ನಿತ್ಯಾನಂದನನ್ನು ಮೀರಿಸುವ ಸ್ವಾ(ಕಾ)ಮಿಗಳು ನಮ್ಮ ಜಿಲ್ಲೆಯಲ್ಲಿ ಇಲ್ಲವೇ?

Posted by JAYAKIRANA Kirana on Monday, 11 June 2012 | 0 comments | Leave a comment...

ಸನತ್, ಮಂಗಳೂರು
ಬಿಡದಿಯ ಧ್ಯಾನಪೀಠದಲ್ಲಿ ಚಿತ್ರನಟಿ ರಂಜಿತಾ ಜೊತೆ ರಾಸಲೀಲೆಯಾಡಿ ಸಿಕ್ಕಿಬಿದ್ದ ನಿತ್ಯಾನಂದ ಎನ್ನುವ ಕಾಮುಕ ಸ್ವಾಮಿ ಇದೀಗ ಅನಿವಾಸಿ ಭಾರತೀಯ ಮಹಿಳೆಯನ್ನು ಆರು ವರ್ಷಗಳ ಕಾಲ ನಿರಂತರ ಅತ್ಯಾಚಾರಗೈದು ಸುದ್ದಿಯಲ್ಲಿದ್ದಾನೆ. ಈತನನ್ನು ಬಂಧಿಸಿ ಗಡಿಪಾರು ಮಾಡಬೇಕೆಂಬ ಆಗ್ರಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಮಂಗಳೂರಿನಲ್ಲೂ ಕೆಲವೊಂದು ಸಂಘಟನೆಗಳು ಸ್ವಾಮಿಯ ವಿರುದ್ಧ ಪ್ರತಿಭಟನೆ ನಡೆಸಿರುವುದು ಸ್ವಾಗತಾರ್ಹ. ಆದರೆ ಈ ಸಂಘಟನೆಗಳಲ್ಲಿ ನನ್ನ ಮನವಿ ಏನೆಂದರೆ, ನಿತ್ಯಾನಂದನಂಥ ಸ್ವಾಮಿಗಳು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಲ್ಲಿ ನೂರಾರು ಮಂದಿ ಇದ್ದಾರೆ. ಇವರ ಬಗ್ಗೆ ಜನರೇ ನೀವೇಕೆ ಗಮನಿಸುತ್ತಿಲ್ಲ? ಇಂಥ ಸ್ವಾಮಿಗಳಿಂದ ಬಡ, ಮಧ್ಯಮ ವರ್ಗದ ಜನರು ನಿತ್ಯ ಕಷ್ಟ ಅನುಭವಿಸುತ್ತಿದ್ದಾರೆ. ಮಾಟ-ಮಂತ್ರ-ವಶೀಕರಣದ ಹೆಸರಿನಲ್ಲಿ ಎಷ್ಟೋ ಸಂಸಾರ ಹಾಳಾಗಿದೆ, ಎಷ್ಟೋ ಮಂದಿ ಅಮಾಯಕ ಹೆಣ್ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ. ಇವರ ವಿರುದ್ಧ ಯಾಕೆ ಸಂಘಟನೆಗಳು ಹೋರಾಟ ಮಾಡುತ್ತಿಲ್ಲ? ನಿತ್ಯಾನಂದನ ಆಶ್ರಮದಂತೆ ಇಲ್ಲಿನ ಕೆಲವು ಆಶ್ರಮಗಳ ಮೇಲೂ ಸಂಘಟನೆ ಗಳು, ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದಾಳಿ ನಡೆಸಿದರೆ ನಿತ್ಯಾನಂದನಿಗಿಂತ ಸ್ವಾರಸ್ಯದ ಸಂಗತಿ ಬಯಲಾಗುವುದರಲ್ಲಿ ಅಚ್ಚರಿ ಪಡಬೇಕಿಲ್ಲ.
ಅವಿಭಜಿತ ಜಿಲ್ಲೆಯಲ್ಲಿ ಮಠ-ಮಂದಿರಗಳನ್ನು ಕಟ್ಟಿಕೊಂಡು ವಾಸವಿರುವ ಕೆಲವೊಂದು ಸ್ವಾಮಿಗಳು ಪ್ರತಿನಿತ್ಯ ಒಂದಿಷ್ಟು ಜನರಿಗೆ ಮಂಕುಬೂದಿ ಎರಚಿ ಹಣ ಗಳಿಕೆ ಮಾಡುತ್ತಲೇ ಇದ್ದು, ಮಠದ ಆಸ್ತಿಯನ್ನು ಹೆಚ್ಚಿಸುತ್ತಲೇ ಇದ್ದಾರೆ. ಇವರ ಬಗ್ಗೆ ಅಕ್ರಮ ಭೂಕಬಳಿಕೆಯ ಆರೋಪಗಳು ಕೇಳಿಬಂದರೂ ಜನರು ಮಾತ್ರ ಮತ್ತೆ ಅಂಥವರಿಗೇ ಮಣೆ ಹಾಕುತ್ತಿರುವುದು ವಿಚಿತ್ರವಾದರೂ ಸತ್ಯ ಎನ್ನಬಹುದು. ಜಿಲ್ಲೆಯ ಖ್ಯಾತ ಆಶ್ರಮವೊಂದರಲ್ಲಿ ಬ್ರಹ್ಮಾಚಾರಿ ಆಂಜನೇಯ ನನ್ನು ಆರಾಧಿಸುವ ಕಾವಿಧಾರಿಯೊಬ್ಬರು ಪ್ರತಿಷ್ಠಿತ ಮನೆತನದ ಸುಂದರ ಹುಡುಗಿಯನ್ನು ಶಿಷ್ಯೆಯನ್ನಾಗಿ ಇಟ್ಟುಕೊಂಡಿರುವುದು ಹೊಸ ಸಂಗತಿಯೇನಲ್ಲ. ಮಂಗಳೂರಿನ ಹೊರವಲಯ ದಲ್ಲಿ ಆಶ್ರಮ ಕಟ್ಟಿಕೊಂಡು ಕೆಲವು ವರ್ಷಗಳ ಹಿಂದೆ ಭಾರೀ ಹಾರಾಟ ಮಾಡಿದ್ದ ಕಾವಿಧಾರಿಯೊಬ್ಬ ಮಾತುಮಾತಿಗೂ ನಾನೇ ಶಿವ, ನಾನೇ ಬ್ರಹ್ಮ, ನಾನೇ ಪಾರ್ವತಿ ಎಂದು ಜನರನ್ನು ಮರಗಟ್ಟಿಸುತ್ತಿರುವುದು, ಬೆಲೆಬಾಳುವ ಲ್ಯಾಪ್‌ಟಾಪ್-ಮೊಬೈಲ್ ಇಟ್ಟುಕೊಂಡು ದಿನದ ಹೆಚ್ಚಿನ ಅವಧಿಯಲ್ಲಿ ಸಮಾಜದ ಯುವ ಜನರೊಂದಿಗೆ ಚಾಟಿಂಗ್ ಮಾಡುತ್ತಾ ಸಂಪರ್ಕ ಇಟ್ಟುಕೊಂ ಡಿರುವುದು ನಿತ್ಯ ನಡೆಯುತ್ತಿದ್ದರೂ ಸಂಬಂಧ ಪಟ್ಟವರು ಗಮನಿಸದೇ ಇರುವುದು ನಾಚಿಕೆಗೇಡಿನ ಸಂಗತಿಯಲ್ಲವೇ? ಬೈಲು, ಗದ್ದೆಯಲ್ಲಿ ಮಂದಿರವನ್ನು ಕಟ್ಟಿ ಜನರನ್ನು ವಶೀಕರಣ ಮಾಡಿ ದೋಚುವ ಧೂರ್ತನಿರುವುದು ಯಾರ ಗಮನಕ್ಕೂ ಬಂದಿಲ್ಲವೇ? ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲ ವೊಂದು ಖಾಸಗಿ ಸ್ಥಳೀಯ ಸುದ್ದಿ ಚಾನೆಲ್‌ಗಳಲ್ಲಿ ಮುಂಜಾ ನೆಯೇ ಕಂಬಳಿ ಹೊದ್ದು ಕುಳಿತು ಕೊಳ್ಳುವ ಇವರು ಪ್ರತಿ ಯೊಂದು ಪ್ರಶ್ನೆಗೂ ‘ನಾಗದೋಷವಿದೆ’ ಎಂದು ವೀಕ್ಷಕ ರನ್ನು ಮುಂಡಾಮೋಚುವುದು ಕಾಣುವುದಿಲ್ಲವೇ?
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸ್ವಾಮಿಗಳು ಸ್ವಂತ ಲಾಭ ಕ್ಕಾಗಿ ನಾಟಕ ತಂಡಗಳನ್ನು ಆಶ್ರಯಿಸಿಕೊಂಡಿರುವುದೂ ಕಂಡು ಬರುತ್ತದೆ. ಆಯಾ ತಂಡಗಳ ನಾಟಕ ಪ್ರದರ್ಶನಗಳ ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ಆಶೀರ್ವಾದ ನೀಡುವುದನ್ನೇ ಇವರು ಪೂರ್ಣ ಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಂಟ, ಬಿಲ್ಲವ, ಮೂಲ್ಯ, ಮೊಗವೀರ ಎಂದು ಜಾತಿಗೊಂದು ಸ್ವಾಮಿ ಗಳಿದ್ದು, ಇವರಿಗೆ ಸಮಾಜದ ಜನರ ಬೆಂಬಲವೂ ಇರುವುದ ರಿಂದ ಆರಾಮವಾಗಿದ್ದಾರೆ. ಮುಂಬೈ, ದುಬೈ ಎಂದು ವಿಮಾನ ದಲ್ಲೇ ಹಾರಾಡುವ ಕೆಲವು ಸ್ವಾಮಿಗಳು ಆಯಾ ಜಾತಿಯ ಜನರನ್ನು ಕೈ ಎತ್ತಿ ಆಶೀರ್ವದಿಸುವ ಮೂಲಕ ಹಣವನ್ನು ಗಂಟು ಕಟ್ಟಿಕೊಳ್ಳುತ್ತಿದ್ದಾರೆ.
ಇಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಇನ್ನೂ ಕೆಲವು ಬಗೆಯ ಸ್ವಾಮಿ ಗಳಿದ್ದಾರೆ. ಇವರಲ್ಲಿ ‘ಬಲ್ಮೆ’ ಸ್ವಾಮಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಜಿಲ್ಲೆಯ ಗಲ್ಲಿ-ಗಲ್ಲಿಯನ್ನು ಆಕ್ರಮಿ ಸಿಕೊಂಡು ಲಾಡ್ಜ್ ಇಲ್ಲವೇ ಸಣ್ಣ ಗುಡಿ ಕಟ್ಟಿಕೊಂಡು ನೆಲೆಸಿರುವ ಇವರು ಬಲ್ಮೆ ಹೇಳುತ್ತಲೇ ಜನರಿಗೆ ಉಂಡೆನಾಮ ತಿಕ್ಕುವುದರಲ್ಲಿ ಎಕ್ಸ್‌ಪರ್ಟ್ ಆಗಿದ್ದಾರೆ. ಇವರ ಬಳಿ ಕುಟುಂಬ, ಸಂಸಾರ ತಾಪತ್ರಯ ಎಂದು ಒಮ್ಮೆ ಹೋದರೆ ಸಾಕು, ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಅಮಾಯಕ ಹೆಣ್ಮಕ್ಕಳನ್ನು ಬುಟ್ಟಿಗೆ ಹಾಕಿಕೊಂಡು ಮಜಾ ಉಡಾಯಿಸಿದ ಅದೆಷ್ಟೋ ಉದಾಹರಣೆ ಗಳಿವೆ.
ಜಿಲ್ಲೆಯಲ್ಲಿ ಕಾವಿ ತೊಟ್ಟವರ ಹಾವಳಿ ಹೆಚ್ಚುತ್ತಿರುವ ಹಾಗೆ ಶ್ವೇತವಸ್ತ್ರಧಾರಿಗಳ ಮತ್ತೊಂದು ರಗಳೆ ಆರಂಭವಾಗಿದೆ. ‘ಹರೇ ಹರೇ ಎಂದು ಕುಣಿಯುವ ಇವರ ಗುಂಪೇ ಬೇರೆ ಇದ್ದು, ಜನ ರನ್ನು ಬ್ರೈನ್‌ವಾಶ್ ಮಾಡುತ್ತಾ ತಮ್ಮ ಸಂಖ್ಯೆಯನ್ನು ಹೆಚ್ಚಿಸುತ್ತಿ ದ್ದಾರೆ. ಇವರು ಮನೆ-ಮನೆಗೆ ತೆರಳಿ ಸತ್ಸಂಗ, ಯೋಗ ಇತ್ಯಾದಿ ಕಾರ್ಯಕ್ರಮವೆಂದು ಹಣ ಮಾಡುವ ದಂಧೆಯಲ್ಲೂ ತೊಡಗಿ ಕೊಂಡಿದ್ದಾರೆ. ಇನ್ನು ಮೂಲ್ಕಿ ಮೂಲದ ಸ್ವಾಮಿಯೊಬ್ಬ ‘ಕೆಂಪು ದ್ವೀಪ’ದ ಕಾರಿನಲ್ಲಿ ಮಿನಿಸ್ಟರ್‌ಗಳಂತೆ ಓಡಾಟ ಮಾಡುತ್ತಿದ್ದರೂ ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಇಂಥವರು ಸಮಾಜದಲ್ಲಿ ‘ಪವರ್‌ಫುಲ್’ ಆಗಿರುವ ಕಾರಣ ಮುಖ್ಯಮಂತ್ರಿಯಿಂದ ಸಾಮಾನ್ಯ ಜನಪ್ರತಿನಿಧಿಯವರೆಗೆ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ.
ಇನ್ನು ಉಡುಪಿ ಜಿಲ್ಲೆಯಲ್ಲಿ ಕಪಟ ಸ್ವಾಮಿಗಳು ಬೇಕಾದಷ್ಟು ಸಂಖ್ಯೆಯಲ್ಲಿದ್ದಾರೆ. ಹಿರಿಯ ಮಠ-ಮಂದಿರಗಳ ಕಾವಿಧಾರಿಗ ಳಲ್ಲೂ ಕೆಲವರು ನಿತ್ಯಾನಂದನಂತೆ ನಿತ್ಯ ಹೆಣ್ಣಿನ ಸಂಗದಲ್ಲಿ ಕಾಲ ಕಳೆಯುವವರಿದ್ದಾರೆ. ಪಿಸ್ತೂಲ್ ತೋರಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ, ಮದುವೆಯಾಗಿ ಮಕ್ಕಳನ್ನು ಪಡೆದು ಮಠವನ್ನೇ ಮನೆ ಮಾಡಿಕೊಂಡಿರುವ ‘ರೌಡಿ ಸ್ವಾಮಿಗಳೂ ಇಲ್ಲಿದ್ದಾರೆ. ಇವರು ಗುಟ್ಟಾಗಿ ಸಂಸಾರ ಸಾಗಿಸುತ್ತಿದ್ದರೂ ಜನರು ಅವರನ್ನು ಅವರ ಪಾಡಿಗೆ ಬಿಟ್ಟು ತಮ್ಮಷ್ಟಕ್ಕೆ ತಾವಿದ್ದಾರೆ. ಇದರಿಂದ ಸ್ವಾಮಿಗಳ ನೀಚತನ ಬಯಲಾಗದೆ ಹಾಗೇ ಉಳಿದುಬಿಟ್ಟಿದೆ.
ಇವಿಷ್ಟು ಹಿಂದೂ ಧರ್ಮದ ಸ್ವಾಮಿಗಳ ರಸಿಕತನದ ಪುರಾಣ ವಾದರೆ ಇನ್ನು ಮುಸ್ಲಿಂ-ಕ್ರೈಸ್ತ ಧರ್ಮದ ಸ್ವಾಮಿಗಳ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಮುಸ್ಲಿಂ ಧರ್ಮಗುರುಗಳು, ಕ್ರೈಸ್ತ ಪಾದ್ರಿಗಳ ಕಾಮ ಲೋಕದ ಬಗ್ಗೆ ಈಗಾಗಲೇ ಅನೇಕ ಪತ್ರಿಕೆ, ಚಾನೆಲ್‌ಗಳಲ್ಲಿ ವರದಿ ಯಾಗಿವೆ. ಕೆಲವೊಂದು ಮದರಸಗಳಲ್ಲಿ ನಡೆಯುವ ಸಣ್ಣ ವಯಸ್ಸಿನ ಮಕ್ಕಳ ಜೊತೆಗಿನ ಸೆಕ್ಸ್, ಗಂಡು ಹುಡುಗರ ಜೊತೆಗಿನ ಅನೈಸರ್ಗಿಕ ಕಾಮಕೇಳಿ, ಕ್ರೈಸ್ತ ಪ್ರಾರ್ಥನಾಲಯಗಳಲ್ಲಿ ನನ್‌ಗಳ ಜೊತೆ ನಡೆ ಯುವ ನಡುರಾತ್ರಿಯ ಮುಕ್ತಕಾಮ. ಇವೆಲ್ಲ ವರದಿಯಾಗುವುದು ತೀರಾ ವಿರಳವೆನ್ನಬಹುದು. ಯಾಕೆಂದರೆ ಇಂಥ ದುರುಳರು ಧರ್ಮದ ಹೆಸರಿನಲ್ಲಿ ಜನರನ್ನು ಕೈವಶ ಮಾಡಿಕೊಳ್ಳುವಷ್ಟು ಶಕ್ತ ರಾಗಿರುವುದೇ ಇದಕ್ಕೆ ಕಾರಣವಾಗಿದೆ. ಇವರಿಗೆ ಕೆಲವೊಂದು ಮಾಧ್ಯಮಗಳು ಬೆಂಬಲವನ್ನೂ ನೀಡುತ್ತಾ ಬಂದಿವೆ.
ಹಾಗೆಂದು ಜಿಲ್ಲೆಯ ಬುದ್ಧಿವಂತ ಜನರು ಇವರೆಲ್ಲರನ್ನೂ ನೋಡಿಕೊಂಡು ಸುಮ್ಮನಿದ್ದಾರೆ ಎಂದೇನಲ್ಲ. ಎಲ್ಲೋ ಒಂದೆರಡು ಕಡೆ ಜನರು ಒಗ್ಗಟ್ಟಾಗಿ ಮಂತ್ರವಾದಿಗಳಿಗೆ ಹಿಡಿದ ‘ಭೂತ ಬಿಡಿ ಸಿದ ಘಟನೆಯೂ ನಡೆದಿದೆ.
ಆದರೆ ಬಹುತೇಕರು ಇವರನ್ನೇ ನಂಬಿರುವ ಕಾರಣ ಇಂದಿಗೂ ಇಂಥ ದೇವಮಾನವರು ಹೆಣ್ಮಕ್ಕಳನ್ನು ಬ್ಲಾಕ್‌ಮೇಲ್ ಮಾಡು ತ್ತಲೇ ಜೀವನ ಸಾಗಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೊಣಾಜೆ ಯಲ್ಲಿ ಮಂತ್ರವಾದಿಯೊಬ್ಬನಿಗೆ ಸ್ಥಳೀಯರೇ ಮಂಗಳಾರತಿ ಎತ್ತಿದ ಘಟನೆಯೂ ಜರುಗಿತ್ತು. ಮಂಗಳಾದೇವಿ ಬಳಿ ಕಚೇರಿ ಹೊಂದಿದ್ದ ‘ದೇವಮಾನವ’ ತನ್ನಲ್ಲಿಗೆ ಕಷ್ಟ ಹೇಳಿಕೊಂಡು ಬಂದ ಮಹಿಳೆ ಯನ್ನು ಬುಟ್ಟಿಗೆ ಹಾಕಿಕೊಂಡು ಆಕೆಯ ಗಂಡನೆದುರೇ ಸರಸ-ಸಲ್ಲಾಪ ನಡೆಸಿದ್ದೂ ಬಯಲಾಗಿತ್ತು. ಮಂಗಳೂರಿನ ಹೊರವ ಲಯದ ನೀರ್‌ಮಾರ್ಗ ಸಮೀಪ ಮನೆ-ಮನೆಗೆ ಪೋಸ್ಟ್ ಹಂಚುವ ಉದ್ದನೆಯ ಕೆಂಪು ನಾಮಧಾರಿ ಮಹಿಳೆ ಮನೆಯಲ್ಲೇ ವಾಮಾಚಾರ ಆರಂಭಿಸಿ ಮದ್ಯ ಬಿಡಿಸುತ್ತೇನೆ ಎಂದು ಜನರ ನೆಮ್ಮದಿ ಹಾಳು ಮಾಡಿದ ಘಟನೆಯೂ ನಡೆದಿತ್ತು. ತಲಪಾ ಡಿಯ ದೇವಿನಗರ ಎಂಬಲ್ಲಿಯೂ ಮಹಿಳೆಯೋರ್ವಳು ಕುತ್ತಿ ಗೆಗೆ ಲಿಂಬೆಹಣ್ಣಿನ ಮಾಲೆ ಹಾಕಿ ನಿತ್ಯ ಕುಣಿದಾಡುವುದೂ ನಡೆಯುತ್ತಿದೆ.
ವಾಸ್ತವವಾಗಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವೊಂದು (ಕು)ಖ್ಯಾತ ಮಠ-ಮಂದಿರಗಳಲ್ಲಿ ನಡೆಯುವ ಲೈಂಗಿಕ ಹಗರಣಕ್ಕೂ-ನಿತ್ಯಾನಂದನ ಧ್ಯಾನಪೀಠ ದಲ್ಲಿ ನಡೆದಿರುವುದಕ್ಕೂ ಏನೇನೂ ವ್ಯತ್ಯಾಸವಿಲ್ಲ. ಯಾಕೆಂದರೆ ದೈಹಿಕ ವಾಂಛೆ ಅನ್ನೋದೇ ಹಾಗೆ. ಅದು ಕಾವಿ ತೊಟ್ಟುಕೊಂಡ ತಕ್ಷಣ ಬೆನ್ನು ಬಿಡುವುದಿಲ್ಲ. ಸುಂದರಿ ಹೆಣ್ಣು ಬಿಳಿ ಬಟ್ಟೆ ತೊಟ್ಟು ಮಾತೆ ಎಂದುಕೊಂಡ ತಕ್ಷಣ ಆಕೆಯ ಕಾಮ ಜಾಗೃತ ಗೊಳ್ಳುವುದಿಲ್ಲವೆಂದೇನಲ್ಲ. ಆಕೆ ಅಸಾಮಾನ್ಯ ಸುಂದರಿಯಾ ಗಿದ್ದು, ಮೈಮೇಲೆ ಕಾವಿ ಇಲ್ಲವೇ ಬಿಳಿ ವಸ್ತ್ರ ತೊಟ್ಟ ತಕ್ಷಣ ಕಾಮುಕರ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಇಲ್ಲಿ ಕಾಮ ವನ್ನು ನಿಗ್ರಹಿಸುವ ಶಕ್ತಿಯ ಜೊತೆ ಮಾನಸಿಕ ಸಾಮರ್ಥ್ಯವೂ ಅಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ.
ಆದರೆ ನಮ್ಮಲ್ಲಿನ ಸ್ವಾಮಿಗಳು ಇಂದು ಮನೆ, ಮಠ, ಸಂಸಾರ, ಲೌಕಿಕ ಸುಖ ಇದಾವುದನ್ನೂ ತ್ಯಜಿಸದೆ ಹೆಸರಿಗೆ ಮಾತ್ರ ಸ್ವಾಮಿಗಳಾಗುತ್ತಿದ್ದಾರೆ. ಇವರಿಗೆ ಕಾಮನಿಗ್ರಹವೂ ಗೊತ್ತಿಲ್ಲ, ಗೊತ್ತಿದ್ದರೂ ಪಾಲಿಸದೆ ಹಾಗೇ ಇರುವ ಜಾಯಮಾ ನಕ್ಕೆ ಒಗ್ಗಿಕೊಂಡು ಆಶ್ರಮದ ತುಂಬಾ ಮಹಿಳಾ ಭಕ್ತೆಯರನ್ನು ಕೂಡಿಡುವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಇವರಿಂದ ಹಿಂದೂ ಧರ್ಮದ ಉದ್ಧಾರಕ್ಕಿಂತ ಅವಹೇಳನವೇ ಜಾಸ್ತಿಯಾ ಗುತ್ತಿದೆ. ನಿತ್ಯಾನಂದನ ವಿರುದ್ಧ ಕನ್ನಡಪರ ಸಂಘಟನೆಗಳು ಎಚ್ಚೆತ್ತು ಕೊಂಡಂತೆ ಜಿಲ್ಲೆಯ ಇಂಥ ಕಾಮಿಸ್ವಾಮಿಗಳ ವಿರುದ್ಧ ಹಿಂದೂ ಸಂಘಟನೆಗಳು, ಪ್ರಗತಿಪರ ಹೋರಾಟಗಾರರು ಧ್ವನಿ ಎತ್ತಬೇಕಿದೆ.
ಜನರ ಧ್ವನಿಯನ್ನು ಹತ್ತಿಕ್ಕುವ ಸಾಮರ್ಥ್ಯ ಹೊಂದಿರುವ ಇಂಥ ಸ್ವಾಮಿಗಳಿಗೆ ಕೆಲವು ಮಾಧ್ಯಮಗಳು ನಿರಂತರ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು. ಮುಂಜಾನೆ ಸುಪ್ರಭಾತದಂತೆ ಕೆಲವೊಂದು ಖಾಸಗಿ ಚಾನೆಲ್‌ಗಳು ಕಾವಿಯುಟ್ಟವರ ಭವಿಷ್ಯ ಕಾರ್ಯಕ್ರಮ ಪ್ರಸಾರ ಮಾಡುವ ಚಾಳಿಯನ್ನು ಬಿಡಬೇಕು. ಬಗೆಬಗೆಯ ಚಾನೆಲ್‌ಗಳಲ್ಲಿ ಮನ ಬಂದಂತೆ ಮಾತಾಡುವ ಇಂಥ ಸ್ವಾಮಿಗಳು ಹಿಂದೂ ಧರ್ಮದ ಕಳಂಕವೇ ಸರಿ. ಇಂಥ ವರನ್ನು ನಿಯಂತ್ರಿಸಿದಾಗ ಮಾತ್ರ ಧರ್ಮ ರಕ್ಷಣೆಯಾಗುತ್ತದೆ.

12-06-2012

Posted by JAYAKIRANA Kirana on | 0 comments | Leave a comment...

ಮಂಗಳೂರು: ಯುವಜನ ಸಮಿತಿ, ಕೆ.ಎಂ.ಎಸ್.ಎಸ್. ಸಂಘ(ರಿ) ಉರ್ವ ಇವರ ಸಹಯೋಗದಲ್ಲಿ ಉರ್ವಾ ರಾಧಾಕೃಷ್ಣ ಮಂದಿರದಲ್ಲಿ ಇತ್ತೀಚೆಗೆ ಲಯನ್ಸ್, ಲಯನೆಸ್, ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಇವರ ನೇತೃತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಮಧುಮೇಹ-ರಕ್ತದೊತ್ತಡ ಪರೀಕ್ಷೆಯು ನಡೆಯಿತು. ಚಿತ್ರದಲ್ಲಿ ಲಯನ್ ಎಂ.ಜೆ.ಎಫ್.ಪಿ. ಕಿಶೋರ್ ರಾವ್, ಅಧ್ಯಕ್ಷ ಗೋವರ್ಧನ್ ಶೆಟ್ಟಿ, ಲಯನೆಸ್ ಅಧ್ಯಕ್ಷೆ ಅಲಿಸ್ ಲೋಬೋ, ಕಾರ‍್ಯದರ್ಶಿ ವಿಜಯ ವಿಷ್ಣು ಮಯ್ಯ, ಸ್ಥಳೀಯ ಕಾರ್ಪೊರೇಟರ್ ಅಶ್ವಿನ್ ಕುಮಾರ್, ಎ.ಸಿ.ಸಿ.ಲಿಮಿಟೆಡ್‌ನ ಮಹಾಪ್ರಬಂದಕರಾದ ವಿ.ಪಿ.ಪಾಟೀಲ್, ಲಯನ್ ಡಾ.ಜಯರಾಂ ಶೆಟ್ಟಿ, ಸಂಘದ ಅಧ್ಯಕ್ಷ ಶಂಕರ್ ಬರ್ಕೆ, ಅರುಣ್ ಉರ್ವಾ, ಪ್ರವೀಣ್ ಉರ್ವಾ, ಹಾಗೂ ಆರ್.ಕೆ.ದೇವಾಡಿಗ ಭಾಗವಹಿಸಿದ್ದರು. ಜಿಲ್ಲಾ ಗವರ್ನರ್ ಪಿ.ಕಿಶೋರ್ ರಾವ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ರಿಕ್ಷಾ ಚಾಲಕರ ಮತ್ತು ಮಾಲಕರ ವತಿಯಿಂದ ಪುಸ್ತಕ ವಿತರಣೆ

Posted by JAYAKIRANA Kirana on | 0 comments | Leave a comment...

ಮುಲ್ಕಿ: ಕಾರ್ನಾಡು ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ವತಿಯಿಂದ ಸಂಘದ ಸದಸ್ಯರ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭವು ತಾ.೨೫-೦೫-೨೦೧೨ನೇ ಶುಕ್ರವಾರ ಕಾರ್ನಾಡು ಸಮುದಾಯ ಭವನದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುಲ್ಕಿ ನಗರ ಪಂಚಾಯತ್‌ನ ಅಧ್ಯಕ್ಷರಾದ ಶಶಿಕಾಂತ್ ಶೆಟ್ಟಿ, ಮುಲ್ಕಿ ನಗರ ಪಂಚಾಯತ್‌ನ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲ್ಯಾನ್, ಕಾರ್ನಾಡು ಯು.ಬಿ.ಎಂ.ಸಿ. ಶಾಲೆಯ ಮುಖ್ಯೋಪಾಧ್ಯಾಯರಾದ ರವಿರಾಜ ಶೆಟ್ಟಿ, ಮುಲ್ಕಿಯ ವಕೀಲ ಹಾಗೂ ನೋಟರಿ ಬಿಪಿನ್‌ಪ್ರಸಾದ್, ಮುಲ್ಕಿ ನಗರ ಪಂಚಾಯತ್‌ನ ಸದಸ್ಯ ಪುತ್ತುಬಾವ, ಸಂಘದ ಅಧ್ಯಕ್ಷರಾದ ಎಂ.ಎ. ರಹಿಮಾನ್ ಹಾಗೂ ಕಾರ್ಯದರ್ಶಿ ಗೋಪಾಲ್ ಶಿಮಂತೂರು, ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಬಡ ಹಾಗೂ ಅರ್ಹ ಕುಟುಂಬಕ್ಕೆ ಸೇರಿದ ೭೦ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.

ಕಲಾ ಸಾಹಿತ್ಯ ಸಂಭ್ರಮ ಸಮಾರಂಭ

Posted by JAYAKIRANA Kirana on | 0 comments | Leave a comment...

ಕೃಷ್ಣಾಪುರ: ಸಾಹಿತ್ಯ ಬದುಕನ್ನು ಪ್ರೀತಿಸಲು ಕಲಿಸುತ್ತದೆ, ನಾವು ಅದನ್ನು ಗೌರವಿಸಿ ಜೀವನದಲ್ಲಿ ಸಾಧಿಸುವತ್ತ ಅದ್ಯ ಗಮನ ಹರಿಸಬೇಕು ಎಂದು ಪತ್ರಕರ್ತ ಪರಮಾನಂದ ಸಾಲ್ಯಾನ್ ಸಸಿಹಿತ್ಲು ಹೇಳಿದರು. ಅವರು ಜೂ. ಎಂಟರಂದು ಕಾಟಿಪಳ್ಳ-ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ  ಗಣೇಶಪುರ ಯಕ್ಷಗಾನ ಕಲಾ ಮಂಡಳಿ ಹಾಗೂ ನಾಗರಿಕ ಸಮಿತಿಯ ಸಹಭಾಗಿತ್ವದಲ್ಲಿ ಅಯೋಜಿ ಸಿದ್ದ ಕಲಾ ಸಾಹಿತ್ಯ ಸಂಭ್ರಮ ಸಮಾರಂಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಪ್ರಮೀಳಾ ದೀಪಕ್‌ರವರ ಅಭಿನಂದನಾ ಸಮಾರಂಭದಲ್ಲಿ ಅಶಯ ಬಾಷಣ ಮಾಡಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಜಗನ್ನಾಥ್ ಶೆಟ್ಟಿ ಬಾಳ ಮಾತನಾಡಿ, ತುಳು ಸಾಹಿತ್ಯದಲ್ಲಿ ಇನ್ನಷ್ಟು ಉತ್ತಮ ಸಾಹಿತ್ಯಗಳು ಹೊರಬರಲಿ ಹಾಗೂ  ಯುವ ತುಳು ಸಾಹಿತಿಗಳ ಉತ್ತಮ ಸಾಹಿತ್ಯಕ್ಕೆ ಅಕಾಡೆಮಿಯು ಪೋತ್ಸಾಹಿ ಸುವ ಯೋಜನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದೆ. ಸಾಹಿತ್ಯ ಅಕಾಡೆಮಿಯು ಜೂ ೧೬ರಂದು ಆರು ಜನ ಸಾಹಿತಿಗಳಿಗೆ ೨೦೧೧ರ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ  ಪ್ರಧಾನ ಸಮಾರಂಭವು ನಡೆಯಲಿದೆ ಎಂದರು. ಸಮಾರಂಭದಲ್ಲಿ ಜಾನಕಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಧರ್ಮೇಂದ್ರ ಗಣೇಶ ಪುರ, ಸುರತ್ಕಲ್ ಬಂಟರ ಸಂಘದ ನಿರ್ದೇಶಕ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಪುಷ್ಪರಾಜ್ ಶೆಟ್ಟಿ ಮಧ್ಯ, ಪದ್ಮನಾಭ ಬಂಗೇರ, ಗಣೇಶಪುರ ಮಹಾಗಣಪತಿ ದೇವ ಸ್ಥಾನದ ಅಡಳಿತ ಸಮಿತಿಯ ಅಧ್ಯಕ್ಷ ಜ್ಯೋತಿಷಿ ರವಿಚಂದ್ರ ಪಂಡಿತ್  ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು  ಲಯನ್ಸ್ ಸಂಸ್ಥೆಯ  ಮಾಜಿ ಅಧ್ಯಕ್ಷ ಸಂಜೀವ ಶೆಟ್ಟಿ ವಹಿಸಿ ದ್ದರು. ಗಣೇಶಪುರ ಗಿರೀಶ್ ನಾವಡ ಸ್ವಾಗತಿಸಿ, ಚಂದ್ರಹಾಸ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

ದಕ್ಷಿಣ ವಲಯ ಜೆಪ್ಪು ಕಾಂಗ್ರೆಸ್ ಸಮಿತಿ ಸಭೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ದಕ್ಷಿಣ ವಲಯ ಕಾಂಗ್ರೆಸ್ ಸಮಿತಿ ಜೆಪ್ಪು ಮಂಗಳೂರು ಇದರ ಮಾಸಿಕ ಸಭೆಯು ಜೆಪ್ಪು ಕಚೇರಿಯಲ್ಲಿ ನಡೆಯಿತು. ಕಾರ್ಪೊರೇಟರ್ ಹಾಗೂ ಬ್ಲಾಕ್ ಅಧ್ಯಕ್ಷರಾದ ಜೆ.ನಾಗೇಂದ್ರ ಕುಮಾರ್‌ರವರು ಅಧ್ಯಕ್ಷತೆ ವಹಿಸಿದ್ದರು. ಪಿ.ವಿ.ಮೋಹನ್, ಜೀವನ್ ಡಿ.ಸೋಜ, ಜೆಸಿಂತಾ ಬೋರೋಮಿ ಯಾ, ಕು.ಅಪ್ಪಿಲತಾ ಟಿ.ಪ್ರವೀಣ್ ಚಂದ್ರ ಆಳ್ವ , ಸುರೇಶ್ ಶೆಟ್ಟಿ, ಟಿ.ಕೆ.ಸುಧೀರ್, ಉಮೇಶ್ ದೇವಾ ಡಿಗ, ಹರ್ಬರ್ಟ್ ಡಿಸೋಜಾ, ಜ್ಯೋತಿ ಅಶೋಕ್, ಮೇಝಿ ಡಿ ಸೋಜಾ ಭರತೇಶ್ ಅಮೀನ್ ಬಜಾಲ್, ಬೆನೆಟ್ ಡಿಮೆಲ್ಲೋ, ಮೋಹನ್ ದಾಸ್ ಕೊಟ್ಟಾರಿ, ಶಾಫಿ ಅಹಮ್ಮದ್ ಬೋಳಾರ, ದುರ್ಗಾ ಪ್ರಸಾದ ಬೋಳಾರ, ನಝೀರ್ ಬಜಾಲ್, ಅಶ್ರಫ್ ಬಜಾಲ್, ಸುಧೀರ್ ಕಡೆಕಾರ್ ಉಪಸ್ಥಿತರಿದ್ದರು.

ಫನ್‌ಸಿಟಿಯಲ್ಲಿ ಸೂಪರ್ ಸ್ಟ್ರೈಕ್ ಕೇಂದ್ರ ಆರಂಭ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿರುವ ‘ಫನ್ ಸಿಟಿ’ಯಲ್ಲಿ ಮನೋರಂಜನಾ ಕೇಂದ್ರ ‘ಬೌಲಿಂಗ್ ಸೂಪರ್ ಸ್ಟೈಕ್ ಸೆಂಟರ್ ಗುರುವಾರ ಪ್ರಾರಂಭಗೊಂಡಿದೆ. ದುಬೈ ಮೂಲದ ಬೃಹತ್ ರಿಟೇಲ್ ವಹಿವಾಟು ಸಂಸ್ಥೆ ಲ್ಯಾಂಡ್ ಮಾರ್ಕ್ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಸಿಟಿ ಮ್ಯಾಕ್ಸ್ ಹೋಟೆಲ್ ಸಮೂಹ ಈ ಸೂಪರ್ ಸ್ಟೈಕ್ ಕೇಂದ್ರವನ್ನು ಆರಂಭಿಸಿದ್ದು ಸಿಟಿ ಸೆಂಟರ್ ಮಾಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಂ.ಸವೂದ್ ಚಾಲನೆ ನೀಡಿದರು. ಫನ್‌ಸಿಟಿಯ ಮಹಾಪ್ರಬಂಧಕ ಪಂಕಜ್ ಭಟ್, ಸೂಪರ್ ಸ್ಟೈಕ್ ಕೇಂದ್ರದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು. ಸುಮಾರು ೭,೦೦೦ ಚ.ಅಡಿ ವಿಸ್ತೀರ್ಣದಲ್ಲಿ ಈ ಕೇಂದ್ರವಿದ್ದು ಕುಟುಂಬದ ಎಲ್ಲಾ ವಯೋಮಾನದವರೂ ಬೌಲಿಂಗ್ ಆಟದ ಖುಷಿ ಪಡುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳು, ಮಹಿಳೆಯರು, ಪುರುಷರು, ಹಿರಿಯರ ಸುರಕ್ಷತೆಯತ್ತಲೂ ಗಮನಹರಿಸ ಲಾಗಿದೆ ಎಂದು ಪಂಕಜ್ ಭಟ್ ತಿಳಿಸಿದರು.

ಫ್ರಾನ್ಸ್ ವಿರುದ್ಧ ಇಂಗ್ಲೆಂಡ್ ಡ್ರಾಗೆ ತೃಪ್ತಿ

Posted by JAYAKIRANA Kirana on | 0 comments | Leave a comment...

ಆಂಗ್ಲರಿಗೆ ನಿರಾಶೆ ತರಿಸಿದ ನಸ್ರಿಯ ಅತ್ಯುತ್ತಮ ಗೋಲ್
ಡೊನೆಟ್ಸ್ಕ್(ಉಕ್ರೇನ್): ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಇಂಗ್ಲೆಂಡ್ ಹಾಗೂ ಫ್ರಾನ್ಸ್ ನಡುವಿನ ಕದನವು ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಸಮೀರ್ ನಸ್ರಿ ಬಾರಿಸಿದ ಅತ್ಯಮೂಲ್ಯ ಗೋಲು ಫ್ರಾನ್ಸ್‌ಗೆ ಪ್ರಬಲ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಲು ನೆರವಾಯಿತು.
ಪಂದ್ಯದ ಪ್ರಥಮಾರ್ಧ ತೀವ್ರ ಹಣಾಹಣಿಗೆ ಸಾಕ್ಷಿಯಾಗಿತ್ತು. ಮೊದಲ ೩೦ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಜೂಲಿಯೊನ್ ಲೆಸ್ಕೊಟ್ ಬಾರಿಸಿದ ಗೋಲು ತಂಡಕ್ಕೆ ಮೊದಲ ಮುನ್ನಡೆಯನ್ನು ತಂದುಕೊಟ್ಟಿತು. ಆದರೆ ಪಟ್ಟುಬಿಡದ ಫ್ರಾನ್ಸ್ ಇನ್ನಷ್ಟು ತೀವ್ರ ಹೋರಾಟ ನೀಡಿತು. ೩೯ನೇ ನಿಮಿಷದಲ್ಲಿ  ಸಮೀರ್ ನಸ್ರಿ ಆಂಗ್ಲ ಡಿಫೆಂಡರ್‌ಗಳನ್ನು ಭೇದಿಗೆ ಗಳಿಸಿದ ಅತ್ಯದ್ಭುತ ಗೋಲು ಫ್ರಾನ್ಸ್‌ಗೆ ವರದಾನವಾಯಿತು. ಅತ್ತ ಆಂಗ್ಲರ ಮೊಗದಲ್ಲಿ ನಿರಾಶೆ ಮನೆಮಾಡಿತು. ನಂತರ ದ್ವಿತೀಯ ಅವಧಿಯನ್ನು ಸಂಪೂರ್ಣವಾಗಿ ಫ್ರಾನ್ಸ್ ಆಳಿತು ಎಂದು ಹೇಳಿದರೆ ತಪ್ಪಿಲ್ಲ. ಮುಖ್ಯವಾಗಿ ಫ್ರಾನ್ಸ್‌ನ ಪ್ರಮುಖ ಸ್ಟ್ರೈಕರ್ ಕರೆಮ್ ಬೆನ್ಝೆಮಾ, ನಸ್ರಿ ಪ್ರಬಲ ಹೊಡೆತಗಳು ಇಂಗ್ಲೆಂಡ್‌ಗೆ ಭಯ ಹುಟ್ಟಿಸಿದವು. ಈ ಅವಧಿಯಲ್ಲಿ ಫ್ರಾನ್ಸ್ ಹಲವಾರು ಗೋಲು ಅವಕಾಶಗಳನ್ನು ಕೈಚೆಲ್ಲಿತು. ಇಂಗ್ಲೆಂಡ್ ಕೂಡ ಇದೇ ರೀತಿ ಮಾಡಿತು. ಇಂಗ್ಲೆಂಡ್‌ನ ಪ್ರಮುಖ ಸ್ಟ್ರೈಕರ್ ವೇಯ್ನ್ ರೂನಿ ಎರಡು ಪಂದ್ಯದ ನಿಷೇಧದಿಂದಾಗಿ ಹೊರಗಿದ್ದಿದ್ದು, ತಂಡಕ್ಕೆ ದುಬಾರಿಯಾಯಿತು.

ಫ್ರೆಂಚ್ ಓಪನ್‌ನಲ್ಲಿ ನಡಾಲ್ ನೂತನ ಇತಿಹಾಸ

Posted by JAYAKIRANA Kirana on | 0 comments | Leave a comment...

ಪ್ಯಾರಿಸ್: ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ ಸ್ಪೇಯ್ನ್‌ನ ರಫೆಲ್ ನಡಾಲ್ ನೂತನ ಇತಿಹಾಸವೊಂದನ್ನು ಬರೆದಿದ್ದಾರೆ. ಇಲ್ಲಿ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಸರ್ಬಿಯಾದ ನೊವಾಕ್ ಜೊಕೊವಿಕ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ನಡಾಲ್ ಪ್ರತಿಷ್ಠಿತ ಟೂರ್ನಿಯನ್ನು ಏಳನೇ ಬಾರಿಗೆ ಕೈವಶ ಮಾಡಿಕೊಂಡ ದಾಖಲೆ ನಿರ್ಮಿಸಿದ್ದಾರೆ. ಆದಿತ್ಯವಾರ ನಡೆಯಬೇಕಿದ್ದ ಫೈನಲ್ ಮಳೆಯ ಕಾರಣ ನಿನ್ನೆ ನಡೆದಿತ್ತು. ಈ ವೇಳೆ ನಡಾಲ್ ೨-೧ ಅಂತರದಿಂದ ಮುನ್ನಡೆ ಗಳಿಸಿದ್ದರು. ನಿನ್ನೆ ಮುಂದುವರೆದ ಫೈನಲ್‌ನ ಅಂತ್ಯದಲ್ಲಿ ಜೊಕೊವಿಕ್ ವಿರುದ್ಧ ನಡಾಲ್ ೬-೪, ೬-೩, ೨-೬ ಹಾಗೂ ೭-೫ರ ಅಂತರದಲ್ಲಿ ಗೆದ್ದು ದಾಖಲೆ ನಿರ್ಮಿಸಿದರು. ಕಳೆದ ವರ್ಷ ಕೂಡ ರಫೆಲ್ ಟೂರ್ನಿ ಗೆದ್ದುಕೊಂಡಿದ್ದರು.    
ತನ್ನ ೧೬ನೇ ಗ್ರ್ಯಾಂಡ್‌ಸ್ಲಾಮ್ ಫೈನಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ನಡಾಲ್ ಫ್ರೆಂಚ್ ಓಪನ್‌ನಲ್ಲಿ ತನ್ನ ದಾಖಲೆಯನ್ನು ಇನ್ನಷ್ಟು ಉತ್ತಮ ಪಡಿಸಿಕೊಂಡರು. ಇಲ್ಲಿ ನಡೆದ ೫೨ ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಸೋಲುಂಡಿದ್ದು, ಇದು ನಡಾಲ್‌ರ ೧೧ನೇ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯಾಗಿದೆ. ಸ್ವಿಸ್‌ನ ರೋಜರ್ ಫೆಡರರ್ ಈಗಾಗಲೇ ೧೬ ಬಾರಿ ಟೂರ್ನಿ ಜಯಿಸಿದ ದಾಖಲೆ ಹೊಂದಿದ್ದಾರೆ. 
ಇಲ್ಲಿ ಜೊಕೊವಿಕ್ ಮತ್ತೊಂದು ಕನಸು ಭಗ್ನಗೊಂ ಡಿದೆ. ಈಗಾಗಲೇ ಋತುವಿನಲ್ಲಿ ವಿಂಬಲ್ಡನ್, ಯುಎಸ್ ಓಪನ್, ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಜೊಕೊವಿಕ್ ಒಂದು ವೇಳೆ ಫ್ರೆಂಚ್ ಓಪನ್ ಗೆದ್ದುಕೊಂಡಿದ್ದರೆ ಆಗ ಎಲ್ಲಾ ಟೂರ್ನಿಗಳನ್ನು ಒಂದೇ ಬಾರಿಗೆ ಗೆದ್ದ ಸಾಧನೆಯಾಗುತ್ತಿತ್ತು. ಈ ಅಪೂರ್ವ ಸಾಧನೆಯನ್ನು ಹಿಂದೆ ಡಾನ್ ಬಡ್ಜ್ (೧೯೩೮), ರೊಡ್ ಲೇವರ್ (೧೯೬೨, ೧೯೬೯) ಪ್ರದರ್ಶಿಸಿದ್ದರು. ಆದರೆ ಇದನ್ನು ಸಾಧಿಸಲು ಜೊಕೊವಿಕ್ ವಿಫಲರಾದರು.

ವಿಸ್ಡನ್ ಗೌರವಕ್ಕೆ ಪಾತ್ರರಾದ ಸಚಿನ್

Posted by JAYAKIRANA Kirana on | 0 comments | Leave a comment...

ದುಬೈ: ದಾಖಲೆ ನಿರ್ಮಿಸುವು ದಕ್ಕಾಗಿಯೇ ಕ್ರಿಕೆಟ್‌ಗೆ ಪ್ರವೇಶ ಪಡೆದಂ ತಿರುವ ವಿಶ್ವದ ದಿಗ್ಗಜ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಮುಡಿಗೆ ಮತ್ತೊಂದು ಮಹೊನ್ನತ ಪ್ರಶಸ್ತಿ ಸೇರಿಕೊಂಡಿದೆ. ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ತೋರಿರುವ ಸಚಿನ್ ನಿನ್ನೆ ವಿಸ್ಡನ್ ಇಂಡಿಯಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಳೆದ ಏಶ್ಯಾ ಕಪ್ ವೇಳೆ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸುವ ಮೂಲಕ ಕ್ರಿಕೆಟ್‌ನಲ್ಲಿ ತನ್ನ ೧೦೦ನೇ ಸೆಂಚುರಿ ಸಿಡಿಸಿದ್ದಕ್ಕಾಗಿ ಈ ಪ್ರಶಸ್ತಿ ಪಡೆದಿದ್ದಾರೆ. 
ಫಿಡೆಲಿಸ್‌ವಲ್ಡ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಚಿನ್‌ಗೆ ಹರಳುಗಳಿಂದ ಮಾಡಿದ ಟ್ರೋಫಿಯನ್ನು ಹಸ್ತಾಂತರಿಸಲಾಯಿತು. ಪ್ರಶಸ್ತಿಯ ಮೇಲ್ಬಾಗದಲ್ಲಿ ಕ್ರಿಕೆಟ್ ಚೆಂಡಿನ ನಿರ್ಮಾಣವಿದೆ. ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ೪೯ ಹಾಗೂ ಟೆಸ್ಟ್‌ನಲ್ಲಿ ೫೧ ಶತಕಗಳು ಸಚಿನ್ ಬ್ಯಾಟ್‌ನಿಂದ ಹರಿದು ಬಂದಿದೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಎರಡೂ ವಿಭಾಗದಲ್ಲೂ ಹತ್ತು ಸಾವಿರಕ್ಕೂ ಹೆಚ್ಚು ರನ್ ಬಾರಿಸಿರುವ ಸಚಿನ್ ಅರ್ಹವಾಗಿಯೇ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚಿಗಷ್ಟೇ ಸಚಿನ್ ರಾಜ್ಯಸಭಾ ಸದಸ್ಯಸತ್ವವನ್ನು ಪಡೆದುಕೊಂಡಿದ್ದರು. ಅಲ್ಲದೆ ಸಚಿನ್‌ಗೆ ‘ಭಾರತರತ್ನ ಪ್ರಶಸ್ತಿ ನೀಡಬೇಕೆಂಬ ಕೂಗು ಈಗ ಬಲವಾಗಿ ಕೇಳಿಕೊಳ್ಳುತ್ತಿದೆ.

ಲಂಡನ್ ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡ ಪ್ರಕಟ

Posted by JAYAKIRANA Kirana on | 0 comments | Leave a comment...

ಮುನ್ನಡೆಸಲಿರುವ ಛೇತ್ರಿ, ವಾಲ್ಮಿಕಿಗೆ ಖೊಕ್    
ದೆಹಲಿ: ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯಲಿರುವ ಒಲಿಂ ಪಿಕ್ಸ್ ಟೂರ್ನಿಗೆ ಭರತ್ ಛೇತ್ರಿ ನೇತೃತ್ವದ ೧೬ ಆಟಗಾರರ ಭಾರತದ ಹಾಕಿ ತಂಡವನ್ನು ನಿನ್ನೆ ಆಯ್ಕೆ ಗೊಳಿಸಲಾಗಿದೆ. ಆದರೆ ಪ್ರಮುಖ ಆಟಗಾರರಾಗಿದ್ದ ರೂಪಿಂದರ್‌ಪಾಲ್ ಸಿಂಗ್ ಹಾಗೂ ಗಾಯಕ್ಕೆ ತುತ್ತಾಗಿ ರುವ ಯುವರಾಜ್ ವಾಲ್ಮಿಕಿಗೆ ತಂಡ ದಿಂದ ಖೊಕ್ ನೀಡಲಾಗಿದೆ. ಟೂರ್ನಿ ಜುಲೈ ೨೭ರಿಂದ ಅಗಸ್ಟ್ ೧೨ರವರೆಗೆ ನಡೆಯಲಿದೆ. ಸರ್ವಾನ್ ಜಿತ್ ಸಿಂಗ್ ಹಾಗೂ ಕೊಥಲ್ಜಿತ್ ಸಿಂಗ್ ತಂಡದ ಸ್ಟಾಂಡ್‌ಬಾಯ್ ಗಳಾಗಿ ನೇಮಕ ಗೊಂಡಿದ್ದು, ಒಂದು ವೇಳೆ ಆಯ್ಕೆಯಾದ ೧೬ ಆಟಗಾರರ ಪೈಕಿ ಯಾರಾದರೂ ಗಾಯಕ್ಕೆ ಸಿಲುಕಿ ದರೆ ಇವರಿಬ್ಬರ ಸೇವೆ ಲಭಿಸಲಿದೆ. ಪುಣೆಯ ಬಾಲೆವಾಡಿ ಕಾಂಪ್ಲಾಕ್ಸ್‌ನಲ್ಲಿ ನಡೆದ ಎರಡು ದಿನಗಳ ಆಯ್ಕೆ ಪ್ರಕ್ರಿಯೆ ಯಲ್ಲಿ ತಂಡವನ್ನು ಅಂತಿಮಗೊಳಿಸ ಲಾಗಿದೆ.  
ತಂಡ: ಟಲಿಸ್‌ಮಾನಿಕ್ ಸರ್ದಾರ್, ಮನ್‌ಪ್ರೀತ್ ಸಿಂಗ್, ಬೇರೇಂದ್ರ ಲಾಕಾ, ಗುರ್ಬಜ್ ಸಿಂಗ್, ಗುರ್ವಿಂದರ್ ಸಿಂಗ್ ಚಾಂಡಿ, ಶಿವೇಂದ್ರ ಸಿಂಗ್, ಡ್ಯಾನಿಶ್ ಮಜ್ತಾಬಾ, ತುಷಾರ್ ಖಾಂಡೇಕರ್, ಎಸ್.ವಿ. ಸುನೀಲ್, ಧರಮ್‌ವೀರ್ ಸಿಂಗ್, ಎಸ್.ಕೆ. ಉತ್ತಪ್ಪ, ಟಿರ್ಕಿ, ಸಂದೀಪ್ ಸಿಂಗ್, ವಿ.ಆರ್. ರಘುನಾಥ್. ಭರತ್ ಛೇತ್ರಿ

ರಿಚರ್ಡ್ಸ್‌ಗೆ ಸೆಡ್ಡು ಹೊಡೆದ ರಾಮ್‌ದಿನ್‌ಗೆ ಪಶ್ಚಾತ್ತಾಪ

Posted by JAYAKIRANA Kirana on | 0 comments | Leave a comment...

ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಶತಕ ಸಿಡಿಸಿದ ನಂತರ ತಂಡದ ಮಾಜಿ ದಿಗ್ಗಜ ಆಟಗಾರ ವಿವಿಯನ್ ರಿಚರ್ಡ್ಸ್‌ಗೆ ಆಕ್ರೋಶಭರಿತ ಸಂದೇಶ ತೋರಿಸಿದ್ದ ವೆಸ್ಟ್ ಇಂಡೀಸ್‌ನ ಕೀಪರ್ ದಿನೇಶ್ ರಾಮ್‌ದೀನ್ ಈಗ ತನ್ನ ಈ ನಡೆಗೆ ಪಶ್ಚಾತಾಪ ಪಟ್ಟುಕೊಂಡಿದ್ದಾರೆ. 
ಪಂದ್ಯದಲ್ಲಿ ಶತಕ ಸಿಡಿಸಿದ ನಂತರ ರಾಮ್‌ದೀನ್ ನೇರವಾಗಿ ತನ್ನ ಜೇಬಿನಿಂದ ಸಂದೇಶ ಬರೆದ ಕಾರ್ಡ್ ಛಾಯಾಗ್ರಾಹಕರಿಗೆ ತೋರಿಸಿದ್ದರು. ಕಾರ್ಡ್‌ನಲ್ಲಿ ‘ಯಾ ವಿವ್ ಟಾಕ್ ನಾ (ಈಗ ಮಾತನಾಡಿ ವಿವ್) ಎಂದು ಬರೆದಿತ್ತು. ಯಾಕೆಂದರೆ ವಿವ್ ಈ ಹಿಂದೆ ರಾಮ್‌ದೀನ್‌ರ ಕಳಪೆ ಪ್ರದರ್ಶನದ ಬಗ್ಗೆ ಟೀಕಿಸಿದ್ದರು. ಈಗ ರಾಮ್‌ದೀನ್ ಈ ರೀತಿಯ ವರ್ತನೆ ತೋರಿಸಿದ್ಕಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. 
ವಿವಿಯನ್ ನನ್ನ ವಿರುದ್ಧ ತನ್ನ ಹಿಂದಿನ ಪತ್ರಿಕಾ ಹೇಳಿಕೆಯಲ್ಲಿ ಟೀಕೆ ಮಾಡಿದ್ದರು. ಇದು ನನಗೆ ಭಾವನಾತ್ಮಕವಾಗಿ ನೋವು ತಂದಿತ್ತು. ಆದರೆ ಈ ಬಗ್ಗೆ ನಾನು ಅವರಲ್ಲಿ ಕ್ಷಮೆ ಕೇಳಲು ಬಯಸುತ್ತೇನೆ. ಅವರು ನನ್ನನ್ನು ಟೀಕಿಸಿದಾಗ ನನಗೆ ಉತ್ತಮ ಪ್ರದರ್ಶನ ನೀಡುವ ಪ್ರಬಲ ಇಚ್ಛೆಯಾಯಿತು. ಹಾಗೆ ಪಂದ್ಯದಲ್ಲಿ ಶತಕ ಸಿಡಿಸಿದ ನಂತರ ಆ ರೀತಿ ನಡೆದುಕೊಂಡಿದ್ದೆ. ಇದಕ್ಕೆ ನಾನು ತುಂಬಾ ಖೇದ ವ್ಯಕ್ತಪಡಿಸುತ್ತೇನೆ. ನನಗೆ ಯಾರಿಗೂ ನೋವು ಮಾಡುವ ಉದ್ದೇಶವಿಲ್ಲ, ಭಾವನಾ ತ್ಮಕವಾಗಿ ಮಾತ್ರ ನಾನು ಈ ರೀತಿ ನಡೆದುಕೊಂಡಿದ್ದೆ. ವಿವಿಯನ್ ದೇಶ ಕಂಡ ಅತ್ಯದ್ಭುತ ಆಟಗಾರನಾಗಿದ್ದು, ಅವರನ್ನು ನಾನು ತುಂಬಾ ಗೌರವಿಸುತ್ತೇನೆ ಎಂದು ತಿಳಿಸಿರುವ ರಾಮ್‌ದೀನ್ ತಂಡಕ್ಕಾಗಿ ಇನ್ನೂ ಉತ್ತಮ ಪ್ರದರ್ಶನ ನೀಡಲು ಕಾತುರನಾಗಿದ್ದೇನೆ ಎಂದು ಹೇಳಿದರು.

ಟಿ.ಪಿ. ಚಂದ್ರಶೇಖರನ್ ಹತ್ಯೆ: ಎಡಕೈ ಅನೂಪ್ ಸೆರೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಕೇರಳದ ಆರ್. ಎಂ.ಪಿ ರಾಜ್ಯ ನಾಯಕ ಟಿ.ಪಿ. ಚಂದ್ರ ಶೇಖರನ್ ಬರ್ಬರ ಹತ್ಯೆ ಪ್ರಕರಣ ದಲ್ಲಿ ನೇರವಾಗಿ ಭಾಗಿಯಾದ ಮತ್ತೋರ್ವ ಆರೋಪಿಯನ್ನು ಬಂಧಿ ಸಲಾಗಿದೆ. ಕಲ್ಲಿಕೋಟೆ ಚೆಂಡೆ ಯಾಡ್‌ನ ಎಂ.ಸಿ.ಅನೂಪ್ ಯಾನೆ ಎಡಕೈ ಅನೂಪ್ ಎಂಬಾತ ಆರೋಪಿ ಯಾಗಿದ್ದು, ಈತನನ್ನು ಬೆಂಗಳೂರಿನಲ್ಲಿ ವಿಶೇಷ ತನಿಖಾ ಪಡೆ ಸೆರೆ ಹಿಡಿದಿದೆ.
 ನಿನ್ನೆ ಬೆಳಿಗ್ಗೆ ಕಲ್ಲಿಕೋಟೆಗೆ ತರಲಾದ ಆರೋಪಿಯನ್ನು ಸಂಜೆ ವರೆಗೆ ರಹಸ್ಯ ಕೇಂದ್ರದಲ್ಲಿ ವಿಚಾರಣೆ ಗೊಳಪಡಿಸಿ ಸಾಯಂಕಾಲ ಅಧಿಕೃತ ಬಂಧನ ದಾಖಲಿಸಲಾಯಿತು. ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸ ಲಾಗುವುದು. ಇದರೊಂದಿಗೆ ಚಂದ್ರ ಶೇಖರನ್ ಹತ್ಯೆಯಲ್ಲಿ ನೇರ ಶಾಮೀ ಲಾದ ಮೂವರು ಬಂಧನಕ್ಕೊಳಗಾ ದಂತಾಗಿದೆ. ಶಾಜಿತ್, ಟಿ.ಕೆ. ರಜೀಶ್ ಎಂಬವರು ಈ ಹಿಂದೆಯೇ ಸೆರೆ ಸಿಕ್ಕಿ ದ್ದರು.
ಏಳು ಮಂದಿ ಹಂತಕ ಪಡೆಯ ನಾಲ್ವರು ಇನ್ನಷ್ಟೇ ಸಿಗಬೇಕಾಗಿದೆ. ಆರೋಪಿಗಳೆಲ್ಲರೂ ಸಿ.ಪಿ.ಎಂ. ಪಕ್ಷದೊಂದಿಗೆ ಸಂಪರ್ಕವುಳ್ಳವರಾಗಿದ್ದಾರೆ ಎನ್ನಲಾಗಿದೆ. ಇದೀಗ ಬಂಧಿತನಾದ ಎಡಕೈ ಅನೂಪ್, ಚಂದ್ರಶೇಖರರ ಕೊಲೆಗೆ ತೆರಳುವಾಗ ಇನ್ನೋವಾ ಕಾರನ್ನು ಚಲಾಯಿಸಿದ್ದ ಎನ್ನಲಾಗಿದೆ. ೨೦೦೯ ರಲ್ಲಿ ಕುನ್ನೋತ್‌ನಲ್ಲಿ ಆರೆಸ್ಸೆಸ್ ಕಾರ್ಯಕರ್ತ ರಾಜೇಶ್‌ನನ್ನು ಕಡಿದು ಕೊಲೆಗೈದ ಪ್ರಕರಣದಲ್ಲೂ ಅನೂಪ್ ಆರೋಪಿಯಾಗಿದ್ದಾನೆ. ಸಿ.ಪಿ.ಎಂನ ಕಣ್ಣೂರಿನಲ್ಲಿರುವ ಪ್ರಮುಖ ರಾಜ್ಯ ನಾಯಕರ ಕೈವಾಡ ಶಂಕೆಯೂ ಉಂಟಾಗಿದೆ. ಪ್ರಸ್ತುತ ಹತ್ಯೆಯು ಸಿ.ಪಿ.ಎಂ ಪಕ್ಷದಲ್ಲಿ ಭಾರೀ ಆಂತರಿಕ ಕಲಹಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ವಿಭಿನ್ನ ಜೋಡಿ: ಬಿಸಿಯೇರಿದ ಸರ್ವಿಸ್ ನಿಲ್ದಾಣ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸರ್ವಿಸ್ ಬಸ್ ನಿಲ್ದಾಣದಲ್ಲಿ ವಿಭಿನ್ನ ಕೋಮಿನ ಜೋಡಿ ಪ್ರತ್ಯಕ್ಷಗೊಂಡಿದ್ದು, ಇದರಿಂದಾಗಿ ಪ್ರದೇಶದಲ್ಲಿ ಕೆಲಹೊತ್ತು ಆತಂಕಕಾರಿ ವಾತಾವರಣ ನಿರ್ಮಾಣಗೊಂಡ ಘಟನೆ ನಡೆದಿದೆ.
ನಿನ್ನೆ ಮಧ್ಯಾಹ್ನದ ವೇಳೆ ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ಶಿವ ಮೊಗ್ಗ ಮೂಲದ ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಜೊತೆ ಯಾಗಿ ಕಂಡು ಬಂದರು. ಯುವತಿ ಬಸ್‌ತಂಗುದಾಣಕ್ಕೆ ಬಂದವಳೇ ಬುರ್ಖಾವನ್ನು ಕಳಚಿ ಬಿಟ್ಟಳು. ಇದನ್ನು ಹತ್ತಿರದಿಂದಲೇ ಗಮನಿಸು ತ್ತಿದ್ದ ಮುಸ್ಲಿಂ ಸಂಘಟನೆಗೆ ಸೇರಿದ್ದ ಯುವಕನೋರ್ವ ಇತರರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ.
ಈ ಸಂದರ್ಭ ತಂಗುದಾಣದಲ್ಲಿ ಸಂಘಟನೆಗೆ ಸೇರಿದವರೆನ್ನಲಾದ ೫೦ರಷ್ಟು ಕಾರ್ಯಕರ್ತರು ಜಮಾ ಯಿಸಿದರು. ಈ ಸಂದರ್ಭ ಜೋಡಿ ಸೇರಿದವರ ವಿರುದ್ಧವೇ ಹರಿಹಾಯ ತೊಡಗಿತು. ಇದರಿಂದ ಆಕ್ರೋಶ ಗೊಂಡ ಸಂಘಟನೆಯ ಕಾರ್ಯ ಕರ್ತರು ಜೋಡಿ ಮೇಲೆ ಮುಗಿ ಬೀಳಲು ಮುಂದಾದರು. ಆದರೆ ತಂಗುದಾಣದಲ್ಲಿದ್ದ ಬಸ್ ಏಜೆಂಟರು ಹಾಗೂ ಇತರರು ತಡೆದು ಪಾಂಡೇಶ್ವರ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದರು.
ಸಂಘಟನೆಯ ಕಾರ್ಯಕರ್ತರು ಅಲ್ಲಿಗೂ ದೌಡಾಯಿಸಿದಾಗ ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯತೊಡಗಿತು. ಆ ವೇಳೆ ಪೊಲೀಸರು ಲಘು ಪ್ರಮಾಣದ ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸುವಲ್ಲಿ ಯಶಸ್ವಿಯಾದರು. ಬಳಿಕ ಜೋಡಿಯನ್ನು ವಿಚಾರಿಸಿದಾಗ ತಾವು ಪರಿಚಯಸ್ಥರಾಗಿದ್ದು ಬಿಡಿಎಸ್ ವಿಭಾಗದ ವಿದ್ಯಾರ್ಥಿಗಳೆಂದು ತಿಳಿಸಿದ್ದರಿಂದ ಎಚ್ಚರಿಕೆ ನೀಡಿ ಬಿಡಲಾಗಿದೆ. ಜೋಡಿಯ ಮನೆಯವರನ್ನು ಕರೆಸಿ ಅವರ ಜೊತೆ ಕಳುಹಿಸಿಕೊಡಲಾಗಿದೆ ಎಂದು ಇನ್ಸ್‌ಪೆಕ್ಟರ್ ತಿಲಕ್‌ಚಂದ್ರ ಅವರು ಪತ್ರಿಕೆಗೆ ತಿಳಿಸಿದ್ದಾರೆ. ಆದರೆ ಶಿವಮೊಗ್ಗದಲ್ಲಿರುವ ಮನೆಯವರು ಅಷ್ಟು ಬೇಗ ಬಂದದ್ದಾದರೂ ಹೇಗೆಂದು ಕೇಳಿದರೆ ಅಸಮಾಧಾನಗೊಂಡ ತಿಲಕ್‌ಚಂದ್ರ ಅವರು ಮನೆಯವರೇ ಬರಬೇಕಿಂದಿಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜೋಡಿಯನ್ನು ಯಾರ ಜೊತೆ ಕಳುಹಿಸಿಕೊಡಲಾಗಿದೆ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.

ಉಪ್ಪಿನಂಗಡಿ: ಬಾಲಕಿಯ ಅತ್ಯಾಚಾರ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ ಕುಂತೂರು ಎಂಬಲ್ಲಿ ಆರು ವರ್ಷದ ಬಾಲಕಿಯೊಬ್ಬಳ ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಕುಂತೂರು ಗ್ರಾಮದ ಅಲಂಗಪೆ ನಿವಾಸಿ ಸನಿಲ್ ಎಂಬವರ ಪುತ್ರಿ ಕುಂತೂರಿನ ಎಲ್.ಕೆ.ಜಿ ವಿದ್ಯಾರ್ಥಿನಿ ಸಂಜನಾ(೬) ಎಂಬ ಬಾಲಕಿಯನ್ನು ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಳಿಯ ನಿವಾಸಿ ಟ್ಯಾಂಕರ್ ಅಬ್ದುಲ್ಲ ಎಂಬವರ ಪುತ್ರ ಸಾದಿಕ್ ಎಂಬಾತ ಅತ್ಯಾಚಾರವೆಸಗಿ ದ್ದಾನೆ. ಈತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸು ತ್ತಿದ್ದಾರೆ.
ಸನಿಲ್‌ರವರ ಬಳಿ ಕೆಲಸ ಮಾಡುತ್ತಿರುವ ಸಾದಿಕ್ ಈ ಕುಕೃತ್ಯ ವೆಸಗಿದ್ದಾನೆ. ಭಾನುವಾರ ಸಂಜನಾ ಳನ್ನು ಕುಂತೂರಿನ ಚರ್ಚ್‌ಗೆ ಪ್ರಾರ್ಥ ನೆಗೆಂದು ತಂದೆ ಕರೆದುಕೊಂಡು ಹೋಗಿದ್ದರು. ಬಾಲಕಿಯ ತಾಯಿ ಹಾಗೂ ಸಣ್ಣ ಮಗು ಮನೆಯಲ್ಲೇ ಇದ್ದುದರಿಂದ ಬಾಲಕಿಯನ್ನು ಮನೆಗೆ ಬೇಗ ತಲುಪಿಸಬೇಕು ಎನ್ನುವ ಉದ್ದೇಶದಿಂದ ಬಾಲಕಿಯನ್ನು ಸಾದಿಕ್‌ನೊಂದಿಗೆ ಬೈಕ್‌ನಲ್ಲಿ ಕಳುಹಿಸಿ ಕೊಟ್ಟಿದ್ದರು. ಇದನ್ನೇ ದುರುಪಯೋಗ ಪಡಿಸಿಕೊಂಡ ಸಾದಿಕ್ ದಾರಿ ಮಧ್ಯೆ ಪೊದೆಯೊಂದರ ಬಳಿ ಬಾಲಕಿಯನ್ನು ಉಪಾಯದಿಂದ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಬಳಿಕ ಮನೆಗೆ ಬಿಟ್ಟು ಹೋಗಿದ್ದ. ಮನೆಯಲ್ಲಿ ಬಾಲಕಿ ಯಾರಲ್ಲಿಯೂ ಮಾತನಾಡದೆ ಇದ್ದಾಗ ಮನೆಯವರಿಗೆ ಏನೋ ಸಂಶಯ ಬಂದಿತ್ತು. ರಾತ್ರಿ ವೇಳೆ ಬಾಲಕಿಯನ್ನು ಸ್ನಾನ ಮಾಡಿಸುವಾಗ ಗುಪ್ತಾಂಗ ಗಾಯವಾಗಿರುವುದು ಕಂಡು ಬಂತು. ಇದರಿಂದ ವಿಷಯ ಬಹಿರಂಗಗೊಂಡಿದೆ. ವಿಶೇಷವೆಂದರೆ ಕಳೆದ ವರ್ಷ ಸಾದಿಕ್ ಅಣ್ಣ ಕೂಡಾ ಬಾಲಕಿಯೊಬ್ಬಳಿಗೆ ಅತ್ಯಾಚಾರವೆಸಗಿ ಪೊಲೀಸರ ವಶವಾಗಿದ್ದ. ಇದೀಗ ಅಣ್ಣನ ಹಾದಿಯಲ್ಲಿ ತಮ್ಮನೂ ಸಾಗಿದ್ದಾನೆ.

ಮುಸ್ಲಿಂ ವಿವಾಹಿತೆಯನ್ನು ಕರೆದೊಯ್ಯುತ್ತಿದ್ದ ಯುವಕನನ್ನು ಅಡ್ಡಹಾಕಿದ ನೈತಿಕ ಪೊಲೀಸರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೈಕ್‌ನಲ್ಲಿ ವಿವಾಹಿ ತಳನ್ನು ಕರೆದೊಯ್ಯುತ್ತಿದ್ದ ಯುವಕನನ್ನು ಅಡ್ಡಹಾಕಿದ ತಂಡ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕುತ್ತಾರು ಬಳಿ ನಿನ್ನೆ ಸಂಜೆ ನಡೆದಿದೆ.
ಮುಸ್ಲಿಂ ಸಮುದಾಯಕ್ಕೆ ಸೇರಿದ ಕೆ.ಸಿರೋಡು ಮೂಲದ ೪೫ ವರ್ಷ ಪ್ರಾಯದ ವಿವಾಹಿತ ಮಹಿಳೆಯನ್ನು ಆಕೆ ಮನೆ ಸಮೀಪದ ಹಿಂದು ಯುವಕ ನೋರ್ವ ಬೈಕಿನಲ್ಲಿ ಕರೆದೊಯ್ಯು ತ್ತಿದ್ದ. ಇದನ್ನು ಕಂಡು ಸ್ಥಳೀಯರು ರಿಕ್ಷಾದಲ್ಲಿ ಬೆನ್ನಟ್ಟಿದ್ದು, ಕುತ್ತಾರು ಸಮೀಪ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಜನ ಜಮಾಯಿಸ ತೊಡಗಿದರು. ಅಷ್ಟರಲ್ಲಿ ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಯುವಕ ತನಗೆ ತೊಕ್ಕೊಟ್ಟು ಕಡೆಗೆ ಬರಲು ಇದ್ದುದರಿಂದ ಮನೆ ಸಮೀ ಪದವರೇ ಆಗಿದ್ದುದರಿಂದ ಪರಿಚಯದ ಮೇರೆಗೆ ಮಹಿಳೆಯನ್ನು ಕುಳ್ಳಿರಿಸಿ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ. ಉಳ್ಳಾಲ ಪೊಲೀಸರು ಇಬ್ಬರನ್ನು ಕರೆದೊಯ್ದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಇತ್ತೀಚೆಗೆ ಸೋಮೇಶ್ವರ ಸಮುದ್ರ ತೀರದಲ್ಲಿ ಸ್ನೇಹಿತರ ಜತೆ ಆಡುತ್ತಿದ್ದ ಪ್ರೇಮಿಗಳಿಬ್ಬರ ಪೈಕಿ ಯುವಕನಿಗೆ ತಂಡವೊಂದು ಗಂಭೀರವಾಗಿ ಹಲ್ಲೆ ನಡೆಸಿತ್ತು. ತಾನು ಮುಸ್ಲಿಂ ಎಂದು ಹೇಳಿದ್ದರೂ ತಂಡ ಹಲ್ಲೆ ಮುಂದುವರಿಸಿ ತ್ತೆನ್ನಲಾಗಿದೆ. ಬಳಿಕ ಅದು ಹೇಗೋ ಗೊತ್ತಾಗಿ ಇಬ್ಬರನ್ನೂ ಬಿಟ್ಟುಬಿಟ್ಟಿದ್ದಾರೆ ನ್ನಲಾಗಿದೆ. ಆದರೆ ಹಲ್ಲೆಗೊಳಗಾದ ಯುವಕ ಮಾತ್ರ ಪೆಟ್ಟು ತಿಂದು ಠಾಣೆಯ ಮುಖವೂ ನೋಡದೆ ವಾಪಸ್ಸು ತೆರಳಿದ್ದಾನೆ. ಇದರಿಂದಾಗಿ ನೈತಿಕ ಪೊಲೀಸ್ ಗಿರಿ ನಡೆಸುತ್ತಿರುವ ಬಜರಂಗದಳದಂತೆ ಇಲ್ಲಿಯೂ ತಂಡವೊಂದು ನೈತಿಕ ಪೊಲೀಸ್‌ಗಿರಿಗೆ ಇಳಿದಿರುವುದರಲ್ಲಿ ಸಂಶಯವಿಲ್ಲ.

ಮುಸ್ಲಿಂ ವಿವಾಹಿತೆಯನ್ನು ಕರೆದೊಯ್ಯುತ್ತಿದ್ದ ಯುವಕನನ್ನು ಅಡ್ಡಹಾಕಿದ ನೈತಿಕ ಪೊಲೀಸರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೈಕ್‌ನಲ್ಲಿ ವಿವಾಹಿ ತಳನ್ನು ಕರೆದೊಯ್ಯುತ್ತಿದ್ದ ಯುವಕನನ್ನು ಅಡ್ಡಹಾಕಿದ ತಂಡ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕುತ್ತಾರು ಬಳಿ ನಿನ್ನೆ ಸಂಜೆ ನಡೆದಿದೆ.
ಮುಸ್ಲಿಂ ಸಮುದಾಯಕ್ಕೆ ಸೇರಿದ ಕೆ.ಸಿರೋಡು ಮೂಲದ ೪೫ ವರ್ಷ ಪ್ರಾಯದ ವಿವಾಹಿತ ಮಹಿಳೆಯನ್ನು ಆಕೆ ಮನೆ ಸಮೀಪದ ಹಿಂದು ಯುವಕ ನೋರ್ವ ಬೈಕಿನಲ್ಲಿ ಕರೆದೊಯ್ಯು ತ್ತಿದ್ದ. ಇದನ್ನು ಕಂಡು ಸ್ಥಳೀಯರು ರಿಕ್ಷಾದಲ್ಲಿ ಬೆನ್ನಟ್ಟಿದ್ದು, ಕುತ್ತಾರು ಸಮೀಪ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಜನ ಜಮಾಯಿಸ ತೊಡಗಿದರು. ಅಷ್ಟರಲ್ಲಿ ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಯುವಕ ತನಗೆ ತೊಕ್ಕೊಟ್ಟು ಕಡೆಗೆ ಬರಲು ಇದ್ದುದರಿಂದ ಮನೆ ಸಮೀ ಪದವರೇ ಆಗಿದ್ದುದರಿಂದ ಪರಿಚಯದ ಮೇರೆಗೆ ಮಹಿಳೆಯನ್ನು ಕುಳ್ಳಿರಿಸಿ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ. ಉಳ್ಳಾಲ ಪೊಲೀಸರು ಇಬ್ಬರನ್ನು ಕರೆದೊಯ್ದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಇತ್ತೀಚೆಗೆ ಸೋಮೇಶ್ವರ ಸಮುದ್ರ ತೀರದಲ್ಲಿ ಸ್ನೇಹಿತರ ಜತೆ ಆಡುತ್ತಿದ್ದ ಪ್ರೇಮಿಗಳಿಬ್ಬರ ಪೈಕಿ ಯುವಕನಿಗೆ ತಂಡವೊಂದು ಗಂಭೀರವಾಗಿ ಹಲ್ಲೆ ನಡೆಸಿತ್ತು. ತಾನು ಮುಸ್ಲಿಂ ಎಂದು ಹೇಳಿದ್ದರೂ ತಂಡ ಹಲ್ಲೆ ಮುಂದುವರಿಸಿ ತ್ತೆನ್ನಲಾಗಿದೆ. ಬಳಿಕ ಅದು ಹೇಗೋ ಗೊತ್ತಾಗಿ ಇಬ್ಬರನ್ನೂ ಬಿಟ್ಟುಬಿಟ್ಟಿದ್ದಾರೆ ನ್ನಲಾಗಿದೆ. ಆದರೆ ಹಲ್ಲೆಗೊಳಗಾದ ಯುವಕ ಮಾತ್ರ ಪೆಟ್ಟು ತಿಂದು ಠಾಣೆಯ ಮುಖವೂ ನೋಡದೆ ವಾಪಸ್ಸು ತೆರಳಿದ್ದಾನೆ. ಇದರಿಂದಾಗಿ ನೈತಿಕ ಪೊಲೀಸ್ ಗಿರಿ ನಡೆಸುತ್ತಿರುವ ಬಜರಂಗದಳದಂತೆ ಇಲ್ಲಿಯೂ ತಂಡವೊಂದು ನೈತಿಕ ಪೊಲೀಸ್‌ಗಿರಿಗೆ ಇಳಿದಿರುವುದರಲ್ಲಿ ಸಂಶಯವಿಲ್ಲ.

ಕಂಠಪೂರ್ತಿ ಕುಡಿದು ಮಹಡಿಯಿಂದ ಬಿದ್ದ!

Posted by JAYAKIRANA Kirana on | 0 comments | Leave a comment...


ಮಂಗಳೂರು: ಕಂಠಪೂರ್ತಿ ಕುಡಿದ ಯುವಕನೋರ್ವ ಬಾರ್‌ನ ಮಹಡಿ ಮೇಲೇರಿ ನಿಲ್ಲಲು ಬ್ಯಾಲೆನ್ಸ್ ಸಿಗದೆ ಕೊನೆಗೆ ಕಿಟಕಿ ಮೂಲಕ ತಗಡಿನ ಮೇಲೆ ಬಿದ್ದ ಘಟನೆಯೊಂದು ನಿನ್ನೆ ನಗರದಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ ಬಿಜೈ ಕಾಪಿಕಾಡ್ ರಸ್ತೆಯಲ್ಲಿರುವ ಬಾರಿಗೆ ಹೋದ ಯುವಕ ಅಲ್ಲಿ ಕಂಠಪೂರ್ತಿ ಕುಡಿದಿ ದ್ದಾನೆ. ಬಾರ್‌ನಿಂದ ತೂರಾಡುತ್ತಾ ಹೊರಗೆ ಬಂದು ನೇರವಾಗಿ ಮಹಡಿ ಮೇಲೆ ಹತ್ತಿದ್ದಾನೆ. ಅಲ್ಲಿ ತೂರಾಡಿ ತೂರಾಡಿ ಬ್ಯಾಲೆನ್ಸ್ ಸಿಗದೆ ಕಿಟಕಿ ಯಿಂದ ಬಾರ್ ಎದುರು ಕಟ್ಟಲಾಗಿದ್ದ ತಗಡಿನ ಚಪ್ಪರದ ಮೇಲೆ ಬಿದ್ದು ಕಾಲಿಗೆ ಗಾಯಗೊಂಡು ಒದ್ದಾಡತೊಡಗಿದ್ದಾನೆ.
ಆತನ ಅವತಾರವನ್ನು ಕಂಡ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಆತನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾ ಗಿದ್ದಾರೆ. ಆತನನ್ನು ವಿಚಾರಿಸಿದಾಗ ತನ್ನ ಹೆಸರು ಪ್ರವೀಣ್ ಎಂದೂ ಆಕಾಶ ಭವನ ನಿವಾಸಿ ಎನ್ನುವ ಮಾಹಿತಿ ನೀಡಿದ್ದಾನೆ.

ಕಾಪು ಅಪಘಾತ: ಕಾರು ಚಾಲಕ ಕಾರಣ?

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಕಳೆದ ಜೂನ್ ೭ರಂದು ರಾಷ್ಟ್ರೀಯ ಹೆದ್ದಾರಿ ೬೬ರ ಕಾಪು ಬಳಿ ಸಂಭವಿಸಿದ ಪೈಪು ಹೇರಿಕೊಂಡಿದ್ದ ಟ್ರಕ್‌ನ್ನು ಬೆಂಬತ್ತಿ ಬಂದ ಕಾರೊಂದು ಕಾರಣವೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಪೂನಾದಿಂದ ಎಂಆರ್‌ಪಿಎಲ್‌ಗೆ ಪೈಪು ಹೇರಿಕೊಂಡು ಬರುತ್ತಿದ್ದ ಟ್ರಕ್‌ಟ್ರೈಲರ್‌ನ ಚಾಲಕ ಹಠಾತ್ತಾಗಿ ಬ್ರೇಕ್ ಹಾಕಿದ್ದರಿಂದಾಗಿ ಟ್ರೈಲರ್‌ನಲ್ಲಿದ್ದ ಪೈಪುಗಳ ಲೋಡು ಟ್ರಕ್‌ನ ಕ್ಯಾಬಿನ್ ತೂರಿ ಮುಂಬದಿಯಿಂದ ಹೊರಬಿದ್ದ ಪರಿಣಾಮವಾಗಿ ಕ್ಲೀನರ್ ಮಹಾ ರಾಷ್ಟ್ರದ ರಾಹುಲ್ ಎಂಬಾತ ಸ್ಥಳದಲ್ಲೇ ಮೃತಪಟ್ಟರೆ, ಆತನ ಅಣ್ಣ ಸಂತೋಷ್ ಸಾವಿನಿಂದ ಪಾರಾಗಿದ್ದ.
ಇದೀಗ ತಿಳಿದು ಬಂದಂತೆ ಅಪ ಘಾತಕ್ಕೀಡಾದ ಟ್ರಕ್ ಮತ್ತು ಇನ್ನೆರಡು ಟ್ರಕ್‌ಗಳು ಹೆದ್ದಾರಿಯಲ್ಲಿ ಒಂದರ ಹಿಂದೆ ಮತ್ತೊಂದು ಸಾಗಿ ಬರುತ್ತಿದ್ದು ಇವುಗಳ ಹಿಂದೆ ಕಾರೊಂದು ಬರುತ್ತಿತ್ತೆನ್ನಲಾಗಿದೆ.
ಕಾರು ಅದೆಷ್ಟೋ ಪ್ರಯತ್ನಪಟ್ಟರೂ ಟ್ರಕ್‌ಗಳನ್ನು ಓವರ್‌ಟೇಕ್ ಮಾಡಲು ಅವಕಾಶ ಸಿಕ್ಕಿಲ್ಲವೆನ್ನಲಾಗಿದ್ದು, ಇದರಿಂದ ಸಹನೆ ಕಳೆದುಕೊಂಡ ಕಾರು ಚಾಲಕ ಕಾಪುವಿನಿಂದ ಅನತಿ ಹಿಂದೆ ಟ್ರಕ್‌ಗಳನ್ನು ಓವರ್‌ಟೇಕ್ ಮಾಡಿ ಮುಂಬದಿಯ ಟ್ರಕ್ಕಿಗೆ ಕಾರನ್ನು ಒಂದೇ ಸಮನೆ ಅಡ್ಡ ಇರಿಸಿ ದಬಾಯಿಸಲು ಮುಂದಾದನೆನ್ನಲಾಗಿದೆ.
ಟ್ರಕ್ ಚಾಲಕ ಅನಿರೀಕ್ಷಿತವಾಗಿ ಬ್ರೇಕ್ ಹಾಕಿದಾಗ ಹಿಂಬದಿಯಿಲ್ಲಿದ್ದ ಪೈಪುಲೋಡು ಚದುರಿ ಕ್ಯಾಬಿನ್‌ನೊಳಗೆ ತೂರಿಬಂದು ಅಪಘಾತ ಸಂಭವಿಸಿತ್ತು. ಕ್ಷಣಾರ್ಧದಲ್ಲಿ ಘಟನೆ ನಡೆದಿದ್ದು ಕಾರು ಚಾಲಕ ತಕ್ಷಣವೇ ತನ್ನ ಕಾರಿನೊಂದಿಗೆ ಮಂಗಳೂರು ಕಡೆ ಪರಾರಿಯಾದ ನೆಂದು ಘಟನೆಯನ್ನು ಕಂಡವರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ವಿದ್ಯುತ್ ಪರಿವರ್ತಕ ಕಳವು ಜಾಲ ಶಂಕೆ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಮೆಸ್ಕಾಂಗೆ ಸೇರಿದ ವಿದ್ಯುತ್ ಪರಿವರ್ತಕಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ಜಾಲವೊಂದು ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಇಬ್ಬರು ಮೆಸ್ಕಾಂ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯೂ ವ್ಯಕ್ತವಾಗಿದೆ. ಕಳವು ಜಾಲವನ್ನು ಪತ್ತೆ ಹಚ್ಚಿರುವ ವಿದ್ಯುತ್ ಗುತ್ತಿಗೆದಾರ ಸಂಘದ ಪದಾಧಿಕಾರಿಗಳು ಮೆಸ್ಕಾಂ ಜಾಗೃತ ದಳಕ್ಕೆ ದೂರು ನೀಡಿದ್ದಾರೆ. ವಿದ್ಯುತ್ ಪರಿವರ್ತಕಗಳ ಅಕ್ರಮ ಸಾಗಾಟದ ಕುರಿತು ಬಿ.ಸಿ.ರೋಡಿನ ಕಾರ್ತಿಕ್ ಇಂಜಿನಿಯರಿಂಗ್ ಮಾಲಕ ಲಕ್ಷ್ಮೀ ನಾರಾಯಣ ಮೆಸ್ಕಾಂ ಉಪ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್‌ಗೆ ಲಿಖಿತ ದೂರು ನೀಡಿದ್ದಾರೆ.
 ಜೂನ್ ೧೦ ಸರ್ಕಾರಿ ರಜಾ ದಿನದಂದು ಮಧ್ಯಾಹ್ನ ೧.೨೦ರ ಸುಮಾರಿಗೆ ಮಹೇಂದ್ರ ಪಿಕ್‌ಅಪ್‌ವೊಂದರಲ್ಲಿ ೧೦೦ ಕೆ.ವಿ.ಎ. ಸಾಮರ್ಥ್ಯದ ಮೋರ್ಡನ್ ಪರಿವರ್ತಕವನ್ನು ಬಿ.ಸಿ.ರೋಡಿನ ಮೆಸ್ಕಾಂ ಉಪವಿಭಾಗದ ಆವರಣಕ್ಕೆ ತರುವುದನ್ನು ಗಮನಿಸಿದ ಲಕ್ಷ್ಮೀ ನಾರಾಯಣ ಆಕ್ಷೇಪಿ ಸಿದ್ದು, ಸ್ಥಳದಿಂದಲೇ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ್ದರು.
ಇದನ್ನು ಗಮನಿಸಿದ ಚಾಲಕರು ತಮ್ಮ ಪಿಕ್‌ಅಪ್ ವಾಹನದೊಂದಿಗೆ ಕಚೇರಿ ಆವರಣದಿಂದ ಪರಾರಿಯಾಗಿದ್ದರು.
 ಘಟನೆಗೆ ಸಂಬಂಧಿಸಿ ನಿನ್ನೆ ಬಂಟ್ವಾಳ ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಲಿಖಿತ ದೂರು ನೀಡಲಾಗಿದ್ದು, ವಿದ್ಯುತ್ ಪರಿವರ್ತಕವನ್ನು ಪತ್ತೆ ಹಚ್ಚಲು ಕ್ರಮ ಜರುಗಿಸಬೇಕಾಗಿ ಆಗ್ರಹಿಸಲಾಗಿದೆ. ಅಲ್ಲದೇ ವಾಹನದಲ್ಲಿದ್ದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆಯೂ ದೂರಿನಲ್ಲಿ ತಿಳಿಸಲಾಗಿದೆ.
 ಈ ವಾಹನದಲ್ಲಿ ಮೆಸ್ಕಾಂಗೆ ಸಂಬಂಧಿಸಿದ ಇಬ್ಬರು ಅಧಿಕಾರಿಗಳೂ ಇದ್ದರೂ ಎನ್ನಲಾ ಗಿದೆ. ಬ್ರಹ್ಮಾವರ ಹಾಗೂ ಪಾಣೆಮಂಗಳೂರು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಬ್ಬರ ಹೆಸರುಗಳನ್ನು ದೂರಿನಲ್ಲಿ ನೀಡಲಾಗಿದ್ದು, ಇವರ ಮೇಲೂ ಕಾನೂನು ಕ್ರಮ ಜರುಗಿಸಬೇಕೆಂದು ದೂರುದಾರ ಆಗ್ರಹಿಸಿದ್ದಾರೆ. ಈ ಮಧ್ಯೆ ವಿದ್ಯುತ್ ಪರಿವರ್ತಕಗಳ ಅಕ್ರಮ ಸಾಗಾಟ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವೂ ನಡೆದಿದ್ದು, ದೂರುದಾರರ ಮೇಲೂ ಒತ್ತಡಗಳು ಬಿದ್ದಿದ್ದವು. ಪ್ರಕರಣದ ಹಿಂದೆ ವ್ಯವಸ್ಥಿತ ಕಳವು ಜಾಲವೊಂದು ಇದೆ ಎನ್ನುವುದು ವಿದ್ಯುತ್ ಗುತ್ತಿಗೆದಾರರ ಸಂದೇಹ. ಮೆಸ್ಕಾಂ ಜಾಗೃತಾದಳ ಅಧಿಕಾರಿಗಳೂ ಪ್ರಕರಣದ ಹಿಂದೆ ಬಿದ್ದಿದ್ದಾರೆ.

ಕಾಂಚನ್ ಟೆಕ್ಸ್‌ಟೈಲ್ಸ್ ಕೊಲೆ ಪ್ರಕರಣ: ಮತ್ತೊರ್ವನ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾಂಚನ್ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಎಂಬಾತನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿ ಯನ್ನು ಉಳ್ಳಾಲ ಪೊಲೀಸರು ಬಂಧಿಸಿ ಬಂದರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಫೆ.೧೪ ರಂದು ರಾತ್ರಿ ಕಾಂಚನ್ ಟೆಕ್ಸ್‌ಟೈಲ್ಸ್‌ಗೆ ನುಗ್ಗಿದ ದುಷ್ಕರ್ಮಿಗಳು ಮ್ಯಾನೇಜರ್ ದಿನೇಶ್ ರಾಜ್‌ನನ್ನು ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆಗೈದಿದ್ದರು. ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಎರಡು ವಾರದ ಬಳಿಕ ಬಂದರು ಪೊಲೀಸರು ಬಂಧಿಸಿ ದ್ದರು. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರೂ ಈ ಕೊಲೆಯ ಬಗ್ಗೆ ನಿಖರ ಮಾಹಿತಿ ಪೊಲೀಸರಿಗೆ ಲಭ್ಯವಾ ಗಿರಲಿಲ್ಲ ಹೀಗಾಗಿ ತನಿಖೆ ಮುಂದು ವರಿದಿತ್ತು. ನಿನ್ನೆ ಉಳ್ಳಾಲ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಉಳ್ಳಾಲ ಒಂಭತ್ತು ಕೆರೆ ಟಿಪ್ಪುಸುಲ್ತಾನ್ ಶಾಲೆ ಬಳಿ ನಿವಾಸಿ ಹನೀಫ್ ಎಂಬಾ ತನನ್ನು ಬಂಧಿಸಿ ಬಂದರು ಪೊಲೀ ಸರಿಗೆ ಹಸ್ತಾಂತರಿಸಿದ್ದಾರೆ.

ಇಂಜಿನಿಯರ್ ಶವ: ಆತ್ಮಹತ್ಯೆಯೆಂದ ಪೊಲೀಸ್

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಶವ ಸಮುದ್ರ ತೀರದಲ್ಲಿ ನಿಗೂಢ ಸ್ಥಿತಿಯಲ್ಲಿ ಪತ್ತೆ ಯಾದ ಪ್ರಕರಣದಲ್ಲಿ ಪೊಲೀಸ್ ತನಿಖೆ ಸ್ಥಗಿತವಾಗಿದೆ. ಇವರು ಆತ್ಮಹತ್ಯೆ ಮಾಡಿದರೆಂದು ಎಫ್.ಐ.ಆರ್ ದಾಖ ಲಾಗಿದ್ದು, ಘಟನೆಯ ಬಗ್ಗೆ ಸ್ಥಳೀಯ ವಾಗಿ ಕೆಲವು ರೀತಿಯ ಶಂಕೆಗಳು ಸೃಷ್ಟಿಯಾಗಿದೆ.
ಮೃತರ ಪತ್ನಿ ಮನೆಯವರಿಗೂ ಸ್ವಂತ ಸಂಬಂಧಿಕರಿಗೂ ಯಾವುದೇ ಸಂಶಯವಿಲ್ಲದ ಹಿನ್ನೆಲೆಯಲ್ಲಿ ಹಾಗೂ ಪ್ರಾಥಮಿಕ ಮಾಹಿತಿ ನೆಲೆಯಲ್ಲಿ ಪೊಲೀ ಸರೂ ಆತ್ಮ ಹತ್ಯೆ ಪ್ರಕ ರಣ ದಾಖಲಿಸಿದ್ದಾರೆ.
ಮಂಗಳೂರು ಪಡೀಲ್‌ನ ದೇವದಾಸ - ಸುಲೋಚನಾ ದಂಪತಿಯ ಪುತ್ರ, ಕುಂಬಳೆ ಪೊಸತ್ತಡ್ಕದ ಸುಷ್ಮಾ ಎಂಬಾಕೆಯ ಪತಿ ಸಚಿನ್ ಕೋಟೆಕಾರ್ (೩೨) ಅವರ ಶವ ಮೊನ್ನೆ ಬೆಳಿಗ್ಗೆ ಮೊಗ್ರಾಲ್ ಕಡಲ ಕಿನಾರೆಯಲ್ಲಿ ಪತ್ತೆಯಾ ಗಿದೆ. ಇವರ ಕಾರು ೨ ಕಿ.ಮೀ ದೂರದಲ್ಲಿ ಕಾಣ ಸಿಕ್ಕಿದೆ. ಅದರ ಹಿಂದಿನ ದಿನ ಪತ್ನಿಯೊಂದಿಗೆ ಕಾರಿನಲ್ಲಿ ಬಂದಿದ್ದ ಸಚಿನ್ ಪತ್ನಿಯನ್ನು ತಾಯಿ ಮನೆಯಲ್ಲಿಳಿಸಿ ಮರುದಿನ ಅಮೇರಿಕಾಕ್ಕೆ ತೆರಳುವ ವಿಮಾನ ಟಿಕೆಟಿನ ಜೆರಾಕ್ಸ್ ಪ್ರತಿ ತೆಗೆದು ಬರುತ್ತೇನೆಂದು ಕಾರಿನಲ್ಲಿ ಕುಂಬಳೆ ಪೇಟೆಗೆ ಹೋಗಿದ್ದರು. ಆದರೆ, ಬಳಿಕ ಮರಳಿರಲಿಲ್ಲ. ಮೃತದೇಹದಲ್ಲಿ ಅಂಗಿಯಿರಲಿಲ್ಲ. ಮನೆಯಿಂದ ಹೋದ ಇವರ ಕಾರನ್ನು ಆ ದಿನ ರಾತ್ರಿ ಮೊಗ್ರಾಲ್ ನಲ್ಲಿ ಕಂಡವರೂ ಇದ್ದಾರೆ. ಕಾರಿನ ಬಳಿ ಬೇರಾರೋ ನಿಂತಿದ್ದರು ಎಂದೂ ಕೆಲವರು ಹೇಳುತ್ತಿದ್ದಾರೆ.

ತೀರ್ಥದಲ್ಲಿ ರ‍್ಯಾಬಿಸ್ ವೈರಾಣು ಶಂಕೆ: ಅತಿಥಿಗಳು ಸಾಮೂಹಿಕವಾಗಿ ಆಸ್ಪತ್ರೆಗೆ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಗೃಹಪ್ರವೇಶದ ಧಾರ್ಮಿಕ ಕೆಲಸದ ಪಂಚಾಮೃತ, ಹುಚ್ಚುನಾಯಿ ಕಡಿತದಿಂದ ಸಾವಿಗೀ ಡಾದ ದನದ ಹಾಲಿನಿಂದ ತಯಾರಿ ಸಲ್ಪಟ್ಟಿತ್ತೆಂಬ ಸಂದೇಹದಿಂದಾಗಿ ಗೃಹಪ್ರವೇಶಕ್ಕೆ ಬಂದು ಪ್ರಸಾದ ಸೇವಿಸಿದ ಮಂದಿಯೆಲ್ಲ ತಂಡೋ ಪತಂಡವಾಗಿ ಸಮೀಪದೂರಿನ ಆಸ್ಪತ್ರೆಗೆ ತೆರಳಿ ಹುಚ್ಚುನಾಯಿ ಕಡಿತದ ಇಂಜೆಕ್ಷನ್ ಚುಚ್ಚಿಸಿಕೊಂಡ ಘಟನೆ ಪಡುಬಿದ್ರಿ ಸಮೀಪದ ಪಲಿಮಾರುವಿನ ಕೊಪ್ಪಲ ಎಂಬಲ್ಲಿಂದ ವರದಿಯಾಗಿದೆ.
ಪಲಿಮಾರು ಕೊಪ್ಪಲ ನಿವಾಸಿ ಧರ್ಮ ಎಂಬವರ ನೂತನ ಮನೆಯ ಗೃಹಪ್ರವೇಶ ಕೆಲ ದಿನಗಳ ಹಿಂದೆ ನಡೆದಿತ್ತು. ಗೃಹಪ್ರವೇಶ ದಿನದ ಸತ್ಯ ನಾರಾಯಣ ಪೂಜೆಯ ಪಂಚಾ ಮೃತವನ್ನು ಅಂದು ಮತ್ತು ಮರುದಿನ ಮನೆಗೆ ಬಂದಿದ್ದ ಅತಿಥಿಗಳೆಲ್ಲಾ ಮಾಮೂಲಿನಂತೆ ಸೇವಿಸಿದ್ದರು.
ಆದರೆ ಪ್ರಸಾದಕ್ಕೆ ಹಾಲು ಉಪ ಯೋಗಿಸಿದ್ದ ದನ ಒಂದೆರಡು ದಿನ ದಲ್ಲಿ ಸತ್ತಿದ್ದು, ಇದಕ್ಕೆ ಹುಚ್ಚು ನಾಯಿ ಕಡಿದಿತ್ತೆಂದು ಶಂಕಿಸಲಾಗಿತ್ತು. ಈ ಸುದ್ದಿ ಬಾಯಿಂದ ಬಾಯಿಗೆ ಹರಡಿ ಗೃಹಪ್ರವೇಶಕ್ಕೆ ಬಂದಿದ್ದವರೆಲ್ಲ ಆಸ್ಪತ್ರೆಗಳ ದಾರಿ ಹಿಡಿಯುವಂತಾಗಿತ್ತು. ಮುಲ್ಕಿ, ಕಾರ್ನಾಡು, ಪಡುಬಿದ್ರಿ ಮತ್ತಿತರೆಡೆ ಬಹುತೇಕ ಮಂದಿ ಚುಚ್ಚುಮದ್ದು ಪಡೆಯುತ್ತಿದ್ದಾರೆನ್ನಲಾಗಿದೆ.
’ರ‍್ಯಾಬಿಸ್ ವೈರಸ್ ಹಾಲಿನಿಂದ ಈ ರೀತಿಯಾಗಿ ಹರಡುವ ಯಾವುದೇ ಸಾಧ್ಯತೆ ಇಲ್ಲ. ಹುಚ್ಚಿನಾಯಿಯ ನೇರ ಕಡಿತ ಆಳಗಾಯದೊಂದಿಗಾದರೆ ಮಾತ್ರ ರೋಗ ಹರಡುತ್ತದೆ. ರ‍್ಯಾಬಿಸ್ ವೈರಸ್ ಹೊರ ವಾತಾವರಣದಲ್ಲಿ ಹೆಚ್ಚು ಸಮಯ ಬದುಕುವುದಿಲ್ಲ’ ಎಂದು ಭಾರತೀಯ ಮೆಡಿಕಲ್ ಎಸೋ ಸಿಯೇಶನ್ ಮಂಗಳೂರು ಅಧ್ಯಕ್ಷ ಡಾ. ಮೋಹನದಾಸ್ ಭಂಡಾರಿ ತಿಳಿಸಿದ್ದಾರೆ.

ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Posted by JAYAKIRANA Kirana on | 0 comments | Leave a comment...

ಮುಲ್ಕಿ: ಮಂಡ್ಯ ಜಿಲ್ಲೆಯ ಗ್ರಾಮಾ ಭಿವೃದ್ಧಿ ಯೋಜನೆಯ ಕಾರ್ಯಕರ್ತೆ ಯನ್ನು ಚಿನ್ನಾಭರಣದ ಆಸೆಯಿಂದ ಉಸಿರುಕಟ್ಟಿಸಿ ಕೊಲೆ ಮಾಡಿದ ಆರೋಪಿಗಳಿಗೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ sssssಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನವಿಲೆ ಗ್ರಾಮದ ಮಂಜುನಾಥ್ ಪತ್ನಿ ಮಮತಾ(೩೫) ಎಂಬವರನ್ನು ತುಮಕೂರು ಜಿಲ್ಲೆಯ ದಿಕ್ಬಲಾ ಗ್ರಾಮದ ನಿವಾಸಿಗಳಾದ ಅರುಣ್ ಕುಮಾರ್(೨೪) ಮತ್ತು ಗೋಪಾಲ(೨೨) ಕೊಲೆ ಮಾಡಿದ್ದರು. ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲ ಯದ ನ್ಯಾಯಮೂರ್ತಿ ಬಿ.ಎ. ಪಾಟೀಲ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿದ್ದಾರೆ.
ಪ್ರಕರಣ ವಿವರ: ಕಳೆದ ೨೦೧೦ ಡಿ. ೧೮ರಂದು ಚಿಕ್ಕ ಮಗಳೂರು ಜಿಲ್ಲೆಯ ಕಳಸ ಸಮೀಪದ ಮರಸಣಿಗೆ ಎಂಬಲ್ಲಿ ಅಪರಿಚಿತ ಮಹಿಳೆಯ ಕೊಲೆ ನಡೆದಿತ್ತು. ಅಂದಿನ ಕುದುರೆಮುಖ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಸ್ತುತ ಮುಲ್ಕಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಶೀರ್ ಅಹಮ್ಮದ್ ನೇತೃತ್ವದಲ್ಲಿ ಪೊಲೀಸ್ ತಂಡ ಪ್ರಕರಣ ಕೈಗೆತ್ತಿ ಕೊಂಡು ತನಿಖೆ ನಡೆಸಿ ತುಮಕೂರು ಜಿಲ್ಲೆಯ ದಿಗ್ಬಾಲಾ ಗ್ರಾಮದಲ್ಲಿ ಆರೋಪಿಗಳ ಪತ್ತೆಯಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬಳಿಕ ೧೪.೩.೨೦೧೧ರಂದು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದ್ದು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ಮೃತ ಮಹಿಳೆಯ ಮಗುವಿಗೆ ೮೦ಸಾವಿರ ರೂ ಪರಿಹಾರ ನೀಡುವಂತೆ ಆಜ್ಞಾಪಿಸಿದೆ. ಸರ್ಕಾರದ ಪರವಾಗಿ(ಪಿ.ಪಿ) ವಿ.ಆರ್.ಉಪಾಧ್ಯಾಯ ವಾದಿಸಿದ್ದರು.

ಉಪ್ಪಿನಂಗಡಿ: ಮಕ್ಕಳಾಟ ತಂದಿತು ಜೀಪ್ ಚಾಲಕನಿಗೆ ಸಂಕಟ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಮದುವೆ ನಿಶ್ಚಿತಾರ್ಥವೊಂದರಲ್ಲಿ ಭಾಗವಹಿಸಲು ಬಂದಿದ್ದ ವ್ಯಕ್ತಿಯೊಬ್ಬರು ತಂದಿದ್ದ ಹೊಸ ಏರ್‌ಗನ್‌ನಿಂದ ಸಿಡಿಸಿದ ಗುಂಡು ತಗುಲಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದು, ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಪೆರಾಬೆ ಗ್ರಾಮ ಪಂಚಾಯತ್ ಸದಸ್ಯ ಕುಮಾರ್ ಎಂಬವರಿಗೆ ಗುಂಡು ತಗುಲಿ ಗಾಯವಾಗಿದೆ ಎಂದು ತಿಳಿದು ಬಂದಿದೆ. ಉಪ್ಪಿನಂಗಡಿಯ ರಾಜಧಾನಿ ಟವರ‍್ಸ್ ನಲ್ಲಿ ಬೆಳ್ತಂಗಡಿ ಕಡೆಯ ಮದುವೆ ನಿಶ್ಚಿತಾರ್ಥ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಮಂಗಗಳನ್ನು ಹೊಡೆ ದೋಡಿಸಲು ಖರೀದಿಸಿದ್ದ ಏರ್‌ಗನ್ನ್ನು ಮಕ್ಕಳಿಬ್ಬರು ಪಡೆದುಕೊಂಡು ಆಟವಾಡುತ್ತಿದ್ದು, ಇದರಿಂದ ಗುಂಡು ಹಾರಿಸಿದರು. ಈ ಗುಂಡು ನೆಲಕ್ಕೆ ಬಡಿದು ಕಟ್ಟಡದ ಕೆಳಗೆ ನಿಂತಿದ್ದ ಜೀಪು ಚಾಲಕ ಗ್ರಾಮ ಪಂಚಾಯತ್ ಸದಸ್ಯ ಕುಮಾರ್‌ರ ತಲೆಗೆ ಸಿಕ್ಕಿ ಅವರು ತೀವ್ರವಾಗಿ ಗಾಯಗೊಂಡರು ಎಂದು ತಿಳಿದು ಬಂದಿದೆ. ವೈದ್ಯರು ಗುಂಡು ಹೊರತೆಗೆಯುವ ಪ್ರಯತ್ನವನ್ನು ವೈದ್ಯರು ನಡೆಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿಲ್ಲ. ರಾಜಿ ಪಂಚಾತಿಕೆಯಲ್ಲಿ ಪ್ರಕರಣ ಮುಗಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾರಿನಿಂದ ನಗದು-ಮೊಬೈಲ್ ಕಳ್ಳತನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸಮುದ್ರ ತೀರದಲ್ಲಿ ನಿಲ್ಲಿಸಿದ್ದ ಕಾರಿನೊಳಗಿದ್ದ ನಗದು, ಮೊಬೈಲ್ ಹಾಗೂ ಡೆಬಿಟ್ ಕಾರ್ಡ್‌ಗಳನ್ನು ಕಳವುಗೈದ ಘಟನೆ ನಿನ್ನೆ ಮುಂಜಾನೆ ಕುಂದಾಪುರ ಬಳಿಯ ಗೋಪಾಡಿ ಎಂಬಲ್ಲಿ ನಡೆದಿದೆ.
ಕುಂದಾಪುರ ಸಮೀಪದ ಚಿಕನ್‌ಸ್ಟಾಲ್ ರಸ್ತೆಯ ನಿವಾಸಿ ವಿವೇಕಾನಂದ ಎಂಬವರು ಕಾರನ್ನು ನಿಲ್ಲಿಸಿ ಹೋಗಿದ್ದ ವೇಳೆ ಕಳ್ಳರು ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿದ್ದ ಮೊಬೈಲ್, ೨೦ ಸಾವಿರ ನಗದು, ಡೆಬಿಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಠಾಣಾ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಇಲ್ಲಿ ಈ ಹಿಂದೆಯೂ ಇಂಥ ಘಟನೆ ನಡೆದಿದ್ದು. ಸ್ಥಳೀಯರ ಕೈವಾಡ ಶಂಕಿಸಲಾಗಿದೆ.

ತಲಪಾಡಿ: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾಗಿ ಯುವಕ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಿ.ಸಿ.ರೋಡ್ ಸಮೀಪದ ತಲಪಾಡಿ ಎಂಬಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ದಾರುಣ ಮೃತಪಟ್ಟಿದ್ದಾನೆ. ಮೃತರನ್ನು ಮೂಲತ: ಉತ್ತರ ಪ್ರದೇಶದ ವೀರೇಂದ್ರನ್(೨೩) ಎಂದು ಹೆಸರಿಸಲಾಗಿದೆ. ಸಹಸವಾರ ಕಮಲೇಶ್ ಗಾಯಗೊಂಡಿದ್ದು, ಆಸ್ಪತ್ರಗೆ ದಾಖಲಾಗಿದ್ದಾರೆ. ಇವರು ಬಂಟ್ವಾಳದಲ್ಲಿ ಮರದ ಪೀಠೋಪಕರಣ ಕೆಲಸ ಮಾಡುತ್ತಿದ್ದರು. ಮಂಗಳೂರಿಗೆ ಹೋಗುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಹಲವರಿಗೆ ಗಾಯ

Posted by JAYAKIRANA Kirana on | 0 comments | Leave a comment...

ಪುತ್ತೂರು: ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹಲವರು ಗಾಯಗೊಂಡಿರುವ ಘಟನೆ ಪುತ್ತೂರು ಗ್ರಾಮದ ಪಾಣಾಜೆ ಬಳಿ ಸಂಭವಿಸಿದೆ.
ಪಾಣಾಜೆಗೆ ಹೋಗುವ ಆಕ್ಟಿವ್ ಬಸ್ ಹಾಗೂ ಅಲ್ಲಿಂದ ವಾಪಸ್ಸಾಗುತ್ತಿದ್ದ ಮಹಾಲಿಂಗೇಶ್ವರ ಬಸ್‌ಗಳ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿದೆ. ಮಹಾಲಿಂಗೇಶ್ವರ ಬಸ್ ನಲ್ಲಿದ್ದ ಪಾಣಾಜೆ ಗ್ರಾಮದ ಕೊರೆಂಗಿಲ ನಿವಾಸಿಗಳಾದ ಆಲಿಕುಂಞಿ, ಆಯಿಷಾ, ಅಬ್ದುಲ್ಲಾ, ಬೆಟ್ಟಂಪಾಡಿ, ಸೀತಾ, ಬೆಟ್ಟಂಪಾಡಿ ಗ್ರಾಮದ ರೆಂಜ ನಿವಾಸಿ ಇಲಿಯಾಸ್, ಕೋನಡ್ಕ ನಿವಾಸಿ ರಾಮನಾಯ್ಕ, ಆರ‍್ಯಾಪು ಗ್ರಾಮದ ಮಚ್ಚಿಮಲೆ ನಿವಾಸಿ ಜೊಹರಾ, ನಿಡ್ಪಳ್ಳಿಯ ತಂಬುತಡ್ಕ ನಿವಾಸಿ ಮಿಸ್ರಿಯಾ ಗಾಯಗೊಂಡು ಪುತ್ತೂರಿನ ಚೇತನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಾವಿಗೆ ಬಿದ್ದ ನರಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಂಟ್ವಾಳ ತಾಲೂಕಿನ ಅಗ್ರಾರ್ ಬಳಿಯ ಇಜ್ಜ ಎಂಬ ಕಡೆ ನರಿಯೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ನಡೆದಿದೆ. ಹಲವು ದಿನಗಳಿಂದ ಇಜ್ಜ ಪರಿಸರದಲ್ಲಿ ರಾತ್ರಿ ಹೊತ್ತು ಕೋಳಿಗೂಡಿಗೆ ನುಗ್ಗುತ್ತಿದ್ದ ನರಿಯು ಭಾನುವಾರವೂ ಹಾಗೆ ಮಾಡಲೆತ್ನಿಸಿದಾಗ ಮನೆಯ ನಾಯಿ ಹಾಗೂ ಮನೆಮಂದಿ ಬೆನ್ನಟ್ಟಿದ ಸಂದರ್ಭ ನರಿಯು ಸಾಂತಪ್ಪ ಪೂಜಾರಿ ಎಂಬವರ ತೋಟದ ಬಾವಿಗೆ ಬಿತ್ತು.
ಜೀವನ್ಮರಣ ಸ್ಥಿತಿಯಲ್ಲಿದ್ದ ನರಿಯನ್ನು ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು ಸೇರಿ ಮೇಲಕ್ಕೆತ್ತಿ ಪ್ರಾಣಾಪಾಯದಿಂದ ಪಾರು ಮಾಡಿದರು.
ತೋಟಕ್ಕೆ ಕಾಡಾನೆ ದಾಳಿ: ಆಲೆಟ್ಟಿ ಗ್ರಾಮದ ಮಾಣಿಧರ್ಮ ಎಂಬಲ್ಲಿ ತೋಟಕ್ಕೆ ಕಾಡಾನೆ ಹಿಂಡು ದಾಳಿ ನಡೆಸಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ. ಆನಂದ ನಾಯ್ಕ್ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆ ೨೦೦ ಅಡಕೆ ಗಿಡ, ೫ ತೆಂಗಿನ ಗಿಡ ಮತ್ತು ಬಾಳೆ ಗಿಡಗಳನ್ನು ನಾಶ ಮಾಡಿದೆ. ಇದರಿಂದಾಗಿ ೫೦ ಸಾವಿರ ರೂ. ನಷ್ಟ ಸಂಭವಿಸಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಸೈನೈಡ್ ಮೋಹನನಿಂದ ಪಾಟಿ ಸವಾಲು

Posted by JAYAKIRANA Kirana on | 0 comments | Leave a comment...

ಮಂಗಳೂರು: ಸೋಮವಾರ ತ್ವರಿತಗತಿ ನ್ಯಾಯಲಯದಲ್ಲಿ ಸುಜಾತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೈನೈಡ್ ಮೋಹನ ಮೃತಳ ಸಹೋದರರಿಗೆ ಪಾಟೀ ಸವಾಲು ಹಾಕಿದ. ಕೋರ್ಟ್ ಹೇಳಿಕೆ ವೇಳೆ ಮೃತಳ ಅಣ್ಣ ಹರೀಶ್ ಸುಜಾತ ಮನೆಬಿಟ್ಟು ಹೋಗುವಾಗ ಚೂಡಿದಾರ್ ಹಾಕಿದ್ದಳೆಂದು ಹೇಳಿದ್ದಾರೆ ಆದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಸೀರೆ ಹಾಕಿರುವುದಾಗಿ ಹೇಳಿದ್ದರು. ಸುಜಾತ ಮನೆ ಬಿಟ್ಟು ಹೋದದ್ದು ೨೦೦೭ರ ಜೂ.೫ಕ್ಕೆ ಆದರೆ ದೂರಿನಲ್ಲಿ ಜೂ.೧೪ಕ್ಕೆ ನಾಪತ್ತೆಯಾಗಿರುವುದಾಗಿ ತಿಳಿಸಲಾಗಿದೆ ಎಂದು ಮೋಹನ ಹಾಕಿದ ಎರಡು ಪ್ರಶ್ನೆಗಳಿಗೂ ಉತ್ತರಿಸಿದ ಹರೀಶ್ ಗಡಿಬಿಡಿಯಲ್ಲಿ ಈ ಪ್ರಮಾದವಾಯಿತು ಎಂದು ಹೇಳಿದ್ದಾರೆ.

ಅಪರಿಚಿತ ಶವ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ತಣ್ಣೀರುಬಾವಿ ಸಮೀಪದ ತೋಟಬೆಂಗ್ರೆಯ ಫೆರಿ ಬಳಿ ನಿನ್ನೆ ಅಪರಿಚಿತ ಯುವಕನ ಶವ ಪತ್ತೆಯಾಗಿದೆ.
ಅಂದಾಜು ೪೦ರ ಹರೆಯದ ವ್ಯಕ್ತಿಯು ಕೆಂಪು ಬಣ್ಣದ ಟಿ-ಶರ್ಟ್, ಸ್ಲೇಟ್ ಬಣ್ಣದ ಬರ್ಮುಡ ಧರಿಸಿದ್ದು, ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಣೋಲಿಬೈಲು: ರಿಕ್ಷಾ ಉರುಳಿ ಮಹಿಳೆಗೆ ಗಾಯ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ರಿಕ್ಷಾ ಉರುಳಿ ಮಹಿಳೆ ಕೈಮುರಿದುಕೊಂಡ ಘಟನೆ ಸೋಮವಾರ ನಡೆದಿದೆ. ಗಾಯಾಳು ಮಹಿಳೆಯನ್ನು ಸ್ಥಳೀಯ ಸಜಿಪಮೂಡ ನಿವಾಸಿ ಲಲಿತಾ ಎಂದು ಗುರುತಿಸಲಾಗಿದೆ. ಅವರು ಭಾನುವಾರ ಸಂಜೆ ಮೆಲ್ಕಾರಿನಿಂದ ಪಣೋಲಿಬೈಲಿಗೆ ಆಟೋದಲ್ಲಿ ಪ್ರಯಾಣಿಸುತಿದ್ದ ವೇಳೆ ಕರಾಜೆ ಎಂಬಲ್ಲಿ ರಿಕ್ಷಾ ಉರುಳಿಬಿದ್ದಿತ್ತು ಎಂದು ನಗರದ ಪೋಲೀಸರು ತಿಲಿಸಿದ್ದಾರೆ.

ಕುಸಿದು ಬೀಳಲಿದೆ ನಕ್ರೆ-ಬೈಲಬರಿ ಕಾಲುಸೇತುವೆ

Posted by JAYAKIRANA Kirana on | 0 comments | Leave a comment...


ಅನುದಾನ ದುರುಪಯೋಗಕ್ಕೆ ಸಾಕ್ಷಿ!
ಕಾರ್ಕಳ: ಸರಕಾರ ಬಿಡುಗಡೆ ಗೊಳಿಸುತ್ತಿರುವ ಅನುದಾನಗಳು ಸದುಪಯೋಗ ವಾಗುತ್ತಿಲ್ಲ ಎನ್ನುವು ದಕ್ಕೆ ಕಾರ್ಕಳ ತಾಲೂಕು ವ್ಯಾಪ್ತಿಯ ನಕ್ರೆಯ ಬೈಲಬರಿ ಎಂಬಲ್ಲಿ ಕಳೆದ ಒಂದು ವರ್ಷದ ಹಿಂದೆ ನಿರ್ಮಿಸ ಲಾಗಿರುವ ಕಾಲುಸೇತುವೆ ಸಾಕ್ಷಿ.
ಧರೆಗುರುಳಲು ಕಾಯುತ್ತಿರುವ ಕಾಲುಸೇತುವೆಯನ್ನು ಈ ರೀತಿ ಯಲ್ಲಿ ಯಾಕಾಗಿ ನಿರ್ಮಿsಸಲಾಗಿದೆ ಎನ್ನುವುದು ಇಲಾಖಾಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹೊರತು ಪಡಿಸಿ ಉಳಿದ್ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಆ ಕಾಲುಸೇತುವೆ ನಿರ್ಮಾಣದ ಹಂತದಲ್ಲಿ ಈ ಎರಡು ವರ್ಗದವರಿಗೆ ಸಿಕ್ಕಿರುವ ಶೇಖಡಾ ವಾರು ಎಷ್ಟಿರಬಹುದೆನ್ನುವುದು ಇದನ್ನು ಕಂಡರೆ ಅರ್ಥವಾಗಬಹುದು.
ರೂಪುರೇಷೆ ಇಲ್ಲದ ಕಾಮಗಾರಿ ಇದಾಗಿರುವುದರಿಂದ ಇದಕ್ಕೆ ಸಂಪರ್ಕ ಕೊಂಡಿಯೇ ಇಲ್ಲ. ಒಂದು ಬದಿ ಯಿಂದ ಹಾದು ಮತ್ತೊಂದು ಬದಿ ಯಾಗಿ ಮುಂದುವರಿಯಲು ಯತ್ನಿಸಿ ದರೆ ಐದು ಅಡಿಯಷ್ಟು ಕೆಳಗೆ ಬಿದ್ದು ಆಸ್ಪತ್ರೆಗೆ ಸೇರುವುದಂತು ಗ್ಯಾರಂಟಿ!
ಕೇವಲ ಒಂದು ವರ್ಷ ಹಿಂದೆ ಯಷ್ಟೇ ನಿರ್ಮಾಣಗೊಂಡಿರುವ ಕಾಲುಸೇತುವೆಯ ಆಧಾರಸ್ತಂಭಗಳು ಮುರಿದಿದೆ. ಕಾಮಗಾರಿಯು ಅವೈ ಜ್ಞಾನಿಕ ಹಾಗೂ ಕಳಪೆಗುಣಮಟ್ಟ ದ್ದಾಗಿದೆ. ಅಯೋಗ್ಯವಾದ ಕಾಲು ಸೇತುವೆ ಯಿಂದಾಗಿ ಮಳೆಗಾಲದಲ್ಲಿ ತೋಡಿನ ಮೂಲಕ ಅಥವಾ ಎರಡು ಕಿ.ಮೀ ದೂರದಲ್ಲಿರುವ ಮತ್ತೊಂದು ಕಾಲುಸೇತುವೆ ಮೂಲಕ ನಾಗರಿಕರು ಪ್ರತಿದಿನ ಓಡಾಡುವಂತಾಗಿದೆ.

ವಿಠಲನ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಕ್ಸಲ್ ಮಾಹಿತಿ ದಾರ ಎಂಬ ಆರೋಪದಡಿ ಬಂಧಿತ ನಾಗಿರುವ ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲ ಮಲೆಕುಡಿಯನ ಜಾಮೀನು ಅರ್ಜಿಯನ್ನು ಹೈಕೋರ್ಟ್ ಮೂರನೇ ಬಾರಿ ನಿನ್ನೆ ಮತ್ತೆ ಮುಂದೂಡಿದೆ.
ಕಳೆದ ಜೂನ್ ೬ ರಂದು ವಿಠಲ ಮಲೆಕುಡಿಯನ ಜಾಮೀನು ಅರ್ಜಿಯ ವಿಚಾರಣೆ ನಡೆಯಬೇಕಿತ್ತು. ಆದರೆ ಅಂದು ಪ್ರಕರಣದ ಸಾರ್ವಜನಿಕ ಅಭಿಯೋಜಕರು ಎಎನ್‌ಎಫ್ ಕಡತ ಹಾಜರು ಪಡಿಸದ ಕಾರಣ ಪ್ರತಿವಾದ ಮಂಡಿಸಲು ನಿರಾಕರಿಸಿದ್ದರು. ಈ ಕಾರಣದಿಂದ ನ್ಯಾಯಾಲಯ ವಿಚಾರಣೆಯನ್ನು ನಿನ್ನೆಗೆ ಮುಂದೂಡಿತ್ತು. ನಿನ್ನೆ ಮತ್ತೆ ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ವಾದ ಆಲಿಸಿದ್ದು ತೀರ್ಪನ್ನು ಜೂನ್ ೧೯ಕ್ಕೆ ಮುಂದೂಡಿದೆ.

ಕ್ರಶರ್ ಘಟಕಕ್ಕೆ ಪರವಾನಿಗೆ?

Posted by JAYAKIRANA Kirana on | 0 comments | Leave a comment...

ಪಾದೂರು ಗ್ರಾಮಸ್ಥರ ಆಕ್ರೋಶ
ಕಾಪು: ಪಾದೂರು ಕಚ್ಛಾ ತೈಲ ಸಂಗ್ರಹಣಾಗಾರದಲ್ಲಿ ಶೇಖರಣೆಯಾದ ಪಾದೆಕಲ್ಲನ್ನು ಹುಡಿಮಾಡುವ ಘಟಕಕ್ಕೆ ಗ್ರಾಮಸ್ಥರ ವಿರೋಧದ ನಡುವೆಯೇ ಗ್ರಾಮ ಪಂಚಾಯತ್ ಪರವಾನಿಗೆ ನೀಡಲು ಯೋಜನೆ ಹಾಕುತ್ತಿದೆ ಎಂದು ಗಾಮಸ್ತರು ಗುಮಾನಿ ವ್ಯಕ್ತಪಡಿಸಿದ್ದು, ಈ ಬಗ್ಗೆ ವಿಶೇಷ ಗ್ರಾಮ ಸಭೆಯನ್ನು ಕರೆಯುವಂತೆ ಗ್ರಾಮದ ೮೦೦ಜನರ ಸಹಿಯಿದ್ದ ಪತ್ರವನ್ನು ಎರಡು ದಿನಗಳ ಹಿಂದೆ ಗ್ರಾಮಸ್ತರು ಮಜೂರು ಗ್ರಾಮ ಪಂಚಾಯತ್‌ಗೆ ನೀಡಿದ್ದಾಗಿ ತಿಳಿದು ಬಂದಿದೆ.
 ಕಚ್ಛ ತೈಲ ಸಂಗ್ರಹಣಾಗಾರಕ್ಕಾಗಿ ಪಾದೂರಿನಲ್ಲಿ ನೂರಾರು ಎಕರೆ ಪ್ರದೇಶವನ್ನು ಕೊರೆದ ಪರಿಣಾಮ ಅಲ್ಲಿ ಲಕ್ಷಾಂತರ ಟನ್ ಪಾದೆ ಕಲ್ಲು ಸಂಗ್ರ ಹಣೆಗೊಂಡಿದೆ. ಈ ಪಾದೆಕಲ್ಲನ್ನು ಒಡೆಯಲು ಬೇರೆಲ್ಲಿಗೋ ಸಾಗಿಸಿ ಎಂದು ಗ್ರಾಮಸ್ತರು ಕಂಪನಿಗೆ ಮೊರೆ ಹೋದಾಗ, ದೂರ ಕೊಂಡೊಯ್ಯು ತ್ತೇವೆ ಎಂದು ಹೇಳಿದ್ದರೂ ಕಂಪನಿ ಪರಿಸರದಲ್ಲಿಯೇ ಪಾದೆಕಲ್ಲನ್ನು ಒಡೆಯುವ ಸಂಚನ್ನು ರೂಪಿಸಿದ ಹಿನ್ನೆ ಲೆಯಲ್ಲಿ ಗ್ರಾಮಸ್ಥರು ತೀವ್ರ ಪ್ರತಿಭಟ ನೆಯನ್ನು ಮಾಡಿದ್ದರು. ಇದರಿಂದ ಕಂಪನಿಯು ತಾನು ಮಾಡಲು ಉದ್ದೇ ಶಿಸಿರುವ ಕೆಲಸವನ್ನು ತಾತ್ಕಾಲಿವಾಗಿ ನಿಲ್ಲಿಸಿತ್ತು. ಈ ಘಟನೆಯ ನಂತರ ಕಂಪನಿಯು ಪಾದೆಕಲ್ಲು ಒಡೆಯುವ ಗುತ್ತಿಗೆಯನ್ನು ಸುರತ್ಕಲ್‌ನ ಮಿಗ್ ಏಂಡ್ ರಿಚ್ ಇನ್ಫ್ರಾ ಸಂಸ್ಥೆಗೆ ನೀಡಿತ್ತು. ಸಂಸ್ಥೆಯು ವಾಹನದಲ್ಲಿಯೇ ಪಾದೆಕಲ್ಲು ಒಡೆಯುವ ಯಂತ್ರವನ್ನು ಹೊಂದಿದ್ದು, ಒಂದೊಂದಾಗಿ ಕಂಪನಿಯೊಳಗೆ ಪ್ರವೇಶಿಸುವುದನ್ನು ಗ್ರಾಮಸ್ಥರು ತಡೆದ ಕಾರಣ ಬಡಾ ಎರ್ಮಾಳಿನ ಬುದಿಯಾ ಪೆಟ್ರೋಲ್ ಪಂಪ್ ಎದುರು ಟರ್ಪಾಲು ಹಾಕಿದ ಸ್ಥಿತಿಯಲ್ಲಿ ನಿಂತಿದೆ. ಇದೀಗ ಐಎಸ್‌ಪಿಆರ್‌ಎಲ್ ಕಂಪನಿಯು ಪಾದೆಕಲ್ಲು ಒಡೆಯುವ ಬಗ್ಗೆ ಪರವಾನಿಗೆಗಾಗಿ ಮಜೂರು ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದೆ. ಗ್ರಾಮ ಪಂಚಾಯತ್ ಕೂಡಾ ಪರವಾನಿಗೆ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದರಿತ ಮಜೂರು, ಪಾದೂರು ಗ್ರಾಮಸ್ಥರು ಪಂಚಾಯತ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಂತೆಯೇ ವಿಶೇಷ ಗ್ರಾಮ ಸಭೆಯನ್ನು ಕರೆದು ಸಭೆಯಲ್ಲಿ ನಿರ್ಣಯವನ್ನು ಮಂಡಿಸುವಂತೆ ಆಗ್ರಹಿಸಿದ್ದಾರೆ.

ಕೋರ್ಟ್ ಆದೇಶ ಉಲ್ಲಂಘಿಸಿದ ಸರಕಾರಿ ಅಧಿಕಾರಿಗಳು!

Posted by JAYAKIRANA Kirana on | 0 comments | Leave a comment...

ಬ್ರಹ್ಮಾವರ ಮೊರಾರ್ಜಿ ದೇಸಾಯಿ ವಸತಿ ಶಾಲೆ
ಉಡುಪಿ: ಉನ್ನತ ಸರಕಾರಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬ್ರಹ್ಮಾವರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೂವರು ಶಿಕ್ಷಕರ ಹುದ್ದೆಯಿರುವ ಸ್ಥಳಕ್ಕೆ ಆರು ಮಂದಿ ಶಿಕ್ಷಕರನ್ನು ನೇಮಕ ಮಾಡಿ ಸರಕಾರಿ ಖಜಾನೆಯಿಂದ ಸಂಬಳವನ್ನು ಭರಿಸ ಲಾಗುತ್ತಿದೆ.
ರಾಜ್ಯ ಸರಕಾರ ವಸತಿ ಶಾಲೆಗ ಳಲ್ಲಿದ್ದ ಅನೇಕ ಮಂದಿ ಶಿಕ್ಷಕರನ್ನು ಇತ್ತೀಚೆಗೆ ಖಾಯಂಗೊಳಿಸಿತ್ತು. ಆದರೆ ಈ ಸಂದರ್ಭ ನೆಹರೂ ಯುವ ಕೇಂದ್ರದ ಮೂಲಕ ನೇಮಕಾತಿ ಗೊಂಡಿರುವ ಶಿಕ್ಷಕರನ್ನು ಸರಕಾರ ಖಾಯಂಗೊಳಿಸಿಲ್ಲ. ಇದರ ವಿರುದ್ಧ ಶಿಕ್ಷಕರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಅದರಂತೆ ನ್ಯಾಯಾಲಯ ಯಥಾಸ್ಥಿತಿ ಕಾಪಾಡುವಂತೆ ಸರಕಾರಕ್ಕೆ ಆದೇಶಿಸಿತ್ತು.
ಈ ನಡುವೆ ಮೊರಾರ್ಜಿ ವಸತಿ ಶಾಲೆಯ ಉನ್ನತ ಸರಕಾರಿ ಅಧಿಕಾರಿಗಳು ಮೂವರು ಶಿಕ್ಷಕರನ್ನು ನೇಮಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತಾಗಿದೆ.

ಪರಿಷತ್ ಚುನಾವಣೆ: ಒಂದು ಮತಕ್ಕಾಗಿ ಹೆಲಿಕಾಪ್ಟರ್!

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಆಡಳಿತಾರೂಢ ಬಿಜೆಪಿಯಲ್ಲಿರುವ ಆಂತರಿಕ ಕಚ್ಚಾಟದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಚುನಾ ವಣೆಯಲ್ಲಿ ಅಧಿಕೃತ ಅಭ್ಯರ್ಥಿಯೇ ಸೋಲುವ ಆತಂಕದಿಂದ ಒಂದೇ ಒಂದು ಮತಕ್ಕಾಗಿ ವಿಶೇಷ ಹೆಲಿಕಾಪ್ಟರ್ ಬಳಿಸಿದ ಪ್ರಸಂಗ ನಡೆಯಿತು.
ಚುನಾವಣಾ ಅಕ್ರಮ ಆರೋಪದ ಮೇಲೆ ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದ ಕೆ.ಆರ್.ಪುರಂ ಶಾಸಕ ನಂದೀಶ್‌ರೆಡ್ಡಿ ಅವರ ವಿರುದ್ಧದ ಹೈಕೋರ್ಟ್ ಆದೇಶಕ್ಕೆ ಇಂದು ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು.
ನಂದೀಶ್‌ರೆಡ್ಡಿ ಸುಪ್ರೀಂಕೋರ್ಟ್ ಆದೇಶ ಪಡೆದು ದೆಹಲಿಯಿಂದ ಬೆಂಗಳೂರಿಗೆ ಬಂದು ಚುನಾವಣಾ ಅಯೋಗಕ್ಕೆ ಪ್ರತಿ ಸಲ್ಲಿಸಿ ನಂತರ ೪ ಗಂಟೆಯೊಳಗೆ ತಮ್ಮ ಅಮೂಲ್ಯ ಮತ ಚಲಾಯಿಸಬೇಕಿತ್ತು.
ಸುಪ್ರೀಂಕೋರ್ಟ್‌ನಲ್ಲಿ ಪ್ರತಿ ಪಡೆದ ನಂದೀಶ್‌ರೆಡ್ಡಿ ಮಧ್ಯಾಹ್ನ ೧೨.೩೦ ನಿಮಿಷಕ್ಕೆ ವಿಶೇಷ ವಿಮಾನದಲ್ಲಿ ೩.೧೦ ನಿಮಿಷಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಆ ನಂತರ ಅಲ್ಲಿಂದಲೇ ಸಿದ್ಧಗೊಂಡಿದ್ದ ಹೆಲಿ ಕಾಪ್ಟರ್ ಮೂಲಕ ಜಕ್ಕೂರು ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು.
ಗೃಹ ಸಚಿವ ಆರ್.ಅಶೋಕ್ ಅವರೇ ಖುದ್ದಾಗಿ ಜಕ್ಕೂರು ವಿಮಾನ ನಿಲ್ದಾಣದಲ್ಲಿ ರೆಡ್ಡಿ ಬರಮಾಡಿಕೊಂಡು ವಿಧಾನಸೌಧಕ್ಕೆ ಮುಕ್ತ ಸಂಚಾರ ಮಾರ್ಗದಲ್ಲಿ ಕರೆತಂದು ೩.೪೫ ನಿಮಿಷಕ್ಕೆ ಮತಗಟ್ಟೆಗೆ ಕರೆತಂದರು.
ನಂತರ ರೆಡ್ಡಿ ನ್ಯಾಯಾಲಯದ ತೀರ್ಪು ಚುನಾವಣಾಧಿಕಾರಿ ಅವರಿಗೆ ನೀಡಿ ತಮ್ಮ ಮತ ಚಲಾಯಿಸಲು ಕೋರಿಕೆ ಸಲ್ಲಿಸಿದರು. ವಿಧಾನಸಭೆ ಕಾರ್ಯದರ್ಶಿಯಾಗಿರುವ ಚುನಾವಣಾ ಧಿಕಾರಿ ನಂತರ ಕೇಂದ್ರ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಅನುಮತಿ ಪಡೆದ ನಂತರ ಮತ ಚಲಾಯಿಸಲು ಹಕ್ಕು ನೀಡಿದರು.ವಿಧಾನಪರಿಷತ್‌ನ ಉಪ ಸಭಾಪತಿ ವಿಮಲಾಗೌಡ ಅವರಿಗೆ ಮತ ಚಲಾಯಿಸುವಂತೆ ರೆಡ್ಡಿ ವಿಪ್ ನೀಡಲಾಗಿತ್ತು. ವಿಮಲಾಗೌಡರಿಗೆ ನಿಗದಿಪಡಿಸಿದ್ದ ೨೧ ಮತಗಳಲ್ಲಿ ಕೆಲವು ಮತಗಳು ಅಡ್ಡಮತಗಳಾಗುವ ಆತಂಕ ಇದ್ದ ಕಾರಣ ಇತರೆ ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದ ಮತಗಳಲ್ಲಿ ವಿಮಲಾಗೌಡರಿಗೆ ಮತ್ತೊಂದು ಮತ ಹಂಚಿಕೆ ಮಾಡಲಾಗಿತ್ತು. ಅದೇ ನಂದೀಶ್‌ರೆಡ್ಡಿ ಮತವಾಗಿತ್ತು.

ನೀರಿನ ಸಂಪರ್ಕವೇ ಇಲ್ಲದವರಿಗೆ ನೀರಿನ ಬಿಲ್!

Posted by JAYAKIRANA Kirana on | 0 comments | Leave a comment...

ಒಳಮೊಗ್ರು ಗ್ರಾ.ಪಂ. ನಿರ್ಲಕ್ಷ್ಯ
ಪುತ್ತೂರು: ನೀರಿನ ಸಂಪರ್ಕ ಇರುವವರಿಗೆ ನೀರಿನ ಬಿಲ್ ಬರುವುದು ಸಹಜ. ಆದರೆ ನೀರಿನ ಸಂಪರ್ಕವೇ ಇಲ್ಲದ, ಅದರಲ್ಲೂ ಮೃತರ ಹೆಸರಿನಲ್ಲಿ ನೀರಿನ ಬಿಲ್ ಕಳುಹಿಸಿ ೩ ದಿನದೊಳಗೆ ಹಣ ಪಾವತಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೋಟೀಸ್ ನೀಡಿರುವುದು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾ. ಪಂ.ನ ಬೇಜವಾ ಬ್ದಾರಿತನಕ್ಕೊಂದು ಸಾಕ್ಷಿ.
ಒಳಮೊಗ್ರು ಗ್ರಾಮದ ಮಗಿರೆ ನಿವಾಸಿ ದಿವಂಗತ ಆದಂ ಕುಂಞಿ ಎಂಬವರ ಹೆಸರಿನಲ್ಲಿ ರೂ.೨೦೩೨ ಮೊತ್ತದ ನೀರಿನ ಬಿಲ್ ಕಳುಹಿಸಿದ್ದು, ಮೂರು ದಿವಸಗೊಳಗೆ ಬಿಲ್ ಪಾವತಿಸದಿದ್ದಲ್ಲಿ ಕಟ್ಟು ನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸಿನಲ್ಲಿ ಎಚ್ಚರಿಸಲಾಗಿದೆ.
ಆದಂ ಕುಂಞಿ ಅವರು ಮೃತ ಪಟ್ಟು ಒಂದು ವರ್ಷ ಕಳೆದಿದೆ. ಅವರ ಮನೆಗೆ ಈತನಕ ಪಂಚಾಯತ್ ನೀರಿನ ಸಂಪರ್ಕ ಸಿಕ್ಕಿಲ್ಲ. ನೀರಿನ ಸಂಪರ್ಕ ಇಲ್ಲದಿದ್ದರೂ ನೀರಿನ ಬಿಲ್ ಬಂದಿದೆ.
ಕಳೆದ ವರ್ಷವೂ ಆದಂ ಕುಂಞಿ ಯವರ ಹೆಸರಿನಲ್ಲಿ ರೂ. ೨೩೨೦ ಮೊತ್ತದ ನೀರಿನ ಬಿಲ್ ಬಂದಿತ್ತು . ಈ ಕುರಿತು ಅವರ ಮನೆಯವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರನ್ನು ಪ್ರಶ್ನಿಸಿದಾಗ ಸರಿಪಡಿಸು ವುದಾಗಿ ಭರವಸೆ ನೀಡಿದ್ದರೂ ಈಗ ಮತ್ತೆ ಬಿಲ್ ಬಂದಿತ್ತು. ಆಗಲೂ ಮತ್ತೆ ಪ್ರಶ್ನಿಸಲಾಗಿತ್ತು. ಆದರೆ ಇದೀಗ ಮೂರನೇ ಬಾರಿಗೆ ಬಿಲ್ (ರೂ.೨೦೩೨) ಬಂದಿದೆ.
ಸತತವಾಗಿ ನೀರಿನ ಬಿಲ್ ಕಳುಹಿಸಿ ಕಟ್ಟು ನಿಟ್ಟಿನ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿ ತಮ್ಮನ್ನು ಅಪಮಾನ ಗೊಳಿಸಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಿರುದ್ದ ಮೇಲಧಿ ಕಾರಿಗಳಿಗೆ ದೂರು ನೀಡುವುದಾಗಿ ಆದಂ ಕುಂಞಿ ಅವರ ಮನೆಯವರು ತಿಳಿಸಿದ್ದಾರೆ.

ಜೆ.ಶಾಂತಾ ಸಂಸತ್ ಸದಸ್ಯತ್ವ ಅಸಿಂಧುಗೊಳಿಸಿದ ಕೋರ್ಟ್

Posted by JAYAKIRANA Kirana on | 0 comments | Leave a comment...

ಲೋಕಸಭಾ ಚುನಾವಣಾ ಅಕ್ರಮ ಪ್ರಕರಣ
ಬೆಂಗಳೂರು: ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರ ಪ್ರತಿನಿಧಿಸುವ ಜೆ.ಶಾಂತಾ ಅವರ ಸಂಸತ್ ಸದಸ್ಯತ್ವ ವನ್ನು ರಾಜ್ಯ ಹೈಕೋರ್ಟ್ ಅಸಿಂಧು ಗೊಳಿಸಿದೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಅಕ್ರಮಗಳು ಕಂಡು ಬಂದಿರುವುದರಿಂದ ನಾಲ್ಕು ವಾರದೊಳಗೆ ಮತಗಳ ಮರು ಎಣಿಕೆ ಮಾಡಬೇಕು. ಆ ನಂತರವಷ್ಠೇ ಅಧಿಕೃತ ಅಭ್ಯರ್ಥಿಯ ಗೆಲುವು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಮೂರ್ತಿ ಬಿಲ್ಲಪ್ಪ ಅವರ ಏಕಸದಸ್ಯಪೀಠ ಆದೇಶ ನೀಡಿ, ಸಂಸತ್ ಸದಸ್ಯ ಸ್ಥಾನದಿಂದ ಶಾಂತಾ ಅವರನ್ನು ಅಸಿಂಧುಗೊಳಿ ಸಿದೆ.
ತಕರಾರು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಪೀಠ ಎರಡೂವರೆ ವರ್ಷಗಳ ಸುಧೀರ್ಘ ವಿಚಾರಣೆ ನಡೆ ಸಿದ ಬಳಿಕ ಮಹತ್ವದ ತೀರ್ಪು ನೀಡಿದೆ.
ಚುನಾವಣಾ ಸಂದರ್ಭದಲ್ಲಿ ಶಾಂತಾ ನಾಮಪತ್ರ ಸಲ್ಲಿಸುವ ವೇಳೆ ತಾವು ವಾಲ್ಮೀಕಿ ಜನಾಂಗಕ್ಕೆ ಸೇರಿದ್ದಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಈ ಕುರಿತು ನ್ಯಾಯಾಲಯ ಯಾವುದೇ ತೀರ್ಪನ್ನು ನೀಡಿಲ್ಲ.

ಪರಿಷತ್ ಚುನಾವಣೆ: ಅನಂತ್‌ಗೆ ಹಿನ್ನಡೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅನಂತ್ ಕುಮಾರ್ ಮತ್ತು ಸಂಘಪರಿವಾರಕ್ಕೆ ಭಾರೀ ಹಿನ್ನಡೆಯಾಗಿದೆ. ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಸ್ಪರ್ಧಿಸಿದ್ದ ಆರು ಸ್ಥಾನಗಳಲ್ಲಿ ಮೂರು ಮಂದಿ ಪರಿವಾರ ಮತ್ತು ಅನಂತ್ ಕುಮಾರ್ ಬಣಕ್ಕೆ ಸೇರಿದವರು. ಅವರಿಗೆ ನಿಗದಿಪಡಿಸಿದ ಮತಗಳಿಗಿಂತ ಕಡಿಮೆ ಮತಗಳು ಲಭ್ಯವಾಗಿ ಸೋಲಿನ ಭೀತಿ ತಲುಪಿದ್ದರು. ಇದಕ್ಕೆ ಯಡಿಯೂರಪ್ಪ ಬಣ ಹೊರಗಿನ ಶಕ್ತಿಗಳೊಂದಿಗೆ ಕೈಜೋಡಿಸಿ ಈ ತಂತ್ರಗಾರಿಕೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಪ್ರಥಮ ಪ್ರಾಶಸ್ತ್ಯದಲ್ಲೇ ಗೆಲ್ಲಿಸಿಕೊಂಡ ಯಡಿಯೂರಪ್ಪ ಪರಿವಾರದವರು ಎರಡನೇ ಸುತ್ತಿಗೆ ತಲುಪುವಂತೆ ಮಾಡಿದರು. ಒಂದು ವೇಳೆ ಕಾಂಗ್ರೆಸ್ ಬಲಾಡ್ಯವಾಗಿದ್ದರೆ ಸೋಲೇ ಇವರಿಗಾಗುತ್ತಿತ್ತು. ಶ್ರರಾಮುಲು ಬಣಕ್ಕೆ ಸೇರಿದ ಮೂರು, ಜಾರಕಿ ಹೊಳಕ್ಕೆ ಸೇರಿದ ಮೂರು ಹಾಗೂ ಉಳಿದ ಆರು ಯಡಿಯೂರಪ್ಪ ಬೆಂಬಲಿತರಾಗಿದ್ದಾರೆ. ಇವರು ಪಕ್ಷೇತರ ಅಭ್ಯರ್ಥಿ ಬೈರತಿ ಸುರೇಶ್ ಮತ್ತು ಕಾಂಗ್ರೆಸ್‌ನ ನೆಲ್ಕನೇ ಅಭ್ಯರ್ಥಿ ಸೀತಾರಾಮ್‌ಗೆ ಮತ ಚಲಾವಣೆಗೊಂಡಿದೆ. ಇದರಿಂದಾಗಿ ಅನಂತ್‌ಕುಮಾರ್ ಮತ್ತು ಸಂಘಪರಿವಾರಕ್ಕೆ ಸೇರಿದ ಮೂವರಿಗೂ ನಿಗದಿತ ಪಡಿಸಿದ್ದ ಎರಡ್ಮೂರು ಮತಗಳು ಕಡಿಮೆಯಾಗಿವೆ.
ಕಾಂಗ್ರೆಸ್‌ನಲ್ಲೂ ಇದೇ ಪರಿಸ್ಥಿತಿ ಆರು ಮತಗಳು ಅಡ್ಡ ಮತದಾನವಾಗಿವೆ. ಅದರಲ್ಲಿ ಮೂರನ್ನು ಬೈರತಿ ಪಡೆದುಕೊಂಡಿದ್ದರೆ ಮತ್ತೆ ಮೂರನ್ನು ಸೀತಾರಾಮ್ ಪಡೆದುಕೊಂಡಿದ್ದಾರೆ. ಇದರಿಂದಾಗಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಅಭ್ಯರ್ಥಿ ಇಕ್ಬಾಲ್ ಸರಡಗಿ ಹೀನಾಯ ಸೋಲು ಅನುಭವಿಸಿದ್ದರು.

ಹೆಣ್ಣು ವೇಷದೊಳಗಿನ ಗಂಡು ವೇಶ್ಯೆಯರು

Posted by JAYAKIRANA Kirana on | 0 comments | Leave a comment...

ಸುಖ ನೀಡುವ ನೆಪದಲ್ಲಿ ವಂಚನೆ
ಮಂಗಳೂರು: ಹಣಮಾಡುವ ದಂಧೆಗೆ ಇಳಿದಿರುವ ಮಂಗಳ ಮುಖಿಯರು ಮತ್ತು ಅವರಂತೆ ವೇಷ ಪರಿವರ್ತನೆ ಮಾಡಿಕೊಂಡಿರುವ ಸಲಿಂಗಕಾಮಿಗಳು ಕಾರ್ಮಿಕರನ್ನು ದೋಚುವ ವ್ಯವಸ್ಥಿತ ಜಾಲವನ್ನು ರಚಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಸುರತ್ಕಲ್, ಬೈಕಂಪಾಡಿ, ಪಣಂಬೂರು, ಕೂಳೂರು ಮತ್ತು ಫೋರ‍್ತ್ ಮೈಲ್ ಪ್ರದೇಶಗಳು ಮಂಗಳಮುಖಿಯಂತೆ ವೇಷ ಧರಿಸಿ ವಂಚಿಸುವವರ ಅಡ್ಡೆಯಂತಾಗಿದ್ದು, ತಡರಾತ್ರಿ ಈ ಪ್ರದೇಶದಲ್ಲಿ ಜನ ಒಬ್ಬೊಬ್ಬರಾಗಿ ಸಂಚರಿ ಸಲು ಭಯ ಪಡುತ್ತಿದ್ದಾರೆ.
ಇಲ್ಲಿ ಪುರುಷರು ಏಕಾಂಗಿಯಾಗಿ ಸಿಕ್ಕರೆ ಅವರನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ದರೋಡೆ ಮಾಡುವ ಪ್ರಕರಣಗಳು ಹೆಚ್ಚು ತ್ತಿದ್ದು ಹೆಚ್ಚಿನವರು ಮರ‍್ಯಾದೆಗೆ ಅಂಜಿ ಪೊಲೀಸರಲ್ಲಿಗೆ ದೂರು ಕೊಂಡೊ ಯ್ಯುತ್ತಿಲ್ಲ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಕೆಟ್ಟು ನಿಂತಿದ್ದ ಬೈಕನ್ನು ದುರಸ್ಥಿ ಮಾಡುತ್ತಿದ್ದ ಬೈಕ್ ಸವಾರನನ್ನು ಬೆದರಿಸಿದ ಹೆಣ್ಣು ವೇಷದ ಸಲಿಂಗಿಗಳು ಆತನನ್ನು ಬಲವಂತದ ಸೆಕ್ಸ್‌ಗೆ ಬಳಸಿಕೊಂಡು ಹಣ, ಮೊಬೈಲ್ ಕಸಿದುಕೊಂಡು ಪರಾರಿಯಾದ ಘಟನೆ ಎರಡು ದಿನದ ಹಿಂದೆ ಫೋರ‍್ತ್ ಮೈಲ್ ಬಳಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬೈಕ್ ಸವಾರ ಹಣ ಮೊಬೈಲ್ ಜೊತೆ ತನ್ನ ಬೈಕಿನ ದಾಖಲೆಗಳನ್ನೂ ಕಳೆದುಕೊಂಡಿದ್ದಾನೆ.
ಆದರೆ ಮರ್ಯಾದೆಗೆ ಅಂಜಿದ ಬೈಕ್ ಸವಾರ ಪೊಲೀಸರಿಗೆ ದೂರು ನೀಡಲಿಲ್ಲ. ಇಂತಹ ಘಟನೆ ಪ್ರತಿನಿತ್ಯ ಎನ್ನುವಂತೆ ನಡೆಯುತ್ತಿದ್ದರೂ ಮರ್ಯಾದೆಗೆ ಅಂಜಿ ಯಾರೂ ದೂರು ನೀಡುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ತಂಡವೊಂದು ಜನರನ್ನು ದೋಚುವುದನ್ನೇ ದಂಧೆ ಮಾಡಿಕೊಂಡಿದೆ. ವರುಷದ ಹಿಂದೆ ಇದೇ ರೀತಿ ಸಲಿಂಗಿಗಳ ದಾಳಿಗೆ ಸಿಲುಕಿದ ಯುವಕನೊಬ್ಬ ಪ್ರಾಣ ಕಳೆದು ಕೊಂಡ ಘಟನೆ ಮಂಗಳೂರು ರೈಲು ನಿಲ್ದಾಣದಲ್ಲಿ ನಡೆದಿತ್ತು.
ಆದರೆ ಇತ್ತೀಚಿನ ದಿನದಲ್ಲಿ ಆ ಮಟ್ಟದಲ್ಲಿ ಇಲ್ಲವಾದರೂ ಜನರನ್ನು ದೋಚುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ಮೊದಮೊದಲು ಸಲಿಂಗಿಗಳು ಇಲ್ಲವೇ ಮಂಗಳ ಮುಖಿಯರು ತಮ್ಮನ್ನು ಅರಸಿಕೊಂಡು ಬರುವವರಿಗೆ ಸುಖ ನೀಡಿ ಹಣ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಜನಜಾಗೃತಿ ಉಂಟಾಗಿದ್ದು, ಮಂಗಳಮುಖಿಯರ ಸಂಗ ಮಾಡಲು ಜನ ಹಿಂದೇಟು ಹಾಕುತ್ತಿದ್ದ ಕಾರಣ ಇವರು ಅನ್ಯ ದಾರಿ ಹಿಡಿದಿದ್ದಾರೆ. ಸುರತ್ಕಲ್, ಬೈಕಂಪಾಡಿ, ಪಣಂಬೂರು ಹೀಗೆ ನಾನಾ ಭಾಗದಲ್ಲಿ ಮಂಗಳಮುಖಿಯರ ಮತ್ತು ಸಲಿಂಗಿಗಳ ಅಡ್ಡೆಯೇ ಇದ್ದರೂ, ಇಲ್ಲಿನ ಬಹುತೇಕ ಮಂದಿ ತಮ್ಮ ಪಾಡಿಗೆ ತಾವು ಎನ್ನುವಂತೆ ಭಿಕ್ಷೆ ಬೇಡಿ ಬದುಕುತ್ತಿದ್ದಾರೆ. ತಮ್ಮದೇ ಬಾಡಿಗೆ ಮನೆ ನಿರ್ಮಿಸಿ ಜೀವಿಸುತ್ತಿದ್ದಾರೆ. ಆದರೆ ಇನ್ನು ಕೆಲವರು ನಿರ್ಜನ ಪ್ರದೇಶದಲ್ಲಿ ನಿಂತು ವಿಕೃತ ಹಾವಭಾವದ ಮೂಲಕ ತಡರಾತ್ರಿ ಕೆಲಸ ಮುಗಿಸಿ ಬರುವ ಕಾರ್ಮಿಕರನ್ನು, ಟ್ರಕ್, ಲಾರಿ ಡ್ರೈವರ್‌ಗಳನ್ನು ಸೆಳೆದು ಕೊಂಡು ಸುಖದ ಹೆಸರಿನಲ್ಲಿ ದೋಚುತ್ತಿದ್ದಾರೆ. ಏಡ್ಸ್ ರೋಗವನ್ನು ಬಿಟ್ಟಿಯಾಗಿ ಹಂಚುತ್ತಿದ್ದಾರೆ.
ಎಂಸಿಎಫ್‌ನಿಂದ ರಾತ್ರಿ ಶಿಫ್ಟ್ ಮುಗಿಸಿ ಹೊರ ಬರುವವರನ್ನು ಗುರಿಯಾಗಿಸಿಕೊಂಡು, ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಿಂದ ಬರುವ ಕಾರ್ಮಿಕರನ್ನು, ಅದೇ ರೀತಿ ಪಣಂಬೂರು ಟ್ರಕ್ ಯಾರ್ಡ್‌ನಲ್ಲಿರುವ ಟ್ರಕ್ ಡ್ರೈವರ್‌ಗಳನ್ನು ಗುರಿಯಾಗಿಸಿ ಒಂದೊಂದು ತಂಡ ಕಾರ್ಯ ನಿರ್ವಹಿಸುತ್ತಿದೆ. ಹೀಗೆ ದೋಚುವವರಲ್ಲಿ ನೈಜ ಮಂಗಳ ಮುಖಿಯರಿಗಿಂತ ವೇಷಧಾರಿಗಳೇ ಹೆಚ್ಚಿರುವುದು ಬೆಳಕಿಗೆ ಬಂದಿದೆ.
ಎಂಆರ್‌ಪಿಎಲ್, ಒಎನ್‌ಜಿಸಿ ಆರಂಭವಾದ ಬಳಿಕ ಮಂಗಳೂರಿನಲ್ಲಿ ಮಂಗಳ ಮುಖಿಯರ ಕಾಟ ಅಧಿಕವಾಗಿದೆ. ದೂರದೂರಿನಿಂದ ಟ್ರಕ್ ಮತ್ತು ಟ್ಯಾಂಕರ್ ಮೂಲಕ ನಗರಕ್ಕೆ ಬರುವ ಮಂಗಳ ಮುಖಿಯರು ಬಳಿಕ ಇಲ್ಲಿಯೇ ಠಿಕಾಣಿ ಹೂಡುತ್ತಿದ್ದಾರೆ. ಕೆಲವು ಕಡೆ ವಿಕೃತ ಮನೋಭಾವದ ವ್ಯಕ್ತಿಗಳು ತಮ್ಮ ಸುಖಕ್ಕಾಗಿ ಇವರನ್ನೇ ಅರಸಿಕೊಂಡು ಹೋಗುತ್ತಿದ್ದಾರೆ ಹೀಗಾಗಿ ಗಂಡು ವೇಶ್ಯೆಯರಿಗೆ ಈ ದಂಧೆ ಲಾಭದಾಯಕ ಅನಿಸಿಕೊಂಡಿದೆ. ಈ ಕಾರಣದಿಂದಾಗಿ ಸಾಮಾನ್ಯರಂತಿರುವ ಕೆಲವು ಸಲಿಂಗಿಗಳೂ ಕೂಡಾ ರಾತ್ರಿ ವೇಳೆ ವೇಷ ಬದಲಾಯಿಸಿ ಕಮಾಯಿ ನಡೆಸುತ್ತಿದ್ದಾರೆ. ವಿಶೇಷ ಎಂದರೆ ಪಣಂಬೂರು ಬಳಿ ಇರುವ ಕೇಂದ್ರ ಪಡೆಯೊಂದರ ಸಿಬ್ಬಂದಿ ಈ ಸಲಿಂಗಿಗಳ ಖಾಯಂ ಗಿರಾಕಿಗಳಾಗಿದ್ದಾರೆ ಎನ್ನುವ ಅಂಶ ಕೂಡಾ ಬೆಳಕಿಗೆ ಬಂದಿದೆ. ಮಂಗಳ ಮುಖಿ ಮತ್ತು ಸಲಿಂಗಿಗಳಿಗೆ ಅವರಲ್ಲಿ ಹರಡುತ್ತಿರುವ ಲೈಂಗಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಸರಕಾರದಿಂದ ಅನುದಾನ ಪಡೆಯುತ್ತಿರುವ ಹಲವಾರು ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿದ್ದರೂ ಅವರ ಕೈಗೂ ಸಿಲುಕದಂತೆ ಚಾಣಾಕ್ಷ್ಯತನದಿಂದ ಕೆಲಸ ನಿರ್ವಹಿಸುತ್ತಿರುವ ಗಂಡು ವೇಶ್ಯೆಯರು ಒಂದು ರಾತ್ರಿಯಲ್ಲಿ ಕೆಲವು ಸಾವಿರ ದುಡಿಯುತ್ತಿದ್ದಾರೆ. ಈ ಹಣದಲ್ಲಿ ಹೆಚ್ಚಿನ ಹಣ ದೋಚಿದ್ದೇ ಆಗಿದೆ. ಈ ಬಗ್ಗೆ ಪೊಲೀಸರು ನಿಗಾ ಇರಿಸುವ ಅಗತ್ಯ ಇದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ವಿಟ್ಲ: ಮಾರಣಾಂತಿಕ ಹಲ್ಲೆ

Posted by JAYAKIRANA Kirana on | 0 comments | Leave a comment...

ವಿಟ್ಲ: ವಿಟ್ಲದ ಕಲಾಸಿಪಾಳ್ಯ ದಲ್ಲಿ ಪೂರ್ವದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಆರು ಜನರ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾದ ಘಟನೆ ಸೋಮ ವಾರ ಸಂಜೆ ನಡೆದಿದೆ.
ಪೆರುವಾಯಿ ಸಮೀಪದ ಮಾಣಿಲ ನಿವಾಸಿ ವಿಜಯ್ ಕ್ರಾಸ್ತ ಯಾನೆ ವಿಜಯ ಕುಮಾರ್ (೨೯) ಎಂಬವರು ಗಂಭೀರವಾಗಿ ಹಲ್ಲೆಗೊ ಳಗಾಗಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕ್ರಾಸ್ತ ಅವರು ಸೋಮವಾರ ಸಂಜೆ ವಿಟ್ಲ ಕಲಾಸಿಪಾಳ್ಯ ಎಂಬ ಖ್ಯಾತಿಯ ಪ್ರದೇಶದಲ್ಲಿ ನಿಂತು ಕೊಂ ಡಿದ್ದ ಸಂದರ್ಭ ಸಿನಿಮೀಯ ರೀತಿ ಯಲ್ಲಿ ಬಂದ ಆರು ಮಂದಿಯ ತಂಡ ಅವರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಪರಿಣಾಮ ಬೆನ್ನಿನ ಭಾಗಕ್ಕೆ ಗಂಭೀರವಾಗಿ ಗಾಯಗೊಂಡ ಅವರು ನೆಲದಲ್ಲಿ ಒದ್ದಾಡುತ್ತ ಪ್ರಜ್ಞಾಹೀನರಾಗಿ ಬಿದ್ದಿದ್ದರು.ಈ ಬಗ್ಗೆ ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಗಾಯಾಳುವನ್ನು ವಾಹನದ ಮೂಲಕ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಜಯ ಕ್ರಾಸ್ತನ ಮೇಲೆ ಆ ದಿನ ಬೆಳಿಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸರು ರಾಜಿ ಸಂಧಾನ ನಡೆಸಿದ್ದರು. ಹಲ್ಲೆ ನಡೆದಾಗ ಈತ ಮದ್ಯ ಸೇವನೆ ಮಾಡಿದ್ದ ಎನ್ನಲಾಗಿದೆ. ಸೋಮವಾರ ಬೆಳಗ್ಗಿನಿಂದ ಈತ ವಿಟ್ಲದ ಕೆಲ ವ್ಯಕ್ತಿಗಳಲ್ಲಿ ‘ನನಗೆ ರವಿ ಪೂಜಾರಿ ತಂಡದಿಂದ ಹಲ್ಲೆ ನಡೆಯಲಿದೆ ಎಂದು ಹೇಳುತ್ತ ಓಡಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಉಡುಪಿ: ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೊಳಗಾದ ಮಾನವ ಹಕ್ಕು ಆಯೋಗದ ಸಭೆ!

Posted by JAYAKIRANA Kirana on | 0 comments | Leave a comment...

ಉಡುಪಿ: ಇಲ್ಲಿನ ರಜತಾದ್ರಿ ಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಿನ್ನೆ ನಡೆದ ಮಾನವ ಹಕ್ಕು ಆಯೋಗದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ ಜನರಿಲ್ಲದೆ ಮತ್ತು ಸ್ಥಳದಲ್ಲಿ ವಿದ್ಯುತ್ ಹಾಗೂ ಧ್ವನಿವರ್ಧಕಗಳಿಲ್ಲದೇ ಇದ್ದುದರಿಂದಾಗಿ ಜಿಲ್ಲಾಡಳಿತದ ನಿರ್ಲಕ್ಷ್ಯ ಎದ್ದು ತೋರಿ ಸುವಂತಿತ್ತು.
ರಾಜ್ಯ ಮಾನವ ಹಕ್ಕು ಆಯೋ ಗದ ಅಧ್ಯಕ್ಷ ನಾಡೋಜ ಎಸ್.ಆರ್ ನಾಯಕ್ ಸಾರ್ವಜನಿಕರಿಂದ ಅಹ ವಾಲು ಸ್ವೀಕರಿಸಲು ಆಗಮಿಸಿದ್ದರು. ಆದರೆ ಒಂದು ಸಾವಿರ ಮಂದಿ ಕುಳಿತು ಕೊಳ್ಳುವ ಸಭಾಂಗಣದಲ್ಲಿ ನಿನ್ನೆ ಉಪಸ್ಥಿ ತರಿದ್ದವರು ೨೦ ಮಂದಿ ಪತ್ರಕರ್ತರು ಹಾಗೂ ೨೦ ಮಂದಿ ಸಾರ್ವಜನಿಕರು. ಅದೂ ಸಭಾಂಗಣದಲ್ಲಿ ವಿದ್ಯುತ್ ವ್ಯವಸ್ಥೆಯಿಲ್ಲದೇ, ಧ್ವನಿವರ್ಧಕಗಳಿಲ್ಲದೆ ಅಧ್ಯಕ್ಷರು ಅಹವಾಲು ನೀಡುತ್ತಿದ್ದುದು ಪತ್ರಕರ್ತರಿಗಾಗಲಿ, ಸಾರ್ವಜನಿಕರಿ ಗಾಗಲಿ ಕೇಳುತ್ತಿರಲಿಲ್ಲ. ಇದು ಜಿಲ್ಲಾಡ ಳಿತ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರನ್ನು ಕಡೆಗಣಿಸುವಂತಿತ್ತು.
ಇದರ ನಡುವೆಯೂ ಸೇರಿದ್ದ ೨೦ ಮಂದಿ ಪೈಕಿ ಹಲವರು ಆಯೋಗಕ್ಕೆ ಸಂಬಂಧಿಸದ ಪ್ರಶ್ನೆಗಳನ್ನು ಕೇಳಿದರು.
ವಕೀಲರು ಹಾಗೂ ನೋಟರಿ ಆಗಿರುವ ಸದಾಶಿವ ಅಮೀನ್ ಎಂಬ ವರು ಜಿಲ್ಲಾ ಕಮಾಂಡೆಂಟ್ ಹುದ್ದೆಗೆ ತನ್ನನ್ನು ನೇಮಕಾತಿ ಮಾಡುವಂತೆ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೈಮುಗಿದು ಅಲವತ್ತುಕೊಂಡು, ೨೦೦೭ರಲ್ಲಿ ಅರ್ಹರಲ್ಲದ ವ್ಯಕ್ತಿಯನ್ನು ನೇಮಿಸಿದ್ದಾರೆಂದು ಆರೋಪಿಸಿ, ಈ ಬಗ್ಗೆ ನ್ಯಾಯಾಲಯಕ್ಕೆ ದೂರು ನೀಡಿದ್ದೇನೆ ಎಂದರು. ಅದಕ್ಕೆ ಉತ್ತರಿಸಿದ ಎಸ್.ಆರ್.ನಾಯಕ್ ಯಾವುದೇ ಒಂದು ಹುದ್ದೆಗೆ ಆದೇಶ ಮಾಡುವ ಅಧಿಕಾರ ಮಾನವ ಹಕ್ಕು ಆಯೋಗಕ್ಕೆ ಇಲ್ಲ ಎಂದು ಅವರನ್ನು ಹಿಂದಕ್ಕೆ ಕಳುಹಿಸಿದರು.
ಮಂಗಳೂರಿನ ಹಿರಿಯ ವ್ಯಕ್ತಿಯೋರ್ವರು ತಮ್ಮ ಮಗಳಿಗೆ ಮದುವೆಯಾಗುವುದಾಗಿ ಹೇಳಿಕೊಂಡು ಇದೀಗ ಯುವಕನೋರ್ವ ಕೈಕೊಟ್ಟಿದ್ದಾನೆ, ಆಯೋಗ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿಕೊಂಡಾಗ ಇದೊಂದು ಕ್ರಿಮಿನಲ್ ಅಥವಾ ಸಿವಿಲ್ ಪ್ರಕರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಸಲಹೆ ನೀಡಿದರು.
ಮಹೇಶ್ ರಾವ್ ಎಂಬವರು ತಮಗೆ ಸೇರಿದ ಮನೆಯನ್ನು ವಿದ್ಯೋದಯ ಟ್ರಸ್ಟಿಗೆ ೧೧ ತಿಂಗಳ ಮಟ್ಟಿಗೆ ಅಗ್ರಿಮೆಂಟ್ ಮಾಡುವ ಮೂಲಕ ಬಾಡಿಗೆ ನೀಡಿದ್ದಾರೆ. ಆದರೆ ಸಮಯ ಕಳೆದರೂ ಅವರು ಏಳಲು ಕೇಳುತ್ತಿಲ್ಲ ಮತ್ತು ಪತ್ರಕರ್ತರೊಬ್ಬರು ರಾ.ಹೆ.ಯಲ್ಲಿ ಮತ್ತು ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಮೀನಿನ ಲಾರಿಗಳಿಂದ ನೀರು ಚೆಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳಲು ಆದೇಶಿಸಬೇಕು ಎಂದರೆ,
 ಯುಪಿಸಿಎಲ್‌ನ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವುದರಿಂದಾಗಿ ೩೦೨ ಕುಟುಂಬಕ್ಕೆ ತೊಂದರೆಯಾಗಿದೆ. ಇವರಿಗೆ ಪರಿಹಾರ ಕೊಡಬೇಕೆಂದು ಕಂಪೆನಿಗೆ ೨೦೦೯ ರಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ ಸಮ್ಮುಖದಲ್ಲಿ ಜಿಲ್ಲಾಡಳಿತ ಆದೇಶಿಸಿತ್ತು. ಆದರೆ ಇದುವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಕೈರಂಪಣಿ ಮೀನುಗಾರರು ದೂರಿದರು.
ಯುಪಿಸಿಎಲ್ ನಾಗಾರ್ಜುನ ವಿರುದ್ಧ ಧ್ವನಿ ಎತ್ತಿದ ಎಲ್ಲೂರು ಶಶಿಧರ ಶೆಟ್ಟಿ ಎಂಬವರು ಯುಪಿಸಿಎಲ್ ಕಂಪೆನಿ ಬಾವಿಯಿಂದ ಹಾಗೂ ಬೇರೆ ಕಡೆಯ ಬಾವಿಯಿಂದ ಕುಡಿಯುವ ನೀರನ್ನು ತಂದು ಅಧ್ಯಕ್ಷರಿಗೆ ತೋರಿಸಿ ವ್ಯತ್ಯಾಸ ತಿಳಿಸಿದರು. ಯುಪಿಸಿಎಲ್ ಬಾವಿಯ ನೀರನ್ನು ಹತ್ತು ಗ್ರಾಮಗಳಿಗೆ ಸ್ನಾನ ಮತ್ತು ಕುಡಿಯಲು ಜನರು ಉಪಯೋಗಿಸುತ್ತಾರೆ. ಅಲ್ಲದೆ ಕಲುಷಿತ ನೀರಿನಿಂದಾಗಿ ಈಗಾಗಲೇ ಜಾನುವಾರುಗಳು ಸಾಯುತ್ತಿವೆ ಮುಂದೆ ಮನು ಷ್ಯರು ಸಾಯುವ ಸ್ಥಿತಿ ಎದುರಾಗಬಹುದು ಎಂದರು.
ರಾಜ್ಯದಲ್ಲಿ ೨೦೦೭ರ ಅಕ್ಟೋಬರ್‌ನಲ್ಲಿ ಆರಂಭಗೊಂಡ ಆಯೋಗಕ್ಕೆ ಮಾ.೩೧ರ ತನಕ ಒಟ್ಟು ೩೩೦೬೪ ಪ್ರಕರಣಗಳು ದಾಖಲಾಗಿದೆ. ಅದರಲ್ಲಿ ಮೂವತ್ತು ಸಾವಿರಕ್ಕೂ ಮಿಕ್ಕಿದ ಪ್ರಕರಣ ಮಾಧ್ಯಮಗಳಲ್ಲಿ ಬಂದ ವರದಿ ಆಧಾರದಂತೆ ದಾಖಲಿಸಲಾಗಿದೆ ೨೨೦೧೨ ಪ್ರಕರಣಗಳನ್ನು ಇತ್ಯರ್ಥಗೊಳಿ ಸಲಾಗಿದೆ. ೧೧೦೫೨ ಬಾಕಿ ಇದೆ. ಉಡುಪಿ ಜಿಲ್ಲೆಯಲ್ಲಿ ೫೭೯ ಪ್ರಕರಣ ದಾಖಲಾಗಿದ್ದು, ಅದರಲ್ಲಿ ೩೬೩ ಇತ್ಯರ್ಥಗೊಳಿಸಲಾಗಿದೆ. ೨೧೬ ಬಾಕಿಯಿದೆ. ದ.ಕ ದಲ್ಲಿ ೧೫೮೮ ಪ್ರಕರಣ ದಾಖಲಾಗಿದ್ದು. ೬೩೬ ಬಾಕಿ ಹಾಗೂ ೯೫೨ ಇತ್ಯರ್ಥಗೊಳಿಸಲಾಗಿದೆ ಎಂದು ವಿವರ ನೀಡಿದರು.

ವಿದ್ಯಾರ್ಥಿಗೆ ಇರಿತ

Posted by JAYAKIRANA Kirana on | 0 comments | Leave a comment...

ವಿಟ್ಲ: ಯುವಕನೋರ್ವ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಬಾಟಲಿ ಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ವಿಟ್ಲ ಕಂಬಳಬೆಟ್ಟು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕಂಬಳಬೆಟ್ಟು ಶಾಂತಿ ನಗರ ನಿವಾಸಿ ಸುಗಮ ಬಸ್ಸಿನ ಚಾಲಕ ರಿಜ್ವಾನ್ ಅವರ ಪುತ್ರ ಅಲ್‌ಹಾನ್ ಖಾನ್(೧೬) ಎಂಬವನೇ ಗಂಭೀರವಾಗಿ ಗಾಯ ಗೊಂಡಿದ್ದು, ವಿಟ್ಲದ ಸುರಕ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಸಂಬಂಧ ಆರೋಪಿ ಕಂಬಳಬೆಟ್ಟು ನಿವಾಸಿ ಸಿರಾಜ್ ಎಂಬಾತನ ಮೇಲೆ ವಿದ್ಯಾರ್ಥಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾನೆ.
ಘಟನೆ ವಿವರ: ಸುಗಮ ಬಸ್ಸಿನ ಚಾಲಕ ರಿಜ್ವಾನ್ ಅವರ ಪುತ್ರ ಪುತ್ತೂರಿನ ಮುರ ಎಂ.ಪಿ.ಎಂ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಅಲ್‌ಹಾನ್‌ಖಾನ್ ಎಂಬಾತ ಸೋಮವಾರ ಶಾಲೆ ಬಿಟ್ಟು ಬಳಿಕ ಟ್ಯೂಶನ್‌ಗೆ ತೆರಳಿದ್ದ. ಬಳಿಕ ರಾತ್ರಿ ಹೊತ್ತು ಕಂಬಳಬೆಟ್ಟು ಶಾಂತಿ ನಗರದಲ್ಲಿರುವ ಅಂಗಡಿ ಯೊಂದಕ್ಕೆ ಗಮ್ ತರಲೆಂದು ತೆರಳಿದ್ದ ಎನ್ನಲಾಗಿದೆ. ಈ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಉರಿಮಜಲು ನಿವಾಸಿ ಸಿರಾಜ್ ಎಂಬಾತ ಅಲ್‌ಹಾನ್‌ನೊಂದಿಗೆ ಜಗಳ ತೆಗೆದು ಆತನ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಗಾಯಾಳು ಆರೋಪಿಸಿದ್ದಾನೆ. ಇವರಿಬ್ಬರ ನಡುವೆ ಮಾತಿನ ಚಕಮುಕಿ ನಡೆದು ಸಿರಾಜ್ ಬಾಟಲಿ ಹಾಗೂ ಬ್ಲೇಡ್‌ನಿಂದ ಆತನ ಎಡ ಕೈಗೆ ಇರಿದಿದ್ದಾನೆ ಎಂದು ಗಾಯಾಳು ದೂರಿದ್ದಾನೆ. ಅದರ ತೀವ್ರತೆಗೆ ಆತನ ಎಡಕೈಗೆ ೧೨ ಗಾಯದ ಗುರುತುಗಳು ಕಾಣಿಸಿಕೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಲ್‌ಹಾನ್‌ನನ್ನು ಸ್ಥಳೀಯರು ವಿಟ್ಲ ಸುರಕ್ಷಾ ಆಸ್ಪತ್ರೆ ದಾಖಲು ಮಾಡಿದ್ದಾರೆ.

ಬೀದಿನಾಯಿಯಂತೆ ನಿತ್ಯಾಗೆ ಸಂತಾನಹರಣ ಚಿಕಿತ್ಸೆ ಅಗತ್ಯ

Posted by JAYAKIRANA Kirana on | 0 comments | Leave a comment...

ಮುನಿರತ್ನಂ ನಾಯ್ಡು ಲೇವಡಿ
ಬೆಂಗಳೂರು: ಬೃಹತ್ ಬೆಂಗ ಳೂರು ಮಹಾನಗರಪಾಲಿಕೆ ಬೀದಿ ನಾಯಿಗಳಿಗೆ ಸಂತಾನ ಆಗದಂತೆ ಇಂಜಕ್ಷನ್ ನೀಡುತ್ತದೆ. ಹಾಗೆಯೇ ಡೋಂಗಿ ಸ್ವಾಮಿ ನಿತ್ಯಾನಂದನಿಗೆ ಸಂತಾನ ಆಗದಂತೆ ಶಸ್ತ್ರಚಿಕಿತ್ಸೆ ಮಾಡ ಬೇಕೆಂದು ಕಾಂಗ್ರೆಸ್ ಕಾರ್ಪೊರೇಟರ್ ಮತ್ತು ನಿರ್ಮಾಪಕರಾದ ಮುನಿರತ್ನಂ ನಾಯ್ಡು ಲೇವಡಿ ಮಾಡಿದ್ದಾರೆ.
ಕಾವಿ ಹಾಕಿದವರೆಲ್ಲಾ ಸ್ವಾಮೀಜಿ ಗಳಲ್ಲ, ನಮ್ಮ ಹಿಂದೂ ಮತ್ತು ಕನ್ನಡ ಸಂಸ್ಕೃತಿಗೆ ನಿತ್ಯಾನಂದನಿಂದ ಬಹು ದೊಡ್ಡ ಗಂಡಾಂತರವಿದೆ. ನಿತ್ಯನ ಆಶ್ರಮದಲ್ಲಿ ನಡೆಯಬಾರದ ದಂಧೆ ಗಳು ನಡೆಯುತ್ತಿವೆ. ಸರಕಾರ ಈ ಬಗ್ಗೆ ಸೂಕ್ತ, ದಿಟ್ಟ ನಿರ್ಧಾರ ತುರ್ತಾಗಿ ತೆಗೆದುಕೊಳ್ಳಬೇಕಾಗಿದೆ ಎಂದು ಮುನಿ ರತ್ನಂ ಸರಕಾರವನ್ನು ಆಗ್ರಹಿಸಿದ್ದಾರೆ.
ಹಿಂದೂ ಸಂಪ್ರದಾಯಕ್ಕೆ ವಿರುದ್ಧ ವಾಗಿ ಹೆಣ್ಣು ಮಕ್ಕಳನ್ನು ಅಲ್ಲಿ ಬಳಸಿಕೊಳ್ಳಲಾಗುತ್ತದೆ. ಮಾಡಬಾರದ ಅಕ್ರಮಗಳು ನಿತ್ಯನ ಆಶ್ರಮದಲ್ಲಿ ನಡೆಯುತ್ತಿವೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಸ್ಥಳೀಯ ಅಧಿಕಾರಿಗಳು, ಪೊಲೀಸರು ಮತ್ತು ಸರಕಾರ ಇನ್ನಾದರೂ ನಿತ್ಯಾನಂದನನ್ನು ವಶಕ್ಕೆ ತೆಗೆದುಕೊಳ್ಳದಿದ್ದರೆ ಇಡೀ ಸಮಾಜ ತಲೆತಗ್ಗಿಸುವಂತ ಕಾರ್ಯಗಳು ಆತ ಮುಂದುವರಿಸಿತ್ತಾನೆ ಎಂದು ಮುನಿರತ್ನಂ ಸರಕಾರವನ್ನು ಎಚ್ಚರಿಸಿದ್ದಾರೆ.
ನನ್ನ ಕಠಾರಿವೀರ ಸುರಸುಂದರಾಂಗಿ ಚಿತ್ರದಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಆಗಿದೆ ಎಂದು ಹಿಂದೂಪರ ಸಂಘಟನೆಗಳು, ಸ್ವಾಮೀಜಿಗಳು ಹೋರಾಟಕ್ಕೆ ಇಳಿದರು. ಉಡುಪಿ ಶ್ರೀಕೃಷ್ಣ, ಮುಖ್ಯಪ್ರಾಣ ದೇವರಿಗೆ ತಪ್ಪು ಕಾಣಿಕೆ ಹಾಕಿಸಲಾಯಿತು. ಈಗ ನಿತ್ಯಾನಂದನಿಂದ ಹಿಂದೂ ಸಂಸ್ಕೃತಿಗೆ ಅವಮಾನ ಆಗುತ್ತಿದ್ದರೂ ಯಾಕೆ ಸ್ವಾಮೀಜಿಗಳು ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ಸ್ವಾಮೀಜಿಗಳಿಗೆ ಈಗ ಹಿಂದೂ ಸಂಸ್ಕೃತಿಗೆ ನಿತ್ಯಾನಂದನಿಂದ ಅಪಾಯ ಕಾದಿದೆ ಎಂದು ಅನಿಸುವುದಿಲ್ಲವೇ. ಯಾಕೆ ಸ್ವಾಮೀಜಿಗಳು ಈಗ ತಮ್ಮ ನಿಲುವನ್ನು ಸ್ಪಷ್ಟ ಪಡಿಸುತ್ತಿಲ್ಲ ಎಂದು ಪರೋಕ್ಷವಾಗಿ ಉಡುಪಿ ಪೇಜಾವರ ಮತ್ತು ಶಿರೂರು ಸ್ವಾಮೀಜಿಗಳಿಗೆ ಮುನಿರತ್ನಂ ಸವಾಲೆಸೆದಿದ್ದಾರೆ.

ನಿತ್ಯನ ಆಶ್ರಮಕ್ಕೆ ಬೀಗ ಜಡಿದು ಬಂಧಿಸಿ

Posted by JAYAKIRANA Kirana on | 0 comments | Leave a comment...

ಬಿಡದಿ ಡಿಸಿಗೆ ಮುಖ್ಯಮಂತ್ರಿ ಆದೇಶ
ಬೆಂಗಳೂರು: ರಾಸಲೀಲೆ ವಿವಾ ದದ ಬಿಡದಿ ನಿತ್ಯಾನಂದ ಸ್ವಾಮಿ ಆಶ್ರಮದಲ್ಲಿನ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ನಿತ್ಯಾನಂದನ ಆಶ್ರಮಕ್ಕೆ ಬೀಗ ಹಾಕುವಂತೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಜಿಲ್ಲಾಧಿ ಕಾರಿಗೆ ಸೋಮವಾರ ಸೂಚನೆ ನೀಡಿ ದ್ದಾರೆ.
ನಿತ್ಯಾನಂದನ ವಿರುದ್ಧ ರಾಜ್ಯ ವ್ಯಾಪಿ ಆಕ್ರೋಶ ಹೆಚ್ಚಾದ ಹಿನ್ನೆಲೆ ಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ನಿನ್ನೆ ಪ್ರಕರಣಕ್ಕೆ ಸಂಬಂ ಧಿಸಿದಂತೆ ವಿಧಾನಸೌಧದಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾ ಡಿದ ಅವರು, ವಿವಾದಿತ ನಿತ್ಯಾನಂದ ಸ್ವಾಮಿಯನ್ನು ಕೂಡಲೇ ಬಂಧಿಸುವಂತೆ ಗೃಹ ಸಚಿವ ಆರ್.ಅಶೋಕ್ ಅವರಿಗೆ ಸೂಚನೆ ನೀಡಿದ್ದಾರೆ. ಅದೇ ರೀತಿ ನಿತ್ಯಾನಂದ ಸ್ವಾಮಿಗೆ ನೀಡಲಾಗಿರುವ ಜಾಮೀನು ರದ್ದು ಮಾಡಲು ಕಾನೂನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಘಟನೆ ನಂತರ ನಾಪತ್ತೆಯಾಗಿರುವ ನಿತ್ಯಾನಂದ ಸ್ವಾಮಿ ಶೋಧಕ್ಕೆ ಸರ್ಚ್ ವಾರಂಟ್ ಹೊರಡಿಸಿರುವುದಾಗಿ ತಿಳಿಸಿದ ಅವರು, ಪ್ರಾದೇಶಿಕ ಆಯುಕ್ತರಿಂದ ತನಿಖೆಗೆ ಆದೇಶ ನೀಡಿರುವುದಾಗಿ ವಿವರಿಸಿದರು.
ಅಲ್ಲದೇ ಸ್ವಾಮಿ ನಿತ್ಯಾನಂದನ ಬಿಡದಿ ಆಶ್ರಮದ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ಸರ್ಕಾರ ಚಿಂತಿಸುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದರು.
ನಿತ್ಯಾನಂದನನ್ನು ಮುಟ್ಟಲು ಸಾಧ್ಯವೇ?
ಮುಖ್ಯಮಂತ್ರಿ ಸದಾನಂದ ಗೌಡರು ಕೆಲ ಒತ್ತಡಗಳಿಗೆ ಜೋತು ಬಿದ್ದು ಬಂಧನಕ್ಕೆ ಆದೇಶ ನೀಡಿದ್ದರೂ ನಿತ್ಯನ ಬಂಧನ ಅಷ್ಟು ಸುಲಭವಲ್ಲ ಎನ್ನಲಾಗಿದೆ. ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಕೋರ್ಟಿನಿಂದ ಜಾಮೀನು ಪಡೆದಿರುವ ಚಾಣಾಕ್ಷ ಸ್ವಾಮೀಜಿ ನಿತ್ಯಾನಂದ ಎಲ್ಲಿದ್ದಾನೆ ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ. ಮೊದಲು ನಿತ್ಯಾನಂದನ ಜಾಮೀನು ರದ್ದಾಗಬೇಕು. ಇದಕ್ಕೆ ಕಾನೂನು ಮೂಲಕ ಸರ್ಕಾರ ಹೋರಾಟ ನಡೆಸಬೇಕಾಗುತ್ತದೆ. ಸಿಎಂ ಸದಾನಂದ ಗೌಡ ಕೂಡಾ ಈ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸುವಂತೆ ಗೃಹ ಇಲಾಖೆಗೆ ಸೂಚಿಸಿದ್ದಾರೆ. ಇನ್ನು ನಿತ್ಯಾನಂದ ಈಗೆಲ್ಲಿದ್ದಾನೆ ಎಂಬ ಬಗ್ಗೆಯೂ ಸ್ಪಷ್ಟವಾಗಿ ಯಾರೊಬ್ಬರಿಗೂ ಮಾಹಿತಿಯಿಲ್ಲ. ನೂರಾರು ಕೇಂದ್ರಗಳನ್ನು ಹೊಂದಿರುವ ನಿತ್ಯಾನಂದನನ್ನು ಬಂಧಿಸಲು ಕೇವಲ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದರೆ ಸಾಲದು. ಕೇಂದ್ರ ಸರ್ಕಾ ರವೂ ಈ ನಿಟ್ಟಿನಲ್ಲಿ ಕಾರ್ಯಪೃವೃತ್ತವಾಗಬೇಕಿದೆ. ಯಾಕೆಂದರೆ ನಿತ್ಯಾನಿಗೆ ದೇಶದ ಬಹುತೇಕ ಕಡೆಗಳಲ್ಲಿ ಆಶ್ರಮಗಳಿವೆ. ಹಾಗಾಗಿ ನಿತ್ಯಾನನ್ನು ಅಷ್ಟು ಸುಲಭದಲ್ಲಿ ಮುಟ್ಟಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಸರ್ಕಾರವನ್ನು ಕಾಡು ತ್ತಿದೆ ಎನ್ನಲಾಗಿದೆ.

ಹೆದ್ದಾರಿ ಕಾಮಗಾರಿ ಸ್ಥಗಿತ, ಮುಂದೆ ಹೇಗೆ?

Posted by JAYAKIRANA Kirana on | 0 comments | Leave a comment...

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ
ಮಂಗಳೂರು: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ ಹೆದ್ದಾರಿ ಕಾಮಗಾರಿಯ ಅವಸ್ಥೆ. ಇರ್ಕಾನ್ ಕಂಪೆನಿಯವರು ಪಂಚ ವಾರ್ಷಿಕ ಮುಗಿದು ಆರನೆ ವರ್ಷಕ್ಕೆ ಕಾಲಿಟ್ಟರೂ ಸುರತ್ಕಲ್ ಬಿ.ಸಿ.ರೋಡ್ ಮಧ್ಯದಲ್ಲಿಯ ಕಾಮಗಾರಿ ಪೂರ್ಣಗೊ ಳಿಸಿಲ್ಲ. ಇರ್ಕಾನ್‌ನವರನ್ನು ಅಣಕಿಸು ವಂತೆ ನವಯುಗ ಕನ್‌ಸ್ಟ್ರಕ್ಷನ್ ಸಂಸ್ಥೆ ಯವರು ಗಮನ ಸೆಳೆಯುವ ಕಾಮಗಾರಿ ನಡೆಸುತ್ತಿದ್ದರೂ ಈಗ ಅದಕ್ಕೂ ಕಡಿವಾಣ ಬಿದ್ದಿದೆ.
ಇರ್ಕಾನ್ ಸಂಸ್ಥೆ ತನ್ನದೆ ಲೋಪ ಗಳಿಂದ ಆಮೆಗತಿಯ ಕಾಮಗಾರಿ ನಡೆಸಿ ಮಂಗಳೂರು ನಗರ ವಾಸಿ ಗಳನ್ನು ಸಂಕಷ್ಟದಲ್ಲಿ ಇಟ್ಟಿದ್ದರೆ, ಇರ್ಕಾನಗಿಂತ ಎರಡು ಪಟ್ಟು ಹೆಚ್ಚು ವೇಗದಲ್ಲಿ ಕಾಮಗಾರಿ ನಡೆಸುತ್ತಿರುವ ನವಯುಗ ಕನ್‌ಸ್ಟ್ರಕ್ಷನ್‌ನವರು ಲೋಪ ಗಳನ್ನು ಬದಿಗೊತ್ತಿ ಮಾದರಿ ಎಂಬಂ ತಹ ಕಾಮಗಾರಿ ನಡೆಸಿ ಸಾರ್ವಜನಿಕರ ಮುಖ್ಯವಾಗಿ ವಾಹನ ಚಾಲಕರ ಗಮನ ಸೆಳೆದಿತ್ತು. ಕುಂದಾಪುರದಿಂದ ಸುರತ್ಕಲ್ ಹಾಗೂ ಪಂಪ್‌ವೆಲ್‌ನಿಂದ ತಲಪಾಡಿ ವರೆಗೆ ರಾಷ್ಟ್ರೀಯ ಹೆದ್ದಾರಿ ೬೬ ಚತು ಷ್ಪಥಗೊಳಿಸುವ ಕಾಮಗಾರಿ ನಡೆಯುತ್ತಿರುವ ವೇಗ ಗಮನಿಸಿದವರು ಮುಂದಿನ ಮಳೆಗಾಲಕ್ಕಿಂತ ಪೂರ್ವ ಚೆಂದದ ಹೆದ್ದಾರಿಯಲ್ಲಿ ಸಾಗುವ ಕನಸು ಕಾಣುತ್ತಿದ್ದರು. ಆದರೆ ರಾಜ್ಯ ಹಾಗೂ ಪಕ್ಕದ ಆಂಧ್ರಪ್ರದೇಶದಲ್ಲಿಯ ರಾಜಕೀಯ ಹೊಯ್ದಾಟ ಹೆದ್ದಾರಿ ಕಾಮಗಾರಿಯ ಮೇಲೂ ಪರಿಣಾಮ ಬೀರಿದ್ದು, ತ್ವರಿತವಾಗಿ ಸಾಗುತ್ತಿದ್ದ ಕಾಮಗಾರಿ ತಕ್ಷಣದಲ್ಲಿ ಸ್ಥಗಿತಗೊಂಡಿದೆ.
ನವಯುಗ ಕನ್‌ಸ್ಟ್ರಕ್ಷನ್ ಕಂಪೆ ನಿಯ ಮಾಲಕ ಆಂಧದ ವೈಎಸ್‌ಆರ್ ಕಾಂಗ್ರೆಸ್ ಮುಖಂಡ ಜಗನ್. ಈತನ ಬಂಧನದೊಂದಿಗೆ ಈ ಕಂಪೆನಿಯ ವ್ಯವಹಾರ ಕೂಡ ಹಠಾತ್ ಸ್ಥಗಿತಗೊಂ ಡಿದೆ. ಜಗನ್‌ಗೆ ಸೇರಿದ ಎಲ್ಲ ಕಂಪೆನಿ ಗಳ ವ್ಯವಹಾರ ಸ್ಥಗಿತಗೊಳಿಸುವಂತೆ ಸಿಬಿಐ ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕರಾವಳಿ ಕರ್ನಾಟಕದ ಪ್ರಮುಖ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿ ತಡೆಯಿಂದ ಕೇವಲ ಕರ್ನಾಟಕ ಕರಾವಳಿ ಮಾತ್ರವಲ್ಲ ಈ ದಾರಿಯಲ್ಲಿ ಸಾಗುವ ಎಲ್ಲ ಪ್ರಯಾ ಣಿಕರ ಮೇಲೂ ನೇರ ಪ್ರಯಾಣ ಬೀರಲಿದೆ. ಮಹಾರಾಷ್ಟ್ರ, ಗೋವಾ ಮತ್ತು ಕೇರಳಕ್ಕೆ ನೇರ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದಾಗಿದೆ ಎಂಬುದು ಗಮನಿಸ ಬೇಕಾದ ಅಂಶ.
ತಲಪಾಡಿಯಿಂದ ಪಂಪ್‌ವೆಲ್ ವರೆಗಿನ ೧೫ ಕಿ.ಮೀ. ಹಾಗೂ ಸುರತ್ಕಲ್ ನಿಂದ ಕುಂದಾಪುರದವರೆಗಿನ ೭೫ಕಿ. ಮೀ. ಕಾಮಗಾರಿ ಭರದಿಂದ ಸಾಗು ತ್ತಿತ್ತು. ಈ ಎರಡು ಕಾಮಗಾರಿಗಳ ಮಧ್ಯದಲ್ಲಿ ಸುರತ್ಕಲ್‌ನಿಂದ ಪಂಪ್‌ವೆಲ್ ವರೆಗೆ ಇರ್ಕಾನ್ ಕಂಪೆನಿ ಆರು ವರ್ಷಗಳಿಂದ ನಡೆಸಿದ ಕಾಮಗಾರಿಯ ಎರಡು ಪೆಟ್ಟು ಕೆಲಸವನ್ನು ನವಯುಗ ದವರು ಆರೇ ತಿಂಗಳಲ್ಲಿ ಮುಗಿಸಿದ್ದರು ಎಂಬುದನ್ನು ಗಮನಿಸಿದರೆ ಕಾಮ ಗಾರಿಯ ವೇಗವನ್ನು ಅಂದಾಜಿಸ ಬಹುದು. ಒಟ್ಟು ೮೦೪ ಕೋಟಿ ರೂ.ಗಳ ಚತುಷ್ಪಥ ಕಾಮಗಾರಿ ಒಂದು ವರ್ಷ ದಿಂದ ವೇಗ ಪಡೆದಿತ್ತು. ಹಗಲು ರಾತ್ರಿ ಕೆಲಸ ನಡೆಯುತ್ತಿತ್ತು. ಆದರೆ ಕೋರ್ಟ್ ಆದೇಶ ಕಾಮಗಾರಿಗೆ ತಡೆಯೊಡ್ಡಿದೆ. ಸರಾಗ ಓಡಾಟದ ಕನಸು ಮತ್ತೆ ನನೆಗುದಿಗೆ ಬಿದ್ದಿದೆ.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

ರಿಚರ್ಡ್ಸ್‌ಗೆ ಸೆಡ್ಡು ಹೊಡೆದ ರಾಮ್‌ದಿನ್‌ಗೆ ಪಶ್ಚಾತ್ತಾಪ

Posted by JAYAKIRANA Kirana on | 0 comments | Leave a comment...

ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಶತಕ ಸಿಡಿಸಿದ ನಂತರ ತಂಡದ ಮಾಜಿ ದಿಗ್ಗಜ ಆಟಗಾರ ವಿವಿಯನ್ ರಿಚರ್ಡ್ಸ್‌ಗೆ ಆಕ್ರೋಶಭರಿತ ಸಂದೇಶ ತೋರಿಸಿದ್ದ ವೆಸ್ಟ್ ಇಂಡೀಸ್‌ನ ಕೀಪರ್ ದಿನೇಶ್ ರಾಮ್‌ದೀನ್ ಈಗ ತನ್ನ ಈ ನಡೆಗೆ ಪಶ್ಚಾತಾಪ ಪಟ್ಟುಕೊಂಡಿದ್ದಾರೆ. 
ಪಂದ್ಯದಲ್ಲಿ ಶತಕ ಸಿಡಿಸಿದ ನಂತರ ರಾಮ್‌ದೀನ್ ನೇರವಾಗಿ ತನ್ನ ಜೇಬಿನಿಂದ ಸಂದೇಶ ಬರೆದ ಕಾರ್ಡ್ ಛಾಯಾಗ್ರಾಹಕರಿಗೆ ತೋರಿಸಿದ್ದರು. ಕಾರ್ಡ್‌ನಲ್ಲಿ ‘ಯಾ ವಿವ್ ಟಾಕ್ ನಾ (ಈಗ ಮಾತನಾಡಿ ವಿವ್) ಎಂದು ಬರೆದಿತ್ತು. ಯಾಕೆಂದರೆ ವಿವ್ ಈ ಹಿಂದೆ ರಾಮ್‌ದೀನ್‌ರ ಕಳಪೆ ಪ್ರದರ್ಶನದ ಬಗ್ಗೆ ಟೀಕಿಸಿದ್ದರು. ಈಗ ರಾಮ್‌ದೀನ್ ಈ ರೀತಿಯ ವರ್ತನೆ ತೋರಿಸಿದ್ಕಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. 
ವಿವಿಯನ್ ನನ್ನ ವಿರುದ್ಧ ತನ್ನ ಹಿಂದಿನ ಪತ್ರಿಕಾ ಹೇಳಿಕೆಯಲ್ಲಿ ಟೀಕೆ ಮಾಡಿದ್ದರು. ಇದು ನನಗೆ ಭಾವನಾತ್ಮಕವಾಗಿ ನೋವು ತಂದಿತ್ತು. ಆದರೆ ಈ ಬಗ್ಗೆ ನಾನು ಅವರಲ್ಲಿ ಕ್ಷಮೆ ಕೇಳಲು ಬಯಸುತ್ತೇನೆ. ಅವರು ನನ್ನನ್ನು ಟೀಕಿಸಿದಾಗ ನನಗೆ ಉತ್ತಮ ಪ್ರದರ್ಶನ ನೀಡುವ ಪ್ರಬಲ ಇಚ್ಛೆಯಾಯಿತು. ಹಾಗೆ ಪಂದ್ಯದಲ್ಲಿ ಶತಕ ಸಿಡಿಸಿದ ನಂತರ ಆ ರೀತಿ ನಡೆದುಕೊಂಡಿದ್ದೆ. ಇದಕ್ಕೆ ನಾನು ತುಂಬಾ ಖೇದ ವ್ಯಕ್ತಪಡಿಸುತ್ತೇನೆ. ನನಗೆ ಯಾರಿಗೂ ನೋವು ಮಾಡುವ ಉದ್ದೇಶವಿಲ್ಲ, ಭಾವನಾ ತ್ಮಕವಾಗಿ ಮಾತ್ರ ನಾನು ಈ ರೀತಿ ನಡೆದುಕೊಂಡಿದ್ದೆ. ವಿವಿಯನ್ ದೇಶ ಕಂಡ ಅತ್ಯದ್ಭುತ ಆಟಗಾರನಾಗಿದ್ದು, ಅವರನ್ನು ನಾನು ತುಂಬಾ ಗೌರವಿಸುತ್ತೇನೆ ಎಂದು ತಿಳಿಸಿರುವ ರಾಮ್‌ದೀನ್ ತಂಡಕ್ಕಾಗಿ ಇನ್ನೂ ಉತ್ತಮ ಪ್ರದರ್ಶನ ನೀಡಲು ಕಾತುರನಾಗಿದ್ದೇನೆ ಎಂದು ಹೇಳಿದರು. 

ವಿಸ್ಡನ್ ಗೌರವಕ್ಕೆ ಪಾತ್ರರಾದ ಸಚಿನ್

Posted by JAYAKIRANA Kirana on | 0 comments | Leave a comment...

ದುಬೈ: ದಾಖಲೆ ನಿರ್ಮಿಸುವು ದಕ್ಕಾಗಿಯೇ ಕ್ರಿಕೆಟ್‌ಗೆ ಪ್ರವೇಶ ಪಡೆದಂ ತಿರುವ ವಿಶ್ವದ ದಿಗ್ಗಜ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಮುಡಿಗೆ ಮತ್ತೊಂದು ಮಹೊನ್ನತ ಪ್ರಶಸ್ತಿ ಸೇರಿಕೊಂಡಿದೆ. ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ತೋರಿರುವ ಸಚಿನ್ ನಿನ್ನೆ ವಿಸ್ಡನ್ ಇಂಡಿಯಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಳೆದ ಏಶ್ಯಾ ಕಪ್ ವೇಳೆ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸುವ ಮೂಲಕ ಕ್ರಿಕೆಟ್‌ನಲ್ಲಿ ತನ್ನ ೧೦೦ನೇ ಸೆಂಚುರಿ ಸಿಡಿಸಿದ್ದಕ್ಕಾಗಿ ಈ ಪ್ರಶಸ್ತಿ ಪಡೆದಿದ್ದಾರೆ. 
ಫಿಡೆಲಿಸ್‌ವಲ್ಡ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಚಿನ್‌ಗೆ ಹರಳುಗಳಿಂದ ಮಾಡಿದ ಟ್ರೋಫಿಯನ್ನು ಹಸ್ತಾಂತರಿಸಲಾಯಿತು. ಪ್ರಶಸ್ತಿಯ ಮೇಲ್ಬಾಗದಲ್ಲಿ ಕ್ರಿಕೆಟ್ ಚೆಂಡಿನ ನಿರ್ಮಾಣವಿದೆ. ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ೪೯ ಹಾಗೂ ಟೆಸ್ಟ್‌ನಲ್ಲಿ ೫೧ ಶತಕಗಳು ಸಚಿನ್ ಬ್ಯಾಟ್‌ನಿಂದ ಹರಿದು ಬಂದಿದೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಎರಡೂ ವಿಭಾಗದಲ್ಲೂ ಹತ್ತು ಸಾವಿರಕ್ಕೂ ಹೆಚ್ಚು ರನ್ ಬಾರಿಸಿರುವ ಸಚಿನ್ ಅರ್ಹವಾಗಿಯೇ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚಿಗಷ್ಟೇ ಸಚಿನ್ ರಾಜ್ಯಸಭಾ ಸದಸ್ಯಸತ್ವವನ್ನು ಪಡೆದುಕೊಂಡಿದ್ದರು. ಅಲ್ಲದೆ ಸಚಿನ್‌ಗೆ ‘ಭಾರತರತ್ನ ಪ್ರಶಸ್ತಿ ನೀಡಬೇಕೆಂಬ ಕೂಗು ಈಗ ಬಲವಾಗಿ ಕೇಳಿಕೊಳ್ಳುತ್ತಿದೆ.  

ಲಂಡನ್ ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡ ಪ್ರಕಟ ಮುನ್ನಡೆಸಲಿರುವ ಛೇತ್ರಿ, ವಾಲ್ಮಿಕಿಗೆ ಖೊಕ್

Posted by JAYAKIRANA Kirana on | 0 comments | Leave a comment...

ದೆಹಲಿ: ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯಲಿರುವ ಒಲಿಂ ಪಿಕ್ಸ್ ಟೂರ್ನಿಗೆ ಭರತ್ ಛೇತ್ರಿ ನೇತೃತ್ವದ ೧೬ ಆಟಗಾರರ ಭಾರತದ ಹಾಕಿ ತಂಡವನ್ನು ನಿನ್ನೆ ಆಯ್ಕೆ ಗೊಳಿಸಲಾಗಿದೆ. ಆದರೆ ಪ್ರಮುಖ ಆಟಗಾರರಾಗಿದ್ದ ರೂಪಿಂದರ್‌ಪಾಲ್ ಸಿಂಗ್ ಹಾಗೂ ಗಾಯಕ್ಕೆ ತುತ್ತಾಗಿ ರುವ ಯುವರಾಜ್ ವಾಲ್ಮಿಕಿಗೆ ತಂಡ ದಿಂದ ಖೊಕ್ ನೀಡಲಾಗಿದೆ. ಟೂರ್ನಿ ಜುಲೈ ೨೭ರಿಂದ ಅಗಸ್ಟ್ ೧೨ರವರೆಗೆ ನಡೆಯಲಿದೆ. ಸರ್ವಾನ್ ಜಿತ್ ಸಿಂಗ್ ಹಾಗೂ ಕೊಥಲ್ಜಿತ್ ಸಿಂಗ್ ತಂಡದ ಸ್ಟಾಂಡ್‌ಬಾಯ್ ಗಳಾಗಿ ನೇಮಕ ಗೊಂಡಿದ್ದು, ಒಂದು ವೇಳೆ ಆಯ್ಕೆಯಾದ ೧೬ ಆಟಗಾರರ ಪೈಕಿ ಯಾರಾದರೂ ಗಾಯಕ್ಕೆ ಸಿಲುಕಿ ದರೆ ಇವರಿಬ್ಬರ ಸೇವೆ ಲಭಿಸಲಿದೆ. ಪುಣೆಯ ಬಾಲೆವಾಡಿ ಕಾಂಪ್ಲಾಕ್ಸ್‌ನಲ್ಲಿ ನಡೆದ ಎರಡು ದಿನಗಳ ಆಯ್ಕೆ ಪ್ರಕ್ರಿಯೆ ಯಲ್ಲಿ ತಂಡವನ್ನು ಅಂತಿಮಗೊಳಿಸ ಲಾಗಿದೆ.  
ತಂಡ: ಟಲಿಸ್‌ಮಾನಿಕ್ ಸರ್ದಾರ್, ಮನ್‌ಪ್ರೀತ್ ಸಿಂಗ್, ಬೇರೇಂದ್ರ ಲಾಕಾ, ಗುರ್ಬಜ್ ಸಿಂಗ್, ಗುರ್ವಿಂದರ್ ಸಿಂಗ್ ಚಾಂಡಿ, ಶಿವೇಂದ್ರ ಸಿಂಗ್, ಡ್ಯಾನಿಶ್ ಮಜ್ತಾಬಾ, ತುಷಾರ್ ಖಾಂಡೇಕರ್, ಎಸ್.ವಿ. ಸುನೀಲ್, ಧರಮ್‌ವೀರ್ ಸಿಂಗ್, ಎಸ್.ಕೆ. ಉತ್ತಪ್ಪ, ಟಿರ್ಕಿ, ಸಂದೀಪ್ ಸಿಂಗ್, ವಿ.ಆರ್. ರಘುನಾಥ್. ಭರತ್ ಛೇತ್ರಿ 

ಫ್ರೆಂಚ್ ಓಪನ್‌ನಲ್ಲಿ ನಡಾಲ್ ನೂತನ ಇತಿಹಾಸ

Posted by JAYAKIRANA Kirana on | 0 comments | Leave a comment...

ಪ್ಯಾರಿಸ್: ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ ಸ್ಪೇಯ್ನ್‌ನ ರಫೆಲ್ ನಡಾಲ್ ನೂತನ ಇತಿಹಾಸವೊಂದನ್ನು ಬರೆದಿದ್ದಾರೆ. ಇಲ್ಲಿ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಸರ್ಬಿಯಾದ ನೊವಾಕ್ ಜೊಕೊವಿಕ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ನಡಾಲ್ ಪ್ರತಿಷ್ಠಿತ ಟೂರ್ನಿಯನ್ನು ಏಳನೇ ಬಾರಿಗೆ ಕೈವಶ ಮಾಡಿಕೊಂಡ ದಾಖಲೆ ನಿರ್ಮಿಸಿದ್ದಾರೆ. ಆದಿತ್ಯವಾರ ನಡೆಯಬೇಕಿದ್ದ ಫೈನಲ್ ಮಳೆಯ ಕಾರಣ ನಿನ್ನೆ ನಡೆದಿತ್ತು. ಈ ವೇಳೆ ನಡಾಲ್ ೨-೧ ಅಂತರದಿಂದ ಮುನ್ನಡೆ ಗಳಿಸಿದ್ದರು. ನಿನ್ನೆ ಮುಂದುವರೆದ ಫೈನಲ್‌ನ ಅಂತ್ಯದಲ್ಲಿ ಜೊಕೊವಿಕ್ ವಿರುದ್ಧ ನಡಾಲ್ ೬-೪, ೬-೩, ೨-೬ ಹಾಗೂ ೭-೫ರ ಅಂತರದಲ್ಲಿ ಗೆದ್ದು ದಾಖಲೆ ನಿರ್ಮಿಸಿದರು. ಕಳೆದ ವರ್ಷ ಕೂಡ ರಫೆಲ್ ಟೂರ್ನಿ ಗೆದ್ದುಕೊಂಡಿದ್ದರು.    
ತನ್ನ ೧೬ನೇ ಗ್ರ್ಯಾಂಡ್‌ಸ್ಲಾಮ್ ಫೈನಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ನಡಾಲ್ ಫ್ರೆಂಚ್ ಓಪನ್‌ನಲ್ಲಿ ತನ್ನ ದಾಖಲೆಯನ್ನು ಇನ್ನಷ್ಟು ಉತ್ತಮ ಪಡಿಸಿಕೊಂಡರು. ಇಲ್ಲಿ ನಡೆದ ೫೨ ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಸೋಲುಂಡಿದ್ದು, ಇದು ನಡಾಲ್‌ರ ೧೧ನೇ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯಾಗಿದೆ. ಸ್ವಿಸ್‌ನ ರೋಜರ್ ಫೆಡರರ್ ಈಗಾಗಲೇ ೧೬ ಬಾರಿ ಟೂರ್ನಿ ಜಯಿಸಿದ ದಾಖಲೆ ಹೊಂದಿದ್ದಾರೆ. 
ಇಲ್ಲಿ ಜೊಕೊವಿಕ್ ಮತ್ತೊಂದು ಕನಸು ಭಗ್ನಗೊಂ ಡಿದೆ. ಈಗಾಗಲೇ ಋತುವಿನಲ್ಲಿ ವಿಂಬಲ್ಡನ್, ಯುಎಸ್ ಓಪನ್, ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಜೊಕೊವಿಕ್ ಒಂದು ವೇಳೆ ಫ್ರೆಂಚ್ ಓಪನ್ ಗೆದ್ದುಕೊಂಡಿದ್ದರೆ ಆಗ ಎಲ್ಲಾ ಟೂರ್ನಿಗಳನ್ನು ಒಂದೇ ಬಾರಿಗೆ ಗೆದ್ದ ಸಾಧನೆಯಾಗುತ್ತಿತ್ತು. ಈ ಅಪೂರ್ವ ಸಾಧನೆಯನ್ನು ಹಿಂದೆ ಡಾನ್ ಬಡ್ಜ್ (೧೯೩೮), ರೊಡ್ ಲೇವರ್ (೧೯೬೨, ೧೯೬೯) ಪ್ರದರ್ಶಿಸಿದ್ದರು. ಆದರೆ ಇದನ್ನು ಸಾಧಿಸಲು ಜೊಕೊವಿಕ್ ವಿಫಲರಾದರು.

ಆಂಗ್ಲರಿಗೆ ನಿರಾಶೆ ತರಿಸಿದ ನಸ್ರಿಯ ಅತ್ಯುತ್ತಮ ಗೋಲ್ ಫ್ರಾನ್ಸ್ ವಿರುದ್ಧ ಇಂಗ್ಲೆಂಡ್ ಡ್ರಾಗೆ ತೃಪ್ತಿ

Posted by JAYAKIRANA Kirana on | 0 comments | Leave a comment...

ಡೊನೆಟ್ಸ್ಕ್(ಉಕ್ರೇನ್): ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಇಂಗ್ಲೆಂಡ್ ಹಾಗೂ ಫ್ರಾನ್ಸ್ ನಡುವಿನ ಕದನವು ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಸಮೀರ್ ನಸ್ರಿ ಬಾರಿಸಿದ ಅತ್ಯಮೂಲ್ಯ ಗೋಲು ಫ್ರಾನ್ಸ್‌ಗೆ ಪ್ರಬಲ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಲು ನೆರವಾಯಿತು.
ಪಂದ್ಯದ ಪ್ರಥಮಾರ್ಧ ತೀವ್ರ ಹಣಾಹಣಿಗೆ ಸಾಕ್ಷಿಯಾಗಿತ್ತು. ಮೊದಲ ೩೦ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಜೂಲಿಯೊನ್ ಲೆಸ್ಕೊಟ್ ಬಾರಿಸಿದ ಗೋಲು ತಂಡಕ್ಕೆ ಮೊದಲ ಮುನ್ನಡೆಯನ್ನು ತಂದುಕೊಟ್ಟಿತು. ಆದರೆ ಪಟ್ಟುಬಿಡದ ಫ್ರಾನ್ಸ್ ಇನ್ನಷ್ಟು ತೀವ್ರ ಹೋರಾಟ ನೀಡಿತು. ೩೯ನೇ ನಿಮಿಷದಲ್ಲಿ  ಸಮೀರ್ ನಸ್ರಿ ಆಂಗ್ಲ ಡಿಫೆಂಡರ್‌ಗಳನ್ನು ಭೇದಿಗೆ ಗಳಿಸಿದ ಅತ್ಯದ್ಭುತ ಗೋಲು ಫ್ರಾನ್ಸ್‌ಗೆ ವರದಾನವಾಯಿತು. ಅತ್ತ ಆಂಗ್ಲರ ಮೊಗದಲ್ಲಿ ನಿರಾಶೆ ಮನೆಮಾಡಿತು. ನಂತರ ದ್ವಿತೀಯ ಅವಧಿಯನ್ನು ಸಂಪೂರ್ಣವಾಗಿ ಫ್ರಾನ್ಸ್ ಆಳಿತು ಎಂದು ಹೇಳಿದರೆ ತಪ್ಪಿಲ್ಲ. ಮುಖ್ಯವಾಗಿ ಫ್ರಾನ್ಸ್‌ನ ಪ್ರಮುಖ ಸ್ಟ್ರೈಕರ್ ಕರೆಮ್ ಬೆನ್ಝೆಮಾ, ನಸ್ರಿ ಪ್ರಬಲ ಹೊಡೆತಗಳು ಇಂಗ್ಲೆಂಡ್‌ಗೆ ಭಯ ಹುಟ್ಟಿಸಿದವು. ಈ ಅವಧಿಯಲ್ಲಿ ಫ್ರಾನ್ಸ್ ಹಲವಾರು ಗೋಲು ಅವಕಾಶಗಳನ್ನು ಕೈಚೆಲ್ಲಿತು. ಇಂಗ್ಲೆಂಡ್ ಕೂಡ ಇದೇ ರೀತಿ ಮಾಡಿತು. ಇಂಗ್ಲೆಂಡ್‌ನ ಪ್ರಮುಖ ಸ್ಟ್ರೈಕರ್ ವೇಯ್ನ್ ರೂನಿ ಎರಡು ಪಂದ್ಯದ ನಿಷೇಧದಿಂದಾಗಿ ಹೊರಗಿದ್ದಿದ್ದು, ತಂಡಕ್ಕೆ ದುಬಾರಿಯಾಯಿತು. 
ಇಂದಿನ ಪಂದ್ಯ
 ಗ್ರೀಸ್-ಜೆಕ್ ರಿಪಬ್ಲಿಕ್ (ರಾತ್ರಿ ೯:೩೦)
ಪೋಲೆಂಡ್-ರಶ್ಯಾ   (೧೨:೧೫)

ಬೆಳಕಿಗೆ ಬಂದ ಸತ್ಯಸಂಗತಿಗಳು

Posted by JAYAKIRANA Kirana on | 0 comments | Leave a comment...

ಔ.S. ಓo. ೭೪/೧೯೨೩ನೇ ವ್ಯಾಜ್ಯದ ಪ್ರಕಾರದ ಸ್ಕೀಮನ್ನು ಅನುಸರಿಸಿ ನೇಮಿಸಲ್ಪಟ್ಟ ಮೊದಲಿನ ಧರ್ಮದರ್ಶಿಗಳು ಔ.S. ಓo.೧ oಜಿ ೧೯೩೧ನೇ ವ್ಯಾಜ್ಯದ ಂ.S ಓo. ೩೯೪/೧೯೩೧ರ ಅಪೀಲಿನ ೧೯೩೭ರ ಜಡ್ಜ್‌ಮೆಂಟ್ ಪ್ರಕಾರ ೧೯೩೮ರಲ್ಲಿ ನೇಮಕ ಹೊಂದಿದ ವರೂ ೧೯೪೮ನೇ ಇಸವಿಯಲ್ಲಿ ನೇಮಕ ಹೊಂದಿದವರಲ್ಲೂ ೧೯೫೩ ರವರೆಗೆ ಪದಚ್ಯುತಿ ಹೊಂದಿದ ವಿನಾಯಕ ವಿಗ್ರಹದ ವಿಷಯದಲ್ಲಿ ಮಾತೆತ್ತುವವರಿಲ್ಲವಾಯಿತು. ಅಲ್ಲದೆ ಆಗಿನ ಮೆನೇಜರರು ಕೂಡಾ ವೈಷ್ಣವ ಮಾಧ್ವರಾಗಿದ್ದರು. ಇದರಿಂದಾಗಿ ಆ ವರೆಗೆ ದೇವಸ್ಥಾನದ ಒಳಗುಟ್ಟು ಹೊರಬರಲು ಸಾಧ್ಯವಿಲ್ಲವಾಯಿತು.
೧೯೫೩ರ ವರೆಗಿನ ಆಡಳಿತೆ ಕಾಲದಲ್ಲಿ ದೇವಳ ಮಾಧ್ವರ ಕೈಯಲ್ಲಿ ಇರುವಾಗ ಉತ್ಪತ್ತಿ ಖರ್ಚು ಸರಿಸಮಾನವಾಗುತ್ತಿತ್ತು, ಚಂಪಾಷಷ್ಠಿ ಮಹೋತ್ಸವದ ಬಾರಾಹಜಾರ್ ಸಂತರ್ಪಣೆ ಖರ್ಚು ಮೈಸೂರಿ ನಿಂದ ಬರುತ್ತಿದ್ದರೂ ಹೆಚ್ಚಿನ ಉಳಿತಾಯವಿರಲಿಲ್ಲ.
೧೯೩೮ರಲ್ಲಿ ನೇಮಕ ಹೊಂದಿದ ಶ್ರೀಬಿ. ವೆಂಕಪ್ಪ ರೈಯವರ ಕಾಲದಲ್ಲಿ ದೇವಸ್ಥಾನದ ಒಳ ಅಂಗಣಕ್ಕೆ ಬ್ರಾಹ್ಮಣೇತರರು ಹೋಗ ಬಾರದು ಎಂದು ಇದ್ದುದನ್ನು ಬ್ರಾಹ್ಮಣೇತರರು ಸ್ನಾನ ಮಾಡಿ ಅಂಗಿ ತೆಗೆದು ಒಳ ಅಂಗಣಕ್ಕೆ ಹೋಗಬಹುದು ಎಂದು ಮಾಡಿದ್ದರು. ೧೯೪೩ರಲ್ಲಿ ಸ್ಮಾರ್ತ ಬ್ರಾಹ್ಮಣರಾದ ಬೆಳ್ತಂಗಡಿ ಮಂಗೇಶರಾಯರು ದೇವಳದ ಮುಖ್ಯ ಟ್ರಸ್ಟಿಗಳಾಗಿ ನೇಮಕಪಟ್ಟರೂ ಅವರಿಗೆ ಉಪ ದ್ರವ ಕೊಟ್ಟು ಅವರನ್ನು ರಾಜಿ ಕೊಡಿಸುವಂತೆ ಮಾಡಿದರು.
೧೯೫೩ನೇ ಇಸವಿಯಲ್ಲಿ ಈ ಮೊದಲಿನ ಸ್ಕೀಮಿನಂತೆ ಬ್ರಾಹ್ಮ ಣರ ಸ್ಥಾನಗಳೆರಡಕ್ಕೆ ಶ್ರೀಅಡಿಬಾಯಿ ಭೀಮ ಭಟ್ರು ಮತ್ತು ಈ ಪುಸ್ತ ಕದ ಲೇಖಕರು ಬ್ರಾಹ್ಮಣೇತರ ಸ್ಥಾನಗಳಿಗೆ ಶ್ರೀಕೆ.ವಿ. ಗೌಡರೂ, ಶ್ರೀ ಬೆಳ್ಳಾರೆ ನಾರಾಯಣ ಶೇಕರೂ, ಮೈಸೂರು ಕಡೆಯಿಂದ ಶ್ರೀಬೋರಣ್ಣ ಗೌಡ ಎಂಬವರು ನೇಮಕ ಮಾಡಲ್ಪಟ್ಟರು. ೧೯೪೮ರಲ್ಲಿ ಎಂಡೋ ಮೆಂಟಿನವರು ಬ್ರಾಹ್ಮಣರಿಗಾಗಿ ಕಾದಿಟ್ಟ ಸ್ಥಾನಗಳನ್ನು ದೇವಳದ ಮೇನೇಜ್‌ಮೆಂಟಿಗೆ ಬ್ರಾಹ್ಮಣರೇ ಆಗಬೇಕೆಂದಿದ್ದ ವಿಷಯವನ್ನು    ತೆಗೆದು ಹಾಕಿ ಸಾರ್ವತ್ರಿಕ ಹಿಂದುಗಳಲ್ಲಿ ಯಾರೂ ಆಗಬಹುದೆಂಬ ರೀತಿಯಲ್ಲಿ ದೇವಳದ ಸ್ಕೀಮ್ ತಿದ್ದುಪಡಿಗೆ ದಾಕ್ಲು ಮಾಡಿದ ಔ.P. ೮೪/೧೯೪೮ರ ಮೇಲೆ ಆದ ಮದ್ರಾಸ್ ಅಪೀಲ್ ೫೮೨ oಜಿ ೧೯೫೧ರ ಜಡ್ಜ್‌ಮೆಂಟ್ ೧೯೫೩ರ ನವಂಬರ್‌ನಲ್ಲಿ ಆಯಿತು. ಅದರಲ್ಲಿ ಬ್ರಾಹ್ಮಣ ರಿಗಾಗಿ ಕಾದಿಟ್ಟ ಸ್ಥಾನವು ಎರಡರಿಂದ ಒಂದಕ್ಕೆ ಇಳಿಸಲ್ಪಟ್ಟಿತು. 
ಕಾದಿಟ್ಟ ಸ್ಥಾನಕ್ಕೆ ಅದರಲ್ಲೂ ದೇವಳದ ಎಲ್ಲಾ ಭಾಗಗಳಿಗೆ ಪ್ರವೇಶಿಸುವ ಹಕ್ಕುಳ್ಳವರಲ್ಲಿ ದೇವಳದ ಹಿತದೃಷ್ಟಿಯಿಂದ ಯೋಗ್ಯ ರಾದವರನ್ನು ನೇಮಿಸಬೇಕೆಂದು ತಿಳಿಸಿದ್ದರೂ ಆ ವಿವರವನ್ನೇ ಸ್ಕೀಮ್ ನಲ್ಲಿ ಸರಿಯಾಗಿ ವ್ಯಕ್ತಪಡಿಸದೇ ಇದ್ದುದರಿಂದ ೧೯೫೭ರ ನಂತರ ಪುನಃ ಮಾಧ್ವ ಟ್ರಸ್ಟಿಗಳ ನೇಮಕಕ್ಕೆ ಎಡೆಕೊಟ್ಟಿತು. ಮೆನೇಜರರ ಸ್ಥಾನವು ಬ್ರಾಹ್ಮಣರಿಗೆ ಎಂದು ಇದ್ದುದೂ ತೆಗೆದು ಹಾಕಲ್ಪಟ್ಟಿತು. ಹಾಗೆ ತೆಗೆದು ಹಾಕಲ್ಪಟ್ಟ ಪ್ರಕಾರ ೧೯೫೬ರಲ್ಲಿ ಸ್ಕೀಮ್ ತಿದ್ದುಪಡಿ ಆಯಿತು. ಆ ಪ್ರಕಾರ ೧೯೫೩ರಲ್ಲಿ ನೇಮಕ ಹೊಂದಿದ ಧರ್ಮದರ್ಶಿ ಗಳು ೧೯೫೭ರಲ್ಲೆ ಒಂದು ವರ್ಷ ಮುಂಚೆಯೇ ನಿವೃತ್ತರಾಗಬೇಕಾ ಯಿತು. ಈ ನಾಲ್ಕು ವರ್ಷಗಳಲ್ಲಿ ದೇವಸ್ಥಾನದಲ್ಲಿ ತುಂಬಾ ವಿಷಯ ಗಳು ಮಾರ್ಪಾಡಾದವು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಮಾಧ್ವ ವೈಷ್ಣವ ಟ್ರಸ್ಟಿಗಳಿಲ್ಲದೇ ಇದ್ದುದರಿಂದ ದೇವಳದ ಟ್ರೆಜರಿಯಲ್ಲಿ ಉಪ ಯೋಗವಿಲ್ಲದೆ ಬಿದ್ದಿದ್ದ ಮಹಾಗಣಪತಿ ದೇವರ ಚಿನ್ನದ ಕವಚದ ವಿಚಾರ ಪ್ರಸ್ತಾಪ ಒಂದು ಅದಕ್ಕೆ ಸಂಬಂಧಿಸಿದೆ. ದೇವಳದಲ್ಲಿ ಅಡಗಿಸಲ್ಪಟ್ಟ ಮಹಾ ಗಣಪತಿ ವಿಗ್ರಹದ ವಿಚಾರವು ಸ್ವಲ್ಪ ಮಟ್ಟಿಗೆ ಹೊರಬಿತ್ತು. ಅದಲ್ಲದೆ ೧೯೫೪ ಮತ್ತು ೧೯೫೫ರಲ್ಲಿ ದೇವಳದಲ್ಲಿ ಅಕ್ಕಿ, ಬೆಲ್ಲ ವಗೈರೆ ಸಾಮಾನುಗಳನ್ನು ದುರುಪಯೋಗಪಡಿಸಿದ ವಿಚಾರದಲ್ಲಿ ತನಿಖೆ ನಡೆದಾಗ ಆಗಿನ ಮಾಧ್ವ ವೈಷ್ಣವ ಮೆನೇಜರು ತಮ್ಮ ಉದ್ಯೋಗಕ್ಕೆ ರಾಜಿಕೊಟ್ಟು ಹೋಗಬೇಕಾ ಯಿತು. ಇವರ ನಂತರ ಬ್ರಾಹ್ಮಣೇತರರಾದ ಶ್ರೀಸೋಮಪ್ಪ ರಿಟಾಯರ್ಡ್ ಸಬ್ ರಿಜಿಸ್ಟ್ರಾರ್, ಸಾಧಾರಣ ಒಂದು ತಿಂಗಳು ಇದ್ದು ಅವರು ಬಿಟ್ಟು ಹೋದರೂ ಆಮೇಲೆ ಅದೇ ೧೯೫೫ರಲ್ಲಿ ಮತ್ತೊಬ್ಬ ರಿಟಾ ಂiiರ್ಡ್ ಸಬ್ ರಿಜಿಸ್ಟ್ರಾರರಾದ ಶ್ರೀಯು. ಲಕ್ಷ್ಮಣ ನಾಯಕರೆಂಬವರು ಮೆನೇಜರರಾಗಿ ನೇಮಕ ಹೊಂದಿದರು. ಇವರು ದೇವಳದಲ್ಲಿ ಕೆಲವು ವರ್ಷ ಉತ್ಸಾಹ ದಿಂದ ಕೆಲಸ ಮಾಡಿರುತ್ತಾರೆ. ಈ ಮಧ್ಯೆ ಒಂದು ತಿಂಗಳು ದೇವಳದ ಮುಖ್ಯ ಗುಮಾಸ್ತರಾದ ಮೆನೇಜರರಾಗಿ ಶ್ರೀಕೆ. ನರಸಿಂಹ ಶರ್ಮರು ತಾತ್ಕಾಲಿಕವಾಗಿ ಕೆಲಸ ಮಾಡಿದ್ದರು. ಇವರು ಸ್ಮಾರ್ತ ಶಿವ ಬ್ರಾಹ್ಮಣರು.
ಅಡಗಿಸಿ ಇರಿಸಲ್ಪಟ್ಟ ಮಹಾಗಣಪತಿ ವಿಗ್ರಹದ ಪ್ರತಿಷ್ಠಾ ವಿಚಾರದಲ್ಲಿ ಟ್ರಸ್ಟಿ ಎಂ.ಎಸ್.ಎ. ಶರ್ಮರು ತಂದ ನಿರ್ಣಯವನ್ನು ಇತರರು ಅಂಗೀಕ ರಿಸಿ ಆ ವಿಗ್ರಹದ ವಿಚಾರ ಚಾರಿತ್ರಿಕ ಹಿನ್ನೆಲೆಯನ್ನು ಸಂಶೋಧಿಸಿ ರಿಪೋರ್ಟು ಮಾಡುವಂತೆ ತಾ. ೯-೧೨-೧೯೫೫ನೇ ವಿiಟಿಂಗ್‌ನಲ್ಲಿ ನಿರ್ಣಯ ನಂಬ್ರ ೪೫೬-೩೯(೭)ರ ಪ್ರಕಾರ ನಿರ್ಣಯವನ್ನು ತಂದ ಶ್ರೀಶರ್ಮರನ್ನೇ ಅಧಿಕರಿಸಿ ದರು. ಆ ಪ್ರಕಾರ ರಿಪೋರ್ಟು ಮಾಡಲ್ಪಟ್ಟು ಅದರ ನಕಲುಗಳು ಎಂಡೋ ಮೆಂಟಿಗೆ ಕಳುಹಿಸಲ್ಪಟ್ಟಿತು.
ಈ ಸಂದರ್ಭದಲ್ಲಿ ದೇವಳದ ತೆಂಕು ಪೌಳಿಯ ಸ್ವಲ್ಪ ಅಂಶವು ಮಾಧ್ವ ಮಠದ ಸ್ವಾಮಿಗಳಿಂದ ಆಕ್ರಮಿಸಲ್ಪಟ್ಟಿದ್ದರಿಂದ ದೇವಳಕ್ಕೂ ಮಠಕ್ಕೂ ವಿವಾದ ಏರ್ಪಟ್ಟು ಅನೇಕ ವರ್ಷಗಳಿಂದ ರಿಪೇರಿ ಇಲ್ಲದೆ ಬಿದ್ದದ್ದನ್ನು ಆಗಿನ ಟ್ರಸ್ಟಿ ಗಳು ಮಠದ ಸ್ವಾಮಿಗಳ ಒಪ್ಪಿಗೆ ಪಡೆದು ಸಾಧಾರಣ ಅರುವತ್ತು ಸಾವಿರ ರೂಪಾ ಖರ್ಚಿನಿಂದ ಕಟ್ಟಿಸಿದರು. ಮಠದ ಸ್ವಾಮಿಗಳು ಹಾಗೆ ಕಟ್ಟಿಸಿದ ಅವರು ಆಕ್ರಮಿಸಿದ ಪೌಳಿಯ ಮಾಳಿಗೆ ಕೂಡ ಅವರಿಗೆ ಸಿಕ್ಕಬೇಕೆಂಬ ದುರಾಕಾಂಕ್ಷೆಯಿಂದ ದೇವಳದ ಮೇಲೆ ದಾವೆ ಮಾಡಿದರು. ಇದರ ಪೂರ್ಣ ವಿವರಗಳನ್ನು ಶ್ರೀಸುಬ್ರಹ್ಮಣ್ಯ ಮಠ ಅದರ ಮಾಧ್ವ ವೈಷ್ಣವ ಸ್ವಾಮಿಗಳು ಇದರಿಂದಾಗಿ ದೇವಳಕ್ಕೆ ಒದಗಿದ ಲೋಪದೋಷಗಳು ಎಂಬ ಶೀರ್ಷಿಕೆ ಯಲ್ಲಿ ವಿವರಿಸಿದ್ದನ್ನು ಓದಬಹುದು.
ಮೇಲಿನ ಟ್ರಸ್ಟಿಗಳಲ್ಲಿ ಮಾಧ್ವ ವೈಷ್ಣವರು ಇಲ್ಲದೇ ಇದ್ದುದರಿಂದ ಆಗಿನ ಮಾಧ್ವ ವೈಷ್ಣವ ಮೆನೇಜರುಗಳು ಸ್ಥಳೀಯ ಸ್ಮಾರ್ತ ವರ್ಗದ ಶ್ರೀಯಂ.ಎಸ್.ಎ. ಶರ್ಮರಿಗೂ ಮೊದಲು ಶ್ರೀವಕೀಲ ಬೆಳ್ತಂಗಡಿ ಮಂಗೇಶರಾಯರಿಗೆ ಹಿಂಸೆ ಕೊಟ್ಟಂತೆ ಹಿಂಸಿಸತೊಡಗಿದರು. ಮೊದಲು ಅವರ ನೇಮಕದ ವಿರುದ್ಧ ಮುಂಚಿನ ಟ್ರಸ್ಟಿಗಳಾಗಿದ್ದ ಶ್ರೀಪುಲ್ಲಡ್ಕ ಸುಬ್ರಾಯರೆಂಬವರಿಂದ ಅರ್ಜಿ ಯೊಂದನ್ನು ಸರಕಾರಕ್ಕೆ ಹಾಕಿಸಿದರು. ಅದು ಪ್ರಯೋಜನವಾಗಲಿಲ್ಲ. ಆಮೇಲೆ ಸ್ಮಾರ್ತರಾದ ಅವರ ಮತದವರನ್ನೂ, ದೇಶಸ್ಥರನ್ನೂ, ಕರ್ನಾಟಕ ಬ್ರಾಹ್ಮಣ ರನ್ನೂ ದೇವಳದಲ್ಲಿ ಇಲ್ಲದ ಹೊಸ ಪದ್ಧತಿಯೆಂದು ಮಾಡಿಕೊಂಡು ದೇವ ಸ್ಥಾನದ ಸಮಾರಾಧನೆ ವೇಳೆ ಊಟದಿಂದ ಎಬ್ಬಿಸಿ ಅವಮಾನಪಡಿಸಿದರು. ಈ ವಿಷಯಗಳು ಎಂಡೋ ಮೆಂಟ್ ಕಮಿಶನ್‌ರವರೆಗೂ ತಿಳಿಸಲ್ಪಟ್ಟು ಅವರ ಆದೇಶದ ಮೇರೆಗೆ ೧೯೫೬ನೇ ಷಷ್ಠಿ ಮಹೋತ್ಸವದ ಸಮಯದಲ್ಲಿ ಮುಂಚಿ ನಂತೆ ಬ್ರಾಹ್ಮಣರೊಳಗೆ ಮತ ಭೇದವಿಲ್ಲದೆ ಸಂತರ್ಪಣೆ ನಡೆಯಿತು. ಈ ವಿಷಯದಲ್ಲಿ ೨೦-೭-೧೯೫೫ರಲ್ಲಿ ಜರಗಿದ ಮೀಟಿಂಗಿನಲ್ಲಿ ನಿರ್ಣಯ ನಂಬ್ರ ೩೪೬(೨) ನಿರ್ಣಯ ಪ್ರಕಾರ ದೇವಳದಲ್ಲಿ ಎಂದಿನಂತೆ ಜಾತಿ ಭೇದವಿಲ್ಲದೆ ಸಂತರ್ಪಣೆ ನಡೆಯ ತಕ್ಕದ್ದೆಂದು ನಿರ್ಣಯಿಸಲ್ಪಟ್ಟಿದೆ. ಮೇಲಿನ ನಾಲ್ಕು ವರ್ಷಗಳಲ್ಲಿ ನಡೆದ ಕೆಲವು ಮುಖ್ಯ ಘಟನೆಗಳು ಕೆಳಗೆ ವಿವರಿಸಲ್ಪಟ್ಟಿವೆ. ಲೇಖಕ ಹಾಗೂ ಸಂಗ್ರಾಹಕ: ಡಾ. ಯಂ.ಯೆಸ್. ಅಚ್ಚುತ ಶರ್ಮಾ 

                          (ಮುಂದಿನ ಮಂಗಳವಾರಕ್ಕೆ)

ಆಕೆಯ ಗೆಳೆತನವನ್ನು ಮಿಸ್‌ಯೂಸ್ ಮಾಡಿಕೊಳ್ಳದಿರಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಮಂಗಳೂರು
ಸಮಸ್ಯೆ: ನನಗೆ ೨೭ ವರ್ಷ ವಯಸ್ಸು. ಖಾಸಗಿ ಕಂಪೆನಿ ಉದ್ಯೋಗಿ. ನಾನು ಕಾಲೇಜು ಹುಡುಗಿಯೊಬ್ಬಳ ಜೊತೆ ಕಳೆದ ಮೂರು ವರ್ಷ ಗಳಿಂದ ಸ್ನೇಹ ಬೆಳೆಸಿದ್ದೇನೆ. ನಮ್ಮದು ಟೈಂಪಾಸ್ ಫ್ರೆಂಡ್‌ಶಿಪ್ ಆಗಿತ್ತು. ಆಕೆ  ನೋಡಲು ಚೆನ್ನಾಗಿದ್ದಾಳೆ. ಆಕೆಯೊಂದಿಗೆ ನಾನು ತುಂಬಾ ಸಲುಗೆ ಬೆಳೆಸಿದ್ದೆ. ಆಕೆಯೂ ನನ್ನನ್ನು ಇಷ್ಟಪಟ್ಟಿದ್ದಳು. ಹೀಗಾಗಿ ಕಳೆದ ಎರಡು ವರ್ಷಗಳಲ್ಲಿ ನಾವು ಹಲವು ಬಾರಿ ದೈಹಿಕ ಸಂಪರ್ಕ ಮಾಡಿದ್ದೇವೆ. ಆಕೆ ಈಗ ಬಿ.ಎ. ದ್ವಿತೀಯ ವರ್ಷದಲ್ಲಿ ಕಲಿಯುತ್ತಿದ್ದಾಳೆ. ನನಗೆ ಈಗ ಆಕೆಯನ್ನು ಬಿಡಲು ಮನಸ್ಸಿಲ್ಲ. ಆಕೆ ಯನ್ನು ಎರಡು ವರ್ಷಗಳ ನಂತರ ನನ್ನ ತಂಗಿಯ ಮದುವೆ ಯಾದ ಮೇಲೆ ಮದುವೆ ಮಾಡಿಕೊಳ್ಳಲು ಮನಸ್ಸಿದೆ. ಆಕೆ ನನ್ನೊಂ ದಿಗೆ ಈಗಲೂ ತುಂಬಾ ಮಾತಾಡುತ್ತಾಳೆ. ಕಾಲೇಜಿನಲ್ಲಿ ದಿನನಿತ್ಯ ನಡೆದ ಪ್ರತಿಯೊಂದು ವಿಷಯವನ್ನೂ ಹೇಳುತ್ತಾಳೆ. ಆದರೆ ನನ್ನ ಸಮಸ್ಯೆ ಯೇನೆಂದರೆ ಆಕೆ ಈಗ ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ. ಆಕೆ ನನ್ನಲ್ಲಿ ಈ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ಆಕೆಯ ಫ್ರೆಂಡ್ ಒಬ್ಬಳು ನನಗೆ ಈ ಮಾತನ್ನು ಹೇಳಿದ್ದಾಳೆ. ಆತನೂ ಅದೇ ಕಾಲೇ ಜಿನಲ್ಲಿ ಓದುವುದರಿಂದ ಜತೆಯಲ್ಲೇ ಸಿನಿಮಾ, ಮಾಲ್ ಎಂದು ಬೈಕ್‌ನಲ್ಲಿ ತಿರುಗಾಡುತ್ತಾರಂತೆ.   ನಾನು ಈ ವಿಚಾರವನ್ನು  ಅವಳಲ್ಲಿ ಕೇಳಿದರೆ ಎಲ್ಲಿ ಆಕೆ ಬೇಸರ ಮಾಡಿಕೊಳ್ಳುತ್ತಾಳೋ ಎಂದು ಭಯ ವಾಗುತ್ತದೆ. ಇದರಿಂದ ನಮ್ಮ ಫ್ರೆಂಡ್‌ಶಿಪ್‌ಗೆ ಧಕ್ಕೆ ಉಂಟಾದರೆ ನನಗೆ ಸಹಿಸಲು ಸಾಧ್ಯವಿಲ್ಲ. ನಾನು ಆಕೆಯನ್ನು ಮದುವೆಯಾ ಗೋಣವೇ ಎಂದು ಕೇಳಿದರೆ ಆಕೆ ತಪ್ಪು ಭಾವಿಸುವುದಿಲ್ಲವೇ? ನಾನೇನು ಮಾಡಲಿ? ನನಗೆ ಆಕೆಯದ್ದೇ ಚಿಂತೆಯಲ್ಲಿ ನಿದ್ದೆ, ಊಟ ಯಾವುದಕ್ಕೂ ಮನಸ್ಸು ಬರುತ್ತಿಲ್ಲ. ನನಗೆ ಸರಿಯಾದ ಸಲಹೆ ಕೊಡಿ.
ಸಲಹೆ: ನೀವು ಮೊದಲು ದ್ವಂದ್ವ ಮನೋಸ್ಥಿತಿಯನ್ನು ಬಿಡಿ. ನೀವಿಬ್ಬರೂ ಜಸ್ಟ್ ಫ್ರೆಂಡ್ಸ್. ಯಾವುದೇ ಗುರಿ ಇಟ್ಟುಕೊಂಡು ಪ್ರೀತಿಸಿದವರಲ್ಲ. ಜಸ್ಟ್ ಟೈಂಪಾಸ್‌ಗಾಗಿ ಪ್ರೀತಿಸಿದಿರಿ. ಇಷ್ಟರಲ್ಲೇ ಎಲ್ಲವನ್ನೂ ಕಳೆದುಕೊಂಡಿದ್ದೀರಿ. ಈ ನಡುವೆ ಆಕೆಗೆ ಬೇರೊಬ್ಬ ಹುಡುಗ ಸಿಕ್ಕಿದ್ದಾನೆ, ಹೀಗಾಗಿ ನೀವು ಆಕೆ ಯನ್ನು ಕಳೆದುಕೊಳ್ಳಲು ಸಿದ್ಧರಿಲ್ಲ ಅಲ್ಲವೇ? ಇದು ಆಕೆಯದ್ದು ತಪ್ಪು ಎನ್ನುವು ದಕ್ಕಿಂತ ನಿಮ್ಮದೇ ತಪ್ಪು ಎನ್ನಬಹುದು. ಸ್ವಚ್ಛ ಮನಸ್ಸಿನಿಂದ ಪ್ರೀತಿಸದೆ ಕೇವಲ ಸುಖಕ್ಕಾಗಿ ಜತೆಗಿದ್ದು, ಈಗ ಆಕೆ ಬೇರೊಬ್ಬನೊಂದಿಗೆ ತಿರುಗಾಡುತ್ತಾಳೆ ಎಂದು ತಿಳಿದ ಮೇಲೆ ಆಕೆ ಬೇಕು ಎಂದು ಅನಿಸುತ್ತಿದೆ. ನೀವು ಮೊದಲು ಆಕೆಯಲ್ಲಿ ನಿಮ್ಮ ಪ್ರೀತಿ, ಮದುವೆಯ ಬಗ್ಗೆ ನೇರವಾಗಿ ವಿಷಯ ಪ್ರಸ್ತಾಪಿಸಿ. ಇಲ್ಲಿ ಆಕೆಯನ್ನು ಹೆದರಿಸುವುದು ಬೇಡ. ಆತ ಯಾರು, ನಿನಗೇಕೆ ಇಷ್ಟ? ಪ್ರೀತಿಸುವುದು ನಿಜವೇ? ಮದುವೆ? ಈ ಬಗ್ಗೆ ಕೇಳಿ. ಆನಂತರ ನಿಮ್ಮ ನಿರ್ಧಾರವನ್ನು ತಿಳಿಸಿ. ನಾನು ನಿನ್ನನ್ನು ಮದುವೆಯಾಗಬೇಕೆಂದಿದ್ದೇನೆ ಎಂದಷ್ಟೇ ಹೇಳಿ ಆಕೆಯ ನಿರ್ಧಾರವನ್ನು ತಿಳಿದುಕೊಳ್ಳಿ. ಇಲ್ಲಿ ಆಕೆ ಒಪ್ಪಿದರೆ ಸರಿ, ಮತ್ತೆ ಮಾತು ಮುಂದುವರಿಸಿ. ಇಲ್ಲದಿದ್ದರೆ ಆಕೆ ಬೇರೆ ಯಾರನ್ನೋ ಮದುವೆ ಯಾಗುತ್ತಾಳೆ ಎಂದು ಹತಾಶೆಯಿಂದ ಅನಾ ಹುತ ಮಾಡಿಕೊಳ್ಳಬೇಡಿ. ಆಕೆಗೆ ಶುಭ ಹಾರೈಸಿ. ಆಕೆ ಮದುವೆಯಾದ ಮೇಲೆ ಆಕೆಯ ಜೊತೆ ಮತ್ತೆ ಹಿಂದಿನ ಸಂಬಂಧ ಇರಿಸಿಕೊಳ್ಳುವ ಪ್ರಯತ್ನ ಬೇಡ. ಇದರಿಂದ ನಿಮ್ಮಿಬ್ಬರ ಸಂಸಾರಕ್ಕೂ ಸಮಸ್ಯೆ ಖಚಿತ. ಆಕೆಗೆ ಯಾವುದಕ್ಕೂ ಒತ್ತಡ ಹೇರುವುದು ಬೇಡ. ಪ್ರೀತಿ ಎನ್ನುವುದು ಎಲ್ಲಾ ಬಂಧನಗಳಿಂದ ಮುಕ್ತವಾಗಿ ರಬೇಕು. ಆಕೆ ಕಾಲೇಜಿಗೆ ಹೋದ ತಕ್ಷಣ, ಹುಡುಗನೊಂದಿಗೆ ಬೈಕ್‌ನಲ್ಲಿ ತಿರುಗಾಡಿದ ಮಾತ್ರಕ್ಕೆ ‘ಲವ್ ಮಾಡಬೇಕು ಅಥವಾ ಕಾಲೇಜ್ ಹುಡುಗಿಯರೆಲ್ಲಾ ಒಂದಷ್ಟು ಲವ್ ಮಾಡುತ್ತಾರೆ ಎನ್ನುವ ನಿಮ್ಮ ಸಂದೇಹ ಸರಿಯಲ್ಲ. ನಿಮ್ಮೊಳಗಿನ ಸಂಶಯವನ್ನು ಆಕೆಯ ಜತೆ ನೇರವಾಗಿ ನಿವಾರಿಸಿಕೊಳ್ಳಿ. ಇದಕ್ಕಾಗಿ ಯಾವುದೇ ರೀತಿಯ ಒತ್ತಾಯ, ಒತ್ತಡ, ಆಮಿಷ ತಂತ್ರವನ್ನು ಬಳಸು ವುದು ಬೇಡ. ಇದರಿಂದ ಆಕೆಗೆ ನಿಮ್ಮ ಮೇಲಿರುವ ಉತ್ತಮ ಭಾವನೆ ಗಳೆಲ್ಲಾ ಕಡಿಮೆಯಾಗಬಹುದು. ಆಕೆ ಒಂದು ವೇಳೆ ಆತನನ್ನು ಪ್ರೀತಿ ಸುವುದಾದರೆ, ಮದುವೆಯಾಗುವುದಾದರೆ ನೀವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಗಳಾಗಿಯೇ ಇರಿ. ಗೆಳೆತನವನ್ನು ಪ್ರೀತಿಯನ್ನಾಗಿ ಪರಿವರ್ತಿಸಲು ಆದಷ್ಟು ಸಂಯಮದಿಂದ ವರ್ತಿಸಬೇಕಾದ್ದು ಅಗತ್ಯ. ಆಕೆ ಒಪ್ಪಿದಲ್ಲಿ ಈಗಲೇ ಆಕೆಯ ಮನೆಯಲ್ಲಿ ವಿಚಾರ ತಿಳಿಸಿ ಅನುಮತಿ ಪಡೆದುಕೊಳ್ಳುವುದು ಒಳ್ಳೆಯದು. ಇಲ್ಲವಾದಲ್ಲಿ ನಿಮ್ಮಷ್ಟಕ್ಕೆ ನೀವಿರಿ.

ಸರ್ವಧರ್ಮ ಏಕತೆ: ಮೌಢ್ಯತನದ ಪರಮಾವಧಿ

Posted by JAYAKIRANA Kirana on | 0 comments | Leave a comment...

ಜಯಕಿರಣ ಚಾವಡಿಯಲ್ಲಿ ‘ಶುದ್ದೀಕರಣ ಮನಸ್ಸಿನಿಂದಾಗಲಿ; ತೊಳೆ ಯುವುದರಿಂದಲ್ಲ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಲೇಖನದ ಬಗ್ಗೆ ಪ್ರತಿ ಕ್ರಿಯೆ.
ಮನುಷ್ಯರೆಲ್ಲರನ್ನೂ ಸರ್ವಧರ್ಮ ಪ್ರಾರ್ಥನಾಲಯಗಳಿಗೆ ಪ್ರಾರ್ಥನೆ ಸಲ್ಲಿ ಸಲು ಅನುಮತಿಸಬೇಕು. ನಮ್ಮ ಹಿರಿಯರು ಸರ್ವಧರ್ಮೀಯರಿಗೂ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನ, ಮಸೀದಿ, ಚರ್ಚ್‌ಗಳನ್ನು ನಿರ್ಮಿಸಿದರೆಂದೂ, ಬೇಧ ಸೃಷ್ಟಿಸಿ, ಪರಸ್ಪರ ಬಡಿದಾಟಕ್ಕಾಗಿ ಅಲ್ಲ, ಶುದ್ಧ ಮನಸ್ಸಿನಿಂದ ಸರ್ವರನ್ನೂ ಸಮಾನವಾಗಿ ಕಾಣಬೇಕು ಎಂಬುದಾಗಿತ್ತು ಲೇಖನದ ಮೂಲ ಉದ್ದೇಶ.
ಆದರೆ ಲೇಖಕರು ಆ ಸಂಪ್ರದಾಯ ಯಾವ ಕಾಲದಿಂದ ಆರಂಭಗೊಂಡು, ಎಲ್ಲಿ ಕೊನೆಗೊಂಡಿತು? ಈಗಿನ ಸಂಪ್ರದಾಯ ಎಲ್ಲಿಂದ ಬಂತು? ಆ ಬಗ್ಗೆ ವಿವಿಧ ಧರ್ಮಗಳ ಅಭಿಪ್ರಾಯ, ನಿಯಮಗಳೇನು? ಎಂಬಿತ್ಯಾದಿ ವಿವರಿಸ ದೆಯೇ ಸ್ವಚಿಂತನೆಯಿಂದ ಮೂಡಿಬಂದ ವಿಚಾರ ಜ್ಞಾನವನ್ನು ಹಿರಿಯರ ಮೇಲೆ ಹೊರಿಸಿ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ!
ಕನಿಷ್ಠ ಮಸೀದಿ ಹಾಗೂ ದರ್ಗಾದ ವ್ಯತ್ಯಾಸ ತಿಳಿಯದ ಅಶೋಕ್ ಹಲಾ ಯಿಯವರು ಮಸೀದಿಯನ್ನು ಉಳ್ಳಾಲ ದರ್ಗಾಕ್ಕೆ ಹೋಲಿಸಿರುವುದು ವಿಪ ರ್ಯಾಸ. ಆ ಬಗ್ಗೆ ತಿಳಿಯದೆ ಬರೆಯುವುದು ಸರಿಯಲ್ಲ.
ಮುಸ್ಲಿಂ ಮಹಾತ್ಮರ ಸಮಾಧಿ ಸ್ಥಳ ದರ್ಗಾವಾದರೆ, ಅಲ್ಲಾಹನನ್ನು ಆರಾ ಧಿಸುವ ಸ್ಥಳವಾಗಿದೆ ಮಸೀದಿ. ಇದು ಉಳ್ಳಾಲದಲ್ಲಿ ದರ್ಗಾದ ಬಲಬದಿಯ ಲ್ಲಿದೆ. ಉಳ್ಳಾಲ ದರ್ಗಾಕ್ಕೆ ಹೋಗಿದ್ದೀರಾ? ವ್ಯಕ್ತಿಪೂಜೆ, ಮೂರ್ತಿಪೂಜೆ ಇನ್ಯಾವುದೇ ವಸ್ತುಗಳಿಗೆ ಪ್ರಾರ್ಥನೆ ಸಲ್ಲಿಸುವುದನ್ನು ಖಡಾಖಂಡಿಸುತ್ತಿರುವ ಇಸ್ಲಾಮ್‌ನ ಆರಾಧ್ಯ ದೇವನಾದ ಅಲ್ಲಾಹನನ್ನು ‘ಮನುಷ್ಯ ಎಂದು ಬರೆದ ತನಗೆ ಇಸ್ಲಾಮಿನ ಬಾಲ ಪಾಠವೇ ತಿಳಿದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ! ಅಂಥವರು ಧರ್ಮಗಳನ್ನು ಒಗ್ಗೂಡಿಸಲು ಹೊರಟಿರುವುದು ಹಾಸ್ಯಾಸ್ಪದ.
ಸ್ಥಳ, ರೂಪ, ಭಾವಗಳಿಲ್ಲದೆ ಆರಂಭ, ಅಂತ್ಯವಿಲ್ಲದ ಪ್ರತಿಮೆಯಿಲ್ಲದ ಮನುಷ್ಯ ಮನುಷ್ಯನಲ್ಲಿ ಚಿಂತಿಸಲು ಸಾಧ್ಯವಿಲ್ಲದ ಅಲ್ಲಾಹನ ಭವನವಾಗಿದೆ ಮಸೀದಿ. ಉಳ್ಳಾಲ ದರ್ಗಾದಲ್ಲಿರುವ ಸಯ್ಯದ್ ಮದನಿ ಅಥವಾ ಇನ್ನಾವುದೇ ದರ್ಗಾಗಳಲ್ಲಿರುವವರು ಮಹಾತ್ಮರೇ ಹೊರತು ದೇವನಾದ ಅಲ್ಲಾಹನದಲ್ಲ. ಸರ್ವ ಧರ್ಮೀಯರು ಜೀವಿತಾವಧಿಯಲ್ಲಿ ಸೃಷ್ಟಿ ಶ್ರೇಷ್ಠರಾದ ಔಲಿಯಾ, ತಂಙ ಳ್‌ರವರನ್ನು ಸಂದರ್ಶಿಸಿದಂತೆ ಮರಣಾನಂತರವು ಅವರ ಸಮಾಧಿ ಸ್ಥಳಕ್ಕೆ ಪ್ರೀತಿಯಿಂದ ಸಂದರ್ಶಿಸಿರುತ್ತಾರಷ್ಟೇ. ಆದರೆ ಅದು ಅಲ್ಲಾಹನನ್ನು ಪ್ರಾರ್ಥಿ ಸುವ ಮಸೀದಿಗಲ್ಲ. ಮುಸ್ಲಿಮೇತರರಿಗೆ ಪ್ರಾರ್ಥಿಸಲು ಮಸೀದಿ ಪ್ರವೇಶ ನಿಷಿ ದ್ದವಾಗಿದೆ.
ಮುಸ್ಲಿಮರಿಗೂ ಇತರ ಧರ್ಮದ ಮಂದಿರಗಳಿಗೆ ಪ್ರಾರ್ಥನೆ ಸಲ್ಲಿಸಲು ಪ್ರವೇಶಿಸಬಾರದು. ಅದನ್ನು ಗೌರವಿಸಲು ಆಜ್ಞೆ ಇದೆ. ಅಲ್ಲಾಹೇತರರಿಗೆ ಆರಾ ಧನೆ ಸಲ್ಲಿಸಿದರೆ ಇಸ್ಲಾಮಿನಿಂದ ಆತ ಔಟ್. ಆತನು ಮುಸ್ಲಿಮನಾಗುವುದಿಲ್ಲ. ಇದು ಇಸ್ಲಾಮಿನ ನಿಯಮ. ಇದೇ ರೀತಿ ವಿವಿಧ ರೂಪಗಳಲ್ಲಿ ವಿವಿಧ ಧರ್ಮ ಗಳ ಧರ್ಮ ನಿಯಮಗಳಿರಬಹುದು. ಅದನ್ನು ಗೌರವಿಸಿದವನೇ ನಿಜವಾದ ಧರ್ಮಾನುಯಾಯಿಯಾಗುತ್ತಾನೆ. ಇದು ಧರ್ಮ ಧರ್ಮಗಳಲ್ಲಿ ವಿಭಿನ್ನತೆ ಸೃಷ್ಟಿ ಸುವುದಲ್ಲ. ಬೇಧ ಭಾವ, ಮೌಢ್ಯ, ಅನೈಕ್ಯತೆಯ ಸೃಷ್ಟಿಯೂ ಅಲ್ಲ. ಇತರ ಧರ್ಮದವರನ್ನು ಕಡೆಗಣಿಸಿ ಕೋಮು ಭಾವನೆಯನ್ನು ಅನುಸರಿಸುವ ತಂತ್ರವೂ ಅಲ್ಲ ನಿಯಮಗಳ ಪಾಲನೆ.
ಬದಲಾಗಿ ಪರಧರ್ಮಗಳನ್ನು ಹೀಯಾಳಿಸುವುದು, ಕೋಮು ಪ್ರಚೋದನೆ ನಡೆಸುವುದು, ಧಾರ್ಮಿಕ ಭಾವನೆ ಸಂಪ್ರದಾಯ ಆಚರಣೆಗಳನ್ನು ಪರಿಹಾಸ್ಯ ಮಾಡುವುದು, ಇತರ ಧರ್ಮದ ಆರಾಧನಾಲಯಗಳನ್ನು ಅಪವಿತ್ರಗೊಳಿಸಲು, ಧ್ವಂಸ ಮಾಡಲು ಪ್ರೇರೇಪಿಸುವುದು, ಆಮಿಷ, ಬಲಾತ್ಕಾರದಿಂದ ಮತಾಂತರಗೊ ಳಿಸಲು ಶ್ರಮಿಸುವುದು ಇತ್ಯಾದಿಗಳೆಲ್ಲವೂ ಯಾವ ಧರ್ಮದ ನಿಯಮಗಳೂ ಅಲ್ಲ. ಧರ್ಮವನ್ನು ಧಾರ್ಮಿಕ ಕೇಂದ್ರಗಳನ್ನು ಇದಕ್ಕಾಗಿ ದುರುಪಯೋಗಪಡಿಸಿಕೊಂ ಡರೆ ಅಖಂಡ ಭಾರತದ ಅಭದ್ರತೆಗೆ, ನಾಶಕ್ಕೆ ಹೇತುವಾದಿತೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರಜ್ಞಾವಂತ ಭಾರತೀಯರೆಲ್ಲರೂ ಇದರ ವಿರುದ್ಧ ಹೋರಾಡುತ್ತಲೇ ಇದ್ದಾರೆ. ಪರಧರ್ಮ ಸಹಿಷ್ಣುತೆಯಿಂದ ಪ್ರೀತಿ, ವಿಶ್ವಾಸ, ಸೌಹಾರ್ದತೆಯ ಮೂಲಕ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಸ್ವಧರ್ಮದ ಶ್ರೇಷ್ಠತೆಯನ್ನು ಮಾತ್ರ ವಿವರಿಸಿ ದರೆ ಯಾವ ಅಪಾಯವೂ ಸಂಭವಿಸುವುದಿಲ್ಲ. ಪ್ರತಿಯೊಬ್ಬರಿಗೂ ಅವರವರ ಧರ್ಮದ ಜ್ಞಾನದ ಮೂಲಕ ಸರ್ವರನ್ನು ಸಮಾನವನ್ನಾಗಿ ಗೌರವಿಸುವ ಮಹಾ ಮನಸ್ಸು ಸೃಷ್ಟಿಯಾಗುತ್ತದೆ. 
ಪ್ರಾರ್ಥನಾಲಯಗಳಲ್ಲಿ, ಆರಾಧನಾಲಯಗಳಲ್ಲಿ, ದೇವರಲ್ಲಿ, ಏಕತೆ ಎಂಬುದು ಮೌಢ್ಯತನದ ಪರಮಾವಧಿ, ಅಪ್ರಯೋಗಿಕವೂ ಸಹ. ಮೌಢ್ಯ, ಅನೈಕ್ಯತೆ, ಕ್ರೌರ್ಯ, ಮೂಢನಂಬಿಕೆ ಅನಿಷ್ಠ ಪದ್ಧತಿ, ಯಾವ ಧರ್ಮಗಳಲ್ಲಿದ್ದರೂ ಖಂಡಿಸ ಬೇಕಾ ದದ್ದೇ. ಆದರೆ ಅದರ ಪವಿತ್ರ ನಿಯಮಗಳನ್ನಲ್ಲ. ಅದರ ಪಾವಿತ್ರ್ಯತೆಯನ್ನು ಗೌರವಿ ಸಲೇ ಬೇಕು. ವೈವಿಧ್ಯತೆಯಲ್ಲಿ ಏಕತೆ ಇರುವ, ಸರ್ವ ಧರ್ಮಗಳ ನೆಲೆಬೀಡಿನ ಪರಂಪರೆಯಿರುವ ಭವ್ಯ ಭಾರತವನ್ನು ಅದೇ ತಳಹದಿಯಲ್ಲೇ ಕಟ್ಟೋಣ. ಜೈ ಭಾರತ್.
ಸಲೀಂ, ಬೈರಿಕಟ್ಟೆ, ವಿಟ್ಲ

ಸಮಸ್ಯೆಯಿಂದ ನರಳುತ್ತಿರುವ ಅಡ್ಡೂರು ಗ್ರಾಮ

Posted by JAYAKIRANA Kirana on | 0 comments | Leave a comment...

ಗುರುಪುರ ಗಾ.ಪಂ. ವ್ಯಾಪ್ತಿಗೊಳಪಟ್ಟ ಅಡ್ಡೂರು ಗ್ರಾಮವು ನಿತ್ಯ ಸಮಸ್ಯೆಯಿಂದ ಪರದಾ ಡುತ್ತಿರುವ ಪ್ರದೇಶ. ಇಲ್ಲಿ ಮೂಲಭೂತ ವ್ಯವ ಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ನಾಗರಿಕರು ನಿದ್ದೆಗೆಡುವಂತಾಗಿದೆ. ಅಡ್ಡೂರು ಜಂಕ್ಷ ನ್‌ನಲ್ಲಿನ ತ್ಯಾಜ್ಯ ವಿಲೇವಾರಿ ಕೇಂದ್ರವು ಕಸದಿಂದ ತುಂಬಿ ತುಳುಕುತ್ತಿದ್ದು, ಪರಿಸರ ದುರ್ನಾತ ಬೀರು ತ್ತಿದೆ. 
ತಿಂಗಳು ಕಳೆದರೂ ತ್ಯಾಜ್ಯ ವಿಲೇವಾರಿ ಆಗು ತ್ತಿಲ್ಲ. ಇಲ್ಲಿನ ಮಾರುಕಟ್ಟೆಯೊಂದು ಮೊದಲ ಮಳೆಗೆ ಕುಸಿದು ಬಿದ್ದಿರುವುದು ಅಡ್ಡೂರು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ. ರಸ್ತೆಯ ಸಮಸ್ಯೆ ಅಡ್ಡೂರು ನಾಗರಿಕರ ನೆಮ್ಮದಿಗೆ ಸವಾಲಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ರಸ್ತೆಯು ಸಂಪೂರ್ಣವಾಗಿ ಹದ ಗೆಟ್ಟಿದ್ದು, ನಿತ್ಯ ಪರದಾಡುವಂತಾಗಿದೆ. ರಸ್ತೆಯು ಸಂಪೂರ್ಣವಾಗಿ ಹೊಂಡ ಮತ್ತು ಕೆಸರಿನಿಂದ ತುಂಬಿರುವ ಕಾರಣದಿಂದಾಗಿ ರಿಕ್ಷಾ ಚಾಲಕರು ಪ್ರಯಾಣ ದರವನ್ನು ಹೆಚ್ಚಿಸಿದ್ದು, ನಾಗರಿಕರ ಪಾಡು  ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿದ್ದರೂ ಜನಪ್ರತಿನಿಧಿ ಗಳು ಮಾತ್ರ ಸಮಸ್ಯೆಗೆ ಪರಿಹರಿಸಲು ಆಸಕ್ತಿ ತೋರಿಸುತ್ತಿಲ್ಲ ಎನ್ನುವುದು ವಿಷಾದನೀಯ ಸಂಗತಿ. ಜನಪ್ರತಿನಿಧಿಗಳು, ಅಧಿಕಾರಿ ವರ್ಗವು ಅಡ್ಡೂರಿನತ್ತ ಮುಖ ಮಾಡಿ ಇಲ್ಲಿಯ ನಾಗರಿ ಕರ ಸಮಸ್ಯೆಗೆ ಮಾನವೀಯ ನೆಲೆಯಲ್ಲಿ ಸ್ಪಂದಿ ಸುವ ಅಗತ್ಯವಿದೆ.
ನಾಗರಿಕರು, ಅಡ್ಡೂರು

ಬಸವೇಶ್ವರ ಪ್ರತಿಮೆ ಸ್ಥಾಪಿಸಿ

Posted by JAYAKIRANA Kirana on | 0 comments | Leave a comment...

ನಗರದ ಕೆಪಿಟಿ ಜಂಕ್ಷನ್ ಬಳಿಯ ಸರ್ಕಲ್ ಅನ್ನು ಬಸವೇಶ್ವರ ಸರ್ಕಲ್ ಎಂದು ನಾಮಕರಣ ಮಾಡಲಾಗಿದೆ. ಕ್ರಾಂತಿಯೋಗಿ ಬಸವಣ್ಣನವರನ್ನು ನಾಡಿನ ಜನತೆ ಹೆಮ್ಮೆಯಿಂದ ಸ್ಮರಿಸಿಕೊಳ್ಳಲು ಇಂತಹ ಕ್ರಮ ಒಳ್ಳೆಯದು. ಆದರೆ ಇಲ್ಲಿ ಬಸವಣ್ಣನವರ ಪ್ರತಿ ಮೆಯನ್ನು ಸ್ಥಾಪಿಸಬೇಕಾದ ತುರ್ತು ಅಗತ್ಯವಿದೆ. ಆದರೆ ಇಲ್ಲಿ ಕೇವಲ ಕಬ್ಬಿಣದ ಬೋರ್ಡ್‌ನಲ್ಲಿ ‘ಬಸವೇಶ್ವರ ಸರ್ಕಲ್’ ಎಂದು ಬರೆದು ಹಾಕಲಾಗಿದೆ. ಇದು ಮುಂದೊಂದು ದಿನ ಅಳಿವನ್ನು ಕಾಣಬಹುದು. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಅವಶ್ಯ ಚಿಂತಿಸಿ ಇಲ್ಲಿ ಬಸವಣ್ಣನವರ ಪ್ರತಿಮೆಯನ್ನು ಸ್ಥಾಪಿಸಬೇಕು. ಸರ್ಕಲ್ ನಲ್ಲಿ ರಾತ್ರಿಯ ವೇಳೆ ಬೆಳಕಿನ ವ್ಯವಸ್ಥೆಯೂ ಇರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ೬೬ ಹಾದು ಹೋಗುವ ಸರ್ಕಲ್ ನಲ್ಲಿ ರಾತ್ರಿ ವೇಳೆ ಪಾದಚಾರಿಗಳು, ವಾಹನ ಸವಾರರು ಸಮಸ್ಯೆಗೀಡಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಇಲ್ಲಿ ಬೆಳಕಿನ ವ್ಯವಸ್ಥೆಯನ್ನು ಮಾಡಲು ಜಿಲ್ಲಾಡಳಿತ, ಮನಪಾ ತುರ್ತು ಕ್ರಮಕೈಗೊಳ್ಳಬೇಕಾಗಿ ವಿನಂತಿ.          
  ಭುವನ್, ಯೆಯ್ಯಾಡಿ

ಪರಿಹಾರ ಕಾಣದ ವೈದ್ಯರ ಕೊರತೆ

Posted by JAYAKIRANA Kirana on | 0 comments | Leave a comment...


ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪುವ ಅದೆಷ್ಟೋ ಘಟನೆಗಳು ನಮ್ಮ ಕಣ್ಣಮುಂದೆಯೇ ನಡೆಯುತ್ತಿವೆ. ಮಂಗಳೂ ರಿನಲ್ಲಿನ ಕುಖ್ಯಾತ ಸರಕಾರಿ ಆಸ್ಪತ್ರೆಗಳಾದ ವೆನ್‌ಲಾಕ್ ಮತ್ತು ಲೇಡಿಗೋಷನ್ ಬಡ ರೋಗಿಗಳ ಪ್ರಾಣವನ್ನು ಹಿಂಡುವ ಕುಖ್ಯಾತ ಆಸ್ಪತ್ರೆಗಳಾಗಿವೆ. ಇಲ್ಲಿ ದಾಖಲಾಗುವ ರೋಗಿ ಗಳು ಪ್ರಾಣದ ಆಸೆಯನ್ನು ಬಿಟ್ಟುಬಿಡ ಬೇಕಾ ಗುತ್ತದೆ. 
ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖ ಲಾಗುವ ರೋಗಿಗಳಿಗೆ ಇಲ್ಲಿ ಚಿಕಿತ್ಸೆಗೆ ಸರಿ ಯಾಗಿ ಸ್ಪಂದಿಸುವ ವೈದ್ಯರೂ ದೊರೆಯು ವುದಿಲ್ಲ. ಸಕಾಲದಲ್ಲಿ ಆಕ್ಸಿಜನ್ ಸಿಲಿಂಡರ್ ಗಳ ಕೊರತೆಯೂ ಆಸ್ಪತ್ರೆಯಲ್ಲಿ ಕಂಡು ಬರುತ್ತದೆ. ಸಮಸ್ಯೆಯ ಬಗ್ಗೆ ಜನಪ್ರತಿನಿಧಿ ಗಳಲ್ಲಿ ಎಷ್ಟೇ ಅಲವತ್ತುಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಅಂಬ್ಯುಲೆನ್ಸ್ ಸೇವೆ ಸರಿಯಾದ ಸಮಯಕ್ಕೆ ದೊರೆಯುವುದೂ ಇಲ್ಲ. ಹೀಗಾಗಿ ಅದೆಷ್ಟೋ ರೋಗಿಗಳು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಲೇಡಿ ಗೋಷನ್ ಆಸ್ಪತ್ರೆ ಸುಸಜ್ಜಿತವಾಗಿ ನಿರ್ಮಾಣ ವಾಗುತ್ತದೆ ಎಂದು ನಂಬಲಾಗಿದ್ದರೂ ಇನ್ನೂ ಆ ಕೆಲಸ ಪ್ರಾರಂಭವಾಗುವ ಲಕ್ಷಣ ಗೋಚರಿಸುತ್ತಿಲ್ಲ.
ಇದರಿಂದ ಬಡರೋಗಿಗಳು ಮತ್ತದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಾಜ್ಯ ಸರಕಾರವು ಆದಷ್ಟು ಬೇಗ ಕಣ್ತೆರೆದು ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಬೇಕಾಗಿ ವಿನಂತಿ.                   
 ಸುಕನ್ಯಾ ನಾಯ್ಕ್, ವಿಟ್ಲ

ಪೊಲೀಸರ ಹಗಲು ದರೋಡೆ

Posted by JAYAKIRANA Kirana on | 0 comments | Leave a comment...

ಮಂಗಳೂರಿನ ಪೊಲೀಸರು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಅನರ್ಥವಾಗಿ ಬಳಸಿ ಮಂಗಳೂರಿನ ಜನರನ್ನು ಲೂಟಿ ಮಾಡುತ್ತಿ ದ್ದಾರೆ. ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಕಪ್ಪು ಬಣ್ಣದ ಕೂಲಿಂಗ್ ಪೇಪರ್ ಅನ್ನು ನಿಷೇಧಿಸಿದೆ. ಅದರ ಆದೇಶದ ಪ್ರಕಾರ ಕಾರಿನ ಮುಂದಿನ ಹಾಗೂ ಹಿಂಭಾಗದ ಗಾಜು ಶೇ.೭೦ ಹಾಗೂ ಬದಿಯ ನಾಲ್ಕು ಗಾಜುಗಳು ಶೇ.೫೦ ರಷ್ಟು ಪಾರದರ್ಶಕ ಆಗಿರಬೇಕು. ನಾನು ಮುಂಬೈ ಹೈಕೋರ್ಟ್‌ನಲ್ಲಿ ವಕೀಲ ನಾಗಿದ್ದು, ಸುಪ್ರೀಂಕೋರ್ಟ್‌ನ ಆದೇಶವನ್ನು ಚೆನ್ನಾಗಿ ಓದಿದ್ದೇನೆ. ಅದರಲ್ಲಿ ಶೇ.೭೦ ಮತ್ತು ಶೇ.೫೦ ಇರುವ ಕೂಲಿಂಗ್ ಪೇಪರ್ ಅನ್ನು ಹಾಕಬಾರದು ಎಂದು ಆದೇಶವನ್ನು ಕೊಟ್ಟಿಲ್ಲ. ನಾನು ಸುಪ್ರೀಂ ಕೋರ್ಟ್ ಆದೇಶ ದಂತೆ ನನ್ನ ಕಾರಿಗೆ ಕೂಲಿಂಗ್ ಪೇಪರ್ ಅಳವಡಿಸಿದ್ದೆ. ಆದರೆ ವಾರದ ಹಿಂದೆ ಕುಟುಂಬ ಸದಸ್ಯರೊಂದಿಗೆ ಮಂಗಳೂರಿಗೆ ಬಂದಾಗ ಪೊಲೀಸರು ಕಾರು ನಿಲ್ಲಿಸಿ ಗೂಂಡಾಗಳಂತೆ ವರ್ತನೆ ಮಾಡಿದರು. ನಾವು ತುಂಬಾ ಸುಸ್ತಾಗಿದ್ದೆವು. ಅವರು ಅದನ್ನು ಗಮನಿಸದೆ ಕಾರಿನ ಗಾಜಿನ ಕೂಲಿಂಗ್ ಪೇಪರ್ ಅನ್ನು ಹರಿದು ಹಾಕಿ ದರು. ಜೂನ್ ಐದರವರೆಗೆ ಅವಧಿ ಇದ್ದರೂ ೬೦೦ರೂ. ಹಣ ವಸೂಲು ಮಾಡಿದರು.
ಸುಪ್ರೀಂ ಕೋರ್ಟ್‌ನ ಆದೇಶವನ್ನು ಅನರ್ಥವಾಗಿ ಬಳಸಿ ಪೊಲೀಸರು ಮಂಗ ಳೂರಿನ ಜನರನ್ನು ಮೂರ್ಖರನ್ನಾಗಿ ಮಾಡಿ ಹಣ ಕಬಳಿಸುವುದು ದರೋಡೆ ಅಲ್ಲವೇ?
 ಧರ್ಮರಾಜ್, ಮುಂಬೈ

ವೇಣೂರಲ್ಲಿ ಸುಸಜ್ಜಿತ ಚಿತ್ರಮಂದಿರ ನಿರ್ಮಾಣವಾಗಲಿ

Posted by JAYAKIRANA Kirana on | 0 comments | Leave a comment...

ವಿಸ್ತಾರವಾಗಿ ಬೆಳೆದು ನಿಂತಿರುವ ಬೆಳ್ತಂಗಡಿ ತಾಲೂಕಿನ ವೇಣೂರು ಎಂಬ ಪಟ್ಟಣಕ್ಕೆ ಒಂದು ಸುಸಜ್ಜಿ ತವಾದ ಸಿನಿಮಾ ಮಂದಿರದ ಅಗತ್ಯತೆ ಇದೆ. ವೇಣೂರು ನಿವಾಸಿಗಳು ಚಲನಚಿತ್ರ ನೋಡಬೇಕೆನಿಸಿದರೆ ದೂರದ ಮೂಡಬಿದ್ರೆಗೋ ಅಥವಾ ಬೆಳ್ತಂಗಡಿಗೆ ಹೋಗ      ಬೇಕಾಗಿದೆ. 
ಶಾಲಾ ಕಾಲೇಜುಗಳು ಹಾಗೂ ಸಾಕಷ್ಟು ವಿದ್ಯಾ ವಂತರು ಇರುವ ಈ ಪ್ರದೇಶದಲ್ಲಿ ಒಂದು ಚಿತ್ರಮಂದಿರ ನಿರ್ಮಿಸಿದಲ್ಲಿ ಮನೋರಂಜನೆ ಬೇಕೆನಿಸಿದಾಗ ಹಾಗೂ ನಮ್ಮ ಆಡು ಭಾಷೆಯಾಗಿರುವ ತುಳುಚಿತ್ರಗಳನ್ನು ವೀಕ್ಷಿಸ ಬಹುದು. ಕನ್ನಡ ಬಾರದ ಇಲ್ಲಿಯ ಹಲವು ನಾಗರಿಕರಿಗೆ ಹಾಗೂ ಮಹಿಳೆಯರಿಗೆ ಟೀವಿಯಲ್ಲೂ ಹೆಚ್ಚಾಗಿ ಕನ್ನಡ ಭಾಷೆಯ ಕಾರ‍್ಯಕ್ರಮಗಳೇ ಪ್ರಸಾರವಾಗುವುದರಿಂದ ಭಾಷೆಯ ಕೊರತೆಯಿಂದಾಗಿ ಹಲವಾರು ಮಹಿಳೆಯರಿಗೆ ಅಷ್ಟೇನು ಮನೋರಂಜನೆ ಸಿಗುತ್ತಿಲ್ಲ.
ತುಳು ಕಾರ‍್ಯಕ್ರಮ ಹಾಗೂ ಚಿತ್ರಗಳು ಟಿವಿಯಲ್ಲಿ ಬರುವುದು ತೀರಾ ವಿರಳವಾಗಿರುವುದರಿಂದ ಚಿತ್ರ ಮಂದಿ ರಕ್ಕೆ ಹೋಗಿ ನೋಡಬಹುದಾಗಿದೆ. ಇದಲ್ಲದೆ ಚಿತ್ರಮಂ ದಿರದ ಒಳಗೆ ಕಾಲಿಡದ ಅದೆಷ್ಟೋ ಮಹಿಳೆಯರು ಇಲ್ಲಿರುವುದರಿಂದ ಇಲ್ಲಿ ಒಂದು ಸುಸಜ್ಜಿತವಾದ ಚಿತ್ರ ಮಂದಿರ ನಿರ್ಮಾಣವಾದರೆ ಹೊಸತೊಂದು ಅನುಭ ವವನ್ನು ಅವರು ಪಡೆಯಬಹುದಾಗಿದೆ. 

ಪಿ.ಬಿ. ಕುಲಾಲ್, ಬಜಿರೆ

ಜಿಮ್‌ನಿಂದ ಕೃಷಿಕರಿಗೇನು ಲಾಭ?

Posted by JAYAKIRANA Kirana on | 0 comments | Leave a comment...

ಕರ್ನಾಟಕ ರಾಜ್ಯ ಸರಕಾರ ವಿದೇಶಿ ಕಂಪೆನಿಗಳನ್ನು ಇಲ್ಲಿಗೆ ಆಕರ್ಷಿಸುವ ಸಲು ವಾಗಿ ವರ್ಷಕ್ಕೊಮ್ಮೆ ಹೂಡಿಕೆದಾರರ ಸಮಾ ವೇಶವನ್ನು ನಡೆಸುತ್ತಿದೆ. ಕಳೆದ ವರ್ಷ ಯಡಿಯೂರಪ್ಪ ಆರಂಭಿಸಿದ್ದ ಸಮಾವೇಶ ಈ ಬಾರಿ ಮುಖ್ಯಮಂತ್ರಿ ಸದಾನಂದ ಗೌಡರ ನೇತೃತ್ವದಲ್ಲಿ ನಡೆದಿದೆ. ಹಲವು ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳ ಹೂಡಿಕೆಯಾಗಿದೆ ಎಂದು ಸರಕಾರ ಭಾರೀ ಖುಷಿಯಲ್ಲಿದೆ. ಆದರೆ ಇಲ್ಲಿ ಬೃಹತ್ ಉದ್ದಿ ಮೆಗಳನ್ನು ಆರಂಭಿಸಲು ಸೂಕ್ತ ಸ್ಥಳಾವ ಕಾಶ ಎಲ್ಲಿದೆ ಎಂಬುವುದರ ಬಗ್ಗೆ ಮಾತ್ರ ಯಾರೂ ಚಿಂತೆ ಮಾಡುತ್ತಿಲ್ಲ. ಯಾಕೆಂದರೆ ದೊಡ್ಡ-ದೊಡ್ಡ ಕೈಗಾರಿಕೆಗಳು ಪ್ರಾರಂಭವಾ ಗಲು ಸಾವಿರಾರು ಎಕರೆಗಳಷ್ಟು ಭೂಮಿ ಬೇಕು. ಭೂಮಿಯ ಅವಶ್ಯಕತೆಗಾಗಿ ಇಲ್ಲಿನ ರೈತರನ್ನು ಒಕ್ಕಲೆಬ್ಬಿಸಲೇಬೇಕು. ಈಗಾಗಲೇ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಕೃಷಿಭೂಮಿ ಯನ್ನು ಸೆಝ್, ನಾಗಾರ್ಜುನ, ಎಂಆರ್ ಪಿಎಲ್, ಸುಜಲಾನ್‌ನಂಥ ಕೈಗಾರಿಕೆಗಳು ಆಕ್ರಮಿಸಿಕೊಂಡಿವೆ. ಹೀಗಿರುವಾಗ ಮತ್ತೆ ಇನ್ನಷ್ಟು ಕೈಗಾರಿಕೆಗಳು ಕೋಟ್ಯಂತರ ಹಣ ಹೂಡಿರುವುದು ಆಪತ್ಕಾಲದ ಸೂಚನೆಯೇ ಆಗಿದೆ. ಜಿಲ್ಲೆಯ ಇನ್ನಷ್ಟು ಕೃಷಿಭೂಮಿ ನಾಶ ವಾಗುವ ಮುನ್ಸೂಚನೆಯಿದು. ರೈತವಿ ರೋಧಿ ಹೂಡಿಕೆದಾರರ ಸಮಾವೇಶ ನಡೆಸಿರುವ  ರಾಜ್ಯ ಸರಕಾರಕ್ಕೆ ಧಿಕ್ಕಾರ ಕೂಗಬೇಕಿದೆ. ರಾಜ್ಯದ ಕೃಷಿಭೂಮಿಯನ್ನು ರಕ್ಷಿಸಲು ಯುವ ಜನತೆ ಪಣ ತೊಡಬೇಕಿದೆ.
 ನಿತಿನ್, ಮಣಿಪಾಲ

ಶಾಲಾ ಗೋಡೆಗಳಲ್ಲಿ ಭಿತ್ತಿಚಿತ್ರ ಬೇಡ

Posted by JAYAKIRANA Kirana on | 0 comments | Leave a comment...

ನಗರದ ಹೆಚ್ಚಿನ ಶಾಲೆ, ಕಾಲೇಜ್ ಮತ್ತಿತರ ಶಿಕ್ಷಣ ಸಂಸ್ಥೆಗಳ ಗೋಡೆಗಳ ಮೇಲೆ ನಾಟಕ, ಸಿನಿಮಾ, ರಾಜಕೀಯ ಪಕ್ಷ ಮತ್ತು ಸಂಘಟನೆಗಳ ಬಿತ್ತಿಚಿತ್ರವನ್ನು ಅಂಟಿಸಿರುವುದು ಕಾಣುತ್ತೇವೆ. ‘ಭಿತ್ತಿಚಿತ್ರ ಅಂಟಿಸಬೇಡಿ’ ಎಂದು ಬರೆದಿರುವ ಕಂಪೌಂಡ್ ಮೇಲೆ ರಾತೋರಾತ್ರಿ ಭಿತ್ತಿಚಿತ್ರ ಅಂಟಿಸುತ್ತಾರೆ. ಕೆಲವು ಅಶ್ಲೀಲ ಸಿನಿಮಾಗಳ ಪೋಸ್ಟರ್, ಒಳಉಡುಪುಗಳ ಜಾಹೀರಾ ತನ್ನು ಸಂಸ್ಥೆಗಳ ಎದುರು ಹಾಕಿರುತ್ತಾರೆ.  ಇದರಿಂದ ಮಕ್ಕಳ ಚಿತ್ತ ಚಂಚಲವಾಗು ತ್ತದೆ. ಶಾಲೆಯ ಎದುರು ವಿದ್ಯಾರ್ಥಿಗಳಿಗೆ ಸದ್ವಿಚಾರ, ಸದ್ಗುಣಗಳನ್ನು ಬೋಧಿಸುವ ಭಿತ್ತಿ ಪತ್ರ, ಬ್ಯಾನರ್ ಇದ್ದರೆ ಚೆಂದ. ಇದು ವಿದ್ಯಾ ರ್ಥಿಗಳ ಶೈಕ್ಷಣಿಕ ಬದುಕಿಗೆ ಪೂರಕವಾಗು ತ್ತದೆ. ಅಶ್ಲೀಲತೆಯನ್ನು ಬಿಂಬಿಸುವ ಭಿತ್ತಿಪತ್ರ ಗಳಿಂದ ವಿದ್ಯಾರ್ಥಿಗಳು ಬೇಡದ ವಿಷಯ ಗಳ ಕಡೆ ಗಮನಹರಿಸುತ್ತಾರೆ. ಇಂಥ ವಿಕೃ ತಿಯ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ, ಮನಪಾ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವರೇ?
ನೊಂದ ವಿದ್ಯಾರ್ಥಿನಿ, ಕೆನರಾ ಕಾಲೇಜ್  

ಹಿಂದೂಗಳು ಸರ್ವಸ್ವದ ತ್ಯಾಗ ಮಾಡಿದರೆ ಮಾತ್ರ ಹಿಂದೂ ರಾಷ್ಟ್ರ! ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ತಪನ್ ಘೋಷ್

Posted by JAYAKIRANA Kirana on | 0 comments | Leave a comment...


ರಾಮನಾಥಿ (ಫೋಂಡಾ, ಗೋವಾ): ಇಂದು ಹಿಂದೂಗಳಿಗೆ ಸರ್ವಸ್ವದ ತ್ಯಾಗ ಮಾಡುವವರು ಹಾಗೂ ಸಿಂಹದಂತೆ ನೇತೃತ್ವವುಳ್ಳವವರು ಇಲ್ಲವಾಗಿದೆ. ಆದುದರಿಂದ ದೇಶದಾದ್ಯಂತ ಹಿಂದೂಗಳ ಸ್ಥಿತಿ ಅತ್ಯಂತ ದಯನೀಯವಾಗಿದೆ. ಸರಕಾರ ಮತ್ತು ಪರಧರ್ಮಿಯರು ಹಿಂದೂಗಳ ಮೇಲೆ ಪ್ರತಿದಿನ ಆಘಾತ ಮಾಡುತ್ತಿದ್ದಾರೆ. ಸಾಕ್ಷಾತ್ ಭಗವಾನ್ ಶ್ರೀಕೃಷ್ಣನಂತಹ ಸ್ನೇಹಿತನು ಇರುವಾಗಲೂ ಅರ್ಜುನನಿಗೆ ತನ್ನ ರಾಜ್ಯವನ್ನು ಪಡೆಯಲು ತನ್ನ ಮಕ್ಕಳ (ಅಭಿಮನ್ಯುವಿನ) ಬಲಿದಾನ ಕೊಡಬೇಕಾಯಿತು.  ಹಿಂದೂ ರಾಷ್ಟ್ರಕ್ಕಾಗಿ ಹಿಂದೂಗಳೂ ಇಂತಹ ಬಲಿದಾನಕ್ಕೆ ಸಿದ್ಧರಾಗಬೇಕು. ಏನಾದರೂ ಪಡೆಯಲು ಅದರ ಮೌಲ್ಯವನ್ನು ತೆರಬೇಕಾಗುತ್ತದೆ ಎಂದು ಬಂಗಾಲದ ಹಿಂದೂ ಸಂಘತಿ ಈ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ ತಪನ ಘೋಷರವರು ಪ್ರತಿಪಾದಿಸಿದರು.
ಶ್ರೀ. ಘೋಷರವರು ರಾಮನಾಥಿ, ಗೋವಾದಲ್ಲಿನ ಶ್ರೀ ರಾಮನಾಥ ದೇವಸ್ಥಾನದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ ಐತಿಹಾಸಿಕ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಗಲಭೆ ಮತ್ತು ಹಿಂದೂಗಳ ಸಂಪರ್ಕ ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದರು. ಹಿಂದೂ ಜನಜಾಗೃತಿ  ಸಮಿತಿಯ ವತಿಯಿಂದ ಆಯೋಜಿಸಿದ ಅಧಿವೇಶನಕ್ಕಾಗಿ ೨೦ ರಾಜ್ಯಗಳಿಂದ ೧೦೦ಕ್ಕಿಂತ ಹೆಚ್ಚು ಸಂತರು, ಧರ್ಮಾಚಾರ್ಯ, ವಿಚಾರವಂತರು, ಸಂಪಾದಕರು, ನ್ಯಾಯವಾದಿಗಳು, ಹಿಂದುತ್ವವಾದಿ ಸಂಘಟನೆಯ ಮುಖಂಡ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಮೂಡುಬಿದ್ರೆ ರೇಂಜ್‌ನಲ್ಲಿ ೨,೨೨,೯೭೫ ಸಸಿ ನೆಡುವಿಕೆಯ ಗುರಿ

Posted by JAYAKIRANA Kirana on | 0 comments | Leave a comment...


ಕಿನ್ನಿಗೋಳಿ: ಮೂಡಬಿದ್ರೆ ರೇಂಜ್‌ನ ೩೦೬ಹೆಕ್ಟೇರ್ ಪ್ರದೇಶದಲ್ಲಿ ೨,೨೨,೯೭೫ ಗಿಡಗಳನ್ನು ನೆಡಸಲಾಗುವುದು ಎಂದು ಮೂಡಬಿದ್ರೆ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ತಿಳಿಸಿದರು.
ಅವರು ಸೋಮವಾರ ನಿಡ್ಡೋಡಿಯಲ್ಲಿ ಕಿನ್ನಿಗೋಳಿ ವ್ಯಾಪ್ತಿಯ ಐದು ಕಿಲೋಮೀಟರ್ ದೂರದ ರಸ್ತೆ ಬದಿಯಲ್ಲಿ ಎರಡು ಸಾವಿರ ಗಿಡಗಳನ್ನು ನೆಡುವ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೂಡುಬಿದ್ರೆ ಪರಿಸರದ ರಸ್ತೆ ಬದಿ ಒಂದು ಸಾವಿರ ಗಿಡಗಳನ್ನು ನೆಡಲಾಗುವುದು. ಅಲ್ಲದೆ ಸಾರ್ವಜನಿಕರಿಗೆ ವಿತರಿಸಲು ೧೦ಸಾವಿರ ಗಿಡಗಳು ಸಿದ್ಧವಿದ್ದು, ಅದರ ಮೌಲ್ಯ ನೀಡಬೇಕಾಗುತ್ತದೆ. ಹಲಸು, ಮಾವು, ರೆಂಜ, ತೇಗ ಮುಂತಾದ ಗಿಡಗಳನ್ನು ನೆಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಲ್ಲಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ ಗೀತಾ ಅಮೀನ್, ಅರಣ್ಯ ಇಲಾಖೆಯ ಯೋಗೀಶ್ವರ್, ನರಸಿಂಹ ಪ್ರಭು, ರೋಲ್ಫಿ ಡಿಕೋಸ್ತ, ಸಿಪ್ರಿಯನ್ ಡಿಸೋಜ, ಜೆರಾಂ ಮೋರಸ್, ದುರ್ಗಾಪ್ರಸಾದ್ ಹೆಗ್ಡೆ ಮತ್ತಿತರರಿದ್ದರು.

ಬಂಟ್ವಾಳ: ಗಾಣಿಗರ ಸಂಘದ ವಿದ್ಯಾರ್ಥಿ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಬಂಟ್ವಾಳ ತಾಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ಪ್ರತೀ ವರ್ಷದಂತೆ ಜುಲೈ.೨೨ರಂದು ವಿತರಿಸಲಾಗುವ ವಿದ್ಯಾರ್ಥಿ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಪಾಣೆಮಂಗಳೂರಿನ ಸುಮಂಗಲಾ ಸಮುದಾಯ ಭವನದಲ್ಲಿರುವ ಸಂಘದ ಕಚೇರಿಯಲ್ಲಿ ಈಗಾಗಲೇ ನಿಗದಿತ ಅರ್ಜಿ ನಮೂನೆ ವಿತರಿಸಲಾಗುತ್ತಿದೆ. ಅರ್ಹ ಸ್ವಜಾತಿ ವಿದ್ಯಾರ್ಥಿಗಳು ಶೈಕ್ಷಣಿಕ ತೇರ್ಗಡೆ ಬಗ್ಗೆ ಅಂಕಪಟ್ಟಿ ಪ್ರತಿ ಮತ್ತು ಶಾಲಾ ಕಾಲೇಜಿನ ಮುಖ್ಯಸ್ಥರ ಸಹಿಯೊಂದಿಗೆ ಜು.೫ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ತಾಲ್ಲೂಕಿನಲ್ಲಿ ನೆಲೆಸಿರುವ ಎಂಟನೇ ತರಗತಿ ಮೇಲ್ಪಟ್ಟು ಪದವಿ, ಸ್ನಾತಕೋತ್ತರ, ಐಟಿಐ, ಡಿಪ್ಲೋಮ, ವೈದ್ಯಕೀಯ ಮತ್ತಿತರ ವಿಭಾಗದಲ್ಲಿ ಅಭ್ಯಸಿಸುತ್ತಿರುವ ಅರ್ಹ ವಿದ್ಯಾರ್ಥಿಗಳು ಆಯಾಯ ವಲಯ ಸಮಿತಿ ಮುಖ್ಯಸ್ಥರ ಶಿಫಾರಸು ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಸಂಘದ ಅಧ್ಯಕ್ಷ ಎಂ.ವೆಂಕಪ್ಪ ಸಪಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಸಿಂಗ್ ಧೃತರಾಷ್ಟ್ರ: ಕಿರಣ ಬೇಡಿ

Posted by JAYAKIRANA Kirana on | 0 comments | Leave a comment...

ನವದೆಹಲಿ: ಪ್ರಧಾನಿ ಮನಮೋಹನ್ ಸಿಂಗ್ ಮಹಾಭಾರತದ ಧೃತರಾಷ್ಟ್ರನಂತಾಗಿದ್ದಾರೆ ಎಂದು ವಾಗ್ದಾಳಿ ನಡೆಸಿರುವ ಅಣ್ಣಾ ತಂಡದ ಸದಸ್ಯೆ ಕಿರಣ ಬೇಡಿ, ಅವರ ಭ್ರಷ್ಟ ಸರ್ಕಾರ ಅನ್ಯಾಯದ ವಿರುದ್ಧ ಹೋರಾಡಲು ಅಶಕ್ತವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರ ವಿರುದ್ಧ ಟೀಕೆ ಮಾಡಿದ ಬೇಡಿ, ಖುರ್ಷಿದ್ ಅವರ ವೈಯಕ್ತಿಕ ಪ್ರಚಾರ ಈ ಬಾರಿ ಕೆಲಸಕ್ಕೆ ಬರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಏತನ್ಮಧ್ಯೆ ಅಣ್ಣಾ ತಂಡಕ್ಕೆ ಬೆಂಬಲ ಸೂಚಿಸಿದ ಬಿಜೆಪಿ, ಯುಪಿಎ ಸರ್ಕಾರ ಕಳಂಕಗೊಂಡಿದೆ. ಪ್ರಧಾನಿ ಪ್ರಾಮಾಣಿಕರಾಗಿದ್ದರೂ ಕಳಂಕಿತರೆಲ್ಲರೂ ಪ್ರಧಾನಿಯವರ ತಂಡದಲ್ಲಿ ಸೇರಿಕೊಂಡು ಭ್ರಷ್ಟರ ತಂಡವನ್ನೇ ಕಟ್ಟಿದ್ದಾರೆ ಎಂದು ಟೀಕಿಸಿದೆ.
ದ್ರೌಪತಿ ವಸ್ತ್ರಾಪಹರಣಕ್ಕೆ ಧೃತರಾಷ್ಟ್ರ ಒಪ್ಪದೇ ಇರುತ್ತಿದ್ದರೆ ಏನಾಗುತ್ತಿತ್ತು? ಅದೇ ಪರಿಸ್ಥಿತಿ ಪ್ರಧಾನಿ ಮನಮೋಹನ್ ಸಿಂಗ್ ಅವರದ್ದು ಎನ್ನುವ ಧಾಟಿಯಲ್ಲಿ ಬೇಡಿ ಟ್ವೀಟ್ ಮಾಡಿದ್ದಾರೆ.

ಬಸ್ರೂರು ಪದ್ಮಶಾಲಿ ಕ್ರಿಯಾ ವೇದಿಕೆಗೆ ಆಯ್ಕೆ

Posted by JAYAKIRANA Kirana on | 0 comments | Leave a comment...

ಕುಂದಾಪುರ: ಬಸ್ರೂರು ವಲಯ ಪದ್ಮಶಾಲಿ ಕ್ರಿಯಾ ವೇದಿಕೆಗೆ ೨೦೧೨-೧೩ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೈಲ್ಕೆರೆ ಕಲ್ಕೂರು ಮನೆ ಚಂದ್ರ ಶೇಖರ ಶೆಟ್ಟಿಗಾರ ಆಯ್ಕೆಯಾಗಿದ್ದಾರೆ.
ಇವರು ಪ್ರಗತಿಪರ ರೈತರಾಗಿದ್ದು, ಪ್ರಸ್ತುತ ಧರ್ಮಸ್ಥಳ ಗ್ರಾಮಾಭಿವೃದ್ಧಿ, ನಾಗೇಶ್ವರ ತಿರುಗಾಟ ಭಜನಾ ಮಂಡಳಿಯ ಅಧ್ಯಕ್ಷರಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವೆಯಲ್ಲಿ ಸಕ್ರೀಯರಾಗಿ ಅನುಭವ ಪಡೆದ ಇವರು ಬಹುಮುಖ ಪ್ರತಿಭಾವನ್ವಿತರಾಗಿದ್ದಾರೆ.

ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಮುದ್ರಪಾಲು

Posted by JAYAKIRANA Kirana on | 0 comments | Leave a comment...

ರಾಯ್‌ಘಡ: ವೀಕೆಂಡ್ ಟ್ರಿಪ್‌ಗಾಗಿ ಬಂದಿರುವ ಓರ್ವ ವಿದ್ಯಾರ್ಥಿನಿ ಸೇರಿದಂತೆ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿರು ಘಟನೆ ಕೊಂಕಣ ಸಮುದ್ರತೀರವಾದ ಹರಿಹರೇಶ್ವರ ಬೀಚ್‌ನಲ್ಲಿ ನಿನ್ನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆಯ ಚಿಂಚ್‌ವಾಡ ಇನ್ಸಿಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಅಧ್ಯಾಪಕ ಜೊತೆ ನಿನ್ನೆ ಪ್ರಖ್ಯಾತ ಬೀಚ್ ರೆಸಾರ್ಟ್‌ಗೆ ಪ್ರಯಾಣ ಬೇಳೆಸಿದ್ದರು.
ಭಾನುವಾರ ಬೆಳಿಗ್ಗಿನ ಜಾವ ಅರಬ್ಬಿ ಸಮುದ್ರದಲ್ಲಿ ಈಜಾಡುವ ವೇಳೆ ಆಳ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದರು.
ಯವಾತ್‌ಮಲ್‌ನ ನಿಖಿಲ್ ಜಿ. ಕಾಳೆ(೨೫)ಯ ದೇಹವನ್ನು ಹೊರ ತೆಗೆಯಲಾಗಿದೆ. ಇಬ್ಬರು ವಿದ್ಯಾರ್ಥಿಗಳಾದ ಲೋನಾವಾಲದ ಕುಶಾಲ್ ಸತಾಲೆ (೨೪) ಹಾಗೂ ಅಮರಾವತಿಯ ಶ್ವೇತಾ ವಟಾಣೆ (೨೫)ರ ದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ.

ಇಬ್ಬರು ಜವಾನ್, ಇಬ್ಬರು ಮಾವೋವಾದಿಗಳ ಹತ್ಯೆ

Posted by JAYAKIRANA Kirana on | 0 comments | Leave a comment...

ಪೊಲೀಸ್-ನಕ್ಸಲ್ ಗುಂಡಿನ ಚಕಮಕಿ
ಗಯಾ: ಬಿಹಾರದ ನಕ್ಸಲ್ ಪೀಡಿತ ಗಯಾ ಜಿಲ್ಲೆಯ ಬಾಲ್ತಾರ್ ಅರಣ್ಯ ಪ್ರದೇಶದಲ್ಲಿ ಪೊಲೀಸ್ ಮತ್ತು ನಕ್ಸಲ್ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಸಿಆರ್‌ಪಿಎಫ್ ಜವಾನರು ಹಾಗೂ ಹಲವು ಮಂದಿ ನಕ್ಸಲರು ಮೃತಪಟ್ಟಿರುವ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸರ ಹಾಗೂ ಶಸ್ತ್ರಸಜ್ಜಿತ ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಸಿಆರ್‌ಪಿಎಫ್ ಜವಾನ್ ಸಚೀಂದ್ರ ಶರ್ಮಾ ನೆಲಬಾಂಬ್ ಸ್ಫೋಟದಿಂದ ಮೃತಪಟ್ಟರೆ, ಮತ್ತೊಬ್ಬ ಜವಾನ್ ಧನಂಜಯ ಕುಮಾರ್ ಹೃದಯ ಸ್ಥಂಭನದಿಂದ ಮೃತಪಟ್ಟಿರುವ ಬಗ್ಗೆ ಐಜಿ ಅಮಿತ್ ಕುಮಾರ್ ತಿಳಿಸಿದ್ದಾರೆ.
ಎಸ್‌ಪಿ ಶಭೂ ಪ್ರಸಾದ್‌ರನ್ನೊಳಗೊಂಡ ಒಂಭತ್ತು ಸೆಕ್ಯುರಿಟಿ ಮೆನ್, ಮೂವರು ಎಸ್‌ಟಿಎಫ್ ಹಾಗೂ ಐವರು ಸಿಆರ್‌ಪಿಎಫ್ ಜವಾನರು ತೀವ್ರವಾದ ಗಾಯದೊಂದಿಗೆ ಪಾಟ್ನಾ, ಗಯಾ ಹಾಗೂ ಇಮಾಮ್‌ಗಂಜ್‌ನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರು ಮಾವೋವಾದಿಗಳು ಮೃತಪಟ್ಟಿದ್ದು, ಪೋಸ್ಟ್‌ಮಾರ್ಟಂಗಾಗಿ ಗಯಾದ ಆಸ್ಪತ್ರೆಗೆ ತರಲಾಗಿದೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4075) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2522) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (39) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (151) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (93) kyandi (1) lekhana (262) ln (1) lnews (3693) lokayukta (3) madikeri (1) maleria (1) mangalore (599) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (421) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (808) srinivaspoojary (1) srinivasshetty (1) sslc (2) suicide (2) sulia (4) sullia (209) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (954) tpchandrashekaran (1) traffic (1) train (1) udu (1) udupi (487) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)