ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೨೦೧೧ನೇ ಸಾಲಿನಲ್ಲಿ ಪುಸ್ತಕ ಪ್ರಕಟಣೆಯ ಗೌರವವನ್ನು ಕಾದಂಬರಿ ವಿಭಾಗದಲ್ಲಿ ಪುತ್ತಿಗೆ ಪದ್ಮನಾಭ ರೈ, ಕಥೆ ವಿಭಾಗದಲ್ಲಿ ಡಾ.ಅಶೋಕ ಆಳ್ವ, ನಾಟಕ ವಿಭಾಗದಲ್ಲಿ ರತ್ನಾಕರ ರಾವ್ ಪಡೆದರು. ಸಮಾರಂಭದಲ್ಲಿ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನ, ಸಮಾರಂಭ ನಡೆಯಿತು.
Tagged with
gallery
ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಮೀಂಜ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೋಭಾ ಸೋಮಪ್ಪ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರು ಗಳಾಗಿ ಹೇಮಾವತಿ, ಗೀತಾ ಲೋಕ ನಾಥ ಶೆಟ್ಟಿ, ವಾಣಿ ಶೆಟ್ಟಿ ವರ್ಕಾಡಿ, ಕಾರ್ಯದರ್ಶಿಗಳಾಗಿ ಅರುಣಾ.ಎಂ ಆಳ್ವ, ನಫೀಸತ್ ಮಿಸ್ರಿಯಾ, ಕೋಶಾಧಿ ಕಾರಿಯಾಗಿ ಮಮತಾ ದಿವಾಕರ್, ಜೊತೆ ಕಾದರ್ಶಿಗಳಾಗಿ ಪ್ರಶಾಂತಿ, ಜೂಲಿಯಾನ್ ಡಿ’ಸೋಜಾ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಥೆರೇಸಾ ಪಿಂಟೋ, ಉಮಾವತಿ ರಾಯ್ ವರ್ಕಾಡಿ, ಯಶೋದಾ ಕೊಳಿಯೂರು, ಸಂಶಾದ್ ಶುಕೂರ, ಸುನೀತಾ ವಸಂತ್ ವರ್ಕಾಡಿ, ಅವಿತಾ ಭಾಸ್ಕರ್, ಥೆರೇಸಾ ಡಿಸೋಜಾ, ಜಯಶ್ರೀ ಕುಲಾಲ್, ಗೀತಾ ಪುತ್ತಿಗೆ ಇವರನ್ನು ಆಯ್ಕೆ ಮಾಡಲಾಯಿತು.
Tagged with
briefs
ಉಳ್ಳಾಲ: ೧೪ ಗ್ರಾಮಗಳ ವ್ಯಾಪ್ತಿ ಗೊಳಪಟ್ಟ ಬಂಟರ ಸಂಘ ಉಳ್ಳಾಲ ವಲಯದ ೨೦೧೨-೨೦೧೪ರ ಸಾಲಿಗೆ ನೂತನ ಅಧ್ಯಕ್ಷರಾಗಿ ಸಾಹಿತ್ಯ, ಸಾಂಸ್ಕೃತಿಕ ಕಲಾಪೋಷಕ, ಸಾಮಾಜಿಕ ರಂಗದಲ್ಲಿ ಅಪ್ರತಿಮ ಸೇವೆ ಸಲ್ಲಿಸುವ ಮೂಲಕ ಜನಪ್ರಿಯ ರಾದ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕೆ.ರವಿಂದ್ರ ಶೆಟ್ಟಿ ಹರೇಕಳ ಅವಿರೋಧ ಆಯ್ಕೆಯಾಗಿದ್ದಾರೆ.
ಅಸೈಗೋಳಿಯ ಆರ್.ಕೆ. ಆರ್ಕೆಡ್‌ನಲ್ಲಿ ಶನಿವಾರ ಮುಖ್ಯ ಚುನಾವಣೆ ಅಧಿಕಾರಿ ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ ಮತ್ತು ಸಹಾಯಕ ಚುನಾವಣೆ ಅಧಿಕಾರಿ ನ್ಯಾಯವಾದಿ ಪುರಂದರ ಶೆಟ್ಟಿ ಅವರದ ಉಪಸ್ಥಿತಿ ಯಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಪ್ರಸಾದ್ ರೈ ಕಲ್ಲಿಮಾರು ಹಾಗೂ ಶಾರದಾ ಶೆಟ್ಟಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್‌ದಾಸ್ ಗಾಂಭೀರ ಬೋಳಿಯಾರು, ಜತೆ ಕಾರ್ಯ ದರ್ಶಿಯಾಗಿ ಸುಖೇಶ್ ಚೌಟ ಪೆರ್ಮ ನ್ನೂರು ಹಾಗೂ ಸುರೇಶ್ ಶೆಟ್ಟಿ ಅಂಬ್ಲ ಮೊಗರು, ಕೋಶಾಧಿ ಕಾರಿ ಆರ್.ಕೆ.ಶೆಟ್ಟಿ ಸೋಮೇಶ್ವರ ಹಾಗೂ ಸಂಘಟನೆ ಕಾರ್ಯದರ್ಶಿ ಜಿತೇಂದ್ರ ಶೆಟ್ಟಿ ತಲಪಾಡಿ ಆಯ್ಕೆ ಯಾಗಿದ್ದಾರೆ.
Tagged with
briefs
ಮ್ಯಾಥ್ಯೂಸ್ ವೀರಾವೇಶಕ್ಕೆ ತತ್ತರಿಸಿದ ಪಾಕ್
ಕೊಲಂಬೊ: ಒಂದು ಹಂತ ದಲ್ಲಿ ಶ್ರೀಲಂಕಾ ಸೊಹೈಲ್ ತನ್ವೀರ್ ಹಾಗೂ ಶಾಹೀದ್ ಅಫ್ರಿದಿ ಬೌಲಿಂಗ್ ಅಬ್ಬರಕ್ಕೆ ಸಿಕ್ಕಿ ಸೋಲಿನತ್ತ ಮುಖಮಾಡಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಆಂಜೆಲೊ ಮ್ಯಾಥ್ಯೂಸ್ ಪ್ರದರ್ಶಿಸಿದ ಅರ್ಧಶತಕದಿಂದ ಕೂಡಿದ ಶ್ರೇಷ್ಠ ಆಟವು ಲಂಕಾಗೆ ಇಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ರೋಚಕ ಎರಡು ವಿಕೆಟ್‌ಗಳ ಗೆಲುವು ತಂದುಕೊ ಟ್ಟಿದೆ. ಈ ಮೂಲಕ ಲಂಕಾ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಾಗಲೇ ಸರಣಿಯನ್ನು ೩-೧ರಿಂದ ಗೆದ್ದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕ್ ಉತ್ತಮ ಆರಂಭವನ್ನೇ ಪಡೆದುಕೊಂಡಿತು. ಆರಂಭದಲ್ಲಿ ಇಮ್ರಾನ್ ಫರ್ಹಾತ್ (೫೬) ಅರ್ಧಶತಕವು ತಂಡಕ್ಕೆ ನೆರವಾಯಿತು. ಮಧ್ಯಮ ಕ್ರಮಾಂಕದಲ್ಲಿ ಅಜರ್ (೩೦), ಶಫೀಕ್ (೩೮) ಹಾಗೂ ಮಿಸ್ಬಾ (೩೨) ದೊಡ್ಡ ಮೊತ್ತ ಗಳಿಸದಿದ್ದರೂ ಕೆಲಹೊತ್ತು ಕ್ರೀಸ್‌ನಲ್ಲಿದ್ದು, ತಂಡಕ್ಕೆ ಆಸರೆಯಾದರು. ಅಂತಿಮ ಹಂತದಲ್ಲಿ ಉಮರ್ ಅಕ್ಮಲ್ (೫೫) ದಾಖಲಿಸಿದ ಅಜೇಯ ಅರ್ಧಶತಕದಿಂದಾಗಿ ತಂಡ ನಿಗದಿತ ೫೦ ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೨೪೭ ರನ್ ಗಳಿಸಿತು. ಮೆಂಡಿಸ್ ಎರಡು ವಿಕೆಟ್ ಪಡೆದರು.
ಆದರೆ ಗುರಿ ಬೆನ್ನತ್ತಿದ್ದ ಲಂಕಾ ಪರ ಪ್ರಮುಖ ಬ್ಯಾಟ್ಸ್‌ಮೆನ್‌ಗಳು ರನ್ ಗಳಿಸಲು ವಿಫಲವಾದಾಗ ತಂಡ ಸೋಲಿನೆಡೆಗೆ ಮುಖಮಾಡಿತ್ತು. ಆದರೆ ಮ್ಯಾಥ್ಯೂಸ್ ಪ್ರದರ್ಶಿಸಿದ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದಾಗಿ ತಂಡ ೪೯.೪ ಓವರ್‌ಗಳಲ್ಲಿ ೨೪೮ ರನ್ ಗಳಿಸಿ ರೋಚಕವಾಗಿ ಗೆದ್ದುಕೊಂಡಿತ್ತು. ಒಂದು ಹಂತದಲ್ಲಿ ಲಂಕಾ ೩೫ ಓವರ್‌ಗಳಲ್ಲಿ ೧೩೮ ರನ್‌ಗೆ ಆರು ವಿಕೆಟ್ ಕಳಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಚಾಂದಿಮಾಲ್ (೫೪) ತಂಡಕ್ಕೆ ಆಸರೆಯಾದರು. ಮುಖ್ಯವಾಗಿ ತಂಡಕ್ಕೆ ಅಂತಿಮ ಓವರ್‌ನಲ್ಲಿ ೧೫ ರನ್‌ಗಳ ಅವಶ್ಯಕತೆಯಿತ್ತು. ಆದರೆ ಮೊಹ್ಮದ್ ಸಮಿ ಓವರ್‌ನಲ್ಲಿ ಮ್ಯಾಥ್ಯೂಸ್ ಒಂದು ಸಿಕ್ಸ್ ಹಾಗೂ ಬೌಂಡರಿ ಸಿಡಿಸಿ ಪಂದ್ಯವನ್ನು ಲಂಕಾ ಪರ ವಾಲುವಂತೆ ಮಾಡಿದರು. ತನ್ವೀರ್ ಮೂರು ಹಾಗೂ ಅಫ್ರಿದಿ ಎರಡು ವಿಕೆಟ್ ಪಡೆದರು.
Tagged with
tnews
ಕ್ರೀಡಾ ಸಚಿವರ ಮಧ್ಯಪ್ರವೇಶಕ್ಕೆ ಆಗ್ರಹ
ದೆಹಲಿ: ಸದ್ಯ ಭಾರತೀಯ ಟೆನಿಸ್ ವಲಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕುರಿತು ಹಾಗೂ ಅಖಿಲ ಭಾರತ ಟೆನಿಸ್ ಅಸೋಸಿಯೇಶನ್ (ಎಐಟಿಎ) ತೆಗೆದುಕೊಂ ಡಿರುವ ನಿರ್ಧಾರದ ಬಗ್ಗೆ ಮಹೇಶ್ ಭೂಪತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೂಡಲೇ ಕ್ರೀಡಾಸಚಿವರ ಮಧ್ಯಪ್ರವೇಶಕ್ಕೆ ಪತ್ರಮುಖೇನ ಆಗ್ರಹಿಸಿದ್ದಾರೆ.
ನಾನು ಹಾಗೂ ರೋಹನ್ ಬೋಪಣ್ಣ ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಕ್ರಮಾಂಕವನ್ನು ಹೊಂದಿದ್ದು, ಇದನ್ನು ಎಐಟಿಎ ಸರಿಯಾಗಿ ಗಮನಿಸಿಯೇ ಇಲ್ಲ. ಲಿಯಾಂಡರ್ ಜೊತೆ ನನ್ನನ್ನು ಆರಿಸಿದ್ದು, ದುರದೃಷ್ಟವಾಗಿದ್ದು, ಇದು ಒಲಿಂಪಿಕ್ಸ್‌ನ ಪದಕ ಗೆಲ್ಲುವ ಹಿತಾದೃಷ್ಟಿಯಿಂದ ಕೂಡ ಸರಿಯಾದ ನಿರ್ಧಾರವಲ್ಲ ಎಂದು ಮಾಕೆನ್‌ಗೆ ಬರೆದ ಪತ್ರದಲ್ಲಿ ಭೂಪತಿ ತಿಳಿಸಿದ್ದಾರೆ.
ಎಐಟಿಎನಿಂದ ವಿವರಣೆ ಕೇಳಿದ ಕ್ರೀಡಾ ಸಚಿವಾಲಯ
ಒಲಿಂಪಿಕ್ಸ್‌ಗೆ ಒಂದೇ ತಂಡಗಳನ್ನು ಕಳುಹಿಸುವ ಎಐಟಿಎ ನಿರ್ಧಾರಕ್ಕೆ ಭಾರತೀಯ ಕ್ರೀಡಾ ಸಚಿವ ಅಜಯ್ ಮಾಕೆನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಅವರು ತಿಳಿಸಿದ್ದಾರೆ. ನಾವು ಎರಡು ತಂಡಗಳನ್ನು ಕಳುಹಿಸಬಹುದಲ್ಲವೇ? ಒಂದೇ ಯಾಕೆ ಎಂದು ತಿಳಿಸಿರುವ ಮಾಕೆನ್, ಹಾಗಾದರೆ ಸಾನಿಯಾ ಜೊತೆ ಯಾರು ಆಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಮುಂಬರುವ ಲಂಡನ್ ಒಲಿಂಪಿಕ್ಸ್‌ಗೆ ಎಐಟಿಎ ಮಹೇಶ್ ಭೂಪತಿ ಹಾಗೂ ಲಿಯಾಂಡರ್ ಪೇಸ್‌ರನ್ನು ಆರಿಸಿದೆ. ಆದರೆ ಸಂಬಂಧ ಹಳಸಿರುವ ಕಾರಣ ಮಹೇಶ್ ಭೂಪತಿ ಲಿಯಾಂಡರ್ ಪೇಸ್‌ರೊಂದಿಗೆ ಜೊತೆಯಾಗಿ ಆಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಟೆನಿಸ್ ವಲಯದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ.
Tagged with
tnews
ಲಂಡನ್: ಸರ್ರೆ ಕ್ಲಬ್ ತಂಡದ ಪರ ಆಡುತ್ತಿದ್ದ ಯುವ ಪ್ರತಿಭಾವಂತ ಕ್ರಿಕೆಟ್ ಆಟಗಾರ ಟಾಮ್ ಮೆನಾರ್ಡ್ ಭೂಗತ ರೈಲು ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ನಿನ್ನೆ ದಕ್ಷಿಣ ಲಂಡನ್‌ನ ವಿಂಬಲ್ಡನ್ ನಲ್ಲಿ ನಡೆದಿದೆ. ಅವರಿಗೆ ೨೩ ವರ್ಷ ವಯಸ್ಸಾಗಿತ್ತು. ಸದ್ಯ ದುರ್ಘಟನೆಯನ್ನು ಬ್ರಿಟಿಷ್ ಸಂಚಾರಿ ಪೊಲೀಸರು ಕೇವಲ ಅಪಘಾತ ಎಂದೇ ಬಿಂಬಿಸಿದ್ದು, ಈ ಬಗ್ಗೆ ಮುಂದಿನ ತನಿಖೆ ನಡೆಯಬೇಕಿದೆ.
ಮಾಜಿ ಇಂಗ್ಲೆಂಡ್ ಆಟಗಾರ ಮ್ಯಾಥ್ಯೂ ವೇಡ್ ಪುತ್ರನಾಗಿರುವ ಟಾಮ್, ನಿನ್ನೆ ಬೆಕೆನಾಮ್‌ನಲ್ಲಿ ಕೆಂಟ್ ವಿರುದ್ಧದ ಟಿ-ಟ್ವೆಂಟಿ ಪಂದ್ಯದಲ್ಲಿ ಆಡಿದ್ದರು. ತಂಡದ ಪ್ರತಿಭಾವಂತ ಆಟಗಾರನ ಸಾವಿಗೆ ಸರ್ರೆ ಕ್ರಿಕೆಟ್ ತಂಡ ಖೇದ ವ್ಯಕ್ತಪಡಿಸಿದ್ದು, ಆತ್ಮಕ್ಕೆ ಚಿರಶಾಂತಿ ಕೋರಿದೆ.
ಟಾಪ್ ಒಬ್ಬ ಅತ್ಯುತ್ತಮ ಆಟಗಾರನಾಗಿದ್ದು, ಈಗಾಗಲೇ ಇಂಗ್ಲೆಂಡ್ ಲಯನ್ಸ್ ಪರ ಆಡಿದ್ದರು. ಮುಂದೆ ರಾಷ್ಟ್ರೀಯ ತಂಡವನ್ನು ಪ್ರವೇಶಿಸುವ ಎಲ್ಲಾ ಸಾಧ್ಯತೆ ಕೂಡ ಇತ್ತು. ನಾವು ಮೆನಾರ್ಡ್ ಕುಟುಂಬದ ಪರ ಇದ್ದೇವೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಜೈಲ್ಸ್ ಕ್ಲಾರ್ಕ್ ತನ್ನ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಆಂಡ್ರ್ಯೂ ಫ್ಲಿಂಟಾಫ್ ಕೂಡ ಮೆನಾರ್ಡ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
Tagged with
tnews
ವಾರ‍್ಸಾ: ಮುಂದೆ ಉಕ್ರೇನ್ ವಿರುದ್ಧ ನಡೆಯಲಿರುವ ಮಹತ್ವಪೂರ್ಣ ಪಂದ್ಯಕ್ಕೆ ಇಂಗ್ಲೆಂಡ್ ತಂಡದ ಪ್ರಮುಖ ಮಿಡ್‌ಫೀಲ್ಡರ್ ಥಿಯೊ ವಾಲ್ಕೊಟ್ ಆಡುವುದು ಅನುಮಾನವಾಗಿದೆ. ವಾಲ್ಕೊಟ್ ಗಾಯಕ್ಕೆ ಸಿಲುಕಿರುವ ಕಾರಣ ಪಂದ್ಯವನ್ನು ಕಳಕೊಳ್ಳುವ ಭೀತಿಗೆ ಸಿಲುಕಿದ್ದಾರೆ. ಕಳೆದ ಸ್ವೀಡನ್ ವಿರುದ್ಧ ಪಂದ್ಯದಲ್ಲಿ ವಾಲ್ಕೊಟ್ ಗಳಿಸಿದ ಅದ್ಭುತ ಗೋಲ್ ಇಂಗ್ಲೆಂಡ್‌ನ ಅಂತಿಮ ಎಂಟರ ಘಟ್ಟದ ಆಸೆಯನ್ನು ಜೀವಂತವಾಗಿರಿಸಿತ್ತು.
ವಾಲ್ಕೊಟ್ ಗಾಯಕ್ಕೆ ತುತ್ತಾಗಿರುವುದು ದುರದೃಷ್ಟ, ಅಲ್ಲದೆ ತರಬೇತಿ ಅವಧಿಯನ್ನು ಕೂಡ ತಪ್ಪಿಸಿಕೊಂಡಿದ್ದಾರೆ. ಇಲ್ಲಿ ವಾಲ್ಕೊಟ್ ಸ್ವಲ್ಪ ಕಠಿಣತೆ ಎದುರಿಸಿದ್ದು, ಹಾಗಾಗಿ ಅವರನ್ನು ಪಂದ್ಯದಲ್ಲಿ ಆಡಿಸುವ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ ಎಂದು ಇಂಗ್ಲೆಂಡ್ ಕೋಚ್ ರಾಯ್ ಹಡ್ಸನ್ ತಿಳಿಸಿದ್ದಾರೆ.
ಗೋಲಿನಲ್ಲಿ ಈಗ ಇಂಗ್ಲೆಂಡ್ ಫ್ರಾನ್ಸ್ ನಂತರ ಎರಡನೇ ಸ್ಥಾನದಲ್ಲಿದೆ. ಒಂದು ವೇಳೆ ಉಕ್ರೇನ್ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಇಂಗ್ಲೆಂಡ್ ಕ್ವಾರ್ಟರ್‌ಫೈನಲ್‌ಗೇರಲಿದ್ದು, ಆದರೆ ಸೋತರೆ ಮುಂದಿನ ಹಂತದ ಸಾಧ್ಯತೆಯನ್ನು ಕಡಿಮೆಗೊಳಿಸಲಿದೆ. ಆದರೆ ಉಕ್ರೇನ್‌ಗೆ ಮಾತ್ರ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
Tagged with
tnews
ಮಂಗಳೂರು: ಸಂಸದನಾಗಿ ಆಯ್ಕೆಯಾದ ಬಳಿಕ ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ಬಿಡುಗಡೆಗೊ ಳಿಸಲಾಗಿರುವ ಅನುದಾನವನ್ನು ಬಳಸದೆ ತನ್ನ ಮೇಲೆ ಅಪವಾದ ಬರುವಂತೆ ಮಾಡಿರುವ ಧಾರ್ಮಿಕ ಕೇಂದ್ರಗಳು ಹಾಗೂ ಸಮುದಾಯ ಭವನಗಳ ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ದ.ಕ.ಜಿಲ್ಲಾ ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.
ನಿನ್ನೆ ಕಲ್ಲಾಪು ಸೇವಂತಿಗುತ್ತು ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಯನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬೇಡಿಕೆ ಬಂದ ಕಡೆಗೆಲ್ಲಾ ಜಾತಿ, ಪಕ್ಷ, ಭೇದ ನೋಡದೆ ಅನುದಾನ ಬಿಡುಗಡೆಗೊಳಿಸಲಾಗಿದೆ. ೨೦೧೦-೧೧ರ ಸಾಲಿನಲ್ಲಿ ಸಂಸದರ ೨.೫೦ ಕೋಟಿ ಅನುದಾನದಲ್ಲಿ ೧.೭೫ ಕೋಟಿ ಬಳಸಲಾಗಿದ್ದು ೩೫ ಲಕ್ಷ ಅನುದಾನ ಕಾನೂನು ಹಾಗೂ ತಾಂತ್ರಿಕ ತೊಂದ ರೆಯಿಂದ ಬಳಕೆಯಾಗದೆ ಉಳಿದಿರುವ ಕಾರಣ ಆಪಾದನೆಗಳು ಬಂದಿವೆ. ಆದರೂ ರಾಜ್ಯದ ಸಂಸದರ ಪೈಕಿ ಶೇ.೭೫ ಅನುದಾನ ಬಿಡುಗಡೆಗೊಳಿಸಿದ ಸಂಸದ ತಾನಾಗಿದ್ದೇನೆ. ಈ ಬಾರಿ ಐದು ಕೋಟಿ ಅನುದಾನ ದೊರಕಿದ್ದು ಇದನ್ನು ಸಂಪೂರ್ಣವಾಗಿ ಬಳಸಲಾ ಗುತ್ತದೆ. ಎಂದು ಅವರು ತಿಳಿಸಿದ್ದಾರೆ.
ಕಾನ, ಬಾನ, ಕುಮ್ಕಿ ರೈಟ್ಸ್ ಜಾಗವನ್ನು ರಾಜ್ಯ ಸರಕಾರ ಅಕ್ರಮ ಸಕ್ರಮಗೊಳಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ನ್ಯಾಯಾಲಯದಿಂದ ಹಿಂದಕ್ಕೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡುವ ಕೆಲಸ ನಡೆದಿದೆ. ಒಂದು ತಿಂಗಳಲ್ಲಿ ಎಲ್ಲಾ ತೊಡಕುಗಳು ನಿವಾರಣೆಯಾ ಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
Tagged with
dk,
lnews
ನಾಳೆ ಅವಿಶ್ವಾಸ ನಿರ್ಣಯ
ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಾಬಲ ಸಾಲ್ಯಾನ್ ವಿರುದ್ಧ ಮಂಡಿಸಲಾಗಿರುವ ಅವಿಶ್ವ್ವಾಸ ನಿರ್ಣಯ ನಾಳೆ (ಜೂ.೨೦ ರಂದು) ನಡೆಯಲಿದೆ.
ಕಾಂಗ್ರೆಸ್ ಬೆಂಬಲಿತ ೧೦ ಸದಸ್ಯರು ಅಧ್ಯಕ್ಷರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಅವಿಶ್ವಾಸ ನಿರ್ಣಯ ಮಂಡಿ ಸಬೇಕೆಂದು ಸಹಾಯಕ ಆಯುಕ್ತರಿಗೆ ಮನವಿ ಸಲಿಸಿದ್ದರು
ಈ ಮನವಿ ಸ್ವೀಕರಿಸಿದ ಸಹಾಯಕ ಆಯುಕ್ತರು ಜೂ. ೧೩ಕ್ಕೆ ನಿಗದಿ ಪಡಿಸಿದ್ದು, ಆ ದಿನ ವಿಧಾನ ಪರಿಷತ್ ಚುಣಾವಣೆಯ ಮತದಾನದ ಎಣಿಕೆ ಇದ್ದದ್ದರಿಂದ ಇದನ್ನು ೨೦ಕ್ಕೆ ಮುಂದೂಡಿದರು.
ಇತ್ತೀಚೆಗೆ ಅಧ್ಯಕ್ಷರ ವಿರುದ್ಧ ಹಲವು ಭ್ರಷ್ಟಾಚಾರದ ಆರೋಪ ಇದ್ದು, ಇದರಿಂದ ರೋಸಿಹೊದ ಸ್ವ ಪಕ್ಷೀ ಯರೇ ಅಧ್ಯಕ್ಷರನ್ನು ರಾಜೀನಾಮೆ ಕೇಳಿದ್ದು ಕೊಡದಿದ್ದಾಗ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಮುಂದೆ ಬಿಟ್ಟು ಅವಿಶ್ವಾಸ ಗೊತ್ತುವಳಿಗೆ ಏರ್ಪಾಡು ಮಾಡಿದ್ದಾರೆ.
ಪಂಚಾಯತ್‌ನಲ್ಲಿ ಒಟ್ಟು ೨೦ಸದಸ್ಯ ರಿದ್ದು, ಅದರಲ್ಲಿ ೧೧ ಬಿಜೆಪಿ ಬೆಂಬಲಿತ ಮತ್ತು ಒಂಭತ್ತು ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು, ಆದರೆ ಈಗ ಬಿಜೆಪಿಯಿಂದ ಮುನಿಸಿ ಕೊಂಡಿರುವ ಎರಡು ಸದಸ್ಯೆಯರು ಕಾಂಗ್ರೆಸಿಗೆ ಹಾಗೂ ಕಾಂಗ್ರೆಸಿನಿಂದ ಒಬ್ಬರು ಬಿಜೆಪಿಗೆ ಹೋಗಿದ್ದು, ಸದ್ಯ ಈಗ ಎರಡೂ ಪಕ್ಷದಲ್ಲಿ ೧೦-೧೦ ಸದಸ್ಯರಿದ್ದಾರೆ. ಈಗ ತನ್ನ ಪಕ್ಷ ದವರಿಂದ ಬೆಂಬಲ ವಿಲ್ಲದಿ ರುವುದರಿಂದ ನಾಳೆ ಅಧ್ಯಕ್ಷರ ತಲೆದಂಡ ಗ್ಯಾರಂಟಿ ಎನ್ನಲಾಗುತ್ತಿದೆ.
Tagged with
dk,
lnews
‘ಕಾರಣಕರ್ತರಿಗೆ ಸ್ಥಾನವಿಲ್ಲ’ | ಸುಳ್ಯದಲ್ಲಿ ಅಸಮಾಧಾನ
ಸುಳ್ಯ: ರಾಜ್ಯ ಸರ್ಕಾರ ನೂತನವಾಗಿ ರಚಿಸಿರುವ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಲ್ಲಿ ಸದಸ್ಯರನ್ನು ನೇಮಕ ಮಾಡುವಾಗ ಅಕಾಡೆಮಿ ಸ್ಥಾಪನೆಗೆ ಶ್ರಮಿಸಿದ ಇಲ್ಲಿನ ಗೌಡ ಯುವ ಸೇವಾ ಸಂಘದವರು ಶಿಪಾರಸು ಮಾಡಿದವರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಭಾನುವಾರ ನಡೆದ ಗೌಡ ಯುವ ಸೇವಾ ಸಂಘದ ಸಭೆಯಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆದು ಮುಖ್ಯಮಂತ್ರಿಗಳಿಗೆ ದೂರು ನೀಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಗೌಡರ ಯುವ ಸೇವಾ ಸಂಘ ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿದ್ದು, ಕೊಡಿಯಾಲ್ ಬೈಲ್‌ನಲ್ಲಿ ಮಹಾತ್ಮಾ ಗಾಂಧಿ ಮಲ್ನಾಡ್ ಹೈಸ್ಕೂಲ್ ಎಂಬ ಶಿಕ್ಷಣ ಸಂಸ್ಥೆಯನ್ನು ನಡೆ ಸುತ್ತಿದೆ. ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ನಡೆಸುತ್ತಿದ್ದು, ಜಿಲ್ಲೆಯ ಹಲವೆಡೆ ಶಾಖೆ ಗಳನ್ನು ತೆರೆಯಲಾಗಿದೆ. ಅರೆಭಾಷೆ ಅಕಾಡೆಮಿ ಸ್ಥಾಪನೆ ಸಂಬಂಧ ಮುಖ್ಯ ಮಂತ್ರಿಗಳ ಬಳಿಗೆ ನಿಯೋಗ ಹೋಗಿ ಒತ್ತಾಯಿಸುವ ಕೆಲಸವನ್ನು ಸಂಘ ಮಾಡಿತ್ತು. ಅದಕ್ಕಾಗಿ ಮಡಿಕೇರಿ, ಮೈಸೂರುಗಳಲ್ಲಿ ಗೌಡ ಜನಾಂಗದ ಸಭೆಯನ್ನು ನಡೆಸಿತ್ತು. ಆದರೆ ಅಕಾ ಡೆಮಿ ಸ್ಥಾಪನೆ ಬಳಿಕ ಸದಸ್ಯರ ನೇಮ ಕದಲ್ಲಿ ಸಂಘ ಶಿಫಾರಸು ಮಾಡಿದ ಒಬ್ಬರಿಗೂ ಸರ್ಕಾರ ಅವಕಾಶ ನೀಡಲಿಲ್ಲ ಎನ್ನಲಾಗಿದೆ. ಇದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ನಿವೃತ್ತ ಕುಲಪತಿ ಕೊಳಂಬೆ ಚಿದಾನಂದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್.ಗಂಗಾಧರ್, ಯುವ ಸೇವಾ ಸಂಘದ ಅಧ್ಯಕ್ಷ ಎ.ವಿ. ತೀರ್ಥರಾಮ, ಮಾಜಿ ಮಂಡಲ ಪ್ರಧಾನ ಕೆ.ಸಿ.ಸದಾನಂದ, ಕೆವಿಜಿ ಎಂಜಿನಿಯ ರಿಂಗ್ ಕಾಲೇಜಿನ ಪ್ರಾಂಶು ಪಾಲ ಎನ್.ಎ.ಜ್ಞಾನೇಶ್, ಚಂದ್ರಾ ಕೋಲ್ಚಾರ್ ಮೊದಲಾದವರ ಹೆಸರು ಗಳನ್ನು ಶಿಫಾರಸು ಮಾಡಿದ್ದು, ಒಬ್ಬ ರನ್ನೂ ಸದಸ್ಯರನ್ನಾಗಿ ಆಯ್ಕೆ ಮಾಡಿಲ್ಲದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಪರ್ಯಾಯ ಅಕಾಡೆಮಿ?:
ಅಕಾಡೆಮಿಯಲ್ಲಿ ಸುಳ್ಯದವರಿಗೆ ಸ್ಥಾನ ದೊರೆಯದ್ದರಿಂದ ಅಸಮಾಧಾನ ಗೊಂಡ ಹಲವು ಸಮಾನಮನಸ್ಕರು ಕೆಲವು ದಿನಗಳ ಹಿಂದೆ ಸಭೆ ನಡೆಸಿ, ಪರ್ಯಾಯ ಅಕಾಡೆಮಿ ರಚಿಸಿಕೊಂಡು ಗೌಡ ಕನ್ನಡದ ಬಗೆಗೆ ಸಂಶೋಧನೆ, ಸಂಸ್ಕೃತಿ ಪ್ರಸಾರ ಮತ್ತು ಅಭಿವೃದ್ಧಿ ಕಾರ್ಯ ನಡೆಸಲು ನಿರ್ಧರಿಸಿ ದ್ದಾರೆ ಎಂದೂ ತಿಳಿದು ಬಂದಿದೆ.
Tagged with
dk,
lnews
ಪುತ್ತೂರು: ರೈತರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿರುವ ಮತ್ತು ರೈತರಿಗೆ ಪರಿಹಾರ ನೀಡಲು ಹಿಂದೇಟು ಹಾಕುತ್ತಿರುವ ಸರ್ಕಾರ ದಿವಾಳಿಯ ಅಂಚಿನತ್ತ ಸಾಗುತ್ತಿದೆ ಎಂದು ಆರೋ ಪಿಸಿದ ರಾಜ್ಯ ರೈತ ಸಂಘ ಹಸಿರು ಸೇನೆಯ ಕಾರ್ಯಕರ್ತರು ತಮ್ಮೊಳಗೆ ಹಣ ಸಂಗ್ರಹಿಸಿ ಡಿಡಿ ಮೂಲಕ ಮುಖ್ಯ ಮಂತ್ರಿಯವರಿಗೆ ಕಳುಹಿಸಿದ ವಿಚಿತ್ರ ಪ್ರಸಂಗವೊಂದು ಸೋಮವಾರ ಪುತ್ತೂರಿನಲ್ಲಿ ನಡೆಯಿತು.
ಪುತ್ತೂರಿನಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆಯ ವತಿಯಿಂದ ಸರ್ಕಾರದ ರೈತ ವಿರೋಧಿ ನೀತಿಯನ್ನು ಪ್ರತಿಭಟಿಸಿ ಮತ್ತು ರೈತರ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸೋಮ ವಾರ ಡಂಗುರ ಜಾಥಾದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರು ಕೃಷಿಕರಿಂದ ರೂ.೩೫೨ ಸಂಗ್ರಹಿಸಿ ಸರ್ಕಾರದ ದಿವಾಳಿತನದ ಬಗ್ಗೆ ವ್ಯಂಗ್ಯ ಪ್ರದರ್ಶಿಸಿದ್ದಾರೆ.
Tagged with
dk,
lnews
ಮಂಗಳೂರು: ಫುಟ್‌ಬಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊ ಬ್ಬರಿಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ನಿನ್ನೆ ಬೆಳಗ್ಗೆ ಬಲ್ಮಠದಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿ ೪೫ರ ಆಸುಪಾಸಿನ ವರೆಂದು ಅಂದಾಜಿಸಲಾಗಿದ್ದು, ಗುರುತು ಪತ್ತೆಯಾಗಿಲ್ಲ. ಮೃತರ ಕಿಸೆಯಲ್ಲಿ ೧೦೨ ರೂ. ಹೊರತು ಪಡಿಸಿ ಮೊಬೈಲ್ ಆಗಲಿ, ಪರ್ಸ್ ಆಗಲಿ ಇಲ್ಲವಾದ ಕಾರಣ ಗುರುತು ಪತ್ತೆ ಅಸಾಧ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮ ಚಾವಡಿಯಿಂದ ಮಂಗಳೂ ರಿಗೆ ಬರುತ್ತಿದ್ದ ೪೪ ನಂಬರಿನ ಸಿಟಿ ಬಸ್‌ನ ಚಾಲಕ ಸತೀಶ್ ಡಿ’ಕುನ್ಹಾ ಎಂಬಾತ ಮತ್ತೊಂದು ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಅತ್ಯಂತ ವೇಗದಲ್ಲಿ ಬಲ ಬದಿಗೆ ಬಸ್ ಚಲಾಯಿಸಿದ ಕಾರಣ ನಿಯಂತ್ರಣ ಕಳೆದು ಕೊಂಡು ಪಾದಚಾರಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಬಸ್ ಚಕ್ರಕ್ಕೆ ಸಿಲುಕಿದ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವ್ಯಕ್ತಿಯ ಗುರುತು ಪರಿಚಯ ಇದ್ದವರು ಪೊಲೀಸ್ ಕಂಟ್ರೋಲ್ ರೂಂ ಅನ್ನು ಸಂಪರ್ಕಿಸಬಹುದಾಗಿದೆ.
Tagged with
cnews,
mlore
ಸುಳ್ಯ ನ್ಯಾಯಾಲಯದ ಆವರಣದಲ್ಲಿ ಘಟನೆ
ಸುಳ್ಯ: ನಾಲ್ಕು ದಿನಗಳ ಹಿಂದೆ ವಿಚಾರಣಾಧೀನ ಖೈದಿ ಶೌಚಾಲಯದ ಶೀಟ್ ಎಬ್ಬಿಸಿ ಪರಾರಿಯಾಗಿ ಸುದ್ದಿ ಮಾಡಿದ್ದ ಇಲ್ಲಿನ ನ್ಯಾಯಾಲಯದಲ್ಲಿ ಸೋಮವಾರ ಪತಿಯ ಕೆನ್ನೆಗೆ ಪತ್ನಿ ಬಾರಿಸಿದ ಘಟನೆ ನಡೆದಿದೆ.
ಬಳ್ಪ ಗ್ರಾಮದ ಬೀದಿಗುಡ್ಡೆ ನಿವಾಸಿ ಯೊಬ್ಬರಿಗೆ ಮಡಿಕೇರಿ ಕಡೆಯ ಯುವತಿ ಯೊಂದಿಗೆ ಮದುವೆಯಾಗಿತ್ತು. ಕೆಲವು ವರ್ಷ ಸರಿಯಾಗಿದ್ದ ಅವರ ದಾಂಪತ್ಯದಲ್ಲಿ ಬಿರುಕುಗಳು ಕಾಣಿಸಿಕೊಂಡು ಅದು ವಿಚ್ಛೇದನ ನೀಡುವವರೆಗೂ ಮುಂದುವರಿ ದಿತ್ತು. ಪತ್ನಿಗೆ ಹಲ್ಲೆ ನಡೆಸಿದ ಕ್ರಿಮಿನಲ್ ಕೇಸೊಂದು ಇದೇ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಅಲ್ಲದೆ ವಿಚ್ಛೇದನ ಕೇಸ್ ಕೂಡಾ ವಿಚಾರಣೆಯಲ್ಲಿತ್ತು. ಈ ಮಧ್ಯೆ ಜಮೀನು ವಿವಾದದ ಕುರಿತು ಸಿವಿಲ್ ಕೇಸ್‌ನ ವಿಚಾರಣೆಗೆ ಇಬ್ಬರೂ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ನ್ಯಾಯಾಧೀಶರು ಪ್ರಕರಣ ರಾಜಿಯಲ್ಲಿ ಇತ್ಯರ್ಥಪಡಿಸುವಂತೆ ಇಬ್ಬರಿಗೂ ಬುದ್ಧಿ ಹೇಳಿದ್ದು, ಪಂಚಾತಿಕೆಗೆ ಹೊರಗೆ ಕಳುಹಿಸಿ ದ್ದರು. ಈ ಸಂದರ್ಭ ಗಂಡನ ಪಕ್ಕದಲ್ಲಿದ್ದ ಮಹಿಳೆಯೊಂದಿಗೆ ಹೆಂಡತಿ ಕುರಿತು ಆಡಿದ ಮಾತೊಂದರಿಂದ ಕೆರಳಿದ ಪತ್ನಿ ಪತಿಯ ಕೆನ್ನೆಗೆ ಎರಡೇಟು ಬಿಗಿದಿದ್ದಾಳೆ ಎನ್ನಲಾಗಿದೆ.
Tagged with
cnews,
sullia
ಮಂಗಳೂರು: ಕ್ಷುಲ್ಲಕ ವಿಚಾರದ ವೈಷಮ್ಯಕ್ಕೆ ಸಂಬಂಧಿಸಿ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ನಿನ್ನೆ ಸಂಜೆ ನೀರುಮಾರ್ಗದ ಗೆಲೆಕ್ಸಿ ಬಾರ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂ ಧಿಸಿ ಇತ್ತಂಡಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ನೀರುಮಾರ್ಗ ನಿವಾಸಿ ಪ್ರಸಾದ್ ಕುಮಾರ್ ಮತ್ತು ಜೀವನ್ ಎಂಬವರು ನೀಡಿದ ದೂರಿನಲ್ಲಿ ‘ನಾವು ನೀರುಮಾರ್ಗದ ಗೆಲೆಕ್ಸಿ ಬಾರಿನಲ್ಲಿ ಕುಡಿಯುತ್ತಿದ್ದ ವೇಳೆ ಅಲ್ಲಿಗೆ ಬಂದ ಸತೀಶ ಹಾಗೂ ಸುರೇಶ ಎಂಬವರು ನಮ್ಮ ಮೇಲೆ ಸೋಡಾ ಬಾಟಲಿಯಿಂದ ಏಕಾಏಕಿಯಾಗಿ ಹಲ್ಲೆ ನಡೆಸಿದ್ದಾರೆ’ ಎಂದು ದೂರಿದ್ದಾರೆ. ಇದಕ್ಕೆ ಪ್ರತಿಯಾಗಿ ದೂರು ನೀಡಿದ ಸುರೇಶ್, ನಾವು ಗೆಲೆಕ್ಸಿ ಬಾರ್‌ನ ಹೊರಭಾಗದಲ್ಲಿ ನಿಂತಿದ್ದ ವೇಳೆ ಅಲ್ಲಿಗೆ ಬಂದ ಪ್ರಸಾದ್ ಹಾಗೂ ಜೀವನ್ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಎರಡು ತಂಡಗಳು ಒಂದು ಕಾಲದಲ್ಲಿ ಶ್ರೀರಾಮ ಸೇನೆಯಲ್ಲಿ ಗುರುತಿಸಿಕೊಂಡಿದ್ದು, ಬಳಿಕ ಭಿನ್ನಾಭಿ ಪ್ರಾಯದಿಂದ ವಿಭಜನೆಗೊಂಡಿದ್ದರು. ಕಳೆದ ಶನಿವಾರ ಇವರೊಳಗೆ ಸಂಘಟನೆ ವಿಚಾರವಾಗಿ ಮಾತಿನಚಕಮಕಿ ನಡೆದಿತ್ತು. ಇದೇ ದ್ವೇಷ ಮುಂದುವರಿದು ಬಾರಿನಲ್ಲಿ ಹೊಡೆದಾಡಿಕೊಳ್ಳುವ ಹಂತಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
Tagged with
cnews,
mlore
ಮಂಗಳೂರು: ಬಚ್ಚಲು ಮನೆಗೆ ಸ್ನಾನಕ್ಕೆಂದು ಹೋದ ನವವಿವಾಹಿತ ಯುವತಿ ಹಿಂಬದಿ ಬಾಗಿಲಿನ ಮೂಲಕ ನಾಪತ್ತೆಯಾಗಿರುವ ಘಟನೆ ನಗರದ ಹೊರವಲಯದ ಸರಿಪಲ್ಲ ಬಳಿಯ ಅಳಪೆ ಎಂಬಲ್ಲಿ ನಡೆದಿದೆ. ಬಂಟ್ವಾಳ ಸಮೀಪದ ಕುಕ್ಕುಂದೂರು ನಿವಾಸಿ ಸೌಮ್ಯಾ(೨೨) ನಾಪತ್ತೆಯಾಗಿರುವಾಕೆ. ಈಕೆಗೆ ಅಳಪೆ ನಿವಾಸಿ ಯೋಗೀಶ್ ಪೂಜಾರಿ ಎಂಬವರ ಜೊತೆ ಕಳೆದ ಎಪ್ರಿಲ್ ೧೯ರಂದು ವಿವಾಹವಾಗಿತ್ತು. ಆ ಬಳಿಕ ಅಳಪೆಯ ಗಂಡನ ಮನೆಯಲ್ಲೇ ಇದ್ದ ಸೌಮ್ಯ ನಿನ್ನೆ ಮುಂಜಾನೆ ಸ್ನಾನ ಮಾಡಿ ಬರುತ್ತೇನೆ ಎಂದು ಬಚ್ಚಲು ಮನೆಗೆ ತೆರಳಿದ್ದರು. ತುಂಬ ಹೊತ್ತಾದರೂ ಬಚ್ಚಲು ಮನೆಯಿಂದ ಸೌಮ್ಯ ಹೊರಗೆ ಬಾರದ್ದನ್ನು ಕಂಡು ಅತ್ತೆ ಹೋಗಿ ನೋಡಿದಾಗ ಬಚ್ಚಲು ಮನೆಯ ಹಿಂಬದಿ ಬಾಗಿಲು ತೆರೆದಿತ್ತೆನ್ನಲಾಗಿದೆ.
ಸೌಮ್ಯ ಹಿಂಬದಿ ಬಾಗಿಲನ್ನು ತೆರೆದು ಎಲ್ಲಿಗಾದರೂ ಹೋಗಿರಬಹುದು ಎಂದು ಮನೆಮಂದಿ ಹುಡುಕಾಟ ನಡೆಸಿದ್ದು, ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ವಿವಾಹಿತೆ ಸೌಮ್ಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆ ಬಚ್ಚಲು ಮನೆಯಿಂದ ಪೂರ್ವಯೋಜಿತವಾಗಿಯೇ ನಾಪತ್ತೆಯಾಗಿರಬೇಕೆಂದು ಶಂಕಿಸಲಾಗಿದೆ.
Tagged with
cnews,
missing,
mlore
ಕಾಸರಗೋಡು: ಜಿಲ್ಲೆಯಲ್ಲಿ ಮಳೆ ತೀವ್ರವಾಗಿರುವಂತೆಯೇ ಜಲಜನ್ಯ ಸಾಂಕ್ರಾ ಮಿಕ ರೋಗವೂ ಹರಡುತ್ತಿದ್ದು, ಆತಂಕ ಸೃಷ್ಠಿಯಾಗಿದೆ. ಅಲ್ಲದೆ ಸಾಂಕ್ರಾಮಿಕ ಜ್ಜರಕ್ಕೆ ಇಲ್ಲಿನ ಬಂದ್ಯೋಡು ಸಮೀಪ ಎರಡರ ಹರೆಯದ ಮಗು ಬಲಿಯಾಗಿದೆ.
ಸೋಂಕು ಜ್ವರ ಪೀಡಿತರಾಗಿ ನೂರಾರು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಸೋಂಕು ಜ್ವರ ತಡೆಗೆ ಆರೋಗ್ಯ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಕಾಯಿಲೆಯು ಜಿಲ್ಲೆಯ ಮತ್ತಷ್ಟು ಪ್ರದೇಶಗಳನ್ನು ಆಕ್ರಮಿಸಿದೆ. ಬಂದ್ಯೋಡು ಇಚ್ಛಂಗೋಡು ಪಡ್ಪುವಿನ ಸತೀಶ-ರಾಜೇಶ್ವರಿ ದಂಪತಿಯ ಎರಡರ ಹರೆಯದ ಕೂಸು ಅನೀಷಾ ಸೋಂಕು ರೋಗಕ್ಕೆ ಬಲಿಯಾದವಳಾಗಿದ್ದಾಳೆ. ತೀವ್ರ ಜ್ವರ ಪೀಡಿತಳಾದ ಮಗುವನ್ನು ಮೂರು ದಿನಗಳ ಹಿಂದೆ ಉಪ್ಪಳದ ಖಾಸಗಿ ಆಸ್ಪತ್ರೆಗೂ ಅಲ್ಲಿಂದ ಗಂಭೀರಾವ್ಯಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾ ಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ನಿನ್ನೆ ಮುಂಜಾನೆ ಕೊರೆಯುಸಿರೆಳೆದಿದೆ. ಈ ದಂಪತಿಗೆ ಅನೀಷಾ ಅಲ್ಲದೆ ಸನಿಲ್ ಕುಮಾರ್ ಎಂಬ ಪುತ್ರ ಇದ್ದಾನೆ.
ಒಳನಾಡು ಪ್ರದೇಶಗಳಲ್ಲಿ ಮಾರಕ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯತೆಯ ವೈದ್ಯರೋ, ಔಷಧಿಯೂ ಇಲ್ಲದಿರುವುದು ಸಮಸ್ಯೆ ಮತ್ತಷ್ಟು ಸೃಷ್ಟಿಯಾಗಿದೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ.
Tagged with
cnews,
kgod
ಕಾಪು: ವಿದ್ಯುತ್ ತಗುಲಿ ವ್ಯಕ್ತಿಯೋ ರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಯ ಠಾಣಾ ವ್ಯಾಪ್ತಿಯ ಕಟಪಾಡಿ ಅಗ್ರಹಾರದ ಆನೆಗುಂಡಿಯಿಂದ ವರದಿಯಾಗಿದೆ.
ಆನೆಗುಂಡಿ ಮಠದ ಬಳಿಯ ನಿವಾಸಿ ದಿ. ಶ್ರೀಧರ ಆಚಾರ‍್ಯರ ಮಗ ಶಶಿಕಾಂತ ಆಚಾರ‍್ಯ (೨೬) ಎಂಬವರೇ ಮೃತಪಟ್ಟ ವರಾಗಿದ್ದಾರೆ. ಸೋಮವಾರ ಬೆಳಿಗ್ಗೆ ಮನೆಯ ನೀರಿನ ಪಂಪ್ ರಿಪೇರಿ ಮಾಡುತ್ತಿದ್ದಾಗ ಏಕಾಏಕಿ ಪಂಪ್‌ನಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಶಶಿಕಾಂತ್ ದಾರುಣವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಶಿಕಾಂತ್‌ರವರ ತಂದೆ ಕಳೆದ ಎರಡು ತಿಂಗಳ ಹಿಂದೆ ಮೃತರಾ ಗಿದ್ದರು.
ಮೃತ ಶಶಿಕಾಂತ್‌ರವರ ತಾಯಿ ಸುಮಿತ್ರಾರವರು ಮಗಳೊಂದಿಗೆ ಬೆಂಗಳೂ ರಿಗೆ ತೆರಳಿದ್ದು, ಮನೆಯಲ್ಲಿ ಶಶಿಕಾಂತ್ ಒಬ್ಬರೇ ಇದ್ದರು ಎನ್ನಲಾಗಿದೆ.
Tagged with
cnews,
kaup
ಬೆಳ್ತಂಗಡಿ: ಜಾಗ ಅತಿಕ್ರಮಣವನ್ನು ಆಕ್ಷೇಪಿಸಿದ ಮಹಿಳೆಗೆ ತಾಯಿ ಹಾಗೂ ಇಬ್ಬರು ಮಕ್ಕಳು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ವೇಣೂರು ಸಮೀಪದ ಬಜಿರೆ ಗ್ರಾಮದಲ್ಲಿ ನಡೆದಿದ್ದು, ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಜಿರೆ ಗ್ರಾಮದ ಮಿಯಲಾಜೆ ಸುಂದರ ಕುಲಾಲ್ ಎಂಬವರ ಪತ್ನಿ ಜಲಜಾಕ್ಷಿ (೪೫) ಎಂಬವರೇ ಗಾಯ ಗೊಂಡವರಾಗಿದ್ದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂಲತಃ ಕೇರಳದ ವರಾದ ಪ್ರಸ್ತುತ ಮಿಯಲಾಜೆಯಲ್ಲಿ ವಾಸವಾಗಿರುವ ಅಣ್ಣಮ್ಮ ಮತ್ತು ಇಬ್ಬರು ಮಕ್ಕಳಾದ ಸೃಜನ್ ಹಾಗೂ ರಾಜು ಎಂಬವರೇ ಆರೋಪಿಗಳಾಗಿದ್ದು, ಸರ್ವೇಯವರು ಹಾಕಿದ ಗಡಿ ಗುರುತಿನ ಕಲ್ಲನ್ನು ತೆಗೆದು ಜಾಗ ಅತಿಕ್ರಮಣಕ್ಕೆ ಯತ್ನಿಸಿದ್ದರು. ಇದನ್ನು ಆಕ್ಷೇಪಿಸಿದ ಸ್ಥಳೀಯ ಜಲಜಾಕ್ಷಿ ಎಂಬವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದರು. ಈ ಬಗ್ಗೆ ವೇಣೂರು ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿ ಕೊಂಡ ವೇಣೂರು ಪೊಲೀಸರು ಆರೋಪಿಗಳ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು, ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾರೆ.
Tagged with
belthangady,
cnews
ಮಂಗಳೂರು: ಅಪರಿಚಿತ ವ್ಯಕ್ತಿಯೋರ್ವ ಮನೆಗೆ ನುಗ್ಗಿ ಮಹಿಳೆಯೊಬ್ಬರ ಚಿನ್ನದ ಸರ ಎಳೆದು ಪರಾರಿಯಾದ ಘಟನೆ ವರದಿಯಾಗಿದೆ.
ನಡುಗೋಡಿನ ಕೊಂಡೇಲದ ಶಂಭು ಭಟ್ ಅವರ ಪತ್ನಿ ಸ್ವರ್ಣಶ್ರೀ ಎಂಬವರೇ ಸರ ಕಳಕೊಂಡವ ರಾಗಿದ್ದಾರೆ. ಅವರು ಜೂ. ೧೭ರಂದು ಮನೆಯ ಹೊರಗಿನ ಚಿಲಕ ಹಾಕಿ ಮಲಗಿದ್ದ ವೇಳೆ ತಡರಾತ್ರಿ ಅಪರಿಚಿತ ವ್ಯಕ್ತಿ ಮನೆಯ ಚಿಲಕ ತೆಗೆದು ಒಳ ನುಗ್ಗಿದ್ದು, ಈ ವೇಳೆ ಮಹಿಳೆ ಬೊಬ್ಬೆ ಹಾಕಿದಾಗ ಅಪರಿಚಿತ ವ್ಯಕ್ತಿ ಬಾಯಿ ಮುಚ್ಚಿಸಿ ಕುತ್ತಿಗೆಯಲ್ಲಿದ್ದ ೨೦ ಗ್ರಾಂಚಿನ್ನ ಅಪಹರಿಸಿ ಪರಾರಿಯಾಗಿದ್ದಾನೆ. ಬೊಬ್ಬೆ ಹೊಡೆದ ಸಂದರ್ಭ ನೆರೆಕರೆಯವರು ಯಾರೂ ಸಹಾಯಕ್ಕೆ ಬರಲಿಲ್ಲ, ಗಂಡ ಕಟೀಲಿ ದೇವಳದಲ್ಲಿ ತಿಂಡಿ ಹಾಖುವ ಕೆಲಸಕ್ಕೆ ಹೋಗಿದ್ದರು.
Tagged with
cnews,
mlore
ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಕಾರು ಮುಲ್ಕಿ ಸಮೀಪದ ಕೊಲ್ನಾಡು ಬಳಿ ಎದುರಿನಿಂದ ಬರುತ್ತಿದ್ದ ಎಕ್ಸ್‌ಪ್ರೆಸ್ ಬಸ್ಸನ್ನು ತಪ್ಪಿಸಲು ಹೋಗಿ ಹಳೆಯ ಸೇತುವೆಗೆ ಬಡಿದು ಮಗುಚಿ ಬಿದ್ದಿದ್ದು, ಚಾಲಕ ಹಾಗೂ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Tagged with
gallery
ಉಡುಪಿ ಮಸೀದಿ ರಸ್ತೆಯ ಕಾಫಿಯಾ ಹೊಟೇಲ್‌ಗೆ ಸೋಮವಾರ ಮುಂಜಾನೆ ಬ್ರೇಕ್ ವೈಫಲ್ಯದಿಂದ ಮಾರುತಿ ಕಾರೊಂದು ನುಗ್ಗಿದ ಪರಿಣಾಮ ಕಾರು ಹಾಗೂ ಹೋಟೆಲ್ ಮೆಟ್ಟಿಲಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
Tagged with
gallery
ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಪುತ್ತೂರು ಪೇಟೆಯ ಹೊರ ವಲಯದ ಕಬಕ ಗ್ರಾಮದ ಮುರ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದ ಪರಿಣಾಮ ೭ ವಿದ್ಯುತ್ ಕಂಬಗಳ ಸಹಿತ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಇದರಿಂದಾಗಿ ಈ ಭಾಗದಲ್ಲಿ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದೆ.
Tagged with
gallery
ಪುತ್ತೂರು: ವ್ಯಕ್ತಿಯೊಬ್ಬರು ಮರದಿಂದ ಸೊಪ್ಪು ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಆದಿತ್ಯವಾರ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ಸಂಭವಿಸಿದೆ.
ಅರಿಯಡ್ಕ ಗ್ರಾಮದ ಗೋಳ್ತಿಲ ನಿವಾಸಿ ಕೃಷ್ಣಪ್ಪ ಪೂಜಾರಿ (೫೫) ಮೃತರು. ಕೃಷ್ಣಪ್ಪ ಪೂಜಾರಿ ತಮ್ಮ ತೋಟದ ತೆಂಗಿನ ಮರದ ಬುಡಕ್ಕೆ ಸೊಪ್ಪು ಹಾಕಲು ಮರವೇರಿ ಸೊಪ್ಪು ಕಡಿಯುತ್ತಿದ್ದ ಸಂದರ್ಭ ಘಟನೆ ನಡೆದಿದೆ.
Tagged with
cnews,
puttur
ಮಂಗಳೂರು: ಪುತ್ತೂರಿನ ರಾಗಿದಕುಮೇರು ನಿವಾಸಿ ವೃದ್ಧೆ ಸಿಸಿಲಿಯಾ ಕುಟಿನ್ಹಾ ಎಂಬವರನ್ನು ಯಾಮಾರಿಸಿ ಕಳ್ಳನೊಬ್ಬ ಅವರ ಬಳಿಯಿದ್ದ ಒಂದು ಸಾವಿರ ರೂ. ಎಗರಿಸಿದ ಘಟನೆ ನಿನ್ನೆ ನಡೆದಿದೆ.
ಸಿಸಿಲಿಯಾ ಅವರ ಬಳಿ ಬಂದ ಅಪರಿಚಿತ ಯುವಕ ಚಿಲ್ಲರೆ ಇದೆಯೇ ಎಂದು ಕೇಳಿದ್ದು, ಈ ವೇಳೆ ಸಿಸಿಲಿಯಾ ಇಲ್ಲ ಎಂದಿದ್ದನ್ನು ಕೇಳಿ ಅವರ ಬಳಿಯಿದ್ದ ಒಂದು ಸಾವಿರ ರೂ. ಹಣವನ್ನು ಪಡೆದು ಚಿಲ್ಲರೆ ತಂದುಕೊಡುವುದಾಗಿ ಹೇಳಿ ಪರಾರಿಯಾಗಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.
Tagged with
cnews,
mlore
ಶಿರ್ವ: ಎರಡು ದಿನಗಳ ಹಿಂದೆ ಉದ್ಯಾವರದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆಂದು ತೆರಳಿದ ಯುವತಿಯೋ ರ್ವಳು ನಾಪತ್ತೆಯಾಗಿರುವ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳತ್ತೂರು ಗ್ರಾಮದ ಸುಂದರ ಸಾಲ್ಯಾನ್ ಅವರ ಮಗಳು ಸೌಮ್ಯ (೧೮) ಕಳೆದ ಶುಕ್ರವಾರ ಉದ್ಯಾವರ ದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಹೊರಟಿದ್ದಳು. ಸೌಮ್ಯಾಳು ೫ಅಡಿ ಎತ್ತರವಿದ್ದು, ಕೋಲು ಮುಖ, ಗೋದಿ ಬಣ್ಣ, ಗುಂಗುರು ಕೂದಲು, ಹಸಿರು ಚೂಡಿ ದಾರ ಧರಿಸಿದ್ದು, ಕನ್ನಡ, ಹಿಂದಿ, ತುಳು ಮತ್ತು ಇಂಗ್ಲಿಷ್ ಮಾತಾ ಡುವ ವಳಾಗಿದ್ದಾಳೆ. ಹುಡುಗಿಯನ್ನು ಕಂಡಲ್ಲಿ ಕಾಪು ಠಾಣೆಯ ೦೮೨೦-೨೫೫೨೧೩೩ ಸಂಖ್ಯೆಯನ್ನು ಸಂಪರ್ಕಿ ಸುವಂತೆ ಕೋರಲಾಗಿದೆ.
Tagged with
cnews,
missing,
shirva
ಕಾಪು: ಕೊಪ್ಪಲಂಗಡಿ ರಾ.ಹೆ.೬೬ರಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ನಿಂತಿದ್ದ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ನಿರ್ವಾ ಹಕ ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಈ ಸಂದರ್ಭ ಟೆಂಪೋ ನಿರ್ವಾಹಕ ಶಲ್‌ಮಲ್ ಎಂಬಾತ ಗಾಯ ಗೊಂಡಿದ್ದಾನೆ. ಟೆಂಪೋ ಚಾಲಕ ಹಮೀದ್ ನೀಡಿದ ದೂರಿನಂತೆ ಬಸ್ ಚಾಲಕ ಶಿವಪ್ರಸಾದ್ ಮೇಲೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews,
kaup
ಮಂಗಳೂರು: ಬಂಟ್ವಾಳ ಸಮೀಪದ ಮೆಲ್ಕಾರ್‌ನ ಸರಾ ಆರ್ಕೆಡ್‌ನಲ್ಲಿರುವ ವೈಭವ ಜ್ಯುವೆಲ್ಲರಿ ಮತ್ತು ರಾಜೇಶ್ ಬಾರ್‌ಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಸೊತ್ತು ಹಾಗೂ ನಗದು ಹಣ ಕಳವು ಮಾಡಿದ್ದಾರೆ.
ವೈಭವ ಜ್ಯುವೆಲ್ಲರಿಯಿಂದ ೧.೨೫ ಲಕ್ಷ ರೂ. ಮೌಲ್ಯದ ಮೂರು ಕೆ.ಜಿ. ಹಳೆಯ ಬೆಳ್ಳಿ, ೧.೫೦ ಲಕ್ಷ ರೂ. ನಗದು, ರಾಜೇಶ್ ಬಾರ್‌ನಿಂದ ೨೪,೫೦೦ ರೂ. ನಗದು ಹಣ ಕಳವು ಮಾಡಿದ್ದಾರೆ. ಜ್ಯುವೆ ಲ್ಲರಿಯ ಶಟರ್ ಬಾಗಿಲನ್ನು ರಾಡ್‌ನಿಂದ ಬಗ್ಗಿಸಿ ಒಳನುಗ್ಗಿ ಕೃತ್ಯವೆಸಗಿದ್ದಾರೆ. ರಾತ್ರಿ ವೇಳೆ ಜೋರಾಗಿ ಮಳೆ ಸುರಿಯುತ್ತಿದ್ದ ಕಾರಣ ಶಟರ್ ಬಾಗಿಲು ಮುರಿಯುವ ಸದ್ದು ಯಾರಿಗೂ ಕೇಳಲಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
Tagged with
cnews,
mlore
ನಿನ್ನೆ ಸುರಿದ ಭಾರಿ ಗಾಳಿ ಮಳೆಗೆ ಪಚ್ಚನಾಡಿ ನಿವಾಸಿ ಹೇಮಾವತಿ ಎಂಬವರ ಮನೆ ಕುಸಿದು ಬಿದ್ದಿದೆ.
Tagged with
gallery
ಮಂಗಳೂರು: ಕುಂದಾಪುರ ವಂಡಾರು ಗ್ರಾಮದ ಮಾರ್ವಿ ನಿವಾಸಿ ಸುಮತಿ (೨೯) ನಿನ್ನೆ ನೇಣು ಬಿಗಿದು ಆತ್ಮಹತ್ಯೆಕೊಂಡಿದ್ದಾರೆ.
ಮಾವನ ಆಸರೆಯಲ್ಲಿದ್ದ ಸುಮತಿ ಆರು ತಿಂಗಳ ಹಿಂದೆ ಮಾವ ಮೃತರಾದ ಬಳಿಕ ಮನನೊಂದಿದ್ದರು ಎನ್ನಲಾಗಿದೆ. ಮಾವನ ಸಾವು ಹಾಗೂ ಮದುವೆಯಾಗದ ಕೊರಗಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews,
mlore
ಉಪ್ಪಿನಂಗಡಿ: ಕಡಬ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸೋಮವಾರ ಸಂಜೆ ವೇಳೆಗೆ ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಆವರಣ ಗೋಡೆ ಕುಸಿದು ಬಿದ್ದಿದೆ. ಇತ್ತ ಶೌಚಾಲಯದ ಛಾವಣಿ ಕೂಡಾ ಧರೆಗೆ ಉರುಳಿ ಒಂದು ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಜಿ. ಪಂ. ಸದಸ್ಯೆ ಕುಮಾರಿ ವಾಸುದೇವನ್, ಕಡಬ ಗ್ರಾ. ಪಂ. ಅಧ್ಯಕ್ಷೆ ನೀಲಾವತಿ ಶಿವರಾಮ್, ಅಶ್ರಫ್ ಶೇಡಿಗುಂಡಿ, ಕೆ.ಎಂ.ಹನೀಫ್, ಫಝಲ್, ಜನಾರ್ದನ ಗೌಡ, ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Tagged with
dk,
lnews,
rain
ಮಂಗಳೂರು: ಶಾಲಾ ಬಾಲಕಿಯರಿಬ್ಬರ ಮೇಲೆ ಕೊಳಚೆ ನೀರು ಎರಚಿದ ಬಸ್ಸನ್ನು ತಡೆದ ಸ್ಥಳೀಯರು ಚಾಲಕನಿಂದ ದಂಡ ವಸೂಲಿ ಮಾಡಿದ ಘಟನೆ ವಿಟ್ಲದ ಸಾಲೆತ್ತೂರು ಸಮೀಪ ನಿನ್ನೆ ನಡೆದಿದೆ. ಕಾಡುಮಠ ಶಾಲೆಯಿಂದ ಮನೆ ಕಡೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಮಂಗಳೂರಿನಿಂದ ವಿಟ್ಲಕ್ಕೆ ಹೋಗು ತ್ತಿದ್ದ ಖಾಸಗಿ ಬಸ್ ಓವರ್‌ಟೇಕ್ ಮಾಡುವ ಭರದಲ್ಲಿ ಮಕ್ಕಳ ಮೇಲೆ ಕೆಸರು ಹಾರಿಸಿತ್ತು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅದೇ ಬಸ್ ಮರಳಿ ಬರುತ್ತಿದ್ದ ಸಮಯ ತಡೆಹಿಡಿದ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದು, ತಪ್ಪೊಪ್ಪಿ ಚಾಲಕ ೧೫೦೦ ರೂ. ದಂಡ ನೀಡಿದ್ದಾರೆ.
Tagged with
cnews,
mlore
ಮಂಗಳೂರು: ಸುರತ್ಕಲ್‌ನ ಕಾಶಿಮಠದಲ್ಲಿ ಕೊಲೆಗೀಡಾದ ಸೈಮನ್ ಮಚಾದೋ ಪ್ರಕರಣದಲ್ಲಿ ಬಂಧನ ದಲ್ಲಿದ್ದ ಸುಧಾಕರ ಪೂಜಾರಿ ಎಂಬ ವರಿಗೆ ನಗರದ ತ್ವರಿತಗತಿ ನ್ಯಾಯಾ ಲಯ ಜಾಮೀನು ನೀಡಿದೆ. ಹಣ ದ್ವಿಗುಣಗೊಳಿಸುತ್ತೇನೆಂದು ಅನೇಕ ಜನರನ್ನು ವಂಚಿಸಿದ್ದ ಸೈಮನ್ ಮಚಾದೋರನ್ನು ಸುಧಾಕರ ಪೂಜಾರಿ, ಜಿತೇಶ್, ಸಂತೋಷ್, ಮನೋಜ್ ಮತ್ತಿತರರು ಸೇರಿ ಮರದ ಸೋಂಟೆ ಯಿಂದ ಹೊಡೆದು ಕೊಂದು ಅವರ ಶವವನ್ನು ಕುಳ್ಳಿರಿಸಿದ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದರು ಎಂದು ಆರೋಪಿ ಸಲಾಗಿತ್ತು. ಪ್ರಾರಂಭದಲ್ಲಿ ಅದೊಂದು ಅಸಾಮಾನ್ಯ ಸಾವು ಎಂದು ಕೇಸು ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕೊಲೆ ಪ್ರಕರಣವಾಗಿ ಮಾರ್ಪಟ್ಟಿತ್ತು. ಪ್ರಕರಣ ದಾಖಲಿ ಸಿಕೊಂಡ ಸುರತ್ಕಲ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಪ್ರಕರಣದ ಆರೋಪಿ ಸುಧಾಕರ ಪೂಜಾರಿಗೆ ನ್ಯಾಯಾಲಯ ಜಾಮೀನು ನೀಡಿದ್ದು, ಆರೋಪಿ ಪರವಾಗಿ ನಗರದ ನ್ಯಾಯವಾದಿ ಜಗದೀಶ್ ಕೆ. ಶೇಣವ ವಾದಿಸಿದ್ದರು.
Tagged with
cnews,
mlore
ಮಧುರೈ: ತಾಯಿಯ ಪ್ರಿಯಕರ ನೊಬ್ಬ ಆಕೆಯ ಅನುಮತಿಯ ಮೇರೆಗೆ ೧೧ ವರ್ಷದ ಮಗಳ ಮೇಲೆ ಅತ್ಯಾಚಾರ ವೆಸಗಿದ ಹೇಯ ಕೃತ್ಯ ಮಧುರೈ ನಗರದ ಹತ್ತಿರದಲ್ಲಿರುವ ಸಕ್ಕಿಮಂಗಲಂ ಪಟ್ಟಣದ ನಡೆದಿದೆ.
ಅತ್ಯಾಚಾರಕ್ಕೊಳಗಾದ ಬಾಲಕಿ ಯನ್ನು ಇಲ್ಲಿಯ ರಾಜಾಜಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಗೊಳಪಡಿಸಿದ ನಂತರ ಸತ್ಯ ಬಹಿರಂ ಗವಾಗಿದೆ.ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಆತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಜೂ. ೧೫ ರಂದು ತಾಯಿಯೇ ತನ್ನ ಪ್ರಿಯಕರನಿಗೆ ಮಗಳ ಮೇಲೆ ಅತ್ಯಾಚಾರವೆಸಗಲು ನೆರವಾಗಿದ್ದಳು ಎನ್ನಲಾಗಿದೆ.
Tagged with
nnews
ಕಟ್ಟಡ ನಿರ್ಮಿಸಲು ಗುಡ್ಡ ಸಮತಟ್ಟು ಮಾಡಿ ಅದರ ಮಣ್ಣನ್ನು ಸಾಗಿಸದೇ ಬಿಟ್ಟು ಹೋದುದರ ಪರಿಣಾಮ ಮಳೆ ನೀರಲ್ಲಿ ಸೇರಿಕೊಂಡ ಮಣ್ಣು ಜಲ್ಲಿ ಗುಡ್ಡೆ ಮುಖ್ಯ ರಸ್ತೆಯಲ್ಲಿ ಸೇರಿಕೊಂಡ ಕಾರಣ ಸಂಚಾರಕ್ಕೆ ತೊಡಕುಂಟಾಯಿತು.
Tagged with
gallery
ಪ್ಲಾಸ್ಟಿಕ್ ನಿಷೇಧ ಕಾನೂನು ಅನುಸರಿಸದ ಸಿಟಿ ಸೆಂಟರ್ ಮತ್ತು ಸಿಂಗಾಪುರ ಸಿಟಿ ಶಾಪಿಂಗ್ ಮಳಿಗೆಯಲ್ಲಿರುವ ಅಂಗಡಿಗಳಿಗೆ ಮನಪಾ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದರು.
Tagged with
gallery
ನವದೆಹಲಿ: ಯುಪಿಎ ಮತ್ತು ಇತರ ರಾಜಕೀಯ ಪಕ್ಷಗಳು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಯನ್ನು ಪ್ರಬಲವಾಗಿ ಬೆಂಬಲಿಸಿದ ಹಿನ್ನೆಲೆಯಲ್ಲಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರಾಷ್ಟ್ರಪತಿ ಚುನಾ ವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಮುಂದೆ ಇಂದು ಅಧಿಕೃತ ಹೇಳಿಕೆ ನೀಡಿದ ಕಲಾಂ, ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನನ್ನ ಮೇಲಿರಿಸಿದ ನಂಬಿಕೆಗೆ ವಿಶೇಷ ಧನ್ಯವಾದಗಳು ಎಂದು ತಿಳಿಸಿ ದ್ದಾರೆ.
ತೃಣಮೂಲ ಕಾಂಗ್ರೆಸ್ , ಬಿಜೆಪಿ ಮತ್ತು ಶಿವಸೇನಾ ಪಕ್ಷಗಳು ಕಲಾಂ ಅವರನ್ನು ರಾಷ್ಟ್ರಪತಿ ಚುನಾವಣೆಗೆ ಸ್ಪ್ರಧಿಸುವಂತೆ ಒತ್ತಡ ಹೇರಿದ್ದವು. ಎಲ್ಲಾ ರಾಜಕೀಯ ಪಕ್ಷಗಳ ಬೆಂಬಲ ದೊರೆ ತಲ್ಲಿ ಮಾತ್ರ ಚುನಾವಣೆಗೆ ಸ್ಪರ್ಧಿ ಸುವುದಾಗಿ ಕಲಾಂ ಹೇಳಿದ್ದರು. ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ, ಡಾ.ಕಲಾಂ ಅವರಿಗೆ ಪತ್ರ ಬರೆದು ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೋರಿದ್ದರು. ಆಡ್ವಾಣಿ ಪತ್ರಕ್ಕೆ ಉತ್ತರಿಸಿದ ಕಲಾಂ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು ಎನ್ನಲಾಗಿದೆ.
ಕಲಾಂ ಬೆಂಬಲಕ್ಕೆ ನಿಂತಿದ್ದವು ಸಾಮಾಜಿಕ ತಾಣಗಳು
ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಆರಂಭಗೊಂ ಡಾಗ ಮೊದಲು ಕೇಳಿ ಬಂದ ಹೆಸರು ಅಬ್ದುಲ್ ಕಲಾಂ. ಕೆಲ ರಾಜಕೀಯ ಪಕ್ಷಗಳೂ ಸೇರಿದಂತೆ ದೇಶದ ಬಹು ತೇಕ ಜನರ ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಲಾಂ ಹೆಸರು ಚಾಲ್ತಿಯಲ್ಲಿತ್ತು. ಅಷ್ಟೇ ಅಲ್ಲದೇ ಸಾಮಾಜಿಕ ತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲೂ ಕಲಾಂಗೆ ಬೆಂಬಲಗಳ ಮಹಾಪೂರವೇ ಹರಿದು ಬಂದಿತ್ತು. ಈ ಮೂಲಕ ಆಗಲೇ ದೇಶದ ಬಹುಕೋಟಿ ಜನತೆ ಕಲಾಂ ರಾಷ್ಟ್ರಪತಿಯಾಗಲಿ ಎನ್ನುವುದನ್ನು ಸ್ಪಷ್ಟಪಡಿಸಿತ್ತು. ಆದರೆ ಇದೊಂದು ರಾಜಕೀಯದ ಒಳ ಆವರಣದಲ್ಲಿ ನಡೆ ಯುವ ಚುನಾವಣಾ ವಿದ್ಯಮಾನವಾದ ಕಾರಣ ಸಾರ್ವಜನಿಕ ಬೆಂಬಲ ಕಲಾಂ ರ ಕೈಹಿಡಿಯುವುದಿಲ್ಲ. ಹಾಗಾಗಿಯೋ ಏನೋ ರಾಜಕೀಯದಾಟಕ್ಕೆ ಬೇಸತ್ತ ಕಲಾಂ ತಾನಾಗಿಯೇ ಕಣದಿಂದ ಹಿಂದೆ ಸರಿದಿದ್ದಾರೆ. ಕಲಾಂರ ಈ ನಿರ್ಧಾರ ಅವರನ್ನು ಬೆಂಬಲಿಸಿದ ವರ್ಗಕ್ಕೆ ಕೊಂಚ ಬೇಸರ ತಂದರೂ ನಮ್ಮ ರಾಜಕೀಯ ವ್ಯವಸ್ಥೆಯ ಸ್ವಾರ್ಥಪರ ಆಟದ ಮಧ್ಯೆ ಇವರು ಹಿಂದೆ ಸರಿದದ್ದರಲ್ಲಿ ಖಂಡಿತಾ ತಪ್ಪಿಲ್ಲ ಎನ್ನಬಹುದು.
Tagged with
kalam,
nnews
ಬೆಂಗಳೂರು : ಪ್ರಜಾಪ್ರಭುತ್ವವನ್ನು ಕ್ರಿಯಾಶೀಲಗೊಳಿಸಲು ಚುನಾವಣಾ ವ್ಯವಸ್ಥೆಗೇ ಸುಧಾರಣೆ ತರಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಬಲವಾಗಿ ಪ್ರತಿಪಾದಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಕರ್ನಾಟಕ ವಿಧಾನಸಭೆಯ ಪ್ರಥಮ ಅಧಿವೇಶನದ ೬೦ ನೇ ವಾರ್ಷಿಕೋತ್ಸವ ಆಚರಣೆಯ ಪ್ರಧಾನ ಭಾಷಣ ಮಾಡಿದ ಅವರು, ಭ್ರಷ್ಟತೆಯಿಂದ ರಾಜಕಾರಣ, ಆಡಳಿತ ಸುಧಾರಣೆಗೆ, ಚುನಾವಣಾ ಸುಧಾರಣೆ ಅನಿವಾರ್ಯವಾಗಿದೆ ಎಂದರು.
ಹೆಚ್ಚಿನ ಪಾರದರ್ಶಕ, ಪ್ರಾಮಾಣಿಕತೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಹೀನ ಪ್ರಭಾವ ಬೀರಿರುವ ಚುನಾವಣಾ ವ್ಯವಸ್ಥೆ ಮತ್ತು ಚುನಾವಣಾ ರಾಜಕೀಯವನ್ನು ಬದಲಿಸದಿದ್ದರೆ ಪರಿಸ್ಥಿತಿ ಸುಧಾರಿಸುವುದಿಲ್ಲ.
ಪ್ರಜಾಪ್ರಭುತ್ವದ ಮಹಾನ್ ಆದರ್ಶಗಳು ತಾತ್ವಿಕ ನೆಲೆಯಲ್ಲಿ ಹಾಗೂ ವಾಸ್ತವದಲ್ಲಿ ತಮ್ಮ ಮೌಲ್ಯ ಗಳನ್ನು ಕಳೆದುಕೊಂಡಿವೆ. ಸಂಸತ್ ಹಾಗೂ ರಾಜ್ಯ ಶಾಸನ ಸಭೆಗಳಲ್ಲಿ ಪ್ರಜಾಸತ್ತಾತ್ಮಕ ಪ್ರಾತಿಧ್ಯವು ತಮ್ಮ ಮಾನ್ಯತೆ ಕಳೆದುಕೊಂಡಿರುವುದು ಅದಕ್ಕೆ ಮೂಲಭೂತ ಸೋಲಾಗಿದೆ.
ಬಹುಪಕ್ಷೀಯ ಸರ್ಕಾರದ ಒತ್ತಡ ಗಳು, ಸಂಸದೀಯ ಪ್ರಜಾಪ್ರಭುತ್ವದ ಮೂಲ ನಿಯಮಗಳನ್ನು ಮತ್ತು ಗೃಹೀತಗಳನ್ನೂ ಉಲ್ಲಂಘಿಸುತ್ತಿವೆ.
ಇಂತಹ ಪರಿಸ್ಥಿತಿಯನ್ನು ವೆಸ್ಟ್ ಮಿನಿಸ್ಟರ್ ಮಾದರಿ ಆದರ್ಶ ಪಾರ್ಲಿ ಮೆಂಟರಿ ವ್ಯವಸ್ಥೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದರು.
Tagged with
snews,
venkatachalaiah
ಬೆಂಗಳೂರು: ಕೊಪ್ಪಳದ ಮಾಜಿ ಸಂಸದ ಎಚ್.ಜಿ ರಾಮುಲು ಅವರಿಗೆ ಮೊಬೈಲ್ ಕರೆ ಮಾಡಿದ ತಂಡವೊಂದು ೩೦ ಲಕ್ಷ ರೂ. ಒತ್ತೆ ಹಣಕ್ಕಾಗಿ ಬೇಡಿಕೆ ಇಟ್ಟು ನಿರಾಕರಿಸಿದ ಹಿನ್ನೆಲೆಯಲ್ಲಿ ಪುತ್ರಿ ವಿಷ್ಣುವಂದನ(೪೨) ಅವರನ್ನು ನಗರದ ಜಯ ನಗರದಿಂದ ನಿನ್ನೆ ರಾತ್ರಿ ೮.೩೦ರ ಸುಮಾರಿಗೆ ಅಪಹರಿಸಿದ್ದಾರೆ.
ಜಯನಗರದ ಶಾಪಿಂಗ್ ಮಾಲ್‌ವೊಂದರಲ್ಲಿ ಸಂಬಂಧಿ ಡಾಲಿಯಾ ಅವರೊಂದಿಗೆ ಶಾಪಿಂಗ್ ನಡೆಸಿ ಹೊರಗಡೆ ಬರುತ್ತಿದ್ದಂತೆಯೇ ಕಾರಿನಲ್ಲಿ ಬಂದಿದ್ದ ಅಪಹರಣಕಾರರ ತಂಡ ಡಾಲಿಯಾ ಅವರ ಕಣ್ಣು ತಪ್ಪಿಸಿ ವಿಷ್ಣುವಂದನ ಅವರನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ಆಂದ್ರ ಪ್ರದೇಶ ವ್ಯಾಪ್ತಿಯಿಂದ ಸಂಸದ ರಾಮುಲು ಅವರಿಗೆ ೩೦ ಲಕ್ಷ ರೂ. ಒತ್ತೆ ಹಣ ನೀಡುವಂತೆ ಮೊಬೈಲ್ ಕರೆ ಬಂದಿದ್ದು, ನಿನ್ನೆ ರಾತ್ರಿ ೮.೩೦ರ ಸುಮಾರಿಗೆ ಪುತ್ರಿಯನ್ನು ಅಪಹರಿಸಲಾಗಿದೆ.
Tagged with
snews
ಬೆಂಗಳೂರು :ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಜನಾರ್ಧನರೆಡ್ಡಿ ಬಂಧನ ಅವಧಿ ಯನ್ನು ಸಿಬಿಐ ವಿಶೇಷ ನ್ಯಾಯಾಲಯ ಜುಲೈ ೨ ರವರೆಗೆ ವಿಸ್ತರಿಸಿದೆ.
ರೆಡ್ಡಿ ಅವರ ನ್ಯಾಯಾಂಗ ಬಂಧನ ಅವಧಿ ನಿನ್ನೆಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಅವರ ಬಂಧನ ಅವಧಿಯನ್ನು ಜುಲೈ ೨ ರವರೆಗೆ ವಿಸ್ತರಿಸಿ ಆದೇಶ ನೀಡಿದೆ. ಜೈಲಿನಿಂದ ಬಿಡುಗಡೆಯ ಭಾಗ್ಯವಿಲ್ಲದಂತಾಗಿದೆ.
Tagged with
reddy,
snews
ಮಂಗಳೂರು: ಕಾಸರಗೋಡು ವಿದ್ಯಾನಗರದ ಉದಯಗಿರಿ ಮನೆ ಬಾವಿಯಲ್ಲಿ ತಾಯಿ, ಮಗಳ ಮೃತದೇಹಗಳು ನಿನ್ನೆ ಸಂಜೆ ಪತ್ತೆಯಾಗಿದೆ. ಇಲ್ಲಿಯ ನಿವಾಸಿ ದಿ. ಭರತನ್ ಎಂಬವರ ಪತ್ನಿ ಸೀಮಂತಿನಿ (೫೫) ಮತ್ತು ಪುತ್ರಿ ಸವಿತಾ ಕುಮಾರಿ (೩೨) ಎಂಬವರ ಮೃತದೇಹಗಳು ಪತ್ತೆಯಾಗಿದ್ದು, ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಪೊಲೀಸ್ ತನಿಖೆ ಮುಂದುವರಿದಿದೆ.
Tagged with
cnews,
mlore
ಮಂಗಳೂರು: ಬೆಳ್ತಂಗಡಿ ಸಮೀಪದ ಬಾರ್ಯ ಗ್ರಾಮದ ಸುರ್ಯ-ಸರಳೀಕಟ್ಟೆ ಪ್ರೌಢಶಾಲೆಗೆ ಮೀಸಲಿಟ್ಟ ನಾಲ್ಕು ಎಕರೆ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಉಪ್ಪಿನಂಗಡಿ ಠಾಣೆಗೆ ದೂರು ನೀಡಲಾಗಿದೆ. ಇಬ್ರಾಹಿಂ ಮತ್ತು ಪುರಂದರ ಸಾಲಿಯಾನ್ ಅನಧಿಕೃತ ರಸ್ತೆ ನಿರ್ಮಿಸುತ್ತಿದ್ದಾರೆ ಎಂದು ದೂರಲಾಗಿದೆ.
Tagged with
cnews,
mlore
ಮಂಗಳೂರು: ಕುಂದಾಪುರ ಸಂತೆಯಲ್ಲಿ ಕಳವು ಮಾಡುತ್ತಿದ್ದ ರಘು ಯಾನೆ ರಂಗ(೨೭) ಎಂಬಾತನನ್ನು ಕುಂದಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೂಲತ: ಶಿಕಾರಿಪುರ ನಿವಾಸಿಯಾದ ಈತ ಕುಂದಾಪುರದ ಸಂತೆ ಮಾರ್ಕೆಟ್‌ನಲ್ಲಿ ಶೇಖರ ಖಾರ್ವಿ ಹಾಗೂ ಎಂ.ಸಿ.ಜಾರ್ಜ್ ಅವರಿಂದ ೨೩,೪೭೦ ರೂ. ಕಳ್ಳತನ ಮಾಡಿದ್ದ.
Tagged with
cnews,
mlore
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಸದಾನಂದ ಗೌಡರನ್ನು ಕೆಳಗಿಳಿಸಿ ಜಗದೀಶ್ ಶೆಟ್ಟರ್ ಅವರನ್ನು ಆ ಸ್ಥಾನಕ್ಕೆ ತರಲು ಯಡಿಯೂರಪ್ಪ ಬೆಂಬಲಿಗರು ಪರ್ಯಾಯ ಶಾಸಕಾಂಗ ಸಭೆ ನಡೆಸುತ್ತಿದ್ದಾರೆ. ಉದಾಸಿ ಅವರ ಅಧ್ಯಕ್ಷತೆಯಲ್ಲಿ ಅವರ ಮನೆಯಲ್ಲಿ ನೆಡೆಯುವ ಸಭೆ ಅಧಿಕೃತವಲ್ಲವಾಗಿದ್ದರೂ ಈ ಬಣ ಪರ್ಯಾಯ ನಾಯಕತ್ವವನ್ನು ಆಯ್ಕೆ ಮಾಡಲಿದೆ.
ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ತಮ್ಮ ನಾಯಕನೆಂದು ಘೋಷಿಸಿಕೊಂಡು ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಪ್ರಕಟಿಸಲಿದ್ದಾರೆ. ಹೆಚ್ಚು ಬಹುಮತವನ್ನು ಹೊಂದಿರುವ ಶೆಟ್ಟರ್ ಅವರನ್ನು ಈ ತಿಂಗಳ ೨೧ರ ಒಳಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ ಮಾಡಬೇಕು ಎಂದು ವರಿಷ್ಠರಿಗೆ ಯಡಿಯೂರಪ್ಪ ಬಣ ಗಡುವು ನೀಡಲಿದ್ದಾರೆ.
ಮುಂದಿನ ಸಾರ್ವತ್ರಿಕ ಚುನಾವಣೆಯ ಉದ್ದೇಶದಿಂದ ವೀರಶೈವ ಮತಗಳನ್ನು ಪಡೆಯಲು ಗೌಡರನ್ನು ಅಧಿಕಾರದಿಂದ ಕೆಳಗಿಳಸಿ ಶೆಟ್ಟರ್ ಅವರನ್ನು ನೇಮಕ ಮಾಡಿ, ಶೆಟ್ಟರ್ ಮಖ್ಯಮಂತ್ರಿಯಾದಲ್ಲಿ ಪಕ್ಷವು ಹೆಚ್ಚು ಮತಗಳಿಸಿ ಅಧಿಕಾರಕ್ಕೆ ಬರಲಿದೆ.
ಸದಾನಂದ ಗೌಡರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಅವರಿಗೆ ನಾಯಕತ್ವದ ವರ್ಚಸ್ಸೂ ಇಲ್ಲ. ಇಂತಹವರನ್ನು ಅಧಿಕಾರದಲ್ಲಿ ಮುಂದುವರಿಯುವುದು ಬೇಡವೆಂಬ ಕಾರಣಕ್ಕೆ ಅಧಿಕಾರದಿಂದ ಗೌಡರನ್ನು ಕೆಳಗಿಳಸಿ ನಮ್ಮ ಗಡುವಿನ ವೇಳೆಗೆ ಬದಲಾವಣೆ ಮಾಡದಿದ್ದರೆ ಮುಂಬರುವ ಅನಾಹುತಕ್ಕೆ ನೀವು ಹೊಣೆಗಾರರಾಗುತ್ತೀರಿ ಎಂಬ ಎಚ್ಚರಿಕೆಯ ಸಂದೇಶ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರನ್ನು ಬೆಂಬಲಿಸಿರುವುದನ್ನು ಬಿಟ್ಟಿರುವ ಯಡ್ಡಿ ಬೆಂಬಲಿಗರು ಪರ್ಯಾಯ ನಾಯಕನ ಆಯ್ಕೆಗೆ ಮುಂದಾಗಲಿದ್ದಾರೆ. ಇದಕ್ಕೆ ಪರೋಕ್ಷವಾಗಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಬೆಂಬಲ ಕೂಡಾ ಇದೆ ಎನ್ನಲಾಗಿದೆ. ಆದರೆ ಜಾರಕಿಹೊಳಿ ಬಣ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುವು ದನ್ನು ಕಾದು ನೋಡಬೇಕಾಗಿದೆ. ಜಾರಕಿಹೊಳಿ ಬಣ ೧೯ರಿಂದ ೨೦ ಶಾಸಕರನ್ನು ಹೊಂದಿದ್ದು ಅವರಿಗೆ ಮೂವರು ಸಚಿವರ ಬೆಂಬಲವೂ ಇದೆ.
Tagged with
dvs,
shettar,
snews
ಮಂಗಳೂರು: ನಗರದ ಹೊರವಲಯದ ಮರವೂರು ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ವೆಂಟೆಡ್ ಡ್ಯಾಂ ನಿಂದಾಗಿ ನದಿಯಲ್ಲಿ ಪಿಲ್ಲರ್ ನಿರ್ಮಿಸಿದ ಕಾರಣ ನೀರು ಸರಾಗವಾಗಿ ಹರಿಯಲು ತೊಡಕುಂಟಾದ ಪರಿಣಾಮ ಹತ್ತಿರದ ಮನೆಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸಿದ ಘಟನೆ ನಿನ್ನೆ ನಡೆದಿದೆ. ಡ್ಯಾಂನ ಒಂದು ಪಾರ್ಶ್ವದಲ್ಲಿ ನೀರು ನುಗ್ಗುತ್ತಿರುವ ಕಾರಣ ಬದಿಯಲ್ಲಿರುವ ಮೂರು ಮನೆಗಳು ಕುಸಿಯುವ ಹಂತದಲ್ಲಿವೆ.
ಮಂಗಳೂರು ಮತ್ತು ಬಜ್ಪೆ ವ್ಯಾಪ್ತಿಯ ೧೩ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರ ನೀರಿನ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಸರಕಾರ ಮರವೂರಿನಲ್ಲಿ ಫಲ್ಗುಣಿ ನದಿಗೆ ಡ್ಯಾಂ ನಿರ್ಮಿಸಲು ಯೋಜನೆ ರೂಪಿಸಿತ್ತು. ಕಳೆದ ೨೦೦೯ನೇ ಇಸವಿಯ ಜೂನ್ ತಿಂಗಳಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಮರವೂರು ಬಳಿ ವೆಂಟೆಡ್ ಡ್ಯಾಂ ಕೆಲಸಕ್ಕೆ ಚಾಲನೆ ನೀಡ ಲಾಗಿತ್ತು. ಈ ಡ್ಯಾಂಗೆ ೧೪ ಕೋಟಿ ರೂ.ಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ಬಿಡುಗಡೆ ಮಾಡಿತ್ತು. ಇದರ ಕೆಲಸವನ್ನು ಮುಗ್ರೋಡಿ ಕನ್‌ಸ್ಟ್ರಕ್ಷನ್ಗೆ ಗುತ್ತಿಗೆ ನೀಡಲಾಗಿತ್ತು. ಮುಂದಿನ ೨೦೧೩ನೇ ಇಸವಿಗೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ನಿನ್ನೆ ಸುರಿದ ಭಾರೀ ಮಳೆಗೆ ಡ್ಯಾಂನ ಪಾರ್ಶ್ವ ಭಾಗದಲ್ಲಿ ಪಿಲ್ಲರ್ ಹಾನಿಗೊಳಗಾಗಿದ್ದು, ನೀರು ಡ್ಯಾಂನ ಬದಿಯ ತೋಟಕ್ಕೆ ನುಗ್ಗಿ, ಮೂರು ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಡ್ಯಾಂ ಇನ್ನೂ ನಿರ್ಮಾಣ ಹಂತದಲ್ಲೇ ಇದ್ದು, ಇನ್ನೂ ಐದಾರು ಕಡೆ ನೀರು ಹರಿವಿಗೆ ಬ್ಲಾಕ್ ನಿರ್ಮಿಸುವ ಕೆಲಸ ಬಾಕಿ ಇತ್ತು. ಹೀಗಿರುವಾಗ ನೀರಿನ ಹರಿವು ಹೆಚ್ಚಿದ್ದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಭಾರೀ ಮಳೆಯ ಪರಿಣಾಮ ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಏರಿದೆ. ನೀರು ನದಿಯ ಎರಡೂ ಬದಿಯಲ್ಲಿ ಭೂಮಿಯನ್ನು ಕೊರೆಯುತ್ತಾ ಸಾಗುತ್ತಿದ್ದು, ಒಂದು ಬದಿಯಲ್ಲಿ ಕಾಮಗಾರಿಯ ಯಂತ್ರೋಪ ಕರಣಗಳಿಗೆ ಹಾನಿಯುಂಟು ಮಾಡಿದರೆ, ಮತ್ತೊಂದು ಬದಿಯಲ್ಲಿ ಮನೆಗಳಿಗೆ ಹಾನಿಯುಂಟು ಮಾಡಿದೆ. ಓಸ್ವಾಲ್ಡ್, ಎಸ್ತೆಫೆನ್ ಹಾಗೂ ಥಾಮಸ್ ಎಂಬವರ ತೋಟಕ್ಕೆ ನೀರು ನುಗ್ಗಿದ್ದು, ಮನೆ ನೀರಿನಲ್ಲಿ ಮುಳುಗಿದ್ದು, ಕುಸಿಯುವ ಭೀತಿಯಲ್ಲಿದೆ.
ಅನಾಹುತ ಸಂಭವಿಸುವ ಸಾಧ್ಯತೆಯಿರುವ ಕಾರಣ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಚೆನ್ನಪ್ಪ ಗೌಡ, ತಹಶೀಲ್ದಾರ್,ಜಿಲ್ಲಾ ಪಂಚಾಯತ್ ಇಂಜಿನಿಯರ್ ಪ್ರಭಾಕರ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಸೂರ್ಯನಾರಾಯಣ ಮತ್ತು ಬಜ್ಪೆ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಪಾಯದ ಸ್ಥಿತಿಗೆ ತಲುಪಿರುವ ಮನೆಯವರಿಗೆ ಮುಗ್ರೋಡಿ ಕನ್‌ಸ್ಟ್ರಕ್ಷನ್ ಮಾಲಕ ಸುಧಾಕರ ಶೆಟ್ಟಿ ತಾತ್ಕಾಲಿಕ ಮನೆ ವ್ಯವಸ್ಥೆ ಮಾಡಿಕೊಟ್ಟಿದ್ದಲ್ಲದೆ ಮಳೆಗಾಲ ಕಳೆದ ಬಳಿಕ ಶಾಶ್ವತ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.
Tagged with
dk,
feature,
lnews,
rain
ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಎಂಬಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ ವನ್ನು ಕೂಡಲೇ ಬೇಧಿಸಿ ಆರೋಪಿಯನ್ನು ಬಂಧಿಸು ವಂತೆ ಬೆಟ್ಟಂಪಾಡಿ ಗ್ರಾ. ಪಂ. ಸಾಮಾನ್ಯ ಸಭೆಯಲ್ಲಿ ಪೊಲೀಸ್ ಇಲಾಖೆಯನ್ನು ಆಗ್ರಹಿಸಲಾಗಿದೆ.
ಬೆಟ್ಟಂಪಾಡಿ ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯು ಶನಿವಾರ ಪಂಚಾಯತ್ ಅಧ್ಯಕ್ಷರಾದ ಸುಂದರ ನಾಯಕ್ ಬಾಳೆಗುಳಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕೊಲೆ ಪ್ರಕರಣ ವನ್ನು ಖಂಡಿಸಲಾಯಿತು ಹಾಗೂ ಆರೋಪಿಯನ್ನು ತಕ್ಷಣವೇ ಬಂಧಿಸಿ ಕೊಲೆ ಪ್ರಕರಣದ ಸತ್ಯಾಂಶ ವನ್ನು ಸಮಾಜಕ್ಕೆ ತಿಳಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.
ಪಂ. ಅಭಿವೃದ್ಧಿ ಅಧಿಕಾರಿ ಶೈಲಜಾ, ಕಾರ್ಯದರ್ಶಿ ರಮೇಶ್, ಉಪಾಧ್ಯಕ್ಷ ರಮೇಶ್ ಶೆಟ್ಟಿ ಕೊಮ್ಮಂಡ, ಸದಸ್ಯರಾದ ಚನಿಯ ಬೈರ, ಸರೋಜ, ಮಾಧವ ರೈ, ಮಹಾಲಿಂಗ ನಾಯ್ಕ, ಬೇಬಿ ಜಯರಾಮ ಪೂಜಾರಿ, ಮುಖೇಶ್ ಬೈಲಾಡಿ, ಅಮೃತಪ್ರಸಾದ್ ರೈ, ಪ್ರೇಮಲತಾ ಉಪಸ್ಥಿತರಿದ್ದರು.
Tagged with
bettampady,
dk,
feature,
lnews
ಮಂಗಳೂರು: ದ.ಕ. ಜಿಲ್ಲೆಯ ಕಾಂಗ್ರೆಸ್ ಮಟ್ಟಿಗೆ ಎರಡನೆ ಸಾಲಿನ ನಾಯಕರು ಎನಿಸುವ ಯುವ ಹಾಗೂ ಉತ್ಸಾಹಿಗಳನೇಕರು ಮುಂಬರುವ ವಿಧಾನ ಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯೊಂದಿಗೆ ಟಿಕೆಟ್ ಲಾಬಿಯನ್ನು ಈಗಿನಿಂದಲೇ ಆರಂಭಿಸಿದ್ದಾರೆ.
ಘಟಾನುಘಟಿ ನಾಯಕರ ಎದುರು ಅವಕಾಶ ಗಿಟ್ಟಿಸುವುದು ಸುಲಭವಲ್ಲ ಎಂಬುದು ಗೊತ್ತಿದ್ದೂ ಹೋರಾಟ ಮುಂದುವರಿಸಿರುವ ಎರಡನೆ ಸಾಲಿನ ನಾಯಕರಲ್ಲಿ ಹೆಚ್ಚಿನ ನಿರೀಕ್ಷೆಯಲ್ಲಿರುವವರು ಅಶ್ವಿನ್‌ಕುಮಾರ್ ರೈ ಹಾಗೂ ಶಶಿಧರ್ ಹೆಗ್ಡೆ ಎಂದು ಹೇಳಬಹುದು. ಇವರಲ್ಲದೆ ಕಳ್ಳಿಗೆ ತಾರನಾಥ ಶೆಟ್ಟಿ, ರಾಕೇಶ್ ಮಲ್ಲಿ, ನವೀನ್ ಡಿ’ಸೋಜಾ, ಮಹಾಬಲ ಮಾರ್ಲ ನಾವೇಕೆ ಸುಮ್ಮನೆ ಕುಳಿತು ಕೊಳ್ಳಬೇಕು ನಮ್ಮಲ್ಲೂ ಸಾಮರ್ಥ್ಯ ಇದೆ ಎಂಬುದನ್ನು ತೋರಿಸಲು ಸಿದ್ದರಾಗಿದ್ದಾರೆ. ಇನ್ನು ಮಹಿಳೆಯರಲ್ಲಿ ಟಿಕೆಟ್ ಪಡೆಯಬಲ್ಲ ಫೆವರೇಟ್ ನಾಯಕಿ ಯಾಗಿ ಕೃಪಾ ಆಳ್ವ ಗೋಚರಿಸುತ್ತಿದ್ದಾರೆ. ಸ್ಪರ್ಧೆಯ ಸಾಲಿನಲ್ಲಿ ಇರುವ ಮಹಿಳಾ ನಾಯಕರಾಗಿ ಮಮತಾ ಗಟ್ಟಿ ಮತ್ತು ಶಾಲೆಟ್ ಪಿಂಟೊ ಕಾಣಸಿಗು ತ್ತಾರೆ. ದ.ಕ. ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಇತ್ತೀ ಚಿನ ದಿನಗಳಲ್ಲಿ ಮಾಸ್ ನಾಯಕರಾಗಿ ಮುಖ ತೋರಿಸುವ ಸಮರ್ಥರನ್ನು ಹುಡು ಕುವುದೇ ಕಷ್ಟ. ಜನನಾಯಕನಾಗುವ ಲಕ್ಷಣ ತೋರಿಸುವ ಯುವಕರಿಗೆ ಟಾಂಗ್ ನೀಡಿ ಅವನ ಬೆಳೆವಣಿಗೆಗೆ ಕತ್ತರಿ ಹಾಕಿದ ಬಹ ಳಷ್ಟು ಉದಾಹರಣೆಗಳು ಕಾಣ ಸಿಗುತ್ತವೆ. ಮೇಲೆ ಹೆಸರಿಸಿದ ನಾಯಕರಲ್ಲಿ ಜನನಾಯಕರಾಗುವ ಲಕ್ಷಣ ತೋರಿಸಿದವರು ಕೆಲವರಾದರೂ ಇದ್ದಾರೆ. ಆದರೆ ಅವರಿಗೆ ಅವಕಾಶ ನಿರಾಕರಿಸಿದ ಸಂದರ್ಭಗಳೇ ಹೆಚ್ಚು. ಕಾಂಗ್ರೆಸ್‌ನಲ್ಲಿ ಬಾಲಬಡುಕರಿಗಲ್ಲದೆ ನೈಜ ನಾಯಕತ್ವ ಪ್ರದರ್ಶಿಸುವವರಿಗೆ ಬೆಳೆಯುವ ಅವಕಾಶವೇ ಇಲ್ಲ. ಕಳೆದ ಎರಡು ದಶಕಗಳಲ್ಲಿ ದ.ಕ. ಜಿಲ್ಲೆಯಲ್ಲಿ ಜನರ ಮಧ್ಯದಿಂದ ಎದ್ದು ಬಂದು ನಾಯಕರಾಗಿ ಬೆಳೆದವರು ಕಡಿಮೆ ಎನ್ನ ಬಹುದು. ಈಗಿನ ನಾಯ ಕರಲ್ಲಿ ಬಹುತೇಕರು ಕಾಂಗ್ರೆಸ್ ಪಾಲಿನ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕರೆನಿಸಿದವರ ಹಿಂಬಾಲಕರಾಗಿ, ಅವರ ಮನೆಯ ಪರಿಚಾರಿಕೆ ಮಾಡಿ ಸ್ಥಾನಮಾನ ಗಿಟ್ಟಿಸಿಕೊಂಡು ತಾವು ಕೂಡ ನಾಯಕರೂ ನಮಗೂ ಟಿಕೆಟ್ ಕೊಡಿ ಎಂದು ಕೋರುವವರೇ ಹೆಚ್ಚು.
ನಾಯಕತ್ವದ ಲಕ್ಷಣ ತೋರಿಸಿ ಹೋರಾಡುತ್ತಿರುವವರಲ್ಲಿ ಅನೇಕರು ಕಾಂಗ್ರೆಸ್‌ನಲ್ಲಿ ಭವಿಷ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಾಗಿದೆ. ಆದರೆ ಬಿಜೆಪಿಯ ಸಿದ್ದಾಂತ ಒಪ್ಪಲಾಗದೆ. ಜೆಡಿಎಸ್ ಕಟ್ಟಲು ಸಾಧ್ಯವಿಲ್ಲ ಎಂಬ ಮನವರಿಕೆಯಿಂದ ಮಾತ್ರ ಕಾಂಗ್ರೆಸ್‌ನಲ್ಲಿದ್ದಾರೆ. ಇಂತಹ ನಾಯಕರಲ್ಲಿ ಸದಾನಂದ ಪೂಂಜಾರನ್ನು ಹೆಸರಿಸಬಹುದು.
ಸಾಮರ್ಥ್ಯವಿದ್ದೂ ಕೂಡ ಆವಕಾಶ ದೊರೆಯದೇ, ಪಕ್ಷದಲ್ಲಿ ಆಯಕಟ್ಟಿನ ಜಾಗವನ್ನು ಅತಿಕ್ರಮಿಸಿ ಕುಳಿತ ದೊಡ್ಡ ದೊಡ್ಡ ಕುಳಗಳ ಓಲೈಸುವ ರಾಜಕಾರಣ ಮಾಡಲಾಗದೆ, ತನ್ನ ಪ್ರತ್ಯೇಕ ಅಸ್ತಿತ್ವ ಉಳಿಸಲು ಹೋರಾಡಿ ವಿಫಲರಾಗಿ ರಾಜಕೀಯ ತೊರೆದ ಕಾಂಗ್ರೆಸ್‌ನ ಯುವ ನಾಯಕರೂ ಇದ್ದಾರೆ ಇಂತಹವರಲ್ಲಿ ಮಾಜಿ ಮೇಯರ್ ದಿವಾಕರ್ ಕಾಣಸಿಗುತ್ತಾರೆ.
ಏನಾದರಾಗಲಿ ನಾನು ಹೋರಾಡುತ್ತೇನೆ. ಹೋರಾಡಿ ಗೆಲ್ಲುತ್ತೇನೆ. ನನ್ನ ಅಸ್ತಿತ್ವವನ್ನು ತೋರಿಸುತ್ತೇನೆ ಎಂದು ಹೊರಟವರು ಮಹಾಬಲ ಮಾರ್ಲ, ಅಶ್ವಿನ್‌ಕುಮಾರ್ ರೈ. ಇನ್ನು ರಾಕೇಶ ಮಲ್ಲಿಯ ಹೋರಾಟದ ವೈಖರಿಯೇ ಭಿನ್ನ. ಶಶಿಧರ ಹೆಗ್ಡೆ, ಭಾಸ್ಕರ್ ಮೊಯ್ಲಿ, ಮಹಾಬಲ ಮಾರ್ಲ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಕಾಂಕ್ಷೆಯೊಂದಿಗೆ ಟಿಕೆಟ್ ಲಾಬಿಯ ಹಿಂದೆ ಸಾಗುತ್ತಿದ್ದಾರೆ. ಇವರೊಂದಿಗೆ ರಾಕೇಶ್ ಮಲ್ಲಿ ಕೂಡ ಮುಂದುವರಿದಿದ್ದಾರೆ. ಸುರೇಶ್ ಬಳ್ಳಾಲ್, ಕಳ್ಳಿಗೆ ತಾರಾನಾಥ ಶೆಟ್ಟಿ, ಐವನ್ ಡಿಸೋಜ, ಲ್ಯಾನ್ಸಿಲಾಟ್ ಪಿಂಟೋ, ನವೀನ್ ಡಿಸೋಜಾ, ಕೃಪಾ ಆಳ್ವಾ, ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅರುಣ್ ಕುವೆಲ್ಲೊ ಮಂಗಳೂರು ದಕ್ಷಿಣ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಎರಡನೆ ಸಾಲಿನ ನಾಯಕರಾಗಿದ್ದರೆ, ಅಶ್ವಿನ್‌ಕುಮಾರ್ ರೈ ಬಂಟ್ವಾಳದಲ್ಲಿ ರಮಾನಾಥ್ ರೈಯವರಿಗೆ ಸೆಡ್ಡು ಹೊಡೆ ಯಲು ಸಜ್ಜಾಗಿದ್ದಾರೆ. ಬೆಳ್ತಂಗಡಿಯಲ್ಲಿ ಹರೀಶ್ ಕುಮಾರ್ ಅವರು ಈ ಬಾರಿ ನಾನೇ ಅಭ್ಯರ್ಥಿ ಎಂಬ ಉಮೇದಿನಲ್ಲಿದ್ದಾರೆ. ಇನ್ನು ಮಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೇಟಿಗಾಗಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿಯವರಿಗೆ ಮೊದಿನ್ ಬಾವ, ಮತ್ತು ಜಿ.ಎ.ಬಾವಾ ಪ್ರತಿಸ್ಪರ್ಧಿಗಳಾಗಿದ್ದಾರೆ. ಇಲ್ಲೂ ಕೂಡಾ ಕೃಪಾ ಆಳ್ವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
Tagged with
congress,
dk,
feature,
lnews
ಉಪ್ಪಿನಂಗಡಿ: ತಾಲೂಕಿನ ಕೊಲ ಗ್ರಾಮದ ಗೋಳಿತ್ತಡಿ-ಏಣಿತಡ್ಕ ರಸ್ತೆಯನ್ನು ದುರಸ್ತಿಗೊಳಿಸದಿರುವುದು ಹಾಗೂ ಗ್ರಾಮ ಸಭೆಯನ್ನು ನಡೆಸಲು ಬಿಡುವುದಿಲ್ಲವೆಂದು ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಇಂಜಿನಿಯರ್ ಸಭೆಗೆ ಗೈರು ಹಾಜರಾಗಿರು ವುದನ್ನು ಪ್ರತಿಭಟಿಸಿ ಗ್ರಾಮಸ್ಥರು ಕೊಯಿಲ ಗ್ರಾಮ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸೋಮವಾರ ಗ್ರಾಮಸಭೆ ಯನ್ನು ಮುಂದೂಡಲ್ಪಟ್ಟ ಘಟನೆ ನಡೆಯಿತು.
ಪಂಚಾಯತ್ ಅಧ್ಯಕ್ಷೆ ವೀಣಾ ಪರಮೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಕೃಷಿ ಇಲಾಖಾಧಿಕಾರಿ ನಯೀಮ್ ಹುಸೈನ್ ಚರ್ಚಾ ನಿಯಂತ್ರಣಾಧಿಕಾರಿಯಾಗಿ ಭಾಗವಹಿಸಿದ್ದರು. ಇಲಾಖಾಧಿ ಕಾರಿಗಳು ಇಲಾಖಾ ಮಾಹಿತಿ ನೀಡುತ್ತಿದ್ದಂತೆ ಏಣಿತಡ್ಕದಲ್ಲಿ ಮರಳು ಅಕ್ರಮ ಮರಳು ದಂಧೆ ನಡೆಯುತ್ತಿದೆ, ಇದರ ಘನವಾಹನಗಳ ಸಂಚಾರದಿಂದಾಗಿ ಗೋಳಿತ್ತಡಿ-ಏಣಿತಡ್ಕ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದನ್ನು ತಕ್ಷಣ ದುರಸ್ತಿಗೊಳಿಸಬೇಕು ಗ್ರಾಮಸ್ಥರು ಎಂದು ಅಗ್ರಹಿಸಿದರು. ಜವಾಬ್ದಾರಿಯುತ ಜಿಲ್ಲಾಪಂಚಾಯತ್ ಇಂಜಿನಿಯರ್ ಹಾಗೂ ಜಿ.ಪ. ಸದಸ್ಯ ಗೈರು ಹಾಜರಾಗಿರುವುದಲ್ಲದೆ ರಸ್ತೆ ದುರಸ್ತಿಗೊಳಿಸದೆ ಈ ಭಾಗದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರು ಸಭೆಗೆ ಹಾಜರಾಗದೆ ಸಭೆ ನಡೆಯಬಾರದು ಎಂದು ಪಟ್ಟು ಹಿಡಿದರು.
ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಗೌಡ ರಸ್ತೆ ದುರಸ್ಥಿಗೆ ಐದು ಲಕ್ಷ ರೂ ಬಿಡುಗಡೆಯಾಗಿದೆ. ಹದಿನೈದು ದಿನಗಳಲ್ಲಿ ದುರಸ್ತಿ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರೂ ಸುಮ್ಮನಾಗದ ಪ್ರತಿಭಟನಾಕಾರರು ವೇದಿಕೆಯ ಮುಂಭಾಗಕ್ಕೆ ಆಗಮಿಸಿ ಪ್ರತಿಭಟಿಸಿದರು. ಇದಕ್ಕೆ ಆ ಭಾಗದ ಗ್ರಾಮ ಪಂಚಾಯತ್ ಸದಸ್ಯರಾದ ಸುಪ್ರಿತ್ ರೈ, ಉಮೇಶ್ ಗೌಡ ಸಾಥ್ ನೀಡಿ ವೇದಿಕೆಯಿಂದ ಇಳಿದು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ರಸ್ತೆ ದುರಸ್ತಿಯಾಗದೆ ಸಭೆ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವುದರಿಂದ ಅನಿವಾರ್ಯವಾಗಿ ಪಂಚಾಯತ್ ಕಾರ್ಯದರ್ಶಿ ಶಾಂತಾರಾಂ ಸಭೆಯನ್ನು ಮುಂದೂಡಿದರು.
Tagged with
dk,
feature,
lnews
ಬೆಂಗಳೂರು: ಪ್ರಸಕ್ತ ರಾಜಕೀಯ ವ್ಯವಸ್ಥೆಯಲ್ಲಿ ಶಾಸಕರಾಗಿ ಆಯ್ಕೆಯಾ ಗುವುದೇ ಸಂಪಾದನೆಗಾಗಿ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಂಸದ ಡಿ.ಬಿ. ಚಂದ್ರೇಗೌಡ ತೀವ್ರ ಕಳವಳ ವ್ಯಕ್ತಪಡಿ ಸಿದ್ದಾರೆ.
ರಾಜ್ಯ ವಿಧಾನಸಭೆಯ ಪ್ರಥಮ ಅಧಿವೇಶನದ ೬೦ನೇ ವಾರ್ಷಿಕೋತ್ಸವ ಆಚರಣೆಯ ಸಮಾರಂಭದಲ್ಲಿ ಭಾಗವಹಿಸಿ, ಕರ್ನಾಟಕ ವಿಧಾನ ಸಭೆ ಅಂದು ಮತ್ತು ಇಂದಿನ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ಯನ್ನು ವ್ಯಕ್ತಪಡಿಸಿದ ಅವರು ಶಾಸಕರಾ ಗುವುದು ಹಣ ಸಂಪಾದನೆಗೆನ್ನುವ ಪರಿಸರ ಮತ್ತು ಹಂತವನ್ನು ತಲುಪಿದ್ದೇವೆ. ಸ್ವಾತಂತ್ರ್ಯ ವನ್ನು ತಂದು ಕೊಡಲು ತ್ಯಾಗ-ಬಲಿ ದಾನವಿತ್ತ ನಮ್ಮ ಹಿರಿಯರ ಆದರ್ಶ ನಮಗೆ ಬೇಡವೆನಿಸಿದೆ.
ಒಮ್ಮೆ ಆಯ್ಕೆಯಾದ ಶಾಸಕ ಪ್ರತಿ ದಿನ ಪ್ರತಿ ಕ್ಷಣ ಕರ್ತವ್ಯ ಪ್ರಜ್ಞೆಯಿಂದಿರಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆ ದೊರೆಯಲಿದೆ ಎಂದು ಅಭಿಪ್ರಾಯ ಪಟ್ಟರು.
ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾದ ಪ್ರತಿಯೊ ಬ್ಬರೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಕರ್ತವ್ಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸುವುದು ಕಠಿಣವೂ ಅಲ್ಲ, ಅಸಾ ಧ್ಯವೂ ಅಲ್ಲ. ೧೦೦ ಕೆಲಸಗಳನ್ನು ಮಾಡುವ ಗುರಿ ಹಾಕಿಕೊಂಡರೆ ಅದರಲ್ಲಿ ಕನಿಷ್ಟ ಐದನ್ನಾದರೂ ಮಾಡಬೇಕು. ಆಗ ಮಾತ್ರ ಜನಪ್ರತಿನಿಧಿಯಾಗಿ ನಮ್ಮ ಜೀವನ ಸಾರ್ಥ ಕವಾಗಲಿದೆ ಎಂದರು.
Tagged with
chandregowda,
feature,
snews
ಪುತ್ತೂರು: ಬ್ರಿಟಿಷರು ನಮ್ಮ ಕೃಷಿ ಸಂಪತ್ತನ್ನು ಕೊಳ್ಳೆ ಹೊಡೆದರು ಅಂತ ಹೇಳುತ್ತಲೇ ಸ್ವಾತಂತ್ರ್ಯ ನಂತರದ ಕಳೆದ ೬೪ ವರ್ಷದ ಅವಧಿಯಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಬ್ರಿಟಿಷರಿ ಗಿಂತಲೂ ಕೀಳು ಮಟ್ಟದಲ್ಲಿ ಪ್ರಕೃತಿ ಯನ್ನು ಲೂಟಿ ಮಾಡಿ ಅತ್ಯಾಚಾರ ನಡೆಸಿದ್ದಾರೆ ಎಂದು ದ.ಕ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ ಚೆಂಗಪ್ಪ ಆರೋಪಿಸಿದರು.
ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಕರ್ನಾ ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ರೈತ ವಿರೋಧಿ ಜಾಥಾ ಮತ್ತು ರೈತ ಜಾಗೃತಿ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
ಮಣ್ಣಿನ ಮಕ್ಕಳು ಎಂದು ಹೇಳಿ ಕೊಳ್ಳುತ್ತಿರುವವರೇ ಇದೀಗ ಮಣ್ಣಿಗೆ ದ್ರೋಹ ಬಗೆದಿದ್ದಾರೆ .ಜಿಂ ಮೇಳದ ನೆಪದಲ್ಲಿ ಹಣದ ಹೊಳೆ ಹರಿಯುತ್ತಿದೆ. ಬೃಹತ್ ಕೈಗಾರಿಕೆಗಳ ನಿರ್ಮಾಣದಿಂದ ರೈತರ ಸರ್ವನಾಶಕ್ಕೆ ನಾಂದಿ ಹಾಡುವ ಕಾರ್ಯ ಸರ್ಕಾರದಿಂದ ನಡೆಯುತ್ತಿದೆ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿ ಸುವ ಕೆಲಸವಾಗಬೇಕು ಎಂದರು.
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಡಾ| ಪಿ.ಕೆ.ಎಸ್. ಭಟ್ , ಸಾಮಾಜಿಕ ಕಾರ್ಯಕರ್ತೆ ಹಾಗೂ ಸೆಜ್ ವಿರೋಧಿ ಹೋರಾಟ ಗಾರ್ತಿ ವಿದ್ಯಾ ದಿನಕರ್, ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ದರ್ಬೆ ವೃತ್ತದ ಬಳಿಯಿಂದ ಹೊರಟ ಡಂಗುರ ಜಾಥ ಎಂಟಿ ರಸ್ತೆ, ಮಾರುಕಟ್ಟೆ ರಸ್ತೆ ಯಾಗಿ ಟೌನ್ ಬ್ಯಾಂಕ್ ತನಕ ನಡೆ ಯಿತು. ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಕ್ಯಾಂಪ್ಕೋ ಅಧಿಕಾರಿ ಗಳಿಗೆ ಮತ್ತು ಪುತ್ತೂರು ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಸಲ್ಲಿಸಲಾಯಿತು.
Tagged with
chengappa,
dk,
feature,
lnews
ಮಂಗಳೂರು: ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ರವಿವಾರದಿಂದ ನೂತನ ವಾಗಿ ಆರಂಭಗೊಂಡಿರುವ ರಿಕ್ಷಾ ನಿಲ್ದಾಣ ಇದೀಗ ವಿವಾದಕ್ಕೆ ಕಾರಣ ವಾಗಿದ್ದು ತೆರವುಗೊಳಿಸುವಂತೆ ಕೌನ್ಸಿಲರ್‌ಗಳು ಪಟ್ಟು ಹಿಡಿದ ಕಾರಣ ಪುರಸಭೆಯಲ್ಲಿ ನಿರ್ಣಯ ಕೈಗೊಳ್ಳ ಲಾಗಿದೆ.
ನಿನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕೌನ್ಸಿಲರ್‌ಗಳಾದ ದಿನೇಶ್ ರೈ ಮತ್ತು ಇಸ್ಮಾಯಿಲ್ ಅವರು ವಿಷಯ ಪ್ರಸ್ತಾಪಿಸಿ ಪುರಸಭೆ ವ್ಯಾಪ್ತಿಯಲ್ಲಿ ಗೂಡಂಗಡಿ ಇಡಲೂ ಅನುಮತಿಯಿಲ್ಲ. ಆದರೆ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಅಟೋರಿಕ್ಷಾ ನಿಲ್ದಾಣ ಆರಂಭಗೊಂಡಿದ್ದು, ಅದನ್ನು ಅಧ್ಯಕ್ಷರೇ ಉದ್ಘಾಟಿಸಿದ್ದು ಈ ಬಗ್ಗೆ ಮುಖ್ಯಾಧಿಕಾರಿ, ಕೌನ್ಸಿಲರ್‌ಗಳ ಗಮನಕ್ಕೆ ತಾರದೆ ಅಗೌರವ ತೋರಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ಇತರ ಸದಸ್ಯರು ಪಕ್ಷ, ಭೇದ ಮರೆತು ಧ್ವನಿಗೂಡಿಸಿದರು. ಈ ಸಂದರ್ಭ ಗದ್ದಲದ ವಾತಾವರಣ ನಿರ್ಮಾಣಗೊಂಡಿತು. ಇದೇ ವೇಳೆ ಉತ್ತರಿಸಿದ ಮುಖ್ಯಾಧಿಕಾರಿ ಶೀನ ನಾಯಕ್, ಅಟೋರಿಕ್ಷಾ ನಿಲ್ದಾಣದ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ಕೈತೊಳೆದುಕೊಂಡರು. ಇದೇ ವೇಳೆ ಮೌನ ಮುರಿದ ಅಧ್ಯಕ್ಷ ಬಾಝಿಲ್ ಡಿ.ಸೋಜ, ಕಳೆದ ಆರೇಳು ವರ್ಷ ಗಳಿಂದ ಪ್ರಸ್ತುತ ಸ್ಥಳದಲ್ಲಿ ನಿಲ್ದಾಣದ ಬೇಡಿಕೆ ಇತ್ತು ಎಂದರಲ್ಲದೆ ತಾನು ಉದ್ಘಾಟಿಸಿದ್ದೆನ್ನುವ ಆರೋಪವನ್ನು ಅಲ್ಲಗಳೆದರು.
ಇದರಿಂದ ಕೆರಳಿದ ಸದಸ್ಯರು ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು, ಸರಕಾರಿ ಜಾಗ ಕಬಳಿಕೆಯಾಗುತ್ತಿರುವ ಬಗ್ಗೆ ಹಾಗೂ ತೊಕ್ಕೊಟ್ಟು ಪುರಸಭೆಯ ಕಟ್ಟಡದ ಕೆಳಭಾಗದಲ್ಲಿ ಅನಧಿಕೃತವಾಗಿ ಹಣ್ಣು ಹಂಪಲುಗಳ ಅಂಗಡಿ ತೆರೆಯಲಾ ಗಿರುವ ಬಗ್ಗೆ ಪ್ರಸ್ತಾಪಿಸಿದರು. ಇದೀಗ ಅಟೋರಿಕ್ಷಾ ನಿಲ್ದಾಣ ಆರಂಭಗೊಂ ಡಿದೆ. ಇದಕ್ಕೆಲ್ಲಾ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ. ಆದರೆ ಅಧಿಕಾರಿಗಳು ಮಾಹಿತಿಯೇ ಇಲ್ಲ ಎನ್ನುವ ಮೂಲಕ ಜವಾ ಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಅಲ್ಲದೆ ರಿಕ್ಷಾ ನಿಲ್ದಾಣದ ವಿರುದ್ಧ ಠಾಣೆಗೆ ದೂರು ನೀಡಿ ಅದರ ಹಿಂದಿ ರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕೊನೆಗೂ ಒಪ್ಪಿದ ಮುಖ್ಯಾಧಿಕಾರಿ, ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವ ತೀರ್ಮಾನ ಕೈಗೊಂಡರು.
Tagged with
auto,
dk,
feature,
lnews
ಸಮಸ್ಯೆ: ನಾನು ೨೦ರ ಹರೆಯದ ಹುಡುಗಿ. ಪದವಿ ಕಾಲೇಜ್ ನಲ್ಲಿ ಕಲಿಯುತ್ತಿದ್ದೇನೆ. ನನಗೊಬ್ಬ ಬಾಯ್‌ಫ್ರೆಂಡ್ ಇದ್ದಾನೆ. ಆತನೂ ನನ್ನದೇ ಕಾಲೇಜ್. ಆದರೆ ನನಗಿಂತ ಒಂದು ವರ್ಷ ಸೀನಿಯರ್. ಅವನು ನನ್ನನ್ನು ಸಿನಿಮಾ, ಪಾರ್ಕ್‌ಗೆ ಕರೆದುಕೊಂಡು ಹೋಗುತ್ತಾನೆ. ಆದರೆ ಇಷ್ಟರವರೆಗೆ ಸೆಕ್ಸ್ ಮಾಡಿಲ್ಲ. ಆತ ನನಗೆ ಕಿಸ್ ಕೊಟ್ಟಿದ್ದಾನೆ. ನನ್ನನ್ನು ತಬ್ಬಿಕೊಂಡು ಹಲವು ಬಾರಿ ಸ್ತನಗಳನ್ನು ಮುಟ್ಟಿದ್ದಾನೆ. ನಾನು ಆತನಿಂದ ಸ್ಪರ್ಶ ಸುಖ ಪಡೆದಿದ್ದೇನೆ. ಆತನಿಗೆ ಹಾಗೆ ಮಾಡಲು ತುಂಬಾ ಖುಷಿಯಾಗುತ್ತದಂತೆ ಮತ್ತು ನನಗೂ ಇದು ಖುಷಿ ಕೊಡು ತ್ತದೆ. ಆತ ಸೆಕ್ಸ್ ಮಾಡಲು ಇಷ್ಟ ಪಡುತ್ತಿದ್ದರೂ ನಾನು ಈವರೆಗೆ ಆತನನ್ನು ಹಾಗೆ ಮಾಡಲು ಬಿಟ್ಟಿಲ್ಲ. ನನ್ನ ಗೆಳತಿಯೊಬ್ಬಳು ನನ್ನ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳುತ್ತಾಳೆ.
ಆಕೆ ಈಗಲೇ ಸೆಕ್ಸ್‌ಗೆ ಅವಕಾಶ ಕೊಡಬೇಡ ಎಂದಿದ್ದರಿಂದ ನಾನು ಆತನಿಗೆ ಅವಕಾಶ ನೀಡಿಲ್ಲ. ವಾಸ್ತವವಾಗಿ ನನಗೆ ಸೆಕ್ಸ್ ಬಗ್ಗೆ ಕುತೂಹಲ ಇದ್ದರೂ ಒಂದೊಮ್ಮೆ ಸೆಕ್ಸ್ ಮಾಡಿದರೆ ನನ್ನ ಕನ್ಯಾ ಪೊರೆ ಹರಿದು ಹೋಗಿ ಮದುವೆಯ ಬಳಿಕ ತೊಂದರೆಯಾಗುತ್ತದೆ. ಕೆಲವೊಮ್ಮೆ ಇದರಿಂದ ಡೈವೋರ್ಸ್ ಕೂಡಾ ಆಗಬಹುದು ಎಂದು ನನ್ನ ಗೆಳತಿ ಹೇಳಿದ್ದಾಳೆ. ಹೀಗಾಗಿ ಆತನಿಗೆ ಏನೂ ಬೇಕಾದರೂ ಮಾಡು, ಆದರೆ ಸೆಕ್ಸ್ ಮಾತ್ರ ಬೇಡ ಎಂದು ಹೇಳಿದ್ದೇನೆ. ಆತ ಏನೂ ಆಗುವುದಿಲ್ಲ, ಮದುವೆಯ ನಂತರ ಏನೂ ಗೊತ್ತಾಗುವುದಿಲ್ಲ ಎನ್ನುತ್ತಾನೆ. ನನಗೆ ಆತನ ಜೊತೆ ಒಮ್ಮೆಯಾದರೂ ಸೇರಲು ಮನಸ್ಸಾಗುತ್ತದೆ. ಆದರೆ ಈ ಬಗ್ಗೆ ಚಿಂತಿಸಿ ಸುಮ್ಮನಾಗುತ್ತೇನೆ. ಕನ್ಯಾ ಪೊರೆ ಎಂದರೆ ಏನು? ಅದು ಹೇಗಿರುತ್ತದೆ? ಮದುವೆಗೂ ಮುನ್ನ ಸೆಕ್ಸ್ ಮಾಡಿದರೆ ಅದು ಹರಿಯುತ್ತದೆಯೇ? ಇದರಿಂದ ಗಂಡ ಮದು ವೆಗಿಂತ ಮೊದಲು ಬೇರೆಯವರೊಂದಿಗೆ ಮಲಗಿದ್ದೀ ಎಂದು ಹೇಳುವುದು ಸಾಧ್ಯವೇ? ನನಗೆ ಸಲಹೆ ಕೊಡಿ.
ಸಲಹೆ: ನಿಮ್ಮ ಪ್ರಶ್ನೆಯ ಬಗ್ಗೆ ಹದಿಹರೆಯದ ಯುವತಿಯರಲ್ಲಿ ಕುತೂ ಹಲ ಇದ್ದೇ ಇರುತ್ತದೆ. ಕನ್ಯಾಪೊರೆಗೂ ಹೆಣ್ಣಿನ ಜೀವನಕ್ಕೂ ಹತ್ತಿರದ ನಂಟು ಇದೆ. ಕನ್ಯಾಪೊರೆ ಹರಿಯುವುದು ಯೋನಿಯೊಳಗೆ ಶಿಶ್ನ ಪ್ರವೇಶವಾದಾ ಗಲೇ ಎಂದು ಅರಿತುಕೊಂಡವರು ತುಂಬಾ ಮಂದಿ ಇದ್ದಾರೆ. ಮೊದಲ ರಾತ್ರಿಯ ಸಮಾಗಮದ ವೇಳೆ ಅದರಿಂದ ರಕ್ತ ಬರಲಿಲ್ಲ ಎಂದು ಪತ್ನಿಗೆ ಹಿಂದೆ ಬೇರೊಬ್ಬನೊಂದಿಗೆ ಸಂಬಂಧ ಇತ್ತು ಎಂದು ಡೈವೋರ್ಸ್ ನೀಡಿದವರೂ ಎಷ್ಟೋ ಮಂದಿ ಇದ್ದಾರೆ. ಕನ್ಯಾಪೊರೆ ಎನ್ನುವುದು ಹೆಣ್ಣಿನ ಜನನಾಂಗ(ಯೋನಿ)ವನ್ನು ಆವರಿಸಿಕೊಂಡಿ ರುವ ತೆಳುವಾದ ಪೊರೆ. ಇದು ಕೇವಲ ಸಮಾಗಮದ ಸಮಯ ದಲ್ಲಿ ಮಾತ್ರವೇ ಹರಿಯಬೇಕೆಂದಿಲ್ಲ. ಹುಡುಗಿಯರು ಸೈಕಲ್ ಬಿಡು ವಾಗ, ಏರೋಬಿಕ್ಸ್ ಮಾಡುವಾಗ, ಯೋಗ, ಕ್ರೀಡೆ, ಕರಾಟೆ ಹೀಗೆ ಹಲವು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರ ಕನ್ಯಾಪೊರೆ ಸಾಮಾ ನ್ಯವಾಗಿ ಹರಿಯುವ ಸಾಧ್ಯತೆಯೂ ಇದೆ. ಇದು ಸಾಮಾನ್ಯವೂ ಹೌದು. ಕನ್ಯಾಪೊರೆ ಹರಿದಿದೆ ಎಂದರೆ ಆ ಹುಡುಗಿ ಬೇರೊಬ್ಬನೊಂ ದಿಗೆ ಸಂಬಂಧ ಇಟ್ಟುಕೊಂಡವಳು ಎಂಬ ಅರ್ಥ ಕಲ್ಪಿಸುವುದಲ್ಲ. ಆದ್ದರಿಂದ ಈ ಬಗ್ಗೆ ಭಯ ಬೇಡ. ಆದರೆ ವಿವಾಹಪೂರ್ವ ಬಾಯ್ ಫ್ರೆಂಡ್ ಜೊತೆ ಇಂಥ ಸಂಬಂಧಕ್ಕೆ ಮುಂದಾಗಿ ಮುಂದೆ ಸಮಸ್ಯೆ ಗಳನ್ನು ಮೈಗೆಳೆದುಕೊಳ್ಳುವ ಉದ್ದೇಶ ಸರಿಯಲ್ಲ.
ನಿಮ್ಮನ್ನು ಆತ ಮುಂದೆ ಬ್ಲ್ಯಾಕ್‌ಮೇಲ್ ಮಾಡಲೂಬಹುದು. ಆದ್ದರಿಂದ ಈ ಹರೆಯದಲ್ಲಿ ಆದಷ್ಟು ಎಚ್ಚರಿಕೆಯಿಂದ ಸೆಕ್ಸ್‌ನಿಂದ ದೂರ ಇರುವುದೇ ಒಳ್ಳೆಯದು. ಹದಿಹರೆಯದಲ್ಲಿ ಸೆಕ್ಸ್ ಬಗ್ಗೆ ಆಸಕ್ತಿ ಇದೆ ಎಂದು ಪರೀಕ್ಷೆಗೆ ಮುಂದಾದರೆ ನಾಳೆಯ ದಿನ ನೀವು ಮತ್ತಷ್ಟು ಸಮಸ್ಯೆಗೆ ಈಡಾಗುವುದು ನಿಶ್ಚಿತ. ಕಾಲೇಜ್ ಕಲಿಕೆಯ ಸಮಯ ದಲ್ಲಿ ನಿಮಗೆ ಇದೆಲ್ಲ ಬೇಕೇ, ಬೇಡವೇ ಎನ್ನುವುದರ ಬಗ್ಗೆ ನೀವೇ ಚಿಂತಿಸಿ. ಯಾವುದಕ್ಕೂ ಸಂಯಮ ಬೆಳೆಸಿಕೊಳ್ಳಿ.
Tagged with
gupta
(ನಿನ್ನೆಯ ಸಂಚಿಕೆಯಿಂದ)
ಮುಸಲ್ಮಾನರು ಕಾಶ್ಮೀರದಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ ದೇಶ ದಾದ್ಯಂತ ಬಡತನದಲ್ಲಿ ಜೀವನ ಸಾಗಿಸಲು, ಯುವಕರು ನಿರುದ್ಯೋಗದಿಂದ ಅಡ್ಡದಾರಿ ಹಿಡಿಯಲು, ರಾಜಕೀಯವಾಗಿ ಮೂಲೆಗುಂಪಾಗಲು, ದೇಶದಲ್ಲಿ ಶೋಷಣೆಗೆ ಒಳಪಡಲು, ತಮ್ಮ ಆರಾಧನಾಲಯಗಳನ್ನು ಸಂರಕ್ಷಿಸಲು ಆಸಾ ಧ್ಯವಾಗಿದ್ದು, ಸ್ತ್ರೀಯರ ಮಾನ ಹರಣವಾದದ್ದು, ತಮ್ಮ ವಿಶ್ವಾಸದ ಸ್ವಾತಂತ್ರದ ಹರಣಗೊಳ್ಳಲು ಕಾಂಗ್ರೆಸ್ ಪಕ್ಷ ದೊಡ್ಡ ಕೊಡುಗೆಯನ್ನೇ ನೀಡಿದೆ. ಕಾಂಗ್ರೆಸ್ ಪಕ್ಷದ ಮೃದು ಹಿಂದುತ್ವ ನೀತಿ ಇಲ್ಲಿ ಕೆಲಸ ಮಾಡಿದೆ. ಅದು ಈ ದೇಶದಲ್ಲಿ ಸಾವಿರಾರು ಅಲ್ಪಸಂಖ್ಯಾತರ ರಕ್ತ ಹೀರಿದೆ. ಸಂಘಪರಿವಾರದ ಹಿಂದುತ್ವಕ್ಕಿಂತ ಕಾಂಗ್ರೆಸ್ ಪಕ್ಷದ ಮೃದು ಹಿಂದುತ್ವ ನೀತಿ ಅಪಾಯಕಾರಿ ಎಂಬುದನ್ನು ಮುಸ್ಲಿಮ್ ಸಮುದಾಯ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.
ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಮುಸಲ್ಮಾನರನ್ನು ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರ ಬಳಸಿಕೊಂಡಿದೆ. ಸಮುದಾಯದ ಅಭಿವೃದ್ಧಿಯ ಬಗ್ಗೆ ಅದು ಯಾವತ್ತೂ ಗಮನ ಹರಿಸಿಲ್ಲ. ಸಾಚಾರ್ ವರದಿ, ರಂಗನಾಥ ಮಿಶ್ರ ವರದಿ ಧೂಳು ತಿನ್ನಲು ಕಾರಣ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮ್ ಸಮುದಾಯದ ಬಗ್ಗೆ ಇರುವ ಅಸಡ್ಡೆಯಾಗಿದೆ. ಅದನ್ನು ಅನುಷ್ಟಾನಕ್ಕೆ ತರುವ ಯಾವುದೇ ಪ್ರಯತ್ನವನ್ನು ಮಾಡಿಲ್ಲ. ಚುನಾವಣಾ ಸಂದರ್ಭ ಮೀಸಲಾತಿ ಆಮಿಷವೊಡ್ಡಿ ಮತ ಸೆಳೆಯುವ ಪ್ರಯತ್ನವನ್ನು ಮಾತ್ರ ಮಾಡುತ್ತದೆ ಹೊರತು ಅದಕ್ಕಾಗಿ ಕಾನೂನು ರೂಪಿಸುವ ಯಾವುದೇ ಪ್ರಯತ್ನಗಳನ್ನು ಸರಕಾರ ಮಾಡಿಲ್ಲ. ಇದು ಮುಸಲ್ಮಾನರಿಗೆ ಮಾಡುವ ವಂಚನೆ ಅಲ್ಲದೇ ಬೇರೇನು?
ಕಳೆದ ಕರ್ನಾಟಕ ವಿಧಾನಸಭೆ ಚುನಾವಣಾ ಸಂದರ್ಭ ೫೦ ಶೇಕಡಾಕ್ಕೂ ಹೆಚ್ಚು ಮುಸ್ಲಿಮ್ ಮತಗಳನ್ನು ಹೊಂದಿರುವ ದಾವಣಗೆರೆ ಉತ್ತರ ಕ್ಷೇತ್ರದ ಮುಸ್ಲಿಮ್ ಅಭ್ಯರ್ಥಿಗಳಿಗಾದ ಅವಮಾನವನ್ನು ಇಡೀ ರಾಜ್ಯವೇ ನೋಡಿದೆ. ಸುಮಾರು ೧೫ ಶೇಕಡಾ ಮುಸ್ಲಿಂ ಜನಸಂಖ್ಯೆ ಇರುವ ರಾಜ್ಯದಲ್ಲಿ ಕಾಂಗ್ರೆಸ್ ಎಷ್ಟು ಮಂದಿ ನಮ್ಮ ಅಭ್ಯರ್ಥಿಗಳಿಗೆ ಸೀಟು ನೀಡಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಜಾಫರ್ ಶರೀಫ್‌ರಂತಹ ಮೇಧಾವಿಗಳನ್ನು ಯಾವ ರೀತಿ ನಡೆಸಿ ಕೊಂಡಿತು ಎಂಬುದನ್ನು ಯಾಕೆ ಮುಸಲ್ಮಾನರು ತಿಳಿಯದೇ ಹೋದರೋ? ಪಕ್ಷಕ್ಕೆ ಮುಸ್ಲಿಮ್ ವ್ಯಕ್ತಿ ಅಧ್ಯಕ್ಷರಾಗುವುದು ಕನಸಿನ ಮಾತು. ದೇಶದ ಪ್ರಧಾನಿ ಅಥವಾ ರಾಜ್ಯದ ಮುಖ್ಯಮಂತ್ರಿ ಮುಸಲ್ಮಾನರಾಗೋದನ್ನು ಊಹಿಸಿ ದರೂ ತಪ್ಪಾಗುತ್ತದೆ. ಭಾಷಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣದ ಬಗ್ಗೆ ಬೊಗಳೆ ಬಿಡುವ ನಾಯಕರು ಮುಸ್ಲಿಮ್ ಸಮುದಾಯಕ್ಕೆ ಮಾಡಿರುವ ಕಾರ್ಯಗಳು ಮಾತ್ರ ಶೂನ್ಯ.
ಕಳೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಸಲ್ಮಾನರನ್ನು ವಂಚನೆಗೆ ಒಳಪಡಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿತ್ತು. ಸಲ್ಮಾನ್ ಖುರ್ಷೀದ್ ಎಂಬ ಮುಸ್ಲಿಮ್ ಕುರಿಯನ್ನು ಅದಕ್ಕಾಗಿ ಬಲಿ ಕೊಡುವ ಪ್ರಯತ್ನವನ್ನು ಪಕ್ಷ ಮಾಡಿತ್ತು. ಹಸಿದವನಿಗೆ ಬಿರಿಯಾನಿ ತೋರಿಸುವ ಪ್ರಯತ್ನವನ್ನು ಮಾಡಿತ್ತು. ಕಾನೂನು ಮಂತ್ರಿಯಾಗಿ ಸಂಸತ್ತಿನಲ್ಲಿ ಕಾನೂನು ರೂಪಿಸಬೇಕಾದ ಸಲ್ಮಾನ್ ಖುರ್ಷಿದ್ ಎಂಬ ಮುಸ್ಲಿಮ್ ಕುರಿ ರಸ್ತೆಯಲ್ಲಿ ಬೊಬ್ಬೆ ಹೊಡೆಯುವ ಹಿಂದಿನ ಮರ್ಮವನ್ನು ಸಮುದಾಯ ಅರಿತುಕೊಂಡಿತು. ಮುಸಲ್ಮಾನರಿಗೆ ತೋಡಿದ ಖೆಡ್ಡಾಕ್ಕೇ ಅವರೇ ಬಲಿಯಾದರು. ಈಗಲಾದರೂ ಮುಸ್ಲಿಮ್ ಸಮುದಾಯ ಜಾಗೃತಿಗೊಳ್ಳು ತ್ತಿದೆ ಎಂಬ ಸತ್ಯವನ್ನು ಕಾಂಗ್ರೆಸ್ ಪಕ್ಷ ಮನಗಾಣಬೇಕಾಗಿದೆ.
ಕಳೆದ ೬೫ ವರ್ಷಗಳಲ್ಲಿ ಮುಸಲ್ಮಾನರನ್ನು ವಂಚಿಸುತ್ತಾ ಅಧಿಕಾರವನ್ನು ಅನು ಭವಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಮುಂದಿನ ದಿನಗಳಲ್ಲಿ ಮುಸ್ಲಿಮ್ ಸಮುದಾಯ ತಿರಸ್ಕರಿಸಬೇಕು. ಯಾವುದೇ ರೀತಿಯ ಆಮಿಷಕ್ಕೆ ಬಲಿಯಾಗದೇ ಚುನಾವಣಾ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಸ್ಲಿಮ್ ಸಮುದಾಯದ ಪತನಕ್ಕೆ ಮುಸ್ಲಿಮ್ ಸಮುದಾಯವೇ ಕಾರಣವಾಗುತ್ತದೆ. ಈ ಸತ್ಯವನ್ನು ಮನಗಂಡು ಮುಸ್ಲಿಮ್ ಸಮುದಾಯ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಕಾರ್ಯಾಚರಿಸಬೇಕಾಗಿದೆ. ರಾಜಕೀಯವಾಗಿ ಶೋಷಣೆಗೆ ಒಳಪಡುತ್ತಿರುವ ಮುಸ್ಲಿಮ್ ಸಮುದಾಯ ಎಚ್ಚರ ಗೊಳ್ಳಬೇಕಾಗಿದೆ. ಎಚ್ಚರಿಸುವ ಪ್ರಯತ್ನವನ್ನು ಮುಸಲ್ಮಾನರೇ ಮಾಡಬೇಕಾಗಿದೆ.
ಎ.ಎಂ.ಶಫೀಕ್ ವಲಾಲ್, ಉಪ್ಪಿನಂಗಡಿ
Tagged with
nimminda
ಮೂಡಬಿದ್ರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ‍್ಯಗಳು ನೆನೆಗುದಿಗೆ ಬಿದ್ದಿದೆ. ಇಲ್ಲಿ ಅಗತ್ಯವಾಗಿ ಅಗಬೇಕಾಗಿದ್ದ ಹೆದ್ದಾರಿ ಅಗಲೀಕರಣ, ಬೈಪಾಸ್ ರಚನೆ, ಒಳಚರಂಡಿ ಕಾಮಗಾರಿ ಹಲವು ವರ್ಷಗಳಿಂದ ಜನರನ್ನು ಕಾಡು ತ್ತಿರುವ ಗಂಭೀರ ಸಮಸ್ಯೆಯಾಗಿದೆ.
ಮೂಡಬಿದ್ರೆಗೆ ಹೊಸ ಮಾರುಕಟ್ಟೆ ಇನ್ನೂ ಆಗಿಲ್ಲ. ಸರಕಾರಿ ಜಾಗದಲ್ಲಿ ಮನೆಯನ್ನು ಕಟ್ಟಿದವರಿಗೆ ಇನ್ನೂ ಮನೆ ಸಕ್ರಮವಾಗಿಲ್ಲ. ನೂರಾರು ಮಂದಿ ಮನೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇವರಿಗೆ ಮನೆ ಕೊಡುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಅಭಯಚಂದ್ರ ಅವರು ಎರಡು ಬಾರಿ ಎಂಎಲ್‌ಸಿ ಆಗಿ ಮೂರು ಬಾರಿ ಶಾಸಕರಾಗಿ(ಈಗ ಸರಕಾರದ ವಿರೋಧ ಪಕ್ಷದ ಮುಖ್ಯ ಸಚೇತಕರೂ ಕೂಡ)ಆಯ್ಕೆಯಾ ದರೂ ಈ ಗಂಭೀರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲವೆಂದರೆ ಜನಪ್ರತಿನಿಧಿಗಳು ಪ್ರಾಮಾಣಿವಾಗಿ ಕೆಲಸ ಮಾಡುತ್ತಿಲ್ಲ ಎನ್ನು ವುದನ್ನು ತೋರಿಸುತ್ತದೆ. ಜನರು ಇವರ ಬಳಿ ಸಮಸ್ಯೆಗಳನ್ನು ಹೇಳಿಕೊಂಡರೆ ಸರಕಾರ ಬಿಜೆಪಿಯದ್ದು, ನಮ್ಮದಲ್ಲ ಎಂದು ಹೇಳಿ ವಾಪಸ್ ಕಳುಹಿಸುತ್ತಾರೆ. ಪ್ರತಿಯೊಬ್ಬ ಶಾಸಕರಿಗೂ ಇಂತಿಷ್ಟು ಅನುದಾನವನ್ನು ಸರಕಾರ ಬಿಡುಗಡೆ ಮಾಡುತ್ತದೆ. ಇದನ್ನು ಬಳಕೆ ಮಾಡಬೇಕು. ಹೆಚ್ಚಿಗೆ ಹಣ ಬೇಕಾದರೆ ಅದಕ್ಕೆ ಬೇಡಿಕೆಯಿಟ್ಟು ಬೆನ್ನು ಹಿಡಿಯಬೇಕು. ಇದ್ಯಾವುದನ್ನು ಮಾಡದೆ ಬಿಜೆಪಿ ಸರಕಾರ ಅನುದಾನ ಕೊಡುತ್ತಿಲ್ಲವೆಂದು ಬೊಟ್ಟು ಮಾಡಿ ಕುಳಿತರೆ ಕೆಲಸ ಆಗುವುದಿಲ್ಲ. ಸರಕಾರ ಅನುದಾನ ಕೊಡದಿ ದ್ದರೆ ಸರಕಾರದ ಸಚೇತಕ ಹುದ್ದೆಯನ್ನು ತ್ಯಜಿಸಿ ಗೂಟದ ಕಾರನ್ನು ವಾಪಸ್ ಕೊಟ್ಟು ಪ್ರತಿಭಟಿಸಿದಲ್ಲಿ ಅಭಯಚಂದ್ರ ಅವರು ಸರಕಾರದ ಮೇಲೆ ಮಾಡುವ ಆರೋಪಕ್ಕೆ ಅರ್ಥವಿದೆ. ಸರಕಾರದ ಎಲ್ಲಾ ಸವಲತ್ತುಗಳನ್ನು ಪಡಕೊಂಡು ಸರಕಾರವನ್ನು ಟೀಕಿ ಸುವುದು ನ್ಯಾಯವಲ್ಲ.
ಇತ್ತೀಚಿನ ದಿನಗಳಲ್ಲಿ ಶಾಸಕರು ಪಟ್ಟಭದ್ರ ಹಿತಾಸಕ್ತಿಗಳ ಪರವಾಗಿದ್ದಾರೆನ್ನುವ ಆರೋಪವಿದೆ. ಮೂಡಬಿದ್ರೆ ನಗರಕ್ಕೆ ಸರಕಾರಿ ಪಿಯು ಕಾಲೇಜು ಮಂಜೂರಾಗದಂತೆ ನೋಡಿಕೊಳ್ಳುವಲ್ಲಿ ಮಾಜಿ ಸಚಿವ ಅಮರನಾಥ್ ಶೆಟ್ಟಿ ಮತ್ತು ಹಾಲಿ ಶಾಸಕರು ಸಮಾನ ಕೆಲಸ ಮಾಡಿದ್ದಾರೆಂಬ ಆರೋಪವಿದೆ. ಇವರಿಬ್ಬರೂ ಖಾಸಗಿ ಕಾಲೇಜ್‌ಗಳ ಹಂಗಿನಲ್ಲಿದ್ದಾರೆ. ಹೀಗಾಗಿ ಪ್ರತೀವರ್ಷ ನೂರಾರು ಬಡಮಕ್ಕಳು ಕಾಲೇಜು ಶಿಕ್ಷಣ ದಿಂದ ವಂಚಿತರಾಗುತ್ತಿದ್ದಾರೆ ಇಲ್ಲವೇ ದುಬಾರಿ ಶುಲ್ಕ ಕೊಟ್ಟು ಖಾಸಗಿ ಶಾಲೆಗಳಿಗೆ ಸೇರುತ್ತಿದ್ದಾರೆ.
ಮೂಡಬಿದ್ರೆಯಲ್ಲಿ ಶಿಕ್ಷಣ ಕ್ರಾಂತಿಯಾದರೂ ಬಡವ ರಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗಿದೆ. ಮೂಡಬಿದ್ರೆ ಯಲ್ಲಿ ಕಟ್ಟಡಗಳಿಗೆ ಪರವಾನಿಗೆ ನೀಡುವ ಗೊಂದಲ ಬಗೆಹರಿಯಿತು. ಯಾಕೆಂದರೆ ಇದರ ಹಿಂದೆ ಬಿಲ್ಡರ್‌ಗಳ ಲಾಬಿ ಇತ್ತು. ಬೈಪಾಸ್, ಒಳಚರಂಡಿ, ಸರಕಾರಿ ಕಾಲೇಜ್ ಸಮಸ್ಯೆ ಬಗೆಹರಿದಿಲ್ಲ. ಅದು ಸಧ್ಯಕ್ಕೆ ಬಗೆಹರಿ ಯುವುದೂ ಇಲ್ಲ. ಯಾಕೆಂದರೆ ಇದರ ಹಿಂದಿರುವುದು ಜನ ಸಾಮಾನ್ಯರ ಕೂಗು ಮಾತ್ರ. ಕೆಲಸ ಆದದ್ದಕ್ಕೆಲ್ಲಾ ನಾನು ಕಾರಣ, ಆಗದಿರುವುದಕ್ಕೆಲ್ಲಾ ಬಿಜೆಪಿ ಹೊಣೆ ಎಂದು ಶಾಸಕರು ಟೀಕಿಸುವುದನ್ನು ಕೇಳುವಾಗ ನಿಜಕ್ಕೂ ವಿಷಾ೦ ದವೆನಿಸುತ್ತದೆ.
ಶಿವಕುಮಾರ್, ಬೆಳುವಾಯಿ
Tagged with
bahiranga
ಇತ್ತೀಚೆಗೆ ನಡೆದ ಸಿಐಟಿಯು ಬೀಡಿ ಕಾರ್ಮಿಕರ ಕನಿಷ್ಠ ಕೂಲಿ ಹೋರಾಟದ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗ ವಹಿಸಿದ ಬೀಡಿ ಕಾರ್ಮಿಕರನ್ನು ಉದ್ದೇಶಿಸಿ ನಾನು ಈ ಮಾತನ್ನು ಹೇಳಲಿಚ್ಛಿಸುತ್ತೇನೆ. ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಕಾರ್ಮಿಕ ಸಂಘಟನೆ ಬೀಡಿ ಕಾರ್ಮಿಕರ ಹೋರಾಟ ಮತ್ತು ಕಮ್ಯುನಿಸ್ಟ್ ಕಾರ್ಮಿಕ ಸಂಘಟನೆಯ ಕಾರ್ಯಕರ್ತರ ತ್ಯಾಗಪೂರ್ಣ ಹೋರಾಟದ ಫಲವಾಗಿ ಬೀಡಿ ಕಾರ್ಮಿಕರಿಗೆ ಸವಲತ್ತು, ಸೌಲಭ್ಯಗಳು ದೊರೆತಿವೆ. ೨೮ ವರ್ಷಗಳ ಕಾಲ ಕೆಂಬಾವುಟದ ಭೂ ಮಸೂದೆಗಾಗಿ ನಡೆ ದಂತಹ ತ್ಯಾಗ ಬಲಿದಾನದ ಕ್ರಾಂತಿಕಾರಿ ಹೋರಾಟದ ಫಲವಾಗಿ ರೈತರಿಗೆ ಉಳುವವನೇ ಹೊಲದೊಡೆಯ ಮಸೂದೆಯ ಜಾರಿ ಯಾಯಿತು. ಇವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಧರ್ಮದ ರೈತ ಕಾರ್ಮಿಕರ ಕೃಷಿ ಕೂಲಿಕಾರ ಮತ್ತು ಬೀಡಿ ಕಾರ್ಮಿಕರ ಮಕ್ಕಳು ಭಾಗಿಯಾಗುತ್ತಿರುವುದನ್ನು ಮತ್ತು ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವುದನ್ನು ಕಾಣಬಹುದು.
ಗೋಮಾತೆಗೆ ಅನ್ಯಾಯವಾದರೆ ರೈತ ಕಾರ್ಮಿಕರ ಮಕ್ಕಳು ಬೀದಿಗಿಳಿದು ಹೋರಾಟ ನಡೆಸಬೇಕು. ಆದರೆ ಬೀಡಿ ಕಾರ್ಮಿಕ ಮಾತೆಗೆ ಅನ್ಯಾಯವಾದರೆ ಸಂಘ ಪರಿವಾರ ಯಾಕೆ ಮಾತಾಡು ತ್ತಿಲ್ಲ? ಬೀಡಿ ಕಾರ್ಮಿಕರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಸಮಾಜಘಾತುಕ ಶಕ್ತಿಯನ್ನಾಗಿಸದೆ ಮತಾಂಧ ಧರ್ಮಾಂಧ ವ್ಯಕ್ತಿ ಗಳನ್ನಾಗಿಸದೆ ಮಕ್ಕಳಿಗೆ ವೈeನಿಕ ಚಿಂತನೆಯನ್ನು ಕೊಡುವು ದರ ಮೂಲಕ ಸುಶಿಕ್ಷಿತರನ್ನಾಗಿಸಿ ಸಮಾಜವಾದಿಗಳನ್ನಾಗಿಸಬೇಕು. ಇದುವರೆಗೆ ಜಿಲ್ಲೆಯಲ್ಲಿ ನಡೆದ ಅಥವಾ ದೇಶಾದ್ಯಂತ ನಡೆದ ಕೋಮು ಗಲಭೆಗಳಲ್ಲಿ ಶ್ರೀಮಂತ ಉದ್ಯಮಿಗಳ ಮಕ್ಕಳಾಗಲಿ, ಶ್ರೀಮಂತ ವ್ಯಾಪಾರಸ್ಥರ ಮಕ್ಕಳು ಅಥವಾ ವೈದ್ಯರು ಇಂಜಿನಿಯರ್‌ಗಳ ಮಕ್ಕಳಾ ಗಲಿ, ಬಿಜೆಪಿ ರಾಜಕೀಯ ಮುಖಂಡರ ಮಕ್ಕಳಾಗಲಿ, ಸಂಘಪರಿ ವಾರ ಮುಖಂಡರುಗಳ ಮಕ್ಕಳಾಗಲೀ ಜೈಲು ಸೇರಲಿಲ್ಲ. ಇವೆ ಲ್ಲವನ್ನು ನನ್ನ ಭಾಷಣದಲ್ಲಿ ವಿವರಿಸಿದ್ದಕ್ಕೆ ಕುಪಿತರಾದ ಕೋಮುವಾದಿ ಸಂಘ ಪರಿವಾರದವರು ಬೆಳಾಲು ಗ್ರಾಮದ ಪ್ರಸಾದ್ ಎಂಬ ದಲಿತ ಯುವಕನಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಸಂಘಪರಿವಾರದ ನಾಯಕರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ದಾಖಲಿ ಸಿದ್ದಾರೆ. ಇದು ಕೋಮುಗಲಭೆಗೆ ಪ್ರಚೋದನೆಯಾಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕೋಮು ಗಲಭೆಗೆ ಹಾತೊರೆಯುವ ಸಮಾಜ ದ್ರೋಹಿ ವ್ಯಕ್ತಿಗಳಿಗೆ ಸತ್ಯವನ್ನು ಜನತೆಗೆ ತಲುಪಿಸುವುದು ಸಹಿಸಲು ಸಾಧ್ಯವಿಲ್ಲ.
ಸಂಘಪರಿವಾರದ ಗೋಮುಖ ವ್ಯಾಘ್ರತನ, ಮನುವಾದದ ಫ್ಯಾಸಿಸ್ಟ್ ಗುಪ್ತ ಅಜೆಂಡಾ. ಜಾತ್ಯತೀತ ಸಂವಿಧಾನವನ್ನು ಕಿತ್ತೊಗೆಯುವ ಷಡ್ಯಂತ್ರಗಳು ಇವುಗಳ ವಿರುದ್ಧ ಸಮಾಜವಾದಿಗಳ ಹೋರಾಟ ಮುಂದುವರಿಯುತ್ತದೆ. ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ನೆಲೆಸಿ ನೆಮ್ಮದಿಯ ಬದುಕು ಎಲ್ಲರಿಗೂ ಲಭಿಸುವಂತಾಗಲಿ. ಇದಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಈ ಮೂಲಕ ಹೇಳುತ್ತಿ ದ್ದೇನೆ. ಬಿ.ದಾಮೋದರ ಭಟ್, ಬೆಳ್ತಂಗಡಿ
Tagged with
nimminda
ಇತ್ತೀಚೆಗೆ ನಡೆದ ಸಿಐಟಿಯು ಬೀಡಿ ಕಾರ್ಮಿಕರ ಕನಿಷ್ಠ ಕೂಲಿ ಹೋರಾಟದ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗ ವಹಿಸಿದ ಬೀಡಿ ಕಾರ್ಮಿಕರನ್ನು ಉದ್ದೇಶಿಸಿ ನಾನು ಈ ಮಾತನ್ನು ಹೇಳಲಿಚ್ಛಿಸುತ್ತೇನೆ. ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಕಾರ್ಮಿಕ ಸಂಘಟನೆ ಬೀಡಿ ಕಾರ್ಮಿಕರ ಹೋರಾಟ ಮತ್ತು ಕಮ್ಯುನಿಸ್ಟ್ ಕಾರ್ಮಿಕ ಸಂಘಟನೆಯ ಕಾರ್ಯಕರ್ತರ ತ್ಯಾಗಪೂರ್ಣ ಹೋರಾಟದ ಫಲವಾಗಿ ಬೀಡಿ ಕಾರ್ಮಿಕರಿಗೆ ಸವಲತ್ತು, ಸೌಲಭ್ಯಗಳು ದೊರೆತಿವೆ. ೨೮ ವರ್ಷಗಳ ಕಾಲ ಕೆಂಬಾವುಟದ ಭೂ ಮಸೂದೆಗಾಗಿ ನಡೆ ದಂತಹ ತ್ಯಾಗ ಬಲಿದಾನದ ಕ್ರಾಂತಿಕಾರಿ ಹೋರಾಟದ ಫಲವಾಗಿ ರೈತರಿಗೆ ಉಳುವವನೇ ಹೊಲದೊಡೆಯ ಮಸೂದೆಯ ಜಾರಿ ಯಾಯಿತು. ಇವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಧರ್ಮದ ರೈತ ಕಾರ್ಮಿಕರ ಕೃಷಿ ಕೂಲಿಕಾರ ಮತ್ತು ಬೀಡಿ ಕಾರ್ಮಿಕರ ಮಕ್ಕಳು ಭಾಗಿಯಾಗುತ್ತಿರುವುದನ್ನು ಮತ್ತು ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವುದನ್ನು ಕಾಣಬಹುದು.
ಗೋಮಾತೆಗೆ ಅನ್ಯಾಯವಾದರೆ ರೈತ ಕಾರ್ಮಿಕರ ಮಕ್ಕಳು ಬೀದಿಗಿಳಿದು ಹೋರಾಟ ನಡೆಸಬೇಕು. ಆದರೆ ಬೀಡಿ ಕಾರ್ಮಿಕ ಮಾತೆಗೆ ಅನ್ಯಾಯವಾದರೆ ಸಂಘ ಪರಿವಾರ ಯಾಕೆ ಮಾತಾಡು ತ್ತಿಲ್ಲ? ಬೀಡಿ ಕಾರ್ಮಿಕರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಸಮಾಜಘಾತುಕ ಶಕ್ತಿಯನ್ನಾಗಿಸದೆ ಮತಾಂಧ ಧರ್ಮಾಂಧ ವ್ಯಕ್ತಿ ಗಳನ್ನಾಗಿಸದೆ ಮಕ್ಕಳಿಗೆ ವೈeನಿಕ ಚಿಂತನೆಯನ್ನು ಕೊಡುವು ದರ ಮೂಲಕ ಸುಶಿಕ್ಷಿತರನ್ನಾಗಿಸಿ ಸಮಾಜವಾದಿಗಳನ್ನಾಗಿಸಬೇಕು. ಇದುವರೆಗೆ ಜಿಲ್ಲೆಯಲ್ಲಿ ನಡೆದ ಅಥವಾ ದೇಶಾದ್ಯಂತ ನಡೆದ ಕೋಮು ಗಲಭೆಗಳಲ್ಲಿ ಶ್ರೀಮಂತ ಉದ್ಯಮಿಗಳ ಮಕ್ಕಳಾಗಲಿ, ಶ್ರೀಮಂತ ವ್ಯಾಪಾರಸ್ಥರ ಮಕ್ಕಳು ಅಥವಾ ವೈದ್ಯರು ಇಂಜಿನಿಯರ್‌ಗಳ ಮಕ್ಕಳಾ ಗಲಿ, ಬಿಜೆಪಿ ರಾಜಕೀಯ ಮುಖಂಡರ ಮಕ್ಕಳಾಗಲಿ, ಸಂಘಪರಿ ವಾರ ಮುಖಂಡರುಗಳ ಮಕ್ಕಳಾಗಲೀ ಜೈಲು ಸೇರಲಿಲ್ಲ. ಇವೆ ಲ್ಲವನ್ನು ನನ್ನ ಭಾಷಣದಲ್ಲಿ ವಿವರಿಸಿದ್ದಕ್ಕೆ ಕುಪಿತರಾದ ಕೋಮುವಾದಿ ಸಂಘ ಪರಿವಾರದವರು ಬೆಳಾಲು ಗ್ರಾಮದ ಪ್ರಸಾದ್ ಎಂಬ ದಲಿತ ಯುವಕನಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಸಂಘಪರಿವಾರದ ನಾಯಕರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ದಾಖಲಿ ಸಿದ್ದಾರೆ. ಇದು ಕೋಮುಗಲಭೆಗೆ ಪ್ರಚೋದನೆಯಾಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕೋಮು ಗಲಭೆಗೆ ಹಾತೊರೆಯುವ ಸಮಾಜ ದ್ರೋಹಿ ವ್ಯಕ್ತಿಗಳಿಗೆ ಸತ್ಯವನ್ನು ಜನತೆಗೆ ತಲುಪಿಸುವುದು ಸಹಿಸಲು ಸಾಧ್ಯವಿಲ್ಲ.
ಸಂಘಪರಿವಾರದ ಗೋಮುಖ ವ್ಯಾಘ್ರತನ, ಮನುವಾದದ ಫ್ಯಾಸಿಸ್ಟ್ ಗುಪ್ತ ಅಜೆಂಡಾ. ಜಾತ್ಯತೀತ ಸಂವಿಧಾನವನ್ನು ಕಿತ್ತೊಗೆಯುವ ಷಡ್ಯಂತ್ರಗಳು ಇವುಗಳ ವಿರುದ್ಧ ಸಮಾಜವಾದಿಗಳ ಹೋರಾಟ ಮುಂದುವರಿಯುತ್ತದೆ. ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ನೆಲೆಸಿ ನೆಮ್ಮದಿಯ ಬದುಕು ಎಲ್ಲರಿಗೂ ಲಭಿಸುವಂತಾಗಲಿ. ಇದಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಈ ಮೂಲಕ ಹೇಳುತ್ತಿ ದ್ದೇನೆ. ಬಿ.ದಾಮೋದರ ಭಟ್, ಬೆಳ್ತಂಗಡಿ
Tagged with
nimminda
ಮಳೆಗಾಲದಲ್ಲಿ ದಿನದ ೨೪ ಗಂಟೆಯೂ ಕೆಲಸ ಮಾಡಬೇ ಕಾದ ಅನಿವಾರ್ಯತೆ ಮೆಸ್ಕಾಂ ಲೈನ್‌ಮೆನ್‌ಗಳಿಗೆ ಇರುತ್ತದೆ. ಜೋರಾಗಿ ಮಳೆ ಸುರಿಯುವಾಗ ವಿದ್ಯುತ್ ತಂತಿ ರಿಪೇರಿ, ಲೈನ್ ದುರಸ್ತಿ ಇತ್ಯಾದಿ ನಿರ್ವಹಿಸುವಾಗ ಹೆಚ್ಚಿನ ಎಚ್ಚರ ವಹಿಸ ಬೇಕಾಗುತ್ತದೆ. ಯಾಕೆಂದರೆ ಸ್ವಲ್ಪ ಎಚ್ಚರ ತಪ್ಪಿದರೂ ಸಹ ಅಪಾಯ ನಿಶ್ಚಿತ. ಅನೇಕ ಸಂದರ್ಭಗಳಲ್ಲಿ ಕೆಲಕ್ಷಣದ ಬೇಜವಾಬ್ದಾರಿಯೂ ಲೈನ್ ಮೆನ್‌ಗಳ ಪ್ರಾಣಕ್ಕೆ ಕುತ್ತು ತರಬಲ್ಲುದು. ಮಳೆಗಾಲದಲ್ಲಿ ಕರ್ತವ್ಯ ನಿರ್ವಹಿಸುವಾಗ ಅಗತ್ಯ ರಕ್ಷಣಾ ಸಲಕರಣೆಗಳನ್ನು ಹೊಂದಿ ರುವುದು ಅಗತ್ಯ. ಒಂದು ವೇಳೆ ಹಿರಿಯ ಅಧಿಕಾರಿಗಳು ಅದನ್ನು ಒದ ಗಿಸುವಲ್ಲಿ ವಿಫಲರಾದರೆ ಕರ್ತವ್ಯ ನಿರ್ವಹಿಸದೆ ಸಂಬಂಧಪಟ್ಟವರನ್ನು ಎಚ್ಚರಿಸಿ. ಯಾಕೆಂದರೆ ನಿಮ್ಮ ಪ್ರಾಣರಕ್ಷಣೆ ನಿಮ್ಮ ಕೈಲಿದೆ. ನೀವು ಎಡವಟ್ಟು ಮಾಡಿಕೊಂಡರೆ ನಿಮ್ಮ ಕುಟುಂಬ, ಮನೆಮಂದಿ ಅನಾಥ ರಾಗುತ್ತಾರೆ ಯೇ ಹೊರತು ಮೆಸ್ಕಾಂ ಅಧಿಕಾರಿಗಳಿಗೆ ಯಾವುದೇ ನಷ್ಟವಿಲ್ಲ. ಕೆಲವು ದಿನಗಳ ಹಿಂದೆ ಸಂಭವಿಸಿದ ಮೆಸ್ಕಾಂ ಲೈನ್‌ಮೆನ್ ಜೆರಾಲ್ಡ್ ಸಾವು ಇದಕ್ಕೊಂದು ಉದಾಹರಣೆಯಷ್ಟೇ. ಆದ್ದರಿಂದ ಇನ್ನಾದರೂ ಲೈನ್‌ಮೆನ್‌ಗಳು ಮಳೆಗಾಲದಲ್ಲಿ ಕರ್ತವ್ಯ ನಿರ್ವಹಿ ಸುವಾಗ ಸುರಕ್ಷಾ ಕ್ರಮಕ್ಕೆ ಮೊದಲ ಪ್ರಾಶಸ್ತ್ಯ ಕೊಡುವಂತಾಗಲಿ.
ನಂದೀಶ್, ಸಕಲೇಶಪುರ
Tagged with
nimminda
ಮಳೆಗಾಲದಲ್ಲಿ ಮಹಾನಗರ ಪಾಲಿಕೆ ಸರ್ವ ಸನ್ನದ್ಧವಾಗಿರಬೇಕು. ಯಾಕೆಂದರೆ ಪ್ರತೀ ಮಳೆಗಾಲದಲ್ಲೂ ಮನಪಾ ವ್ಯಾಪ್ತಿಯ ವಿವಿದೆಡೆ ಕೃತಕ ನೆರೆ, ಚರಂಡಿಯಲ್ಲಿ ಹೂಳು ತುಂಬಿಕೊಳ್ಳುವಿಕೆ ಇತ್ಯಾದಿ ಸಾಮಾನ್ಯ ಸಮಸ್ಯೆ ಗಳು ಕಂಡುಬರುತ್ತವೆ. ಮನಪಾ ಅಧಿಕಾರಿ ಗಳು ಸಮಸ್ಯೆಯನ್ನು ಬಗೆಹರಿಸಲು ಯೋಗ್ಯ ಯೋಜನೆಗಳನ್ನು ರೂಪಿಸಿದರೆ ಒಳ್ಳೆಯದು. ಇಲ್ಲವಾದಲ್ಲಿ ಮಳೆಗಾಲ ಮಂಗಳೂರಿಗರ ಪಾಲಿಗೆ ನರಕಮಯವಾಗಿ ಭಾಸವಾಗುತ್ತದೆ. ನಗರದ ಬಿಜೈ, ನ್ಯೂರೋಡ್, ಕೊಡಿಯಾ ಲ್‌ಬೈಲ್, ಜೆಪ್ಪು, ಮಾರ್ಗನ್ಸ್‌ಗೇಟ್, ಮಹಾ ಕಾಳಿಪಡ್ಪು, ಕೊಟ್ಟಾರ ಬಳಿ ಪ್ರತೀ ವರ್ಷವೂ ಮನೆಗಳು, ಅಂಗಡಿಗಳು ಜಲಾವೃತವಾಗು ತ್ತದೆ. ಈ ಪರಿಸ್ಥಿತಿಯನ್ನು ಸರಿಯಾಗಿ ನಿಭಾ ಯಿಸಲು ಮನಪಾ ತಂಡ ಸಿದ್ಧವಾಗಿರಲಿ.
ಜೆ.ಕೀರ್ತನಾ, ಕಂಕನಾಡಿ
Tagged with
nimminda
ಕಿನ್ನಿಗೋಳಿ ಪ್ರದೇಶವು ಮೂಡಬಿದ್ರೆ-ಮುಲ್ಕಿಯ ನಡುಭಾಗದಲ್ಲಿದೆ. ಇಲ್ಲಿ ಹಿಂದೆ ಮೂಲ್ಕಿ ಪೊಲೀಸ್ ಠಾಣೆಯ ಚೌಕಿಯೊಂದು ಕಾರ್ಯಾಚರಿಸುತ್ತಿತ್ತು. ಆದರೆ ಇಲ್ಲಿದ್ದ ಹಳೇ ಬಸ್ ತಂಗುದಾಣ ಕೆಡವಲ್ಪಟ್ಟ ಬಳಿಕ ಹೊಸ ಬಸ್ ನಿಲ್ದಾಣ ನಿರ್ಮಾಣವಾದರೂ ಪೊಲೀಸ್ ಚೌಕಿ ನಿರ್ಮಾಣ ಮಾಡಿಲ್ಲ. ಇದರಿಂದ ಕಿನ್ನಿಗೋಳಿ, ಐಕಳ ಹಾಗೂ ಇನ್ನಿತರ ಕಡೆ ಯಾವುದಾದರೂ ಅನಾ ಹುತ ಸಂಭವಿಸಿದಲ್ಲಿ ಮೂಲ್ಕಿ ಪೊಲೀಸರನ್ನು ಕಾಯಬೇ ಕಾಗುತ್ತದೆ. ಮುಲ್ಕಿ ಠಾಣೆ ದೂರದಲ್ಲಿರುವ ಕಾರಣ ಪೊಲೀಸರಿಗೆ ಬೇಗನೆ ತಲುಪಲು ಸಾಧ್ಯವಾಗುವುದೂ ಇಲ್ಲ. ಆದ್ದರಿಂದ ಪೊಲೀಸ್ ಹಿರಿಯ ಅಧಿಕಾರಿಗಳು ಗಮನಿಸಿ ಇಲ್ಲಿ ಪೊಲೀಸ್ ಹೊರಠಾಣೆಯನ್ನು ನಿರ್ಮಿ ಸಲು ವಿನಂತಿ. ಗಣೇಶ್, ಕಿನ್ನಿಗೋಳಿ
Tagged with
nimminda
ಬಿಡದಿಯ ಕಾಮಿ ನಿತ್ಯಾನಂದ ಸ್ವಾಮಿಯ ಅಸಲೀಯತ್ ಒಂದೊಂದಾಗಿ ಹೊರ ಬರತೊಡಗಿದೆ. ಅಬಾರ್ಷನ್ ಮಾಡಿಸಿಕೊಳ್ಳಬೇಕಾದರೆ ನಿತ್ಯಾನಂದನಲ್ಲಿಗೆ ಹೋಗಿ ಆತನು ನೀಡುವ ತೀರ್ಥ ವನ್ನು ಕುಡಿದರೆ ಸಾಕು. ನಮ್ಮೀ ದೇಶದ ಜನರು ಕಣ್ಣಾರೆ ಕಂಡರೂ ಸಹ ಇನ್ನು ಕೂಡಾ ಮುಗ್ಧರಂತೆ ವರ್ತಿಸುತ್ತಿರುವುದು ತುಂಬಾ ಶೋಚನೀಯ ವಿಚಾರ. ಅದರಲ್ಲೂ ಪದವೀಧರ ಉನ್ನತ ಅಧಿಕಾರಿಗಳು, ವೈದ್ಯರುಗಳು, ಇಂಜಿನಿಯರರು ಹಾಗೂ ವಕೀಲರು ಗಳು ಕೂಡಾ ಇಂತಹ ಕಪಟಿ ಸನ್ಯಾಸಿಗಳ ಮಾಯ ಜಾಲಕ್ಕೆ ಸಿಲುಕಿರುವುದು ಆಶ್ಚರ್ಯವೆನಿಸುತ್ತದೆ. ಇಂತಹವರಿಂದಾಗಿಯೇ ನಮ್ಮ ಸಮಾಜವು ಅಧೋ ಗತಿಯೆಡೆಗೆ ದಾಪುಗಾಲು ಹಾಕುತ್ತಿದೆ ಎಂಬುದು ನಾಚಿಗೇಡಿನ ವಿಚಾರ. ವಿದ್ಯಾವಂತರಾದ ಇವರೆಲ್ಲ ಕಪಟ ಸ್ವಾಮೀಜಿಗಳ ಮಾಯಾಜಾಲಕ್ಕೆ ಮರುಳಾಗುತ್ತಿರುವುದು ಸರಿಯಲ್ಲ.
ಕಾವಿವಸ್ತ್ರ ಕೇಸರಿವಸ್ತ್ರವೆನ್ನುವುದು ಹಿಂದೂಗಳಿಗೆ ಬಹು ಪ್ರಾಮುಖ್ಯ. ಆ ವಸ್ತ್ರಕ್ಕೆ ಇರುವ ಪ್ರಾಮುಖ್ಯತೆ ಪವಿತ್ರತೆಯನ್ನು ಇತ್ತೀಚೆಗೆ ಅಪವಿತ್ರಗೊಳಿಸು ತ್ತಿದ್ದಾರೆ. ಕಾವಿವಸ್ತ್ರವನ್ನು ಧರಿಸಿ ಕೊಂಡು ಮಾಡಬಾರದ ಕೆಲಸಗಳನ್ನೆಲ್ಲ ಮಾಡಿ ಆ ವಸ್ತ್ರವನ್ನು ಅಪವಿತ್ರಗೊಳಿಸುತ್ತಿದ್ದಾರೆ. ಬಿಡದಿಯ ಕಾಮಿ ನಿತ್ಯಾನಂದನು ಕಾವಿವಸ್ತ್ರಕ್ಕೆ ಎಷ್ಟೇ ಅವಮಾನ ಅಪವಿತ್ರತೆ ಮಾಡಿದರೂ ಅವನೇನು ಮಾಡಿಲ್ಲವೆಂದು ಹಿಂದೂಗಳ ಉದ್ಧಾರಕರೆಂದು ಹೇಳಿಕೊಳ್ಳುವ ಹಿಂದೂ ಸಂಘಟನೆಗಳು ಹೇಳುತ್ತಾ ಅವನು ಮಾಡಿರುವುದನ್ನು ಸಮರ್ಥಿಸಿ ಅವನ್ನು ಹುರಿದುಂಬಿಸುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿ ಯನ್ನು ಕಡುವಾಗಿ ವಿರೋಧಿಸುವ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಕೂಡಾ ಈತನನ್ನು ಸಮರ್ಥಿಸುತ್ತಿದ್ದಾರೆ. ಇಂತಹವರು ಹಿಂದೂ ನಾಯಕನೆನೆಸಿಕೊಳ್ಳಲು ಅರ್ಹರಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಕಿಡಿಕೆಂಡಕಾರುವ ಮುತಾಲಿಕ್ ಈ ಕಾಮಿ ನಿತ್ಯಾನಂದ ಒಬ್ಬ ಹಿಂದುವಾಗಿದ್ದುಕೊಂಡು ಆಂಗ್ಲ ಭಾಷೆಯಲ್ಲಿ ಭಾಷಣ ಬಿಗಿಯುವಾಗ ಮುತಾಲಿಕ್‌ರವರಿಗೆ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಕ್ರೋಧ ಉಕ್ಕಿ ಬಾರದಿರುವುದು ತುಂಬಾ ವಿಚಿತ್ರವೆಂದು ನಮಗೆ ತೋರುತ್ತದೆ. ಈತನು ಮಾಡುವ ಹಲ್ಕಾ ಕೆಲಸಗಳಿಗೆ ಬೆಂಬಲ ಸೂಚಿಸುವ ಮುತಾಲಿಕ್ ಹಿಂದೂಗಳ ನಾಯಕರಾಗಲು ಅರ್ಹ ವ್ಯಕ್ತಿಯೇ ಅಲ್ಲ. ಹಿಂದೂಗಳಿಗೆ ಕಾವಿ ವಸ್ತ್ರವೆಂದರೆ ಪವಿತ್ರವಾದುದು. ಅಂತಹ ಕಾವಿವಸ್ತ್ರವನ್ನಿಂದು ಅಪವಿತ್ರಗೊಳಿಸುತ್ತಿದ್ದಾರೆ.
ಅದರಲ್ಲೂ ಹಿಂದೂ ಗಳ ಉದ್ಧಾರಕರೆಂದು ತಮ್ಮನ್ನು ತಾವೇ ಬೆನ್ನುತಟ್ಟಿಕೊಳ್ಳುತ್ತಿರುವ ಹಿಂದೂ ಸಂಘಟನೆಗಳು ಇಂತಹ ಕೆಲಸವನ್ನು ಮಾಡುತ್ತಿದೆ ಎಂಬುದು ಹಿಂದೂಗಳೆಲ್ಲರ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡುತ್ತಿದೆ.
ಸರ್ವಸಂಗ ಪರಿತ್ಯಾಗ ಮಾಡಿ ಸನ್ಯಾಸವನ್ನು ಸ್ವೀಕರಿಸುವವರು ಕಾವಿ ವಸ್ತ್ರವನ್ನು ಧರಿಸುತ್ತಾರೆ. ಆದರೆ ಇಂದು ಹಿಂದು ಸಂಘಟನೆಗಳ ಪ್ರಭಾವದಿಂದ ಬಹಳಷ್ಟು ಮಂದಿ ಕಾವಿ ಬಟ್ಟೆ ತೊಡುತ್ತಿದ್ದಾರೆ. ಕಾವಿ ಬಟ್ಟೆ ತೊಟ್ಟುಕೊಂಡು ಇಲ್ಲಸಲ್ಲದ ದುಷ್ಕೃತ್ಯ ಗಳನ್ನು ಮಾಡಿ ತಾವು ತೊಟ್ಟ್ಟುಕೊಂಡಿರುವ ಪವಿತ್ರ ವಾದ ಕಾವಿ ವಸ್ತ್ರದ ಪಾವಿತ್ರತೆಯನ್ನು ಮೂರು ಕಾಸಿನ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ. ಮುಂಚೆ ಕಾವಿ ಧರಿಸಿದವರನ್ನು ಕಂಡಲ್ಲಿ ಭಕ್ತಿಭಾವ ಮೂಡಿ ಬರುತ್ತಿತ್ತು. ಆದರೆ ಈಗ ಕಾವಿ ಧರಿಸಿದವರನ್ನು ಕಂಡರೆ ಭಯದಿಂದ ಎದೆ ನಡುಕ ಉಂಟಾಗುತ್ತದೆ. ಇದಕ್ಕೆಲ್ಲಾ ಹಿಂದೂ ಸಂಘಟನೆಗಳೇ ಮುಖ್ಯ ಕಾರಣವೆನ್ನಬಹುದು.
ಆದುದರಿಂದ ಹಿಂದೂ ಮತ ಬಾಂಧವರಲ್ಲಿ ನನ್ನ ಕಳ ಕಳಿಯ ವಿನಂತಿಯೇನೆಂದರೆ ಇನ್ನು ಮೇಲಾದರೂ ಪವಿತ್ರ ವಾದ ಕಾವಿವಸ್ತ್ರಕ್ಕಾಗುವ ಕಳಂಕಗಳನ್ನು ತಪ್ಪಿಸಲು ಪ್ರಯತ್ನಿಸಿ ಅದೇ ರೀತಿ ಕಾವಿಯೊಳಗಿನ ಕಾಮಿ ನಿತ್ಯಾನಂದ ಸ್ವಾಮಿಯನ್ನು ನಡುಬೀದಿಯಲ್ಲಿ ಬೆತ್ತಲೆ ಕಟ್ಟಿ ಹಾಕಿ ಕಲ್ಲು ಹೊಡೆದು ಸಾಯಿ ಸಬೇಕು. ಹಾಗಾದಲ್ಲಿ ಮಾತ್ರ ಇಂತಹ ಕಪಟ ಹಾಗೂ ಕಾಮಿ ಸ್ವಾಮಿಗಳು ಹುಟ್ಟುವುದನ್ನು ತಪ್ಪಿಸ ಬಹುದು ಏನಂತೀರಿ?
ರಮೇಶ್.ಕೆ. ಯೆಯ್ಯಾಡಿ
Tagged with
bahiranga