ಮಂಗಳೂರು: ಗುಜರಾತಿನಿಂದ ತಮಿಳುನಾಡಿಗೆ ತೆರಳುತ್ತಿದ್ದ ಮಹಿಳೆ ರೈಲಿನಲ್ಲೇ ಗಂಡುಮಗುವಿಗೆ ಜನ್ಮ ನೀಡಿದ ಘಟನೆ ನಿನ್ನೆ ಮಂಗಳೂರಿನಲ್ಲಿ ನಡೆದಿದೆ.ರೈಲಿನಲ್ಲಿ ಸಹ ಪ್ರಯಾಣಿಕ ರಾಗಿದ್ದ ರಯೀಸ್ ಎಂಬವರು ಮಾನವೀಯತೆಯಿಂದ ಸ್ಪಂದಿಸಿದ ಕಾರಣ ಮಹಿಳೆ ಹಾಗೂ ಮಗು ಪ್ರಾಣಾಪಾ ಯದಿಂದ ಪಾರಾಗಿದ್ದಾರೆ.
ಮಹಾರಾಷ್ಟ್ರದ ಧೋಡಾ ಜಿಲ್ಲೆಯ ಶ್ರೀಪುರದ ಲಲಿತಾ ಧಾರಾಸಿಂಗ್ ಎಂಬ ಮಹಿಳೆ ಕೂಲಿ ಕೆಲಸಕ್ಕಾಗಿ ಮನೆ ಮಂದಿ ಜೊತೆ ತಮಿಳುನಾಡಿಗೆ ತೆರಳುತ್ತಿದ್ದಳು. ತುಂಬು ಗರ್ಭಿಣಿ ಯಾಗಿದ್ದ ಈಕೆಗೆ ರೈಲು ಸುರತ್ಕಲ್ ತಲುಪುತ್ತಿರುವಂತೆ ಪ್ರಸವ ವೇದನೆ ಉಂಟಾಗಿತ್ತು. ತಕ್ಷಣ ಈಕೆಯನ್ನು ಶೌಚಾಲಯದೊಳಗೆ ಹಾಕಿದ ಮನೆಮಂದಿ ಶೌಚಾಲಯದ ಹೊರಗೆ ಕಾವಲು ಕಾದಿದ್ದರು. ಇದನ್ನು ಸಹ ಪ್ರಯಾಣಿಕರಾದ ರಯೀಸ್ ಎಂಬವರು ಗಮನಿಸಿ ಮಹಿಳೆಯನ್ನು ಕಂಪಾರ್ಟ್‌ಮೆಂಟ್‌ಗೆ ಕರೆತಂದು ಸಹಜ ಹೆರಿಗೆ ಮಾಡಿಸಿದ್ದಾರೆ. ಇದಕ್ಕೆ ಸಹ ಪ್ರಯಾಣಿಕರು ಸಹಕಾರ ನೀಡಿದರಾದರೂ ಮಹಿಳೆಯರು ಮಾತ್ರ ಸಹಕಾರ ನೀಡಲೇ ಇಲ್ಲ. ಅಲ್ಲದೆ ರೈಲು ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಲು ಚಾಲಕ ಸಹಕಾರ ನೀಡಲಿಲ್ಲ ಎಂದು ತಿಳಿದು ಬಂದಿದೆ. ಅಂತೂ ಸಹ ಪ್ರಯಾಣಿಕರಿಂದ ಹಣ ಸಂಗ್ರಹಿಸಿ ಬಾಡಿಗೆ ವಾಹನದ ಮೂಲಕ ಮಹಿಳೆಯನ್ನು ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Tagged with
dk,
lnews
ಬಂಟ್ವಾಳ: ಕಳೆದ ಸುಮಾರು ನಾಲ್ಕು ವಾರಗಳ ಹಿಂದೆ ತನ್ನ ಪತ್ನಿ ಮನೆಗೆ ಕಾಲೇಜು ವಿದ್ಯಾರ್ಥಿನಿ ಓರ್ವಳನ್ನು ಕರೆಯಿಸಿ ವಿವಾದಕ್ಕೆ ಸಿಲುಕಿ ಕೊಂಡಿದ್ದ ಮುಸ್ಲಿಂ ಸಮುದಾಯದ ಪ್ರತಿಷ್ಠಿತ ಸಂಘಟನೆಯಲ್ಲಿ ಗುರುತಿಸಿ ಕೊಂಡಿದ್ದ ಸಂಘಟಕ, ಪಾಣೆಮಂಗಳೂರಿನ ಆಲಡ್ಕ ನಿವಾಸಿ ಈಗ ಗೆಳತನ ಬೆಳೆಸಿ ಕೆಲಸ ಕಳೆದುಕೊಂಡಿದ್ದಾನೆ. ತುಂಬೆ ಸಮೀಪದ ಮಿಲ್ಲೊಂದರಲ್ಲಿದ್ದ ಈತನನ್ನು ಮಿಲ್ ಮಾಲೀ ಕರು ಕೆಲಸದಿಂದ ತೆಗೆದು ಹಾಕಿರುವುದಾಗಿ ತಿಳಿದುಬಂದಿದೆ.
ಆಲಡ್ಕದಲ್ಲಿರುವ ತನ್ನ ಪತ್ನಿ ಮನೆಗೆ ಯಾರೂ ಇಲ್ಲದ ವೇಳೆ ಯುವತಿಯೊಬ್ಬ ಳನ್ನು ಕರೆಯಿಸಿದ ಆರೋಪದಲ್ಲಿ ಸ್ಥಳೀಯ ಯುವಕರ ಆಕ್ರೋಶಕ್ಕೆ ಗುರಿಯಾದ ಸಂಘಟಕನ ಮೇಲೆ ಹಲ್ಲೆಯೂ ನಡೆದಿತ್ತು. ಈ ಹಿಂದೆ ಮುಸ್ಲಿಂ ಪ್ರತಿಷ್ಠಿತ ಸಂಘಟನೆ ಯೊಂದರಲ್ಲಿ ಗುರುತಿಸಿಕೊಂಡಿದ್ದ ಆತ ಮೂಲತಃ ಬಂಗ್ಲೆಗುಡ್ಡೆ ನಿವಾಸಿಯಾಗಿದ್ದು, ಮೊಲಾರ್‌ಗಳ ಕುಟುಂಬಕ್ಕೆ ಸೇರಿದವರಾಗಿ ದ್ದರಿಂದ ಘಟನೆ ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮನೆಯಲ್ಲಿ ಪತ್ನಿ ಹಾಗೂ ಇತರ ಸಂಬಂಧಿಕರು ಇಲ್ಲದ ವೇಳೆ ಯುವತಿಯನ್ನು ಕರೆಯಿಸಿದ್ದು, ಸಂಶಯಕ್ಕೆ ಕಾರಣವಾಗಿತ್ತು. ಆಕೆ ಹಿಂದು ಯುವತಿ ಯಾದ್ದರಿಂದ ಮತೀಯ ರಾದ್ಧಾಂತವಾಗುವ ಸಾಧ್ಯತೆಯೂ ಎದುರಾಗಿತ್ತು. ಅಲ್ಲದೇ ಘಟನಾ ಸಂದರ್ಭ ಯುವತಿಯ ಕುರಿತು ತಪ್ಪು ಮಾಹಿತಿ ನೀಡಿದ್ದು, ಮತ್ತಷ್ಟು ವಿವಾದಕ್ಕೆ ಕಾರಣವಾಗಿತ್ತು. ಸಂಘಟಕನ ಮನೆಯಲ್ಲಿದ್ದ ಯುವತಿಯನ್ನು ಮಿಲ್‌ನಲ್ಲಿ ಕೆಲಸ ಮಾಡುವವಳು ಎಂದು ಹೇಳಿಕೊಂಡು ಆಕೆಯ ಪರಿಚಯವನ್ನು ಮರೆಮಾಚಿ ಪ್ರಕರಣದ ದಾರಿ ತಪ್ಪಿಸಿದ್ದನು. ಆಕೆ ಮಂಗಳೂರಿನ ಟ್ಯುಟೋರಿಯಲ್ ಕಾಲೇಜೊಂದರಲ್ಲಿ ಕಲಿಯುತ್ತಿದ್ದು, ರಜೆಯಲ್ಲಿ ಫರಂಗಿಪೇಟೆಯ ಬಟ್ಟೆಯಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಚಾರ ಬಳಿಕ ತಿಳಿದುಬಂದಿದೆ. ಈ ಮಧ್ಯೆ ಇಬ್ಬರಿಗೂ ಗೆಳೆತನ ಬೆಳೆದಿದ್ದು, ಮನೆಗೂ ಆಹ್ವಾನ ನೀಡಿದ್ದನು. ಈ ವಿಚಾರ ತಿಳಿದ ಸ್ಥಳೀಯರು ಮನೆ ಹತ್ತಿರ ಜಮಾಯಿಸಿದ್ದರು. ಸಂಘಟಕನ ವರ್ತನೆಗೆ ಸ್ವಲ್ಪ ಅನುಮಾನಗೊಂಡಿದ್ದರು. ಅಲ್ಲದೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹುಡುಗಿಯನ್ನು ಕರೆಯಿಸಿದ್ದು, ಮತ್ತೊಂದು ವಿವಾದಕ್ಕೆ ಕಾರಣವಾಯಿತು.
Tagged with
dk,
lnews
ಕಾರ್ಕಳ: ಹತ್ತು ವರ್ಷಗಳ ನಂತರ ಸತ್ತ ವ್ಯಕ್ತಿಯ ಪ್ರೇತಾತ್ಮವೊಂದು ವಿದ್ಯುತ್ ಸಂಪರ್ಕ ಪಡೆದಿರುವ ಘಟನೆ ಕಾರ್ಕಳದ ಹಿರ್ಗಾನದಲ್ಲಿ ನಡೆದಿದೆ. ಇಂಥಹದೊಂದು ವಿಸ್ಮಯಕಾರಿ ಘಟನೆಯು ಕಾರ್ಕಳ ಮೆಸ್ಕಾಂ ವಿಭಾಗದಿಂದ ಬೆಳಕಿಗೆ ಬಂದಿದೆ.
ಹಿರ್ಗಾನ ಮಂಗಿಲಾಯದ ಸುಬ್ರಾಯ ನಾಯಕ್ ಎಂಬವರು ೧೯೯೮ ಜನವರಿ ೭ರಂದು ಮೃತಪಟ್ಟಿದ್ದಾರೆ. ಹೀಗಿದ್ದರೂ ೨೦೦೮ ನವಂಬರ್ ೧೨ರಂದು ಇವರಿಂದ ಸಹಿ ಪಡೆದು ವಿದ್ಯುತ್ ಸಂಪರ್ಕವನ್ನು ಪಕ್ಕದ ಮನೆಯವರಿಗೆ ನೀಡಲಾಗಿದೆ. ಮೆಸ್ಕಾಂ ಇಲಾ ಖಾಧಿಕಾರಿಗಳು ಅರ್ಜಿಯ ವಿಚಾರಣೆಯನ್ನು ನಡೆಸದೇ ವಿದ್ಯುತ್ ಸಂಪರ್ಕಕ್ಕೆ ಸಹಿ ಹಾಕಿರುವುದೇ ಈ ಅವಾಂತರಕ್ಕೆ ಕಾರಣವಾಗಿದೆ. ನೆರೆಕರೆಯ ನಿವಾಸಿಗಳಾದ ನಾರಾಯಣ, ನಾಗೇಶ್ ಎಂಬವರು ಸತ್ತ ವ್ಯಕ್ತಿಯ ನಕಲಿ ಸಹಿ ಬಳಸಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆಂದು ಆರೋಪಿಸಿ ಮೃತವ್ಯಕ್ತಿಯ ಮಗ ರಾಧಾಕೃಷ್ಣ ನಾಯಕ್ ಅವರು ನೀಡಿರುವ ದೂರಿನನ್ವಯ ಆರೋಪಿಗಳ ವಿರುದ್ಧ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
Tagged with
lnews,
udupi
ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಸದಾನಂದ ಗೌಡರನ್ನು ಅಧಿಕಾರದಿಂದ ಕೆಳಗಿಳಿಸಲು ಯಡಿಯೂರಪ್ಪ ಬೆಂಬಲಿಗರು ತಮ್ಮ ಹೋರಾಟ ಆರಂಭಿಸಲಿದ್ದಾರೆ.
ಈ ಬಾರಿ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿ ಎನ್ನುವ ಬದಲು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಲಿದ್ದಾರೆ. ಸದಾನಂದ ಗೌಡರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಅವರು ತೆಗೆದುಕೊಂಡ ನಿರ್ಧಾರವೇ ಅಂತಿಮ. ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ಪಕ್ಷ ಹೀನಾಯ ಸ್ಥಿತಿ ತಲುಪಲಿದೆ. ಪಕ್ಷವನ್ನು ಮುನ್ನಡೆಸಿ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕಾಗಿದ್ದರೆ ಜಗದೀಶ್ ಶೆಟ್ಟರ್ ಅವರ ನಾಯಕತ್ವದಿಂದಲೇ ಸಾಧ್ಯ. ಶೆಟ್ಟರ್ ನಾಯಕತ್ವದಲ್ಲಿ ಮುನ್ನಡೆದರೆ ಪಕ್ಷದಿಂದ ದೂರ ಸರಿಯುತ್ತಿರುವ ವೀರಶೈವ ಮತಗಳು ಬಲ ಬರಲಿದೆ. ಹೆಚ್ಚಿನ ಸ್ಥಾನ ದೊರೆಯಲಿದೆ. ಈ ಹಿನ್ನಲೆಯಲ್ಲಿ ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ಜಗದೀಶ್ ಶೆಟ್ಟರನ್ನು ನೇಮಕಮಾಡಿ ಎಂದು ಹೋರಾಟ ಆರಂಭಿಸಲಿದ್ದಾರೆ.
ಶೆಟ್ಟರ್ ಅವರನ್ನು ಶಾಸಕಾಂಗ ಪಕ್ಷದ ನಾಯಕ ಎಂದು ಆಗ್ರಹಿಸಿ ಸಹಿ ಸಂಗ್ರಹವೂ ನಡೆಯಲಿದೆ. ಇದಕ್ಕೆ ಸಮ್ಮತಿಸದಿದ್ದರೆ ಸದಾನಂದ ಗೌಡರ ವಿರುದ್ದವಾಗಿ ಸರಕಾರವನ್ನೇ ಉರುಳಿಸಲು ಯಡಿಯೂರಪ್ಪ ಬೆಂಬಲಿಗರು ಸಿದ್ದರಾಗಿದ್ದಾರೆ.ರಾಜ್ಯ ವಿಧಾನಸಭೆಗೆ ಡಿಸೆಂಬರ್‌ನಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಸರಕಾರವನ್ನೇ ಉಳಿಸಿಕೊಂಡೇ ಭಿನ್ನಮತ ಬಗೆಹರಿಸಲು ಒಂದು ಸೂತ್ರ ಸಿದ್ಧಪಡಿಸಲಿದ್ದಾರೆ. ವಿಧಾನ ಪರಿಷತ್‌ನ ೧೫ ಸ್ಥಾನಗಳಿಗೆ ಚುನಾವಣೆ ಮುಗಿಯುತ್ತಿದ್ದಂತೆ ಈ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.
Tagged with
snews,
yeddi
ಕುಂಬಳೆ: ಕೇರಳದ ಕ್ರಾಂತಿಕಾರಿ ಮಾರ್ಕ್ಸಿಸ್ಟ್ ಪಕ್ಷದ ರಾಜ್ಯ ನಾಯಕ ಟಿ.ಪಿ. ಚಂದ್ರಶೇಖರನ್ ಅವರ ಬರ್ಬರ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಮಂಗಳೂರು ಹಾಗೂ ಮೈಸೂರಿಗೂ ವಿಸ್ತರಿಸಿದ್ದಾರೆ.
ಚಂದ್ರಶೇಖರನ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲೋರ್ವನಾದ ರಜೀಶ್ ಎಂಬಾತನಿಗಾಗಿ ಮಂಗಳೂರಿನಲ್ಲಿ ಬಲೆ ಬೀಸಲಾಗಿದೆ. ಕೊಲೆ ನಡೆಸಿದ ಬಳಿಕ ಪಲಾಯನಗೈದ ಈತನ ಪತ್ತೆಗೆ ವ್ಯಾಪಕ ಬಲೆ ಬೀಸಲಾಗಿತ್ತು. ಈತನ ಮೊಬೈಲ್ ಇರುವಿಕೆಯ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿತ್ತು. ಈ ನಡುವೆ ರಜೀಶ್ ಮಂಗಳೂರಿನ ರಹಸ್ಯ ಕೇಂದ್ರದಲ್ಲಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಎಡಿಜಿಪಿ ಅವರ ಮಾರ್ಗದರ್ಶನದಂತೆ ವಿಶೇಷ ತನಿಖಾ ಪಡೆಯ ತಂಡವೊಂದು ಮಂಗಳೂರಿಗೆ ತೆರಳಿದೆ. ಕೊಲೆ ಕೃತ್ಯದ ಬಳಿಕ ಮುಂಬೈಯಲ್ಲಿ ತಂಗಿದ್ದ ರಜೀಶ್ ಇದೀಗ ಮಂಗಳೂರಿನಲ್ಲಿರುವುದಾಗಿ ಖಚಿತ ಮಾಹಿತಿ ದೊರೆತಿದೆ.
ಈ ಮಧ್ಯೆ, ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಆರೋಪಿ ಸಜಿತ್ ಎಂಬಾತ ಕೃತ್ಯದ ಬಳಿಕ ಮೈಸೂರಿನಲ್ಲಿ ತಂಗಿದ್ದು, ಈ ಬಗೆಗಿನ ಮಾಹಿತಿ ಸಂಗ್ರಹಕ್ಕಾಗಿ ಈತನನ್ನು ಕೂಡಿಕೊಂಡು ಪೊಲೀಸ್ ತಂಡ ಮೈಸೂರಿಗೆ ತೆರಳಿದೆ.
Tagged with
kasaragod,
lnews
ಮಂಗಳೂರು: ರಾಷ್ಟ್ರ ಮತ್ತು ಧರ್ಮ ಇವುಗಳ ರಕ್ಷಣೆಗಾಗಿ ಕಟಿಬದ್ಧ ವಾಗಿರುವ ರಾಜ್ಯರಾಜ್ಯಗಳಲ್ಲಿನ ಹಿಂದು ತ್ವವಾದಿ ಸಂಘಟನೆಗಳು ಮತ್ತು ಹಿಂದು ತ್ವವಾದಿ ವಿಚಾರವಂತರು, ನ್ಯಾಯವಾ ದಿಗಳು, ಧರ್ಮಾಚಾರ್ಯರು ಮತ್ತು ನಿಯತಕಾಲಿಕೆಗಳ ಸಂಪಾದಕರ ಅಖಿಲ ಭಾರತ ಅಧಿವೇಶನವು ಗೋವಾದಲ್ಲಿ ೧೦ ರಿಂದ ೧೪ ಜೂನ್ ಈ ಕಾಲಾವಧಿಯಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗಿದೆ.
ಭಾರತವರ್ಷದಲ್ಲಿ ಹಿಂದೂ ರಾಷ್ಟ್ರ ಸ್ಥಾಪಿಸುವುದು, ಈ ಅಧಿವೇಶನದ ಪ್ರಮುಖ ಉದ್ದೇಶವಾಗಿದೆ. ೨೦ ರಾಜ್ಯ ಗಳ ೧೭೫ ಕ್ಕಿಂತ ಹೆಚ್ಚು ಹಿಂದುತ್ವವಾದಿ ನೇತಾರರು ಮತ್ತು ವಿಚಾರವಂತರು ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವಾತಂತ್ರ್ಯ ದೊರಕಿದ ನಂತರ ಪ್ರಥಮ ಬಾರಿ ಇಷ್ಟು ದೊಡ್ಡ ರಾಷ್ಟ್ರೀಯ ಅಧಿವೇಶನ ನಡೆಯುತ್ತಿರುವುದರಿಂದ ಇದು ಎಲ್ಲ ದೃಷ್ಟಿಯಿಂದ ಐತಿಹಾಸಿಕ ವಾಗಿದೆ. ಈ ಅಧಿವೇಶನದಿಂದ ಹಿಂದೂಗಳ ರಾಷ್ಟ್ರೀಯ ಸಂಘಟನೆಗಳ ದಿಶೆಯನ್ನು ನಿಶ್ಚಿತಗೊಳಿಸಲಿದ್ದೇವೆ ಹಿಂದೂ ಜನಜಾಗೃತಿ ಸಮಿತಿ ತಿಳಿಸಿದೆ.
Tagged with
dk,
lnews
ಬಳ್ಳಾರಿ: ಜನಾರ್ದನ ರೆಡ್ಡಿಗೆ ಜಾಮೀನು ನೀಡಲು ನ್ಯಾಯಾದೀಶರಿಗೆ ಲಂಚ ನೀಡಿದ ಆರೋಪವನ್ನು ತಳ್ಳಿ ಹಾಕಿರುವ ಸೋಮ ಶೇಖರ ರೆಡ್ಡಿ, ನಮ್ಮನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.
ನಿನ್ನೆ ಸಂಜೆ ಬಳ್ಳಾರಿಯಲ್ಲಿ ಕರೆ ದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತ ನಾಡಿದ ಅವರು, ರೆಡ್ಡಿ ಜಾಮೀನಿಗೆ ಲಂಚ ನೀಡಿದ ಆರೋಪ ಸುಳ್ಳು. ಇದು ರಾಜಕೀಯ ಪಿತೂರಿಯಾ ಗಿದ್ದು, ನಮ್ಮನ್ನು ಟಾರ್ಗೆಟ್ ಮಾಡಲಾ ಗಿದೆ ಎಂದು ಸೋಮಶೇಖರ ರೆಡ್ಡಿ ಹೇಳಿದರು. ಬಾಯಿಗೆ ಬಂದಂತೆ ನಮ್ಮ ವಿರುದ್ಧ ಆರೋಪ ಮಾಡಿದ್ದಾರೆ. ಸಿಬಿಐ ಮೇಲೆ ನಮಗೆ ಪೂರ್ಣ ವಿಶ್ವಾಸವಿದೆ. ಸತ್ಯ ಹೊರಬರಲಿದೆ ಎಂದು ಸೋಮ ಶೇಖರ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
Tagged with
snews
ಮಂಗಳೂರು: ಬೆಳ್ತಂಗಡಿಯ ಕಾಜೂರು ರಹಮ್ಮಾನಿಯ ಜುಮ್ಮಾ ಮಸಿದಿ ಮತ್ತು ದರ್ಗಾ ಶರೀಫ್ ಆಡಳಿತ ಸಮಿತಿಗೆ ನಡೆದ ಚುನಾವಣೆಯ ಫಲಿತಾಂಶಕ್ಕೆ ತಡೆಯಾಜ್ಞೆ ನೀಡಲಾಗಿದೆ. ಡಿ.೧೬ಮತ್ತು ಫೆ.೨ರ ಚುನಾವಣಾ ಪ್ರಕಟಣೆಯನ್ನು ತಪ್ಪಾಗಿ ಸೃಷ್ಟಿಸಿ ಚುನಾವಣಾಧಿಕಾರಿ ಮತ್ತು ಆಡಳಿತಾಧಿಕಾರಿಯ ಸಹಿಯನ್ನು ಜೆರಾಕ್ಸ್ ಮಾಡಿ ಪ್ರಕಟಣೆಯನ್ನು ಅಂಚೆ ಮೂಲಕ ಮದ್ರಸಗಳಿಗೆ ಕಳಿಸಲಾಗುತ್ತಿದೆ. ಇದು ಅಧಿಕೃತ ಚುನಾವಣಾ ಪ್ರಕಟಣೆ ಅಲ್ಲ. ಈ ರೀತಿಯ ಪ್ರಕಟಣೆ ನೀಡುತ್ತಿರುವವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಠಾಣೆಗೆ ತಿಳುಸವಂತೆ ಆಡಳಿತಾಧಿಕಾರಿ ಕೋರಿದ್ದಾರೆ. ೨೦೧೧ರ ಡಿ.೧೬ರಂದು ಕ್ಷೇತ್ರ ವಿಂಗಡನೆ ಮಾಡಿ ಕಿಲ್ಲೂರು ಕಾಜೂರು ಜಮಾತಿಗೆ ಒಳಪಟ್ಟು ೨೦೧೨ ಫೆ.೨ರಂದು ವೇಳಾ ಪಟ್ಟಿ ಪ್ರಕಟಿಸಿ ಚುನಾವಣೆ ನಡೆಸಲಾಗಿತ್ತು. ಆದರೀಗ ಚುನಾವಣಾ ಫಲಿತಾಂಶಕ್ಕೆ ತಡೆ ನೀಡಲಾಗಿದೆ.
Tagged with
dk,
lnews
ಮುಲ್ಕಿ: ಬಿಜೆಪಿ ಸರಕಾರ ಬಂದ ಮೇಲೆ ಶಿಕ್ಷಕರ ಪ್ರತಿಭಟನೆಗಳು ಹೆಚ್ಚಿವೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಆಯ್ಕೆಯಾಗುತ್ತಿರುವ ಎಂಭತ್ತರ ವೃದ್ಧ ಡಿ.ಎಚ್.ಶಂಕರ ಮೂರ್ತಿಯವರು ಪದವೀಧರರಿಗೆ ಏನೇನೂ ಮಾಡಿಲ್ಲ. ಹಾಗಾಗಿ ನೈಋತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್.ಪಿ.ದಿನೇಶ್ ಹಾಗೂ ಹೊಸೂರು ರಮೇಶ್ ಜೋಯಪ್ಪ ರನ್ನು ಬೆಂಬಲಿಸಬೇಕೆಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಮುಲ್ಕಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಪ್ರಮೋದ್ ಕುಮಾರ್, ಶಾಲೆಟ್ ಪಿಂಟೋ, ಪದ್ಮನಾಭ ನರಿಂಗಾನ, ಗುಣಪಾಲ ಶೆಟ್ಟಿ, ವಸಂತ ಬೆರ್ನಾಡ್, ಫಾರೂಕ್ ಉಳ್ಳಾಲ್, ನೂರ್ ಅಹ ಮ್ಮದ್, ಆಸೀಫ್ ಮುಂತಾದವವರು ಗೋಷ್ಟಿಯಲ್ಲಿದ್ದರು.
Tagged with
dk,
lnews
ಪರಿಸರ ದಿನಾಚರಣೆ ಉದ್ಘಾಟಿಸಿ ಪೇಜಾವರ ಶ್ರೀ
ಉಡುಪಿ: ನೇತ್ರಾವತಿ ನದಿ ತಿರುವು ಯೋಜನೆಯ ಪರಿಣಾಮ ಗಳ ಬಗ್ಗೆ ಅಧ್ಯಯನ ನಡೆಸಿ ವೈಜ್ಞಾನಿಕ ವಾಗಿ ಹಾನಿ ಎಂದು ಕಂಡು ಬಾರದೇ ಇದ್ದಲ್ಲಿ ಯೋಜನೆಯನ್ನು ಕಾರ‍್ಯ ಗತಗೊಳಿಸಲು ಅಡ್ಡಿಯಿಲ್ಲದಿದ್ದರೂ ಮುಂದಿನ ದಿನಗಳಲ್ಲಿ ನದಿಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಾರದು ಎಂದು ಪೇಜಾ ವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳವಾರ ರಾತ್ರಿ ಪರಿಸರ ದಿನಾಚರಣೆಯ ಅಂಗವಾಗಿ ಉಡುಪಿ ಯ ಅಂಬಾಗಿಲುವಿನಲ್ಲಿ ಸುಸಿ ರೋಬಲ್ ರಿಸರ್ಚ್ ಸೆಂಟರ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಜಂಟಿಯಾಗಿ ಆಯೋಜಿಸಿದ ಪರಿಸರ ದಿನಾಚರಣೆಯ ಉದ್ಘಾಟನೆ ನಡೆಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಒಂದು ಲಕ್ಷ ಕಾಡು ಹಾಗೂ ಒಂದು ಲಕ್ಷ ಕೆರೆಯನ್ನು ನಿರ್ಮಾಣ ಮಾಡುವ ಯೋಜನೆಗೆ ಚಾಲನೆ ನೀಡಿದರು.
ಮರಗಳನ್ನು ಕಡಿದು ಕೆರೆಗಳನ್ನು ಮುಚ್ಚಿ ಕಟ್ಟಡ ನಿರ್ಮಾಣ ಮಾಡುವ ಮೂಲಕ ಉದ್ಯಮ ಅಭಿವೃದ್ಧಿ ನಡೆಯು ತ್ತಿದೆ ಇದು ಪರಿಸರಕ್ಕೆ ವಿರುದ್ಧವಾದ ಪ್ರಕ್ರಿಯೆ. ಈ ಪ್ರಕ್ರಿಯೆಯ ಮೂಲಕ ಹಸಿರುಕ್ರಾಂತಿ ಆಗಬೇಕೆಂದು ಪೇಜಾ ವರ ಶ್ರೀ ಕರೆ ನೀಡಿದರು.
ಸಭೆಯಲ್ಲಿ ರಾಜ್ಯ ರೈತ ಸಂಘದ ನೂತನ ಉಪಾಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯ ಅಂತಿಮ ವರದಿಯನ್ನು ಪೇಜಾವರ ಶ್ರೀಗಳಿಗೆ ಹಸ್ತಾಂತರಿಸಿದರು.
Tagged with
lnews,
udupi
ಬೆಂಗಳೂರು: ಭೂವ್ಯಾಜ್ಯ ಇತ್ಯರ್ಥಕ್ಕೆ ಲಂಚ ಸ್ವೀಕರಿಸಿದ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸು ತ್ತಿದ್ದ ಬಿಜೆಪಿ ಶಾಸಕ ವೈ ಸಂಪಂಗಿಗೆ ರಾಜ್ಯ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ.
ಲಂಚ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಾಲಯ ನೀಡಿದ್ದ ತೀರ್ಪನ್ನು ಅಮಾನತ್ತಿನಲ್ಲಿಟ್ಟಿರುವ ಹೈಕೋರ್ಟ್ ವಿಚಾರಣೆಯನ್ನು ಜೂನ್ ೧೮ಕ್ಕೆ ಮುಂದೂಡಿದೆ. ಲೋಕಾಯುಕ್ತ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ಸಂಪಂಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದ್ದಲ್ಲದೆ ಆರೋಪಿಗೆ ೯೦ ಸಾವಿರ ರೂ. ದಂಡ ಪಾವತಿ ಸುವಂತೆ ಸೂಚಿಸಿದೆ.
ವಿಚಾರಣೆ ಪೂರ್ಣ ಗೊಳ್ಳುವವರೆಗೂ ದೇಶ ಬಿಟ್ಟು ತೆರಳದಂತೆ ಆದೇಶ ಮಾಡಿರುವ ಹೈಕೋರ್ಟ್, ಲೋಕಾಯುಕ್ತ ನ್ಯಾಯಾ ಲಯ ವಿಚಾರಣೆಗೆ ಕರೆದಲ್ಲಿ ಹಾಜ ರಾಗುವಂತೆ ಆದೇಶಿಸಿದೆ. ಲಂಚ ಪ್ರಕ ರಣಕ್ಕೆ ಸಂಬಂಧಿಸಿದಂತೆ ಕಳೆದ ಶನಿ ವಾರ ಲೋಕಾಯುಕ್ತ ನ್ಯಾಯಾಲಯ ಸಂಪಂಗಿಗೆ ಮೂರುವರೆ ವರ್ಷ ಜೈಲು ಶಿಕ್ಷೆ ಹಾಗೂ ೯೦ ಸಾವಿರ ರೂ. ದಂಡ ವಿಧಿಸಿತ್ತು. ಅಂದೇ ಸಂಪಂಗಿಯನ್ನು ಬಂಧಿಸಿ, ಪರಪ್ಪನ ಆಗ್ರಹಾರಕ್ಕೆ ಕರೆ ದೊಯ್ದಿದ್ದರು. ಜೈಲಿನ ಆಡಳಿತ ಕಚೇರಿ ಪಿ-೧ರ ಸೆಲ್‌ನಲ್ಲಿ ಅವಕಾಶ ಮಾಡಿ ಕೊಡಲಾಗಿತ್ತು.
Tagged with
sampangi,
snews
ಮುಲ್ಕಿ: ಇಲ್ಲಿನ ಅಂಗಡಿಗಳಿಗೆ ಪ್ಲಾಸ್ಟಿಕ್ ಕಂಪೆನಿಗಳಿಂದ ಪೂರೈಕೆಯಾ ಗುವ ಪ್ಲಾಸ್ಟಿಕ್‌ಗಳಲ್ಲಿ ೪೦ಮೈಕ್ರೋ ಎಂದು ಬರೆದಿರುತ್ತದೆ ಮಾತ್ರ. ಆದರೆ ಅದರ ಒಳಗಡೆ ಇರುವಂತಹ ಪ್ಲಾಸ್ಟಿಕ್ ಚೀಲಗಳು ೧೫ರಿಂದ೨೦ ಮೈಕ್ರೋ ಪ್ಲಾಸ್ಟಿಕ್ ಚೀಲಗಳಾಗಿದ್ದು, ನಗರ ಪಂಚಾಯತ್‌ನ ಆರೋಗ್ಯ ನಿರೀಕ್ಷಕ ರಾಜೇಶ್‌ರವರ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.
ಮಾತ್ರವಲ್ಲದೆ ಕಾರ್ನಾಡ್ ಸಂತೆಯ ವೇಳೆ ಇಲ್ಲಿ ನಾಮಪಲಕ ಹಾಕಿದರೂ ಇದನ್ನು ಲೆಕ್ಕಿಸದೆ ೧೫ ರಿಂದ೨೦ ಮೈಕ್ರೋ ಪ್ಲಾಸ್ಟಿಕ್ ಬಳಸು ತ್ತಿರುವಾಗ ಆರೋಗ್ಯ ನಿರೀಕ್ಷಕರು ಕಾರ್ಯಾಚರಣೆ ನಡೆಸಿ ೨೦ ಕೆ.ಜಿಗೂ ಹೆಚ್ಚು ಪ್ಲಾಸ್ಟಿಕ್ ಚೀಲಗಳನ್ನು ಅಂಗಡಿ ಗಳಿಂದ ವಶ ಪಡಿಸಿಕೊಂಡರು. ಈ ವೇಳೆ ೧೦೦ ಅಥವಾ ೩೦೦ರೂ ದಂಡ ಹಾಕಲಾಗು ವುದು. ಮತ್ತು ಹಾಗೆಯೇ ಮುಂದು ವರಿದಲ್ಲಿ ನೋಟಿಸ್ ನೀಡಿ ಅಂತಹ ಅಂಗಡಿಗಳ ಪರವಾನಿಗೆ ಯನ್ನು ರದ್ದು ಮಾಡುವುದಾಗಿ ಆರೋಗ್ಯ ನಿರೀಕ್ಷಕರು ತಿಳಿಸಿದ್ದಾರೆ. ಅಂಗಡಿಮಾಲಕರ ಪ್ರಕಾರ ಪ್ಲಾಸ್ಟಿಕನ್ನು ಕೇಳಿದಾಗ ೪೦ ಮೈಕ್ರೋ ಎಂದು ಲೈನ್‌ಸೇಲ್‌ನವರು ಹಾಕುತ್ತಾರೆ. ನಮಗೆ ಅದರ ಬಗ್ಗೆ ತಿಳಿದಿಲ್ಲ ಎಂದು ಹೇಳು ತ್ತಾರೆ. ಈ ಬಗ್ಗೆ ಎಲ್ಲಾ ಅಂಗಡಿ ವ್ಯಾಪಾರಿಗಳು ಜಾಗೃತೆ ವಹಿಸಿ ಪ್ಲಾಸ್ಟಿಕ್‌ಗಳನ್ನು ಬಳಸಬೇಕಾಗುತ್ತದೆ. ಒಂದು ವೇಳೆ ನಿರ್ಲಕ್ಷಿಸಿದಲ್ಲಿ ಮುಂದೆ ಒಂದು ದಿನ ನಮ್ಮ ಪರಿಸರ ಕಲುಷಿತ ವಾಗಿ ಮಾರಕ ರೋಗಗಳಿಗೆ ತುತ್ತಾಗು ವುದರಲ್ಲಿ ಸಂದೇಹವಿಲ್ಲ. ಎಲ್ಲಾ ಹೆಚ್ಚಿನ ಅಂಗಡಿಗಳಿಗೆ ಬೈಕಂಪಾಡಿ ಮೂಲ ದಿಂದ ಇಂತಹ ಪ್ಲಾಸ್ಟಿಕ್‌ಚೀಲಗಳನ್ನು ಪೂರೈಕೆ ಮಾಡಲಾಗುತ್ತಿದೆ. ಇಂಥವರ ಮೇಲೆ ಕಾನೂನು ಕ್ರಮ ಕೈಗೊಂಡು ಕಂಪೆನಿಗಳ ಪರವಾನಿಗೆಯನ್ನು ರದ್ದು ಪಡಿಸಬೇಕು. ನಮಗೆ ಮೋಸ ಮಾಡಿ ಪ್ಲಾಸ್ಟಿಕ್ ಪೂರೈಕೆ ಮಾಡುತ್ತಿದ್ದಾರೆ ಎಂದು ಅಂಗಡಿ ಮಾಲಕರು ದೂರುತ್ತಿದ್ದಾರೆ.
Tagged with
dk,
lnews
ಸುಬ್ರಹ್ಮಣ್ಯ ಪಿಡಿಓ ವರ್ಗಾವಣೆಗೆ ಹೆಚ್ಚಿದ ಒತ್ತಡ
ಸುಳ್ಯ: ಸುಬ್ರಹ್ಮಣ್ಯ ಗ್ರಾಮ ಪಂಚಾ ಯಿತಿಯ ಪಿಡಿಓರನ್ನು ವರ್ಗಾವಣೆ ಮಾಡಬೇಕೆಂದು ಪಂಚಾಯಿತಿ ಆಡಳಿತ ಹಲವು ಬಾರಿ ಮನವಿ ಮಾಡಿದ್ದೂ, ಕಳೆದ ೧೫ ದಿನಗಳಿಂದ ಪಂಚಾಯಿತಿ ಕಚೇರಿ ಎದುರು ನಿರಂತರ ಪ್ರತಿಭಟನೆ ನಡೆಸಿದೆ. ಇನ್ನೂ ವರ್ಗಾವಣೆ ಆಗದೇ ಇರುವುದರಿಂದ ಜೂನ್ ೧೧ರಂದು ಸುಳ್ಯ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ಬೆಂಬಲಿತ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಜಿ.ಕೆ. ಹಮೀದ್ ಮತ್ತು ಸಂಚಾಲಕ ಶಿವರಾಮ ರೈ ತಿಳಿಸಿದ್ದಾರೆ.
ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭ ತಾಲೂಕು ಪಂಚಾಯಿತಿ ಇಓ ಮತ್ತು ಜಿ.ಪಂ.ನ ಎಎಸ್ ಭೇಟಿ ನೀಡಿ ೧೫ ದಿನಗಳ ಒಳಗೆ ವರ್ಗಾವಣೆ ಮಾಡುತ್ತೇವೆ ಎಂದು ಭರವಸೆ ನೀಡಿ ದ್ದರು. ಆದರೆ ಈಗ ನಮ್ಮ ಆಪಾದನೆಗೆ ದಾಖಲೆ ಕೇಳುತ್ತಿದ್ದಾರೆ. ನಾವು ಅದಕ್ಕೂ ಬದ್ಧರಾಗಿದ್ದೇವೆ. ಆದರೆ ಅಷ್ಟರವರೆಗೆ ಅವರು ರಜೆಯಲ್ಲಿ ಹೋಗಬೇಕು ಎಂಬುದು ನಮ್ಮ ಬೇಡಿಕೆ. ಜನಪ್ರತಿ ನಿಧಿಗಳಿಗೆ ಅಗೌರವ ತೋರುವ ಪಿಡಿಓ ಇದ್ದರೆ ಆಡಳಿತ ನಡೆಸಲು ಕಷ್ಟ. ಒಂದೋ ಪಿಡಿಓ ವರ್ಗಾವಣೆ ಮಾಡಿ ಇಲ್ಲದಿದ್ದರೆ ಪಂಚಾಯಿತಿಯನ್ನು ವಿಸ ರ್ಜಿಸಬೇಕು ಎಂದವರು ಪತ್ರಿಕಾಗೋ ಷ್ಠಿಯಲ್ಲಿ ಒತ್ತಾಯಿಸಿದರು.
ಹಿಂದೆ ವರ್ಗಾವಣೆಗೆ ಪಿಡಿಓ ಒಪ್ಪಿದ್ದರೂ, ಇಓ ಆದೇಶ ನೀಡಿಲಿಲ್ಲ. ಈಗ ಪಿಡಿಓ ಅವರೇ ರಾಜಕೀಯ ಪಕ್ಷಗಳನ್ನು ಹಿಡಿದು ವರ್ಗಾವಣೆ ಆಗದಂತೆ ಒತ್ತಡ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಕೂಡಾ ಈ ಪ್ರತಿಭಟನೆಗೆ ಬೆಂಬಲ ನೀಡಲಿದೆ ಎಂದವರು ತಿಳಿಸಿದರು.
ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮ್ಯಾನೇಜರ್ ನಿತ್ಯ ಮದ್ಯ ಸೇವಿಸಿ ತೂರಾಡಿಕೊಂಡು ಕಚೇರಿಗೆ ಬರುತ್ತಿದ್ದು, ಪ್ರಭಾರ ಇಓ ಆಗಿರುವ ಬಿಇಓಗೆ ತಮ್ಮ ಕಚೇರಿ ಸಿಬ್ಬಂದಿ ಮೇಲೆಯೇ ನಿಯಂತ್ರಣ ತರಲು ಸಾಧ್ಯ ವಾಗುತ್ತಿಲ್ಲ. ಇದು ದುರಂತ. ತಾ.ಪಂ.ಗೆ ಬಂದ ೧ ಕೋಟಿ ಅನುದಾನದಲ್ಲಿ ೨೭ ಲಕ್ಷ ರೂಪಾಯಿ ಖರ್ಚಾಗದೇ ವಾಪಾಸ್ ಹೋಗಿದೆ ಎಂದು ಜಿ.ಕೆ.ಹಮೀದ್ ಆರೋಪಿಸಿದರು.
ಕೃಷ್ಣಮೂರ್ತಿ ಭಟ್, ಹರೀಶ್ ಇಂಜಾಡಿ, ರಾಧಾಕೃಷ್ಣ ಪರಿವಾರಕಾನ, ಶರೀಫ್ ಕಂಠಿ, ಸವಾದ್, ಶಾಫಿ ಕುತ್ತಮೊಟ್ಟೆ, ಗಫೂರ್, ಗೋಕುಲ್‌ದಾಸ್, ದಿನೇಶ್ ಅಂಬೆಕಲ್ಲು ಇದ್ದರು.
Tagged with
dk,
lnews,
protest
ವಿಟ್ಲ: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ವಿಟ್ಲದ ಜನತೆಗೆ ವಿದ್ಯುತ್ ಇಲಾಖೆ ಮತ್ತೊಂದು ಶಾಕ್ ನೀಡಿದೆ. ಕಳೆದ ಎರಡು ತಿಂಗಳುಗಳಿಂದ ವಿಟ್ಲದ ಕೆಲ ಮನೆಗಳಿಗೆ ವಿದ್ಯುತ್ ಮಾಸಿಕ ಬಿಲ್ ಬಂದಿರಲಿಲ್ಲ. ಕಳೆದ ಎರಡು ದಿನಗಳ ಹಿಂದೆ ವಿದ್ಯುತ್ ಬಿಲ್ ಬಂದಿದ್ದು, ಇದನ್ನು ನೋಡಿ ವಿಟ್ಲದ ಜನತೆ ಸುಸ್ತಾಗಿದ್ದಾರೆ.
ವಿಟ್ಲದ ಮೇಗಿನ ಪೇಟೆ ವ್ಯಕ್ತಿಯೊಬ್ಬರಿಗೆ ಅವರ ಅಂಗಡಿಯ ಎರಡು ತಿಂಗಳ ವಿದ್ಯುತ್ ಬಿಲ್ ೫೦ಸಾವಿರ ರೂಪಾಯಿ. ಕಳೆದ ತಿಂಗಳು ಇವರಿಗೆ ಬಂದ ಬಿಲ್ ೪೫ಸಾವಿರ. ಸಾಮಾನ್ಯವಾಗಿ ಈ ಹಿಂದೆ ಅವರಿಗೆ ತಿಂಗಳಿಗೆ ೨ಸಾವಿರದಿಂದ ೩ಸಾವಿರ ರೂಪಾಯಿವರೆಗೆ ಅವರಿಗೆ ಬಿಲ್ ಬರುತ್ತಿದ್ದವು. ದುಬಾರಿ ವಿದ್ಯುತ್ ಬಿಲ್ ಬಂದ ಬಗ್ಗೆ ವಿದ್ಯುತ್ ಇಲಾಖೆಯಲ್ಲಿ ಸ್ಥಳೀಯರು ವಿಚಾರಿಸಿದರೆ ಅದು ಕಂಪ್ಯೂಟರ್ ಕೆಟ್ಟು ಹೋದ ಪರಿಣಾಮ ಈ ರೀತಿಯಾಗಿ ಬಂದಿದೆ. ನಿಮ್ಮ ಹಳೆಯ ಬಿಲ್ ಕೋಡಿ ಅದನ್ನು ಸರಿ ಮಾಡಿ ಕೊಡುತ್ತೇವೆ ಎಂದು ಅವರು ಉತ್ತರಿಸುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ. ಇದೇ ರೀತಿಯಾಗಿ ಕೆಲವರಿಗೆ ೧ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿರುತ್ತದೆ. ವಿದ್ಯೆ ಇಲ್ಲದ ಬಡವರು ಅವರಿಗೆ ಬಂದಂತಹ ದುಬಾರಿ ವಿದ್ಯುತ್ ಬಿಲ್ಲನ್ನು ಕಟ್ಟುತ್ತಾರೆ. ಇದರಿಂದ ನಷ್ಟ ಯಾರಿಗೆ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
Tagged with
dk,
lnews

ಮಂಗಳೂರು: ಎಕ್ಕಾರು ನಡ್ಯೋಡಿಗುತ್ತಿನಲ್ಲಿ ಸಾಂಪ್ರದಾಯಿಕ ಧರ್ಮನೇಮ ಇತ್ತೀಚೆಗೆ ನಡೆಯಿತು. ಕುಂದರಣ್ಣ ಗೋತ್ರದ ಮುದ್ದ ಉಪನಾಮದ ಯಜಮಾನರನ್ನು ಹೊಂದಿರುವ ಎಕ್ಕಾರು ನಡ್ಯೋಡಿ ಗುತ್ತು ಎಕ್ಕಾರು ನಾಲ್ಕು ಕರೆ, ೩೨ ವರ್ಗಗಳಲ್ಲಿ ದ್ವಿತೀಯ ಗೌರವದ ಪ್ರತಿಷ್ಠಿತ ಬಂಟ ಮನೆತನ, ಸಾರ ಜುಮಾದಿ ಈ ಗುತ್ತಿನ ವಿಶೇಷ ಅಧಿಕಾರ ದೈವ. ಎಕ್ಕಾರು ಶ್ರೀ ಗೋಪಾಲಕೃಷ್ಣ ಮಠ ವೇದಮೂರ್ತಿ ಹರಿದಾಸ ಉಡುಪ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಮೈಸಂದಾಯ, ಕೊಡಮಂದಾಯ, ಕಾಂತೇರಿ ಜುಮಾದಿ, ಜಾರಂದಾಯ, ಸರಳ ಜುಮಾದಿ, ಪಿಲಿಚಾಮುಂಡಿ ದೈವಗಳ ನೇಮ ಹಾಗೂ ಮನೆದೈವ ಗಳಾದ ಸತ್ಯದೇವತೆ, ಕಲ್ಲುರ್ಟಿ ಪಂಜುರ್ಲಿ ಕೋಲ ನಡೆಯಿತು. ನಾಗ ಸಾನಿಧ್ಯದಲ್ಲಿ ಆಶ್ಲೇಷ ಬಲಿ ಸೇವೆ ಜರುಗಿತು. ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ, ಮೊಕ್ತೇಸರ ರಾಮ ಮುದ್ದ ಎಕ್ಕಾರು ನಡ್ಯೋಡಿಗುತ್ತು, ಬಡಕೆರೆ ಬಾಳಿಕೆ ಗೋಪಾಲ ಶೆಟ್ಟಿ, ಮೇಗಿನಮನೆ ಮೇಲೆಕ್ಕಾರು ಬಾಬು ಭಂಡಾರಿ, ಚಂದ್ರಹಾಸ.ಪಿ.ಶೆಟ್ಟಿ, ಶ್ರೀನಿವಾಸ ಎ.ಮುದ್ದ. ಡಾ.ನಿಶಾಕಾಂತ ಶೆಟ್ಟಿ, ಪ್ರಧಾನ ಸಂಚಾಲಕ ಇ.ಟಿ.ಶೆಟ್ಟಿ ಸುರತ್ಕಲ್ ಕದ್ರಿ ನವನೀತ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಶಿವನಾಂದ ಶೆಟ್ಟಿ. ಸಂದೀಪ್ ಶೆಟ್ಟಿ ಕೋಶಾಧಿಕಾರಿ ಸುಧಾಕರ ಪೂಂಜ ಹೊಸಬೆಟ್ಟು ಹಾಗೂ ಗುತ್ತಿನ ಹಿರಿಯರಾದ ರಾಮ ಮುದ್ದ, ವಾಮಯ್ಯ ಶೆಟ್ಟಿ, ಭೋಜ ಶೆಟ್ಟಿ, ಕರಿಯ ಶೆಟ್ಟಿ, ಬಾಲಕೃಷ್ಣ ವಿ.ಹೆಗ್ಡೆ, ಜಯ ಶೆಟ್ಟಿ ಉಪಸ್ಥಿತರಿದ್ದರು. ಲಕ್ಷ್ಮೀ ನಾರಾಯಣ ಅಸ್ರಣ್ಣ, ಅನಂತ ಅಸ್ರಣ್ಣ, ಜ್ಯೋತಿಷಿ ಶ್ರೀರಂಗ ಐತಾಳ್, ಅಜಿತ್ ಕುಮಾರ್ ರೈ ಮಾಲಾಡಿ, ನಳಿನ್ ಕುಮಾರ್ ಕಟೀಲ್, ಶೆಡ್ಡೆ ಮಂಜುನಾಥ ಭಂಡಾರಿ, ಮಂಜುಕಾವ ಮತ್ತು ಪ್ರಧಾನ ಗುತ್ತುಗಳ ಯಜಮಾನರು ಭಾಗವಹಿಸಿದ್ದರು.
Tagged with
briefs
ಮಂಗಳೂರು: ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್‌ಎಸ್ ಎಫ್) ಇನೋಳಿ ಶಾಖೆ ಇದರ ವತಿ ಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಸನ್ಮಾನ ಸಮಾ ರಂಭ ಇನೋಳಿಯಲ್ಲಿರುವ ಎಸ್ ಎಸ್‌ಎಫ್ ಕಚೇರಿ ವಠಾರದಲ್ಲಿ ನಡೆ ಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಎಸ್‌ಎಸ್‌ಎಫ್ ಇನೋಳಿ ಶಾಖೆಯ ಅಧ್ಯಕ್ಷ ಉಮರ್ ಅಹ್ಸನಿ ವಹಿಸಿದ್ದರು. ರಾಜ್ಯ ಎಸ್‌ಎಸ್‌ಎಫ್ ಉಪಾಧ್ಯಕ್ಷ ಸಿದ್ದೀಕ್ ಕೆ.ಎಂ. ಮೋಂಟುಗೋಳಿ ಕಾರ್ಯ ಕ್ರಮ ಉದ್ಘಾಟಿಸಿದರು. ಐ.ಕೆ.ಅಬ್ದುಲ್ ಹಮೀದ್ ಮುಸ್ಲಿಯಾರ್ ಹಾಗೂ ಅಸ್ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ಪ್ರಾರ್ಥನೆ ನೆರವೇರಿಸಿದರು.
ಅಬ್ದುಲ್ ಕರೀಂ ಮದನಿ ಖತೀ ಬರು ವಾಮಂಜೂರು, ಇನೋಳಿ ಜಾಮಿಯಾ ಮುಬಾರಕ್ ಮಸೀದಿ ಅಧ್ಯಕ್ಷ ಹುಸೈನ್, ಮಿಸ್ಬಾಹುಲ್ ಹುದಾ ಯಂಗ್‌ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಉಮರಬ್ಬ, ಎಸ್‌ಎಸ್‌ಎಫ್ ಬದ್ರಿಯಾ ನಗರ ಶಾಖೆಯ ಅಧ್ಯಕ್ಷ ಶೌಕತ್ ಅಲಿ, ಗಲ್ಫ್ ಪ್ರತಿನಿಧಿ ಅಬ್ದುಲ್ ಜಬ್ಬಾರ್ ಕಾರ್ಯಕ್ರಮದಲ್ಲಿ ಉಪಸ್ಥಿತ ರಿದ್ದರು.
ಎಸ್.ಎಸ್.ಎಫ್. ಇನೋಳಿ ಶಾಖೆಯ ಉಪಾಧ್ಯಕ್ಷ ಹೈದರ್ ಸಖಾಫಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಧನ್ಯವಾದವಿತ್ತರು.
Tagged with
briefs
ಬೆಳ್ತಂಗಡಿ: ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಅಂತಾರಾಜ್ಯ ತಂಡವೊಂದನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ೩ ಮಂದಿ ಮಹಿಳೆಯರೂ ಸೇರಿದಂತೆ ಒಟ್ಟು ೭ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಂಗಳೂರಿನ ಅತ್ತಿಬೆಲೆ ನಿವಾಸಿ ಬಸವರಾಜ್(೨೪), ತಮಿಳುನಾಡು ಕೃಷ್ಣ ಗಿರಿಯ ಗಣೇಶ್(೨೫),ಹೊಸೂರಿನ ಶ್ರೀನಿವಾಸ ಯಾನೆ ಶೀನ(೨೪), ಲೋಕೇಶ್ (೨೭), ಸರೋಜ(೪೪), ಕವಿತಾ(೨೩) ಹಾಗೂ ಮಂಜುಳಾ ರತ್ನ (೨೭) ಇವರೇ ಬಂಧಿತರು. ಈ ತಂಡ ಮೇ೩೦ ರಂದು ಮುಂಜಾನೆ ೫-೩೦ರ ಸುಮಾರಿಗೆ ಧರ್ಮಸ್ಥಳ ಸನಿಹ ಕನ್ಯಾಡಿ ಎಂಬಲ್ಲಿ ಧರ್ಮಸ್ಥಳ ನಿವಾಸಿ ಭರತ್ ಸಿಂಗ್ ಎಂಬವರು ಅಂಬಾಸಿಡರ್ ಕಾರಿನಲ್ಲಿ ಹೋಗುತ್ತಿದ್ದಾಗ ಟಾಟಾ ಸಫಾರಿ ಕಾರಿನಲ್ಲಿ ಬಂದು ಕಾರನ್ನು ಅಡ್ಡಗಟ್ಟಿತು. ಬಳಿಕ ಸಿಂಗ್ ಅವರಿಗೆ ಚೂರಿ ತೋರಿಸಿ ಬೆದರಿಸಿದ್ದಲ್ಲದೆ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಅವರಲ್ಲಿದ್ದ ರೂ.೬೬೪೦ ನಗದನ್ನು ದೋಚಿದ್ದಾರಲ್ಲದೆ ಎಟಿಎಂ ಕಾರ್ಡ್ ಮತ್ತು ಸೆಲ್ ಫೋನನ್ನು ಕಿತ್ತು ಪರಾರಿಯಾಗಿದ್ದರು. ಕೂಡಲೇ ಭರತ್ ಸಿಂಗ್ ಅವರು ಬೆಳ್ತಂಗಡಿ ಪೋಲಿಸರಿಗೆ ದೂರು ನೀಡಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲೆಡೆ ನಾಕಾ ಬಂದಿ ನಡೆಸಿದ ಪರಿಣಾಮ ಚಾರ್ಮಾಡಿ ತಪಾಸಣಾ ಗೇಟಿನ ಬಳಿ ತಮಿಳುನಾಡಿನ ನೊಂದಣಿ ಕಾರನ್ನು ಹಿಡಿದು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸೋಮವಾರ ರಾತ್ರಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಳ್ತಂಗಡಿ ವೃತ್ತನಿರೀಕ್ಷಕ ಭಾಸ್ಕರ್ ರೈ ಮಾರ್ಗದರ್ಶನದಲ್ಲಿ ಎಸ್‌ಐ ಯೋಗೀಶ್ ಕುಮಾರ್, ಪ್ರೋಬೇಷನರಿ ಎಎಸ್‌ಐಗಳಾದ ಗರೀಶ್, ಜಗದೀಶ್ ರೆಡ್ಡಿ, ಕುಶಾಲಪ್ಪ, ಪೌಲೋಸ್, ಲಕ್ಷ್ಮಣ, ಭಾಸ್ಕರ, ದಯಾನಂದ, ಸಿಬ್ಬಂದಿಗಳಾದ ಸುಂದರ್ ಶೆಟ್ಟಿ, ಶಶಿಧರ್, ಶಿವಾನಂದ, ಪ್ರವೀಣ್, ಮಹೇಶ್, ಕನಕರಾಜ್, ಕೃಷ್ಣ, ಗೀತಾ, ಬಿ.ಎನ್. ಬುಡ್ಕಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Tagged with
cnews
ಸುಳ್ಯ: ಅಪೆಂಡಿಕ್ಸ್ ಸಮಸ್ಯೆಯಿಂದ ಬಳ ಲುತ್ತಿದ್ದ ಮಹಿಳೆಯೊಬ್ಬರನ್ನು ಚಿಕಿತ್ಸೆಗೆಂದು ಜೋತಿಷ್ಯರಲ್ಲಿಗೆ ಕರೆದು ತಂದ ಯುವಕನೊ ಬ್ಬನಿಗೆ ಗುಂಪೊಂದು ಹಲ್ಲೆ ಮಾಡಿದ ಘಟನೆ ಮಂಗಳವಾರ ಜಯನಗರದಲ್ಲಿ ನಡೆದಿದೆ.
ಉಪ್ಪಳದಲ್ಲಿರುವ ಜಮಾಲ್ ಎಂಬವರ ಪತ್ನಿ ನೆಬಿಸಾ ಪುತ್ತೂರು ತಾಲೂಕಿನ ಮಾಡಾವು ಬಳಿಯ ಕಟ್ಟತ್ತಾರು ಎಂಬಲ್ಲಿರುವ ತನ್ನ ತವರು ಮನೆಯಲ್ಲಿದ್ದು ಅವರು ಅಪೆಂ ಡಿಕ್ಸ್ ಸಮಸ್ಯೆಯಿಂದ ಬಳಲುತ್ತಿದ್ದರು. ಸುಳ್ಯ ದಲ್ಲಿ ಕಮಲಾಕ್ಷ ಎಂಬ ಜ್ಯೋತಿಷಿ ಇದ್ದು, ಅವರಲ್ಲಿಗೆ ತನ್ನನ್ನು ಕರೆದೊಯ್ಯಬೇಕೆಂದು ಆಕೆ ನೆರೆಮನೆಯ ಸಂತೋಷ್ (೧೮) ಎಂಬ ಯುವಕನಿಗೆ ಒತ್ತಾಯಿಸಿದ್ದರಿಂದ ಆತ ಆಕೆಯನ್ನು ಮಂಗಳವಾರ ಜಯನಗರಕ್ಕೆ ಕರೆದುಕೊಂಡು ಬಂದಿದ್ದ. ಇವರು ರಿಕ್ಷಾದಲ್ಲಿ ಹೋಗುತ್ತಿರುವುದನ್ನು ತಿಳಿದ ಯುವಕ ರಿಬ್ಬರು ಬೈಕ್‌ನಲ್ಲಿ ಬಂದು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಮಸೀದಿ ಬಳಿ ಗುಂಪು ಸೇರಿದ ಯುವಕರ ತಂಡ ಕೂಡಾ ಸಂತೋಷ್ ಮೇಲೆ ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಕರೆತಂದಿದೆ. ಘಟನೆ ಕುರಿತು ಸಂತೋಷ್ ಪೊಲೀಸರಿಗೆ ದೂರು ನೀಡಿ ದ್ದಾರೆ.
Tagged with
cnews
ಕಾಸರಗೋಡು: ರಸ್ತೆ ದುರಂತಗಳ ಆಗರವೆನಿಸಿರುವ ಉಪ್ಪಳದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಟೆಂಪೋ ಹಾಗೂ ಅಟೋರಿಕ್ಷಾ ಪರಸ್ಪರ ಢಿಕ್ಕಿ ಹೊಡೆದು ಸಂಭ ವಿಸಿದ ದುರಂತದಲ್ಲಿ ರಿಕ್ಷಾ ಪ್ರಯಾಣಿಕರಾದ ಇಬ್ಬರು ಗಂಭೀರ ಜಖಂಗೊಂಡಿದ್ದಾರೆ. ಇವ ರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಮೊನ್ನೆ ರಾತ್ರಿ ಈ ಅಪಘಾತ ನಡೆದಿದೆ.
ಮೊನ್ನೆಯಷ್ಟೇ ಎರಡು ಅಪಘಾತಗಳು ನಡೆದ ಸ್ಥಳದ ಅತ್ಯಂತ ಸನಿಹದಲ್ಲೇ ಪ್ರಸ್ತುತ ಅಪಘಾತವೂ ಘಟಿಸಿದೆ. ಅಟೋ ಚಾಲಕ ರಾದ ವರ್ಕಾಡಿ ಕಡಂಬಾರಿನ ಇಸ್ಮಾಯಿಲ್, ಪ್ರಯಾಣಿಕ ಉಮ್ಮರ್ ಜಖಂಗೊಂಡು ಮಂಗಳೂರು ಆಸ್ಪತ್ರೆಗೆ ಸೇರಿಸಲ್ಪಟ್ಟವರು. ಸೋಮವಾರ ಬೆಳಿಗ್ಗೆ ಇಲ್ಲಿ ಸ್ಕಾರ್ಪಿಯೋ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಫಲವಾಗಿ ೧೦ ಮಂದಿ ಜಖಂಗೊಂಡಿದ್ದರು. ಅಲ್ಪ ಹೊತ್ತಿನಲ್ಲೇ ಕಾರು ಹಾಗೂ ಟ್ಯಾಂಕರ್ ಲಾರಿ ಪರಸ್ಪರ ಬಡಿದಿತ್ತು. ರಸ್ತೆ ದುರಸ್ತಿಯ ಅವ್ಯವಸ್ಥೆಯೇ ಇಲ್ಲಿನ ನಿರಂತರ ದುರಂತಕ್ಕೆ ಕಾರಣವೆಂದು ವಾಹನ ಚಾಲಕರು ಆರೋಪಿಸಿದ್ದಾರೆ.
Tagged with
accident,
cnews
ಬೆಳ್ತಂಗಡಿ: ಗೃಹಿಣಿಯೋರ್ವಳು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡ ಘಟನೆ ತೋಟತ್ತಾಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಕುಂಟಾಡಿ ನಿವಾಸಿ ವರ್ಗೀಸ್ ಎಂಬವರ ಪತ್ನಿ ರೋಸಮ್ಮ (೬೫) ಎಂಬವರೇ ಮೃತ ಪಟ್ಟವರು.
ಅವರು ಹೃದಯದ ಕಾಯಿಲೆಯಿಂದ ಬಳಲುತ್ತಿದ್ದು, ಸೋಮವಾರ ರಾತ್ರಿ ವಿಷ ಸೇವಿಸಿದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
Tagged with
cnews
ಮುಲ್ಕಿ; ಮುಲ್ಕಿ ಸಮೀಪದ ಚಿತ್ರಾಪು ಗಜನಿ ನಿವಾಸಿ ರಮೇಶ್ ಅಮೀನ್(೫೫) ಎಂಬವರು ನಿನ್ನೆ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವಿವಾಹಿತ ರಾಗಿದ್ದು, ಮಾನಸಿಕನಂತೆ ವರ್ತಿಸುತ್ತಾ ಒಂದು ತಿಂಗಳಿನಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದ. ಮುಲ್ಕಿ ಪೊಲೀಸರು
ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews
ಮಂಗಳೂರು: ಕುಂದಾಪುರ ಸಮೀಪದ ಹಾಲಾಡಿ ಮಾರುಕಟ್ಟೆ ಬಳಿಯಿರುವ ಅಡಿಕೆ ಗೋಡೌನ್‌ಗೆ ನುಗ್ಗಿದ ಕಳ್ಳರು ೩೦ ಅಡಿಕೆ ಚೀಲಗಳನ್ನು ಕಳವುಗೈದ ಘಟನೆ ನಡೆದಿದೆ. ಶಾಂತಾ ರಾಮ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ೬೦ ಸಾವಿರ ರೂ. ಮೌಲ್ಯದ ಅಡಿಕೆ ಕಳವಾಗಿರುವುದಾಗಿ ಹೇಳಿದ್ದಾರೆ. ಹಾಲಾಡಿ ನಿವಾಸಿ ಗಿರೀಶ್ ಹಾಗೂ ರಿಕ್ಷಾ ಚಾಲಕ ಯೋಗೀಶ ಎಂಬವರ ಮೇಲೆ ಸಂಶಯವಿದೆ ಎಂದು ಶಾಂತಾರಾಮ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.
Tagged with
cnews
ಮಂಗಳೂರು: ಕಡಬ ಸಮೀಪದ ಕಳಾರ ಪರಿಸರದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದ್ದು, ರಸ್ತೆಯಲ್ಲಿ ಮೇಯಲು ಬಿಟ್ಟ ಆಡುಗಳನ್ನು ನಾಯಿ ಗಳು ಕಚ್ಚಿ ಕೊಂದುಹಾಕುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ. ಅಂಗನವಾಡಿಗೆ ತೆರಳುವ ಮಕ್ಕಳನ್ನೂ ಬೆನ್ನಟ್ಟಿಕೊಂಡು ಬರು ತ್ತಿವೆ ಎನ್ನಲಾಗಿದ್ದು, ಸಂಬಂಧಪಟ್ಟವರು ಕ್ರಮ ಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.
Tagged with
cnews
ಮಂಗಳೂರು: ಕಾಪು ಸಮೀಪದ ಉಳಿಯಾರಗೋಳಿ ಎಂಬಲ್ಲಿ ಟೆಂಪೋ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ನಿರ್ವಾಹಕ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡರೆ, ಪಾದಚಾರಿ ಯುವತಿ ಟೆಂಪೋ ತಾಗಿದ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಿನ್ನೆ ನಡೆದಿದೆ.
ಟೆಂಪೋ ಚಾಲಕ ಹಬೀಬ್ ಮತ್ತು ಸ್ಥಳೀಯ ಯುವತಿ ಗಾಯಗೊಂಡವರು. ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಟೆಂಪೋಗೆ ಯುವತಿ ಏಕಾಏಕಿ ಅಡ್ಡ ಬಂದಿದ್ದರಿಂದ ಚಾಲಕ ಬ್ರೇಕ್ ಹಾಕಿದ್ದೇ ಘಟನೆಗೆ ಕಾರಣವೆನ್ನಲಾಗಿದೆ.
Tagged with
cnews
ಮಂಗಳೂರು: ಇಂದು ನಸುಕಿನ ಜಾವ ರಿಕ್ಷಾದಲ್ಲಿ ಮನಪಾ ಅನುಮತಿರಹಿತವಾಗಿ ಗೋಮಾಂಸ ಸಾಗಾಟವಾಗುತ್ತಿದೆ ಎಂಬ ಮಾಹಿತಿಯನ್ವಯ ಆರೋಗ್ಯ ಇಲಾಖೆ ಅಧಿಕಾರಿಗಳು ರಿಕ್ಷಾವನ್ನು ಕಂಕನಾಡಿ ಬಳಿ ತಡೆದು ಪರಿಶೀಲನೆ ನಡೆಸಿದ ಘಟನೆ ನಡೆದಿದೆ. ಕುದ್ರೋಳಿಯ ಮಂಡಿಯಿಂದ ರಿಕ್ಷಾದಲ್ಲಿ ಗೋಮಾಂಸ ಸಾಗಾಟ ಮಾಡಲಾಗು ತ್ತಿತ್ತು. ಮಾಂಸದ ಪ್ಯಾಕೆಟ್‌ನಲ್ಲಿ ಮನಪಾ ಮುದ್ರೆ ಯೂ ಇತ್ತೆನ್ನಲಾಗಿದೆ. ಆದರೆ ಮನಪಾ ಆರೋಗ್ಯ ಅಧಿಕಾರಿಗಳು ರಿಕ್ಷಾ ಚಾಲಕನ ವಿಚಾರಣೆ ನಡೆಸಿದ್ದಾರೆ. ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಕೆಲವು ದಿನಗಳ ಹಿಂದೆ ಮಂಗಳೂರಿನ ಕುದ್ರೋಳಿ ಬಳಿ ಅನಧಿಕೃತ ಮಾಂಸ ತಯಾರಿ ಕೇಂದ್ರಕ್ಕೆ ದಾಳಿ ನಡೆಸಿ ದ್ದನ್ನು ಸ್ಮರಿಸಬಹುದಾಗಿದೆ.
Tagged with
cnews
ಮಂಗಳೂರು: ಕಡಬ ಸಮೀಪದ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮೀನಾಡಿ ತಿರುವಿನಲ್ಲಿ ಮಾರುತಿ ಓಮ್ನಿ ಮತ್ತು ಮಿನಿಲಾರಿ ನಡುವೆ ಅಪಘಾತ ಸಂಭವಿಸಿ ಏಳು ಮಂದಿ ಗಾಯಗೊಂಡಿದ್ದಾರೆ.
ಧಾರವಾಡ ಮೂಲದ ಯಲ್ಲಪ್ಪ ಅಂಗಡಿ, ರೇಣುಕಾ ಕಾಮಟಿ, ಅಣ್ಣಪ್ಪ ಕಾಮಟಿ, ವಿರೂಪಾಕ್ಷಿ ಕಾಮಟಿ, ಶಂಕರವ್ವ ಕಾಮಟಿ, ಹಿತೇಶ್ ಕಾಮಟಿ, ಅಖಿಲೇಶ್ ಕಾಮಟಿ ಗಾಯಗೊಂಡವರು. ಇವರು ಧರ್ಮಸ್ಥಳ-ಸುಬ್ರಹ್ಮಣ್ಯಕ್ಕೆ ಯಾತ್ರಾರ್ಥಿಗಳಾಗಿ ಬಂದಿದ್ದರು. ಬೇಕರಿ ಸಾಮಾಗ್ರಿ ಸಾಗಿಸುತ್ತಿದ್ದ ಮಿನಿ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
accident,
cnews
ಮಂಗಳೂರು: ನಗರದ ಜ್ಯೋತಿ ವೃತ್ತದ ಬಳಿಯ ಕ್ಲಿನಿಕ್‌ನಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದ ಸುರತ್ಕಲ್-ಆಶ್ರಯ ಕಾಲನಿಯ ಬಿಲ್ಲವ ಸಮುದಾಯಕ್ಕೆ ಸೇರಿದ ಯುವತಿ ಮೇ ೨೨ರಿಂದ ನಾಪತ್ತೆ ಯಾಗಿರುವ ಬಗ್ಗೆ ಬಂದರು ಪೊಲೀಸರಿಗೆ ದೂರು ನೀಡಲಾಗಿದೆ.
ಪ್ರೀತಿ(೨೨) ನಾಪತ್ತೆಯಾದಾಕೆ. ಈಕೆ ಎಂದಿನಂತೆ ಮೇ ೨೨ರಂದು ಮನೆಯಿಂದ ಕೆಲಸಕ್ಕೆ ಬಂದಿದ್ದು, ಸಂಜೆ ಆರು ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೊರಟಿದ್ದಳು. ಆದರೆ ಕೆ.ಎಸ್.ರಾವ್ ರಸ್ತೆಯ ಬಳಿ ಬಸ್‌ನಿಂದ ಅರ್ಧದಲ್ಲೇ ಇಳಿದಿದ್ದಳು ಎನ್ನಲಾಗಿದೆ. ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಆಗಾಗ ಬರುತ್ತಿದ್ದ ಅನ್ಯಮತೀಯ ಯುವಕನ ಜೊತೆ ಪ್ರೇಮ ವ್ಯವಹಾರ ಹೊಂದಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಇದೇ ಹಿನ್ನೆಲೆಯಲ್ಲಿ ಮನೆ ತೊರೆದಿರಬೇಕೆಂದು ಶಂಕಿಸ ಲಾಗಿದೆ. ಮನೆಮಂದಿ ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿ ತಡ ವಾಗಿ ಪೊಲೀಸರಿಗೆ ದೂರು ನೀಡಿ ದ್ದಾರೆ. ಆಕೆಗೆ ವಿವಾಹ ನಿಶ್ಚಯ ವಾಗಿತ್ತು ಎನ್ನಲಾಗಿದೆ. ಬಂದರು ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯುವತಿ ನಾಪತ್ತೆ: ನಗರದ ವೆಲೆನ್ಸಿಯಾದಲ್ಲಿ ಮನೆ ಕೆಲಸಕ್ಕಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ. ಮೈಸೂರಿನ ಎಚ್.ಡಿ. ಕೋಟೆ ಮೂಲದ ಸಾಕಮ್ಮ ಯಾನೆ ಸಾಕಿ (೨೫) ನಾಪತ್ತೆಯಾದವಳು. ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಬೆಳಗ್ಗೆ ಹೋದ ಸಾಕಮ್ಮ ಮನೆಗೆ ವಾಪ ಸಾಗಿಲ್ಲ. ಮನೆ ಮಾಲೀಕ ವೆಲೆನ್ಸಿಯಾದ ಜೋಸೆಫ್ ಮಸ್ಕರೇನಸ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
Tagged with
cnews,
missing
ದೆಹಲಿ: ಮುಂದೆ ಲಂಡನ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಒಲಿಂಪಿಕ್ಸ್ ಕೂಟದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲೆಂದು ದೇಶದ ಕ್ರೀಡಾ ಸಚಿವಾಲ ಯವು ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದರೆ ಇನ್ನೊಂದು ಬದಿ ಮಾತ್ರ ಅದಕ್ಕೆ ತದ್ವಿರುದ್ದವಾದ ಸಂಗತಿಗಳು ನಡೆಯುತ್ತಿವೆ. ಮುಂದಿನ ಲಂಡನ್ ಟೂರ್ನಿಗೆ ದೆಹಲಿಯಿಂದ ೪೫ ಕಿ.ಮೀ. ದೂರದ ಲ್ಲಿರುವ ಸೊನೆಪತ್‌ನಲ್ಲಿ ತರಬೇತಿ ಪಡೆಯುತ್ತಿರುವ ಕುಸ್ತಿ ತಂಡಕ್ಕೆ ಕೊಳೆತ ಆಹಾರವನ್ನು ನೀಡಲಾ ಗುತ್ತಿರುವ ಸಂಗತಿ ಈಗ ಬಯಲಾಗಿದೆ. ಅಲ್ಲದೆ ಆಹಾರ ತಯಾರಿಸುತ್ತಿರುವ ಅಡುಗೆ ಕೋಣೆಯು ಗಬ್ಬೆದ್ದು ನಾರುತ್ತಿದ್ದು, ಇಡೀ ತಂಡಕ್ಕೆ ದಿಗ್ಭ್ರಮೆಯನ್ನು ತಂದಿದೆ. ಕ್ಯಾಂಪ್‌ನಲ್ಲಿ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಕೂಡ ಸೇರಿದ್ದಾರೆ.
ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿರುವ ದೇಶದ ಮಾಜಿ ಅಥ್ಲೀಟ್ ಹಾಗೂ ಸದ್ಯ ಕ್ರೀಡಾ ಇಲಾಖೆಯ ಮೇಲ್ವಿಚಾರಣಾ ಸಮಿತಿಯಲ್ಲಿ ಸದಸ್ಯ ರಾಗಿರುವ ಖಾಜನ್ ಸಿಂಗ್ ಪರಿಸ್ಥಿತಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜ್ಯೂಸ್ ಹಾಗೂ ಇತರೆ ಖಾದ್ಯ ಗಳಿಗೆ ಬಳಸಲ್ಪಡುವ ಹಣ್ಣುಹಂಪಲುಗಳು ಕೊಳೆತು ನಾರುತ್ತಿದ್ದು, ಇದೊಂದು ಹಾಸ್ಯಾಸ್ಪದ ಸಂಗತಿಯಾ ಗಿದೆ. ಅಲ್ಲದೆ ಆಹಾರದ ಬಗ್ಗೆ ಕ್ರೀಡಾಳುಗಳಿಗೆ ಸರಿಯಾಗಿ ಮಾಹಿತಿ ನೀಡಲು ಯಾವೊಬ್ಬನೇ ಸಮರ್ಥ ಡಯಟೀಷಿಯನ್ ಅಥವಾ ನುರಿತ ವೈದ್ಯ ಕೀಯ ಸಿಬ್ಬಂದಿಯಿಲ್ಲ.
ಒಂದು ವೇಳೆ ಈ ಸಂಗತಿ ಯನ್ನು ಹೊರಹಾ ಕಿದರೆ ಕ್ಯಾಂಪ್‌ನಿಂದ ಹೊರ ಬೀಳುವ ಭಯದಿಂದ ಯಾರೂ ಕೂಡ ಈ ಬಗ್ಗೆ ದೂರನ್ನೂ ನೀಡಿಲ್ಲ ಎಂದು ಸಿಂಗ್ ಖೇದ ವ್ಯಕ್ತಪ ಡಿಸಿದ್ದಾರೆ. ಟೂರ್ನಿಗೆ ಇನ್ನೇನು ೫೧ ದಿನಗಳ ಬಾಕಿ ಉಳಿದಿರುವಂತೆ ದೇಶದ ತಂಡಗಳು ವಿವಿಧ ಕಡೆಗಳಲ್ಲಿ ತರಬೇತಿ ಪಡೆಯು ತ್ತಿದ್ದು, ಆದರೆ ಕುಸ್ತಿ ತಂಡದ ದುಸ್ಥಿತಿ ಮಾತ್ರ ಇಡೀ ದೇಶದ ಜನತೆಯನ್ನು ತಲೆತಗ್ಗಿ ಸುವಂತೆ ಮಾಡಿದೆ. ಅಲ್ಲದೆ ಲಂಡನ್ ಟೂರ್ನಿಯಲ್ಲಿ ಭಾರತ ಅನೇಕ ಪದಕಗಳ ನಿರೀಕ್ಷೆಯಲ್ಲಿದೆ.
Tagged with
tnews
ದೆಹಲಿ: ಇತ್ತೀಚಿಗಷ್ಟೇ ಅಮೆರಿಕಾದ ಬೋಸ್ಟನ್‌ನಲ್ಲಿ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದ ೨೦೧೧ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಈಗ ಕ್ಷಿಪ್ರಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಮುಂದೆ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ವಿಶ್ವ ಟಿ-ಟ್ವೆಂಟಿಯಲ್ಲಿ ಆಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಯುವರಾಜ್ ಸಿಂಗ್‌ರ ಸಿಟಿ ಸ್ಕ್ಯಾನ್ ವರದಿ ಬಂದಿದ್ದು, ಅದರಲ್ಲಿ ಬಂದ ವೈದ್ಯಕೀಯ ವರದಿಯು ಇಡೀ ಯುವಿ ಕುಟುಂಬವನ್ನು ಸಂತಸದಲ್ಲಿ ರುವಂತೆ ಮಾಡಿದೆ. ಯುವಿ ಕಳೆದ ಐದು ದಿನಗಳಿಂದ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ತರಬೇತಿ ಪಡೆಯುತ್ತಿದ್ದಾರೆ. ಅಲ್ಲಿ ತರಬೇತಿ ಪಡೆಯುತ್ತಿರುವ ಮತ್ತೋರ್ವ ಬೌಲರ್ ಇಶಾಂತ್ ಶರ್ಮಾ ಎಸೆತದಲ್ಲಿ ಯುವಿ ಆರು ಸಿಕ್ಸರ್‌ಗಳನ್ನು ಸಿಡಿಸಿದ್ದು, ಕುತೂಹಲದ ಸಂಗತಿಯಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ಯುವಿ ಕಾರ್ಡಿಕ್ ಅಭ್ಯಾಸ ಹಾಗೂ ತೂಕ ತರಬೇತಿಯನ್ನು ಪಡೆದಿದ್ದು, ಮುಂದಿನ ಜುಲೈನಲ್ಲಿ ಸಂಪೂರ್ಣವಾಗಿ ಫಿಟ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Tagged with
tnews
ಆಂಗ್ಲ ವಿರುದ್ಧದ ಏಕದಿನ ಸರಣಿಯಲ್ಲಿ ‘ಸಿಕ್ಸರ್ ಕಿಂಗ್ಗೆ ಸ್ಥಾನ
ಬಾರ್ಬೆಡೊಸ್: ಐಪಿಎಲ್ ನಲ್ಲಿ ರಾಯಲ್ ಚಾಲೆಂಜ್ ಬೆಂಗಳೂರು ತಂಡದ ಪರ ಕ್ರಿಸ್ ಗೇಲ್ ಪ್ರz ರ್ಶಿಸುತ್ತಿದ್ದ ಅತ್ಯದ್ಭುತ ಪ್ರದರ್ಶನವು ಕೆರೇಬಿಯನ್ ಆಟಗಾರನಿಗೆ ಅದೃಷ್ಟದ ಬಾಗಿಲನ್ನು ತೆರೆದಿದೆ. ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆಯಲಿ ರುವ ಮೂರು ಏಕದಿನ ಪಂದ್ಯಗಳಿಗೆ ಆಯ್ಕೆಮಾಡಲಾದ ೧೫ ಆಟಗಾರರ ವೆಸ್ಟ್ ಇಂಡೀಸ್ ತಂಡದಲ್ಲಿ ಗೇಲ್‌ಗೆ ಅವಕಾಶ ಕಲ್ಪಸಲಾಗಿದೆ. ಈ ಮೂಲಕ ೧೪ ತಿಂಗಳ ನಂತರ ಗೇಲ್ ಅಂತಾ ರಾಷ್ಟ್ರೀಯ ಪಂದ್ಯವಾಡು ವಂತಾಗಿದೆ.
೨೦೧೧ರಲ್ಲಿ ಎಪ್ರಿಲ್‌ನಲ್ಲಿ ಖಾಸಗಿ ರೇಡಿಯೋ ಚಾನೆಲ್ ನೀಡಿದ ಸಂದರ್ಶನದಲ್ಲಿ ಗೇಲ್ ವಿಂಡೀಸ್ ಬೋರ್ಡ್ ವಿರುದ್ಧ ತೀವ್ರ ರೀತಿಯಲ್ಲಿ ಹರಿಹಾಯ್ದಿದ್ದರು. ಪರಿಣಾಮ ಕೆರೇಬಿಯನ್‌ನ ದೈತ್ಯ ಆಟಗಾರನಿಗೆ ಬೋರ್ಡ್ ಮುಂದೆ ನಡೆದ ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳಿಂದ ಖೊಕ್ ನೀಡಿತ್ತು. ಈಗ ಮರಳಿ ಅವಕಾಶ ಕಲ್ಪಿಸಿರುವುದು ಗೇಲ್ ಖುಷಿ ಮೂಡಿಸಿರುವುದರಲ್ಲಿ ಸಂಶಯವಿಲ್ಲ.
ತಂಡ: ಡ್ಯಾರೆನ್ ಸ್ಯಾಮಿ (ನಾ), ಡ್ವೇಯ್ನ್ ಬ್ರಾವೊ, ಟಿನೊ ಬೆಸ್ಟ್, ಡ್ಯಾರೆನ್ ಬ್ರಾವೊ, ಜಾನ್ಸನ್ ಚಾರ್ಲ್ಸ್, ಫಿಡೆಲ್ ಎಡ್ವರ್ಡ್ಸ್, ಗೇಲ್, ಸುನೀಲ್ ನಾರೈನ್, ಪೊಲಾರ್ಡ್, ರಾಮ್‌ದೀನ್, ರಾಂಪಾಲ್, ರಸ್ಸೆಲ್, ಸ್ಯಾಮ್ಯುವೆಲ್ಸ್, ಸಿಮ್ಮೊನ್ಸ್, ಸ್ಮಿತ್.
Tagged with
tnews
ದುಬೈ: ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಪ್ರಕಟಿಸಿದ ಏಕದಿನ ರ‍್ಯಾಂಕಿಂಗ್ ಪಟ್ಟಿಯ ಅಗ್ರನಾಲ್ಕರಲ್ಲಿ ಭಾರತದ ಇಬ್ಬರು ಪ್ರತಿಭಾವಂತ ಆಟಗಾರರು ಸ್ಥಾನಗಿಟ್ಟಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಉದಯೋನ್ಮುಖ ಆಟಗಾರ ವಿರಾಟ್ ಕೊಹ್ಲಿ ಸ್ಥಾನಗಿಟ್ಟಿಸಿದ್ದರೆ ನಾಲ್ಕನೇ ಸ್ಥಾನದಲ್ಲಿ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯಿದ್ದಾರೆ. ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ ೮೭೧ ಅಂಕದೊಂದಿಗೆ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಇತ್ತೀಚಿಗಷ್ಟೇ ಮುಕ್ತಾಯಗೊಂಡ ಅನೇಕ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೊಹ್ಲಿ ೮೪೬ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ನಾಯಕ ಧೋನಿ ೭೫೨ ಅಂಕ ಸಂಪಾದಿಸಿ ಚತುರ್ಥ ಸ್ಥಾನದಲ್ಲಿದ್ದಾರೆ. ಆದರೆ ನಂತರ ಅಗ್ರಹತ್ತರ ಕ್ರಮಾಂಕದಲ್ಲಿ ಯಾವೊಬ್ಬ ಭಾರತೀಯ ಸ್ಥಾನಗಿಟ್ಟಿಸಲು ವಿಫಲವಾಗಿದ್ದಾನೆ. ಆದರೆ ಗೌತಮ್ ಗಂಭೀರ್ ೬೬೬ ಅಂಕದ ಜೊತೆ ೧೭ನೇ ಸ್ಥಾನದಲ್ಲಿದ್ದಾರೆ. ಇನ್ನು ಬೌಲಿಂಗ್ ವಿಭಾಗದ ಅಗ್ರ ೨೦ರ ಪಟ್ಟಿಯಲ್ಲಿ ಭಾರತದ ಯಾವೊಬ್ಬ ಆಟಗಾರ ಕಾಣಿಸಲು ವಿಫಲನಾಗಿದ್ದಾನೆ. ಆಫ್ರಿಕಾದ ಸೊಸೊಬೆ ಅಗ್ರಸ್ಥಾನ, ಪಾಕಿಸ್ತಾನದ ಸಯೀದ್ ಅಜ್ಮಲ್ ಎರಡನೇ ಹಾಗೂ ಮೊರ್ನೆ ಮೊರ್ಕೆಲ್ ಮೂರನೇ ಕ್ರಮಾಂಕದಲ್ಲಿದ್ದಾರೆ. ಇನ್ನು ಏಕದಿನ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಆಫ್ರಿಕಾ ಮೊದಲೆರಡು ಸ್ಥಾನದಲ್ಲಿದ್ದರೆ ಭಾರತ ೧೧೭ ಅಂಕದೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
Tagged with
tnews
ಬೆಂಗಳೂರು: ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಯಿಂದ ಡಾ. ಜಿ. ಪರಮೇಶ್ವರ್ ಅವರನ್ನು ಬದಲಾವಣೆ ಮಾಡಿ, ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕಾರಣಿಯಲ್ಲಿ ಭಾಗವಹಿಸಲು ನಿನ್ನೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ನಿನ್ನೆ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಹಾಗೂ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ಭೇಟಿ ಮಾಡಿ ಪ್ರದೇಶ ಕಾಂಗ್ರೆಸ್‌ನ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಕಳೆದ ೯ ವರ್ಷಗಳಿಂದ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರ ವಂಚಿತಗೊಂಡಿದೆ. ನಮಗೆ ಇದೀಗ ಬಂದಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಆದರೆ ಪರಮೇಶ್ವರ್ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಮಧುಸೂದನ್ ಮಿಸ್ತ್ರಿ ಕೂಡ ತಮ್ಮ ಕಾರ್ಯನಿರ್ವಹಣೆಯಲ್ಲಿ ವಿಫಲರಾಗಿದ್ದು, ಉಸ್ತುವಾರಿ ಹೊಣೆಯನ್ನು ಬೇರೆಯವರಿಗೆ ವಹಿಸಿಕೊಡಿ. ನನಗೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಟ್ಟು, ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಭರವಸೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ. ಪ್ರತಿಪಕ್ಷದ ನಾಯಕತ್ವಕ್ಕೆ ತಾವು ರಾಜೀನಾಮೆಯನ್ನು ಯಾವ ಕಾರಣಕ್ಕೆ ನೀಡಬೇಕಾಯಿತು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಲ್ಲದೆ ತಾವು ಮತ್ತೆ ಆ ಸ್ಥಾನದಲ್ಲಿ ಮುಂದುವರೆಯಲು ಆಸಕ್ತನಾಗಿಲ್ಲ. ನನಗೆ ಪಕ್ಷದ ಹೊಣೆಗಾರಿಕೆಯನ್ನೇ ನೀಡಿ ಎಂದು ಮನವಿ ಮಾಡಿದ್ದಲ್ಲದೆ ಪರಮೇಶ್ವರ್ ಹಾಗೂ ಮಿಸ್ತ್ರಿ ವಿರುದ್ಧ ಸಿದ್ಧಪಡಿಸಿಕೊಂಡು ಹೋಗಿದ್ದ, ಲಿಖಿತ ದೂರನ್ನು ವರಿಷ್ಠರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Tagged with
siddu,
snews
ಮುಂಬೈ: ವಿವಾದಾತ್ಮಕ ಮಹಿಳಾ ಲೇಖಕಿ ತಸ್ಲೀಮಾ ನಸ್ರೀನ್ ಭಾರತದಲ್ಲಿ ದಿಢೀರ್ ಖ್ಯಾತಿಗೆ ಬಂದಿರುವ ನೀಲಿ ಚಿತ್ರಗಳ ನಟಿ ಸನ್ನಿ ಲಿಯೋನ್ ಮತ್ತು ಮಾತೆತ್ತಿದರೆ ಬೆತ್ತಲಾಗುವ ಪೂನಂ ಪಾಂಡೆಯನ್ನು ಟ್ವಿಟ್ಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಹದಿ ವಯಸ್ಕರ ಚಿತ್ರದ ನಟಿಯೊಬ್ಬಳನ್ನು ಬಾಲಿವುಡ್‌ಗೆ ಕರೆಸಿ ದೊಡ್ಡ ನಟಿಯಂತೆ ಮಾಡುತ್ತಿದ್ದೀರಿ. ಇದರಿಂದ ವಿಜ್ಞಾ ನಿಯೋ, ಇಂಜಿನಿಯರೋ ಅಥವಾ ಡಾಕ್ಟರ್ ಆಗಬೇಕಾದ ನಮ್ಮ ಹೆಣ್ಣುಮಕ್ಕಳನ್ನು ಸನ್ನಿ ಲಿಯೋನ್ ರೀತಿಯಲ್ಲೇ ಲೈಂಗಿಕ ಚಿತ್ರಗಳ ತಾರೆಯನ್ನಾಗಿಸಲು ಪ್ರೇರೇಪಿಸು ತ್ತಿದ್ದೀರಿ ಎಂದಾಯಿತು ಎಂದು ತಸ್ಲೀಮಾ ಟ್ವಿಟ್ಟರಿನಲ್ಲಿ ಝಾಡಿಸಿದ್ದಾರೆ. ಇನ್ನು ಪೂನಂ ಪಾಂಡೆ ಎಂಬಾಕೆ ಸಂಪೂರ್ಣ ನಗ್ನಳಾದಳು. ಆದರೂ ಅವಳಿಗೆ ತೃಪ್ತಿಯಾಗಿಲ್ಲ. ನಾವು ಸುಮ್ಮನಿದ್ದರೆ ಬಹಿರಂಗವಾಗಿ, ಸಾರ್ವ ಜನಿಕರೆ ದುರು ಸಂಭೋಗ ಮಾಡಿಸಿಕೊಳ್ಳು ವುದಕ್ಕೂ ಅವಳು ಸಿದ್ಧವಾಗಿದ್ದಾಳೆ ಎಂದು ತಸ್ಲೀಮಾ ಕಿಡಿಕಾರಿದ್ದಾರೆ. ತಸ್ಲೀಮಾ ಈ ಹೇಳಿಕೆಯಿಂದ ಸದಾ ಒಂದಿಲ್ಲೊಂದು ವಿವಾದಗಳಲ್ಲೇ ಕಾಲ ಕಳೆಯುವ ಈ ಇಬ್ಬರು ಹಾಟ್ ತಾರೆಯರಿಗೆ ಸರಿಯಾಗಿಯೇ ಮುಖಭಂಗವಾಗಿದೆ ಎನ್ನಬಹುದು. ತಸ್ಲೀಮಾ ನಸ್ರೀನ್ ತನ್ನ ಲೇಖನದ ಮೂಲಕವೇ ವಿವಾದ ಸೃಷ್ಟಿಸಿದಾಕೆ. ಇದೀಗ ಒಮ್ಮಿಂದೊಮ್ಮೆಲೇ ಈ ಇಬ್ಬರು ಹಾಟ್ ಬೆಡಗಿಯರ ಮೇಲೆ ಉರಿದು ಬೀಳುವ ಮೂಲಕ ಟ್ವಿಟ್ಟರ್‌ನಲ್ಲಿ ಸಖತ್ತಾಗಿಯೇ ಸದ್ದು ಮಾಡಿದ್ದಾರೆ. ಈಕೆಯ ಆಕ್ರೋಶದ ಕಿಡಿಗೆ ಈ ಇಬ್ಬರು ತಾರೆಯರು ಯಾವ ರೀತಿ ಪ್ರತಿಕ್ರ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಷ್ಟೇ.
Tagged with
nnews
ಕಾರ್ಕಳ: ದುರ್ಗ-ತೆಳ್ಳಾರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋ ಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಜೊತೆಗೆ ಚಕ್ರಬಡ್ಡಿಗೆ ಸಾಲ ನೀಡುತ್ತಾ ಬಂದಿದ್ದ ವರ್ಣಬೆಟ್ಟು ಸೋಮಶೇಖರಪ್ಪ(೪೬) ಎಂಬವರು ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದಾರೆ.
ಸೋಮವಾರ ರಾತ್ರಿ ವಿಸ್ತೃತ ಬಸ್ಸು ನಿಲ್ದಾಣ ಪಕ್ಕದ ಹೋಟೆಲ್‌ವೊಂದರಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸ ಲಾಗಿದ್ದ ಸಭೆಯಲ್ಲಿ ಅವರು ಪಾಲ್ಗೊಂಡಿ ದ್ದರೆಂದು ತಿಳಿದುಬಂದಿದೆ. ಅದಕ್ಕೂ ಮೊದಲು ತನ್ನ ಸ್ನೇಹಿತರೊಂದಿಗೆ ಬಾರ್ ನಲ್ಲಿ ಕಂಠಪೂರ್ತಿ ಕುಡಿದಿದ್ದರೆಂಬ ಮಾಹಿತಿ ಲಭ್ಯವಾಗಿದೆ.
ರಾತ್ರಿ ಸುಮಾರು ೧೧ರ ವೇಳೆಗೆ ಮನೆಗೆ ಹಿಂತಿರುಗಿದ್ದ ಅವರು ತನ್ನ ಪತ್ನಿಯೊಂದಿಗೆ ಅದ್ಯಾವುದೋ ಕಾರಣದಿಂದ ತಗಾದೆ ಉಂಟುಮಾಡಿದರಲ್ಲದೇ ವಸ್ತ್ರದಿಂದ ಕುತ್ತಿಗೆ ಯನ್ನು ಬಿಗಿದುಕೊಂಡು ಬೊಬ್ಬೆ ಹೊಡೆಯುತ್ತಿದ್ದರೆಂದು ಸ್ಥಳೀಯ ಮೂಲ ಗಳಿಂದ ತಿಳಿದುಬಂದಿದೆ. ಈ ಎಲ್ಲಾ ಬೆಳವಣಿಗೆಯ ನಡುವೆ ಸೋಮಶೇಖರಪ್ಪ ರನ್ನು ಸರಕಾರಿ ಆಸ್ಪತ್ರೆಗೆ ಕರೆತಂದಾಗ ಅವರ ಪ್ರಾಣಪಕ್ಷಿ ಹಾರಿಹೋಗಿದೆ.
ಸೋಮಶೇಖರಪ್ಪ ಅವರು ನೇಣುಬಿಗಿದು ಆತ್ಮಹತ್ಯೆಗೈದಿದ್ದಾರೆಂಬ ಮಾಹಿತಿಯೊಂದು ಪೊಲೀಸರಿಗೆ ಮೊದಲಿಗೆ ಲಭ್ಯವಾಗಿತ್ತು. ಅದರಂತೆ ತನಿಖೆಯನ್ನು ಮುಂದುವರಿಸಿ ಮನೆಮಂದಿಯ ಅನುಮತಿಯೊಂದಿಗೆ ಶವಮಹಜರನ್ನು ನಿನ್ನೆ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನೆರವೇರಿಸಲಾಗಿತ್ತು.
ಮೂಲತಃ ಸೊರಬದವರಾಗಿದ್ದ ಸೋಮಶೇಖರಪ್ಪ ಅವರು ಬಾಲ್ಯವಸ್ಥೆಯಲ್ಲಿ ಕಾರ್ಕಳಕ್ಕೆ ಬಂದಿದ್ದರಲ್ಲದೇ ಹನುಮಾನ್ ಬಸ್ಸು ಏಜೆಂಟರಾಗಿದ್ದ ಪಂಡರೀನಾಥ ಶೆಣೈ ಅವರಲ್ಲಿ ಕೆಲಸಕ್ಕೆ ಸೇರಿದ್ದರು. ತದನಂತರ ಕನಕ ಬಸ್ಸಿನಲ್ಲಿ ನಿರ್ವಾಹಕನಾಗಿ ದುಡಿಯುತ್ತಿರುವಾಗಲೇ ಉಡುಪಿಯಲ್ಲಿ ತೆರೆದಅಂಚೆ ಮೂಲಕ ಬಿಎಡ್ ವ್ಯಾಸಂಗ ಮಾಡಿ ಸರಕಾರಿ ಶಾಲೆಯೊಂದರಲ್ಲಿ ಅಧ್ಯಾಪಕರಾಗಿ ನಿಯುಕ್ತಿಗೊಂಡಿದ್ದ ಅವರು ನಿಗೂಢ ರೀತಿಯಲ್ಲಿ ಸಾವಿಗೀಡಾಗುವ ಮುಂಚಿನ ದಿನದವರೆಗೆ ದುರ್ಗಾ ತೆಳ್ಳಾರು ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋ ಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ಕುಡಿತದ ಚಟದ ಜೊತೆಗೆ ಸಾರ್ವಜನಿಕರಿಗೆ ಸಾಲ ನೀಡಿ ಚಕ್ರಬಡ್ಡಿ ವಸೂಲಿ ನಡೆಸುತ್ತಿದ್ದ ಅಪಕೀರ್ತಿಗೂ ಕಾರಣರಾಗಿದ್ದರು.
ರಕ್ತದೊತ್ತಡ ಹಾಗೂ ಸಿಹಿಮೂತ್ರ ರೋಗದಿಂದ ಬಳಲುತ್ತಿದ್ದ ಸೋಮ ಶೇಖರಪ್ಪ ಅವರು ಕಾರ್ಯಕ್ರಮದಿಂದ ಹಿಂತಿರುಗಿ ಸ್ವಲ್ಪ ಹೊತ್ತಿನಲ್ಲಿಯೇ ಎದೆ ನೋವು ಎಂದು ಬೊಬ್ಬೆಹೊಡೆಯುತ್ತಿದ್ದರು. ಕುಡಿಯಲು ನೀರು ತರುವಷ್ಟರಲ್ಲಿ ಅವರು ಕುಸಿದು ಬಿದ್ದು ಸಾವಿಗೀಡಾಗಿದ್ದಾರೆಂದು ಮೃತವ್ಯಕ್ತಿಯ ಪತ್ನಿ ರೇಖಾ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಮೃತದೇಹದ ಕುತ್ತಿಗೆ ಭುಜದ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಗುರುತು ಕಂಡುಬಂದಿದೆ. ವೈದ್ಯಕೀಯ ವರದಿಯ ಬಳಿಕವಷ್ಟೇ ನಿಜಾಂಶ ಹೊರಬೀಳಲಿದೆ. ಪತ್ನಿ ರೇಖಾ ನೀಡಿರುವ ದೂರಿನಂತೆ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
Tagged with
cnews,
feature
ಅಕ್ರಮ ಕಸಾಯಿಖಾನೆ ದಾಳಿಯ ಹಿಂದೆ ಮೇಯರ್‌ಗಿರಿ
ಮಂಗಳೂರು: ಕುದ್ರೋಳಿಯಲ್ಲಿ ಅಕ್ರಮವಾಗಿ ನಡೆಸಲ್ಪಡುತ್ತಿದ್ದ ಕಸಾಯಿಖಾನೆಗೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದ್ದ ಕುರಿಗಳನ್ನು ಹರಾಜು ಹಾಕುವ ಬದಲು ದಂಡ ವಿಧಿಸಿ ಸಂಬಂಧಪಟ್ಟವರಿಗೆ ಒಪ್ಪಿಸಲಾಗಿದ್ದು, ಇದರ ಹಿಂದೆ ಮೇಯರ್ ಅವರಿಂದ ಲಾಬಿ ನಡೆದಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಅದಿತ್ಯವಾರ ಬೆಳ್ಳಂಬೆಳಗ್ಗೆ ಪಾಲಿಕೆಯ ಆರೋಗ್ಯಾಧಿಕಾರಿ ರಘುನಾಥ್, ಜಂಟಿ ಆಯುಕ್ತರಾದ ಶ್ರೀಕಾಂತ್ ರಾವ್ ಸಹಿತ ೧೨ ಮಂದಿಯ ತಂಡ ಕುದ್ರೋಳಿ ಸೇತುವೆ ಬಳಿಯಿರುವ ನೂರ್‌ಮಹಮ್ಮದ್ ಎಂಬವರ ಕಟ್ಟಡಕ್ಕೆ ದಾಳಿ ನಡೆಸಿತ್ತು. ಆ ಸಂದರ್ಭ ಕಟ್ಟಡದ ಕೋಣೆಯೊಂದರಲ್ಲಿ ಅಕ್ರಮವಾಗಿ ಕುರಿಗಳನ್ನು ಕಡಿದು ಮಾಂಸ ಮಾಡಲಾಗುತ್ತಿದ್ದುದನ್ನು ಪಾಲಿಕೆ ಅಧಿಕಾರಿಗಳು ಪತ್ತೆ ಹಚ್ಚಿದ್ದಲ್ಲದೆ ೨೬ ಜೀವಂತ ಕುರಿಗಳನ್ನು ವಶಪಡಿಸಿಕೊಂಡಿದ್ದರು. ಇದೇ ವೇಳೆ ಆಗತಾನೇ ಧಹಿಸಲಾಗಿದ್ದ ಕುರಿಗಳ ಚರ್ಮ, ತಲೆಗಳು ಹಾಗೂ ರಕ್ತದ ಕಲೆಗಳೂ ಸ್ಥಳದಲ್ಲಿ ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪರವಾನಿಗೆ ರಹಿತವಾಗಿ ಕಸಾಯಿಖಾನೆ ನಡೆಸುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದ ಆರೋಗ್ಯಾಧಿಕಾರಿ ರಘುನಾಥ್, ವಶಪಡಿಸಿಕೊಳ್ಳಲಾಗಿದ್ದ ಕುರಿಗಳು ಹಾಗೂ ಚರ್ಮವನ್ನು ಹರಾಜು ಹಾಕಲಾಗುವುದಾಗಿ ತಿಳಿಸಿದ್ದರು. ೨೬ ಕುರಿಗಳ ಪೈಕಿ ಒಂದು ಕುರಿ ಸಾವನ್ನಪ್ಪಿದ್ದು ನಿನ್ನೆ ಉಳಿದ ಕುರಿಗಳನ್ನು ಅದರ ಮಾಲಕರಿಗೆ ಹಿಂದಿರುಗಿಸಲಾಗಿದೆ. ಈ ಸಂದರ್ಭ ಕುರಿಗಳನ್ನು ಹರಾಜು ಹಾಕುವ ಬದಲು ಎರಡು ಸಾವಿರ ದಂಡಕ್ಕೆ ಪ್ರಕರಣ ಇತ್ಯರ್ಥಪಡಿಸಲಾಗಿದೆ. ಅಕ್ರಮ ಕಸಾಯಿಖಾನೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಂಟಿ ಆಯುಕ್ತರು ಮುಂದಾಗಿದ್ದರೂ ಮೇಯರ್ ಮೇಡಂ ಅಧಿಕಾರಿಗಳ ಕ್ರಮಕ್ಕೆ ಅಡ್ಡಗಾಲಿಕ್ಕಿ ಹರಾಜು ತಪ್ಪಿಸಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯಾಧಿಕಾರಿ ರಘುನಾಥ್, ಕಟ್ಟಡಕ್ಕೆ ದಾಳಿ ನಡೆಸಿದಾಗ ಕೇವಲ ಚರ್ಮ ಮತ್ತು ಜೀವಂತ ಕುರಿಗಳು ಮಾತ್ರವೇ ಸಿಕ್ಕಿವೆ. ಇದು ಅಕ್ರಮವಾಗಿ ಕುರಿಗಳನ್ನು ವಧಿಸಲಾಗುತ್ತಿತ್ತು ಎನ್ನುವುದಕ್ಕೆ ಪುರಾವೆ ಅಲ್ಲ. ಈ ಕಾರಣದಿಂದ ದಂಡ ಹಾಕುವ ಮೂಲಕ ಪ್ರಕರಣ ಮುಕ್ತಾಯಗೊಳಿಸಲಾಗಿದೆ ಎಂದು ಹಿಂದಿನ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ಮೇಯರ್ ಲಾಬಿಯಿಂದಾಗಿ ಅಧಿಕಾರಿಗಳು ನಿದ್ದೆಬಿಟ್ಟು ನಡೆಸಿದ್ದ ದಾಳಿಗೆ ಎಳ್ಳುನೀರು ಬಿಟ್ಟಂತಾಗಿದೆ.
Tagged with
dk,
feature,
lnews
ಅಡ್ಯಾರು ಸಹ್ಯಾದ್ರಿ ಕಾಲೇಜು ಭೂ ಹಗರಣ
ಮಂಗಳೂರು: ನೇತ್ರಾವತಿ ನದಿ ತಟದ ಐದು ಎಕ್ರೆ ಭೂ ಪ್ರದೇಶಕ್ಕೆ ಮಣ್ಣು ತುಂಬಿಸಿದ ಅಡ್ಯಾರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ನದಿಯನ್ನು ಕ್ರೀಡಾಂಗಣವಾಗಿ ಪರಿವರ್ತಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ನದಿಯ ಸಹಜ ಹರಿವು ಇರುವ ಪ್ರದೇ ಶವನ್ನು ಯಾವುದೇ ರೀತಿಯ ಚಟುವಟಿಕೆ ಗಳಿಗೆ ಬಳಿಸಿಕೊಳ್ಳಬಾರದು ಎನ್ನುವ ಸಿಆರ್ ಝಡ್ ಕಾನೂನೇ ಇದ್ದರೂ ಅದನ್ನು ಉಲ್ಲಂ ಘಿಸಿದ ಕಾಲೇಜು ಆಡಳಿತ ಮಂಡಳಿ ಅಕ್ರಮ ವಾಗಿ ನದಿಗೆ ಮಣ್ಣು ತುಂಬಿ ನದಿಯನ್ನು ಮೈದಾನವಾಗಿ ಪರಿವರ್ತಿಸುವ ಹುನ್ನಾರ ನಡೆಸುತ್ತಿದೆ. ಈಗಾಗಲೇ ಐದು ಎಕ್ರೆಯಷ್ಟು ಪ್ರದೇಶಕ್ಕೆ ಮಣ್ಣು ಹಾಕಲಾಗಿದ್ದು, ಈ ಪ್ರಮಾಣ ಇನ್ನಷ್ಟು ಮುಂದುವರಿಯುವ ಸೂಚನೆ ಕಂಡು ಬಂದಿದೆ. ಕಾಲೇಜಿನ ಕೂಗ ಳತೆ ದೂರದಲ್ಲಿ ಅಡ್ಯಾರು ಗ್ರಾಮ ಪಂಚಾ ಯತ್ ಕಚೇರಿ ಇದ್ದರೂ ಪಂಚಾಯತ್ ಕೂಡಾ ಈ ಅಕ್ರಮದ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ಶಂಕೆಗೆ ಕಾರಣವಾಗಿದೆ. ಅಡ್ಯಾರು ಸಹ್ಯಾದ್ರಿ ಕಾಲೇಜಿನ ಹಿಂಭಾಗದಲ್ಲಿ ಒಂದು ಕಡೆ ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದ್ದು ಇನ್ನೊಂದು ಕಡೆ ಕಾಲೇಜು ನದಿ ಮಟ್ಟಕ್ಕಿಂತ ತುಂಬಾ ಎತ್ತರದವರೆಗೆ ಮಣ್ಣು ತುಂಬಿದೆ. ಹೀಗಾಗಿ ನದಿ ತೀರದ ಮನೆಮಂದಿ ನೆರೆ ಭೀತಿಯನ್ನು ಎದುರಿಸುವಂತಾಗಿದೆ. ಈಗಾಗಲೇ ಮಳೆ ಆರಂಭಗೊಂಡಿದ್ದು ಒಂದು ಭಾಗದಲ್ಲಿ ನದಿ ಒತ್ತುವರಿಯಾದ ಕಾರಣ, ನದಿ ಇನ್ನೊಂದು ಭಾಗದತ್ತ ಹೆಚ್ಚಾಗಿ ಹರಿಯುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ. ಇದರಿಂದಾಗಿ ಕೃಷಿ ಭೂಮಿ ಮೇಲೆ ನೆರೆ ನೀರು ಬರುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಸಹ್ಯಾದ್ರಿ ಕಾಲೇಜು ಕಳೆದ ಕೆಲ ತಿಂಗಳಿನಿಂದ ಹಂತಹಂತವಾಗಿ ನದಿಗೆ ಮಣ್ಣು ತುಂಬಿಸುವ ಕೆಲಸವನ್ನು ನಿರ್ವಹಿಸುತ್ತಾ ಬರುತ್ತಿದೆ. ಇದಲ್ಲದೆ ಕಾಲೇಜಿನ ಒಂದು ಬದಿಯಿಂದ ನದಿ ತೀರಕ್ಕೆ ಸಾಗುವ ಹಾದಿಗೆ ಗೇಟ್ ನಿರ್ಮಿಸಿ ಈ ಭಾಗದಿಂದ ನದಿ ತೀರಕ್ಕೆ ಪ್ರವೇಶವನ್ನು ನಿರ್ಬಂಧಿಸಿದೆ. ಇದರಿಂದಾಗಿ ಈ ಭಾಗದಲ್ಲಿ ನಡೆಯುತ್ತಿರುವ ಅವ್ಯವಹಾರ ಬೆಳಕಿಗೆ ಬರಲು ವಿಳಂಬವಾಗಿತ್ತು. ನೀತಿ ಪಾಠ ಬೋಧಿಸುವ ವಿದ್ಯಾ ಸಂಸ್ಥೆಯೇ ಈ ರೀತಿಯ ಅವ್ಯವಹಾರ ನಡೆಸಿರುವ ಬಗ್ಗೆ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ.
ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಬೃಹತ್ ಪ್ರವಾಸಿ ಹೊಟೇಲು ನಿರ್ಮಾಣವಾಗುತ್ತಿದ್ದು, ಇದರ ಪಾರ್ಕಿಂಗ್‌ಗಾಗಿ ಮತ್ತು ಹೊಟೇಲಿಗೆ ಬರುವ ಗ್ರಾಹಕರ ಅನುಕೂಲತೆಗಾಗಿ ಈ ಮೈದಾನವನ್ನು ಬಳಸಿಕೊಳ್ಳುವ ಅಂದಾಜು ಇದೆ ಎನ್ನುವ ಶಂಕೆಯನ್ನು ಸ್ಥಳೀಯರು ವ್ಯಕ್ತ ಪಡಿಸಿದ್ದಾರೆ. ಸಹ್ಯಾದ್ರಿ ಕಾಲೇಜು ನೇತ್ರಾವತಿ ನದಿ ತೀರದಿಂದ ನೂರು ಮೀಟರ್ ಅಂತರದಲ್ಲಿದ್ದು ನದಿ ತೀರಕ್ಕೆ ಹೊಂದಿಕೊಂಡಂತೆ ಯಾವುದೇ ಕೆಲಸ ನಿರ್ವಹಿಸಲು ಸಿಆರ್‌ಝಡ್‌ನಲ್ಲಿ ಅವಕಾಶ ಇಲ್ಲ. ಇದೇ ಕಾರಣದಿಂದ ಗುರುಪುರ ನದಿಗೆ ಎಂಎಸ್‌ಇಝಡ್ ಮಣ್ಣು ತುಂಬಿ ಕಾರಿಡಾರ್ ರಸ್ತೆ ನಿರ್ಮಿಸಲು ಮುಂದಾಗಿರುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸಹ್ಯಾದ್ರಿ ಕಾಲೇಜು ನದಿಗೆ ಮಣ್ಣು ಹಾಕಿರುವ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ಸಿಆರ್‌ಝಡ್ ಅಧಿಕಾರಿಗಳು ಹೇಳುತ್ತಿರುವುದೂ ಸಂಶಯವನ್ನು ಹುಟ್ಟು ಹಾಕಿದೆ. ಐದು ಎಕರೆ ವ್ಯಾಪ್ತಿಯಲ್ಲಿ ಮಣ್ಣು ತುಂಬಿಸಿಕೊಂಡಿರುವ ನದಿಯಿಂದಾಗಿ ಈ ಬಾರಿ ಕೃತಕ ನೆರೆ ಸೃಷ್ಟಿಯಾಗುವುದು ಖಚಿತ ಎನ್ನಲಾಗುತ್ತಿದೆ. ಅಕ್ರಮ ನದಿಯನ್ನೇ ಮೈದಾನ ಮಾಡಿದ ಪ್ರಕರಣದಲ್ಲಿ ಸಿಆರ್‌ಜೆಡ್ ಅಧಿಕಾರಿಗಳಿಂದ ಹಿಡಿದು ಅಡ್ಯಾರು ಪಂಚಾಯತ್ ತನಕ ಹೇರಳ ಮಣ್ಣು ತಿನ್ನುವ ಕೆಲಸ ಮಾಡಿರುವುದು ದೃಢ ಪಟ್ಟಿದೆ.
Tagged with
dk,
feature,
lnews

ವಿಟ್ಲ: ಇಲ್ಲಿಗೆ ಸಮೀಪದ ಕುದ್ದುಪದವು ಎಂಬಲ್ಲಿಯ ದಿನಸಿ ಅಂಗಡಿಗೆ ಮಂಗಳವಾರ ಬೆಳಗಿನ ಜಾವ ಬೆಂಕಿ ತಗುಲಿದ ಪರಿಣಾಮ ೧೩ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳು ಬೆಂಕಿಗಾಹುತಿಯಾಗಿದೆ. ಇದೀಗ ಸ್ಥಳೀಯರು ಅಗ್ನಿಶಾಮಕ ದಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುದ್ದುಪದವು ಮಹಮ್ಮದ್ ಅವರ ಕಟ್ಟಡದಲ್ಲಿರುವ ಎಂ.ಎ ಅಬೂಬಕ್ಕರ್ ಅವರ ಅಂಗಡಿಗೆ ಮಂಗಳವಾರ ಬೆಳಗ್ಗಿನ ಜಾವ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿತು. ಅಂಗಡಿಯ ಒಳಗಿನಿಂದ ಬೆಂಕಿ ಬರುವುದನ್ನು ಗಮನಿಸಿದ ಟೆಂಪೋ ಚಾಲಕರೊಬ್ಬರು ತಕ್ಷಣವೇ ಅಂಗಡಿ ಮಾಲಕರಾದ ಅಬೂ ಬಕರ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಬಳಿಕ ಸ್ಥಳೀಯರು ಪುತ್ತೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರೂ ಅವರು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ನೀವು ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಎಂದು ಹೇಳಿ ಕೈ ತೊಳೆದು ಕೊಂಡಿದ್ದರು ಎಂದು ಸ್ಥಳೀಯರು ದೂರಿದ್ದಾರೆ. ಅದಲ್ಲದೇ ಅಗ್ನಿಶಾಮಕ ದಳದವರು ಮಂಗಳೂರು ಅಗ್ನಿಶಾಮಕ ದಳ ಕಂಟ್ರೋಲ್ ರೂಂನ ದೂರವಾಣಿ ಸಂಖ್ಯೆಯ ಬದಲಾಗಿ ಅವರು ಮಂಗಳೂರು ಪೊಲೀಸ್ ಕಂಟ್ರೋಲ್ ರೂಂನ ಸಂಖ್ಯೆ ನೀಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿದ್ದ ೫ಸಾವಿರ ರೂಪಾಯಿ ನಗದು, ಅಂಗಡಿ ಪರವಾನಿಗೆ ಪತ್ರ, ಅಕ್ಕಿ, ಬೇಳೆಕಾಳು, ಮುಂತಾದ ದಿನಸಿ ಸಾಮಾಗ್ರಿಗಳು ಭಸ್ಮವಾಗಿದೆ. ಕೊನೆಗಳಿಗೆ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರುವಷ್ಟರಲ್ಲಿ ಅಂಗಡಿ ಸ್ವತ್ತುಗಳೆಲ್ಲ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಘಟನಾ ಸ್ಥಳಕ್ಕೆ ಕೇಪು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ, ಸದಸ್ಯ ಕರೀಂ ಕುದ್ದುಪದವು ಮುಂತಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Tagged with
dk,
feature,
fire,
lnews
ರೈ ಮಧ್ಯಸ್ಥಿಕೆಯಿಂದ ಪ್ರತಿಭಟನೆ ಹಿಂತೆಗೆತ
ಬಂಟ್ವಾಳ: ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಗ್ರಾ. ಪಂ ಕಛೇರಿಯೆದುರು ಪ್ರತಿಭಟನೆ ನಡೆಸಿದು, ಬಳಿಕ ಇಲಾಖಾ ಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ಭರವಸೆಯಿಂದ ಪ್ರತಿಭಟನೆ ಹಿಂತೆಗೆದು ಕೊಂಡ ಘಟನೆ ಮಂಗಳವಾರ ನೇಲ್ಯ ಕುಮೇರು ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಸರಪಾಡಿ ಗ್ರಾ. ಪಂ ವ್ಯಾಪ್ತಿಯ ನೇಲ್ಯಕುಮೇರಿನ ಎರಡನೇ ವಾರ್ಡಿನ ನಿವಾಸಿಗಳಿಗೆ ಕಳೆದ ತಿಂಗಳಿನಿಂದ ಕುಡಿಯುವ ನೀರಿಗೆ ತತ್ವಾರ ಒದಗಿದು, ಈ ಕುರಿತು ಗ್ರಾ. ಪಂ ಹಾಗೂ ತಾ. ಪಂ ಕಾರ್ಯನಿರ್ವ ಹಣಾಧಿಕಾರಿಯವರ ಗಮನಕ್ಕೆ ತಂದಿದ್ದರೂ ಸರಿಯಾದ ಕ್ರಮ ಕೈಗೊಂಡಿರಲಿಲ್ಲ. ಕಳೆದ ಮೂರು ದಿನಗಳಿಂದ ನೀರಿನ ವ್ಯವಸ್ಥೆಯೇ ಇಲ್ಲದಿರುವ ಸ್ಥಿತಿಯಲ್ಲಿ ರೊಚ್ಚಿಗೆದ್ದ ಸ್ಥಳೀಯರು ಗ್ರಾ. ಪಂ ಕಛೇರಿಯೆದುರು ಪ್ರತಿಭಟನೆ ನಡೆಸಿದರು.
ನೂರಾರು ಮಂದಿ ಗ್ರಾ. ಪಂ ಎದುರು ಇಂದು ಮುಂಜಾನೆಯೇ ಜಮಾಯಿಸಿದ್ದು ಸಮಸ್ಯೆಗೆ ಸ್ಪಂದಿಸದ ಗ್ರಾ. ಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳಿಗೆ ಮತ್ತು ಪಿಡಿಒಗೆ ದಿಕ್ಕಾರ ಕೂಗಿದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಬಂಟ್ವಾಳ ಇಂಜಿನಿಯರ್ ನಾರಾಯಣ್ ನಾಯಕ್ ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಮಸ್ಯೆ ಬಗೆಹರಿಯುವವರೆಗೆ ನಾವು ಈ ಜಾಗ ಬಿಟ್ಟು ಕದಲುವುದಿಲ್ಲ. ಮತ್ತು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಕೆ ಒಡ್ಡಿದರು. ಇದೇ ಸಂದರ್ಭ ಸ್ಥಳೀಯ ಶಾಸಕ ಬಿ. ರಮಾನಾಥ ರೈ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಸಮಸ್ಯೆಯ ಬಗ್ಗೆ ಇಲಾಖಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಆದರೆ ಸ್ಥಳೀಯ ಸದಸ್ಯರು ಹಾಗೂ ಪ್ರತಿಭಟನಾಕಾರರ ನಡುವೆ ಸಮಸ್ಯೆಯ ಬಗ್ಗೆ ಮಾತಿಗೆ ಮಾತು ಬೆಳೆದು ರಾಜಕೀಯದತ್ತ ಮುಖ ಮಾಡಿತ್ತು. ಕೂಡಲೇ ಅರಿತ ಶಾಸಕ ರೈ ಇದು ರಾಜಕೀಯ ವೇದಿಕೆಯಾಗುವುದು ಬೇಡ ಸಾರ್ವಜನಿಕರಿಗೆ ಅಗತ್ಯವುಳ್ಳ ನೀರನ್ನು ಒದಗಿಸುವುದು ನಮ್ಮ ಕರ್ತವ್ಯ. ನಾವು ರಾಜಕೀಯ ರಹಿತವಾಗಿ ಆ ಕೆಲಸವನ್ನು ಮಾಡೋಣ. ಅದಕ್ಕಾಗಿ ರಾಜಕೀಯ ಚರ್ಚೆ ಬೇಡ. ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಪೋನ್ ಮೂಲಕ ಸಂಪರ್ಕಿಸಿ ಮೂರು ದಿನದೊಳಗೆ ಕುಡಿಯುವ ನೀರಿನ ಶಾಶ್ವತ ಪರಿಹಾರ ಮಾಡುವಂತೆ ಸೂಚಿಸಿದ್ದರಲ್ಲದೆ ಅಗತ್ಯವಾಗಿ ಇಲ್ಲಿನ ನಿವಾಸಿಗಳಿಗೆ ಬದಲಿ ನೀರಿನ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಇದಕ್ಕೆ ಸಮ್ಮತಿ ಸೂಚಿಸಿದ ಸಾರ್ವಜನಿಕರು ಪ್ರತಿಭಟನೆ ಹಿಂತೆಗೆದುಕೊಂಡರು.
Tagged with
dk,
feature,
lekhana,
protest
ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂ. ವ್ಯಾಪ್ತಿಯ ಎಂಟು ಮತ್ತು ಒಂಭ ತ್ತನೇ ವಾರ್ಡ್‌ಗೊಳಪಟ್ಟ ಅಂಬೇಡ್ಕರ ಕಾಲನಿ ನಿವಾಸಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ಇಲ್ಲಿನ ವಾರ್ಡ್ ಸದಸ್ಯರಾಗಲೀ, ಗ್ರಾಮ ಪಂಚಾಯತಾ ಗಲೀ ಯಾವುದೇ ಪರಿಹಾರಕ್ಕೆ ಮುಂದಾಗಿಲ್ಲವೆಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಈ ಕಾಲನಿಯಲ್ಲಿ ಸುಮಾರು ೨೦೦ ಕುಟುಂಬಗಳು ವಾಸಿಸುತ್ತಿದ್ದು ಇದರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದಾರೆ. ಕುಡಿಯುವ ನೀರು ಯೋಜನೆಯ ಡಿಯ ಕೊಳವೆ ಬಾವಿಯೊಂದಕ್ಕೆ ಹಾಕಿದ ಪಂಪು ಕೆಟ್ಟು ಹೋಗಿದ್ದರೂ ಇದರ ರಿಪೇರಿ ಮಾಡಿಸುವಲ್ಲಿ ವಾಟರ್ ಅಥೋರಿಟಿ ಅಧಿಕಾರಿಗಳು ವಿಳಂಬ ಧೋರಣೆ ತೋರಿಸುವುದರಿಂದ ಇಲ್ಲಿನ ನಿವಾಸಿಗಳು ನೀರಿಗಾಗಿ ಪರದಾಡು ವಂತಾಗಿದೆ.
ಮೋಟಾರು ಕೆಟ್ಟು ಹೋಗಿ ವಾರ ಕಳೆದರೂ ಇನ್ನೂ ರಿಪೇರಿಯಾಗಿಲ್ಲ : ಇಲ್ಲಿ ಕೇಂದ್ರ ಸರಕಾರದ ಅಂಬೇಡ್ಕರ್ ಕುಡಿಯುವ ನೀರು ಯೋಜನೆಯಡಿ ಕೊಳವೆ ಬಾವಿ ಹಾಗೂ ಟ್ಯಾಂಕೊಂದು ಇದ್ದರೂ ಕೊಳವೆ ಬಾವಿಗೆ ಹಾಕಲಾ ಗಿದ್ದ ಮೋಟಾರು ಕೆಟ್ಟು ಹೋಗಿ ಹಲವು ದಿನಗಳು ಕಳೆದರೂ ರಿಪೇರಿ ಮಾಡಿಸುವಲ್ಲಿ ಅಧಿಕಾರಿಗಳು ತೋರಿ ಸುವ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಜನತೆ ನೀರಿನ ಸಮಸ್ಯೆಯನ್ನು ಎದುರಿಸು ವಂತಾಗಿದೆ. ಪ್ರಸ್ತುತ ಕೊಳವೆ ಬಾವಿಯ ಮೋಟಾರಿಗೆ ಹಾಕಲಾದ ಪೈಪ್ ಇದೀಗ ಜೀರ್ಣಾವಸ್ಥೆಯಲ್ಲಿದ್ದರೂ ಇದನ್ನು ಬದಲಿಸಲು ಇನ್ನೂ ಮುಂದಾಗಿಲ್ಲ.
ಪ್ರಸ್ತುತ ಯೋಜನೆಯಡಿ ಇಲ್ಲಿ ಸಮೀಪದ ಗೋವಿಂದ ಪೈ ಕಾಲೇಜು ಸಮೀಪದ ಸ್ಥಳೀಯರೋರ್ವರು ದಾನವಾಗಿ ನೀಡಿದ ಭೂಮಿಯಲ್ಲಿ ಟ್ಯಾಂಕೊಂದನ್ನು ನಿರ್ಮಿಸಲಾಗಿದೆ. ಪ್ರಾರಂಭದಲ್ಲಿ ಈ ಟ್ಯಾಂಕಿಗೆ ನೀರು ಹಾಕಲಾಗುತ್ತಿದ್ದರೂ ಟ್ಯಾಂಕ್ ನಲ್ಲಿ ಸೋರಿಕೆಯಿರುವುದರಿಂದ ಈಗ ಮಾತ್ರ ಮೋಟಾರಿನಿಂದಲೇ ನೇರ ನೀರು ಬಿಡಲಾಗುತ್ತಿದೆಯೆಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.
ಸ್ಥಳೀಯ ಉದ್ಯಮಿಯಿಂದ ನೀರು:
ನೀರಿನ ಸಮಸ್ಯೆಯಿಂದ ಪರಿತಪಿಸುತ್ತಿರುವ ಕಾಲನಿ ನಿವಾಸಿಗಳಿಗೆ ಇಲ್ಲಿನ ಸ್ಥಳೀಯ ಕಾಕ್ಕುಂಜೆ ಪ್ಲಾಸ್ಟಿಕ್ ಫ್ಯಾಕ್ಟರಿ ಉದ್ಯಮಿ ದಿನ ನಿತ್ಯ ಬೆಳಗ್ಗೆ ಹಾಗೂ ಸಂಜೆ ಹೊತ್ತಿಗೆ ನೀರು ನೀಡುತ್ತಿರುವುದರಿಂದ ಇಲ್ಲಿನ ಜನತೆ ಸ್ವಲ್ಪ ಮಟ್ಟಿಗೆ ನೀರಿನ ಸಮಸ್ಯೆಯಿಂದ ಪಾರಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಉದ್ಯಮಿಗಳಾದ ಬಾಲಕ್ರಷ್ಣ ಭಟ್ ಹಾಗೂ ರಾಮ್ ಭಟ್ ಸೇವೆ ಶ್ಲಾಘನೀಯ ಎಂದು ಸ್ಥಳೀಯರು ಹೇಳುತ್ತಾರೆ.
ನೀರಿನ ಸಮಸ್ಯೆಯನ್ನು ಬಗೆಹರಿಸಲು ಮುಂದಾಗದ ಬಿಜೆಪಿಯ ಎರಡು ವಾರ್ಡ್ ಸದಸ್ಯರುಗಳು ಪಂಚಾಯತ್ ಸ್ಥಾನಕ್ಕೆ ರಾಜೀನಾಮೆ ನೀಡುವುದೊಳಿತೆಂದು ದಲಿತ ಕಾಂಗ್ರೆಸ್ ಮಂಡಲ ಅಧ್ಯಕ್ಷ ನಾಗೇಶ್ ಮಂಜೇಶ್ವರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕುವುದಾಗಿ ಅವರು ತಿಳಿಸಿದ್ದಾರೆ.
Tagged with
feature,
kasaragod,
lnews
ವಿಶ್ಲೇಷಣೆ
ಬಿಜೆಪಿ ಶಾಸಕ ಸಂಪಂಗಿ ಲಂಚ ಪಡೆದ ಆರೋಪ ಸಾಬೀತಾಗಿ ಲೋಕಾಯುಕ್ತ ನ್ಯಾಯಾ ಲಯದಿಂದ ಮೂರೂವರೆ ವರ್ಷ ಜೈಲು ಶಿಕ್ಷೆಗೊಳ ಗಾದ ಮೇಲೆ ಪಕ್ಷದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ನೀಡಿರುವ ಹೇಳಿಕೆಯೊಂದು ಅವರ ಪಕ್ಷ ಹೊಂದಿರುವ ಭೀತಿಯನ್ನು ಪ್ರತಿಬಿಂಬಿಸಿದಂತಿದೆ. ಈ ಹಿಂದೆಲ್ಲಾ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗಿಲ್ಲ ಎಂದು ಹೇಳುತ್ತಿದ್ದವರು, ಇದೀಗ ಮೇಲ್ಮನವಿ ಮಾಡುವ ಅವಕಾಶ ಇದೆ. ಒಂದು ನ್ಯಾಯಾಲಯ ತೀರ್ಪು ನೀಡಿದ ಮಾತ್ರಕ್ಕೆ ಅದುವೇ ಅಂತಿಮವಲ್ಲ ಎಂದು ಹೇಳುವ ಮೂಲಕ ಈಶ್ವರಪ್ಪ ಹೊಸ ಸಂಪ್ರದಾಯವೊಂದನ್ನು ಹುಟ್ಟು ಹಾಕಿದ್ದಾರೆ ಎಂದು ಹೇಳಬಹುದು. ಇದೀಗ ಸಂಪಂಗಿಗೆ ಹೈಕೋರ್ಟ್ ಜಾಮೀನು ನೀಡಿರಬ ಹುದು ಮತ್ತು ಅವರಿಗೆ ಮೀಲಾಗಿರುವ ಶಿಕ್ಷೆಯನ್ನು ಅಮಾನತಿನಲ್ಲಿಟ್ಟಿರಬಹುದು. ಆದರೆ ಅವರು ಒಂದು ನ್ಯಾಯಾಲಯದಿಂದ ಅಪರಾಧ ಎಂದು ಘೋಷಿಸಲ್ಪಟ್ಟು ಶಿಕ್ಷೆಯ ತೀರ್ಪನ್ನು ಹೊತ್ತು ಒಂದೆ ರಡು ದಿನ ಜೈಲಿನ ಅನ್ನ ತಿಂದಿದ್ದಾರೆ ಎಂಬುದನ್ನು ಈಶ್ವರಪ್ಪ ಕುರುಡುಗಣ್ಣಿನಿಂದ ನೋಡಿರುವುದು ಒಳ್ಳೆಯ ಲಕ್ಷಣವಂತೂ ಅಲ್ಲ. ಇದು ನ್ಯಾಯಾಂಗದ ಮೇಲೆ ಅಪನಂಬಿಕೆ ತೋರಿಸಿದಂತೆ ಎಂದು ಹೇಳಿದರೆ ಖಂಡಿತಾ ತಪ್ಪಾಗುವುದಿಲ್ಲ.
ಹೇಳಿಕೇಳಿ ಸಂಪಂಗಿ ಸಕ್ರಿಯ ಭಿನ್ನಮತೀಯ. ಅವರು ಯಾವ ಗುಂಪಿನಲ್ಲಿದ್ದಾರೆ ಎಂಬುದು ಅವರಿಗೇ ಸರಿಯಾಗಿ ಗೊತ್ತಿರುವ ಬಗ್ಗೆ ಅನುಮಾ ನವಿದೆಯಾದರೂ, ಅವರು ಪಕ್ಷನಿಷ್ಠರಲ್ಲ ಎಂಬುದು ಅವರ ಈ ಹಿಂದಿನ ವರ್ತನೆಯಿಂದ ಸಾಬೀತಾಗಿದೆ. ಅಂತಹ ಶಾಸಕನೋರ್ವನು ಭ್ರಷ್ಟಾಚಾರದ ಆರೋಪ ಹೊತ್ತು, ಅದು ನ್ಯಾಯಾಲಯದಲ್ಲಿ ಸಾಬೀತಾಗಿ ಶಿಕ್ಷೆ ಪ್ರಕಟವಾದರೂ ಶಿಸ್ತಿನ ಪಕ್ಷ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿ ರುವವರ ಪಕ್ಷ ಎಂದು ಗುರುತಿಸಿಕೊಂಡಿರುವ ಬಿಜೆಪಿಯು ಭ್ರಷ್ಟ ಶಾಸಕನನ್ನು ಪಕ್ಷದಿಂದ ದೂರವಿರಿಸುವ ಧೈರ್ಯ ಮಾಡದಿರುವುದು ಆಶ್ಚ ರ್ಯದ ಸಂಗತಿ, ಆತಂಕದ ವಿಷಯ. ಇಲ್ಲಿ ಬಿಜೆಪಿಯು ಯಾವುದಕ್ಕೋ ಹೆದರುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಆಡ್ವಾಣಿ ಹೇಳಿರುವ ಮಾತಿನ ಪ್ರಸ್ತುತತೆ ಎಷ್ಟು ಗಂಭೀರವಾಗಿದೆ ಎಂಬುದನ್ನು ಚಿಂತಿಸಲೂ ಇದು ಸಕಾಲ,
ಅಪರಾಧ ಎಂಬುದು ಸಾಬೀತಾದ ಕಾರಣ ಸಂಪಂಗಿಯನ್ನು ಪಕ್ಷದಿಂದ ದೂರ ಇರಿಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಇದೇ ಕಾರ ಣಕ್ಕೆ ಇನ್ನಷ್ಟ್ಟು ನಾಯಕರನ್ನು ದೂರ ಇರಿಸಬೇ ಕಾದೀತು ಎಂಬ ಭೀತಿ ಈಶ್ವರಪ್ಪರನ್ನು ಕಾಡಿದ್ದಿ ರಬೇಕು. ಕರ್ನಾಟಕದಲ್ಲಿ ಈ ಹಿಂದೆಂದೂ ಕಂಡುಬರದಷ್ಟು ಸಚಿವರು ಬಿಜೆಪಿ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ, ಲೈಂಗಿಕತೆ, ಅನೈತಿಕತೆ ...ಇತ್ಯಾದಿಗಳಿಗೆ ಸಂಬಂಧಿಸಿದ ಆರೋಪ ಹೊತ್ತು ವಿಚಾರಣೆ ಎದುರಿಸುತ್ತಿದ್ದಾರೆ. ಹೆಚ್ಚಿನವರ ವಿರುದ್ಧವೂ ಆರೋಪ ಸಾಬೀತಾಗುವಂಥ ಪುರಾವೆಗಳಿವೆ. ಇವರೆಲ್ಲರಿಗೂ ಮುಂದಿನ ದಿನಗಳಲ್ಲಿ ಶಿಕ್ಷೆಯಾಗುವ ಸಂಭವ ಹೆಚ್ಚು. ಹಾಗಿರುವಾಗ ಒಂದು ನ್ಯಾಯಾಲಯ ಶಿಕ್ಷೆ ವಿಧಿಸಿದ ಮಾತ್ರಕ್ಕೆ ಇವರನ್ನು ಪಕ್ಷದಿಂದ ದೂರವಿಟ್ಟರೆ ಬಿಜೆಪಿ ನಾಯಕರಿಲ್ಲದ ಪಕ್ಷವಾಗುವ ಅಪಾಯ ಇದೆ ಎಂಬ ಭೀತಿ ಪಕ್ಷದ ಅಧ್ಯಕ್ಷ ಈಶ್ವರಪ್ಪರನ್ನು ಕಾಡುತ್ತಿರಲೇಬೇಕು. ಆದ್ದರಿಂದಲೇ ಅವರು ಮೊದಲ ಹೆಜ್ಜೆಯನ್ನು ತುಂಬಾ ಜಾಗರಾಕವಾಗಿಟ್ಟು, ಮೇಲ್ಮನವಿಯ ಮಾತಾಡಿದ್ದಾರೆ.
ಇಲ್ಲೊಂದು ಪ್ರಶ್ನೆ ಏಳದೆ ಇರುವುದಿಲ್ಲ. ಎಂತೆಂಥ ಅಪರಾಧ ಮಾಡಿದ ಆರ್ಥಿಕ ಸದೃಢರೂ ಕೂಡ ನಮ್ಮ ಕಾನೂನಿನ ಕೆಲವೊಂದು ದೌರ್ಬಲ್ಯ ಅಥವಾ ಉದಾರತೆಗಳಿಂದಾಗಿ ಮೇಲ್ಮನವಿಯ ಲಾಭ ಗಿಟ್ಟಿಸಿಕೊಂಡು ಜೈಲಿನಿಂದ ಹೊರಗಿದ್ದಾರೆ. ಅವರು ತಮ್ಮ ಎಲ್ಲ ಪ್ರಭಾವ, ಶಕ್ತಿ-ಸಾಮರ್ಥ್ಯಗಳನ್ನು ಬಳಸಿಕೊಂಡು ಕಾನೂನ ಕುಣಿಕೆಯಿಂದ ಪಾರಾಗಲು ಶ್ರಮಿಸುತ್ತಲೇ ಇದ್ದಾರೆ. ಕೆಳ ನ್ಯಾಯಾಲಯ ಅಪರಾಧ ಎಂದು ಘೋಷಿಸಿದ್ದುದನ್ನು ಗಂಭೀರವಾಗಿ ಪರಿಗಣಿಸದೆ ಅಂಥವರಿಗೆ ರಾಜಕೀಯ ಜೀವನ ನೀಡಲು ಎಲ್ಲ ರಾಜಕೀಯ ಪಕ್ಷ ಮುಂದಾದರೆ ಈಗಲೇ ಕೊಳತು ನಾರುತ್ತಿರುವ ರಾಜಕೀಯದ ಸ್ಥಿತಿ ಮುಂದಿನ ದಿನಗಳಲ್ಲಿ ಎಲ್ಲಿಗೆ ತಲುಪೀತು?
ಬಿಜೆಪಿಯಲ್ಲಿ ಒಂದಿಷ್ಟಾದರೂ ಪ್ರಾಮಾಣಿಕತೆ, ಜನಪರ ಕಾಳಜಿ, ಭ್ರಷ್ಟರ ವಿರುದ್ಧ ಹೋರಾಡುವ ಮನಸ್ಸು ಇದ್ದರೆ ಸಂಪಂಗಿಯಂಥವರನ್ನು ಪಕ್ಷದಿಂದ ದೂರ ಇರಿಸಲೇಬೇಕು. ಅವರು ಮೇಲಿನ ನ್ಯಾಯಾಲಯದಲ್ಲಿ ಆರೋಪಮುಕ್ತರಾಗುವ ವರೆಗೆ ಅವರಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ನೀಡಬಾರದು. ಈಗಾಗಲೇ ಕೆಳನ್ಯಾಯಾಲಯದಿಂದ ಅಪರಾಧ ಸಾಬೀತಾದ ಕಾರಣ ಜನರು ಕೂಡ ಅವರನ್ನು ಸಂಶಯ, ಅಗೌರವದಿಂದ ನೋಡುತ್ತಾರೆ. ಆ ನೋಟ ಪೂರ್ತಿ ಪಕ್ಷಕ್ಕೆ ಹರಡುವ ಮೊದಲು ಬಿಜೆಪಿ ಜಾಗೃತವಾಗಬೇಕಿದೆ. ಪಕ್ಷದಿಂದ ಇಂಥ ಕೆಲವು ದುಷ್ಟಶಕ್ತಿಗಳನ್ನು ದೂರ ಇರಿಸದಿದ್ದರೆ ಬಿಜೆಪಿಗೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಇದ್ದೇ ಇದೆ. ಇಂಥವರನ್ನು ಹೆಗಲಲ್ಲಿ ಹೊತ್ತುಕೊಂಡು ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಿದರೆ ಜನರು ತಕ್ಕ ಶಾಸ್ತಿ ಮಾಡದೆ ಇರುವುದಿಲ್ಲ. ಇಂಥವರನ್ನು ಜತೆಯಲ್ಲಿ ಕರೆದುಕೊಂಡು ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದರೆ ಅದೊಂದು ಸೂಪರ್ ಜೋಕ್ ಆಗುತ್ತದಷ್ಟೆ.
Tagged with
eshwarappa,
feature,
vishleshane
ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಇದರ ನಂದಿನಿ ಶಾಖೆಯು ಕುಲಶೇಖರದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡಿತು. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಹಿಂಪ ವಿಭಾಗ ಕಾರ್ಯದರ್ಶಿ ಕೃಷ್ಣಮೂರ್ತಿ, ಬಜರಂಗದಳ ವಿಭಾಗ ಸಂಚಾಲಕ ಶರಣ್ ಪಂಪ್‌ವೆಲ್, ಜಿಲ್ಲಾಸಂಚಾಲಕ ಹರೀಶ್ ಅಮ್ಟಾಡಿ, ಪುನೀತ್ ಪಂಪ್‌ವೆಲ್, ಪ್ರದೀಪ್ ಪಂಪ್‌ವೆಲ್, ಜಗನ್ನಾಥ್ ಕುತ್ತಾರ್ ಮತ್ತಿತರರು ಉಪಸ್ಥಿತರಿದ್ದರು.
Tagged with
briefs
ಮಂಗಳೂರು: ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್‌ಎಸ್ ಎಫ್) ಇನೋಳಿ ಶಾಖೆ ಇದರ ವತಿ ಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಸನ್ಮಾನ ಸಮಾ ರಂಭ ಇನೋಳಿಯಲ್ಲಿರುವ ಎಸ್ ಎಸ್‌ಎಫ್ ಕಚೇರಿ ವಠಾರದಲ್ಲಿ ನಡೆ ಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಎಸ್‌ಎಸ್‌ಎಫ್ ಇನೋಳಿ ಶಾಖೆಯ ಅಧ್ಯಕ್ಷ ಉಮರ್ ಅಹ್ಸನಿ ವಹಿಸಿದ್ದರು. ರಾಜ್ಯ ಎಸ್‌ಎಸ್‌ಎಫ್ ಉಪಾಧ್ಯಕ್ಷ ಸಿದ್ದೀಕ್ ಕೆ.ಎಂ. ಮೋಂಟುಗೋಳಿ ಕಾರ್ಯ ಕ್ರಮ ಉದ್ಘಾಟಿಸಿದರು. ಐ.ಕೆ.ಅಬ್ದುಲ್ ಹಮೀದ್ ಮುಸ್ಲಿಯಾರ್ ಹಾಗೂ ಅಸ್ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ಪ್ರಾರ್ಥನೆ ನೆರವೇರಿಸಿದರು.
ಅಬ್ದುಲ್ ಕರೀಂ ಮದನಿ ಖತೀ ಬರು ವಾಮಂಜೂರು, ಇನೋಳಿ ಜಾಮಿಯಾ ಮುಬಾರಕ್ ಮಸೀದಿ ಅಧ್ಯಕ್ಷ ಹುಸೈನ್, ಮಿಸ್ಬಾಹುಲ್ ಹುದಾ ಯಂಗ್‌ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಉಮರಬ್ಬ, ಎಸ್‌ಎಸ್‌ಎಫ್ ಬದ್ರಿಯಾ ನಗರ ಶಾಖೆಯ ಅಧ್ಯಕ್ಷ ಶೌಕತ್ ಅಲಿ, ಗಲ್ಫ್ ಪ್ರತಿನಿಧಿ ಅಬ್ದುಲ್ ಜಬ್ಬಾರ್ ಕಾರ್ಯಕ್ರಮದಲ್ಲಿ ಉಪಸ್ಥಿತ ರಿದ್ದರು.
ಎಸ್.ಎಸ್.ಎಫ್. ಇನೋಳಿ ಶಾಖೆಯ ಉಪಾಧ್ಯಕ್ಷ ಹೈದರ್ ಸಖಾಫಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಧನ್ಯವಾದವಿತ್ತರು.
Tagged with
briefs
ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಸಂಘದ ವ್ಯಾಪ್ತಿಯ ಗ್ರಾಮಗಳಲ್ಲಿರುವ ಬಂಟ ಸಮಾಜ ಬಾಂಧವರಲ್ಲಿ ಆರ್ಥಿಕವಾಗಿ ಹಿಂದುಳಿದ ೧ ರಿಂದ ೧೨ನೇ ತರಗತಿವರೆಗಿನ ಬಂಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿಯು ಜೂನ್ ೧೦ರಿಂದ ಸುರತ್ಕಲ್ ಬಂಟರ ಸಂಘದ ಕಚೇರಿಯಲ್ಲಿ ದೊರೆಯುತ್ತದೆ.
ಜೂನ್ ೨೦ರ ಒಳಗಡೆ ಅರ್ಜಿಯನ್ನು ಭರ್ತಿ ಮಾಡಿ ಸುರತ್ಕಲ್ ಬಂಟರ ಸಂಘದ ಸ್ಥಳೀಯ ನಿರ್ದೇಶಕರ ಶಿಫಾರಸಿನೊಂದಿಗೆ ಸಂಘದ ಕಚೆರಿಗೆ ಸಲ್ಲಿಸಬೇಕು.
ಈ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.೮೫ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಂತಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ನಕಲು ಮತ್ತು ಪೂರ್ಣ ವಿವರದೊಂದಿಗೆ ಸಂಘದ ಕಚೇರಿಗೆ ಜೂನ್ ೨೦ರ ಒಳಗಾಗಿ ತಲುಪಿಸಬೇಕೆಂದು ಸಂಘದ ಪ್ರಕಟಣೆಯು ತಿಳಿಸಿದೆ.
Tagged with
briefs
ಸೈಂಟ್ ಜೋಸೆಫ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಬಜಾಲ್‌ನ ವಿದ್ಯಾರ್ಥಿನಿ ದೀಕ್ಷಾ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೯೧ ಅಂಕವನ್ನು ಗಳಿಸಿರುತ್ತಾಳೆ. ಈಕೆ ಬಜಾಲ್ ಗೋಕುಲ್ ಹಾಗೂ ಸೌಮ್ಯ ಬಜಾಲ್ ಇವರ ಪುತ್ರಿಯಾಗಿದ್ದಾಳೆ.
Tagged with
briefs
ಮಂಗಳೂರು: ಎಕ್ಕಾರು ನಡ್ಯೋಡಿಗುತ್ತಿನಲ್ಲಿ ಸಾಂಪ್ರದಾಯಿಕ ಧರ್ಮನೇಮ ಇತ್ತೀಚೆಗೆ ನಡೆಯಿತು. ಕುಂದರಣ್ಣ ಗೋತ್ರದ ಮುದ್ದ ಉಪನಾಮದ ಯಜಮಾನರನ್ನು ಹೊಂದಿರುವ ಎಕ್ಕಾರು ನಡ್ಯೋಡಿ ಗುತ್ತು ಎಕ್ಕಾರು ನಾಲ್ಕು ಕರೆ, ೩೨ ವರ್ಗಗಳಲ್ಲಿ ದ್ವಿತೀಯ ಗೌರವದ ಪ್ರತಿಷ್ಠಿತ ಬಂಟ ಮನೆತನ, ಸಾರ ಜುಮಾದಿ ಈ ಗುತ್ತಿನ ವಿಶೇಷ ಅಧಿಕಾರ ದೈವ. ಎಕ್ಕಾರು ಶ್ರೀ ಗೋಪಾಲಕೃಷ್ಣ ಮಠ ವೇದಮೂರ್ತಿ ಹರಿದಾಸ ಉಡುಪ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಮೈಸಂದಾಯ, ಕೊಡಮಂದಾಯ, ಕಾಂತೇರಿ ಜುಮಾದಿ, ಜಾರಂದಾಯ, ಸರಳ ಜುಮಾದಿ, ಪಿಲಿಚಾಮುಂಡಿ ದೈವಗಳ ನೇಮ ಹಾಗೂ ಮನೆದೈವ ಗಳಾದ ಸತ್ಯದೇವತೆ, ಕಲ್ಲುರ್ಟಿ ಪಂಜುರ್ಲಿ ಕೋಲ ನಡೆಯಿತು. ನಾಗ ಸಾನಿಧ್ಯದಲ್ಲಿ ಆಶ್ಲೇಷ ಬಲಿ ಸೇವೆ ಜರುಗಿತು. ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ, ಮೊಕ್ತೇಸರ ರಾಮ ಮುದ್ದ ಎಕ್ಕಾರು ನಡ್ಯೋಡಿಗುತ್ತು, ಬಡಕೆರೆ ಬಾಳಿಕೆ ಗೋಪಾಲ ಶೆಟ್ಟಿ, ಮೇಗಿನಮನೆ ಮೇಲೆಕ್ಕಾರು ಬಾಬು ಭಂಡಾರಿ, ಚಂದ್ರಹಾಸ.ಪಿ.ಶೆಟ್ಟಿ, ಶ್ರೀನಿವಾಸ ಎ.ಮುದ್ದ. ಡಾ.ನಿಶಾಕಾಂತ ಶೆಟ್ಟಿ, ಪ್ರಧಾನ ಸಂಚಾಲಕ ಇ.ಟಿ.ಶೆಟ್ಟಿ ಸುರತ್ಕಲ್ ಕದ್ರಿ ನವನೀತ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಶಿವನಾಂದ ಶೆಟ್ಟಿ. ಸಂದೀಪ್ ಶೆಟ್ಟಿ ಕೋಶಾಧಿಕಾರಿ ಸುಧಾಕರ ಪೂಂಜ ಹೊಸಬೆಟ್ಟು ಹಾಗೂ ಗುತ್ತಿನ ಹಿರಿಯರಾದ ರಾಮ ಮುದ್ದ, ವಾಮಯ್ಯ ಶೆಟ್ಟಿ, ಭೋಜ ಶೆಟ್ಟಿ, ಕರಿಯ ಶೆಟ್ಟಿ, ಬಾಲಕೃಷ್ಣ ವಿ.ಹೆಗ್ಡೆ, ಜಯ ಶೆಟ್ಟಿ ಉಪಸ್ಥಿತರಿದ್ದರು. ಲಕ್ಷ್ಮೀ ನಾರಾಯಣ ಅಸ್ರಣ್ಣ, ಅನಂತ ಅಸ್ರಣ್ಣ, ಜ್ಯೋತಿಷಿ ಶ್ರೀರಂಗ ಐತಾಳ್, ಅಜಿತ್ ಕುಮಾರ್ ರೈ ಮಾಲಾಡಿ, ನಳಿನ್ ಕುಮಾರ್ ಕಟೀಲ್, ಶೆಡ್ಡೆ ಮಂಜುನಾಥ ಭಂಡಾರಿ, ಮಂಜುಕಾವ ಮತ್ತು ಪ್ರಧಾನ ಗುತ್ತುಗಳ ಯಜಮಾನರು ಭಾಗವಹಿಸಿದ್ದರು.
Tagged with
briefs
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೪೨ರ ಹರೆಯದ ಗೃಹಿಣಿ. ನನ್ನ ಮಗಳಿಗೆ ೧೮ ವರ್ಷ ಪ್ರಾಯ. ದ್ವಿತೀಯ ಪಿಯುಸಿ ಓದುತ್ತಿದ್ದಾಳೆ. ನಾನು ಆಕೆಯನ್ನು ತುಂಬಾ ಹಚ್ಚಿಕೊಂಡಿದ್ದು, ಯಾವುದಕ್ಕೂ ಕೊರತೆ ಮಾಡಿಲ್ಲ. ನಾನು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆರ್ಥಿಕ ಸಮಸ್ಯೆಯಿಲ್ಲ. ನನ್ನ ಗಂಡ ದುಬೈಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಮಗಳ ಓದಿಗೆ ಉಪಯೋಗಕ್ಕೆ ಬರಲೆಂದು ಕಂಪ್ಯೂಟರ್, ಮೊಬೈಲ್ ಎಲ್ಲ ವನ್ನೂ ತೆಗೆಸಿ ಕೊಟ್ಟಿದ್ದೇನೆ. ಆದರೆ ನನ್ನ ಮಗಳು ಫೇಸ್‌ಬುಕ್‌ನಲ್ಲಿ ರಾತ್ರಿ ಯಾರೊಂದಿಗೋ ಚಾಟಿಂಗ್ ಮಾಡುತ್ತಾ ಕಾಲ ಕಳೆಯುತ್ತಾಳೆ. ನಾನು ಕೇಳಿದರೆ ಕ್ಲಾಸ್‌ಮೇಟ್ಸ್ ಎನ್ನುತ್ತಾಳೆ. ಹೈಸ್ಕೂಲ್ ಕಲಿಯುತ್ತಿದ್ದ ವೇಳೆ ಆಕೆ ನನ್ನ ಮಾತನ್ನು ಕೇಳುತ್ತಿದ್ದಳು. ಆದರೆ ಈಗ ನಾನು ಮಾತಾಡಿದ್ದಕ್ಕೆ ಎದುರು ಮಾತಾಡುತ್ತಾಳೆ. ನನಗೆ ಏನು ಮಾಡುವುದೆಂದೇ ತೋಚುತ್ತಿಲ್ಲ. ಆಕೆ ಕಾಲೇಜ್ ಸೇರಿದ ಮೇಲೆ ತುಂಬಾನೇ ಬದಲಾಗಿ ದ್ದಾಳೆ. ಕಾಲೇಜಿನಿಂದ ಮನೆಗೆ ಲೇಟಾಗಿ ಬರುತ್ತಾಳೆ. ನಾನೇನಾದರೂ ಕೇಳಿದರೆ ಸ್ಪೆಷಲ್ ಕ್ಲಾಸ್ ಎನ್ನುತ್ತಾಳೆ. ಆಕೆ ಕೆಲವು ಮಂದಿ ಬಾಯ್ ಫ್ರೆಂಡ್‌ಗಳಿರುವುದು ನನಗೆ ತಿಳಿದಿದೆ. ನಾನು ಒಮ್ಮೆ ಅವಳಿಗೆ ಬೈದು ಬುದ್ಧಿವಾದ ಹೇಳಿದ್ದೇನೆ. ಆದರೆ ಆನಂತರ ಅವಳು ನನ್ನ ಜೊತೆ ಸರಿಯಾಗಿ ಮಾತಾಡುತ್ತಿಲ್ಲ.
ನಾನು ಬಲವಂತ ಮಾಡಿದರೂ ಏನೂ ಹೇಳುವುದಿಲ್ಲ. ನನ್ನ ಮಗಳು ಈಗಾಗಲೇ ಎಲ್ಲವನ್ನೂ ಕಳೆದು ಕೊಂಡಿದ್ದಾಳೆಂದು ಭಾಸವಾಗುತ್ತಿದೆ. ಅವಳು ನೋಡಲು ಆಕರ್ಷಕವಾಗಿದ್ದು, ಎಲ್ಲರೊಂದಿಗೆ ಚೆಲ್ಲುಚೆಲ್ಲಾಗಿ ವರ್ತಿಸುತ್ತಾಳೆ. ಇದರಿಂದ ಆಕೆಯನ್ನು ಹೊರಗೆ ಕರೆದೊಯ್ಯಲು ಭಯವಾಗುತ್ತದೆ. ಮೊಬೈಲ್, ಕಂಪ್ಯೂಟರ್ ಇವೇ ಅವಳ ಸರ್ವಸ್ವವಾಗಿದೆ. ಕಲಿಕೆಯಲ್ಲೂ ಹಿಂದೆ ಬಿದ್ದಿದ್ದಾಳೆ. ಇದೆಲ್ಲ ನನ್ನ ಗಂಡನಿಗೆ ತಿಳಿದರೆ ಮನೆಯಲ್ಲಿ ರಾದ್ಧಾಂತ ವಾಗಬಹುದು. ಸರ್, ನಾನು ನಿಮ್ಮ ಪತ್ರಿಕೆಯನ್ನು ನಿತ್ಯ ಓದುತ್ತೇನೆ. ನನಗೆ ಸರಿಯಾದ ಸಲಹೆ ಕೊಡಿ.
ಸಲಹೆ: ನಿಮ್ಮ ಮಗಳ ಸಮಸ್ಯೆ ಗಂಭೀರವಾದುದು. ಆದ್ದರಿಂದ ಸಮಸ್ಯೆಯನ್ನು ಸಾಧ್ಯವಾದಷ್ಟು ಜಾಣತನದಿಂದ ಪರಿಸರಿಸಬೇಕಾಗಿದೆ. ಮಗಳಿಗೆ ಅಷ್ಟು ಸ್ವಾತಂತ್ರ್ಯ ಕೊಟ್ಟಿದ್ದು ಹೆಚ್ಚಾಯಿತು. ಸ್ವಾತಂತ್ರ್ಯ ಎಂದರೆ ಸ್ವೇಚ್ಛೆಯೆಂದು ತಿಳಿದ ಪರಿಣಾಮ ಇಷ್ಟೆಲ್ಲಾ ಸಮಸ್ಯೆಗಳು ಆರಂಭವಾಯಿತು. ಮೊಬೈಲ್‌ನಿಂದಾಗಿ ಹುಡುಗರ ಪರಿಚಯ, ಸ್ನೇಹ ಬೆಳೆಸಲು ಕಾರಣವಾಯಿತು. ಆಕೆ ಚಿಕ್ಕವಳಾಗಿದ್ದಾಗಲೇ ಸರಿದಾರಿಗೆ ತರುವ ಪ್ರಯತ್ನ ಮಾಡಬೇಕಿತ್ತು. ಆದರೆ ನೀವು ಹಾಗೆ ಮಾಡುವ ಬದಲು ಆಕೆಗೆ ಅಗತ್ಯವಿರದ ಮೊಬೈಲ್, ಕಂಪ್ಯೂಟರ್ ತೆಗೆಸಿಕೊಟ್ಟಿರಿ. ಈಗ ನಿಮಗೆ ಸಮಸ್ಯೆಯ ಅರಿವಾಗಿದೆ. ಆದರೆ ಕಾಲ ಮಿಂಚಿದೆ. ಈಗ ಚಿಂತಿಸಿ ಪ್ರಯೋಜನವಿಲ್ಲ. ನೀವು ಆಕೆಯ ಹಿಂದಿನ ತಪ್ಪನ್ನು ಮತ್ತೆ, ಮತ್ತೆ ನೆನಪಿಸಲು ಹೋಗದಿರಿ. ಹದಿಹರೆಯದಲ್ಲಿ ಎಡವುದು ಸಾಮಾನ್ಯ. ಇದನ್ನೇ ಮನಸ್ಸಿಗೆ ಹಚ್ಚಿಕೊಳ್ಳದಿರಿ. ಆಕೆಯನ್ನು ಸ್ವಲ್ಪ ದಿನಗಳ ಕಾಲ ಹೊರಗಡೆ ರಿಲ್ಯಾಕ್ಸ್‌ಗೆಂದು ಕರೆದುಕೊಂಡು ಹೋಗಿ. ಆಕೆಯದ್ದೇ ತಪ್ಪಿರಬಹುದು. ಆದರೆ ಆಕೆ ಬೇಕೆಂದೇ ತಪ್ಪು ಮಾಡಿಲ್ಲ ತಾನೇ? ತಪ್ಪಿನಲ್ಲಿ ನಿಮ್ಮದೂ ಪಾಲಿದೆ. ಹೀಗಾಗಿ ಆಕೆಯ ಮನಸ್ಸಿಗೆ ಬೇಸರವಾ ಗದಂತೆ ನೋಡಿಕೊಳ್ಳಿ. ಆಕೆಯೊಂದಿಗೆ ಫ್ರೆಂಡ್ಲಿಯಾಗಿರಿ. ಆಕೆಯ ಮನಸ್ಸು ತಿಳಿಗೊಳ್ಳುವಂತೆ ಮಾಡಿ, ಸಮಯ ಸಿಕ್ಕಾಗ ಆಕೆಗೆ ಬುದ್ಧಿ ಮಾತು ಹೇಳಿ.
ಆಕೆಯ ಕಾಲೇಜಿಗೆ ತೆರಳಿ ಸ್ವಲ್ಪ ದಿನಗಳ ರಜೆ ಪಡೆಯಿರಿ. ನಡೆದಿರು ವಂತಹ ಘಟನೆಯನ್ನು ಮರೆಯುವಂತೆ ಆಕೆಗೆ ಹೇಳಿ. ವ್ಯವಸ್ಥೆಯಿದ್ದರೆ ಬೇರೆ ಊರಿನಲ್ಲಿ ನೆಲೆಸಿ. ಸಮಸ್ಯೆಯನ್ನು ಗಂಭೀರವಾಗಿ ಭಾವಿಸದೆ ಪರಿಹಾರ ಕಂಡುಕೊಳ್ಳಿ. ಅಗತ್ಯವೆಂದು ತೋರಿದಲ್ಲಿ ಕುಟುಂಬದ ವೈದ್ಯರ ಸಲಹೆ ಪಡೆಯಿರಿ. ಮಗಳಿಗಿನ್ನೂ ಹದಿವಯಸ್ಸು. ಆಕೆ ಈ ಪ್ರಾಯದಲ್ಲಿ ಮನಸ್ಸಿಗೆ ಇಂತಹ ವಿಚಾರವನ್ನು ಹೆಚ್ಚಾಗಿ ಹಚ್ಚಿಕೊಂಡರೆ ನಿಮಗೇ ತೊಂದರೆ. ಆದ್ದರಿಂದ ಈ ಬಗ್ಗೆ ಜಾಗರೂಕರಾಗಿರಿ. ಆಕೆಯ ಫ್ರೆಂಡ್ಸ್ ಗಳನ್ನು ಬದಲಿಸುವಂತೆ ಸಲಹೆ ಕೊಡಿ. ಆಕೆ ಮಾಡಿದ್ದೇ ತಪ್ಪು ಎಂದು ಮಾತಿನಲ್ಲಿ ಚುಚ್ಚುವ ಪ್ರಯತ್ನ ಬೇಡ. ಮೊಬೈಲ್, ಕಂಪ್ಯೂಟರ್ ಬಳಕೆ ಯನ್ನು ಉಪಾಯದಿಂದ ನಿಲ್ಲಿಸಿ. ಆಗ ಆಕೆ ಎಲ್ಲರಂತೆ ಓದಿನತ್ತ ಗಮನ ಕೊಡಬಹುದು.
Tagged with
gupta
ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ, ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಪರಿಣತ ತಜ್ಞರ ಚಿಕಿತ್ಸೆಯನ್ನು ಪಡೆಯುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರಲ್ಲಿ ಸದ್ಭಾವನೆ ಯುಳ್ಳವರೆಲ್ಲರೂ ಅವರು ಶೀಘ್ರ ಗುಣಮುಖರಾಗಲಿ ಎಂಬ ಕಳಕಳಿಯನ್ನು ಹೊಂದಿರುವುದೂ ಪ್ರಕಟವಾಗಿದೆ.
ಅದು ಸಹಜವೂ ಹೌದು. ಅಮೆರಿಕಾದ ತಜ್ಞ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀಮತಿ ಸೋನಿಯಾ ಗಾಂಧಿಯವರಾಗಲಿ, ಚಿಕಿತ್ಸೆಯನ್ನು ನೀಡುವ ವೈದ್ಯರಾಗಲಿ ಯಾವುದೇ ದೇವಾಲಯಗಳಲ್ಲಿ, ಇಗರ್ಜಿ, ಮಸೀದಿಗಳಲ್ಲಿ ಯಾವುದೇ ತರದ ಹರಕೆಯನ್ನಾಗಲೀ ಪ್ರಾರ್ಥನೆಯನ್ನಾಗಲೀ ಮಾಡಿಕೊಂಡ ವರದಿ ಪ್ರಕಟವಾಗಲಿಲ್ಲ. ವೈದ್ಯರು ವೈಜ್ಞಾನಿಕ ಚಿಕಿತ್ಸಾ ಕ್ರಮಗಳನ್ನು ಮಾತ್ರ ಅನುಸರಿಸಿ ಸೋನಿಯಾ ಗಾಂಧಿಯವರನ್ನು ಗುಣಪಡಿಸಲು ತಮ್ಮ ಶಕ್ತಿ ಮೀರಿ ವೈಜ್ಞಾನಿಕ ಕ್ರಿಯೆಗಳಲ್ಲಿ ಮಗ್ನರಾಗಿದ್ದಾರೆ.
ಆದರೆ, ಸೋನಿಯಾ ಗಾಂಧಿಯವರು ಗುಣಮುಖರಾಗುವಂತೆ ನಮ್ಮಲ್ಲಿಯ ಕೆಲವು ದೇವಾಲ ಯಗಳಲ್ಲಿ ಉರುಳು ಸೇವೆ ನಡೆಸುವ ಹಾಸ್ಯಾಸ್ಪದ ಮತ್ತು ನಾಟಕೀಯ ಕ್ರಿಯೆಗಳು ನಡೆಯುತ್ತಿವೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಮುಖ್ಯವಾಗಿ ಮಾಜಿ ಸಂಸತ್ ಸದಸ್ಯ ಮತ್ತು ಚುನಾವಣೆಗಳಲ್ಲಿ ಸೋತು ಈಗ ಬಹುತೇಕ ಮೂಲೆಗುಂಪಾಗಿರುವ ಜನಾದನ ಪೂಜಾರಿಯವರು ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ಹಾಗೂ ಇತರ ದೈವದೇವರುಗಳಿಗೆ ಪ್ರಾರ್ಥಿಸಿ, ಉರುಳು ಸೇವೆ ಯನ್ನು ಆರಂಭಿಸಿದ್ದಾರೆ.
ಇದರ ಹಿಂದೆ ಸೋನಿಯಾ ಗಾಂಧಿಯವರು ಗುಣಮುಖರಾಗಬೇಕೆಂಬ ಕಾಳಜಿಗಿಂತಲೂ ತಮ್ಮ ರಾಜಕೀಯ ಪುನರುಜ್ಜೀವನಕ್ಕೆ ಈ ಸಂದರ್ಭವನ್ನು ಬಳಸಿಕೊಳ್ಳುವ ಪ್ರಯತ್ನ ಕಾಣುತ್ತಿದೆ. ಹಿಂದೆ ಜೆಡಿಯಸ್‌ನಲ್ಲಿ ಇದ್ದು ಅಲ್ಲಿ ಬೇಳೆ ಬೇಯಿಸಲಾಗದೆ ಈಗ ಕಾಂಗ್ರೆಸ್ ಪಕ್ಷದಲ್ಲಿ ಸೇರಿಕೊಂಡು ಗುರುತಿಸಿಕೊಳ್ಳಲು ಹವಣಿಸಿ ಪ್ರಚಾರ ಮತ್ತು ಒಲವು ಗಳಿಸಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿರುವ ಐವನ್ ಡಿ’ಸೋಜರೂ ಇವರಿಗೆ ಸಾಥ್ ನೀಡಿದ್ದಾರೆ.
ಅಲ್ಲದೆ ಇತರ ಕೆಲವು ಚೇಲಾಗಳನ್ನೂ ಸೇರಿಸಿ ಉರುಳಿದ್ದಾರೆ. ಶಾಸಕ ಯು.ಟಿ. ಖಾದರ್ ರವರೂ ಜತೆಗಿದ್ದು, ಇವರ ಕಾರ್ಯಗಳಿಗೆ ಮೆರಗು ನೀಡಿದ್ದಾರೆ. ರಾಜಕಾರಣವನ್ನು ಯಾವುದೇ ಧರ್ಮದ ಹರಕೆಯಿಂದ ಸಾಧಿಸುವ ಮನೋಧರ್ಮವನ್ನು ಅನ್ಯಧರ್ಮೀಯರು ಹೇಗೆ ಸಮರ್ಥಿಸುವರೋ ತಿಳಿಯದು.
ಮೂಢನಂಬಿಕೆಗಳನ್ನು ಅವಿದ್ಯಾವಂತ, ಬಡ ಜನಸಮುದಾಯದವರು ಅನುಸರಿಸಿದರೆ ಅಂಥವರನ್ನು ಕ್ಷಮಿಸಬಹುದು. ಆದರೆ, ವಿದ್ಯಾವಂತರು, ರಾಜಕೀಯ ಕಾರ್ಯಕರ್ತರು ತಮ್ಮ ಮಹತ್ವಾಕಾಂಕ್ಷೆಗಳನ್ನು ಮೂಢ ಕಾರ್ಯಾಚರಣೆಗಳ ಮೂಲಕ ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣುವಾಗ ಅಸಹ್ಯವೆನಿಸುತ್ತದೆ. ಅದು ಅಕ್ಷಮ್ಯವಾಗುತ್ತದೆ. ಜನಾರ್ದನ ಪೂಜಾರಿಯವರ ಮೊದಲನೆಯ ಪಾರ್ಲಿಮೆಂಟರಿ ಚುನಾವಣೆಯಿಂದ ತೊಡಗಿ ಕೊನೆಯ ಸೋಲಿನ ತನಕ ಕೂಲಂಕುಷವಾಗಿ ಅಧ್ಯಯನ ಮಾಡಿ ತಿಳಿದುಕೊಂಡಿರುವ ನಮ್ಮಂಥವರಂತೂ ಅವರ ಈ ವರ್ತನೆಯನ್ನು ಖಂಡಿಸದೆ ಬಿಟ್ಟರೆ, ಮೂಢನಂಬಿಕೆಗೆ ಚಾಲನೆ ನೀಡುವ ಇಂತಹ ಆಟಗಳನ್ನು ಕಂಡೂ ಕಾಣದಂತೆ ಸುಮ್ಮನಿದ್ದರೆ, ಅದಕ್ಕೆಲ್ಲ ಪರೋಕ್ಷ ಪ್ರೋತ್ಸಾಹ ನೀಡಿದಂತಾದೀತು.
ಇನ್ನಾದರೂ ಇಂಥ ಮೂಢ ಕಾರ್ಯಾಚರಣೆಗಳ ಮೂಲಕ ಪ್ರಚಾರಪ್ರಿಯತೆಗೆ ಹವಣಿಸದೆ, ನೇರ ಮಾರ್ಗಗಳಲ್ಲಿ ಜನಪರ ಕಾರ್ಯಗಳನ್ನು ಕೈಗೆತ್ತಿ ಬಡಜನರ ಮೌಢ್ಯತೆಯನ್ನು ಹೋಗಲಾಡಿಸುವಂತ ಕಾರ್ಯವೈಖರಿಯನ್ನು ರೂಪಿಸಿಕೊಂಡು ಕಾರ್ಯನಿರತರಾಗುವರೆಂದು ಹಾರೈಸುತ್ತೇನೆ.
Tagged with
lekhana
ಹೋರಾಟಗಾರ ಬಿ.ವಿ. ಕಕ್ಕಿಲ್ಲಾಯ ಇನ್ನಿಲ್ಲ. ಹೋರಾಟ ಮುಗಿಯುವ ಮುನ್ನವೇ, ತಮ್ಮ ಪಾಲಿನ ಕೊಡುಗೆ ನೀಡಿ ಅವರು ಕಣ್ಮರೆಯಾಗಿದ್ದಾರೆ. ಸೋಮವಾರ ರಾತ್ರಿ ೨ ಗಂಟೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ನಿಧನರಾದರು. ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಅವರು ಬದುಕುಳಿಯಲಿಲ್ಲ.
ಕಕ್ಕಿಲ್ಲಾಯ ಅವರದು ಸಾರ್ಥಕ ಬದುಕು. ರೈತ ಕಾರ್ಮಿಕರ ಹಕ್ಕುಗಳೇನೆಂಬುದೇ ತಿಳಿಯದಿದ್ದ ೧೯೪೦ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತ ಕಾರ್ಮಿಕರನ್ನು ಸಂಘಟಿಸಿದ್ದರು. ಎಲ್ಲಾ ದಬ್ಬಾಳಿಕೆಗಳನ್ನೂ ಎದುರಿಸಿ, ಅವರ ಮೂಲಭೂತ ಹಕ್ಕುಗಳಿಗಾಗಿ ಅನೇಕ ಹೋರಾಟಗಳನ್ನು ಮಾಡಿದ್ದರು. ದ.ಕ. ಅಷ್ಟೇ ಅಲ್ಲ, ಕರ್ನಾಟಕದ ಹಲವೆಡೆ ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ಗಳನ್ನು ಪ್ರಬಲವಾಗಿ ಬೆಳೆಸಿದ ವ್ಯಕ್ತಿ ಕಕ್ಕಿಲ್ಲಾಯ.
ಜೊತೆಜೊತೆಗೆ ಸ್ವಾತಂತ್ರ್ಯ ಹೋರಾಟ ದಲ್ಲೂ ಸಕ್ರಿಯರಾಗಿದ್ದರು. ಭಾರತ ಬಿಟ್ಟು ತೊಲಗಿ ಚಳುವಳಿಯೂ ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ನಡೆದ ಹಲವು ಹೋರಾಟ ಗಳಲ್ಲಿಯೂ ತೊಡಗಿಕೊಂಡಿದ್ದ ಕಕ್ಕಿಲ್ಲಾ ಯರು ಅದಕ್ಕಾಗಿ ಸೆರೆವಾಸವನ್ನೂ ಅನುಭ ವಿಸಿದ್ದರು.
ಸ್ವಾತಂತ್ರ್ಯಾನಂತರದ ದಿನಗಳಲ್ಲಿ ರೈತ-ಕಾರ್ಮಿಕರ ಮೇಲೆ ಮುಂದುವರೆದಿದ್ದ ದಬ್ಬಾ ಳಿಕೆ ಹಾಗೂ ಶೋಷಣೆಗಳನ್ನು ಪ್ರತಿಭಟಿಸಿ ಸಂಘಟನೆ ಹಾಗೂ ಹೋರಾಟವನ್ನು ಮುಂದುವರಿಸಿದ ಕಕ್ಕಿಲ್ಲಾಯ, ಈ ಉದ್ದೇಶ ಕ್ಕಾಗಿ ಚುನಾವಣೆಗೂ ನಿಂತು ಆಯ್ಕೆಯಾಗಿ ದ್ದರು. ೧೯೫೨ರಿಂದ ೧೯೫೪ ರವರೆಗೆ ಮದ್ರಾಸ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಗೊಂ ಡಿದ್ದ ಕಕ್ಕಿಲ್ಲಾಯ ಅಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಕರ್ನಾಟಕ ಏಕೀಕರಣ ಚಳುವಳಿಯಲ್ಲೂ ಅವರದು ಮಹತ್ವದ ಪಾತ್ರ.
ಬಂಟ್ವಾಳ ಹಾಗೂ ವಿಟ್ಲ ಕ್ಷೇತ್ರಗಳಿಂದ ೧೯೭೨ ಹಾಗೂ ೧೯೭೮ರಲ್ಲಿ ಕರ್ನಾಟಕ ವಿಧಾನಸಭೆಗೆ ಭಾರೀ ಮತಗಳಿಂದ ಆಯ್ಕೆ ಯಾಗಿದ್ದ ಕಕ್ಕಿಲ್ಲಾಯ ಅತ್ಯಂತ ಸಮರ್ಥ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಭೂಸುಧಾರಣಾ ಮಸೂದೆಯ ರಚನೆಯಲ್ಲಿ ಅವರು ವಹಿಸಿದ್ದ ಪಾತ್ರವು ಮಹತ್ತರವಾದುದು.
ತಮ್ಮ ತೀಕ್ಷ್ಣ ಬುದ್ದಿಮತ್ತೆ, ಎಂಥವರನ್ನೂ ಮಂತ್ರ ಮುಗ್ಧರನ್ನಾಗಿಸುವ ಭಾಷಣ ಶೈಲಿ, ಅಗಾಧವಾದ ಓದು ಮತ್ತು ಪಾಂಡಿತ್ಯ, ಸರಳತೆ, ಸಚ್ಛಾರಿತ್ರ್ಯ ಹಾಗೂ ಸಜ್ಜನಿ ಕೆಗಳಿಗೆ ಹೆಸರಾಗಿದ್ದ ಕಕ್ಕಿಲ್ಲಾಯರು, ಜಾತ್ಯತೀತವಾದ, ಕೋಮು ನಿರಪೇಕ್ಷವಾದ, ಸರ್ವರಿಗೂ ಸಮಬಾಳನ್ನು ನೀಡಬಲ್ಲ ಪ್ರಗತಿಪರ, ಸಮಾಜವಾದಿ ಸಮಾಜದ ನಿರ್ಮಾ ಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು, ಕೊನೆ ತನಕ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಹೋರಾಟವನ್ನು ಮುಂದುವರೆಸಿದ್ದರು.
ಇವತ್ತು ಕಕ್ಕಿಲ್ಲಾಯ ಇಲ್ಲ. ಅವರ ಹೋರಾಟವೂ ಮುಗಿದಿಲ್ಲ. ಅದನ್ನು ಮುಂದುವರಿಸಿಕೊಂಡು ಹೋಗು ವುದೇ ಅವರಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿ.
Tagged with
lekhana
ಮೇ ೨೬ರ ಚಾವಡಿ ವಿಭಾಗದಲ್ಲಿ ಮೆಹಬೂಬ್ ಉಳ್ಳಾಲರವರ ‘ಎ.ಪಿ. ಉಸ್ತಾದರಿಗೆ ಸರಿಸಮಾನರಿಲ್ಲ’ ಎಂಬ ಲೇಖನವು ಪ್ರಕಟವಾಗಿತ್ತು. ಆ ಲೇಖನದಿಂದ ಇನ್ನು ನೂರು ಮಂದಿ ಸತ್ಯದ ಹಾದಿಗೆ ಮರಳುತ್ತಾರೆಯೇ ಹೊರತು ಯಾರೂ ಕೂಡಾ ಸತ್ಯದಿಂದ ದೂರ ಹೋಗುವುದಿಲ್ಲ. ಓರ್ವ ಮನುಷ್ಯನಿಗೆ ಪ್ರಥಮವಾಗಿ ಇರಬೇಕಾದ ಗುಣ ಮಾನವೀಯತೆ. ಮಾನವೀ ಯತೆ ಹೃದಯದಿಂದ ದೂರವಾದಾಗ ಮನಬಂದಂತೆ ಬರೆಯಲು ಮೃಗೀಯ ಮನಸ್ಸು ಪ್ರೇರೇಪಿಸುತ್ತದೆ.
ಮಾನವೀಯತೆ ನಷ್ಟ ಹೊಂದಿರುವ ಈ ಕಾಲದಲ್ಲಿ ಮಾನವೀಯತೆಯ ಧ್ವನಿಯನ್ನು ಎತ್ತಿ ಹಿಡಿದು ಜನರ ಹೃದಯದಲ್ಲಿ ಅದು ಸ್ಥಿರಗೊಳಿಸಲು ಎ.ಪಿ. ಉಸ್ತಾದರು ಮಹತ್ವವಾದ ಮತ್ತು ಈ ಕಾಲಕ್ಕೆ ಅನಿವಾರ‍್ಯವಾದ ಯಾತ್ರೆ ಯನ್ನು ಕೈಗೊಂಡರು. ಆ ಯಾತ್ರೆಯು ಅಲ್ಲಾಹನ ಅನುಗ್ರಹದೊಂದಿಗೆ ಸರ್ವಧರ್ಮೀಯರ ಜೊತೆ ಸೇರಿ ಜಾಗೃತಿ ಮೂಡಿಸುವ ಈ ಕೆಲಸ ಯಶಸ್ವಿ ಯಾಯಿತು. ಈ ಯಾತ್ರೆಯಿಂದ ಇಡೀ ಕೇರಳ ರಾಜ್ಯವೇ ಧನ್ಯಗೊಂಡಿತು. ಯಾರು ಏನೇ ನಿಂದಿಸಿದರೂ, ಅಪಪ್ರಚಾರ ನಡೆಸಿದರೂ ತನ್ನ ಕರ್ತವ್ಯದ ಕಡೆಗೆ ಗಮನ ಕೊಟ್ಟು ಅದೆಷ್ಟೋ ಜನರ ಹೃದಯದಲ್ಲಿ ಮನೆ ಮಾಡಿರುವ ಎ.ಪಿ. ಉಸ್ತಾದ್, ಯಾವುದೋ ಕೆಲವು ಅವಿವೇಕಿಗಳಿಗೆ ಇಷ್ಟವಾಗಿಲ್ಲ ಅನ್ನುವ ಕಾರಣಕ್ಕೆ ಯಾರೂ ತಲೆಗೆಡಿಸಿಕೊಳ್ಳುವುದಿಲ್ಲ.
ವಿದೇಶಿ ರಾಷ್ಟ್ರಗಳಲ್ಲಿ ಎ.ಪಿ. ಉಸ್ತಾದರು ಸಲಫಿ ಮಸೀದಿಗೆ ಹೋಗಿ ಮಹಿಳೆಯರೊಂದಿಗೆ ಖುತ್‌ಬಾ ನಿರ್ವಹಿಸಿ ನಮಾಜಿಗೆ ನೇತೃತ್ವ ನೀಡುತ್ತಾರೆ. ಅನ್ನುವ ತಮ್ಮ ಹೇಳಿಕೆ ಓರ್ವ ಮುಸಲ್ಮಾನನಾಗಿ ಹೇಳುವಂತಹ ಮಾತಲ್ಲ. ಜೀವನದ ದಾರಿಗಳನ್ನು ಕಳೆದುಕೊಂಡು ಶೋಚನೀಯ ಮಟ್ಟದಲ್ಲಿರುವ ಕಾಶ್ಮೀರ, ಗುಜರಾತ್, ಉತ್ತರ ಪ್ರದೇಶ ಇತ್ಯಾದಿ ರಾಜ್ಯಗಳಲ್ಲಿನ ಅದೆಷ್ಟೋ ಅನಾಥ, ಬಡ ಮಕ್ಕಳನ್ನು ಉನ್ನತ ವಿದ್ವಾಂಸನನ್ನಾಗಿಯೂ, ಡಾಕ್ಟರ್, ಇಂಜಿನಿ ಯರ್‌ಗಳಾಗಿಯೂ, ಉತ್ತಮ ಸಮಾಜ ನಾಗರಿಕರನ್ನಾಗಿ ಮಾಡಿದ ಎ.ಪಿ. ಉಸ್ತಾದ್, ಮಾತ್ರವಲ್ಲ ನೀರಿಲ್ಲದ ಹರಿಯಾಣದಂತಹ ಹಲವು ರಾಜ್ಯಗಳಿಗೆ ಬಾವಿ ಸೌಕರ್ಯ ಒದಗಿಸಿ ಕೊಟ್ಟ ಮಹಾನ್ ವ್ಯಕ್ತಿ. ಗಲಭೆ ನಡೆದಾಗ ಮುಸ್ಲಿಮನಾಗಲಿ, ಸಹೋದರ ಧರ್ಮೀಯರಾಗಲಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ನೀಡುವ ಸಮುದ್ದಾರಕ, ಮಸೀದಿಗಳಿಲ್ಲದ ಅದೆಷ್ಟೋ ಪರಿಸರಗಳಲ್ಲಿ ಮಸೀದಿ ನಿರ್ಮಿಸಿ ಅದಕ್ಕೋಸ್ಕರ ಹಗಲು ರಾತ್ರಿ ಕಷ್ಟಪಟ್ಟು ನಿದ್ದೆ ಇಲ್ಲದೆ ಹೋರಾಡುತ್ತಿರುವ ಈ ಕಾಲದ ಸಮುದ್ಧಾರಕ ಎ.ಪಿ. ಉಸ್ತಾದರ ಬಗ್ಗೆ ಮನಬಂದಂತೆ, ಪುರಾವೆಗಳಿಲ್ಲದೆ ಮೃಗೀಯ ರೂಪವನ್ನು ತಾಳಿ ಮಾತನಾಡಲು, ಬರೆಯಲು ಮನಸ್ಸಾದರೂ ಹೇಗೆ ಬರುತ್ತದೆ ಸಹೋದರ? ಅಂತಹ ಮಹಾನ್ವಿತರನ್ನು ಪಡೆಯಲು ನಾವು ಪುಣ್ಯ ಮಾಡಿರಬೇಕು. ಅವರನ್ನು ಅನುಗ್ರಹಿಸಿದ ಅಲ್ಲಾಹನಿಗೆ ವಂದನೆಗಳು.
ಮಾನವೀಯತೆಯ ಜಾಗೃತಿಯ ಹೋರಾಟವು ಕೇವಲ ಮುಸಲ್ಮಾನರಿ ಗೋಸ್ಕರ ಮಾಡಿದ ಕಾರ್ಯಕ್ರಮವಲ್ಲ. ಸರ್ವಧರ್ಮೀಯರಲ್ಲೂ ಜಾಗೃತಿ ಗೊಳಿಸುವ ಹೋರಾಟ. ಅದಕ್ಕೋಸ್ಕರ ಕರ್ನಾಟಕದಲ್ಲಿ ಅದನ್ನು ಬೆಂಬಲಿಸುವ ಸಲುವಾಗಿ ಮಂಗಳೂರು ನೆಹರೂ ಮೈದಾನದ ಸಂಗಮದಲ್ಲಿ ಹಿಂದೂ ಧಾರ್ಮಿಕ ಮುಖಂಡರಾದ ಪೇಜಾವರ ಸ್ವಾಮೀಜಿಯವರನ್ನು, ಕ್ರೈಸ್ತ ಸಮುದಾಯದ ಮುಖಂಡ ರನ್ನೂ ಕರೆಸಿ ಸಮಾಜದಲ್ಲಿ ಜಾಗೃತಿಗೊಳಿಸುವ ಕೆಲಸವನ್ನು ಉಸ್ತಾದರು ನಿರ್ವಹಿಸಿದ್ದು. ಅದು ಸ್ವಾಗತಾರ್ಹವಾದ ವಿಷಯವಾಗಿದೆ.
ಉಳ್ಳಾಲ ತಂಙಳ್‌ರವರು ದೂರ ಹೋಗುವ ಸೂಚನೆ ಇದೆ ಎಂಬುದು ಅತ್ಯಂತ ಹಾಸ್ಯಾಸ್ಪದವಾಗಿತ್ತು. ಯಾಕೆಂದರೆ ಎ.ಪಿ. ವಿಭಾಗದ ಸಮಸ್ತದ ಅಧ್ಯಕ್ಷರೇ ಉಳ್ಳಾಲ ತಂಙಳ್‌ರವರು ಅವರು ಕಟ್ಟಿ ಬೆಳೆಸಿದ ಸಂಘಟನೆ, ಅವರ ನಿದರ್ಶನಗಳೇ ಎ.ಪಿ. ಉಸ್ತಾದರ ಕಾರ್ಯಗಳು ಎಂಬುದನ್ನು ಮರೆಯಬೇಡಿ.
ಎ.ಪಿ. ವಿಭಾಗದ ಸುನ್ನಿಗಳ ಯಾವುದೇ ವೇದಿಕೆಗಳಲ್ಲಿಯೂ ಇ.ಕೆ. ಉಸ್ತಾದ ರನ್ನಾಗಲಿ, ಇತರರನ್ನಾಗಲಿ ನಿಂದಿಸುವುದಿಲ್ಲ. ಬದಲು ಸ್ಮರಿಸುತ್ತೇವೆ. ನಿಂದಿಸುವ ಸಂಸ್ಕೃತಿ ಎ.ಪಿ. ಉಸ್ತಾದರು ಕಲಿಸಿ ಕೊಟ್ಟಿಲ್ಲ. ಯಾರನ್ನು ನಿಂದಿಸದೆ ತಾಳ್ಮೆಯಿಂದ ಸತ್ಯದ ಪತಾಕೆಯನ್ನು ಹಿಡಿದು ಮುನ್ನಡೆಸುತ್ತಿರುವ ಎ.ಪಿ. ಉಸ್ತಾದರಿಗೆ ಶತ್ರುಗಳು ಇರಲೇ ಬೇಕಲ್ಲವೇ?
ಒಂದು ನಾಯಕತ್ವಕ್ಕೆ ಎಷ್ಟು ಶಕ್ತಿ ಇದೆಯೋ ಅಷ್ಟೇ ಶಕ್ತಿ ಎದುರಾಳಿಗಳ ನಾಲ ಗೆಗೂ ಇರುತ್ತದೆ. ಅದು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಕಾಲದಿಂದಲೂ ನಡೆದು ಬಂದ ಪದ್ಧತಿ. ಎಲ್ಲಾ ರೀತಿಯಲ್ಲೂ ಎ.ಪಿ. ಉಸ್ತಾದರನ್ನು ನಿಂದಿಸಿ ಫಲಿ ಸದೆ ಇದೀಗ ಹೊಸ ಪ್ರಯೋಗ. ಹೊಗಳಿ ನಿಂದಿಸುವ ಕಾರ್ಯಕ್ರಮ. ನೆನಪಿಡಿ ನೀವು ಎಷ್ಟು ನಿಂದಿಸುತ್ತೀರೋ ಅಷ್ಟೇ ಎತ್ತರಕ್ಕೆ ಉಸ್ತಾದರು ಬೆಳೆಯುತ್ತಾರೆ. ಯಾಕೆಂದರೆ ಸತ್ಯ ಅವರ ಕೈಯಲ್ಲಿದೆ.
ಸಿರಾಜುದ್ದೀನ್ ಕೆ.ಎಚ್, ಉಚ್ಚಿಲ, ಉಡುಪಿ
Tagged with
chavadi
ಪ್ರಜಾ, ಮಂಗಳೂರು
ಹಿಂದೂ ಸಮಾಜದಲ್ಲಿ ನಡೆಯುವಷ್ಟು ಆತ್ಮಹತ್ಯೆ ಪ್ರಕ ರಣಗಳು ಇನ್ನಿತರ ಧರ್ಮಗಳಲ್ಲಿ ನಡೆಯುವುದಿಲ್ಲ. ಇದಕ್ಕಿ ರುವ ಮೂಲ ಕಾರಣಗಳು ಯಾವುದು? ಈ ಬಗ್ಗೆ ಹಿಂದೂ ಸಮಾಜದ ಪ್ರತಿಯೊಬ್ಬರಿಗೂ ತಿಳುವಳಿಕೆ ನೀಡುವ ಕೆಲಸ ಆಗ ಬೇಕಾಗಿದೆ. ಮದ್ಯಪಾನ ಹಿಂದೂ ಸಮಾಜದ ಇನ್ನೊಂದು ಕರುಣಾಜನಕ ಕಥೆ. ಶ್ರಮಪಟ್ಟು ದುಡಿದು ಸಂಜೆಯಾದೊ ಡನೆ ಕುಡಿದು ತೂರಾಡುತ್ತಾ ಮನೆಗೆ ಬಂದು ಹೆಂಡತಿ, ಮಕ್ಕ ಳಿಗೆ ಹೊಡೆಯುವುದು, ಮನೆಯವರು ಊಟಕ್ಕಿಲ್ಲದೆ ಉಪ ವಾಸ ಮಲಗುವುದು, ಕೆಲವೊಮ್ಮೆ ಇದು ಸಾವಿನಲ್ಲಿ ಅಂತ್ಯವಾ ಗುವುದೂ ಇದೆ. ಇದೇ ರೀತಿ ಹಿಂದೂ ಧಾರ್ಮಿಕ ಉತ್ಸವ ಗಳ ಮೆರವಣಿಗೆಯಲ್ಲಿ ಅಸಭ್ಯವಾಗಿ ಕುಣಿಯುವುದು, ಅಸಭ್ಯ ವರ್ತನೆಗಳು ಇದಕ್ಕೆಲ್ಲಾ ಕಡಿವಾಣ ಬೇಕಾಗಿದೆ.
ವಿದ್ಯೆ ಕಲಿಯಲು ಆಸಕ್ತಿ ಇದ್ದರೂ ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದೇ ಎಷ್ಟೋ ಹಿಂದೂ ಬಾಲಕ-ಬಾಲಕಿಯರು ಹೊಟೇಲ್‌ಗಳಲ್ಲಿ ಗ್ಲಾಸ್ ತಟ್ಟೆ ತೊಳೆ ಯಲು, ಮನೆಗೆಲಸದ ಆಳುಗಳಾಗಿ, ಬಾಲ ಕಾರ್ಮಿಕರಾಗಿ ದುಡಿಯುತ್ತಾರೆ. ಇಲ್ಲಿ ಮಾಲಕರ ಶೋಷಣೆ, ಕಿರುಕುಳ, ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಆಸಕ್ತ ಬಡ ವಿದ್ಯಾರ್ಥಿ ಗಳ ವಿದ್ಯಾಭ್ಯಾಸಕ್ಕೆ ಶಾಶ್ವತ ಯೋಜನೆಗಳು ಬೇಕಾಗಿದೆ.
ಹಿಂದೂ ಸಮಾಜದ ಎಷ್ಟೋ ಅವಿವಾಹಿತ ಹೆಣ್ಣುಮ ಕ್ಕಳು ವರದಕ್ಷಿಣೆಯ ಪೆಡಂಭೂತದಿಂದ ಮದುವೆಯಾಗದೆ ಉಳಿದಿರುವುದು, ಆತ್ಮಹತ್ಯೆಗೆ ಒಳಗಾಗುವುದು, ಲೈಂಗಿಕ ಶೋಷಣೆ ಗಳಿಗೆ ಒಳಗಾಗುತ್ತಿರುವುದನ್ನು ನಾವಿಂದು ನಮ್ಮ ಸಮಾಜದಲ್ಲಿ ಕಾಣುತ್ತಿದ್ದೇವೆ. ವರದಕ್ಷಿಣೆಯ ಪೆಡಂಭೂತದ ವಿರುದ್ಧ ಹಿಂದೂ ಸಮಾಜದಲ್ಲಿ ಸುಧಾರಣೆ ಮಾಡಲು ಸಾಧ್ಯವಿಲ್ಲವೇ?
ನಿರುದ್ಯೋಗ ಈ ದೇಶದ ಸಮಸ್ಯೆಯಾದರೂ ಹಿಂದೂ ಸಮಾಜದಲ್ಲಿ ಹೆಚ್ಚು ಕಾಣುತ್ತಿದ್ದೇವೆ. ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಶಿಬಿರ, ಉದ್ಯೋಗಾವಕಾಶ ಒದಗಿಸುವುದು, ಸ್ವ-ಉದ್ಯೋಗ ಯೋಜನೆಗಳಿಗೆ ನೆರವು ನೀಡುವ ಕ್ರಾಂತಿಕಾರಕ ಕೆಲಸ ಮಾಡಿ ದರೆ ಹಿಂದೂ ಸಮಾಜದ ಕೌಟುಂಬಿಕ ನೆಮ್ಮದಿ ಸುಧಾರಣೆಯಾ ಗಬಹುದು.
ದೇವಸ್ಥಾನಗಳ ಉತ್ಸವ, ಜಾತ್ರೆಗಳ ಮೆರವಣಿಗೆ, ಸುಡುಮದ್ದು- ಟ್ಯಾಬ್ಲೊಗಳಿಗೆ ಲಕ್ಷಾಂತರ ಖರ್ಚು ಮಾಡುವ ಬದಲು ಸಮಾ ಜದ ಜನರಿಗೆ ಪ್ರಯೋಜನಕಾರಿ ಕಾರ್ಯಗಳಿಗೆ ವಿನಿಯೋಗಿಸಿ ದರೆ ಸಮಾಜ ಸುಧಾರಣೆಯಾಗುವುದಿಲ್ಲವೇ? ದೇವಸ್ಥಾನಗಳಲ್ಲಿ ಹೆಚ್ಚುತ್ತಿರುವ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕುವುದು, ಪಂಕ್ತಿ ಭೇದ ನೀತಿಗಳನ್ನು ನಿಷೇಧಿಸುವುದು ಸಾಧ್ಯವಿಲ್ಲವೇ? ನಾವೆಲ್ಲ ಒಂದು, ಹಿಂದು, ಬಂಧು ಕೇವಲ ಒಂದು ದಿನಕ್ಕೆ ಸೀಮಿತವಾ ಗುವ ಬದಲು ಖಾಯಂ ಆಗಿ ನಾವೆಲ್ಲ ಹಿಂದು, ಬಂಧು, ಒಂದು ಆಗಿರಲು ಸಾಧ್ಯವಿಲ್ಲವೇ? ಹಿಂದೆ ನಮ್ಮ ಮನೆಗಳಲ್ಲಿ ಮದುವೆ ಯಂಥ ಶುಭ ಸಮಾರಂಭಗಳಿವೆ ಎಂದಾದರೆ ಶ್ರೀಸತ್ಯನಾರಾಯಣ ಪೂಜೆ ಮುಂತಾದ ದೇವತಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈಗ ‘ಮದರೆಂಗಿ’ ಎಂಬ ವಿಶಿಷ್ಟ ಸಂಪ್ರದಾಯ ಬೆಳೆದು ಮೊದ ಲಿನ ದಿನ ಗುಂಡು-ತುಂಡು ಪಾರ್ಟಿ ಎಂದು ಮಧ್ಯರಾತ್ರಿವರೆಗೂ ನರ್ತಿಸುತ್ತಾ, ಮರುದಿನ ಮದುವೆ ಮಂಟಪಕ್ಕೆ ಮದ್ಯದ ಅಮಲಿ ನಲ್ಲಿ ಹೋಗಬೇಕಾದ ಪರಿಸ್ಥಿತಿ ಹಿಂದೂ ಸಮಾಜಕ್ಕೆ ಬೇಕೇ? ಇನ್ನು ಅದ್ಧೂರಿ ಮದುವೆಗಳಿಂದ ಜನ ಸಾಲದ ಸಮಸ್ಯೆಗೆ ಸಿಲು ಕುತ್ತಾರೆ. ಸಾಮೂಹಿಕ ವಿವಾಹ. ಸರಳ ಮದುವೆಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟಲ್ಲಿ ಬಡಕುಟುಂಬದ ಹೆಣ್ಣುಮಕ್ಕಳಿಗೆ ಅನುಕೂ ಲಕರವಾಗಬಹುದು. ಈ ಬಗ್ಗೆ ಚಿಂತನೆ ಬೇಡವೇ?
ಕಾಲೇಜ್‌ಗೆ ಹೋಗುವ ಹೆಣ್ಣುಮಕ್ಕಳಿಗೆ ಮೊಬೈಲ್ ಅವಶ್ಯ ಕತೆ ಇದೆಯೇ? ಈ ಮೊಬೈಲ್ ಮೇನಿಯಾದಿಂದ ಎಷ್ಟು ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರವಾಗಿದೆ? ಕೊಲೆಯಾಗಿದೆ? ಮೈಸೂರು ಮಲ್ಲಿಗೆ, ಮಂಗಳೂರು ಮಲ್ಲಿಗೆ, ಪುತ್ತೂರು ಮಲ್ಲಿಗೆ ಎಂದು ಎಷ್ಟು ಹೆಣ್ಣುಮಕ್ಕಳ ಮಾನ ಹರಾಜು ಆಗಿದೆ? ಅರೆನಗ್ನ ಉಡುಪು ಗಳು ನಮ್ಮ ಸಮಾಜದ ಹೆಣ್ಣುಮಕ್ಕಳಿಗೆ ಬೇಕೇ? ಈ ಬಗ್ಗೆ ಹೆತ್ತ ವರು ಯಾಕೆ ಚಿಂತನೆ ಮಾಡುತ್ತಿಲ್ಲ? ಮೊಬೈಲ್ ಅವಾಂತರ ಗಳಿಂದ ಅತ್ಯಾಚಾರ, ಕೊಲೆಯಾದರೂ ನಾವು ಮೌನವಹಿಸು ತ್ತೇವೆ. ಈ ಬಗ್ಗೆ ಸಾಮಾಜಿಕ ಚಿಂತನೆ ಬೇಡವೇ?
ವಾಮಾಚಾರ, ಮಾಟ-ಮಂತ್ರಗಳಿಂದ ನಕಲಿ ಮಂತ್ರವಾದಿ ಗಳು, ಮಾಂತ್ರಿಕರು, ವಾಮಾಚಾರಿಗಳು ಹಿಂದೂ ಧರ್ಮದ ಶೋಷಣೆ ಮಾಡುತ್ತಿದ್ದಾರೆ, ಕೊಲೆ ಮಾಡುತ್ತಿದ್ದಾರೆ. ಸಂಕಷ್ಟ ಪರಿಹಾರವೆಂದು ಸಾವಿರಗಟ್ಟಲೆ ಹಣವನ್ನು ಬಡವರಿಂದ ಲೂಟಿ ಮಾಡುತ್ತಿದ್ದಾರೆ. ಪ್ರೇಮಿಗಳನ್ನು ಸದೆಬಡಿಯುವ ಸಂಘಟನೆಗಳು ಗಲ್ಲಿ-ಗಲ್ಲಿಗಳಲ್ಲಿರುವ ನಕಲಿ ಮಂತ್ರವಾದಿಗಳನ್ನು ಸದೆಬಡಿಯಲು ಸಾಧ್ಯವಿಲ್ಲವೇ? ಇದರಿಂದ ಎಷ್ಟೋ ಅಮಾಯಕರ ಪ್ರಾಣ ಉಳಿ ಯಬಹುದು. ಓ ಹಿಂದೂ ನಾಯಕರೇ, ಕೇವಲ ವೇದಿಕೆಯೇರಿ ಭಾಷಣ ಬಿಗಿಯುವ ಬದಲು ಸಮಾಜ ಸುಧಾರಣೆಯತ್ತ ಗಮನ ಹರಿಸಿ.
Tagged with
bahiranga
ಪತ್ರಿಕೋದ್ಯಮ ಕಲಿಯುತ್ತಿದ್ದ ಬಡ, ಅಮಾಯಕ ವಿದ್ಯಾರ್ಥಿ ವಿಠಲ ತನ್ನ ಬಾಲ್ಯಜೀವನದಲ್ಲಿ ನಕ್ಸಲ್ ಸಭೆಯಲ್ಲಿ ಭಾಗವಹಿಸಿದ್ದ ಎಂಬ ನೆಪವೊಡ್ಡಿ ಪೊಲೀಸ್ ಇಲಾಖೆ ಮಾನಸಿಕ ಹಿಂಸೆ ನೀಡು ತ್ತಿರುವ ಕ್ರಮ ಸರ್ವಥಾ ತಪ್ಪು. ವಿಠಲ ಒಂದೊಮ್ಮೆ ನಕ್ಸಲ್ ವಿಚಾರಧಾರೆ ಹೊಂದಿದ್ದರೂ ಆತನಿಗೆ ಸುಧಾ ರಿಸುವ ಅವಕಾಶ ನೀಡಬೇಕಿತ್ತು. ಅದನ್ನು ಬಿಟ್ಟು ಆತನನ್ನು ಜೈಲಿ ನಲ್ಲಿ ಕೂಡಿಹಾಕಿದರೆ ಪ್ರಯೋಜ ನವೇನು? ವಿಠಲನಿಗೆ ಪರೀಕ್ಷೆ ಬರೆ ಯುವುದಕ್ಕೂ ನ್ಯಾಯಾಲಯ ಅನುಮತಿ ನಿರಾಕರಿಸುವ ಮೂಲಕ ತಪ್ಪು ಮಾಡಿದೆ. ಇದು ಆತನ ಹಕ್ಕುಗ ಳನ್ನು ದಮನಿಸುವ ಪ್ರಯತ್ನವಾ ಗಿದೆ. ವಿಠಲ ಆರೋಪಗಳಿಂದ ಮುಕ್ತನಾಗಿ ಜೈಲಿನಿಂದ ಹೊರ ಬರಲಿ. ಕೀರ್ತನ್, ನಡುಗೋಡು
Tagged with
nimminda
ಸುಪ್ರೀಂ ಕೋರ್ಟ್ ಆದೇಶದನ್ವಯ ದೇಶಾ ದ್ಯಂತ ಕಾರಿಗೆ ಅಳವಡಿಸಿದ್ದ ಟಿಂಟ್ ಪಟ್ಟಿಯನ್ನು ತೆಗೆಯಲಾಗುತ್ತಿದೆ. ಈ ಮೂಲಕ ದೇಶದ ಪ್ರಮುಖ ನಗರಗಳಲ್ಲಿ ಈ ಹಿಂದೆ ಚಲಿಸುವ ಕಾರಿನಲ್ಲಿ ನಡೆ ದಿದ್ದ ಅಮಾಯಕ ಹೆಣ್ಮಕ್ಕಳ ಅತ್ಯಾಚಾರ ಪ್ರಕರಣ ಗಳನ್ನು ಮರುಕಳಿಸದಂತೆ ಮಾಡುವ ಹೊಣೆಗಾ ರಿಕೆಯನ್ನು ನ್ಯಾಯಾಲಯ ನಿಭಾಯಿಸಲು ಮುಂದಾ ಗಿರುವುದು ಸಮಾಧಾನಕರ ಸಂಗತಿ. ಆದರೆ ಕಾರಿಗೆ ಅಳವಡಿಸಿದ ಟಿಂಟ್ ಪಟ್ಟಿ ತೆಗೆಸಿದ ನಂತರ ಕಾಮು ಕರು ಹೊಸ ವ್ಯವಸ್ಥೆಯನ್ನು ಬಳಸಲು ಪ್ರಾರಂಭಿ ಸಿದ್ದಾರೆ.
ಅದೇನೆಂದರೆ ಕಾರಿನ ಗಾಜುಗಳಿಗೆ ಪರದೆ ಅಳವಡಿಸುವುದು. ಈಗಾಗಲೇ ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಕಾರು ಚಾಲಕರು ಪರದೆ ಹಾಕಿ ಓಡಾಡುತ್ತಿದ್ದಾರೆ. ಪರದೆ ಅಳವಡಿಸಿರುವ ಓಮ್ನಿ, ಸ್ಕಾರ್ಪಿಯೋ, ಕ್ವಾಲಿಸ್ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಕಾರಿನಲ್ಲಿ ಟಿಂಟ್ ಗಾಜು ಇದ್ದಾಗ ಗಾಜಿನ ಹತ್ತಿರ ನಿಂತುಕೊಂಡರೆ ಒಳಗಿದ್ದವರು ಕಾಣುತ್ತಿದ್ದರು. ಆದರೆ ಪರದೆ ಅಳವಡಿಸಿದ ಕಾರು ಗಳಲ್ಲಿ ಒಳಗೆ ಯಾರಿದ್ದಾರೆ, ಒಳಗೆ ಏನು ನಡೆಯು ತ್ತಿದೆ ಎಂದು ಅಷ್ಟು ಸುಲಭವಾಗಿ ಗಮನಕ್ಕೆ ಬರು ವುದೂ ಇಲ್ಲ. ಇದು ಅತ್ಯಾಚಾರಿಗಳು, ಕಾಮುಕ ರಿಗೆ ವರದಾನವಾಗುತ್ತಿದೆ. ಬಿಸಿಲು ನೇರವಾಗಿ ಬೀಳು ತ್ತದೆ ಎಂದು ಕೆಲವರು ಕಾರಿಗೆ ಪರದೆ ಅಳವಡಿಸು ತ್ತಾರೆ. ಆದರೆ ಇದು ಕೇವಲ ನೆಪ ಮಾತ್ರ. ಯಾಕೆಂ ದರೆ ಟಿಂಟ್ ತೆಗೆದು ಅದೆಷ್ಟೋ ಮಂದಿ ಕಾರು ಓಡಿಸುವುದಿಲ್ಲವೇ? ಪರದೆ ಹಾಕಿದವರ ಮನಸ್ಸಿ ನಲ್ಲಿ ದುರಾಲೋಚನೆ ಇದ್ದೇ ಇರುತ್ತದೆ. ಆದ್ದರಿಂದ ಈ ಬಗ್ಗೆ ಪೊಲೀಸ್ ಇಲಾಖೆ ತಕ್ಷಣ ಗಮನಿಸ ಬೇಕು. ಟಿಂಟ್ ಗಾಜು ಕಿತ್ತಂತೆ ಕಾರಿಗೆ ಪರದೆ ಅಳವಡಿಸಿ ಸಂಚರಿಸುವವರನ್ನೂ ಠಾಣೆಗೆ ಕರೆತಂದು ಪರದೆ ತೆಗೆಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡೀತೇ? ಇಲ್ಲವಾದಲ್ಲಿ ಅಕ್ರಮ ವ್ಯವಹಾರಗಳು ಮುಂದೆ ಪರದೆಯ ಒಳಗೆ ನಡೆಯುವ ಸಾಧ್ಯತೆಯಿದೆ.
ಕ್ಷಿತಿಜ ರಾವ್, ಆದಿಉಡುಪಿ
Tagged with
nimminda
ಕಳೆದ ವರ್ಷ ಉಡುಪಿಯಲ್ಲಿ ನಡೆ ದಿದ್ದ ರೇವ್‌ಪಾರ್ಟಿ ಕೊನೆಗೂ ಬಿಜೆಪಿ ನೇತೃ ತ್ವದ ರಾಜ್ಯ ಸರಕಾರ ‘ಕೃಪಾಪೋಷಿತ’ ಎನ್ನು ವುದು ಬಯಲಾಗಿದೆ. ಯಾಕೆಂದರೆ ತತ್ವ, ಸಿದ್ಧಾಂತ ಬೋಧಿಸುವ ಬಿಜೆಪಿ ಪಕ್ಷ ರೇವ್ ಪಾರ್ಟಿಯನ್ನು ವಿರೋಧಿಸಲೂ ಇಲ್ಲ, ತನಿಖೆ ನಡೆಸುವಲ್ಲಿಯೂ ಆಸಕ್ತಿ ವಹಿಸಲಿಲ್ಲ. ಮೈಸೂ ರಿನ ಆಯುಕ್ತೆ ಜಯಂತಿ ಅವರನ್ನು ತಿಂಗಳ ಬಳಿಕ ಮಲ್ಪೆ ಬೀಚ್‌ಗೆ ಕಳುಹಿಸಿ ಕಪ್ಪೆಚಿಪ್ಪು ಸಂಗ್ರಹಿಸಿದ್ದೇ ಸರಕಾರದ ತನಿಖೆಯಾ ಯಿತು. ಈಗ ರೇವ್‌ಪಾರ್ಟಿ ನಡೆದು ಇಷ್ಟು ತಿಂಗಳಾದರೂ ತನಿಖೆ ದಡ ಮುಟ್ಟಿಲ್ಲ. ಮಲ್ಪೆ ಬೀಚ್‌ನಲ್ಲಿ ಬಟಾಬಯಲಾಗಿ ನಡೆದ ಕಾಮ ಕ್ರೀಡೆಯನ್ನು ಬಿಜೆಪಿ ಶಾಸಕರು, ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಕಣ್‌ಕಣ್ ಬಿಟ್ಟು ನೋಡಿದರೇ ವಿನಃ ಯಾರೊಬ್ಬರೂ ಜಿಲ್ಲೆಯ ಮಾನ ಹರಾಜಾಗುತ್ತಿದೆ ಎಂದು ಭಾವಿಸಲಿಲ್ಲ. ಇದರ ಫಲವಾಗಿಯೇ ಜಿಲ್ಲೆಯಲ್ಲಿ ಅರಾಜ ಕತೆ ತಾಂಡವವಾಡುತ್ತಿದೆ. ರಾಜ್ಯ ಸರಕಾರ ದೇಶಕ್ಕೆ ಒಳ್ಳೆ ಯದಾಗುತ್ತದೆ ಎಂದಾದರೆ ಇನ್ನಷ್ಟು ಇಂಥ ರೇವ್ ಪಾರ್ಟಿ ಗಳನ್ನು ಅಲ್ಲಲ್ಲಿ ನಡೆಸಲಿ. ಇದರಿಂದ ದೇಶದ ಬೊಕ್ಕಸ ತುಂಬಲಿ. ದೇಶದ ಸನಾತನ ಸಂಸ್ಕೃತಿ ಅಧಃಪತನ ಕಂಡು ಕೊಂಡರೂ ಚಿಂತಿಸುವುದು ಬೇಡ!
ಕಿಶೋರ್‌ಕುಮಾರ್, ಪುತ್ತೂರು
Tagged with
nimminda
ವಿಕಲಚೇತನರು, ವಯೋ ವೃದ್ಧರು ಹಾಗೂ ವಿಧವೆಯರಿಗೆ ಸರಕಾರದ ಕಂದಾಯ ಇಲಾಖೆ ವತಿ ಯಿಂದ ಮಾಶಾಸನವನ್ನು ನೀಡು ತ್ತಿರುವುದು ಸ್ವಾಗತಾರ್ಹ. ಆದರೆ ಪಿಂಚಣಿ ಮೊತ್ತವು ಬಹಳ ಅತ್ಯಲ್ಪ ವಾಗಿದ್ದು, ಊಟಕ್ಕಾಗಲಿ ಅಥವಾ ವೈದ್ಯಕೀಯ ಚಿಕಿತ್ಸೆಗಾಗಲಿ ಸಂಪೂ ರ್ಣವಾಗಿ ಸಾಕಾಗುವುದಿಲ್ಲ. ಎರಡು ತಿಂಗಳು ಅಥವಾ ನಾಲ್ಕು ತಿಂಗಳಿಗೊಮ್ಮೆ ಮಾಶಾಸನ ನೀಡ ಲಾಗುತ್ತಿತ್ತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಪ್ರತೀ ತಿಂಗಳು ಐದು ಅಥವಾ ಅದ ಕ್ಕಿಂತ ಮುಂಚಿತವಾಗಿ ಮಾಶಾಸನ ನೀಡಬೇಕಾಗಿದ್ದು, ಈ ಆದೇಶವನ್ನು ಪಾಲಿಸುತ್ತಿಲ್ಲ. ಇತ್ತೀಚೆಗೆ ಐದಾರು ತಿಂಗಳುಗಳಿಂದ ಮಾಸಾಶನ ಬರದೆ ಫಲಾನುಭವಿಗಳಿಗೆ ಅನೇಕ ವಿಧದ ತೊಂದರೆಯಾಗಿದೆ. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಕೇಳಿ ದಾಗ ಖಜಾನೆ ಇಲಾಖೆಯಲ್ಲಿ ಹೋಗಿ ಕೇಳು ವಂತೆ, ಖಜಾನೆ ಇಲಾಖೆಯಲ್ಲಿ ವಿಚಾರಿಸಿದಾಗ ತಹಶೀಲ್ದಾರ್ ಕಚೇರಿಯಲ್ಲಿ ಕೇಳುವಂತೆ ಹೇಳು ತ್ತಾರೆ. ಇಷ್ಟೇ ಅಲ್ಲದೆ ಮತ್ತೊಮ್ಮೆ ಅರ್ಜಿ, ಪ್ರಮಾಣ ಪತ್ರಗಳನ್ನು ಒದಗಿಸುವಂತೆ ತಿಳಿಸಲಾಗುತ್ತಿದೆ. ಇದ ರಿಂದ ವಿಕಲಚೇತನರು, ಅಶಕ್ತ ವಯೋವೃದ್ಧರು ಹಾಗೂ ನೊಂದ ವಿಧವೆಯರು ಒಂದು ಕಡೆ ಯಿಂದ ಮತ್ತೊಂದು ಕಡೆಗೆ ಅಲೆದಾಡಿ ಬೇಸರ ಗೊಂಡಿದ್ದಾರೆ. ಆದ್ದರಿಂದ ಸರಕಾರ ಅಧಿಕಾರಿಗ ಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ಕಳುಹಿಸಿ ತಪಾಸಣೆ ನಡೆಸಿ ತಡೆಹಿಡಿದಿರುವ ಮಾಸಾಶನ ಹಾಗೂ ಪ್ರತೀ ತಿಂಗಳು ಸಮಯಕ್ಕೆ ಸರಿಯಾಗಿ ಪಿಂಚಣಿ ತಲುಪುವಂತೆ ಕ್ರಮ ಕೈಗೊಳ್ಳಬೇಕು.
ಧನು, ಮೂಡಬಿದ್ರೆ
Tagged with
nimminda
ಕನ್ನಡ ಚಿತ್ರರಂಗದಲ್ಲಿ ಎದ್ದಿ ರುವ ಡಬ್ಬಿಂಗ್ ಪರ ಹಾಗೂ ವಿರೋಧ ಚರ್ಚೆಗಳು ಬಿಸಿಬಿಸಿ ಯಾಗಿವೆ. ಡಬ್ಬಿಂಗ್ ವಿರೋಧಿ ಸುತ್ತಿರುವವರು ಕನ್ನಡ ಆಯ್ಕೆ ಸ್ವಾತಂತ್ರ್ಯದ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಒಳಿತು. ಡಬ್ಬಿಂಗ್ ಆದ ಚಿತ್ರಗಳನ್ನು ನೋಡುವುದು, ಬಿಡುವುದು ಪ್ರೇಕ್ಷಕನಿಗೆ ಬಿಟ್ಟ ವಿಷಯ. ಡಬ್ಬಿಂಗ್ ಮಾಡದೆ ಪರ ಭಾಷೆ ಚಿತ್ರಗಳನ್ನು ಅದೇ ಭಾಷೆ ಯಲ್ಲಿ ಬೇಕಾದರೆ ನೋಡಿ ಎನ್ನು ವುದು ಅನ್ಯ ಭಾಷೆಯ ಅನಗತ್ಯ ಹೇರಿಕೆಯೆಂದೇ ಹೇಳಬಹುದು. ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡದಲ್ಲೇ ಎಲ್ಲಾ ಮನರಂಜನೆ ಗಳು ಸಿಗುವಂತಹ ವಾತಾವ ರಣ ಸೃಷ್ಟಿಯಾದರೆ ಅದರಲ್ಲಿ ತಪ್ಪೇನಿಲ್ಲ. ಇದರಿಂದ ಕರ್ನಾಟ ಕದಲ್ಲಿ ಕನ್ನಡ ಭಾಷೆ ಉಳಿಯು ವುದು, ಇಲ್ಲವಾದಲ್ಲಿ ಪರಭಾ ಷೆಯ ಹಾವಳಿ ಹೆಚ್ಚಾಗುವುದು. ಆದ್ದರಿಂದ ಕನ್ನಡ ಭಾಷೆಯಲ್ಲಿ ಪರಭಾಷಾ ಚಿತ್ರಗಳು ಡಬ್ಬಿಂಗ್ ಬರಲಿ, ಕನ್ನಡಿಗರಿಗೆ ಕನ್ನಡದಲ್ಲೇ ಎಲ್ಲಾ ಮನರಂಜನೆ ಸಿಗುವಂತೆ ಮಾಡುವುದು ಒಳ್ಳೆಯದಲ್ಲವೇ? ಹೀಗಾದಾಗ ಕನ್ನಡ ಉಳಿಯು ತ್ತದೆ.
ವೆಂಕಟೇಶ್, ಮಂಗಳೂರು
Tagged with
nimminda
ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ವಾದ ಮಲ್ಪೆ ಬೀಚ್‌ನಲ್ಲಿ ಕಾಮುಕರು, ವಿಕೃತ ಕಾಮಿಗಳ ಹಾವಳಿ ವಿಪರೀತವಾಗಿದೆ. ಇಲ್ಲಿಗೆ ಪ್ರೇಮಿಗಳು, ಹೊಸದಾಗಿ ಮದುವೆಯಾದವರು ಹೋಗುವಂತೆಯೇ ಇಲ್ಲ. ಇಲ್ಲಿನ ರಸ್ತೆಯಲ್ಲಿ ಬೈಕ್, ಕಾರುಗಳಲ್ಲಿ ಬೊಬ್ಬೆ ಹೊಡೆಯುತ್ತಾ ತಮ್ಮದೇ ಸಾಮ್ರಾಜ್ಯವೆಂಬಂತೆ ಸಂಚರಿಸುವ ಕಾಮುಕರು ಭಯದ ವಾತಾವರಣ ನಿರ್ಮಿ ಸುತ್ತಾರೆ.
ಇವರಲ್ಲಿ ಹೆಚ್ಚಿನವರು ಇದೇ ಊರಿನವರು ಆಗಿದ್ದರೆ, ಕೆಲವರು ಮಾತ್ರ ಹೊರಗಿನವರು. ತಮ್ಮದೇ ಶೈಲಿಯಲ್ಲಿ ಅಶ್ಲೀಲವಾಗಿ ಮಾತಾ ಡುವ ಇವರಿಗೆ ಪೊಲೀಸರ ಭಯವಂತೂ ಮೊದಲೇ ಇಲ್ಲ. ಹತ್ತಿರದಲ್ಲೇ ಮಲ್ಪೆ ಠಾಣೆಯಿ ದ್ದರೂ ಪೊಲೀಸರು ಬೀಚ್‌ನಲ್ಲಿ ಪ್ರವಾಸಿಗರ ರಕ್ಷಣೆ ಮಾಡದೆ ಆರಾಮವಾಗಿ ನಿದ್ದೆ ಮಾಡು ತ್ತಿರುತ್ತಾರೆ. ತಿಂಗಳ ಹಿಂದೆ ಇಲ್ಲಿ ವಿದೇಶಿ ಯುವ ತಿಯನ್ನು ಸ್ಥಳೀಯ ಕಾಮುಕರು ಸರಣಿ ಅತ್ಯಾ ಚಾರಗೈದ ಘಟನೆ ಸುದ್ದಿಯಾಗಿತ್ತು. ಆದರೆ ಈ ಪ್ರಕರಣವನ್ನು ಪೊಲೀಸರು ಅಲ್ಲಿಗೇ ಮುಗಿಸಿ ದ್ದಾರೆ. ಈ ಘಟನೆಯಿಂದ ಮತ್ತಷ್ಟು ಬೆಳೆದಿ ರುವ ಕಾಮುಕ ಯುವಕರು ಬೀಚನ್ನು ವಾಸ ಸ್ಥಾನವನ್ನಾಗಿಸಿಕೊಂಡಿದ್ದಾರೆ. ಸೈಂಟ್ ಮೆರೀಸ್ ದ್ವೀಪದಲ್ಲಂತೂ ವಿಕೃತರ ಹಾವಳಿ ಹೇಳಿ ಪ್ರಯೋಜನವಿಲ್ಲ. ಗಂಡು-ಹೆಣ್ಣು ಜತೆಯಾಗಿ ಕುಳಿತಿದ್ದರೆ ಅವರ ಸುತ್ತವೇ ಠಳಾಯಿಸುವುದು, ಗುರಾಯಿಸುವುದು, ಅವರು ಸುಮ್ಮನಿದ್ದರೆ ಮೊಬೈಲ್, ನಗ-ನಗದು ದೋಚುವುದು ಮಾಮೂಲಾಗಿದೆ. ಇಲ್ಲಿ ದರೋಡೆಗೆ ಒಳಗಾ ಗುವ ಪ್ರೇಮಿಗಳು ಮರ್ಯಾದೆಗೆ ಅಂಜಿ ಪೊಲೀ ಸರಿಗೆ ದೂರು ಕೊಡದೇ ಇರುವುದು ಇವರಿಗೆ ವರದಾನವಾಗಿದೆ. ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟ ವರು ಮತ್ತೊಮ್ಮೆ ಇಲ್ಲಿಗೆ ಭೇಟಿ ಕೊಡುವ ಧೈರ್ಯ ತೋರಿಸಲಾರರು. ಇಲ್ಲಿನ ಪರಿಸ್ಥಿತಿ ಯನ್ನು ನೋಡುತ್ತಿದ್ದರೆ ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸುತ್ತಿ ದೆಯೇ ಎಂಬ ಶಂಕೆಯುಂಟಾಗುತ್ತಿದೆ. ಪೊಲೀ ಸರು ಇನ್ನಾದರೂ ಗಾಢನಿದ್ದೆಯಿಂದ ಎಚ್ಚೆತ್ತು ಕೊಂಡು ಪ್ರವಾಸಿ ಸ್ಥಳದಲ್ಲಿ ಅಸಭ್ಯವಾಗಿ ವರ್ತಿ ಸುವವರನ್ನು ಸ್ಥಳದಲ್ಲೇ ಹಿಡಿದು ಬೆಂಡೆತ್ತದೇ ಇದ್ದರೆ ಭವಿಷ್ಯದಲ್ಲಿ ಮಲ್ಪೆ ಬೀಚ್‌ಗೆ ಪ್ರವಾಸಿ ಗರು ಹೋಗಲು ಹಿಂದೇಟು ಹಾಕಬಹುದು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು, ಇಲ್ಲಿನ ಪರಿಸ್ಥಿತಿಯ ಪರಾಮರ್ಶೆ ನಡೆ ಸಲಿ. ಈ ಹಿಂದೆ ಇಲ್ಲಿ ನಡೆದಿರುವ ಚುಡಾವಣೆ, ದರೋಡೆ, ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕ ರಣಗಳ ವರದಿ ತರಿಸಿಕೊಂಡು ಇನ್ನಾದರೂ ಬೀಚ್‌ನಲ್ಲಿ ಕಾಮುಕರ ಆಟಾಟೋಪಕ್ಕೆ ಕಡಿ ವಾಣ ಹಾಕಿ. ಆರತಿ ದಿನೇಶ್, ಸಾಗರ
Tagged with
nimminda
ಮುಲ್ಕಿ: ಕಾರ್ನಾಡು ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ವತಿಯಿಂದ ಸಂಘದ ಸದಸ್ಯರ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭವು ತಾ.೨೫-೦೫-೨೦೧೨ನೇ ಶುಕ್ರವಾರ ಕಾರ್ನಾಡು ಸಮುದಾಯ ಭವನದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಮುಲ್ಕಿ ನಗರ ಪಂಚಾಯತ್‌ನ ಅಧ್ಯಕ್ಷರಾದ ಶಶಿಕಾಂತ್ ಶೆಟ್ಟಿ, ಮುಲ್ಕಿ ನಗರ ಪಂಚಾಯತ್‌ನ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲ್ಯಾನ್, ಕಾರ್ನಾಡು ಯು.ಬಿ.ಎಂ.ಸಿ. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ ಶೆಟ್ಟಿ, ಮುಲ್ಕಿಯ ವಕೀಲ ಹಾಗೂ ನೋಟರಿ ಬಿಪಿನ್‌ಪ್ರಸಾದ್, ಮುಲ್ಕಿ ನಗರ ಪಂಚಾಯತ್‌ನ ಸದಸ್ಯ ಪುತ್ತುಬಾವ, ಸಂಘದ ಅಧ್ಯಕ್ಷರಾದ ಎಂ.ಎ. ರಹಿಮಾನ್ ಹಾಗೂ ಕಾರ್ಯದರ್ಶಿ ಗೋಪಾಲ್ ಶಿಮಂತೂರು, ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ೭೦ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.
Tagged with
briefs
ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಂಚರಿಸಲಿ. ಯಾಕೆಂದರೆ ರಾಹುಲ್ ಕಾಲಿಟ್ಟಲ್ಲಿ ಕಾಂಗ್ರೆಸ್ ಸರ್ವನಾಶವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣಲಾಗುತ್ತಿದ್ದಾರೆ ಎಂದು ರಾಹುಲ್ ಗಾಂಧಿಯವರೇ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ರಾಹುಲ್ ರಾಜ್ಯದ ಎಲ್ಲ ೨೨೪ ಕ್ಷೇತ್ರಗಳಿಗೂ ಭೇಟಿ ನೀಡಬೇಕು. ಅವರು ಭೇಟಿ ನೀಡಿದ ಕಡೆಯೆಲ್ಲಾ ಕಾಂಗ್ರೆಸ್ ಸರ್ವನಾಶವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪ ಕ್ಷವನ್ನು ಪೂರ್ಣವಾಗಿ ನಾಶ ಮಾಡಬೇಕು ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಹಾಳು ಬಾವಿಗೆ ಬಿದ್ದಿದ್ದಾರೆ: ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಿಲ್ಲ ಎಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್ ಪಕ್ಷವೇ ಒಂದು ದೊಡ್ಡ ಬಾವಿ. ಅಲ್ಲಿ ಬಿದ್ದವರು ಮೇಲೆ ಬರುವುದು ಕಷ್ಟ. ಈಗಾಗಲೇ ಸಿದ್ದರಾಮಯ್ಯ ಹಾಳು ಬಾವಿಗೆ ಬಿದ್ದಾಗಿದೆ. ಅವರು ಅಲ್ಲೇ ಇರಲಿ. ಅವರಿಗೀಗ ಅದರ ಅನುಭವಾಗುತ್ತಿದೆ. ಅವರು ಬಿಜೆಪಿ ಪಕ್ಷದ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ಎಲ್ಲಾ ಸ್ಥಾನಗಳಲ್ಲಿ ಗೆಲ್ಲಲಿದೆ: ಈ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಸದಾನಂದಗೌಡ ಅವರ ಅಭಿವೃದ್ಧಿ ಕಾರ್ಯಕ್ರಮಗಳೇ ನಮಗೆ ಶ್ರೀರಕ್ಷೆಯಾಗಲಿದೆ. ಸದಾನಂದಗೌಡರು ಮಂಡಿಸಿದ ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ ಶೇ. ೧೫ ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ. ಇದನ್ನು ಶಿಕ್ಷಕರು ಮತ್ತು ಪದವೀಧರರು ಮೆಚ್ಚಿಕೊಂಡಿದ್ದಾರೆ ಎಂದರು.
Tagged with
snews