page1

Posted by JAYAKIRANA Kirana on Saturday, 9 June 2012 | 0 comments | Leave a comment...


page2

Posted by JAYAKIRANA Kirana on | 0 comments | Leave a comment...


page3

Posted by JAYAKIRANA Kirana on | 0 comments | Leave a comment...


page4

Posted by JAYAKIRANA Kirana on | 0 comments | Leave a comment...


page5

Posted by JAYAKIRANA Kirana on | 0 comments | Leave a comment...


page6

Posted by JAYAKIRANA Kirana on | 0 comments | Leave a comment...


ಡಾಲರ್ ಎದುರು ರೂಪಾಯಿ ಕುಸಿತಕ್ಕೆ ಬೆಲೆ ಏರಿಕೆಗೆ ಕಾರಣ ನಿಜವೇ?

Posted by JAYAKIRANA Kirana on | 0 comments | Leave a comment...

ಉಮಾನಾಥ್ ಕುಮಾರ್, ಮಂಗಳೂರು
ಸಮೀಕ್ಷೆಯೊಂದರ ಪ್ರಕಾರ ಇಡೀ ಪ್ರಪಂಚದಲ್ಲಿ ಹೆಚ್ಚು ಇಂಧನ ಬಳಕೆ ಏಶಿಯಾ ಖಂಡದಲ್ಲಿ ಆಗುತ್ತಿದೆ. ಅಲ್ಲಿನ ಜನ ಸಂಖ್ಯೆಗೆ ಅನುಗುಣವಾಗಿ ಶೇ.೪೨ರಷ್ಟು ವಾಹನಗಳು ಬಳಕೆ ಯಾಗುತ್ತಿವೆ. ಕೆಲವು ಕಡೆ ಒಂದು ಮನೆಗೆ ಆರರಿಂದ ಎಂಟಕ್ಕೂ ಹೆಚ್ಚು ಲಘುವಾಹನಗಳ ಬಳಕೆ ನಡೆಯುತ್ತಿದೆ. ಆಧುನಿಕ ಯುಗ ದಲ್ಲಿ ಸರ್ವೇಸಾಮಾನ್ಯವಾಗಿ ತೈಲಕ್ಕಾಗಿ ಎಲ್ಲೆಡೆ ಪೈಪೋಟಿ ಇದ್ದದ್ದೇ. ಈಗ ಬಲಾಢ್ಯ ರಾಷ್ಟ್ರಗಳ ಹಣದ ಬೆಲೆ ಮೀರಿಹೋದ ಕಾರಣ ಬಡದೇಶಗಳ ಹಣಕಾಸು(ಕರೆನ್ಸಿ) ಅಪಮೌಲ್ಯಕ್ಕೆ ಈಡಾಗುವುದು ಸಹಜವೇ ಸರಿ. ೨೧ನೇ ಶತಮಾನದ ಜಗತ್ತಿನ ಆರ್ಥಿಕತೆ ಹಿಂಜರಿತಕ್ಕೆ ಇಲ್ಲೊಂದು ಸಣ್ಣ ನಿದರ್ಶನವಿದೆ.
ಪ್ರಸಕ್ತ ಇಂಧನ ಬೆಲೆ ವ್ಯವಹಾರದಲ್ಲೂ ಬಿಲ್‌ಗೇಟ್ಸ್‌ನಂತಹ ಆಧುನಿಕ ಬಂಡವಾಳಶಾಹಿಗಳು ಹುಟ್ಟುತ್ತಿದ್ದು, ಪ್ರಸಕ್ತ ಅಂತ ರಾಷ್ಟ್ರೀಯ ತೈಲ ಮಾರುಕಟ್ಟೆ ಅಲ್ಲೋಲ-ಕಲ್ಲೋಲಕ್ಕೆ ಹೇತು ಎನ್ನಲಾಗುವ ಸುದ್ದಿ ನಿಜವೇ? ಇದನ್ನು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇಲ್ಲೊಂದು ಐತಿಹಾಸಿಕ ಬದಲಾವಣೆಗೆ ಸಿದ್ಧತೆ ನಡೆದಂತಿದೆ. ಇಷ್ಟೇ ವೇಗದಲ್ಲಿ ವಾಹನಗಳು ಬೆಳೆಯುತ್ತಾ ಹೋದರೆ ಮುಂದೊಂದು ದಿನ ಭೂಗರ್ಭದಲ್ಲಿ ಕಷ್ಟಗಳು ಕಟ್ಟಿಟ್ಟ ಬುತ್ತಿ ಎಂದು ವೈeನಿಕ ವರದಿ ಎಚ್ಚರಿಸಿದೆ. ಬಹುಶಃ ಜಾಗತಿಕ ನಾಯಕರಿಗೆ eನೋದಯ ಉಂಟಾದಂತಿದೆ. ಇಂಧನ ನಿಯಂತ್ರಣಕ್ಕೆ ಎರಡು ತಿಂಗಳ ಹಿಂದೆ ಕೈಗಾರಿಕಾ ರಾಷ್ಟ್ರಗಳ ಶೃಂಗಸಭೆ ನ್ಯೂಯಾರ್ಕ್‌ನಲ್ಲಿ ನಡೆದಿದೆ. ವಿಶೇಷತೆಯೆಂದರೆ ಮಿತಿಯಲ್ಲಿರದ ನಿವಾಸಿ ವಾಹನಗಳು ಹಾಗೂ ಸರಕಾರಿ ಕಚೇರಿ ಗಳ ವಾಹನಗಳ ಸಂಖ್ಯೆ ತೀವ್ರ ಕಡಿತಗೊಳಿಸಿ, ಅದಕ್ಕೆ ಪರ್ಯಾ ಯವಾಗಿ ಆದಷ್ಟು ಹೆಚ್ಚು ಪ್ಯಾಸೆಂಜರ್ ಹಡಗುಗಳು, ಕುದುರೆ ಮತ್ತು ಎತ್ತಿನಗಾಡಿಗಳು, ಸೈಕಲ್‌ಗಳ ಉಪಯೋಗಕ್ಕೆ ಭಾರೀ ಒಪ್ಪಂದಕ್ಕೆ ಚಿಂತನೆ ನಡೆದಿದೆ ಎನ್ನಲಾಗಿದೆ.
ಡೂ ಓರ್ ಡೈ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾಲಕ್ಕೆ ತಕ್ಕ ಕೋಲ ಕಟ್ಟಬೇಕಾಗುತ್ತದೆ. ಜಾಗತಿಕ ಬಿಕ್ಕಟ್ಟುಗಳ ಕುರಿತು ಇತ್ತೀಚೆಗೆ ವಿಶ್ಲೇಷಣೆ ಮುನ್ನುಡಿಯೊಂದರಲ್ಲಿ ತಿಳಿದುಬಂದ ಪ್ರಕಾರ ತೈಲ ಸಾಮ್ರಾಜ್ಯದ ಅಧಿಪತ್ಯ ಹಿಡಿತ ಸ್ಥಾಪನೆಗೆ ಹೊಕೈ ನಡೆದಿದೆಯಂತೆ. ದಶಕಗಳಿಂದ ಕಚ್ಛಾತೈಲ ಉತ್ಪಾದನೆ ಸರಬರಾಜು ರಾಷ್ಟ್ರಗಳು ಯುದ್ಧದಿಂದ ಜರ್ಜರಿತಗೊಂಡು ಇನ್ನೂ ಚೇತರಿಸಿಕೊಂಡಿಲ್ಲ ಎನ್ನುವುದು ಎದ್ದು ಕಾಣುತ್ತಿದೆ. ಅವುಗಳು ತೈಲ ಬೆಲೆ ಹಕ್ಕು ನಿಗ ದಿತ ನಿಯಂತ್ರಣ ಕಳೆದುಕೊಂಡಂತಿದೆ. ಭಾರತಕ್ಕೆ ಶೇ.೮೦ ರಷ್ಟು ಕಚ್ಛಾತೈಲ ಸರಬರಾಜು ರಾಷ್ಟ್ರ ಇರಾಕ್, ಲಿಬಿಯಾ ಮತ್ತು ಇರಾನ್. ಈಗಾಗಲೇ ದೊಡ್ಡಣ್ಣ ಅಮೇರಿಕ ಮತ್ತು ಮಿತ್ರಕೂಟದ ರಾಷ್ಟ್ರಗಳು ನಿರ್ಬಂಧ ಹೇರಿರುವ ಕಾರಣದಿಂದ ಅಷ್ಟೊಂದು ಸುಲಭದಲ್ಲಿ ಪೆಟ್ರೋಲಿಯಂ ವಸ್ತುಗಳ ವ್ಯವಹಾರ ನಡೆಸುವಂತಹ ಸ್ಥಿತಿಯಲಿಲ್ಲ ಎಂಬುದು ನಿಜ. ಹೀಗಿರುವಾಗ ಮಿತಬಳಕೆ ಮತ್ತು ಜಾಗೃತಿ ಇದ್ದರೆ ಸಮಸ್ಯೆ ಉಂಟಾಗದು. ಚೀನಾ ಒಂದನ್ನು ಹೊರತು ಪಡಿಸಿ ಜಗತ್ತಿನಲ್ಲಿ ದ್ವಿತೀಯ ಸ್ಥಾನದಲ್ಲಿ ಕಚ್ಛಾತೈಲ ಆಮದು ರಾಷ್ಟ್ರ ಭಾರತವೇ ಎಂಬುದು ಸಮೀಕ್ಷೆಯೊಂದರ ಲೆಕ್ಕಾಚಾರ ವ್ಯಕ್ತವಾಗಿದೆ. ಆದರೆ ಇಂಧನ ಉಳಿತಾಯ ಸಿರಿವಂತ ಬದುಕಿಗೆ ಪೆಟ್ಟು ನೀಡುವುದಿಲ್ಲ ಎಂಬುದನ್ನು ತಿಳಿಸಿದೆ.
ಇಂಥವರನ್ನು ಅಂಕುಶದಲ್ಲಿಟ್ಟರೆ ನಷ್ಟ ತಪ್ಪಿಸಲು ಸಾಧ್ಯ. ಅರ್ಥೈಸಿಕೊಳ್ಳಬೇಕಾದ ವಿಚಾರವೆಂದರೆ ಇಂಧನ ಬೆಲೆ ಶಾಶ್ವತವಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಮ್ಮೆ ಬೆಲೆ ತೀವ್ರ ಏರಿಕೆ ಯಾದರೆ ಮತ್ತೊಮ್ಮೆ ಇಳಿಕೆಯಾಗುತ್ತಿದೆ. ಇದರಿಂದ ಶುಕ್ರದಿಸೆ ಕಂಪೆನಿಗಳದ್ದು ಎನ್ನುವುದು ಮೂಲಗಳಿಂದ ತಿಳಿದುಬಂದಿದೆ. ಸದ್ದು ಮಾಡದೆ ಇಂಧನ ಇಲಾಖೆಯವರು ದಿಢೀರ್ ಆಗೊಮ್ಮೆ ಈಗೊಮ್ಮೆ ಶೋಧನೆ ನಡೆಸುವ ಮೂಲಕ ತಕ್ಕ ಶಾಸ್ತಿ ಮಾಡಿದಲ್ಲಿ ಪೆಟ್ರೋಲ್ ಸೋರಿಕೆ ತಡೆಯಲು ಸಾಧ್ಯವಿದೆ. ಇದರಿಂದ ಸಾವಿರಾರು ಕೋಟಿ ರೂ. ನಷ್ಟ ತಪ್ಪಿಸಬಹುದೆಂದು ತಜ್ಞರು ಹೇಳುತ್ತಾರೆ. ಆಳ್ವಿಕೆಗೆ ಒಂದು ಕನ್ನಡಿಯಾಗಿ ಪ್ರಸ್ತುತ ಅಭಿವೃದ್ಧಿಶೀಲ ಅರ್ಜೆಂಟಿನಾ, ಚೀನಾ, ಬ್ರೆಜಿಲ್‌ನಂತಹ ರಾಷ್ಟ್ರಗಳಲ್ಲಿ ದಿನಬಳಕೆ ವಸ್ತುಗಳ ಏರಿಕೆ ಪ್ರಮಾಣ ಬರೀ ೨.೮ರಷ್ಟು ಇದ್ದರೆ ಭಾರತದಲ್ಲಿ ಯಾಕೆ ನಿಯಂತ್ರಣ ಅಸಾಧ್ಯ ಎಂಬ ಮಾತು ಆಂತಕ ಪಡು ವಂಥದ್ದು. ಇದ್ದಕ್ಕಿದ್ದಂತೆ ಆಹೋರಾತ್ರಿ ಮತ್ತೆ ದಿಢೀರ್ ಪೆಟ್ರೋಲ್ ಬೆಲೆ ತುಟ್ಟಿಯಾಗಿದೆ. ದೂರದ ದೆಹಲಿಯಲ್ಲಿ ಲೀಟರಿಗೆ ೭೧.೨೫ ಪರಿಷ್ಕೃತ ದರ ಇದ್ದರೆ ನಮ್ಮಲ್ಲಿ ಲೀಟರಿಗೆ ೮೨.೩೫ ಬೆಲೆ. ಅಂದರೆ ಲೀಟರಿಗೆ ೭.೩೫ರೂ. ಏರಿಕೆಯಾಗಿದ್ದು, ಬಹುತೇಕ ರಾಜ್ಯದಲ್ಲಿ ಆಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ಆದರೆ ಡೀಸೆಲ್ ಮತ್ತು ಎಲ್‌ಪಿಜಿ ಬೆಲೆ ಏರಿಕೆಯಾಗಿಲ್ಲ. ಇಂಧನ ಇಲಾಖೆಯ ಈ ಹೇಳಿಕೆಯಿಂದಾಗಿ ಜನರು ನಿಟ್ಟುಸಿರು ಬಿಡುವಂತಾಗಿದೆ. ಇದ ರಿಂದಾಗಿ ಘನ ವಾಹನಗಳ ಟಿಕೆಟ್ ದರ ಮತ್ತು ಬಾಡಿಗೆ ಹೆಚ್ಚಿಸು ವಂತಿಲ್ಲ. ಆಧಾಯಭರಿತ ರಾಜ್ಯಗಳು ಬೆಲೆ ಕೊಂಚ ಇಳಿಕೆ ಮಾಡಿದ್ದು ಸಂತಸ ತಂದಿದೆ. ನಮ್ಮಲ್ಲಿ ಬೃಹತ್ ಕಚ್ಛಾತೈಲ ಶುದ್ಧೀಕರಣ ಘಟಕ ಎಂಆರ್‌ಪಿಎಲ್ ಕಂಪೆನಿ ಇರುವ ಕಾರಣ ಇಲ್ಲಿಯೂ ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆಯನ್ನು ತಳ್ಳಿ ಹಾಕುವಂತದ್ದಲ್ಲ.

Posted by JAYAKIRANA Kirana on | 0 comments | Leave a comment...

ದ.ಕ. ಮತ್ತು ಉಡುಪಿ ಜಿಲ್ಲೆ ಯಲ್ಲಿ ಬೀಡಿ ಉದ್ಯಮವನ್ನು ನೆಚ್ಚಿ ರುವ ಅಸಂಖ್ಯ ಬಡಕುಟುಂಬಗಳಿವೆ. ಇಲ್ಲಿ ಬೀಡಿ ಕಾರ್ಮಿಕರ ದುಡಿಮೆಗೆ ಸರಿಯಾದ ಪ್ರತಿಫಲ ದೊರಕುವುದೇ ಇಲ್ಲ ಎಂದರೆ ತಪ್ಪಾಗದು. ಇದಕ್ಕೆ ಕಾರಣ ಬ್ರಾಂಚ್ ಮಾಲಕರ ದುರಾ ಡಳಿತ. ಬೀಡಿ ಕಂಪೆನಿ ಕಾರ್ಮಿಕ ರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಮಾಲಕರು ಈ ಬಗ್ಗೆ ಕಾರ್ಮಿಕರಿಗೆ ತಿಳಿಸದೆ, ಸವಲ ತ್ತನ್ನು ದುರ್ಬಳಕೆ ಮಾಡುತ್ತಾರೆ. ಇದು ಇನ್ನಾದರೂ ನಿಲ್ಲಲಿ.
     ಸುರೇಖಾ, ಬಂಟ್ವಾಳ

ಛಾಯಾಗ್ರಾಹಕರ ಮೇಲೆ ಕಣ್ಣಿಡಿ!

Posted by JAYAKIRANA Kirana on | 0 comments | Leave a comment...

ಇತ್ತೀಚೆಗೆ ಕಾರ್ಕಳ ತಾಲೂಕಿನ ಪಳ್ಳಿ ಎಂಬಲ್ಲಿ ಮದುವೆಯ ಆರ್ಡರ್ ಗೆಂದು ಬಂದಿದ್ದ ಛಾಯಾಚಿತ್ರ ಗ್ರಾಹಕನೊಬ್ಬ ಚಿನ್ನಾಭರಣ ಕದ್ದು ಪೊಲೀಸ್ ವಶವಾದ ಘಟನೆ ನಡೆದಿದೆ. ಇದನ್ನು ಸಾಮಾನ್ಯ ಘಟನೆ ಯೆಂದು ಸುಮ್ಮನಿರಬಹುದಾದರೂ ಇದು ಸಮಾಜದ ಮೇಲೆ ಬೀರುವ ಪರಿ ಣಾಮ ಮಾತ್ರ ಗಾಢವಾದುದು. ಯಾಕೆಂದರೆ ಛಾಯಾಗ್ರಾಹಕರನ್ನು ಮದುವೆ ಮತ್ತಿತರ ಶುಭ ಸಂದರ್ಭ ದಲ್ಲಿ ನೆಂಟರ ಥರವೇ ನೋಡಿಕೊಳ್ಳು ತ್ತೇವೆ. ಅತಿಥಿ ಸತ್ಕಾರವನ್ನೂ ಮಾಡು ತ್ತೇವೆ. ಹೀಗಿರುವಾಗ ಛಾಯಾಗ್ರಾ ಹಕರ ವೇಷದಲ್ಲಿ ಕಳ್ಳರು ಮನೆಯೊ ಳಗೆ ಹೊಕ್ಕಿದರೆ ಪರಿಸ್ಥಿತಿ ಏನಾಗ ಬೇಡ? ಆದ್ದರಿಂದ ಇಂಥ ಘಟನೆಯ ಬಳಿಕವಾದರೂ ಜನರು ಜಾಗೃತರಾ ಗಬೇಕು. ಕೆಲವು ವರ್ಷಗಳ ಹಿಂದೆ ಬಂಟ್ವಾಳದಲ್ಲಿ ಕಾಮುಕ ಛಾಯಾ  ಗ್ರಾಹಕನಿಗೆ ಮದುಮಗಳು ಮಂಟ ಪದಲ್ಲೇ ಹಾರ ಹಾಕಿ ಮದುವೆ ಯಾದ ಘಟನೆ ನಡೆದಿತ್ತು. ಇಂಥ ಪ್ರಕರಣ ಅಲ್ಲಲ್ಲಿ ನಡೆದಾಗ ಸಹಜ ವಾಗೇ ಛಾಯಾಗ್ರಾಹಕರ ಮೇಲಿನ ಗೌರವ ಮಾಯವಾಗುತ್ತದೆ. ಜನರು ಯಾವುದಕ್ಕೂ ಛಾಯಾಗ್ರಾಹಕರ ಮೇಲೆ ಒಂದು ಕಣ್ಣಿಡುವುದು ಲೇಸು.
ರಾಜೇಶ್, ಕಾರ್ಕಳ

ಖಾಸಗಿ ಬಸ್‌ಗಳನ್ನು ಪುನರಾರಂಭಿಸಿ

Posted by JAYAKIRANA Kirana on | 0 comments | Leave a comment...

ವಿಟ್ಲ-ಒಡಿಯೂರು-ಉಪ್ಪಳ ಮಾರ್ಗವಾಗಿ ‘ಶ್ರೀದೇವಿ ಕೃಪಾ’ ಎಂಬ ಹೆಸರಿನ ಖಾಸಗಿ ಬಸ್ ಹಲವಾರು ವರ್ಷ ಗಳಿಂದ ಉತ್ತಮ ಸೇವೆಯೊಂದಿಗೆ ಸಂಚರಿಸುತ್ತಿತ್ತು. ಇಂಟರ್ ಸ್ಟೇಟ್ ಪರ್ಮಿಟ್ ಎಂಬ ಕಾರಣದಿಂದ ಸರಕಾರ ಪರವಾನಗಿಯನ್ನು ನವೀಕರಿಸದಿರುವುದರಿಂದ ಈ ಬಸ್‌ನ ಸಂಚಾರ ನಿಲುಗಡೆಗೊಂಡಿದೆ. ನಾವು ಬಸ್‌ನಲ್ಲಿ ಬೆಳಗ್ಗಿನ ವೇಳೆ ಮತ್ತು ಸಂಜೆ ವೇಳೆ ಒಡಿಯೂರು ಕಡೆಯಿಂದ ಉಪ್ಪಳ ಕಡೆಗೆ ದಿನನಿತ್ಯ ಉದ್ಯೋಗ ನಿಮಿತ್ತ ಸಂಚರಿಸು ತ್ತಿದ್ದೆವು. ಈ ಬಸ್ ನಿಲುಗಡೆಗೊಂಡಿರುವುದರಿಂದ ನಮಗೆ ತುಂಬಾ ತೊಂದರೆಯಾಗಿದೆ. ಈ ರೂಟ್‌ನಲ್ಲಿ ಬಸ್‌ನ ಸಂಖ್ಯೆಯೇ ವಿರಳ. ಅದರಲ್ಲಿಯೂ ಸರಕಾರ ಇರುವ ಬಸ್‌ನ ಪರವಾನಿಗೆಯನ್ನು ರದ್ದುಗೊಳಿಸುತ್ತಿದೆ. ಕೆಎಸ್‌ಆರ್‌ಟಿಸಿ ಬಸ್ ಆರಂಭಗೊಂಡಿದ್ದರೂ ಅದು ಬರ ಬಹುದು ಎಂಬ ನಿಶ್ಚಯವಿಲ್ಲ. ಸರಕಾರಿ ಬಸ್ ಅನ್ನು ನಂಬಿ ಕೆಲಸಕ್ಕೆ ಹೊರಟರೆ ತಲುಪುವಾಗ ಮಧ್ಯಾಹ್ನ ವಾದೀತು. ಸರಕಾರಿ ಬಸ್‌ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಶಾಲೆಗೆ ಹೋಗುವ ವಿದ್ಯಾರ್ಥಿಗಳ ಸಮಯ ಬಸ್ಸನ್ನು ಕಾಯುವುದರಲ್ಲಿಯೇ ವ್ಯರ್ಥವಾಗುತ್ತಿದೆ. ಖಾಸಗಿ ಬಸ್ ಸಂಚಾರವನ್ನು ನಿರ್ಬಂಧಿಸಿರುವುದರಿಂದ ಪ್ರತಿಯೊಬ್ಬ ರಿಗೂ ತೊಂದರೆಯಾಗಿದೆ. ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಪತ್ರ ಬರೆದರೂ ಏನೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಪ್ರಯಾಣಿಕರ ಸಮಸ್ಯೆ ಯನ್ನು ಅರಿತು ಖಾಸಗಿ ಬಸ್ ಸಂಚಾರವನ್ನು ಆರಂಭಿಸಲಿ.
 ನೊಂದ ಪ್ರಯಾಣಿಕ, ಒಡಿಯೂರು

ಪಾನಿಪುರಿ ಅಂಗಡಿ ಪರ ಸಿಐಟಿಯು ಹೇಳಿಕೆ ಹಾಸ್ಯಾಸ್ಪದ

Posted by JAYAKIRANA Kirana on | 0 comments | Leave a comment...


ಮಹಾನಗರ ಪಾಲಿಕೆಯ ಹೆಸರಿನಲ್ಲಿ ಬೇನಾಮಿ ವ್ಯಕ್ತಿಗಳು ಬೀದಿ ಬದಿ ವ್ಯಾಪಾರಸ್ಥರಿಂದ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಸಿಐಟಿಯು ವಾದವು ಸತ್ಯಕ್ಕೆ ದೂರವಾಗಿದ್ದು, ವಾಸ್ತವವನ್ನು ಮರೆಮಾಚುವ ಷಡ್ಯಂತ್ರವಾಗಿದೆ.
ವಾಸ್ತವವೆಂದರೆ ಪಾನಿಪುರಿ ವ್ಯಾಪಾರಸ್ಥರು ಹೊರರಾಜ್ಯದವರಾಗಿದ್ದು, ಶ್ರೀಮಂತ ಕುಳದವರು ನಡೆಸುವ, ತೆರಿಗೆ ವಂಚಿಸುವ ದಂಧೆಯಾಗಿದೆ. ಜುಜುಬಿ ಸಂಬಳ ಕೊಟ್ಟು ಹುಡುಗರನ್ನು ನೇಮಿಸಿ ಆಯಕಟ್ಟಿನ ಸ್ಥಳದಲ್ಲಿ ವ್ಯಾಪಾರ ಮಾಡುವ ಇವರು ತಿಂಗಳಿಗೆ ಲಕ್ಷಗಟ್ಟಲೆ ವ್ಯವಹಾರವನ್ನು ನಡೆಸು ತ್ತಿದ್ದಾರೆ. ಆದರೆ ಸರಕಾರಕ್ಕಾಗಲೀ, ಸಂಬಂಧಪಟ್ಟ ಮನಪಾ ಇಲಾಖೆಗಾಗಲೀ ಯಾವುದೇ ರೀತಿಯ ಶುಲ್ಕವನ್ನು ಇವರು ಪಾವತಿಸುವುದಿಲ್ಲ. ಇಷ್ಟೇ ಅಲ್ಲದೆ ಇದೇ ಊರಿನ ಸಣ್ಣಪುಟ್ಟ ಗೂಡಂಗಡಿ ಗಳಿಗೂ ಇವರು ಕಂಟಕವಾಗಿದ್ದು, ಇವರ ವಿರು ದ್ಧದ ಮನಪಾ ಕಾರ್ಯಾಚರಣೆಯು ಶ್ಲಾಘನೀಯ ವಾಗಿದೆ. ಸಿಐಟಿಯು ಇದುವರೆಗೆ ಬೀದಿ ಬದಿ ವ್ಯಾಪಾರಸ್ಥರನ್ನು ತನ್ನ ಸದಸ್ಯರನ್ನಾಗಿಸಿ ಅವರಿಂದ ಮಾಮೂಲು ಪಡೆಯುತ್ತಿದ್ದು, ಇದೀಗ ಪಾನಿಪುರಿ ಯವರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವ ಣಿಸುತ್ತಿರುವುದು ನಾಚಿಕೆಗೇಡು. ತನ್ನ ಹೇಳಿಕೆಗೆ ಈಗಲೂ ಅಂಟಿಕೊಂಡಿರುವ ಪಾನಿಪುರಿ ಮಾಲಿಕ ಈಗಲೂ ತನ್ನ ಹೇಳಿಕೆಯನ್ನು ಬದಲಿಸಲಿಲ್ಲ. ಆದರೆ ಅವನ ಪರವಾಗಿ ಸಿಐಟಿಯು ಪತ್ರಿಕಾ ಗೋಷ್ಠಿ ಕರೆದು ಅವನನ್ನು ಸಮರ್ಥಿಸುವುದನ್ನು ನೋಡಿದರೆ, ನಿಜವಾಗಿಯೂ ಹಣ ಪಡೆದವರ ಬಣ್ಣ ಬಯಲಾದಂತಾಗಿದೆ.
 ರಿಯಾಝ್, ಹರೇಕಳ

ಅಬಕಾರಿ ಕಾರ್ಮಿಕರ ಗೋಳು ಕೇಳುವವರಾರೂ ಇಲ್ಲವೇ?

Posted by JAYAKIRANA Kirana on | 0 comments | Leave a comment...

ಸರಕಾರ ರಾಜ್ಯಾದ್ಯಂತ ಅಬಕಾರಿ ಇಲಾಖೆಯ ಕಚೇರಿಗಳಲ್ಲಿ ದೈನಂದಿನ ಕೆಲಸ ಕಾರ್ಯ ಚಟುವಟಿಕೆ ಗಳು ಸುಸೂತ್ರವಾಗಿ ನಡೆಯಲು ಖಾಯಂ ನೌಕರ ರನ್ನು ನೇಮಕಗೊಳಿಸದೆ ಹೊರಗುತ್ತಿಗೆ ಆಧಾರದ ಮೇಲೆ ದಿನಗೂಲಿ ಕಾರ್ಮಿಕರನ್ನು ಮತ್ತು ವಾಹನ ಚಾಲಕರುಗಳನ್ನು ನೇಮಕ ಮಾಡಿಕೊಂಡಿರುವುದನ್ನು ಕಾಣುತ್ತೇವೆ. ಆದರೆ ಕಾರ್ಮಿಕರಿಗೆ ನೀಡಬೇಕಾದ ಸವಲತ್ತುಗಳನ್ನು ನೀಡಿರುವುದಿಲ್ಲ. ಅಲ್ಲದೆ ಅತ್ಯಂತ ಕಡಿಮೆ ವೇತನವನ್ನು ನೀಡಿ ದುಡಿಸಿಕೊಳ್ಳುತ್ತಿದೆ.  ಪ್ರತೀ ತಿಂಗಳು ಸಂಬಳದ ವೇತನವನ್ನು ನಿಗದಿತ ದಿನಾಂಕದ ಒಳಗಡೆ ನೀಡದೆ ಹೊರಗುತ್ತಿಗೆ ದಿನ ಗೂಲಿ ಕಾರ್ಮಿಕರನ್ನು ಸತಾಯಿಸುತ್ತಿದೆ ಹಾಗೂ ಪದೇ ಪದೇ ಕಾರ್ಮಿಕರನ್ನು ಕೂಡಾ ಬದಲಾ ಯಿಸುತ್ತಿದೆ. ಕಾರ್ಮಿಕರ ಶ್ರಮಕ್ಕೆ ತಕ್ಕಂತೆ ವೇತನ ಸಿಗದೆ ಹಾಗೂ ಉದ್ಯೋಗ ಭದ್ರತೆ ಇಲ್ಲದೆ ಕಾರ್ಮಿ ಕರು ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುವಂತಾ ಗಿದೆ. ಹೊರಗುತ್ತಿಗೆ ಪದ್ಧತಿಯಿಂದ ಕಾರ್ಮಿಕರು ಶೋಷಣೆಗೆ ಒಳಗಾಗುತ್ತಿದ್ದು, ನೆಮ್ಮದಿಯ ಜೀವನ ನಡೆಸಲು ಅಸಾಧ್ಯವಾಗಿದೆ. ಕಾರ್ಮಿಕರ ಬವಣೆ ಗಳನ್ನು ಕೇಳುವ ಗತಿ ಇಲ್ಲದಂತಾಗಿದೆ. ಕನಿಷ್ಟ ವೇತನ ಇಲ್ಲದೆ ಹೊರಗುತ್ತಿಗೆ ದಿನಗೂಲಿ ಕಾರ್ಮಿಕ ಕುಟುಂಬ ಬೀದಿಪಾಲಾಗಿದೆ. ಆದುದರಿಂದ ಅಬ ಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೊರ ಗುತ್ತಿಗೆ ದಿನಗೂಲಿ ಕಾರ್ಮಿಕರು ಮತ್ತು ವಾಹನ ಚಾಲಕರು ನೌಕರರಿಗೆ ದಿನಗೂಲಿ ವೇತನವನ್ನು ಹೆಚ್ಚಿಸಬೇಕು ಮತ್ತು ಕಾರ್ಮಿಕರಿಗಿರುವ ಇನ್ನಿತರ ಸವಲತ್ತುಗಳನ್ನು ನೀಡಬೇಕು. ಸೇವೆಯನ್ನು ಪಡೆ ಯುವ ಸರಕಾರ ಹೊರಗುತ್ತಿಗೆ ಕಾರ್ಮಿಕರ ಹಿತ ವನ್ನು ಕೂಡಾ ಕಾಯಬೇಕು. ಅದು ಸರಕಾರದ ಜವಾಬ್ದಾರಿಯೂ ಆಗಿರುತ್ತದೆ. ಅಬಕಾರಿ ಇಲಾಖೆ ಯ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ನೌಕರರ ಅವಶ್ಯಕತೆ ಇದ್ದು, ಪ್ರಸ್ತುತ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ದಿನಗೂಲಿ ಕಾರ್ಮಿಕ ರನ್ನು ಮತ್ತು ವಾಹನ ಚಾಲಕರುಗಳನ್ನು ಖಾಯಂ ನೌಕರರನ್ನಾಗಿ ನೇರ ನೇಮಕಗೊಳಿಸಬೇಕೆಂದು ಸರಕಾರವನ್ನು ಈ ಮೂಲಕ ಒತ್ತಾಯಿಸುತ್ತೇವೆ. ಸರಕಾರ ಈ ನಿಟ್ಟಿನಲ್ಲಿ ವಿಳಂಬ ಮಾಡದೆ ತಕ್ಷಣ ಕ್ರಮ ಜರುಗಿಸಬೇಕೆಂದು ವಿನಂತಿ.
 ನಾಗರಾಜ್, ಪಣಕಜೆ

ರಾಜ್ಯ ಸರಕಾರ ಕೃಷಿ ಕಡೆಗಣಿಸುತ್ತಿದೆ!

Posted by JAYAKIRANA Kirana on | 0 comments | Leave a comment...

ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ನಡೆಸಿರುವ ರಾಜ್ಯ ಸರಕಾರ ಹಣದ ಹೊಳೆಯನ್ನೇ ಹರಿಸಿದೆ. ವಿದೇಶಿ ಕಂಪೆನಿಗಳು ತುದಿ ಗಾಲಲ್ಲಿ ನಿಂತು ಹಲವು ಕೋಟಿ ರೂ.ಗಳಷ್ಟು ಬಂಡವಾಳವನ್ನು ತೊಡಗಿಸಿವೆ. ರಾಜ್ಯದ ಕೃಷಿಭೂಮಿ ಯನ್ನು ಆಕ್ರಮಿಸಿಕೊಂಡು ಪ್ರಾರಂಭ ವಾಗಿರುವ ಬೃಹತ್ ಉದ್ದಿಮೆಗಳು ಇನ್ನಷ್ಟು ಕೋಟಿ ರೂ. ಬಂಡವಾಳ ಹೂಡಿರುವುದು ಭವಿಷ್ಯದಲ್ಲಿ ಮತ್ತಷ್ಟು ಕೃಷಿಭೂಮಿ ನಾಶಪಡಿಸುವ ಸೂಚನೆ ಯನ್ನು ನೀಡಿದೆ. ಕೃಷಿ ಪ್ರಧಾನ ದೇಶ ವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಭಾರತದಲ್ಲಿ ಕೃಷಿಭೂಮಿಯೇ ನಾಶ ವಾದರೆ ಕೃಷಿಕರು ಬದುಕುವುದು ಹೇಗೆ? ರಾಜ್ಯದ ಬಹುತೇಕ ಅರಣ್ಯ ಪ್ರದೇಶ, ಕೃಷಿಭೂಮಿ ಈಗಾಗಲೇ ನಾಶವಾಗಿದ್ದು, ಅಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆಯಾಗುತ್ತಿದೆ. ನೂರಾರು ಬೃಹತ್ ಕೈಗಾರಿಕೆಗಳು ದಾಂಗುಡಿ ಇಡುತ್ತಿವೆ. ಹೀಗಿರುವಾಗ ರಾಜ್ಯ ಸರಕಾರ ಕೃಷಿಕರ ಪರ ಕಾಳಜಿ ಯೇ ಇಲ್ಲದಂತೆ ಮತ್ತೆ ವಿದೇಶಿ ಉದ್ದಿಮೆದಾರರನ್ನು ಆಕರ್ಷಿಸಲು ಮುಂದಾಗಿರುವುದು ನಾಚಿಕೆಗೇಡು. ಕೃಷಿಕರ ಬಾಳನ್ನು ನಾಶ ಮಾಡಲು ಹೊರಟಿರುವ ರಾಜ್ಯ ಸರಕಾರ ಹೆಚ್ಚು ಕಾಲ ಬಾಳಿಕೆ ಬಾಳದು. ಕೃಷಿ ಚಟು ವಟಿಕೆಗಳಿಗೆ ಪ್ರೋತ್ಸಾಹ ನೀಡುವ ಕೈಗಾರಿಕೆ, ಉತ್ಫನ್ನಗಳ ಸಂರಕ್ಷಣೆಗೆ ಒತ್ತು ಕೊಟ್ಟರೆ ರಾಜ್ಯದ ಕೃಷಿಕರು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಿದೆ.
 ಹುಸೈನ್, ಮಂಗಳೂರು

ಜರ್ಮನಿಗೆ ಪೋರ್ಚುಗಲ್‌ನ ಸತ್ವಪರೀಕ್ಷೆ

Posted by JAYAKIRANA Kirana on | 0 comments | Leave a comment...

ಯೂರೋಕಪ್: ಹಾಲೆಂಡ್‌ಗೆ ಡೆನ್ಮಾರ್ಕ್ ಸವಾಲು
ಖಾರ್ಕಿವ್: ಯೂರೂ ಕಪ್ ಎರಡನೇ ದಿನವಾದ ಇಂದು ಎರಡು ಮೈನವಿರೇಳಿಸುವ ಪಂದ್ಯಗಳು ನಡೆಯಲಿವೆ. ಖಾರ್ಕಿವ್‌ನ ಮೆಟಲಿಸ್ಟ್ ಅಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ವಿಶ್ವಕಪ್‌ನ ರನ್ನರ್‌ಅಪ್ ಹಾಲೆಂಡ್ ಹಾಗೂ ಡೆನ್ಮಾರ್ಕ್ ನಡುವೆ ಹಣಾಹಣಿ ನಡೆಯಲಿದ್ದರೆ ಎಲ್ವಿವ್‌ನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ೨೦೦೮ರ ಯುರೋ ರನ್ನರ್‌ಅಪ್ ಜರ್ಮನಿ ಹಾಗೂ ಪೊರ್ಚುಗಲ್ ಮಧ್ಯೆ ರೋಚಕ ಹಣಾಹಣಿ ನಡೆಯಲಿದ್ದು, ಒಟ್ಟಿನಲ್ಲಿ ಅಭಿಮಾನಿಗಳಿಗೆ ಉತ್ತಮ ರಸದೌತನ ನೀಡುವುದರಲ್ಲಿ ಸಂಶಯವಿಲ್ಲ.
ಬೊಮೆಲ್, ರಾಬ್ ವೆನ್ ಪರ್ಸಿ, ಡರ್ಕ್ ಕೈಟ್, ಆರ್ಜೆನ್ ರೊಬೆನ್ ಹಾಗೂ ವೆಸ್ಲಿ ಸ್ನೈಡ್ಜರ್ ಮುಂತಾದ ಘಟಾನುಘಟಿ ಆಟಗಾರರನ್ನು ಹೊಂದಿರುವ ಹಾಲೆಂಡ್ ತಂಡ ಗೆಲ್ಲುವ ಫೆವರೇಟ್ ಎಂದು ಮೇಲ್ನೋಟದಲ್ಲೇ ಸಾಬೀತಾಗುತ್ತದೆ. ಅದರಲ್ಲೂ ಡರ್ಕ್‌ಕೈಟ್, ಪರ್ಸಿ ಹಾಗೂ ಸ್ನೈಡ್ಜರ್ ಪಂದ್ಯದ ಗತಿಯನ್ನೇ ಬದಲಾಯಿಸುವ ಸಾಮರ್ಥ ಹೊಂದಿದ್ದಾರೆ. ಅತ್ತ ಖ್ಯಾತನಾಮ ಆಟಗಾರರನ್ನು ಹೊಂದಿರದ ಡೆನ್ಮಾರ್ಕ್‌ನಲ್ಲಿ ಕೆಲವೊಂದು ಆಟಗಾರರು ಕೂಡ ಫಲಿತಾಂಶ ಬದಲಾಯಿಸುವ ಸಾಮರ್ಥ ಹೊಂದಿದ್ದಾರೆ. ತಂಡದ ಪ್ರಮುಕ ಸ್ಟ್ರೈಕರ್ ನಿಕೊಲಾಸ್ ಬೆನ್ಟ್ಡರ್ ಮೇಲೆ ಹೆಚ್ಚು ನಿರೀಕ್ಷೆ ಇದೆ.
ಇನ್ನು ಎರಡನೇ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್‌ಅಪ್ ಹಾಗೂ ಖ್ಯಾತ ಕೋಚ್ ಜೋಕಿಮ್ ಲಾಮ್ ನೇತೃತ್ವದ ಜರ್ಮನಿ ಬಲಿಷ್ಠ ಪೋರ್ಚುಗಲ್‌ನ ಸವಾಲು ಎದುರಿಸಲಿದೆ. ಮೈಕಲ್ ಬಲ್ಲಾಕ್ ಸೇವೆಯಿಂದ ಜರ್ಮನಿ ವಂಚಿತವಾದರೂ ಹಲವು ಪ್ರಸಿದ್ದ ಆಟಗಾರರು ತಂಡದಲ್ಲಿದ್ದಾರೆ. ಮುಖ್ಯವಾಗಿ ಖ್ಯಾತ ಗೋಲಿ ಮ್ಯಾನ್ಯುವಲ್ ನ್ಯೇರ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಅಲ್ಲದೆ ಸ್ಟ್ರೈಕರ್‌ಗಳಾದ ಮಿರೊಸ್ಲಾವ್ ಕ್ಲೋಸ್, ಪೊಡೊಲ್ಸ್‌ಕೀ, ಥೋಮಸ್ ಮುಲ್ಲರ್ ಗೋಲು ಗಳಿಸುವ ತುದಿಗಾಲಿನಲ್ಲಿದ್ದಾರೆ. ಅಲ್ಲದೆ ಡಿಫೆಂಡ್‌ನಲ್ಲಿ ಕಪ್ತಾನ ಫಿಲಿಮ್ ಲಾಮ್ ಕೂಡ ಇದ್ದಾರೆ. ಇನ್ನು ಅತ್ತ ಕಡೆ ಪೊರ್ಚುಗಲ್ ಕೂಡ ತಾನೇನು ಇತರರಿಗೆ ಕಡಿಮೆಯಿಲ್ಲ ಎಂಬಂತಿದೆ. ಮುಖ್ಯವಾಗಿ ಅದಕ್ಕೆ ಕ್ರಿಸ್ತಿಯಾನೊ ರೊನೊಲ್ಡೊ ತಂಡದಲ್ಲಿರುವುದು ಶ್ರೀರಕ್ಷೆಯೇ ಸರಿ. ಅಲ್ಲದೆ ಯುನೈಟೆಡ್ ನಾನಿ ಹಾಗೂ ಪೊಸ್ಟಿಗಾ ಕೂಡ ಪ್ರಮುಖ ಆಟಗಾರರಾಗಿದ್ದು, ಒಟ್ಟಿನಲ್ಲಿ ಇಂದಿನ ಎರಡೂ ಪಂದ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಲಿದೆ.

ಸೈನಾ ಸೆಮೀಸ್‌ಗೆ

Posted by JAYAKIRANA Kirana on | 0 comments | Leave a comment...

ಥಾಲ್ಯಾಂಡ್ ಓಪನ್ ಬ್ಯಾಡ್ಮಿಂಟನ್
ಬ್ಯಾಂಕಾಕ್: ಭರ್ಜರಿ ಫಾರ್ಮ್ ನಲ್ಲಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಥೈಲ್ಯಾಂಡ್ ಓಪನ್ ಗ್ರ್ಯಾಂಡ್ ಫ್ರಿಕ್ಸ್ ಗೋಲ್ಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಟೂರ್ನಿಯ ಸೆಮಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಸ್ಥಳೀಯ ಆಟಗಾರ್ತಿ ಸೆಪ್ಸಿರಿ ತೀರ ತಂಚಾಯಿ ವಿರುದ್ಧ ನೇರ ಅಂತರದ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.
ಪ್ರಥಮ ಸುತ್ತಿನಲ್ಲಿ ಸೈನಾ ಭರ್ಜರಿ ಪ್ರದರ್ಶನ ನೀಡಿ ಪ್ರಯಾಸಕಾರರಹಿತ ಜಯ ದಾಖಲಿಸಿದರೆ ಎರಡನೇ ಸುತ್ತಿನಲ್ಲಿ ಮಾತ್ರ ಥೈಲ್ಯಾಂಡ್ ಆಟಗಾರ್ತಿಯಿಂದ ಕಠಿಣ ಸವಾಲು ಎದುರಿಸಿದರು. ಆದರೂ ಪಟ್ಟುಬಿಡದ ಸೈನಾ ತನ್ನೆಲ್ಲಾ ಸಾಮರ್ಥ ಬಳಸಿ ಜಯದಾಖಲಿಸುವಲ್ಲಿ ಯಶಸ್ವಿ ಯಾದರು. ಅಂತಿಮವಾಗಿ ಸೈನಾ ಪಂದ್ಯವನ್ನು ೨೧-೧೦ ಹಾಗೂ ೨೨-೨೦ರ ಅಂತರದಲ್ಲಿ ಗೆಲ್ಲುವ ಮೂಲಕ ಸೆಮೀಸ್‌ಗೇರಿದರು.
ಸೆಮೀಸ್‌ನಲ್ಲಿ ಸೈನಾ ಒಂದಾ ಜಪಾನ್‌ನ ನೊಜೊಮಿ ಒಕುಹಾರ ಅಥವಾ ಥೈಲ್ಯಾಂಡ್‌ನ ಪೊರ್ನ್‌ಟಿಪ್ ವಿರುದ್ಧ ಹೋರಾಟ ನಡೆಸಲಿದ್ದು, ಈ ಪಂದ್ಯ ಇಂದು ನಡೆಯಲಿದೆ. ಉತ್ತಮ ಫಾರ್ಮ್‌ನಲ್ಲಿರುವ ಸೈನಾ ಈ ಪಂದ್ಯವನ್ನೂ ಕೂಡ ಗೆದ್ದು, ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದ್ದಾರೆ.

ವಿಶ್ವ ಟಿ-ಟ್ವೆಂಟಿ ಟೂರ್ನಿ ರಾಯಭಾರಿಯಾಗಿ ಲಸಿತ್ ಮಲಿಂಗಾ

Posted by JAYAKIRANA Kirana on | 0 comments | Leave a comment...

ದುಬೈ: ಟಿ-ಟ್ವೆಂಟಿ ಹಾಗೂ ಏಕದಿನ ಪಂದ್ಯಗಳಲ್ಲಿ ಪರಿಣಾಮಕಾರಿ ಬೌಲರ್ ಎಂದೇ ಖ್ಯಾತಿ ಗಳಿಸಿರುವ ಶ್ರೀಲಂಕಾ ತಂಡದ ಪ್ರಮುಖ ವೇಗದ ಬೌಲರ್ ಲಸಿತ್ ಮಲಿಂಗಾಗೆ ಐಸಿಸಿ ಉತ್ತಮ ರೀತಿಯಲ್ಲಿ ಸನ್ಮಾನಿಸಿದೆ. ಮುಂದೆ ಶ್ರೀಲಂಕಾದಲ್ಲಿ ನಡೆಯಲಿ ರುವ ವಿಶ್ವ ಟಿ-ಟ್ವೆಂಟಿ ಕೂಟಕ್ಕೆ ಮಲಿಂಗಾರನ್ನು ಐಸಿಸಿ ರಾಯಭಾರಿ ಯನ್ನಾಗಿ ನೇಮಕಗೊಳಿಸಿದೆ. ಸೆ. ೧೮ರಿಂದ ನಡೆಯ ಲಿರುವ ಟೂರ್ನಿ ಯಲ್ಲಿ ೧೨ ಪುರುಷರ ಹಾಗೂ ಎಂಟು ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. ಮಲಿಂಗಾ ಒಬ್ಬರು ವಿಶ್ವದ ಪ್ರಮುಖ ಆಟ ಗಾರ. ಪ್ರತೀ ಬಾರಿ ಅವರು ಚೆಂಡು ನಡೆಸಲು ತನ್ನ ವಿಶೇಷ ಸ್ಟೈಲ್ ನಲ್ಲಿ ಆಗಮಿಸುವಾಗ ಪಂದ್ಯದಲ್ಲೇನೋ ಕುತೂಹಲ ಅಡಗಿದೆ ಎಂದು ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡುತ್ತದೆ. ಅವರು ಈಗಾಗಲೇ ನಿರೀಕ್ಷೆ ಸೃಷ್ಟಿಸಿರುವ ಕೂಟಕ್ಕೆ ಇನ್ನಷ್ಟು ಮೆರಗು ತಂದುಕೊ ಡಲಿದ್ದಾರೆ ಎಂದು ವಿಶ್ವಾಸ ನಮಗಿದೆ ಎಂದು ಐಸಿಸಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾರೂನ್ ಲಾಗೋರ್ಟ್ ತಿಳಿಸಿದ್ದಾರೆ.

ಸಲಿಂಗಕಾಮಕ್ಕೆ ಜೈ ಎಂದ ವೀಣಾ ಮಲಿಕ್

Posted by JAYAKIRANA Kirana on | 0 comments | Leave a comment...

ಮುಂಬೈ: ಸಲಿಂಗ ಕಾಮಕ್ಕೆ ಮಡಿವಂತಿಕೆಯ ರಾಷ್ಟ್ರ ಭಾರತದಲ್ಲಿ ಸಾಕಷ್ಟು ವಿರೋಧವಿದೆ. ಈ ಪದವೇ ಇಲ್ಲಿ ನಿಷಿದ್ದ. ಆದರೆ ಸದ್ಯ ಕನ್ನಡದ ದಿ ಡರ್ಟಿ ಪಿಕ್ಚರ್’ನಲ್ಲಿ ಅಭಿನಯಿಸುತ್ತಿರುವ ಪಾಕಿಸ್ತಾನ ಮೂಲದ ನಟಿ ವೀಣಾ ಮಲಿಕ್ ಸಲಿಂಗ ಕಾಮಕ್ಕೆ ಜೈ ಅಂದಿದ್ದಾಳೆ.
ಕನ್ನಡ ಚಿತ್ರರಂಗದಲ್ಲಿ ಹಾಟ್ ಅಲೆ ಎಬ್ಬಿಸಿರುವ ಹೊಸ ಅಲೆಯ ಅಭಿನೇತ್ರಿ ವೀಣಾ ಮಲಿಕ್ ಸಲಿಂಗ ಕಾಮದ ಬಗ್ಗೆ ನಿರ್ಭಿತಿಯಿಂದ ಮಾತಿಗಿಳಿದಿದ್ದಾಳೆ. ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಅಶ್ಮಿತ ಪಟೇಲ್ ಜೊತೆ ಬಹಿರಂಗವಾಗಿ ಕಾಮನೆಗಳಲ್ಲಿ ತೊಡಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ವೀಣಾ ಮಲಿಕ್‌ಗೆ, ತಾವು ತೊಡುವ ಬಟ್ಟೆಗಳ ಮೇಲೆ ಅಲರ್ಜಿ ಎಷ್ಟಿದೆಯೋ, ಸಲಿಂಗ ಕಾಮದ ಬಗ್ಗೆ ಅಷ್ಟೇ ಆಸಕ್ತಿ ತೋರಿಸುತ್ತಿದ್ದಾರೆ. ಸಲಿಂಗ ಕಾಮ ಮಾತ್ರವಲ್ಲ ಸಲಿಂಗ ಕಾಮಿಗಳ ಮದುವೆಗೂ ಕಾನೂನು ಅವಕಾಶ ಮಾಡಿ ಕೊಡಬೇಕೆಂದು ಒತ್ತಾಯಿಸಿದ್ದಾಳೆ.
ಸಲಿಂಗಕಾಮಿಗಳನ್ನು ಬಹಿರಂಗವಾಗಿಯೇ ನಾನು ಬೆಂಬಲಿಸುತ್ತೇನೆ. ಇದರಲ್ಲಿ ಮುಜುಗರ ಪಡುವಂತಹುದು ಏನೂ ಇಲ್ಲ. ಸಲಿಂಗ ಕಾಮವನ್ನು ಬೆಂಬಲಿಸಲು ಹಿಂಜರಿಕೆಯೇಕೆ ಎಂದು ಪ್ರಶ್ನಿಸಿದ್ದಾಳೆ. ನಮ್ಮ ಸಮಾಜದಲ್ಲಿ ಸಲಿಂಗ ಕಾಮದ ಬಗ್ಗೆ ಜನರು ಕೂಡ ಮುಕ್ತವಾಗಿ ಹರಟುವಂತಾಗಬೇಕು, ಸಲಿಂಗ ಕಾಮವನ್ನು ಪಾಲಿಸಲು ಮುಂದಾಗುವವರಿಗೆ ಸಮಾಜದಲ್ಲಿ ಮುಕ್ತ ಅವಕಾಶ ನೀಡಬೇಕಿದೆ. ನಾಗರಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವವರು ಸಲಿಂಗ ಕಾಮಿಗಳ ಹಕ್ಕಿಗಾಗಿ ಬಹುದೊಡ್ಡ ಹೆಜ್ಜೆ ಇಡಬೇಕಾಗಿದೆ. ನಮ್ಮ ನಡವಳಿಕೆ ಬದಲಾಗಬೇಕಾಗಿದೆ ಎಂದು ವೀಣಾ ಮಲಿಕ್ ನುಡಿದಿದ್ದಾಳೆ. ಈ ಹಾಟ್ ನಟಿಯ ಸಲಿಂಗ ಕಾಮದ ಪರವಾದ ಹೇಳಿಕೆ ಭಾರತದ ಸಲಿಂಗ ಕಾಮಿಗಳ ಪಾಲಿಗೆ ದೊಡ್ಡ ಬೆಂಬಲ ಎನ್ನುವುದರಲ್ಲಿ ಎರಡು ಮಾತಿಲ್ಲ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4077) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1461) donation (1) dvs (21) election (1) encounter (1) epaper (2528) epapr (2) escape (2) eshwarappa (6) facebook (1) fariyad (8) fea (1) feature (2303) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (39) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (151) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (95) kyandi (1) lekhana (262) ln (1) lnews (3700) lokayukta (3) madikeri (1) maleria (1) mangalore (599) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (153) mlore (713) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (421) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (811) srinivaspoojary (1) srinivasshetty (1) sslc (2) suicide (2) sulia (4) sullia (209) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (959) tpchandrashekaran (1) traffic (1) train (1) udu (1) udupi (491) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)