• HOME
  • ABOUT US
  • LOCAL NEWS
  • CRIME NEWS
  • SPORTS NEWS
  • STATE NEWS
  • ASTROLOGY
  • CONTACT US
ಪೇಶಾವರ: ಮದುವೆ ಸಂಭ್ರಮದಲ್ಲಿ ಪುರುಷರ ನರ್ತನಕ್ಕೆ ಮಹಿಳೆಯರು ಚಪ್ಪಾಳೆ ಹಾಗೂ ಹಾಡಿರುವುದನ್ನೇ ಕಾರಣವಾಗಿರಿಸಿಕೊಂಡು ನಾಲ್ವರು ಮಹಿಳೆಯರನ್ನು ಹತ್ಯೆ ಮಾಡಲಾಗಿರುವ ಘಟನೆಯನ್ನು ತನಿಖೆ ನಡೆಸಲು ಪಾಕಿಸ್ಥಾನ ಸುಪ್ರೀಂ ಕೋರ್ಟ್ ಪೊಲೀಸರಿಗೆ ಹಾಗೂ ಸರಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಬುಡಕಟ್ಟು ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟು ಈ ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.
“ಮಹಿಳೆಯರನ್ನು ಬುಡಕಟ್ಟು ನ್ಯಾಯಾಲಯದ ಆದೇಶ ಮೇರೆಗೆ ಕೊಲೆಗೈಯ್ಯಲಾಗಿದೆ ಎಂದು ಪ್ರಮಾಣೀಕರಿಸುತ್ತೇನೆ. ಅವರನ್ನು ಮೇ ೩೦ರಂದೇ ಕೊಲೆ ಮಾಡಲಾಗಿದೆ. ನನ್ನ ಸಹೋದರನಿಗಾಗಿ ಮತ್ತು ಜೀವಬೆದರಿಕೆಯಿಂದ ಒಳಗಾಗಿದ್ದೇನೆ” ಎಂದು ಅಫ್ಜಲ್ ಖಾನ್ ನಿನ್ನೆ ವರದಿಗಾರರಿಗೆ ಸುಪ್ರೀಂ ಕೋರ್ಟ್ ಆವರಣದ ಹೊರಗಡೆ ವಿವರಿಸಿದ್ದಾರೆ.
ಕುಟುಂಬ ವರ್ಗ ಅಥವಾ ಬುಡಕಟ್ಟು ಜನಾಂಗವೆಂದೆನಿಸಿಕೊಳ್ಳುವ ಜನರು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಕಳೆದ ವರ್ಷ, ದಕ್ಷಿಣ ಏಷಿಯಾ ಪ್ರಾಂತ್ಯದಲ್ಲಿ ಸುಮಾರು ೧೦೦೦ ಮಹಿಳೆಯರನ್ನು ರಾಷ್ಟ್ರದ ಘನತೆಯಡಿಯಲ್ಲಿ ಕೊಲೆ ಮಾಡಲಾಗಿದೆ ಎನ್ನುವುದು ಪಾಕಿಸ್ಥಾನದ ಮಾನವ ಹಕ್ಕುಗಳ ಆಯೋಗದಿಂದ ಬಹಿರಂಗಗೊಂಡಿದೆ.
ಪೂಜಾರ ಕೆಚ್ಚೆದೆಯ ನಾಯಕನಾಟ
ಬಾರ್ಬೆಡೋಸ್: ಇಲ್ಲಿ ಆತಿ ಥೇಯ ವೆಸ್ಟ್ ಇಂಡೀಸ್ ‘ಎ ತಂಡದ ವಿರುದ್ಧ ನಡೆದ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಭಾರತ ‘ಎ ತಂಡ ಎರಡು ವಿಕೆಟ್‌ಗಳ ರೋಚಕ ಗೆಲುವು ಸಾಧಿ ಸಿದೆ. ನಾಯಕ ಚೇತೇಶ್ವರ್ ಪೂಜಾರ ಪ್ರದರ್ಶಿಸಿದ ಅಜೇಯ ಆಟದ ನೆರವಿನಿಂದ ತಂಡ ಎರಡು ವಿಕೆಟ್‌ಗಳ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ ೧-೦ ಮುನ್ನಡೆ ಸಾಧಿಸಿದೆ.
ಗೆಲುವಿಗೆ ೧೮೮ ರನ್‌ಗಳ ಗುರಿ ಪಡೆದ ಭಾರತ ಒಂದು ಹಂತದಲ್ಲಿ ಜೇಸನ್ ಹೋಲ್ಡರ್‌ರ ಮಾರಕ ಬೌಲಿಂಗ್ ದಾಳಿಗೆ ೧೧೫ ರನ್‌ಗಳಿಗೆ ಎಂಟು ವಿಕೆಟ್ ಕಳಕೊಂಡು ಸಂಕ ಷ್ಟದ ಸ್ಥಿತಿಯಲ್ಲಿತ್ತು. ಅಗ್ರಕ್ರಮಾಂಕದ ಶಿಖರ್ ಧವನ್, ಮುಕುಂದ್, ರಹಾಣೆ ಹಾಗೂ ರೋಹಿತ್ ಶರ್ಮಾ ಅಲ್ಪ ಮೊತ್ತಕ್ಕೆ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದು, ತಂಡಕ್ಕೆ ದುಬಾರಿಯಾಗುವ ಲಕ್ಷಣ ಗೋಚರಿಸಿತು. ಈ ವೇಳೆ ಜೊತೆ ಸೇರಿದ ಪೂಜಾರ ಹಾಗೂ ಬಾಲಂ ಗೋಚಿ ಆಟಗಾರ ಶಮ್ಮಿ ಅಹ್ಮದ್ ಒಂಬತ್ತನೇ ವಿಕೆಟ್‌ಗೆ ಅಜೇಯ ೭೩ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ರೋಚಕ ಗೆಲುವು ತಂದಿತ್ತರು. ಅದ ರಲ್ಲೂ ನಾಯಕ ಪೂಜಾರ ೯೬ ರನ್ ಗಳಿಸಿದರು. ಇದರಲ್ಲಿ ಹತ್ತು ಬೌಂಡರಿ ಗಳಿದ್ದು, ೨೨೨ ಎಸೆತಗಳನ್ನು ಎದುರಿ ಸಿದ್ದರು. ಪೂಜಾರಾಗೆ ಸಮರ್ಥ ಸಾಥ್ ನೀಡಿದ್ದ ಅಹ್ಮದ್ ೧೩೨ ಎಸೆತಗಳಲ್ಲಿ ೨೭ ರನ್ ಗಳಿಸಿ ದರು. ಹೋಲ್ಡರ್ ಐದು ವಿಕೆಟ್ ಪಡೆದರೂ ತಂಡಕ್ಕೆ ಜಯ ದೊರಕಿಸಿಕೊಡಲಿಲ್ಲ. ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ್ದ ವಿಂಡೀಸ್ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ೨೫೨ ಹಾಗೂ ೨೧೦ ರನ್‌ಗಳನ್ನು ಪೇರಿಸಿತ್ತು. ಭಾರತ ಪರ ರೋಹಿತ್ ಶರ್ಮಾ ನಾಲ್ಕು ವಿಕೆಟ್ ಪಡೆದರು. ಭಾರತ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ೨೭೭ ರನ್ ಗಳಿಸಿದ್ದು, ತಂಡದ ಪರ ಶರ್ಮಾ ೯೪, ಸಹಾ (೫೬) ಹಾಗೂ ಪೂಜಾರ (೫೦) ಅರ್ಧಶತಕ ಸಿಡಿಸಿದ್ದರು.


ಫ್ರೆಂಚ್ ಓಪನ್: ಸೆಮೀಸ್‌ಗೆ ಲಗ್ಗೆಯಿಟ್ಟ ಜೊಕೊವಿಕ್, ಫೆಡರರ್
ಪ್ಯಾರಿಸ್: ವಿಶ್ವದ ಪ್ರಸಿದ್ದ ಆಟಗಾರರಾದ ಸರ್ಬಿಯಾದ ನೊವಾಕ್ ಜೊಕೊವಿಕ್ ಹಾಗೂ ಸಿಝರ್‌ಲ್ಯಾಂಡ್‌ನ ರೋಜರ್ ಫೆಡರರ್ ಕ್ರಮವಾಗಿ ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಇನ್ನು ಟೂರ್ನಿಯ ಮಿಕ್ಸ್‌ಡ್ ಡಬಲ್ಸ್ ವಿಭಾಗದಲ್ಲಿ ಭಾರತದ ಲಿಯಾಂಡರ್ ಪೇಸ್ ಹಾಗೂ ರಶ್ಯಾದ ಎಲೆನಾ ವೆಸ್ನಿನಾ ಜೋಡಿ ಕೂಟ ಅಂತಿಮ ನಾಲ್ಕರ ಘಟ್ಟಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಕ್ವಾರ್ಟರ‍್ಸ್‌ನಲ್ಲಿ ಫ್ರಾನ್ಸ್‌ನ ವಿಲ್ಫೆಡ್ ಟಿಸೊಂಗಾ ವಿರುದ್ಧ ೬-೧, ೫-೭, ೫-೭, ೭-೬ ಹಾಗೂ ೬-೧ರ ರೋಚಕ ಗೆಲುವು ಸಾಧಿಸಿ ಜೊಕೊವಿಕ್ ಸೆಮೀಸ್‌ಗೆ ಪ್ರವೇಶಿಸಿದರು. ವಿಶ್ವದ ಅಗ್ರಶ್ರೇಯಾಂಕದ ಆಟಗಾರ ಜೊಕೊವಿಕ್‌ಗೆ ಟಿಸೊಂಗಾ ಉತ್ತಮ ಹೋರಾಟ ನೀಡಿದರೂ ಗೆಲುವು ಪಡೆಯಲು ವಿಫಲರಾದರು. ಜುವಾನ್ ಮಾರ್ಟಿನ್ ಡೆಲ್‌ಪೊಟ್ರೊ ವಿರುದ್ಧದ ಪಂದ್ಯದಲ್ಲಿ ಫೆಡರರ್ ಕಠಿಣ ಹೋರಾಟವನ್ನು ಪಡೆದರು. ಡೆಲ್‌ಪೋಟ್ರೊ ವಿರುದ್ಧ ೩-೬, ೬-೭, ೬-೨, ೬-೦ ಹಾಗೂ ೬-೩ರ ದೀರ್ಘ ಹೋರಾಟದಲ್ಲಿ ಫೆಡರರ್ ಗೆಲುವು ಪಡೆಯಲು ಶಕ್ತರಾದರು. ಇನ್ನು ಮಿಶ್ರ ಡಬಲ್ಸ್‌ನಲ್ಲಿ ಪೇಸ್-ವೆಸ್ನಿನಾ ಕೂಟ ಮುನ್ನಡೆ ಪಡೆದರು. ಬೆಲರೂಸ್-ಅಮೆರಿಕಾದ ಜೋಡಿಯಾದ ಮ್ಯಾಕ್ಸ್ ಮಿರ್ನಿ ಹಾಗೂ ಲೈಜೆಲ್ ಹಬ್ಬರ್ ವಿರುದ್ಧದ ಪಂದ್ಯದಲ್ಲಿ ಇಂಡೋ-ರಶ್ಯನ್ ಜೋಡಿಯು ೪-೬, ೬-೫ ಹಾಗೂ ೧೦-೫ರ ಅಂತರದಲ್ಲಿ ಗೆದ್ದುಕೊಂಡು ಸೆಮೀಸ್‌ಗೆ ಲಗ್ಗೆಯಿಟ್ಟಿದೆ.
ಎರಡು ಕೋಟಿ ಚೆಕ್ ಹಸ್ತಾಂತರ
ಚೆನ್ನೈ: ಮಾಸ್ಕೊದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಇಸ್ರೇಲ್‌ನ ಬೊರಿಸ್ ಗೆಲ್‌ಫೆಂಡ್ ವಿರುದ್ಧ ಟೈಬ್ರೇಕರ್ ಮೂಲಕ ಗೆಲುವು ಸಾಧಿಸಿ ಐದನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್‌ರನ್ನು ನಿನ್ನೆ ತಮಿಳು ನಾಡು ಮುಖ್ಯಮಂತ್ರಿ ಸನ್ಮಾನಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಜಯ ಲಲಿತಾ ಎರಡು ಕೋಟಿ ರೂ.ಗಳ ಚೆಕ್ಕನ್ನು ಆನಂದ್‌ಗೆ ಹಸ್ತಾಂತರಿಸಿದರು.
ನಿನ್ನೆ ತನ್ನ ರಾಜ್ಯ ಕಾರ್ಯದರ್ಶಿ ಗೃಹಕ್ಕೆ ಆನಂದ್ ಹಾಗೂ ಅವರ ಪತ್ನಿ ಅರುಣಾರನ್ನು ಆಮಂತ್ರಿಸಿದ ಜಯಲಲಿತಾ ಗ್ರ್ಯಾಂಡ್‌ಮಾಸ್ಟರನ್ನು ಗೌರವಿಸಿದರು. ಆನಂದ್ ತಮಿಳು ನಾಡು ಹಾಗೂ ದೇಶಕ್ಕೆ ಉತ್ತಮ ಗೌರವ ತಂದುಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಈ ಹಿಂದೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದು, ಅಲ್ಲದೆ ಎರಡು ಕೋಟಿ ರೂ.ಗಳ ಗೌರವ ವನ್ನು ನೀಡುವುದಾಗಿ ತಿಳಿಸಿದ್ದರು. ಇದೇ ರಾಜ್ಯ ಸರ್ಕಾರ ನಿನ್ನೆ ‘ವಿಷಿ ಆನಂದ್ ಎಂಬ ಕೈಪಿಡಿಯನ್ನು ಹೊರತಂ ದಿದ್ದು, ಇದರಲ್ಲಿ ಅವರು ಆನಂದ್ ಅವರು ೧೯೮೬ರಿಂದ ೨೦೧೨ರ ವರೆಗಿನ ಅವಧಿಯಲ್ಲಿ ಸಾಧಿಸಿದ ಸಾಧನೆಗಳನ್ನು ತಿಳಿಸಲಾಗಿದೆ.
ಐಪಿಯಾ (ಸಮೊಆ): ಇಲ್ಲಿ ನಿನ್ನೆ ಆರಂಭವಾದ ಕಾಮನ್‌ವೆಲ್ತ್ ವೇಟ್ ಲಿಫ್ಟಿಂಗ್ ಟೂರ್ನಿಯ ಆರಂಭಿಕದ ದಿನದಲ್ಲೇ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ. ಒಟ್ಟಾರೆಯಾಗಿ ಭಾರತ ೧೧ ಚಿನ್ನದ ಪದಕಗಳ ಸಹಿತ ಒಟ್ಟು ೧೫ ಪದಕಗಳನ್ನು ಜೋಲಿಗೆಗೆ ಹಾಕಿಕೊಂಡಿದೆ. ಟೂರ್ನಿಯು ಯುವ, ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿದೆ.
ಕ್ರಮಾವಾಗಿ ಮಹಿಳೆಯರ ೪೮ ಹಾಗೂ ೫೮ ಕೆ.ಜಿ. ವಿಭಾಗದಲ್ಲಿ ಭಾರತದ ಸಂಜಿತಾ ಚಾನು ಹಾಗೂ ಮಿಯಾಂತಿ ಸೇಥಿ ಚಿನ್ನದ ಪದಕ ಗೆದ್ದುಕೊಂಡು ಭಾರತಕ್ಕೆ ಆರಂಭಿಕ ಮುನ್ನಡೆ ದೊರಕಿಸಿಕೊಟ್ಟಿದ್ದರು. ಇಲ್ಲಿ ಸಂಜಿತಾ ಒಟ್ಟಾರೆಯಾಗಿ ೧೫೪ ಕೆ.ಜಿ. ತೂಕವನ್ನು ಎತ್ತುಕೊಂಡಿದ್ದರೆ ಯುವ ಹೆಣ್ಣುಮಕ್ಕಳ ವಿಭಾಗದಲ್ಲಿ ಮಿಯಾಂತಿ ೧೭೫ಕೆ ಕೆ.ಜಿ. ಎತ್ತಿ ಉತ್ತಮ ನಿರ್ವಹಣೆ ತೋರಿದರು.
ಮಂಗಳೂರು: ಪಾಲಿಟೆಕ್ನಿಕ್‌ನಲ್ಲಿ ೪೦ಶೇ. ಅಂಕ ಗಳಿಸಿದವರು ನೇರವಾಗಿ ಇಂಜಿನಿಯರಿಂಗ್‌ಗೆ ಸೇರಬಹುದು ಎನ್ನುವ ನಿಯಮ ಇದ್ದರೂ ಪ್ರತ್ಯೇಕ ಪರೀಕ್ಷೆ ನಡೆಸುವಂತೆ ಖಾಸಗಿ ಟ್ಯುಟೋ ರಿಯಲ್‌ಗಳು ಸರಕಾರದ ಮೇಲೆ ಒತ್ತಡ ಹೇರುತ್ತಿದೆ ಎಂದು ಮಂಗಳೂರು ಕ್ಷೇತ್ರ ಶಾಸಕ ಯು.ಟಿ.ಖಾದರ್ ಗಂಭೀರ ಆರೋಪ ಮಾಡಿದ್ದಾರೆ.
ನಿನ್ನೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತ ನಾಡಿದ ಅವರು, ರಾಜ್ಯದಲ್ಲಿ ೩೦೦ಕ್ಕೂ ಅಧಿಕ ಪಾಲಿಟೆಕ್ನಿಕ್‌ಗಳಿವೆ. ಪರೀಕ್ಷೆಯಲ್ಲಿ ೪೦ ಶೇ. ಅಂಕ ಗಳಿಸಿದವರು ಯಾವುದೇ ಪರೀಕ್ಷೆಗಳನ್ನು ಎದುರಿಸದೆ ನೇರವಾಗಿ ಇಂಜಿನಿಯರಿಂಗ್ ತರಗತಿಗೆ ಸೇರಬ ಹುದು ಎನ್ನುವುದು ಎಐಸಿಟಿಇ ನಿಯಮವಾಗಿದೆ. ಆದರೆ ಈ ಬಾರಿ ಇಂಜಿನಿಯರಿಂಗ್ ಸೇರಲು ಬಯಸುವ ವಿದ್ಯಾರ್ಥಿಗಳು ಇನ್ನೊಂದು ಪರೀಕ್ಷೆ ಬರೆಯಬೇಕು ಎನ್ನುವ ಗೊಂದಲವನ್ನು ಟ್ಯುಟೋರಿಯಲ್‌ಗಳು ಸೃಷ್ಟಿಸಿವೆ.
ಇದರಿಂದಾಗಿ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ವಾಸ್ತವವಾಗಿ ಇಂತಹ ನಿಯಮ ಇಲ್ಲದಿದ್ದರೂ ಅದನ್ನು ಜಾರಿಗೆ ತರಬೇಕು ಎಂದು ಟ್ಯುಟೋರಿಯಲ್‌ಗಳ ಮಾಲಕರು ಸ್ವಾರ್ಥಕ್ಕಾಗಿ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಜಾರಿಗೆ ಬಂದಲ್ಲಿ ಪರೀಕ್ಷೆಯ ಹೆಸರಲ್ಲಿ ತರಬೇತಿ ನಡೆಸಿ ವಿದ್ಯಾರ್ಥಿಗಳಿಂದ ಐದು, ಹತ್ತು ಸಾವಿರ ಶುಲ್ಕ ಪೀಕಿಸುವ ಹುನ್ನಾರ ಅಡಗಿದೆ ಎಂದು ಟೀಕಿಸಿದ ಖಾದರ್, ಇಂತಹ ಪದ್ದತಿಗೆ ಅವಕಾಶ ನೀಡಬಾರದೆಂದು ಒತ್ತಾಯಿಸುವ ಸಲುವಾಗಿ ಶುಕ್ರವಾರ ಮುಖ್ಯಮಂತ್ರಿ ಯನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಟಿ.ಕೆ.ಸುಧೀರ್, ಸದಾಶಿವ ಉಳ್ಳಾಲ, ಜಬ್ಬಾರ್ ಬೋಳಿ ಯಾರ್ ಉಪಸ್ಥಿತರಿದ್ದರು.
ಉಡುಪಿ: ವಿಧಾನಪರಿಷತ್ ಸದಸ್ಯರಾದ ಡಿ.ಹೆಚ್. ಶಂಕರಮೂರ್ತಿ ಹಾಗೂ ಗಣೇಶ್ ಕಾರ್ಣಿಕ್ ಅವರು ಅಧಿಕಾರ ಯಂತ್ರವನ್ನು ಚುನಾವಣೆ ಗಾಗಿ ದುರುಪಯೋಗ ಮಾಡುತ್ತಿದ್ದಾ ರೆಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತ್ರ ಅಭ್ಯರ್ಥಿ ಸೂರ‍್ಯನಾರಾಯಣ ಭಟ್ ಆರೋಪಿಸಿದರು.
ನಿನ್ನೆ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಇಬ್ಬರು ವಿಧಾನಪರಿಷತ್ ಸದಸ್ಯರು ಶಿಕ್ಷಣಾಧಿಕಾರಿಗಳ ಮೂಲಕ ಅಲ್ಲಲ್ಲಿ ಶಿಕ್ಷಕರ ಸಭೆ ಕರೆದು ಪ್ರಚಾರ ಮಾಡುತ್ತಿದ್ದಾರೆ, ಕಡೂರಿನಲ್ಲಿ ಶಿಕ್ಷಕರಿಗೆ ಬಾಡೂಟ ವಿತರಣೆಯಾಗಿದೆ. ಶಾಸಕರಾದ ಸಿ.ಟಿ.ರವಿ, ಅಪ್ಪಚ್ಚು ರಂಜನ್ ಇದರಲ್ಲಿ ಭಾಗವಹಿಸಿ ಹಲವು ಭರವಸೆಗಳನ್ನು ಶಿಕ್ಷಕರಿಗೆ ನೀಡಿದ್ದಾರೆ. ಇದೆಲ್ಲವೂ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ. ಈ ಬಗ್ಗೆ ಚುನಾವಣಾಧಿ ಕಾರಿಗಳಿಗೆ ದೂರು ನೀಡಲಾಗಿದೆ. ಅನುದಾನರಹಿತ ಶಿಕ್ಷಕರನ್ನು ಕೂಡಾ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡು ವಂತೆ ಶಿಕ್ಷಣಾಧಿಕಾರಿಗಳ ಮೂಲಕ ಶಾಸಕರು ಮೌಖಿಕವಾಗಿ ಆದೇಶಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಿಗೆ ತಮ್ಮ ಸೋಲು ಖಚಿತ ಎನ್ನುವುದು ಗೊತ್ತಾಗಿದೆ. ತಮಗೆ ದೂರವಾಣಿ ಮೂಲಕ ಶಾಸಕರು ಪರೋಕ್ಷವಾಗಿ ಬೆದರಿಕೆ ಮತ್ತು ಒತ್ತಡ ನೀಡುವ ಕೆಲಸ ಮಾಡುತ್ತಿದ್ದಾರೆ. ವಿಧಾನಪರಿಷತ್ ಸದಸ್ಯ ಡಿ.ಹೆಚ್. ಶಂಕರಮೂರ್ತಿ ಹಾಗೂ ಕಾರ್ಣಿಕ್ ಇದುವರೆಗೆ ಶಿಕ್ಷಕರ ಬಗ್ಗೆ ವಿಧಾನ ಸಭೆಯಲ್ಲಿ ಒಂದು ಶಬ್ದವನ್ನು ಮಾತಾ ಡಿಲ್ಲ ಎಂದು ಆರೋಪಿಸಿದರು.
ಮಂಗಳೂರು: ಕಳೆದೆರಡು ವರ್ಷಗಳಿಂದ ಪ್ರತಿಭಟನೆಗಳ ಮೂಲಕ ಸಾರ್ವಜನಿಕರ ಪಾಲಿಕೆ ಅಧಿಕಾರಿಗಳ ಗಮನ ಸೆಳೆದಿದ್ದ ಕೊಟ್ಟಾರ-ಮಾಲೆ ಮಾರ್ ರಸ್ತೆ ಕಾಮಗಾರಿಗೆ ಕೊನೆಗೂ ಚಾಲನೆ ನೀಡಲಾಗಿದ್ದು, ಈ ಮೂಲಕ ಸ್ಥಳೀಯರ ಪ್ರತಿಭಟನೆಗಳಿಗೆ ಬ್ರೇಕ್ ಹಾಕಿದಂತಾಗಿದೆ.
ಕಳೆದೆರಡು ವರ್ಷಗಳಿಂದ ಹೊಂಡಮಯವಾಗಿದ್ದ ಕೊಟ್ಟಾರ-ಮಾಲೆಮಾರ್ ರಸ್ತೆಯಲ್ಲಿ ಮಳೆಗಾಲದಲ್ಲಿ ನಡೆದಾಡುವುದೂ ನರಕ ಸದೃಶ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ದುರಸ್ಥಿಪಡಿಸುವಂತೆ ಒತ್ತಾಯಿಸಿ ಸ್ಥಳೀಯರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರಲ್ಲದೆ ಸ್ವಂತ ಖರ್ಚಿನಿಂದ ರಸ್ತೆ ದುರಸ್ಥಿಪಡಿಸಿದ್ದರು.
ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿದ್ದ ಸ್ಥಳೀಯರು ರಸ್ತೆ ದುರಸ್ಥಿಪಡಿಸದಿದ್ದಲ್ಲಿ ಬುಧವಾರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಇದೇ ವೇಳೆ ನಿನ್ನೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಈ ಸಂದರ್ಭ ಮಾಜಿ ಮಂತ್ರಿ ಕೃಷ್ಣ ಪಾಲೆಮಾರ್, ಸ್ಥಳೀಯ ಕಾರ್ಪೊರೇಟರ್‌ಗಳಾದ ಶಶಿಧರ್ ಹೆಗ್ಡೆ ಹಾಗೂ ಶಂಕರ್ ಭಟ್ ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ಪಾಲೆಮಾರ್ ೨೦ ಕೋಟಿ ವೆಚ್ಚದಲ್ಲಿ ೩೦೦ಮೀ. ರಸ್ತೆಗೆ ಕಾಂಕ್ರೀಟೀಕರಣಕ್ಕೆ ಚಾಲನೆ ನೀಡಲಾಗಿದ್ದು ಎರಡು ತಿಂಗಳಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ಅದಲ್ಲದೆ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಹಾಗೂ ಇತರ ಸಮಸ್ಯೆಯನ್ನೂ ಶೀಘ್ರವೇ ಬಗೆಹರಿಸಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕೆಂದು ಒತ್ತಾಯಿಸಿದರು.
ಪ್ರಸ್ತುತ ರಸ್ತೆಯು ಕಾರ್ಪೊರೇಟರ್ ಶಂಕರ್ ಭಟ್ ಅವರು ಶಿಲಾನ್ಯಾಸ ನಡೆಯುವ ಸ್ಥಳಕ್ಕೆ ಬಾರದೆ ದೂರವೇ ನಿಂತಿದ್ದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಯಿತು. ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿದ ಶಂಕರ್ ಭಟ್, ಮಾಲೆಮಾರ್ ರಸ್ತೆಗೆ ಕಾಂಕ್ರಿಟೀಕರಣಕ್ಕೆ ನಿನ್ನೆ ಚಾಲನೆ ನೀಡುವ ಬಗ್ಗೆ ಸ್ಥಳೀಯರಿಗೆ ಗೊತ್ತಿದ್ದರೂ ಉಪವಾಸ ಸತ್ಯಾಗ್ರಹದ ಬೆದರಿಕೆ ಹಾಕಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಉಡುಪಿ: ಕಳೆದ ೨೪ ವರ್ಷ ಗಳಿಂದ ವಿಧಾನಪರಿಷತ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವಿಧಾನಪರಿಷತ್ ಸದಸ್ಯ ಡಿ.ಹೆಚ್.ಶಂಕರಮೂರ್ತಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿಯೇ ಇಲ್ಲ ನಿರು ದ್ಯೋಗಿಗಳಿಗೆ ೧೫೦೦ರೂ. ಭತ್ಯೆ ನೀಡುವುದಾಗಿ ಹೇಳಿದ್ದರೂ ಸಿಗಲಿಲ್ಲ, ಶಾಲೆಗಳು ಮುಚ್ಚುಗಡೆಯಾಗುತ್ತಿದೆ, ಶಿಕ್ಷಕರ ಸಮಸ್ಯೆಗಳು ಯಾವುದೇ ಸಭೆಯಲ್ಲಾಗಲಿ, ವಿಧಾನಪರಿಷತ್ತಿನ ಲ್ಲಾಗಲಿ ಚರ್ಚೆಗಳು ನಡೆದಿಲ್ಲವೆಂದು ಸಂಸದ ಜಯಪ್ರಕಾಶ್ ಹೆಗ್ಡೆ ಟೀಕಿಸಿದರು.
ಅವರು ಉಡುಪಿಯಲ್ಲಿ ನಿನ್ನೆ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಕರೆದಿದ್ದ ಪತ್ರಿಕಾಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದರು.
ಪದವೀಧರ ಕ್ಷೇತ್ರದಲ್ಲಿ ಅಧಿಕಾರ ದುರ್ಬಳಕೆ ನಡೆಸುವ ಪ್ರಯತ್ನ ನಡೆದಿದೆ. ಈ ಹಿಂದೆ ವಿಧಾನಪರಿಷತ್ ಚುನಾವಣೆಗೆ ಕೆಲಸ ನಡೆದಿರುವುದು ಕಡಿಮೆ. ಮತದಾರರನ್ನು ನೋಂದಣಿ ಮಾಡಿರುವುದೂ ಕಡಿಮೆ. ಆದರೆ ಈ ಬಾರಿ ಕಾಂಗ್ರೆಸ್ ಹೆಚ್ಚು ಮತದಾರರನ್ನು ನೋಂದಾಯಿಸಿದೆ. ಹಾಗಾಗಿ ಗೆಲುವು ಖಚಿತ. ರಾಜ್ಯ ಸರಕಾರ ಬೇರೆ ಬೇರೆ ಯೋಜನೆಗಳಿಗೆ ಹಾಗೂ ಕಾರ್ಯ ಕ್ರಮಗಳ ಬಗ್ಗೆ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸುತ್ತಿಲ್ಲ. ಇದ ರಿಂದಾಗಿ ಅನುದಾನವೇ ಬಿಡುಗಡೆಯಾ ಗುತ್ತಿಲ್ಲ. ಗಂಗೊಳ್ಳಿಯ ಬ್ರೇಕ್ ವಾಟರ್ ನಿಂದಾಗಿ ಕುಂದಾ ಪುರದ ಕೋಡಿಯಲ್ಲಿ ಕಡಲ್ಕೊರೆತ ಆರಂಭವಾಗಿದೆ. ಸಮಸ್ಯೆ ಸರಿಪಡಿಸುವಂತೆ ಅಧಿಕಾರಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ನಾಯಕ ನರಸಿಂಹ ಮೂರ್ತಿ ಉಪಸ್ಥಿತರಿದ್ದರು.
ಎಂಎಸ್‌ಇಝೆಡ್ ಪೈಪ್‌ಲೈನ್ ಕಾಮಗಾರಿ ಅವಾಂತರ
ಸುರತ್ಕಲ್: ಎಂಎಸ್‌ಇಝೆಡ್ ತ್ಯಾಜ್ಯ ವಿಲೇವಾರಿ ಪೈಪ್‌ಲೈನ್ ಕಾಮಗಾರಿ ಅವಾಂತರಕ್ಕೆ ಕಾರಣವಾಗುತ್ತಿದೆ, ಚೇಳ್ಯಾರು ಗ್ರಾಪಂ ವ್ಯಾಪ್ತಿ ಮೂಲಕ ಮುಕ್ಕ ಸಮುದ್ರಕ್ಕೆ ಸಂಪರ್ಕ ಕಲ್ಪಿಸುವ ಈ ಪೈಪ್‌ಲೈನ್ ಕಾಮಗಾರಿಯು ಚೇಳ್ಯಾರು ಮಧ್ಯಪದವಿನ ವಿಜಯನಗರ ಬಳಿ ನಡೆಯುತ್ತಿದ್ದು, ಕಾಮಗಾರಿಯಿಂದಾಗಿ ಗ್ರಾಮಸ್ಥರು ಸಮಸ್ಯೆಯನ್ನು ಎದುರಿಸುವಂತಾಗಿದೆ.
 ಡಾಮರೀಕರಣಗೊಂಡಿರುವ ರಸ್ತೆಯ ಮಧ್ಯಭಾಗದಲ್ಲಿ ರಸ್ತೆಯನ್ನು ಅಗೆದು ಪೈಪ್‌ಲೈನ್ ಕಾಮಗಾರಿಯನ್ನು ಮಾಡಿರುವುದರಿಂದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆ ಕೊಚ್ಚಿಹೋಗಿದೆ. ಅಗೆದ ರಸ್ತೆಗೆ ತುಂಬಿಸಿರುವ ಮಣ್ಣಿನ ಸಮತಟ್ಟು ಕಾರ್ಯ ಸಮರ್ಪಕವಾಗದಿರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ. ಚೇಳ್ಯಾರಿನ ರಸ್ತೆ ಸಂಪರ್ಕವೇ ಕಡಿತಗೊಂಡಿ ರುವುದರಿಂದ ಬಸ್ ಸಂಚಾರ ಮೊಟಕುಗೊಂಡಿದೆ. ಇದರಿಂದಾಗಿ ಗ್ರಾಮಸ್ಥರು ಮಂಗಳವಾರ ಬಸ್‌ಗಾಗಿ ಪರದಾಡುವಂತಾಯಿತು. ದ್ವಿಚಕ್ರ ವಾಹನ ಸವಾರರಂತೂ ರಸ್ತೆಯ್ಲಲೇ ಸರ್ಕಸ್ಮಾಡುವ ಸ್ಥಿತಿ ಯ್ದಿದರೆ ಪಾದಚಾರಿಗಳು ನಡೆದಾಡಲೂ ಕಷ್ಟಪಡುವಂತಾಗಿದೆ. ರಸ್ತೆ ಕೆಸರು ಮಯವಾಗಿದ್ದು ಪಾದರಕ್ಷೆಗಳನ್ನು ಕೈಯ್ಯಲ್ಲೇ ಹಿಡಿದು ನಡೆಯುವಂತಾಗಿದೆ, ಬಟ್ಟೆ ಕೆಸರುಮಯವಾಗುತ್ತಿದೆ ಎಂದು ಗ್ರಾಮಸ್ಥರಾದ ನವೀನ್ ದೂರಿದ್ದಾರೆ.
 ಕಳೆದ ಕೆಲವು ದಿನಗಳ ಹಿಂದಷ್ಟೇ ರಾತ್ರಿ ವೇಳೆ ವಿಜಯ ನಗರ ನಿವಾಸಿ ಗಳು ಪೈಪ್‌ಲೈನ್ ಕಾಮಗಾರಿಯ ವಿರುದ್ಧ ಬಂಡೆದ್ದಿದರು.ಕುಡಿಯುವ ನೀರಿನ ಪೈಪ್‌ಗೆ ಹಾನಿಯಾಗಿರು ವುದರಿಂದ ಕಾಮಗಾರಿಯನ್ನ ತಡೆದು ರಾತ್ರಿ ೨ಗಂಟೆಯವರೆಗೆ ಗುತ್ತಿಗೆದಾ ರರಿಂದಲೇ ನೀರಿನ ಪೈಪ್ ಜೋಡಣೆ ಯನ್ನು ಮಾಡಿಸಿದರೂ. ಈ ಸಂದರ್ಭ ದಲ್ಲೇ ಚೇಳ್ಯಾರು ಗ್ರಾಪಂ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಮಳೆಗೆ ರಸ್ತೆ ಕೊಚ್ಚಿಹೋಗುವ ಸಾಧ್ಯತೆಯ ಬಗ್ಗೆ ಗುತ್ತಿಗೆದಾರರಿಗೆ ಎಚ್ಚರಿಕೆಯನ್ನು ನೀಡ್ದಿ ದರು. ರಸ್ತೆ ದುರಸ್ತಿಗೊಳಿಸದೆ ಕಾಮ ಗಾರಿ ನಡೆಸಬಾರದು ಎಂದು ಕಾಮಗಾರಿಯನ್ನೇ ನಿಲ್ಲಿಸಲಾಗಿತ್ತು. ಎಚ್ಚರಿಕೆಯನ್ನು ನೀಡಿದ್ದರೂ ಗುತ್ತಿಗೆದಾರರು ಮಾತ್ರ ನಿದ್ರಾವಸ್ಥೆಯ ಲ್ದಿದುದೇ ಅವಾಂತರಕ್ಕೆ ಕಾರಣವಾಗಿದೆ ಎಂದು ಚೇಳ್ಯಾರು ಗ್ರಾಮಸ್ಥರ ದೂರು. ಊರು ಕೊಳ್ಳೆಹೊಡೆದ ಮೇಲೆ ಕೋಟೆಬಾಗಿಲು ಹಾಕಿದರು ಎಂಬಂತೆ ರಸ್ತೆ ಕೊಚ್ಚಿಹೋದ ಮೇಲೆ ದುರಸ್ಥಿ ಕಾರ್ಯವನ್ನು ಗುತ್ತಿಗೆದಾರರು ನಡೆಸಲು ಮುಂದಾಗಿರುವ ಬಗ್ಗೆ ಗ್ರಾಮಸ್ಥರು ಗುತ್ತಿಗೆದಾರರ ವಿರುದ್ಧ ಕಿಡಿಕಾರಿದ್ದಾರೆ.
 ಶಾಸಕ ಕೃಷ್ಣ ಜೆ.ಪಾಲೇಮಾರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವದಿಯಲ್ಲಿ ರೂ.೬೦ಲಕ್ಷ ವಿಶೇಷ ಅನುದಾನದಲ್ಲಿ ಈ ರಸ್ತೆ ಡಾಮರೀ ಕರಣಗೊಂಡಿದ್ದು, ವಾಹನ ಸಂಚಾರಕ್ಕೆ ಅನುಕೂಲವಾಗಿತ್ತು. ಆದರೆ ಪೈಪ್‌ಲೈನ್ ಕಾಮಗಾರಿ ರಸ್ತೆಯನ್ನೇ ಕಿತ್ತುಕೊಂಡಿದೆ. ರಸ್ತೆಯ ಮರುಡಾಮರೀಕರಣ ಬಗ್ಗೆ ಎಂಎಸ್‌ಇಜೆಡ್ ಮತ್ತು ಲೋಕೋ ಪಯೋಗಿ ಇಲಾಖೆ ಪರಸ್ಪರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತ್ದಿದು ಗ್ರಾಮಸ್ಥರಿಗೆ ದಿಕ್ಕುತೋಚದಂತಾಗಿದೆ ಎಂದು ಗ್ರಾಪಂ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ದೂರಿದ್ದಾರೆ.
 ಮಂಗಳವಾರ ಗುತ್ತಿಗೆದಾರರು ರಸ್ತೆಗೆ ಜಲ್ಲಿಹಾಕುವ ಕಾರ್ಯ ನಡೆಸಿದ್ದಾರೆ .ಆದರೆ ಮಳೆಗೆ ಕಾಮಗಾರಿ ಗುಣಮಟ್ಟದ ಬಗ್ಗೆ ಅನು ಮಾನಗಳು ಗ್ರಾಮಸ್ಥರಿಂದ ವ್ಯಕ್ತವಾಗಿದೆ.
 ರಸ್ತೆ ತೀರಾ ಹದಗೆಟ್ಟಿರುವುದರಿಂದ ವಾಹನ ಸಂಚಾರ ಕಷ್ಟಸಾಧ್ಯವಾಗಿದ್ದು ಇನ್ನೂ ಕೆಲವು ದಿನಗಳವರೆಗೆ ಸಮಸ್ಯೆ ಮುಂದುವರಿಯುವ ಆತಂಕದಲ್ಲಿ ವಿಜಯನಗರ ನಿವಾಸಿಗಳಿದ್ದಾರೆ.
ಪಡುಬಿದ್ರಿ: ರಾ.ಹೆ೬೬ರಲ್ಲಿ ನಡೆಯು ತ್ತಿರುವ ಕುಂದಾಪುರ-ಸುರತ್ಕಲ್ ಚತು ಷ್ಪಥ ಕಾಮಗಾರಿಯ ನಡುವೆ ವಿವಾದಾತ್ಮಕವಾಗಿ ನೆನೆಗುದಿಗೆ ಬಿದ್ದಿದ್ದ ಪಡುಬಿದ್ರಿಯ ಬೈಪಾಸ್ ನಿರ್ಮಾಣದ ಕೆಲಸ ಕಾರ್ಯಗಳು ಒಂದೆರಡು ದಿನದಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಎ.ಟಿ. ರೇಜು ತಿಳಿಸಿ ದ್ದಾರೆ.
ಪ್ರಸ್ತಾವಿತ ಬೈಪಾಸ್ ಹೆದ್ದಾರಿ ಹೋಗುವ ಪಡುಬಿದ್ರಿ ಅಬ್ಬಾಸ್‌ಗುಡ್ಡೆ ಪರಿಸರಕ್ಕೆ ಸಮೀಕ್ಷಾರ್ಥವಾಗಿ ಆಗಮಿಸಿ ಸಂತ್ರಸ್ತರಿಗೆ ವಿಷಯ ವಿವರಿಸಿದ ಜಿಲ್ಲಾಧಿ ಕಾರಿಗಳು, ಬಳಿಕ ದೂರವಾಣಿಯಲ್ಲಿ ಸಂಪರ್ಕಿಸಿದ ಪತ್ರಿಕೆಗೆ ಮಾಹಿತಿ ನೀಡಿ ದ್ದಾರೆ.
ಪಡುಬಿದ್ರಿ ಕಲ್ಸಂಕ (ರಾ. ಹೆದ್ದಾರಿ ೬೬)ದ ಬಳಿಯಿಂದ ಪಾದೆ ಬೆಟ್ಟು-ಹರಿಜನ ಕಾಲನಿ, ರಾಮನಗರ, ಅಲಂ ಗಾರು, ಪಡುಬಿದ್ರಿಬೀಡು (ರಾ. ಹೆದ್ದಾರಿ)ರ ನಡುವೆ ಸುಮಾರು ೨.೯ ಕಿ.ಮೀ. ಉದ್ದದ ಬೈಪಾಸ್ ಹೆದ್ದಾರಿ ರಚನೆಯಾಗಲಿದೆ. ಈ ಹಿಂದಿನ ೬೦ ಮೀ. ಬದಲಾಗಿ ೪೫ ಮೀ. ಹೆದ್ದಾರಿ ನಿರ್ಮಾಣವಾಗಲಿದೆ. ಹಾಗಾಗಿ ಹಿಂದೆ ಪ್ರಸ್ತಾಪಿಸಲಾಗಿದ್ದ ೪೨ ಮನೆಗಳ ಎತ್ತಂಗ ಡಿಯ ಪೈಕಿ ಕೇವಲ ೨೦ರಿಂದ ೨೧ ಮನೆಗಳು ಮಾತ್ರ ಸ್ವಾಧೀನತೆಗೊಳ ಪಡಲಿದೆ. ಪಾದೆಬೆಟ್ಟುವಿನ ದಲಿತ ಕಾಲ ನಿಯ ಕೇವಲ ಮೂರು ಮನೆಗಳು ಮಾತ್ರ ಪ್ರಸ್ತಾವಿತ ಹೆದ್ದಾರಿ ನಕಾಶೆಯಲ್ಲಿ ಒಳಗೊಂಡಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ. ಮುಂದಿನ ಎರಡು ದಿನ ದೊಳಗೆ ಹೊಸ ಬೈಪಾಸ್ ಸಂತ್ರಸ್ತರಿಗೆ ನೋಟೀಸು ಜಾರಿಗೊಳಿಸಲಾಗುವುದು ಮತ್ತು ಈಗಿರುವ ಹೆದ್ದಾರಿ ೧೭ರಲ್ಲಿ ಅತಿಕ್ರಮಣ ಎಸಗಿರುವ ಕಟ್ಟಡ ಮಾಲೀ ಕರಿಗೂ ನೋಟೀಸ್ ನೀಡಲಾಗುವುದು ಎಂದು ಹೇಳಿದ್ದಾರೆ.
ಬೈಪಾಸ್ ವಿರೋಧ: ಬೆಳಿಗ್ಗೆ ಜಿಲ್ಲಾಧಿಕಾರಿ ಮತ್ತು ಕಂದಾಯ ಅಧಿ ಕಾರಿಗಳಿದ್ದ ತಂಡ ಸಮೀಕ್ಷೆಗಾಗಿ ಬೈಪಾಸ್ ವಿರೋಧಿಗಳ ಪ್ರತಿರೋಧ ಎದುರಿಸಬೇಕಾಯಿತು. ಆಗ ಡಿಸಿ ‘ಇದುವರೆಗೆ ನಡೆದ ಸಮೀಕ್ಷೆ, ಪರ ವಿರೋಧದ ಚರ್ಚೆ, ವಿಚಾರ ವಿನಿಮ ಯಗಳೆಲ್ಲ ಮುಗಿದ ಅಧ್ಯಾಯ. ಇದೀಗ ಬೈಪಾಸ್ ರಚನೆಯ ನಿರ್ಧಾರ ಅಂತಿಮ ವಾಗಿದೆ ಎಂದು ಉತ್ತರಿಸಿ ಅತಿಕ್ರಮಣದ ವಿರುದ್ಧ ಕ್ರಮಕೈಗೊಳ್ಳಲಾಗುದೆಂದರು.
ಮಂಗಳೂರು: ಕೋಮು ಸೂಕ್ಷ್ಮ ಪ್ರದೇಶದಲ್ಲಿ ಸೌಹಾರ್ದತೆ ಕದಡುವ ಶಕ್ತಿಗಳು ಆಗುಂತಕರಂತೆ ಕೆಲಸ ನಿರ್ವ ಹಿಸುತ್ತಾರೆ ಅವರ ಬಗ್ಗೆ ನಾವು ಎಚ್ಚರಿಕೆ ವಹಿಸಿಕೊಂಡು ನಮ್ಮೊಳಗಿನ ನಂಬಿಕೆ ಯನ್ನು ಉಳಿಸಿಕೊಂಡಾಗ ಯಾವುದೇ ರೀತಿಯ ತೊಂದರೆಗಳೂ ಉದ್ಭವಿ ಸಲು ಸಾಧ್ಯವಿಲ್ಲ ಎಂದು ಮಹಾಬಲ ಪೂಜಾರಿ ಕಡಂಬೋಡಿ ತಿಳಿಸಿದರು.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಸರ್ವಧರ್ಮಿಯರ ಶಾಂತಿ ಸಭೆಯಲ್ಲಿ ಅವರು ಮಾತನಾಡಿ ದರು. ಸುರತ್ಕಲ್ ಪ್ರದೇಶದಲ್ಲಿ ನಡೆಯುವ ಗಲಾಟೆಗಳಿಗೆ ಕೋಮು ಬಣ್ಣ ಹಚ್ಚುವ ವ್ಯವಸ್ಥಿತ ಸಂಚು ಕಿಡಿಗೇಡಿಗಳಿಂದ ನಡೆ ಯುತ್ತಿದೆ ಈ ನಿಟ್ಟಿನಲ್ಲಿ ಸರ್ವಧರ್ಮಿ ಯಲ್ಲೂ ಏಕತೆಯನ್ನು ಮೂಡಿಸುವ ನಿಟ್ಟಿನಲ್ಲಿ ಸುರತ್ಕಲ್ ಪೊಲೀಸರು ಶಾಂತಿ ಸಭೆಯನ್ನು ನಡೆಸಿದ್ದರು. ಸಭೆಯಲ್ಲಿ ಡಿಸಿಪಿ ಮುತ್ತುರಾಯ, ಎಸಿಪಿ ಪುಟ್ಟ ಮಾದಯ್ಯ, ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ಎಸ್.ಐ ರಮೇಶ್ ಉಪಸ್ಥಿತರಿದ್ದರು. ಶಾಂತಿ ಸಭೆಯಲ್ಲಿ ಎಲ್ಲಾ ಧರ್ಮದ ಮುಖಂಡರೂ ಭಾಗವಹಿಸಿದ್ದರು.
ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದ ಬಳಿ ರಾಶಿ ಬಿದ್ದಿರುವ ಕಸವನ್ನು ಪುರಸಭೆಯು ಸಮರ್ಪಕ ವಾಗಿ ವಿಲೇವಾರಿ ಮಾಡದೆ ಇರುವು ದರಿಂದ ಪರಿಸರದ ಜನರು ಮೂಗು ಮುಚ್ಚಿಕೊಂಡು ನಡೆದಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ನಾಗರಿಕರು ಪ್ರತಿಭಟನೆ ನಡೆಸಿದ್ದು, ಕಸವನ್ನು ಬೇಗನೇ ವಿಲೇವಾರಿ ಮಾಡದೇ ಇದ್ದರೆ ಪುರಸಭೆಯ ಮುಂದೆ ತ್ಯಾಜ್ಯವನ್ನು ತಂದು ಹಾಕುತ್ತೇವೆ ಎಂದು ಎಚ್ಚರಿಸಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಮೂಡುಬಿದಿರೆ ಪರಿಸರದಿಂದ ಸಂಗ್ರಹಿತವಾದ ಕಸವನ್ನು ಸ್ವರಾಜ್ಯ ಮೈದಾನದ ಬಳಿ ತಂದು ಹಾಕುತ್ತಿರು ವುದರಿಂದ ನಾನಾ ಬಗೆಯ ಸಮಸ್ಯೆಗಳು ತಲೆದೋರುತ್ತಿವೆ. ಜೆಸಿಬಿಯಿಂದ ಕಸ ವಿಲೇವಾರಿ ಮಾಡುವ ಸಂದರ್ಭ ಆ ಪ್ರದೇಶದ ಮಣ್ಣು ಸವೆದು ಹೊಂಡ ನಿರ್ಮಾಣವಾಗುತ್ತಿದ್ದು ಇದರಿಂದಾಗಿ ಅಲ್ಲಿ ನೀರು ನಿಂತು ವಿವಿಧ ಕ್ರಿಮಿ ಕೀಟಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ ಎಂದು ದೂರಿದ್ದಾರೆ.
ಈ ವಿಷಯಕ್ಕೆ ಸಂಬಂಧಿತವಾಗಿ ಮೂಡುಬಿದಿರೆ ಪುರಸಭಾ ಮುಖ್ಯಾಧಿ ಕಾರಿ ರಾಯಪ್ಪ ಇವರು ಮಾಧ್ಯಮದ ಜೊತೆಗೆ ಮಾತನಾಡುತ್ತ, ಮೇ ೩೧ ರ ಭಾರತ್ ಬಂದ್‌ನಿಂದಾಗಿ ಕಸ ವಿಲೇ ವಾರಿಯ ಕಾರ‍್ಯದಲ್ಲಿ ಸ್ವಲ್ಪ ವಿಳಂಬ ವಾಗಿದೆ. ವಾಸನೆ ಬರಲು ಇಲ್ಲಿ ಕೊಳೆ ಯುವ ತ್ಯಾಜ್ಯವನ್ನು ಹಾಕುತ್ತಿಲ್ಲ. ಅಲ್ಲದೆ ಪ್ರತಿದಿನ ಕಸವನ್ನು ವಿಲೇವಾರಿ ಮಾಡುತ್ತಿದ್ದೇವೆ. ಕರಿಂಜೆಯ ತ್ಯಾಜ್ಯ ವಿಲೇವಾರಿ ಮಾಡುವ ಘಟಕದ ಕಾಮ ಗಾರಿ ಇನ್ನು ೩ ತಿಂಗಳೊಳಗೆ ಪೂರ್ಣ ಗೊಳ್ಳುವುದು ನಂತರ ಅಲ್ಲಿಗೆ ಕಸವನ್ನು ವಿಲೇವಾರಿ ಮಾಡುತ್ತೇವೆ ಎಂದು ತಿಳಿಸಿದರು. ಮೂಡಬಿದ್ರೆ ಪೊಲೀ ಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಮಣಿಪಾಲ: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲದಿರುವುದು ಮೇಲ್ನೋಟಕ್ಕೆ ಕಾಣುತ್ತಿದ್ದು ಇದರಿಂ ದಾಗಿ ಪದವೀಧರ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಖಚಿತ ಎಂದು ಗೃಹಸಚಿವ ಆರ್.ಅಶೋಕ್ ತಿಳಿಸಿದರು.
ಉಡುಪಿಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ ದರು.ರಾಜ್ಯಸರಕಾರ ಸಚಿವ ಸಂಪುಟ ದಲ್ಲಿ ಶಿಕ್ಷಕರಿಗೆ ಸಂಬಂಧಿಸಿದ ಹಲ ವಾರು ಆಶ್ವಾಸನೆಗಳನ್ನು ಈಡೇರಿಸಿದೆ. ಅಭ್ಯರ್ಥಿ ಮತಯಾಚನೆಯಲ್ಲಿ ಬೇರೆ ಪಕ್ಷಕ್ಕಿಂತ ಮುಂದಿದ್ದು, ಸೋಲಿನ ಅಂಚಿ ನಲ್ಲಿ ವಿರೋಧ ಪಕ್ಷದವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇದ್ಯಾವುದು ಪಕ್ಷಕ್ಕೆ ಹಿನ್ನಡೆಯಾಗು ವುದಿಲ್ಲ.
ಟಿಂಟ್ ಗ್ಲಾಸ್ ತೆಗೆಯುವ ಪೊಲೀಸ್ ಅಧಿಕಾರಿಗಳು ನಾಗರಿಕ ರೊಂದಿಗೆ ದುರ್ವರ್ತನೆ ತೋರುತ್ತಿ ದ್ದಾರೆಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲಾ ವಾಹನದ ಮಾಲೀ ಕರು ಪಾಲಿಸಬೇಕು. ಪೊಲೀಸ್ ಅಧಿಕಾರಿ ಗಳು ಈ ಬಗ್ಗೆ ನಾಗರಿ ಕರೊಂದಿಗೆ ಸೌಮ್ಯತೆಯಿಂದ ವರ್ತಿಸ ಬೇಕು. ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವಂತಹ ಕೆಲಸವನ್ನು ಮಾಡಬೇಕು ಎಂದು ಗೃಹಸಚಿವರು ಆದೇಶಿಸಿದರು.ಈ ವೇಳೆ ಉದಯ ಕುಮಾರ್ ಶೆಟ್ಟಿ, ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಲಾಲಾಜಿ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು: ಕುದ್ರೋಳಿಯಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರೂ ಮೇಯರ್ ಅವರು ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ಪ್ರಕರಣವನ್ನು ದಂಡ ವಿಧಿಸಿ ಮುಚ್ಚಿ ಹಾಕಿರುವುದನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತೀವ್ರವಾಗಿ ಖಂಡಿಸಿದೆ.
ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಹಸಿಕ ರೀತಿಯಲ್ಲಿ ದಾಳಿ ನಡೆಸಿದ್ದು, ಆದರೆ ಪ್ರಕರಣವನ್ನು ಮುಚ್ಚಿ ಹಾಕಿ ಮನಪಾ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಮನೋಬಲ ಕುಗ್ಗಿಸಿದಂ ತಾಗಿದೆ ಎಂದು ಅದು ಆರೋಪಿಸಿದೆ.
ಈ ಪ್ರಕರಣವನ್ನು ಪುನರ್ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಳ್ಳಬೇಕು. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಯಾಗಬೇಕೆಂದು ವಿ.ಹಿಂ.ಪ ಹಾಗೂ ಬಜರಂಗದಳ ಮನಪಾ ಆಯುಕ್ತರನ್ನು ಒತ್ತಾಯಿಸಿದೆ.
ಬೆಂಗಳೂರು: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿರುವ ಬಿಜೆಪಿ ಅಭ್ಯರ್ಥಿಗಳಿಗೆ ಕಠಿಣ ಸವಾಲು ಎದುರಾಗಿದೆ. ಸರಕಾರದ ಭ್ರಷ್ಟಾಚಾರ, ಬಿಜೆಪಿಯಲ್ಲಿನ ಒಳಜಗಳ ಪ್ರeವಂತ ಮತದಾರರು ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.
ಅವರಲ್ಲೂ ಕರಾವಳಿ ಮತ್ತು ಮಲೆನಾಡಿನ ಪ್ರeವಂತ ಮತದಾರರು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಐತಿಹಾಸಿಕ ತೀರ್ಪು ನೀಡಲಿದ್ದಾರೆ. ಈಗಾಗಲೇ ಉಡುಪಿ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಒಳಜಗಳ ಭ್ರಷ್ಟಾಚಾರಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಮತದಾರರು ಸಾಬೀತುಪಡಿಸಿದ್ದಾರೆ.
ಇದರ ಬೆನ್ನಲೇ ಬಂದಿರುವ ವಿಧಾನ ಪರಿಷತ್ ಚುನಾವಣೆಯಲ್ಲೂ ಅಭ್ಯರ್ಥಿಗಳಿಗೆ ಬುದ್ದಿ ಕಲಿಸುವ ಸಾಧ್ಯತೆ ಇದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಗೊಂಡು ಪರಿಷತ್ ಪ್ರವೇಶಿಸಿದ ನಂತರ ಅವರು ಮತ್ತೆ ಹಿಂತಿರುಗಿ ನೋಡಿಲ್ಲ ಎಂಬ ಭಾವನೆ ಬಂದಿದೆ.
ಹೀಗಾಗಿ ಗಣೇಶ್ ಕಾರ್ಣಿಕ್ ಮತ್ತು ಡಿ.ಎಚ್.ಶಂಕರ ಮೂರ್ತಿಯವರಿಗೆ ಇದು ಕಠಿಣ ಪರೀಕ್ಷೆ ಎದುರಾಗಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅಷ್ಟು ಸುಲಭದ ಮಾತಾಗಿಲ್ಲ. ಒಂದೆಡೆ ಸರಕಾರದ ಭ್ರಷ್ಟಾಚಾರ, ಒಳಜಗಳ ಮತ್ತೊಂದೆಡೆ ಅಭ್ಯರ್ಥಿಗಳು ತಮ್ಮ ಮತದಾರರನ್ನು ಕಡೆಗಣಿಸಿರುವುದು ಇದಕ್ಕೆ ಕಾರಣವಾಗಿದೆ. ಇದರ ಲಾಭವನ್ನು ಪ್ರತಿಪಕ್ಷದ ಅಭ್ಯರ್ಥಿಗಳು ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಪ್ರeವಂತ ಮತದಾರರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಈ ಎರಡು ಕ್ಷೇತ್ರಗಳಲ್ಲದೆ ಉಳಿದ ನಾಲ್ಕು ಕ್ಷೇತ್ರಗಳಲ್ಲೂ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳಿಗೆ ಇದು ಕಠಿಣ ಸವಾಲಾಗಿದೆ. ಈ ಸವಾಲನ್ನು ಎದುರಿಸಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಖ್ಯಮಂತ್ರಿ ಸದಾನಂದ ಗೌಡ, ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಇಡೀ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪ್ರeವಂತ ಮತದಾರರನ್ನು ಒಲೈಸಿಕೊಳ್ಳುವ ಕೆಲಸ ನಡೆಸಿದ್ದಾರೆ.
ಪುತ್ತೂರು: ಜನತೆಯ ನೆಮ್ಮದಿ ಕೆಡಿಸುತ್ತಿದ್ದ ಪುತ್ತೂರಿನ ನೆಮ್ಮದಿ ಕೇಂದ್ರಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷ ಶಂಭು ಭಟ್ ಬುಧವಾರ ಭೇಟಿ ನೀಡಿ ಪರಿಶಿಲನೆ ನಡೆಸಿದರು. ವಿದ್ಯುತ್ ತೊಂದರೆಯಿಂದ ಜನರಿಗೆ ತೊಂದರೆ ಯಾಗದಂತೆ ತಕ್ಷಣವೇ ಜನರೇಟರ್ ವ್ಯವಸ್ಥೆ ಕಲ್ಪಿಸುವಂತೆ ಅವರು ತಹಶೀಲ್ದಾರರಿಗೆ ಸೂಚಿಸಿದರು.
ಪುತ್ತೂರು ಪೇಟೆಯಲ್ಲಿರುವ ನೆಮ್ಮದಿ ಕೇಂದ್ರದ ಅವ್ಯವಸ್ಥೆಯಿಂದಾಗಿ ಗ್ರಾಮೀಣ ಭಾಗದ ಜನರು ಸೇರಿದಂತೆ ಪ್ರತೀ ದಿನ ಹಲವಾರು ಮಂದಿಗೆ ಸಮಸ್ಯೆಯಾಗುತ್ತಿತ್ತು. ನೆಮ್ಮದಿ ಕೇಂದ್ರದಲ್ಲಿ ಕೇವಲ ಒಂದು ಕಂಪ್ಯೂ ಟರ್ ವ್ಯವಸ್ಥೆಯಿದ್ದು . ಅಲ್ಲಿನ ಅವ್ಯವಸ್ಥೆ ಯಿಂದಾಗಿ ತುರ್ತು ದಾಖಲೆ ಪತ್ರ ಕ್ಕಾಗಿ ಜನತೆ ದಿನಗಟ್ಟಲೆ ಕಾಯಬೇ ಕಾದ ಅನಿವಾರ್ಯತೆ ಇತ್ತು. ಸಮಸ್ಯೆ ಯನ್ನು ಮನಗಂಡ ತಾಲೂಕು ಪಂಚಾ ಯಿತಿ ಅಧ್ಯಕ್ಷರು ಈ ಹಿನ್ನಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧ್ಯಕ್ಷರ ಸೂಚನೆಗೆ ಸ್ಪಂದಿಸಿದ ತಹಶೀಲ್ದಾರ್ ಡಾ.ದಾಸೇ ಗೌಡ ಅವರು ಜನರೇಟರ್ ವ್ಯವಸ್ಥೆ ಕಲ್ಪಿಸಿ ಸಮಸ್ಯೆಯನ್ನು ಪರಿಹರಿಸಿದರೆಂದು ತಿಳಿದು ಬಂದಿದೆ.
ಮಂಗಳೂರು: ಬಿಜೆಪಿಯ ಹೆಬ್ಬಾಗಿಲು, ದಕ್ಷಿಣ ಭಾರತದಲ್ಲಿ ಸಂಘ ಪರಿವಾರದ ನಿರ್ಧಾರಿತ ಪ್ರದೇಶ ಎನಿಸುವ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ವರ್ದನೆಯ ಪ್ರಯತ್ನಗಳು ಮೆಲ್ಲನೆ ನಡೆಯುತ್ತಿವೆ.
ಮುಂದಿನ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳ ಪ್ರಮಾಣ ಬಿಜೆಪಿಗಿಂತ ಹೆಚ್ಚಾಗಿರಲೇ ಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಅದಕ್ಕಾಗಿ ಸಮೀಕ್ಷೆ ಮತ್ತು ನಾಯಕರ ಆಯ್ಕೆಯ ಪ್ರಕ್ರಿಯೆಗಳು ಈಗಿನಿಂದಲೇ ನಡೆಯುತ್ತಿದೆ. ಇದು ಎಷ್ಟರ ಮಟ್ಟಿಗೆ ಸಿರಿಯಸ್ ಆಗಲಿದೆ ಎಂಬುದು ಮಾತ್ರ ಭವಿಷ್ಯದಲ್ಲಷ್ಟೇ ಗೊತ್ತಾಗಲಿದೆ.
ಮಂಗಳೂರಿಗೆ ತಿಂಗಳಿಗೊಬ್ಬರಂತೆ ವೀಕ್ಷಕರು ಬರುತ್ತಿದ್ದಾರೆ. ಇಲ್ಲಿಯ ಕಾಂಗ್ರೆಸ್ ವ್ಯವಹಾರಗಳ ಅವಲೋಕನ ನಡೆಸಿ ಹೋಗುತ್ತಿದ್ದಾರೆ. ಕಳೆದ ವಾರದಲ್ಲಿ ಗೋವಾದಿಂದ ಶಂಕರ್ ಬಂದಿದ್ದರು. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷ ಹಾಗೂ ಪಕ್ಷದ ನಾಯಕರು ಎಷ್ಟರ ಮಟ್ಟಿಗೆ ಸಿದ್ಧರಾಗಿದ್ದರೆ ಎಂಬುದು ಅವಲೋಕಿಸುವುದು ಅವರ ಉದ್ದೇಶವಾಗಿತ್ತು. ಆದರೆ ಇಲ್ಲಿಯ ನಾಯಕರು ಟಿಕೆಟ್ ಲೆಕ್ಕಾಚಾರದೊಂದಿಗೆ ಅವರ ಸುತ್ತ ಮುಗಿ ಬಿದ್ದಿದ್ದರು. ಪಕ್ಷದ ಸಂಘಟನೆಯ ವಿಷಯದಲ್ಲಿ ನಿಮ್ಮ ಕೊಡುಗೆ ಏನು ಎಂದು ಟಿಕೆಟ್ ಆಕಾಂಕ್ಷಿಗಳಲ್ಲಿ ಕೇಳಿದರೆ ಹೆಚ್ಚಿನವರಲ್ಲಿ ಉತ್ತರವಿ ರಲಿಲ್ಲ. ಕಾಂಗ್ರೆಸ್ ಟಿಕೆಟ್ ಒಂದು ಸಿಕ್ಕರೆ ಸಾಕು ಮತಗಳು ತನ್ನಿಂದ ತಾನೆ ಹರಿದು ಬರುತ್ತವೆ ಎಂಬ ಮನೋಭಾವವೇ ಹೆಚ್ಚಿನವರಲ್ಲಿ ಕಾಣುತ್ತಿತ್ತು. ಶಂಕರ್ ಇಲ್ಲಿಯ ನಾಯಕರ ಈ ಮನೋಭಾವದತ್ತ ಗಮನ ಹರಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಗಮನಿಸಿದ್ದರೆ ಸೋನಿಯಾ ಮೇಡಂಗೆ ಖಂಡಿತವಾಗಿ ತಿಳಿಸುತ್ತಾರೆ.
ಬೆಂಗಳೂರು ಮೂಲದ ಕಾಂಗ್ರೆಸ್ ನಾಯಕರೋರ್ವರು ನೀಡಿದ ಮಾಹಿತಿಯ ಪ್ರಕಾರ ಶಂಕರ್ ದ.ಕ. ಜಿಲ್ಲೆಗೆ ಬಂದುದು ಇಲ್ಲಿರುವ ಟಿಕೆಟ್ ಆಕಾಂಕ್ಷಿಗಳನ್ನಾಗಲಿ, ಅಥವಾ ಪಕ್ಷದಲ್ಲಿರುವ ಪ್ರಭಾವಿತ ನಾಯಕರನ್ನಾಗಲಿ ಗುರುತಿಸಲು ಅಲ್ಲ. ಬದಲಿಗೆ ಪಕ್ಷದಲ್ಲಿಯ ಗೊಂದಲಗಳು, ಸಂಘಟನೆಗೆ ತೊಡಕಾಗಿರುವ ಅಂಶಗಳನ್ನು ಹತ್ತಿರದಿಂದ ತಿಳಿದು ಅದರ ವರದಿಯನ್ನು ಹೈಕಮಾಂಡ್‌ಗೆ ಕೊಡಲು. ಈ ಕಾರ್ಯದಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ದ.ಕ. ಜಿಲ್ಲೆಯ ಕಾಂಗ್ರೆಸ್‌ನಲ್ಲಿ ನಡೆಯುವ ಆಂತರಿಕ ಬದಲಾವಣೆಗಳಷ್ಟೇ ತೋರಿಸಿಕೊಡಲಿವೆ.
ದ.ಕ. ಜಿಲ್ಲೆಯಲ್ಲಿ ಈ ವರೆಗೆ ಪಾರುಪತ್ಯ ಮೇರೆದ ತ್ರಿವಳಿ ನಾಯಕರು ತಮ್ಮ ಎದುರು ಇನ್ನೊಬ್ಬರು ಬೆಳೆಯ ಬಾರದು ಎಂಬ ದುರಾಲೋಚನೆಯಿಂದ ಕಾರ್ಯನಿರ್ವಹಿದ್ದರ ಪರಿಣಾಮವಾಗಿಯೇ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಇಂದು ಸಮರ್ಥ ನಾಯಕರ ಕೊರತೆ ಎದುರಿಸುವಂತಾಗಿದೆ. ಇದನ್ನು ಮನಗಂಡಿರುವ ಹೈಕಮಾಂಡ್ ಜಿಲ್ಲೆಯಲ್ಲಿ ಹೊಸ ನಾಯಕರನ್ನು ಹುಡುಕುವ ಕಾರ್ಯದಲ್ಲಿ ನಿರತವಾಗಿದೆ. ಭವಿಷ್ಯದಲ್ಲಿ ನವನಾಯಕರನ್ನು ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಕಾಣಲಿದೆ ಎಂಬ ಆಶಾಭಾವವನ್ನು ದೆಹಲಿ ಒಡನಾಟದ ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ.
ಪಡುಬಿದ್ರಿ: ಪಡುಬಿದ್ರಿ ಪರಿಸರದಲ್ಲಿ ಅಸ್ತಿತ್ವಕ್ಕೆ ಬರಲಿದ್ದ ಎನ್‌ಟಿಪಿಸಿ, ಸುಜ್ಲಾನ್, ಕೊಜೆಂಟ್ರಿಕ್ಸ್ ಯೋಜನೆಗಳಿಗಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಸ್ವಾಧೀನತೆ ನಡೆಸಿದ್ದ ಸಂದರ್ಭದಲ್ಲಿ ಪಡುಬಿದ್ರಿಯ ಬೀಡು ಮನೆತನಕ್ಕೆ ಸೇರಿದ್ದೆಂದು ಹೇಳಲಾದ ನೂರಾರು ಎಕರೆ ಜಮೀನಿಗೆ ಪಾವತಿಯಾದ ಐದು ಕೋಟಿ ರೂಪಾಯಿ ಪರಿಹಾರ ಧನ ವನ್ನು ಬೀಡು ಮನೆತನಕ್ಕೆ ಸೇರಿದ ಅಣ್ಣ ತಮ್ಮಂದಿರಿಬ್ಬರು ತಾವೇ ಜಮೀನಿಗೆ ವಾರೀ ಸುದಾರರು ಎಂದು ಸುಳ್ಳು ಭೂದಾಖಲೆ ಸೃಷ್ಟಿಸಿ ನಗದೀಕರಿಸಿದ್ದಾರೆ ಎಂದು ಅದೇ ಬೀಡಿನ ಮತ್ತೋರ್ವ ವಾರೀಸುದಾರರಾದ ಮಾಜಿ ಸರಕಾರಿ ಅಭಿಯೋಜಕ, ವಕೀಲ ಉದಯವರ್ಮರಾಜ ಎಂಬವರು ಪಡು ಬಿದ್ರಿ ಠಾಣೆಗೆ ನ್ಯಾಯಾಲಯದ ಮೂಲಕ ದೂರು ಸಲ್ಲಿಸಿದ್ದಾರೆ.
ಪಡುಬಿದ್ರಿ ಬೀಡಿನ ಹಾಲಿ ಅರಸರಾದ ಚಂದಯ್ಯ ಅರಸು ಕಿನ್ಯಕ್ಕೆ ಬಲ್ಲಾಳ್ ಮತ್ತವರ ತಮ್ಮ ಪಿ. ರತ್ನಾಕರರಾಜ್ ಎಂಬವರ ವಿರುದ್ಧ ದಾಖಲಾಗಿದ್ದು, ದೂರುದಾರ ಉದಯ ವರ್ಮರಾಜ ಬಲ್ಲಾಳ ಎಂಬವರು ಆರೋಪಿ ತರ ನೇರ ಸಂಬಂಧಿಯಾಗಿದ್ದಾರೆ. ಸುಮಾರು ಐದಕ್ಕೂ ಹೆಚ್ಚು ಮಂದಿ ವಾರೀಸುದಾರರಿರುವ, ಪಡುಬಿದ್ರಿ ಬೀಡಿನ ಅನುಭೋಗಕ್ಕೆ ಒಳಪಟ್ಟಿದ್ದ ನೂರಾರು ಎಕರೆ ಆಸ್ತಿಗೆ ’ಈ ಜಮೀನಿಗೆ ಸಂದಾಯವಾಗಿರುವ ಭೂಪರಿಹಾರಕ್ಕೆ ನಮ್ಮಿಬ್ಬರ ವಿನಹ ಬೇರೆ ಯಾರಿಗೂ ಯಾವುದೇ ಹಕ್ಕಿಲ್ಲ’ ಎಂಬ ದಾಖಲೆ ಸೃಷ್ಟಿಸಿ ಮತ್ತು ಕೆಐಡಿಬಿ ಅಧಿಕಾರಿಗಳ ಮೇಲೆ ಪ್ರಭಾವ, ಒತ್ತಡ ಬೀರಿ ಐದು ಕೋಟಿ ರೂಪಾಯಿ ಪರಿಹಾರಧನ ಪಡೆಯಲಾಗಿದೆ ಎಂದು ಉದಯವರ್ಮ ಬಲ್ಲಾಳ್ ಆಪಾದಿಸಿ ದೂರು ದಾಖಲಿಸಿದ್ದಾರೆ.
ಕುಕ್ಕೇ ದೇವಳದ ಸೆಕ್ಯುರಿಟಿಗೆ ನಿಂದನೆ
ಸುಳ್ಯ: ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ಒಳಗೆ ಚಪ್ಪಲಿ ಹಾಕಿಕೊಂಡು ಹೊಗಿದ್ದಲ್ಲದೆ ಅಲ್ಲಿನ ಕಾವಲುಗಾರನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಸುಬ್ರಹ್ಮಣ್ಯದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ (ಐಒಬಿ) ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸ ಲಾಗಿದೆ.
ಮಂಗಳವಾರ ರಾತ್ರಿ ಈ ಘಟನೆ ನಡೆ ದಿದೆ. ಬ್ಯಾಂಕ್ ಮ್ಯಾನೇಜರ್ ಮೂಲತಃ ಮಂಗಳೂರಿನವರಾದ ರೆನ್ನಿ ವೇಗಸ್, ದೇವ ಳದ ಒಳಗೆ ಚಪ್ಪಲಿ ಹಾಕಿಕೊಂಡೇ ಹೋಗಿ ದ್ದು, ಇದನ್ನು ಆಕ್ಷೇಪಿಸಿದ ಕಾವಲುಗಾರನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು.
ಕಾಸರಗೋಡು: ಕೇರಳದ ಪೊಲೀಸ್ ಇಲಾಖೆಯಲ್ಲಿ ಉನ್ನತ ಪೊಲೀಸಧಿಕಾರಿಗಳ ಸಹಿತ ಒಟ್ಟು ೫೩೩ ಮಂದಿ ವಂಚನೆ, ಅತ್ಯಾ ಚಾರ ಸಹಿತ ವಿವಿಧ ಕ್ರಿಮಿನಲ್ ಪ್ರಕರಣಗಳಿಗೆ ಒಳಪಟ್ಟವರೆಂದು ಸ್ಪಷ್ಟಪಡಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹೈಕೋ ರ್ಟಿಗೆ ಈಗಾಗಲೇ ಮಾಹಿತಿ ನೀಡಿದ್ದಾರೆ. ಜಿಲ್ಲಾ ಆಧಾರದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಇಷ್ಟು ಸಂಖ್ಯೆಯಲ್ಲಿ ಕ್ರಿಮಿನಲ್‌ಗಳು ಪೊಲೀಸ್ ಇಲಾಖೆಯಲ್ಲಿರುವುದಾಗಿ ವರದಿಯಲ್ಲಿ ಸ್ಪಷ್ಟವಾಗಿ ಸಂಪೂರ್ಣ ಮಾಹಿತಿ ನೀಡ ಲಾಗಿದೆ. ಈ ವರದಿಯಂತೆ ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಕ್ರಿಮಿನಲ್ ಕೇಸುಗಳಲ್ಲಿ ಒಳಪಟ್ಟ ೧೬ ಮಂದಿ ಪೊಲೀಸರಿರುವುದಾಗಿ ತಿಳಿಸಲಾಗಿದೆ. ಮಾಹಿತಿ ಹಕ್ಕು ಕಾನೂನಿನ ಪ್ರಕಾರ ಈ ಮಾಹಿತಿಯನ್ನು ಅಧಿಕೃತವಾಗಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕಾಸರಗೋಡು ಪಾರೆಕಟ್ಟೆಯಲ್ಲಿರುವ ಎ.ಆರ್. ಕ್ಯಾಂಪ್ (ಸಶಸ್ತ್ರ ಮೀಸಲು ಪಡೆ)ಯಲ್ಲಿ ಮಾತ್ರ ೭ ಕ್ರಿಮಿನಲ್ ಪೊಲೀಸರಿದ್ದಾರೆ. ಮೀಸಲು ಪಡೆಯ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ (ಹೆಡ್ ಕಾನ್‌ಸ್ಟೇಬಲ್)ಗಳಾದ ಸಂತೋಷ್, ಮೋಹನನ್, ಅಲ್‌ಫಿರಸ್ವಲ್, ಜೋಯಿ, ಜಲನ್ ಮೋನ್, ಚಾಲಕ ರಾಕೇಶ್, ಕಾನ್‌ಸ್ಟೇಬಲ್ ನಿಕ್ಸನ್ ಎಂಬವರು ಈ ಪಟ್ಟಿಯಲ್ಲಿ ಒಳಗೊಂಡಿದ್ದಾರೆ. ಇದಲ್ಲದೆ ಬೇಕಲ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಜನಾದನನ್, ನೀಲೇಶ್ವರದ ಹೆಡ್ ಕಾನ್‌ಸ್ಟೇಬಲ್ ಗೋಪಾಲಕೃಷ್ಣನ್, ಕಾಸರಗೋಡು ಠಾಣೆಯ ಎಚ್.ಸಿ. ರಾಮುಟ್ಟಿ, ಕಾನ್‌ಸ್ಟೇಬಲ್ ದಾಮೋದರನ್, ಚಂದ್ರಶೇಖರನ್, ಹೊಸದುರ್ಗ ಕಾನ್‌ಸ್ಟೇಬಲ್ ಚಂದ್ರನ್, ಲಾಲು, ಎಚ್.ಸಿ. ಅಶೋಕನ್, ಪಯ್ಯನ್ನೂರಿನ ಕಾನ್‌ಸ್ಟೇಬಲ್ ಭರತನ್ ಎಂಬವರೂ ಪಟ್ಟಿಯಲ್ಲಿ ಒಳಪಟ್ಟ ಕಾನೂನು ಪಾಲಕರು(?). ಕಾಸರಗೋಡಿನ ಹಿರಿಯ ಪತ್ರಕರ್ತ ರಹಿಮಾನ್ ತಾಯ ಲಂಗಾಡಿ ಸಹಿತ ಕೆಲವೊಂದು ಮಾಧ್ಯಮ ಪ್ರತಿನಿಧಿಗಳ ಮೇಲೆ ತಮ್ಮ ಕೈಚಳಕ ಪ್ರದರ್ಶಿಸಿದ ಬಗ್ಗೆ ಕೇಸುಗಳು ದಾಖಲಾಗಿದ್ದರೂ ಅವರ ಹೆಸರುಗಳು ಸದ್ರಿ ಪಟ್ಟಿಯಲ್ಲಿ ಒಳಪಟ್ಟಿಲ್ಲ. ಅದೂ ಸೇರಿದರೆ ಈ ಸಂಖ್ಯೆ ೫೦ಕ್ಕೇರುವುದರಲ್ಲಿ ಸಂಶಯವಿಲ್ಲ ಎನ್ನಲಾಗಿದೆ.
ಕೇರಳದಲ್ಲಿ ಒಟ್ಟು ೫೩೩ ಮಂದಿಯಲ್ಲಿ ಎ.ಡಿ.ಜಿ.ಪಿ ಪುಲಿಕೇಶಿ, ಐ.ಜಿ. ಟೋಮಿನ್. ಜೆ. ತಚ್ಚಂಗೇರಿ, ಡಿ.ಐ.ಜಿ. ಎಸ್. ಶ್ರೀಜಿತ್ ಸಹಿತ ಅತ್ಯುನ್ನತ ಪೊಲೀಸಧಿಕಾರಿಗಳು ಪಟ್ಟಿಯಲ್ಲಿರುವುದು ಬೆಚ್ಚಿ ಬೀಳಿಸುವಂತೆ ಮಾಡಿದೆ. ಹಿಂದೆ, ಹಿರಿಯ ಮುತ್ಸಧ್ದಿ ವಿ.ಎಸ್. ಅಚ್ಚುತಾನಂದನ್ ಸರಕಾರ ಅಧಿಕಾರ ದಲ್ಲಿದ್ದಾಗ ಟೋಮಿನ್ ತಚ್ಚಂಗೇರಿ ವಿರುದ್ದ ತನಿಖೆಗೆ ಸ್ವತಃ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಾಸರಗೋಡು: ಕೇರಳದ ಪೊಲೀಸ್ ಇಲಾಖೆಯಲ್ಲಿ ಉನ್ನತ ಪೊಲೀಸಧಿಕಾರಿಗಳ ಸಹಿತ ಒಟ್ಟು ೫೩೩ ಮಂದಿ ವಂಚನೆ, ಅತ್ಯಾ ಚಾರ ಸಹಿತ ವಿವಿಧ ಕ್ರಿಮಿನಲ್ ಪ್ರಕರಣಗಳಿಗೆ ಒಳಪಟ್ಟವರೆಂದು ಸ್ಪಷ್ಟಪಡಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹೈಕೋ ರ್ಟಿಗೆ ಈಗಾಗಲೇ ಮಾಹಿತಿ ನೀಡಿದ್ದಾರೆ. ಜಿಲ್ಲಾ ಆಧಾರದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಇಷ್ಟು ಸಂಖ್ಯೆಯಲ್ಲಿ ಕ್ರಿಮಿನಲ್‌ಗಳು ಪೊಲೀಸ್ ಇಲಾಖೆಯಲ್ಲಿರುವುದಾಗಿ ವರದಿಯಲ್ಲಿ ಸ್ಪಷ್ಟವಾಗಿ ಸಂಪೂರ್ಣ ಮಾಹಿತಿ ನೀಡ ಲಾಗಿದೆ. ಈ ವರದಿಯಂತೆ ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಕ್ರಿಮಿನಲ್ ಕೇಸುಗಳಲ್ಲಿ ಒಳಪಟ್ಟ ೧೬ ಮಂದಿ ಪೊಲೀಸರಿರುವುದಾಗಿ ತಿಳಿಸಲಾಗಿದೆ. ಮಾಹಿತಿ ಹಕ್ಕು ಕಾನೂನಿನ ಪ್ರಕಾರ ಈ ಮಾಹಿತಿಯನ್ನು ಅಧಿಕೃತವಾಗಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕಾಸರಗೋಡು ಪಾರೆಕಟ್ಟೆಯಲ್ಲಿರುವ ಎ.ಆರ್. ಕ್ಯಾಂಪ್ (ಸಶಸ್ತ್ರ ಮೀಸಲು ಪಡೆ)ಯಲ್ಲಿ ಮಾತ್ರ ೭ ಕ್ರಿಮಿನಲ್ ಪೊಲೀಸರಿದ್ದಾರೆ. ಮೀಸಲು ಪಡೆಯ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ (ಹೆಡ್ ಕಾನ್‌ಸ್ಟೇಬಲ್)ಗಳಾದ ಸಂತೋಷ್, ಮೋಹನನ್, ಅಲ್‌ಫಿರಸ್ವಲ್, ಜೋಯಿ, ಜಲನ್ ಮೋನ್, ಚಾಲಕ ರಾಕೇಶ್, ಕಾನ್‌ಸ್ಟೇಬಲ್ ನಿಕ್ಸನ್ ಎಂಬವರು ಈ ಪಟ್ಟಿಯಲ್ಲಿ ಒಳಗೊಂಡಿದ್ದಾರೆ. ಇದಲ್ಲದೆ ಬೇಕಲ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಜನಾದನನ್, ನೀಲೇಶ್ವರದ ಹೆಡ್ ಕಾನ್‌ಸ್ಟೇಬಲ್ ಗೋಪಾಲಕೃಷ್ಣನ್, ಕಾಸರಗೋಡು ಠಾಣೆಯ ಎಚ್.ಸಿ. ರಾಮುಟ್ಟಿ, ಕಾನ್‌ಸ್ಟೇಬಲ್ ದಾಮೋದರನ್, ಚಂದ್ರಶೇಖರನ್, ಹೊಸದುರ್ಗ ಕಾನ್‌ಸ್ಟೇಬಲ್ ಚಂದ್ರನ್, ಲಾಲು, ಎಚ್.ಸಿ. ಅಶೋಕನ್, ಪಯ್ಯನ್ನೂರಿನ ಕಾನ್‌ಸ್ಟೇಬಲ್ ಭರತನ್ ಎಂಬವರೂ ಪಟ್ಟಿಯಲ್ಲಿ ಒಳಪಟ್ಟ ಕಾನೂನು ಪಾಲಕರು(?). ಕಾಸರಗೋಡಿನ ಹಿರಿಯ ಪತ್ರಕರ್ತ ರಹಿಮಾನ್ ತಾಯ ಲಂಗಾಡಿ ಸಹಿತ ಕೆಲವೊಂದು ಮಾಧ್ಯಮ ಪ್ರತಿನಿಧಿಗಳ ಮೇಲೆ ತಮ್ಮ ಕೈಚಳಕ ಪ್ರದರ್ಶಿಸಿದ ಬಗ್ಗೆ ಕೇಸುಗಳು ದಾಖಲಾಗಿದ್ದರೂ ಅವರ ಹೆಸರುಗಳು ಸದ್ರಿ ಪಟ್ಟಿಯಲ್ಲಿ ಒಳಪಟ್ಟಿಲ್ಲ. ಅದೂ ಸೇರಿದರೆ ಈ ಸಂಖ್ಯೆ ೫೦ಕ್ಕೇರುವುದರಲ್ಲಿ ಸಂಶಯವಿಲ್ಲ ಎನ್ನಲಾಗಿದೆ.
ಕೇರಳದಲ್ಲಿ ಒಟ್ಟು ೫೩೩ ಮಂದಿಯಲ್ಲಿ ಎ.ಡಿ.ಜಿ.ಪಿ ಪುಲಿಕೇಶಿ, ಐ.ಜಿ. ಟೋಮಿನ್. ಜೆ. ತಚ್ಚಂಗೇರಿ, ಡಿ.ಐ.ಜಿ. ಎಸ್. ಶ್ರೀಜಿತ್ ಸಹಿತ ಅತ್ಯುನ್ನತ ಪೊಲೀಸಧಿಕಾರಿಗಳು ಪಟ್ಟಿಯಲ್ಲಿರುವುದು ಬೆಚ್ಚಿ ಬೀಳಿಸುವಂತೆ ಮಾಡಿದೆ. ಹಿಂದೆ, ಹಿರಿಯ ಮುತ್ಸಧ್ದಿ ವಿ.ಎಸ್. ಅಚ್ಚುತಾನಂದನ್ ಸರಕಾರ ಅಧಿಕಾರ ದಲ್ಲಿದ್ದಾಗ ಟೋಮಿನ್ ತಚ್ಚಂಗೇರಿ ವಿರುದ್ದ ತನಿಖೆಗೆ ಸ್ವತಃ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೂಡುಬಿದಿರೆ: ಸ್ವಚ್ಛತೆ ಹಾಗೂ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಮೂಡುಬಿದಿರೆಯ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಪುರಸಭಾ ಮುಖ್ಯಾಧಿಕಾರಿ, ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರು ದಾಳಿನಡೆಸಿ ಕೆಲವೆಡೆ ದಂಡ ವಿಧಿಸಿದ್ದಾರೆ.
ಮೂಡಬಿದಿರೆಯ ಕೆಲ ಹೋಟೆಲು ಗಳಲ್ಲಿ ಅನಾರೋಗ್ಯ ಪೀಡಿತ ಕಾರ್ಮಿಕರಿ ದ್ದಾರೆನ್ನುವ ಖಚಿತ ಮಾಹಿತಿ ಪಡೆದು ಪುರಸಭಾಧಿಕಾರಿಗಳು ದಾಳಿ ನಡೆಸಿದ್ದು, ಪ್ರತೀ ನೌಕರರ ತಪಾಸಣೆ ನಡೆಸಿ ಪ್ರತಿಯೊ ಬ್ಬರ ಆರೋಗ್ಯದ ಬಗ್ಗೆ ತಾಲೂಕು ವೈದ್ಯಾಧಿ ಕಾರಿಯವರಿಂದ ದೃಢೀಕರಣ ಪತ್ರ ಪಡೆದು ಕೊಂಡೇ ಕೆಲಸಕ್ಕಿರಿಸಿಕೊಳ್ಳಬೇಕೆಂದು ಎಚ್ಚರಿ ಸಿದ್ದಾರೆ.
 ೪೦ ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಬೇಕರಿಗಳಿಗೆ, ರಸ್ತೆಯಲ್ಲಿ ಕಸಹಾಕಿರುವ ಫ್ಯಾನ್ಸಿ ಸ್ಟೋರ್‌ಗಳಿಗೆ ಹಾಗೂ ಕಸದಲ್ಲಿ ಗಾಜಿನ ಚೂರುಗಳನ್ನು ಹಾಕಿ ಪುರಸಭಾ ವಾಹನಕ್ಕೆ ನೀಡಿದ್ದಕ್ಕೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಹಳೆ ಬಸ್ಸು ನಿಲ್ದಾಣದ ಪಕ್ಕದಲ್ಲಿ ನೂತನವಾಗಿ ಆರಂಭಗೊಂಡಿರುವ ಬೇಕರಿಯೊಂದರ ತಿಂಡಿ, ತಯಾರಿಕಾ ಘಟಕದಿಂದ ರಸ್ತೆಗೆ ಬೀಳುತ್ತಿದ್ದು, ಇದರಿಂದ ಜನರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವುದರಿಂದ ಅಧಿಕಾರಿಗಳು ಆ ಬೇಕರಿಗೂ ದಾಳಿ ನಡೆಸಿ ದಂಡವಿಧಿಸಿದ್ದಾರೆ. ಅಲ್ಲದೆ ಪರವಾನಿಗೆ ಇಲ್ಲದ ಈ ಘಟಕಕ್ಕೆ ಬೀಗ ಜಡಿದಿದ್ದಾರೆ.
ಪುತ್ತೂರು: ಜ್ವರ ಬಾಧೆಗೊಳ ಗಾದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಶೇಕಮಲೆ ಎಂಬಲ್ಲಿ ಮಂಗಳ ವಾರ ಸಂಭವಿಸಿದೆ.
ಅರಿಯಡ್ಕ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿಯ ವಿದ್ಯಾ ರ್ಥಿನಿ ನಿಶ್ಚಿತಾ (೧೩) ಮೃತಪಟ್ಟ ಬಾಲಕಿ.
ಅರಿಯಡ್ಕ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಶೇಕಮಲೆ ನಿವಾಸಿ ಗುರು ವಪ್ಪ ನಾಯ್ಕ ಎಂಬವರ ಪುತ್ರಿಯಾದ ನಿಶ್ಚಿತಾ, ಶಾಲೆ ಆರಂಭದ ದಿನ ಶಾಲೆ ಯಲ್ಲಿ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದಳು.
ಅದೇ ದಿನ ಆಕೆಗೆ ಜ್ವರ ಬಾಧಿಸಿತ್ತು ಎಂದು ತಿಳಿದು ಬಂದಿದೆ.
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ ೬೬ ತೆಂಕಎರ್ಮಾಳಿನಲ್ಲಿ ಕಾರವಾರದ ಕಡೆಗೆ ಸಾಗುತ್ತಿದ್ದ ಮ್ಯಾಕ್ಸಿಕ್ಯಾಬ್ ವಾಹನವೊಂದು ಹೆದ್ದಾರಿಗೆ ತಿರುಗುತ್ತಿದ್ದ ಬೈಕೊಂದಕ್ಕೆ ಡಿಕ್ಕಿ ಹೊಡೆದ ಪರಿ ಣಾಮವಾಗಿ ಬೈಕ್ ಸವಾರ ಮೃತಪಟ್ಟು ಸಹಸವಾರ ಗಂಭೀರವಾಗಿ ಗಾಯ ಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಿನ್ನೆ ಮಧ್ಯಾಹ್ನ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟವರು ಯುಪಿಸಿಎಲ್ ಕಂಪೆನಿಯೊಳಗಿನ ಕ್ಯಾಂಟೀನ್ ಒಂದರ ನೌಕರ ಪಿಲಾರಿನ ಹರೀಶ್ ಪೂಜಾರಿ (೩೬) ಎಂಬವ ರಾಗಿದ್ದು, ಗಾಯಗೊಂಡವರು ಅದಮಾರು ಎಂಬಲ್ಲಿನ ರಮೇಶ ಶೆಟ್ಟಿ ಎಂಬವರಾಗಿದ್ದಾರೆ.
ಸುಳ್ಯ: ಬೈಕ್ ಚರಂಡಿಗೆ ಬಿದ್ದು ಗಾಯಗೊಂಡಿದ್ದ ಬೈಕ್ ಸವಾರ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೊಡಿಯಾಲ ಗ್ರಾಮದ ಐತಪ್ಪ ನಾಯ್ಕ(೩೮) ಮೃತರು. ಮಂಗಳವಾರ ರಾತ್ರಿ ಬೆಳ್ಳಾರೆಯ ಮಾಸ್ತಿಕಟ್ಟೆ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಚರಂಡಿಗೆ ಬಿದ್ದಿತ್ತು. ಗಂಭೀರ ಗಾಯಗೊಂಡಿದ್ದ ಐತಪ್ಪ ನಾಯ್ಕರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸುಳ್ಯ: ಪತ್ರಕರ್ತರೊಬ್ಬರ ಬೈಕ್‌ಗೆ ಡಿಕ್ಕಿ ಹೊಡೆದ ಬೈಕೊಂದು ಪರಾರಿಯಾದ ಘಟನೆ ಬುಧವಾರ ಸಂಜೆ ಸುಳ್ಯ ಠಾಣೆ ಎದುರು ಮುಖ್ಯ ರಸ್ತೆಯಲ್ಲಿ ನಡೆದಿದೆ.
ಪತ್ರಕರ್ತ ಗಿರೀಶ್ ಅಡ್ಪಂಗಾಯ ತಮ್ಮ ಸಹೋದರ ಪ್ರಶಾಂತ್‌ರೊಂದಿಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಬೈಕ್(ಕೆ.ಎ.೨೧-೪೨೦೨) ಡಿಕ್ಕಿ ಹೊಡೆದಿದೆ. ಪ್ರಶಾಂತ್‌ಗೆ ಗಾಯವಾಗಿದೆ. ಡಿಕ್ಕಿ ಹೊಡೆದ ಬೈಕ್ ಪರಾರಿಯಾಗಿದೆ.
ಮುಲ್ಕಿ: ಕಾರ್ನಾಡ್ ಗಾಂಧಿ ಮೈದಾನದ ಬಳಿ ಇರುವ ಅಂಗನ ವಾಡಿ ಶಾಲೆಯ ಶಿಕ್ಷಕಿ ಮಂಜುಳ ನಾಪತ್ತೆಯಾಗಿದ್ದು, ಇದರಿಂದ ಗ್ರಾಮಸ್ಥರು ಗುರುತಿನ ಚೀಟಿ ಮತ್ತು ಭಾಗ್ಯ ಲಕ್ಷ್ಮಿ ಯೋಜನೆಯ ಪ್ರಯೋ ಜನ ಪಡೆದುಕೊಳ್ಳಲು ಹೋಗಿ ಒಂದು ವಾರದಿಂದ ಹಿಂದಿರುಗಿ ಬೇಸತ್ತಿದ್ದಾರೆ. ಈಕೆಗೆ ಕರೆ ಮಾಡಿ ದಾಗ ಮೊಬೈಲ್ ಸ್ವಿಚ್‌ಆಫ್ ಆಗಿದೆ.
ಇಲ್ಲಿ ಶಿಕ್ಷಕಿ ಇಲ್ಲದೆ ಹೋದುದು ಇದು ಮೊದಲಲ್ಲ. ಈ ಹಿಂದೆ ೩ತಿಂಗಳ ಕಾಲ ರಜೆ ಹಾಕಿದ ಸಂದರ್ಭ ಬದಲಿ ಶಿಕ್ಷಕರನ್ನು ನೇಮಿಸದೆ ಹೋದುದರಿಂದ ಇಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿಯ ಸಹಾಯಕಿ ಬರದೆ ಹೋದರೆ ಅಂಗನವಾಡಿ ತೆರೆಯು ವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಇಷ್ಟು ಮಾತ್ರವಲ್ಲದೆ ಇಲ್ಲಿ ತಿಂಗಳಿಗೆ ಒಂದು ಸಭೆಯು ನಡೆಯುತ್ತಿಲ್ಲ. ಎರಡು ಸ್ತ್ರೀಶಕ್ತಿ ಗುಂಪು ಇತ್ತು. ಇದೀಗ ಈ ಕಾರಣದಿಂದ ಒಂದೇ ಗುಂಪು ಕಾರ್ಯಾಚರಿಸುತ್ತಿದೆ. ಇದೀಗ ಅಂಗನ ವಾಡಿ ಸಹಾಯಕಿ ಎಲ್ಲಾ ಕೆಲಸವನ್ನು ನಿಭಾಯಿಸುತಿದ್ದಾರೆ. ಈಕೆ ಅಂಗನ ವಾಡಿಗೆ ಬಂದರೂ ಶಿಕ್ಷಕಿ ಎನ್ನುವುದನ್ನು ಮರೆತು ಮೊಬೈಲ್‌ನಲ್ಲೇ ಮುಳುಗಿರು ತ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಅಂಗನವಾಡಿ ಶಿಕ್ಷಕಿಯ ಬಗ್ಗೆ ಅನೇಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ನಗರ ಪಂಚಾಯತ್ ಅಧ್ಯಕ್ಷರು ಮತ್ತು ಸಂಬಂದ ಪಟ್ಟ ನಗರ ಪಂಚಾಯತ್ ಸದಸ್ಯರು ಲಿಖಿತವಾಗಿ ದೂರು ನೀಡಿದ್ದರು. ಆದರೂ ಈ ಶಿಕ್ಷಕಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರ ತಂದಿದೆ ಎನ್ನುತ್ತಾರೆ ಸ್ಥೃಳೀಯರು. ಈ ಅಂಗನ ವಾಡಿಯ ಎಲ್ಲಾ ಜವಾಬ್ದಾರಿಯನ್ನು ಸಹಾ ಯಕಿಯ ಮೇಲೆ ಹೊರಿಸಿ ಹೋಗುವ ಈ ಶಿಕ್ಷಕಿ ಸಂಬಳಕ್ಕೆ ಮಾತ್ರ ಇರುವಂತೆ ಕಾಣುತ್ತದೆ. ಈಕೆಯ ಬಗ್ಗೆ ಮೇಲಾಧಿಕಾ ರಿಗಳು ಕ್ರಮ ಕೈಗೊಂಡು ಈ ಅಂಗನ ವಾಡಿಗೆ ಸೂಕ್ತ ಶಿಕ್ಷಕಿಯನ್ನು ನೇಮಿಸಿದಲ್ಲಿ ಕಾರ್ನಾಡ್ ಅಂಗನವಾಡಿ ಉಳಿದೀತು ಎನ್ನುವ ಮಾತು ಕೇಳಿ ಬಂದಿದೆ.
ಮಂಗಳೂರು: ಐವರು ಸೇರಿ ಜಾಗ ಕಬಳಿಸಲು ಹುನ್ನಾರ ನಡೆಸಿರುವ ಬಗ್ಗೆ ಉಡುಪಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ತನಿಖೆಗೆ ಬಂದಿದೆ.
ಕಲ್ಯಾಣಪುರದ ನಾರಗಾಜ ಕೆದಿಲಾಯ ಎಂಬವರು ನ್ಯಾಯಾಲಯದಲ್ಲಿ ದಾಖಲಿಸಿರುವ ದೂರಿನಲ್ಲಿ ಶೋಭಾ ಕೆದ್ಲಾಯ, ವಿಶ್ವನಾಥ ರಾವ್, ರಾಮಚಂದ್ರ ನಾಯಕ್, ಬಿ.ಎಚ್. ಬದರಿನಾಥ್, ಶ್ರೀಶ ತಂತ್ರಿ ಎಂಬವರು ಶಿವಳ್ಳಿ ಗ್ರಾಮದಲ್ಲಿರುವ ತಮ್ಮ ಪಿತ್ರಾರ್ಜಿತ ಆಸ್ತಿಯ ೦.೧೦ಎಕ್ರೆ ಜಾಗವನ್ನು ನಕಲಿ ಸಹಿ ಮಾಡಿ ಕಬಳಿಸಿದ್ದೂ ಅಲ್ಲದೆ ಜಾಗವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಜಾಗದಲ್ಲಿ ತನ್ನ ಹಾಗೂ ತನ್ನ ಸಹೋದರಿಯಾರಾದ ಕಮಲಾಕ್ಷಿ, ಕಸ್ತೂರಿ ಮತ್ತು ಶೋಭಾ ಕೆದ್ಲಾಯರಿಗೆ ಪಾಲಿದೆ. ಆದರೆ ಶೋಭಾ ಕೆದ್ಲಾಯ ಮತ್ತಿತರ ನಾಲ್ವರು ಸೇರಿ ತನ್ನ ಇನ್ನಿಬ್ಬರು ಸಹೋದರಿಯರ ನಕಲಿ ಸಹಿ ಮಾಡಿ ಜಾಗ ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂದು ನಾಗರಾಜ ಕೆದ್ಲಾಯ ದೂರಿನಲ್ಲಿ ತಿಳಿಸಿದ್ದಾರೆ.
ಸುಳ್ಯ: ಪೆರುವಾಜೆ ಗ್ರಾಮದ ಮುತ್ತಪ್ಪ ರೈ ಎಂವರ ಮನೆಯಿಂದ ನಿನ್ನೆ ಹಾಡಹಗಲೇ ೮ ಪವನ್ ಚಿನ್ನ ಕಳುವಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಮುತ್ತಪ್ಪ ರೈ ಅವರ ತಾಯಿ ಕಮಲ ಕೂಲಿ ಕೆಲಸಕ್ಕೆ ಹೋಗಿದ್ದರು. ತಂಗಿ ಪ್ರೇಮಾ ಗ್ರಾಮಕರಣಿಕರ ಕಚೇರಿ ಯಲ್ಲಿ ಉದ್ಯೋಗಿಯಾಗಿದ್ದು, ಅವರೂ ಕಚೇರಿಗೆ ತೆರಳಿದ್ದರು. ಮುತ್ತಪ್ಪ ರೈ ಪತ್ನಿ ಬದಿಯಡ್ಕದಲ್ಲಿರುವ ತವರು ಮನೆಗೆ ಮಗಳೊಂದಿಗೆ ವಾರದ ಹಿಂದೆ ಯೇ ಹೋಗಿದ್ದರು. ಮಗಳಿಗೆ ಶಾಲೆ ಆರಂಭವಾಗಿದ್ದು ಅವರನ್ನು ಕರೆದು ಕೊಂಡು ಬರಲು ಮುತ್ತಪ್ಪ ರೈ ಬದಿಯ ಡ್ಕಕ್ಕೆ ಬೆಳಿಗ್ಗೆ ತೆರಳಿದ್ದರು. ಮನೆಗೆ ಬೀಗ ಹಾಕಿತ್ತು. ಬೆಳಿಗ್ಗೆ ೧೦.೩೦ರಿಮದ ಮಧ್ಯಾಹ್ನ೧ ಗಂಟೆಯ ಒಳಗೆ ಕಳವು ನಡೆದಿದೆ.
ಒಂದು ಗಂಟೆ ವೇಳೆಗೆ ಕಮಲ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು, ಕಪಾಟನ್ನೆಲ್ಲಾ ಕಳ್ಳರು ಜಾಲಾಡಿದ್ದರು. ಎಲ್ಲಾ ವಸ್ತುಗಳನ್ನು ಅಸ್ತವ್ಯಸ್ತಗೊಳಿಸಲಾಗಿತ್ತು. ಪ್ರೇಮಾರಿಗೆ ಮದುವೆ ನಿಶ್ಚಯವಾಗಿದ್ದು, ಆಕೆಗಾಗಿ ೮ ಪವನ್ ಚಿನ್ನವನ್ನು ಕೆಲವು ದಿನಗಳ ಹಿಂದೆಯಷ್ಟೇ ಖರೀದಿ ಮಾಡಲಾಗಿತ್ತು.
ಪುತ್ತೂರು: ಕೆಮ್ಮಿಂಜೆಯಲ್ಲಿ ನಾಯಿಯೊಂದರ ವಿಪರೀತ ಕಾಟದಿಂದ ಬೇಸತ್ತ ಅಲ್ಲಿನ ರಿಕ್ಷಾ ಚಾಲಕರೊಬ್ಬರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಕೆಮ್ಮಿಂಜೆಯ ರಿಕ್ಷಾ ಚಾಲಕ ರಮೇಶ್ ಎಂಬವರೇ ಪೊಲೀಸ್ ಠಾಣಾ ಮೆಟ್ಟಲೇರಿದವರಾಗಿದ್ದಾರೆ. ಕೆಮ್ಮಿಂಜೆಯಲ್ಲಿ ವ್ಯಕ್ತಿಯೊಬ್ಬರ ನಾಯಿ ಸ್ಥಳೀಯರಿಗೆ ವಿಪರೀತ ಕಾಟ ಕೊಡುತ್ತಿದ್ದು , ತನ್ನ ರಿಕ್ಷಾದ ಟರ್ಪಾಲನ್ನು ಆ ನಾಯಿಯು ಕಳೆದ ೨ ತಿಂಗಳಲ್ಲಿ ಎರಡು ಬಾರಿ ಹರಿದು ಹಾನಿ ಮಾಡಿದೆ, ಇದರಿಂದಾಗಿ ತನಗೆ ಸುಮಾರು ರೂ. ೨ ಸಾವಿರ ನಷ್ಟವಾಗಿದೆ. ಈ ಬಗ್ಗೆ ನಾಯಿಯ ಯಜಮಾನರಿಗೆ ಹೇಳಿದರೂ ಪ್ರಯೋಜನ ಆಗಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪುತ್ತೂರು: ಟಿಪ್ಪರ್ ಲಾರಿ ಮತ್ತು ಅಂಬಾಸಿಡರ್ ಕಾರೊಂದರ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿ ಪ್ರಯಾ ಣಿಸುತ್ತಿದ್ದ ನಾಲ್ವರು ಗಾಯಗೊಂಡ ಘಟನೆ ಪುತ್ತೂರು ಪೇಟೆಯ ಹೊರವಲಯದ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಸಮೀಪ ಬುಧವಾರ ಸಂಭವಿಸಿದೆ.ಈ ದುರ್ಘಟನೆಯಲ್ಲಿ ಕೆಮ್ಮಿಂಜೆ ಗ್ರಾಮದ ನೈತಾಡಿ ನಿವಾಸಿ ಭವಾನಿ , ಅವರ ಪುತ್ರಿ ತೇಜಸ್ವಿನಿ ಸೇರಿದಂತೆ ನಾಲ್ಕು ಮಂದಿ ಗಾಯಗೊಂ ಡಿರುವುದಾಗಿ ತಿಳಿದು ಬಂದಿದೆ.
ಮಂಗಳೂರು: ಅಶೋಕ್‌ನಗರದ ದೇವದಾಸ್ ಎಂಬವರ ಮನೆಯ ಬಚ್ಚಲು ಮನೆ ಹಾಗೂ ಮೇಲ್ಛಾವಣಿ ಬೆಂಕಿಯಿಂದ ಹಾನಿಗೀಡಾಗಿದೆ.
ಬುಧವಾರ ರಾತ್ರಿ ಈ ಅವಘಡ ಸಂಭವಿಸಿದ್ದು, ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ರಾತ್ರಿ ಒಲೆಗೆ ಹಾಕಿದ ಬೆಂಕಿ ಚಿಮಣಿ ಮೂಲಕ ಅಟ್ಟದಲ್ಲಿಟ್ಟಿದ್ದ ಕಟ್ಟಿಗೆಗೆ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ನಷ್ಟದ ಪ್ರಮಾಣ ಅಂದಾಜಿಸಲಾಗಿಲ್ಲ.
ಮಂಗಳೂರು: ಉಡುಪಿ ಬೀಡಿನಗುಡ್ಡೆಯ ಕುಕ್ಕಿಕಟ್ಟೆಯ ಬಳಿ ಬೈದು ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ ದೂರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬೀಡಿನ ಗುಡ್ಡೆಯ ಸಂತೋಷ ಬುಧವಾರ ಕುಕ್ಕಿಕಟ್ಟೆ ರಸ್ತೆಯ ಕೈಪು ರಮೇಶ್‌ರ ಅಂಗಡಿಗೆ ಬರುತ್ತಿರುವಾಗ ಅನ್ಸಾರ್ ಮತ್ತಿ ಅರಾಫತ್ ಎಂಬವರು ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.




ಬಾರದ ಆಂಬುಲೆನ್ಸ್: ಶವವನ್ನು ಹೊತ್ತು ನಡೆದ ಜನ
ಮಂಗಳೂರು: ಬೈಕ್‌ಗೆ ಟಿಪ್ಪರ್ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದರೂ ಪೊಲೀಸರು ಶವವನ್ನು ಒಂದು ತಾಸು ನಡು ರಸ್ತೆಯಲ್ಲೇ ಬಿಟ್ಟು ಮೊಬೈಲ್‌ನಲ್ಲಿ ಕಾಲಹರಣ ನಡೆಸಿದ ಘಟನೆ ನಿನ್ನೆ ಸಂಜೆ ನಗರದ ಕದ್ರಿ ಶಿವಭಾಗ್ ಬಳಿ ನಡೆದಿದೆ.
ಪೊಲೀಸರ ವರ್ತನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ತಾವೇ ಶವವನ್ನು ಎತ್ತಿ ಕೊಂಡು ಆಸ್ಪತ್ರೆಗೆ ಹೋಗಲು ಮುಂದಾ ಗಿದ್ದು, ಇದನ್ನು ತಡೆದ ಪೊಲೀಸರ ವಿರುದ್ಧ ತಿರುಗಿ ಬಿದ್ದ ಸಾರ್ವಜನಿಕರು ರೋಷ ಗೊಂಡರು.
ನಿನ್ನೆ ಸಂಜೆ ಶಕ್ತಿನಗರದ ವಿಕ್ಕಿ ಯಾನೆ ಈಸ್ಟ್ರಸ್ ಮೆಂಡೊನ್ಸ (೪೬) ಎಂಬವರು ಕೆಲಸ ಮುಗಿಸಿ ತಮ್ಮ ಬೈಕ್‌ನಲ್ಲಿ ಮನೆ ಕಡೆ ತೆರಳುತ್ತಿದ್ದ ವೇಳೆ ಅತೀ ವೇಗದಿಂದ ಬಂದ ಮರಳು ಸಾಗಾಟದ ಟಿಪ್ಪರ್ ಲಾರಿ ವಿಕ್ಕಿ ಅವರ ಬೈಕಿಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಟಿಪ್ಪರ್ ಅಡಿಗೆ ಬಿದ್ದ ವಿಕ್ಕಿ ಸ್ಥಳದಲ್ಲೇ ಮೃತ ಪಟ್ಟಿದ್ದರು. ಘಟನೆಯನ್ನು ಕಂಡ ಸ್ಥಳೀಯರು ಟಿಪ್ಪರನ್ನು ತಡೆ ಹಿಡಿದು ಕುಡುಕ ಚಾಲಕನನ್ನು ಹಿಡಿದರು. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೊದಲು ಚಾಲಕನನ್ನು ಪಿಸಿಆರ್ ವಾಹನದಲ್ಲಿ ಕುಳ್ಳಿರಿಸಿ ಬಳಿಕ ಮೊಬೈ ಲ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಆಂಬುಲೆನ್ಸ್ ಕರೆಸಿ ಶವವನ್ನು ಆಸ್ಪತ್ರೆಗೆ ಸಾಗಿಸುವಂತೆ ಸಾರ್ವಜನಿಕರು ಹಲವಾರು ಬಾರಿ ವಿನಂತಿ ಸಿಕೊಂಡಾಗಲೂ ಆಂಬು ಲೆನ್ಸ್ ಬರುತ್ತದೆ ಎನ್ನುವ ಒಂದೇ ಉತ್ತರ ಪೊಲೀಸರಿಂದ ಬಂತು. ಮೃತರ ಮನೆ ಮಂದಿಗೆ ವಿಷಯ ತಿಳಿಸುವಂತೆ ಪೊಲೀ ಸರನ್ನು ವಿನಂತಿಸಿದಾಗಲೂ ಅದನ್ನು ಆಮೇಲೆ ತಿಳಿಸುತ್ತೇವೆ ಎನ್ನುವುದು ಪೊಲೀಸರಿಂದ ಬರುತಿತ್ತು. ಇದರಿಂದ ಬೇಸತ್ತ ವ್ಯಕ್ತಿಯೊಬ್ಬರು ಮೃತರ ಕಿಸೆಯಿಂದ ಫೋನ್ ತೆಗೆದು ಅದರಲ್ಲಿದ್ದ ಮಾಹಿತಿ ಆಧಾರದಲ್ಲಿ ಕರೆ ಮಾಡಲು ಮುಂದಾದಾಗ ಎಚ್ಚೆತ್ತ ಪೊಲೀಸಪ್ಪ ಫೋನ್ ಪಡೆದು ತಾನೇ ಸುದ್ದಿ ಮುಟ್ಟಿಸಿದ್ದ. ಆ ಬಳಿಕ ಎಲ್ಲೋ ಇದ್ದ ಮನೆ ಮಂದಿ ಅಪಘಾತ ನಡೆದ ಸ್ಥಳಕ್ಕೆ ಬಂದಾಗಲೂ ಶವ ನಡುರಸ್ತೆಯಲ್ಲೇ ಇದ್ದವು. ಪೊಲೀಸರು ಮಾತ್ರ ತಮ್ಮಷ್ಟಕ್ಕೆ ತಾವು ಅತ್ತಿಂದಿತ್ತ ತಿರುಗುತ್ತಲೇ ಇದ್ದರು. ಶವ ಹೊಟ್ಟೆ ಸಿಗಿಯಲ್ಪಟ್ಟು ಕರುಳು ಹೊರ ಬಂದಿದ್ದರೂ ಪೊಲೀಸರು ಒಂದು ತುಂಡು ಬಟ್ಟೆಯನ್ನೂ ಶವದ ಮೇಲೆ ಹಾಕಿರಲಿಲ್ಲ. ಇದೆಲ್ಲವನ್ನು ಗಮನಿಸುತ್ತಿದ್ದ ಸಾರ್ವಜನಿಕರ ತಾಳ್ಮೆ ಎಲ್ಲೇ ಮೀರಿತ್ತು. ‘ನಿಮ್ಮ ಆಂಬುಲೆನ್ಸ್ ಜೀವ ಇದ್ದವರನ್ನು ಕರೆದುಕೊಂಡು ಹೋಗಲು ಅಂತೂ ಬರುವುದಿಲ್ಲ. ಕೊನೆಗೆ ಶವ ಸಾಗಾಟಕ್ಕೂ ಇಲ್ಲವಾಗಿದೆ. ಮಂಗಳೂರಿನ ಹೃದಯಭಾಗದಲ್ಲೇ ಘಟನೆ ನಡೆದು ತಾಸು ಕಳೆದರೂ ಒಂದು ಆಂಬುಲೆನ್ಸ್ ಕರೆಸಲು ನಿಮ್ಮಿಂದ ಸಾಧ್ಯವಾಗಿಲ್ಲ ಇನ್ನು ನೀವು ಅಪಘಾತದಲ್ಲಿ ಗಾಯಗೊಂಡವನ ಪ್ರಾಣ ಹೇಗೆ ರಕ್ಷಿಸುತ್ತೀರಿ ಎಂದರೆ ಅದು ಕನಸು ಮಾತ್ರ, ನೀವು ಅಪಘಾತದ ಸಾಕ್ಷಿಗಳನ್ನು ಗದರಿಸಲು ಮಾತ್ರ ಲಾಯಕ್ಕು ಎಂದ ಜನ ನಿಮ್ಮ ಆಂಬುಲೆನ್ಸ್ ಬರುವ ಮುನ್ನ ನಾವು ನಡೆದು ಆಸ್ಪತ್ರೆ ಸೇರುತ್ತೇವೆ ಎಂದು ಶವವನ್ನು ಎತ್ತಿಕೊಂಡು ನಡೆದೇ ಬಿಟ್ಟರು. ಇದರಿಂದ ಮುಖಭಂಗಕ್ಕೀಡಾದ ಪೊಲೀಸರು ಅಲ್ಲೇ ಪಕ್ಕದಲ್ಲಿ ನಿಂತ್ತಿದ್ದ ಪಿಕಪ್ ವಾಹನದಲ್ಲಿ ದನ ಸಾಗಾಟ ಮಾಡುವಂತೆ ಶವ ಸಾಗಿಸಲು ಮುಂದಾದರು ಇದು ಸಾರ್ವಜನಿಕರ ಮತ್ತಷ್ಟು ಕೋಪಕ್ಕೆ ಕಾರಣವಾಗಿತ್ತು. ಶವವನ್ನು ಪಿಕಪಲ್ಲೇ ಸಾಗಿಸ ಬೇಕು ಎಂದು ಕದ್ರಿ ಠಾಣಾ ಎಸ್ ಸಂದೇಶ್ ಹಠ ಹಿಡಿದಾಗ ತಿರುಗಿ ಬಿದ್ದ ಸಾರ್ವಜನಿಕರು ಸಂದೇಶ್ ಜೊತೆ ಮಾತಿನ ಚಕಮಕಿ ನಡೆಸಿದರು. ಅಂತೂ ಇಂತೂ ಪೊಲೀಸ್ ಇಲಾಖೆಯ ಆಂಬುಲೆನ್ಸ್ ಸ್ಥಳಕ್ಕೆ ಬಂದಾಗ ಬರೊಬ್ಬರಿ ಒಂದು ತಾಸು ಕಳೆದಿತ್ತು.

ಕಿರಿಕ್ ಸಂದೇಶ
ಅಪಘಾತ ನಡೆದ ಸ್ಥಳದಲ್ಲಿ ಕದ್ರಿ ಟ್ರಾಫಿಕ್ ಎಸ್.ಐ ಸಂದೇಶ್ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಯಿತು. ಒಂದು ಕಡೆ ಆಂಬುಲೆನ್ಸ್ ಕರೆಸದೇ ಶವವನ್ನು ತಾಸುಗಟ್ಟಲೇ ರಸ್ತೆಯಲ್ಲೇ ಉಳಿಸಿದರೆ ಇನ್ನೊಂದು ಕಡೆ ಶವವನ್ನು ಪಿಕಪ್ ವಾಹನದಲ್ಲಿ ತುಂಬಲು ಮುಂದಾಗಿದ್ದ. ಅಲ್ಲದೆ ಟ್ರಾಫಿಕ್ ಕಂಟ್ರೋಲ್ ಮಾಡುವ ಬದಲು ಮೊಬೈಲ್‌ನಲ್ಲಿ ಬ್ಯುಸಿಯೋ ಬ್ಯುಸಿ. ಇವರ ಜೊತೆಗೆ ಇವರ ಸಿಬ್ಬಂದಿಯೂ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದರು. ಈ ಕಾರಣದಿಂದ ಗೊಂದಲ ಉಂಟಾ ಗಿತ್ತು. ಮಂಗಳೂರಿನಲ್ಲಿ ದಿನಕ್ಕೊಂದು ಅಪಘಾತ ನಡೆಯುತ್ತಿದೆ. ಹೀಗಿದ್ದರೂ ಶವವನ್ನು ನಿಮಿಷದೊಳಗೆ ಸಾಗಿಸಲಾಗುತ್ತದೆ, ಅಲ್ಲದೆ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಟ್ರಾಫಿಕ್ ಕಂಟ್ರೋಲ್ ಮಾಡಲಾಗುತ್ತಿದೆ. ಆದರೆ ಸಂದೇಶ್ ಅವರ ವರ್ತನೆಯಿಂದಾಗಿ ನಿನ್ನೆ ಗೊಂದಲ ಉಂಟಾಗಿ ಜನರು ಆಕ್ರೋಶ ಗೊಳ್ಳುವಂತೆ ಮಾಡಿತು.

ಪೊಲೀಸರನ್ನು ಕಂಡು ಮಾಲಕನಿಗೆ ದರ್ಶನ!
ಮಂಗಳೂರು: ಎಸಿಪಿ ಜಗನ್ನಾಥ್ ನೇತೃತ್ವದ ತಂಡ ಹೊಗೆ ಬಝಾರ್‌ನಲ್ಲಿರುವ ಮನೆಯೊಂದಕ್ಕೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ ಭಾರೀ ಪ್ರಮಾಣದ ಸೀಮೆಎಣ್ಣೆಯನ್ನು ವಶಕ್ಕೆ ತೆಗೆದುಕೊಂಡಿದ್ದು, ಈ ಸಂದರ್ಭ ಪೊಲೀಸರನ್ನು ಕಂಡ ಎಣ್ಣೆ ಮಾಲಕ ದರ್ಶನ ಬಂದಂತೆ ನಟಿಸಿದ ಘಟನೆಯೂ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ನಿನ್ನೆ ಬೆಳಿಗ್ಗೆಯೇ ಹೊಗೆಬಝಾರ್‌ನಲ್ಲಿರುವ ದಾಮೋದರ್ ಕರ್ಕೇರ ಎಂಬವರಿಗೆ ಸೇರಿದ ಶೆಡ್‌ಗೆ ದಾಳಿ ನಡೆಸಿದೆ. ಈ ಸಂದರ್ಭ ಸರಕಾರದಿಂದ ಸಬ್ಸಿಡಿಯಲ್ಲಿ ಬರುವ ಭಾರೀ ಪ್ರಮಾಣದ ನೀಲಿ ಸೀಮೆಎಣ್ಣೆ ಪತ್ತೆಯಾಗಿದೆ. ಪೊಲೀಸರನ್ನು ಕಂಡ ಕೂಡಲೇ ದಾಮೋದರ್ ಮೈಮೇಲೆ ದರ್ಶನ ಬಂದಂತೆ ನಟಿಸಿದ್ದರು ಎನ್ನಲಾಗಿದೆ.
ಸಂಜೆಯವರೆಗೂ ಕಾರ್ಯಾಚರಣೆ ಮುಂದುವರಿಸಿದ ಪೊಲೀಸ್ ತಂಡ ೨೨೦ ಲೀಟರಿನ ನೀಲಿ ಹಾಗೂ ಕಬ್ಬಿಣದ ೩೯ ಡ್ರಮ್ ಮತ್ತು ೩೫ ಲೀಟರಿನ ೧೩ ಡ್ರಮ್ ಸೀಮೆಎಣ್ಣೆಯ ಸಹಿತ ಆರೋಪಿಯನ್ನೂ ವಶಕ್ಕೆ ತೆಗೆದುಕೊಂಡು ಪಾಂಡೇಶ್ವರ ಠಾಣೆಗೆ ಒಪ್ಪಿಸಿದ್ದಾರೆ.
ಈ ಸಂದರ್ಭ ದರ್ಶನದ ಬಗ್ಗೆ ಪೊಲೀಸರು ಕೇಳಿದಾಗ ತಾನು ಹೆದರಿ ಆ ರೀತಿ ವರ್ತಿಸಿದ್ದಾಗಿ ಆರೋಪಿ ದಾಮೋದರ್ ತಿಳಿಸಿದ್ದಾರೆ ಎನ್ನಲಾಗಿದೆ. ಮೀನುಗಾರಿಕೆಗೆ ನಿಲ್ಲಿಸಲಾಗಿರುವ ಕಾರಣ ಬೋಟು ಮಾಲಕರು ಸೀಮೆ ಎಣ್ಣೆಯನ್ನು ತಮ್ಮ ಶೆಡ್‌ನಲ್ಲಿ ದಾಸ್ತಾನಿರಿಸಿದ್ದಾರೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳೂ ತಮ್ಮ ಬಳಿ ಇವೆ. ಕಳೆದ ಬಾರಿಯೂ ಇದೇ ರೀತಿ ಎಸಿಯವರು ದಾಳಿ ನಡೆಸಿದ್ದು ದಾಖಲೆಗಳನ್ನು ಪರಿಗಣಿಸಿ ವಾಪಸ್ ನೀಡಿದ್ದರು ಎಂದು ಸ್ಥಳದಲ್ಲಿದ್ದ ಕೆಲಸಗಾರರು ಪತ್ರಿಕೆಗೆ ತಿಳಿಸಿದ್ದಾರೆ.
ನಾವು ಪ್ರತ್ಯೇಕ: ದಸಂಸ ಭೀಮವಾದ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ
ಮಂಗಳೂರು: ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮೂರು ಭಾಗವಾಗಿ ಪರಿವರ್ತನೆಗೊಂಡಿಲ್ಲ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚಂದು. ಎಲ್ ಅವರು ಸ್ಪಷ್ಟ ಪಡಿಸಿದ್ದಾರೆ. ಆದರೆ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ದಲಿತ ಸಂಘರ್ಷ ಸಮಿತಿ (ಭೀಮಾವಾದ)ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ. ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಳೆದ ಮೂರು ವರುಷದಲ್ಲಿ ದಲಿತ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ್ ವಾದ) ದಲಿತ ಸಂಘರ್ಷ ಸಮಿತಿ (ಭೀಮವಾದ) ಮತ್ತು ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟವಾಗಿ ವಿಭಜನೆಗೊಂಡಿರುವ ವರದಿ ಪತ್ರಿಕೆಯಲ್ಲಿ ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಜಿಲ್ಲಾ ಸಂಚಾಲಕ ಚಂದು ಎಲ್, ಐದು ವರ್ಷದ ಹಿಂದೆ ದಲಿತ ಸಂಘರ್ಷ ಸಮಿತಿ (ಭೀಮವಾದ) ನಿರ್ಮಾಣಗೊಂಡಿತ್ತು. ಆ ಬಳಿಕ ದಲಿತ ಸಂಘರ್ಷ ಸಮಿತಿ (ಡಾ. ಅಂಬೇಡ್ಕರ್ ವಾದ) ಹುಟ್ಟಿಕೊಂಡಿರುವುದು ನಿಜವಾದರೂ ಅದೀಗ ಭೀಮವಾದದ ಜೊತೆ ವಿಲೀನಗೊಂಡಿದೆ. ದಲಿತ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ್ ವಾದ)ಕ್ಕೆ ಅಸ್ತಿತ್ವ ಇಲ್ಲ ಎಂದರು. ಅಲ್ಲದೆ ದಲಿತ ಸಂಘರ್ಷ ಸಮಿತಿ ಎನ್ನುವುದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಅಂಗ ಸಂಸ್ಥೆಯೇ ಆಗಿದೆ. ಹೀಗಾಗಿ ಪತ್ರಿಕೆಯಲ್ಲಿ ಬಂದಿರುವ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಚಂದು ಎಲ್. ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭೀಮವಾದದ ರಾಜ್ಯ ಸಮಿತಿ ಸದಸ್ಯರಾದ ಕೇಶವ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮತ್ತು ದಲಿತ ಸಂಘರ್ಷ ಸಮಿತಿ (ಭೀಮವಾದ) ಪ್ರತ್ಯೇಕ ಸಂಘಟನೆಯಾಗಿದ್ದು, ಈ ಹಿಂದೆ ಒಂದಾಗಿದ್ದರೂ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಹೊರ ಬಂದಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ. ಅದೇ ರೀತಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದ ಅಂಗ ಸಂಸ್ಥೆ ಎನ್ನಲಾಗುತ್ತಿರುವ ದಲಿತ ವಿದ್ಯಾರ್ಥಿ ಒಕ್ಕೂಟ ಪ್ರತ್ಯೇಕವಾಗಿದ್ದು, ಅದನ್ನು ಹೊರತು ಪಡಿಸಿ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು ಇವರು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಹೇಳಿಕೆ ಖಂಡಿಸಿ ನಮ್ಮದು ಪ್ರತ್ಯೇಕ ಸಂಘಟನೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಈ ಹಿಂದೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಯಲ್ಲಿ ಒಂದಾಗಿದ್ದರೂ ಬಳಿಕ ಅಲ್ಲಿನ ಅವ್ಯವಸ್ಥೆಯಿಂದ ನೊಂದು ಹೊರ ಬಂದು ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ ರಚಿಸಿದ್ದು, ಇದು ದಲಿತ ಸಂಘರ್ಷ ಸಮಿತಿಯ ಯಾವುದೇ ಸಂಘಟನೆಯ ಅಡಿಯಲ್ಲಿರದೇ ಸ್ವಾತಂತ್ರ ಸಂಘಟನೆಯಾಗಿದೆ ಎಂದು ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಜಗದೀಶ್ ಪಾಂಡೇಶ್ವರ ಲಿಖಿತವಾಗಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ತಮ್ಮ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳು ಸಾಬೀತಾದರೆ ತಾವು ಅಣ್ಣಾ ಹಜಾರೆತಂಡವನ್ನು ತೊರೆಯಲು ಸಿದ್ಧ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಮೇಲಿನ ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದರು.
ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ದ ಯಾವುದೇ ಪೂರ್ವಾಗ್ರಹಪೀಡಿತ ವರದಿ ನೀಡಿರಲಿಲ್ಲ.
ಬಿಜೆಪಿಯ ಹಿರಿಯ ಮುಖಂಡ ಅಡ್ವಾಣಿ ಹಾಗೂ ಅನಂತಕುಮಾರ್ ಆದೇಶದಂತೆ ವರದಿ ಸಿದ್ದಪಡಿಸಲಿಲ್ಲ. ಈ ವರದಿಯಲ್ಲಿ ಬಿಜೆಪಿ ಹಿರಿಯ ನಾಯಕರು, ಯಡಿಯೂರಪ್ಪ ಹೆಸರು ಸೇರಿಸುವಂತೆ ತಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಹಾಕಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ೨೦೧೦ ಜೂನ್‌ನಲ್ಲಿ ಅಡ್ವಾಣಿ ಅವರೊಂದಿಗೆ ಮಾತುಕತೆ ನಡೆಸಿದ್ದು ಹೊರತುಪಡಿಸಿದರೆ ಬಿಜೆಪಿಯ ಯಾವ ನಾಯಕರ ಜತೆಯೂ ಯಾವ ವಿಷಯ ಕುರಿತು ಚರ್ಚೆ ನಡೆಸಿಲ್ಲ. ಈ ಕುರಿತು ಬಿಜೆಪಿಯ ರಾಜ್ಯ ನಾಯಕರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದರು.
ಲಂಚ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿದ್ದ ಬಿಜೆಪಿ ಶಾಸಕ ಸಂಪಂಗಿಗೆ ಹೈಕೋರ್ಟ್ ಜಾಮೀನು ನೀಡಿರುವ ಕುರಿತು ಪ್ರತಿಕ್ರಿಯಿಸಿದ ಹೆಗ್ಡೆ, ಕಾನೂನು ಹೋರಾಟದಲ್ಲಿ ಇವೆಲ್ಲ ಸಹಜ. ಸಂಪಂಗಿಗೆ ಮೂರೂವರೆ ವರ್ಷ ಶಿಕ್ಷೆ ವಿಧಿಸಲಾಗಿದೆ. ಯಾವುದೇ ಆರೋಪಿಗೆ ೭ ವರ್ಷ ಇಲ್ಲವೇ ಜೀವಾವಧಿ ಶಿಕ್ಷೆಯಾದರೆ ಮಾತ್ರ ಜಾಮೀನು ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇದೊಂದು ಸಹಜ ಪ್ರಕ್ರಿಯೆ ಎಂದಷ್ಟೇ ಹೇಳಿದರು.

ಮಂಗಳೂರಿಗರಿಗೆ ಮನಪಾ ಕೊಡುಗೆ!
ಮಂಗಳೂರು: ‘ಮುಂಗಾರು ಕರಾವಳಿ ಜಿಲ್ಲೆಗಳನ್ನು ಪ್ರವೇಶಿಸಿದೆ. ಈ ಬಾರಿ ಸ್ವಲ್ಪ ವಿಳಂಬವಾಗಿ ಮಳೆ ಆರಂಭವಾದರೂ ಭಾರೀ ಮಳೆ ಬೀಳುವ ಸಂಭವವನ್ನು ಹವಾಮಾನ ಇಲಾಖೆ ಈಗಾಗಲೇ ವ್ಯಕ್ತಪಡಿಸಿದೆ. ಮಳೆಗಾಲಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನು ಮನಪಾ ಮಾಡದೆ ಮುಂದೆ ಅನಾಹುತ ಎದು ರಾದಾಗ ಕೈ-ಕಾಲು ಬಡಿಯುವುದು ಪ್ರತೀ ವರ್ಷ ನಡೆದುಬಂದ ಸಂಪ್ರದಾಯ. ಈ ಬಾರಿಯೂ ನಗರದ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡಿದ್ದು, ಮಳೆ ಜೋರಾಗಿ ಸುರಿದರೆ ರಸ್ತೆ ಮುಳುಗುವ ಭೀತಿ ಎದುರಾಗಿದೆ. ಇಷ್ಟೇ ಅಲ್ಲದೆ ಪ್ರತೀ ವರ್ಷ ಮಂಗಳೂರಿಗರನ್ನು ಕಾಡುವ ಮಲೇರಿಯಾ ಸಹಿತ ನಾನಾ ನಮೂನೆಯ ಜ್ವರಗಳು ಈ ಬಾರಿ ವೇಗವಾಗಿ ಪಸರಿಸುತ್ತಿದ್ದು, ಜನರಲ್ಲಿ ನಡುಕ ಹುಟ್ಟಿಸಿದೆ. ಮಂಗಳೂರಿಗೂ-ಮಲೇರಿಯಾಕ್ಕೂ ಎಡೆಬಿಡದ ನಂಟು. ನಗರದ ಬಂದರು, ಕಾರ್‌ಸ್ಟ್ರೀಟ್, ಕದ್ರಿ, ಬಿಜೈ, ಕೊಟ್ಟಾರ ಪರಿಸರದಲ್ಲಿ ಮಲೇರಿಯಾ ಪೀಡಿತ ಪ್ರದೇಶಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಲ್ಲಿನ ಜನರು ಪ್ರತೀ ವರ್ಷ ಮಳೆಗಾಲದಲ್ಲಿ ಮಲೇರಿಯಾ ರೋಗಕ್ಕೆ ತುತ್ತಾಗುತ್ತಾರೆ. ವಾರಗಟ್ಟಲೆ ಆಸ್ಪತ್ರೆಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಹೀಗಿದ್ದೂ ವರ್ಷಾನುವರ್ಷ ಮಲೇರಿಯಾ ಪ್ರಕರಣ ಪುನರಾವರ್ತನೆಯಾಗದಂತೆ ಮನಪಾ ಆರೋಗ್ಯ ಇಲಾಖೆ ಮುಂಜಾಗ್ರತೆ ವಹಿಸುತ್ತಿಲ್ಲ. ಇದರ ಪರಿಣಾಮ ಪ್ರತೀವರ್ಷ ನೂರಾರು ಸಂಖ್ಯೆಯಲ್ಲಿ ಮಲೇರಿಯಾ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಲೇ ಇರುತ್ತಾರೆ.
ಮಲೇರಿಯಾ ಮಾತ್ರವಲ್ಲದೆ ಡೆಂಗ್ಯೂ, ಚಿಕುನ್‌ಗುನ್ಯಾದಂಥ ಮಾರಕ ರೋಗಗಳಿಗೂ ದಕ್ಷಿಣ ಕನ್ನಡ ಜಿಲ್ಲೆ ತವರೂರಾಗಿದೆ. ಹೆಚ್ಚಾಗಿ ಉತ್ತರ ಕರ್ನಾಟಕದ ಕಾರ್ಮಿಕರು ವಾಸವಿರುವ ಕಡೆ ಇದು ಸಾಂಕ್ರಾಮಿಕ ರೋಗಗಳಂತೆ ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ. ಇಲ್ಲಿ ಮನಪಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೇ ಇರುವುದು ಜನರ ಪ್ರಾಣಕ್ಕೆ ಕುತ್ತು ತರುತ್ತಿದೆ.
ಕಳೆದ ಬಾರಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನಾನಾ ಕಡೆ ಮಲೇರಿಯಾ, ಡೆಂಗ್ಯೂ ರೋಗ ಲಕ್ಷಣಗಳು ಪತ್ತೆಯಾಗಿತ್ತು. ಇಷ್ಟೇ ಅಲ್ಲದೆ ಹೆಚ್೧ಎನ್೧, ಮಂಗನ ಖಾಯಿಲೆ, ಇಲಿಜ್ವರದ ಪ್ರಕರಣಗಳೂ ವರದಿಯಾಗಿತ್ತು. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಇಂಥ ನೂರಾರು ಪ್ರಕರಣ ಗಳು ವರದಿಯಾಗಿದ್ದರೆ, ಪುತ್ತೂರು, ಸುಳ್ಯ, ಮಾಣಿ, ಸಂಪಾಜೆ, ಉಪ್ಪಿನಂಗಡಿ ಪರಿಸರದಲ್ಲಿ ಪ್ರತಿನಿತ್ಯ ನೂರಾರು ಜನರು ಖಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದುದೂ ನಡೆಯುತ್ತಿತ್ತು. ಇಷ್ಟೆಲ್ಲ ಗೊತ್ತಿದ್ದರೂ ಆರೋಗ್ಯ ಇಲಾಖೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಮಳೆಗಾಲ ಆರಂಭಕ್ಕೆ ಕಾದು ಕುಳಿತಿರುವುದು ಸೋಜಿಗವೆನ್ನುತ್ತಾರೆ ನಗರವಾಸಿಗಳು.
ಮಂಗಳೂರಲ್ಲಿ ಮಳೆಗಾಲ ಆರಂಭವೆಂದರೆ ನಾನಾ ರೀತಿಯ ಜ್ವರಗಳು ಆರಂಭ ಎಂದೇ ಅರ್ಥ. ಪ್ರತೀ ವರ್ಷ ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಭಾಗಗಳಲ್ಲೂ ನಾನಾ ನಮೂನೆಯ ಜ್ವರ ಲಕ್ಷಣಗಳು ಕಾಣಿಸಿ ಕೊಳ್ಳುತ್ತವೆ. ಮಾರಕ ರೋಗಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ. ಈ ಬಾರಿಯೂ ಮಳೆ ಆರಂಭಗೊಂಡಿದ್ದು, ಮತ್ತಷ್ಟು ಮಂದಿ ಮಾರಕ ಜ್ವರಗಳಿಗೆ ಬಲಿಯಾಗುವ ಮುನ್ನ ಸಂಬಂಧಪಟ್ಟ ಮನಪಾ, ಆರೋಗ್ಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾದ್ದು ಸದ್ಯದ ಅಗತ್ಯವೂ ಆಗಿದೆ.
ಮನಪಾ ಎಚ್ಚೆತ್ತುಕೊಳ್ಳಲಿ
ಮಲೇರಿಯಾ ನಿಯಂತ್ರಣಕ್ಕಾಗಿ ಮನಪಾ ಪ್ರಯೋಗಿಸುವ ಮೊದಲ ಅಸ್ತ್ರವೆಂದರೆ ಫಾಗಿಂಗ್. ಮಲೇರಿಯಾ ಪೀಡಿತ ಪ್ರದೇಶಗಳ ಕಟ್ಟಡ, ಜನವಸತಿ ಸ್ಥಳಗಳಲ್ಲಿ ಫಾಗಿಂಗ್ ನಡೆಸುವ ಮೂಲಕ ಮಲೇರಿಯಾ ರೋಗ ಹರಡುವ ಸೊಳ್ಳೆಗಳನ್ನು ನಿಯಂತ್ರಿಸಲಾಗುತ್ತದೆ. ಪ್ರತೀವರ್ಷ ಮನಪಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಲೇರಿಯಾ ನಿಯಂತ್ರಿಸಿ ಎಂಬ ಸ್ಟಿಕ್ಕರ್, ಕರಪತ್ರ ಹಿಡಿದುಕೊಂಡು ಮನೆ-ಮನೆ, ಕಟ್ಟಡಗಳಿಗೆ ಭೇಟಿ ಕೊಡುತ್ತಾರೆ. ಆದರೆ ಈ ಬಾರಿ ಆ ಕೆಲಸವೂ ಸಮರ್ಪಕವಾಗಿ ನಡೆದಿಲ್ಲ ಎನ್ನುತ್ತಾರೆ ಸಾರ್ವಜನಿಕರು. ಕಾರ್ಪೊರೇಟರ್‌ಗಳು ಬಿಳಿ ಬಟ್ಟೆ ಧರಿಸಿ ಗಾಢನಿದ್ದೆಗೆ ಶರಣಾಗಿದ್ದರೆ, ಮಲೇರಿಯಾ ನಿಯಂತ್ರಿಸುವ ಪ್ರಾಥಮಿಕ ಹಂತದಲ್ಲೇ ಎಡವಿರುವ ಮನಪಾ ಆರೋಗ್ಯ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂಬ ಅಭಿಪ್ರಾಯ ಪ್ರeವಂತ ನಾಗರಿಕರದ್ದು.

ಪುತ್ತೂರು: ಪುತ್ತೂರು ಪೇಟೆಯ ಹೊರವಲಯದ ಮರೀಲ್ ಪ್ರದೇಶದಲ್ಲಿನ ಮನೆಯ ಸುತ್ತಮುತ್ತ ಕಳೆದ ಒಂದು ತಿಂಗಳಿನಿಂದ ಕಪ್ಪುಬಣ್ಣದ ಹುಡಿ ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ ಪರಿಸರದ ಮಂದಿಗೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಜಿಲ್ಲಾಧಿಕಾರಿಗಳು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದಾರೆ. ಸ್ಥಳೀಯ ಫ್ಯಾಕ್ಟರಿಯೊಂದರಿಂದ ಬರುವ ತ್ಯಾಜ್ಯ ಇದಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕೆಮ್ಮಿಂಜೆ ಗ್ರಾಮದ ಕೂರ್ನಡ್ಕದಲ್ಲಿ ಕ್ಯಾಂಪ್ಕೋ ಚಾಕೋಲೇಟ್ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಗೆ ಸಮೀಪದ ಮರೀಲ್ ಪ್ರದೇಶದಲ್ಲಿ ಸುಮಾರು ೧೦ ಮನೆಗಳಿವೆ. ಆದರೆ ಈ ತನಕ ಯಾವುದೇ ರೀತಿಯ ತೊಂದರೆ ಇರಲಿಲ್ಲ. ಈ ಪ್ರದೇಶದಲ್ಲಿ ಕಳೆದ ಸುಮಾರು ಒಂದು ತಿಂಗಳಿನಿಂದ ಮನೆಯ ಸುತ್ತಮುತ್ತ ಹಾಗೂ ಮನೆಯ ಆವರಣದಲ್ಲಿ ಕಪ್ಪು ಬಣ್ಣದ ಹುಡಿ ಬೀಳುತ್ತಿದೆ, ಕಾರ್ಖಾನೆಯಿಂದ ಹೊರಬರುವ ಹೊಗೆಯೇ ಇದಕ್ಕೆ ಕಾರಣವಾಗಿರಬೇಕು ಎಂದು ಸ್ಥಳೀಯರು ಆರೋಪಿಸಿದ್ದಾರೆ,
ಈ ಹುಡಿಯಿಂದಾಗಿ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ. ಬಟ್ಟೆ ಒಣಗಿಸಲು ಹಾಕಿದರೆ ಇಡಿ ಬಟ್ಟೆಯೇ ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಸಂಜೆ ವೇಳೆ ವಿಪರೀತ ಹೊಗೆ ಸಮಸ್ಯೆ ಕಾಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಂಗಳೂರು: ಕ್ಯಾನ್ಸರ್ ರೋಗ ಹೆತ್ತ ತಾಯಿಯ ಜೀವ ಹಿಂಡುತ್ತಿದ್ದರೆ, ಮಗ ಔಷಧೋಪಚಾರಕ್ಕೆ ಹಣ ಹೊಂದಿಸಲಾರದೆ ಪರದಾಡುತ್ತಿದ್ದಾನೆ. ಸ್ತನ ಕ್ಯಾನ್ಸರ್ ಪೀಡಿತರಾಗಿ ಒಂದು ಸ್ತನ ಕಳೆದುಕೊಂಡಿರುವ ಹೆತ್ತವಳ ಸೇವೆ ಮಾಡುತ್ತಿರುವ ಮಗ ಪತ್ರಿಕೆಯ ಓದು ಗರೆದುರು ದೈನ್ಯತೆಯಿಂದ ಬಂದಿದ್ದಾನೆ. ಕರುಣೆಯ ಕೈಗಳು ಬಡಕುಟುಂಬಕ್ಕೆ ನೆರವಾಗುತ್ತದೆ ಎಂಬ ವಿಶ್ವಾಸ ದೊಂದಿಗೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಿವಾಸಿ ಲಕ್ಷ್ಮೀ ರಮೇಶ್ ದೇಶ್ ಬಹರಾಲಿ ಅವರು ಕಳೆದ ಐದು ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. ಸ್ತನಗಳಲ್ಲಿ ತಡೆಯಲಸಾಧ್ಯ ನೋವು, ಗಂಟಿನಂಥ ರಚನೆ ಕಂಡುಬಂದಾಗ ಕುಮಟಾದ ವೈದ್ಯರಲ್ಲಿ ಪರೀಕ್ಷೆ ಮಾಡಿಸಿದರು. ಅವರು ನೀವು ಮಣಿಪಾಲದ ಆಸ್ಪತ್ರೆಯಲ್ಲಿ ತೋರಿಸಿ ಎಂದು ಸಲಹೆ ನೀಡಿದಂತೆ ಅಲ್ಲಿ ಪರೀಕ್ಷೆ ಮಾಡಿಸಿದ ವೇಳೆ ಸ್ತನಗಳ ಕ್ಯಾನ್ಸರ್ ರೋಗ ಪತ್ತೆಯಾಗಿತ್ತು. ವೈದ್ಯರ ಸಲಹೆಯಂತೆ ಕ್ಯಾನ್ಸರ್ ಪೀಡಿತ ಒಂದು ಸ್ತನವನ್ನು ಕತ್ತರಿಸಿ ತೆಗೆಯ ಲಾಗಿದೆ. ಇದಕ್ಕಾಗಿ ಇದ್ದ ಚಿನ್ನವನ್ನೆಲ್ಲ ಮಾರಿ ಹಣ ಖರ್ಚು ಮಾಡಲಾಗಿದೆ.
ಲಕ್ಷ್ಮಿ ಅವರಿಗೆ ಇಬ್ಬರು ಗಂಡು ಮಕ್ಕಳು ಇದ್ದರೂ ಹಿರಿಯಾತ ಪ್ರತ್ಯೇಕ ವಾಸಿಸುತ್ತಿದ್ದಾನೆ. ತಾಯಿಯ ಚಿಕಿತ್ಸೆಗಾಗಿ ಕಿರಿಯ ಮಗ ಲೋಕೇಶನೇ ಹಣ ಹೊಂದಿಸಬೇಕಾಗಿದೆ. ತಾಯಿಯ ಚಿನ್ನಾಭರಣದ ಜೊತೆ ಅಲ್ಲಲ್ಲಿ ಕೈ ಸಾಲ ಮಾಡಿರುವ ಲೋಕೇಶ್ ದಿನದಲ್ಲಿ ಒಂದು ಹೊತ್ತು ಹೊಟ್ಟೆ ತುಂಬ ಉಣ್ಣುವುದಕ್ಕೂ ಕಷ್ಟ ಪಡಬೇಕಾಗಿದೆ. ಪ್ರತಿನಿತ್ಯ ತಾಯಿಯ ರೇಡಿಯೇಷನ್, ಇಂಜೆಕ್ಷನ್, ಔಷಧಿ ಖರ್ಚು ಎಂದು ಸಾವಿರಾರು ರೂ. ಖರ್ಚು ಮಾಡಬೇಕಿ ರುವ ಕಾರಣ ಲೋಕೇಶ್ ಅಸಹಾಯ ಕರಾಗಿದ್ದಾರೆ. ತಮ್ಮ ತಾಯಿಯ ಪ್ರಾಣ ವನ್ನು ಉಳಿಸಲು ಪಣತೊಟ್ಟಿರುವ ಲೋಕೇಶ್ ಪತ್ರಿಕೆಯ ಓದುಗರು, ಸಹೃದಯಿ ದಾನಿಗಳ ಎದುರು ಸಹಾಯಕ್ಕಾಗಿ ಕೈಚಾಚಿದ್ದಾರೆ.
ಲಕ್ಷ್ಮೀ ರಮೇಶ್‌ದೇಶ್ ಬಹರಾಲಿ ಅವರ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಲು ಇಚ್ಛಿಸುವವರು ಕಂಕನಾ ಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಲ್ಲಿರುವ ಅವರನ್ನು ಖುದ್ದು ಭೇಟಿ ಮಾಡಬಹುದು. ಹೆಚ್ಚಿನ ಮಾಹಿತಿ ಗಾಗಿ ಲೋಕೇಶರ ಮೊಬೈಲ್ ಫೋನ್ ಸಂಖ್ಯೆ ೯೯೦೦೯೦೬೫೯೭ ಅನ್ನು ಸಂಪರ್ಕಿಸಲು ಕೋರಲಾಗಿದೆ.
ಲಕ್ಷ್ಮಿ ಅವರ ಖಾಯಂ ವಿಳಾಸವು ಇಲ್ಲಿದೆ.
ಲಕ್ಷ್ಮಿ ರಮೇಶ್‌ದೇಶ್ ಬಹರಾಲಿ ಕುಮಟಾ ಕಾಲನಿ, ಉತ್ತರ ಕನ್ನಡ
ಜಯಕಿರಣ ಮನವಿ
ಸ್ತನಕ್ಯಾನ್ಸರ್ ಪೀಡಿತ ಲಕ್ಷ್ಮೀ ರಮೇಶ್‌ದೇಶ್ ಬಹರಾಲಿ ಅವರ ಚಿಕಿತ್ಸೆಗೆ ಆರ್ಥಿಕ ನೆರವನ್ನು ನೀಡುವಂತೆ ಪತ್ರಿಕೆಯ ಓದುಗರು, ಸಹೃದಯಿ ದಾನಿಗಳು ಮತ್ತು ಸಂಘ-ಸಂಸ್ಥೆಗಳಲ್ಲಿ ‘ಜಯಕಿರಣ ಪತ್ರಿಕೆ ಮನವಿ ಮಾಡಿದೆ.
ಕಾಟಿಪಳ್ಳ ಕೃಷ್ಣಾಪುರ ಪರಿಸರದಲ್ಲಿ ಹಿಂದೂಗಳ ಮೇಲೆ ಅಪ್ರಚೋದಿ ತವಾಗಿ ಹಲ್ಲೆ ನಡೆಯುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಈ ಬಗ್ಗೆ ನೊಂದವರೊಬ್ಬರು ಚಾವಡಿ ವಿಭಾಗದಲ್ಲಿ ವಿಷಾದವನ್ನು ವ್ಯಕ್ತಪಡಿಸಿ ಪತ್ರ ಬರೆದಿದ್ದರು.
ಒಂದು ಪ್ರದೇಶದಲ್ಲಿ ಯಾವಾಗಲೊಮ್ಮೆ ಅಹಿತಕರ ಘಟನೆ ನಡೆಯು ವುದು ಸ್ವಾಭಾವಿಕ ಎಂದು ಭಾವಿಸಬಹುದಾಗಿದೆ. ಜನರು ಇದ್ದಲ್ಲಿ ಏನಾದರೂ ಒಂದು ತಂಟೆ ತಕರಾರು ಇದ್ದೇ ಇರುತ್ತದೆ. ಆದರೆ ಒಂದು ಪ್ರದೇಶದಲ್ಲಿ ಒಂದೇ ಕೋಮಿನವರು ಬಹುಸಂಖ್ಯಾತರಾಗಿರುವಲ್ಲಿ ಅಲ್ಪಸಂಖ್ಯಾತರಾಗಿರು ವವರ ಮೇಲೆ ಕ್ರಮಬದ್ಧವಾಗಿ ಹಲ್ಲೆ ನಡೆಯುತ್ತದೆ ಎಂದು ಹೇಳಿದರೆ ಅದರಲ್ಲಿ ಷಡ್ಯಂತ್ರ ಅಡಗಿದೆ ಎಂದು ಹೇಳದೆ ಬೇರೆ ವಿಧಿಯಿಲ್ಲ. ಇಲ್ಲಿ ಕಾನೂನು ಸಮಸ್ಯೆಯಿಂದ ಹೀಗೆ ಆಗಿದೆ ಎಂದು ಸಮರ್ಥಿಸುವುದಾದರೆ ಬಹುಸಂಖ್ಯಾ ತರ ನಡುವೆ ಅಥವಾ ಬಹುಸಂಖ್ಯಾತರ ಮೇಲೆ ಯಾವುದೇ ಹಲ್ಲೆ ಯಾಕೆ ನಡೆದಿಲ್ಲ? ಇದೊಂದುತರ ದ.ಕ. ಜಿಲ್ಲೆಯ ಕಾಶ್ಮೀರದಂತಿದೆ.
ಕೆಲವು ಬ್ರಾಹ್ಮಣ ಮುಖಂಡರು ಕೆಳ ಜಾತಿಯ ಯುವಕರನ್ನು ಕೋಮು ಗಲಭೆಗೆ ಪ್ರಚೋದಿಸುತ್ತಾರೆ ಎಂದು ಹಿಂದೂ ಸಂಘಟನೆಗೆ ಸೇರಿದ ಬಂಟ, ಬಿಲ್ಲವ, ಮೊಗವೀರ ಮತ್ತು ಇತರ ಜಾತಿಗಳವರನ್ನು ಬ್ರಾಹ್ಮಣರ ವಿರುದ್ಧ ಎತ್ತಿ ಕಟ್ಟುವ ಮಾತುಗಳನ್ನು ಕೆಲವು ಪ್ರಗತಿಪರ ಸಂಘಟನೆಗಳು, ಬುದ್ದಿವಂತರ ಸಂಘಟನೆಗಳು ಎಂದು ಹೇಳಿಕೊಳ್ಳುವ ಸಂಘಟನೆಗಳ ನಾಯಕರು ಆಗಾಗ ಹೇಳುತ್ತಿದ್ದಾರೆ. ಇಂತಹಾ ನಾಯಕರು ಕಾಟಿಪಳ್ಳದ ಕೃಷ್ಣಾಪುರ, ಸುರತ್ಕಲ್ ಪರಿಸರದಲ್ಲಿ ಇದ್ದಾರೆ. ಇವರೆಲ್ಲಾ ಜಾತಿ, ಧರ್ಮದ ನೆಲೆಯಲ್ಲಿ ಇಲ್ಲಿ ಸರಣಿ ಹಲ್ಲೆ ನಡೆದಾಗ ಎಲ್ಲಿ ಬಿಲದಲ್ಲಿ ಅಡಗಿ ಕುಳಿತಿದ್ದಾರೆ? ಇಲ್ಲಿ ಬ್ರಾಹ್ಮಣರ ಮೇಲೆ ಹಲ್ಲೆ ನಡೆದದ್ದಲ್ಲ. ಬ್ರಾಹ್ಮಣರನ್ನು ಹೊರತುಪಡಿಸಿ ಇತರರ ಮೇಲೆ ಮಾರಣಾಂ ತಿಕ ಹಲ್ಲೆ ನಡೆದಿದೆ. ಅವರನ್ನು ಅವರ ವಾಸಸ್ಥಳದಿಂದ ಬೆದರಿಸಿ ಓಡಿಸುವ ಕೃತ್ಯಗಳು ನಡೆಯುತ್ತಿವೆ. ಇದೆಲ್ಲಾ ಪ್ರಗತಿಪರರು ಎಂದು ಹೇಳಿಕೊಳ್ಳುವವರ ಕಣ್ಣಿಗೆ ಕಾಣಿಸುತ್ತಿಲ್ಲವೇ? ಹಲ್ಲೆಗೀಡಾದವರ ಮನೆಗೆ ಭೇಟಿ ನೀಡಿ ಮಾನವತೆ ಗಾಗಿ ಹೋರಾಡುವವರು ಯಾಕೆ ಸಾಂತ್ವನ ನೀಡಲಿಲ್ಲ? ಹಲ್ಲೆಗೀಡಾದವರು ಮಾನವರಲ್ಲವೇ?
ದಕ್ಷಿಣ ಕನ್ನq ಜಿಲ್ಲೆಯಲ್ಲಿ ಬೋಗಸ್ ಕೋಮು ಸಾಮರಸ್ಯವನ್ನು ಬೋಧಿ ಸುವ ಸಾಕಷ್ಟು ಸಂಘಟನೆಗಳು ಕಾರ್ಯಾಚರಿಸುತ್ತವೆ. ವೇದಿಕೆ ಸಿಕ್ಕಿದರೆ ಮೈಕ್ ನಲ್ಲಿ ಗಂಟೆಗಟ್ಟಲೆ ಭಾಷಣ ಮಾಡುವ ನಾಯಕರಿಗೇನೂ ಇಲ್ಲಿ ಕೊರತೆ ಇಲ್ಲ. ಕೋಮು ಸಾಮರಸ್ಯ, ಸಹೋದರತೆ, ಮಾನವತೆ ಈ ಬಗ್ಗೆ ಬಹಳಷ್ಟು ಪ್ರಭಾ ವಿಯಾಗಿ ಮಾತನಾಡುತ್ತಾರೆ. ಆದರೆ ಮಾನವತೆಗೆ, ಕೋಮು ಸೌಹಾರ್ದಕ್ಕೆ ಧಕ್ಕೆ ಬರುವಂತಹಾ ವಾಸ್ತವ ಎದುರಾದಾಗ ಇವರೆಲ್ಲಾ ಊರುಬಿಟ್ಟು ಓಡು ತ್ತಾರೆ. ವಾಸ್ತವ ಸಂಗತಿಯನ್ನು ಎದುರಿಸಲು ಆಗದೇ ಇರುವ ಹೇಡಿಗಳು ಪೋಸ್ಟರ್ ಅಂಟಿಸುವುದು, ಕಾರ್ಯಕ್ರಮ, ಮೆರವಣಿಗೆ ಮಾಡುವುದರಲ್ಲಿ ಮಾತ್ರ ತಮ್ಮ ಪೌರುಷವನ್ನು ಪ್ರದರ್ಶನ ಮಾಡುತ್ತಾರೆ.
ಈಗ ಕೃಷ್ಣಾಪುರ ಪ್ರದೇಶದಲ್ಲಿ ಹಲ್ಲೆಗೊಳಗಾದವರ ಪರವಾಗಿ ಅವರ ರಕ್ಷಣೆಗೆ ಬ್ರಾಹ್ಮಣರು, ಹಿಂದೂವಾದಿಗಳು ಬಂದಿಲ್ಲ. ಈ ಹಲ್ಲೆಯನ್ನು ನೆಪವನ್ನಾಗಿ ಮಾಡಿಕೊಂಡು ಶೂದ್ರ ಜನರನ್ನು ದಂಗೆ ಏಳುವಂತೆ ಯಾವ ಬ್ರಾಹ್ಮಣನೂ ಪ್ರಚೋದಿಸಿಲ್ಲ. ಇಷ್ಟೆಲ್ಲಾ ಹಲ್ಲೆ ಪ್ರಕರಣ ನಡೆದರೂ, ಪೊಲೀಸರು ನಿರ್ಲಿಪ್ತರಾಗಿ ದ್ದರೂ ಇಲ್ಲಿ ಇನ್ನೂ ಪರಿಸರ ಪ್ರಕ್ಷುಬ್ಧಗೊಂಡಿಲ್ಲ. ಬ್ರಾಹ್ಮಣವಾದಿಗಳ, ಶೂದ್ರ ರನ್ನು ಅನ್ಯ ಕೋಮಿನವರ ವಿರುದ್ಧ ಎತ್ತಿಕಟ್ಟುವವರ ಪ್ರವೇಶ ಇನ್ನೂ ಇಲ್ಲಿಗೆ ಆಗಿಲ್ಲ. ಹಾಗಿರುವಾಗ ಇಲ್ಲಿ ಮಾನವತೆಯನ್ನು ಬೆಳೆಸುವವರಿಗೆ, ಸೌಹಾರ್ದ ಸೇತುವೆ ಯನ್ನು ಬಿಗಿಯುವ ವರಿಗೆ, ಮನಸ್ಸುಗಳನ್ನು ಕಟ್ಟುವವರಿಗೆ, ಧಾರಾಳವಾದ ಅವ ಕಾಶ ಇದೆ. ಇಲ್ಲಿ ಓಡಾಟ ನಡೆಸಿ ಹಲ್ಲೆಕೋರರ ಮನಸ್ಸನ್ನು ಪರಿವರ್ತಿಸಬಹುದಾ ಗಿದೆ. ಹಲ್ಲೆಗೊಳಗಾದವರ ಮನಸ್ಸಿಗೆ ಸಾಂತ್ವನ, ಅವರಿಗೆ ಧೈರ್ಯ ಹೇಳಬಹುದಾ ಗಿದೆ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಪೋಸ್ಟರ್, ಬ್ಯಾನರ್ ಮೂಲಕ ಪ್ರತ್ಯಕ್ಷರಾಗುವವ ರಿಗೆ ಇಲ್ಲಿ ಸಾಕಷ್ಟು ಕೆಲಸ ಇದೆ. ಈಗ ಇರುವ ಅವಕಾಶವನ್ನು ಕೈಚೆಲ್ಲಬೇಡಿ.
ಒಂದು ಪ್ರದೇಶದ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಕಂಡೂ ಕಾಣ ದಂತೆ ಪೊಲೀಸ್ ಇಲಾಖೆ ವರ್ತಿಸುತ್ತಿರುವ ಅಪಾಯ ಮುಂದಿನ ದಿನಗಳಲ್ಲಿ ಗೋಚರವಾ ಗಬಹುದು. ದಯವಿಟ್ಟು ಪೊಲೀಸರು ಮತ್ತು ರಾಜಕಾರಣಿಗಳು ಇಲ್ಲಿ ಶಾಂತಿ ಕಾಪಾಡುವ ಬಗ್ಗೆ ಆಲೋಚನೆ ಮಾಡಿ. ಇಲ್ಲದೇ ಇದ್ದಲ್ಲಿ ಮುಂದೊಂದು ದಿನ ಇಲ್ಲಿ ಶೂದ್ರರನ್ನು ಎತ್ತಿಕಟ್ಟುವವರ ಪ್ರವೇಶವಾಗಿ ಪರಿಸ್ಥಿತಿ ಬಿಗಡಾಯಿಸಬಹುದು. ಆಮೇಲೆ ಶಾಂತಿ ಪ್ರಿಯರು, ಸೌಹಾರ್ದತೆ, ಮಾನವತೆಯ ವಕ್ತಾರರಿಗೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಬ್ಯಾನರ್ ಹಾಕುವ, ಪೋಸ್ಟರ್ ಅಂಟಿಸುವ ಸಾಕಷ್ಟು ಕೆಲಸಗ ಳನ್ನು  ಮಾಡುವ ಬದಲು ಎಲ್ಲರೂ ಈಗಲೇ ಎಚ್ಚೆತ್ತು ಇಲ್ಲಿ ಶಾಂತಿ ಕಾಪಾಡು ವುದು ಒಳ್ಳೆಯದು.
ಶ್ರೀಕಾಂತ್, ಸುರತ್ಕಲ್
ಕರ್ನಾಟಕದ ವಿಚಾರಕ್ಕೇ ಹೇಳುವುದಾದರೆ ಒಂದೆರಡು ವರ್ಷಗ ಳಿಂದ ಹೀಗೊಂದು ಮಾತು ಕೋರ್ಟ್ ವ್ಯವಹಾರಗಳನ್ನು ಬಲ್ಲವರಿಂದ ಅಲ್ಲಲ್ಲಿ ಅನಧಿಕೃತವಾಗಿ ಪ್ರಸ್ತಾಪಿಸಲ್ಪಡುತ್ತಿತ್ತು. ನೇರವಾಗಿ ಜಡ್ಜುಗಳಿಗೇ ಲಂಚ ಕೊಟ್ಟು ಬುಕ್ ಮಾಡಿಕೊಳ್ಳಲಾಗಿದೆ, ಈ ಜಡ್ಜ್ ಜಾತಿ ಕಾರಣಕ್ಕೆ ಇಂತಹ ಆದೇಶ ಹೊರಡಿಸಿದ್ದಾರೆ, ಆ ಜಡ್ಜ್ ಲಂಚ ತೆಗೆದುಕೊಂಡು ಅಂತಹ ಆದೇಶ ಹೊರಡಿಸಿದ್ದಾರೆ. ಮತ್ತೊಬ್ಬ ಜಡ್ಜ್ ಅನ್ನು ಆತನ ಗರ್ಲ್ ಫ್ರೆಂಡ್ ಮುಖಾಂತರ ಬುಕ್ ಮಾಡಿಕೊಂಡು ಹಾಗೊಂದು ಜಾಮೀನು ತೆಗೆದುಕೊಳ್ಳಲಾಗಿದೆ, ಇತ್ಯಾದಿ, ಇತ್ಯಾದಿ. ಆದರೆ, ನ್ಯಾಯಾಲಯ ಎಂದ ರೇನೇ ಭಯಪಡುವ ಜನಸಾಮಾನ್ಯರ ನಡುವೆ, ನ್ಯಾಯಾಂಗ ನಿಂದನೆ ಆಗಿಬಿಡುತ್ತದೇನೊ ಎಂದು ಹೇಳಬೇಕಾದದ್ದನ್ನು ಹೇಳದೆ ಇರುವಂತಹ ಭಯಗ್ರಸ್ಥ ವಾತಾವರಣವನ್ನು ನಾವು ಸೃಷ್ಟಿಸಿಕೊಂಡಿದ್ದೇವೆ. ಈ ಮಧ್ಯೆ ಬಲಿಷ್ಟರು, ಶ್ರೀಮಂತರು, ಜಾತಿವಾದಿಗಳು ನ್ಯಾಯಾಂಗದಲ್ಲಿರುವ ಒಂದಷ್ಟು ಭ್ರಷ್ಟರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಪ್ರತಿದಿನ ಸಮಾಜ ನ್ಯಾಯದ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತ ಬರುತ್ತಿದೆ. ತಮಗೆ ಬೇಕಾದಂತೆ ಅನ್ಯಾಯದ ಆದೇಶಗಳನ್ನು ಹೊರಡಿಸಿಕೊಳ್ಳುವಲ್ಲಿ ಸಫಲವೂ ಆಗುತ್ತಿದೆ.
ದೇಶದ ಸರ್ವೋಚ್ಚ ನ್ಯಾಯಮೂರ್ತಿಯಾಗಿದ್ದ ಜಡ್ಜ್ ಬಾಲಕೃಷ್ಣನ್ ಮೇಲೆ ಈಗಲೂ ಗಂಭೀರ ಸ್ವರೂಪದ ಆರೋಪಗಳಿವೆ. ದೇಶದ ೧೬ ನ್ಯಾಯಾಧೀಶರ ಪಟ್ಟಿಯಲ್ಲಿ ೮ ನ್ಯಾಯಾಧೀಶರು ಭ್ರಷ್ಟರು ಎಂದು ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಈ ಹಿಂದೆ ಸುಪ್ರೀಮ್‌ಕೋ ರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಆಪಾದಿಸಿ. ಅವರ ಹೆಸರುಗಳನ್ನು ಸುಪ್ರೀಮ್ ಕೋರ್ಟ್‌ಗೆ ಸಲ್ಲಿಸಿದ್ದರು. ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಯಾಗಿದ್ದ ಜಡ್ಜ್ ದಿನಕರನ್ ಮೇಲೆಯೂ ಗಂಭೀರ ಆರೋಪಗಳಿದ್ದವು. ಇತ್ತೀಚೆಗೆ ಲೋಕಾಯುಕ್ತರಾಗಿ ನೇಮಕಗೊಂಡು ವಿವಾದಗಳ ಕಾರಣಗ ಳಿಂದ ಹಿಂದೆ ಸರಿದ ಜಡ್ಜ್ ಒಬ್ಬರ ಮೇಲೆ ರಾಜ್ಯದ ರಾಜ್ಯಪಾಲರಿಗೆ ದೂರು ಕೊಡಲಾಗಿತ್ತು. ಇವು ಕೆಲವೊಂದು ಹೇಳಬಹುದಾದ ಬಹಿರಂಗ ವಾದ ವಿಷಯಗಳು. ಆದರೆ ರಾಜಕಾರಣಿಗಳಿಗೆ-ವಕೀಲರಿಗೆ-ಪತ್ರಕರ್ತ ರಿಗೆ ಗೊತ್ತಿರುವ ಅನೇಕ ವಿಷಯಗಳು ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಜನಸಾಮಾನ್ಯರಿಗೆ ಗೊತ್ತಿಲ್ಲ. ಹಾಗಾಗಿಯೇ ಇಂತಹುದೊಂದು ಕರ್ಮಕಾಂಡವನ್ನು ಪವಿತ್ರ ಗೋವಿನ ರೀತಿ ರಕ್ಷಿಸಿಕೊಂಡು ಬರುತ್ತಿರುವ ವಿದ್ಯಮಾನದಲ್ಲಿ ಇವರೆಲ್ಲರ ಪಾಲಿದೆ. ಮತ್ತು ದೇಶದ ನ್ಯಾಯವ್ಯವಸ್ಥೆ ದುರವಸ್ಥೆಯಲ್ಲಿರುವುದು ಪ್ರತಿದಿನದ ಪ್ರಕರಣಗಳಿಂದ ಎದ್ದುಕಾಣಿಸುತ್ತಿದೆ.
ಸಾಂವಿಧಾನಿಕ ಅಂಗವಾದ ನ್ಯಾಯಾಂಗವನ್ನು ದುಷ್ಟ ಮತ್ತು ಭ್ರಷ್ಟ ಶಕ್ತಿಗಳ ಹಸ್ತಕ್ಷೇಪದಿಂದ ದೂರ ಇಡಲು ಇಂದು ದೇಶದ ಸರ್ವೋಚ್ಛ ನ್ಯಾಯಾಲಯದ ಪ್ರಾಮಾಣಿಕ ನ್ಯಾಯಾಧೀಶರೂ ಪ್ರಯತ್ನಿಸುತ್ತಿದ್ದಾರೆ. ಮುಖ್ಯನ್ಯಾಯಮೂರ್ತಿ ಕಪಾಡಿಯರವರು ಇದರ ಬಗ್ಗೆ ಮಾತನಾಡಿದ್ದರು. ಆದರೂ ನ್ಯಾಯಾಧೀಶರಿಗೆ ಇರುವ ಕಾರಣದಿಂದ ಇವು ಸಾಕಷ್ಟು ಪರಿ ಣಾಮಕಾರಿಯಾಗಿ ಆಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಆಂಧ್ರಪ್ರದೇಶ ದಲ್ಲಿ ಬಹಿರಂಗವಾದ ಪ್ರಕರಣ.
ಆಂಧ್ರಪ್ರದೇಶ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಮದನ ಲೋಕೂರ್‌ರವರು ಹೈದರಾಬಾದಿನ ವಿಶೇಷ ಸಿಬಿಐ ಕೋರ್ಟಿನ ನ್ಯಾಯ ಮೂರ್ತಿಯಾಗಿದ್ದ ಟಿ. ಪಟ್ಟಾಭಿರಾಮರಾವ್ ಅವರನ್ನು ನ್ಯಾಯಮೂರ್ತಿ ಸ್ಥಾನದಿಂದ ವಜಾ ಮಾಡಿದ್ದಾರೆ. ಕಾರಣ?
ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಸಿಬಿಐ ವಶದಲ್ಲಿರುವುದು ಎಲ್ಲರಿಗೂ ತಿಳಿದಿರುವುದೆ. ಇವರ ಅನೇಕ ಜಾಮೀನು ಅರ್ಜಿಗಳನ್ನು ವಿವಿಧ ನ್ಯಾಯಾಲಯಗಳು ತಿರಸ್ಕರಿಸುತ್ತ ಬರುತ್ತಿವೆ. ಆದರೆ ಕಳೆದ ಮೇ ೧೨ರಂದು ಅವರಿಗೆ ಹೈದರಾಬಾದಿನ ವಿಶೇಷ ಸಿಬಿಐ ನ್ಯಾಯಾ ಲಯ ಜಾಮೀನು ನೀಡಿತ್ತು. ಅವರು ಇನ್ನೇನು ಜಾಮೀನಿನ ಮೇಲೆ ಬಿಡು ಗಡೆ ಆದರು ಎಂದು ಜನ ಅಂದುಕೊಂಡರು. ಟಿವಿ ಮಾಧ್ಯಮಗಳೂ ಹಾಗೆಯೇ ವರದಿ ಮಾಡಿದವು. ಆದರೆ ಇನ್ನೊಂದು ಜಾಮೀನು ತೆರವಾಗಿ ಲ್ಲದ ಕಾರಣ ಅವರು ಜೈಲಿನಿಂದ ಹೊರಬರಲು ಆಗಲಿಲ್ಲ. ಆದರೆ, ಅವರಿಗೆ ಮೇ ೨೧ರಂದು ವಿಶೇಷ ನ್ಯಾಯಾಲಯ ಜಾಮೀನು ನೀಡಿದ್ದಾ ದರೂ ಹೇಗೆ?
ಅದರ ಬೆಲೆ ೫ ಕೋಟಿ ಎನ್ನುತ್ತಿವೆ ಇಂದಿನ ವರದಿಗಳು. ಗಾಲಿ ಜನಾ ರ್ದನ ರೆಡ್ಡಿ ಕಡೆಯವರಿಂದ ಐದು ಕೋಟಿ ಲಂಚ ತೆಗೆದುಕೊಂಡು ಅಂತಹುದೊಂದು ಜಾಮೀನನ್ನು ಪಟ್ಟಾಭಿರಾಮರಾವ್ ನೀಡಿದ್ದಾರೆ ಎಂದು ಸಿಬಿಐ ಆಂಧ್ರದ ಮುಖ್ಯನ್ಯಾಯಾಧೀಶರಿಗೆ ದೂರು ನೀಡಿದೆ. ಆ ಐದು ಕೋಟಿ ರೂಪಾಯಿಯನ್ನು ಅದು ರಾಮರಾಯರಿಗೆ ಸಂಬಂಧಿಸಿದ ನೆಂಟರ ಬ್ಯಾಂಕ್‌ಲಾಕರ್‌ನಲ್ಲಿ ವಶಪಡಿಸಿಕೊಂಡಿದೆ. ಇವರ ದೂರು ಮತ್ತು ಸಾಕ್ಷ್ಯದ ಆದಾರದ ಮೇಲೆ ಪಟ್ಟಾಭಿರಾಮರಾವ ವಜಾ ಆಗಿದ್ದಾರೆ. [ಇತ್ತೀಚಿನ ತೆಲುಗು ವಾರ್ತಾಚಾನೆಲ್‌ಗಳ ವರದಿಗಳ ಪ್ರಕಾರ ಈ ಪ್ರಕರಣದಲ್ಲಿ ಹತ್ತು ಕೋಟಿ ಕೈಬದಲಾಯಿಸಿದೆ, ಮತ್ತು ಬಳ್ಳಾರಿಯಿಂದ ಮಧ್ಯವರ್ತಿಯೊಬ್ಬ ಅದನ್ನು ಹೈದರಾಬಾದಿಗೆ ತಂದಿದ್ದ ಎನ್ನಲಾಗುತ್ತಿದೆ.]
ಈ ಘಟನೆ ನಮ್ಮ ರಾಜ್ಯದಲ್ಲೂ ಧನಾತ್ಮಕ/ಸಕಾರಾತ್ಮಕ ಪರಿಣಾಮ ಬೀರಲಿ ಎಂದಷ್ಟೇ ಈಗ ನಾವು ಆಶಿಸಬಹುದಾದದ್ದು. ಆದರೆ ಹಾಗಾಗು ತ್ತದೆ ಎನ್ನುವ ನಂಬಿಕೆ ನನಗೆ ಇನ್ನೂ ಬಂದಿಲ್ಲ. ನಮ್ಮ ರಾಜ್ಯದಲ್ಲಿ ಹಣ ಮತ್ತು ಜಾತಿಯ ಕಬಂಧ ಬಾಹುಗಳು ಬಹಳ ಬಲಶಾಲಿಯಾಗಿವೆ. ಭ್ರಷ್ಟರು ನಿವೃತ್ತರಾಗದ ಹೊರತು ಇದು ಕಮ್ಮಿ ಆಗುತ್ತದೆ ಎನ್ನುವ ಆಸೆ ನಮಗಿಲ್ಲ. ಮೇಲಿನ ಪ್ರಕರಣದಲ್ಲಿ ಆದೇಶ ಸಿಬಿಐ ವಿರುದ್ಧವಾಗಿ ಬಂದಿದ್ದ ರಿಂದ ಸಿಬಿಐನವರು ವಿಶೇಷ ಕಾಳಜಿ ವಹಿಸಿ ಈ ಪ್ರಕರಣವನ್ನು ಬಯಲಿ ಗೆಳೆದಿದ್ದಾರೆ, ಸಾಕ್ಷಿ ಸಮೇತ. ಆದರೆ ಸಿಬಿಐನವರು ಪ್ರತಿವಾದಿಗಳಾಗಿಲ್ಲದ ಕಡೆ? ನಮ್ಮಲ್ಲಿ ಲೋಕಾಯುಕ್ತ ಸಂಸ್ಥೆ ಇದೆ. ಅದು ತನ್ನ ವಿರುದ್ಧ ಬಂದ ಆದೇಶಗಳನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಹೋಗು ತ್ತಿಲ್ಲ. ಇಂದಿನ ಲೋಕಾಯುಕ್ತ ಸಂಸ್ಥೆ ಕರ್ನಾಟಕದಲ್ಲಿ ನ್ಯಾಯ ಮತ್ತು ಪ್ರಾಮಾಣಿಕತೆಯ ಪರ ಇದೆ ಎಂದು ಹೇಳುವ ಪರಿಸ್ಥಿತಿ ಇಲ್ಲ. ಇಂತಹ ಸ್ಥಿತಿಯಲ್ಲಿ ಯಾರು ಯಾರಿಗೆ ಗಂಟೆ ಕಟ್ಟುವುದು?
ನ್ಯಾಯಸ್ಥಾನದ ಮೇಲೆ ಜನ ಸಂಪೂರ್ಣ ವಿಶ್ವಾಸ ಕಳೆದುಕೊಳ್ಳುವ ಮೊದಲು ನ್ಯಾಯಾಧೀಶರು ಮತ್ತು ಪ್ರಾಮಾಣಿಕ, ನ್ಯಾಯವಂತ ಆಡಳಿತ ಗಾರರು ಎಚ್ಚತ್ತುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವೇ ಸಂದೇಹಾಸ್ಪದವಾಗುತ್ತದೆ.
ರವಿಕೃಷ್ಣಾ ರೆಡ್ಡಿ
 ನೊಂದವರು, ಕುಲಶೇಖರ 
ಮಳೆಗಾಲ ಆರಂಭವಾದಂತೆ ಹೆಚ್ಚು ಸಮಸ್ಯೆ ಎದುರಿ ಸುವವರು ಮೆಸ್ಕಾಂ ಸಿಬ್ಬಂದಿ ಎಂದರೆ ತಪ್ಪಾಗದು. ಯಾಕೆಂದರೆ ದಿನದ ಹೆಚ್ಚಿನ ಅವಧಿಯಲ್ಲಿ ಅವರಿಗೆ ಕೆಲಸದ ಒತ್ತಡವಿರುತ್ತದೆ. ಇದು ಮಳೆಗಾಲದಲ್ಲಿ ಇನ್ನೂ ಜಾಸ್ತಿ. ಮಳೆ, ಸಿಡಿಲು, ಗಾಳಿ ಜೋರಾಗಿ ಬಂದರೆ ವಿದ್ಯುತ್ ಲೈನ್‌ನಲ್ಲಿ ದೋಷ ಕಂಡುಬರುತ್ತದೆ. ಇದನ್ನು ಸರಿಪಡಿಸಲು ಮೆಸ್ಕಾಂ ಸಿಬ್ಬಂದಿ ಬೇಕೇಬೇಕು. ಯಾಕೆಂದರೆ ಬೇರೆ ಕೆಲಸಗಳನ್ನೆಲ್ಲ ಮಾಡಲು ಜನರು ಪರ್ಯಾಯ ವ್ಯವಸ್ಥೆ ಯನ್ನು ಅವಲಂಬಿಸಿರುತ್ತಾರಾದರೂ ವಿದ್ಯುತ್‌ಗೆ ಸಂಬಂಧ ಪಟ್ಟ ಸಮಸ್ಯೆಗಳ ಪರಿಹಾರಕ್ಕೆ ಮೆಸ್ಕಾಂ ಸಿಬ್ಬಂದಿಯನ್ನೇ ಅವಲಂಬಿರುತ್ತಾರೆ. ಹೀಗಾಗಿ ಮೆಸ್ಕಾಂ ಸಿಬ್ಬಂದಿ ಮಳೆಗಾಲ ದಲ್ಲಿ ಎಂಥ ಸಮಸ್ಯೆಯೇ ಆಗಲಿ, ಅದನ್ನು ಎದುರಿಸಲು ಸಿದ್ಧರಿರುತ್ತಾರೆ.  
 ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಮೆಸ್ಕಾಂ ಮತ್ತದರ ನೌಕರರು ಸಲ್ಲಿಸುವ ಸೇವೆಯಲ್ಲ. ಅದರ ಬದಲು ಮೆಸ್ಕಾಂ ತನ್ನ ನೌಕರರಿಗೆ ಮಳೆಗಾಲದಲ್ಲಿ ನೀಡುವ ಸವಲ ತ್ತುಗಳ ಬಗ್ಗೆ. ಮಳೆಗಾದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುವ ಅನಿವಾರ್ಯತೆ ಇರುವ ಕಾರಣ ಮೆಸ್ಕಾಂ ನೌಕರರಿಗೆ ಹೆಚ್ಚಿನ ಸವಲತ್ತು ನೀಡಬೇಕಾಗುತ್ತದೆ. ಮಳೆಯಲ್ಲಿ ನೆನೆದು ಕರ್ತವ್ಯ ನಿರ್ವಹಿಸುವ ವೇಳೆ ಅಗತ್ಯ ಕೈಗವಚ, ರೈನ್‌ಕೋಟ್, ಸೂಕ್ತ ರಕ್ಷಣಾ ವ್ಯವಸ್ಥೆ ಎಲ್ಲವನ್ನೂ ಒದಗಿಸಬೇಕಾಗುತ್ತದೆ. ಆದರೆ ಮೆಸ್ಕಾಂ ಅಧಿಕಾರಿಗಳು ತನ್ನ ನೌಕರರಿಗೆ ಈ ಎಲ್ಲ ಸವಲತ್ತುಗಳನ್ನು ನೀಡದೆ ವಂಚಿಸುವುದು ಕಂಡುಬರುತ್ತದೆ.  ಮೆಸ್ಕಾಂ ಸಿಬ್ಬಂದಿ ದಿನದಲ್ಲಿ ಇಷ್ಟೇ ಅವಧಿ ಕೆಲಸ ಮಾಡಬೇಕು, ಸಮಯ ಮೀರಿ ಅವರನ್ನು ದುಡಿಸಬಾರದು ಎಂಬ ನಿಯಮ ಗಳಿದ್ದರೂ ಅಧಿಕಾರಿವರ್ಗ ಅದನ್ನು ಗಾಳಿಗೆ ತೂರುತ್ತಿದೆ. ಇದರ ಪರಿಣಾಮ ಮೆಸ್ಕಾಂ ಲೈನ್‌ಮೆನ್‌ಗಳು ಪ್ರಾಣ ಕಳೆದುಕೊಳ್ಳುವ ಘಟನೆಗಳು ಹೆಚ್ಚೆಚ್ಚು ಜರುಗುತ್ತಿವೆ. ಕೆಲವು ಕಡೆಗಳಲ್ಲಿ ಮೆಸ್ಕಾಂ ಅಧಿಕಾರಿಗಳು ಲೈನ್‌ಮೆನ್‌ಗಳನ್ನು ತಮ್ಮ ಮನೆಯ ಕೆಲಸದಾಳುಗಳಂತೆ ನಡೆಯಿಸಿಕೊಳ್ಳುವುದೂ ಇದೆ. ಹೊತ್ತಲ್ಲದ ಹೊತ್ತಿನಲ್ಲಿ ಕರೆದು ತನ್ನ ವ್ಯಾಪ್ತಿಯಲ್ಲದೇ ಇದ್ದರೂ ಬೇರೆ ವ್ಯಾಪ್ತಿ ಪ್ರದೇಶಕ್ಕೆ ಕಳುಹಿಸಿ ಕೆಲಸ ಮಾಡಿಸುವ ಅಧಿಕಾರಿಗಳೂ ಜಿಲ್ಲೆಯಲ್ಲಿ ದ್ದಾರೆ. 
ಜಿಲ್ಲೆಯಲ್ಲಿ ಮೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಅನೇಕ ಮಂದಿ ಲೈನ್‌ಮೆನ್‌ಗಳು ಪ್ರಾಣವನ್ನು ಬಲಿ ನೀಡಿದ್ದಾರೆ. ಸೂಕ್ತ ಸುರಕ್ಷಾ ಸಾಮಾಗ್ರಿ, ಅಧಿಕಾರಿಗಳ ತಪ್ಪು ತಿಳುವಳಿಕೆ, ಅವಸರದ ತೀರ್ಮಾನ ಇವೇ ಇತ್ಯಾದಿ ನೌಕರರ ಪ್ರಾಣಕ್ಕೆ ಕುತ್ತು ತರುತ್ತಿವೆ. ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಹತ್ತಾರು ಮಂದಿ ಲೈನ್‌ಮೆನ್ ಗಳು ತಮ್ಮ ಅಮೂಲ್ಯ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇವರ ಕುಟುಂಬ ಸದಸ್ಯರು ಸೂಕ್ತ ಪರಿಹಾರ ಸಿಗದೆ ಕಣ್ಣೀರಿನಲ್ಲೇ ಕೈತೊಳೆಯುವಂತಾಗಿದೆ. 
ಇತ್ತೀಚೆಗೆ ವಾಮಂಜೂರಿನಲ್ಲಿ ಮೆಸ್ಕಾಂ ಲೈನ್‌ಮೆನ್ ಜೆರಾಲ್ಡ್ ವೇಗಸ್ ಸಾವು ಪ್ರಕರಣ ಇದಕ್ಕೆ ಹೊಸ ಸೇರ್ಪಡೆ ಯಾಗಿದೆ. ಅಮಾಯಕ ಜೆರಾಲ್ಡ್‌ರನ್ನು ಬೇರೆ ವ್ಯಾಪ್ತಿ ಪ್ರದೇಶಕ್ಕೆ ಕಳುಹಿಸಿದ ಅಧಿಕಾರಿ ಅವರ ಸಾವಿನ ನೇರ ಹೊಣೆಯಾಗಿರುತ್ತಾರೆ. ಇವರ ಮೇಲೆ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಿ ತಕ್ಷಣ ಕಂಬಿಯ ಹಿಂದೆ ಕಳುಹಿಸಿ. ಜೆರಾಲ್ಡ್ ವೇಗಸ್ ಸಾವು ಕುಟುಂಬಕ್ಕೆ ತುಂಬಲಾರದ ನಷ್ಟ. ಮಳೆಗಾಲದಲ್ಲಿ ಇನ್ನಾದರೂ ಮೆಸ್ಕಾಂ ಸಿಬ್ಬಂದಿಗೆ ಯೋಗ್ಯ ಸುರಕ್ಷಾ ಪರಿಕರ ಸಿಗುವಂತಾಗಲಿ. ಮೆಸ್ಕಾಂ ಸಿಬ್ಬಂದಿ ಬೇಜವಾಬ್ದಾರಿ ಹಾಗೂ ದುಂಡಾವರ್ತನೆಗೆ ಇನ್ನಷ್ಟು ಜೆರಾಲ್ಡ್‌ನಂಥ ಸಿಬ್ಬಂದಿ ಬಲಿಯಾಗ ದಿರಲಿ ಎಂದು ಹಾರೈಸುತ್ತೇನೆ.   
ಕಳೆದ ವರ್ಷದ ಮಳೆಗಾಲದ ಪ್ರಾರಂಭದಲ್ಲಿ ಬೈಕ್ ಸವಾರನಾದ ನನಗೆ ರೈನ್‌ಕೋಟ್ ವಿಚಾರವಾಗಿ ಮಂಗಳೂರಿನ ಅಂಗಡಿಯೊಂದರಲ್ಲಿ ಆಗಿದ್ದಂತಹ ಅನ್ಯಾಯದ ಬಗ್ಗೆ ಇಲ್ಲಿ ಬರೆಯುತ್ತಿದ್ದೇನೆ. ಮಳೆಗಾಲ ವಾದ್ದರಿಂದ ನನ್ನ ಬೈಕ್ ಸವಾರಿಗೆ ರೈನ್‌ಕೋಟ್ ಅವಶ್ಯವಾಗಿತ್ತು. ಹಾಗಾಗಿ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಹೊರಗಡೆಯ ಸೌರಾಷ್ಟ್ರಕ್ಕೆ ತೆರಳಿ ರೂಪಾಯಿ ೬೮೮ ರೂ. ಕೊಟ್ಟು ರೈನ್ ಕೋಟ್ ಖರೀದಿಸಿದ್ದೆ. ಆ ಸಂದರ್ಭ ರೇಟ್ ಸ್ವಲ್ಪ ಕಡಿಮೆ ಮಾಡಿ ಎಂದಿದ್ದಕ್ಕೆ ಅಂಗಡಿ ಮಾಲಿಕ ‘ಅದೆಲ್ಲ ಆಗುವುದಿಲ್ಲ, ಅದು ಫಿಕ್ಸ್‌ಡ್ ರೇಟ್’ ಎಂದು ನನ್ನ ಕೈಯಿಂದ ಏಳು ನೂರು ರೂಪಾಯಿ ಕಸಿದು ಭರ್ತಿ ಹನ್ನೆರಡು ರೂಪಾಯಿ ಹಿಂದಿರುಗಿಸಿದ್ದ. ಆದರೆ ನನ್ನ ಎರಡೂವರೆ ದಿವಸ ಬೆವರು ಸುರಿಸಿ ದುಡಿದ ದುಡ್ಡಿನಿಂದ ಖರೀದಿಸಿದ್ದ ಆ ರೈನ್‌ಕೋಟ್ ಎರಡು ಸಲ ಧರಿಸುವಾಗಲೇ ಒಳಗಡೆಯಿಂದ ಬಿಚ್ಚಲು ತೊಡಗಿ ಮೂರನೇ ಸಲ ಧರಿಸಿದಾಗ ಮಳೆ ನೀರಿನಿಂದ ನಾನು ಸಂಪೂರ್ಣ ತೋಯ್ದು ಹೋಗಿದ್ದೆ.
ಇದರಿಂದ ಅಚ್ಚರಿಗೊಂಡು ನಾನು ಸದ್ರಿ ರೈನ್ ಕೋಟ್ ಅನ್ನು ಹಿಡಿದು ಸೀದಾ ಆ ಅಂಗಡಿಗೆ ಹೋಗಿ ಮಾಲಿಕನಿಗೆ ತೋರಿಸಿದೆ. ಆದರೆ ಆ ಅಂಗಡಿ ಮಾಲಿಕ ಅದನ್ನು ಒಪ್ಪಲು ತೀರಾ ಸಿದ್ಧನಿರಲಿಲ್ಲ. ನಮ್ಮಲ್ಲಿ ಅಂಥ ಕಳಪೆ ಕೋಟ್ ಇಲ್ಲವೇ ಇಲ್ಲ, ನಿಮ್ಮಲ್ಲೇ ತಪ್ಪಿದೆ ಎಂದು ನನ್ನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಟ್ಟ. ಬೇಸರಗೊಂಡ ನಾನು ಏಳುನೂರ ಮೂವತ್ತು ರೂಪಾಯಿ ಕೊಟ್ಟು ಇನ್ನೊಂದು ಕೋಟ್ ಅನ್ನು ಬೇರೆ ಅಂಗಡಿಯೊಂದರಲ್ಲಿ ಖರೀದಿಸಿದೆ. ಕಳೆದ ವರ್ಷ ಮಳೆಗಾಲ ಪೂರ್ತಿ ಅದನ್ನು ಧರಿಸಿದೆ. ಈ ವರ್ಷವೂ ಧರಿಸುತ್ತಿದ್ದೇನೆ. ಕೋಟ್ ಧರಿಸುತ್ತಿರುವಾಗ ನನ್ನ ಕೈಯಲ್ಲಿ ತಪ್ಪಾಗುತ್ತದೆ ಎನ್ನುವುದಾದರೆ ಈ ಎರಡನೇ ರೈನ್ ಕೋಟ್ ಕೂಡಾ ಹಾಳಾಗಬೇಕಿತ್ತು. ಅದೂ ಅಲ್ಲದೇ ನಾನು ವಿವಿಧ ಅಂಗಡಿಗಳ ರೈನ್‌ಕೋಟ್ ಖರೀದಿಸು ತ್ತಿರುವುದು ಸುಮಾರು ಆರು ವರ್ಷಗಳಿಂದ ನಡೆದು ಕೊಂಡು ಬರುತ್ತಿರುವ ಸಂಗತಿ. ಇದರರ್ಥ ಸೌರಾಷ್ಟ್ರ ಎಂಬ ಅಂಗಡಿಯಿಂದ ನಾನು ಖರೀದಿಸಿದ ರೈನ್ ಕೋಟ್ ಒಂದೋ ಹಳೆಯ ಸ್ಟಾಕ್ ಆಗಿರ ಬಹುದು ಅಥವಾ ತೀರಾ ಕಳಪೆ ಗುಣಮಟ್ಟದ್ದಾಗಿ ರಬಹುದು. ಎರಡಲ್ಲಿ ಒಂದಂತೂ ದಿಟ.
ಕಳೆದ ವರ್ಷ ನಡೆದ ಸದ್ರಿ ಘಟನೆಯನ್ನು ಈ ವರ್ಷ ಹೇಳಲು ಕಾರಣವೇನೆಂದರೆ ಆ ಸಂಗತಿ ನನ್ನನ್ನು ಅಷ್ಟೂ ನೋಯಿಸಿತ್ತು. ನನ್ನ ಹಾಗೆಯೇ ತಿಂಗಳ ಸಂಬಳಕ್ಕಾಗಿ ಅಥವಾ ದಿನಗೂಲಿಗಾಗಿ ಪರದಾಡುವ ಅದೆಷ್ಟೋ ಬೈಕ್ ಸವಾರರಿದ್ದಾರೆ. ಈಗ ಮಳೆಗಾಲ ಶುರುವಾಗಿದೆ.  ರೈನ್‌ಕೋಟ್ ಎಲ್ಲರಿಗೂ ಅಗತ್ಯಬರುತ್ತದೆ. ಈ ಸಂದರ್ಭ ಅಂಗಡಿ ಗಳಲ್ಲಿ ವಿವಿಧ ಮಾದರಿಯ ರೈನ್‌ಕೋಟ್‌ಗಳನ್ನು ಮಾರಲಾಗುತ್ತದೆ. ಆದರೆ ಯಾರಿಗೂ ನನ್ನ ಹಾಗೆ ಅನ್ಯಾಯವಾಗದಿರಲಿ ಎಂಬ ಸಮಾಜಿಕ ಕಳಕಳಿ ಯಿಂದ ಈ ಪತ್ರ ಬರೆಯುತ್ತಿದ್ದೇನೆ. ರೈಟ್‌ಕೋಟ್‌ಗೆ ಗ್ಯಾರಂಟಿ ಕೊಡಲಿಕ್ಕಾಗುವುದಿಲ್ಲ ಎಂಬ ಉಡಾಫೆ ಮಾತನಾಡುವುದನ್ನು ಇನ್ನಾದರೂ ಮಾರಾಟಗಾರರು ನಿಲ್ಲಿಸಲಿ.
 ಇಬ್ರಾಹಿಂ.ಕೆ., ಮಂಗಳೂರು
ಸುರತ್ಕಲ್ ಬಸ್ ನಿಲ್ದಾಣದ ಸಮೀಪ ಇರುವ ಸುಲಭ ಶೌಚಾಲಯ ವಿಪರೀತ ವಾಸನೆಯಿಂದಾಗಿ ಬಸ್ ಕಾಯುವವರು ಮೂಗು ಮುಚ್ಚಿ ಕೊಂಡು ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ಇಲ್ಲಿ ಹಣ ಪಡೆದುಕೊಳ್ಳುವವರು ಶೌಚಾಲಯವನ್ನು ಶುಚಿಯಾಗಿಡುವಲ್ಲಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?
ಶೌಚಾಲಯಕ್ಕೆ ಹೋದವರು ಒಳಗಡೆ ವಾಸನೆ ಹೆಚ್ಚಾದ ಕಾರಣ ಗೋಡೆಯ ಹೊರಗಡೆಯೇ ಮೂತ್ರ ಮಾಡಿ ವಾಪಸ್ ಬರುತ್ತಾರೆ. ಆದರೆ ಇದಕ್ಕೂ ಹಣ ಮಾತ್ರ ಕೊಡಲೇಬೇಕು. ಇನ್ನಾದರೂ ಇಲ್ಲಿನ ಶೌಚಾಲಯವನ್ನು ಶುಚಿಯಾಗಿಡುವ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಿಸುವ ಕೆಲಸವನ್ನು ಮನಪಾ ಮಾಡಲಿ.      ಪ್ರವೀಣ್, ಸುರತ್ಕಲ್
ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಬಳ್ಳಾಲ್ ಹಾಗೂ ನಿರ್ದೇಶಕ ಕಿಶನ್ ಕುಮಾರ್ ಹೆಗ್ಡೆ ಇವರನ್ನು ಮುಂದಿನ ಐದು ವರ್ಷಗಳ ಅವಧಿಗೆ ಮೇಲಿನ ಸಂಘಕ್ಕೆ ಹಾಗೂ ಇನ್ಯಾವುದೇ ಸಂಘಕ್ಕೆ ನಿರ್ದೇಶಕರಾಗಲು ಅಥವಾ ಮುಂದುವರೆಯಲು ಅನರ್ಹಗೊಳಿಸಿ ಕುಂದಾ ಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಎಸ್. ಸಿದ್ದಾರ್ಥ ನೀಡಿ ರುವ ಪೂರ್ವಾಗ್ರಹ ಪೀಡಿತ ಆದೇಶವನ್ನು ಸಹಕಾರ ಸಂಘಗಳ ಉಪ ನಿಬಂಧಕರು, ಉಡುಪಿ ಜಿಲ್ಲೆ ಅವರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸ ಲಾಗಿದೆ. ಸಹಕಾರಿ ಸಂಘಗಳ ಉಪನಿಬಂಧಕರು ಈ ಮೇಲ್ಮನವಿಯನ್ನು ಪುರಸ್ಕರಿಸಿ ಸದರಿ ವಜಾ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿರುತ್ತಾರೆ. ಸಹ ಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಎಸ್ ಸಿದ್ದಾರ್ಥ ಇವರು ಪೂರ್ವ ಗ್ರಹ ಪೀಡಿತ ಹಾಗೂ ವೈಯಕ್ತಿಕ ದ್ವೇಷ ಸಾಧನೆಗಾಗಿ ಅನರ್ಹಗೊಳಿಸಿ ಆದೇಶ ನೀಡಿದ್ದಾರೆ. ಇದು ದುರುದ್ದೇಶದಿಂದ ಕೂಡಿದೆ. ಈ ಆದೇಶಕ್ಕೆ ತಡೆ ಯಾಜ್ಞೆ ನೀಡಿರುವುದರಿಂದ ಯಾವುದೇ ಸಹಕಾರಿ ಸಂಘಗಳಲ್ಲಿ ನಿರ್ದೇಶಕ ರಾಗಿ ಮುಂದುವರೆಯಲು ಯಾವುದೇ ಅಡಚಣೆ ಇರುವುದಿಲ್ಲ. 
ಕಿಶನ್ ಹೆಗ್ಡೆ ಕೊಳ್ಕೆಬೈಲ್, ಅಧ್ಯಕ್ಷರು
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್
ಕೇಂದ್ರ ಸರಕಾರ ಪೆಟ್ರೋಲ್ ಬೆಲೆಯನ್ನು ಹಿಂದೆಂದಿಗಿಂತ ಹೆಚ್ಚು ಏರಿಸಿತು. ಇದನ್ನೇ ಕಾದು ಕುಳಿತಿದ್ದ ವಿರೋಧ ಪಕ್ಷಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು. ದೇಶಾದ್ಯಂತ ಹೋರಾಟ ನಡೆಸಿದ ವಿರೋಧ ಪಕ್ಷಗಳು ಪೆಟ್ರೋಲ್ ಬೆಲೆ ಇಳಿಕೆ ಮಾಡಿಯೇ ಸಿದ್ಧ ಎಂದು ಹೇಳಿಕೊಂಡವು. ಪ್ರತಿಭಟನೆ ನಡೆದ ನಂತರ ಪೆಟ್ರೋಲ್ ಬೆಲೆಯೂ ಇಳಿಯಿತು. ಆದರೆ ಇಳಿದಿದ್ದು ಬರೇ ಮೂರು ರೂಪಾಯಿ ಮಾತ್ರ. ವಾಸ್ತವ ವಾಗಿ ಕೇಂದ್ರ ಸರಕಾರ ಇದನ್ನು ಮೊದಲೇ ಅಂದಾಜಿಸಿ ಒಮ್ಮೆಲೇ ದುಪ್ಪಟ್ಟು ಬೆಲೆ ಏರಿಕೆ ಮಾಡಿತ್ತು ಎನ್ನುವುದು ನಿಸ್ಸಂ ದೇಹ. ಏರಿರುವ ಬೆಲೆ ಯನ್ನು ಹಾಗೇ ವಾಪಸ್ ಪಡೆಯು ವಂತೆ ಮಾಡಿದ್ದರೆ ಬಿಜೆಪಿ ಮತ್ತಿತರ ವಿರೋಧ ಪಕ್ಷಗಳ ಹೋರಾಟಕ್ಕೆ ಅರ್ಥ ಬರುತ್ತಿತ್ತು. ಆದರೆ ಯಾವುದೇ ಪ್ರಯೋಜನಕ್ಕೂ ಬಾರದೆ ಹೋರಾಟ, ಪ್ರತಿಭಟನೆ ವ್ಯರ್ಥವಾಗಿ ಹೋಗಿದ್ದು ಮಾತ್ರ ವಿಪರ್ಯಾಸ. ಗೋವಾ, ಮಹಾರಾಷ್ಟ್ರ, ಕಲ್ಕತ್ತಾ, ದೆಹಲಿಯಂಥ ರಾಜ್ಯಗಳಲ್ಲೇ ಇರದ ತೆರಿಗೆಯನ್ನು ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಅದರ ಉತ್ಫನ್ನಗಳ ಮೇಲೆ ವಿಧಿಸಲಾಗುತ್ತಿದೆ. ಬಿಜೆಪಿ ಪಕ್ಷಕ್ಕೆ ಜನತೆಯ ಬಗ್ಗೆ ಕಾಳಜಿಯಿದ್ದರೆ ತೆರಿಗೆಯನ್ನಾದರೂ ಇಳಿಸಬಹುದಿತ್ತಲ್ಲವೇ? ಆದರೆ ಹಾಗೆ ಮಾಡದೆ ಸೈಕಲ್ ಚಲಾಯಿಸಿ ಕೇಂದ್ರ ಸರಕಾರಕ್ಕೆ ಧಿಕ್ಕಾರ ಕೂಗಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯ ಸರಕಾರ ಪ್ರಜೆಗಳ ಮೇಲೆ ಅಲ್ಪ ಕಾಳಜಿಯನ್ನಾದರೂ ವಹಿಸಿರುತ್ತಿದ್ದರೆ ಇಲ್ಲಿಯೂ ಗೋವಾದಂತೆ ಕಡಿಮೆ ಬೆಲೆ ಪೆಟ್ರೋಲ್ ಸಿಗುತ್ತಿತ್ತು. 
 ಸುರೇಶ್, ತಲಪಾಡಿ
ನಾವೆಲ್ಲ ಸಣ್ಣವರಿರುವಾಗ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳು ತುಂಬಿ ತುಳು ಕುತ್ತಿದ್ದರು. ಮಕ್ಕಳಿಗೆ ಪಾಠದ ಜೊತೆ ಪಠ್ಯೇತರ ಚಟುವಟಿಕೆಗಳನ್ನೂ ಯೋಗ್ಯ ರೀತಿಯಲ್ಲಿ ಕಲಿಸ ಲಾಗುತ್ತಿತ್ತು. ಭಜನೆ, ವಾರ್ಷಿಕ ಕ್ರೀಡಾಕೂಟ, ವಾರ್ಷಿಕೋತ್ಸವದ ಸಂಭ್ರಮ-ಸಡಗರವೇ ಬೇರೆ. ಆದರಿಂದ ಇಂದಿನ ಮಕ್ಕಳು ಈ ಸಂಭ್ರ ಮದಿಂದ ವಂಚಿತರಾಗಿದ್ದಾರೆ ಎಂದೇ ಅನಿಸು ತ್ತಿದೆ. ಯಾಕೆಂದರೆ ಕನ್ನಡ ಶಾಲೆಗಳು ಭರ್ತಿ ಗೊಳ್ಳುವುದೇ ಅಪರೂಪವಾಗಿ ಬಿಟ್ಟಿದೆ. ಕೆಲವು ಶಾಲೆಗಳಲ್ಲಿ ಐದಾರು ತರಗತಿಗಳಿಗೆ ಒಬ್ಬರೇ ಶಿಕ್ಷಕರು ಬೋಧನೆ ಮಾಡಬೇಕಾದ ಅನಿ      ವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಇಂಗ್ಲಿಷ್ ಶಿಕ್ಷಣದ ಮೇಲೆ ಹೆಚ್ಚಿನ ಪ್ರೀತಿಯೇ ಆಗಿದೆ. ಮಕ್ಕಳಿಗೆ ಸಣ್ಣಪ್ರಾಯದಲ್ಲೇ ಇಂಗ್ಲಿಷ್ ಕಲಿಸು ತ್ತಾರೆ ಎಂಬ ಕಾರಣಕ್ಕೆ ಹೆಚ್ಚಿನ ಹೆತ್ತವರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸು ತ್ತಾರೆ. ಆದರೆ ಅಲ್ಲಿ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ಮಕ್ಕಳಿಗೆ ಸ್ವಚ್ಛಂದ ವಾತಾ ವರಣ ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ಇರುವು ದಿಲ್ಲ. ಶಿಕ್ಷಕರ ಬೈಗುಳ, ಬೇಕಾಬಿಟ್ಟಿ ಶಿಕ್ಷೆ ಎಲ್ಲ ವನ್ನೂ ಎದುರಿಸಿ ಮಕ್ಕಳು ಕಷ್ಟದಲ್ಲೇ ವಿದ್ಯೆ ಕಲಿಯುತ್ತಾರೆ. ಇದು ಅವರ ಬಾಲ್ಯ ಜೀವನವನ್ನು ಮೊಟಕುಗೊಳಿಸುವುದಲ್ಲದೆ ಗಂಭೀರ ಪರಿಣಾಮ ವನ್ನೂ ಉಂಟುಮಾಡುತ್ತದೆ. ಆದ್ದರಿಂದ ಮಕ್ಕ ಳನ್ನು ಸರಕಾರಿ ಶಾಲೆಗೆ ಸೇರಿಸುವ ಮೂಲಕ ಕನ್ನಡ ಶಿಕ್ಷಣಕ್ಕೆ ಒತ್ತು ಕೊಡುವ ಕೆಲಸವನ್ನು ಹೆತ್ತವರು, ಪೋಷಕರು ಮಾಡಬೇಕಿದೆ. ಇದ ರಿಂದ ಕನ್ನಡ ಮಾಧ್ಯಮ ಶಾಲೆಗಳ ಪುನರುತ್ಥಾನ ಸಾಧ್ಯವಿದೆ.
 ತೃಪ್ತಿ ಸಿ.ಹೆಚ್., ಬಂಟ್ವಾಳ
ಬೈಕಂಪಾಡಿ ಹೃದಯ ಭಾಗದಲ್ಲಿರುವ ಬಂಟ್ವಾಳ್ ಚೇಂಬರ್ ಎದುರುಗಡೆ ತೆರೆದ ಬಾವಿಯೊಂದಿದ್ದು, ಅಪಾಯ ಆಹ್ವಾನಿಸುತ್ತಿದೆ. ಬಾವಿಯ ಸುತ್ತ ಇದ್ದ ಕಬ್ಬಿಣ್ಣದ ತಡೆಗಳು ಇದೀಗ ಮಾಯವಾಗಿದೆ.
ರಾತ್ರಿವೇಳೆಯಲ್ಲಂತೂ ಅಪಾಯ ಕಟ್ಟಿಟ್ಟ ಬುತ್ತಿ. ಕುಡಿದ ಮತ್ತಿನಲ್ಲಿ ತೂರಾಡಿ ಕೊಂಡು ಹೋಗುವವರ ಸಂಖ್ಯೆ ಇಲ್ಲಿ ಅಧಿಕವಾಗಿದ್ದು, ಈ ತೆರೆದ ಬಾವಿಯಿಂದ ಅಪಾಯ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಸಂ ಬಂಧಿತರು ಅವಘಡ ನಡೆಯುವ ಮೊದಲು ಈ ಬಾವಿಗೆ ರಕ್ಷಾ ಕವಚ ಒದಗಿ ಸಲಿ.
ನವೀನ್.ಕೆ., ಸುರತ್ಕಲ್
ಕಾಟಿಪಳ್ಳ: ಬಡತನ ಶಿಕ್ಷಣಕ್ಕೆ ಮಾರಕವಾಗಬಾರದು, ಶಿಕ್ಷಣದಿಂದ ಯಾರೂ ವಂಚಿತರಾಗಬಾರದು, ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಶೈಕ್ಷಣಿಕ ಉದ್ದೇಶಗಳಿಗೆ ನೀಡುವ ಸವಲತ್ತುಗಳು ಸದುಪಯೋಗವಾಗಬೇಕು ಎಂದು ವಕೀಲ ಸದಾಶಿವ ಐತಾಳ್ ಹೇಳಿದ್ದಾರೆ.
 ಅಜೇಯ ಫ್ರೆಂಡ್ಸ್ ಸರ್ಕಲ್ ಕಾಟಿಪಳ್ಳ  ಇದರ ವತಿಯಿಂದ ಭಾನುವಾರ  ಮಂಗಳಪೇಟೆ ಶ್ರೀ ಶಾರದಾ ಭಜನಾ ಮಂಡಳಿಯಲ್ಲಿ ನಡೆದ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ  ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ‍್ಯಕ್ರಮದಲ್ಲಿ ಮಾತನಾಡಿದ ಚೇಳ್ಯಾರು ಗ್ರಾಮಪಂಚಾಯತ್ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಭವಿಷ್ಯವನ್ನು ಬದಲಾಯಿಸುವ ಶಕ್ತಿ ವಿದ್ಯೆಗಿದೆ. ಶಿಕ್ಷಣ ಪ್ರತಿಯೊಬ್ಬ ಮಕ್ಕಳ ಹಕ್ಕಾಗಿದ್ದು  ಪೋಷಕರು ಈ ನಿಟ್ಟಿನಲ್ಲಿ ಹೆಚ್ಚು ಜವಾಬ್ದಾರಿಯನ್ನು ಹೊಂದಬೇಕಿದೆ ಎಂದರು.
ಹಿರಿಯರಾದ ರಾಘವ ಭಂಡಾರಿ, ವಿಶ್ವನಾಥ ಶೆಟ್ಟಿ, ಎಂಆರ್‌ಪಿಎಲ್ ಕರ್ಮಚಾರ್ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಛಾಯಾಗ್ರಾಹಕ ದೇವರಾಜ್ ಶೆಟ್ಟಿ, ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಪ್ರಫ್ಲುಲಚಂದ್ರ ರೈ, ಪೆರ್ಮುದೆ ಗ್ರಾಮ ಪಂಚಾಯತ್ ಸದಸ್ಯ ಶ್ರೀಧರ ಶೆಟ್ಟಿ ಕಣಿ, ಕಾಟಿಪಳ್ಳ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ಸುಕುಮಾರ ಭಂಡಾರಿ, ಅಜೇಯ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ನವೀನ್ ಶೆಟ್ಟಿ ಕೇಂಞ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಪಂಡಿತ್, ಕೋಶಾಧಿಕಾರಿ ನಾಗೇಶ ದೇವಾಡಿಗ ಮತ್ತಿತರರು ಉಪಸ್ಥಿತರ‍್ದಿದರು.
 ಸುಧೀರ್ ಶೆಟ್ಟಿ ಸ್ವಾಗತಿಸಿ, ಲೋಕನಾಥ ಭಂಡಾರಿ ವಂದಿಸಿದರು.
ಮಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳೂರು ದಕ್ಷಿಣ ಕಾಂಗ್ರೆಸ್ ಸಮಿತಿ ಮೆಸ್ಕಾಂ ವಿದ್ಯುಚ್ಛಕ್ತಿ ಮಂಡಳಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದೆ.
ಕುಲಶೇಖರ ಸಬ್‌ಸ್ಟೇಶನ್ ಹಾಗೂ ಜಪ್ಪು ಸಬ್‌ಸ್ಟೇಶನ್‌ಗೆ ಹೆಚ್ಚುವರಿಯಾಗಿ ಎರಡು ಜೀಪು ಹಾಗೂ ಲೈನ್‌ಮೆನ್‌ಗಳನ್ನು ನೀಡುವಂತೆ ಅತ್ತಾವರ ಮೆಸ್ಕಾಂ ಸುಪರ್‌ಡೆಂಟ್ ಇಂಜಿನಿಯರ್ ಅವರಿಗೆ ಮನವಿ ನೀಡಿದೆ. ಒಂದು ಪ್ರದೇಶದಲ್ಲಿ ಆಕಸ್ಮಾತ್ ಆಗಿ ಕರೆಂಟ್ ಹೋದರೆ ಪ್ರಸ್ತುತ ಕಾರ‍್ಯನಿರ್ವಹಿಸುವ ಜೀಪು ಇನ್ನೊಂದು ಕಡೆ ಕೆಲಸ ಮುಗಿಸಿ ಬರುವ ತನ ಕಾಯಬೇಕಾದ ಪರಿಸ್ಥಿತಿ ಇದೆ. ಇದಲ್ಲದೆ ಮಳೆಗಾಲದಲ್ಲಿ ಗ್ರಾಹಕರ ದೂರುಗಳು ಹೆಚ್ಚಾಗಿರುವುದರಿಂದ ಕೂಡಲೇ ಇನ್ನೆರಡು ಜೀಪು ಹಾಗೂ ಲೈನ್‌ಮೆನ್‌ಗಳನ್ನು ಒದಗಿಸಿಕೊಡಬೇಕೆಂದು ವಿದ್ಯುಚ್ಛಕ್ತಿ ಮಂಡಳಿ ಹಾಗೂ ಶಾಸಕ ಯು.ಟಿ. ಖಾದರ್ ಅವರಿಗೆ ಜಪ್ಪಿನಮೊಗರು ಕಾರ್ಪೋರೇಟರ್ ಜೆ. ನಾಗೇಂದ್ರ ಕುಮಾರ್ ಮನವಿ ನೀಡಿ ಒತ್ತಾಯಿಸಿದ್ದಾರೆ.
ಮಂಗಳೂರು: ಕುದ್ರೋಳಿಯಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರೂ  ಮೇಯರ್ ಅವರು ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ಪ್ರಕರಣವನ್ನು ದಂಡ ವಿಧಿಸಿ ಮುಚ್ಚಿ ಹಾಕಿರುವುದನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತೀವ್ರವಾಗಿ ಖಂಡಿಸಿದೆ.
ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಹಸಿಕ ರೀತಿಯಲ್ಲಿ ದಾಳಿ ನಡೆಸಿದ್ದು, ಆದರೆ ಪ್ರಕರಣವನ್ನು ಮುಚ್ಚಿ ಹಾಕಿ ಮನಪಾ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಮನೋಬಲ ಕುಗ್ಗಿಸಿದಂತಾಗಿದೆ ಎಂದು ಅದು ಆರೋಪಿಸಿದೆ. ಈ ಪ್ರಕರಣವನ್ನು ಪುನರ್ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಳ್ಳಬೇಕು. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಯಾಗಬೇಕೆಂದು ವಿ.ಹಿಂ.ಪ. ಹಾಗೂ ಬಜರಂಗದಳ ಮನಪಾ ಆಯುಕ್ತರನ್ನು ಒತ್ತಾಯಿಸಿದೆ.
ಬಂಟ್ವಾಳ: ನೈರುತ್ಯ ಪದವೀಧರರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ, ರಾಷ್ಟ್ರೀಯ ವಕೀಲರ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಬಂಟ್ವಾಳ ತಾಲೂಕು ವಕೀಲರ ಸಂಘದ ಕಾರ‍್ಯಾಲಂiiಕ್ಕೆ ಭೇಟಿ ನೀಡಿದರು. ಈ ಸಂದರ್ಭ ಸಂಘಧ ಅಧ್ಯಕ್ಷ ಸುರೇಶ್ ಪೂಜಾರಿ, ಕಾರ‍್ಯದರ್ಶಿ ಗಣೇಶ್ ಪೈ, ಪದಾಧಿಕಾರಿಗಳಾದ ವಿಶ್ವನಾಥ ಗೌಡ, ಸತೀಶ್ ಕುಮಾರ್, ಚಂದ್ರಶೇಖರ್ ರಾವ್, ಚೆನ್ನಪ್ಪ ಸಾಲ್ಯಾನ್,  ಕಬೀರ್ ಕೆಮ್ಮಾರ ಮತ್ತಿತರರು ಅವರನ್ನು ಸ್ವಾಗತಿಸಿದರು.
ಕುಂದಾಪುರ: ಮಾನವ ತನ್ನ ಬದುಕನ್ನು ಉತ್ಕೃಷ್ಟ ಗೊಳಿಸುವ ನಿಟ್ಟಿನಲ್ಲಿ ಆಸೆ, ದುರಾಸೆಗೆ ಒಳಗಾಗಿ ಪರಿಸರದ ಮೇಲೆ ಮಿತಿಮೀರಿ ದೌರ್ಜನ್ಯ ಎಸೆಗಿದಾಗ ಮುಂದಿನ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳು ಸಂಪೂರ್ಣವಾಗಿ ಬರಿದಾಗಿ ಬಿಡುವ ಸಾಧ್ಯತೆಯಿದೆ ಎಂದು ಕೋಟ ವಿವೇಕ ಪಪೂ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಜಗದೀಶ ನಾವುಡ ಹೇಳಿದರು.
ಅವರು ಮಂಗಳವಾರ ಹೆಮ್ಮಾಡಿಯ ಜನತಾ ಪಪೂ ಕಾಲೇಜಿನಲ್ಲಿ ಪಂಚಗಂಗಾ ಇಕೋ ಕ್ಲಬ್ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಕೈಗಾರಿಕೀಕರಣ ಹಾಗೂ ಕೃಷಿ ವಿಸ್ತರಣೆ ಚಟುವಟಿಕೆಗಳಿಗೆ ಶುದ್ದ ನೀರಿನ ಸಂಪನ್ಮೂಲಗಳನ್ನು ಸಿಕ್ಕಾಪಟ್ಟೆ ಬಳಸಿದ ಪರಿಣಾಮ ಒಂದೆಡೆ ಜಲಮಾಲಿನ್ಯ ಉಂಟಾದರೆ, ಇನ್ನೊಂದೆಡೆ ಶುದ್ದ ಕುಡಿಯುವ ನೀರಿನ ಅಭಾವ, ಜೊತೆಗೆ ಜಲಚರ ಜೀವ ವೈವಿದ್ಯವು ಸರ್ವನಾಶದತ್ತ ಸಾಗುತ್ತಿದೆ. ವಾಯು ಮಾಲಿನ್ಯದಿಂದ ಹಸಿರು ಮನೆ ಪರಿಣಾಮ, ಓಝೋನ್ ಪದರ ನಾಶ, ಆಮ್ಲ ಮಳೆಯಂತಹ ಸಮಸ್ಯೆಗಳು ಜಾಗತಿಕ ಮಟ್ಟದಲ್ಲಿ ಸೃಷ್ಠಿಯಾಗಿ ಮಾನವ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.
ನಮ್ಮ ಸುತ್ತಮುತ್ತಲಿನ ಘಟಕಾಂಶ ಹಾಗೂ ಜೀವ ಸಂಕುಲಕ್ಕೂ ಇರುವ ಹೊಂದಾಣಿಕೆ ತಪ್ಪಿದಾಗ ಜೀವ ಜಾಲಕ್ಕೆ ಹಾನಿ ಖಚಿತ, ಪೃಕೃತಿಯಲ್ಲಿ ಮರಗಿಡ ಸಸ್ಯಗಳು ಕಾರ್ಬನ್ ಆಕ್ಸೈಡ್ ಸೇವಿಸಿ ಆಮ್ಲಜನಕ ಬಿಡುಗಡೆ ಮಾಡಿ ಪರಿಸರ ಸಮತೋಲನ ಕಾಪಾಡುತ್ತದೆ ಆದರೆ ಈಗ,  ಸಸ್ಯಗಳು ಕಾರ್ಬನ್ ಆಕ್ಸೈಡ್ ಜಾಸ್ತಿ ಸೇವಿಸಿ ಆಮ್ಲಜನಕ ಕಡಿಮೆ  ಬಿಡುಗಡೆ ಮಾಡುವುದರಿಂದಲೇ ಪರಿಸರದಲ್ಲಿ ಉಷ್ಣತೆ ಜಾಸ್ತಿಯಾಗಿ ಅನೇಕ ಸೂಕ್ಷ್ಮ ಜೀವಿಗಳು ಸಾಯುತ್ತಿದ್ದು, ಮನುಷ್ಯನು ಸಹ ಗುಣ ಪಡಿಸಲಾಗದ ಮಾರಣಾಂತಿಕ ಖಾಯಿಲೆಗೆ  ತುತ್ತಾಗಿದ್ದಾನೆ. ಪರಿಸರದ ಸಂರಕ್ಷಣೆಯ ಆಚರಣೆ ಕೇವಲ ಒಂದು ದಿವಸಕ್ಕೆ ಮಾತ್ರ ಸೀಮಿತವಾಗಿರದೆ ಅನುದಿನವು ಮೈಗೂಡಿಸಿಕೊಳ್ಳಬೇಕು ಎಂದರು. ಮನೆಯ ಸುತ್ತ ಮುತ್ತ ಸ್ವಚ್ಚತೆಯನ್ನು ಕಾಪಾಡಿ ಗಿಡ ನೆಟ್ಟು ಪರಿಸರ ರಕ್ಷಣೆ ಮಾಡಿದಾಗ ವಿಶ್ವ ಪರಿಸರ ದಿನಾಚರಣೆ ಸಾರ್ಥಕ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ.ಎಸ್. ಮಧ್ಯಸ್ಥ ಮಾತನಾಡಿ  ಈ ಪರಿಸರದಲ್ಲಿ ಮನುಷ್ಯನು ಮಾತ್ರ   ವಿಪರೀತ ಬುದ್ದಿಯಿಂದ ತನ್ನ ನಾಶಕ್ಕೆ ತಾನೇ ಕಾರಣನಾಗಿದ್ದಾನೆ, ನನ್ನೊಂದಿಗೆ ಎಲ್ಲರೂ ಬದುಕಬೇಕೆಂಬ ಮನೋಭಾವನೆ ಇದ್ದರೆ ಮುಂದಿನ ಪೀಳಿಗೆ ಉಳಿಯಲು ಸಾಧ್ಯಎಂದರು. ಕನ್ನಡ ಭಾಷಾ ಉಪನ್ಯಾಸಕ ಮಂಜುನಾಥ.ಕೆ.ಎಸ್. ಸ್ವಾಗತಿಸಿದರು. ರಾಜ್ಯ ಶಾಸ್ತ್ರ ಉಪನ್ಯಾಸಕ ಸುಧಾಕರ ವಕ್ವಾಡಿ ವಂದಿಸಿದರು.
ಕಿನ್ನಿಗೋಳಿ: ಮೈಸೂರಿನಲ್ಲಿ ನಡೆದ ಆರೋಹಣ ಜಿಲ್ಲಾ ಸಮಾವೇಶದಲ್ಲಿ ಕಿನ್ನಿಗೋಳಿ ರೋಟರಿ ಕ್ಲಬ್‌ಗೆ ೫ ಜಿಲ್ಲಾ ಪ್ರಶಸ್ತಿ ದೊರಕಿದೆ. ರೋಟರ‍್ಯಾಕ್ಟ್ ಗೆ ಪ್ರಥಮ, ಹೊಸ ಪೀಳಿಗೆ ಉತ್ತಮ ಕ್ಲಬ್‌ನಲ್ಲಿ ದ್ವಿತೀಯ, ಏಡ್ಸ್ ತಿಳುವಳಿಕೆ ಮತ್ತು ತಡೆಗಟ್ಟುವಿಕೆ ವಿಭಾಗದಲ್ಲಿ ತೃತೀಯ, ಇಂಟರಾಕ್ಟ್‌ಗೆ  ತೃತೀಯ, ರೋಟರಿ ಗ್ರಾಮಿಣ ದಳಕ್ಕೆ ತೃತೀಯ ಪ್ರಶಸ್ತಿ ಲಭಿಸಿದೆ.
ಜಿಲ್ಲಾ ಗವರ್ನರ್ ಎಚ್. ಎಲ್. ರವಿ, ನಿಯೋಜಿತ ಜಿಲ್ಲಾ ಗವರ್ನರ್ ದೇವದಾಸ್ ರೈ, ಜ್ಞಾನ ವಸಂತ ಶೆಟ್ಟಿ, ಕೆ. ಆರ್ ಪಾಟ್ಕರ್, ವಲಯ ಸೇನಾ ಹೆರಿಕ್ ಪಾಯಸ್, ಕಿಗೋಳಿ ರೋಟರಿ ಅಧ್ಯಕ್ಷ ಜಯರಾಮ ಪೂಂಜ, ಕಾರ್ಯದರ್ಶಿ ಯಶವಂತ ಎ., ಕೆ. ಬಾಲಕೃಷ್ಣ ಶೆಟ್ಟಿ, ಪಿ. ಸತೀಶ್ ರಾವ್, ಜೆರಾಲ್ಡ್ ಮೆನೇಜಸ್ ಮತ್ತು ಶರತ್ ಶೆಟ್ಟಿ ಉಪಸ್ಥಿತರಿದ್ದರು.
ಕಿನ್ನಿಗೋಳಿ: ಸರಕಾರಿ ಶಾಲೆಗಳಲ್ಲೀಗ ಅತ್ಯುತ್ತಮ ಸವಲತ್ತುಗಳು ವಿದ್ಯಾರ್ಥಿಗಳಿಗೆ ಸಿಗುತ್ತಿದ್ದು, ಕನ್ನಡ ಮಾಧ್ಯಮದಲ್ಲಿ ಕಲಿತವರೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಾರೆ. ಹಾಗಾಗಿ ಕನ್ನಡ ಮತ್ತು ಸರಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಬೇಡ ಎಂದು ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ ಹೇಳಿದರು.
ಅವರು ಮಂಗಳವಾರ ಅನಂತ ಪ್ರಕಾಶ ಹಾಗೂ ಯಕ್ಷನಾದ ಕೊಡೆತ್ತೂರು ಸಂಸ್ಥೆಗಳ ಆಸರೆಯಲ್ಲಿ ಉಲ್ಲಂಜೆ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಆರನೆಯ ವರ್ಷದ ಯಕ್ಷಗಾನ, ಯೋಗ, ಸಂಗೀತ, ನೃತ್ಯ ತರಗತಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಶಾಲೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ಲಲಿತಕಲೆಗಳ ಅಭ್ಯಾಸದಿಂದ ಸಿಗುತ್ತದೆ ಎಂದರು. ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ಶಕುನ ಉಡುಪ, ಶಿಕ್ಷಕರಾದ ಹರಿರಾಜ್, ರಾಜೇಶ್ ಕಟೀಲ್, ರವಿ ಕೆ., ಶಾಲಾಭಿವೃದ್ಧಿ ಸಮಿತಿಯ ದಯಾನಂದ್ ಮತ್ತಿತರರಿದ್ದರು.
ಮುಖ್ಯ ಶಿಕ್ಷಕಿ ಮಂಗಳಾ ಎಸ್. ಭಟ್ ಪ್ರಸ್ತಾವನೆಗೈದರು. ಶಿಕ್ಷಕಿ ಜೆಸಿಂತಾ ಡಿಸೋಜ ಸ್ವಾಗತಿಸಿದರು. ಸರೋಫಿ ಜ್ಯೂಲಿಯಟ್ ವಂದಿಸಿದರು.
Newer Posts Older Posts Home
Recent Updates
Recomment to Your Friends
Current Views
Blog Archive
Copyright © 2012. Basnetg.com. All rights reserved.
Home