದಾನೆ. ಅನಧಿಕೃತವಾಗಿ ಆತ ಮದುವೆಯಾ ದಷ್ಟು ಸಂತಾನ ಭಾಗ್ಯ ಕರುಣಿಸಿದೆಷ್ಟು ಎಂದು ಇನ್ನೂ ತಿಳಿದುಬಂದಿಲ್ಲ. ಆತನ ಮೂರನೇ ಹೆಂಡತಿ ಕುಂದಾಪುರ ಕೋಡಿಯ ರಹಮತ್‌ಳನ್ನು ಆತ ಮದುವೆಯಾದದ್ದು ೨೦೦೬ರಲ್ಲಿ. ಕಟಪಾಡಿಯ ಬಾಡಿಗೆ ಮನೆ ವಿಳಾಸ ತಿಳಿಸಿ ರೂ.೧೫೦೦೦ಕ್ಕೆ ತಂದೆ ತಾಯಿಯ ಹಾಗೆ ನಟಿಸುವಂತೆ ಅಪ್ಪ ಅಮ್ಮಂದಿ ರನ್ನು ಸೃಷ್ಟಿಸಿದ ಆತ ರಹಮತ್ ಮನೆಯವರಿಂದ ಎಂಟು ಪವನ್ ಚಿನ್ನ ರೂ. ೫೦,೦೦೦ ನಗದು ಪಡೆದು ವಿವಾಹವಾಗಿದ್ದ. ಪೈಂಟರ್, ಪ್ಲಂಬರ್ ಎನ್ನುತ್ತಾ ಒಂದಷ್ಟು ಸಮಯ ರಹಮತ್‌ಳೊಂದಿಗೆ ದಾಂಪತ್ಯ ಹಾಡಿದ ಈತ ಅವಳಿಗೆ ಎರಡು ಮಕ್ಕ ಳನ್ನು ಸೃಷ್ಟಿಸಿ ನಾಪತ್ತೆಯಾಗಿದ್ದ. ಅವನ ಹುಡುಕಾಟ ದಲ್ಲಿದ್ದ ರಹಮತ್‌ಳ ಮನೆಯವರಿಗೆ ತಿಳಿದುಬಂದದ್ದು ಈ ನಿಖಾ ಪ್ರವೀಣ ಹಂಝನ ಮನೆಯಿರುವುದು ಗುರುಪುರ ಸಮೀಪದ ಮಳಲಿ ಎಂಬಲ್ಲಿ. ತನ್ನ ೧೬ನೇ ವರ್ಷಕ್ಕೆ ಇವನು ನಿಖಾ ಮಾಡಿಕೊಂಡಿದ್ದು ಮಂಗಳೂರು ಬೆಂಗ್ರೆಯ ಬಡ ಯುವತಿಯನ್ನು. ಅವಳಿಗೂ ಸಮಪಾಲು ಎಂಬಂತೆ ಎರಡು ಮಕ್ಕಳನ್ನು ಕರುಣಿಸಿದ ಹಂಝ ನೇರವಾಗಿ ಹೊರಟಿದ್ದು ಕೇರಳದ ಕಾಞಂಗಾಡಿಗೆ. ಅಲ್ಲಿಯೂ ಸಹ ಓರ್ವಳೊಂದಿಗೆ ನಿಖಾ ಮಾಡಿಕೊಂಡಿದ್ದ ಹಂಝ ಅಲ್ಲಿಯೂ ಸಮಪಾಲನಂತೆ ಎರಡು ಮಕ್ಕಳ ಅಂತರ್ಧಾನನಾಗಿದ್ದ. ಮಗದೊಂದು ನಿಖಾ ಬಂಟ್ವಾಳ ಸಮೀಪದ ಯುವತಿಯೊಂದಿಗೆ ನಡೆದಿದೆ ಎನ್ನಲಾಗಿದೆ. ಸಾಕಷ್ಟು ಹುಡುಕಾಟದ ನಂತರ ಕಳೆದ ಎರಡು ವರ್ಷದ ಹಿಂದೆ ಏಕಾಏಕಿ ರಹಮತ್‌ಳ ಮನೆಯಲ್ಲಿ ಪ್ರತ್ಯಕ್ಷನಾದ ಹಂಝ ಅಲ್ಲಿ ಮತ್ತೆ ಹಣ ಸೆಳೆಯುವ ತಂತ್ರ ಹೂಡಿದ್ದನಾದರೂ ಇವನ ಸರಣಿ ನಿಖಾದ ಬಗ್ಗೆ ತಿಳಿದಿದ್ದ ಮನೆಯವರು ಕುಂದಾಪುರ ಮಹಿಳಾ ಠಾಣೆಗೆ ದೂರು ನೀಡಿ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲಿ ಹೆಂಡತಿ ಮಕ್ಕಳಿಗೆ ಮಾಸಿಕ ೨೦೦೦ ನೀಡುವ ಬಗ್ಗೆ ಲಿಖಿತವಾಗಿ ಬರೆದುಕೊಟ್ಟಿದ್ದ ಹಂಝ ಮತ್ತೆ ಅಂತರ್ಧಾನಿಯಾಗಿ ಬಿಟ್ಟಿದ್ದ. ಕಟ್ಟಕಡೆಗೆ ಆತ ರಮಲತ್ ಳಿಗೆ ತಲಾಖ್ ಆದರೂ ನೀಡಿದರೆ ಅವಳಿಗೆ ಬೇರೊಂದು ಬದುಕಾದರೂ ಕಲ್ಪಿಸಿಕೊಡಬಹುದಿತ್ತು ಎಂಬ ಹುಕ್ಕಿಗೆ ಬಿದ್ದ ಅವರ ಮನೆಯವರು ಮತ್ತೆ ಹುಡುಕಾಟ ಶುರು ಮಾಡಿದರೆ ಅವನು ನಿನ್ನೆ ರಾತ್ರಿ ಪತ್ತೆಯಾಗಿದ್ದು. ಬೆಂಗ್ರೆಯ ಹೆಂಡತಿ ಮನೆಯಲ್ಲಿ ಅಲ್ಲಿಂದ ಅವನನ್ನು ಎಬ್ಬಿಸಿಕೊಂಡ ರಮಲತ್‌ಳ ಮನೆಯವರು ಕುಂದಾಪುರ ಠಾಣೆಗೆ ತಂದು ಕೇಸನ್ನು ದಾಖಲಿಸದೆ ತಲಾಖನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರಾ ದರೂ ಉಳಿದ ಹೆಂಡತಿಯರ ಗತಿ ಅಲ್ಲಾಹುವೇ ಬಲ್ಲ ಎಂಬಂತಾಗಿದೆ.
ಬಚಾವಾದ ಗಂಗೊಳ್ಳಿಯ ಯುವತಿ
ಈ ಖತರ್‌ನಾಕ್ ಹಂಝ ತೀರಾ ಬಡ ಹುಡುಗಿಯರನ್ನು ತನ್ನ ಟಾರ್ಗೆಟನ್ನಾಗಿಸಿಕೊಳ್ಳುತ್ತಿದ್ದು, ಕೋಡಿಯ ರಹಮತ್‌ಳ ಮನೆಯವರೋರ್ವರು ಆಸ್ಪತ್ರೆಗೆ ದಾಖಲಾಗಿದ್ದಾಗ ಅಲ್ಲಿ ಪರಿಚಯವಾದ ಗಂಗೊಳ್ಳಿಯ ನಿವಾಸಿಯೋರ್ವರ ಸಂಪರ್ಕಕ್ಕೆ ಬಂದು ಅವರ ಮಗಳನ್ನು ವರಿಸುವ ಮಾತುಕತೆ ನಡೆಸಿದ್ದನು. ಆದರೆ ಕೋಡಿಯ ಹೆಂಡತಿ ಸಂಬಂಧಿಯೋರ್ವರ ಮದುವೆ ಸಮಾರಂಭದಲ್ಲಿ ಈತ ಬಿರಿಯಾನಿ ಸಪ್ಲೈ ಮಾಡುತ್ತಿದ್ದ ಸಂದರ್ಭ ಅಲ್ಲಿ ಮದುವೆಗೆ ಬಂದಿದ್ದ ಗಂಗೊಳ್ಳಿಯವರು ಹಂಝನನ್ನು ಕಂಡು ವಿಚಾರಿಸಿದಾಗ ಆತ ಅದಾಗಲೇ ರಮಲತ್‌ಳನ್ನು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಸತ್ಯ ತಿಳಿದ ಅವರು ಹಂಝನನ್ನು ಜಾಡಿಸಿ ಹೋಗಿದ್ದರೂ ಇವನ ‘ ಸರಣಿ ನಿಖಾಕ್ಕೆ ಬ್ರೇಕ್ ಬಿದ್ದಿರಲಿಲ್ಲ.
Tagged with
cnews,
feature,
kundapura
ಕಾರ್ಕಳ: ನಿಟ್ಟೆ ದೂಪದಕಟ್ಟೆ ಬೆರೊದೊಟ್ಟು ಎಂಬಲ್ಲಿ ಪತ್ನಿಯನ್ನು ಕೊಲೆಗೈದು ನೇಣಿಗೆ ಶರಣಾದ ಆರೋಪಿ ಜಗನ್ನಾಥ ಪೂಜಾರಿಯ ಶವವನ್ನು ಕೊಂಡುಹೋಗಲು ವಾರಿಸುದಾರರು ಬಾರದೇ ಹೋದುದರಿಂದ ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ತನ್ನ ಎರಡನೆ ಪತ್ನಿ ಮಾಲಿನಿ ಶೆಡ್ತಿಯನ್ನು ಜಗನ್ನಾಥ ಪೂಜಾರಿ ಕತ್ತಿಯಿಂದ ಕಡಿದು ಕೊಲೆಗೈದು ತಾನು ನೇಣಿಗೆ ಶರಣಾಗಿದ್ದ. ಪುತ್ತೂರು ಮೂಲದವನೆಂದು ಪರಿಚಯಿಸಿ ಕೊಂಡಿದ್ದ ಆತ ಬಿಜೈ ಕಾಪಿಕಾಡಿನಲ್ಲಿ ಪ್ಲಾಮಾ ಲಾಂಡ್ರಿಯೊಂದನ್ನು ನಡೆಸುತ್ತಿದ್ದಾಗ ಬ್ಯೂಟಿಷನ್ ಆಗಿದ್ದ ಮಾಲಿನಿಶೆಡ್ತಿಯೊಂದಿಗೆ ಒಡನಾಟ ಉಂಟಾಗಿ ಧರ್ಮಸ್ಥಳದಲ್ಲಿ ವಿವಾಹವಾಗಿದ್ದ.
ಕಾರ್ಕಳ ಗ್ರಾಮಾಂತರ ಪೊಲೀಸರು ಜಗನ್ನಾಥ ಪೂಜಾರಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ನಿನ್ನೆ ಮಂಗಳೂರಿನ ವಿವಿಧೆಡೆಗಳಿಗೆ ತೆರಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಿಜೈ ಕಾಪಿಕಾಡಿನಲ್ಲಿ ಲಾಂಡ್ರಿ ವ್ಯವಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ಹಲವು ಹೆಣ್ಣು ಮಕ್ಕಳನ್ನು ಮೋಸದ ಬಲೆಗೆ ಬೀಳಿಸಿ ದೈಹಿಕ ಸುಖ ಪಡೆದಿರುವ ಮಾಹಿತಿ ಲಭ್ಯವಾಗಿದೆ. ಮಹಿಳೆಯೊಬ್ಬಳನ್ನು ಇದೇ ತರದಲ್ಲಿ ತನ್ನ ವಂಚನಾ ಜಾಲಕ್ಕೆ ಸಿಲುಕಿಸಲು ಯತ್ನಿಸಿ ವಿಫಲವಾದಾಗ ಆಕೆಗೆ ತೀವ್ರತರದಲ್ಲಿ ಹಲ್ಲೆಗೈದು ಅಲ್ಲಿಂದಲ್ಲೇ ತಲೆಮರೆಸಿಕೊಂಡಿದ್ದ ಆತ ಬೆಂಗಳೂರಿಗೆ ಹೋಗಿದ್ದ.
Tagged with
cnews,
feature,
karkala
ಪುತ್ತೂರು: ಎರಡು ವರ್ಷಗಳ ಹಿಂದೆ ತುಮಕೂರಿನಲ್ಲಿ ಪುತ್ತೂರು ಮೂಲದ ವರಾದ ತನ್ನ ನಾದಿನಿ ಮತ್ತು ಅತ್ತೆಯನ್ನು ಕೊಲೆಗೈದು ನೀರಿನ ತೊಟ್ಟಿಗೆ ಹಾಕಿ ಬಳಿಕ ಪುತ್ತೂರಿಗೆ ಬಂದು ತನ್ನ ಇಬ್ಬರು ಮಕ್ಕಳನ್ನು ಪಾಣಾಜೆ ಎಂಬಲ್ಲಿ ಕೆರೆಗೆ ದೂಡಿ ಹಾಕಿ ಕೊಲೆಗೈದಿದ್ದ ನಾಲ್ವರ ಕೊಲೆ ಹಂತಕನಿಗೆ ತುಮಕೂರಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತುಮಕೂರಿನ ತ್ವರಿತಗತಿ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಸ್ತುತ ಆರೋಪಿ ಜೈಲಿನ ಲ್ಲಿಯೇ ಇದ್ದು ಮಕ್ಕಳಿಬ್ಬರ ಕೊಲೆ ತೀರ್ಪು ಇನ್ನಷ್ಟೇ ಹೊರಬೀಳಬೇಕಿದೆ.
ಮೂಲತಃ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಆರ್ಲಪದವು ಸಮೀ ಪದ ಅರ್ಧಮೂಲೆ ನಿವಾಸಿಯಾಗಿದ್ದು, ತುಮಕೂರು ಜಿಲ್ಲೆಯ ಬನಶಂಕರಿ ಸೆಕೆಂಡ್ ಸ್ಟೇಜ್ ಕುಮ್ಟೇಯ ಲೇಔಟ್‌ನಲ್ಲಿನ ಸೌರಭ ನಿಲಯದಲ್ಲಿ ವಾಸ್ತವ್ಯವಿದ್ದ ಮಹಾರಾಷ್ಟ್ರದ ಸೋಲಾಪುರದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಮ್ಯಾನೇಜರ್ ಆಗಿದ್ದ ರಮೇಶ್ ನಾಯ್ಕ(೪೮) ಕೊಲೆ ಪ್ರಕರಣದಲ್ಲಿ ಅಪ ರಾಧಿಯಾದ ವ್ಯಕ್ತಿ. ಎರಡು ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ತುಮಕೂರು ತಿಲಕ್‌ಪಾರ್ಕ್ ಪೊಲೀಸ್ ಠಾಣೆ ಮತ್ತು ಸಂಪ್ಯ ಠಾಣೆಯಲ್ಲಿ ಪ್ರತ್ಯೇಕ ಕೊಲೆ ಪ್ರಕರಣಗಳು ದಾಖಲಾಗಿತ್ತು.
ಘಟನೆಯ ಹಿನ್ನೆಲೆ: ರಮೇಶ್ ನಾಯ್ಕ ತನ್ನ ನಾದಿನಿ ಸವಿತಾಳನ್ನು ಎಳವೆಯಿಂದಲೇ ಸಾಕಿ ಶಿಕ್ಷಣ ಕೊಡಿಸಿ ಬೆಂಗಳೂರಿನಲ್ಲಿನ ಪೀಣ್ಯದಲ್ಲಿರುವ ಭವಿಷ್ಯನಿಧಿ ಕಛೇರಿಯಲ್ಲಿ ಉದ್ಯೋಗ ದೊರಕಿಸಿ ಕೊಟ್ಟಿದ್ದ . ಈ ಮಧ್ಯೆ ಸವಿತ ಅದೇ ಕಛೇರಿಯಲ್ಲಿ ಉದ್ಯೋಗದಲ್ಲಿದ್ದ ಮೋಹನ್ ಎಂಬಾತನನ್ನು ಪ್ರೀತಿಸಿ ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಇದನ್ನು ಆಕ್ಷೇಪಿಸಿದ್ದ ರಮೇಶ್ ಆತನನ್ನು ಮರೆಯುವಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದ, ಆದರೆ ಆಕೆ ಈತನ ಮಾತಿಗೆ ಬೆಲೆ ಕೊಡದೆ ತನ್ನ ಪ್ರೀತಿಯನ್ನು ಮೋಹನನ ಜೊತೆ ಮುಂದುವರಿಸಿದ್ದಳು. ಈ ಬಗ್ಗೆ ರಮೇಶ ತನ್ನ ಪತ್ನಿಯಲ್ಲಿಯೂ ಆಕ್ಷೇಪ ವ್ಯಕ್ತಪಡಿಸಿದ್ದ, ಆದರೆ ಮಂಗಳೂರಿನ ಅಳಪೆಯಲ್ಲಿರುವ ಎಸ್.ಬಿ.ಎಂ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದ ಪತ್ನಿ ಸುಂದರಿಯು ಇದಕ್ಕೆ ಕಿವಿಗೊಡದೆ ತಂಗಿಯನ್ನೇ ಬೆಂಬಲಿಸಿದ್ದರು. ಅತ್ತೆ ಸರಸ್ವತಿಯವರೂ ಸವಿತಾ ಅವರ ಪರವಹಿಸಿದ್ದರು. ಇದರಿಂದಾಗಿ ಪತ್ನಿಯ ಕುಟುಂಬದ ಮೇಲೆ ದ್ವೇಷ ಹೊಂದಿದ್ದ ಆರೋಪಿ ರಮೇಶ್ ನಾಯ್ಕ ಅವರೆಲ್ಲರ ಕೊಲೆಗೆ ಪೂರ್ವ ಯೋಜನೆ ರೂಪಿಸಿ ಈ ಕೃತ್ಯ ಎಸಗಿದ್ದ. ಆದರೆ ಮಕ್ಕಳನ್ನು ಕೊಲೆಗೈದಂದೇ ಆತನನ್ನು ಪೊಲೀಸರು ಬಂಧಿಸಿರುವುದರಿಂದ ಪತ್ನಿ ಸುಂದರಿ ಅವರು ಅದೃಷ್ಟವಶಾತ್ ಬದುಕುಳಿದಿದ್ದರು.
ಮಂಗಳೂರಿಗೆ ಬಂದು ಮಕ್ಕಳ ಕೊಲೆ: ತುಮಕೂರಿನಲ್ಲಿ ಜೋಡಿಕೊಲೆ ನಡೆಸಿದ ಹಂತಕ ರಮೇಶ್, ಪತ್ನಿ ಮತ್ತು ಮಕ್ಕಳನ್ನು ಕೊಲೆಗೈಯುವ ಉದ್ದೇಶದಿಂದ ೨೦೧೦ರ ಜೂನ್ ೧೫ ರಂದು ರಾತ್ರಿಯೇ ಮಂಗಳೂರಿಗೆ ಪಯಣ ಬೆಳೆಸಿದ್ದ. ಮರುದಿನ ಮಂಗಳೂರಿನ ಮಂಗಳಾದೇವಿಯಲ್ಲಿ ವಾಸ್ತವ್ಯವಿರುವ ತನ್ನ ಪತ್ನಿಯ ಮನೆಗೆ ಬಂದಿದ್ದ ಆತ ಪತ್ನಿ ಸುಂದರಿ ಕೆಲಸಕ್ಕೆ ಹೋಗಿರುವ ಸಂದರ್ಭದಲ್ಲಿ ಬಾಡಿಗೆ ಕಾರೊಂದರಲ್ಲಿ ತನ್ನ ಇಬ್ಬರು ಮಕ್ಕಳಾದ ಭುವನ್ ರಾಜ್ ಮತ್ತು ಕೃತಿಕಾಳನ್ನು ಕರೆದುಕೊಂಡು ಪುತ್ತೂರು ತಾಲೂಕಿನ ಪಾಣಾಜೆಗ್ರಾಮದ ಅರ್ಧಮೂಲೆ ಎಂಬಲ್ಲಿಗೆ ಬಂದು, ಈ ಹಿಂದೆ ಆತನೇ ಮಾರಾಟ ಮಾಡಿದ್ದ ಅಲ್ಲಿನ ವಕೀಲರೊಬ್ಬರಿಗೆ ಸೇರಿದ ಕರೆಯೊಂದಕ್ಕೆ ಇಬ್ಬರು ಮಕ್ಕಳನ್ನು ದೂಡಿ ಹಾಕಿ ಕೊಲೆ ಮಾಡಿದ್ದ.
ಕೊಲೆ ಮಾಡಿ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ್ದಿದ್ದ: ತನ್ನ ಇಬ್ಬರು ಮಕ್ಕಳನ್ನು ಕೆರೆಗೆ ದೂಡಿಹಾಕಿ ಕೊಲೆಗೈದ ಹಂತಕ ರಮೇಶ್ ಪುತ್ತೂರಿನ ಲಾಡ್ಜ್ ವೊಂದರಲ್ಲಿ ಅಂದೇ ಸಂಪ್ಯ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದ, ಪುತ್ತೂರಿನಲ್ಲಿ ಹಂತಕನ ಬಂಧನವಾಗುತ್ತಿದ್ದಂತೆಯೇ ತುಮಕೂರಿನಲ್ಲಿ ಈತನೇ ಎಸಗಿದ ಜೋಡಿ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.ಪತ್ನಿ,ಅತ್ತೆ ಹಾಗೂ ಇಬ್ಬರು ಮಕ್ಕಳನ್ನು ಕೊಲೆಗೈದು ತಾನೂ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಯೋಜನೆ ರೂಪಿಸಿದ್ದೆ ಎಂದು ಹಂತಕ ರಮೇಶ್ ಪೋಲಿಸ್ ವಿಚಾರಣೆ ವೇಳೆ ತಿಳಿಸಿದ್ದ.
Tagged with
cnews,
feature,
puttur
ಮೂಡುಬಿದಿರೆ: ಬುಧವಾರ ತಡರಾತ್ರಿ ಆಸ್ಪತ್ರೆಯಲ್ಲೇ ಬಾಣಂತಿ ಪತ್ನಿಯನ್ನು ಕಡಿದು ಕೊಲೆಗೈದ ಹಂತಕ ತಲೆಮರೆಸಿ ಕೊಂಡಿದ್ದು, ಈ ಸಂಬಂಧ ಆರೋಪಿಯ ಸ್ನೇಹಿತರಿಬ್ಬರನ್ನು ಮೂಡು ಬಿದಿರೆ ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊ ಳಪಡಿಸಿದ್ದಾರೆ.
ಬುಧವಾರ ರಾತ್ರಿ ೧೧ ಗಂಟೆಯ ಸುಮಾರಿಗೆ ಮೂಡುಬಿದಿರೆಯ ಸರಕಾರಿ ಆಸ್ಪತ್ರೆಯಲ್ಲಿ ಜನರಲ್ ವಾರ್ಡ್‌ಗೆ ನುಗ್ಗಿದ ಎಡಪದವಿನ ಜಯಂತ ಎಂಬಾತ ಹೆರಿಗೆಗಾಗಿ ದಾಖಲಾಗಿದ್ದ ತನ್ನ ಪತ್ನಿ ಜಯಂತಿ ಯನ್ನು ಕತ್ತಿಯಿಂದ ಕೊಚ್ಚಿ ಬರ್ಬರ ರೀತಿಯಲ್ಲಿ ಕೊಲೆಗೈದಿದ್ದ.
ಜಯಂತಿ ಮತ್ತು ಜಯಂತ ಕಳೆದ ಮಾರ್ಚ್ ಒಂದರಂದು ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ಜಯಂತಿ ೪ ತಿಂಗಳ ಗರ್ಭವತಿಯಾಗಿದ್ದು, ಜಯಂತ ಮದುವೆಗೆ ನಿರಾಕರಿಸಿದ್ದ ವೇಳೆ ಬಜ್ಪೆ ಪೊಲೀಸರು ಮತ್ತು ಸ್ಥಳೀಯ ಕೆಲ ಯುವಕರ ಮಧ್ಯಸ್ಥಿಕೆಯಿಂದ ಮೂಡುಬಿದಿರೆ ಮಾರಿಗುಡಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು.
ಮದುವೆಯಾದ ಆರಂಭದ ಒಂದು ತಿಂಗಳು ಮಾತ್ರ ಹೆಂಡತಿಯೊಂದಿಗಿದ್ದ ಜಯಂತ ಮತ್ತೆ ಸಂಪರ್ಕದಿಂದ ದೂರವಾಗಿದ್ದ ಎನ್ನಲಾಗಿದೆ. ಈ ನಡುವೆ ಜಯಂತಿ ಹೆರಿಗೆಗೆ ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಗಂಡುಮಗುವಿಗೆ ಜನ್ಮನೀಡಿದ್ದರು. ಹೆರಿಗೆಯಾಗಿ ಕೇವಲ ಮೂರೇ ದಿನಗಳಾಗಿತ್ತು. ಬುಧವಾರ ರಾತ್ರಿ ಆಸ್ಪತ್ರೆಗೆ ಬಂದ ಜಯಂತ ಪತ್ನಿ ಜಯಂತಿ ಇದ್ದ ಕೊಠಡಿಗೆ ತೆರಳಿ ತಾನು ತಂದಿದ್ದು ಕತ್ತಿಯಿಂದ ಕೊಚ್ಚಿ ಪರಾರಿಯಾಗಿದ್ದಾನೆ. ಅಲ್ಪಸ್ವಲ್ಪ ಗಾಯಗಳಾದ ಮೂರು ದಿನದ ಮಗು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದೆ.
ಗುರುವಾರ ಘಟನಾ ಸ್ಥಳಕ್ಕೆ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಎಸಿಪಿ ಪುಟ್ಟಮಾದಯ್ಯ, ಡಿಸಿಪಿ ಧರ್ಮಯ್ಯರವರು ಭೇಟಿ ನೀಡಿದ್ದಾರೆ. ಜಯಂತನ ಸ್ನೇಹಿತರೆನ್ನಲಾದ ಸ್ಥಳೀಯ ಯುವಕರಿಬ್ಬರನ್ನು ವಶಕ್ಕೆ ತೆಗೆದುಕೊಂಡ ಮೂಡುಬಿದಿರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Tagged with
cnews,
feature,
moodabidri
ಐಟಂ ಸಾಂಗ್‌ಗೆ ಕುಣಿಯಲಿದ್ದಾನಂತೆ ನಿತ್ಯಾನಂದ!
ಬೆಂಗಳೂರು: ಕಾಮಿ ಸ್ವಾಮಿ ನಿತ್ಯಾ ನಂದ ಸಾಕಷ್ಟು ವಿವಾದ ಸೃಷ್ಟಿಸಿ ಜೈಲು ಸೇರಿ, ನಂತರ ಜಾಮೀನು ಪಡೆದು ಮಧುರೈ ಅಧೀನಂ ಪೀಠದಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಬಂದಿರುವ ಸುದ್ದಿಯ ಪ್ರಕಾರ ಪರಮಹಂಸ ನಿತ್ಯಾನಂದ ಸ್ವಾಮಿ ಸಿನಿಮಾದಲ್ಲೂ ನಟಿಸ್ತಾರಾಂತೆ. ಅಲ್ಲದೇ ಐಟಂ ಸಾಂಗ್‌ನಲ್ಲೂ ಕುಣೀ ತಾರಂತೆ. ಇಂತಹ ಹೇಳಿಕೆ ನೀಡಿರೋದು ನೈಸ್ ಅಶೋಕ್ ಖೇಣಿ!
ಬೆಂಗಳೂರಿನಲ್ಲಿ ದೊಡ್ಡ ಫಿಲಂ ಸಿಟಿ ಮಾಡ್ತೇನೆ, ಈ ವರ್ಷ ಹಿಂದಿಯಲ್ಲಿ ಹತ್ತು ಸಿನಿಮಾ ನಿರ್ಮಿಸ್ತೇನೆ, ಕನ್ನಡ ಚಿತ್ರರಂಗ ವನ್ನು ದೇಶದಲ್ಲೇ ನಂಬರ್ ವನ್ ಮಾಡ್ತೇನೆ, ಹೀಗೆ ಅಶೋಕ್ ಖೇಣಿ ಕಳೆದ ನಾಲ್ಕೈದು ವರ್ಷಗಳಲ್ಲಿ ನೀಡಿರುವ ಹೇಳಿಕೆಗಳಿಗೆ ಲೆಕ್ಕವಿಲ್ಲ. ಹಿಂದೆ ಮುಂದೆ ನೋಡದೆ ಹೇಳಿಕೆ ನೀಡುವುದರಲ್ಲಿ ಅವರು ನಿಸ್ಸೀಮ.
ಆದರೆ ಇದೀಗ ಖೇಣಿ ಸಿಡಿಸಿರುವ ಹೊಸ ಬಾಂಬ್ ಅಚ್ಚರಿ ಮೂಡಿಸಿದೆ. ಪಾರು ಐ ಲವ್ ಯೂ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ವಿಕ್ರಾಂತ ಮಠದ ಶ್ರೀಗುರುಬಸವೇಶ್ವರ ಸ್ವಾಮೀಜಿ ಪಕ್ಕದಲ್ಲೇ ಇದ್ದ ಖೇಣಿ, ತಾನು ಸ್ವಾಮೀಜಿ ಐ ಲವ್ ಯೂ ಎಂಬ ಸಿನಿಮಾ ಮಾಡಲಿದ್ದೇನೆ. ಆ ಚಿತ್ರದಲ್ಲಿ ಗುರುಬಸವೇಶ್ವರ ಸ್ವಾಮೀ ಜಿಯೇ ಹೀರೋ, ನಿತ್ಯಾನಂದ ಸ್ವಾಮಿ ಐಟಂ ಸಾಂಗ್‌ಗೆ ಕುಣಿಯುತ್ತಾರೆ ಎಂದು ಹೇಳಿದ್ದಾರೆ.
ಇಷ್ಟು ದಿನ ಭಕ್ತರನ್ನು ಅದ್ಯಾವುದೋ ಪೂಜೆಯ ಹೆಸರಿನಲ್ಲಿ ಕುಣಿಸುತ್ತಿದ್ದ ನಿತ್ಯಾನಂದ, ಸೆಕ್ಸಿ ಐಟಂ ಡ್ಯಾನ್ಸ್ ಮಾಡ್ತಾನೆ ಅನ್ನೋದು ಈತನ ಭಕ್ತರಿಗೆ ಸಾಕಷ್ಟು ಖುಷಿ ಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಂದು ವೇಳೆ ನಿತ್ಯಾನಂದ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಿದರೆ ಐಟಂ ಹಾಡಿನ ನರ್ತಕಿಯರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬ ಮಾತು ಗಾಂಧಿನಗರಲ್ಲಿ ಕೇಳಿಬಂದಿದೆ.
Tagged with
feature,
nithyananda,
snews
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಆರ್.ಧನರಾಜ್ ಅವರು ಅಬಕಾರಿ ಸಚಿವ ರೇಣುಕಾಚಾರ್ಯ ವಿರುದ್ಧ ಮಾಡಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡರು ರೇಣುಕಾಚಾರ್ಯ ವಿರುದ್ಧ ತನಿಖೆ ನಡೆಸಿ ಮೂರು ದಿನಗಳಲ್ಲಿ ವರದಿ ನೀಡುವಂತೆ ಹೇಳಿರುವುದು ಮತ್ತೊಂದು ಸುತ್ತಿನ ರಾಜಕೀಯ ಜಂಗೀಕುಸ್ತಿಗೆ ಅಖಾಡ ಸಿದ್ಧವಾದಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ವೈನ್ ಮರ್ಚೆಂಟ್ಸ್ ಸಂಘದ ಸದಸ್ಯರೂ ಆಗಿರುವ ಧನರಾಜ್ ಅವರು ಮೇ ೨೫ರಂದು ಸಲ್ಲಿಸಿರುವ ದೂರಿನಲ್ಲಿ, ‘ಈ ಹಿಂದೆ ಹಾಸನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಬಕಾರಿ ಉಪನಿರೀ ಕ್ಷಕ ಬಿ.ಎಸ್.ದೇವರಾಜಪ್ಪ ಅವರು ಮೂರು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಸ್ಪೆಷಲ್ ಸ್ಕ್ವಾಡ್‌ಗೆ ನಿಯೋಜನೆ ಗೊಂಡಿರುತ್ತಾರೆ. ಇವರು ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ೩೦ ವೈನ್‌ಶಾಪ್‌ಗಳ ಮೇಲೆ ದಾಳಿ ನಡೆಸಿ, ಪ್ರತಿಯೊಬ್ಬರಿಂದ ೨೫ ಸಾವಿರ ರೂಪಾಯಿ ಲಂಚ ಕೇಳುತ್ತಿ ದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ, ಅಬ ಕಾರಿ ಉಪನಿರೀಕ್ಷಕರು, ತಾನು ವರ್ಗಾ ವಣೆ ಮಾಡಿಕೊಳ್ಳಲು ಅಬಕಾರಿ ಸಚಿ ವರಿಗೆ ೩-೫ಲಕ್ಷ ರೂ. ನೀಡಬೇಕಾ ಗುತ್ತದೆ ಮಾತ್ರವಲ್ಲದೆ ಈಗ ಪಡೆಯು ತ್ತಿರುವ ಲಂಚದ ಹಣದಲ್ಲಿ ಅಬಕಾರಿ ಸಚಿವರು, ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಯವರಿಗೂ ಪಾಲು ನೀಡಬೇಕಿದೆ ಎಂದು ಹೇಳುತ್ತಿದ್ದಾರೆ, ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು. ಬಿಜೆಪಿ ಸರಕಾರದ ಭ್ರಷ್ಟಾಚಾರ ಈ ಮೂಲಕ ಸಾಬೀತಾಗಿದ್ದು, ಅಬಕಾರಿ ಇಲಾಖೆಯ ಹಿರಿ-ಕಿರಿಯ ಅಧಿಕಾರಿ ಗಳು ಲಂಚದ ಹಣ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸದಾನಂದ ಗೌಡರು, ಈ ಬಗ್ಗೆ ತಕ್ಷಣ ತನಿಖೆ ನಡೆಸಿ ಮೂರು ದಿನಗಳೊಳಗಾಗಿ ವರದಿ ಸಲ್ಲಿಸಬೇಕು ಎಂದು ಕಟ್ಟಪ್ಪಣೆ ಮಾಡಿರುವುದು ರೇಣುಕಾಚಾರ್ಯ ಕುರ್ಚಿಗೆ ಸಂಚಕಾರ ಎದುರಾಗುವ ಎಲ್ಲ ಲಕ್ಷಣ ಗೋಚರಿಸು ತ್ತಿದೆ ಎನ್ನಲಾಗಿದೆ. ಈ ಬಗ್ಗೆ ಅಬಕಾರಿ ಇಲಾಖೆ ಆಯುಕ್ತರಿಗೂ ಮುಖ್ಯಮಂತ್ರಿಯವರು ಪತ್ರ ರವಾನಿಸಿದ್ದು, ಲಂಚ ಪಡೆಯುತ್ತಿರುವ ಅಧಿಕಾರಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿ ದ್ದಾರೆ ಎನ್ನಲಾಗಿದೆ. ಜಿಲ್ಲೆಯ ಕೆಲ ವೊಂದು ಅಧಿಕಾರಿಗಳನ್ನೂ ದೂರಿನಲ್ಲಿ ಹೆಸರಿಸಿರುವ ಕಾರಣ, ಅವರಿಂದಲೂ ತಕ್ಷಣದ ಉತ್ತರ ಕೇಳಿ ಮುಖ್ಯಮಂತ್ರಿ ಯವರು ಪತ್ರ ಬರೆದಿದ್ದಾರೆ.
ಆರ್.ಧನರಾಜ್ ಅವರು ಜೆಡಿಎಸ್ ಲೆಟರ್‌ಹೆಡ್‌ನಲ್ಲಿ ಸಲ್ಲಿಸಿರುವ ದೂರನ್ನು ಪರಿಶೀಲಿಸಿರುವ ಮುಖ್ಯಮಂತ್ರಿಗಳು ತಕ್ಷಣ ಕೈಗೆತ್ತಿಕೊಂಡು ಇಡೀ ಪ್ರಕರಣದ ತನಿಖೆ ನಡೆಸುವಂತೆ ಕೋರಿ ಸಂಬಂಧ ಪಟ್ಟ ಇಲಾಖೆಗಳಿಗೆ ಸೂಚನೆ ನೀಡಿರು ವುದು ರಾಜ್ಯ ಬಿಜೆಪಿಯಲ್ಲಿ ತೀವ್ರ ಸಂಚ ಲನಕ್ಕೆ ಕಾರಣವಾಗಿದೆ. ಹಾಸನದಿಂದ ‘ಅಬಕಾರಿ ಸಚಿವರಿಗೆ ಲಕ್ಷಗಟ್ಟಲೆ ಹಣ ಕೊಟ್ಟು ವರ್ಗಾವಣೆ ಮಾಡಿಸಿಕೊಂಡೆ ಎಂದಿರುವ ಅಬಕಾರಿ ಅಧಿಕಾರಿ ಮತ್ತೆ ಇಲ್ಲಿಂದ ಜಾಗ ಖಾಲಿ ಮಾಡುವುದು ಖಚಿತವಾದಂತಾಗಿದೆ.
ಉರಿವ ಬೆಂಕಿಗೆ ತುಪ್ಪ ಸುರಿದರೇ?
ಯಡಿಯೂರಪ್ಪ ಬಣದಲ್ಲಿ ಮೊದಲ ಸಾಲಿನ ನಾಯಕರಾಗಿ ಗುರುತಿಸಿಕೊಂಡಿದ್ದ ರೇಣುಕಾಚಾರ್ಯರನ್ನು ಪಕ್ಷದಿಂದ ಉಚ್ಛಾಟಿಸಿ ಎಂಬ ಕೂಗು ಈ ಹಿಂದೆಯೇ ಪಕ್ಷದೊಳಗೆ ಅನೇಕ ಬಾರಿ ಕೇಳಿಬಂದಿತ್ತು. ಆದರೆ ಮುಖ್ಯಮಂತ್ರಿ ಸದಾನಂದ ಗೌಡರು ಸಾವಧಾನವಾಗಿ ವರ್ತಿಸಿದ್ದರು. ಆದರೆ ಈಗ ಜೆಡಿಎಸ್ ಕಾರ್ಯದರ್ಶಿಯ ದೂರಿನನ್ವಯ ತಮ್ಮದೇ ಕ್ಯಾಬಿನೆಟ್ ಸಚಿವರ ಮೇಲೆಯೇ ತಕ್ಷಣ ಕ್ರಮಕ್ಕೆ ಆದೇಶ ನೀಡಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅಭಿಪ್ರಾಯ ಪಡುತ್ತಾರೆ ರಾಜಕೀಯ ವಿಶ್ಲೇಷಕರು. ಈಗಾಗಲೇ ಯಡಿಯೂರಪ್ಪರೊಂದಿಗೆ ಗುರುತಿಸಿಕೊಂಡಿರುವ ಮಂತ್ರಿಮಂಡಲದ ಸಹೋದ್ಯೋಗಿಗಳ ಜೊತೆ ಹೆಚ್ಚಿನ ಬಾಂಧವ್ಯ ಇರಿಸದ ಮುಖ್ಯಮಂತ್ರಿಗಳು ಸಮಯ-ಸಂದರ್ಭ ಕಾದು ರೇಣುಕಾರಿಗೆ ಮೂಗುದಾರ ತೊಡಿಸಲು ಮುಂದಾ ದರೇ ಎಂಬ ಸಂದೇಹವೂ ಜನರಲ್ಲಿದೆ. ಯಡಿಯೂರಪ್ಪ ಮತ್ತವರ ಬೆಂಬಲಿಗರು ಪದೇ ಪದೇ ಹೇಳುತ್ತಿರುವ ‘ಮುಖ್ಯಮಂತ್ರಿಗಳು ಜೆಡಿಎಸ್ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ, ಜೆಡಿಎಸ್ ವರಿಷ್ಠ ದೇವೇಗೌಡರ ಅಣತಿಯಂತೆ ನಡೆಯುತ್ತಿದ್ದಾರೆ’ ಎಂಬ ಮಾತಿಗೆ ಪೂರಕವೆಂಬಂತೆ ಮುಖ್ಯಮಂತ್ರಿಯವರು, ದ.ಕ. ಜಿಲ್ಲಾ ಜೆಡಿಎಸ್ ಕಾರ್ಯದರ್ಶಿಯ ಸಾಮಾನ್ಯ ದೂರನ್ನೇ ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಆದೇಶ ನೀಡಿದ್ದರ ಹಿಂದೆಯೂ ‘ಬಣ ರಾಜಕೀಯ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
Tagged with
dhanraj,
dk,
feature,
lnews
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೨೧ರ ಹರೆಯದ ವಿದ್ಯಾರ್ಥಿನಿ. ಅಂತಿಮ ವರ್ಷದ ಪದವಿ ಕಲಿಯುತ್ತಿದ್ದೇನೆ. ನನ್ನ ತಾಯಿ ತೀರಿಹೋಗಿದ್ದಾರೆ. ನನ್ನ ತಂದೆ ಇನ್ನೊಂದು ಮದುವೆಯಾಗಿದ್ದಾರೆ. ನಾನು ತಂದೆಯ ಜೊತೆಯೇ ಇದ್ದೇನೆ. ನನ್ನ ತಂದೆಯ ಎರಡನೇ ಪತ್ನಿ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನನ್ನನ್ನು ಪದೇ ಪದೇ ಕೀಳುಮಾತಿನಲ್ಲಿ ಹೀಯಾಳಿ ಸುತ್ತಾರೆ. ಮನೆಗೆ ನನ್ನ ಫ್ರೆಂಡ್ಸ್‌ಗಳನ್ನು ಕರೆದುಕೊಂಡು ಬರುವಂತಿಲ್ಲ. ಅವರು ಬಂದರೆ ಅವರೆದುರಿಗೇ ಏನೇನೋ ಹೇಳುತ್ತಾರೆ. ನನಗೆ ಜೀವನವೇ ಕಷ್ಟವಾಗಿದೆ. ಕಾಲೇಜಿನಲ್ಲಿ ತುಂಬಾ ಮಂದಿಯ ಜತೆ ಫ್ರೆಂಡ್‌ಶಿಪ್ ಹೊಂದಿದ್ದೇನೆ. ನನಗೆ ಫ್ಯಾಶನೇಬಲ್ ಡ್ರೆಸ್ ಅಂದ್ರೆ ಇಷ್ಟ. ನಾನು ಇಲ್ಲಿಯವರೆಗೆ ಯಾವ ಹುಡುಗರ ಜತೆಯೂ ಮಿತಿಮೀರಿ ನಡೆದುಕೊಂಡಿಲ್ಲ. ಒಂದು ವೇಳೆ ಅವರು ಗೆಳೆತನದ ಗೆರೆ ದಾಟಿ ವರ್ತಿಸಿದರೆ ಅದನ್ನು ಸಹಿಸುವುದಿಲ್ಲ. ನನ್ನ ಮನೆಯಲ್ಲಿ ನಿತ್ಯ ಕಾಲೇಜಿಗೆ ಹೊರಡುವಾಗಲೂ ಕಿರಿಕಿರಿ. ನನಗೆ ಯಾರೊಂದಿಗೋ ಸಂಬಂಧ ಇದೆ ಎಂದೆಲ್ಲ ಸುಮ್ಮನೆ ಕಲ್ಪಿಸಿ ಮಾತಾಡುತ್ತಾರೆ. ಇದರಿಂದ ನನ್ನ ಭವಿಷ್ಯ ಹಾಳಾಗುತ್ತದೆ ಎಂಬ ಭಯ ನನ್ನನ್ನು ಕಾಡುತ್ತಿದೆ. ನಾನೇನು ಮಾಡಲಿ? ಕಾಲೇಜಿನಲ್ಲಿ ಒಬ್ಬ ನನ್ನ ಬಗ್ಗೆ ತುಂಬಾ ಕೇರ್ ತೆಗೆದು ಕೊಳ್ಳುತ್ತಾನೆ. ನಾನು ಆತನಿಗೆ ಎಲ್ಲಾ ವಿಷಯವನ್ನು ತಿಳಿಸುತ್ತೇನೆ. ನನಗೆ ಆತನನ್ನು ಪ್ರೀತಿಸಬೇಕೆಂಬ ಆಸೆಯಿದೆ. ಆದರೆ ಆತ ಏನು ತಿಳಿಯುತ್ತಾನೋ ಎಂದು ಭಯ. ಆತನಿಗೆ ಹೇಗೆ ಹೇಳಲಿ? ನಾನು ಸಮಸ್ಯೆಯಿಂದ ಹೇಗೆ ಪಾರಾಗಲಿ?
ಸಲಹೆ: ಮಲತಾಯಿ ತನ್ನ ಗಂಡನ ಮೊದಲ ಪತ್ನಿಯ ಮಕ್ಕಳನ್ನು ಕೀಳು ಮಟ್ಟದಲ್ಲಿ ನಡೆಸಿಕೊಳ್ಳುವ ಘಟನೆ ಹೊಸದೇನೂ ಅಲ್ಲ. ಆದರೆ ಎಲ್ಲರೂ ಒಂದೇ ರೀತಿ ಎಂದು ಹೇಳುತ್ತಿಲ್ಲ. ತುಂಬಾ ಕಿರಿಕಿರಿ ಆಗುವುದಾದರೆ, ವಿದ್ಯಾಭ್ಯಾಸಕ್ಕೆ ಅಡಚಣೆಯಾಗುವುದಾದರೆ ನೀವು ನಿಮ್ಮ ಅಣ್ಣ, ತಂದೆಯ ಅನುಮತಿ ಪಡೆದು ಯಾವುದಾದರೂ ಹಾಸ್ಟೆಲ್ ಸೇರುವುದೊಳ್ಳೆಯದು. ಇದರಿಂದ ಯಾವ ಸಮಸ್ಯೆಯೂ ಇರುವುದಿಲ್ಲ. ಇನ್ನು ಪ್ರೀತಿಯಲ್ಲಿ ಬೀಳುವ ಮುನ್ನ ಯೋಚಿಸಿ. ಆತನ ಪೂರ್ವಾಪರ ತಿಳಿದುಕೊಳ್ಳಿ. ಆತ ನಿಮ್ಮ ಬಗ್ಗೆ ಕಾಳಜಿ ತೋರಿಸಿದ್ದೇ ಪ್ರೀತಿ ಎಂದು ನಂಬಲು ಹೋಗಬೇಡಿ. ಇದರಿಂದ ನಿಮ್ಮ ನಡುವಿನ ಸ್ನೇಹಕ್ಕೆ ಹೊಡೆತ ಬೀಳುವ ಸಾಧ್ಯತೆಯಿದೆ. ಹೆಣ್ಣುಮಕ್ಕಳ ಅಸಹಾಯಕತೆಯನ್ನು ದುರುಪಯೋಗಪಡಿಸಿ ಕೊಳ್ಳುವವರು ಬಹಳಷ್ಟು ಮಂದಿ ಇದ್ದಾರೆ. ನೀವೂ ಅಷ್ಟೆ. ಆಪ್ತರಂತೆ ನಟಿಸುವವರಲ್ಲಿ ಮನಸ್ಸಿನಲ್ಲಿದ್ದ ಎಲ್ಲವನ್ನೂ ಬಿಚ್ಚಿಟ್ಟು, ಸಾಂತ್ವನ ನೀಡುತ್ತಾರೆ ಎಂದು ನಂಬಲು ಹೋಗಬೇಡಿ. ಗೆಳೆಯನ ಬಗ್ಗೆಯೂ ಜಾಗೃತೆಯಿಂದ ಇರುವುದು ಒಳ್ಳೆಯದು ಆತನ ಮನಸ್ಸಿನಲ್ಲಿ ಇದ್ದುದನ್ನು ನಿಧಾನವಾಗಿ ತಿಳಿಯುವ ಪ್ರಯತ್ನ ಮಾಡಿ. ಆತನೇ ಹೇಳಿದಲ್ಲಿ ಸ್ವಾಗತಿಸಿ. ಅವಸರ ಪಡಬೇಡಿ. ಪ್ರೀತಿ ನಿಮ್ಮದೇ ಆಗಿದ್ದಲ್ಲಿ ಖಂಡಿತಾ ಸಿಕ್ಕೇ ಸಿಗುತ್ತದೆ. ಭಯ ಬೇಡ. ಆದರೆ ಈಗಲೇ ಪ್ರೀತಿ, ಪ್ರೇಮ ಎಂದು ಮುಂದುವರಿಯುವುದು ಬೇಡ. ನೀವು ಸದ್ಯದ ಸ್ಥಿತಿಯಲ್ಲಿ ಪ್ರೀತಿ- ಪ್ರೇಮ ಎಂದು ತಲೆ ಕೆಡಿಸಿಕೊಂಡು ಇನ್ನಷ್ಟು ತೊಂದರೆಗೊಳಗಾಗುವುದು ಸರಿಯಲ್ಲ. ಏನಿದ್ದರೂ ನಿಮ್ಮ ಗಮನ ವಿದ್ಯಾಭ್ಯಾಸದ ಕಡೆ ಮಾತ್ರ ಇರಲಿ. ಆದಷ್ಟು ಬೇಗನೆ ಉತ್ತಮ ಉದ್ಯೋಗ ಪಡೆದು ನಿಮ್ಮ ಕಾಲ ಮೇಲೆ ನಿಂತುಕೊಳ್ಳಿ. ಬದುಕಿಗೆ ನಿರ್ದಿಷ್ಟ ಗುರಿ ಇರಲಿ. ಅದನ್ನು ಸಾಧಿಸುವ ತನಕ ಬೇರೆಲ್ಲಾ ವಿಚಾರಗಳು ದೂರವಿರುವಂತೆ ನೋಡಿಕೊಳ್ಳಿ. ಮನೆಯ ಸಮಸ್ಯೆಯ ಬಗ್ಗೆ ಹೆಚ್ಚು ಚಿಂತಿಸದೆ ಓದಿನಲ್ಲಿ ತೊಡಗಿಸಿಕೊಂಡು ಪರಿಹಾರವನ್ನು ಸುಲಭವಾಗಿ ಪರಿಹರಿಸುವ ಮಾರ್ಗವನ್ನು ಕಂಡುಕೊಳ್ಳಿ.
Tagged with
gupta
ಉಳ್ಳಾಲ ಕುಂಞಕೋಯ ಎಂಬವರ ಮಗನಾದ ಫಝಲ್ ಕೋಯ ರವರನ್ನು ಕೂರತ್ ಫಝಲ್ ಕೋಯಮ್ಮ ತಂಞಳ್ ಎಂದು ಕರೆಯುತ್ತಾರೆ. ಪತ್ರಿಕೆ, ಮಾಧ್ಯಮಗಳಲ್ಲಿ ಕೂಡಾ ಇದೇ ರೀತಿ ಇವರ ಹೆಸರು ಬರೆಯಲ್ಪಡುತ್ತದೆ.
ನಾನು ಸುಮಾರು ೫೨ ವರ್ಷದ ವ್ಯಕ್ತಿ. ನನಗೆ ತಿಳುವಳಿಕೆ ಬಂದ ನಂತರ ಅಮ್ಮ ಎಂಬ ಪದಬಳಕೆಯು ಮಹಿಳೆಯರನ್ನು ಸಂಬೋಧಿಸುವುದಾಗಿದೆ. ೨೧ನೇ ಶತಮಾನದಲ್ಲಿರುವ ನಾವು ಯಾವನೇ ಗಂಡಸನ್ನು ಕೋಯಮ್ಮ ಎಂದು ಕರೆದರೆ ಅದು ಅರ್ಥಶೂನ್ಯವಾಗಿರುತ್ತದೆ.
ಕೇರಳದ ಕೋಝಿಕ್ಕೋಡು ಜಿಲ್ಲೆಯಲ್ಲಿ ವಾಸಿಸುವ ಎಲ್ಲರನ್ನು ’ಕೋಯ’ ಎಂದು ಕರೆಯುವುದು ವಾಡಿಕೆಯಾಗಿದೆ. ಅದರ ಪೂರ್ವಕವಾಗಿ ತಾಂಗಳ್ ಎಂದು ಕರೆದರು. ಮಲೆಯಾಳಂ ಭಾಷೆಯಲ್ಲಿ ಹಿರಿಯರನ್ನು ಗೌರವಿಸುತ್ತಾ ತಾಂಗಳ್ ಎಂದು ಸಂಬೋಧಿಸುತ್ತಾರೆ. ಕರ್ನಾಟಕದಲ್ಲಿ ಕನ್ನಡಿಗರು ಅತೀ ಗೌರವದಿಂದ ತಾವುಗಳು ಎಂದು ಸಂಬೋಧಿಸಿದಂತೆ.
ಇಸ್ಲಾಮ್ ಧರ್ಮದಲ್ಲಿ ಪ್ರವಾದಿ ಮೊಹಮ್ಮದ್‌ರು ಕಲಿಸಿಕೊಟ್ಟಂತೆ ಅತ್ಯಂತ ಶ್ರೇಷ್ಠ ವ್ಯಕ್ತಿಯು ತಕ್ವವಿರುವವನಾಗಿರುತ್ತಾನೆ ಅಂದರೆ ಧರ್ಮನಿಷ್ಠನಾಗಿರುತ್ತಾನೆ. ಅಲ್ಲದೆ ತಾಂಗಳ್ ಇದ್ದದ್ದನ್ನು ತಂಞಳ್ ಎಂದು ಹೇಳಿ ಅದು ಪ್ರವಾದಿ ಕುಟುಂಬದವರು ಎಂದು ಸುಳ್ಳು ಪುರಾವೆಗಳನ್ನು ನೀಡುತ್ತಾ ತಾವೇ ಶ್ರೇಷ್ಠರು ಎಂದು ತೋರಿಸಿಕೊಂಡು ಇಸ್ಲಾಂ ಧರ್ಮವನ್ನು ಪಾಮರ ಜನರಿಗೆ ತಪ್ಪು ಮಾಹಿತಿಯನ್ನು ಕೊಟ್ಟರು. ಇದನ್ನು ನಂಬಿದ ಬಡಜನರು ಈ ಮೊಂಡು ವಾದವನ್ನು ನಂಬಿಕೊಂಡು ಮೇಲೆ ತಿಳಿಸಿದ ತಾಂಗಳ್‌ಗಳನ್ನು ಕೋಟ್ಯಧಿಪತಿ ಯನ್ನಾಗಿ ಮಾಡಿದರು. ಕೆಲವು ಪಾಮರ ಜನರು ಕಾಯಿಲೆ ಬಂದರೆ ಡಾಕ್ಟರುಗಳನ್ನು ಸಮೀಪಿಸದೆ ಹಲವರು ಪ್ರಾಣ ಕಳೆದುಕೊಂಡದ್ದು, ದಿನನಿತ್ಯ ಪತ್ರಿಕೆಯಲ್ಲಿ ಪ್ರಕಟವಾಗುವುದು ಮರೆಯುವಂತಿಲ್ಲ. ಕೂರತ್ ತಂಗಳ್ ಎಂದು ಕರೆಯಲ್ಪಡುವ ವ್ಯಕ್ತಿಯಿಂದ ಮುಸ್ಲಿಂ ಸಮಾಜಕ್ಕೆ ಅಥವಾ ಜನಸಾಮಾನ್ಯರಿಗೆ ಇವರ ಬಳಿ ಹೋಗಿ ಆದ ಲಾಭವಾದರೂ ಏನು. ಇಂಥವರನ್ನು ಸಮೀಪಿಸುವ ಮತ್ತು ಇವರಿಂದ ಮಂತ್ರಿಸಿ ನೀರು ಕುಡಿಯುವವರು ಒಮ್ಮೆ ಚಿಂತಿಸಿದರೆ ಒಳ್ಳೆಯದಿತ್ತು.
ಪವಿತ್ರ ಕುರಾನಿನಲ್ಲಿ ೨೫ ಪ್ರವಾದಿಗಳ ಹೆಸರುಗಳನ್ನು ಪ್ರತಿಪಾದಿಸುತ್ತದೆ. ಆದರೆ ಒಂದೇ ಒಂದು ಪ್ರವಾದಿಯನ್ನು ತಂಞಳ್ ಎಂಬ ಶಬ್ದದಿಂದ ಉಲ್ಲೇಖಿಸಿದ ಉದಾಹರಣೆಯಿಲ್ಲ. ಅಂದರೆ ಅರಬಿ ಭಾಷೆಯಲ್ಲಿ (ಞ) ಎಂಬ ಶಬ್ದ ಬರುವು ದಿಲ್ಲ. ಮತ್ತೆ ಇವರು ಎಲ್ಲಿಂದ ತಂಞಳ್ ಎಂಬ ಪದವನ್ನು ಬಳಸಲಿಕ್ಕೆ ಪ್ರಾರಂಭ ಮಾಡಿದ್ದು. ಇಸ್ಲಾಮ್ ಧರ್ಮಕ್ಕೂ ತಂಞಳ್ ಎಂಬ ಪದಕ್ಕೂ ಯಾವುದೇ ಸಂಬಂಧವಿಲ್ಲ. ದೊಡ್ಡ ದೊಡ್ಡ ವಿದ್ಯಾವಂತರು, ಮೇಲೆ ತಿಳಿಸಿದ ತಂಞಳ್ ಎಂಬವರು ಬಳಿ ಹೋಗಿ ಅವರ ಕಾಲಿಗೆ ಬೀಳುತ್ತಾರೆ. ಇದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ. ಅಲ್ಲಾಹನು ಪವಿತ್ರ ಕುರಾನಿನಲ್ಲಿ ಹೇಳಿದ್ದು, ನೀವು ನನ್ನಲ್ಲಿ ಪ್ರಾರ್ಥಿಸಿರಿ ನಾನು ನಿಮಗೆ ಉತ್ತರ ಕೊಡುತ್ತೇನೆ. ನನ್ನಲ್ಲಿ ಪ್ರಾರ್ಥಿಸುವವರು ಅಹಂಕಾರಪಟ್ಟು ಬೇರೆಯವರಲ್ಲಿ ಪ್ರಾರ್ಥಿಸಿದರೆ ಖಂಡಿತ ವಾಗಿಯೂ ನರಕ ಪ್ರವೇಶಿಸುವರು. ಪವಿತ್ರ ಕುರಾನಿನ ೪೦ನೇ ಅಧ್ಯಾಯ ೬೦ನೇ ಸೂಕ್ತ. ಆದುದರಿಂದ ಅಲ್ಲಾಹನಲ್ಲಿ ಪ್ರಾರ್ಥಿಸುವವನು ಮಾತ್ರ ಮುಸ್ಲಿಮನು.
ಇಸ್ಲಾಂ ಧರ್ಮದ ಬಗ್ಗೆ ಪ್ರತಿಯೊಬ್ಬನೂ ಕಲಿತಿದ್ದರೆ ಮುಸ್ಲಿಮರು ಕಾಲಿಗೆ ಬೀಳುವ ಅವಸ್ಥೆ ಬರುವುದಿಲ್ಲವಾದೀತು. ಪ್ರಪಂಚದಲ್ಲಿ ೧೦೧ ರಾಷ್ಟ್ರದಲ್ಲಿ ಪವಿತ್ರ ಕುರಾನಿನ ಅನುವಾದವಾಗಿದೆ. ಪವಿತ್ರ ಕುರಾನಿನ ಅನುವಾದದಿಂದ ಪ್ರಪಂಚದ ಮುಸ್ಲಿಂ ರಾಷ್ಟ್ರಗಳಲ್ಲಿ ಇಸ್ಲಾಂ ಧರ್ಮವನ್ನು ಸರಿಯಾಗಿ ತಿಳಿದುಕೊಂಡಿದ್ದಾರೆ. ಭಾರತ ದೇಶದಲ್ಲಿ ಮತ್ತು ಪಾಕಿಸ್ತಾನದಲ್ಲಿ ಕೆಲವು ಮುಸ್ಲಿಮ್ ನಾಮಧಾರಿಗಳು ದರ್ಗಾಕ್ಕೆ ಅಡ್ಡ ಬೀಳುವುದು ಬಿಟ್ಟರೆ ಹೆಚ್ಚಿನ ಕಡೆಯಲ್ಲಿ ಇಸ್ಲಾಂ ಧರ್ಮವನ್ನು ಅರಿ ತುಕೊಂಡಿದ್ದಾರೆ.
ಆದುದರಿಂದ ಸುನ್ನಿ ಸಹೋದರರೇ ಕೂರತ್ ಫಝಲ್ ಕೋಯಮ್ಮರವರ ನಕಲಿ ಜಾದುವಿನಿಂದ ಹೊರ ಬಂದು ನೈಜ ಇಸ್ಲಾಂ ಧರ್ಮಗಳನ್ನು ಕಲಿಯಲಿಕ್ಕೆ ಪ್ರಯತ್ನಿಸಿರಿ. ಸರ್ವಶಕ್ತನಾದ ಅಲ್ಲಾಹನು ನೈಜ ಇಸ್ಲಾಮ್ ಧರ್ಮವನ್ನು ಕಲಿಯಲಿಕ್ಕೆ ಅನುಗ್ರಹಿಸಲಿ. ಈ ಪತ್ರಕ್ಕೆ ಪ್ರತಿಕ್ರಿಯೆ ಬರೆಯುವವರಲ್ಲಿ ನನ್ನ ವಿನಂತಿ ಏನೆಂದರೆ ಕೂರತ್ ಕೋಯಮ್ಮ ಎಂದು ಕರೆಯುವುದರ ಅರ್ಥ ಏನು? ಕೋಯಮ್ಮ ಅಂದರೆ ನನ್ನ ಲೆಕ್ಕದಲ್ಲಿ ಹೆಂಗಸು. ಇದನ್ನು ಬೇರೆ ರೀತಿ ಹೇಗೆ ಭಾವಿಸಲಾಗುತ್ತದೆ? ಕೋಯ, ತಂಞಳ್, ತಾಂಗಳ್ ಎಂಬವರ ಬಗ್ಗೆ ಬರೆಯುವುದಾದರೆ ಬಹಳಷ್ಟು ಇದೆ. ಈ ಬಗ್ಗೆ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇನೆ.
ಟಿ.ಇಸ್ಮಾಯಿಲ್, ತಲಪಾಡಿ
Tagged with
chavadi
ಕಲೆ; ಪ್ರಪಂಚದ ಜನ ಏನೇ ಅಂದರೂ ಅವರದನ್ನು ಕರೆಯುತ್ತಿದ್ದುದು ಮಾತ್ರ ‘ಕಲೆ’ ಎಂದೆ!! ಯಾವುದೋ ಪುರುಷ ಯಾವುದೋ ಹೆಣ್ಣಿನ ಗಂಡನಾಗಿ, ಪ್ರೇಮಿಯಾಗಿ ಅಥವಾ ‘ಇಟ್ಟುಕೊಂಡವ’ನಾಗಿ ನಟಿಸಿಕೊಳ್ಳುವುದು ಆ ಕಲಾ ಪ್ರಕಾರದಲ್ಲಿ ಕಂಡುಬರುವ ಪ್ರಮುಖ ಅಂಗ. ಆ ಕಲಾಪ್ರಕಾರವನ್ನು ಪ್ರವರ್ತಿ ಸುವವರು ತಮ್ಮ ಕಲಾಪ್ರಕಾರಕ್ಕೆ ಕೊಟ್ಟ ಹೆಸರು ‘ಸಿನಿಮಾ’ ಅಥವಾ ‘ಚಲನಚಿತ್ರ ವೆಂದು. ಇಂಥ ಸಿನಿಮಾ ರೂಪುಗೊಂಡಿದ್ದು ನಿಜ ಜೀವನದಲ್ಲಿ ಹೆಣ್ಣೋರ್ವಳು ತನ್ನ ಗಂಡನ ಮುಖ ನೋಡಲು ಅಥವಾ ಆತನ ಹೆಸರು ಉಚ್ಛರಿಸಲೂ ನಾಚಿಕೆಪಟ್ಟುಕೊಳ್ಳುತ್ತಿದ್ದ ಕಾಲಘಟ್ಟದಲ್ಲಾಗಿತ್ತು. ಪುರುಷರೂ ತಮ್ಮ ಸ್ತ್ರೀಯರನ್ನು ಬಹಿರಂಗವಾಗಿ ತೋರಿಸಲು ಅಷ್ಟಾಗಿ ಇಷ್ಟಪಡದ ಕಾಲಘಟ್ಟದಲ್ಲಾಗಿತ್ತು. ಅಂಥಹ ಸೂಕ್ಷ್ಮಾತೀಸೂಕ್ಷ್ಮ ಕಾಲದಲ್ಲಿ ಯಾರಿಂದಲೋ ರೂಪು ಪಡೆದ ಸಿನಿಮಾ ಎಂಬ ಮನೋರಂಜನಾ ಮಾದರಿ ಒಂದು ಕಡೆ ಜನರಿಗೆ ವಿಶಿಷ್ಟವಾದ, ಅದ್ಭುತವೆನಿಸ ಬಹುದಾದ, ವಿಚಿತ್ರವೆನಿಸಬಹುದಾದ, ಅಪರೂಪವೆನಿಸಬಹುದಾದ ಅನುಭವ ಕೊಡುತ್ತಾ ಹೋಯಿತು. ಇನ್ನೊಂದು ಕಡೆ ಸಭ್ಯತೆ, ನೈತಿಕತೆ ಎಂದೆಲ್ಲಾ ಆಲೋಚಿಸುವವರಿಗೆ ತಲೆಬಿಸಿ ಹೆಚ್ಚೆಚ್ಚು ಕೊಡುತ್ತಾ ಹೋಯಿತು!
ಸಿನಿಮಾದಲ್ಲಿ ಗಂಡು ಹೆಣ್ಣು ಪರಸ್ಪರ ಸ್ಪರ್ಷಿಸಿ ರೋಮಾಂಚನಗೊಳ್ಳುವುದು, ಅಪ್ಪಿಕೊಳ್ಳುವುದು ಚುಂಬಿಸುವುದು, ಒಟ್ಟಾಗಿ ಮಲಗೋದು ಸೇರಿದಂತೆ ತರೇವಾರಿ ದೃಶ್ಯಗಳಲ್ಲಿ ನಟ ನಟಿಯರು ಕಾಣಿಸಿಕೊಂಡಾಗ ಅಂದಿನ ಜನ ಭಾವಿಸಿ ಕೊಂಡಿದ್ದೇನೆಂದರೆ ಇಲ್ಲಪ್ಪಾ, ಅವರು ಅಂಥಾ ಜನ ಅಲ್ಲವೇ ಅಲ್ಲ. ಹಾಗೆ ಗಂಡು ಹೆಣ್ಣು ಪರಸ್ಪರ ಚುಂಬಿಸಲು, ಅಪ್ಪಿಕೊಳ್ಳಲು ಅಥವಾ ಮಲಗಿ ಪಲ್ಟಿ ಹೊಡೆಯಲು ಅವರೇನು ಅಂಥಾ ಮೂರ್ಖರಾ? ನಾವೆಲ್ಲ ನೋಡುತ್ತಿದ್ದೇವೆ ಹಾಗೂ ಅವರು ಗುರುತು ಪತ್ತೆ ಹಚ್ಚುತ್ತೇವೆ ಎಂಬ ಪರಿeನ ಅವರಿಗಿರುವು ದಿಲ್ಲವಾ? ನಿಜ ಹೇಳಬೇಕೆಂದರೆ ಅವರು ಹಾಗೆ ಮಾಡುತ್ತಿರುವುದು ನೈಜ ದೃಶ್ಯಗಳೇ ಅಲ್ಲ. ಸಿನಿಮಾ ತಂತ್ರಜ್ಞರು ತಂತ್ರeನ ಬಳಸಿ ನಮಗೆ ನಟನಟಿಯರು ನಿಜವಾಗಿಯೂ ಹಾಗೆ (?) ಮಾಡಿಕೊಳ್ಳುತ್ತಿದ್ದಾರೆ ಎಂಬ ಭ್ರಮೆ ಸೃಷ್ಟಿಯಾಗುವಂತೆ ದೃಶ್ಯಗಳನ್ನು ಸಂಯೋಜಿಸಿರುತ್ತಾರೆ ಅಷ್ಟೇ ಎಂದಾಗಿತ್ತು.
ಆದರೆ ದಿನಗಳುರುಳಿದಂತೆ ವರ್ಷಗಳು ತಮ್ಮ ಆಯುಷ್ಯಗಳನ್ನು ತಿಂದು ಮುಗಿಸುತ್ತಾ ಹೋದಂತೆ ಜನರಿಗೆ ವಸ್ತು ಸ್ಥಿತಿ ಮನವರಿಕೆಯಾಗ ತೊಡಗಿತು. ಆದರೆ ಹಾಗೆ ಮನವರಿಕೆಯಾದವರು ಏನೂ ಮಾಡುವಂತಿರಲಿಲ್ಲ. ಯಾಕೆಂದರೆ ಸಿನಿಮಾರಂಗ ಬಹುದೂರ ಸಾಗಿ ಹೋಗಿತ್ತು. ಅದನ್ನು ಹಿಂದೆ ಕರೆಸಿ ಅಂಕುಶ ಹಾಕಲು ಆಗದ ಮಾತಾಗಿತ್ತು. ಸಿನಿಮಾರಂಗ ದಿನದಿಂದ ದಿನಕ್ಕೆ ತನ್ನ ಗಾತ್ರ ಹಿರಿದಾಗಿಸುತ್ತಾ ನಾಗಾಲೋಟಗೈಯ್ಯುತ್ತಿತ್ತು. ಅದನ್ನು ಇಷ್ಟ ಪಡುವವರು, ಅನುಕರಿಸುವವರು, ಒಪ್ಪಿಕೊಳ್ಳುವವರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋದರು. ಯಾರೂ ಏನೂ ಮಾಡುವಂತಿರಲಿಲ್ಲ. ಕುದುರೆಯನ್ನು ಕಟ್ಟಿಹಾಕಲು ಯಾರಿಗೂ ಸಾಧ್ಯವಾಗುವಂತಿರಲಿಲ್ಲ.
ಆದರೂ ಅದರೆಡೆಯಲ್ಲಿ ಕೆಲವು ಜನರು ಸಿನಿಮಾ ಪ್ರಕಾರಕ್ಕೆ ತಮ್ಮ ವಿರೋಧ ವ್ಯಕ್ತಪಡಿಸುತ್ತಲೇ ಮುಂದುವರಿದರು. ಅದೊಂದು ನೀಚಕಾರ್ಯ ವೆನ್ನುತ್ತಲೇ ಹೋದರು. ಯಾವನದ್ದೋ ಮಗಳು ಯಾರ‍್ಯಾರೋ ಪುರುಷರ ಜೊತೆ ಆಲಿಂಗನದಲ್ಲಿದ್ದು ಪ್ರೇಮ ಚುಂಬನದಲ್ಲಿ ಮೈಮರೆಯುವುದು, ಯಾವ್ಯಾ ವನದ್ದೋ ಸಹೋದರಿ ಪರಪುರುಷರೆದುರು ತಮ್ಮ ಮೈಯ ಮುಚ್ಚಿಡಲೇಬೇಕಾದ ಅಂಗಾಂಗಗಳನ್ನು ತೆರೆದು ತೋರಿಸಿ ನಿಲ್ಲುವುದು, ಯಾವನದ್ದೋ ಹೆಂಡತಿ ಹಾಸಿಗೆಯಲ್ಲಿ ಪರಪುರುಷರ ಜೊತೆ ನಗ್ನಳಾಗಿ ಹೊರಳಾಡುವುದು ಖಂಡಿತ ವಾಗಿಯೂ ಅಸಹ್ಯ. ಅದರಲ್ಲಿ ಎರಡು ಮಾತೇ ಇಲ್ಲ. ಇಂಥಾ ನೀಚಾತಿನೀಚ ಕಾರ್ಯ ನಿಲ್ಲಲೇ ಬೇಕು ಎಂದು ಆಗ್ರಹಿಸುತ್ತಲೇ ಹೋದರು. ಆದರೆ ಸಿನಿಮಾ ಮಂದಿ ಮಾತ್ರ ಅದನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ. ಅವರು ಹೇಳುತ್ತಾ ಹೋದರು. ಇದೊಂದು ಕಲೆ. ಈ ಕಲೆಯನ್ನು ಬೆಳೆಸುವುದರಲ್ಲಿ ನಾವೆಲ್ಲ ರಾತ್ರಿ ಹಗಲೂ ಶ್ರಮವಹಿಸುತ್ತಿದ್ದೇವೆ. ಇಲ್ಲಿ ಕೆಲಸ ಮಾಡುವವರೆಲ್ಲರೂ ಒಂದೇ ಕುಟುಂಬ. ಇಲ್ಲಿ ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು. ಅದಾಗಿ ಅದೆಷ್ಟೋ ಕೋಟಿ ಸಂಖ್ಯೆಯ ಸಿನಿಮಾಗಳು ಈ ಭೂಮಿಯಲ್ಲಿ ಪ್ರದರ್ಶನಗೊಂಡಾಗಿದೆ. ಇಂದಿಗೂ ಧಾಂಧೂಂಮೆಂದು ಪ್ರದರ್ಶನ ಗೊಳ್ಳುತ್ತಲೇ ಇಲ್ಲ. ಅವರು ಇಂದು ಹೇಳುವುದು ಅಂದು ಹೇಳಿದ್ದನ್ನೇ. ‘ಸಿನಿಮಾ ಒಂದು ಕಲೆ’ ಅದೇ ಹೊತ್ತು ಈ ಕಡೆ ಅದನ್ನು ವಿರೋಧಿಸುವವರು ಹೇಳುವುದೂ ತಾವು ಹಿಂದೆ ಹೇಳಿದಂಥದ್ದೇ. ಸಿನಿಮಾ ಕಲೆಯಲ್ಲಿ ಅದೊಂದು ವಿಕ್ಷಿಪ್ತ ಮನಸುಳ್ಳವರ ನೀಚ ಚಿಂತನೆಗಳ ಮೂರ್ತರೂಪ ಅಷ್ಟೇ ಹಾಗಾದರೆ ಗೆಳೆಯರೇ, ಯಾರದ್ದು ಸರಿ ನೋಡೋಣವೇ?
ರಾಧಿಕಾ ಎಂಬ ಕನ್ನಡ ಚಿತ್ರರಂಗದ ನಟಿಯೋರ್ವಳ ಹೆಸರು ನೀವು ಕೇಳಿರಬಹುದು. ನಾನು ಕೂಡಾ ಕೇಳಿದ್ದೇನೆ. ಪತ್ರಿಕೆಗಳನ್ನು ಓದುವ ಹವ್ಯಾಸ ನನಗಿರುವುದರಿಂದ ಆಗೊಮ್ಮೆ ಈಗೊಮ್ಮೆ ಸಿನಿಮಾಕ್ಕೆ ಸಂಬಂಧಿಸಿದ ಸುದ್ಧಿ ಅವುಗಳಲ್ಲಿ ಪ್ರಸ್ತಾಪವಾಗುವುದರಿಂದ ಚಲನಚಿತ್ರರಂಗದ ಕೆಲ ವಿಚಾರಗಳೂ ನಮ್ಮ ಗಮನಸೆಳೆಯುವುದು ಸಹಜ. ಅದು ಬಿಟ್ಟು ಟಿವಿಗಳ ಲ್ಲಾಗಲೀ ಇನ್ನಿತರ ಕಡೆಗಳಲ್ಲಾಗಲೀ ಸಿನಿಮಾ ವೀಕ್ಷಿಸುವ ಗೀಳು ನನಗೆ ಮೊದಲೇ ಇಲ್ಲ. ಅದಿರಲಿ, ಈ ನಟಿಮಣಿಯ ಬಗ್ಗೆ ಮಾತನಾಡೋಣ. ಅವಳ ಇಂದಿನ ಪೂರ್ಣ ಹೆಸರು ರಾಧಿಕಾ ಕುಮಾರಸ್ವಾಮಿ. ಕುಮಾರ ಸ್ವಾಮಿ ಈಕೆಯ ಗಂಡ. ಗೊತ್ತಿಲ್ಲದಿದ್ದರೂ ನಾನೀಗ ಹೇಳಲು ಹೋಗುವ ವಿಚಾರಕ್ಕೆ ಅದು ಅಗತ್ಯವೂ ಇಲ್ಲ. ಈ ನಟಿ ಮೊನ್ನೆ ಪತ್ರಿಕೆಯೊಂದರಲ್ಲಿ ಹೀಗೆ ಹೇಳಿಕೊಂಡಿದ್ದಾಳಂತೆ "ಸಿನಿಮಾದಲ್ಲಿ ನಾನು ನಟಿಸುತ್ತೇನೆ. ಆದರೆ ಹೀರೋ (ಪುರುಷ)ನನ್ನನ್ನು ಸ್ಪರ್ಶಿಸಲೇಬಾರದು. ಆತ ಕನಿಷ್ಠ ಪಕ್ಷ ಒಂದಡಿಯಾದರೂ ದೂರನಿಲ್ಲಬೇಕು" ಎಂಬ ಷರತ್ತು ಹಾಕಿದ್ದಾಳೆ.
ಗೆಳೆಯರೇ, ಹಾಗಾದರೆ ಇದರರ್ಥ ಏನು?
ಹಿಂದೆ ಅನೇಕ ಸಲ ಪತ್ರಿಕೆಗಳನ್ನು ತಿರುವು ಹಾಕುತ್ತಿದ್ದ ಸಂದರ್ಭ ಈ ನಟಿಯ ಅದೆಷ್ಟೋ ಅರೆನಗ್ನ ಫೋಟೋಗಳನ್ನು ಅಚಾನಕ್ಕಾಗಿ ಕಂಡವನು ನಾನು. ಪ್ರಾಯಶಃ ಇತರ ಎಲ್ಲಾ ನಟಿಯರಂತೆ ಈ ನಟಿ ಕೂಡಾ ಸ್ಪಷಸುಖ, ಚುಂಬನ ಸುಖ, ಆಲಿಂಗನ ಸುಖ ಎಲ್ಲವನ್ನು ಪಡೆದವಳೇ, ಧಾರೆಯೆರೆದವಳೇ. ಅಂತಿರುವಾಗ ಈಗ ಮಾತ್ರ ನಟನೆ ಸಂದರ್ಭ ಪುರುಷ ಒಂದಡಿ ದೂರ ನಿಲ್ಲಬೇಕು ಎಂದು ಶರತ್ತು ವಿಧಿಸುವುದು ಹೇಗೆ ಸರಿ!? ಇದರ ಮರ್ಮ ಏನು?
ನನ್ನನಿಸಿಕೆ ಪ್ರಕಾರ ನಟನೆ ಎಂಬ ಹುಚ್ಚು ಇನ್ನೂ ಬಿಟ್ಟು ಹೋಗದ ಈಕೆಗೆ ಗಂಡ ಕುಮಾರಸ್ವಾಮಿ ಎಂಬ ವ್ಯಕ್ತಿ, "ನೀನು ನನ್ನ ಹೆಂಡತಿ. ನಿನ್ನನ್ನು ನಾನಲ್ಲದೆ ಬೇರೆ ಯಾರೂ ಸ್ಪರ್ಶಿಸಕೂಡದು. ನಟಿಸುವಾಗ ಪರಪುರುಷರು ನಿನ್ನನ್ನು ಸ್ಪರ್ಶಿಸುವ ಸಂದರ್ಭ ಬಂದೇ ಬರುತ್ತದೆ. ಒಂದು ವೇಳೆ ನಿನಗೆ ನಟಿಸಲೇಬೇಕು ಎಂದಿದ್ದರೆ ಪುರುಷರು ಸ್ಪರ್ಶಿಸದ ದೃಶ್ಯಗಳಲ್ಲಿ ನಟಿಸು" ಎಂದು ಒಪ್ಪಿಗೆ ಕೊಟ್ಟಿರ ಬಹುದು. ಅಥವಾ ತನ್ನನ್ನು ತನ್ನ ಗಂಡ ಕುಮಾರಸ್ವಾಮಿ ಎಂಬ ಪುರುಷನಲ್ಲದೆ ಬೇರೆ ಯಾರೂ ಸ್ಪರ್ಶಿಸಕೂಡದು ಎಂಬ ನಿಯತ್ತಿನಲ್ಲಿ ಈ ರಾಧಿಕಾ ಇಂಥಾ ಶರತ್ತು ಹಾಕಿರಬಹುದು.
ಏನೇ ಆದರೂ ಒಟ್ಟಿನಲ್ಲಿ ಎರಡರ ಧ್ವನಿ ಒಂದೇ. ಒಬ್ಬ ವ್ಯಕ್ತಿ ಆಧುನಿಕತೆಗೆ ಎಷ್ಟೇ ತೆರೆದುಕೊಂಡಿದ್ದರೂ ತನ್ನ ಸಂಗಾತಿಯನ್ನು ಪರಪುರುಷ ಸ್ಪರ್ಷಿಸಿ ಸುಖ ಪಡೆಯುವುದನ್ನು ಖಂಡಿತಾ ಇಷ್ಟ ಪಡಲಾರ! ತನ್ನ ಸಂಗಾತಿ ತನ್ನ ಸೊತ್ತು ಎಂದು ಭಾವಿಸುವವನನ್ನು ತನ್ನ ಗಲ್ಲದೆ ಸಂಗಾತಿಯನ್ನು ಇನ್ನೊಬ್ಬನಿಗೆ ಅನುಭವಿಸಲು ಬಿಡ ಲಾರ. ಇದು ಪ್ರಪಂಚ ಸೃಷ್ಟಿಯಿಂದ ಇಂದಿನವರೆಗೂ ಕಂಡಿರುವ ಮತ್ತು ಅಂತ್ಯದಿನದವರೆಗೂ ಕಾಣಬಹುದಾದ ಮನುಷ್ಯನ ಮನಸ್ಥಿತಿ. ಯಾರೂ ಇದರಿಂದ ಹೊರತಾಗಲು ಸಾಧ್ಯವಿಲ್ಲ.
ರಾಧಿಕಾ ಎಂಬ ನಟಿ ಪರ ಪರುಷ ತನ್ನನ್ನು ಸ್ಪರ್ಶಿಸಕೂಡದು ಎಂದಿರುವುದು ಮಾನವ ಸಹಜ ಭಾವನೆಯನ್ನು ಅಭಿವ್ಯಕ್ತಿ ಗೊಳಿಸುತ್ತದೆ. ಆಕೆ ಹಾಗೆ ಅಂದಿರುವುದರಲ್ಲಿ ಯಾವ ತಪ್ಪು ಇಲ್ಲ. ಸಿನಿಮಾದಲ್ಲಿ ಕಂಡು ಬರುವ ಅನ್ಯ ಸ್ತ್ರೀ ಪುರುಷರ ಆಲಿಂಗನ ಚುಂಬನ ಮತ್ತಿತರ ಅಸಹ್ಯಕರ ನಡವಳಿಕೆಗಳು ಮನುಷ್ಯನಾದವ ಕಲೆ ಎಂಬ ಹೆಸರಿನಲ್ಲಿ ಒಪ್ಪಿಕೊಳ್ಳುವುದಿಲ್ಲವೆಂದು ನಗ್ನತೆಗೆ ಅನೈತಿಕತೆಗೆ ಮೈಯೊಡ್ಡಿದವರು, ಪ್ರೋತ್ಸಾಹ ಎಂದು ಅರಿತುಕೊಳ್ಳುವು ದೊಳಿತು. ಬಟ್ಟೆ ಬಿಚ್ಚುವುದು ಅನ್ಯರೊಂದಿಗೆ ಮೈಚಳಿ ಬಿಟ್ಟು ಸುಖ ಪಡೆಯುವುದು ‘ಕಲೆ’ ಎಂದಾದರೆ ಅಂಥಾ ಕಲೆಯಲ್ಲಿ ಸಾಧನೆ ಮಾಡಲು ಪ್ರಪಂಚದ ಆರುನೂರು ಕೋಟಿ ಮಂದಿಗೂ ಸಾಧ್ಯವಿದೆ ಎಂಬುವುದನ್ನು ಇವರು ಅರಿಯಲಿ.
ಫರಿಯಾದ್, ಇಖ
Tagged with
lekhana
ಭಾರತದ ಆರ್ಥಿಕಾಭಿವೃದ್ಧಿಗೆ ಕೃಷಿ ಕ್ಷೇತ್ರದ ಕೊಡುಗೆ ಅಪಾರ. ಒಂದು ದೇಶದ ಅಭಿವೃದ್ಧಿಯಾಗಬೇಕಿದ್ದಲ್ಲಿ ಇಲ್ಲಿರುವ ಪ್ರಜೆಗಳಿಗೆ ಆಹಾರ, ಆರೋಗ್ಯ, ವಸತಿ, ಉದ್ಯೋಗ, ಆದಾಯ ಇವೆಲ್ಲ ಅತ್ಯಗತ್ಯ. ಈ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ಕೃಷಿ ಕ್ಷೇತ್ರ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯಾವ ರೀತಿ ಪ್ರತಿ ಕ್ರಿಯೆ ನೀಡುತ್ತದೆಯೆಂಬುದು ಈ ದೇಶದ ಅಭಿವೃ ದ್ಧಿಯ ಪಥವನ್ನು ನಿರ್ಧರಿಸುತ್ತದೆ. ಈ ದೃಷ್ಟಿಯಿಂದ ಭಾರತವನ್ನು ನೋಡಿದಾಗ ಇಲ್ಲಿನ ಕೃಷಿ ಕ್ಷೇತ್ರ ಸರ್ವ ರೀತಿಯಿಂದಲೂ ಸಹಕರಿಸುತ್ತಾ ಬರುತ್ತಿರುವುದನ್ನು ನಾವು ಕಂಡುಕೊಳ್ಳಬಹುದು.
ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ ಮತ್ತು ಆ ಬಳಿಕದ ಎರಡು ದಶಕಗಳಲ್ಲಿ ಕಂಡುಬಂದ ಪ್ರಮುಖ ಸಮಸ್ಯೆ ಆಹಾರ ಧಾನ್ಯಗಳ ಅಭಾವವಾಗಿತ್ತು. ಈ ಸಮಸ್ಯೆಯನ್ನು ನಿವಾ ರಿಸಲು ‘ಹಸಿರುಕ್ರಾಂತಿ’ಯನ್ನು ಅಳವಡಿಸಲಾಯಿತು. ಇದಕ್ಕನು ಗುಣವಾಗಿ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಇಳು ವರಿ ಹೆಚ್ಚು ನೀಡಬಲ್ಲ ಬೀಜಗಳು, ರಸಗೊಬ್ಬರ, ರಾಸಾಯ ನಿಕ, ಕೀಟನಾಶಕ, ಹಣಕಾಸಿನ ಸಂಸ್ಥೆಗಳು, ನೀರಾವರಿ ವ್ಯವಸ್ಥೆ, ಭೂಸುಧಾರಣೆ ಇತ್ಯಾದಿ ಇತ್ಯಾದಿಗಳು ಹೊರಹೊಮ್ಮಿದವು. ಇವೆಲ್ಲದರ ಪರಿಣಾಮವಾಗಿ ದೇಶವಿಂದು ಆಹಾರ ಧಾನ್ಯಗ ಳನ್ನು ಮಿಗತೆ ಪ್ರಮಾಣದಲ್ಲಿ ಉತ್ಪಾದಿಸುವ ಹಂತದಲ್ಲಿದ್ದು, ಇದರೊಂದಿಗೆ ಆಹಾರೇತರ ಉತ್ಪನ್ನಗಳಲ್ಲೂ ಗಣನೀಯ ಬೆಳ ವಣಿಗೆಯನ್ನು ಸಾಧಿಸಿದೆ. ಆದ್ದರಿಂದ ನಮ್ಮ ಕೃಷಿ ಕ್ಷೇತ್ರವಿಂದು ಉತ್ಪಾದನಾ ದೃಷ್ಟಿಯಿಂದ ಒಂದು ಅಭಿವೃದ್ಧಿ ಸಾಧಿಸಿದ ಕ್ಷೇತ್ರ ವೆಂಬುದಾಗಿ ಹೆಸರು ಪಡೆದಿದೆ.
ಕಳೆದ ೫೩ ವರ್ಷಗಳ ಯೋಜನೆಗಳ ಪರಿಣಾಮವಾಗಿ ನಮ್ಮ ಕೃಷಿ ಕ್ಷೇತ್ರ ಉತ್ಪನ್ನಗಳ ಉತ್ಪಾದನಾ ದೃಷ್ಟಿಯಿಂದ ಸಾಕಷ್ಟು ಅಭಿವೃದ್ಧಿಯನ್ನು ಕಂಡುಕೊಂಡಿದ್ದು, ಇದೀಗ ಇಲ್ಲಿ ದ್ವಿತೀಯ ಹಂತದ ‘ಹಸಿರುಕ್ರಾಂತಿ’ಗೆ ಸಕಲ ಸಿದ್ಧತೆಗಳು ತಯಾರಾಗು ತ್ತಿದೆ. ಆದರೆ ನಮ್ಮೆಲ್ಲಾ ನೀತಿಗಳು, ಯೋಜನೆಗಳು ಮತ್ತು ಪ್ರೇರ ಣೆಗಳು ಕೃಷಿ ಕ್ಷೇತ್ರವನ್ನು ಕೇವಲ ಉತ್ಪಾದನಾ ದೃಷ್ಟಿಯೊಂದನ್ನೇ ಗಮನದ ಲ್ಲಿರಿಸಿ ಹೊರಹೊಮ್ಮಿರುವುದು ದೇಶದ ಅದರಲ್ಲೂ ಮುಖ್ಯವಾಗಿ ಕೃಷಿಕರ ದುರ್ದೈವವೇ ಸರಿ. ಇದಕ್ಕೆ ಮುಖ್ಯ ಕಾರಣ ಪೂರೈಕೆ, ಬೇಡಿಕೆಯನ್ನು ಸೃಷ್ಟಿ ಮಾಡುವುದು ಎಂಬ ವಾದ. ಈ ದೃಷ್ಟಿಯಿಂದ ನೋಡಿದಾಗ ಪೂರೈಕೆಗೆ ಬೇಡಿಕೆಯೇನೋ ಸೃಷ್ಟಿ ಯಾಗಿದೆ, ಆಗುತ್ತಲಿದೆ, ಆದರೆ ಇಲ್ಲಿ ಪೂರೈಕೆಯನ್ನು ಬೇಡಿಕೆ ಯಾಗಿ ಪರಿವ ರ್ತಿಸುವ ಮಾರುಕಟ್ಟೆ ವ್ಯವಸ್ಥೆಯೆಂಬುದು ಉತ್ಪಾದ ಕನ ಮತ್ತು ಗ್ರಾಹಕನ ಹಿತಕ್ಕನುಗುಣವಾಗಿಲ್ಲ. ಪರಿಣಾಮವಾಗಿ ಕೃಷಿಕರಿಂದು ಕಷ್ಟ-ನಷ್ಟಗಳನ್ನು ಅನುಭವಿಸುವುದು ಒಂದೆಡೆ ಯಲ್ಲಾದರೆ, ಇನ್ನೊಂದೆಡೆಯಲ್ಲಿ ಗ್ರಾಹಕ ತೀವ್ರ ಸಂಕಷ್ಟಕ್ಕೊಳ ಗಾಗುತ್ತಿದ್ದಾನೆ.
ಈ ರೀತಿಯದ್ದಾದ ವಿಭಿನ್ನ ಪರಿಸ್ಥಿತಿಯಿಂದು ನಮ್ಮ ಕೃಷಿ ಕ್ಷೇತ್ರದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದ್ದು, ಇದಕ್ಕೆಲ್ಲಾ ಮುಖ್ಯ ಕಾರಣ ದೇಶವಿನ್ನೂ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಉತ್ಪಾದನಾ ಪ್ರಕ್ರಿಯೆ ಕೊಟ್ಟು ಪ್ರಾಧ್ಯಾನತೆ ಕೊಡದಿರುವುದು. ನಮ್ಮ ಆಡಳಿತ ಗಾರರು, ಯೋಜನಕಾರರು, ನೀತಿಗಳು ಕೃಷಿ ಮಾರುಕಟ್ಟೆ ವಿಚಾ ರಕ್ಕೆ ಕೊಟ್ಟಂತಹ ಗಮನ ಅತ್ಯಲ್ಪ. ನಮ್ಮ ಕೃಷಿಯುತ್ಪನ್ನ ಮಾರುಕಟ್ಟೆ ವ್ಯವಸ್ಥೆಯಲ್ಲಿ ಇದೀಗ ನಾವು ಕಂಡುಕೊಳ್ಳುತ್ತಿರುವ ಸಮಸ್ಯೆಗಳು ಅನಾದಿ ಕಾಲದಿಂದ ಲೂ ನಿರಂತರ ಪ್ರಕ್ರಿಯೆಯಾಗಿ ಮೂಡಿ ಬಂದವುಗಳು. ಇಲ್ಲಿ ಬೆಲೆ, ಸಂಘಟನೆ, ಮಧ್ಯವರ್ತಿ ಸಮೂಹ, ಶೇಖರಣೆ, ಸಾಗಣೆ, ಮಾಹಿತಿ ಇತ್ಯಾದಿಗಳೆಲ್ಲ ಸಮಸ್ಯೆಗಳಾಗಿ ಈ ಮೊದಲು ಮತ್ತಿದೀಗ ಕಾಣಸಿಗುತ್ತಿವೆ.
ದೇಶದಲ್ಲಿಂದು ಕಾರ್ಯನಿರ್ವಹಿಸುತ್ತಿರುವ ಮಾರಾಟ ವ್ಯವಸ್ಥೆಯಲ್ಲಿ ಉತ್ಪಾದಕ ಮತ್ತು ಗ್ರಾಹಕರ ನಡುವೆ ಅತಿ ದೊಡ್ಡದಾದ ಮಧ್ಯವರ್ತಿ ಸಮೂಹ ವಿದ್ದು, ಇದಿಂದು ಗ್ರಾಹಕ ಉತ್ಪನ್ನಕ್ಕೆ ತೆರುತ್ತಿರುವ ಬೆಲೆಯ ಬಹುಪಾಲನ್ನು ತನ್ನದಾಗಿಸಿಕೊಳ್ಳುತ್ತಿದೆ.
ಕೃಷಿಯುತ್ಪನ್ನಗಳ ಮಾರಾಟ ಜಾಲದಲ್ಲಿ ನಮ್ಮ ಲ್ಲಿಂದು ಕನಿಷ್ಟ ೫ರಿಂದ ಗರಿಷ್ಟ ೧೫ರ ತನಕ ಮಧ್ಯವರ್ತಿಗಳು ಕಾರ್ಯ ನಿಭಾಯಿಸುತ್ತಿದ್ದು, ಇದರಿಂದಾಗಿ ಗ್ರಾಹಕ ಕೊಡುವ ಬೆಲೆಯ ಶೇಕಡಾ ೪೦ರಿಂದ ೬೦ ತನಕದ ಬೆಲೆ ಉತ್ಪಾದಕ ನಿಗೆ ಲಭ್ಯವಾಗುವಂತಾಗಿದೆ. ಇಲ್ಲಿ ಈ ಮಧ್ಯ ವರ್ತಿಗಳು ಉತ್ಪಾದಕ ಮತ್ತು ಗ್ರಾಹಕರನ್ನು ನಾನಾ ರೀತಿಯಲ್ಲಿ ಮರುಳು ಮಾಡಿ ಮೋಸಗೊಳಿಸುತ್ತಿದ್ದು, ಇಂತಹ ಪ್ರವೃತ್ತಿ ೧೯೨೮ಕ್ಕಿಂ ತಲೂ ಮೊದಲು ನಮ್ಮಲ್ಲಿತ್ತು ಎಂಬುದಾಗಿ ಆಗಿನ ರಾಯಲ್ ಕಮಿಷನ್ ವರದಿ ಹೇಳಿತ್ತು. ಇದರ ಪರಿಣಾಮ ಕೃಷಿ ಕ್ಷೇತ್ರ ವಿಂದು ಸೋಲಿನ ಸುಳಿಯಲ್ಲಿ ಸಿಲುಕಿ ಹೆಣಗಾಡುತ್ತಿದೆ.
ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅಂದಿನಿಂದ ಇಂದಿನ ತನಕ ಕಾಡುತ್ತಿರುವ ಇನ್ನೊಂದು ಸಮಸ್ಯೆ ಕೃಷಿಕರೊಳಗೆ ಸಂಘಟನೆಯಿಲ್ಲದಿರುವುದು.
ಸಂಘಟನೆಯ ಅಭಾವದಿಂದಾಗಿ ಮಾರಾಟ ವ್ಯವಸ್ಥೆಯ ಲ್ಲಿರುವ ಮಧ್ಯವರ್ತಿಗಳು ಕೃಷಿಕರನ್ನು ಶೋಷಿಸುತ್ತಿದ್ದು, ಇದು ಇಲ್ಲಿನ ಬೆಳವಣಿಗೆಗೆ ಮಾರಕವಾಗಿದೆ. ನಮ್ಮ ಕೃಷಿಕರು ಸಂಘ ಟಿತರಾಗದಿರಲು ನಾನಾ ರೀತಿಯ ಕಾರಣಗಳಿದ್ದು, ಇದರಲ್ಲಿ ಸರಕಾರದ ನಿರ್ಲಕ್ಷ್ಯತನವೂ ಒಂದಾಗಿದೆ. ಇದರೊಂದಿಗೆ ಸರ ಕಾರ ತನ್ನ ನೀತಿಗಳ ಮೂಲಕ ಕೃಷಿಕರನ್ನು ವಿವಿಧ ರೂಪದಲ್ಲಿ ವರ್ಗೀಕರಿಸಿರುವುದು ಸಂಘಟನಾತ್ಮಕ ಹೋರಾಟಕ್ಕೆ ತಡೆ ಯೊಡ್ಡಿದಂತಾಗಿದೆ.
ವಿ.ಎಂ. ಶೇಖರ, ಮಂಗಳೂರು
Tagged with
bahiranga
ಮುಲ್ಕಿ-ಮೂಡಬಿದ್ರೆ ಮಾರ್ಗವಾಗಿ ದಿನನಿತ್ಯ ನೂರಾರು ಲಾರಿಗಳಲ್ಲಿ ಕೆಂಪು ಕಲ್ಲು ಸಾಗಾಟ ವಾಗುತ್ತಿರುತ್ತದೆ. ರಸ್ತೆಯಲ್ಲಿ ಅತೀವೇಗವಾಗಿ ಸಂಚರಿ ಸುವ ಲಾರಿಗಳು ಪಾದ ಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಿಗೆ ಅಪಾಯವ ನ್ನುಂಟು ಮಾಡುತ್ತಿವೆ. ಈ ಹಿಂದೆ ಇದೇ ರಸ್ತೆಯಲ್ಲಿ ಕಲ್ಲಿನ ಲಾರಿಗಳ ಅವಾಂತರಕ್ಕೆ ಸಿಲುಕಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕುಬೆ ವೂರು, ಕೆಂಚನೆಕೆರೆ, ಪುನರೂರು, ಕೆರೆಕಾಡು, ಎಸ್.ಕೋಡಿ ಬಳಿ ಅಪಾಯಕಾರಿ ಕಡಿದಾದ ತಿರುವು ಗಳಿದ್ದು, ಇಲ್ಲಿ ಲಾರಿಗಳು ವೇಗವನ್ನು ತಗ್ಗಿಸದೆ ಅತೀವೇಗ ಹಾಗೂ ಅಜಾ ಗರೂಕತೆಯಿಂದ ಸಂಚರಿಸುವ ಕಾರಣ ಅಪಘಾತದ ಭೀತಿ ಎದು ರಾಗಿದೆ.
ಮುಲ್ಕಿ ಠಾಣಾ ಪೊಲೀಸರು ಸೂಕ್ತ ಕ್ರಮ ಕೈಗೊಂಡು ಇಲ್ಲಿ ಸಂಚರಿಸುವ ಲಾರಿಗಳಿಗೆ ಸಮಯದ ಮಿತಿಯನ್ನು ವಿಧಿಸಿದರೆ ಉಳಿದ ವಾಹನಗಳ ಸವಾರರು ನೆಮ್ಮದಿಯಿಂದ ಸಂಚರಿಸಬಹುದಾಗಿದೆ.
ಪ್ರವೀಣ್, ಕಾರ್ನಾಡು
Tagged with
nimminda
ಮಳೆ ಆರಂಭವಾದರೆ ಸಾಕು, ಕೂಳೂರು ಸೇತುವೆಯ ಮೇಲೆ ಕೊಳಕು ನೀರು ಶೇಖ ರಣೆಯಾಗುತ್ತದೆ. ಇದರಿಂದ ದ್ವಿಚಕ್ರ ಸವಾರರ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ದ್ವಿಚಕ್ರ ಸವಾರರು ಸೇತುವೆಯ ಮೇಲೆ ಸಂಚರಿಸುವಾಗ ವೇಗದೂತ ಬಸ್‌ಗಳು ಬಂದರೆ ಕೆಸರು ನೀರಿನ ಅಭಿಷೇಕವಾಗುತ್ತದೆ. ಪ್ರತೀ ವರ್ಷ ಇದೇ ಸಮಸ್ಯೆ ಯಿದ್ದರೂ ಪರಿಹಾರ ಕಂಡುಹಿಡಿಯುವಲ್ಲಿ ಮಾತ್ರ ಸಂಬಂಧಪಟ್ಟವರು ಸಂಪೂರ್ಣ ವಿಫಲವಾಗಿದ್ದಾರೆ. ಸೇತುವೆಯ ಮೇಲೆ ನೀರು ನಿಲ್ಲದಂತೆ ನೋಡಿ ಕೊಂಡರೆ ದ್ವಿಚಕ್ರ ಸವಾರರು ನೆಮ್ಮದಿಯಿಂದ ಸಂಚರಿಸಬಹುದು. ಜೋರು ಮಳೆ ಸುರಿದಾಗ ಸೇತುವೆಯ ಮೇಲೆ ನೆರೆಯಂತೆ ನೀರು ಹರಿಯುತ್ತಿರುತ್ತದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ತುರ್ತಾಗಿ ಗಮನಿಸಲಿ.
ಶ್ರೀನಿವಾಸ್, ಕೂಳೂರು
Tagged with
nimminda
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಗಳ ಸಂಖ್ಯೆಯಲ್ಲಿ ತೀರಾ ಹೆಚ್ಚಳ ಕಂಡುಬರು ತ್ತಿದೆ. ಪೊಲೀಸ್ ಇಲಾಖೆ ಕಮಿಷನರೇಟ್ ವ್ಯವ ಸ್ಥೆಗೆ ಒಳಪಟ್ಟ ನಂತರವೂ ಅಪರಾಧಿಗಳು ಕಾನೂ ನಿನ ಭಯವೇ ಇಲ್ಲದಂತೆ ಓಡಾಡಿಕೊಂಡಿರುವುದು ಅದೃಷ್ಟವೋ, ದುರಾದೃಷ್ಟವೋ ತಿಳಿಯದಾಗಿದೆ. ಯಾಕೆಂದರೆ ಇತ್ತೀಚಿನ ಕೆಲವು ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ಅನೇಕ ಮಂದಿ ಕೊಲೆಯಾಗಿ ಹೋಗಿ ದ್ದಾರೆ. ಇನ್ನೂ ಮೀಸೆ ಮೂಡದ ಯುವಕರು ಜೈಲು ಸೇರಿದ್ದಾರೆ. ಪೊಲೀಸ್ ಇಲಾಖೆಗೆ ಹೊಚ್ಚ ಹೊಸ ತಂತ್ರeನ ಬಂದಿದೆ, ಹತ್ತಾರು ಪಿಸಿಆರ್ ವಾಹನಗಳ ಸೇರ್ಪಡೆಯಾಗಿದೆ. ನಗರದ ವಿವಿಧ ಭಾಗಗಳಲ್ಲಿ ಪೊಲೀಸರು ಗಸ್ತು ನಿರತರಾಗಿರುತ್ತಾರೆ. ಆದರೂ ಕೆಲವು ಕಡೆ ಗೂಡಂಗಡಿ, ಬಾರ್, ವೈನ್ ಶಾಪ್‌ಗಳಲ್ಲಿ ಪುಂಡ ಯುವಕರು ಸಂಜೆಯ ವೇಳೆ ಕುಡಿದು ಚಿತ್ತಾಗಿ ಘರ್ಷಣೆಗೆ ಇಳಿದು ಗಂಭೀರ ಪ್ರಮಾಣದ ಅಪರಾಧ ಕೃತ್ಯಗಳನ್ನು ಎಸಗುತ್ತಲೇ ಇದ್ದಾರೆ. ಇವರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳದೇ ಇರುವುದು ವರದಾನವಾಗುತ್ತಿದೆ. ಪೊಲೀಸ್ ಕಮಿಷನರ್, ಹಿರಿಯ ಅಧಿಕಾರಿಗಳು ಇನ್ನಾದರೂ ಇತ್ತ ಗಮನಿಸಿ ನಗರದಲ್ಲಿ ರೌಡಿಯಿಸಂ, ಗ್ಯಾಂಗ್‌ವಾರ್ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕಾಗಿ ವಿನಂತಿ.
ಸುಪ್ರೀತ್, ಮಂಗಳೂರು
Tagged with
nimminda
ಮಂಗಳೂರಿನಲ್ಲಿ ನೂರಾರು ಬಟ್ಟೆಯಂಗಡಿಗಳು ವ್ಯವಹಾರ ನಡೆಸು ತ್ತಿವೆ. ಆದರೆ ಇವುಗಳಲ್ಲಿ ಹೆಚ್ಚಿನವುಗಳು ಗ್ರಾಹಕರಿಗೆ ವಂಚಿಸುವುದನ್ನೇ ವ್ಯವಹಾರ ಎಂದುಕೊಂಡಿವೆ. ‘ಒಂದು ಕೊಂಡರೆ ಇನ್ನೊಂದನ್ನು ಉಚಿತ ವಾಗಿ ಪಡೆಯಿರಿ’ ಎಂದು ಅನೇಕ ಅಂಗಡಿಗಳಲ್ಲಿ ಆಫರ್ ನೀಡುತ್ತಾರೆ. ಆದರೆ ಇಲ್ಲಿ ಬಟ್ಟೆಯ ಗುಣಮಟ್ಟ ಕಳಪೆ ಮಟ್ಟದ್ದಾಗಿರುತ್ತದೆ, ದರ ಮಾತ್ರ ಅಸಲಿ ಯಾಗಿರುತ್ತದೆ. ಈ ಬಗ್ಗೆ ಅಂಗಡಿ ಮಾಲಕರಲ್ಲಿ ಪ್ರಶ್ನಿಸುವಂತಿಲ್ಲ. ಬೇಕಾದರೆ ಕೊಂಡುಕೊಳ್ಳಿ, ಇಲ್ಲವಾ ದರೆ ಮುಂದೆ ಹೋಗಿ ಎನ್ನುತ್ತಾರೆ. ಮುಂಬೈ, ಗುಜರಾತ್‌ಗಳಲ್ಲಿ ರಸ್ತೆಯ ಬದಿ ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡುವ ಫ್ಯಾಕ್ಟರಿ ರಿಜೆಕ್ಟ್ ಮಾಲುಗಳು ಇಲ್ಲಿನ ಬಟ್ಟೆ ಮಳಿಗೆಯನ್ನು ಸೇರುತ್ತಿವೆ. ಇವುಗಳನ್ನು ಗ್ರಾಹಕರು ಗರಿಷ್ಠ ಬೆಲೆ ಕೊಟ್ಟು ಕೊಳ್ಳುತ್ತಾರೆ. ಇಂಥಹ ಮೋಸದ ವ್ಯವಹಾರಕ್ಕೆ ಕೊನೆ ಯೆಂದು? ಇನ್ನಾದರೂ ಗ್ರಾಹಕರೇ ಜಾಗೃತರಾಗಿರಿ.
ಸುಚಿತ್ರ, ವೆಲೆನ್ಸಿಯಾ
Tagged with
nimminda
ಮುಂಬಯಿ: ಹಿಂದಿ ಚಿತ್ರರಂಗದ ಮೇರುನಟ ರಾಜೇಶ್ ಖನ್ನಾ, ಕಳೆದ ಕೆಲವು ದಿನಗಳಿಂದ ಆಹಾರ ಸೇವಿಸದೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇತ್ತೀಚೆಗೆ ದೂರದರ್ಶನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಖನ್ನಾ, ಹಿಂದಿ ಚಿತ್ರರಂಗದಲ್ಲಿ ಎಲ್ಲವೂ ಸರಿಯಿಲ್ಲ ಎಂದಿದ್ದಾರೆ. ಸದ್ಯಕ್ಕೆ ಪತ್ನಿ ಡಿಂಪಲ್ ಕಪಾಡಿಯಾರ ಹಾರೈಕೆಯಲ್ಲಿ ದಿನ ಕಳೆಯುತ್ತಿದ್ದಾರೆ.
ಚಿತ್ರರಂಗದಲ್ಲಿ ಕಾಕಾ ಎಂದು ಖ್ಯಾತರಾಗಿರುವ ರಾಜೇಶ್ ಖನ್ನಾ, ಏಪ್ರಿಲ್ ತಿಂಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತದ ನಂತರದ ದಿನಗಳಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ರಿಂಕಿ ಹಾಗೂ ಆಕೆಯ ತಾಯಿ ಡಿಂಪಲ್ ಕಪಾಡಿಯಾ ಸದ್ಯಕ್ಕೆ ಖನ್ನಾರನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಅಶ್ವಿನ್ ತಿಳಿಸಿದ್ದಾರೆ.
೧೯೬೬ರಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಿರುವ ರಾಜೇಶ್ ಖನ್ನಾರ ಮೊದಲ ಚಿತ್ರ ಅಖ್ರಿ ಖತ್ ಬಹಳ ಜನಪ್ರಿಯವಾಗಿದ್ದು, ರಾಝ್, ದೋ ರಾಸ್ತೆ ಹಾಗೂ ಆರಾಧನ್ ಅವರ ಪ್ರಮುಖ ಚಿತ್ರಗಳು. ೧೯೬೯-೧೯೭೨ರ ಮಧ್ಯೆ ತನ್ನ ನಟನೆಯ ೧೫ಕ್ಕೂ ಹೆಚ್ಚು ಚಿತ್ರಗಳಿಗೆ ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ಹವೆಲ್ಸ್ ಫ್ಯಾನ್‌ನ ದೂರದರ್ಶನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
Tagged with
feature,
nnews
ಬೆಂಗಳೂರು: ಗಣಿಕಪ್ಪ ಹಗರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕುಟುಂಬದವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಸದ್ಯದ ಮಟ್ಟಿಗೆ ಸಿಬಿಐ ಬಂಧನ ಭೀತಿಯಿಂದ ಪಾರಾಗಿದ್ದಾರೆ.
ನಿರೀಕ್ಷಣಾ ಜಾಮೀನಿಗೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ಸುಭಾಷ್ ಅಡಿಯವರನ್ನೊಳಗೊಂಡ ಏಕ ಸದಸ್ಯ ಪೀಠ ತೀರ್ಪು ನೀಡಿದೆ. ಯಡಿಯೂರಪ್ಪರೇ ಅಲ್ಲದೆ, ಅವರ ಇಬ್ಬರು ಪುತ್ರರಿಗೆ ಹಾಗೂ ಅಳಿಯನಿಗೂ ಜಾಮೀನು ನೀಡಲಾಗಿದೆ. ಯಡಿಯೂರಪ್ಪ ಹಾಗೂ ಕುಟುಂಬದವರಿಗೆ ಹೈಕೋರ್ಟ್ ನೀಡಿರುವ ಜಾಮೀನನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಕೆ ಸಾಧ್ಯತೆಗಳು ದಟ್ಟವಾಗಿವೆ.
ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಕೆಲವೊಂದು ಶರತ್ತುಗಳನ್ನು ವಿಧಿಸಿರುವ ನ್ಯಾಯಾಲಯ, ೨ ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿಯನ್ನು ಪಡೆದುಕೊಂಡಿದೆ. ಯಡಿಯೂರಪ್ಪ ಹಾಗೂ ಕುಟುಂಬದವರು ಬೆಂಗಳೂರು ಬಿಟ್ಟು ಎಲ್ಲೂ ಹೋಗುವಂತಿಲ್ಲ. ಅಲ್ಲದೆ ತನ್ನ ರಾಜಕೀಯ ಪ್ರಭಾವ ಬಳಸಿಕೊಂಡು ಸಾಕ್ಷಿನಾಶ ಮಾಡದಂತೆ ಎಚ್ಚರಿಕೆ ನೀಡಿದೆ.
ಜಾಮೀನು ಮಂಜೂರಾಗಿರುವ ಹರ್ಷವನ್ನು ತನ್ನ ಕಾರ್ಯಕರ್ತರೊಂದಿಗೆ ಹಂಚಿಕೊಂಡಿರುವ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸದಂತೆ ವಿನಂತಿಸಿಕೊಂಡಿದ್ದಾರೆ.
Tagged with
feature,
snews,
yeddi
ಮುಂಬಯಿ: ಮಹಾರಾಷ್ಟ್ರ ಸರಕಾರದ ಸಚಿವಾಲಯ ಮಂತ್ರಾಲಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ಕನೇ ಮಹಡಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ನಾಲ್ಕನೇ ಮಹಡಿಯಲ್ಲಿಡಲಾಗಿದ್ದ ಆದರ್ಶ ಬಿಲ್ಡಿಂಗ್ ಹಗರಣದ ದಾಖಲೆಗಳು ನಾಶವಾಗಿದೆ.
ಕನಿಷ್ಟ ೨೦ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಮೂರು ಅಂಬುಲೆನ್ಸ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಸದ್ಯಕ್ಕೆ ಯಾವುದೇ ಸಾವು-ನೋವಿನ ಮಾಹಿತಿಗಳು ಲಭಿಸಿಲ್ಲ. ಆದರೂ, ಹಲವು ಮಂದಿ ಕಟ್ಟಡದ ಒಳಗಡೆ ಸಿಲುಕಿರುವ ಸಂಶಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ತುರ್ತು ರಕ್ಷಣಾ ಪಡೆ ಫೋರ್ಸ್ ಒನ್‌ನ್ನು ಸಹಾಯಕ್ಕೆ ಕರೆಯಲಾಗಿದೆ.
ಬೆಂಕಿ ಇತರ ಮಹಡಿಗಳಿಗೆ ಹರಡದಂತೆ ಅಗ್ನಿಶಾಮಕ ದಳದವರು ಹರಸಾಹಸ ಪಡುತ್ತಿದ್ದು, ೬ನೇ ಮಹಡಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾಣ್ ಅವರ ಕಚೇರಿಯಿದೆ. ಅಗ್ನಿ ಅನಾಹುತಕ್ಕೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.
ಪ್ರಮುಖ ಅಂಶಗಳು
- ೫ನೇ ಮತ್ತು ೬ನೇ ಮಹಡಿಯಲ್ಲಿ ಹಲವರು ಸಿಲುಕಿರುವ ಸಂಭವ
- ಬೆಂಕಿ ನಂದಿಸಲು ೨೫ಕ್ಕೂ ಅಧಿಕ ಅಗ್ನಿಶಾಮಕ ದಳದ ಸಹಾಯ
- ಸಾವು-ನೋವಿನ ವರದಿಯಿಲ್ಲ
- ಸಣ್ಣಪುಟ್ಟ ಗಾಯಗೊಂಡ ಮೂವರನ್ನು ಹತ್ತಿರದ ಜೆಜೆ ಆಸ್ಪತ್ರೆ ದಾಖಲಿಸಲಾಗಿದೆ
- ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೊದಲ ಅಗ್ನಿಶಾಮಕ ದಳದ ವಾಹನ ಆಗಮನಕ್ಕೆ ೩೦ ನಿಮಿಷ ತಗುಲಿದೆ
- ನಾಲ್ಕನೇ ಮಹಡಿಗೆ ಮೊದಲು ಅಗ್ನಿಸ್ಪರ್ಶ. ಅದರಲ್ಲಿರುವ ಹಲವು ರಾಜ್ಯ ಮಂತ್ರಿಗಳ ಕಚೇರಿಗಳು
- ೬ನೇ ಮತ್ತು ೭ನೇ ಮಹಡಿಗೆ ಬೆಂಕಿ ಆವ್ರತ. ೬ನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿ
- ಕಚೇರಿಯಲ್ಲಿದ್ದ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾಣ್‌ರ ರಕ್ಷಣೆ
- ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಕಚೇರಿಗೆ ಬಹುತೇಕ ಹಾನಿ
- ಆಕ್ಸಿಜನ್ ವಾಹನಗಳ ರವಾನೆ
- ಬ್ರಿಗೇಡ್ ಕಾಲ್ ಘೋಷಿಸಿದ ಮುಂಬಯಿ ಅಗ್ನಿಶಾಮಕ ದಳ
- ಬ್ರಿಗೇಡ್ ಕಾಲ್ ಎಂದರೆ ಎಲ್ಲಾ ಅಗ್ನಿಶಾಮಕ ದಳದ ವಾಹನ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸುವುದು
- ಜೆಜೆ ಫ್ಲೈಓವರ್‌ನಲ್ಲಿ ಸಂಚಾರ ನಿಲುಗಡೆ
- ಹವಾನಿಯಂತ್ರಣ ಉಪಕರಣದಲ್ಲಿ ಶಾರ್ಟ್‌ಸರ್ಕ್ಯೂಟ್ ಆಗಿರುವುದೇ ಘಟನೆಗೆ ಕಾರಣ.
Tagged with
feature,
fire,
nnews
ಕನ್ನಡ ಸಾಹಿತ್ಯ ಎಂದಾಗ ನಮಗೆಲ್ಲಾ ನೆನಪಾಗುವುದು ಕನ್ನಡಕ್ಕಾಗಿ ಶ್ರಮಿಸಿದ ಅನೇಕ ಕವಿಗಳು, ಸಾಹಿತಿಗಳು, ವಚನಗಾರರು... ಕನ್ನಡ ಭಾಷೆ, ಸಾಹಿತ್ಯಗಳಿಗೆ ಒಂದು ಸಾವಿರದ ಐನೂರು ವರ್ಷಕ್ಕೂ ಮೀರಿದ ಇತಿಹಾಸವನ್ನು ನಾವು ಕಾಣಬಹುದಾ ಗಿದೆ. ಕನ್ನಡ ಭಾಷೆ ಸಾಹಿತ್ಯವನ್ನು ಶ್ರೀಮಂತಗೊಳಿಸಲು ಹಲವಾರು ಮಂದಿ ಕನ್ನಡದ ದಿಗ್ಗಜರು ಶ್ರಮಿಸಿದ್ದಾರೆ. ಶರಣ ಹಾಗೂ ದಾಸ ಸಾಹಿತ್ಯಗಳು ಕನ್ನಡ ಸಾಹಿ ತ್ಯಕ್ಕೆ ಅಪಾರ ಕೊಡುಗೆಗಳನ್ನು ನೀಡಿವೆ.
ಭೂಮಿ ಹುಟ್ಟಿದಂದಿನಿಂದ ಇಂದಿ ನವರೆಗೆ, ಮನುಕುಲದ ಅನುಭವ, ಅಲೋ ಚನೆ, ನಂಬಿಕೆ ಹಾಗೂ ನಡವಳಿಕೆ ಇವುಗಳು ಸಂಸ್ಕೃತಿಯ ಮೂಲಗಳಾಗಿವೆ. ಮಾತು, ಭಾಷೆ, ಅಭಿವ್ಯಕ್ತಿಗಳು ನಮ್ಮ ಅನುಭವ ವನ್ನು ಇತರರೊಡನೆ ಹಂಚುವ ಮಾಧ್ಯಮಗಳಾಗಿವೆ. ಸಂಸ್ಕೃತಿಯು ಯಾವಾಗಲೂ ನಿಂತ ನೀರಾಗದೆ, ತುಂಬಿ ಹರಿಯಬೇಕು. ಜನರ ಮನೋಭಾವ, ಆಸಕ್ತಿ, ಅಭಿರುಚಿ, ಚಿಂತನೆ ಕಾಲಕಾಲಕ್ಕೆ ಬದಲಾಗುತ್ತಾ ಹೋಗುವಂತೆ, ಸಂಸ್ಕೃತಿಯೂ ರೂಪಾಂತರ ಹೊಂದುತ್ತಾ ಉತ್ತಮ ನಾಗರಿಕತೆಯನ್ನು ನಿರ್ಮಿಸುವ ಶಕ್ತಿಯುತ ಸಾಧನವಾಗಬೇಕು. ಒಂದು ನಾಡಿನ ಸಂಸ್ಕೃತಿಯು ಆ ನಾಡಿನ ಜನಾಂಗದ ಪೂರ್ತಿ ಚಿತ್ರಣವನ್ನು ಬಿಂಬಿಸಿ, ಅಲ್ಲಿನ ಕಲಾಕೌಶಲಗಳು, ಭಾಷೆ, ಸಾಹಿತ್ಯ, ಸಂಗೀತ, ಶಿಲ್ಪ, ಚಿತ್ರಕಲೆ ಮೊದಲಾದವುಗಳನ್ನು ಹೊಂದಿ ರುತ್ತದೆ.
ಯಾವುದೇ ಸಾಹಿತ್ಯದ ಪ್ರಮುಖ ಉದ್ದೇಶವು ಜನರಲ್ಲಿ ಏಕತೆಯನ್ನುಂಟು ಮಾಡಿ, ಅವರ ಮನಸ್ಸನ್ನು ಬದುಕಿನ ಅರ್ಥವಂತಿಕೆಯ ಕಡೆಗೆ ತೊಡಗುವಂತೆ ಮಾಡಿ, ಅವರಲ್ಲಿ ಅನ್ಯಮತ ಸಹಿಷ್ಣುತಾ ಭಾವವನ್ನು ಬಿಂಬಿಸಬೇಕು. ಕನ್ನಡವು ಹಲವು ಭಾಷೆಗಳಿಂದ ತನಗೆ ಅಗತ್ಯವಾದ ಪದಗಳನ್ನು ಸ್ವೀಕರಿಸುತ್ತಾ ಬೆಳೆದಿದೆಯಾದರೂ, ತನ್ನ ಭಾಷೆಯ ಸತ್ಯವನ್ನು ಕಳೆದುಕೊಳ್ಳುವಷ್ಟು ಆ ಭಾಷೆಗೆ ಮಾರು ಹೋಗಲಿಲ್ಲ. ಸ್ವಂತ ಅನುಭವ, ಸಾಮಾಜಿಕ ಕಳಕಳಿಗಳ ದೃಷ್ಟಿಯಿಂದ ರಚಿತವಾದ ವಚನ ಸಾಹಿತ್ಯವಂತೂ ಕನ್ನಡದ್ದೇ ಎಂಬಷ್ಟು ಸ್ವಂತಿಕೆಯನ್ನು ಹೊಂದಿರುವ ಸಾಹಿತ್ಯವಾಗಿದೆ. ಇದು ವಿಶ್ವಸಾಹಿತ್ಯಕ್ಕೆ ಕನ್ನಡವು ಕೊಟ್ಟ ಅತೀ ಮಹತ್ವದ ಕಾಣಿಕೆಯಾಗಿದೆ.
ಸಾಹಿತ್ಯವು ಎಲ್ಲರಿಗೂ ತಲು ಪುವಂ ತಾಗಲು ಸಮೂಹ ಮಾಧ್ಯಮಗಳ ಸೇವೆ ಅತೀ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಾಹಿತ್ಯವು ನಮ್ಮನ್ನೆಲ್ಲಾ ಒಂದು ಗೂಡಿಸುವ ಶಕ್ತಿಯನ್ನು ಹೊಂದಿದೆ. ಬದುಕನ್ನು ಕೇವಲ ವ್ಯಾವಹಾರಿಕವಾಗಿ ನೋಡುವವರಿಗೆ, ಅದರೊಳಗಿನ ಚೆಲುವಿ ಕೆಯಾಗಲೀ, ಜೀವಂತಿಕೆಯಾಗಲೀ ಕಾಣಲು ಸಾಧ್ಯವಿಲ್ಲ. ಅದಮ್ಯವಾದ ಜೀವನ ಪ್ರೀತಿಯೇ ಸಾಹಿತ್ಯ ಹುಟ್ಟುವುದಕ್ಕೆ ಮೂಲ ಕಾರಣವಾಗಿದೆ. ಮನುಷ್ಯ, ಪ್ರಕೃತಿಯ ಪ್ರತೀ ಅಂಶಗಳ ಅಂತರಂಗವನ್ನು ಹೊಕ್ಕು, ಅದನ್ನು ಸಹಾನುಭೂತಿಯಿಂದ ನೋಡಿದಾಗ ಅಲ್ಲಿ ನಿಜವಾದ ಸಾಹಿತ್ಯ ಸೃಷ್ಟಿ ಸಾಧ್ಯವಿದೆ.
ಇಂತಹ ಚೈತನ್ಯದ ಚೆಲುಮೆಯಾದ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಅರಿತು, ಕನ್ನಡ ಸಾಹಿತ್ಯವನ್ನು ಬೆಳೆಸುವುದು ನಮ್ಮಂತಹ ಯುವಜನರ ಪ್ರಮುಖ ಕರ್ತವ್ಯವಾಗ ಬೇಕು. ಕನ್ನಡದ ಬಗ್ಗೆ ನಿಜವಾದ ಕಾಳಜಿ, ಪ್ರೀತಿ ಜನಸಮು ದಾಯದ ಅಂತರಾಳದಿಂದ ಹುಟ್ಟಿ ಬಂದರೆ ಕನ್ನಡ ಸಾಹಿತ್ಯವು ಬೆಳಗುವುದರಲ್ಲಿ ಸಂಶಯವಿಲ್ಲ.
ಶ್ವೇತಾ.ಎಂ., ಮಂಗಳೂರು
Tagged with
bahiranga
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಕೆಲವೊಂದು ಕಡೆಗಳಲ್ಲಿ ಕಳೆದ ಐದಾರು ವರ್ಷಗಳಿಂದಲೂ ಆಮೆಗತಿಯಲ್ಲಿ ನಡೆಯುತ್ತಿರುವುದನ್ನು ನೋಡಿದಾಗ ಬಹಳ ಬೇಸರವಾಗುತ್ತದೆ. ಬಿ.ಸಿ.ರೋಡ್ ಪೇಟೆಯಲ್ಲಿ ಪ್ರತೀ ವರ್ಷವೂ ಮಳೆಗಾಲದಲ್ಲಿ ಕೆಸರಿನ ಸಮಸ್ಯೆ ಎದುರಾಗುತ್ತದೆ. ಇದಕ್ಕಾಗಿ ನಾಗರಿಕರು ಪ್ರತೀ ಭಾರೀ ಪ್ರತಿಭಟನೆ, ರಸ್ತೆ ತಡೆ ನಡೆಸಿದರೂ ಪ್ರಯೋಜನ ಮಾತ್ರ ಶೂನ್ಯ. ತ್ಯಾಜ್ಯವನ್ನು ಹೆದ್ದಾರಿ ಬದಿಯಲ್ಲಿ ಬೇಕಾಬಿಟ್ಟಿ ರಾಶಿ ಹಾಕಲಾಗಿರು ವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅದೇ ರೀತಿ ಕುಡಿಯುವ ನೀರಿನ ಪೈಪ್ ಆಗಾಗ ಒಡೆದು ನೀರು ಪೋಲಾಗುತ್ತಿದ್ದರೂ ಅತ್ತ ಯಾರೂ ಗಮನಹರಿಸುವುದಿಲ್ಲ. ಹೆದ್ದಾರಿ ಮತ್ತು ಸರ್ವಿಸ್ ರಸ್ತೆ ಬದಿ ಸೂಕ್ತ ಚರಂಡಿ ಯಂತೂ ಮೊದಲೇ ಇಲ್ಲ. ರಸ್ತೆ ದುರವಸ್ಥೆಯು ಇಲಾಖೆಯ ಕಾರ್ಯವೈಖರಿ ಯನ್ನು ಅಣಕಿಸುತ್ತಿದೆ. ಇನ್ನು ಮುಂದೆ ನಾಗರಿಕರೆಲ್ಲರೂ ಸೇರಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದಲ್ಲಿ ಮಾತ್ರ ಹೋರಾಟಕ್ಕೆ ಜಯ ಸಿಗಲಿದೆ.
ನಾಗರಿಕರು, ಬಿ.ಸಿ.ರೋಡ್
Tagged with
nimminda
ಮಂಗಳೂರು ತಾಲೂಕು ಬೆಳುವಾಯಿ ಗ್ರಾಮದಲ್ಲಿ ಎಪಿಎಲ್ ಪಡಿತರ ಚೀಟಿ ಹೊಂದಿ ದವರ ಮಕ್ಕಳು ಸರಕಾರಿ ಶಾಲೆಗಳಲ್ಲಿಯೂ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಶೇಕಡಾ ೮೦ರಷ್ಟು ಹೆತ್ತವರು ಮಕ್ಕಳನ್ನು ಸಾವಿರಾರು ರೂಪಾಯಿ ಡೊನೇಷನ್ ತೆತ್ತು ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ಓದಿಸುತ್ತಿರುವುದನ್ನು ಕಂಡಾಗ ನಿಜವಾದ ಬಡವರಾರು? ಶ್ರೀಮಂತರಾರು? ಎಂಬ ಪ್ರಶ್ನೆ ಮೂಡುತ್ತದೆ. ಇದೆಲ್ಲ ಸ್ಥಳೀಯಾ ಡಳಿತದಲ್ಲಿ ಹಾಸು ಹೊಕ್ಕಿರುವ ಭ್ರಷ್ಟಾಚಾರದ ಫಲ ಎಂಬುವುದರಲ್ಲಿ ಸಂಶಯವೇ ಇಲ್ಲ. ಇಲ್ಲಿನ ಸ್ಥಳೀಯಾಡಳಿತ ಹಾಗೂ ಆಹಾರ ನಿರೀಕ್ಷಕರ ನೇರ ಭ್ರಷ್ಟಾಚಾರದಿಂದಾಗಿಯೇ ಗ್ರಾಮದ ನಿಜವಾದ ಬಡವರು ಶ್ರೀಮಂತರಾಗಿ ದ್ದಾರೆ ಹಾಗೂ ಶ್ರೀಮಂತರು ಬಡವರಿಗಾಗಿ ರುವ ಸರಕಾರಿ ಸವಲತ್ತುಗಳನ್ನು ಪಡೆಯುವುದು ಸಾಧ್ಯವಾಗದೆ ಬಡವರಾಗಿಯೇ ಉಳಿದಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸಿ ಸೂಕ್ತ ಹಾಗೂ ಕಠಿಣ ಕ್ರಮ ಕೈಗೊಂಡು ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಿರುವ ಹೆತ್ತವರ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಗಳನ್ನು ತಕ್ಷಣ ಮುಟ್ಟುಗೋಲು ಹಾಕಿ ನಿಜವಾದ ಅರ್ಹ ಬಡ ಜನರಿಗೆ ಸರಕಾರಿ ಸವಲತ್ತುಗಳು ದೊರಕು ವಂತೆ ಮಾಡಿ ಸ್ಥಳೀಯಾಡಳಿತದಲ್ಲಿನ ಭ್ರಷ್ಟಾಚಾರ ವನ್ನು ನಿಗ್ರಹಿಸಲಿ ಎಂದು ನೆಮ್ಮೆಲ್ಲರ ಆಗ್ರಹ.
ಯು.ನಾಗೇಶ್, ಬೆಳುವಾಯಿ
Tagged with
nimminda
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮ ಗಾರಿಯ ಅವ್ಯವಸ್ಥೆಯಿಂದಾಗಿ ಉಪ್ಪೂರು ಪರಿಸರ ದಲ್ಲಿ ಸುರಿದ ಭಾರೀ ಮಳೆಗೆ ಕೃತಕ ನೆರೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿಯ ಅವಾಂತರದಿಂದಾಗಿ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಉಪ್ಪೂರು ಕುದ್ರು ಪರಿಸರದಲ್ಲಿ ಮಳೆ ನೀರು ನಿಂತು ನೆರೆಯುಂಟಾಗಿದ್ದು, ಜನರ ಒಡಾಟಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಪರಿಸರದ ಜನರು ಸಾಕಷ್ಟು ತೊಂದರೆ ಅನುಭವಿ ಸುತ್ತಿದ್ದಾರೆ. ಮೊದಲಿನ ಚರಂಡಿ ಪೂರ್ತಿ ಮುಚ್ಚಿದ್ದು, ಇದರ ದುರಸ್ತಿಗೆ ಹೆದ್ದಾರಿ ಇಲಾಖೆ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಇರುವು ದರಿಂದ ಜನರು ಆಕ್ರೋಶಗೊಂಡಿದ್ದಾರೆ. ಮೊದಲ ಮಳೆಗೆ ಈ ರೀತಿಯಾದರೆ ಇನ್ನು ಮಳೆಗಾಲ ಮುಗಿಯುವಷ್ಟರ ಹೊತ್ತಿಗೆ ಜನರ ಪಾಡೇನು ಎಂದು ತಿಳಿಯದು. ಇದರಿಂದಾಗಿ ಕೃಷಿ ಚಟುವಟಿಕೆಯಲ್ಲೂ ಹಿನ್ನೆಡೆಯುಂಟಾಗಿದೆ. ಒಟ್ಟಿನಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಂಡು ಪರ್ಯಾಯ ವ್ಯವಸ್ಥೆ ಒದಗಿಸಿಕೊಡಬೇಕಾಗಿ ವಿನಂತಿ.
ನಾಗರಿಕರು, ಉಪ್ಪೂರು
Tagged with
nimminda
ಮಂಗಳೂರು ವಿಶೇಷ ಆರ್ಥಿಕ ವಲಯ ಕರಾವಳಿಯ ಸಹಸ್ರ್ರಾರು ಎಕರೆ ಕೃಷಿಭೂಮಿಯನ್ನು ನುಂಗಿ ನೀರು ಕುಡಿದಿದೆ. ನೂರಾರು ವಿದೇಶಿ ಕಂಪೆನಿಗಳನ್ನು ಇಲ್ಲಿ ಸ್ಥಾಪಿಸುವ ಉದ್ದೇಶಕ್ಕಾಗಿ ರೈತರ ಬೆಲೆಬಾಳುವ ಹೊಲ-ಗದ್ದೆಯನ್ನು ಅಗೆದು ಅಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿದ್ದ ಮೂಲ ನಿವಾಸಿಗಳನ್ನು ಈಗಾಗಲೇ ಪರಿಹಾರ, ಉದ್ಯೋಗದ ಭರವಸೆ ನೀಡಿ ಮನೆ-ಹೊಲ ತೊರೆಯುವಂತೆ ಮಾಡಿದ್ದಾರೆ. ಸಂತ್ರಸ್ತರಿಗೆ ನ್ಯಾಯ ಪ್ರಕಾರ ಉದ್ಯೋಗ ಇನ್ನೂ ಸಿಕ್ಕಿಲ್ಲ. ಸಂತ್ರಸ್ತರ ಮಕ್ಕಳಿಗೆ ಉದ್ಯೋಗ ಕೊಡು ವುದಾಗಿ ತರಬೇತಿ ನೀಡಿದ್ದೂ ನಡೆದಿದೆ. ಆದರೆ ಇನ್ನೂ ಕೆಲಸ ಸಿಕ್ಕಿಲ್ಲ. ಸೆಝ್ ನಂಬಿ ಕುಳಿತಿರುವ ನೂರಾರು ವಿದ್ಯಾವಂತರಿಗೆ ನ್ಯಾಯ ಸಿಗುವುದೇ?
ಸುಜಿತ್, ಕೈಕಂಬ
Tagged with
nimminda
ಮತ್ತೆ ಶಾಲೆ-ಕಾಲೇಜ್ ಆರಂಭಗೊಂಡಿದೆ. ಮಕ್ಕಳು ಹೊಸ ಹುಮ್ಮಸ್ಸಿನಲ್ಲಿ ಮನೆಯಿಂದ ತೆರಳುತ್ತಿದ್ದಾರೆ. ಆದರೆ ಈ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದವರು ಹೆಣ್ಮಕ್ಕಳ ಹೆತ್ತವರು. ಹದಿಹರೆಯದ ಹೆಣ್ಮಕ್ಕ ಳನ್ನು ಗುರಿಯನ್ನಾಗಿಸಿಕೊಂಡು ಕಾಮುಕರು ಹೊಂಚು ಹಾಕುತ್ತಿರುತ್ತಾರೆ. ಮುಖ್ಯವಾಗಿ ನಿತ್ಯ ಸಂಚರಿಸುವ ಬಸ್‌ಗಳಲ್ಲಿ ಕಾಮುಕರು ಸಮಯ ಸಂದರ್ಭ ಸಾಧಿಸಿ ಸ್ನೇಹ ಬೆಳೆಸು ತ್ತಾರೆ. ಕೆಲವು ಬಸ್‌ಗಳ ಚಾಲಕರು, ಕ್ಲೀನರ್, ನಿರ್ವಾಹಕರಿಗೆ ಹದಿಹರೆಯದ ಹೆಣ್ಮಕ್ಕಳನ್ನು ಬುಟ್ಟಿಗೆ ಹಾಕಿಕೊಳ್ಳುವುದು ಚಟವಾಗಿ ಬೆಳೆದಿದೆ. ಹೀಗಾಗಿ ಹೆಣ್ಮಕ್ಕಳ ಹೆತ್ತವರು, ಪೋಷಕರು ಅತೀವ ಎಚ್ಚರಿಕೆ ವಹಿಸಬೇಕು. ಕಾಲೇಜ್ ಜೀವನ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುತ್ತದೆ. ಹೀಗಾಗಿ ಮಕ್ಕಳನ್ನು ಎಲ್ಲೂ ಎಡವದಂತೆ ನೋಡಿಕೊಳ್ಳುವುದು ಹೆತ್ತವರ, ಪೋಷಕರ ಆದ್ಯ ಕರ್ತವ್ಯವಾಗಿದೆ. ಸುಚೇತಾ, ಹೆಬ್ರಿ
Tagged with
nimminda
ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ದಿನಕ್ಕೊಂದು ಕಡೆ ಅತ್ಯಾಚಾರ ವರದಿಯಾಗುತ್ತಿದೆ. ಇಲ್ಲಿ ಕೆಲವೇ ಕೆಲವು ಪ್ರಕರಣಗಳ ಆರೋಪಿಗಳು ಪೊಲೀಸರಿಗೆ ಸೆರೆಯಾದರೆ ಇನ್ನುಳಿದಂತೆ ಆರೋಪಿಗಳನ್ನು ಹುಡುಕಿ ಕಾನೂನಿನ ಸುಪರ್ದಿಗೆ ಒಪ್ಪಿಸುವಲ್ಲಿ ಪೊಲೀಸರೂ ಮುಂದಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಹೆಣ್ಮಕ್ಕಳ, ಬಾಲಕಿಯರ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಏನೂ ಅರಿಯದ ಮುಗ್ಧ ಮಕ್ಕಳು ಕಾಮಪಿಪಾಸುಗಳ ಕೈಯಲ್ಲಿ ನರಳಿ ಇಹಲೋಕ ತ್ಯಜಿಸಿದ ಉದಾಹರಣೆಗಳೂ ಇವೆ. ಇಂಥ ಘಟನೆಗಳು ನಡೆದಾಗ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆಗಳು ಸೂಕ್ತ ಕ್ರಮ ಜರುಗಿಸುವುದಿಲ್ಲ. ಅದರ ಬದಲು ಕಾನೂನು ಭಂಜಕರ ಹಣದ ಥೈಲಿಗೆ ಮರುಳಾಗಿ ಆರೋಪಿಗಳನ್ನು ಶಿಕ್ಷಿಸದೆ ಬಿಡುತ್ತಾರೆ. ರಾಜ್ಯ ಸರಕಾರ ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ರಕ್ಷಣೆ, ಭದ್ರತೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ರಾಜ್ಯ ರಾಜಧಾನಿಯಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಪೈಶಾಚಿಕ ಅತ್ಯಾಚಾರವೇ ಉದಾಹರಣೆಯಾಗಿದೆ. ಮಹಿಳಾ ಮತ್ತು ಕಲ್ಯಾಣ ಇಲಾಖೆ ಇನ್ನಾದರೂ ಮಹಿಳಾ ದೌರ್ಜನ್ಯ ತಡೆಯುವಲ್ಲಿ ಪ್ರಯತ್ನಿಸಲಿ.
ಕಾರುಣ್ಯ, ಪುತ್ತೂರು
Tagged with
nimminda
ಮನೇಸರ್: ೫ರ ಬಾಲಕಿ ಮನೆ ಬಳಿಯ ಬೋರ್‌ವೆಲ್ ಗುಂಡಿಗೆ ಬಿದ್ದಿರುವ ಘಟನೆ ಕಳೆದ ರಾತ್ರಿ ಮನೇಸರ್‌ನಲ್ಲಿ ಸಂಭವಿಸಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಬಾಲಕಿಯ ಪತ್ತೆಗಾಗಿ ಅಳವಡಿಸಲಾಗಿರುವ ಕ್ಯಾಮರಾದ ಮೂಲಕ ಆಕೆಯ ಚಲನವಲನ ಮನೆಮಂದಿಯಲ್ಲಿ ಕೊಂಚ ನಿರಾಳೆ ಮೂಡಿಸಿದೆ.
ಬಾಲಕಿಯ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸುಮಾರು ೬೦ ಸೈನಿಕರು ಸುರಂಗವನ್ನು ಕೊರೆದು ಬಾಲಕಿಯನ್ನು ತಲುಪುವ ಪ್ರಯತ್ನದಲ್ಲಿದ್ದಾರೆ. ಇಲಾಖಾಧಿಕಾರಿಗಳು ರಾಷ್ಟ್ರೀಯ ರಕ್ಷಣಾ ಸಿಬ್ಬಂದಿಗಳನ್ನೂ ಸಹಾಯಕ್ಕಾಗಿ ಕರೆದಿದ್ದಾರೆ.
ಘಟನೆ ವಿವರ
ಗುರ್‌ಗಾಂವ್ ಬಳಿಯ ಮನೇಸರ್‌ನ ಖಾಔ ಹಳ್ಳಿಯಲ್ಲಿ ೫೦ ಅಡಿ ಆಳದ ನಿಷ್ಕ್ರಿಯ ಬೋರ್‌ವೆಲ್ ಗುಂಡಿಗೆ ಬಾಲಕಿ ಮಾಹಿ ಉಪಾಧ್ಯಾಯ ನಿನ್ನೆ ರಾತ್ರಿ ೧೧ರ ವೇಳೆಗೆ ಬಿದ್ದಿದ್ದಳು.
“ನಾವು ಆಕೆಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದೆವು. ಕಾಲು ಜಾರಿ ಬೋರ್‌ವೆಲ್ ಗುಂಡಿಗೆ ಬಿದ್ದಿದ್ದಳು. ತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಲಾಗಿದೆ. ಸುಮಾರು ರಾತ್ರಿ ೧೧ರಿಂದ ೧೨.೩೦ರ ತನಕ ಸಹಾಯಕ್ಕಾಗಿ ಕೂಗುತ್ತಿದ್ದಳು. ಮತ್ತೆ ಇಂದು ಬೆಳಿಗ್ಗೆ ತನಕ ಯಾವುದೇ ಚಲನವಲನ ಕಾಣಿಸಿಲ್ಲ” ಎಂದು ಬಾಲಕಿಯ ತಂದೆ ನೀರಜ್ ಉಪಾಧ್ಯಾಯ ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಸ್ಥಳದಲ್ಲಿಯೇ ಇದ್ದು, ಉಸಿರಾಟಕ್ಕೆ ತೊಂದರೆಯಾಗದಂತೆ ಸರಾಗವಾಗಿ ಆಕ್ಸಿಜನ್ ರವಾನಿಸಲಾಗುತ್ತಿದೆ. ಆದರೆ ಆಕೆಯ ವೈದ್ಯಕೀಯ ಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿ ಇಲ್ಲ ಎಂದಿದ್ದಾರೆ.
ಈ ಸಂಬಂಧ ಬೋರ್‌ವೆಲ್‌ನ್ನು ಯಾಕಾಗಿ ತೆರೆದಿಡಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
Tagged with
feature,
nnews
ಮುಂಬಯಿ: ೨೦೦೫ರಲ್ಲಿ ಚಿತ್ರೀಕರಣಕ್ಕೆಂದು ಲಂಡನ್‌ಗೆ ತೆರಳಿರುವ ಪಿಐ ಪ್ರವೀಣ್ ಪಾಟೀಲ್, ಇದೀಗ ಮತ್ತೊಮ್ಮೆ ತನ್ನ ಮಡದಿಯ ಆರ್ಥಿಕ ಸಹಾಯದಿಂದ ಹಾಂಗ್ ಕಾಂಗ್ ಮತ್ತು ಬ್ಯಾಂಕಾಕ್ ಪ್ರಯಾಣಿಸಿ ಪೊಲೀಸ್ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಬ್ ತಕ್ ಚಪ್ಪನ್ ಚಿತ್ರದಲ್ಲಿ ಎನ್‌ಕೌಂಟರ್ ಸ್ಪೆಶಲಿಸ್ಟ್ ಆಗಿ ಪಾತ್ರವಹಿಸಿದ್ದ ಪ್ರವೀಣ್‌ನನ್ನು ಸೇವೆಯಿಂದ ಅಮಾನತು ಮಾಡಿ ಪೊಲೀಸ್ ಆಯುಕ್ತರು ಮಂಗಳವಾರ ಆದೇಶ ಹೊರಡಿಸಿದ್ದಾರೆ. ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆಯದೆ ಇನ್ಸ್‌ಪೆಕ್ಟರ್ ಪ್ರವೀಣ್ ಪಾಟೀಲ್ ಚಿತ್ರೀಕರಣಕ್ಕೆ ತೆರಳಿದ್ದರು. ಅಲ್ಲದೆ ನಂತರದ ದಿನಗಳಲ್ಲಿ ಪಾಟೀಲ್ ಅವರೇ ಬಂಧಿಸಿರುವ ವಂಚನೆ ಆರೋಪಿಯ ಪತ್ನಿಯ ಜೊತೆ ಬ್ಯಾಂಕಾಕ್ ಹಾಗೂ ಹಾಂಗ್ ಕಾಂಗ್‌ಗೂ ಪ್ರಯಾಣಿಸಿದ್ದರು.
ಪಾಟೀಲ್, ಪೊಲೀಸ್ ಇಲಾಖೆಯ ರಕ್ಷಣಾ ವಿಭಾಗದಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕ್ರೈಂ ಬ್ರಾಂಚ್ ಯೂನಿಟ್ ೯ರ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ಪತ್ನಿ ಸಂಗೀತ ಜೊತೆ ೨೦೦೫, ಡಿಸೆಂಬರ್ ೧೧ರಿಂದ ೨೦ರವರೆಗೆ ಚಿತ್ರೀಕರಣಕ್ಕೆಂದು ತೆರಳಿದ್ದರು. ಜೊತೆಯಲ್ಲಿ ಮಗಳು ಕಲ್ಯಾಣಿ ಮತ್ತು ಮಗ ಓಂ ಕೂಡಾ ಪ್ರಯಾಣಿಸಿದ್ದರು.
“ಪ್ರತಿಯೊಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಕೂಡಾ ವಿದೇಶ ಪ್ರಯಾಣ ಮಾಡುವ ಸಂದರ್ಭ ಇಲಾಖೆಗೆ ತಿಳಿಸುವುದು ಖಡ್ಡಾಯವಾಗಿದೆ. ಆದರೆ ಪಾಟೀಲ್ ಒಪ್ಪಿಗೆ ಪಡೆಯಲಿಲ್ಲ” ಎಂದು ಮುಂಬಯಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
೨೦೦೬ರಲ್ಲಿ ಪಾಟೀಲ್ ಬ್ಯಾಂಕಾಕ್ ಮತ್ತು ಹಾಂಗ್ ಕಾಂಗ್‌ಗೆ ತೆರಳಿದ್ದು, ಸೆಕ್ಯುರಿಟಿ ಮತ್ತು ಶೇರ‍್ಸ್ ಪ್ರಕರಣದಲ್ಲಿ ಇಕಾನಮಿ ಅಫೆನ್ಸ್ ವಿಂಗ್(ಇಒಡಬ್ಲ್ಯು)ನಿಂದ ಬಂಧಿಯಾಗಿರುವ ಬ್ರೋಕರ್ ಹರೀಶ್ ಜಶ್ನಾಣಿ ಹಣಕಾಸಿನ ಒಲವು ತೋರಿಸಿದ್ದರು.
೨೦೦೬ ಆಗಸ್ಟ್ ತಿಂಗಳಲ್ಲಿ ಬಂಧಿಯಾಗಿರುವ ಬ್ರೋಕರ್‌ನ ಪತ್ನಿ ಜೊತೆ ಪಾಟೀಲ್ ವ್ಯವಹಾರ ಕುದುರಿಸಿದ್ದರು. ಅಲ್ಲದೆ ಆ ಸಂದರ್ಭ ತನ್ನ ಪತಿಯನ್ನು ಪಲಾಯಣದ ಶಿಕ್ಷೆ ಕೊಡುವಂತೆ ವಿನಂತಿಸಿಕೊಂಡಿದ್ದಳು. ಅದಕ್ಕೆ ಪ್ರತಿಯಾಗಿ ಬ್ರೋಕರ್ ಪತ್ನಿ ಪಾಟೀಲ್ ಸೇರಿದಂತೆ ಅವರ ಕುಟುಂಬದ ಐವರಿಗೆ ೨೦೦೬ರ ಜನವರಿ ೨೩ರಿಂದ ೨೭ರವರೆಗೆ ಹಾಂಗ್ ಕಾಂಗ್ ಮತ್ತು ಬ್ಯಾಂಕಾಕ್ ವಿದೇಶಿ ಪ್ರಯಾಣದ ಖರ್ಚು ಭರಿಸಲು ಒಪ್ಪಿದ್ದಳು.
ಪಾಟೀಲ್ ವಿದೇಶದಿಂದ ಹಿಂತಿರುಗಿದ ಬಳಿಕ ಜೋಶ್ನಾಣಿ ಪತ್ನಿಗೆ ನೀಡಿರುವ ಮಾತನ್ನು ಈಡೇರಿಸ ಕಾರಣ ಕುಪಿತಗೊಂಡ ಆಕೆ, ಪಾಟೀಲ್‌ರ ಬಂಡವಾಳವನ್ನು ಹಿರಿಯ ಅಧಿಕಾರಿಗಳಿಗೆ ಬಯಲು ಮಾಡಿದ್ದಳು.
Tagged with
encounter,
feature,
nnews