ಸೋಲಿನೊಂದಿಗೆ ಐರ‍್ಲೆಂಡ್ ಟೂರ್ನಿಯಿಂದ ಔಟ್

Posted by JAYAKIRANA Kirana on Thursday, 14 June 2012 | 0 comments | Leave a comment...

ಆರ್ಭಟಿಸಿದ ಟೋರಸ್; ಸ್ಪೇಯ್ನ್‌ಗೆ ಭರ್ಜರಿ ಜಯ
ಎಲ್ವಿವ್: ಐರ‍್ಲೆಂಡ್ ಈ ಬಾರಿಯ ಯುರೋ ಕಪ್ ೨೦೧೨ರ ಟೂರ್ನಿಯಿಂದ ಹೊರಬಿದ್ದಿದೆ. ನಿನ್ನೆ ವಿಶ್ವಚಾಂಪಿಯನ್ ಸ್ಪೇಯ್ನ್ ವಿರುದ್ಧ ೪-೦ ಅಂತರದ ಹೀನಾಯ ಸೋಲುಣ್ಣುವ ಮೂಲಕ ಐರಿಶ್ ತಂಡ ನಿರಾಶೆ ಪಟ್ಟುಕೊಂಡಿದೆ. ಅತ್ತ ಫರ್ನಾಂಡೋ ಟೋರಸ್ ಗಳಿಸಿದ ಎರಡು ಗೋಲು ಸ್ಪೇಯ್ನ್‌ಗೆ ಭರ್ಜರಿ ಗೆಲುವು ಸಾಧಿಸಲು ನೆರವಾಯಿತು. ಕ್ರೊವೇಶಿಯ ವಿರುದ್ಧದ ಪ್ರಥಮ ಪಂದ್ಯದಲ್ಲಿ ಐರ‍್ಲೆಂಡ್ ೩-೧ರ ಸೋಲುಂಡಿತ್ತು.
ಪಂದ್ಯದ ನಾಲ್ಕನೇ ನಿಮಿಷದಲ್ಲೇ ಟೋರಸ್ ಮೊದಲ ಗೋಲು ಗಳಿಸಿ ಸ್ಪಾನಿಶ್ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿ ಕೊಟ್ಟರು. ಆದರೆ ೪೯ನೇ ನಿಮಿಷದಲ್ಲಿ ಡೇವಿಡ್ ಸಿಲ್ವಾ ಗಳಿಸಿದ ಮತ್ತೊಂದು ಗೋಲು ಐರಿಶ್ ತಂಡಕ್ಕೆ ದುಬಾರಿಯಾಯಿತು. ಸಿಲ್ವಾ ಅತ್ಯಂತ ಚಾಕಚಕತ್ಯತೆಯಿಂದ ಸುಲಭ ರೀತಿಯಲ್ಲೇ ಗೋಲು ಗಳಿಸಿದರು. ಆದರೆ ಮೊದಲ ಗೋಲು ಗಳಿಸಿದ್ದ ಟೋರಸ್ ೭೦ನೇ ನಿಮಿಷದಲ್ಲೂ ತನ್ನ ಪರಾಕ್ರಮ ತೋರಿಸಿದರು. ಆದರೆ ಐರಿಶ್ ತಂಡ ಗೋಲು ಗಳಿಸುವ ಅಲ್ಪ ಪ್ರಯತ್ನವನ್ನೇ ಮಾಡಿತು. ಅಂತಿಮವಾಗಿ ೮೩ನೇ ನಿಮಿಷದಲ್ಲಿ ಸೆಸ್ ಫ್ಯಾಬ್ರಿಗಾಸ್ ಗಳಿಸಿದ ಟೂರ್ನಿಯ ಎರಡನೇ ಗೋಲು ತಂಡಕ್ಕೆ ೪-೦ಯ ಮುನ್ನಡೆಯನ್ನು ತಂದುಕೊಟ್ಟಿತ್ತು. ಈ ಮೂಲಕ ಸ್ಪೇಯ್ನ್ ತಾನೇಕೆ ಅಗ್ರಶ್ರೇಯಾಂಕದ ತಂಡವೆಂದು ಸಾಬೀತು ಮಾಡಿತು.

ಏಶ್ಯಡ್ ಚಿನ್ನದ ಪದಕ ವಿಜೇತೆ ಪಿಂಕಿ ಪುರುಷನಂತೆ!

Posted by JAYAKIRANA Kirana on | 0 comments | Leave a comment...

ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ದಾಖಲು
ದೆಹಲಿ: ೨೦೦೬ರ ಏಶ್ಯಡ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ಕೊಂಡಿದ್ದ ಪಿಂಕಿ ಪ್ರಾಮಾಣಿಕ್ ಈಗ ಹೊಸದೊಂದು ವಿವಾದಕ್ಕೆ ಸಿಲುಕಿ ದ್ದಾರೆ. ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಹಾಗೂ ಮಹಿಳೆಯೇ ಅಲ್ಲವೆಂಬ ಆರೋಪದ ಎರಡು ಹೊಸ ಪ್ರಕರಣಗಳು ಪಿಂಕಿ ವಿರುದ್ಧ ದಾಖಲಾಗಿರುವುದು ಅಚ್ಚರಿ ತಂದಿದೆ. ೨೦೦೪ರಲ್ಲಿ ಈಕೆಯ ವಿರುದ್ಧ ಅಕ್ರಮ ಶಸ್ಟ್ರಾಸ್ತ್ರ ಹೊಂದಿದ ಆರೋಪ ಕೂಡ ದಾಖಲಾಗಿತ್ತು.
ಪುರುಷನಾಗಿರುವ ಪಿಂಕಿ ಜೊತೆ ನಾನು ಕಳೆದ ಏಳು ತಿಂಗಳಿನಿಂದ ಸಂಪರ್ಕ ಹೊಂದಿದ್ದು, ಮದುವೆ ಯಾಗುವು ದಾಗಿ ಆತ ನಂಬಿಸಿದ್ದ ಕೂಡ. ನಂತರ ಇದರಿಂದ ತಪ್ಪಿಸಿ ಕೊಂಡಿದ್ದಾನೆ ಎಂದು ಮಹಿಳೆಯೊ ಬ್ಬಳು ಅಥ್ಲೀಟ್ ವಿರುದ್ಧ ದಾಖಲಿಸಿದ ಕೇಸ್‌ನಲ್ಲಿ ತಿಳಿಸಿದ್ದಾಳೆ. ಮಹಿಳೆಯಿಂದ ಪಿಂಕಿ ಹಣವನ್ನು ಕೂಡ ಪಡೆದು ಕೊಂಡಿದ್ದಳು ಎಂಬ ಆರೋಪ ವಿದೆ. ಕೋರ್ಟ್‌ನಲ್ಲಿ ಹಾಜರುಪಡಿಸಿದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಪಿಂಕಿಯ ಲಿಂಗ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ರೈಲ್ವೇ ವಲಯದ ಮಧ್ಯಮ ಕ್ರಮಾಂಕದ ಓಟಗಾರ್ತಿ ಯಾಗಿರುವ ಪಿಂಕಿ, ೨೦೦೬ರಲ್ಲಿ ದೋಹಾದಲ್ಲಿ ನಡೆದ ಏಶ್ಯಡ್ ಗೇಮ್ಸ್‌ನ ೪*೪೦೦ ಗೇಮ್ಸ್ ರಿಲೆಯಲ್ಲಿ ಚಿನ್ನದ ಹಾಗೂ ೨೦೦೬ರ ಮೆಲ್ಬೊರ್ನ್ ಟೂರ್ನಿಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಒಂದು ವೇಳೆ ಪಿಂಕಿ ವಿರುದ್ಧ ದಾಖಲಾದ ಆರೋಪ ಸಾಬೀ ತಾದರೆ ಕಠಿಣ ಕ್ರಮ ತೆಗೆದು ಕೊಂಡು, ಆಕೆ ಪಡೆದ ಪದಕಗಳನ್ನು ಹಿಂದಕ್ಕೆ ಪಡೆಯಲಾ ಗುವುದು ಎಂದು ಅಖಿಲ ಭಾರತ ಅಥ್ಲೀಟ್ಸ್ ಯುನಿಯನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬ್ಯಾಡ್ಮಿಂಟನ್: ಇಂಡೋನೇಶ್ಯಾ ಓಪನ್‌ನಲ್ಲೂ ಸೈನಾ ಪರಾಕ್ರಮ

Posted by JAYAKIRANA Kirana on | 0 comments | Leave a comment...

ಜಕಾರ್ತ: ಆದಿತ್ಯವಾರ ನಡೆದಿದ್ದ ಥೈಲ್ಯಾಂಡ್ ಓಪನ್ ಟೂರ್ನಿಯ ಫೈನಲ್ ಗೆದ್ದುಕೊಂಡಿದ್ದ ಭಾರತದ ಅಗ್ರಶ್ರೇ ಯಾಂಕದ ಆಟಗಾರ್ತಿ ಸೈನಾ ನೆಹ್ವಾಲ್‌ರ ಭರ್ಜರಿ ಪ್ರದರ್ಶನ ಇಲ್ಲಿ ನಡೆಯುತ್ತಿರುವ ಇಂಡೋನೇಶ್ಯಾ ಓಪನ್‌ನಲ್ಲೂ ಮುಂದು ವರೆದಿದೆ. ಸ್ಥಳೀಯ ಆಟಗಾರ್ತಿ ಅಪ್ರಿಲ್ಲಾ ಯುಸ್‌ವಂದಾರಿ ವಿರುದ್ಧ ೨೧-೧೭, ೧೪-೨೧ ಹಾಗೂ ೨೧-೧೩ರ ಅಂತರ ದಲ್ಲಿ ಗೆಲ್ಲುವ ಮೂಲಕ ಸೈನಾ ಮಹಿಳೆಯ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಇನ್ನು ಪುರುಷರ ವಿಭಾಗದಲ್ಲಿ ಭಾರತದ ಅಗ್ರಶ್ರೇಯಾಂಕದ ಆಟಗಾರ ಅಜಯ್ ಜಯರಾಮ್ ಮಾತ್ರ ನಿರಾಶೆಗೊಂಡರು. ಇಂಡೋನೇಶ್ಯಾದ ಡಿಯೊನಿಸಸ್ ಹೊಯೊಮ್ ರುಂಬಕಾ ವಿರುದ್ಧ ೧೫-೨೧, ೧೪-೨೧ರ ಅಂತರದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು. ಇನ್ನು ಸೈನಾ ಹಾಗೂ ಅಪ್ರಿಲ್ಲಾ ನಡುವಿನ ಮೊದಲ ಸುತ್ತಿನ ಪಂದ್ಯವು ರೋಚಕ ಗಳಿಗೆಗೆ ಸಾಕ್ಷಿಯಾ ಯಿತು.

ಡೋಪಿಂಗ್ ಪ್ರಕರಣವನ್ನು ತಳ್ಳಿಹಾಕಿದ ಸೈಕ್ಲಿಸ್ಟ್ ಆರ್ಮ್‌ಸ್ಟ್ರಾಂಗ್

Posted by JAYAKIRANA Kirana on | 0 comments | Leave a comment...

ಆಸ್ಟಿನ್: ತನ್ನ ಮೇಲೆ ಯಾವುದೇ ಡೋಪಿಂಗ್ ಆರೋಪದ ಪ್ರಕರಣ ದಾಖಲಾಗಿಲ್ಲ ಎಂದು ವಿಶ್ವದ ಪ್ರಸಿದ್ದ ಸೈಕ್ಲಿಸ್ಟ್ ಅಮೆರಿಕಾದ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಸ್ಪಷ್ಟಪಡಿಸಿದ್ದಾರೆ. ಲ್ಯಾನ್ಸ್ ವಿರುದ್ಧ ಅಮೆರಿಕಾದ ಡೋಪಿಂಗ್ ವಿರೋಧಿ ಸಂಸ್ಥೆ (ಯುಎಸ್‌ಎಡಿಎ) ಹೊಸ ಪ್ರಕರಣವನ್ನು ದಾಖಲಿಸಿದೆ ಎಂಬ ‘ವಾಷಿಂಗ್ಟನ್ ಪೋಸ್ಟ್ ವರದಿಗೆ ಸೈಕ್ಲಿಸ್ಟ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಏಳು ಬಾರಿಯ ಟೂರ್ ಡೇ ಫ್ರಾನ್ಸ್ ಟೂರ್ನಿಯ ವಿಜೇತರಾಗಿರುವ ಲ್ಯಾನ್ಸ್‌ರ ಈ ಹಿಂದಿನ ಸಾಧನೆ ಈಗ ಡೋಲಾಯಮಾನ ಸ್ಥಿತಿಯಲ್ಲಿದೆ. ಒಂದು ವೇಳೆ ಆರೋಪ ಸಾಬೀತಾದರೆ ಲ್ಯಾನ್ಸ್‌ಗೆ ಅಜೀವ ನಿಷೇಧ ಹೇರುವ ಸಾಧ್ಯತೆಯಿದೆ. ಈಗಾಗಲೇ ತನ್ನ ವೃತ್ತಿ ಬದುಕಿನಲ್ಲಿ ೫೦೦ಕ್ಕೂ ಬಾರಿ ಡ್ರಗ್ಸ್ ಪರೀಕ್ಷೆಗೆ ಒಳಗಾಗಿದ್ದರೂ ಒಂದರಲ್ಲೂ ವಿಫಲತೆ ಕಂಡಿಲ್ಲ ಎನ್ನುವುದು ಲ್ಯಾನ್ಸ್‌ನ ವಿಶೇಷತೆ ಎನ್ನಬಹುದು.
ನನ್ನ ವಿರುದ್ಧ ಯಾವುದೇ ಡೋಪಿಂಗ್ ಆರೋಪ ದಾಖಲಾಗಿಲ್ಲ. ಈ ಹಿಂದಿನಂತೆ ಇದು ಕೂಡ ಒಂದು ತಪ್ಪಾದ ವರದಿಯಾಗಿದೆ. ನಾನು ನನ್ನ ೨೫ ವರ್ಷದ ಕ್ರೀಡಾ ಬದುಕಿನಲ್ಲಿ ಯಾವುದೇ ತಪ್ಪು ಹೆಜ್ಜೆಯನ್ನು ಇಟ್ಟಿಲ್ಲ. ತನಿಖೆಯನ್ನು ಮುಂದುವರೆಸುವುದಿಲ್ಲ ಎಂದು ನನ್ನ ವಿರುದ್ಧ ಈ ಹಿಂದೆ ದಾಖಲಾದ ವರದಿಯೇ ಇದಾಗಿದೆ ಎಂದು ಲ್ಯಾನ್ಸ್ ತಿಳಿಸಿದ್ದಾರೆ.

ಕಳವು ಆರೋಪಿಗಳು ಪೊಲೀಸ್ ಬಲೆಗೆ

Posted by JAYAKIRANA Kirana on | 0 comments | Leave a comment...

ಮಂಗಳೂರು : ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿ ಮೂರು ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಇತರ ಸೊತ್ತುಗಳನ್ನು ಕಳವುಗೈದ ನಾಲ್ವರು ಆರೋಪಿಗಳನ್ನು ಕದ್ರಿ ಪೊಲೀ ಸರು ನಿನ್ನೆ ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಲ್ಯಾಪ್ ಟಾಪ್, ಡಿಜಿಟಲ್ ಕ್ಯಾಮಾರಾ, ಹ್ಯಾಂಡಿ ಕ್ಯಾಮ್, ಮತ್ತು ೧೯ ಪವನ್ ಚಿನ್ನಾ ಭರಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕದ್ರಿ ಮೈದಾನದ ಬಳಿ ಯುವಕರಿಬ್ಬರು ಲ್ಯಾಪ್ ಟಾಪ್ ಬ್ಯಾಗಿನೊಂದಿಗೆ ಬೈಕಿನಲ್ಲಿ ಅನುಮಾನಸ್ಪದವಾಗಿ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಕದ್ರಿ ಪೊಲೀಸರಿಗೆ ಲಭ್ಯವಾಗಿತ್ತು. ಇದರ ಆಧಾರದಲ್ಲಿ ಇನ್ಸ್‌ಪೆಕ್ಟರ್ ವೆಂಕಟೇಶ್ ಪ್ರಸನ್ನ ನೇತೃತ್ವದ ಪೊಲೀಸರು ದಾಳಿ ನಡೆಸಿ ಮಹಾರಾಷ್ಟ್ರ ಥಾಣೆ ಜಿಲ್ಲೆಯ ಅರುಣ್ ಶಣ್ಮುಗಂ ಶೆಟ್ಟಿ (೨೨)ಮತ್ತು ಮಂಗಳೂರು ಆರ್ಯ ಸಮಾಜ ರಸ್ತೆ ನಿವಾಸಿ ವೆಂಕಟೇಶ್ (೨೮)ಎಂಬಿಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇವರು ಈ ಹಿಂದೆ ಕಳವು ನಡೆಸಿರುವ ವಿಚಾರ ಬಾಯ್ಬಿಟ್ಟಿದ್ದರು. ತಮ್ಮ ಜೊತೆಗೆ ವೆಂಕಟೇಶ್ ತಮ್ಮ ಮುರುಗೇಶ್ (೨೦) ಮತ್ತು ದಾವಣಗೆರೆ ನಿವಾಸಿ ಕಿರಣ್ ಇದ್ದ ಬಗ್ಗೆ ಆರೋಪಿ ಗಳು ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಮುರುಗೇಶ್ ಮನೆ ಯಿಂದ ಪೊಲೀಸರು ಬಂಧಿಸಿದ್ದರು. ಆರೋಪಿಗಳು ಮೇ ೧೨ರಂದು ಬಲ್ಮಠ ಕಲ್ಪನಾ ರಸ್ತೆಯ ನಿವಾಸಿ ಜಸ್ವರುದ್ದಿನ್ ಎಂಬವರ ಮನೆಯಿಂದ ಚಿನ್ನ ಹಾಗೂ ಇತರ ಸೊತ್ತುಗಳನ್ನು ಕಳವುಗೈದಿದ್ದರು.

ನರ್ಸ್ ನಿಗೂಢ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಜ್ಯೋತಿಯ ಕೆಎಂಸಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಂಟ್ವಾಳದ ಲೊರೆಟ್ಟೋ ಪದವಿನ ಯುವತಿ ನಾಪತ್ತೆಯಾಗಿರುವ ಬಗ್ಗೆ ಕದ್ರಿ ಪೊಲೀಸರಿಗೆ ದೂರು ನೀಡಲಾಗಿದೆ. ಕು. ರೇಷ್ಮಾ ಹರಿಯಟ್ ಮಿನೇಜಸ್ (೨೫) ಎಂಬಾಕೆಯೇ ನಾಪತ್ತೆಯಾಗಿದ್ದು, ಕಳೆದ ಮೂರು ವರ್ಷ ಗಳಿಂದ ಕೆಎಂಸಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿ ಸುತ್ತಿದ್ದರು. ಫಳ್ನೀರ್‌ನ ಹಾಸ್ಟೆಲ್‌ನಲ್ಲಿ ಉಳಿಯುತ್ತಿದ್ದ ಇವಳು ಆದಿತ್ಯವಾರ ಸಂಜೆ ಮನೆಗೆ ಹೋಗಿ ಬರುವುದಾಗಿ ಹಾಸ್ಟೆಲ್‌ನಲ್ಲಿ ತಿಳಿಸಿ ಹೋದವಳು ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಗೋಧಿ ಮೈಬಣ್ಣ ಹೊಂದಿರುವ ಈಕೆಯನ್ನು ಯಾರಾದರೂ ಕಂಡಲ್ಲಿ ಕದ್ರಿ ಠಾಣೆ ಅಥವಾ ಜಿಲ್ಲಾ ಕಟ್ರೋಲ್ ರೂಮ್‌ನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಕೆಲಸ ವಂಚಕ ದಲಿತ ಸಂಚಾಲಕ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಹಾನಗರ ಪಾಲಿಕೆ ಯಲ್ಲಿ ಗುತ್ತಿಗೆ ಆಧಾರಿತ ನೌಕರನಾಗಿ ದುಡಿ ಯುತ್ತಿರುವ ದಲಿತ ಸಂಘಟನೆಯ ಸಂಚಾ ಲಕನೊಬ್ಬ ತನ್ನ ಹೆಸರಿನಲ್ಲಿ ಬೇರೊಬ್ಬನನ್ನು ದುಡಿಸಿಕೊಂಡು ಸಂಬಳ ಪಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ದಲಿತರ ಕುಂದು ಕೊರತೆಗಳಿಗೆ ಸ್ಪಂದಿಸಿ ಅವರಿಗೆ ಸದಾ ಆನಂದವನ್ನು ನೀಡುತ್ತೇ ನೆಂದು ದಲಿತರ ದುಡ್ಡಿನಲ್ಲಿಯೇ ಕೆಲಸ ಮಾಡುತ್ತಿರುವ ಈ ನಾಯಕ ಸದ್ಯ ಮತ್ತೊಂದು ಅವ್ಯವಹಾರದಿಂದಾಗಿ ಸುದ್ದಿ ಯಲ್ಲಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಯಲ್ಲಿ ಕದ್ರಿ ವಾರ್ಡಿನ ಆರೋಗ್ಯ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಅಂಬೇ ಡ್ಕರ್ ಹೆಸರಿನಲ್ಲಿ ಸಂಘಟನೆಯನ್ನು ಕಟ್ಟಿಕೊಂ ಡಿರುವ ಈ ಸಂಘಟಕ, ತಾನು ಕಂಟೈನರ್ ಜೊತೆಗೆ ಮಾಡಬೇಕಾದ ಕೆಲಸವನ್ನು ಮತ್ತೊಬ್ಬ ಕಾರ್ಮಿಕನಿಗೆ ಲಂಚ ನೀಡಿ ಮಾಡಿ ಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸಹ ಕಾರ್ಮಿಕರೇ ದೂರಿಕೊಂಡಿದ್ದು, ಮನಪಾ ಆಯುಕ್ತರಿಗೂ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.
ಬೆಳಗ್ಗೆ ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಹೋದರೆ ಮತ್ತೇ ಈತ ಬರುವುದು ಮರುದಿನ ಸಹಿ ಹಾಕುವ ಹೊತ್ತಿಗೆ. ಅಲ್ಲಿಯ ತನಕ ಈತನ ಕೆಲಸವನ್ನು ಸಹ ಕಾರ್ಮಿಕ ಮಾಡುತ್ತಿದ್ದಾನೆ. ಆತನಿಗೆ ನೂರೋ ಇನ್ನೂರೋ ನೀಡಿ ಕೈತೊಳೆದು ಕೊಳ್ಳುತ್ತಿದ್ದಾನೆ. ಈ ಹಿಂದೊಮ್ಮೆ ಈತನ ಕೆಲಸ ವಂಚನೆ ಪ್ರಕರಣ ಬೆಳಕಿಗೆ ಬಂದ ಬಳಿಕ ಈತ ಗುತ್ತಿಗೆದಾರನನ್ನೇ ಸೆಟ್ಟಿಂಗ್ ಮಾಡಿ ಕೊಂಡಿದ್ದು. ತನ್ನ ಹಾಜರಿ ನಿತ್ಯ ಕೈ ತಪ್ಪದಂತೆ ನೋಡಿಕೊಳ್ಳುತ್ತಿದ್ದಾನೆ. ಇದಲ್ಲದೆ ಈತ ಮತ್ತೊಬ್ಬರ ಸಮಸ್ಯೆಗಳ ಪರಿಹಾರದ ಹೆಸರಿನಲ್ಲಿ ತನ್ನ ಜೇಬು ತುಂಬಿಸಿಕೊಳ್ಳುತ್ತಾನೆ ಎಂದು ಬಲ್ಲವರೇ ದೂರುತ್ತಿದ್ದಾರೆ. ಸಮಸ್ಯೆಯಿಂದ ಬಳಲುತ್ತಾ ಅದರಿಂದ ಹೊರ ಬರಲಾದರೆ ಒದ್ದಾಡುವ ದಲಿತರನ್ನು, ನಾವು ಸಂಘಟನೆಯವರು ನಿಮ್ಮ ಸಮಸ್ಯೆಯನ್ನು ಸರಿ ಮಾಡಿಸುತ್ತೇವೆ ಎಂದು ಕರೆದು ಬಳಿಕ ಅವರಿಂದಲೇ ಒಂದಷ್ಟು ಕಾಪಿ, ತಿಂಡಿ ಫೀ ಎಂದು ಹಣ ಕಿತ್ತುಕೊಂಡು, ಇತ್ತ ಪೊಲೀಸರಿಗೆ ನಾವು ದಲಿತರು ನಮ್ಮ ಕೆಲಸ ಮಾಡಿ ಕೊಡಿ ಎನ್ನುವ ಒಂದಷ್ಟು ಬೆದರಿಕೆ ಒಡ್ಡಿ ಕೆಲಸ ಮಾಡಿಸಿಕೊಡುವ ಬಗ್ಗೆ ಪೊಲೀಸರೂ ದೂರುತ್ತಿದ್ದಾರೆ. ಈ ಹಿಂದೊಮ್ಮೆ ಸಂಸಾರ ಸಮಸ್ಯೆಯನ್ನು ಸರಿ ಮಾಡಿಸುತ್ತೇವೆ ಎಂದು ಮಹಿಳೆಯೊಬ್ಬಳನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಬಳಿಕ ಆಕೆ ಜೊತೆ ಅನುಚಿತ ವರ್ತನೆ ತೋರಿ ಏಟು ತಿಂದಿರುವ ಬಗ್ಗೆಯೂ ಈತನ ಮೇಲೆ ದೂರುಗಳಿವೆ. ಈತನ ಬಗ್ಗೆ ಗೊತ್ತಿರುವ ಸಂಘಟನೆ ಸದಸ್ಯರು ಸಂಚಾಲಕ ಸ್ಥಾನದಿಂದ ಬದಲಾಯಿಸ ಬೇಕೆಂದು ಒತ್ತಾಯಿಸಿದಾಗ ಅಲ್ಲಿ ಈತ ಚಿಲ್ಲರೆ ರಾಜಕೀಯ ತೋರಿದ ಕಾರಣ ಕೆಲವರು ಸಂಘಟನೆಯಿಂದಲೇ ಹೊರ ಬಂದಿದ್ದರು. ಒಂದೆರಡಲ್ಲ, ಸತತ ಮೂರು ವರುಷದಿಂದ ಈತನ ಸಂಘಟನೆಯಿಂದ ಒಂದೊಂದು ಬಣ ಹೊರ ಬರುತ್ತಲೇ ಇದೆ. ಇದನ್ನು ಈತ ಅಲ್ಲಗಳೆಯುತ್ತನಾದರೂ ಇತರ ದಲಿತ ಸಂಘಟನೆಯವರು ಈತನಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಉಡುಪಿ: ತಂಡದಿಂದ ಹಲ್ಲೆ

Posted by JAYAKIRANA Kirana on | 0 comments | Leave a comment...

ಉಡುಪಿ: ಮಹಿಳೆಯರ ಸಹಿತ ನಾಲ್ವರಿದ್ದ ತಂಡವೊಂದು ವ್ಯಕ್ತಿಯೋರ್ವ ರನ್ನು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ಕೆಂಜೂರು ಗ್ರಾಮದ ಬೈದಬೆಟ್ಟು ಎಂಬಲ್ಲಿ ನಡೆದಿದೆ. ಈ ಬಗ್ಗೆ ಗಾಯಾಳು ಸದಾಶಿವ ಪೂಜಾರಿ (೫೭) ಎಂಬವರು ನೀಡಿದ ದೂರಿನ ಪ್ರಕಾರ ಆರೋಪಿಗಳಾದ ನವೀನ್, ಪ್ರಸಾದ್, ಕುಸುಮ ಹಾಗೂ ಸುಮತಿ ಎಂಬವರ ವಿರುದ್ದ ಬ್ರಹ್ಮಾವರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿ ಕೊಂಡಿದ್ದಾರೆ.

ಕಾಪು: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Posted by JAYAKIRANA Kirana on | 0 comments | Leave a comment...

ಕಾಪು: ಇಲ್ಲಿಯ ಠಾಣಾ ವ್ಯಾಪ್ತಿಯ ಉಳಿಯಾರ ಗೋಳಿ ಎಂಬಲ್ಲಿ ಬುಧವಾರ ರಾತ್ರಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಘಟನೆ ಸಂಭವಿಸಿದೆ.
ಉಳಿಯಾರಗೋಳಿ ದಂಡತೀರ್ಥ ಮಠದ ಸಮೀಪದ ನಿವಾಸಿ ಶುಭಾವತಿಯವರು ತಮ್ಮ ಸಂಬಂದಿಕರ ಮನೆಗೆ ಹೋಗಿದ್ದ ಸಂದರ್ಭ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ಮೂರು ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.
ಕಪಾಟಿನಲ್ಲಿರಿಸಿದ ೬ಪವನ್ ತೂಕದ ಚಿನ್ನದ ೬ಜೊತೆ ಕಿವಿಯೋಲೆ, ಎರಡು ಪವನಿನ ಎರಡು ಕರಿಮಣಿ ಸರ, ನಾಲ್ಕು ಪವನಿನ ಎರಡು ಚಿನ್ನದ ಬಳೆ, ಮನೆಯ ಹಾಲಿನಲ್ಲಿಟ್ಟಿದ್ದ ಶೋಕೇಸಿನಲ್ಲಿಟ್ಟಿದ್ದ ೨೦೦ಗ್ರಾಂ ತೂಕದ ಮೂರು ಬೆಳ್ಳಿ ಯ ಕಾಲು ದೀಪ, ಹಾಲ್ ಪಕ್ಕದ ಕೋಣೆಯ ಡ್ರಾವರಿನಲ್ಲಿರಿಸಿದ ೫೦ಸಾವಿರ ರುಪಾಯಿ ನಗದು ಸೇರಿ ೩ಲಕ್ಷರುಪಾಯಿ ಮೌಲ್ಯದ ಸೊತ್ತು ಕಳವಾಗಿದೆ ಎಂದು ಅಂದಾಜಿಸಲಾಗಿದೆ. ಶುಭಾವತಿಯವರ ಸಹೋದರ ಜಯ ಶೆಟ್ಟಿಯವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

15-06-2012

Posted by JAYAKIRANA Kirana on | 0 comments | Leave a comment...

ಚಾಲಕ ನಿಯಂತ್ರಣ ಕಳೆದುಕೊಂಡ ಟಿಪ್ಪರ್ ಗೂಡಂಗಡಿಗೆ ಢಿಕ್ಕಿ ಹೊಡೆದಿರುವ ಘಟನೆ ನಿನ್ನೆ ಮಧ್ಯಾಹ್ನ ಬಜ್ಪೆ ಬಳಿ ಸಂಭವಿಸಿದೆ.

ಅಕ್ರಮ ಮರ ಸಾಗಾಟ ಪತ್ತೆ: ರೂ.೨ ಲಕ್ಷದ ಸೊತ್ತು ವಶ

Posted by JAYAKIRANA Kirana on | 0 comments | Leave a comment...

ಪುತ್ತೂರು : ಅಕ್ರಮ ಮರಸಾಗಾಟ ಪ್ರಕರಣವೊಂದನ್ನು ಅರಣ್ಯ ಇಲಾ ಖೆಯ ಅಧಿಕಾರಿಗಳು ಗುರುವಾರ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಇಳಂತಾಜೆ ಎಂಬಲ್ಲಿ ಪತ್ತೆ ಮಾಡಿ ಮರದ ದಿಮ್ಮಿಗಳನ್ನು ಸಾಗಾಟಕ್ಕೆ ಬಳಸಿದ ಪಿಕ್ ಆಪ್ ಸಮೇತ ವಶ ಪಡಿಸಿಕೊಂಡಿದ್ದಾರೆ.
ಮಾಡಾವು ಕೈಕಂಬ ಕೌಡಿಚ್ಚಾರು ರಸ್ತೆಯಲ್ಲಿ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಗುರುವಾರ ಬೆಳಿಗ್ಗೆ ಪತ್ತೆಮಾಡಿದ ನರಿಮೊಗ್ರು ಶಾಖಾ ಉಪವಲಯ ಅರಣ್ಯಾಧಿಕಾರಿ ಕೆ. ವೆಂಕಪ್ಪ ನೇತೃತ್ವದ ತಂಡ ಕಿರಾಲ್‌ಬೋಗಿ ಮರದ ೬ ದಿಮ್ಮಿಗ ಳನ್ನು ಮಹೇಂದ್ರ ಪಿಕ್ ಆಪ್ ಸಮೇತ ವಶಪಡಿಸಿಕೊಂಡಿದೆ.
ಅರಣ್ಯಾಧಿಕಾರಿಗಳ ಕಾರ್ಯಾಚರ ಣೆಯ ವೇಳೆ ಆರೋಪಿ ಚಾಲಕ ವಾಹನ ಬಿಟ್ಟು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ವಶಪಡಿಸಿಕೊಳ್ಳಲಾದ ಮರ ಮತ್ತು ವಾಹನದ ಮೌಲ್ಯ ರೂ.೨ಲಕ್ಷ ಎಂದು ಅರಣ್ಯಾಧಿಕಾರಿಗಳು ತಿಳಿಸಿ ದ್ದಾರೆ.

ವಿದ್ಯಾರ್ಥಿಗೆ ಇರಿತ: ಆರೋಪಿಗೆ ಜಾಮೀನು

Posted by JAYAKIRANA Kirana on | 0 comments | Leave a comment...

ವಿಟ್ಲ: ಅಪ್ರಾಪ್ತ ಯುವಕನೊಬ್ಬ ವಿದ್ಯಾರ್ಥಿಯೊಬ್ಬನಿಗೆ ಬಾಟಲಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಮಂಗಳೂರು ಬಾಲ ನ್ಯಾಯ ಮಂಡಳಿ ಗುರುವಾರ ಜಾಮೀನು ನೀಡಿದೆ.
ಕುಳ ಗ್ರಾಮದ ಉರಿಮಜಲು ನಿವಾಸಿ ಸಿರಾಜುದ್ದೀನ್(೧೭) ಎಂಬಾತನೇ ಆರೋಪಿಯಾಗಿದ್ದು, ಆತನಿಗೆ ಜಾಮೀನು ದೊರಕಿದೆ. ಕಳೆದ ಸೋಮವಾರ ರಾತ್ರಿ ಕಂಬಳಬೆಟ್ಟು ಶಾಂತಿನಗರ ನಿವಾಸಿ ಪುತ್ತೂರು ಎಂ.ಪಿ.ಎಂ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಅಲ್‌ಹಾನ್ ಖಾನ್(೧೬) ಎಂಬಾತನಿಗೆ ಆರೋಪಿ ಸಿರಾಜುದ್ದೀನ್ ಬಾಟಲಿಯಿಂದ ಇರಿದಿದ್ದ ಎಂದು ದೂರಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿ ಬಾಲ ನ್ಯಾಯ ಮಂಡಳಿಗೆ ಹಾಜರು ಪಡಿಸಿದ್ದರು. ಆತನ ವಯಸ್ಸು ಇನ್ನೂ ೧೮ ದಾಟದ ಹಿನ್ನೆಲೆಯಲ್ಲಿ ಆತನನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿತ್ತು.

ಅಕ್ರಮ ಮದ್ಯ; ಆರೋಪಿ ದೋಷಮುಕ್ತ

Posted by JAYAKIRANA Kirana on | 0 comments | Leave a comment...

ಕುಂದಾಪುರ: ತಾಲೂಕಿನ ವಡೇರಹೋಬಳಿ ಗ್ರಾಮದ ಮಂಗಳಪಾಂಡ್ಯ ರಸ್ತೆಯಲ್ಲಿರುವ ವಾಸ್ತವ್ಯದ ಮನೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟಿದ್ದ ಆರೋಪ ಹೊತ್ತಿದ್ದ ಕೆ. ಅರುಣ್ ಹವಾಲ್ದಾರ ದೋಷಮುಕ್ತಗೊಂಡಿದ್ದಾರೆ.
ಆರೋಪಿಯ ಮನೆಯಲ್ಲಿ ೮೪ ಮದ್ಯದ ಬಾಟಲಿ ಅಬಕಾರಿ ಉಪ ನಿರೀಕ್ಷಕರಾದ ಶ್ರೀ ನಾರಾಯಣ ಮಣಿಯಾಣಿಯವರ ತಂಡವು ದಾಳಿ ನಡೆಸಿದಾಗ ಪತ್ತೆಯಾಗಿದೆ. ಸದ್ರಿ ಬಾಟಲಿಗಳಿಗೆ ಭದ್ರತಾ ಚೀಟಿ ಇರದೇ ಇದ್ದು, ಅವುಗಳನ್ನು ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟ ನಡೆಸಬೇಕಿತ್ತು. ಕರ್ನಾಟಕ ಅಬಕಾರಿ ಕಾಯಿದೆಯ ಕಲಂ ೩೨, ೩೪ ಹಾಗೂ ೩೮ ಎ ಕೆಳಗೆ ಆರೋಪಿಯ ವಿರುದ್ಧ ಚಾರ್ಜ್‌ಶೀಟ್‌ನ್ನು ಹಾಕಲಾಗಿತ್ತು. ಆರೋಪಿ ಕೆ. ಅರುಣ ಹವಾಲ್ದಾರ್‌ನ ಪರವಾಗಿ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.

ಬೈಕ್‌ಗೆ ಶಾಲಾ ವಾಹನ ಡಿಕ್ಕಿ: ಗಾಯ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಉಡುಪಿ ಕಡೆಯಿಂದ ಪಡುಬಿದ್ರಿಯತ್ತ ಬರುತ್ತಿದ್ದ ಬೈಕೊಂದಕ್ಕೆ ಶಾಲಾ ವಾಹನವೊಂದು ತೆಂಕ ಎರ್ಮಾಳಿನಲ್ಲಿ ಹಿಂಬದಿಯಿಂದ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೂಲತಃ ಹೆಜಮಾಡಿಯವರಾದ ಪಡುಬಿದ್ರಿ ಹೊನ್ನಯ ಸದನ ಸಮೀಪದ ನಿವಾಸಿ ಡಿಪ್ಲೊಮಾ ಇಂಜಿನಿಯರ್ ಹುಸೇನ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಪರಿಚಿತ ಶವ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ತೋಟಬೆಂಗ್ರೆಯ ಗುರುಪುರ ನದಿ ದಡದಲ್ಲಿ ಸುಮಾರು ೩೦ರಿಂದ ೪೦ ವರ್ಷದ ಪ್ರಾಯದ ಗಂಡಸಿನ ಶವವೊಂದು ಪತ್ತೆಯಾಗಿದೆ. ವಾರಿಸುದಾರರು ಇದ್ದಲ್ಲಿ ಪಣಂಬೂರು ಠಾಣೆಯಲ್ಲಿ ಸಂಪರ್ಕಿಸುವಂತೆ ಕೋರಲಾಗಿದೆ.

ಗೋಸಾಗಾಟ: ಆರು ಮಂದಿ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸಿದ್ದಾಪುರದ ಬಳ್ಮನೆಯಿಂದ ಕುಂದಾಪುರ ಕಡೆ ಮಿನಿಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವುಗಳನ್ನು ಅಮಾಸೆಬೈಲು ಪೊಲೀಸರು ವಶಕ್ಕೆ ಪಡೆದುಕೊಂಡು ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಲ್ಪೆಯ ಹೂಡೆ ನಿವಾಸಿಗಳಾದ ಮಹಮ್ಮದ್ ರಫೀಕ್, ಸಿರಾಜ್, ಶಫಿ, ಮಹಮ್ಮದ್ ಆರಿಫ್, ಖಾದರ್ ಖುರೇಷಿ ಮತ್ತು ಅಮಾಸೆಬೈಲು ನಿವಾಸಿ ಶಬೀರ್ ಎಂದು ಹೆಸರಿಸಲಾಗಿದೆ. ಗೋವುಗಳನ್ನು ನೀಲಾವರ ಗೋಶಾಲೆಗೆ ಸಾಗಿಸಲಾಗಿದೆ. ಪೊಲೀಸರು ರಾತ್ರಿ ವೇಳೆ ಗಸ್ತು ನಿರತ ಸಂದರ್ಭ ಅಕ್ರಮ ಗೋಸಾಗಾಟ ಪತ್ತೆಯಾಗಿದೆ. ಗೋಸಾಗಾಟದ ಸೂತ್ರಧಾರ ಬಳ್ಮನೆ ನಿವಾಸಿ ಸಂತೋಷ್ ಶೆಟ್ಟಿಗಾರ ತಲೆಮರೆಸಿದ್ದಾನೆ.

ಬ್ಯಾಂಕ್ ದರೋಡೆ: ಐವರ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹಾಡಹಗಲೇ ಕಾರ್ಪೊರೇಷನ್ ಬ್ಯಾಂಕ್ ಲೂಟಿಗೈದು ೧.೯೧ಕೋ.ರೂ ದೋಚಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಐವರನ್ನು ಬಂಧಿಸಿದ್ದಾರೆ ಆದರೆ ಪೂರ್ತಿ ಹಣ ವಶಪಡಿಸಲು ಸಾಧ್ಯವಾಗಿಲ್ಲ. ಆರ್.ಟಿ ನಗರದಲ್ಲಿ ಮೇ ತಿಂಗಳಲ್ಲಿ ಸಿಎಂಎಸ್ ಖಾಸಗಿ ಸೆಕ್ಯುರಿಟಿ ಸಂಸ್ಥೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ೧.೯೧ಕೋ.ರೂ ಹಣ ದೋಚಿದ್ದರು. ಇವರೆಲ್ಲಾ ವೃತ್ತಿಪರ ದರೋಡೆಕಾರರಾಗಿದ್ದು ಪೊಲೀಸರು ಇವರನ್ನು ಬಂಧಿಸುವಲ್ಲಿ ಯಶಸ್ವಿಯಗಿದ್ದಾರೆ.
ಬೆಳ್ತಂಗಡಿಯ ಮಾಲಾಡಿ ಗಾಮದ ಜಯಪ್ರಕಾಶ್(೨೯), ಬೆಳ್ತಂಗಡಿ ನಾಪುಳೆ ನಿವಾಸಿ ಸಂತೋಷ್(೩೭), ಮುಂಬೈನ ನಾರಾಯಣ ನಗರ ನಿವಾಸಿ ಫಜೇಲ್ ಅಹಮ್ಮದ್(೨೬), ಹಾಸನ ಜಿಲ್ಲೆಯ ಆಲೂರಿನ ಕೆ.ಹೊಸಪೇಟೆ ನಿವಾಸಿ ಕರುಣಾಕರ ಅಲಿಯಾಸ್ ರವಿಕಾಂತ ಪೂಜಾರಿ(೩೦) ಬಂಧಿತರು. ಇವರಿಂದ ೩೨ಲಕ್ಷ ನಗದು ಸೇರಿದಂತೆ ೫೦ಲ.ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೇ ೧೪ರಂದು ಸಿಎಂಎಸ್ ಖಾಸಗಿ ಭದ್ರತಾ ಸಂಸ್ಥೆ ಸಿಬ್ಬಂದಿ ಕಾರ್ಪೊರೇಷನ್ ಬ್ಯಾಂಕ್‌ನ ಎಟಿಎಂಗೆ ೧.೯೧ಕೋ.ರೂ ತುಂಬಲು ಹೋಗುತಿದ್ದ ವಾಹನವನ್ನು ಹಿಂದಿನಿಂದ ಅಡ್ಡಗಟ್ಟಿದ ೧೪ ದರೋಡೆಕೋರರ ತಂಡ ಕೆಲವೇ ಕ್ಷಣಗಳಲ್ಲಿ ಲೂಟಿ ಮಾಡಿ ಪರಾರಿಯಾಗಿತ್ತು ಇದರಲ್ಲಿ ಎಂಟು ಮಂದಿ ಭಾಗಿಯಾಗಿದ್ದು ಅವರನ್ನು ಬಂಧಿಸಲು ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.

ಅಕ್ರಮ ಗೋಸಾಗಾಟ: ಬೆನ್ನಟ್ಟಿದ ಕಾರ‍್ಯಕರ್ತರಿಗೆ ತಲವಾರಿನಿಂದ ಹಲ್ಲೆ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ನಾರಾವಿಯಿಂದ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ಬೆನ್ನಟ್ಟಿದ್ದ ಹಿಂದೂ ಸಂಘಟನೆಯ ಕಾರ‍್ಯಕರ್ತರಿಗೆ ಗುರುವಾಯನಕೆರೆ ಸಮೀಪದ ಶಕ್ತಿನಗರದಲ್ಲಿ ಪೊಟ್ಟುಕೆರೆ ಕಸಾಯಿಖಾನೆ ಆವರಣದಲ್ಲಿ ಅಡ್ಡಗಟ್ಟಿ ಹಲ್ಲೆಗೈದಿರುವ ಘಟನೆ ನಿನ್ನೆ ಸಂಭವಿಸಿದೆ.
ಘಟನೆಯನ್ನು ಮೂವರು ಹಿಂದೂ ಸಂಘಟನೆಯ ಕಾರ‍್ಯಕರ್ತರಾದ ನಾರಾವಿ ಪಿಲ್ಯ ನಿವಾಸಿಗಳಾದ ಗಂಗಯ್ಯ, ಹರೀಶಗ ಹಾಗೂ ಗಿರೀಶ್ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಬೆಳಿಗ್ಗೆ ಪಿಕ್‌ಅಪ್ ವಾಹನದಲ್ಲಿ ಮೂರು ದನಗಳನ್ನು ಸಾಗಿಸುತ್ತಿದ್ದಾಗ ವಿಷಯ ತಿಳಿದ ಬಜರಂಗದಳದ ಕಾರ‍್ಯಕರ್ತರು ಬೈಕ್‌ನಲ್ಲಿ ಹಿಂಬಾಲಿಸಿದ್ದರು ಎನ್ನಲಾಗಿದೆ. ಗೋಸಾಗಾಟದ ವಾಹನ ಪೊಟ್ಟುಕೆರೆ ಎಂಬಲ್ಲಿರುವ ಅಕ್ರಮ ಕಸಾಯಿಖಾನೆ ಪ್ರವೇಶಿಸಿದಾಗ ಇವರೂ ಅವರನ್ನು ಹಿಂಬಾಳಿಸಿ ಒಳನುಗ್ಗಿದ್ದರು. ಗುಂಪು ಸೇರಿದ್ದ ೧೦-೧೫ ಮಂದಿ ಬಜರಂಗ ದಳದ ಕಾರ‍್ಯಕರ್ತರ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ನಾಯಿ ಅಡ್ಡ ಬಂದು ಬೈಕ್ ಪಲ್ಟಿ: ಶಿಕ್ಷಕಿಗೆ ಗಂಭೀರ ಗಾಯ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಾಯಿ ಅಡ್ಡ ಬಂದ ಕಾರಣ ಬೈಕ್ ಪಲ್ಟಿ ಹೊಡೆದು ಶಿಕ್ಷಕಿ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಮರ್ಕಂಜ ಎಂಬಲ್ಲಿ ನಿನ್ನೆ ನಡೆದಿದೆ.
ದೇವಪ್ಪ ಎಂಬವರು ತಮ್ಮ ಪತ್ನಿ, ಶಿಕ್ಷಕಿ ಸುಶೀಲ ಎಂಬವರೊಂದಿಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ನಾಯಿ ಏಕಾಏಕಿ ಅಡ್ಡ ಬಂದು ಅಪಘಾತ ಸಂಭವಿಸಿದೆ. ದೇವಪ್ಪರ ನಿಯಂತ್ರಣ ಕಳೆದುಕೊಂಡ ಬೈಕ್ ರಸ್ತೆಯಲ್ಲೇ ಪಲ್ಟಿ ಹೊಡೆದ ಪರಿಣಾಮ ಸುಶೀಲ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಸುಶೀಲರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಪ್ಪ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಅಡ್ಡ ಮತದಾನ ಮಾಡಿದ ೧೨ ಮಂದಿಯ ಪತ್ತೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಸಚಿವ ಜಾರಕೀ ಹೊಳಿ ಹಾಗೂ ಮಾಜೀ ಮುಖ್ಯಮಂತ್ರಿ ಯಡಿಯೂರಪ್ಪ ಬಣಕ್ಕೆ ಸೇರಿದವರು ಅಡ್ಡಮತದಾನ ಮಾಡಿರುವುದು ಖಚಿತಗೊಂಡಿದೆ. ಪಕ್ಷದ ಉನ್ನತ ಮಟ್ಟದ ಸಮಿತಿ ಹಾಗೂ ಗುಪ್ತಚರ ಇಲಾಖೆ ನೀಡಿದ ಆಧಾರದ ಮೇಲೆ ಅಡ್ಡಮತದಾನ ಮಾಡಿದ ೧೨ ಮಂದಿಯನ್ನು ಪತ್ತೆಮಾಡಿದೆ.
ಇಬ್ಬರು ಸಚಿವರು ಕೂಡಾ ಅಡ್ಡಮತದಾನ ಮಾಡಿದ್ದು ಯಡಿಯೂರಪ್ಪ ಬಣಕ್ಕೆ ಸೇರಿದ ಐವರು ಅಡ್ಡ ಮತದಾನ ಮಾಡಿದ್ದಾರೆ. ಅಡ್ಡಮತದಾನ ಮಾಡಿರುವವರು ಒಂದು ಕೋಟಿ ರೂ.ನಿಂದ ಎರಡು ಕೋಟಿ ರೂ.ವರೆಗೂ ಪಡೆದಿದ್ದಾರೆ. ಚಾಮರಾಜ ನಗರ ಜಿಲ್ಲೆಗೆ ಸೇರಿದ ಒಬ್ಬ ಶಾಸಕರು ಅತೀ ಹೆಚ್ಚು ೨ಕೋಟಿ ರೂ ಪಡೆದ ಸದಸ್ಯರಾಗಿದ್ದಾರೆ. ಇವರು ಕಾಂಗ್ರೆಸ್‌ನ ಸೀತಾರಾಮ್‌ಗೆ ಮತ ಚಲಾಯಿಸಿದ್ದಾರೆ. ಯಡಿಯೂರಪ್ಪ ಬಣಕ್ಕೆ ಸೇರಿದವರು ಉದ್ದೇಶ ಪೂರ್ವಕವಾಗಿಯೇ ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ರಾಜ್ಯಾಧ್ಯಕ್ಷ ಈಶ್ವರಪ್ಪರ ಹೆಸರಿಗೆ ಮಸಿ ಬಳಿಯಲು ಈ ಕೆಲಸ ಮಾಡಿದ್ದಾರೆಂದು ಹೇಳಲಾಗಿದೆ.
ಯಡಿಯೂರಪ್ಪ ಬಣಕ್ಕೆ ಸೇರಿದ್ದ ಈ ಐವರು ಶಾಸಕರು ಅನಂತಕುಮಾರ್ ಮತ್ತು ಸಂಘಪರಿವಾರದ ವತಿಯಿಂದ ಸ್ಪರ್ಧಿಸಿದ್ದ ಭಾನುಪ್ರಕಾಶ್, ವಿಮಲಾಗೌಡ, ರಘುನಾಥ ಅವರಿಗೆ ಮತ ಚಲಾಯಿಸುವ ಬದಲು ಅಡ್ಡಮತದಾನ ಮಾಡಿದ್ದಾರೆ.
ಇವರಲ್ಲಿ ಒಬ್ಬರು ಕಾಂಗ್ರೆಸ್‌ಗೆ ಸೇರಿದ ಸೀತಾರಾಮ ಅವರಿಗೆ ಮತ ಚಲಾಯಿಸಿದ್ದಾರೆ. ಈ ೧೨ ಮಂದಿಯ ವಿರುದ್ದ ಸದ್ಯಕ್ಕೆ ಯಾವುದೇ ಶಿಸ್ತುಕ್ರಮ ಕೈಗೊಳ್ಳದಿರಲು ನಿರ್ಧರಿಸಿರುವ ಪಕ್ಷ ಮುಂಬರುವ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸಲು ಅವಕಾಶ ನೀಡದಿರಲು ತೀರ್ಮಾನಿಸಿದೆ. ಈಗಾಗಲೇ ಕೇಂದ್ರ ಘಟಕಕ್ಕೂ ರಾಜ್ಯ ಘಟಕ ವರದಿ ಸಲ್ಲಿಸಿದೆ.

ಉಳ್ಳಾಲ: ವ್ಯಕ್ತಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ಉಳ್ಳಾಲ: ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮಧ್ಯಾಹ್ನದ ಊಟಕ್ಕೆಂದು ಕೊಲ್ಯ ಎಂಬಲ್ಲಿಗೆ ಹೋದವರು ನಾಪತ್ತೆಯಾದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಿನ್ಯ ಮೀನಾದಿ ಎಂಬಲ್ಲಿ ನಡೆದಿದೆ.
ಕಿನ್ಯ ಮೀನಾದಿ ನಿವಾಸಿ ಸುಂದರ(೩೭) ನಾಪತ್ತೆಯಾ ದವರು. ಅವರು ಬಿಲ್ಡಿಂಗ್ ಕಾಂಟ್ರಾಕ್ಟರ್ ಚಂದ್ರ ಶೇಖರ್‌ಗಟ್ಟಿ ಜೊತೆ ಕೂಲಿ ಕೆಲಸ ಮಾಡುತ್ತಿದ್ದರೆನ್ನ ಲಾಗಿದೆ. ಅವರು ಮಧ್ಯಾಹ್ನ ಒಂದು ಗಂಟೆಯ ವೇಳೆ ಕೊಲ್ಯಕ್ಕೆ ಹೋಗಿ ಬರುವುದಾಗಿ ಉಳಿದ ಕೆಲಸಗಾರರಲ್ಲಿ ಹೇಳಿ ಹೊರಟು ಹೋದವರು ಮತ್ತೆ ಹಿಂತಿರುಗಿ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸುಂದರ ಅವರ ಪತ್ನಿ ವಾರಿಜ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

ವೈದ್ಯ ಅಸಹಜ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಆಸ್ಪತ್ರೆಯೊಂದರ ಯುವವೈದ್ಯ ಬಾಲಮುರಳಿ(೨೯) ತಮ್ಮ ಮನೆಯಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ಅತ್ತಾವರ ಕಾಪ್ರಿಗುಡ್ಡದಲ್ಲಿ ವಾಸಿಸುತ್ತಿದ್ದ ಇವರು ಹೈಪರ್‌ಟೆನ್ಶನ್ ಮತ್ತು ಡಯಾಬಿಟಿಸ್‌ನಿಂದ ಬಳಲುತ್ತಿದ್ದರೆನ್ನಲಾಗಿದೆ.

ಪೆಟ್ರೋಲ್ ಸೆಸ್ ಕಡಿತಕ್ಕೆ ಚಿಂತನೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಪೆಟ್ರೋಲ್ ಮೇಲಿನ ಸೆಸ್ ಕಡಿಮೆ ಮಾಡುವ ಬಗ್ಗೆ ಒಂದೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸದಾನಂದ ಗೌಡ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿಂದು ಜನತಾದರ್ಶನ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು,ಪೆಟ್ರೋಲ್ ಮೇಲಿನ ಸುಂಕ ಕಡಿತಗೊಳಿಸುವ ಕುರಿತು ಹಣಕಾಸು ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಕಂಪ್ಯೂಟರ್ ಕಲಿಕಾ ಕೇಂದ್ರವಾದ ಕಾಂಗ್ರೆಸ್ ಕಚೇರಿ!

Posted by JAYAKIRANA Kirana on | 0 comments | Leave a comment...

ಕಾರ್ಕಳ: ಕಾಂಗ್ರೆಸ್ ಪಕ್ಷದ ಕಚೇರಿಯು ಕಂಪ್ಯೂಟರ್ ಕಲಿಕಾ ಕೇಂದ್ರವಾಗುವುದೇ? ಇಂತಹದೊಂದು ಪ್ರಶ್ನೆ ಸಹಜವಾಗಿ ಕಾಡತೊಡಗಿದ್ದರೂ ಅದು ಸತ್ಯ ಎಂಬುವುದನ್ನು ಸಾಬೀತು ಪಡಿಸಿರುವುದು ಕಾರ್ಕಳ ತಾಲೂಕು ಇನ್ನಾದ ರಾಷ್ಟ್ರೀಯ ಕಾಂಗ್ರೆಸ್ ಕಚೇರಿ.
ಕಾರ್ಕಳ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರಾಗಿರುವ ರೋಕಿ ಡಿಸೋಜಾ ಎಂಬವರು ತನ್ನ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣವನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಅದಕ್ಕಾಗಿ ಸುಮಾರು ೨ ಲಕ್ಷ ರೂಪಾಯಿ ವಿನಿಯೋಗಿಸಿದ್ದಾರೆ. ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಉಪಯೋಗಿಸಿಕೊಂಡಿದ್ದಾರೆ. ಇವರ ಕಾರ್ಯಸಾಧನೆಗೆ ಪಕ್ಷದ ಮುಖಂಡರು ಬೆಂಬಲ ನೀಡಿದ್ದಾರೆಂದು ತಿಳಿದುಬಂದಿದೆ. ಪ್ರಸ್ತುತ ೭೦ ಮಂದಿ ವಿದ್ಯಾರ್ಥಿಗಳು ಕಾಂಗ್ರೆಸ್ ಪಕ್ಷದ ಕಚೇರಿ ಕಂ ಕಂಪ್ಯೂಟರ್ ತರಬೇತು ಕೇಂದ್ರಕ್ಕೆ ಬರುತ್ತಿದ್ದಾರೆ. ಕಂಪ್ಯೂಟರ್ ಕಲಿಸಲೆಂದು ಶಿಕ್ಷಕಿಯೊಬ್ಬರು ನಿಯುಕ್ತಿ ಗೊಂಡಿದ್ದಾರೆ. ಶಿಕ್ಷಣದೊಂದಿಗೆ ರಾಜಕೀಯ ಬೆರೆಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದಾಗಿ ರೋಕಿ ಡಿಸೋಜಾ ಅವರಲ್ಲಿ ಪತ್ರಿಕಾ ಪ್ರತಿನಿಧಿ ಪ್ರಶ್ನಿಸಿದಾಗ ಕೇವಲ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಮಾತ್ರವೇ ಕಲಿಕಾ ಕೇಂದ್ರಕ್ಕೆ ಉಪಯೋಗಿಸಿರುವುದನ್ನು ಬಿಟ್ಟು ರಾಜಕೀಯ ಚಟುವಟಿಕೆಗಳಿಗೆ ವಿದ್ಯಾರ್ಥಿಗಳನ್ನು ಬಳಸಿಕೊಂಡಿಲ್ಲ. ಕಂಪ್ಯೂಟರ್ ತರಬೇತಿ ನೀಡುವ ವೇಳೆಗೆ ಇಲ್ಲಿ ಯಾವುದೇ ತರದಲ್ಲಿ ಪಕ್ಷದ ಚಟುವಟಿಕೆಗಳು ನಡೆಸಬಾರದೆಂಬ ತೀರ್ಮಾನಕ್ಕೆ ಬಂದ ಬಳಿಕವಷ್ಟೇ ಉಚಿತವಾಗಿ ಕಂಪ್ಯೂಟರ್ ತರಬೇತಿ ನೀಡಲು ಮುಂದಾಗಿರುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಕಂಪ್ಯೂಟರ್ ವಿದ್ಯಾರ್ಥಿಗಳೇ ಮುಂದಿನ ಕಾಂಗ್ರೆಸ್ ಕಾರ್ಯಕರ್ತರಾಗುವರೇ ಎಂಬುವುದನ್ನು ಕಾದುನೋಡಬೇಕಷ್ಟೇ.

ಮತ್ತೆ ವಧಾಗೃಹದ ಬಾಗಿಲತ್ತ ಕುರಿಗಳು

Posted by JAYAKIRANA Kirana on | 0 comments | Leave a comment...

ಮಂಗಳೂರು : ನಿನ್ನೆ ಮುಂಜಾನೆ ಅಕ್ರಮ ವಧಾಗೃಹಕ್ಕೆ ದಾಳಿ ನಡೆಸಿದ ಮನಪಾ ಅಧಿಕಾರಿಗಳು ವಶ ಪಡಿಸಿಕೊಂಡಿದ್ದ ಕುರಿಗಳನ್ನು ಖರೀದಿಸಲು ಯಾವುದೇ ಬಿಡ್ಡುದಾರ ಬಾರದ ಹಿನ್ನೆಲೆಯಲ್ಲಿ ಕುರಿಗಳು ಮರಳಿ ವಧಾಗೃಹದ ನಯೀಮ್ ಮಡಿಲು ಸೇರಿದೆ.
ಬಂದರ್ ಅನ್ಸಾರಿ ರಸ್ತೆಯಲ್ಲಿ ನಯೀಮ್ ಎಂಬವರು ಅನಧಿಕೃತ ವಧಾಗೃಹ ವನ್ನು ನಡೆಸುತ್ತಿದ್ದರು. ಈ ಬಗ್ಗೆ ದೂರು ಪಡೆದುಕೊಂಡ ಮನಪಾ ಆರೋಗ್ಯಾಧಿಕಾರಿಗಳು ನಿನ್ನೆ ಮುಂಜಾನೆ ಈ ವಧಾಗೃಹಕ್ಕೆ ದಾಳಿ ನಡೆಸಿ ೮೧ ಜೀವಂತ ಕುರಿಗಳನ್ನು ವಶಕ್ಕೆ ತೆಗೆದುಕೊಂಡು ವಧಾಗೃಹಕ್ಕೆ ಬೀಗ ಜಡಿದಿದ್ದರು. ಆ ಬಳಿಕದ ಬೆಳವಣಿಗೆಯಲ್ಲಿ ಈ ಕುರಿಗಳನ್ನು ತಮಗೆ ನೀಡುವಂತೆ ನಯೀಮ್ ಮನಪಾ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದ. ಆದರೆ ಈ ಕುರಿಗಳ ಮಾರಾಟಕ್ಕೆ ಹರಾಜು ಪ್ರಕ್ರಿಯೇ ನಡೆಸಲು ಮನಪಾ ಅಧಿಕಾರಿಗಳು ತೀರ್ಮಾನಿಸಿದ್ದರು. ಅದರಂತೆ ನಿನ್ನೆ ಮಧ್ಯಾಹ್ನ ಬಹಿರಂಗ ಹರಾಜು ಪ್ರಕ್ರಿಯೇ ನಡೆದರೂ ಕುರಿ ಖರೀದಿಸಲು ಯಾವುದೇ ಬಿಡ್ಡುದಾರ ಭಾಗವಹಿಸಲೇ ಇಲ್ಲ ಹೀಗಾಗಿ ಕುರಿಗಳು ಮತ್ತೆ ನಯೀಮ್ ಪಾಲಾಗಿದೆ. ಆದರೆ ಮನಪಾ ಆಯುಕ್ತರ ಮುಂದಿನ ಆದೇಶ ಬರುವವರೆಗೆ ಕುರಿಗಳನ್ನು ಸಾಕುವಂತೆ ಮನಪಾ ಅಧಿಕಾರಿಗಳು ನಯೀಮ್‌ಗೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅತ್ಯಾಚಾರ: ದಸಂಸ ಖಂಡನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಣಿಪಾಲ ಠಾಣಾ ವ್ಯಾಪ್ತಿಯ ೮೦ಬಡಗುಬೆಟ್ಟು ಗ್ರಾಮ ನೇತಾಜಿನಗರದ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿಯನ್ನು ಮೇ. ಏಳರಂದು ಸಿದ್ಧಿಕ್ ಎಂಬಾತ ಅತ್ಯಾಚಾರಗೈದಿದ್ದು, ಮಣಿಪಾಲ ಪೊಲೀಸರು ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವೆಂದು ದಸಂಸ ಅಂಬೇಡ್ಕರ್ ವಾದ ಖಂಡಿಸಿದೆ.
ಆರೋಪಿ ಸಿದ್ಧಿಕ್ ಈ ಹಿಂದೆ ಹಲವಾರು ಹುಡುಗಿಯರ ಮೇಲೆ ಅತ್ಯಾಚಾರ ನಡೆಸಿದ ಬಗ್ಗೆ ಪೊಲೀಸ ರಿಗೆ ತಿಳಿದಿದ್ದರೂ ಹಾಗೂ ಈ ಪ್ರಕರಣ ದಲ್ಲಿ ಬಾಲಕಿಯ ತಾಯಿ ಲಿಖಿತ ದೂರು ನೀಡಿದ್ದರೂ ಅದನ್ನು ತಿರಸ್ಕರಿಸಿ ಬೇಜ ವಾಬ್ದಾರಿತನದಿಂದ ವರ್ತಿಸಿ ದಲಿತ ಕುಟುಂಬಕ್ಕೆ ಅನ್ಯಾಯವೆಸಗಿದ ಪೊಲೀ ಸರ ಮೇಲೆ ಕೂಡಲೇ ಕಾನೂನುಕ್ರಮ ಕೈಗೊಳ್ಳಬೇಕೆಂದು ತಾಲೂಕು ಪ್ರಧಾನ ಸಂಚಾಲಕ ಪರಮೇಶ್ವರ ಉಪ್ಪೂರು, ಜಿಲ್ಲಾ ಸಮಿತಿ ಸದಸ್ಯರಾದ ಸುಂದರ ಗುಜ್ಜರಬೆಟ್ಟು, ಮಾರಿಮುತ್ತು ನೇತಾಜಿನಗರ ಒತ್ತಾಯಿಸಿದ್ದಾರೆ.

ಹಣಕ್ಕಾಗಿ ಬನ್ನಂಜೆ ರಾಜನಿಂದ ಬೆದರಿಕೆ

Posted by JAYAKIRANA Kirana on | 0 comments | Leave a comment...

ಉಡುಪಿ: ಕುಖ್ಯಾತ ಭೂಗತ ಲೋಕದ ದೊರೆ ಬನ್ನಂಜೆ ರಾಜ ಎಂದು ಹೇಳಿಕೊಂಡ ವ್ಯಕ್ತಿಯೋರ್ವ ಉಡುಪಿಯಲ್ಲಿ ಕನ್‌ಸ್ಟ್ರಕ್ಷನ್ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವರಿಗೆ ಕಳೆದೆರಡು ತಿಂಗಳಿಂದ ಹಣಕ್ಕಾಗಿ ಮೊಬೈಲ್ ಮೂಲಕ ಬೆದರಿಕೆ ಹಾಕುತ್ತಿ ರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಮೈತ್ರಿ ಕಾಂಪ್ಲೆಕ್ಸ್‌ನಲ್ಲಿ ಕಚೇರಿ ಹೊಂದಿರುವ, ಬ್ರಹ್ಮಗಿರಿಯ ಸಾಯಿರಾಧಾ ಪ್ಯಾಲೇಸ್‌ನಲ್ಲಿ ವಾಸವಾ ಗಿರುವ ಸುಧೀರ್ ಶೆಟ್ಟಿ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖ ಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಎಪ್ರಿಲ್ ೧೯ ರಿಂದ ಬೆದರಿಕೆ ಕರೆ ಆರಂಭವಾಗಿದೆ. ಕಚೇರಿಯ ಸ್ಥಿರ ದೂರವಾಣಿ ಮತ್ತು ತನ್ನ ಮೊಬೈಲ್‌ಗೆ ಎರಡಕ್ಕೂ ಬೆದರಿಕೆ ಕರೆ ಬರುತ್ತಿದ್ದು, ಕರೆ ಮಾಡಿದ ವ್ಯಕ್ತಿ ತಾನು ಬನ್ನಂಜೆ ರಾಜಾ ಎಂದು ಹೇಳಿಕೊಂಡಿದ್ದಾನೆ ಎಂದು ಸುಧೀರ್ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಜೂನ್ ೧೨ ರಂದು ಮಧ್ಯಾಹ್ನ ಗಂಟೆ ೨.೪೦ ಕ್ಕೆ ಮತ್ತೆ ಎರಡೆರಡು ಬಾರಿ ಕರೆ ಮಾಡಿದ ಆರೋಪಿ, ಹಣಕ್ಕಾಗಿ ಪೀಡಿಸಿದ್ದಾನೆ ಎನ್ನಲಾಗಿದೆ.

ಯುವಕ ನೇಣು ಬಿಗಿದು ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಉಡುಪಿ: ಅವಿವಾಹಿತ ಯುವಕನೋರ್ವ ವೈಯುಕ್ತಿಕ ಕಾರಣಕ್ಕಾಗಿ ಜೀವನದಲ್ಲಿ ಜುಗುಪ್ಸೆಗೊಂಡು ಪಕ್ಕಾಸಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಂಗಳವಾರ ರಾತ್ರಿ ೮ ಗಂಟೆಗೆ ಉಪ್ಪೂರು ಗ್ರಾಮದ ಕೊಳಲಗಿರಿ ಎಂಬಲ್ಲಿ ನಡೆದಿದೆ. ಶರತ್ (೨೦) ಎಂಬವನು ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನದ ಸರ ಕಳವು: ಆರೋಪಿಗಳ ಬಂಧನ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ವಸತಿಗೃಹಕ್ಕೆ ನುಗ್ಗಿ ಯುವಕನ ಎರಡು ಪವನ್ ಚಿನ್ನದ ಸರ ಎಗರಿಸಿದ ಪ್ರಕರಣದಲ್ಲಿ ನಾಲ್ವರ ತಂಡವನ್ನು ಕಾಸರಗೋಡು ನಗರ ಸರ್ಕಲ್ ಇನ್‌ಸ್ಪೆಕ್ಟರ್ ನೇತೃತ್ವದ ಪೊಲೀಸರು ದಸ್ತಗಿರಿಗೈದಿದ್ದಾರೆ.
ಕಾಸರಗೋಡು ತಳಂಗೆರೆಯ ಮುಹಮ್ಮದ್ ಹಿಷಾಂ, ಕೂಡ್ಲು ಗುಹತ್ತಡ್ಕದ ರೋಶನ್ ಕಾಸ್ತ, ತಳಂಗೆ ರೆಯ ನಿಜಾಮುದ್ದೀನ್ , ಚೆಟ್ಟುಂ ಗುಯಿಯ ಅಬ್ದುಲ್ ರಶೀದ್ ಬಂಧಿ ತರು. ನಾಟೆಕ್ಕಲ್ಲು ಐಕನ್ ನಿವಾಸಿ ಸುಭಾಷ್ ದೌರ್ಜನ್ಯ ಹಾಗೂ ದರೋ ಡೆಗೆ ಒಳಗಾದ ಯುವಕ. ಕಾಸರ ಗೋಡಿನ ಖಾಸಗಿ ಮೊಬೈಲ್ ಅಂಗಡಿಯ ನೌಕರನಾದ ಸುಭಾಷ್ ಚೌಕಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾನೆ. ಈ ತಿಂಗಳ ೧೦ ರಂದು ಈ ಮನೆಗೆ ದಿಢೀರ್ ದಾಳಿಯಿರಿಸಿದ ತಂಡ ಸುಭಾಷ್‌ರನ್ನು ಬೆದರಿಸಿ ೫೦ ಸಾವಿರ ರೂಪಾಯಿ ಕೇಳಿದ್ದು ಇಲ್ಲ ವೆಂದಾಗ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಎರಡು ಪವನ್ ತೂಕದ ಚಿನ್ನದ ಹಾರ ಎಗರಿಸಿ ಪರಾರಿಯಾಗಿತ್ತು.

ಕಾವಲುಗಾರನ ಹತ್ಯೆ: ಆರೋಪಿ ಪೊಲೀಸ್ ವಶದಲ್ಲಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವನೆಂಬ ಭೀತಿಯಿಂದ ಫಿಶ್ ಆಯಿಲ್ ಮಿಲ್‌ನ ಕಾವಲುಗಾರನನ್ನು ಹತ್ಯೆಗೈದಿರುವುದಾಗಿ ಪೊಲೀಸ್ ವಶದಲ್ಲಿರುವ ಗುಜರಿ ವ್ಯಾಪಾರಿ ತಿಳಿಸಿರುವ ಬಗ್ಗೆ ತಿಳಿದುಬಂದಿದೆ.
ಉಳ್ಳಾಲ ಕೋಟೆಪುರದ ಕಬೀರ್ ಯಾನೆ ಕತ್ತಿ(೨೨) ಪೊಲೀಸ್ ವಶದಲ್ಲಿ ರುವಾತ. ಬುಧವಾರ ರಾತ್ರಿಪಾಳಿಯಲ್ಲಿ ಕಾವಲುಗಾರನಾಗಿ ಕರ್ತವ್ಯ ನಿರ್ವಹಿಸು ತ್ತಿದ್ದ ಮೂಲತ: ಹುಬ್ಬಳ್ಳಿಯ ಹಾಗೂ ಸದ್ಯ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿ ವಾಸವಿದ್ದ ವಿನಾಯಕ(೨೪) ಎಂಬಾತನನ್ನು ಕೊಲೆಗೈಯ್ಯಲಾಗಿತ್ತು.
ಪೊಲೀಸ್ ವಶದಲ್ಲಿರುವ ಆರೋಪಿ ಕಬೀರ್ ಎಂಬಾತ ಕಳೆದ ಶನಿವಾರ ಇಂಡಿಯನ್ ಫಿಶ್‌ಮಿಲ್ ನಿಂದ ಉಪಕರಣವೊಂದನ್ನು ಕಳವು ಗೈದಿದ್ದ. ಈ ಬಗ್ಗೆ ವಿಚಾರಣೆಗೆಂದು ಫಿಶ್ ಆಯಿಲ್‌ಮಿಲ್‌ನಲ್ಲಿ ಕಾವಲು ಗಾರನಾಗಿದ್ದ ವಿನಾಯಕನನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡು ಬಿಟ್ಟುಬಿಟ್ಟಿದ್ದರು. ಇದನ್ನು ಅರಿಯದ ಕಳವು ಆರೋಪಿ ಕಬೀರ್ ತನ್ನ ಹೆಸರನ್ನು ಪೊಲೀಸರಿಗೆ ವಿನಾಯಕ ಹೇಳುವ ಭೀತಿಯಿಂದ ಬುಧವಾರ ರಾತ್ರಿ ರಾಡಿನಿಂದ ತಲೆಗೆ ಬಡಿದು ಕೊಲೆ ನಡೆಸಿದ್ದನಲ್ಲದೆ ಕಳವುಗೈದ ಉಪಕ ರಣವನ್ನು ವಾಪಸ್ಸು ತಂದು ಅಲ್ಲೇ ಇಟ್ಟಿದ್ದನು. ಆರೋಪಿ ಈ ಹಿಂದೆ ಕಳವುಗೈದ ಬೈಕೊಂದನ್ನು ಪೊಲೀಸರಿಗೆ ಸಿಕ್ಕಿಬೀಳುವ ಹಂತದಲ್ಲಿದ್ದಾಗ ಸಮು ದ್ರಕ್ಕೆ ಬಿಸಾಡುವ ಮೂಲಕ ತಪ್ಪಿಸಿ ಕೊಳ್ಳಲು ಯತ್ನಿಸಿರುವ ಪ್ರಕರಣ ಉಳ್ಳಾಲ ಠಾಣೆಯಲ್ಲಿರುವುದಾಗಿ ತಿಳಿದು ಬಂದಿದೆ.

ಬಸ್ ಹತ್ತುತ್ತಿದ್ದವರ ಪರ್ಸ್ ಕಳವು

Posted by JAYAKIRANA Kirana on | 0 comments | Leave a comment...

ವಿಟ್ಲ: ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ಇಬ್ಬರು ವ್ಯಕ್ತಿಗಳು ಬಸ್ಸು ಹತ್ತುತ್ತಿದ್ದಂತೆ ಕಳ್ಳರು ಅವರ ಪರ್ಸನ್ನು ಎಗರಿಸಿ ಪರಾರಿ ಯಾದ ಘಟನೆ ನಡೆದಿದೆ.
ಕುದ್ದುಪದವು ನಿವಾಸಿ ಇಬ್ರಾಹಿಂ ಎಂಬವರು ಬಸ್ ಹತ್ತಲು ಯತ್ನಿಸು ತ್ತಿದಾಗ ಕಳ್ಳರು ಅವರ ಪರ್ಸನ್ನು ಎಗರಿ ಸಿದ್ದಾರೆ ಎನ್ನಲಾಗಿದೆ. ಅವರು ಬಸ್ಸು ಹತ್ತಿದ ಮೇಲೆ ಅವರಿಗೆ ಪರ್ಸ್ ಕಳವು ಆದ ಬಗ್ಗೆ ಅವರ ಗಮನಕ್ಕೆ ಬಂದಿದೆ. ಈ ಸಂದರ್ಭ ಅವರ ಜತೆಯಲ್ಲಿಯೇ ಬಸ್ಸನ್ನು ಹತ್ತಿದ್ದ ಮತ್ತೊಬ್ಬ ವ್ಯಕ್ತಿಯ ಪರ್ಸನ್ನು ಕೂಡ ಕಳ್ಳರು ಎಗರಿಸಿದ್ದಾರೆ. ಈ ಬಗ್ಗೆ ಅವರು ವಿಟ್ಲ ಪೊಲೀ ಸರಿಗೆ ದೂರು ನೀಡಿದ್ದಾರೆ.

ಬೈಕ್ ಸವಾರ ದಾರುಣ ಸಾವು

Posted by JAYAKIRANA Kirana on | 0 comments | Leave a comment...

ಕಾರ್ಕಳ: ಸಾಣೂರು ಚಿಲಿಂಬಿ ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ. ಬಜಗೋಳಿ ಮುಡಾರಿನ ಪ್ರಸಾದ್ ಜೈನ್(೨೮) ಎಂಬಾತ ಮೃತಪಟ್ಟವನಾ ಗಿದ್ದಾನೆ. ಬೆಳ್ವಾಯಿಯಲ್ಲಿ ಹೋಟೆಲ್ ವ್ಯಾಪಾರ ನಡೆಸುತ್ತಿದ್ದ ಆತ ಸಂಜೆ ವೇಳೆಗೆ ಮೂಡಬಿದ್ರಿ ಹನುಮಾನ್ ದೇವಳದಲ್ಲಿ ಪೂಜೆ ಸಲ್ಲಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆಗೆ ಈ ಘಟನೆ ಸಂಭವಿಸಿದೆ. ಕೆಲ ದಿನಗಳ ಹಿಂದೆ ಯಷ್ಟೇ ಆತನಿಗೆ ವಿವಾಹ ನಿಶ್ಚಿತಾರ್ಥ ವಾಗಿತ್ತೆಂದು ತಿಳಿದುಬಂದಿದೆ.

ಸರಕಾರಿ ರಸ್ತೆಯಲ್ಲಿ ಅಕ್ರಮ ಮನೆ, ನನಗೆ ಸಂಬಂಧವಿಲ್ಲ: ಕೊರಗಪ್ಪ ಸ್ಪಷ್ಟನೆ

Posted by JAYAKIRANA Kirana on | 0 comments | Leave a comment...

ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಗಾಂಧಿನಗರದ ಕಡ್ಡಬೆಟ್ಟು ದಲಿತ ಕಾಲನಿಯ ಸರಕಾರಿ ಜಾಗದ ರಸ್ತೆಯಲ್ಲಿ ಅಕ್ರಮವಾಗಿ ಮನೆ ಕಟ್ಟಿ ದಲಿತರಿಗೆ ಅನ್ಯಾಯ ಮಾಡುತ್ತಿದ್ದೇ ನೆಂದು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಹೊನ್ನಯ್ಯ ತನ್ನ ಮೇಲೆ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ. ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಮನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಪುರಸಭಾ ಸದಸ್ಯ ಕೊರಗಪ್ಪ ಸ್ಪಷ್ಟ ಪಡಿಸಿದ್ದಾರೆ.
ಅವರು ಗುರುವಾರ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಪ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಾ ಸ್ವಯಂ ಘೋಪಿತ ದಲಿತ ನಾಯಕರೆಂದು ಹೇಳಿಕೊಂಡಿರುವ ಹೊನ್ನಯ್ಯ ಅವರು ಬುಧವಾರದಂದು ಪತ್ರಿಕಾ ಗೋಪ್ಠಿ ಕರೆದು ತನ್ನ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಕೆಲ ಭೂ ಮಾಫಿಯಾ ಶಕ್ತಿಗಳೊಂದಿಗೆ ಸೇರಿಕೊಂಡು ಹಣಕ್ಕಾಗಿ ತನ್ನ ಸಮಾಜ ಬಾಂಧವರಿಗೆ ಅನ್ಯಾಯ ಮಾಡುತ್ತಿ ದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಪರಿಶಿಷ್ಟ ಜಾತಿ ಕಾಲೋನಿಯ ಹಿಂದು ಗಡೆಯಲ್ಲಿ ಅಲ್ವಿನ್ ವಾಲ್ಟರ್ ಡಿ.ಸೋಜ ಎಂಬವರು ಜಾಗವನ್ನು ಖರೀದಿಸಿದ್ದು ಇದಕ್ಕೋಸ್ಕರವೇ ದಲಿತ ಕಾಲೋನಿಯ ಒಳಗೆ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿದ್ದು, ಸಂಜೀವ ಎಂಬವರು ನಿರ್ಮಿಸುತ್ತಿರುವ ಮನೆಯ ಮಧ್ಯೆಯೇ ರಸ್ತೆಯನ್ನು ಮಾಡಿ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಇದಕ್ಕೆ ಕೆಲವೊಂದು ದಲಿತರು ‘ವಾಲ್ಟರ್ ಅವರಿಂದ ಹಣ ಪಡೆದು ಕೊಂಡು ಅವರಿಗೆ ಬೆಂವಲ ನೀಡು ತ್ತಿದ್ದಾರೆಂದು ಆರೋಪಿಸಿರು.
ಮೂಡಬಿದಿರೆಯಲ್ಲಿ ಭೂ ಉದ್ಯಮಿ ಆಲ್ವಿನ್ ವಾಲ್ಟರ್ ಡಿ.ಸೋಜ ಅವರು ತನ್ನ ಅಕ್ರಮ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿ ಗಾಗಿ ದಲಿತ ಬಾಂಧವರನ್ನು ಒಬ್ಬರ ನ್ನೊಬ್ಬರು ಎತ್ತಿ ಕಟ್ಟುವಂತೆ ಮಾಡು ತ್ತಿದ್ದಾರೆ ಎಂದು ಹೇಳಿದ ಕೊರಗಪ್ಪ ತಾನು ಮೂಡು ಬಿದಿರೆ ಪೊಲೀ ಸರಿಗೆ, ಪುರಸಭಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ವಿಚಾರಣೆ ನಡೆಸುವಂತೆ ಮನವಿ ಸಲ್ಲಿಸಿದ್ದು ಈ ಬಗ್ಗೆ ಅವರು ಕ್ರಮ ಕೈಗೊಂಡಿಲ್ಲ ವೆಂದು ಆರೋಪಿಸಿದ್ದಾರೆ.
ಮನೆ ನಿರ್ಮಾಣದ ಬಗ್ಗೆ ತಪ್ಪು ಮಾಹಿತಿ : ಮಾರ್ಪಾಡಿ ಗ್ರಾಮದ ಸರ್ವೆ ನಂ-೧೫೮ರಲ್ಲಿ ತಾನು (ಸಂಜೀವ) ಕಳೆದ ೨೭ ವರ್ಷ ಹುಲ್ಲಿನ ಮನೆಯಲ್ಲಿ ವಾಸಿಸುತ್ತಿದೆ. ಕಳೆದ ಮೂರು ವರ್ಷಗಳ ಹಿಂದೆ ಪ್ರಕೃತಿ ವಿಕೋಪದಿಂದ ಮನೆ ಬಿದ್ದು ಹೋಗಿರುತ್ತದೆ. ತಾನು ಆ ಜಾಗದಲ್ಲಿ ಮತ್ತೆ ಮನೆ ನಿರ್ಮಿಸುತ್ತಿದ್ದಾಗ ಆಲ್ವಿನ್ ವಾಲ್ಟರ್ ಡಿ’ ಸೋಜ ಎಂಬಾತ ತನಗೆ ಬೆದರಿಕೆ ಹಾಕಿ ಮನೆಯ ಮಧ್ಯದಲ್ಲೇ ರಸ್ತೆ ನಿರ್ಮಿಸುತ್ತಿದ್ದಾರೆ. ಇದಕ್ಕೆ ದಲಿತ ನಾಯಕರಾದ ಹೊನ್ನಯ್ಯ, ನೀಲಯ್ಯ, ಸಾಂಟು, ದೇವಕಿ ಹಾಗೂ ಇತರರು ತನ್ನ ಮೇಲೆ ದೌರ್ಜನ್ಯ ನಡೆಸಿರುತ್ತಾರೆ ಎಂದು ಆರೋಪಿಸಿದ್ದಾರೆ.
ಸ್ಥಳೀಯರಾದ ಸೀತು, ಜಯಶ್ರೀ, ನೀಲಮ್ಮ, ಸುನಂದ ಮತ್ತು ಬೀಪಾ ತಿಮ್ಮ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕುಟುಂಬಕ್ಕೆ ಯಮನಾದ ಯಜಮಾನ!

Posted by JAYAKIRANA Kirana on | 0 comments | Leave a comment...






ನಾಲ್ಕು ಕೊಲೆಗೆ ಬೆಚ್ಚಿಬಿದ್ದ ಪುತ್ತೂರು
ಪುತ್ತೂರು: ಮನೆಯ ಯಜಮಾನನೇ ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಚ್ಚಿ ಕೊಲೆಗೈದು ಪರಾರಿಯಾಗಿರುವ ದಾರುಣ ಘಟನೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಎಂಬಲ್ಲಿ ಸಂಭವಿಸಿದೆ. ಈ ಘಟನೆ ಗುರುವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.
ಬೆಟ್ಟಂಪಾಡಿ ಗ್ರಾಮದ ಕಕ್ಕೂರು ನಿವಾಸಿ ವೆಂಕಟ್ರಮಣ ಭಟ್ ಎಂಬವರ ಪತ್ನಿಯಾಗಿರುವ ಶಿಕ್ಷಕಿ ಸಂಧ್ಯಾ.ವಿ.ಭಟ್ (೪೫) ಅವರ ಮಕ್ಕಳಾದ ವೇದ್ಯ (೧೮) , ಹರಿಗೋವಿಂದ ಶರ್ಮ (೧೫) ಮತ್ತು ವಿನುತಾ(೧೨) ಕೊಲೆಗೀಡಾದವರು. ಮನೆಯ ಯಜಮಾನ ವೆಂಕಟ್ರಮಣ ಭಟ್ ನಾಪತ್ತೆಯಾಗಿದ್ದು, ಆತನೇ ಈ ಕೃತ್ಯ ಎಸಗಿ ರುವುದಾಗಿ ಶಂಕಿಸಲಾಗಿದೆ. ಗುರುವಾರ ಮಧ್ಯಾಹ್ನದ ವೇಳೆಗೆ ವಿದ್ಯುತ್ ಮೀಟರ್ ರೀಡರ್ ವಿದ್ಯುತ್ ಬಿಲ್ ಮಾಡಲೆಂದು ಮನೆಗೆ ತೆರಳಿದಾಗ ಮನೆಯ ಬಾಗಿಲು ಹಾಕಿಕೊಂಡಿತ್ತು. ಮನೆಯೊಳ ಗಿನಿಂದ ದುರ್ವಾಸನೆ ಬೀರುತ್ತಿತ್ತು. ಆತ ಬಾಗಿಲು ತೆರೆದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸಂಧ್ಯಾ, ಅವರ ಮಕ್ಕಳಾದ ಹರಿ ಗೋವಿಂದ ಮತ್ತು ವಿನುತಾಳ ಶವ ಮನೆಯ ಒಳಗಿನ ಚಾವಡಿಯ ಒಂದು ಮೂಲೆಯಲ್ಲಿ ಜೊತೆಯಾಗಿ ನೆಲದಲ್ಲಿ ಮಲಗಿದ ಸ್ಥಿತಿಯಲ್ಲಿ ಮತ್ತು ವೇದ್ಯಾಳ ಶವ ಮತ್ತೊಂದು ಮೂಲೆ ಯಲ್ಲಿದ್ದ ಮಂಚದ ಮೇಲೆ ರಕ್ತಸಿಕ್ತವಾಗಿ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದ್ದು, ರಕ್ತ ಸಿಕ್ತವಾಗಿದ್ದ ಶವಗಳ ತಲೆ, ಹೊಟ್ಟೆ ಮತ್ತು ಇನ್ನಿತರ ಭಾಗಗಳಲ್ಲಿ ಮಚ್ಚಿನಿಂದ ಕೊಚ್ಚಿದ ರೀತಿಯಲ್ಲಿ ಹಲವು ಗಾಯಗಳು ಕಂಡು ಬಂದಿವೆ.
ಸಂಧ್ಯಾ ಸುಳ್ಯದ ಉಬರಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಈ ವರ್ಷದ ಕೌನ್ಸಿಲಿಂಗ್ ವರ್ಗಾವಣೆ ಪದ್ಧತಿಯಲ್ಲಿ ಅವರಿಗೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕುಂಟಿಕಾನ ಶಾಲೆಗೆ ವರ್ಗಾವಣೆಯಾಗಲಿತ್ತು. ಆದರೆ ಈ ಕುರಿತ ಆದೇಶ ಇನ್ನೂ ಬಂದಿಲ್ಲ ಎಂದು ತಿಳಿದು ಬಂದಿದೆ. ಸುಳ್ಯ ತಾಲೂಕಿನ ಉಬರಡ್ಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅವರು ತನ್ನ ಕೊನೆಯ ಪುತ್ರಿ ವಿನುತಾಳ ಜೊತೆ ಅಲ್ಲೇ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ವಿನುತಾ ಅದೇ ಶಾಲೆಗೆ ಹೋಗುತ್ತಿದ್ದಳು. ಪ್ರತೀ ಶನಿವಾರ ಅವರು ಪುತ್ರಿಯೊಂದಿಗೆ ಕಕ್ಕೂರಿನ ಮನೆಗೆ ಬಂದು ಸೋಮವಾರ ಬೆಳಿಗ್ಗೆ ಅಲ್ಲಿಗೆ ಹಿಂತಿರುಗುತ್ತಿದ್ದರು. ಈ ವರ್ಷ ಕುಂಟಿಕಾನ ಶಾಲೆಗೆ ವರ್ಗಾವಣೆಯಾಗುವ ಹಿನ್ನೆಲೆಯಲ್ಲಿ ಅವರು ಪುತ್ರಿ ವಿನುತಾಳನ್ನು ಬೆಟ್ಟಂಪಾಡಿಯ ನವೋದಯ ಪ್ರೌಢ ಶಾಲೆಗೆ ಸೇರ್ಪಡೆ ಗೊಳಿಸಿದ್ದರೆಂದು ತಿಳಿದು ಬಂದಿದೆ.
ಪಿಯುಸಿ ವಿಜ್ಞಾನ ವಿದ್ಯಾಭ್ಯಾಸವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಈ ವರ್ಷ ಪೂರ್ಣಗೊಳಿಸಿದ್ದ ವೇದ್ಯಾಳನ್ನು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿಗೆ ಈ ವರ್ಷ ಸೇರ್ಪಡೆ ಗೊಳಿಸಲಾಗಿತ್ತು. ಹರಿಗೋವಿಂದ ಪಾಣಾಜೆ ಸುಭೋಧ ಪ್ರೌಢ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ .
ಆವರಣದಲ್ಲಿದ್ದ ಬಕೆಟ್‌ನ ನೀರು ರಕ್ತ ಮಯವಾಗಿದ್ದು, ಕೊಲೆಗೈದ ಬಳಿಕ ಆರೋಪಿ ಬಕೆಟ್‌ನಲ್ಲಿದ್ದ ನೀರಿನಲ್ಲಿ ಕೈತೊಳೆದು ಹೋಗಿರಬಹುದೆಂದು ಶಂಕಿಸಲಾಗಿದೆ.
ಮನೆಯ ಅಂಗಳದಲ್ಲಿದ್ದ ಪೆಟ್ಟಿಗೆಯೊದರಲ್ಲಿ ೪ ಖಾಲಿ ಸಿರಿಂಜ್‌ಗಳು ಮತ್ತು ಪಕ್ಕದಲ್ಲಿಯೇ ಔಷಧಿಯಂತಹ ದ್ರಾವಣವಿರುವ ಬಾಟ್ಲಿಗಳು ಪತ್ತೆಯಾಗಿವೆ . ವೆಂಕಟ್ರಮಣ ಭಟ್ ಮನೆಮಂದಿಗೆ ಅರೆವಳಿಕೆ ಚುಚ್ಚು ಮದ್ದು ಇಲ್ಲವೇ ನಿದ್ರೆ ಮಾತ್ರೆ ನೀಡಿ ಈ ಕೃತ್ಯ ಎಸಗಿರಬಹುದೆಂದು ಹೇಳಲಾಗುತ್ತಿದೆ. ಶವಗಳು ಕೊಳೆತ ಸ್ಥಿತಿಯಲ್ಲಿರುವುದರಿಂದ ಈ ಕೃತ್ಯ ಎರಡು ದಿನಗಳ ಹಿಂದೆ ಸಂಭವಿಸಿ ರಬಹುದೆಂದು ಅಂದಾಜಿಸಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿಗಳ ಭೇಟಿ
ಘಟನಾ ಸ್ಥಳಕ್ಕೆ ಪಶ್ಚಿಮ ವಲಯದ ಪೊಲೀಸ್ ವರಿಷ್ಠಾಧಿಕಾರಿ ಪ್ರತಾಪ್ ರೆಡ್ಡಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಪುತ್ತೂರು ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಅನುಚೇತ್, ಗ್ರಾಮಾಂತರ ಠಾಣಾ ಇನ್ಸ್‌ಪೆಕ್ಟರ್ ಜಗದೀಶ್, ಪುತ್ತೂರು ನಗರ ಠಾಣಾಧಿಕಾರಿ ಸುದರ್ಶನ್, ಸಂಪ್ಯ ಠಾಣಾಧಿಕಾರಿ ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವೆಂಕಟ್ರಮಣ ಭಟ್ ಅವರು ಮೇ.೪ ರಂದು ತನ್ನ ಮನೆ ದರೋಡೆಯಾದ ಕುರಿತು ಸಂಪ್ಯ ಠಾಣೆಗೆ ದೂರು ನೀಡಿದ್ದರು. ಆ ವೇಳೆಯೇ ನಮಗೆ ದೂರಿನ ಬಗ್ಗೆ ಸಂಶಯ ಬಂದಿತ್ತು . ದೂರಿನಲ್ಲಿನ ಕೆಲವೊಂದು ಮಾಹಿತಿಗಳು ಸುಳ್ಳು ಎಂಬುವುದು ತನಿಖೆಯ ವೇಳೆ ಬೆಳಕಿಗೆ ಬಂದಿತ್ತು . ಇದೇ ವಿವಾದಕ್ಕೆ ಸಂಬಂಧಿಸಿ ವೆಂಕಟ್ರಮಣ ಭಟ್ ಅವನ್ನು ಪತ್ತೆ ಮಾಡಿ ಅದರ ಜೊತೆಗೆ ಕೊಲೆಗೆ ಸಂಬಂಧಿಸಿ ತನಿಖೆ ನಡೆಸುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ತಿಳಿಸಿದ್ದಾರೆ. ಶ್ವಾನದಳ ಆಗಮಿಸಿ ಅವರದೇ ತೋಟದ ಕೆರೆಯ ಬಳಿಗೆ ಬಂದು ಅಲ್ಲಿಂದ ನೆರವಾಗಿ ತಂಬುತ್ತಡ್ಕ ಸಂಪರ್ಕ ರಸ್ತೆಯ ಬಳಿ ಬಂದು ಮುಂದೆ ಸಾಗದೇ ನಿಂತಿದೆ. ಇದನ್ನು ಗಮನಿಸಿದರೆ ಆರೋಪಿ ಕೆರೆಯಲ್ಲಿ ಕೈ ತೊಳೆದು ಈ ರಸ್ತೆಯ ಮೂಲಕ ಪರಾರಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ದರೋಡೆ ನಾಟಕವೇ ಕೊಲೆಗೆ ಹೇತು?
ಮಾರಕಾಯುಧಗಳೊಂದಿಗೆ ಮನೆಗೆ ನುಗ್ಗಿದ ೭ ಮಂದಿಯಿದ್ದ ತಂಡವೊಂದು ತಮ್ಮನ್ನು ಬೆದರಿಸಿ ಮನೆ ಮಂದಿಯಲ್ಲಿದ್ದ ೭ ಪವನ್ ಚಿನ್ನಾಭರಣ ಮತ್ತು ರೂ. ೫೦ಸಾವಿರ ನಗದು ಹಣವನ್ನು ದೋಚಿರುವುದಾಗಿ ವೆಂಕಟ್ರಮಣ ಭಟ್ ಅವರು ಸಂಪ್ಯ ಪೊಲೀ ಸರಿಗೆ ದೂರು ನೀಡಿದ್ದರು. ಪೊಲೀಸ್ ತನಿಖೆಯ ವೇಳೆ ಅವರು ನೀಡಿರುವ ಕೆಲವೊಂದು ಮಾಹಿತಿಗಳು ಸುಳ್ಳೆಂಬುವುದು ಬೆಳಕಿಗೆ ಬಂದಿತ್ತು. ಅಲ್ಲದೇ ಮನೆಯವರನ್ನು ಪೊಲೀಸರು ಈ ಬಗ್ಗೆ ವಿಚಾರಿಸಿದಾಗ ಕಳ್ಳತನ ನಡೆದಿರುವುದು ಸುಳ್ಳೆಂದು ಹೇಳಿದ್ದರು ಎನ್ನಲಾಗಿದೆ. ಪೊಲೀಸರು ಮನೆಯವರ ಹೇಳಿಕೆ ಆಧರಿಸಿ ತನ್ನನ್ನು ಬಂಧಿಸಬಹುದು ಎಂಬ ಭೀತಿಯಿಂದ ಈ ಕೃತ್ಯ ಎಸಗಿ ಪರಾರಿ ಯಾಗಿರಬಹುದು ಇಲ್ಲವೇ ಎಲ್ಲಿಯಾದರೂ ಹೋಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗುತ್ತಿದೆ. ಪತಿ ಮತ್ತು ಪತ್ನಿ ನಡುವೆ ಆಗಾಗ್ಗೆ ಜಗಳ ಸಂಭವಿಸುತ್ತಿತ್ತು ಎಂಬ ಮಾಹಿತಿಯೂ ಇದೆ. ಇದುವೇ ಈ ಘಟನೆಗೆ ಹೇತುವಾಗಿರುವ ಸಾಧ್ಯತೆ ಹೆಚ್ಚಾಗಿದೆ.
ಕಂಪ್ಯೂಟರ್ ಯುವತಿಗೆ ಎಚ್ಚರಿಕೆ
ವೆಂಕಟ್ರಮಣ ಭಟ್ ಅವರು ಗ್ರಂಥ ಮತ್ತು ಗುರುತ್ವಾಕರ್ಷಣೆ ವಿದ್ಯುತ್ ಸಂಶೋಧನೆಯ ಫೈಲ್ ಮಾಡುತ್ತಿದ್ದು, ತನ್ನ ಮನೆಯ ಪಕ್ಕದಲ್ಲೇ ಇರುವ ಗುಡಿಸಲಿನಲ್ಲಿ ಕಂಪ್ಯೂಟರ್ ವ್ಯವಸ್ಥೆ ಮಾಡಿಕೊಂಡಿದ್ದರು. ಕಂಪ್ಯೂಟರ್ ಅರಿವಿಲ್ಲದ ಅವರು ಅದೇ ಊರಿನ ವಿಮಲಾ ಎಂಬಾಕೆಯನ್ನು ಅಗತ್ಯ ಕಂಪ್ಯೂಟರ್ ಕೆಲಸವಿರುವಾಗ ಕರೆಸಿ ಆಕೆಯ ಮೂಲಕ ತನ್ನ ಕಂಪ್ಯೂಟರ್ ಟೈಪಿಂಗ್ ಕೆಲಸಗಳನ್ನು ಮಾಡಿಸುತ್ತಿದ್ದರೆಂಬ ಮಾಹಿತಿ ಲಭಿಸಿದೆ. ಕಳೆದ ಸೋಮವಾರ ವೆಂಕಟ್ರಮಣ ಭಟ್ ಅವರು ಆ ಯುವತಿಗೆ ಕರೆ ಮಾಡಿ ಸ್ವಲ್ಪ ಕಂಪ್ಯೂಟರ್ ಟೈಪಿಂಗ್ ಕೆಲಸವಿದ್ದು, ಮಂಗಳವಾರ ಬೆಳಿಗ್ಗೆ ಮನೆಗೆ ಬರುವಂತೆ ತಿಳಿಸಿದ್ದರು. ಅದರಂತೆ ಯುವತಿ ಮಂಗಳವಾರ ಬೆಳಿಗ್ಗೆ ಅವರ ಮನೆಗೆ ತೆರಳಿದಾಗಿ ವೆಂಕಟ್ರಮಣ ಭಟ್ ಮನೆಯ ಅಂಗಳದಲ್ಲಿ ನಿಂತುಕೊಂಡಿದ್ದರು. ಮನೆಗೆ ಬಾಗಿಲು ಹಾಕಲಾಗಿತ್ತು. ಅಂಗಳದಲ್ಲಿದ್ದ ವೆಂಕಟ್ರಮಣ ಭಟ್ ಅವರು ನೀನು ಇನ್ನು ಮುಂದೆ ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿ ಯುವತಿಯನ್ನು ಹಿಂದಕ್ಕೆ ಕಳುಹಿಸಲು ಮುಂದಾಗಿದ್ದರು ಎಂಬ ಮಾಹಿತಿ ಲಭಿಸಿದೆ.
ಆ ವೇಳೆ ಕಂಪ್ಯೂಟರ್ ಯುವತಿ ವಿಮಲಾ ಅವರು ಸಂಧ್ಯಾಕ್ಕ ಎಲ್ಲಿ ಎಂದು ಪ್ರಶ್ನಿಸಿ, ಮನೆಯತ್ತ ತೆರಳಿದಾಗ ಆಕೆಯನ್ನು ತಡೆದ ವೆಂಕಟ್ರಮಣ ಭಟ್ ಅವರು ನೀನು ನೇರವಾಗಿ ಮನೆಗೆ ಹೋಗು. ಹೀಗೆಲ್ಲಾ ಮಾಡಿದರೆ ನೀನು ಸಾಯಬೇಕಾಗುತ್ತದೆ, ಜೀವನವಿಡೀ ಜೈಲು ಕೋರ್ಟ್ ಅಲೆಯಬೇಕಾಗುತ್ತದೆ ಎಂದು ಎಚ್ಚರಿಸಿ ಆಕೆಯನ್ನು ಕಳುಹಿಸಿದ್ದರು ಎಂಬ ಮಾಹಿತಿಯನ್ನು ಯುವತಿಯೇ ನೀಡಿದ್ದಾರೆ. ಅದೇ ದಿನ ರಾತ್ರಿ ವೇಳೆ ಅವರು ಕೊಲೆ ಕೃತ್ಯ ನಡೆಸಿರಬಹುದೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸಿಎಂ ವಿರುದ್ಧ ೧೦ ಕೋ. ನಷ್ಟ ಪರಿಹಾರ ರಿಟ್!

Posted by JAYAKIRANA Kirana on | 0 comments | Leave a comment...

ನಿತ್ಯಾನ ರಿವೇಂಜ್
ಬೆಂಗಳೂರು: ಮಹತ್ವದ ಬೆಳವಣಿಗೆ ಯೊಂದರಲ್ಲಿ ಬಿಡದಿ ಆಶ್ರಮಕ್ಕೆ ಬೀಗ ಜಡಿಯಲು ಆದೇಶ ನೀಡಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ವಿರುದ್ಧವೇ ನಿತ್ಯಾನಂದ ಸ್ವಾಮಿ, ತನಗೆ ಸುಮಾರು ೧೦ ಕೋಟಿ ರೂಪಾಯಿ ನಷ್ಟ ಪರಿಹಾರ ನೀಡು ವಂತೆ ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾನೆ.
ಆಶ್ರಮದಲ್ಲಿ ಅನೈತಿಕ, ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಮಾಧ್ಯಮಗಳ ಒತ್ತಡಕ್ಕೆ ಮಣಿದಿದ್ದ ಮುಖ್ಯಮಂತ್ರಿ ಸದಾನಂದ ಗೌಡರು ಇತ್ತೀಚೆಗೆ ಬಿಡದಿ ಆಶ್ರಮಕ್ಕೆ ಬೀಗ ಜಡಿದು, ನಿತ್ಯಾನಂದನನ್ನು ಬಂಧಿಸುವಂತೆ ಆದೇಶ ನೀಡಿದ್ದರು.
ಆಶ್ರಮಕ್ಕೆ ಬೀಗ ಹಾಕುವಂತೆ ಹೇಳುವ ಅಧಿಕಾರ ಮುಖ್ಯಮಂತ್ರಿಗಳಿಗೆ ಇಲ್ಲ. ಅಲ್ಲದೇ ಸಂಘಟನೆಗಳ ಗೂಂಡಾಗಿರಿಯಿಂ ದಾಗಿ ತನಗೆ ಅಪಾರ ನಷ್ಟವಾಗಿದೆ. ಹಾಗಾಗಿ ತನಗೆ ಸುಮಾರು ೧೦ ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಕೋರಿ ಗುರು ವಾರ ಹೈಕೋರ್ಟ್‌ನಲ್ಲಿ ತನ್ನ ವಕೀಲರ ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಲಿದೆ. ಮುಖ್ಯಮಂತ್ರಿ ಸದಾನಂದ ಗೌಡ, ರಾಜ್ಯ ಸರ್ಕಾರ ಹಾಗೂ ರಾಮನಗರ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ, ಪೊಲೀಸ ವರಿಷ್ಠಾಧಿಕಾರಿ ಅನುಪಮ್ ಅಗರ್ ವಾಲ್, ರಾಜ್ಯದ ಡಿಜಿಪಿ ವಿರುದ್ಧವೂ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ ತನ್ನ ವಿರುದ್ಧ ಅವಹೇಳನಕಾರಿ ವರದಿ ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಿ ಸುವರ್ಣ ನ್ಯೂಸ್ ಚಾನೆಲ್ ವಿರುದ್ಧವೂ ದೂರು ದಾಖಲಿಸಿದ್ದಾನೆ.

ಪಾಲೇಮಾರ್ ಕಡೆಗಣನೆ ಬಿಜೆಪಿಗೆ ಮುಳುವಾಗಲಿದೆಯೇ?

Posted by JAYAKIRANA Kirana on | 0 comments | Leave a comment...

ಮಂಗಳೂರು: ತನ್ನದಲ್ಲದ ತಪ್ಪಿಗೆ ಸಚಿವ ಸ್ಥಾನ ತ್ಯಜಿಸಿದ ಕೃಷ್ಣ ಪಾಲೇಮಾರರನ್ನು ದ.ಕ. ಬಿಜೆಪಿಯಲ್ಲಿ ಮೂಲೆಗುಂಪು ಮಾಡುವ ಷಡ್ಯಂತ್ರ ನಡೆಯುತ್ತಿದ್ದು, ನಾಯಕರ ಈ ವರ್ತನೆ ಕಾರ್ಯಕರ್ತ ವಲಯದಲ್ಲಿ ಬೇಸರ ಮೂಡಿಸಿದೆ.
ದ.ಕ. ಜಿಲ್ಲೆಯಲ್ಲಿ ಬಿಜೆಪಿಯ ಬೆಳವಣಿಗೆ ಯಲ್ಲಿ ಪಾಲೇಮಾರರ ಕೊಡುಗೆ ಕಡೆಗಣಿ ಸುವಂತಹದ್ದೇನಲ್ಲ. ಆದರೂ ಎಲ್ಲವನ್ನೂ ಮರೆತಿರುವ ನಾಯಕರು ಸ್ವಾರ್ಥಿಗಳಂತೆ ವರ್ತಿಸುತ್ತಿವುದು ಸರಿಯಲ್ಲ. ಇವರ ಈ ವರ್ತನೆಗೆ ಚುನಾವಣೆಯಲ್ಲಿ ಬೆಲೆ ತೆರಬೇ ಕಾಗುತ್ತದೆ. ಕೋಮು ಸೂಕ್ಷ್ಮ ಪ್ರದೇಶವಾದ ದ.ಕ. ಜಿಲ್ಲೆಯಲ್ಲಿ ಅಧಿಕಾರ ಇಲ್ಲದೆ ಇರು ವುದರ ನೇರ ಪರಿಣಾಮ ಕಾರ್ಯಕರ್ತರ ಮೇಲೆ ಬೀರಲಿದೆ. ಆದುದರಿಂದ ನಾಯಕರೆ ನಿಸಿರುವವರು ಪಾಲೇಮಾರರನ್ನು ಪಕ್ಷದ ಸಂಘಟನೆಯ ಭಾಗವಾಗಿಸಿಕೊಂಡು ಸಾಗುವುದು ಜಾಣತನ ಎಂದು ಕಾರ್ಯ ಕರ್ತರು ಸಂದೇಶ ರವಾನಿಸಿದ್ದಾರೆ.
ಕಲಾಪದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಲಕ್ಷ್ಮಣ್ ಸವದಿ ಎರಡನೆ ಕ್ಲಾಸ್‌ನ ಮಕ್ಕಳಂತೆ ತಮ್ಮ ತಪ್ಪು ಮುಚ್ಚಿಕೊಳ್ಳಲು ಪಾಲೇಮಾರರ ಹೆಸರೆತ್ತಿದ್ದು ಸದನ ಸಮಿತಿಯ ತನಿಖೆ ಯಿಂದ ಬಹಿರಂಗವಾಗಿದೆ. ತಾನು ತಪ್ಪು ಮಾಡಿಲ್ಲ ಎಂಬುದು ಗೊತ್ತಿದ್ದುದರಿಂದಲೇ ಪಾಲೇಮಾರರೇ ಮೊದಲಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಒತ್ತಾಯಿಸಿದ್ದರು. ಪಾಲೇಮಾರರ ನಡೆ ಅನುಸರಿಸುವುದು ಲಕ್ಷ್ಮಣ ಸವದಿಯವರಿಗೂ ಅನಿವಾರ್ಯವಾಗಿತ್ತು. ಸದನ ಸಮಿತಿ ನಡೆಸಿದ ತನಿಖೆಯಲ್ಲಿ ಪಾಲೇಮಾರರು ನಿರಪರಾಧಿ ಎಂಬುದು ಸಾಬೀತಾದರೆ ಲಕ್ಷ್ಮಣ್ ಸವದಿ ತಪ್ಪಿತಸ್ಥರಾಗಿದ್ದರು. ಪಾಲೇಮಾರರ ಆತ್ಮವಿಶ್ವಾಸದ ವರ್ತನೆ ದ.ಕ. ಜಿಲ್ಲೆಯ ಬಿಜೆಪಿ ನಾಯಕರಿಗೆ ಮಾದರಿಯಾಗಬೇಕಿತ್ತು. ದುರದಷ್ಟವಶಾತ್ ಇಲ್ಲಿಯವರು ಪಾಲೇಮಾರರು ಮಾಡದ ತಪ್ಪನ್ನೆ ದಂಡವಾಗಿ ಉಪಯೋಗಿಸಿ ಅವರಿಗೆ ಬಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಪಾಲೇಮಾರ್ ಬಿಜೆಪಿಗೆ ಬಂದ ಅಲ್ಪ ಅವಧಿಯಲ್ಲೇ ಪಕ್ಷಕ್ಕಾಗಿ ದುಡಿಯುವ ದೊಡ್ಡ ಪಡೆಯನ್ನೇ ಸಿದ್ದಪಡಿಸಿದ್ದರು. ಅದೂ ಮಾತ್ರವಲ್ಲದೆ ಪಾಲೇಮಾರರ ಜಾತ್ಯತೀತ ನಿಲುವು ಅಲ್ಪಸಂಖ್ಯಾತರೂ ಕೂಡ ಬಿಜೆಪಿಯನ್ನು ಬೆಂಬಲಿಸುವಂತೆ ಮಾಡಿತ್ತು. ರಾಜ್ಯ ದಲ್ಲಿ ಎಲ್ಲೂ ಇಲ್ಲದಷ್ಟು ಅಲ್ಪಸಂಖ್ಯಾತ ಕಾರ್ಯಕರ್ತರು ದ.ಕ. ಜಿಲ್ಲೆಯಲ್ಲಿ ಇದ್ದರೆ ಅದಕ್ಕೆ ಪಾಲೇಮಾರರ ಪ್ರಭಾವವೇ ಕಾರಣ ಎಂಬುದು ಕಡೆಗಣಿಸಲಾಗದ ಸತ್ಯ.
ಸದ್ಯವೇ ವಿಧಾನಸಭೆ ಚುನಾವಣೆ ಬರಲಿದೆ. ಅದರ ಹಿಂದೆಯೇ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಪಾಲೇಮಾರರು ಪಕ್ಷದ ಕಾರ್ಯಕರ್ತರು ಹಾಗೂ ಮತದಾರರ ಮೇಲೆ ಬೀರಬಹುದಾದ ಪ್ರಭಾವವನ್ನು ನಿರ್ಲಕ್ಷಿಸಿದ್ದೇ ಆದರೆ ಇದರ ಋಣಾತ್ಮಕ ಪರಿಣಾಮವನ್ನು ದ.ಕ. ಜಿಲ್ಲೆಯ ಬಿಜೆಪಿ ಎದುರಿಸುವುದು ಖಂಡಿತ.
ಪಾಲೇಮಾರರನ್ನು ಬದಿಗೆ ಸರಿಸಿದರೆ ತಾವು ಬೆಳೆಯಬಹುದು ಎಂದು ದುರಾಸೆಯಿಂದ ಸಾಗುತ್ತಿರುವ ಬಿಜೆಪಿಯ ಜಿಲ್ಲಾ ನಾಯಕರ ಷಡ್ಯಂತ್ರಕ್ಕೆ ಪಾಲೇಮಾರಿಗೆ ರಾಜಕೀಯ ಹಿನ್ನಡೆಯಾಗಬಹುದು. ಆದರೆ ಇದರಿಂದ ಅವರಿಗೆ ವೈಯಕ್ತಿಕವಾಗಿ ಯಾವುದೇ ನಷ್ಟವಾಗದು. ಬದಲಿಗೆ ನಷ್ಟ ಅನುಭವಿಸಬೇಕಾಗಿರುವುದು ನಾವು ಎಂದು ಪಕ್ಷದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈಗ ಮಂಗಳೂರು ಮಹಾನರಗಪಾಲಿಕೆಯಲ್ಲಿ ಬಿಜೆಪಿಯ ಆಡಳಿತ ಇದ್ದುದಾದರೆ ಇದರ ಸೂತ್ರದಾರ ಪಾಲೇಮಾರರು ಎಂಬುದು ಪರಿಗಣಿಸಲೇ ಬೇಕಾದ ಸತ್ಯ ಎಂಬುದನ್ನು ಕಾರ್ಯಕರ್ತರು ನಾಯಯಕರಿಗೆ ನೆನಪಿಸುತ್ತಾರೆ.

ಕಡೆಗಣನೆ ಬೇಡ
ಪಾಲೇಮಾರ ಇಲ್ಲದ ಕಾರ್ಯಕ್ರಮವೇ ಇಲ್ಲ ಎಂಬಂತಹ ಸ್ಥಿತಿ ಬಿಜೆಪಿಯಲ್ಲಿ ಕೆಲವು ದಿನಗಳ ಹಿಂದಿನವರೆಗೂ ಇತ್ತು. ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲೂ ಅವರು ಬೇಕೇ ಬೇಕು ಎಂಬಂತಹ ಸ್ಥಿತಿ. ಪಕ್ಷದ ಹಾಗೂ ತಮ್ಮ ಆತ್ಮೀಯರ ಕಾರ್ಯಕ್ರಮಗಳಿಗೆ ಬಿಚ್ಚಿದ ಕೈಯಿಂದ ಸಹಾಯ ಮಾಡುತ್ತಿದ್ದರು. ಈಗ ಸಹಾಯ ಪಡೆದವರಿಗೂ ಬೇಡವಾಗಿದ್ದಾರೆ. ಪಾಲೇಮಾರರನ್ನು ಹಾಡಿ ಹೊಗಳಿ ಅವರಿಂದ ತಮಗೆ ಬೇಕಾದ ಕೆಲಸ ಮಾಡಿಸಿಕೊಂಡವರೂ ಈಗ ಅವರನ್ನು ಪಕ್ಕಕ್ಕೆ ಇಟ್ಟು ತಮ್ಮ ಸ್ಥಾನ ಭದ್ರಪಡಿಸಿ ಕೊಳ್ಳುವ ಹವಣಿಕೆಯಲ್ಲಿದ್ದಾರೆ. ಪಾಲೇಮಾರ್ ಬಿಜೆಪಿಯಲ್ಲಿದ್ದರೂ ಅವರ ಆತ್ಮೀಯ ಬಳಗ ಎಲ್ಲ ಪಕ್ಷಗಳಲ್ಲೂ ಇದೆ. ಬಿಜೆಪಿ ನಾಯಕರು ಕಡೆಗಣಿಸಿದರೂ ಅವರ ವರ್ಚಸ್ಸು ಮತ್ತು ಅಭಿಮಾನಿ ಬಳಗಕ್ಕೆ ಕೊರತೆ ಇಲ್ಲ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ್ನು ಧನಬಲ ಹಾಗೂ ಜನಬಲದಿಂದ ಎದುರಿಸುವ ಸಾಮರ್ಥ್ಯ ಇರುವುದು ಪಾಲೇಮಾರರಿಗೆ ಮಾತ್ರ. ಒಂದು ವೇಳೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಯೋಗೀಶ್ ಭಟ್ಟರು ಹಿಂದೇಟು ಹಾಕಿದರೆ ಈ ಕ್ಷೇತ್ರದಲ್ಲೂ ಬಿಜೆಪಿಯಲ್ಲಿ ಗೆಲ್ಲುವ ಸಾಮಥ್ಯ ಇರುವ ವ್ಯಕ್ತಿಯಾಗಿ ಗೋಚರಿಸುವವರು ಪಾಲೇಮಾರರು ಮಾತ್ರ.

ಕನ್ನಡದ ಡರ್ಟಿಯಲ್ಲಿ ಬಿಚ್ಚಲು ರೆಡಿಯಾಗಿದ್ರಂತೆ ಪೂಜಾ, ನಿಖಿತಾ!

Posted by JAYAKIRANA Kirana on | 0 comments | Leave a comment...


ಬೆಂಗಳೂರು: ಹಿಂದಿಯಲ್ಲಿ ಸದ್ದು ಮಾಡಿದ ಹಾಟ್ ಸಿನಿಮಾ ಡರ್ಟಿ ಪಿಕ್ಚರ್‌ನ ಕನ್ನಡದ ರೀಮೇಕ್‌ನಲ್ಲಿ ಪಾಕಿಸ್ಥಾನದ ನಟಿ ವೀಣಾ ಮಲಿಕ್ ನಟಿಸುತ್ತಿರುವುದು ಹಳೆಯ ಸುದ್ದಿ. ಆದರೆ ಇದಕ್ಕೂ ಮೊದಲು ಕನ್ನಡದ ಇಬ್ಬರು ನಟಿಯರು ಡರ್ಟಿ ಪಿಕ್ಚರ್‌ನಲ್ಲಿ ಬಟ್ಟೆ ಬಿಚ್ಚಲು ರೆಡಿಯಾಗಿದ್ದರು ಎನ್ನುವುದು ಲೇಟೆಸ್ಟ್ ಸಮಾಚಾರ.
ಡರ್ಟಿಯಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳಲು ಬಂದಿದ್ದ ಆ ಇಬ್ಬರು ನಟಿಯರು ಮುಂಗಾರು ಮಳೆಯ ಬೆಡಗಿ ಪೂಜಾ ಗಾಂಧಿ ಮತ್ತು ದರ್ಶನ್ ದಾಂಪತ್ಯದಲ್ಲಿ ಬಿರುಕು ಮೂಡಿಸಿದ್ದ ನಿಖಿತಾ ತುಕ್ರಲ್ ಎಂದರೆ ನಂಬಲೇ ಬೇಕು! ಈ ಚಿತ್ರಕ್ಕೆ ವೀಣಾ ಮಲಿಕ್ ಅವರನ್ನೇ ಯಾಕೆ ಆಯ್ಕೆ ಮಾಡಿದಿರಿ ಎಂಬ ಪ್ರಶ್ನೆಗೆ ಚಿತ್ರದ ನಿರ್ದೇಶಕ ತ್ರಿಶೂಲ್ ಹೇಳಿದ್ದು ಹೀಗೆ ‘ಈ ಚಿತ್ರದಲ್ಲಿ ಅಭಿನಯಿಸಲು ಮೊದಲು ನಿಖಿತಾ ತುಕ್ರಲ್ ಬಂದಿದ್ದರು. ಚಿತ್ರದ ಹಾಟ್ ದೃಶ್ಯಗಳಿಗೆ ತನ್ನದೇನೂ ಅಭ್ಯಂತರವಿಲ್ಲ. ಟೂ ಪೀಸ್, ಕೊನೆಗೆ ಸಿಂಗಲ್ ಪೀಸ್‌ಗೂ ಸಿದ್ಧ ಎಂದರು. ಇಂತಹ ಕಥೆ ನನಗೆ ಸಿಕ್ಕಿಯೇ ಇರಲಿಲ್ಲ. ಪಾತ್ರವೂ ಅದ್ಭುತವಾಗಿದೆ ಎಂದಿದ್ದರು. ಆದರೆ ಶೀರ್ಷಿಕೆಯಲ್ಲಿನ ಸಿಲ್ಕ್ ಎಂಬ ಪದ ತೆಗೆಯಬೇಕು ಎಂದ ಕಾರಣಕ್ಕೆ ಆಕೆಯನ್ನು ಕೈ ಬಿಟ್ಟೆವು. ಬಳಿಕ ಈ ಚಿತ್ರದಲ್ಲಿ ಅಭಿನಯಿಸಲು ಜೆಡಿಎಸ್‌ನ ತೆನೆಹೊತ್ತ ಮಹಿಳೆ ಪೂಜಾ ಗಾಂಧಿ ಬಂದಿದ್ದರು. ಚಿತ್ರದ ಯಾವುದೇ ದೃಶ್ಯಕ್ಕೆ ಬೇಕಾದರೂ ನಾನು ಪೋಸ್ ಕೊಡುತ್ತೇನೆ. ಬಿಚ್ಚುವ ದೃಶ್ಯಗಳಿಗೆ ಹಿಂದೇಟು ಹಾಕೋದೇ ಇಲ್ಲ ಅಂದಿದ್ರು. ನಮಗೂ ಪೂಜಾ ಇಷ್ಟವಾಗಿದ್ರು. ಆದ್ರೆ ಅವರ ಸಂಭಾವನೆ ನಮಗೆ ಸರಿಯೆನಿಸಲಿಲ್ಲ. ಅವರಿಗೆ ಅಷ್ಟು ಸಂಭಾವನೆ ಕೊಡುವ ಅನಿವಾರ್ಯತೆ ನಮಗಿರಲಿಲ್ಲ. ಹಾಗಾಗಿ ಪೂಜಾ ಗಾಂಧಿಯನ್ನು ನಮ್ಮ ಪೊಜೆಕ್ಟ್‌ನಿಂದ ಕೈ ಬಿಡಬೇಕಾಯಿತು ಎಂಬ ಬಾಂಬ್ ಸಿಡಿಸಿದ್ದಾರೆ ನಿರ್ದೇಶಕ ತ್ರಿಶೂಲ್. ಒಟ್ಟಿನಲ್ಲಿ ಕನ್ನಡದಲ್ಲೂ ಬಟ್ಟೆ ಬಿಚ್ಚಲು ನಟಿಯರು ರೆಡಿಯಾಗಿದ್ದಾರೆ ಎನ್ನುವುದು ತ್ರಿಶೂಲ್ ಮಾತಿನಿಂದ ಸ್ಪಷ್ಟವಾಗುತ್ತದೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಎಂದರೆ, ವೀಣಾ ಮಲಿಕ್ ಈ ಚಿತ್ರಕ್ಕಾಗಿ ೭೦ರಿಂದ ೮೦ ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಶಾಲೆ ಸರಕಾರದ್ದು, ನನ್ನದೆಂದು ಹೇಳಬೇಡಿ: ಹರೇಕಳ ಹಾಜಬ್ಬ ಮನವಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಸ್ಸು ತಂಗು ದಾಣದಲ್ಲಿ ಬುಟ್ಟಿಯಲ್ಲಿ ಕಿತ್ತಳೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಯಾರಿಗೂ ನಯಾಪೈಸೆಯ ಪ್ರಯೋಜನಕ್ಕೂ ಬಾರದ ನನಗೆ ಮಾಧ್ಯಮ ಹಾಗೂ ಪತ್ರಿಕೆಗಳು ಬೆಂಬಲಿಸಿದ ಕಾರಣ ಪ್ರೌಢಶಾಲೆ ನೆಲೆ ನಿಲ್ಲುವಂತಾಯಿತು. ಇಷ್ಟಕ್ಕೂ ನಾನು ಶಾಲೆ ಕಟ್ಟಿಸಲು ಪ್ರಯತ್ನ ಮಾಡಿ ದ್ದರೂ, ಸರಕಾರ ಹಾಗೂ ದಾನಿಗಳು ದೇಣಿಗೆ ನೀಡಿ ಬೆಂಬಲ ನೀಡಿದ್ದಾರೆ. ಈ ಕಾರಣದಿಂದ ಹರೇಕಳ ಹಾಜ ಬ್ಬರ ಶಾಲೆ ಎಂದು ಕರೆಯಬೇಡಿ. ಇದು ಅಕ್ಷರ ಯೋಗಿ ಹರೇಕಳ ಹಾಜಬ್ಬ ಮಾಡಿದ ಕಳಕಳಿಯ ಮನವಿ. ನಿನ್ನೆ ಹರೇಕಳ ಗ್ರಾಮದ ನ್ಯೂಪಡ್ಪುವಿನಲ್ಲಿ ಹಾಜಬ್ಬ ಅವರ ಪ್ರಯತ್ನದ ಫಲವಾಗಿ ನಿರ್ಮಾಣಗೊಂಡ ಸರಕಾರಿ ಸಂಯುಕ್ತ ಪ್ರೌಢಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಲೆಗೆ ಅತಿಥಿಗಳು ಬರುವಾಗ ವಾಹನ ಬರಲು ಸಾಧ್ಯವಿರುವ ರಸ್ತೆ ಇಲ್ಲಿಲ್ಲ. ಆಟದ ಮೈದಾನ, ವಿದ್ಯುತ್ ದೀಪಗಳ ಕೊರತೆಯಿದೆ. ಅಲ್ಲದೆ ಇಲ್ಲೇ ಟೈಲರಿಂಗ್ ಕೋರ್ಸ್ ಆರಂಭಿಸುವ ಯೋಜನೆಯೂ ಇದೆ. ಇದಕ್ಕೆಲ್ಲಾ ಸರಕಾರದಿಂದ ೫೦ ಲಕ್ಷ ಅನುದಾನ ದೊರಕಿಸಿ. ನಾವು ಇಂದೋ ನಾಳೆ ಯೋ ಇಲ್ಲಿಂದ ಹೋಗಬಹುದು. ಆದರೆ ಈ ಶಾಲೆಯನ್ನು ಮುನ್ನಡೆಸುವ ಜವಾಬ್ದಾರಿ ಇಲ್ಲಿಯವರಿಗಿದ್ದು ಚೆನ್ನಾಗಿ ಮುನ್ನಡೆಸಿ ಊರಿಗೆ ಕೀರ್ತಿ ತನ್ನಿ ಎಂದು ಇದೇ ವೇಳೆ ಅವರು ಭಾವುಕ ರಾಗಿ ನುಡಿದರು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ಶಾಸಕ ಯು.ಟಿ.ಖಾದರ್, ಮುಂತಾ ದವರು ಉಪಸ್ಥಿತರಿದ್ದರು.

ಹಾಜಬ್ಬ ಹಿಂದೆ, ಇತರರು ಮುಂದೆ
ನೂತನ ಶಾಲೆಯ ಉದ್ಘಾಟನಾ ಸಮಾರಂಭದ ವೇಳೆ ಹಾಜಬ್ಬ ಅವರು ಹಿಂದಿಗಿಂತಲೂ ಹೆಚ್ಚಿನ ಉತ್ಸಾಹ ದಲ್ಲಿದ್ದು ಕಂಡು ಬಂತು. ಅತಿಥಿಗಳನ್ನು ರಸ್ತೆಯಲ್ಲೇ ಸ್ವಾಗತಿಸಿ ಕರೆತರುವುದು, ಅವರನ್ನು ಸತ್ಕರಿಸುವುದು, ಉದ್ಘಾಟ ನೆಯ ವೇಳೆ ಇನ್ನೊಬ್ಬರನ್ನು ಕರೆಸಿ ಎದುರು ನಿಲ್ಲಿಸುವುದು ಮುಂತಾದ ಕಾರ್ಯ ಮಾಡುವು ದರಲ್ಲೇ ತಲ್ಲೀನ ರಾಗಿದ್ದರು. ಫೊಟೋ ತೆಗೆಯುವ ಸಂದರ್ಭದಲ್ಲೂ ಹಾಜಬ್ಬ ಅವರು ಕ್ಯಾಮಾರಾದ ಮುಂದೆ ಬರಲಿಲ್ಲ. ಯು.ಟಿ.ಖಾದರ್ ಹಾಗೂ ಫೊಟೋಗ್ರಾಪರ್‌ಗಳು ಮುಂದೆ ಬರುವಂತೆ ಒತ್ತಾಯಿಸಿ ದರೂ ಹಾಜಬ್ಬ ಒಪ್ಪಲಿಲ್ಲ. ಕೊನೆಗೆ ಒತ್ತಾಯಪೂರ್ವಕವಾಗಿ ನಿಲ್ಲಿಸಿ ದರೂ ಇತರರ ಫೊಟೋ ಫೋಸ್ ಮುಂದೆ ಹಾಜಬ್ಬರ ಮುಖ ಕಾಣ ದಾಯಿತು.

ಸಿಬ್ಬಂದಿ ಕೊರತೆ: ಪೊಲೀಸ್ ಠಾಣೆಯಲ್ಲಿ ಕೆಲಸದ ಭಾರ

Posted by JAYAKIRANA Kirana on | 0 comments | Leave a comment...


  • ಗಿರೀಶ್ ಅಡ್ಪಂಗಾಯ
ಸುಳ್ಯ: ಸುಳ್ಯಕ್ಕೆ ರಕ್ಷಣೆ ನೀಡುವ ಆರಕ್ಷಕ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದ್ದು ಕೆಲಸ ಕಾರ್ಯಗಳು ತಾಳ ತಪ್ಪುತ್ತಿದೆ. ಒಟ್ಟು ಇರಬೇಕಾದ ಪೊಲೀಸ್ ಪೇದೆಗಳ ಪೈಕಿ ಅರ್ಧ ದಷ್ಟು ಕೊರತೆ ಉಂಟಾಗಿದ್ದು, ಇರುವ ಪೊಲೀಸರಿಗೆ ಕೆಲಸದ ಒತ್ತಡ ತೀವ್ರ ವಾಗಿದೆ.
ಸುಳ್ಯದವರೇ ಆದ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡರು ಸೇರಿದಂತೆ ಇಲ್ಲಿ ಸದಾ ವಿಐಪಿಗಳ ದಂಡೇ ಆಗಮಿಸುತ್ತಾ ಇರುತ್ತಾರೆ. ಈ ಸಂದರ್ಭದಲ್ಲಿ ಮತ್ತು ಉಪ ವಿಭಾಗದ ಇತರೆಡೆಯಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕಾದ ಸಂದರ್ಭದ ಸ್ಥಿತಿಯಂತೂ ಹೇಳತೀರದು. ಒಬ್ಬರು ಅಥವಾ ಇಬ್ಬರೂ ಇಡೀ ಠಾಣೆಯನ್ನು ನಿಭಾಯಿಸಬೇಕಾದ ಸ್ಥಿತಿ ಉಂಟಾಗುತ್ತದೆ.
ಇಲ್ಲಿ ಇಬ್ಬರು ಆರಕ್ಷರ ಉಪ ನಿರೀಕ್ಷಕರ ಹುದ್ದೆ ಇದ್ದು, ಒಂದೂವರೆ ವರ್ಷದಿಂದ ಅಪರಾಧ ವಿಭಾಗದ ಎಸ್‌ಐ ಇಲ್ಲ. ಕಾನೂನು ಸುವ್ಯವಸ್ಥೆಯ ಎಸ್‌ಐಯೇ ಎರಡನ್ನೂ ನಿಭಾಯಿಸ ಬೇಕು. ಐವರು ಎಎಸ್‌ಐಗಳು ಭರ್ತಿ ಇದ್ದರೆ, ೧೨ ಮುಖ್ಯ ಪೇದೆಯ ಹುದ್ದೆ ಯಲ್ಲಿ ಒಂದು ಖಾಲಿ ಇದೆ. ೩೨ ಪೇದೆಗಳ ಪೈಕಿ ೧೬ ಮಂದಿ ಮಾತ್ರ ಇದ್ದು ಶೇ.೫೦ ರಷ್ಟು ಕೊರತೆ ಇದೆ. ಅಲ್ಲದೆ ಒಬ್ಬರು ಮಹಿಳಾ ಮುಖ್ಯಪೇದೆ ಹುದ್ದೆ ಖಾಲಿ ಇದೆ. ಇರುವ ಕೆಲವೇ ಮಂದಿ ಸಿಬ್ಬಂದಿ ಠಾಣಾ ವ್ಯಾಪ್ತಿಯ ಎಲ್ಲಾ ಪ್ರಕರಣಗಳ ದಾಖಲು, ತನಿಖೆ ನಡೆಸಬೇಕು. ವಿಐಪಿ ಭದ್ರತೆ, ಜೊತೆಗೆ ಅಪಘಾತ ಪ್ರಕರಣ ಗಳನ್ನು ನಿಭಾಯಿಸಬೇಕು. ನಗರದಲ್ಲಿ ಸಂಚಾರ ನಿಯಂತ್ರಣಕ್ಕೂ ಸಿಬ್ಬಂದಿ ಒದಗಿಸಬೇಕು. ವಿವಿದೆಡೆ ನಡೆಯುವ ಕಾರ್ಯಕ್ರಮಗಳ ಭದ್ರತೆಗೆ ಹೋಗ ಬೇಕು. ಅಲ್ಲದೆ ಪ್ರಕರಣಗಳ ತನಿಖೆ ಯನ್ನೂ ಸೂಕ್ತ ಕಾಲದಲ್ಲಿ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸ ಬೇಕು. ಕಳೆದ ವರ್ಷ ಸುಳ್ಯ ಪೊಲೀಸ್ ಠಾಣೆಯಲ್ಲಿ ೨೧೩ ಪ್ರಕರಣಗಳು ದಾಖಲಾಗಿದ್ದವು. ಈ ವರ್ಷದ ನಾಲ್ಕು ತಿಂಗಳಲ್ಲಿ ಮಾತ್ರ ೬೭ ಪ್ರಕರಣಗಳು ದಾಖಲಾಗಿದೆ. ಇನ್ನುಳಿದಂತೆ ಸುಳ್ಯ ಠಾಣೆಯ ವ್ಯಾಪ್ತಿಯಲ್ಲಿರುವ ಕಲ್ಲು ಗುಂಡಿ ಮತ್ತು ಬೆಳ್ಳಾರೆಯ ಹೊರ ಠಾಣೆಗಳ ಸ್ಥಿತಿಯೂ ಭಿನ್ನವಾಗಿಲ್ಲ. ಇಲ್ಲಿ ಒಬ್ಬರು ಎಎಸ್‌ಐ ಮತ್ತು ಕನಿಷ್ಟ ನಾಲ್ಕು ಮಂದಿ ಪೇದೆಗಳು ಬೇಕಾದಲ್ಲಿ ಒಬ್ಬರು ಎಎಸ್‌ಐ ಮತ್ತು ಇಬ್ಬರು ಪೇದೆಗಳು ಹೊರ ಠಾಣೆಯ ಕೆಲಸ ವನ್ನು ನಿಭಾಯಿಸಬೇಕಾಗಿದೆ. ಗಲಾಟೆ ನಡೆದು ಹೆಚ್ಚುವರಿ ಪಡೆ ಪುತ್ತೂರು ಅಥವಾ ಮಂಗಳೂರಿನಿಂದ ಬರಬೇ ಕಾದರೆ ಕಡಿಮೆ ಎಂದರು ಮೂರು ಘಂಟೆಗೂ ಹೆಚ್ಚು ಸಮಯ ಬೇಕಾ ಗುತ್ತದೆ. ಮುಖ್ಯಮಂತ್ರಿಯ ತವರು ತಾಲೂಕಿನ ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿ ನೇಮಿಸಿ ಭದ್ರತಾ ವ್ಯವಸ್ಥೆಯನ್ನು ಬಲ ಪಡಿಸಬೇಕು ಎಂಬ ಬೇಡಿಕೆಯಿದೆ.
ಸುಬ್ರಹ್ಮಣ್ಯದಲ್ಲೂ ಕೊರತೆ: ಸುಳ್ಯ ತಾಲೂಕಿನ ಮತ್ತೊಂದು ಠಾಣೆ ಕ್ಷೇತ್ರ ನಗರಿ ಸುಬ್ರಹ್ಮಣ್ಯದಲ್ಲಿದೆ. ಇಲ್ಲೂ ಸಿಬ್ಬಂದಿ ಕೊರತೆ ಕಾಡುತ್ತಿರುತ್ತದೆ. ಸದಾ ಕುಕ್ಕೆ ಸುಬ್ರಹಣ್ಯ ಕ್ಷೇತ್ರಕ್ಕೆ ಬರುವ ಭಕ್ತರ ಮತ್ತು ವಿಐಪಿಗಳಿಂದ ಗಿಜಿಗುಟ್ಟುತ್ತಿರುವ ಸುಬ್ರಹ್ಮಣ್ಯದಲ್ಲಿ ಭದ್ರತೆಯ ಭಾರ ಹೆಚ್ಚೇ ಇದೆ. ಇಲ್ಲಿ ೨೧ ಪೇದೆಗಳ ಹುದ್ದೆ ಮಂಜೂರಾಗಿದ್ದು ೧೪ ಮಂದಿ ಮಾತ್ರ ಇದ್ದಾರೆ. ಹೆಚ್‌ಸಿ ಮತ್ತು ಎಎಸ್‌ಐಗಳ ಹುದ್ದೆ ಭರ್ತಿ ಇದೆ.

ಯಾಕೆ ಕೊರತೆ.?
ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ ಬಳಿಕ ಗ್ರಾಮೀಣ ತಾಲೂಕುಗಳಲ್ಲಿನ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ರಚನೆಯಾದಾಗ ಜಿಲ್ಲೆಯ ವಿವಿಧ ಠಾಣೆಗಳಿಂದ ಹಲವು ಮಂದಿ ಸಿಬ್ಬಂದಿ ಅಲ್ಲಿಗೆ ನಿಯೋಜನೆ ಮಾಡಿದಾಗ ಇಲ್ಲೆಲ್ಲ ಸಿಬ್ಬಂದಿ ಕೊರತೆ ಹೆಚ್ಚಾಯಿತು. ಇಲ್ಲಿ ಈಗ ಭರ್ತಿ ಮಾಡದ ಕಾರಣ ಇರುವ ಸಿಬ್ಬಂದಿ ಕೆಲಸ ದ್ವಿಗುಣವಾಯಿತು. ಕೆಲಸದ ಕಾರ್ಯಭಾರದದಿಂದ ಪೊಲೀಸ್ ಸಿಬ್ಬಂದಿ ಬಸವಳಿದಿದ್ದಾರೆ. ಇದೀಗ ನೂತನವಾಗಿ ಪೊಲೀಸ್ ಪೇದೆಗಳ ಆಯ್ಕೆ ನಡೆದಿದ್ದರೂ ತರಬೇತಿ ಮುಗಿಸಿ ಹೊರ ಬಂದು ನೇಮಕಾತಿ ನಡೆಸುವಾಗ ಒಂದು ವರ್ಷಕ್ಕಿಂತಲೂ ಅಧಿಕ ಸಮಯ ಬೇಕಾಗಿದೆ.

ಮನೆಗೆ ಆಧಾರವಾಗಬೇಕಿದ್ದವನಿಗೆ ಮನೆಯವರೇ ಆಧಾರ!

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ವೈದ್ಯರೊಬ್ಬರ ತಪ್ಪಿನಿಂದಾಗಿ ಮನೆಗೆ ಅಧಾರವಾಗಬೇಕಿದ್ದ ಮನೆಮಗನಿಗೆ ಇದೀಗ ಮನೆಯವರೇ ಅಧಾರವಾಗಿರುವ ಕರುಣಾಜನಕ ಕಥೆಯಿದು. ಇಷ್ಟೆಲ್ಲಾ ಆದರೂ ಈ ಪ್ರದೇಶದ ಜನಪ್ರತಿನಿಧಿಗಳ ಸಹಿತ ಸಾಮಾಜಿಕ ಸಂಘಟನೆ ಗಳು ಕಂಡರೂ ಕಾಣದಂತಿರುವುದು ಮಾತ್ರ ವಿಶೇಷವಾಗಿದೆ.
ಬದಿಯಡ್ಕ ಪಂಚಾಯತ್ ವ್ಯಾಪ್ತಿಯ ಮೇಲಿನ ಪಳ್ಳತಡ್ಕ ನಿವಾಸಿ ಕುಂಞ ಕಣ್ಣನ್- ಕಮಲ ದಂಪತಿಯ ಪುತ್ರ ಗೋಪಾಲ ಬೆಳ್ಚಪ್ಪಾಡ ಈ ನತದೃಷ್ಟ ಯುವಕ.
ಹತ್ತನೇ ತರಗತಿವರೆಗೆ ಪೆರ್ಲದ ಶಾಲೆಯೊಂದರಲ್ಲಿ ವ್ಯಾಸಂಗ ಮಾಡಿದ ಈತ ಮನೆಯ ಬಡತನದ ಬೇಗೆಯನ್ನು ನೀಗಿಸಲು ಖಾಸಗಿ ಬಸ್ಸೊಂದರಲ್ಲಿ ಕ್ಲೀನರ್ ಕೆಲಸಕ್ಕೆ ಸೇರಿ ಕೊಂಡಿದ್ದ. ಆದರೆ ಅದೊಂದು ಕರಾಳ ದಿನ ೨೦೦೭ ಸಪ್ಟೆಂಬರ್ ೮ ರಂದು ಈತ ಕೆಲಸ ಮಾಡುತಿದ್ದ ಬಸ್ಸು ಚೆರ್ಕಳ ಸಮೀಪದ ಬೋವಿಕ್ಕಾನದಲ್ಲಿ ಮಗುಚಿಬಿದ್ದ ಪರಿಣಾಮ ಗೋಪಾಲರ ಎರಡು ಕಾಲಿಗೆ ತೀವ್ರ ಗಾಯಗಳಾದವು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ನಾಲ್ಕು ತಿಂಗಳವರೆಗೆ ಚಿಕಿತ್ಸೆ ನೀಡಲಾಯಿತಾದರೂ ಅವರ ಎಡ ಕಾಲು ಗುಣಮುಖ ವಾಗದಿದ್ದಾಗ ಮನೆಮಂದಿ ಉನ್ನತ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆ ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಎಡಕಾಲಿನ ಒಳಗೆ ಗಾಜಿನ ಚೂರು ಹಾಗು ಕಬ್ಬಿಣದ ಅಂಶ ಇರುವುದೆಂದು ಹೇಳಿ ಶಸ್ತ್ರಚಿಕತ್ಸೆ ನಡೆಸಿ ಎಡಕಾಲನ್ನು ಮೊಣಗಂಟಿನಿಂದ ಬೇರ್ಪಡಿಸಿದರು. ಮನೆಗೆ ಬಂದ ನಂತರ ಏಟಾದ ಬಲಕಾಲು ಪೂರ್ಣ ಗುಣಮುಖವಾಗದೆ ಕೀವು ಇಳಿಯಲಾರಂಭಿಸಿತು. ಯಾವುದೇ ಆಸ್ಪತ್ರೆಯಲ್ಲಿ ಇದಕ್ಕೆ ಪರಿಹಾರ ದೊರೆಯಲಿಲ್ಲ. ಅಲ್ಲದೇ ಅಪಘಾತ ನಡೆದು ವರ್ಷ ಐದಾದರೂ ಅಂಗವಿಕಲರಿಗೆ ಲಭಿಸಬೇಕಾದ ಯಾವುದೇ ಸವಲತ್ತುಗಳು ಈವರೆಗೆ ಸಿಕ್ಕಿಲ್ಲ ಎನ್ನುವುದು ಮನೆಮಂದಿಯ ಕೊರಗು. ಓಟು ಕೇಳಲು ಮನೆಗೆ ಬರುವ ಜನಪ್ರತಿನಿಧಿಗಳಿಗಾಗಲೀ ಹತ್ತಿರದ ಸಾಮಾಜಿಕ ಸಂಘಟನೆಗಳಿಗಾಗಲೀ ಈತನ ಯಾತನೆ ಕಣ್ಣಿಗೆ ಬೀಳದಿರುವುದು ದುರಂತ. ಲಕ್ಷಾಂತರ ರೂಪಾಯಿ ಚಿಕಿತ್ಸೆಗಾಗಿ ವ್ಯಯಿಸಿದರೂ ಇನ್ನೂ ಆಧಿಕ ಹಣದ ಅವಶ್ಯಕತೆ ಇದೆ. ಆದ್ದರಿಂದ ಗೋಪಾಲರತ್ತ ಸಾಮಾಜಿಕ ಸಂಘಟನೆಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕಾದ ಅಗತ್ಯವಿದೆ.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

ಆಂಗ್ಲಮಾಧ್ಯಮ ಸರಕಾರಿ ಶಾಲೆ ಆದೇಶ, ಹಾಲಂಬಿ ಹೇಳಿಕೆ ಮೂರ್ಖತನ

Posted by JAYAKIRANA Kirana on | 0 comments | Leave a comment...

ಕರ್ನಾಟಕ ರಾಜ್ಯದಲ್ಲಿ ಶೇಕಡಾ ೬೦ ಮಕ್ಕಳು ಆಂಗ್ಲಮಾ ಧ್ಯಮ ಶಾಲೆಯಲ್ಲಿ ಕಲಿಯುತ್ತಿರುವಾಗ ೪೦ ಶೇ. ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಕನ್ನಡ ಮಾಧ್ಯಮ ಕಲಿಯುತ್ತಿರುವ ಮಕ್ಕಳು ಆಂಗ್ಲ ಮಾಧ್ಯಮ ಕಲಿಯುತ್ತಿರುವ ಮಕ್ಕಳ ಮುಂದೆ ತಲೆತಗ್ಗಿಸುವಂತೆ ಮಾಡಿದೆ.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಈ ವರ್ಷದಿಂದ ಜಾರಿಗೆ ಬರುವಂತೆ ಆರನೇ ತರಗತಿಯಿಂದ ಆಂಗ್ಲ ಮಾಧ್ಯಮವನ್ನು ಕಲಿಯಲು ಅಥವಾ ಕಲಿಸಲು ಸರ ಕಾರ ಆದೇಶ ಹೊರಡಿಸಿದೆ. ಈ ವಿಷಯವನ್ನು ನಾನು ಆರು ತಿಂಗಳ ಮುಂಚೆ ಸನ್ಮಾನ್ಯ ಮುಖ್ಯಮಂತ್ರಿ ಸದಾನಂದ ಗೌಡರ ಗಮನಕ್ಕೆ ಪತ್ರಿಕಾ ಮಾಧ್ಯಮಗಳ ಮೂಲಕ ಗಮನಹರಿಸಿದ್ದೆ.
ಸರಕಾರ ಮನಸ್ಸು ಮಾಡಿದರೆ ಇದನ್ನು ಒಂದನೇ ತರಗ ತಿಯಿಂದ ಪ್ರಾರಂಭ ಮಾಡಬಹುದು ಎಂದು ನನಗೆ ಅನಿಸು ತ್ತದೆ. ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಇಲ್ಲದೆ ಇರು ವುದರಿಂದ ಸುಮಾರು ಕಡೆ ಸರಕಾರಿ ಶಾಲೆಯಲ್ಲಿ ಮಕ್ಕಳಿಲ್ಲದೆ ಶಾಲೆ ಬಂದ್ ಮಾಡುವ ಪರಿಸ್ಥಿತಿ ಕೂಡಾ ಮರೆಯುವಂ ತಿಲ್ಲ. ಆಂಗ್ಲ ಮಾಧ್ಯಮ ಶುರುಮಾಡುವ ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮ ಕೂಡಾ ಇದೆ ಎಂಬುದು ಬಹುಶಃ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿಯವರಿಗೆ ಗೊತ್ತೇ ಇಲ್ಲ ಎಂದು ಅನಿಸುತ್ತದೆ.
ಪ್ರಪಂಚದಲ್ಲಿ ಶಿಕ್ಷಣ ಪದ್ಧತಿ ವೇಗವಾಗಿ ಮುಂದುವರಿ ಯುತ್ತಿರುವಾಗ ಪುಂಡಲೀಕರು ಯಾಕೆ ಈ ರೀತಿ ಹೇಳಿಕೆ ಕೊಡುತ್ತಾರೆ ಎಂದೇ ಗೊತ್ತಾಗುವುದಿಲ್ಲ. ಇದರಿಂದ ಇವರಿಗೆ ಏನು ಲಾಭವಿದೆ? ಕರ್ನಾಟಕದಲ್ಲಿ ಅರುವತ್ತು ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಕೂಡಾ ಈ ವಿಷಯದಲ್ಲಿ ಮೌನವಾಗಿತ್ತು. ಈಗ ನಮ್ಮ ಜಿಲ್ಲೆಯವರಾದ ಸನ್ಯಾನ್ಮ ಮುಖ್ಯಮಂತ್ರಿ ಸದಾನಂದ ಗೌಡರು ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮವನ್ನು ಕಲಿಸಲು ಆದೇಶ ಹೊರಡಿಸುವಾಗ ಇದನ್ನು ತಡೆಯುವವರು ಪುಂಡಲೀ ಕರಲ್ಲದೆ ಬೇರೆ ಯಾರೂ ಇವರ ಜೊತೆಯಲ್ಲಿರುವುದು ಕಷ್ಟ ಎಂದು ಕಾಣುತ್ತದೆ.
ಪುಂಡಲೀಕರು ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಬೋಧನೆ ಶುರು ಮಾಡಿದರೆ ಚಳವಳಿಯನ್ನು ಆರಂಭಿಸುತ್ತೇನೆ ಎಂದಿದ್ದಾರೆ. ಮಾತ್ರವಲ್ಲ ಹದಿನೈದು ದಿವಸದ ಒಳಗೆ ಸರಕಾರ ಈ ಆದೇಶವನ್ನು ಹಿಂಪಡೆಯಬೇಕು ಎಂದಿದ್ದಾರೆ. ಇಲ್ಲದಿದ್ದರೆ ಅಮ ರಣ ಉಪವಾಸ ಆರಂಭಿಸುತ್ತೇನೆ ಎಂದಿದ್ದಾರೆ.
ಪುಂಡಲೀಕರೇ, ನಿಮಗೆ ಮಾತ್ರವಲ್ಲ ಗೊತ್ತು ಆಮರಣ ಉಪವಾಸ ಮಾಡಲಿಕ್ಕೆ ನಮಗೂ ಗೊತ್ತಿದೆ. ಆದರೆ ನಾವು ನೀವು ಮಾಡಿದ ರೀತಿಯಲ್ಲಿ ಚಳುವಳಿ ನಡೆಸುವುದಿಲ್ಲ. ಬದಲಾಗಿ ಕರ್ನಾ ಟಕದಲ್ಲಿರುವ ಎಲ್ಲಾ ಸರಕಾರಿ ಶಾಲೆಯ ಮಕ್ಕಳ ಪೋಷಕರ ಜೊತೆ ಸೇರಿ ಕರ್ನಾಟಕದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೇಕು ಎಂದು ಸನ್ಮಾನ್ಯ ಮುಖ್ಯಮಂತ್ರಿಯವರಲ್ಲಿ ವಿನಂತಿ ಮಾಡೋಣ. ಕರ್ನಾಟಕದ ಬುದ್ಧಿ ಇದ್ದ ಜನರೇ ಸರ ಕಾರಿ ಶಾಲೆಯಲ್ಲಿ ಆಂಗ್ಲಮಾಧ್ಯಮ ಬಂದ ತಕ್ಷಣ ಕನ್ನಡ ನಾಶ ವಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಮಕ್ಕಳ ಭವಿಷ್ಯವನ್ನು ಹಾಳು ಮಾಡಲಿಕ್ಕೆ ಹೊರಟ ಪುಂಡಲೀಕರಿಗೆ ಯಾರೂ ಸಾಥ್ ನೀಡಬೇಡಿ. ಪುಂಡಲೀ ಕರೇ, ತಮಗೆ ಇದ್ದ ಗೌರವವನ್ನು ಕಳೆ ದುಕೊಳ್ಳಬೇಡಿ. ಖಾಸಗಿ ಶಾಲೆಯಲ್ಲಿ ದೊಡ್ಡ ಮೊತ್ತವನ್ನು ಕಟ್ಟಿ ಆಂಗ್ಲ ಮಾಧ್ಯಮ ಕಲಿಯಲಿಕ್ಕೆ ಆಗದ ಮಕ್ಕಳ ಶಾಪವನ್ನು ತಲೆಗೆ ಹಾಕಿಕೊಳ್ಳಬೇಡಿ. ಇದರ ಬಗ್ಗೆ ಯೋಚಿಸಿ, ಚಿಂತಿಸಿ. ನನಗೆ ಧೈರ್ಯ ಇದೆ, ಸರಕಾರ ಖಂಡಿತವಾಗಿಯೂ ಈ ಆದೇಶವನ್ನು ಹಿಂಪಡೆಯುವುದಿಲ್ಲ. ಪುಂಡಲೀಕರವರ ಆಮರಣ ಉಪವಾಸ ನೀರಿನ ಮೇಲೆ ಇದ್ದ ಗುಳ್ಳೆಯಂತೆ ಆಗಲಿದೆ. 
ಯಾವ ಕಾರಣಕ್ಕೂ ಸರಕಾರ ಜಗ್ಗದೆ ಈ ಆದೇಶವನ್ನು ಜಾರಿಗೊಳಿಸಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿ ಸದಾನಂದ ಗೌಡರಲ್ಲಿ ವಿನಂತಿ ಮಾಡುತ್ತಾ ಬಹಿರಂಗ ಪತ್ರದ ನಿಬಂಧನೆಗ ಳನ್ನು ಪಾಲಿಸಿಕೊಂಡು ಕೊನೆಗೊಳಿಸುತ್ತೇನೆ. ಅವಶ್ಯ ಇದ್ದರೆ ಮುಂದಕ್ಕೆ ಬರೆಯುತ್ತೇನೆ.  ಇಸ್ಮಾಯಿಲ್, ಮಂಗಳೂರು 

ಮುಂದಿನ ಚುನಾವಣೆಯಲ್ಲಿ ಶಾಸಕರಿಗೆ ಬುದ್ಧಿ ಕಲಿಸೋಣ

Posted by JAYAKIRANA Kirana on | 0 comments | Leave a comment...

ಜೂ.೯ರ ‘ಜಯಕಿರಣ’ ಪತ್ರಿಕೆಯ ಮುಖಪುಟದಲ್ಲಿ ಬಹಿರಂಗ ವಿಭಾಗದ ಬರಹ ವನ್ನು ಪ್ರಕಟಿಸಿದ ಸಂಪಾದಕರಿಗೆ ಮೊದಲು ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ನಮ್ಮ ಶಾಸಕರು ನಮ್ಮಿಂದ ಓಟು ಪಡೆದು ಜಯ ಗಳಿಸಿದ ನಂತರ ನಮಗೆ ಅಪರಿಚಿತ ರಾಗುತ್ತಾರೆ. ಈ ಸಾಲಿನಲ್ಲಿ ಮೊದಲು ಕೆ.ಅಭಯ ಚಂದ್ರರನ್ನು ಸೇರಿಸಬೇಕು. ಅವರು ಮೂಲ್ಕಿ-ಮೂಡಬಿದ್ರಿ ಕ್ಷೇತ್ರದ ಅಭ್ಯರ್ಥಿಯಾ ಗಿದ್ದರೂ ಯಾವ ಸಮಸ್ಯೆಗೂ ಸ್ಪಂದಿಸಿದವ ರಲ್ಲ. ಆಸಿಯಮ್ಮರವರು ತನ್ನ ಗಂಡನ ಪಿಂಚಣಿ ಸೌಲಭ್ಯಕ್ಕಾಗಿ ಶಿಕ್ಷಣ ಇಲಾಖೆಯೊಂದಿಗೆ ಸಹ ಕರಿಸಲು ಸಲ್ಲಿಸಿದ ಮನವಿಗೆ ಸ್ಪಂದಿಸದ ಇಂತಹ ಶಾಸಕರು ಖಂಡಿತವಾಗಿಯೂ ನಮಗೆ ಅಗತ್ಯವಿಲ್ಲ.
ಕಳೆದ ತಿಂಗಳು ಇದೇ ಪತ್ರಿಕೆಯ ವಾರಾಂತ್ಯ ವಿಭಾಗದಲ್ಲಿ ಪ್ರಕಟಿಸಿದ ‘ಭ್ರಷ್ಟ ಇಲಾಖೆಯೊಂ ದಿಗೆ ಗುದ್ದಾಡಿದ ಮಾಸ್ತರ್, ಪಿಂಚಣಿ ಪಡೆಯ ದೇನೇ ತೆರಳಿದ ಪುತ್ತಬ್ಬ’ ಬರಹವು ಓದಿದ ಅನೇಕ ಜನರಿಗೆ ಆಘಾತವಾಗಿತ್ತು. ಸರಕಾರದಿಂದ ಸಿಗುವ ಸೌಲಭ್ಯದಲ್ಲೂ ವಂಚಿಸಿದ ಸರಕಾರಕ್ಕೆ ಮೊದಲು ಧಿಕ್ಕಾರವಿರಲಿ. ನಮ್ಮ ಶಾಸಕರಿಗೆ ಜನಪ್ರತಿನಿಧಿಗಳ ಸಮಸ್ಯೆಯ ಅಹವಾಲುಗಳನ್ನು ಇತ್ಯರ್ಥ ಮಾಡಲು ಸಮಯವೇ ಸಿಗುವುದಿಲ್ಲ. ಹವಾನಿಯಂತ್ರಣ ಕಾರು ಗಳಲ್ಲಿ ತಿರುಗಾಡುತ್ತಾ, ಸಭೆ, ಸಮಾರಂಭ, ಉದ್ಘಾ ಟನೆ ಎಂದು ಟಿ.ವಿ. ಮಾಧ್ಯಮಗಳಿಗೆ ಪೋಸ್ ಕೊಡುತ್ತಾ ಮರುದಿನ ದೊಡ್ಡ ಹೆಡ್‌ಲೈನ್‌ನಲ್ಲಿ ಪ್ರಕಟವಾಗುವ ಸುದ್ದಿಯನ್ನೇ ಓದುತ್ತಾ ಕಾಲ ಕಳೆಯುವ ಇಂಥ ಶಾಸಕರಿಗೆ ಜನರು ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಲೇಬೇಕು.
ಯಾವುದೇ ಕಾರಣಕ್ಕೂ ಬರುವ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಲು ಅಭಯ ಚಂದ್ರ ಅವರಿಗೆ ಟಿಕೆಟ್ ನೀಡಲೇಬಾರದು. ಒಂದು ವೇಳೆ ಟಿಕೆಟ್ ನೀಡಿದ್ದೇ ಆದಲ್ಲಿ ವಿರೋಧ ಪಕ್ಷದ ಜೊತೆ ಸೇರಿಕೊಂಡು ಬೀದಿಗಿಳಿದು ಹೋರಾಟ ಮಾಡಿ, ಮತದಾರರಿಗೆ ಮನವ ರಿಕೆ ಮಾಡಿ ಕೊಡಲಾಗುವುದು. ತನ್ನ  ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗದ ನಾಲಾ ಯಕ್ಕು ಶಾಸಕರುಗಳಿಗೆ ಇನ್ನಾದರೂ ತಕ್ಕ ಶಾಸ್ತಿ ಮಾಡಲೇಬೇಕು. ಖಂಡಿತವಾಗಿಯೂ ಮುಂದಿನ ಚುನಾವಣೆಯಲ್ಲಿ ಮತದಾರರು ಇದನ್ನು ಮಾಡದೇ ಇರಲಾರರು. ನಾನು ಆಸಿಯಮ್ಮರ ವರ ಹಾಗೆ ನಿವೃತ್ತಿ ವೇತನ ಪಡೆಯಲು ಅನೇಕ ವರುಷ ನೋವುಂಡವಳು. ಆವಾಗ ಯಾವ ಶಾಸಕರೂ ನನ್ನ ಸಹಕಾರಕ್ಕೆ ಬಂದಿಲ್ಲ. ಆದು ದರಿಂದ ಜಿಲ್ಲೆಯ ಎಲ್ಲಾ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು, ಮಂತ್ರಿಗಳು ಆಸಿಯ ಮ್ಮರ ಆವಹಾಲುಗಳನ್ನು ಸ್ವೀಕರಿಸಿ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ವಿನಂ ತಿಸಿಕೊಳ್ಳುತ್ತೇನೆ.
       ಕೆ.ಸರೋಜಿನಿ, ಹಳೆಯಂಗಡಿ

ಪೊಲೀಸ್ ಇಲಾಖೆ ಮೇಲಿನ ಕಳಂಕ

Posted by JAYAKIRANA Kirana on | 0 comments | Leave a comment...

ಪೊಲೀಸ್ ಎಂದರೆ ಶಾಂತಿಯ ದೂತರು ಎಂಬ ಮಾತಿದೆ. ಸಮಾಜದಲ್ಲಿ ಶಾಂತಿಯನ್ನು ಕಾಪಾಡಿ ನ್ಯಾಯ-ನಿಷ್ಠೆಯಿಂದ ದುಡಿಯ ಬೇಕಾದ ಪೊಲೀಸರು ಇಂದು ವಿವಿಧ ಅಕ್ರಮ ದಂಧೆಕೋರರಿಂದ ವಸೂಲಿ ಮಾಡಿಕೊಂಡು ಹಾಯಾಗಿರುವುದನ್ನು ಕಾಣು ತ್ತೇವೆ. ಮರಗಳ್ಳ ಸಾಗಣೆ, ಇಸ್ಪೀಟ್ ಅಡ್ಡೆ, ಜೂಜಾಟ, ಕೋಳಿ ಅಂಕಗಳಿಂದ ಆಯಾ ಠಾಣೆ ಗಳ ಪೊಲೀಸರು ಇಂತಿಷ್ಟು ಆದಾಯ ಪಡೆ ಯುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಕೆಲವೊಂದು ಠಾಣೆಗಳಲ್ಲಿ ಅಧಿಕಾರಿಗಳಿಗಿಂತ ಹಿರಿಯ ಕಾನ್‌ಸ್ಟೇಬಲ್‌ಗಳಿಗೆ ಹೆಚ್ಚು ಮರ್ಯಾದೆ ಇರುತ್ತದೆ. ಯಾಕೆಂದರೆ ಠಾಣಾ ವ್ಯಾಪ್ತಿಗಳಲ್ಲಿ ನಡೆಯುವ ಅಕ್ರಮ ದಂಧೆ, ಅದರಲ್ಲಿ ಭಾಗಿ ಯಾಗಿರುವವರು ಎಲ್ಲದರ ಮಾಹಿತಿ ಇವರಿಗೆ ಇರುತ್ತದೆ. ಒಂದೇ ಠಾಣೆಯಲ್ಲಿ ಜಂಡಾ ಊರುವ ಇವರು ಎಲ್ಲರಿಗೂ ಬೇಕಾದವರಾ ಗಿರುತ್ತಾರೆ. ಹೀಗಾಗಿ ಪೊಲೀಸರೆಂದರೆ ವಸೂಲಿ ಕೋರರೇ ಎಂಬ ಸಂಶಯ ಜನರಲ್ಲಿ ಮೂಡು ತ್ತದೆ. ಹಿರಿಯ ಅಧಿಕಾರಿಗಳು ಸರಿಪಡಿಸುವರೇ?                        ರಾಮಕೃಷ್ಣ, ಮೂಲ್ಕಿ

ಕಾರು ಚಾಲಕರಿಗೆ ರಕ್ಷಣೆ ಕೊಡಿ

Posted by JAYAKIRANA Kirana on | 0 comments | Leave a comment...

ಕಾರು ಚಾಲಕರನ್ನು ಬಾಡಿಗೆಗೆಂದು ಕರೆದೊಯ್ದು ದೋಚುವ, ಹತ್ಯೆಗೈಯುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಇಲ್ಲಿ ಕಾರು ಚಾಲಕ ರಿಗೆ ರಕ್ಷಣೆ ಎನ್ನುವುದು ಮರೀಚಿಕೆಯಾಗಿದೆ. ದಿನದ ೨೪ ಗಂಟೆಯೂ ಕರ್ತವ್ಯ ನಿರ್ವ ಹಿಸುವ ಕಾರು-ಟ್ಯಾಕ್ಸಿ ಚಾಲಕ ರನ್ನು ಗುರಿಯಾಗಿಸಿಕೊಂಡು ರಾತ್ರಿಯ ವೇಳೆ ದುಷ್ಕೃತ್ಯ ನಡೆ ಯುತ್ತಿದೆ. ಇಲ್ಲಿ ಪೊಲೀಸ್ ಇಲಾಖೆಯೂ ದೂರದೂ ರಿಗೆ ಬಾಡಿಗೆಗೆ ಹೋಗುವ ಕಾರು ಚಾಲಕರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ ಕಾರು ಚಾಲಕರು ಕರ್ತವ್ಯದ ಅವಧಿಯಲ್ಲಿ ಹೇಗೆ ಸುರ ಕ್ಷಿತವಾಗಿರಬೇಕು ಎಂಬ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ಒದ ಗಿಸಬೇಕು. ತುರ್ತು ಸಂದರ್ಭದಲ್ಲಿ ರಕ್ಷಣೆಗಾಗಿ ಏನು ಮಾಡ ಬೇಕು, ಯಾರನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಕಾರು ಚಾಲಕ ರಿಗೆ ಅಗತ್ಯ ತರಬೇತಿ ನೀಡಿದಲ್ಲಿ ಕಾರು ಚಾಲಕರು ರಾತ್ರಿ-ಹಗಲು ಧೈರ್ಯದಿಂದ ದುಡಿದು ಜನರ ಸೇವೆ ಮಾಡಬಹುದಾಗಿದೆ.
 ಸತೀಶ್ ಕೆ, ಬಿಜೈ

ವಿಠಲ ಮಲೆಕುಡಿಯ ಅಲ್-ಖೈದಾ ಉಗ್ರನೇ?

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ ಸಮೀಪದ ಕುತ್ಲೂರು ಎಂಬ ಹಳ್ಳಿಯ ಪ್ರತಿಭಾವಂತ ವಿದ್ಯಾರ್ಥಿ ವಿಠಲ ಮಲೆಕುಡಿಯನನ್ನು ನಕ್ಸಲ್ ಚಟುವಟಿಕೆ ಆರೋಪದ ಮೇಲೆ ಬಂಧಿಸಿ ಜೈಲಿನಲ್ಲಿಡಲಾಗಿದೆ. ಪೊಲೀಸ್ ಇಲಾಖೆ, ಗೃಹ ಇಲಾಖೆ ವಿಠಲನಿಗೆ ಜೈಲೇ ಸೂಕ್ತ ಎಂಬ ನಿರ್ಧಾ ರಕ್ಕೆ ಬಂದಂತಿದೆ. ಹೀಗಾಗಿ ಎಲ್ಲರಿಗೂ ಸಿಗುವ ಜಾಮೀನು ವಿಠಲನಿಗೆ ಮಾತ್ರ ಸಿಗುತ್ತಿಲ್ಲ. ಪತ್ರಿಕೋ ದ್ಯಮ ವಿದ್ಯಾರ್ಥಿ ವಿಠಲನನ್ನು ಬಂಧಿಸಲು ಪೊಲೀಸ ರಿಗೆ ಸೂಕ್ತ ದಾಖಲೆಗಳೇನೂ ಸಿಕ್ಕಿಲ್ಲ. ಸಿಕ್ಕಿದ್ದು ಚಹಾ ಪುಡಿ ಮತ್ತು ಭಗತ್ ಸಿಂಗ್ ಬಗೆಗಿನ ಸಾಹಿತ್ಯ ಮಾತ್ರ. ಹೀಗಿದ್ದೂ, ಪೊಲೀಸರು ಹುಲಿ ಹಿಡಿದು ಬೋನಿಗೆ ಹಾಕಿದಂತೆ ವರ್ತಿಸುತ್ತಿರುವುದು ನಾಚಿಕೆಗೇಡು. ವಿಠ ಲನನ್ನು ಬಂಧಿಸಿರುವ ಪೊಲೀಸರ ವರ್ತನೆ ಒಬ್ಬ ಅಲ್-ಖೈದಾ ಉಗ್ರನನ್ನು ಬಂಧಿಸಿರುವಂತಿದೆ. ಇದು ಸರಕಾರದ ದ್ವಿಮುಖ ನೀತಿಯನ್ನು ಪ್ರತಿಬಿಂಬಿಸುತ್ತದೆ. ಮುಖ್ಯಮಂತ್ರಿಯವರ ಜಿಲ್ಲೆಯ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿ ನಕ್ಸಲನೆಂಬ ಹಣೆಪಟ್ಟಿ ಧರಿಸಿ ಜೈಲಿನಲ್ಲಿರುವುದು ಮುಖ್ಯಮಂತ್ರಿಗೆ ಶೋಭೆ ತರುವ ವಿಚಾರವೇ?ದಿನೇಶ್, ಗುಡ್ಡೆಯಂಗಡಿ

ಕಾಮುಕರ ಗುರು

Posted by JAYAKIRANA Kirana on | 0 comments | Leave a comment...

ನಿತ್ಯಾನಂದ ಎನ್ನುವ ವಿಕೃತ ಸ್ವಾಮಿಯ ನಿಜಬಣ್ಣ ಬಯಲಾಗಿದೆ. ದೇಶವ್ಯಾಪಿ ಆಕ್ರೋಶದ ಅಲೆ ಭುಗಿಲೆದ್ದಿದ್ದು, ನಿತ್ಯಾನಂದನಂಥ ಕಾಮುಕ ಸ್ವಾಮಿಗಳ ಎದೆಯಲ್ಲಿ ಭಯ ಮಡುಗಟ್ಟಿದೆ. ಚಿತ್ರನಟಿ ರಂಜಿತಾ ಜೊತೆಗಿನ ಸೆಕ್ಸ್ ಹಗರಣ, ಬ್ಲೂಫಿಲ್ಮ್‌ಗಳ ಪಾತ್ರಧಾರಿಯಾಗಿರುವ ನಿತ್ಯಾನಂದ ಕಾಮುಕರ ದೊಡ್ಡ ಗುರು. ಈತನಿಂದಾಗಿ ದೇಶ ದಲ್ಲಿ ಕಾಮುಕರ ಹಾವಳಿ ಹೆಚ್ಚುವ ಭೀತಿಯಿದೆ. ನಿತ್ಯಾನಂದನ ಶಿಷ್ಯರು ಕೂಡಾ ಆತನನ್ನೇ ಅನು ಕರಣೆ ಮಾಡುತ್ತಿದ್ದು, ಅರಾಜಕತೆ ಸೃಷ್ಟಿಸುತ್ತಿ ದ್ದಾರೆ. ಇವರನ್ನು ಈಗಲೇ ಮಟ್ಟ ಹಾಕದಿದ್ದರೆ ಮುಂದೆ ದೇಶಾದ್ಯಂತ ಇನ್ನಷ್ಟು ಮಠ-ಮಂದಿರ ಗಳು ಪ್ರಾರಂಭಗೊಳ್ಳುವ ಸಾಧ್ಯತೆಯಿದೆ. ಪೊಲೀಸ್ ಇಲಾಖೆ, ರಾಜ್ಯ ಗೃಹ ಇಲಾಖೆ ಎಲ್ಲೆಡೆ ಇರುವ ಕಾವಿಧಾರಿಗಳನ್ನು ಗಡಿಪಾರು ಮಾಡುವ ಮೂಲಕ ರಾಜ್ಯವನ್ನು ರಕ್ಷಿಸಲಿ.
 ಶ್ರೀನಾಥ್, ಬೆಳ್ತಂಗಡಿ

ಕೊಳಕು ನಟಿ ಕನ್ನಡಕ್ಕೆ ಬೇಕಿತ್ತೇ?

Posted by JAYAKIRANA Kirana on | 0 comments | Leave a comment...

ಪಾಕಿಸ್ತಾನದ ಕೊಳಕು ನಟಿ ವೀಣಾ ಮಲಿ ಕ್‌ಳನ್ನು ಹಾಕಿ ಕನ್ನಡದಲ್ಲಿ ಚಿತ್ರವೊಂದನ್ನು ನಿರ್ಮಿಸಲಾಗುತ್ತಿದೆ. ಯಶಸ್ವಿ ಹಿಂದಿ ಚಿತ್ರ ಡರ್ಟಿ ಪಿಕ್ಚರ್ ಅನ್ನು ಕನ್ನಡದಲ್ಲಿ ನಿರ್ಮಿಸ ಲಿದ್ದು, ಈಕೆಯ ಭಾವಾಭಿನಯದ ಚಿತ್ರಗಳನ್ನು ನೋಡಿ ದರೆ ಆಕೆ ಎಷ್ಟು ಡರ್ಟಿ ನಟಿ ಎಂಬುದು ಮನದ ಟ್ಟಾಗುತ್ತದೆ. ಹೀಗಿರು ವಾಗ ಕನ್ನಡ ಚಿತ್ರರಂಗಕ್ಕೆ ಇಂಥ ಡರ್ಟಿ ನಟಿಯ ಅವಶ್ಯಕತೆಯಿತ್ತೇ? ಕೊಳಕು ನಟಿಯನ್ನು ಅಂಬಾ ರಿಯಲ್ಲಿ ಹೊತ್ತುಕೊಂಡು ಮೆರೆಯುತ್ತಿರುವ ಕನ್ನಡ ಚಿತ್ರರಂಗ ಘನತೆಯನ್ನು ಕಳೆದುಕೊ ಳ್ಳುತ್ತಿದೆ. ಇಂಥವರು ಇರುವುದರಿಂದಲೇ ಕನ್ನಡ ಭಾಷೆಯಲ್ಲಿ ಸದಭಿರುಚಿಯ ಚಿತ್ರಗಳು ಬಿಡು ಗಡೆಯಾಗುತ್ತಿಲ್ಲ.  
 ರಹೀಂ, ಮಂಗಳೂರು

ಶಿಕ್ಷಣ ಕ್ರಾಂತಿಯೆಂದು ಸುಳ್ಳು ಪೋಸ್ ಕೊಡುವ ಶಿಕ್ಷಣ ಸಂಸ್ಥೆ

Posted by JAYAKIRANA Kirana on | 0 comments | Leave a comment...

ಇಡೀ ಜಗತ್ತಿಗೆ, ಕನ್ನಡ, ಸಂಸ್ಕೃತಿ, ಪ್ರೋತ್ಸಾಹ ಅಂತ ಪೋಸ್ ಕೊಡುವ ಕಾಲೇಜೊಂದರ ನಿಜವಾದ ಮಹಿಮೆ ಅಲ್ಲಿರುವ ವಿದ್ಯಾರ್ಥಿ ಗಳಿಗೆ ಮಾತ್ರ ಗೊತ್ತು. ಶಿಕ್ಷಣ ಕ್ರಾಂತಿ ಎಂದು ಒಂದರ ಮೇಲೆ ಕಟ್ಟಡ ಗಳನ್ನು ಕಟ್ಟಿಕೊಂಡು ಸದಾ ಸುದ್ದಿಯಲ್ಲಿರುವ ಕಾಲೇಜೊಂದರ ನಿತ್ಯದ ಕಥೆ ಇದು.
ಈ ಕಾಲೇಜು ಮಾತ್ರ ವಿದ್ಯಾರ್ಥಿಗಳನ್ನು ಇನ್ನಿಲ್ಲದಂತೆ ದೋಚಲು ತೊಡಗಿದೆ. ಒಂದು ಕಡೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ಪಡೆದು ಮಾಧ್ಯಮಗಳಲ್ಲಿ ಇನ್ನಿಲ್ಲದಂತೆ ಪ್ರಚಾರ ಗಿಟ್ಟಿಸಿ ಇನ್ನೊಂದು ಕಡೆ ಬಹಿ ರಂಗವಾಗಿಯೇ ದೋಚುತ್ತದೆ. ಪ್ರತಿಯೊಂದು ಕಾಲೇಜುಗಳಲ್ಲೂ ಫೀಸು ಕಟ್ಟುವುದಕ್ಕೆ ಕಂತು ಮುಖಾಂತರ ಪಾವತಿಸುವ ವ್ಯವಸ್ಥೆ ಇರುತ್ತದೆ. ಆದರೆ ಈ ಕಾಲೇಜಲ್ಲಿ ಮಾತ್ರ ಈ ವ್ಯವಸ್ಥೆ  ಇಲ್ಲ. ಕಾಲೇಜು ನಿಗದಿಪಡಿ ಸಿದ ದಿನಾಂಕದೊಳಗೆ ಹಣ ಪಾವತಿಸದಿದ್ದರೆ ಅದಕ್ಕೆ ದಂಡ ತೆರಬೇ ಕಾಗುತ್ತದೆ. ಕಾಲೇಜಿಗೆ ರಜೆ ಹಾಕಿದರೆ, ತಪ್ಪು ಮಾಡಿ ಸಿಕ್ಕಿಹಾಕಿಕೊಂ ಡರೆ, ಸ್ಥಳೀಯ ಭಾಷೆ ಮಾತಾಡಿದರೆ, ಬಂಕ್ ಹೊಡೆದರೆ, ಅದಕ್ಕೂ ದಂಡ ರೂಪದ ಶಿಕ್ಷೆ. ಹಣವಿರುವ ವಿದ್ಯಾರ್ಥಿಗಳು ಬೇಕಾದಷ್ಟು ದಂಡ ತೆತ್ತು ಮತ್ತಷ್ಟು ತಪ್ಪುಗಳನ್ನು ಮಾಡುತ್ತಾರೆ. ದಂಡ ಪಾವತಿಸಲಾಗದಿ ದ್ದರೆ ಬ್ಲ್ಯಾಕ್‌ಮೇಲ್ ತಂತ್ರವನ್ನು ಅನುಸರಿಸುತ್ತದೆ. ವಿದ್ಯಾರ್ಥಿಯ ಹಾಜರಿ ಕಡಿತಗೊಳಿಸುವುದು, ಅಮಾನತಿನಲ್ಲಿಡುವುದು, ಪರೀಕ್ಷೆಗೆ ಕೂರಲು ಹಾಲ್‌ಟಿಕೇಟು ನೀಡದಿರುವಂತಹ ಕೃತ್ಯಗಳನ್ನು ನಡೆಸುತ್ತದೆ. ಇಷ್ಟೆಲ್ಲ್ಲಾ ಕಿತಾಪತಿ ನಡೆಸುವುದು ಅಲ್ಲಿನ ಪ್ರಾಂಶುಪಾಲರು. ಆ ಕಾಲೇಜಿನ ಅಧ್ಯಕ್ಷರೇ ನಿಂತು ಈ ಕೃತ್ಯಗಳನ್ನು ಮಾಡಿಸುತ್ತಾರೋ ಅಥವಾ ಇದರಲ್ಲಿ ಅಲ್ಲಿನ ಅಧ್ಯಕ್ಷರಿಗೂ ಪಾಲಿದೆಯೋ ಎಂಬುದು ತಿಳಿಯಬೇಕಾದ ಸತ್ಯ. ಹಾಸ್ಟೆಲ್‌ನಲ್ಲಂತೂ ಅಧಿಕ ಫೀಸ್. ಅಲ್ಲಿ ಹೊರರಾಜ್ಯ, ಹೊರದೇಶ ಗಳ ವಿದ್ಯಾರ್ಥಿಗಳು ಹೆಚ್ಚಿದ್ದು, ಅವರಿಗೆ ಬೇಕಾದ ರೀತಿಯಲ್ಲಿ ಫೀಸ್ ಹೇರುತ್ತಾರೆ. ಇವರು ನಿಗದಿಪಡಿಸಿದ ಮೊತ್ತಗಳನ್ನು ಪಾವತಿಸಲು ಸಾಧ್ಯ ವಾಗದೆ ಕಾಲೇಜಿಗೆ ಶರಣು ಹೊಡೆದವರೂ ಇದ್ದಾರೆ. 
ಈ ಬಗ್ಗೆ ಪ್ರಶ್ನಿಸಲು ಪ್ರಾಂಶುಪಾಲರನ್ನು ಮತ್ತು ಅಧ್ಯಕ್ಷರನ್ನು ಎದುರು ಹಾಕಲು ಯಾರಿಗೂ ಧೈರ್ಯವಿಲ್ಲ. ಯಾಕೆಂದರೆ ಎಲ್ಲಿ ತಮ್ಮ ಭವಿಷ್ಯಕ್ಕೆ ಕಲ್ಲು ಬೀಳುತ್ತದೋ ಎಂಬ ಭಯ ಅವರನ್ನು ಕಾಡು ತ್ತದೆ. ಉತ್ತಮ ಶಿಕ್ಷಕರ ಕೊರತೆಯೂ ಇದೆ. ಐದಾರು ತಿಂಗಳವರೆಗೆ ಅವರ ಸಂಬಳ ಬಾಕಿ ಇರಿಸಿ ಸತಾಯಿಸುವ ಸುದ್ದಿಯೂ ಇದೆ. ಇದರ ಪ್ರತಿಫಲವನ್ನು ಅನುಭವಿಸುವುದು ಮಾತ್ರ ವಿದ್ಯಾರ್ಥಿಗಳು. ಗ್ರಂಥಾಲಯ ವ್ಯವಸ್ಥೆ ಸುಸಜ್ಜಿತವಾಗಿದ್ದರೂ ಅದಕ್ಕೆ ನಿಗದಿಪಡಿಸಿದ ದಂಡದ ಮೊತ್ತವು ದಂಗು ಪಡಿಸುತ್ತದೆ. ಒಂದು ಪುಸ್ತಕಕ್ಕೆ ಐದು ದಿನಗಳನ್ನು ನಿಗದಿಪಡಿಸಿ ಅದರ ದಿನ ಮುಗಿದರೆ ದಿನಕ್ಕೆ ೫-೧೦ ರೂ ದಂಡ ವಿಧಿಸುತ್ತಾರೆ. ಇಲ್ಲಿನ ಕಾಲೇಜಲ್ಲಿ ವಿದ್ಯಾರ್ಥಿಸಂಘ ಗಳಿಗೆ ಅವಕಾ ಶವೇ ಇಲ್ಲ. ಯಾಕೆಂದರೆ ಇದಕ್ಕೆ ಅದರ ಅಧ್ಯಕ್ಷರು ಅವಾಕಾಶವೇ ನೀಡಲಿಲ್ಲ.                              ನೊಂದ ವಿದ್ಯಾರ್ಥಿ, ಗುರುಪುರ

ಸಂತಾನ ಅಭಿವೃದ್ಧಿಯೇ ಮದುವೆಯ ಹಿಂದಿನ ಉದ್ದೇಶವಾಗಿದೆ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಪ್ರಶ್ನೆ: ನಾನು ಗೃಹಿಣಿ. ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದೇನೆ. ನನ್ನ ಪತಿ ಮುಂಬೈಯಲ್ಲಿ ಉದ್ಯೋಗದಲ್ಲಿದ್ದಾರೆ. ನಾನು ಮನೆಯವರ ಒತ್ತಾಯಕ್ಕೆ ಮಣಿದು ಅವರನ್ನು ಮದುವೆಯಾದೆ. ಅವರಿಗೆ ಪ್ರಾರಂಭದಿಂದಲೇ ನನ್ನ ಮೇಲೆ ಆಸಕ್ತಿಯಿರಲಿಲ್ಲ. ಮದುವೆಯ ಮೊದಲ ರಾತ್ರಿಯೇ ಅವರ ವಿಚಾರ ನನಗೆ ತಿಳಿಯಿತು. ಅವರು ನಾನು ಮಾತ್ರ ಅಲ್ಲದೆ ಯಾವ ಹುಡುಗಿಯರ ಮೇಲೂ ಆಸಕ್ತಿ ಹೊಂದಿಲ್ಲ. ನಾನು ಕೆಲವು ತಿಂಗಳು ಈ ಬಗ್ಗೆ ಸುಮ್ಮನಿದ್ದೆ. ಆದರೆ ಒಂದು ದಿನ ತಡೆಯಲಾಗದೆ ಅವರಲ್ಲಿ ಕೇಳಿದೆ. ಅದಕ್ಕೆ ಅವರು ‘ನೀನು ಕೇವಲ ಸೆಕ್ಸ್‌ಗಾಗಿ ನನ್ನನ್ನು ಮದುವೆಯಾಗಿದ್ದೀ ಎಂದು ಬೈದು ನನ್ನ ಬಳಿ ತೀರಾ ಕೆಟ್ಟದಾಗಿ ಮಾತಾಡಿದರು. ಸೆಕ್ಸ್ ಬೇಕಿದ್ದರೆ ನೀನು ಬೇರೆ ಯಾರನ್ನಾದರೂ ನೋಡಿಕೋ, ನನಗೆ ಅದರಲ್ಲಿ ಇಷ್ಟವಿಲ್ಲ ಎಂದರು. ನಾನು ಅವರಲ್ಲಿ, ನನ್ನನ್ನು ಯಾಕೆ ಮದುವೆಯಾ ಗಿದ್ದೀರಿ ಎಂದು ಜಗಳ ಮಾಡಿದೆ. ಆಮೇಲೆ ಅವರಲ್ಲಿ ಸರಿಯಾಗಿ ಮಾತಾಡಲಿಲ್ಲ. ನನಗೆ ಇನ್ನೂ ಯಾಕೆ ಮಕ್ಕಳಾಗಿಲ್ಲ ಎಂದು ಎಲ್ಲರೂ ನನ್ನಲ್ಲಿ ಪ್ರಶ್ನಿಸುತ್ತಾರೆ. ಆಗೆಲ್ಲಾ ನಾನು ಸತ್ತು ಹೋಗಬೇಕೆಂದೆನಿಸುತ್ತದೆ. ನನ್ನವರು ಜನನಾಂಗ ನಿಮಿರುವಿಕೆ ಸಮಸ್ಯೆಗೆ ಈಡಾಗಿದ್ದಾರೆ. ಅವರಲ್ಲಿ ಡಾಕ್ಟರ್ ಹತ್ತಿರ ಹೋಗೋಣ ಎಂದರೆ ಏನೂ ಹೇಳುವುದಿಲ್ಲ. ವರ್ಷಕ್ಕೆ ಒಂದೆರಡು ಬಾರಿ ಊರಿಗೆ ಬರುತ್ತಾರೆ. ನನಗೆ ಈಗೀಗ ನನ್ನ ಜೀವನ ಯಾವ ಸುಖವೂ ಸಿಗದ ಕಳೆದು ಹೋಗುತ್ತದಲ್ಲಾ ಎಂದು ಬೇಸರವಾಗುತ್ತದೆ. ಮನೆಯಲ್ಲಿ ನಾನು ಮತ್ತು ಅವರ ತಾಯಿ ಮಾತ್ರ ಇರುವುದು. ನಾನು ನನ್ನ ಕಾಲೇಜ್‌ಮೇಟ್ ಒಬ್ಬನ ಜೊತೆ ಸ್ನೇಹ ಬೆಳೆಸಿದ್ದೇನೆ. ಆತ ಒಳ್ಳೆಯ ಉದ್ಯೋಗದಲ್ಲಿದ್ದಾನೆ. ನಾನು ಆತನ ಜೊತೆ ಎಲ್ಲವನ್ನೂ ಮುಕ್ತವಾಗಿ ಮಾತಾಡುತ್ತೇನೆ. ಆತ ನನ್ನನ್ನು ಪ್ರೀತಿಸುವು ದಾಗಿ ಹೇಳಿದ್ದಾನೆ. ನಾನು ಆತನ ಜೊತೆ ರೋಮ್ಯಾನ್ಸ್ ಮಾಡಿದ್ದೇನೆ. ಆತ ನನಗೆ ಎಲ್ಲಾ ಸುಖವನ್ನು ಕೊಡುತ್ತಾನೆ. ನಾವು ಹೀಗೆ ಮಾಡುವುದರಿಂದ ಮುಂದೆ ನನಗೆ ಮತ್ತು ಆತನ ಆರೋಗ್ಯಕ್ಕೆ ಏನಾದರೂ ಸಮಸ್ಯೆಯಾಗುತ್ತದೆಯೇ ಎಂದು ಭಯವಾಗುತ್ತಿದೆ. ಆತನನ್ನು ಬಿಡಲು ನನಗೆ ಮನಸ್ಸಿಲ್ಲ. ಆತ ನನ್ನ ವಯಸ್ಸಿನವನು. ಒಮ್ಮೊಮ್ಮೆ ಆತನ ಜೊತೆ ಎಲ್ಲಾದರೂ ಎಲ್ಲವನ್ನೂ ಬಿಟ್ಟು ಓಡಿಹೋಗೋಣ ಎಂದು ಅನಿಸುತ್ತದೆ. ನನಗೆ ಸೂಕ್ತ ಸಲಹೆ ಕೊಡಬೇಕಾಗಿ ವಿನಂತಿ.
ಸಲಹೆ: ಸಾಮಾನ್ಯವಾಗಿ ವಿಪರೀತ ಕುಡಿತ, ಮಾದಕವಸ್ತು, ತಂಬಾಕು ಇವುಗಳ ಮಿತಿಮೀರಿದ ಬಳಕೆಯಿಂದ ಗಂಡಸರು ಬೇಗನೆ ಜನನಾಂಗ ನಿಮಿರುವಿಕೆಯಂತಹ ಸಮಸ್ಯೆಗೆ ಈಡಾಗುತ್ತಾರೆ. ಇನ್ನು ಕೆಲವು ಮಂದಿಯಲ್ಲಿ ಬೇರೆ ಸಮಸ್ಯೆಗಳೂ ಇದ್ದಿರಬಹುದು. ನಿಮ್ಮವರಿಗೆ ಆಸಕ್ತಿಯಿಲ್ಲ ಎಂದರೆ ಯಾವ ರೀತಿ ಎಂದು ತಿಳಿಸಿಲ್ಲ. ಬರೇ ಜನನಾಂಗ ನಿಮಿರದಿದ್ದರೆ ವೈದ್ಯಕೀಯ ಚಿಕಿತ್ಸೆಯಿಂದ ಅದನ್ನು ತಕ್ಕಮಟ್ಟಿಗೆ ಪರಿಹರಿಸಲು ಸಾಧ್ಯ. ಈ ಬಗ್ಗೆ ಯಾವುದೋ ಲೈಂಗಿಕ ಚಿಕಿತ್ಸೆ ನೀಡುವ ವೈದ್ಯರನ್ನು ಸಂಪರ್ಕಿಸ ಬೇಡಿ. ನುರಿತ ತಜ್ಞರನ್ನು ಭೇಟಿ ಮಾಡಿ ಪರಿಹಾರ ಪಡೆಯಬಹುದು. ಇನ್ನು ಸೆಕ್ಸ್ ಉದ್ದೇಶಕ್ಕಾಗಿ ಮದುವೆ ಎನ್ನುವುದು ಒಂದರ್ಥದಲ್ಲಿ ನಿಜ. ಗಂಡು-ಹೆಣ್ಣು ಸಮಾಗಮ ಹೊಂದಿ ಸಂತಾನ ಅಭಿವೃದ್ಧಿ ಮಾಡಿ ಕೊಳ್ಳುವುದೇ ಮದುವೆಯ ಹಿಂದಿನ ರಹಸ್ಯ ಹೊರತು ಬೇರೇನೂ ಅಲ್ಲ. ವಿವಾಹವಾಗಿ ಲೈಂಗಿಕ ಸುಖ ಸಿಗದಿದ್ದರೆ ಹೀಗಾಗುವುದು ಸಾಮಾನ್ಯ. ಆದರೆ ಸಮಸ್ಯೆ ಪರಿಹಾರಕ್ಕಾಗಿ ಬೇರೊಬ್ಬನ ಜತೆ ರೊಮ್ಯಾನ್ಸ್ ಪ್ರಾರಂಭಿಸಿ ದ್ದು ಸರಿಯೇ? ಈ ವಿಷಯ ಸಮಾಜಕ್ಕೆ ತಿಳಿದರೆ ಮಾನ ಹರಾಜಾಗಬ ಹುದು. ಸುಖ ಬೇಕಿದ್ದರೆ ಗಂಡನಿಗೆ ಡೈವೋರ್ಸ್ ಕೊಟ್ಟು ಬೇರೆ ಮದುವೆ ಯಾಗಿ. ಲೈಂಗಿಕ ಸಂಬಂಧವೇರ್ಪಟ್ಟರೆ ಆರೋಗ್ಯಕ್ಕೇನೂ ತೊಂದರೆಯಾ ಗುವುದಿಲ್ಲ. ಆದರೆ ಓಡಿ ಹೋಗುವ ಕಲ್ಪನೆ ಮಾಡಬೇಡಿ. ಇದರಿಂದ ಸಮಸ್ಯೆಗಳೇ ಜಾಸ್ತಿ. ಲೈಂಗಿಕ ಬಯಕೆಯನ್ನು ತಣಿಸುವ ಇನ್ನಿತರ ಸುಲಭ ಮತ್ತು ಸುರಕ್ಷಿತ ವಿಧಾನಗಳ ಬಗ್ಗೆ ಗಮನ ಹರಿಸಿ. ಗಂಡನೊಂದಿಗೆ ನಿಮ್ಮ ಮನಸ್ಸಿನ ಭಾವನೆಯನ್ನು ಹೇಳಿಕೊಳ್ಳಿ. ಆತ ಗಮನ ಕೊಡದಿದ್ದರೆ ಡೈವೋರ್ಸ್ ನಿಮಗೆ ಸರಿಯಾದ ದಾರಿ.

ಈ ‘ಆ’ಸಾಮಿ ಎಲ್ಲಿದ್ದಾನೆ?

Posted by JAYAKIRANA Kirana on | 0 comments | Leave a comment...

ಹರಿಪ್ರಸಾದ್, ಮಂಗಳೂರು
ಗ್ರಹಚಾರ ಪರಿಹಾರ, ದೋಷ ಪರಿಹಾರ ಇತ್ಯಾದಿ ವಿಚಾರಗಳಿಗೆ ಜನರು ಅದರಲ್ಲೂ ಮಹಿಳೆಯರು ಬಹಳ ಬೇಗ ಮರುಳಾಗಿ ಬಿಡುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡು, ಸಾಮೂಹಿಕ ಸನ್ನಿ ಸೃಷ್ಟಿಸಿ ನಕಲಿ ಜ್ಯೋತಿಷಿಗಳು, ದೇವಮಾನವರು, ಸ್ವಾಮಿಗಳು, ನಾಯಿಕೊಡೆಗಳಂತೆ ಸೃಷ್ಟಿಯಾಗುತ್ತಿರುವ ಕಾವಿಧಾರಿಗಳು ಕೋಟ್ಯಧೀಶರಾಗುತ್ತಾರೆ. ಇದಕ್ಕೆ ನಮ್ಮ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಒಂದು ಘಟನೆಯೇ ಪ್ರಮುಖ ಸಾಕ್ಷಿಯಾಗಿದೆ. ಚಾವಡಿ ವಿಭಾಗದಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿರುವುದರಿಂದ ಇಲ್ಲಿ ನನ್ನ ಅನುಭವ, ಅನಿಸಿಕೆ ಹೇಳಲು ಬಯಸುತ್ತಿದ್ದೇನೆ.
ಕೆಲವು ವರ್ಷಗಳ ಹಿಂದೆ ಒಂದು ‘ದೀಪೋತ್ಸವ ಎಂಬ ಹೆಸರಿನಲ್ಲಿ ಓರ್ವ ವ್ಯಕ್ತಿ ಈ ಜಿಲ್ಲೆಗಳಲ್ಲಿ ಓಡಾಡಲಾರಂಭಿಸಿದ್ದ. ಈತನ ಹೆಸರು ಈಗ ನೆನಪಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಲವಾರು ಮಹಿಳೆಯರಲ್ಲಿ ಈಗ ಈ ಬಗ್ಗೆ ಪ್ರಶ್ನಿಸಿದರೆ ‘ಹೋ ಹೌದಲ್ವಾ... ಎಂದು ಹೇಳುತ್ತಾರೆ. ಎಲ್ಲಿ ಯವರೆಗೆ ಎಂದರೆ ನನಗೆ ಗೊತ್ತಿಲ್ಲದೇ ನನ್ನ ಮನೆಯ ಮಹಿಳೆಯರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು! ಈ ಬಗ್ಗೆ ನಾನು ಈಗಲೂ ಆಗಾಗ ತಮಾಷೆ ಮಾಡುವುದಿದೆ. ಹಾಗೆಂದು ನಾನು ನಾಸ್ತಿಕ ಮತ್ತು ದೇವರ ಬಗ್ಗೆ ನಂಬಿಕೆ ಇಲ್ಲದವನೇನೂ ಅಲ್ಲ. ಆದರೆ ದೇವರು ಮತ್ತು ಭಕ್ತಿಯನ್ನು ಈ   ರೀತಿಯಾಗಿ ದುರುಪಯೋಗ ಮಾಡುವವರ ಬಗ್ಗೆ ನನಗೆ ತಿರಸ್ಕಾರವಿದೆ.
ಈ ದೀಪೋತ್ಸವ ಮಾಡುವ ವ್ಯಕ್ತಿ ಏನು ಮಾಡಿದ್ದ ಎಂದರೆ ಒಂದು ಕೋಟಿ ಮಂದಿ ಮಹಿಳೆಯರ ಅಥವಾ ಭಕ್ತರ ಮೂಲಕ ದೀಪಾರಾಧನೆ ಮಾಡಿಸುವ ಗುರಿ ಇಟ್ಟುಕೊಂಡಿದ್ದ. ಈ ಬಗ್ಗೆ ನೋಟೀಸು ಪ್ರಿಂಟು ಮಾಡಿ ದೇವಸ್ಥಾನಗಳ ಬಳಿಗೆ ಹೋಗಿ ಅಲ್ಲಿ ಗ್ರಹಚಾರ ಪರಿಹಾರಕ್ಕಾಗಿ ಪೂಜೆ ಮಾಡಿ ಸುವುದಾಗಿ ಪ್ರಚಾರ ಮಾಡಿಸುತ್ತಿದ್ದ. ದೇವಸ್ಥಾನದಲ್ಲಿ ಸಾಮೂಹಿಕ ಪೂಜೆಯನ್ನು ಯಾರಾದರೂ ಮಾಡಿಸುತ್ತಾರೆ ಎಂದರೆ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಎಲ್ಲರೂ ಸಾಧ್ಯವಾದಷ್ಟು ಸಹಕಾರವನ್ನು ಸದುದ್ದೇಶದಿಂದ ಮಾಡುತ್ತಾರೆ. ಈ ವ್ಯಕ್ತಿ ಇದನ್ನೇ ದುರುಪಯೋಗ ಮಾಡಿದ್ದ.
ಈ ಪೂಜೆಯಲ್ಲಿ ಭಾಗವಹಿಸುವವರಿಗೆ ಹೆಚ್ಚೇನೂ ಖರ್ಚು ಇಲ್ಲ. ಪೂಜೆಗೆ ಬೇಕಾದ ಬತ್ತಿ, ಎಣ್ಣೆ, ಕಾಲುದೀಪ, ಕುಂಕುಮ, ಕರ್ಪೂರ ಇತ್ಯಾದಿಗಳನ್ನು ಇದರಲ್ಲಿ ಭಾಗವಹಿಸುವವರೇ ತರಬೇಕು. ಈ ಬಗ್ಗೆ ಈ ವ್ಯಕ್ತಿಗೆ ಸಲ್ಲಬೇಕಾದದ್ದು ಕಾಣಿಕೆ ರೂಪದಲ್ಲಿ ಕೇವಲ ಒಂದು ರೂಪಾಯಿ ಮಾತ್ರ! ಒಟ್ಟಿನಲ್ಲಿ ಹತ್ತಿಪ್ಪತ್ತು ರೂಪಾಯಿಯ ಒಳಗೆ ಗ್ರಹಚಾರ ಪರಿಹರಿಸುವ ಸುಲಭ ವಿಧಾನ! ಈ ಸುದ್ದಿ ಹೆಚ್ಚಾಗಿ ಮಹಿಳೆಯರಲ್ಲಿ ಕಾಳ್ಗಿಚ್ಚಿನಂತೆ ಪ್ರಚಾರವಾಗಿತ್ತು. ಕಡಿಮೆ ಖರ್ಚಿನಲ್ಲಿ ತಮ್ಮ ಮತ್ತು ತಮ್ಮ ಕುಟುಂಬದ ಗ್ರಹಚಾರ ಪರಿಹಾರ! ಯಾರಿಗೆ ಬೇಡ? ಗಂಡ ಎಷ್ಟು ದುಡಿದು ತಂದರೂ ಕಡಿಮೆಯೇ ಇದಕ್ಕೆಲ್ಲಾ ಗ್ರಹಚಾರವೇ ಕಾರಣ ಎಂದು ಭಾವಿಸುವ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಏನಾದರೂ ಸಣ್ಣ ಪುಟ್ಟ ರೋಗ ಇಲ್ಲದೇ ಇರುವ ವ್ಯಕ್ತಿಗಳು ಈ ಪ್ರಪಂಚದಲ್ಲಿ ಇಲ್ಲವೇ ಇಲ್ಲ. ಇದಕ್ಕೆಲ್ಲಾ ಗ್ರಹಚಾರವೇ ಕಾರಣ ಎಂದು ಭಾವಿಸುವವರು ನಮ್ಮಲ್ಲಿ ಇದ್ದಾರೆ. ಗ್ರಹಚಾರ ಪರಿಹಾರಕ್ಕಾಗಿ ಆ ಪೂಜೆ, ಈ ಪೂಜೆ ಎಂದು ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ಹತ್ತಿಪ್ಪತ್ತು ರೂಪಾಯಿಯಲ್ಲಿ ಭಾರೀ ಅಗ್ಗದ ದರದಲ್ಲಿ ಪರಿಹಾರ! ಈ ಕಾರಣಗಳಿಂದಾಗಿ ಈತನ ಕಾರ್ಯ ಕ್ರಮಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರುತ್ತಿದ್ದರು. ಕೆಲವು ಕಡೆ ಮೈದಾನ ಸಾಕಾಗದೆ ಹೋಯಿತು. ಈತ ಭಕ್ತರನ್ನು ಸಾಲಾಗಿ ಕೂರಿಸಿ, ಪುಟ್ಟ ಉಪ ನ್ಯಾಸದೊಂದಿಗೆ ಒಂದು ಗಂಟೆಗಳ ಗ್ರಹಚಾರ ಪರಿಹರಿಸುವ ವಿಧಿ - ವಿಧಾನ, ಮಂತ್ರ ಹೇಳಿ ಭಕ್ತರಿಂದ ಅದನ್ನು ಮಾಡಿಸತೊಡಗಿದೆ. ಸಂಜೆಯ ಕತ್ತಲಲ್ಲಿ ಮೈದಾನ ತುಂಬಾ ಸಾವಿರಾರು ದೀಪಗಳು ನೋಡುಗರಿಗೂ ಇದೊಂದು ವಿಸ್ಮಯ, ಸುಂದರ, ಮನಮೋಹಕವಾಗಿ ಕಂಡು ಬಂದಿತ್ತು. ತಮ್ಮ ಊರಿನಲ್ಲೂ ಈ ರೀತಿಯ ಪೂಜೆ ಮಾಡಿಸಬೇಕೆಂದು ಬೇಡಿಕೆ, ಒತ್ತಾಯಗಳು ಸುತ್ತ ಮುತ್ತಲಿಂದ ಬರತೊಡಗಿತು.
ಇದನ್ನು ಓದುತ್ತಿರುವವರಿಗೆ ಕೆಲವರಿಗಾದರೂ ಈ ಪೂಜೆಯಲ್ಲಿ ಭಾಗವಹಿಸಿದ್ದ ನೆನಪು ಬರಬಹುದು. ನನಗೆ ನೆನಪಿದ್ದಂತೆ ಎರಡು ವರ್ಷ ಈ ರೀತಿಯ ಪೂಜೆ ವಿವಿಧೆಡೆಯಲ್ಲಿ ನಡೆದಿತ್ತು. ಅಂದರೆ ಬಹುಷಃ ಈ ಪೂಜೆ ಮಾಡಿಸುತ್ತಿದ್ದ ವ್ಯಕ್ತಿಯ ಕೋಟಿ ಸಂಖ್ಯೆಯ ಗುರಿ ಮುಟ್ಟುವವರೆಗೆ ಪೂಜೆ ವಿವಿಧೆಡೆ ನಡೆದಿರಬಹುದು. ಕೋಟಿ ಸಂಖ್ಯೆಯಲ್ಲಿ ಈ ಪೂಜೆಯಲ್ಲಿ ಪಾಲ್ಗೊಂಡವರ ಒಂದೊಂದು ರೂಪಾಯಿ ಯಿಂತೆ ಒಟ್ಟು ಒಂದು ಕೋಟಿ ರೂಪಾಯಿಗಳು ಈ ವ್ಯಕ್ತಿಗೆ ಕಾಣಿಕೆ ರೂಪದಲ್ಲಿ ಸಂದಾಯವಾಗಿದೆ! ಪೂಜೆ ಮಾಡಿದವರ ಗ್ರಹಚಾರ ಎಷ್ಟು ಪರಿಹಾರವಾಗಿದೆಯೋ ಗೊತ್ತಿಲ್ಲ ಆದರೆ ಈ ಪೂಜೆ ಮಾಡಿಸಿದ ವ್ಯಕ್ತಿ ಗ್ರಹಚಾರ ಪರಿಹಾರವಾದದ್ದಂತೂ ಖಂಡಿತಾ. ಎರಡು ವರ್ಷಗಳಲ್ಲಿ ಒಂದು ಕೋಟಿ ರೂಪಾಯಿ ಸಂಪಾದನೆ! ಆ ವ್ಯಕ್ತಿಯ ಜೀವಮಾನವಿಡೀ ಐಶಾರಾಮದಿಂದ ಕಳೆಯಬಹುದಾದಷ್ಟು ದುಡ್ಡು! ಈ ಪೂಜೆಯಲ್ಲಿ ಪಾಲ್ಗೊಂಡವರಿಗೆ ಇದು ಈಗ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ನೆನಪಿಗೆ ಬಂದರೂ ‘ಒಂದು ರೂಪಾಯಿಯಲ್ಲ ಹೋಗಲಿ ಎನ್ನಬಹುದು!
ನಮ್ಮ ಬುದ್ದಿವಂತರ ಜಿಲ್ಲೆಯಲ್ಲಿ ಈ ರೀತಿಯಾಗಿಯೂ ದುಡ್ಡು ಸಂಪಾದನೆ ಮಾಡಬಹುದು ಎಂಬುದಕ್ಕೆ ಇದೊಂದು ಸಾಕ್ಷಿ ಅಷ್ಟೆ. ಇಲ್ಲಿ ಸಂಗ್ರಹವಾದ ದುಡ್ಡಿನಿಂದ ದೇವಸ್ಥಾನ ನಿರ್ಮಾಣ ಮಾಡಲಾಗುತ್ತದೆ ಎಂದು ಪ್ರಚಾರಕ್ಕಾಗಿ ಬಳಸಲಾಗುತ್ತಿದ್ದ ನೋಟೀಸುಗಳಲ್ಲಿ ತಿಳಿಸಲಾಗಿತ್ತು. ಎಲ್ಲಿ ದೇವಸ್ಥಾನ ನಿರ್ಮಾಣವಾಗಿದೆ, ಈ ವ್ಯಕ್ತಿ ಈಗ ಎಲ್ಲಿದ್ದಾನೆ ಎಂದು ಯಾರಿಗೂ ತಿಳಿದಿಲ್ಲ. ಸದುದ್ದೇಶದಿಂದ ಈ ವ್ಯಕ್ತಿ ಈ ಪೂಜೆಗಳನ್ನು ಕೋಟಿ ಸಂಖ್ಯೆಯಲ್ಲಿ ಮಾಡಿಸಿದ್ದರೆ ಪೂಜೆಯಲ್ಲಿ ಪಾಲ್ಗೊಂಡವರಿಗೆ ಕಡಿಮೆ ಪಕ್ಷ ಒಂದು ಧನ್ಯವಾದವನ್ನಾದರೂ ಹೇಳಿ ಇಂತಹಾ ಕಡೆಯಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದೇನೆ ಎಂದು ತಿಳಿಸುತ್ತಿದ್ದ. ಈ ಪತ್ರವನ್ನು ಓದಿಯಾದರೂ ಆತ ಸಂಗ್ರಹವಾದ ಒಂದು ಕೋಟಿ ರೂಪಾಯಿ ಯಾವ  ಉದ್ದೇಶಕ್ಕೆ ಬಳಕೆಯಾಯಿತು ಎಂದು ತಿಳಿಸಿದರೆ ಪೂಜೆಯಲ್ಲಿ ಪಾಲ್ಗೊಂಡವರಿಗೆ ತಮ್ಮ ಪೂಜೆ ಸಾರ್ಥಕವಾಯಿತು ಎಂಬ ಮನೋಭಾವನೆ ಬರುತ್ತದೆ.
ಆದುದರಿಂದ ಜನರು ಗ್ರಹಚಾರ, ದೋಷ, ಪಾಪ ಪರಿಹಾರ ಎಂದು ಹೇಳುತ್ತಾ ಮೋಸಮಾಡುವವರ ಬಲೆಗೆ ಬೀಳಬಾರದು ಎಂಬುದಕ್ಕಾಗಿ ಈ ಪತ್ರವನ್ನು ಬರೆಯುತ್ತಿ ದ್ದೇನೆ. ಮಾಡಿದ ಪಾಪ ಯಾವ ರೀತಿಯಿಂದಲೂ ಪರಿಹಾರವಾಗುವುದಿಲ್ಲ. ಪಾಪ ಪರಿಹಾರ ಎಂಬ ಮಾತೇ ಮತ್ತಷ್ಟು ಪಾಪ ಮಾಡುವುದಕ್ಕೆ ಪ್ರಚೋದನೆಯಾಗಿದೆ. ಗ್ರಹಚಾರವನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗಿರುವಾಗ ನಕಲಿ ಸ್ವಾಮೀಜಿಗಳ, ದೇವದೂತರ, ಪುರೋಹಿತರ, ಜ್ಯೋತಿಷಿಗಳ ಬಳಿಗೆ ಹೋಗಿ ಇಲ್ಲ ಸಲ್ಲದ ಮಾನಸಿಕತೆಗಳನ್ನು ತುಂಬಿಸಿಕೊಂಡು ಮಾನಸಿಕ ರೋಗಿಗಳಂತೆ ವರ್ತಿಸುವ ಬದಲು. ಒಳ್ಳೆಯದು ಮತ್ತು ಕೆಟ್ಟದರ ಬಗ್ಗೆ ಚಿಂತನೆ ಮಾಡಿಕೊಂಡು ತಮಗೆ, ಸಮಾಜಕ್ಕೆ ಒಳ್ಳೆಯದು ಎನಿಸಿದನ್ನು ಮಾಡಿಕೊಂಡು ಹೋಗಬೇಕು ಎಂದು ನನ್ನ ವಿನಂತಿಯಾಗಿದೆ.

Posted by JAYAKIRANA Kirana on | 0 comments | Leave a comment...

ಘಟಿಸುವುದಕ್ಕಿಂತ ಮೊದಲು...
ಬೇಡವಾಗಿತ್ತು ನಿತ್ಯಾನಂದ ಸ್ವಾಮಿಗೆ ಈ ಟಿವಿ ಮಂದಿಯನ್ನು ತನ್ನ ಪತ್ರಿಕಾಗೋಷ್ಠಿಯಿಂದ ಹೊರದಬ್ಬುವ ಉಸಾಬರಿಯೇ ಬೇಡ ವಾಗಿತ್ತು. ಇದೊಂದು ರೀತಿಯಲ್ಲಿ ಬೀದಿಯಲ್ಲಿ ಹೋಗುತ್ತಿದ್ದ ಮಾರಿ ಯನ್ನು ಮನೆಗೆ ಕರೆತಂದಂತಾಗಿದೆ. 
ಗೆಳೆಯರೇ, ಕಳೆದ ವಾರದ ನನ್ನ ಅಂಕಣದಲ್ಲಿ ಒಂದು ಕಡೆ ಇಸ್ಲಾಮಿನ ಪ್ರವಾದಿ ಮಹಮ್ಮದ್‌ರವರ ಉಕ್ತಿಯೊಂದನ್ನು ಪ್ರಸ್ತಾಪಿಸಿದ್ದೆ, ಯುದ್ಧರಂಗದಲ್ಲಿ ಹೋರಾಡುವವನಿಗಿಂತ ಕೋಪ ಬಂದಾಗ ತನ್ನನ್ನು ತಾನು ಹತೋಟಿಗೆ ತರುವವನೇ ನಿಜವಾದ ಧೀರ ಎಂದಾಗಿತ್ತು ಆ ಉಕ್ತಿ. ನಿತ್ಯಾನಂದ ಪ್ರಕರಣಕ್ಕೆ ಸದ್ರಿ ಉಕ್ತಿ ಸರಿಯಾಗಿಯೇ ಹೊಂದಿ ಕೊಳ್ಳುತ್ತದೆ. ನಿತ್ಯಾನಂದ ತಾನು ಕರೆದ ಪತ್ರಿಕಾಗೋಷ್ಠಿಯಲ್ಲಿ ಸಿಟ್ಟಿನ ಕೈಗೆ ಬುದ್ದಿಕೊಟ್ಟು ತಾಳ್ಮೆ ಕಳೆದುಕೊಂಡು ಯರಾಬಿರ್ರಿ ಹಾರಾಡಿದ್ದು ಈಗ ಫಜೀತಿಗಿಟ್ಟುಕೊಂಡಿದ್ದಾನೆ. ಪಾಪ ನಿತ್ಯಾನಂದ! ಈಗ ಬೆರಳು ಕಚ್ಚಿಕೊಳ್ಳುತ್ತಿರಬಹುದು. ಛೇ, ಎಂಥಾ ಕೆಲಸ ಮಾಡಿಬಿಟ್ಟೆ, ಧುಮ್ಮುಕ್ಕಿ ಬಂದಿದ್ದ ಸಿಟ್ಟನ್ನು ಕೆಲ ಕ್ಷಣಗಳ ಮಟ್ಟಿಗೆ ತಡೆದು ನಿಲ್ಲಿಸಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಎಂದು ತನ್ನನ್ನು ತಾನೇ ಜಪಿಸುತ್ತಿರಬಹುದು.
ಅದೆಲ್ಲಾ ಇರಲಿ. ಇಷ್ಟೆಲ್ಲಾ ಮಾತನಾಡಿದ್ದು ನಿತ್ಯಾನಂದನ ಬಗ್ಗೆ, ಮುಂದೆ ಜನರ ಬಗ್ಗೆ ಮಾತನಾಡೋಣ ಸತ್ಯಾಸತ್ಯತೆಯನ್ನು ಪರಿಶೀಲಿಸಿ ನೋಡುವ ಜನರಿಲ್ಲ. ಇಂದು ನಿಶ್ಚಯವಾಗಿಯು ನಿತ್ಯಾನಂದನ ವಂಚನೆ ಮನವರಿಕೆಯಾಗಿದೆ. ಒಂದು ವೇಳೆ ಅವನ ರಾಸಲೀಲೆ ಪ್ರಕರಣ ಬಹಿರಂಗಗೊಳ್ಳದಿರುತ್ತಿದ್ದರೆ ಇಂದು ದೂರ ನಿಂತು ತಮಾಷೆ ನೋಡುವವರಲ್ಲಿ ಕೆಲವು ಮಂದಿಯಾದರೂ ಆತನ ಭಕ್ತರ ಸಾಲಿನಲ್ಲಿ ಹೆಸರು ನಮೂದಿಸುತ್ತಿದ್ದರು! ಅರ್ಧ ಕೋಟಿಯಷ್ಟಿದ್ದ ಆತನ ಭಕ್ತರ ಸಂಖ್ಯೆ ಕಡಿಮೆಯೆಂದರೂ ಮುಕ್ಕಾಲು ಕೋಟಿ ತಲುಪುತ್ತಿತ್ತು. ಆದರೆ ಸುದೈವವಶಾತ್ ಈ ದೇಶದ ಜನ ಪುಣ್ಯ ಮಾಡಿದ್ದಾರೆ ಎಂದು ಕಾಣುತ್ತೆ. ಆತನ ಸಾಮ್ರಾಜ್ಯ ವಿಸ್ತರಣೆಗೆ ತಡೆ ಬಿದ್ದಿದೆ.
ಒಂದಂಶವನ್ನು ನಾವಿಲ್ಲಿ ಗಮನಿಸಬೇಕು. ನಿತ್ಯಾನಂದ ಇಂದು ಸಂಪೂರ್ಣವಾಗಿ ನಗ್ನನಾಗಿ ನಿಂತಿದ್ದಾನೆ. ಅವನು ಏನನ್ನೂ ಮರೆ ಮಾಡುವಂತಿಲ್ಲ. ಎಲ್ಲವೂ ಬಟಾಬಯಲಾಗಿದೆ. ಸಂತ ಎನ್ನುವ ಶಬ್ದಕ್ಕೆ ಆತನಲ್ಲಿ ಒಂದು ಅಣುವಿನಷ್ಟೂ ಕುರಹುಗಳಿಲ್ಲ. ಇಂತಾದರೂ ಆತನೇ ದೇವರೆಂದು ಇನ್ನೂ ಕೂಡಾ ಭಾವಿಸಿಕೊಂಡಿರುವ ಲಕ್ಷಗಟ್ಟಲೆ ಮುಟ್ಠಾಳರು ಇದ್ದಾರೆ ಎನ್ನುವುದು ವಾಸ್ತವ. ಹಿಂದೂ ಸಮಾಜದ ಉದ್ದಾರವೇ ನಮ್ಮ ಜೀವನದ ಏಕಮೇವ ಗುರಿ ಎಂದು ಹೇಳಿ ತಿರುಗಾಡುವ ಒಂದೆರಡು ಸಂಘಟನೆಗಳೂ ನಿತ್ಯಾನಂದನ ಬೆನ್ನಿಗೆ ನಿಂತಿದ್ದು, ಈಗಿನ ಹೊಸ ಬೆಳವಣಿಗೆ. ನಿಜ ಹೇಳಬೇಕೆಂದರೆ ದುರಂತ ಎನ್ನಬೇಕಾದದ್ದು ಇದನ್ನೇ.
ನಿತ್ಯಾನಂದನಂಥಾ ಠಕ್ಕರನ್ನು ನಾವು ಕಂಡಿರುವುದು ಇದು ಮೊದಲೇನೂ ಅಲ್ಲ. ಇಂಥಾ ಠಕ್ಕರು ಹಿಂದಿನ ಕಾಲದಲ್ಲಿಯೂ ಇದ್ದರು. ಮುಂದೆಯೂ ಇರುತ್ತಾರೆ. ವಿಷಯ ಅದಲ್ಲ. ಜನರ ಅಭಿರುಚಿ ಮತ್ತು ಚಿಂತನೆಯ ದಾಟಿ ಯಾವ ರೀತಿ ಬದಲಾವಣೆಗೊಳಗಾಗುತ್ತಿದೆ ಎನ್ನುವುದು ಮಾತ್ರ ನಾವು ಗಮನಿಸಬೇಕಾದ ಬಹುಮುಖ್ಯ ಸಂಗತಿ. ಹಿಂದಿನ ಕಾಲದಲ್ಲಾದರೆ ಇಂಥಾ ಕಪಟ ಸನ್ಯಾಸಿಗಳು (ಅಥವಾ ಸಜ್ಜನರ ವೇಷದಲ್ಲಿ ಬರುವ ಮೌಲ್ವಿಗಳು ಯಾ ಪಾದ್ರಿಗಳು) ವಂಚನೆ/ಅನಾಚಾರ ಮಾಡಿ ಸಿಕ್ಕಿಬಿದ್ದರೆ ಇಡೀ ಊರು ಸೇರಿ ಅವನ ಕತ್ತು ಹಿಡಿದು ಹೊರದಬ್ಬುತ್ತಿತ್ತು. ಅಥವಾ ಕಠಿಣಾತಿಕಠಿಣ ಶಿಕ್ಷೆ ವಿಧಿಸುತ್ತಿತ್ತು. ಆದರೆ ಇಂದು ಏನಾಗುತ್ತಿದೆ. ನೀವು ಕಾಣ್ತಾ ಇದ್ದೀರಿ. ವಂಚಕರು ಏನು ಮಾಡಿದರೂ ಜೀರ್ಣಿಸಿಕೊಳ್ಳುತ್ತಿದ್ದಾರೆ. ನಮ್ಮನ್ನಾಳುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿಚಾರದಲ್ಲೂ ಅಷ್ಟೇ. ಇವರು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿ ಸಿಕ್ಕಿ ಬಿದ್ದರೂ ಮತ್ತೆ ಮತ್ತೆ ಚಿಗಿತುಕೊಳ್ಳುತ್ತಿದ್ದಾರೆ. ಅತ್ಯಾಚಾರಿಗಳಿಗೆ ಅಥವಾ ಭ್ರಷ್ಟಾಚಾರಿಗಳಿಗೆ ಬೆಂಬಲ ವ್ಯಕ್ತಪಡಿಸಿ ಅವರ ಪರವಾಗಿ ಘೋಷಣೆ ಕೂಗಲು ದೊಡ್ಡ ದೊಡ್ಡ ಪಡೆಯೇ ಸಿದ್ದವಾಗಿರುತ್ತದೆ. ಜನರ ಅಭಿರುಚಿ ಬದಲಾಗುತ್ತಿದೆ ಅಥವಾ ಅವರ ಆಲೋಚನೆಗಳು, ಚಿಂತನೆಗಳು ಭಿನ್ನ ರೂಪ ಪಡೆಯುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ.
ನಿಜ ಹೇಳಬೇಕೆಂದರೆ ಇದು ನಮ್ಮ ಸಮಾಜವನ್ನು ವೇಗವಾಗಿ ನೈತಿಕ ದೀವಾಳಿತನದತ್ತ ದೂಡುತ್ತಿದೆ. ಇಂದು ಹೆಣ್ಮಕ್ಕಳನ್ನು ಹುರಿದು ಮುಕ್ಕಲು ಕಾಮಾಂಧರು ನಾನಾ ವೇಷ ಧರಿಸುತ್ತಿದ್ದಾರೆ. ದೇಶವನ್ನು ಲೂಟಿ ಹೊಡೆಯಲು ಭ್ರಷ್ಟಾಚಾರಿಗಳು ನಾ ಮುಂದು ತಾ ಮುಂದು ಎಂದು ಮುನ್ನುಗ್ಗುತ್ತಿದ್ದಾರೆ. ಯಾರಿಗೆ ಏನೊಂದೂ ಭಯ ಇಲ್ಲವಾಗಿದೆ. ಇದಕ್ಕೆ ಕಾರಣ ಎರಡು. ಒಂದು ತಮಗಿಂತ ಮೊದಲು ಸಿಕ್ಕಿಬಿದ್ದವರಿಗೆ ನ್ಯಾಯಾಲಯದಲ್ಲಿ ಏನೂ ಶಿಕ್ಷೆ ಆಗದಿರುವುದು. ಎರಡನೆಯದಾಗಿ ಮೇಲೆ  ಹೇಳಿದಂತೆಯೇ ವ್ಯಭಿಚಾರ/ಭ್ರಷ್ಟಾಚಾರ/ ವಂಚನೆ ಪ್ರಕರಣ ಬಹಿರಂಗವಾದ ಮೇಲೂ ಆಪಾದಿತರಿಗೆ ಹೋದಲ್ಲಿ ಬಂದಲ್ಲಿ ಸ್ವಾಗತ, ಗೌರವ ಇಮ್ಮಡಿಯಾ ಗುವುದು.
ನನ್ನಭಿಪ್ರಾಯ ಪ್ರಕಾರ ವಿಷಯವಿಂದು ಇಂಥಾ ವಿಷಮಸ್ಥಿತಿಗೆ ತಲು ಪಲು ಮೊದಲ ಕಾರಣಕ್ಕಿಂತ ಎರಡನೇ ಕಾರಣವೇ ಅತೀ ಹೆಚ್ಚಿನ ದೇಣಿಗೆ ಕೊಟ್ಟಿದೆ. ನೀವು ಊಹಿಸಿ ಭ್ರಷ್ಟರಿಗೆ ಯಾ ವಂಚಕರಿಗೆ ಒಂದು ವೇಳೆ ಕಾನೂನಿನಲ್ಲಿ ಜಯ ಸಿಕ್ಕರೂ ಸಾರ್ವಜನಿಕ ವಲಯದಲ್ಲಿ ಛೀ, ಥೂ ಎಂದು ಮುಖಕ್ಕೆ ಉಗುಳುವ ಸ್ವಾಗತ ಅಥವಾ ಅಸ್ಪೃಶ್ಯನಂತೆ ನೋಡುವ ಭಾಗ್ಯ ಸಿಗುತ್ತಿದ್ದರೆ ಇಂಥಾ ಠಕ್ಕರು ಇನ್ನೊಮ್ಮೆ ಆ ಕಾರ್ಯಕ್ಕೆ ಕೈಯಿಕ್ಕಲು ಧೈರ್ಯ ಮಾಡುವರೇ!?
ಆದರೆ ಯಾಕೋ, ಧರ್ಮಾಂಧರಿಗೆ ಪಕ್ಷಪಾತಿಗಳಿಗೆ ಇದು ಅರ್ಥವಾ ಗುವುದಿಲ್ಲ! 
ಇಂಥಾ ಧರ್ಮಾಂಧರ ದೆಸೆಯಿಂದ ಮುಂದೆ ನಮ್ಮ ಸಮಾಜದಲ್ಲಿ ಎಂಥಾ ಪ್ರತಿಕೂಲ ಜನಾಂಗ ಸೃಷ್ಟಿಯಾಗಬಹುದೆಂದು ಒಂದು ನಿಮಿಷ ಯೋಚಿಸಿ, ಇಂದು ಟಿವಿ ವಾಹಿನಿಗಳಲ್ಲಿ ಪತ್ರಿಕೆಗಳಲ್ಲಿ ನಿತ್ಯಾನಂದ ಪುರಾಣವೂ ಸೇರಿದಂತೆ ನಮ್ಮ ನಡುವೆ ಇರುವ ಹಲವಾರು ಅತ್ಯಾಚಾರಿಗಳ, ವ್ಯಭಿಚಾರಿಗಳ ಲೂಟಿಕೋರರ ಭ್ರಷ್ಟಾಚಾರಿಗಳ ಸುದ್ದಿ ಭಿತ್ತರವಾಗುತ್ತಲೇ ಇದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಸೇರಿದಂತೆ ದೇಶದ ಭವಿಷ್ಯವನ್ನು ರೂಪಿಸುವ ಯುವಜನತೆ ಇದನ್ನೆಲ್ಲ ಕಣ್ಣರಳಿಸಿ ಗಮನಿಸುತ್ತಲೂ ಇದೆ. ನೀವು ಯೋಚಿಸಿ, ವ್ಯಭಿಚಾರ ಮಾಡಿದ ಸಾಧು ಸಂತರು, ಭ್ರಷ್ಟಾಚಾರ ಎಸಗಿದ ಜನಪ್ರತಿನಿಧಿಗಳು ಯಾ ಅಧಿಕಾರಿ ವರ್ಗದವರು ಯಾವ ಬಗೆಯದ್ದೂ ಶಿಕ್ಷೆಗೊಳಗಾಗದೆ ಹೋದಲ್ಲಿ ಬಂದಲ್ಲಿ ರಾಜಮರ್ಯಾದೆಗೊಳಗಾಗುತ್ತಾ ಬಂದರೆ ಅದು ಈ ಯುವ ಜನ ರಲ್ಲಿ ಎಂಥಾ ‘ಅನಿಸಿಕೆ’ಗಳಿಗೆ ದಾರಿ ಮಾಡಿಕೊಡಬಹುದು! ಮುಂದೆ ತಾವು ಯಾರನ್ನು ಅನುಕರಿಸಬೇಕು ಎಂದು ನಿರ್ಧರಿಸುವಂತಾಗಬಹುದು.
ಗೆಳೆಯರೇ, ಹಿಂದೂ ಧರ್ಮದ ಸ್ವಾಮೀಜಿಗಳೇ ಇರಲಿ, ಮುಸ್ಲಿಮರ ಮೌಲ್ವಿ ಅಥವಾ ಉಸ್ತಾದ್‌ಗಳೇ ಇರಲಿ, ಕ್ರಿಶ್ಚಿಯನ್ನರ ಪಾದ್ರಿ, ಮಾದ್ರಿಗಳೇ ಇರಲಿ ಅನಾಚಾರ ಮಾಡಿದ್ದಾರೆ, ವಂಚನೆ ಎಸಗಿದ್ದಾರೆ ಎಂದು ಮನವರಿಕೆ ಯಾದರೆ ನಾವು ಮೂಲ ಅಂಥವನಿಗೆ ಕಠಿಣಾತಿಕಠಿಣ ಶಿಕ್ಷೆ ಕೊಡಿಸಲು ಗರಿಷ್ಠ ಪ್ರಯತ್ನಿಸಬೇಕಾಗಿದೆ. ಇಂದು ನಮ್ಮ ಮಕ್ಕಳು ಅಧ್ಯಾಪಕರುಗಳಿಂದಲೇ ಲೈಂಗಿಕ ಮತ್ತಿತರ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ನಮಗೆ ಗೊತ್ತಿದೆ. ಮಸೀದಿಗಳಲ್ಲೂ, ಮದ್ರಸಾಗಳಲ್ಲೂ, ಚರ್ಚ್‌ಗಳಲ್ಲೂ, ದೇವಸ್ಥಾನಗಳಲ್ಲೂ, ಮಠಗಳಲ್ಲೂ ನಮ್ಮ ಮಕ್ಕಳನ್ನು ದುರುಳರು ಲೈಂಗಿಕ ತೃಷೆ ತೀರಿಸಲು ಬಳಸಿ ರುವುದು ಬಹಳಷ್ಟು ಕಂಡಿದ್ದೇವೆ. ಇದೆಲ್ಲಾ ಮುಂದೆಯೂ ಮರುಕಳಿಸಬಾರದು ಎಂದಾದರೆ ಅಡಿಯಿಂದ ಮುಡಿಯವರೆಗೂ ಎಲ್ಲಾ ಕಪಟಿಗಳಿಗೂ ಕಠಿಣ ಶಿಕ್ಷೆಯಾಗಲೇ ಬೇಕು.
ಧರ್ಮವನ್ನು ಇತರರಿಗೆ ಹೇರಳವಾಗಿ ಬೋಧಿಸುವ ಸ್ವಾಮೀಜಿಗಳು, ಮೌಲ್ವಿಗಳು, ಪಾದ್ರಿಗಳು ಪ್ರವಚನ ಮಾಡುವ ಸ್ಥಳಗಳಲ್ಲಿ ಮಲಗುವ ಕೋಣೆಗಳಲ್ಲಿ, ಸಂಬಂಧಪಟ್ಟವರು ಸಿಸಿ ಕ್ಯಾಮೆರಾ ಅಳವಡಿಸಿ ಒಂದು ನಿಗಾ ಇಟ್ಟರೆ ಯಾರು ವಂಚಕರು, ಯಾರು ನಿಜವಾಗಿಯೂ ಧರ್ಮಬೀರುಗಳು ಎಂಬುವುದನ್ನು ಪತ್ತೆ ಹಚ್ಚಬಹುದು. ತನ್ಮೂಲಕ ಠಕ್ಕರು ಬೆಳೆಯುವ ಮೊದಲೇ ಚಿವುಟಿ ಬಿಸಾ ಡಬಹುದು ಮತ್ತು ನಮ್ಮ ಮಕ್ಕಳನ್ನು, ಮಹಿಳೆಯರನ್ನು ರಕ್ಷಿಸಿ ಕೊಳ್ಳಬಹುದು. ಏನಂತೀರಿ?
ಫರಿಯಾದ್ ಇಖ

ಕ್ರೀಡಾಕೂಟ: ಪ್ರಥಮ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ನಡೆದ ೩೨ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಶ್ರೀಮತಿ ಗ್ಲೇಡಿಸ್ ಪಾಸ್‌ರವರು ಎತ್ತರ ಜಿಗಿತ, ಉದ್ದಜಿಗಿತ ಮತ್ತು ೧೫೦೦ಮೀ ಓಟದಲ್ಲಿ ಪ್ರಥಮ ಸ್ಥಾನ ಮತ್ತು ೧೦೦ ಮೀ ಓಟದಲ್ಲಿ ದ್ವಿತೀಯ ಹಾಗೂ ೪*೧೦೦ ಮೀ. ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಇವರು ಸಂತ ಜಾಕೋಬರ ಹಿ.ಪ್ರಾ. ಶಾಲೆ ಫರ್ಲಾ ಇಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎಲ್ಲಾ ಜೀವರಾಶಿಗಳು ನೆಮ್ಮದಿಯಿಂದ ಬದುಕುವ ನೈಸರ್ಗಿಕ ಹಕ್ಕನ್ನು ಹೊಂದಿದೆ: ಭಟ್ಟಾರಕ ಚಾರುಕೀರ್ತಿ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿರುವ ತ್ಯಾಗಿ ಮಹಾಶಯರಿಗೆ ಸಮಾಜ  ಋಣಿಯಾಗಿದೆ ಎಂದು ಮೂಡಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ನುಡಿದರು.
ಅವರು ಪಾಣೆಮಂಗಳೂರು ಶ್ರೀ ಅನಂತನಾಥ  ಸ್ವಾಮಿ ಬಸದಿ ಸಮುಚ್ಚಯದಲ್ಲಿ ಸ್ವಸ್ತಿಶ್ರೀ ೧೦೮ ಚಂದ್ರಸಾಗರ ಮುನಿ ಮಹಾರಾಜರ ಸಂಸ್ಮರಣಾರ್ಥ ನಿರ್ಮಾಣ ಉದ್ದೇಶಿತ ತ್ಯಾಗಿ ನಿವಾಸಕ್ಕೆ ನಡೆದ ಶಿಲಾನ್ಯಾಸ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆರ್ಶೀವಚನ ನೀಡುತ್ತಿದ್ದರು.
ಮನುಷ್ಯನಿಗೆ ಮಾತ್ರವಲ್ಲದೇ ಸಕಲ ಪ್ರಾಣಿಪಕ್ಷಿಗಳಿಗೂ ದಯೆಯನ್ನು ತೋರಬೇಕಾದುದು ನಮ್ಮ ಧರ್ಮ, ಪ್ರಕೃತಿಯು ಸಹಬಾಳ್ವೆಯ ಸಂಕೇತ ವಾಗಿದ್ದು, ಎಲ್ಲಾ ಜೀವರಾಶಿಗಳು ನೆಮ್ಮದಿಯಿಂದ ಬದುಕುವ ನೈಸರ್ಗಿಕ ಹಕ್ಕನ್ನು ಹೊಂದಿದೆ ಎಂದು ಹೇಳಿದರು.
ಬಿಳಿಯೂರು ಗುತ್ತು ಧನ್ಯ ಕುಮಾರ್ ರೈ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಧಾರ್ಮಿಕ ಶ್ರದ್ಧೆ ಪುನರ್ ಜಾಗೃತಿ ಆಗುತ್ತಿದೆ. ಒಳ್ಳೆಯ ಕೆಲಸಕ್ಕೆ  ದಾನ ಮಾಡುವುದರಿಂದ ಮಾನಸಿಕ ನೆಮ್ಮದಿ, ಸಂತಸ ಸಿಗುತ್ತದೆ. ಇದನ್ನು ಕರ್ತವ್ಯ ಎಂದು ಭಾವಿಸಬೇಕು ಎಂದು ಅಭಿಪ್ರಾಯ ಪಟ್ಟರು. ಮಧುಮೇಹ ತಜ್ಙ ವೈದ್ಯ ಡಾ| ವಿದ್ಯಾಧರ ಶೆಟ್ಟಿ ಯುವ ಜನತೆ ಇಂದು ನಮ್ಮ ಸಂಸ್ಕೃತಿಯ ಮೌಲ್ಯವನ್ನು ತಿಳಿಯದೆ ಪಾಶ್ಚಾತ್ಯ ಅನುಕರಣೆ ಮಾಡುವ ಮೂಲಕ ದೌರ್ಬಲ್ಯಕ್ಕೆ ಒಳಗಾಗುತ್ತಿದ್ದಾರೆ. ನಮ್ಮ ಮಕ್ಕಳಿಗೆ ಧರ್ಮದ ಸರಿಯಾದ ತಿಳುವಳಿಕೆಯನ್ನು ಹೆತ್ತವರು ನೀಡಬೇಕು ಎಂದರು.  ಈ ಸಂದರ್ಭದಲ್ಲಿ  ಕೋಶಾಧಿಕಾರಿ ಹರಿಶ್ಚಂದ್ರ ಜೈನ್, ಜೊತೆ ಕಾರ‍್ಯದರ್ಶಿ ಭುವನೇಂದ್ರ ಇಂದ್ರ, ಸದಸ್ಯರಾದ ನಗ್ರಿ  ಸಂಕಪ್ಪ ಶೆಟ್ಟಿ, ದೇವಕುಮಾರ್ ಶೆಟ್ಟಿ, ಧನ್ಯಕುಮಾರ್ ಶೆಟ್ಟಿ, ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಉಪಸ್ಥಿತರಿದ್ದರು.
ಸಮಿತಿಯ ಉಪಾಧ್ಯಕ್ಷ ಪಿ. ಪುಷ್ಪೆಂದ್ರ ಸ್ವಾಗತಿಸಿ, ನ್ಯಾಯವಾದಿ ಶಿವಪ್ರಸಾದ್ ವಂದಿಸಿದರು. ಸಮಿತಿ ಕಾರ‍್ಯನಿರ್ವಾಹಕ ಪಾ| ಅನಂತರಾಜ ಇಂದ್ರ ನಿರ್ವಹಿಸಿದರು.

ರಾಷ್ಟ್ರಪತಿ ಹುದ್ದೆ: ಕಲಾಂ, ಸೋಮನಾಥ್ ನೋ; ಪ್ರಣಬ್ ಎಸ್

Posted by JAYAKIRANA Kirana on | 0 comments | Leave a comment...

ನವದೆಹಲಿ: ತನ್ನ ದೃಢ ಪ್ರತಿಕ್ರಿಯೆಯಲ್ಲಿ, ಕಾಂಗ್ರೆಸ್ ಪಕ್ಷ ಗುರುವಾರ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಹಾಗೂ ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿಸುವುದಿಲ್ಲ ಎಂದು ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಮಾಧ್ಯಮದವರ ಜೊತೆ ಮಾತನಾಡಿರುವ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ, ಜನಾರ್ದನ್ ದ್ವಿವೇದಿ, ಯಾವುದೇ ಕಾರಣಕ್ಕೂ ಮನಮೋಹನ್ ಸಿಂಗ್‌ನ್ನು ಪ್ರಧಾನ ಹುದ್ದೆಯಿಂದ ಬದಲಾಯಿಸುವುದೇ ಇಲ್ಲ ಎಂದು ತಿಳಿಸಿದ್ದಾರೆ.
ನಿನ್ನೆ ಟಿಎಂಸಿ ಮುಖ್ಯಸ್ಥ ಮಮತಾ ಬ್ಯಾನರ್ಜಿ ಜೊತೆ ನಡೆಸಿರುವ ಚರ್ಚೆಯ ಹಿನ್ನೆಲೆಯಲ್ಲಿ, “ಇತರ ಮಿತ್ರ ಪಕ್ಷಗಳು ಪ್ರಣಬ್ ಹಾಗೂ ಹಮೀದ್ ಅನ್ಸಾರಿಯವರ ಹೆಸರು ಹೊರಬಿದ್ದಿರುವ ಬಳಿಕ ಯುಪಿಎ ಅಧಿನಾಯಕಿ ಸೋನಿಯಾ ತನ್ನ ನಿರ್ಧಾರವನ್ನು ಮಮತಾ ಜೊತೆ ಹಂಚಿಕೊಂಡರು”. “ಪಕ್ಷ ಈಗಲೂ ತನ್ನ ನಿರ್ಧಾರಕ್ಕೆ ಅಂಟಿಕೊಂಡಿದೆ ಮತ್ತು ಪ್ರಣಬ್‌ನನ್ನು ರಾಷ್ಟ್ರಪತಿ ಹುದ್ದೆಗೆ ಮೊದಲ ಅಭ್ಯರ್ಥಿಯಾಗಿಯೂ, ಅನ್ಸಾರಿಯನ್ನು ಎರಡನೇ ಆಯ್ಕೆಯನ್ನಾಗಿ ಮುಂದಿಟ್ಟಿದೆ”.

ಬಾತ್‌ರೂಮಿನಲ್ಲೇ ಮೂರು ದಿನ ಕಳೆದ ಹಿರಿಯ ದಂಪತಿ

Posted by JAYAKIRANA Kirana on | 0 comments | Leave a comment...

ಕೊಟ್ಟಾಯಂ: ಹಿರಿಯ ದಂಪತಿ ಮೂರು ದಿನಗಳ ಕಾಲ ಬಾತ್‌ರೂಮಿನಲ್ಲಿಯೇ ಬಾಕಿಯಾಗಿ ತೀವ್ರ ಅಸ್ವಸ್ಥವಾದ ಘಟನೆ ಬಗ್ಗೆ ವರದಿಯಾಗಿದೆ.
ಜೋಸೆಫ್ (೭೪) ಹಾಗೂ ಅವರ ಪತ್ನಿ ಎಲಿಯಮ್ಮ (೭೨) ಕಳೆದ ಶನಿವಾರದಿಂದ ಸೋಮವಾರದವರೆಗೆ ಬಾತ್‌ರೂಮಿನ ಬಾಗಿಲಿನ ತೊಂದರೆಯಿಂದಾಗಿ ಹೊರ ಬರಲು ಆಗದೆ ಮೂರು ದಿನ ಕಳೆಯಬೇಕಾಗಿ ಬಂತು ಎಂದು ಅವರು ಸಂಬಂಧಿಕರು ತಿಳಿಸಿದ್ದಾರೆ. ಎಷ್ಟು ಪ್ರಯತ್ನಿಸಿದರೂ ಬಾಗಿಲನ್ನು ತೆರೆಯಲಾಗದೆ ಒತ್ತಾಡುತ್ತಿದ್ದರು. ಅಲ್ಲದೆ ಸಹಾಯಕ್ಕಾಗಿ ಕೂಗರೆದರೂ ಯಾರಿಗೂ ಅವರ ಅಳಲು ಕೇಳಿಸಲಿಲ್ಲ.
ಹೇಗೋ ತಡಕಾಡಿದ ದಂಪತಿ ಅಂತಿಮವಾಗಿ ಹೊರಬಂದು ನೆರೆಯ ಮನೆಯವರ ಸಹಾಯದಿಂದ ಆಸ್ಪತ್ರೆಗೆ ದಾಖಲಾದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಓರ್ವ ವಿದೇಶದಲ್ಲಿದ್ದು ಮತ್ತೊಬ್ಬ ಹೈದರಾಬಾದ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಬನ್ವಾರಿ ದೇವಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಪರಾರಿ

Posted by JAYAKIRANA Kirana on | 0 comments | Leave a comment...

ಜೋದ್‌ಪುರ: ಬನ್ವಾರಿ ದೇವಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಕೈಲಾಶ್ ಜಾಖರ್ ಜೋದ್‌ಪುರ ನ್ಯಾಯಾಲಯ ಆವರಣದಿಂದ ಪರಾರಿಯಾಗಿದ್ದಾನೆ.
ಇನ್ನೊಂದು ಕೇಸಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆ ತಂದಿದ್ದರು.
ಜಾಖರ್‌ನನ್ನು ಜನವರಿಯಲ್ಲಿ ಸಿಬಿಐ ಪೊಲೀಸರು ಬಂಧಿಸಿದ್ದು, ತದ ನಂತರ ಜೋದ್‌ಪುರ ಜೈಲಿಗೆ ಕಳುಹಿಸಿದ್ದರು.
ಬಿಷ್ಣಾ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿರುವ ಕೈಲಾಶ್ ಜಾಖರ್, ಬನ್ವಾರಿ ದೇವಿಯ ದೇಹಯನ್ನು ವ್ಯವಸ್ಥಿತವಾಗಿ ವಿಲೇ ಮಾಡಿದ್ದರು.

ವಿಝಾಗ್ ಸ್ಟೀಲ್ ಪ್ಲಾಂಟ್ ಸ್ಫೋಟ ೧೦ ಸಜೀವ ದಹನ

Posted by JAYAKIRANA Kirana on | 0 comments | Leave a comment...

ವಿಶಾಖಪಟ್ಟಣ: ವಿಝಾಗ್ ಸ್ಟೀಲ್ ಪ್ಲಾಂಟ್‌ನಲ್ಲಿ ಬುಧವಾರ ರಾತ್ರಿ ಸ್ಫೋಟ ಸಂಭವಿಸಿದ್ದು, ಜನರಲ್ ಮೆನೇಜರ್ ಸೇರಿದಂತೆ ಕನಿಷ್ಟ ೧೦ ಜನರು ಸಜೀವ ದಹನವಾಗಿದ್ದಾರೆ.
ಸ್ಫೋಟದ ತೀವ್ರತೆಯೆಷ್ಟೆಂದರೆ, ಕೆಲವೇ ಕ್ಷಣಗಳಲ್ಲಿ ಪ್ಲಾಂಟ್‌ನ ಅತ್ಯಧಿಕ ಜಾಗಕ್ಕೆ ಪಸರಿಸಿದೆ. ಸದ್ಯಕ್ಕೆ ತಿಳಿದಿರುವ ಮಾಹಿತಿಯಂತೆ, ರಾಷ್ಟ್ರೀಯ ಇಸ್ಪಾಟ್ ನಿಗಮ್ ಲಿಮಿಟೆಡ್‌ನ ಪ್ಲಾಂಟ್‌ನ ಸ್ಟೀಲ್ ಮೆಲ್ಟಿಂಗ್ ಶಾಪ್ ಬಳಿ ಆಕ್ಸಿಜನ್ ಕಂಟ್ರೋಲ್ ಯುನಿಟ್ ಸ್ಫೋಟಗೊಂಡಿರುವುದು ಘಟನೆ ಕಾರಣ.

ಗುಜರಾತ್: ರಸ್ತೆ ಅಪಘಾತಕ್ಕೆ ೨೪ ಬಲಿ

Posted by JAYAKIRANA Kirana on | 0 comments | Leave a comment...

ಅಹ್ಮದಾಬಾದ್: ಲಾರಿ ಅಪಘಾತಕ್ಕೀಡಾಗಿ ಎಂಟು ಮಕ್ಕಳು ಸೇರಿದಂತೆ ೨೪ ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಸನಂದ್-ವಿರಂಗಮ್ ಹೆದ್ದಾರಿಯಲ್ಲಿ ಇಂದು ನಡೆದಿದೆ.
ಕಳೆದ ರಾತ್ರಿ ಸುರಿದ ದಾರಾಕಾರ ಮಳೆಯಿಂದಾಗಿ ರಸ್ತೆ ಜಾರುತ್ತಿದ್ದು, ಅಪಘಾತ ಇಂದು ಬೆಳಿಗ್ಗಿನ ಜಾವ ನಡೆದಿದೆ. ಅಲ್ಲದೆ ಘಟನೆಯಲ್ಲಿ ೧೬ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಪ್ರಯಾಣಿಸುತ್ತಿದ್ದವರು ಬಹುತೇಕ ಮಂದಿ ಕೂಲಿಕಾರ್ಮಿಕರಾಗಿದ್ದು, ಲಾರಿಯಲ್ಲಿ ಪ್ರಯಾಣಿಸುತ್ತಿದ್ದರು. ಗಾಯಗೊಂಡಿರುವ ೧೫ ಮಂದಿಯ ಪೈಕಿ ೬ ಜನರನ್ನು ನಗರದ ವಿ ಎಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಇತರರನ್ನು ಸನಂದ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)