ಕೀವಾ: ಅಂತಿಮ ಲೀಗ್ ಪಂದ್ಯ ದಲ್ಲಿ ಸ್ವೀಡನ್ ವಿರುದ್ಧ ೨-೦ ಅಂತರ ದಿಂದ ಸೋಲುಂಡರೂ ಫ್ರಾನ್ಸ್ ಯುರೋ ಕಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಫಾನ್ಸ್ಸ್ ತಂಡದ ಗರ್ವ ಭಂಗ ಮಾಡಿದ ಸ್ವೀಡನ್ನರು ಸರಿಯಾದ ಪಾಠ ಕಲಿಸಿ, ಟೂರ್ನಿ ಯಿಂದ ಹೊರ ಬಿದ್ದಿದ್ದಾರೆ.
ಗ್ರೂಪ್ ಡಿ ವಿಭಾಗದಲ್ಲಿ ಇಂಗ್ಲೆಂಡ್ ಅಗ್ರ ಸ್ಥಾನವನ್ನು ಪಡೆದು ಕೊಂಡಿದೆ. ಇಂಗ್ಲೆಂಡ್ ತಂಡ ಏಕೈಕ ಗೋಲಿನಿಂದ ಅತಿಥೇಯ ಉಕ್ರೇನ್ ತಂಡವನ್ನು ಮಣಿಸಿದೆ. ಮೊದಲ ಎರಡು ಪಂದ್ಯಗ ಳಲ್ಲಿ ತೋರಿಸದಿದ್ದ ಕಿಚ್ಚನ್ನು ಕೊನೆಯ ಪಂದ್ಯದಲ್ಲಿ ತೋರಿ ಸಿದ ಸ್ವೀಡನ್ ಪಂದ್ಯ ದುದ್ದಕ್ಕೂ ಉತ್ತಮ ಆಟ ಪ್ರದರ್ಶಿಸಿತು. ಇಟಲಿ ಯ ಬಾಲೋಟೆಲ್ಲಿ ಹೊಡೆದ ಕ್ರಾಸ್ ಪಲ್ಟಿ ಹೊಡೆದ ಪುನಾರವರ್ತನೆ ಮಾಡಿದ ಇಬ್ರಾಹಿಮೊವಿಕ ಉತ್ತಮ ಗೋಲು ದಾಖಲಿಸಿದರು.
ಮೊದಲಾರ್ಧದಲ್ಲೇ ಫ್ರಾನ್ಸ ಸಮಸ್ಯೆ ಗಳಿಂದ ಒದ್ದಾಡಿತು. ದ್ವಿತೀ ಯಾರ್ಧ ದಲ್ಲಿ ಉತ್ತಮವಾಗಿ ಆಡಿದ ಸ್ವೀಡನ ಝಲ್ಟನ್ ಇಬ್ರಾಹಿಮೊವಿಕ ಬಾರಿಸಿದ ಗೋಲಿನಿಂದ ಮುನ್ನಡೆ ಪಡೆಯಿತು. ಲೀಗ್ ಎಲ್ಲಾ ಪಂದ್ಯ ಸೋತಿದ್ದ ಸ್ವೀಡನ್ ಭರ್ಜರಿ ಆಟದ ಪ್ರದರ್ಶನ ನೀಡಿ ಫ್ರಾನ್ಸನ್ನು ತಬ್ಬಿಬ್ಬು ಮಾಡಿತು. ಆದರೆ ಸ್ವೀಡನ್ ಆಟಗಾರರು ತಮ್ಮ ಉತ್ತಮ ಆಟವನ್ನು ಪ್ರದರ್ಶಿಸುವಾಗ ತುಂಬಾ ವಿಳಂಬವಾಗಿತ್ತು.
ಈ ಸೋಲಿನೊಂದಿಗೆ ಫ್ರಾನ್ಸ್‌ನ ೨೩ ಗೆಲುವುಗಳ ನಾಗಾಲೋಟಕ್ಕೆ ತಡೆಬಿತ್ತು. ಪಂದ್ಯದಲ್ಲಿ ಉಕ್ರೇನ್ ವಿರುದ್ಧ ಇಂಗ್ಲೆಂಡ್ ಗೆಲುವು ದಾಖಲಿಸಿಕೊಂಡ ಕಾರಣ ಗ್ರೂಪ ಡಿ ವಿಭಾಗದಲ್ಲಿ ಫ್ರಾನ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕ್ವಾರ್ಟರ್ ಫೈನಲಿ ನಲ್ಲಿ ಅದು ಸ್ಪೇನ್ ವಿರುದ್ಧ ಆಡಲಿದೆ.
Tagged with
tnews
ದುಬೈ: ಕ್ಯಾನ್ಸರ್‌ಗೆ ಚಿಕಿತ್ಸೆ ವೇಳೆ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಅರಿತಿರುವ ಕ್ರಿಕೆಟಿಗ ಯುವರಾಜ್ ಶ್ರೀಲಂಕಾದಲ್ಲಿ ನಡೆಯಲಿರುವ ೨೦-೨೦ ವಿಶ್ವಕಪ್ ವೇಳೆ ತಂಡಕ್ಕೆ ಮರಳಲು ಪ್ರಯತ್ನಿಸು ತ್ತೇನೆ. ಆದರೆ ಇದು ದೊಡ್ಡ ಸವಾಲು ಎಂದು ಒಪ್ಪಿಕೊಂಡಿದ್ದಾರೆ.
ಟೀಂ ಇಂಡಿಯಾ ಪರವಾಗಿ ಆಡುವುದು ನನಗೆ ದೊಡ್ಡ ಸವಾಲು. ಯಾಕೆಂದರೆ ನನ್ನ ದೇಹ ದೊಡ್ಡ ಮಟ್ಟದ ಆಘಾತಕ್ಕೆ ಒಳಗಾಗಿದೆ. ಅದನ್ನು ನಾನು ಬಿಟ್ಟು ಬೇರೆ ಯಾರು ಕೂಡ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಐಸಿಸಿ ಕ್ರಿಕೆಟ್ ೩೬೦ ಶೋದಲ್ಲಿ ಭಾಗವಹಿಸಿ ಹೇಳಿದರು.
ಕೇವಲ ಕ್ಯಾನ್ಸರ್ ರೋಗಿ ಮಾತ್ರ ನನ್ನ ಪರಿಸ್ಥಿತಿ ಯನ್ನು ಅರ್ಥಮಾಡಿಕೊಳ್ಳಬಲ್ಲ. ಭಾರತ ಪರವಾಗಿ ಮತ್ತೆ ಆಡುವುದು ನನಗೆ ದೊಡ್ಡ ಸವಾಲು. ನಾನು ಮರಳಲು ಯಾವುದೇ ಸಮಯವನ್ನು ನಿಗದಿಪಡಿಸಿಲ್ಲ. ನನ್ನ ದೇಹ ಹೇಗೆ ಚೇತರಿಸಿಕೊಳ್ಳುತ್ತದೆ ಮತ್ತು ನಾನು ಎಷ್ಟು ಬೇಗ ಮೈದಾನಕ್ಕೆ ಮರಳುತ್ತೇನೆ ಎನ್ನುವುದನ್ನು ನೋಡಬೇಕಾಗಿದೆ. ಶೇ. ೭೫ರಷ್ಟು ಫಿಟ್ ನೆಸ್ ಇಟ್ಟು ಕೊಂಡು ನಾನು ಮೈದಾನಕ್ಕೆ ಮರಳುವುದಿಲ್ಲ. ಇದಕ್ಕೆ ಆರು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಬೇಕಾಗ ಬಹುದು. ಆದರೆ ನಾನು ಶೇ. ನೂರರಷ್ಟು ಪಿಟ್ ಇದ್ದೇನೆಂದು ಅನಿಸಿದ ದಿನ ಮೈದಾನಕ್ಕೆ ಮರಳುತ್ತೇನೆ ಎಂದು ತಿಳಿಸಿದರು.
Tagged with
tnews
ಹರಾರೆ: ಟ್ವೆಂಟಿ ಟ್ವೆಂಟಿ ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವ ದಕ್ಷಿಣ ಆಫ್ರಿಕಾ ಇಲ್ಲಿ ನಡೆಯುತ್ತಿರುವ ೨೦-೨೦ ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ೩೯ ರನ್‌ಗಳಿಂದ ಸುಲಭವಾಗಿ ಪರಾಭವ ಗೊಳಿಸಿದೆ.
ಖಾಯಂ ನಾಯಕ ಜೋಹನ್ ಬೋಥಾ ಅನುಪಸ್ಥಿತಿಯಲ್ಲಿ ಹಶಿಮ್ ಅಮ್ಲಾ ತಂಡವನ್ನು ಮುನ್ನಡೆಸಿದ್ದರು. ಆಮ್ಲಾ ಇನ್ನಿಂಗ್ಸ್ ಉದ್ದಕ್ಕೂ ಬ್ಯಾಟಿಂಗ್ ಮಾಡಿ ಕೇವಲ ೫೩ ಎಸೆತಗಳಲ್ಲಿ ೮೮ ರನ ಸಿಡಿಸಿದರು. ಆಮ್ಲಾ ಮತ್ತು ಲೆವಿ(೩೭) ತಂಡಕ್ಕೆ ಭರ್ಜರಿ ಆರಂಭವನ್ನು ಒದಗಿಸಿಕೊಟ್ಟರು. ಇವರಿಬ್ಬರು ೬.೨ ಓವರ್‌ಗಳಲ್ಲಿ ೭೦ ರನ್ ಪೇರಿಸಿದರು. ಆದರೆ ಲೆವಿ ಝೈಯುರ ರಹ್ಮಾನಗೆ ವಿಕೆಟ್ ಒಪ್ಪಿಸಿದರು. ಕಾಲಿನ ಇಂಗ್ರಾಮ(೨೯) ಮತ್ತು ಅಲ್ಬಿ ಮೊರ್ಕೆಲ್(೨೨) ತಂಡದ ರನ್ ರೇಟ್ ಕಾಯ್ದುಕೊಂಡರು.
ಆದರೆ ಅಂತ್ಯದಲ್ಲಿ ಡ್ಯುಮಿನಿ ಸಿಡಿಲಬ್ಬರದ ಬ್ಯಾಟಿಂಗ ನೆರವಿನಿಂದ ದ. ಆಫ್ರಿಕಾ ದೊಡ್ಡ ಮೊತ್ತವನ್ನು ಪೇರಿಸಿತು. ಡ್ಯುಮಿನಿ ೨೩ ರನ್ ಸಿಡಿಸಿದರು. ದ. ಆಫ್ರಿಕಾ ಮೂರು ವಿಕೆಟ ನಷ್ಟಕ್ಕೆ ೨೦೯ ರನ್‌ಗಳ ದೊಡ್ಡ ಮೊತ್ತವನ್ನು ಪೇರಿಸಿತು.
ಇದಕ್ಕೆ ಉತ್ತರಿಸಿದ ಬಾಂಗ್ಲಾದೇಶ ಮುಶ್ಫಿಕರ ರಹೀಂ ಅರ್ಧಶತಕದ ಹೊರ ತಾಗಿಯೂ ಕೇವಲ ೧೭೦ ರನ್ ಮಾಡಲಷ್ಟೇ ಶಕ್ತವಾಯಿತು. ಮೊಹಮ್ಮದುಲ್ಲಾ ೩೪ ಮತ್ತು ಅಶ್ರಫುಲ್ ೩೩ ರನ್ ಮಾಡಿದರು. ರಾಬಿನ ಪೀಟರ್ಸನ್ ಮತ್ತು ಡಿ ಲಾಂಗ ತಲಾ ಎರಡೆರಡು ವಿಕೆಟ್ ಕಬಳಿಸಿದರು.
Tagged with
tnews
ಸುಳ್ಯ: ಐವರ್ನಾಡಿನ ಮೀರಾ ಬಾಲಕೃಷ್ಣ (೭೬) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಸುಳ್ಯ ಪೊಲೀಸರು ಬಂಧಿಸಿದ್ದ ಕಾಸರಗೋಡು ಸಿರಿಬಾಗಿಲು ನಿವಾಸಿ ಸಚ್ಚಿದಾನಂದ ಯಾನೆ ಸಚಿನ್(೨೭) ಎಂಬಾತನನ್ನು ಬುಧವಾರ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಜೂನ್ ಎರಡರಂದು ಆರೋಪಿಗಳಾದ ಸೋಣಂಗೇರಿಯ ದೇವಿಪ್ರಸಾದ್, ಐವರ್ನಾಡು ತಮಿಳು ನಿರ್ವಸಿತರ ಕಾಲನಿಯ ಶಿವರಾಜ್, ಸೋಣಂಗೇರಿ ತಮಿಳು ನಿರ್ವಸಿತರ ಕಾಲನಿಯ ಮಹಾವೀರ ಹಾಗೂ ಪೈಚಾರಿನ ರವಿ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾಸರಗೋಡಿನ ಸಚಿನ್ ಹಾಗೂ ಮೂರ್ನಾಡಿನ ಚೆಟ್ಟಿಮಾಡ ನಿವಾಸಿ ರೋಶನ್ ತಲೆಮರೆಸಿಕೊಂಡಿದ್ದರು. ಅವರಲ್ಲಿ ಸಚಿನ್‌ನನ್ನು ಪೊಲೀಸರು ಕಾಸರಗೋಡಿನಲ್ಲಿ ಶನಿವಾರ ಬಂಧಿಸಿದ್ದರು. ೨೦೦೬ರಲ್ಲಿ ಕೊಲೆ ಕೃತ್ಯ ನಡೆದಿದ್ದು, ಆ ಸಂಧರ್ಭ ಸಚಿನ್ ಸುಳ್ಯದ ಜೂನಿಯರ್ ಕಾಲೇಜು ರಸ್ತೆಯಲ್ಲಿ ಶೃಂಗಾರ್ ಫ್ಯಾನ್ಸಿ ಸೆಂಟರ್ ಹೆಸರಿನ ಅಂಗಡಿ ನಡೆಸುತ್ತಿದ್ದ, ಕೊಲೆ ಕೃತ್ಯದ ಬಳಿಕ ಅಂಗಡಿಯನ್ನು ಮಾರಾಟ ಮಾಡಿ ಕಾಸರಗೋಡಿಗೆ ತೆರಳಿದ್ದ. ಪ್ರಕರಣದ ನಾಲ್ವರು ಆರೋಪಿಗಳು ಸೆರೆ ಸಿಕ್ಕಿದ ವಿಚಾರ ತಿಳಿದ ನಾಪತ್ತೆಯಾಗಿದ್ದ, ಈತನಿಗೆ ಮದುವೆ ನಿಶ್ಚಯವಾಗಿದ್ದು, ಆತ ಮನೆಗೆ ಬಂದೇ ಬರುತ್ತಾನೆ ಎಂದು ಪೊಲೀಸರು ಬಲೆ ಬೀಸಿದ್ದರು. ಕೊನೆಗೂ ಆತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಪ್ರಕರಣದ ಇನ್ನೊಬ್ಬ ಆರೋಪಿ ಮೂರ್ನಾಡಿನ ಚೆಟ್ಟಿಮಾಡ ನಿವಾಸಿ ರೋಶನ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Tagged with
cnews,
sullia
ಪಂಜಿಮೊಗರು ಜೋಡಿ ಕೊಲೆ ಪ್ರಕರಣ
ಮಂಗಳೂರು: ದ.ಕ.ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಪಂಜಿಮೊಗರು ಜೋಡಿ ಕೊಲೆಗೆ ಒಂದು ವರ್ಷ ಸಮೀಪಿಸುತ್ತಿದೆ. ಆದರೆ ಇದು ವರೆಗೂ ಆರೋಪಿಗಳ ಪತ್ತೆಯಾಗದಿದ್ದು ಕಡತಗಳು ನೂರರಲ್ಲಿ ಒಂದಾಗಿ ಪೊಲೀಸ್ ಕಪಾಟು ಸೇರಿ ತುಕ್ಕು ಹಿಡಿಯುತ್ತಿದೆ.
ಜೂ.೨೮, ಆ ದಿನವನ್ನು ಜಿಲ್ಲೆಯ ಜನ ಮರೆಯಲು ಸಾಧ್ಯವೇ ಇಲ್ಲ. ಅಂದು ಮಟ ಮಟ ಮಧ್ಯಾಹ್ನವೇ ಪಂಜಿಮೊಗರು ಜನನಿಬಿಡ ಪ್ರದೇಶದಲ್ಲಿ ಎರಡು ಹೆಣಗಳು ಬಿದ್ದಿದ್ದವು. ಅದು ಗುಜರಿ ವ್ಯಾಪಾರಿ ಹಮೀದ್ ಎಂಬವರ ಪತ್ನಿ ರಝಿಯಾ ಹಾಗೂ ಅವರ ಮಗಳು ಫಾತಿಮಾ ಝಿವಾ ಅವರದ್ದು.
ಹಂತಕ ಇಬ್ಬರನ್ನೂ ಬರ್ಬರವಾಗಿ ತಲ್ವಾರಿನಿಂದ ಕಡಿದು ನಾಪತ್ತೆಯಾಗಿದ್ದ. ಘಟನೆ ನಡೆದ ದಿನ ಕಮೀಷನರ್ ಸೇರಿದಂತೆ ಪೊಲೀಸ್ ಇಲಾಖೆ ಅಲರ್ಟ್ ಆಯಿತು. ಮಧ್ಯಾಹ್ನವೇ ಘಟನೆ ನಡೆದಿರುವ ಕಾರಣ ಆರೋಪಿ ಹತ್ತಿರದ ಸಂಬಂಧಿಕನೇ ಆಗಿದ್ದು, ಆ ಕಾರಣದಿಂದಲೇ ಮಹಿಳೆಯ ಜೊತೆ ಬಾಲಕಿಯ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿಕೆ ನೀಡಿ ಇಬ್ಬರ ಶವಸಂಸ್ಕಾರ ಆಗುವ ಮೊದಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದರು.
ಆದರೆ ದಿನಗಳು, ವಾರಗಳು, ತಿಂಗಳುಗಳು ಅಷ್ಟೇ ಏಕೆ? ವರ್ಷವೇ ಆಗುತ್ತಾ ಬಂದಿದೆ. ಆದರೂ ಇದುವರೆಗೆ ಆರೋಪಿಗಳ ಪತ್ತೆಯಿಲ್ಲ. ಆರಂಭದಲ್ಲಿ ಚುರುಕಿನಿಂದ ತನಿಖೆ ನಡೆಸಿದ ಪೊಲೀಸರು ನಗರದ ಎಲ್ಲಾ ಗುಜರಿ ವ್ಯಾಪಾರಿಗಳನ್ನು ಠಾಣೆಗೆ ಕರೆತಂದು ಗದರಿಸಿದರು. ಸಂಶಯ ಇದ್ದ ಕೆಲವು ವ್ಯಾಪಾರಿಗಳು ಪೆಟ್ಟನ್ನೂ ತಿಂದರು. ಆದರೂ ವಿಚಾರಣೆ ಯಾವುದೇ ಫಲ ನೀಡಿಲ್ಲ. ಘಟನೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ಮಹಿಳಾ ಸಂಘಟನೆಗಳು, ಡಿವೈಎಫ್‌ಐ ಸಂಘಟನೆ ಪ್ರತಿಭಟನೆ ನಡೆಸಿತು., ಪಂಜಿಮೊಗ ರುವಿನಿಂದ ಕಮೀಷನರೇಟ್ ಕಚೇರಿವರೆಗೆ ಪಾದಯಾತ್ರೆ ನಡೆಸಿತು. ಆ ಸಂದರ್ಭದಲ್ಲೂ ಅವರಿಗೆ ಭರವಸೆ ನೀಡಲಾಯಿತಾದರೂ ಅದ್ಯಾವುದೂ ಕಾರ್ಯರೂಪದಲ್ಲಿ ತೋರಿಸಲು ಪೊಲೀಸರಿಂದಾಗಲಿಲ್ಲ. ಆರಂಭದಲ್ಲಿ ಹಮೀದ್‌ನ ಮೇಲೆ ಪೊಲೀಸರು ಕಣ್ಣಿಟ್ಟಿದ್ದರಾದರೂ ನಂತರ ಸಂಶಯವನ್ನು ಸಡಿಲುಗೊಳಿಸಿದರು. ಒಂದೆರಡು ಪ್ರತಿಭಟನೆಯಲ್ಲಿ ಕಾಣಿಸಿಕೊಂಡ ಹಮೀದ್ ನಂತರದ ದಿನಗಳಲ್ಲಿ ಪತ್ತೆಯಿರಲಿಲ್ಲ. ಮಂಗಳೂರಿಗೆ ಪೊಲೀಸ್ ಕಮೀಷನರೇಟ್ ಬಂದ ಬಳಿಕ ಪೊಲೀಸರ ಸಂಖ್ಯೆ ಹೆಚ್ಚಳವಾಗಿದೆ. ಸಾಲದ್ದಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಪಿಸಿಆರ್ ಹೆಸರಿನ ಸುಂದರ ವಾಹನವನ್ನು ನೀಡಲಾಗಿದೆ. ದಿನವಿಡೀ ವಾಹನ ತಿರುಗಾಡುತ್ತಿದ್ದರೂ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲೂ ಸಾಧ್ಯವಾಗಿಲ್ಲ. ಜೋಡಿ ಕೊಲೆ ಪ್ರಕರಣಕ್ಕೆ ವರ್ಷವಾಗಲು ಎಂಟು ದಿನಗಳು ಮಾತ್ರವೇ ಇದ್ದು, ಅದಕ್ಕಿಂತ ಮೊದಲಾದರೂ ಆರೋಪಿಗಳ ಪತ್ತೆಯಾಗಲಿ ಎನ್ನುವುದು ಸಾರ್ವಜನಿಕರ ಆಶಯ.
Tagged with
cnews,
mlore
ಪುತ್ತೂರು: ವಾರದ ಹಿಂದೆ ನಡೆದ ಹಲ್ಲೆ ಮತ್ತು ಮೊಬೈಲ್ ಹಾಗೂ ಹಣ ಕಸಿದುಕೊಂಡ ಪ್ರಕರಣದ ರಾಜಿ ಮಾತುಕತೆಯ ವೇಳೆಯೇ ಸಂಘಟನೆಗೆ ಸೇರಿದವರೆನ್ನಲಾದ ಎರಡು ತಂಡಗಳ ನಡುವೆ ತಲವಾರು ಕಾಳಗ ನಡೆದು ಆರು ಮಂದಿ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಸವಣೂರು ಗ್ರಾಮದ ಮಾಂತೂರು ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಸವಣೂರು ಸಮೀಪದ ಮಾಂತೂರಿನ ಸಂಶುದ್ದೀನ್ (೨೬) ಮತ್ತು ಇನ್ನೊಂದು ತಂಡದ ನಝೀರ್ (೨೪) ಹಲ್ಲೆಗೊಳಗಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನೆಯ ಹಿನ್ನಲೆ
ವಾರದ ಹಿಂದೆ ಹಲ್ಲೆ ನಡೆಸಿ ಅವರಲ್ಲಿದ್ದ ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡಿದ್ದರೆಂಬ ಆರೋಪವಿತ್ತು. ಈ ಘಟನೆಯ ಕುರಿತು ಕಡಬ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಈ ನಡುವೆ ನಝೀರ್ ಅವರು ಕಸಿದುಕೊಂಡಿದ್ದ ಮೊಬೈಲ್ ಮತ್ತು ಹಣವನ್ನು ಝಾಕೀರ್ ಅವರಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಾತುಕತೆ ನಡೆಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಮುಗಿಸುವುದೆಂದು ಮಾಂತೂರಿನ ಸಂಶುದ್ದೀನ್ ಅವರ ನೇತೃತ್ವದಲ್ಲಿ ನಡೆದ ಸಂಧಾನ ಮಾತುಕತೆಯ ವೇಳೆ ತೀರ್ಮಾನಿಸಲಾಗಿತ್ತು.
ಬುಧವಾರ ಪ್ರಕರಣವನ್ನು ಮಾತುಕತೆಯ ಮೂಲಕ ಮುಗಿಸಲೆಂದು ಎರಡು ತಂಡದವರು ಆಗಮಿಸಿದ್ದರು. ಹಣ ಮತ್ತು ಮೊಬೈಲ್ ಅನ್ನು ಹಿಂತಿರುಗಿಸುವ ವಿಚಾರದಲ್ಲಿ ಮಾತುಕತೆ ನಡೆಯುತ್ತಿದ್ದ ವೇಳೆಯೇ ಎರಡು ತಂಡಗಳ ನಡುವೆ ಮಾತಿನ ಚಕಮಕಿ ಹೊಕೈ ನಡೆದು ಎರಡು ತಂಡಗಳ ನಡುವೆ ಪರಸ್ಪರ ಹಲ್ಲೆ ನಡೆದು ಇತ್ತಂಡದ ಇಬ್ಬರು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Tagged with
cnews,
puttur
ಕಾಸರಗೋಡು: ವ್ಯಾಪಾರ ಆರಂಭಿಸುವ ಹೆಸರಿನಲ್ಲಿ ಕಾಞಂಗಾಡ್ ನಿವಾಸಿಗೆ ೨೫ ಲಕ್ಷ ರೂಪಾಯಿ ವಂಚಿಸಿದ ಆರೋಪದಲ್ಲಿ ದಂಪತಿ ಯರ ಸಹಿತ ನಾಲ್ವರ ವಿರುದ್ದ ಕಾಸರಗೋಡು ನಗರ ಪೊಲೀಸರು ಕೇಸು ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಹೊಸದುರ್ಗ ಪುದಿಯಕೋಟ ನಿವಾಸಿ ಎನ್.ಕೆ ಮುಹಮ್ಮದ್ ಕುಂಞಿ(೪೫) ಎಂಬವರ ದೂರಿನನ್ವಯ ಕಾಸರಗೋಡು ಅಣಂಗೂರು ಟಿ.ವಿ. ಸ್ಟೇಶನ್ ರಸ್ತೆ ನಿವಾಸಿಗಳಾದ ಹಸನ್ ಮುನ್‌ಸಿರ್ ತಮೀಂ, ಪತ್ನಿ ನಿಶಾನಾ, ತಂದೆ ಹಮೀದ್, ತಾಯಿ ನಸಿಯಾ ಎಂಬವರ ವಿರುಧ್ದ ಕೇಸು ದಾಖಲಿಸಲಾಗಿದೆ. ಎರ್ನಾಕು ಳಂನ ಸ್ಟಡ್ ಫಾಸ್ಟ್ ವ್ಯಾಪಾರಿ ಸಮೂಹದ ಆಡಳಿತ ಪಾಲುದಾರನೆಂದು ಹೇಳಿ ಆರೋಪಿ ಹಸನ್ ತಮೀಂ ಕಂಪೆನಿಗೆ ಠೇವಣಿ ರೂಪದಲ್ಲಿ ಮುಹಮ್ಮದ್ ಕುಂಞಿಯಿಂದ ೨೦೦೮ರ ಡಿಸೆಂಬರ್ ತಿಂಗಳಿನಲ್ಲಿ ೧೦ ಲಕ್ಷ ರೂಪಾಯಿ, ೨೦೦೯ ರ ಫೆಬ್ರವರಿಯಲ್ಲಿ ೧೫ ಲಕ್ಷ ರೂಪಾಯಿ ಪಡೆಯಲಾಗಿತ್ತು. ೧೧ ರಿಂದ ೧೫ ಶೇಕಡಾ ವರೆಗೆ ಆಕರ್ಷಕ ಲಾಭದ ಮೋಹ ಹುಟ್ಟಿಸಿ ವಂಚನೆ ಮಾಡಲಾಗಿತ್ತು. ಲಾಭಾಂಶ ಸಿಗದ ವೇಳೆ ವಿಚಾರಿಸಲಾಗಿ ಎರ್ನಾಕುಳಂನಲ್ಲಿ ಈ ರೀತಿಯ ಕಂಪೆನಿಯೇ ಇಲ್ಲವೆಂಬುದು ಸ್ಪಷ್ಟವಾಗಿತ್ತು. ಕಾಸರಗೋಡಿಗೆ ತಲುಪಿ ತಮೀಂನನ್ನು ಭೇಟಿಯಾದಾಗ ಆತ ಹಾಗೂ ಕುಟುಂಬಿಕರು ಸೇರಿ ಜಾರಿಕೆಯ ಉತ್ತರ ನೀಡುತ್ತಿದ್ದರು. ಇದರಿಂದ ವಂಚಿತನಾದ ಮುಹಮ್ಮದ್ ಕುಞಿ ನಗರ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಕಂಪೆನಿಯ ಹೆಸರಿನಲ್ಲಿ ಈ ಜಾಲವು ಇನ್ನೂ ಹಲವರಿಗೆ ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ಆರಂಭಿಸಲಾಗಿದೆ.
Tagged with
cnews,
kgod
ಮಂಗಳೂರು: ಎರಡು ವರ್ಷಗಳ ಹಿಂದೆ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ನಡೆಸಿ ಪರಾರಿಯಾಗಿದ್ದ ಹಾವೇರಿ ಮೂಲದ ಆರೋಪಿಯನ್ನು ಬಂದರು ಪೊಲೀಸರು ನಿನ್ನೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲೂಕಿನ ಹಂಸ್ ಬಾವಿ ಗ್ರಾಮದ ಜಬೀಯುಲ್ಲಾ ಮಕಾನ್ ದಾರ್ ಯಾನೆ ಜಬ್ಬಿ (೨೮) ಬಂಧಿತ ಆರೋಪಿ. ಈತ ೨೨-೬-೨೦೧೦ ರಂದು ಅನ್ಸಾರಿ ರಸ್ತೆ ಬಳಿಯಿರುವ ಯತೀಂ ಖಾನ ಹಾಲ್‌ನ ಬಳಿಯಿರುವ ಫ್ಲಾಟಿನ ಒಂದನೇ ಮಹಡಿಯಲ್ಲಿ ವಾಸವಿದ್ದ ಅಬ್ದುಲ್ ರಜಾಕ್ ಎಂಬವರ ತಲೆಗೆ ಚಪ್ಪಡಿ ಕಲ್ಲು ಹಾಕಿ ಹತ್ಯೆಗೈಯ್ಯಲಾಗಿತ್ತು. ಕೃತ್ಯದ ಬಳಿಕ ಆರೋಪಿ ಪರಾರಿಯಾಗಿದ್ದನು.
Tagged with
cnews,
mlore
ಪುತ್ತೂರು: ವಿದ್ಯುತ್ ಸ್ಪರ್ಶಿಸಿ ಹೋರಿಯೊಂದು ಮೃತಪಟ್ಟ ಘಟನೆ ಪುತ್ತೂರು ಪೇಟೆಯ ಹೊರವಲಯದ ನೆಹರೂನಗರ ಸಮೀಪ ಶನಿವಾರ ಸಂಜೆ ಸಂಭವಿಸಿದೆ.
ನೆಹರೂನಗರ ಬಳಿಯ ವಿದ್ಯುತ್ ಪರಿವರ್ತಕದ ಬುಡದಲ್ಲಿ ನೇತಾಡಿ ಕೊಂಡಿದ್ದ ವಿದ್ಯುತ್ ಪರಿವರ್ತಕದ ಆಧಾರ ತಂತಿಯನ್ನು ಅಲ್ಲೇ ಮೇಯು ತ್ತಿದ್ದ ಹೋರಿ ಸ್ಪರ್ಶಿಸಿದ ಪರಿಣಾಮ ವಾಗಿ ಈ ಘಟನೆ ಸಂಭವಿಸಿದೆ. ಕಳೆದ ಒಂದು ವಾರ ದಿಂದೀಚೆಗೆ ವಿದ್ಯುತ್ ಪರಿವರ್ತಕದ ಆಧಾರ ತಂತಿ ಕಡಿದು ನೇತಾಡಿ ಕೊಂಡಿದ್ದು, ಅದನ್ನು ಸರಿಪಡಿಸುವ ಗೋಜಿಗೆ ಮೆಸ್ಕಾಂ ಇಲಾಖೆ ಯವರು ಮುಂದಾಗಿರಲಿಲ್ಲ.
ಜೀಪು- ರಿಕ್ಷಾ ಡಿಕ್ಕಿ: ಓರ್ವನಿಗೆ ಗಾಯ: ಜೀಪು ಮತ್ತು ರಿಕ್ಷಾ ವೊಂದರ ನಡುವೆ ಅಫಘಾತ ಸಂಭವಿಸಿ ರಿಕ್ಷಾದಲ್ಲಿದ್ದ ಪುತ್ತೂರಿನ ಉರ್ಲಾಂಡಿ ನಿವಾಸಿ ಪ್ರಜ್ವಲ್ (೧೯) ಗಾಯಗೊಂಡ ಘಟನೆ ಮಂಗಳವಾರ ಪುತ್ತೂರು ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಬಳಿ ಸಂಭವಿಸಿದೆ. ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿ ಸಲಾಗಿದೆ.
Tagged with
cnews,
power,
puttur
ಕಾಪು: ಕುರ್ಕಾಲು ಗ್ರಾಮದ ಶಂಕರಪುರ ಪೇಟೆಯಲ್ಲಿರುವ ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು ೩೮ಸಾವಿರ ರೂ. ಮೌಲ್ಯದ ಮೊಬೈ ಲ್‌ಗಳನ್ನು ಕದ್ದೊಯ್ದಿರುವ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಪತ್ ಎಂಬವರಿಗೆ ಸೇರಿದ ಸುಮನ್ ಸೆಲ್ ಫೋನ್ ಮೊಬೈಲ್ ಅಂಗಡಿಗೆ ನುಗ್ಗಿ ನಿನ್ನೆ ರಾತ್ರಿ ಅಂಗ ಡಿಯ ಬಾಗಿಲು ಮುರಿದು ಮಾರಾಟಕ್ಕೆ ಹಾಗೂ ರಿಪೇರಿಗಿಟ್ಟಿದ್ದ ೪೨ ಮೊಬೈ ಲ್‌ಗಳನ್ನು ಕದ್ದೊಯ್ದಿದಾರೆ.
Tagged with
cnews,
kaup
ಕಾಸರಗೋಡು: ಕೊಲ್ಲಿ ರಾಷ್ಟ್ರ ದಿಂದ ಲಕ್ಷಾಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದ ಕುಂಬಳೆಯ ಆರಿಕ್ಕಾಡಿ ನಿವಾಸಿಯನ್ನು ಅರಸಿ ಇಲ್ಲಿಗೆ ಬಂದ ಕಣ್ಣೂರಿನ ತಲಶ್ಶೇರಿ ನಿವಾಸಿ ಯಾದ ಯುವಕನನ್ನು ಗಂಭೀರ ವಾಗಿ ಹಲ್ಲೆಗೊಳಿಸಿದ ಘಟನೆ ವರದಿಯಾಗಿದೆ.
ತಲಶ್ಶೇರಿ ನಿವಾಸಿ ಸಲ್ಮಾನ್(೩೦) ಎಂಬವರು ಹಲ್ಲೆಗೊಳಗಾದ ಅಮಾ ಯಕ ಯುವಕ. ಈ ಸಂಬಂಧ ಆರಿಕ್ಕಾ ಡಿಯ ಅಶ್ರಫ್(೨೯), ಈತನ ತಂದೆ ಅಬೂಬಕ್ಕರ್(೫೨) ಎಂಬವರ ವಿರುದ್ದ ಕುಂಬಳೆ ಪೊಲೀಸರು ಕೇಸು ದಾಖಲಿ ಸಿದ್ದಾರೆ. ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯದ ನಿರ್ದೇಶಾ ನುಸಾರ ಪೊಲೀಸರು ಪ್ರಕರಣ ದಾಖ ಲಿಸಿದ್ದಾರೆ. ಕೊಲ್ಲಿಯ ಯು.ಎ.ಇ ಯಲ್ಲಿ ವ್ಯಾಪಾರಿಯಾಗಿರುವ ತಲಶ್ಶೇರಿಯ ಸಲ್ಮಾನ್‌ರಿಂದ ಆರೋಪಿ ಅಶ್ರಫ್ ಕೊಲ್ಲಿಯಲ್ಲಿದ್ದಾಗ ಸುಮಾರು ೨೦ ಲಕ್ಷ ರೂಪಾಯಿಗಳ ಸಾಮಾಗ್ರಿಗಳನ್ನು ಸಾಲವಾಗಿ ಪಡೆದು ಬಳಿಕ ವಂಚಿಸಿ ಊರಿಗೆ ಪರಾರಿ ಯಾಗಿದ್ದನೆನ್ನಲಾಗಿದೆ.
ಊರಿಗೆ ತಲುಪಿದ ಸಲ್ಮಾನ್ ಇತ್ತೀಚೆಗೆ ಅಶ್ರಫ್ ನನ್ನು ಅರಸಿ ಆತನ ಮನೆಗೆ ಬಂದಾಗ ಕೊಠಡಿ ಯಲ್ಲಿ ಕೂಡಿ ಹಾಕಿ ದೌರ್ಜನ್ಯವೆ ಸಲಾಗಿದೆ.
Tagged with
cnews,
kgod
ಕಾರ್ಕಳ: ಬೆಳ್ಮಣ್ ಸಮೀಪದ ಸೂಡಾ-ಕಲ್ಯಾ ಎಂಬಲ್ಲಿನ ಕೋರೆ ಯೊಂದರಲ್ಲಿ ಉಂಟಾದ ಸ್ಫೋಟಕ್ಕೆ ಮಹಿಳೆಯರಿಬ್ಬರು ಸಾವಿಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಕೇಸುದಾಖ ಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೋರೆ ಮಾಲಿಕ ಕಿರಣ್‌ಜಾಯ್ ತಲೆಮರೆಸಿಕೊಂಡಿದ್ದಾನೆ. ಮ್ಯಾನೇಜರ್ ಅನಿಷ್, ಮೇಲ್ವಿಚಾರಕ ಶಿವಣ್ಣ ಎಂಬ ವರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರದಂದು ಕರಿಕಲ್ಲು ಕೋರೆಯಲ್ಲಿ ದುಡಿಯುತ್ತಿದ್ದ ಬಾಗಲ ಕೋಟೆಯ ಮಲ್ಲವ್ವ, ಕೊಪ್ಪಳದ ಅಂಬಿ ಕಾ ಎಂಬವರು ಸ್ಫೋಟಕ್ಕೆ ದಾರುಣ ರೀತಿಯಲ್ಲಿ ಮೃತಪಟ್ಟಿದ್ದರು.
ಪ್ರಕರಣವನ್ನು ತಿರುಚುವ ಯತ್ನ ನಡೆಯುತ್ತಿದ್ದು, ಸಿಡಿಲಿನ ಅಘಾತಕ್ಕೊಳ ಗಾಗಿ ಘಟನೆ ಸಂಭವಿಸಿದೆ ಎಂಬ ಕಾರಣ ಮುಂದಿಟ್ಟು ಪರಿಹಾರ ಧನವನ್ನು ಸರಕಾರ ದಿಂದ ನೀಡುವಂತೆ ಪ್ರಭಾವ ಬೀರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
Tagged with
cnews,
karkala
ಮಂಗಳೂರು: ಬದಿಯಡ್ಕ ಸಮೀಪದ ನೀರ್ಚಾಲು-ಗೋಳಿಯಡ್ಕ ಎಂಬಲ್ಲಿ ಶಾಲಾ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ನಿನ್ನೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಮನೋಜ್ ಕ್ರಾಸ್ತಾ(೧೭) ಎಂದು ಹೆಸರಿಸಲಾಗಿದೆ. ಈತ ಹತ್ತನೇ ತರಗತಿಯಲ್ಲಿ ಫೇಲ್ ಆಗಿರುವ ಕಾರಣಕ್ಕೆ ಕೃತ್ಯವೆಸಗಿರಬೇಕೆಂದು ಶಂಕಿಸಲಾಗಿದೆ.
Tagged with
cnews,
mlore
ಮಂಗಳೂರು: ಜೂ. ೧೮ರಂದು ನಾಪತ್ತೆಯಾಗಿದ್ದಾರೆಂದು ತಿಳಿಯಲಾಗಿದ್ದ ಸಂತೆಕಟ್ಟೆ ಪುತ್ತೂರಿನ ಪುಟ್ಟಮ್ಮ ಎಂಬವರ ಮಗ ಸುರೇಶ(೨೦) ಹಾಗೂ ಪಾರ್ವತಮ್ಮನ ಮಗಳು ಶರಣಮ್ಮ(೨೫) ಅವರ ಬಿಡುಗಡೆಗೆ ಒಂದು ಲಕ್ಷ ರೂ. ಹಣ ನೀಡುವಂತೆ ಬೆದರಿಸಿರುವುದಾಗಿ ದೂರು ನೀಡಲಾಗಿದೆ.ಪುಟ್ಟಮ್ಮ ಸಂಬಂಧಿ ರಮೇಶ ಅವರಿಗೆ ಮೊಬೈಲ್ ಕರೆ ಮಾಡಿದ ವ್ಯಕ್ತಿ ಸುರೇಶ ಮತ್ತು ಶರಣಮ್ಮರ ಬಿಡುಗಡೆಗೆ ಹಣದ ಬೇಡಿಕೆ ಇಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Tagged with
cnews,
mlore
ಮಂಗಳೂರು: ಕುಂದಾಪುರ ಡಿವೈಎಸ್‌ಪಿ ನೇತೃತ್ವದ ಪೊಲೀಸ್ ತಂಡ ಕೋಡಿ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಘಟನೆ ನಿನ್ನೆ ನಡೆದಿದೆ.
ಆರೋಪಿ ಅಶ್ಫಕ್ ಎಂಬಾತ ತನ್ನ ಮನೆಯ ವಠಾರದಲ್ಲಿ ಗೋವುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸ್ ತಂಡ ದಾಳಿ ನಡೆಸಿದೆ. ಈ ವೇಳೆ ಸ್ಥಳದಲ್ಲಿ ಕಡಿಯಲ್ಪಟ್ಟ ಗೋಮಾಂಸ ಹಾಗೂ ಗೋವು ಪತ್ತೆಯಾಗಿದೆ. ಮೂರು ಗೋವುಗಳನ್ನು ಕಡಿಯಲಾಗಿತ್ತು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews,
mlore
ಮಂಗಳೂರು: ಕೊಲ್ಲಿ ರಾಷ್ಟ್ರದಿಂದ ಅನಧಿಕೃತವಾಗಿ ವಿಮಾನದ ಮೂಲಕ ಸಾಗಿಸಲಾಗುತ್ತಿದ್ದ ಒಟ್ಟು ೨.೮೨ ಲಕ್ಷ ರೂ. ಮೌಲ್ಯದ ೪೨೮ ವಿದೇಶಿ ಸಿಗರೇಟ್‌ಗಳನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಮೂವರನ್ನು ಬಂಧಿಸಿದ್ದಾರೆ.
ಕಾಸರಗೋಡು ನಿವಾಸಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಕಾಸರಗೋಡಿನ ಇಬ್ಬರು ಪ್ರಯಾಣಿಕರ ಬ್ಯಾಗ್‌ನಲ್ಲಿ ವಿದೇಶಿ ಸಿಗರೇಟ್‌ಗಳು ಪತ್ತೆಯಾಗಿವೆ.
Tagged with
cnews,
mlore
ಮಂಗಳೂರು: ಬ್ರಹ್ಮಾವರ ಬಳಿಯ ಪಡುಕೆರೆ ಎಂಬಲ್ಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಮೃತ ಪಟ್ಟ ವ್ಯಕ್ತಿಯನ್ನು ಪಡುಕೆರೆಯ ನಿವಾಸಿ ಪಿಣಿಯ(೫೦) ಎಂಬುದಾಗಿ ಹೆಸರಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
Tagged with
cnews,
mlore
ಮಂಗಳೂರು: ರಹೀಂ ಉಚ್ಚಿಲ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಪಾಂಡೇಶ್ವರ ಪೊಲೀಸರು ನಗರದ ಸರ್ವಿಸ್ ಬಸ್ ನಿಲ್ದಾಣದಿಂದ ಬಂಧಿಸಿದ್ದಾರೆ.
ಕಸಬಾ ಬೆಂಗ್ರೆ ನಿವಾಸಿ ಅಬ್ದುಲ್ ಸಲೀಂ(೩೪) ಬಂಧಿತ ಆರೋಪಿ. ಈ ಹಿಂದೆ ಉಳ್ಳಾಲ ನಿವಾಸಿ ರವೂಫ್ ಎಂಬಾತನನ್ನು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು.
ಮಾ.೧೫ರಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅತ್ತಾವರದ ಕಚೇರಿಯಲ್ಲಿದ್ದ ಸಂದರ್ಭ ಆರು ಜನರ ತಂಡ ಆಗಮಿಸಿ ಮಾರಕಾಯುಧಗಳಿಂದ ಯದ್ವಾತದ್ವ ಕಡಿದು ಪರಾರಿಯಾಗಿತ್ತು. ಗಂಭೀರ ಗಾಯ ಗೊಂಡಿದ್ದ ರಹೀಂ ಉಚ್ಚಿಲ್ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದು, ಇದೀಗ ಮೂರು ತಿಂಗಳ ಬಳಿಕ ಚೇತರಿಸಿಕೊಂಡಿ ದ್ದಾರೆ. ರಹೀಂ ಉಚ್ಚಿಲ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ಕೊಲೆಯತ್ನ ನಡೆದಿದೆ ಎಂದು ಬಂಧಿತ ಆರೋಪಿಗಳು ಬಾಯ್ಬಿಟ್ಟಿರುವುದಾಗಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂ ಧಿಸಿ ಇನ್ನೂ ನಾಲ್ಕು ಜನರ ಬಂಧನವಾ ಗಬೇಕಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
Tagged with
cnews,
mlore
ಪಡುಬಿದ್ರಿ: ಕೆಲವು ದಿನಗಳ ಹಿಂದೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲದ ರಾಷ್ಟ್ರೀಯ ಹೆದ್ದಾರಿ ೬೬ರ ಸನಿಹದ ಮಸೀದಿಯ ಪಕ್ಕದಲ್ಲಿ ನಿಲ್ಲಿಸಲ್ಪಟ್ಟಿದ್ದ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿ ಚಾಲಕನನ್ನು ಬೆದರಿಸಿ ದರೋಡೆಗೈದ ತಂಡದ ಮತ್ತೋರ್ವ ಆರೋಪಿ ಸುಧೀರ್ ದೇವಾಡಿಗ ಎಂಬಾತನನ್ನು ನಿನ್ನೆ ಉಚ್ಚಿಲದ ಅಬ್ದುಲ್ ಖಾದರ್ ಅವರ ಮಗನಾದ ದೆಫ್ತಾಲ್ ಖಾದ್ರಿ ಎಂಬವರ ಮನೆಯಂಗಳದಿಂದ ಪೊಲೀಸರು ಬಂಧಿಸಿದ್ದಾರೆ.
ತಂಡದ ನಾಲ್ಕು ಮಂದಿ ಸದಸ್ಯ ರನ್ನು ಪೊಲೀಸರು ಈಗಾಗಲೇ ಬಂಧಿ ಸಿದ್ದು, ಈಗ ಸೆರೆಸಿಕ್ಕ ಆರೋಪಿ ಸುಧೀರ್ ದೇವಾಡಿಗ ಕುಖ್ಯಾತ ದನಕಳ್ಳ ನಾಗಿದ್ದು, ಎರ್ಮಾಳು ಸಮೀಪದ ಅದಮಾರು ಎಂಬಲ್ಲಿಯವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದನ ಕಳ್ಳತನ ನಡೆಸುತ್ತಲೇ ಹೆದ್ದಾರಿ ದರೋಡೆಯ ಹಂತಕ್ಕೆ ಬೆಳೆದಿದ್ದ ಈ ಐದು ಮಂದಿಯ ತಂಡ ಉಡುಪಿ, ದ.ಕ. ಹಾಗೂ ಚಿಕ್ಕಮಗಳೂ ರಿನಾದ್ಯಂತ ದನ ಕಳ್ಳತನದಲ್ಲಿ ಕುಖ್ಯಾತ ವಾಗಿತ್ತು. ಉಚ್ಚಿಲದ ಅಜರುದ್ದೀನ್, ಕಂಚಿನಡ್ಕದ ಕಬೀರ್, ಕಾಪುವಿನ ನೌಫಾಲ್ ಹಾಗೂ ಶಕೀಲ್ ಎಂಬವ ರನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು. ಉಚ್ಚಿಲದ ಲಾರಿ ಚಾಲಕ ನನ್ನು ಮಾರುತಿ ಆಲ್ಟೋ ಕಾರಿನಲ್ಲಿ ಬಂದು ಬೆದರಿಸಿ ದರೋಡೆಗೈದ ಈ ತಂಡ ಚಾಲಕನ ಸಾವಿರ ರೂಪಾಯಿ ನಗದು ಮತ್ತು ಎರಡು ಮೊಬೈಲ್ ಸೆಟ್ ದೋಚಿತ್ತು. ಪಡುಬಿದ್ರಿ ಪೊಲೀ ಸರು ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದು, ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Tagged with
cnews,
padubidri
ಮಂಗಳೂರು: ೧೦ ರೂ. ನೋಟು ಎಸೆದು ಗಮನ ಬೇರೆ ಕಡೆ ಸೆಳೆದು ೩ ಲಕ್ಷ ರೂ. ಚಿನ್ನಾಭರಣಗಳನ್ನು ದೋಚಿದ ಘಟನೆ ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆದಿದೆ.
ಬಿದ್ಕಲ್‌ಕಟ್ಟೆಯ ಹಾರ್ದಳ್ಳಿ ಮಂದಳ್ಳಿ ಗ್ರಾಮದ ವಿಶ್ವನಾಥ ಗೌಡರು ಧರ್ಮಸ್ಥಳದಲ್ಲಿ ತೀರ್ಥಸ್ನಾನ ಮಾಡುತ್ತಿದ್ದಾಗ ಚಿನ್ನದ ಬಳೆ, ಸರ, ನೆಕ್ಲೆಸ್, ಮೊಬೈಲ್, ವಾಚು, ಪರ್ಸುಗಳಿದ್ದ ಬ್ಯಾಗನ್ನು ಈ ರೀತಿ ಕದಿಯಲಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Tagged with
cnews,
mlore
ಮಂಗಳೂರು: ಉಚ್ಚಿಲ ಭಾಸ್ಕರನಗರದ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ತಾಕೀಬ್(೧೯) ಎಂಬಾತನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಕೃಷ್ಣಾಪುರ ಆರನೇ ಬ್ಲಾಕ್ ನಿವಾಸಿ ಯಾಗಿರುವ ಈತನನ್ನು ನ್ಯಾಯಾ ಲಯಕ್ಕೆ ಹಾಜರು ಪಡಿಸಲಾಗಿದೆ.
Tagged with
cnews,
mlore
ಮಂಗಳೂರು: ಮೀನು ಹಿಡಿಯಲೆಂದು ತೆರಳಿದ್ದ ಮೂವರು ನಿಗೂಢವಾಗಿ ಕಾಣೆಯಾಗಿರುವ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಗುಳಿಯಾರಿನಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಉಡುಪಿಯ ಮೂಡುಗುಳಿಯೂರು ನಿವಾಸಿಗಳಾದ ನರಸಿಂಹ(೬೦), ರಾಜ್(೪೬), ಮತ್ತು ಕಿರಣ್(೧೭) ಬುಧವಾರ ಸಂಜೆ ಗದ್ದೆಯಲ್ಲಿರುವ ದೊಡ್ಡ ಹೊಂಡದಲ್ಲಿ ಮೀನು ಹಿಡಿಯಲು ತೆರಳಿದ್ದರು. ತಡ ರಾತ್ರಿವರೆಗೂ ಈ ಮೂವರು ವಾಪಾಸಾಗದಿದ್ದಾಗ ಗಾಬರಿಗೊಂಡ ಮನೆಯವರು ಮತ್ತು ಆಸುಪಾಸಿನವರು ಎಷ್ಟು ಹುಡುಕಾಡಿದರೂ ಈ ಮೂವರು ಪತ್ತೆಯಾಗಲಿಲ್ಲ. ಹೊಂಡದಲ್ಲಿ ಮೀನು ಹಿಡಿಯಲಿ ಉಪಯೋಗಿಸಿದ ಬಲೆ ಪತ್ತೆಯಾಗಿದ್ದು ಅದರ ಬಳಿಯಲ್ಲಿ ಚಪ್ಪಲಿ ಮತ್ತು ಅಂಗಿ ಸಿಕ್ಕಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ರಾಜ್ ಮತ್ತು ಕಿರಣ್ ತಂದೆ-ಮಗನಾಗಿದ್ದು, ನರಸಿಂಹ ಅವರು ಪಕ್ಕದ ಮನೆಯವರಾಗಿದ್ದಾರೆ. ಕಿರಣ್ ಕೋಟದ ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ತಡರಾತ್ರಿವರೆಗೆ ಹುಡುಕಾಡಿದರೂ ಮೂವರ ದೇಹದ ಪತ್ತೆಯಾಗಿಲ್ಲ. ಕುಂದಾಪುರ ಅಗ್ನಿಶಾಮಕ ದಳ ಹಾಗೂ ಕೋಟ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.
Tagged with
cnews,
missing,
mlore
ಪುತ್ತೂರು: ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ನಡೆದ ೧೦ ಮನೆಕಳವು ಪ್ರಕರಣಗಳೂ ಸೇರಿದಂತೆ ರಾಜ್ಯ ಹೊರರಾಜ್ಯಗಳ ವಿವಿದೆಡೆಗಳಲ್ಲಿ ಕಳ್ಳ ತನ ನಡೆಸಿದ್ದ ಕುಖ್ಯಾತ ಕಳ್ಳ ತಮಿಳು ನಾಡಿನ ಕೊಯಮುತ್ತೂರು ಜಿಲ್ಲೆಯ ವಡಹಳ್ಳಿ ಗ್ರಾಮದ ಮರುದಮಲೈ ಅಡಿ ಯರಮ್ ನಿವಾಸಿ ಕೆ.ಆರ್. ಸಂತಾ ನಮ್ ಯಾನೆ ಚಂದ್ರನ್ ಯಾನೆ ಅಂತೋನಿ (೪೭) ಎಂಬಾತನನ್ನು ಪುತ್ತೂರು ನಗರ ಪೊಲೀಸರು ಬುಧ ವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ದ್ದಾರೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯು ವರ್ಷದ ಅವಧಿ ಯಲ್ಲಿ ಪುತ್ತೂರು ನಗರ ವ್ಯಾಪ್ತಿಯಲ್ಲಿ ಒಟ್ಟು ೮ ಮತ್ತು ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ೨ ಮನೆಗಳಿಂದ ಕಳ್ಳತನ ನಡೆಸಿದ್ದ.
Tagged with
cnews,
puttur
ಶಿಕ್ಷಣದ ಕೇಸರೀಕರಣ ಈಶ್ವರಪ್ಪ ಹೇಳಿಕೆ
ವಿಟ್ಲ: ಬಿಜೆಪಿಯ ರಾಜ್ಯಾಧ್ಯಕ್ಷರಾದ ಕೆ.ಎಸ್ ಈಶ್ವರಪ್ಪ ಅವರ ಶಿಕ್ಷಣದ ಕೇಸರೀಕರಣ ಎಂಬ ಹೇಳಿಕೆಯನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ವಿಟ್ಲ ವಲಯದ ವತಿ ಯಿಂದ ನಿನ್ನೆ ಸಂಜೆ ವಿಟ್ಲದ ಖಾಸಗಿ ಬಸ್ಸು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಆಧ್ಯಕ್ಷೀಯ ಭಾಷಣ ಮಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇದರ ರಾಜ್ಯಾಧ್ಯಕ್ಷ ಮುಹಮ್ಮದ್ ತುಫೈಲ್‌ರವರು ಗಣಿ ಹಗರಣ, ಭ್ರಷ್ಟಾ ಚಾರ, ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಮಾಡಿದಂತಹ ನೈತಿಕತೆ ಇಲ್ಲದ ರಾಜ್ಯ ಸರಕಾರ ಶಿಕ್ಷಣದಲ್ಲಿ ಹಸಿರೀಕರಣ ದೊಂದಿಗೆ ಕೇಸರೀಕರಣ ಮಾಡಲು ನೀಡಿರುವ ಹೇಳಿಕೆಯು ಅತ್ಯಂತ ಖಂಡನೀಯವಾಗಿದೆ ಹಾಗೂ ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು. ಬಳಿಕ ಪ್ರತಿಭಟನೆಕಾರರು ಈಶ್ವರಪ್ಪ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಇದರ ರಾಜ್ಯ ಕೋಶಾಧಿ ಕಾರಿ ತಫ್ಸೀರ್, ಜಿಲ್ಲಾ ಕಾರ್ಯದರ್ಶಿ ಯಾಸಿರ್, ತಾಲೂಕು ಅಧ್ಯಕ್ಷ ಇಮ್ರಾನ್ ತುಂಬೆ, ರಿಯಾಝ್ ಕಡಂಬು, ಆಸಿಫ್ ಕಲ್ಲಡ್ಕ, ಉಬೈದ್ ಕಡಂಬು, ಜುಬೈರ್ ಕನ್ಯಾನ, ಹರ್ಷದ್ ಕೋಡಪದವು, ಸಫ್ರಾಝ್ ವಿಟ್ಲ ಮುಂತಾದವರು ಉಪ ಸ್ಥಿತರಿದ್ದರು.
Tagged with
dk,
eshwarappa,
lnews
ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಸುಜ್ಲಾನ್ ಗಾಳಿಯಂತ್ರ ಬಿಡಿಭಾಗಗಳ ತಯಾರಿಕಾ ಘಟಕದ ನಿರ್ದಿಷ್ಟ ವಿಭಾಗಗಳು ಜೂನ್ ೨೧ರಿಂದ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.
ಗಾಳಿಯಂತ್ರಗಳ ಬ್ಲೇಡ್ ತಯಾರಿಕಾ ಘಟಕದ ತಾತ್ಕಾಲಿಕ ಕಾರ್ಮಿಕರಿಗೆ ಒಂದು ತಿಂಗಳ ಕಡ್ಡಾಯ ರಜೆ ಹೇರಲಾಗಿದ್ದು, ಅವರೆಲ್ಲಾ ಸ್ಪೆಕ್ಟ್ರಂ ಎಂಬ ಕಾರ್ಮಿಕ ಪೂರೈಕಾ ಕಂಪೆನಿಗೆ ಸೇರಿದವರಾಗಿದ್ದಾರೆ. ಒಂದು ಮೂಲದ ಪ್ರಕಾರ ಸುಜ್ಲಾನ್ ಉತ್ಪನ್ನಗಳಿಗೆ ಬೇಕಾಗುವ ಕಚ್ಚಾವಸ್ತುಗಳ ಪೂರೈಕೆಯಲ್ಲಾಗುತ್ತಿರುವ ವಿಳಂಬ ನಿಲುಗಡೆಗೆ ಕಾರಣ ಎಂದು ಹೇಳಲಾಗಿದ್ದರೂ ಕಂಪೆನಿಯ ಉತ್ಪನ್ನಗಳಿಗೆ ಮಾರಾಟ ಕಡಿಮೆಯಾಗಿ ಕಂಪೆನಿಯೊಳಗೇ ದಾಸ್ತಾನಿ ರುವುದು ಮತ್ತೊಂದು ಕಾರಣವೆನ್ನಲಾಗಿದೆ.
ಸುಜ್ಲಾನ್‌ನ ಉಪಗುತ್ತಿಗೆದಾರರಿಗೆ ಕಳೆದೊಂದು ತಿಂಗಳಿಂದ ಬಿಲ್ ಪಾವತಿ ಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ, ಉಪ ಗುತ್ತಿಗೆದಾರರು ಪಡುಬಿದ್ರಿ ಪರಿಸರ ಮತ್ತು ಉಡುಪಿಯ ರಖಂ ವ್ಯಾಪಾರಿಗಳಲ್ಲಿ ಮಾಡಿದ್ದ ವ್ಯವಹಾರವೂ ಅಡಚಣೆಗೀಡಾದ ಬಗ್ಗೆ ವರದಿಯಾಗಿದೆ. ಆಂಶಿಕ ನಿಲುಗಡೆಯ ಬಗ್ಗೆ ಪತ್ರಿಕೆ ಸುಜ್ಲಾನ್‌ನ ಮಾತೃ ಸಂಸ್ಥೆ ಸಿನೆಫ್ರಾದ ಮುಖ್ಯಸ್ಥ ಅಶೋಕ್ ಶೆಟ್ಟಿಯವರನ್ನು ಸಂಪರ್ಕಿಸಿದಾಗ, ಇದು ನಮಗೆ ಸಂಬಂಧಿಸಿದಲ್ಲ, ಸಿನೆಫ್ರಾ ಬೇರೆ, ಸುಜ್ಲಾನ್ ಬೇರೆ ಎಂಬ ಉತ್ತರ ನೀಡಿದ್ದಾರೆ. ಸುಜ್ಲಾನ್ ಈ ಭಾಗದಲ್ಲಿ ಅವಶ್ಯಕತೆಗಿಂತ ನೂರಾರು ಪಟ್ಟು ಅಧಿಕ ಜಮೀನಿನಲ್ಲಿ ಅಸ್ತಿತ್ವಕ್ಕೆ ಬರುವಲ್ಲಿ ಅಶೋಕ್ ಶೆಟ್ಟಿ ಪ್ರಮುಖ ಪಾತ್ರವಹಿಸಿದ್ದಾರೆಂಬುವುದಿಲ್ಲಿ ಗಮನಾರ್ಹವಾಗಿದೆ.
Tagged with
lnews,
suzlon,
udupi
ಬೆಂಗಳೂರು: ಪಕ್ಷದ ಶಾಸಕಾಂಗ ಸಭೆ ಕರೆಯಲು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ನಿರಾಕರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ಮತ್ತು ಅವರ ಬೆಂಬಲಿಗ ಸಚಿವ ಶಾಸಕರು, ಶಾಸಕಾಂಗ ಸಭೆ ಕರೆಯಲು ಮಾಡಿದ ಒತ್ತಡವನ್ನು ನಯವಾಗಿ ತಳ್ಳಿ ಹಾಕಿರುವ ಮುಖ್ಯಮಂತ್ರಿಯ ವರು ವರಿಷ್ಠರ ಅನುಮತಿ ಇಲ್ಲದೆ ಸಭೆ ಕರೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ರಾಜ್ಯದಲ್ಲಿ ತೀವ್ರ ಬರಗಾಲ ತೋರಿದ್ದು, ಅಧಿಕಾರಿಗಳು ಸ್ಪಂದಿಸದೇ ಇರುವ ಕಾರಣ ಈ ಸಂಬಂಧ ಚರ್ಚೆ ನಡೆಸಲು ತುರ್ತು ಶಾಸಕಾಂಗ ಸಭೆ ಕರೆಯುವಂತೆ ಮತ್ತೊಮ್ಮೆ ಆಗ್ರಹಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಶಾಸಕಾಂಗ ಸಭೆ ಕರೆದು ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ.
ತಾವು ಅಧಿಕಾರ ವಹಿಸಿಕೊಂಡ ನಂತರ ಶಾಸಕಾಂಗ ಸಭೆ ಕರೆದಿಲ್ಲ ಎನ್ನುವುದು ಊಹಾಪೋಹಾ. ಈಗ ಮತ್ತೆ ಸಭೆ ಕರೆಯಬೇಕೆಂದರೆ ವರಿಷ್ಠರ ಅನುಮತಿ ಅತ್ಯಗತ್ಯ. ಸ್ವತಂತ್ರ್ಯವಾಗಿ ಈ ಸಂಬಂಧ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಮನೆಯಲ್ಲಿ ಮದುವೆ ಇದ್ದು ಅವರು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿದ್ದಾರೆ. ಹೀಗಾಗಿ ವರಿಷ್ಟರ ಜತೆ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ಹೈಕಮಾಂಡ್ ಮುಖಂಡರು ಬಿಡುವಾದ ಬಳಿಕ ಚರ್ಚಿಸಿ ಸೂಕ್ತ ತೀರ್ಮಾನ ಮಾಡುವುದಾಗಿ ತಿಳಿಸಿದರು. ಇಂತಹ ಸ್ಥಾನದಲ್ಲಿ ಕುಳಿತು ಹಾದಿ-ಬೀದಿಲಿ ಮಾತಾಡೋರಿಗೆಲ್ಲ ಉತ್ತರ ಕೊಡೋ ಅಗತ್ಯ ನನಗಿಲ್ಲ. ನನ್ನ ಘನತೆಗೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿ ದ್ದೇನೆ. ತಮ್ಮ ವಿರುದ್ಧ ಬೀದಿಯಲ್ಲಿ ನಿಂತು ಮಾತನಾಡೋರಿಗೆ ನೈತಿಕತೆಯೇ ಇಲ್ಲ. ಅಂಥಹವರ ಹೇಳಿಕೆಗೆ ತಲೆ ಕೆಡಸಿಕೊಳ್ಳುವಷ್ಟು ಸಮಯವೂ ತಮಗಿಲ್ಲ. ಮುಖ್ಯಮಂತ್ರಿಯಾಗಿ ತಾವು ಅಂತಹವರ ಮಟ್ಟಿಗೆ ಇಳಿದು ಪ್ರತಿಕ್ರಿಯೆ ನೀಡುವುದು ಉಚಿತವಲ್ಲ ಎಂದರು.
Tagged with
dvs,
snews
ಮೂಡುಬಿದಿರೆ: ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿರುವು ದನ್ನು ಮೂಡುಬಿದಿರೆ ಪುರಸಭಾಧಿಕಾರಿ ಗಳು ಬುಧವಾರ ತೆರವುಗೊಳಿಸಿದ್ದಾರೆ.
ಸುರತ್ಕಲ್‌ನ ನಿವಾಸಿ ಜೋಹರಾ ಎಂಬವರು ಕೋಟೆಬಾಗಿಲು ಶೇಡಿಗು ರಿಯ ಆಶ್ರಯ ಕಾಲೋನಿಯಲ್ಲಿ ಅನ ಧಿಕೃ\ತವಾಗಿ ಮನೆಯೊಂದನ್ನು ನಿರ್ಮಿಸಿದ್ದರು. ಇದಕ್ಕೆ ಸ್ಥಳೀಯರೇ ವಿರೋಧಿಸಿ ಮೂಡುಬಿದಿರೆ ತಹಶೀಲಾ ರ್ ಮುರಳೀಧರ್ ಅವರಿಗೆ ದೂರು ನೀಡಿದ್ದರು.
ಸರಕಾರಿ ಜಾಗವನ್ನು ನಿವೇಶನಕ್ಕಾಗಿ ಪುರಸಭೆಗೆ ಹಸ್ತಾಂತರಿಸಿದರುವ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾದಿ ಕಾರಿ ರಾಯಪ್ಪ ಅವರು ಮನೆ ನಿರ್ಮಿಸಿ ರುವ ಜೋಹಾರಾ ಅವರಿಗೆ ನೋಟಿಸ್ ನೀಡಿದ್ದರು. ಆದರೆ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಕಂದಾಯ ಇಲಾಖಾಧಿP ರಿಗಳ ಸೂಚನೆಯಂತೆ ಪುರಸಭಾಧಿ ಕಾರಿಗಳು ಪೋಲಿಸರ ಸಹಕಾರ ದೊಂದಿಗೆ ತೆರವು ಗೊಳಿಸಿದ್ದಾರೆ. ಸ್ಥಳದಲ್ಲಿ ಪುರಸಭಾ ಕಂದಾಯ ನಿರೀಕ್ಷಕ ಧನಂಜಯ, ಕಂದಾಯ ನಿರೀಕ್ಷಕ ಎಂ.ಬಿ.ಬ್ಯಾರಿ ಈ ಸಂದರ್ಭದಲ್ಲಿ ಹಾಜರಿದ್ದರು.
Tagged with
dk,
lnews
ಕಾರ್ಕಳ: ಪುರಸಭೆಯ ದುರಾಡಳಿತ ವಿರುದ್ಧ ಮಾಜಿಶಾಸಕ ವಿ.ಸುನಿಲ್‌ಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಗಳಿದು, ರಸ್ತೆ ದುರಸ್ಥಿ ಕಾಮಗಾರಿ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳು ದುಸ್ಥಿತಿಯಲ್ಲಿದ್ದು, ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಅಡಚಣೆ ಉಂಟಾಗಿದ್ದರೂ ಪುರಸಭಾ ಆಡಳಿತ ವರ್ಗವು ಸಕರಾತ್ಮಕವಾಗಿ ಸ್ವಂದಿಸದೇ ಇದ್ದುದರಿಂದಾಗಿ ಬಿಜೆಪಿ ಕಾರ್ಯಕರ್ತರು ಈ ರೀತಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಬಂಡೀಮಠದಿಂದ ಅನಂತಶಯನ ದೇವಳ ತನಕ ರಸ್ತೆಯಲ್ಲಿರುವ ಹೊಂಡಗಳಿಗೆ ಕಲ್ಲು ತುಂಬಿಸಿ ಶ್ರಮದಾನ ನಡೆಸುವುದರೊಂದಿಗೆ ಪುರಸಭಾ ಆಡಳಿತವನ್ನು ಎಚ್ಚರಿಸುವ ಕೆಲಸಕ್ಕೆ ಕಾರ್ಯಕರ್ತರು ಮುಂದಾದರು. ಇದಕ್ಕೂ ಪುರಸಭಾ ಆಡಳಿತ ವರ್ಗ ಕಿವಿಕೊಡದಿದ್ದರೇ ಮುಂದಿನ ಪ್ರತಿ ತಿಂಗಳುಗಳಲ್ಲಿ ಇದೇ ತರದಲ್ಲಿ ಹೋರಾಟ ನಡೆಸಲಾಗುವುದೆಂದು ಮಾಜಿಶಾಸಕ ವಿ.ಸುನಿಲ್‌ಕುಮಾರ್ ಅವರು ತಿಳಿಸಿದ್ದಾರೆ.
Tagged with
lnews,
udupi
ಮಂಗಳೂರು: ಜಿಲ್ಲೆಯಲ್ಲಿ ಸುರಿ ಯುತ್ತಿರುವ ಧಾರಾಕಾರ ಮಳೆಗೆ ಕೃಷಿ ಭೂಮಿಗಳು ನಾಶವಾಗುತ್ತಿದ್ದು, ಅಲ್ಲದೆ ಅಡುಗೆ ಅನಿಲ, ಪಡಿತರ ಚೀಟಿ, ಹಕ್ಕು ಪತ್ರ ಕುಡಿಯುವ ನೀರು ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದು, ತುರ್ತಾಗಿ ಕೆಡಿಪಿ ಸಭೆಯನ್ನು ಕರೆಯಬೇಕೆಂದು ಶಾಸಕ ಯು.ಟಿ. ಖಾದರ್ ಅವರು ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲಾ ಮಟ್ಟದ ಕೆಡಿಪಿ ಸಭೆ ಕರೆಯದೆ ಐದು ತಿಂಗಳುಗಳೇ ಕಳೆದಿ ದ್ದು, ವಾಸದ ಮನೆಗಳು, ತಡೆಗೋಡೆ ಗಳು ಕುಸಿದು ಬಿದ್ದು, ತೀವ್ರ ಹಾನಿ ಸಂಭವಿಸುತ್ತಿದೆ. ಅಲ್ಲದೆ ಕಡಲಕೊರೆತ ಸಮಸ್ಯೆಯೂ ತೀವ್ರವಾಗಿರುತ್ತದೆ. ಇದನ್ನೆಲ್ಲ ದೀರ್ಘವಾಗಿ ಚರ್ಚಿಸಲು ಜಿಲ್ಲಾ ಮಟ್ಟದ ಕೆಡಿಪಿ ಸಭೆಯನ್ನು ತಮ್ಮ ಅಧ್ಯಕ್ಷತೆಯಲ್ಲಿ ಕರೆಯಬೇಕೆಂದು ಮುಖ್ಯಮಂತ್ರಿಯವರನ್ನು ಖಾದರ್ ಒತ್ತಾಯಿಸಿದ್ದಾರೆ. ಇದು ಸಾಧ್ಯವಾ ಗದಿದ್ದಲ್ಲಿ ಬೇರೆ ಸಚಿವರನ್ನು ಜಿಲ್ಲೆಗೆ ನಿಯೋಜನೆ ಮಾಡಿ ಕೂಡಲೇ ಕೆಡಿಪಿ ಸಭೆಯನ್ನು ಕರೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಯಲ್ಲಿ ತಿಳಿಸಿದ್ದಾರೆ.
Tagged with
dk,
lnews,
utkhader
ಮೂಡುಬಿದಿರೆ: ತರಕಾರಿ ಮಾರ್ಕೆಟ್‌ನ ಒಳಗಡೆಯ ರಸ್ತೆಗೆ ಪುರಸಭಾ ವತಿಯಿಂದ ಹಾಕಿದ ತೇಪೆಯು ಒಂದೇ ದಿನದಲ್ಲಿ ಎದ್ದು ಹೋಗಿ ಮಾಯ ವಾಗಿದ್ದು ಜಲ್ಲಿಯು ರಸ್ತೆಯಲ್ಲೆಲ್ಲಾ ಹರಡಿಕೊಂಡಿದೆ.
ಕಳೆದ ಹಲವು ವರ್ಷಗಳಿಂದ ಈ ರಸ್ತೆಗೆ ಡಾಮರೀಕರಣವಾಗದೆ. ಇದ್ದುದ ರಿಂದ ರಸ್ತೆಯೆಲ್ಲಾ ಕಿತ್ತು ಹೋಗಿತ್ತು. ಈ ಬಗ್ಗೆ ಮಾರ್ಕೆಟ್ ಒಳಗಿನ ವ್ಯಾಪಾರಿಗಳು ಪುರಸಭೆಗೆ ದೂರು ನೀಡಿದ್ದರು. ಇದಕ್ಕೆ ರಾತ್ರೋ ರಾತ್ರಿ ರಸ್ತೆಗೆ ತೇಪೆ ಹಾಕುವ ಕಾರ್ಯವನ್ನು ಕೈಗೊಂಡಿದ್ದರು. ಆದರೆ ರಾತ್ರಿ ಜೋರಾ ಗಿ ಸುರಿದ ಮಳೆಯಿಂದಾಗಿ ರಸ್ತೆಗೆ ಹಾಕಿದ ತೇಪೆಯು ಎಲ್ಲಾ ಎದ್ದು ಹೋಗಿದ್ದು ಜಲ್ಲಿ ಮಾತ್ರ ಮೇಲ್ಗಡೆ ಕಾಣುತ್ತಿದೆ. ಇದರಿಂದಾಗಿ ಎದ್ದು ಹೋಗಿರುವ ಜಲ್ಲಿಯ ಮೇಲೆ ನಡೆದಾಡಿಕೊಂಡು ಹೋಗುವ ಜನರಿಗೆ ತುಂಬಾ ತೊಂದರೆ ಅನುಭವಿಸುವಂತಾಗಿದೆ.
Tagged with
dk,
lnews,
road
ಬೆಂಗಳೂರು: ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಗುರಿಯಾಗಿ ಬಂಧನದ ಭೀತಿಯನ್ನೆದು ರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ನಿರೀಕ್ಷಣಾ ಜಾಮೀನಿಗೆ ಸಂಬಂಧಿಸಿದಂತೆ ಹೈಕೋರ್ಟ್ ಇಂದು ತೀರ್ಪು ನೀಡಲಿದೆ. ಯಡಿಯೂರಪ್ಪ, ಅವರ ಮಕ್ಕಳಾದ ರಾಘವೇಂದ್ರ,ವಿಜೇಂದ್ರ ಹಾಗೂ ಅಳಿಯ ಸೋಹನ್‌ಕುಮಾರ್ ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ಯ ವಿಚಾರಣೆಯನ್ನು ಮಂಗ ವಾರ ಪೂರ್ಣಗೊಳಿಸಿದ್ದ ನ್ಯಾಯಾ ಲಯ ನಿನ್ನೆ ತೀರ್ಪು ನೀಡುವುದಾಗಿ ಪ್ರಕಟಿಸಿ ತ್ತು. ಆದರೆ ನಿನ್ನೆ ತೀರ್ಪು ನೀಡಬೇಕಿದ್ದ ನ್ಯಾಯಾಲಯ ಈ ಪ್ರಕ್ರಿಯೆಯನ್ನು ಇವತ್ತಿಗೆ ಮುಂದೂಡಿದ್ದು, ಆ ಮೂಲಕ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರಿಗೆ ಜೇಲಾ?ಬೇಲಾ?ಎಂಬ ಪ್ರಶ್ನೆಗೆ ಉತ್ತರ ಪಡೆಯಲು ಇನ್ನೊಂದು ದಿನ ಕಾಯಬೇಕಿದೆ.
Tagged with
snews,
yeddi
ಉಡುಪಿ: ಕೇಂದ್ರ ಸರ್ಕಾರದ ಆರ್ಥಿಕ ನೀತಿ ಹಾಗೂ ತಪ್ಪು ರಾಜಕೀಯ ನಿರ್ಧಾರಗಳನ್ನು ವಿರೋಧಿಸಿ ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ವತಿಯಿಂದ ನಾಳೆ (ಜೂ.೨೨) ಜೈಲ್ ಭರೋ ಕಾರ‍್ಯಕ್ರಮ ನಡೆಯಲಿದೆ.
ಯುಪಿಎ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನರನ್ನು ದುಸ್ತರಗೊಳಿಸಿದೆ. ಬೆಲೆ ಏರಿಕೆ ಅತೋಟಿಗೆ ತರುವಲ್ಲಿ ಯುಪಿಸಿ ಸರ್ಕಾರ ವಿಫಲವಾಗಿದ್ದು, ಇದನ್ನು ವಿರೋಧಿಸಿ ಉಡುಪಿ ತಾಲೂಕು ಕಚೇರಿ ವೃತ್ತದ ಬಳಿ ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ರಸ್ತೆ ತಡೆ ನಡೆಸಿ ಜೈಲ್ ಭರೋ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಕಾಪು, ಕಾರ್ಕಳ, ಕುಂದಾಪುರ, ಬೈಂದೂರುನಲ್ಲಿ ಪ್ರತಿಭಟನೆ ನಡೆಸಲಿದೆ.
Tagged with
bjp,
lnews,
udupi

ಬೆಂಗಳೂರು: ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ಕೊಡುವ ಅಗತ್ಯವಿಲ್ಲ ಎಂದು ಬಿಜೆಪಿಯ ಹೈಕಮಾಂಡ್ ಸದಾನಂದ ಗೌಡರಿಗೆ ಸಂದೇಶ ರವಾನೆ ಮಾಡಿದೆ. ಸದ್ಯಕ್ಕೆ ನಾಯಕತ್ವದ ಬದಲಾವಣೆಯ ವಿಚಾರ ತಮ್ಮ ಮುಂದಿಲ್ಲ. ಉತ್ತಮ ಆಡಳಿತ ಕೊಡುವ ನಿಟ್ಟಿನಲ್ಲಿ ಸಾಗುವಂತೆ ಸಲಹೆ ಮಾಡಿದ್ದಾರೆ. ಮುಂಬರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿ. ನೀವೇ ಯಾವುದೇ ಒತ್ತಡಕ್ಕೆ ಮಣಿಯುವ ಅಗತ್ಯ ಇಲ್ಲ. ಕರ್ನಾಟಕದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡುವ ಉದ್ದೇಶ ನಮಗಿಲ್ಲ, ಮುಂದಿನ ದಿನಗಳಲ್ಲಿ ಕೆಲವು ರಾಜಕೀಯ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳುತ್ತೇವೆ. ಒಂದು ವರ್ಗ ಸದಾಕಾಲ ಇಂತಹ ಒತ್ತಡಗಳನ್ನು ಮಾಡುತ್ತಲೇ ಇರುತ್ತದೆ. ಉಳಿದ ಅಲ್ಪಾವಧಿಯಲ್ಲಿ ಅನಗತ್ಯವಾಗಿ ನಾವು ಯಾರ ಮೇಲೂ ಕ್ರಮ ಜರುಗಿಸಲು ಸಾಧ್ಯವಿಲ್ಲ. ವ್ಯಕ್ತಿಗಿಂತ ಸರಕಾರ ಮುಖ್ಯ. ಕರ್ನಾಟಕದಲ್ಲಿ ಬಿಜೆಪಿ ತನ್ನ ಅವಧಿಯನ್ನು ಪೂರ್ಣಗೊಳಿಸಬೇಕು, ಈ ನಿಟ್ಟಿನಲ್ಲಿ ಮುನ್ನಡೆಯಿರಿ. ಅಭಿವೃದ್ದಿಗೆ ಒತ್ತು ಕೊಟ್ಟು ಸಂಘಟನೆಯನ್ನು ಬಲಗೊಳಸಿ, ಎಲ್ಲರ ವಿಶ್ವಾಸ ಪಡೆಯಿರಿ ಎಂದು ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಸದಾನಂದ ಗೌಡರಿಗೆ ತಿಳಿಸಿದ್ದಾರೆ. ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಅರುಣ್ ಜೇಟ್ಲಿ ಗೌಡರನ್ನು ಸಂಪರ್ಕಿಸಿ ಈ ಸಲಹೆ ಮಾಡಿದ್ದಾರೆ. ಪಕ್ಷದ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅವರು ಯಡಿಯೂರಪ್ಪ ವರ್ತನೆಯ ಬಗ್ಗೆ ಮತ್ತೆ ಸಿಡಿಮಿಡಿಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಯಡಿಯೂರಪ್ಪ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಸರಕಾರ ಬಿದ್ದು ಹೋದರೂ ಸೈ, ನಾಯಕತ್ವ ಬದಲಾವಣೆ ಬೇಡ ಎಂದು ದೆಹಲಿ ಮತ್ತು ಕರ್ನಾಟಕದ ನಾಯಕರುಗಳಿಗೆ ಸುಷ್ಮಾ ಸಂದೇಶ ನೀಡಿದ್ದಾರೆ.
Tagged with
dvs,
snews
ಮಂಗಳೂರು: ಮೇಯರ್ ಆಗು ವವರು ಎರಡೂವರೆ ವರ್ಷಗಳ ಕಾಲ ಆರಾಮವಾಗಿ ಮೇಯುವ ಅವಕಾಶವನ್ನು ತೆರೆದುಕೊಡುವ ಸೂಚನೆಯನ್ನು ರಾಜ್ಯ ಸರಕಾರ ನೀಡಿದೆ. ಮೇಯರ್, ಉಪ ಮೆಯರ್ ಅಧಿಕಾರವನ್ನು ಹೆಚ್ಚಿಸಲು ಸರಕಾರ ಚರ್ಚಿಸುತ್ತಿದ್ದು, ಅವರ ಅಧಿಕಾರ ವಧಿಯನ್ನು ಇಪ್ಪತ್ತು ಇಲ್ಲವೇ ಮುವತ್ತು ತಿಂಗಳುಗಳಿಗೆ ಹೆಚ್ಚಿಸಲು ಚಿಂತಿಸಲಾಗುತ್ತಿದೆ ಎಂದು ನಗರಾಭಿವೃದ್ದಿ ಸಚಿವ ತಿಳಿಸಿದ್ದಾರೆ.
ಮೇಯರ್ ಗಿರಿಯಲ್ಲಿ ಮೆರೆಯಲು ಈಗಿರುವ ಅವಧಿ ಒಂದು ವರ್ಷ ಮಾತ್ರ. ದ.ಕ. ಜಿಲ್ಲೆಯ ಮಟ್ಟಿಗೆ ಹೇಳವುದಾದರೆ ಆರು ತಿಂಗಳು ಮಳೆಗಾಲದ ಹೋಯ್ದಾಟ ದಲ್ಲಿ ಕಳೆದರೆ ಮೇಯಲು ಸಿಗುವುದು ಇನ್ನು ಆರು ತಿಂಗಳು ಮಾತ್ರ. ಕೇವಲ ಆರು ತಿಂಗ ಳಲ್ಲಿ ಅಭಿವೃದ್ಧಿ ಕಾರ್ಯ (ಯಾರದು ಎಂದು ಕೇಳಬೇಡಿ)ಸಾಧ್ಯವಿಲ್ಲ ಎಂದು ಹಿಂದೆ ಹಲವರು ನ್ಯಾಯಾಲಯದ ಮೆಟ್ಟಲೇರಿ ದ್ದರು. ಮೇಯರ್ ಅಧಿಕಾರಾವಧಿ ಕನಿಷ್ಠ ಎರಡು ವರ್ಷವಾದರೂ ಇರಬೇಕು ಎಂದು ದಿವಾಕರ್ ಮಂಗಳೂರು ಮನಪಾ ಮೇಯರ್ ಆಗಿದ್ದ ಅವಧಿಯಲ್ಲಿ ನ್ಯಾಯಾ ಲಯದಲ್ಲಿ ಮೆಟ್ಟಲೇರಿದ್ದರು. ದಿವಾಕರ್ ಎರಡು ವರ್ಷ ಮೇಯರ್ ಆಗುವ ಕನಸು ಕಾಣುತ್ತಲೇ ಒಂದೇ ವರ್ಷದಲ್ಲಿ ಅಧಿಕಾರ ಬಿಟ್ಟೆದ್ದಿದ್ದರು.
ಒಂದು ವರ್ಷ ಸರಿಯಾದ ಯೋಜನೆ ರೂಪಿಸಲೂ ಸಾಕಾಗದು. ಹೀಗಿರುವಾಗ ರೂಪಿತ ಯೋಜನೆ ಕಾರ್ಯರೂಪಕ್ಕೆ ತರು ವುದು ಯಾವಾಗ ಯಾರೋ ಮೇಯರ್ ಆಗಿದ್ದ ಕಾಲದಲ್ಲಿ ಯೋಚಿಸಿದ ಯೋಜನೆ ಇನ್ಯಾರೋ ಮೇಯರ್ ಆಗುವಾಗ ಕಾರ್ಯರೂಪಕ್ಕೆ ಬರುತ್ತದೆ. ಯೋಜನೆ ಚೆನ್ನಾಗಿದೆ ಎಂತಾದರೆ ಇದು ತಾನು ಮಾಡಿದ್ದು ಎಂದು ಕ್ರೆಡಿಟ್ ಪಡೆಯಲು ಹಾಲಿ ಮತ್ತು ಮಾಜಿಗಳು ಪೈಪೋಟಿಗಿಳಿಯು ವುದೂ ಇದೆ.
ಇದೆಲ್ಲ ರಾಜ್ಯ ಸರಕಾರಕ್ಕೆ ಮನವರಿ ಕೆಯಾಗಿರಬೇಕು. ಆದುದರಿಂದಲೇ ಮೇಯರ್ ಅಧಿಕಾರ ಅವಧಿಯನ್ನು ಇಪ್ಪತ್ತು ಇಲ್ಲವೇ ಮೂವತ್ತು ತಿಂಗಳಿಗೆ ಹೆಚ್ಚಿಸಲು ಚಿಂತನೆ ನಡೆಸಿದೆ. ಇಪ್ಪತ್ತು ತಿಂಗಳಾದರೆ ಐದು ವರ್ಷಗಳ ಒಂದು ಪಕ್ಷದ ಆಡಳಿ ತದಲ್ಲಿ ಮೂವರಿಗೆ ಮೇಯರ್ ಆಗುವ ಅವಕಾಶ ಇದೆ. ಮೂವತ್ತು ತಿಂಗಳಾದರೆ ಇಬ್ಬರಿಗೆ ಮಾತ್ರ ಅವಕಾಶ.
ಮೇಯರ್ ಅಧಿಕಾರ ಅವಧಿ ಈಗಿರುವುದು ಒಂದು ವರ್ಷ ಮಾತ್ರ. ಇದರಿಂದ ಮೇಯರ್‌ಗಳ ಸಂಖ್ಯೆ ಏರುತ್ತಲೆ ಸಾಗಿದೆ. ಈಗಿರುವ ಒಂದು ವರ್ಷದ ಮೇಯರ್‌ಗಿರಿ ಕೇವಲ ಸಭೆ ನಡೆಸುವುದಕ್ಕಷ್ಟೇ ಸೀಮಿತವಾಗಿದೆ ಎಂಬ ನಂಬಿಕೆ ಇದೆ. ಅವರ ಅಧಿಕಾರ ಅವಧಿ ಮತ್ತು ಅಧಿಕಾರ ಹೆಚ್ಚಿಸುವ ಆಗ್ರಹವಿದೆ. ಅದಕ್ಕೆ ಪೂರಕವಾಗಿ ಸರಕಾರ ಸ್ಪಂದಿಸುವ ಲಕ್ಷಣ ಗೋಚರಿಸುತ್ತಿದೆ. ಮೇಯರ್ ನೇರವಾಗಿ ಜನರಿಂದಲೇ ಆಯ್ಕೆ ಆಗಬೇಕು ಎಂಬ ಒತ್ತಡ ಇದೆ. ಈಗಾಗಲೇ ಗ್ರಾಮಪಂಚಾಯತ್ ಅಧ್ಯಕ್ಷರನ್ನು ನೇರವಾಗಿ ಜನರೇ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯ ಹೊತ್ತಿಗೆ ಇದು ಜಾರಿಗೆ ಬಂದರೂ ಬರಬಹುದು. ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ್ದಾದರೆ ಮೇಯರ್ ಆಯ್ಕೆಯನ್ನು ನೇರವಾಗಿ ಜನರೇ ಮಾಡುವ ಅವಕಾಶ ಲಭಿಸಲೂ ಬಹುದು.
Tagged with
dk,
lnews,
mcc
ಮಂಗಳೂರು: ಮೂರು ದಿನಗಳ ಹಿಂದಷ್ಟೇ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ತಲೆ ಎತ್ತಿದ್ದ ಅಟೋರಿಕ್ಷಾ ಪಾರ್ಕನ್ನು ನಿನ್ನೆ ಪೊಲೀಸರು ತೆರವು ಗೊಳಿಸಿದ್ದು, ಈ ಕ್ರಮವನ್ನು ಖಂಡಿಸಿ ಅಟೋರಿಕ್ಷಾ ಚಾಲಕರು ಉಳ್ಳಾಲ ಠಾಣೆಗೆ ಮುತ್ತಿಗೆ ಹಾಕಿದರು.
ರವಿವಾರದಂದು ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ನೂತನ ಅಟೋ ರಿಕ್ಷಾ ಪಾರ್ಕ್ ಆರಂಭಗೊಂಡಿತ್ತು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕೌನ್ಸಿಲರ್‌ಗಳು ಸೋಮವಾರ ನಡೆದ ಉಳ್ಳಾಲ ಪುರಸಭೆಯ ಸಾಮಾನ್ಯ ಸಭೆ ಯಲ್ಲಿ ಗದ್ದಲ ಎಬ್ಬಿಸಿದ್ದರಲ್ಲದೆ ಅನಧಿ ಕೃತ ಪಾರ್ಕ್ ತೆರವುಗೊಳಿಸುವಂತೆ ಒತ್ತಾಯಿಸಿ ಪಾರ್ಕ್ ಹಿಂದಿರುವವರ ವಿರುದ್ಧ ದೂರು ನೀಡುವಂತೆ ಆಗ್ರಹಿಸಿ ದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಬೆಳಗ್ಗೆ ೯.೩೦ರ ವೇಳೆಗೆ ತೊಕ್ಕೊಟ್ಟಿಗೆ ಧಾವಿ ಸಿದ ಉಳ್ಳಾಲ ಪೊಲೀಸರು ಪಾರ್ಕ್ ತೆರವುಗೊಳಿಸಿದರು.
ಇದರಿಂದ ಅಸಮಾಧಾನಗೊಂಡ ರಿಕ್ಷಾ ಚಾಲಕರು ಉಳ್ಳಾಲ ಠಾಣೆಗೆ ಮುತ್ತಿಗೆ ಹಾಕಿದರು.
Tagged with
auto,
dk,
lnews
ಮಂಗಳೂರು: ವಿದ್ಯಾರ್ಥಿಗಳ ಡೊನೇಶನ್ ಮೇಲೆಯೇ ಕಣ್ಣಿಟ್ಟಿರುವ ಅಲೋಶಿಯಸ್ ಪಿಯು ಕಾಲೇಜಿಗೆ ಭ್ರಷ್ಟಾಚಾರದ ವಿರುದ್ಧ ಬೆಂಬಲ ನೀಡಿ ದರೆ ಅದು ತಪ್ಪಾಗಿ ಕಾಣುತ್ತದೆ. ವಿವಿ ಯಿಂದ ಅನುಮತಿ ಪಡೆಯದೇ ವಿವಿಧ ಕೋರ್ಸು ಆರಂಭಿಸುತ್ತಿರುವ ಕಾಲೇಜು ಮೊದಲು ತನ್ನ ನಡತೆ ತಿದ್ದ ಬೇಕಾಗಿದೆ ಎಂದು ಎಬಿವಿಪಿ ಗುಡುಗಿದೆ.
ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಅಣ್ಣಾ ಹಜಾರೆಯವರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ಎಬಿವಿಪಿ ನಗರ ಕಾರ್ಯದರ್ಶಿಗೆ ನಡತೆ ಸರಿಯಿಲ್ಲ ಎಂಬ ಸರ್ಟಿಫಿಕೇಟ್ ನೀಡಿ ರುವುದನ್ನು ಖಂಡಿಸಿ, ಎಬಿವಿಪಿ ನಿನ್ನೆ ಸಂತ ಅಲೋಶಿಯಸ್ ಪಿಯು ಕಾಲೇಜಿನ ಮುಂದೆ ನಡೆಸಿದ ಪ್ರತಿಭಟನೆ ವೇಳೆ ಈ ಆರೋಪ ಮಾಡಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದಾಗ ಅವರಿಗೆ ದೇಶದಾದ್ಯಂತ ಬೆಂಬಲ ವ್ಯಕ್ತವಾಗಿತ್ತು. ಅದರಂತೆ ಮಂಗಳೂರಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳೂ ಭ್ರಷ್ಟಾಚಾ ರದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಬೆಂಬಲ ನೀಡಿದ್ದರು. ಸಂತ ಅಲೋಶಿಯಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಈ ಹೋರಾಟ ನಡೆಸಿ ದ್ದರು. ಇದರ ನೇತೃತ್ವವನ್ನು ಎಬಿವಿಪಿ ನಗರ ಕಾರ್ಯದರ್ಶಿ ಬಿಂದುಮಾಧವ್ ವಹಿಸಿಕೊಂಡಿದ್ದರು. ಅಂದಿನಿಂದ ಪರೀಕ್ಷೆ ಮುಗಿಯುವವರೆಗೆ ಸುಮ್ಮನಿದ್ದ ಕಾಲೇಜು, ಇದೀಗ ಬಿಂದು ಮಾಧವ್ ಉತ್ತಮ ಅಂಕದೊಂದಿಗೆ ಕಾಲೇಜು ಬಿಡುವ ವೇಳೆ ಆತನ ನಡತೆ ಸರ್ಟಿಫಿಕೇಟಿನಲ್ಲಿ ನಡತೆ ಸರಿಯಿಲ್ಲ ಎಂದು ದಾಖಲಿಸುವ ಮೂಲಕ ದ್ರೋಹ ಬಗೆದಿದೆ ಎಂದು ಎಬಿವಿಪಿ ದೂರಿದೆ. ಹೀಗಾಗಿ ವಿದ್ಯಾರ್ಥಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಎಬಿವಿಪಿ ಅವಿಭಾಜಿತ ದ.ಕ ಜಿಲ್ಲೆಯಾದ್ಯಂತ ವಿವಿಧ ಕಾಲೇಜು ಮುಂದೆ ಪ್ರತಿಭಟನೆ ನಡೆಸಿತ್ತು. ನಗರದ ಸಂತ ಅಲೋಶಿ ಯಸ್ ಕಾಲೇಜು ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳಿಗೆ ಎಬಿವಿಪಿ ಮನವಿಯನ್ನೂ ನೀಡಿತ್ತು. ಇದರೊಂದಿಗೆ ಸಂತ ಅಲೋಶಿಯಸ್ ಕಾಲೇಜು ವಿವಿಯಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆಯದೇ ವಿವಿಧ ಕೋರ್ಸುಗಳನ್ನು ಆರಂಭಿಸು ತ್ತಿದ್ದಾರೆ. ಇದರ ಬಗ್ಗೆ ಮಾಹಿತಿ ಇಲ್ಲದ ವಿದ್ಯಾರ್ಥಿಗಳು ಸಾಲ ಮಾಡಿ ಈ ಕೋರ್ಸಿಗೆ ಸೇರುತ್ತಿದ್ದು ಅಂತಿಮವಾಗಿ ಈ ಕೋರ್ಸಿಗೆ ಮಾನ್ಯತೆ ಇಲ್ಲದಂತಾಗು ತ್ತದೆ ಆದರಿಂದ ಈ ಬಗ್ಗೆ ಗಮನ ಹರಿಸುವಂತೆ ಎಬಿವಿಪಿ ಮನವಿ ಮಾಡಿದೆ.
Tagged with
abvp,
dk,
lnews
ವಿಟ್ಲ: ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರುದ್ಧ ನಡೆಸಿದ ಹೋರಾಟಕ್ಕೆ ವಿದ್ಯಾರ್ಥಿಯೊಬ್ಬ ಬೆಂಬಲ ನೀಡಿದ್ದಾನೆ ಎಂಬ ಉದ್ದೇಶದಿಂದ ವಿದ್ಯಾರ್ಥಿಯ ವರ್ಗಾವಣೆ ಮತ್ತು ಗುಣನಡತೆ ಪತ್ರದಲ್ಲಿ ಮಂಗಳೂರು ಅಲೋಶಿಯಸ್ ಕಾಲೇಜು ಪ್ರಾಂಶುಪಾಲರು ಋಣಾತ್ಮಕವಾಗಿ ಬರೆದಿದ್ದಾರೆ ಎಂದು ಆರೋಪಿಸಿ ಎಬಿವಿಪಿ ವಿದ್ಯಾರ್ಥಿಗಳು ವಿಟ್ಲದಲ್ಲಿ ನಿನ್ನೆ ಪ್ರತಿಭಟಿಸಿ ನಡೆಸಿ ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯ ನೇತೃತ್ವವನ್ನು ವಿಟ್ಲ ಎಬಿವಿಪಿ ನಗರ ಕಾರ್ಯದ ಯತೀಶ್ ಎಚ್ ಅನಂತಾಡಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ರವಿ ಮಾಣಿಲ, ವಿನಯ ಆಲಂಗಾರು ವಹಿಸಿದ್ದರು.
Tagged with
abvp,
dk,
lnews
ಮುಲ್ಕಿ: ಮಂಗಳೂರು ತಾಲೂಕಿನ ಹಳೆಯಂಗಡಿ ಗ್ರಾಮ ಪಂಚಾಯತ್ ಹಗರಣಗಳ ಸುಳಿಯಲ್ಲಿ ಸದಾ ಸುದ್ದಿ ಯಲ್ಲಿದ್ದು, ಈಗ ಹೊಸ ಸೇರ್ಪಡೆ ಯಾಗಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಒಟ್ಟಾಗಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದ ಘಟನೆ ಬುಧವಾರ ನಡೆದಿದೆ.
ಮಂಗಳೂರಿನ ಸಹಾಯಕ ಕಮಿಷ ನರ್ ಡಾ. ವೆಂಕಟೇಶ್ ಎಮ್.ವಿ. ಯವರು ಸದಸ್ಯರ ಅವಿಶ್ವಾಸ ಗೊತ್ತು ವಳಿಯ ನಡಾವಳಿಯನ್ನು ಪಂಚಾ ಯತ್ ಕಚೇರಿಯಲ್ಲಿ ನಡೆಸಿದಾಗ ಒಟ್ಟು ೨೦ ಸದಸ್ಯರಲ್ಲಿ ೧೯ ಸದಸ್ಯರು ಅವಿಶ್ವಾಸವನ್ನು ಬೆಂಬಲಿಸಿದ್ದರಿಂದ ಅಧ್ಯಕ್ಷರು ತನ್ನ ಸ್ಥಾನದಿಂದ ಹೊರ ನಡೆದರು.
ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರ ವಿರುದ್ಧ ಕಳೆದ ಒಂದೂವರೆ ವರ್ಷದಿಂದ ಹೋರಾಟ ನಡೆಸುತ್ತಿದ್ದು, ಈ ಹಿಂದೆಯೂ ಅವಿಶ್ವಾಸ ನಿರ್ಣ ಯವನ್ನು ಮಂಡಿಸಲು ಪ್ರಯತ್ನ ನಡೆಸಿದ್ದರು. ಆದರೆ ಇಂದು ಸ್ವತಃ ಆಡಳಿತ ಪಕ್ಷದ ಸದಸ್ಯರೇ ಕೈ ಹಿಡಿದಾಗ ಅನಿವಾರ್ಯವಾಗಿ ಅಧ್ಯಕ್ಷರು ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಸಹಾಯಕ ಕಮಿಷನರ್ ವೆಂಕ ಟೇಶ್ ಮಾಧ್ಯಮದೊಂದಿಗೆ ಮಾತ ನಾಡಿ, ಅಧ್ಯಕ್ಷರ ಅವಿಶ್ವಾಸ ನಿರ್ಣಯಕ್ಕೆ ೧೯ ಜನರ ಬೆಂಬಲ ಇರುವುದರಿಂದ ಅಧ್ಯಕ್ಷ ಸ್ಥಾನ ಖಾಲಿಯಾಗಿದ್ದು ಅಧ್ಯಕ್ಷ ರಾಗಿದ್ದವರು ಗ್ರಾಮ ಪಂಚಾಯತ್‌ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು, ಬೀಗದ ಕೀಗಳನ್ನು, ಎಲ್ಲಾ ಸೊತ್ತುಗಳ ಸಹಿತ ಅಭಿವೃದ್ದಿ ಅಧಿಕಾರಿಗೆ ಹಸ್ತಾಂತರ ಮಾಡಬೇಕು, ಮುಂದಿನ ಒಂದು ತಿಂಗಳಿನಲ್ಲಿ ಅಧ್ಯಕ್ಷ ಹುದ್ದೆಗೆ ಆಂತರಿಕ ಮರು ಚುನಾವಣೆ ನಡೆಯಲಿದ್ದು ಇದನ್ನು ತಹಶೀಲ್ದಾರರು ನಿರ್ಧರಿಸುತ್ತಾರೆ. ಆವರಿಗೆ ಪಂಚಾಯತ್ ಆಡಳಿತ ನಡೆಸಲು ಉಪಾಧ್ಯಕ್ಷರಿಗೆ ಅಧಿಕಾರ ನೀಡಲಾಗಿದೆ ಎಂದರು.
ಕಾಂಗ್ರೆಸ್ಸಿನ ಹಾಲಿ ಸದಸ್ಯ ವಸಂತ ಬೆರ್ನಾರ್ಡ್ ಮಾಧ್ಯಮ ದೊಂದಿಗೆ ಮಾತನಾಡಿ ಕಳೆದ ಒಂದೂವರೆ ವರ್ಷದಲ್ಲಿನ ಹೋರಾಟ ಇಂದು ತಾರ್ಕಿಕ ಹಂತಕ್ಕೆ ಬಂದಿದೆ. ಮುಂದಿನ ನವೆಂಬರ್ ತಿಂಗಳಿನಲ್ಲಿ ಪ್ರಥಮ ಅವಧಿ ಕೊನೆಗೊಳ್ಳುವುದರಿಂದ ಕೇವಲ ಐದು ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬೇಕೆ ಬೇಡವೆ ಎಂದು ಪಕ್ಷದ ವರಿಷ್ಠರು ಹಾಗೂ ಶಾಸಕ ಅಭಯಚಂದ್ರ ಜೈನ್ ನಿರ್ಧರಿಸುತ್ತಾರೆ ಎಂದರು. ಪದಚ್ಯುತ ಮಹಾಬಲ ಸಾಲ್ಯಾನ್ ಬಿಜೆಪಿ ಬಿಟ್ಟು ಬಂದು ಕಾಂಗ್ರೆಸ್ ಸೇರಲು ಅವಕಾಶ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಧ್ಯಕ್ಷರಿಗೂ ಮನಸ್ಸಿಲ್ಲ...
ಪಂಚಾಯತ್‌ನಲ್ಲಿ ಒಟ್ಟು ೨೦ ಸದಸ್ಯರಿದ್ದು ೧೦ ಕಾಂಗ್ರೇಸ್ ಮತ್ತು ೯ ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಪರವಾಗಿ ಕೈ ಮೇಲೆತ್ತಿದರೆ ಸ್ವತಹ ಅಧ್ಯಕ್ಷ ಅದರ ವಿರೋಧವಾಗಿ ಕೈ ಎತ್ತದೆ ತಟಸ್ಥರಾಗಿ ಉಳಿದದ್ದು ಸಹ ವಿಶೇಷವಾಗಿತ್ತು.
Tagged with
dk,
lnews
ಕನ್ನಡದಲ್ಲಿ ಅಮೂಲ್ಯಾಳ ತಂದೆ ಯಾಗಿ ತಾನು ನಟಿಸಿದ್ದ, ತನ್ನದೇ ಸಿನಿಮಾ ‘ನಾನೂ ನನ್ನ ಕನಸು’ ಸಿನಿಮಾ ವನ್ನು ಬಾಲಿವುಡ್‌ಗೆ ಕೊಂಡೊಯ್ಯುತ್ತಿ ದ್ದಾರೆ ಖ್ಯಾತ ನಟ ಪ್ರಕಾಶ್ ರೈ ಅವರು. ಹಾಗೆ ನೋಡಿದರೆ ಪ್ರಕಾಶ್ ರೈಗೆ ಬಾಲಿವುಡ್ ಹೊಸತೇನಲ್ಲ. ಆದರೆ ನಿರ್ದೇಶಕನಾಗಿ ಅವರಿಗೆ ಬಾಲಿವುಡ್ ಹೊಸತು. ನಾನೂ ನನ್ನ ಕನಸು ಸಿನಿಮಾದಲ್ಲಿ ಪ್ರಕಾಶ್ ರೈ ಮಾಡಿದ್ದ ಪಾತ್ರವನ್ನು ಬಾಲಿವುಡ್‌ನಲ್ಲಿ ಆಮಿರ್ ಖಾನ್ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ನಾಯಕಿ ಮತ್ತು ಸಿನಿಮಾದ ಹೆಸರು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಚಿತ್ರ ವನ್ನು ಬೋನಿ ಕಪೂರ್ ನಿರ್ಮಿಸ ಲಿದ್ದು, ಚಿತ್ರಕಥೆ ಕೇಳಿ ಆಮಿರ್‌ಗೆ ತುಂಬಾ ಖುಷಿ ಯಾಗಿದ್ದು ನಟಿಸಲು ಮುಂದಾಗಿದ್ದಾರೆ.
Tagged with
cnnews
ಪಾಕಿಸ್ತಾನದ ವಿವಾದಾಸ್ಪದ ನಟಿ ವೀಣಾ ಮಲಿಕ್ ಕನ್ನಡಕ್ಕೆ ಬಂದಿರು ವುದು ಹಳೇ ಸುದ್ದಿ. ಕನ್ನಡದ ಡರ್ಟಿ ಪಿಕ್ಚರ್ ಸಿನಿಮಾದಲ್ಲಿ ಆಕೆ ಮೈಚಳಿ ಬಿಟ್ಟು ನಟಿಸಿ ಪ್ರೇಕ್ಷಕರಿಗೆ ಚಳಿ ಹತ್ತಿಸಲಿದ್ದಾಳೆ. ಈಗಾಗಲೇ ಫಟೋಸೆಶನ್ ಮುಗಿದಿದೆ. ಅದರಲ್ಲಿಯೇ ಮೈ ರೋಮಾಂಚನಗೊಳ್ಳುವಂತೆ ಪೋಸ್ ನೀಡಿದ್ದಾಳೆ. ಕೆಲವು ದಿನಗಳ ಹಿಂದೆಯೇ ಕರ್ನಾಟಕದ ಮಣ್ಣಲ್ಲಿ ಕಾಲಿರಿಸಿರುವ ಆಕೆ ಈಗ ಎಲ್ಲಿದ್ದಾಳೆ ಎಂಬ ಕುತೂಹಲ ಎಲ್ಲರಲ್ಲೂ ಇರಬಹುದು, ಇರಬೇಕಾದುದೇ.
ಆ ಕುತೂಹಲಿಗಳು ಜೂ. ೧೩ರವರೆಗೆ ಕಾಯಲೇಬೇಕು. ಯಾಕೆಂದರೆ ಅಂದು ಕಂಠೀರವ ಸ್ಟುಡಿಯೋದಲ್ಲಿ ಆಕೆಯ ವೈಭವೋಪೇತ ದರ್ಶನ ವಾಗಲಿದೆಯಂತೆ. ಅಂದು ಕನ್ನಡದ ಡರ್ಟಿ ಪಿಕ್ಚರ್ ಚಿತ್ರೀಕರಣ ಆರಂಭವಾಗಲಿದೆ. ಒಂದೇ ಹಂತದಲ್ಲಿ ಆದಷ್ಟು ಬೇಗ ಚಿತ್ರೀಕರಣ ಮುಗಿಸುವ ಯೋಚನೆ ನಿರ್ಮಾಪಕರದ್ದು.
ಅಂಬರೀಷ್, ದರ್ಶನ್, ವಿಜಯ್, ಗೃಹ ಸಚಿವ ಆರ್.ಅಶೋಕ್ ಮುಂತಾದ ಗಣ್ಯರೊಂದಿಗೆ ಆಕೆಯ ದರ್ಶನವಾಗಲಿದೆ ಎನ್ನಲಾಗುತ್ತಿದೆ.
ನಾಯಕ ಅಕ್ಷಯ್‌ನೊಂದಿಗೆ ಈಕೆ ಮೈಚಳಿ ಬಿಟ್ಟು ನಟಿಸಲಿದ್ದು, ಭಾರತ ಮತ್ತು ಶ್ರೀಲಂಕಾದ ವೀಸಾ ಹೊಂದಿರುವ ವೀಣಾಳನ್ನು ಆದಷ್ಟು ಬೇಗ ಕೆಲಸ ಮುಗಿಸಿ ಕಳುಹಿಸಬೇಕು ಎಂದು ನಿರ್ಮಾ ಪಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ಹಾಡುಗಳ ಚಿತ್ರೀಕರಣವನ್ನು ಶ್ರೀಲಂಕಾದಲ್ಲೂ ಮಾಡಬೇಕು ಎಂಬ ಆಸೆ ನಿರ್ಮಾಪಕರದ್ದು. ಏನೇ ಆದರೂ ಜೂ.೧೩ರ ಬಳಿಕ ಮಾಧ್ಯಮಗಳಲ್ಲೆಲ್ಲ ವೀಣಾ ವೈಭವದ ದರ್ಶನವಾಗಲಿರುವುದಂತೂ ಸತ್ಯ.
Tagged with
cnnews
ಈ ಹಿಂದೆ ಕನ್ನಡಕ್ಕೆ ಬಂದು ಒಂದೇ ಒಂದು ಸಿನಿಮಾದಲ್ಲಿ ನಟಿಸಿ ಹೋಗಿದ್ದ ಹಿಂದಿಯ ಪ್ರೀತಿ ಜಿಂಗಾನಿಯಾ ಮತ್ತೆ ಕನ್ನಡಕ್ಕೆ ಬಂದಿದ್ದಾಳೆ. ಅವಳಿಗೆ ಹೊಸತೊಂದು ಸಿನಿಮಾ ಸಿಕ್ಕಿದೆ. ಅದರಲ್ಲಿ ಒಂದು ಕಿರುಪಾತ್ರ, ಆದರೆ ಕಥೆಯ ಬಗ್ಗೆ ಹೇಳವುದಾದರೆ ಒಂದು ಬಲು ಮುಖ್ಯ ಪಾತ್ರದಲ್ಲಿ ನಟಿಸಿ ಹೋಗಿದ್ದಾಳಂತೆ.
ಈ ಹಿಂದೆ ಉಪೇಂದ್ರನೊಂದಿಗೆ ‘ಓಂಕಾರ’ ಚಿತ್ರದಲ್ಲಿ ನಟಿಸಿದ್ದ ಪ್ರೀತಿ, ದಶಾವತಾರ ಎಂಬ ಸಿನಿಮಾದಲ್ಲೂ ನಟಿಸಬೇಕಿತ್ತು. ಆದರೆ ಆ ಚಿತ್ರದ ಯೋಜನೆ ಅರ್ಧಕ್ಕೇ ನಿಂತ ಕಾರಣ ಮತ್ತೊಂದು ಬಾರಿ ಕನ್ನಡಿಗರಿಗೆ ಆಕೆಯ ಮುಖದರ್ಶನವಾಗಲಿಲ್ಲ. ಇದೀಗ ಆಕೆ ಜಯತೀರ್ಥ ನಿರ್ದೇಶನದ ಟೋನಿ ಎಂಬ ಸಿನಿಮಾದಲ್ಲಿ ನಟಿಸಿದ್ದಾಳೆ. ಅದರಲ್ಲಿ ಒಂದು ಕಂಪೆನಿಯ ಸಿಇಒ ಪಾತ್ರದಲ್ಲಿ ನಟಿಸಿ ಹೋಗಿರುವ ಆಕೆಯ ಪಾತ್ರ ಕತೆಗೆ ಹೊಸ ತಿರುವು ತರುವಂಥದ್ದಂತೆ. ಚಿತ್ರದ ಬಗ್ಗೆ ಜಯತೀರ್ಥ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರೀತಿ ಜಿಂಗಾನಿಯಾಳಂಥ ಬಾಲಿವುಡ್ ಸುಂದರಿಯನ್ನು ಕರೆತಂದಿರುವುದರಿಂದ ನಿರೀಕ್ಷೆ ಸಹಜವಾಗಿಯೇ ಜಾಸ್ತಿಯಾಗಿದೆಯಂತೆ. ಗುಲ್ಬರ್ಗದ ಆಳಂದ ಎಂಬ ಸುಮಾರು ೩೦೦ ಎಕರೆ ವಿಶಾಲ ಪ್ರದೇಶದಲ್ಲಿ ಸುಮಾರು ೭೦ ಕಲಾವಿದರು ಬರಿಗಾಲಲ್ಲಿ ನಟಿಸಿರುವ ಒಂದು ವಿಶೇಷ ದೃಶ್ಯವಿದೆಯಂತೆ. ಚಿತ್ರೀಕರಣ ಹೆಚ್ಚು ಕಡಿಮೆ ಮುಗಿದಿದ್ದು, ಪ್ರೀತಿ ಮತ್ತು ಚಿತ್ರದ ಬಗ್ಗೆ ತುಂಬಾ ಅಭಿಮಾನ, ನಿರೀಕ್ಷೆ ಇಟ್ಟುಕೊಂಡಿರುವ ಜಯತೀರ್ಥರಿಗೆ ಎಂಥ ಫಲಿತಾಂಶ ಸಿಗುತ್ತೆ ಎಂಬುದನ್ನು ಕಾದು ನೋಡಬೇಕಷ್ಟೆ.
Tagged with
cnnews
ಹೇಳಿಕೇಳಿ ಕೋಮಲ್ ಎನ್ನುವ ಪೋಷಕ ಹಾಸ್ಯನಟ ಪೂರ್ಣ ಪ್ರಮಾಣದ ನಾಯಕನಾದುದು ಮೊನ್ನೆ ಮೊನ್ನೆ ಗೋವಿಂದಾಯ ನಮಃ ಎಂಬ ಹಾಸ್ಯ ಸಿನಿಮಾದಲ್ಲಿ. ಆ ಸಿನಿಮಾ ಭರ್ಜರಿ ಹಿಟ್ ಆದುದು ಕೋಮಲ್‌ನ ಅದೃಷ್ಟವನ್ನು ಬದಲಾಯಿಸಲು ಸಿದ್ಧತೆ ನಡೆಸುವಂತಿದೆ. ಯಾಕೆಂದರೆ ಇದುವರೆಗೆ ೨೦-೨೫ ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದ ಕೋಮಲ್ ಇದೀಗ ತನಗೆ ಕೋಟಿ ರೂ. ಸಂಭಾವನೆ ಬೇಕು ಎಂದು ನಿರ್ಮಾಪಕರಲ್ಲಿ ಬೇಡಿಕೆ ಮಂಡಿಸುತ್ತಿದ್ದಾನೆ. ಒಂದು ಸಿನಿಮಾ ಹಿಟ್ ಆದ ಕೂಡಲೇ ಸಂಭಾವನೆ ಈ ಪರಿ ಏರುವುದಾದರೆ ಇತರ ನಟರ ಸಂಭಾವನೆ ಎಷ್ಟು ಕೋಟಿಗೆ ಏರಬೇಕಿತ್ತು ಎಂದು ಪ್ರಶ್ನಿಸು ವವರೂ ಗಾಂಧಿನಗರಲ್ಲಿದ್ದಾರೆ.
‘ಗೋವಿಂದಾಯ ನಮಃ’ ಚಿತ್ರ ಹಿಟ್ ಆಗಲು ಕೇವಲ ಕೋಮಲ್ ಮಾತ್ರ ಕಾರಣ ಎಂದು ಹೇಳಲಾಗದು ಎಂದು ಹೇಳುತ್ತಿದ್ದಾರೆ ಚಿತ್ರ ವಿಮರ್ಶಕರು. ಅದರ ‘ಪ್ಯಾರ್‌ಗೆ ಆಗ್ಬಿಟೈತೆ ನಮ್ದುಕೆ ಪ್ಯಾರ್‌ಗೆ ಆಗ್ಬುಟೈತೆ’ ಎಂಬ ಹಾಡು ಚಿತ್ರದ ಯಶಸ್ಸಿನಲ್ಲಿ ದೊಡ್ಡ ಕೊಡುಗೆ ನೀಡಿದೆ. ಹಾಗಿರುವಾಗ ಚಿತ್ರದ ಯಶಸ್ಸಿನ ಎಲ್ಲಾ ಕ್ರೆಡಿಟ್ ಅನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಕೋಮಲ್ ಒಬ್ಬರೇ ಹೊರಟಿರುವುದು ಸರಿಯಲ್ಲ. ಇದನ್ನೇ ಮುಂದಿಟ್ಟುಕೊಂಡು ಸಂಭಾವನೆಯನ್ನು ಕೋಟಿ ರೂ.ಗೆ ಏರಿಸಿಕೊಂಡಿರುವುದು ತುಂಬಾ ಅತಿಯಾಯಿತು ಎನ್ನುತ್ತಿದೆ ಗಾಂಧಿನಗರ. ಕೋಮಲ್ ಭವಿಷ್ಯ ಏನಾಗುತ್ತದೆ ಎಂಬ ಕುತೂಹಲ ಚಿತ್ರ ಪೇಮಿಗಳದ್ದಾಗಿದೆ.
Tagged with
cnnews
ಮಗು ಗಂಭೀರ, ಆರೋಪಿ ಪತಿ ಎಸ್ಕೇಪ್
ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ನಡೆದ ಘಟನೆ
ಮೂಡಬಿದ್ರೆ: ಚೊಚ್ಚಲ ಮಗುವಿಗೆ ಜನ್ಮ ನೀಡಲು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪತ್ನಿಯಲ್ಲಿಗೆ ಕತ್ತಿ ಝಳಪಿಸಿಕೊಂಡು ಬಂದ ಪತಿಮಹಾಶಯ ಆಕೆಯನ್ನು ಕೊಚ್ಚಿ ಕೊಲೆಗೈದ ಘಟನೆ ನಿನ್ನೆ ತಡರಾತ್ರಿ ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಮಗು ಗಂಭೀರ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದೆ.
ಮೃತ ಮಹಿಳೆಯನ್ನು ಜಯಂತಿ(೨೪) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಜಯಂತ ಎಂಬಾತ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ನಿನ್ನೆ ತಡರಾತ್ರಿ ಹನ್ನೊಂದರ ಸುಮಾರಿಗೆ ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಗೆ ಬಂದ ಈತ ಕತ್ತಿಯನ್ನು ಝಳಪಿಸಿಕೊಂಡು ಬರುತ್ತಿದ್ದಂತೆ ಆಸ್ಪತ್ರೆಯ ಲ್ಲಿದ್ದ ಮಂದಿ ಕಕ್ಕಾಬಿಕ್ಕಿಯಾಗಿದ್ದಾರೆ. ಯಾರಾ ದರೂ ಬೊಬ್ಬೆ ಹೊಡೆದರೆ ಕೊಲ್ಲುವುದಾಗಿ ಬೆದರಿಸುತ್ತಾ ಸೀದಾ ಪತ್ನಿ ಜಯಂತಿ ಇದ್ದಲ್ಲಿ ತೆರಳಿದ್ದಾನೆ. ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಗಂಡು ಮಗುವಿನ ಜನ್ಮ ನೀಡಿದ್ದ ಜಯಂತಿಯನ್ನು ಎಲ್ಲರೂ ಕಣ್ಣೆದುರಿಗೇ ಕೊಚ್ಚಿ ಬರ್ಬರವಾಗಿ ಕೊಲೆಗೈದಿದ್ದಾನೆ. ಮಗುವಿನ ಕೈಗೂ ತೀವ್ರ ಸ್ವರೂಪದ ಗಾಯ ಗಳಾಗಿದ್ದು, ಅಪಾಯದಿಂದ ಪಾರಾಗಿದೆ.
ಆರೋಪಿ ಜಯಂತಿಗೆ ಗರ್ಭದಾನ ಮಾಡಿ ಮದುವೆಗೆ ನಿರಾಕರಿಸಿ ಬಳಿಕ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಮಾಚ್ ಒಂದರಂದು ವಿವಾಹವಾಗಿದ್ದ. ಪ್ರೀತಿಸುತ್ತಿದ್ದ ಸಂದರ್ಭ ಜಯಂತ ಎಡಪದವಿನಲ್ಲಿ ಗ್ಯಾರೇಜ್ ಹೊಂದಿದ್ದರೆ, ಜಯಂತಿ ತೋಡಾರು ಮೈಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದರು.
ಪ್ರೇಮ ಸಂಬಂಧ ಹದ್ದುಮೀರಿದ ಪರಿಣಾಮ ಜಯಂತಿ ನಾಲ್ಕು ತಿಂಗಳ ಗರ್ಭವತಿಯಾಗಿದ್ದಳು. ಈ ಸಂದರ್ಭದಲ್ಲಿ ಜಯಂತನೊಂದಿಗೆ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾಗ ಜಯಂತ ಬೇರೆ-ಬೇರೆ ಕಾರಣಗಳನ್ನು ನೀಡುತ್ತಾ ಮದುವೆಗೆ ನಿರಾಕರಿಸಿದ್ದ. ಇದರಿಂದ ನೊಂದ ಯುವತಿ ಮೂಡಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಎಡಪದವು ಬಜ್ಪೆ ಠಾಣಾ ವ್ಯಾಪ್ತಿಗೆ ಬರುವುದರಿಂದ ಈ ಪ್ರಕರಣವನ್ನು ಬಜ್ಪೆ ಠಾಣೆಗೆ ಹಸ್ತಾಂತರಿಸಲಾಗಿತ್ತು. ಬಜ್ಪೆ ಪೊಲೀಸರು ಜೋಡಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ನಂತರ ಅವರಿಬ್ಬರನ್ನೂ ಮೂಡಬಿದ್ರೆಗೆ ಕಳುಹಿಸಿದ್ದು ಮೂಡಬಿದ್ರೆಯ ಮಾರಿಗುಡಿಯಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು. ಗರ್ಭದಾನ ಮಾಡಿ ತಪ್ಪಿಸಿಕೊಳ್ಳಲೆತ್ನಿಸಿದ ಜಯಂತನನ್ನು ಮೂಡಬಿದ್ರೆಯ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮದುವೆ ನಡೆಸಲಾಗಿದ್ದು, ಒಲ್ಲದ ಈ ಮದುವೆಯಿಂದ ಬೇಸತ್ತು ಕೊಲೆ ಕೃತ್ಯಕ್ಕೆ ಮುಂದಾಗಿರ ಬೇಕೆಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಮೂಡಬಿದ್ರೆ ವೃತ್ತ ನಿರೀಕ್ಷಕ ಎ.ಕೆ.ತಿಮ್ಮಯ್ಯ, ಠಾಣಾಧಿಕಾರಿ ರಮೇಶ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
Tagged with
cnews,
feature,
moodabidri
ಕಾರ್ಕಳ: ನಿಟ್ಟೆ ದೂಪದಕಟ್ಟೆಯ ಪರೆ ದೊಟ್ಟು ಎಂಬಲ್ಲಿ ಪತ್ನಿಯನ್ನು ಕೊಲೆಗೈದ ಪತಿರಾಯನೊಬ್ಬ ನೇಣಿಗೆ ಶರಣಾದ ಘಟನೆ ನಡೆದಿದೆ. ಪುತ್ತೂರು ಮೂಲದವನೆಂದು ಹೇಳಿ ಕೊಂಡಿರುವ ಜಗನ್ನಾಥ ಪೂಜಾರಿ ಪ್ರಕರಣದ ಆರೋಪಿಯಾಗಿದ್ದಾನೆ. ತನ್ನ ಕುಕೃತ್ಯದಿಂದ ಪ್ರಾಯಶ್ಚಿತಗೊಂಡ ಆತ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಂಗಳೂರು ಯೆಯ್ಯಾಡಿಯ ಉಮಾ ವತಿ ಶೆಡ್ತಿ ಹಾಗೂ ಜಗದೀಶ ಶೆಟ್ಟಿ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯವರಾದ ಮಾಲಿನಿ ಶೆಡ್ತಿ ಎಂಬಾಕೆ ತನ್ನ ಎರಡನೆಯ ಗಂಡನಾಗಿರುವ ಜಗನ್ನಾಥ ಪೂಜಾರಿಯ ಕೈಗೆ ಸಿಲುಕಿ ಜೀವತೆತ್ತ ನತದೃಷ್ಟೆಯಾಗಿದ್ದಾಳೆ. ಉಮಾವತಿ ಶೆಡ್ತಿಯ ನಿಕಟ ಸಂಬಂಧಿಯಾಗಿದ್ದ ಹಾಸನದ ಕುಮಾರ ಗೌಡ (ಅಂತರ್ಜಾತಿ ವಿವಾಹ) ಎಂಬಾತ ನೊಂದಿಗೆ ಮಾಲತಿಗೆ ವಿವಾಹ ಮಾಡಿ ಕೊಡಲಾಗಿತ್ತಾದರೂ, ದಾಂಪತ್ಯ ಜೀವನ ಮುರಿದುಬಿದ್ದುದರಿಂದ ಆಕೆ ತನ್ನ ತವರು ಮನೆಯಲ್ಲಿ ಕಾಲ ಕಳೆಯಬೇಕಾಯಿತು. ದಂಪತಿಗೆ ನಿಶ್ವಿನ್, ನಿತೇಶ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಬ್ಯೂಟಿಷಿಯನ್ ಆಗಿರುವ ಮಾಲಿನಿ ಶೆಡ್ತಿ ಮಂಗಳೂರು ಕಾಪಿ ಕಾಡು ಎಂಬಲ್ಲಿ ಬ್ಯೂಟಿ ಪಾರ್ಲರ್ ಒಂದನ್ನು ನಡೆಸುತ್ತಿದ್ದಾಗ ಪಕ್ಕದ ಇಸ್ತ್ರೀ ಅಂಗಡಿಯೊಂದರಲ್ಲಿ ಜಗನ್ನಾಥ ಪೂಜಾರಿಯ ಪರಿಚಯವಾಗಿ ಇಬ್ಬರ ನಡುವೆ ಪ್ರೇಮವಿವಾಹ ನಡೆಯಿತು. ನಿನ್ನೆ ಬೆಳಿಗ್ಗೆ ದಂಪತಿ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ಹೋದಾಗ ನೆರೆಮನೆಯವರು ಘಟನಾ ಸ್ಥಳಕ್ಕೆ ಬರುವ ಮೊದಲೇ ಆರೋಪಿ ಜಗನ್ನಾಥ ಪೂಜಾರಿ ತನ್ನ ಪತ್ನಿಯನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವ್ಯವಹಾರ ನಿಗೂಢ; ಜೀವನ ಐಷಾರಾಮಿ
ದಂಪತಿಗಳು ಬಾಡಿಗೆ ಮನೆಯಲ್ಲಿ ವಾಸವಾಗಿ ಮೂರು ತಿಂಗಳು ಕಳೆ ಯುತ್ತಾ ಬಂದಿದ್ದರೂ, ನೆರೆಕರೆಯವ ರಲ್ಲಿ ಮಾತುಕತೆ ಅಷ್ಟಕಷ್ಟೆಯಂತೆ. ಮಾಲತಿ ಶೆಡ್ತಿಗೊಂದು ಕೈನೆಟಿಕ್ ಹೊಂಡಾವಿತ್ತು. ಜಗನ್ನಾಥನಲ್ಲಿ ಬೈಕ್ ಕೂಡಾ ಇತ್ತು. ಮನೆಯೊಳಕ್ಕೆ ಹೊಕ್ಕರೆ ಯಾವುದು ಇಲ್ಲ. ಯಾವುದು ಉಂಟು ಎಂಬ ಪ್ರಶ್ನೆ ಕಾಡುವ ಮೊದಲೇ ಐಷಾರಾಮಿ ಜೀವನಕ್ಕೆ ಬೇಕಾದ ಗೃಹೋಪಯೋಗಿ ಸಾಮಾಗ್ರಿಗಳೆಲ್ಲವೂ ಇತ್ತು. ಕೋಳಿಅಂಕದೊಂದಿಗೆ ಜೂಜಿ ಗಾಗಿ ಹಣವಿನಿಯೋಗಿಸುವ ಚಟ ಜಗನ್ನಾಥನಿಗೆ ಇತ್ತು ಎನ್ನಲಾಗುತ್ತಿದೆ.
ಪ್ರೇಮವಿವಾಹವಾಗಿದ್ದ ಮಾಲಿನಿ ಶೆಡ್ತಿಗೂ ಜಗನ್ನಾಥ ಪೂಜಾರಿಯ ನಡುವೆ ಅಗಾಗ ಜಗಳ ಏರ್ಪಡು ತ್ತಿತ್ತೆಂದು ಮಾಲಿನಿ ಶೆಡ್ತಿಯ ತಾಯಿ ವರದಿಗಾರರ ಗಮನಕ್ಕೆ ತಂದಿದ್ದಾರೆ. ಪೊಲೀಸ್ ವೃತ್ತ ನಿರೀಕ್ಷಕ ವೆಲೆಂಟಿನ್ ಡಿಸೋಜಾ ಅವರು ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ.
ತಬ್ಬಲಿಗಳಾದ ಮಕ್ಕಳು
ಜಗಳವೇ ಸಾವಿನ ಪೀಠಿಕೆಗೆ ಕಾರಣವಾದ ಘಟನೆಯಿಂದ ದಂಪತಿಗಳ ಮಕ್ಕಳಿಬ್ಬರು ತಬ್ಬಲಿಗಳಾಗಿದ್ದಾರೆ. ನಿಶ್ವಿನ್, ನಿತೀಶ್ ಇಬ್ಬರು ಗಂಡು ಮಕ್ಕಳು ಪ್ರಸ್ತುತ ಸ್ಥಳೀಯ ಶಾಲೆಯೊಂದರಲ್ಲಿ ಕಲಿಯುತ್ತಿದ್ದಾರೆ. ಘಟನೆಯ ಮಾಹಿತಿ ತಿಳಿದು ಅಲ್ಲಿಗೆ ಬಂದಿದ್ದ ಮಕ್ಕಳಿಬ್ಬರು ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯಾವಳಿಯು ನೋಡುಗರ ಮನ ಕರಗಿಸುವಂತಿತ್ತು.
Tagged with
cnews,
feature,
karkala
ಬೆಂಗಳೂರು: ‘ಕಾಮಿ ಸ್ವಾಮಿ ನಿತ್ಯಾ ನಂದ ನನಗೆ ಹಾಗೆ ಮಾಡಿದ್ದಾನೆ, ಹೀಗೆ ಮಾಡಿದ್ದಾನೆ ಎಂದು ಸುದ್ದಿವಾಹಿನಿಯೊಂ ದರ ಸಂದರ್ಶನದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿ ಕಣ್ಣೀರು ಸುರಿಸಿದ್ದ ಆರತಿರಾವ್ ಎಂಬ ಮಹಿಳೆ ಈಗ ಕಾಣೆಯಾಗಿರುವುದು ಹಲ ವಾರು ಅನುಮಾನಗಳಿಗೆ ಕಾರಣವಾಗಿದೆ. ನಿತ್ಯಾನಂದನನ್ನು ಬಂಧಿಸಿದ ನಂತರ ಸುದ್ದಿ ವಾಹಿನಿಯೇ ಈಕೆಯನ್ನು ಗೌಪ್ಯ ಸ್ಥಳದ ಲ್ಲಿಟ್ಟಿದೆ ಎಂಬ ಮಾತುಗಳು ಮಾಧ್ಯಮ ವಲಯದಲ್ಲಿ ಕೇಳಿ ಬರುತ್ತಿದೆ.
ನಿತ್ಯಾನಂದನನ್ನು ತಮ್ಮ ಸುದ್ದಿಗೆ ಆಹಾರವಾಗಿಸಿ ಮೊದಲು ಅಂದ ನೋಡಿದ್ದೇ ಕನ್ನಡದ ಸುವರ್ಣ ಸುದ್ದಿ ವಾಹಿನಿ. ಈ ವಾಹಿನಿ ಆರತಿರಾವ್ ಎಂಬ ಮಹಿಳೆಯನ್ನು ತಂದು ಸ್ಟುಡಿಯೋದಲ್ಲಿ ಕುಳ್ಳಿರಿಸಿ ಸಂದ ರ್ಶನ ಮಾಡಿ, ನಿತ್ಯಾನಂದನನ್ನು ಜೈಲುಗ ಟ್ಟುವಲ್ಲೂ ಯಶಸ್ವಿಯಾಯಿತು. ಆದರೆ ಈಗ ಕಾಡುತ್ತಿರುವ ಪ್ರಶ್ನೆ, ಆರತಿ ರಾವ್ ಎಲ್ಲಿದ್ದಾಳೆ ಎನ್ನುವುದು.
ನಿತ್ಯಾನಂದ ತನ್ನ ಕಾಮ ಪುರಾಣಗಳು ಬಯಲಿಗೆ ಬಂದ ನಂತರ ಜೈಲು ಸುತ್ತಿ ಬಂದು ತನ್ನಷ್ಟಕ್ಕೆ ತಾನಿದ್ದ. ತನ್ನ ಅಪಾರ ಭಕ್ತ ಸಮೂಹದ ಮಧ್ಯೆ ಎಗ್ಗಿಲ್ಲದೆ ಮತ್ತದೇ ದೇವರಾಟದಲ್ಲಿ ತೊಡಗಿದ್ದ. ಈ ವೇಳೆ ಇದ್ದಕ್ಕಿದಂತೆ ಸುವರ್ಣ ವಾಹಿನಿ ಆರತಿ ರಾವ್ ಎಂಬ ಮಹಿಳೆಯನ್ನು ಸಂದರ್ಶನ ಮಾಡಿ ಈ ಕಾರ್ಯಕ್ರಮವನ್ನು ಎಗ್ಗಿಲ್ಲದೆ ಪ್ರಸಾರ ಮಾಡುವ ಮೂಲಕ ನಿತ್ಯಾನ ಮತ್ತೊಂದು ಮುಖದ ಪರಿಚಯವನ್ನು ಮಾಡಿಕೊಟ್ಟಿತು. ನಿತ್ಯಾನಂದನ ಬಂಧನಕ್ಕೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಬಿತ್ತು. ಅಂತೂ ಇಂತೂ ನಿತ್ಯಾನ ಬಂಧನವೂ ಆಯಿತು. ಆದರೆ ಆರತಿ ರಾವ್ ಮತ್ತೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಕೆಲವೊಂದು ಮೂಲಗಳ ಪ್ರಕಾರ ಸುದ್ದಿವಾಹಿನಿಯೇ ಈಕೆಯನ್ನು ತನ್ನ ಸುದ್ದಿ ಮೂಲವಾಗಿ ಬಚ್ಚಿಟ್ಟಿದೆ ಎಂಬ ಮಾತು ಗಳು ಕೇಳಿ ಬರುತ್ತಿವೆ. ಅಲ್ಲದೇ ಈ ಆರತಿ ರಾವ್ ವಿರುದ್ದ ಭಾರತೀಯ ದಂಡ ಸಂಹಿತೆ (೧೪)೩೫೪, ೫೦೬,೩೮೪ ಮತ್ತು ೫೦೯ರ ಕಲಾಂ ಅಡಿಯಲ್ಲಿ ಕೇಸುಗಳಿವೆ. ಇಷ್ಟೆಲ್ಲಾ ವಿವಾದಗಳಿದ್ದರೂ ಆರತಿರಾವ್ ನಿತ್ಯಾನ ವಿರುದ್ದ ಪೊಲೀಸರಿಗೆ ದೂರು ಕೊಡದೆ ಆಡಗಿರುವುದು ಯಾಕೆ ಎಂಬ ಸಂಶಯವೂ ಕಾಡುತ್ತಿದೆ. ಈ ನಡುವೆ ನಿತ್ಯಾನಂದನ ವೈದ್ಯಕೀಯ ಪರೀಕ್ಷೆಗೆ ಕೋರ್ಟ್ ಆದೇಶಿಸಿದೆ.
Tagged with
feature,
nithyananda,
snews
ಮಂಗಳೂರು: ಬಿಜೈ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಬಳಿ ಮಾನವ ತಲೆ ಬುರುಡೆಗಳು ಪತ್ತೆಯಾಗಿವೆ.
ನಿನ್ನೆ ಬೆಳಿಗ್ಗೆ ೧೦ ಗಂಟೆಯ ವೇಳೆಗೆ ಕಸದ ತೊಟ್ಟಿಯಲ್ಲಿ ಮಾನವನ ತಲೆಬು ರುಡೆಯನ್ನು ಕಂಡ ಸಾರ್ವಜನಿಕರು ಬರ್ಕೆ ಠಾಣೆಗೆ ಮಾಹಿತಿ ನೀಡಿದ್ದರು. ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಇಡಲಾಗಿದ್ದ ನಾಲ್ಕು ಬುರುಡೆಗಳು ಕಂಡು ಬಂದವು. ಅಲ್ಲದೆ ಅದರಲ್ಲಿ ಗುರುತುಗಳು ಕಂಡು ಬಂದಿದ್ದು ಎಲುಬು ಮತ್ತು ಮೂಳೆ ವಿಭಾಗದಲ್ಲಿ ಕಲಿ ಯುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು ರಾತ್ರಿ ವೇಳೆ ಎಸೆದು ಹೋಗಿರಬಹುದು ಎಂದು ಶಂಕಿಸಲಾಗಿದೆ.
Tagged with
dk,
feature,
lnews
ಮಂಗಳೂರು: ಆರು ದಿನಗಳ ಹಿಂದೆ ಕಾವೂರು ಠಾಣಾ ವ್ಯಾಪ್ತಿಯ ಕೊಂಚಾಡಿಯಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಜಾಲ್ ನಿವಾಸಿ ಗೌರೀಶ್ (೨೧), ಆಕಾಶಭವನದ ಗೌತಮ್ (೨೨) ಮತ್ತು ಕುಲ ಶೇಖರ ನಿವಾಸಿ ಹರ್ಷರಾಜ್ (೨೦) ಬಂಧಿತ ಆರೋಪಿಗಳು. ಇವರು ಶನಿವಾರ ರಾತ್ರಿ ಕೊಂಚಾಡಿ ಫೋರ‍್ತ್‌ಮೈಲ್ ನಿವಾಸಿ ಕುಮಾರ್ ಎಂಬಾತನನ್ನು ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಿದ್ದು, ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೊನ್ನೆ ಮಧ್ಯಾಹ್ನದ ವೇಳೆ ಆರೋಪಿಗಳು ಬಂಟ್ವಾಳ ಬಸ್ಸು ತಂಗು ದಾಣದ ಬಳಿ ಇರುವ ಬಾರ್‌ನಲ್ಲಿ ಇದ್ದ ಸಂದರ್ಭ ಮಾಹಿತಿಯರಿತ ಸಿಸಿಬಿ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಹಾಗೂ ಕೊಲೆಯಾದ ಯುವಕ ಸ್ನೇಹಿತರಾಗಿದ್ದರು. ಆಗೊಮ್ಮೆ ಈಗೊಮ್ಮೆ ಇವರ ಮಧ್ಯೆ ಜಗಳ ನಡೆಯುತ್ತಲೇ ಇತ್ತು. ಇದೇ ಹಿನ್ನೆಲೆಯಲ್ಲಿ ಕುಮಾರ್‌ನನ್ನು ಕೊಲೆ ನಡೆಸ ಲಾಗಿದೆ ಎಂದು ಆರೋಪಿಗಳು ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Tagged with
cnews,
feature,
mlore
ಮಂಗಳೂರು: ನಕ್ಸಲ್ ಬೆಂಬಲದ ಆರೋ ಪದಲ್ಲಿ ಕಳೆದ ಮೂರು ತಿಂಗಳುಗಳಿಂದ ಮಂಗ ಳೂರಿನ ಸಬ್‌ಜೈಲಿನಲ್ಲಿ ರುವ ವಿಠಲ ಮಲೆಕು ಡಿಯ ಹಾಗೂ ಆತನ ತಂದೆ ಲಿಂಗಣ್ಣ ಅವರಿಗೆ ಜಾಮೀನು ನಿರಾಕರಣೆ ಮಾಡಿರುವ ಹೈಕೋರ್ಟ್ ಸ್ಥಳೀಯ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಆದೇಶಿಸಿದೆ.
ಮಾರ್ಚ್ ಪ್ರಥಮ ವಾರವೇ ಬೆಳ್ತಂಗಡಿ ಕುತ್ಲೂರಿನ ಲಿಂಗಣ್ಣ ಹಾಗೂ ಮಂಗಳೂರು ವಿವಿಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ವಿಠಲನನ್ನು ನಕ್ಸಲ್ ನಿಗ್ರಹದಳದ ಪೊಲೀಸರು ಬಂಧಿಸಿದ್ದರು. ಕಳೆದ ಮೂರು ತಿಂಗಳಿಂದ ಜೈಲಿನಲ್ಲಿರುವ ಇವರಿಗೆ ಇದುವರೆಗೂ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತ್ತು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಅಪೀಲು ಸಲ್ಲಿಸಲಾಗಿದ್ದು, ನಿನ್ನೆ ಹೈಕೋ ರ್ಟ್‌ನಲ್ಲಿ ವಿಚಾರಣೆ ನಡೆದಿದೆ. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ತಂದೆ, ಮಗನ ಬಂಧನವಾಗಿ ೯೦ ದಿನಗಳು ಕಳೆದರೂ ಇದುವರೆಗೂ ಪೊಲೀಸರು ನ್ಯಾಯಾಲಯಕ್ಕೆ ಜಾರ್ಜ್‌ಶೀಟ್ ಸಲ್ಲಿಸಿಲ್ಲ. ಮಾತ್ರವಲ್ಲದೆ ಜಾರ್ಜ್‌ಶೀಟ್ ಸಲ್ಲಿಕೆಗೆ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿಲ್ಲ. ಈ ಕಾರಣದಿಂದ ಬೆಳ್ತಂಗಡಿ ಸ್ಥಳೀಯ ಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸುವಂತೆ ಆದೇಶದಲ್ಲಿ ಹೇಳಿದೆ.
Tagged with
dk,
feature,
lnews
ಇದು ಕುಞಡಿ ಸರ್ಕಾರಿ ಶಾಲೆಯ ದುಸ್ಥಿತಿ
ವೇಣೂರು: ಇಲ್ಲಿಗೆ ಸಮೀಪದ ಗುಂಡೂರಿ ಸರಕಾರಿ ಕಿರಿಯ ಪ್ರಾಥ ಮಿಕ ಶಾಲೆಯಲ್ಲಿ ಐದನೇ ತರಗತಿ ಯವರೆಗೆ ಮಕ್ಕಳಿಗೆ ಶಿಕ್ಷಣ ನೀಡಲಾಗು ತ್ತಿದೆ. ಆದರೆ ಇಲ್ಲಿನ ವಿಶೇಷತೆ ಏನೆಂ ದರೆ ಸುಮಾರು ೩೭ ವಿದ್ಯಾರ್ಥಿಗಳಿಗೆ ಕಲಿಸುವ ಶಿಕ್ಷಕರ ಸಂಖ್ಯೆ ಬರೇ ಒಂದು!
ಖಾಸಗಿ ಆಡಳಿತಕ್ಕೆ ಒಳಪಟ್ಟಿದ್ದ ಕುಞಡಿ ಪ್ರಾಥಮಿಕ ಶಾಲೆಯು ಸುಮಾರು ಎಂಟು ವರ್ಷಗಳ ಹಿಂದಷ್ಟೇ ಸರ್ಕಾರಿ ಶಾಲೆಯಾಗಿ ಬದ ಲಾಯಿತು. ಆಗ ಇಲ್ಲಿ ಒರ್ವ ಶಿಕ್ಷಕಿ ಸಹಿತ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಬೋಧಿಸುತ್ತಿದ್ದರು. ಆದರೆ ಎರಡು ವರ್ಷದ ಹಿಂದೆ ಇಲ್ಲಿನ ಮುಖ್ಯೋಪಾಧ್ಯಾಯರು ಆರಂ ಬೋಡಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಆದೇಶ ಪಡೆದು ತೆರಳಿದ ಬಳಿಕ ಇಲ್ಲಿ ಒಬ್ಬ ಶಿಕ್ಷಕಿ ಬಾಕಿಯಾ ಗಿದ್ದಾರೆ. ಒಂದರಿಂದ ಐದನೇ ತರ ಗತಿವರೆಗೂ ಏಕೈಕ ಸಾರಥಿಯಾಗಿ ಮಕ್ಕಳ ಭವಿಷ್ಯ ರೂಪಿಸುವ ಕೈಂಕ ರ್ಯದಲ್ಲಿ ನಿರತರಾಗಿದ್ದಾರೆ.
ಕುಞಡಿ ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕೆಂದು ಸಂಬಂಧ ಪಟ್ಟವರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಆದರೆ ಹಾಗೆ ಮಾಡಿದ ಮನವಿಗಳೆಲ್ಲ ಎಲ್ಲೋ ಕಸದ ಬುಟ್ಟಿ ಸೇರಿದೆ ಎಂದು ನಿರಾಶೆ ಪಡು ತ್ತಾರೆ ಸ್ಥಳೀಯ ಗ್ರಾಮಸ್ಥರು. ಸದ್ಯ ಇಲ್ಲಿದ್ದ ಏಕೈಕ ಶಿಕ್ಷಕಿಯೂ ಹೆರಿಗೆ ರಜೆಯಲ್ಲಿ ಇರುವ ಕಾರಣ ಇಲ್ಲಿನ ಖಾಸಗಿ ಶಾಲೆ ಯ ಓರ್ವ ಶಿಕ್ಷಕಿಯನ್ನು ಅತಿಥಿ ಅಧ್ಯಾಪಕಿಯಾಗಿ ತಾತ್ಕಾಲಿಕ ಅವಧಿಗೆ ಇಲ್ಲಿ ನೇಮಕ ಮಾಡಲಾಗಿದೆ. ಇಷ್ಟೆಲ್ಲ ಆದರೂ ಸರ ಕಾರ ಮಾತ್ರ ಈ ಶಾಲೆಗೆ ಪರ್ಮನೆಂಟ್ ಆಗಿ ಶಿಕ್ಷಕರನ್ನು ನೇಮಕ ಮಾಡಲು ಚಿಂತಿಸದೇ ಇರುವುದು ವಿಪರ್ಯಾಸ ಎಂಬ ಅಭಿಪ್ರಾಯ ಸ್ಥಳೀಯರದ್ದು.
ಇದು ಕುಞಡಿ ಸರಕಾರಿ ಶಾಲೆಯ ದುರವಸ್ಥೆ ಮಾತ್ರವಲ್ಲ, ಬೆಳ್ತಂಗಡಿ ತಾಲೂಕಿನಲ್ಲಿರುವ ಹಲವಾರು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಂಡುಬರುತ್ತಿದೆ. ಅಧ್ಯಾಪಕರ ಸಂಖ್ಯೆ ಹೆಚ್ಚಿರುವ ಕೆಲವು ಶಾಲೆಗಳಿಂದ ಅಧ್ಯಾಪಕರನ್ನು ಇಂತಹ ಶಾಲೆಗಳಿಗೆ ವರ್ಗಾವಣೆ ಮಾಡಿದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗ ಬಹುದು.ಕೆಲವು ವರ್ಷಗಳ ಹಿಂದೆ ಒಂದ ರಿಂದ ಐದನೇ ತರಗತಿವರೆಗೆ ೫೦ರಿಂದ ೬೦ರಷ್ಟು ವಿದ್ಯಾರ್ಥಿಗಳಿದ್ದ ಕುಞಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯ ಪ್ರಮಾಣ ದಲ್ಲಿ ಇಳಿಯತೊಡಗಿದೆ.ಗ್ರಾಮೀಣ ಸರ್ಕಾರಿ ಶಾಲೆ ಯಾಗಿರುವ ಇಲ್ಲಿ ವಿದ್ಯಾ ರ್ಥಿಗಳಿಗೆ ಉಚಿತ ಪುಸ್ತಕ, ಉಚಿತ ಸಮವಸ್ತ್ರ, ಮಧ್ಯಾಹ್ನದ ಊಟದ ವ್ಯವ ಸ್ಥೆಯೂ ಇದೆ. ಆದರೂ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿರುವುದು ಮುಚ್ಚುಗಡೆ ಭೀತಿ ಎದುರಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಬೆಳ್ತಂಗಡಿ ಶಿಕ್ಷಣಾಧಿಕಾರಿಗಳಿಗೆ ಶಾಲಾ ಕಮಿಟಿ ಮನವರಿಕೆ ಮಾಡಿಕೊಂಡಿದ್ದರೂ ಬೇಡಿಕೆ ಮಾತ್ರ ಈಡೇರಿಲ್ಲ.ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣಾಧಿಕಾರಿ ಗಳು ಈ ಬಗ್ಗೆ ಕ್ರಮ ಜರುಗಿಸಿ ಕನಿಷ್ಠ ಇಬ್ಬರು ಶಿಕ್ಷಕರನ್ನಾದರೂ ಇಲ್ಲಿಗೆ ಶಾಶ್ವತವಾಗಿ ನೇಮಿಸಲಿ ಎಂಬುದು ಮಕ್ಕಳ ಪೋಷಕರ ಅಭಿಪ್ರಾಯವಾಗಿದೆ.
ಶಾಲೆಯಲ್ಲಿ ಅಧ್ಯಾಪಕರ ಕೊರತೆ ಇದ್ದು, ಈ ಬಗ್ಗೆ ನಾವು ತಾಲೂಕಿನ ಶಿಕ್ಷಣಾಧಿಕಾರಿಯವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳ ಹಿತ ದೃಷ್ಟಿಯಿಂದ ಕಮಿಟಿ ಸದಸ್ಯರೊಂದಿಗೆ ಕೂಡಿ ಸಮಸ್ಯೆ ನಿವಾರಿಸಲು ಶಿಕ್ಷಣಾಧಿಕಾರಿಯವರಿಗೆ ಈಗಾಗಲೇ ಎರಡು ಬಾರಿ ಮನವಿ ಮಾಡಿಯಾಗಿದೆ. ತಾಲೂಕಿನ ಶಾಸಕರೂ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸೂಚನೆ ನೀಡಿದ್ದರೂ ಶಾಲೆಯ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಮುಂಚೆ ಇದ್ದ ಶಿಕ್ಷಣಾಧಿಕಾರಿಗಳು ಇದೀಗ ಬೇರೆಡೆ ವರ್ಗಾವಣೆಗೊಂ ಡಿದ್ದು, ಈ ಬಗ್ಗೆ ಶಾಸಕರು ದೃಢ ನಿರ್ಧಾರ ತೆಗೆದುಕೊಂಡಲ್ಲಿ ನಮ್ಮ ಶಾಲೆಯ ಸಮಸ್ಯೆಗೆ ಅಂತ್ಯ ಹಾಡಬಹುದಾಗಿದೆ.
ಸೇಸಪ್ಪ ಪೂಜಾರಿ, ಕೊಯಂದೂರು ಗುಂಡೂರಿ
ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ
ತಾಲೂಕಿನಲ್ಲಿ ಶಿಕ್ಷಕರ ಕೊರತೆ ಕಾಡುತ್ತಿರುವುದು ನಿಜ. ಕಳೆದ ವರ್ಷ ೧೨೫ ಇದ್ದ ಶಿಕ್ಷಕರ ಕೊರತೆ ಈ ಸಲ ೧೭೫ಕ್ಕೇರಿದೆ. ತಾಲೂಕಿನಿಂದ ವರ್ಗಾವಣೆ ಹಾಗೂ ಬಂದ ಶಿಕ್ಷಕರ ಸಂಖ್ಯೆಯ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ. ಇದೀಗ ಶಾಲೆಗಳಿಗೆ ಮಕ್ಕಳ ದಾಖಲಾತಿ ಆಗುತ್ತಿದ್ದು, ೩೦ ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ನೇಮಕಾತಿ ಮಾಡ ಲಾಗುತ್ತದೆ. ವೇಣೂರು ಸಮೀಪದ ಗುಂಡೂರಿ ಗ್ರಾಮದ ಕುಂಞಡಿ ಶಾಲೆಯ ಸಮಸ್ಯೆ ನಮ್ಮ ಅರಿವಿಗೆ ಬಂದಿದೆ. ಜುಲೈ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಕುಂಞಡಿ ಶಾಲೆಗೆ ಶಿಕ್ಷಕರ ಕೊರತೆಯನ್ನು ನೀಗಿಸಲಿದ್ದು, ಗೌರವ ಶಿಕ್ಷಕರ ನೆಲೆಯಲ್ಲಾದರೂ ಶಿಕ್ಷಕರ ತುರ್ತು ನೇಮಕಾತಿ ಮಾಡಲಾಗುವುದು.
ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬೆಳ್ತಂಗಡಿ
Tagged with
dk,
feature,
lnews,
school
ಮುಂಬಯಿ: ಮನೆಯೊಡತಿಯೊಬ್ಬಳ ಮೇಲೆ ಕಳೆದ ೬ ತಿಂಗಳುಗಳಿಂದ ಸಾಮೂಹಿಕ ಅತ್ಯಾಚಾರ ಮಾಡುತ್ತಿದ್ದ ಎಂಟು ಮಂದಿಯ ವಿರುದ್ಧ ಕೊನೆಗೂ ಸಾಂತಾಕ್ರೂಸ್ ಪೊಲೀಸರಿಗೆ ದೂರು ನೀಡಲಾಯಿತು.
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಶಾಸ್ತ್ರಿ ನಗರದ ನಿವಾಸಿಯಾಗಿರುವ ಪಿಂಕಿ ಶಾಹ್ (ಹೆಸರು ಬದಲಾಯಿಸಲಾಗಿದೆ) ಮೇಲೆ ಎಂಟು ಮಂದಿಯ ತಂಡವೊಂದು ಆಕೆಯ ಪತಿ ಕೆಲಸಕ್ಕೆ ತೆರಳಿದ ಮೇಲೆ ಅತ್ಯಾಚಾರವೆಸಗುತ್ತಿದ್ದು, ವಿಚಾರವನ್ನು ಬಹಿರಂಗ ಪಡಿಸಿದರೆ ಮಗನನ್ನು ಕೊಲೆಗೈಯ್ಯುವುದಾಗಿ ಬೆದರಿಕೆ ಒಡ್ಡಿದ್ದರು.
ಪ್ರಕರಣ ಬೆಳಕಿಗೆ ಬಂದ್ದದ್ದು ಹೇಗೆ?
ಪಿಂಕಿ ಗಂಡ ಎಂದಿನಂತೆ ಕಳೆದ ಭಾನುವಾರ ಕೂಡಾ ಅಂಗಡಿಗೆ ತೆರಳಿದ್ದರು. ಅದೇ ಸಮಯದಲ್ಲಿ ಎಂಟ ಮಂದಿಯ ತಂಡ ಮನೆ ಹೊಕ್ಕಿತ್ತು. ಅರ್ಧದಲ್ಲಿಯೇ ಪತಿ ಮನೆಗೆ ಹಿಂದಿರುಗಿದ ವೇಳೆ ತನ್ನ ಪತ್ನಿ ವ್ಯಕ್ತಿಯೊಬ್ಬನ ಜೊತೆ ಮಲಗಿರುವುದನ್ನು ತಪ್ಪಾಗಿ ಅರ್ಥೈಸಿ ಆಕೆಗೆ ಅಕ್ರಮ ಸಂಬಂಧವಿದೆ ಎಂದು ನೆರೆಹೊರೆಯವರ ಸಮ್ಮುಖದಲ್ಲಿಗೆ ಕಾಳಗ ಏರ್ಪಟ್ಟಿತು.
ಮರು ದಿನವೂ ಪಿಂಕಿ ಜೊತೆ ಬೇರೊಬ್ಬ ವ್ಯಕ್ತಿಯನ್ನು ಗಮನಿಸಿದ ಪತಿ ವೀರನ್ ಶಾಹ್ (ಹೆಸರು ಬದಲಾಯಿಸಲಾಗಿದೆ), ಪತ್ನಿ ತನ್ನಿಂದ ಏನೋ ವಿಚಾರವನ್ನು ಬಚ್ಚಿಟ್ಟಿದ್ದಾರೆಂಬುದನ್ನುವಿಚಾರಿಸಿದಾಗ, ಪಿಂಕಿ ನಡೆದ ಎಲ್ಲಾ ವಿಚಾರಗಳನ್ನು ವಿವರಿಸಿದ್ದಾರೆ.
ಕೊನೆಗೂ ವೀರೆನ್ ದಂಪತಿ ಪೊಲೀಸರಿಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಇನ್ನೂ ನಾಲ್ವರನ್ನು ಸದ್ಯವೇ ಬಂಧಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ವಿಶ್ವಾಸ್ ನಂಗ್ರೆ ಪಾಟೀಲ್ ತಿಳಿಸಿದ್ದಾರೆ.
Tagged with
feature,
nnews