ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಳು ಸಿನಿಮಾ ಮಂದಿರಗಳಲ್ಲಿ ಭಾರೀ ನಿರೀಕ್ಷೆಯೊಂದಿಗೆ ಎ.೨೭ರಂದು ಏಕಕಾಲದಲ್ಲಿ ಬಿಡುಗಡೆಯಾಗಿರುವ ರಾಮ್ ಶೆಟ್ಟಿ ಅವರ ‘ಬಂಗಾರ‍್ದ ಕುರಲ್’ ತುಳು ಚಿತ್ರ ಇದೀಗ ೫೦ರ ಸಂಭ್ರಮದಲ್ಲಿರುವುದು ತುಳು ಚಿತ್ರರಂಗಕ್ಕೆ ಒಂದು ಸಂತಸದ ಸಂಗತಿ. ಈ ಹಿಂದೆ ೫೦, ೭೫ ದಿನಗಳನ್ನು ಪೂರೈಸಿರುವ ಕೆಲವು ಸಿನಿಮಾಗಳೊಂದಿಗೆ ೧೭೫ ದಿನ ಪೂರೈಸಿರುವ ಒರಿಯರ್ದೊರಿ ಅಸಲ್‌ನಂಥ ಸಿನಿಮಾಗಳು ಕೂಡ ತುಳುವಿಗೆ ವಿಶೇಷ ಕೊಡುಗೆ ನೀಡಿವೆ. ಆದರೆ ರಾಮ್ ಶೆಟ್ಟಿ ಅವರ ಬಂಗಾರ‍್ದ ಕುರಲ್ ಸಿನಿಮಾವು ಉತ್ತಮ ಕಥಾಹಂದರ, ಕನಿಷ್ಠ ಹಾಸ್ಯದೊಂದಿಗೆ ೫೦ ದಿನಗಳನ್ನು ಪೂರೈಸುತ್ತಿರುವುದು ಒಂದು ದೊಡ್ಡ ಸಾಧನೆ. ಇದು ತುಳುವಿನಲ್ಲಿ ಇಂಥ ಸಿನಿಮಾಗಳಿಗೂ ಪ್ರೇಕ್ಷಕರಿದ್ದಾರೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆ.
ಈ ಹಿಂದೆ ದಾರೆದ ಸೀರೆ, ಬದ್ಕೆರೆ ಬುಡ್ಲೆ ಎಂಬ ಉತ್ತಮ, ಯಶಸ್ವಿ ಸಿನಿಮಾಗಳನ್ನೂ ತುಳುವಿಗೆ ನೀಡಿರುವ ರಾಮ್ ಶೆಟ್ಟಿ ಅವರ ಸಿನಿಮಾ ರಂಗದಲ್ಲಿ ಹಳೆಯ ಹುಲಿ. ತುಳುವಿಗೂ ಒಂದು ಉತ್ತಮ ಕಥೆಯಿರುವ ಅತ್ಯುತ್ತಮ ಗುಣಮಟ್ಟದ ಸಿನಿಮಾ ನೀಡಬೇಕು ಎಂಬ ಕನಸು ಇದೀಗ ಬಂಗಾರ‍್ದ ಕುರಲ್ ಮೂಲಕ ಸಾಕಾರಗೊಂಡಿದೆ. ಹಾಸ್ಯಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಇಂದಿನ ತುಳು ಚಿತ್ರಪ್ರೇಮಿಗಳ ನಡುವೆ ಬಂಗಾರ‍್ದ ಕುರಲ್‌ನಂಥ ಚಿತ್ರಗಳಿಗೂ ಪ್ರೇಕ್ಷಕ ವರ್ಗ ಇದೆ ಎಂಬುದನ್ನು ಪತ್ತೆಹಚ್ಚಿ ಹೊರ ಜಗತ್ತಿಗೆ ತೋರಿಸಿಕೊಟ್ಟಿರುವುದು ರಾಮ್ ಶೆಟ್ಟಿ ಅವರ ಸಾಧನೆ ಎಂದು ಹೇಳಲೇಬೇಕು. ಅಲ್ಲದೆ ಅವರು ಹಿರಿಯ ಮಹಿಳೆಯರನ್ನು ಮನೆ ಯಿಂದ ಚಿತ್ರಮಂದಿರಕ್ಕೆ ಕರೆತರುವಲ್ಲಿ ಸಫಲರಾಗಿದ್ದಾರೆ. ಬಂಗಾರ‍್ದ ಕುರಲ್ ಸಿನಿಮಾ ಮಹಿಳಾ ಪ್ರೇಕ್ಷಕರನ್ನು, ಅದರಲ್ಲೂ ಹಿರಿಯ ಮಹಿಳೆಯರನ್ನು ಹೆಚ್ಚಾಗಿ ಸೆಳೆದಿರುವುದು ಎಲ್ಲ ಸಿನಿಮಾ ಮಂದಿರಗಳಲ್ಲೂ ಸಾಬೀ ತಾಗಿದೆ.
ಉತ್ತಮ ಭಕ್ತಿಪ್ರಧಾನ ಕಥೆ ಮತ್ತು ಅಂಥದ್ದೇ ಹಾಡುಗಳು ಚಿತ್ರದ ಪ್ಲಸ್ ಪಾಯಿಂಟ್‌ಗಳಲ್ಲಿ ಒಂದು. ನಾಯಕಿ ಪಾಕಿ ಹೆಗ್ಡೆ ಮತ್ತು ನಾಯಕ ಶಿವಧ್ವಜ್ ಅವರ ನಟನೆಯಂತೂ ಚಿತ್ರದ ಯಶಸ್ಸಿಗೆ ಗರಿಷ್ಠ ಕೊಡುಗೆ ನೀಡಿದೆ ಎಂದು ಹೇಳಲೇಬೇಕಾಗಿದೆ. ಜತೆಗೆ ಸಹಕಲಾವಿದರು ಕೂಡ ಉತ್ತಮ ಕೊಡುಗೆ ನೀಡಿದ್ದಾರೆ. ಹಾಡುಗಳನ್ನು ರಚಿಸಿರುವ ಹಿರಿಯ ನಾಟಕಕಾರ ಮಚ್ಛೇಂದ್ರನಾಥ ಪಾಂಡೇಶ್ವರ್ ಮತ್ತು ವಿ. ಮನೋಹರ್ ಅವರ ಕೊಡುಗೆಯೂ ಇದೆ. ಕಲಾ ನಿರ್ದೇಶಕ ತಮ್ಮಲಕ್ಷ್ಮಣ್, ಅಡ್ಯಾರ್ ಮಾಧವ ನಾಕ್, ಜಗದೀಶ್ ಶೆಟ್ಟಿ ಸರ್ವಾಣಿ, ದೀಪಕ್ ಶೆಟ್ಟಿ, ಕುದ್ರೆಪ್ಪಾಡಿ, ಪುರುಷೋತ್ತಮ ಭಂಡಾರಿ ಮೊದಲಾದವರು ಸಿನಿಮಾದ ಯಶಸ್ಸಿಗಾಗಿ ರಾಮ್ ಶೆಟ್ಟಿಯವರೊಂದಿಗೆ ದುಡಿದಿದ್ದಾರೆ.
ಜೂನ್ ೧೫ರಂದು (ನಾಳೆ) ೫೦ ದಿನಗಳನ್ನು ಪೂರೈಸುತ್ತಿರುವ ಬಂಗಾರ‍್ದ ಕುರಲ್ ಸಾಧನೆ ತುಳು ಚಿತ್ರರಂಗದಲ್ಲಿ ಒಂದು ಗಮನಿಸಬೇಕಾದ ಅಂಶವಾಗಿ ದಾಖಲಾಗಲಿದೆ. ಹಾಸ್ಯ ಚಿತ್ರಗಳಿಗೆ ಮಾತ್ರ ತುಳು ಪ್ರೇಕ್ಷಕರಿರುವುದು ಎಂಬುದನ್ನು ಸುಳ್ಳಾಗಿಸಿದ ಕೀರ್ತಿ ಈ ಸಿನಿಮಾದ್ದು. ಉತ್ತಮ ಕಥೆಯುಳ್ಳ ಸಿನಿಮಾಗಳು ಕೂಡ ಹಾಸ್ಯದ ಲೇಪನವಿಲ್ಲದೆ ಯಶಸ್ವಿಯಾಗುತ್ತದೆ ಎಂಬುದಕ್ಕೆ ಬಂಗಾರ‍್ದ ಕುರಲ್‌ಗಿಂತ ಉತ್ತಮ ಉದಾಹರಣೆ ಬೇರೆ ಸಿಗುವುದಿಲ್ಲ.
ಅಪ್ಪಟ ತುಳುವರಿಂದಲೇ ನಿರ್ಮಾಣವಾಗಿರುವ ಬಂಗಾರ‍್ದ ಕುರಲ್ ತುಳುವರ ಸಾಮರ್ಥ್ಯದ ಪ್ರತೀಕವಾಗಿಯೂ ಮೂಡಿಬರುತ್ತಿದೆ. ಈ ಸಿನಿಮಾದ ಪ್ರದರ್ಶನ ಇನ್ನೂ ಕೆಲವು ದಿನ ಮುಂದುವರಿಯುವ ನಿರೀಕ್ಷೆ ಇದೆ. ಇದು ನೂರು ದಿನಗಳನ್ನು ಪೂರೈಸಲಿ ಎಂಬುದು ತುಳು ಚಿತ್ರಪ್ರೇಮಿಗಳ ಹಾರೈಕೆ. ಜತೆಗೆ ರಾಮ್ ಶೆಟ್ಟಿ ಅಭಿನಂದನೆಯನ್ನೂ ಸಲ್ಲಿಸಬೇಕಾಗಿದೆ.
Tagged with
cnnews
ಕೊಲಂಬೊ: ಇತ್ತೀಚೆಗಷ್ಟೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ಜತೆ ಕಡಿಮೆ ವೇತನಕ್ಕೆ ಸಂಬಂಧಿಸಿದ ಒಪ್ಪಂದವೊಂದಕ್ಕೆ ಸಹಿ ಹಾಕಲು ನಿರಾಕರಿಸಿರುವ ಲಂಕನ್ ವೇಗಿ ಲಸಿತ್ ಮಾಲಿಂಗ, ತೀವ್ರ ಸಂಕಷ್ಟಕ್ಕೆ ಸಿಲುಕಿ ದ್ದಾರೆ. ಈ ಕಾರಣಕ್ಕೆ ಲಂಕಾ ಸರಕಾರ ದಿಂದ ತಾತ್ಕಾಲಿಕ ನಿಷೇಧ ಕ್ಕೊಳಗಾ ಗುವ ಭೀತಿ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ನಿರ್ದಿಷ್ಟ ಸಮಯದಲ್ಲಿ ರಾಷ್ಟ್ರೀಯ ಕ್ರೀಡಾಪಟುವೊಬ್ಬ ದೇಶ ವನ್ನು ಪ್ರತಿನಿಧಿಸಲು ನಿರಾಕರಿಸಿರು ವುದರ ಬಗ್ಗೆ ಮಾಲಿಂಗ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳ ಲು ಶ್ರೀಲಂಕಾ ಕ್ರೀಡಾ ಸಚಿವಾಲಯ ಮುಂದಾಗುತ್ತಿದೆ.
ಕ್ರಿಕೆಟ್ ಹಾಗೂ ರಗ್ಬಿ ರಾಷ್ಟ್ರೀಯ ಆಟಗಾರರಿಂದ ನಾವು ಅನೇಕ ಸಮಸ್ಯೆ ಗಳನ್ನು ಎದುರಿಸುತ್ತಿದ್ದು, ದೇಶವನ್ನು ಪ್ರತಿನಿಧಿಸಲು ನಿರಾಕರಿಸುತ್ತಿದ್ದಾರೆ. ಹಾಗಾಗಿ ಇಂತಹ ವಿಚಾರಗಳಲ್ಲಿ ಕಾಯ್ದೆ ಯಲ್ಲಿ ಹೊಸ ತಿದ್ದುಪಡಿ ತರಲು ಯತ್ನಿ ಸುತ್ತಿದ್ದು, ತಾತ್ಕಾಲಿಕ ನಿಷೇಧ ಹೇರಲು ಚಿಂತನೆ ನಡೆಸಲಾಗುತ್ತಿದೆ ಎಂದು ಕ್ರೀಡಾ ಸಚಿವ ಮಹಿಂದಾ ನಂದ್ ಅಲುತ್‌ಗಾಮಗೆ ತಿಳಿಸಿದ್ದಾರೆ.
Tagged with
tnews
ವಾರ್ಸಾ: ಯುರೋ ೨೦೧೨ರ ಫುಟ್‌ಬಾಲ್ ಪಂದ್ಯಾಟದ ವೇಳೆ ರಷ್ಯಾ ಮತ್ತು ಪೋಲೆಂಡ್‌ನ ಅಭಿಮಾನಿಗಳ ಮಧ್ಯೆ ಪಂದ್ಯ ಆರಂಭಕ್ಕೂ ಮುನ್ನ ಘರ್ಷನೆ ನಡೆದಿದ್ದು, ನೂರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಭಿಮಾನಿಗಳ ನಡುವಿನ ಹಿಂಸಾಚಾರದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಷ್ಯಾದ ರಾಷ್ಟ್ರೀಯ ದಿನದ ಅಂಗವಾಗಿ ರಷ್ಯಾದ ಅಭಿಮಾನಿ ಗಳು ರಸ್ತೆಯಲ್ಲಿ ರ‍್ಯಾಲಿ ನಡೆಸುತ್ತಿದ್ದ ವೇಳೆ ಈ ಹಿಂಸಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಉಂಟಾದ ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಹಿಂಸಾ ನಿಗ್ರಹ ಪಡೆ ರಸ್ತೆಗಳಲ್ಲಿ ಪಥಸಂಚಲನ ನಡೆಸಿ ಶಾಂತಿ ನೆಲೆಗೊಳ್ಳು ವಂತೆ ಮಾಡಿದರು. ಹಿಂಸಾಚಾರ ಕಡಿಮೆಯಾಗಿದ್ದು, ಇದು ಮತ್ತೆ ಭುಗಿಲೇಳುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಸುಮಾರು ಆರು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
Tagged with
tnews
ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಣ ಕ್ರಿಕೆಟ್ ಬಾಂಧವ್ಯ ಪುನರಾರಂಭಕ್ಕೆ ವೇದಿಕೆ ಸಜ್ಜುಗೊಂಡಿದ್ದು, ಇದರಂತೆ ಸರಕಾ ರದ ಒಪ್ಪಿಗೆ ಕೋರಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮನವಿ ಸಲ್ಲಿಸಿದೆ.
ಇತ್ತೀಚೆಗಷ್ಟೇ ಪಿಸಿಬಿ ಮುಖ್ಯಸ್ಥರ ಭಾರತಕ್ಕೆ ಭೇಟಿ ಬಳಿಕ ಮಾತುಕತೆ ಇನ್ನಷ್ಟು ಚುರುಕುಗೊಂಡಿತ್ತು. ಇದರಂತೆ ಪಾಕಿಸ್ತಾನದ ಸಿಲಾಕೋಟ ಸ್ಟಾಲಿನ್ಸ್ಸ್ ತಂಡಕ್ಕೆ ಚಾಂಪಿಯನ್ಸ್ ಲೀಗ್‌ನಲ್ಲಿ ಆಡಲು ಅವಕಾಶವನ್ನು ನೀಡಲಾಗಿತ್ತು.
ಭಾರತ-ಪಾಕ್ ಸರಣಿಗೆ ವೇಳಾ ಪಟ್ಟಿ ಇನ್ನು ಸಿದ್ಧಗೊಂಡಿಲ್ಲ. ಇದಕ್ಕೂ ಮಿಗಿಲಾಗಿ ಭಾರತ ಸರಕಾರದಿಂದ ಹಸಿರು ನಿಶಾನೆ ಕೂಡಾ ಸಿಕ್ಕಿಲ್ಲ. ಹಾಗಿದ್ದರೂ ಸರಕಾರದಿಂದ ಅನುಮತಿ ದೊರತಲ್ಲಿ ೨೦೧೩ರ ಮಾರ್ಚ್ ತಿಂಗಳಿ ಗೂ ಮುನ್ನ ಸರಣಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ.
ಇತ್ತೀಚೆಗಷ್ಟೇ ಭಾರತ ತಂಡದ ನಾಯಕ ಧೋನಿ ಕೂಡ ಪಾಕ್ ಜೊತೆ ಆಡುವ ಒಲವು ವ್ಯಕ್ತಪಡಿಸಿದ್ದರು.
Tagged with
tnews
ಮಂಗಳೂರಿನಿಂದ ಕೇರಳದತ್ತ ತೆರಳುತ್ತಿದ್ದ ವಾಹನ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕುಂಪಲ ಬೈಪಾಸ್ ಬಳಿ ಅಪಾಯಕಾರಿ ಸ್ಥಿತಿಯಲ್ಲಿ ವಾಲಿ ನಿಂತಿದೆ.
Tagged with
gallery
ಹರೇಕಳದಿಂದ ಮುಡಿಪು ಕಡೆಗೆ ಮರಳು ಕೊಂಡೊಯ್ಯುತ್ತಿದ್ದ ಟಿಪ್ಪರ್ ಲಾರಿ ಕುರ್ನಾಡು ಸಮೀಪದ ತೆಕ್ಕುಂಜೆ ಸಮೀಪ ಮಣ್ಣಿನಲ್ಲಿ ಹೂತು ಹೋಗಿ ಉರುಳಿಬಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
Tagged with
gallery
ವಿಟ್ಲ: ಬಸ್ಸಿಗೆ ರಾಂಗ್ ಸೈಡ್‌ನಿಂದ ಬಂದ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ವಾಗಿ ಗಾಯಗೊಂಡ ಘಟನೆ ವಿಟ್ಲ ಸಾಲೆತ್ತೂರು ರಸ್ತೆಯ ನೆತ್ರಕೆರೆ ಎಂಬಲ್ಲಿ ನಿನ್ನೆ ಬೆಳಿಗ್ಗೆ ನಡೆದಿದೆ.
ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿ ಅಲೆಜ್ಜಿ ನಿವಾಸಿ ಗಣಪತಿ ಭಟ್ ಅವರ ಪುತ್ರ ಸುಶ್ರೂತ್(೨೧) ಗಂಭೀರವಾಗಿ ಗಾಯಗೊಂಡವರು. ನಿನ್ನೆ ಬೆಳಿಗ್ಗೆ ವಿಟ್ಲದ ಕೊಡಂಗಾಯಿ ಸಮೀಪದ ಪಳ್ಳಿಖಂಡ ಎಂಬಲ್ಲಿಯ ತನ್ನ ಸಂಬಂಧಿಕರ ಮನೆಯಿಂದ ಉಪ್ಪಿನಂಗಡಿಯ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ನೆತ್ರಕೆರೆ ಎಂಬಲ್ಲಿ ಈ ಘಟನೆ ಸಂಭವಿಸಿದೆ. ವಿಟ್ಲದಿಂದ ಸಾಲೆತ್ತೂರು ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಕೊಡಂಗಾಯಿ ಕಡೆಯಿಂದ ಬರುತ್ತಿದ್ದ ಸುಶ್ರೂತ್‌ರ ಬೈಕ್ ಡಿಕ್ಕಿ ಹೊಡೆಯಿತು. ಪರಿಣಾಮ ಆತನ ತಲೆಗೆ ಗಂಭೀರವಾಗಿ ಗಾಯಗೊಂಡು, ತಕ್ಷಣ ಸ್ಥಳೀಯರು ಗಾಯಾಳುವನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews
ಪುತ್ತೂರು: ಪುತ್ತೂರಿನ ಕಲ್ಲುರ್ಟಿ ದರ್ಶನ ಪಾತ್ರಿ ಕಂ ಜ್ಯೋತಿಷಿಯ ಮೇಲೆ ಹಲ್ಲೆ ನಡೆಸಿ ಸುದ್ದಿ ಟಿವಿ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ಮಾಡಲು ರೂ.೨ಲಕ್ಷ ನೀಡಬೇಕೆಂದು ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದ ಪ್ರಕರಣದ ಸೂತ್ರ ಧಾರಿಯಾದ ವಿಟ್ಲ ವ್ಯಾಪ್ತಿಯ ಬಿಜೆಪಿ ಮುಖಂಡ ಹಣದಾಸೆಯಿಂದ ಪುತ್ತೂ ರಿನ ಫುಟ್‌ವೇರ್ ಅಂಗಡಿಯೊಂದಕ್ಕೆ ಬಂದು ಸಿಕ್ಕಿ ಬಿದ್ದು ಕ್ಷಮೆ ಯಾಚಿಸಿ ಬಾಲ ಮಡಚಿಕೊಂಡು ಹೊರಟು ಹೋಗಿರುವ ಸುದ್ದಿ ಇದೀಗ ಎಲ್ಲೆಡೆ ಪ್ರಚಾರದಲ್ಲಿದೆ.
ಬಿಜೆಪಿ ಮುಖಂಡನ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಹೆದರಿದ ಜ್ಯೋತಿಷಿ ಹರೀಶ್ ರೈ ಪುತ್ತೂರಿನ ಫುಟ್‌ವೇರ್ ಅಂಗಡಿಯೊಂದಕ್ಕೆ ಬಂದು ಅಲ್ಲಿ ರೂ. ೬೦ ಸಾವಿರ ಹಣ ನೀಡುವುದಾಗಿ ಹೇಳಿ ದ್ದರು. ಅಲ್ಲದೆ ಹಣದೊಂದಿಗೆ ಅಲ್ಲಿಗೆ ಬಂದು ಅವರಿಗಾಗಿ ಕಾದು ಕುಳಿತಿ ದ್ದರು. ರಾಮದಾಸ್ ತನ್ನ ಆಪ್ತ ಲೋಕೇಶ್ ಎಂಬಾತನೊಂದಿಗೆ ಬಂದು ರೂ.೬೦ ಸಾವಿರವನ್ನು ಕಿಸೆಗೆ ಹಾಕಿಕೊಳ್ಳುವ ಹಂತದಲ್ಲಿದ್ದಾಗಲೇ ಅಲ್ಲಿ ಮಫ್ತಿಯಲ್ಲಿದ್ದ ಇಬ್ಬರು ಪೊಲೀಸರು ಅವರಿಬ್ಬರನ್ನು ಹಿಡಿದು ಕೊಂಡರೆಂದು ತಿಳಿದು ಬಂದಿದೆ. ಅಲ್ಲೇ ಇದ್ದ ಪುತ್ತೂರಿನ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಎಂಬವರು ಅವರನ್ನು ಗದರಿಸಿದಾಗ ನಮ್ಮಿಂದ ತಪ್ಪಾಯಿತು ಎಂದು ಒಪ್ಪಿಕೊಂಡು ಕ್ಷಮೆಯಾಚಿಸಿ ನಮ್ಮನ್ನು ಬಚಾವ್ ಮಾಡ ಬೇಕೆಂದು ದಮ್ಮಯ್ಯ ಹಾಕಿರುವುದು ಎಲ್ಲೆಡೆ ಸುದ್ದಿಯಾಗಿದೆ.
ದಮ್ಮಯ್ಯ ಹಾಕಿದ ಹಿನ್ನೆಲೆಯಲ್ಲಿ ಅವರನ್ನು ಬಿಟ್ಟಿದ್ದು, ಅಲ್ಲಿಂದ ಅವರಿಬ್ಬರು ಬಾಲಮಡಚಿಕೊಂಡು ಹೊರಟು ಹೋಗಿರುವುದಾಗಿ ತಿಳಿದು ಬಂದಿದೆ.
Tagged with
cnews
ಕಾರ್ಕಳ: ಬೆಳ್ಮಣ್ ಸಮೀಪದ ಮುಂಡ್ಕೂರು ಇಂದಿರಾನಗರ ಎಂಬಲ್ಲಿ ಮಂಗಳವಾರ ತಡರಾತ್ರಿ ಸ್ಕೂಟರ್ ಸ್ಕಿಡ್ ಆಗಿ ಸವಾರ ಸ್ಥಳದಲ್ಲಿಯೇ ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ.
ಇನ್ನಾದ ಚಂದ್ರಯ್ಯ ಆಚಾರಿ (೪೦) ಮೃತರು. ಕೆಲಸ ಮುಗಿಸಿ ಕೋಡಿಮಾರ್ ನಲ್ಲಿರುವ ಪತ್ನಿಯ ಮನೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
Tagged with
cnews
ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಮುಂಗಾರು ಮಳೆ ಬಿರುಸುಗೊಂಡಿದ್ದು, ಮಳೆಯ ಆರ್ಭಟಕ್ಕೆ ಕಾಞಂಗಾಡ್ ರಾಜಪುರಂನಲ್ಲಿ ಜಿಜಿತಾ(೨೭) ಎಂಬ ಯುವತಿ ತೋಡಿನ ಪ್ರವಾಹಕ್ಕೆ ಕೊಚ್ಚಿ ಹೋಗಿ ದಾರುಣವಾಗಿ ಮೃತಪಟ್ಟಿದ್ದಾಳೆ. ಈಕೆ ಅವಿವಾಹಿತೆಯಾಗಿದ್ದು, ಕಾಸರಗೋಡು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು.
ಭೀಮನಡಿ, ಮೊಗ್ರಾಲ್ ಪುತ್ತೂರು, ಚೆಮ್ನಾಡು ಮೊದಲಾ ದೆಡೆಗಳಲ್ಲಿ ಅನೇಕ ಮನೆಗಳು ಆಂಶಿಕ ವಾಗಿ ಕುಸಿದಿವೆ. ಕೋಟೂರಿನಲ್ಲಿ ಮರ ಬಿದ್ದು ಮನೆಗೆ ಹಾನಿಯುಂಟಾಗಿದೆ. ಕೋಟೂರು ಓಡಚ್ಚಾಲಿನ ಶಾರದಾ ಎಂಬವರ ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದಿದೆ. ಮನೆ ಮುಂದೆ ನಿಲ್ಲಿಸಿದ್ದ ನೆರೆಮನೆಯ ಬಾಲಕೃಷ್ಣ ಎಂಬವರ ಜೀಪಿಗೂ ಮರ ಬಿದ್ದ ಫಲವಾಗಿ ಹಾನಿಯಾಗಿದೆ.
ಚೆಮ್ನಾಡಿನಲ್ಲಿ ಮುಹಮ್ಮದ್ ಎಂಬವರ ಹಂಚಿನ ಮನೆ ಕುಸಿದು ಬಿದ್ದು ಅಪಾರ ನಷ್ಟವುಂಟಾಗಿದೆ. ಈ ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ತಪ್ಪಿ ಹೋಗಿದೆ. ಮುಹಮ್ಮದರು ಇತ್ತೀಚೆಗಷ್ಟೇ ಹೊಸ ಮನೆ ನಿರ್ಮಿಸಿ ಕುಟುಂಬ ಸಮೇತ ವಾಸ ಬದಲಿಸಿದ್ದರು.
ಜಿಲ್ಲೆಯ ವಿವಿಧೆಡೆಗಳಲ್ಲಿ ೩೦ ಹಕ್ಟೇರ್‌ಗಳಷ್ಟು ಕೃಷಿ ನಾಶವುಂಟಾಗಿದೆ. ಲಕ್ಷಾಂತರ ರೂಪಾಯಿಗಳ ನಷ್ಟ ತಗುಲಿದೆ ಎನ್ನಲಾಗಿದೆ.
Tagged with
cnews,
rain
ಕಾರ್ಕಳ: ಬೈಲೂರು ಅಂಗಡಿಬೆಟ್ಟು ಎಂಬಲ್ಲಿ ನಿನ್ನೆ ಮಧ್ಯಾಹ್ನದ ವೇಳೆಗೆ ಬಡಿದ ಸಿಡಿಲಿನ ಅಘಾತಕ್ಕೆ ದನದ ಕೊಟ್ಟಿಗೆ ಸಂಪೂರ್ಣ ಭಸ್ಮವಾಗಿ ದನ ವೊಂದು ಸಾವಿಗೀಡಾಗಿದ್ದರೆ ಮತ್ತೊಂದು ಗಂಭೀರವಾಗಿ ಗಾಯ ಗೊಂಡಿದೆ.
ಅಂಗಡಿಬೆಟ್ಟು ಸುಶೀಲ ಎಂಬವರ ಮಾಲಕತ್ವದಲ್ಲಿರುವ ಕೊಟ್ಟಿಗೆ ಹಾನಿ ಗೊಳಗಾಗಿದೆ. ಮನೆಗೆ ತಾಗಿಕೊಂಡು ದನದ ಕೊಟ್ಟಿಗೆ ಇದೆಯಾದರೂ ಅದರೊಳಗೆ ಬೈಹುಲ್ಲಿನ ರಾಶಿ ಇದ್ದುದರಿಂದ ಬೆಂಕಿ ಬೇಗನೆ ಹೊತ್ತಿಕೊಳ್ಳಲು ಕಾರಣವಾಗಿದೆ.
ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಕಂದಾಯ ಇಲಾಖಾ ಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ೯೦ ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
Tagged with
cnews,
rain
ಬಂಟ್ವಾಳ: ಬಿ.ಸಿ.ರೋಡ್ ಹಳೆಯ ಎಲ್‌ಐಸಿ ಕಟ್ಟಡದ ಹಿಂಬದಿಯ ಮನೆಗಳ ಮೇಲೆ ಮರವೊಂದು ಬಿದ್ದು, ಭಾಗಶಃ ಹಾನಿಗೀಡಾಗಿವೆ. ಘಟನೆಯಿಂದ ಸುಮಾರು ೫೦ ಸಾವಿರ ರೂ.ಗಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅನಂತರಾಯ ಪೈ ಎಂಬವರ ಮಾಲಕತ್ವದ ಎರಡು ಬಾಡಿಗೆ ಮನೆಗಳ ಮೇಲೆ ಸಮೀಪದ ಮಾವಿನ ಮರ ಮಗುಚಿದ್ದು, ಮನೆಗಳ ಮೇಲ್ಛಾವಣಿ, ಗೋಡೆ ಹಾಗೂ ಇನ್ನಿತರ ಸಾಮಾಗ್ರಿಗಳು ಹಾನಿಗೊಂಡಿದೆ. ಮನೆಗಳಲ್ಲಿ ರಮೇಶ್ ಶೆಣೈ ಹಾಗೂ ಯಾದವ್ ವಾಸಿಸುತ್ತಿದ್ದು, ಮನೆಯವರು ಅನಾಹುತದಿಂದ ಪಾರಾಗಿದ್ದಾರೆ.
ಪಾಣೆಮಂಗಳೂರು ಕಂದಾಯ ನಿರೀಕ್ಷಕ ಸಾಧು, ಬಿ.ಮೂಡ ಗ್ರಾಮಲೆಕ್ಕಾಧಿಕಾರಿ ರತನ್ ಕುಮಾರ್, ಸಿಬ್ಬಂದಿ ಸದಾಶಿವ ಘಟನಾ ಸ್ಥಳಕ್ಕೆ ಭೇಟಿಇಡಿದ್ದು, ಮಳೆ ಹಾನಿ ಪ್ರಕರಣವನ್ನು ಪರಿಶೀಲನೆ ನಡೆಸಿರುವುದಾಗಿ ತಹಶೀಲ್ದಾರ್ ಸಿ.ಎಚ್.ಆನಂದ ನಾಯಕ್ ತಿಳಿಸಿದ್ದಾರೆ.
Tagged with
cnews,
rain
೬೮.೨೪ ಲಕ್ಷ ಮೌಲ್ಯದ ಸೊತ್ತು ವಶ, ಅಬಕಾರಿ-ಲಾಟರಿ ದಳದ ಕಾರ್ಯಾಚರಣೆ
ಉಡುಪಿ: ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳವು ಉಡುಪಿ ನಾಯರ್‌ಕೆರೆಯಲ್ಲಿರುವ ಅಬಕಾರಿ ಭವನದಲ್ಲಿ ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಲು ಆರಂಭಿಸಿದ ಬಳಿಕ ೨೦೦೯ ರಿಂದ ೨೦೧೨ ರ ಮಾರ್ಚ್ ಅಂತ್ಯದವರೆಗಿನ ಅವಧಿಯಲ್ಲಿ ೭೭ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಒಟ್ಟು ೩೬,೦೪,೯೮೦ ರೂ.ಗಳನ್ನು ಸ್ವಾಧೀನಪಡಿಸಿಕೊಂಡು ಸರಕಾರಿ ಬೊಕ್ಕ ಸಕ್ಕೆ ಸಂದಾಯ ಮಾಡಿದೆ. ೩೨.೨೦ ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಅವಧಿ ಯಲ್ಲಿ ೧೨೫ ಆರೋಪಿಗಳನ್ನು ಬಂಧಿಸಲಾಗಿದೆ.
೨೦೦೯ರಲ್ಲಿ ೧೮ ಪ್ರಕರಣಗಳನ್ನು ದಾಖಲಿಸಿ, ೨,೬೯,೫೦೦ ರೂ. ಮೌಲ್ಯದ ಗೋವಾ ಮದ್ಯ, ೪.೯೦ ಲಕ್ಷ ಮೌಲ್ಯದ ಸ್ಪಿರಿಟ್, ೩೪,೬೮೦ ರೂ. ಮೌಲ್ಯದ ಅಕ್ರಮ ಮದ್ಯ, ೭೫೦ ರೂ. ಮೌಲ್ಯದ ಕಳ್ಳಭಟ್ಟಿ ಮತ್ತು ೮೧,೦೫೦ ರೂ. ಮೌಲ್ಯದ ಅಕ್ರಮ ಲಾಟರಿಯನ್ನು ಸ್ವಾಧೀನಪಡಿಸಿ ಕೊಳ್ಳಲಾಗಿತ್ತು. ಒಟ್ಟು ೧೭.೭೦ ಲಕ್ಷ ರೂ. ಮೌಲ್ಯದ ಬೊಲೆರೊ, ಇಂಡಿಕಾ, ಸ್ಕಾರ್ಪಿಯೊ, ಅಲ್ಟೊ ಕಾರ್, ಕೈನೆಟಿಕ್‌ನ್ನು ವಶಪಡಿಸಿಕೊಳ್ಳಲಾಗಿತ್ತು. ದಾಖಲಾದ ೧೮ ಪ್ರಕರಣಗಳಲ್ಲಿ ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಆರೋಪಿ ಗಳಿಗೆ ಶಿಕ್ಷೆಯಾಗಿದೆ.
೨೦೧೦ರಲ್ಲಿ ೨೫ ಪ್ರಕರಣಗಳನ್ನು ದಾಖಲಿಸಲಾಗಿದ್ದು, ೧,೧೫,೬೫೦ ರೂ. ಮೌಲ್ಯದ ಗೋವಾ ಮದ್ಯ, ೨೫.೨೨ ಲಕ್ಷ ರೂ. ಮೌಲ್ಯದ ಸ್ಪಿರಿಟ್, ೪೧,೯೫೦ ರೂ. ಮೌಲ್ಯದ ಅಕ್ರಮ ಮದ್ಯ, ೮೦೦ ರೂ. ಮೌಲ್ಯದ ಕಳ್ಳಭಟ್ಟಿ ಮತ್ತು ೩೭,೦೪೦ ರೂ. ಮೌಲ್ಯದ ಅಕ್ರಮ ಲಾಟ ರಿಯನ್ನು ಸ್ವಾಧೀನಪಡಿಸಿಕೊಳ್ಳಲಾ ಗಿತ್ತು. ತಲಾ ಒಂದೊಂದು ಲಾರಿ ಮತ್ತು ಹೀರೋ ಹೋಂಡಾ ಮೋಟಾರ್ ಸೈಕಲ್‌ನ್ನು ವಶಪಡಿಸಿಕೊಳ್ಳ ಲಾಗಿತ್ತು. ಇವುಗಳ ಮೌಲ್ಯ ೧೪.೩೫ ಲಕ್ಷ ರೂ. ಆಗಿದೆ. ದಾಖಲಿಸಲಾದ ೨೫ ಪ್ರಕರಣಗಳ ಪೈಕಿ ಕೇವಲ ೧೦ ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದ್ದು, ೧೧ ಪ್ರಕರಣಗಳಲ್ಲಿ ಆರೋಪಿಗಳು ಆರೋ ಪಮುಕ್ತರಾಗಿದ್ದಾರೆ.
೨೦೧೧ರಲ್ಲಿ ೨೨ ಪ್ರಕರಣಗಳನ್ನು ದಾಖಲಿಸಲಾಗಿತ್ತು. ೭೧,೨೫೦ ರೂ. ಮೌಲ್ಯದ ಗೋವಾ ಮದ್ಯ ಮತ್ತು ೮,೦೨೦ ರೂ. ಮೌಲ್ಯದ ಅಕ್ರಮ ಮದ್ಯ ವನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ದಾಖಲಿಸಲಾದ ೨೨ ಪ್ರಕರಣಗಳಲ್ಲಿ ಆರು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಐದು ಪ್ರಕರಣಗಳಲ್ಲಿ ಆರೋಪಿಗಳು ದೋಷಮುಕ್ತರಾಗಿ ದ್ದಾರೆ.
೨೦೧೨ರ ಮಾರ್ಚ್ ಅಂತ್ಯದ ವರೆ ಗಿನ ಅವಧಿಯಲ್ಲಿ ೧೨ ಪ್ರಕರಣಗಳು ದಾಖಲಾಗಿವೆ. ೧೮,೫೩೫ ರೂ. ಬೆಲೆಯ ಅಕ್ರಮ ಮದ್ಯವನ್ನು ಸ್ವಾಧೀನಪಡಿಸಿಕೊ ಳ್ಳಲಾಗಿದೆ. ೧೫ ಸಾವಿರ ರೂ. ಬೆಲೆಯ ಟಿವಿಎಸ್ ದ್ವಿಚಕ್ರ ವಾಹನವನ್ನು ಮುಟ್ಟುಗೋಲು ಹಾಕಿ ಕೊಳ್ಳಲಾಗಿದೆ. ಪ್ರಕರಣಗಳು ನ್ಯಾಯಾ ಲಯದಲ್ಲಿವೆ. ಇದುವರೆಗೆ ದಾಖಲಾದ ಒಟ್ಟು ೭೭ ಪ್ರಕರಣಗಳಲ್ಲಿ ಕೇವಲ ೧೮ ಪ್ರಕರಣ ಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾ ಗಿದೆ. ಇದಕ್ಕಿಂತ ಹೆಚ್ಚು ಅಂದರೆ, ೨೩ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆ ಯಾಗಿದ್ದಾರೆ. ಉಳಿದ ಪ್ರಕರಣ ಗಳು ನ್ಯಾಯಾಲಯದಲ್ಲಿ ಇನ್ನೂ ವಿಚಾ ರಣೆಯಲ್ಲಿವೆ.
ಅಬಕಾರಿ ಮತ್ತು ಲಾಟರಿ ನಿಷೇಧ ದಳವು ಉಡುಪಿಯಲ್ಲಿ ೨೦೦೮ರ ಮಾರ್ಚ್ ೬ ರಂದು ಆರಂಭವಾಗಿತ್ತು. ಇದರ ಮೊದಲ ಇನ್ಸ್‌ಪೆಕ್ಟರ್ ಆಗಿದ್ದ ಹೊನ್ನಾವಡ್ಕರ್ ಎಂಬವರು ಸೆಪ್ಟೆಂಬರ್ ೧೫ ರಂದು ಸಿ.ಇ.ತಿಮ್ಮಯ್ಯ ಅವರಿಗೆ ಅಧಿಕಾರ ಹಸ್ತಾಂತರಿಸಿ ನಿರ್ಗಮಿಸಿ ದರು. ತಿಮ್ಮಯ್ಯರವರು ೨೦೧೦ರ ನವೆಂ ಬರ್ ೩೦ರವರೆಗೆ ಕರ್ತವ್ಯದಲ್ಲಿದ್ದರು. ೨೦೧೦ರ ಡಿಸೆಂಬರ್ ೨ರಿಂದ ಇಂದಿನವ ರೆಗೂ ಜಿ.ಎಂ. ನಾಯ್ಕರ್ ಇನ್ಸ್‌ಪೆಕ್ಟರ್ ಸೇವೆ ಸಲ್ಲಿಸುತ್ತಿದ್ದಾರೆ.
ವಿಶೇಷ ಪೊಲೀಸ್ ಠಾಣೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಮತ್ತು ಲಾಟರಿ ನಿಷೇದ ದಳದಲ್ಲಿ ಎರಡು ಇನ್ಸ್‌ಪೆಕ್ಟರ್ ಹುದ್ದೆಗಳಿದ್ದರೂ, ಇದು ಖಾಲಿ ಇದೆ. ೨೧ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿವೆಯಾದರೂ, ಭರ್ತಿ ಮಾಡಿರುವುದು ಕೇವಲ ಇಬ್ಬರನ್ನು ಮಾತ್ರ. ಆರು ಮಂದಿ ಹೆಡ್ ಕಾನ್‌ಸ್ಟೇಬಲ್‌ಗಳು ಕರ್ತವ್ಯದಲ್ಲಿದ್ದಾರೆ. ಒಬ್ಬರು ಟೈಪಿಸ್ಟ್ ಇದ್ದಾರೆ. ಕೇವಲ ಒಂದು ಜೀಪು ಮತ್ತು ಒಂದು ಬೈಕ್ ಮಾತ್ರ ಈ ವಿಶೇಷ ಪೊಲೀಸ್ ಠಾಣೆಗೆ ಇದ್ದು, ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಡೀ ಉಡುಪಿ ಜಿಲ್ಲೆಯಾ ದ್ಯಂತ ಕಾರ್ಯನಿರ್ವಹಿಸಬೇಕಾಗಿದೆ. ಸಿಬ್ಬಂದಿ ಮತ್ತು ವಾಹನದ ಕೊರತೆಯಿಂ ದಾಗಿ ಕುಂದಾಪುರ ಮತ್ತು ಕಾರ್ಕಳದ ಗ್ರಾಮೀಣ ಪ್ರದೇಶಗಳ ಮೇಲೆ ಕಾರ್ಯಾಚರಣೆ ನಡೆಸಲು ಈ ದಳಕ್ಕೆ ಸಾಧ್ಯವಾಗುತ್ತಿಲ್ಲ.
Tagged with
cnews
ಪುತ್ತೂರು: ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದಿಂದ ನಾಪತ್ತೆಯಾಗಿದ್ದ ಯುವ ಜೋಡಿಯೊಂದು ವಿವಾಹವಾಗಿ ಮನೆ ಸೇರುವ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.
ನಿಡ್ಪಳ್ಳಿ ಗ್ರಾಮದ ನುಳಿಯಾಲು ನಿವಾಸಿ ಚಂದ್ರಶೇಖರ ಬೆಳ್ಚಪ್ಪಾಡ (೩೦) ಮತ್ತು ಅದೇ ಗ್ರಾಮದ ಕೊಂತಿಮೂಲೆ ನಿವಾಸಿ ವನಿತಾ (೨೫) ಎಂಬವರು ಕಳೆದ ಜೂನ್ ೧೧ ರಂದು ನಾಪತ್ತೆಯಾಗಿದ್ದರು.
ಜೂನ್ ೧೧ರಂದು ಬೆಳಿಗ್ಗೆ ಬೆಟ್ಟಂಪಾಡಿಯಲ್ಲಿರುವ ಧರ್ಮಸ್ಥಳ ಸ್ವಸಹಾಯ ಸಂಘದ ಹಣ ಪಾವತಿಸಲೆಂದು ಹೋಗಿದ್ದ ವನಿತಾ ಅವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಅಂದೇ ಚಂದ್ರಶೇಖರ ಬೆಳ್ಚಪ್ಪಾಡ ಕೂಡ ನಾಪತ್ತೆಯಾಗಿದ್ದರು. ಅವರಿಬ್ಬರು ಜೊತೆಯಾಗಿ ನಾಪತ್ತೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು.
ಅಂದೇ ರಾತ್ರಿ ಚಂದ್ರಶೇಖರ್ ಅವರು ವನಿತಾಳ ಜೊತೆ ತನ್ನ ಮನೆಗೆ ಆಗಮಿಸಿದ್ದು, ಇದೀಗ ವನಿತಾ ಅವರ ಮನೆಯಲ್ಲಿರುವುದಾಗಿ ತಿಳಿದು ಬಂದಿದೆ. ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಾವಿಬ್ಬರು ವಿವಾಹವಾಗಿರುವುದಾಗಿ ಅವರ ಮನೆಯವರಿಗೆ ತಿಳಿಸಿರುವುದಾಗಿ ತಿಳಿದು ಬಂದಿದೆ. ಇದರೊಂದಿಗೆ ನಾಪತ್ತೆ ಪ್ರಕರಣವು ಮಂಗಳಕರವಾಗಿ ಕೊನೆಗೊಂಡಿರುವುದಾಗಿ ಮಾಹಿತಿ ಲಭಿಸಿದೆ.
Tagged with
cnews
ಮಂಗಳೂರು: ಬೆಳ್ತಂಗಡಿ ತಾಲೂಕಿನ ನಾರಾವಿಯ ಕುತ್ಲೂರು ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಮೂಲ ನಿವಾಸಿಗಳ ತಾಣಕ್ಕೆ ಆಗಮಿಸಿ ತನ್ನನ್ನು ನಕ್ಸಲರಿಗೆ ಪರಿಚಯ ಮಾಡಿಕೊಡಿ ಎಂದು ಸ್ಥಳೀಯರಲ್ಲಿ ಮನವಿ ಮಾಡಿದ್ದ ಗದಗ ಹನುಮಸಾಗರ ಮೂಲದ ಛಾಯಾಗ್ರಾಹಕನನ್ನು ಹನುಮಸಾಗರ ಪೊಲೀಸರು ಬಂಧಿಸಿದ್ದಾರೆ. ನಾಗಯ್ಯ ಸಾರಂಗಮಠ ಎಂಬವರೇ ಬಂಧಿತರಾಗಿದ್ದು, ಇಲ್ಲಿನ ಮೂಲ ನಿವಾಸಿಗಳ ಮೊಬೈಲ್ ನಂಬರ್ ಪಡೆದು ನಕ್ಸಲರ ಪರಿಚಯ ಮಾಡಿಕೊಡಿ ಎಂದು ಆಗಾಗ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಲಾಗಿತ್ತು.
Tagged with
cnews
ಕಾಸರಗೋಡು: ಕಾರ್ ಢಿಕ್ಕಿ ಹೊಡೆದು ಶಾಲಾ ಶಿಕ್ಷಕಿ ಹಾಗೂ ಅವರ ಪತಿ ಗಾಯಗೊಂಡ ಘಟನೆ ಉಪ್ಪಳ ಸರಕಾರಿ ಪ್ರೌಢ ಶಾಲೆ ಮುಂಭಾಗದಲ್ಲಿ ನಿನ್ನೆ ಅಪರಾಹ್ನ ಸಂಭವಿಸಿದೆ. ಪ್ರಸ್ತುತ ಶಾಲೆಯ ಶಿಕ್ಷಕಿ ಕಣ್ಣೂರು ಅರಿಕ್ಕೋಡು ನಿವಾಸಿ ಸಲೀನಾ(೩೩) ಹಾಗೂ ಇವರ ಪತಿ ಕಲ್ಲಿಕೋಟೆಯ ಕೆ. ಮುಹಮ್ಮದ್ ಎಂಬವರು ಗಾಯ ಗೊಂಡವರು.
ಸಲೀನಾ ಟೀಚರ್ ಅವರಿಗೆ ಕೇರ ಳದ ವಯನಾಡ್ ಜಿಲ್ಲೆಯ ಶಾಲೆಗೆ ವರ್ಗಾವಣೆಯಾಗಿತ್ತು. ನಿನ್ನೆ ಪತಿಯೊಂ ದಿಗೆ ಇಲ್ಲಿಂದ ತೆರಳಲು ರಸ್ತೆ ಬದಿಯಲ್ಲಿ ನಿಂತಿದ್ದಾಗ ಮಂಗಳೂರು ಕಡೆಯಿಂದ ಅತೀ ವೇಗದಲ್ಲಿ ಬಂದ ಕಾರು ಇವರ ಮೇಲೆ ಹರಿದಿತ್ತು. ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ಯಲ್ಲಿ ಟೆಂಟ್ ಹಾಕಿ ಮಾರಾಟ ನಡೆಸು ತ್ತಿದ್ದ ಹುಂಡಾಯಿ ಕಂಪೆನಿಯ ಕಾರಿಗೆ ಬಡಿದಿದೆ. ಎರಡು ಕಾರುಗಳಿಗೂ ಹಾನಿ ಯಾಗಿದೆ. ಗಾಯಾಳುಗಳನ್ನು ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.
ಉಡುಪಿ: ಅತ್ಯಾಚಾರಿಗೆ ನ್ಯಾ.ಸೆರೆ: ಹದಿನೈದರ ಹರೆಯದ ದಲಿತ ಬಾಲಕಿಯನ್ನು ಮೂರು ದಿನಗಳ ಕಾಲ ಕಾಡಿನಲ್ಲಿರಿಸಿ, ಬಳಿಕ ಮಂಗಳೂರು-ಬೆಂಗಳೂರು ಹಾಗೂ ವಿವಿಧೆಡೆ ಕರೆದೊಯ್ದು ನಿರಂತರ ಅತ್ಯಾಚಾರ ನಡೆಸಿದ್ದ ಆರೋಪಿ ಪರ್ಕಳ ನೇತಾಜಿನಗರದ ಅಬೂಬಕರ್ ಸಿದ್ದಿಕ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Tagged with
cnews
ಮಂಗಳೂರು: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಬಂಟ್ವಾಳ ಬಿ.ಮೂಡ ಗ್ರಾಮದ ಭಂಡಾರಿಬೆಟ್ಟು ಎಂಬಲ್ಲಿ ನಡೆದಿದೆ.
ನ್ಯಾಯವಾದಿ ಶ್ರೀಧರ್ ಪೈ ಅವರ ಪತ್ನಿ ಶ್ರೇಯಾ ಪೈ(೩೬) ಮೃತಪಟ್ಟವರು. ರಕ್ತಸ್ರಾವ ನಿಯಂತ್ರಣಕ್ಕೆ ಬಾರದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಅಮ್ಟಾಡಿ: ಅಕ್ರಮ ಜಾನುವಾರು ಸಾಗಾಟ; ಇಬ್ಬರು ವಶಕ್ಕೆ: ಅಮ್ಟಾಡಿ ಎಂಬಲ್ಲಿ ಪಿಕಪ್‌ನಲ್ಲಿ ಎರಡು ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಸ್ಥಳೀಯರು ನೀಡಿದ ಮಾಹಿತಿಯನ್ನು ಆದರಿಸಿ ಪೊಲೀಸರು ಇಬ್ಬರು ಯುವಕರನ್ನು ಬಂಧಿಸದ್ದಾರೆ. ಆರೋಪಿಗಳನ್ನು ಪಿಕಪ್ ಚಾಲಕ ಅಬ್ದುಲ್ ಬಶೀರ್ ಹಾಗೂ ಜೋನ್‌ವೆಂ ದರ್ ಎಂದು ಗುರುತಿಸ ಲಾಗಿದ್ದು, ಇವರು ಜಾನುವಾರು ಗಳನ್ನು ರಾಯಿ ನಿವಾಸಿ ವಸಂತ ಪೂಜಾರಿ ಮನೆಯಿಂದ ತಂದಿರು ವುದಾಗಿ ತಿಳಿಸಿದ್ದಾರೆ. ಇದನ್ನು ರಾಯಿಯಿಂದ ಅಮ್ಟಾಡಿಗೆ ತಂದಿರಿಸಿ, ಮದ್ಯಾಹ್ನ ನಂತರ ಕಸಾಯಿಖಾನೆ ಸಾಗಿಸುತ್ತಿದ್ದರು ಎನ್ನಲಾಗಿದೆ.
Tagged with
cnews
ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಂಟ್ವಾಳ ತಾಲೂಕು ಲೊರೆಟ್ಟೋ ನಿವಾಸಿ ರೇಶ್ಮಾ ಹೇರಿಯೆಟ್ ಮಿನೇಜಸ್(೨೫) ಕಳೆದ ಜೂನ್ ೧೦ರಿಂದ ನಾಪತ್ತೆಯಾಗಿರುವ ಬಗ್ಗೆ ಕದ್ರಿ ಠಾಣೆಗೆ ದೂರಲಾಗಿದೆ.
ರವಿವಾರ ರೇಶ್ಮಾ ಅವರು ತನ್ನ ಸೋದರ ರೋಶನ್‌ಗೆ ಫೋನ್ ಮಾಡಿ ಹಾಸ್ಟೆಲ್‌ಗೆ ಬರುವಂತೆ ತಿಳಿಸಿದ್ದರು. ಅದರಂತೆ ಅವರು ಬಂದಾಗ ರೇಶ್ಮಾ ನಾಪತ್ತೆಯಾಗಿದ್ದರು. ಹಾಸ್ಟೆಲ್ ವಾರ್ಡನ್ ಬಳಿ ವಿಚಾರಿಸಿ ದಾಗ ಆಕೆ ತನ್ನ ಸಹಪಾಠಿ ಜೊತೆ ತೆರಳಿರುವುದಾಗಿ ಹೇಳಿದ್ದಾರೆ. ರೇಶ್ಮಾ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ಕದ್ರಿ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Tagged with
cnews,
missing
ಕಣ್ಣೆತ್ತಿಯೂ ನೋಡದ ಜನಪ್ರತಿನಿಧಿಗಳು
ಉಡುಪಿ: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕಟಪಾಡಿ ಗ್ರಾಪಂ ವ್ಯಾಪ್ತಿಯ ಶಿರ್ವ ರಾಜ್ಯ ಹೆದ್ದಾರಿ ಯಲ್ಲಿನ ಹೋಲಿ ಕ್ರಾಸ್ ಬಳಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ವಾಹನ ಹಾಗೂ ಜನ ಸಂಚಾರಕ್ಕೆ ತೀರಾ ತೊಂದರೆ ಉಂಟಾಗುತ್ತಿದೆ.
ಇದು ಈ ವರ್ಷದ ಸಮಸ್ಯೆಯಲ್ಲ. ಪ್ರತಿ ಮಳೆಗಾಲದಲ್ಲೂ ಇಲ್ಲಿ ಮಳೆನೀರು ರಸ್ತೆಯಲ್ಲಿ ಹೊಳೆಯಂತೆ ಹರಿಯುತ್ತದೆ. ಇಲ್ಲಿ ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೇ ಇಲ್ಲ. ಇದ್ದ ಚರಂಡಿ ಹೂಳು ತುಂಬಿ ಮುಚ್ಚಿ ಹೋಗಿವೆ. ಇದರ ಪರಿಣಾಮ ಮಳೆ ನೀರು ರಸ್ತೆಯಲ್ಲಿ ಹರಿದು ತಗ್ಗುಪ್ರದೇಶದಲ್ಲಿ ತುಂಬಿ ಬಿಡುತ್ತದೆ. ಈಗ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೋಲಿ ಕ್ರಾಸ್ ಬಳಿಯ ರಸ್ತೆ ಮುಳುಗಿವೆ.
ಈ ರಸ್ತೆಯಲ್ಲಿ ಸಂಚರಿಸುವ ಲಘು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ನೀರಿನಲ್ಲಿ ಮಳುಗಿ ಏಳುವ ಅನುಭವ ಪ್ರತಿ ಮಳೆಗಾಲದಲ್ಲೂ ಸಾಮಾನ್ಯ. ಪಾದಚಾರಿಗಳು ರಸ್ತೆಯಲ್ಲಿ ತುಂಬಿ ಹರಿಯುತ್ತಿರುವ ಮೊಣಕಾಲಿನವರೆಗಿನ ನೀರಿನ್ನು ದಾಟಲು ಹರಸಾಹಸ ಪಡಬೇಕಾಗುತ್ತದೆ. ಸ್ಥಳೀಯರು ಪ್ರತಿವರ್ಷ ಈ ಸಮಸ್ಯೆಯನ್ನು ಸರಿಪಡಿಸುವಂತೆ ಸ್ಥಳೀಯ ಗ್ರಾಪಂಗೆ ಮನವಿ ಸಲ್ಲಿಸುತ್ತಿದ್ದರೂ ತಾತ್ಕಾಲಿಕವಾಗಿ ನೀರು ಹರಿದುಹೋಗಲು ವ್ಯವಸ್ಥೆ ಕಲ್ಪಿಸಿ ಮತ್ತೆ ಸುಮ್ಮನಾಗುತ್ತಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಂತೂ ಇತ್ತ ತಲೆ ಕೂಡ ಹಾಕುವುದಿಲ್ಲ. ಒಟ್ಟಾರೆ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
Tagged with
lnews,
udupi
ಕಾಸರಗೋಡು: ಅಂಗಡಿ ಮುಚ್ಚಿ ರಾತ್ರಿ ಮನೆಗೆ ಮರಳುತ್ತಿದ್ದ ವೃದ್ಧ ವ್ಯಾಪಾರಿಯನ್ನು ಅಡ್ಡಗಟ್ಟಿ ಹಲ್ಲೆಗೈಯ ಲಾಗಿದೆ. ಇಲ್ಲಿನ ಕಂಚಿಕಟ್ಟೆ ಮಳಿಯ ನಿವಾಸಿ ಯಾದ ವರ್ತಕ ಕೃಷ್ಣ ಗಟ್ಟಿ (೬೪) ಹಲ್ಲೆಗೊಳಗಾದವರು. ಗಾಯಾಳುವನ್ನು ಕುಂಬಳೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಗಾಯಾಳುವಿನ ದೂರಿ ನಂತೆ ಉಪ್ಪಳ ನಿವಾಸಿ ರೋಷನ್ ಗಟ್ಟಿ (೨೬) ಹಾಗೂ ಕಂಡರೆ ಗುರುತು ಹಚ್ಚಬಹುದಾದ ಇನ್ನೊಬ್ಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Tagged with
cnews
ಸುಳ್ಯ: ನಾಯಿ ಅಡ್ಡ ಬಂದು ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿ ಹಿಂಬದಿ ಸವಾರೆ ಶಿಕ್ಷಕಿ ಗಾಯಗೊಂಡ ಘಟನೆ ಮರ್ಕಂಜದಲ್ಲಿ ನಡೆದಿದೆ. ಸುಳ್ಯದಿಂದ ಮರ್ಕಂಜಕ್ಕೆ ಹೋಗುವ ಸರ್ವೀಸ್ ವ್ಯಾನ್ ತಪ್ಪಿದ್ದರಿಂದ ದೂರವಾಣಿ ಕೇಂದ್ರದಲ್ಲಿ ಉದ್ಯೋಗಿಯಾಗಿರುವ ಶಿಕ್ಷಕಿ ಸುಶೀಲ ಅವರ ಪತಿ ದೇವಪ್ಪ ಎಂಬವರು ತಮ್ಮ ಬೈಕಿನಲ್ಲಿ ಪತ್ನಿಯನ್ನು ಕುಳ್ಳಿರಿಸಿಕೊಂಡು ಮರ್ಕಂಜ ಕಡೆಗೆ ಹೋಗುತ್ತಿದ್ದಾಗ ರಸ್ತೆಗೆ ನಾಯಿಯೊಂದು ಅಡ್ಡ ಬಂದಿದ್ದು, ತಕ್ಷಣ ಬ್ರೇಕ್ ಹಾಕಿದ್ದರಿಂದ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ತಲೆಗೆ ಗಂಭೀರ ಗಾಯ ಗೊಂಡ ಸುಶೀಲರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.
Tagged with
cnews
ಮಂಗಳೂರು: ನಗರದ ಜಿಲ್ಲಾದಿ ಕಾರಿ ಕಚೇರಿಯ ಜನರೇಟರ್‌ನ ಎರಡು ಬ್ಯಾಟರಿಗಳನ್ನು ಕಳವುಗೈದಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರಲಾಗಿದೆ.
Tagged with
cnews
ಮಂಗಳೂರು: ನಗರದ ಎ.ಬಿ ಶೆಟ್ಟಿ ವೃತ್ತದ ಬಳಿಯ ಪ್ಯಾರಾದಿಗಮ್ ಪ್ಲಾಜಾದಲ್ಲಿರುವ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರ ಮತ್ತೊಂದು ವಿವಾದದ ಸುಳಿಯೊಳಗೆ ಸಿಲುಕಿದೆ. ಇಲ್ಲಿನ ಡಿಜಿಎಂರ ಎಡವಟ್ಟು ತನದಿಂದ ಅಧಿಕೃತ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರದ ಬಳಿಯೇ ಮತ್ತೊಂದು ಖಾಸಗಿ ಫ್ರಾಂಚೈಸಿ ಆರಂಭಗೊಂಡು ವಿವಾದಕ್ಕೆ ಕಾರಣವಾಗಿದೆ.
ಬಿಎಸ್‌ಎನ್‌ಎಲ್‌ನ ಡಿಜಿಎಂ ಅವರೇ ಖಾಸಗಿ ಫ್ರಾಂಚೈಸಿಗೆ ಅನುಮತಿಯನ್ನು ನೀಡಿದ್ದು, ಇವರ ಈ ಕೃತ್ಯಕ್ಕೆ ಬಿಎಸ್‌ಎನ್‌ಎಲ್ ವಲಯದಲ್ಲಿ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ. ಸದಾ ಒಂದಿಲ್ಲೊಂದು ವಿವಾದ ವನ್ನು ಹುಟ್ಟು ಹಾಕುತ್ತಿರುವ ಬಿಎಸ್‌ಎನ್‌ಎಲ್ ಡಿಜಿಎಂ ಇದೀಗ ನಗರದ ಎ.ಬಿ ಶೆಟ್ಟಿ ವೃತ್ತದ ಬಳಿ ಇರುವ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರ ನಷ್ಟದಲ್ಲಿ ನಡೆಯುತ್ತಿದೆ ಎನ್ನುವುದನ್ನು ಬಿಂಬಿಸಲು ತಮ್ಮ ಕಚೇರಿ ಪಕ್ಕದಲ್ಲೇ ಖಾಸಗಿ ಫ್ರಾಂಚೆಸಿಗೆ ಅನುಮತಿಯನ್ನು ನೀಡಿದ್ದಾರೆ ಎಂಬ ಮಾತು ಸಿಬ್ಬಂದಿಯಿಂದಲೇ ಕೇಳಿ ಬಂದಿದೆ. ಈ ಹಿಂದೆ ಎ.ಬಿ ಶೆಟ್ಟಿ ವೃತ್ತದ ಬಳಿಯ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರದ ಸ್ಥಳವನ್ನು ಖಾಸಗಿ ಮೊಬೈಲ್ ಕಂಪನಿಗೆ ಮಾರುವ ಬಗ್ಗೆ ಒಳ ಒಪ್ಪಂದವನ್ನು ಮಾಡಿಕೊಂಡ ಡಿಜಿಎಂ ಆ ಸ್ಥಳದಲ್ಲಿದ್ದ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರವನ್ನು ಸಿಟಿಒ ಕಚೇರಿಯ ಕಟ್ಟಡಕ್ಕೆ ಸ್ಥಳಾಂತರಿಸಲು ಹುನ್ನಾರ ನಡೆಸಿದ್ದರು. ಮಾತ್ರವಲ್ಲದೆ ೧೫ ಲಕ್ಷ ವೆಚ್ಚ ಮಾಡಿ ಹೊಸ ಕಚೇರಿಯ ಸಿದ್ದತೆಯನ್ನೂ ಮಾಡಿಕೊಂಡಿದ್ದರು. ಆದರೆ ಈ ಬಗ್ಗೆ ಜಯಕಿರಣ ಪತ್ರಿಕೆ ಬೆಳಕು ಚೆಲ್ಲಿದ ಕಾರಣ ಗ್ರಾಹಕರು ಸಿಡಿದೆದ್ದಿದ್ದರು. ಪರಿಣಾಮ ಬಿಎಸ್‌ಎನ್‌ಎಲ್ ಉನ್ನತಾಧಿಕಾರಿಗಳು ಸೇವಾ ಕೇಂದ್ರದ ಸ್ಥಳಾಂತರ ಕೆಲಸಕ್ಕೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದ್ದರು. ಹೀಗಾಗಿ ಪ್ಯಾರಡಿಗಮ್ ಪ್ಲಾಜಾದಲ್ಲಿದ್ದ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರ ಅಲ್ಲಿಯೇ ಉಳಿಯುವಂತಾಗಿತ್ತು. ಆದರೂ ಇದನ್ನು ತೆಗೆಸಿಯೇ ಸಿದ್ದ ಎಂಬ ಜಿದ್ದಿಗೆ ಬಿದ್ದಿರುವ ಡಿಜಿಎಂ, ಅಧಿಕೃತ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರ ಇರುವ ಕಟ್ಟಡದಲ್ಲೇ ಕೇವಲ ಹತ್ತು ಮೀಟರ್ ಅಂತರದಲ್ಲಿ ಖಾಸಗಿಯವರಿಗೆ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರ ನಡೆಸಲು ಅನುಮತಿಯನ್ನು ನೀಡಿದ್ದಾರೆ. ವಾಸ್ತವವಾಗಿ ಇದಕ್ಕೆ ಅವಕಾಶವೇ ಇಲ್ಲ ಎನ್ನುತ್ತಾರೆ ಸಿಬ್ಬಂದಿ. ಒಂದು ಕಡೆ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರ ಇದರ ಕೂಗಲತೆ ದೂರದಲ್ಲಿ ಬಿಎಸ್‌ಎನ್‌ಎಲ್ ದೂರ ಸಂಪರ್ಕ ಕೇಂದ್ರದ ಮುಖ್ಯ ಕಚೇರಿ, ಮತ್ತೊಂದು ಭಾಗದಲ್ಲಿ ಸಿಟಿಒ ಕಚೇರಿ ಈ ಮೂರು ಕಚೇರಿಗಳಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರ ನಡೆಯು ತ್ತಿದ್ದರೂ ಇದರ ನಡುವೆಯೇ ಖಾಸಗಿ ಸೇವಾ ಕೇಂದ್ರಕ್ಕೆ ಅಸ್ತು ನೀಡಿರುವುದು ಉದ್ದಟತನ ಎನ್ನುವ ಮಾತು ಕೇಳಿ ಬಂದಿದೆ. ಇದು ಅಧಿಕೃತ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರ ನಷ್ಟದಲ್ಲಿ ನಡೆಯುವಂತೆ ಮಾಡಿ ಬಳಿಕ ಈ ಕೇಂದ್ರ ಸ್ಥಳದಿಂದ ಎತ್ತಂಗಡಿ ಮಾಡಿ ಆ ಸ್ಥಳವನ್ನು ಖಾಸಗಿಯ ವರಿಗೆ ಮಾರುವ ಹುನ್ನಾರದ ಫಲ ಎಂಬ ಆರೋಪ ಕೇಳಿ ಬಂದಿದೆ. ಡಿಜಿಎಂ ಅನುಮತಿ ಮೇರೆಗೆ ಈಗಾಗಲೇ ಖಾಸಗಿ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರ ಆರಂಭಗೊಂಡಿದ್ದು, ಇದರ ಅವಶ್ಯಕತೆ ಇದೀಗ ಪ್ರಶ್ನಾತೀತವಾಗಿ ಉಳಿದಿದೆ.
Tagged with
bsnl,
dk,
lnews
ಬೆಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ತಮ್ಮ ಚಿತ್ರದಲ್ಲಿ ಅಭಿನ ಯಿಸಲಿದ್ದಾರೆ ಎಂದು ‘ಅಲೆ ಚಿತ್ರತಂಡ ಸುಳ್ಳು ಹೇಳಿಕೊಂಡಿದ್ದು, ಇದೀಗ ಇಕ್ಕಟ್ಟಿಗೆ ಸಿಲುಕಿದ್ದು, ಅಭಿನಯ ನನ್ನ ಕ್ಷೇತ್ರವಲ್ಲ ನಾನು ಅಭಿನಯಿಸುವುದೂ ಇಲ್ಲ ಎಂದು ಸ್ವತಃ ಹೆಗ್ಗಡೆಯವರೇ ಪತ್ರಕರ್ತರಿಗೆ ಹೇಳಿಕೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಗುವುದು ಕಷ್ಟ. ಧಾರ್ಮಿಕ ನಂಬಿಕೆ ಹೊತ್ತು ಬರುವ ಭಕ್ತಾದಿಗಳ ಭಾವನೆಗಳಿಗೆ ಯಾವುದೇ ಘಾಸಿಯಾಗ ದಿರಲಿ ಎಂಬ ಕಾರಣಕ್ಕೆ ದೇಗುಲದ ಸುತ್ತಮುತ್ತ ಕೂಡಾ ಚಿತ್ರೀಕರಣಕ್ಕೆ ಅವಕಾಶ ನೀಡಿದ ಉದಾಹರಣೆಗಳು ಕಮ್ಮಿ ಎಂದು ಹೆಗ್ಗಡೆಯವರು ಹೇಳಿದ್ದಾರೆ. ಹೀಗಿರುವಾಗ ಹೆಗ್ಗಡೆಯವರು ಚಿತ್ರದ ಸನ್ನಿವೇಶವೊಂದರ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಅಲೆ ಚಿತ್ರತಂಡ ಹೇಳಿಕೊಂಡಾಗ ಅಚ್ಚರಿ ವ್ಯಕ್ತವಾಗಿತ್ತು. ಆದರೆ ಈ ಮಾಹಿತಿ ತಿರುಚಿದ ವರ್ತಮಾನ ಎನ್ನುವುದು ಈಗ ಸ್ಪಷ್ಟವಾಗಿದೆ.
ಅಲೆ ಸಿನಿಮಾಕ್ಕೆ ಕ್ಯಾಮರಾ ಚಾಲನೆ ಮಾಡಿಕೊಡುವಂತೆ ಹೆಗ್ಗಡೆಯವರ ಬಳಿ ಚಿತ್ರತಂಡ ವಿನಂತಿಸಿಕೊಂಡಿತ್ತು. ಅದಕ್ಕೊಪ್ಪಿದ ಧರ್ಮಾಧಿಕಾರಿಯವರು ತಮ್ಮ ನಿವಾಸದಲ್ಲಿ ಭಕ್ತರಿಗೆ ದರ್ಶನ ಕಲ್ಪಿಸಿರುವ ಸಮಯದಲ್ಲೇ ಸ್ವಲ್ಪ ಬಿಡುವು ಮಾಡಿಕೊಂಡು ಕ್ಯಾಮರಾ ಚಾಲನೆ ಮಾಡಿಕೊಡಲು ಒಪ್ಪಿಕೊಂಡಿದ್ದರು.
ಅಷ್ಟು ಅವಕಾಶ ಸಿಕ್ಕಿದ್ದೇ ಪುಣ್ಯ ಎಂದುಕೊಂಡ ‘ಅಲೆ ಚಿತ್ರತಂಡ ಅದನ್ನೇ ಹೆಗ್ಗಡೆಯವರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಿಕೊಂಡು ಪ್ರಚಾರ ಪಡೆದಿತ್ತು. ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ನಾಯಕ ನಾಯಕಿ ಮದುವೆ ಮಾಡಿಕೊಂಡು ಧರ್ಮಾಧಿಕಾರಿಗಳ ಕಾಲಿಗೆ ಬಿದ್ದು ಆಶೀರ್ವಾದ ಕಾರಣಕ್ಕೆ ದೇಗುಲದ ಸುತ್ತಮುತ್ತ ಕೂಡಾ ಚಿತ್ರೀಕರಣಕ್ಕೆ ಅವಕಾಶ ನೀಡಿದ ಉದಾಹರಣೆಗಳು ಕಮ್ಮಿ ಎಂದು ಹೆಗ್ಗಡೆಯವರು ಹೇಳಿದ್ದಾರೆ. ಹೀಗಿರುವಾಗ ಹೆಗ್ಗಡೆಯವರು ಚಿತ್ರದ ಸನ್ನಿವೇಶವೊಂದರ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಅಲೆ ಚಿತ್ರತಂಡ ಹೇಳಿಕೊಂಡಾಗ ಅಚ್ಚರಿ ವ್ಯಕ್ತವಾಗಿತ್ತು. ಆದರೆ ಈ ಮಾಹಿತಿ ತಿರುಚಿದ ವರ್ತಮಾನ ಎನ್ನುವುದು ಈಗ ಸ್ಪಷ್ಟವಾಗಿದೆ.
ಅಲೆ ಸಿನಿಮಾಕ್ಕೆ ಕ್ಯಾಮರಾ ಚಾಲನೆ ಮಾಡಿಕೊಡುವಂತೆ ಹೆಗ್ಗಡೆಯವರ ಬಳಿ ಚಿತ್ರತಂಡ ವಿನಂತಿಸಿಕೊಂಡಿತ್ತು. ಅದಕ್ಕೊಪ್ಪಿದ ಧರ್ಮಾಧಿಕಾರಿಯವರು ತಮ್ಮ ನಿವಾಸದಲ್ಲಿ ಭಕ್ತರಿಗೆ ದರ್ಶನ ಕಲ್ಪಿಸಿರುವ ಸಮಯದಲ್ಲೇ ಸ್ವಲ್ಪ ಬಿಡುವು ಮಾಡಿಕೊಂಡು ಕ್ಯಾಮರಾ ಚಾಲನೆ ಮಾಡಿಕೊಡಲು ಒಪ್ಪಿಕೊಂಡಿದ್ದರು.
ಅಷ್ಟು ಅವಕಾಶ ಸಿಕ್ಕಿದ್ದೇ ಪುಣ್ಯ ಎಂದುಕೊಂಡ ‘ಅಲೆ ಚಿತ್ರತಂಡ ಅದನ್ನೇ ಹೆಗ್ಗಡೆಯವರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಿಕೊಂಡು ಪ್ರಚಾರ ಪಡೆದಿತ್ತು. ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ನಾಯಕ ನಾಯಕಿ ಮದುವೆ ಮಾಡಿಕೊಂಡು ಧರ್ಮಾಧಿಕಾರಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು ಚಿತ್ರತಂಡ ಆಯೋಜಿಸಿದ್ದ ಸನ್ನಿವೇಶ. ಕ್ಯಾಮರಾ ಚಾಲನೆ ಮಾಡಿ ಶುಭ ಹಾರೈಸಿದ ಹೆಗ್ಗಡೆಯವರು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವಂಥ ಸಿನಿಮಾ ಮಾಡುವುದು ಚಿತ್ರರಂಗದ ಗುರಿಯಾಗಲಿ ಎಂದು ಆಶಿಸಿದರು. ಆದರೆ ನಾಯಕ ನಾಯಕಿ ಪಾತ್ರಧಾರಿಗಳು ಅವರ ಆಶೀರ್ವಾದ ಪಡೆಯುವ ಸನ್ನಿವೇಶದಲ್ಲಿ ಕಾಣಿಸಿಕೊಳ್ಳಲು ನಿರಾಕರಿಸಿ ಅಲ್ಲಿಂದ ನಿರ್ಗಮಿಸಿದರು. ಮುಕ್ತಾಯ ಹಂತಲ್ಲಿರುವ ಈ ಚಿತ್ರಕ್ಕೆ ಈಗ ಕ್ಯಾಮರಾ ಚಾಲನೆ ಮಾಡಿಕೊಡುವಂತೆ ಹೆಗ್ಗಡೆಯವರು ಬಳಿ ಹೋದದ್ದು ಯಾತಕ್ಕೆ ಎನ್ನುವುದಕ್ಕೆ ಚಿತ್ರತಂಡದ ಬಳಿ ಉತ್ತರವಿಲ್ಲ.
ಈ ಹಿಂದೆ ಹೆಗ್ಗಡೆಯವರು ಡಾ. ರಾಜ್ ಕುಮಾರ್ ಅಭಿನಯದ ‘ಶ್ರಾವಣ ಬಂತು’ ಚಿತ್ರದ ಪುಟ್ಟ ಸನ್ನಿವೇಶವೊಂದರಲ್ಲಿ ಕಾಣಿಸಿಕೊಂಡಿದ್ದರು.
Tagged with
cnnews,
snews
ಪುತ್ತೂರು: ಎಂಡೋಸಲ್ಫಾನ್ ನಿಂದಾಗಿ ರಾಜ್ಯದ ನೀರಾವರಿ ಪ್ರದೇಶ ಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ದೊಡ್ಡ ಪ್ರಮಾಣದ ಹಾನಿ ಸಂಭವಿ ಸುತ್ತಿದ್ದು, ಇದನ್ನು ಪೂರ್ಣ ಪ್ರಮಾಣ ದಲ್ಲಿ ತಕ್ಷಣ ನಿಷೇಧಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವುದಾಗಿ ರಾಜ್ಯದ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು. ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅವರು ಬಳಿಕ ಸುದ್ದಿ ಗಾರರ ಜೊತೆ ಮಾತನಾಡಿದರು. ರಾಜ್ಯ ದ ನೀರಾವರಿ ಪ್ರದೇಶಗಳಾದ ಗಂಗಾವತಿ. ಕೊಪ್ಪಳ, ರಾಯಚೂರು ಗಳಲ್ಲಿ ಎಂಡೋಸಲ್ಫಾನ್ ನಿಂದಾಗಿ ದೊಡ್ಡ ಪ್ರಮಾಣದ ಹಾನಿ ಸಂಭವಿ ಸುತ್ತಿದೆ. ಇಲ್ಲಿನ ಪ್ರತೀ ಕುಂಬಗಳಲ್ಲಿ ಎಂಡೋ ಪೀಡನೆ ಕಂಡು ಬರುತ್ತಿದೆ ಎಂದರು.
ದ.ಕ ಜಿಲ್ಲೆಯ ಎಂಡೋ ಪೀಡಿತ ಪ್ರದೇಶಗಳು ಸೇರಿದಂತೆ ಎಲ್ಲಾ ಕಡೆಗ ಳಲ್ಲಿನ ಎಂಡೋ ಸಲ್ಫಾನ್ ದುಷ್ಪರಿಣಾ ಮಗಳ ಕುರಿತು ಸರ್ವೆ ಮತ್ತು ಆರೋಗ್ಯ ತಪಾಸಣೆ ನಡೆಸಬೇಕು. ಎಂಡೋ ಪೀಡಿತ ಪ್ರದೇಶಗಳಲ್ಲದೆ ಉಳಿದ ಕಡೆಗ ಳಲ್ಲೂ ವಾಸ್ತವ್ಯ ಹೊಂದಿರುವ ಎಂಡೋ ಪೀಡಿತರಿರಿಗೂ ಸೂಕ್ತ ಪರಿಹಾರ ಸಿಗಬೇಕು ಎಂಬುವುದು ನಮ್ಮ ಪ್ರಯತ್ನವಾಗಿದ್ದು, ಈ ಕುರಿತು ತಕ್ಷಣ ಸ್ಪಂದಿಸುವಂತೆ ಸರ್ಕಾರವನ್ನು ಆಗ್ರಹಿಸು ವುದಾಗಿ ಹೇಳಿದರು. ಸುಪ್ರೀಂ ಕೋರ್ಟು ಕೂಡ ಎಂಡೋ ಸಲ್ಫಾನ್ ನಿಷೇಧ ವಿಚಾರದಲ್ಲಿ ಜನತೆಯ ಅಭಿಪ್ರಾಯವನ್ನು ಎತ್ತಿ ಹಿಡಿಯಬೇಕು ಎಂದು ಅವರು ಭಿನ್ನವಿಸಿಕೊಂಡರು. ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬಿಜೆಪಿ ನಾಯಕಿ ಮಂಜುಳಾ ಮತ್ತಿತರರು ಇದ್ದರು.
Tagged with
dk,
lnews,
shobha
ಮಂಜೇಶ್ವರ: ಗ್ರಾ.ಪಂ. ಅಧ್ಯಕ್ಷರು ಮಂಜೇಶ್ವರ ಗ್ರಾಹಕರ ವೇದಿಕೆಯ ಪದಾಧಿಕಾರಿಗಳನ್ನು ಅಪಮಾನಕರ ವಾದ ರೀತಿಯಲ್ಲಿ ಬಿಂಬಿಸಿ ಪತ್ರಿಕಾ ಹೇಳಿಕೆ ನೀಡಿದ್ದನ್ನು ಮಂಜೇಶ್ವರ ಪ್ರವಾಸಿ ಬಂಗಲೆಯಲ್ಲಿ ನಡೆದ ಗ್ರಾಹಕರ ವೇದಿಕೆಯ ಕಾರ್ಯಕಾರಿ ಸಮಿತಿ ತುರ್ತು ಸಭೆಯಲ್ಲಿ ಒಕ್ಕೊರಳಿನಿಂದ ಖಂಡಿಸಲಾಯ್ತು.
ಈ ಬಗ್ಗೆ ವಿವರಣೆ ನೀಡುವಂತೆ ಕೋರಿ ಪಂ.ಉಪಾಧ್ಯ ಕ್ಷರಿಗೆ ನೋಟೀಸು ಜಾರಿ ಮಾಡಲು ತೀರ್ಮಾನಿಸಲಾಯ್ತು. ಹಾಗೂ ಗ್ರಾಹಕರ ವೇದಿಕೆಯ ಪದಾಧಿಕಾರಿಗಳ ಬಗ್ಗೆ ಇಲ್ಲ ಸಲ್ಲದ ಆರೋಪ ಹೊರಿಸಿ ಅಪಮಾನಕಾರವಾದ ರೀತಿಯಲ್ಲಿ ನೀಡಿದ ಹೇಳಿಕೆಯ ವಿರುದ್ದ ಕೈಗೊಳ್ಳಲು ಕೂಡಾ ತೀರ್ಮಾನಿಸಲಾಗಿದೆ.
Tagged with
kasaragod,
lnews
ನೈಋತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಕ್ಯಾ.ಗಣೇಶ್ ಕಾರ್ಣಿಕ್ ಮತ್ತು ಡಿ.ವಿ.ಶಂಕರಮೂರ್ತಿ ಅವರು ಜಯಗಳಿಸಿದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಮಂಗಳೂರಿನಲ್ಲಿರುವ ಬಿಜೆಪಿ ಕಚೇರಿಯೆದುರು ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚಸಿದರು.
Tagged with
gallery
ಪುತ್ತೂರು: ಹೈಕೋರ್ಟಿನ ಆದೇಶ ಮತ್ತು ಜಿಲ್ಲಾಧಿಕಾರಿಗಳ ಅಧಿಸೂಚನೆ ಯನ್ನು ಧಿಕ್ಕರಿಸಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರವರ್ತಕರ ದುಂಡಾ ವರ್ತನೆಯನ್ನು ತಡೆಯಬೇಕೆಂದು ಆಗ್ರಹಿಸಿ ಕೆಎಸ್‌ಆರ್‌ಟಿಸಿ ಮಜ್ದೂರು ಸಂಘದವರು ಬುಧವಾರ ಪುತ್ತೂರಿನ ಗಾಂಧಿ ಮಂಟಪದ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬಜರಂಗದಳದ ಪುತ್ತೂರು ಸಹ ಸಂಚಾಲಕ ಬಿ.ಭಾಸ್ಕರ ಅವರು ‘ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳ ಸಂಚಾರಕ್ಕೆ ಸಂಬಂಧಿಸಿ ಈ ಹಿಂದೆ ಯೇ ಶಾಸಕರ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿ ಸೂಚನೆ ನೀಡಲಾಗಿತ್ತು. ಆದರೆ ಅವರು ಎಲ್ಲಾ ಕಾಯ್ದೆ ಕಾನೂನು ಗಳನ್ನು ಮೀರಿ ತಮಗೆ ಇಷ್ಟ ಬಂದಂತೆ ಓಡಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಅಧಿಕಾರಿಗಳಿಂದ ಹಣ ಪಡೆದು ಬಿಎಂಎಸ್ ಸಂಘಟನೆ ಯವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಾಂಟ್ರಾಕ್ಟ್ ಕ್ಯಾರೇಜ್‌ನವರು ಆರೋಪಿಸುತ್ತಿದ್ದು, ಇದನ್ನು ಅವರು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಮಂಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಶಾಂತಾರಾಮ ವಿಟ್ಲ ಅವರು ಮಾತನಾಡಿ ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ನವರು ಹೈಕೋರ್ಟಿನ ಆದೇಶವನ್ನು ಪಾಲನೆ ಮಾಡುತ್ತಿಲ್ಲ. ಸಾರಿಗೆ ಪ್ರಾಧಿಕಾರದ ಷರತ್ತುಗಳನ್ನು ಉಲ್ಲಂಘಿಸಿ, ಜಿಲ್ಲಾಧಿಕಾರಿಗಳ ಅದಿ ಸೂಚನೆಯನ್ನು ಧಿಕ್ಕರಿಸಿ ಅನಧಿಕೃತ ವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕಿ ಮಲ್ಲಿಕಾ ಭರವಸೆ: ಪ್ರತಿಭಟನೆ ಹಿಂತೆಗೆತ
ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸುಗಳು ದರ್ಬೆಯಾಗಿ ಮುಂದುವರಿದು ಬೈಪಾಸ್ ಪರ್ಲಡ್ಕ ಮಾರ್ಗವಾಗಿ ಮಹಮ್ಮಾಯಿ ದೇವಸ್ಥಾನದ ಬಳಿಗೆ ಬಂದು ಅಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ತಾಲೂಕು ಕಚೇರಿ -ಮಾರುಕಟ್ಟೆ ರಸ್ತೆಯಾಗಿ ಶ್ರೀಧರ್ ಭಟ್ ಅಂಗಡಿಯ ಬಳಿ ಮುಖ್ಯ ರಸ್ತೆ ಪ್ರವೇಶಿಸಿ ಮಂಗಳೂರು ಕಡೆಗೆ ಮುಂದುವರಿಯಬೇಕೆಂದು ಕಳೆದ ಮೇ.೭ರಂದು ಕೈಗೊಳ್ಳಲಾದ ನಿರ್ಣಯವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಮಲ್ಲಿಕಾ ಪ್ರಸಾದ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
Tagged with
dk,
lnews
ಮಂಗಳೂರು: ಐವರ್ನಾಡು ಗ್ರೀನ್‌ಲ್ಯಾಂಡ್ ಎಸ್ಟೇಟ್ ಮಾಲೀಕ ಮೀರಾ ಬಾಲಕೃಷ್ಣ ಅವರ ಕೊಲೆ ಆರೋಪಿಗಳ ಶೋಧಕ್ಕಾಗಿ ಕೊಡಗು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಯ ಮುಖ್ಯ ಆರೋಪಿ ರೋಶನ್ ಕೊಡಗು ಜಿಲ್ಲೆಯವನಾಗಿದ್ದು ಮಡಿಕೇರಿಯಲ್ಲಿ ಸುತ್ತಾಡಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆ ಪ್ರದೇಶದಲ್ಲಿ ಶೊಧ ಕಾರ್ಯ ನಡೆಸಿದ್ದಾರೆ.
ಪ್ರಕರಣದ ಎರಡನೇ ಆರೋಪಿಯಾಗಿರುವ ಸಚಿನ್ ಶೆಟ್ಟಿ ಕಳೆದ ಒಂದು ವರ್ಷದಿಂದ ತಲೆಮರೆಸಿ ಕೊಂಡಿದ್ದು ಈಗ ಆತನ ಮದುವೆ ನಡೆಯಲಿರುವ ಕಾರಣ ಊರಿಗೆ ಬಂದೇ ಬರುವನು ಎಂಬ ಮಾಹಿತಿ ಇರುವುದರಿಂದ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ವೇಶ್ಯಾವಾಟಿಕೆ ಸುಳ್ಳು ಆರೋಪ: ತನ್ನ ಪತ್ನಿಯ ಮೇಲೆ ವೇಶ್ಯಾವಾಟಿಕೆಗೆ ಪ್ರಚೋದನೆ ನೀಡಿದ ಆರೋಪದಡಿ ಸುಳ್ಳು ಕೇಸು ಹಾಕಲಾಗಿದೆ ಎಂದು ಉಜಿರೆಯ ಗುಲಾಬಿ ಎಂಬವರ ಪತಿಯಾದ ಸಂಜೀವ ಶೆಟ್ಟಿಯವರು ಜಿಲ್ಲಾ ಎಸ್‌ಪಿಗೆ ದೂರು ನೀಡಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ವಿಶ್ವನಾಥ ಎಂಬಾತನ್ನು ಪ್ರಕರಣದಿಂದ ಕೈ ಬಿಡಲಾಗಿದೆ ಎಂದು ದೂರಿನಲ್ಲಿ ತಿಳಿಸಿರುವ ಅವರು ಈ ಪ್ರಕರಣದಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿರುವುದಾಗಿ ಹೇಳಿದ್ದಾರೆ. ತಕ್ಷಣ ಸೂಕ್ತ ತನಿಖೆ ನಡೆಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಹಿಮ್ಮುಖ ಚಲಿಸಿದ ಪಿಕಪ್: ಪಾದಚಾರಿ ಸಾವು: ಹಿಮ್ಮುಖವಾಗಿ ಚಲಿಸು ತ್ತಿದ್ದ ಪಿಕಪ್ ವಾಹನದ ಅಡಿಗೆ ಸಿಲುಕಿ ವ್ಯಕ್ತಿಯೊ ಬ್ಬರು ದಾರುಣವಾಗಿ ಸಾವಿಗೀಡಾದ ಘಟನೆ ಬಜಪೆಯ ಮುತ್ತೂರು ಕಾಲೇಜು ರಸ್ತೆಯಲ್ಲಿ ನಡೆದಿದೆ. ಮೃತರನ್ನು ಸ್ಥಳೀಯರಾದ ಎಂ.ಎಚ್ ಮೊಹಮ್ಮದ್ ಎಂದು ಗುರುತಿಸಲಾಗಿದೆ.
ವಾಹನ ಡಿಕ್ಕಿ ಹೊಡೆದು ನೆಲಕ್ಕುರುಳಿದ ಮೊಹಮ್ಮದ್ ಅವರ ಮೇಲೆ ವಾಹನ ಹರಿದು ಸ್ಥಳದಲ್ಲೇ ಮೃತ ಪಟ್ಟರು. ಘಟನೆಯಿಂದ ಆಕ್ರೋಶಿತರಾದ ಸ್ಥಳೀಯರು ವಾಹನಕ್ಕೆ ಕಲ್ಲು ತೂರಟ ನಡೆಸಿದರು. ಸ್ಥಳಕ್ಕಾಗಮಿಸಿದ ಬಜಪೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
Tagged with
cnews
ಬೆಂಗಳೂರು: ಬರ ಪರಿಹಾರ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಕಾಂಗ್ರೆಸ್ ನಾಯಕರು ರಾಜ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿಗಳು, ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ೫ ಸಾವಿರ ಕೋಟಿ ರೂಗಳ ಪರಿಹಾರ ಕೋರಲಾಗಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ ೨೭೮ ಕೋಟಿ ರೂಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಈ ಮೂಲಕ ರಾಜ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದರು. ಬರ ಪರಿಹಾರಕ್ಕೆ ಅನುದಾನ ನೀಡಿ ಎಂದು ಪದೇ ಪದೇ ಕೇಂದ್ರಕ್ಕೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರದ ಕೂಗು ಕೇಂದ್ರದಲ್ಲಿನ ಕಾಂಗ್ರೆಸ್ ನಾಯಕರಿಗೆ ಕೇಳುತ್ತಿಲ್ಲ. ನಮ್ಮ ಕೂಗು ಕೊಳಚೆಯಲ್ಲಿ ಬಿದ್ದ ಎಮ್ಮೆಗೆ ಹೊಡೆದಂತಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು ರಾಜ್ಯ ಸರ್ಕಾರ ಕಳೆದ ಎರಡು ದಿನಗಳ ಹಿಂದೆ ೧೭ ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಕುಡಿಯುವ ರಿನ ಸಮಸ್ಯೆ ಗಂಭೀರವಾಗಿದ್ದು ಈ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
Tagged with
dvs,
snews
ಮಂಗಳೂರು: ಫಿಶ್ ಆಯಿಲ್‌ಮಿಲ್ ವಾಚ್‌ಮೆನ್ ಓರ್ವರನ್ನು ಕೊಲೆಗೈದು ಮೃತದೇಹವನ್ನು ಗೋಣಿಚೀಲದಲ್ಲಿ ಕಟ್ಟಿ ಹಾಕಿ ಜನಸಂಚಾರವಿಲ್ಲದ ಪ್ರದೇಶದಲ್ಲಿ ಎಸೆದಿರುವ ಘಟನೆ ಉಳ್ಳಾಲ-ಕೋಟೆಪುರದಲ್ಲಿ ನಿನ್ನೆ ತಡರಾತ್ರಿ ಬೆಳಕಿಗೆ ಬಂದಿದೆ.
ಮಂಗಳೂರು ಕಾರ್‌ಸ್ಟ್ರೀಟ್ ನಿವಾಸಿ ವಿನಾಯಕ(೨೪) ಹತ್ಯೆಯಾದ ವರು. ಇವರು ಐದು ವರ್ಷಗಳಿಂದ ಕೋಟೆಪುರದಲ್ಲಿರುವ ಇಂಡಿಯನ್ ಫಿಶ್‌ಮಿಲ್‌ನಲ್ಲಿ ವಾಚ್‌ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ವೇಳೆ ೧೫ ವರ್ಷದ ಬಾಲಕನೋರ್ವ ಎನ್‌ಎಂಪಿ ( ಮಂಗಳೂರ್ ಮೆರೈನ್ ಪ್ರಾಡಕ್ಟ್ಸ್) ಫಿಶ್ ಆಯಿಲ್ ಮಿಲ್ ಗೋಡೌನಿನ ಹಾಗೂ ಹ್ಯಾರಿಸ್ ಮೆರೈನ್ ಫಿಶ್‌ಮಿಲ್ ಮಧ್ಯದಲ್ಲಿರುವ ಪ್ಯಾಸೇಜ್‌ನೊಳಗಡೆ ಮೂತ್ರ ಶಂಕೆ ಗೆಂದು ತೆರಳಿದ ಸಂದರ್ಭ ಮೃತ ದೇಹವಿದ್ದ ಗೋಣಿಚೀಲ ಪತ್ತೆಯಾಗಿದೆ.
ಈ ಬಗ್ಗೆ ಉಳ್ಳಾಲ ಪೊಲೀಸರಿಗೆ ಮಾಹಿತಿಯನ್ನು ನೀಡಲಾಯಿತು. ಶ್ವಾನ ದಳ ಬರುವವರೆಗೂ ಗೋಣಿಚೀಲ ವನ್ನು ತೆರೆಯದೇ ಇದ್ದರೂ ಮೃತದೇಹ ನಾಪತ್ತೆಯಾಗಿರುವ ವಾಚ್‌ಮೆನ್ ವಿನಾ ಯಕನದ್ದೇ ಆಗಿರಬಹುದೆಂಬ ಶಂಕೆ ಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು.
ಮೃತದೇಹವನ್ನು ಬೆಡ್‌ಶೀಟ್ ಹಾಗೂ ಎರಡು ಗೋಣಿಯಲ್ಲಿ ಸುತ್ತಿಡಲಾಗಿತ್ತು
ರಾತ್ರಿ ೧೦.೦೦ ಗಂಟೆ ಸುಮಾರಿಗೆ ಶ್ವಾನದಳ ಆಗಮಿಸಿದ ಬಳಿಕ ಪೊಲೀ ಸರು ಗೋಣಿಚೀಲವನ್ನು ತೆರೆದರು. ಕೈ-ಕಾಲು ಹಾಗೂ ಮುಖವನ್ನು ಕಟ್ಟಿಹಾಕಿ, ಬೆಡ್‌ಶೀಟ್‌ನಲ್ಲಿ ಮೃತದೇಹ ವನ್ನು ಸುತ್ತಿ ಬಳಿಕ ಎರಡು ಗೋಣಿ ಯಲ್ಲಿ ವಿನಾಯಕ್ ಮೃತದೇಹವನ್ನು ತುಂಬಿಡಲಾಗಿತ್ತು. ಪ್ಯಾಂಟ್ ಅನ್ನು ಜಾರಿಸಲಾದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು. ಮೂಗು ಹಾಗೂ ಕಿವಿಯಲ್ಲಿ ರಕ್ತಸ್ರಾವವಾಗುತ್ತಿದ್ದು, ಇದ ರಿಂದ ತಲೆಗೆ ಬಲವಾದ ಆಯುಧ ದಿಂದ ಬಡಿದು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ನಾಪತ್ತೆಯಾಗಿದ್ದ ವಾಚ್‌ಮೆನ್
ಮಂಗಳವಾರ ರಾತ್ರಿ ಕೆಲಸಕ್ಕೆ ಬಂದಿದ್ದ ವಿನಾಯಕ ಎಂಟು ಗಂಟೆ ಹೊತ್ತಿಗೆ ಫಿಶ್‌ಆಯಿಲ್‌ಮಿಲ್ ಮಾಲೀಕ ರಾದ ಫೈಝಲ್ ಎಂಬವರೊಂದಿಗೆ ಮೊಬೈಲ್ ಮೂಲಕ ಮಾತನಾಡಿದ್ದರು. ಮರುದಿನ ಅಂದರೆ ನಿನ್ನೆ ಬೆಳಿಗ್ಗೆ ಬೆಳ ಗ್ಗಿನ ಅವಧಿಯ ಕೆಲಸಕ್ಕೆ ಇನ್ನೋರ್ವ ವಾಚ್‌ಮೆನ್ ಸೂಫಿ ಹಾಜರಾದಾಗ ಗೇಟ್ ಬಂದ್ ಆಗಿತ್ತು. ಹಾಗೂ ರಾತ್ರಿಪಾಳಿಯ ವಿನಾಯಕ ಕಾಣದೇ ಇದ್ದಾಗ ಮಾಲೀಕರಿಗೆ ವಿಷಯ ತಿಳಿಸಿದ್ದರು. ಸಂಶಯದಿಂದ ಮಾಲೀಕ ಫೈಝಲ್ ಆತನ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಆತನ ಮಂಗಳೂರಿನ ಮನೆಗೆ ಹೋಗಿ ವಿಚಾರಿಸಿದರೂ ಸೋಮವಾರದಂದು ಬಂದು ಹೋದ ಬಳಿಕ ವಾಪಸ್ಸಾಗಿರಲಿಲ್ಲ ಎಂದು ಸಹೋದರಿ ಹೇಳಿದ್ದರು. ವಿನಾಯಕ ಆಯಿಲ್ ಮಿಲ್‌ನಲ್ಲಿಯೇ ಉಳಿದುಕೊಂಡು ವಾರಕ್ಕೊಮ್ಮೆ ಮನೆಗೆ ಹೋಗುತ್ತಿದ್ದನೆನ್ನಲಾಗಿದೆ.
ಪೊಲೀಸ್ ವಶದಲ್ಲಿದ್ದ ವಿನಾಯಕ
ಕಳೆದ ಶನಿವಾರ ಇಂಡಿಯನ್ ಫಿಶ್‌ಮಿಲ್‌ನ ರೂ.೧೦,೦೦೦ ದಷ್ಟು ಬೆಲೆ ಬಾಳುವ ಮೆಷಿನ್ ಕಳವು ನಡೆದಿತ್ತು. ಈ ಹಿನ್ನೆಲೆಯಲ್ಲಿ ಮಾಲೀಕರು ಉಳ್ಳಾಲ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ವಿಚಾರಣೆಗಾಗಿ ಪೊಲೀಸರು ವಿನಾಯಕನನ್ನು ಒಂದು ದಿನದವರೆಗೆ ವಶಕ್ಕೆ ತೆಗೆದುಕೊಂಡು, ಬಳಿಕ ನಿರಪರಾಧಿಯೆಂದು ಬಿಟ್ಟುಬಿಟ್ಟಿದ್ದರೆನ್ನಲಾಗಿದೆ. ಆದರೆ ವಿಚಿತ್ರವೆಂದರೆ ವಿನಾಯಕ ನಾಪತ್ತೆಯಾದ ನಂತರ ಅಂದರೆ ನಿನ್ನೆ ಬೆಳಿಗ್ಗೆ ಕಳವಾದ ಮೆಷಿನ್ ಗೇಟ್ ಬಳಿ ಪತ್ತೆಯಾಗಿತ್ತು. ಆದ್ದರಿಂದ ಮೆಷಿನ್ ಕಳವುಗೈದಿರುವ ಆರೋಪಿಗಳು ಪೊಲೀಸರಿಗೆ ಸಿಕ್ಕಿಬೀಳುವ ಭೀತಿಯಿಂದ ಅದನ್ನು ತಂದಿಡುವ ವೇಳೆ ವಾಚ್‌ಮೆನ್ ವಿನಾಯಕ ನೋಡಿದ್ದು, ಈ ಬಗ್ಗೆ ಪೊಲೀಸರಿಗೆ ವಿನಾಯಕ ಮಾಹಿತಿ ನೀಡುವನೆಂಬ ಕಾರಣಕ್ಕಾಗಿ ಹತ್ಯೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಪ್ಯಾಂಟ್ ಜಾರಿಸಿರುವ ಸ್ಥಿತಿಯಲ್ಲಿ ಶವ ಕಂಡುಬಂದಿರುವುದರಿಂದ ಕೊಲೆ ಹಿಂದೆ ಸಲಿಂಗಕಾಮದ ಶಂಕೆಯೂ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸರು ಞಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Tagged with
cnews,
feature,
murder
ಸುಳ್ಯ: ಬಯಲಿನಲ್ಲಿ ಹೊಂಡ ತೆಗೆದರು-ಮುಚ್ಚಿದರು
ಸುಳ್ಯ: ಚೆನ್ನಕೇಶವ ದೇವಸ್ಥಾನದ ಎದುರಿನ ಅಂಗಳದಲ್ಲಿ ಇಂಟರ್‌ಲಾಕ್ ಹಾಕುವ ಉದ್ದೇಶದಿಂದ ಜಿಲ್ಲಾಡಳಿತ ಕಳೆದ ವಾರ ಹೊಂಡ ತೆಗದಿದ್ದು, ಅದನ್ನು ಸ್ಥಳೀಯ ನಗರ ಪಂಚಾಯಿತಿಯವರು ಮಣ್ಣು ತುಂಬಿಸಿ ಮುಚ್ಚಿಸಿದ ಘಟನೆ ಬುಧವಾರ ನಡೆದಿದೆ. ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ ಮುಖ್ಯಮಂತ್ರಿಗಳ ನಿಧಿಯಿಂದ ದೇವಸ್ಥಾನದ ಅಂಗಳಕ್ಕೆ ಇಂಟರ್‌ಲಾಕ್ ಹಾಕುವ ಉದ್ದೇಶದಿಂದ ೨೫ ಲಕ್ಷ ರೂ. ಮಂಜೂರುಗೊಂಡಿತ್ತು.ನಿರ್ಮಿತಿ ಕೇಂದ್ರಕ್ಕೆ ಇದರ ಗುತ್ತಿಗೆಯನ್ನು ನೀಡಲಾಗಿತ್ತು. ಸುಮಾರು ೮೦ ಮೀಟರ್‌ನಷ್ಟು ಡಾಮರು ಹಾಕಿದ್ದ ಅಂಗಳವನ್ನು ನಿರ್ಮಿತಿ ಕೇಂದ್ರದವರು ಸಂಪೂರ್ಣ ಅಗೆದು ಹಾಕಿದ್ದು, ಸುಮಾರು ೮ ಅಡಿಯಷ್ಟು ಹೊಂಡ ಮಾಡಿದ್ದರು. ಈ ಜಮೀನು ಧರ್ಮಸ್ಥಳ ಕ್ಷೇತ್ರದ ಒಡೆತನದಲ್ಲಿದ್ದು, ಅವರ ಗಮನಕ್ಕೆ ಬಾರದೆ ಜಿಲ್ಲಾಡಳಿತ ೮ ಅಡಿ ಹೊಂಡ ಮಾಡಿದ ಕ್ರಮಕ್ಕೆ ಆಕ್ಷೇಪನೆ ಬಂದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲಿ ತೆಗೆದ ಮಣ್ಣಿನಲ್ಲಿ ಸ್ಥಳೀಯರೊಬ್ಬರ ಮನೆಗೆ ಹೋಗುವ ಖಾಸಗಿ ರಸ್ತೆ ಅಭಿವೃದ್ಧಿಗೆ ಕೆಲವು ಲೋಡ್ ಮಣ್ಣನ್ನು ಸುರಿಯಲಾಗಿತ್ತು. ಇದರಿಂದ ರಥಬೀದಿಯಲ್ಲಿ ಮಳೆ ನೀರು ನಿಂತು ಸ್ಥಳೀಯರು ಆ ಮಣ್ಣನ್ನು ಅಲ್ಲಿಂದ ತೆರವುಗೊಳಿಸಬೇಕೆಂದು ನಗರ ಪಂಚಾಯಿತಿಗೆ ದೂರು ನೀಡಿದ್ದರು. ಮಣ್ಣು ಎಲ್ಲಿಂದ ತೆಗೆದಿದ್ದಾರೋ ಅಲ್ಲಿಗೆ ಹಾಕುವಂತೆ ನಗರ ಪಂಚಾಯತಿ ಆಡಳಿತ ಸೂಚಿಸಿದ ಮೇರೆಗೆ ಟಿಪ್ಪರ್ ಮೂಲಕ ಮಣ್ಣನ್ನು ತಂದು ಅದೇ ಹೊಂಡಕ್ಕೆ ತುಂಬಿಸಲಾಗಿದೆ.
ಅರ್ಥ್‌ವರ್ಕ್‌ನಲ್ಲಿ ಹೆಚ್ಚು ಕಮಿಶನ್
ಸರ್ಕಾರದ ಯಾವುದೇ ಕಾಮಗಾರಿ ನಡೆದರೂ ಡಾಮರು, ಕಾಂಕ್ರೀಟ್ ಕೆಲಸಕ್ಕಿಂತ ಹೆಚ್ಚು ಕಮಿಶನ್ ಅರ್ಥ್‌ವರ್ಕ್‌ನಲ್ಲಿ ಸಿಗುತ್ತದೆ. ಹಾಗಾಗಿ ಅಧಿಕಾರಿಗಳು, ಗುತ್ತಿಗೆದಾರರು ಜನಪ್ರತಿನಿಧಿಗಳೂ ಇದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇಲ್ಲೂ ಆಗಿರುವುದು ಅದೇ. ವಾಸ್ತವವಾಗಿ ಇಲ್ಲಿ ಇಂಟರ್‌ಲಾಕ್ ಅಳವಡಿಕೆಗೆ ಕೇವಲ ಅರ್ಧ ಅಡಿ ಮಾತ್ರ ಸಮತಟ್ಟು ಮಾಡಿದ್ದರೆ ಸಾಕಿತ್ತು. ಆದರೆ ಹೆಚ್ಚು ಬಿಲ್ ಮಾಡುವ ಉದ್ದೇಶದಿಂದ ೭ರಿಂದ ೮ ಅಡಿಯಷ್ಟು ತಗ್ಗು ಮಾಡಿ ಹಣವನ್ನು ಪೋಲು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Tagged with
dk,
feature,
lnews
ಮಂಗಳೂರು: ಅಭಿವೃದ್ಧಿ ಕಾಮ ಗಾರಿ ನಡೆಸಿದ ಪಂಚಾಯತ್ ಸದಸ್ಯರಿಗೆ ಶುಭಾಶಯ ಕೋರಿ ಹಾಕಿದ್ದ ಬ್ಯಾನ ರನ್ನು ಹರಿದು ಹಾಕಿದ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಪೊಲೀ ಸರು ನಿನ್ನೆ ವಶಕ್ಕೆ ತೆಗೆದುಕೊಂಡಿದ್ದಾರೆ.
ಮೇರಮಜಲು ಗಣೇಶ್ ತೋಟ ನಿವಾಸಿ ಇಬ್ರಾಹಿಂ ಎಂಬಾತ ಕಳೆದ ಒಂದು ವಾರದ ಹಿಂದೆ ಮೇರಮಜಲು, ಅರ್ಕುಲ ಬಳಿ ಪಂಚಾಯತ್ ಸದಸ್ಯ ಸಂತೋಷ್ ಎಂಬವರು, ತಮ್ಮ ಗ್ರಾಮ ದಲ್ಲಿ ನಡೆಸಿದ ಅಭಿವೃದ್ಧಿ ಕಾಮಗಾರಿಗೆ ಕೃತಜ್ಞತೆ ಸಲ್ಲಿಸಿ ಗ್ರಾಮಸ್ಥರು ಅಭಿನಂದನಾ ಬ್ಯಾನರನ್ನು ಹಾಕಿದ್ದರು. ಆದರೆ ಸಂತೋಷ್ ಮೇಲೆ ವೈಯಕ್ತಿಕ ದ್ವೇಷವನ್ನು ಹೊಂದಿದ್ದ ಇಬ್ರಾಹಿಂ ಈ ಬ್ಯಾನರನ್ನು ಹರಿದು ಹಾಕಿದನ್ನಲ್ಲದೆ, ಇದನ್ನು ಪ್ರಶ್ನಿಸಿದ್ದ ಯುವಕರಿಗೆ ಜೀವ ಬೆದರಿಕೆ ಒಡ್ಡಿದ್ದ. ಈ ಬಗ್ಗೆ ಪಂಚಾಯತ್ ಸದಸ್ಯ ಇಬ್ರಾಹಿಂ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿ ದ್ದರು. ಇದಲ್ಲದೆ ಈ ಹಿಂದೆ ಕ್ರೈಸ್ತ ಸಮುದಾಯದ ವಿವಾಹಿತ ಮಹಿಳೆಯನ್ನು ಅಪಹರಿಸಿದ ಬಗ್ಗೆಯೂ ಈತನ ಮೇಲೆ ದೂರುಗಳಿದ್ದವು. ಈ ದೂರನ್ನು ಹಿಂಪಡೆಯುವಂತೆ ಈತ ಮಹಿಳೆಯ ಮನೆಗೆ ತೆರಳಿ ಬೆದರಿಕೆ ಹಾಕಿದ್ದ ಈ ಬಗ್ಗೆಯೂ ದೂರು ದಾಖಲಿಸಿ ಕೊಂಡಿದ್ದ ಪೊಲೀಸರು ಎರಡೂ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಆರೋಪಿಯನ್ನು ನಿನ್ನೆ ಮಧ್ಯಾಹ್ನ ಆತನ ಮನೆಯಿಂದ ವಶಕ್ಕೆ ತೆಗೆದುಕೊಂಡಿದ್ದಾರೆ.
Tagged with
cnews,
feature
ಮಂಗಳೂರು: ಕುದ್ರೊಳಿ ಬಳಿಯ ಅನ್ಸಾರ್ ರೋಡ್‌ನಲ್ಲಿ ಕಳೆದ ಹಲವು ಸಮಯಗಳಿಂದ ಕಾರ್ಯಾಚರಿಸುತ್ತಿದ್ದ ಅನಧಿಕೃತ ವಧಾಗೃಹಕ್ಕೆ ಇಂದು ನಸುಕಿನ ೪:೩೦ರ ಸುಮಾರಿಗೆ ಮನಪಾ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅನ್ಸಾರ್ ರಸ್ತೆಯಲ್ಲಿ ಕಳೆದ ಹಲವು ಸಮಯಗಳಿಂದ ನಯೀಮ್ ಎಂಬವರಿಗೆ ಸೇರಿದ ಅನಧಿಕೃತ ವಧಾಗೃಹ ಕಾರ್ಯಾಚರಿಸುತ್ತಿದ್ದ ಬಗ್ಗೆ ಮನಪಾಕ್ಕೆ ಸಾರ್ವಜನಿಕ ದೂರುಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ನಸುಕಿನ ವೇಳೆ ಮನಪಾ ತಂಡ ದಾಳಿ ನಡೆಸಿದೆ. ದಾಳಿ ನಡೆದ ಸಂದರ್ಭದಲ್ಲಿ ಆಗತಾನೇ ಕಡಿಯಲ್ಪಟ್ಟ ಒಂಬತ್ತು ಕುರಿಗಳು, ಜೀವಂತವಿದ್ದ ೮೧ ಕುರಿಗಳು ಪತ್ತೆಯಾಗಿವೆ. ಕುರಿಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಲಾಗುತ್ತಿರುವುದು ಬೆಳಕಿಗೆ ಬಂದಿದೆ. ಕಡಿಯಲ್ಪಟ್ಟ ಕುರಿಗಳನ್ನು ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ಗೆ ಸಾಗಿಸಲಾಗಿದ್ದರೆ, ಉಳಿದ ಕುರಿಗಳನ್ನು ಸ್ವಾಧೀನಕ್ಕೆ ಪಡೆದುಕೊಂಡು ವಧಾಗೃಹಕ್ಕೆ ಬೀಗ ಜಡಿಯಲಾಗಿದೆ.
ದಾಳಿಯ ನೇತೃತ್ವವನ್ನು ಮನಪಾ ಆರೋಗ್ಯ ಇಲಾಖೆ ವಹಿಸಿಕೊಂಡಿತ್ತು. ಆರೋಗ್ಯ ಇಲಾಖೆ ಅಧಿಕಾರಿ ರಘುನಾಥ್, ಪರಿಸರ ಅಭಿಯಂತರರು ಮಂಜುನಾಥ್ ಶೆಟ್ಟಿ, ಹೆಲ್ತ್ ಇನ್ಸ್‌ಪೆಕ್ಟರ್ ಭರತ್, ಯಶವಂತ್, ಸಂತೋಷ್ ಹಾಗೂ ಅಧಿಕಾರಿ ಮಧು ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Tagged with
cnews,
feature
ಮಾಧ್ಯಮ ಮತ್ತು ಮುಖಂಡರ ನಡುವೆ ಘರ್ಷಣೆ
ಬೆಂಗಳೂರು: ಕಾಮಿಸ್ವಾಮಿ ನಿತ್ಯಾನಂದನನ್ನು ಸಮರ್ಥಿಸಿಕೊಳ್ಳಲು ಮುಂದಾದ ವಿಶ್ವ ಹಿಂದೂ ಪರಿಷತ್ ಮುಖಂಡರು ಹಾಗೂ ಮಾಧ್ಯಮ ದವರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿ ಸುವ ಹಂತ ತಲುಪಿದ ಘಟನೆ ಬೆಂಗಳೂರಿನಲ್ಲಿ ನಡೆಯಿತು.
ಸುದ್ದಿಗೋಷ್ಠಿ ನಡೆಸಲು ಆಗಮಿಸಿದ್ದ ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ದಕ್ಷಿಣ ವಿಭಾಗದ ಅಧ್ಯಕ್ಷ ವಿಜಯಕುಮಾರ್ ರೆಡ್ಡಿ, ಮಾಧ್ಯಮ ಗೋಷ್ಠಿ ಆರಂಭದಲ್ಲೇ ಸುದ್ದಿ ಮಾಧ್ಯಮಗಳ ವಿರುದ್ಧ ಆರೋಪ ಮಾಡಿದರು. ಈ ವೇಳೆ ನಿತ್ಯಾನಂದ ನನ್ನು ಸಮರ್ಥಿಸಲು ಮುಂದಾದ ವಿಜಯಕುಮಾರ್ ರೆಡ್ಡಿ ಹಾಗೂ ಮಾಧ್ಯ ಮದವರ ನಡುವೆ ಮಾತಿನ ಚಕಮಕಿ ನಡೆಯಿತು. ಮಾಧ್ಯಮಗಳು ಹಿಂದೂ ಸ್ವಾಮಿಗಳ ವಿರುದ್ಧ ಪಿತೂರಿ ಮಾಡು ತ್ತಿವೆ. ಈ ಹಿಂದೆ ಕಂಚಿ ಶಂಕರಾ ಚಾರ್ಯ ಶ್ರೀಗಳು, ಬಾಬಾ ರಾಮ್ ದೇವ್, ಪ್ರಮೋದ್ ಮುತಾಲಿಕ್ ವಿರುದ್ದ ಪಿತೂರಿ ನಡೆಸಲಾಗಿತ್ತು. ಇದೀಗ ಪರಮಹಂಸ ನಿತ್ಯಾನಂದನ ವಿರುದ್ಧ ಪಿತೂರಿ ಮಾಡಲಾಗಿದೆ ಎಂದು ಆರೋಪಿಸಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಲು ಹೆಣಗಾಡಿದ ವಿಜಯ ಕುಮಾರ್‌ರೆಡ್ಡಿ, ವಿಶ್ವಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್‌ಸಿಂಘಾಲ್ ನಿತ್ಯಾನಂದನಿಗೆ ಬೆಂಬಲ ನೀಡಿದ್ದಾರೆ ಎನ್ನುವ ಮೂಲಕ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಮಾಧ್ಯಮದವರಿಗೆ ಮಾಹಿತಿ ಒದಗಿಸುವ ಪ್ರಯತ್ನವನ್ನೂ ನಡೆಸಿದರು. ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ತಬ್ಬಿಬ್ಬಾದ ರೆಡ್ಡಿ, ಮಾಧ್ಯಮಗೋಷ್ಟಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಪಲಾಯನ ಮಾಡಿದರು. ಒಟ್ಟಾರೆ, ನಿತ್ಯಾನಂದನನ್ನು ಸಮರ್ಥಿಸಿಕೊಳ್ಳಲು ಬಂದಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡರು ರಾಜ್ಯದ ಜನರೆದುರು ನಗೆಪಾಟಲೀಗೀಡಾದರು.
ನಿತ್ಯಾನಂದ ಬಂಧನ
ಬಿಡದಿ ಆಶ್ರಮದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ವಿವಾದಿತ ಸ್ವಾಮಿ ನಿತ್ಯಾನಂದ ರಾಮನಗರ ನ್ಯಾಯಾಲಯಕ್ಕೆ ಶರಣಾಗಿದ್ದು, ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಅವರನ್ನು ಒಪ್ಪಿಸಲಾಗಿದೆ.
ಧ್ಯಾನಪೀಠದಲ್ಲಿ ಕಳೆದ ಮೂರು ದಿನಗಳ ಹಿಂದೆ ಮಾಧ್ಯಮ ಪ್ರತಿನಿಧಿಗಳು, ಸಂಘಟನೆಗಳು ಹಾಗೂ ನಿತ್ಯ ಭಕ್ತರ ನಡುವೆ ನಡೆದ ಘರ್ಷಣೆ ಬಳಿಕ ನಿತ್ಯಾನಂದ ಸ್ವಾಮಿ ಆಶ್ರಮದಿಂದ ನಾಪತ್ತೆಯಾಗಿದ್ದ. ಇಂದು ಮಧ್ಯಾಹ್ನ ದಿಢೀರನೆ ಜಿಲ್ಲಾ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರತ್ಯಕ್ಷನಾದ ನಿತ್ಯಾನಂದನನ್ನು ನ್ಯಾಯಾಧೀಶರಾದ ಕೋಮಲ್ ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು. ಇದೇ ವೇಳೆ ನಿತ್ಯಾನಂದ ಜಾಮೀನು ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದು, ಗುರುವಾರ ಬೆಳಿಗ್ಗೆ ರಾಮನಗರ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ನಿತ್ಯಾನಂದನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ನಂತರ ಆತನನ್ನು ಬಂಧಿಸಿದ ಪೊಲೀಸರು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ನಿತ್ಯಾನಂದನ ಆರೋಗ್ಯ ತಪಾಸಣೆ ನಡೆಸಿದ್ದಾರೆ.
Tagged with
feature,
nithyananda,
snews
ಉಡುಪಿ: ರಾತ್ರಿ ಮನೆಯತ್ತ ಬೈಕ್‌ನಲ್ಲಿ ಸಾಗುತ್ತಿದ್ದ ಟಿವಿ೯ ಕ್ಯಾಮೆರಾಮೆನ್ ಶಿಜಿತ್ ಎಂಬವರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮೆಣಸಿನ ಪುಡಿ ಎರಚಿ, ಚೂರಿಯಿಂದ ಇರಿದು, ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಿನ್ನೆ ರಾತ್ರಿ ೧೦:೩೦ರ ಸುಮಾರಿಗೆ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ಬಳಿ ನಡೆದಿದೆ.
ಪೊಲೀಸರು ಇಬ್ಬರು ಆರೋಪಿಗಳನ್ನು ರಾತ್ರಿಯೇ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ
ಕೊಡಂಗಳ ಎಂಬಲ್ಲಿ ನಡೆದ ಸ್ನೇಹಿತನ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದ ಶಿಜಿತ್‌ರವರು ರಾಜೇಶ್ ಶೆಟ್ಟಿ ಹಾಗೂ ಚೆಂದ್ರಶೇಖರ್ ಎಂಬವರೊಂದಿಗೆ ರಾತ್ರಿ ಅಲ್ಲಿಂದ ತಮ್ಮ ಮನೆಗೆ ಹೊರಟಿದ್ದರು. ಮೂವರೂ ಪ್ರತ್ಯೇಕ ಬೈಕ್‌ನಲ್ಲಿದ್ದು ದೆಂದೂರುಕಟ್ಟೆಯ ಬಳಿ ತಮ್ಮ-ತಮ್ಮ ಮನೆಯತ್ತ ತೆರಳಿದ್ದರು. ಅಲ್ಲಿಂದ ಶಿಜಿತ್‌ರನ್ನು ಹಿಂಬಾಲಿಕೊಂಡು ಬಂದ ದುಷ್ಕರ್ಮಿಗಳು ಶಾರದಾ ಕಲ್ಯಾಣ ಮಂಟಪದ ಟವರ್ ಬಳಿ ಬೈಕ್ ಅನ್ನು ಓವರ್‌ಟೇಕ್ ಮಾಡಿ ಅವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ ಎನ್ನಲಾಗಿದೆ.
ಈ ವೇಳೆ ನಿಯಂತ್ರಣ ಕಳೆದುಕೊಂಡ ಶಿಜಿತ್ ಬೈಕ್‌ನಿಂದ ಬಿದ್ದಿದ್ದು, ದುಷ್ಕರ್ಮಿಗಳು ಶಿಜಿತ್‌ರ ಹೊಟ್ಟೆಗೆ ಚೂರಿಯಿಂದ ಇರಿದು, ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶಿಜಿತ್ ಬೊಬ್ಬೆ ಹೊಡೆದಿದ್ದು, ಸ್ಥಳೀಯರು ಬರುವುದನ್ನು ನೋಡಿದ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಒಂದೇ ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಮೂವರು ದುರ್ಷರ್ಮಿಗಳು ಮುಸುಕುಧಾರಿಗಳಾಗಿದ್ದು, ದಾಳಿಯಿಂದ ಅಸ್ವಸ್ಥಗೊಂಡಿದ್ದ ಶಿಜಿತ್ ಬಿದ್ದಲ್ಲಿಂದಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಶಿಜಿತ್‌ರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಜಿಲ್ಲಾ ಎಸ್ಪಿ ಬೋರಲಿಂಗಯ್ಯ ಆಸ್ಪತ್ರೆಗೆ ಭೇಟಿ ನೀಡಿ ಶಿಜಿತ್‌ರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಬಂಧಿತ ಆರೋಪಿ ತನ್ನ ಹೆಸರನ್ನು ವಿಶು ಎನ್ನುತ್ತಿದ್ದು, ಶಿಜಿತ್ ಮೇಲೆ ದಾಳಿ ನಡೆಸಲು ಸಂತೋಷ ಕೊಪ್ಪ ಎಂಬಾತ ಹೇಳಿದ್ದಾಗಿ ಮಾಹಿತಿ ನೀಡಿದ್ದಾನೆ. ಘಟನೆಗೆ ಒಮ್ಮೆ ಹುಡುಗಿ ವಿಚಾರ ಕಾರಣ ಎನ್ನುವ ಆರೋಪಿ, ಇನ್ನೊಮ್ಮೆ ಜಾಗದ ವಿಚಾರ ಎಂದು ಹೇಳುತ್ತಿದ್ದಾನೆ. ಪ್ರಕರಣದ ದಾರಿ ತಪ್ಪಿಸುವ ಉದ್ದೇಶದಿಂದ ತಪ್ಪು ಮಾಹಿತಿ ನೀಡುತ್ತಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತನಿಖೆ ಮುಂದುವರಿದಿದೆ.
Tagged with
cnews,
feature
ಮೂಡುಬಿದಿರೆ: ಮೂಡುಬಿದಿರೆ ಪುರಸಭಾ ಸದಸ್ಯ , ಮಾಜಿ ಉಪಾಧ್ಯಕ್ಷ ಕೊರಗಪ್ಪ ಅವರು ಸರಕಾರಿ ಜಾಗದ ಲ್ಲಿರುವ ರಸ್ತೆಯನ್ನು ಅಕ್ರಮಿಸಿ ಆ ರಸ್ತೆಯ ಮಧ್ಯಭಾಗದಲ್ಲಿ ಮನೆ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಈ ಭಾಗದ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾ ರೆಂದು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಹೊನ್ನಯ್ಯ ಅವರು ಪತ್ರಿಕಾಗೋ ಷ್ಟಿಯಲ್ಲಿ ಆರೋಪಿಸಿದ್ದಾರೆ.
ಮಂಗಳವಾರ ಪ್ರೆಸಕ್ಲಬ್‌ನಲ್ಲಿ ನಡೆ ಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿನಗರದ ದಲಿತರ ಮನೆ ಗಳಿಗೆ ಹೋಗುವ ದಾರಿಯನ್ನು ಬಂದ್ ಮಾಡಿ, ಸರ್ವೆನಂಬ್ರ ೧೫೮/೨ರಲ್ಲಿ ಸರಕಾರಿ ರಸ್ತೆಯ ಮಧ್ಯಭಾಗದಲ್ಲೇ ಮನೆ ನಿರ್ಮಿಸುತ್ತಿದ್ದಾರೆಂದು ಆಪಾದಿಸಿದರು.
ದಲಿತರಿಗೆ ಸಿಗುವ ಸೌಲಭ್ಯಗಳಿಗೆ ಅಡ್ಡಗಾಲು ಹಾಕುತ್ತಿರುವ ಕೊರಗಪ್ಪ, ಕೆಲವರಿಗೆ ಡೋರ್ ನಂಬ್ರ ಕೊಡದಂತೆ ಮಾಡಿದ್ದಾನೆ. ಇದಲ್ಲದೆ ಅನೇಕ ಮನೆಗ ಳನ್ನು ಕಟ್ಟಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಬಾಡಿಗೆಗೆ ನೀಡಿದ್ದಾರೆಂದು ಆರೋಪಿಸಿ ರುವ ಅವರು ದಲಿತ ಮುಖಂಡನೆಂದು ಹೇಳಿಕೊಂಡಾತನಿಂದಲೇ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋ ಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಈ ನಿರ್ಮಾಣ ಹಂತದ ಕಟ್ಟಡವನ್ನು ಕೂಡಲೇ ತಡೆಹಿಡಿದು ಸಾರ್ವಜನಿಕ ರಿಗೆ ಅನುಕೂಲವಾಗುವಂತೆ ಮಾಡಿ ಕೊಡಬೇಕೆಂದು ಅವರು ಆಗ್ರಹಿಸಿ ದ್ದಾರೆ. ಅಪ್ಪು, ಗಣೇಶ, ಎ.ಕೊರಗ, ಆಸಿಯಾ,ಸಾಂಟು,ದೇವಕಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.
Tagged with
dk,
feature,
lnews
ಹೆಸರು;ಬೇಡ: ಊರು;ಉಡುಪಿ
ಸಮಸ್ಯೆ: ನನಗೆ ೧೯ ವರ್ಷ ವಯಸ್ಸು. ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ನಾವಿಬ್ಬರೂ ಮುಂದೆ ಮದುವೆಯಾಗಬೇಕೆಂದು ನಿಶ್ಚಿಯಿಸಿದ್ದೇವೆ. ನನಗೆ ಸೆಕ್ಸ್ ಬಗ್ಗೆ ಹೆಚ್ಚಿನ eನವಿಲ್ಲ. ಅವನಿಗೆ ಸೆಕ್ಸ್ ಬಗ್ಗೆ ಆಸಕ್ತಿ ಹೆಚ್ಚು. ನಾವಿಬ್ಬರೂ ಆಗಾಗ ಭೇಟಿಯಾಗುತ್ತೇವೆ. ಈ ವೇಳೆ ಅವನು ನನ್ನ ಸ್ತನವನ್ನು ಹಿಚುಕುತ್ತಾನೆ. ಕಿಸ್ ಕೊಡುತ್ತಾನೆ. ನಾನು ಇದನ್ನು ವಿರೋಧಿಸುವುದಿಲ್ಲ. ನನಗೂ ಇದರಿಂದ ಖುಷಿ ಸಿಗುತ್ತದೆ. ಆದರೆ ಸ್ತನದ ತೊಟ್ಟಿನಿಂದ ಒಂದು ರೀತಿಯ ದ್ರವ ಹೊರಹೋಗುತ್ತದೆ. ನನ್ನ ಸ್ತನಗಳ ಸೈಜ್ ದೊಡ್ಡದಿದೆ. ಮುಟ್ಟಿನ ಐದಾರು ದಿನಗಳ ಮುಂಚೆ ಸ್ತನಗಳಲ್ಲಿ ಹೆಚ್ಚು ನೋವಿರುತ್ತದೆ. ಇದು ಎಷ್ಟೆಂದರೆ ಅದನ್ನು ಮುಟ್ಟಲು ಅಸಾಧ್ಯವಾಗುತ್ತದೆ. ನನಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದೆಯೇ ಎಂದು ಭಯವಾಗುತ್ತಿದೆ. ಆತ ನನ್ನ ಜತೆಯಲ್ಲಿ ರೊಮ್ಯಾನ್ಸ್ ಮಾಡಿದರೆ ಜನನಾಂಗದಿಂದ ಬಿಳಿಬಣ್ಣದ ಅಂಟುದ್ರವ ಸ್ರವಿಕೆಯಾಗುತ್ತದೆ. ಇದರಿಂದ ಏನಾದರೂ ತೊಂದರೆಯಿದೆಯೇ? ನನ್ನ ಸಮಸ್ಯೆಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನೀವಿಬ್ಬರೂ ಪ್ರೀತಿಸುತ್ತಿದ್ದು, ನಿಮ್ಮ ಮದುವೆಗೆ ಯಾವುದೇ ತೊಡಕುಂಟಾಗದು ಎಂಬ ಭರವಸೆ ಇದ್ದರೆ ಚುಂಬನ, ಆಲಿಂಗನ ಅಥವಾ ರೊಮ್ಯಾನ್ಸ್‌ನಲ್ಲಿ ಒಮ್ಮತದಿಂದ ಪಾಲ್ಗೊಳ್ಳಬಹುದು. ಇದು ಗಂಡು-ಹೆಣ್ಣು ಜತೆಯಾದಾಗ ನಡೆಸುವ ಸಹಜ ಕ್ರಿಯೆಯಾಗಿದ್ದು, ಪ್ರೀತಿಯನ್ನು ಹಂಚಿಕೊಳ್ಳಲು ಇರುವ ಸರಳ ಮತ್ತು ಸುಲಭ ವಿಧಾನ. ಇದರಿಂದ ಯಾವುದೇ ಸಮಸ್ಯೆ, ಆರೋಗ್ಯ ತೊಂದರೆ ಖಂಡಿತಾ ಬರುವುದಿಲ್ಲ. ಗಂಡು-ಹೆಣ್ಣು ಪರಸ್ಪರ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ದೇಹದ ಲೈಂಗಿಕ ಅಂಗಗಳಲ್ಲಿ ಬದಲಾವಣೆಯಾಗುತ್ತದೆ. ಈ ಸಮಯದಲ್ಲಿ ಹೆಣ್ಣಿನ ಸ್ತನದ ತೊಟ್ಟಿನಿಂದ ಒಂದು ರೀತಿಯ ದ್ರವ ಸ್ರವಿಕೆಯಾಗುವುದು ಸಹಜ. ಇದರಿಂದ ಯಾವುದೇ ಸಮಸ್ಯೆಯಿಲ್ಲ. ಅದೇ ರೀತಿ ಸ್ತ್ರೀ ಜನನಾಂಗ(ಯೋನಿ)ಯಿಂದಲೂ ದ್ರವ ಸ್ರವಿಕೆಯಾಗುತ್ತದೆ. ಇದು ಲೈಂಗಿಕ ಬಯಕೆಗಳು ಅತಿಯಾದಾಗ, ಗಂಡು ಹೆಣ್ಣಿನ ಲೈಂಗಿಕ ಅವಯವಗಳನ್ನು ಉದ್ರೇಕಿಸಿದಾಗ ತೀರಾ ಸಾಮಾನ್ಯ ಕ್ರಿಯೆ. ಆದ್ದರಿಂದ ಈ ಬಗ್ಗೆ ಭಯಪಡಬೇಕಾದ ಅವಶ್ಯಕತೆಯಿಲ್ಲ. ಮುಟ್ಟಿನ ಸಮಯದಲ್ಲಿ ಸ್ತನ ನೋವು ಸಾಮಾನ್ಯ. ಇದು ಕೆಲವರಲ್ಲಿ ಸ್ವಲ್ಪ ಹೆಚ್ಚಿದ್ದು, ಇನ್ನೂ ಕೆಲವರಲ್ಲಿ ಗಮನಕ್ಕೆ ಬಾರದಿರಬಹುದು. ಆದರೆ ಮುಟ್ಟಿನ ವೇಳೆ ಸ್ತನ ಭಾರವಾದಂತೆನಿಸುವುದು, ನೋವಾಗುವುದು ಸಾಮಾನ್ಯ. ಈ ಬಗ್ಗೆ ಭಯ ಬೇಡ. ನೀವು ಕಾಫಿ, ಕೂಲ್‌ಡ್ರಿಂಕ್ಸ್‌ಗಳ ಸೇವನೆಯಿಂದ ದೂರವಿರಿ. ಪೋಷಕಾಂಶಯುಕ್ತ ಆಹಾರವನ್ನು ಸೇವಿಸುತ್ತಾ ಬನ್ನಿ. ಸೋಯಾ ಉತ್ಪನ್ನಗಳನ್ನು ಅಡುಗೆಯಲ್ಲಿ ಹೆಚ್ಚು ಬಳಸಿ. ಸೂರ್ಯಕಾಂತಿ ಎಣ್ಣೆಯನ್ನು ನೋವಿರುವ ವೇಳೆ ಸ್ತನಗಳಿಗೆ ಹಚ್ಚಬಹುದು. ಸ್ತನನೋವಿಗೆ ಸ್ತನಗಳಲ್ಲಿ ಮುಟ್ಟಿನ ವೇಳೆ ಈಸ್ಟ್ರೋಜೆನ್ ಕಾರ್ಯಾಚರಣೆ ಹೆಚ್ಚುವುದೇ ಆಗಿದೆ.
ಕೊಬ್ಬಿನಾಂಶ ಹೆಚ್ಚಿರುವ ಆಹಾರವನ್ನು ತ್ಯಜಿಸಿ. ಹಣ್ಣು, ತರಕಾರಿ, ದ್ವಿದಳ ಧಾನ್ಯ ಹೆಚ್ಚು ಬಳಸಿ. ಸ್ತನ ನೋವು ಅತಿಯಾದರೆ ಸ್ತನದ ಮೇಲೆ ಐಸ್ ತುಂಡು ಅಥವಾ ಬಿಸಿನೀರನ್ನು ಬಾಟಲಿಗೆ ಹಾಕಿ ನೋವಿನ ಭಾಗಕ್ಕೆ ಒತ್ತಡ ಕೊಡುವುದರಿಂದ ಪರಿಣಾಮ ಸಾಧ್ಯವಿದೆ. ದಿನಕ್ಕೆ ಸಾಕಷ್ಟು ನೀರು ಕುಡಿಯಿರಿ. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಮಹಿಳಾ ತಜ್ಞರನ್ನು ಭೇಟಿಯಾಗಿ ಸಮಾಲೋಚಿಸಿ. ಮದುವೆಗೆ ಮುಂಚೆ ಆತನ ಜತೆ ಇಷ್ಟೇ ಸಾಕು. ಆತ ಇನ್ನೂ ಮುಂದುವರಿಯದಂತೆ ಎಚ್ಚರಿಕೆ ವಹಿಸಿ. ಚುಂಬನ, ಆಲಿಂಗನ, ಸ್ತನಗಳ ಸ್ಪರ್ಶ ನಿಮ್ಮನ್ನು ಮೈಮರೆಯುವಂತೆ ಮಾಡಿ ಬೇರೆಯೇ ಸಮಸ್ಯೆಗೆ ಜಾರಿಬೀಳದಂತೆ ನೋಡಿಕೊಳ್ಳಿ. ಯಾಕೆಂದರೆ ನೀವು ಈ ಹರೆಯದಲ್ಲಿ ಜಾರಿಬಿದ್ದರೆ ನಿಮ್ಮನ್ನು ಮನೆಮಂದಿ, ಸಮಾಜ ದೂರವಿಡುತ್ತದೆ. ಮತ್ತೆ ಸಮಸ್ಯೆ ಪಡುವುದಕ್ಕಿಂತ ಈಗಲೇ ಎಚ್ಚೆತ್ತುಕೊಳ್ಳುವುದು ಒಳಿತಲ್ಲವೇ?
Tagged with
gupta
ಟಿ. ಇಸ್ಮಾಯಿಲ್
ಉಡುಪಿ ಸಮೀಪದ ಕಟಪಾಡಿ ಮಸೀದಿಯ ಅಧೀನದಲ್ಲಿ ಫಕೀರ್ ಶಾಹ್ ವಲಿಯುಲ್ಲಾಹ್ ಎಂಬವರ ಹೆಸರಿನಲ್ಲಿ ಜೂನ್ ೮ ರಿಂದ ೧೦ರ ತನಕ ಉರೂಸ್ ಸಮಾರಂಭ ನಡೆಯಿತು. ಫಕೀರ್ ಶಾಹ್‌ರವರು ತೀರಿ ಹೋಗಿ ಎಷ್ಟೋ ವರ್ಷಗಳಾಗಿರಬಹುದು. ಆದರೆ ಇವರ ಹೆಸರಲ್ಲಿ ಉರೂಸ್ ಎಂಬ ಹರಕೆಯನ್ನು ಮಾಡಿ ಪಾಪದ ಜನರ ಹಣವನ್ನು ಕೊಳ್ಳೆ ಹೊಡೆಯುತ್ತಾರೆ.
ಇದರ ನಿಜ ಅಂಶ ಏನೆಂದರೆ ಅರಬೀ ಭಾಷೆಯಲ್ಲಿ ’ಫಕೀರ್’ ಎಂದರೆ ಅದನ್ನು ಕನ್ನಡಕ್ಕೆ ಅನುವಾದ ಮಾಡಿದರೆ ’ಬೇಡುವವನು’ ಎಂದು ಅರ್ಥ. ಇವರು ಜೀವನದಲ್ಲಿ ಪಾಪದ ಜನರಿಂದ ಯಾಚಿಸಿ ಭಿಕ್ಷೆ ಬೇಡುತ್ತಾ ಜೀವನ ನಡೆಸುತ್ತಿದ್ದ ವ್ಯಕ್ತಿ. ಇವರು ತೀರಿ ಹೋದ ಮೇಲೆ ಇವರ ಗೋರಿಯನ್ನು ಎತ್ತರ ಮಾಡಿ ಕಟ್ಟಿ ಸಿಮೆಂಟ್ ಹಾಕಿ ಹಸಿರು ಬಟ್ಟೆ ಹೊದಿಸಿ ದಿನನಿತ್ಯ ಜನರು ಅಲ್ಲಿಗೆ ಸಂದರ್ಶನ ಮಾಡುವುದರ ಜೊತೆಗೆ ವರ್ಷದಲ್ಲಿ ಒಂದು ಸಲ ಉರೂಸ್ ಅಂದರೆ ಉತ್ಸವ ಮಾಡುವುದಕ್ಕೆ ಮಸೀದಿಯ ಆಡಳಿತ ಮಂಡಳಿಯು ತೀರ್ಮಾ ನಿಸಿತು. ಇದು ಯಾಕೆ ತೀರ್ಮಾನಿಸಿದ್ದೆಂದರೆ ವರಮಾನ ಮಾಡಲಿಕ್ಕೇ ಹೊರತು ಬೇರೆ ಏನೂ ಅಲ್ಲ. ಆ ಮರಣ ಹೊಂದಿದ ವ್ಯಕ್ತಿಯ ಮೇಲೆ ಪ್ರೀತಿ ಇಟ್ಟು ಈ ರೀತಿ ಮಾಡಿದ್ದಲ್ಲ.
ಫಕೀರನು ಬೇಡುತ್ತಾ ಜೀವನ ನಡೆಸಿ ಅವರು ತೀರಿ ಹೋದ ಮೇಲೆ ಅವರ ಗೋರಿಯ ಹತ್ತಿರ ಹೋಗಿ ಬೇಡುವವರು ಎಷ್ಟು ಬುದ್ದಿಶೂನ್ಯರು ಎಂದು ಸ್ವಲ್ಪ ಆಲೋಚನೆ ಮಾಡಿ. ಅಲ್ಲಾಹನು ಪವಿತ್ರ ಕುರಾನಿನಲ್ಲಿ ಹೇಳು ತ್ತಾನೆ. ನೀವು ಮರಣ ಹೊಂದಿದ ವ್ಯಕ್ತಿಯನ್ನು ಕರೆದು ಪ್ರಾರ್ಥಿಸಿದರೆ ಅವರಿಗೆ ಕೇಳುವುದಿಲ್ಲ. ಒಂದು ವೇಳೆ ಅವರಿಗೆ ಕೇಳಿದರೂ ಕೂಡ ಅದಕ್ಕೆ ಉತ್ತರ ಕೊಡಲು ಸಾಧ್ಯವಿಲ್ಲ. ಪರಲೋಕದಲ್ಲಿ ನಿಮ್ಮನ್ನು ಅವರು ನಿಷೇಧಿಸುವರು ಎಂದು ಪವಿತ್ರ ಕುರಾನಿನ ೩೫ನೇ ಅಧ್ಯಾಯದ ೧೪ನೇ ಸೂಕ್ತ ಹೇಳುತ್ತದೆ. ಮಾತ್ರವಲ್ಲ ಪ್ರವಾದಿಯವರನ್ನು ಅಂಗೀಕರಿಸದಿದ್ದರೆ ಅವನು ಮುಸ್ಲಿಮನೇ ಎಂದು ಪವಿತ್ರ ಕುರಾನಿನ ೪ನೇ ಅಧ್ಯಾಯದ ೬೫ನೇ ಸೂಕ್ತ ಹೇಳುತ್ತದೆ.
ಮೇಲೆ ತಿಳಿಸಿದಂತಹ ಗೋರಿಗಳ ಮೇಲೆ ಸಿಮೆಂಟ್ ಗಾರೆ ಹಾಕಿ ಎತ್ತರ ವಾಗಿ ಕಟ್ಟಿದ ಗೋರಿ ಹತ್ತಿರ ಹೋಗಿ ಪ್ರಾರ್ಥಿಸುವುದು ಯಹೂದಿ ಮತ್ತು ನಸ ರಾಕಳ ಕರ್ಮವಾಗಿದೆ. ಅಲ್ಲಾಹನು ಅದನ್ನೂ ಶಪಿಸಿರುತ್ತಾನೆ. ಆದುದರಿಂದ ಸತ್ಯ ವಿಶ್ವಾಸಿಗಳು ಇಂತಹ ಕೆಲಸಗಳಲ್ಲಿ ಭಾಗಿಯಾಗಬಾರದು. ಆದುದರಿಂದ ಕಟಪಾಡಿ ಮಸೀದಿಯ ಆಡಳಿತ ಮಂಡಳಿಯವರೇ ಫಕೀರ್ ಶಾಹ್‌ರವರ ಬಗ್ಗೆ ಜನರಿಗೆ ಬೋಧನೆ ಮಾಡಿ, ಇನ್ನು ಮುಂದೆ ಇಂತಹ ಕೆಲಸ ಮಾಡದೆ ಅಲ್ಲಾಹನಲ್ಲಿ ಮಾತ್ರ ಪ್ರಾರ್ಥಿಸಬೇಕು ಎಂದು ವಿವರಿಸಿ.
ಪವಿತ್ರ ಕುರಾನಿನಲ್ಲಿ ಅಲ್ಲಾಹನು ಹೇಳುತ್ತಾನೆ. ನೀವು ನನ್ನಲ್ಲಿ ಪ್ರಾರ್ಥಿಸಿರಿ ನಾನು ನಿಮಗೆ ಉತ್ತರ ಕೊಡುತ್ತೇನೆ. ನನ್ನಲ್ಲಿ ಪ್ರಾರ್ಥಿಸಲಿಕ್ಕೆ ಅಹಂಕಾರ ಪಡು ವವನು ಖಂಡಿತವಾಗಿಯೂ ನರಕ ಪ್ರವೇಶಿಸುವನು. ಪವಿತ್ರ ಕುರಾನಿನ ೪೦ನೇ ಅಧ್ಯಾಯ, ೬೦ನೇ ಸೂಕ್ತ.
ಪ್ರಪಂಚದ ೭೫೦ ಕೋಟಿ ಜನರನ್ನು ನಿಯಂತ್ರಿಸುವ ಗಾಳಿ, ಮಳೆ, ಮರ, ಸೂರ್ಯಚಂದ್ರ, ನಕ್ಷತ್ರ, ಸಮುದ್ರ ಇಡೀ ಜಗತ್ತನ್ನೇ ಸೃಷ್ಟಿಸಿದ ಅಲ್ಲಾಹನನ್ನು ಬಿಟ್ಟು ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಫಕೀರ್ ಶಾಹ್‌ರವರಲ್ಲಿ ಹೋಗಿ ಬೇಡುವವರು ಈಗಿನ ಕಾಲದಲ್ಲಿಯೂ ಇದ್ದಾರೆ ಎಂದರೆ ನಿಜಕ್ಕೂ ಬುದ್ದಿ ಶೂನ್ಯ ಎಂದು ಹೇಳಬಹುದು. ಅಲ್ಲಾಹನು ಪವಿತ್ರ ಕುರಾನಿನಲ್ಲಿ ಹೀಗೆ ಹೇಳು ತ್ತಾನೆ. ಜನರೇ ಒಂದು ಉದಾಹರಣೆ ಕೊಡಲಾಗುತ್ತಿದೆ. ಗಮನವಿಟ್ಟು ಕೇಳಿರಿ, ನೀವು ಅಲ್ಲಾಹನನ್ನು ಬಿಟ್ಟು ಯಾವ ಆರಾಧ್ಯರನ್ನು ಪ್ರಾರ್ಥಿಸುತ್ತಿರೋ ಅವರೆ ಲ್ಲರೂ ಒಟ್ಟಾಗಿ ಒಂದು ನೊಣವನ್ನು ಸೃಷ್ಟಿಸಲಾರರು. ಮಾತ್ರವಲ್ಲ ನೊಣವು ಅವ ರಿಂದ ಏನನ್ನಾದರೂ ಕಸಿದು ಕೊಂಡೊಯ್ದರೆ ಅವರಿಗೆ ಅದನ್ನು ಬಿಡಿಸಿಕೊಳ್ಳ ಲಿಕ್ಕೂ ಸಾಧ್ಯವಾಗದು. ಸಹಾಯಾರ್ಥಿಗಳೂ ದುರ್ಬಲರೂ ಯಾರಿಂದ ಸಹಾಯ ಬೇಡಲಾಗುತ್ತದೋ ಅವರೂ ದುರ್ಬಲರು. ಪವಿತ್ರ ಕುರಾನಿನ ೨೨ನೇ ಅಧ್ಯಾಯದ ೭೩ನೇ ಸೂಕ್ತ.
ಖಬರ್ ಸಂದರ್ಶನ ಸುನ್ನತ್ತಾಗಿದೆ. ಆದರೆ ಗೋರಿ ಕಟ್ಟಿ ಅದಕ್ಕೆ ಸಿಮೆಂಟ್ ಹಾಕಿ ಹಸಿರು ಬಟ್ಟೆ ಹೊದಿಸಿ ಹಣ ಸಂಪಾದನೆ ಮಾಡಲಿಕ್ಕೆ ಯಾರು ಕಲಿಸಿದ್ದು. ಇದಕ್ಕೂ ಮುಸ್ಲಿಮ್ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಇದು ಯಹೂದಿ ಮತ್ತು ಕ್ರಿಸ್ತಿಯಾನಿಗಳ ಸ್ವಭಾವ ಮಾತ್ರವಲ್ಲ, ಇವರ ಜೊತೆ ಶಿಯಾಗಳು ಕೂಡಾ ಇದ್ದಾರೆ. ಹಾಗಾಗಿ ಸುನ್ನಿ ಎಂದು ಹೇಳಿ ನಡೆಯುವವರಿಗೆ ಈ ಕೆಲಸ ಹೇಳಿದ್ದಲ್ಲ. ಸುನ್ನಿ ಅಂದರೆ ಸುನ್ನತ್ತನ್ನು ನಿರ್ವಹಿಸುವವನು. ಇದು ನೇರ ವಿರುದ್ದ. ಸಿಗರೇಟ್ ಪ್ಯಾಕ್‌ನಲ್ಲಿ ಬರೆದಿದೆ ಇದು ‘ಆರೋಗ್ಯಕ್ಕೆ ಹಾನಿಕರ’ ಎಂದು. ಆದರೂ ಜನರು ಅದನ್ನು ಸೇದುತ್ತಾರೆ. ಅದೇ ರೀತಿ ಗೋರಿಯ ಮೇಲೆ ಹೊದಿಸಿದ ಬಟ್ಟೆಯಲ್ಲಿ ಬರೆದಿದೆ ಅಲ್ಲಾಹನನ್ನು ಮಾತ್ರ ಕರೆದು ಪ್ರಾರ್ಥಿಸಬೇಕು ಎಂದು. ಆದರೆ ಜನರು ಗೋರಿಯ ಬಳಿ ಹೋಗಿ ಪ್ರಾರ್ಥಿಸುತ್ತಾರೆ. ಮುಸ್ಲಿಮರೇ ಎದ್ದೇಳಿ ಶಿರ್ಕ್, ಬಿದ್ ಹತ್, ಕುರಾಫಾತುಗಳಿಂದ ಹೊರಬನ್ನಿ ಅಲ್ಲಾಹನನ್ನು ಮಾತ್ರ ಕರೆದು ಪ್ರಾರ್ಥಿ ಸೋಣ. ಇದೇ ಮಾರ್ಗವನ್ನು ಸ್ವೀಕರಿಸಿದ ಅಲ್ಲಾಹನ ಪ್ರವಾದಿಯವರು, ಸಜ್ಜ ನರು, ಸಿದ್ದೀಕಿಗಳು, ಹಾರೀಫಿಗಳು ಅವುಲಿಯಾಕಳು ಇವರೆಲ್ಲ ಅಲ್ಲಾಹನಲ್ಲಿ ಮಾತ್ರ ಪ್ರಾರ್ಥಿಸಿ ಮುಸ್ಲಿಮರಾಗಿ ಜೀವಿಸಿದರು, ಮುಸ್ಲಿಮರಾಗಿ ಮರಣ ಹೊಂದಿದರು. ನಾವು ಕೂಡಾ ಇದಕ್ಕಾಗಿ ಶ್ರಮಿಸೋಣ.
Tagged with
chavadi
ಕೆಲವು ತಿಂಗಳ ಹಿಂದೆ ಸಾಮಾಜಿಕ ತಾಣವಾದ ಫೇಸ್ ಬುಕ್‌ನಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಬಗ್ಗೆ ಪ್ರಕಟವಾದ ವ್ಯಂಗ್ಯಚಿತ್ರವೊಂದು ಇಂತಹ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಈ ಬಗ್ಗೆ ಐಟಿ ಮಂತ್ರಿ ಕಪಿಲ್ ಸಿಬಲ್ ಸಾಮಾಜಿಕ ತಾಣಗಳು ತಮಗೆ ತಾವೇ ಕೆಲವು ನಿರ್ಬಂಧನೆಗಳನ್ನು ಹಾಕಿಕೊಳ್ಳಬೇಕಾದಂತಹ ಅವಶ್ಯಕತೆಯಿದೆ ಎಂದು ಹೇಳಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಮಮತಾ ದೀದಿಯಂತೂ ತನ್ನ ವ್ಯಂಗ್ಯಚಿತ್ರವನ್ನು ಪ್ರಕಟಿಸಿದ ತಾಣವನ್ನೇ ಸ್ತಬ್ಧ ಗೊಳಿಸುವುದಾಗಿ ಬೆದರಿಸಿದ್ದರು. ತಂತ್ರಜ್ಞಾನ ಕ್ರಾಂತಿಯಿಂದಾಗಿ ಈಗ ಎಲ್ಲವೂ ‘ನೆಟ್‌ಮಯ’ವಾಗಿದೆ. ಪೆನ್ನು ಪುಸ್ತಕದ ಜಾಗವನ್ನು ಮಾನಿಟರ್ ಕೀಪ್ಯಾಡ್‌ಗಳು ಆಕ್ರಮಿಸಿವೆ. ರಾಜಕೀಯ ವಿಶ್ಲೇಷಣೆಗೆಂದೇ ಹಲವು ಬ್ಲಾಗ್‌ಗಳು ಹುಟ್ಟಿಕೊಂ ಡಿವೆ. ಅವುಗಳಲ್ಲಿ ಕೆಲವು ತಮ್ಮ ಅಭಿಪ್ರಾಯಗಳನ್ನು ಸ್ವಲ್ಪ ವ್ಯಂಗ್ಯ ವಾಗಿಯೇ ಪ್ರಕಟಿಸುತ್ತವೆ. ಈಗ ರಾಜಕಾರಣಿಗಳ ಕಣ್ಣು ಇಂತಹ ತಾಣಗಳ ಮೇಲೆ ಬಿದ್ದಿದೆ. ಸಾಮಾಜಿಕ ತಾಣಗಳಲ್ಲಾಗಲಿ, ಬ್ಲಾಗ್ ಗಳಲ್ಲಾಗಲಿ ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುವ ಹಕ್ಕು ಎಲ್ಲರಿಗೂ ಇದೆ. ಸದ್ಯ ಕಾಂಗ್ರೆಸ್ ಆಡಳಿತ ಪಕ್ಷ ವಾಗಿರುವುದರಿಂದ ಎಲ್ಲರಿಗೂ ಆ ಪಕ್ಷ ಸುಲಭದ ಗುರಿಯಾಗಿದೆ.
ನಮ್ಮ ಮಂಗಳೂರಿನವರೇ ಆದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಪ್ರಕಾರ ರಾಜಕೀಯ ವ್ಯಂಗ್ಯಚಿತ್ರಗಳನ್ನು ಆಕ್ಷೇಪಾ ರ್ಹವೋ, ಅಲ್ಲವೋ ಎಂಬುವುದನ್ನು ಯಾರು ನಿರ್ಧರಿಸಬೇಕು ಹಾಗೂ ಅದರ ಮಾನದಂಡವೇನೆಂಬುವುದು ಖಚಿತವಿಲ್ಲ. ಆದರೂ ೨೦೦೮ರಲ್ಲಿ ಫೇಕಿಂಗ್ ನ್ಯೂಸ್ ಎಂಬ ತಾಣವನ್ನು ಹುಟ್ಟುಹಾಕಿದ ರೋಶನ್ ತಮ್ಮ ಬರಹಗಳಿಂದಾಗಿ ಹಲವು ಬಾರಿ ಇಕ್ಕಟ್ಟಿಗೆ ಸಿಲುಕಿರುವುದಾಗಿ ತಿಳಿಸುತ್ತಾರೆ. ಮೊದಮೊದಲು ಅನಾಮಧೇಯರಾಗಿ ಉಳಿಯಲು ಬಯ ಸುತ್ತಿದ್ದ ಅವರು ನಂತರದ ದಿನಗಳಲ್ಲಿ ತಮ್ಮ ಹೆಸರನ್ನು ಪ್ರಕಟಿಸಲು ಶುರುವಿ ಟ್ಟರು. ನಿವ್ಸ್ ದ್ಯಾಟ್ ಮ್ಯಾಟರ‍್ಸ್ ನೋಟ್‌ನ ಸಂಪಾದಕ ತನಯ್ ಸುಕುಮಾರ್ ಪ್ರಕಾರ ಸುದ್ದಿಗಳು ಸಮಸ್ಯೆ ಕೇಂದ್ರಿತ ವಾಗಿರಬೇಕೇ ವಿನಃ ವ್ಯಕ್ತಿ ಕೇಂದ್ರಿತವಾ ಗಿರಬಾರದು.
ಯುವ ಪೀಳಿಗೆಯ ಬದಲಾದ ಯೋಚನೆ ಸಮಾಜವನ್ನು ಅಭಿವೃದ್ಧಿ ಯತ್ತ ಕೊಂಡೊಯ್ಯುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಆ ನಿಟ್ಟಿನಲ್ಲಿ ರಾಜ ಕಾರಣಿಗಳು ಟೀಕೆ ಟಿಪ್ಪಣಿಗಳಿಗೆ ಗುರಿ ಯಾಗುವುದು ಸರ್ವೇ ಸಾಮಾನ್ಯ. ತನ್ನನ್ನು ಟೀಕಿಸಿದ ಕೂಡಲೇ ಅವರನ್ನು ಮಾವೋವಾದಿಗಳೆಂದು ಆರೋಪಿಸುವು ದಾಗಲೀ, ಅಂತಹ ತಾಣಗಳನ್ನೇ ಬಹಿ ಷ್ಕರಿಸುವುದಾಗಲೀ ಮಾಡುವುದು ಔಚಿತ್ಯ ವಲ್ಲ. ಹಾಗಂತ ಕುಹಕವಾಡುವುದಕ್ಕೂ ಅದ ರದೇ ಆದ ಇತಿ ಮಿತಿಗಳಿವೆ. ಅವುಗಳನ್ನು ಮೀರಿ ಹೋಗದೆ ಸೀಮಾರೇಖೆಯ ಒಳಗಿದ್ದು ಕೊಂಡೇ ಕಾರ್ಯ ಸಾಧಿಸುವುದು ಜಾಣತನ.
ವಿಡಂಬನಾತ್ಮಕ ಬ್ಲಾಗ್‌ಗಳನ್ನು ಆರಂಭಿಸುವ ಮುನ್ನ ಕೆಲವು ನಿಯಮಗಳನ್ನು ತಪ್ಪದೆ ಪಾಲಿಸ ಬೇಕು. ತಮ್ಮ ಬ್ಲಾಗ್‌ನಲ್ಲಿ ಡಿಸ್‌ಕ್ಲೈಮರ್ ಪುಟ ವೊಂದನ್ನು ತಪ್ಪದೆ ಪ್ರಕಟಿಸಿ. ವಿಡಂ ಬನಾತ್ಮಕ ಲೇಖನಗಳ ಬಗ್ಗೆ ಅಧ್ಯಯನ ನಡೆಸಿ. ತಮ್ಮ ಲೇಖನದ ಬಗ್ಗೆ ಸಂಶಯವಿದ್ದಲ್ಲಿ ಮಾಹಿತಿ ತಂತ್ರಜ್ಞಾನ ಸಂಬಂಧಿತ ವಕೀಲರಲ್ಲಿ ಸಲಹೆ ಕೇಳಿ. ಸತ್ಯಾಂಶ ದಿಂದ ಕೂಡಿದ ವಿಷಯಗಳಿಗೆ ಹೆಚ್ಚಿನ ಮಹತ್ವ ಕೊಡಿ.
ದ ಅನ್‌ರಿಯಲ್ ಟೈಮ್ಸ್ ಎಂಬ ವೀಡಿಯೋ ಸೈಟನ್ನು ಪ್ರಾರಂಭಿಸಿ ರುವ ಕೃಷ್ಣಾ ಹಾಗೂ ಲಕ್ಷ್ಮಣ್ ಎಂಬ ಯುವಕರು ಪ್ರಧಾನ ಮಂತ್ರಿಯನ್ನು ಸಿಂಗಮ್ ಚಿತ್ರದಲ್ಲಿ ಅಜಯ್ ದೇವ್‌ಗನ್ ನಿಭಾಯಿಸಿದ ಪಾತ್ರದಂತೆ ತೋರಿಸಿದ್ದರು. ಇದು ಹಲವು ಪ್ರತಿ ರೋಧಗಳಿಗೆ ಕಾರಣವಾಗಿತ್ತು. ರಾಜ ಕೀಯ ದುರುದ್ದೇಶ ಪೂರಿತ ಬರಹ ಗಳಿಗಾಗಲೀ, ದೃಶ್ಯಾವಳಿಗಾಗಲೀ ತಮ್ಮ ಬೆಂಬಲವಿಲ್ಲ ಎನ್ನವ ಇವರು ಸದ್ಯ ಬಿಜೆಪಿಯ ಶಾಸಕರ ಬಳಿ ಯೋಜನಾ ವಿಷಯಗಳಿಗೆ ಸಂಬಂಧ ಪಟ್ಟ ಕೆಲಸ ಮಾಡುತ್ತಿದ್ದರೂ ಹಲವು ಬಾರಿ ಬಿಜೆಪಿ ಕೂಡ ಅವರ ವಿಡಂಬನಾ ತ್ಮಕ ವಿಡಿಯೋಗಳಿಗೆ ಗುರಿಯಾಗಿದೆ.
ಇಂತಹ ಬ್ಲಾಗ್‌ಗಳು ಹೆಚ್ಚಾಗಿ ರಾಜಕೀಯ ಪಕ್ಷಗಳನ್ನೇ ಹೆಚ್ಚಾಗಿ ಗುರಿ ಮಾಡುವುದರಿಂದ ರಾಜಕಾರಣಿಗಳಿಗೆ ಇವು ನುಂಗಲಾರದ ತುತ್ತಾಗಿ ಪರಿ ಣಮಿಸಿದೆ. ವಿಡಂಬನಾತ್ಮಕ ತಾಣಗಳನ್ನು ಹಾಗೂ ಆಕ್ಷೇಪಾರ್ಹ ಲೇಖನ ಗಳನ್ನಾಗಲೀ, ವ್ಯಂಗ್ಯ ಚಿತ್ರಗಳನ್ನಾಗಲೀ ಪ್ರಕಟಿಸುವ ಸಾಮಾಜಿಕ ತಾಣಗ ಳನ್ನು ತಡೆಹಿಡಿಯಲು ಬಲಿಷ್ಠವಾದ ಕಾನೂನು ತರುವ ಬಗ್ಗೆ ಅಂತರಾ ಷ್ಟ್ರೀಯ ಮಟ್ಟದಲ್ಲೂ ಕೂಗು ಕೇಳಿ ಬರುತ್ತಿದ್ದು ಈ ಬಗ್ಗೆ ಭಾರತೀಯ ಸರ ಕಾರ ಉತ್ಸುಕತೆಯನ್ನು ತೋರಿಸುತ್ತಿರುವುದು ಬ್ಲಾಗ್‌ಗಳಿಗೆ ಹಾಗೂ ಫೇಸ್ಬುಕ್ ಲೇಖಕರುಗಳಿಗೆ ಆತಂಕವನ್ನುಂಟು ಮಾಡಿದೆ. ಪ್ರಜಾಸತಾತ್ಮಕ ದೇಶ ವಾದ ಭಾರತದಲ್ಲಿ ಈ ಬೆಳವಣಿಗೆ ನಿಜವಾಗಿಯೂ ಸರಿಯೇ ಎಂಬ ವಾದ ಕೂಡಾ ಜೊತೆಜೊತೆಗೆ ಎದ್ದಿದೆ.
ತಮ್ಮ ನಿಂದಕರನ್ನು ಯಾವಾಗಲೂ ಗೌರವಿಸಿ ಎಂಬ ಜ್ಞಾನಿಗಳ ಮಾತು ಸರಕಾರಿ ಪುಢಾರಿಗಳಿಗೆ ಅಪಥ್ಯವಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಡಲಿಯೇಟು ಬೀಳುವ ಮುನ್ನ ಎಚ್ಚೆತ್ತು ಕೊಳ್ಳಬೇಕಿದೆ.
* ಸುಶ್ಮಿತಾ, ಮಂಗಳೂರು
Tagged with
lekhana
ಸಿಐಟಿಯುಗೆ ಸೇರ್ಪಡೆಗೊಂಡ ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದು ಸರಿ. ಆದರೆ ನಡೆಸುವ ರೀತಿ ಸರಿ ಯಲ್ಲ. ಕನಿಷ್ಟ ಕೂಲಿ, ತುಟ್ಟಿಭತ್ತೆಯನ್ನು ಯಾವ ಮಾಲ ಕರೂ ಕೊಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಆದರೆ ಗಜೆಟ್ ಪ್ರಕಟಣೆ ಬರಲಿ ಎಂದು ಮಾತ್ರ ಹೇಳಿರುತ್ತಾರೆ. ಹಾಗಿರುವಾಗ ಕಂಪೆನಿಯ ಎದುರು ಅಥವಾ ಡಿಪೋಗಳ ಎದುರು ಪ್ರತಿಭಟನೆ ಮಾಡುವುದು ಸರಿಯಲ್ಲ. ರೋಗಿಯು ಡಾಕ್ಟರಲ್ಲಿ ಹೋಗಬೇಕೇ ಹೊರತು ಗ್ಯಾರೇಜ್‌ಗೆ ಅಲ್ಲ. ಗಜೆಟ್ ಪ್ರಕಟಿಸಲು ವಿಳಂಬಿಸಿದ ಸರಕಾರದ ನೀತಿಯನ್ನು ಸಂಬಂಧಪಟ್ಟ ಸರಕಾರಿ ಕಚೇರಿ ಎದುರು ಪ್ರತಿಭಟಿಸುವ ಬದಲು ಬೀಡಿ ಕಂಪೆನಿಗಳ ಎದುರು ಪ್ರತಿಭಟಿಸಿದ್ದು ಯಾವ ನ್ಯಾಯ?
ಅದರಲ್ಲೂ ಕಾರ್ಮಿಕರು ಕಟ್ಟುವ ಬೀಡಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಮಜಾ ಮಾಡುವ ಸಿಐಟಿಯುನ ನಾಯಕರು ನಿಜವಾಗಿಯೂ ಕಾರ್ಮಿಕರ ಪರ ಇದ್ದಾರೆಯೇ? ಅನ್ನದ ಬಟ್ಟಲಿಗೆ ವಿಷ ಹಾಕುವ ಪ್ರವೃತ್ತಿ ಸಿಐಟಿಯುನ ಪದಾಧಿಕಾರಿಗಳದ್ದು ಎಂದರೆ ತಪ್ಪಾಗುತ್ತದೆಯೇ?
ಇತ್ತೀಚೆಗೆ ಮೂಡಬಿದಿರೆಯ ಗಣೇಶ್ ಬೀಡಿಯ ಡಿಪೋದ ಎದುರು ರಮಣಿ ಅಕ್ಕನ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಮಣಿ ಅಕ್ಕನ ಉದ್ರೇಕದ ಮಾತು ‘ಬೀಡಿ ಡಿಪೋಗಳಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಾಕಲಾಗುವುದು’ ಕೇಳಿದರೆ, ಇವರೂ ಬೀಡಿ ಕಾರ್ಮಿಕರ ಸಂಘಟಕರೇ ಎಂದು ಅನಿಸುವುದಿಲ್ಲವೇ? ಬೀಡಿ ಡಿಪೋಗೆ ಬೆಂಕಿ ಹಚ್ಚಿ ನಾಶ ಮಾಡಿದರೆ ಮತ್ತೆ ಇವರು ಬೀಡಿ ಕಾರ್ಮಿಕರ ಸಂಘವನ್ನು ಬರ್ಖಾಸು ಮಾಡುತ್ತಾರೆಯೇ? ಬೀಡಿ ಉದ್ಯಮವನ್ನು ಬಂದ್ ಮಾಡಲು ಸರಕಾರವೇ ಆರೋಗ್ಯ ಇಲಾಖೆಗೆ ಈಗಾಗಲೇ ಕೆಲವೊಂದು ಸೂಚನೆಗಳನ್ನು ನೀಡಿದೆ. ಸಿಐಟಿಯುನ ಯೂನಿಯನ್ ಕೂಡಾ ಇದಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತಿದೆಯೇ ಎಂಬ ಅನುಮಾನ ನಮಗೆ ಇದೆ. ರಮಣಿ ಅಕ್ಕ ಒಬ್ಬ ಜನಪ್ರತಿನಿಧಿಯಾಗಿದ್ದು, ಈ ರೀತಿಯ ಆಕ್ರೋಶಿತ ವರ್ತನೆ ಶೋಭೆ ತರುವಂತದಲ್ಲ. ಅಲ್ಲದೆ ತನ್ನ ಸಂಘಟನೆಯ ಕಾರ್ಯವ್ಯಾಪ್ತಿಯನ್ನು ಬಿಟ್ಟು ಇನ್ನೊಂದು ಸಂಘಟನೆ ಇರುವ ಬ್ರಾಂಚ್‌ಗೆ ಹೋಗಿ ಕಾರ್ಮಿಕರು ಕಟ್ಟಿದ ಬೀಡಿಯನ್ನು (ಯಾವುದೇ ಮಾಲಕರು ಕಟ್ಟುವ ಬೀಡಿ ಇಲ್ಲ) ಎಳೆದು ಬಂದು ಡಿಪೋದ ಎದುರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವುದು ಸರಿಯೇ? ಗುತ್ತಿಗೆದಾರರ ಪ್ರತಿನಿಧಿಗಳೂ ಇದರಲ್ಲಿ ಸೇರಿದ್ದಾರೆ. ಇನ್ನಾದರೂ ಸಿಐಟಿಯುನ ಸಂಘಟನೆಯಲ್ಲಿ ಇರುವ ಬಡ ಕಾರ್ಮಿಕರು ಇವರ ಡಬ್ಬಲ್ ಗೇಮ್ ಅನ್ನು ಅರ್ಥ ಮಾಡುವಿರಾ?
ಬೀಡಿ ಕಾರ್ಮಿಕರ ಶೋಷಣೆಯಲ್ಲಿ ಗುತ್ತಿಗೆದಾರರ ಪಾಲು ಇದೆ ಎಂದು ಎಲ್ಲರಿಗೂ ತಿಳಿದ ವಿಚಾರ. ಸರಕಾರ, ಕನಿಷ್ಠ ಕೂಲಿ, ತುಟ್ಟಿಭತ್ತೆಯನ್ನು ಜಾರಿ ಮಾಡಿದರೂ ಅದು ಕಾರ್ಮಿಕರಿಗೆ ಸಿಗುವುದು ಬಲು ಅಪರೂಪ. ಯಾಕೆಂದರೆ ಅದನ್ನು ನೀಡುವುದು ಗುತ್ತಿಗೆದಾರರು. ಅದನ್ನು ನುಂಗು ವಂತಹ ಗುತ್ತಿಗೆದಾರರೊಂದಿಗೆ ಸಿಐಟಿಯುನ ಸಂಘಟನೆ ಯೂ ಸೇರಿಕೊಂಡು ಪ್ರತಿಭಟನೆ ಮಾಡುವುದು ಸರಿಯೇ?
ಸಿಐಟಿಯುನ ಇನ್ನೊಂದು ಮುಖ ಕೆಲವೊಂದು ಕಾರ್ಮಿಕರಿಗೆ ಅದರಲ್ಲೂ ನನ್ನಂತಹ ಕಾರ್ಮಿಕರಿಗೆ ತಿಳಿದಿದೆ. ೨೦೦೬ರಲ್ಲಿ ಬೀಡಿ ಕಾರ್ಮಿಕರಿಗೆ ರೂ. ೪೫೦೦ ತುಟ್ಟಿ ಭತ್ತೆ ಅಂತ ಸಿಕ್ಕಿತ್ತು. ಆ ಮೊತ್ತ ಸಿಗುವಂತಾಗಲು ಹೋರಾಟ ನಡೆಸಿ, ಸುಪ್ರೀಂಕೋರ್ಟು ಮೆಟ್ಟಲು ಹತ್ತಿದ್ದು, ಎಐಟಿಯುಸಿ. ಆದರೆ ಈಗ ಕನಿಷ್ಠ ತುಟ್ಟಿಭತ್ತೆ ಜಾರಿಗಾಗಿ ಹೋರಾಟದ ನಾಟಕ ಮಾಡುವ ಸಿಐಯುಟಿನ ಪ್ರತಿನಿಧಿಗಳು ೧೯೯೬ರಲ್ಲಿ ಏರಿಕೆಯಾದ ಮಜೂರಿ, ತುಟ್ಟಿಭತ್ತೆಯನ್ನು ಬಿಟ್ಟುಕೊಟ್ಟು ಕಡಿಮೆ ಮಜೂರಿಗೆ ಮಾಲಕರೊಡನೆ ಒಪ್ಪಂದ ಮಾಡಿದ್ದರು ಎನ್ನುವುದನ್ನು ನಾವು ಇನ್ನೂ ಮರೆತಿಲ್ಲ.
ಬೀಡಿ ಕಾರ್ಮಿಕರು ಕಟ್ಟಿದ ಬೀಡಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ಎಲೆ ಬಂಡಲಿಗೆ ಸೀಮೆ ಎಣ್ಣೆ ಸುರಿದದ್ದು, ಡಿಪೋಗೆ ಬೆಂಕಿ ಹಚ್ಚಲು ಹೊರಟ ಸಿಐಟಿಯು ನಾಯಕರು ಬೀಡಿ ಕಾರ್ಮಿಕರಿಗೆ ಮೋಸ ಮಾಡಿರುತ್ತಾರೆ. ಇಂತಹ ಯೂನಿ ಯನ್ ನಾಯಕರು ಕಾರ್ಮಿಕರ ಪರ ಇದ್ದಾರೆಯೇ ಅಥವಾ ಮಾಲಕರ ಪರ ಇದ್ದಾರೆಯೇ ಎನ್ನುವುದನ್ನು ತಿಳಿಯಬೇಕಿದೆ.
ಸುನಂದ, ನಾಗೇಶ, ಮೂಡಬಿದ್ರೆ
Tagged with
bahiranga
ಮೇ ೨೩ರ ‘ಜಯಕಿರಣ’ ಸಂಚಿಕೆಯಲ್ಲಿ ಪಾಣೆಮಂಗಳೂರಿನ ಜಿ.ಮಯ್ಯದ್ಧಿ ಎಂಬವರು ‘ಇಂಥವರಿಗೆ ಮಾಡಲು ಬೇರೆ ಕೆಲಸ ಇಲ್ಲವೇ?’ ಎಂದು ಪ್ರಶ್ನಿಸಿ ಬರೆದ ಪತ್ರಕ್ಕೆ ಸ್ಪಷ್ಟನೆ. ಮಯ್ಯದ್ಧಿ ಅವರಿಗೆ ಕಾಟಿಪಳ್ಳ ಮಸೀದಿಯ ಕಾಮಗಾರಿ ಯಲ್ಲಿ ನಡೆದ ಅವ್ಯವಹಾರದ ಕುರಿತು ದಾಖಲೆ ಸಮೇತ ಬರೆದರೂ ಇಲ್ಲಿಯ ಜನರು ಭ್ರಷ್ಟರನ್ನೇ ಆಯ್ಕೆ ಮಾಡಿದ್ದರಿಂದ ಮುಜದ್ದಿದ್ ಅವರಂಥ ವರು ಭೂಮಿ-ಆಕಾಶ ಬಿರಿಯುವಷ್ಟು ಆರ್ಭಟಿಸಿದರೂ ಪ್ರಯೋಜನವಾಗದು ಎಂದು ಹೇಳಿದ್ದಾರೆ.
ಬಹುಶಃ ಮಯ್ಯದ್ದಿಯವರು ಚುನಾವಣೆ ಯಲ್ಲಿ ಗೆದ್ದ ಮಾತ್ರಕ್ಕೆ ಒಬ್ಬನು ಮಾಡಿದ ಭ್ರಷ್ಟಾ ಚಾರ ಕಾನೂನುಬದ್ಧವಾಗುತ್ತದೆ ಎಂದು ಭಾವಿ ಸಿದಂತಿದೆ. ಚುನಾವಣೆಯಲ್ಲಿ ಎಂತೆಂಥ ಭ್ರಷ್ಟಾ ತಿಭ್ರಷ್ಟರು, ಅಕ್ರಮಿಗಳು, ಕ್ರಿಮಿನಲ್‌ಗಳು ಆಯ್ಕೆ ಯಾಗುತ್ತಾರೆ ಎಂದ ಮಾತ್ರಕ್ಕೆ ಅವರ ವಿದ್ರೋಹಿ ಕೆಲಸಗಳೆಲ್ಲವೂ ಮಾನ್ಯವಾಗಿದೆ ಎಂದರ್ಥವೇ? ಪೂಲನ್‌ದೇವಿ, ಪಪ್ಪು ಯಾದವ್, ಆರಿಫ್ ಖಾನ್‌ನಂಥ ಡಕಾಯಿತರು, ಮಾಫಿಯಾ ಗ್ಯಾಂಗ್ ನವರ ಆಯ್ಕೆಯನ್ನು ಏನನ್ನೋಣ? ಯಡಿ ಯೂರಪ್ಪ ರಾಜಕಾರಣಿ, ಅವರಿಗೆ ಜನಬೆಂಬಲ ಇದೆಯೆಂದು ತಿಂದು ತೇಗಿದ ಸಾರ್ವಜನಿಕ ಹಣವನ್ನು ರಕ್ಷಿಸಬಾರದೆಂದು ಹೇಳಲಾದೀತೇ?
ಕಾಟಿಪಳ್ಳ ಮಸೀದಿಯಲ್ಲಿ ನಡೆದ ಅವ್ಯವ ಹಾರಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಮೂರು ತಿಂಗಳೊಳಗೆ ತನಿಖೆ ಹಾಗೂ ಚುನಾವಣೆ ನಡೆಸ ಬೇಕೆಂದು ಆದೇಶಿಸಿತ್ತು. ಭ್ರಷ್ಟಾಚಾರದ ಆಡುಂಬೊ ಲವೆನಿಸಿದ ರಾಜ್ಯ ವಕ್ಫ್ ಮಂಡಳಿ ರಾಜಕೀಯ ಒತ್ತಡಕ್ಕೆ ಮಣಿದು ತನಿಖೆಯ ವರದಿಯನ್ನು ಬಹಿರಂಗಪಡಿಸದೆ ಚುನಾವಣೆಗೆ ಮುಂದಾಯಿತು. ವರದಿಯಲ್ಲಿ ಸಿಇಒ ಅವರು ಭ್ರಷ್ಟರಿಗೆ ಚುನಾವಣೆ ಯಲ್ಲಿ ಮೂರು ವರ್ಷ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಬರೆದಿದ್ದರು. ಈ ವರದಿ ಬಹಿರಂಗವಾ ಗಿರುತ್ತಿದ್ದರೆ ಚುನಾವಣೆಯ ಫಲಿತಾಂಶದ ಚಿತ್ರಣವೇ ಬೇರೆಯಾಗುತ್ತಿತ್ತು. ವಕ್ಫ್ ಮಂಡಳಿಯ ಈ ಕುತಂತ್ರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾ ಯಿತು. ಹೈಕೋರ್ಟ್ ನಾಲ್ಕು ತಿಂಗಳಲ್ಲಿ ಉತ್ತರಿಸ ಬೇಕೆಂದು ವಕ್ಫ್‌ಗೆ ಆದೇಶಿಸಿತು. ನಾಲ್ಕು ತಿಂಗಳು ಕಳೆದರೂ ಏನೂ ಕ್ರಮವಿಲ್ಲದ ಕಾರಣ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಯಿತು. ಅದನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾ ಲಯವು ಮತ್ತೆ ವಕ್ಫ್ ಮಂಡಳಿಗೆ ನೋಟಿಸ್ ಜಾರಿಗೊಳಿಸಿತು. ಇದರ ಬಿಸಿಯಿಂದ ಇದೀಗ ಎಚ್ಚೆತ್ತುಕೊಂಡಿರುವ ವಕ್ಫ್ ಮಂಡಳಿ ಸಂಬಂಧ ಪಟ್ಟವರಿಗೆ ವಕ್ಫ್‌ನ ಲೆಕ್ಕ ಪರಿಶೋಧಕರು ಗುರು ತಿಸಿದ ೧೩ ಲಕ್ಷ ಖೋತಾದ ಬಗ್ಗೆ ಶೋಕಾಸ್ ನೋಟಿಸ್ ಜಾರಿ ಗೊಳಿಸಿದೆ. ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಕುರಿತು ಮತ್ತೊಂದು ಬೇರೆಯೇ ಆದ ಹೋರಾಟದ ಪ್ರಕ್ರಿಯೆಗಳಿವೆ. ವಿಶ್ವವಿಖ್ಯಾತ ಬ್ರಿಟಿಷ್ ಕವಿ ಶೆಲ್ಲಿ ‘ನ್ಯಾಯ ಬಂದೇ ಬಿಡುತ್ತದೆ. ಆದರೆ ಅದು ತಡ ವಾಗಿ ಬರುತ್ತದೆ ಎಂದಿದ್ದಾನೆ’
ನ್ಯಾಯ ದೊರೆತು ತಾರ್ಕಿಕ ಅಂತ್ಯ ತಲುಪುವ ತನಕ ನಮ್ಮ ಹೋರಾಟ ನಿಲ್ಲದು. ಏಕೆಂದರೆ ನಮಗೆ ನಮ್ಮನ್ನು ಬೆಂಬಲಿಸಿದ ಜಮಾತ್ ಶೇಕಡಾ ೪೭ರಷ್ಟು ಜನರ ಉತ್ತರದಾ ಯಿತ್ವ ಇದೆ. ಇದು ನಾನು ಮಾಡುವ ಬೇರೆ ಕೆಲಸದ ಜೊತೆಯಾಗಿಯೇ ಸಾಗುವ ಹೆಚ್ಚುವರಿ ಕೆಲಸವಾಗಿದೆ.
ನಾವು ಬಹುಮತದಿಂದ ಆಯ್ಕೆಯಾದ ಕಾರಣ ನಮ್ಮ ವಿರುದ್ಧ ಯಾವುದೇ ದೂರು ಬಂದರೆ ಸ್ವೀಕರಿಸಬಾರದೆಂದು ಸುರತ್ಕಲ್ ಆರಕ್ಷಕ ಠಾಣೆಯ ಠಾಣಾಧಿಕಾರಿಯವರಿಗೆ ಲಿಖಿತ ಮನವಿ ಮಾಡುವಷ್ಟು ವಿದ್ಯೆ, ಬುದ್ಧಿ, ವಿವೇಕದ ದಾರಿದ್ರ್ಯದಿಂದ ಬಳಲುವವರೊಂದಿಗೆ ಯಾವುದೇ ಮಾತುಕತೆ, ಚರ್ಚೆ, ವ್ಯರ್ಥ. ಊಟವಾಯಿತೇ ಎಂದು ಕೇಳಿದರೆ ಮುಂಡಾಸು ಮೂರು ಮೊಳ ಉದ್ದವಿದೆ ಎಂದು ಅಸಂಬದ್ಧವಾಗಿ ಮಾತನಾ ಡುವವರಿಗೆ ಕಾನೂನು ಹೋರಾಟದ ಜೊತೆಗೆ ಪತ್ರಿಕೆಗಳಲ್ಲಿ ಬರೆಯುವುದೇ ಹೆಚ್ಚು ಪರಿಣಾ ಮಕಾರಿ. ಇವರು ಇದನ್ನು ಓದಿ ಜೀರ್ಣಿಸಿ ಕೊಳ್ಳುವಷ್ಟು ಪ್ರಬುದ್ಧರು ಎಂಬ ಕಾರಣಕ್ಕಾಗಿ ಅಲ್ಲ. ಬದಲಾಗಿ, ಬೇರೆ ಜಮಾತ್‌ನವರಾದರೂ ಬುದ್ಧಿ ಹೇಳಲಿ ಎಂದು.
ಮುಜದ್ದಿದ್, ಕಾಟಿಪಳ್ಳ
Tagged with
nimminda
ವಾಹನಗಳ ಅಸ್ತವ್ಯಸ್ತ ಓಡಾಟದಿಂದ ಗಿಜಿಗುಡುತ್ತಿದ್ದ ಸುರ ತ್ಕಲ್‌ನಲ್ಲಿ ಫ್ಲೈ ಓವರ್ ನಿರ್ಮಾಣವಾಗಿ ಕೆಲವು ಸಮಯ ಕಳೆ ದಿದೆ. ಆದರೆ ವಾಹನಗಳ ಬೇಕಾಬಿಟ್ಟಿ ಓಡಾಟದಿಂದ ಪಾದ ಚಾರಿಗಳಿಗೆ ಇನ್ನೂ ಮುಕ್ತಿ ಸಿಕ್ಕಂತಿಲ್ಲ. ಉಡುಪಿಯಿಂದ ಮಂಗ ಳೂರಿಗೆ ಬರುವ ವಾಹನಗಳು ಫ್ಲೈ ಓವರ್ ಮೇಲ್ಗಡೆಯೇ ಸಂಚ ರಿಸಬೇಕಿದ್ದರೂ ಬಹುತೇಕ ಎಕ್ಸ್‌ಪ್ರೆಸ್, ಸರ್ವಿಸ್ ಬಸ್‌ಗಳು ಕೆಳ ಗಡೆ ಪೇಟೆಯನ್ನು ಹಾದುಹೋಗುತ್ತವೆ. ಇದರಿಂದ ಫ್ಲೈ ಓವರ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ನಸುಕಿನ ವೇಳೆ ಮಂಗ ಳೂರಿನಿಂದ ಸಾಗಿಬರುವ ವಾಹನಗಳು ಫ್ಲೈ ಓವರ್ ಮೇಲೆ ವಿರುದ್ಧ ದಿಕ್ಕಿನಿಂದ ಸಾಗಿಬರುತ್ತವೆ. ಇದರಿಂದ ವಾಹನ ಚಾಲಕರು ಗಲಿಬಿಲಿಗೊಂಡು ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಸಮೀಪದ ಠಾಣಾ ಪೊಲೀಸರು ಈ ಬಗ್ಗೆ ಗಮನಿಸಿ ಫ್ಲೈ ಓವರ್ ಮೇಲೆ ವಾಹನಗಳು ಬೇಕಾಬಿಟ್ಟಿ ಸಂಚಾರ ಮಾಡುವುದನ್ನು ತಡೆಯಬೇಕಾಗಿ ವಿನಂತಿ. ರಜನೀಶ್, ಸುರತ್ಕಲ್
Tagged with
nimminda
ಸಂತೂರ್ ಸಾಬೂನು ಜೊತೆ ಒಂದು ನೀಲಿ ಬಣ್ಣದ ಬಾಲ್‌ಪೆನ್ ಉಚಿತವಾಗಿ ಕೊಡುತ್ತಾರೆ ಎಂದು ಜಾಹೀರಾತು ಹೇಳುತ್ತದೆ. ಆದರೆ ಈ ನೀಲಿ ಬಣ್ಣದ ಪೆನ್ನನ್ನು ಅಂಗಡಿಯವರು ಗ್ರಾಹಕರಿಗೆ ನೀಡದೆ ವಂಚನೆ ಮಾಡುವ ಘಟನೆಗಳು ಹೆಚ್ಚಿನ ಕಡೆ ನಡೆಯುತ್ತದೆ. ಕೆಲವು ಕಡೆ ಮಾತ್ರ ಗ್ರಾಹಕರು ಕೇಳದೆ ಯೂ ಅಂಗಡಿಯ ವರು ಪೆನ್ ನೀಡು ತ್ತಾರೆ. ಆದರೆ ಇನ್ನೂ ಹಲವು ಕಡೆ ಅಂಗಡಿಯವರಲ್ಲಿ ಗ್ರಾಹಕರು ಕೇಳಿದ ಮೇಲಷ್ಟೇ ಕೊಡುತ್ತಾರೆ. ಇದೇಕೆ ಹೀಗೆ? ಇಲ್ಲಿ ಅಂಗಡಿಯವರು ಸಂತೂರ್ ಸಾಬೂನು ಜೊತೆ ಸಿಗುವ ಪೆನ್ ಅನ್ನು ಮಾರಿ ಹಣ ಮಾಡುತ್ತಾರೆ. ಇದು ಗ್ರಾಹಕರಿಗೆ ಮಾಡುವ ವಂಚನೆಯಲ್ಲವೇ?
ಈ ಹಿಂದೆಯೂ ಸಾಬೂನು, ಪೇಸ್ಟ್ ಕಂಪೆನಿಗಳ ಜೊತೆ ಕೆಲವು ಸಣ್ಣಪುಟ್ಟ ವಸ್ತುಗಳು ಫ್ರೀ ಎಂದು ಬರೆಯಲಾಗುತ್ತಿತ್ತು. ಆದರೆ ಗ್ರಾಹಕರಿಗೆ ಕೊಡುವಲ್ಲಿ ಮಾತ್ರ ಅಂಗಡಿ ಮಾಲಕರು ನಿರಾಸಕ್ತಿ ವಹಿಸುತ್ತಾರೆ. ಬಿಸ್ಕತ್ ಕಂಪೆನಿಯೊಂದು ಒಂದು
ಪ್ಯಾಕೆಟ್ ಬಿಸ್ಕತ್ ಜೊತೆ ಗ್ಲಾಸ್ ಬೌಲ್ ಅನ್ನು ಉಚಿತವಾಗಿ ನೀಡುತ್ತಿತ್ತು. ಇಲ್ಲಿ ಅಂಗಡಿ ಮಾಲಕರು ಗ್ಲಾಸ್ ಬೌಲ್ ಅನ್ನು ಪ್ರತ್ಯೇಕವಾಗಿ ಗ್ರಾಹಕರಿಗೆ ಮಾರಿ ಹಣ ಮಾಡುತ್ತಿದ್ದುದು ಬೆಳಕಿಗೆ ಬಂದಿತ್ತು. ಬರೆಯಲು ಹೊರಟರೆ ಇಂಥ ಬೇಕಾದಷ್ಟು ವಿಚಾರ ಗಳಿವೆ. ಗ್ರಾಹಕರಿಗೆ ಸಿಗದ ಇಂಥ ಫ್ರೀ ವಸ್ತುಗಳನ್ನು ಕಂಪೆನಿ ಕೊಡುವುದಾದರೂ ಯಾಕೆ?
ಪ್ರೀತಿ ಕುಕ್ಯಾನ್, ಉಡುಪಿ
Tagged with
nimminda
ಭಾರೀ ವೇಗವಾಗಿ ಆರಂಭಗೊಂಡಿದ್ದ ಪಾವಂಜೆ ಸೇತುವೆ ಕಾಮಗಾರಿ ಈಗೀಗ ನಿಧಾನ ಗತಿಯಲ್ಲಿ ಸಾಗುತ್ತಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಯಾಗುತ್ತಿದೆ. ವಾಹನಗಳು ಸೇತುವೆಯ ಎರಡೂ ಬದಿಗಳಲ್ಲಿ ತಿರುವು ಪಡೆದು ಸಾಗ ಬೇಕಿದೆ. ಇಲ್ಲಿ ಸೇತುವೆ ಕಾಮಗಾರಿಯ ಬಗ್ಗೆ ಅರಿವಿರದೆ ವಾಹನಗಳು ಒಂದೊಮ್ಮೆ ವೇಗವಾಗಿ ಸಂಚರಿಸಿದಲ್ಲಿ ಅಪಾಯ ನಿಶ್ಚಿತ. ರಸ್ತೆಯಲ್ಲಿ ಸಂಚರಿಸುವ ತಿರುವು ಗಮನಕ್ಕೆ ಬರುವಂತೆ ನೋಡಿಕೊಳ್ಳುವ ಲೈಟ್ ಆಗಲೀ, ರಿಫ್ಲೆಕ್ಟರ್ ಆಗಲೀ ಇಲ್ಲಿಲ್ಲ. ಇದರಿಂದ ವಾಹನ ಚಾಲಕರು ಸೇತುವೆಯ ಪಕ್ಕ ಬಂದಾಗ ಗಲಿಬಿಲಿ ಗೊಳ್ಳುವ ಸಾಧ್ಯತೆಯಿದೆ. ಪಾವಂಜೆ ಸೇತುವೆ ಕಾಮಗಾರಿಯನ್ನು ಆದಷ್ಟು ಬೇಗನೆ ಮುಗಿಸಿದಲ್ಲಿ ವಾಹನ ಸವಾರರು, ಪಾದಚಾರಿಗಳಿಗೆ ಅನುಕೂಲ ವಾಗಲಿದೆ. ಸೇತುವೆ ನಿರ್ಮಾಣಕ್ಕಾಗಿ ನಂದಿನಿ ನದಿಗೆ ಮಣ್ಣು ತುಂಬಿಸಲಾಗಿದೆ. ಇದನ್ನು ತೆಗೆ ಯದೇ ಇದ್ದಲ್ಲಿ ಮಳೆಯಿಂದ ನದಿಯಲ್ಲಿ ನೀರಿನ ಮಟ್ಟ ಏರಿದಲ್ಲಿ ನದಿ ಪಾತ್ರದ ಮನೆಗಳು ಮುಳುಗುವ ಭೀತಿಯನ್ನು ಎದು ರಿಸಲಿವೆ. ಕಾಮಗಾರಿ ನಡೆಸು ತ್ತಿರುವ ನವ ಯುಗ್ ಕನ್‌ಸ್ಟ್ರಕ್ಷನ್ ಕಂಪೆನಿ ಕಾಮ ಗಾರಿ ಯನ್ನು ವೇಗ ಪಡೆಯುವಂತೆ ನೋಡಿ ಕೊಂಡು ವಾಹನ ಸವಾರರ ಪ್ರಾಣ ರಕ್ಷಣೆ ಯನ್ನೂ ಮಾಡಬೇಕಿದೆ.
ಹೆಚ್.ರಮೇಶ್, ನಡುಗೋಡು
Tagged with
nimminda
ಕೇಂದ್ರ ಸರಕಾರ ಮಾತ್ರ ದೇಶ ದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಗಳಲ್ಲಿ ಭಾಗಿಯಾಗಿದ್ದ ಉಗ್ರರನ್ನು ಪೋಷಿಸುತ್ತಿದೆ ಎಂಬ ಮಾತು ಸರಿ ಯಲ್ಲ. ಯಾಕೆಂದರೆ ರಾಜ್ಯ ಸರ ಕಾರವೂ ಉಗ್ರರ ಪೋಷಣೆಯಲ್ಲಿ ಹಿಂದೆ ಬಿದ್ದಿಲ್ಲ. ದೇಶದ ಪಟ್ಟಣಗಳಾದ ಪುಣೆ, ಗೋವಾ, ಬೆಂಗಳೂರಿನಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟಗಳ ಆರೋಪಿ ಉಗ್ರರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಆರಾಮಾಗಿ ದ್ದಾರೆ. ಇವರಿಗೆ ಎಲ್ಲಾ ರೀತಿಯ ಐಶಾ ರಾಮಿ ಸವಲತ್ತುಗಳು ಸಿಗುತ್ತಿವೆ. ಇವ ರನ್ನು ಸರಕಾರ ಭಾರೀ ಮುತು ವರ್ಜಿ ಯಿಂದ ನೋಡಿಕೊಳ್ಳುತ್ತಿದೆ. ಜೈಲಿನಲ್ಲಿ ಇವರ ಭದ್ರತೆಗಾಗಿಯೇ ಸರಕಾರ ಕೋಟ್ಯಂತರ ರೂಪಾಯಿ ವ್ಯಯಿ ಸುತ್ತಿದೆ. ಇವರ ಮೇಲಿನ ಪ್ರಕರಣಗಳ ವಿಚಾರಣೆ ತ್ವರಿತಗತಿಯಲ್ಲಿ ನಡೆದು ಬೇಗನೆ ಶಿಕ್ಷೆಯಾಗುವಂತೆ ನೋಡಿ ಕೊಂಡಿದ್ದರೆ ರಾಜ್ಯ ಸರಕಾರದ ಘನತೆ ಇನ್ನಷ್ಟು ಹೆಚ್ಚುತ್ತಿತ್ತು. ಆದರೆ ರಾಜ ಕೀಯ, ಕುರ್ಚಿಯನ್ನು ಉಳಿಸಿ ಕೊಳ್ಳುವ ಹೋರಾಟದೆದುರು ದೇಶ ದಲ್ಲಿ ಸಂಭವಿಸಿರುವ ಬಾಂಬ್ ಸ್ಫೋಟಗಳನ್ನು ಜನಪ್ರತಿನಿಧಿಗಳು ಮರೆತೇ ಹೋಗಿರುವುದು ವಿಷಾದ ನೀಯವಲ್ಲದೆ ಮತ್ತೇನು? ರಾಜ್ಯ ಸರ ಕಾರ ಇನ್ನೆಷ್ಟು ಸಮಯ ಉಗ್ರರನ್ನು ರಕ್ಷಿಸೀತು?
ರಕ್ಷಿತ್, ಕೈಕಂಬ
Tagged with
nimminda
ಭಗವಂತ ಜನರ ಇಷ್ಟಾರ್ಥವನ್ನು ಸಿದ್ಧಿಸುತ್ತಾನೆ ಎಂಬ ಕಾರಣಕ್ಕೆ ಭಕ್ತರು ಆತನಿಗೆ ಹರಕೆ ಹೊರುವುದು ಸಾಮಾನ್ಯ. ದೇವರ ಹುಂಡಿಗೆ ಲೆಕ್ಕವಿಲ್ಲದಷ್ಟು ಹಣ ಕೊಂಡೊಯ್ದು ಹಾಕುತ್ತಾರೆ. ಬಂಗಾರ, ಬೆಳ್ಳಿ, ವಜ್ರ, ವೈಢೂರ್ಯಗಳನ್ನು ಅವನ ಸನ್ನಿಧಿಗೆ ಅರ್ಪಿಸಿ ಕೃತಾರ್ಥರಾಗುವುದೂ ಇದೆ. ಹೀಗೆ ಭಕ್ತರು ಕೊಡುವ ಹಣ ಅಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಉಪಯೋಗವಾದರೆ ಉಳಿದ ಹಣ ಹಾಗೆಯೇ ಕೊಳೆಯುತ್ತಾ ಬಿದ್ದಿರುತ್ತದೆ. ನಮ್ಮಲ್ಲಿರುವ ಮಠ-ಮಂದಿರಗಳು ಒಂದೊಂದು ಗ್ರಾಮವನ್ನು ದತ್ತು ಪಡೆದುಕೊಂಡರೂ ಗ್ರಾಮ ಮತ್ತು ಅಲ್ಲಿರುವ ಜನರ ಬದುಕು ಸುಧಾರಿಸುವುದರಲ್ಲಿ ಸಂಶಯವಿಲ್ಲ. ಆದರೆ ಹಾಗೆ ಮಾಡಲು ಕಾವಿಧಾರಿಗಳು ಬಿಡುವುದಿಲ್ಲ. ಮಠ, ಮಂದಿರಗಳು ಸಂಪತ್ತನ್ನು ಅಕ್ರಮವಾಗಿ ಕೂಡಿಟ್ಟಿದ್ದು ಖಂಡಿತಾ ಸರಿಯಲ್ಲ. ಇದರಿಂದಲೇ ನಮ್ಮ ದೇಶ ಆರ್ಥಿಕತೆಯಲ್ಲಿ ಹಿಂದುಳಿದಿದೆ. ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಲ್ಲೂ ಧನ-ಸಂಪತ್ತು ಕೊಳೆಯುತ್ತಾ ರಾಶಿ ಬಿದ್ದಿದೆ. ಇದನ್ನು ಸರಕಾರ ಕೂಡಲೇ ತನ್ನ ವಶಕ್ಕೆ ತೆಗೆದುಕೊಂಡು ನಾಡಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವುದು ಒಳಿತು.
ರಾಕೇಶ್ ಆಚಾರ್ಯ, ನಿm
Tagged with
nimminda
ಜೋರಾಗಿ ಮಳೆ ಸುರಿದರೆ ಮಂಗಳೂರಿನ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಭೀತಿ ಎದುರಾಗುತ್ತದೆ. ಕೊಟ್ಟಾರ, ಕೋಡಿಕಲ್, ನಂತೂರು, ಪಡೀಲ್, ಅಳಪೆ, ಕುದ್ರೋಳಿ ಪರಿಸರದಲ್ಲಿ ವಾಸಿ ಸುವ ಜನರು ಸಂಕಷ್ಟ ಕ್ಕೀಡಾ ಗುತ್ತಾರೆ. ಪ್ರತಿವರ್ಷವೂ ಇದೇ ಪರಿಸ್ಥಿತಿ ಆಗಿರುವ ಕಾರಣ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಮಹಾನಗರ ಪಾಲಿಕೆಗೆ ಶಪಿಸುವಂತಾಗಿದೆ. ಕೃತಕ ನೆರೆಗೆ ಕಾರಣ ಚರಂಡಿಗಳಲ್ಲಿ ಹೂಳು ತುಂಬಿರುವುದು. ಮಳೆಗಾಲಕ್ಕೂ ಮುನ್ನ ಮನಪಾ ಗಮನಹರಿಸಿ ಚರಂಡಿಗಳ ಹೂಳು ತೆಗೆದರೆ ಮಾತ್ರ ಸಮಸ್ಯೆ ನಿವಾರಣೆಯಾಗುವುದು. ಇಲ್ಲವಾದರೆ ನೀರು ಹರಿಯಲು ಜಾಗ ಸಾಲದೆ ಚರಂಡಿ ತುಂಬಿ ನೀರು ಮೇಲಕ್ಕೆ ಬರುತ್ತದೆ.
ಮಂಗಳೂರಿನಲ್ಲಿ ಈಗಾಗಲೇ ಮಳೆ ಆರಂಭಗೊಂಡಿದೆ. ಚರಂಡಿಗಳಲ್ಲಿ ಮಳೆಯ ನೀರು ಹರಿಯುವಂತೆ ನೋಡಿಕೊಳ್ಳಲು ಮನಪಾ ಇನ್ನಾದರೂ ಕ್ರಮ ಕೈಗೊಳ್ಳಲಿ. ವಿನ್ಯಾಸ್, ಕೊಟ್ಟಾg
Tagged with
nimminda
ಮಂಗಳೂರು: ಮಂಗಳೂರು ತಾಲೂಕು ಪಂಚಾಯತ್ ಅಧೀನದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ/ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ೨೦೧೨-೧೩ ನೇ ಸಾಲಿನಲ್ಲಿ ಸೇರ್ಪಡೆ ಬಯಸುವ ಹಿಂದುಳಿದ ವರ್ಗ ೧, ೨ಎ, ೨ಬಿ, ೩ಎ, ೩ಬಿ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸೇರಿದ ಪಿಯುಸಿ/ಪದವಿ/ಬಿಇ/ ಎಂಬಿಬಿಎಸ್/ಡಿಪ್ಲೊಮಾ/ವೃತ್ತಿಪರ ಕೋರ್ಸು ಇತ್ಯಾದಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಂದ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ವಿದ್ಯಾರ್ಥಿ ನಿಲಯಗಳಲ್ಲಿ/ತಾಲೂಕು ಪಂಚಾಯತ್ ಕಚೇರಿ, ಬಿಸಿಎಂ ವಿಭಾಗ, ಮಂಗಳೂರು ಇಲ್ಲಿಂದ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ ೨೦-೬-೧೨ ರೊಳಗೆ ಅದೇ ಕಚೇರಿಗೆ ಸಲ್ಲಿಸಲು ಮಂಗಳೂರು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ತಿಳಿಸಿರುತ್ತಾರೆ.
Tagged with
briefs
ಮಂಗಳೂರು: ದ.ಕ. ಜಿಲ್ಲೆಯ ಅಬಕಾರಿ ಇಲಾಖಾ ವಾಹನಗಳಿಗೆ ಆವಶ್ಯವಿರುವ ೪ ಮಂದಿ ವಾಹನ ಚಾಲಕರುಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು (ಪ್ರವರ್ಗ ೨ಎ ಸಾಮಾನ್ಯ, ಸಾಮಾನ್ಯ ಅರ್ಹತೆ, ಪರಿಶಿಷ್ಟ ಜಾತಿ (ಗ್ರಾಮೀಣ) ಸಾಮಾನ್ಯ ಅರ್ಹತೆ (ಮಹಿಳೆ) ಒಟ್ಟು ೪ ಹುದ್ದೆ. ದಿನಾಂಕ ೭-೭-೧೨ ರೊಳಗೆ ತಮ್ಮ ಪೂರ್ಣ ಹೆಸರು ಮತ್ತು ವಿಳಾಸ, ವಿದ್ಯಾರ್ಹತೆ, ಹುಟ್ಟಿದ ದಿನಾಂಕ, ಜಾತಿ, ವಾಹನದ ಲೈಸನ್ಸ್, ಮುಂತಾದ ವಿವರಗಳೊಂದಿಗೆ ತಮ್ಮ ಅರ್ಜಿಯನ್ನು ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್, ಅಬಕಾರಿ ಭವನ, ಮೇರಿಹಿಲ್, ಕೊಂಚಾಡಿ, ಮಂಗಳೂರು ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮಂಗಳೂರಿನ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ಇವರನ್ನು ಸಂಪರ್ಕಿಸಬಹುದು.
Tagged with
briefs
ಮಂಗಳೂರು: ರೋಗಿಯ ರೋಗವನ್ನು ವಾಸಿ ಮಾಡಿ ಆತ ಸದೃಡನನ್ನಾಗಿಸುವಲ್ಲಿ ವೈದ್ಯರು ತೋರುವ ಮುತುವರ್ಜಿ ಆಸಕ್ತಿ ಆತನಿಗೆ, ಅವಳಿಗೆ ಚಿಕಿತ್ಸೆ ನೀಡುವಾಗ ಉತ್ಪನ್ನವಾಗುವ ಜೈವಿಕ ತ್ಯಾಜ್ಯ ವಿಲೇವಾರಿಯಲ್ಲಿ ಆಸಕ್ತಿ ತೋರಬೇಕು. ಇಲ್ಲದ್ದಿದ್ದರೆ ಅದರಿಂದ ಬೇರೆಯವರ ಆರೋಗ್ಯ ಜೀವಕ್ಕೆ ಹಾನಿಕಾರಕವಾಗಬಹುದು ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ‍್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಅವರು ತಿಳಿಸಿದ್ದಾರೆ.
ಅವರು ನಿನ್ನೆ ನಗರದ ವೆನ್ಲಾಕ್ ಆಸ್ಪತ್ರೆ ಆರ್‌ಎಪಿಸಿಸಿ ಸಭಾಂಗಣದಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಬೆಂಗಳೂರು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ, ಕರ್ನಾಟಕ ಸರ್ಕಾರ ಇವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ದ.ಕ. ಇವರ ಸಹಯೋಗದೊಂದಿಗೆ ಏರ್ಪಡಿಸಿದ್ದ ಮೂರು ದಿನಗಳ ಜಿಲ್ಲಾ ಮಟ್ಟದ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕಾರ‍್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ೨೬ ಸಾವಿರ ಆಸ್ಪತ್ರೆಗಳಿದ್ದು, ಇವುಗಳಿಂದ ಪ್ರತೀನಿತ್ಯ ೭೩ ಟನ್‌ನಷ್ಟು ತ್ಯಾಜ್ಯ ಉತ್ಪಾದನೆ ಆಗುತ್ತಿದು, ಈ ತ್ಯಾಜ್ಯ ಮಾನವ ಹಾಗೂ ಇತರೆ ಜೀವಿಗಳಿಗೆ ಹಾನಿಕಾರಕವಾಗದಂತೆ ವೈಜ್ಞಾನಿಕವಾಗಿ ವಿಲೇ ಮಾಡಬೇಕೆಂದರು.
ದ.ಕ. ಜಿಲ್ಲೆ ತ್ಯಾಜ್ಯ ನಿರ್ವಹಣೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂಬುದಾಗಿ ‘ಸ್ವಚ್ಛ ಜಿಲ್ಲೆ ಪುರಸ್ಕಾರಕ್ಕೆ ಪಾತ್ರವಾಗಿದ್ದು, ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಲ ಪಂಚಾಯತ್‌ನಲ್ಲಿ ಉತ್ಪಾದಿಸುತ್ತಿರುವ ಕಡಿಮೆ ದರದ ಸೇಫ್ಟಿ ನ್ಯಾಪ್‌ಕಿನ್‌ಗಳಿಗೆ ೧೫ ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಮಹಿಳೆಯರಿಂದ ಬೇಡಿಕೆ ಬಂದಿದೆ. ಇನ್ನು ಮುಂದೆ ಜಿಲ್ಲೆಯ ಶಾಲೆಗಳಲ್ಲಿ ಆಸ್ಪತ್ರೆಗಳಲ್ಲಿ ನ್ಯಾಪ್‌ಕಿನ್ ಡಿಸ್ಪೋಸೆಬಲ್ ಟಿನ್‌ಗಳನ್ನು ಇಡಲು ಯೋಜಿಸಲಾಗುತ್ತಿದೆಯೆಂದರು. ಇಂದು ಘನ, ದ್ರವ, ತ್ಯಾಜ್ಯಗಳ ವಿಲೇವಾರಿ ಸಮಸ್ಯೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚಾಗಿದೆ. ಆದ್ದರಿಂದ ನಾವು ನಮ್ಮ ಗ್ರಾಮೀಣ ಮಹಿಳೆಯರಲ್ಲಿ ಸೇಫ್ಟಿ ನ್ಯಾಪ್‌ಕಿನ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವಂತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇವುಗಳ ಸರಬರಾಜಿಗೆ ಕ್ರಮ ವಹಿಸುವಂತೆ ವೈದ್ಯಾಧಿಕಾರಿಗಳನ್ನು ವಿನಂತಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಚ್. ವಿನಯ ಕುಮಾರ್ ವಹಿಸಿದ್ದರು.
ಡಾ. ವಾಮನ ಕುಲಕರ್ಣಿ, ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ. ಹೇಮಲತಾ ಮುಂತಾದವರು ಉಪಸ್ಥಿತರಿದ್ದರು. ಕಾರ‍್ಯಾಗಾರದಲ್ಲಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಸಿಬ್ಬಂದಿ ಮುಂತಾದವರು ಹಾಜರಿದ್ದರು.
Tagged with
briefs
ಮಂಡಿ: ಎಂಟು ಮಂದಿ ಚೀನಿ ಗೂಢಚರ್ಯೆರನ್ನು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಿಂದ ಬಂಧಿಸಲಾಗಿದ್ದು, ಅವರಿಂದ, ಸುಮಾರು ೩೦ ಲಕ್ಷ, ಮೊಬೈಲ್ ಫೋನ್, ಹಲವು ಸಿಮ್ ಮತ್ತು ನಾಲ್ಕು ಲಾಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಸುಮಾರು ೨ ಕೋಟಿ ಬೆಲೆಬಾಳುವ ಐಶಾರಾಮಿ ಬಂಗಲೆಯಲ್ಲಿ ವಾಸವಾಗಿದ್ದ ಎಂಟು ಗೂಢಚರ್ಯೆರು, ತಾವು ಬಡಗಿ ಹಾಗೂ ಪೈಂಟರ್ ಎಂದು ಹೊರ ಜಗತ್ತಿಗೆ ತೋರುತ್ತಿದ್ದರು.
ಮನೆಯ ಮಾಲಕ ಪಲಾಯಣ ಗೈದಿದ್ದು, ದೆಹಲಿಯಲ್ಲಿರಬೇಕೆಂದು ಶಂಕಿಸಲಾಗಿದೆ. ಆತನ ಬಂಧನಕ್ಕಾಗಿ ಹಿಮಾಚಲ ಪೊಲೀಸರ ತಂಡ ದೆಹಲಿಗೆ ತೆರಳಿದೆ.
Tagged with
nnews
ನವದೆಹಲಿ: ವ್ಯಕ್ತಿಯೊಬ್ಬನಿಗೆ ರೈಲು ಡಿಕ್ಕಿಯಾಗಿ ಆತನ ಎರಡು ವರ್ಷದ ಮಗಳು ಪವಾಡ ಸದೃಶವಾಗಿ ಪಾರಾಗಿರುವ ಘಟನೆ ವರದಿಯಾಗಿದೆ.
ಬಿಹಾರದ ಮಧುಬಾನಿ ಪ್ರದೇಶ ರಾಜೇಶ್ ಠಾಕೂರ್ (೨೫), ಸೋಮವಾರ ರಾತ್ರಿ ೧೦ರ ವೇಳೆಗೆ ದೆಹಲಿಯ ಸಮಯ್‌ಪುರ ಬದ್ಲಿಯಲ್ಲಿ ಹಳಿ ದಾಟುತ್ತಿದ್ದ ವೇಳೆ ಕಲ್ಕಾ ಮೇಲ್ ರೈಲು ಡಿಕ್ಕಿಯಾಗಿತ್ತು.
ಠಾಕೂರ್ ಸ್ಥಳದಲ್ಲಿಯೇ ಮೃತಪಟ್ಟರೆ, ಆತನ ಮಗಳು ಪೂಜಾ ಪವಾಡ ಸದೃಶವಾಗಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾಳೆ. ಮೃತರು ಪತ್ನಿ ರಿಂಕು ದೇವಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
Tagged with
nnews