ಸೆಂಟ್ರಲ್ ಮಾರುಕಟ್ಟೆ ಬಳಿ ನಿನ್ನೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಒಳಚರಂಡಿ ತುಂಬಿ ತುಳುಕಾಡಿದ್ದು, ಕಲುಷಿತ ನೀರು ರಸ್ತೆಯುದ್ದಕ್ಕೂ ಹರಿದಾಡಿದ ಕಾರಣ ವಾಹನ ಸವಾರರು ಮತ್ತು ಪಾದಚಾರಿಗಳು ಸಂಕಷ್ಟ ಅನುಭವಿಸಿದರು.
Tagged with
gallery
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉರ್ವ ದೈವಜ್ಞ ಸಭಾಂಗಣದ ಬಳಿಯಿರುವ ತೋಡಿನಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಇದರ ಪರಿಣಾಮವಾಗಿ ಆವರಣ ಗೋಡೆ ಕುಸಿದು ಮನೆಯೊಂದು ಅಪಾಯಕ್ಕೆ ಸಿಲುಕಿದೆ.
Tagged with
gallery
ಸುಳ್ಯ ಸಮೀಪದ ಕಾಂತಮಂಗಲ-ಮುಳ್ಯಕಜೆ ರಸ್ತೆಗೆ ಭಾನುವಾರ ಬಿದಿರಿನ ಮೆಳೆ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
Tagged with
gallery
ಗೇಲ್ ಆಗಮನ ಬದಲಿಸಲಿಲ್ಲ ವಿಂಡೀಸ್ ಅದೃಷ್ಟ
ಲಂಡನ್: ಹದಿನಾಲ್ಕು ತಿಂಗಳ ನಂತರ ಅಂತಾರಾಷ್ಟ್ರೀಯ ಪಂದ್ಯವಾಡಿದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಕೂಡ ವೆಸ್ಟ್ ಇಂಡೀಸ್‌ಗೆ ಅದೃಷ್ಟ ತರಲು ವಿಫಲರಾಗಿದ್ದಾರೆ. ನಿನ್ನೆ ಅಲೆಸ್ಟರ್ ಕುಕ್ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ವಿಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯವನ್ನು ಆಂಗ್ಲರು ಎಂಟು ವಿಕೆಟ್‌ಗಳಿಂದ ಗೆದ್ದುಕೊಂಡಿದ್ದಾರೆ. ಈ ಮೂಲಕ ಆಂಗ್ಲ ಇನ್ನೂ ಒಂದು ಪಂದ್ಯ ಉಳಿದಿರುವಾಗಲೇ ಸರಣಿಯನ್ನು ೨-೦ಯಿಂದ ಕೈವಶ ಮಾಡಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ವಿಂಡೀಸ್ ಭರ್ಜರಿ ಆರಂಭವನ್ನೇ ಪಡೆದಿತ್ತು. ಅದರಲ್ಲೂ ಕ್ರಿಸ್ ಗೇಲ್ ಐದು ಸಿಕ್ಸ್ ಹಾಗೂ ಮೂರು ಬೌಂಡರಿ ನೆರವಿನಿಂದ ೫೧ ಎಸೆತಗಳಲ್ಲಿ ೫೩ ರನ್ ಗಳಿಸಿದರು. ಆದರೆ ಡ್ವೇಯ್ನ್ ಸ್ಮಿತ್ (೦) ಹಾಗೂ ಸ್ಯಾಮ್ಯುವೆಲ್ಸ್ (೧೩) ಅಲ್ಪಮೊತ್ತಕ್ಕೆ ನಿರ್ಗಮಿಸಿದಾಗ ತಂಡ ಆಘಾತಕ್ಕೆ ಸಿಲಕಿತು. ಆದರೆ ಡ್ವೇಯ್ನ್ ಬ್ರಾವೊ (೭೭) ಹಾಗೂ ಪೊಲಾರ್ಡ್ (೪೧) ತಂಡಕ್ಕೆ ಆಸರೆಯಾದರು. ಈ ಹಿನ್ನೆಲೆಯಲ್ಲಿ ತಂಡ ನಿಗದಿತ ೫೦ ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ ೨೩೮ ರನ್ ಗಳಿಸಿತು. ಆಂಗ್ಲ ಪರ ಆಂಡರ್ಸನ್ ಎರಡು ವಿಕೆಟ್ ಪಡೆದರು.
ಆದರೆ ಬ್ಯಾಟಿಂಗ್ ಆರಂಭಿಸಿದ ಆಂಗ್ಲ ವಿಂಡೀಸ್ ಬೌಲರ್‌ಗಳನ್ನು ತೀವ್ರವಾಗಿ ದಂಡನೆಗೊಳಪಡಿಸಿತು. ಅದರಲ್ಲೂ ಇಯಾನ್ ಬೆಲ್ (೫೩) ಹಾಗೂ ಅಲೆಸ್ಟರ್ ಕುಕ್ ಪ್ರಥಮ ವಿಕೆಟ್‌ಗೆ ನಡೆಸಿದ ೧೨೨ ರನ್‌ಗಳ ಜೊತೆಯಾಟವು ಆಂಗ್ಲ ತಂಡಕ್ಕೆ ಭರ್ಜರಿ ಅಡಿಪಾಯ ಹಾಕಿಕೊಟ್ಟಿತ್ತು. ಹಾಗಾಗಿ ತಂಡ ಇನ್ನೂ ಐದು ಓವರ್ ಬಾಕಿ ಉಳಿದಿರುವಂತೆ ಎರಡು ವಿಕೆಟ್ ನಷ್ಟಕ್ಕೆ ೨೩೯ ರನ್ ಗಳಿಸಿ ಜಯದಾಖಲಿಸಿತು. ಬೆಲ್ ನಂತರ ಕುಕ್‌ಗೆ ಟ್ರಾಟ್ (೪೩) ಸಮರ್ಥ ಸಾಥ್ ನೀಡಿದರು. ಈ ಜೋಡಿ ಕೂಡ ದ್ವಿತೀಯ ವಿಕೆಟ್‌ಗೆ ೮೧ ರನ್ ಪೇರಿಸಿತು. ಈ ವೇಳೆ ಕುಕ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಕುಕ್ ೧೨೦ ಎಸೆತಗಳಲ್ಲಿ ೧೩ ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ೧೧೨ ರನ್ ಗಳಿಸಿ ನಿರ್ಗಮಿಸಿದರು. ಅಂತಿಮವಾಗಿ ಟ್ರಾಟ್‌ಗೆ ಬೊಪಾರ (೧೯) ಉತ್ತಮ ಸಾಥ್ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟರು.
Tagged with
tnews
ಹೈದರಾಬಾದ್: ಬೆನ್ನು ಬೆನ್ನಿಗೆ ಎರಡು ಟೂರ್ನಿಗಳನ್ನು ಗೆದ್ದುಕೊಂಡಿರುವುದು ಮುಂದಿನ ತಿಂಗಳು ನಡೆಯ ಲಿರುವ ಲಂಡನ್ ಒಲಿಂಪಿಕ್ಸ್ ನಲ್ಲಿ ನನ್ನ ಪದಕ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ದೇಶದ ಅಗ್ರಶ್ರೇಯಾಂಕದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿಶ್ವಾಸ ವ್ಯಕ್ತಪಡಿಸಿ ದ್ದಾರೆ. ಸೈನಾ ಕಳೆದ ಥೈಲ್ಯಾಂಡ್ ಹಾಗೂ ಇಂಡೋನೇಶ್ಯಾ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.
ಕಳೆದ ಎರಡು ವಾರಗಳಲ್ಲಿ ನಾನು ಅನೇಕ ವಿಶ್ವಶ್ರೇಷ್ಠ ಆಟಗಾರರನ್ನು ಸೋಲಿಸಿದ್ದು, ಮುಖ್ಯವಾಗಿ ಪ್ರತಿಷ್ಠಿತ ಟೂರ್ನಿಗಳನ್ನು ಗೆದ್ದುಕೊಂಡಿರುವುದು ಸಹಜವಾಗಿಯೇ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇಂಡೋನೇಶ್ಯಾ ಓಪನ್ ಟೂರ್ನಿಯನ್ನು ಮೂರನೇ ಬಾರಿಗೆ ಕೈವಶ ಮಾಡಿಕೊಂಡಿದ್ದು, ಮರೆಯಲಾಗದ ಸಾಧನೆಯಾಗಿದೆ. ಸದ್ಯ ಈಗ ಎಲ್ಲರೂ ಮುಂಬರುವ ಒಲಿಂಪಿಕ್ಸ್‌ಗಾಗಿ ಉತ್ತಮ ತರಬೇತಿ ಪಡೆಯುತ್ತಿದ್ದು, ಕಠಿಣ ಸವಾಲು ಎದುರಾಗಲಿದೆ. ಆದರೆ ಈ ರೀತಿಯ ಟೂರ್ನಿಯ ಜಯವು ಒಲಿಂಪಿಕ್ಸ್‌ಗೆ ಉತ್ತಮ ಆತ್ಮವಿಶ್ವಾಸದಂತೆ ಕೆಲಸ ಮಾಡಲಿದೆ ಎಂದು ಸೈನಾ ನೆಹ್ವಾಲ್ ತಿಳಿಸಿದರು. ಕಳೆದ ವರ್ಷ ಮೂರು ಫೈನಲ್ ಪಂದ್ಯಗಳನ್ನು ಚೀನಾದ ಆಟಗಾರ್ತಿಯರ ವಿರುದ್ಧ ಸೋಲುಂಡಾಗ ಸೈನಾರ ಪ್ರತಿಭೆಯ ಬಗ್ಗೆ ಪ್ರಶ್ನೆಗಳು ಎದ್ದಿತ್ತು. ಈಗ ಟೀಕಾಕಾರರ ಆ ಪ್ರಶ್ನೆಗಳಿಗೆ ಸೈನಾ ಸಮರ್ಥವಾಗಿಯೇ ಉತ್ತರ ರವಾನಿಸಿದ್ದಾರೆ.
Tagged with
tnews
ವಿವಾದದ ಮಧ್ಯಪ್ರವೇಶಕ್ಕೆ ಕ್ರೀಡಾ ಸಚಿವಾಲಯ ನಿರಾಕರಣೆ
ದೆಹಲಿ: ಸದ್ಯ ಭಾರತೀಯ ಟೆನಿಸ್ ವಲಯ ದಲ್ಲಿ ಕೋಲಾಹಲ ಸೃಷ್ಟಿಸಿರುವ ವಿವಾದದ ಮಧ್ಯ ಪ್ರವೇಶಿಸಲು ಭಾರತೀಯ ಕ್ರೀಡಾ ಸಚಿವಾಲಯ ನಿರಾಕರಿಸಿದ್ದು, ಈ ಬಗೆಗಿನ ನಿರ್ಧಾರವನ್ನು ತೆಗೆದುಕೊಳ್ಳಲು ಸಂಪೂರ್ಣವಾಗಿ ಅಖಿಲ ಭಾರತ ಟೆನಿಸ್ ಸಮಿತಿ (ಎಐಟಿಎ)ಗೆ ಬಿಟ್ಟುಕೊಟ್ಟಿದೆ. ಆದರೆ ಎಐಟಿಎ ಲಿಯಾಂಡರ್ ಪೇಸ್ ಪರ ನಿಂತುಕೊಂ ಡಿರುವುದು ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣಗೆ ಆಘಾತವನ್ನು ಉಂಟುಮಾಡಿದೆ.
ಇನ್ನು ಕ್ರೀಡಾ ಸಚಿವ ಮಾಕೆನ್‌ಗೆ ಬರೆದ ಪತ್ರದಲ್ಲಿ ಎಐಟಿಎ ಪೇಸ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಟೆನಿಸ್‌ಗೆ ಅಪಾರ ಗೌರವ ಕೊಡುವ ಲಿಯಾಂಡರ್ ಪೇಸ್ ಜೊತೆ ರೋಹನ್ ಬೋಪಣ್ಣರನ್ನು ಆಡಿಸಿದರೆ ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ. ಇದು ಸರಿಯಾದ ಜೋಡಿ ಕೂಡ ಅಲ್ಲ. ಒಲಿಂಪಿಕ್ಸ್‌ನಲ್ಲಿ ವಿಶ್ವದ ಅಗ್ರಶ್ರೇಯಾಂಕದ ಆಟಗಾರರ ಜೊತೆ ಸೆಣೆಸಾಡಲು ನಮಗೆ ಸಾಧ್ಯವಿಲ್ಲ ಎಂದು ಈಗಾಗಲೇ ಭೂಪತಿ ಹಾಗೂ ರೋಹನ್‌ಗೆ ಗೊತ್ತಾ ಗಿದೆ. ಒಂದು ವೇಳೆ ಬೋಪತಿ-ರೋಹನ್‌ರನ್ನು ಜೊತೆಯಾಗಿ ಆಡಿಸಿದರೆ ಆಗ ಪೇಸ್ ಒಂದಾ ಯೂಕಿ ಬಾಂಬ್ರಿ ಅಥವಾ ವಿಷ್ಣು ವರ್ಧನ್ ಜೊತೆ ಆಡಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ಸೋಮ್‌ದೇವ್ ದೇವ್‌ವರ್ಮನ್ ಈಗಾಗಲೇ ಗಾಯಕ್ಕೆ ತುತ್ತಾಗಿದ್ದಾರೆ. ಆದರೆ ವಿಶ್ವದ ಅದ್ಭುತ ಆಟಗಾರರು ನಮ್ಮಲ್ಲಿ ಇರುವಾಗ ಪೇಸ್‌ರನ್ನು ಕಿರಿಯರೊಂದಿಗೆ ಆಡಿಸುವುದು ಅರ್ಥಹೀನ ಎಂದು ಮಾಕೆನ್‌ಗೆ ಬರೆದ ಪತ್ರದಲ್ಲಿ ಎಐಟಿಎ ತಿಳಿಸಿದೆ.
Tagged with
tnews
ವಿವಾದದ ಮಧ್ಯಪ್ರವೇ ಶಿಸಲು ನಾವು ಹೋಗುವು ದಿಲ್ಲ. ಹಲವು ದಿಗ್ಗಜ ಆಟ ಗಾರರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನನ್ನನ್ನು ಕೇಳಿಕೊಂಡಿದ್ದರು. ಅದ ಕ್ಕಾಗಿ ಹಿಂದೆ ಈ ಬಗ್ಗೆ ಪ್ರತಿಕ್ರಿಯಿಸಿದ್ದೆ. ಆದರೆ ಈಗ ಆಯ್ಕೆ ಪ್ರಕ್ರಿಯೆಯ ಭಾಗವಾಗಲು ನಾವು ಹೋಗುವುದಿಲ್ಲ. ದೇಶದ ಹಿತಾದೃಷ್ಟಿಯ ಇರಾದೆ ಯಿಂದ ಇನ್ನು ಎಐಟಿಎ ಏನೇ ನಿರ್ಧಾರ ತೆಗೆದು ಕೊಂಡರೂ ಅದನ್ನು ನಾನು ಬೆಂಬಲಿಸುತ್ತೇನೆ.
ನಾನು ಏನು ಮಾಡಬೇಕಿತ್ತೋ ಅದನ್ನು ನಾನೀಗಲೇ ಮಾಡಿಮುಗಿಸಿದ್ದೇನೆ. ಇನ್ನು ಮುಂದೆ ಎಐಟಿಎ ನಿರ್ಧಾರವನ್ನು ಪ್ರಶ್ನಿಸಲು ನಾನು ಹೋಗುವುದಿಲ್ಲ. ನಾನು ಈ ಬಗ್ಗೆ ಸಚಿವಾಲಯದ ಅಧಿಕಾರಿಗಳ ಬಳಿ ಮಾತನಾಡಿದ್ದೇನೆ. ನಾವು ಮೂರು ಡಬಲ್ಸ್ ಆಟಗಾರರನ್ನು ಹೊಂದಿದ್ದು, ಆದರೆ ಒಲಿಂಪಿಕ್ಸ್‌ಗೆ ಕೇವಲ ಇಬ್ಬರೇ ಹೋಗಲು ಸಾಧ್ಯ. ಒಂದು ವೇಳೆ ಪೇಸ್ ಜೊತೆ ಆಡುವುದಕ್ಕೆ ಭೂಪತಿ ನಿರಾಕರಿಸಿದರೆ ಆಗ ಬೋಪಣ್ಣ ಮಾತ್ರ ನಮ್ಮ ಆಯ್ಕೆ ಎಂದು ಮಾಕೆನ್ ತಿಳಿಸಿದರು.
Tagged with
tnews
ಉಪ್ಪಿನಂಗಡಿ: ಉಪ್ಪಿನಂಗಡಿ ಪೇಟೆಯ ಎರಡು ಅಂಗಡಿಗಳಿಗೆ ಕಳೆದ ರಾತ್ರಿ ಕಳ್ಳರು ನುಗ್ಗಿ ೩೩ಸಾವಿರ ರೂ ನಗದು ದೋಚಿದ ಘಟನೆ ನಡೆದಿದೆ. ಸೋಮವಾರ ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಇಲ್ಲಿನ ಬ್ಯಾಂಕ್ ರಸ್ತೆಯ ಐಡಿಯಲ್ ಕ್ಲೋತ್ ಸೆಂಟರ್‌ನ ಒಳಛಾವಣಿ ಮುರಿದು ಒಳ ನುಗ್ಗಿದ ಕಳ್ಳರು ಇಲ್ಲಿದ್ದ ೩೩ಸಾವಿರ ರೂ ದೋಚಿದ್ದಾರೆ ಎಂದು ಮಾಲಕ ಅಬೀಬ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಪಕ್ಕದಲ್ಲಿರುವ ಮೈನಾ ಕ್ಲೋತ್ ಸೆಂಟರ್ ಗೂ ಕಳ್ಳರು ನುಗ್ಗಿದ್ದು, ನಗದು ಹಣಕ್ಕಾಗಿ ಪರದಾಡಿದ್ದಾರೆ. ಆದರೆ ಇಲ್ಲಿ ನಗದು ಹಣ ಇಲ್ಲದಿದ್ದುದರಿಂದ ಬೇರೇನೂ ಕಳ್ಳತನ ಮಾಡದೇ ಹೊರಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಹಸನಬ್ಬ ಎಂಬರಿಗೆ ಸೇರಿದ ಈ ಸೆಂಟರ್ ಗೆ ಕಳ್ಳರು ನುಗ್ಗಿ ಕೆಲವೊಂದು ವಸ್ತುಗಳನ್ನು ಜಾಲಾಡಿರುವುದಾಗಿ ತಿಳಿದು ಬಂದಿದೆ. ಉಪ್ಪಿನಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕಳ್ಳತನ ಪ್ರಕರಣದಲ್ಲಿ ಸ್ಥಳೀಯರ ಕೈವಾಡವನ್ನು ಶಂಕಿಸಲಾಗಿದೆ.
Tagged with
cnews,
uppinangadi
ಮಂಜೇಶ್ವರ: ವಿವಾಹಿತ ಮಹಿಳೆಯೋ ರ್ವರ ಮೃತದೇಹ ಮನೆ ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ.
ಬಾಯರು ಬಳಿಯ ಚೇರಾಲ್ ನಿವಾಸಿ ಅಶ್ರಫ್ ಎಂಬವರ ಪತ್ನಿ ಶಮೀಮ ಮೃತ ಮಹಿಳೆಯಾಗಿದ್ದಾರೆ. ಮೊನ್ನೆ ರಾತ್ರಿ ಊಟ ಮಾಡಿ ಮಲಗಿದ್ದರು. ಆದರೆ ನಿನ್ನೆ ಬೆಳಿಗ್ಗೆ ಎದ್ದು ನೋಡಿದಾಗ ಶಮೀಮಾ ನಾಪತ್ತೆ ಯಾಗಿದ್ದರು. ಇದರಿಂದ ಗಾಬರಿಗೊಂಡ ಮನೆಮಂದಿ ಹುಡುಕಾಟ ನಡೆಸಿದಾಗ ಮನೆ ಬಳಿಯ ಬಾವಿಯ ಆವರಣ ಗೋಡೆಯ ಮೇಲೆ ಬಟ್ಟೆ ಕಂಡುಬಂದಿದ್ದು, ಇದರಿಂದ ಸಂಶಯಗೊಂಡು ಅಗ್ನಿಶಾಮಕ ದಳವನ್ನು ಕರೆಸಿ ಹುಡುಕಾಟ ನಡೆಸಿದಾಗ ಶಮೀಮಳ ಮೃತ ದೇಹ ಪತ್ತೆಯಾಯಿತು. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟು ಕೊಡಲಾಗಿದೆ. ಈಕೆಯ ಸಾವಿನ ಬಗ್ಗೆ ನಾಗರಿಕರು ಸಂಶಯ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಮಂಜೇಶ್ವರ ಪೊಲೀಸರು ನಾಗರಿಕರನ್ನು ಸಮಾಧಾನ ಪಡಿಸುವಲ್ಲಿ ಸಫಲರಾದರು. ಪ್ರಕರಣದ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Tagged with
cnews,
kgod
ಪುತ್ತೂರು: ಹಲ್ಲೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆ ಯೊಂದರಲ್ಲಿ ದಾಖಲಾಗಿದ್ದ ವ್ಯಕ್ತಿಯನ್ನು ನೋಡಲೆಂದು ಬಂದ ತಂಡವೊಂದು ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತ್ಯಾಗರಾಜೆ ರಸ್ತೆ ನಿವಾಸಿ ಅಬ್ಬಾಸ್ ಗೂನಡ್ಕ (೪೦) ಹಲ್ಲೆಗೊಳಗಾಗಿ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರನ್ನು ನೋಡುವ ನೆಪದಲ್ಲಿ ಬಂದ ತಂಡ ಕೊಲೆಗೆ ಯತ್ನಿಸಿರುವುದಾಗಿ ಆರೋಪಿಸಲಾಗಿದೆ.
ತಾನು ಕಳೆದ ಶನಿವಾರ ಕುಂಬ್ರದಲ್ಲಿದ್ದ ವೇಳೆ ಅಲ್ಲಿಗಾಗಮಿಸಿದ್ದ ಇಬ್ರಾಹಿಂ ಎಂಬವರನ್ನೊಳಗೊಂಡ ತಂಡವೊಂದು ಹಲ್ಲೆ ನಡೆ ಸಿತ್ತು. ಹಲ್ಲೆಗೊಳಗಾದ ತಾನು ಅಂದೇ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದೆ. ಆಸ್ಪತ್ರೆಯಲ್ಲಿ ತಾನು ದಾಖಲಾ ಗಿದ್ದ ಕೊಠಡಿಗೆ ಸೋಮವಾರ ವೈದ್ಯರು ಆಗಮಿಸಿದ ಸಂದರ್ಭದಲ್ಲಿ ಇಬ್ರಾಹಿಂ ಬೆಳ್ಳಾರೆ, ಹಬೀಬ್ ರಹಿಮಾನ್, ಅಬ್ದುಲ್ಲಾ ಗೂನಡ್ಕ ಬಂದು ನನ್ನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವಂತೆ ವೈದ್ಯರಲ್ಲಿ ಹೇಳಿದರು. ವೈದ್ಯರು ಆಮೇಲೆ ನೋಡೋಣ ಎಂದು ಹೇಳಿ ಹೊರ ಹೋದರು. ವೈದ್ಯರು ಕೊಠಡಿಯಿಂದ ಹೊರಹೋದ ತಕ್ಷಣ ಇಬ್ರಾಹಿಂ ಬೆಳ್ಳಾರೆ ಮತ್ತವರ ತಂಡ ತನ್ನ ಕೊರಳಿಗೆ ಗ್ಲೂಕೋಸ್ ಬಾಟಲಿಯ ವಯರನ್ನು ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಅಬ್ಬಾಸ್ ಗೂನಡ್ಕ ಆರೋಪಿಸಿದ್ದಾರೆ.
ಆರೋಪಿಗಳು ಕೊಲೆಗೆ ಯತ್ನಿಸಿದ ಸಂದರ್ಭದಲ್ಲಿ ತಾನು ಹೊರಳಾಡಿ ತನ್ನ ಕಾಲಿನಿಂದ ಎಮರ್ಜೆನ್ಸಿ ಬೆಲ್ ಒತ್ತಿದೆ. ಬೆಲ್ ಶಬ್ಧ ಕೇಳಿ ಆಸ್ಪತ್ರೆಯ ಶುಶ್ರೂಷಕಿಯೊಬ್ಬರು ಬಂದಾಗ ಆರೋಪಿ ತಂಡ ಅಲ್ಲಿಂದ ಪರಾರಿಯಾಯಿತು ಎಂದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಕುರಿತು ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಆಗಮಿಸಿ ಅಬ್ಬಾಸ್ ಅವರಿಂದ ಮಾಹಿತಿ ಪಡೆದು ತೆರಳಿರುವುದಾಗಿ ತಿಳಿದು ಬಂದಿದೆ.
Tagged with
cnews,
puttur
ವಿಟ್ಲ: ಭಾನುವಾರ ಸಂಜೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಸಂಭವಿಸಿದ ಮಿನಿಲಾರಿ ಹಾಗೂ ರಿಕ್ಷಾ ನಡುವಿನ ಅಪಘಾತಕ್ಕೆ ಸಂಬಂಧಿಸಿ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ನಿವಾಸಿ ಮಹಮ್ಮದ್ ರಫೀ ಎಂಬಾತನೇ ಲಾರಿ ಚಾಲಕನಾಗಿದ್ದು, ಈತ ಭಾನುವಾರ ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತನ್ನ ಲಾರಿಯಲ್ಲಿ ಕೊರಿಯರ್ ಪಾರ್ಸಲ್ ಸಾಗಿಸುತ್ತಿದ್ದ ಸಂದರ್ಭ ಕಡೇಶ್ವಾಲ್ಯ ಕಡೆಯಿಂದ ಬರುತ್ತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದ. ಘಟನೆಯಲ್ಲಿ ರಿಕ್ಷಾ ಚಾಲಕ ಮಂಗಳೂರು ಕುಂಜತ್ತಬೈಲು ನಿವಾಸಿ ಹರೀಶ(೩೯) ಮೃತಪಟ್ಟಿದ್ದು, ಅವರ ಪತ್ನಿ, ಪುತ್ರ ಮತ್ತು ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಇವರು ಭಾನುವಾರ ಗಡಿಯಾರ ಸಮೀಪದ ಕಡೇಶ್ವಾಲ್ಯ ಎಂಬಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಬರ್ತ್‌ಡೇ ಪಾರ್ಟಿ ಮುಗಿಸಿಕೊಂಡು ಹಿಂತಿರುಗುತ್ತಿದ್ದ ಸಂದರ್ಭ ಘಟನೆ ಸಂಭವಿಸಿತ್ತು.
Tagged with
cnews,
vittla
ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಎಂಬಲ್ಲಿ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಲೆಗೈದು ಪರಾರಿಯಾಗಿರುವ ಆರೋಪಿ ಇನ್ನೂ ಪತ್ತೆಯಾಗಿಲ್ಲ. ಆದರೆ ಆರೋಪಿ ಬೆಂಗಳೂರಿ ನಲ್ಲಿರುವ ಕುರಿತು ಸುಳಿವೊಂದು ಪೊಲೀಸರಿಗೆ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಬೆಟ್ಟಂಪಾಡಿ ಗ್ರಾಮದ ಕಕ್ಕೂರು ನಿವಾಸಿ ವೆಂಕಟ್ರಮಣ ಭಟ್ ತನ್ನ ಪತ್ನಿ ಶಿಕ್ಷಕಿಯಾಗಿದ್ದ ಸಂಧ್ಯಾ.ವಿ.ಭಟ್ ಮಕ್ಕಳಾದ ವೇದ್ಯ, ಹರಿಗೋವಿಂದ ಶರ್ಮ ಮತ್ತು ವಿನುತಾ ಎಂಬವರನ್ನು ಕೊಲೆಗೈದು ವ್ಯವಸ್ಥಿತ ರೀತಿಯಲ್ಲಿ ಪರಾರಿಯಾಗಿದ್ದ. ಸಂಪ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಭಟ್ಟರ ಪತ್ತೆಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಆರೋಪಿಯ ಪತ್ತೆ ಕಾರ್ಯಾಚರಣೆಗಾಗಿ ರಚಿಸಲಾಗಿರುವ ಜಿಲ್ಲಾ ಅಪರಾಧ ಪತ್ತೆದಳ, ಎಎಸ್ಪಿ ಮತ್ತು ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದ ಪ್ರತ್ಯೇಕ ಮೂರು ಪೊಲೀಸ್ ತಂಡಗಳು ಮುಂಬಯಿ, ಕೇರಳ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ನಿರತವಾ ಗಿದ್ದರೂ ಈ ತನಕ ಆರೋಪಿಯನ್ನು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾ ಗಿಲ್ಲ. ಇದರಿಂದಾಗಿ ಕೊಲೆ ಮತ್ತು ದರೋಡೆ ನಾಟಕ ಪ್ರಕರಣ ರಹಸ್ಯ ನಿಗೂಢವಾಗಿಯೇ ಉಳಿದು ಕೊಂಡಿದೆ.
ಕಂಪ್ಯೂಟರ್ ಯುವತಿಯ ವಿಚಾರಣೆ
ಭಟ್ಟರ ಮನೆಯಲ್ಲಿ ಕಂಪ್ಯೂಟರ್ ಟೈಪಿಂಗ್ ಕೆಲಸ ಮಾಡುತ್ತಿದ್ದ ವಿಮಲಾ ನಾಯ್ಕ ಅವರ ಹೇಳಿಕೆಯನ್ನು ಆರಂಭದಲ್ಲಿ ಪಡೆದುಕೊಂಡಿದ್ದ ಪೊಲೀಸರು ಸೋಮವಾರ ವಿಮಲಾ ಅವರನ್ನು ಆಕೆಯ ತಂದೆ ಕೃಷ್ಣಪ್ಪ ನಾಯ್ಕ ಅವರ ಜೊತೆಯಲ್ಲಿ ಮತ್ತೊಮ್ಮೆ ವಿಚಾರಣೆಗೊಳಪಡಿಸಿದ್ದಾರೆ.
ದರೋಡೆ ನಾಟಕದ ಹಿಂದೆ ಕೊಲೆಯ ಪೂರ್ವ ಸಂಚು ?
ವೆಂಕಟ್ರಮಣ ಭಟ್ಟರು ಕಳೆದ ಜೂನ್ ೩ ರಂದು ಮಧ್ಯ ರಾತ್ರಿ ೨-೩೦ರ ವೇಳೆ ತನ್ನ ಮನೆಗೆ ಮಾರಕಾಯುಧಧಾರಿಗಳಾಗಿ ನುಗ್ಗಿದ ೭ ಮಂದಿಯಿದ್ದ ತಂಡವೊಂದು ಮನೆಮಂದಿಯನ್ನು ಬೆದರಿಸಿ ಮೈಮೇಲಿದ್ದ ಒಟ್ಟು ೭ ಪವನ್ ಚಿನ್ನಾಭರಣ ಮತ್ತು ಮನೆಯಲ್ಲಿದ್ದ ರೂ. ೫೦ ಸಾವಿರ ಹಣವನ್ನು ದರೋಡೆ ಮಾಡಿರುವುದಾಗಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಈ ದರೋಡೆ ನಾಟಕ ಮನೆ ಮಂದಿಯನ್ನು ಕೊಲೆ ನಡೆಸಲೆಂದೇ ಮಾಡಿರುವ ಪೂರ್ವ ಯೋಜಿತ ಸಂಚಾಗಿರಬಹುದೇ ಎಂಬ ಪ್ರಶ್ನೆ ಜನತೆಯನ್ನು ಕಾಡುತ್ತಿದೆ.
Tagged with
bettampady,
dk,
lnews
ಕುಂದಾಪುರ: ಆಗಷ್ಟೇ ಪ್ರಥಮ ಪದವಿ ಯಲ್ಲಿ ಕಲಿಯುತ್ತಿರುವ ಕಾಲೇಜು ಕನ್ಯೆ ಯೋರ್ವಳ ಟೀನೇಜ್ ಲವ್ ಮನೆಯವರ ತೀವ್ರ ವಿರೋಧದಿಂದ ನಡು ಹಾದಿಯ ಲ್ಲಿಯೇ ಕೈಬಿಟ್ಟಿರುವ ಘಟನೆಯು ಕುಂದಾಪುರದ ಕೋಣಿ ಎಂಬಲ್ಲಿ ಜರಗಿದೆ.
ಕೊಂಚ ಅನುಕೂಲಸ್ಥ ಮನೆಯವ ಳಾಗಿರುವ ಈ ಕನ್ಯೆ ಕಲಿಯುತ್ತಿದ್ದುದು ಹತ್ತಿರದ ಬಸ್ರೂರಿನ ಕಾಲೇಜಿನಲ್ಲಿ. ಅಂದ ಹಾಗೆ ಅಲ್ಲಿ ಇವಳ ಮನಸ್ಸಿನ ಹಿತ್ತಲಲ್ಲಿ ಮೆಲ್ಲ ಮೆಲ್ಲಗೆ ಬಿಡಾರ ಹೂಡಿದವನು ಕೋಣಿಯ ರಿಕ್ಷಾ ಚಾಲಕ. ನೋಡನೋಡುತ್ತಿದ್ದಂತೆ ಇವರ ಪ್ರೀತಿಯು ಅಗಲಲಾರದಷ್ಟು ಚೆಲುವಿನ ಚಿತ್ತಾರವಾಗಿ ಮಾರ್ಪಟ್ಟಿತ್ತು.
ಒಂದಷ್ಟು ಸಮಯ ಇಬ್ಬರೂ ಕಾಯ ಬಹುದಿತ್ತು. ಆದರೆ ಬೊಗಸೆಯಿಂದ ಜಾರಿದ ಹನಿಬಿಂದುಗಳ ಹಾಗೆ ಇಬ್ಬರ ಸರಹದ್ದಿನಿಂದ ಜಾರಿ ಹೋದ ಮನಸುಗಳು ಪರಾರಿಯಾ ಗುವ ದುಷ್ಟ ನಿರ್ಧಾರವನ್ನು ಕೈ ಗೊಂಡೇ ಬಿಟ್ಟಿತು. ಕೆಲ ದಿನಗಳ ಹಿಂದೆ ಮನೆಬಿಟ್ಟ ಪ್ರೇಮಿಗಳು ‘ನಾನೇ ವೀಣೆ ನೀನೇ ತಂತಿ ಎಂಬಂತೆ ಬೆಂಗಳೂರಿನ ಬಸ್ಸನ್ನು ಹತ್ತಿ ಬಿಟ್ಟಿತು. ಅಲ್ಲಿ ಹುಡುಗಿ ಮನೆಯಿಂದ ಸಾಕಷ್ಟು ಚಿನ್ನಾಭರಣಗಳನ್ನು ತೆಗೆದು ಕೊಂಡು ಹೋಗಿದ್ದರು ಎನ್ನಲಾಗಿದೆ.
ಬೆಂಗಳೂರಿನ ಮಹಾ ನಗರದಲ್ಲಿ ಬಂದಿಳಿದ ಪ್ರೇಮಿಗಳು ಅಪ್ಪಟ ಜೋಡಿಯಂತೆ ಅಲ್ಲಲ್ಲಿ ತಿರುಗಾಡಿ ಹಣ ಖಾಲಿಯಾದಾಗ ಇದೇ ಹುಡುಗಿ ತಂದಿದ್ದ ಚಿನ್ನಾಭರಣಗಳನ್ನು ಅಡವಿರಿಸಿ ಮತ್ತೆ ಅಮರ ಮಧುರ ಪ್ರೇಮದ ಡ್ಯುಯೆಟ್ ಹಾಡಿದ್ದಾರೆ.
ಇತ್ತ ಹುಡುಗಿ ಕಾಣೆಯಾಗುತ್ತಲೇ ಹುಡುಕಾಟಕ್ಕಿಳಿದ ಹುಡುಗಿಯ ಕಡೆಯವರು ಸಾಕಷ್ಟು ಶೋಧ ನಡೆಸಿ ಕೊನೆಗೂ ಮೊಬೈಲ್ ಜಾಡಿನ ಮೂಲಕ ಪ್ರೇಮಿಗಳನ್ನು ಕುಂದಾಪುರಕ್ಕೆ ಕರೆತರುವಲ್ಲಿ ಯಶಸ್ವಿ ಯಾಗಿದ್ದಾರೆ. ಹುಡುಗನ ಮೇಲೆ ಸಿಕ್ಕಾಪಟ್ಟೆ ರಾಂಗ್ ಆಗಿ ವಕೀಲರೋರ್ವರ ಮಧ್ಯಸ್ಥಿಕೆಯಲ್ಲಿ ಯಾವುದೇ ದೂರು ದಾಖಲಿಸದೆ ಅವರು ಅಡವಿರಿಸಿದ ಚಿನ್ನಾಭರಣಗಳನ್ನು ವಾಪಾಸು ಕೊಡುವ ವಾಗ್ದಾನದ ಮೇಲೆ ಇನ್ನು ಮುಂದೆ ಪ್ರೇಮಿಗಳಿಬ್ಬರಿಂದಲೂ ನೀನ್ಯಾರೋ-ನಾನ್ಯಾರೋ ಎಂದು ಬರೆಯಿಸಿಕೊಂಡು ಕಾಲೇಜ್ ಕನ್ಯೆ ಟೀನೇಜ್ ಲವ್‌ಗೆ ಬ್ರೇಕ್ ಹಾಕುವಲ್ಲಿ ಸಫಲರಾಗಿದ್ದಾರೆ.
ಅಂದಹಾಗೆ ಇಷ್ಟೆಲ್ಲಾ ಪ್ರೇಮಿಸಿ ನೀನೇ ಜೀವ ನಾನೇ ದೇಹ ಎನ್ನುತ್ತಿದ್ದ ಪ್ರೇಮಿಗಳಲ್ಲಿ ಕೊನೆಗೆ ಹುಡುಗಿ ಮಾತ್ರ ಮನಸ್ಸಿಲ್ಲದ ಮನಸ್ಸಿನಿಂದ ‘ನೀನು ನನಗೆ ಇಷ್ಟವಿಲ್ಲ ಕಣೋ.. ಎಂಬಲ್ಲಿಗೆ ಲಿಟಲ್ ಲವ್ ಸ್ಟೋರಿ ನೆಗೆದು ಬಿದ್ದಿದೆ.
Tagged with
lnews,
udupi
ವಿಟ್ಲ: ಕಳೆದ ಹಲವಾರು ವರ್ಷಗಳ ವಿಟ್ಲದ ಜನತೆಯ ಬೇಡಿಕೆಯಾದ ವಿಟ್ಲ ರಸ್ತೆ ಅಗಲೀಕರಣಕ್ಕೆ ಹಾಗೂ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ೧೫ಮೀ ಸುತ್ತಳತೆಯ ಸರ್ಕಲ್ ನಿರ್ಮಿಸಲು ಮಂಗಳವಾರ ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಅವರು ಅಧಿಕೃತ ಘೋಷಣೆ ಮಾಡಿದರು.
ವಿಟ್ಲಕ್ಕೆ ಮಂಗಳವಾರ ರಸ್ತೆ ಅಗಲೀಕರಣ ವಿಚಾರವಾಗಿ ಭೇಟಿ ನೀಡಿ ಜನಪ್ರತಿನಿಧಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ವಿಷಯ ತಿಳಿಸಿ ದರು. ಕಳೆದ ಹಲವಾರು ವರ್ಷಗಳಿಂದ ವಿಟ್ಲ ಟ್ರಾಫಿಕ್‌ಗೆ ರೋಸಿ ಹೋಗಿದ್ದ ವಿಟ್ಲ ಜನತೆ ಜಿಲ್ಲಾಧಿಕಾರಿ ಅವರ ಈ ಅಧಿಕೃತ ಘೋಷಣೆಯಿಂದ ನಿಟ್ಟುಸಿರು ಬಿಡುವಂತಾಗಿದೆ.
Tagged with
dk,
lnews
ಸುಳ್ಯ: ಕಳೆದ ಮೂರು ದಿನಗ ಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಅಲ್ಲಲ್ಲಿ ಹಾನಿ ಸಂಭವಿಸಿದೆ.
ಮಂಗಳವಾರ ಕಾಂತಮಂಗಲದ ಅಮ್ಮಣ್ಣಿ ಎಂಬವರ ಮನೆಯ ಮಾಡು ಕುಸಿದು ಬಿದ್ದಿದ್ದು, ಸುಮಾರು ೫ ಸಾವಿರ ರೂಪಾಯಿ ನಷ್ಟ ಸಂಭವಿಸಿದೆ. ಕಾಂತಮಂಗಲ -ಮುಳ್ಯಕಜೆ ರಸ್ತೆಗೆ ಅಡ್ಡವಾಗಿ ಭಾನುವಾರ ಬಿದಿರಿನ ಹಿಂಡಲು ಬಿದ್ದು ಎರಡು ವಿದ್ಯುತ್ ಕಂಬಗಳು ಮುರಿದಿವೆ. ಇದರಿಂದ ವಾಹನ ಸಂಚಾರ ಮತ್ತು ವಿದ್ಯುತ್ ಸರಬರಾಜಿಗೆ ಅಡ್ಡಿಯಾಗಿದೆ. ರಸ್ತೆಯು ದ್ದಕ್ಕೂ ಸುಧಾಕರ ಪ್ರಭು ಎಂಬವರಿಗೆ ಸೇರಿದ ಜಮೀನಿದ್ದು, ಅದರಲ್ಲಿರುವ ಬಿದಿರಿನ ಹಿಂಡಿಲು ರಸ್ತೆಗೆ ಬಾಗಿಕೊಂ ಡಿದ್ದು, ಅದನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.ಪೆರಾಜೆ ಗ್ರಾಮದ ಅಂಜಿಕಾರು ಎಂಬಲ್ಲಿ ಪ್ರಭಾಕರ ಪೈ ಎಂಬವರ ಕೊಟ್ಟಿಗೆ ಮೇಲೆ ಹತ್ತಿರದ ಮಣ್ಣಿನ ಬರೆ ಬಿದ್ದು ಹಾನಿಗೊಂಡಿದೆ.
Tagged with
dk,
lnews,
rain
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಸದಾನಂದ ಗೌಡರನ್ನು ಪದಚ್ಯುತಿಗೊಳಿಸುವ ವಿಷಯದಲ್ಲಿ ಯಡಿಯೂರಪ್ಪ ಬಣದಲ್ಲೇ ಅಪಸ್ವರ ಕಂಡಿದೆ.
ಸದಾನಂದಗೌಡರನ್ನು ಬದಲಾವಣೆ ಮಾಡುವ ಉದ್ದೇಶದಿಂದ ತುರ್ತು ಶಾಸಕಾಂಗ ಸಭೆ ಕರೆಯುವಂತೆ ಆಗ್ರಹಿಸಲು ಲೋಕೋಪಯೋಗಿ ಸಚಿವ ಉದಾಸಿ ಅವರ ನಿವಾಸದಲ್ಲಿ ಸೇರಿದ್ದ ಸಭೆಯಲ್ಲಿ ಈ ಬದಲಾವಣೆ ಕಂಡಿದೆ.
ಈ ಬಗ್ಗೆ ನಿರ್ಣಯ ಕೈಗೊಳ್ಳುವ ಮುನ್ನ ಸದಾನಂದಗೌಡರನ್ನು ಯಾವ ಕಾರಣಕ್ಕೆ ಇಳಿಸಬೇಕೆಂದು ಉದಾಸಿ ಸೇರಿದಂತೆ ಕೆಲವು ಸಚಿವರು ಪ್ರಸ್ತಾಪ ಮಾಡಿದ ಸಂದರ್ಭದಲ್ಲೇ ಯಲಹಂಕ ಕ್ಷೇತ್ರ ಪ್ರತಿನಿಧಿಸುವ ಎಸ್.ಆರ್. ವಿಶ್ವನಾಥ್, ಕಳಸಪ್ಪ ಬಂಡಿ, ಬೇಲೂರು ಗೋಪಾಲಕೃಷ್ಣ ಸೇರಿದಂತೆ ಆರಕ್ಕೂ ಹೆಚ್ಚು ಸದಸ್ಯರು ಸಚಿವರ ವಿರುದ್ಧವೇ ತಿರುಗಿ ಬಿದಿದ್ದಾರೆ.
ಸಭೆಯ ಔಚಿತ್ಯವನ್ನು ಪ್ರಶ್ನಿಸಿದ ಈ ಸದಸ್ಯರು ಸದಾನಂದಗೌಡರು ನಮ್ಮಗಳ ಕೆಲಸ ಮಾಡುತ್ತಿಲ್ಲ ಎನ್ನುತ್ತ್ತೀರಿ. ಅದನ್ನೂ ಒಪ್ಪುತ್ತೇವೆ. ಆದರೆ ಸಚಿವರಾದ ನೀವು, ನಮ್ಮ ಕ್ಷೇತ್ರಗಳಿಗೆ ಏನು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೀರಿ ಎಂಬುದನ್ನು ಬಹಿರಂಗಪಡಿಸಿ.
ಬೇರೆಯವರ ಮೇಲೆ ದೂರುವ ಬದಲು ನಾವು ಏನು ಮಾಡಿದ್ದೇವೆ ಎನ್ನುವುದು ಹೊರ ಬರಲಿ ಎಂದು ವಿಶ್ವನಾಥ ಹೇಳುತ್ತಿದ್ದಂತೆ ಇತರರು ಧ್ವನಿಗೂಡಿಸಿದ್ದಾರೆ.
ನಾಯಕತ್ವ ಬದಲಾವಣೆ ಹಾದಿ ಬೀದಿಯಲ್ಲಿ ಮಾಡುವುದಲ್ಲ. ನೀವೇ ಕೆಲವು ನಾಯಕರು ದೆಹಲಿಗೆ ತೆರಳಿ, ವರಿಷ್ಠರ ಮನವೊಲಿಸಿ, ಅದು ಬಿಟ್ಟು, ಶಾಸಕರ ಸಭೆ ಕರೆದು ಅವರನ್ನು ಬೆದರಿಕೆ ಹಾಕಿ, ನಿಮ್ಮ ಕೆಲಸ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ.
ಸಂಪುಟ ವಿಸ್ತರಣೆ ನಡೆಯುತ್ತಿದೆ ಎನ್ನುವ ಸಂದರ್ಭದಲ್ಲೇ ಬೇರೆಯವರಿಗೆ ಅವಕಾಶ ಕಲ್ಪಿಸದಿರಲು ಇಂತಹ ಸಭೆ ನಡೆಸಿ, ಬೆದರಿಕೆ ತಂತ್ರ ರೂಪಿಸುವ ಪ್ರಯತ್ನ ಇದಾಗಿದೆ ಎಂದು ಖಾರವಾಗಿ ನುಡಿದಿದ್ದಾರೆ.
ನಮ್ಮ ಉದ್ದೇಶ ಶಾಸಕಾಂಗ ಸಭೆ ಕರೆಯಬೇಕೆಂಬ ಒತ್ತಾಯ. ಉಳಿದ ವಿಚಾರ ಇಲ್ಲಿಗೆ ನಿಲ್ಲಿಸೋಣ ಎಂದು ಕೆಲವು ಸಚಿವರು ಹೇಳಿ. ಸಭೆ ಮುಕ್ತಾಯಗೊಳಿಸಿದರು.
Tagged with
dvs,
snews
ಹಜಾರೆ ಹೋರಾಟ ಬೆಂಬಲಿಸಿದವನ ಕ್ಯಾರೆಕ್ಟರ್ ಸರಿಯಿಲ್ಲವಂತೆ!
ಮಂಗಳೂರು: ಅಣ್ಣಾ ಹಜಾರೆಯವರ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆ ಯಲ್ಲಿ ಭಾಗವಹಿಸಿದನೆಂಬ ಕಾರಣಕ್ಕೆ ಸಂತ ಅಲೋಶಿಯಸ್ ಕಾಲೇಜು ಇಲ್ಲಿನ ವಿದ್ಯಾರ್ಥಿಗೆ ನಡತೆ ತೃಪ್ತಿದಾಯಕವಾಗಿಲ್ಲ ಎನ್ನುವ ಸರ್ಟಿಫಿಕೇಟು ನೀಡಿದ್ದು, ಇದು ಖಂಡನಾರ್ಹ ಎಂದು ಆರೋಪಿಸಿದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಇಂದು ಜಿಲ್ಲೆ ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ಬಿಂದು ಮಾಧವ್ ತಿಲಕ್ ಎನ್ನುವ ವಿದ್ಯಾರ್ಥಿ ಎಬಿವಿಪಿಯ ನಗರ ಕಾರ್ಯ ದರ್ಶಿಯಾಗಿದ್ದು, ಸಂತ ಅಲೋಶಿಯಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಯಾಗಿದ್ದ. ಕಳೆದ ನವೆಂಬರ್‌ನಲ್ಲಿ ಭ್ರಷ್ಟಾ ಚಾರದ ವಿರುದ್ಧ ಅಣ್ಣಾ ಹಜಾರೆ ಹೋರಾಟ ಆರಂಭಿಸಿದಾಗ ಇವರ ಹೋರಾಟಕ್ಕೆ ದೇಶ ದಾದ್ಯಂತ ಬೆಂಬಲ ವ್ಯಕ್ತವಾಗಿತ್ತು. ಅದರಂತೆ ಸಂತ ಅಲೋಶಿಯಸ್ ಕಾಲೇಜು ಪಿಯುಸಿ ವಿದ್ಯಾರ್ಥಿಗಳ ಹೋರಾಟದ ಮುಂದಾ ಳತ್ವವನ್ನು ಬಿಂದು ಮಾಧವ್ ವಹಿಸಿಕೊಂಡಿದ್ದ. ಇದೀಗ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿದ್ದು, ಬಿಂದು ಮಾಧವ್ ೮೮% ಅಂಕ ಪಡೆದು ಉತೀರ್ಣಗೊಂಡಿ ದ್ದನಾದರೂ ಆತನ ವರ್ಗಾವಣೆ ಪತ್ರ ಪಡೆಯುವ ವೇಳೆ ಕಾಲೇಜು ನೀಡಿದ್ದ ನಡತೆ ಪತ್ರದಲ್ಲಿ ಈತನ ನಡತೆ ಸರಿಯಿಲ್ಲ ಎಂದು ದಾಖಲಿಸಿದೆ ಎಂದು ದೂರಿದ ಎಬಿವಿಪಿ, ಎರಡು ವರುಷದ ಅವಧಿಯಲ್ಲಿ ಬಿಂದು ಮಾಧವ್ ಬಗ್ಗೆ ಕಾಲೇಜಿನಲ್ಲಿ ಒಂದೇ ಒಂದು ದೂರು ಇಲ್ಲ, ಹಾಜರಿ ಕೊರತೆ ಇಲ್ಲ. ಕೇವಲ ಆತ ಅಣ್ಣಾ ಹಜಾರೆಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸಿದ್ದಾನೆ ಎನ್ನುವ ಕಾರಣಕ್ಕೆ ಕಾಲೇಜು ಈ ರೀತಿ ಮಾಡಿದ್ದು ಖಂಡನಾರ್ಹವಾಗಿದೆ.
ಈ ಬಗ್ಗೆ ಪ್ರಾಂಶುಪಾಲರಲ್ಲಿ ಕೇಳಿದರೆ ಅವರು ನೀವು ಮಾಡುವುದು ಮಾಡಿ ನಾವು ಬೇರೆ ಸರ್ಟಿಫಿಕೆಟ್ ನೀಡುವುದಿಲ್ಲ ಎಂದು ಉಡಾಫೆಯಿಂದ ಮಾತನಾಡಿದ್ದಾರೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್ ದೂರಿದ್ದಾರೆ. ಅಲ್ಲದೇ ಅನುಮತಿ ಇಲ್ಲದೇ ಕಾಲೇಜ್ ಕೋರ್ಸ್ ನಡೆಸುತ್ತಿದೆ ಎಂದು ಎಂದು ದೂರಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ಕಾಲೇಜಿನ ಈ ಅನ್ಯಾಯದ ವಿರುದ್ಧ ಇಂದು ಉಡುಪಿ, ಕೊಡಗು ಮತ್ತು ದ.ಕ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
Tagged with
dk,
lnews
ಮೂಡಬಿದಿರೆ: ಇರ್ವತ್ತೂರಿನ ಜಲ್ಲಿ ಕ್ರಷರ್‌ನಿಂದ ಜಲ್ಲಿ ಸಾಗಿಸುವ ಟಿಪ್ಪರ್ ಗಳಿಂದಾಗಿ ಕೆಲ್ಲ ಪುತ್ತಿಗೆ, ರೆಂಜಾಳ ಮತ್ತು ಕೆಂಪು ಗುಡ್ಡೆಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಎಚ್ಚರಿಸಿದರೂ ಸುಧಾರಿಸದ ಟಿಪ್ಪರ್‌ಗಳನ್ನು ಕೆಂಪುಗುಡ್ಡೆಯ ಗ್ರಾಮಸ್ಥರು ತಡೆದು ನಿಲ್ಲಿಸಿದ ಘಟನೆ ಮಂಗಳವಾರ ನಡೆದಿದೆ.
ಈ ಭಾಗದ ರಸ್ತೆಗಳು ಟಿಪ್ಪರ್‌ಗಳಿಂದ ಹಾಳಾಗುತ್ತಿದ್ದು, ಈ ಬಗ್ಗೆ ಪರಿಹಾರ ಸೂಚಿ ಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಸಮಯದಿಂದ ಮನವಿ ಮಾಡಿ ದ್ದರೂ ಯಾವುದೇ ಪ್ರಯೋಜನವಾಗಿಲ್ಲ ವೆನ್ನಲಾಗಿದೆ. ಇತ್ತೀಚೆಗೆ ಶಾಲಾ ವಿದ್ಯಾರ್ಥಿನಿ ಯೋರ್ವಳು ಚರಂಡಿಗೆ ಬಿದ್ದು ಗಾಯ ಗೊಂಡ ಪ್ರಸಂಗವೂ ನಡೆದಿದೆ. ಇಲ್ಲಿನ ಸಮಸ್ಯೆಯ ಬಗ್ಗೆ ಸ್ಥಳೀಯ ಪಂಚಾಯತ್ ನವರಿಗೂ ತಿಳಿಸಲಾಗಿತ್ತು. ಪಂಚಾಯತ್ ನವರು ಚರಂಡಿ ತೆಗೆಯುವ ಕೆಲಸ ಮಾಡಿ ಅದರ ಮಣ್ಣನ್ನು ರಸ್ತೆಗೆ ಹಾಕಿದ್ದರು. ಮಳೆಗಾಲ ಪ್ರಾರಂಭವಾಗಿ ಹದಗೆಟ್ಟಿದ್ದ ರಸ್ತೆಗೆ ಮಣ್ಣು ಸೇರಿ ಸಂಪೂರ್ಣ ಕೆಸರುಮಯವಾಗಿ ಮತ್ತೊಂದು ಸಮಸ್ಯೆ ನಿರ್ಮಾಣವಾಗಿದೆ. ಈ ಎಲ್ಲಾ ಸಮಸ್ಯೆಗಳ ವಿರುದ್ಧ ಸ್ಥಳೀಯರಾದ ವೈ. ಜಯಗೋಪಾಲ ಭಟ್‌ರವರ ನೇತೃತ್ವದಲ್ಲಿ ಸ್ಥಳೀಯ ಯುವಕರು ಮಂಗಳವಾರ ೪ ಟಿಪ್ಪರ್‌ಗಳನ್ನು ತಡೆದು ಪ್ರತಿಭಟಿಸಿದ್ದಾರೆಂದು ತಿಳಿದು ಬಂದಿದೆ.
Tagged with
dk,
lnews
ಹೈದರಾಬಾದ್: ಅಕ್ರಮ ಗಣಿಗಾರಿಕೆಯ ಆರೋಪಿ ಜನಾರ್ದನ ರೆಡ್ಡಿಗೆ ಜಾಮೀನು ನೀಡಲು ಲಂಚ ಪಡೆದು ಇಡೀ ನ್ಯಾಯಾಂಗಕ್ಕೆ ಕಪ್ಪು ಮಸಿ ಬಳಿದು ಅಮಾನತುಗೊಂಡಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಟ್ಟಾಭಿ ರಾಮ ರಾವ್ ಅವರನ್ನು ಆಂಧ್ರಪ್ರದೇಶದ ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ) ಮಂಗಳವಾರ ಅಧಿಕೃತವಾಗಿ ಬಂಧಿಸಿದೆ.
ಲಂಚದ ಡೀಲ್ ಕುದುರಿಸಲು ಪ್ರಮುಖ ಪಾತ್ರ ವಹಿಸಿದ್ದ ನ್ಯಾಯಾಧೀಶರ ಮಗ ಟಿ. ರವಿ ಚಂದ್ರ ಮತ್ತು ನಿವೃತ್ತ ನ್ಯಾಯಾಧೀಶ ಪಿ.ವಿ. ಚಲಪತಿರಾವ್ ಅವರನ್ನು ಎಸಿಬಿ ಈಗಾಗಲೇ ಬಂಧಿಸಿದೆ. ಪಟ್ಟಾಭಿರಾಮ ರಾವ್ ಅವರನ್ನು ಮಂಗಳವಾರ ಅವರ ಮನೆಯಿಂದ ಎಸಿಬಿ ಕಚೇರಿಗೆ ಕರೆದೊಯ್ದು ಬೆಳಿಗ್ಗೆ ತೀವ್ರವಾಗಿ ವಿಚಾರಣೆಗೆ ಗುರಿಪಡಿಸಿದ ನಂತರ ಭ್ರಷ್ಟಾಚಾರ ವಿರೋಧಿ ದಳದ ನಿರ್ದೇಶಕ ಬಿ ಪ್ರಸಾದ್ ರಾವ್ ಅವರು ನ್ಯಾಯಾಧೀಶರನ್ನು ಅಧಿಕೃತವಾಗಿ ಬಂಧಿಸಿದ್ದಾರೆ.
ಓಬಳಾಪುರಂ ಮೈನಿಂಗ್ ಕಂಪೆನಿಯ ಮಾಲಿಕ ಜನಾರ್ದನ ರೆಡ್ಡಿಗೆ ಜಾಮೀನು ನೀಡಲು ಅಮಾನತುಗೊಂಡ ನ್ಯಾಯಾಧೀಶ ಪಟ್ಟಾಭಿರಾಮ ರಾವ್ ಅವರು ೬೦ ಕೋಟಿ ರು. ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಸಚಿವರುಗಳಾದ ಸೋಮಶೇಖರ ರೆಡ್ಡಿ ಮತ್ತು ಸುರೇಶ ಬಾಬು ಅವರ ವಿರುದ್ಧ ಕೂಡ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ.
ಈ ಭ್ರಷ್ಟಾಚಾರ ಪ್ರಕರಣದ ಕೇಂದ್ರ ಬಿಂದು ನಿವೃತ್ತ ನ್ಯಾಯಾಧೀಶ ಚಲಪತಿ ರಾವ್ ಅವರು ಎಸಿ ಕಾಲೇಜ್ ಆಫ್ ಲಾನಲ್ಲಿ ಕಾನೂನು ಓದುತ್ತಿದ್ದಾಗ ಪಟ್ಟಾಭಿರಾಮ ರಾವ್ ಅವರ ಸಹಪಾಠಿಯಾಗಿದ್ದರು. ಇದೇ ಚಲಪತಿ ರಾವ್ ನಡೆಸಿದ ದೂರವಾಣಿ ಸಂಭಾಷಣೆಯ ಆಧಾರದ ಮೇಲೆ ಈ ಪ್ರಕರಣವನ್ನು ಬಯಲಿಗೆಳೆಯಲಾಗಿದೆ.
Tagged with
nnews,
pattabhi
ನವದೆಹಲಿ: ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎನ್ನಲಾಗುತ್ತಿದೆ. ಆದರೆ ಈ ಕುರಿತಂತೆ ಇದ್ದ ಎಲ್ಲಾ ಉಹಾಪೋಹ ಗಳಿಗೆ ಅಂತ್ಯಹಾಡಿದ ಬಿಹಾರ ಮುಖ್ಯ ಮಂತ್ರಿ ನಿತೀಶ್ ಕುಮಾರ್, ತಾವು ಪ್ರಧಾನಿ ಅಭ್ಯರ್ಥಿಯ ರೇಸ್‌ನಲ್ಲಿಲ್ಲ. ನರೇಂದ್ರ ಮೋದಿಯನ್ನಂತೂ ನಾವು ಒಪ್ಪುವುದಿಲ್ಲ ಎಂದು ಹೇಳಿಕೆ ನೀಡಿ ಬಿಜೆಪಿ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟ ಮುಂಚಿತವಾಗಿ ಪ್ರಧಾನಿ ಅಭ್ಯರ್ಥಿ ಯನ್ನು ಘೋಷಿಸಬೇಕು. ಪ್ರಧಾನಿ ಅಭ್ಯರ್ಥಿ ಯಾದ ವ್ಯಕ್ತಿ ಮೈತ್ರಿಕೂಟದ ಪಕ್ಷಗಳಿಗೆ ಒಪ್ಪಿಗೆಯಾಗಬೇಕು. ಪ್ರಮು ಖವೆಂದರೆ ಜಾತ್ಯತೀತ ಮನೋ ಭಾವನೆ ಹೊಂದಿರ ಬೇಕು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಹುಧಾರ್ಮಿಕ ಮತ್ತು ಬಹುಭಾಷೆ ಹೊಂದಿರುವ ದೇಶ ನಮ್ಮದು. ಪ್ರಧಾನಿ ಅಭ್ಯರ್ಥಿಯಾಗುವ ವ್ಯಕ್ತಿಯ ಮೇಲೆ ದೇಶದ ಜನತೆ ವಿಶ್ವಾಸ ತೋರಿಸುವಂ ತಿರಬೇಕು ಎಂದು ಹೇಳಿದ್ದಾರೆ.
Tagged with
nitish,
nnews
ಮಣಿಪಾಲ: ಕಟ್ಟಡ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಲಿಫ್ಟ್ ಅಳವಡಿಕೆಗೆ ತೆಗೆಯಲಾದ ಗುಂಡಿಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಅಂಬಲಪಾಡಿಯಲ್ಲಿ ನಿನ್ನೆ ಸಂಭವಿಸಿದೆ. ಹಾವೇರಿ ಮೂಲದ ಮಂಜು ಮೃತ ಕಾರ್ಮಿಕ. ಇವರು ಅಂಬಲಪಾಡಿ ನಾಗಗರಾಜ್ ಬಲ್ಲಾಳ್ ಮಾಲಕತ್ವದ ಜನಾರ್ದನ ಹೈತ ಕಟ್ಟಡ ಕಾಮಗಾರಿಯನ್ನು ಮುಗಿಸಿ ಹೊರಬರುತ್ತಿದ್ದಾಗ ಲಿಫ್ಟಿಗೆಂದು ತೆಗೆಯಲಾದ ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಹಕಾರ್ಮಿಕ ಶೇಕಪ್ಪ ಇತರ ಕಾರ್ಮಿಕರೊಂದಿಗೆ ಸೇರಿ ಆಸ್ಪತ್ರೆಗೆ ದಾಖಲಿಸಿದರೂ,ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Tagged with
cnews,
manipal
ಬೆಂಗಳೂರು: ತಮಿಳ್ನಾಡು ಮುಖ್ಯಮಂತ್ರಿ ಜಯಲಲಿತಾ ಹೆಸರಿಗೆ ೨೦ ಕೋಟಿ ರೂ. ಮೌಲ್ಯದ ಆಸ್ತಿ ಬರೆದಿಟ್ಟು ೨೪ರ ಹರೆಯದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಯಂಬತ್ತೂರಿನಲ್ಲಿ ನಡೆದಿದೆ.
Tagged with
snews
ಮಂಗಳೂರು: ಸಂಚರಿಸುತ್ತಿದ್ದ ಲಾರಿಗೆ ನಿನ್ನೆ ಸಂಜೆ ಕಾಸರಗೋಡಿನ ವಿದ್ಯಾನಗರದಲ್ಲಿ ಬೆಂಕಿ ತಗುಲಿದೆ. ರಾಜ್‌ಘಾಟ್‌ನಿಂದ ಚೆಂಗನಾಶ್ಯೇರಿಗೆ ಉದ್ದಿಬೇಳೆಯ ಮೂಟೆಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಗೆ ವಿದ್ಯಾನಗರ ಜಲಪ್ರಾಧಿಕಾರದ ಬಳಿ ಹಿಂಬದಿಯ ಚಕ್ರ ಸಿಡಿದ ಪರಿಣಾಮ ಬೆಂಕಿ ತಗುಲಿತು. ಜಲಪ್ರಾಧಿಕಾರದ ಕಚೇರಿ ನೌಕರರು, ಅಗ್ನಿಶಾಮಕ ದಳದ ಸಿಬ್ಬಂದಿ, ಸಾರ್ವಜನಿಕರು ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.
Tagged with
cnews,
mlore
ಮಂಗಳೂರು: ನಿಟ್ಟೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ. ಓದುತ್ತಿದ್ದ ಕಾರ್ಕಳ ಸಾಲ್ಮರ ಕಾಬೆಟ್ಟು ನಿವಾಸಿ ಹಫ್ಸಾ ಬಾನು (೨೦) ಕಾಣೆಯಾಗಿದ್ದಾಳೆ. ಈಕೆ ಕಳೆದ ಜೂ. ೧೫ರಂದು ಕಾಲೇಜಿ ಗೆಂದು ಹೋದವಳು ವಾಪಾಸು ಬಾರದೆ ನಾಪತ್ತೆಯಾಗಿದ್ದು, ಈ ಬಗ್ಗೆ ಕಾರ್ಕಳ ಪೊಲೀಸರಿಗೆ ದೂರು ನೀಡಲಾಗಿದೆ.
Tagged with
cnews,
missing
ಬೆಂಗಳೂರು: ಪಂಚಾಯತ್ ರಾಜ್ ಸಚಿವ ಜಗದೀಶ್ ಶಟ್ಟರ್‌ಗೆ ಯಡಿಯೂರಪ್ಪ ಮುಖ್ಯಮಂತಿ ಯನ್ನಾಗಿಸುವ ಆಸೆ ತೋರಿಸಿ ಕೈಕೊಟ್ಟಿದ್ದಾರೆ. ರಾಜಕೀಯವಾಗಿ ತಮ್ಮ ಗುರಿಮುಟ್ಟಿಕೊಳ್ಳಲು ಯಡಿಯೂರಪ್ಪ ಅವರು ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಕಳೆದ ಎರಡು ದಿನಗಳಿಂದ ಸಂಚಲನ ಮೂಡಿಸಿದ್ದರು. ಇದಕ್ಕಾಗಿ ತಮ್ಮ ಬೆಂಬಲಿಗ ಶಾಸಕರ ಸಭೆ ನಡೆಸಿದ್ದ ಯಡ್ಡಿ ವರಿಷ್ಠರ ಮೇಲೂ ಒತ್ತಡ ಹೇರಲು ತೀರ್ಮಾನಿಸಿದ್ದರು.
ಇಂದು ದೆಹಲಿಗೆ ತೆರಳಿ ಅಧ್ಯಕ್ಷರನ್ನು ಭೇಟಿ ಮಾಡಲು ವಿಮಾನದ ಟಿಕೆಟ್ ಕೂಡಾ ಬುಕ್ ಆಗಿತ್ತು. ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಇರುವುದಿಲ್ಲ ಎಂಬುವುದನ್ನು ಮನಗಂಡರೂ ಪ್ರಚಾರಕ್ಕಾಗಿ ಶೆಟ್ಟರ್ ಪರವಾಗಿ ದೆಹಲಿಗೆ ತೆರಳುವುದಾಗಿ ಪ್ರಕಟಿಸಿದ್ದರು. ನಿನ್ನೆ ರಾತ್ರಿ ಯಡಿಯೂರಪ್ಪರ ಮನೆಯಲ್ಲಿ ಸಭೆ ಸೇರಿದ್ದ ಆಪ್ತರ ಸಭೆಯಲ್ಲಿ ತಮ್ಮ ದೆಹಲಿಗೆ ಹೋಗುವ ನಿರ್ಧಾರವನ್ನು ಕೈಬಿಟ್ಟರು.
ಸಿಬಿಐ ಹೈಕೋರ್ಟಿನಲ್ಲಿ ಗಣಿಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಮ್ಮ ಪರವೇ ತೀರ್ಪು ಬರುವ ಸಾಧ್ಯತೆ ಇದೆ. ನ್ಯಾಯಾಲಯದ ತೀರ್ಪಿನ ನಂತರ ದೆಹಲಿಗೆ ಹೋಗೋಣ ಎಂದು ಹೇಳಿ ವರಸೆ ಬದಲಾಯಿಸಿದರು. ಒಂದು ವೇಳೆ ನ್ಯಾಯಾಲಯದ ತೀರ್ಪು ತಮ್ಮ ಪರವಾಗಿಯೇ ಮುಂದುವರಿದರೆ ತಾವೇ ಮುಖ್ಯಮಂತ್ರಿಯಾಗಬಹುದೆಂಬ ಆಸೆ ಇನ್ನೂ ಅವರಿಗಿದೆ. ಇದಕ್ಕೆಂದೇ ತಕ್ಷಣ ನಿರ್ಧಾರ ಬದಲಾಯಿಸಿದ ಯಡಿಯೂರಪ್ಪ ದೆಹಲಿ ಪ್ರವಾಸವನ್ನು ರದ್ದುಗೊಳಿಸಿದರು. ಕಳೆದ ಆರು ತಿಂಗಳಲ್ಲಿ ಒಂಬತ್ತನೇ ಬಾರಿಗೆ ಸದಾನಂದ ಗೌಡರನ್ನು ಅಧಿಕಾರದಿಂದ ಕೆಳಗಿಳಿಸುವ ಹೋರಾಟ ನಡೆಸಿ ಅದು ತಾರಕಕ್ಕೆ ಮುಟ್ಟುವ ಸಮಯದಲ್ಲಿ ಕೈ ಬಿಟ್ಟರು. ಈ ಮಧ್ಯೆ ಗೌಡರನ್ನು ಬದಲಾವಣೆ ಮಾಡಿದರೆ ಸತೀಶ್ ಜಾರಕಿಹೋಳಿ ಬಣದ ೧೮ ಮಂದಿ ಶಾಸಕರು ತಮ್ಮ ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ. ಸದಸ್ಯತ್ವಕ್ಕೆ ರಾಜಿನಾಮೆ ನೀಡುವುದು ಒಂದು ಭಾಗವಾದರೆ ಗೌಡರನ್ನು ಕೆಳಗಿಳಸಿ ಪಕ್ಷದ ವತಿಯಿಂದ ಯಾರೇ ಮುಖ್ಯಮಂತ್ರಿಯಾದರೂ ಅವರಿಗೆ ತಮ್ಮ ಬೆಂಬಲವಿಲ್ಲ ಎಂದು ಪ್ರಕಟಿಸಿದ್ದಾರೆ. ಇದರಿಂದ ಗೌಡರನ್ನು ಬದಲಾವಣೆ ಮಾಡಿದರೆ ಸರಕಾರವೇ ಪತನವಾಗುತ್ತದೆ ಎಂದು ಬಿಜೆಪಿಯೂ ವರಿಷ್ಠರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
Tagged with
snews,
yeddi
ಸುಳ್ಯ: ಪಾದಚಾರಿಯೊಬ್ಬರಿಗೆ ಇಂಡಿಕಾ ಕಾರೊಂದು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಅರಂಬೂರಿನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಕಾಸರಗೋಡು ಬಂದ್ಯಡ್ಕದ ಸಂಜೀವ ರೈ ಎಂಬವರು ತಮ್ಮ ಸಹೋದರ ಅರಂಬೂರಿನಲ್ಲಿರುವ ಬಾಲಕೃಷ್ಣ ರೈ ಎಂಬವರ ಮನೆಗೆ ಬಂದಿದ್ದು, ಸಂಜೆ ಮತ್ತೆ ತಮ್ಮ ಮನೆಗೆ ಹಿಂತಿರುಗಲು ಅರಂಬೂರು ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ಕಾರು ಸತೀಶ್ ಎಂಬವರಿಗೆ ಸೇರಿದ್ದು, ಮಂಗಳೂರಿನಿಂದ ಮೈಸೂರಿಗೆ ಹೋಗುತ್ತಿತ್ತು.
Tagged with
cnews,
sullia
ಬೆಂಗಳೂರು: ವಿವಾದಿತ ನಿತ್ಯಾ ನಂದ ಸ್ವಾಮಿಯ ಬಿಡದಿ ಆಶ್ರಮದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಆಶ್ರಮದ ಕೊಠಡಿಗಳಿಗೆ ಹಾಕಿದ್ದ ಬೀಗವನ್ನು ಜಿಲ್ಲಾಡಳಿತ ಮಂಗಳವಾರ ಮಧ್ಯಾಹ್ನ ತೆರವುಗೊಳಿಸಿದೆ.
ನಿತ್ಯಾನಂದನ ಆಶ್ರಮದ ಕೊಠಡಿ ಗಳಿಗೆ ಬೀಗ ಹಾಕಿದ್ದನ್ನು ಪ್ರಶ್ನಿಸಿ ನಿತ್ಯಾ ನಂದ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
ಆದರೆ ನಿನ್ನೆ ಉಪ ವಿಭಾಗಾಧಿ ಕಾರಿ ಸ್ನೇಹಾ ಮತ್ತು ಬಿಡದಿ ಪೊಲೀಸರು ಆಶ್ರಮದ ಕೊಠಡಿಗಳಿಗೆ ಹಾಕಿದ್ದ ಬೀಗವನ್ನು ತೆರವುಗೊಳಿಸಿದ್ದು, ಕೊಠಡಿಯ ಬೀಗದ ಕೀಲಿ ಕೈಯುನ್ನು ನಿತ್ಯಾನಂದನ ಶಿಷ್ಯರಿಗೆ ವಾಪಸ ನೀಡಲಾಗಿದೆ.ಈ ಬಗ್ಗೆ ಮಾತನಾಡಿದ ನಿತ್ಯಾನಂದ ಪರ ವಕೀಲ ರವಿ. ಬಿ. ನಾಯಕ, ಆಶ್ರಮಕ್ಕೆ ಬೀಗ ಹಾಕಲು ಯಾವುದೇ ಸರ್ಕಾರಿ ಆದೇಶ ಹೊರಡಿ ಸಿಲ್ಲ. ಆದರೂ ಬೀಗ ಹಾಕಲಾಗಿದೆ. ಇದೀಗ ಜಿಲ್ಲಾಡಳಿತಕ್ಕೆ ತಮ್ಮ ತಪ್ಪಿನ ಅರಿವಾಗಿದೆ ಎಂದರು.
Tagged with
nithyananda,
snews
ಮಂಜೇಶ್ವರ: ಲಕ್ಷಾಂತರ ರೂ. ತೆರಿಗೆ ವಂಚಿಸಿ ಕೇರಳದಿಂದ ಕರ್ನಾಟಕಕ್ಕೆ ಲಾರಿಯಲ್ಲಿ ಸಾಗಿಸುತ್ತಿದ್ದ ರಬ್ಬರ್ ಶೀಟ್‌ಗಳನ್ನು ಮಂಜೇಶ್ವರ ಮಾರಾಟ ತೆರಿಗೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಜವುಳಿ ಪಾರ್ಸೆಲ್ ಮಾಡುವ ಕಂಟೈನರ್ ಲಾರಿಗಳಲ್ಲಿ ಅನಧಿಕೃತವಾಗಿ ರಬ್ಬರ್ ಶೀಟ್ ಸಾಗಿಸುತ್ತಿರುವ ಬಗ್ಗೆ ಮಾರಾಟ ತೆರಿಗೆ ಚೆಕ್‌ಪೋಸ್ಟ್‌ನ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ನಿನ್ನೆ ತಪಾಸಣಾ ಕೇಂದ್ರಕ್ಕೆ ತಲುಪಿದ ಲಾರಿಯನ್ನು ಪರಿಶೀಲನೆ ನಡೆಸಿದಾಗ ವಿದೇಶಕ್ಕೆ ರಫ್ತು ಮಾಡುವ ಜವುಳಿ ಪಾರ್ಸೆಲ್‌ನ ಮರೆಯಲ್ಲಿ ಬಚ್ಚಿಟ್ಟಿದ್ದ ಸುಮಾರು ೭.೪೪ ಲಕ್ಷ ರೂಪಾಯಿ ಮೌಲ್ಯದ ರಬ್ಬರ್ ಶೀಟ್ ಪತ್ತೆಯಾಯಿತು. ಮಾರಾಟ ತೆರಿಗೆ ಅಧಿಕಾರಿಗಳು ೧.೮೬ ಲಕ್ಷ ರೂ. ಹಾಗು ರಬ್ಬರ್ ಮಂಡಳಿಯವರು ೮೦ ಸಾವಿರ ರೂಪಾಯಿ ದಂಡ ವಸೂಲಿ ಮಾಡಿ ಕಂಟೈನರ್ ಲಾರಿಯನ್ನು ಬಿಡುಗಡೆಗೊಳಿಸಿದ್ದಾರೆ. ರಬ್ಬರ್ ಶೀಟ್‌ಗಳನ್ನು ಕಣ್ಣೂರಿನಿಂದ ಮಂಗ ಳೂರಿಗೆ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೆಕ್‌ಪೋಸ್ಟ್‌ನಲ್ಲಿ ಹೈ ದಂಧಾ!
ಮಂಜೇಶ್ವರ ಮಾರಾಟ ತೆರಿಗೆ ಚೆಕ್ ಪೋಸ್ಟ್ ಮಟ್ಟಿಗೆ ಹೇಳುವುದಾದರೆ ಇದೇನು ಹೊಸತಲ್ಲ. ಇಲ್ಲಿನ ಅಧಿಕಾರಿಗಳ ಕೃಪಾಕಟಾಕ್ಷದಿಂದಾಗಿ ತೆರಿಗೆ ವಂಚಿಸಿ ಹಲವಾರು ಲಾರಿಗಳು ಹೋಗುತ್ತಿವೆಯೆನ್ನುವ ಆರೋಪ ನಾಗರಿಕ ವಲಯದಿಂದ ಕೇಳಿಬರುತ್ತಿದೆ. ಅಪರೂಪಕ್ಕೊಮ್ಮೆ ಯಾವುದಾದರೊಂದು ವಾಹನವನ್ನು ತಡೆದು ಅವರಿಂದ ತೆರಿಗೆ ವಸೂಲಿ ಮಾಡುತ್ತಿರುವುದು ನಾಗರಿಕರ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದ್ದು, ಇದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತಾಗಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ತೆರಿಗೆ ಸಂಗ್ರಹವಾಗುವ ಮಾರಾಟ ತೆರಿಗೆ ಚೆಕ್‌ಪೋಸ್ಟ್‌ಗಳ ಸಾಲಿನಲ್ಲಿರುವ ಇದು ಅವ್ಯವಹಾರಗಳ ಅಗರವಾಗಿದ್ದು, ಇಲ್ಲಿನ ಕೆಲವೊಂದು ಅಧಿಕಾರಿಗಳು ನಿರ್ದಿಷ್ಟ ಲಾರಿಗಳವರೊಂದಿಗೆ ಗಳಸ್ಯ ಕಂಠಸ್ಯ ಒಪ್ಪಂದದಿಂದಾಗಿ ಕಪ್ಪ ಕಾಣಿಕೆ ಪಡೆದು ಅವರಿಗೆ ಬೆಂಗಾವಾಲಾಗಿ ನಿಲ್ಲುತಿದ್ದಾರೆ ಎನ್ನುವ ಆರೋಪ ನಾಗರಿಕರದ್ದು. ಉನ್ನತ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಭ್ರಷ್ಟ ಅಧಿಕಾರಿಗಳನ್ನು ಮಟ್ಟ ಹಾಕಬೇಕೆಂದು ನಾಗರಿಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
Tagged with
cnews,
kgod
ಮಂಗಳೂರು: ಮನೆಯಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳನ್ನು ದಾಸ್ತಾನಿರಿಸಿ ಹೊಟೇಲು ಹಾಗೂ ರಿಕ್ಷಾ ಚಾಲಕರಿಗೆ ರೀಫಿಲ್ಲಿಂಗ್ ಮಾಡಿಸುತ್ತಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದ ಕೋಡಿ ನಿವಾಸಿ ಮಹಮ್ಮದ್ ಹನೀಫ್ (೪೫) ಬಂಧಿತ. ಈತ ಮನೆಯಲ್ಲಿ ಗ್ಯಾಸ್ ಸಿಲಿಂಡರುಗಳನ್ನು ದಾಸ್ತಾನಿರಿಸಿ ವ್ಯವಹಾರ ನಡೆಸುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿ, ೨೫ ಸಿಲಿಂಡರ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Tagged with
cnews,
mlore
ಮಂಜೇಶ್ವರ: ವಿವಾಹಿತ ವ್ಯಕ್ತಿ ಯೋರ್ವರ ಮೃತದೇಹ ಮನೆ ಸಮೀಪದ ಆವರಣ ರಹಿತ ಬಾವಿಯಲ್ಲಿ ಪತ್ತೆಯಾಗಿದೆ.
ಮೂಲತಃ ಉದ್ಯಾವರ ಗುತ್ತು ನಿವಾಸಿ ದಿ| ಚಂದು ಎಂಬವರ ಪುತ್ರ ಜಗದೀಶ್ (೩೫) ಮೃತ ವ್ಯಕ್ತಿ.
ವೃತಿಯಲ್ಲಿ ಪೈಂಟರ್ ಆಗಿರುವ ಜಗದೀಶ್‌ರವರ ವಿವಾಹ ಮೂರು ವರ್ಷದ ಹಿಂದೆ ಕಡಂಬಾರು ಬಳಿಯ ಇಡಿಯದ ಯುವತಿಯೊಂದಿಗೆ ನಡೆ ದಿದ್ದು, ಬಳಿಕ ಅಲ್ಲೇ ಸಮೀಪದಲ್ಲಿ ಹೊಸ ಮನೆಯೊಂದನ್ನು ಕಟ್ಟಿ ವಾಸವಾಗಿದ್ದರು. ನಿನ್ನೆ ಕೆಲಸಕ್ಕಾಗಿ ತೆರಳಿದ ಅವರು ಹೊತ್ತು ಮೀರಿದರೂ ಬರದಿದ್ದಾಗ ಮನೆಮಂದಿ ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಈ ವೇಳೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎನ್ನಲಾಗಿದೆ. ಇದರಿಂದ ಗಾಬರಿ ಗೊಂಡ ಮನೆಮಂದಿ ಹುಡುಕಾಟ ನಡೆಸಿದಾಗ ಮನೆಯಿಂದ ಸ್ವಲ್ಪ ದೂರ ದಲ್ಲಿದ್ದ ಆವರಣ ರಹಿತ ಬಾವಿಯಲ್ಲಿ ಚಪ್ಪಲಿ ಹಾಗೂ ಕೊಡೆ ತೇಲುತ್ತಿರು ವುದು ಕಂಡುಬಂತು. ತಕ್ಷಣ ಸ್ಥಳೀ ಯರು ಬಾವಿಯೊಳಗೆ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮೇಲಕ್ಕೆತ್ತಿದ ನಾಗ ರಿಕರು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮನೆಯವರಿಗೆ ಬಿಟ್ಟುಕೊಡ ಲಾಗಿದೆ. ಕಾಲು ಜಾರಿ ಇವರು ಬಾವಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.
Tagged with
cnews,
kgod
ಕಾಸರಗೋಡು: ತಾಯಿ ಹಾಗೂ ಸಹಕಾರಿ ಸಂಸ್ಥೆಯಲ್ಲಿ ಎಟೆಂ ಡರ್ ಆಗಿದ್ದ ಪುತ್ರಿಯ ಮೃತದೇಹ ಗಳು ಮನೆಯಂಗಳದ ಬಾವಿಯಲ್ಲಿ ಪತ್ತೆಯಾಗಿದ್ದು, ಇವರೀರ್ವರೂ ಆತ್ಮಹತ್ಯೆ ಮಾಡಿರುವುದಾಗಿ ಖಚಿತ ಪಡಿಸಲಾಗಿದೆ. ವಾಸಿಯಾಗದ ಕಾಯಿ ಲೆಯೇ ಕೃತ್ಯಕ್ಕೆ ಕಾರಣವೆನ್ನಲಾಗಿದೆ.
ವಿದ್ಯಾನಗರ ಉದಯಗಿರಿ ಅರಣ್ಯ ಕಚೇರಿ ಬಳಿಯ ನಿವಾಸಿ ದಿ. ವರದರ ಪತ್ನಿ ಶ್ರೀಮತಿ (೫೫) ಹಾಗೂ ಪುತ್ರಿಯೂ, ವಿದ್ಯಾನಗರ ಕೆಸಿಎಂಸಿ ಸೊಸೈಟಿಯ ನೌಕರೆಯೂ ಆಗಿರುವ ಸವಿತಾ (೩೦) ಎಂಬವರ ಮೃತದೇಹಗಳು ಬಾವಿಯಲ್ಲಿ ಪತ್ತೆಯಾಗಿವೆ. ಕಳೆದ ೧೦ ದಿನಗಳಿಂದ ಸವಿತಾ ಕೆಲಸಕ್ಕೆ ತೆರಳಿಲ್ಲ. ತಾನು ಕಾಯಿಲೆಯಿಂದ ಬಳಲುತ್ತಿರು ವುದಾಗಿ ಸಹೋದ್ಯೋಗಿಗಳೊಂದಿಗೆ ತಿಳಿಸಿದ್ದರು ಎನ್ನಲಾಗಿದೆ.
ಹತ್ತು ದಿನಗಳು ಕಳೆದರೂ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸೊಸೈಟಿ ಅಧಿಕ್ಷಕರು ಮೊನ್ನೆ ಮಧ್ಯಾಹ್ನ ಸವಿತಾರ ಮಾವನಾದ ವಿದ್ಯಾನಗರದ ಕುಮಾರರಿಗೆ ಮಾಹಿತಿ ನೀಡಿದ್ದರು. ಇದರಂತೆ ವಿಚಾರಿಸೋ ಣವೆಂದು ಕುಮಾರ್ ಇವರ ಮನೆಗೆ ಬಂದಾಗ ಮನೆ ಬಾಗಿಲು ತೆರೆದಿತ್ತು. ಬಾವಿಯ ದಂಡೆಯಲ್ಲಿ ಬಟ್ಟೆಯೊಂ ದು ಕಂಡುಬಂದು ಶಂಕಿತರಾದ ಇವರು ಆಸುಪಾಸಿನವರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕದಳದವರು ತಲುಪಿ ಬಾವಿಯಲ್ಲಿ ಶೋಧಿಸಿದಾಗ ತಾಯಿ, ಮಗಳ ಮೃತದೇಹ ಪತ್ತೆಯಾಗಿದೆ. ಪಂಚನಾಮೆ ಬಳಿಕ ಜನರಲ್ ಆಸ್ಪತ್ರೆಯಲ್ಲಿ ಮಹಜರು ನಡೆಸಲಾಯಿತು. ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಅವಿವಾಹಿತೆಯಾದ ಸವಿತಾ, ಜಯಶಂಕರ ಹಾಗೂ ಪ್ರಶಾಂತ್ ಎಂಬ ಇಬ್ಬರು ಸಹೋದರನ್ನು ಹೊಂದಿದ್ದರು.
Tagged with
cnews,
kgod
ಮಂಗಳೂರು: ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರ್ ಪೆಟ್ರೋಲ್ ಪಂಪ್ ಬಳಿ ಕಾರು, ರಿಕ್ಷಾ ಹಾಗೂ ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತ ದಲ್ಲಿ ಅಟೋರಿಕ್ಷಾ ಚಾಲಕ ಗಾಯ ಗೊಂಡಿದ್ದಾರೆ.
ದೇರಳಕಟ್ಟೆ ನಿವಾಸಿ ರಿಕ್ಷಾ ಚಾಲಕ ಉಮರ್ ಫಾರೂಕ್ ಎಂಬವರೇ ಗಾಯಾಳು. ಇವರು ಮಂಗಳವಾರ ಬೆಳಗ್ಗೆ ತಮ್ಮ ಹೊಸ ರಿಕ್ಷಾದಲ್ಲಿ ಮನೆ ಯಿಂದ ತೊಕ್ಕೊಟ್ಟಿಗೆ ಹೊರಟಿದ್ದರು. ಕುತ್ತಾರು ಪೆಟ್ರೋಲ್ ಪಂಪ್ ಬಳಿ ತಲುಪಿದಾಗ ಮಂಗಳೂರಿನಿಂದ ದೇರಳಕಟ್ಟೆಗೆ ಹೋಗುತ್ತಿದ್ದ ಬೊಲೆರೋ ಕಾರು, ರಿಕ್ಷಾ ಹಾಗೂ ಅದರ ಹಿಂದಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಗಾಯಾಳು ವನ್ನು ತೊಕ್ಕೊಟ್ಟಿನ ಆಸ್ಪತ್ರೆಗೆ ದಾಖಲಿ ಸಲಾಗಿದೆ.
Tagged with
cnews,
mlore
ಬೆಂಗಳೂರು: ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶೇ ೫೦ ರಷ್ಟು ರಿಯಾಯಿತಿ ದರದಲ್ಲಿ ಔಷಧಿಗಳನ್ನು ಜನತಾಬಜಾರ್ ಮೂಲಕ ಮಾರಾಟ ಮಾಡುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ್ದಲ್ಲದೆ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಆವರಣದಲ್ಲಿ ಮೊದಲ ಹಂತದಲ್ಲಿ ಈ ಔಷಧಿ ಮಾರಾಟ ವ್ಯವಸ್ಥೆ ಕಲ್ಪಿಸಲಾ ಗುವುದು. ಮುಂದಿನ ದಿನಗಳಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾ ಖೆಯ ಸಹಯೋಗದೊಂದಿಗೆ ರಾಜ್ಯದ ಜಿಲ್ಲಾ/ತಾಲ್ಲೂಕು ಆಸ್ಪತ್ರೆಗಳ ಆವರಣ ದಲ್ಲೂ ರಿಯಾಯಿತಿ ಔಷಧಿ ಮಾರಾಟ ಕೇಂದ್ರಗಳನ್ನು ಆರಂಭಿಸ ಲಾಗುವುದು ಎಂದರು. ಸರ್ಕಾರಿ ಆಸ್ಪತ್ರೆಯ ವೈದ್ಯರ ಶಿಫಾರಸ್ಸುಗಳಿಗಷ್ಟೇ ಈ ಕೇಂದ್ರದಲ್ಲಿ ಸೀಮಿತಗೊಳಿಸದೇ ಖಾಸಗೀ ಆಸ್ಪತ್ರೆ ಮತ್ತು ಔಷಧಾಲಯ ಗಳಲ್ಲಿ ವೈದ್ಯರು ಮಾಡುವ ಶಿಫಾರಸ್ಸು ಔಷಧಗಳನ್ನು ಸಾರ್ವಜನಿಕರು ಕೇಂದ್ರಗಳಲ್ಲಿ ಖರೀದಿಸಬಹುದಾಗಿದೆ.
ಅದೇ ರೀತಿ ಸರ್ಕಾರಿ ಕೋಟಾ ದಡಿ ವೈದ್ಯಕೀಯ ಪದವಿ ಪಡೆದ ಪದವೀಧರರು ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷಗಳ ಕಾಲ ಕಡ್ಡಾಯವಾಗಿ ಸೇವೆ ಸಲ್ಲಿಸಲು ಸುಗ್ರೀವಾಜ್ಞೆ ಮೂಲಕ ಒಂದೆ ರಡು ದಿನದಲ್ಲಿ ಆದೇಶ ಹೊರಡಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಎ. ರಾಮದಾಸ್ ಪ್ರಕಟಿಸಿದ್ದಾರೆ. ಗ್ರಾಮೀಣ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಹೋಗದಿದ್ದರೆ ಭಾರೀ ಪ್ರಮಾಣದ ದಂಡ ವಿಧಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಂಬಿಬಿಎಸ್ ಕೋರ್ಸು ಮುಗಿಸಿರುವ ವಿದ್ಯಾರ್ಥಿಗಳು ಗ್ರಾಮೀಣ ಸೇವೆಗೆ ಹೋಗಲು ಬಯಸದಿದ್ದರೆ ಹತ್ತು ಲಕ್ಷ ರೂ, ಪಿಜಿ ಡಿಪ್ಲೋಮಾ ವಿದ್ಯಾರ್ಥಿ ಗಳಿಗೆ ಹದಿನೈದು ಲಕ್ಷ ರೂ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇಪ್ಪತ್ತೈದು ಲಕ್ಷ ರೂ ದಂಡ ವಿಧಿಸಲು ಈ ಸುಗ್ರೀವಾಜ್ಞೆಯ ಮೂಲಕ ಅವಕಾಶ ಕಲ್ಪಿಸಲಾಗುವುದು ಎಂದರು.
Tagged with
ramdas,
snews
ಮೂಡಬಿದ್ರೆ: ಖಾಲಿದ್ ಎಂಬವರು ಆಳ್ವಾಸ್ ಆಸ್ಪತ್ರೆ ಬಳಿಯಲ್ಲಿ ಹಾಸ್ಟೆಲ್‌ನ್ನು ನಿರ್ಮಿಸಿದ್ದು ಇದಕ್ಕೆ ನೀರಿನ ಪೂರೈಕೆಗಾಗಿ ಪಕ್ಕದ ದಾರಿ ಮಧ್ಯೆ ಬೋರ್‌ವೆಲ್ ತೆಗೆದಿದ್ದಾರೆ ಎಂದು ಈ ಭಾಗದ ನಿವಾಸಿಗಳ ಪರವಾಗಿ ಕೊರಗಪ್ಪ ಸಪಲ್ಯ ಸೋಮವಾರ ದೂರು ನೀಡಿದ್ದಾರೆ. ಮೂಡಬಿದ್ರೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
Tagged with
cnews,
moodabidri
ಮಂಗಳೂರು: ಶಾಲೆಗೆ ಕಳ್ಳರು, ಪುಂಡು ಪೋಕರಿಗಳು ಕಿರಿಕ್ ಮಾಡುವುದನ್ನು ಕೇಳಿದ್ದೇವೆ. ಆದರೆ ಪಾವೂರು ಗ್ರಾಮದ ಇನೋಳಿ ಶಾಲೆಯ ಶಿಕ್ಷಕರ ಕೊಠಡಿಗೆ ತೆಂಗಿನ ಕಾಯಿಗಳು ಕಿರಿಕ್ ಮಾಡುತ್ತಿದೆ.
೧೨ ವರ್ಷಗಳ ಹಿಂದೆ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಪ್ರತ್ಯೇಕ ಕೋಣೆಯನ್ನು ನಿರ್ಮಿಸಲಾಗಿತ್ತು. ಆದರೆ ಅಂದು ಹಂಚಿನ ಮಾಡಿನಿಂದ ಕೂಡಿದ ಕೊಠಡಿ ನಿರ್ಮಿಸಿದ್ದೇ ಈಗ ಸಮಸ್ಯೆಗೆ ಕಾರಣವಾಗಿದೆ.
ಕೊಠಡಿಯ ಹಿಂಭಾಗದಲ್ಲಿ ತೆಂಗಿನ ಮರಗಳಿವೆ. ತೆಂಗಿನ ಕಾಯಿ ಒಣಗುತ್ತಲೇ ನೇರವಾಗಿ ಕೊಠಡಿಯ ಮಾಡಿಗೆ ಬೀಳುತ್ತಿದೆ. ಇದರ ಪರಿಣಾಮವಾಗಿ ಈಗ ಕೊಠಡಿಯೊ ಳಗೆ ನೀರು ಸೋರುತ್ತಿದ್ದು ಕಚೇರಿ ಯನ್ನೇ ವರ್ಗಾಯಿಸಲಾಗಿದೆ.
ಈ ವರ್ಷವೇ ತೆಂಗಿನ ಕಾಯಿ ಗಳು ಮಾಡಿಗೆ ಬೀಳುವ ಸಮಸ್ಯೆ ಆರಂಭಗೊಂಡಿದೆ. ಮಳೆಗಾಲದಲ್ಲಿ ಇದು ಸಮಸ್ಯೆಗೆ ಕಾರಣವಾಗಿದ್ದು ಇನ್ನು ಮುಂದಕ್ಕೆ ಹಂಚಿನ ಮಾಡಿನಲ್ಲಿ ಕೊಠಡಿ ಮುಂದುವರಿಸಲು ಅಸಾಧ್ಯ ವಾಗಿದೆ. ಈ ಹಿನ್ನೆಲೆಯಲ್ಲಿ ಜಿ. ಪಂ. ಅನುದಾನದಿಂದ ಆರ್.ಸಿ.ಸಿ ಕಟ್ಟಡ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್ ತಿಳಿಸಿದ್ದಾರೆ.
Tagged with
dk,
lnews,
school
ಮೂಡಬಿದಿರೆ: ಇಲ್ಲಿನ ಬಸ್ಸುನಿಲ್ದಾಣದ ಬಳಿ ಇರುವ ಇಂದಿರಾ ಗಾಂಧಿ ವಾಣಿಜ್ಯ ಸಂಕೀರ್ಣದ ಗೋಡೆಗಳನ್ನು ಕೆಲ ದಂಡಪಿಂಡಗಳು ವಿರೂಪಗೊ ಳಿಸಿದ್ದಾರೆ. ವಾಣಿಜ್ಯ ಸಂಕೀರ್ಣಕ್ಕೆ ಹೋಗುವ ದಾರಿಯ ಗೋಡೆಗಳ ಮೇಲೆ ಬೀಡಾ, ಗುಟ್ಕ್ಕಾ ತಿಂದು ಉಗುಳಿ ಕೆಂಪು ಬಣ್ಣದ ಪೈಂಟ್ ಹೊಡೆದಿರುವಂತೆ ಮಾಡಿ, ಸಾರ್ವಜನಿಕರು ನಡೆದಾಡಲೂ ಹೇಸಿಗೆ ಪಡುವಂತೆ ಮಾಡಿದ್ದಾರೆ.
ಈ ಗೋಡೆಯ ಮೇಲೆ ಸ್ವಚ್ಛತೆ ಕಾಪಾಡಿ ಉಗುಳಬಾರದು ಎಂದು ಎಚ್ಚರಿಕೆ ಫಲಕ ಹಾಕಿದ್ದರು. ಅದಕ್ಕೆ ಪ್ರತೀಕಾರ ತೀರಿಸಲೋ ಎಂಬಂತೆ ಆ ಗೋಡೆಯ ಉದ್ದಗಲಕ್ಕೂ ಉಗುಳಿ ಈ ಉಂಡಾಡಿ ಗುಂಡರು ತಮ್ಮ ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ಮಹಡಿಯ ಮೇಲಿನ ಭಾಗದಲ್ಲಿ ರಾಶಿ ರಾಶಿ ಕಸ, ನಿರೋಧ್, ಗುಟ್ಕಾ ಪ್ಯಾಕೆಟ್, ಸಿಗರೇಟ್ ಪ್ಯಾಕೆಟ್ ಇತ್ಯಾದಿಗಳ ರಾಶಿ ಬೀಳುತ್ತಿದ್ದು, ಪುರಸಭೆ ಇದನ್ನು ಯಾವಾಗಲಾದರೊಮ್ಮೆ ಸ್ವಚ್ಛಗೊಳಿಸುತ್ತದೆ. ಪುರಸಭೆ ಸ್ವಚ್ಛತೆಯ ವಿಷಯದಲ್ಲಿ ವಿಶೇಷವಾದ ಕೆಲಸ ಮಾಡುತ್ತಿದ್ದರೂ ಇಂತಹ ಉಗುಳು ಪ್ರಿಯರಿಂದಾಗಿ ಸ್ವಚ್ಛವಿದ್ದ ಪರಿಸರ ಹಾಳಾಗುತ್ತಿದೆ. ಈ ರೀತಿ ವಿರೂಪಗೊಳಿಸುವವರಿಗೆ ಸಂಬಂಧಪಟ್ಟ ಅಧಿಕಾರಿಗಳು ಒಂದೆರಡು ಭಾರಿ ಮುಸುಡಿಗೆ ಬಾರಿಸಿದಲ್ಲಿ ಕೊಂಚ ಮಟ್ಟಿಗೆ ಸುಧಾರಿಸಬಹುದು ಎಂಬ ಮಾತು ಕೇಳಿ ಬಂದಿದೆ.
Tagged with
dk,
lnews
ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಹೊಂಡಕ್ಕೆ ಬಿದ್ದ ಘಟನೆ ಪೆರುವಾಯಿ-ವಿಟ್ಲ ರಸ್ತೆಯ ಕುದ್ದುಪದವು ಎಂಬಲ್ಲಿ ಸೋಮವಾರ ನಡೆದಿದ್ದು, ಘಟನೆಯಲ್ಲಿ ಇಬ್ಬರು ಅಪಾಯದಿಂದ ಪಾರಾಗಿ ದ್ದಾರೆ.
ವಿಟ್ಲ-ಪೆರುವಾಯಿ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ತನ್ನ ಹೊಸ ಕಾರನ್ನು ಚಲಾಯಿಸಿಕೊಂಡು ವಿಟ್ಲ ಕಡೆ ತೆರಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಈ ಸಂದರ್ಭ ಅವರು ಕಾರ್ ಡ್ರೈವಿಂಗ್ ಕಲಿಯುತ್ತಿದ್ದರು ಎನ್ನಲಾಗಿದೆ.
Tagged with
cnews,
vittla
ಕಾರ್ಕಳ: ಬೆಳ್ಮಣ್ ಸಮೀಪದ ಕಲ್ಯಾ ಎಂಬಲ್ಲಿ ಕರಿಕಲ್ಲಿನ ಕೊರೆಯೊಂದರಲ್ಲಿ ಸಂಭವಿಸಿದ ಸ್ಫೋಟವೊಂದರಲ್ಲಿ ಮಹಿಳೆಯರಿಬ್ಬರು ದಾರುಣ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಕಿರಣ್ ಜೋಯ್ ಎಂಬವರ ಮಾಲ ಕತ್ವದಲ್ಲಿರುವ ಕರಿಕಲ್ಲಿನ ಕೋರೆಯಲ್ಲಿ ನಿನ್ನೆ ಮಧ್ಯಾಹ್ನ ಸುಮಾರು ೩.೩೦ರ ವೇಳೆಗೆ ಈ ಘಟನೆ ಸಂಭವಿಸಿದೆ. ಕೋರೆಯಲ್ಲಿ ಬಳಸ ಲಾಗುವ ಸ್ಪೋಟಕಗಳನ್ನು ಶೆಡ್‌ನಲ್ಲಿ ಇಡಲಾ ಗಿತ್ತು. ಇತರ ಕೆಲಸಗಾರರೆಲ್ಲರೂ ಊಟಕ್ಕೆ ಹೋಗಿ ಹಿಂತಿರುಗುತ್ತಿದ್ದಾಗ ಅನಾಹುತ ನಡೆ ದಿರುವುದರಿಂದ ಹಲವು ಜೀವಗಳು ಉಳಿದಿದೆ.
ಈ ನಡುವೆ ಬಾಗಲಕೋಟೆಯ ಮಲ್ಲವ್ವ(೨೫) ಕೊಪ್ಪಳದ ಅಂಬಿಕಾ(೩೫) ಎಂಬವರು ಇತರ ಕೆಲಸಗಾರರಿಗಿಂತ ಮುಂಚಿತವಾಗಿ ಆ ಶೆಡ್‌ನೊಳಗೆ ಪ್ರವೇಶಿಸಿದ ಕೆಲವೇ ಕ್ಷಣದೊಳಗಾಗಿ ಭಾರೀ ಸ್ಫೋಟ ಉಂಟಾಗಿತ್ತು. ಸ್ಫೋಟದ ತೀವ್ರತೆಗೆ ಶೆಡ್ ಸಂಪೂರ್ಣ ನೆಲಕಚ್ಚಿದೆ. ಮಹಿಳೆಯರಿಬ್ಬರ ಮೃತದೇಹದ ಅಂಗಾಂಗಗಳೆಲ್ಲ ಸುಮಾರು ೨೦ ಮೀಟರ್ ದೂರದವರೆಗೆ ಚೆಲ್ಲಾಪಿಲ್ಲಿಯಾಗಿ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿತ್ತು.
ಕರಿಕಲ್ಲನ್ನು ಸೀಳಲು ಉಪಯೋಗಿಸಲಾಗುವ ಜಿಲಿಟಿನ್ ಕಡ್ಡಿ ಮತ್ತು ಡಿಟೋನೆಟರ್ ಸ್ಫೋಟಕ ಸಾಮಾಗ್ರಿಗಳನ್ನು ಒಟ್ಟಾಗಿ ಇರಿಸಿಕೊಂಡಿರುವುದು ಹಾಗೂ ಇದೇ ಸಂದರ್ಭದಲ್ಲಿ ಸ್ಪರ್ಶ ಉಂಟಾಗಿರುವುದೇ ಘಟನೆಗೆ ಕಾರಣ ವಾಗಿರಬಹುದೆಂಬ ಮಾಹಿತಿ ಲಭ್ಯವಾಗಿದೆ. ಮತ್ತೊಂದೆಡೆಯಲ್ಲಿ ಸ್ಫೋಟಕ ವಸ್ತುಗಳೆರಡು ಜೊತೆಯಾಗಿದ್ದ ವೇಳೆಗೆ ಸಮೀಪದಲ್ಲಿ ಸಿಡಿಲಿನ ಅಘಾತಕ್ಕೊಳಗಾಗಿ ಘಟನೆ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಕರಿಕಲ್ಲಿನ ಕೋರೆಯಲ್ಲಿ ಕಾನೂನು ರೀತ್ಯಾದಲ್ಲಿ ಸ್ಫೋಟಕಗಳನ್ನು ಉಪ ಯೋಗಿಸಲು ಅವಕಾಶವಿದ್ದರೂ ಅದರ ಬಗ್ಗೆ ಮುನ್ನೆಚ್ಚರಿಕೆ ವಹಿಸದೇ ಇರುವುದು ಇಂತಹ ಅನಾಹುತಗಳು ಸಂಭವಿಸುತ್ತಿರಲು ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಡಿವೈಎಸ್‌ಪಿ ಜಯಂತ್ ಶೆಟ್ಟಿ, ವೃತ್ತನಿರೀಕ್ಷಕ ವೆಲೆಂಟಿನ್ ಡಿಸೋಜಾ, ಗ್ರಾಮಾಂತರ ಎಸೈ ಹಝಮತ್ ಆಲಿ ಮೊದಲಾದವರು ಘಟನಾ ಸ್ಥಳಕ್ಕೆ ತೆರಳಿ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಸುಮಾರು ೧೦ ವರ್ಷದ ಹಿಂದೆ ಕಾರ್ಕಳದ ಎಸ್‌ವಿಟಿ ಶಾಲಾ ಬಳಿಯಲ್ಲಿ ಟೆಂಪೋ ಟ್ರ್ಯಾಕ್ಸ್‌ವೊಂದರಲ್ಲಿ ಸ್ಪೋಟಕಗಳನ್ನು ಸಾಗಿಸುತ್ತಿದ್ದ ವೇಳೆ ಸ್ಫೋಟ ಗೊಂಡು ಸಂಪೂರ್ಣ ಹಾನಿಗೊಳಗಾಗಿತ್ತು. ಅಲ್ಲದೇ ದೂರದ ಊರುಗಳಿಂದ ಹೊಟ್ಟೆಪಾಡಿಗೆ ಇಲ್ಲಿಗೆ ಬರುವ ಕಾರ್ಮಿಕರ ಗುರುತು ಚೀಟಿಯಾಗಲಿ, ರೇಷನ್ ಕಾರ್ಡ್ ಪ್ರತಿಯಾಗಲಿ ಇಲ್ಲದ ಕಾರಣ ಇವರ ಪತ್ತೆಕಾರ‍್ಯ ಕಷ್ಟಸಾಧ್ಯ. ಇವರಿಗೆ ಸರ್ಕಾರವಾಗಲಿ, ಕೋರೆ ಮಾಲೀಕರಾಗಲಿ ಯಾವುದೇ ಪರಿಹಾರ ನೀಡಲು ಮುಂದಾಗುತ್ತಿಲ್ಲ.
Tagged with
cnews,
feature,
karkala
ಮಂಗಳೂರು: ನ್ಯಾಯವಾದಿ ಎಸ್.ಎಸ್.ಖಾಝಿ ಮತ್ತು ಅವರ ಕಕ್ಷಿದಾರ ಟಿಂಬರ್ ವ್ಯಾಪಾರಿ ಮಹಮ್ಮದ್ ಹನೀಫ್ ಹಾಗೂ ಅವರ ಪತ್ನಿ ಶೆಹನಾಜ್ ವಿರುದ್ಧ ಯಾವುದೇ ಮಾನಹಾನಿಕರ ಲೇಖನಗಳನ್ನು ಪ್ರಕಟಿಸದಂತೆ ಬಿ.ವಿ.ಸೀತಾರಾಂ, ಆಕಾಶ ಭವನದ ಜಮೀಲಾಬಾನು ಹಾಗೂ ಕರಾವಳಿ ಅಲೆ ಪತ್ರಿಕೆಯ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಎರಡನೇ ಹಿರಿಯ ಸಿವಿಲ್ ನ್ಯಾಯಾಲಯ ನಿಷೇಧಾಜ್ಞೆ ಹೊರಡಿಸಿದೆ.
ಬಿ.ವಿ.ಸೀತಾರಾಮ್ ಪತ್ನಿ ರೋಹಿಣಿ ಮತ್ತು ಆತನ ಕರಾವಳಿ ಅಲೆ ಪತ್ರಿಕೆಯ ಅನ್ಯ ಪ್ರಾಯೋಜಕರ ವಿರುದ್ಧ ಸುಮಾರು ೧೦-೧೨ ವಿವಿಧ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯವಾದಿಯಾಗಿರುವ ತಾನು ಯಶಸ್ವಿಯಾಗಿ ಪ್ರತಿನಿ ಧಿಸುತ್ತಿದ್ದೇನೆ. ಇದರ ಪ್ರತೀಕಾರ ತೀರಿಸುವ ಸಲುವಾಗಿ ಹಾಗೂ ಕರಾವಳಿ ಅಲೆ ವಿರುದ್ಧ ದಾಖಲಾಗುವ ಯಾವುದೇ ಪ್ರಕರಣಗಳನ್ನು ಕೈಗೆತ್ತಿಕೊಳ್ಳದಂತೆ ಬೆದರಿಸುವ ಸಲುವಾಗಿ ಸೀತಾರಾಮ ತನ್ನ ಕರಾವಳಿ ಅಲೆ ಪತ್ರಿಕೆಯಲ್ಲಿ ತನ್ನ ವಿರುದ್ಧ ಮಾನಹಾನಿಕರ ಲೇಖನಗಳನ್ನು ಪ್ರಕಟಿಸುತ್ತಿದ್ದಾನೆ ಎಂದು ನ್ಯಾಯವಾದಿ ಎಸ್.ಎಸ್.ಖಾಝಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದರು.
ಹೂಡಿರುವ ಪ್ರಕರಣ ವಜಾ: ಮುಖಭಂಗ
ಜಯಕಿರಣ ಪತ್ರಿಕೆ ವಿರುದ್ಧ ಸೀತಾರಾಮ ಮತ್ತು ಆತನ ಪತ್ನಿ ರೋಹಿಣಿ ಹೂಡಿರುವ ಪ್ರಕರಣವೊಂದು ವಜಾ ಆಗಿತ್ತು. ಇದರಿಂದ ಸೀತಾರಾಮ ಮುಖಭಂಗ ಅನುಭವಿಸಿ ದಂತಾಗಿದೆ. ಮತ್ತೆ ಸೀತಾರಾಮನ ಪತ್ನಿ ಜಯಕಿರಣದ ವಿರುದ್ಧ ಇನ್ನೊಂದು ಪ್ರಕರಣ ಹೂಡಿದ್ದು, ಆ ಪ್ರಕರಣದ ವಿಚಾರಣೆ ಮೇ ತಿಂಗಳಲ್ಲಿ ನಡೆದಿತ್ತು. ಅದರಲ್ಲಿ ಸೀತಾರಾಮನ ಪತ್ನಿ ರೋಹಿಣಿಯನ್ನು ಅಡ್ಡ ವಿಚಾರಣೆ ನಡೆಸಿದ್ದ ನ್ಯಾಯವಾದಿ ಖಾಝಿಯವರು ಸೀತಾರಾಮ ಮತ್ತು ಪತ್ನಿ ರೋಹಿಣಿ ಈ ಹಿಂದೆ ಹಲವು ಬಾರಿ ಜೈಲುವಾಸ ಮಾಡಿರುವ ಸತ್ಯವನ್ನು ನ್ಯಾಯಾಲಯದಲ್ಲಿ ಬಹಿರಂಗಗೊಳಿಸಿದ್ದರು. ಇದಾದ ಬಳಿಕ ‘ಕರಾವಳಿ ಅಲೆ ಪತ್ರಿಕೆಯಲ್ಲಿ ದ್ವೇಷ ಸಾಧಿಸುವ ರೀತಿಯಲ್ಲಿ ತನ್ನ ವಿರುದ್ಧ ಅವಹೇಳನಕಾರಿ ಲೇಖನಗಳು ಪ್ರಕಟವಾಗಲು ಆರಂಭವಾಯಿತು. ಇದರಿಂದ ಅನೈತಿಕ ಮಟ್ಟಕ್ಕೆ ಸೀತಾರಾಮ ಕುಸಿದಿರು ವುದು ಆತನ ಹತಾಶೆಯ ಸ್ಪಷ್ಟ ಸಂಕೇತವಾಗಿದೆ ಎಂಬುದು ಖಾಝಿಯವರ ಅಭಿಪ್ರಾಯ.
ಸಂಧಾನ ಯತ್ನ ವಿಫಲ
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿಯವರು ನ್ಯಾಯವಾದಿ ಖಾಝಿ ಯವರನ್ನು ಸಂಪರ್ಕಿಸಿ ಸೀತಾರಾಮನ ಜತೆ ಸಂಧಾನವನ್ನು ಅವರ ಕಚೇರಿಯಲ್ಲಿಯೇ ತಾ.೧೬.೬.೨೦೧೨ ರಂದು ಸಂಜೆ ೪.೦೦ ಗಂಟೆಗೆ ಏರ್ಪಡಿಸಿದ್ದರು. ಅಲ್ಲಿ ‘ಜಯಕಿರಣದ ಪರವಾಗಿ ವಕಾಲತ್ತುಗಳನ್ನು ಹಿಂದಕ್ಕೆ ಪಡೆದರೆ ತಾನು ನ್ಯಾಯವಾದಿ ಖಾಝಿ ವಿರುದ್ಧ ‘ಕರಾವಳಿ ಅಲೆ ಯಲ್ಲಿ ಬರೆಯುವುದನ್ನು ನಿಲ್ಲಿಸುವುದಾಗಿ ಹೇಳಿದ್ದು, ಆದರೆ ಅದನ್ನು ನಿರಾಕರಿಸಿ ತನಗೆ ಯಾರ ವಕಾಲತ್ತು ಮಾಡಬೇಕು, ಮಾಡಬಾರದೆಂಬುದನ್ನು ನಾನೇ ನಿರ್ಧರಿಸುತ್ತೇನೆ, ಬೇರೆ ಯಾರಿಗೂ ಅಧಿಕಾರವಿಲ್ಲ ಎಂದು ಹೇಳಿರು ವುದಲ್ಲದೆ ನನ್ನ ಕಕ್ಷಿದಾರರಾದ ಪ್ರಕಾಶ್ ಅವರು ಜತೆಯಲ್ಲಿದ್ದರೆ ತಟಸ್ಥ ಸ್ಥಾನದಲ್ಲಿ ಮೀಟಿಂಗ್ ನಡೆಸಿ ಎಂದಿದ್ದೆ. ರಾಜಿ ಪ್ರಯತ್ನ ಮುರಿದುಬಿದ್ದಿರು ವುದರಿಂದ ಮತ್ತೆ ಬಿ.ವಿ.ಸೀತಾರಾಮ ತನ್ನ ಹಳೆಯ ಛಾಳಿ ಪ್ರಾರಂಭಿಸಿದ್ದಾನೆ ಎಂದು ಖಾಜಿ ಪತ್ರಿಕೆಗೆ ತಿಳಿಸಿದ್ದಾರೆ.
Tagged with
bvsee,
dk,
feature,
lnews
ಉಡುಪಿ: ಯಾವುದೇ ಪರವಾನಿಗೆ ಇಲ್ಲದ, ದೇಶಿ ನಿರ್ಮಿತ ಅಕ್ರಮ ರಿವಾ ಲ್ವರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಕ್ರಿಮಿನಲ್‌ನನ್ನು ಉಡುಪಿ ಜಿಲ್ಲಾ ಅಪರಾಧ ಪತ್ತೆ ದಳ (ಡಿಸಿಐಬಿ) ದ ಪೊಲೀಸರು ಸೋಮವಾರ ಸಂಜೆ ಕೊರಂಗ್ರಪಾಡಿ ಗ್ರಾಮದ ಬಲಾಯಿಪಾದೆ ವಿಜಯ ವೈನ್ ಬಾರ್ ಪಕ್ಕದಿಂದ ಬಂಧಿಸಿ, ರಿವಾಲ್ವರ್‌ನ್ನು ವಶಪಡಿಸಿಕೊಂಡಿದ್ದಾರೆ.
ಬೈಲಕೆರೆ ನಿವಾಸಿ ರಾಘವೇಂದ್ರ ಕಾಂಚನ್ (೨೭) ಬಂಧಿತ ಆರೋಪಿಯಾ ಗಿದ್ದಾನೆ. ಈತ ಕಳೆದ ವರ್ಷದ ಫೆಬ್ರವರಿ ೧೧ ರಂದು ರಾತ್ರಿ ಇಂದ್ರಾಳಿ ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ನಡೆದ ರೌಡಿ ಪಿಟ್ಟಿ ಯಾನೆ ಪಿಟ್ಟಿ ನಾಗೇಶ್ ಕೊಲೆ ಯತ್ನ ಪ್ರಕರಣದ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದ.
ಕಳೆದ ವರ್ಷ ಹೊರ ಊರಿನ ಅಪರಿಚಿತ ವ್ಯಕ್ತಿಯೊಬ್ಬನಿಂದ ಖರೀದಿಸಿದ್ದ ರಿವಾಲ್ವರ್‌ನ್ನು ದುಬಾರಿ ಬೆಲೆಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಸಂದರ್ಭದಲ್ಲಿ ಡಿಸಿಐಬಿ ಮಾಹಿತಿದಾರ ನೀಡಿದ ಖಚಿತ ಮಾಹಿತಿ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ರೌಡಿ ವಿನೋದ್ ಶೆಟ್ಟಿಗಾರ್‌ನ ಸಹಚರನಾಗಿದ್ದು, ಶೆಟ್ಟಿಗಾರ್ ಕೊಲೆಗೆ ಪ್ರತಿಕಾರ ತೀರಿಸಲು ಕಳೆದ ವರ್ಷ ಶೆಟ್ಟಿಗಾರ್‌ನ ಇತರ ಸಹಚರರಾದ ಗುರುರಾಜ ಪೂಜಾರಿ, ಕಿರಣ್ ಶೇರಿಗಾರ್ ಹಾಗೂ ವಿಶ್ವನಾಥ ಶೆಟ್ಟಿ ಎಂಬ ವರೊಂದಿಗೆ ಸೇರಿಕೊಂಡು ಪಿಟ್ಟಿ ಹತ್ಯೆಗೆ ಸಂಚು ರೂಪಿಸಿ ತಲವಾರು ಹಲ್ಲೆ ನಡೆಸುವ ಮೂಲಕ ಕೊಲೆ ಯತ್ನ ನಡೆಸಿದ್ದನು. ಪಿಟ್ಟಿ ಈ ಯತ್ನದಲ್ಲಿ ಗಂಭೀರ ಹಲ್ಲೆಗೊಳಗಾಗಿ ಹೇಗೋ ಬಚಾವಾಗಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಣಿಪಾಲ ಠಾಣೆಯ ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ಆದರೆ, ರಾಘವೇಂದ್ರ ಕಾಂಚನ್ ಮಾತ್ರ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದನು.
ಹೆಚ್ಚಿನ ತನಿಖೆಗಾಗಿ ರಿವಾಲ್ವರ್ ಸಹಿತ ಆರೋಪಿಯನ್ನು ಡಿಸಿಐಬಿ ಪೊಲೀಸರು ಉಡುಪಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
Tagged with
cnews,
feature,
upi
ಮಂಗಳೂರು: ಧರ್ಮಸ್ಥಳದ ವಿವಿಧೆಡೆ ಗಳಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಏಳು ಮಂದಿ ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಶಾಂತಿನಗರ ನಿವಾಸಿ ಗಳಾದ ಬಸವರಾಜು, ಲೋಕೇಶ, ಸರೋಜ, ಕವಿತಾ, ಮಂಜುಳಾ ರತ್ನ, ತಮಿಳ್ನಾಡು ಮೂಲದ ಗಣೇಶ ಮತ್ತು ಶ್ರೀನಿವಾಸ ಯಾನೆ ಶೀನ ಎಂಬವರೇ ಬಂಧಿತ ಆರೋಪಿಗಳು. ಇವರು ತಂಡವನ್ನು ಕಟ್ಟಿ ಕೊಂಡು ದರೋಡೆ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದರು.
ಕಳೆದ ತಿಂಗಳು ೩೦ರಂದು ಬೆಳಿಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾಡಿ ಎಂಬಲ್ಲಿ ಭರತ್ ಸಿಂಗ್ ಎಂಬವರ ಟಾಟಾ ಸಫಾರಿ ಕಾರನ್ನು ಅಡ್ಡಗಟ್ಟಿದ್ದ ತಂಡ ಚಾಲಕನಿಗೆ ಮಾರಕಾಯುಧ ತೋರಿಸಿ ಬೆದರಿಸಿದ್ದಲ್ಲದೆ ಕಣ್ಣಿಗೆ ಮೆಣಸಿನ ಪುಡಿ ಎರಚಿ ಕಿಸೆಯಲ್ಲಿದ್ದ ೬,೬೪೦ ರೂ. ನಗದು, ಮೊಬೈಲ್, ಎಟಿಎಂ ಕಾರ್ಡ್ ಕಳವು ಮಾಡಿ ಪರಾರಿಯಾಗಿತ್ತು.
ಈ ಬಗ್ಗೆ ಕೇಸು ದಾಖಲಿಸಿದ್ದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ದ್ದರು. ನಾಲ್ಕು ದಿನಗಳ ಹಿಂದೆ ಖಚಿತ ಮಾಹಿತಿ ಮೇರೆಗೆ ಬಸವರಾಜು ಮತ್ತು ಶ್ರೀನಿವಾಸನನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಿಸಲಾಗಿತ್ತು. ಈ ಸಂದರ್ಭ ಆರೋಪಿಗಳು ದರೋಡೆ ಕೃತ್ಯವನ್ನು ಒಪ್ಪಿಕೊಂಡರಲ್ಲದೆ ಇತರ ಆರೋಪಿಗಳ ಬಗ್ಗೆಯೂ ಮಾಹಿತಿ ನೀಡಿದ್ದರು.
ಇದೇ ವೇಳೆ ಕಳೆದ ತಿಂಗಳು ೩೦ರಂದು ಧರ್ಮಸ್ಥಳದಲ್ಲಿ ನಡೆಸಿದ್ದ ಕಳ್ಳತನದ ಬಗ್ಗೆಯೂ ಆರೋಪಿಗಳು ಬಾಯ್ಬಿಟ್ಟಿದ್ದರು. ಅಂದು ಗೌರಿಬಿದನೂರು ನಿವಾಸಿ ಶಿವಕುಮಾರ್ ಎಂಬವರು ಸಂಸಾರ ಸಮೇತ ಬೆಳ್ತಂಗಡಿ ನೇತ್ರಾವತಿ ಸ್ನಾನ ಘಟ್ಟಕ್ಕೆ ಬಂದಿದ್ದರು. ಆ ಸಂದರ್ಭ ಅವರು ವ್ಯಾನಿಟಿ ಬ್ಯಾಗಿನಲ್ಲಿ ೧,೪೮,೦೦೦ ನಗದು ಹಾಗೂ ೩೩ ಗ್ರಾಂ ಚಿನ್ನಾಭರಣವನ್ನು ಇಟ್ಟಿದ್ದರು. ಇದೇ ವೇಳೆ ಆರೋಪಿಗಳು ಅದನ್ನು ಕಳ್ಳತನ ಮಾಡಿರುವ ಬಗ್ಗೆಯೂ ಬಂಧಿತರು ಬಾಯ್ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಆರೋಪಿಗಳನ್ನು ಬಂಧಿಸಿರುವ ಬೆಳ್ತಂಗಡಿ ಪೊಲೀಸರು ನ್ಯಾಯಾಯಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಭಿಷೇಕ್ ಗೋಯಲ್ ತಿಳಿಸಿದ್ದಾರೆ.
Tagged with
belthangady,
cnews,
feature
ಕಾರ್ಕಳ: ಮುಡಾರು ದಿಡಿಂಬಿರಿ ಎಂಬಲ್ಲಿ ಅತಿಕ್ರಮಣವಾಗಿದ್ದ ನೂರಾರು ಎಕರೆ ಸರಕಾರಿ ಜಾಗವನ್ನು ತಹಶೀಲ್ದಾರ್ ಜಗನ್ನಾಥ್ ರಾವ್ ನೇತೃತ್ವದಲ್ಲಿ ತೆರವು ಮಾಡಲಾಯಿತು.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ರಾಜ್ಯ ಸರಕಾರವು ಹೊರಡಿಸಿರುವ ಅದೇಶ ವೊಂದರಲ್ಲಿ ಹಲವು ವರ್ಷಗಳಿಂದ ಸರಕಾರಿ ಜಾಗವನ್ನು ಅತಿಕ್ರಮಿಸಿ ಕೃಷಿ, ವಾಸ ಜಾಗವನ್ನಾಗಿ ಮಾಡಿಕೊಂಡರೆ ಅಂಥವುದನ್ನು ಗುರುತಿಸಿ ಸಕ್ರಮಗೊಳಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಇಂತಹದೊಂದು ಅದೇಶ ಹೊರಬೀಳುತ್ತಿದಂತೆ ಮುಡಾರು ಗ್ರಾಮವೊಂದರಲ್ಲಿಯೇ ಹಲವು ಎಕರೆಯಷ್ಟು ಸರಕಾರಿ ಜಾಗವನ್ನು ಕಬಳಿಸುವ ಯತ್ನ ನಡೆದಿದೆ. ಮುಳ್ಳುಬೇಲಿ, ಗಡಿಗುರುತಿನ ಕಂಬ, ಮನೆ ನಿರ್ಮಾಣ, ಮನೆಗೆ ಅಡಿಪಾಯ ಸೇರಿದಂತೆ ಹಲವು ಕಾರ್ಯಗಳು ಅತಿಕ್ರಮಣ ಜಾಗದಲ್ಲಿ ಎಗ್ಗಿಲ್ಲದೇ ನಡೆಯುತ್ತಿತ್ತು. ಇಂತಹ ದೂರೊಂದು ಕಂದಾಯ ಇಲಾಖೆಗೆ ತಿಳಿದಿರುವುದೇ ತೆರವು ಕಾರ್ಯಚರಣೆ ನಡೆದಿರಲು ಕಾರಣವಾಗಿದೆ.
ಜನಪ್ರತಿನಿಧಿಗಳ ಕುಮ್ಮಕ್ಕು!
ಭೂಕಬಳಿಕೆಯ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕುಮ್ಮಕ್ಕು ಇರುವುದು ಸ್ಪಷ್ಟಗೊಂಡಿದೆ. ಪ್ರಮುಖ ರಸ್ತೆ ಬದಿಯಲ್ಲಿ ಶೆಡ್‌ವೊಂದು ನಿರ್ಮಾಣಗೊಂಡಿದ್ದು, ಹಲವು ಸೆಂಟ್ಸ್ ಜಾಗಕ್ಕೆ ಗಡಿಗುರುತು ಅಕ್ರಮವಾಗಿ ಹಾಕಿಕೊಂಡಿರುವುದು ಇದೇ ವೇಳೆಗೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಸಿಬ್ಬಂದಿ ತೆರಳಿದಾಗ ಶೆಡ್‌ನ ದ್ವಾರದಲ್ಲಿ ನಿಂತುಕೊಂಡಿದ್ದ ಮಹಿಳೆಯೊಬ್ಬರು ತೆರವುಕಾರ್ಯಕ್ಕೆ ಅಕ್ಷೇಪ ವ್ಯಕ್ತಪಡಿಸಿರುವುದು ಕಂಡುಬಂತು. ವಿಧವೆ ಮಹಿಳೆ ಹಾಗೂ ಆಕೆಯ ಚಿಕ್ಕಮಕ್ಕಳು ಬೇರೆದಾರಿ ಕಾಣದೇ ಇದರಲ್ಲಿ ವಾಸವಾಗಿದ್ದಾರೆ ಎಂಬ ರೆಡಿಮಡ್ ಉತ್ತರವನ್ನು ನೀಡಿದ್ದಳು. ನೀವ್ಯಾರಮ್ಮ ಎಂದು ತಹಶೀಲ್ದಾರರು ಆಕೆಯಲ್ಲಿ ಪ್ರಶ್ನಿಸಿದರೆ, ತಾನು ಈ ಗ್ರಾಮ ಪಂಚಾಯತ್‌ನ ಸದಸ್ಯೆಯಾಗಿದ್ದೇನೆ, ಮಾತ್ರವಲ್ಲದೇ ಇಲ್ಲಿರುವ ಮಹಿಳೆಯ ಅತ್ತಿಗೆ ಎಂದಳು. ಜನಪ್ರತಿನಿಧಿಯಾಗಿದ್ದು, ಕಾನೂನನ್ನು ಗೌರವಿಸಬೇಕಾದವರೇ ಹೀಗೆ ಮಾಡಿದರೆ ಹೇಗೆ ಎಂಬುವುದನ್ನು ಮನವರಿಕೆ ಮಾಡಿ ಬಳಿಕವಷ್ಟೇ ಶೆಡ್‌ತೆರವು ಕಾರ್ಯ ಯಶಸ್ವಿಯಾಗಿ ನಡೆಯಿತು.
Tagged with
feature,
lnews,
udupi
ಸುರತ್ಕಲ್: ಶುಚಿತ್ವ ಮತ್ತು ಮಾಲಿನ್ಯ ನಿಯಂತ್ರಣ ಕ್ರಮ ಅಳವಡಿಕೆಯ ಪರಿಶೀಲನೆ ನಡೆಸುವ ಸಲುವಾಗಿ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಬೈಕಂ ಪಾಡಿ ಕೈಗಾರಿಕಾ ವಲಯದಲ್ಲಿರುವ ವಿವಿಧ ಕಂಪನಿಗಳಿಗೆ ಮಂಗಳವಾರ ದಾಳಿ ನಡೆಸಿದರು. ಪರವಾನಿಗೆ ರಹಿತವಾಗಿ ಅಕ್ರಮವಾಗಿ ನಡೆಯುತ್ತಿ ರುವ ಕಂಪನಿಗಳ ಬಗ್ಗೆ, ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ಹಾಗೂ ಶುಚಿತ್ವ ನಿಯಮ ಗಾಳಿಗೆ ತೂರಿ ನಡೆಯುತ್ತಿರುವ ಕಂಪೆನಿಗಳ ಮೇಲೆ ಕಣ್ಣಿಟ್ಟಿರುವ ಮನಪಾ ಅಧಿಕಾರಿಗಳು ಬೈಕಂಪಾಡಿ ಕೈಗಾರಿಕಾ ವಲಯದ ಕಂಪನಿಗಳಿಗೆ ದಿಢೀರ್ ದಾಳಿ ನಡೆಸಿದರು. ಈ ವೇಳೆ ಒಂದು ಕಂಪೆನಿ ಅನುಮತಿ ರಹಿತವಾಗಿ ನಡೆಯುತ್ತಿರುವುದು ಕಂಡು ಬಂದಿದ್ದು ಅಧಿಕಾರಿಗಳು ಈ ಸಂಸ್ಥೆಗೆ ಬೀಗ ಜಡಿ ದರಾದರೂ ಬಳಿಕ ಬೀಗ ತೆರವುಗೊ ಳಿಸಿ ನಿಯಮ ಗಾಳಿಗೆ ತೂರಿದ ಬಗ್ಗೆ ಎಚ್ಚರಿಕೆ ನೋಟೀಸು ಜಾರಿ ಮಾಡಿದ್ದಾರೆ.
ದಾಳಿಯ ನೇತೃತ್ವವನ್ನು ಮಹಾನಗರ ಪಾಲಿಕೆಯ ಪರಿಸರ ವಿಭಾಗದ ಪೂವಪ್ಪ, ಸುಶಾಂತ್, ಮಧು, ಭರತ್, ಕರುಣಾಕರ್ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ಲಕ್ಷ್ಮಣ್ ವಹಿಸಿಕೊಂಡಿದ್ದರು.
Tagged with
dk,
feature,
lnews,
mcc
ಮಂಗಳೂರು: ಶಾಸಕ ಯು.ಟಿ. ಖಾದರ್ ಪ್ರಶಂಸೆಗೆ ಅರ್ಹ ವ್ಯಕ್ತಿ. ಇವರು ಜನಪ್ರತಿನಿಧಿಗಳಿಗೆ ಮಾದರಿ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಹಣ ಬಿಚ್ಚದ ಅಪವಾದದ ಹೊರತಾಗಿ ಶಾಸಕ ಯು.ಟಿ.ಖಾದರ್ ಸಾಧ್ಯವಾಗುವ ಕೆಲಸ ವನ್ನು ಶ್ರಮ ವಹಿಸಿ ಮಾಡುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಶಾಸಕ ಖಾದರ್ ಜನರ ಹಾಗೂ ಸಮಾಜದ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿ ಎಂಬುದನ್ನು ಸದನದಲ್ಲೂ ಸದನದ ಹೊರಗೂ ಸಾಬೀತು ಮಾಡಿದ್ದಾರೆ. ಕ್ಷೇತ್ರವ್ಯಾಪ್ತಿಯಲ್ಲಿ ಮಧ್ಯರಾತ್ರಿಯೂ ಜನರಿಗೆ ಸಿಗುವ ಹಾಗೂ ಜನರ ಸಮಸ್ಯೆಗಳಿಗೆ ಯಾವ ಕ್ಷಣದಲ್ಲೂ ಸ್ಪಂದಿಸುವ ವ್ಯಕ್ತಿತ್ವ ಪ್ರದರ್ಶಿಸುತ್ತ ಬಂದಿರುವ ಖಾದರ್ ಸದನದಲ್ಲಿ ಅತಿ ಹೆಚ್ಚು ಪ್ರಶ್ಮೆ ಕೇಳಿರುವ ಶಾಸಕನಾಗಿ ಸದನ ವೀರರಾಗಿ ಮೂಡಿಬಂದಿರುವುದು ಅವರ ಕಾರ್ಯತತ್ಪರತೆಗೆ ಸಾಕ್ಷಿ.
೨೨೪ಶಾಸಕರಿರುವ ಸದನದಲ್ಲಿ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಪ್ರಶ್ನೆ ಕೇಳದ ೬೦ ಶಾಸಕರಿದ್ದಾರೆ. ಒಂದೇ ಒಂದು ಪ್ರಶ್ನೆ ಕೇಳಿ ತಮ್ಮ ಆಯ್ಕೆಯನ್ನು ಸಾರ್ಥಕ ಮಾಡಿಕೊಂಡ ೧೦ಶಾಸಕರಿದ್ದಾರೆ. ೧೦ಕ್ಕಿಂತ ಕಡಿಮೆ ಪ್ರಶ್ನೆ ಕೇಳಿದ ಶಾಸಕರ ಸಂಖ್ಯೆ ೧೭. ಇಂಥವರ ಮಧ್ಯೆ ಬರೋಬ್ಬರಿ ೩೮೩ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದವರು ಮಂಗಳೂರಿನ ಶಾಸಕ ಯು.ಟಿ. ಖಾದರ್.
ಸದನಕ್ಕೆ ಕೇಳಲಾದ ಎಲ್ಲ ಪ್ರಶ್ನೆಗಳಿಗೂ ಸರಕಾರ ಉತ್ತರಿಸಲೇ ಬೇಕಾಗುತ್ತದೆ. ಆಡಳಿತಗಾರರು ಎಲ್ಲ ಪ್ರಶ್ನೆಗಳಿಗೂ ಸಕಾರಾತ್ಮಕ ಉತ್ತರವೇ ನೀಡಬೇಕೆಂದೇನೂ ಇಲ್ಲ. ಆದರೆ ಒಮ್ಮೆ ಉತ್ತರ ನೀಡಿದರೆ ಅದನ್ನು ಹಿಂಬಾಲಿಸಿ ಸಮಸ್ಯೆ ಬಗೆಹರಿಸಲು ಅನುಕೂಲವಾಗುತ್ತದೆ. ಸಮಸ್ಯೆಯ ಗಂಭೀರತೆಯನ್ನು ಸರಕಾರದ ಗಮನಕ್ಕೆ ತರಲು ಸಾಧ್ಯವಾಗುತ್ತದೆ ಎನ್ನುವ ಯು.ಟಿ. ಖಾದರ್ ಜನಪ್ರತಿನಿಧಿಯಾದುದಕ್ಕೆ ಇದನ್ನಲ್ಲದೆ ಮಾಡುವುದು ಬೇರೇನಿದೆ ಎಂದು ಪ್ರಶ್ನಿಸುತ್ತಾರೆ.
ಸದನವೀರರಾಗಿ ಗುರುತಿಸಲ್ಪಟ್ಟ ಯು.ಟಿ. ಖಾದರ್ ಈ ಸಂದರ್ಭದಲ್ಲಿ ನೀಡಿರುವ ಪ್ರತಿಕ್ರಿಯೆ ಜನಪ್ರತಿನಿಧಿಗಳಿಗೆ ನೇರವಾಗಿ ನಾಟುವಂತಿದೆ. ಅವರು ಹೇಳುವುದು ಹೀಗೆ, ವಿಧಾನ ಸಭೆಯ ಅಧಿವೇಶನ ಎಂಬುದು ಶಾಸಕಾಂಗದ ಹೃದಯ ಇದ್ದಂತೆ. ಅದನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳಬೇಕಾದುದು ಶಾಸಕರ ಜವಾಬ್ದಾರಿ, ಶಾಸಕರಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು, ಕೆಲಸ ಮಾಡಿಸಿಕೊಡುವುದಕ್ಕಷ್ಟೇ ಸೀಮಿತವಾಗಬಾರದು. ಜನರ, ಕ್ಷೇತ್ರದ ಮತ್ತು ರಾಜ್ಯದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಗಮನ ಸೆಳೆದು ಸರಕಾರದಿಂದ ಪರಿಹಾರ ಕೊಡಿಸುವ ಕೆಲಸ ಮಾಡಿದರೆ ಜನರು ನಮ್ಮನ್ನು ಆಯ್ಕೆ ಮಾಡಿದ್ದು ಸಾರ್ಥಕವಾಗುತ್ತದೆ ಎನ್ನುವ ಶಾಸಕ ಯು.ಟಿ.ಖಾದರ್‌ರ ಈವರೆಗಿನ ಕಾರ್ಯವೈಖರಿ ಸಮಾಧಾನಕರ. ಇದು ಹೀಗೆ ಮುಂದುವರಿದರೆ ಉತ್ತಮ ನಾಯಕನಾಗಿ ಬೆಳೆಯುವುದರಲ್ಲಿ ಸಂಶಯವೇ ಇಲ್ಲ. ಖಾದರ್ ಆರಂಭದಲ್ಲಿ ಅಗಸ ಎತ್ತಿ ಎತ್ತಿ ಒಗೆದ...... ಎಂಬಂತಾಗದಿದ್ದರೆ ಸಾಕು. ಸದನದಲ್ಲಿ ಅತಿ ಹೆಚ್ಚು ಪ್ರಶ್ನೆ ಕೇಳಿದ ಇತರ ಹತ್ತು ಶಾಸಕರಲ್ಲಿ ಆರಂಭಿಕ ನಾಲ್ಕು ಸ್ಥಾನಗಳಲ್ಲಿ ಇರುವುದು ಕೂಡ ದ.ಕ. ಜಿಲ್ಲೆಯ ಮೂಲದವರೇ ಎಂಬುದು ಗಮನಿಸಬೇಕಾದ ಅಂಶ. ೩೨೦ ಪ್ರಶ್ನೆಗಳನ್ನು ಕೇಳಿ ಮೂರನೇ ಸ್ಥಾನದಲ್ಲಿ ಇರುವುದು ಎನ್. ಹ್ಯಾರಿಸ್. ಇವರು ಪ್ರತಿನಿಧಿಸುತ್ತಿರುವ ಕ್ಷೇತ್ರ ಬೆಂಗಳೂರಿನದ್ದಾದರೂ ಇವರ ಮೂಲ ದ.ಕ., ೨೫೦ಪ್ರಶ್ನೆಗಳನ್ನು ಕೇಳಿ ನಾಲ್ಕನೇ ಸ್ಥಾನದಲ್ಲಿರುವವರು ವಸಂತ ಬಂಗೇರ. ಅನಾರೋಗ್ಯದ ನಡುವೆಯೂ ವಸಂತ ಬಂಗೇರರು ಜನರ ಮತ್ತು ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿಯನ್ನು ಮನಗಾಣ ಬೇಕಾದ ಅಂಶವಿದು.
Tagged with
dk,
feature,
lnews,
utkhader
ಬೆಂಗಳೂರು: ಕನ್ನಡ ಚಿತ್ರರಂಗ ದಲ್ಲಿ ಮಿಂಚಿ ಮರೆಯಾಗಿದ್ದ ನಟಿ ರಾಧಿಕಾ ಮತ್ತೆ ತನ್ನ ಸಿನಿಪಯಣದ ಆಸೆಯನ್ನು ಮುಂದಿಟ್ಟಿದ್ದಾರೆ. ರೊಮ್ಯಾಂ ಟಿಕ್ ಹಾಡುಗಳಲ್ಲಿ ಕಾಣಿಸಿಕೊಳ್ಳಲು ಸಿದ್ಧಳಿದ್ದೇನೆ. ಆದರೆ ಹೀರೋ ಒಂದಡಿ ದೂರದಲ್ಲೇ ನಿಲ್ಲಬೇಕು, ದಬಾಂಗ್‌ನ ಮುನ್ನಿ ಬದ್ನಾಮಿ ಹುಯಿನಂತಹ ಹಾಡು ಸಿಕ್ಕಿದ್ರೆ ಕಣ್ಮುಚ್ಚಿ ಒಪ್ಪಿಕೊಳ್ಳುತ್ತೇನೆ. ಆದರೆ ಬಿಚ್ಚಮ್ಮಳಂತೆ ಕಾಣಿಸಿಕೊಳ್ಳಲು ಸಾಧ್ಯವಿಲ್ಲ!
ಇವಿಷ್ಟು ಕಡಲತಡಿಯ ಸುಂದರಿ ರಾಧಿಕಾ ಕುಮಾರಸ್ವಾಮಿ ಮತ್ತೆ ನಟಿ ಸಲು ನಿರ್ದೇಶಕ-ನಿರ್ಮಾಪಕರುಗಳಿಗೆ ಹಾಕುತ್ತಿರುವ ಷರತ್ತು. ಇದಕ್ಕೆ ಒಪ್ಪಿಕೊಂಡರೆ ಯಾವ ಪಾತ್ರದಲ್ಲಾ ದರೂ ನಟಿಸಲು ತಾನು ಸಿದ್ಧ ಎಂದು ಹೇಳಿದ್ದಾರೆ.
ಗ್ಲಾಮರ್ ಅಥವಾ ಚರ್ಮ ಪ್ರದರ್ಶನ ಇನ್ನು ನನ್ನಿಂದಾಗಲ್ಲ. ಒಬ್ಬ ಹೆಂಡತಿ ಮತ್ತು ತಾಯಿಯ ಜವಾಬ್ದಾರಿ ಪಡೆದುಕೊಂಡಿರುವ ನನಗೆ ಅದಕ್ಕೆ ಹೊಂದುವ ಪಾತ್ರಗಳು ಬೇಕು. ಹಾಗೆಂದು ರೊಮ್ಯಾಂಟಿಕ್ ಹಾಡುಗಳಿಗೆ ಖಡಾಖಂಡಿತವಾಗಿ ನೋ ಅನ್ನಲಾರೆ. ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಲು ಸಿದ್ಧಳಿದ್ದೇನೆ. ಆದರೆ ಹಾಡುಗಳಲ್ಲಿ ನನ್ನ ನಾಯಕ ನನ್ನಿಂದ ಒಂದಡಿ ದೂರ ನಿಲ್ಲಬೇಕು ಎಂದು ಆಂಗ್ಲ ಪತ್ರಿಕೆಯೊಂದರ ಜತೆ ರಾಧಿಕಾ ತನ್ನ ಷರತ್ತುಬದ್ಧ ಅಭಿನಯದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲ ಕಂಡೀಷನ್ ಹಾಕುವ ರಾಧಿಕಾಗೆ ಹಾಟ್ ಸಾಂಗ್ ತುಂಬಾ ಇಷ್ಟವಂತೆ. ದಬಾಂಗ್ ಸಿನಿಮಾದ ಮುನ್ನಿ ಬದ್ನಾಮ್ ಹುಯಿ ನಂತಹ ಹಾಡು ಸಿಕ್ಕಿದರೆ ನಾನು ಮೈ ಕುಣಿಸಲು ಸಿದ್ಧಳಿದ್ದೇನೆ. ಆದರೆ ಅಲ್ಲಿ ಸೆಕ್ಸಿಯಾಗಿರಬಾರದು, ಚರ್ಮ ಪ್ರದರ್ಶನಕ್ಕೆ ಅವಕಾಶವಿಲ್ಲ ಎಂದು ವಿಚಿತ್ರ ಷರತ್ತು ಮುಂದಿಡುತ್ತಾರೆ. ಹೀರೋ ಮೈ ಮುಟ್ಟದೆ ಸಿನಿಮಾ ಮಾಡೋ ದಾದರೂ ಹೇಗೆ? ಒಂದು ವೇಳೆ ಮಾಡಿದರೂ ಜನ ನೋಡ್ತಾರ? ಎಂಬ ಗೊಂದಲದಲ್ಲಿದ್ದಾರಂತೆ ಕನ್ನಡದ ಕೆಲ ನಿರ್ಮಾಪಕರು.
Tagged with
cnnews,
feature,
snews
ಪ್ರಶ್ನೆ: ನಾನು ಸದ್ಯದಲ್ಲೇ ಮದುವೆಯಾಗಲಿದ್ದೇನೆ. ನನಗೆ ನಿಶ್ಚಿ ತಾರ್ಥ ನಡೆದಿದೆ. ನನಗೆ ಸೆಕ್ಸ್ ಬಗ್ಗೆ ಸರಿಯಾದ ಮತ್ತು ಸಮರ್ಪಕ ಮಾಹಿತಿ ಇಲ್ಲ. ನಾನು ಈ ಬಗ್ಗೆ ಯಾರಲ್ಲೂ ಚರ್ಚಿಸಲು ಹೋಗಿಲ್ಲ. ಯಾಕೆಂದರೆ ಈಗಿನ ಕಾಲದ ಹುಡುಗರು ಎಲ್ಲದರಲ್ಲೂ ತುಂಬಾ ಫಾರ್ವರ್ಡ್ ಆಗಿರುವ ಕಾರಣ ಅವರು ನನ್ನ ಬಗ್ಗೆ ತಪ್ಪು ತಿಳಿದು ಕೊಳ್ಳುತ್ತಾರೆಯೇ ಎಂಬ ಭಯ. ನಾನು ಮದುವೆಯಾಗುವ ಹುಡುಗಿ ನನಗಿಂತ ಸಪೂರ ಹಾಗೂ ಸುಂದರಿ. ಅವಳ ಜೊತೆ ಸಿನಿಮಾಕ್ಕೆ ಒಂದು ಬಾರಿ ಹೋಗಿದ್ದರೂ ಈ ಬಗ್ಗೆ ಚರ್ಚೆ ಮಾಡಿಲ್ಲ. ಸೆಕ್ಸ್ ವೇಳೆ ಕೆಲವು ಹೆಣ್ಣುಮಕ್ಕಳಲ್ಲಿ ನೋವು ಕಾಡುತ್ತದೆ ಎಂದು ಹೇಳು ತ್ತಾರೆ. ಇದೇಕೆ ಎಂದು ನನಗೆ ತಿಳಿದಿಲ್ಲ. ಸೆಕ್ಸ್‌ಗೂ ಮುನ್ನ ಹೆಣ್ಣು ಉದ್ರೇಕಗೊಂಡಿದ್ದಾಳೆ ಎಂದು ತಿಳಿಯುವುದು ಹೇಗೆ? ನನಗೆ ಸೂಕ್ತ ಸಲಹೆ ನೀಡಬೇಕಾಗಿ ವಿನಂತಿ.
ಉತ್ತರ: ನೀವು ಕೇಳಿರುವ ಪ್ರಶ್ನೆ ಸಮಂಜಸವಾದುದು. ಸೆಕ್ಸ್ ವೇಳೆ ಸ್ತ್ರೀಗೆ ಎಷ್ಟೇ ಲೈಂಗಿಕ ಕಾಮನೆಗಳಿದ್ದರೂ ಕೆಲವೊಮ್ಮೆ ಜನ ನಾಂಗ ಪ್ರವೇಶ ಆಗುವುದಿಲ್ಲ. ಪುರುಷ ಮತ್ತೆ, ಮತ್ತೆ ಪ್ರಯತ್ನಿಸಿ ದಾಗ ಅತಿಯಾದ ನೋವುಂಟಾಗುತ್ತದೆ. ಯೋನಿಪಟಲ ಗಟ್ಟಿಯಾ ಗಿದ್ದರೆ ಅದು ಪುರುಷ ಜನನಾಂಗವನ್ನು ತಡೆಯುತ್ತದೆ. ಸ್ತ್ರೀಗೆ ತನ್ನ ಬೆರಳನ್ನು ಕೂಡಾ ಜನನಾಂಗದೊಳಕ್ಕೆ ಸೇರಿಸಲು ಅಸಾಧ್ಯ ಎನ್ನಿಸು ವಷ್ಟು ನೋವುಂಟಾದರೆ ಆಗ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿ ಪಡೆ ಯಬೇಕಾಗುತ್ತದೆ. ಇನ್ನು ಸ್ತ್ರೀ, ಪುರುಷನಿಗಿಂತ ನಿಧಾನವಾಗಿ ಲೈಂಗಿಕ ಉದ್ರೇಕದ ಸ್ಥಿತಿಯನ್ನು ತಲುಪುವುದರಿಂದ ಆಕೆಯನ್ನು ಚುಂಬನ, ಆಲಿಂಗನದಿಂದ ಉದ್ರೇಕಿಸುವುದು ಒಳಿತು. ಆಕೆ ಸಂಪೂರ್ಣ ರತಿ ಕ್ರೀಡೆಗೆ ಸಿದ್ಧಳಾಗಿದ್ದಾಳೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಬೇರೆ-ಬೇರೆ ಉಪಾಯಗಳಿವೆ. ಇವೆಲ್ಲವೂ ನಿಮಗೇ ತಿಳಿಯುತ್ತದೆ. ಆ ಬಗ್ಗೆ ಸಂದೇಹ ಬೇಡ. ಇನ್ನು ಸ್ತ್ರೀಯ ಉದ್ರೇಕದ ಸ್ಥಿತಿಯನ್ನು ತಿಳಿದುಕೊಂಡೇ ಪುರುಷ ಮುಂದಾದರೆ ನೋವಿನ ಸಮಸ್ಯೆಗಳು ಕಾಡುವುದಿಲ್ಲ. ಸೆಕ್ಸ್‌ಗೂ ಮುನ್ನ ಮುನ್ನ ಲಿವು(ಫೋರ್‌ಪ್ಲೇ)ನಲ್ಲಿ ತೊಡಗಿಕೊಂಡೂ ಸ್ತ್ರೀ ಉದ್ರೇಕ ತಲುಪದೇ ಇದ್ದು, ಸಂಭೋಗದ ವೇಳೆ ಅತೀವ ನೋವು ಉಂಟಾದರೆ ಅವಶ್ಯವಾಗಿ ವೈದ್ಯರನ್ನು ಕಾಣಬೇಕು. ಇಂಥ ಸ್ಥಿತಿಯಲ್ಲಿ ಸ್ತ್ರೀಯು ಭಯಪಡದೆ ಪುರುಷನಿಗೆ ತಾನಿನ್ನೂ ಕೊನೆಯ ಹಂತಕ್ಕೆ ಸಿದ್ಧಳಾಗಿಲ್ಲ ಎನ್ನುವುದನ್ನು ತಿಳಿಸಬೇಕು. ಪತಿ-ಪತ್ನಿ ತನ್ನ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಬಿಡುತ್ತದೆ.
ಇನ್ನು ಆರೋಗ್ಯದ ಸಾಮಾನ್ಯ ತೊಂದರೆಗಳೂ ಕೂಡಾ ಸ್ತ್ರೀಯರಲ್ಲಿ ಲೈಂಗಿಕ ನಿರುತ್ಸಾಹಕ್ಕೆ ಕಾರಣವಾಗುತ್ತವೆ. ಹಾಲು, ಮೊಟ್ಟೆ, ಮಾಂಸ, ಮೀನು, ಹಣ್ಣು, ಹಾಲು ಇತ್ಯಾದಿ ಜೀವಸತ್ವ ಹಾಗೂ ಪೌಷ್ಠಿಕಾಂಶಯುಕ್ತ ಆಹಾರ ಸೇವಿ ಸಬೇಕು. ಬಿಸಿನೀರಿಗೆ ಸಾಸಿವೆ ಬೆರೆಸಿ ಸ್ನಾನ ಮಾಡುವುದರಿಂದ ಇಂಥ ಸಮಸ್ಯೆ ಶಮನವಾಗುತ್ತದೆ. ಲೈಂಗಿಕ ಕ್ರಿಯೆಯ ವೇಳೆ ಸ್ತ್ರೀಯರಲ್ಲಿ ನೋವು ಎಲ್ಲ ರಲ್ಲೂ ಒಂದೇ ತೆರನಾಗಿ ಕಾಣಿಸಿಕೊಳ್ಳ ಬೇಕಿಲ್ಲ. ಸೆಕ್ಸ್ ಬಗ್ಗೆ ಸಮರ್ಪಕ ಮಾಹಿತಿ ಇರದಿದ್ದ ವೇಳೆ ದಂಪತಿ ಇಂಥ ಸಾಮಾನ್ಯ ಸಮಸ್ಯೆಯನ್ನೇ ದೊಡ್ಡದು ಮಾಡಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ವಿವಾಹಾನಂತರ ಜೀವನಕ್ಕೆ ಸೆಕ್ಸ್ ಭದ್ರ ಅಡಿಪಾಯ ಆಗಿರುತ್ತದೆ. ದಂಪತಿ ಪರಸ್ಪರ ಅರಿತು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.
ನೀವು ಮದುವೆಗೂ ಮುನ್ನ ಇಂಥ ಸಮಸ್ಯೆಯ ಬಗ್ಗೆ ಚರ್ಚಿಸಿದ್ದು ಒಳ್ಳೆಯದೇ ಆಯಿತು. ನಿಮಗೆ ಮತ್ತೂ ಹೆಚ್ಚಿನ ಲೈಂಗಿಕ eನ ಸಿಗಬೇಕಿ ದ್ದರೆ ಮಾರುಕಟ್ಟೆಯಲ್ಲಿ ಸಿಗುವ ಲೈಂಗಿಕ ಸಾಹಿತ್ಯವನ್ನು ಓದಬಹುದು. ಸುಖಮಯ ದಾಂಪತ್ಯಕ್ಕೆ ಸ್ತ್ರೀ-ಪುರುಷರಿಬ್ಬರ ಸಹಕಾರ ಅತ್ಯಗತ್ಯ. ಇಲ್ಲಿ ಸಮಸ್ಯೆ ಯಾರದ್ದೇ ಆಗಿರಲಿ, ಅದನ್ನು ತಿಳಿದು ಬಗೆಹರಿಸುವುದೇ ಜಾಣ ತನವಾಗಿರುತ್ತದೆ. ತನಗೆ ಬೇಕೆನಿಸಿದ್ದನ್ನು ಸ್ತ್ರೀ ನೇರವಾಗಿ ಪುರುಷನಲ್ಲಿ ಕೇಳಬೇಕು. ಇಲ್ಲಿ ಹಿಂಜರಿಕೆ ಪಟ್ಟರೆ ಸಮಸ್ಯೆ ಪರಿಹಾರ ಕಾಣುವುದಿಲ್ಲ. ಸೆಕ್ಸ್ ವೇಳೆ ರಮಿಸುವ ಇಚ್ಛೆ ಸ್ತ್ರೀಯರಲ್ಲಿರಬೇಕು.
ಪುರುಷ ಆಕೆಯ ಬಯಕೆಯತ್ತ ಗಮನ ಕೊಡಬೇಕೇ ಹೊರತು ತನ್ನ ಸುಖದತ್ತ ಮಾತ್ರ ಗಮನ ನೀಡಕೂಡದು. ಲೈಂಗಿಕ ಸಮಸ್ಯೆಗಳು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತದೆ. ಇದರಲ್ಲಿ ಸಣ್ಣವು ಅಥವಾ ದೊಡ್ಡ ಸಮಸ್ಯೆಯನ್ನು ಪ್ರತ್ಯೇಕವಾಗಿ ಗುರುತಿಸಿಕೊಂಡು ಸಣ್ಣ ಸಮಸ್ಯೆಯನ್ನು ತಾವೇ ಬಗೆಹರಿಸಿ ಕೊಂಡು ಗಂಭೀರ ಸ್ವರೂಪದ್ದು ಎಂದು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಲು ತಡಮಾಡಬಾರದು. ಪ್ರಥಮ ಬಾರಿಯ ಲೈಂಗಿಕ ಕ್ರಿಯೆ ಅಥವಾ ಸಂಭೋಗ ಮಧುರ ಅನುಭವವನ್ನೇ ನೀಡಬೇಕು ಎಂದಿಲ್ಲ. ಆದರೆ ಸಹನೆ, ಪರಸ್ಪರ ಕಾಳಜಿ, ಪ್ರೀತಿ ದಂಪತಿಯಲ್ಲಿದ್ದರೆ ಯಾವುದೂ ಸಮಸ್ಯೆಯಾಗುವುದಿಲ್ಲ.
Tagged with
gupta
ಜೂ. ೧೨ರ ಚಾವಡಿ ವಿಭಾಗದಲ್ಲಿ ಸಲೀಂ ಬೈರಿಕಟ್ಟೆ ವಿಟ್ಲರವರ ಸರ್ವಧರ್ಮ ಏಕತೆ ಮೌಢ್ಯತನದ ಪರಮಾವಧಿ ಎಂಬ ಶೀರ್ಷಿಕೆಯ ಬರಹ ಪ್ರಕಟವಾಗಿತ್ತು. ನಾನು ಬರೆದ ಬರಹದ ಬಗ್ಗೆ ವಿಮರ್ಶೆ ವ್ಯಕ್ತಪಡಿಸಿ ಅಭಿ ಪ್ರಾಯ ಪ್ರಕಟಿಸಿದ ಸಲೀಂರ ಬರಹದ ಕೊನೆಯವರೆಗೂ ಸರ್ವಧರ್ಮ ಒಗ್ಗೂಡುವ ವಿಚಾರಕ್ಕೆ ಅಂದರೆ ಮುಸ್ಲಿಮೇತರರಿಗೆ ಮಸೀದಿ ಪ್ರವೇಶ ನಿಷಿ ದ್ಧವಾಗಿದೆ ಎಂಬ ಆಭಿಪ್ರಾಯ ವ್ಯಕ್ತಪಡಿಸಿ ನನ್ನ ಬರಹವೇ ಅಜ್ಞಾನದ ಹಾಗೂ ಹಾಸ್ಯಾಸ್ಪದವಾದುದು ಎಂಬ ನೇರ ಅಭಿಪ್ರಾಯ ಜೊತೆ ಸೇರಿತ್ತು.
ಮಸೀದಿ-ದರ್ಗಾದ ವ್ಯತ್ಯಾಸ ತಿಳಿಯದವನೇನೂ ಅಲ್ಲ. ಮಸೀದಿಗೂ ಹೋದವ, ದರ್ಗಾಕ್ಕೂ ಹೋದವ ನಾನು. ಉಳ್ಳಾಲದ ದರ್ಗಾಕ್ಕೆ ನನ್ನ ತಂದೆ ಹಾಗೂ ನಮ್ಮ ಮುಸ್ಲಿಂ ಮಿತ್ರರ ಜೊತೆ ೫ ವರ್ಷದ ಹಿಂದೆ ಹೋಗಿದ್ದೆ. ಅಲ್ಲಿ ಮುಸ್ಲಿಮರೂ ಇದ್ದರು, ಹಿಂದೂಗಳೂ ಇದ್ದರು. ಹಿಂದೂಗಳು ಕೈಮುಗಿದು ಪ್ರಾರ್ಥಿಸಿದರೆ ಮುಸ್ಲಿಮರು ಎರಡೂ ಕೈಗಳನ್ನು ಮುಂದಕ್ಕೆ ಚಾಚಿ ಬೇಡುವ ರೀತಿಯ ಪ್ರಾರ್ಥನೆ ನಮಾಜು ಮಾಡುವ ಕ್ರಮ ದರ್ಗಾದಲ್ಲಿ ಇಲ್ಲ. ಮಾಡ ಬಾರದೆಂಬ ನಿಯಮವೇನೂ ಇಲ್ಲ ಎಂಬ ಅಭಿಪ್ರಾಯ ನನ್ನ ಅನೇಕ ಮುಸ್ಲಿಂ ಮಿತ್ರರದ್ದು.
ಮಸೀದಿ ಅಲ್ಲಾಹನನ್ನು ಪ್ರಾರ್ಥಿಸುವ ನಮಾಜು ಮಾಡುವ ಸ್ಥಳವೆಂ ಬುದು ಸಣ್ಣ ಮಗುವಿಗೂ ಗೊತ್ತಿರುವ ವಿಚಾರ. ಅಲ್ಲಾಹನನ್ನು ಮಹಮ್ಮದ್ ಪೈಗಂಬರರೇ ನೋಡಲಿಲ್ಲವಂತೆ. ಮನುಷ್ಯನೊಬ್ಬ ತನ್ನ ಆತ್ಮ ಚೈತನ್ಯವನ್ನು ಯಾವ ರೂಪಗಳಲ್ಲಿಯೂ ಬಹಿರಂಗದಲ್ಲಿ ಕಾಣಬಹುದು. ಮನುಷ್ಯ ರೂಪ ಕಲ್ಪಿಸಿಕೊಂಡರೆ ಅಲ್ಲಾಹನೂ ಮನುಷ್ಯ ರೂಪವೆಂದು ಗ್ರಹಿಸಬಹುದು. ರೂಪ, ಆಕಾರ, ಭಾವ ಇವು ಯಾವುದೂ ಇಲ್ಲದ ಮನುಷ್ಯನ ನಿಲುಮೆಗೆ ಮೀರಿದ ಶಕ್ತಿ ಎಂಬ ನಂಬಿಕೆ ತಪ್ಪಲ್ಲ. ಈ ಬಗೆಗಿನ ನಿಮ್ಮ ಅಭಿಪ್ರಾಯಕ್ಕೆ ನಾನು ಸಮ್ಮತ ವನ್ನೇ ವ್ಯಕ್ತಪಡಿಸಬಲ್ಲೆ. ಅದಕ್ಕಿಂತ ಬೇರೆ ಏನನ್ನೂ ಅಲ್ಲಾಹನ ಬಗ್ಗೆ ಹೇಳಲು ನನಗೆ ಶಕ್ತಿ ಇಲ್ಲ.
ವ್ಯಕ್ತಿಯೊಬ್ಬ ದೇವರ ಪ್ರತಿರೂಪ ಅಥವಾ ಸಕಲ ಜೀವಿಗಳಲ್ಲಿ ಇರುವ ಆತ್ಮ. ಅಥವಾ ಚೈತನ್ಯವೇ ದೇವರು ಎಂಬುದು ಬೇರೆ ಬೇರೆ ದೃಷ್ಟಿಕೋನದಲ್ಲಿ ಚಿಂತಿಸಬಹುದು. ಸಲೀಂರ ಧಾರ್ಮಿಕ ಭಾವನೆ ಅವರ ಧರ್ಮದ ಕುರಾನಿನ ನಿಯಮಗಳಿಗೆ ಅನುಗುಣವಾಗಿದ್ದರೆ ಅದು ಅವರಿಗೆ ಶ್ರೇಷ್ಠ. ಮಸೀದಿಗೆ ನಾನು ಹೋಗಿದ್ದೆ. ಅದೂ ಕೂಡಾ ಮೂಡಬಿದ್ರೆಯ ತೋಡಾರಿನ ಮಸೀದಿ. ಅಲ್ಲಿ ಹೆಚ್ಚಿನ ವಾಹನ ಚಾಲಕರು ನಿಲ್ಲಿಸಿ ಹರಕೆ ಸಲ್ಲಿಸುವುದನ್ನು ನೋಡಿದೆ. ಅದರಲ್ಲಿ ಹಿಂದೂಗಳೂ ಇದ್ದರು. ನಾನು ನನ್ನ ಕಣ್ಣಾರೆ ನೋಡಿದ್ದೇನೆ.
ನನಗೆ ಮಸೀದಿ, ಚರ್ಚ್, ದೇವಸ್ಥಾನ ಒಂದೇ ಉದ್ದೇಶದಿಂದ ಕೂಡಿದ ಸ್ಥಳ ಎಂಬ ನಂಬಿಕೆ ಇದೆ. ಈ ಮೂರರ ಉದ್ದೇಶ ಪ್ರಾರ್ಥಿಸುವುದು. ಅಥವಾ ದೇವನಿಗಾಗಿ ಪ್ರಾರ್ಥಿಸುವ ಸ್ಥಳ ಎಂಬ ವಾಸ್ತವ ತಿಳಿದ ಕಾರಣ ನನ್ನ ಬರಹ ನಿಮಗೆ ಅಜ್ಞಾನದ ಬರಹ. ಹಾಸ್ಯಾಸ್ಪದವಾದ ಬರಹ ಎಂದು ತಿಳಿದರೆ ನಾನು ಏನೂ ಹೇಳಲಾರೆ.
ಹಿರಿಯರ ಉದ್ದೇಶದ ವಿವರಣೆ ಸಲೀಂರ ಕೇಳಿಕೆಯಾಗಿತ್ತು. ಸಂಪ್ರ ದಾಯ ಆರಂಭವಾದುದು ಯಾವಾಗ? ಕೊನೆಗೊಂಡಿದ್ದು ಯಾವಾಗ ಈ ಎರಡು ಪ್ರಶ್ನೆಗೆ ಉತ್ತರಿಸುವುದಕ್ಕೆ ತೊಡಗಿದ್ದೇನೆ. ನನಗೆ ತಿಳಿದ ವಿಚಾರವನ್ನು ಭಯವಿಲ್ಲದೆ ನೇರವಾಗಿ ತಿಳಿಸುವುದಕ್ಕೆ ಸಿದ್ಧನಾಗಿಯೇ ಇದ್ದೆನೆ.
ಬಪ್ಪನಾಡಿನ ದೇವಸ್ಥಾನದ ಪರಂಪರೆ ಸ್ಥಾಪನೆ ಆದ ಬಗೆಗೆ ಬಪ್ಪ ಬ್ಯಾರಿಗೆ ದುರ್ಗೆ ಕಾಣಿಸಿಕೊಂಡದ್ದು, ದೈವಿ ಶಕ್ತಿಗೆ ಹಿಂದೂ ಮುಸ್ಲಿಂ, ಕ್ರೈಸ್ತ, ಅವನು ಇವನು ಮೇಲ್ಜಾತಿ, ಕೆಳಜಾತಿ ಎಂಬ ಬೇಧವಿಲ್ಲ ಎಂಬುದನ್ನು ತೋರಿಸಿದ್ದು, ಒಂದು ಕ್ಷೇತ್ರದ ರಚನೆಯ ಹಿಂದಿರುವ ಕಟು ಸತ್ಯ. ಹಿಂದೆ ಹಿಂದೂ ಮುಸ್ಲಿಂ ಕ್ರೈಸ್ತರು ಅಣ್ಣ ತಮ್ಮಂದಿರಂತೆ ಕೂಡಿ ಬಾಳಿದ ನಿದರ್ಶನಗಳು. ಮಸೀದಿಗೆ ಧರ್ಮಾರ್ಥವಾಗಿ ಮರ ಹಂಚು ಕೊಟ್ಟದ್ದು ಇದೆ. ದೇವಸ್ಥಾನದ ನಿರ್ಮಾಣಕ್ಕೆ ಸ್ಥಳ ವನ್ನೂ ನೀಡಿದ ಉದಾ ಹರಣೆಗಳಿವೆ. ಇಂತಹ ಪರಿಸರ ನಿರ್ಮಾಣವಾಗುವುದಕ್ಕೆ ಅಂತರಂಗದಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳೆಂಬ ಬೇಧವಿಲ್ಲದ ಮೂಲ ಕಾರಣ ಅಲ್ಲವೆ? ಸಲೀಂರವರೇ ಆಲೋಚಿಸಿ.
ತುಳುನಾಡಿನ ಭೂತಾರಾಧನೆಯಲ್ಲಿ ಕೆಲವು ಪ್ರದೇಶದಲ್ಲಿ ನೇಮ ಅಥವಾ ಜಾತ್ರೆಯ ಸಂದರ್ಭದಲ್ಲಿ ದೈವವು ಮಸೀದಿಗೆ ಹೋಗುವ ಮಸೀದಿ ಮುಖ್ಯಸ್ಥರಿಗೆ ಪ್ರಸಾದ ಕೊಡುವ ಸಂಪ್ರದಾಯ ಈಗಲೂ ಇರುವುದರಿಂದ ಇಂತಹ ಸನ್ನಿವೇಶಗಳು ಸರ್ವ ಧರ್ಮವು ಏಕತೆಯಿಂದ ಕೂಡಿದೆ ಎಂಬುದನ್ನು ತೋರಿಸುವುದು ಸತ್ಯವಲ್ಲವೇ? ಈ ಎಲ್ಲವುಗಳನ್ನು ಅಂತರಂಗದಿಂದ ನೋಡಿದರೆ ಅಲ್ಲಾಹನು, ಈಶ್ವರನೂ, ಕ್ರೈಸ್ತನೂ ಬೇರೆ ಬೇರೆ ಅಲ್ಲ ಎಂಬ ವಾಸ್ತವ ಚಿತ್ರಣವಿರುವುದರಿಂದ ಮನಸ್ಸಿನ ಶುದ್ದೀಕರಣ ವಾಗಬೇಕು. ತೊಳೆಯುವುದರಿಂದಲ್ಲ ಎಂಬ ಶೀರ್ಷಿಕೆ ಬರಹ ನೀಡಿದ್ದನ್ನು ನೀವು ಹಾಸ್ಯಾಸ್ಪದ, ಅಜ್ಞಾನವೆಂದು ಉಲ್ಲೇಖಿಸುವಿರಾದರೆ ನಿಮ್ಮ ಗ್ರಹಿಕೆ ಯಾವ ರೀತಿ, ಜ್ಞಾನದ ವ್ಯಾಪ್ತಿ ಎಷ್ಟು ಎಂಬುದನ್ನು ಬೇರೆ ಮಾತಿನಲ್ಲಿ ಹೇಳಬೇಕಾಗಿಲ್ಲ. ಅದನ್ನೆಲ್ಲಾ ನೀವೇ ಸ್ಪಷ್ಟಪಡಿಸಬೇಕಾಗುತ್ತದೆ.
ಎಲ್ಲಿ ಕೊನೆಗೊಂಡಿತು? ಎಂಬ ಪ್ರಶ್ನೆಗೆ ಉತ್ತರಿಸುವುದಾದರೆ. ಧಾರ್ಮಿಕ ವಿಚಾರಕ್ಕೆ ಯಾವಾಗ ರಾಜಕೀಯ ಪ್ರವೇಶವಾಯಿತೋ. ಧಾರ್ಮಿಕ ಮುಖಂ ಡರು ರಾಜಕೀಯ ಕೈಗೊಂಬೆಯಾದರೋ. ದೇವಸ್ಥಾನದಲ್ಲಿ ದನದ ರುಂಡ ಇಟ್ಟರೋ. ಮಸೀದಿಯೊಳಗೆ ಹಂದಿ ರುಂಡ ಇಟ್ಟರೋ ಕ್ರೈಸ್ತ ಶಿಲುಬೆ ಪುಡಿ ಮಾಡಿದರೋ ಅವತ್ತಿನಿಂದ ಗಲಭೆಗಳು ಸೃಷ್ಟಿಯಾಗಿ ಮಸೀದಿ, ದೇವಸ್ಥಾನ, ಚರ್ಚ್ ಬೇರೆ ಬೇರೆ ಎಂಬ ಭಾವನೆ ಬರುವ, ಪರಸ್ಪರ ಇವುಗಳ ಹೆಸರಿನಲ್ಲಿ ಬಡಿದಾಟ, ರಕ್ತಪಾತ ಮಾಡಿ, ಜೀವ ಹಾನಿ, ಸೊತ್ತು ಹಾನಿಯಾಯಿತೋ ಅದರ ಲಾಭ ರಾಜಕೀಯ ಪಕ್ಷ, ಪ್ರಮುಖರು ಪಡಕೊಳ್ಳುವ ಕೀಳು ರಾಜಕೀಯ ಆರಂಭವಾಯಿತು. ಪ್ರಾಚೀನ ಪರಂಪರೆಯಿಂದ ಬಂದ ಸರ್ವಧರ್ಮ ಸಮನ್ವಯತೆ ನಾಶದ ಅಂಚಿಗೆ ಬಂತು. ಅವರು ಇವರು ಎಂಬ ಬೇಧಗಳು ಸೃಷ್ಟಿಯಾದವು.
ಪೈಗಂಬರರ ನುಡಿಯೊಂದಿದೆ ‘ವಿದ್ಯೆಯೇ ಸುಖದ ಸಾಧನವಾಗಿದೆ ಎಲ್ಲಾ ಧರ್ಮದವರು ಸುಖದಿಂದ ಜೀವಿಸಬಹುದಾದ ವಿದ್ಯೆ ಸಿಗಲಿ ಎಂಬುದೇ ಅವರ ಚಿಕ್ಕ ಮಾತಿನ ವಿಶೇಷ ಅರ್ಥ ಕೊಡುವ ನುಡಿಯಾಗಿದೆ. ‘ಏಕೋ ದೇವ, ಸರ್ವವ್ಯಾಪಿ, ‘ನಿರ್ಗುಣ ಮೊದಲಾದವು ದೇವರ ಬಗೆಗಿರುವ ಅಭಿಪ್ರಾಯಗಳು.
ಅಶೋಕ ಹಲಾಯಿ, ಬಂಟ್ವಾಳ
Tagged with
chavadi
ಮೀನುಗಾರಿಕಾ ಇಲಾಖೆಯು ಹಿಂದೆಂದೂ ಕಾಣದಂತಹ ಹಾಗೂ ಪ್ರಾಯಶಃ ಮುಂದೆಂದೂ ಸಿಗದಂತಹ ಮಂತ್ರಿಯೊಬ್ಬ ರಿಗೆ ಸಿಕ್ಕಿದೆ. ಅವರು ಮಂತ್ರಿಯಾದ ಈ ನಾಲ್ಕು ವರ್ಷಗಳಲ್ಲಿ ಮೀನುಗಾರರಿಂದ ಮತ್ತು ಮೀನುಗಾರರಿಗೆ ಇಲಾಖೆ ಕೊಡುವ ಸವಲತ್ತುಗಳಿಂದ ಎಲ್ಲದರಲ್ಲೂ ವಂಚಿಸಿ ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾರೆ. ಮೀನುಗಾರಿಕಾ ಬಂದರುಗಳಲ್ಲಿ ಅವರ ಮತ್ತು ಅವರ ಸಂಬಂಧಿಕರ ಹೆಸರಲ್ಲಿ ಕೆಲವು ಜಾಗಗಳನ್ನು ಗುಳುಂ ಮಾಡಲಾಗಿದೆ. ಅವರಿಗೆ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳು ಸಾಥ್ ನೀಡುತ್ತಿದ್ದು, ನಿಷ್ಠ ಅಧಿಕಾರಿಗಳಿಗೆ ಈಗಾಗಲೇ ಖೊಕ್ ನೀಡಿದ್ದಾರೆ. ಇದೆಲ್ಲದರ ಸಂಚು ಅವರ ಆಪ್ತಕಾರ್ಯದರ್ಶಿಯ ಮೂಲಕ ಕಾರ್ಯಗತವಾಗುತ್ತಿದೆ.
ಕಳೆದ ಎರಡು-ಮೂರು ವರ್ಷಗಳಲ್ಲಿ ಇಲಾಖೆಯಿಂದ ದೋಣಿ ಕಟ್ಟಲು ಇನ್ನೂರಕ್ಕೂ ಹೆಚ್ಚು ಪರವಾನಿಗೆಯನ್ನು ಕೊಟ್ಟಿದ್ದಾರೆ. ಒಂದೊಂದು ಪರವಾನಿಗೆಗೂ ಒಂದೊಂದು ಲಕ್ಷ. ಅದನ್ನು ಕಾರ್ಯರೂಪಕ್ಕೆ ತಂದದ್ದು ಬೆಂಗಳೂರಿನ ಜಂಟಿ ನಿರ್ದೇಶಕ, ಮಂಗಳೂರಿನಲ್ಲಿ ಮೀನುಗಾರರಾಗಿರುವ ವ್ಯಕ್ತಿಯೊಬ್ಬರು. ಬೆಂಗಳೂರಿನಲ್ಲಿ ಒಂದು ಲಕ್ಷ ಪಾವತಿಯಾದರೆ ಮಾತ್ರ ಹೆಸರು ಪಟ್ಟಿಯಲ್ಲಿ ಸೇರ್ಪಡೆ. ಇಲ್ಲಿ ಆ ಪಟ್ಟಿಯಲ್ಲಿ ರುವವರಿಗೆ ಮಾತ್ರ ಪರವಾನಿಗೆ ಮಂಜೂರು ಮಾಡಿ ಇದರಲ್ಲಿ ಎಲ್ಲರಿಗೂ ಪಾಲು. ಸುಮಾರು ಎರಡು ಕೋಟಿಗೂ ಹೆಚ್ಚು ಲಂಚದ ಹಣ ಸಂಪಾದನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಇನ್ನೊಬ್ಬ ಜಂಟಿ ನಿರ್ದೇಶಕ ರಾಮಕೃಷ್ಣ. ಇವರು ಹೆಗ್ಗಣಕ್ಕೆ ಸಮ. ಇವರು ಜಲಾಶಯಗಳಿಗೆ ಮೀನು ಮರಿ ಬಿಟ್ಟಿದ್ದು ಕಮ್ಮಿ. ಮೀನು ಬಿಡುವ ಹೆಸರಲ್ಲಿ ವಿತರಕರೊಡನೆ ಅಡ್ಜಸ್ಟ್‌ಮೆಂಟ್ ಮಾಡಿ ಹಣ ಮಾಡಿದ್ದೇ ಹೆಚ್ಚು. ಹೇಗಿದ್ದರೂ ಮೀನು ಬಿಟ್ಟಿದೆಯೇ, ಇಲ್ಲವೇ ಎನ್ನುವುದು ಕಾಣುವುದಿಲ್ಲ ಅಲ್ಲವೇ?
ಈ ಇಬ್ಬರು ‘ಜಂಟಿ ಅಧಿಕಾರಿಗಳು ಕೇಂದ್ರ ಸರಕಾರದಿಂದ ಮಂಜೂರಾದಂತಹ ಅನುದಾನಗಳನ್ನು ಮೀನುಗಾರರಿಗೆ ಹೇಳದೆ ಕೆಲವು ಏಜೆಂಟ್‌ಗಳನ್ನು ನೇಮಿಸಿ ಕಮಿಷನ್ ಹಣ ಪಡೆದು ನುಂಗಿ ನೀರು ಕುಡಿಯುತ್ತಲೇ ಇದ್ದಾರೆ. ಇದೂ ಸಾಲದೆಂಬಂತೆ ಇಬ್ಬರೂ ಈಗ ನಿರ್ದೇಶಕರ ಹುದ್ದೆಗೆ ಕಣ್ಣು ಹಾಕಿದ್ದಾರೆ. ಮಡಿಕೇರಿ ಯವರು ತಾನು ನಿರ್ದೇಶಕನಾಗುವ ಕನಸು ಕಂಡಿದ್ದರು. ಆದರೇನು? ರಾಮಕೃಷ್ಣ ನಲವತ್ತು ಲಕ್ಷ ಕೊಟ್ಟು ಸಚಿವರಿಗೆ ಹತ್ತಿರವಾದರು. ಇಲ್ಲಿ ಮೆರಿಟ್‌ಗೆ, ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ. ಎಲ್ಲಾ ಹಣದ ಲ್ಲಿಯೇ ಅಳತೆ. ಅಂತೆಯೇ ವೀರಪ್ಪ ಗೌಡನನ್ನು ಕೆಳಗಿಳಿಸಿ ರಾಮ ಕೃಷ್ಣರಿಗೆ ನಿರ್ದೇಶಕರ ಹುದ್ದೆಗೆ ಪಟ್ಟಕಟ್ಟಿ ಆಯಿತು. ಅದರ ಮೇಲೆ ಗೌಡ ಕೋರ್ಟಿಗೆ ಹೋಗಿ ಸ್ಟೇ ತಂದದ್ದೂ ಆಯಿತು. ಇದು ಪೇಪರ್‌ನಲ್ಲಿ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರ. ತಿಳಿಯದ್ದು ಏನೆಂದರೆ ಹೀಗೆ ಬೆಂಗಳೂರಿನಲ್ಲಿ ಕುಳಿತು ನಿರ್ದೇಶಕರ ಹುದ್ದೆಗೆ ಕಚ್ಚಾಡುತ್ತಿರುವ ಇಬ್ಬರೂ ಇಲಾಖಾ ನಿಯಮಗಳಿಗನುಸಾರವಾಗಿ ಜಂಟಿ ನಿರ್ದೇಶಕರೂ ಅಲ್ಲ ಎಂಬುದು. ಅದು ಇನ್ನು ಇತ್ಯರ್ಥವಾಗ ಬೇಕಾದ ವಿಚಾರ.
ಇನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವಿಷಯಕ್ಕೆ ಬರೋಣ. ಇಲ್ಲಿ ಸುಮಾರು ನಾಲ್ಕು ವರ್ಷಗಳ ಹಿಂದೆ ಸಾಯಿ ಅನ್ನಪೂರ್ಣ ಬಯೋಪ್ರೊಟೀನ್ಸ್ ಎಂಬ ಸಂಸ್ಥೆ ವರ್ಷಕ್ಕೆ ಎರಡು ಕೋಟಿ ರೂಪಾಯಿಗೆ ಹರಾಜಿನ ಮೂಲಕ ಫಿಶ್ ಮೀಲ್ ಘಟಕವನ್ನು ಗುತ್ತಿಗೆ ಪಡೆದಿತ್ತು. ಆ ಕಂಪೆನಿ ಇದರ ಬಾಬ್ತು ಸ್ವಲ್ಪ ಹಣವನ್ನು ಕೂಡಾ ಪಾವತಿಸಿತ್ತು. ಅಷ್ಟಾಗುವಾಗ ಮೀನುಗಾರಿಕಾ ಸಚಿವರ ಕಾಕದೃಷ್ಟಿ ಅದರ ಮೇಲೆ ಬಿದ್ದಿತ್ತು. ಅವರು ಆ ಎರಡು ಕೋಟಿಯನ್ನು ಎಪ್ಪತ್ತೈದು ಲಕ್ಷಕ್ಕೆ ಇಳಿಸಿ ಕೊಡುತ್ತೇನೆ ಎನ್ನುವ ಆಶ್ವಾಸನೆಯ ಮೇರೆಗೆ ತನ್ನ ತಾಯಿಯ ಹೆಸರಿನಲ್ಲಿ ಆ ಕಂಪೆನಿಯಲ್ಲಿ ಪಾಲುದಾರಿಕೆ ತೆಗೆದುಕೊಂಡಿದ್ದಾರೆ ಹಾಗೂ ಅಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ವಿ.ಕೆ.ಶೆಟ್ಟಿಯ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಒತ್ತಡ ಹೇರಿದ್ದಾರೆ. ವಿ.ಕೆ.ಶೆಟ್ಟಿ ಒಪ್ಪದೇ ಇದ್ದಾಗ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿದ್ದಾರೆ. ಮುಂದೇನು?
ವಿ.ಕೆ.ಶೆಟ್ಟಿಯ ಜಾಗಕ್ಕೆ ಈಗಾಗಲೇ ಹಲವು ಆರೋಪಗಳ ಸುಳಿಯಲ್ಲಿರುವ ಗಣಪತಿ ಭಟ್ ಎನ್ನುವವರನ್ನು ನಿಯೋಜಿಸ ಲಾಗಿದೆ. ಇವರನ್ನು ಹೆದರಿಸಿ ಬೆದರಿಸಿ ಎರಡು ಕೋಟಿಯನ್ನು ಎಪ್ಪತ್ತೈದು ಲಕ್ಷಕ್ಕೆ ಇಳಿಸಿ ಸರಕಾರದ ಹಣವನ್ನು ಲೂಟಿ ಮಾಡುವ ಹುನ್ನಾರ ನಡೆದಿದೆ. ಅಲ್ಲಿ ಕದ್ದ ಐಸ್ ಹಾಗೂ ಡೀಸಿಲ್ ಮಾರುತ್ತಾ ಮಲ್ಪೆಗೆ ವರ್ಗಾವಣೆಗೊಂಡಿದ್ದ ಕುಖ್ಯಾತ ವ್ಯಕ್ತಿಯೊಬ್ಬ ವಾಪಸ್ ಮಂಗಳೂರಿಗೆ ಬಂದಿದ್ದಾನೆ. ಹಾಗೆಯೇ ಅಂತಹುದೇ ಕಾರಣಕ್ಕೆ ಬೆಂಗಳೂರಿನಿಂದ ಕಾರವಾರಕ್ಕೆ ವರ್ಗಾವಣೆಗೊಂಡಿದ್ದ ಇಫ್ತಿಕಾರ್ ಎನ್ನುವವನನ್ನು ದಿನಕ್ಕೆ ಒಂದು ಲಕ್ಷಕ್ಕೂ ಜಾಸ್ತಿ ವರಮಾನವಿರುವ ಕಬ್ಬನ್ ಪಾರ್ಕ್ ಕಂಪೆನಿಗೆ ಹಾಕುವ ಸನ್ನಾಹ ನಡೆದಿದೆ. ಇವರು ಸಚಿವರಿಗೆ ಹಫ್ತಾ ಕೊಡುವ ವಾಗ್ದಾನ ಮಾಡಿದ್ದಾರೆ. ಇವರನ್ನು ಇಲ್ಲಿ ತರಲು ನಿಗಮದ ಇನ್ನುಳಿದ ನೌಕರರನ್ನು ಎತ್ತಂಗಡಿ ಮಾಡುವ ಕಾರ್ಯ ಈಗಾಗಲೇ ಶುರುವಾಗಿದೆ.
ಹೀಗೆ ಮುಂದುವರಿದರೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಐದು ವರ್ಷಗಳ ಹಿಂದೆ ಯಾವ ದುರವಸ್ಥೆ ಯಲ್ಲಿ ಇತ್ತೋ, ಅದಕ್ಕಿಂತಲೂ ಹೀನಸ್ಥಿತಿಗೆ ಮಾನ್ಯ ಸಚಿವರು ತನ್ನ ಮಂತ್ರಿಗಿರಿಯ ಅವಧಿ ಮುಗಿಯುವುದಕ್ಕೆ ಮುನ್ನ ತಂದಿಡ ಲಿದ್ದಾರೆ.
ಮುಖ್ಯಮಂತ್ರಿಯವರೂ ಕೂಡಾ ತನ್ನ ಕುರ್ಚಿ ಉಳಿಸಿ ಕೊಳ್ಳುವ ಸಲುವಾಗಿ ಎಲ್ಲವನ್ನು ತಿಳಿದೂ ತನ್ನ ಅಭಯ ಹಸ್ತವನ್ನು ಇಂಥ ಭ್ರಷ್ಟರ ತಲೆಯ ಮೇಲೆ ಇಟ್ಟಿದ್ದಾರೆ.
ಇದೆಲ್ಲದರ ಮಧ್ಯೆ ಮೀನುಗಾರರ ಗತಿ ಅಧೋಗತಿ. ಮೀನುಗಾರರೇ, ಈಗಲಾದರೂ ಎಚ್ಚೆತ್ತುಕೊಳ್ಳಿರಿ.
ಶಿವಕುಮಾರ್, ಬೆಳುವಾಯಿ
Tagged with
bahiranga
ಕಳವಿನ ಅರೋಪದಲ್ಲಿ ಬಂಧಿ ತನಾಗಿರುವ ಛಾಯಾಗ್ರಾಹಕ ಸುಭಾಶ್ ಕೋಟ್ಯಾನ್ ಮಂಜರ ಪಲ್ಕೆ, ಕಾರ್ಕಳ ತಾಲೂಕು ಇವರನ್ನು ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮಂಗಳೂರು, ಉಡುಪಿ, ಈ ಸಂಸ್ಥೆಯಿಂದ ಉಚ್ಚಾಟಿಸಿ ಆತನ ಸದಸ್ಯತ್ವ ರದ್ದು ಗೊಳಿಸಿದ್ದೇವೆ.
ವಾಸುದೇವ್ ರಾವ್ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ
ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್, ಮಂಗಳೂರು-ಉಡುಪಿ
Tagged with
nimminda
ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಿಂಗಳ ಹಿಂದೆ ಇಬ್ಬರು ದಲಿತ ಮಹಿಳೆಯರು ದಾರುಣ ಸಾವನ್ನಪ್ಪಿದರು. ಇಬ್ಬರನ್ನೂ ಅತ್ಯಾಚಾರ ಗೈದು ಕೊಲೆ ಮಾಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲೇ ಬೆಳಕಿಗೆ ಬಂದಿತ್ತು. ಆದರೆ ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸದ ಕಾರಣ ಪ್ರಕರಣದ ಕಡತ ಮುಚ್ಚಿಹೋಗುವ ಹಂತ ತಲುಪಿದೆ. ಪ್ರಾರಂಭದಲ್ಲಿ ದಲಿತ ಸಂಘಟನೆಗಳು ಕೊಲೆ ಪ್ರಕರಣಗಳ ತನಿಖೆ ನಡೆಸುವಂತೆ ಇಲಾಖೆಯ ಮೇಲೆ ಒತ್ತಡ ಹೇರಿದರೂ ಬಳಿಕ ತಮಗೇಕೆ ಬೇಡದ ಉಸಾಬರಿ ಎಂಬಂತೆ ಸುಮ್ಮನಾಗಿವೆ. ಇಲ್ಲಿ ದಲಿತ ಸಂಘಟನೆಗಳು ಮೃತ ಮಹಿಳೆಯರ ಕುಟುಂಬಕ್ಕೆ ನ್ಯಾಯ
ಒದಗಿಸುವ ಆಸಕ್ತಿ ಹೊಂದಿದಂತಿಲ್ಲ. ದಲಿತ
ಸಂಘರ್ಷ ಸಮಿತಿ ಹಾಗೂ ಮತ್ತಿತರ ಸಂಘ ಟನೆಗಳು ಎರಡೂ ಕೊಲೆ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಇಲಾಖೆಯ ಬೆನ್ನು ಬಿದ್ದಿರು ತ್ತಿದ್ದರೆ ಇಷ್ಟರವರೆಗೆ ನೈಜ ಆರೋಪಿಗಳು ಕಂಬಿಯ ಹಿಂದಿರು ತ್ತಿದ್ದರು. ಆದರೆ ಮೃತ ಮಹಿಳೆಯರ ಎರಡೂ ಕುಟುಂಬಗಳು ಬಡತನದ ಹಿನ್ನೆಲೆ ಹೊಂದಿ ರುವ ಕಾರಣ ದಲಿತ ಸಂಘಟನೆಗಳು ಹೋರಾಟಕ್ಕೆ ಇಳಿ ದಿಲ್ಲ. ಪೊಲೀಸ್ ಹಿರಿಯ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿವಹಿಸಿ ತನಿಖೆ ನಡೆಸಬೇಕಾಗಿ ವಿನಂತಿ. ಕೆ.ರಮೇಶ್, ಮೂಡಬಿದ್ರೆ
Tagged with
nimminda
ಗಾಂಧಿವಾದಿ ಅಣ್ಣಾ ಹಜಾರೆ ತಮ್ಮ ಇಳಿ ವಯಸ್ಸಿ ನಲ್ಲೂ ಭ್ರಷ್ಟಾಚಾರದ ವಿರುದ್ಧ ಆಂದೋಲನವನ್ನು ಕೈಗೊಂಡಿರುವುದು ಸ್ವಾಗತಾರ್ಹ. ಇವರು ಉಪವಾಸ ಕುಳಿತು ಮಲಗಿದ್ದ ರಾಜಕೀಯ ನಾಯಕರನ್ನು ನಿದ್ದೆ ಯಿಂದ ಎಬ್ಬಿಸಿದರು. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಜನಲೋಕಪಾಲ ಮಸೂದೆಯನ್ನು ಜಾರಿಗೆ ತರಲು ಕೇಂದ್ರ ಸರಕಾರ ತೀರ್ಮಾನವನ್ನೂ ಮಾಡಿದೆ. ಆದರೆ ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಇವರೊಬ್ಬ ರಿಂದ ಖಂಡಿತಾ ಸಾಧ್ಯವಿಲ್ಲ. ಇವರಂತೆಯೇ ನಮ್ಮ ದೇಶದ ರಾಜಕೀಯ ವಲಯದಲ್ಲಿ ಪ್ರಭಾವ ಬೀರಲು ಶಕ್ತರಾಗಿರುವ ಅನೇಕ ಮಂದಿ ಮಠಾಧಿಪತಿಗಳು, ಕಾವಿ ಧಾರಿಗಳು ಇದ್ದಾರೆ. ಇವರು ಕೂಡಾ ಅಣ್ಣಾ ಹಜಾರೆ ಯಂತೆ ದೇಶದ ಉದ್ದಗಲಕ್ಕೂ ಉಪವಾಸ ಕುಳಿತಲ್ಲಿ ಭ್ರಷ್ಟಾಚಾರ ದೂರಮಾಡಲು ಸಾಧ್ಯವಿದೆ. ಜನರು ಜಾತಿ, ಮತ ಬೇಧ ಮರೆತು ಹೋರಾಟದಲ್ಲಿ ಭಾಗಿಯಾದರೆ ಮಾತ್ರ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾನ ಸಾಧ್ಯ. ಪ್ರಗತಿ, ಮಣಿಪಾಲ
Tagged with
nimminda
ಇತ್ತೀಚೆಗೆ ಜಯಕಿರಣ ಪತ್ರಿಕೆ ಯಲ್ಲಿ ಮೂಲ್ಕಿಯ ಕಾರ್ನಾಡು ಸರಕಾರಿ ಆಸ್ಪತ್ರೆಯಲ್ಲಿ ಮತಾಂತರದ ಹುನ್ನಾರದ ಬಗ್ಗೆ ವರದಿಯಾಗಿತ್ತು. ವಾಸ್ತವವಾಗಿ ಇಂಥ ಪ್ರಸಂಗ ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಾಗಿ ನಡೆ ಯುತ್ತದೆ. ಮಂಗಳೂರಿನ ವೆನ್ ಲಾಕ್, ಲೇಡಿಗೋಷನ್ ಆಸ್ಪತ್ರೆ ಯಲ್ಲೂ ಇಂಥ ಘಟನೆ ಈ ಹಿಂದೆ ನಡೆದಿದ್ದ ಬಗ್ಗೆ ಪತ್ರಿಕೆಗಳಲ್ಲಿ ಬಂದಿತ್ತು. ಆದರೆ ಅಷ್ಟೇ ವೇಗವಾಗಿ ಪ್ರಕರಣ ಮುಚ್ಚಿ ಹೋಗಿತ್ತು. ಇದೀಗ ಮೂಲ್ಕಿಯ ಸರ ಕಾರಿ ಆಸ್ಪತ್ರೆ ಇಂಥ ಕುಖ್ಯಾತಿಗೆ ಈಡಾ ಗಿದೆ. ಇಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಗಳನ್ನು ಧರ್ಮದ ಹೆಸರಿನಲ್ಲಿ ಬ್ರೈನ್‌ವಾಶ್ ಮಾಡುವುದು ಖಂಡ ನೀಯ. ಈ ಬಗ್ಗೆ ಮೂಲ್ಕಿ ಠಾಣಾ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳ ಬೇಕು. ಸರಕಾರಿ ಆಸ್ಪತ್ರೆಗಳ ವೈದ್ಯಾಧಿ ಕಾರಿಗಳ ತಂಡ ಮತಾಂತರದಂಥ ಕೃತ್ಯ ಗಳ ಬಗ್ಗೆ ಕಟ್ಟುನಿಟ್ಟಾದ ಕ್ರಮ ಕೈಗೊ ಳ್ಳದಿದ್ದರೆ ಹಿಂದೂ ಸಂಘಟನೆಗಳು ಪ್ರತಿಭ ಟನೆ ನಡೆಸಬೇಕು.
ರೋಹಿತ್, ಮೂಲ್ಕಿ
Tagged with
nimminda
ಜೈನಕಾಶಿ ಎಂದೇ ಕರೆಯಲ್ಪಡುವ ಮೂಡಬಿದ್ರೆಯಲ್ಲಿ ಅಸಂಖ್ಯ ಜೈನ ಬಸದಿಗಳಿವೆ. ಇಲ್ಲಿ ಹಿರಿ-ಕಿರಿಯ ಬಸದಿಗಳಲ್ಲಿ ಕೆಲವೊಂದನ್ನು ಮಾತ್ರ ಪುರಾತತ್ವ ಇಲಾಖೆಗಳು ರಕ್ಷಿಸುವ ಕೆಲಸ ಮಾಡಿದ್ದರೆ, ಇನ್ನುಳಿದವು ಶಿಥಿಲಾವಸ್ಥೆಯನ್ನು ತಲುಪಿವೆ. ಇವುಗಳನ್ನು ರಕ್ಷಣೆ ಮಾಡುವ ಕೆಲಸಕ್ಕೆ ಪುರಾತತ್ವ ಇಲಾಖೆ, ಸರ ಕಾರ ಮುಂದಾಗಬೇಕಿದೆ.
ಮೂಡಬಿದ್ರೆಯಲ್ಲಿ ಅಳಿದುದಿಳಿರುವ ಸ್ಮಾರಕ, ಜೈನ ಬಸದಿಗಳನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಿದಲ್ಲಿ ಪ್ರವಾಸೋದ್ಯಮಕ್ಕೆ ಲಾಭವೂ ಇದೆ. ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ಜೈನ ಬಸದಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಯ ಜನರು ನೋಡುವಂತೆ ಮಾಡಬೇಕು. ಪ್ರೀತಂ ಜೈನ್, ಬೆಳುವಾಯಿ
Tagged with
nimminda
ಭವಿಷ್ಯದ ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಕನಸು ಕಂಡ ಕಿತ್ತಳೆ ಹಣ್ಣು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಹಾಜಬ್ಬರವರು ಕಳೆದ ೧೨ ವರ್ಷಗಳ ಹಿಂದೆ ಹರೇಕಳ ನ್ಯೂಪಡ್ಪುವಿನಲ್ಲಿ ೨೮ ಮಕ್ಕಳೊಂದಿಗೆ ಒಂದನೇ ತರಗತಿ ಆರಂಭಿಸಿ ಬಳಿಕ ಪ್ರತೀವರ್ಷ ಒಂದೊಂದೇ ತರಗತಿ ಏರಿಸಿಕೊಂಡರಲ್ಲದೆ ಸರಕಾರ ಮತ್ತು ಕೊಡುಗೈ ದಾನಿಗಳ ನೆರವಿನಿಂದ ಜೂ. ೧೪ರಂದು ಪ್ರೌಢಶಾಲಾ ಕಟ್ಟಡ ಉದ್ಘಾಟನೆಗೊಂಡಿ ದೆ. ಹಾಜಬ್ಬರು ಒಂದು ಹಂತದ ಶಿಕ್ಷಣ ದಾಹ ನೀಗಿಸಿದರು. ಇನ್ನು ಮುಂದೆ ಇಲ್ಲಿಯೇ ಪಿಯು ಕಾಲೇಜು ನಿರ್ಮಾಣಗೊಳ್ಳಬೇಕು ಎಂದು ಹೇಳಿಕೊ ಳ್ಳುತ್ತಿದ್ದಾರೆ. ಶಿಕ್ಷಣ ಕ್ರಾಂತಿಗೆ ಹಾಜಬ್ಬರ ಕನಸು ಆದಷ್ಟು ಬೇಗ ನನಸಾಗಲಿ.
ಹೆಚ್.ಎನ್.ಶಾಫಿ ಮಿಸ್ಬಾಹಿ, ನಂತೂರು
Tagged with
nimminda
ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಮುಕ್ಕ ದಿಂದ ಮೂಲ್ಕಿಯವರೆಗೆ ಕಾಮಗಾರಿ ಪ್ರಗತಿಯಲ್ಲಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಮುಕ್ಕ ಹಿಂದಿನ ಚೆಕ್‌ಪೋಸ್ಟ್‌ನಿಂದ ಹಳೆಯಂಗಡಿ ಜಂಕ್ಷನ್‌ವರೆಗೆ ಹೆದ್ದಾರಿಯಲ್ಲಿ ಕೆಲವು ತಾತ್ಕಾಲಿಕ ತಿರುವು ಗಳನ್ನು ಕೊಡಲಾಗಿದೆ. ಇಲ್ಲಿ ವಾಹನ ಸವಾರರನ್ನು ಎಚ್ಚರಿಸುವ ಯಾವುದೇ ವ್ಯವಸ್ಥೆ ಇಲ್ಲದಿರುವ ಕಾರಣ ವಾಹನ ಸವಾರರು ಕಂಗಾಲಾಗುತ್ತಾರೆ.
ಪಾವಂಜೆ ಸೇತುವೆ ಮೊದಲೇ ಆಪಘಾತ ವಲಯ ವಾಗಿ ಗುರುತಿಸಲ್ಪಟ್ಟಿದ್ದು, ಇಲ್ಲಿ ಸದ್ಯದ ಸ್ಥಿತಿಯಲ್ಲಿ ಮತ್ತಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇದೆ. ಆದ್ದ ರಿಂದ ಹೆದ್ದಾರಿ ಪ್ರಾಧಿಕಾರ ಇತ್ತ ಗಮನಿಸಿ ರಸ್ತೆ ಕಾಮ ಗಾರಿಯನ್ನು ಆದಷ್ಟು ಶೀಘ್ರವಾಗಿ ಪೂರ್ತಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
ಸಚಿನ್ ಸುವರ್ಣ, ಪಡುಬಿದಿ
Tagged with
nimminda
ಕಟೀಲು ದೇವಳದ ಎದುರಿನ ರಸ್ತೆಯಲ್ಲಿ ಆಗಾಗ ಟ್ರಾಫಿಕ್ ಜಾಂ ಉಂಟಾಗುತ್ತದೆ. ವಿಶೇಷ ದಿನಗಳಲ್ಲಿ ಭಕ್ತರು ಮತ್ತು ವಾಹನಗಳಿಂದ ರಸ್ತೆ ಕಿಕ್ಕಿರಿದು ತುಂಬಿ ರುತ್ತದೆ. ಇದರಿಂದ ಪಾದಚಾರಿಗಳು ರಸ್ತೆಗೆ ಕಾಲಿಡುವು ದಕ್ಕೂ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ ಮಳಿಗೆಗಳು ಇರುವ ಕಾರಣ ಗ್ರಾಹಕರು ರಸ್ತೆಯಲ್ಲೇ ನಿಂತಿರುತ್ತಾರೆ. ಇಲ್ಲಿ ಭದ್ರತೆಗಾಗಿ ಒಂದಿಬ್ಬರು ಪೊಲೀಸರನ್ನು ನಿಯೋ ಜಿಸಲಾಗಿದ್ದರೂ ರಸ್ತೆಯ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಕಟೀಲು ದೇವಳದ ರಸ್ತೆಯನ್ನು ವಿಸ್ತರಣೆ ಮಾಡಲು ಕೂಡಲೇ ಸಂಬಂಧಪಟ್ಟವರು ಮುಂದಾಗಬೇಕು. ಕಟೀಲು ಸೇತುವೆಯಿಂದ ಕಟೀಲು ಕಾಲೇಜಿನ ತನಕ ರಸ್ತೆಯನ್ನು ದ್ವಿಪಥಗೊಳಿಸಿದರೆ ವಾಹನಗಳ ಭರಾಟೆ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ದೇವಳದ ಆಡಳಿತಾಧಿಕಾರಿ ಮುತುವರ್ಜಿ ವಹಿಸಲಿ.
ರಮೇಶ್. ಕಟೀಲು
Tagged with
nimminda