ಸೋಲಾಪುರ: ಹೈದರಾಬಾದ್‌ನಿಂದ ಶಿರಡಿಗೆ ಪ್ರಯಾಣಿಸುತ್ತಿದ್ದ ಬಸ್ಸು ಸೇತುವೆಯಿಂದ ಕೆಳಕ್ಕುರುಳಿದ ಪರಿಣಾಮ ೩೨ ಪ್ರಯಾಣಿಕರು ಮೃತಪಟ್ಟು ೧೫ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ಸಂಭವಿಸಿದೆ. ಅಲ್ಲದೆ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಮಹಾರಾಷ್ಟ್ರದ ಸೋಲಾಪುರದ ಬಳಿ ಕಿರುದಾದ ರಸ್ತೆಯಲ್ಲಿ ಖಾಸಗಿ ಬಸ್ ಕ್ಸಿಡ್ ಆಗಿ ಸೇತುವೆಯಿಂದ ಕೆಳಕ್ಕುರುಳಿದೆ. ಯಾತ್ರಾರ್ಥಿಗಳು ಹೈದರಾಬಾದ್‌ನವರಾಗಿದ್ದು, ಯಾತ್ರೆ ಮುಗಿಸಿ ಅಹಮ್ಮದ್‌ನಗರ ಜಿಲ್ಲೆಯಲ್ಲಿರು ಶಿರಡಿ ಸಾಯಿ ಬಾಬಾ ಮಂದಿರಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ ಘಟನೆ ಬೆಳಿಗ್ಗೆ ೨.೪೦ರ ಸುಮಾರಿಗೆ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಮೃತರ ಗುರುತು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಗಾಯಾಳುಗಳನ್ನು ಒಸ್ಮಾನಾಬಾದ್ ಮತ್ತು ಸೋಲಾಪುರದ ಸಿವಿಕ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಆಂಧ್ರ ಪ್ರದೇಶದ ವೈದ್ಯಕೀಯ ಹಾಗೂ ಸರ್ಕಾರಿ ತಂಡಗಳು ಸ್ಥಳಕ್ಕೆ ತೆರಳಿದ್ದು, ಗಾಯಾಳುಗಳ ಚಿಕಿತ್ಸೆ ಹಾಗೂ ಮಹಾರಾಷ್ಟ್ರ ರಾಜ್ಯ ಅಧಿಕಾರಿಗಳೊಂದು ಸಮಾಲೋಚಿಸಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಿದೆ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್ ವಿ ಚಂದ್ರವದನ್ ತಿಳಿಸಿದ್ದಾರೆ.
Tagged with
feature,
nnews