ಮಂಗಳೂರು: ಹಾವೇರಿಯಿಂದ ಆದಿಉಡುಪಿಗೆ ವಲಸೆ ಕಾರ್ಮಿಕರಾಗಿ ಬಂದ ದೇವಮ್ಮ ಹಾಗೂ ರುದ್ರಪ್ಪ ದಂಪತಿ ನೆಲೆಸಿದ್ದ ಗುಡಿಸಲು ಬೆಂಕಿಗಾಹುತಿಯಾಗಿ ಸುಮಾರು ೨ ಲಕ್ಷ ರೂ. ನಷ್ಟ ಸಂಭವಿಸಿದೆ. ೧೬ ಜೋಪಡಿಗಳಿರುವ ಈ ಕಾಲನಿಯ ಒಂದು ಜೋಪಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳೀಯರು ಬೆಂಕಿ ನಂದಿಸಲು ಸಹಕರಿಸಿ ಇತರ ಜೋಪಡಿಗಳಿಗೆ ಬೆಂಕಿ ತಗುಲದಂತೆ ನೋಡಿಕೊಂಡರು.
Tagged with
gallery
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಎಂ. ಅಶೋಕ್‌ಶೇಟ್ ಆಯ್ಕೆಯಾಗಿದ್ದಾರೆ. ಅಶೋಕ್ ಶೇಟ್ ಅವರು ಶ್ವೇತಾ ಜ್ಯುವೆಲ್ಲರ‍್ಸ್‌ನ ಮಾಲಕರಾಗಿದ್ದಾರೆ.
Tagged with
gallery
ಇಂದು ಮುಂದುವರೆಯಲಿರುವ ಪಂದ್ಯ; ಮುನ್ನಡೆಯಲ್ಲಿ ನಡಾಲ್
ಪ್ಯಾರಿಸ್: ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಪುರುಷರ ವಿಭಾಗದಲ್ಲಿ ನಿನ್ನೆ ಮುಕ್ತಾಯಗೊಳ್ಳಬೇಕಿದ್ದ ರಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಕ್ ನಡುವಿನ ಫೈನಲ್ ಪಂದ್ಯಕ್ಕೆ ಮಳೆಕಾಟ ನೀಡಿದ್ದು, ಹಾಗಾಗಿ ಅಂತಿಮ ಹಣಾಹಣಿ ಇಂದು ಮುಂದುವರೆಯಲಿದೆ. ಈ ವೇಳೆ ನಡಾಲ್ ೨-೧ರ ಅಂತರದಿಂದ ಮುಂದಿದ್ದಾರೆ.
ಮಳೆಯ ಕಾರಣ ಪಂದ್ಯ ಇಂದಿಗೆ ಮುಂದುವರಿದಾಗ ಸ್ಪೇಯ್ನ್‌ನ ರಫೆಲ್ ನಡಾಲ್ ಉತ್ತಮ ಹೋರಾಟ ನೀಡಿದ್ದು, ಪರಿಣಾಮ ಪಂದ್ಯದಲ್ಲಿ ೬-೪, ೬-೩, ೨-೬, ೧-೨ರ ಮುನ್ನಡೆಯಲ್ಲಿದ್ದಾರೆ. ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದರು. ಆದರೆ ಈ ವೇಳೆ ಆರಂಭವಾದ ಮಳೆ ನಿಲ್ಲುವ ಯಾವುದೇ ಸೂಚನೆ ನೀಡದಿದ್ದಾಗ ಪಂದ್ಯವನ್ನು ಇಂದಿಗೆ ಮುಂದುವರೆಸಲಾಗಿದೆ. ಒಮ್ಮೆ ಪಂದ್ಯ ಆರಂಭವಾದರೂ ಎರಡನೇ ಬಾರಿ ಆರಂಭವಾದ ಮಳೆಯು ಪಂದ್ಯವನ್ನೇ ಸ್ಥಗಿತಗೊಳಿಸುವಂತೆ ಮಾಡಿತು. ಮೊದಲ ಎರಡು ಸೆಟ್‌ನಲ್ಲಿ ನಡಾಲ್ ಜಯಗಳಿಸಿದಾಗ ಈ ಬಾರಿ ಫ್ರೆಂಚ್ ಓಪನ್ ಗೆಲ್ಲಲಿದ್ದಾರೆ ಎಂಬ ವಿಶ್ವಾಸ ಮೂಡಿತು. ಆದರೆ ಪಟ್ಟುಬಿಡದ ಜೊಕೊವಿಕ್ ಮೂರನೇ ಸುತ್ತಿನಲ್ಲಿ ಅತ್ಯುತ್ತಮ ನಿರ್ವಹಣೆ ಪ್ರದರ್ಶಿಸಿ ಪಂದ್ಯದಲ್ಲಿ ಉಳಿದುಕೊಂಡರು. ಹಾಗಾಗಿ ಇಂದು ಮುಂದುವರೆಯುವ ಪಂದ್ಯದಲ್ಲಿ ಈ ಭಾರಿಯ ಫ್ರೆಂಚ್ ಓಪನ್‌ಗೆ ಯಾರು ಅಧಿಪತಿಯಾಗಲಿದ್ದಾರೆ ಎಂದು ನಿರ್ಧಾರವಾಗಲಿದೆ.
Tagged with
tnews
ಬ್ಯಾಂಕಾಕ್: ಪ್ರಸಕ್ತ ಋತುವಿನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಭಾರತದ ಅಗ್ರಶ್ರೇಯಾಂಕದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮುಕು ಟಕ್ಕೆ ಮತ್ತೊಂದು ಗರಿ ಸೇರಿದಂ ತಾಗಿದೆ. ಇಲ್ಲಿ ನಡೆಯುತ್ತಿದ್ದ ಥೈಲ್ಯಾಂಡ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಟೂರ್ನಿಯನ್ನು ಐದನೇ ಶ್ರೇಯಾಂಕದ ಸೈನಾ ಗೆದ್ದುಕೊಂಡಿ ದ್ದಾರೆ. ಈ ಮೂಲಕ ಪ್ರಸಕ್ತ ವರ್ಷದ ಎರಡನೇ ಟೂರ್ನಿ ಜಯಿಸಿದಂ ತಾಗಿದೆ. ಈ ಹಿಂದೆ ಮಾರ್ಚ್‌ನಲ್ಲಿ ನಡೆದಿದ್ದ ಸ್ವಿಸ್ ಓಪನ್‌ನಲ್ಲೂ ಸೈನಾ ಪರಾಕ್ರಮ ಮೆರೆದಿದ್ದರು.
ಫೈನಲ್‌ನಲ್ಲಿ ಸೈನಾ ವಿಶ್ವದ ೧೧ನೇ ಶ್ರೇಯಾಂಕದ ಥೈಲ್ಯಾಂಡ್‌ನ ರ‍್ಯಾಚನೊಕ್ ಇನೆಥೊನ್ ವಿರುದ್ಧ ೧೯-೨೧, ೨೧-೧೫, ೨೧-೧೦ರ ಅಂತರ ದಲ್ಲಿ ಗೆಲುವು ಸಾಧಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡರು. ಪ್ರಥಮ ಸುತ್ತಿನಲ್ಲಿ ಇಬ್ಬರೂ ಆಟಗಾರ್ತಿಯರು ಸಮಬಲದ ಹೋರಾಟ ನೀಡಿದ ಪರಿಣಾಮ ರೋಚಕತೆಗೆ ಸಾಕ್ಷಿಯಾ ಯಿತು. ಈ ವೇಳೆ ಸ್ವಲ್ಪ ಒತ್ತಡಕ್ಕೆ ಸಿಲುಕಿ ಕೊಂಡಿದ್ದ ಸುಳ್ಳಲ್ಲ. ಆದರೆ ನಂತರದ ಎರಡೂ ಸುತ್ತಿನಲ್ಲಿ ಸೈನಾ ಮರಳಿ ಫಾರ್ಮ್‌ಗೆ ಮರಳಿದರು. ಎರಡನೇ ಸುತ್ತನ್ನು ಕೈವಶ ಮಾಡಿಕೊಂಡಾಗ ಅಂತಿಮ ಸುತ್ತು ರೋಚಕತೆಗೆ ಸಿಲುಕಿತು. ಈ ಸುತ್ತಿನಲ್ಲಿ ಸೈನಾ ಮೊದಲ ಎರಡೂ ಸುತ್ತಿಗಿಂತಲೂ ಉತ್ತಮ ಸರ್ವ್ ಹಾಗೂ ಸ್ಮಾಶ್ ಹೊಡೆತಗಳನ್ನು ಪ್ರದರ್ಶಿಸಿದ ಪರಿಣಾಮ ಪಂದ್ಯವನ್ನೇ ಗೆದ್ದುಕೊಳ್ಳುವಂತಾಯಿತು.
Tagged with
tnews
ಫ್ರೆಂಚ್ ಓಪನ್ ಜಯಿಸಿದ್ದು
ಪ್ಯಾರಿಸ್: ನಾನು ೧೭ನೇ ಹರೆಯ ದಲ್ಲಿದ್ದ ಸಮಯದಲ್ಲಿ ಗೆದ್ದುಕೊಂಡಿದ್ದ ವಿಂಬಲ್ಡನ್ ಓಪನ್ ನನ್ನ ಶ್ರೇಷ್ಠ ಸಾಧನೆ ಎಂದು ತಿಳಿದುಕೊಂಡಿದ್ದೆ. ಆದರೆ ಫ್ರೆಂಚ್ ಓಪನ್ ಅದನ್ನು ಮೀರಿದ್ದಾಗಿದೆ ಎಂದು ರಶ್ಯಾದ ಖ್ಯಾತ ಟೆನಿಸ್ ಆಟಗಾರ್ತಿ ಮಾರಿಯಾ ಶರಪೋವಾ ತಿಳಿಸಿದ್ದಾರೆ. ಆದಿತ್ಯವಾರ ನಡೆದ ಫ್ರೆಂಚ್ ಓಪನ್ ಮಹಿಳಾ ಫೈನಲ್‌ನಲ್ಲಿ ಶರ ಪೋವಾ ಇಟಲಿಯ ಸಾರಾ ವಿರುದ್ಧ ೬-೩, ೬-೨ರ ನೇರ ಅಂತರದಲ್ಲಿ ಗೆದ್ದುಕೊಂಡು ಮರಳಿ ನಂಬರ್ ವನ್ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರು. ಪ್ರಶಸ್ತಿಯ ಜೊತೆಗೆ ಶರಪೋವಾ ೧.೨೫ ಮಿಲಿ ಯನ್ ಡಾಲರ್‌ಗಳ ಮೊತ್ತವನ್ನು ಪಡೆದುಕೊಂಡಿದ್ದರೆ ಸಾರಾ ಅದರ ಅರ್ಧದಷ್ಟನ್ನು ಜೋಲಿಗೆಗೆ ಹಾಕಿ ಕೊಂಡಿದ್ದಾರೆ.
ಜೀವನದಲ್ಲಿ ಎಷ್ಟೇ ಏಳು-ಬೀಳುಗಳನ್ನು ಕಂಡಿದ್ದರೂ ಅದರಿಂದ ಸಂಪೂರ್ಣವಾಗಿ ಮೇಲೇರುವುದನ್ನು ನಾನು ಬಲ್ಲೆ. ಟೆನಿಸ್ ಅಂಗಣದಲ್ಲಿ ದ್ದಾಗ ನನ್ನ ಆತ್ಮವಿಶ್ವಾಸ ಯಾವಾ ಗಲೂ ಉನ್ನತ ಮಟ್ಟದಲ್ಲಿರುತ್ತೆ. ಇದು ಸಫಲತೆಗೆ ಕಾರಣ ಕೂಡ ಹೌದು. ೨೦೦೪ರ ವಿಂಬಲ್ಡನ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ವಿರುದ್ಧ ಗೆದ್ದಾಗ ಶ್ರೇಷ್ಠ ಜಯವೆಂದು ತಿಳಿದಿದ್ದೆ. ಆದರೆ ಫ್ರೆಂಚ್ ಓಪನ್ ಅದೆಲ್ಲಕ್ಕಿಂತ ಶ್ರೇಷ್ಠ ಎಂದು ಶರಪೋವಾ ಬಣ್ಣಿಸಿದರು.
Tagged with
tnews
ಬರ್ಮಿಂಗ್‌ಹ್ಯಾಮ್: ಇಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ವಿಸ್ಡನ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ವೇಳೆ ರೋಚಕ ಘಟನೆಗೆ ಸಾಕ್ಷಿಯಾ ಯಿತು. ವಿಂಡೀಸ್ ತಂಡದ ವಿಕೆಟ್ ಕೀಪರ್ ದಿನೇಶ್ ರಾಮ್‌ದೀನ್ ನಿನ್ನೆ ಶತಕ ಸಿಡಿಸಿದ ನಂತರ ತಂಡದ ಮಾಜಿ ಆಟಗಾರ ವಿವಿಯನ್ ರಿಚರ್ಡ್ಸ್‌ಗೆ ತೀಕ್ಷ್ಣ ಸಂದೇಶವನ್ನು ಹೊತ್ತು ಕಾರ್ಡ್ ಪ್ರದರ್ಶಿಸಿದ್ದು ಅಚ್ಚರಿಗೆ ಕಾರಣವಾಯಿತು.
ಹಿನ್ನೆಲೆ: ಸರಣಿಯ ಈ ಹಿಂದಿನ ಎರಡೂ ಟೆಸ್ಟ್ ಪಂದ್ಯಗಳಲ್ಲಿ ರಾಮ್‌ದೀನ್ ತೀರಾ ಕಳಪೆ ಪ್ರದರ್ಶನ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಮುಖ್ಯವಾಗಿ ತಂಡದ ಮಾಜಿ ದಿಗ್ಗಜ ಆಟಗಾರ ವಿವಿಯನ್ ರಿಚರ್ಡ್ಸ್ ರಂತೂ ರಾಮ್‌ದೀನ್ ವಿರುದ್ಧ ತೀವ್ರ ಹರಿಹಾಯ್ದು, ಆತನೊಬ್ಬ ಎಲ್ಲವನ್ನೂ ಕಳಕೊಂಡ ಆಟಗಾರ ಎಂದು ತಿಳಿಸಿದ್ದರು. ಆದರೆ ನಿನ್ನೆಯ ದಿನದಲ್ಲಿ ರಾಮ್‌ದೀನ್ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ನಿನ್ನೆಯ ದಿನದಲ್ಲಿ ರಾಮ್‌ದೀನ್ ಶತಕ ಸಿಡಿಸಿ ನೇರವಾಗಿ ತನ್ನ ಜೇಬಿನಿಂದ ವಿವಿಯನ್ ರಿಚರ್ಡ್ಸ್ ವಿರುದ್ಧ ಸೆಡ್ಡು ಹೊಡೆದ ಸಂದೇಶವನ್ನೇ ಛಾಯಾಗ್ರಾಹಕರಿಗೆ ಪ್ರದರ್ಶಿಸಿದರು. ಸಂದೇಶದಲ್ಲಿ ‘ಯಾ ವಿವ್ ಟಾಕ್ ನಾ ಎಂದು ಬರೆದಿದ್ದು, ದಿಗ್ಗಜ ಆಟಗಾರನಿಗೆ ಇರಿಸು ಮುರಿಸಾಗು ವಂತಾಗಿತ್ತು.
Tagged with
tnews
ಆಡಳಿತ ವಿವಾದ
ಪುತ್ತೂರು: ಪುತ್ತೂರಿನ ನಿಡ್ಪಳ್ಳಿ ಚರ್ಚ್ ವಠಾರದಲ್ಲಿ ಆಡಳಿತ ಪರ ಮತ್ತು ವಿರುದ್ಧ ಗುಂಪುಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟು, ಘರ್ಷಣೆ ನಡೆದ ಘಟನೆ ಆದಿತ್ಯ ವಾರ ಸಂಭವಿಸಿದೆ.
ನಿಡ್ಪಳ್ಳಿ ಚರ್ಚ್‌ನ ಆಡಳಿತ ಮಂಡಳಿ ವಿವಾದದ ಹಿನ್ನೆಲೆಯಲ್ಲಿ ತಿಂಗಳ ಪ್ರಾರ್ಥನೆಯ ವಿಚಾರವನ್ನು ನೆಪವಾಗಿರಿಸಿಕೊಂಡು ಎರಡು ಗುಂ ಪುಗಳ ನಡುವೆ ಆರಂಭಗೊಂಡ ವಿವಾ ದವು ಆದಿತ್ಯವಾರದ ಸಾಮೂಹಿಕ ಪ್ರಾರ್ಥನೆಯ ವೇಳೆ ವಿಕೋಪಕ್ಕೆ ತಿರುಗಿ ಹೊಡೆದಾಟದ ಹಂತ ತಲುಪಿ ಗೊಂದಲ ಸೃಷ್ಟಿಯಾಗಿದೆ ಎನ್ನಲಾಗಿದೆ.
ಕಳೆದ ತಿಂಗಳ ಪ್ರಾರ್ಥನಾ ಕಾರ್ಯಕ್ರಮ ಗುರಿಕಾರರ ಅನುಪಸ್ಥಿತಿ ಯಲ್ಲಿ ಆಂಟನಿ ಡಿ’ಸೋಜಾ ಎಂಬ ವರ ಮನೆಯಲ್ಲಿ ನಡೆದಿತ್ತು. ನಿನ್ನೆ ಪ್ರಾರ್ಥನಾ ಕಾರ್ಯಕ್ರಮ ಮಿಲ್ಲಿ ಡಿ ಸೋಜಾ ಎಂಬವರ ಮನೆಯಲ್ಲಿ ನಡೆದಿದ್ದು, ಆಂಟನಿ ಡಿ’ಸೋಜಾ ಅವರ ಮನೆಯಲ್ಲಿ ಕಳೆದ ತಿಂಗಳು ನಡೆದಿದ್ದ ಪ್ರಾರ್ಥನಾ ಕಾರ್ಯಕ್ರಮಕ್ಕೆ ಗುರಿಕಾರರು ಹೋಗದಿರುವ ಹಿನ್ನೆಲೆ ಯಲ್ಲಿ ಮತ್ತೆ ಅಲ್ಲಿ ಪ್ರಾರ್ಥನಾ ಕಾರ್ಯಕ್ರಮ ನಡೆಸಬೇಕು ಎಂಬ ಬೇಡಿಕೆಯನ್ನು ಒಂದು ಗುಂಪು ಮುಂದಿಟ್ಟಿತ್ತು. ಇದಕ್ಕೆ ಆಡಳಿತ ಮಂಡಳಿಯವರು ಒಪ್ಪದೇ ಇದ್ದದ್ದು ವಿವಾದಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.
ಇದೇ ವಿಚಾರವನ್ನು ಮುಂದಿಟ್ಟು ಕೊಂಡು ಆದಿತ್ಯವಾರ ಚರ್ಚ್‌ನೊಳಗೆ ಆರಂಭಗೊಂಡ ವಿವಾದವು ಬಳಿಕ ಚರ್ಚ್ ವಠಾರದಲ್ಲಿ ಮಾತಿನ ಚಕಮಕಿ ಹೊಕೈಯೊಂದಿಗೆ ತಾರಕ್ಕಕ್ಕೇರಿ ಹೊಡೆದಾಟದ ಹಂತ ತಲುಪಿತೆಂಬ ಮಾಹಿತಿ ಲಭಿಸಿದೆ. ಚರ್ಚ್‌ನೊಳಗೆ ವಿವಾದ ಸೃಷ್ಠಿಯಾದ ವೇಳೆ ಅಲ್ಲಿನ ಧರ್ಮಗುರುಗಳು ನೀವು ಇಲ್ಲಿ ಗಲಾಟೆ ಮಾಡುವುದು ಬೇಡ. ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಿ ಎಂಬ ಸಲಹೆ ನೀಡಿದರೆಂದು ತಿಳಿದು ಬಂದಿದೆ.
ಕಾಶ್ಮೀರ್ ಡಿ’ಸೋಜಾ ಅವರನ್ನೊಳಗೊಂಡ ಆಡಳಿತ ಪರ ಮತ್ತು ಗ್ರೆಗೆರಿ ಡಿ’ಸೋಜಾ ಅವರನ್ನೊಳಗೊಂಡ ಆಡಳಿತ ವಿರುದ್ಧ ಗುಂಪುಗಳ ನಡುವೆ ಆಡಳಿತದ ವಿಚಾರದಲ್ಲೂ ಮಾತಿನ ಚಕಮಕಿ ನಡೆದಿದ್ದು, ಚರ್ಚ್‌ಗೆ ಸರ್ಕಾರದಿಂದ ಮಂಜೂರಾದ ರೂ.೧೦ಲಕ್ಷ ಹಣವನ್ನು ಆಡಳಿತ ಮಂಡಳಿಯವರು ದುರುಪಯೋಗ ಪಡಿಸಿದ್ದಾರೆ ಎಂದು ವಿರೋಧಿ ಗುಂಪಿನವರು ಆರೋಪಿಸಿದ್ದರು. ಎರಡು ಗುಂಪುಗಳ ನಡುವಿನ ವಿವಾದವು ವಿಕೋಪಕ್ಕೆ ತಿರುಗಿದ ಹಿನ್ನಲೆಯಲ್ಲಿ ಸಂಪ್ಯ ಪೊಲೀಸರು ಅಲ್ಲಿಗೆ ತೆರಳಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಯಾವುದೇ ದೂರು ದಾಖಲಾಗಿಲ್ಲ ಎನ್ನಲಾಗಿದೆ.
Tagged with
cnews
ಮೂಡಬಿದಿರೆ: ಕುಡಿತದ ಚಟ ಹೊಂದಿದ್ದ ಯುವಕನೊಬ್ಬ ಆರ್ಥಿಕ ಮುಗ್ಗಟ್ಟಿನಿಂದಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ತೋಡಾರಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ತೋಡಾರು ಗ್ರಾಮದ ಶೇಖರ ಶೆಟ್ಟಿ ಎಂಬವರ ಪುತ್ರ ಶಾಶ್ವತ್ (೨೧) ಎಂದು ಗುರುತಿಸಲಾಗಿದೆ.
ಮಂಗಳೂರಿನಲ್ಲಿ ಡೋರ್ ಪ್ರೇಮ್ಸ್‌ನ ಕೆಲಸವನ್ನು ಮಾಡುತ್ತಿದ್ದ ಈತ ತನ್ನ ಮನೆಯ ಸಿಲಿಂಗ್ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೈದ್ಯಾಧಿಕಾರಿ ‘ನಾಟ್‌ರಿಚೇಬಲ್’: ಆತ್ಮಹತ್ಯೆ ಮಾಡಿಕೊಂಡಿರುವ ಶಾಶ್ವತ್ ಮೃತದೇಹವನ್ನು ಪೋಸ್ಟ್ ಮಾರ್ಟಮ್ ಮಾಡಿಕೊಡುವಂತೆ ಮೂಡಬಿದಿರೆಯ ವೈದ್ಯಾಧಿಕಾರಿ ಡಾ. ರಶ್ಮಿ ಮುರಳೀಕೃಷ್ಣ ಅವರ ಮೊಬೈಲ್‌ಗೆ ಕರೆ ಮಾಡಿದಾಗ ನಾಟ್ ರೀಚೇಬಲ್ ಆಗಿತ್ತು. ಕಲ್ಲಮುಂಡ್ಕೂರಿನ ವೈದ್ಯಾಧಿಕಾರಿ ರಜೆಯಲ್ಲಿದ್ದ ಕಾರಣ ನಂತರ ಪಾಲಡ್ಕದ ವೈದ್ಯಾಧಿಕಾರಿಯವರು ಪೋಸ್ಟ್ ಮಾರ್ಟಮ್ ಮಾಡಬೇಕಾಯಿತು.
Tagged with
cnews
ಮಂಗಳೂರು: ಮದುವೆಯಾಗಿ ವಂಚಿಸುವುದನ್ನೇ ಖಯಾಲಿ ಮಾಡಿ ಕೊಂಡು ಮಲ್ಪೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಭೂಪ ಕಿನ್ನಿಗೋಳಿಯ ಸುಕುಮಾರನ ವಿರುದ್ಧ ಶಿರ್ವ ಠಾಣೆಯಲ್ಲೂ ದೂರು ದಾಖ ಲಾಗಿದೆ. ಬೆಳಪು ಗ್ರಾಮದ ಪ್ರೇಮಾ ಎಂಬಾಕೆ ದೂರು ನೀಡಿದ್ದು, ಸುಕುಮಾರ ತನ್ನನ್ನು ೨೦೦೫ನೇ ಇಸವಿಯಲ್ಲಿ ಮದುವೆಯಾಗಿದ್ದು, ಈ ವೇಳೆ ೧೯ ಸಾವಿರ ರೂ. ನಗದು, ಏಳು ಪವನ್ ಚಿನ್ನಾಭರಣ ಪಡೆದುಕೊಂಡಿದ್ದ. ಮದುವೆಯ ಬಳಿಕ ಮೂರು ತಿಂಗಳು ಸಂಸಾರ ನಡೆಸಿ ಬಳಿಕ ನಾಪತ್ತೆಯಾಗಿದ್ದ. ಇದೀಗ ವಿವಿಧ ಪತ್ರಿಕೆಗಳಲ್ಲಿ ವಂಚಕನ ಭಾವಚಿತ್ರ ಪ್ರಕಟಗೊಂಡಿದ್ದನ್ನು ನೋಡಿ ಆತನೇ ತನ್ನ ಗಂಡ ಎಂದು ಗೊತ್ತಾ ಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸುಕುಮಾರ ತಾಳಿಪಡ್ಪು ಎಂಬಲ್ಲಿನ ಬಸ್ ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ ಕುಕ್ ಆಗಿ ಕೆಲಸ ಮಾಡಿಕೊಂಡಿದ್ದ ವೇಳೆ ಸ್ಥಳೀಯ ಕೃಷ್ಣ ಮಣಿಯಾಣಿ ಎಂಬವರ ಪುತ್ರಿ ಶಾಂಭವಿಯನ್ನು ಮದುವೆಯಾಗಿದ್ದ ಎನ್ನಲಾಗಿದೆ. ಈತನಿಗೆ ಸಮೀಪದ ಅಂಗಡಿ ವ್ಯಾಪಾರಿಯೋರ್ವ ಯುವತಿಯನ್ನು ಪರಿಚಯಿಸಿದ್ದು, ಅಡ್ಕತ್ತಬೈಲ್‌ನ ಭಜನಾ ಮಂದಿರದಲ್ಲಿ ಮದುವೆಯೂ ನಡೆದಿತ್ತೆನ್ನಲಾಗಿದೆ. ಮದುವೆಯ ಸಂದರ್ಭ ೨೦ ಸಾವಿರ ವರದಕ್ಷಿಣೆ ಪಡೆದು ಒಂದೂವರೆ ವರ್ಷ ಸಂಸಾರ ಸಾಗಿಸಿದ್ದ. ಈತನಿಗೆ ಹೆಣ್ಣುಮಗುವೂ ಆಗಿತ್ತು. ಬಳಿಕ ಹೇಳದೆ ಮಂಗಳೂರಿಗೆ ಪಲಾಯನ ಮಾಡಿರುವುದಾಗಿ ತಿಳಿದುಬಂದಿದೆ. ಮದುವೆ ವಂಚಕನ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಇನ್ನಷ್ಟು ಪ್ರಕರಣ ದಾಖಲಾಗುವ ಸಂಭವವಿದೆ ಎನ್ನಲಾಗಿದೆ.
Tagged with
cnews
ಕಾಪು: ಕಟಪಾಡಿ ಜುಮ್ಮಾ ಮಸೀದಿಯಲ್ಲಿ ನಡೆಯುತ್ತಿರುವ ಉರೂಸಿಗೆ ಆಗಮಿಸಿದ ಭಕ್ತರೋರ್ವರು ಪಾರ್ಕಿಂಗ್ ಬಗ್ಗೆ ವಿವಾದ ಎಬ್ಬಿಸಿ ಇಲ್ಲಿಯ ಸ್ವಯಂ ಸೇವಕರೋರ್ವರಿಗೆ ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಕಟಪಾಡಿ ಜುಮ್ಮಾ ಮಸೀದಿಯಲ್ಲಿ ಎರಡು ದಿನಗಳಿಂದ ಉರೂಸ್ ಕಾರ್ಯಕ್ರಮ ನಡೆಯುತ್ತಿದ್ದು, ಮೊಹಮ್ಮದ್ ಶರೀಫ್ ಎಂಬವರು ಅಲ್ಲಿ ಸ್ವಯಂ ಸೇವಕರಾಗಿದ್ದರು. ಉರೂಸ್ ಕಾರ್ಯಕ್ರಮದಲ್ಲಿ ಅತ್ಯಧಿಕ ವಾಹನಗಳು ಬರುತ್ತಿರುವ ಹಿನ್ನೆಲೆಯಲ್ಲಿ ವಾಹನಗಳನ್ನು ಎಸ್‌ವಿಎಸ್ ಶಾಲಾ ಮೈದಾನದಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿತ್ತು. ಶನಿವಾರ ರಾತ್ರಿ ಆತಿಷ್ ಯಾನೆ ಆತಿಕ್ ಎಂಬವರು ತನ್ನ ಸ್ಕಾರ್ಪಿಯೋ ವಾಹನವನ್ನು ಮಸೀದಿಯ ಬಳಿಗೆ ಕೊಂಡೊ ಯ್ಯಲು ಪ್ರಯತ್ನಿಸಿದಾಗ, ಶರೀಫ್ ತಡೆದಿದ್ದಾರೆ. ಇದರಿಂದ ಕುಪಿತಗೊಂಡ ಆತಿಷ್ ತನಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಶರೀಫ್ ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews
ಪುತ್ತೂರು: ಪಾತ್ರಿಯೊಬ್ಬ ಪ್ರೇಮಕ್ಕೆ ಅಡ್ಡಿಬಂದ ಎಂಬ ಕಾರಣ ಒಡ್ಡಿ ಯುವಕರ ತಂಡವೊಂದು ಪ್ರೇಯಸಿಯ ಮಧ್ಯಸ್ಥಿಕೆಯಲ್ಲಿ ಪಾತ್ರಿಗೆ ಹಲ್ಲೆ ನಡೆಸಿದ ಘಟನೆ ನಿನ್ನೆ ನಡೆದಿದೆ.
ಪುತ್ತೂರು ನೆಹರೂ ನಗರದ ಲಿಂಗದಕಾಡುನಲ್ಲಿರುವ ದರ್ಶನ ಪಾತ್ರಿ ಹರೀಶ್ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭ ವಿಟ್ಲ ವೀರಕಂಬದ ಪ್ರಿಯ ಕರನ ಸಹಿತ ಐದಾರು ಯುವಕರನ್ನು ಯುವತಿ ಕರೆಸಿಕೊಂಡು ದರ್ಶನ ಪಾತ್ರಿಗೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಗುಂಪು ಗೂಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪಾತ್ರಿ, ಯುವತಿ ಸಹಿತ ಆರೋಪಿ ಗಳನ್ನು ವಶಕ್ಕೆ ತೆಗೆದುಕೊಂಡರು.
ವೀರಕಂಭ ನಿವಾಸಿಯಾಗಿರುವ ಯುವತಿ ತಾನು ಗಣೇಶ್ ಎಂಬವ ರನ್ನು ಪ್ರೀತಿಸುತ್ತಿದ್ದೆ. ಇದಕ್ಕಾಗಿ ವಶೀಕರಣ ಮಾಡಲು ಈ ದರ್ಶನ ಪಾತ್ರಿ ಹರೀಶ್ ಬಳಿ ತೆರಳಿದ್ದೆ. ಆಗ ಆತ ನಾನು ಹೇಳಿದಂತೆ ಕೇಳಿದರೆ ನಿನ್ನ ಕೆಲಸ ಮಾಡಿ ಕೊಂಡುತ್ತೇನೆಂದು ನಂಬಿಸಿದ್ದ.
ತದ ನಂತರ ಒಂದು ದಿನ ನನ್ನನ್ನು ವೀರಕಂಬಕ್ಕೆ ಕರೆಸಿಕೊಂಡು ಪಕ್ಕದ ಕಾಡಿಗೆ ಕರೆದೊಯ್ದು ಅತ್ಯಾಚಾರ ನಡೆಸಲು ಯತ್ನಿಸಿದ್ದ. ಅಲ್ಲದೆ ಈ ವಿಷಯವನ್ನು ಯಾರಲ್ಲಾದರೂ ಬಾಯಿಬಿಟ್ಟರೆ ನಾನು ನಂಬಿದ ಕಲ್ಲುರ್ಟಿ ಮೇಲಾಣೆ ಎಂದು ಹೇಳಿ ಕಳುಹಿಸಿದ್ದ. ಮೊನ್ನೆ ಪುನಃ ನನಗೆ ಕಾಲ್ ಮಾಡಿ ಪುತ್ತೂರಿಗೆ ಬರುವಂತೆ ಒತ್ತಾಯಿಸಿದ್ದ ಎಂದು ವಿವರಿಸಿದ್ದಾಳೆ. ಆದರೆ ಆಕೆಯ ಹೆತ್ತವರು ಠಾಣೆಯಲ್ಲಿ ಹೇಳುವುದೇ ಬೇರೆ. ‘ನಮ್ಮ ಹುಡುಗಿ ಗಣೇಶ್ ಎಂಬಾತನನ್ನು ಲವ್ ಮಾಡಿದ್ದಳು. ಇದು ನಮಗೆ ಇಷ್ಟವಿರಲಿಲ್ಲ. ಆತಕ್ಕಾಗಿ ದರ್ಶನಪಾತ್ರಿಯ ಮೊರೆ ಹೋಗಿದ್ದೆವು’ ಎಂದು ಯುವತಿ ಹೆತ್ತವರು ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ. ದರ್ಶನ ಪಾತ್ರಿಗೆ ಹಲ್ಲೆ ನಡೆಸಲು ಕಾರಣವಾದ ನಮ್ಮ ಹುಡುಗಿ ನಮಗೆ ಬೇಡ. ಆಕೆ ಪ್ರೀತಿಸಿದ ಹುಡುಗನೊಂದಿಗೆ ತೆರಳಲಿ ಎಂದು ಹೇಳಿಕೆ ನೀಡಿದ್ದಾರೆ.
Tagged with
cnews
ಮಂಗಳೂರು: ಅಣಬೆ(ಲಾಂಬು) ಪದಾರ್ಥ ತಿಂದ ಪರಿಣಾಮ ಐದು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಗಂಜಿಮಠದ ಕಂದಾ ವರಬೈಲ್‌ನಲ್ಲಿ ನಡೆದಿದೆ. ಇವರು ಮಳೆಗಾಲದಲ್ಲಿ ಬೆಳೆಯುವ ಅಣಬೆಯನ್ನು ಮಧ್ಯಾಹ್ನದ ಊಟದ ಜೊತೆ ಸೇವಿಸಿದ್ದರು. ಅಣಬೆ ವಿಷಯುಕ್ತವಾಗಿ ದ್ದರಿಂದ ಐವರು ಅಸ್ವಸ್ಥಗೊಂಡರು. ಮನೆಯ ಹಿರಿಯರಾದ ವಾಮನ ಮಡಿವಾಳ ಹಾಗೂ ಅವರ ಪತ್ನಿ ಸಂಬಂಧಿಕರ ಮನೆಗೆ ತೆರಳಿದ್ದ ಸಮಯ ಈ ಘಟನೆ ನಡೆದಿದೆ. ಈ ಸಂದರ್ಭ ಮನೆಯಲ್ಲಿ ಅವರ ನಾಲ್ಕು ಮಕ್ಕಳು ಹಾಗೂ ಸೊಸೆ ಮಾತ್ರ ಇದ್ದರು. ತೀವ್ರ ವಾಂತಿಮಾಡುತ್ತಿದ್ದ ಐವರು ಹೊಟ್ಟೆನೋವು ತಾಳಲಾರದೆ ಬಸವಳಿದಿರುವುದನ್ನು ಕಂಡು ಗಾಬರಿಯಾದ ನೆರೆಮನೆಯವರು ರಿಕ್ಷಾದಲ್ಲಿ ಸ್ಥಳೀಯ ಕ್ಲಿನಿಕ್‌ಗೆ ಕರೆದುಕೊಂಡು ಹೋದರು. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ತರಲಾಯಿತು. ಇದೀಗ ಐವರ ಆರೊಗ್ಯ ಸುಧಾರಿಸುತ್ತಿದೆ.
Tagged with
cnews
ಮಂಗಳೂರು: ನಿನ್ನೆ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧವಿದ್ದರೂ ಮದ್ಯವನ್ನು ಶೇಖರಿಸಿ ಇಟ್ಟುಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಉಡುಪಿ ನಗರ ಠಾಣಾ ಪೊಲೀಸರು ಬಂಧಿಸಿ ದ್ದಾರೆ. ಅಂಬಾಗಿಲು ಜಂಕ್ಷನ್‌ನ ವೈನ್ ಶಾಪ್ ಹಿಂಬದಿಯಲ್ಲಿ ಆರೋಪಿಗಳಾದ ನೀಲಾವರದ ಜಾನ್ ಡಿಸೋಜಾ, ಹಳವಳ್ಳಿ ಗ್ರಾಮದ ನಾಗರಾಜ ಶೆಟ್ಟಿ ಎಂಬವರನ್ನು ಬಂಧಿಸಿರುವ ಪೊಲೀಸರು, ೨೫ ಟೆಟ್ರಾ ಪ್ಯಾಕ್ ಮದ್ಯ ಹಾಗೂ ೭೬೦ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಹಣ ಪಡೆದು ವಂಚನೆ
ಮಂಗಳೂರು: ಹಣ ಪಡೆದು ವಾಪಸ್ ನೀಡದೆ ವಂಚಿಸಿರುವ ಬಗ್ಗೆ ವ್ಯಕ್ತಿಯೊಬ್ಬರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಕೇರಳ-ಕಣ್ಣೂರಿನ ಫೈಝಲ್ ಹಾಗೂ ಅಬೂಬಕ್ಕರ್ ತಮ್ಮಿಂದ ೭,೩೪,೯೯೯ ರೂ. ನಗದು ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಅತ್ತಾವರದ ಸದಾಶಿವ ಪೊಲೀಸರಿಗೆ ದೂರಿದ್ದಾರೆ. ಸದಾಶಿವ ಅವರು ಅತ್ತಾವರದಲ್ಲಿ ಕ್ರೀಂ ಪಾರ್ಲರ್ ನಡೆಸುತ್ತಿದ್ದು, ವರ್ಷದ ಹಿಂದೆ ಆರೋಪಿಗಳಿಗೆ ಹಣ ನೀಡಿದ್ದರು. ಈ ಬಗ್ಗೆ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದು, ನ್ಯಾಯಾಲಯ ತನಿಖೆ ನಡೆಸುವಂತೆ ಪಾಂಡೇಶ್ವರ ಪೊಲೀಸರಿಗೆ ಆದೇಶ ನೀಡಿದೆ.
Tagged with
cnews
ಮಂಗಳೂರು: ಎಂಡೋಸಲ್ಫಾನ್ ದುಷ್ಪರಿಣಾಮ ದಿಂದಾಗಿ ಬಳಲುತ್ತಿದ್ದ ವ್ಯಕ್ತಿಯೊರ್ವರು ಮೃತಪಟ್ಟ ಘಟನೆ ಕಾಸರಗೋಡು ದೇಲಂಪಾಡಿಯಲ್ಲಿ ಭಾನುವಾರ ನಡೆದಿದೆ. ಕುಂಞಿರಾಮ ಮಣಿಯಾಣಿ ಹಾಗೂ ಲಕ್ಷ್ಮಿ ದಂಪತಿ ಪುತ್ರರಾದ ಬಾಲಗೋಪಾಲನ್(೪೨)ಮೃತ ದುರ್ದೈವಿ. ಇವರ ಹೆಸರು ಎಂಡೋ ಸಂತ್ರಸ್ತರ ಪಟ್ಟಿಯಲ್ಲಿದೆ.
Tagged with
cnews
ಮಂಗಳೂರು: ಬೆಳ್ತಂಗಡಿ ಸಮೀಪದ ಪಡಂಗಡಿ ಗ್ರಾಮದ ಪೆರ್ನಮಂಜ ಎಂಬಲ್ಲಿ ನಿನ್ನೆ ಸಂಜೆ ಪೊಲೀಸರು ದಾಳಿ ನಡೆಸಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಪ್ರದೀಪ್, ರಫೀಕ್, ಸಂತೋಷ್, ಲೋಕಯ್ಯ, ಶಂಕರ ಎಂದು ಹೆಸರಿಸಲಾಗಿದೆ. ಇವರಿಂದ ೨,೧೮೦ ರೂ. ವಶಪಡಿಸಿಕೊಳ್ಳಲಾಗಿದೆ.
Tagged with
cnews
ಮಂಗಳೂರು: ಶಂಕರನಾರಾಯಣ ಠಾಣಾ ವ್ಯಾಪ್ತಿಯ ಅಂಪಾರು ಪ್ರೌಢಶಾಲೆಯ ಬಳಿ ಹಂಗಳೂರು ನಿವಾಸಿ ಸದಾಶಿವ ಶೆಟ್ಟಿ ಹಾಗೂ ಅವರ ಪತ್ನಿಯ ಮೇಲೆ ಕಾರಿನಲ್ಲಿ ಬಂದ ಅಂಪಾರಿನ ಕಂಚಾರಿನ ಪ್ರಶಾಂತ್ ಶೆಟ್ಟಿ ಹಾಗೂ ಪುಂಡಲೀಕ ಪೂಜಾರಿ ಎಂಬವರು ಮರದ ಸೋಂಟೆಯಿಂದ ಹಲ್ಲೆ ಮಾಡಿರುವುದಾಗಿ ಪೊಲೀಸರಿಗೆ ದೂರಲಾಗಿದೆ. ಅಂಪಾರಿನ ಶ್ರೀರಾಮ ಮಂದಿರದಲ್ಲಿ ಸಮಾರಂಭವೊಂದನ್ನು ಮುಗಿಸಿ ಪತ್ನಿ, ಮೊಮ್ಮಗಳೊಂದಿಗೆ ಮನೆಗೆ ಹೊರಟಿದ್ದ ವೇಳೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿರುವುದಾಗಿ ದೂರಲಾಗಿದೆ.
Tagged with
cnews
ಮಂಗಳೂರು: ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ಉಳ್ಳಾಲದಲ್ಲಿ ನಾಪತ್ತೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವಿದ್ಯಾರ್ಥಿನಿಯ ಶವ ವಾರದ ನಂತರ ಭಟ್ಕಳ ಶಿರಾಲಿ ಅಳಿವೆಕೋಡಿ ಸಮುದ್ರ ತೀರದಲ್ಲಿ ನಿನ್ನೆ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿನಿಯನ್ನು ಮೂಡಿಗೆರೆ ನಿವಾಸಿ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದ ವಿದ್ಯಾರ್ಥಿನಿ ರೋನತ್ ಜಹಾನ್ (೧೭) ಎಂದು ಗುರುತಿಸಲಾಗಿದೆ.
Tagged with
cnews
ವಿಟ್ಲ: ವ್ಯಕ್ತಿಯೊಬ್ಬ ತನ್ನ ಅಂಗಡಿ ಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸಂದರ್ಭ ದಾಳಿ ನಡೆಸಿದ ಪೊಲೀಸರು ಒಬ್ಬ ಆರೋಪಿಯನ್ನು ಮದ್ಯ ಸಹಿತ ವಶಕ್ಕೆ ಪಡೆದುಕೊಂಡ ಘಟನೆ ವಿಟ್ಲ ಸಮೀಪದ ಅನಂತಾಡಿ ಎಂಬಲ್ಲಿ ನಡೆದಿದೆ.
ಅನಂತಾಡಿ ಗ್ರಾಮದ ಗೋಳಿಕಟ್ಟೆ ನಿವಾಸಿ ಚಂದ್ರಶೇಖರ(೪೭) ಬಂಧಿತ ಆರೋಪಿ. ಈತ ಶನಿವಾರ ಅನಂತಾಡಿ ಯಲ್ಲಿರುವ ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಬಿಯರನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪುತ್ತೂರು ಎ.ಎಸ್.ಪಿ ದಿವ್ಯಾ ವಿ ಗೋಪಿನಾಥ್ ಮಾರ್ಗದರ್ಶನದಲ್ಲಿ ವಿಟ್ಲ ಎ.ಎಸ್.ಐ ಜಯರಾಜ್ ಮತ್ತು ತಂಡ ದಾಳಿ ನಡೆಸಿತ್ತು.
ದಾಳಿ ವೇಳೆ ಆರೋಪಿಯಿಂದ ೧೮ ಬಿಯರ್ ಬಾಟಲಿ ಹಾಗೂ ೫೫೦ ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿ ಸಲಾಗಿದೆ.
Tagged with
cnews
ಪುತ್ತೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಪುತ್ತೂರು ಮತದಾನ ಕೇಂದ್ರದಲ್ಲಿ ನಕಲಿ ಮತದಾನವಾಗಿದ್ದು, ಪಂಚಾಯತ್ ಗುಮಾಸ್ತರೊಬ್ಬರ ಮತ ವನ್ನೇ ಇಲ್ಲಿ ನಕಲಿ ಮಾಡಲಾಗಿದೆ ಎನ್ನು ವುದು ವಿಶೇಷ.
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಂಚಾಯತ್ ಗುಮಾಸ್ತ ಸುಧಾ ಕರ ನಾಯ್ಕ ಎಂಬವರು ತನ್ನ ಹೆಸರಿ ನಲ್ಲಿ ನಡೆದ ನಕಲಿ ಮತದಾನದಿಂದ ಮತ ದಾನದ ಹಕ್ಕು ವಂಚಿತರಾಗಿದ್ದಾರೆ.
ಪದವೀಧರ ಕ್ಷೇತ್ರದ ಮತದಾ ರರಾದ ಸುಧಾಕರ ನಾಯ್ಕ ಅವರು ಮತ ಚಲಾಯಿಸಲು ಮತಗಟ್ಟೆಗೆ ತೆರ ಳಿದ್ದರು. ಆ ವೇಳೆಗಾಗಲೇ ಯಾರೋ ಅವರ ಮತವನ್ನು ಚಲಾಯಿಸಿ ಹೋಗಿ ದ್ದರು. ಇದರಿಂದಾಗಿ ಅವರು ಮತ ಚಲಾಯಿಸಲು ಅವಕಾಶ ಸಿಗದೆ ಹಿಂತಿ ರುಗಿ ಹೋಗಬೇಕಾಯಿತು.
Tagged with
cnews
ಮುಲ್ಕಿ: ಮುಲ್ಕಿಯಿಂದ ಕಿನ್ನಿ ಗೋಳಿಗೆ ಹೋಗುವ ಸ್ಕಾರ್ಪಿಯೋ ವೊಂದು ಪಾದಚಾರಿ ಅಮೃತ ನಗರ ಕಾರ್ನಾಡ್ ಕೃಷ್ಣಪ್ಪ(೩೨)ಎಂಬವರಿಗೆ ಡಿಕ್ಕಿಹೊಡೆದಿದೆ. ಗಂಭೀರ ಗಾಯ ಗೊಂಡ ಅವರನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Tagged with
cnews
ಮಂಗಳೂರು: ಶಿರಾಡಿ ಸಮೀಪದ ಅಡ್ಡೊಳೆ ಎಂಬಲ್ಲಿ ಟಾಟಾ ಸುಮೊ ವಾಹನ ರಾ.ಹೆ. ಬದಿಯ ಮೋರಿಗೆ ಡಿಕ್ಕಿ ಹೊಡೆದು ಕಮರಿಗೆ ಬಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಮುಂಜಾನೆ ಸಂಭವಿಸಿದೆ.
ದೊಡ್ಡಬಳ್ಳಾಪುರ ನಿವಾಸಿಗಳಾದ ಸುರೇಶ್ ಕುಮಾರ್, ರವಿ ಕುಮಾರ್, ಸಂತೋಷ್, ಹರೀಶ್ ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಧರ್ಮಸ್ಥಳ ಯಾತ್ರೆ ಕೈಗೊಂಡು ವಾಪಸಾಗುತ್ತಿದ್ದಾಗ ಅಡ್ಡೊಳೆ ಎಂಬಲ್ಲಿ ನಿಯಂತ್ರಣ ಕಳೆದುಕೊಂಡ ವಾಹನ ಹೆದ್ದಾರಿ ಬದಿಯ ಮೋರಿಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ವಾಹನ ಕಮರಿಗೆ ಬಿದ್ದು ನಜ್ಜುಗುಜ್ಜಾಗಿದೆ ಎನ್ನಲಾಗಿದೆ. ಪ್ರಕರಣ ಪುತ್ತೂರು ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.
Tagged with
cnews
ಅಂದು ಅರ್ಧ ಸಿಪಿಎಂ, ಇಂದು ಪೂರ್ಣ ಕಾಂಗ್ರೆಸ್
ಮಂಗಳೂರು: ಕಾಸರಗೋಡು ಕೇಂದ್ರಿತ ಕೇರಳದ ತುಳುವರ ಹಿತಾ ಸಕ್ತಿ ಕಾಪಾಡಿಕೊಳ್ಳಲು ಮಂಜೇಶ್ವರದ ಮಾಜಿ ಶಾಸಕ ಕುಂಞಂಬು ಅವರು ವಿಶೇಷ ಆಸಕ್ತಿಯಿಂದ ಹುಟ್ಟು ಪಡೆ ದಿರುವ ಕೇರಳ ತುಳು ಅಕಾಡೆಮಿಗೆ ರಾಜಕೀಯ ಎಂಬುದು ಒಂದು ಶಾಪ ವಾಗಿ ಪರಿಣಮಿಸುವಂತಿದೆ.
ಕಳೆದೊಂದು ವರ್ಷದಿಂದ ಜಡ ವಾಗಿ ಬಿದ್ದಿದ್ದ ಅಕಾಡೆಮಿಗೆ ಇದೀಗ ಹೊಸ ಪದಾಧಿಕಾರಿಗಳನ್ನು ನೇಮಿ ಸಲಾಗಿದೆ. ಅಕಾಡೆಮಿ ಆರಂಭವಾಗುವ ಹೊತ್ತಿಗೆ ಕೇರಳದಲ್ಲಿ ಅಧಿಕಾರದಲ್ಲಿದ್ದ ಸಿಪಿಎಂ ಪಕ್ಷವು ಅಕಾಡೆಮಿಯಲ್ಲಿ ಸಿಂಹಪಾಲು ಸದಸ್ಯರನ್ನು ತನ್ನ ಪಕ್ಷ ದಿಂದಲೇ ನೇಮಿಸಿ ವಿವಾದವನ್ನು ಮೈಗೆಳೆದುಕೊಂಡಿತು. ಆಗ ಗಂಟಲು ಬಿರಿಯುವಂತೆ ಬೊಬ್ಬಿರಿದಿದ್ದ, ಟೀಕಿ ಸಿದ್ದ ಕಾಂಗ್ರೆಸಿಗರು ಈಗ ಅಧಿಕಾರ ದಲ್ಲಿದ್ದಾರೆ. ಅವರು ಮಾಡಿದ್ದು ಕೂಡ ಹಿಂದಿನ ಸಿಪಿಎಂ ಸರಕಾರ ಮಾಡಿ ದ್ದನ್ನೇ. ನೇರವಾಗಿ ಹೇಳುವುದಾದರೆ ಹಿಂದಿನಿಂತಲೂ ಹೆಚ್ಚು ಪ್ರಬಲವಾಗಿ ಇದೀಗ ತುಳು ಅಕಾಡೆಮಿಯಲ್ಲಿ ಕಾಂಗ್ರೆ ಸಿಗರ ಪ್ರಾಬಲ್ಯ ಕಂಡುಬರುತ್ತಿದೆ. ಪರಿಣಾಮವಾಗಿ ತುಳು ಅಕಾಡೆ ಮಿಯು ಅರ್ಹರಿಂದ ದೂರ ಇರು ವಂತಾಗಿದೆ. ಕಳೆದ ಬಾರಿಯ ಅಧ್ಯಕ್ಷರಾದರೂ ರಾಜಕೀಯೇತರ ವ್ಯಕ್ತಿಯಾಗಿದ್ದರು, ಹಿರಿಯ ವಿದ್ವಾಂಸರಾಗಿದ್ದರು. ಪ್ರಖ್ಯಾತ ತುಳು ವಿದ್ವಾಂಸ, ಸಂಶೋಧಕ ವೆಂಕಟರಾಜ ಪುಣಿಂಚಿತ್ತಾಯ ಅವರಿಗೆ ಅಧ್ಯಕ್ಷತೆ ನೀಡಲಾಗಿತ್ತು.
ಆದರೆ ಈಗಿನ ಅಧ್ಯಕ್ಷರು ಸಕ್ರಿಯ ರಾಜಕಾರಣಿ, ಕಾಂಗ್ರೆಸ್ ನೇತಾರ ಎಂಬುದು ವಿಶೇಷ. ಮಾಜಿ ಸಂಸದ ದಿ.ಐ.ರಾಮ ರೈ ಅವರ ಪುತ್ರ, ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಸುಬ್ಬಯ್ಯ ರೈ ಅವರನ್ನು ತುಳು ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಅಕಾಡೆಮಿಯಲ್ಲಿ ರಾಜಕೀಯ ಮಾಡುವಲ್ಲಿ ನಾವು ಸಿಪಿಎಂನವರನ್ನು ಹಿಂದಿಕ್ಕಿದ್ದೇವೆ ಎಂಬುದನ್ನು ಕಾಂಗ್ರೆಸಿಗರು ತೋರಿಸಿ ಕೊಟ್ಟಿದ್ದಾರೆ.
ಸುಬ್ಬಯ್ಯ ರೈ ತುಳುವರೂ ಹೌದು, ನೇತಾರರೂ ಹೌದು. ಆದರೆ ತುಳು ಅಕಾಡೆಮಿಯ ಅಧ್ಯಕ್ಷರಾಗಲು ಅವರಿಗಿಂತ ಉತ್ತಮ ವ್ಯಕ್ತಿ, ಪಾಂಡಿತ್ಯ ಇರುವವರು ಬೇರೆ ಯಾರೂ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ. ಕಾರ್ಯದರ್ಶಿಯಾಗಿರುವ ಕೆ.ಮಂಜುನಾಥ ಆಳ್ವ ಅವರೂ ಸಕ್ರಿಯ ಕಾಂಗ್ರೆಸ್ ರಾಜಕಾರಣಿ. ಜತೆಗೆ ಸದಸ್ಯರ ಸಾಲಲ್ಲಿ ನೋಡಿದರೂ ಕಾಂಗ್ರೆಸಿಗರ ಹಲವು ಮುಖಗಳು ಕಂಡುಬರುತ್ತಿವೆ. ಸುಂದರ ಆರಿಕ್ಕಾಡಿ, ಗೀತಾ ಲೋಕನಾಥ ಶೆಟ್ಟಿ, ನ್ಯಾಯವಾದಿ ಸದಾನಂದ ರೈ, ನ್ಯಾಯವಾದಿ ಶಿವರಾಮ ಆಳ್ವ, ಹಮೀದ್ ಕುಂಞಲಿ, ಕೇಶವಪ್ರಸಾದ್ ನಾಣಿಹಿತ್ತಿಲು, ಹಮೀದ್ ಕುಂಞಾಲಿ ಪೈವಳಿಕೆ, ಅಹ್ಮದ್ ಕುಂಞ ದೈಗೋಳಿ, ಕಲ್ಲೇಗ ಚಂದ್ರಶೇಖರ್ ಮುಂತಾದ ಸಕ್ರಿಯ ಕಾಂಗ್ರೆಸಿಗರೇ ತುಂಬಿದ್ದಾರೆ. ಆಡುಭಾಷೆಯಲ್ಲಿ ಹೇಳುವುದಾದರೆ ಮದ್ದಿಗೊಂದು ಕಾಂಗ್ರೆಸ್ಸೇತರರು ಕೇರಳ ತುಳು ಅಕಾಡೆಮಿಯಲ್ಲಿಲ್ಲ! ಅದೂ ಕೂಡ ಸಕ್ರಿಯ ಕಾಂಗ್ರೆಸಿಗರು!
ಕಳೆದ ಬಾರಿಯೇ ಅಕಾಡೆಮಿಯಲ್ಲಿ ರಾಜಕೀಯ ನುಸುಳುತ್ತಿದೆ ಎಂಬ ಆರೋಪ ಎದುರಾದಾಗ ಸದಸ್ಯರಾಗಿದ್ದ ಡಿ.ಸಿ.ಚೌಟರು ರಾಜೀನಾಮೆ ನೀಡಿ ಸಮಿತಿಯಿಂದ ಹೊರಬಂದಿದ್ದರು. ಆದರೆ ಆ ಬಾರಿ ಅಕಾಡೆಮಿ ಇಷ್ಟೊಂದು ಗಂಭೀರವಾಗಿ ರಾಜಕೀಯಗೊಂಡಿರಲಿಲ್ಲ. ಹೊಸ ಸಮಿತಿಯನ್ನು ನೋಡಿದ ಯಾವ ತುಳು ಅಭಿಮಾನಿಯೂ ಅಕಾಡೆಮಿಯನ್ನು ಗೌರವಿಸುವ ಸಾಧ್ಯತೆ ಇಲ್ಲ.
ಕಾಸರಗೋಡಿನಲ್ಲಿ ತುಳು ಸಾಹಿತಿಗಳು, ಸಂಶೋಧಕರಿಗೆ ಕೊರತೆಯಿಲ್ಲ. ತುಳು ರಂಗಭೂಮಿ ಕಲಾವಿದರು, ಯಕ್ಷಗಾನ ಕಲಾವಿದರು ಸೇರಿದಂತೆ ಅಲ್ಲಿ ತುಳು ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹೆಸರುಗಳು ಧಾರಾಳ ಕಾಣಸಿಗುತ್ತಿವೆ. ಯುವ ಸಮುದಾಯದಲ್ಲೂ ತುಳು ಪ್ರತಿಭೆಗಳಿವೆ. ಹೊಸ ಸಮಿತಿಯಲ್ಲಿ ಅಂಥ ಯಾವುದೇ ಪ್ರತಿಭೆಗಳಿಗೆ ಮನ್ನಣೆ ನೀಡದೆ, ಅದನ್ನು ಒಂದು ರಾಜಕೀಯ ಪಕ್ಷದ ಉಪ ಸಮಿತಿಯಂತೆ ಮಾಡಿರುವುದು ತುಂಬಾ ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯಲ್ಲಿ ವಿವಾದಕ್ಕೆ ಕಾವು ಹಚ್ಚಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.
Tagged with
dk,
lnews
ಜನರ ಅಸಮಾಧಾನ
ಜಿಲ್ಲೆಯಲ್ಲಿ ಹೊರಗಿನಿಂದ ಬಂದಿರುವ ಕೆಲವು ಕಾವಿಧಾರಿಗಳೂ ನೆಲೆಸಿದ್ದು, ಇವರು ಜಿಲ್ಲೆಯ ಉದ್ದಗಲಕ್ಕೂ ಜನರನ್ನು ಮಾಟ-ಮಂತ್ರ, ವಶೀಕರಣ ತಂತ್ರಗಳಿಂದ ಮರಳು ಮಾಡಿ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿರುವ ಬಗ್ಗೆಯೂ ಸುದ್ದಿ ಕೇಳಿ ಬರುತ್ತಿದೆ. ಬಿಡದಿಯ ಧ್ಯಾನಕೇಂದ್ರದಲ್ಲಿ ನಿತ್ಯಾನಂದ ಸ್ವಾಮಿಯ ರಾಸಲೀಲೆ ಹೊರಜಗತ್ತಿಗೆ ಅನಾವರಣಗೊಳ್ಳುತ್ತಿದ್ದಂತೆ ಜನರು ಇಂಥ ಸ್ವಾಮಿಗಳ ವಿರುದ್ಧವೂ ಕತ್ತಿ ಮಸೆಯಲು ಆರಂಭಿಸಿದ್ದು, ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಲು ಸಮಯ, ಸಂದರ್ಭಕ್ಕೆ ಕಾಯುತ್ತಿದ್ದಾರೆ ಎನ್ನಲಾಗಿದೆ.
ಮಂಗಳೂರು: ಕಾವಿ ತೊಟ್ಟು ಆಶ್ರಮದ ಭಕ್ತೆಯರ ಜೊತೆ ರಾಸ ಲೀಲೆಯಾಡಿ ಜನರಿಂದ ಉಗಿಸಿಕೊಂ ಡಿರುವ ಬಿಡದಿ ಧ್ಯಾನಕೇಂದ್ರದ ಸ್ವಾಮಿ ನಿತ್ಯಾನಂದನ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವಂ ತೆಯೇ ಜಿಲ್ಲೆಯ ಕೆಲವು ಕಾವಿಧಾರಿ ಗಳೂ ಆತನ ಹಾದಿಯಲ್ಲೇ ಸಾಗುತ್ತಿ ರುವ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸರ್ವಸಂಗ ಪರಿ ತ್ಯಾಗಿಯಾಗಿ ದೇವರ ಸ್ಮರಣೆ ಮಾಡ ಬೇಕಿರುವ ಸ್ವಾಮಿಗಳು ಕಾವಿ ತೊಟ್ಟು ಲೌಕಿಕ ಸುಖದಲ್ಲೇ ಮೈಮರೆ ತಿದ್ದಾರೆ ಎಂದು ಆರೋಪಿಸುವ ಜನರು ಮುಂದಿನ ದಿನಗಳಲ್ಲಿ ಇಂಥವರ ವಿರು ದ್ಧವೂ ಪ್ರತಿಭಟನೆಗೆ ಸಜ್ಜಾಗುತ್ತಿರುವ ಸುದ್ದಿ ಪತ್ರಿಕೆಗೆ ಲಭಿಸಿದೆ.
ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಲ್ಲಿ ಹಿಂದೆ ಕೆಲವೊಂದು ಪ್ರಸಿದ್ಧ ಮಠಗಳನ್ನು ಹೊರತುಪಡಿಸಿದರೆ ಈಗಿನಂತೆ ನಾಯಿಕೊಡೆಗಳಂತೆ ಅಲ್ಲಲ್ಲಿ ಮಠ, ಮಂದಿರಗಳು ಉದ್ಭವವಾಗಿರಲಿಲ್ಲ. ಒಂದು ನಿರ್ದಿಷ್ಟ ಸಮುದಾಯ ಇಲ್ಲವೇ ಜಾತಿಯ ಜನತೆ ಮಾತ್ರ ಇಂಥ ಮಠಗಳ ಅನುಯಾಯಿಗಳಾಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದು ನೂರಾರು ಸಣ್ಣ ಮತ್ತು ದೊಡ್ಡ ಮಠ-ಮಂದಿರಗಳಿವೆ. ಇವುಗಳಲ್ಲಿ ಕೆಲವೊಂದು ಮಠಗಳ ಕಾವಿಧಾರಿಗಳು ನೈತಿಕತೆಯ ಗಡಿ ದಾಟದೆ ಸಾಮಾಜಿಕ ಚಿಂತನೆಯಲ್ಲಿ ತೊಡಗಿದರೆ ಬಹುತೇಕ ಮಠಮಂದಿರಗಳ ಕಾವಿಧಾರಿಗಳು ಗುಟ್ಟಾಗಿ ರಾಸಲೀಲೆಯಾಡುತ್ತಿರುವುದೂ ಇಂದು ಗುಟ್ಟಾಗಿ ಉಳಿದಿಲ್ಲ. ಜನರ ನಾಲಿಗೆಯ ತುದಿಯಲ್ಲಿ ಹರಿದಾಡುವ ಈ ಕಾವಿಧಾರಿಗಳು ಈಗಾಗಲೇ ಸಭ್ಯ, ಸುಸಂಸ್ಕೃತ ಸಮಾಜದಿಂದ ತಿರಸ್ಕೃತವಾಗಿರುವ ಬೆಳವಣಿಗೆಯೂ ನಡೆದಿದೆ.
ಜಿಲ್ಲೆಯಲ್ಲಿ ಹಿರಿ-ಕಿರಿಯ ಮಠ, ಮಂದಿರಗಳನ್ನು ಹೊಂದಿದ್ದು, ಕುಸಂಸ್ಕೃತ ವ್ಯವಹಾರ ನಡೆಸಿಕೊಂಡಿರುವ ಕಾವಿಧಾರಿಗಳ ಪುರಾಣ ಜನರಿಗೆ ತಿಳಿದಿಲ್ಲವೆಂದೇನಲ್ಲ. ಆದರೆ ಈ ಬಗ್ಗೆ ಮಾತಾಡಿ ನಾಲಗೆ ಹೊಲಸು ಮಾಡುವುದು ಬೇಡ ಎಂಬ ನಿಲುವಿಗೆ ಜನರು ಬದ್ಧರಾಗಿರುವ ಕಾರಣ ಈ ಮಠಾಧಿಪತಿಗಳು ಇನ್ನೂ ಮರ್ಯಾದೆ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮಠಗಳಲ್ಲಿ ಭಕ್ತೆಯರು, ಶಿಷ್ಯೆಯರೆಂದು ಚಂದದ ಹೆಣ್ಮಕ್ಕಳನ್ನು ಕೂಡಿಹಾಕಿರುವ ಸ್ವಾಮಿಗಳು, ರಾಜಕೀಯ, ಸಿನಿಮಾ ಎಂದು ಪುಕ್ಸಟ್ಟೆ ಪ್ರಚಾರ ಪಡೆಯುವ ಸ್ವಾಮಿಗಳ ನಡುವೆ ಮೊಬೈಲ್, ಲ್ಯಾಪ್‌ಟಾಪ್ ಹಿಡಿದು ಫೇಸ್‌ಬುಕ್, ಆರ್ಕುಟ್‌ನಂಥ ಸಾಮಾಜಿಕ ತಾಣಗಳಲ್ಲಿ ಸುತ್ತುವ ಕಾವಿಧಾರಿಗಳೂ ಇಲ್ಲಿದ್ದಾರೆ. ಇವರೆಲ್ಲರ ನಡುವೆ ಸಭ್ಯರ ಶೋಭೆಗೆ ಕಳಂಕ ಬಡಿದಿದೆ ಎನ್ನುತ್ತಾರೆ ಸ್ವಾಮಿಗಳ ಕಾ(ಮಿ)ವಿ ಪುರಾಣ ಬಲ್ಲವರು.
ಜಿಲ್ಲೆಯಲ್ಲಿ ಹೊರಗಿನಿಂದ ಬಂದಿರುವ ಕೆಲವು ಕಾವಿಧಾರಿಗಳೂ ನೆಲೆಸಿದ್ದು, ಇವರು ಜಿಲ್ಲೆಯ ಉದ್ದಗಲಕ್ಕೂ ಜನರನ್ನು ಮಾಟ-ಮಂತ್ರ, ವಶೀಕರಣ ತಂತ್ರಗಳಿಂದ ಮರಳು ಮಾಡಿ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿರುವ ಬಗ್ಗೆಯೂ ಸುದ್ದಿ ಕೇಳಿಬರುತ್ತಿದೆ. ಬಿಡದಿಯಲ್ಲಿ ನಿತ್ಯಾನಂದ ಸ್ವಾಮಿಯ ರಾಸಲೀಲೆ ಹೊರಜಗತ್ತಿಗೆ ಅನಾವರಣಗೊಳ್ಳುತ್ತಿದ್ದಂತೆ ಜನರು ಇಂಥ ಸ್ವಾಮಿಗಳ ವಿರುದ್ಧವೂ ಕತ್ತಿ ಮಸೆಯಲು ಆರಂಭಿಸಿದ್ದು, ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಲು ಸಮಯ, ಸಂದರ್ಭಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.
ಹಿಂದೂ ಸಂಘಟನೆಗಳು ಎದ್ದೇಳಲಿ!
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಠ-ಮಂದಿರಗಳು ಜನರನ್ನು ವಶೀಕರಣಗೊಳಿಸಿ ಸಮಾಜದಲ್ಲಿ ಭದ್ರವಾಗಿ ನೆಲೆ ಕಂಡುಕೊಂಡಿವೆ. ಇವುಗಳಿಗೆ ಪ್ರತಿನಿತ್ಯ ನೂರಾರು ಮಂದಿ ಭೇಟಿಕೊಟ್ಟು ದಾನ, ಧರ್ಮ ಅರ್ಪಿಸಿ ಕೃತಾರ್ಥ ರಾಗುವುದೂ ಇದೆ. ಕಾವಿ ತೊಟ್ಟು ಸಂಸಾರ ಸುಖದಿಂದ ದೂರವಿರುವ ಕೆಲವು ಮಂದಿ ಕಾವಿಯೊಳಗೆ ಮಾಡಬಾರದ ಕೆಲಸವನ್ನು ಮಾಡಿ ಆಗಾಗ ಸುದ್ದಿಯಾಗುತ್ತಲೇ ಇದ್ದರೂ ಜಿಲ್ಲೆಯ ಹಿಂದೂ ಸಂಘಟನೆಗಳು ಇದನ್ನು ಪ್ರತಿಭಟಿಸುವ ಗೋಜಿಗೆ ಹೋಗದೆ ಇರುವುದು ವಿಪರ್ಯಾಸ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ. ಹಿಂದೂ ಧರ್ಮ ಇಂಥ ಕೆಟ್ಟ ಸ್ವಾಮಿಗಳಿಂದಲೇ ಮೂರನೇ ದರ್ಜೆಗೆ ತಳ್ಳಲ್ಪಡುತ್ತಿದ್ದು, ಸಂಘಟನೆಗಳು ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂಬ ಆಶಯ ಸಾರ್ವಜನಿಕರದ್ದು.
Tagged with
dk,
lnews,
nithyananda
ಪಡುಬಿದ್ರಿ: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾ ದ್ಯಂತ ನಿನ್ನೆ ಹೊರಡಿಸಲಾಗಿದ್ದ ಮದ್ಯ ಮಾರಾಟ ನಿಷೇಧಾಜ್ಞೆಯ ನಡು ವೆಯೇ ಜಿಲ್ಲೆಯ ಬಹುತೇಕ ಕಡೆ ಹಿಂಬದಿ ಬದಿ ಮದ್ಯ ಮಾರಾಟ ಧಾರಾಳವಾಗಿಯೇ ನಡೆದಿರುವುದು ವರದಿಯಾಗಿದೆ.
ಚುನಾವಣೆಯ ಹಿನ್ನೆಲೆಯಲ್ಲಿ ಕೊನೆ ಘಳಿಗೆಯಲ್ಲಿ ಜೂನ್ ಎಂಟರ ಸಾಯಂಕಾಲ ನಾಲ್ಕು ಗಂಟೆಯಿಂದ ಜೂ. ೧೦ರ ಸಾಯಂಕಾಲ ನಾಲ್ಕು ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಾಜ್ಞೆಯನ್ನು ಉಡುಪಿ ಜಿಲ್ಲಾಧಿ ಕಾರಿಗಳು ಹೊರಡಿಸಿದ್ದು, ಈ ಬಗ್ಗೆಯೇ ಜಿಲ್ಲೆಯಾದ್ಯಂತ ಬಾರ್ ಮತ್ತು ವೈನ್‌ಶಾಪ್ ಮಾಲಿಕರಿಂದ ವಿರೋಧ ವ್ಯಕ್ತವಾಗಿತ್ತು.
ಅಬಕಾರಿ ಇಲಾಖೆಯಿಂದ ನಿಷೇಧಾಜ್ಞೆ ಸಕಾಲದಲ್ಲಿ ಜಾರಿಯಾ ಗದ್ದರಿಂದಾಗಿ ಕೆಲವೆಡೆ ಜೂನ್ ಎಂಟರ ವ್ಯಾಪಾರ ಎಂದಿನಂತೆ ತಡ ರಾತ್ರಿಯವರೆಗೂ ನಡೆದಿತ್ತು. ಆದರೆ ಮರುದಿನ ಬೆಳಿಗ್ಗೆ ಇಲಾಖೆಯ ಸಿಬ್ಬಂದಿ ಮದ್ಯ ದಂಗಡಿಗಳಿಗೆ ಸೀಲ್ ಜಡಿದಿದ್ದರು.
ಒಮ್ಮಿಂದೊಮ್ಮೆಗೆ ವ್ಯಾಪಾರ ಸ್ಥಗಿತಗೊಳಿಸಲು ಇಲಾಖೆ ಸೂಚಿಸಿದ್ದರಿಂದ ತಾವು ಸಿದ್ದಪಡಿಸಿದ್ದ ಆಹಾರ ಪದಾರ್ಥಗಳು ಮತ್ತು ಮರುದಿನದ ಸಿದ್ದತೆಗಳು ವ್ಯರ್ಥವಾಗಿ ವ್ಯಾಪಾರಕ್ಕೆ ನಷ್ಟ ಉಂಟಾಗಬಹುದೆಂಬುದು ಬಹುತೇಕ ಬಾರ್ ಮಾಲಿಕರ ದೂರಾಗಿತ್ತು. ಈ ಬಗ್ಗೆ ಉಡುಪಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘ ಇಲಾಖೆಯನ್ನು ವಿನಂತಿಸಿದ್ದರೂ ಅದು ಪ್ರಯೋಜನಕಾರಿಯಾಗಲಿಲ್ಲ.
ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಮೂಲಿಯಾಗಿದ್ದರಿಂದ ಮದ್ಯ ದಂಗಡಿಗಳು ಮುಚ್ಚಿದ್ದರೂ ಕಾಳಸಂತೆಯ ಮದ್ಯ ಮಾರಾಟ ಸಖತ್ತಾಗಿಯೇ ನಡೆದಿದೆ.
ಮದ್ಯದಂಗಡಿ ಮಾಲಿಕರೇ ತಮ್ಮ ಅಂಗಡಿಗಳಿಂದ ಅನತಿ ದೂರದಲ್ಲಿ ತಮ್ಮದೇ ಉದ್ಯೋಗಿಗಳ ಕೈಗೆ ಮದ್ಯದ ಕೇಸುಗಳನ್ನು ನೀಡಿ ಪರೋಕ್ಷ ವ್ಯಾಪಾರ ನಡೆಸಿದ್ದರು. ಪಡುಬಿದ್ರಿಯ ಬಾರೊಂದರಲ್ಲಿ ಮಾಮೂಲಿ ೫೫ರೂಪಾಯಿಯ ಮದ್ಯ ಬಾಟಲಿ ೧೧೦ ರೂಪಾಯಿಗೆ ಮಾರಾ ಟವಾಗುತ್ತಿದ್ದರೆ ಸಂಜೆಯ ವೇಳೆ ಎಲ್ಲೂ ಮದ್ಯ ದೊರೆಯದೇ ಇದ್ದಾಗ ೭೦ ರೂ.ಯ ಕ್ವಾರ್ಟರ್‌ನ್ನು ಬರೋಬ್ಬರಿ ೧೨೦ ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಮದ್ಯದ ಸ್ಟಾಕು ಮುಗಿಯುವವರೆಗೆ ಬಹುತೇಕ ಪಡುಬಿದ್ರಿ ಪರಿಸರದ ಬಾರ್, ವೈನ್‌ಶಾಪ್‌ಗಳಲ್ಲಿ ಪರಿಸ್ಥಿತಿ ಒಂದೇ ತರ ಮುಂದುವರಿದಿತ್ತು.
Tagged with
lnews,
udupi
ಮಂಗಳೂರು: ವಿಧಾನಸಭೆಯ ಸದಸ್ಯರು ಮತದಾನದ ಮೂಲಕ ಆಯ್ಕೆ ಮಾಡುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಾರೀ ಪ್ರಮಾಣದ ಕುದುರೆ ವ್ಯಾಪಾರ ನಡೆದಿದೆ. ೧೧ ಸ್ಥಾನಗಳಿಗೆ ೧೨ಅಭ್ಯರ್ಥಿಗಳು ಸ್ಪರ್ಧಿಸಿರುವುದೇ ಕುದುರೆ ವ್ಯಾಪಾರಕ್ಕೆ ಪ್ರಮುಖ ಕಾರಣ. ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ತಮ್ಮ ಗೆಲುವಿಗೆ ಹೋರಾಟ ನಡೆಸಿದ್ದು, ತಮ್ಮ ಪರ ಮತದಾನ ಮಾಡುವ ಪ್ರತಿ ಶಾಸಕರಿಗೆ ೧.೫ಕೋಟಿ ರೂ. ಆಫರ್ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
೧೧ನೆ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಇಬ್ಬರೂ ಅಭ್ಯರ್ಥಿಗಳೂ ಆರ್ಥಿಕವಾಗಿ ಪ್ರಭಲರಾಗಿದ್ದಾರೆ. ಇಲ್ಲಿ ಬಂಡವಾಳ ಹೂಡಲು ಅವರು ಪೈಪೋಟಿ ನಡೆಸಿದ್ದಾರೆ. ಹೆಚ್ಚುವರಿ ಮತ ಸೆಳೆಯುವ ಉದ್ದೇಶದಿಂದ ಹಣದ ಹೊಳೆ ಹರಿಸಿದ್ದಾರೆ ಎಂಬ ಮಾತು ವಿಧಾನ ಸಭೆಯ ಪಡಸಾಲೆಯಲ್ಲಿ ಚಾಲ್ತಿಯಲ್ಲಿದೆ. ಹನ್ನೊಂದನೆ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಕಾಂಗ್ರೆಸ್‌ನ ಸೀತಾರಾಮ್ ಮತ್ತು ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬೈರತಿ ಸುರೇಶ್‌ರವರು ಮೂರೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಖರೀದಿಯ ಪ್ರಯತ್ನ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಡೀಲಿಂಗ್ ವ್ಯವಹಾರ ನಡೆದಿದ್ದು, ಕಳೆದ ರಾತ್ರಿ ವ್ಯವಹಾರಕ್ಕೆ ಅಂತಿಮ ರೂಪ ಸಿಕ್ಕಿತ್ತು.
ಅಭ್ಯರ್ಥಿಯ ಗೆಲುವಿಗೆ ೧೯ಮತಗಳು ಬೇಕು. ೧೧ನೆ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಅಭ್ಯರ್ಥಿಗಳ ಬಳಿ ತಲಾ ೧೪ಮತಗಳು ಇವೆ. ಹೆಚ್ಚಿನ ಐದು ಮತಗಳನ್ನು ಪಡೆಯಲು ಕುದುರೆ ವ್ಯಾಪಾರ ನಡೆದಿದೆ. ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ನ ಅದಿಕೃತ ಅಭ್ಯರ್ಥಿಗಳಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಪಕ್ಷದ ಶಾಸಕರು ಈ ಕುದುರೆ ವ್ಯಾಪಾರಕ್ಕೆ ಬಲಿ ಬೀಳದಂತೆ ಹಿಡಿದಿಟ್ಟುಕೊಳ್ಳಲು ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ತಡ ರಾತ್ರಿಯವರೆಗೂ ತಮ್ಮ ಪ್ರಯತ್ನ ಮುಂದುವರಿಸಿದ್ದರು. ೧೧ನೆ ಅಭ್ಯರ್ಥಿಗಳು ತಮ್ಮ ಹಣದ ಪ್ರಭಾವದಿಂದ ಗೆಲವು ಸಾಧಿಸಿದ್ದೇ ಆದರೆ ಕಾಂಗ್ರೆಸ್ ಅಥವಾ ಬಿಜೆಪಿಯ ಅದಿಕೃತಗಳಲ್ಲಿ ಒಬ್ಬರು ಪರಾಭವಗೊಳ್ಳುವ ಸಾಧ್ಯತೆ ಇದೆ.
Tagged with
dk,
lnews
ಮಂಗಳೂರು: ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಕ್ಕೆ ನಿನ್ನೆ ಚುನಾವಣೆ ನಡೆದಿದ್ದು ಶೇ. ೪೫.೦೫ ಮತದಾನ ನಡೆದಿದ್ದು ಮತ ದಾರರು ನೀರಸ ಪ್ರತಿಕ್ರಿಯೆ ವ್ಯಕ್ತಪ ಡಿಸಿದ್ದು ಸಾಬೀತಾಗಿದೆ.
ಮಂಗಳೂರಿನಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ೨೮೬೩ ಮತದಾ ರರಿದ್ದು ಈ ಪೈಕಿ ೧೩೦೮ ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅದೇ ರೀತಿ ಪದವೀಧರರ ಕ್ಷೇತ್ರದಲ್ಲಿ ೬೬೪೦ ಮತದಾರರಿದ್ದು ಈ ಪೈಕಿ ಕೇವಲ ೨೯೯೨ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಶೇ.೫೪.೯೫ ಮಂದಿ ಮತದಾನದಿಂದ ದೂರ ಉಳಿಯುವ ಮೂಲಕ ವಿದ್ಯಾವಂ ತರೇ ರಾಜಕಾರಣದಲ್ಲಿ ಆಸಕ್ತಿ ಕಳೆದು ಕೊಳ್ಳುತ್ತಿರುವುದನ್ನು ಸಾಬೀತುಪಡಿಸಿ ದಂತಾಗಿದೆ.
ಮಂಗಳೂರು ಕ್ಷೇತ್ರ ವ್ಯಾಪ್ತಿಯ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ೫೯೪ ಹಾಗೂ ಪದವೀಧರರ ಕ್ಷೇತ್ರದಲ್ಲಿ ೩೨೦ ಮತಗಳಿವೆ. ಬಬ್ಬುಕಟ್ಟೆ ಸರಕಾರಿ ಶಾಲೆ ಮತ್ತು ಕೊಣಾಜೆ ವಿಶ್ವಮಂಗಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚುನಾವಣೆ ನಡೆಯಿತು.
ಬಬ್ಬುಕಟ್ಟೆ ಬೂತ್‌ನಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ೧೭೯ ಮತಗಳ ಪೈಕಿ ೧೦೭ ಮತಗಳು ಚಲಾವಣೆಯಾದರೆ, ಪದವೀಧರರ ಕ್ಷೇತ್ರದ ೩೯೩ ಮತಗಳ ಪೈಕಿ ೧೯೩ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಇಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.
ಕೊಣಾಜೆಯಲ್ಲಿ ಗೊಂದಲ
ಕೊಣಾಜೆ ಬೂತ್‌ನಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ೧೪೧ ಮತದಾರರಿದ್ದು ಇವುಗಳ ಪೈಕಿ ೬೭ ಮಂದಿ ತಮ್ಮ ಹಕ್ಕನ್ನು ಚಲಾಯಿಸಿದರು. ಅದೇ ರೀತಿ ಪದವೀಧರರ ಕ್ಷೇತ್ರದ ೨೦೧ ಮತದಾರರ ಪೈಕಿ ೭೦ ಮಂದಿ ಮತ ದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ಮತದಾರರು ಗುರುತಿನ ಚೀಟಿಯೊಂದಿಗೆ ಬೆಳಗ್ಗೆಯೇ ಬೂತ್‌ಗೆ ಉತ್ಸಾಹದಿಂದ ಆಗಮಿಸಿದ್ದರು. ಬೂತ್‌ನಲ್ಲಿದ್ದ ಪಟ್ಟಿಯಲ್ಲಿ ಮತದಾರರ ಹೆಸರಿದ್ದರೂ, ಮತದಾನ ಕೇಂದ್ರದೊಳಗೆ ಅಧಿಕಾರಿಗಳ ಬಳಿ ಇದ್ದ ಪಟ್ಟಿಯಲ್ಲಿ ಹೆಸರು ಮಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಮತದಾರರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಇದರಿಂದ ಇನ್ನಷ್ಟು ಅಸಮಾಧಾನಗೊಂಡ ಮತದಾರರು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರು. ಆ ವೇಳೆ ಅಧಿಕಾರಿಗಳು ನಿರ್ಲಕ್ಷ್ಯತನದಿಂದ ಉತ್ತರ ನೀಡಿದ್ದಾರೆ ಎನ್ನುವ ದೂರು ಕೇಳಿ ಬಂದಿದೆ. ಕೊಣಾಜೆ ಬೂತ್‌ವೊಂ ದರಲ್ಲೇ ೫೦ಕ್ಕೂ ಅಧಿಕ ಮತದಾರರ ಹೆಸರುಗಳು ಮಾಯವಾಗಿದ್ದವು.
Tagged with
dk,
lnews
ಕಾರ್ಕಳ: ಗುಡಿಸಿದರೆ ಡಾಮರು ರಸ್ತೆಯೇ ಕಿತ್ತು ಹೋಗುತ್ತದೆ. ಇಂತಹದೊಂದು ರಸ್ತೆ ನಿರ್ಮಿಸಿರುವ ಕೀರ್ತಿ ಕಾರ್ಕಳ ಪುರಸಭೆಗೆ ಸಲ್ಲುತ್ತದೆ.
ಕಾರ್ಕಳ ನಗರದ ಆನೆಕರೆ ಪಕ್ಕದ ಜ್ಯೋತಿ ಸ್ಟ್ರೀಟ್‌ರಸ್ತೆ ಈ ಸುದ್ದಿಯ ಕೇಂದ್ರಬಿಂದುವಾಗಿದೆ. ಮುಂದೆ ಈ ರಸ್ತೆಯು ಕಾಳಿಕಾಂಬ ಪ್ರಮುಖ ರಸ್ತೆಯನ್ನು ಸಂಪರ್ಕಿಸುತ್ತದೆ. ೧೫ ದಿನಗಳ ಹಿಂದೆಯಷ್ಟೇ ರಸ್ತೆಗೆ ಡಾಮಾರೀಕರಣ ಕಾಮಗಾರಿ ನಡೆಸಲಾಗಿತ್ತು. ಲಕ್ಷಾಂತರ ರೂಪಾಯಿ ವೆಚ್ಚದ ಕಾಮಗಾರಿಯ ನಿಜಬಣ್ಣ ೨೪ ಘಂಟೆಯಲ್ಲಿ ಬಯಲಾಗಿದೆ. ಜಲ್ಲಿಕಲ್ಲು ಡಾಮರು ಮಿಶ್ರಣದಿಂದ ಬೇರ್ಪ ಟ್ಟಿದೆ. ಅಂದರೆ ನಿರ್ದಿಷ್ಟ ಪ್ರಮಾಣದಲ್ಲಿ ಗುಣಮಟ್ಟದ ಡಾಮರನ್ನು ಇಲ್ಲಿ ಉಪಯೋಗಿಸದೇ ಇರುವುದು ಇದಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಪುರಸಭೆಯಲ್ಲಿ ಪ್ರಧಾನ ಅಭಿಯಂತರ ರವೀಂದ್ರ ಭಂಡಾರಿ, ಉಪಭಿಯಂ ತರರಾಗಿ ದುರ್ಗಪ್ರಸಾದ್ ನಿಷ್ಟೆಯಿಂದ ಕಾರ್ಯನಿರ್ವಹಿಸಿದ್ದರೆ ಹೀಗಾಗುತ್ತಿರಲಿಲ್ಲ ಎಂಬ ಅಭಿಪ್ರಾಯ ನಾಗರಿಕರದಾಗಿದೆ.
ಪುರಸಭಾ ವ್ಯಾಪ್ತಿಯಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಹಲವು ಕಾಮಗಾರಿಗಳು ಇದೇ ರೀತಿಯಲ್ಲಿರುವುದು ಕಂಡುಬಂದಿದೆ. ಉಡುಪಿ ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿಗಳು ಕಳಪೆ ಕಾಮಗಾರಿಗೆ ಕಾರಣವಾದವರ ವಿರುದ್ಧ ಕೈಗೊಳ್ಳಬೇಕೆಂಬುವುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
Tagged with
lnews,
udupi
ಕಾಟಿಪಳ್ಳ: ಅಜೇಯ್ ಫ್ರೆಂಡ್ಸ್ ಸರ್ಕಲ್, ಕಾಟಿಪಳ್ಳ ಇದರ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ ಶ್ರೀ ಶಾರಾದ ಭಜನಾ ಮಂಡಳಿ ಮಂಗಳ ಪೇಟೆಯಲ್ಲಿ ಇತ್ತೀಚೆಗೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಕೀಲ ಸದಾಶಿವ ಐತಾಳ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಚೇಳಾರು ಗಾ. ಪಂ. ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ರಾಘವ ಭಂಡಾರಿ, ವಿಶ್ವನಾಥ ಶೆಟ್ಟಿ, ಎಂಆರ್ ಪಿಎಲ್ ಕರ್ಮಚಾರ್ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ದೇವರಾಜ್ ಶೆಟ್ಟಿ, ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಪ್ರಫುಲ್ಲಚಂದ್ರ ರೈ, ಪೆರ್ಮುದೆ ಗ್ರಾ. ಪಂ. ಸದಸ್ಯ ಶ್ರೀಧರ ಶೆಟ್ಟಿ ಕಣಿ, ಕಾಟಿಪಳ್ಳ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ಸುಕುಮಾರ ಭಂಡಾರಿ, ಅಜೇಯ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ನವೀನ್ ಶೆಟ್ಟಿ ಕೇಂಞ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಪಂಡಿತ್, ಕೋಶಾಧಿಕಾರಿ ನಾಗೇಶ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಸುಧೀರ್ ಶೆಟ್ಟಿ ಅವರು ಸ್ವಾಗತಿಸಿ ಲೋಕನಾಥ ಭಂಡಾರಿ ವಂದಿಸಿ ದರು.
Tagged with
briefs
ಮಂಗಳೂರು; ನಗರದ ಮೇರಿಹಿಲ್ ಸಮೀಪ ವಿಮಾನ ನಿಲ್ದಾಣ ರಸ್ತೆಗೆ ತಾಗಿಕೊಂಡಿರುವ ವಿಕಾಸ ಪದವಿ ಪೂರ್ವ ಕಾಲೇಜಿನ ಪ್ರಾರಂಭೋತ್ಸವ ಜೂನ್ ೧೧(ಇಂದು)ರಂದು ಅಪರಾಹ್ನ ೩ಗಂಟೆಗೆ ಪುರಭವನದಲ್ಲಿ ನಡೆಯಲಿದೆ.
ಕಾಲೇಜಿನ ಸಂಚಾಲಕ ಡಾ.ಡಿ. ಶ್ರೀಪತಿ ರಾವ್ ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾರಂಭೋತ್ಸವದ ಬಗ್ಗೆ ಮಾತಾನಾಡುತ್ತಾ ಮಾಜಿ ಸಚಿವ, ಶಾಸಕ ಕೃಷ್ಣ ಪಾಲೆಮಾರ್ ಅಧ್ಯಕ್ಷತೆಂii ವಿಕಾಸ ಎಜುಕೇಷನ್ ಟ್ರಸ್ಟ್ ವಿಕಾಸ ಪದವಿ ಪೂರ್ವ ಕಾಲೇಜನ್ನು ಪ್ರವರ್ತಿಸಿದೆ. ಅಪೇಕ್ಷಿತರಿಗೆ ಉತ್ತಮ ಶಿಕ್ಷಣ ನೀಡುವ ಗುರಿಯೊಂದಿಗೆ ಆರಂಭವಾದ ಈ ಕಾಲೇಜ್ ಈಗಾಗಲೇ ಫಿಸಿಯೋಥೆರಪಿ ಕಾಲೇಜಿನ ಮೂಲಕ ಉತ್ತಮ ಶಿಕ್ಷಣ ನೀಡುತ್ತಿದೆ. ವಿಶಾಲವಾದ ಕ್ಯಾಂಪಸನ್ನು ಸಹ ಈ ಕಾಲೇಜು ಹೊಂದಿದೆ ಎಂದು ಅವರು ಹೇಳಿದರು.
ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸು ಗಳ ಸೇರ್ಪಡೆಗೆ ಸಹಕಾರಿಯಾಗುವ ವ್ಯವಸ್ಥೆ ಶಿಕ್ಷಣ ವಿಕಾಸ ಪದವಿಪೂರ್ವ ಕಾಲೇಜಿನಲ್ಲಿ ಲಭಿಸಲಿದೆ. ಪಿಸಿಎಂಬಿಯ ೮೦ ವಿದ್ಯಾರ್ಥಿಗಳ ಒಂದು ತಂಡ ಮತ್ತು ಪಿಸಿಎಂ ಸಿಎಸ್ ೮೦ ವಿದ್ಯಾರ್ಥಿಗಳ ಎರಡು ತಂಡಗಳಿಗೆ ಸರಕಾರದಿಂದ ಮಂಜೂರಾತಿ ದೊರೆತಿದೆ. ಒಂದು ತರಗತಿಗೆ ೬೦ ವಿದ್ಯಾರ್ಥಿಗಳನ್ನು ಸೀಮಿತಗೊಳಿಸಿ, ನಾಲ್ಕು ತಂಡ ಗಳಾಗಿಸಿ ಹೆಚ್ಚು ಪರಿಣಾಮಕಾರಿ ಶಿಕ್ಷಣ ನೀಡುವುದು ಸಂಸ್ಥೆಯ ಮುಂದಿರುವ ಗುರಿ ಎಂದು ಅವರು ನುಡಿದರು.
ನಿಟ್ಟೆ ವಿದ್ಯಾಲಯದ ಉಪಕುಲಪತಿ ಡಾ.ಎಂ.ಶಾಂತರಾಮ ಶೆಟ್ಟಿ ಕಾಲೇಜಿನ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕೃಷ್ಣ ಜೆ ಪಾಲೆಮಾರ್ ಅಧ್ಯಕ್ಷತೆ ವಹಿಸಲಿದ್ದು, ಪೊಲೀಸ್ ಮಹಾ ನಿರೀಕ್ಷಕ ಗೋಪಾಲ ಹೊಸೂರು ಮತ್ತು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌ಸಿ.ಶರ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಎಕ್ಷ್‌ಪರ್ಟ್ ಕಾಲೇಜಿನ ಅಧ್ಯಕ್ಷ ನರೇಂದ್ರ ಎಲ್.ನಾಯಕ್, ಕಾರ್ಯದರ್ಶಿ ಉಷಪ್ರಭಾ ಎಲ್.ನಾಯಕ್, ಲೆಕ್ಕಪರಿಶೋಧಕ ಎಂ.ಜಗನ್ನಾಥ ಕಾಮತ್, ಮಂಗಳೂರು ವಿವಿಯ ಮಾಜಿ ಕುಲಪತಿ ಡಾ.ಕೆ.ಎಂ. ಕಾವೇರಿಯಪ್ಪ ಮತ್ತು ವಿಕಾಸ ಕಾಲೇಜಿನ ಸಲಹಾ ಸಮಿತಿ ಸದಸ್ಯ ಪ್ರಸನ್ನಕುಮಾರ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಶ್ರೀಪತಿ ರಾವ್ ವಿವರಿಸಿದರು.
ಇದೇ ವೇಳೆ ಸಂಸ್ಥೆಯ ನಿಯಮಾ ವಳಿಗಳ ಕುರಿತು ಹೆತ್ತವರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಜೂ.೧೨ರಂದು ಕಾಲೇಜ್ ವಿದ್ಯಾರ್ಥಿ ಗಳಿಗಾಗಿ ತೆರೆದುಕೊಳ್ಳಲಿದೆ ಎಂದು ಪ್ರಾಚಾರ್ಯರು ವಿವರಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಕೆ.ರಾಜೇಂದ್ರ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥಸಾರಥಿ ಉಪಸ್ಥಿತರಿದ್ದರು.
Tagged with
briefs
ರಾಹುಲ್ ತನ್ನ ಮಾತಿಗೆ ತಕ್ಕುದಾಗಿ ನಡೆಯುತ್ತಾರೆ ಎಂದಾದರೆ ಎರಡನೆ ಬಾರೀ ಸ್ಪರ್ಧೆ ಬಯಸಿರುವವರಿಗೆ ಮುಂಬರುವ ವಿಧಾನಸಭೆ ಚುನಾವಣೆ ಮಾಡು ಇಲ್ಲವೆ ಮಡಿ ಎಂಬ ಯುದ್ದ ಕ್ಷೇತ್ರವೇ ಆಗಿರುತ್ತದೆ.
ಮಂಗಳೂರು: ಕಾಂಗ್ರೆಸ್ ಪಾಲಿನ ಯುವರಾಜ ರಾಹುಲ್ ಗಾಂಧಿ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಹುಬ್ಬಳ್ಳಿಗೆ ಬಂದವರು ಭಾರೀ ಬಾಂಬ್ ಸಿಡಿಸಿ ಹೋಗಿದ್ದಾರೆ. ಚುನಾವಣೆ ಯಲ್ಲಿ ಎರಡು ಬಾರಿ ಸೋತವರಿಗೆ ಮತ್ತೆ ಟಿಕೆಟ್ ಕೊಡುವುದಿಲ್ಲ ಎಂದು ಹೇಳಿದ್ದು ಕಾಂಗ್ರೆಸ್‌ನ ಘಟನಾ ಘಟಿಗಳಲ್ಲಿ ನಡುಕ ಹಟ್ಟಿಸಿದೆ. ರಾಹುಲ್‌ರ ನಿರ್ಧಾರ ಬದಲಾಯಿ ಸುವಂತೆ ಮಾಡುವ ತಂತ್ರಗಾರಿಕೆಯ ಬಗ್ಗೆ ಈಗಲೇ ಚರ್ಚೆ ನಡೆಯುತ್ತಿದೆ.
ಏನಾದರಾಗಲಿ ಈಗಿರುವ ಸ್ಥಿತಿಯಲ್ಲಿ ರಾಹುಲ್ ತಮ್ಮ ನಿರ್ಧಾರಕ್ಕೆ ಅಂಟಿ ಕೊಂಡಿದ್ದೇ ಆದರೆ ಯಾರ‍್ಯಾರ ಭವಿಷ್ಯ ಮಂಕಾಗಲಿದೆ ಎಂಬ ಕುತೂಹಲದ ಚರ್ಚೆಯೂ ಇನ್ನೊಂದು ಕಡೆ ನಡೆಯುತ್ತಿದೆ. ಈ ಚರ್ಚೆ ದ.ಕ. ಜಿಲ್ಲೆಯಲ್ಲೂ ಇದೆ. ಮೊದಲಾಗಿ ಕೇಳಿ ಬರುತ್ತಿರುವ ಮಾತು ರಾಹುಲ್ ಹೇಳಿದಂತೆ ನಡೆಯುತ್ತಾರೆಯೇ ಎಂಬುದು. ಕಾಂಗ್ರೆಸ್‌ನಲ್ಲಿಯೇ ಇರುವ ಅಲಿಖಿತ ನಿಯಮದಂತೆ ಮೂರು ಬಾರಿ ಸ್ಪರ್ಧಿಸಿ ಸೋತವರಿಗೆ ಟಿಕೆಟ್ ನೀಡುವಂತಿಲ್ಲ. ಆದರೆ ದ.ಕ. ಜಿಲ್ಲೆಯ ಮಟ್ಟಿಗೆ ಈ ನಿಯಮ ಅನ್ವಯವಾಗಲೇ ಇಲ್ಲ. ಪ್ರಭಾವದ ಎದುರು ನಿಯಮಗಳೆಲ್ಲ ಲೆಕ್ಕಕ್ಕಿರುವುದೇ ಇಲ್ಲ.
ಜನಾರ್ದನ ಪೂಜಾರಿ ಮತ್ತು ವೀರಪ್ಪ ಮೊಯ್ಲಿ ಮೂರು ಬಾರಿ ನಿರಂತರವಾಗಿ ಸೋತ ಹೊರತಾಗಿಯೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿದರು. ಮೊಯ್ಲಿ ಗೆಲವು ಸಾಧಿಸಿದರೆ, ಜನಾರ್ದನ ಪೂಜಾರಿ ಮತ್ತೆ ಸೋಲಿನ ಸರಣಿಯ ಭಾಗ ಆದರು. ಈಗಲೂ ಪೂಜಾರಿಯ ಸ್ಪರ್ಧೆಯ ಉತ್ಸಾಹ ಕುಗ್ಗಿಲ್ಲ ಎಂಬುದು ಅವರ ನಡವಳಿಕೆಯೇ ತೋರಿ ಸುತ್ತದೆ. ಇಂತಹ ನಾಯಕರನ್ನು ರಾಹುಲ್ ಹೇಗೆ ನಿಭಾಯಿಸುತ್ತಾರೆ ಎಂಬು ದರ ಆಧಾರದಲ್ಲಿ ಅವರ ನಾಯಕತ್ವದ ಭವಿಷ್ಯ ನಿಂತಿದೆ. ರಾಹುಲ್ ಗಾಂಧಿಯ ಹೊಸ ನಿಯಮಾವಳಿ
ಜಾರಿಗೆ ಬಂದರೆ ದ.ಕ. ಜಿಲ್ಲೆಯಲ್ಲಿ ಸ್ಥಾನ ವಂಚಿತರಾಗಲಿರುವವರು ಯಾರು ಎಂಬ ಪ್ರಶ್ನೆಗೆ ಪುತ್ತೂರಿನ ಸುಧಾಕರ ಶೆಟ್ಟರ ಹೊರತಾಗಿ ಸ್ಪಷ್ಟ ಉತ್ತರ ಸಿಗುವ ಲಕ್ಷಣ ಕಾಣುತ್ತಿಲ್ಲ. ಎರಡು ಬಾರಿ ನಿರಂತರವಾಗಿ ಸೋತವರಲ್ಲಿ ಸುಳ್ಯದ ಡಾ. ರಘು ಇದ್ದಾರೆ. ಆದರೆ ಸುಳ್ಯ ಮೀಸಲು ಕ್ಷೇತ್ರದಲ್ಲಿ ಡಾ.ರಘುಗೆ ಹೊರತಾದ ಅಭ್ಯರ್ಥಿಯನ್ನು ಹುಡುಕುವುದು ಕಾಂಗ್ರೆಸ್‌ಗೆ ಕಷ್ಠವೇ ಆಗಬಹುದು.
ಅದಲ್ಲದೆ ರಘು ಹಿಂದೆಂದಿಗಿಂತ ಈಗ ಹೆಚ್ಚು ಕ್ರಿಯಾಶೀಲರಾಗಿರುವ ವ್ಯಕ್ತಿಯಾಗಿದ್ದಾರೆ. ಇಂತಹದ್ದೇ ಸಮಸ್ಯೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲೂ ಕಾಡಬಹುದು. ವಿಜಯ ಕುಮಾರ್ ಶೆಟ್ಟರು ಎರಡು ಬಾರಿ ಸೋತಿದ್ದಾ ರಾದರೂ ಅದು ನಿರಂತರವಾಗಿಯಲ್ಲ. ಒಮ್ಮೆ ಕುಂಬ್ಳೆ ಸುಂದರ್‌ರಾವ್ ಎದುರು ಸೋತು ಅವರ ಎದುರೇ ಗೆಲವು ಸಾಧಿಸಿದ್ದರು. ಮತ್ತೊಮ್ಮೆ ಸೋತಿದ್ದು ಪಾಲೇಮಾರರ ಎದುರು. ವಿಜಯ ಕುಮಾರರ ಸೋಲು ಸಹಜ ಬದಲಾವಣೆ ಎಂದು ಪ್ರತಿಕ್ರಿಯಿಸಬಹುದೇ ಹೊರತು ಅವರ ಜನಪ್ರಿಯತೆ ಕುಸಿದಿದೆ ಎಂದಲ್ಲ. ಇನ್ನು ಒಂದೊಂದು ಬಾರಿ ಸೋತವರ ದೊಡ್ಡ ಪಟ್ಟಿಯೇ ಇದೆ. ಐವನ್ ಡಿಸೋಜಾ, ಬೊಂಡಾಲ ಜಗನ್ನಾಥ ಶೆಟ್ಟಿ, ಹರೀಶ್ ಕುಮಾರ್, ಲ್ಯಾನ್ಸಿಲಾಟ್ ಪಿಂಟೊ, ಮೊಯ್ದಿನ್ ಬಾವಾ, ಶುಂಠಿಕೊಪ್ಪ ಇಬ್ರಾಹಿಂ ಹೀಗೆ ಸಾಗುತ್ತವೆ ಹೆಸರುಗಳು.
ಇವರಿಗೆಲ್ಲ ಈಗಿರುವುದು ಒಂದೇ ಒಂದು ಅವಕಾಶ ಮಾತ್ರ. ರಾಹುಲ್ ತನ್ನ ಮಾತಿಗೆ ತಕ್ಕುದಾಗಿ ನಡೆಯುತ್ತಾರೆ ಎಂದಾದರೆ ಎರಡನೆ ಬಾರೀ ಸ್ಪರ್ಧೆ ಬಯಸಿರುವವರಿಗೆ ಮುಂಬ ರುವ ವಿಧಾನ ಸಭೆ ಚುನಾವಣೆ ಮಾಡು ಇಲ್ಲವೆ ಮಡಿ ಎಂಬ ಯುದ್ದ ಕ್ಷೇತ್ರವೇ ಆಗಿರುತ್ತದೆ.
ಇಂತಹ ಯುದ್ದದಲ್ಲಿ ಗೆಲುವಿನ ವಿಶ್ವಾಸದ ತಂತ್ರಗಾರಿಕೆಯನ್ನು ದ.ಕ. ಜಿಲ್ಲೆಯ ಕಾಂಗ್ರೆಸ್ ನಾಯಕರು ತೋರಿಸುವರೇ. ಇಲ್ಲವೆ ಅವನು ಸೋತರೆ ಮುಂದಿನ ಅವಕಾಶ ನನಗೇ ಎಂದು ತಂತ್ರ ರೂಪಿಸುವರೇ ಕಾದು ನೋಡಬೇಕಿದೆ.
Tagged with
dk,
lnews
ರಾಹುಲ್ ತನ್ನ ಮಾತಿಗೆ ತಕ್ಕುದಾಗಿ ನಡೆಯುತ್ತಾರೆ ಎಂದಾದರೆ ಎರಡನೆ ಬಾರೀ ಸ್ಪರ್ಧೆ ಬಯಸಿರುವವರಿಗೆ ಮುಂಬರುವ ವಿಧಾನಸಭೆ ಚುನಾವಣೆ ಮಾಡು ಇಲ್ಲವೆ ಮಡಿ ಎಂಬ ಯುದ್ದ ಕ್ಷೇತ್ರವೇ ಆಗಿರುತ್ತದೆ.
ಮಂಗಳೂರು: ಕಾಂಗ್ರೆಸ್ ಪಾಲಿನ ಯುವರಾಜ ರಾಹುಲ್ ಗಾಂಧಿ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಹುಬ್ಬಳ್ಳಿಗೆ ಬಂದವರು ಭಾರೀ ಬಾಂಬ್ ಸಿಡಿಸಿ ಹೋಗಿದ್ದಾರೆ. ಚುನಾವಣೆ ಯಲ್ಲಿ ಎರಡು ಬಾರಿ ಸೋತವರಿಗೆ ಮತ್ತೆ ಟಿಕೆಟ್ ಕೊಡುವುದಿಲ್ಲ ಎಂದು ಹೇಳಿದ್ದು ಕಾಂಗ್ರೆಸ್‌ನ ಘಟನಾ ಘಟಿಗಳಲ್ಲಿ ನಡುಕ ಹಟ್ಟಿಸಿದೆ. ರಾಹುಲ್‌ರ ನಿರ್ಧಾರ ಬದಲಾಯಿ ಸುವಂತೆ ಮಾಡುವ ತಂತ್ರಗಾರಿಕೆಯ ಬಗ್ಗೆ ಈಗಲೇ ಚರ್ಚೆ ನಡೆಯುತ್ತಿದೆ.
ಏನಾದರಾಗಲಿ ಈಗಿರುವ ಸ್ಥಿತಿಯಲ್ಲಿ ರಾಹುಲ್ ತಮ್ಮ ನಿರ್ಧಾರಕ್ಕೆ ಅಂಟಿ ಕೊಂಡಿದ್ದೇ ಆದರೆ ಯಾರ‍್ಯಾರ ಭವಿಷ್ಯ ಮಂಕಾಗಲಿದೆ ಎಂಬ ಕುತೂಹಲದ ಚರ್ಚೆಯೂ ಇನ್ನೊಂದು ಕಡೆ ನಡೆಯುತ್ತಿದೆ. ಈ ಚರ್ಚೆ ದ.ಕ. ಜಿಲ್ಲೆಯಲ್ಲೂ ಇದೆ. ಮೊದಲಾಗಿ ಕೇಳಿ ಬರುತ್ತಿರುವ ಮಾತು ರಾಹುಲ್ ಹೇಳಿದಂತೆ ನಡೆಯುತ್ತಾರೆಯೇ ಎಂಬುದು. ಕಾಂಗ್ರೆಸ್‌ನಲ್ಲಿಯೇ ಇರುವ ಅಲಿಖಿತ ನಿಯಮದಂತೆ ಮೂರು ಬಾರಿ ಸ್ಪರ್ಧಿಸಿ ಸೋತವರಿಗೆ ಟಿಕೆಟ್ ನೀಡುವಂತಿಲ್ಲ. ಆದರೆ ದ.ಕ. ಜಿಲ್ಲೆಯ ಮಟ್ಟಿಗೆ ಈ ನಿಯಮ ಅನ್ವಯವಾಗಲೇ ಇಲ್ಲ. ಪ್ರಭಾವದ ಎದುರು ನಿಯಮಗಳೆಲ್ಲ ಲೆಕ್ಕಕ್ಕಿರುವುದೇ ಇಲ್ಲ.
ಜನಾರ್ದನ ಪೂಜಾರಿ ಮತ್ತು ವೀರಪ್ಪ ಮೊಯ್ಲಿ ಮೂರು ಬಾರಿ ನಿರಂತರವಾಗಿ ಸೋತ ಹೊರತಾಗಿಯೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿದರು. ಮೊಯ್ಲಿ ಗೆಲವು ಸಾಧಿಸಿದರೆ, ಜನಾರ್ದನ ಪೂಜಾರಿ ಮತ್ತೆ ಸೋಲಿನ ಸರಣಿಯ ಭಾಗ ಆದರು. ಈಗಲೂ ಪೂಜಾರಿಯ ಸ್ಪರ್ಧೆಯ ಉತ್ಸಾಹ ಕುಗ್ಗಿಲ್ಲ ಎಂಬುದು ಅವರ ನಡವಳಿಕೆಯೇ ತೋರಿ ಸುತ್ತದೆ. ಇಂತಹ ನಾಯಕರನ್ನು ರಾಹುಲ್ ಹೇಗೆ ನಿಭಾಯಿಸುತ್ತಾರೆ ಎಂಬು ದರ ಆಧಾರದಲ್ಲಿ ಅವರ ನಾಯಕತ್ವದ ಭವಿಷ್ಯ ನಿಂತಿದೆ. ರಾಹುಲ್ ಗಾಂಧಿಯ ಹೊಸ ನಿಯಮಾವಳಿ
ಜಾರಿಗೆ ಬಂದರೆ ದ.ಕ. ಜಿಲ್ಲೆಯಲ್ಲಿ ಸ್ಥಾನ ವಂಚಿತರಾಗಲಿರುವವರು ಯಾರು ಎಂಬ ಪ್ರಶ್ನೆಗೆ ಪುತ್ತೂರಿನ ಸುಧಾಕರ ಶೆಟ್ಟರ ಹೊರತಾಗಿ ಸ್ಪಷ್ಟ ಉತ್ತರ ಸಿಗುವ ಲಕ್ಷಣ ಕಾಣುತ್ತಿಲ್ಲ. ಎರಡು ಬಾರಿ ನಿರಂತರವಾಗಿ ಸೋತವರಲ್ಲಿ ಸುಳ್ಯದ ಡಾ. ರಘು ಇದ್ದಾರೆ. ಆದರೆ ಸುಳ್ಯ ಮೀಸಲು ಕ್ಷೇತ್ರದಲ್ಲಿ ಡಾ.ರಘುಗೆ ಹೊರತಾದ ಅಭ್ಯರ್ಥಿಯನ್ನು ಹುಡುಕುವುದು ಕಾಂಗ್ರೆಸ್‌ಗೆ ಕಷ್ಠವೇ ಆಗಬಹುದು.
ಅದಲ್ಲದೆ ರಘು ಹಿಂದೆಂದಿಗಿಂತ ಈಗ ಹೆಚ್ಚು ಕ್ರಿಯಾಶೀಲರಾಗಿರುವ ವ್ಯಕ್ತಿಯಾಗಿದ್ದಾರೆ. ಇಂತಹದ್ದೇ ಸಮಸ್ಯೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲೂ ಕಾಡಬಹುದು. ವಿಜಯ ಕುಮಾರ್ ಶೆಟ್ಟರು ಎರಡು ಬಾರಿ ಸೋತಿದ್ದಾ ರಾದರೂ ಅದು ನಿರಂತರವಾಗಿಯಲ್ಲ. ಒಮ್ಮೆ ಕುಂಬ್ಳೆ ಸುಂದರ್‌ರಾವ್ ಎದುರು ಸೋತು ಅವರ ಎದುರೇ ಗೆಲವು ಸಾಧಿಸಿದ್ದರು. ಮತ್ತೊಮ್ಮೆ ಸೋತಿದ್ದು ಪಾಲೇಮಾರರ ಎದುರು. ವಿಜಯ ಕುಮಾರರ ಸೋಲು ಸಹಜ ಬದಲಾವಣೆ ಎಂದು ಪ್ರತಿಕ್ರಿಯಿಸಬಹುದೇ ಹೊರತು ಅವರ ಜನಪ್ರಿಯತೆ ಕುಸಿದಿದೆ ಎಂದಲ್ಲ. ಇನ್ನು ಒಂದೊಂದು ಬಾರಿ ಸೋತವರ ದೊಡ್ಡ ಪಟ್ಟಿಯೇ ಇದೆ. ಐವನ್ ಡಿಸೋಜಾ, ಬೊಂಡಾಲ ಜಗನ್ನಾಥ ಶೆಟ್ಟಿ, ಹರೀಶ್ ಕುಮಾರ್, ಲ್ಯಾನ್ಸಿಲಾಟ್ ಪಿಂಟೊ, ಮೊಯ್ದಿನ್ ಬಾವಾ, ಶುಂಠಿಕೊಪ್ಪ ಇಬ್ರಾಹಿಂ ಹೀಗೆ ಸಾಗುತ್ತವೆ ಹೆಸರುಗಳು.
ಇವರಿಗೆಲ್ಲ ಈಗಿರುವುದು ಒಂದೇ ಒಂದು ಅವಕಾಶ ಮಾತ್ರ. ರಾಹುಲ್ ತನ್ನ ಮಾತಿಗೆ ತಕ್ಕುದಾಗಿ ನಡೆಯುತ್ತಾರೆ ಎಂದಾದರೆ ಎರಡನೆ ಬಾರೀ ಸ್ಪರ್ಧೆ ಬಯಸಿರುವವರಿಗೆ ಮುಂಬ ರುವ ವಿಧಾನ ಸಭೆ ಚುನಾವಣೆ ಮಾಡು ಇಲ್ಲವೆ ಮಡಿ ಎಂಬ ಯುದ್ದ ಕ್ಷೇತ್ರವೇ ಆಗಿರುತ್ತದೆ.
ಇಂತಹ ಯುದ್ದದಲ್ಲಿ ಗೆಲುವಿನ ವಿಶ್ವಾಸದ ತಂತ್ರಗಾರಿಕೆಯನ್ನು ದ.ಕ. ಜಿಲ್ಲೆಯ ಕಾಂಗ್ರೆಸ್ ನಾಯಕರು ತೋರಿಸುವರೇ. ಇಲ್ಲವೆ ಅವನು ಸೋತರೆ ಮುಂದಿನ ಅವಕಾಶ ನನಗೇ ಎಂದು ತಂತ್ರ ರೂಪಿಸುವರೇ ಕಾದು ನೋಡಬೇಕಿದೆ.
Tagged with
dk,
lnews
ಅಪರೂಪದ ಪರೀಕ್ಷೆಯೋ? ಅಪರೂಪದ ಮದುವೆಯೋ?
ಶಿವಮೊಗ್ಗ: ನಗರದ ಕಮಲಾ ನೆಹರೂ ನ್ಯಾಷನಲ್ ಕಾಲೇಜಿಗೆ ವಿಶೇಷ ಕಳೆ ಬಂದಿತ್ತು. ಪರೀಕ್ಷಾರ್ಥಿಗಳು ಎಂದಿನಂತೆ ಪರೀಕ್ಷೆ ಬರೆ ಯುವ ಆತಂಕದಲ್ಲಿದ್ದರೆ ಒಬ್ಬಳು ವಿದ್ಯಾರ್ಥಿನಿ ಮಾತ್ರ ಸಡಗರದಿಂದ ಬಂದು ಪರೀಕ್ಷೆಗೆ ಕುಳಿತಳು.
ಹೌದು, ಇಂತಹ ಒಂದು ಘಟನೆ ನಡೆ ದದ್ದು ಕಲಾಶ್ರೀ ಎಂಬ ವಿದ್ಯಾರ್ಥಿನಿಯ ಜೀವ ನದಲ್ಲಿ! ಅತ್ತ ಕುತ್ತಿಗೆಗೆ ತಾಳಿ ಬಿಗಿಸಿಕೊಂಡಿದ್ದೇ ತಡ ಸೀದಾ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದ ಕಲಾಶ್ರೀ, ಪರೀಕ್ಷೆ ಬರೆದು ನಂತರವೇ ಮದುವೆಯ ಉಳಿದ ಶಾಸ್ತ್ರಗಳನ್ನು ಪೂರೈಸಿದ್ದಾಳೆ. ಇದನ್ನು ಅಪರೂಪದ ಪರೀಕ್ಷೆ ಅನ್ನಬೇಕೋ ಅಥವಾ ಅಪರೂಪದ ಮದುವೆ ಅನ್ನಬೇಕೋ?
ಕಲಾ ಮದುವೆ ವೆಂಕಟೇಶ ಎಂಬ ವರನ ಜತೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಏರ್ಪಾಡಾಗಿತ್ತು. ಮದುವೆ ಸಂಭ್ರಮದ ಮಧ್ಯೆ ಬಿಕಾಂ ಅಂತಿಮ ವರ್ಷದ ವಿಷಯದ ಪರೀಕ್ಷೆಯನ್ನೂ ಕಲಾಶ್ರೀ ಬರೆದರು. ಅಗ್ನಿಸಾಕ್ಷಿಯಾಗಿ ಕಲಾಗೆ ತಾಳಿಕಟ್ಟಿದ ವೆಂಕಟೇಶ ಅವರೇ ಪತ್ನಿಯನ್ನು ಬಿಕಾಂ ಅಗ್ನಿ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರಕ್ಕೆ ಕರೆತಂದರು. ವೆಂಕಟೇಶ ಅವರು ಶಿಕಾರಿಪುರದಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ ದುಡಿಯುತ್ತಿದ್ದಾರೆ. ಮದುವೆಯ ಊಟದ ಶಾಸ್ತ್ರವನ್ನೂ ಪೂರೈಸದ ಕಲಾಶ್ರೀ, ಧಾರೆ ಸೀರೆಯಲ್ಲೇ ಪರೀಕ್ಷೆಗೆ ಕುಳಿತರು. ಇದನ್ನು ನೋಡಿದ ಮಂದಿ ಮೂಕವಿಸ್ಮಿತರಾದರು!
Tagged with
feature,
snews
ಕಾಸರಗೋಡು: ಅಮೆರಿಕಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ೪೫ ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ ಮೂಲತಃ ಮಂಗಳೂರಿನ ವ್ಯಕ್ತಿಯೋ ರ್ವರು ಸಂಶಯಾಸ್ಪದವಾಗಿ ಸಾವನ್ನ ಪ್ಪಿದ್ದು, ಕಾಸರಗೋಡು ಕೊಪ್ಪಲದ ಕಡಲ ಕಿನಾರೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಮಂಗಳೂರು ಪಡೀಲ್ ನಿವಾಸಿ ದೇವದಾಸ-ಸುಲೋಚನಾ ದಂಪ ತಿಯ ಪುತ್ರನಾಗಿರುವ ಸಚಿನ್ ಕೋಟೆ ಕಾರ್ (೩೨) ಎಂಬವರ ಮೃತದೇಹ ಮೊಗ್ರಾಲಿನ ಕೊಪ್ಪಲ ಕಡಲ ಕಿನಾರೆ ಯಲ್ಲಿ ಉಪೇಕ್ಷಿತ ರೀತಿಯಲ್ಲಿ ಪತ್ತೆ ಯಾಗಿದೆ. ಇವರಿಗೆ ಒಂದೂವರೆ ವರ್ಷದ ಹಿಂದೆ ಕುಂಬಳೆ ಪೊಸತ್ತಡ್ಕದ ಸುಷ್ಮಾ ಎಂಬಾಕೆಯೊಂದಿಗೆ ವಿವಾಹ ವಾಗಿತ್ತು. ೪೫ ದಿನಗಳ ಹಿಂದೆ ಅಮೆ ರಿಕಾದಿಂದ ಬಂದಿದ್ದ ಇವರು ನಿನ್ನೆ ಅಮೆರಿಕಾಕ್ಕೆ ವಾಪಸಾಗಬೇಕಿತ್ತು. ಶನಿವಾರ ರಾತ್ರಿ ಮಂಗಳೂರು ಪಡೀಲ್ ನಿಂದ ಕುಂಬಳೆಯ ಪತ್ನಿ ಮನೆಗೆ ಕಾರಿನಲ್ಲಿ ಬಂದು ಹೆಂಡತಿಯನ್ನು ಮನೆಯಲ್ಲಿ ಬಿಟ್ಟು ವಿಮಾನ ಟಿಕೆಟ್ ಖರೀದಿಸಲೆಂದು ಹೇಳಿ ತೆರಳಿದ್ದರು. ರಾತ್ರಿಯಾದರೂ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ದೂರವಾಣಿ ಕರೆ ಮಾಡಿದರೂ ರಿಸೀವ್ ಆಗುತ್ತಿರಲಿಲ್ಲ ಎನ್ನಲಾಗಿದೆ. ಗೊಂದಲಕ್ಕೊಳಗಾದ ಮನೆಮಂದಿ ಮಂಗಳೂರು ಪಡೀಲ್‌ನಲ್ಲಿರುವ ಸಚಿನ್ ಮನೆಗೆ ವಿಷಯ ತಿಳಿಸಿದ್ದು, ಪತ್ತೆಯಾಗದ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಿದರು. ಇದರ ಬೆನ್ನಲ್ಲೇ ಮೊಗ್ರಾಲಿನ ಕೊಪ್ಪಲ ಕಡಲ ಕಿನಾರೆಯಲ್ಲಿ ಅಜ್ಞಾತವಾಗಿ ಮೃತದೇಹವೊಂದು ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಯಿತು. ವಿಷಯ ತಿಳಿದ ಸಚಿನ್ ಸಂಬಂಧಿಕರು ಕಡಲ ಕಿನಾರೆಗೆ ಆಗಮಿಸಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ. ಶನಿವಾರ ರಾತ್ರಿ ಕಡಲ ಕಿನಾರೆಗೆ ಬಂದಿದ್ದ ಸಚಿನ್‌ರೊಂದಿಗೆ ಬೇರೊಬ್ಬ ಯುವಕ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭಿಸಿದೆ. ಕಾರನ್ನು ಕಡಲ ಕಿನಾರೆಯಿಂದ ಎರಡು ಕಿ.ಮೀ. ಅಂತರದಲ್ಲಿ ನಿಲ್ಲಿಸಲಾಗಿತ್ತು. ದೇಹದಲ್ಲಿ ಪ್ಯಾಂಟ್ ಮಾತ್ರ ಇದ್ದು, ಶರ್ಟ್ ಇರಲಿಲ್ಲ. ಮೂಗಿನಿಂದ ರಕ್ತ ಸವರಿದ ಕಲೆಗಳಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕಾಗಮಿಸಿರುವ ಕುಂಬಳೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews,
feature
ಪುತ್ತೂರು-ವಿಟ್ಲದಲ್ಲಿ ಕೇಸ್ ದಾಖಲು
ವಿಟ್ಲ/ಉಪ್ಪಿನಂಗಡಿ: ಕಾರು ಮಾರಾಟ ವಿವಾದಕ್ಕೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳಿಗೆ ಹಲ್ಲೆ ನಡೆಸಿದ ಘಟನೆ ವಿಟ್ಲ ಮತ್ತು ಪುತ್ತೂರಿನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಎರಡೂ ಕಡೆಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಹಲ್ಲೆಗೊಳಗಾದವರನ್ನು ವಿಟ್ಲದ ಅಜೀಜ್ ಮತ್ತು ಪುತ್ತೂರಿನ ಅಬ್ದುಲ್ ಕುಂಞಿ ಎಂದು ಗುರುತಿಸಲಾಗಿದೆ.
ವಿಟ್ಲಪಡ್ನೂರು ಗ್ರಾಮದ ರಾಧುಕಟ್ಟೆ ನಿವಾಸಿ ಅಬ್ದುಲ್ ಅಝೀಝ್ ಎಂಬವರು ಕೆಲ ದಿನಗಳ ಹಿಂದೆ ಇಪ್ಪತ್ತು ಸಾವಿರ ಮುಂಗಡ ಹಣ ಪಡೆದು ತನ್ನ ಮಾರುತಿ ಓಮ್ನಿ ಕಾರನ್ನು ಮಂಗಳಪದವು ಹನೀಫ್ ಎಂಬವರಿಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ. ಬಾಕಿ ಹಣ ೧.೪೦ ಲಕ್ಷ ಹಣ ೩೦ ದಿವಸದೊಳಗೆ ನೀಡುವುದಾಗಿ ಕರಾರುಪತ್ರ ಮಾಡಿಸಿಕೊಂಡಿದ್ದರು. ಒಂದು ವಾರವಾದರೂ ಇವರ ಪತ್ತೆಯಿಲ್ಲದ ಕಾರಣ ಅಬ್ದುಲ್ ಅಝೀಝ್ ಅವರು ವಿಟ್ಲ ಠಾಣೆಯಲ್ಲಿ ದೂರು ನೀಡಿದ್ದರು. ಶನಿವಾರ ದೂರವಾಣಿ ಕರೆ ಮಾಡಿದ ಅಬ್ದುಲ್ಲ ಕುಂಞಿ ಎಂಬವರು ಕಾರಿನ ಬಾಬ್ತು ಬಾಕಿ ಹಣ ನೀಡಲು ನಮ್ಮಿಂದ ಸಾಧ್ಯವಿಲ್ಲ. ನೀನು ತಕ್ಷಣ ಮುಂಗಡ ಪಾವತಿಸಿದ ೨೦ ಸಾವಿರ ರೂಪಾಯಿ ಹಿಡಿದುಕೊಂಡು ಕಲ್ಲಡ್ಕಕ್ಕೆ ಬಂದು ನಿನ್ನ ಕಾರನ್ನು ವಾಪಾಸು ಕೊಂಡು ಹೋಗು ಎಂದು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಅಬ್ದುಲ್ ಅಝೀಝ್ ಅವರು ಕಲ್ಲಡ್ಕಕ್ಕೆ ತೆರಳಿದ್ದು, ಆರೋಪಿಗಳು ಅಲ್ಲಿಂದ ಅವರನ್ನು ಮಾರುತಿ ೮೦೦ ಕಾರಿನಲ್ಲಿ ಮಜ್ಜೋನಿ ಕಡೆಗೆ ಕರೆದು ಕೊಂಡು ಹೋಗಿ ನನಗೆ ಹಲ್ಲೆ ನಡೆಸಿದ್ದಲ್ಲದೆ ನನ್ನಲ್ಲಿದ್ದ ೨೦ ಸಾವಿರ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿರುವುದಾಗಿ ಅಬ್ದುಲ್ ಅಝೀಝ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕೊಡುಂಗಾಯಿ ನಿವಾಸಿ ಅಬ್ದುಲ್ಲ ಕುಂಞಿ, ಮಂಗಿಲಪದವು ಸಮೀಪದ ಕೊಡಂಗೆ ನಿವಾಸಿ ಹನೀಫ್ ಯಾನೆ ಎಲಿ ಹನೀಫ್ ಹಾಗೂ ರಹಿಮಾನ್ ಎಂಬವರ ವಿರುದ್ಧ ಗಾಯಾಳು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದೇ ಕಾರು ವ್ಯವಹಾರಕ್ಕೆ ಸಂಬಂಧಿಸಿ ಮಧ್ಯಸ್ಥಿಕೆ ವಹಿಸಿ ಮಾತನಾ ಡಲು ಕೊಡುಂಗೈ ನಿವಾಸಿ ಅಬ್ದುಲ್ ಕುಂಞಿ ಎಂಬವರನ್ನು ಪುತ್ತೂರಿಗೆ ಹನೀಫ್ ಎಂಬವರು ಬರ ಹೇಳಿ ರಾತ್ರಿ ವೇಳೆ ಟವೆರಾ ಕಾರು ಕೆ.ಎ ೧೯ ೮೦೧೧ ರಲ್ಲಿ ಕರೆದೊಯ್ದು ಏಳು ಮಂದಿಯ ತಂಡ ಮೆಲ್ಕಾರ್ ಸಮೀಪ ಅಝೀಝ್ ಪರ ಮಾತನಾಡುತ್ತೀಯಾ ಎಂದು ಕೇಳಿ ಅಬ್ದುಲ್ ಕುಞಿಗೆ ಗಂಭೀರ ಹಲ್ಲೆ ನಡೆಸಿದ್ದು, ಇವರಲ್ಲಿದ್ದ ೨೨,೦೦೦ ಸಾವಿರ ರೂಪಾಯಿ ಲೂಟಿಗೈದು ಪರಾರಿಯಾಗಿದ್ದಾರೆ ಎಂದು ಪುತ್ತೂರು ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಹಲ್ಲೆಗೈಯ್ದವರು ಕೊಕ್ಕಕೋಲ ಹಸೈನಾರ್, ಇಸ್ಮಾಯಿಲ್, ಹನೀಫ್, ನಕಲಿ ಪಾಸ್ ಪೋರ್ಟ್ ರಝಾಕ್, ಮತ್ತು ಇತರರು ಎಂದು ಪುತ್ತೂರು ಅಸ್ಪತ್ರೆಯಲ್ಲಿ ದಾಖಲಾಗಿರುವ ಅಬ್ದುಲ್‌ಕುಞಿಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Tagged with
cnews,
feature
ಕುಂದಾಪುರ: ನಿನ್ನೆ ಬೆಳಗಿನ ಜಾವ ಐದರ ಸುಮಾ ರಿಗೆ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಕೊಚ್ಚಿಯಿಂದ ಗೋವಾ ಕಡೆ ತೆರಳುತ್ತಿದ್ದ ಪೌಲೋ ಸಂಸ್ಥೆಗೆ ಸೇರಿದ ವೋಲ್ವೋ ಬಸ್ ರಾ.ಹೆ. ೬೬ರ ಮುಲ್ಲಿಕಟ್ಟೆ ಸಮೀಪ ಹಿಂದಿನಿಂದ ಡಿಕ್ಕಿ ಹೊಡೆದು ಬಸ್ಸಿನ ಮುಂಭಾಗದಲ್ಲಿ ಕುಳಿತ್ತಿದ್ದ ಕ್ಲೀನರ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಮೃತ ಕ್ಲೀನರ್ ಗೋವಾ ಮೂಲದ ಪೀಟರ್ (೪೪) ಎಂದು ಗುರುತಿಸಲಾಗಿದೆ. ಇತರ ಏಳು ಬಸ್ ಪ್ರಯಾಣಿಕರು ಗಾಯಗೊಂಡಿದ್ದು, ಮಣಿಪಾಲದ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ಸಿನ ಚಕ್ರವನ್ನು ಕುಂದಾಪುರದಲ್ಲಷ್ಟೇ ಬದಲಿಸಲಾಗಿದ್ದು, ಬಸ್ ಅಪರಿಮಿತ ವೇಗದಲ್ಲಿ ಸಾಗುತ್ತಿತ್ತೆನ್ನಲಾಗಿದೆ. ಮುಂಜಾನೆಯಲ್ಲಿ ನಸುಕತ್ತಲಿಗೆ ಕೆಟ್ಟು ನಿಂತ ಲಾರಿಗೆ ಯಾವುದೇ ಸಿಗ್ನಲ್ ಇಲ್ಲದ ಕಾರಣ ಹಾಗೂ ಬಸ್ಸಿನ ಅಪರಿಮಿತ ವೇಗವೇ ಘಟನೆಗೆ ಕಾರಣವೆನ್ನಲಾಗಿದೆ. ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ಮುದ್ದೆಯಾಗಿದ್ದು, ತುಸು ದೂರದ ತನಕವೂ ಲಾರಿಯನ್ನು ತಳ್ಳಿಕೊಂಡು ಹೋಗಿತ್ತು. ಲಾರಿಯ ಕ್ಲೀನರ್ ಕೆಟ್ಟಿದ್ದ ಲಾರಿಯ ಕೆಳಗೆ ಮಲಗಿದ್ದು ಮಳೆ ಬಂದ ಕಾರಣ ಆಗಷ್ಟೇ ಲಾರಿಯ ಒಳಗೆ ಹೋಗಿ ಮಲಗಿ ದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಗಂಗೊಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews,
feature
ಮಂಗಳೂರು: ಮಾಜಿ ಕೇಂದ್ರ ಮಂತ್ರಿ ಹಾಲಿ ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂಗೆ ಎಂಎಲ್‌ಸಿ ಟಿಕೆಟ್ ನೀಡದೆ ಕಾಂಗ್ರೆಸ್ ಹೈಕ ಮಾಂಡ್ ಕೈಕೊಟ್ಟಿದ್ದು ಇದರ ಹಿಂದೆ ಇ.ಕೆ.ಬಣದ ಕೈಚಳಕ ಇದೆಯೆಂದು ಹೇಳಲಾಗುತ್ತಿದೆ.
ವಿಧಾನಪರಿಷತ್‌ಗೆ ಖಾಲಿ ಇರುವ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಸಿ.ಎಂ.ಇಬ್ರಾಹಿಂ ಅವರಿಗೆ ಟಿಕೆಟ್ ನೀಡುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಹೈಕಮಾಂಡ್ ಮುಂದೆ ಎಂದೋ ಬೇಡಿಕೆ ಇಟ್ಟಿದ್ದು, ಅದು ಈಡೇರುವ ಲಕ್ಷಣಗಳೂ ಗೋಚರಿಸಿದ್ದವು. ಆದರೆ ಅಂತಿಮ ಹಂತದಲ್ಲಿ ಹೈಕಮಾಂಡ್ ಸಿದ್ಧು ಡಿಮ್ಯಾಂಡನ್ನು ಕಸದ ಬುಟ್ಟಿಗೆ ಎಸೆದಿದ್ದು ಇದರಿಂದ ಕೆರಳಿದ ಸಿದ್ಧು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಹೊರಹೋಗುವ ಧಮ್ಕಿ ಹಾಕಿ ಬಳಿಕ ತಣ್ಣಗಾಗಿದ್ದಾರೆ.
ಸಿದ್ಧರಾಮಯ್ಯ ಅವರ ಬೇಡಿಕೆಯಂತೆ ಸಿ.ಎಂ.ಇಬ್ರಾಹಿಂ ಸಾಹೇಬರಿಗೆ ಒಂದು ಹಂತದಲ್ಲಿ ಎಂಎಲ್‌ಸಿ ಸೀಟು ಪಕ್ಕಾ ಆಗಿತ್ತು. ಆದರೆ ಎಪ್ರಿಲ್ ತಿಂಗಳಲ್ಲಿ ಮಂಗಳೂರಿನಲ್ಲಿ ಸುನ್ನೀ ವಿಭಾಗ ವಾಗಿರುವ ಎ.ಪಿ. ಉಸ್ತಾದರು ನಡೆಸಿದ ಮಾನವತಾ ಸಂಗಮ ಸಮಾವೇ ಶವೇ ಸಿ.ಎಂ.ಸಾಹೇಬರಿಗೆ ಮುಳುವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಸಮಾವೇಶದಲ್ಲಿ ಭಾಗವಹಿಸಿದ್ದ ಸಿ.ಎಂ.ಸಾಹೇಬರು, ಇ.ಕೆ. ಬಣ ಹಾಗೂ ಅದರ ಧರ್ಮಗುರುಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ದ್ದರು. ಇ.ಕೆ. ಬಣವು ಕೇರಳದಲ್ಲಿ ರಾಜಕೀಯವಾಗಿ ಮುಸ್ಲಿಂ ಲೀಗ್‌ನಲ್ಲಿ ಗುರುತಿಸಿಕೊಂಡಿದೆ. ಇನ್ನೊಂದೆಡೆ ಮುಸ್ಲಿಂಲೀಗ್ ನೇತಾರರಾಗಿರುವ ಸಮದಾನಿಯವರು ಹಾಗೂ ಎ.ಪಿ.ಉಸ್ತಾದ್ ನಡುವೆ ಕೇರಳದಲ್ಲಿ ನೇರ ವಾದ-ಸಂವಾದ ನಡೆಯುತ್ತಲೇ ಇದೆ. ಇದು ಧಾರ್ಮಿಕ ಸಂವಾದವಾಗಿ ದ್ದರೂ ಇಲ್ಲಿ ರಾಜಕೀಯಕ್ಕೆ ತಾಳೆಯಾಗುತ್ತಿದೆ. ಇದೇ ಸಂದರ್ಭ ಸಿ.ಎಂ.ಇಬ್ರಾಹಿಂ ಅವರು ಇ.ಕೆ ಬಣದ ವಿರುದ್ಧ ಮಾತನಾಡಿದ್ದು ಅವರ ಎಂಎಲ್‌ಸಿ ಆಸೆಯನ್ನು ಮಣ್ಣುಪಾಲು ಮಾಡಿದೆ.
ಇ.ಕೆ. ಬಣದ ಮುಖಂಡರು ಸಿ.ಎಂ.ಇಬ್ರಾಹಿಂ ಅವರ ಭಾಷಣದ ಪ್ರತಿಯನ್ನು ಕೇಂದ್ರ ಮಂತ್ರಿ ಇ.ಕೆ.ಆಂಟನಿ ಹಾಗೂ ವಯಲಾರ್ ರವಿ ಮೂಲಕ ಇನ್ನೋರ್ವ ಕೇಂದ್ರ ಮಂತ್ರಿ ವೀರಪ್ಪ ಮೊಲಿಗೆ ತಲುಪಿಸಿ ಇಬ್ರಾಹಿಂ ಅವರಿಗೆ ಎಂಎಲ್‌ಸಿ ಮಾಡದಂತೆ ಒತ್ತಡ ಹೇರಿತ್ತು ಎನ್ನಲಾಗಿದೆ. ಇದೇ ವೇಳೆ ಸಿದ್ಧರಾಮಯ್ಯ ಬಣದ ವಿರುದ್ಧ ಕತ್ತಿ ಮಸೆಯುತ್ತಿರುವ ವೀರಪ್ಪ ಮೊಲಿಯವರು ಮುಂದಿನ ದಿನಗಳಲ್ಲೂ ಕೇರಳದಲ್ಲಿ ಕಾಂಗ್ರೆಸ್, ಮುಸ್ಲಿಂ ಲೀಗ್ ಬೆಂಬಲ ಪಡೆಯಬೇಕಾದರೆ ಇಬ್ರಾಹಿಂ ಅವರನ್ನು ಎಂಎಲ್‌ಸಿ ಮಾಡದಿರುವುದೇ ಲೇಸು ಎಂದು ಹೈಕಮಾಂಡ್‌ಗೆ ಸಂದೇಶ ನೀಡಿದ್ದ ಕಾರಣ ಸಿದ್ಧು ಬೇಡಿಕೆ ಮಣ್ಣುಪಾಲಾಗಿದೆ.
ಕೇರಳದ ಕಲ್ಲಿಕೋಟೆ ಲೋಕಸಭಾ ಕ್ಷೇತ್ರವು ಮುಸ್ಲಿಂ ಬಾಹುಳ್ಯ ಹೊಂದಿದ್ದರೂ ಅಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದ ವೀರೇಂದ್ರ ಪಾಟೇಲ್ ಅವರು ಸಿಪಿಐಎಂ ಬೆಂಬಲದಿಂದ ನಿರಂತರವಾಗಿ ಜಯಗಳಿಸುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ೧೯೯೮ರಲ್ಲಿ ಸಿ.ಎಂ.ಇಬ್ರಾಹಿಂ ಅವರು ಜನತಾದಳದಿಂದ ಕಲ್ಲಿಕೋಟೆ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದು ಅವರ ಗೆಲುವು ನಿಚ್ಚಳವಾ ಗಿತ್ತು. ಆದರೆ ಅಲ್ಲಿನ ಮುಸ್ಲಿಮರು ಇ.ಕೆ. ಬೆಂಬಲಿತರಾಗಿದ್ದು ಎ.ಪಿ. ಬೆಂಬಲಿತ ರಾಗಿರುವ ಸಿ.ಎಂ.ಇಬ್ರಾಹಿಂ ಅವರಿಗೆ ಮತ ಸೋಲಿಗೆ ಕಾರಣಕರ್ತರಾ ಗಿದ್ದನ್ನು ಇಲ್ಲಿ ಜ್ಞಾಪಿಸಬಹುದಾಗಿದೆ.
Tagged with
cmibrahim,
dk,
feature,
lnews
ಕಾಸರಗೋಡು: ವಿವಾಹ ಸಮಾ ರಂಭ ಮುಗಿಸಿ ಮಾರುತಿ ಓಮ್ನಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ನುಳಿಪ್ಪಾಡಿ ಬಳಿ ತೆರಳುತ್ತಿದ್ದಾಗ ಎದುರಿನಿಂದ ಬರು ತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಾಯಗೊಂಡಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಕಾಸರಗೋಡು ಮುಳ್ಳೇರಿಯಾ ನಿವಾಸಿಗಳಾದ ಮನೋಹರ (೨೩), ಪ್ರಶಾಂತ (೪೦), ದಾಮೋದರ (೪೦) ವಿದ್ಯಾನಗರ ನಿವಾಸಿ ವಿಜಯ್ (೩೯), ಅಶೋಕ್ (೪೫), ಅಜಯ್ (೨೮) ಕಾಸರಗೋಡಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಮಧ್ಯಾಹ್ನ ಮೂರರ ಸುಮಾರಿಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಲಾರಿ (ಕೆ.ಎಲ್. ೧೩, ಇ.೮೧೦೩) ಡಿಕ್ಕಿಯ ರಭಸಕ್ಕೆ ಮಾರುತಿ ಓಮ್ನಿ ನಜ್ಜುಗುಜ್ಜಾಗಿದ್ದು, ಓಮ್ನಿಯಲ್ಲಿ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಕಾಸರಗೋಡು ಅಗ್ನಿಶಾಮಕ ದಳ ರಕ್ಷಿಸಿದ್ದು, ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಪ್ರಶಾಂತ್ ಎಂಬವರ ಸ್ಥಿತಿ ಚಿಂತಾ ಜನಕವಾಗಿದೆ ಎನ್ನಲಾಗಿದೆ.
Tagged with
cnews,
feature
ನಿತ್ಯಾನಂದನನ್ನು ಬಂಧಿಸಲು ಸರಕಾರ ಯಾಕೆ ಹಿಂದುಮುಂದು ನೋಡುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಇಲ್ಲಿ ವೋಟ್‌ಬ್ಯಾಂಕ್ ಒಡೆಯುವ ಯಾವುದೇ ಭೀತಿ ಸರಕಾರಕ್ಕೆ ಇರುವ ಸಾಧ್ಯತೆ ಇದ್ದಂತಿಲ್ಲ. ಸರಕಾರದಲ್ಲಿರುವ ಕೆಲವರ ಸ್ವಾರ್ಥಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಬೇಕಾಗಿ ಆತನ ಬಗ್ಗೆ ಮೃದು ಧೋರಣೆ ಹೊಂದಲಾಗಿದೆ ಎಂದೇ ಭಾವಿಸಬೇಕಾಗುತ್ತದೆ. ಸರಕಾರಕ್ಕೆ ರಾಜ್ಯದ ಜನತೆ ಮೇಲೆ ಕಾಳಜಿ ಇರುವುದು ಹೌದಾಗಿದ್ದಲ್ಲಿ ಅದು ನಿತ್ಯಾನಂದನ ಮೇಲೆ ಪ್ರೀತಿ ತೋರಿಸಲೇಬಾರದು ಎಂಬುದನ್ನು ಮುಖ್ಯಮಂತ್ರಿ ಸದಾನಂದ ಗೌಡರು ತಿಳಿದಿರಬೇಕಾಗಿದೆ. ಆದರೆ ಹಾಗಾಗಿಲ್ಲ. ಅದು ನಮ್ಮ ದುರದೃಷ್ಟ.
ಸುದ್ದಿ ವಿಶ್ಲೇಷಣೆ
ರಾಜ್ಯದ ಜನರೆಲ್ಲರೂ ದ್ವೇಷಿಸುತ್ತಿರುವ ಅಸಹ್ಯ, ಸ್ವಾಮೀಜಿ ಸೋಗಿನ ಖಳನಾಯಕ, ಕಪಟಿ ಎಂದೆಲ್ಲ ಕರೆಯಲು ಸೂಕ್ತವಾಗಿರುವ ನಿತ್ಯಾನಂದನ ಬಿಡದಿ ಆಶ್ರಮದಲ್ಲಿ ಇತ್ತೀಚೆಗೆ ನಡೆದಿರುವ ದಾಂಧಲೆ ಮತ್ತು ಅದರ ಬಳಿಕದ ವಿದ್ಯಮಾನಗಳೆಲ್ಲ ರಾಜ್ಯ ಸರಕಾರದ ಪ್ರಾಮಾಣಿಕತೆಯನ್ನು ಹಾಗೂ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸುವ ವಾತಾವರಣ ಸೃಷ್ಟಿಸಿದೆ.
ಮೊದಲಾಗಿ ಹೇಳುವುದಾದರೆ, ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವ ನಿತ್ಯಾನಂದನ ಅನುಯಾಯಿಗಳಿಗೆ ಜಾಮೀನು ಸಿಗುವಂಥ ಕಲಂಗಳಡಿಯಲ್ಲಿ ಕೇಸು ಹಾಕಿರುವ ಪೊಲೀಸರು, ಪ್ರತಿಭಟನೆ ನಡೆಸಿರುವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಜಾಮೀನು ಸಿಗದಂಥ ಕಲಂಗಳನ್ನು ಅನ್ವಯಿಸಿ ಅವರಿಗೆ ನ್ಯಾಯಾಂಗ ಬಂಧನವಾಗುವಂತೆ ಮಾಡಿರುವುದು ಸಹಜವಾಗಿಯೇ ಸಂಶಯ ಮೂಡಿಸುತ್ತಿದೆ. ಜತೆಗೆ ಘಟನೆ ನಡೆದು ಕೆಲವು ದಿನಗಳಾದರೂ ಅದಕ್ಕೆ ಮೂಲ ಕಾರಣವಾಗಿರುವ, ಹಲ್ಲೆ ನಡೆಸಲು ಪರೋಕ್ಷ ಆದೇಶ ನೀಡಿರುವ ಮತ್ತು ಒಟ್ಟು ಗೊಂದಲಗಳಿಗೆ ಮೂಲ ಕಾರಣಕರ್ತನಾಗಿರುವ ನಿತ್ಯಾನಂದನನ್ನು ಬಂಧಿಸದೆ ಇರುವುದು ಸರಕಾರದ ಪ್ರಾಮಾಣಿಕತೆಯ ಮೇಲೆ ಬಿದ್ದಿರುವ ಸಂಶಯದ ನೆರಳನ್ನು ಮತ್ತಷ್ಟು ದಟ್ಟವಾಗಿ ಸುತ್ತಿದೆ. ಸಾಲದ್ದಕ್ಕೆ ನಿತ್ಯಾನಂದ ಪರಾರಿಯಾಗುವಲ್ಲಿ ಸರಕಾರದ ಸಚಿವರೋರ್ವರ ಕೈವಾಡ ಇದೆ ಎಂಬ ಆರೋಪದ ಬಗ್ಗೆಯೂ ಸರಕಾರ ಮೌನವಾಗಿರುವುದು ಬಿಜೆಪಿ ಸರಕಾರ ನಿತ್ಯಾನಂದನ ಪರವಾಗಿದೆಯೇ ಎಂಬ ಸಂಶಯ ಮೂಡಿಸುತ್ತಿದೆ.
ಸರಕಾರಕ್ಕೆ ಕಾವಿ ಕಂಡರೆ ಭಯ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿರುವುದು ಸತ್ಯ ಎಂಬುದನ್ನು ಸರಕಾರ ತನ್ನ ಕಾರ್ಯವೈಖರಿಯಿಂದ ತೋರಿಸುತ್ತಿದೆ. ಬಿಡದಿ ಆಶ್ರಮದ ಸುತ್ತ ಸರ್ಪಗಾವಲು ಹಾಕಿದ್ದರೂ ಅದರೊಳಗಿದ್ದ ನಿತ್ಯಾನಂದ ಹೇಗೆ ತಪ್ಪಿಸಿಕೊಂಡ ಎಂಬುದಕ್ಕೆ ಅಲ್ಲಿನ ಪೊಲೀಸರು ಮತ್ತು ಜಿಲ್ಲಾಧಿಕಾರಿಗಳಲ್ಲಿ ಸಮರ್ಪಕ ಉತ್ತರ ಸಿಗುತ್ತಿಲ್ಲ. ಹಾಗಿರುವಾಗ ಇಲ್ಲಿ ಏನೋ ಅಡ್ಡ ವ್ಯವಹಾರ ನಡೆದಿದೆ ಎಂಬ ಶಂಕಿಸಲು ಒಂದು ವೇದಿಕೆ ನಿರ್ಮಾಣವಾಗುತ್ತಿದೆ.
ನಿತ್ಯಾನಂದನನ್ನು ಬಂಧಿಸಿ ಎಂದು ವಿವಿಧ ಸಂಘಟ ನೆಗಳು, ರಾಜಕೀಯ ಪಕ್ಷಗಳು ಆಗ್ರಹಿಸುತ್ತಿದ್ದರೂ, ಆತನಿಂದ ಅನ್ಯಾಯಕ್ಕೊಳಗಾಗಿರುವವರು ಅವಲತ್ತು ಕೊಂಡರೂ ಸರಕಾರ ದಿವ್ಯ ಮೌನ ವಹಿಸಿರುವುದು ಒಳ್ಳೆಯ ಸಂಗತಿಯಲ್ಲ. ನಿತ್ಯಾನಂದನಿಗೆ ಸ್ವಾಮೀಜಿ ಎಂದು ಹೇಳಿ ಕೊಳ್ಳುವ ಯಾವ ಅರ್ಹತೆ, ಯೋಗ್ಯತೆಯೂ ಇಲ್ಲ ಎಂಬುದಕ್ಕೆ ಆತನ ವರ್ತನೆಗಳೇ ಸಾಕ್ಷಿ. ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡರೆ ಯಾವ ಹಿಂದೂ ಕೂಡ ವಿರೋಧಿಸುವುದಿಲ್ಲ. ಹಾಗೆಂದು ಆತನನ್ನು ಕಾರಣವಿಲ್ಲದೆ ಬಂಧಿಸಬೇಕು ಎಂದು ಯಾರೂ ಆಗ್ರಹಿಸುತ್ತಿಲ್ಲ. ಸ್ವಾಮೀಜಿ ಎಂದು ಹೇಳಿಕೊಳ್ಳುವವರು ಸಮಾಜದಲ್ಲಿ ಶಾಂತಿ ಹೆಚ್ಚಲು ಶ್ರಮಿಸಬೇಕೇ ಹೊರತು ಅಶಾಂತಿ ಸೃಷ್ಟಿಸುವುದಕ್ಕಲ್ಲ. ಸ್ವಾಮೀಜಿ ಎಂದು ಗುರುತಿಸಿಕೊಳ್ಳುವವರು ವಿರೋಧಿಗಳನ್ನು ಕೂಡ ಪ್ರೀತಿಯಿಂದ ನೋಡಬೇಕು, ತಾಳ್ಮೆಯಿಂದ ಮಾತಾ ಡಬೇಕೇ ಹೊರತು ತನಗೆ ಆಗದಂಥ ಪ್ರಶ್ನೆ ಕೇಳಿದ ಪತ್ರಕರ್ತನನ್ನು ಗೆಟೌಟ್ ಎಂದು ಹೇಳುವುದಲ್ಲ. ಸ್ವಾಮೀಜಿ ಎಂದು ಹೇಳಿಕೊಳ್ಳುವ ಯಾವ ಅರ್ಹತೆಯೂ ಇಲ್ಲದಿರುವ (ಆದರೆ ಅಪ್ಪಟ ಮೋಸಗಾರ ಎಂದು ಕರೆಸಿಕೊಳ್ಳುವ ಸಂಪೂರ್ಣ ಅರ್ಹತೆ ಹೊಂದಿರುವ) ನಿತ್ಯಾನಂದನನ್ನು ಬಂಧಿಸಲು ಸರಕಾರ ಯಾಕೆ ಹಿಂದು ಮುಂದು ನೋಡುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಇಲ್ಲಿ ವೋಟ್ ಬ್ಯಾಂಕ್ ಒಡೆಯುವ ಯಾವುದೇ ಭೀತಿ ಸರಕಾರಕ್ಕೆ ಇರುವ ಸಾಧ್ಯತೆ ಇದ್ದಂತಿಲ್ಲ. ಸರಕಾರದಲ್ಲಿರುವ ಕೆಲವರ ಸ್ವಾರ್ಥಹಿತಾಸಕ್ತಿಯನ್ನು ಕಾಪಾಡಿ ಕೊಳ್ಳಲು ಬೇಕಾಗಿ ಆತನ ಬಗ್ಗೆ ಮೃದು ಧೋರಣೆ ಹೊಂದಲಾಗಿದೆ ಎಂದೇ ಭಾವಿಸಬೇಕಾಗುತ್ತದೆ. ಸರಕಾರಕ್ಕೆ ರಾಜ್ಯದ ಜನತೆ ಮೇಲೆ ಕಾಳಜಿ ಇರುವುದು ಹೌದಾಗಿದ್ದಲ್ಲಿ ಅದು ನಿತ್ಯಾ ನಂದನ ಮೇಲೆ ಪ್ರೀತಿ ತೋರಿಸಲೇ ಬಾರದು ಎಂಬುದನ್ನು ಮುಖ್ಯಮಂತ್ರಿ ಸದಾನಂದ ಗೌಡರು ತಿಳಿದಿರ ಬೇಕಾಗಿದೆ. ಆದರೆ ಹಾಗಾಗಿಲ್ಲ. ಅದು ನಮ್ಮ ದುರದೃಷ್ಟ. ಮತ್ತೊಂದು ಕೋನದಲ್ಲಿ ನೋಡಿದಾಗ ಸರಕಾರ ಪರೋಕ್ಷವಾಗಿ ಪತ್ರಕರ್ತರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆಯೇ ಎಂಬ ಸಂಶಯವೂ ಮೂಡುತ್ತಿದೆ. ಹಿಂದೆ ವಕೀಲರು ಮತ್ತು ಪತ್ರಕರ್ತರ ನಡುವೆ ಜಟಾಪಟಿ ನಡೆದಿದ್ದ ಸಂದರ್ಭದಲ್ಲೂ ಸರಕಾರ ಪರೋಕ್ಷವಾಗಿ ಪತ್ರಕರ್ತರ ವಿರುದ್ಧವೇ ವರ್ತಿಸಿತ್ತು. ಇದೀಗ ನಿತ್ಯಾನಂದನ ಅನುಯಾಯಿಗಳು ಮತ್ತು ಪತ್ರಕರ್ತರ ನಡುವೆ ನಡೆದಿರುವ ಸಂಘರ್ಷದಲ್ಲೂ ಸರಕಾರ ನಿತ್ಯಾನಂದನ ಪರ ವಹಿಸಿ ದಂತಿದೆ.
ನಿತ್ಯಾನಂದನ ವಿವೇಕಶೂನ್ಯ ಅನುಯಾಯಿಗಳಿಂದ ಪತ್ರಕರ್ತರನ್ನು ರಕ್ಷಿಸಲು ಮುಂದಾದ ಸಂಘಟನೆಯ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿ, ನಿತ್ಯಾನಂದನ ಅಮಲೇರಿದ ಶಿಷ್ಯರಿಗೆ ಜಾಮೀನು ಕೊಡಿಸಿರುವ ಪೊಲೀಸರಿಗೆ ಸರಕಾರದಿಂದ ರಹಸ್ಯವಾಗಿ ಏನಾದರೂ ಸೂಚನೆ, ಆದೇಶ ಬಂದಿರಬಹುದೇ ಎಂಬ ಸಂಶಯ ಕಾಡುತ್ತಿದೆ. ಸರಕಾರದ ಕೆಲವು ಹಗರಣಗಳನ್ನು ಬಯಲಿಗೆಳೆದು, ಹಲವು ಸಚಿವರನ್ನು ಜೈಲಿಗಟ್ಟುವ ಮೂಲಕ ಸರಕಾರದ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿರುವ ಮಾಧ್ಯಮದ ವಿರುದ್ಧ ಸರಕಾರ ಪರೋಕ್ಷ ಯುದ್ಧ ಸಾರಿದೆಯೇ ಎಂಬ ಪ್ರಶ್ನೆಯನ್ನು ತಳ್ಳಿ ಹಾಕಲು ಸಾಧ್ಯವೇ ಇಲ್ಲ. ಒಂದೊಮ್ಮೆ ಇದರಲ್ಲಿ ನಿಜಾಂಶ ವಿದ್ದರೆ ಅದು ಸರಕಾರಕ್ಕೆ ವಿನಾಶಕಾಲದ ಬುದ್ಧಿಯಾದೀತು. ನಿತ್ಯಾನಂದನಂಥ ಧೂರ್ತರನ್ನು ರಕ್ಷಿಸಲು ಬಿಜೆಪಿ ಸರಕಾರ ಮುಂದಾದರೆ, ‘ನಾವಿರುವುದು ಭ್ರಷ್ಟರು, ಧೂರ್ತರ ರಕ್ಷಣೆಗಾಗಿ ಎಂಬ ಸ್ಲೋಗನ್ ಅನ್ನು ಬಿಜೆಪಿ ಸರಕಾರ ತನ್ನ ಎಲ್ಲ ಕಚೇರಿಗಳಲ್ಲಿ ನೇತು ಹಾಕುವುದು ಅಗತ್ಯ!
Tagged with
feature,
nithyananda,
vishleshane
ಮಂಗಳೂರು: ಕಲ್ಲಡ್ಕದಲ್ಲಿರುವ ಪದ್ಮನಾಭ ಕೊಟ್ಟಾರಿ ಅವರ ನಿವಾಸದಲ್ಲಿ ನಡೆದ ಚಹಾಕೂಟದ ಬಳಿಕ ಕೊಠಡಿಯೊಂದರಲ್ಲಿ ಆರ್‌ಎಸ್‌ಎಸ್ ಪ್ರಮುಖ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಸಿಎಂ ಸದಾನಂದ ಗೌಡ ಅವರು ಸುಮಾರು ಅರ್ಧ ಗಂಟೆಗಳ ಕಾಲ ರಹಸ್ಯವಾಗಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು.
ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಪುತ್ತೂರಿಗೆ ತೆರಳುವ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ ಅವರ ಕಲ್ಲಡ್ಕ ಮನೆಗೆ ಭೇಟಿ ನೀಡಿದ್ದರು.
ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಸಭೆ ಉಪಾಧ್ಯಕ್ಷ ಯೋಗೀಶ್ ಭಟ್, ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್, ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಭಟ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಕ್ಷೇತ್ರ ಸಮಿತಿ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ತಾ.ಪಂ. ಉಪಾಧ್ಯಕ್ಷ ದಿನೇಶ್ ಅಮ್ಟೂರು. ಗೋಳ್ತಮಜಲು ಗ್ರಾ.ಪಂ. ಅಧ್ಯಕ್ಷ ಮೋನಪ್ಪ ದೇವಸ್ಯ ಮೊದಲಾದವರು ಹಾಜರಿದ್ದರು.
Tagged with
briefs,
lnews
ಎರಡು ಶಾಖಾ ಕಚೇರಿಗಳ ವ್ಯಾಪ್ತಿಯಲ್ಲಿ ಸುಮಾರು ೧೫ ಸಾವಿರಕ್ಕೂ ಮಿಕ್ಕಿ ವಿವಿಧ ರೀತಿಯ ವಿದ್ಯುತ್ ಸರ ಬರಾಜು ಸಂಪರ್ಕಗಳನ್ನು ಹೊಂದಿರುವ ಉಡುಪಿ ಜಿಲ್ಲೆಯ ಬಹು ಆದಾಯದ ಪಡುಬಿದ್ರಿ ಮೆಸ್ಕಾಂ ಕಚೇ ರಿಯ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಜನರು ರೋಸಿ ಹೋಗಿದ್ದಾರೆ.
ಪಡುಬಿದ್ರಿಯ ಮೆಸ್ಕಾಂ ವಿಭಾಗ ಪಡುಬಿದ್ರಿ ಮತ್ತು ಮುದರಂಗಡಿಗಳೆಂಬ ಎರಡು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಎರಡೂ ಶಾಖಾ ಕಚೇರಿಗಳಿಗೆ ಕೆಲವು ತಿಂಗಳುಗಳಿಂದ ಓರ್ವನೇ ಶಾಖಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಡುಬಿದ್ರಿ ವಿಭಾಗಕ್ಕೆ ಒಳಪಡುವ ಹೆಜಮಾಡಿ, ತೆಂಕ ಎರ್ಮಾಳ್, ಬಡಾ ಎರ್ಮಾಳ್ (ಉಚ್ಚಿಲ ಗಡಿ) ಮತ್ತು ನಂದಿಕೂರಿಗೆ ಒಟ್ಟು ೧೩ ಮಂದಿ ಲೈನ್ ಮ್ಯಾನ್‌ಗಳಿದ್ದು, (ಪಡುಬಿದ್ರಿಗೆ ಎಂಟು ಮಂದಿ) ರಾತ್ರಿ ಪಾಳಿಗೆ ಪಡುಬಿದ್ರಿಯಲ್ಲಿ ವಾರಕ್ಕೊಬ್ಬರಂತೆ ಕಾರ್ಯ ನಿರ್ವಹಿಸುವ ವ್ಯವಸ್ಥೆ ಇದೆ.
ಆದರೆ ವಾರದ ಯಾವ ದಿನವೂ ಯಾವುದೇ ಹೊತ್ತಲ್ಲಿ ಪಡುಬಿದ್ರಿ ಕಚೇರಿಗೆ ಫೋನಾಯಿಸಿದರೆ ಇಲ್ಲಿಯ ದೂರವಾಣಿ ಮಾತನಾಡುತ್ತಿಲ್ಲವೆಂಬುದು ಇಲ್ಲಿಯ ಗ್ರಾಮೀಣ ಭಾಗದ ಜನ ರೆಲ್ಲರ ಒಕ್ಕೊರಲಿನ ದೂರಾಗಿದೆ. ಹಾಗಾಗಿ ಬಳಕೆದಾರರು ಪೊಲೀಸ್ ಠಾಣೆಗೋ, ಮರುದಿನ ಪಂಚಾಯತ್ ಕಚೇರಿಗೋ ದೂರು ನೀಡುವ ಪರಿಸ್ಥಿತಿ ಮಾಮೂಲಾಗಿದೆ.
ಪಡುಬಿದ್ರಿಯ ಕೆಳಗಿನಪೇಟೆ, ಬೇಂಗ್ರೆ, ಪಾದೆಬೆಟ್ಟು, ಕಡಲ ಕಿನಾರೆ ಮತ್ತು ಅಬ್ಬೇಡಿ ಬೀಡು ಪರಿಸರಕ್ಕೆ ವಾರದಲ್ಲಿ ಮೂರು ದಿನ ಮತ್ತೂ ಮುಂದುವರಿದರೆ ಮರುದಿನವೂ ವಿದ್ಯುತ್ ಕಣ್ಮರೆ ಯಾಗುವುದು ಮಾಮೂಲು ಸಂಗತಿ. ಪಡುಹಿತ್ಲು ಎಂಬಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯೊಂದು ಗದ್ದೆಗೆ ಬಿದ್ದಿದ್ದರೂ, ಈ ಬಗ್ಗೆ ದೂರಿಕೊಂಡರೂ ಪ್ರಯೋಜ ನವಾಗಿಲ್ಲ.
ಯುಪಿಸಿಎಲ್ ದೆಸೆಯಿಂದಾಗಿ ಅವಿಭಜಿತ ಜಿಲ್ಲೆಯಾದ್ಯಂತ ತಡೆರಹಿತ ವಿದ್ಯುತ್ ಸರಬರಾಜಾಗುತ್ತಿದ್ದರೂ ಉತ್ಪಾದ ನೆಯ ಬುಡದಲ್ಲಿರುವ ಪಡುಬಿದ್ರಿ ಶಾಖಾ ಕಚೇರಿಯ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲೇ ವಿದ್ಯುತ್ ವ್ಯತ್ಯಯ ವಾಗುತ್ತಿರುವುದು ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬ ಗಾದೆ ಮಾತಿಗನುಗುಣವಾದಂತಿದೆ. ಪಡುಬಿದ್ರಿಯ ನಗರ ಭಾಗಕ್ಕೆ ಮಾತ್ರ ಅವಿರತ ವಿದ್ಯುತ್ ಸರಬರಾಜಾಗು ವಂತೆ ಇಲಾಖಾ ಮಂದಿ ಗಮನಹರಿಸುತ್ತಿರುವುದೂ ಗ್ರಾಮೀಣ ಭಾಗದ ಬಳಕೆದಾರರ ಆಕ್ರೋಶಕ್ಕೆ ಕಾರಣ ವಾಗಿದೆ. ಪರಿಸ್ಥಿತಿ ಈ ಹಂತ ತಲುಪಿದ್ದಾದರೂ ಇಲ್ಲಿನ ಶಾಖಾಧಿಕಾರಿ(?) ನಾಪತ್ತೆಯಾಗಿರುವುದು ಮೆಸ್ಕಾಂನ ನಿರ್ಲಕ್ಷ್ಯಕ್ಕೆ ಸ್ಪಷ್ಟ ನಿದರ್ಶನವಾಗಿ ಕಾಣುವಂತಿದೆ.
ಮಳೆಗಾಲದ ಮುನ್ನೆಚ್ಚರಿಕೆಯೆಂದು ಪಡುಬಿದ್ರಿ ಮೆಸ್ಕಾಂ ಕಳೆದೆರಡು ದಿನಗಳ ಹಿಂದೆ ಹೈಟೆನ್ಶನ್ ತಂತಿಗಳಿಗೆ ತಾಗಿರುವ ಮರಗಳ ಗೆಲ್ಲುಗಳನ್ನು ಬೇಕಾಬಿಟ್ಟಿಯಾಗಿ ಕಡಿದಿರುವುದೂ ವ್ಯಾಪಕ ಟೀಕೆಗೆ ಎಡೆಮಾಡಿಕೊಟ್ಟಿದೆ. ಖಾಸಗಿ ಕಂಪೌಂಡ್‌ಗಳ ಒಳಹೊಕ್ಕ ಮೆಸ್ಕಾಂ ತಂಡ ಹೂದೋಟದ ಅಲಂಕಾರಿಕ ಮರಗಳನ್ನು, ತೆಂಗಿನ ಮರಗಳನ್ನು ಹಿಂದೆ ಮುಂದೆ ನೋಡದೆ ಕಡಿದುರುಳಿಸಿದ್ದು, ಕಡಿದ ಗೆಲ್ಲು ತಾಗಿ ಕಂಪೌಂಡ್ ದೀಪ, ಕೇಬಲ್ ಟಿವಿ ಸಂಪರ್ಕಗಳೂ ತುಂಡ ರಿಸಲ್ಪಟ್ಟಿವೆ. ಪೊದೆಗಳಿಂದಾವೃತ ದೊಡ್ಡ ಮರಗಳಿರುವ ಕಂಬಗ ಳಾಚೆ ಈ ಮೆಸ್ಕಾಂ ಮಂದಿ ಕಣ್ಣು ಹಾಯಿಸಿರುವಂತಿಲ್ಲ. ಈಗಾ ಗಲೇ ಟ್ರೀ ಕಟ್ಟಿಂಗ್ ದಾಂಧಲೆಯ ಬಗ್ಗೆ ಮೆಸ್ಕಾಂ ಹಿರಿಯ ಅಧಿ ಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ದೂರು ರವಾನೆಯಾಗಿದೆ.
ನಾಗರಿಕರು, ಪಡುಬಿದ್ರಿ
Tagged with
bahiranga
ಕಾರುಗಳಲ್ಲಿ ಟಿಂಟ್ ಗ್ಲಾಸ್ ಅಳ ವಡಿಸುವ ವಿರುದ್ಧ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿರು ವುದು ಸ್ವಾಗತಾರ್ಹ. ಈಗಾಗಲೇ ದೇಶಾದ್ಯಂತ ಕಾರುಗಳ ಟಿಂಟ್ ಗಾಜು ತೆಗೆಯಲು ಎರಡೆರಡು ಗಡುವು ವಿಧಿಸಲಾಗಿದ್ದರೂ ಇನ್ನೂ ಕೆಲವು ಕಡೆ ಕಾರುಗಳು ಟಿಂಟ್ ಗಾಜು ತೆಗೆಯದೆ ರಾಜಾರೋಷವಾಗಿ ಓಡಾಟ ನಡೆಸುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಟಿಂಟ್ ಗಾಜು ತೆಗೆ ಯುವ ಕಾರ್ಯವನ್ನು ಎಲ್ಲೆಡೆ ಸಾರ್ವ ತ್ರಿಕವಾಗಿ ಹಾಗೂ ಕಟ್ಟುನಿಟ್ಟಾಗಿ ನಡೆ ಸಬೇಕು. ದೇಶದ ಸರ್ವೋಚ್ಛ ನ್ಯಾಯಾ ಲಯದ ಆದೇಶವನ್ನು ಗೌರವಿಸಬೇ ಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಹೌದು. ಇದನ್ನು ಜನರೂ ಅರಿತು ಕೊಂಡು ಇಲಾಖೆಯ ಜೊತೆ ಸಹಕ ರಿಸಬೇಕಿದೆ. ಇಮ್ರಾನ್, ಕಬಕ
Tagged with
nimminda
ಬಂಟ್ವಾಳ ತಾಲೂಕಿನ ವಿಟ್ಲದಿಂದ ಹಾದು ಹೋಗುವ ಉಕ್ಕುಡ, ಕೇಪು ಮತ್ತು ಪುಣಚ ರಸ್ತೆ ತೀರಾ ಹದಗೆಟ್ಟಿದ್ದು, ದೊಡ್ಡ-ದೊಡ್ಡ ಹೊಂಡಗಳು ನಿರ್ಮಾಣವಾಗಿ ವಾಹನ ಸಂಚಾರ ಕಷ್ಟಸಾಧ್ಯ ವಾಗಿದೆ. ಅಪಾಯಕಾರಿ ರಸ್ತೆಯಿಂದಾಗಿ ಬಸ್ ಚಾಲಕರು ಮತ್ತು ಇತರ ವಾಹನ ಚಾಲಕರು ಹಾಗೂ ಜನಸಾಮಾನ್ಯರು ಸಂಚಾರಕ್ಕೆ ಹರಸಾಹಸ ಪಡುತ್ತಿದ್ದು ಸ್ಥಳೀಯ ಆಡಳಿತವನ್ನು ಶಪಿಸು ವಂತಾಗಿದೆ. ಮಳೆಗಾಲವಾದ ಕಾರಣ ರಸ್ತೆಯ ಗುಂಡಿಯಲ್ಲಿ ನೀರು ತುಂಬುವ ಕಾರಣ ಸಂಚಾರ ತಲೆನೋವಾಗಿ ಪರಿಣಮಿಸಿದೆ. ಇಲ್ಲಿಯ ನಾಗರಿಕರು ರಸ್ತೆ ದುರಸ್ತಿಯನ್ನು ಮಾಡುವಂತೆ ಆಗ್ರಹಿಸಿ ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ, ಈವರೆಗೆ ಈ ಬಗ್ಗೆ ಯಾವುದೇ ಅಧಿಕಾರಿಗಳು ಸ್ಪಂದಿಸಿಲ್ಲ. ಘನವಾಹನಗಳ ಓಡಾಟದಿಂದ ರಸ್ತೆಯ ಸ್ಥಿತಿ ದಿನೇ ದಿನೇ ಹದಗೆಡು ತ್ತಿದೆ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಗಮನ ನೀಡಬೇಕಾಗಿ ವಿನಂತಿ. ಗ್ರಾಮಸ್ಥರು, ಪುಣಚ
Tagged with
nimminda
ಹೆದ್ದಾರಿಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿರುವುದು ವಾಹನ ಸವಾರರಿಗೆ ಕಂಟಕಪ್ರಾಯ ವಾಗಿದೆ. ಮೂಲ್ಕಿ ಸಮೀಪದ ಕಾರ್ನಾಡು ಬೈಪಾಸ್ ಬಳಿ ಹೆದ್ದಾರಿ ಯಲ್ಲಿ ತಾತ್ಕಾಲಿಕ ತಿರುವು ನಿರ್ಮಿಸಿ ರುವುದು ತೀರಾ ಅಪಾಯಕಾರಿ ಯಾಗಿದೆ. ಇಲ್ಲಿ ಕೆಲವು ದಿನಗಳ ಹಿಂದೆ ಕಾರೊಂದು ಲಾರಿಗೆ ಬಡಿದು ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿತ್ತು. ಅಂದು ಬೆಳಗ್ಗಿ ನಿಂದ ಸಂಜೆಯವರಗೆ ಮತ್ತೆರಡು ಅಪಘಾತಗಳು ಇಲ್ಲಿ ಸಂಭವಿಸಿವೆ. ರಸ್ತೆ ಇಳಿಜಾರಾಗಿದ್ದು, ವೇಗವಾಗಿ ಸಾಗಿಬರುವ ವಾಹನಗಳು ಎದುರಿನ ತಿರುವು ಗಮನಿಸದೆ ಮುಂದಕ್ಕೆ ಸಾಗುವುದರಿಂದ ವಿರುದ್ಧ ದಿಕ್ಕಿನಲ್ಲಿ ಸಾಗಿಬರುವ ವಾಹನಗಳ ಚಾಲಕರು ಗಲಿಬಿಲಿಗೊಂಡು ಅಪಘಾತಕ್ಕೆ ಕಾರಣರಾಗುತ್ತಾರೆ. ಇಲ್ಲಿ ರಸ್ತೆಯನ್ನು ಕೂಡಲೇ ಪೂರ್ತಿಗೊಳಿಸಲು ಸಂಬಂಧಪಟ್ಟ ಗುತ್ತಿಗೆದಾರರು ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
ಅನಿತಾ, ಮೂಲ್ಕಿ
Tagged with
nimminda
ತೊಕ್ಕೊಟ್ಟುವಿನಿಂದ ಕೊಣಾಜೆ ಕಡೆಗೆ ಹೋಗುವ ರಸ್ತೆಯಲ್ಲಿ ಸಂಚಾರ ದಟ್ಟಣೆಯಿದೆ. ಕೆಲವು ವರ್ಷಗಳ ಹಿಂದೆ ಈ ರಸ್ತೆಯಲ್ಲಿ ಬಸ್‌ಗಳ ಸಂಖ್ಯೆ ಕಡಿಮೆಯಿತ್ತು. ಈಗ ಬಸ್‌ಗಳ ಸಂಖ್ಯೆ ಹೆಚ್ಚಿದೆ. ಜೊತೆಗೆ ಜನಸಂಖ್ಯೆ ಮತ್ತು ಲಘುವಾಹನಗಳ ಸಂಚಾರವೂ ದಟ್ಟವಾಗಿದೆ. ಇದರಿಂದ ಈ ರಸ್ತೆಯಲ್ಲಿ ಈಗ ಸಂಚರಿಸುವುದೇ ದುಸ್ತರವಾಗಿದೆ. ಎದುರಿನಲ್ಲಿ ಸಂಚರಿಸುವ ವಾಹನವನ್ನು ಓವರ್‌ಟೇಕ್ ಮಾಡಿ ಮುಂದಕ್ಕೆ ಹೋಗಲು ಸಾಕಷ್ಟು ಜಾಗವಿಲ್ಲ. ನಿಧಾನಗತಿ ಯಲ್ಲಿ ಓಡಾಡುವ ಲಾರಿಗಳನ್ನು ಓವರ್‌ಟೇಕ್ ಮಾಡಿ ಮುಂದೆ ಹೋಗಲು ಹಿಂಬದಿಯಲ್ಲಿನ ಲಘುವಾಹನ ಚಾಲಕರಿಗೆ ತುಂಬಾ ತೊಂದರೆಯಾಗು ತ್ತದೆ. ಈ ರಸ್ತೆಯು ಮಂಗಳೂರು ವಿಶ್ವವಿದ್ಯಾನಿಲಯ, ಪ್ರತಿಷ್ಠಿತ ಐಟಿ ಕಂಪೆ ನಿಯೂ ಸೇರಿದಂತೆ ಪ್ರತಿಷ್ಠಿತ ಆಸ್ಪತ್ರೆಗಳನ್ನು ಸಂಪರ್ಕಿಸುತ್ತದೆ. ಆದರೆ ಸಂಬಂಧಪಟ್ಟವರಿಗೆ ಮಾತ್ರ ಈವರೆಗೆ ಇಲ್ಲಿನ ರಸ್ತೆಯ ಅವ್ಯವಸ್ಥೆ ಕಣ್ಣಿಗೆ ಬಿದ್ದಂತೆ ಕಾಣುತ್ತಿಲ್ಲ. ಈ ರಸ್ತೆಯ ಮೂಲಕವೇ ಇನ್ಫೋಸಿಸ್, ಎರಡು ಪ್ರತಿ ಷ್ಠಿತ ಆಸ್ಪತ್ರೆಗಳ ಬಸ್‌ಗಳು ಸಂಚರಿಸಿದರೂ ರಸ್ತೆಯ ಸಮಸ್ಯೆಯ ಬಗ್ಗೆ ಯಾರೊ ಬ್ಬರೂ ತಲೆಕೆಡಿಸುತ್ತಿಲ್ಲ. ವರ್ಷಗಳು ಉರುಳಿ ಹೋದರೂ ಸಂದರ್ಭಕ್ಕೆ ತಕ್ಕಂತೆ ಮೂಲ ಸೌಕರ್ಯಗಳ ವ್ಯವಸ್ಥೆಯಾಗುತ್ತಿಲ್ಲ. ಈ ರಸ್ತೆ ಅಗಲೀಕರಣದ ತುರ್ತು ಅವಶ್ಯಕತೆ ಇದೆ. ಸಂಬಂಧಪಟ್ಟವರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮತ್ತು ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಅರಿತು ಇಲ್ಲಿನ ರಸ್ತೆಯನ್ನು ಆದಷ್ಟು ಬೇಗ ಅಗಲೀಕರಣ ಮಾಡಿ ಸುಸಜ್ಜಿತ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ. ಬಶೀರ್, ತೊಕ್ಕೊಟ್ಟು
Tagged with
nimminda
ಹೆಣ್ಮಕ್ಕಳ ಬಾಳಿನ ಜೊತೆ ಚೆಲ್ಲಾಟವಾಡುತ್ತಾ ದೇವಮಾನವನಂತೆ ವರ್ತಿಸುತ್ತಿರುವ ವಿಕೃತಕಾಮಿ ನಿತ್ಯಾನಂದನನ್ನು ರಾಜ್ಯದಿಂದಲೇ ಗಡಿಪಾರು ಮಾಡ ಬೇಕು. ಖಾಸಗಿ ಸುದ್ದಿವಾಹಿನಿಯ ಪತ್ರಕರ್ತನ ಮೇಲೆ ಗೂಂಡಾಗಿರಿ ತೋರಿಸಿರುವ ಈ ಸ್ವಾಮಿಯ ಭಕ್ತ ರನ್ನು ಕೇಸ್ ಹಾಕಿ ಜೈಲಿಗಟ್ಟಬೇಕು. ಇಡೀ ರಾಜ್ಯದಲ್ಲಿ ನಿತ್ಯಾನಂದನ ಕಾನೂನು ಬಾಹಿರ ಮತ್ತು ಧರ್ಮಬಾಹಿರ ಕೃತ್ಯಗಳ ಬಗ್ಗೆ ಟೀಕೆ ವ್ಯಕ್ತ ವಾಗುತ್ತಿದ್ದರೂ ಮುಖ್ಯಮಂತ್ರಿ ಯವರು ಪ್ರತಿಕ್ರಿಯೆ ನೀಡದೆ ರಾಜಕೀಯದಲ್ಲೇ ತಲ್ಲೀಣರಾ ಗಿರುವುದು ವಿಪರ್ಯಾಸವೇ ಸರಿ. ಎಲ್ಲಿಂದಲೋ ಬಂದು ರಾಜ್ಯದ ಭೂಮಿಯನ್ನು ಸ್ವಾಧೀನಪಡಿಸಿ ನೆಲೆಸಿರುವ ಇಂಥ ಕಾಮುಕ ಸ್ವಾಮಿಯನ್ನು ಸುಮ್ಮನೆ ಬಿಟ್ಟರೆ ನಾಳೆ ಇಡೀ ಸಮಾಜಕ್ಕೆ ಕಂಟಕ ತಪ್ಪಿದ್ದಲ್ಲ. ಚಿತ್ರನಟಿ ರಂಜಿತಾ ರಾಸಲೀಲೆಯ ನಂತರ ಇದೀಗ ಆರತಿ ರಾವ್ ಎನ್ನುವ ಮತ್ತೋರ್ವ ಮಹಿಳೆಯ ಜೊತೆಗಿನ ರಾಸಲೀಲೆಯೂ ಬಯಲಾಗಿದೆ. ಈತ ತನ್ನ ಆಶ್ರಮದಲ್ಲಿ ಇರಿಸಿಕೊ ಂಡಿರುವ ಯಾವೊಬ್ಬ ಹೆಣ್ಮಗಳನ್ನೂ ಸುಮ್ಮನೆ ಬಿಟ್ಟಿರ ಲಿಕ್ಕಿಲ್ಲ. ಕಾಮವನ್ನೇ ಉಸಿರಾಡುವ ಇಂಥ ಸ್ವಾಮಿ ಯನ್ನು ಜನರೇ ಒಂದಾಗಿ ಒದ್ದೋಡಿಸಬೇಕು. ಮಾನವ ಕುಲಕ್ಕೆ ವಿರೋಧಿಯಾಗಿರುವ ಈತನ ಆಶ್ರಮವನ್ನು ಸರಕಾರ ಸ್ವಾಧೀನಕ್ಕೆ ಪಡೆದು ಬೀಗ ಜಡಿದರೆ ಮಾತ್ರ ಸಮಾಜದ ಅಲ್ಲಲ್ಲಿ ಆಶ್ರಮ, ಮಠ ನಿರ್ಮಿಸಿ ತಂಗಿರುವ ಇಂಥ ಹೆಣ್ಣುಬಾಕ ಸ್ವಾಮಿಗಳಿಗೆ ಬುದ್ಧಿ ಬಂದೀತು.
ಶೇಖರ್ ಸುವರ್ಣ, ಕಟಪಾಡಿ
Tagged with
nimminda
ನಿತ್ಯಾನಂದನ ಪುರಾಣ ಮತ್ತೆ ತೆರೆದು ಕೊಂಡಿದೆ. ಮಾಧ್ಯಮಗಳಲ್ಲಿ ಮತ್ತೆ ಸುದ್ದಿಯ ಪ್ರಮುಖ ವಸ್ತುವಾಗುವ ಮೂಲಕ ನಿತ್ಯಾ ನಂದ ಸುದ್ದಿಯಲ್ಲಿದ್ದಾನೆ. ಈತ ಕಾಮಿಸ್ವಾಮಿ ಎನ್ನುವುದು ಬಹುತೇಕರಿಗೆ ಗೊತ್ತಿರುವ ಸತ್ಯ. ಹೀಗಿದ್ದರೂ ಧರ್ಮರಕ್ಷಕ ಎನಿಸಿಕೊಂಡಿರುವ ಶ್ರೀರಾಮ ಸೇನೆಯ ಮುತಾಲಿಕ್ ಈತನನ್ನು ಬೆಂಬಲಿಸಿದ್ದು ಎಷ್ಟು ಸರಿ ಎನ್ನುವುದೇ ಈಗಿ ರುವ ಪ್ರಶ್ನೆ.
ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆ ದಾಗ ಪಬ್ ದಾಳಿಯಂತಹ ಕೃತ್ಯಗಳಿಗೆ ಇಳಿ ಯುವ ಇವರಿಗೆ ನಿತ್ಯಾನ ಕಾಮ ಪುರಾಣಕ್ಕೆ ಇನ್ನೆಷ್ಟು ಸಾಕ್ಷಿಗಳು ಬೇಕು? ಖಾಸಗಿ ವಾಹಿನಿ ಯಲ್ಲಿ ಮೊನ್ನೆ ಮುತಾಲಿಕ್‌ರ ಹೇಳಿಕೆಗಳನ್ನು ನಾನೂ ಗಮನಿಸಿದ್ದೇನೆ. ಈ ವೇಳೆ ಇವರು ನಿತ್ಯಾನಂದ ತಪ್ಪತಸ್ಥನಾಗಿಲ್ಲ. ಈಗಲೇ ಆತನ ಮೇಲೆ ಕ್ರಮ ಕೈಗೊಳ್ಳುವುದು ಯಾಕೆ ಅನ್ನುವ ರೀತಿಯಲ್ಲಿ ಆತನನ್ನು ಬೆಂಬಲಿಸಿದ್ದರು. ಹಾಗಾ ದರೆ ಶ್ರೀರಾಮ ಸೇನೆ ಹೆಣ್ಣು ಮಕ್ಕಳ ರಕ್ಷಣೆ ಎಂದು ಬೊಬ್ಬಿಡುವುದು ಯಾವ ಪುರು ಷಾರ್ಥಕ್ಕೆ? ಖಾಸಗಿ ವಾಹಿನಿಯಲ್ಲಿ ಹೆಣ್ಣೊ ಬ್ಬಳು ನೇರವಾಗಿ ತನ್ನ ಸಮಸ್ಯೆ ಹೇಳಿಕೊಂ ಡಾಗ ಆಕೆಗೆ ಸ್ಪಂದಿಸುವ ಬದಲು ಶ್ರೀರಾಮ ಸೇನೆ ಕಾಮಿ ಸ್ವಾಮಿಯನ್ನು ಸಮರ್ಥಿಸು ವುದು ಎಷ್ಟು ಸರಿ? ಆಕೆಯ ಮಾತು ಎಷ್ಟು ಸತ್ಯ, ಸುಳ್ಳು ಎನ್ನುವುದು ಮುಂದಿನ ವಿಚಾರ. ಆದರೆ ಮಹಿಳೆಯೊಬ್ಬಳ ಸಮಸ್ಯೆಗೆ ಸ್ಪಂದಿ ಸುವ ಕಿಂಚಿತ್ತು ಮಾನವೀಯತೆಯೂ ಇರ ದಿರುವ ಶ್ರೀರಾಮ ಸೇನೆ ಸಂಸ್ಕೃತಿ ರಕ್ಷಣೆಯ ಹೆಸರೇಳಿಕೊಂಡು ತಿರುಗುವುದೇಕೆ? ಮಾಧ್ಯ ಮಗಳ ಮೇಲೆ ಉರಿದು ಬೀಳುವ ಮುತಾ ಲಿಕ್‌ರಂತಹ ಕಪಟ ಹಿಂದೂ ನಾಯಕರು ಇನ್ನಾದರೂ ನೈಜ ಉದ್ದೇಶಗಳ ಈಡೇರಿ ಕೆಗಾಗಿ ಹೋರಾಟ ನಡೆಸಲಿ.
ಸಿನಿಮಾಗಳಲ್ಲಿ ನಡೆಯುವ ಧರ್ಮದ ಮೇಲಿನ ದಾಳಿಯನ್ನು ವಿರೋಧಿಸುವ ನಿಮ್ಮಿಂದ ಹಿಂದುತ್ವದ ಮೇಲೆ ಸವಾರಿ ಮಾಡುವ ಇಂತಹ ಕಳ್ಳ ಸ್ವಾಮಿಗಳನ್ನು ವಿರೋಧಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಬಜರಂಗದಳದಂತಹ ಹಿಂದೂ ಸಂಘಟ ನೆಗಳು ಈ ವಿಚಾರವಾಗಿ ಸುಮ್ಮನಿಸುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇನ್ನಾ ದರೂ ನಮ್ಮ ಹಿಂದೂ ರಕ್ಷಕರೆನಿಸಿಕೊಂಡ ಸಂಘಟನೆಗಳು ಈ ಬಗ್ಗೆ ಗಮನ ಹರಿಸಲಿ.
ಸಂಕೇತ್ ನಾಯಕ್, ಕಂಕನಾಡಿ
Tagged with
nimminda
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ವಿವಾಹಿತ ಯುವತಿ. ನನ್ನ ಮದುವೆಯಾಗಿ ಮೂರು ತಿಂಗಳಾಯಿತು. ನಾನು ಮದುವೆಗೆ ಮೊದಲು ಸ್ಕೂಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದೆ. ಮದುವೆಯ ನಂತರ ಎರಡು ತಿಂಗಳು ರಜೆ ಮಾಡಿದ್ದು, ಈಗ ಮತ್ತೆ ಕೆಲಸಕ್ಕೆ ಹೋಗುತ್ತೇನೆ. ನನ್ನ ಪತಿ ಕಂಪೆನಿಯೊಂದರ ಸೇಲ್ಸ್ ಮೆನೇಜರ್ ಆಗಿದ್ದು, ಬೇರೆ ಬೇರೆ ಊರಿಗೆ ಹೋಗುತ್ತಿರುತ್ತಾರೆ. ನಾವು ಸದ್ಯಕ್ಕೆ ಮಗು ಬೇಡ ಎಂದು ನಿರ್ಧಸಿದ್ದೇವೆ. ನಾನು ದಿನಾ ಬಸ್‌ನಲ್ಲೇ ಕೆಲಸಕ್ಕೆ ಹೋಗುತ್ತೇನೆ. ಕೆಲಸಕ್ಕೆ ತೆರಳುವ ವೇಳೆ ಮಧ್ಯ ವಯಸ್ಕ ವ್ಯಕ್ತಿಯೋರ್ವ ನನ್ನನ್ನು ನೋಡುತ್ತಿರುತ್ತಾನೆ. ಕೆಲವೊಮ್ಮೆ ಆತ ನನ್ನನ್ನು ಕೆಲಸ ಮುಗಿಸಿ ಬರುವಾಗ ಹಿಂಬಾಲಿಸಿ ಬರುವುದು, ಬೇಕೆಂದೇ ಪರಿಚಿತನಂತೆ ನಗುವುದೂ ಮಾಡುತ್ತಾನೆ. ಎರಡು ಬಾರಿ ನನ್ನ ಮೊಬೈಲ್ ನಂಬ್ರವನ್ನೂ ಕೇಳಿ ದ್ದಾನೆ. ಆದರೆ ನಾನು ನೀಡಿರಲಿಲ್ಲ. ನಾನು ಆತನನ್ನು ಅನೇಕ ಬಾರಿ ದುರುಗುಟ್ಟಿ ನೋಡಿ ಬೈದಿದ್ದೇನೆ. ಆದರೆ ಆತ ತನ್ನ ಹಳೆಯ ಚಾಳಿ ಯನ್ನು ಬಿಟ್ಟಿಲ್ಲ. ನಾನು ಹಿಂದೆಯೂ ಜೀನ್ಸ್‌ಪ್ಯಾಂಟ್, ಟಿ-ಶರ್ಟ್ ಹಾಕುತ್ತಿದ್ದು ಈಗಲೂ ಅದನ್ನೇ ಹಾಕುತ್ತಿದ್ದೇನೆ. ಇದು ತಪ್ಪೇ? ನನ್ನ ಗೆಳತಿಯೊಬ್ಬರು ನನ್ನ ಉಡುಗೆಯನ್ನು ಬದಲಾಯಿಸಲು ಸೂಚನೆ ನೀಡಿದ್ದಾರೆ. ಆದರೆ ನನಗೆ ಇದು ಕಂಫರ್ಟ್ ಆಗಿರುವ ಕಾರಣ ನಾನು ಅದನ್ನು ಒಪ್ಪಿಲ್ಲ. ಮದುವೆಯಾದ ಮೇಲೆ ತೊಡುವ ಬಟ್ಟೆ ಯನ್ನು ಬದಲಾಯಿಸುವ ಅಗತ್ಯವಿದೆಯೇ? ನನಗೆ ಆತನಿಗೆ ಹೇಗೆ ಬುದ್ಧಿ ಕಲಿಸುವುದೆಂದೇ ತಿಳಿಯದಾಗಿದೆ. ನಾನು ನನ್ನ ಗಂಡನ ಹೊರತು ಬೇರೆ ಯಾರನ್ನೂ ಆ ದೃಷ್ಟಿಯಿಂದ ನೋಡಿಲ್ಲ. ಆತನ ನೋಟ ನನಗೆ ತೀರಾ ಅಸಹ್ಯವಾಗುತ್ತದೆ. ಹೆಣ್ಮಕ್ಕಳನ್ನು ಎಂದೂ ಕಣ್ಣಲ್ಲಿ ಕಂಡಿರದ ಹಾಗೆ ವರ್ತಿಸುತ್ತಾನೆ. ನನಗೆ ಏನು ಮಾಡಬೇಕೆಂದೇ ತೋಚು ತ್ತಿಲ್ಲ. ಸರ್, ನಾನು ಜಯಕಿರಣ ಪತ್ರಿಕೆ ನಿತ್ಯ ಓದುತ್ತೇನೆ. ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನೀವು ನವವಿವಾಹಿತ ಯುವತಿ. ಅದರಲ್ಲೂ ಕೆಲಸಕ್ಕೆ ಹೋಗುವ ೩೦ಕ್ಕಿಂತ ಕೆಳಗಿನ ವಯಸ್ಸಿನ ಯುವತಿಯರಲ್ಲಿ ನಿಮಗೆ ಉಂಟಾಗಿರುವಂಥ ಸಮಸ್ಯೆ ಸಾಮಾನ್ಯವಾಗಿ ಎದುರಾಗುತ್ತದೆ. ನಿತ್ಯ ಸಂಚಾರ ನಡೆಸುವ ಬಸ್‌ನಲ್ಲೋ, ರಸ್ತೆಯಲ್ಲೋ ಕಾಮುಕರ ಕಣ್ಣುಗಳು ನಿಮ್ಮ ಮೇಲೆ ಬೀಳುತ್ತಿವೆ ಎಂದು ತಿಳಿದಾಗ ವಿಚಲಿತರಾಗುವುದು ಸಹಜ. ಇದನ್ನು ಯಾರೂ ನಿಮ್ಮಂತೆ ಬಾಯ್ಬಿಟ್ಟು ಹೇಳುವುದಿಲ್ಲ. ನೀವು ಈಗಲೇ ಈ ವಿಷಯದಲ್ಲಿ ಜಾಗ್ರತೆ ವಹಿಸದಿದ್ದರೆ ಮುಂದೆ ಅಪಾಯ ಎದುರಾಗು ತ್ತದೆ. ತೊಡುವ ಉಡುಗೆ ಸಭ್ಯವಾಗಿರಬೇಕಾದ್ದು ಇಂದಿನ ಸಮಾಜದಲ್ಲಿ ಅತ್ಯಗತ್ಯ. ಯಾಕೆಂದರೆ ನಾವು ತೊಡುವ ಬಟ್ಟೆ ಅಸಭ್ಯವಾಗಿದ್ದರೆ ಸಾರ್ವ ಜನಿಕರ ಕಣ್ಣು, ನಮ್ಮ ಮೇಲೆ ಬಿದ್ದೇ ಬೀಳುತ್ತದೆ. ಪ್ಯಾಂಟ್, ಶರ್ಟ್, ಟಿ-ಶರ್ಟ್ ಅಥವಾ ಇನ್ನಿತರ ಫ್ಯಾಶನೇಬಲ್ ಬಟ್ಟೆ ಹಾಕುವುದು ತಪ್ಪಲ್ಲ. ಆದರೆ ಅದು ಆದಷ್ಟು ಸಭ್ಯವಾಗಿರಲಿ. ಶರ್ಟ್ ಅಥವಾ ಟಾಪ್ ಮೇಲೆ ಧರಿಸುವ ಮಫ್ಲರ್‌ಗಳು ಮಾರುಕಟ್ಟೆಯಲ್ಲಿ ಬೇಕಾದಷ್ಟು ಸಿಗುತ್ತವೆ. ನಿಮ್ಮ ಸಮಸ್ಯೆಯ ಬಗ್ಗೆ ಕೂಡಲೇ ನಿಮ್ಮ ಮನೆಯವರ ಗಮನಕ್ಕೆ ತರುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಸಮಸ್ಯೆಗೆ ಹೆದರದೆ ಪರಿಸ್ಥಿತಿ ಯನ್ನು ಧೈರ್ಯದಿಂದ ಎದುರಿಸಿ, ಸುಮ್ಮನೆ ಬೇಡದ ವಿಷಯದ ಕಡೆಗೆ ಗಮನ ಕೊಡುವುದು ಬೇಡ.
ಆತ ತನ್ನ ಚಾಳಿ ಬಿಡದಿದ್ದರೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರನ್ನು ಕೊಡುವುದು ಒಳ್ಳೆಯದು. ಅವರು ವಿಚಾರಿಸಿಕೊಳ್ಳುತ್ತಾರೆ. ಭಯ ಬೇಡ. ಕೆಲಸಕ್ಕೆ ಹೋಗಿ ಬರುವಾಗ ಎಚ್ಚರದಿಂದಿರಿ. ಇಂದು ನೀವು ಸಮಸ್ಯೆಯನ್ನು ಸಣ್ಣದೆಂದು ನಿರ್ಲಕ್ಷ್ಯ ತಾಳಿದರೆ ನಾಳೆ ಇದೇ ಗಂಭೀರವಾಗಬಹುದು. ಯಾವುದಕ್ಕೂ ಎಚ್ಚರಿಕೆಯಿರಲಿ. ಕೆಲಸ ಮಾಡುವ ಕಡೆ, ಸಾರ್ವಜನಿಕ ಸ್ಥಳಗಳಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿರಿ. ಆಗ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
Tagged with
gupta
ಹಾಯ್ ಮುನ್ನಿ, ಸ್ಸಾರೀ ನಿನ್ನ ಹೆಸರು ಬಿಟ್ಟು ಬೇರೆ ಹೊಸದಾಗಿ ಕರೆದೆ ಎಂದು ಬೇಸರಿಸಬೇಡ.
ನನ್ನ ಗೆಳೆಯರಿಗೆ ಹಾಗೂ ನನ್ನ ಮನೆಯವ ರಿಗೆ ಬಿಟ್ಟು ನನ್ನ ನಿನ್ನ ಪ್ರೀತಿಯ ಕಥೆ ಇನ್ಯಾರಿಗೂ ತಿಳಿದಿಲ್ಲ.
ಅದೆಷ್ಟೋ ವರ್ಷದಿಂದ ನಮ್ಮ ಪ್ರೀತಿಯ ದೋಣಿ ಸಾಗುತ್ತ ಇತ್ತ ದಡ ಸೇರುವ ಸಮಯ ದಲ್ಲಿ ನೀನು ಯಾಕೆ ದೂರಾಗುವೆ ಚಿನ್ನಾ?
ಅದೊಂಥರಾ ಬಡವನಿಗೆ ಬಂದ ಭಾಗ್ಯದಂತೆ. ಆ ನಿನ್ನ ಮುಗ್ಧ ಮುಖದಲ್ಲಿರುವ ತುಂಟ ನಗು ನನ್ನನ್ನು ನಿನ್ನಯ ಹೃದಯದಲ್ಲಿರುವ ಪ್ರೀತಿಯ ವಿಶಾಲ ಜಾಗಕ್ಕೆ ಕರೆದುಕೊಂಡು ಹೋಗಿ ಒಂದೇ ಪ್ರಶ್ನೆಯನ್ನು ಕೇಳಿದಾಗ ಅಲ್ಲಿ ಯಾರೂ ಜೊತೆ ಇಲ್ಲದೆ ನಿನ್ನ ಜೊತೆಯನ್ನು ಬಯಸಿ ನಿಜವಾದ ಪ್ರೀತಿಯನ್ನು ಪಡೆದೆ. ಈಗ ಅನಿಸುತ್ತದೆ. ನಾನೆಂಥ ಭಾಗ್ಯವಂತ ಎಂದು. ಏಕೆಂದರೆ ನನ್ನ - ನಿನ್ನ ಅಂತರವೂ ಅದೆಷ್ಟೋ ದೂರವಿದ್ದರೂ ಕೇವಲ ಪ್ರೀತಿ ಎಂಬ ಎರಡಕ್ಷರದಿಂದ ಅದು ಹೇಗೆ ಜೊತೆ ಯಾಗಿ ತರುತ್ತಿದೆ. ಈಗ ನನಗೆ ದಿಕ್ಕು ಇಲ್ಲ.
ಒಂದು ಪ್ರಶಾಂತವಾದ ಜಾಗದಲ್ಲಿ ಒಬ್ಬಳು ಕುಳಿತು ಕಾದಂತೆ ನಾನಲ್ಲಿಗೆ ಹೋಗದೇ ಇದ್ದಾಗ ಅವಳೇ ಎದ್ದು ಬಂದು ಎದುರು ನಿಂತಂತೆ. ಅವಳ ಆ ಸುಂದರವಾದ ನಗುವಿನ ಜೊತೆಗೆ ಬೇರೆ ಯಾವ ಲೋಕಕ್ಕೋ ಕರೆದೊಯ್ದಂತೆ. ನೀನೇ ಬಂದು ಬಡಿದೆಬ್ಬಿಸಿದಂತೆ.
ನಿನ್ನ ಬಗ್ಗೆ ಯಾವ ರೀತಿ ಬರೆದರೂ ಕಡಿ ಮೆಯೇ. ಏಕೆಂದರೆ ಒಂದು ರೈಲು ಹಳಿ ತಪ್ಪಿ ಹೋಗಲು ಮುಂದಾದಾಗ ಏನನ್ನೋ ಆಧಾರವಾಗಿ ಕೊಟ್ಟು ಸರಿದಾರಿಯಲ್ಲಿ ತರುತ್ತಾರೆ. ಹಾಗೆ ಎಲ್ಲೋ ಹೊರಟ ನನ್ನ ಜೀವನ ದಾರಿಯನ್ನು ಬದಲಾಯಿಸಿ ಬದುಕು ಎಂಬ ಹೊಸ ದಾರಿಯನ್ನು ತೋರಿಸಿ ಆಸೆಗಳನ್ನು ಚಿಗುರಿಸಿದವಳು ನೀನೇ ತಾನೇ?
ಅದೆಷ್ಟೋ ದುಃಖಗಳೆಲ್ಲ ಸಾಲು ಸಾಲಾಗಿ ಬಂದು ನಿಂತಾಗ ಇವೆಲ್ಲ ತ್ಯಜಿಸಿ ದಾರಿ ಕಾಣದೆ ಊರಿಗೆ ಹೋಗೋಣ ಎಂದು ಹೊರಟಾಗ ನಿನ್ನ ಪ್ರೀತಿಯ ನೆನಪುಗಳು ನನ್ನನ್ನು ಹಗ್ಗವಿಲ್ಲದೆ ಕಟ್ಟಿ ಹಾಕುತ್ತಿದೆ. ಮುನ್ನಿ ಅಂದೇನೋ ಕೆಟ್ಟ ಗಳಿಗೆಯಲ್ಲಿ ಜೀವನದ ಅಮೂಲ್ಯ ಸೊತ್ತನ್ನು ಕಳೆದುಕೊಂಡು ನಾನು ಎಲ್ಲೋ ದಾರಿ ಸಿಕ್ಕ ಊರಿಗೆ ಪ್ರಯಾಣ ವನ್ನು ಮಾಡುವಾಗ ಪುನಃ ಅಲ್ಲಿ ಸ್ವಾಗತಿಸಿದೆ.
ನಿನ್ನ ಪ್ರೀತಿಯ ಮಾತು ಮತ್ತು ಮುದ್ದಾದ ನಗು ಮರೆಯಲಾರೆ ಚಿನ್ನ. ನಾ. ನಿನ್ನ ನೆನಪಿಸಿಕೊಂಡು ಅಂದು ನಿನ್ನ ನೋಡಲೇಬೇಕೆಂಬ ಹಠದಿಂದ ನಿಮ್ಮ ಮನೆಯ ಕಡೆಗೆ ಬರುತ್ತಿದ್ದೆ. ಅಲ್ಲಿನ ಊರಲ್ಲಿದ್ದ ನಿನ್ನ ನಗು ಮುಖ ಕಂಡು ನಾನೊಬ್ಬನೇ ಹುಚ್ಚ ನಂತೆ ಕುಣಿಯುತ್ತಿದ್ದೆ. ನೀನು ನನಗೆ ಕೊನೆಗೂ ಮುತ್ತಿಟ್ಟ ಆ ದಿನವನ್ನು ನನ್ನ ಜೀವನ ಪೂರ್ತಿ ಮರೆಯಲಾರೆ. ನನ್ನ ಜೀವನದ ತುಂಬಾ ಸಂತಸದ ದಿನವೆಂದರೆ ಅದು ಮಾತ್ರ ಕಣೇ!
ನನ್ನ ನಿನ್ನ ನಡುವೆ ಇರುವ ಗಾಢವಾದ ಪ್ರೀತಿಯ ಕತೆ ಎಲ್ಲರಿಗೂ ತಿಳಿಯಲು ಕಾರಣ ನಾನೇ ಆಗಿದ್ದರೂ ನಿನ್ನ ಒಪ್ಪಿಗೆಯೊಂದೇ ಸಾಕು ನನಗೆ. ನನ್ನ ಬಾಳ ಸಂಗಾತಿಯಾಗಿ ಬರಲು ನಿನಗೆ ಆಸೆ ಇದ್ರೆ ಕೂಡಲೇ ನನಗೆ ಫೋನ್ ಮಾಡಿ ತಿಳಿಸು. ಅಲ್ಲಿಯ ತನಕ ನಿನಗೆಂದು ಈ ಪ್ರಾಣ ಬೇಕಾದರೂ ಕೊಡಬಲ್ಲೆ ಎಂಬ ಭರವಸೆಯೊಂದೇ ಈ ಜೀವದ್ದು. ಒಂದು ಮಾತ್ರ ನೆನಪಿಟ್ಟುಕೋ, ಈ ನನ್ನ ಜೀವನದಲ್ಲಿ ಮದುವೆ ಆದ್ರೆ ಅದು ನಿನ್ನೊಂದಿಗೆ ಮಾತ್ರ. ಖಂಡಿತ ವಾಗಿ ಬೇರೆಯವರೊಂದಿಗೆ ಅಲ್ಲ. ನಿನ್ನ ಸುಖ ಸಂತೋಷಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧ.
ಇಂತೀ ನಿನ್ನ ಪ್ರೀತಿಯ...
ಎಲ್‌ಕೆ
Tagged with
premakirana
ಮೇ ೩೧ರ ಜಯಕಿರಣ ಬಹಿರಂಗ ಪತ್ರ ವಿಭಾಗದಲ್ಲಿ ಧನು ಎಂಬವರು ಓ ಕನ್ನಡಿಗರೇ, ಕಟುಕರಿಂದ ಕನ್ನಡ ನಾಡನ್ನು ರಕ್ಷಿಸಿ ಎಂದು ಕರೆ ಕೊಟ್ಟಿದ್ದಾರೆ. ಇಂದಿನ ದಿನಗಳಲ್ಲಿ ಭಾಷೆಯ ಬೆಳವಣಿಗೆಯಲ್ಲಿ ಟಿವಿ ಚಾನೆಲ್‌ಗಳು ಬಹ ಳಷ್ಟು ಪ್ರಭಾವವನ್ನು ಬೀರುತ್ತದೆ. ಟಿವಿಯಲ್ಲಿ ಪ್ರಸಾರವಾಗುವ ಸಿನಿಮಾ, ಧಾರವಾಹಿ ಮತ್ತಿತರ ಕಾರ್ಯಕ್ರಮಗಳಿಂದ ಒಂದು ಭಾಷೆಯನ್ನು ಕಲಿಯಲು ಸಾಧ್ಯವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ವಾಹಿನಿಗಳೇ ಕನ್ನಡದ ಕೊಲೆ ಮಾಡಲು ಮಚ್ಚು ಹಿಡಿದು ಬೀಸುತ್ತಿರುವುದು ಕಂಡು ಬರುತ್ತಿದೆ. ಅಚ್ಚ ಕನ್ನಡದ ಖಾಸಗಿ ದೂರದರ್ಶನ ವಾಹಿನಿ ಯಾವುದಿದೆ?
ನಾವು ವಿದ್ಯಾರ್ಥಿಗಳಾಗಿರುವಾಗ ದೂರದರ್ಶನ, ಚಂದನ ಮತ್ತು ಆಕಾಶವಾಣಿ ಮಂಗಳೂರು, ಬೆಂಗಳೂರು, ಡೆಲ್ಲಿ ಇದನ್ನು ಮಾಹಿತಿ ಪಡೆದು ಕೊಳ್ಳುವುದಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದೆವು. ವಾರ್ತಾ ಪ್ರಸಾರಗಳಲ್ಲಿ ಬರು ತ್ತಿರುವ ವಿಷಯಗಳನ್ನು ಗಮನವಿಟ್ಟು ಕೇಳಿ ನಮ್ಮ ದೇಶದ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದೆವು. ಕನ್ಯಾಕುಮಾರಿಯಿಂದ ಹಿಮಾಲಯದವರೆಗಿನ ವಿವರ. ಜನರ ಪರಿಸ್ಥಿತಿ ಇದೆಲ್ಲವೂ ತಿಳಿದು ಬರುತ್ತಿತ್ತು. ನಮ್ಮ ದೇಶದಲ್ಲಿ ಮತ್ತು ರಾಜ್ಯ ದಲ್ಲಿ ಯಾವ ಯಾವ ಇಲಾಖೆಗೆ ಯಾವ ಯಾವ ಮಂತ್ರಿಗಳು ಎಂಬ ವಿಷ ಯಗಳನ್ನು ಸ್ವತಹ ಆಸಕ್ತಿಯಿಂದ ಕೇಳಿ ನೋಟ್ ಮಾಡಿಕೊಂಡು, ನೆನಪಿಟ್ಟು ಕೊಳ್ಳುತ್ತಿದ್ದೆವು. ಇಡೀ ದೇಶದ ರಾಜಕೀಯ, ಸಂಸ್ಕೃತಿ ವಿಚಾರಗಳು ತಿಳಿದು ಕೊಳ್ಳಲು ಸಹಾಯಕವಾಗುತ್ತಿತ್ತು. ದೇಶದಲ್ಲಿ ಎಲ್ಲಾದರೂ ಅನಾಹುತ ನಡೆದರೆ, ಬರ ಅಥವಾ ಪ್ರವಾಹ ಬಂದರೆ ಎಲ್ಲವೂ ತಿಳಿಯುತ್ತಿತ್ತು. ಆಗ ಈಗಿನಂತೆ ೨೪ ಗಂಟೆಗಳ ಕಾಲ ಅರಚುವ ಟಿವಿ ವಾಹಿನಿಗಳು ಇರಲಿಲ್ಲ. ಕೇವಲ ದಿನದ ಅರ್ಧ, ಒಂದು ಗಂಟೆಯಲ್ಲೇ ದೇಶದ ಹೆಚ್ಚಿನ ಎಲ್ಲಾ ಅಗತ್ಯವಾದ ವಿಷಯ ಗಳು ತಿಳಿದು ಬರುತ್ತಿದ್ದವು. ಈ ಮೂಲಕ ನಾವು ಕನ್ನಡ, ಹಿಂದಿ, ಮತ್ತು ಇಂಗ್ಲಿಷ್ ಭಾಷೆಯನ್ನು ಕಲಿತಿದ್ದೆವು.
ಈಗಿನ ಪರಿಸ್ಥಿತಿ ತುಂಬಾ ಬದಲಾಗಿ ಹೋದಂತೆ ಕಂಡು ಬರುತ್ತಿದೆ. ಈಗಿನ ವಿದ್ಯಾರ್ಥಿಗಳು ಟಿವಿ ಚಾನೆಲ್‌ಗಳಿಂದ ಕಲಿಯುವುದಾದರೂ ಏನನ್ನು? ವಾರ್ತೆಗಳು ಮತ್ತು ವಿಶ್ಲೇಷಣೆಗಳು ನಮ್ಮ ರಾಜಕಾರಣಿಗಳನ್ನು ಖಳನಾಯಕ ರನ್ನಾಗಿ ತೋರಿಸುತ್ತಿವೆ. ಇವರಲ್ಲಿ ಕೆಟ್ಟ ಗುಣಗಳು ಇಲ್ಲವೆಂದು ಹೇಳುವುದಲ್ಲ. ಆದರೆ ಯಾವುದೇ ಒಳ್ಳೆಯ ಗುಣಗಳು ಇಲ್ಲವೇ? ಒಳ್ಳೆಯ ಗುಣಗಳನ್ನು ಗುರುತಿಸುವ ಕೆಲಸವನ್ನಾದರೂ ಮಾಡಬಹುದಲ್ಲವೇ? ಪ್ರಪಂಚದ ನಾಯಕರು ಮತ್ತು ನಮ್ಮ ದೇಶದ ನಾಯಕರು ಮನುಷ್ಯರೇ ಆಗಿರುವುದರಿಂದ ಮಾನವ ಸಹಜವಾದ ಒಳ್ಳೆಯ ಕೆಟ್ಟ ಗುಣಗಳು ಎಲ್ಲರಿಗೂ ಇರುತ್ತದೆ. ಗಾಂಧಿ, ನೆಹರೂ, ಪಟೇಲ್, ಇಂದಿರಾಗಾಂಧಿ ಇವರೆಲ್ಲರಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದವು. ಆದರೂ ಇವರಲ್ಲಿ ರಾಷ್ಟ್ರದ ನಾಯಕರನ್ನು, ಓರ್ವ ಮಾದರಿ ವ್ಯಕ್ತಿಯನ್ನು ಕಾಣುವ ಅವರಲ್ಲಿರುವ ಒಳ್ಳೆಯ ಅಂಶಗಳನ್ನು ವಿದ್ಯಾ ರ್ಥಿಗಳು ಅಳವಡಿಸಿಕೊಳ್ಳು ವಂತಹಾ ಪರಿಸ್ಥಿತಿ ಅಂದು ಇತ್ತು. ಆದರೆ ಇಂದು ನೂರೆಂಟು ವಾಹಿನಿಗಳು ಬಂದು ಜನರಿಗೆ ಮಾಹಿತಿಯ ಮಹಾಪೂರವನ್ನೇ ನೀಡುತ್ತಿದ್ದೇವೆ ಎಂದು ಹೇಳುತ್ತಾ ಜನರ ಮನಸ್ಸಿನಲ್ಲಿ ಗೊಂದಲ ಉಂಟಾಗುವಂತೆ ಮಾಡುತ್ತಿರುವುದು ಕಂಡು ಬರುತ್ತದೆ. ಹೀಗಾದರೆ ನಮಗೆ ಮುಂದಿನ ದಿನಗಳಲ್ಲಿ ನಮ್ಮ ದೇಶದ ಮೇಲೆ ಇರುವ ಭರವಸೆಯೇ ಹೊರಟು ಹೋಗ ಬಹುದು. ಕನ್ನಡ ಖಾಸಗಿ ಚಾನೆಲ್‌ನ್ನು ದಿನಾಲೂ ಬಿಡದೇ ವೀಕ್ಷಿಸಿದರೆ ಅಂತಹಾ ವ್ಯಕ್ತಿ ಕೂಪಮಂಡೂಕ ವ್ಯಕ್ತಿಯಾಗಿ ಹೋಗಬಹುದು. ಕರ್ನಾಟಕ, ಬೆಂಗಳೂರು ಬಿಟ್ಟು ಉಳಿದ ಪ್ರದೇಶಗಳಲ್ಲಿ ಏನು ನಡೆಯುತ್ತಿದೆ? ಏನು ನಡೆದಿದೆ ಎಂದು ಆತನಿಗೆ ತಿಳಿಯದೇ ಹೋಗಬಹುದಾದ ಪರಿಸ್ಥಿತಿ ಇದೆ.
ಸಮಗ್ರವಾಗಿ ದೇಶದ ಆಗು ಹೋಗುಗಳನ್ನು ತಿಳಿಸುವ ಯಾವುದೇ ಖಾಸಗಿ ಟಿವಿ ವಾಹಿನಿಗಳು ಇಲ್ಲವೇ ಇಲ್ಲ. ನಮ್ಮ ಕನ್ನಡದಲ್ಲಿರುವ ಅಷ್ಟೂ ಟಿವಿಗಳೂ ನಮ್ಮ ಬೆಂಗಳೂರಿನ ಪ್ರತಿಷ್ಠಿತ ರಾಜಕಾರಣಿಗಳು ಹಾಸಿಗೆಯಿಂದ ಎದ್ದು ಮುಖತೊಳೆದು, ತಂಡಾಸ್‌ಗೆ ಹೋಗಿ, ಚಾ ಕುಡಿದು, ಮೀಟಿಂಗ್‌ಮಾಡಿ, ಊಟ ಮಾಡಿ, ನಿದ್ದೆ ಮಾಡಿ ಸಂಜೆ ಕಾಫಿ ಕುಡಿದು, ಮುಸ್ಸಂಜೆಯಲ್ಲಿ ಎಲ್ಲೆಲ್ಲಾ ಏನೇನು ಮಾಡಿದರು ಎಂದು ತೋರಿಸುವುದನ್ನು, ಅದನ್ನು ವಿಜೃಂಭಿಸುವುದನ್ನು, ಟೀಕೆ ಮಾಡುವುದನ್ನು, ಗೇಲಿ ಮಾಡುವುದನ್ನು ಎಲ್ಲಾ ತೋರಿಸುತ್ತಿವೆ. ಸಂಜೆಯ ಹೊತ್ತಿಗೆ ನೀತಿ, ನಡತೆ ಗೆಟ್ಟ ದುಡ್ಡು ಕೊಟ್ಟರೆ ನಡುರಸ್ತೆಯಲ್ಲಿ ಬೆತ್ತಲಾಗಲು ಸಿದ್ಧವಾಗಿರುವ ಹೆಣ್ಣು ಗಂಡು ಗಳನ್ನು ಇಂದಿನ ಯುವಜನತೆಗೆ ಮಾದರಿ ವ್ಯಕ್ತಿಗಳಂತೆ ತೋರಿಸುತ್ತಿದೆ. ಈ ರೀತಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುವ ಕೆಲಸವನ್ನು ದುಡ್ಡು ಪಡೆದುಕೊಂಡು ಜನರಿಗೆ ತೋರಿಸಲು ಟಿವಿ ವಾಹಿನಿಗಳಿಗೆ ಯಾವುದೇ ನಾಚಿಕೆಯಾಗುವುದಿಲ್ಲ.
ಖಾಸಗಿ ವಾಹಿನಿಗಳು ಜನರ ಅಭಿರುಚಿಯನ್ನೇ ಕೆಡಿಸಿ ಬಿಟ್ಟಿದೆ. ಇಂದಿಗೂ ರಾಷ್ಟ್ರೀಯ ವಾಹಿನಿ, ಚಂದನ ಮುಂತಾದ ವಾಹಿನಿಗಳು ತಾಜಾವಾಗಿಯೇ ಇವೆ. ಇದರಲ್ಲಿ ಮಾಹಿತಿಯ ಮಹಾಪೂರವೇ ಸಿಗುತ್ತದೆ. ಸಮಗ್ರ ದೇಶದ ಚಿತ್ರಣ ಸಿಗುತ್ತದೆ. ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಬಯಸುವವರು ಥಳುಕು ಬಳುಕಿನ ಮೂಲಕ ಮನಸ್ಸಿಗೆ ವಿಷ ಹಾಕುವ ಚಾನೆಲ್‌ಗಳನ್ನು ಬಹಿಷ್ಕರಿಸಿ ರಾಷ್ಟ್ರೀಯ ವಾಹಿನಿಗಳನ್ನು ಮಕ್ಕಳು ನೋಡುವಂತೆ ಪ್ರೇರೇಪಿಸಬೇಕಾಗಿದೆ. ಜತೆಗೆ ಮಾಹಿತಿ ಕಣಜಗಳಾದ ಡಿಸ್ಕವರಿ, ಎನಿಮಲ್ ಪ್ಲಾನೆಟ್ ಇತ್ಯಾದಿ ಚಾನೆಲ್‌ಗಳನ್ನು ನೋಡುವಂತೆ ಮಾಡಬೇಕಾಗಿದೆ. ಇಂತಹಾ ಚಾನೆಲ್‌ಗಳನ್ನು ಮಾತ್ರ ತಮ್ಮ ಟಿವಿಗ ಳಲ್ಲಿ ಅಳವಡಿಸಿ ಉಳಿದವುಗಳನ್ನು ಲಾಕ್ ಮಾಡುವಂತಹಾ ವ್ಯವಸ್ಥೆ ಬರಬೇಕಾಗಿದೆ.
ಹಾಗಿರುವಾಗ ಧನು ಅವರು ಹೇಳಿದ ಕಟುಕರು ಇಂದಿನ ಪರಿಸ್ಥಿತಿಯಲ್ಲಿ ಬೇರೆ ಯಾರೂ ಅಲ್ಲ. ಖಾಸಗಿ ಟಿವಿ ಚಾನೆಲ್‌ಗಳೇ ಆಗಿವೆ. ಕನ್ನಡ ಭಾಷೆಯ ಅಂದ ವನ್ನೇ ಕುಲಗೆಡಿಸಿದ ಕನ್ನಡದ ಖಾಸಗಿ ಟಿವಿ ವಾಹಿನಿಗಳ ವಿರುದ್ಧ ಕನ್ನಡಿಗರು ಸಂಘಟಿತ ಹೋರಾಟವನ್ನು ಮಾಡಬೇಕಾಗಿದೆ. ಆದರೆ ಟಿವಿಯಲ್ಲಿ ತಮ್ಮ ಮುಖ ಬರಬೇಕು. ತಾನು ಕನ್ನಡಕ್ಕೆ ಜೈ ಹಾಕಿದ್ದು ಟಿವಿಯಲ್ಲಿ ಕಾಣಿಸಬೇಕು ಎಂದು ಬಯ ಸುವ ಹೋರಾಟಗಾರರು, ಕ್ಯಾಮರಾ ಮುಂದೆ ಮಾತ್ರ ಕನ್ನಡಕ್ಕೆ ಜೈಕಾರ ಹಾಕುವ ವರು ಇರುವಾಗ ಇದೆಲ್ಲಾ ಸಾಧ್ಯವೇ? ಅಭಿಪ್ರಾಯಗಳನ್ನು ಜನರಿಗೆ ನಿಷ್ಪಕ್ಷಪಾತ ವಾಗಿ ತಲುಪಿಸಲು ಇರುವ ಶ್ರಾವ್ಯ, ದೃಶ್ಯ, ಮುದ್ರಣ ಮಾಧ್ಯಮಗಳು ತಮಗೆ ಬೇಕಾ ದಂತೆ ಅಭಿಪ್ರಾಯಗಳನ್ನು ರೂಪಿಸಿ ‘ವ್ಯಾಪಾರವನ್ನು ವೃದ್ಧಿಸುತ್ತಿರುವಾಗ ಕನ್ನಡ ನಾಡನ್ನು ರಕ್ಷಿಸುವುದಾದರೂ ಹೇಗೆ?
Tagged with
chavadi
ಕಾರ್ಕಳ: ದೇಶದ ಸುಪ್ರಸಿದ್ದ ಜೈನ ಅತಿಶಯ ಯಾತ್ರಾ ಕ್ಷೇತ್ರಗಳಲ್ಲಿ ಒಂದಾದ ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ನೂತನ ಭಟ್ಟಾರಕರಾದ ದೇವೇಂದ್ರಕೀರ್ತಿ ಸ್ವಾಮೀಜಿಯವರು ಪಟ್ಟಾಭಿಷಿಕ್ತರಾದ ಬಳಿಕ ಪ್ರಥಮ ಬಾರಿಗೆ ಕಾರ್ಕಳಕ್ಕೆ ಪುರಪ್ರವೇಶ ಮಾಡಿದರು.
ಬಾಹುಬಲಿ ಪ್ರವಚನ ಮಂದಿರದ ಧರ್ಮಸ್ಥಳದ ಮಾತೃಶ್ರೀ ರತ್ನಮ್ಮ ವೇದಿಕೆಯಲ್ಲಿ ಸಭಾ ಕಾರ್ಯಕ್ರಮವು ಕಾರ್ಕಳ ಜೈನ ಮಠದ ರಾಜಗುರು ಸ್ವಸ್ತಿ ಶ್ರೀಲಲಿತಾ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ನೆರವೇರಿತು.
ದೇವೇಂದ್ರ ಕೀರ್ತಿ ಭಟ್ಟಾರಕರು ಮಾತನಾಡಿ, ಅಹಿಂಸೆಯನ್ನು ಮನವಚನ ಕಾಯದಲ್ಲಿ ಆಚರಣೆಗೆ ತರಬೇಕು. ಜೈನ ಧರ್ಮ ವೃತ ಉಪವಾಸಕ್ಕೆ ಸೀಮಿತವಾದ ಧರ್ಮವಲ್ಲ. ಆಹಾರ ದಾನ, ಅಭಯ ದಾನ, ಔಷಧ ದಾನ ಮತ್ತು ಶಾಸ್ತ್ರ ದಾನ ಚತುರ್ವಿದದ ದಾನಕ್ಕೆ ಜಗತ್ತಿನ ಇತರ ಧರ್ಮಗಳಿಗಿಂತ ಮುಂಚೂಣಿಯಲ್ಲಿದೆ ಎಂದರು.
Tagged with
briefs
ಬಿಡದಿ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಿತ್ಯಾನಂದ ಸ್ವಾಮಿಯ ಸಹಚರರು ನಡೆಸಿರುವ ಹಲ್ಲೆಯನ್ನು ಖಂಡಿಸಿ ಶನಿವಾರ ತುಳುನಾಡ ರಕ್ಷಣಾ ವೇದಿಕೆಯಿಂದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.
Tagged with
gallery
ಬಿ.ಸಿ.ರೋಡಿನಿಂದ ಕೊಣಾಜೆಗೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಮುಡಿಪು ಸಮೀಪದ ಪುಚ್ಚೆಕಟ್ಟೆ ಎಂಬಲ್ಲಿ ಹಿಂಬದಿ ಭಾರದಿಂದಾಗಿ ಹೆದ್ದಾರಿ ಮಧ್ಯೆ ಮೇಲ್ಮುಖವಾಗಿ ನಿಂತಿತು.
Tagged with
gallery
ತೆರಿಗೆದಾರರ ಮೇಲಿನ ಪ್ರೀತಿಯೋ? ಭಯಾನಕ ಇತಿಹಾಸದ ಭಯವೋ?
ಮುಂಬೈ: ಇತ್ತೀಚಿಗೆ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ವಿಶ್ವದ ದಿಗ್ಗಜ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಈಗ ತನ್ನ ಹುದ್ದೆಗಾಗಿ ಸರಕಾರ ನೀಡಿದ ಬಂಗಲೆಯಲ್ಲಿರಲು ನಿರಾಕರಿಸಿದ್ದಾರೆ. ತೆರಿಗೆದಾರರ ಹಣ ಪೋಲಾಗುವ ಹಿನ್ನೆಲೆಯಿಂದಲೇ ಬಂಗಲೆ ತಿರಸ್ಕರಿಸಿದೆ ಎಂದು ಸಚಿನ್ ಸ್ಪಷ್ಟೀಕರಣ ನೀಡಿದ್ದರೂ, ಬಂಗಲೆ ಹಿನ್ನೆಲೆಯು ಮಾಸ್ಟರ್ ಬ್ಲಾಸ್ಟರ್ ಮೇಲೆ ಪರಿಣಾಮ ಬಿದ್ದಿರಬಹುದೇ ಎಂಬು ದನ್ನು ತಳ್ಳಿಹಾಕುವಂತಿಲ್ಲ.
ಯಾಕೆಂದರೆ ಇದೇ ಬಂಗಲೆ ಯಲ್ಲಿ ಈ ಹಿಂದೆ ವಾಸವಿದ್ದ ಅನೇಕ ರಾಜ್ಯಸಭಾ ಸದಸ್ಯರು ಕಾಕತಾಳಿ ಯವೋ ಎಂಬಂತೆ ಹಲವು ರೀತಿಯ ಅಪಘಾತಕ್ಕೆ ಸಿಲುಕಿ ಮೃತಪಟ್ಟಿದ್ದು, ಇದುವೇ ಸಚಿನ್‌ಗೆ ಭಯ ಹುಟ್ಟಿಸಿ ರಬಹುದೇ ಎಂಬ ಅನುಮಾನ ದಟ್ಟ ವಾಗಿ ಕಾಡಿದೆ. ಈಗ ಸಚಿನ್‌ಗೆ ಕೂಡ ಉಳಿಯಲು ಇದೇ ಬಂಗಲೆ ಸಿಕ್ಕಿದ್ದು, ಆದರೆ ದಿಗ್ಗಜ ಆಟಗಾರ ಸರಕಾರದ ಬಂಗಲೆಯಲ್ಲಿ ಇರಲು ನಿರಾಕರಿಸಿದ್ದಾರೆ. ಆದರೆ ಅವರು ಮಾತ್ರ ಇದಕ್ಕೆ ತನ್ನದೇ ಆದ ಕಾರಣವನ್ನು ನೀಡಿದ್ದಾರೆ.
ದೆಹಲಿಯಲ್ಲಿರುವಾಗ ನನಗೆ ಈ ಬಂಗಲೆಯಲ್ಲಿ ಉಳಿಯುವ ಯಾವುದೇ ಇರಾದೆಯಿಲ್ಲ, ತೆರಿಗೆದಾರರು ಕಷ್ಟಪಟ್ಟು ಸಲ್ಲಿಸುವ ಹಣವನ್ನು ಇದು ಅನಾ ವಶ್ಯಕವಾಗಿ ಪೋಲು ಮಾಡಿದಂ ತಾಗುತ್ತದೆ. ಆ ಕಾರಣ ಇದರ ಅಗತ್ಯ ನನಗೆ ಇಲ್ಲ. ಇದರ ಅಗತ್ಯವಿರುವ ಬೇರೊಬ್ಬನಿಗೆ ಇದನ್ನು ಕೊಡಲಿ. ಆದರೆ ಇದು ನನ್ನ ಜವಾಬ್ದಾರಿಯನ್ನು ಮರೆ ಸುವುದಿಲ್ಲ. ರಾಜ್ಯಸಭಾ ಸದಸ್ಯನಾಗಿ ನನ್ನನ್ನು ಆಯ್ಕೆಮಾಡಿದ್ದಕ್ಕಿಂತ ಬೇರೆ ಗೌರವ ಇಲ್ಲ, ದೆಹಲಿಯಲ್ಲಿದ್ದಾಗ ನಾನು ಹೊಟೇಲ್‌ಲ್ಲಿ ವಾಸವಿರಲು ಬಯಸಿದ್ದೇನೆ. ಪ್ರತಿಯೊಂದು ರಾಜ್ಯಸಭೆಯ ಅಧಿವೇಶನದ ಕೆಲವು ದಿನಗಳನ್ನು ಹಾಜರಾಗುವ ಉದ್ದೇಶ ಹೊಂದಿದ್ದೇನೆ ಎಂದು ಸಚಿನ್ ತಿಳಿಸಿದ್ದಾರೆ. ಜನಸಾಮಾನ್ಯರ ಮೇಲಿನ ಪ್ರೀತಿಯೋ ಅಥವಾ ಭಯಾನಕ ಇತಿಹಾಸದ ಭಯವೋ ಸಚಿನ್ ಸರಕಾರ ಬಂಗಲೆ ನಿರಾಕರಿಸಿರುವುದು ಹಲವರಿಗೆ ಅಚ್ಚರಿ ಮೂಡಿಸಿದ್ದಂತೂ ನಿಜ.
Tagged with
tnews
ದಿಲ್ಶಾನ್-ಪಿರೇರಾ ಜುಗಲ್‌ಬಂಧಿ ಪ್ರದರ್ಶನ
ಪಳ್ಳೆಕೆಲೆ: ತಿಸೇರಾ ಪರೇರಾ ಹಾಗೂ ತಿಲಕರತ್ನೆ ದಿಲ್ಶಾನ್ ಪ್ರದರ್ಶಿಸಿದ ಮಾರಕ ಆಟದ ನೆರವಿನಿಂದ ಇಲ್ಲಿ ಪಾಕಿಸ್ತಾನ ವಿರುದ್ಧ ದ್ವಿತೀಯ ಏಕದಿನ ಪಂದ್ಯವನ್ನು ಲಂಕಾ ೭೬ ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಲಂಕಾ ೧-೧ರ ಸಮಬಲ ಸಾಧಿಸಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಂಕಾ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರ ತಿಲಕರತ್ನೆ ದಿಲ್ಶಾನ್ ೩೯ ಎಸೆತಗಳಲ್ಲಿ ೧೧೯ ರನ್ ಸಿಡಿಸಿದರು. ಇದರಲ್ಲಿ ೧೧ ಬೌಂಡರಿ ಹಾಗೂ ಒಂದು ಸಿಕ್ಸ್ ಒಳಗೊಂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಜಯವರ್ಧನೆ ಅರ್ಧಶತಕ ಸಿಡಿಸಿದರೆ ಅಂತಿಮ ಹಂತದಲ್ಲಿ ತಿಸಾರಾ ಪಿರೇರಾ ಕೇವಲ ೧೪ ಎಸೆತಗಳಲ್ಲಿ ತಲಾ ಎರಡು ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ ಅಜೇಯ ೨೪ ರನ್ ಸಿಡಿಸಿದ ಪರಿಣಾಮ ತಂಡ ನಿಗದಿತ ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೨೮೦ ರನ್ ಗಳಿಸಿದರು. ಪಾಕ್ ಪರ ಹಫೀಸ್ ಒಂದು ವಿಕೆಟ್ ಪಡೆದರು.
ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಪಿರೇರಾ ಬೌಲಿಂಗ್‌ನಲ್ಲಿ ಕೂಡ ಮಿಂಚಿದರು. ತನ್ನ ಹತ್ತು ಓವರ್‌ಗಳ ಸ್ಪೆಲ್‌ನಲ್ಲಿ ೪೪ ರನ್ ನೀಡಿ ಪ್ರಮುಖ ಆರು ವಿಕೆಟ್ ಪಡೆದ ಪರಿಣಾಮ ಪಾಕ್ ಕೇವಲ ೪೬.೨ ಓವರ್‌ಗಳಲ್ಲಿ ೨೦೪ ರನ್ ಗಳಿಸಲಷ್ಟೇ ಶಕ್ತವಾಯಿತು. ಪಿರೇರಾ ಮಾರಕ ಬೌಲಿಂಗ್ ದಾಳಿಗೆ ತಂಡ ತರಗೆಲೆಯಂತೆ ಉದುರಿತು.
ತಂಡದ ಪ್ರಮುಖ ಆಟಗಾರರಾದ ಹಫೀಸ್, ಯೂನಿಸ್ ಖಾನ್ ಹಾಗೂ ಉಮರ್ ಕ್ರೀಸ್‌ನಲ್ಲಿ ನೆಲೆಗೊಳ್ಳಲು ವಿಫಲವಾಗಿದ್ದು, ತಂಡಕ್ಕೆ ದುಬಾರಿಯಾಯಿತು. ಪಾಕ್ ಪರ ಆರಂಭಿಕ ಆಟಗಾರ ಅಜರ್ ಅಲಿ ನಡೆಸಿದ ಏಕಾಂಗಿ ಹೋರಾಟ ವಿಫಲವಾಯಿತು. ಅಲಿ ೧೧೯ ಎಸೆತಗಳಲ್ಲಿ ೯೬ ರನ್‌ಗೆ ನಿರ್ಗಮಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಿಸ್ಬಾ (೨೭) ಹಾಗೂ ಅಹ್ಮದ್ (೨೦) ಕೆಲಹೊತ್ತು ಕ್ರೀಸ್‌ನಲ್ಲಿದ್ದರು.
Tagged with
tnews
ಬ್ಯಾಂಕಾಕ್: ಪ್ರಸಕ್ತ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಭಾರತದ ಅಗ್ರಶ್ರೇಯಾಂಕದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಇಲ್ಲಿ ನಡೆಯುತ್ತಿರುವ ಥೈಲ್ಯಾಂಡ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದು, ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.
ಥೈಲ್ಯಾಂಡ್‌ನ ಪೊರ್ನ್‌ಟಿಪ್ ಬುರನಾ ಪ್ರಸೆರ್‌ಸುಕ್ ವಿರುದ್ಧ ಸೈನಾ ೨೪-೨೨ ಹಾಗೂ ೨೧-೧೧ರ ನೇರ ಅಂತರದಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ಟೂರ್ನಿಯ ಅಂತಿಮ ಘಟ್ಟಕ್ಕೇರಿದ್ದಾರೆ. ಈ ಮೂಲಕ ಪೊರ್ನ್‌ಟಿಪ್ ವಿರುದ್ಧದ ನಾಲ್ಕೂ ಪಂದ್ಯಗಳನ್ನು ಸೈನಾ ಗೆದ್ದುಕೊಂಡಂತಾಗಿದೆ.
ಇನ್ನು ಫೈನಲ್‌ನಲ್ಲಿ ಸೈನಾ ಮತ್ತೊಬ್ಬ ಥೈಲ್ಯಾಂಡ್ ಆಟಗಾರ್ತಿ ರ‍್ಯಾಚ್‌ನೊಕ್ ಇಂಥೆನೊನ್ ವಿರುದ್ಧ ಕಾದಾಡಲಿದ್ದಾರೆ. ರಾಚ್ ನೊಕ್ ಚೀನಾದ ಲಿನ್ ವ್ಯಾಂಗ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ೨೧-೧೩ ಹಾಗೂ ೨೧-೧೯ರ ಅಂತರದಲ್ಲಿ ಗೆಲುವು ಸಾಧಿಸಿದ್ದರು.
Tagged with
tnews
ಬೆಂಗಳೂರು: ಮಾಜಿ ಸಚಿವ ಜನಾದನ ರೆಡ್ಡಿ ಜೈಲು ಸೇರಲು ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ನಾಯ ಕರ ಪಿತೂರಿಯೇ ಕಾರಣ ಎಂದು ಬಿಎಸ್‌ಆರ್ ಪಕ್ಷದ ಅಧ್ಯಕ್ಷ ಹಾಗೂ ಶಾಸಕ ಬಿ.ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.
ಜನಾರ್ದನ ರೆಡ್ಡಿ ತಮ್ಮನ್ನು ಮುಖ್ಯಮಂತ್ರಿಯಾಗಿ ನೋಡಬೇ ಕೆಂಬ ಇಚ್ಛೆ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿ ನಾಯಕರಿಂದ ಪಿತೂರಿ ಆರಂಭವಾಗಿದೆಯಲ್ಲದೆ, ಅವರ ಬಂಧನವಾಯಿತು. ಬಿಜೆಪಿ ಪಕ್ಷದ ಮೇಲೆ ತಾವಿಟ್ಟಿದ್ದ ನಂಬಿಕೆಗೆ ದ್ರೋಹ ಬಗೆದು ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಯಿತು. ಅಕ್ರಮ ಗಣಿಗಾ ರಿಕೆಯಲ್ಲಿ ತಮ್ಮ ಹೆಸರನ್ನು ಲೋಕಾ ಯುಕ್ತ ವರದಿಯಲ್ಲಿ ಪ್ರಸ್ತಾಪವಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ನನ್ನ ರಾಜೀನಾಮೆ ಅಂಗೀಕರಿಸಿದ ಬಳಿಕ ಸಂಪುಟ ಸಭೆಯಲ್ಲಿ ಲೋಕಾಯುಕ್ತ ವರದಿ ಕುರಿತು ಸ್ಪಷ್ಟೀಕರಣ ಕೇಳಿ ವಾಪಾಸು ಕಳುಹಿಸುವ ನಿರ್ಧಾರ ಕೈಗೊಳ್ಳಲಾಯಿತು.
ಬಿಜೆಪಿ ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ಮೇಲೆ ತಾವು ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದೆವು. ಆದರೆ, ಸಂಕಷ್ಟದ ಕಾಲದಲ್ಲಿ ನಮ್ಮ ನೆರವಿಗೆ ಯಾರೂ ಸಹ ಬರಲಿಲ್ಲ. ಇವೆಲ್ಲವನ್ನು ತಮ್ಮ ಪಾದಯಾತ್ರೆ ಸಂದರ್ಭದಲ್ಲಿ ಜನರ ಗಮನಕ್ಕೆ ತಂದಿರುವುದಾಗಿ ತಿಳಿಸಿದರು. ವಿಧಾನಸಭೆ ಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ತಾವು ಮತದಾನ ಮಾಡುವುದಿಲ್ಲ. ಆದರೆ, ತಮ್ಮೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿ ಶಾಸಕರು ಆ ಪಕ್ಷದ ಅಭ್ಯರ್ಥಿಗಳ ಪರ ಮತದಾನ ಮಾಡಲಿದ್ದಾರೆ. ಬಿಜೆಪಿ ನಾಯಕರು ನಂಬಿಕೆದ್ರೋಹ ಮಾಡಿದ ಮಾತ್ರಕ್ಕೆ ನಾವು ವಿಶ್ವಾಸದ್ರೋಹ ಮಾಡಲು ಸಿದ್ಧವಿಲ್ಲ. ಈಗಾಗಲೇ ಈ ಕುರಿತು ತಮ್ಮ ಬೆಂಬಲಿಗ ಶಾಸಕರ ಜತೆ ಚರ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
Tagged with
ramulu,
snews
ಕಾಂಗ್ರೆಸ್ ವ್ಯಂಗ್ಯ
ಮಂಗಳೂರು: ತುಪ್ಪ ಬಳಕೆಯ ಮೂಲಕ ನೈಯ್ಯಪ್ಪ ತಯಾರು ಮಾಡಬೇಕಿದ್ದರೂ ಇತ್ತೀಚೆಗೆ ತುಪ್ಪ ಇಲ್ಲದೆ ಎಣ್ಣೆಯಿಂದ ತಯಾರಾದ ವಸ್ತು ವನ್ನೂ ನೈಯ್ಯಪ್ಪ ಎಂದು ಕರೆಯಲಾ ಗುತ್ತದೆ. ಅದೇ ರೀತಿ ಕೋಮುವಾದಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಜೆಡಿಎಸ್ ಈಗ ಜಾತ್ಯತೀತ ಎಂದು ಹೇಳಿಕೊಳ್ಳುವ ಮೂಲಕ ತುಳುನಾಡಿನ ನೈಯ್ಯಪ್ಪದಂತಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ವ್ಯಂಗ್ಯವಾಡಿದ್ದಾರೆ.
ಗುರುವಾರ ಜೆಡಿಎಸ್ ವಕ್ತಾರ ಎಂ.ಜಿ. ಹೆಗ್ಡೆಯವರು ಕಾಂಗ್ರೆಸ್ ವಿರುದ್ಧ ನಡೆಸಿದ್ದ ಪತ್ರಿಕಾಗೋಷ್ಟಿಗೆ ವಿರುದ್ಧವಾಗಿ ನಿನ್ನೆ ಕಾಂಗ್ರೆಸ್ ಕಚೇರಿ ಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆ ಯಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ರಮಾನಾಥ ರೈ ಹೇಳಿಕೆಯನ್ನು ಸಮರ್ಥಿಸಿದರು. ಎಂ.ಜಿ.ಹೆಗ್ಡೆ ಕಾಂಗ್ರೆಸ್ ಪಕ್ಷದ ಗಂಡಸುತನದ ಬಗ್ಗೆ ಮಾತನಾಡುವ ಮೊದಲು ಜಿ.ಪಂ. ಚುನಾವಣೆಯಲ್ಲಿ ಜೆಡಿಎಸ್ ಶೂನ್ಯ ಸಾಧನೆ ಮಾಡುವ ಮೂಲಕ ಬಂಜೆ ತನ ತೋರ್ಪಡಿಸಿದೆ. ಆ ಕಾಯಿಲೆಗೆ ಮದ್ದು ಮಾಡಲಿ ಎಂದು ತಿರುಗೇಟು ನೀಡಿದರು. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಗಳು ಯಾವುದೇ ಕೆಲಸ ಮಾಡಿಲ್ಲ. ಸರಕಾರಿ ನೌಕರರ ನಿವೃತ್ತಿ ವಯಸ್ಸು ೬೦ಕ್ಕೇರಿದೆ. ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಭತ್ಯೆ ನೀಡುವ ಭರವಸೆ ಮರೀಚಿಕೆಯಾಗಿದೆ. ಶಿಕ್ಷಕರು ವೇತನ ಕ್ಕಾಗಿ ಬೀದಿಗಿಳಿದರೂ ಸರಕಾರ ಸಮಸ್ಯೆ ಬಗೆಹರಿಸಿಲ್ಲ. ಕಾರ್ಣಿಕ್ ಹಾಗೂ ಶಂಕರಮೂರ್ತಿ ಸ್ವಂತಕ್ಕಾಗಿ ಮಾಡಿದ್ದಾರೆಯೇ ಹೊರತು ಮತದಾ ರರಿಗಾಗಿ ಏನನ್ನೂ ಮಾಡಿಲ್ಲ.
ಇಂತಹ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿಗಳು ಕ್ಷೇತ್ರಾದಾದ್ಯಂತ ಪ್ರಚಾರ ದಲ್ಲಿ ನಿರತರಾಗಿದ್ದು ಪಕ್ಷದ ಮುಖಂ ಡರು, ಕಾರ್ಯಕರ್ತರು ಸಹ ಕಾರ ನೀಡುತ್ತಿದ್ದಾರೆ. ಆದರೆ ಜೆಡಿಎಸ್, ಬಿಜೆಪಿ ಜೊತೆ ಒಳಒಪ್ಪಂದ ಮಾಡಿ ಕೊಳ್ಳುವ ಮೂಲಕ ಹಿಂದಿನ ಚಾಳಿ ಮುಂದುವರಿ ಸಿದ್ದು ಇದಕ್ಕೆ ಎಂ.ಜಿ.ಹೆಗ್ಡೆ ಪತ್ರಿಕಾಗೋ ಷ್ಟಿಯೇ ಪುರಾವೆಯಾಗಿದೆ. ಹಿಂದೆ ಕಾಂಗ್ರೆಸ್‌ನಲ್ಲಿದ್ದ ಅವರು ಜೆಡಿಎಸ್ ಸೇರಿದ ಬಳಿಕ ಕಾಂಗ್ರೆಸ್ ವಿರುದ್ಧ ಮಾತನಾಡು ತ್ತಿದ್ದರೂ ಬಿಜೆಪಿ ವಿರುದ್ಧ ಮೌನವಾಗಿರು ವುದನ್ನು ಗಮನಿಸಿದಾಗ ಮುಂದೆ ಆ ಪಕ್ಷ ಸೇರುವುದು ಖಚಿತ ಎಂದು ಫಾರೂಕ್ ಸಂಶಯ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಟಿ ಯಲ್ಲಿ ಸೇವಾದಳದ ಅಶ್ರಫ್, ಸುರೇಶ್ ಬಳ್ಳಾಲ್ ಉಪಸ್ಥಿತರಿದ್ದರು.
Tagged with
dk,
lnews
ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಅಪರಿಚಿತ
ಬೆಳ್ತಂಗಡಿ: ನಾರಾವಿ ಗ್ರಾ.ಪಂ. ವ್ಯಾಪ್ತಿಯ ಕುತ್ಲೂರು ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಮೂಲನಿವಾಸಿಗಳ ತಾಣಕ್ಕೆ ಅಪರಿಚಿತ ವ್ಯಕ್ತಿಯೋರ್ವ ಬಂದು ನಾವು ೧೫ ಮಂದಿ ಇದ್ದೇವೆ. ನಕ್ಸಲ್ ಗುಂಪಿಗೆ ಸೇರಲು ಇಷ್ಟಪಟ್ಟಿದ್ದೇವೆ. ನಕ್ಸಲರನ್ನು ಪರಿಚಯ ಮಾಡಿಸಿಕೊಡಿ ಎಂದು ಕೇಳಿಕೊಂಡು ಬಂದ ಬಗ್ಗೆ ಸ್ಥಳೀ ಯರು ಬೆಳ್ತಂಗಡಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
ಕುತ್ಲೂರಿಗೆ ಬಂದ ತರುಣ ವ್ಯಕ್ತಿ ಯೊಬ್ಬ ತಾನು ನಾಗಾರ್ಜುನ ಸಾರಂಗ ಮಠ ಎಂದು ಪರಿಚಯಿಸಿದ್ದಲ್ಲದೆ ಸಾಹಿತಿ ಮತ್ತು ಪತ್ರಕರ್ತನೂ ಹೌದು ಎಂದಿರುವುದಲ್ಲದೆ ಬಾದಿ ಮಹಾಳ ಎಂಬ ಊರಿನಲ್ಲಿರುವ ಮಂಜುಳಾ ಸ್ಟುಡಿಯೋ ವಿಡಿಯೋ ಇದರ ವಿಸಿಟಿಂಗ್ ಕಾರ್ಡ್ ಅನ್ನು ಸ್ಥಳೀಯ ಯುವಕರಿಗೆ ನೀಡಿದ್ದಾನೆ. ಈತ ಇಲ್ಲಿನ ಮೂಲ ನಿವಾಸಿ ಯುವಕರ ಸೆಲ್ ಫೋನ್ ನಂಬರ್ ಪಡೆದು ನಕ್ಸಲರನ್ನು ಪರಿಚಯಿಸಿ ಎಂದು ಆಗಾಗ್ಗೆ ಕರೆ ಮಾಡಿ ಕಿರುಕುಳ ನೀಡುತ್ತಿರುವ ಬಗ್ಗೆ ಸ್ಥಳೀಯರು ಪತ್ರಿಕೆಗೆ ತಿಳಿಸಿದ್ದಾರೆ.
ಅಲ್ಲದೆ ಈ ಬಗ್ಗೆ ಪೊಲೀಸ್ ಇಲಾ ಖೆಗೂ ಮಾಹಿತಿ ನೀಡಲಾಗಿದೆ. ಅಪರಿಚಿತ ವ್ಯಕ್ತಿಯೋರ್ವನ ನಡವಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
Tagged with
dk,
lnews
ಮಂಗಳೂರು: ಮುಂದಿನ ಎಪ್ರಿಲ್ ವರೆಗೆ ರಾಜ್ಯ ಸರಕಾರದ ಆಡಳಿತ ಅವಧಿ ಇದೆಯಾದರೂ ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಸಭೆಯ ಚುನಾವಣೆ ನಡೆಸುವ ಸೂಚನೆಯನ್ನು ಬಿಜೆಪಿಯ ನಾಯಕರು ನೀಡಿದ್ದಾರೆ. ನಿಗದಿತ ಅವಧಿಗಿಂತ ಆರು ತಿಂಗಳು ಮೊದಲು ಚುನಾವಣೆ ನಡೆಸುವ ಅಧಿಕಾರವೂ ಚುನಾವಣಾ ಆಯೋಗಕ್ಕೆ ಇದೆ. ಡಿಸೆಂಬರ್‌ನಲ್ಲಿ ಚುನಾವಣೆಗೆ ಬಿಜೆಪಿ ಸಿದ್ದವಾಗಿದೆ. ಆದರೆ ಕಾಂಗ್ರೆಸ್?
ಡಿಸೆಂಬರ್‌ನಲ್ಲಿ ನಾಲ್ಕು ರಾಜ್ಯಗ ಳಲ್ಲಿ ವಿಧಾನಸಭೆ ಚುನಾವಣೆ ನಡೆ ಯಲಿದ್ದು ಇದೇ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆಸು ವಂತೆ ಚುನಾವಣಾ ಆಯೋಗಕ್ಕೆ ಕೋರಲಾಗುವುದು ಎಂದು ಸದಾನಂದ ಗೌಡರು ತಿಳಿಸಿದ್ದಷ್ಟೆ ಕಾಂಗ್ರೆಸ್‌ನಲ್ಲಿ ತಳಮಳ ಆರಂಭವಾಗಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಎಷ್ಟು ತಳಮಳ ಇದೆಯೋ ಆದರ ನಾಲ್ಕು ಪಟ್ಟು ಹೆಚ್ಚಿನ ಗೊಂದಲ ದ.ಕ. ಜಿಲ್ಲೆಯ ಕಾಂಗ್ರೆಸ್‌ನಲ್ಲಿದೆ. ಯಾರ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದು ಎಂಬುದು ಎಂದಿನ ಸಹಜ ಗೊಂದಲವಾದರೆ, ಯಾರಿಗೆ ಟಿಕೆಟ್ ಎಂಬುದು ಮುಗಿ ಯದ ಸಮಸ್ಯೆಯಾಗಿ ಕಾಡುತ್ತಿದೆ.
ಮೊದಲೇ ಅಭ್ಯರ್ಥಿಯನ್ನು ಘೋಷಿಸಿದರೆ ಕಾರ್ಯಕರ್ತರನ್ನು ಒಗ್ಗೂಡಿಸುವ ಹಾಗೂ ಪ್ರಚಾರದ ಸಿದ್ಧತೆ ಮಾಡಿಕೊಳ್ಳಲು ಅನುಕೂಲ ಆಗುತ್ತದೆ. ಸದ್ಯಕ್ಕೆ ಇಂತಹ ಅನುಕೂಲ ಇರುವುದು ಮಂಗಳೂರು ವಿಧಾನಸಭಾ ಕ್ಷೇತ್ರದ ಯು.ಟಿ.ಖಾದರ್ ಮತ್ತು ಮುಲ್ಕಿ- ಮೂಡಬಿದ್ರೆ ಕ್ಷೇತ್ರದ ಅಭಯ ಚಂದ್ರರಿಗೆ ಮಾತ್ರ. ನಾನು ನಾನು ಎಂದು ಮೆರೆಯುವವರಿದ್ದಾರಾದರೂ ಅವರ ಗತಿ ಏನಾಗಲಿದೆ ಎಂದು ಕಾಂಗ್ರೆಸ್‌ನ ಹಗ್ಗ ಜಗ್ಗಾಟದ ರಾಜ ಕೀಯದಲ್ಲಿ ಹೇಳಲಾಗದು. ಮಂಗ ಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ವಿಜಯ ಕುಮಾರ್ ಶೆಟ್ಟಿ, ಮೊದಿನ್ ಬಾವ ಪೈಪೋಟಿ ನಡೆಸುತ್ತಿದ್ದಾರೆ. ದಕ್ಷಿಣದಲ್ಲಿ ಐವನ್ ಡಿಸೋಜಾರ ಕಾಲು ಎಳೆಯಲು ಕ್ರೈಸ್ತರೇ ಸಿದ್ದರಾಗಿದ್ದಾರೆ. ವಿಧಾನ ಸಭೆಯಲ್ಲಿ ಅವಕಾಶ ನೀಡಿ ಕ್ರೈಸ್ತರ ಕೋಟಾ ಭರ್ತಿ ಮಾಡಿ ಎಂದು ಹೇಳುವವರು ಕ್ರೈಸ್ತರೇ ಆದರೂ ಅವರು ಐವನ್‌ಗೆ ಪರಿಷತ್ ಸ್ಥಾನ ದೊರಕಲು ಬಿಡುವಂತವರಲ್ಲ. ಇಲ್ಲಿ ನಾಲ್ಕು ಬಾರಿ ಕ್ರೈಸ್ತ ಅಭ್ಯರ್ಥಿಗಳು ಪರಾ ಭವಗೊಂಡಿರುವುದರಿಂದ ಪರ್ಯಾಯ ಆಯ್ಕೆಯಾಗಿ ತೋರಿಸಲಾಗುವ ವ್ಯಕ್ತಿ ಸುರೇಶ್ ಬಲ್ಲಾಳ್.
ಬಂಟ್ವಾಳದಲ್ಲಿ ಧೈತ್ಯಶಕ್ತಿಯಾಗಿ ಬೆಳೆದಿರುವ ರಮಾನಾಥ ರೈಯವರಿಗೆ ಟಾಂಗ್ ಕೊಡಲು ಸಿದ್ದರಾಗಿದ್ದಾರೆ ಅಶ್ವಿನ್ ಕುಮಾರ್ ರೈ. ಇವರಿಗೆ ಬೆಂಬಲ ವಾಗಿ ನಿಂತಿರುವವರು ಸದಾನಂದ ಪೂಂಜಾ ಎಂದು ಪ್ರತ್ಯೇಕವಾಗಿ ಹೇಳ ಬೇಕಾಗಿಯೇ ಇಲ್ಲ. ಪುತ್ತೂರಿನಲ್ಲಿ ಹತ್ತಾರು ಸಮಸ್ಯೆಗಳು ಅಲ್ಲಿಯ ಗುಂಪು ಗಾರಿಕೆ ಹಾಗೂ ಉಮೇದುವಾರಿಕೆಯದೇ ಪ್ರತ್ಯೇಕ ಕತೆ. ವಿಧಾನ ಸಭೆ ಚುನಾವಣೆ ಯಲ್ಲಿ ರಾಜ್ಯದಲ್ಲಿ ಎಲ್ಲಿಯೂ ಕಾಣ ದಷ್ಟು ಆಂತರಿಕ ಪೈಪೋಟಿಯನ್ನು ಪುತ್ತೂರು ಕಾಂಗ್ರೆಸ್‌ನಲ್ಲಿ ಕಾಣ ಸಿಗು ತ್ತದೆ. ಕಳೆದ ವಿಧಾನ ಸಭೆಯ ಚುನಾ ವಣೆಯಲ್ಲಿ ಇಲ್ಲಿ ಸ್ಪರ್ಧಾಕಾಂಕ್ಷಿಗಳಾ ಗಿದ್ದವರ ಸಂಖ್ಯೆ ೪೦ಕ್ಕೇರಿತ್ತು. ಅಂತಿಮ ವಾಗಿ ಬೊಂಡಾಲ ಜಗನ್ನಾಥ ಶೆಟ್ಟರ ತಂತ್ರ ಕೆಲಸ ಮಾಡಿತ್ತು. ಇವರ ತಂತ್ರ ಟಿಕೆಟ್ ಗಿಟ್ಟಿಸುವುದಕ್ಕಷ್ಟೇ ಸೀಮಿತ ವಾಗಿತ್ತು. ನಳಿನಿ ಲೋಕಪ್ಪ ಗೌಡರಿಗೆ ಟಿಕೆಟ್ ಕೊಟ್ಟಿದ್ದರೆ ಆಗಿನ ಫಲಿತಾಂಶ ವೇ ಬೇರೆಯಾಗಿರುತ್ತಿತ್ತು ಎಂದು ಈಗಲೂ ಹೇಳುವ ಕಾಂಗ್ರೆಸಿಗರಿದ್ದಾರೆ. ಈ ಬಾರಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಕಾಂಗ್ರೆಸ್‌ಗೆ ಬರುವ ಲೆಕ್ಕಾಚಾರ ಹಾಕಲಾಗುತ್ತಿದೆ.
ಬೆಳ್ತಂಗಡಿಯಲ್ಲಿ ಹಾಲಿ ಶಾಸಕ ವಸಂತ ಬಂಗೇರರು ಮತ್ತೆ ಚುನಾ ವಣೆಗೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ. ಅನಾರೋಗ್ಯ ಅವರ ಶಕ್ತಿಯನ್ನು ಕುಂದಿಸಿದೆ, ಸ್ಫೂರ್ತಿಯನ್ನಲ್ಲ. ಅವರ ಸ್ಥಾನ ತುಂಬಲು ಹರೀಶ್‌ಕುಮಾರ್ ಸಿದ್ದರಾಗಿದ್ದಾರೆ. ಹರೀಶರಿಗೆ ತೊಡಕಾಗಿದ್ದ ಗಂಗಾಧರ ಗೌಡರು ಬಿಜೆಪಿಯಲ್ಲಿರುವುದು ಹರೀಶ್‌ಕುಮಾರ್ ಪಾಲಿನ ಸಮಾಧಾನದ ಸಂಗತಿ.
ಸುಳ್ಯದಲ್ಲಿ ಕಾಂಗ್ರೆಸ್‌ಗೆ ಡಾ.ರಘು ಹೊರತಾದ ಅಭ್ಯರ್ಥಿಯೇ ಇಲ್ಲ ಎನ್ನಬಹುದಾದರೂ ಅವರಿಗಾಗಿ ದುಡಿಯುವ ಕಾಂಗ್ರೆಸ್ ನಾಯಕರನ್ನು ಹುಡುಕಬೇಕಾಗಿದೆ.
Tagged with
dk,
lnews
ಬೆಂಗಳೂರು: ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಂದ ವಿಧಾನಪರಿಷತ್ತಿನ ಆರು ಸ್ಥಾನಗಳಿಗೆ ಇಂದು ನಡೆಯ ಲಿರುವ ಚುನಾವಣೆಗೆ ಸಕಲ ಸಿದ್ದತೆ ಗಳನ್ನು ಪೂರ್ಣಗೊಳಿಸಲಾಗಿದೆ. ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಗುಲ್ಬರ್ಗಾ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕುಗಳನ್ನು ಒಳಗೊಂಡ ಈಶಾನ್ಯ ಪದವೀಧರ ಕ್ಷೇತ್ರ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕುಗಳು ನೈರುತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳನ್ನೊಳ ಗೊಂಡ ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ
Tagged with
snews
ಕಾರ್ಕಳ: ಪುರಸಭೆ ವ್ಯಾಪ್ತಿಗೆ ನೀರು ಸರಬರಾಜಾವಾಗುವ ಮುಂಡ್ಲಿ ಡ್ಯಾಂನಿಂದ ರಾಮಸಮುದ್ರ ಟ್ಯಾಂಕ್‌ಗೆ ಸಂಪರ್ಕಿಸಲಾಗಿದ್ದ ಭಾರೀ ಗಾತ್ರದ ಕೊಳವೆಯೊಂದು ತಡರಾತ್ರಿ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿದ್ದು, ಸುಮಾರು ೩ ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.
ತೆಳ್ಳಾರು ೨೧ನೇಯ ಅಡ್ಡ ರಸ್ತೆ ಯಲ್ಲಿ ಶುಕ್ರವಾರ ತಡರಾತ್ರಿ ವೇಳೆಗೆ ಕೊಳವೆ ಮಾರ್ಗದಲ್ಲಿ ಕಾಣಿಸಿಕೊಂಡ ಬಿರುಕು ಈ ಅವಾಂತರಕ್ಕೆ ಕಾರಣ ವಾಗಿದೆ. ಒಳಹರಿವಿನ ಒತ್ತಡಕ್ಕೆ ಕೊಳವೆ ಸಂಪೂರ್ಣವಾಗಿ ಎರಡು ಭಾಗವಾಗಿ ಹೋಗಿದೆ. ಪರಿಣಾಮ ವಾಗಿ ತೆಳ್ಳಾರು-ಕಾರ್ಕಳ ಸಂಪರ್ಕದ ಮಾರ್ಗಕ್ಕೂ ಹಾನಿಯಾಗಿದೆ. ಮಾಹಿತಿ ತಿಳಿದ ಬೆನ್ನಲ್ಲೇ ನೀರು ಸರಬರಾಜನ್ನು ಕಡಿತಗೊಳಿಸಲಾಗಿದೆ ಎಂದು ಪುರಸಭಾ ಕಚೇರಿ ಮೂಲಗಳಿಂದ ತಿಳಿದುಬಂ ದಿದೆ.
ಈ ನೀರಾವರಿ ಯೋಜನೆಗೆ ಇದೀಗ ೧೭ ವರ್ಷ ಕಳೆದಿದೆ. ಕೊಳವೆ ಹಳೆ ಯದಾಗಿರುವುದು ಇದಕ್ಕೆಲ್ಲ ಕಾರಣವೆಂದು ತಿಳಿದುಬಂದಿದೆ. ದುರಸ್ಥಿ ಕಾರ್ಯವು ಭರದಿಂದ ಸಾಗುತ್ತಿದ್ದು, ರಾತ್ರಿಯೊಳ ಗಾಗಿ ಬದಲಿ ಕೊಳವೆಯನ್ನು ಜೋಡಿ ಸುವ ಸಾಧ್ಯತೆ ಇದೆ ಎಂದು ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾಹಿತಿ ನೀಡಿದ್ದಾರೆ.
Tagged with
lnews,
udupi
ಮಂಜೇಶ್ವರ: ಇಲ್ಲಿಯ ಕುಂಜ ತ್ತೂರು ನಿವಾಸಿ ಮಂಜುನಾಥ ಎಂಬ ವರ ಪತ್ನಿ ಬಿ. ಮಿನಿ(೨೩) ಎಂಬವರು ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ.
ಶನಿವಾರ ಸಂಜೆಯಿಂದ ನಾಪತ್ತೆ ಯಾಗಿದ್ದು, ಈ ಸಂದರ್ಭದಲ್ಲಿ ಮನೆ ಯಲ್ಲಿದ್ದ ಚಿನ್ನಾಭರಣ ಮತ್ತು ತನ್ನ ಬಟ್ಟೆ ಬರೆಗಳನ್ನು ತೆಗೆದುಕೊಂಡು ಹೋಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮಿನಿ ಕಾಸರಗೋಡಿನ ಎರಿಯನ್ ನಿವಾಸಿಯಾಗಿದ್ದು, ಕಳೆದ ತಿಂಗಳ ಮೂರರಂದು ಕುಂಜತ್ತೂರಿನ ಮಂಜುನಾಥ ಎಂಬವರೊಂದಿಗೆ ವಿವಾಹ ನಡೆದಿತ್ತು. ಪತಿ ಮಂಜುನಾಥ ನೀಡಿದ ದೂರಿನಂತೆ ಪ್ರಕರಣ ದಾಖ ಲಿಸಿಕೊಂಡಿದ್ದಾರೆ.
Tagged with
cnews,
missing