ವ್ರಾಕ್ಲಾ: ರಶ್ಯಾ ವಿರುದ್ಧದ ತನ್ನ ಪ್ರಥಮ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡಿದ್ದ ಜೆಕ್ ಗಣರಾಜ್ಯ ನಿನ್ನೆ ಗ್ರೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ತಿರುಗಿಬಿದ್ದಿದ್ದು, ೨-೧ರ ಅಂತರದಲ್ಲಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಉಳಿದುಕೊಂಡಿದೆ.
ಜೆಕ್ ಗಣರಾಜ್ಯ ಪಂದ್ಯದ ಆರಂಭದಲ್ಲೇ ಭರ್ಜರಿ ಪ್ರದರ್ಶನ ನೀಡಿತು. ಪ್ರಥಮ ಆರು ನಿಮಿಷಗಳ ಅವಧಿಯಲ್ಲಿ ತಂಡ ಎರಡು ಗೋಲು ಗಳಿಸಿದ್ದು, ಇದಕ್ಕೆ ಸಾಕ್ಷಿಯಾಗಿತ್ತು. ಥೋಮಸ್ ಹಬ್ಸ್‌ಮ್ಯಾನ್ ಮೊದಲ ಮೂರು ನಿಮಿಷಗಳಲ್ಲೇ ಜೆಕ್‌ಗೆ ಮುನ್ನಡೆ ಒದಗಿಸಿದರು. ಈ ವೇಳೆ ಗ್ರೀಸ್‌ಗೆ ಆಘಾತ. ಆದರೆ ಗ್ರೀಸ್ ಆಘಾತವನ್ನು ಇನ್ನಷ್ಟು ಹೆಚ್ಚಿಸಿದವರು ಪಿಲಾರ್. ಟೂರ್ನಿಯಲ್ಲಿ ಎರಡನೇ ಗಳಿಸುವ ಮೂಲಕ ಪಿಲಾರ್ ತಂಡದ ಮುನ್ನಡೆಯನ್ನು ೨-೦ಗೆ ಏರಿಸಿದರು. ಆದರೆ ೫೩ನೇ ನಿಮಿಷದಲ್ಲಿ ಜೆಕ್ ಗೋಲ್‌ಕೀಪರ್ ಜೆಕ್ ಮಾಡಿದ ಪ್ರಮಾದದಿಂದಾಗಿ ಗ್ರೀಸ್ ಗೋಲು ಗಳಿಸುವಂತಾಯಿತು. ಜೆಕಾಸ್ ಈ ಗೋಲು ಗಳಿಸಿದರು. ಆದರೆ ನಂತರ ತಂಡಗಳು ಉತ್ತಮ ನಿರ್ವಹಣೆ ನೀಡಿದರೂ ಗೋಲು ಗಳಿಸಲು ವಿಫಲವಾಯಿತು.
Tagged with
tnews
ಹಾಕಿ ಆಟಗಾರರಿಗೆ ಪಂಜಾಬ್ ಸರ್ಕಾರದ ಆಫರ್
ಚಂಢೀಗಡ: ಪಂಜಾಬ್ ಉಪ ಮುಖ್ಯಮಂತ್ರಿಯಾಗಿರುವ ಸುಖ್ ಬೀರ್ ಸಿಂಗ್ ಬಾದಲ್ ಹಾಕಿ ಆಟಗಾರರಿಗೆ ವಿಶೇಷ ಆಫರ್ ವೊಂದನ್ನು ಪ್ರಕಟಿಸಿದ್ದಾರೆ. ಮುಂಬರುವ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಹಾಕಿ ಆಟಗಾರರಿಗೆ ರಾಜ್ಯದ ವತಿಯಿಂದ ತಲಾ ಎರಡು ಕೋಟಿ ರೂ.ಗಳ ಬಹುಮಾನ ಮೊತ್ತವನ್ನು ನೀಡಲಾಗುವುದು ಎಂದು ತಿಳಿಸಿ ದ್ದಾರೆ. ಅವರು ನಿನ್ನೆ ಹಾಕಿ ಇಂಡಿಯಾ ಪ್ರಕಟಿಸಿದ ಭಾರತೀಯ ಹಾಕಿ ತಂಡದಲ್ಲಿ ಸ್ಥಾನ ಪಡೆದ ಐವರು ಪಂಜಾಬ್ ಆಟಗಾರರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಈ ಕೊಡುಗೆಯನ್ನು ಬಹಿರಂಗ ಪಡಿಸಿ ದರು.
ಗುರ್ವಿಂದರ್ ಸಿಂಗ್ ಚಾಂಡಿ, ಧರ್ಮವೀರ್ ಸಿಂಗ್, ಗುರ್ಬಜ್ ಸಿಂಗ್, ಮಂಜೀತ್ ಸಿಂಗ್, ಮನ್ ಪ್ರೀತ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರೆ ಸ್ಟಾಂಡ್‌ಬಯ್ ಆಟಗಾರನಾಗಿ ಸರ್ವಣ್‌ಜಿತ್ ಸಿಂಗ್ ಆಯ್ಕೆಯಾಗಿದ್ದರು.
ಈ ವೇಳೆ ಮಾತನಾಡಿದ ಬಾದಲ್, ಪಂಜಾಬ್ ಹಿಂದಿನಿಂದಲೂ ಹಾಕಿ ಯಲ್ಲಿ ಉತ್ತಮ ಸಾಧನೆ ತೋರುತ್ತಾ ಬಂದಿದ್ದು, ರಾಷ್ಟ್ರೀಯ ತಂಡಕ್ಕೆ ನಾವು ಅನೇಕ ಆಟಗಾರರನ್ನು ನೀಡಿದ್ದೇವೆ. ರಾಜ್ಯದ ಐದು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿರುವುದು ಸಂತಸದ ವಿಚಾರ. ಒಂದು ವೇಳೆ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡರೆ ತಲಾ ಎರಡು ಕೋಟಿ ರೂ.ಗಳ ವಿಶೇಷ ಬಹುಮಾನವನ್ನು ನೀಡಲಾಗುವುದು ಎಂದು ಬಾದಲ್ ತಿಳಿಸಿದರು.
Tagged with
tnews
ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿ ಪ್ರಕಟ
ದುಬೈ: ನಿನ್ನೆ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸ ಲಾಗಿದ್ದು, ಇತ್ತೀಚಿಗೆ ಮುಗಿದ ವೆಸ್ಟ್ ಇಂಡೀಸ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ೨-೦ಯಿಂದ ಗೆದ್ದುಕೊಂಡ ಇಂಗ್ಲೆಂಡ್ ನಂಬರ್ ವನ್ ಸ್ಥಾನದಲ್ಲಿ ಮುಂದುವರೆದಿದ್ದರೆ ಭಾರತ (೧೧೧) ನಾಲ್ಕನೇ ಸ್ಥಾನದಲ್ಲಿದೆ. ಕಳೆದ ಟೀಮ್ ಇಂಡಿಯಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ವೈಟ್‌ವಾಶ್ ಸಾಧಿಸಿದ ನಂತರ ಅಗ್ರಸ್ಥಾನಕ್ಕೆ ಪ್ರವೇಶಿಸಿತ್ತು.
೧೧೭ ಅಂಕಗಳೊಂದಿಗೆ ಇಂಗ್ಲೆಂಡ್ ಅಗ್ರಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾ (೧೧೬) ನಾಲ್ಕು ಅಂಕಗಳ ಹಿನ್ನ ಡೆಯಲ್ಲಿ ದ್ವಿತೀಯ ಕ್ರಮಾಂಕದಲ್ಲಿದೆ. ರ‍್ಯಾಂಕಿಂಗ್‌ನಲ್ಲಿ ಈ ಹಿಂದೆ ಅಧಿಪತ್ಯ ಸಾಧಿಸಿದ್ದ ಆಸ್ಟ್ರೇಲಿಯಾ ೧೧೨ ಅಂಕ ಪಡೆದು ತೃತೀಯ ಸ್ಥಾನದಲ್ಲಿದೆ. ಒಂದು ವೇಳೆ ವಿಂಡೀಸ್ ವಿರುದ್ಧದ ಸರಣಿ ಯನ್ನು ಇಂಗ್ಲೆಂಡ್ ಕ್ಲೀನ್‌ಸ್ವೀಪ್ ಸಾಧಿಸುತ್ತಿದ್ದರೆ ಆಂಗ್ಲ ಇನ್ನೂ ಎರಡು ಅಂಕಗಳನ್ನು ಹೆಚ್ಚುವರಿಯಾಗಿ ಪಡೆ ಯುತ್ತಿತ್ತು. ಅಂತಿಮ ಟೆಸ್ಟ್‌ನಿಂದ ಹೊರಬಿದ್ದಿದ್ದ ವಿಂಡೀಸ್‌ನ ಚಂದ್ರ ಪಾಲ್ ಅಗ್ರಸ್ಥಾನವನ್ನು ಕಾಯ್ದುಕೊಂ ಡಿದ್ದರೆ ಅಗ್ರ ೨೦ರಲ್ಲಿ ಸ್ಥಾನ ಪಡೆದವರಲ್ಲಿ ಸಚಿನ್ ತೆಂಡೂಲ್ಕರ್ (೧೨) ಏಕೈಕ ಭಾರತೀಯ ಆಟಗಾರ.
Tagged with
tnews
ಎಲ್ವಿವ್: ತಮ್ಮ ವಿರುದ್ಧ ಜನಾಂಗೀಯ ನಿಂದನೆ ಮಾಡಲಾಗಿದೆ ಎಂದು ಜೆಕ್ ರಿಪಬ್ಲಕ್‌ನ ಥಿಯೊ ಡೊರ್ ಗೆಬ್ರೆ ಹಾಗೂ ಫ್ರಾನ್ಸ್‌ನ ಮರಿಯೊನ್ ಬಲೊಟೆಲ್ಲಿ ಮಾಡಿದ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಯುಇಎಫ್‌ಎ ಈ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದೆ. ಪಂದ್ಯವ ವೇಳೆ ಪ್ರೇಕ್ಷಕರು ಜನಾಂ ಗೀಯ ನಿಂದನೆಯನ್ನು ಹೊತ್ತ ಹಾಡನ್ನು ಹಾಡಿದ್ದರು ಎಂದು ಆಟಗಾರರು ಆರೋಪಿಸಿದ್ದರು.
ಆದಿತ್ಯವಾರ ಗ್ನಾದ್ಸ್‌ನಲ್ಲಿ ನಡೆದ ಇಟಲಿ ಹಾಗೂ ಸ್ಪೇಯ್ನ್ ನಡುವಿನ ಪಂದ್ಯವ ವೇಳೆ ಬಲೊಟ್ಟೆಲ್ಲಿ ವಿರುದ್ಧ ನಾವು ‘ಮಂಕಿ ಚಾಂಟ್ಸ್ ಮಾಡಿದ್ದೆವು ಎಂದು ಈಗಾಗಲೇ ೨೨೦ ಸ್ಪಾನಿಶ್ ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಯುಇಎಫ್‌ಎ ವಕ್ತಾರ ರಾಬ್ ಫೌಲ್ಕ್ನರ್, ಇಂತಹ ಆರೋಪಗಳ ಬಗ್ಗೆ ನಾವು ತನಿಖೆ ನಡೆಸುತ್ತೇವೆ. ಆದರೆ ಈಗಲೇ ಕಠಿಣ ಕ್ರಮ ತೆಗೆದುಕೊಳ್ಳುವ ಯಾವುದೇ ಇರಾದೆಯಿಲ್ಲ ಆದರೆ ಗೆಬ್ರೆ ಮಾಡಿದ ಆರೋಪದ ಬಗ್ಗೆ ನಾವು ಜೆಕ್ ತಂಡದ ಸಿಬ್ಬಂದಿಯಿಂದ ಸಾಕ್ಷಿಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
Tagged with
tnews
ಮಂಗಳೂರು: ಚಲಿಸುತ್ತಿದ್ದ ಕಾರು ಹಾಗೂ ರಿಕ್ಷಾ ಮೇಲೆ ಮರವೊಂದು ಬಿದ್ದು ಇಬ್ಬರೂ ಚಾಲಕರು ಪವಾಡಸದೃಶವಾಗಿ ಪಾರಾಗಿರುವ ಘಟನೆ ಕದ್ರಿ ಪಾರ್ಕ್ ಎದುರುಗಡೆ ನಿನ್ನೆ ಸಂಜೆ ವೇಳೆ ನಡೆದಿದ್ದು, ಘಟನೆಯಲ್ಲಿ ಬಾಲಭವನದ ತಡೆಗೋಡೆಗೆ ಭಾಗಶ: ಹಾನಿಯಾಗಿದೆ. ಜೋಕಿಮ್ ಎಂಬವರ ವ್ಯಾಗನಾರ್ ಕಾರು ಹಾಗೂ ದಯಾನಂದ ನಾಯಕ್ ಎಂಬವರ ರಿಕ್ಷಾದ ಮೇಲೆ ನಿನ್ನೆ ಸಂಜೆ ವೇಳೆ ಸುರಿದ ಮಳೆಯ ರಭಸಕ್ಕೆ ಕದ್ರಿ ಪಾರ್ಕ್ ಬಳಿಯ ಬಾಲಭವನದ ಕಂಪೌಂಡಿನೊಳಗಿದ್ದ ಮರ ಬಿದ್ದಿದೆ. ಇದರಿಂದಾಗಿ ರಸ್ತೆ ಸಂಚಾರಕ್ಕೆ ಅರ್ಧ ತಾಸು ತೊಂದರೆಯುಂಟಾಯಿತು. ತಡೆಗೋಡೆಯ ಮೇಲೆ ಮೊದಲು ಮರ ಬಿದ್ದುದರಿಂದಾಗಿ ವಾಹನಗಳೆರೆಡು ಸಂಪೂರ್ಣ ಅಪ್ಪಚ್ಚಿಯಾಗುವುದರಿಂದ ತಪ್ಪಿದಂತಾಯಿತು. ಅಗ್ನಿ ಶಾಮಕ ಸಿಬ್ಬಂದಿ ಮರವನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Tagged with
cnews
ಪಡುಬಿದ್ರಿ: ಮಹಾರಾಷ್ಟ್ರ ಮೂಲದ ಅಭ್ಯುದಯ ಕೋ. ಅಪ ರೇಟಿವ್ ಬ್ಯಾಂಕಿನ ಪಡುಬಿದ್ರಿ ಶಾಖೆ ಯ ಮಾಜಿ ಪ್ರಬಂಧಕ, ಇತ್ತೀಚೆಗೆ ತಾನೆ ಕಾಪು ಸಮೀಪದ ಮೂಳೂರಿನ ತನ್ನ ಪತ್ನಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಜನಾರ್ದನ ತಿಂಗ ಳಾಯ (೬೦) ಎಂಬವರ ಆತ್ಮಹತ್ಯೆಗೆ ಬ್ಯಾಂಕ್ ಸಾಲಗಾರರ ಸಾಲ ಮರು ಪಾವತಿಯಲ್ಲಿನ ಏರುಪೇರೇ ಕಾರಣ ವೆಂದು ಹೇಳಲಾಗುತ್ತಿದೆ.
ಮೂಲತಃ ಹೆಜಮಾಡಿಯ ವರಾಗಿದ್ದ ಜನಾರ್ದನ ತಿಂಗಳಾಯ ಮುಂಬೈ ನಿವಾಸಿಯಾಗಿದ್ದು, ಅಲ್ಲಿನ ಅಭ್ಯುದಯ ಕೋ. ಅಪರೇಟಿವ್ ಬ್ಯಾಂಕಿನಲ್ಲಿ ಸೇವೆಯಲ್ಲಿದ್ದರು.
ಜನತಾ ಕೋ. ಅಪರೇಟಿವ್ ಬ್ಯಾಂಕ್, ಅಭ್ಯುದಯ ಕೋ. ಅಪ ರೇಟಿವ್ ಬ್ಯಾಂಕ್‌ನೊಂದಿಗೆ ವಿಲೀನ ಗೊಂಡ ಬಳಿಕ ತಿಂಗಳಾಯ ಪಡುಬಿದ್ರಿ ಶಾಖೆಯ ಪ್ರಬಂಧಕರಾಗಿ ಪಡುಬಿದ್ರಿಗೆ ವರ್ಗಾವಣೆಗೊಂಡಿದ್ದರು. ಸರಳ ಮತ್ತು ಸಜ್ಜನಿಕೆಯ ವ್ಯಕ್ತಿಯಾಗಿದ್ದ ತಿಂಗಳಾಯ ತನ್ನ ಪರಿಚಯದ ಅದರಲ್ಲೂ ಹೆಜಮಾಡಿ ಪರಿಸರದ ಹಲವಾರು ಮಂದಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದರೆನ್ನಲಾಗಿದೆ. ಆದರೆ ಸಾಲಗಾರರು ಬ್ಯಾಂಕ್ ಸಾಲ ಹಿಂದಿರುಗಿಸಲು ವಿಳಂಬ ಮಾಡಿದ್ದು ಮತ್ತು ಕಂತು ಪಾವತಿಸದಿದ್ದುದು ತಿಂಗಳಾಯರ ಉದ್ಯೋಗಕ್ಕೆ ಮುಳುವಾಗಿತ್ತು. ಬ್ಯಾಂಕ್ ಆಡಳಿತ ಮಂಡಳಿ ಅವರನ್ನು ಪ್ರಬಂಧಕ ಹುದ್ದೆಯಿಂದ ಕಿತ್ತು ಹಿಂಬಡ್ತಿ ನೀಡಿ ಗುಮಾಸ್ತನಾಗಿ ನಿಯುಕ್ತಿಗೊಳಿಸಿತೆನ್ನಲಾಗಿದೆ.
ಇದರಿಂದ ಮನನೊಂದಿದ್ದ ತಿಂಗಳಾಯ, ಉದ್ಯೋಗಕ್ಕೆ ವಿಆರ್‌ಎಸ್ ನೀಡಿ ಉದ್ಯೋಗದಿಂದ ಹೊರಬಂದಿದ್ದರು ಮತ್ತು ಮುಂಬೈಯ ತನ್ನ ಫ್ಲ್ಯಾಟನ್ನು ಸುಮಾರು ೨೫ ಲಕ್ಷ ರೂಪಾಯಿಗಳಿಗೆ ಮಾರಿ ಬ್ಯಾಂಕ್ ಸಾಲಗಾರರ ಹಣ ಮರುಪಾವತಿಸಿದ್ದರೆನ್ನಲಾಗಿದೆ.
ಕಳೆದ ಶುಕ್ರವಾರದಂದು ಹೆಂಡತಿಯ ಮೂಳೂರು ಮನೆಯಲ್ಲಿ ವಾಸ್ತವ್ಯ ಹೊಂದಿದ್ದ ಅವರು ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು
Tagged with
cnews
ವಿಟ್ಲ: ವಿಟ್ಲದ ಖಾಸಗಿ ಬಸ್ಸು ನಿಲ್ದಾಣದ ಕಲಾಸೀಪಾಳ್ಯ ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ಆರೋಪಿಗಳ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣದ ವಿಚಾರವಾಗಿ ಈ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.
ಪೆರುವಾಯಿ ಸಮೀಪದ ಮಾಣಿಲ ನಿವಾಸಿ ವಿಜಯ ಕ್ರಾಸ್ತ ಯಾನೆ ವಿಜಯ ಕುಮಾರ್ ಎಂಬವರಿಗೆ ಏಳು ಜನರ ತಂಡ ಸೋಮವಾರ ವಿಟ್ಲ ಖಾಸಗಿ ಬಸ್ಸು ನಿಲ್ದಾಣದ ಮುಂಭಾಗದ ಕಲಾಸೀಪಾಳ್ಯ ಎಂಬಲ್ಲಿ ಹಲ್ಲೆ ನಡೆಸಿ ಪರಾರಿಯಾಗಿತ್ತು. ಇದರ ತೀವ್ರತೆಗೆ ಬೆನ್ನಿನ ಭಾಗಕ್ಕೆ ಗಂಭೀರವಾಗಿ ಏಟು ಬಿದ್ದ ಪರಿಣಾಮ ಕ್ರಾಸ್ತ ನೆಲದಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಬಳಿಕ ವಿಟ್ಲ ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ೧೦೮ ತುರ್ತು ಚಿಕಿತ್ಸಾ ವಾಹನದ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ವಿಜಯ್ ಕ್ರಾಸ್ತ ವಿಟ್ಲ ಪೊಲೀಸರಿಗೆ ಪೆರುವಾಯಿ ಗ್ರಾಮದ ನಾಗೇಶ್ ಶೆಟ್ಟಿ, ಉದಯ ಶೆಟ್ಟಿ, ಜೀತಾನಂದ, ಸೀತಾ ಪೂಜಾರಿ, ವಸಂತ, ಉದಯ ರೈ, ರಾಜೇಶ್ ರೈ ಸೇರಿ ಏಳು ಮಂದಿಯ ವಿರುದ್ಧ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗೇಶ ಶೆಟ್ಟಿ ತನ್ನ ಬಳಿ ಐದು ಸಾವಿರ ರೂಪಾಯಿ ಹಣ ಕೇಳಿದ್ದ. ನಾನು ಕೊಡಲು ನಿರಾಕರಿಸಿದ್ದಕ್ಕೆ ವಿಟ್ಲ ಎಕ್ಸಿಸ್ ಬ್ಯಾಂಕ್ ಎಟಿಎಮ್ ಬಳಿ ನನಗೆ ಹಲ್ಲೆ ನಡೆಸಿದ್ದಾರೆ ಎಂದು ಆತ ದೂರಿನಲ್ಲಿ ತಿಳಿಸಿದ್ದಾರೆ.
Tagged with
cnews
ಮಂಗಳೂರು: ಮಿಸ್ಡ್ ಕಾಲ್ ಮೂಲಕ ಪರಿಚಿತಳಾದ ಯುವತಿ ಯನ್ನು ಮದುವೆಯಾಗುವುದಾಗಿ ನಂಬಿಸಿದ ಯುವಕ ಆಕೆಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆದೊಯ್ದು ಮಜಾ ಉಡಾಯಿಸಿ ನಗ-ನಗದು ದೋಚಿದ ಘಟನೆ ಹೊಸದುರ್ಗ ಠಾಣಾ ವ್ಯಾಪ್ತಿಯಲ್ಲಿ ತಿಂಗಳ ಹಿಂದೆ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಣ್ಣೂರಿನ ೨೨ರ ಹರೆಯದ ಯುವತಿ ವಂಚನೆಗೆ ಈಡಾದವಳು. ಈಕೆಗೆ ಕೊಟ್ಟಾಯಂ ನಿವಾಸಿ ರಿಶಾಲ್‌ರಾಜ್ ಎಂಬ ಹೆಸರಿನ ಯುವಕ ಮಿಸ್ಡ್ ಕಾಲ್ ಮೂಲಕ ಪರಿಚಿತನಾಗಿದ್ದ. ಪರಿಚಯ ಪ್ರೇಮಕ್ಕೆ ತಿರುಗಿ ಒಂದು ದಿನ ರಿಶಾಲ್‌ರಾಜ್ ಯುವತಿಯನ್ನು ಮದುವೆಯಾಗೋಣ ಎಂದು ನಂಬಿಸಿ ಬೆಂಗಳೂರಿಗೆ ಬರಲು ಹೇಳಿದ್ದಾನೆ. ಅದರಂತೆ ಯುವತಿ ಚಿನ್ನಾಭರಣ ಮತ್ತು ಹಣದೊಂದಿಗೆ ಬೆಂಗಳೂರಿಗೆ ಹೋಗಿ ಭೇಟಿಯಾಗಿದ್ದಾಳೆ. ಯುವಕ ಆಕೆಯನ್ನು ಲಾಡ್ಜ್‌ಗೆ ಕರೆದೊಯ್ದು ಮಜಾ ಉಡಾಯಿಸಿದ ಬಳಿಕ ಆಕೆಯಿಂದ ಚಿನ್ನಾಭರಣ, ಮೊಬೈಲ್ ಮತ್ತು ನಗದು ಹಣ ಪಡೆದು ಆಕೆಯನ್ನು ಮರಳಿ ಬೆಂಗಳೂರು ರೈಲ್ವೇ ನಿಲ್ದಾಣಕ್ಕೆ ಕರೆತಂದು ಬಿಟ್ಟು ಪರಾರಿಯಾಗಿದ್ದ ಎನ್ನಲಾಗಿದೆ. ಯುವತಿ ನಾಪತ್ತೆಯಾಗಿದ್ದ ಬಗ್ಗೆ ಆಕೆಯ ಸೋದರ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಯುವತಿಯನ್ನು ತಿರುವನಂತಪುರದಲ್ಲಿ ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯದಲ್ಲಿ ಯುವತಿಯು, ತಾನು ತಿರುವನಂತಪುರದ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಾಗಿ ಹೇಳಿಕೆ ನೀಡಿದ್ದು, ಯುವಕನ ವಂಚನೆಯನ್ನು ಬಹಿರಂಗಪಡಿಸಿದ್ದಾಳೆ. ಆರೋಪಿ ಯುವಕ ರಿಶಾಲ್‌ರಾಜ್‌ನನ್ನು ಬಂಧಿಸಿರುವ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
Tagged with
cnews
ಕಾಪು: ಇಲ್ಲಿನ ಕೊಪ್ಪಲಂಗಡಿ ರಾ.ಹೆದ್ದಾರಿ ೬೬ರಲ್ಲಿ ಕಾರೊಂದು ಪಾದಚಾರಿಗೆ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತ ಪಟ್ಟ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕ್ವಾಲಿಸ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕ ಸರಿದಾಗ ಫುಟ್ ಪಾತಿನಲ್ಲಿ ನಡೆದುಕೊಂಡು ಹೋಗು ತಿದ್ದ ಸ್ಥಳೀಯರೇ ಆದ ಸದಾನಂದ ಶೆಟ್ಟಿ(೬೦) ಎಂಬವರಿಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ದಾಖಲಿಸಲು ಕೊಂಡೊ ಯ್ಯುತ್ತಿದ್ದಾಗ ಮೃತಪಟ್ಟಿದ್ದಾರೆ. ಕಾಪು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಕ್ವಾಲಿಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Tagged with
cnews
ಮಂಗಳೂರು: ಗುರುಪುರ ಸಾಮಾಣಿ ರಸ್ತೆಯಲ್ಲಿ ನಿನ್ನೆ ರಾತ್ರಿ ತಡೆಗೋಡೆ ಕುಸಿದು ಮನೆ ಸಂಪೂರ್ಣ ಧರಾಶಾಹಿಯಾಗಿ ಮನೆಯೊಳಗೆ ಟಿವಿ ನೋಡುತ್ತಿದ್ದ ಯಜಮಾನ ಗಂಭೀರ ಗಾಯಗೊಂಡರೆ ಉಳಿದವರು ಅಲ್ಪ ಗಾಯಗೊಂಡು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಜನಾರ್ದನ(೫೫) ಎಂಬವರಿಗೆ ಸೇರಿದ ಮನೆ ಧರಾಶಾಹಿಯಾಗಿದ್ದು, ಅವರು ಗಂಭೀರವಾಗಿ ಗಾಯ ಗೊಂಡಿದ್ದಾರೆ. ಪತ್ನಿ ಪ್ರಮೀಳಾ, ತಾಯಿ ಹೊನ್ನಮ್ಮ ಹಾಗೂ ಮಕ್ಕಳಾದ ಶೋಭಾ(೧೭) ಮತ್ತು ದೀಪಾ(೧೪) ಎಂಬವರು ಗಾಯ ಗೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ನಿನ್ನೆ ರಾತ್ರಿ ನಿರಂತರವಾಗಿ ಸುರಿದ ಮಳೆಯಿಂ ದಾಗಿ ಮನೆಯ ತಡೆಗೋಡೆ ಕುಸಿದು ಮನೆ ಮೇಲೆ ಬಿದ್ದಿತು. ಇದರಿಂದ ಮನೆಗೆ ಸಂಪೂರ್ಣ ಹಾನಿಯಾಯಿತು.
Tagged with
cnews
ಮಂಗಳೂರು: ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸಲಾಗುತ್ತಿದ್ದ ವೇಳೆ ಮಂಗಳೂರು ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ವಾಹನ ಸಮೇತ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತನನ್ನು ಪುತ್ತೂರು-ನರಿಮೊಗ್ರುವಿನ ಶೇಖ್ ಗಫೂರ್(೨೬) ಎಂದು ಹೆಸರಿಸಲಾಗಿದೆ. ಈತನಿಂದ ೫೦ ಸಾವಿರ ರೂ. ಮೌಲ್ಯದ ನಾಟಾ ಮತ್ತು ಒಂದೂವರೆ ಲಕ್ಷ ರೂ. ಮೌಲ್ಯದ ಬಜಾಜ್ ಪಿಕಪ್ ವಾಹನ ವಶಪಡಿಸಿಕೊಳ್ಳಲಾಗಿದೆ. ಮರದ ದಿಮ್ಮಿಗಳನ್ನು ಪುತ್ತೂರು-ಸಾಲ್ಮರದ ಮರದ ಮಿಲ್‌ಗೆ ಕೊಂಡೊಯ್ಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸದು ದಾಳಿ ನಡೆಸಿದ್ದಾರೆ.
Tagged with
cnews
ಮಂಗಳೂರು: ಕಳೆದ ೨೦೦೮ನೇ ಜುಲೈ ೧೧ರ ಮಧ್ಯರಾತ್ರಿ ಸುಳ್ಯ ಸಮೀಪದ ಕಲ್ಲುಗುಂಡಿ ಎಂಬಲ್ಲಿ ಸೈಡ್ ಕೊಡುವ ವಿಚಾರಕ್ಕೆ ಸಂಬಂಧಿಸಿ ಜೀಪ್ ಚಾಲಕರೊಬ್ಬರ ಮೇಲೆ ಹಲ್ಲೆ ನಡೆಸಿ, ಅವರ ಸಾವಿಗೆ ಕಾರಣವಾಗಿದ್ದ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಜೀಪ್‌ನಲ್ಲಿದ್ದ ಕೆ.ಡಿ.ಗೋಪಾಲ ಹಾಗೂ ಕಾರ್‌ನಲ್ಲಿ ಸಂಚರಿಸುತ್ತಿದ್ದ ರವಿಶಂಕರ್ ಭಟ್ ಎಂಬವರ ನಡುವೆ ಸೈಡ್ ಕೊಡುವ ವಿಚಾರದಲ್ಲಿ ಗಲಾಟೆ ನಡೆಸಿತ್ತು. ಈ ವೇಳೆ ರವಿಶಂಕರ್ ಭಟ್ ಹಾಗೂ ಇತರರು ಗೋಪಾಲರ ಮೇಲೆ ಹಲ್ಲೆಗೈದಿದ್ದರು. ಗೋಪಾಲ ಅವರು ಹಲ್ಲೆಯ ಸಂದರ್ಭ ಹೃದಯಾಘಾತಕ್ಕೆ ತುತ್ತಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ರವಿಶಂಕರ್, ಶ್ರೀಧರ, ಮಂಜುನಾಥ, ಜಗನ್ನಾಥ, ರಾಜಾರಾಮ, ರಾಮಚಂದ್ರರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದರು. ತನಿಖೆ ನಡೆಸಿದ ನ್ಯಾಯಾಲಯ ಆರೋಪಿಗಳ ವಿರುದ್ಧ ಆರೋಪ ಸಾಬೀತುಪಡಿಸು ವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಹೇಳಿ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.
Tagged with
cnews
ಮಂಗಳೂರು: ಪುತ್ತೂರು ನಗರ ಠಾಣಾ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಎಂಬಲ್ಲಿನ ನಿವಾಸಿ ಪ್ರೇಮಾಂಜಲಿ(೨೦) ಎಂಬಾಕೆ ಜೂನ್ ಒಂಬತ್ತನೇ ತಾರೀಖಿನಿಂದ ನಾಪತ್ತೆಯಾಗಿರುವ ಬಗ್ಗೆ ದೂರಲಾಗಿದೆ. ಈಕೆ ಚಿಕ್ಕಮಗಳೂರಿನ ಧರ್ಮ ಎಂಬಾತನ ಜೊತೆ ಪ್ರೇಮ ವ್ಯವಹಾರ ಹೊಂದಿದ್ದು, ಈ ಕಾರಣಕ್ಕಾಗಿ ಮನೆ ತೊರೆದಿರಬೇಕೆಂದು ಶಂಕಿಸಲಾಗಿದೆ. ತಾಯಿ ಬೋಜಮ್ಮ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Tagged with
cnews,
missing
ಮಂಗಳೂರು: ನಗರದ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಕೀನ್ಯಾದ ವಿದ್ಯಾರ್ಥಿಯೊಬ್ಬ ಇಂಟರ್‌ನೆಟ್‌ನಲ್ಲಿ ಮೊಬೈಲ್ ಖರೀದಿಸಲು ಮುಂದಾಗಿ ಹಣ ಕಳೆದುಕೊಂಡಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನ್ನಾ ಅಬ್ದುಲ್ ಗದರ್ ಎಂಬಾತ ಆನ್‌ಲೈನ್ ಮೂಲಕ ೭೫,೦೦೦ ರೂ. ಅನ್ನು ಐಸಿಐಸಿಐ ಮತ್ತು ವಿಜಯ ಬ್ಯಾಂಕ್ ಖಾತೆಯಲ್ಲಿ ಹಣ ಜಮಾವಣೆ ಮಾಡಿ ಮೋಸ ಹೋಗಿದ್ದಾನೆ.
Tagged with
cnews
ಮಂಗಳೂರು: ಇಲಿ ಪಾಷಾಣ ಸೇವಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯ ಸಮೀಪ ಬಳ್ಪದಲ್ಲಿ ಸಂಭವಿಸಿದೆ.
ಬಳ್ಪ ಗ್ರಾಮದ ಎಡೋಣಿ ಬೆಳ್ಯಪ್ಪ ನಾಕ ಮತ್ತು ಜಯಲಕ್ಷ್ಮೀ ದಂಪತಿಯ ಏಕೈಕ ಪುತ್ರ ಮಲ್ಲಿಕಾರ್ಜುನ (೨೪) ಆತ್ಮಹತ್ಯೆಮಾಡಿಕೊಂಡ ಯುವಕ. ಬೆಳ್ಯಪ್ಪರು ಪಂಜದಲ್ಲಿ ಅವರ ಅಂಗಡಿಯಲ್ಲಿದ್ದಾಗ, ಮಲ್ಲಿಕಾರ್ಜುನ ಮಡಿಕೇರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೊರಟಿದ್ದರು. ಈ ವೇಳೆ ಬೆಳ್ಯಪ್ಪರವರ ಹೆಂಡತಿಯೂ ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ಯಾರೂ ಇರಲಿಲ್ಲ. ದಂಪತಿ ಮನೆಗೆ ಬಂದಾಗ ಮಲ್ಲಿಕಾರ್ಜುನ ಮಡಿಕೇರಿಗೆ ಹೋಗಿದ್ದಾರೆ ಎಂದು ತಿಳಿದಿದ್ದರು. ನಡುರಾತ್ರಿ ಬೆಳ್ಯಪ್ಪರ ಮನೆಯ ಶೌಚಾಲಯದಲ್ಲಿ ಬೊಬ್ಬೆ ಕೇಳಿ ಎದ್ದು ಬಂದು ನೋಡಿದಾಗ ಮಲ್ಲಿಕಾರ್ಜುನ ವಾಂತಿ ಮಾಡುತ್ತಾ ಒದ್ದಾಡುತ್ತಿದ್ದರು. ಆತನನ್ನು ವಿಚಾರಿಸಿದಾಗ ಆತ ಇಲಿ ಪಾಷಾಣ ಸೇವಿಸಿರುವುದಾಗಿ ಹೇಳಿದರು. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದಿಲ್ಲ. ಮೃತರು ಅವಿವಾಹಿತರು.
Tagged with
cnews
ಮಂಗಳೂರು: ಪಾದಚಾರಿ ಮಹಿಳೆಯೋರ್ವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಸೆಳೆಯಲು ಯತ್ನಿಸಿ ವಿಫಲನಾದ ಅಪರಿಚಿತ ಯುವಕನೋರ್ವ ಮಹಿಳೆ ಬೊಬ್ಬಿಟ್ಟಾಗ ತನಗಾಗಿ ಕಾಯುತ್ತಿದ್ದ ವಾಹನ ಏರಿ ಪರಾರಿಯಾದ ಘಟನೆ ಕುಂತೂರಿನ ಕೋಚಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಅಲಂಕಾರು ಗ್ರಾಮದ ಪೊಸೋಣಿ ನಿವಾಸಿ ರಾಮಣ್ಣ ಗೌಡರ ಪುತ್ರಿ ವಿದ್ಯಾ ಅವರು ತನ್ನ ಮಗುವಿಗೆ ಔಷಧ ತರುವುದಕ್ಕಾಗಿ ಉಪ್ಪಿನಂಗಡಿಗೆ ಹೋಗಿದ್ದವರು ಔಷಧ ತೆಗೆದುಕೊಂಡು ಮಗುವಿನೊಂದಿಗೆ ಮನೆಯತ್ತ ಹೋಗುತ್ತಿದ್ದಾಗ ಮುಖ್ಯರಸ್ತೆಯಲ್ಲಿ ಬಂದ ಯುವಕನೊಬ್ಬ ಅವರ ಕತ್ತಿನಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿ ಎಳೆಯಲೆತ್ನಿಸಿದ. ಮಹಿಳೆ ಪ್ರತಿರೋಧ ವ್ಯಕ್ತಪಡಿಸಿ ಬೊಬ್ಬಿಟ್ಟಾಗ ಓಟಕ್ಕಿತ್ತ ಆತ ಅಲ್ಲಿಯೇ ಒಳರಸ್ತೆಯಲ್ಲಿ ತನಗಾಗಿ ಕಾಯುತ್ತಿದ್ದ ಕೆಂಪು ಬಣ್ಣದ ಸ್ಕಾರ್ಪಿಯೋ ವಾಹನ ಏರಿ ಉಪ್ಪಿನಂಗಡಿಯತ್ತ ಪರಾರಿಯಾದ. ವಾಹನದ ನೋಂದಣಿ ಸಂಖ್ಯೆ ೬೨೨೯ ಎಂದು ಹೇಳುವ ಮಹಿಳೆ ಪೂರ್ತಿ ಸಂಖ್ಯೆಯನ್ನು ನೋಡುವಷ್ಟು ಸಮಯ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ವಾಹನ ಚಲಾಯಿಸುತ್ತಿದ್ದ ಯುವಕ ಹಾಗೂ ಸರ ಎಳೆಯಲು ಯತ್ನಿಸಿದಾತನಿಗೆ ೨೫-೩೦ ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಈ ಕುರಿತು ಮಂಗಳವಾರ ಸಂಜೆಯ ತನಕ ಯಾವುದೇ ದೂರು ಬಂದಿಲ್ಲ ಎಂದು ಕಡಬ ಪೊಲೀಸರು ತಿಳಿಸಿದ್ದಾರೆ.
Tagged with
cnews
ಮಂಗಳೂರು: ಮೋರ್ಗನ್ಸ್ ಗೇಟ್‌ನ ಪಿ.ಎಲ್.ಕಾಲೊನಿಯ ಶ್ರೀ ಆದಿಮಾಯೆ ಮಹಾಲಕ್ಷ್ಮಿ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಜ್ರದೇಹಿ ಮಠದ ರಾಜಶೇಖ ರಾನಂದ ಸ್ವಾಮೀಜಿ ಭಾಗವಹಿಸಿದರು. ಮಂದಿರದ ಧರ್ಮದರ್ಶಿ ಮತ್ತು ಕಾರ್ಯಾಧ್ಯಕ್ಷ ರಾಜೇಶ್ ಶಿಲಾನ್ಯಾಸ ನೆರವೇರಿಸಿದರು.
ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ, ಉದ್ಯಮಿ ಮಧುಕರ ಮಲ್ಲಿ ಪಶುಸಂಗೋಪನೆ ಇಲಾಖೆಯ ಕಚೇರಿ ನಿವೃತ್ತ ಸುಪರಿಂಟೆಂಡೆಂಟ್ ವಾಸು ದೇವ ಉಪ್ಪಳ, ಶಿರ್ಡಿ ಸಾಯಿಬಾಬ ಮಂದಿರ ಲೇಡಿಹಿಲ್‌ನ ವಿಶ್ವಾಸ್‌ದಾಸ್, ತಂದೊಳಿಗೆ ಶ್ರೀ ಆದಿಮಾಯೆ ದೇವ ಸ್ಥಾನದ ಧರ್ಮದರ್ಶಿ ದಯಾನಂದ, ಕಾರ್ಪೊರೇಟರ್ ರಾಜಶ್ರೀ ಮಧುಕರ್, ಶಿಲ್ಪಿ ಆನಂದ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.
ರಾಜೇಂದ್ರ ಪ್ರಸಾದ್ ಪ್ರಸ್ತಾವಿಸಿ ದರು. ಸುಧೀರ್ ಬಿ.ಜೆಪ್ಪು ವಂದಿಸಿ, ಪುಷ್ಕಳ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
Tagged with
briefs
ಬಂಟ್ವಾಳ: ತಾಲೂಕಿನ ಬಿಸ್ಮಿಲ್ಲಾ ನವೋದಯ ಸ್ವಸಹಾಯ ಗುಂಪು ಗೂಡಿನಬಳಿ-ಬಿ.ಮೂಡ ಇಲ್ಲಿ ಝುಬೈದಾ ಇವರಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಬಿ.ಸಿ.ರೋಡ್ ಶಾಖೆಯ ಶಾಖಾಧಿಕಾರಿ ಪ್ರಭಾಕರ ಪೈ ಅವರು ಚೈತನ್ಯ ವಿಮಾ ಪರಿಹಾರ ಚೆಕ್ ಅನ್ನು ವಿತರಿಸಿದರು. ಈ ಸಂದರ್ಭ ದಲ್ಲಿ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್(ರಿ.) ಇದರ ಮೇಲ್ವಿಚಾರಕ ಡಿ.ಸಂಜೀವ ಪೂಜಾರಿ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್(ರಿ.)ನ ಬಿ.ಸಿ.ರೋಡ್ ವಲಯ ಪ್ರೇರಕಿ ಶ್ರೀಮತಿ ಆಶಾ ಮುಂತಾದವರು ಉಪಸ್ಥಿತರಿದ್ದರು.
Tagged with
briefs
ಆಸರೆ ಚಾರಿಟೇಬಲ್ ಟ್ರಸ್ಟ್(ರಿ) ಮಂಗಳೂರು ಇದರ ವತಿಯಿಂದ ಇತ್ತೀಚೆಗೆ ಬಂಟ್ಸ್ ಹಾಸ್ಟೆಲ್‌ನ ಎಸ್.ಎಂ.ಶೆಟ್ಟಿ ಸಭಾಂಗಣದಲ್ಲಿ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಯೋಗೀಶ್ ಭಟ್ ಪ್ರಸನ್ನ ಕುಮಾರ್, ಮಾಲಾಡಿ ಅಜಿತ್‌ಕುಮಾರ್ ರೈ, ಕೃಪಾ ಅಮರ್ ಆಳ್ವಾ, ಡಾ.ಆಶಾಜ್ಯೋತಿ ರೈ, ದಿವಾಕರ ಸಾಮಾನಿ ಮೊದಲಾದವರು ಉಪಸ್ಥಿತರಿದ್ದರು.
Tagged with
gallery
ಮಂಗಳೂರು: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಜೂ. ೧೪ ಗುರುವಾರ ದಂದು ತೇಜಸ್ವಿನಿ ಆಸ್ಪತ್ರೆ ಕದ್ರಿಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ.ಶಿಬಿರದ ಅಧ್ಯಕ್ಷತೆಯನ್ನು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಸಹಾಯಕ ಮುಖ್ಯಸ್ಥರಾದ ಡಾ. ಮೋಹನ್‌ದಾಸ್ ಭಂಡಾರಿ ವಹಿಸ ಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಶಾಂತಾ ರಾಮ್ ಶೆಟ್ಟಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ ೯.೩೦ರಿಂದ ಕಾರ‍್ಯಕ್ರಮ ಪ್ರಾರಂಭ ವಾಗಲಿದ್ದು, ಸಾರ್ವ ಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳು ವಂತೆ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಬ್ಲಡ್ ಬ್ಯಾಂಕ್ ಮುಖ್ಯಸ್ಥ ರಾದ ನಾಗೇಶ್ ಕುಮಾರ್ ಎನ್.ಜೆ. ತಿಳಿಸಿದ್ದಾರೆ.
Tagged with
briefs
ಮಂಗಳೂರು: ಸುಳ್ಯ ತಾಲೂಕಿನ ಕುತ್ಕುಂಜ ಗ್ರಾಮದ ನಿವಾಸಿ ಪಟೇಲ್ ಬಿ. ಕುಶಾಲಪ್ಪ ಗೌಡ (೭೮) ಅವರು ಜೂ. ೧೦ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಸುಮಾರು ೧೫ ವರ್ಷಗಳ ಕಾಲ ಅನುವಂಶಿಕ ಪಟೇಲರಾಗಿ ದುಡಿದು ಬಳಿಕ ಗ್ರಾಮಲೆಕ್ಕಿಗರಾಗಿ ೨೪ ವರ್ಷಗಳ ಸೇವೆ ಸಲ್ಲಿಸಿ ೧೯೯೨ರಲ್ಲಿ ನಿವೃತ್ತರಾ ಗಿದ್ದರು. ಸುಳ್ಯ, ಬಂಟ್ವಾಳ, ಪುತ್ತೂರು ತಾಲೂಕುಗಳಲ್ಲಿ ಅವರು ಗ್ರಾಮ ಲೆಕ್ಕಿಗರಾಗಿ ಕರ್ತವ್ಯ ನಿರ್ವಹಿಸಿದ್ದರು.
Tagged with
death
ಸುರತ್ಕಲ್‌ನ ಸೂರಜ್ ಹೊಟೇಲ್‌ನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ‘ವೀರ ಶಂಭುಕಲ್ಕುಡ’ ತುಳು ಯಕ್ಷಗಾನ ಸಂದರ್ಭದಲ್ಲಿ ತೆಂಕು ತಿಟ್ಟಿನ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರನ್ನು ಕರ್ನಾಟಕ ತಳು ಸಾಹಿತ್ಯ ಅಕಾಡೆಮಿಯ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಸನ್ಮಾನಿಸಿದರು. ಹೊಟೇಲ್ ಮಾಲೀಕ ರವೀಂದ್ರ ಪೂಜಾರಿ ಉಪಸ್ಥಿತರಿದ್ದರು.
Tagged with
gallery
ವಿಟ್ಲದ ಬಿಜೆಪಿ ಮುಖಂಡರ ಷಡ್ಯಂತ್ರಕ್ಕೆ ದೃಶ್ಯ ಮಾಧ್ಯಮದವರ ಸಾಥ್!
ಪುತ್ತೂರು: ಪುತ್ತೂರಿನ ಕಲ್ಲುರ್ಟಿ ದರ್ಶನ ಪಾತ್ರಿ ಕಂ ಜ್ಯೋತಿ ಷಿಯ ಮೇಲೆ ಆದಿತ್ಯವಾರ ಸಂಜೆ ನಡೆದ ಹಲ್ಲೆ ಪ್ರಕರಣದ ಹಿಂದೆ ವಿಟ್ಲ ವ್ಯಾಪ್ತಿಯ ‘ರಾಮಣ್ಣ’ ಎಂಬ ಹೆಸರುಳ್ಳ ಬಿಜೆಪಿ ಮುಖಂಡರೊಬ್ಬರ ಕೈವಾಡವಿದ್ದು, ದರ್ಶನ ಪಾತ್ರಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ರೂ.೨ ಲಕ್ಷ ಕಸಿಯುವ ಈ ಷಡ್ಯಂತ್ರಕ್ಕೆ ಕೆಲ ದೃಶ್ಯ ಮಾಧ್ಯಮದವರು ಕೈಜೋಡಿಸಿರುವುದು ಇದೀಗ ಬಹಿರಂಗಗೊಂಡಿದೆ.
ಪುತ್ತೂರಿನ ನೆಹರೂನಗರ ಬಳಿಯ ಲಿಂಗದಕಾಡು ಎಂಬಲ್ಲಿ ಕಲ್ಲುರ್ಟಿ ದೈವವನ್ನು ಆರಾಧಿಸಿಕೊಂಡು ದರ್ಶನ ಪಾತ್ರಿಯಾಗಿ ಮತ್ತು ಜ್ಯೋತಿಷಿ ಯಾಗಿ ಗುರುತಿಸಿಕೊಂಡಿರುವ ಹರೀಶ್ ರೈ ಎಂಬವರಿಗೆ ಹಲ್ಲೆ ನಡೆಸಿದ ಹಿಂದೆ ಬ್ಲ್ಯಾಕ್‌ಮೇಲ್ ಷಡ್ಯಂತ್ರ ನಡೆ ದಿರುವುದು ಇದೀಗ ಬಹಿರಂಗ ಗೊಂಡಿದ್ದು, ಇದಕ್ಕೆ ಮೂಲ ಕಾರಣ ರಾದ ವಿಟ್ಲದ ಬಿಜೆಪಿ ನಾಯಕನ ವಿರುದ್ದ ಬಿಜೆಪಿಗರೇ ಅಸಮಾಧಾನ ಹೊಂದಿದ್ದಾರೆ ಎಂಬ ಮಾಹಿತಿ ಇದೆ.
ಕೆಲ ದೃಶ್ಯ ಮಾಧ್ಯಮದವರ ಎದುರು ಹರೀಶ್ ರೈಯವರ ಮೇಲೆ ಹಲ್ಲೆ ನಡೆಸಿ ಅವರ ಮಾನ ಹರಾಜುಗೊಳಿಸಿ ಬಳಿಕ ಈ ಸುದ್ದಿ ಮಾಧ್ಯಮ ಗಳಲ್ಲಿ ಬಾರದಂತೆ ನೋಡಿಕೊಳ್ಳಲು ರೂ. ೨ಲಕ್ಷ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿರುವ ಸುದ್ದಿ ಇದೀಗ ಬಹಿರಂಗಗೊಂಡಿದೆ.
ಕೇವಲ ದೃಶ್ಯ ಮಾಧ್ಯಮದವರನ್ನು ಮಾತ್ರ ಕರೆಸಿ ಅವರ ಎದುರಿನಲ್ಲಿ ಹರೀಶ್ ರೈಯವರ ಮೇಲೆ ಹಲ್ಲೆ ನಡೆಸಿ ಹರೀಶ್ ಅವರು ವಿಟ್ಲ ಸಮೀಪದ ಅಳಕೆಮಜಲಿನ ಯುವತಿಯೊಬ್ಬಳನ್ನು ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂಬ ಕಟ್ಟು ಕತೆ ಹೇಳಿ ಸಾರ್ವಜನಿಕರೆದುರು ಹರೀಶ್ ರೈಯವರ ಮಾನ ಹರಾಜು ಹಾಕಿದ್ದ ಸುಮಾರು ೧೫ ಮಂದಿಯಷ್ಟಿದ್ದ ತಂಡ ಈ ಸುದ್ದಿ ಪ್ರಚಾರವಾಗದಂತೆ ನೋಡಿಕೊಳ್ಳಬೇಕಾದರೆ ಪೊಲೀಸರಿಗೆ, ವಿವಿಧ ಪತ್ರಿಕೆಯವರಿಗೆ ಮತ್ತು ದೃಶ್ಯ ಮಾಧ್ಯಮದವರಿಗೆ ಸೇರಿದಂತೆ ಒಟ್ಟು ರೂ.೨ಲಕ್ಷ ಹಣವನ್ನು ನೀಡಬೇ ಕೆಂದು ಬೆದರಿಸಿದ್ದು, ಈ ಬೆದರಿಕೆಗೆ ಮಣಿದ ಹರೀಶ್ ರೂ.೨ಲಕ್ಷದ ಪೈಕಿ ರೂ.೬೦ ಸಾವಿರ ನೀಡಲು ಮುಂದಾಗಿದ್ದು, . ಇದಕ್ಕಾಗಿ ಚಿನ್ನಾಭರಣ ಅಡವಿ ಡಲು ನಿರ್ಧರಿಸಿದ್ದರು. ಈ ವಿಚಾರ ತಿಳಿದ ಪುತ್ತೂರಿನ ಬಿಜೆಪಿ ನಾಯಕರೊಬ್ಬರು ಅದನ್ನು ತಡೆದರು ಎಂಬ ಮಾಹಿತಿ ಲಭಿಸಿದೆ.
ಜೋತಿಷಿ ಹರೀಶ ರೈಯವರ ಮೇಲೆ ಹಲ್ಲೆ ನಡೆಸಿದ್ದ ತಂಡ ಹಣವನ್ನು ಮಂಗಳೂರಿಗೆ ತಲುಪಿಸುವಂತೆ ತಿಳಿಸಿದ್ದರು. ರಾತ್ರಿಯೊಳಗೆ ಮಂಗಳೂರಿಗೆ ಬಂದು ಹಣ ತಲುಪಿಸದಿದ್ದಲ್ಲಿ ಬೆಂಗಳೂರಿನಲ್ಲಿ ಸುದ್ದಿ ಟೆಲಿಕಾಸ್ಟ್ ಆಗುತ್ತದೆ ಎಂದು ಬೆದರಿಸಿದ್ದರು. ಹರೀಶ್ ಅವರು ರೂ.೨ಲಕ್ಷದ ಪೈಕಿ ರೂ. ೬೦ ಸಾವಿರ ಹಣವನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗುವ ಸಿದ್ಧತೆ ನಡೆಸಿದ್ದರು. ಆದರೆ ಈ ವಿಚಾರ ತಿಳಿದ ಈ ಹಿಂದೆ ಪುತ್ತೂರು ಪುರಸಭಾಪತಿಯೂ ಆಗಿದ್ದ ಪುತ್ತೂರಿನ ಬಿಜೆಪಿ ನಾಯಕರೊಬ್ಬರು ಅವರಿಗೆ ಹಣ ನೀಡದಂತೆ ತಡೆಯುವ ಮೂಲಕ ಬ್ಲ್ಯಾಕ್‌ಮೇಲ್ ತಂತ್ರವನ್ನು ವಿಫಲಗೊಳಿಸಿದರೆಂದು ತಿಳಿದು ಬಂದಿದೆ.
ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ!
ವಿಟ್ಲ ವ್ಯಾಪ್ತಿಯಲ್ಲಿ ಪೈಂಟರ್ ವೃತ್ತಿ ನಡೆಸುತ್ತಿರುವ ವೀರಕಂಬದ ಕಡಂಬು ನಿವಾಸಿ ಗಣೇಶ್ ಮತ್ತು ಅಡಿಕೆ ಗಾರ್ಬಲ್ ಕೆಲಸಕ್ಕೆ ಹೋಗುತ್ತಿದ್ದ ವೀರಕಂಬದ ಮಜಿಯ ಯುವತಿಯೊಬ್ಬಳ ನಡುವೆ ಪ್ರೇಮಾಂಕುರವಾಗಿತ್ತು. ಆದರೆ ಯುವತಿಯ ಕಡೆಯವರು ಅದಕ್ಕೆ ಆಕ್ಷೇಪ ವ್ಯಕ್ತ ಪಡಿಸಿ ದ್ದರು. ಮಾತ್ರವಲ್ಲದೆ ದರ್ಶನ ಪಾತ್ರಿ ಹರೀಶ್ ರೈ ಅವರನ್ನು ಸಂಪರ್ಕಿಸಿ ಈ ಪ್ರೇಮ ಸಂಬಂಧ ಕಡಿದು ಹೋಗುವಂತೆ ಮತ್ತು ಮಗಳ ಮನಪರಿವರ್ತನೆಯಾಗುವಂತೆ ಮಾಡ ಬೇಕೆಂದು ಭಿನ್ನವಿಸಿಕೊಂಡಿದ್ದರು . ಈ ಹಿನ್ನಲೆಯಲ್ಲಿ ಹರೀಶ್ ರೈಯವರು ಯುವತಿಯಲ್ಲಿ ‘ಅವನು ಸರಿ ಇಲ್ಲ, ಅವನ ಗುಣ ನಡತೆ ಸರಿ ಇಲ್ಲ ಎಂದು ಬುದ್ದಿವಾದ ಹೇಳಿ ಮನಪರಿವರ್ತನೆಗೆ ಪ್ರಯತ್ನ ನಡೆಸಿದ್ದರು ಎಂಬುದು ವಾಸ್ತವಿಕ ವಿಚಾರ ಎಂಬುದು ಇದೀಗ ಸ್ಪಷ್ಟವಾಗಿದೆ.
ತನ್ನ ಪ್ರಿಯಕರನೊಂದಿಗೆ ಅನುರಕ್ತಳಾಗಿದ್ದ ಯುವತಿ ತನ್ನ ಪ್ರಿಯಕರ ಗಣೇಶನಿಗೆ ಈ ವಿಚಾರವನ್ನು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಆತ ದರ್ಶನ ಪಾತ್ರಿ ಹರೀಶರ ಮೇಲೆ ಸೇಡು ತೀರಿಸಲು ಮುಂದಾಗಿ ತನ್ನ ಸ್ನೇಹಿತನಾದ ವಿಟ್ಲದ ಬಿಜೆಪಿ ಮುಖಂಡರೊಬ್ಬರನ್ನು ಸಂಪರ್ಕಿಸಿದ್ದ. ವಿಟ್ಲದ ಬಿಜೆಪಿ ಮುಖಂಡ ತನ್ನ ಬಳಗದವರೊಂದಿಗೆ ಸೇರಿಕೊಂಡು ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ ರೂಪಿಸಿ ದೃಶ್ಯ ಮಾಧ್ಯಮದವರನ್ನು ಕರೆಸಿ ಹರೀ ಶರ ಮೇಲೆ ಹಲ್ಲೆ ನಡೆಸುವ ಜೊತೆಗೆ ಆವರಿಂದ ರೂ.೨ಲಕ್ಷ ಕೀಳುವ ಪ್ರಯತ್ನ ನಡೆಸಿದ್ದು, ಇದಕ್ಕೆ ಕೆಲ ದೃಶ್ಯ ಮಾಧ್ಯಮ ಮಂದಿ ಕೈಜೋಡಿಸಿದ್ದಾರೆ ಎಂಬ ಸುದ್ದಿ ಹರಡುತ್ತಿದೆ.
ತಾನು ಮತ್ತು ಗಣೇಶ್ ಪ್ರೀತಿಸುತ್ತಿದ್ದು, ಗಣೇಶ್ ತನ್ನನ್ನು ದೂರ ಮಾಡಲು ಮುಂದಾಗಿದ್ದ. ಈ ಬಗ್ಗೆ ವಶೀಕರಣಕ್ಕಾಗಿ ತಾನು ಹರೀಶರ ಬಳಿಗೆ ತೆರಳಿದ್ದೆ. ಆ ಸಂದರ್ಭದಲ್ಲಿ ಆತ ವಶೀಕರಣ ವ್ಯವಸ್ಥೆ ಮಾಡಿಕೊಟ್ಟರೆ ನಾನು ಹೇಳಿದಂತೆ ನೀನು ಕೇಳಬೇಕು ಎಂದಿದ್ದ. ಕೆಲವು ಸಮಯದ ಬಳಿಕ ಮನೆಗೆ ಬಂದ ಆತ ತನ್ನನ್ನು ಹೊರಗೆ ಕರೆದುಕೊಂಡು ಹೋಗಿ ಬಳಿಕ ಕಾಡೊಂದಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದ , ಅಲ್ಲದೆ ಈ ವಿಚಾರವನ್ನು ಯಾರಲ್ಲಾದರೂ ತಿಳಿಸಿದಲ್ಲಿ ಕಲ್ಲುರ್ಟಿಯ ಆಣೆ ಇದೆ ಎಂದಿದ್ದ. ಇದರಿಂದಾಗಿ ನಾನು ಆ ವಿಚಾರವನ್ನು ಯಾರಲ್ಲೂ ತಿಳಿಸಿಲ್ಲ. ಆದರೆ ಆತ ಕಳೆದ ಮೂರು ದಿನಗಳ ಹಿಂದೆ ಮತ್ತೆ ಪೋನ್ ಮಾಡಿ ತನ್ನ ಬಳಿಗೆ ಬರುವಂತೆ ಒತ್ತಾಯಿಸತೊಡಗಿದ್ದಾನೆ ಎಂದು ಯುವತಿ ಹಲ್ಲೆ ಘಟನೆಯ ಸಂದರ್ಭದಲ್ಲಿ ಸುಳ್ಳಿನ ರೀಲು ಬಿಟ್ಟಿದ್ದಳು. ಪೊಲೀಸರು ಆಕೆಯ ಹೆತ್ತವರನ್ನು ಕರೆಸಿ ವಿಚಾರಣೆ ನಡೆಸಿದ ಬಳಿಕವಷ್ಟೇ ಸತ್ಯಾಂಶ ಹೊರಬಿದ್ದಿತ್ತು. ಈ ಒಟ್ಟು ಘಟನೆಯು ಹರೀಶರನ್ನು ಬ್ಲ್ಯಾಕ್‌ಮೇಲೆ ಮಾಡಿ ಅವರಿಂದ ರೂ.೨ಲಕ್ಷ ಪಡೆಯುವ ಉದ್ದೇಶದಿಂದಲೇ ನಡೆದಿತ್ತು ಎಂಬುದು ಇದೀಗ ಸ್ಪಷ್ಟವಾಗಿದೆ.
ಬಿಜೆಪಿ ಲೀಡರ್ ರಾಮಣ್ಣ ಎಂಬವರೇ ಈ ಬ್ಲ್ಯಾಕ್‌ಮೇಲ್ ತಂತ್ರದ ರುವಾರಿ ಎಂದು ಹೇಳಲಾಗುತ್ತಿದೆ. ಇವರಿಗೆ ಸಹಕರಿಸಿದವರಲ್ಲಿ ಸುನಿತ್ ಎಂಬವರೂ ಸೇರಿದ್ದಾನೆ . ರಾಮಣ್ಣ ತನ್ನ ಮೊಬೈಲ್‌ನಲ್ಲಿ ದೃಶ್ಯ ಮಾಧ್ಯಮದವರ ಜೊತೆ ಸಂಭಾಷಿಸುವಂತೆ ನಾಟಕವಾಡುತ್ತಾ ಆ ಟಿವಿಯವರು ಅಷ್ಟು ಕೇಳುತ್ತಾರೆ. ಮತ್ತೊಂದು ಟಿವಿಯವರು ಇಷ್ಟು ಕೇಳುತ್ತಾರೆ. ಪತ್ರಿಕೆಯವರೂ ಇಷ್ಟು ಡಿಮಾಂಡ್ ಇಡುತ್ತಿದ್ದಾರೆ. ಹಣ ನೀಡದಿದ್ದರೆ ನ್ಯೂಸ್ ಬ್ರಾಡ್ ಕಾಸ್ಟ್ ಮಾಡುವುದಾಗಿ ಹೇಳುತ್ತಿದ್ದಾರೆ. ಹಣ ನೀಡಿದರೆ ನಾವು ಅದನ್ನು ತಡೆಯುತ್ತೇವೆ ಎಂದು ಹೇಳುತ್ತಾ ಹರೀಶ್ ರೈ ಕಡೆಯವರನ್ನು ನಂಬಿಸಲು ಯತ್ನಿಸಿದ್ದ ಎಂದು ಹರೀಶ್ ರೈ ಬಳಗದವರು ಆರೋಪಿಸುತ್ತಿದ್ದಾರೆ.
ಈ ಬಿಜೆಪಿ ಮುಖಂಡ ತಾನು ಕೆಡುವುದರ ಜೊತೆಗೆ ವಿವಿಧ ಪತ್ರಿಕೆಗಳ ಮತ್ತು ದೃಶ್ಯ ಮಾಧ್ಯಮಗಳ ಹೆಸರು ಹೇಳಿ ಇಂತವರಿಗೆ ಇಂತಿಷ್ಟು ನೀಡಬೇಕೆಂದು ಒಟ್ಟು ರೂ. ೨ಲಕ್ಷದ ಬೇಡಿಕೆ ಮುಂದಿಟ್ಟು ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಎಲ್ಲರ ಹೆಸರು ಕೆಡಿಸಲು ಮುಂದಾಗಿರುವುದು ವಿಶೇಷವಾಗಿದೆ. ಇವರ ಈ ನರಿ ಬುದ್ದಿಯ ವಿರುದ್ದ ಬಿಜೆಪಿಗರೇ ತಿರುಗಿ ಬೀಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
‘ನಾನು ತಪ್ಪು ಮಾಡಿಲ್ಲ’
ನಾವು ಕಳೆದ ೧೦ ವರ್ಷಗಳಿಂದ ಕಲ್ಲುರ್ಟಿ ಸೇವೆ ಮಾಡಿಕೊಂಡು ಬಲಿಮೆ ವೃತ್ತಿ ಮಾಡಿಕೊಂಡು ಬಂದಿದ್ದೇನೆ . ಈ ತನಕ ಯಾರಿಗೂ ಅನ್ಯಾಯ ಮಾಡಿಲ್ಲ. ಯುವತಿಯರನ್ನು ಆಕರ್ಷಿಸುವ ವಯಸ್ಸು ಕೂಡ ನನ್ನದ್ದಲ್ಲ. ನನ್ನ ಮಕ್ಕಳಿಗೆ ಈಗಾಗಲೇ ಮದುವೆಯಾಗಿದ್ದು, ನಾನೊಬ್ಬ ಸಭ್ಯ ಸಂಸಾರಸ್ಥ. ನನಗೆ ಹಲ್ಲೆ ನಡೆಸಿ ಇಷ್ಟು ಹಣ ನೀಡಬೇಕು ಎಂದು ಬೆದರಿಸಿದಾಗ ಮಾನ ಮರ್ಯಾದೆಗೆ ಅಂಜಿ ಚಿನ್ನಾಭರಣ ಅಡವಿಟ್ಟಾದರೂ ರೂ. ೬೦ಸಾವಿರ ಕೊಡಲು ಮುಂದಾದೆ. ಆದರೆ ಪುತ್ತೂರು ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ನನ್ನನ್ನು ತಡೆದು ಅವರಿಗೆ ಹಣ ಯಾಕೆ ಕೊಡಬೇಕು ಎಂದು ನನ್ನ ಕಣ್ಣು ತೆರೆಸುವ ಮೂಲಕ ಬಹುದೊಡ್ಡ ಉಪಕಾರ ಮಾಡಿದರು ಎಂದು ಜೋತಿಷಿ ಹರೀಶ್ ರೈ ಹೇಳಿಕೆ ನೀಡಿದ್ದಾರೆ.
ಇದೊಂದು ಹಣ ಮಾಡುವ ಪಡ್ಯಂತ್ರವಾಗಿದ್ದು, ಇದರಲ್ಲಿ ರಾಮಣ್ಣ ರೊಂದಿಗೆ ಕೆಲವೊಂದು ಟಿವಿ ಮಾಧ್ಯಮದವರು ಶಾಮೀಲಾಗಿದ್ದಾರೆ ಎಂದು ಹರೀಶ್ ರೈ ಭಕ್ತರು ಪ್ರತಿಕ್ರಿಯಿಸಿದ್ದಾರೆ.
Tagged with
dk,
lnews
ಕಾರ್ಕಳ: ಜಲವಿದ್ಯುತ್ ಕಂಪೆನಿಗೆ ಬ್ಲ್ಯಾಕ್‌ಮೇಲ್
ಕಾರ್ಕಳ: ಪುರಸಭಾ ವ್ಯಾಪ್ತಿಗೆ ನೀರು ಸರಬರಾಜಾಗುತ್ತಿರುವ ಏಕೈಕ ಆಸರೆಯಾದ ಮುಂಡ್ಲಿ ಡ್ಯಾಂ ಸನಿಹ ದಲ್ಲಿಯೇ ನಿರ್ಮಾಣವಾಗುತ್ತಿರುವ ಅಪಾಯಕಾರಿ ವಿದ್ಯುತ್ ಸ್ಥಾವರದ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧರಿಸಿ ತಾಲೂಕು ಪಂಚಾಯತ್ ಸದಸ್ಯನೊಬ್ಬ ಜಲ ವಿದ್ಯುತ್ ಕಂಪೆನಿಯವರಿಗೆ ಬ್ಲ್ಯಾಕ್ ಮೇಲ್ ಮಾಡಿ ಏಳು ಲಕ್ಷ ರೂಪಾಯಿ ಕಪ್ಪಕಾಣಿಕೆ ಪಡೆದ ಬಗ್ಗೆ ಮಾಹಿತಿ ಯೊಂದು ಬೆಳಕಿಗೆ ಬಂದಿದೆ.
ಫೆಬ್ರವರಿ ತಿಂಗಳಲ್ಲಿ ಮುಂಡ್ಲಿ ಡ್ಯಾಂ ಬತ್ತಿಹೋಗಿತು. ಇದಕ್ಕೆ ಜಲ ವಿದ್ಯುತ್ ಉತ್ಪಾದಕ ಘಟಕ ಯೋಜ ನೆಗೆ ಉಪಯೋಗಿಸುವ ಸ್ಫೋಟಕ ಕಾರಣವೆಂಬ ಮಹತ್ವ ಅಂಶವೊಂ ದನ್ನು ಪತ್ರಿಕೆಗಳು ವರದಿ ಮಾಡಿತ್ತು. ಸ್ಫೋಟಕಗಳ ಬಳಕೆಯಿಂದ ಅಂತ ರ್ಜಲ ಬತ್ತಿ ಹೋಗಿದೆಯೆಂದು ನೈಜಾಂ ಶವನ್ನು ಬಹಿರಂಗ ಪಡಿಸಲಾಗಿತ್ತು.
ಇಂತಹ ಸಂದರ್ಭದಲ್ಲಿ ಪುರಸಭಾ ಆಡಳಿತ ವರ್ಗವು ಯಾವುದೇ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸದೇ ಇದ್ದುದರಿಂದ ಜಿಲ್ಲಾ ಡಳಿತವು ಯಾವುದೇ ಕ್ರಮಕೈಗೊಂಡಿ ಲ್ಲವೆನ್ನಲಾಗಿದ್ದರೂ, ಸಾರ್ವಜನಿಕರ ದೂರಿನನ್ವಯ ಸೂಕ್ತಕ್ರಮ ಕೈಗೊಳ್ಳುವ ಜವಾಬ್ದಾರಿಯು ಜಿಲ್ಲಾಡಳಿತಕ್ಕೆ ಇದ್ದರೂ ಕ್ರಮಕೈಗೊಳ್ಳಲು ವಿಫಲವಾಗಿರುವ ಬಗ್ಗೆ ಹಲವು ಅನುಮಾನಗಳಿಗೆ ಕಾರಣ ವಾಗಿದೆ.
ಇದೇ ವಿಚಾರವನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷದ ತಾಲೂಕು ಪಂಚಾ ಯತ್ ಸದಸ್ಯನೊಬ್ಬ ಜಲವಿದ್ಯುತ್ ಉತ್ಪಾದಕ ಕಂಪೆನಿಗೆ ತೆರಳಿ ಬ್ಲ್ಯಾಕ್‌ಮೇಲ್ ಮಾಡಿರುವ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಗ್ರಾಮಸ್ಥರು ಯಾವುದೇ ಸಂದರ್ಭದಲ್ಲೂ ನನ್ನ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಬಹುದು ಎಂದು ಎಚ್ಚರಿಸಿದನೆನ್ನಲಾಗಿದೆ. ಇದರಿಂದ ಬೆದರಿದ ಕಂಪೆನಿಯ ಆಡಳಿತ ವರ್ಗವು ಏಳು ಲಕ್ಷ ರೂಪಾಯಿ ಕಪ್ಪಕಾಣಿಕೆ ನೀಡಿ ಸಮಾಧಾನಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Tagged with
lnews,
udupi
ಜಾಮೀನು ಸಿಗದಿದ್ದರೆ ಒಳಗೆ!
ಬೆಂಗಳೂರು: ಗಣಿ ಗುತ್ತಿಗೆ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು ಯಡಿ ಯೂರಪ್ಪ ಅವರ ಭವಿಷ್ಯವನ್ನು ಜೂ.೧೩ (ಇಂದು) ನಿರ್ಧರಿಸಲಿದೆ.
ಒಂದು ವೇಳೆ ಸಿಬಿಐ ನ್ಯಾಯಾ ಲಯ ಜಾಮೀನು ನಿರಾಕರಿಸಿದರೆ ಯಡ್ಡಿ ಅವರನ್ನು ಸಿಬಿಐ ತಕ್ಷಣವೇ ಬಂಧಿಸುವ ಸಾಧ್ಯತೆಗಳು ದಟ್ಟವಾಗಿದೆ. ಹೀಗಾಗಿ ಕಿಕ್‌ಬ್ಯಾಕ್ ಪ್ರಕರಣದಲ್ಲಿ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಸಿಗದಿದ್ದರೆ ಏನೂ ಮಾಡು ವುದು ಎಂದು ಯಡಿಯೂರಪ್ಪ ಅವರ ಆಪ್ತರು ಚಿಂತಿಸತೊಡಗಿದ್ದಾರೆ.
ಜಾಮೀನು ಸಿಗುವುದು ಕಷ್ಟ: ಸಿಬಿಐ ಪರ ವಕೀಲ ಅಶೋಕ್ ಬಾನ್ ಅವರು ಮಂಡಿಸಿದ ವಾದದ ಪ್ರಕಾರ ಗಣಿ ಕಂಪನಿಗಳಿಂದ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್‌ಲಿಗೆ ಬರ ಬೇಕಿರುವ ೯೧೭ಕ್ಕೂ ಅಧಿಕ ಕೋಟಿ ರು. ಮೊತ್ತ ಇನ್ನೂ ಬಾಕಿ ಇದೆ.
ಗಣಿ ಗುತ್ತಿಗೆ ಅವ್ಯವಹಾರ ಎಲ್ಲವೂ ನಕಲಿ ದಾಖಲೆ, ನಕಲಿ ಕಂಪೆನಿಗಳ ಹೆಸರಿನಲ್ಲಿ ನಡೆದಿರುವುದರಿಂದ ಸರ್ಕಾರಕ್ಕೆ ಸಿಗಬೇಕಾದ ತೆರಿಗೆ, ರಾಜಸ್ವ ಮೊತ್ತ ತಲುಪಿಲ್ಲ. ಡಿನೋಟಿಫಿಕೇಷನ್ ಪ್ರಕರಣದಲ್ಲೂ ದಾಖಲೆಗಳನ್ನು ತಿದ್ದಿ, ನಕಲಿ ಮಾಡಿ ವ್ಯವಹಾರ ಮುಗಿಸ ಲಾಗಿದೆ. ಹೀಗಾಗಿ ಸಿಬಿಐ ಹೆಚ್ಚಿನ ತನಿಖೆ ನಡೆಸದಿದ್ದರೆ ಸರ್ಕಾರಕ್ಕೆ ಇನ್ನಷ್ಟು ನಷ್ಟ ವಾಗುತ್ತದೆ. ಹಾಗೂ ಯಡಿಯೂರಪ್ಪ ಅವರ ಕಾಲದ ಅಕ್ರಮದ ಅಸಲಿ ಮೊತ್ತ ತಿಳಿಯುತ್ತದೆ ಎಂದು ವಾದಿಸಿದರು.
ಆದರೆ, ಸಿಬಿಐ ಪರ ವಕೀಲರ ವಾದವನ್ನು ಯಡಿಯೂರಪ್ಪ ಅವರ ಪರ ವಕೀಲ ಅಶೋಕ್ ಹಾರನಹಳ್ಳಿ ಅಲ್ಲಗೆಳೆದು, ಯಡಿಯೂರಪ್ಪ ಅವರು ಯಾವುದೇ ಅಕ್ರಮ ಎಸೆಗಿಲ್ಲ ಎಂದು ಕೋರ್ಟಿನಲ್ಲಿ ವಾದಿಸಿದರು.
ಯಡಿಯೂರಪ್ಪ ಅವರ ಅಕ್ರಮದ ಮೊತ್ತ ತಿಳಿಯದ ಕಾರಣ, ಹೀಗಾಗಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಸಿಬಿಐ ವಶಕ್ಕೆ ವಹಿಸುವ ಸಾಧ್ಯತೆ ಹೆಚ್ಚಾಗಿದೆ. ಭ್ರಷ್ಟಾಚಾರ, ಸಂಚು, ವಂಚನೆ, ೧೯೯೧ರ ಭೂ ಕಾಯಿದೆ ಉಲ್ಲಂಘನೆ ಮುಂತಾದ ಆರೋಪ ಹೊತ್ತಿರುವ ಯಡಿಯೂರಪ್ಪ, ಅವರ ಮಕ್ಕಳು, ಅಳಿಯಂದಿರ ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ಸಿಬಿಐ ವಕೀಲ ಅಶೋಕ ವಾದಿಸಿದರು.
ಯಡ್ಡಿ ನಡೆ ನಿಗೂಢ: ಪರಿಷತ್ ಚುನಾವಣೆ ಸಂದರ್ಭದಲ್ಲಿ ಯಡಿಯೂ ರಪ್ಪ ಅವರು ತಮ್ಮ ಬೆಂಬಲಿಗರ ಜೊತೆ ಜೊತೆಯಲ್ಲೇ ಸಾಗುತ್ತಿದ್ದರು. ಇಂದಿನ ತೀರ್ಪಿನ ನಂತರ ಯಡಿಯೂರಪ್ಪ ಅವರ ಜೊತೆ ಯಾರು ಇರುತ್ತಾರೆ. ಯಾರು ಅವರ ಸಂಗ ತೊರೆಯುತ್ತಾರೆ ಎಂಬುದು ನಿರ್ಧಾರವಾಗಲಿದೆ.
Tagged with
snews,
yeddi
ಕಾಸರಗೋಡು: ಮಂಜೇಶ್ವರದ ಉದ್ಯಾವರದಲ್ಲಿ ಮನೆ ಬೆಂಕಿಗಾಹುತಿ ಯಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಉದ್ಯಾವರ ಕೊಳ್ಕೆಬೈಲಿನ ಬಾಬು ಭಂಡಾರಿ ಎಂಬವರ ಮನೆಯು ಸೋಮವಾರ ರಾತ್ರಿ ದಿಢೀರನೆ ಬೆಂಕಿ ಗಾಹುತಿಯಾಗಿದೆ. ಬೆಂಕಿಯ ಕೆನ್ನಾಲೆ ಇಡೀ ಮನೆಯನ್ನು ನುಂಗುವಷ್ಟರಲ್ಲಿ ಮನೆ ಮಂದಿ ಹೊರಗೋಡಿದ ಫಲ ವಾಗಿ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆ ವೇಳೆ ಬಾಬು ಭಂಡಾರಿಯವರ ಪತ್ನಿ, ಇಬ್ಬರು ಮಕ್ಕಳು, ನಾಲ್ವರು ಸೊಸೆಯಂದಿರು, ಪುಟಾಣಿಯರು ಮನೆಯಲ್ಲಿದ್ದರೆನ್ನಲಾಗಿದೆ. ಸುದ್ದಿಯರಿತು ತಕ್ಷಣ ಧಾವಿಸಿದ ಉಪ್ಪಳ ಅಗ್ನಿ ಶಾಮಕ ದಳದವರು ಊರವರ ನೆರವಿನೊಂದಿಗೆ ಬೆಂಕಿಯನ್ನಾರಿಸಿದರು.
ಹಂಚಿನ ಮನೆಯ ಬಹುಭಾಗ ಉರಿದು ಹೋಗಿದ್ದು, ಸುಮಾರು ಮೂರು ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿದೆ.
Tagged with
fire,
kasapa,
lnews
ಮಂಗಳೂರು: ನಗರದ ಕಾವೂರಿನಲ್ಲಿ ಟ್ರಾನ್ಸ್‌ಫಾರ್ಮರ್ ಸೇರಿದಂತೆ ಭಾರಿ ಪ್ರಮಾಣದಲ್ಲಿ ವಿದ್ಯುತ್ ಪರಿಕರಗಳನ್ನು ಅಕ್ರಮವಾಗಿ ದಾಸ್ತಾನಿಸಿರುವುದು ಪತ್ತೆಯಾಗಿದೆ.
ಸೋಮವಾರ ರಾತ್ರಿ ಬಂಟ್ವಾಳದ ಲೊರೆಟ್ಟೊಪದವು ಸಮೀಪದ ಉಗ್ರಾಣದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಪತ್ತೆ ಮಾಡಿದ್ದ ಜಾಗೃತದಳದ ಇನ್ಸ್‌ಪೆಕ್ಟರ್ ರಾಘವ ಪಡೀಲ್ ಮತ್ತು ಸಿಬ್ಬಂದಿ ಮಂಗಳವಾರ ಕಾವೂರಿನಲ್ಲಿರುವ ಮೆಸ್ಕಾಂನ ಮುಖ್ಯ ಉಗ್ರಾಣದಲ್ಲಿ ಶೋಧ ಕಾರ್ಯ ನಡೆಸಿದ್ದು, ಸುಮಾರು ೬೦ ರಿಂದ ೭೦ ವಿದ್ಯುತ್ ಪರಿವರ್ತಕಗಳ ಅಕ್ರಮ ದಾಸ್ತಾನು ಪತ್ತೆಯಾಗಿದೆ. ಮೆಸ್ಕಾಂ ಇಂಜಿನಿಯರ್‌ಗಳು ಹಾಗೂ ಸಿಬ್ಬಂದಿ ಈ ಅಕ್ರಮದಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ದಟ್ಟವಾಗಿದ್ದು, ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಈ ರೀತಿಯ ಘಟನೆಗೆ ಕಾರಣವೆನ್ನಲಾಗಿದೆ.
ಕೆಲ ಇಂಜಿನಿಯರ್‌ಗಳು ಕೆಟ್ಟುಹೋದ ಟ್ರಾನ್‌ಫಾರ್ಮರ್‌ಗಳನ್ನು ಮೆಸ್ಕಾಂಗೆ ನೀಡದೆ ವಂಚಿಸಿದ್ದಾರೆ.
Tagged with
dk,
lnews
ಮುಲ್ಕಿ: ಹಳೆಯಂಗಡಿ ಮತ್ತು ಇಂದಿರಾನಗರದಲ್ಲಿ ಮಲೇರಿಯಾ ಹೆಚ್ಚುತ್ತಿದ್ದು, ಸುಮಾರು ೨೦ ಮಂದಿ ಮಲೇರಿಯಾದಿಂದ ಬಳಲುತ್ತಿದ್ದಾರೆ. ಹಳೆಯಂಗಡಿ ಗ್ರಾಮ ಪಂಚಾಯತ್ ನಿಂದ ಇಂದಿರಾನಗರ ಪ್ರದೇಶದಲ್ಲಿ ಕಸ ಹಾಕಲು ಸರಿಯಾದ ವ್ಯವಸ್ದೆ ಇಲ್ಲದೆ ಜನರು ರಸ್ತೆಯಲ್ಲಿಯೇ ಎಸೆ ಯುತ್ತಿದ್ದು, ಮಳೆಗೆ ಸೊಳ್ಳೆ ಉತ್ಪಾದನ ತಾಣಗಳಾಗಿ ಹೋಗಿವೆ.
ಹಳೆಯಂಗಡಿ ಗ್ರಾಮ ಪಂಚಾ ಯತ್ ಒಳಪಟ್ಟ ಇಂದಿರಾನಗರ ದಲ್ಲಿ ೫ ಪಂಚಾಯತ್ ಸದಸ್ಯರಿದ್ದು, ಇವರು ಈ ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ ಎನ್ನುವುದು ನಾಗರಿಕರ ದೂರು. ಈ ಮೊದಲು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕಸ ಹಾಕಲು ಪರ್ಯಾಯ ವ್ಯವಸ್ದೆ ಮಾಡಲು ಸಾರ್ವಜನಿಕ ಸಭೆಕರೆದಿದ್ದು, ಈ ಸಭೆಗೆ ಪಂಚಾಯತ್ ಸದಸ್ಯರೇ ಗ್ಯೆರು ಹಾಜರಾಗಿದ್ದರು. ಈ ಬಗ್ಗೆ ಜನರು ಪಂಚಾಯತ್ ಅಧ್ಯಕ್ಷ, ಪಿಡಿಓರಲ್ಲಿ ಮನವಿ ಮಾಡಿದರೂ ಸ್ಪಂದಿ ಸದ ಪರಿಣಾಮ ಇಂದು ಮಲೇ ರಿಯಾ ಹರಡಿದೆ ಎನ್ನುವುದು ನಾಗರಿಕ ಆರೋಪ. ಜನರು ಮಲೇರಿಯಾದಿಂದ ಸಾಯುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ ಎಂಬ ಕೂಗು ಕೇಳಿ ಜನರಿಂದ ಬಂದಿದೆ.
Tagged with
dk,
lnews
ಪಾವೂರು ಗ್ರಾಮದ ಕಂಬಳಪದವಿನಲ್ಲಿರುವ ಸರಕಾರಿ ಪ್ರೌಢ ಶಾಲೆಗೆ ಅಗತ್ಯವಿರುವ ಕೊಠಡಿಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ತರಗತಿಗಳನ್ನು ಚಪ್ಪರದಿಂದ ಮುಕ್ತಿಗೊಳಿಸುವಂತೆ ಒತ್ತಾಯಿಸಿ ಎಸ್.ಎಫ್.ಐ ನಿಯೋಗ ತಾಲೂಕು ಶಿಕ್ಷಣಾಧಿಕಾರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
Tagged with
gallery
ಮಂಗಳೂರು: ಸುಪ್ರೀಂ ಕೋರ್ಟ್ ಆದೇಶದನ್ವಯ ದೇಶಾದ್ಯಂತ ಕಾರುಗಳ ಟಿಂಟ್ ಗಾಜು ತೆರವುಗೊಳಿಸುವ ಅಭಿಯಾನ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪೊಲೀಸರು ಕಾನೂನು ಪಾಲನೆ ಮಾಡದೆ ಅಲೆದಾಡುತ್ತಿದ್ದ ಕಾರುಗಳನ್ನು ಹಿಡಿದು ಬಲವಂತವಾಗಿ ಟಿಂಟ್ ಗಾಜು ತೆಗೆಸಿದ್ದೂ ಆಗಿದೆ. ಟ್ರಾಫಿಕ್ ಪೊಲೀಸರು ಕೆಲವು ಕಡೆಗಳಲ್ಲಿ ಕಾರು ಚಾಲಕರನ್ನು ಹಿಡಿದು ದಂಡ ಕಕ್ಕಿಸಿದ್ದಾರೆ. ಆದರೆ ಯಾವುದೇ ಸೂಚನೆ ಕೊಡದೆ ಏಕಾಏಕಿ ಬ್ಲೇಡ್ ಹಿಡಿದು ಟಿಂಟ್ ಗಾಜಿನ ಮೇಲೆ ಗೀರುವ ಪೊಲೀಸರ ಕ್ರಮ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ದೇಶದ ಮಹಾನಗರಗಳಲ್ಲಿ ಚಲಿಸುವ ಕಾರಿನಲ್ಲೇ ನಡೆಯುತ್ತಿದ್ದ ಹೆಣ್ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ಮೇಲೆ ಬೆಳಕು ಚೆಲ್ಲಿದ್ದ ಸುಪ್ರೀಂ ಕೋರ್ಟ್ ಇದಕ್ಕೆಲ್ಲ ಟಿಂಟ್ ಗಾಜು ಬಳಕೆ ವ್ಯಾಪಕ ಅವಕಾಶ ನೀಡುತ್ತಿದೆ ಎನ್ನುವುದನ್ನು ಮನಗಂಡು ಟಿಂಟ್ ಗಾಜು ತೆರವಿಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕಾರುಗಳ ಟಿಂಟ್ ಗಾಜು ತೆಗೆಯಲು ಕ್ರಮ ಜರುಗಿಸಲಾಗಿತ್ತು.
ಮಂಗಳೂರಿನಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಪೊಲೀಸ್ ಇಲಾಖೆ, ಟ್ರಾಫಿಕ್ ಪೊಲೀಸ್ ಇಲಾಖೆ ಮುತುವರ್ಜಿ ವಹಿಸಿಕೊಂಡಿತ್ತು. ಅದರಂತೆ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರೇ ಮುಂದಾಗಿ ಟಿಂಟ್ ಗಾಜು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ರಸ್ತೆಯಲ್ಲಿ ಸಾಗುವ ಟಿಂಟ್ ಗಾಜು ಅಳವಡಿಸಿದ ಕಾರುಗಳನ್ನು ತಡೆದು ಬ್ಲೇಡ್‌ನಿಂದ ಗೀರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಇದೀಗ ಪೊಲೀಸರ ಈ ಕ್ರಮದ ವಿರುದ್ಧವೇ ನಾಗರಿಕರು ಅಸಹನೆ ವ್ಯಕ್ತಪಡಿಸುವಂತಾಗಿದೆ.
ಕಾರುಗಳ ಕಿಟಕಿ, ಮುಂಭಾಗದ ಗಾಜಿಗೆ ಬ್ಲೇಡ್‌ನಿಂದ ಗೀರಿರುವ ಪೊಲೀಸರು ಗಾಜಿಗೆ ಹಾನಿಯುಂಟು ಮಾಡಿದ್ದಾರೆ ಎಂಬ ಆರೋಪಗಳೂ ಎಲ್ಲೆಡೆ ಕೇಳಿಬಂದಿವೆ. ಕಾರಿನ ಟಿಂಟ್ ತೆಗೆದಿಲ್ಲವೆಂದಾದರೆ ಪೊಲೀಸರು ದಂಡ ವಿಧಿಸಲಿ, ಅದನ್ನು ಬಿಟ್ಟು ಏಕಾಏಕಿ ಕಾರಿನ ಗಾಜಿಗೆ ಗೀರುವುದು ಸರಿ ಯಲ್ಲ ಎಂಬ ಅಭಿಪ್ರಾಯ ನಾಗರಿಕರದ್ದು. ಕಾರಿನಲ್ಲಿ ಹೆಡ್‌ಲೈಟ್ ಇಲ್ಲವೆಂ ದಾದರೆ, ನಂಬರ್ ಪ್ಲೇಟ್ ಇಲ್ಲವೆಂದಾದರೆ ನೂರಿನ್ನೂರು ರೂ. ಸ್ಥಳದಲ್ಲೇ ದಂಡ ವಿಧಿಸುತ್ತಾರೆಯೇ ಹೊರತು ಹೆಡ್‌ಲೈಟ್, ನಂಬರ್ ಪ್ಲೇಟ್ ಅಳವಡಿಸಿ ಕೊಡುತ್ತಾರೆಯೇ, ಹೀಗಿರುವಾಗ ಟಿಂಟ್ ಗಾಜು ಅಳವಡಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರೇಕೆ ಅವಿವೇಕಿಗಳಂತೆ ವರ್ತಿಸುತ್ತಾರೆ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಟಿಂಟ್ ಗಾಜುಗಳನ್ನು ತೆಗೆಯಲು ಅಲ್ಲಲ್ಲಿ ಸರ್ವಿಸ್ ಸೆಂಟರ್‌ಗಳಿವೆ. ಅಲ್ಲಿ ಟಿಂಟ್ ತೆಗೆಯುವ ಎಕ್ಸ್‌ಪರ್ಟ್‌ಗಳೇ ಇರುತ್ತಾರೆ. ಹೀಗಿರುವಾಗ ಪೊಲೀಸರು ಜಿದ್ದಿಗೆ ಬಿದ್ದವರಂತೆ ಕಾರಿನ ಗಾಜಿನ ಮೇಲೆ ಬ್ಲೇಡ್ ಆಡಿಸುವುದು ಎಷ್ಟರಮಟ್ಟಿಗೆ ಸರಿ ಎನ್ನುವ ನಾಗರಿಕರು, ಪೊಲೀಸರು ಟಿಂಟ್ ತೆಗೆದು ರಸ್ತೆಯಲ್ಲೇ ಎಸೆಯುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವ ನೆಪದಲ್ಲಿ ಪರಿಸರದ ಅಂದಗೆಡಿಸುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ಈಗಾಗಲೇ ಬಹುತೇಕ ಕಾರುಗಳ ಟಿಂಟ್ ಪಟ್ಟಿಯನ್ನು ತೆಗೆಸಲಾಗಿದ್ದರೂ, ಐಶಾರಾಮಿ ಕಾರುಗಳ ಮಾಲಕರು ಇನ್ನೂ ಟಿಂಟ್ ತೆಗೆಯದೆ ಕಾನೂನಿನ ಯಾವುದೇ ಭಯವಿಲ್ಲದೆ ಓಡಾಟ ನಡೆಸುತ್ತಿರುವ ಬಗ್ಗೆಯೂ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Tagged with
dk,
lnews
ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಮುತಾಲಿಕ್
ಗೋವಾ: ಮುಸಲ್ಮಾನರ ಹಿಂದೂ ವಿರೋಧಿ ಫತ್ವಾಗಳು ಮತ್ತು ನಿರ್ಣಯಗಳು ಮಸೀದಿಯಿಂದ ಹೊರಡುತ್ತವೆ, ಕೆಸ್ತರು ಏನು ಮಾಡ ಬೇಕು ಎಂಬುದರ ಬಗ್ಗೆ ಇಗರ್ಜಿಗಳು ನಿರ್ಣಯ ತೆಗೆದುಕೊಳ್ಳುತ್ತದೆ. ಇವೆ ರಡೂ ಧರ್ಮೀಯರಿಗಾಗಿ ಮಸೀದಿ ಮತ್ತು ಇಗರ್ಜಿಗಳು ಕೇಂದ್ರ ಬಿಂದುಗಳಾಗಿವೆ. ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂಬು ದರ ಬಗ್ಗೆಯೂ ಇಲ್ಲಿಯೇ ನಿರ್ಣಯ ತೆಗೆದುಕೊಳ್ಳಲಾಗುತ್ತದೆ, ಇದೇ ರೀತಿ ಹಿಂದೂಗಳಿಗೆ ಮಾರ್ಗದರ್ಶನ ಮಾಡಲು ಹಿಂದೂ ಭವನದ ಸಂಕ ಲ್ಪನೆ ಮಾಡುವುದು ಆವಶ್ಯಕವಾಗಿದೆ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇವರು ದತ್ತಪೀಠದ ಮೇಲಾದ ಮುಸಲ್ಮಾನರ ಆಕ್ರಮಣಕ್ಕೆ ಮಾಡಿದ ವಿರೋಧ ಈ ಬಗ್ಗೆ ಮಾತನಾಡುತ್ತಾ ನುಡಿದರು.
ಇದೇ ವೇಳೆ ಮಾತನಾಡಿದ ಆಸಾರಾಮಜಿಬಾಪು ಇವರ ಸುಪುತ್ರ ಪೂ. ನಾರಾಯಣ ಪ್ರೇಮಸಾಯಿ ಯವರು ‘ಜಗತ್ತಿನಲ್ಲಿ ಕ್ರೈಸ್ತರ ೫೭ ಮತ್ತು ಮುಸಲ್ಮಾನರಿಗಾಗಿ ೯೨ ರಾಷ್ಟ್ರಗಳು,
ಹಾಗಾದರೆ ಹಿಂದೂಗಳಿಗಾಗಿ ಒಂದಾದರೂ ರಾಷ್ಟ್ರ ಏಕೆ ಇರಬಾ ರದು? ಎಂದು ಪ್ರಶ್ನಿಸಿದರಲ್ಲದೆ, ಹಿಂದೂ ರಾಷ್ಟ್ರದ ಸ್ಥಾಪನೆಯು ಒಂದು ಮುಖ್ಯ ಸಂಕಲ್ಪವಿದೆ; ಆದರೆ ಅದರ ಪೂರ್ಣತ್ವಕ್ಕಾಗಿ ಅನೇಕ ಸಣ್ಣಪುಟ್ಟ ಸಂಕಲ್ಪಗಳನ್ನು ಮಾಡಬೇಕಾಗುವುದು. ಅದಕ್ಕಾಗಿ ಸಾತತ್ಯ ಮತ್ತು ದೃಢ ನಿರ್ಧಾರ ಈ ಗುಣಗಳನ್ನು ಹಿಂದೂ ಗಳು ಅಂಗೀಕರಿಸಬೇಕು. ವಕ್ಫ್ ಬೋರ್ಡ್ನಂತೆ ಹಿಂದೂಗಳು ಸನಾತನ ಆರ್ಯ ಮಂಡಳಿಸ್ಥಾಪಿಸಿ ಎಲ್ಲ ಧಾರ್ಮಿಕಸ್ಥಳಗಳಿಗೆ ಸಹಾಯ ಮಾಡಬೇಕು ಎಂದರು.
Tagged with
mutalik,
nnews
ಬೆಂಗಳೂರು: ಮುಖ್ಯಮಂತ್ರಿ ಸದಾನಂದ ಗೌಡ ತಮ್ಮ ಮಂತ್ರಿ ಮಂಡಲವನ್ನು ಬರುವ ವಾರ ವಿಸ್ತರಿಸಲಿದ್ದು, ೯ ಮಂದಿಯನ್ನು ಹೊಸತಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.
ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರಿಗೆ ತಲಾ ಒಂದು ಸ್ಥಾನ ಲಭ್ಯವಾಗಲಿದೆ. ಸಂಪುಟಕ್ಕೆ ಯಾರನ್ನು ತೆಗೆದುಳ್ಳಬೇಕು, ಖಾತೆಗಳನ್ನು ಮರುಹಂಚಿಕೆ ಮಾಡುವ ಉದ್ದೇಶದಿಂದ ಮುಂದಿನ ಭಾನುವಾರ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ಸೇರಲಿದೆ. ಅನಂತರ ಯಾವುದೇ ಕ್ಷಣದಲ್ಲಿ ತಮ್ಮ ಮಂತ್ರಿಮಂಡಲವನ್ನು ವಿಸ್ತರಿಸಲಿದ್ದಾರೆ.
ಪಕ್ಷದ ನಿಷ್ಠಾವಂತ ಹಿರಿಯ ಸದಸ್ಯರು ಹಾಗೂ ಯುವಕರಿಗೆ ಈ ಸ್ಥಾನಗಳು ಲಭ್ಯವಾಗಲಿದೆ. ಮೂಲ ಬಿಜೆಪಿಗರಿಗೆ ಐದಾರು ಸ್ಥಾನಗಳು ಲಭ್ಯವಾಗಲಿದೆ. ವಲಸಿಗರಿಗೆ ನೀಡಲಾಗುತ್ತಿದೆ ಎಂಬುದನ್ನು ಅಳಿಸಿ ಹಾಕಿರುವ ಉದ್ದೇಶ ಇದಾಗಿದೆ. ಸಂಪುಟದಲ್ಲಿ ೧೨ ಸ್ಥಾನಗಳು ಖಾಲಿ ಇದ್ದು ಅದರಲ್ಲಿ ಮೂರನ್ನು ಹಾಗೆಯೇ ಉಳಿಸಿಕೊಂಡು ಒಂಭತ್ತನ್ನು ಮಾತ್ರ ಭರ್ತಿ ಮಾಡಲಿದ್ದಾರೆ.
ರಾಜ್ಯ ವಿಧಾನ ಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಪಕ್ಷ ಸಂಘಟಿಸಿ ಉತ್ತಮ ಆಡಳಿತ ನೀಡುವುದರ ಜತೆಗೆ ಎಲ್ಲಾ ಜಿಲ್ಲೆ ಮತ್ತು ಜನಾಂಗಗಳಿಗೆ ಪ್ರಾತಿನಿಧ್ಯ ನೀಡುವುದು ಈ ವಿಸ್ರರಣೆಯ ಕಸರತ್ತು ಆಗಿದೆ.
ಬಹುತೇಕ ಸಿ.ಟಿ.ರವಿ., ಅಪ್ಪಚು ರಂಜನ್, ಎಸ್.ಅಂಗಾರ, ಕಳಸಪ್ಪ ಬಂಡಿ ಮೊದಲಾದವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ. ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ನಂತರ ಅದರ ಪರಾಮರ್ಶೆ ನಡೆಸಲು ಸೇರಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ, ಅಂದಿನ ಸಭೆಯಲ್ಲಿ ಮುಖ್ಯಮಂತ್ರಿಯವರಲ್ಲಿದೆ. ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಸಂಘಟನಾ ಕಾರ್ಯದರ್ಶಿ ಸಂತೋಷ್ ಉಪಸ್ಥಿತರಿದ್ದರು.
Tagged with
snews
ಪರಿಷತ್‌ನಲ್ಲಿ ಅಡ್ಡಮತದಾನ ಹಿನ್ನೆಲೆ
ಬೆಂಗಳೂರು: ಅಡ್ಡ ಮತದಾನ ದಿಂದ ವಿಧಾನ ಪರಿಷತ್ ಚುನಾ ವಣೆಯಲ್ಲಿ ಇಕ್ಬಾಲ್ ಅಹ್ಮದ್ ಸರಡಗಿಯ ಪರಾಭವ ಪ್ರದೇಶ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ್ದು, ಪಕ್ಷದ ಅಲ್ಪ ಸಂಖ್ಯಾತ ಶಾಸಕರು ಮತ್ತು ಪದಾಧಿ ಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸೇರಿದ್ದ ಅಲ್ಪಸಂಖ್ಯಾತ ಮುಖಂಡರು ಈ ನಿರ್ಧಾರ ಕೈಗೊಂ ಡಿದ್ದಲ್ಲದೆ ತಮ್ಮ ರಾಜೀನಾಮೆ ಪತ್ರ ಗಳನ್ನು ರಾಜ್ಯಾಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರಿಗೆ ಸಲ್ಲಿಸಿದ್ದಾರೆ. ಅಧೀಕೃತ ಅಭ್ಯರ್ಥಿಯನ್ನು ಸೋಲಿಸಿ, ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡ ಲಾಗಿದೆ. ಅಡ್ಡಮತದಾನದ ಬಗ್ಗೆ ತನಿಖೆ ನಡೆಸಿ, ತಪ್ಪಿತ್ಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪಕ್ಷದ ನಾಯಕರನ್ನು ಆಗ್ರಹಿಸಿದ್ದಾರೆ.
ಮುನಿಸಿಕೊಂಡಿರುವ ಅಲ್ಪ ಸಂಖ್ಯಾತರ ನಾಯಕರನ್ನು ಸ್ವಾಂತನಗೊಳಿಸಿರುವ ಪರಮೇಶ್ವರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಡ್ಡ ಮತದಾನದ ಬಗ್ಗೆ ತನಿಖೆ ನಡೆಸುವ ಭರವಸೆ ನೀಡಿರುವುದಲ್ಲದೆ ಮಾಜಿ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿದ್ದಾರೆ.
Tagged with
snews
ಬೆಂಗಳೂರು: ಜಗತ್ತಿನ ಸವಾಲು ಎದುರಿಸುವ ವಿಶ್ವಾಸ ಮೂಡಿಸಲು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಗಳನ್ನು ಗ್ರಾಮೀಣ ಭಾಗದಲ್ಲಿ ತೆರೆಯು ವಂತೆ ತೀವ್ರ ಒತ್ತಡ ಹೆಚ್ಚಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ನಗರ ಮತ್ತು ಗ್ರಾಮೀಣ ಪ್ರದೇ ಶದ ವಿದ್ಯಾರ್ಥಿಗಳ ನಡುವಣ ಅಂತರ ವನ್ನು ಕಡಿಮೆ ಮಾಡಿ ಮಕ್ಕಳ ಬೌದ್ದಿ ಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಇಂಗ್ಲೀಷ್ ಶಾಲೆಗಳ ಅಗತ್ಯತೆ ಇದೆ ಎಂದು ಗ್ರಾಮೀಣ ಜನತೆ, ಪೋ ಕರು ಮತ್ತು ಜನಪ್ರತಿನಿಧಿಗಳು ನಮ್ಮ ಮೇಲೆ ಒತ್ತಡ ತರುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ನಾವು ಅವಲಂಬಿತರಾಗು ವುದಕ್ಕಿಂತ ಸರ್ಕಾರಿ ಶಾಲೆಗಳಲ್ಲಿ ನಮ್ಮ ಮಕ್ಕಳು ಇಂಗ್ಲೀಷ್ ಕಲಿಯಲಿ ಎಂಬ ಅಭಿಪ್ರಾಯ ಮೂಡಿ ಬಂದಿದೆ.
ಗ್ರಾಮೀಣ ಪ್ರದೇಶಗಳಿಂದ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಬಂದಿರುವ ಒತ್ತಡವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾತೃಭಾಷಾ ಶಿಕ್ಷಣದ ಕಾನೂನಿ ನಂತೆ ಒಂದರಿಂದ ಐದನೇ ತರಗತಿ ವರೆಗೂ ಮಾತೃಭಾಷೆ ಶಿಕ್ಷಣವನ್ನೇ ನೀಡಿ ನಂತರ ಇಂಗ್ಲಿಷ್ ಕಲಿಕೆಗೆ ಅವಕಾಶ ಕಲ್ಪಿಸಲು ೧೯೯೪ ರಿಂದಲೇ ನಡೆದುಕೊಂಡು ಬಂದಿದೆ.
ನಮ್ಮ ಸರ್ಕಾರ ಕೂಡ ಮಾತೃ ಭಾಷೆ ಶಿಕ್ಷಣಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಲ್ಲದೆ ಯಾರಾ ದರೂ ಗ್ರಾಮೀಣ ಪ್ರದೇಶದಲ್ಲಿ ಸ್ವಯಿಚ್ಚೆ ಯಿಂದ ಇಂಗ್ಲೀಷ್ ಮಾಧ್ಯಮವನ್ನು ಆರನೇ ತರಗತಿಯಿಂದ ಆರಂಭಿಸಲು ಇಚ್ಚೆಪಟ್ಟಿದ್ದಲ್ಲಿ ಅಂತಹವರಿಗೆ ಅನುವು ಮಾಡಿಕೊಟ್ಟಿದ್ದೇವೆ ಎಂದರು.
Tagged with
kageri,
snews
ಇಬ್ಬರು ವ್ಯವಸ್ಥಾಪಕರ ಬಂಧನ
ಮಂಗಳೂರು: ಸಾವಿರ ಕಟ್ಟಿದರೆ ಲಕ್ಷ ಕೊಡುತ್ತೇವೆ ಎಂದು ನಂಬಿಸಿ ಸಾವಿರಾರು ಗ್ರಾಹಕರಿಂದ ಹಣ ಸಂಗ್ರ ಹಿಸಿ ನೀಡಿದ ಭರವಸೆಯನ್ನು ಗಾಳಿಗೆ ತೂರಿದ ಬಿಝಾರೆ ಕಂಪೆನಿ ವಿರುದ್ಧ ಸಿಡಿದೆದ್ದ ಗ್ರಾಹಕರು ನಿನ್ನೆ ಸಿಪಿಐಎಂ ಹಾಗೂ ಡಿವೈಎಫ್‌ಐ ಕಾರ್ಯಕರ್ತರ ಸಹಕಾರದಲ್ಲಿ ವೆಲೆನ್ಸಿಯಾದಲ್ಲಿರುವ ಕಚೇರಿಗೆ ದಾಳಿ ನಡೆಸಿದರು. ಆ ವೇಳೆ ಬಂದರ್ ಪೊಲೀಸರು ಇಬ್ಬರನ್ನು ಬಂಧಿಸಿ ನಡೆಯಬಹುದಾಗಿದ್ದ ಅಹಿತ ಕರ ಘಟನೆಯನ್ನು ತಪ್ಪಿಸಿದ್ದಾರೆ.
ಓರ್ವ ವ್ಯಕ್ತಿಯಿಂದ ಕೇರಳದಲ್ಲಿ ಆರಂಭಗೊಂಡಿದ್ದ ಬಿಝಾರೆ ಹೆಸರಿನ ಕಂಪೆನಿ ಎರಡು ವರ್ಷಗಳ ಹಿಂದೆ ಮಂಗಳೂರಿನ ಮಂಗಳಾದೇವಿ ದೇವ ಸ್ಥಾನದ ಬಳಿ ಕಾರ್ಯಾಚರಣೆ ಆರಂಭಿ ಸಿತ್ತು. ಸೋಮೇಶ್ವರ ಉಚ್ಚಿಲದ ಬಿಜೆಪಿ ಮುಖಂಡ ಮಂಗಳೂರು ಕಂಪೆ ನಿಯ ಮುಖ್ಯಸ್ಥರಾಗಿದ್ದರು. ಜಿನಸು ವಸ್ತುಗಳನ್ನು ಹೊಂದಿದ್ದ ಕಂಪೆನಿಗೆ ೧೬ ಸಾವಿರ ಶುಲ್ಕ ಕಟ್ಟಿದರೆ ಬರೇ ಎರಡು ವರ್ಷಗಳಲ್ಲೇ ಮೂರು ಲಕ್ಷ ಹಣವನ್ನು ನೀಡಲಾಗುವುದು ಎಂದು ಗ್ರಾಹಕರನ್ನು ನಂಬಿಸಲಾಗುತ್ತಿತ್ತು.
ಕಂಪೆನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೇರು ವ್ಯವಹಾರ ನಡೆಸುತ್ತಿದ್ದು ಮೂರು ತಿಂಗಳ ಅಂತರದಲ್ಲಿ ನೋಂದಣಿಯಾಗಲಿದ್ದು ಗ್ರಾಹಕರು ಕಟ್ಟುವ ಶುಲ್ಕ ಶೇರು ರೂಪದಲ್ಲಿ ಪಡೆಯಲಾಗುತ್ತಿದೆ. ಅಲ್ಲದೆ ಜಿನಸು ವಸ್ತುಗಳನ್ನು ಹೊಂದಿರುವ ಕಾರಣ ಅಪಾರ ಪ್ರಮಾಣದ ಲಾಭವಿದ್ದು ಅದೇ ಹಣವನ್ನು ಹತ್ತು ಪಟ್ಟು ಹೆಚ್ಚು ಮಾಡಿ ಗ್ರಾಹಕರಿಗೆ ವಾಪಸ್ ನೀಡಲಾಗುತ್ತದೆ. ಸಾವಿರ ರೂಪಾಯಿಯ ವಸ್ತುಗಳನ್ನು ಖರೀದಿಸಿದರೆ ನೂರು ರೂ. ರಿಯಾಯಿತಿ ನೀಡ ಲಾಗುತ್ತಿದ್ದು, ಇದು ೧೬ ಸಾವಿರ ಶುಲ್ಕದ ಪೈಕಿ ೧೨ ಸಾವಿರವರೆಗೆ ಮುಂದುವರಿ ಯುತ್ತದೆ. ಈ ಕಾರಣದಿಂದ ಕಂಪೆನಿ ಮುಳುಗುವ ಭೀತಿಯೇ ಇಲ್ಲ ಎಂದು ನಂಬಿಸಿ ಶುಲ್ಕ ಕಟ್ಟಿ ಸದಸ್ಯರಾದಾಗ ೧೨ ಸಾವಿರದ ಕೂಪನ್ ಕೊಡಲಾಗುತ್ತಿತ್ತು ಎಂದು ಗ್ರಾಹಕರು ಹೇಳಿದ್ದಾರೆ.
ಇದನ್ನು ನಂಬಿದ ಸಾವಿರಾರು ಮಂದಿ ಕಂಪೆನಿಗೆ ಸದಸ್ಯರಾಗಿದ್ದರು. ಬಳಿಕ ಕೆಲವು ಕಚೇರಿಗಳಲ್ಲಿ ಮಾತ್ರವಲ್ಲದೆ ವಾಹನಗಳಲ್ಲೂ ಬಿಝಾರೆ ಹೆಸರು ರಾರಾಜಿಸತೊಡಗಿದವು. ಕಳೆದ ವರ್ಷ ಕಂಪೆನಿಯ ಮಾಲಕನ ಮೇಲೆ ಆರೋಪ ಬಂದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ ಮಂಗಳೂರಿನಲ್ಲಿ ಈ ವ್ಯವಹಾರ ಯಾವುದೇ ಎಗ್ಗಿಲ್ಲದೆ ಮುಂದುವರಿದಿದ್ದು ವೆಲೆನ್ಸಿಯಾದಲ್ಲೂ ಕಚೇರಿ ತೆರೆಯಲಾಗಿದ್ದು, ಆರು ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿತ್ತು ಎನ್ನಲಾಗಿದೆ.
ಆದರೆ ಎರಡು ವರ್ಷ ಕಳೆದರೂ ಲಕ್ಷ ಬಿಟ್ಟು ನೂರು ರೂಪಾಯಿಯನ್ನೂ ವಾಪಸ್ ನೀಡಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಇಂದು, ನಾಳೆ ಎಂದು ಸತಾಯಿ ಸಲಾಗುತ್ತಿತ್ತು ಎಂದು ಗ್ರಾಹಕರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಬೆಳಗ್ಗೆ ಸಿಪಿಐಎಂ ಮುಖಂಡ ಸುನಿಲ್ ಬಜಾಲ್, ಡಿವೈಎಫ್‌ಐ ಮುಖಂಡರಾದ ಇಂತಿಯಾಝ್, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಮುಂತಾ ದವರ ನೇತೃತ್ವದಲ್ಲಿ ೫೦ಕ್ಕೂ ಹೆಚ್ಚು ಗ್ರಾಹಕರು ವೆಲೆನ್ಸಿಯಾದಲ್ಲಿರುವ ಬಿಝಾರೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಸಂದರ್ಭ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಲಕ್ಷಣ ಗೋಚರಿಸಿದವು. ಸ್ಥಳಕ್ಕೆ ಆಗಮಿಸಿದ ಬಂದರ್ ಪೊಲೀಸರು ಕಚೇರಿ ವ್ಯವಸ್ಥಾಪಕರಾದ ಶ್ರೀಕಂಠಯ್ಯ ಹಾಗೂ ದೇವರಾಜ್ ಅವರನ್ನು ವಶಕ್ಕೆ ತೆಗೆದು ಕೊಂಡರು. ಕಂಪೆನಿಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ೧೫ ದಿನಗಳಲ್ಲೇ ಗ್ರಾಹಕರಿಗೆ ಸ್ಪಷ್ಟವಾದ ಮಾಹಿತಿ ನೀಡಲಾಗುವುದು ಎಂದು ಈ ಸಂದರ್ಭ ವ್ಯವಸ್ಥಾಪಕರು ಪೊಲೀಸರ ಮೂಲಕ ಭರವಸೆ ನೀಡಿದ್ದಾರೆ.
ಬಿಝಾರೆ ಕಂಪೆನಿಯು ಮಂಗಳಾದೇವಿಯಲ್ಲಿಯೂ ಸೂಪರ್‌ಮಾರ್ಕೆಟ್ ಹೊಂದಿದೆಯಾದರೂ ಇಲ್ಲಿ ಅಪರತಪರಾ ನಡೆದಿದೆ ಎಂದು ಹೇಳಲಾಗುತ್ತಿದೆ.
Tagged with
cnews,
feature
ಮಣಿಪಾಲ: ಬಾಲಕಿಯೋರ್ವಳನ್ನು ಅಪಹರಿಸಿದ ನೆರೆಯಮನೆಯ ಯುವಕನೋರ್ವ ಆಕೆಯನ್ನು ಎರಡು ದಿನಗಳ ಕಾಲ ಕಾಡಿನಲ್ಲಿರಿಸಿ ನಿರಂತರವಾಗಿ ಅತ್ಯಾಚಾರ ಗೈದಿರುವ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯ ನೇತಾಜಿ ನಗರ ಎಂಬತ್ತು ಬಡಗುಬೆಟ್ಟುವಿನ ಪರ್ಕಳದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅತ್ಯಾಚಾರಿಯನ್ನು ಪೊಲೀಸರು ಬಂಧಿಸಿ ತನಿಖೆಗೊಳಪಡಿಸಿದ್ದಾರೆ.
ಪರ್ಕಳದ ಪರಿಶಿಷ್ಟ ಜಾತಿಗೆ ಸೇರಿದ ೧೫ ವರ್ಷ ಪ್ರಾಯದ ಬಾಲಕಿಯನ್ನು ನೆರೆಮನೆಯ ಸಿದ್ಧೀಕ್ ಎಂಬಾತ ಜೂನ್.೭ರಂದು ಅಪಹರಿಸಿದ್ದ. ಈ ಬಗ್ಗೆ ಆಕೆಯ ತಾಯಿ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದ್ದರೆ, ಪ್ರಕರಣ ದಾಖಲಿಸಲು ಹಿಂಜರಿದ ಪೊಲೀಸರು ಅವರನ್ನು ವಾಪಸ್ಸು ಕಳುಹಿಸಿದ್ದರು. ಈ ಕಾರಣಕ್ಕಾಗಿ ಮಹಿಳೆ ದಲಿತ ಸಂಘರ್ಷ ಸಮಿತಿ ಮೊರೆ ಹೋಗಿದ್ದರು. ಅವರು ಪಶ್ಚಿಮ ವಲಯ ಐ.ಜಿ.ಯವರಿಗೆ ಬಾಲಕಿಯನ್ನು ಪತ್ತೆ ಹಚ್ಚಿ ಕೊಡುವಂತೆ ಮನವಿ ಮಾಡಿಕೊಂಡಿದ್ದರು. ನಂತರ ಮಣಿಪಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಜೂ.೧೦ ರಂದು ಬೆಂಗಳೂರು ಪೊಲೀಸರ ಮಾಹಿತಿಯಂತೆ ಮಣಿಪಾಲ ಪೊಲೀಸರು ಬಾಲಕಿಯನ್ನು ನೆರೆಮನೆಯ ಸಿದ್ಧೀಕ್ ಎಂಬಾತನೊಂದಿಗೆ ಮಣಿಪಾಲ ಠಾಣೆಗೆ ಕರೆತಂದಿದ್ದರು. ನೆರೆಮನೆಯ ಸಿದ್ಧೀಕ್ ಬಲಾತ್ಕಾರವಾಗಿ ಅಪಹರಣಗೈದು ಎರಡು ದಿನಗಳ ಕಾಲ ಸ್ಥಳೀಯ ಕಾಡಿನಲ್ಲಿರಿಸಿ ನಿರಂತರವಾಗಿ ದೈಹಿಕ ಸಂಪರ್ಕ ನಡೆಸಿದ್ದನು. ಬಳಿಕ ಮದುವೆಯಾಗುವ ಭರವಸೆಯನ್ನು ಒಡ್ಡಿ, ಬೆಂಗಳೂರಿಗೆ ಕರೆದೊಯ್ದಿದ್ದನು. ಅಲ್ಲಿ ಈತನ ಕಿರುಕುಳದಿಂದ ಬೇಸತ್ತ ಬಾಲಕಿ ಅಳುತ್ತಾ ಇದ್ದುದನ್ನು ಕಂಡ ಅಲ್ಲಿನ ರಿಕ್ಷಾ ಚಾಲಕರು ಪೊಲೀಸರಿಗೆ ದೂರು ನೀಡಿದ್ದರು. ಸಿದ್ಧೀಕ್‌ನನ್ನು ತನಿಖೆಗೊಳಪಡಿಸಿ ವಿಚಾರಣೆ ನಡೆಸಿದ ಬೆಂಗಳೂರು ಪೊಲೀಸರಿಗೆ ಈತನ ಕರ್ಮಕಾಂಡ ಬಯಲಾಗಿ, ಮಣಿಪಾಲ ಪೊಲೀಸರಿಗೆ ಮಾಹಿತಿ ರವಾನಿಸಿ ಇಬ್ಬರನ್ನು ಹಸ್ತಾಂತರಿಸಿದ್ದರು.
ಇದೀಗ ಆರೋಪಿ ಸಿದ್ದೀಕ್‌ನನ್ನು ಬಂಧಿಸಿರುವ ಮಣಿಪಾಲ ಪೊಲೀಸರು ಡಿವೈಎಸ್ಪಿ ನೇತೃತ್ವದಲ್ಲಿ ತೀವ್ರ ತನಿಖೆಗೊಳಪಡಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ರಾಜ್ಯ ಬಾಲನಿಲಯಕ್ಕೆ ನೀಡಿದ್ದು, ಅಲ್ಲಿಂದ ತಪಾಸಣೆಗೆಂದು ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವ ಕುರಿತು ತಿಳಿದುಬಂದಿದೆ. ದಸಂಸ ಪ್ರಕರಣದ ಆರೋಪಿಗೆ ಕಠಿಣ ಸಜೆಯಾಗುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
Tagged with
cnews,
feature
ಬೆಂಗಳೂರು: ಬಿಡದಿಯಲ್ಲಿರುವ ನಿತ್ಯಾನಂದ ಧ್ಯಾನಪೀಠ ಆಶ್ರಮಕ್ಕೆ ಬೀಗ ಹಾಕಲು ಸರ್ಕಾರ ಆದೇಶಿಸಿದ ಹಿನ್ನೆಲೆ ಯಲ್ಲಿ ಮಂಗಳವಾರ ನಡೆದ ಶೋಧ ಕಾರ್ಯಾಚರಣೆಯ ವೇಳೆ ಆಶ್ರಮ ದಲ್ಲಿ ಎಂ.ಪಿ ತ್ರಿ ಸಿಡಿಗಳು, ಡಿವಿಡಿಗಳು, ಗಾಂಜಾ, ಕಾಂಡೋಮ್ ಮತ್ತು ಖಾಲಿ ಮದ್ಯದ ಬಾಟಲಿಗಳು ದೊರೆತಿವೆ.
ನಿತ್ಯಾನಂದನ ಆಶ್ರಮವಾಸಿಗಳು ಸೋಮವಾರ ಆಶ್ರಮವನ್ನು ತೊರೆ ದಿದ್ದರು. ಈ ವೇಳೆ ನಿತ್ಯಾ ಶಿಷ್ಯರು ಅಲ್ಲಿರುವ ದಾಖಲೆಗಳನ್ನು ನಾಶ ಮಾಡಲು ಯತ್ನಿಸಿರುವ ಕುರುಹುಗಳು ಕೂಡ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಸರ್ಕಾರ ಆಶ್ರಮಕ್ಕೆ ಬೀಗಮುದ್ರೆ ಹಾಕಲು ಆದೇಶ ನೀಡಿದ್ದರೂ ಕೂಡ, ಸಂಬಂಧಪಟ್ಟ ಅಧಿಕಾರಿಗಳು ತಮಗೆ ಈವರೆಗೂ ಆದೇಶ ಕೈಸೇರಿಲ್ಲ ಎಂದು ಹೇಳುತ್ತಿದ್ದಾರೆ.
ಹೈಕೋರ್ಟ್ ಮೊರೆ ಹೋದ ನಿತ್ಯಾನಂದ
ನಿತ್ಯಾನಂದನ ಬಿಡದಿ ಆಶ್ರಮದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಬಿಡದಿ ಪೊಲೀಸರು ತನ್ನ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದು ಗೊಳಿಸಬೇಕೆಂದು ಕೋರಿ ನಿತ್ಯಾನಂದ ಸ್ವಾಮಿ ಮಂಗಳವಾರ ಹೈಕೋರ್ಟ್ ಮೊರೆ ಹೋಗಿದ್ದಾನೆ.
ತಮ್ಮ ಕಕ್ಷಿದಾರ ನಿತ್ಯಾನಂದ ಸ್ವಾಮಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ವಕೀಲ ರವಿ.ಬಿ.ನಾಯಕ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ತನಿಖೆಗೆ ಅಧಿಕೃತ ಆದೇಶ: ನಿತ್ಯಾನಂದ ಸ್ವಾಮಿ ನಡೆಸಿದ್ದಾನೆ ಎನ್ನಲಾದ ಅಕ್ರಮಗಳ ತನಿಖೆಗೆ ಗೃಹಸಚಿವಾಲಯ ಅಧಿಕೃತ ಆದೇಶ ಹೊರಡಿಸಿದ್ದು, ಇನ್ನು ೧೫ ದಿನಗಳೊಳಗೆ ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸಿ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಲಾಗಿದೆ. ತಲೆಮರೆಸಿಕೊಂಡಿರುವ ಸ್ವಾಮಿ ನಿತ್ಯಾನಂದನ ವಿರುದ್ಧ ತನಿಖೆ ನಡೆಸಬೇಕೆಂದು ಗೃಹ ಸಚಿವಾಲಯದ ಕಾರ್ಯದರ್ಶಿ ರಾಘವೇಂದ್ರ ಔರಾದ್‌ಕರ್ ಮಂಗಳವಾರ ಅಧಿಕೃತ ಸೂಚನೆ ಹೊರಡಿಸಿದ್ದಾರೆ. ರಾಮನಗರ ಜಿಲ್ಲಾಧಿಕಾರಿ ತನಿಖೆ ನಡೆಸಿ ಸಲ್ಲಿಸಿರುವ ವರದಿಯ ಹಿನ್ನೆಲೆಯಲ್ಲಿ ಈ ಆಧಿಕೃತ ಅದೇಶ ಹೊರಡಿಸಲಾಗಿದೆ ಎನ್ನಲಾಗಿದೆ. ಇಂದಿನಿಂದ ನಿತ್ಯಾನಂದನ ಬಿಡದಿ ಆಶ್ರಮಕ್ಕೆ ಅಧಿಕೃತವಾಗಿ ಬೀಗಮುದ್ರೆ ಬೀಳಲಿದೆ.
ಕೆಲವೊಂದು ಮಾಹಿತಿಗಳ ಪ್ರಕಾರ ಸರಕಾರ ನೀಡಿದ್ದ ೩೫ ಎಕರೆ ಜಮೀನಿನಲ್ಲಿ ಕೇವಲ ಎರಡು ಎಕರೆಯಲ್ಲಿ ಮಾತ್ರ ಸಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಉಳಿದ ಭೂಮಿಯಲ್ಲಿ ಕೃಷಿಯೇತರ ಚಟುವಟಿಕೆ ನಡೆಯುತ್ತಿದೆ ಎನ್ನಲಾಗಿದೆ. ಉಳಿದಂತೆ ನಿತ್ಯಾನಂದನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ಆದರೆ ಆತ ಎಲ್ಲಿದ್ದಾನೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ ಎನ್ನಲಾಗಿದೆ.
Tagged with
feature,
nithyananda,
snews
ಡೀಸೆಲ್ ಬೆಲೆ ಏರಿಸುವ ಹುನ್ನಾರ?
ನವದೆಹಲಿ: ಜಾಗತಿಕ ಮಾರುಕಟ್ಟೆ ಯಲ್ಲಿ ಕಚ್ಚಾ ತೈಲದ ಬೆಲೆ ಕಳೆದ ಹದಿನೈದು ದಿವಸಗಳಲ್ಲಿ ಇಳಿದಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಮತ್ತೆ ಇಳಿಕೆಯಾಗುವ ಸಂಭವನೀಯ ತೆಯಿದೆ. ಜೂ. ೨ರಂದು ೨ ರು. ಇಳಿಸಿದ ನಂತರ ಈಗ ಮತ್ತೆ ಲೀಟರಿಗೆ ೨ ರು. ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಇಂಗ್ಲೀಷ್ ಪತ್ರಿಕೆಯೊಂದು ವರದಿ ಮಾಡಿದೆ.
ಮೇ ೨೩ರಂದು ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಲೀಟಲಿಗೆ ೭.೫೪ ರು.ನಷ್ಟು ಪೆಟ್ರೋಲ್ ಬೆಲೆಯನ್ನು ಏರಿಸಿದ್ದವು. ಇದರ ಹಿನ್ನೆಲೆ ಯಲ್ಲಿ ದೇಶದಾದ್ಯಂತ ಭಾರೀ ಪ್ರತಿಭ ಟನೆ ವ್ಯಕ್ತವಾಗಿತ್ತು. ಬೆಲೆ ಏರಿಕೆಯನ್ನು ವಿರೋಧಿಸಿ ಎನ್‌ಡಿಎ ಮೈತ್ರಿಕೂಟ ಕರೆದಿದ್ದ ಮೇ ೩೧ರ ಭಾರತ ಬಂದ್ ಕರೆಗೆ ಭಾರತದಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ನಂತರ, ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದಿದ್ದ ಸರಕಾರ ಪೆಟ್ರೋಲ್ ಬೆಲೆ ಇಳಿಕೆಗೆ ಒಪ್ಪಿಗೆ ನೀಡಿತ್ತು. ಮತ್ತು ಸಿಂಗಪುರದಲ್ಲಿ ಕಚ್ಚಾ ತೈಲದ ಬೆಲೆ, ಅದೇ ಸಮಯದಲ್ಲಿ ಇಳಿಕೆ ಕಂಡಿತ್ತು. ಆದ್ದರಿಂದ ಪೆಟ್ರೋಲ್ ಬೆಲೆ ಇಳಿಸದೆ ತೈಲ ಕಂಪೆನಿಗಳಿಗೆ ವಿಧಿ ಇರಲಿಲ್ಲ. ರುಪಾಯಿ ಕೂಡ ಡಾಲರ್ ವಿರುದ್ಧ ಸ್ಥಿರತೆ ಕಂಡುಕೊಂಡಿದ್ದರಿಂದ ಜೂ. ೨ರಂದು ಪೆಟ್ರೋಲ್ ಬೆಲೆಯನ್ನು ೨ ರು.ನಷ್ಟು ಇಳಿಸಲಾಗಿತ್ತು.
ಪೆಟ್ರೋಲ್ ಬೆಲೆ ಇಳಿಕೆಯ ಹಿಂದೆ ಡೀಸೆಲ್ ಬೆಲೆ ಏರಿಸುವ ಹುನ್ನಾರವೂ ಇದೆ ಎಂಬ ಮಾತು ಕೇಳಿಬಂದಿದೆ. ಪೆಟ್ರೋಲ್ ಬೆಲೆ ಪರಿಷ್ಕರಣೆಯ ಅಧಿಕಾರ ಸರಕಾರ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ಬಿಟ್ಟುಕೊಟ್ಟಿದೆ.
Tagged with
feature,
nnews,
petrol
ಕಾಸರಗೋಡು: ಎರಡು ಕಾರು ಗಳು ಪರಸ್ಪರ ಢಿಕ್ಕಿ ಹೊಡೆದಿದ್ದು, ಮತ್ತೊಂದು ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದ ಪರಿಣಾಮ ಒಟ್ಟು ೧೮ ಮಂದಿ ಗಾಯ ಗೊಂಡಿದ್ದಾರೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಕುಂಬಳೆ ಗೋಪಾಲಕೃಷ್ಣ ಕ್ಷೇತ್ರದ ಹಿಂಭಾಗದಲ್ಲಿ ನಿನ್ನೆ ಬೆಳಿಗ್ಗೆ ೯.೩೦ ರ ವೇಳೆಗೆ ಅಪಘಾತ ಸಂಭವಿಸಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಬರುತ್ತಿದ್ದ ಕಾಸರಗೋಡು ಪೊವ್ವಲ್ ನಿವಾಸಿಗಳು ಸಂಚರಿಸುತ್ತಿದ್ದ ವ್ಯಾನ್ ಕಾಸರಗೋಡಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ಕಾರ್ಪಿಯಾಕ್ಕೆ ಬಡಿದಿತ್ತು. ಇದೇ ವೇಳೆ ಸ್ಕಾರ್ಪಿಯಾದ ಹಿಂಬದಿಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಈ ಅಪಘಾತದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದಿದೆ. ವ್ಯಾನ್‌ನಲ್ಲಿದ್ದ ಪೊವ್ವಲ್ ನಿವಾಸಿಗಳಾದ ಚಾಲಕ ಮುನೀರ್, ಅಬ್ದುಲ್ಲ, ಅನ್‌ಶೀದ್, ರಶೀದ್, ಮುಹಮ್ಮದ್, ಸಮೀರಾ, ಕುಬ್ರಾ, ಮುಸಮ್ಮಿಲ್ ಮೊದಲಾದವರು ಗಾಯಗೊಂಡಿದ್ದು, ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ಸೇರಿಸಲಾಗಿದೆ.
Tagged with
cnews,
feature
ಇದು ಮುಲ್ಕಿ ಸಬ್‌ರಿಜಿಸ್ಟ್ರಾರ್ ಕಚೇರಿ ಅವ್ಯವಸ್ಥೆ
ಮುಲ್ಕಿ: ನಿಮಗೆ ಮುಲ್ಕಿಯಲ್ಲಿ ಜಮೀನನ್ನು ಮಾರಲು ರಿಜಿಸ್ಟರ್ ಮಾಡಿಸಬೇಕೆ? ಹಾಗಾದರೆ ರಾತ್ರಿ ಜಾಗರಣೆ ಮಾಡಬೇಕು ಅಥವಾ ಬಾಡಿಗೆ ಜಾಗರಣೆ ಮಾಡುವವರನ್ನು ಹುಡುಕಬೇಕು! ಆಶ್ಚರ್ಯವಾದರೂ ಮುಲ್ಕಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈಗ ಇದೇ ಸುದ್ದಿ.
ಇಲ್ಲಿ ಕೆಲಸ ಆಮೆಗತಿಯಲ್ಲಿ ಸಾಗು ತ್ತಿದೆ ಎಂಬ ಕೂಗು ಹಿಂದಿನಿಂದಲೂ ಇದ್ದದ್ದೆ. ಈ ಹಿನ್ನೆಲೆಯಲ್ಲಿ ಪತ್ರಿಕೆ ತನಿಖೆ ನಡೆಸಿದಾಗ ಈ ರಾತ್ರಿ ಜಾಗರಣೆಯ ವಿಚಾರ ಬಹಿರಂಗಗೊಂಡಿದೆ. ಇಲ್ಲಿನ ನಿಯಮದ ಪ್ರಕಾರ ದಾಖಲೆ ಪತ್ರಗಳ ರಿಜಿಸ್ಟ್ರೇಶನ್‌ಗೆ ಟೋಕನ್ ಪಡೆದುಕೊಳ್ಳಬೇಕು. ಅದರ ಆಧಾರದ ಮೇಲೆ ದಿನಕ್ಕೆ ಸಾಧಾರಣ ೩೦ರಿಂದ ೩೫ ದಾಖಲೆ ಪತ್ರಗಳ ಕೆಲಸ ಆಗುತ್ತಿದೆ. ಆದರೆ ಈ ಟೋಕನ್ ಪಡೆಯಲು ಕೆಲವು ವ್ಯವಸ್ಥಿತ ದಸ್ತಾವೇಜು ಬರಹಗಾರರು ಮತ್ತು ವಕೀಲರು ಅನಿವಾರ್ಯವಾಗಿ ಹಿಂದಿನ ರಾತ್ರಿಯೇ ಜಾಗರಣೆ ಮಾಡುವ ಬಾಡಿಗೆ ಗ್ರಾಹಕರನ್ನು ನಿಯೋಜಿಸಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಮುಲ್ಕಿ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಮುಲ್ಕಿ ಹೋಬಳಿಯ, ಉಡುಪಿ ಜಿಲ್ಲೆಯ ಕಾಪು ಹೋಬಳಿಯ ಒಟ್ಟು ೫೪ ಗ್ರಾಮಗಳ ಜಮೀನು ವಹಿವಾಟಿನ ದಾಖಲೀಕರಣ ನಡೆಯುತ್ತಿದೆ. ಅಲ್ಲದೇ ಸಂಜೆ ೫ಕ್ಕೆ ಕಂಪ್ಯೂಟರ್ ಸರ್ವರ್ ನಿಂತರೂ ರಾತ್ರಿ ಎಂಟು ಗಂಟೆಯವರೆಗೂ ಕಚೇರಿ ತೆರೆದಿರುತ್ತದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಇಲ್ಲಿನ ಸಬ್ ರಿಜಿಸ್ಟ್ರಾರ್ ಅಧಿಕಾರಿ ರಘುರಾಮ್‌ರವ ರಲ್ಲಿ ಕೇಳಿದಾಗ ರಾತ್ರಿ ಜಾಗರಣೆಯ ಬಗ್ಗೆ ತಮಗೆ ಮಾಹಿತಿ ಇಲ್ಲ. ಆದರೆ ಟೋಕನ್ ವ್ಯವಸ್ಥೆ ಮಾತ್ರ ಬೆಳಿಗ್ಗೆ ೧೦ ಗಂಟೆಯ ನಂತರ ನಡೆಯುತ್ತದೆ, ಅಲ್ಲದೇ ಮತ್ತೊಂದು ಕಂಪ್ಯೂಟರ್ ವ್ಯವಸ್ಥೆ ಮಾಡಿದಲ್ಲಿ ಸಿಬ್ಬಂದಿಯ ಕೊರತೆ ಉಂಟಾಗುತ್ತದೆ. ಎಲ್ಲಾ ದಾಖಲೆ ಪತ್ರಗಳನ್ನು ಸರಿಯಾಗಿ ಪರಿಶೀಲಿಸಿ ಮಾಡುವುದರಿಂದ ಸ್ವಲ್ಪ ತಡವಾಗುತ್ತದೆ. ಸಂಜೆ ಸರ್ವರ್ ಬಂದ್ ಆಗುವವರೆಗೂ ದಾಖಲೆ ಪತ್ರವನ್ನು ಪಡೆಯುತ್ತೇವೆ, ರಾತ್ರಿ ಜಾಗರಣೆಯ ಬಗ್ಗೆ ಕ್ರಮ ಕೈಗೊಳ್ಳುವೆ, ಕಛೇರಿಯ ಆವರಣದಲ್ಲಿಯೇ ಇಂತಹ ಅಸುರಕ್ಷಿತ ವ್ಯವಸ್ಥೆಯ ಬಗ್ಗೆ ಮೇಲ ಧಿಕಾರಿಯವರಿಗೆ ಮಾಹಿತಿ ನೀಡುವೆ ಎಂದು ಹೇಳಿದರು.
ಅಲ್ಲದೇ ಈ ಕಛೇರಿಗೆ ಯಾವೊಬ್ಬ ಸೆಕ್ಯುರಿಟಿಯೂ ಇಲ್ಲ. ರಾತ್ರಿಯ ವೇಳೆ ಬರುವ ಬಾಡಿಗೆ ಜಾಗರಣೆ ಮಾಡುವವರು ಯಾರ ಆದೇಶವೂ ಇಲ್ಲದೆ ಕಚೇರಿ ಆವರಣದೊಳಗೆ ತಮ್ಮ ವಾಹನಗಳನ್ನು ನುಗ್ಗಿಸುತ್ತಿದ್ದಾರೆ. ಇದು ಸರ್ಕಾರಿ ಕಚೇರಿಯೊಂದರ ಅವ್ಯವಸ್ಥೆಗೆ ಸಾಕ್ಷಿ ಎಂದರೆ ತಪ್ಪಿಲ್ಲ.
ಜಾಗರಣೆ ಹೇಗೆ..?
ಜಾಗರಣೆ ಮಾಡುವವರು ಕೊಟ್ಟ ಮಾಹಿತಿಯಂತೆ ಒಂದು ದಾಖಲೆ ಪತ್ರಕ್ಕೆ ನೂರು ರೂಪಾಯಿ ಚಾರ್ಚ್. ಒಟ್ಟು ಹತ್ತು ದಾಖಲೆ ಪತ್ರ ವಿದ್ದರೆ ಅದನ್ನು ಐದರಂತೆ ವಿಂಗಡಿಸಿ ಕಚೇರಿಯ ಬಾಗಿಲ ಎದುರಿಗೆ ಇಡಬೇಕು. ಹಿಂದಿನ ರಾತ್ರಿ ೧೧ಕ್ಕೆ ಬಂದು ಮಲಗಬೇಕು. ಬೆಳಿಗ್ಗೆ ೭ಕ್ಕೆ ವಕೀಲರ ಮೇಡಂಗೆ ಫೈಲ್ ತೋರಿಸಿ ಹೋಗಬೇಕು. ಆಗಲೇ ಅವರಿಗೆ ಹಣ ಸಿಗುತ್ತದೆ ಎಂದು ತಿಳಿದು ಬಂದಿದೆ. ಕಾರಿಗೆ ಪ್ರತ್ಯೇಕ ೧೦೦ ರೂ. ಸಿಗುತ್ತದೆ ಎನ್ನಲಾಗಿದೆ. ಕಚೇರಿಯಲ್ಲಿರುವ ತಾತ್ಕಾಲಿಕ ನೆಲೆಯಲ್ಲಿ ಇರುವ ಸಿಬ್ಬಂದಿಗೆ ಸಿಗುವುದು ತಿಂಗಳಿಗೆ ೨ಸಾವಿರ ಸಂಬಳ. ಆದರೆ ಅವರಿಗೆ ದಿನಕ್ಕೆ ಒಂದು ದಾಖಲೆ ಪತ್ರಕ್ಕೆ ಕಮಿಷನ್ ಐವತ್ತರಂತೆ ಸಿಗುವ ಹಣವೇ ಎರಡು ಸಾವಿರ ದಾಟುತ್ತದೆ, ಕೆಲವು ಸಿಬ್ಬಂದಿ ವಿಶೇಷವಾಗಿ ಕಂಪ್ಯೂಟರ್ ಆಪರೇಟರ್ ಹುದ್ದೆಯ ತಾತ್ಕಾಲಿಕ ನೆಲೆಯಲ್ಲಿ ರುವವರಿಗೂ ಇಂತಿಷ್ಟೇ ಹಣ ಒಂದೇ ದಿನದಲ್ಲಿ ಸಿಗುತ್ತಿರುವು ದರಿಂದಲೇ ಅಂತ ವರು ವರ್ಷಾನುಗಟ್ಟಲೆ ಇಲ್ಲಿಯೇ ತಾತ್ಕಾಲಿಕ ನೆಲೆಯಲ್ಲಿ ಜಂಡಾ ಊರಿರುವ ಒಳ ಗುಟ್ಟಾಗಿದೆ.
Tagged with
dk,
feature,
lnews
ಮಂಗಳೂರು: ವಿಧಾನಸಭೆ ಚುನಾವಣೆಯ ಸಿದ್ದತೆಗಳು ದ.ಕ. ಜಿಲ್ಲೆಯಲ್ಲಿ ಜೋರಾಗಿದೆ. ಅವಧಿಗಿಂತ ಮೊದಲೇ ಚುನಾವಣೆ ನಡೆಯುವ ಸಾಧ್ಯತೆಯ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಯಾವ ಕ್ಷೇತ್ರಕ್ಕೆ ಯಾರು ಎಂದು ಲೆಕ್ಕಾಚಾರ ನಡೆಯುತ್ತಿದೆ. ಬಿಜೆಪಿಯಲ್ಲಿ ನಳಿನ್‌ಕುಮಾರ್ ಕಟೀಲ್ ಮತ್ತು ಡಿ.ವಿ.ಸದಾನಂದ ಗೌಡ ರಾಜ್ಯ ರಾಜಕಾರಣದಲ್ಲೆ ನೆಲೆ ಕಾಣುವ ಲೆಕ್ಕಾಚಾರ ದಲ್ಲಿದ್ದಾರೆ ಎಂಬ ವಿಷಯವೀಗ ಹೊರಬಿದ್ದಿದೆ.
ನಳಿನ್‌ಕುಮಾರ್ ಕಟೀಲ್ ಹಾಗೂ ಡಿ.ವಿ.ಸದಾನಂದ ಗೌಡ ಇಬ್ಬರ ಕಣ್ಣುಗಳೂ ಪೂತ್ತೂರು ವಿಧಾನಸಭಾ ಕ್ಷೇತ್ರದ ಮೇಲಿದೆ. ಡಿ.ವಿ.ಸದಾನಂದ ಗೌಡರು ಸ್ಪರ್ಧೆಯ ಇಚ್ಛೆ ವ್ಯಕ್ತಪಡಿಸಿದ್ದೇ ಆದರೆ ನಳಿನ್ ಅಲ್ಲಿಂದ ನೇರವಾಗಿ ಮೂಡಬಿದ್ರೆಗೆ ಜಾರಲಿದ್ದಾರೆ ಎಂದು ಸದ್ಯಕ್ಕೆ ಬಿಜೆಪಿಯಲ್ಲಿ ಚಾಲ್ತಿಯಲ್ಲಿರುವ ಮಾತು.
ಮುಖ್ಯಮಂತ್ರಿಯಾದ ಬಳಿಕ ಬಿಕ್ಕಟ್ಟು, ಭಿನ್ನಮತ, ಸಂಕಷ್ಟಗಳನ್ನು ಎದು ರಿಸಿಯೂ ಉತ್ತಮ ಆಡಳಿತ ನೀಡಿದ ಆತ್ಮ ಸಂತೃಪ್ತಿ ಹೊಂದಿರುವ ಡಿ.ವಿ.ಸದಾನಂದ ಗೌಡರು ಇದೇ ಆತ್ಮವಿಶ್ವಾಸದೊಂದಿಗೆ ರಾಜ್ಯದಲ್ಲೇ ನೆಲೆ ನಿಂತು ರಾಜ್ಯ ರಾಜಕಾರಣದಲ್ಲೇ ತಮ್ಮ ಭವಿಷ್ಯ ರೂಪಿಸಲು ಹೆಚ್ಚಿನ ಗಮನ ಹರಿಸುವತ್ತ ಯೋಚಿಸುತ್ತಿದ್ದಾರೆ. ಅವರ ಯೋಚನೆ ಬಿಜೆಪಿಯ ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸಿದ್ದೇ ಆದರೆ ಅವರು ವಿಧಾನಸಭೆಯ ಚುನಾವಣೆ ಅಖಾಡಕ್ಕೆ ಇಳಿಯಲಿದ್ದಾರೆ. ಡಿ.ವಿ.ಸದಾನಂದ ಗೌಡರ ವಿಧಾನ ಪರಿಷತ್ ಅಧಿಕಾರವಧಿ ಎರಡು ವರ್ಷಕ್ಕೆ ಮುಗಿಯಲಿದೆ. ಅದರ ಬಳಿಕ ಏನು ಎಂಬ ಪ್ರಶ್ನೆಗೆ ಈಗಲೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದಲೇ ಡಿವಿ. ವಿಧಾನಸಭೆಯ ಚುನಾವಣೆಯತ್ತ ಆಸಕ್ತರಾಗಿದ್ದು, ಅವರು ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಡಿ.ವಿ.ಸದಾನಂದ ಗೌಡರು ಸ್ಪರ್ಧೆಯಲ್ಲಿ ಇಲ್ಲದೆ ಇದ್ದರೆ ಪೂತ್ತೂರು ಕ್ಷೇತ್ರದಲ್ಲಿ ಆವರಿಸಲು ನಳಿನ್ ಯಾವಾಗಲೋ ಸಿದ್ಧರಾಗಿದ್ದಾರೆ. ಪುತ್ತೂರಿನಲ್ಲಿ ಅವರ ಓಡಾಟ ಹಾಗೂ ಒಡನಾಟ ಇದರ ಸೂಚನೆ ನೀಡಿದೆ. ಆದರೆ ಆವರ ಆಸೆ ನೆರವೇರುವ ಸಾಧ್ಯತೆ ಕಡಿಮೆ. ಆದುದರಿಂದ ಅವರ ಕಣ್ಣು ಈಗ ಮುಲ್ಕಿ-ಮೂಡಬಿದ್ರೆ ಕ್ಷೇತ್ರದತ್ತ ಹರಿದಿದೆ ಎನ್ನುತ್ತಾರೆ ನಳಿನ್‌ರ ಒಡನಾಡಿಗಳು.
ಎರಡು ದಶಕಗಳ ಹಿಂದೆ ಜನತಾ ದಳದ ಭದ್ರಕೋಟೆಯಾಗಿದ್ದ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರವನ್ನು ಕೈವಶ ಮಾಡಿಕೊಂಡ ಅಭಯಚಂದ್ರ ಜೈನ್ ಅದರ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಲ್ಲೀಗ ಬಿಜೆಪಿಗೆ ಪೂರಕ ವಾತಾವರಣ ಇದೆ ಎಂಬ ನಂಬಿಕೆ ಬಿಜೆಪಿಯವರಿಗೆ. ಗಟ್ಟಿ ಕ್ಯಾಂಡಿಡೇಟ್ ಹಾಕಿದರೆ ಖಂಡಿತ ಬಿಜೆಪಿ ಗೆಲವು ಸಾಧಿಸುತ್ತದೆ ಎಂದು ಹೇಳುವ ಬಿಜೆಪಿಯ ಮಂದಿ ನಳಿನ್‌ರತ್ತಲೇ ಬೆರಳು ತೋರಿಸುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಈ ವಿಷಯ ಚರ್ಚೆಯಲ್ಲಿದೆ ಆದರೆ ನಳಿನ್ ತನ್ನ ನಿಲವು ಸ್ಪಷ್ಟಪಡಿಸಿಲ್ಲ. ಈ ಬಗ್ಗೆ ಕೇಳಿದರೆ ನೋಡಿದರಾಯಿತು ಎಂಬಂತಹ ಪ್ರತಿಕ್ರಿಯೆ ನೀಡಿ ಮುಂದೆ ಸಾಗುತ್ತಾರೆ. ಮುಲ್ಕೀ-ಮೂಡಬಿದ್ರೆ ಕ್ಷೇತ್ರ ಈಗ ಬಿಜೆಪಿಗೆ ಪೂರಕವಾಗಿದೆ ಎಂಬ ನಂಬಿಕೆಯೊಂದಿಗೆ ಇಲ್ಲಿ ಅಭ್ಯರ್ಥಿಗಳಾಗ ಬಯಸುವವರಿಗೇನೂ ಕೊರತೆ ಇಲ್ಲ. ಕಳೆದ ಬಾರಿ ಸ್ಪರ್ಧಿಸಿ ಸೋತ ಜಗದೀಶ್ ಅಧಿಕಾರಿ, ಜೆಡಿಎಸ್‌ನಿಂದ ಬಿಜೆಪಿಗೆ ಹಾರಿ ಬಂದ ಸುಚರಿತ ಶೆಟ್ಟಿ, ಬಿಜೆಪಿಯ ಯುವ ಕಾರ್ಯಕರ್ತರ ಕಣ್ಮಣಿ ಸತ್ಯಜಿತ್ ಸುರತ್ಕಲ್, ಜೆಡಿಎಸ್‌ನಿಂದಲೇ ಬಂದು ಬಿಜೆಪಿಯಲ್ಲಿ ಗೌರವಯುತ ನಡೆ ಪ್ರದರ್ಶಿಸಿರುವ ಭರತ್ ಶೆಟ್ಟಿ ಇವರೆಲ್ಲ ಇಲ್ಲಿ ಸ್ಪರ್ಧಿಸಬಯಸಿ ಲಾಬಿ ನಡೆಸುತ್ತಿರುವರೇ ಆಗಿದ್ದಾರೆ. ಆದರೆ ನಳಿನ್ ಆಸೆ ಪಟ್ಟರೆ ಇವರೆಲ್ಲ ಬದಿಗೆ ತಳ್ಳಲ್ಪಡುತ್ತಾರೆ.
Tagged with
dk,
feature,
lnews
ಕೇಂದ್ರ ಸರಕಾರವು ಏಕಾಏಕಿ ಪೆಟ್ರೋಲ್ ಬೆಲೆ ಏರಿಸಿದಾಗ ವಿರೋಧ ಪಕ್ಷಗಳು ಬಂದ್, ಪ್ರತಿಭಟನೆ ಯೆಂದು ಕರೆ ನೀಡುವುದು ಸಾಮಾನ್ಯ. ಇದಕ್ಕೆ ಇನ್ನಿತರ ಸಂಘಟನೆಗಳು ಬೆಂಬಲ ಸೂಚಿಸುವುದು ಮಾಮೂಲಿ ಸಂಗತಿ. ಇತ್ತೀಚೆಗೆ ನಡೆದ ಬಂದ್ ವಿರೋಧ ಪಕ್ಷಗಳು ಪ್ರಾಬಲ್ಯದಲ್ಲಿರುವ ಕಡೆ ಬಹುತೇಕ ಯಶಸ್ವಿಯೂ ಆಯಿತು. ಆದರೆ ದಿನಗೂಲಿಯನ್ನೇ ನಂಬಿಕೊಂಡ ಕಾರ್ಮಿಕರು ಮತ್ತು ಬೀದಿ ವ್ಯಾಪಾರಿಗಳು ತುಂಬಾ ಕಷ್ಟ ಅನುಭವಿಸಿದರು. ಅದೇ ರೀತಿ ರೋಗಿಗಳು, ಮದುವೆ ಇನ್ನಿತರ ಸಭೆ-ಸಮಾರಂಭಗಳನ್ನು ಆಯೋಜಿ ಸಿದವರು ಕಷ್ಟ-ನಷ್ಟ ಅನುಭವಿಸಿದರು. ಇಷ್ಟೇ ಅಲ್ಲದೆ ನಮ್ಮ ರಾಜ್ಯಕ್ಕೆ ೪೫೦ ಕೋಟಿ ರೂ. ನಷ್ಟವಾಯಿತು. ಹಾಗಾದರೆ ಈ ಬಂದ್ ನಮಗೆ ಬೇಕೇ?
ಹೆಚ್.ಎಸ್.ಶಾಫಿ, ಬಜಾಲ್-ನಂತೂರು
Tagged with
nimminda
ಬೆಳ್ತಂಗಡಿ ತಾಲೂಕಿಗೆ ಒಳಪಟ್ಟ ವೇಣೂರಿನಲ್ಲಿ ಒಂದು ವೈನ್‌ಶಾಪ್ ಅಲ್ಲದೆ ಕುಡಿದು ತಿನ್ನಲು (ಇಲ್ಲವೇ ತಿಂದು ಕುಡಿ ಯಲು) ಅನುಕೂಲವಾಗುವಂತೆ ಬಾರ್‌ವೊಂದು ಕಾರ‍್ಯಾಚರಿ ಸುತ್ತಿದೆ. ಮೂಡಬಿದ್ರೆ ಹಾಗೂ ಗುರುವಾಯನಕೆರೆ ಬಿಟ್ಟರೆ ಇದರ ಮಧ್ಯಭಾಗದಲ್ಲಿ ಕಾರ‍್ಯಾಚರಿಸುತ್ತಿರುವುದು ಇವೆರಡು ಮಾತ್ರ.
ಶರಾಬು ಪ್ಯಾಕೆಟ್‌ಗಳಿದ್ದ ಸಂದರ್ಭದಲ್ಲಿ ಗ್ರಾಮಗಳಿಗೊಂದ ರಂತೆ ಶರಾಬು ಅಂಗಡಿ ಕಾರ‍್ಯಾಚರಿಸುತ್ತಿದ್ದವು. ಇದು ಮದ್ಯಪ್ರಿಯ ರಿಗೆ ಹೆಚ್ಚು ದೂರ ಹೋಗದೇ ಸ್ಥಳೀಯರಿಗೆ ವರದಾನವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಪ್ರಸಿದ್ದಿ ಪಡೆದಿದ್ದ ತೊಟ್ಟೆಯನ್ನು ಸರ್ಕಾರ ನಿಲ್ಲಿಸಿಬಿಟ್ಟಿತು. ಪ್ಲಾಸ್ಟಿಕ್ ಬಳಕೆ ಭೂ ಜೀವಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಅಂತಲೋ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಪ್ರಸಿದ್ಧಿ ಪಡೆದಿರುವ ‘ಯೋಜನೆಗಳಿಂದ ಲೋ ಅಥವಾ ಜನರಿಗೆ ಹಾನಿಕಾರಕವಂತಲೋ ಕಡಿಮೆ ಬೆಲೆ ಯಲ್ಲಿ ಸಿಗುತ್ತಿದ್ದ ಶರಾಬು ಇನ್ನಿಲ್ಲವಾಯಿತು.
ಆದರೆ ಇದೀಗ ಪೊಲೀಸರ ಸಹಕಾರದಿಂದಲೋ ಅಥವಾ ಸ್ಥಳೀಯ ಅಬಕಾರಿ ಅಧಿಕಾರಿಗಳ ಕುಮ್ಮಕ್ಕಿನಿಂದಲೋ ವೇಣೂರು ಒಳ ಗ್ರಾಮಗಳಲ್ಲಿ ವ್ಯವಸ್ಥಿತವಾಗಿ ಎಲ್ಲೆಂದರಲ್ಲಿ ಮದ್ಯದ ಬಾಟಲಿ ಮಾರಾಟವಾಗುತ್ತಿದೆ. ಅದೆಷ್ಟೋ ಟ್ಯಾಕ್ಸ್ ಕಟ್ಟಿ, ಲೈಸನ್ಸ್ ಪಡೆದು ಮಾರಾಟವಾಗಬೇಕಿದ್ದ ಸ್ಪಿರಿಟ್‌ಗಳು ಇದೀಗ ಕೇವಲ ಬಾರ್, ವೈನ್‌ಶಾಪ್‌ಗಳಲ್ಲಿ ಮಾರಾಟವಾಗದೆ ವೇಣೂರು ಒಳ ಗ್ರಾಮೀಣದ ಪ್ರದೇಶದ ಜನರಲ್ ಸ್ಟೋರ್‌ಗಳಲ್ಲಿ ಮಾರಾಟವಾಗುತ್ತಿದೆ. ಇದ ರಿಂದಾಗಿ ಗ್ರಾಮೀಣ ಭಾಗದ ಕೂಲಿಕಾರ್ಮಿಕರು ಸಂಜೆಯ ಹೊತ್ತಿಗೆ ಅಮಲೇರಿಸಿಕೊಂಡು ಮನೆಯ ರಾದ್ದಾಂತಗಳಿಗೆ ಕಾರಣವಾಗುತ್ತಿದ್ದಾರೆ. ಗ್ರಾಮೀಣ ಭಾಗದ ಜನರಲ್ ಸ್ಟೋರ್‌ಗಳಲ್ಲಿ ಈ ಅಕ್ರಮ ಮದ್ಯ ಮಾರಾಟವಾಗದಿರುತ್ತಿದ್ದರೆ ಬಡಪಾಯಿ ಕೂಲಿ ಕಾರ್ಮಿಕರು ಮಹಿಳೆಯರು ವೇಣೂರಿಗೆ ಹೋಗಿ ಮದ್ಯ ಖರೀದಿ ಸಲು ಸ್ವಲ್ಪ ಕಷ್ಟಸಾಧ್ಯವಾಗುತ್ತಿತ್ತು. ಕುಡಿಯದೇ ಆಗುವುದೇ ಇಲ್ಲ ಎಂಬವರೂ ಕೂಡಾ ಡೈಲಿ ಕುಡಿಯದೆ ಅಪರೂಪಕ್ಕೆ ಪೇಟೆಗೆ ಹೋಗಿ ಬರುತಿದ್ದರೇನೋ?
ವಿಷಯ ತಿಳಿದು ದೂರುದಾರರ ಕಣ್ಣುಕಟ್ಟಿಗೋ ಅಥವಾ ನಾಗರಿಕರ ಕಣ್ಣಿಗೆ ಮಣ್ಣೆರೆಚಲೋ ಯಾವಾಗಲೊಮ್ಮೆ ದಾಳಿ ನಡೆಸುವ ಅಬಕಾರಿ ಹಾಗೂ ಸ್ಥಳೀಯ ಪೊಲೀಸರು ಬರೀ ಕೈಯಲ್ಲಿ ವಾಪಸಾ ಗುವುದು ಮಾಮೂಲಿಯಾಗಿದೆ. ವಿಷಯವನ್ನು ಮೊದಲೇ ಮದ್ಯ ಮಾರಾಟ ಮಾಡುವ ಜನರಲ್ ಸ್ಟೋರ್‌ಗಳಿಗೆ ತಿಳಿಸಿ ಬರುವ ಪೊಲೀಸರು ಮಾಮೂಲಿ ತೆಗೆದುಕೊಂಡು ಹೋಗುತ್ತಾರೆ. ಇಲ್ಲವೇ ದಂಡಹಾಕಿ ಬಿಟ್ಟು ಬಿಡುತ್ತಾರೆ. ವಾಪಾಸು ಬಂದ ಕೂಡಲೇ ತಪ್ಪಿಸಿಟ್ಟಿರುವ ಮದ್ಯದ ಬಾಟಲಿಗಳನ್ನು ಪುನಃ ರಾಜಾರೋಷವಾಗಿ ಮಾರುತ್ತಾರೆ. ಯಾಕೆಂದರೆ ದಂಡಕಟ್ಟಿದ ಹಣ ವಾಪಾಸು ಬರ ಬೇಕಲ್ಲ!
ತರಕಾರಿಗೆ, ಬೀಡಿಬ್ರಾಂಚ್‌ಗೆ ಬರುವವರು ಮದ್ಯದ ಬಾಟಲಿ ಗಳನ್ನು ಸರಾಗವಾಗಿ ಈ ಜನರಲ್ ಸ್ಟೋರ್‌ಗಳಿಂದ ಕೊಂಡೊ ಗುತ್ತಾರೆ. ಇಷ್ಟೇಕೆ ಸಂಜೆಯೊತ್ತು ಹಂಡೆ ಹಿಡಿದು ಕೊಂಡು ಹಾಲಿನ ಡೈರಿಗೆ ಬರುವವರು ಹಿಂದೆ ಹೋಗುವಾಗ ಒಂದು ಕ್ವಾರ್ಟರ್‌ನ್ನು ಅದರೊಳಗೆ ಹಾಕಿ ಕೊಂಡೋಗುವುದು ಕಂಡು ಬರುತ್ತದೆ. ಅನುಮತಿ ಪಡೆದ ಬಾರ್, ವೈನ್‌ಶಾಪ್‌ನಲ್ಲಿ ಮಾರಾಟ ವಾಗುವ ಮದ್ಯ ಬೆಲೆಗಳಿಗಿಂತ ೧೦, ೨೦ ರೂ. ಹೆಚ್ಚಿಗೆ ಪಡೆಯುವ ಇವರು ಸ್ಥಳೀಯ ಬಾರ್, ವೈನ್‌ಶಾಪ್‌ಗಳಿಂದಲೇ ನಿಗದಿತ ಬೆಲೆ ಕೊಟ್ಟು ಪರ್ಚೆಸ್ ಮಾಡುತ್ತಾರೆ. ಆದ್ದರಿಂದಲೇ ವೇಣೂರು ಬಾರ್ ಮಾಲಿಕರಾಗಲಿ, ವೈನ್‌ಶಾಪ್ ಮಾಲಿಕರಾಗಲಿ ಈ ಬಗ್ಗೆ ತಕರಾರು ಎತ್ತುತ್ತಿಲ್ಲ. ಒಂದು ರೀತಿಯಲ್ಲಿ ತುಂಬೆದಲೆಕ್ಕಿ, ಗುಂಡೂರಿ, ಆಕಡೆ ಪಡ್ಡಂದಡ್ಕ, ಕುರ್ಲೊಟ್ಟು ಕೆಲವು ಅಂಗಡಿ ಹಾಗೂ ಮನೆ ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಇದು ಬಾರ್, ವೈನಶಾಪ್‌ಗಳ ಬ್ರಾಂಚ್‌ಗಳಂತೆ ಕಾರ‍್ಯನಿರ್ವಹಿಸುತ್ತಿವೆ ಎಂದರೆ ತಪ್ಪಾಗದು.
ಸ್ವಸಹಾಯ ಸಂಘ ಯೋಜನೆಗಳು ಬಹಳ ಗಟ್ಟಿಯಾಗಿ ಬೆಳೆದಿರುವ ವೇಣೂರಿನ ಗ್ರಾಮೀಣ ಪ್ರದೇಶಗಳಲ್ಲಿ ಈ ಅಕ್ರಮ ಮದ್ಯ ನಡೆಯುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ವ್ಯಾಪಿಸಿರುವ ಈ ಅಕ್ರಮವನ್ನು ಯೋಜನಾಧಿಕಾರಿಗಳು ನಿಲ್ಲಿಸಲು ನೈಜ ಪ್ರಯತ್ನ ಮಾಡಬೇಕು. ಬೆಳ್ತಂಗಡಿ ಶಾಸಕರು ಈ ಬಗ್ಗೆ ಗಮನ ಹರಿಸಿ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ರವಾನಿಸಬೇಕಾಗಿದೆ.
ನೊಂದ ಗ್ರಾಮಸ್ಥರು, ವೇಣೂರು-ಬಜಿರೆ
Tagged with
bahiranga
ಇತ್ತೀಚೆಗೆ ಕಾಂಗ್ರೆಸ್ ಪಕ್ಷದಿಂದ ತನಗೆ ನೋವುಂಟಾ ಗಿದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ತನ್ನ ಬೆಂಬಲಿಗ ಸಿ.ಎಂ.ಇಬ್ರಾಹಿಂ ಅವರಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಮುನಿಸಿ ಕೊಂಡಿದ್ದರು. ಕುರುಬ ಸಮುದಾಯ ದ ಪ್ರಬಲ ನಾಯಕರಾಗಿರುವ ಸಿದ್ದ ರಾಮಯ್ಯರಿಗೆ ಕಾಂಗ್ರೆಸ್ ಪಕ್ಷ ಸೂಕ್ತ ಸ್ಥಾನಮಾನ ಕೊಟ್ಟು ಅವರನ್ನು ವಿಶ್ವಾ ಸಕ್ಕೆ ತೆಗೆದುಕೊಂಡು ಮುಂದುವರಿ ಯಬೇಕಿದೆ. ಮುಂಬರುವ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ಈಗಲೇ ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ಧವಾಗಬೇಕಿದೆ. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್‌ನ ಪ್ರಧಾನ ಕಾರ್ಯ ದರ್ಶಿ ರಾಹುಲ್‌ಗಾಂಧಿ ಕೂಡಾ ಒಳ್ಳೆಯ ಮಾತುಗಳನ್ನಾ ಡಿದ್ದಾರೆ. ಮೂರು ಸಲ ಸೋತವರಿಗೂ ಟಿಕೆಟ್ ಬೇಡ ಎನ್ನುವ ನೀತಿಯೇ ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಆಗಲಿದೆ. ಜಿ.ಎ.ಸಂಶುದ್ದೀನ್, ಅಜ್ಜಿನಡ್ಕ
Tagged with
nimminda
ಕೊಂಕಣ ರೈಲು ಮಾರ್ಗದಲ್ಲಿ ಓಡಾಡುವ ರೈಲು ಗಳಲ್ಲಿ ತಿಂಡಿ-ಪಾನೀಯವನ್ನು ಹಿಡಿದುಕೊಂಡು ಬರುವ ‘ಚಾಯ್‌ವಾಲಾ’ಗಳು ದುಬಾರಿ ದರ ವಿಧಿಸುತ್ತಾರೆ. ಇದು ಮಾರುಕಟ್ಟೆಯ ದರಕ್ಕೆ ಹೋಲಿಸಿದರೆ ತುಂಬಾ ಹೆಚ್ಚಾಗಿರುತ್ತದೆ ಮತ್ತು ಇದರ ಪ್ರಮಾಣವೂ ಕಮ್ಮಿಯಿರು ತ್ತದೆ. ಎರಡು ಸಣ್ಣದಾದ ಸಮೋಸಕ್ಕೆ ೧೨ ರೂಪಾಯಿ, ಐದು ಸಣ್ಣದಾದ ಗೋಳಿಬಜೆಗೆ ೧೨ ರೂಪಾಯಿ ವಸೂಲಿ ಮಾಡುತ್ತಾರೆ. ಇಷ್ಟೇ ಅಲ್ಲದೆ ಪಾನೀಯಕ್ಕೆ ಇವರು ವಿಧಿಸುವ ಬೆಲೆ ತೀರಾ ದುಬಾರಿ. ಇದು ಗ್ರಾಹಕರಿಗೆ ಮಾಡುವ ಮೋಸವಲ್ಲವೇ?
ರೈಲು ಹತ್ತುವಾಗ ಅವಸರದಲ್ಲಿ ತಿಂಡಿ-ಪಾನೀಯ ಕೊಳ್ಳಲು ಮರೆತರೆ ರೈಲಿನಲ್ಲಿ ದುಬಾರಿ ದರ ಕೊಟ್ಟು ಖರೀದಿ ಮಾಡುವುದು ಅನಿವಾರ್ಯವಾಗುತ್ತದೆ. ಬೆಲೆಯನ್ನು ನಿಯಂತ್ರಿಸಿ ಗ್ರಾಹಕರ ಹಿತವನ್ನು ಕಾಪಾಡುವುದು ಯಾರ ಕರ್ತವ್ಯ? ಇನ್ನಾದರೂ ರೈಲ್ವೇ ಇಲಾಖೆ ಇತ್ತ ಗಮನಿಸಿ ಗ್ರಾಹಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಿ.
ಪದ್ಮಲತಾ, ನಾರಾವಿ
Tagged with
nimminda
ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವೇಣೂರಿನಿಂದ ನೈನಾಡು ವಿಗೆ ಹೋಗುವ ರಸ್ತೆಯ ಮಧ್ಯೆ ಸಿಗುವ ಹೊಸಪಟ್ಲದ ಪ್ರಯಾಣಿಕರ ತಂಗುದಾಣ ಅವ್ಯವಸ್ಥೆಯ ಆಗರ ವಾ ಗಿದೆ. ಗಂಟೆಗೊಮ್ಮೆ ಬಸ್ ಓಡಾಡುವ ಈ ರಸ್ತೆಯಲ್ಲಿ ಪ್ರಯಾಣಿಕರು ಬಹಳ ಹೊತ್ತು ಬಸ್ ತಂಗುದಾಣದಲ್ಲೇ ಕಾಯಬೇಕಾದ ಪರಿಸ್ಥಿತಿ ಇದೆ.
ಆದರೆ ಈ ತಂಗುದಾಣದಲ್ಲಿ ನಿಲ್ಲುವುದೇ ಅಪಾಯಕಾರಿ! ಕಾರಣ ತಂಗುದಾಣದ ಸುತ್ತ ಪೊದೆ ಬೆಳೆದು ಕಟ್ಟಡ ಕಾಣದಂತಾಗಿದೆ. ಗ್ರಾಮೀಣ ಭಾಗದ ನಾಗರಿಕರು ಹಾಗೂ ಹೆಚ್ಚಾಗಿ ಶಾಲಾ ವಿದ್ಯಾರ್ಥಿಗಳು ಅವಲಂಬಿ ಸುವ ಈ ತಂಗುದಾಣವನ್ನು ತುರ್ತಾಗಿ ಸ್ವಚ್ಛಗೊಳಿಸಿ ಪ್ರಯಾಣಿಕರನ್ನು ತಂಗಲು ಅನುವು ಮಾಡಿಕೊಡಬೇಕಾಗಿ ವಿನಂತಿ.
ರಾಕೇಶ್, ನೈನಾಡು
Tagged with
nimminda
ಉಳ್ಳಾಲ ಸಮುದ್ರ ತೀರದಲ್ಲಿ ಕಡಲಿಗೆ ಇಳಿಯಬಾರದೆಂದು ಕಟ್ಟುನಿಟ್ಟಿನ ಆಜ್ಞೆಯಿ ದ್ದರೂ ದೂರದೂರಗಳಿಂದ ಉಳ್ಳಾಲ ದರ್ಗಾ ಸಂದರ್ಶನಕ್ಕೆ ಬರುವ ಸಂದರ್ಶಕರು ಕಡಲಿಗಿಳಿದು ಅಪಾಯ ಆಹ್ವಾನಿಸುತ್ತಿದ್ದಾರೆ. ಕಡಲಿಗಿಳಿಯಬಾರದೆಂದು ದರ್ಗಾ ಸಮಿತಿ ಫಲಕವೊಂದನ್ನು ದರ್ಗಾ ಬಳಿ ಹಾಕಿದೆ. ಇದನ್ನು ಲೆಕ್ಕಿಸದೆ ಕೆಲವರು ಕಡಲಿನಲ್ಲಿ ನೀರಿ ನಾಟಕ್ಕೆ ಮುಂದಾಗುತ್ತಾರೆ. ಇತ್ತೀಚಿನ ಕೆಲವು ಸಮಯದಲ್ಲಿ ಹತ್ತು ಮಂದಿ ಇಲ್ಲಿ ನೀರು ಪಾಲಾಗಿದ್ದಾರೆ. ಉಳ್ಳಾಲ ಕಡಲ ಕಿನಾರೆಯಲ್ಲಿ ಪೊಲೀಸರನ್ನು ನಿಯೋಜಿಸಿ ಕಡಲಿಗಿಳಿಯುವ ವರನ್ನು ತಡೆಯಲು ಆಡಳಿತ ವರ್ಗ ತಯಾರಾ ಗಬೇಕು. ಇಲ್ಲದಿದ್ದರೆ ಇಲ್ಲಿ ಅಪಾಯ ತಪ್ಪಿದ್ದಲ್ಲ. ಯಾತ್ರಾರ್ಥಿಗಳು ಹೆಚಾ ಗಿರುವ ಸಂದರ್ಭ ಇಲ್ಲಿನ ಪರಿಸರದ ಕೆಲವರು ಮೋಜಿಗಾಗಿ ಈಜುತ್ತಾ ದೂರಸಾಗಿ ಇತರ ರನ್ನು ನೀರಿಗಿಳಿ ಯುವಂತೆ ಮಾಡುತ್ತಿರುವುದನ್ನು ಇಲ್ಲಿ ಕಾಣ ಬಹುದು.
ಅವರು ಈಜಿನಲ್ಲಿ ಪರಿಣತಿ ಹೊಂದಿದವ ರಾದರೂ ರಕ್ಷಣೆಯ ದೃಷ್ಟಿಯಿಂದ ಅವರನ್ನು ನೀರಿಗಿಳಿಯದಂತೆ ತಡೆಯಬೇಕಾದ್ದು ಅನಿ ವಾರ್ಯವಾಗಿದೆ.
ಕೆ.ಎ.ಅಬ್ದುಲ್ ಅಝೀಝ್, ಪುಣZ
Tagged with
nimminda
ಮಣಿಪಾಲದಲ್ಲಿ ಶ್ರೀಮಂತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಮಾದಕದ್ರವ್ಯದ ಚಟಕ್ಕೆ ಬಲಿ ಬೀಳುತ್ತಿದ್ದಾರೆ ಎಂಬ ಆರೋಪ ಇಂದು ನಿನ್ನೆಯದಲ್ಲ. ಆದರೆ ಇಲ್ಲಿನ ವಿದ್ಯಾರ್ಥಿಗಳು ಮಾಡುವ ಯಾವುದೇ ತಪ್ಪು ಕಾರ್ಯಗಳನ್ನು ಇಲ್ಲಿನ ಪೊಲೀಸರು ಪ್ರಶ್ನಿಸುವುದಿಲ್ಲ. ಕ್ಯಾಂಪಸ್ ಭದ್ರತೆಗಾಗಿ ಪ್ರತ್ಯೇಕ ತಂಡವೊಂದು ಇದೆಯಾದರೂ ಅದು ವಾಹನದಲ್ಲಿ ಸುತ್ತಾಡುವುದು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ಆದ್ದರಿಂದಲೇ ಇಲ್ಲಿ ಲ್ಯಾಪ್‌ಟಾಪ್ ಕಳವು ಸೇರಿದಂತೆ ಹತ್ತು, ಹಲವು ಕಳವು ಪ್ರಕರಣಗಳು ವರದಿಯಾಗುತ್ತಿವೆ. ಇಲ್ಲಿನ ಅಕ್ರಮಗಳಿಗೆ ಪೊಲೀಸರ ಶ್ರೀರಕ್ಷೆ ಇದೆ ಎಂದೇ ಹೇಳಬಹುದು. ಮಣಿಪಾಲದ ರಸ್ತೆಯಲ್ಲಿ ರಾತ್ರಿ ಕುಡುಕ ವಿದ್ಯಾರ್ಥಿಗಳದ್ದೇ ಕಾರುಬಾರು. ಎಂಐಟಿಯಿಂದ ಈಶ್ವರನಗರದವರೆಗೆ ರಾತ್ರಿ ಹೊತ್ತಿನಲ್ಲಿ ನೋಡ ಲಾಗದಂಥ ದೃಶ್ಯಗಳು ಗೋಚರಿಸುತ್ತವೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರ ಹಾವಭಾವ ಕಂಡು ಸಭ್ಯರು ನಡೆದಾಡುವುದಕ್ಕೆ ಅಸಹ್ಯಪಡುತ್ತಿದ್ದಾರೆ. ಆದ್ದರಿಂದ ಪೊಲೀಸರೇ, ನೀವು ಒಂದಿಷ್ಟು ಚುರುಕಾದರೆ ವಿದ್ಯಾರ್ಥಿಗಳಿಂದಾಗಿ ಮಣಿ ಪಾಲದ ಮಾನ ಹೋಗುವುದನ್ನು ತಡೆಯಬಹುದು. ಸೂರಜ್, ಮಣಿಪಾಲ
Tagged with
nimminda
ಕಾಸರಗೋಡಿನಿಂದ ಮಂಗಳೂರು ನಡುವಿನ ರಸ್ತೆ ಚೆನ್ನಾ ಗಿದೆ. ಬೇಕಾದಷ್ಟು ಸರಕಾರಿ ಬಸ್‌ಗಳೂ ಸಂಚಾರ ನಡೆಸುತ್ತಿರು ವುದು ಜನರಿಗೆ ತುಂಬಾ ಅನುಕೂಲಕರವಾಗಿದೆ. ಆದರೆ ಸಂಚಾ ರಕ್ಕೆ ತೆಗೆದುಕೊಳ್ಳುವ ಸಮಯ ಮಾತ್ರ ಒಂದು ಗಂಟೆ ಹದಿನೈದು ನಿಮಿಷ. ಬಸ್‌ಗಳ ಹೆಸರು ಮಾತ್ರ ಎಕ್ಸ್‌ಪ್ರೆಸ್ ಎಂದು. ವರ್ಷ ದಿಂದ ವರ್ಷಕ್ಕೆ ಹೆಚ್ಚೆಚ್ಚು ನಿಲ್ದಾಣಗಳು ನಿರ್ಮಾಣ ಆಗುತ್ತಿವೆ. ನಿಜವಾಗಿ ಮೊದಲು ಇದ್ದಿದ್ದು ಏಳೋ, ಏಂಟೋ ನಿಲ್ದಾಣಗಳು. ಈಗ ಇಪ್ಪತ್ತು ಮೀರಿದೆ. ಕನಿಷ್ಟ ಪಕ್ಷ ಪೀಕ್ ಸಮಯ ನೋಡಿ ಒಂದೆರಡು ಸೂಪರ್ ಎಕ್ಸ್‌ಪ್ರೆಸ್ ಬಸ್‌ಗಳನ್ನು ರಸ್ತೆಗಿಳಿಸಿದರೆ ಜನರಿಗೆ ಬಹಳಷ್ಟು ಅನುಕೂಲವಾದೀತು. ಮಂಗಳೂರು ಬಿಟ್ಟರೆ, ಉಪ್ಪಳ, ಕುಂಬಳೆ, ಕಾಸರಗೋಡು ಇಷ್ಟೇ ನಿಲ್ದಾಣಗಳಲ್ಲಿ ಬಸ್ ನಿಲುಗಡೆ ಘೋಷಿಸಿದರೆ ಸಮಯದ ಉಳಿತಾಯವೂ, ಜನರಿಗೆ ಅನುಕೂಲವೂ ಆದೀತು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವರೇ?
ಪ್ರೊ.ಮಧೂರು ಮೋಹನ ಕಲ್ಲೂರಾಯ
Tagged with
nimminda
ಕಾರ್ಕಳ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಜೂಜುಕೋರರ ಹಾವಳಿ ವಿಪರೀತವಾಗಿದೆ. ಸಾಣೂರು, ಮುರತಂಗಡಿ, ಕಾರ್ಕಳ, ಬಂಗ್ಲೆಗುಡ್ಡೆ ಪರಿಸರದಲ್ಲಿನ ಕೆಲವು ಸಣ್ಣಪುಟ್ಟ ಅಂಗಡಿ ವ್ಯಾಪಾರಿ-ಗಳು ಸಂಜೆಯಾದೊಡನೆ ಜೂಜು ಅಡ್ಡೆಯಲ್ಲಿ ಕಾಲ ಕಳೆಯುತ್ತಾರೆ. ತಾವು ದುಡಿದ ಹಣವನ್ನು ದಂಧೆ ಯಲ್ಲಿ ತೊಡಗಿಸಿ ಕಿಸೆ ಖಾಲಿ ಮಾಡಿ ಮನೆಗೆ ಹೋಗು ತ್ತಾರೆ. ಇವರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಪೊಲೀ ಸರು ಮಾಡುತ್ತಿಲ್ಲ. ಜೂಜಾಟವನ್ನು ನಿಯಂತ್ರಿಸಿದರೆ ಎಷ್ಟೋ ಬಡವರ ಮನೆ-ಮಠವಾದರೂ ಉಳಿಯು ತ್ತಿತ್ತು. ಕಾರ್ಕಳ ತಾಲೂಕಿನ ವಿವಿಧೆಡೆ ಮಟ್ಕಾ, ಜುಗಾರಿಯ ಅಡ್ಡೆಗಳು ಹೊಸದಾಗಿ ತಲೆಯೆತ್ತಿವೆ. ಕೆಲವು ಹೋಟೆಲ್, ಬಾರ್‌ಗಳಲ್ಲೂ ದಂಧೆ ಹೇರಳವಾಗಿ ಬೇರುಬಿಟ್ಟಿದೆ. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಇಲಾಖೆ ಇನ್ನಾದರೂ ಎಚ್ಚೆತ್ತು ಕ್ರಮ ಜರುಗಿಸುವುದೇ?
ರಾಧಾಕೃಷ್ಣ, ಕಾರ್ಕ
Tagged with
nimminda
ಮಂಗಳೂರು-ಪುತ್ತೂರು ನಡುವೆ ಓಡಾಡುವ ಕೆಎಸ್‌ಆರ್ ಟಿಸಿ ಬಸ್ ಚಾಲಕರಲ್ಲಿ ನನ್ನದೊಂದು ವಿನಂತಿ ಏನೆಂದರೆ, ನೀವು ಬಸ್ ಚಾಲನೆಯ ಸಂದರ್ಭ ದಲ್ಲಿ ಪ್ರಯಾಣಿಕರ ಸುರಕ್ಷತೆಯ ಕಡೆ ಹೆಚ್ಚಿನ ಗಮನ ಕೊಡಿ. ಬಸ್‌ನಲ್ಲಿ ನೀವೊಬ್ಬರೇ ಸಂಚರಿಸುವುದಲ್ಲ, ಬದಲಿಗೆ ನೂರಾರು ಪ್ರಯಾಣಿಕರು ತುಂಬಿದ್ದಾರೆ ಎಂಬ ಪರಿeನ ನಿಮಗಿರಲಿ. ಬಿ.ಸಿ.ರೋಡ್‌ನಿಂದ ಕಲ್ಲಡ್ಕ, ಮಾಣಿ ಬಳಿ ರಸ್ತೆಯ ವಿಸ್ತಾರವೂ ಕಿರಿದಾಗಿದ್ದು, ಬಸ್ ಸಂಚಾರದ ವೇಳೆ ಪ್ರಯಾಣಿಕರು ಭಯಭೀತರಾಗುತ್ತಾರೆ. ಓವರ್‌ಟೇಕ್ ಮಾಡುವ ಸಂದರ್ಭ ರಸ್ತೆಯಿಂದ ಕೆಳಕ್ಕಿಳಿದು ಅಷ್ಟೇ ವೇಗವಾಗಿ ಮೇಲಕ್ಕೆ ಹತ್ತುವ ವೇಳೆ ಅಪಘಾತ ಭಯ ಪ್ರಯಾಣಿಕರಿಗೆ ಆಗಿಯೇ ಆಗುತ್ತದೆ. ಹೀಗಾಗಿ ಉಸಿರು ಬಿಗಿಹಿಡಿದು ಸಂಚಾರ ನಡೆಸಬೇಕಾಗುತ್ತದೆ. ಆದರೆ ಬಸ್ ಚಾಲಕ ಮಾತ್ರ ತನಗೂ-ಇದಕ್ಕೂ ಯಾವುದೇ ಸಂಬಂಧ ವಿಲ್ಲ ಎಂಬಂತೆ ಒಂದೇ ವೇಗದಲ್ಲಿ ಸಾಗುತ್ತಿರುತ್ತಾನೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಿಸಬೇಕು. ರಸ್ತೆ ಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಸಂಚರಿ ಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಚಾಲಕರು ಸುರಕ್ಷತೆಗೆ ಹೆಚ್ಚಿನ ಒತ್ತುಕೊಡಲಿ. ಸುರೇಂದ್ರ, ಬಂಗಾಡಿ
Tagged with
nimminda
ಕೆಲವು ದಿನಗಳ ಹಿಂದೆ ‘ಜಯಕಿರಣ’ ಪತ್ರಿಕೆಯಲ್ಲಿ ಪ್ರಕಟವಾದ ‘ನಿತ್ಯಾನಂದನ ಹಾದಿಯಲ್ಲಿ ಜಿಲ್ಲೆಯ ಕೆಲವು ಕಾವಿಧಾರಿ ಗಳು’ ವರದಿ ಅಕ್ಷರಶಃ ಸತ್ಯ. ಯಾಕೆಂದರೆ ನಮ್ಮಲ್ಲಿಯೂ ಊರು, ಹಳ್ಳಿ, ಪೇಟೆ, ಪಟ್ಟಣ ಒಂದನ್ನೂ ಬಿಡದೆ ಅಲ್ಲಲ್ಲಿ ಜಂಡಾ ಊರಿ ರುವ ಇಂಥ ಕಾಮುಕ ಶಿಖಾಮಣಿ ಗಳಿ ದ್ದಾರೆ. ಎಲ್ಲೋ ಕೆಲವು ಕಡೆ ಮಾತ್ರ ಇಂಥ ವರ ನೈಜ ಸಂಗತಿ ಬಯಲಾಗಿದೆಯೇ ಹೊರತು ಉಳಿದಂತೆ ಜನರು ಇಂಥವರನ್ನು ನಂಬಿ ವಂಚನೆಗೊಳಗಾಗುತ್ತಲೇ ಇದ್ದಾರೆ. ಪೊಲೀಸ್ ಇಲಾಖೆಯಂತೂ ಇಂಥವರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮಂಗ ಳೂರಿನ ಸುತ್ತಮುತ್ತ ಇಂಥವರ ಸಂಖ್ಯೆ ಹೆಚ್ಚಿದೆ. ಮಠ, ಮಂದಿರ ಕಟ್ಟಿಕೊಂಡು ಕಾವಿ ಬಟ್ಟೆ ಧರಿಸಿ ಓಡಾಡುವ ಇಂಥ ವಿಕೃತರನ್ನು ಜನರೇ ವಿಚಾರಿಸಬೇಕಿದೆ. ಯಾಕೆಂದರೆ ಇಂಥವರಿಗೆ ಸಮಾಜದ ಪ್ರಭಾವಿಗಳ, ಪೊಲೀಸ್ ಅಧಿಕಾರಿ ಗಳ, ವಿವಿಧ ರಾಜಕೀಯ ಪಕ್ಷಗಳ ಜನ ಪ್ರತಿನಿಧಿಗಳ ಬೆಂಬಲ ಇರುತ್ತದೆ. ಹೀಗಾಗಿ ತಾವೇನೇ ಮಾಡಿದರೂ ನಡೆಯುತ್ತದೆ ಎಂಬ ಭ್ರಮೆ ಅವರಲ್ಲಿರುತ್ತದೆ. ಮಂಗಳೂರಿನಲ್ಲಿ ನೆಲೆಸಿರುವ ಕಪಟ ಸ್ವಾಮಿಗಳ, ಮಂತ್ರವಾದಿ ಗಳ, ವಾಮಾಚಾರಿಗಳ ವಿರುದ್ಧ ಪೊಲೀಸ್ ಇಲಾಖೆ ಇನ್ನಾದರೂ ಉಗ್ರ ಕ್ರಮ ಜರುಗಿಸ ಬೇಕಾಗಿ ವಿನಂತಿ.
ಶಶಿಕಾಂತ್, ರಥಬೀದಿ
Tagged with
nimminda