ಮನಪಾ ಹೆಸರಿನಲ್ಲಿ ಬೇನಾಮಿಗಳಿಂದ ಹಣ ಸಂಗ್ರಹ: ಸಿಐಟಿಯು

Posted by JAYAKIRANA Kirana on Thursday, 7 June 2012 | 0 comments | Leave a comment...

ಮಂಗಳೂರು: ಮಹಾನಗರ ಪಾಲಿಕೆಯ ಹೆಸರಿನಲ್ಲಿ ಬೇನಾಮಿ ವ್ಯಕ್ತಿಗಳು ಬೀದಿ ಬದಿ ವ್ಯಾಪಾರಸ್ಥರಿಂದ ಹಣ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ಮನಪಾ ಮೊದಲು ತನಿಖೆ ನಡೆಸಬೇ ಕಾಗಿದೆ ಎಂದು ಬೀದಿ ಬದಿ ವ್ಯಾಪಾ ರಸ್ಥರ ಸಂಘದ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.
ಮಂಗಳೂರು ಮನಪಾಗೆ ನಾನು ಲಂಚದ ಹಣ ನೀಡುತ್ತಿದ್ದೇನೆ ಎಂದು ಪಾನಿಪುರಿ ವ್ಯಾಪಾರಿ ಇದೇ ಕಾರಣ ದಿಂದ ಹೇಳಿಕೆ ನೀಡಿರುವುದಾಗಿ ತಿಳಿ ಸಿದ ಸುನೀಲ್ ಅವರು ಪಾನಿಪುರಿ ವ್ಯಾಪಾರಿಯ ಈ ಹೇಳಿಕೆ ಖಂಡನಾರ್ಹ ವಾದರೂ ಈ ಕಾರಣದಿಂದ ನಗರದ ಎಲ್ಲಾ ಪಾನಿಪುರಿ ವ್ಯಾಪಾರಸ್ಥರ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದಿ ದ್ದಾರೆ. ಉರ್ವಾಸ್ಟೋರ್ ಬಳಿ ಇರುವ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರಿಂದ ನಾಲ್ಕು ಮಂದಿಯ ತಂಡವೊಂದು ಮನಪಾ ಹೆಸರಿನಲ್ಲಿ ಹಣ ಸಂಗ್ರಹಿಸು ತ್ತಿದೆ. ಇದು ಇಲ್ಲಿನ ಮಾರುಕಟ್ಟೆ ಉಸ್ತು ವಾರಿ ನೋಡಿಕೊಂಡಿರುವ ಅಶ್ರಫ್ ಎಂಬವರ ಗಮನಕ್ಕೂ ಬಂದಿದೆ. ಈ ಪ್ರಕರಣ ಕಳೆದ ಕೆಲ ಸಮಯದಿಂದ ನಡೆಯುತ್ತಾ ಬರುತ್ತಿದೆ. ಹೀಗಿದ್ದರೂ ಈ ಬಗ್ಗೆ ಮನಪಾಕ್ಕೆ ಯಾವುದೇ ಮಾಹಿತಿ ಇಲ್ಲದ ಕಾರಣ ಈ ಗೊಂದಲ ಉಂಟಾಗಿದೆ ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ. ಹೀಗಾಗಿ ಕಳೆದ ೧೫ ವರು ಷದಿಂದ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಪಾನಿಪುರಿ ವ್ಯಾಪಾರಿಗಳ ಮೇಲೆ ಮನಪಾ ಸವಾರಿ ನಡೆಸಿರುವುದನ್ನು ತಾವು ಖಂಡಿಸುವುದಾಗಿ ತಿಳಿಸಿದ್ದಾರೆ.

ಇಳಂತಿಲ ಎನ್ಮಾಡಿ ಪರಿಸರದಲ್ಲಿ ಡೆಂಗ್ಯೂ ಭೀತಿ

Posted by JAYAKIRANA Kirana on | 0 comments | Leave a comment...

ಪುತ್ತೂರು: ಇಳಂತಿಲ ಎನ್ಮಾಡಿ ಪರಿಸರದಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಈಗಾಗಲೇ ಹಲವು ಮಂದಿಗೆ ಜ್ವರದಿಂದ ಪುತ್ತೂರು ಮತ್ತು ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮುಂಜಾಗೃತ ಕ್ರಮಕ್ಕಾಗಿ ನಿನ್ನೆ ಬೆಳ್ತಂಗಡಿ ತಹಶೀಲ್ದಾರ್ ಕುಸುಮಾ ಕುಮಾರಿಯವರು ಎನ್ಮಾಡಿ ಪರಿಸರಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಇಳಂತಿಲ ಗ್ರಾ.ಪಂ ಅಧ್ಯಕ್ಷ ಎ.ಮನೋಹರ್ ಕುಮಾರ್ ಕೂಡ ಇದ್ದು, ಈ ಬಗ್ಗೆ ಇಂದು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಇಳಂತಿಲ ಗ್ರಾ.ಪಂ.ವತಿಯಿಂದ ಎನ್ಮಾಡಿ ಪ್ರದೇಶದಲ್ಲಿ ಫಾಗಿಂಗ್ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎಸ್‌ಐಗೆ ಕಮಿಷನರ್ ರಕ್ಷಣೆ: ಪಿಯುಸಿಎಲ್ ಆರೋಪ

Posted by JAYAKIRANA Kirana on | 0 comments | Leave a comment...

ಮಂಗಳೂರು: ವಿಚಾರಣೆಯ ನೆಪದಲ್ಲಿ ಠಾಣೆಯಲ್ಲಿ ಅನಾಗರಿಕ ರೀತಿಯಲ್ಲಿ ಹಿಂಸಿಸಿ, ಮಾನವ ಹಕ್ಕು ಆಯೋಗದಿಂದ ತಪ್ಪಿತಸ್ಥ ಅಧಿಕಾರಿ ಎಂದು ಗುರುತಿಸಲ್ಪಟ್ಟ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ಅವರನ್ನು ಪೊಲೀಸ್ ಆಯು ಕ್ತರೇ ರಕ್ಷಿಸುತ್ತಿದ್ದಾರೆಂದು ಪಿಯುಸಿಎಲ್ ಆರೋಪಿಸಿದೆ.
೨೦೧೦ ನೇ ಜೂನ್ ೨ ರಂದು ಅಡ್ಯಾರು ನಿವಾಸಿ ಜುಸ್ತಿನ್ ವಾಸ್, ಜೋಯಲ್ ವಾಸ್, ಮತ್ತು ಗಂಗಾಧರ ಶೆಟ್ಟಿ ಅವರನ್ನು ಜಾಗದ ತಕರಾರಿಗೆ ಸಂಬಂಧಿಸಿ ವಿಚಾರಣೆಗಾಗಿ ಠಾಣೆಗೆ ಕರೆತಂದ ಅಂದಿನ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್, ಗಂಗಾಧರ ಶೆಟ್ಟಿ ಮತ್ತು ಜುಸ್ತಿನ್ ವಾಸ್ ಅವರನ್ನು ಎದುರು ಬದುರಾಗಿ ನಿಲ್ಲಿಸಿ ಪರಸ್ಪರರ ಮರ್ಮಾಂಗದ ಕೂದಲನ್ನು ಕೀಳಿಸಿ ಅನಾಗರಿಕವಾಗಿ ಹಿಂಸಿಸಿದ್ದಾರೆಂದು ಜುಸ್ತಿನ್ ವಾಸ್ ಅವರ ಪುತ್ರ ಜೋಯಲ್ ವಾಸ್ ರಾಜ್ಯ ಮಾನವಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದರು. ಡಿಸಿಪಿ ರಮೇಶ್ ಅವರ ಮೂಲಕ ತನಿಖೆಯನ್ನು ನಡೆಸಿತ್ತು. ತನಿಖೆ ನಡೆಸಿದ ಡಿಸಿಪಿ ರಮೇಶ್ ಅವರು ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ಅಮಾನವೀಯವಾಗಿ ವರ್ತಿಸಿರುವುದು ಕಂಡು ಬಂದಿರುವುದಾಗಿ ತನಿಖಾ ವರದಿಯಲ್ಲಿ ತಿಳಿಸಿದ್ದರು.
ಇದರ ಆಧಾರದಲ್ಲಿ ಆದೇಶ ನೀಡಿದ ಮಾನವಹಕ್ಕು ಆಯೋಗ ನೊಂದವರಿಗೆ ಪರಿಹಾರ ನೀಡಬೇಕೆಂದು ಆದೇಶ ನೀಡಿತ್ತು. ಆದರೆ ಇಲ್ಲಿಯ ತನಕವೂ ಸಂಬಂಧಪಟ್ಟವರಿಗೆ ಪರಿಹಾರ ಸಿಕ್ಕಿಲ್ಲವೆಂದು ಪಿಯುಸಿಎಲ್ ಸಂಘಟನೆ ಆರೋಪಿಸಿದೆ.

ಕ್ವಿಟ್ಟೊವಾಗೆ ಸೋಲು; ಫೈನಲ್‌ನಲ್ಲಿ ಶರಪೋವಾ-ಸಾರಾ ಹೋರಾಟ

Posted by JAYAKIRANA Kirana on | 0 comments | Leave a comment...



ಬರ್ತ್‌ಡೇ ಬಾಯ್ ಮಹೇಶ್-ಸಾನಿಯಾ ಮುಡಿಗೆ ಫ್ರೆಂಚ್ ಮಿಕ್ಸ್‌ಡ್ ಗರಿ
ಪ್ಯಾರಿಸ್: ನಿನ್ನೆಯ ಪ್ಯಾರಿಸ್ ಓಪನ್ ಭಾರತೀಯರ ಪಾಲಿಗೆ ಅತ್ಯುನ್ನತ ದಿನವಾಗಿತ್ತು. ಭಾರತದ ಮಹೇಶ್ ಭೂಪತಿ ಹಾಗೂ ಸಾನಿಯಾ ಮಿರ್ಜಾ ಜೋಡಿ ಪ್ರತಿಷ್ಟಿತ ಪ್ಯಾರಿಸ್ ಓಪನ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಮೂಡಿಬರುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಭೂಪತಿಯವರ ೩೮ನೇ ಹುಟ್ಟುಹಬ್ಬದಂದೇ ಇದು ಬಂದಿರುವುದು ವಿಶೇಷ. ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟ್ಟೊವಾಗೆ ಸೋಲುಣಿಸಿ ರಶ್ಯಾದ ಮರಿಯಾ ಶರಪೋವಾ ಫೈನಲ್‌ಗೇರಿದ್ದು, ಇಲ್ಲಿ ಸಮಂತಾ ಸ್ಟೊಸರ್ ವಿರುದ್ಧ ಗೆಲುವು ಸಾಧಿಸಿದ್ದ ಇಟಲಿಯ ಸಾರಾ ಇರ್ರಾನಿ ವಿರುದ್ಧ ಕಾದಾಡಲಿದ್ದಾರೆ.
ಮೆಕ್ಸಿಕೊದ ಸ್ಯಾಂಟಿಗೊ ಗೊನ್ಝಾಲೆಸ್ ಹಾಗೂ ಪೊಲೆಂಡ್‌ನ ಕ್ಲೌಡಿಯಾ ಜೆನ್ಸ್ ವಿರುದ್ಧ ೭-೬ ಹಾಗೂ ೬-೧ರ ಅಂತದಲ್ಲಿ ಗೆಲ್ಲುವ ಮೂಲಕ ಮಹೇಶ್-ಸಾನಿಯಾ ಜೋಡಿ ಫ್ರೆಂಚ್ ಟೂರ್ನಿಯನ್ನು ತನ್ನ ವಶಕ್ಕೆ ಮಾಡಿತು. ಇನ್ನು ಕ್ವಿಟ್ಟೊವಾ ವಿರುದ್ಧ ೬-೩, ೬-೩ ಅಂತರದಲ್ಲಿ ಗೆಲುವು ಸಾಧಿಸಿ ಶರಪೋವಾ ಫೈನಲ್‌ಗೇರಿದ್ದು, ಇಲ್ಲಿ ಆಸೀಸ್‌ನ ಸಮಂತಾ ಸ್ಟೊಸರ್ ವಿರುದ್ಧ ೭-೫, ೧-೬, ೬-೩ರ ಅಂತರದಲ್ಲಿ ಗೆದ್ದುಕೊಂಡಿದ್ದ ಸಾರಾ ವಿರುದ್ಧ ಕಾದಾಟ ನಡೆಸಲಿದ್ದಾರೆ.

ಏಕದಿನ ಸರಣಿಯಲ್ಲಿ ಪಾಕ್ ಶುಭಾರಂಭ

Posted by JAYAKIRANA Kirana on | 0 comments | Leave a comment...

ಸಮಿ-ಗುಲ್ ದಾಳಿಗೆ ಕಂಗಾಲಾದ ಲಂಕಾ
ಪಳ್ಳೆಕೆಲೆ: ಮೊಹ್ಮದ್ ಸಮಿ ಹಾಗೂ ಉಮರ್ ಗುಲ್ ನಡೆಸಿದ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಇಲ್ಲಿ ಶ್ರೀಲಂಕಾ ವಿರುದ್ಧ ಆರಂಭವಾದ ಐದು ಏಕದಿನ ಸರಣಿಯ ಪ್ರಥಮ ಪಂದ್ಯದಲ್ಲಿ ಡಕ್‌ವರ್ತ್ ಲೂಹಿಸ್ ನಿಯಮದ ಪ್ರಕಾರ ಆರು ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ೧-೦ಯ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಟಾಸ್ ಗೆದ್ದ ಲಂಕಾ ಮೊದಲು ಬ್ಯಾಟಿಂಗ್ ನಡೆಸಿತು. ಆದರೆ ಪಂದ್ಯ ಆರಂಭವಾದ ಕೆಲಹೊತ್ತಿನಲ್ಲೇ ಮಳೆ ಅಡ್ಡಿಯಾದ ಹಿನ್ನೆಲೆಯಲ್ಲಿ ೪೨ ಓವರ್‌ಗೆ ಪಂದ್ಯವನ್ನು ನಿಗದಿಪಡಿಸಲಾಯಿತು. ಆದರೆ ತಂಡ ಉಮರ್ ಗುಲ್ ಹಾಗೂ ಮೊಹ್ಮದ್ ಸಮಿ ಬೌಲಿಂಗ್‌ನಲ್ಲಿ ತೀವ್ರ ರೀತಿಯಲ್ಲಿ ದಂಡನೆಗೊಳಪಟ್ಟಿತು. ಅಗ್ರಕ್ರಮಾಂಕದ ನಾಲ್ವರು ಆಟಗಾರರಾದ ಜಯವರ್ಧನೆ, ದಿಲ್ಶಾನ್, ಸಂಗಾಕ್ಕರ ಹಾಗೂ ಚಾಂದಿಮಾಲ್ ಎರಡಂಕೆ ಮೊತ್ತವನ್ನು ಪೇರಿಸಲು ವಿಫಲವಾಗಿದ್ದು, ಬ್ಯಾಟಿಂಗ್ ವೈಫಲ್ಯಕ್ಕೆ ಕನ್ನಡಿ ಹಿಡಿದಂತಿತ್ತು. ಆದರೆ ಅಂತಿಮ ಹಂತದಲ್ಲಿ ತಿರುಮಣ್ಣೆ ಪೇರಿಸಿದ ಅಜೇಯ ಆಟದ ನೆರವಿನಿಂದ ತಂಡ ನಿಗದಿತ ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ೧೩೫ ರನ್‌ಗಳ ಪ್ರಯಾಸಕರ ಮೊತ್ತ ಗಳಿಸಿತು. ಗುಲ್ ಹಾಗೂ ಸಮಿ ತಲಾ ಮೂರು ವಿಕೆಟ್ ಪಡೆದರು.
ಗುರಿ ಬೆನ್ನತಿದ್ದ ಪಾಕ್ ಕೂಡ ಆರಂಭಿಕ ಆಘಾತ ಕಂಡರೂ ೩೪.೧ ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೧೩೫ ರನ್ ಗಳಿಸಿ ಜಯದಾಖಲಿಸಿತು. ಅಜರ್ ಅಲಿ ಹಾಗೂ ಯೂನಿಸ್ ಖಾನ್‌ರನ್ನು ತಂಡ ಬೇಗನೇ ಕಳಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಮಿಸ್ಬಾ ಉಲ್ ಹಕ್ ೩೦ ರನ್ ಗಳಿಸಿದರು. ಆದರೆ ಉಮರ್ ಅಕ್ಮಲ್ ಅಜೇಯ ೩೬ ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಲಂಕಾ ಪರ ಕುಲಶೇಕರ ಒಂದು ವಿಕೆಟ್ ಪಡೆದರು.

ಆತಿಥೇಯ ಪೋಲೆಂಡ್‌ಗೆ ಗ್ರೀಸ್ ಸೆಡ್ಡು

Posted by JAYAKIRANA Kirana on | 0 comments | Leave a comment...

ಇಂದಿನಿಂದ ಪ್ರತಿಷ್ಠಿತ ಯುರೋಕಪ್ ಫುಟ್ಬಾಲ್‌ಗೆ ಚಾಲನೆ
ವಾರ‍್ಸಾ: ಇಂದಿನಿಂದ ಫುಟ್ಬಾಲ್ ಪ್ರಿಯರಿಗೆ ಭರಪೂರ ಮನೋರಂಜನೆಯನ್ನು ಒದಗಿಸುವ ಪ್ರತಿಷ್ಟಿತ ಯುರೋ ಕಪ್‌ಗೆ ಇಂದಿನಿಂದ ಚಾಲನೆ ದೊರಕಲಿದೆ. ಇಂದು ನಡೆಯುವ ಆರಂಭಿಕ ಪಂದ್ಯದಲ್ಲಿ ಗ್ರೀಸ್ -ಆತಿಥೇಯ ಪೊಲ್ಯಾಂಡ್ ನಡುವೆ ಕಾದಾಡಲಿದ್ದರೆ ಎರಡನೇ ಪಂದ್ಯದಲ್ಲಿ ರಶ್ಯಾಗೆ ಜೆಕ್ ಗಣರಾಜ್ಯ ಕಠಿಣ ಸವಾಲು ನೀಡುವಲ್ಲಿ ತುದಿಗಾಲಲ್ಲಿ ನಿಂತಿದೆ. ಇತ್ತೀಚಿಗೆ ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿರುವ ಗ್ರೀಸ್ ತಂಡ ಸಮಸ್ಯೆಯ ಸುಳಿಯಲ್ಲಿಯೇ ಪಂದ್ಯವಾಡಲು ವಾರ‍್ಸಾಗೆ ಆಗಮಿಸಿದ್ದು, ಇಲ್ಲಿ ಅದು ಕಠಿಣ ಹೋರಾಟವನ್ನೇ ಎದುರಿಸುತ್ತಿದೆ.
ನಾವೀಗ ಸಂಪೂರ್ಣ ಹೊಸತಂಡವಾಗಿದ್ದು, ಹೊಸ ನಿರೀಕ್ಷೆಗಳೊಂದಿಗೆ ಆಗಮಿಸಿದ್ದೇವೆ. ಭರ್ಜರಿ ಕೂಟದಕ್ಕೆ ನಾವು ಉತ್ತಮ ರೀತಿಯಲ್ಲಿ ಸಜ್ಜಾಗಿದ್ದೇವೆ ಎಂದು ಗ್ರೀಸ್‌ನ ಪ್ರಮುಖ ಸ್ಟ್ರೈಕರ್ ಜೊರ್ಜಿಸ್ ಸಮರಾಸ್ ತಿಳಿಸಿದ್ದಾರೆ. ಅತ್ತ ಆತಿಥೇಯ ಪೊಲ್ಯಾಂಡ್ ಪಂದ್ಯ ತವರಿನಲ್ಲೇ ನಡೆಯಲಿರುವುದರಿಂದ ಉತ್ತಮ ಆತ್ಮವಿಶ್ವಾಸದಲ್ಲಿದೆ. ಇನ್ನುಳಿದಂತೆ ಮತ್ತೊಂದು ಪಂದ್ಯದಲ್ಲಿ ರಶ್ಯಾದ ಹಾಗೂ ಜೆಕ್ ಗಣರಾಜ್ಯ ಕೂಡ ಉತ್ತಮ ಹೋರಾಟ ಪ್ರದರ್ಶಿಸುವ ನಿರೀಕ್ಷೆಯಲ್ಲಿದೆ. ಮುಖ್ಯವಾಗಿ ರಶ್ಯಾ ತಂಡಕ್ಕೆ ಅತ್ಯದ್ಭುತ ಆಟಗಾರ ಅಶ್ರಾವಿನ್ ನಾಯಕತ್ವವಿರುವುದು ಅದರ ನಿರೀಕ್ಷೆಯನ್ನು ಹೆಚ್ಚಿಸಿದೆ.

ಕ್ವಾರ್ಟರ‍್ಸ್ ಪ್ರವೇಶಿಸಿದ ಸೈನಾ

Posted by JAYAKIRANA Kirana on | 0 comments | Leave a comment...

ಥಾಲ್ಯಾಂಡ್ ಓಪನ್ ಬ್ಯಾಡ್ಮಿಂಟನ್
ಬ್ಯಾಂಕಾಕ್: ಇಲ್ಲಿ ನಡೆಯುತ್ತಿ ರುವ ಥ್ಯಾಂಲ್ಯಾಂಡ್ ಓಪನ್ ಗ್ರ್ಯಾಂಡ್ ಫ್ರಿಕ್ಸ್ ಗೋಲ್ಡ್ ಟೂರ್ನಿಯಲ್ಲಿ ಭಾರತದ ಭರವಸೆಯ ಆಟಗಾರ್ತಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಚೀನಾದ ಲೀ ಹಾನ್ ವಿರುದ್ಧ ನೇರ ಅಂತರದ ಜಯಸಾಧಿಸುವ ಮೂಲಕ ಭಾರತದ ಅಗ್ರಶ್ರೇಯಾಂಕದ ಆಟಗಾರ್ತಿ ಟೂರ್ನಿಯಲ್ಲಿ ಮುನ್ನಡೆದಿ ದ್ದಾರೆ.
ವಿಶ್ವದ ಐದನೇ ಶ್ರೇಯಾಂಕದ ಸೈನಾ ಹಾನ್ ವಿರುದ್ಧದ ಪಂದ್ಯವನ್ನು ತನ್ನಪರವಾಗುವಂತೆ ಮಾಡಲು ಕೇವಲ ೪೫ ನಿಮಿಷಗಳಷ್ಟನ್ನೇ ತೆಗೆದು ಕೊಂಡರು. ಪಂದ್ಯವನ್ನು ಸೈನಾ ೨೧-೧೭ ಹಾಗೂ ೨೧-೧೩ರ ಭರ್ಜರಿ ಅಂತರದಲ್ಲಿ ಗೆಲ್ಲುವ ಸಾಧಿಸಿದರು. ಸೈನಾ ತನ್ನ ಮುಂದಿನ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಥ್ಯಾಲ್ಯಾಂಡ್‌ನ ಸೆಪ್ಸಿರಿ ತೀರಥಾನ್ಚೈ ವಿರುದ್ಧ ಹೋರಾಟ ನಡೆಸಲಿದ್ದಾರೆ. ಸೆಪ್ಸಿರಿ ತನ್ನ ಹಿಂದಿನ ಪಂದ್ಯದಲ್ಲಿ ಜಪಾನ್‌ನ ಕಾರಿ ಇಮಬೆಪ್ಪು ವಿರುದ್ಧ ಜಯಗಳಿಸಿದ್ದರು.

ಅಂಪಾಯರಿಂಗ್‌ನಿಂದ ದೂರ ಸರಿದ ಬಿಲ್ಲಿ ಡಾಕ್ಟ್ರೊವ್

Posted by JAYAKIRANA Kirana on | 0 comments | Leave a comment...

ಲಂಡನ್: ವಿಶ್ವದ ಖ್ಯಾತ ಅಂಪಾಯರ್‌ಗಳಲ್ಲಿ ಒಬ್ಬರಾಗಿದ್ದ ವೆಸ್ಟ್ ಇಂಡೀಸ್‌ನ ಬಿಲ್ಲಿ ಡಾಕ್ಟ್ರೊವ್ ನಿನ್ನೆ ಐಸಿಸಿ ಎಲೈಟ್ ಪ್ಯಾನೆಲ್‌ಗೆ ನಿವೃತ್ತಿ ಘೋಷಿ ಸಿದ್ದಾರೆ. ಈ ಮೂಲಕ ಬಿಲ್ಲಿ ತನ್ನ ೧೪ ವರ್ಷಗಳ ಅಂಪಾಯರಿಂಗ್ ಬದುಕಿಗೆ ಅರ್ಥಪೂರ್ಣ ವಿದಯಾ ಹೇಳಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಐಸಿಸಿ ಜೊತೆ ಬಿಲ್ಲಿ ಮಾಡಿಕೊಂಡಿದ್ದ ಒಪ್ಪಂದ ಅಂತ್ಯಗೊಳ್ಳಲಿದೆ. ಆದರೆ ಒಪ್ಪಂದವನ್ನು ವಿಸ್ತರಿಸದಿರಲು ಬಿಲ್ಲಿ ನಿರ್ಧರಿಸಿದ್ದು, ಹಾಗಾಗಿ ಕ್ರಿಕೆಟ್‌ನಿಂದ ದೂರಸರಿಯಲಿದ್ದಾರೆ. ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಹಾಗೂ ಟೆಸ್ಟ್ ಸರಣಿಗೆ ಬಿಲ್ಲಿ ಅಧಿಕೃತ ಅಂಪಾಯರ್ ಆಗಿ ನೇಮಕಗೊಂಡಿದ್ದರು. ಆದರೆ ಕುಟುಂಬದ ಕಾರಣವೊಡ್ಡಿ ಬಿಲ್ಲಿ ತವರಿಗೆ ಮರಳಿದ್ದು, ಈಗ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಅವರು ಕಾರ್ಯನಿರ್ವಹಿಸಿದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಬಿಲ್ಲಿ ಕೇವಲ ಅಂತಾರಾಷ್ಟ್ರೀಯ ಪಂದ್ಯವಲ್ಲದೆ ಪ್ರತಿಷ್ಟಿತ ಐಪಿಎಲ್ ಸೇರಿದಂತೆ ಅನೇಕ ಕ್ಲಬ್ ಪಂದ್ಯಗಳಲ್ಲೂ ಕಾರ್ಯನಿರ್ವಹಿಸಿದ್ದರು.

ಹಠಾತ್ ಬ್ರೇಕ್‌ಗೆ ಲಾರಿ ನಿರ್ವಾಹಕ ದಾರುಣ ಬಲಿ; ಚಾಲಕ ಗಂಭೀರ

Posted by JAYAKIRANA Kirana on | 0 comments | Leave a comment...


ಕಾಪು: ಇಲ್ಲಿಯ ಠಾಣಾ ವ್ಯಾಪ್ತಿಯ ಹಳೆ ಮಾರಿಯಮ್ಮ ದೇವಳದ ಎದುರು ರಾ.ಹೆದ್ದಾರಿ ೬೬ರಲ್ಲಿ ಲಾರಿಯೊಂದರ ಚಾಲಕ ಹಠಾತ್ ಬ್ರೇಕ್ ಹಾಕಿದಾಗ ಅದರಲ್ಲಿದ್ದ ಕಬ್ಬಿಣದ ಪೈಪುಗಳು ಮುಂದೆ ಸರಿದು ನಿರ್ವಾಹಕ ಸ್ಥಳದಲ್ಲಿಯೇ ಮೃತಪಟ್ಟು, ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಘಟನೆಯ ವಿವರ: ಮಹಾರಾಷ್ಟ್ರ ದಿಂದ ಸ್ಟೀಲ್ ಪೈಪು ಹೇರಿಕೊಂಡು ಮಂಗಳೂರಿನ ಎಂಆರ್‌ಪಿಎಲ್‌ಗೆ ಹೊರಟ ವೋಲ್ವೋ ಲಾರಿಯ ಚಾಲಕ ಮಹಾರಾಷ್ಟ್ರ ಮೂಲದ ಸಂತೋಷ್ ಗುಳೆ, ಕಾಪು ಹಳೇ ಮಾರಿಯಮ್ಮ ದೇವಳದ ಎದುರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತನ್ನದೇ ಕಂಪೆನಿಯ ಲಾರಿಯೊಂದು ನಿಂತಿದ್ದನ್ನು ಕಂಡ ಆತ ಪಕ್ಕನೇ ಬ್ರೇಕ್ ಹಾಕಿದ. ಪವರ್ ಬ್ರೇಕ್ ಆದ ಪರಿಣಾಮ ಲಾರಿಯಲ್ಲಿದ್ದ ಪೈಪು ಮುಂಭಾಗಕ್ಕೆ ಸರಿಯಿತು. ಪೈಪ್‌ಗಳು ಒಮ್ಮೆಲೇ ಮುಂದೆ ಸರಿದ ಪರಿಣಾಮ ನಿರ್ವಾಹಕ ರಾಹುಲ್ ಗುಳೆ(೩೦) ಸ್ಥಳದಲ್ಲಿಯೇ ಪೈಪ್ ಮತ್ತು ಕ್ಯಾಬಿನ್ ಮಧ್ಯೆ ಸಿಕ್ಕಿ ಹಾಕಿಕೊಂಡು ದಾರುಣವಾಗಿ ಮೃತಪಟ್ಟಿದ್ದಾನೆ. ಪೈಪ್‌ಗಳು ಮುಂಬದಿಗೆ ಜಾರಿದ ಪರಿಣಾಮ ಲಾರಿಯ ಕ್ಯಾಬಿನ್ ಸಂಪೂರ್ಣ ಹೊರಬಂದಿದೆ.
 ಬೆಳಿಗ್ಗೆ ೮-೪೫ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ೧೦-೩೦ರವರೆಗೆ ಚಾಲಕ ಸಂತೋಷ್ ಪೈಪ್ ಮತ್ತು ಕ್ಯಾಬಿನ್ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದ. ಸ್ಥಳೀಯರು ಹರಸಾಹಸ ನಡೆಸಿದರೂ, ಚಾಲಕನನ್ನು ಹೊರ ತೆಗೆಯಲಾರದ ಪರಿಸ್ಥಿತಿ ನೆಲೆಸಿತ್ತು. ನಂತರ ಜೆಸಿಬಿ ತರಿಸಿ ಮುಂಭಾಗ ದಲ್ಲಿದ್ದ ಪೈಪ್‌ಗಳನ್ನು ಮೇಲಕ್ಕೆತ್ತುವ ಮೂಲಕ ಚಾಲಕ ಹಾಗೂ ನಿರ್ವಾಹಕನನ್ನು ಹೊರ ತೆಗೆಯಲಾಯಿತು. ತೀವ್ರ ಗಾಯಗೊಂಡ ಚಾಲಕ ಸಂತೋಷ್‌ನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಪು ವೃತ್ತ ನಿರೀಕ್ಷಕ ಶಿವಾನಂದ ವಾಲೀಕರ್, ಠಾಣಾಧಿಕಾರಿ ಅರ್ಚನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಈ ಸಂದರ್ಭ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ವಾಗಿದ್ದು, ಕಾಪು ಪೊಲೀಸರು ವಾಹನಗಳನ್ನು ಒಳ ರಸ್ತೆಯಲ್ಲಿ ಕಳುಹಿಸುತ್ತಿದ್ದುದು ಕಂಡು ಬಂದಿದೆ.

ಪೊಲೀಸ್ ಇಲಾಖೆಯನ್ನು ಕಾಡುತ್ತಿರುವ ಸಿಬ್ಬಂದಿ ಕೊರತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪೊಲೀಸ್ ಕಮಿಷನರೇಟ್ ವ್ಯವಸ್ಥೆ ಬಂದ ಬಳಿಕವೂ ನಗರದಲ್ಲಿ ಅಪಘಾತ ಮತ್ತು ವಾಹನ ಸಂಚಾರ ತಡೆ ಉಂಟಾಗಲು ಸಂಚಾರಿ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಕಾಡು ತ್ತಿರುವುದೇ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.
ಪೊಲೀಸ್ ಕಮಿಷನರೇಟ್ ವ್ಯವಸ್ಥೆ ಬಂದ ಬಳಿಕ ಪ್ರತಿ ಠಾಣೆಯಲ್ಲಿ ೪೦ ಪೊಲೀಸ್ ಸಿಬ್ಬಂದಿಯ ಅಗತ್ಯವಿದ್ದರೂ ಹೆಚ್ಚಿನ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಕದ್ರಿ ಸಂಚಾರಿ ಠಾಣೆಯಲ್ಲಿ ೪೦ ಮಂದಿ ಸಿಬ್ಬಂದಿಯ ಅಗತ್ಯವಿದ್ದರೂ ಇಲ್ಲಿರುವುದು ಕೇವಲ ೨೨ ಮಂದಿ ಸಿಬ್ಬಂದಿ ಮಾತ್ರ. ಕದ್ರಿ ಸಂಚಾರಿ ಠಾಣೆಗೆ ಒಟ್ಟು ೧೧ ಟ್ರಾಫಿಕ್ ಪಾಯಿಂಟ್‌ಗಳಿದ್ದು ಪ್ರತಿಯೊಂದಕ್ಕೂ ಇಬ್ಬರು ಸಿಬ್ಬಂದಿ ನೇಮಿಸುವುದು ಅಗತ್ಯವಾಗಿದೆ. ಹೀಗೆ ಇಬ್ಬರನ್ನು ಒಂದು ಟ್ರಾಫಿಕ್ ಪಾಯಿಂಟ್‌ಗೆ ನೇಮಿಸಿದರೆ ಸಿಬ್ಬಂದಿ ಕೊರತೆ ಕಂಡು ಬರುತ್ತದೆ. ಹೀಗಾಗಿ ಕಳೆದ ಬುಧವಾರ ಶಿವಭಾಗ್ ಬಳಿ ಅಪಘಾತ ನಡೆದಾಗ ಸಕಾಲದಲ್ಲಿ ಸ್ಪಂದಿಸಲು ಪೊಲೀಸರಿಂದ ಸಾಧ್ಯವಾಗಲಿಲ್ಲ. ಕಳೆದ ಬುಧವಾರ ೨೨ ಸಿಬ್ಬಂದಿ ಪೈಕಿ ೮ ಮಂದಿ ರಜೆಯಲ್ಲಿದ್ದು ಉಳಿದ ಸಿಬ್ಬಂದಿಯನ್ನು ಟ್ರಾಫಿಕ್ ಪಾಯಿಂಟ್ ಮತ್ತು ಕಚೇರಿ ಕೆಲಸಕ್ಕೆ ನೇಮಿಸಲಾಗಿತ್ತು. ಹೀಗಾಗಿ ಅಪಘಾತ ನಡೆದಾಗ ಟ್ರಾಫಿಕ್ ಕಂಟ್ರೋಲ್ ಮಾಡಲು ಸಾಧ್ಯವಾಗಲಿಲ್ಲ. ಇದಲ್ಲದೆ ಆಂಬುಲೆನ್ಸ್ ಸಿಬ್ಬಂದಿ ಕೂಡಾ ರಜೆಯಲ್ಲಿದ್ದ ಕಾರಣ ಆಂಬುಲೆನ್ಸ್ ಕರೆಸಿಕೊಳ್ಳುವುದೂ ವಿಳಂಬವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಬಂದ ಎಸ್.ಐ ಸಂದೇಶ್ ಅವರು ಆಂಬುಲೆನ್ಸ್ ತರಿಸಲು ಮೊಬೈಲ್ ಮೂಲಕ ಕರೆ ಮಾಡುತ್ತಿದ್ದರು. ಆದರೆ ಈ ವಿಷಯ ತಿಳಿಯದ ಜನ ಎಸ್.ಐ ಸಂದೇಶ್ ಮೊಬೈಲಲ್ಲಿ ಕಾಲ ಹರಣ ಮಾಡುತ್ತಿದ್ದಾರೆಂದು ಆರೋಪಿಸಿ ಮಾತಿನ ಚಕಮಕಿಯನ್ನೂ ನಡೆಸಿದ್ದರು.
ಮಂಗಳೂರು ವೇಗವಾಗಿ ಬೆಳೆಯುತ್ತಿದ್ದು ದಿನದಿನಕ್ಕೆ ವಾಹನ ಸಂಚಾರ ಅತಿಯಾಗುತ್ತಿದೆ. ಇದರ ಜೊತೆಗೆ ಅಪಘಾತಗಳೂ, ಕ್ರೈಂಗಳು ಅಧಿಕವಾಗುತ್ತಿದೆ ಇದಕ್ಕೆ ಮುಖ್ಯ ಕಾರಣ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಎನ್ನುವುದು ಪೊಲೀಸರ ಅಂಬೋಣ. ಪೊಲೀಸ್ ಆಯುಕ್ತರು ಈ ಸಮಸ್ಯೆಗೆ ಸ್ಪಂದನೆ ನೀಡಿ ಮಂಗಳೂರು ಪೊಲೀಸ್ ಠಾಣೆಗಳಿಗೆ ಅಗತ್ಯ ಸಿಬ್ಬಂದಿ ನೇಮಿಸುವ ಅಗತ್ಯ ಇದೆ ಎಂಬ ಮಾತು ಕೇಳಿ ಬಂದಿದೆ. ನಗರದ ಕೂಡು ರಸ್ತೆಗಳಲ್ಲಿ ಪ್ರತಿದಿನಾ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಟ್ರಾಫಿಕ್ ಪೊಲೀಸರು ಟ್ರಾಫಿಕ್ ಕಟ್ಟೆಯಲ್ಲಿಯೇ ಕುಳಿತು ನಿರ್ದೇಶನ ನೀಡುವುದು ಸಮಸ್ಯೆಗೆ ಒಂದು ಕಾರಣವಾದರೆ ಇನ್ನೊಂದು ಕಡೆ ಟ್ರಾಫಿಕ್ ಪೊಲೀಸರು ನೆರಳನ್ನು ಆಶ್ರಯಿಸಿಕೊಂಡು ಮರದಡಿ ಇಲ್ಲವೆ ಕಟ್ಟಡದ ಕೆಳಗೆ ನಿಂತು ಅಲ್ಲಿಯೇ ಮೊಬೈಲಿಗೆ ಜೊತು ಬೀಳುತ್ತಿದ್ದಾರೆ. ಈ ಕಾರಣದಿಂದಾಗಿ ಆಯಾ ಕಟ್ಟಿನ ಸ್ಥಳದಲ್ಲೂ, ಕೂಡು ರಸ್ತೆಯಲ್ಲೂ ವಾಹನ ಮಿತಿ ಮೀರಿದ ವೇಗದಲ್ಲಿ ಸಾಗುತ್ತದೆ. ಹೀಗಾಗಿ ನಗರ ವ್ಯಾಪ್ತಿಯೊಳಗೆ ಅಪಘಾತ ಅಧಿಕವಾಗುತ್ತಿದೆ ಈ ಬಗ್ಗೆಯೂ ಪೊಲೀಸ್ ಆಯುಕ್ತರು ಗಮನ ಹರಿಸಬೇಕಿದೆ ಎಂಬ ಮಾತು ಕೇಳಿ ಬಂದಿದೆ.

ಸುಳ್ಯ: ದೇವಳದ ಇಂಟರ್‌ಲಾಕ್ ಕಾಮಗಾರಿ ಸ್ಥಗಿತ ಸಂಚಕಾರದಲ್ಲಿ ಭಕ್ತಾದಿಗಳು

Posted by JAYAKIRANA Kirana on | 0 comments | Leave a comment...

ಸುಳ್ಯ: ಸುಳ್ಯ ಚೆನ್ನಕೇಶವ ದೇವ ಸ್ಥಾನದ ಎದುರಿನ ಬಯಲಿಗೆ ಇಂಟರ್ ಲಾಕ್ ಹಾಕುವ ಕಾಮಗಾರಿ ಆರಂಭ ವಾಗಿದ್ದು, ಎರಡೇ ದಿನದಲ್ಲಿ ಕಾಮಗಾರಿ ಸ್ಥಗಿತವಾಗಿದೆ.
ಮುಖ್ಯಮಂತ್ರಿಗಳ ನಿಧಿಯಿಂದ ದೇವಸ್ಥಾನಕ್ಕೆ ೨೫ ಲಕ್ಷ ಅನುದಾನ ಬಂದಿದ್ದು, ಈ ಮೊತ್ತದಿಂದ ದೇವಳದ ಎದುರಿನ ಬಯಲಿಗೆ ಇಂಟರ್‌ಲಾಕ್ ಹಾಕುವುದಾಗಿ ಜಿಲ್ಲಾಡಳಿತ ನಿರ್ಧರಿಸಿತ್ತು. ಈ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡಲಾಗಿತ್ತು. ಕಾಮಗಾರಿ ವಹಿಸಿಕೊಂಡ ನಿರ್ಮಿತಿ ಕೇಂದ್ರದವರು ದೇವಳದ ಎದುರಿನ ಅಂಗಳಕ್ಕೆ ಹಾಕಿದ್ದ ಡಾಮರನ್ನು ಕಿತ್ತು ಹಾಕಿ ಮುಖ್ಯ ರಸ್ತೆಯ ಮಟ್ಟಕ್ಕೆ ಸಮತಟ್ಟುಗೊಳಿಸುವ ಕಾರ್ಯ ನಡೆಯುತ್ತಿತ್ತು. ಸುಮಾರು ೮೦ ಅಡಿಗಿಂತಲೂ ಹೆಚ್ಚು ದೂರಕ್ಕೆ ನಾಲ್ಕು ಜಿಸಿಬಿ ತಂದು ಸುಮಾರು ೨ ಮೀಟರ್‌ನಷ್ಟು ಇಡೀ ಅಂಗಳವನ್ನು ತಗ್ಗಿಸಲಾಗಿದೆ. ಇದು ಜಿಲ್ಲಾಡಳಿತ ನಡೆಸುವ ಕಾಮಗಾರಿ ದೇವಸ್ಥಾನದ ವತಿಯಿಂದ ನಡೆಯುವುದಲ್ಲ. ಅದೂ ರಾತ್ರಿ ವೇಳೆ ಕೆಲಸ ಮಾಡಿದ್ದಾರೆ. ಅದು ಗಮನಕ್ಕೆ ಬಂದಾಗ ಕೆಲಸ ನಿಲ್ಲಿಸುವಂತೆ ನಾವು ಅವರಿಗೆ ತಿಳಿಸಿದ್ದೇವೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತಿಳಿಸಿದ್ದಾರೆ. ಇಡೀ ರಥಬೀದಿಯ ಜಮೀನು ಧರ್ಮಸ್ಥಳ ದೇವಸ್ಥಾನಕ್ಕೆ ಸೇರಿದ್ದು, ಅಲ್ಲಿಂದ ೧ ಮೀಟರ್ ತಗ್ಗಿಸಲು ಜಿಲ್ಲಾಡಳಿತ ಒಪ್ಪಿಗೆಯನ್ನು ಪಡೆದಿದ್ದರೂ ೨ ಮೀಟರ್‌ನಷ್ಟು ತಗ್ಗಿಸಲಾಗಿದೆ ಎನ್ನಲಾಗಿದೆ.
೨ ಮೀಟರ್‌ನಷ್ಟು ತಗ್ಗಿಸಿದ್ದರಿಂದ ರಸ್ತೆ ಬದಿಗೆ ಇರುವ ವಾಣಿಜ್ಯ ಸಂಕೀರ್ಣಗಳಿಗೆ ಏಣಿ ಇಟ್ಟು ಹತ್ತಬೇಕಾದ ಪ್ರಮೇಯ ಬರಬಹುದು. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಲಂಡನ್‌ಗೆ ತೆರಳಿದ್ದು ಅವರು ಬಂದ ಬಳಿಕ ಜಿಲ್ಲಾಡಳಿತ ಅವರೊಂದಿಗೆ ಮಾತುಕತೆ ಮಾಡಿದ ಬಳಿಕವಷ್ಟೇ ಕಾಮಗಾರಿ ಮುಂದುವರಿಯುವ ಸೂಚನೆಗಳಿವೆ.
ಧರ್ಮಸ್ಥಳದಿಂದ ಒಪ್ಪಿಗೆ ಸಿಗುವವರೆಗೆ ಕಾಮಗಾರಿಯನ್ನು ಮುಂದುವರಿಸದಿರಲು ಜಿಲ್ಲಾಡಳಿತ ನಿರ್ಧರಿಸಿದೆ. ಮಳೆಗಾಲ ಆರಂಭವಾಗುತ್ತಿದ್ದು, ರಥಬೀದಿಗೆ ಹೊಂದಿಕೊಂಡಂತೆ ಸುಮಾರು ೮ ಅಡಿ ಅಳದ ಬೃಹತ್ ಹೊಂಡ ನಿರ್ಮಾಣವಾಗಿದೆ. ಇದು ಕೇವಲ ರಥಬೀದಿ ಮಾತ್ರವಾಗಿರದೇ ಅಜ್ಜಾವರ ಹಾಗೂ ಮಂಡೆಕೋಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಆಗಿದೆ. ಮಳೆ ನೀರು ತುಂಬಿ ಕೃತಕ ಕೆರೆ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ.

ದುರಸ್ತಿ ವೇಳೆ ಶಾಲಾ ಮೇಲ್ಛಾವಣಿ ಕುಸಿತ

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ಶಾಲಾ ಕಟ್ಟಡವೊಂದರ ಮೇಲ್ಛಾವಣಿ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ಕಟ್ಟಡ ಕುಸಿದುಬಿದ್ದ ಘಟನೆ ಇಲ್ಲಿನ ಬೇಕೂರಿನಿಂದ ವರದಿಯಾಗಿದ್ದು, ಘಟನೆಯಿಂದಾಗಿ ಕೆಲಸ ಮಾಡುತ್ತಿದ್ದವರ ಪೈಕಿ ಓರ್ವ ಸಣ್ಣ ಪುಟ್ಟ ಗಾಯಾಗಳೊಂದಿಗೆ ಪಾರಾಗಿದ್ದಾರೆ.
ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ವಿಭಾಗದ ಕಟ್ಟಡ ಕುಸಿದು ಬಿದ್ದಿದೆ. ಒಟ್ಟು ಆರು ಕೊಠಡಿಗಳಿರುವ ಪ್ರಸ್ತುತ ಹೈಸ್ಕೂಲ್ ಕಟ್ಟಡಕ್ಕೆ ಹಾಕಲಾಗಿದ್ದ ಪಕ್ಕ್ಕಾಸು ಸಹಿತ ಇತರ ಮರದ ಸಾಮಗ್ರಿಗಳು ಶೋಚನೀಯ ಸ್ಥಿತಿಗೆ ತಲುಪಿದ್ದರಿಂದ ಇದರ ದುರಸ್ಥಿ ಕಾರ್ಯ ನಿನ್ನೆ ಆರಂಭಿಸಲಾಗಿತ್ತು. ನಾಲ್ಕು ಮಂದಿ ಕೆಲಸಗಾರರು ಇದರ ದುರಸ್ತಿ ಕಾರ್ಯ ನಡೆಸುತ್ತಿದ್ದರು. ಒಂದು ಭಾಗದ ಕೆಲಸ ಪೂರ್ತಿಗೊಳ್ಳುತಿದ್ದಂತೆ ಚಾವಣಿಯ ಮುಂಭಾಗದ ಕಲ್ಲಿನ ಕಂಬವೊಂದು ಮುರಿದು ಬಿದ್ದಿದ್ದು ಇದರೊಟ್ಟಿಗೆ ಮೇಲ್ಛಾವಣಿಯು ಕುಸಿದು ಬಿದ್ದಿದೆ. ಇದರಿಂದಾಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ. ೧೯೮೨ರಲ್ಲಿ ನಿರ್ಮಿಸಲಾದ ಈ ಕಟ್ಟಡಕ್ಕೆ ನಂತರ ದುರಸ್ತಿ ಭಾಗ್ಯ ಕೂಡಿ ಬರಲಿಲ್ಲವೆನ್ನಲಾಗಿದೆ. ಇದೀಗ ಕಟ್ಟಡದ ಈ ಶೋಚನಾವಸ್ಥೆ ಬಗ್ಗೆ ಜಿಲ್ಲಾ ಪಂಚಾಯತ್ ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟಡದ ದುರಸ್ತಿಗಾಗಿ ಮನವಿ ಮಾಡಿ ಗಮನ ಸೆಳೆದ ಫಲವಾಗಿ ದುರಸ್ತಿ ಕೆಲಸಕ್ಕಾಗಿ ನಬಾರ್ಡ್‌ನಿಂದ ೫ ಲಕ್ಷ ರೂ ಮಂಜೂರುಗೊಂಡಿತ್ತಾದರೂ ಅದರ ಮೊತ್ತ ಸಿಗುವಲ್ಲಿ ಉಂಟಾದ ವಿಳಂಬದಿಂದಾಗಿ ದುರಸ್ತಿ ಕಾರ್ಯ ವಿಳಂಬವಾಯಿತೆಂದು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಪತ್ರಿಕೆಗೆ ತಿಳಿಸಿದ್ದಾರೆ. ಹಲವಾರು ವರುಷಗಳಿಂದ ಯಾವುದೇ ದುರಸ್ತಿ ಭಾಗ್ಯ ಕಾಣದೆ ಅಪಾಯವನ್ನು ಕೈ ಬೀಸಿ ಕರೆಯುತ್ತಿರುವ ಹಲವಾರು ಶಾಲೆಗಳು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರು ತಕ್ಷಣವೇ ಸ್ಪಂದಿಸ ಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಿಂದ ಪತ್ರಕರ್ತನನ್ನು ಹೊರದಬ್ಬಿಸಿದ ನಿತ್ಯಾನಂದ!

Posted by JAYAKIRANA Kirana on | 0 comments | Leave a comment...

ಬಿಡದಿ: ತನ್ನ ವಿರುದ ಆರತಿ ರಾವ್ ಎಂಬವರು ಮಾಡಿದ ಆರೋಪಗಳಿಗೆ ಉತ್ತರಿಸಲು ನಿತ್ಯಾನಂದ ಸ್ವಾಮೀಜಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಟಿವಿ ಮಾಧ್ಯಮದ ವರದಿಗಾರರೊಬ್ಬರನ್ನು ಹೊರದಬ್ಬಿದ ಘಟನೆ ನಡೆಯಿತು. ಇದರಿಂದ ಆಕ್ರೋಶಗೊಂಡ ಪತ್ರಕರ್ತರು ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿ ಹೊರನಡೆದರು.
ಮಾಧ್ಯಮ ಮಿತ್ರರ ಎಲ್ಲಾ ಪ್ರಶ್ನೆಗಳಿಗೆ ನಗುನಗುತ್ತಲೇ ಉತ್ತರಿಸುತ್ತಿದ್ದ ನಿತ್ಯಾನಂದ, ಸುವರ್ಣ ನ್ಯೂಸ್ ಪತ್ರಕರ್ತ ಅಜಿತ್ ಅವರು, ಅಮೆರಿಕದ ನಿವಾಸಿ ವಿನಯ್ ಭಾರದ್ವಾಜ ಎಂಬವರು ನಿತ್ಯಾನಂದನ ವಿರುದ್ಧ ನೀಡಿದ್ದ ಕೇಸಿನ ಸಮನ್ಸ್ಸ್ ಪ್ರತಿಯನ್ನು ತೋರಿಸುತ್ತಿದ್ದಂತೆ ಕೆರಳಿ ಕೆಂಡವಾದ ನಿತ್ಯಾನಂದ ತನ್ನ ಹಿಂಬಾಲಕರನ್ನು ಛೂಬಿಟ್ಟು ಅಜಿತ್ ಅವರನ್ನು ಹೊರದಬ್ಬಿದ್ದಾರೆ. ಅಜಿತ್, ನಿಮಗೆ ಬಂದ ಸಮನ್ಸ್‌ಗೆ ಯಾಕೆ ಉತ್ತರಿಸಿಲ್ಲ ಎಂದು ಕೇಳಿದಾಗ ನನಗೆ ಸಮನ್ಸ್ಸ್ ಬಂದೇ ಇಲ್ಲ. ಸಮನ್ಸ್ ಬಂದರೆ ಖಂಡಿತ ಉತ್ತರಿಸುತ್ತೇನೆ ಎಂದು ನಿತ್ಯಾನಂದ ಉತ್ತರಿಸಿದರು. ಆಗ, ಅಜಿತ್ ‘ಇಲ್ಲ ಸಮನ್ಸ್ ಸ್ವೀಕರಿಸಿಲ್ಲ, ಸಮನ್ಸ್ಸ್ ತಂದವರನ್ನು ಆಶ್ರಮದ ಗೇಟಿನ ಒಳಗೇ ಬಿಟ್ಟಿಲ್ಲ ಎಂದು ಹೇಳುತ್ತ, ಸಮನ್ಸ್ಸ್ ಪ್ರತಿಯನ್ನು ತೆಗೆದು ತೋರಿಸಿದಾಗ ನಿತ್ಯಾನಂದ ತಿರುಗಿಬಿದ್ದು, ಇದು ಪತ್ರಕರ್ತರಿಗೆ ಮಾತ್ರ ಕರೆಯಲಾಗಿದ್ದ ಪತ್ರಿಕಾಗೋಷ್ಠಿ. ಲಾಯರ್‌ನಂತೆ ವರ್ತಿಸುವವರನ್ನು ಒಳಗೆ ಬಿಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿ ತನ್ನ ಶಿಷ್ಯ ವೃಂದಕ್ಕೆ ಹೊರದಬ್ಬುವಂತೆ ಆದೇಶ ನೀಡಿದ್ದಾರೆ. ಈ ವೇಳೆ ವಿರೋಧಿಸಿದ ಇತರೆ ಪತ್ರಕರ್ತರು ಪತ್ರಿಕಾಗೋಷ್ಠಿ ಬಹಿಷ್ಕರಿಸಿದ ಘಟನೆ ನಡೆಯಿತು. ಪತ್ರಕರ್ತರ ಮೇಲೆ ನಿತ್ಯಾ ಶಿಷ್ಯರ ವರ್ತನೆಯನ್ನು ಖಂಡಿಸಿ ಕೆಲ ಕನ್ನಡ ಪರ ಸಂಘಟನೆಗಳು ನಿತ್ಯಾ ಆಶ್ರಮಕ್ಕೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನಿತ್ಯಾನಂದನಿಗೆ ಮುತಾಲಿಕ್ ಸಾಥ್!

ಈ ಘಟನೆಗೆ ಸಂಬಂಧಿಸಿ ಖಾಸಗಿ ಮಾಧ್ಯಮದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನಿತ್ಯಾ ನಂದನಿಗೆ ಬೆಂಬಲ ನೀಡಿದ ಘಟನೆ ನಡೆಯಿತು. ಪತ್ರಕರ್ತರನ್ನು ಹೊರ ದಬ್ಬಿದ ಘಟನೆಗೆ ಸಂಬಂಧಿಸಿ ದೂರ ವಾಣಿ ಮೂಲಕ ಮಾತಿಗಿಳಿದ ಮುತಾಲಿಕ್ ಬರೋಬ್ಬರಿ ಅರ್ಧಘಂಟೆಗೂ ಹೆಚ್ಚುಕಾಲ ಬಹಿರಂಗವಾಗಿಯೇ ನಿತ್ಯನ ಬೆಂಬಲಕ್ಕೆ ನಿಂತರು. ಆರತಿ ರಾವ್ ಪ್ರಕರಣದಲ್ಲಿ ಯಾರು ತಪ್ಪಿತಸ್ಥರು ಎನ್ನುವುದು ಇನ್ನಷ್ಟೇ ಇತ್ಯರ್ಥವಾಗಬೇಕಿದೆ. ಅಷ್ಟು ಬೇಗ ನಿತ್ಯಾನಂದರನ್ನು ತಪ್ಪಿತಸ್ಥ ಮಾಡುವುದು ಸರಿಯಲ್ಲ ಎಂದು ನಿತ್ಯಾನಂದರ ಬೆಂಬಲಕ್ಕೆ ನಿಂತರು. ಈ ಹಿಂದೆ ಆರತಿ ರಾವ್ ನೇರವಾಗಿ ಮಾಧ್ಯಮದ ಮುಂದೆ ಬಂದು ತನ್ನ ಮೇಲೆ ನಡೆದ ಲೈಂಗಿಕ ಕಿರುಕುಳದ ಹೇಳಿಕೆ ನೀಡಿದ್ದರೂ ಮುತಾಲಿಕ್‌ರ ಈ ಹೇಳಿಕೆ ಸಾಕಷ್ಟು ಗೊಂದ ಲಕ್ಕೆ ಕಾರಣವಾಗಿದೆ. ಒಬ್ಬ ಸಂಸ್ಕೃತಿ ರಕ್ಷಕನಾಗಿದ್ದುಕೊಂಡು ಹೀನ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಕಪಟ ಸ್ವಾಮಿ ನಿತ್ಯಾನಂದನನ್ನು ಬೆಂಬಲಿಸಿದ್ದು ಕೆಲ ಪ್ರಗತಿಪರರ ಕೆಂಗಣ್ಣಿಗೆ ಗುರಿಯಾಗಿದೆ. ಕಾರ್ಯಕ್ರಮದಲ್ಲಿದ್ದ ಮಹಿಳಾ ಸಂಘಟನೆಯ ಕಾರ್ಯಕರ್ತರು ಒಂದು ಹಂತಕ್ಕೆ ಮುತಾಲಿಕ್‌ರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ಬೆಳ್ಮಣ್‌ನಲ್ಲೊಬ್ಬಳು ಸ್ವಾವಲಂಬಿ ಹೆಣ್ಣು

Posted by JAYAKIRANA Kirana on | 0 comments | Leave a comment...

ಕಾರ್ಕಳ: ಕಾರ್ಕಳದ ಬೆಳ್ಮಣ್ ಪೇಟೆಯಲ್ಲಿ ಸ್ವಾವಲಂಬಿ ಹೆಣ್ಣೊಬ್ಬಳಿ ದ್ದರೆ ಆಕೆ ಕುಮಾರಿ ಶೋಭಾ ಆಚಾರಿ ಎಂದರೆ ತಪ್ಪ್ಪಾಗಲಾರದು. ಅವಿವಾ ಹಿತೆಯಾಗಿರುವ ಈಕೆ ಐದನೆಯ ತರಗತಿಗೆ ಗುಡ್‌ಬೈ ಹೇಳಿದ ನಂತರ ತಂದೆ ಮಾಡುತ್ತಿದ್ದ ಕಮ್ಮಾರ ಕೆಲಸ ವನ್ನು ಆರಿಸಿಕೊಂಡಿದ್ದಾಳೆ.
ಬೆಳ್ಮಣ್ ಶೀನ ಆಚಾರಿ ಮತ್ತು ಇಂದಿರಾ ದಂಪತಿಗೆ ನಾಲ್ಕು ಮಕ್ಕಳು. ಈ ನಡುವೆ ಇಂದಿರಾ ಮೃತ ಪಟ್ಟಿರುವುದರಿಂದಾಗಿ ಶೀನ ಅವರು ಇಂದಿರಾಳ ತಂಗಿ ಸೀತಾಳನ್ನು ಎರಡ ನೆಯ ಪತ್ನಿಯನ್ನಾಗಿ ವರಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವು ದರಿಂದ ಆರು ಮಂದಿ ಮಕ್ಕಳಿಗೆ ಜನ್ಮ ನೀಡಿದ್ದರು. ಅವರಲ್ಲಿ ಕಿರಿಯ ವಳೇ ಶೋಭಾ.
ಬಡತನದ ನಡುವೆ ಐದನೇ ಕ್ಲಾಸ್ ತನಕ ಕಲಿತು ವಿದ್ಯಾಭ್ಯಾಸಕ್ಕೆ ಗುಡ್‌ಬೈ ಹೇಳಿದ ಶೋಭಾ, ತಂದೆ ಮಾಡುತ್ತಿದ್ದ ಕಮ್ಮಾರ ಕೆಲಸವನ್ನು ತನ್ನ ಉದ್ಯೋಗ ವನ್ನಾಗಿ ಮುಂದುವರಿಸಿಕೊಂಡು ಬಂದಿದ್ದಾಳೆ. ದಿನವೊಂದಕ್ಕೆ ಸುಮಾರು ೩೦೦ ರೂಪಾಯಿ ಸಂಪಾ ದಿಸುವ ಆಕೆ ಮನೆಮಂದಿಗೆ ಆಶಾ ಕಿರಣವಾಗಿದ್ದಾಳೆ.
 ಶೋಭಾ ಹಾಗೂ ಆಕೆಯ ಅಕ್ಕ ಸಾವಿತ್ರಿ ಅವರಿಬ್ಬರಿಗೆ ಇನ್ನೂ ವಿವಾಹವಾಗಿಲ್ಲ. ಸ್ವಜಾತಿಯ ಬಂಧುಗಳು ಈ ಕಡೆ ಒಮ್ಮೆ ಗಮನ ಕೊಡುವರೇ ಎಂಬುವುದು ಶೋಭಾಳ ಆಶಯವಾಗಿದೆ. ಕಿರಿಯ ಸಹೋದರ ರಘುರಾಮ ಆಚಾರಿ ಪೂನಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿ ೧೨ ವರ್ಷಗಳು ಕಳೆದಿದೆಯಂತೆ. ಇದರಿಂದಾಗಿ ಸಂಸಾರ ನಿರ್ವಹಿಸುವ ಸಂಪೂರ್ಣ ಹೊಣೆ ಶೋಭಾಳ ಹೆಗಲ ಮೇಲೆ ಬಿತ್ತು.
ಗ್ಯಾರೇಜ್‌ನಲ್ಲಿ ದೊರಕುವ ವಾಹನಗಳ ಪ್ಲೇಟ್‌ಗಳನ್ನು ಕೆ.ಜಿ ರೂಪದಲ್ಲಿ ಪಡೆದು ಅದನ್ನು ಹಿಡಿಗತ್ತಿಯನ್ನಾಗಿ ಮಾಡುತ್ತಾಳೆ. ದಿನವೊಂದಕ್ಕೆ ಸುಮಾರು ಮೂರು ಹಿಡಿಗತ್ತಿ ತಯಾರಿಸುವ ಸಾಮರ್ಥ್ಯ ಹೊಂದಿದ್ದಾಳೆ. ತಲಾ ಒಂದಕ್ಕೆ ೨೦೦ರೂ.ನಂತೆ ಮಾರಾಟ ಮಾಡುತ್ತಾಳೆ.
ಉಳಿದ ಸಮಯದಲ್ಲಿ ಹಳೆಯದಾದ ಕತ್ತಿ, ಚೂರಿ, ಹಾರೆ, ಕೆಂಪುಕಲ್ಲು ಕೆತ್ತುವ ಬಾಜಿ, ಪಿಕ್ಕಾಸುಗಳ ದುರಸ್ಥಿ ಮಾಡುತ್ತಾಳೆ. ಶೋಭಾ ತಿಳಿಸುವಂತೆ ಒಂದು ಕತ್ತಿ ತಯಾರಿಕೆಗೆ ಮುಕ್ಕಾಲು ಡಬ್ಬಿ(ಎಣ್ಣೆ ಸಂಗ್ರಹಿಸುವ ಡಬ್ಬಿ) ಇದ್ದಿಲು ಬೇಕು. ಒಂದು ಡಬ್ಬಿ ಇದ್ದಿಲಿಗೆ ೨೦ ರಿಂದ ೪೦ ರೂಪಾಯಿ ನೀಡಬೇಕಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಅದರ ಅಭಾವ ತಲೆದೋರಿದೆ. ಬಹುತೇಕ ಕಡೆಗಳಲ್ಲಿ ಗ್ಯಾಸ್ ಬಳಕೆಯಾಗುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ವಿವರಿಸಿದ್ದಾಳೆ.
ಅಂದ ಹಾಗೇ ಆಕೆ ದುಡಿಯುವ ಶೆಡ್‌ಗೆ ಅಡ್ಡ ಗೋಡೆಯಾಗಲಿ, ಬಾಗಿಲು, ಕಿಟಕಿ ಎಂಬುವುದಿಲ್ಲ. ನಾಲ್ಕು ದಿಕ್ಕುಗಳಿಂದಲೂ ಶೆಡ್ ತೆರೆದುಕೊಂಡಿದೆ. ಸ್ವಾವಲಂಬಿ ಬದುಕು ನಡೆಸುತ್ತಿರುವ ಶೋಭಾಳು ವಿವಾಹವಾಗುವ ಬಯಕೆ ಹೊಂದಿದ್ದಾಳೆ.

‘ಕಾಂಗ್ರೆಸ್ ಇನ್ನೊಂದು ಪಕ್ಷವನ್ನು ಎದುರಿಸುವ ಗಂಡಸುತನ ತೋರಲಿ’

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಪಕ್ಷವನ್ನು ಎದುರಿಸುವ ಗಂಡಸುತನ ಇಲ್ಲದ ಕಾರಣ ಅದರ ನಾಯಕರು ಜೆಡಿಎಸ್ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಇದನ್ನು ಬಿಟ್ಟು ಇನ್ನೊಂದು ಪಕ್ಷವನ್ನು ಎದುರಿಸುವ ಗಂಡಸುತನವನ್ನು ಕಾಂಗ್ರೆಸ್ ತೋರಿದರೆ ಮುಂಬರುವ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ರಾಜ್ಯ ಜೆಡಿಎಸ್ ಮುಖಂಡ ಎಂ.ಜಿ. ಹೆಗ್ಡೆ ಲೇವಡಿ ಮಾಡಿದ್ದಾರೆ.
ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರ ಚುನಾವಣೆಗಾಗಿ ಪಕ್ಷ ಸಿದ್ಧತೆ ನಡೆಸಿದ್ದು ಶೇ.೪೦ರಷ್ಟು ನೂತನ ಮತ ದಾರರನ್ನು ನೊಂದಾಯಿಸಿದೆ. ಕಾಂಗ್ರೆಸ್ ಪಕ್ಷ ಇದುವರೆಗೂ ಮತದಾ ರರನ್ನು ನೊಂದಾಯಿಸದೆ ಬಿಜೆಪಿ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದು ಗಣೇಶ್ ಕಾರ್ಣಿಕ್ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ್ದೇ ಸಾಕ್ಷಿ.
ಆದರೆ ಅದೆಲ್ಲವನ್ನೂ ಮರೆಮಾಚು ತ್ತಿರುವ ರಮಾನಾಥ ರೈ ಜೆಡಿಎಸ್‌ಗೆ ಮತ ನೀಡಿದರೆ ಬಿಜೆಪಿಗೆ ಲಾಭ ಎಂದು ಹೇಳಿಕೆಯ ಮೂಲಕ ಮತದಾರರ ದಾರಿ ತಪ್ಪಿಸುತ್ತಿದ್ದಾರೆ. ಇದುವರೆಗೆ ನಡೆದಿರುವ ಬಹುತೇಕ ಉಪಚುನಾ ವಣೆಗಳಲ್ಲಿ ಸೋಲನುಭವಿ ಸಿರುವ ಕಾಂಗ್ರೆಸ್‌ಗೆ ಮತ ನೀಡಿದರೆ ಬಿಜೆಪಿಗೆ ಲಾಭವಾಗುತ್ತದೆ ಎಂದು ಹೆಗ್ಡೆ ತಿರುಗೇಟು ನೀಡಿದರು. ಪತ್ರಿಕಾಗೋಷ್ಟಿ ಯಲ್ಲಿ ಶಶಿರಾಜ್ ಶೆಟ್ಟಿ ಕೊಳಂಬೆ, ಡಿ.ಎಂ.ಅಸ್ಲಂ, ಜೆ.ಮಹಮ್ಮದ್ ಮತ್ತು ಹಕೀಂ ಅವರು ಉಪಸ್ಥಿತರಿದ್ದರು.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

ಥಾಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಕ್ವಾರ್ಟರ‍್ಸ್ ಪ್ರವೇಶಿಸಿದ ಸೈನಾ

Posted by JAYAKIRANA Kirana on | 0 comments | Leave a comment...

ಬ್ಯಾಂಕಾಕ್: ಇಲ್ಲಿ ನಡೆಯುತ್ತಿ ರುವ ಥ್ಯಾಂಲ್ಯಾಂಡ್ ಓಪನ್ ಗ್ರ್ಯಾಂಡ್ ಫ್ರಿಕ್ಸ್ ಗೋಲ್ಡ್ ಟೂರ್ನಿಯಲ್ಲಿ ಭಾರತದ ಭರವಸೆಯ ಆಟಗಾರ್ತಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಚೀನಾದ ಲೀ ಹಾನ್ ವಿರುದ್ಧ ನೇರ ಅಂತರದ ಜಯಸಾಧಿಸುವ ಮೂಲಕ ಭಾರತದ ಅಗ್ರಶ್ರೇಯಾಂಕದ ಆಟಗಾರ್ತಿ ಟೂರ್ನಿಯಲ್ಲಿ ಮುನ್ನಡೆದಿ ದ್ದಾರೆ.
ವಿಶ್ವದ ಐದನೇ ಶ್ರೇಯಾಂಕದ ಸೈನಾ ಹಾನ್ ವಿರುದ್ಧದ ಪಂದ್ಯವನ್ನು ತನ್ನಪರವಾಗುವಂತೆ ಮಾಡಲು ಕೇವಲ ೪೫ ನಿಮಿಷಗಳಷ್ಟನ್ನೇ ತೆಗೆದು ಕೊಂಡರು. ಪಂದ್ಯವನ್ನು ಸೈನಾ ೨೧-೧೭ ಹಾಗೂ ೨೧-೧೩ರ ಭರ್ಜರಿ ಅಂತರದಲ್ಲಿ ಗೆಲ್ಲುವ ಸಾಧಿಸಿದರು. ಸೈನಾ ತನ್ನ ಮುಂದಿನ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಥ್ಯಾಲ್ಯಾಂಡ್‌ನ ಸೆಪ್ಸಿರಿ ತೀರಥಾನ್ಚೈ ವಿರುದ್ಧ ಹೋರಾಟ ನಡೆಸಲಿದ್ದಾರೆ. ಸೆಪ್ಸಿರಿ ತನ್ನ ಹಿಂದಿನ ಪಂದ್ಯದಲ್ಲಿ ಜಪಾನ್‌ನ ಕಾರಿ ಇಮಬೆಪ್ಪು ವಿರುದ್ಧ ಜಯಗಳಿಸಿದ್ದರು.

ಇಂದಿನಿಂದ ಪ್ರತಿಷ್ಠಿತ ಯುರೋಕಪ್ ಫುಟ್ಬಾಲ್‌ಗೆ ಚಾಲನೆ ಆತಿಥೇಯ ಪೋಲೆಂಡ್‌ಗೆ ಗ್ರೀಸ್ ಸೆಡ್ಡು

Posted by JAYAKIRANA Kirana on | 0 comments | Leave a comment...

ವಾರ‍್ಸಾ: ಇಂದಿನಿಂದ ಫುಟ್ಬಾಲ್ ಪ್ರಿಯರಿಗೆ ಭರಪೂರ ಮನೋರಂಜನೆಯನ್ನು ಒದಗಿಸುವ ಪ್ರತಿಷ್ಟಿತ ಯುರೋ ಕಪ್‌ಗೆ ಇಂದಿನಿಂದ ಚಾಲನೆ ದೊರಕಲಿದೆ. ಇಂದು ನಡೆಯುವ ಆರಂಭಿಕ ಪಂದ್ಯದಲ್ಲಿ ಗ್ರೀಸ್ -ಆತಿಥೇಯ ಪೊಲ್ಯಾಂಡ್ ನಡುವೆ ಕಾದಾಡಲಿದ್ದರೆ ಎರಡನೇ ಪಂದ್ಯದಲ್ಲಿ ರಶ್ಯಾಗೆ ಜೆಕ್ ಗಣರಾಜ್ಯ ಕಠಿಣ ಸವಾಲು ನೀಡುವಲ್ಲಿ ತುದಿಗಾಲಲ್ಲಿ ನಿಂತಿದೆ. ಇತ್ತೀಚಿಗೆ ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿರುವ ಗ್ರೀಸ್ ತಂಡ ಸಮಸ್ಯೆಯ ಸುಳಿಯಲ್ಲಿಯೇ ಪಂದ್ಯವಾಡಲು ವಾರ‍್ಸಾಗೆ ಆಗಮಿಸಿದ್ದು, ಇಲ್ಲಿ ಅದು ಕಠಿಣ ಹೋರಾಟವನ್ನೇ ಎದುರಿಸುತ್ತಿದೆ. 
ನಾವೀಗ ಸಂಪೂರ್ಣ ಹೊಸತಂಡವಾಗಿದ್ದು, ಹೊಸ ನಿರೀಕ್ಷೆಗಳೊಂದಿಗೆ ಆಗಮಿಸಿದ್ದೇವೆ. ಭರ್ಜರಿ ಕೂಟದಕ್ಕೆ ನಾವು ಉತ್ತಮ ರೀತಿಯಲ್ಲಿ ಸಜ್ಜಾಗಿದ್ದೇವೆ ಎಂದು ಗ್ರೀಸ್‌ನ ಪ್ರಮುಖ ಸ್ಟ್ರೈಕರ್ ಜೊರ್ಜಿಸ್ ಸಮರಾಸ್ ತಿಳಿಸಿದ್ದಾರೆ.  ಅತ್ತ ಆತಿಥೇಯ ಪೊಲ್ಯಾಂಡ್ ಪಂದ್ಯ ತವರಿನಲ್ಲೇ ನಡೆಯಲಿರುವುದರಿಂದ ಉತ್ತಮ ಆತ್ಮವಿಶ್ವಾಸದಲ್ಲಿದೆ. ಇನ್ನುಳಿದಂತೆ ಮತ್ತೊಂದು ಪಂದ್ಯದಲ್ಲಿ ರಶ್ಯಾದ ಹಾಗೂ ಜೆಕ್ ಗಣರಾಜ್ಯ ಕೂಡ ಉತ್ತಮ ಹೋರಾಟ ಪ್ರದರ್ಶಿಸುವ ನಿರೀಕ್ಷೆಯಲ್ಲಿದೆ. ಮುಖ್ಯವಾಗಿ ರಶ್ಯಾ ತಂಡಕ್ಕೆ ಅತ್ಯದ್ಭುತ ಆಟಗಾರ ಅಶ್ರಾವಿನ್ ನಾಯಕತ್ವವಿರುವುದು ಅದರ ನಿರೀಕ್ಷೆಯನ್ನು ಹೆಚ್ಚಿಸಿದೆ.

ಸಮಿ-ಗುಲ್ ದಾಳಿಗೆ ಕಂಗಾಲಾದ ಲಂಕಾ ಏಕದಿನ ಸರಣಿಯಲ್ಲಿ ಪಾಕ್ ಶುಭಾರಂಭ

Posted by JAYAKIRANA Kirana on | 0 comments | Leave a comment...

ಪಳ್ಳೆಕೆಲೆ: ಮೊಹ್ಮದ್ ಸಮಿ ಹಾಗೂ ಉಮರ್ ಗುಲ್ ನಡೆಸಿದ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಇಲ್ಲಿ ಶ್ರೀಲಂಕಾ ವಿರುದ್ಧ ಆರಂಭವಾದ ಐದು ಏಕದಿನ ಸರಣಿಯ ಪ್ರಥಮ ಪಂದ್ಯದಲ್ಲಿ ಡಕ್‌ವರ್ತ್ ಲೂಹಿಸ್ ನಿಯಮದ ಪ್ರಕಾರ ಆರು ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ೧-೦ಯ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಟಾಸ್ ಗೆದ್ದ ಲಂಕಾ ಮೊದಲು ಬ್ಯಾಟಿಂಗ್ ನಡೆಸಿತು. ಆದರೆ ಪಂದ್ಯ ಆರಂಭವಾದ ಕೆಲಹೊತ್ತಿನಲ್ಲೇ  ಮಳೆ ಅಡ್ಡಿಯಾದ ಹಿನ್ನೆಲೆಯಲ್ಲಿ ೪೨ ಓವರ್‌ಗೆ ಪಂದ್ಯವನ್ನು ನಿಗದಿಪಡಿಸಲಾಯಿತು. ಆದರೆ ತಂಡ ಉಮರ್ ಗುಲ್ ಹಾಗೂ ಮೊಹ್ಮದ್ ಸಮಿ ಬೌಲಿಂಗ್‌ನಲ್ಲಿ ತೀವ್ರ ರೀತಿಯಲ್ಲಿ ದಂಡನೆಗೊಳಪಟ್ಟಿತು. ಅಗ್ರಕ್ರಮಾಂಕದ ನಾಲ್ವರು ಆಟಗಾರರಾದ ಜಯವರ್ಧನೆ, ದಿಲ್ಶಾನ್, ಸಂಗಾಕ್ಕರ ಹಾಗೂ ಚಾಂದಿಮಾಲ್ ಎರಡಂಕೆ ಮೊತ್ತವನ್ನು ಪೇರಿಸಲು ವಿಫಲವಾಗಿದ್ದು, ಬ್ಯಾಟಿಂಗ್ ವೈಫಲ್ಯಕ್ಕೆ ಕನ್ನಡಿ ಹಿಡಿದಂತಿತ್ತು. ಆದರೆ ಅಂತಿಮ ಹಂತದಲ್ಲಿ ತಿರುಮಣ್ಣೆ ಪೇರಿಸಿದ ಅಜೇಯ ಆಟದ ನೆರವಿನಿಂದ ತಂಡ ನಿಗದಿತ ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ೧೩೫ ರನ್‌ಗಳ ಪ್ರಯಾಸಕರ ಮೊತ್ತ ಗಳಿಸಿತು. ಗುಲ್ ಹಾಗೂ ಸಮಿ ತಲಾ ಮೂರು ವಿಕೆಟ್ ಪಡೆದರು.
ಗುರಿ ಬೆನ್ನತಿದ್ದ ಪಾಕ್ ಕೂಡ ಆರಂಭಿಕ ಆಘಾತ ಕಂಡರೂ ೩೪.೧ ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೧೩೫ ರನ್ ಗಳಿಸಿ ಜಯದಾಖಲಿಸಿತು. ಅಜರ್ ಅಲಿ ಹಾಗೂ ಯೂನಿಸ್ ಖಾನ್‌ರನ್ನು ತಂಡ ಬೇಗನೇ ಕಳಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಮಿಸ್ಬಾ ಉಲ್ ಹಕ್ ೩೦ ರನ್ ಗಳಿಸಿದರು. ಆದರೆ ಉಮರ್ ಅಕ್ಮಲ್ ಅಜೇಯ ೩೬ ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಲಂಕಾ ಪರ ಕುಲಶೇಕರ ಒಂದು ವಿಕೆಟ್ ಪಡೆದರು.  

ಬರ್ತ್‌ಡೇ ಬಾಯ್ ಮಹೇಶ್-ಸಾನಿಯಾ ಮುಡಿಗೆ ಫ್ರೆಂಚ್ ಮಿಕ್ಸ್‌ಡ್ ಗರಿ ಕ್ವಿಟ್ಟೊವಾಗೆ ಸೋಲು; ಫೈನಲ್‌ನಲ್ಲಿ ಶರಪೋವಾ-ಸಾರಾ ಹೋರಾಟ

Posted by JAYAKIRANA Kirana on | 0 comments | Leave a comment...



ಪ್ಯಾರಿಸ್: ನಿನ್ನೆಯ ಪ್ಯಾರಿಸ್ ಓಪನ್ ಭಾರತೀಯರ ಪಾಲಿಗೆ ಅತ್ಯುನ್ನತ ದಿನವಾಗಿತ್ತು. ಭಾರತದ ಮಹೇಶ್ ಭೂಪತಿ ಹಾಗೂ ಸಾನಿಯಾ ಮಿರ್ಜಾ ಜೋಡಿ ಪ್ರತಿಷ್ಟಿತ ಪ್ಯಾರಿಸ್ ಓಪನ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಮೂಡಿಬರುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಭೂಪತಿಯವರ ೩೮ನೇ ಹುಟ್ಟುಹಬ್ಬದಂದೇ ಇದು ಬಂದಿರುವುದು ವಿಶೇಷ. ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟ್ಟೊವಾಗೆ ಸೋಲುಣಿಸಿ ರಶ್ಯಾದ ಮರಿಯಾ ಶರಪೋವಾ ಫೈನಲ್‌ಗೇರಿದ್ದು, ಇಲ್ಲಿ ಸಮಂತಾ ಸ್ಟೊಸರ್ ವಿರುದ್ಧ ಗೆಲುವು
ಸಾಧಿಸಿದ್ದ ಇಟಲಿಯ ಸಾರಾ ಇರ್ರಾನಿ ವಿರುದ್ಧ ಕಾದಾಡಲಿದ್ದಾರೆ.
ಮೆಕ್ಸಿಕೊದ ಸ್ಯಾಂಟಿಗೊ ಗೊನ್ಝಾಲೆಸ್ ಹಾಗೂ ಪೊಲೆಂಡ್‌ನ ಕ್ಲೌಡಿಯಾ ಜೆನ್ಸ್ ವಿರುದ್ಧ ೭-೬ ಹಾಗೂ ೬-೧ರ ಅಂತದಲ್ಲಿ ಗೆಲ್ಲುವ ಮೂಲಕ ಮಹೇಶ್-ಸಾನಿಯಾ ಜೋಡಿ ಫ್ರೆಂಚ್ ಟೂರ್ನಿಯನ್ನು ತನ್ನ ವಶಕ್ಕೆ ಮಾಡಿತು. ಇನ್ನು ಕ್ವಿಟ್ಟೊವಾ ವಿರುದ್ಧ ೬-೩, ೬-೩ ಅಂತರದಲ್ಲಿ ಗೆಲುವು ಸಾಧಿಸಿ ಶರಪೋವಾ ಫೈನಲ್‌ಗೇರಿದ್ದು, ಇಲ್ಲಿ ಆಸೀಸ್‌ನ ಸಮಂತಾ ಸ್ಟೊಸರ್ ವಿರುದ್ಧ ೭-೫, ೧-೬, ೬-೩ರ ಅಂತರದಲ್ಲಿ ಗೆದ್ದುಕೊಂಡಿದ್ದ ಸಾರಾ ವಿರುದ್ಧ ಕಾದಾಟ ನಡೆಸಲಿದ್ದಾರೆ. 

ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿಗೆ ಮುಕ್ತಿ ಇಲ್ಲವೇ?

Posted by JAYAKIRANA Kirana on | 0 comments | Leave a comment...

ಒಂದೆಡೆ ನಮ್ಮ ಸಂವಿಧಾನದ ಆಶಯದಂತೆ ಸರಕಾರವು ಆರರಿಂದ ೧೪ ವರ್ಷಗಳ ನಡುವಿನ ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡುವ ಕಾಯಿದೆಯನ್ನು ಜಾರಿಗೆ ತಂದಿದೆ. ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಜವಾಬ್ದಾರಿಯನ್ನು ಸರಕಾರವೇ ಹೊತ್ತುಕೊಂಡಿದೆ. ಆದರೆ ಎಲ್ಲಿ ಸಮರ್ಪಕವಾಗಿ ಆರರಿಂದ ೧೪ ವರ್ಷಗಳ ನಡುವಿನ ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಸಿಗುತ್ತದೆ? ಒಂದನೇ ತರಗತಿಗೆ ಮಕ್ಕಳನ್ನು ಸೇರಿಸುವಾಗಲೇ ಸಾವಿರಾರು ಡೊನೇಶನ್ ವಿದ್ಯಾರ್ಥಿಗಳಿಂದ ಪಡೆಯುವ ಶಿಕ್ಷಣ ಸಂಸ್ಥೆಗಳು ನಮ್ಮ ಮುಂದೆ ಬೆಳೆದು ನಿಂತಿವೆ.
ವಿದ್ಯಾರ್ಥಿಗಳಿಗೆ ಒಂದು ಕಾಲದಲ್ಲಿ ಸುಲಭದಲ್ಲಿ ದಕ್ಕುತ್ತಿದ್ದ ಶಿಕ್ಷಣ ಈಗ ದುಬಾರಿ. ಯಾವುದೇ ಅಡ್ಡಿ ಆತಂಕ ಇಲ್ಲದೇ ನಡೆ ಯುತ್ತಿದ್ದ ಪರೀಕ್ಷೆ ಈಗ ಹಲವು ಸಮಸ್ಯೆಗಳೊಂದಿಗೆ ಆರಂಭ. ಪರೀಕ್ಷೆ ಆರಂಭವಾದ ಮೇಲೆ ಪ್ರಶ್ನೆ ಪತ್ರಿಕೆ ಬಹಿರಂಗವಾದ ಸುದ್ದಿ ಹರಡಿ ಪರೀಕ್ಷೆ ಸ್ಥಗಿತ. ಪ್ರಶ್ನೆ ಪತ್ರಿಕೆಗಳಲ್ಲಿ ಕಂಡು ಬರುವ ಲೋಪದೋಷಗಳು, ಅಂಕಪಟ್ಟಿಯಲ್ಲಿ ಕಂಡು ಬರುವ ಲೋಪ ದೋಷಗಳು, ಮೌಲ್ಯಮಾಪನದಲ್ಲಿ ಉಂಟಾಗುವ ಲೋಪ ದೋಷ ಗಳು ಹೀಗೇ ಒಂದೊಂದು ಸಮಸ್ಯೆಗಳು ಈಗ ಜಾಸ್ತಿಯಾಗಿ ಕಾಣುತ್ತಿವೆ. ಇದರ ಪರಿಣಾಮವನ್ನು ವಿದ್ಯಾರ್ಥಿಗಳೇ ಎದುರಿಸ ಬೇಕೆನ್ನುವುದನ್ನು ಅರ್ಥಮಾಡಿಕೊಳ್ಳುವವರೇ ಇಲ್ಲ. ಸರಕಾ ರವಂತೂ ಇಂತಹ ವಿಚಾರದಲ್ಲಿ ತಲೆಕೆಡಿಸಿಕೊಳ್ಳುವುದಿಲ್ಲ. ಒಂದು ವೇಳೆ ತಲೆಕೆಡಿಸಿಕೊಂಡಿದ್ದರೆ ಇಷ್ಟೆಲ್ಲ ಸಮಸ್ಯೆಗಳು ಸೃಷ್ಟಿಯಾ ಗುತ್ತಿರಲಿಲ್ಲ. ಮಾನವನ ಅಬಿವೃದ್ಧಿಯ ಮೂಲಭೂತ ಅಂಗವಾದ ಶಿಕ್ಷಣ ಈಗ ಎಲ್ಲರಿಗೂ ಬಹಳ ಸುಲಭವಾಗಿ ದಕ್ಕ ಬೇಕು ಎನ್ನು ವುದು ಎಲ್ಲರ ಆಶಯ. ಇದರ ಪ್ರಕಾರ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆತರೆ ಬಾಲ ಕಾರ್ಮಿಕರ ಬಾಲ್ಯ ವಿವಾಹ ಆಗುವವರ ಪಟ್ಟಿಯ ಬೆಳವಣಿಗೆಗೆ ತೆರೆ ಬೀಳಬಹುದು. ಎಲ್ಲದಕ್ಕೂ ಸರ ಕಾರ ಮೊದಲು ಎಚ್ಚೆತ್ತು ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಇಷ್ಟೆಲ್ಲ ಸಮಸ್ಯೆಗಳ ಇತ್ಯರ್ಥ ಸಾಧ್ಯ.
     ಅಬ್ದುಲ್ ನಝೀರ್, ಕೋಣಾಜೆ 

ಸಮಾಜವಿರೋಧಿ ಪಿಎಫ್‌ಐಯನ್ನು ಸರಕಾರ ನಿಷೇಧಿಸಲಿ

Posted by JAYAKIRANA Kirana on | 0 comments | Leave a comment...

ಹೆಸರು ಬದಲಿಸಿ ಪಿಎಫ್‌ಐ ಆಗಿ ಬದಲಾ ಗಿರುವ ಕೆಎಫ್‌ಡಿಯು ಕೊಲೆ, ಕೊಲೆಯತ್ನ ಗಲ ಭೆಯಂತಹ ಮಾನವ ವಿರೋಧಿ ಕೃತ್ಯಗಳಲ್ಲಿ ಸದಾ ಭಾಗಿಯಾಗುತ್ತಿರುವುದು ಇತ್ತೀಚಿನ ದಿನಗಳಿಂದ ಬಹಿರಂಗವಾಗಿರುವುದರಿಂದ ಈ ಧರ್ಮ ವಿರೋಧಿ ಸಂಘಟನೆಯನ್ನು ಕೂಡಲೇ ಶಾಶ್ವತ ವಾಗಿ ನಿಷೇಧಿಸಿ ರಾಜ್ಯದ ಸೌಹಾರ್ದ ಪರಂಪ ರೆಯನ್ನು ಉಳಿಸಬೇಕಾಗಿದೆ. ಒಬ್ಬ ಮನುಷ್ಯನನ್ನು ಕೊಂದರೆ ಇಡೀ ಮನುಕುಲವನ್ನು ಕೊಂದಂತೆ ಎಂದು ಇಸ್ಲಾಂ ಜಗತ್ತಿಗೆ ಕಲಿಸುತ್ತಿದೆ.
 ಒಬ್ಬ ಮುಸ್ಲಿಮನನ್ನು ಇನ್ನೊಬ್ಬ ಮುಸ್ಲಿಂ ಕೊಂದರೆ, ಕೊಂದವರಿಗೆ ಶಾಶ್ವತ ನರಕ ಶಿಕ್ಷೆಯಿದೆ ಯೆಂದೂ ಇಸ್ಲಾಂ ಧರ್ಮ ಎಚ್ಚರಿಕೆ ನೀಡಿದೆ. ಹೀಗಿ ರುವಾಗ ಮುಸ್ಲಿಂ ರಕ್ಷಣೆ ಎಂಬ ಘೋಷಣೆ ಮಾಡಿ ರುವ ಪಿಎಫ್‌ಐ ಕಾಪಟ್ಯ ಸದಾ ಬಹಿರಂಗವಾಗುತ್ತಾ ಬಂದಿದೆ. ಸಂಸ್ಥೆಗಳ ಮೇಲೆ ದಾಳಿ, ದಾಂಧಲೆ ಪಿಎಫ್‌ಐ ಮುಖಮುದ್ರೆಯಾಗಿದೆ. ಸಂಘಪರಿವಾರವನ್ನು ಕೋಮು ವಾದಿಗಳು ಎನ್ನುವ ಪಿಎಫ್‌ಐಯವರು ಶುದ್ಧ ಕೋಮು ವಾದಿ ಹಾಗೂ ಮುಸ್ಲಿಂ ಸಂಸ್ಕೃತಿ ವಿರೋಧಿಗಳಾಗಿ ರುದ್ರನರ್ತನ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಪಿಎಫ್‌ಐ ನೇತೃತ್ವದ ಎಲ್ಲಾ ಸಂಘಟನೆಗಳನ್ನು ಸರ್ವ ಮುಸ್ಲಿಮರೂ ತಮ್ಮ ಜಮಾಅತ್ ಮಟ್ಟದಲ್ಲಿ ನಿಷೇಧಿ ಸಬೇಕು. ಖಾಝಿ, ಖತೀಬ್‌ಗಳು ಈ ಬಗ್ಗೆ ಮಧ್ಯ ಪ್ರವೇಶಿಸಿ ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಿ ಸಮಾಜವನ್ನು ರಕ್ಷಿಸಬೇಕು. ಇದಕ್ಕಾಗಿ ಫತ್ವಾ ನೀಡಲೂ ವಿದ್ವಾಂಸರು ಹಿಂದೇಟು ಹಾಕಬಾರದು.
ಪಿಎಫ್‌ಐಯ ಧರ್ಮ ವಿರೋಧಿ, ದೇಶ ದ್ರೋಹಿ, ಮಾನವವಿರೋಧಿ ಕೃತ್ಯಗಳ ಬಗ್ಗೆ ಎಲ್ಲಾ ಮುಸ್ಲಿಂ ಸಂಘಟನೆಗಳು ಜಾಗೃತೆ ವಹಿಸಬೇಕು. ಮುಸ್ಲಿಂ ನಾಯಕರ ವಿರುದ್ಧವೇ ಕ್ಷುಲ್ಲಕ ಕಾರಣಕ್ಕೆ ತಿರುಗಿ ಬೀಳುವ ಪಿಎಫ್‌ಐ ಕರ್ನಾಟಕದ ಜನತೆಗೆ ಬೇಕಾಗಿಲ್ಲ. 
ಎಂ.ಕೆ.ಸುಹೈಲ್ ಬಂದರ್, ಮಂಗಳೂರು

ಮಳೆಗಾಲ ಬಂದಾಯ್ತು ಈಗಲಾದರೂ ಚರಂಡಿ ಸ್ವಚ್ಛಗೊಳಿಸಿ

Posted by JAYAKIRANA Kirana on | 0 comments | Leave a comment...

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವಿಜಯ ಪ್ರಕಾಶರವರು ಆಯುಕ್ತರಾಗಿದ್ದ ಅವಧಿ ಯಲ್ಲಿ ಮಳೆಗಾಲದ ಸಿದ್ಧತೆ ಬೇಸಿಗೆಯಲ್ಲಿಯೇ ನಡೆಯುತ್ತಿತ್ತು. ಚರಂಡಿ ಸ್ವಚ್ಛಗೊಳಿಸುವುದು. ಮಳೆ ನೀರು ಸರಾಗವಾಗಿ ಹರಿಯಲು ಇರುವ ಅಡೆ ತಡೆ ಗಳನ್ನು ತೆರವುಗೊಳಿಸುವುದು, ಮಳೆಗಾಲ ದಲ್ಲಿ ಸಮಸ್ಯೆ ಎದುರಿಸುವ ಪ್ರದೇಶಗಳನ್ನು ಗುರು ತಿಸಿ ಮುಂಜಾಗರೂಕತಾ ಕ್ರಮ ಕೈಗೊಳ್ಳುವುದು ಇಂತಹ ಕೆಲಸವನ್ನು ವಿಜಯಪ್ರಕಾಶ್‌ರವರು ಖುದ್ದಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದರು. ಪಾಲಿಕೆಯ ಸದಸ್ಯರಿಗಿಂತ ಹೆಚ್ಚಿನ ಕಾಳಜಿ ಅವರ ಲ್ಲಿತ್ತು. ಆದುದರಿಂದ ಕಳೆದ ಮಳೆಗಾಲದಲ್ಲಿ ಮಂಗ ಳೂರಿನ ಜನತೆ ಹೆಚ್ಚಿನ ಸಮಸ್ಯೆ ಎದುರಿಸಲಿಲ್ಲ.
ಆದರೆ ಪರಿಸ್ಥಿತಿ ಬದಲಾಗಿದೆ. ವಿಜಯ ಪ್ರಕಾಶ ರೀಗ ಜಿಲ್ಲಾ ಪಂಚಾಯತ್‌ಗೆ ಹೋಗಿದ್ದಾರೆ. ನಗರ ದಲ್ಲಿ ಎಂದಿನ ನಿರ್ಲಕ್ಷ್ಯ ಹಾಗೆಯೇ ಮುಂದುವರಿ ದಿದೆ. ಮನಪಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಆಡ ಳಿತ ಗೊಂದಲದ ಕಾರಣದಿಂದಿರಬೇಕು ಮಳೆಗಾ ಲದ ಸಿದ್ಧತೆ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.
ರಾಜೇಶ್, ಮಂಗಳೂರು

ಗೊಂದಲ ನಿವಾರಿಸಿ

Posted by JAYAKIRANA Kirana on | 0 comments | Leave a comment...

ಉದ್ಯೋಗ ಕಾಯಿದೆ ಯೋಜನೆಯಲ್ಲಿ ಸರಕಾರದ ಕೆಲ ನಿಯಮಾ ವಳಿಗಳಿಂದ ಸಮಸ್ಯೆ ಎದುರಾಗುತ್ತಿದೆ. ವೈಯಕ್ತಿಕವಾಗಿ ಕೈಗೊಂಡ ಕೆಲ ಕಾಮಗಾರಿಗಳಿಗೆ ಹಣ ಪಾವತಿಯಾಗುತ್ತಿಲ್ಲ. ಇತ್ತೀಚೆಗೆ ವೈಯಕ್ತಿಕ ಕಾಮ ಗಾರಿಗಳಿಗೆ ಆದ್ಯತೆ ನೀಡಲಾಗುತ್ತಿಲ್ಲ. ಇದರಿಂದ ಜನರು ಸಮಸ್ಯೆ ಎದುರಿ ಸುವಂತಾಗಿದೆ.  ಬಸವ ವಸತಿ ಮನೆ ಯೋಜನೆ ಆರು ತಿಂಗಳಲ್ಲಿಯೇ ರದ್ದಾಗಿದೆ. ಇದರಿಂದ ಮನೆಯ ನಿರ್ಮಾಣ ಆಗುತ್ತಿಲ್ಲ. ಈ ಯೋಜನೆ ಯಲ್ಲಿ ಮನೆ ಕಟ್ಟಲು ಇನ್ನು ಹೆಚ್ಚಿನ ಕಾಲಾವಕಾಶ ಬೇಕು. 
ಕ್ರಿಯಾ ಯೋಜನೆಗೆ ಅನುಮೋದನೆ ಪಡೆದ ಬಳಿಕ ಯಾವುದೇ ಕಾಮಗಾರಿ ರದ್ದು ಪಡಿಸಬಾ ರದು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವಿವಿಧ ಯೋಜನೆ ಮತ್ತು ನಿಯಮಾವಳಿಗಳ ಸಮರ್ಪಕ ಮಾಹಿತಿಯನ್ನು ಜನಪ್ರತಿನಿಧಿಗ ಳಿಗೆ ನೀಡಬೇಕು ಇದರಿಂದ ಅಬಿವೃದ್ಧಿ ಕಾಮಗಾರಿಗಳನ್ನು ಸಮರ್ಪಕ ವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. 
ಗ್ರಾಮ ಪಂಚಾಯತ್‌ಗಳಲ್ಲಿಯ ಹಲವು ಸಮಸ್ಯೆಗಳಿಗೆ ಜನಪ್ರತಿನಿಧಿ ಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳ ನಡುವಿನ ಗೊಂದಲವೇ ಕಾರಣ ವಾಗಿದೆ ಇದನ್ನು ನಿವಾರಿಸಲು ಹಿರಿಯ ಅಧಿಕಾರಿಗಳು ಮುಂದಾಗಬೇ ಕಿದೆ.                  ಓರ್ವ ಗ್ರಾಮ ಪಂಚಾಯತ್ ಸದಸ್ಯ

ಪದವಿಪೂರ್ವ ಕಾಲೇಜುಗಳನ್ನು ಕಾವಲು ಕಾಯುವವರ‍್ಯಾರು?

Posted by JAYAKIRANA Kirana on | 0 comments | Leave a comment...

ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳ ಪ್ರವೇಶ ದಲ್ಲಿ ಬೋಧನ ಶುಲ್ಕದ ನೆಪದಲ್ಲಿ ಲಕ್ಷ, ಸಾವಿರ ರೂ. ಕೊಳ್ಳೆ ಹೊಡೆಯ ಲಾಗುತ್ತಿದೆ. ಇದನ್ನು ಗಮನ ಹರಿಸುವವರು ಯಾರು?
ಏಕರೂಪ ಶಿಕ್ಷಣ, ಏಕರೂಪ ಪ್ರವೇಶ ಮತ್ತು ಏಕರೂಪ ಶುಲ್ಕ ವಸೂ ಲಿಯ ನೀತಿಯನ್ನು ೨೦೦೭ರಲ್ಲಿಯೇ ರೂಪಿಸಲಾಗಿದೆ. ಆದರೆ ಅದನ್ನೂ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಲೇ ಇಲ್ಲ. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ೨೦೦೭ರಲ್ಲಿ ರೂಪಿಸಿದ ಶಿಕ್ಷಣ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. ಅವರು ಹೇಳಿದ್ದಷ್ಟೇ ಬಂತು ಖಾಸಗಿ ಶಿಕ್ಷಣ ಸಂಸ್ಥೆಗಳು ವಸೂಲಿ ಕೆಲಸವನ್ನು ಎಂದಿ ನಂತೆಯೇ ಮುಂದುವರಿಸಿವೆ. 
ಸರಕಾರ ಮತ್ತು ಅಧಿಕಾರಿಗಳು ಹಿಂದೆಯೂ ಅಸಹಾಯಕರಾಗಿಯೇ ಕುಳಿತಿದ್ದರೂ ಈಗಲೂ ಅಷ್ಟೇ. ಸರಕಾರಕ್ಕಾಗಲಿ, ಅಧಿಕಾರಿಗಳಿಗಾಗಲೇ ಸಾರ್ವ ಜನಿಕ ಸಮಸ್ಯೆ ಗಂಭೀರ ವಿಷಯ ಅಲ್ಲವೇ ಅಲ್ಲ. ಅವರು ಜನ ಸೇವಕರಾಗಿ ಕೆಲಸ ಮಾಡುವುದೇ ಇಲ್ಲ. ಅವರದ್ದೇನಿದ್ದರೂ ಬಂಡವಾಳ ಶಾಹಿಗಳ        ಸೇವೆ ಮಾತ್ರ.
ಆಲಿ ಹಸನ್, ಮಂಗಳೂರು

ಇತ್ತ ಗಮನಿಸಿ

Posted by JAYAKIRANA Kirana on | 0 comments | Leave a comment...

ಉಡುಪಿಯ ಸರಕಾರಿ ಬಸ್ ನಿಲ್ದಾಣದಲ್ಲಿನ ಸುಲಭ ಶೌಚಾಲಯ ಸದಾಕಾಲ ವಾಸನೆ ಬೀರುತ್ತಾ ಅವ್ಯ ವಸ್ಥೆಯ ತಾಣವಾಗಿ ಬದಲಾಗಿದೆ. ಶೌಚಾಲಯದ ಹೊರಗೆ ಹಣ ಸಂಗ್ರ ಹಿಸುವವರು ಇರುತ್ತಾರೆ. ಶೌಚಾಲ ಯದ ಒಳಗಿನ ಗೋಡೆಯಲ್ಲಿ ‘ಶುಚಿ ತ್ವಕ್ಕಾಗಿ ಹಣ ಕೊಡಿ’ ಎಂದೂ ಬರೆ ದಿರುತ್ತಾರೆ. ಆದರೆ ಇಲ್ಲಿ ಪಡೆಯುವ ಹಣದಿಂದ ಎಷ್ಟರಮಟ್ಟಿಗೆ ಶುಚಿತ್ವ ಕಾಪಾಡುತ್ತಾರೆ ಎನ್ನುವುದು ತಿಳಿ ಯುವುದಿಲ್ಲ. ಶೌಚಾಲಯದ ಒಳಗೆ ಹೊಕ್ಕರೆ ಮೂಗು ಮುಚ್ಚಿ ಕೊಂಡೇ ನಿಲ್ಲಬೇಕು. ಒಳಗಡೆ ವಾಶ್ ಬೇಸಿ ನ್‌ನ ನೀರು ಲೀಕೇಜ್ ಆಗುವುದ ರಿಂದ ಶೌಚಾಲಯವಿಡೀ ಒದ್ದೆಯಾ ಗಿರುತ್ತದೆ.  ಉಡುಪಿ ನಗರಸಭೆ ಇನ್ನಾ ದರೂ ಇತ್ತ ಗಮನಿಸುವುದು ಒಳ್ಳೆ ಯದು. ಜನರ ಆರೋಗ್ಯ ಹಾಳು ಮಾಡುವ ಇಂಥ ಶೌಚಾಲಯವನ್ನು ಆದಷ್ಟು ಶೀಘ್ರವಾಗಿ ಮುಚ್ಚಿ ಬಿಡು ವುದೇ ಒಳ್ಳೆಯದು. 
  ರಾಜಶೇಖರ್, ಆದಿಉಡುಪಿ

ಯೌವ್ವನದ ಶಕ್ತಿಯ ಸದ್ಭಳಕೆಯಾಗಲಿ

Posted by JAYAKIRANA Kirana on | 0 comments | Leave a comment...

ಫರಿಯಾದ್ ಇಖ
ಅವರಿಗೆ ಬಹಳ ಅರ್ಜೆಂಟಿತ್ತು. ಹಾಗಾಗಿ ರಾಕೆಟ್ ತರಹ ಕಾರು ಚಲಾಯಿಸುತ್ತಿದ್ದರು. ಆದರ ಮರುಗಳಿಗೆಯಲ್ಲಿಯೇ ‘ದಢಾರ್’ ಎಂದು ಇನ್ನೊಂದು ಕಾರಿಗೆ ಗುದ್ದಿ ಹೊರಕ್ಕೆ ಚೆಲ್ಲಲ್ಪಟ್ಟರು. ಕೂಡಲೇ ಜನ ಸೇರಿಬಿಟ್ಟರು. ಬಹಳ ಅರ್ಜೆಂಟಾಗಿ ಕಾರು ಚಲಾಯಿಸುತ್ತಿದ್ದವರು ಈಗ ಬಹಳ ಸೈಲೆಂಟಾಗಿ ಜನರನ್ನು ಮಿಕ ಮಿಕ ನೋಡತೊಡಗಿದರು. ಅವರಗೀಗ ಯಾವ ಅರ್ಜೆಂಟೂ ಇರಲಿಲ್ಲ. ಇಂಗು ತಿಂದ ಮಂಗನಂತೆ ಆಕಾಶದ ಕಡೆಗೊಮ್ಮೆ ಜನರ ಕಡೆಗೊಮ್ಮೆ ಗುದ್ದಿದ ಕಾರಿನ ಕಡಗೊಮ್ಮೆ ನಂತರ ತಮ್ಮ ಕಾರಿನ ಕಡೆಗೊಮ್ಮೆ ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತಾ ನಿಂತುಬಿಟ್ಟರು.
ಇದು ಬಲ್ಮಠ ಕಲೆಕ್ಟರ್ ಗೇಟ್ ಬಳಿ ಜಿಲ್ಲಾಧಿಕಾರಿಗಳ ಕಾರಿಗೆ ಅಪ್ಪಳಿಸಿದ ಕಾರೊಂದರ ಕಥೆ! ನನ್ನ ಕಣ್ಣಾರೆ ಕಂಡ ಘಟನೆಯಿದು. ಈ ಮಾರುತಿ ೮೦೦ ಕಾರು ಹೇಗೆ ಚಲಾಯಿಸಲ್ಪಟ್ಟಿತ್ತೆಂದರೆ ದೀಪಾವಳಿ ಸಂದರ್ಭದಲ್ಲಿ ನಾವು ಆಕಾಶಕ್ಕೆ ಹಾರಿಬಿಡುತ್ತೇವೆಯಲ್ಲಾ, ಆ ರಾಕೆಟ್ ಪಟಾಕಿ... ಅದೇ ತರಹ ಚಲಾಯಿಸಲ್ಪಟ್ಟಿತ್ತು. ಕಾರಿನಲ್ಲಿದ್ದವರೆಲ್ಲ ಸಣ್ಣ ವಯಸ್ಸಿನವರೆ. ಎಲ್ಲರೂ ಯುವಕರು. ಒಂದಿಬ್ಬರಿಗೆ ಇನ್ನಷ್ಟೇ ಮೀಸೆ ಚಿಗುರೊಡೆಯಬೇಕು! ಇಂಥಾ ಯುವಕರು ಹೋಗಿ ಹೋಗಿ ಜಿಲ್ಲಾಧಿಕಾರಿ ಕಾರಿಗೇ ಗುದ್ದಿಬಿಟ್ಟಿದ್ದರು. ಯಾವನೋ ಒಬ್ಬ ಬೈಕ್ ಸವಾರ ನಸೀಬು ಮಾಡಿದ್ದಿರಬೇಕು. ಜಿಲ್ಲಾಧಿಕಾರಿ ಕಾರು ಅಡ್ಡ ಬರದಿದ್ದರೆ ಈ ಯುವಕರು ನನ್ನಂಥಾ ಯಾವನೋ ಬೈಕ್ ಸವಾರನನ್ನು ಬಲಿ ಪಡೆಯುತ್ತಿದ್ದರು!.
ಏನೋ ಕಾರಣವಿರಲಿಲ್ಲ. ಈ ಯುವಕರು ಅಷ್ಟೊಂದು ವೇಗದಲ್ಲಿ ಕಾರು ಚಲಾಯಿಸಲು ಅವರ ಮುಂದೆ ಅಂಥಾದ್ದೊಂದು ಕಾರಣ ಏನೂ ಇರಲಿಲ್ಲ. ಇತರರಂತೆಯೇ ಸೇರಬೇಕಾದ ಯಾವುದೋ ಸ್ಥಳಕ್ಕೆ ತಲುಪ ಬೇಕಿತ್ತಷ್ಟೆ. ಅದಕ್ಕೆ ಈ ಪರಿ ಮಿತಿಮೀರಿದ ವೇಗದಲ್ಲಿ ಕಾರು ಚಲಾಯಿಸುವ ಅಗತ್ಯವೇ ಇರಲಿಲ್ಲ. ಎಲ್ಲರಿಗೂ ಚಲಾಯಿಸಿದಂತೆ ಮಧ್ಯಮವೇಗದಲ್ಲಿ ಕಾರು ಚಲಾಯಿಸಿದ್ದರೆ ೫-೧೦ ನಿಮಿಷ ತಡವಾಗಿ ತಮ್ಮ ಜಾಗಕ್ಕೆ ತಲುಪುತ್ತಿದ್ದರು ಅಷ್ಟೆ. ಅದರಲ್ಲಿ ಯಾವನದ್ದೇ ತಲೆ ಹೋಗುವಂತದ್ದಿರಲಿಲ್ಲ. ವಿನಾ ಕಾರಣ ಕುಂಡೆಯೊಳಗೆ ಗಾಳಿ ಹೊಕ್ಕಂತೆ ಮಿತಿ ಮೀರಿದ ವೇಗದಲ್ಲಿ ಕಾರು ಚಲಾ ಯಿಸಿ ತಾವು ಸಮಸ್ಯೆಗೆ ಸಿಕ್ಕಿಬಿಟ್ಟರು ಇತರರಿಗೂ ಸಮಸ್ಯೆ ಮಾಡಿಬಿಟ್ಟರು. ಬೇಕಿತ್ತಾ ಇದೆಲ್ಲಾ!?
ಯುವಜನತೆ ಎಷ್ಟೊಂದು ಅಪಾಯಕಾರಿಗಳಾಗಿ ವರ್ತಿಸುತ್ತಾರೆ ಎನ್ನುವುದಕ್ಕೆ ಇದೊಂದು ಸಣ್ಣ ನಿದರ್ಶನ ಅಷ್ಟೆ. ನಿಮಗೆ ಗೊತ್ತಿದೆ. ಕಾರ್ - ಬೈಕ್ ಮತ್ತಿತರ ವಾಹನ ಚಲಾಯಿಸುವವರಲ್ಲಿ ಎಲ್ಲಾ ವಯೋಮಾನದವರು ಇರುತ್ತಾರೆ. ಆದರೆ ಅಪಘಾತ ಎಸಗುವವರಲ್ಲಿ ಯುವಕರ ಪಾಲೇ ಹೆಚ್ಚು. ಒಂದು ಲೆಕ್ಕದಲ್ಲಿ ಇದು ವಯಸ್ಸಿನ ದೋಷ ಎಂದರೂ ಸರೀನೇ... ಆದರೆ ಹಾಗಂತ ಈ ವಯಸ್ಸಿನಲ್ಲಿ ಎಸಗಲ್ಪಡುವ ಎಲ್ಲಾ ಅನಾಹುತಕಾರೀ ಸಂಗತಿ ಗಳನ್ನು ಸಮಾಜ ಒಪ್ಪಿಕೊಳ್ಳುವಂತೆಯೂ ಇಲ್ಲ. ಸಹಿಸಿಕೊಳ್ಳುವಂತೆಯೂ ಇಲ್ಲ. ಯಾಕೆಂದರೆ ಯುವಕರು ಸೃಷ್ಟಿಸುವ ಸಮಸ್ಯೆಗಳಿಂದ ಇಡೀ ಸಮಾಜವೇ ನೋವು ತಿನ್ನುವ ಸ್ಥಿತಿಗೆ ಬೀಳುತ್ತದೆ. ಯುವಕರ ತಿಳಿಗೇಡಿತನದಿಂದ ಊರಿಗೆ ಊರೇ ಹೊತ್ತಿ  ಉರಿಯುವ ಸಾಧ್ಯತೆ ಇರುತ್ತದೆ.
ನಮ್ಮ ದೇಶದಲ್ಲಿ ಯುವಕರು ಜಾಣ್ಮೆಯಿಂದ ವ್ಯವಹರಿಸಿ ದೇಶದ ಅಭಿವೃದ್ದಿಯಲ್ಲಿ ತಮ್ಮ ಪಾಲನ್ನು ದಾಖಲಿಸಿರುವುದು ಬಹಳ ಕಡಿಮೆ. ಆದರೆ ತಮ್ಮ ತಿಳಿಗೇಡಿತನದಿಂದ ಎಸಗಿರುವ ಅನಾಹುತಗಳೆಷ್ಟೊ, ಬಹುಶಃ ಲೆಕ್ಕವಿರಲಿಕ್ಕಿಲ್ಲ. ಈಗ್ಗೆ ಹಲವು ದಿನಗಳಿಂದ ಕೃಷ್ಣಾಪುರ ಎಂಬ ಮುಸ್ಲಿಂ ಬಾಹುಳ್ಯವಿರುವ ಪ್ರದೇಶವೊಂದರಲ್ಲಿ ಮುಸ್ಲಿಂ ಯುವಕರಿಂದ ಸೃಷ್ಟಿಯಾದ ಸಮಸ್ಯೆಯೊಂದು ಹಿಂದೂ - ಮುಸ್ಲಿಂ ಬಾಂಧವ್ಯದಲ್ಲಿ ಬಿರುಕು ಹೆಚ್ಚು ಮಾಡುವತ್ತ ಸಾಗುತ್ತಿರುವುದು ನೀವು ಗಮನಿಸಿರಬಹುದು. ಅದರಂತೆಯೇ ನನ್ನ ಉಳ್ಳಾಲದ ಮನೆಯ ಹತ್ತಿರವೇ ನಡೆದ ಘಟನೆಯೊಂದು ನನ್ನ ನೆರೆಕರೆಯ ಹಿಂದೂ ಮುಸ್ಲಿಂ ಸಂಬಂಧವನ್ನು ದುರ್ಬಲಗೊಳಿಸುವಂತಿತ್ತು. ಆದರೆ ಉಭಯ ಸಮುದಾಯದ ಪ್ರಜ್ಞಾವಂತ ಹಿರಿಯರು ವಿಷಯವನ್ನು ಬೆಳೆಯಗೊಡದೆ ಒಗ್ಗಟ್ಟು ನೆಲೆಗೊಳಿಸಲು ಬಹುವಾಗಿ ಪ್ರಯತ್ನಪಟ್ಟಿದ್ದರು.
ಆದದ್ದೇನೆಂದರೆ ಓರ್ವ ಹಿಂದು ಯುವಕ ತನ್ನ ಬೈಕನ್ನು ಪ್ರತಿದಿನ ಬಹಳ ವೇಗವಾಗಿ ಚಲಾಯಿಸುತ್ತಿದ್ದನಂತೆ. ಈಗ ಮಳೆ ಬಿದ್ದು ರಸ್ತೆ ತುಂಬಾ ಕೆಸರು ತುಂಬಿಕೊಂಡಿದೆ. ಮೊನ್ನೆ ಬುಧವಾರದಂದು ಆತ ಎಂದಿನಂತೆಯೇ ತನ್ನ ಬೈಕನ್ನು ವೇಗವಾಗಿ ಚಲಾಯಿಸುತ್ತಿದ್ದಾಗ ಬದಿಯಲ್ಲಿ ಸಾಗುತ್ತಿದ್ದ ಆರೇಳು ಮುಸ್ಲಿಂ ಯುವಕರ ಮೇಲೆ ಕೆಸರು ಹಾರಿದೆ. ಇದ ರಿಂದ ಮಾತಿಗೆ ಮಾತು ಬೆಳೆದು ಈ ಹಿಂದೂ ಯುವಕನಿಗೆ ಮುಸ್ಲಿಂ ಯುವಕರು ಯದ್ವಾ ತದ್ವಾ ಥಳಿಸಿದ್ದಾರೆ. ಹಿಂದೂ ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾನೆ. ವಿಷಯ ಪೊಲೀಸ್ ಠಾಣೆಯ ಮೆಟ್ಟಲೇರಿ ಪೊಲೀಸರು ಆರೋಪಿಗಳ ಶೋಧ ನಡೆಸುತ್ತಿದ್ದಾರೆ. ಈಗ ಹಿಂದೂ ಯುವಕನ ಮನೆಯವರಿಗೂ, ಸಂಬಂಧಿಕರಿಗೂ, ಗೆಳೆಯ ರಿಗೂ, ಈ ಕಡೆ ಮುಸ್ಲಿಂ ಯುವಕನ ಮನೆಯವರಿಗೂ, ಗೆಳೆಯರಿಗೂ, ಸಂಬಂಧಿಕರಿಗೂ ನಿದ್ರೆಯಿಲ್ಲ. ಪೊಲೀಸರಿಗೂ ನಿದ್ದೆಯಿಲ್ಲ. ಇನ್ನು ಎಲ್ಲರೂ ಪೊಲೀಸ್ ಠಾಣೆ, ಕೋರ್ಟು ಕಚೇರಿ ಅಲೆದಾಡಬೇಕು. ಯಾರಿಂದಾಯ್ತು ಇದೆಲ್ಲಾ? ಯಾಕಾಯ್ತು ಇದೆಲ್ಲಾ?
ಒಂದು ಕ್ಷುಲ್ಲಕ ಕಾರಣದಿಂದ ಸೃಷ್ಟಿಯಾಗಿದೆ ಇಲ್ಲಿ ವೈಷಮ್ಯ. ಬೈಕ್‌ನಲ್ಲಿ ವೇಗವಾಗಿ ಚಲಿಸಿ ಕೆಸರು ಹಾರಿಸಿದವನು ಹಿಂದುವಾಗಿರಲಿ, ಮುಸ್ಲಿಮ ನಾಗಿರಲಿ, ಕ್ರಿಶ್ಚಿಯನ್ನನೇ ಆಗಿರಲಿ. ಅವನಿಗೆ ಆರೇಳು ಮಂದಿ ಒಟ್ಟಿಗೆ ಸೇರಿ ತದುಕುವುದು ಎಷ್ಟು ಸರಿ? ಆರೇಳು ಮಂದಿ ಒಟ್ಟು ಸೇರಿ ಒಬ್ಬ ನಿಗೆ ಥಳಿಸುವುದು ದೊಡ್ಡ ಸಾಹಸವೇ? ಇಂಥಾ ಸಾಹಸ ಮಾಡಲು ಒಂದು ಕುನ್ನಿಗೂ ಸಾಧ್ಯವಿದೆ. ಮುಸ್ಲಿಂ ಯುವಕನೋರ್ವ ಸರಿ ಅಥವಾ ತಪ್ಪೇ ಮಾಡಿರಲಿ. ಬಜರಂಗದಳದ್ದೋ, ರಾಮಸೇನೆಯದ್ದೋ ರೌಡಿ ಪಡೆ ಆ ಮುಸ್ಲಿಂ ಯುವಕನಿಗೆ ಥಳಿಸಿದರೆ ಅವರಿಗೆ ಕಾನೂನು ಕೈಗೆತ್ತಿ ಕೊಳ್ಳಲು ಅಧಿಕಾರವೇನಿದೆ ಎಂದು ಪ್ರಶ್ನಿಸುವ ನಾವು ನಮ್ಮ ಯುವಕರೇ ಗುಂಪು ಸೇರಿ ಅನ್ಯಧರ್ಮದ ಒಬ್ಬಂಟಿ ಯುವಕರನ್ನು ಹಿಡಿದು ಥಳಿ ಸುವಾಗ ನ್ಯಾಯ ಹೇಳಬೇಕೆಂದು ಅನಿಸದಿರುವುದು ನಮ್ಮಲ್ಲಿರುವ ಸಣ್ಣ ಮನಸ್ಸನ್ನು ಎತ್ತಿ ತೋರಿಸುತ್ತದೆ.
ಆದರೆ ಉಳ್ಳಾಲದ ನನ್ನ ಮನೆಯ ಪರಿಸರದ ಮುಸ್ಲಿಂ ಮುಖಂಡರು ಆ ಮಟ್ಟಿನ ಸಣ್ಣ ಮನಸ್ಸಿನವರು ಅಲ್ಲವೆಂದು ಕಾಣುತ್ತದೆ. ಅವರು ಯಾರೂ ಆರೋಪಿಗಳನ್ನು ಸಮರ್ಥಿಸುವ ಮಾತನ್ನಾಡಿಲ್ಲ. ಬೈಕ್ ಸವಾರ ಯುವಕ ಮಾಡಿದ್ದು ತಪ್ಪೋ ಸರಿಯೋ ಅದು ಬೇರೆಯೇ ವಿಚಾರ. ಆದರೆ ಆತನಿಗೆ ನಮ್ಮ ಯುವಕರು ಥಳಿಸಿದ್ದು ಮಾತ್ರ ಖಂಡಿತಾ ತಪ್ಪು ಎಂದಿದ್ದಾರೆ ಪರಿಸರದವರು. ಆದರೆ ಕೃಷ್ಣಾಪುರದಲ್ಲಿ ಅಂಥಾ ಸುದ್ದಿ ನಮ್ಮ ಕಿವಿಗೆ ಬಿದ್ದಿಲ್ಲ.
ನಾನಿಲ್ಲಿ ಹೇಳುವುದು ಇಷ್ಟೆ. ಯುವಕರು ತಾಳ್ಮೆ ವಹಿಸಿಕೊಳ್ಳಬೇಕು. ಸಂಯಮ ರೂಢಿಸಿಕೊಳ್ಳಬೇಕು. ಅದರಲ್ಲೂ ಮುಸ್ಲಿಂ ಯುವಕರಂತೂ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಪ್ರವಾದಿ ಮಹಮ್ಮದ್‌ರವರು ಒಂದು ಕಡೆ ಹೀಗೆ ಹೇಳುತ್ತಾರೆ. ಯುದ್ಧರಂಗದಲ್ಲಿ ಹೋರಾಡುವ ವನಿಗಿಂತ ತನ್ನ ಸಿಟ್ಟನ್ನು ನಿಗ್ರಹಿಸಿ ತನ್ನನ್ನು ಹತೋಟಿಗೆ ತರುವವನೇ ನಿಜವಾದ ಧೀರ. ಎಲ್ಲಾ ಮುಸ್ಲಿಂ ಯುವಕರು ಮದ್ರಸಾಗಳಲ್ಲಿ ಇಂಥಾ ನೂರಾರು ನುಡಿಮುತ್ತುಗಳನ್ನು ಆಲಿಸಿದವರೇ. ಆದರೆ ತಮ್ಮ ಜೀವನದಲ್ಲಿ ಅದನ್ನು ಪಾಲಿಸುವುದೇ ಇಲ್ಲ. ಮುಸ್ಲಿಂ ಸಮಾಜದ ನಿಜವಾದ ದುರಂತ ಇದು. ಪ್ರವಾದಿ ನುಡಿಗಳನ್ನು ಅಲ್ಲಾಹನ ವಚನಗಳನ್ನು ಮುಸ್ಲಿಮರೇ ಮರೆತು ಬಿಟ್ಟಿದ್ದಾರೆ.
ಓರ್ವ ಮನುಷ್ಯನಿಗೆ ಯೌವ್ವನ ಎಂಬುವುದು ಆತನ ಇಡೀ ಬದುಕಿನಲ್ಲಿ ಅತೀ ಹೆಚ್ಚು ಶಕ್ತಿ ಸಂಚಯಗೊಂಡಿರುವ ಅವಧಿ. ಬಾಲ್ಯದಲ್ಲಿ ವ್ಯಯ ಮಾಡಿರುವುದು ಮುಪ್ಪಿನಲ್ಲಿ ವ್ಯಯ ಮಾಡಲಿಕ್ಕಿರುವುದನ್ನು ಆತ ಕೂಡಿಡುವುದು ಯೌವ್ವನದಲ್ಲಿ. 
ಯೌವ್ವನ ಎಂಬುವುದೇ ಶಕ್ತಿ. ಯೌವ್ವನ ಎಂಬುವುದೇ ಹುಮ್ಮಸ್ಸು. ಹಿಂದೂವಾಗಿರಲಿ. ಮುಸ್ಲಿಮನಾ ಗಿರಲಿ, ಕ್ರಿಶ್ಚಿಯನ್ನನಾಗಿರಲಿ. ಯುವಕರು ಇದನ್ನು ಅರ್ಥಮಾಡಿಕೊಂಡು ತಮ್ಮ ಶಕ್ತಿಯನ್ನು ಸದ್ಭಳಕೆ ಮಾಡಿಕೊಳ್ಳ ಬೇಕು. ಸಮಾಜಕ್ಕೆ ಸಮಸ್ಯೆ, ನೋವು ತರುವ ಕಾರ್ಯಗಳಿಂದ ಮುಲಾಜಿಲ್ಲದೆ ನಿರ್ಗಮಿಸಬೇಕು. 
ಜವಾನಿ ಜಿಂದಾಬಾದ್.

ಪ್ರೇಮಿಯ ಮೇಲಿನ ಭರವಸೆ ಹುಸಿಯಾಗದಂತೆ ನೋಡಿಕೊಳ್ಳಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ:
    ಸಮಸ್ಯೆ: ನಾನು ನಗರದ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಒಬ್ಬ ಹುಡುಗನನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇನೆ. ನಮ್ಮ ಜಾತಿ ಬೇರೆ. ಆತ ಮತ್ತು ನಾನು ರಜೆ ಇದ್ದಾಗ ಭೇಟಿಯಾಗುತ್ತೇವೆ. ಆತ ನನಗಿಂತ ಎರಡು ವರ್ಷ ದೊಡ್ಡ ವನು. ಆತ ನೋಡಲು ಚೆನ್ನಾಗಿದ್ದಾನೆ. ನನಗೆ ಆತನ ಜತೆಗಿನ ಸ್ನೇಹ ತುಂಬಾ ಖುಷಿ ಕೊಡುತ್ತದೆ. ನಮ್ಮ ನಡುವಿನ ಪ್ರೀತಿ ನಾನು ಕೆಲಸ ಮಾಡುವಲ್ಲಿ ತಿಳಿದಿದೆ. ನನ್ನ ಮನೆಯಲ್ಲೂ ಈ ವಿಚಾರ ತಿಳಿದು ಒಮ್ಮೆ ಗಲಾಟೆಯೂ ನಡೆದಿತ್ತು. ನನಗೆ ಮೂವರು ಅಣ್ಣಂದಿರು ಇದ್ದಾರೆ. ಅಣ್ಣಂದಿರು ನನ್ನ ಪ್ರೀತಿಯ ವಿಷಯ ತಿಳಿದು ಕೆಲಸಕ್ಕೆ ಹೋಗುವುದು ಬೇಡ ಎನ್ನುತ್ತಾರೆ. ನೀನು ಯಾರನ್ನೋ ಪ್ರೀತಿಸಿ ಮದುವೆಯಾದರೆ ನಾವು ಹಗ್ಗ ತೆಗೆದುಕೊಂಡು ಸಾಯುತ್ತೇವೆ ಎನ್ನುತ್ತಾರೆ. ನಾನು ಕೆಲಸಕ್ಕೆ ಹೋಗುವುದನ್ನು ಬಿಟ್ಟಿಲ್ಲ. ನಾನು ಪ್ರೀತಿ ಸುತ್ತಿರುವ ಹುಡುಗ ತುಂಬಾ ಒಳ್ಳೆಯವನು. ಆತ ನನ್ನನ್ನು ಪ್ರಾಣ ಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ. ನನ್ನ ಭಾವನೆಗೆ ಗೌರವ ಕೊಡುತ್ತಾನೆ. ಅವನಿಗೆ ಒಬ್ಬಳು ತಂಗಿ ಇದ್ದಾಳೆ. ಆಕೆಯ ಮದುವೆ ಆದಮೇಲೆ ಮದುವೆಯಾಗುತ್ತೇನೆ ಎನ್ನುತ್ತಾನೆ. ಆತನ ಮನೆಯಲ್ಲಿ ಒಪ್ಪಿಗೆಯಿದೆ ಎನ್ನುತ್ತಾನೆ. ಒಟ್ಟಾರೆ ನಾನು ಸಂಕಷ್ಟಕ್ಕೆ ತುತ್ತಾಗಿದ್ದೇನೆ.
ನಾನು ಪ್ರೀತಿಸುತ್ತಿರುವ ಹುಡುಗನಿಗೆ ಈಗಾಗಲೇ ಎಲ್ಲವನ್ನೂ ಕೊಟ್ಟಿದ್ದೇನೆ. ಆತನ ಮೇಲೆ ನಂಬಿಕೆಯಿದೆ. ನಾವು ಮದುವೆಯಾ ಗಲು ಸಾಧ್ಯವಿದೆಯೇ? ನನಗೆ ಸಲಹೆ ಕೊಡಿ.
ಸಲಹೆ: ಸಮಸ್ಯೆಯನ್ನು ಬೇಕು ಬೇಕೆಂದೇ ಆಹ್ವಾನಿಸಿದಿರಿ. ನೀವು ಆತನನ್ನು ಪ್ರೀತಿ ಸಿದ್ದೇ ತಪ್ಪು ಎಂದು ನಾನು ಹೇಳುತ್ತಿಲ್ಲ. ಯಾಕೆಂದರೆ ಪ್ರೀತಿ ಹೇಳಿ ಕೇಳಿ ಬರುವುದಿಲ್ಲ. ಬಂದ ಪ್ರೀತಿ ಅಷ್ಟು ಸುಲಭವಾಗಿ ದೂರ ಹೋಗುವುದೂ ಇಲ್ಲ. ಆದರೆ ಪ್ರೀತಿಯಲ್ಲಿ ಈಗಲೇ ಮೈಮರೆತು ನಾಳೆ ಸಮಸ್ಯೆ ಸೃಷ್ಟಿಯಾದರೆ ಯಾರು ಜವಾಬ್ದಾರಿ? ನಿಮ್ಮನ್ನು ಪ್ರೀತಿಸುವ ಹುಡುಗ ನಿಮಗಿಂತ ಸಣ್ಣ ವರ್ಷದವನಾಗಿರಬಹುದು. ಆತ ತಂಗಿ ಇರುವಾಗ ಇಷ್ಟು ಬೇಗ ಮದುವೆ ಯಾಗಲು ಸಾಧ್ಯವಿದೆಯೇ? ಎಲ್ಲರೆದುರು ಈಗಲೇ ಬಿಂದಾಸ್ ಆಗಿ ತಿರುಗಾಟ ಶುರು ಮಾಡಿದ್ದರಿಂದ ಮನೆಯಲ್ಲಿ ತಿಳಿದಿದೆ. ಹೀಗಾಗಿ ಅವರು ನಿಮ್ಮನ್ನು ಬೈಯ್ದಿರಬಹುದು. ನೀವು ಕೆಲಸ ಮಾಡುವಲ್ಲಿ ಯಾರಿಗೂ ಹೆದರಿಕೊಂಡು ಇರಬೇಕಾದ ಅವಶ್ಯಕತೆಯಿಲ್ಲ. ನಿಮ್ಮ ವಿದ್ಯಾರ್ಹತೆಗೆ ಬೇರೆ ಉದ್ಯೋಗ ಖಂಡಿತಾ ಸಿಗುತ್ತದೆ. ಬೇರೆ ಕಡೆ ಉದ್ಯೋಗಕ್ಕೆ ಪ್ರಯತ್ನಿಸಿ. ಪ್ರೀತಿಯಲ್ಲಿ ದೈಹಿಕ ಸಂಪರ್ಕಕ್ಕೆ ಅವಕಾಶ ಕೊಡುವುದು ಬೇಡ. ಇದರಿಂದ ವಿವಾಹಪೂರ್ಣ ಗರ್ಭಧಾರಣೆಯೂ ಸೇರಿದಂತೆ ಇನ್ನಿತರ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆಯೇ ಹೆಚ್ಚು.
ಆತನ ಜೊತೆ ಅನಗತ್ಯ ತಿರುಗಾಟಕ್ಕೆ ಕಡಿವಾಣ ಹಾಕಿ. ಪ್ರೀತಿ ಎಂದಿಗೂ ಮನಸ್ಸಿನಲ್ಲೇ ಇದ್ದರೆ ಒಳ್ಳೆಯದು. ಆತನಲ್ಲಿ ಮನೆಯಲ್ಲಿ ಬಂದು ಮದುವೆಯ ವಿಚಾರ ಪ್ರಸ್ತಾಪಿಸಲು ಹೇಳಿ. ಏನೂ ಆಗುವುದಿಲ್ಲ. ಆಗ ಪ್ರೀತಿಗೆ ಭದ್ರತೆ ಸಿಕ್ಕಂತಾಗುತ್ತದೆ. ಅದು ಬಿಟ್ಟು ಆತನ ಮೇಲೆ ನಂಬಿಕೆ ಇದೆ ಎಂದು ಸುಮ್ಮನಿದ್ದರೆ ಆತ ಸಮಯದ ಕೈಗೊಂಬೆಯಾಗಿ ಮನಸ್ಸು ಬದಲಾಯಿಸಿದರೆ ಕಷ್ಟ. ಮದುವೆ ಈಗಲೇ ಬೇಡ. ಮನೆಯವ ರನ್ನು ಒಪ್ಪಿಸಿ. ಆತನ ತಂಗಿಯ ಮದುವೆಯ ಬಳಿಕ ಎಲ್ಲರಲ್ಲೂ ಒಪ್ಪಿಸಿ ಮದುವೆಯಾಗಿ. ಆಗ ಯಾವುದೇ ಸಮಸ್ಯೆಬಾರದು.

ಕಬಕದಲ್ಲೂ ಪಾರ್ಟಿ ಇದೆಯಾ!?

Posted by JAYAKIRANA Kirana on | 0 comments | Leave a comment...

ನೊಂದ ಊರಿನವರು, ಕಬಕ
ಶಾಂತಿ-ಸಾಮರಸ್ಯ ಸಹಬಾಳ್ವೆಗೆ ಪ್ರತೀಕವಾದ, ಪುತ್ತೂರಿನ ಹೃದಯ ಭಾಗದಲ್ಲಿರುವ ಒಂದು ಸುಂದರ ಊರೇ ಕಬಕ ಎಂಬ ಪಟ್ಟಣ. ಧಾರ್ಮಿಕ ಆಚಾರ-ವಿಚಾರಗಳಿಗೆ ಸದಾ ಬದ್ಧವಾಗಿ ನಿಲ್ಲುವ, ಸಾಮಾಜಿಕ ದೃಷ್ಟಿಯಲ್ಲೂ, ಧಾರ್ಮಿಕ ನಿಟ್ಟಿನಲ್ಲಿಯೂ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಈ ಊರು ಹೆಚ್ಚಾಗಿ ಪ್ರಸಿದ್ಧಗೊಂಡಿದೆ. ಆದರೆ ಇತ್ತೀಚೆಗೆ ಕೆಲವೊಂದು ವಿದ್ಯ ಮಾನಗಳು, ತ್ವರಿತಗತಿ ಬದಲಾವಣೆಗಳು ಕಬಕ ಪರಿಸರವನ್ನೇ ಮೂಕ ವಿಸ್ಮಿತ ವಾಗುವಂತೆ ಮಾಡಿತು. ಜನರ ನಡುವೆಯೇ ಹಲವು ಗೊಂದಲಗಳು ಉದ್ಭವಿಸಿ ಸಂಶಯದ ವಾತಾವರಣ ಸೃಷ್ಟಿಯಾಯಿತು. ಮುಖ್ಯ ವಿಷಯವೇನೆಂದರೆ, ಕಬಕ ಪರಿಸರದಲ್ಲಿ ಧಾರ್ಮಿಕ ವಿದ್ಯಾಭ್ಯಾಸ ನೀಡುವ ಹಿತದೃಷ್ಟಿಯಿಂದ ದರ್ಸ್ ಗಳನ್ನು ನಡೆಸಲಾಗುತ್ತಿದೆ. ಅದರೊಂದಿಗೆ ಜಮಾಅತ್‌ನಲ್ಲಿ ಮುತಲ್ಲಿಮರ ವಿದ್ಯಾಭ್ಯಾಸಕ್ಕೆ ಒತ್ತುನೀಡಿ ಹಾಗೂ ಜಮಾಅತ್‌ನ ಕೀಳಿನಲ್ಲಿ ಉಸ್ತಾದರು ಕೂಡಾ ಸೇವೆ ಸಲ್ಲಿಸುತ್ತಿದ್ದಾರೆ.  
ವಿದ್ಯಾಪುರ ಎಂಬ ಜನತಾ ಕಾಲನಿಯು ಕಬಕ ವಲಯದಲ್ಲಿ ಕಾಣಸಿಗುವ ಜನಭರಿತ ಪ್ರದೇಶ. ಇಲ್ಲಿ ದರ್ಸ್ ನಡೆಸುತ್ತಿದ್ದ ತಂಙಳ್‌ರವರ ದಿಢೀರನೇ ರಾಜೀನಾಮೆ! ದೀನೀ ವಿದ್ಯಾಭ್ಯಾಸ ಬೋಧಿಸುತ್ತಿದ್ದ ಪಠ್ಯಪುಸ್ತಕದಲ್ಲಿ ಮಾಡಿದ ಬದಲಾವಣೆ! ಮದ್ರಸ ಆರಂಭದ ಸಮಯದಲ್ಲಿ ದುವಾಶೀರ್ವಚನಕ್ಕೆ ಆಗಮಿಸಿದ ಕೋಯಕುಟ್ಟಿ ತಂಙಳ್ ಅವರು ತಮ್ಮ ಪ್ರಾರ್ಥನೆಯಲ್ಲಿ ಎ.ಪಿ. ವಿಭಾಗದ ನೇತಾರರಿಗೆ ಪ್ರತ್ಯೇಕ ದುವಾಃ ಮಾಡುವುದರೊಂದಿಗೆ ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟರು.  
ಕಬಕದಲ್ಲಿ ವಿಭಾಗೀಯತೆ ಇಲ್ಲವೆಂದು ಮೆರೆಡಾಡುತ್ತಿದ್ದವರಿಗೆ ನನ್ನ ಒಂದು ಪ್ರಶ್ನೆ. ಹಾಗಾದರೆ ಪಠ್ಯಪುಸ್ತಕದಲ್ಲಿ ಎ.ಪಿ. ಬೋರ್ಡ್‌ನ ಹಸ್ತಕ್ಷೇಪ, ವಿದ್ಯಾರ್ಥಿಗಳ ಮನಸ್ಸಲ್ಲಿ ಅಲ್ಲಿರುವ ಉಸ್ತಾದರು ಗಾಢವಾಗಿ ಪರಿಣಾಮ ಬೀರುವಂತೆ ವಿಭಾಗೀಯ ತೆಯ ಪ್ರವಚನ ನೀಡುವುದು ಅಲ್ಲದೇ ತಂಙಳ್‌ರವರ ಸಂದೇಹಪೂರಿತ ಪ್ರಾರ್ಥನೆ. ಹೀಗೆ ಹತ್ತು ಹಲವು ವಿಷಯಗಳಿಂದ ಗೊಂದಲದ ಗೂಡಾಗಿರುವ ಜನರು ಕೇಳುವ ಪ್ರಶ್ನೆ ಒಂದೆ.. ‘ಕಬಕದಲ್ಲೂ ಗ್ರೂಪಿಸಂ ಇದೆಯೇ’? ಐಕ್ಯತೆ ಎಂದು ಕೊಚ್ಚಿಕೊಳ್ಳುತ್ತಿದ್ದವರೆಲ್ಲಿ? ಕಳೆದ ಹತ್ತು ಹಲವು ವರ್ಷಗಳಿಂದ ಕಬಕ ಪರಿಸರವನ್ನು ದೀನೀ ಕಾರ್ಯಕ್ರಮಗಳಿಂದ ಸದಾ ಕಂಗೊಳಿಸುವಂತೆ ಮಾಡುತ್ತಿದ್ದ ತಂಙಳ್‌ರವರು ಅಸಮಾಧಾನಗೊಳ್ಳಲು ಕಾರಣ ಈ ವಿಭಾಗೀಯತೆ ತಾರ ತಮ್ಯವೇ? 
ಇನ್ನೊಂದು ಕುತೂಹಲಕಾರಿ ವಿಷಯ, ಇಷ್ಟೆಲ್ಲಾ ವಿದ್ಯಮಾನಗಳು ತಮ್ಮ ಊರಲ್ಲೇ ನಡೆಯುತ್ತಿರುವಾಗ ಕಬಕದ ಉಸ್ತಾದರು ಮೌನ ಪಾಲಿಸಿದ್ದು ಯಾಕೆ? ಅವರೇಕೆ ಸಂಧಾನಕ್ಕಾಗಲಿ ಅಥವಾ ಸಮಸ್ಯೆಗೆ ಪರಿಹಾರ ನೀಡುವ ವಿಷಯದಲ್ಲಿ ತಲೆಹಾಕಿಲ್ಲ? ಇಲ್ಲೂ ವಿಭಾಗೀಯತೆಯೇ? ತಂಙಳ್‌ರವರು ವಿದ್ಯಾಪುರ ಪರಿಸರ ವನ್ನು ತೊರೆಯುತ್ತಿದ್ದಂತೆ ತಮ್ಮ ಮಕ್ಕಳನ್ನು ಮದ್ರಸಕ್ಕೆ ಕಳುಹಿಸದೆ ತಂಙಳ್‌ರವರ ಶಿಷ್ಯರಾಗಬೇಕೆಂದು ಹಂಬಲಿಸುತ್ತಿದ್ದರು. ಅವರೆಲ್ಲರೂ ಸಹಿ ಮಾಡಿದ ಒಂದು ಪ್ರತಿಯಲ್ಲಿ ತಂಙಳ್‌ರವರ ಆಗಮನ ಹಾಗೂ ಅಲ್ಲಿರುವ ಎರಡು ಉಸ್ತಾದರ (ಗುರುಗಳ) ನಿರ್ಗಮನವನ್ನು ಬೇಡಿಕೆಯಾಗಿಟ್ಟರು. ಆದರೆ ಊರಿನವರಿಗೆ ಅವಶ್ಯವಿಲ್ಲದ, ವಿದ್ಯಾರ್ಥಿಗಳಿಗೆ ಮನಸ್ಸಿಲ್ಲದ ಉಸ್ತಾದರು ಬೇಕಾಗಿದ್ದು ಯಾರಿಗೆ?  ಇಲ್ಲಿ ‘ಅರಸನಿಗೊಂದು ನೀತಿ, ಪ್ರಜೆಗಳಿಗೊಂದು ನೀತಿ ನಡೆಸಲು ನಡೆಯುತ್ತಿರುವ ತುಘಲಕ್ ದರ್ಬಾರ್ ಯಾರದ್ದು? ಇದರ ಹಿಂದಿರುವ ಕುಮ್ಮಕ್ಕು ಏನು? ಕಬಕದಲ್ಲಿ ವಿಭಾಗೀಯತೆಯ ಮಾತಿಲ್ಲ ಎಂದು ಹೇಳುತ್ತಿದ್ದವರೆಲ್ಲಿ? ಹಾಗಾದರೆ ಈಗ ಪಾರ್ಟಿ ಮಾಡುತ್ತಿರುವವರು ಯಾರು? 
ಒಟ್ಟಿನಲ್ಲಿ ಜನರಂತೂ ಗೊಂದಲ್ಕಕೀಡಾಗಿದ್ದಾರೆ. ಅದಲ್ಲಿದೆ ಇಲ್ಲಿ ಇನ್ನಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದ್ದು ಕೋಯಕುಟ್ಟಿ ತಂಙಳ್ ಉಪ್ಪಳ ಇವರು ಎ.ಪಿ. ನೇತಾರರಾದ ಎ.ಪಿ. ಕಾಂತಪುರಂ ಉಸ್ತಾದ್ ಹಾಗೂ ಕೂರ ತಂಙಳ್ ಪರವಹಿಸಿ ಅವರನ್ನು ಅಲ್ಲಗಳೆಯಬೇಡಿ. ನಮ್ಮ ನಾಯಕರೆಂಬ ರೀತಿಯಲ್ಲಿ ಊರವರಲ್ಲಿ ತಿಳಿಸಿರುವುದು ಅಲ್ಲದೆ ಕಬಕ ಪರಿಸರದಲ್ಲಿರುವ ಮದರಸಗಳಲ್ಲಿ ಕಾರ‍್ಯಾಚರಿಸುತ್ತಿರುವ ಉಸ್ತಾದರುಗಳೆಲ್ಲರೂ ಎ.ಪಿ. ವಿಭಾಗದವರೇ ಆಗಿದ್ದಾರೆ. ಹಾಗಾದರೆ ಕಬಕದಲ್ಲಿ ಪಾರ್ಟಿ ಯಾವಾಗ ನೆಲೆ ನಿಂತದ್ದು? ಪಾರ್ಟಿಯ ಭದ್ರತೆಗೆ ಇದು ಮುನ್ಸೂಚನೆಯೇ? ಈಗ ಐಕ್ಯತೆಯ ಹಿತದೃಷ್ಟಿ ಮರೆತುಬಿಟ್ಟರೋ? ಅಥವಾ ಕಬಕ ಪರಿಸರ ಎ.ಪಿ. ವಿಭಾಗದ ಭದ್ರ ಕೋಟೆಯೇ? ಒಟ್ಟಿನಲ್ಲಿ ಪ್ರಶ್ನೆಗಳ ಸರಮಾಲೆಯೇ ನಮ್ಮಲ್ಲಿ ಮೂಡಿ ಬರುತ್ತಿದೆ. ಸೂಕ್ತ ಪರಿಹಾರ ನೀಡುವ ಮೂಲಕ ತಾರತಮ್ಯ ಹಾಗೂ ವ್ಯತ್ಯಾಸ ಅಭಿ ಪ್ರಾಯಗಳನ್ನು ಸರಿಪಡಿಸಲು ಯತ್ನಿಸಿ.

ಪ್ರಶಸ್ತಿ ಎಂಬುದು ಎಚ್ಚರಿಕೆಯ ಸಂಕೇತ: ವೀರೇಂದ್ರ ಹೆಗ್ಗಡೆ

Posted by JAYAKIRANA Kirana on | 0 comments | Leave a comment...


ಬೆಳ್ತಂಗಡಿ: ಈಗಾಗಲೇ ೧೦ ಸಾವಿರ ಗೋಬರ್ ಗ್ಯಾಸ್ ವ್ಯವಸ್ಥೆಯನ್ನು ಅಳವಡಿಸಲಾಗಿದು, ಪ್ರತಿವರ್ಷ ಅಂದರೆ ಮುಂದಿನ ಮೂರು ವರ್ಷಗಳಲ್ಲಿ ತಲಾ ೧೫ಸಾವಿರದಂತೆ ಒಟ್ಟು ೪೫ ಸಾವಿರ ಗೋಬರ್ ಗ್ಯಾಸ್ ಹಾಗೂ ಸೌರವಿದ್ಯುತ್ ದೀಪಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಅಳವಡಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗೆ ಜಾಗತಿಕ ಮಟ್ಟದ ಗ್ರೀನ್ ಆಶ್ಡೆನ್ ಪ್ರಶಸ್ತಿ (ಗ್ರೀನ್ ಆಸ್ಕರ್)ಸ್ವೀಕರಿಸಿದ ಬಳಿಕ ಗುರುವಾರ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಅವರು ಊರವರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಪ್ರಶಸ್ತಿ ಎಂಬುದು ಎಚ್ಚರಿಕೆಯ ಸಂಕೇತ. ಅದು ಹೆಮ್ಮೆ ಪಡುವ ಸಂಗತಿಯಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಇಂಧನ ಉಳಿತಾಯದ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮನುಷ್ಯನ ವಿಪರೀತ ಅತಿ ಆಸೆಯಿಂದಾಗಿ ಪ್ರಕೃತಿ ನಾಶವಾಗುತ್ತಾದೆ. ಮನುಷ್ಯನ ಅತಿ ಇಷ್ಟಗಳನ್ನು ಈಡೇರಿಸುವ ಸಾಮರ್ಥ್ಯ ಪ್ರಕೃತಿಗೆ ಇಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ ಎಂದು ಡಾ. ಹೆಗ್ಗಡೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದರು.

ಅನೂಷಾ ಎ. ಪೂಜಾರಿಗೆ 96% ಅಂಕ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಸೈಂಟ್ ಆಗ್ನೇಸ್ ಗರ್ಲ್ಸ್ ಹೈಸ್ಕೂಲಿನ ವಿದ್ಯಾರ್ಥಿನಿ ಅನೂಷಾ ಎ. ಪೂಜಾರಿ ೯೬% (೬೦೩ ಅಂಕಗಳು) ಪಡೆದು ಅಗ್ರಸ್ಥಾನ ಪಡೆದಿದ್ದಾಳೆ.
ಪ್ರತಿಭಾವಂತ ವಿದ್ಯಾರ್ಥಿನಿಯಾದ ಅನುಷಾ ಪಠ್ಯೇತರ ಚಟುವಟಿಕೆಯಲ್ಲೂ ಸಕ್ರಿಯಳಾಗಿದ್ದು, ಈಕೆ ಪೊಲೀಸ್ ಲೇನ್‌ನ ಆನಂದ್ ಮತ್ತು ಲೀಲಾ ದಂಪತಿಯ ಪುತ್ರಿಯಾಗಿದ್ದಾಳೆ.

೨೦೨೦ಕ್ಕೆ ಫೇಸ್‌ಬುಕ್ ಯುಗಾಂತ್ಯ ಮುಂದಿನ ಕಾಲ ಏನಿದ್ದರೂ ಮೊಬೈಲ್‌ನದ್ದು!

Posted by JAYAKIRANA Kirana on | 0 comments | Leave a comment...

ಹೂಸ್ಟನ್: ಯುವ ಸಮೂಹಕ್ಕೆ ಹುಚ್ಚಿನ ರೀತಿ ಅಂಟಿಕೊಂಡಿರುವ ಆನ್‌ಲೈನ್ ಸಾಮಾಜಿಕ ತಾಣ ಫೇಸ್‌ಬುಕ್ ಇನ್ನು ೫ ರಿಂದ ೮ ವರ್ಷದಲ್ಲಿ ಅಂದರೆ ೨೦೨೦ರ ವೇಳೆಗೆ ನಿರ್ನಾಮವಾಗಲಿದೆಯಂತೆ.
ಹಾಗಂತ ಐರನ್‌ಫೈರ್ ಕ್ಯಾಪಿಟಲ್ ಸಲಹಾ ಸಂಸ್ಥೆಯ ಮುಖ್ಯಸ್ಥ ಎರಿಕ್ ಜಾಕ್ಸನ್ ಭವಿಷ್ಯ ನುಡಿದಿದ್ದಾರೆ.
ಕಳೆದ ದಶಕದಲ್ಲಿ ಯಾಹೂ ಸಮೂಹ ಸನ್ನಿ ಇಡೀ ವಿಶ್ವವನ್ನೇ ಆವರಿಸಿಕೊಂಡಿತ್ತು. ಆದರೆ ಅಂದು ಕಂಪೆನಿ ಸ್ಥಿತಿಯಲ್ಲಿತ್ತೋ ಅದರ ಶೇ.೧೦ರಷ್ಟು ಪಾಲನ್ನೂ ಅದು ಉಳಿಸಿಕೊಂಡಿಲ್ಲ. ಮುಂದಿನ ಕಾಲ ಏನಿದ್ದರೂ ಮೊಬೈಲ್‌ನದ್ದು. ಅಲ್ಲಿ ಫೇಸ್‌ಬುಕ್‌ಗೆ ಸ್ಥಾನವೇ ಇರೋದಿಲ್ಲ. ಹಾಗಾಗಿ ೫ ರಿಂದ ೮ ವರ್ಷದಲ್ಲಿ ಫೇಸ್‌ಬುಕ್ ಅನ್ನೋದೇ ಇರೋದಿಲ್ಲ ಎಂದು ಎರಿಕ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಮಾರುಕಟ್ಟೆಗೆ ಷೇರುಗಳನ್ನು ಬಿಡುಗಡೆ ಮಾಡಿದ್ದ ಫೇಸ್‌ಬುಕ್ ಹೊಸ ದಾಖಲೆಯನ್ನೇ ಸೃಷ್ಟಿಸಿತ್ತು. ಈ ಬೆನ್ನಲ್ಲೆ ಇಂತಹದ್ದೊಂದು ಭವಿಷ್ಯ ಹೊರಬಿದ್ದಿರುವುದು ಅದರ ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಆಕೆ ನಿಮಗೆ ಬೇಕೆಂದಾದರೆ ಪಡೆಯುವ ಛಲ ನಿಮ್ಮಲ್ಲಿರಲಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಮೂಡಬಿದ್ರೆ
ಸಮಸ್ಯೆ: ನಾನು ೩೫ ವರ್ಷದ ಯುವಕ. ನಾನು ಏಳು ವರ್ಷ ಗಳಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳು ಕೂಡಾ ನನ್ನನ್ನು ತುಂಬಾ ಪ್ರೀತಿಸುತ್ತಿದ್ದಳು. ಕಳೆದ ಐದು ವರ್ಷಗಳ ಕಾಲ ನನ್ನ ಜೊತೆ ಚೆನ್ನಾಗಿ ಮಾತಾಡುತ್ತಿದ್ದಳು. ಆದರೆ ಈಗ ನನ್ನ ಜೊತೆ ಮಾತು ಕಡಿಮೆ ಮಾಡಿದ್ದಾಳೆ. ಫೋನ್ ಮಾಡಿದರೂ ರಿಸೀವ್ ಮಾಡು ವುದಿಲ್ಲ. ಮಾತಾಡುವಾಗಲೇ ಫೋನ್ ಕಟ್ ಮಾಡುತ್ತಾಳೆ. ಇದರ ಅರ್ಥವೇನು? ನನಗೆ ಇದರಿಂದ ತುಂಬಾ ದುಃಖವಾಗಿದೆ. ಮೊನ್ನೆ ನಾನು ಕೆಲಸಕ್ಕೆ ಹೋಗುವಾಗ ಅವಳು ದಾರಿಯಲ್ಲಿ ಸಿಕ್ಕಿದಳು. ನಾನು ಅವಳಲ್ಲಿ, ಏನು ಸುದ್ದಿಯಿಲ್ಲ ಎಂದು ಕೇಳಿದೆ. ಅದಕ್ಕೆ ಅವಳು, ‘ನನ್ನನ್ನು ನೀನು ಮದುವೆಯಾಗುವುದಾದರೆ ಬೇಗನೆ ಆಗು, ಇಲ್ಲದಿದ್ದರೆ ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ ಎಂದಳು. ಅದಕ್ಕೆ ನಾನು ಯಾಕೆ ಎಂದು ಕೇಳಿದ್ದಕ್ಕೆ, ನನಗೆ ಬೇರೆ ಹುಡುಗನನ್ನು ನೋಡಿ ಮದುವೆ ಮಾಡುತ್ತಾರೆ. ನನಗೆ ಈಗ ೨೬ ವರ್ಷವಾಯಿತು. ನಾನು ಇಷ್ಟು ವರ್ಷ ನಿಮಗಾಗಿ ಕಾದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಮನೆಯಲ್ಲಿ ಎಲ್ಲರೂ ನನಗೆ ಬೈಯುತ್ತಿದ್ದಾರೆ. ಅದಕ್ಕೆ ಬೇಗನೆ ಮದುವೆ ಯಾಗಿ ಎಂದಿದ್ದಾಳೆ. ಆದರೆ ನನಗೆ ಏನು ಮಾಡಬೇಕೆಂದೇ ತೋಚುತ್ತಿಲ್ಲ. ನಾನು ಅವಳನ್ನು ಬೇಗನೆ ಮದುವೆಯಾದರೆ ನನ್ನ ತಂಗಿ ಮನೆಯಲ್ಲೇ ಉಳಿಯುತ್ತಾಳೆ. ನಾವು ಏಳು ಜನ ಮಕ್ಕಳು. ಅದರಲ್ಲಿ ನಾನೇ ಮೊದಲನೆಯವನು. ನಾನು ಪ್ರೀತಿಸಿದ ಹುಡುಗಿ ಬೇರೆ ಮದುವೆಯಾದರೆ ನಾನು ಖಂಡಿತಾ ಬದುಕಿ ಉಳಿಯುವುದಿಲ್ಲ. ಈಚೆ ನನ್ನ ಹುಡುಗಿ, ಆಚೆ ನನ್ನ ತಂಗಿ ಏನು ಮಾಡುವುದು? ನನ್ನ ತಂಗಿಗೆ ಮದುವೆ ಮಾಡಲು ತುಂಬಾ ಕಡೆ ಗಂಡು ನೋಡಿದೆವು. ಆದರೆ ಯಾವುದೂ ಸರಿಯಾಗಲಿಲ್ಲ. ನಾನೇನು ಮಾಡಲಿ? ನೀವೇ ಸರಿಯಾದ ದಾರಿ ತೋರಿಸಬೇಕಾಗಿ ವಿನಂತಿ.
ಸಲಹೆ: ನೀವು ಎಲ್ಲವನ್ನೂ ಬರೆದಿದ್ದೀರಿ. ಆದರೆ ಪ್ರೀತಿಸುತ್ತಿರುವ ಹುಡುಗಿ ನಿಮ್ಮ ಜಾತಿಯೇ, ಸಂಬಂಧಿಯೇ ಇಲ್ಲ ಬೇರೆ ಜಾತಿಯವಳೇ ಎನ್ನುವುದನ್ನು ತಿಳಿಸಿಲ್ಲ. ಏನೇ ಆಗಲಿ, ಆಕೆ ನಿಮ್ಮನ್ನು ಮದುವೆ ಮಾಡಿಕೊಳ್ಳುವಂತೆ ಹೇಳುವು ದರಲ್ಲಿ ತಪ್ಪಿಲ್ಲ. ಯಾಕೆಂದರೆ ೨೬ ವರ್ಷ ಹೆಣ್ಣುಮಕ್ಕಳಿಗೆ ದೊಡ್ಡದೇ. ನಮ್ಮ ಸಮಾಜದಲ್ಲಿ ಯಾರೂ ತಮ್ಮ ಮನೆಯ ಹೆಣ್ಣನ್ನು ಅಷ್ಟು ವಯಸ್ಸಿನವರೆಗೆ ಮದುವೆ ಮಾಡಿಸದೇ ಇರುವುದಿಲ್ಲ. ಇಲ್ಲಿ ನಿಮ್ಮ ಹುಡುಗಿಗೂ ಒತ್ತಾಯ ಸಹಜವಾದುದು. ಆದರೆ ಮದುವೆಯ ವಯಸ್ಸಿಗೆ ಬಂದಿರುವ ತಂಗಿಯಿರುವಾಗ ನೀವು ಅವಸರದಲ್ಲಿ ಮದುವೆಯಾಗುವುದು ಸರಿಯಾಗದು. ನಾಳೆ ಸಮಾಜದಲ್ಲಿ ಕೀಳು ಮಾತನ್ನು ಕೇಳಬೇಕಾದೀತು. ಆದ್ದರಿಂದ ನೀವು ಪ್ರೀತಿಸಿದ್ದು ನಿಜ ವಾದರೆ, ಆಕೆ ಬೇಕೆಂದೇ ಆದರೆ ಆಕೆಯೇ ಹೇಳುವಂತೆ ಆಕೆಯ ಮನೆಗೆ ಧೈರ್ಯದಿಂದ ಹೋಗಿ ಇರುವ ವಿಷಯ ಪ್ರಸ್ತಾಪಿಸಿ. ಪರಸ್ಪರ ಪ್ರೀತಿಸುವುದಾಗಿಯೂ, ಕೆಲವೇ ಸಮಯದಲ್ಲಿ ಮದುವೆ ಮಾಡಿಕೊಳ್ಳು ವುದಾಗಿಯೂ ಹೇಳಿ ಅವರನ್ನು ನಂಬಿಸಿ. ಅವರು ನಿಮ್ಮ ಮಾತನ್ನು ನಂಬಿ ಸ್ವಲ್ಪ ಸಮಯ ಕಾಲಾವಕಾಶ ನೀಡಬಹುದು. ಈ ವೇಳೆ ನಿಮ್ಮ ತಂಗಿಗೆ ಯೋಗ್ಯ ವರನನ್ನು ಹುಡುಕುತ್ತಿರಿ. ಆಕೆಯನ್ನು ಸ್ವಲ್ಪ ಕಾಲ ಕಾಯುವಂತೆ ಹೇಳಿ. ಇದೆಲ್ಲ ಅಸಾಧ್ಯವೆಂದಾದರೆ ಆಕೆಯನ್ನು ಆಕೆಯ ಪಾಡಿಗೆ ಬಿಟ್ಟುಬಿಡುವುದೇ ಒಳಿತು. ಪ್ರೀತಿಸಿದ ಮೇಲೆ ಧೈರ್ಯವನ್ನು ಬೆಳೆಸಿಕೊಳ್ಳಿ. ಆಕೆ ಬೇರೆ ಮದುವೆಯಾದರೆ ಸಾಯುತ್ತೇನೆ ಎಂಬ ಮಾತು ಇಲ್ಲಿ ಅಪ್ರಸ್ತುತ. ಯಾಕೆಂದರೆ ಪ್ರೀತಿಸಿದ್ದು ಆಕೆಯ ಜೊತೆಗೂಡಿ ಬಾಳುವೆ ಮಾಡುವುದಕ್ಕಾದರೆ ಆಕೆಯನ್ನು ಪಡೆದೇ ಪಡೆಯುತ್ತೇನೆ ಎಂಬ ಛಲ ನಿಮ್ಮಲ್ಲಿರಲಿ. ಆಕೆ ನಿಮ್ಮ ಸಂಬಂಧಿ ಇಲ್ಲವೇ ನಿಮ್ಮದೇ ಜಾತಿಯವನಾಗಿದ್ದರೆ ಆಕೆಯ ಮನೆಯಲ್ಲಿ ಒಪ್ಪಿಗೆ ಕೊಡಬಹುದು. ಅಂತರ್ಜಾತಿ ಪ್ರೀತಿಯಾಗಿದ್ದಲ್ಲಿ ನಿಮ್ಮ ಮದುವೆಗೆ ಒಪ್ಪಿಗೆ ಸಿಗಬಹುದೇ, ಇಲ್ಲವೇ ಎಂದು ಚಿಂತಿಸಿ ಮುಂದಡಿಯಿಡಿ. ಅಂತರ್ಜಾತಿ ಪ್ರಕರಣದಲ್ಲಿ ಈಗ ಹಿಂದಿನಷ್ಟು ಮಡಿವಂತಿಕೆ ಇಲ್ಲ. ಒಂದೊಮ್ಮೆ ಆಕೆಯ ಮನೆಯಲ್ಲಿ ಇದ್ದರೆ ಆಕೆಯನ್ನು ಸ್ವಲ್ಪ ಸಮಯ ಕಾಲ ಕಾಯುವಂತೆ ಕೇಳಿನೋಡಿ. ಆಕೆ ಮನೆಯಲ್ಲಿ ಬೇರೇನಾದರೂ ಕಾರಣ ಹೇಳಿ ಸ್ವಲ್ಪ ಸಮಯ ಮದುವೆಯನ್ನು ಮುಂದಕ್ಕೆ ಹಾಕಲಿ. ನಿಮ್ಮ ತಂಗಿಯ ಮದುವೆಯಾದ ನಂತರ ನೀವು ಕಾನೂನು ಪ್ರಕಾರ ರಿಜಿಸ್ಟರ್ಡ್ ಮದುವೆಯನ್ನೂ ಆಗಬಹುದು, ಏನೂ ಸಮಸ್ಯೆ ಇರಲಾರದು.

ವಿದ್ಯಾರ್ಥಿ ಮೇಲೆ ಹಲ್ಲೆ, ಸಾವು

Posted by JAYAKIRANA Kirana on | 0 comments | Leave a comment...

ಅಂಬಾಲ: ಐವರ ಗುಂಪೊಂದು ಕುರುಕ್ಷೇತ್ರದ ಎರಡನೇ ವರ್ಷದ ಬಿಟೆಕ್ ಇಂಜಿನಿಯರಿಂಗ್ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಅಂಬಾಲ ಬಳಿ ನಡೆದಿದೆ.
ಪೊಲೀಸರ ಪ್ರಕಾರ, ಅಂಬಾಲ ಕಂಟೋನ್ಮೆಂಟ್‌ಗೆ ತಾಗಿಕೊಂಡಿರುವ ಘಾಸ್ತಿಪುರ ಹಳ್ಳಿಯವನಾದ ನಾರ್‌ಮೇಲ್ ಸಿಂಗ್(೨೨)ನ ಮೇಲೆ ತಂಡವೊಂದು ಶಾಹ್‌ಪುರ ಹಳ್ಳಿಯ ಬಳಿ ಬಸ್ ತಂಗುದಾಣಕ್ಕೆ ತೆರಳುವ ವೇಳೆ ಹಲ್ಲೆ ನಡೆಸಿತ್ತು. ತಕ್ಷಣವೇ ಹತ್ತಿರ ಆಸ್ಪತ್ರೆಗೆ ದಾಖಲಿಸಲಾಗದರೂ, ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆಗೆ ಕಾರಣವೇನೆಂಬುದು ಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಎಸ್‌ಹೆಚ್‌ಒ ಪರಾವೋ ಪೊಲೀಸ್ ಅಜಬ್ ಸಿಂಗ್ ತಿಳಿಸಿದ್ದಾರೆ. ಕೆಲವ ದಿನಗಳ ಹಿಂದೆ, ನಿಂದನೆಗೆ ಸಂಬಂಧಿಸಿದಂತೆ, ಐವರ ವಿರುದ್ಧ ಅನುಚಿತ ವರ್ತನೆಯ ಕೇಸು ದಾಖಲಿಸಿರುವುದೇ ಘಟನೆಗೆ ಕಾರಣ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (82) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4036) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2490) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (37) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (110) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (259) ln (1) lnews (3666) lokayukta (3) madikeri (1) maleria (1) mangalore (575) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (410) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (270) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (792) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (947) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (45) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)