೧,೮೦೧ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Posted by JAYAKIRANA Kirana on Sunday, 17 June 2012 | 0 comments | Leave a comment...

ಬಜ್ಪೆ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ವತಿಯಿಂದ ನಡೆಸಿದ ‘ಸ್ಕೂಲ್ ಚಲೋ’ ಅಭಿ ಯಾನದ ಅಂಗವಾಗಿ ಮಂಗಳೂರು ತಾಲೂಕಿನ ವಿವಿಧೆಡೆ ಪುಸ್ತಕ, ಶಾಲಾ ಶುಲ್ಕ ಹಾಗೂ ಯೂನಿಫಾರಂ ವಿತರಣೆ ನಡೆಯಿತು. ಸುರತ್ಕಲ್, ಬಜ್ಪೆ, ಮಂಗಳೂರು, ಉಳ್ಳಾಲ ವ್ಯಾಪ್ತಿಗೊಳ ಪಟ್ಟ ೨,೮೭೧ ಮನೆಗಳ ೩,೭೯೦ ಮಕ್ಕಳ ನ್ನು ಸರ್ವೆ ನಡೆಸಲಾಯಿತು. ಇದರಲ್ಲಿ ಆಯ್ದ ೧,೮೦೧ ಮಕ್ಕಳಿಗೆ ಪುಸ್ತಕ, ೪೬ ಮಕ್ಕಳಿಗೆ ಶಾಲಾ ಶುಲ್ಕ ಹಾಗೂ ೧೫ ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು. ೪ ಮಕ್ಕಳನ್ನು ಸಂಪೂರ್ಣವಾಗಿ ದತ್ತು ತೆಗೆದು ಕೊಳ್ಳಲಾಯಿತು. ಒಟ್ಟು ೧,೮೬೬ ಮಕ್ಕಳು ಫಲಾನುಭವಿಗಳಾಗಿರುತ್ತಾರೆ. ೨೬ ಕಡೆಗಳಲ್ಲಿ ಪುಸ್ತಕ ವಿತರಣೆಯ ಕಾರ್ಯಕ್ರಮಗಳು ನಡೆದಿರುತ್ತದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ತಿಳಿಸಿದ್ದಾರೆ.

ಸರಕಾರಿ ಶಾಲೆಗಳೆಂಬ ಅಸಡ್ಡೆ ಬೇಡ -ರಾಜಲಕ್ಷ್ಮಿ

Posted by JAYAKIRANA Kirana on | 0 comments | Leave a comment...

ಕಿನ್ನಿಗೋಳಿ: ಸರಕಾರಿ ಶಾಲೆ ಗಳಲ್ಲೀಗ ಅತ್ಯುತ್ತಮ ಸವಲತ್ತುಗಳು ವಿದ್ಯಾರ್ಥಿಗಳಿಗೆ ಸಿಗುತ್ತಿದ್ದು, ಕನ್ನಡ ಮಾಧ್ಯಮದಲ್ಲಿ ಕಲಿತವರೇ ಎಸ್‌ಎಸ್ ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಾರೆ. ಹಾಗಾಗಿ ಕನ್ನಡ ಮತ್ತು ಸರಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಬೇಡ ಎಂದು ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ ಹೇಳಿ ದರು.ಅವರು ಉಲ್ಲಂಜೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯು ತ್ತಿರುವ ಆರನೆಯ ವರ್ಷದ ಯಕ್ಷಗಾನ, ಯೋಗ, ಸಂಗೀತ, ನೃತ್ಯ ತರಗತಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ ದರು.ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಮೆನ್ನ ಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ಶಕುನ ಉಡುಪ, ಶಿಕ್ಷಕರಾದ ಹರಿರಾಜ್, ರಾಜೇಶ್ ಕಟೀಲ್, ರವಿ ಕೆ., ದಯಾನಂದ್ ಮತ್ತಿತರರಿದ್ದರು. ಮಂಗಳಾ ಎಸ್. ಭಟ್ ಪ್ರಸ್ತಾವನೆಗೈದರು. ಜೆಸಿಂತಾ ಡಿಸೋಜ ಸ್ವಾಗತಿಸಿ, ಸರೋಫಿ ಜ್ಯೂಲಿಯಟ್ ವಂದಿಸಿದರು.

ಮಂಗಳೂರಿನಲ್ಲಿ ಮೆಟ್ರೋ ಶೂ ಸಂಸ್ಥೆಯಿಂದ ಹೊಸ ಮಳಿಗೆ ಪ್ರಾರಂಭ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಸಿದ್ಧಪಡಿಸುವ ಮೆಟ್ರೋ ಕಂಪನಿಯು, ಇದೀಗ ತನ್ನ ಬೃಹತ್ ಆದ ಹಾಗೂ ಎರಡನೇ ಅತಿದೊಡ್ಡ ಮಳಿಗೆಯನ್ನು ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ ತೆರೆದಿದೆ. ಎಲ್ಲಾ ವಯೋಮಾನದವರಿಗೆ ತಕ್ಕುದಾದ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಬ್ರಾಂಡ್‌ಗಳ ಚಪ್ಪಲಿ ಮತ್ತು ಶೂಗಳನ್ನು ಒಂದೇ ಸೂರಿನಡಿಯಲ್ಲಿ ದೊರೆ ಯಲು ಅನುಕೂಲಕರವಾಗು ವಂತೆ ಮೆಟ್ರೋ ತನ್ನ ಮಳಿಗೆಯನ್ನು ಪ್ರಾರಂಬಿಸಿದೆ.
ನಮ್ಮ ಹೊಸ ಮಳಿಗೆಯಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳ ಸುಮಾರು ೯,೧೦೦ಕ್ಕೂ ಹೆಚ್ಚು ಜೊತೆ ಪಾದರಕ್ಷೆಗಳು ಮಾರಾಟಕ್ಕೆ ಸಿದ್ದವಾಗಿದೆ. ಪುರುಷರ ಪಾದರಕ್ಷೆಗಳ ಬೆಲೆ ಸುಮಾರು ರೂ.೧೦೯೦ಮತ್ತು ಮಹಿಳೆಯರ ಪಾದರಕ್ಷೆಗಳು ಸುಮಾರು ರೂ. ೫೯೦ ರಿಂದ ಪ್ರಾರಂಭವಾಗಲಿದೆ. ಅಲ್ಲದೆ, ಇದೇ ಜೂನ್ ೧೫ ಮತ್ತು ೧೬ರಂದು ಸಂಸ್ಥೆಯ ವಸ್ತುಗಳ ಮೇಲೆ ಶೇ ೨೦ರಷ್ಟು ಮತ್ತು ಇತರೆ ಅಂತ ರಾಷ್ಟ್ರೀಯ ಬ್ರಾಂಡ್‌ಗಳ ಮೇಲೆ ಶೇ ೧೦ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕೊಂಬ್ರಬೈಲು: ವಿಶ್ವಹಿಂದೂ ಪರಿಷತ್ ನೂತನ ಶಾಲೆ ಉದ್ಘಾಟನೆ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಬಂಟ್ವಾಳ ಪ್ರಖಂಡದ ಮೂಡುನಡುಗೋಡು ಮತ್ತು ಪಂಜಿಕಲ್ಲು ಗ್ರಾಮಗಳ ನವಜ್ಯೋತಿ ನೂತನ ಶಾಖೆ ಕೊಂಬ್ರ ಬೈಲ್‌ನಲ್ಲಿ ಉದ್ಘಾಟನೆ. ಬಜ ರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ದಿನೇಶ್ ಕುಮಾರ್ ಜೈನ್, ಬಂಟ್ವಾಳ ಪ್ರಖಂಡ ಸಹ ಸಂಚಾಲಕ ಗುರುರಾಜ್ ಬಂಟ್ವಾಳ, ಸುರಕ್ಷಾ ಪ್ರಮುಖ್ ಯಾದವ್ ಶೆಟ್ಟಿ ಸರಪಾಡಿ ಅವರು ವಿಶ್ವ ಹಿಂದೂ ಪರಿಷತ್ ನೂತನ ಶಾಖೆಯ ಅಧ್ಯಕ್ಷ ಕರುಣೇಂದ್ರ ಕೊಂಬ್ರಬೈಲ್ ಅವರಿಗೆ ಧ್ವಜ ಹಸ್ತಾಂತರಿಸಿದರು.
ವಿಶ್ವಹಿಂದೂ ಪರಿಷತ್ ಉಪಾಧ್ಯಕ್ಷ ಚಂದ್ರ ಡೆಚ್ಚಾರು, ಕಾರ್ಯದರ್ಶಿ ನವೀನ್ ಮತ್ತು ಹರೀಶ್, ಬಜರಂಗ ದಳ ಸಂಚಾಲಕ ಚಂದ್ರ ಶೇಖರ ಕೃಷ್ಣಪಲ್ಕೆ, ಸಹ ಸಂಚಾಲಕ ಕೃಷ್ಣ ಕುಮಾರು ಮತ್ತು ವಿಠಲ ಮೇನಾಡು, ಗೋರಕ್ಷಾ ಪ್ರಮುಖ್ ಕೇಶವ ಕುಲಾಲ್ ಕುಮೇರ್ ಪಲ್ಕೆ, ಸುರಕ್ಷಾ ಪ್ರಮುಖ್ ಅಶೋಕ್ ಕೊಂಬ್ರಬೈಲ್, ಸಾಪ್ತಾಹಿಕ ಪ್ರಮುಖ್ ದೀಕ್ಷಿತ್ ಕೊಂಬ್ರಬೈಲ್, ವಿದ್ಯಾರ್ಥಿ ಪ್ರಮುಖ್ ದಿನೇಶ್ ಆಯ್ಕೆಯಾಗಿದ್ದಾರೆ.

ಪುನರ್ ಪ್ರತಿಷ್ಠಾ ಬ್ರಹ್ಮಕಲಶ

Posted by JAYAKIRANA Kirana on | 0 comments | Leave a comment...

ಮಂಗಳೂರು: ದೇರು ಬೈದ್ಯ ಪಾಲು ಸಾಲ್ಯಾನ್ ಕುಟುಂಬಸ್ಥರು ಅಲಂಕಾರ ಗುಡ್ಡೆ, ತಲಪಾಡಿ ಇಲ್ಲಿ ಶ್ರೀ ನಾಗದೇವರು ಮತ್ತು ಮೈಸಂದಾಯ, ಧೂಮವತಿ ಬಂಟ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಜೂನ್೨೦ರಿಂದ ಜೂನ್೨೨ರವರೆಗೆ ನಡೆಯಲಿದೆ. ಜೂನ್ ೨೧ರಂದು ಬೆಳಿಗ್ಗೆ ೬.೦೦ಕ್ಕೆ ಪುಣ್ಯಾಹವಾಚನ. ಪ್ರತಿಷ್ಠಾ ಪ್ರಧಾನಹೋಮ, ನಾಗದೇವರಿಗೆ ೨೫ ಕಲಶಪೂಜೆ ದೈವಗಳಿಗೆ ಪಂಚವಿಂಶತಿ, ನವಕ ಕಲಶಾರ್ಚನೆ. ೮.೨೦ರ ಕರ್ಕಾಟಕ ಲಗ್ನದಲ್ಲಿ ನಾಗಶಿಲಾಪ್ರತಿಷ್ಠೆ ಪಂಚಾಮೃತ ಸ್ನಾನ, ಪಂಚವಿಂಶತಿ ಕಲಾಶಾಭಿಷೇಕ , ೧೦,೦೪ರ ಪರಿವಾರ ದೈವಗಳ ಪ್ರತಿಷ್ಠೆ ಕಲಶಾಭಿಷೇಕ ೧೧.೦೦ರಿಂದ ನಾಗಬನದಲ್ಲಿ ಆಶ್ಲೇಶಾಬಲಿ, ತಂಬಿಲ ಸೇವೆ , ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬.೩೦ಕ್ಕೆ ವಾಸ್ತು ಬಲಿ, ದೈವಾಧಿವಾಸ, ಪ್ರಸನ್ನಪೂಜೆ, ಪ್ರಸಾದವಿತರಣೆ . ಜೂ.೨೨ರಂದು ಬೆಳಿಗ್ಗೆ ೬.೦೦ಕ್ಕೆ ಪುಣ್ಯಾಹವಾಚನೆ, ಕಲಶಪೂಜೆ, ಪ್ರಧಾನಹೋಮ ೮.೧೫ರ ಕರ್ಕಾಟಕ ಮುಹೂರ್ತದಲ್ಲಿ ಕುಟುಂಬ ದೈವಗಳ ಪ್ರತಿಷ್ಠೆ, ಪಂಚಾಮೃತ ಅಭಿಷೇಕ, ಕಲಶಾಭಿಶೇಕ ೧೦.೩೦ಕ್ಕೆ ದೈವಗಳಿಗೆ ಪರ್ವಸೇವೆ ನಡೆಯಲಿದೆ.

18-06-2012

Posted by JAYAKIRANA Kirana on | 0 comments | Leave a comment...

ಸೈಂಟ್ ಜೋಸೆಫ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್-ಬಜಾಲ್ ಇದರ ವಿದ್ಯಾರ್ಥಿನಿ ದೀಕ್ಷಾ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಂ iಲ್ಲಿ ಶೇಕಡಾ ೯೧ ಅಂಕವನ್ನು ಗಳಿಸಿ ದ್ದಾಳೆ. ಈಕೆ ಬಜಾಲ್ ನಿವಾಸಿ ಗೋಕುಲ್ ಹಾಗೂ ಸೌಮ್ಯ ಬಜಾಲ್ ಇವರ ಪುತ್ರಿಯಾಗಿರುತ್ತಾಳೆ.

ಶ್ರೀರಾಮಲು ಪಕ್ಷಕ್ಕೆ ಕರಾವಳಿಯಲ್ಲಿ ನಾಯಕರು ಬೇಕಾಗಿದ್ದಾರೆ!

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಮಾಜಿಸಚಿವ, ಗಣಿ ಧಣಿ ಶ್ರೀರಾಮಲು ಅವರ ಹೊಸ ಪಕ್ಷದ ಹೆಸರು ಘೋಷಿಸಿಯಾಗಿದೆ. ಇದರೊಂದಿಗೆ ಪಕ್ಷದ ಸಂಘಟನೆಯತ್ತ ರಾಮುಲು ಗಮನ ಹರಿಸಿದ್ದಾರೆ.
ಬೀದರ್‌ನ ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಕೈಗೊಂಡ ಪಾದಯಾತ್ರೆ ರವಿವಾರ ಅಂತ್ಯಗೊಂ ಡಿದ್ದು, ರವಿವಾರವೇ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡವರ, ಶ್ರಮಿಕರ, ರೈತರ ಕಾಂಗ್ರೆಸ್ (ಬಿಎಸ್‌ಆರ್ ಕಾಂಗ್ರೆಸ್)ಪಕ್ಷದ ಹೆಸರನ್ನು ಶ್ರೀರಾಮುಲು ಘೋಷಿಸಿದ್ದಾರೆ.
ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಶ್ರೀರಾಮಲು ಪಕ್ಷ ಸಂಘಟಿಸುವ ಉದ್ದೇಶ ಹೊಂದಿ ದ್ದಾರೆ. ಇದರ ಜೊತೆಜೊತೆಯಲ್ಲೇ ಕರಾವಳಿಯಲ್ಲಿ ಸಮರ್ಥ ನಾಯಕರನ್ನು ಗುರುತಿಸುವ ಇಚ್ಚೆಯನ್ನೂ ಶ್ರೀರಾ ಮುಲು ವ್ಯಕ್ತಪಡಿಸಿದ್ದಾರೆ. ಶ್ರೀರಾಮಲು ಪಾದಯಾತ್ರೆಯ ಬಳಲಿಕೆಯ ನಡುವೆಯೂ ಪಕ್ಷದ ಸಂಘಟನೆಯ ಯೋಜನೆ ರೂಪಿಸುತ್ತಲೇ ಇದ್ದರು. ರಾಜ್ಯದಲ್ಲಿ ತಮ್ಮ ಪ್ರಭಾವ ಇಲ್ಲದ ಕಡೆಗಳಲ್ಲಿ ಸಮರ್ಥ ನಾಯಕರನ್ನು ಹುಡುಕಲು ತಮ್ಮ ಆತ್ಮೀಯರಿಗೆ ಸಲಹೆ ಮಾಡಿದ್ದರು. ಅವರ ಸಲಹೆಯಂತೆ ಶ್ರೀರಾಮುಲು ಆತ್ಮೀಯ ಬಳಗದ ಕೆಲವರು ದ.ಕ. ಜಿಲ್ಲೆಯಲ್ಲಿ ಪ್ರಭಾವಿ ನಾಯಕರ ಹುಡುಕಾಟ ನಡೆಸಿದ್ದಾ ರಾದರೂ ಸಮರ್ಥರು ಈವರೆಗೆ ಸಿಕ್ಕಿಲ್ಲ. ಯೋಗ್ಯರು ಎನಿಸುವ ವ್ಯಕ್ತಿಗಳು ಶ್ರೀರಾಮುಲುರವರ ಬಿಎಸ್‌ಆರ್ ಪಕ್ಷದತ್ತ ಆಸಕ್ತಿ ತೋರುತ್ತಿಲ್ಲ. ತಾನು ಪಕ್ಷ ಕಟ್ಟುತ್ತೇನೆ ಎಂದು ಮುಂದೆ ಬಂದವರೆಲ್ಲ ಎಡಬಿಡಂಗಿಗಳೇ ಎಂದು ನಾಯಕರ ಹುಡುಕಾಟದಲ್ಲಿರುವವರು ಹೇಳುತ್ತಿದ್ದಾರೆ.
ದ.ಕ. ಜಿಲ್ಲೆಯಿಂದ ಶ್ರೀರಾಮುಲು ಪಕ್ಷಕ್ಕೆ ಹೋಗಲು ಹಾಗೂ ಪಕ್ಷ ಸಂಘಟಿಸಲು ಆಸಕ್ತಿ ವ್ಯಕ್ತಪಡಿಸುವವರಿ ಗೇನೂ ಕೊರತೆ ಇಲ್ಲ. ಶ್ರೀರಾಮುಲು ರನ್ನು ನೇರವಾಗಿ ಭೇಟಿಯಾಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಹಾತೊರೆ ಯುವವರು ಇದ್ದಾರೆ. ಇಂತಹವರಲ್ಲಿ ಕೆಲವರು ಶ್ರೀರಾಮುಲು ಸೆಲ್ ನಂಬರ್ ಕೊಡಿ ಎಂದು ಅವರಿವರಲ್ಲಿ ಕೇಳುತ್ತ ತಿರಗುತ್ತಿದ್ದಾರೆ. ನಂಬರ್ ಸಿಕ್ಕರೂ ಅದು ಶ್ರೀರಾಮುಲು ರಿಸೀವ್ ಮಾಡು ತ್ತಿಲ್ಲ ಎಂಬ ಬೇಸರವನ್ನು ವ್ಯಕ್ತಪಡಿ ಸುತ್ತಾರೆ.
ಶ್ರೀರಾಮುಲು ಪಕ್ಷಕ್ಕೆ ಸೇರ ಬಯಸುವವರಲ್ಲಿ ಹೆಚ್ಚಿನವರಿಗೆ ಪಕ್ಷದ ಸಂಘಟನೆಯ ಉದ್ದೇಶಕ್ಕಿಂತ ಸಂಘ ಟನೆಯ ಉದ್ದೇಶಕ್ಕಾಗಿ ಶ್ರೀರಾಮುಲು ಸುರಿಯಬಹುದಾದ ಹಣದ ಮೇಲೆಯೇ ಹೆಚ್ಚಿನ ಆಸಕ್ತಿ ಎಂಬುದು ಅವರ ಮಾತಿನಿಂದಲೇ ವ್ಯಕ್ತವಾಗುತ್ತದೆ. ಗಣಿ ಧಣಿಯಾಗಿರುವ ಶ್ರೀರಾಮುಲು ಸಾವಿರಾರು ಕೋಟಿ ರೂ.ಗಳ ಒಡೆಯ ಬಿಜೆಪಿ ಸರಕಾರ ಉಳಿಸಲು ಅವರು ಹಣದ ಹೊಳೆಯನ್ನೇ ಹರಿಸಿದ್ದನ್ನು ಕಂಡಿರುವವರು ಬಿಎಸ್‌ಆರ್ ಪಕ್ಷಕ್ಕಾಗಿ ಹಣ ಸುರಿಯದಿರುತ್ತಾರಯೇಎಂದು ಯೋಚಿಸುವವರೇ ಹೆಚ್ಚು. ಆದರೆ ಪರಿಸ್ಥಿತಿ ಇದಕ್ಕಿಂತ ಭಿನ್ನ. ಶ್ರೀರಾಮುಲು ತಮ್ಮ ಪಕ್ಷದ ಸಂಘಟನೆಗೆ ಸಮರ್ಥ ರನ್ನು ಹುಡುಕುತ್ತಿದ್ದಾರೆಯೇ ಹೊರತು ಹಣದ ಆಸೆಯಿಂದ ಬರುವವರನ್ನಲ್ಲ.
ಕರ್ನಾಟಕದಲ್ಲಿ ಈ ಹಿಂದೆ ಕಟ್ಟಿದ್ದ ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿಲ್ಲ. ಅದಕ್ಕೆ ಹಲವು ಕಾರಣಗಳಿದ್ದಾವೆ. ಅದರಲ್ಲಿ ಒಂದು ಪ್ರಮುಖ ಕಾರಣ ಹೊಸ ಪಕ್ಷದ ಹಿಂದೆ ಬೀಳುವವರು ಹಣದ ಆಸೆ ಹೊಂದಿರುವುದು. ಯಾವುದೇ ಹೊಸ ಪಕ್ಷ ಸೇರಬಯಸುವವವರು ಅದರ ನಾಯಕ ಬಂಡವಾಳ ಶಾಹಿಯೇ ಎಂದು ಯೋಚಿಸುವವರೆ ಹೆಚ್ಚು. ಎಸ್.ಬಂಗಾರಪ್ಪ, ವಿಜಯ ಸಂಕೇಶ್ವರ ರವರು ತಮ್ಮ ತಮ್ಮ ನಾಯಕತ್ವದಲ್ಲಿ ಹೊಸ ಪಕ್ಷಗಳನ್ನು ಘೋಷಿಸಿದಾಗ ಪಕ್ಷದ ಸಂಘಟನೆಗೆ ಹಣದ ಹೊಳೆಯೇ ಹರಿಸುತ್ತಾರೆ ಎಂದು ನಿರೀಕ್ಷಿಸಿದವರೇ ಹೆಚ್ಚು. ಆದರೆ ಇಂತಹ ನಿರೀಕ್ಷೆ ಹುಸಿ ಯಾಗಿತ್ತು. ಹಣದ ಆಸೆಯ ಕಾರ್ಯ ಕರ್ತರು ಬಹಳ ದಿನ ಪಕ್ಷದಲ್ಲಿ ಇರುವು ದಿಲ್ಲ. ಅಂತೆಯೇ ಹೊಸ ಪಕ್ಷಗಳು ನಿಲ್ಲಲೇ ಇಲ್ಲ. ಇದನ್ನು ಮನಗಂಡಿರುವ ಶ್ರೀರಾಮುಲು ಹಣಕ್ಕಾಗಿ ಬರುವ ಕಾರ್ಯಕರ್ತರನ್ನು ದೂರವೇ ಇಡುತ್ತಿದ್ದಾರೆ. ಅವರದು ಸಮರ್ಥರ ಹುಡುಕಾಟ ಮಾತ್ರ. ದ.ಕ. ಜಿಲ್ಲೆಯಲ್ಲಿ ಅವರು ಶಕುಂತಳಾ ಶೆಟ್ಟರನ್ನು ನಾಯಕಿಯಾಗಿ ಪ್ರತಿಬಿಂಬಿಸಲು ಆಸಕ್ತರಾಗಿದ್ದಾರೆ. ಆದರೆ ಶಕುಂತಳಾ ಶೆಟ್ಟರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ.
ಶ್ರೀರಾಮುಲು ಹಾಗೂ ಶಕುಂ ತಳಾ ಶೆಟ್ಟರ ಒಡನಾಟ, ಆತ್ಮೀಯತೆ ತುಂಬಾ ಹಳೆಯದು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಹೊಸತರಲ್ಲಿ ಪುತ್ತೂರೂ, ಸುಳ್ಯ, ಬೆಳ್ತಂಗಡಿ ವಲಯದಲ್ಲಿ ಡೆಂಗ್ಯೂ ಜ್ವರ ಆವರಿಸಿತ್ತು. ಈ ಸಂದರ್ಭದಲ್ಲಿ ದ.ಕ. ಜಿಲ್ಲೆಗೆ ಬಂದಿದ್ದ ಶ್ರೀರಾಮುಲು ಶಕುಂ ತಳಾ ಶೆಟ್ಟಿಯವರನ್ನು ಭೇಟಿಯಾಗಿ ಬಿಜೆಪಿಯ ನಾಯಕರು ಹುಬ್ಬೇರಿ ಸುವಂತೆ ಮಾಡಿದ್ದರು. ಬಿಜೆಪಿಯ ಪಾಲಿಗೆ ಶಕುಂತಳಾ ಶೆಟ್ಟರು ಅಸ್ಪ್ರಶ್ಯ ರಾಗಿದ್ದ ಅವಧಿ ಅದು.
ಆತ್ಮೀಯತೆ ಏನೇ ಇದ್ದರು ದ.ಕ. ಜಿಲ್ಲೆಯಲ್ಲಿ ಹೊಸ ಪಕ್ಷವೊಂದನ್ನು ಕಟ್ಟಿ ಬೆಳೆಸುವುದು ಸಾಧ್ಯವೇ ಎಂಬುದು ಶಕುಂತಳಾ ಶೆಟ್ಟರ ಪ್ರಶ್ನೆ. ಇಂತಹ ಪ್ರಶ್ನೆ ಉತ್ತರಗಳ ನಡುವೆ ಸಮಯ ಕಳೆಯುತ್ತಿದೆ.
ಆಂಧ್ರದಲ್ಲಿ ಜಗನ್‌ಮೋಹನ್ ರೆಡ್ಡಿಯ ವೈಎಸ್‌ಆರ್ ಕಾಂಗ್ರೆಸ್ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಅಂತಹದ್ದೇ ಪೂರಕ ವಾತಾವರಣ ರಾಜ್ಯದಲ್ಲಿ ಸೃಷ್ಟಿಸಿ ಕೊಳ್ಳುವ ಯೋಜನೆಯಿಂದ ಶ್ರೀರಾಮುಲು ತಮ್ಮ ಪಕ್ಷದ ಹೆಸರು ಘೋಷಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆಂಧ ದಲ್ಲಿಯಂತೆ ರಾಜಕೀಯ ನಾಯಕರ ಹಿಂದೆ ಬೀಳುವ ಮನಃಸ್ಥಿತಿಯ ನಾಗರಿ ಕರು ಕರ್ನಾಟಕದಲ್ಲಿ ಕಾಣುವುದಿಲ್ಲ.

ಮುಖ್ಯಮಂತ್ರಿ ಪಟ್ಟದತ್ತ ಈಗ ಈಶ್ವರಪ್ಪ ಕಣ್ಣು

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಮುಖ್ಯಮಂತ್ರಿ ಸದಾನಂದ ಗೌಡರ ಬದಲಾವಣೆಗೆ ಪರೋಕ್ಷವಾಗಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಕೂಡಾ ಕೈಜೋಡಿಸಿದ್ದಾರೆ. ಉಳಿದ ಅವಧಿಗೆ ತಮಗೂ ಅವಕಾಶ ದೊರೆಯಬಹುದೆಂಬ ಲೆಕ್ಕಾಚಾರ ಇವರದ್ದಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷಕ್ಕೆ ವರ್ಚಸ್ಸುಳ್ಳ ನಾಯಕತ್ವಕ್ಕಾಗಿ ಹುಡುಕಾಟ ಆರಂಭಗೊಂಡಿದೆ. ಈ ಸ್ಥಾನ ತುಂಬಲು ತಾನು ಏಕಾಗಬಾರದು ಎಂಬ ಉದ್ದೇಶ ಅವರದ್ದು. ಪಕ್ಷವು ಒಂದು ವೇಳೆ ಸದಾನಂದಗೌಡರನ್ನು ಬದಲಾವಣೆ ಮಾಡುವ ಚಿಂತನೆ ಮಾಡಿದರೆ ಅಂತಹ ಸಂದರ್ಭದಲ್ಲಿ ಲಿಂಗಾಯಿತ ಮತದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಜಗದೀಶ್ ಶೆಟ್ಟರ್ ಅವರಿಗೆ ಅವಕಾಶ ಮಾಡಿಕೊಡಲಿದೆ. ಶೆಟ್ಟರ್ ನಡುವೆಯೇ ಈಶ್ವರಪ್ಪ ತಮಗೂ ಈ ಸ್ಥಾನ ಧಕ್ಕಬಹುದೆಂಬ ಲೆಕ್ಕಾಚಾರ. ಯಡಿಯೂರಪ್ಪ ಬಣ ಗೌಡರನ್ನು ಕೆಳಗಿಳಿಸಲು ಮತ್ತೆ ಚಾಲನೆ ನೀಡಿ ಸಹಿ ಸಂಗ್ರಹ ಆರಂಭಿಸಿದೆ.
ತಕ್ಷಣವೇ ಶಾಸಕಾಂಗ ಸಭೆ ಕರೆಯುವಂತೆ ಇವರ ಬೇಡಿಕೆ. ಗೌಡರು ಒಂದು ವೇಳೆ ಸಭೆ ಕರೆದರೆ ಸಭೆಯಲ್ಲೇ ನಾಯಕತ್ವ ಪಟ್ಟಕ್ಕೆ ಒತ್ತಡ ಹೇರುವುದು, ಶೆಟ್ಟರ್ ಅವರನ್ನು ಈ ಸ್ಥಾನಕ್ಕೆ ತನ್ನಿ ಎಂಬ ಬೇಡಿಕೆ, ಇದಕ್ಕಾಗಿಯೇ ಶಾಸಕಾಂಗ ಸಭೆ ಕರೆಯಿರಿ ಎಂದು ಆಗ್ರಹಿಸುತಿದ್ದಾರೆ. ಸಹಿ ಸಂಗ್ರಹ ಈಗಾಗಲೇ ೪೦ಕ್ಕೆ ದಾಟಿದ್ದು, ಇಂದು ಒಟ್ಟು ೬೦ ಶಾಸಕರ ಸಹಿ ಹಾಕಿಸಿ ಪಕ್ಷದ ಅಧ್ಯಕ್ಷ ನಿತಿನ್ Uಡ್ಕರಿ ಅವರಿಗೆ ಸಭೆ ಕರೆಯುವಂತೆ ಒತ್ತಾಯಿಸಿ ಮನವಿ ಮಾಡಲಿದ್ದಾರೆ.

ಮಹಿಳೆಗೆ ಸೀಟು ಒದಗಿಸಿ ಕೊಡದ ಕಂಡಕ್ಟರ್‌ಗೆ ದಂಡ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಖಾಸಗಿ ತಡೆರಹಿತ ಬಸ್ಸೊಂ ದರಲ್ಲಿ ಸಂಚರಿಸುತ್ತಿದ್ದ ಮಹಿಳಾ ಪ್ರಯಾ ಣಿಕರೋರ್ವರಿಗೆ ಕೂರಲು ಸೀಟು ಒದಗಿಸಿ ಕೊಡಲು ನಿರಾಕರಿಸಿದ ನಿರ್ವಾಹಕನಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ದಂಡ ವಿಧಿಸಿ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಜನವರಿ ೨೮ರಂದು ಪಡುಬಿದ್ರೆ ಬೇಂಗ್ರೆಯ ಕಾಪಾಜಿ ಕರೆ ನಿವಾಸಿ ಆನಂದ. ಆರ್ ಪೂಜಾರಿ ಎಂಬವರು ತಮ್ಮ ಪತ್ನಿ ಮತ್ತಿತರರೊಂದಿಗೆ ಉಡುಪಿಗೆ ತೆರಳಲು ಪಡುಬಿದ್ರೆಯಲ್ಲಿ ಶ್ರೀಗಣೇಶ್ ಎಂಬ ಹೆಸರಿನ ಬಸ್ಸನ್ನೇರಿದ್ದರು. ಬಸ್ಸಿನ ಮಹಿಳೆಯರ ಮೀಸಲು ಸೀಟಿನಲ್ಲಿ ಗಂಡಸರು ಕುಳಿತಿದ್ದನ್ನು ಕಂಡು ಅವರನ್ನೆಬ್ಬಿಸಿ ಪತ್ನಿಗೆ ಸೀಟು ಮಾಡಿ ಕೊಡಲು ನಿರ್ವಾಹಕನಲ್ಲಿ ವಿನಂತಿಸಿದರು. ಆದರೆ ಕಂಡಕ್ಟರ್ ‘ಬೇಕಿದ್ದರೆ ನೀವೇ ಎಬ್ಬಿಸಿ ಎಂದು ನಿರಾಕರಿಸಿದ ಎನ್ನಲಾಗಿದೆ.
ಬಸ್ಸು ಕಾಪುವಿಗೆ ಬಂದಾಗ ಬಸ್ಸಿನಿಂದಿಳಿದ ಆನಂದ ಪೂಜಾರಿ ಬಸ್ಸಿನ ವಿಳಾಸದೊಂದಿಗೆ ಉಡುಪಿ ಆರ್‌ಟಿಓ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ. ದೂರಿನ ಪ್ರತಿಯನ್ನು ಕಾಪು ವೃತ್ತ ನಿರೀಕ್ಷಕ ಶಿವಾನಂದ ವಾಲೇಕರ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಬಿ ರಾಮ ಮೂರ್ತಿ ಮತ್ತು ಬೆಂಗಳೂರಿನ ಸಾರಿಗೆ ಪ್ರಾಧಿಕಾರದ ಆಯುಕ್ತ ಟಿ.ಶ್ಯಾಂ ಭಟ್‌ರವರಿಗೆ ರವಾನಿಸಿದ್ದರು.
ಘಟನೆಯ ಕುರಿತು ಮೂರು ತಿಂಗಳು ತೀವ್ರ ವಿಚಾರಣೆ ನಡೆದು ಬಸ್‌ನ ನಿರ್ವಾಹಕ ಸೀತಾರಾಮ ಮತ್ತು ಬೈಟಕ್ ಶೇಖ್ ಮಿರ್ಜಾ ಎಂಬವರಿಗೆ ಉಡುಪಿ ಆರ್‌ಟಿಓ ಎಚ್.ಎನ್ ರಮೇಶ್ ಮುನ್ನೂರು ರೂಪಾಯಿ ದಂಡ ವಿಧಿಸಿದ್ದಲ್ಲದೆ, ಇಂತಹ ಘಟನೆ ಪುನರಾವರ್ತನೆಯಾದಲ್ಲಿ ಬಸ್ ಪರ್ಮಿಟ್ ರದ್ದುಗೊಳಿಸುವುದಾಗಿ ಎಚ್ಚರಿಸಿದ್ದಾರೆ.

18-06-2012

Posted by JAYAKIRANA Kirana on | 0 comments | Leave a comment...

ನಿನ್ನೆ ಬೆಳಿಗ್ಗೆ ಸುರಿದ ಭಾರೀ ಮಳೆಯಿಂದಾಗಿ ಮಂಗಳೂರು ಹೊರವಲಯದ ಜಪ್ಪು ಮಹಾಕಾಳಿ ಪಡ್ಪು ರೈಲ್ವೇ ಸೇತುವೆ ಬಳಿ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

18-06-2012

Posted by JAYAKIRANA Kirana on | 0 comments | Leave a comment...

ನಿನ್ನೆ ಬೆಳಿಗ್ಗೆ ಸುರಿದ ಭಾರೀ ಮಳೆ ಮತ್ತು ಗಾಳಿಯಿಂದಾಗಿ ಪಾಂಡೇಶ್ವರದಲ್ಲಿ ಭಾರೀ ಗಾತ್ರದ ಮರವೊಂದು ರಸ್ತೆಗೆ ಉರುಳಿಬಿದ್ದಿದ್ದು ಇದರ ಪರಿಣಾಮವಾಗಿ ಹೊಯಿಗೆ ಬಜಾರ್ ಕಡೆಗೆ ಹೋಗುವ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು.

ಕಾರ್ಕಳ ರಸ್ತೆಯ ದುರವಸ್ಥೆ!

Posted by JAYAKIRANA Kirana on | 0 comments | Leave a comment...

ಕಾರ್ಕಳ: ಪುರಸಭಾ ವ್ಯಾಪ್ತಿಗೆ ಒಳಪಟ್ಟ ಬಹುತೇಕ ರಸ್ತೆಗಳು ದುರ ವಸ್ಥೆಯಲ್ಲಿ ಇರುವುದರಿಂದ ವಾಹನಗಳ ಸಂಚಾರಕ್ಕೆ ಅಯ್ಯೋಗವೆನಿಸಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.
ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರ ಹೇಳಿ ಕೆಯ ಪ್ರಕಾರ ಪುರಸಭಾ ಅಧೀನ ದಲ್ಲಿರುವ ನಗರ ವ್ಯಾಪ್ತಿಯ ರಸ್ತೆಗಳ ವಿಸ್ತಾರವು ೯೫ ಕಿ.ಮೀ ಉದ್ದವಾಗಿದ್ದು, ೨೦೧೧ ಜೂನ್‌ನಿಂದ ೨೦೧೨ ಮೇ ವರೆಗೆ ರಸ್ತೆ ಅಭಿವೃದ್ಧಿಗಾಗಿ ಸುಮಾರು ೨ ಕೋಟಿ ರೂಪಾಯಿಯನ್ನು ವಿನಿಯೋ ಗಿಸಲಾಗಿದೆ ಎಂದು ತಿಳಿದುಬಂದಿದೆ. ಅವುಗಳಲ್ಲಿ ರಸ್ತೆ ಪ್ಯಾಚ್‌ವರ್ಕ್, ಡಾಂಬರೀಕರಣ, ಹೋಲೋಬ್ರಿಕ್ಸ್ ಜೋಡಣೆಗಳು ಸೇರಿವೆ.
ಪ್ರಸ್ತುತ ದಿನಗಳಲ್ಲಿ ಶೇಖಡ ೭೦ ರಷ್ಟು ಪ್ರಮಾಣದ ರಸ್ತೆಗಳು ದುಸ್ಥಿತಿ ಯಲ್ಲಿದೆ. ಕಳೆದ ವರ್ಷದ ಮಳೆ ಯಿಂದಾಗಿ ರಸ್ತೆಯಲ್ಲಿ ಕಂಡುಬಂದ ಕಂದಕಗಳಿಗೆ ವೈಜ್ಞಾನಿಕ ರೀತಿಯಲ್ಲಿ ಮುಚ್ಚುಗಡೆ ಮಾಡದಿರುವುದರಿಂದ ಈ ಬಾರಿಯ ಮಳೆಗೆ ಸಾಧರಣ ಮಳೆಗೆ ಕಳಪೆ ಗುಣ ಮಟ್ಟದ ಪ್ಯಾಚ್‌ವರ್ಕ್ ನೀರಿನೊಂದಿಗೆ ಕೊಚ್ಚಿಹೋಗಿದೆ.
ನಗರದ ಚತುರ್ಮುಖ ಬಸದಿ ರಸ್ತೆ, ಉಡುಪಿ ಬಸ್ಸು ನಿಲ್ದಾಣಕ್ಕೆ ಹೋಗುವ ರಸ್ತೆ, ಮೂರು ಮಾರ್ಗ,ಜ್ಯೋತಿ ಸ್ಟ್ರೀಟ್, ಬಂಡೀಮಠ, ಸಾಲ್ಮರ್, ಪೆರ್ವಾಜೆ ರಸ್ತೆ, ಮಾರ್ಕೆಟ್ ರಸ್ತೆ, ಆನೆಕರೆ ಸೇರಿದಂತೆ ಎಲ್ಲಾ ಮುಖ್ಯ ರಸ್ತೆಗಳಿಗೆ ಮೇ ತಿಂಗಳ ಕೊನೆವಾರದ ತನಕ ವಿವಿಧ ಅವಧಿಯಲ್ಲಿ ಪ್ಯಾಚ್‌ವರ್ಕ್ ಕಾಮಗಾರಿಯನ್ನು ನಡೆಸಲಾಗಿದೆ.
ಪುರಸಭಾ ಕಚೇರಿಯಲ್ಲಿ ಅಭಿ ಯಂತರರಾಗಿ ರವೀಂದ್ರ ಭಂಡಾರಿ ಇವರು ನಿವೃತ್ತಿಯಾದ ಬಳಿಕವೂ ದಿನ ಸಂಬಳದಲ್ಲಿ ದುಡಿಯುತ್ತಿದ್ದಾರೆ. ಉಪಅಭಿಯಂತರ ದುರ್ಗಪ್ರಸಾದ್ ವಿರುದ್ಧ ಈಗಾಗಲೇ ಲೋಕಾಯುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆ ಯುತ್ತಿದೆ.(ಎಸ್‌ಎಫ್‌ಸಿ ಯೋಜನೆ ಯಡಿಯಲ್ಲಿ ನಗರದ ಪ್ರಮುಖ ರಸ್ತೆಗಳ ಡಾಮಾರೀಕರಣ ಕಾಮಗಾರಿಯು ಕಳಪೆ ಗುಣಮಟ್ಟದಾಗಿರುವುದರಿಂದ ಪುರಸಭಾ ಖಜಾನೆಗೆ ಒಂದುಕಾಲು ಕೋಟಿ ರೂಪಾಯಿ ನಷ್ಟವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ) ಸಮರ್ಥ, ದಕ್ಷ ಅಭಿಯಂತರರನ್ನು ನಿಯೋಜಿಸುವುದರೊಂದಿಗೆ ಅನುದಾನ ಗಳನ್ನು ಸದುಪಯೋಗಪಡಿಸಿ ಕಾರ್ಕಳ ಅಬಿವೃದ್ಧಿಪಡಿಸಬೇಕೆಂಬುವುದು ನಾಗರಿಕ ಅಭಿಪ್ರಾಯವಾಗಿದೆ.

ಡಿಫಿ ನಗರ ಯುವಜನ ಸಮಾವೇಶ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರ ಡಿವೈಎಫ್‌ಐ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯುವಜನ ಸಮಾವೇಶ ನಿನ್ನೆ ಬೋಳಾರದಲ್ಲಿ ಜರುಗಿತು.
ಕಾರ್ಯಕ್ರಮವನ್ನು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯ ನಂತರ ದೇಶದಲ್ಲಿ ಭ್ರಷ್ಟಾಚಾರ, ಜಾತಿವಾದ, ಕೋಮು ವಾದ ಪಾರಮ್ಯ ಮೆರೆದಿದ್ದು, ನಮ್ಮನ್ನು ಆಳುವವರು ದೇಶದ ಖಜಾನೆಯನ್ನು ಲೂಟಿ ಮಾಡುತ್ತಿದ್ದಾರೆ. ಸ್ವಾರ್ಥರಹಿತ, ಪ್ರಮಾಣಿಕ ಸಮರಶೀಲ ಚಳುವಳಿಯ ಮೂಲಕ ಬ್ರಿಟಿಷರ ವಿರುದ್ಧ ಹೋರಾ ಡಿದ್ದ ಯುವಜನ ಸಂಘಟನೆ ಮತ್ತೊಮ್ಮೆ ಹುಟ್ಟುವ ಅಗತ್ಯವಿದೆ ಎಂದರು.
ಬಡವರು ಹಾಗೂ ಧರ್ಮದ ಆಧಾರದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಭ್ರಷ್ಟಾಚಾರದಲ್ಲಿ ಒಂದನೇ ಸ್ಥಾನದಲ್ಲಿದೆ. ಅನ್ಯಾಯ, ಅಕ್ರಮದ ವಿರುದ್ಧ ಧ್ವನಿ ಎತ್ತಲೂ ಇಲ್ಲಿ ಅವಕಾಶವಿಲ್ಲದಿದ್ದು ಹಾಗೊಂದು ವೇಳೆ ಧ್ವನಿ ಎತ್ತಿದರೆ ಅವರಿಗೆ ನಕ್ಸಲ್ ಬೆಂಬ ಲಿಗ ಎನ್ನುವ ಪಟ್ಟ ಕಟ್ಟಿ ಜೈಲಿಗೆ ಹಾಕ ಲಾಗುತ್ತಿದೆ ಎಂದವರು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಫ್‌ಐ ಮುಖಂಡರಾದ ಇಂತಿಯಾಝ್, ಮುನೀರ್ ಕಾಟಿಪಳ್ಳ. ದಯಾನಂದ ಶೆಟ್ಟಿ, ಸಂತೋಷ್ ಬಜಾಲ್, ಅಹ್ಮದ್ ಬಶೀರ್, ಯೋಗೀಶ್ ಜಪ್ಪಿನ ಮೊಗರು, ಸಾಧಿಕ್, ಪ್ರಮೀಳಾ, ಕಾಂ.ತಿಮ್ಮಪ್ಪ ಕಾವೂರು ಮತ್ತಿತರರು ಉಪಸ್ಥಿತರಿದ್ದರು.

ಬರಿಗೈಲಿ ತವರಿಗೆ ಮರಳಿದ ವಿಶ್ವಕಪ್ ರನ್ನರ‍್ಸ್‌ಅಪ್‌ಗೆ ಹಾಲೆಂಡ್

Posted by JAYAKIRANA Kirana on | 0 comments | Leave a comment...

ರೊನಾಲ್ಡೊ ಆರ್ಭಟ; ಎಂಟರ ಘಟ್ಟಕ್ಕೇರಿದ ಪೋರ್ಚುಗಲ್
ಖಾರ್ಕಿವ್: ನಿನ್ನೆಯ ಯುರೋಕಪ್ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶವೊಂದು ಹೊರಬದ್ದಿದೆ. ಕಳೆದ ವಿಶ್ವಕಪ್‌ನ ರನ್ನರ‍್ಸ್‌ಅಪ್ ತಂಡವಾಗಿದ್ದ ಹಾಲೆಂಡ್ ಈ ಬಾರಿ ಲೀಗ್ ಹಂತದಲ್ಲೇ ಸೋತು ಮುಗ್ಗರಿಸಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ೨-೧ರ ಅಂತರದಲ್ಲಿ ಸೋಲುಣ್ಣುವ ಮೂಲಕ ಹಾಲೆಂಡ್ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. ಪೋರ್ಚುಗಲ್‌ನ ಕ್ರಿಸ್ತಿಯಾನೊ ರೊನಾಲ್ಡೊರ ಎರಡು ಗೋಲು ಹಾಲೆಂಡ್‌ಗೆ ದುಬಾರಿಯಾಯಿತು.
ಅಂತಿಮ ಎಂಟರ ಬಳಗಕ್ಕೆ ಪ್ರವೇಶಿಸಬೇಕಾದರೆ ಹಾಲೆಂಡ್ ಈ ಪಂದ್ಯವನ್ನು ಎರಡು ಗೋಲಿನ ಅಂತರದಿಂದ ಗೆಲ್ಲಲೇಬೇಕಿತ್ತು. ಅದರಂತೆ ಆಟವಾಡಿತು ಕೂಡ. ಪಂದ್ಯದ ೧೧ನೇ ಅವಧಿಯಲ್ಲಿ ವಾನ್ ಡರ್ ವಾರ್ಟ್ ಅದ್ಭುತ ಗೋಲು ಹಾಲೆಂಡ್ ಮುನ್ನಡೆ ಒದಗಿಸಿತು. ಆದರೆ ಇದಕ್ಕೆ ರೊನಾಲ್ಡೊ ಅವಕಾಶ ನೀಡಲಿಲ್ಲ. ೨೮ನೇ ಅವಧಿಯಲ್ಲಿ ರೊನಾಲ್ಡೊ ಗೋಲು ಸಮಬಲ ಸಾಧಿಸಲು ಪೋರ್ಚುಗಲ್‌ಗೆ ನೆರವಾಯಿತು. ಆದರೆ ಆನಂತರ ಹಾಲೆಂಡ್ ಡಿಫೆಂಡಿಂಗ್ ಕೊಂಚ ಎಡವಿತು. ಹಾಲೆಂಡ್‌ನ ದುರ್ಬಲ ಡಿಫೆಂಡಿಂಗ್ ಪೋರ್ಚುಗಲ್‌ಗೆ ವರದಾನವಾಯಿತು. ಆದರೂ ಪ್ರಥಮಾವಧಿಯಲ್ಲಿ ಮುನ್ನಡೆ ಸಾಧಿಸಲು ಯಾರೂ ಶಕ್ತರಾಗಲಿಲ್ಲ. ಆದರೆ ಎರಡನೇ ಅವಧಿ ಇನ್ನಷ್ಟು ರೋಚಕತೆಗೆ ಸಿಲುಕಿತು. ಆದರೆ ೭೮ನೇ ನಿಮಿಷದಲ್ಲಿ ರೊನಾಲ್ಡೊ ಮತ್ತೊಂದು ಗೋಲು ಹಾಲೆಂಡ್ ತಂಡವನ್ನು ಟೂರ್ನಿಯಿಂದ ಹೊರದಬ್ಬಿತು. ಈ ಮೂಲಕ ಕಳೆದ ಬಾರಿಯ ವಿಶ್ವಕಪ್ ರನ್ನರ‍್ಸ್‌ಅಪ್ ಆಗಿದ್ದ ಹಾಲೆಂಡ್ ಈ ಬಾರಿ ಲೀಗ್‌ನಲ್ಲೇ ಮುಗ್ಗಿರಿಸಿದ್ದು, ಅಚ್ಚರಿಗೆ ಕಾರಣವಾಯಿತು.

ಸೂಪರ್ ಸೈನಾ ಮುಡಿಗೆ ಇಂಡೋನೇಶ್ಯನ್ ಓಪನ್ ಕಿರೀಟ

Posted by JAYAKIRANA Kirana on | 0 comments | Leave a comment...

ಜಕಾರ್ತ: ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಐದನೇ ಶ್ರೇಯಾಂಕದ ಆಟಗಾರ್ತಿ ಸೈನಾ ನೆಹ್ವಾಲ್ ಹವಾ ಮತ್ತೆ ಆರಂಭವಾಗಿದೆ. ಇತ್ತೀಚಿಗಷ್ಟೆ ಮುಗಿದ ಥೈಲ್ಯಾಂಡ್ ಓಪನ್‌ನಲ್ಲಿ ಪರಾಕ್ರಮ ಮೆರೆದಿದ್ದ ಸೈನಾ ಇಲ್ಲಿ ಮುಕ್ತಾಯಗೊಂಡ ಇಂಡೋನೇಶ್ಯಾ ಓಪನ್ ಟೂರ್ನಿಯನ್ನು ಗೆದ್ದುಕೊಂಡಿದ್ದು, ಈ ಮೂಲಕ ಕೂಟದಲ್ಲಿ ಹ್ಯಾಟ್ರಿಕ್ ಸಾಧನೆಗೈದಿದ್ದಾರೆ.
ಚೀನಾದ ಕ್ಷುರೀ ಲೀ ವಿರುದ್ಧ ೧೩-೨೧, ೨೨-೨೦ ಹಾಗೂ ೨೧-೧೯ರ ರೋಚಕ ಅಂತರದಲ್ಲಿ ಗೆಲ್ಲುವ ಮೂಲಕ ಸೈನಾ ಟೂರ್ನಿಯನ್ನು ಮೂರನೇ ಬಾರಿಗೆ ಕೈವಶ ಮಾಡಿಕೊಂಡರು. ಪ್ರಥಮ ಸುತ್ತಿನಲ್ಲಿ ಕಳಪೆ ಆಟ ಪ್ರದರ್ಶಿಸಿದ ಕಾರಣ ಚೀನಾದ ಆಟಗಾರ್ತಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಆದರೆ ಹೋರಾಟ ಬಿಡದ ಸೈನಾ ಎರಡನೇ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆದರೆ ಲೀ ಕೂಡ ತನ್ನ ಪ್ರಬಲ ಹೋರಾಟವನ್ನು ನೀಡಿದ ಕಾರಣ ಸುತ್ತು ರೋಚಕ ಘಟ್ಟಕ್ಕೆ ಸಾಕ್ಷಿಯಾಗಿತ್ತು. ಆದರೂ ಪಂದ್ಯದಲ್ಲಿ ಸೈನಾ ಸಮಬಲ ಸಾಧಿಸಲು ಸಫಲರಾದರು. ಆದರೆ ದ್ವಿತೀಯ ಸುತ್ತು ರೋಚಕ ಘಟ್ಟಕ್ಕೆ ಹೋದರೂ ಸೈನಾ ಪಂದ್ಯ ಕಳಕೊಳ್ಳಲು ಬಿಡಲಿಲ್ಲ. ಒಂದು ಹಂತದಲ್ಲಿ ಪಂದ್ಯಕ್ಕೆ ಯಾರು ಅಧಿಪತಿಯಾಗಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತು. ಆದರೆ ಪಂದ್ಯದ ಮುಕ್ತಾಯದಲ್ಲಿ ಸೈನಾ ಎದುರಾಳಿಗಿಂತ ಮೇಲುಗೈ ಸಾಧಿಸಿದ್ದರಿಂದ ಪಂದ್ಯವನ್ನು ರೋಚಕ ಅಂತರದಲ್ಲಿ ಗೆದ್ದುಕೊಂಡರು.

ಕಠಿಣ ಹೋರಾಟವಾಗಿತ್ತು: ಸೈನಾ
ಪಂದ್ಯದ ನಂತರ ಮಾತನಾಡಿದ ಸೈನಾ, ಹೋರಾಟ ಅತ್ಯಂತ ಕಠಿಣದ್ದಾಗಿತ್ತು. ಇಲ್ಲಿನ ಅಭಿಮಾನಿಗಳು ನನಗೆ ಹಿಡಿಸಿದ್ದಾರೆ. ಪ್ರತಿಯೊಂದು ಬಾರಿ ನಾನು ಈ ಅಂಗಣ ಪ್ರವೇಶಿಸುವಾಗ ನನಗೆ ಚಾಂಪಿಯನ್ ಆದ ರೀತಿ ಅನುಭವವಾಗುತ್ತದೆ ಎಂದು ೨೨ರ ಹರೆಯದ ಸೈನಾ ಮನದಾಳದ ಮಾತನ್ನು ಹೊರಗೆಡವಿದರು.

ಧೋನಿ ನಾಯಕತ್ವದ ಬಗ್ಗೆ ದ್ರೊಗ್ಬಾ ಶ್ಲಾಘನೆ

Posted by JAYAKIRANA Kirana on | 0 comments | Leave a comment...

ದೆಹಲಿ: ಕಳೆದ ತಿಂಗಳು ಮುಕ್ತಾಯಗೊಂಡಿದ್ದ ಚಾಂಪಿಯನ್ ಲೀಗ್‌ನಲ್ಲಿ ಚೆಲ್ಸಿ ತಂಡಕ್ಕೆ ಪ್ರಶಸ್ತಿ ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಐವರಿ ಕೋಸ್ಟ್ ಸ್ಟ್ರೈಕರ್ ದಿದಿರ್ ದ್ರೊಗ್ಬಾ ಈಗ ಭಾರತ ಪ್ರವಾ ದಲ್ಲಿದ್ದು, ಅದರಲ್ಲೂ ಟೀಮ್ ಇಂಡಿಯಾ ನಾಯಕ ಎಮ್.ಎಸ್. ಧೋನಿ ಬಗ್ಗೆ ಮುಕ್ತಕಂಠದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತ್ಯಾಗರಾಜ್ ಮೈದಾನದಲ್ಲಿ ನಡೆಯುವ ಪೆಪ್ಸಿ ಟಿ-೨೦ ಫುಟ್ಬಾಲ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ದ್ರೊಗ್ಬಾ ಭಾರತದಲ್ಲಿದ್ದಾರೆ.
ನನಗೆ ನಿಮ್ಮ ಕ್ರಿಕೆಟ್ ನಾಯಕನ ಹೆಸರು ತಿಳಿದಿದ್ದು, ಆದರೆ ಅದನ್ನು ಉಚ್ಛಾರಿಸಲು ಬಾರದು. ಕೊನೆಯ ವಿಶ್ವಕಪ್‌ನಲ್ಲಿ ಭಾರತ ಗೆಲುವು ಸಾಧಿ ಸಿದ ಬಗ್ಗೆ ನನಗೆ ಗೊತ್ತು. ಮುಖ್ಯವಾಗಿ ಧೋನಿ ನಾಯಕತ್ವ ಅತ್ಯುತ್ತಮ ರೀತಿ ಯಿಂದ ಕೂಡಿದೆ. ಕ್ರಿಕೆಟ್‌ನ ನಿಯಮ ಗಳ ಬಗ್ಗೆ ನನಗೆ ತಿಳಿಯದು. ಆದರೆ ಕೆಲ ಆಟಗಾರರು ಈ ಬಗ್ಗೆ ನನಗೆ ತಿಳಿಸಿದ್ದು, ಈಗ ಈ ಆಟವು ಹೆಚ್ಚು ರೋಚಕವಾಗಿದೆ ಎಂದು ಅನ್ನಿಸುತ್ತಿದೆ. ಎಲ್ಲಾ ಆಟವನ್ನು ಗೌರವಿಸುವ ನನ್ನನ್ನು ಕ್ರಿಕೆಟ್ ತಂಡ ಈ ಕೆಲಸಕ್ಕೆ ಆರಿಸಿದ್ದು, ನಿಜಕ್ಕೂ ಸಂತಸದ ವಿಚಾರಎಂದು ದ್ರೊಗ್ಬಾ ತಿಳಿಸಿದರು.

ಸೈನಾ ಕೋಚ್ ಪುಲ್ಲೇಲ ಹರ್ಷ

Posted by JAYAKIRANA Kirana on | 0 comments | Leave a comment...

ಜಕಾರ್ತ: ಪ್ರಸಕ್ತ ಋತುವಿನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಸೈನಾ ನೆಹ್ವಾಲ್ ಬಗ್ಗೆ ಆಟಗಾರ್ತಿಯ ಕೋಚ್ ಹಾಗೂ ಮಾಜಿ ಆಟಗಾರ ಪುಲ್ಲೇಲ ಗೋಪಿಚಂದ್ ಅತೀವ ಹರ್ಷ ವ್ಯಕ್ತ ಪಡಿಸಿದ್ದು, ಸಾಧನೆಯನ್ನು ಮುಕ್ತ ಕಂಠದಿಂದ ಅಭಿನಂದಿಸಿದ್ದಾರೆ.
ಇದೊಂದು ಸೈನಾಳ ಅತ್ಯುತ್ತಮ ಗೆಲುವಾಗಿದೆ. ಪಂದ್ಯವು ಒಂದೇ ಕಡೆ ವಾಲದೆ ರೋಚಕತೆ ಸಿಲುಕಿದಾಗ ಸೈನಾ ತೋರಿದ ದಿಟ್ಟತನ ಅದ್ಭುತ. ಕಳೆದೊಂದು ವಾರದಲ್ಲಿ ಸೈನಾ ಕಠಿಣ ಹೋರಾಟಗಳನ್ನೇ ಎದುರಿಸುತ್ತಿದ್ದಾಳೆ. ಆದರೆ ಮುಖ್ಯವಾಗಿ ಆಕೆ ಅದರಲ್ಲಿ ಸಫಲವಾಗುತ್ತಿರುವುದು ಸಂತಸದ ಸಂಗತಿ. ಮಾನಸಿಕ ಒತ್ತಡವನ್ನೂ ಸಮರ್ಥವಾಗಿ ನಿಭಾಯಿಸಿದ್ದು, ಶ್ಲಾಘನೀಯ ಎಂದು ಪುಲ್ಲೇಲ ಅಭಿಪ್ರಾಯ ಪಟ್ಟರು. ಸೈನಾ ಟೂರ್ನಿಯನ್ನು ಗೆಲ್ಲುವ ಮೂಲಕ ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯ ಲಿರುವ ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯುವ ನಿರೀಕ್ಷೆ ಮೂಡಿಸಿದ್ದಾರೆ.

ಮತ್ತು ಬರಿಸುವ ಚಾಕೊಲೇಟ್ ನೀಡಿ ದರೋಡೆ

Posted by JAYAKIRANA Kirana on | 0 comments | Leave a comment...

ಮಣಿಪಾಲ: ರೈಲಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮತ್ತೇರಿಸುವ ಚಾಕೊಲೇಟ್ ನೀಡಿ ವ್ಯಕ್ತಿಯೊಬ್ಬರ ನಗದು ಮತ್ತು ಚಿನ್ನಾಭರಣ ದೋಚಿದ ಘಟನೆ ಬೈಂದೂರು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಕೊಂಕಣ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಳ್ಳಿ ಗ್ರಾಮದ ಬೈಲಕೆರೆ ಎಂಬಲ್ಲಿಯ ಕಿಶೋರ್ ಎಂಬವರು ಶುಕ್ರವಾರ ರಾತ್ರಿ ಗೋವಾದ ಮಡಗಾಂವ್‌ನಿಂದ ಉಡುಪಿಗೆ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾ ಣಿಸುತ್ತಿದ್ದರು. ಈ ವೇಳೆ ಬೈಂದೂರು ಬಳಿ ಒಬ್ಬ ಅಪರಿಚಿತ ವ್ಯಕ್ತಿ ನೀಡಿದ ಚಾಕೊಲೇಟ್     ತಿಂದು ಸ್ವಲ್ಪ ಸಮಯದ ಬಳಿಕ ಅಮಲಿನಿಂದ ನಿದ್ರೆಗೆ ಒಳಗಾಗಿದ್ದಾರೆ. ಇಂದ್ರಾಳಿ ರೈಲ್ವೆ ನಿಲ್ದಾಣ ಬಂದಾಗ ಎಚ್ಚರಗೊಂಡು ನೋಡಿ ದಾಗ ಪಕ್ಕದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯು ಇಲ್ಲದೇ ಇದ್ದು, ತನ್ನ ಬಳಿಯಿದ್ದ ಲ್ಯಾಪ್‌ಟಾಪ್, ಚಿನ್ನದ ಉಂಗುರ, ಚಿನ್ನದ ಚೈನ್, ಎ.ಟಿ.ಎಂ ಕಾರ್ಡ್, ಎರಡು ಮೊಬೈಲ್ ಸೆಟ್, ಪಾಸ್‌ಪೋರ್ಟ್ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಳವಾದ ವಸ್ತುಗಳ ಒಟ್ಟು ಮೌಲ್ಯ ೪೨,೬೦೦/- ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೊಂಕಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ.

ರಹಸ್ಯ ಬಚ್ಚಿಟ್ಟ ಬಿಜೆಪಿ ಯುವನಾಯಕ!

Posted by JAYAKIRANA Kirana on | 0 comments | Leave a comment...

ದರ್ಶನ ಪಾತ್ರಿ ಮೇಲೆ ಹಲ್ಲೆ: ಬ್ಲ್ಯಾಕ್‌ಮೇಲ್ ಪ್ರಕರಣ
ಪುತ್ತೂರು: ಪುತ್ತೂರಿನ ಕಲ್ಲುರ್ಟಿ ದರ್ಶನ ಪಾತ್ರಿ ಕಂ ಜ್ಯೋತಿಷಿಯ ಮೇಲೆ ಹಲ್ಲೆ ನಡೆಸಿ ಸುದ್ದಿ ಚಾನೆಲ್ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ಮಾಡಲು ೨ ಲಕ್ಷ ನೀಡಬೇಕೆಂದು ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದ ಪ್ರಕರ ಣದ ಸೂತ್ರಧಾರಿಯಾದ ವಿಟ್ಲ ವ್ಯಾಪ್ತಿಯ ಬಿಜೆಪಿ ಮುಖಂಡ ಪೊಲೀಸ್ ವಿಚಾರಣೆಯ ವೇಳೆ ತುಟ್ಟಿ ಬಿಚ್ಚದೆ ಮೌನ ವಹಿಸುವ ಮೂಲಕ ಗುಟ್ಟನ್ನು ಬಚ್ಚಿಟ್ಟಿದ್ದು, ಇದರಿಂದಾಗಿ ಪ್ರಕರಣದ ರಹಸ್ಯ ಬಯಲಾಗದೆ ಉಳಿದು ಕೊಂಡಿದೆ.
ರಾಮದಾಸ್ ಎಂಬವರು ದರ್ಶನ ಪಾತ್ರಿ ಯನ್ನು ಬೆದರಿಸಿ ಅವರಿಂದ ಹಣ ಪಡೆಯಲು ಮುಂದಾದ ಹಿನ್ನಲೆಯಲ್ಲಿ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಈ ಪ್ರಕರಣದ ಕುರಿತು ಆರೋಪಿ ಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಸತ್ಯಾಂಶವನ್ನು ಬಹಿರಂಗ ಪಡಿಸ ಬೇಕೆಂದು ಮನವಿ ಸಲ್ಲಿಸಿತ್ತು. ಪುತ್ತೂರಿನ ಪತ್ರಕರ್ತರು ಈ ಪ್ರಕರಣದಲ್ಲಿ ಶಾಮೀಲಾಗಿಲ್ಲ ಎಂಬು ದನ್ನು ಬಹಿರಂಗ ಪಡಿಸುವ ಉದ್ದೇಶದಿಂ ದಲೇ ತನಿಖೆಗೆ ಒತ್ತಾಯಿಸಲಾಗಿತ್ತು. ಸರ್ಕಲ್ ಇನ್ಸ್‌ಪೆಕ್ಟರ್ ಸುದರ್ಶನ್ ದರ್ಶನ ಪಾತ್ರಿ ಹರೀಶ್ ರೈ, ಬಿಜೆಪಿ ನಾಯಕನಾದ ಕಂಬಳಬೆಟ್ಟುವಿನ ರಾಮದಾಸ್ ಶೆಟ್ಟಿ ಮತ್ತು ಹಣಪಡೆಯಲು ಬಂದಿದ್ದ ವೇಳೆ ಅವರೊಂದಿಗಿದ್ದ ಪರ್ಲಡ್ಕದ ಲೊಕೇಶ್ ಎಂಬವರನ್ನು ವಿಚಾರಣೆಗಾಗಿ ಕರೆಸಿಕೊಂಡಿದ್ದರು.
ಆರಂಭದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಸುದರ್ಶನ್ ಅವರು ದರ್ಶನದ ಹರೀಶ್ ರೈಯನ್ನು ವಿಚಾರಣೆ ನಡೆಸಿದ್ದರು. ಆ ವೇಳೆ ಇವರು ತಮಗೆ ಹಲ್ಲೆ ನಡೆಸಲು ಬಂದವರ ಪೈಕಿ ರಾಮದಾಸರು ಸುದ್ದಿ ಬಾರದಂತೆ ಮಾಡಬೇಕಾದರೆ ತನಗೆ ಹಣ ನೀಡಬೇಕೆಂದು ಕೇಳಿದ್ದರು. ತಾನು ರೂ.೬೦ಸಾವಿರ ನೀಡುವುದಾಗಿ ಒಪ್ಪಿಕೊಂಡಿದ್ದೆ. ಅದರಂತೆ ಮರುದಿನ ೫೫ ಸಾವಿರ ಹಣವನ್ನು ರಾಮದಾಸರಿಗೆ ನೀಡಲೆಂದು ಪುತ್ತೂರಿನ ಫೂಟ್‌ವೇರ್ ಅಂಗಡಿಗೆ ಬಂದಿದ್ದೆ. ಅಲ್ಲಿಗೆ ರಾಮದಾಸ ಮತ್ತು ಇನ್ನೊಬ್ಬರು ಬಂದಿದ್ದರು. ಅಂಗಡಿಯಲ್ಲಿದ್ದ ಬಿಜೆಪಿಯ ರಾಜೇಶ್ ಬನ್ನೂರು ಅವರು ಹಣ ಯಾಕಾಗಿ ನೀಡಬೇಕು ಎಂದು ಅವರಲ್ಲಿ ಪ್ರಶ್ನಿಸಿ ಹಣ ನೀಡದಂತೆ ತಡೆದರು ಎಂದು ಹೇಳಿಕೆ ನೀಡಿದ್ದರು.
ಆ ಬಳಿಕ ರಾಮದಾಸ್ ಶೆಟ್ಟಿಯನ್ನು ಕರೆದು ವಿಚಾರಣೆ ನಡೆಸಲಾಯಿತು. ಆರಂಭದಲ್ಲಿ ತಾನು ತಪ್ಪು ಮಾಡಿಲ್ಲ ಎಂದು ರಾಮದಾಸ್ ಹೇಳತೊಡಗಿದಾಗ ಇನ್ಸ್ಸ್‌ಪೆಕ್ಟರ್ ಗದರಿಸಿ ಸತ್ಯವನ್ನು ನುಡಿಯುವಂತೆ ಸೂಚಿಸಿದ್ದಾರೆ. ಆ ಬಳಿಕ ತುಟ್ಟಿ ಬಿಚ್ಚದೆ ಮೌನವಹಿಸುವ ಮೂಲಕ ರಾಮದಾಸ್ ಪ್ರಕರಣದ ರಹಸ್ಯವನ್ನು ಬಚ್ಚಿಟ್ಟ. ಇದರಿಂದಾಗಿ ಹಣ ಯಾರಿಗಾಗಿ’ ಎಂಬುದಕ್ಕೆ ಕೊನೆಗೂ ಉತ್ತರ ಇಲ್ಲದಾಯಿತು. ಇನ್ಸ್‌ಪೆಕ್ಟರ್ ಸುದರ್ಶನ್ ಅವರು ದರ್ಶನದ ಹರೀಶ್ ಶೆಟ್ಟಿ ಮತ್ತು ಬ್ಲ್ಯಾಕ್ ಮೇಲ್‌ನ ರಾಮದಾಸರಿಗೆ ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದರು. ರಾಮದಾಸ್ ತಪ್ಪು ಮಾಡಿದ್ದಾನೆ. ಅದನ್ನು ನಾನೇ ನಿಮ್ಮ ಮುಂದೆ ಹೇಳುತ್ತೇನೆ ಎಂದ ಅವರು ಈ ವಿಚಾರವನ್ನು ಇಲ್ಲಿಗೆ ಮುಗಿಸುವಂತೆ ಪತ್ರಕರ್ತರಿಗೆ ತಿಳಿಸಿದರು.

ಸುಳ್ಯ: ಹೊಡೆದಾಟ-ದೂರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಸುಳ್ಯ ಸಮೀಪದ ಕುರುಂಜಿಬಾಗ್ ಎಂಬಲ್ಲಿ ಇಬ್ಬರು ಹೊಡೆದಾಡಿಕೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದ್ದು, ಸುಳ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ ಶಾಂತಿಭಂಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಶಿಧರ್ ಮತ್ತು ಅರುಣ್ ಎಂಬವರು ತಮ್ಮೊಳಗಿನ ವ್ಯವಹಾರಕ್ಕೆ ಸಂಬಂಧಿಸಿ ಪರಸ್ಪರ ಹೊಡೆದಾಡಿಕೊಂಡಿದ್ದು, ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.

ರಿಕ್ಷಾ-ಲಾರಿ ಡಿಕ್ಕಿ: ಓರ್ವ ಮೃತ್ಯು

Posted by JAYAKIRANA Kirana on | 0 comments | Leave a comment...

ವಿಟ್ಲ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಈಚರ್ ಲಾರಿಯೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟು ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ಸಂಜೆ ನಡೆದಿದೆ.
ಮಂಗಳೂರು ಸಮೀಪದ ಕುಂಜತ್ತಬೈಲು ನಿವಾಸಿ ಹರೀಶ್(೩೯) ಮೃತಪಟ್ಟ ರಿಕ್ಷಾ ಚಾಲಕ. ಈತನ ಆಟೋ ರಿಕ್ಷಾದಲ್ಲಿ ಭಾನು ವಾರ ಬೆಳಿಗ್ಗೆ ಮಂಗಳೂರಿನಿಂದ ಒಂದೇ ಕುಟುಂಬದ ಆರು ಮಂದಿ ಗಡಿಯಾರ ಸಮೀಪದ ಕಡೇಶ್ವಾಲ್ಯ ಎಂಬಲ್ಲಿಯ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಅಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಈ ಸಂದರ್ಭ ಈ ಘಟನೆ ಸಂಭವಿಸಿದೆ.
ಮಂಗಳೂರಿನಿಂದ ಬೆಂಗಳೂರು ಕಡೆ ತೆರಳುತ್ತಿದ್ದ ಈಚರ್ ಲಾರಿ ಕಡೇಶ್ವಾಲ್ಯ ಕಡೆ ಯಿಂದ ಬರುತ್ತಿದ್ದ ಆಟೋ ರಿಕ್ಷಾ ಹೆದ್ದಾರಿ ಯನ್ನು ಪ್ರವೇಶಿಸುತ್ತಿದ್ದಂತೆ ಅದಕ್ಕೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಗಂಭೀರವಾಗಿ ಗಾಯ ಗೊಂಡಿದ್ದರು. ತಕ್ಷಣವೇ ಸ್ಥಳೀಯರು ಆತನನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಸಂದರ್ಭ ಆತ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ರಿಕ್ಷಾದಲ್ಲಿದ್ದ ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ವಿವರ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಾಡಹಗಲೇ ಮನೆ ಕಳವಿಗೆ ಯತ್ನ

Posted by JAYAKIRANA Kirana on | 0 comments | Leave a comment...

ಪುತ್ತೂರು: ಹಾಡಹಗಲೇ ಮನೆ ಯೊಂದಕ್ಕೆ ನುಗ್ಗಿ ಕಳವಿಗೆ ಯತ್ನಿಸಿ ರುವ ಘಟನೆ ಪುತ್ತೂರು ನಗರದ ಹೊರವಲಯದಲ್ಲಿನ ಸೇಡಿಯಾಪು ಎಂಬಲ್ಲಿ ಶನಿವಾರ ನಡೆದಿದೆ.
ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಸೇಡಿಯಾಪು ನಿವಾಸಿ ವೀರಪ್ಪ ಗೌಡ ಎಂಬವರ ಪುತ್ರಿ ಮಧ್ಯಾಹ್ನ ಶಾಲೆಯಿಂದ ಮನೆಗೆ ಬಂದಿದ್ದರು. ಆ ವೇಳೆ ಮನೆಯ ಎದುರಿನ ಬಾಗಿಲು ಮುರಿದಿತ್ತು. ಮನೆ ಯೊಳಗಿನ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿ ಯಾಗಿಸಿ ಕಳ್ಳರು ಹಣ ಮತ್ತು ಚಿನ್ನಾ ಭರಣಕ್ಕಾಗಿ ಹುಡುಕಾಡಿರುವುದು ಕಂಡು ಬಂದಿತ್ತು. ಆದರೆ ಕಳ್ಳರು ಯಾವುದೇ ಸೊತ್ತುಗಳನ್ನು ಕಳವು ಗೈಯುವಲ್ಲಿ ವಿಫಲರಾಗಿರುವುದಾಗಿ ತಿಳಿದು ಬಂದಿದೆ.
ವೀರಪ್ಪ ಗೌಡ ಮತ್ತು ಅವರ ಪತ್ನಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು . ಹಗಲು ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವ ವಿಚಾರವನ್ನು ತಿಳಿದವರೇ ಕಳವಿಗೆ ಯತ್ನಿಸಿರಬಹುದೆಂದು ಶಂಕಿಸ ಲಾಗಿದೆ. ಕಳವಿಗೆ ಯತ್ನಿಸಿದ ಘಟ ನೆಯ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.

ಅಕ್ರಮ ಮರಳು ದಾಸ್ತಾನು ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಂಟ್ವಾಳದ ತುಂಬೆ ಗ್ರಾಮದ ಬೊಳ್ಳಾರಿ ಎಂಬಲ್ಲಿ ಲತೀಫ್ ಎಂಬವರು ಅಕ್ರಮವಾಗಿ ಗೋಣಿಚೀಲಗಳಲ್ಲಿ ಶೇಖರಿಸಿಟ್ಟಿದ್ದ ಮರಳುಗಳನ್ನು ಕಂದಾಯ ಇಲಾಖೆ, ಗಣಿ ಮತ್ತು ವಿಜ್ಞಾನ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಚರಣೆಯಲ್ಲಿ ಪತ್ತೆ ಹಚ್ಚಿದ್ದಾರೆ.
ದಾಳಿ ಸಂದರ್ಭ ೪೦೦ಕ್ಕೂ ಅಧಿಕ ಮರಳು ಚೀಲಗಳು, ಪತ್ತೆಯಾಗಿದ್ದು ಆರೋಪಿಗೆ ದಂಡ ವಿಧಿಸಲಾಗಿದೆ.

ಮಧ್ಯರಾತ್ರಿಯ ಸಂಧಾನ: ಹಫ್ತಾ ಪ್ರಕರಣಕ್ಕೆ ತೆರೆ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಹಫ್ತಾ ವಸೂಲಿಗೆ ಬಂದು ಮನೆಗೆ ನುಗ್ಗಿ ಮಾರಣಾಂ ತಿಕವಾಗಿ ಹಲ್ಲೆ ನಡೆಸಿದರೆಂದು ಪೊಲೀ ಸರಿಗೆ ದೂರಿತ್ತವನೇ ನಡು ರಾತ್ರಿಯ ಸಂಧಾನಕ್ಕೆ ಮಣಿದು ದಿನಬೆಳಗಾಗುವು ದರೊಳಗೆ ದೂರು ಹಿಂಪಡೆದು ಕೊಂಡ ವಿದ್ಯಮಾನ ಪಡುಬಿದ್ರಿಯಲ್ಲಿ ನಡೆದಿದೆ.
ರಾ.ಹೆದ್ದಾರಿ ೬೬ ರಲ್ಲಿನ ಹೆಜಮಾಡಿ ಜಮಾದಾರ್ ತೋಟದ ರವೀಂದ್ರ ಕೋಟ್ಯಾನ್ ಮತ್ತವರ ತಂದೆ ಬಾಲು ಕೋಟ್ಯಾನ್ ಎಂಬವರಿಗೆ ಎರ್ಮಾಳು ತಾ. ಪಂಚಾಯತ್‌ನ ಮಾಜಿ ಸದಸ್ಯೆಯ ಮಗ ಜಯಶೀಲ ಪೂಜಾರಿ ಮತ್ತು ಆತನ ಗೆಳೆಯ ಕೊಪ್ಪದ ಅಶೋಕ್ ಭಂಡಾರಿ ಹಣದ ವಿಚಾರದಲ್ಲಿ ತಗಾದೆ ತೆಗೆದು ರವೀಂದ್ರ ಕೋಟ್ಯಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರೆಂದು ಮೊದಲಿಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ತೀವ್ರವಾಗಿ ತಲೆ, ಕೈಗೆ ಗಾಯಗೊಂಡಿದ್ದ ರವೀಂದ್ರ ಪೂಜಾರಿ ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಗೆ ದಾಖಲಾಗಿದ್ದ. ಇದೊಂದು ಹಫ್ತಾ ವಸೂಲಿಯ ಹಲ್ಲೆ ಎಂದು ಪೊಲೀಸರಿಗೆ ದೂರು ಕೂಡಾ ನೀಡಿದ್ದ. ಹಲ್ಲೆಯ ಸಂದರ್ಭದಲ್ಲಿ ಸಾರ್ವ ಜನಿಕರಿಂದ ತೀವ್ರವಾಗಿ ಥಳಿಸಲ್ಪಟ್ಟು ಕಂಬಕ್ಕೆ ಬಿಗಿಯಲ್ಪಟ್ಟಿದ್ದ ಹಲ್ಲೆಕೋರ ಕೊಪ್ಪ ಅಶೋಕ್ ಭಂಡಾರಿಯೂ ಈ ಬಗ್ಗೆ ಪ್ರತಿ ದೂರು ನೀಡಿದ್ದ. ಸ್ಥಳದಿಂದ ಪರಾರಿಯಾಗಿದ್ದ ಜಯಶೀಲ ಪೂಜಾರಿ ಹಲ್ಲೆಯ ಪ್ರಧಾನ ಆರೋಪಿಯೆಂದು ಗಾಯಾಳುಗಳು ಹೆಸರಿಸಿದ್ದರು. ಆತನ ಪರೋಕ್ಷ ಪ್ರಯತ್ನದಿಂದಲೇ ಪ್ರಕರಣ ಮಧ್ಯ ರಾತ್ರಿಯ ಸುಮಾರಿಗೆ ಹಿಂತೆಗೆಯಲ್ಪ ಟ್ಟಿತು ಎನ್ನಲಾಗಿದೆ. ಭಾರತೀಯ ದಂಡ ಸಂಹಿತೆಯ ೩೦೭ನೇ ಕಲಂನಡಿ ಕೊಲೆ ಪ್ರಯತ್ನ ಮತ್ತು ಹಫ್ತಾ ವಸೂಲಿಯ ಅಪರಾಧದ ಮೇಲೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಕೊನೆ ಘಳಿಗೆಯಲ್ಲಿ ರಾಜಿ ಸಂಧಾನ ವಾಗಲು ಪಡುಬಿದ್ರಿ ಪೊಲೀಸರೂ ಪ್ರಯತ್ನಿಸಿದ್ದಿರಬೇಕೆಂದು ಸಾರ್ವ ಜನಿಕ ಅಭಿಪ್ರಾಯ ಕೇಳಿ ಬಂದಿದೆ.

ಹೇರೂರಿನ ಶಿಕ್ಷಕ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ಸಮೀಪದ ಹೇರೂರು-ಚಪ್ಪರಿಕೆ ನಿವಾಸಿ ಶಿಕ್ಷಕ ಹರಿಶ್ಚಂದ್ರ ಹರಿಕಂತ್ರ(೪೬) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತ: ಉತ್ತರ ಕನ್ನಡ ಜಿಲ್ಲೆಯವರಾದ ಇವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಬ್ಯಾಂಕ್ ಸಾಲವೇ ಸಾವಿಗೆ ಕಾರಣವೆನ್ನಲಾಗಿದೆ.

ತಲೆಮರೆಸಿದ್ದ ವ್ಯಕ್ತಿ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಡಬ ಹಾಗೂ ಉಪ್ಪಿನಂಗಡಿಯಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತನನ್ನು ೩೪ನೇ ನೆಕ್ಕಿಲಾಡಿ ನಿವಾಸಿ ಅಬ್ದುಲ್ ಶುಕೂರ್ ಎಂದು ಹೆಸರಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದಮಾಮ್‌ನಲ್ಲಿ ಅಪಘಾತ: ಗಾಯಾಳು ಅಡ್ಡೂರಿನ ವ್ಯಕ್ತಿ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ದಮಾಮ್‌ನಲ್ಲಿ ಕಳೆದ ೫೫ ದಿನಗಳ ಹಿಂದೆ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಡ್ಡೂರು ನಿವಾಸಿ ಅಬ್ದುಲ್ ಜಬ್ಬಾರ್ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಸೌದಿ ಅರೇಬಿಯಾದ ದಮಾಮ್‌ನಲ್ಲಿ ಉದ್ಯೋಗಿಯಾಗಿದ್ದ ಜಬ್ಬಾರ್ ರಾತ್ರಿಯ ವೇಳೆ ಮಸೀದಿಗೆ ತೆರಳುತ್ತಿದ್ದ ಸಂದರ್ಭ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಗಂಭೀರ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ೧೭ ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ನೋಟ್‌ಗಳಲ್ಲಿ ಇಂದಿರಾ, ನೆಹರು ಚಿತ್ರ ಅಳವಡಿಸಲು ಚಿಂತನೆ

Posted by JAYAKIRANA Kirana on | 0 comments | Leave a comment...

ಮುಂಬೈ: ನೋಟುಗಳಲ್ಲಿ ಶಿವಾಜಿ, ಅಂಬೇಡ್ಕರ್, ನೆಹರು ಮತ್ತು ಇಂದಿರಾಗಾಂಧಿ ಅವರ ಚಿತ್ರಗಳನ್ನು ಅಳವಡಿಸುವ ಬಗ್ಗೆ ಭಾರತೀಯ ರಿಸರ್ವ ಬ್ಯಾಂಕ್ ಚಿಂತನೆ ನಡೆಸಿದೆ. ಆರಂಭದಲ್ಲಿ ಅಶೋಕ ಸ್ಥಂಭ ಮಾತ್ರ ನೋಡುಗಳಲ್ಲಿ ಮುದ್ರಣವಾಗುತ್ತಿತ್ತು. ೧೯೮೭ರಲ್ಲಿ ಗಾಂಧಿ ಚಿತ್ರ ಹೊಂದಿದ ೫೦೦ ರೂ. ನೋಟು ಚಲಾವಣೆಗೆ ಬಂತು. ೧೯೯೬ರಲ್ಲಿ ಗಾಂಧಿ ಚಿತ್ರ ಎಲ್ಲಾ ನಾಡುಗಳಲ್ಲಿ ಮುದ್ರಿಸಲಾಯಿತು. ೧೯೯೩ರಲ್ಲಿ ಗಾಂದಿ ಚಿತ್ರ ಅಳವಡಿಸುವ ಬಗ್ಗೆ ಆರ್‌ಬಿಐ ಮಾಡಿದ ಶಿಫಾರಸ್ಸನ್ನು ಕೇಂದ್ರ ಅನುಮೋದಿಸಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆರ್‌ಬಿಐ ಪ್ರಸಕ್ತ ಚಿಂತನೆ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವಾರು ಸ್ಮಾರಕಗಳು, ಜಾನಪದಕಲೆ, ಸಂಸ್ಕೃತಿ, ವಿಜ್ಞಾನಿಗಳ ಚಿತ್ರ ಅಳವಡಿಸಲು ಆರ್‌ಬಿಐ ಏಕೆ ಚಿಂತಿಸಿಲ್ಲ ಎಂದು ಪ್ರಶ್ನಿಸಲಾಗಿದೆ.

ಸುರತ್ಕಲ್: ಎನ್‌ಐಟಿಕೆ ಬಳಿ ಟೋಲ್‌ಗೇಟ್ ನಿರ್ಮಾಣ ವಿರುದ್ಧ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಟೋಲ್‌ಫೀ ಸಂಗ್ರಹದ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ೬೬ರ ಎನ್‌ಐಟಿಕೆ ಬಳಿ ಇರ್ಕಾನ್ ಸಂಸ್ಥೆ ನಿರ್ಮಾಣ ಮಾಡಲುದ್ದೇಶಿಸಿದ್ದ ಟೋಲ್‌ಗೇಟ್ ಸ್ಥಳೀಯರಿಂದ ವಿರೋಧ ಎದುರಾಗಿದೆ. ಯಾವುದೇಕಾರಣಕ್ಕೂ ಟೋಲ್‌ಗೇಟ್ ನಿರ್ಮಿಸಲು ಬಿಡುವುದಿಲ್ಲ ಎಂದು ಒತ್ತಾಯಿಸಿ ಸ್ಥಳೀಯರು ಗುರುವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡ ಯತೀಶ್ ಬೈಕಂಪಾಡಿ , ಟೋಲ್‌ಗೇಟ್ ಸಂಗ್ರಹಿಸಲು ನಿರ್ದಿಷ್ಟ ಅಂತರವಿದ್ದು ಅದನ್ನು ಕಂಪೆನಿ ಪಾಲಿಸುತ್ತಿಲ್ಲ. ಎನ್‌ಐಟಿಕೆಯಲ್ಲಿ ಟೋಲ್‌ಗೇಟ್ ಇರ್ಕಾನ್ ನಿರ್ಮಿ ಸಿದರೆ, ಮುಲ್ಕಿ, ಹೆಜಮಾಡಿ ಯಲ್ಲಿ ನವಯುಗ ಕಂಪೆನಿ ನಿರ್ಮಿಸುತ್ತದೆ ಇದು ನಿರ್ದಿಷ್ಟ ಅಂತರದಲ್ಲಿರು ವುದರಿಲ್ಲ, ಇದರಿಂದ ವಾಹನ ಸವಾರರು ದುಬಾರಿ ಶುಲ್ಕ ತೆರಬೇಕಾಗುತ್ತದೆ. ಈಗಾಗಲೇ ಪೆಟ್ರೋಲ್ ಬೆಲೆ ಏರಿಕೆ, ಬಿಡಿಭಾಗಗಳ ದರ ಏರಿಕೆಯಿಂದ ವಾಹನ ಸವಾರರು ಕಂಗಾಲಾಗಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಟೋಲ್‌ಗೇಟ್ ಬೇಡ ಎಂದರು.
ಮನಪಾ ಸದಸ್ಯೆ ರೇವತಿ ಪುತ್ರನ್ ಪತ್ರಿಕೆಯೊಂದಿಗೆ ಮಾತನಾಡಿ, ಪಾಲಿಕೆ ಈ ಬಗ್ಗೆ ಈಗಾಗಲೇ ಸಾಮಾನ್ಯ ಸಭೆಯಲ್ಲಿ ಟೋಲ್‌ಗೇಟ್ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸದಂತೆ ನಿರ್ಣಯ ಅಂಗೀಕರಿಸಿದೆ. ಆದರೆ ಇರ್ಕಾನ್ ಸಂಸ್ಥೆ ಉದ್ಧಟತನದಿಂದ ನಿರ್ಮಿಸಲುದ್ದೇಶಿಸಿದೆ. ಟೋಲ್‌ಗೇಟ್ ನಿರ್ಮಿಸುವುದರಿಂದ ದಿನನಿತ್ಯದ ಪ್ರಯಾಣಿಕರು ಸಮಸ್ಯೆಯನ್ನು ಎದುರಿ ಸಬೇಕಾಗುತ್ತದೆ.ರಸ್ತೆತಡೆಗಳು ಉಂಟಾ ಗುತ್ತದೆ.ಅಪಘಾತಗಳ ಸಂಭ ವವೂ ಅಧಿಕವಾಗುತ್ತದೆ.
ಒಂದು ವರ್ಷದ ಹಿಂದೆ ಜಿಲ್ಲಾಧಿಕಾರಿ ಆದೇಶದಂತೆ ಪೊಲೀಸ್ ರಕ್ಷಣೆಯಲ್ಲಿ ಕಾಮಗಾರಿಗೆ ಮುಂದಾಗಿತ್ತು ಆಗಲೂ ವಿರೋದಿ ಸಿದ್ದೇವೆ. ಈಗಲೂ ವಿರೋಧಿಸುತ್ತೇವೆ ಎಂದರು. ಪುಷ್ಪರಾಜ ಶೆಟ್ಟಿ ಕುಡುಂಬೂರು, ಮಹಾಬಲ ರೈ, ಟೆಂಪೋ ಚಾಲಕರು ಹಾಗೂ ರಿಕ್ಷಾ ಚಾಲಕರು ಪ್ರತಿಭಟನೆ ಯಲ್ಲಿದ್ದರು.

ಕಳತ್ತೂರು: ಯುವತಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಳತ್ತೂರು-ಶಾಂತಿಗುಡ್ಡೆ ಎಂಬಲ್ಲಿನ ಯುವತಿ ಸೌಮ್ಯಾ(೧೯) ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
ಉದ್ಯಾವರದ ಚಿಕ್ಕಮ್ಮನ ಮನೆಗೆ ಹೋಗಿ ಬರುತ್ತೇನೆ ಎಂದು ಹೊರಟಿದ್ದ ಸೌಮ್ಯಾ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಕನ್ನಡ, ತುಳು, ಇಂಗ್ಲಿಷ್, ಹಿಂದಿ ಮಾತಾಡಬಲ್ಲ ಈಕೆ ಉಡುಪಿಯ ಕಾಲೇಜ್‌ನಲ್ಲಿ ದ್ವಿತೀಯ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ಈಕೆಯ ಬಗ್ಗೆ ಮಾಹಿತಿ ಇದ್ದವರು ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.

ನೈಜೀರಿಯಾ: ಚರ್ಚ್‌ಗಳ ಮೇಲೆ ದಾಳಿ

Posted by JAYAKIRANA Kirana on | 0 comments | Leave a comment...

ನೈಜೀರಿಯಾ: ನೈಜೀರಿಯಾದ ಉತ್ತರ ಭಾಗದ ಪಟ್ಟಣ ಕಡುನಾದ ಲ್ಲಿರುವ ಮೂರು ಚರ್ಚ್‌ಗಳ ಮೇಲೆ ನಿನ್ನೆ ಆತ್ಮಾಹುತಿ ದಾಳಿ ನಡೆದಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.
ವಾಹನದಲ್ಲಿ ಆಗಮಿಸಿದ ಆತ್ಮಾಹುತಿ ದಾಳಿಕೋರನು ಚರ್ಚ್ ಆಫ್ ವೆಸ್ಟ್ ಆಫ್ರಿಕಾ ಇದರ ಸಭಾಂಗಣದ ಮೇಲೆ ದಾಳಿ ನಡೆಸಿ ದ್ದಾನೆ. ಈ ವೇಳೆ ಅನೇಕ ಮಂದಿ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ. ಝರಿಯಾ ಎಂಬಲ್ಲಿನ ಇನ್ನೊಂದು ಚರ್ಚ್‌ನ ಮೇಲೆ ಆತ್ಮಾಹುತಿ ದಾಳಿ ನಡೆದಿದ್ದು, ಮಕ್ಕಳು, ವಿದ್ಯಾರ್ಥಿಗಳೂ ಸೇರಿದಂತೆ ಅನೇಕ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ದಾಳಿಗಳ ಹಿಂದೆ ಬೊಕೊ ಹರಾಂ ಬಣದ ಕೈವಾಡವಿರುವುದಾಗಿ ಹೇಳಲಾಗಿದೆ.

ಸಂಶಯಾಸ್ಪದ ವ್ಯಕ್ತಿಗಳ ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಕ್ಕುಂದೂರು ಜಾರ್ಕಳ ಬಸ್ ನಿಲ್ದಾಣದ ಬಳಿ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಮಹಮ್ಮದ್ ರಫೀಕ್(೩೭) ಮತ್ತು ಅಶ್ರಫ್(೩೨) ಎಂಬವರನ್ನು ಕಾರ್ಕಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಫೀಕ್ ಕುಕ್ಕುಂದೂರು ಮಸೀದಿ ಬಳಿಯ ಕೆ.ಎಸ್.ಖಾದರ್ ಅವರ ಪುತ್ರ ಹಾಗೂ ಅಶ್ರಫ್ ಗಣಿತ ನಗರದ ಅಬ್ದುಲ್ ಖಾದರ್ ಎಂಬವರ ಮಗ ನಾಗಿದ್ದಾನೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಚ್ಚಳಿಕೆ ಬರೆಸಿ ಬಿಡುಗಡೆ ಮಾಡಿದ್ದಾರೆ.

ಡಿಸೆಂಬರ್‌ನಲ್ಲಿ ಚುನಾವಣೆ: ಸಿದ್ಧತೆ ಹೇಗೆ?

Posted by JAYAKIRANA Kirana on | 0 comments | Leave a comment...

ಮಂಗಳೂರು: ದೇಶದ ಮೂರು ರಾಜ್ಯಗಳಲ್ಲಿ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಇದೇ ಸಮಯದಲ್ಲಿ ಕರ್ನಾಟಕದಲ್ಲೂ ಚುನಾವಣೆ ನಡೆಸುವಂತೆ ರಾಜ್ಯ ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ. ಆರು ತಿಂಗಳ ಅವಧಿಗೂ ಮೊದಲೇ ಚುನಾವಣೆ ನಡೆಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇರುವುದರಿಂದ ಬಿಜೆಪಿಯವರ ಮನವಿಗೆ ಕಾಯದೆಯೇ ಚುನಾವಣೆ ನಡೆಸಲೂಬಹುದು. ಅಂತೆಯೇ ಬಿಜೆಪಿಯ ಮನವಿಗೆ ಚುನಾವಣಾ ಆಯೋಗ ಪೂರಕವಾಗಿ ಸ್ಪಂಧಿಸುವ ಸಾಧ್ಯತೆ ಇದೆ.
ಡಿಸೆಂಬರ್‌ನಲ್ಲಿ ನಡೆಯುವ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಸಿದ್ದತೆ ನಡೆಸಿದ್ದರೆ, ಜೆಡಿಎಸ್ ನಾಯಕರು ತಾವೇನೂ ಸುಮ್ಮನೆ ಕುಳಿತುಕೊಳ್ಳಲಿಲ್ಲ ಎಂದು ತೋರಿಸಲು ರೆಡಿಯಾಗಿದ್ದಾರೆ. ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆ ತಲೆನೋವಿನ ವಿಷಯ. ಜೆಡಿಎಸ್‌ಗೆ ಅಭ್ಯರ್ಥಿಗಳನ್ನು ಹುಡುಕುವುದು ಕಷ್ಟದ ಕೆಲಸ, ಕಾಂಗ್ರೆಸ್‌ಗೆ ಬಂಡಾಯ ತಡೆಯುವುದು ಹೇಗೆ ಎಂಬುದಷ್ಟೇ ಯೋಚನೆ ಎಂಬಂತಹ ಸ್ಥಿತಿ ಈಗ ರಾಜ್ಯದಲ್ಲಿ ಇದೆ.
ದ.ಕ. ಜಿಲ್ಲೆಯ ಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ. ಒಂದೇ ಒಂದು ವ್ಯತ್ಯಾಸ ಎಂದರೆ ಸದ್ಯಕ್ಕೆ ಇಲ್ಲಿ ಜೆಡಿಎಸ್ ಲೆಕ್ಕಕ್ಕಿಲ್ಲ.
ರಾಜ್ಯಮಟ್ಟದಲ್ಲಿ ಜೆಡಿಎಸ್ ಪ್ರಭಾವಿತ ಪಕ್ಷವಾಗಿ ಬೆಳೆಯುವ ಲಕ್ಷಣಗಳನ್ನು ತೋರಿಸುತ್ತಿದೆ. ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಪಕ್ಷ ಗಟ್ಟಿಗೊಳಿಸುವ ಪ್ರಯತ್ನ ಆರಂಭಿಸಿದ್ದು, ಪಕ್ಷವನ್ನು ತೊರೆದು ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿರುವ ನಾಯಕರನ್ನು ಮತ್ತೆ ತವರಿಗೆ ಕರೆತರಲು ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ,ಮಾತ್ರವಲ್ಲ ಈ ಎರಡೂ ಪಕ್ಷಗಳ ನಿರ್ಲಕ್ಷಿತ ನಾಯಕರನ್ನೂ ತನ್ನ ತೆಕ್ಕೆಗೆ ಎಳೆದುಕೊಳ್ಳಲು ಯೋಜನೆಯನ್ನೂ ರೂಪಿಸಿದ್ದಾರೆ. ಪುತ್ತೂರಿನ ಶಕುಂತಳಾ ಶೆಟ್ಟಿ ಇಂತಹ ಯೋಜನೆಯ ಭಾಗ ಆಗಲಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಸಿದ್ದರಾಮಯ್ಯನಂತಹ ಉದ್ಧಟ ಹಾಗೂ ಹಿರಿಯ ನಾಯಕರನ್ನೇ ಪಕ್ಷಕ್ಕೆ ತರಲು ಬೇಕಾದ ಕಸರತ್ತು ಕೂಡ ಜೆಡಿಎಸ್ ವಲಯದಲ್ಲಿ ನಡೆಯುತ್ತಿದೆ.
ಈಗಿನ ಸ್ಥಿತಿಯಲ್ಲಿ ಬಿಜೆಪಿ ಬಹುನಾಯಕತ್ವಕ್ಕೆ ಮನ್ನಣೆ ನೀಡುವ ಸಾಧ್ಯತೆಯೇ ಹೆಚ್ಚು. ಡಿ.ವಿ. ಸದಾನಂದ ಗೌಡರು ಒಳ್ಳೆಯ ಆಡಳಿತ ನೀಡಿದ್ದರೂ ಕೂಡ ಅವರನ್ನೇ ನಾಯಕರಾಗಿ ಬೆಂಬಲಿಸಿದರೆ ಬಹುಸಂಖ್ಯಾತ ಲಿಂಗಾಯಿತರು ಮುನಿಸಿಕೊಳ್ಳುವ ಸಾಧ್ಯತೆ ಇದೆ. ಲಿಂಗಾಯತರ ಮನವೊಲಿಕೆಗೆ ಯಡಿಯೂರಪ್ಪರನ್ನು ಎದುರಿಗೆ ಬಿಡುವಂತೆಯೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ಬಿಜೆಪಿ ವರಿಷ್ಠರು ಜಗದೀಶ್ ಶೆಟ್ಟರ್‌ರನ್ನು ಉತ್ತರ ಕರ್ನಾಟಕ ಭಾಗದಲ್ಲಿ ಈಶ್ವರಪ್ಪರನ್ನು ಮಲೆನಾಡು ಹಳೆ ಮೈಸೂರು ಭಾಗದಲ್ಲಿ ಹಾಗೂ ಡಿ.ವಿ.ಸದಾನಂದ ಗೌಡರನ್ನು ಕರಾವಳಿಯ ಭಾಗದಲ್ಲಿ ಪ್ರತಿತಿಂಬಿಸಲು ಯೋಜನೆ ರೂಪಿಸಲಾಗಿದೆ. ಇದಲ್ಲದೆ ಸ್ಥಳೀಯ ನಾಯಕರು ತಮ್ಮ ತಮ್ಮ ವಲಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈಗಿನ ಶಾಸಕರಲ್ಲಿ ಬಂಡಾಯ ಹಾಗೂ ಭಿನ್ನಮತ ಎಬ್ಬಿಸಿ ಪಕ್ಷದ ವರ್ಚಸ್ಸಿಗೆ ದಕ್ಕೆ ತಂದ ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಟಿಕೆಟ್ ನೀಡದಿರಲು ಪಕ್ಷದ ನಾಯಕರು ನಿರ್ಧರಿಸಿರುವುದರಿಂದ ತಮಗೆ ಟಿಕೆಟ್ ಸಿಗುವುದಿಲ್ಲ ಎಂದು ಮನವರಿಕೆ ಮಾಡಿಕೊಂಡಿರುವ ಶಾಸಕರನೇಕರು ಈಗಲೇ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಇದು ಬಿಜೆಪಿ ನಾಯಕರಿಗೂ ಗೊತ್ತಾಗಿದೆ. ಇವರು ಹೋದರೆ ಹೋಗಲಿ ಎಂಬುದು ಬಿಜೆಪಿ ನಾಯಕರ ನಿಲುವು.

ಕುಖ್ಯಾತ ಹೆದ್ದಾರಿ ದರೋಡೆಕೋರರ ಬಂಧನ

Posted by JAYAKIRANA Kirana on | 0 comments | Leave a comment...

ಸೊತು-ನಗದು ವಶ
ಪಡುಬಿದ್ರಿ: ಕುಖ್ಯಾತ ಹೆದ್ದಾರಿ ದರೋಡೆಕೋರರ ನಾಲ್ಕು ಮಂದಿ ಸದಸ್ಯರನ್ನು ಬಂಧಿಸಿರುವ ಪಡುಬಿದ್ರಿ ಪೊಲೀಸರು ಬಂಧಿತರಿಂದ ಹಣ ಮತ್ತು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ತಂಡದ ಓರ್ವ ತಲೆಮರೆಸಿಕೊಂಡಿದ್ದು, ಆತನ ಶೋಧ ಮುಂದುವರಿದಿದೆ.
 ಕಳೆದ ಶುಕ್ರವಾರ ಮುಂಜಾನೆ ಪಡು ಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲ ಮಸೀದಿಯ ಸಮೀಪ ಲಾರಿ ಚಾಲಕನನ್ನು ಬೆದರಿಸಿ ಎರಡು ಮೊಬೈಲ್ ಮತ್ತು ಸಾವಿರ ರುಪಾಯಿ ದೋಚಿದ ಪ್ರಕರಣದ ತನಿಖೆಯಲ್ಲಿ ಈ ತಂಡ ವನ್ನು ಪತ್ತೆ ಹಚ್ಚಲಾಗಿದೆಯೆಂದು ಕಾಪು ವೃತ್ತ ನಿರೀಕ್ಷಕ ಶಿವಾನಂದ ವಾಲೇಕರ್ ತಿಳಿಸಿ ದ್ದಾರೆ. ಲಾರಿ ಚಾಲಕ ಅರುವ ಅಳದಂ ಗಡಿಯ ಯೂಸುಫ್ ಎಂಬಾತ ಗುರುತಿಸಿದ ಭಾವಚಿತ್ರಗಳ ಆಧಾರದಲ್ಲಿ ತನಿಖೆ ಮುಂದು ವರಿಸಿದ ಪೊಲೀಸರು ದರೋಡೆಯ ರೂವಾರಿ ಕಾಪು ಮಲ್ಲಾರು ಪರಿಸರದ ಯುವಕ ನನ್ನು ಮೊದಲು ಬಂಧಿಸಿದರು. ಆತ ನೀಡಿದ ಸುಳಿವಿನನ್ವಯ ಪಡುಬಿದ್ರಿ ಕಾಪುವಿನ ಮತ್ತೀ ರ್ವರನ್ನು ಬಂಧಿಸಲಾಗಿದ್ದು, ಓರ್ವ ತಲೆಮ ರೆಸಿಕೊಂಡಿದ್ದಾನೆ. ತನಿಖೆಯ ದೃಷ್ಠಿಯಿಂದ ಬಂಧಿತರ ವಿವರಗಳನ್ನು ಬಹಿರಂಗ ಪಡಿಸ ಲಾಗಿಲ್ಲ.
ಬಂಧಿತ ಆರೋಪಿಗಳಿಂದ ಏಳು ಮೊಬೈಲ್, ಹತ್ತು ಸಾವಿರ ರುಪಾಯಿ ನಗದು, ಮತ್ತು ನಾಲ್ಕು ಸಾವಿರ ರುಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬ್ರಹ್ಮಾವರ ಮತ್ತು ಉಡುಪಿ ನಗರ ಠಾಣಾ ವ್ಯಾಪ್ತಿಯ ಇಂತಹದ್ದೇ ಹಲ ವಾರು ರೀತಿಯ ಹೆದ್ದಾರಿ ದರೋಡೆ ನಡೆಸಿ ದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀ ಸರು ತಿಳಿಸಿದ್ದಾರೆ. ಕಾರ್ಕಳ ಡಿವೈಯಸ್ಪಿ ಜಯಂತ್.ವಿ.ಶೆಟ್ಟಿ ನೇತೃತ್ವದ ತಂಡ ಮತ್ತು ಪಡುಬಿದ್ರಿ, ಕಾಪು ಪೊಲೀಸರು ಜಂಟಿ ಕಾರ್ಯಾ ಚರಣೆ ನಡೆಸಿ ಈ ತಂಡವನ್ನು ಬಂಧಿಸಿದ್ದಾರೆ.

ಪುತ್ತೂರು ಕೊಲೆ: ಆರೋಪಿಯ ಸುಳಿವು ಇನ್ನೂ ಅಲಭ್ಯ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪುತ್ತೂರಿನ ಬೆಟ್ಟಂಪಾಡಿಯ ಕಕ್ಕೂರಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಎನ್ನಲಾದ ವೆಂಕಟ್ರಮಣ ಭಟ್‌ನ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎನ್ನಲಾಗಿದೆ. ಅಲ್ಲದೇ ಇದೊಂದು ಆರೋಪಿಯ ಪೂರ್ವಯೋ ಜಿತ ಕೃತ್ಯವಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಪುತ್ತೂರಿನ ವ್ಯಕ್ತಿಯೊಬ್ಬರಿಗೆ ವೆಂಕಟ್ರಮಣ ಭಟ್ ಸಿಕ್ಕಿದ್ದು, ಸರಣಿ ಕೊಲೆಯ ಬಗ್ಗೆ ಮಾಹಿತಿಯಿರದ ಅವರು ಆತನನ್ನು ಮಾತನಾಡಿಸಿ ಬಿಟ್ಟು ಬಿಟ್ಟಿದ್ದಾರೆ ಎನ್ನಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಯಾವುದೇ ಮಾಹಿತಿ ನೀಡುತ್ತಿಲ್ಲ. ಕೆಲ ಕಾರಣಗಳಿಂದ ತನಿಖೆಯ ಆಗು-ಹೋಗುಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಅಲ್ಲದೇ ಪೊಲೀಸರೇ ಮಾಧ್ಯಮ ಮಿತ್ರರಲ್ಲಿ ಆತನ ಬಗ್ಗೆ ಸುಳಿವು ಲಭ್ಯವಿದ್ದರೆ ತಿಳಿಸಿ ಎನ್ನುತ್ತಿದ್ದಾರೆ. ಒಟ್ಟಾರೆ ಬೆಳವಣಿಗೆಯನ್ನು ಗಮನಿಸಿದರೆ ಒಂದು ವೇಳೆ ಆರೋಪಿ ಬೆಂಗಳೂರಿನಲ್ಲಿ ಇರುವುದೇ ಆದರೆ ಆರೋಪಿಯ ಪತ್ತೆಗೆ ಬೆಂಗಳೂರು ಪೊಲೀಸರ ಸಹಕಾರ ಬಯಸುವುದು ದ.ಕ ಜಿಲ್ಲಾ ಪೊಲೀಸರಿಗೆ ಅನಿವಾರ್ಯವಾದೀತು ಎನ್ನಲಾಗಿದೆ. ಒಟ್ಟಿನಲ್ಲಿ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಈ ಪ್ರಕರಣ ದ.ಕ ಜಿಲ್ಲೆಯ ಪೊಲೀಸರಿಗೆ ಸವಾಲಿನ ಪ್ರಕರಣವಾಗಿ ಪರಿಣಮಿಸಿದೆ.

ಅಕ್ರಮ ಕಸಾಯಿಖಾನೆಗೆ ದಾಳಿ: ಆರೋಪಿಗಳು ಎಸ್ಕೇಪ್

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಳಾಯಿಬೆಟ್ಟು ಎಂಬಲ್ಲಿ ನಡೆಸಲ್ಪಡುತ್ತಿದ್ದ ಅಕ್ರಮ ಕಸಾಯಿಖಾನೆಗೆ ನಿನ್ನೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಕಂಕನಾಡಿ ಪೊಲೀಸ್ ವೃತ್ತ ನಿರೀಕ್ಷಕರಾದ ರವೀಶ್ ನಾಯಕ್ ಅವರ ನೇತೃತ್ವದ ತಂಡ ಮಾರಾಟಕ್ಕಿಡಲಾಗಿದ್ದ ಮಾಂಸವನ್ನು ವಶಪಡಿಸಿ ಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಉಳಾಯಿಬೆಟ್ಟು ಗ್ರಾಮದ ಕನಿಬೆಟ್ಟು ಎಂಬಲ್ಲಿರುವ ಪುತ್ತು ಮೋನು ಎಂಬವರಿಗೆ ಸೇರಿದ ಶೆಡ್‌ನಲ್ಲಿ ಅಕ್ರಮವಾಗಿ ದನಗಳನ್ನು ತಂದು ಮಾಂಸ ಮಾಡುವ ಹುನ್ನಾರ ನಡೆದಿರುವುದಾಗಿ ವೃತ್ತನಿರೀಕ್ಷರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆ ಆರು ಗಂಟೆಗೆ ದಾಳಿ ನಡೆಸಲಾಗಿತ್ತು.
ಈ ಸಂದರ್ಭ ಶೆಡ್‌ನಲ್ಲಿ ಅದಾಗಲೇ ಒಂದು ದನವನ್ನು ಕಡಿದು ಮಾಂಸ ಮಾಡಲಾಗಿತ್ತು. ಪೊಲೀಸರನ್ನು ಕಂಡ ಆರೋಪಿಗಳಾದ ಪುತ್ತುಮೋನು, ಫೈಝಲ್ ಮತ್ತು ಸಿದ್ದೀಕ್ ಎಂಬವರು ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ೧೦ ಸಾವಿರ ಮೌಲ್ಯದ ೭೫ ಕೆಜಿಯಷ್ಟು ಮಾಂಸ, ಎರಡು ಕತ್ತಿಗಳು, ಎರಡು ಚೂರಿಗಳು, ತಕ್ಕಡಿ ಹಾಗೂ ಕಲ್ಲುಗಳನ್ನು ಪೊಲೀಸರು ವಶಪಡಿ ಸಿಕೊಂಡಿದ್ದಾರೆ. ತಂಡದಲ್ಲಿ ಪಿಸಿಗಳಾದ ದಿನೇಶ್, ಸದಾನಂದ, ಹರೀಶ್, ಪ್ರಮೋದ್, ಉತ್ತಪ್ಪಗೌಡ, ಚೆರಿಯನ್ ಭಾಗವಹಿಸಿದ್ದರು.

ಭಯೋತ್ಪಾದನೆ ಬೆಂಬಲಿಸುವವನು ನೈಜ ಮುಸ್ಲಿಮನಲ್ಲ: ಶಾಫಿ ಸಅದಿ

Posted by JAYAKIRANA Kirana on | 0 comments | Leave a comment...

ಉಡುಪಿ: ೧೬೬ ಕೋಟಿ ಜನರು ನಂಬುವ, ಆರಾಧಿಸುವ ಖುರಾನಿನಲ್ಲಾಗಲೀ, ೬,೬೬೬ ಸೂಕ್ತಿಗಳಲ್ಲಾಗಲೀ, ಲಕ್ಷಕ್ಕೂ ಮಿಕ್ಕಿದ ಹದೀಸ್‌ಗಳಲ್ಲಾಗಲೀ ಎಲ್ಲಿಯೂ ಒಂದೇ ಒಂದು ಶಬ್ದಗಳಲ್ಲಿ ಸಹ ಭಯೋತ್ಪಾದನೆಗೆ, ಉಗ್ರವಾದಕ್ಕೆ ಪ್ರಚೋದನೆ ನೀಡಿದ, ನೀಡುವ ಶಬ್ದಗಳಿಲ್ಲ. ಭಯೋತ್ಪಾದನೆ, ಉಗ್ರವಾದಗಳಿಗೆ ಇವುಗಳೆಲ್ಲವೂ ವಿರೋಧ ಸೂಚಿಸಿದೆಯೇ ಹೊರತು ಬೆಂಬಲಿಸಿದ್ದೇ ಇಲ್ಲ. ಬೆಂಬಲಿಸುವವನು ನೈಜ ಮುಸ್ಲೀಮನೇ ಅಲ್ಲ. ಹೀಗಿರುವಾಗ ಉಗ್ರವಾದದ ಜತೆಗೆ ಇಸ್ಲಾಂಗೆ ನಂಟು ಹಾಕುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಸದಸ್ಯರಾದ ಎನ್.ಕೆ.ಎಂ.ಶಾಫಿ ಸಅದಿ ಅವರು ಹೇಳಿದರು.
ಉಡುಪಿಯ ಫೋರಮ್ ಫಾರ್ ಹ್ಯುಮ್ಯಾನಿಟಿ ಸಂಸ್ಥೆಯು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಆದಿತ್ಯವಾರ ಆಯೋಜಿಸಿದ ಪ್ರಶ್ನೋತ್ತರ ಮತ್ತು ವಿಚಾರ ವಿನಿಮಯವೆಂಬ ವಿಶೇಷ ಕಾರ್ಯಕ್ರಮ ಸ್ನೇಹ ಸಂಗಮದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮನುಷ್ಯ ಪ್ರೀತಿ, ಕರುಣೆ, ದಯೆಯನ್ನು ಬೋಧಿಸಿದವರು ಪ್ರವಾದಿ ಪೈಗಂಬರರು. ಮುಸ್ಲಿಮರ ಪ್ರಶ್ನಾತೀತ ನಾಯಕನಾದ ಪೈಗಂಬರರು ನಾಸ್ತಿಕರೂ ಸೇರಿದಂತೆ ನಮ್ಮಂತೆಯೇ ಇರುವ ಯಾವ ಮನುಷ್ಯರಿಗೂ ನೋವನ್ನುಂಟು ಮಾಡಬಾರದು ಎಂಬ ಸಂದೇಶವನ್ನು ನೀಡಿದವರು. ಇತರ ಧರ್ಮಗಳನ್ನು, ಧರ್ಮೀಯರನ್ನು, ದೇವ- ದೇವತೆಗಳನ್ನು ಅವಹೇಳನ ಮಾಡುವುದು ನೈಜ ಮುಸ್ಲೀಮನಿಗೆ ಸಾಧ್ಯವಿಲ್ಲ ಎಂದು ಸಅದಿ ತಿಳಿಸಿದರು.
ಭಾರತದಲ್ಲಿ ಜನ್ಮ ತಾಳಿದ ನಾವು ಭಾಗ್ಯವಂತರಾಗಿದ್ದು, ಮನುಷ್ಯತ್ವದ ಪಾಠ ಹೇಳಿಕೊಡಲು ಭಾರತೀಯರಾದ ನಮಗೆ ಮಾತ್ರ ಸಾಧ್ಯವೆಂದು ಹೇಳಿದರು.

ಹೇಳುವವರು, ಕೇಳುವವರಿಲ್ಲದ ಮಣಿಪಾಲ ವಿದ್ಯಾರ್ಥಿಗಳು!

Posted by JAYAKIRANA Kirana on | 0 comments | Leave a comment...


ಮಣ್ಣಪಳ್ಳದಲ್ಲಿ ಮತ್ತೊಂದು ಶವ ಪತ್ತೆ
ಮಣಿಪಾಲ: ಮಣ್ಣಪಳ್ಳದಲ್ಲಿ ಶನಿವಾರ ನಡೆದ ದುರಂತಕ್ಕೆ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಒಂದು ಶವ ದುರ್ಘಟನೆ ನಡೆದ ದಿನವೇ ದೊರಕಿದ್ದರೆ ಮತ್ತೊಂದು ಶವ ನಿನ್ನೆ ದೊರಕಿದೆ. ಅವಘಡಕ್ಕೆ ಮೂಲ ಕಾರಣವೆನ್ನಲಾಗುತ್ತಿರುವ ಬೋಟು ಇನ್ನೂ ಪತ್ತೆಯಾಗಿಲ್ಲ. ಶನಿವಾರದ ಘಟನೆ ಮಣಿ ಪಾಲ ಪರಿಸರದಲ್ಲಿ ಮುಕ್ತವಾಗಿ ಹರಡಿಕೊಂಡಿರುವ ವಿದ್ಯಾರ್ಥಿಗಳ ಸ್ವಚ್ಛಂದ ಬದುಕಿನ ಬಗ್ಗೆಯೂ ಬೆಳಕು ಚೆಲ್ಲಿದೆ. ಮಣಿಪಾಲ ಉಡುಪಿ ಜಿಲ್ಲೆಯ ಶೈಕ್ಷಣಿಕ ರಾಜಧಾನಿ ಎಂದೆಲ್ಲಾ ಗುರುತಿಸಿಕೊಂಡ ಪ್ರದೇಶ. ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಉದ್ದೇಶದಿಂದ ಲಕ್ಷಾಂತರ ರುಪಾಯಿ ಹಣ ಖರ್ಚು ಮಾಡಿ ಮಣಿಪಾಲಕ್ಕೆ ಬಂದು ಸೇರಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ದೇಶದ ಮೂಲೆ ಮೂಲೆಯಿಂದ ಹೆಚ್ಚಾಗುತ್ತಲೇ ಇದೆ. ಜೊತೆಗೆ ವಿದೇಶಿ ವಿದ್ಯಾರ್ಥಿಗಳು ಬೇರೆ. ಹೀಗೆ ಬರುವ ವಿದ್ಯಾರ್ಥಿಗಳು ಗಂಭೀರವಾಗಿ ಶಿಕ್ಷಣದಲ್ಲಿ ತೊಡಗಿಸಿಕೊಳ್ಳುವುದಕ್ಕಿಂತಲೂ ಮೋಜು-ಮಸ್ತಿ ಮಾಡುವುದೇ ಹೆಚ್ಚು. ಹಾಸ್ಟೆಲ್ಲಿನಲ್ಲೋ, ಪಿ. ಜಿಯಲ್ಲೋ ಸೇರಿಕೊಳ್ಳುವ ವಿದ್ಯಾರ್ಥಿಗಳಿಗೆ ನಿಯಂತ್ರಣ ಹೇರುವವರು ಇಲ್ಲ. ಮಣಿಪಾಲದ ಮೂಲೆ ಮೂಲೆಗಳಲ್ಲಿ ಪಿ. ಜಿಗಳಿವೆ. ಕೆಲ ಮನೆಗಳನ್ನೇ ವಿದ್ಯಾರ್ಥಿಗಳಿಗೆ ಲೀಸ್ ಆಧಾರದಲ್ಲಿ ಕೊಡುವ ವ್ಯವಹಾರವೂ ಜೋರಾಗಿದೆ. ಹೀಗೆ ನಾಲ್ಕೈದು ಮಂದಿ ಜೊತೆಗಿದ್ದುಕೊಂಡು ವಿದ್ಯಾರ್ಥಿಗಳು ಶಿಕ್ಷಣ ಕಲಿಯುವುದಕ್ಕಿಂತಲೂ ಅಡ್ಡ ದಾರಿ ಹಿಡಿಯುವುದೇ ಹೆಚ್ಚು. ಮಣಿಪಾಲದಲ್ಲಿ ಅಡ್ಡಹಾದಿಯಲ್ಲಿ ಹೋಗುವವರಿಗೆಂದೇ ಬೇಕಾದಷ್ಟು ಮಾರ್ಗದರ್ಶಕರಿದ್ದಾರೆ. ಯಾವ ಸರಿಹೊತ್ತಿನಲ್ಲೂ ಬೇಕಾದರೂ ಗಾಂಜಾ, ಅಮಲು ಪೂರೈಸುವವರು ಸಿಗುತ್ತಾರೆ. ಇದನ್ನೇ ಫುಲ್‌ಟೈಮ್ ದಂಧೆಯನ್ನಾಗಿಸಿಕೊಂಡ ಮಂದಿ ಸಿಗುತ್ತಾರೆ. ಕಾಲಿನ ಬುಡಕ್ಕೆ ಬಂದು ಬೀಳುವ ಸುಖ, ಪ್ರತಿಯೊಂದಕ್ಕೂ ಎದೆಯುಸಿರುವ ಬೆಚ್ಚಗಾಗುವ ವಯಸ್ಸು ಇರುವಾಗ ಇಲ್ಲಿ ವಿದ್ಯಾರ್ಥಿಗಳು ದಾರಿ ತಪ್ಪಲು ಎಷ್ಟರ ಹೊತ್ತಿನ ಮಾತು?
ಶನಿವಾರ ಮಣ್ಣಪಳ್ಳದಲ್ಲಿ ನಡೆದಿರುವ ಘಟನೆಯೂ ಇದಕ್ಕಿಂಥ ಭಿನ್ನವೇನಲ್ಲ. ಶುಕ್ರವಾರ ಮತ್ತು ಶನಿವಾರದ ಮೋಜು ಮಸ್ತಿ ಇಬ್ಬರು ವಿದ್ಯಾರ್ಥಿಗಳ ಪ್ರಾಣ ತೆಗೆದುಬಿಟ್ಟಿದೆ. ಮಣ್ಣಪಳ್ಳದಲ್ಲಿ ಯಾವಾತ್ತೋ ಬಿಟ್ಟು ಹೋಗಿದ್ದ ಹಳೆಯ ಬೋಟು ಸಾವಿಗೊಂದು ಕಾರಣವಾಗಿ ಮಣ್ಣಪಳ್ಳದ ನೂರಾರು ಅಡಿಯ ಆಳದಲ್ಲಿ ಸೇರಿಕೊಂಡಿದೆ. ಇಬ್ಬರು ವಿದ್ಯಾರ್ಥಿಗಳ ಸಾವು ಕಾಲದ ಮರೆಯಲ್ಲಿ ಸರಿದು ಹೋಗಬಹುದು. ಆದರೆ ಬೇರೆ ಬೇರೆ ರೀತಿಯಲ್ಲಿ ಸಾವಿನೊಂದಿಗೆ ಮುಖಾಮುಖಿಗೆ ಹಾತೊರೆಯುವ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಇವರನ್ನೆಲ್ಲಾ ನಿಯಂತ್ರಿಸಲು ಪೊಲೀಸರಿಗೇ ಸಾಧ್ಯವಿಲ್ಲ. ಹೊರಗಿನ ವಿದ್ಯಾರ್ಥಿಗಳು ಹಣ ಬಿಸಾಕುತ್ತಾರೆಂದು ಅವರಿಗೆ ಎಲ್ಲವನ್ನೂ ಪೂರೈಸುವ ಸ್ಥಳೀಯರೂ ಈ ಬಗ್ಗೆ ಯೋಚಿಸಬೇಕು. ಈ ವಿದ್ಯಾರ್ಥಿಗಳು ಇತ್ತ ಬರಲು ಕಾರಣವಾಗುವ ವಿದ್ಯಾಲಯಗಳೂ ತಮ್ಮ ಜವಾಬ್ದಾರಿಯನ್ನು ಕೇವಲ ವಿದ್ಯೆ ಕಲಿಸುವುದಕ್ಕೆ ಸೀಮಿತಗೊಳಿಸಬಾರದು. ಕಲಿಯುವಷ್ಟು ಹೊತ್ತು ಅವರ ಬಗ್ಗೆ ಕಣ್ಣಿಡಬೇಕಾದದ್ದು ಮುಖ್ಯ ಎಂಬ ಮಾತು ನಿನ್ನೆ ಶವ ಕೊಂಡೊಯ್ಯಲು ಬಂದ ಮೃತ ವಿದ್ಯಾರ್ಥಿಗಳ ಬಂಧು ಬಳಗದಿಂದ ಕೇಳಿ ಬಂತು.

ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ಈಶ್ವರಪ್ಪ

Posted by JAYAKIRANA Kirana on | 0 comments | Leave a comment...

ಸರ್ಕಾರಿ ಶಾಲೆಗಳಲ್ಲಿ ಕೇಸರೀಕರಣ ಮುಂದುವರೆಯಲಿದೆ
ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಈಗ ಮತ್ತೆ ತನ್ನ ಹೇಳಿಕೆಯಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಶಿವಮೊಗ್ಗದಲ್ಲಿ ಭಾನುವಾರ ಗಿಡನೆಡುವ ಹಸಿರೀಕರಣ ಆಂದೋಲನ ಕಾರ್ಯಕ್ರಮ ದಲ್ಲಿ ಶಾಲೆಗಳ ಕೇಸರೀಕರಣಕ್ಕೆ ಪುಷ್ಠಿ ನೀಡುವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಾಲೆಗಳಲ್ಲಿ ಕೇಸರೀಕರಣ ನಡೆಯು ತ್ತಿದೆ ಎಂಬ ಆರೋಪಗಳು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮೇಲೆ ಬರುತ್ತಲೇ ಇದೆ. ಇಂತಹ ಆರೋಪಗಳು ಏನೇ ಇದ್ದರೂ ಅದು ಮುಂದುವರೆಯುತ್ತದೆ ಎಂದು ಶಾಲೆಗಳಲ್ಲಿ ನಡೆಯುತ್ತಿರುವ ಕೇಸರಿ ಕರಣವನ್ನು ಬೆಂಬಲಿಸಿ ಮಾತಿಗಿಳಿದಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ಪಾಯಿ ಮಕ್ಕಳು ಭಾಗವಹಿಸಿದ್ದ ಹಸಿರೀಕರಣ ಆಂದೋಲನದಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಉತ್ತಮ ಸಂದೇಶ ನೀಡುವ ಬದಲು, ತಮ್ಮ ಅಜ್ಞಾನ ಹಾಗೂ ಕೋಮುವಾದದ ಮನೋ ಭಾವನೆಯಿಂದ ಶಾಲೆಯಲ್ಲಿ ಕೇಸರೀಕರಣ ಮುಂದುವರೆಯ ಬೇಕಾಗಿದೆ ಎಂದಿದ್ದಾರೆ.
ನಂತರ ಸಮರ್ಥನೆಯೆಂಬಂತೆ ಮಾತ ನಾಡಿದ ಅವರು ಕೇಸರೀಕರಣ ಎಂದರೆ ಯಾವುದೇ ಧರ್ಮಕ್ಕೆ ಸೀಮಿತವಾದುದಲ್ಲ ಎಂದು ಶತದಡ್ಡನಂತೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯೆ ಕಲಿಯಲು ಹೋಗುವ ಬಡಪಾಯಿ ಮಕ್ಕಳ ತಲೆಯಲ್ಲಿ ದೇಶ ಪ್ರೇಮದ ಹೆಸರಿನಲ್ಲಿ ಕೇಸರೀಕರಣದ ಬೋಧನೆ ಮಾಡಿ ಮಕ್ಕಳನ್ನು ಕೋಮುವಾದದಲ್ಲಿ ತೊಡಗಿಸಿ, ಆ ಮೂಲಕ ಅವರನ್ನು ಮತ್ತೆ ಹಳ್ಳಕ್ಕೆ ತಳ್ಳುವ ಯತ್ನದ ಧೋರಣೆಯಿರುವ ಕೇಸರೀಕರಣ ಸಿದ್ದಾಂತವನ್ನು ರಾಜ್ಯದೆಲ್ಲೆಡೆ ಹರಡಬೇಕಾಗಿದೆ ಎಂಬಂತ ಹೇಳಿಕೆಗಳನ್ನು ಬೇರೆ ಬೇರೆ ಮಾತಿನ ಅರ್ಥದಲ್ಲಿ ಈಶ್ವರಪ್ಪ ಹೇಳುತ್ತಲೇ ಬಂದಿದ್ದಾರೆ. ಒಂದು ಹಂತಕ್ಕೆ ಇವರ ಹೇಳಿಕೆ ಅಲ್ಲಿದ್ದ ಕೆಲ ಪ್ರಗತಿಪರರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗಿದೆ.

ಕೆನಡಾದ ದೇವಾಲಯಕ್ಕೆ ಕಾರ್ಕಳದ ಹೆಬ್ಬಾಗಿಲು!

Posted by JAYAKIRANA Kirana on | 0 comments | Leave a comment...

ಪುಣ್ಯಕ್ಷೇತ್ರದಲ್ಲಿ ರಾರಾಜಿಸಲಿದೆ ಗಂಡಭೇರುಂಡ
ಕಾರ್ಕಳ: ಕೆನಡಾ ದೇಶದ ವ್ಯಾಂಕೋವರ್ ಎಂಬಲ್ಲಿ ನಿರ್ಮಾಣಗೊಳ್ಳುತ್ತಿರುವ ಮಹಾಲಕ್ಷ್ಮೀ ದೇವಳಕ್ಕೆ ಕಾರ್ಕಳದ ಪಾಜಿನಡ್ಕದಲ್ಲಿ ನಿರ್ಮಿತಗೊಂಡ ಹೆಬ್ಬಾಗಿಲು, ಗರ್ಭಗುಡಿಯ ಬಾಗಿಲು, ಬೆಳ್ಳಿ ಪಲ್ಲಕಿ ತಿಂಗಳ ಅಂತ್ಯದಲ್ಲಿ ಪ್ರಯಾಣ ಬೆಳೆಸಲಿವೆ.
ರಾಷ್ಟ್ರಪತಿ ಪದಕ ವಿಜೇತ ಡಿ.ಪಿ ನಾರಾಯಣ ಭಟ್ಟ ೧೯೮೪ರಲ್ಲಿ ಆರಂಭಿಸಿದ ಕಲಾ ಕೇಂದ್ರವು ೧೯೮೨ರಲ್ಲಿ ಶ್ರೀಸಿದ್ಧಿವಿನಾಯಕ ಕಲಾ ಕೇಂದ್ರವಾಗಿ ಮಾರ್ಪಟ್ಟು ಬಜಗೋಳಿ ಕಡಾರಿಯ ಪಾಜಿನಡ್ಕ ಎಂಬಲ್ಲಿ ಪ್ರಾರಂಭ ಗೊಂಡಿದ್ದು, ಇದೇ ಕಲಾ ಕೇಂದ್ರದಲ್ಲಿ ನಿರ್ಮಾಣಗೊಂಡ ಕಲಾಕೃತಿಯು ಇದೀಗ ವಿಶ್ವವಿಖ್ಯಾತಿ ಪಡೆದಿದೆ.
ಶಿಲ್ಪಕಲಾಕೇಂದ್ರ ಸ್ಥಾಪಕರ ಮಗನಾಗಿರುವ ಕರ್ನಾಟಕ ಶಿಲ್ಪಕಲಾ ಪ್ರಶಸ್ತಿ ಪುರಸ್ಕೃತ ಡಿ.ಪಿ ದಿವಾಕರ್ ಚಿಪ್ಳೂಣ್‌ಕರ್ ಮತ್ತು ಮಗ ಡಿ.ಪಿ ಸುದರ್ಶನ್ ಚಿಪ್ಳೂಣ್‌ಕರ್ ನೇತೃತ್ವ ಒಳಗೊಂಡಂತೆ ೧೧ ಮಂದಿ ಕಲಾವಿದರು ದೇವಳ ಕಲಾ ಕೃತಿಗಳನ್ನು ನಿರ್ಮಿಸಿದ್ದಾರೆ.
೧೧ ಅಡಿ ಎತ್ತರದ ೭ ಅಡಿ ಅಗಲದ ಹಿತ್ತಾಳೆಯ ಹೆಬ್ಬಾಗಿಲು, ೧೨ ಅಡಿ ಎತ್ತರದ ೬ ಅಡಿ ಅಗಲದ ಗರ್ಭಗುಡಿ ಬಾಗಿಲು, ಬೆಳ್ಳಿ ಪಲ್ಲಕ್ಕಿ ಇವುಗಳ ನಿರ್ಮಾಣ ಕಾರ್ಯವು ಪೂರ್ಣಗೊಂಡಿದ್ದು, ಇದೇ ತಿಂಗಳ ಕೊನೆಯ ವಾರ ದಂದು ಬೆಂಗಳೂರು-ಚೆನ್ನೈ ಬಂದರು ಮೂಲಕ ಕೆನಡಾ ದೇಶಕ್ಕೆ ತಲುಪಲಿದೆ.
ಬಾಗಿಲಿಗೆ ೨೪೦ ಕೆ.ಜಿ ಹಿತ್ತಾಳೆ, ಪಲ್ಲಕ್ಕಿಗೆ ೫೦ ಕೆ.ಜಿ ಬೆಳ್ಳಿಯನ್ನು ಉಪಯೋಗಿಸಲಾಗಿದೆ. ಇದರ ಒಟ್ಟು ಮೌಲ್ಯ ೩೫ ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತದಾರ ಡಿ.ಪಿ ಸುದರ್ಶನ ಚಿಪ್ಲೂಣ್‌ಕರ್ ತಿಳಿಸಿದ್ದಾರೆ.
ಬಾಗಿಲುಗಳ ಪೈಕಿ ಒಂದು ಚಿಲಕವನ್ನು ಅಳವಡಿಸಿದರೆ, ಮತ್ತೊಂದು ಸ್ಲೈಡಿಂಗ್‌ನದ್ದಾಗಿದೆ. ಇದರಲ್ಲಿ ವಿಶೇಷವೆಂದರೆ ವಿದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇವಳದ ಹೆಬ್ಬಾಗಿಲ ಮೇಲ್ಬಾಗದಲ್ಲಿ ಕರ್ನಾಟಕ ರಾಜ್ಯ ಲಾಂಛನವಾಗಿರುವ ಗಂಡಭೇರುಂಡ ಕಲಾಕೃತಿ ಎದ್ದು ಕಾಣುತ್ತಿದೆ. ಇದು ಕನ್ನಡಿಗರ ಹೆಮ್ಮೆಯ ಸಂಗತಿಯಾಗಿದೆ. ಉಳಿದಂತೆ ಅಷ್ಟಲಕ್ಷ್ಮೀ, ಅಷ್ಟಗಣಪತಿ, ತ್ರಿಶೂಲ, ಶಂಖ, ಚಕ್ರ, ಸ್ವಸ್ತಿಕ್, ವಿವಿಧ ಹೂಬಳ್ಳಿ, ಹೂಗಳ ಸುಂದರ ಕೆತ್ತನೆಗಳ ಕಲಾ ಕೃತಿಗಳು ಇದರಲ್ಲಿ ಮೂಡಿಬಂದಿದೆ.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

17-06-2012

Posted by JAYAKIRANA Kirana on | 0 comments | Leave a comment...

ನಿನ್ನೆ ಸುರಿದ ಭಾರಿ ಗಾಳಿ ಮಳೆಗೆ ಅತ್ತಾವರ ಬಸ್ ನಿಲ್ದಾಣದ ಸಿಮೆಂಟ್ ಶೀಟ್ ಹಾರಿಹೋಗಿದ್ದು ಕಳಪೆ ಕಾಮಗಾರಿಗೆ ಸಾಕ್ಷಿ ನುಡಿದಿದೆ.

ಏಕದಿನ ಸರಣಿಯಲ್ಲಿ ಲಂಕಾಗೆ ಮುನ್ನಡೆ

Posted by JAYAKIRANA Kirana on | 0 comments | Leave a comment...

ಪಿರೇರಾ ಹ್ಯಾಟ್ರಿಕ್ ದಾಳಿಗೆ ವ್ಯರ್ಥಗೊಂಡ ಅಜರ್ ಶ್ರಮ
ಕೊಲಂಬೊ: ಒಂದು ಹಂತದಲ್ಲಿ ಜಯದತ್ತ ಸಾಗುತ್ತಿದ್ದ ಪಾಕಿಸ್ತಾನ ನಂತರ ತಿಸಾರ ಪಿರೇರಾ ನಡೆಸಿದ ಹ್ಯಾಟ್ರಿಕ್ ದಾಳಿಗೆ ನಾಟಕೀಯ ಕುಸಿತ ಕಂಡಿದ್ದು, ಈ ಮೂಲಕ ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯವನ್ನು ಲಂಕಾ ೪೪ ರನ್‌ಗಳಿಂದ ಗೆದ್ದು ಕೊಂಡು ಐದು ಪಂದ್ಯಗಳ ಸರಣಿಯಲ್ಲಿ ೨-೧ರಿಂದ ಮುನ್ನಡೆ ಸಾಧಿಸಿದೆ. ನಾಲ್ಕು ವಿಕೆಟ್ ಪಡೆದ ಪಿರೇರಾ ಅಂತಿಮವಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇದೇ ವೇಳೆ ಅಜರ್ ಅಲಿ ಪ್ರದರ್ಶಿಸಿದ ಅರ್ಧಶತಕದ ಆಟ ವ್ಯರ್ಥಗೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಲಂಕಾಗೆ ಮಧ್ಯಮ ಕ್ರಮಾಂ ಕದಲ್ಲಿ ಕುಮಾರ ಸಂಗಾಕ್ಕರ ಆಸರೆ ಯಾದರು. ಸಂಗಾಕ್ಕರ ೧೩೦ ಎಸೆತ ಗಳಲ್ಲಿ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ ೯೭ ರನ್ ಗಳಿಸಿ ಶತಕದಿಂದ ವಂಚಿತರಾದರು. ಜಯವರ್ಧನೆ ೪೦ ರನ್ ಗಳಿಸಿದರು. ಪರಿಣಾಮ ತಂಡ ನಿಗದಿತ ೫೦ ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ೨೪೩ ರನ್‌ಗಳನ್ನು ಪೇರಿಸಿತು.
ಗುರಿ ಬೆನ್ನತ್ತಿದ್ದ ಪಾಕ್ ಒಂದು ಹಂತದಲ್ಲಿ ೩೭ ಓವರ್‌ಗಳಲ್ಲಿ ೧೬೬ ರನ್‌ಗೆ ಮೂರು ವಿಕೆಟ್ ಕಳಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಮೊಹ್ಮದ್ ಹಫೀಸ್ ಸೊನ್ನೆಗೆ ನಿರ್ಗಮಿಸಿದರೂ ಎರಡನೇ ವಿಕೆಟ್‌ಗೆ ಅಸದ್ ಶಫೀಕ್ (೨೫) ಹಾಗೂ ಅಸರ್ ಅಲಿ ೫೩ ರನ್ ಗಳ ಜೊತೆಯಾಟ ನಡೆಸಿದರು. ನಂತರ ಅಜರ್ ಜೊತೆ ಸೇರಿದ ಮಿಸ್ಬಾ (೫೭) ಮೂರನೇ ವಿಕೆಟ್‌ಗೆ ೧೧೩ ರನ್‌ಗಳ ಜೊತೆಯಾಟ ನಡೆಸಿದಾಗ ಪಾಕ್ ಜಯದ ಕನಸಿನಲ್ಲಿತ್ತು. ಆದರೆ ಪಿರೇರಾ ಎಲ್ಲವನ್ನೂ ಬದಲಾಯಿಸಿದರು. ಇನ್ನಿಂಗ್ಸ್‌ನ ೪೦ನೇ ಓವರ್‌ನ ಎರಡು, ಮೂರು ಹಾಗೂ ನಾಲ್ಕನೇ ಎಸೆತಗಳಲ್ಲಿ ಕ್ರಮಾವಾಗಿ ಯೂನಿಸ್ (೧), ಅಫ್ರಿದಿ (೦) ಹಾಗೂ ಸಫ್ರಾಸ್ (೦) ವಿಕೆಟ್ ಪಡೆದಾಗ ಲಂಕಾಗೆ ಗೆಲುವಿನ ನಿರೀಕ್ಷೆ ಮೂಡಿತು. ತನ್ವೀರ ಹಾಗೂ ಗುಲ್ ಕೂಡ ಅಲಿ ಸಾಥ್ ಕೊಡಲಿಲ್ಲ. ಆದರೆ ಕ್ರೀಸ್ ಕಾಯ್ದು ಕೊಂಡಿದ್ದ ಅಜರ್ ಅಲಿ ಹಾಗೂ ಅಜ್ಮಲ್ (೧೨) ಕೊನೆ ವಿಕೆಟ್‌ಗೆ ೨೦ ರನ್‌ಗಳ ಜೊತೆಯಾಟ ನಡೆಸಿದರೂ ಜಯಕ್ಕೆ ಕಾರಣವಾಗಲಿಲ್ಲ.

ಭೂಪತಿ-ಬೋಪಣ್ಣಗೆ ಎಐಟಿಎ ನಿಷೇಧ?

Posted by JAYAKIRANA Kirana on | 0 comments | Leave a comment...

ಪೇಸ್ ಜೊತೆ ಆಡಲು ನಿರಾಕರಣೆ ಹಿನ್ನೆಲೆ
ಬೆಂಗಳೂರು: ಒಂದು ಸಮಯ ದಲ್ಲಿ ಭಾರತೀಯ ಟೆನಿಸ್ ಲೋಕ ವನ್ನೇ ಆಳಿದ್ದ ಮಹೇಶ್ ಭೂಪತಿ ಹಾಗೂ ಪ್ರತಿಭಾವಂತ ಯುವ ಆಟಗಾರ ರೋಹನ್ ಬೋಪಣ್ಣ ಕ್ರೀಡಾ ಭವಿಷ್ಯ ಸದ್ಯ ತೂಗು ಯ್ಯಾಲೆಯಲ್ಲಿದೆ. ನಿನ್ನೆ ಪೇಸ್-ಭೂಪತಿ ಜೋಡಿಯನ್ನು ಮುಂದಿನ ಲಂಡನ್ ಒಲಿಂಪಿಕ್ಸ್‌ನಲ್ಲಿ ಜೊತೆ ಯಾಗಿ ಆಡಿಸುವ ಅಖಿಲ ಭಾರತ ಟೆನಿಸ್ ಅಸೋಸಿಯೇಶನ್ ನಿರ್ಧಾ ರಕ್ಕೆ ಭೂಪತಿ ವಿರೋಧ ವ್ಯಕ್ತಪಡಿಸಿ ದ್ದಾರೆ. ಅಲ್ಲದೆ ಬೋಪಣ್ಣ ಕೂಡ ಪೇಸ್ ಜೊತೆ ಆಡಲು ನಿರಾಕರಿಸಿ ದ್ದಾರೆ. ಹಾಗಾಗಿ ಇಬ್ಬರೂ ಆಟಗಾರ ರಿಗೆ ಎಐಟಿಎ ನಿಷೇಧ ಹೇರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ತಾನು ಆಯ್ಕೆ ಮಾಡಿದ ತಂಡದಲ್ಲಿ ಬದಲಾವಣೆ ಮಾಡಲು ಎಐಟಿಎ ನಿರಾಕರಿಸಿರುವುದು ವಿವಾದದ ಸ್ವರೂಪ ದೊಡ್ಡದಾಗುವ ಎಲ್ಲಾ ಸಾಧ್ಯತೆಯಿದೆ.
ನಿನ್ನೆ ಎಐಟಿಎ ತಂಡವನ್ನು ಆಯ್ಕೆ ಮಾಡಿದ ಮರುಕ್ಷಣವೇ ಭೂಪತಿ ಆಘಾತಕಾರಿ ಹೇಳಿಕೆಯನ್ನು ನೀಡಿ ದ್ದರು. ಒಂದು ವೇಳೆ ನನ್ನನ್ನು ಪೇಸ್ ಜೊತೆ ಆಡಲು ಹೇಳಿದರೆ ಲಂಡನ್ ಟೂರ್ನಿಯಲ್ಲಿ ನಾನು ಭಾಗವಹಿಸುವು ದಿಲ್ಲ ಈ ಬಗ್ಗೆ ನಾನು ಎಐಟಿಎಗೆ ಮೊದಲೇ ತಿಳಿಸಿದ್ದೆ. ಅಲ್ಲದೆ ಕಳೆದ ನವೆಂಬರ್ ನಂತರ ನಾನು ಪೇಸ್ ಜೊತೆ ಮಾತನಾಡಿಯೇ ಇಲ್ಲವೆಂದು ಭೂಪತಿ ಇದೇ ವೇಳೆ ತಿಳಿಸಿದ್ದರು.
ನಂತರ ಇದಕ್ಕೆ ಪ್ರತಿಕ್ರಿಯೆ ನೀಡಿದ ಎಐಟಿಎ, ನಾವು ಭೂಪತಿ ಹಾಗೂ ಬೋಪಣ್ಣ ಇಬ್ಬರಿಗೂ ಕರೆ ಮಾಡಿ ದ್ದೆವು. ಈ ವೇಳೆ ಅವರು ಜೊತೆಯಾಗಿ ಕಣಕ್ಕಿಳಿಸಿದರೆ ಮಾತ್ರ ಆಡುವುದಾಗಿ ಹಾಗೂ ಪೇಸ್ ಜೊತೆ ಆಡಲು ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿ ದ್ದಾರೆ ಎಂದು ತಿಳಿಸಿದೆ.

ಯಾರೊಂದಿಗೂ ಆಡಲು ಸಿದ್ದ: ಲಿಯಾಂಡರ್

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಯಾರ ಜೊತೆ ಆಡಬೇಕು ಎಂದು ಆಯ್ಕೆ ಸಮಿತಿ ತಿಳಿಸಿದರೆ ಅವರ ಜೊತೆ ಕೋರ್ಟ್ ಹಂಚಿಕೊಳ್ಳಲು ನಾನು ಸಿದ್ದ ಎಂದು ಲಿಯಾಂಡರ್ ಪೇಸ್ ಸ್ಪಷ್ಟಪಡಿಸಿದ್ದು, ಈ ಮೂಲಕ ಆಯ್ಕೆ ಸಮಿತಿಯ ನಿರ್ಧಾರವನ್ನು ಗೌರವಿಸಿದ್ದಾರೆ. ಪೇಸ್ ಜೊತೆ ಆಡಲು ನಾನು ಸಿದ್ದವಿಲ್ಲ ಎಂಬ ಮಹೇಶ್ ಭೂಪತಿ ಹೇಳಿಕೆಯ ನಂತರ ಈ ಪ್ರತಿಕ್ರಿಯೆ ಹೊರಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇತ್ತೀಚಿಗೆ ಭೂಪತಿ ಮಾಡಿದ ಮಾಧ್ಯಮ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಾನು ಹೋಗುವುದಿಲ್ಲ. ನಾನು ಹಿಂದಿನಿಂದಲೂ ಆಯ್ಕೆ ಸಮಿತಿಯ ನಿರ್ಧಾರವನ್ನು ಗೌರವಿಸುತ್ತಾ ಬರುತ್ತಿದ್ದು, ಮುಂದೆಯೂ ಈ ರೀತಿ ನಡೆದುಕೊ ಳ್ಳುತ್ತೇನೆ. ಮುಖ್ಯವಾಗಿ ರೋಹನ್ ಬೋಪಣ್ಣ ಒಬ್ಬ ಉತ್ತಮ ಆಟಗಾರ ಹಾಗೂ ಆತನ ಸರ್ವ್ ಅತ್ಯುತ್ತಮ. ಹಾಗಾಗಿ ಆತನ ಜೊತೆ ಮುಂದಿನ ಒಲಿಂಪಿಕ್ಸ್‌ನಲ್ಲಿ ಜೊತೆಯಾಗಿ ಆಡುವಲ್ಲಿ ನಾನು ಹೆಚ್ಚಿನ ಕುತೂಹಲ ಹೊಂದಿದ್ದೇನೆ. ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಂಡಿದ್ದು, ಜೀವನದ ಶ್ರೇಷ್ಠ ಅನುಭವ. ಇದು ನನ್ನ ಏಳನೇ ಒಲಿಂಪಿಕ್ಸ್ ಆಗಿದೆ. ದೇಶವನ್ನು ಪ್ರತಿನಿಧಿಸುವುದೆಂದರೆ ಅದಕ್ಕಿಂತ ಶ್ರೇಷ್ಠ ಸಾಧನೆ ಮತ್ತೊಂದಿಲ್ಲ ಎಂದು ಇದೇ ವೇಳೆ ಪೇಸ್ ತಿಳಿಸಿದರು.

ಪಿಂಕಿಗೆ ಎರಡು ವಾರಗಳ ನ್ಯಾಯಾಂಗ ಬಂಧನ

Posted by JAYAKIRANA Kirana on | 0 comments | Leave a comment...

ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ
ಕೊಲ್ಕತ್ತಾ: ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹೊತ್ತಿರುವ ೨೦೦೬ರ ಏಶ್ಯಡ್ ಟೂರ್ನಿ ಯ ಚಿನ್ನದ ಪದಕ ವಿಜೇತೆ ಪಿಂಕಿ ಪ್ರಾಮಾಣಿಕ್‌ಗೆ ಪಶ್ಚಿಮ ಬಂಗಾಳ ಜಿಲ್ಲಾ ಕೋರ್ಟ್ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ. ಮಹಿಳೆ ಯೊಬ್ಬಳು ಪಿಂಕಿ ವಿರುದ್ಧ ಅತ್ಯಾಚಾರ ನಡೆಸಿದ ಹಾಗೂ ಪುರುಷನೆಂಬ ಆರೋಪ ಹೊರಿಸಿದ್ದು, ಈ ಹಿನ್ನೆಲೆ ಯಲ್ಲಿ ಅಥ್ಲೀಟ್ ಬಂಧನವಾಗಿತ್ತು.
ಇದೇ ವೇಳೆ ಪಿಂಕಿ ಪಡೆದಿರುವ ಪದಕಗಳನ್ನು ಮರಳಿ ಪಡೆಯಲು ನಮಗೆ ಯಾವುದೇ ಹಕ್ಕಿಲ್ಲ ಎಂದು ಅಥ್ಲೀಟ್ಸ್ ಫೆಡರೇಶನ್ ಆಫ್ ಇಂಡಿಯಾ ನಿನ್ನೆ ತಿಳಿಸಿದೆ. ನಾವು ವಿಶ್ವ ಅಥ್ಲೀಟ್ಸ್ ಮಹಾಮಂಡಲಿಯ ಸಮಿತಿಯ ಕೆಲವು ನಿಯಮಗಳನ್ನು ನೋಡಿದ್ದು, ಅಲ್ಲಿ ನಿವೃತ್ತಿ ಹೊಂದಿರುವ ಅಥ್ಲೀಟ್ಸ್‌ಗಳ ಪದಕಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಆಕೆ ಪದಕ ಗೆದ್ದಾಗ ಮಹಿಳೆಯಾಗಿದ್ದು, ಈಗ ಪುರುಷ ಹಾರ್ಮೋನ್‌ಗಳ ಪತ್ತೆಯಾಗಿದೆ. ಆದರೆ ಈಗ ಆಕೆ ಕ್ರೀಡೆಯಿಂದ ದೂರಸರಿದಾ ಗಿದೆ. ಅಲ್ಲದೆ ಈಗಲೂ ಪಿಂಕಿ ಮಹಿಳೆ ಯಲ್ಲ ಎಂದು ಸಾಬೀತಾಗಿಲ್ಲ ಎಂದು ಅಥ್ಲೀಟ್ಸ್ ಫೆಡರೇಶನ್ ಆಫ್ ಇಂಡಿಯಾ ತಿಳಿಸಿದೆ.

ಡಿ.ವಿ.ಗೆ ತಿರುಗೇಟು ನೀಡಿದ ತಮಿಳು ಕಾರ್ಮಿಕರು

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಬಿಜೆಪಿ ಪಕ್ಷದಲ್ಲಿದ್ದ ಸುಳ್ಯ ತಮಿಳು ಕಾರ್ಮಿಕ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ರಾಜಕೀಯ ವಿದ್ಯಮಾನವೊಂದು ಬಂಟ್ವಾಳದಲ್ಲಿ ನಿನ್ನೆ ನಡೆಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ ಸಮ್ಮುಖದಲ್ಲಿ ಸುಳ್ಯ ಬಿಜೆಪಿ ಮುಖಂಡ, ಮಾಜಿ ಜಿ.ಪಂ. ಸದಸ್ಯ ಹಾಗೂ ಟಿಟಿಎಸ್ ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರ ಲಿಂಗಂ ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪ್ರವೇಶಿಸುವ ಮೂಲಕ ಬಿಜೆಪಿ ವರಿಷ್ಠರಿಗೆ ಅಚ್ಚರಿ ಮೂಡಿಸಿದ್ದಾರೆ.
ಬಿಜೆಪಿ ತೊರೆದ ಚಂದ್ರಲಿಂಗಂ ಹಾಗೂ ಸಂಘದ ಸುಮಾರು ೨೦ ಮಂದಿ ಪದಾಧಿಕಾರಿಗಳನ್ನು ನಿನ್ನೆ ಬಂಟ್ವಾಳ ಕಾಂಗ್ರೆಸ್ ಕಚೇರಿಯಲ್ಲಿ ರಮಾನಾಥ ರೈ ಅವರು ಔಪಚಾರಿಕ ವಾಗಿ ಸ್ವಾಗತಿಸಿದರು.
ಥೋಮಸ್ ಬೆಂಗಮಲೆ, ಮೋಹನ್ ಸುರೇಂದ್ರ ಬೆಂಗಮಲೆ, ಸನ್ಮುಖ ಬೆಂಗಮಲೆ, ಮಾಡಪ್ಪ ಬೆಂಗಮಲೆ, ಅಂಗಮುತ್ತು ಕಡಬ, ಶಿವ ಮುತ್ತು ಕಡಬ, ಸತ್ಯ ಶೀಲನ್ ಕಡಬ, ಸೆಂದಿಲ್ ಕುಮಾರ್ ಕಡಬ, ನಾರಾಯಣ ಸ್ವಾಮಿ ಕಡಬ, ಮಂಜೇಶ್ವರ ಕಡಬ, ಜೀವರತ್ನಂ ಸುಳ್ಯ, ಚಂದ್ರಶೇಖರ್ ನಿಡುಬೆ, ಜಿ.ಸುಬ್ರಹ್ಮಣ್ಯ ನಿಡುಬೆ, ಸೆಲ್ವರಾಜ್ ನಿಡುಬೆ, ಯೋಗ ರಾಜ್, ಬಾಲಚಂದ್ರ ಅವರನ್ನು ರೈ ಸ್ವಾಗತಿಸಿದರು.

ಬಿಜೆಪಿಗಾಗಿ ೨೫ ವರ್ಷ ದುಡಿದೆ:
ಈ ಸಂದರ್ಭ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸುಳ್ಯ ಬಿಜೆಪಿ ಮುಖಂಡ ಎ.ಎಸ್. ಚಂದ್ರ ಲಿಂಗಂ ಮಾತನಾಡಿ ಈ ಬೆಳವಣಿಗೆ ಬಿಜೆಪಿಗೆ ಹಿನ್ನಡೆ ಆಗಲಿದೆ ಎಂದರು. ಕಳೆದ ಸುಮಾರು ೨೫ವರ್ಷ ಬಿಜೆಪಿ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿ ದಿದ್ದೇನೆ. ಗ್ರಾ.ಪಂ., ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರಗಳನ್ನು ಪ್ರತಿನಿಧಿಸಿದ್ದು ಪಕ್ಷವನ್ನು ಗ್ರಾಮೀಣ ಪ್ರದೇಶದಲ್ಲಿ ಸಂಘಟಿಸಿದ್ದೇವೆ.
ಆದರೆ ನಮ್ಮ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ಇದುವರೆಗೂ ಏನೂ ಯೋಜನೆ ಹಮ್ಮಿಕೊಂಡಿಲ್ಲ. ಈ ಕುರಿತು ಸರ್ಕಾರ ಪ್ರತಿನಿಧಿಗಳು ಭರವಸೆ ಯನ್ನೇ ನೀಡುತ್ತಾ ಬಂದಿದ್ದರು. ನಮ್ಮನ್ನು ಕಡೆಗಣಿಸಲಾಗಿದೆ. ಇದನ್ನು ವಿರೋಧಿಸಿ, ನಾವೆಲ್ಲ ಕಾಂಗ್ರೆಸ್‌ಗೆ ಸೇರಿದ್ದು, ಇದೊಂದು ಔಪಚಾರಿಕ ಕಾರ್ಯಕ್ರಮ. ಸದ್ಯದಲ್ಲೇ ನಮ್ಮ ಸಮಾಜದವರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದರು.

ಕೇಂದ್ರ ಸರಕಾರದ ವಿರುದ್ಧ ಬಿಜೆಪಿ ಅಭಿಯಾನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ರಾಜಕೀಯ ಸಂಘರ್ಷಕ್ಕೆ ಬಿದ್ದಿರುವ ಭಾರತೀಯ ಜನತಾ ಪಾರ್ಟಿ ಕೇಂದ್ರ ಸರಕಾರದ ವಿರುದ್ಧ ಎರಡು ಅಭಿಯಾನಗಳ ಬಾಣ ಪ್ರಯೋಗಿಸಿದೆ.
ಕೇಂದ್ರ ಸರಕಾರದ ಹೊಣೆಗೇಡಿ ಆರ್ಥಿಕ ನೀತಿಗಳು, ತಪ್ಪು ರಾಜಕೀಯ ನಿರ್ಧಾರಗಳು, ಪೆಟ್ರೋಲ್ ಹಾಗೂ ಇನ್ನಿತರ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಜೂನ್ ೭ರಿಂದ ೨೨ರವರೆಗೆ ಜನಸಂಘರ್ಷ ಅಭಿಯಾನ ಮತ್ತು ರಸ್ತೆ ತಡೆ ಮೂಲಕ ಜೈಲ್ ಭರೋ ಕಾರ್ಯಕ್ರಮ ದೇಶದಾದ್ಯಂತ ನಡೆಸಲು ಯೋಜನೆ ರೂಪಿಸಿದ್ದು, ಈ ಕಾರ್ಯಕ್ರಮ ಜಿಲ್ಲೆಯಲ್ಲೂ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ತಿಳಿಸಿದರು.
ಇದಲ್ಲದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕಾಶ್ಮೀರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಚಿಸಿದ ತ್ರಿಸದಸ್ಯ ಸಮಿತಿಯು ಕೇಂದ್ರ ಗೃಹ ಸಚಿವಾಲಯಕ್ಕೆ ದೇಶ ವಿರೋಧಿ ವರದಿಯನ್ನು ಸಲ್ಲಿಸಿದೆ. ದೇಶದ ಹಿತ ದೃಷ್ಟಿಕೋನವನ್ನು ಇಟ್ಟುಕೊಂಡು ಈ ವರದಿಯನ್ನು ತಯಾರಿಸಲಾಗಿಲ್ಲ ಹೀಗಾಗಿ ಇದನ್ನು ಕೂಡಲೇ ತಿರಸ್ಕರಿಸಬೇಕೆಂದು ಒತ್ತಾಯಿಸಿ ಮತ್ತು ಕಾಶ್ಮೀರವನ್ನು ಭಾರತದಲ್ಲಿಯೇ ಉಳಿಸುವುದಕ್ಕಾಗಿ ಜೂನ್ ೨೩ ರಿಂದ ಜುಲೈ ೬ರವರೆಗೆ ಜನಜಾಗರಣಾ ಅಭಿಯಾನ ನಡೆಸಲಿದೆ ಎಂದು ಕೊಟ್ಟಾರಿ ತಿಳಿಸಿದರು.

ವಿಟ್ಲ ರಸ್ತೆ ವಿಸ್ತರಣೆಗೆ ಇನ್ನೂ ದಿನ ನಿಗದಿಯಾಗಿಲ್ಲ ಸುಳ್ಳಾಯಿತೇ ಜಿಲ್ಲಾಧಿಕಾರಿಯವರ ಆಶ್ವಾಸನೆ?

Posted by JAYAKIRANA Kirana on | 0 comments | Leave a comment...

ವಿಟ್ಲ: ವಿಟ್ಲ ಜನತೆಯ ಬಹುದಿನದ ಬೇಡಿಕೆಯಾಗಿದ್ದ ವಿಟ್ಲ ರಸ್ತೆ ವಿಸ್ತರಣೆಗೆ ಇನ್ನೂ ದಿನ ನಿಗದಿಯಾಗಿಲ್ಲ. ಇದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾರದ ಹಿಂದೆ ವಿಟ್ಲದ ಕುರುಂಬಳ ಎಂಬ ಪ್ರದೇಶಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಅವರು ಜೂನ್ ೧೪ರವರೆಗೆ ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಜೂನ್ ೧೫ರ ಬಳಿಕ ವಿಟ್ಲದಲ್ಲಿ ಜನಪ್ರತಿನಿಧಿಗಳ, ವಿವಿಧ ಇಲಾಖೆಗಳ ಸಭೆ ಕರೆದು ವಿಟ್ಲ ರಸ್ತೆ ಅಗಲೀಕರಣ ವಿಚಾರವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಈ ಕೂಡಲೇ ಮೆಸ್ಕಾಂ ಇಲಾಖೆ ಕಂಬಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಬೇಕು. ಚರಂಡಿ ಕಾಮಗಾರಿ ನಡೆಯಬೇಕೆಂದು ತಿಳಿಸಿದ್ದರು. ಇದೀಗ ಜೂನ್೧೬ ಕಳೆದರೂ ಜಲ್ಲಾಧಿಕಾರಿ ಅವರ ಪತ್ತೆಯಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ದಟ್ಟ ನೆಯ ಟ್ರಾಫಿಕ್‌ನಿಂದ ರೋಸಿ ಹೋಗಿದ್ದ ವಿಟ್ಲದ ಜನತೆ ಜಿಲ್ಲಾಧಿಕಾರಿಗಳ ಭರವಸೆ ಯನ್ನು ನೋಡಿ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಜಿಲ್ಲಾಧಿಕಾರಿಗಳು ಯಾವಾಗ ಸಭೆ ಕರೆಯುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಜನತೆ ಇದೀಗ ಚಿಂತೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ಹಿಂದೆ ಇದೇ ರೀತಿ ೩,೪ ಬಾರಿ ರಸ್ತೆ ವಿಸ್ತರಣೆ ವಿಚಾರವಾಗಿ ಸಭೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಸಭೆ ಮಾತ್ರ ಇದೂವರೆಗೂ ನಡೆಯಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಗ್ರಾಮ ಪಂಚಾಯತ್ ಅನುದಾನದಿಂದ ಬಿಡುಗಡೆಯಾದ ೧ಲಕ್ಷ ರೂಪಾಯಿ ಹಣದಲ್ಲಿ ಶುಕ್ರವಾರ ರಾತ್ರಿಯಿಂದಲೇ ವಿಟ್ಲದ ಮುಖ್ಯ ರಸ್ತೆಯ ಚರಂಡಿ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ. ಒಂದೆಡೆ ಆಡಳಿತ ಪಕ್ಷ, ಇನ್ನೊಂದೆಡೆ ವಿರುದ್ಧ ಪಕ್ಷ ಧ್ವನಿ ಎತ್ತುತ್ತಿಲ್ಲವೆಂದು ಸಾರ್ವ ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಯ ಅಶ್ವಾಸನೆ ಸುಳ್ಳಾ ಯಿತೇ ಎಂಬ ಅನುಮಾನ ಕಾಡುತ್ತಿದೆ.

ಸಾಕು ಎಮ್ಮೆ ಸಾಗಾಟಕ್ಕೆ ಶ್ರೀರಾಮಸೇನೆ ತಡೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸಾಕಲೆಂದು ಎಮ್ಮೆ ಯನ್ನು ಖರೀದಿಸಿ ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ತಪ್ಪು ಮಾಹಿತಿ ಪಡೆದ ಶ್ರೀರಾಮ ಸೇನೆ ಕಾರ್ಯಕರ್ತರು ಪಿಕಪನ್ನು ತಡೆದು ನಿಲ್ಲಿಸಿ ರಾದ್ದಾಂತ ಸೃಷ್ಠಿಸಿದ ಘಟನೆ ನಿನ್ನೆ ಮಧ್ಯಾಹ್ನ ನೀರುಮಾರ್ಗ ಅಡ್ಯಾರು ಬಳಿ ಸಂಭವಿಸಿದೆ.
ಐವನ್ ಡಿ ಸೋಜಾ ಎಂಬವರು ಸಾಕುವ ಉದ್ದೇಶದಿಂದ ಹಾಲು ಕರೆಯುವ ಎಮ್ಮೆಯನ್ನು ಖರೀದಿಸಿ ಅದನ್ನು ಜಯಪ್ರಕಾಶ್ ಎಂಬವರ ಪಿಕಪ್ ವಾಹನದಲ್ಲಿ ಮನೆಗೆ ತರುತ್ತಿ ದ್ದರು. ಈ ಬಗ್ಗೆ ಯಾರೋ ಶ್ರೀರಾಮ ಸೇನೆಯವರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಪಿಕಪಲ್ಲಿ ದನ ಸಾಗಾಟ ವಾಗುತ್ತಿದೆ ಎನ್ನುವ ಸುದ್ದಿ ನೀರುಮಾರ್ಗ ಅಡ್ಯಾರು ಪರಿಸರದಲ್ಲಿ ಹರಡಿ ಶ್ರೀರಾಮ ಸೇನೆ ಕಾರ್ಯಕರ್ತರು ವಾಹನವನ್ನು ತಡೆದು ನಿಲ್ಲಿಸಿ ಮಂಗಳೂರು ಗ್ರಾಮಾಂ ತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಅದು ಸಾಕ ಲೆಂದು ತೆಗೆದುಕೊಂಡು ಹೋಗುತ್ತಿ ರುವ ಎಮ್ಮೆ ಎನ್ನುವುದು ದೃಢಪಟ್ಟಿತ್ತು. ಪೊಲೀಸರು ಎಮ್ಮೆಯನ್ನು ಐವನ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ.

ಮಂಜೇಶ್ವರ: ಕಂಟೈನರ್‌ಗೆ ಬೆಂಕಿ

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ೬೬ರ ಮಂಜೇಶ್ವರ ಪೊಸೋಟ ಪೆಟ್ರೋಲ್ ಬಂಕ್ ಬಳಿ ಸರಕು ಹೇರಿಕೊಂಡು ತೆರಳು ತ್ತಿದ್ದ ಕಂಟೈನರೊಂದಕ್ಕೆ ಸಾಗಾಟ ಮಧ್ಯೆ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದೆ. ಸಾಯಿರಾಂ ಲಾಜಿಸ್ಟಿಕ್ ಲಿಮಿಟೆಡ್‌ನ ಎಚ್.ಆರ್ ೪೬ ಸಿ ೩೦೭೭ ನಂಬ್ರದ ಕಂಟೈನರ್ ಇದಾಗಿದ್ದು, ಇದರಲ್ಲಿ ದೆಹಲಿಯಿಂದ ಕೊಚ್ಚಿಗೆ ಸರಕು ಸಾಗಿಸಲಾಗುತ್ತಿತ್ತೆಂದು ತಿಳಿದುಬಂದಿದೆ. ಕಂಟೈನರ್‌ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಸಂದರ್ಭ ಚಾಲಕ ಕಂಟೈನರ್ ನಿಲ್ಲಿಸಿದ್ದು, ಉಪ್ಪಳ ಹಾಗೂ ಕಾಸರಗೋಡಿನಿಂದ ಬಂದ ಎರಡು ಅಗ್ನಿ ಶಾಮಕ ದಳ ಹಾಗೂ ಸ್ಥಳೀಯರ ನೆರವಿನಿಂದ ಸುಮಾರು ೩ ತಾಸಿನ ಪ್ರಯತ್ನದಿಂದ ಕಂಟೈನರ್‌ನಲ್ಲಿದ್ದ ಸರಕುಗಳನ್ನು ಹೊರತೆಗೆಯುವ ಮೂಲಕ ಬೆಂಕಿಯನ್ನು ನಂದಿಸಿ ದೊಡ್ಡ ಅಪಾಯವನ್ನು ತಪ್ಪಿಸಿದ್ದಾರೆ. ಇದರಿಂದಾಗಿ ಸುಮಾರು ಒಂದೂವರೆ ತಾಸುಗಳ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿತ್ತು. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದಾಗಿ ಬೆಂಕಿ ಅನಾಹುತ ಸಂಭವಿಸಿರಬೇಕೆಂದು ಶಂಕಿಸಲಾಗಿದೆ.

ಆಸ್ತಿಯ ಕ್ರಮಬದ್ಧ ದಾಖಲೆಗೆ ಹೊಸ ತಂತ್ರ : ಪೊನ್ನುರಾಜ್

Posted by JAYAKIRANA Kirana on | 0 comments | Leave a comment...

ಮಂಗಳೂರು : ನಗರ ವ್ಯಾಪ್ತಿಯ ಆಸ್ತಿಗಳಿಗೆ ಹಕ್ಕು ದಾಖಲೆಗಳನ್ನು ರೂಪಿಸುವ ಸಲುವಾಗಿ ಭೂಮಾಪನ ಇಲಾಖೆಯಲ್ಲಿ ಜಾರಿಯಲ್ಲಿರುವ ಭೂ ಕಂದಾಯ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಪ್ರಾಯೋಗಿಕವಾಗಿ ನಗರ ಮಾಪನ ಯೋಜನೆ (ಯುಪಿಒಆರ್)ಗೆ ಸಾರ್ವಜನಿಕರು ಸಹಕರಿಸ ಬೇಕು ಎಂದು ರಾಜ್ಯ ಕಂದಾಯ ಇಲಾಖೆಯ ಕಾರ್ಯದರ್ಶಿ ಪೊನ್ನುರಾಜ್ ಮನವಿ ಮಾಡಿದ್ದಾರೆ.
ಪ್ರಥಮ ಹಂತದಲ್ಲಿ ಪ್ರಾಯೋಗಿ ಕವಾಗಿ ಈ ಯೋಜನೆಯನ್ನು ಮೈಸೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ- ಧಾರವಾಡ ಮತ್ತು ಬಳ್ಳಾರಿಗಳಲ್ಲಿ ಖಾಸಗಿ ಸಂಸ್ಥೆಯಾದ ಇನ್‌ಫೋಟೆಕ್ ಸಹಭಾಗಿತ್ವದಲ್ಲಿ ಆರಂಭಿಸಲಾಗಿದೆ ಎಂದರು.
ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು ಸಮರ್ಪಕವಾಗಿವೆ. ಆದರೆ ನಗರ ಆಸ್ತಿಗೆ ಯಾವುದೇ ಹಕ್ಕು ದಾಖಲೆ ಇಲ್ಲದಿ ರುವುದರಿಂದ ಸಾರ್ವಜನಿಕರು ಖಾತಾ ದಾಖಲೆಯನ್ನು ಹಕ್ಕು ದಾಖಲೆ ಎಂದು ಪರಿಗಣಿಸಲಾಗುತ್ತಿದೆ. ಆರ್‌ಟಿಸಿ ಬಹು ಅಂತಸ್ತಿನ ಕಟ್ಟಡಗಳಿಗೆ ಲಭ್ಯವಿರುವು ದಿಲ್ಲ. ಜಮೀನಿಗೆ ಮಾತ್ರ ಲಭ್ಯವಾಗಿರು ತ್ತದೆ. ಇನ್ನು ಮುಂದೆ ಭೂಪರಿವರ್ತಿತ ಜಮೀನಿಗೆ ಆರ್‌ಟಿಸಿಯನ್ನು ಸ್ಥಗಿತ ಗೊಳಿಸಲಾಗುವುದು. ಭೂಪರಿವರ್ತಿತ ನಕ್ಷೆಯನ್ನು ಇನ್ನು ಮುಂದೆ ಯುಪಿಆರ್‌ನಿಂದ ತಯಾರಿಸಲಾ ಗುವುದು. ಮುಂದೆ ಎಲ್ಲಾ ಭೂ ವ್ಯವ ಹಾರಗಳಿಗೆ ಪಿಆರ್ ಕಾರ್ಡ್ ಕಡ್ಡಾಯ ವಾಗಲಿದೆ.
ಇದರಿಂದಾಗಿ ಆಸ್ತಿಗಳ ಮಾರಾಟದ ಸಂದರ್ಭದಲ್ಲಿ ಪರಸ್ಪರ ಮೋಸ ಹೋಗುವುದು ತಪ್ಪಲಿದ್ದು ಅಕ್ರಮ ನೋಂದಣಿ ಕಾರ್ಯ ನಿಯಂ ತ್ರಿಸಬಹುದಾಗಿದೆ. ಗುತ್ತಿಗೆ ಅಡಮಾನಕ್ಕೆ ಒಳಪಡುವ ಆಸ್ತಿಗಳ ಮಾಹಿತಿ ಸಂಗ್ರ ಹಣೆ ಮತ್ತು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದರು
ಮಂಗಳೂರು ನಗರದಲ್ಲಿ ಅಂದಾಜು ೨ ಲಕ್ಷ ಆಸ್ತಿಗಳನ್ನು ಈ ಯೋಜನೆಗೆ ಒಳಪಡಿಸಲಾಗುವುದು. ಹೈದರಾಬಾದ್‌ನ ಇನ್‌ಫೋಟೆಕ್ ಎಂಟರ್‌ಪ್ರೈಸಸ್ ಲಿಮಿಟೆಡ್ ಎಂಬ ಖಾಸಗಿ ಸರ್ವೆ ಕಂಪನಿಯು ಇಲಾ ಖೆಯ ಸಹಯೋಗೊಂದಿಗೆ ಕಾರ್ಯ ನಿರ್ವಹಿಸಲಿದೆ. ಸಂಸ್ಥೆಯು ಎಲ್ಲಾ ಆಸ್ತಿಗಳನ್ನು ಅಳತೆ ಮಾಡಿ, ನಕ್ಷೆ ತಯಾ ರಿಸಿ ಆಸ್ತಿಗಳಿಗೆ ಸಂಬಂಧಿಸಿದಂತೆ ಮಾಲಕತ್ವದ ಮಾಹಿತಿಯನ್ನು ಎಲ್ಲಾ ಮೂಲಗಳಿಂದ ಸಂಗ್ರಹಿಸಿ ಮಾಹಿತಿ ಕೋಶ ಸಿದ್ಧಪಡಿಸಲಿದೆ ಎಂದವರು ತಿಳಿಸಿದರು.

ಕಾಪು ಪರಿಸರದಲ್ಲಿ ಕಳ್ಳತನ: ಪೊಲೀಸರ ನಿರಾಸಕ್ತಿ

Posted by JAYAKIRANA Kirana on | 0 comments | Leave a comment...

ಕಾಪು: ಇಲ್ಲಿಯ ಠಾಣಾ ವ್ಯಾಪ್ತಿ ಯಲ್ಲಿ ದಿನ ನಿತ್ಯ ಎಂಬಂತೆ ಕಳ್ಳತನ ನಡೆಯುತ್ತಿದ್ದರೂ, ಕಾಪು ಪೊಲೀಸರು ಸೂಕ್ತ ಬಂದೋಬಸ್ತನ್ನು ವಹಿಸುವಲ್ಲಿ ನಿರಾಸಕ್ತಿ ವಹಿಸುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಕಾಪು ಪರಿಸರದಲ್ಲಿ ಕಳ್ಳರ ಕೈಚಳಕ ಮಾಮೂಲಿ ಸಂಗತಿ ಎನಿಸಿದೆ. ಮೂರು ದಿನಗಳ ಹಿಂದೆ ಕಾಪು ಬಳಿಯ ಉಳಿಯಾರ ಗೋಳಿ ದಂಡತೀರ್ಥ ಮಠದ ಸಮೀಪದ ನಿವಾಸಿ ಶುಭಾವತಿಯವರು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದ ಸಂದರ್ಭ ಅವರ ಮನೆಯ ಎದುರಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ಮೂರು ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿ ದ್ದಾರೆ.
 ಗುರುವಾರ ರಾತ್ರಿ ಮೂಳೂರಿನ ಮನೆಯೊಂದಕ್ಕೆ ಕಳ್ಳರು ನುಗ್ಗಿದ್ದು, ಮನೆಯೆಲ್ಲಾ ಜಾಲಾಡಿ ಏನೂ ಸಿಗದ ಕಾರಣ ಅಲ್ಲಿಂದ ಹೊರಟು ಹೋಗಿ ದ್ದಾರೆ. ಮನೆಯ ಮಾಲಕ ಬೆಂಗಳೂ ರಿನಲ್ಲಿದ್ದು, ಕಾಪು ಠಾಣೆಗೆ ದೂರು ನೀಡಲು ಅವರು ಹಿಂದೇಟು ಹಾಕಿ ದ್ದಾರೆ. ಅದೇ ದಿನ ಮೂಳೂರಿನ ಕಾರ್ಪೋರೇಶನ್ ಬ್ಯಾಂಕ್ ಸಮೀಪದ ಪಂಚಮಿ ಕಾಂಪ್ಲೆಕ್ಸ್‌ನ ಸತೀಶ್ ಚಂದ್ರ ಹೆಗ್ಡೆ ಎಂಬವರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದನ್ನು ದೋಚಿ ದ್ದರು. ಮನೆಗೆ ಬೀಗ ಹಾಕಿ ಸತೀಶ್ ಚಂದ್ರ ಹೆಗ್ಡೆಯವರು ಜೂನ್ ೧೧ರಂದು ಶಿರ್ಡಿ ಸಾಯಿಬಾಬಾ ದರ್ಶನಕ್ಕೆ ತೆರಳಿದ್ದರು. ಶುಕ್ರವಾರ ಸಂಜೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ಆಗಿದ್ದು ಗೊತ್ತಾಗಿದೆ.
ಮೂಳೂರು ಸಮೀಪ ಲಾರಿ ಯೊಂದನ್ನು ತಡೆದು ಚಾಲಕನಲ್ಲಿದ್ದ ಹಣ ಹಾಗೂ ಮೊಬೈಲ್ ಕಳ್ಳತನ ಮಾಡಿದ ಬಗ್ಗೆಯೂ ದೂರು ದಾಖಲಾಗಿದೆ. ಬುಧವಾರ ರಾತ್ರಿ ಮಟ್ಟು ಗ್ರಾಮದ ದುಗ್ಗುಪಾಡಿ ಎಂಬಲ್ಲಿಯ ಗುರು ಕೃಪಾ ಮನೆಯ ಆಂಗಣz ಲ್ಲಿರಿಸಿದ ಪಲ್ಸರ್ ಬೈಕೊಂದು ಕಳ್ಳತನ ಆಗಿದೆ ಎಂದು ನಿತಿನ್ ಅಂಚನ್ ಎಂಬವರುಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾಪು ಪೋಲೀಸರು ರಾತ್ರಿ ಗಸ್ತನ್ನು ಹೆಚ್ಚಿಸಿ ಕಳ್ಳತನಕ್ಕೆ ಕಡಿವಾಣ ಹಾಕ ಬೇಕೆಂದು ಸಾರ್ವಜನಿಕರು ಆಗ್ರಸಿದ್ದಾರೆ.

ಶಿರ್ವ ಕಾಲೇಜು ಪ್ರಾಂಶುಪಾಲರ ರಾಜಿನಾಮೆ ಹಿಂಪಡೆಯಲು ಆಗ್ರಹಿಸಿ ಜಾಥಾ

Posted by JAYAKIRANA Kirana on | 0 comments | Leave a comment...

ಶಿರ್ವ: ಇಲ್ಲಿಯ ಎಂಎಸ್‌ಆರ್ ಎಸ್ ಕಾಲೇಜು ಪ್ರಾಂಶುಪಾಲ ಮತ್ತು ಆಡಳಿತ ಮಂಡಳಿಯ ಶೀತಲ ಸಮರ ಇದೀಗ ಬೀದಿಗೆ ಬಂದಿದೆ.
ಶಿರ್ವದ ಎಂಎಸ್‌ಆರ್‌ಎಸ್ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲ ಡಾ.ಸುಧಾಕರ ಮಾರ್ಲರ ನಡುವೆ ಕೆಲದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಈ ಗಲಾಟೆಯಲ್ಲಿ ಡಾ.ಸುಧಾಕರ ಮಾರ್ಲರವರು ರಾಜಿನಾಮೆ ನೀಡಿ ಹೊರಬಂದಿದ್ದರು. ಕಾಲೇಜಿನಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದ ಮಾರ್ಲರಲ್ಲಿ ಇಲ್ಲಿಯ ವಿದ್ಯಾರ್ಥಿಗಳು ಅತ್ಯುತ್ತಮ ಬಾಂಧವ್ಯದಿಂದಿದ್ದರು. ಮಾರ್ಲರವರು ರಾಜಿನಾಮೆ ನೀಡಿ ದ್ದಾರೆ ಎಂಬ ಸುದ್ದಿಯಿಂದ ಕೆರಳಿದ ವಿದ್ಯಾರ್ಥಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ರಾಜಿನಾಮೆ ಹಿಂದೆ ಪಡೆಯಬೇಕೆಂದು ಆಡಳಿತ ಮಂಡ ಳಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳು ತರಗತಿ ಬಹಿಷ್ಕ ರಿಸಿ ಕಾಲೇಜಿನಿಂದ ಶಿರ್ವದ ಗಣಪತಿ ಪೆಂಡಾಲ್‌ವರೆಗೆ ಪ್ರತಿಭಟನೆ ನಡೆಸಿದರು.

‘ಹಿಂದುತ್ವದ ಕಾರ‍್ಯದಿಂದಲೇ ಸನಾತನ ಸಂಸ್ಥೆಗೆ ನಿರ್ಬಂಧ ಹೇರುವ ಯತ್ನ’

Posted by JAYAKIRANA Kirana on | 0 comments | Leave a comment...

ಮಂಗಳೂರು: ಹಿಂದುತ್ವದ ಕಾರ‍್ಯ ಮಾಡುತ್ತಿರುವುದರಿಂದಲೇ ಮಹಾರಾಷ್ಟ್ರ ಸರ್ಕಾರದ ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರಲಾಗುತ್ತಿದೆ ಎಂದು ಸನಾತನ ಸಂಸ್ಥೆಯ ವಿರೇಂದ್ರ ಮರಾಠೆ ಆರೋಪಿಸಿದ್ದಾರೆ.
ಸನಾತನ ಸಂಸ್ಥೆಯು ಸಮಾಜ ಸಹಾಯ, ರಾಷ್ಟ್ರರಕ್ಷಣೆ ಮತ್ತು ಧರ್ಮ ಜಾಗೃತಿ ಇವುಗಳಿಗಾಗಿ ಕಳೆದ ೨೨ ವರ್ಷಗಳಿಂದ ಕಾರ‍್ಯ ನಿರ್ವಹಿಸುತ್ತಿದೆ. ಸನಾತನದ ಎಲ್ಲಾ ಕಾರ‍್ಯಗಳೂ ಕಾನೂನು ಮಾರ್ಗದಿಂದಲೇ ನಡೆಯುತ್ತಿದೆ. ಈಗಿದ್ದರೂ ಮಹಾರಾಷ್ಟ್ರ ಸರ್ಕಾರದ ಗೃಹ ಇಲಾಖೆಯೂ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪತ್ರ ಕಳುಹಿಸಿ ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರುವ ಶಿಫಾರಸ್ಸು ಮಾಡಿದೆ. ಕಾಂಗ್ರೆಸ್ ಸರ್ಕಾರವು ಸನಾತನವನ್ನು ಹತ್ತಿಕ್ಕುವ ಯತ್ನ ನಡೆಸುತ್ತಿದ್ದು, ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸನಾತನವು ಹಿಂದುತ್ವ ಕಾರ್ಯವನ್ನು ಮಾಡುತ್ತಿರು ವುದರಿಂದಲೇ ಕಾಂಗ್ರೆಸ್ ಸರ್ಕಾರವು ಸನಾತನದ ಮೇಲೆ ನಿರ್ಬಂಧ ಹೇರುವ ಹೀನ ಯತ್ನ ಮಾಡಿದೆ ಎಂದು ಆರೋಪಿಸಿರುವ ವಿರೇಂದ್ರ ಮರಾಠ, ಈಶ್ವರನ ಆಶೀರ್ವಾದ ಮತ್ತು ರಾಷ್ಟ್ರ ಹಾಗೂ ಧರ್ಮಪ್ರೇಮಿ ಇವರ ಬೆಂಬಲದ ಬಲದಿಂದ ಸನಾತನವು ಇದರಂದಲೂ ಮೇಲೆದ್ದು ಬರುತ್ತದೆ ಎಂದವರು ಭರವಸೆ ವ್ಯಕ್ತಪಡಿಸಿದ್ದಾರೆ.

ಸಚಿವ ನಿರಾಣಿಯಿಂದ ರೈತನಿಗೆ ಕಪಾಳಮೋಕ್ಷ!

Posted by JAYAKIRANA Kirana on | 0 comments | Leave a comment...

ಬಾಗಲಕೋಟೆ: ಸಚಿವರ ವಾಹನಕ್ಕೆ ಅಡ್ಡ ಬಂದ ಎಂಬ ಕಾರಣಕ್ಕೆ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮತ್ತು ಬೆಂಬಲಿಗರು ರೈತನೊಬ್ಬನಿಗೆ ಕಪಾಲ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರಿನಲ್ಲಿ ಈ ಘಟನೆ ನಡೆದಿದ್ದು, ರೈತ ಶಿವಾನಂದ ಸಂಸಾಣಿ ಸಚಿವರಿಂದ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಸಚಿವರಿಂದ ಹಲ್ಲೆಗೊಳಗಾದ ರೈತ ಶಿವಾನಂದ ಸಚಿವರ ವಿರುದ್ಧ ದೂರು ನೀಡಲು ಮುಂದಾಗಿದ್ದರೂ ಪೊಲೀಸರೂ ದೂರು ಸ್ವೀಕರಿಸಲಿಲ್ಲ.
ಸಚಿವ ನಿರಾಣಿ ವರ್ತನೆಯನ್ನು ಖಂಡಿಸಿ ಮಂಟೂರು ಗ್ರಾಮಸ್ಥರು ಮಾತ್ರವಲ್ಲದೆ ರಾಜ್ಯದ ಅಲ್ಲಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಆರೋಪ ತಳ್ಳಿ ಹಾಕಿದ ನಿರಾಣಿ: ಕಪಾಳಮೋಕ್ಷ ಮಾಡುವ ಕೆಲಸ ನಾನು ಮಾಡಿಲ್ಲ ಎಂದು ಆರೋಪವನ್ನು ನಿರಾಣಿ ತಳ್ಳಿ ಹಾಕಿದ್ದಾರೆ.

ಯುವಕನ ಕೊಲೆ: ಆರೋಪಿಗಳಿಗೆ ಮುಂದುವರಿದ ಶೋಧ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕ್ಷುಲ್ಲಕವಾದ ಪೂರ್ವ ದ್ವೇಷವನ್ನೇ ಗುರಿಯಾ ಗಿಟ್ಟುಕೊಂಡು ಯುವಕನನ್ನು ಚೂರಿಯಿಂದ ಇರಿದು ಕೊಲೆಗೈದ ಆರೋಪಿಗಳು ನಾಪತ್ತೆಯಾಗಿದ್ದು ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.
ಯುವಕನನ್ನು ಚೂರಿಯಿಂದ ಇರಿದು ಗಾಯಗೊಳಿಸಿದಾಗಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ನಿರ್ಲಕ್ಷ್ಯ ಧೋರಣೆ ತಾಳಿದ ಕಾರಣ ಯುವಕ ಸಾವಿಗೀಡಾಗುತ್ತಿರುವಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ.
ಕೊಂಚಾಡಿ ಫೋರ‍್ತ್ ಮೈಲ್ ನಿವಾಸಿ ಕುಮಾರ್ ಎಂಬಾತನನ್ನು ಆಕಾಶಭವನದ ಸಂತು ಮತ್ತಾತನ ಸ್ನೇಹಿತರು ಶುಕ್ರ ವಾರ ರಾತ್ರಿ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿ ದ್ದರು. ಪರಿಣಾಮ ಗಂಭೀರ ಸ್ಥಿತಿ ಯಲ್ಲಿ ಆಸ್ಪತ್ರೆಗೆ ದಾಖಲಾದ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದ.
ಸಣ್ಣ ಪುಟ್ಟ ಗಲಾಟೆಗಳಲ್ಲಿ ಗುರುತಿಸಿಕೊಂಡಿದ್ದ ಸಂತೋಷ್ ಯಾನೇ ಸಂತುಗೆ ಈ ಹಿಂದೊಮ್ಮೆ ಕುಮಾರ್ ಜೊತೆ ಜಗಳ ಉಂಟಾಗಿತ್ತು. ಕ್ಷುಲ್ಲಕ ವಿಚಾರಕ್ಕೆ ಆರಂಭ ವಾದ ಮಾತಿನ ಚಕಮಕಿ ಬಳಿಕ ಹಲ್ಲೆಯವರೆಗೆ ಮುಂದಾಗಿತ್ತು. ಪರಿಣಾಮ ಸಂತು ತನ್ನ ಸ್ನೇಹಿ ತರ ಜೊತೆ ಸೇರಿ ಕುಮಾರ್ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಈ ಪ್ರಕರಣ ರಾಜಿ ಹಂತಕ್ಕೆ ಬಂದಿತ್ತಾದರೂ ಕುಮಾರ್ ಸಂತು ವಿರುದ್ಧ ದೂರು ನೀಡಿದ್ದ. ಹೀಗಾಗಿ ಪೊಲೀಸರು ಸಂತುವನ್ನು ಬಂಧಿಸಿದ್ದರು. ಆದರೆ ರಾಜಕೀಯ ಪ್ರಭಾವ ಬಳಿಸಿದ ಸಂತು ಒಂದೇ ದಿನದಲ್ಲಿ ಬಿಡುಗಡೆಯಾಗಿ ಬಂದಿದ್ದ. ಆ ಬಳಿಕದಿಂದ ಕುಮಾರ್ ಜೊತೆ ದ್ವೇಷ ಕಟ್ಟಿಕೊಂಡಿದ್ದ. ಸಂತು ಕುಮಾರ್‌ನನ್ನು ಬದುಕಲು ಬಿಡಲ್ಲ ಎಂದು ಸಿಕ್ಕಸಿಕ್ಕವರಲ್ಲಿ ಹೇಳಿಕೊಂಡು ತಿರುಗುತ್ತಿದ್ದ. ಅಲ್ಲದೆ ಹಿಂದೊಮ್ಮೆ ಹಲ್ಲೆಗೆ ಸ್ಕೆಚ್ ಕೂಡಾ ರೂಪಿಸಿದ್ದ. ಆದರೆ ಅಂದು ಈತನ ಯೋಜನೆ ಕೈಗೂಡಿರಲಿಲ್ಲ. ಸ್ನೇಹಿತರು ಈ ಜಗಳ ಮುಂದುವರಿಸದಂತೆ ಸಲಹೆ ನೀಡಿದ್ದರು. ನೀವು ಸ್ನೇಹಿತರಾಗಿ ನನಗೆ ಸಾಥ್ ನೀಡ ಬೇಕು ಎಂದು ಅವರನ್ನು ಪುಸಲಾಯಿಸುತ್ತಿದ್ದ. ಹೀಗಾಗಿ ಈತನ ಋಣದಲ್ಲಿದ್ದ ಸ್ನೇಹಿತರು ಹೂಂಗುಟ್ಟಿದ್ದರು. ಶುಕ್ರವಾರ ರಾತ್ರಿ ಅಂಗಡಿಗೆಂದು ಬಂದಿದ್ದ ಕುಮಾರ್‌ನನ್ನು ಕಂಡ ಸಂತು ತನ್ನ ಸ್ನೇಹಿತರಾದ ಶರಣ್, ಅಕ್ಷಯ ಗೌರಿ ಶಂಕರ, ಭವಾನಿ ಶಂಕರ, ಫಾವಿ, ವಿಶಾಲ್, ಗೌತಮ್, ಪ್ರೀತಮ್ ಎಂಬವರ ಜೊತೆ ಸೇರಿ ಕುಮಾರ್‌ನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು ಕೋಪಗೊಂಡ ತಂಡದಲ್ಲಿದ್ದ ಯುವಕನೊಬ್ಬ ಕುಮಾರ್‌ಗೆ ಚೂರಿಯಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡ ಕುಮಾರ್ ಕುಸಿದು ಬೀಳುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರು. ಸ್ಥಳೀಯರು ಸೇರಿ ಕುಮಾರ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿಯೇ ಕಾವೂರು ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತಾದರೂ ಪೊಲೀಸರು ನಿರಾಸಕ್ತಿ ತೋರಿದ್ದರು. ಆದರೆ ಮುಂಜಾನೆ ಯುವಕ ಮೃತಪಟ್ಟಿದ್ದು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಇದೀಗ ಎಚ್ಚೆತ್ತ ಪೊಲೀಸರು ಆರೋಪಿಗಳಿಗಾಗಿ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ಮೀರಾ ಬಾಲಕೃಷ್ಣ ಕೊಲೆ: ಮತ್ತೊಬ್ಬ ಆರೋಪಿ ಸೆರೆ

Posted by JAYAKIRANA Kirana on | 0 comments | Leave a comment...

ಸುಳ್ಯ: ಐವರ್ನಾಡಿನ ಮೀರಾ ಬಾಲಕೃಷ್ಣ(೭೬) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಕಾಸರಗೋಡಿನ ಸಚಿನ್ ಎಂಬಾತನನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದಿದ್ದು, ಸಿಒಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಜೂನ್ ೨ರಂದು ಆರೋಪಿಗಳಾದ ಸೋಣಂಗೇರಿಯ ದೇವಿಪ್ರಸಾದ್, ಐವರ್ನಾಡು ತಮಿಳು ನಿರ್ವಸಿತರ ಕಾಲಯ ಶಿವರಾಜ್, ಸೋಣಂಗೇರಿ ತಮಿಳು ನಿರ್ವಸಿತರ ಕಾಲನಿಯ ಮಹಾವೀರ ಹಾಗೂ ಪೈಚಾರಿನ ರವಿ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾಸರಗೋಡಿನ ಸಚಿನ್ ಹಾಗೂ ಮೂರ್ನಾಡಿನ ಚೆಟ್ಟಿಮಾಡ ನಿವಾಸಿ ರೋಶನ್ ತಲೆಮರೆಸಿ ಕೊಂಡಿದ್ದರು. ಅವರಲ್ಲಿ ಸಚಿನ್‌ನನ್ನು ಪೊಲೀಸರು ಕಾಸರಗೋಡಿನಲ್ಲಿ ಶನಿವಾರ ವಶಕ್ಕೆ ಪಡೆದಿದ್ದು, ರೋಶನ್ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಹೊಟೇಲ್ ಕಾರ್ಮಿಕ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಇಲ್ಲಿಗೆ ಸಮೀಪದ ಜೋಡುರಸ್ತೆಯಲ್ಲಿ ಹೋಟೆಲ್ ಕಾರ್ಮಿಕನೊಬ್ಬ ನೇಣುಬಿಗಿದು ಆತ್ಮಹತ್ಯೆಗೈದಿದ್ದಾನೆ.
ಮೂಡಬಿದ್ರಿ ತೋಡಾರ್ ನಿವಾಸಿ ಪ್ರವೀಣ್(೨೨) ಎಂಬಾತ ಘಟನೆಯಲ್ಲಿ ಬದುಕಿಗೆ ಅಂತ್ಯ ಹೇಳಿದವನು. ಹೋಟೆಲ್‌ನ ಬಚ್ಚಲು ಕೋಣೆಯಲ್ಲಿ ನೈಲಾನ್ ಹಗ್ಗದಿಂದ ನೇಣುಬಿಗಿದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ರಾತ್ರಿ ವೇಳೆಗೆ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.

ಕೂಸಿನ ಮೇಲೆ ತಂದೆಯ ಅತ್ಯಾಚಾರ: ತಾಯಿ ದೂರು

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಹಾಲು ಕುಡಿಯುವ ಹಸುಗೂಸಿನ ಮೇಲೆ ಜನ್ಮ ಕೊಟ್ಟ ತಂದೆಯೇ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಅತ್ಯಾಚಾರವೆಸಗಿದ ಪೈಶಾಚಿಕ ಮತ್ತು ಇಡೀ ನಾಗರಿಕ ಸಮಾಜ ತಲೆತಗ್ಗಿ ಸಬೇಕಾದ ಕೃತ್ಯ ಬೆಳಕಿಗೆ ಬಂದಿದೆ. ಫ್ರೆಂಚ್ ರಾಯ ಭಾರಿ ಕಚೇರಿಯ ನೌಕರನಾಗಿದ್ದ ಪಾಸ್ಕಲ್ ಮಜೂರಿಯ ಎನ್ನುವಾತನೇ ಇಂತಹ ಪೈಶಾಚಿಕ ಕೃತ್ಯವೆಸಗಿದ ಆರೋಪಿ.
ಮಗಳು ಎರಡು ವರ್ಷ ಹಸುಗೂಸು ಆಗಿದ್ದಾ ಗಿಂದಲೇ ಈತ ಇಂತಹ ಹೇಯ ಕೃತ್ಯ ನಡೆಸುತ್ತಿದ್ದನು. ತನ್ನ ಕರುಳಕುಡಿಯ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ತಪ್ಪಿಸಲು ವಿಫಲಳಾದ ತಾಯಿ ಕೊನೆಗೆ ಬೇರೆ ದಾರಿ ಇಲ್ಲದೆ ಪೋಲೀಸರ ಮೊರೆ ಹೋಗಿದ್ದಾರೆ.
ನಗರದ ಅರಮನೆ ಮೈದಾನದ ಸಮೀಪವಿರುವ ಫ್ರೆಂಚ್ ರಾಯಭಾರ ಕಚೇರಿಯಲ್ಲಿ ಮುಖ್ಯ ಜಂಟಿ ಛಾನ್ಸಲ್‌ರ ಅಧಿಕಾರಿಯಾಗಿದ್ದ ಪಾಸ್ಕಲ್ ಪತ್ನಿ ನೀಡಿದ ದೂರಿನ ಅನ್ವಯ ಹೈಗ್ರೌಂಡ್ ಪೊಲೀಸರು ಈತನನ್ನು ತನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿ ಸಿದ್ದಾರೆ.
ಮಗಳ ಮೇಲೆ ಹಲ್ಲೆ, ದೈಹಿಕ ಹಿಂಸೆ ನೀಡುತ್ತಿದ್ದ. ದಿನಗಳು ಕಳೆದಂತೆ ಮಗಳು ಮೂರು ವರ್ಷ ೧೦ ತಿಂಗಳು ತುಂಬಿದ ಮಗಳಿಗೆ ಬುದ್ದಿ ಬಂದು ತಾಯಿಯೊಂದಿಗೆ ತನ್ನ ನೋವು ಹೇಳಿಕೊಳ್ಳುವುದಕ್ಕೆ ಮುಂದಾಗುತ್ತದೆ.
ಕಳೆದ ಬುಧವಾರದಂದು ವೈದ್ಯಕೀಯ ತಪಾಸ ಣೆಯ ವರದಿ ಪಡೆಯುವುದಕ್ಕಾಗಿ ಪತ್ನಿ ಮನೆಕೆಲಸ ದಾಕೆಯನ್ನು ಮಗಳ ಬಳಿ ಬಿಟ್ಟು ಹೋಗಿದ್ದಾಗ ಮನೆಗೆ ಬಂದ ಪಾಸ್ಕಲ್ ಮಗಳನ್ನು ರೂಮಿಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡಿದ್ದನು. ಆ ವೇಳೆ ಕಂದಮ್ಮನ ಚೀರಾಟ ಕೇಳಿ ಬಂದಿದೆ. ೧೫ ನಿಮಿಷದ ನಂತರ ಹೊರ ಬಂದು ಪಾಸ್ಕಲ್ ಕಚೇರಿಗೆ ತೆರಳಿದ್ದಾನೆ. ಮನೆಗೆ ಬಂದ ಪತ್ನಿ ಮಗಳು ಯಾಕೆ ಅಳುತ್ತಿದ್ದಾಳೆ ಎಂದು ಕೆಲಸದಾಕೆಯನ್ನು ಕೇಳಿದಾಗ ಅವಳು ನಡೆದ ಘಟನೆ ತಿಳಿಸಿದ್ದಾಳೆ.
ಇದರಿಂದ ನೊಂದ ತಾಯಿ ಮಗಳನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಆ ವೇಳೆ ವೈದ್ಯರು ಕಂದಮ್ಮನ ಮೇಲೆ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿದ್ದಾರೆ.

ಕಳವು ಆರೋಪಿಗೆ ಪೊಲೀಸ್ ಕಸ್ಟಡಿ

Posted by JAYAKIRANA Kirana on | 0 comments | Leave a comment...

ಪುತ್ತೂರು: ಪುತ್ತೂರು ಪೇಟೆ ವ್ಯಾಪ್ತಿಯ ೧೧ ಮನೆಗಳಿಂದ ಹಾಡ ಹಗಲೇ ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ತಮಿಳುನಾಡಿನ ಕುಖ್ಯಾತ ಕಳ್ಳ ಕೆ.ಆರ್. ಸಂತಾನಮ್‌ಗೆ ಪುತ್ತೂರು ನ್ಯಾಯಾಲಯ ೪ ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಗುರುವಾರ ಪುತ್ತೂರಿನ ರೈಲ್ವೇ ಸ್ಟೇಷನ್ ಬಳಿ ಅನುಮಾನಾಸ್ಪದವಾಗಿ ತಿರುಗಾಡಿಕೊಂಡಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಗೊಳಪಡಿಸಿದಾಗ ಮನೆ ಕಳವು ಪ್ರಕರಣ ಬೆಳಕಿಗೆ ಬಂದಿತ್ತು.

ಹಾಯ್ ಉಡುಪಿ ಸಂಪಾದಕಗೆ ಹಲ್ಲೆ: ಆರೋಪಿಗಳಿಗೆ ಪೊಲೀಸ್ ರಕ್ಷಣೆ; ದೂರು

Posted by JAYAKIRANA Kirana on | 0 comments | Leave a comment...

ಉಡುಪಿ: ತನ್ನ ಮೇಲೆ ಹಲ್ಲೆ ನಡೆಸಿದ ೨೦ಕ್ಕೂ ಅಧಿಕ ಮಂದಿ ಆರೋಪಿಗಳಲ್ಲಿ ೧೩ಕ್ಕೂ ಅಧಿಕ ಮಂದಿ ಆರೋಪಿಗಳನ್ನು ಘಟನೆ ನಡೆದು ೩ ತಿಂಗಳು ಕಳೆದರೂ ಇನ್ನು ಸಹ ಬಂಧಿಸಲಾಗಿಲ್ಲ. ಬೆರಳೆಣಿಕೆ ಮಂದಿ ಆರೋಪಿಗಳನ್ನು ಬಂಧಿಸಲಾಗಿದೆಯಾ ದರೂ, ಇವರು ತನ್ನಿಂದ ದರೋಡೆಗೈದ ಸೊತ್ತುಗಳನ್ನಾಗಲೀ, ಹಲ್ಲೆಗೆ ಬಳಸಿದ ವಾಹನಗಳನ್ನಾಗಲೀ ಇದುವರೆಗೆ ವಶಪ ಡಿಸಿಕೊಳ್ಳಲು ಪೊಲೀಸ್ ಅಧಿಕಾರಿ ಗಳಿಗೆ ಸಾಧ್ಯವಾಗಿಲ್ಲ. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಯಾರದೋ ಒತ್ತಡಕ್ಕೆ ಒಳಗಾಗಿರು ವುದೇ ಇದಕ್ಕೆಲ್ಲಾ ಕಾರಣವೆಂದು ಹಾಯ್ ಉಡುಪಿ ಮಾಸಿಕದ ಸಂಪಾದಕರಾದ ಪ್ರಕಾಶ್ ಪೂಜಾರಿ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ.
ಮಾರ್ಚ್ ೧೬ರಂದು ಸಂಜೆ ಕೆಮ್ಮಣ್ಣು ಪರಿಸರದಲ್ಲಿ ಪತ್ರಿಕೆಗಳನ್ನು ವಿತರಿಸುತ್ತಿದ್ದಾಗ, ಪತ್ರಿಕೆಯಲ್ಲಿ ರೇವ್ ಪಾರ್ಟಿ ವಿರುದ್ಧ ವರದಿ ಇದೆ ಎಂಬ ಏಕೈಕ ಕಾರಣಕ್ಕೆ ಬಿಜೆಪಿಯ ೪೦ ಕ್ಕೂ ಅಧಿಕ ಮಂದಿ ಕಾರ್ಯಕರ್ತರು ೨೦ಕ್ಕೂ ಅಧಿಕ ಬೈಕ್‌ಗಳಲ್ಲಿ ಬಂದು ಪ್ರಕಾಶ್‌ರನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ದಿಗ್ಭಂಧನಕ್ಕೆ ಒಳಪಡಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದರು.
 ಈ ಸಂದರ್ಭದಲ್ಲಿ ತನ್ನಿಂದ ಬಲವಂತವಾಗಿ ದರೋಡೆ ಮಾಡಲಾ ಗಿದ್ದ ಸ್ಕೂಟರ್‌ನ ಕೀ, ೨ ಬೆಲೆ ಬಾಳುವ ಮೊಬೈಲ್ ಸೆಟ್, ಹೆಲ್ಮೆಟ್ ಇತ್ಯಾದಿ ಗಳನ್ನು ಇದುವರೆಗೆ ಆರೋಪಿಗಳ ಕೈಯಿಂದ ವಶಪಡಿಸಿಕೊಂಡು ಮರಳಿ ಸುವಲ್ಲಿ ಪೊಲೀಸ್ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪ್ರಕಾಶ್ ಪೂಜಾರಿ ಎಸ್‌ಪಿಯವರಿಗೆ ನೀಡಿದ ದೂರಿನಲ್ಲಿ ಅಪಾದಿಸಿದ್ದಾರೆ.
 ಬೋಟ್ ಪ್ರಶಾಂತ್, ಪುರಂದರ ಗುಳೆಬೆಟ್ಟು, ಮೋಹನ್ ಪಡುಕುದ್ರು, ರವಿ ಪಡುಕುದ್ರು, ಚರಣ್ ಕೆಮ್ಮಣ್ಣು, ರವಿ ಸನಿಲ್ ಹೂಡೆ, ಹಿತೇಶ್ ಪಡುಕುದ್ರು, ರಿಗ್ ಶ್ರೀಧರ್ ಗುಳೆಬೆಟ್ಟು, ಸುದರ್ಶನ್ ಗುಳೆಬೆಟ್ಟು, ಪ್ರಶಾಂತ್ ಕಾಂಚನ್, ಗಂಗು ಅಡ್ಡಬೆಂಗ್ರೆ, ಚೇತು ಸುವರ್ಣ ಅಡ್ಡಬೆಂಗ್ರೆ, ರವಿ ಪೂಜಾರಿ ಅಡ್ಡಬೆಂಗ್ರೆ ಸಹಿತ ಸುಮಾರು ೪೦ ಮಂದಿ ಪ್ರಕಾಶ್ ಪೂಜಾರಿ ಮೇಲೆ ಹಲ್ಲೆ ನಡೆಸಿದ್ದರು. ಇವರಲ್ಲಿ ಕೇವಲ ಐದು ಮಂದಿ ಆರೋಪಿಗಳನ್ನು ಮಾತ್ರ ಪೊಲೀಸರು ಇದುವರೆಗೆ ಬಂಧಿಸಿದ್ದು, ಉಳಿದವರನ್ನು ಬಂಧಿಸದೆ ಪೊಲೀಸರು ರಕ್ಷಣೆ ನೀಡುತ್ತ್ತಿದ್ದಾರೆಂದು ಪ್ರಕಾಶ್ ಪೂಜಾರಿ ಎಸ್ಪಿಯವರಿಗೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ.

ಅಪಘಾತ: ಸುಳ್ಳು ದೂರು; ಪ್ರಕರಣ ದಾಖಲು

Posted by JAYAKIRANA Kirana on | 0 comments | Leave a comment...

ಸುಳ್ಯ: ಬೈಕಿಗೆ ನಾಯಿ ಅಡ್ಡ ಬಂದಿ ದ್ದರಿಂದ ಸ್ಕಿಡ್ ಆಗಿ ಅಪಘಾತ ಸಂಭವಿಸಿದ ಪ್ರಕರಣದಲ್ಲಿ ಬೈಕಿಗೆ ಆರ್.ಸಿ. ಹಾಗೂ ಇನ್ಸೂರೆನ್ಸ್ ಇಲ್ಲದ್ದ ರಿಂದ ಬೇರೊಬ್ಬರ ಬೈಕ್‌ನ್ನು ತೋರಿಸಿ ಇನ್ಸೂರೆನ್ಸ್ ಪಡೆಯಲು ಯತ್ನಿಸಿದ ಘಟನೆ ನಡೆದಿದ್ದು, ಸುಳ್ಳು ದೂರು ನೀಡಿದವರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಸುಳ್ಯದ ಬಿಎಸ್‌ಎನ್‌ಎಲ್‌ನಲ್ಲಿ ಉದ್ಯೋಗಿಯಾಗಿರುವ ಬೆಳ್ತಂಗಡಿಯ ದುಗ್ಗಪ್ಪ ಗೌಡ ಎಂಬವರು ತಮ್ಮ ಪತ್ನಿ ಮರ್ಕಂಜದಲ್ಲಿ ಶಿಕ್ಷಕಿಯಾಗಿರುವ ಸುಶೀಲ ಎಂಬವರನ್ನು ಶಾಲೆಗೆ ಬಿಡಲು ತೆರಳುತ್ತಿದ್ದಾಗ ಅವರ ಬೈಕ್ ಅಪಘಾತಕ್ಕೀಡಾಗಿತ್ತು. ಆದರೆ ಅವರ ಬೈಕಿಗೆ ಆರ್.ಸಿ. ದಾಖಲೆ ಮತ್ತು ಇನ್ಸೂರೆನ್ಸ್ ಇರಲಿಲ್ಲ ಎನ್ನಲಾಗಿದ್ದು, ತಮ್ಮ ಮಿತ್ರ ಪುರುಷೋತ್ತಮ ದೊಡ್ಡಿಹಿತ್ಲು ಅವರ ಬೈಕ್ ಅಪಘಾತ ವಾಗಿದ್ದಾಗಿ ಸುಳ್ಳು ದೂರು ನೀಡಿದ್ದರು ಎನ್ನಲಾಗಿದೆ.
ತನಿಖೆಗಾಗಿ ಪೊಲೀಸರು ತೆರಳಿ ದಾಗ ಅಲ್ಲಿ ಅಪಘಾತವಾದ ಯಾವುದೇ ಕುರುಹುಗಳು ಸಿಗದಿದ್ದ ರಿಂದ ಇದು ಸುಳ್ಳು ದೂರು ಎಂದು ತೀರ್ಮಾನಿಸಿ ದುಗ್ಗಪ್ಪ ಗೌಡರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ನ್ಯೂಮೋನಿಯಾಕ್ಕೆ ವಿದ್ಯಾರ್ಥಿ ಬಲಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ನ್ಯುಮೋನಿಯಾದಿಂದ ಬಳಲುತ್ತಿದ್ದ ಮೂಲತಃ ಪೊಸೋಟು ನಿವಾಸಿ, ಇದೀಗ ಕುಂಜತ್ತೂರು ಕಣ್ವತೀರ್ಥದಲ್ಲಿ ವಾಸಿಸುತ್ತಿರುವ ಅಬ್ದುಲ್ ರೆಹಮಾನ್ ಫೌಸಿಯಾ ದಂಪತಿ ಪುತ್ರ ಅಬ್ದುಲ್ ರಹಮಾನ್ ಜಂಶೀದ್ (೧೪) ಮೃತಪಟ್ಟಿದ್ದಾನೆ.
೧೪ ದಿನಗಳಿಂದ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ಈತನನ್ನು ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದರೂ ಫಲಕಾರಿಯಾಗಲಿಲ್ಲ. ಈತ ಕುಂಜತ್ತೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದ. ಏಳನೆ ತರಗತಿಯಲ್ಲಿ ಅತ್ಯಧಿಕ ಅಂಕಗಳಿಸಿದ್ದ. ಬಹುಮುಖ ಪ್ರತಿಭೆಯ ವಿದ್ಯಾರ್ಥಿಯಾಗಿದ್ದ.

ಅಪಘಾತ: ಪಾದಚಾರಿ ಮೃತ್ಯು

Posted by JAYAKIRANA Kirana on | 0 comments | Leave a comment...

ಉಳ್ಳಾಲ: ಕೊಣಾಜೆ ಸಮೀಪದ ಪಜೀರು ಜೋಡುಕಟ್ಟೆ ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಪಾದಚಾರಿ ಸಾವಿಗೀಡಾಗಿದ್ದಾರೆ.
ಪಾವೂರು ಗ್ರಾಮ ಪಂಚಾಯಿತಿ ಸದಸ್ಯ ಮಲಾರ್ ಬದ್ರಿಯಾ ನಗರ ನಿವಾಸಿ ಮಹಮ್ಮದ್ ಎಂಬವರ ಮಗ ಅಬ್ದುಲ್ ಜಲೀಲ್(೨೩) ಎಂಬವರೇ ಮೃತ ದುರ್ದೈವಿ.

ವಿದ್ಯುತ್ ಆಘಾತ: ವಿದ್ಯಾರ್ಥಿ ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ವಿದ್ಯುತ್ ತಗುಲಿ ಮಂಗಳೂರಿನಲ್ಲಿ ಬಿಪಿಟಿ ವ್ಯಾಸಂಗ ಮಾಡುತ್ತಿದ್ದ ನೇಪಾಳಿ ವಿದ್ಯಾರ್ಥಿ ಅಮಿತ್ ಕುಮಾರ್ ಶ್ರೇಷ್ಠ(೨೭) ಸಾವನ್ನಪ್ಪಿದ ಘಟನೆ ಶುಕ್ರವಾರ ತಡ ರಾತ್ರಿ ಸಂಭವಿಸಿದೆ.
ಮಂಗಳೂರಿನ ಕಾಲೇಜೊಂದರಲ್ಲಿ ಫಿಸಿಯೊತೆರಪಿ ವಿದ್ಯಾರ್ಥಿಯಾಗಿದ್ದ ಈತ ಮೋರ್ಗನ್ಸ್‌ಗೇಟ್‌ನಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಶುಕ್ರವಾರ ತಡರಾತ್ರಿ ಒಂದನೇ ಅಂತಸ್ತಿನಿಂದ ಕೆಳಗಿಳಿಯುತ್ತಿದ್ದಾಗ ಕಾಲು ಜಾರಿದ್ದರಿಂದ ಪಕ್ಕದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಹಿಡಿದಿದ್ದಾನೆ. ಆಗ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಅಸುನೀಗಿದ್ದಾನೆ.
ಕಟ್ಟಡದ ಸಮೀಪ ವಿದ್ಯುತ್ ತಂತಿ ಹಾದು ಹೋಗಿರುವುದನ್ನು ಪಾಂಡೇಶ್ವರ ಪೊಲೀಸರು ಮೆಸ್ಕಾಂ ಗಮನಕ್ಕೆ ತಂದಿದ್ದಾರೆ.

ಶಾಲೆಯಲ್ಲಿ ಸಿಲಿಂಡರ್ ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳಿಯ ಗ್ರಾಮದ ಗೋವಿಂದೂರು ಹಿರಿಯ ಪ್ರಾಥಮಿಕ ಶಾಲೆಗೆ ಕಳ್ಳರು ನುಗ್ಗಿ ೫೦ ಕೆಜಿ ಅಕ್ಕಿ, ೨ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಕಳವುಗೈದಿದ್ದಾರೆ. ಈ ಬಗ್ಗೆ ಮುಖ್ಯೋ ಪಾಧ್ಯಾಯಿನಿ ಸುಮಿತ್ರಾ ಅವರು ಬೆಳ್ತಂಗಡಿ ಪೊಲೀಸರಿ ದೂರು ನೀಡಿದ್ದಾರೆ.

ವ್ಯಕ್ತಿಯ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಅನುಮಾನಾಸ್ಪದ ವಾಗಿ ನಿಂತಿದ್ದ ವ್ಯಕ್ತಿಯನ್ನು ಶನಿವಾರ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಭಾಗಿಯಾ ಗಿರುವ ಪುತ್ರಬೈಲಿನ ಕಮಲಾಕ್ಷ ಸಾಲಿಯಾನ್(೩೧) ಬಂಧಿತ ವ್ಯಕ್ತಿ. ಈತನನ್ನು ತಾಲೂಕು ದಂಡಾಧಿಕಾರಿ ಮುಂದೆ ಹಾಜರು ಪಡಿಸಿ ಜಾಮೀನು ನೀಡಲಾಗಿದೆ.

ಮುಲ್ಕಿ ಪೊಲೀಸರ ವಿರುದ್ಧ ಲೋಕಾಯುಕ್ತ ಕೇಸು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮುಲ್ಕಿ ಪೊಲೀ ಸರು ಮತ್ತು ಏಳು ಮಂದಿಯ ವಿರುದ್ಧ ಕಿನ್ನಿಗೋಳಿ ಕೆಮ್ರಾಲ್ ಗ್ರಾಮದ ನಾರಾ ಯಣ ಶೆಟ್ಟಿ ಅವರು ನೀಡಿದ ದೂರನ್ನು ತನಿಖೆ ನಡೆಸಿ ಜೂ.೨೫ರ ಒಳಗೆ ವರದಿ ಒಪ್ಪಿಸುವಂತೆ ಜಿಲ್ಲಾ ವಿಶೇಷ ನ್ಯಾಯಾಲಯ ಲೋಕಾಯುಕ್ತಕ್ಕೆ ಆದೇಶ ನೀಡಿದೆ.

ಯಡಿಯೂರಪ್ಪ ಪುತ್ರನ ಬಂಧನಕ್ಕೆ ಕ್ಷಣಗಣನೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಗಣಿ ಕಂಪನಿಗಳಿಂದ ಲಂಚ ಸ್ವೀಕಾರ ಹಾಗೂ ಜಮೀನು ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಣ್ಣು ಮಾಜಿ ಮುಖ್ಯಮಂತ್ರಿ ಅವರ ಕಿರಿಯ ಪುತ್ರ ಬಿ.ವೈ. ವಿಜಯೇಂದ್ರ ಅವರತ್ತ ನೆಟ್ಟಿದ್ದು, ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ತಳ್ಳಿ ಹಾಕು ವಂತಿಲ್ಲ.
ಹಗರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ, ಅರಣ್ಯ, ಕಂದಾಯ, ಗಣಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಂದಿನ ಮತ್ತು ಕೆಲವು ಹಾಲಿ ಅಧಿಕಾರಿಗಳು ನೀಡಿದ ಮಾಹಿತಿಯೇ ರಾಘವೇಂದ್ರ ಅವರಿಗೆ ಕಂಟಕವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಗಣಿ ಹಗರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ, ಯಡಿಯೂರಪ್ಪ ಮತ್ತು ಅವರ ಕುಟುಂಬದವರ ಮೇಲೆ ಎಫ್‌ಐಆರ್ ಸಲ್ಲಿಸಿ ನಾಲ್ಕು ವಾರ ಕಳೆದ ನಂತರ ತನಿಖಾ ಕಾರ್ಯ ಚುರುಕುಗೊಳಿಸಿದೆ.
ಆಗಸ್ಟ್ ೩ರೊಳಗೆ ವರದಿ ನೀಡುವ ಉದ್ದೇಶದಿಂದ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್ ಕುಮಾರ್ ಅವರನ್ನು ತೀವ್ರ ವಿಚಾರಣೆಗೊಳ ಪಡಿಸಿತು.
ಸಿಬಿಐನ ಹಿರಿಯ ಅಧಿಕಾರಿ ಹಿತೇಂದ್ರ ನೇತೃತ್ವದ ೧೫ ಮಂದಿ ಅಧಿಕಾರಿಗಳು ಮೂವರನ್ನು ಪ್ರತ್ಯೇಕವಾಗಿ ಹಾಗೂ ಒಬ್ಬರಿಗೊಬ್ಬರು ಭೇಟಿ ಯಾಗದ ರೀತಿಯಲ್ಲಿ ವಿಚಾರಣೆ ನಡೆಸಿ ಪಡೆದ ಮಾಹಿತಿ ಆಧಾರದ ಮೇಲೆ ಮೊದಲ ಹಂತವಾಗಿ ವಿಜಯೇಂದ್ರನ ಮೇಲೆ ಕೆಂಗಣ್ಣು ಬೀರಿದ್ದಾರೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4086) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1469) donation (1) dvs (21) election (1) encounter (1) epaper (2536) epapr (2) escape (2) eshwarappa (6) facebook (1) fariyad (8) fea (1) feature (2309) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (39) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (152) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (109) kinnigoli (2) kodihalli (1) kota (1) ksrtc (1) kumaraswamy (1) kundapura (96) kyandi (1) lekhana (262) ln (1) lnews (3709) lokayukta (3) madikeri (1) maleria (1) mangalore (599) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (153) mlore (717) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (421) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (275) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (813) srinivaspoojary (1) srinivasshetty (1) sslc (2) suicide (2) sulia (4) sullia (210) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (963) tpchandrashekaran (1) traffic (1) train (1) udu (1) udupi (492) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (133) water (4) wenlock (2) yeddi (53) yogishbhat (1)