page1

Posted by JAYAKIRANA Kirana on Saturday, 2 June 2012 | 0 comments | Leave a comment...


page2

Posted by JAYAKIRANA Kirana on | 0 comments | Leave a comment...


page3

Posted by JAYAKIRANA Kirana on | 0 comments | Leave a comment...


page4

Posted by JAYAKIRANA Kirana on | 0 comments | Leave a comment...


page5

Posted by JAYAKIRANA Kirana on | 0 comments | Leave a comment...


page6

Posted by JAYAKIRANA Kirana on | 0 comments | Leave a comment...


ಲಂಚ ಪ್ರಕರಣ: ಸಂಪಂಗಿ ಅಪರಾಧಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ರಾಜ್ಯದಲ್ಲಿ ಲಂಚ ಪ್ರಕರಣಕ್ಕೆ ಗುರಿಯಾಗಿರುವ ಮೊದಲ ಶಾಸಕ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಕೆಜಿಎಫ್‌ನ ಬಿಜೆಪಿ ಶಾಸಕ ವೈ. ಸಂಪಂಗಿ ಅಪರಾಧಿ ಎಂದು ವಿಚಾರಣೆ ನಡೆಸಿದ ಲೋಕಾಯುಕ್ತ ಕೋರ್ಟ್ ತೀರ್ಪು ನೀಡಿ ಆದೇಶ ಹೊರಡಿಸಿದೆ. ಅವರು ೨೦೦೯ರಿಂದ ಲಂಚ ಪ್ರಕರಣದ ವಿಚಾರಣೆಯನ್ನು ಎದುರಿಸುತ್ತಿದ್ದರು. ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಸಂಪಂಗಿಗೆ ೧ ವರ್ಷ ಶಿಕ್ಷೆ, ಒಂದೂವರೆ ವರ್ಷ ಸಾದಾ ಜೈಲುವಾಸ ಮತ್ತು ೪೦ ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶ ಎನ್.ಕೆ. ಸುಧೀಂಧ್ರ ರಾವ್ ಅವರು ತೀರ್ಪು ಪ್ರಕಟಿಸಿದೆ. ತೀರ್ಪು ಹೊರಬೀದ್ದ ಕ್ಷಣದಲ್ಲೇ ಸಂಪಂಗಿಯನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.

ಶಾಸಕನಿಗೆ ಗುಂಡು: ದೇಹಸ್ಥಿತಿ ಚಿಂತಾಜನಕ

Posted by JAYAKIRANA Kirana on | 0 comments | Leave a comment...

ನವದೆಹಲಿ: ಪಕ್ಷೇತರ ಶಾಸಕ ಭರತ್ ಸಿಂಗ್‌ನನ್ನು ನಾಲ್ವರು ಅಪರಿಚಿತರ ತಂಡವೊಂದು ಗುಂಡಿಕ್ಕಿ ಕೊಲೆಗೈದ ಘಟನೆ ಇಂದು ಬೆಳಿಗ್ಗೆ ದೆಹಲಿಯ ನಜಾಫ್‌ಘರ್ ಪರಿಸರದಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ೮ರ ಸುಮಾರಿಗೆ ಶಾಸಕ ತನ್ನ ಕಚೇರಿಗೆ ಹೋಗುತ್ತಿದ್ದ ವೇಳೆ ಕಚೇರಿ ಬಳಿಯಲ್ಲಿಯೇ ಗುಂಡಿಕ್ಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜನಕ್ ಪುರಿಯ ಚನನ್ ದೇವಿ ಆಸ್ಪತ್ರೆಗೆ ಸಿಂಗ್‌ನನ್ನು ತಕ್ಷಣವೇ ದಾಖಲಿಸಲಾಗಿದ್ದು, ದೇಹಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಆಸ್ಪತ್ರೆಗೆಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಶಿಕ್ಷಣ ಸಚಿವರೇ, ಮೌಲ್ಯಮಾಪನ ಶುಲ್ಕವು ನ್ಯಾಯಯುತವೇ?

Posted by JAYAKIRANA Kirana on | 0 comments | Leave a comment...

ಪರೀಕ್ಷಾ ಮಂಡಳಿ ಎಸ್‌ಎಸ್‌ಎಲ್‌ಸಿ ಫಲಿ ತಾಂಶವನ್ನು ನಿಗದಿತ ಸಮಯಕ್ಕೆ ಪ್ರಕಟಿಸಿ ವಿದ್ಯಾ ರ್ಥಿಗಳ ಮುಂದಿನ ಶೈಕ್ಷಣಿಕ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಿದೆ. ಪರೀಕ್ಷಾ ವ್ಯವಸ್ಥೆಯ ಪಾರದರ್ಶ ಕತೆ ಕಾಪಾಡಿಕೊಳ್ಳಲು ಉತ್ತರ ಪತ್ರಿಕೆಯ ಜೆರಾಕ್ಸ್, ಪ್ರತಿ ನೀಡಿಕೆ, ಮರು ಎಣಿಕೆ, ಮರು ಮೌಲ್ಯಮಾಪನ ಸೌಲಭ್ಯ ಒದಗಿಸುತ್ತಿದೆ. ಆದರೆ ಇವುಗಳಿಗೆ ನಿಗದಿ ಪಡಿಸಿರುವ ಶುಲ್ಕ ಸಂಪೂರ್ಣ ಅವೈeನಿಕವಾಗಿದೆ.
ಒಂದು ವಿಷಯದ ಜೆರಾಕ್ಸ್ ಪ್ರತಿ ಪಡೆಯಲು ೩೦೦ ರೂ. ಮರು ಎಣಿಕೆಗೆ ೧೫೦ರೂ. ಮರು ಮೌಲ್ಯಮಾಪನಕ್ಕೆ ೭೦೦ ರೂ. ಈ ರೀತಿಯಾಗಿ ದರ ನಿಗದಿ ಪಡಿಸಿದೆ. ಮೌಲ್ಯಮಾಪಕರು ಮಾಡುವ ನಿರ್ಲಕ್ಷ್ಯ ಮತ್ತು ತಪ್ಪಿಗೆ ವಿದ್ಯಾರ್ಥಿಗಳಿಗೆ ದಂಡ ವಿಧಿಸುವುದು ನ್ಯಾಯವೇ? ಮೊದಲು ಮಾಡಿದ ಮೌಲ್ಯ ಮಾಪನಕ್ಕಿಂತ ಹೆಚ್ಚಿನ ಅಂಕವಿದ್ದರೆ ಅದಕ್ಕೆ ದಂಡ ಇಲ್ಲ, ಮತ್ತೆ ಮೌಲ್ಯಮಾಪನ ಸರಿಯಾಗಿದ್ದರೆ ದಂಡ ವಿಧಿಸುವ ಕ್ರಮವನ್ನು ಮಾಡಬೇಕಾಗಿತ್ತು. ಏಕೆಂದರೆ ಮಾಡಿದ ಮೌಲ್ಯಮಾಪನಕ್ಕಿಂತ ಹೆಚ್ಚು ಅಂಕ ಗಳಿಸಿದರೆ ಅದು ಮೌಲ್ಯಮಾಪಕರ ತಪ್ಪಿನಿಂದಾಗಿದೆ ಇದಕ್ಕೆ ವಿದ್ಯಾರ್ಥಿಯಲ್ಲಿ ದಂಡ ಪಡೆಯುವುದ ರಲ್ಲಿ ಅರ್ಥವಿಲ್ಲ.
ಒಂದು ವಿಷಯದ ಉತ್ತರ ಪತ್ರಿಕೆ ಸರಾಸರಿ ೨೦ ರಿಂದ ೨೪ ಪುಟಗಳಿರುತ್ತದೆ. ಅದರ ಛಾಯಾ ಪ್ರತಿ ಪಡೆಯಲು ಗರಿಷ್ಠ ೩೦ ರೂ. ಖರ್ಚಾಗು ತ್ತದೆ. ಅದನ್ನು ವಿದ್ಯಾರ್ಥಿಗೆ ತಲುಪಿಸಲು ಅಂಚೆ ವೆಚ್ಚ ೨೫ ರೂ. ಈ ಕೆಲಸ ಮಾಡಿದ್ದಕ್ಕೆ ೨೦ರೂ. ಶುಲ್ಕ ಪಡೆಯಬಹುದು. ಒಟ್ಟು ೭೫ ರೂ. ನಿಗದಿ ಮಾಡುವುದು ನ್ಯಾಯಸಮ್ಮತ. ಆದರೆ ಪರೀಕ್ಷಾ ಮಂಡಳಿ ೩೦೦ ರೂ. ಶುಲ್ಕ ಸಂಗ್ರಹಿಸಿ ವಿದ್ಯಾರ್ಥಿ ಗಳನ್ನು ಶೋಷಣೆಗೆ ಈಡು ಮಾಡುತ್ತಿದೆ. ಈ ವ್ಯವಸ್ಥೆ ತಪ್ಪಬೇಕು. ಆದ್ದರಿಂದ ಇನ್ನು ಮುಂದೆ ಯಾದರೂ ಶಿಕ್ಷಣ ಸಚಿವರು ಇತ್ತ ಗಮನಹರಿ ಸಬೇಕಾಗಿ ವಿನಂತಿ.
ಧನು, ಮೂಡಬಿದ್ರೆ

ಬಿಜೆಪಿ ಸಾಧನೆ ಏನು?
ರಾಜ್ಯ ಬಿಜೆಪಿ ಸರಕಾರ ಹೇಗೋ ನಾಲ್ಕು ವರ್ಷಗಳನ್ನು ಯಶ ಸ್ವಿಯಾಗಿ ಪೂರೈಸಿದೆ. ಅವೆಷ್ಟೋ ಹಗ ರಣ, ಭ್ರಷ್ಟಾಚಾರಗಳ ನಡುವೆ ಸಿಲು ಕಿದ ಸರಕಾರ ಇಷ್ಟು ಕಾಲ ಬಾಳಿಕೆ ಬಂದಿದ್ದೇ ಹೆಚ್ಚು. ಈ ನಾಲ್ಕು ವರ್ಷ ಗಳಲ್ಲಿ ಪಕ್ಷದ ಅನೇಕ ಹಿರಿ-ಕಿರಿಯ ಸಚಿವರು, ಶಾಸಕರುಗಳು ನಾನಾ ರೀತಿಯ ತಪ್ಪು ಕಾರ್ಯಗಳನ್ನು ಎಸಗಿ ಪಕ್ಷಕ್ಕೆ ಅಪಚಾರವೆಸಗಿದರು. ಬಿಜೆಪಿ ಪಕ್ಷ ತನ್ನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜಿಗಿಟ್ಟಿತು. ನಾಲ್ಕು ವರ್ಷಗಳಲ್ಲಿ ಬಿಜೆಪಿ ಎಸಗಿರುವ ಭ್ರಷ್ಟಾ ಚಾರ ಈ ಹಿಂದಿನ ಯಾವುದೇ ರಾಜ ಕೀಯ ಪಕ್ಷ ನಡೆಸಿದ್ದಿಲ್ಲ. ಮುಖ್ಯ ಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷರು ಸರ ಕಾರವನ್ನು ಉಳಿಸುವಲ್ಲಿ ಕಾಲ ಕಳೆ ದರೇ ಹೊರತು ಜನರಿಗಾಗಿ ಉತ್ತಮ ಯೋಜನೆಯನ್ನು ರೂಪಿಸಲಿಲ್ಲ. ಇದ ರಿಂದ ರಾಜ್ಯದ ಬಡವರ್ಗದ ಜನತೆ ಮತ್ತಷ್ಟು ಬಡವರಾದರೆ, ಶ್ರೀಮಂ ತರು ಹಣ ಮಾಡುತ್ತಲೇ ಸಾಗಿದರು. ರಾಜ್ಯ ಬಿಜೆಪಿ ಸರಕಾರ ಮತ್ತೂ ನಾಲ್ಕು ವರ್ಷ ಆಡಳಿತದಲ್ಲಿ ಮುಂದು ವರಿದರೆ ರಾಜ್ಯದ ಅಮೂಲ್ಯ ಪ್ರಾಕೃತಿಕ ಸಂಪತ್ತು ನಾಶವಾಗುವುದು ನಿಶ್ಚಿತ.
ಕರುಣಾಕರ, ಹೊಸಬೆಟ್ಟು

ಫೇಸ್‌ಬುಕ್ ಸಾಮಾಜಿಕ ಜೀವನಕ್ಕೆ ಅಪಾಯ
ಫೇಸ್‌ಬುಕ್ ಎನ್ನುವ ಸಾಮಾ ಜಿಕ ತಾಣವನ್ನು ಮಿತಿಮೀರಿ ಬಳಕೆ ಮಾಡುತ್ತಿರುವುದರ ಪರಿಣಾಮ ಜನರ ಸಾಮಾಜಿಕ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳು ಕಂಡು ಬರುತ್ತಿವೆ. ಡೈವೋರ್ಸ್ ಪ್ರಕರಣಗಳು ಮಾತ್ರವ ಲ್ಲದೆ ಹೆಣ್ಮಕ್ಕಳ ಹದಿವಯಸ್ಸಿನ ಪ್ರೀತಿ, ಲೈಂಗಿಕತೆಗೂ ಫೇಸ್‌ಬುಕ್ ಕಾರಣ ವಾಗುತ್ತಿದೆ. ಇತ್ತೀಚೆಗೆ ಅಸ್ಸಾಂನ ಕಾಂಗ್ರೆಸ್ ಪಕ್ಷದ ಮಹಿಳಾ ರಾಜ ಕಾರಣಿಯೊಬ್ಬರೂ ಫೇಸ್‌ಬುಕ್ ಜೊತೆ ಪರಿಚಯವಾದ ಯುವಕನ ಜೊತೆ ಗಂಡ-ಮಕ್ಕಳನ್ನು ಮನೆ ಯಲ್ಲೇ ಬಿಟ್ಟು ನಾಪತ್ತೆಯಾದ ಘಟನೆ ನಡೆದಿದೆ. ಇಂಥ ಘಟನೆಗಳು ಬಾರಿ-ಬಾರಿ ಮರುಕಳಿಸುತ್ತಿದ್ದರೂ ಜನರು ಫೇಸ್‌ಬುಕ್ ಅನ್ನು ಮೆಚ್ಚಿಕೊಂಡಿರು ವುದು ಅಪಾಯವನ್ನು ಆಹ್ವಾನಿಸಿ ದಂತೆ. ಇನ್ನಾದರೂ ಫೇಸ್ ಬುಕ್ ಸಾಮಾಜಿಕ ತಾಣದ ಬಳಕೆ ಮಿತಿಯ ಲ್ಲಿರಲಿ.
ಲೋಕೇಶ್, ಪುತ್ತೂರು

ಇಲ್ಲಸಲ್ಲದ ಆರೋಪ ಖಂಡನೀಯ
ಕಳೆದ ೨೭ರ ಜಯಕಿರಣ ಪತ್ರಿ ಕೆಯ ‘ಬಹಿರಂಗ ಪತ್ರ’ ವಿಭಾಗ ದಲ್ಲಿ ‘ಭ್ರಷ್ಟಾಚಾರದ ವಿರುದ್ಧ ಹೋರಾಡುವವರೇ ಭ್ರಷ್ಟರಾದರೆ?’ ಎಂಬ ಶೀರ್ಷಿಕೆಯಡಿಯಲ್ಲಿ ಪತ್ರ ಬರೆದವರು ಮಂಚಿ ವಲಯದ ಎಸ್ ಡಿಪಿಐ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಮೇ. ೧೫ರಲ್ಲಿ ಇರಾ ಗ್ರಾಮದಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆದಿದ್ದ ಹೋರಾಟವನ್ನೇ ನೆಪ ವಾಗಿಟ್ಟುಕೊಂಡು ಎಸ್‌ಡಿಪಿಐ ನಾಯಕರು ಬಿಜೆಪಿ ನಾಯಕನಿಂದ ಹಣ ಪಡೆದು ಕಾರ್ಯಕರ್ತರನ್ನು ಸೇರಿಸಿದ್ದಾರೆ ಎಂದು ಬರೆದಿದ್ದಾರೆ. ಇವರು ಬರೆದಿರುವ ಶೈಲಿಯನ್ನು ಗಮನಿಸಿದರೆ ಮತಿಭ್ರಮಣೆಗೆ ಒಳ ಗಾದಂತೆ ತೋರುತ್ತಿದೆ. ಯಾಕೆಂ ದರೆ ಭ್ರಷ್ಟಾಚಾರ ಎನ್ನುವುದು ಯಾವುದೇ ಪಕ್ಷದ, ಯಾವುದೇ ನಾಯಕನ ಸಮಸ್ಯೆಯಲ್ಲ. ಇದೇ ನಿದ್ದರೂ ಸಮಾಜದ ಎಲ್ಲ ವರ್ಗಗಳ ಜನರ ಸಮಸ್ಯೆ. ಹೀಗಾಗಿ ಇದರ ವಿರುದ್ಧ ಹೋರಾಡಬೇಕಾದ್ದು ಎಲ್ಲ ವರ್ಗಗಳ ಜನರ ಕರ್ತವ್ಯ. ಇದಕ್ಕೆ ಆ ಪಕ್ಷ, ಈ ಪಕ್ಷವೆಂಬ ಬೇಧಭಾವ ವಿಲ್ಲ. ಹೀಗಾಗಿ ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರೂ ಕೂಡಾ ಸ್ವಇಚ್ಛೆಯಿಂದಲೇ ಭಾಗವ ಹಿಸಿದ್ದರು. ಇನ್ನು ದೇವಸ್ಥಾನ, ಮಠ-ಮಂದಿರಗಳು, ಮುಸ್ಲಿಂ ಬಂಧುಗಳ ಶ್ರದ್ಧಾಭಕ್ತಿಯ ಕೇಂದ್ರ, ಕ್ರೈಸ್ತರ ಇಗ ರ್ಜಿಗಳು ನಮಗೇ ಬೇರೆ-ಬೇರೆ ಯಲ್ಲ. ಎಲ್ಲವೂ ದೇವರು ನೆಲೆಸಿ ರುವ ಸಾನಿಧ್ಯವೇ ಆಗಿದೆ. ಹೀಗಾಗಿ ಇದನ್ನು ಟೀಕಿಸುವ ಕೋಮುವಾದಿತನ ಲೇಖಕರು ಬಿಡುವುದೊಳಿತು. ಇನ್ನು ಎಸ್‌ಡಿಪಿಐ ಸಂಘಟನೆ ಮುಂಜಿ ಕಾರ್ಯಕ್ರಮ ಮಾಡುತ್ತದೆ ಎಂದಿದ್ದೀರಿ. ಲೇಖಕರು ಇನ್ನೂ ಎಸ್‌ಡಿಪಿಐ ಸಂಘ ಟನೆಯ ಬಗ್ಗೆ ಸರಿಯಾಗಿ ತಿಳಿದು ಕೊಂಡಿಲ್ಲವೆಂದು ಕಾಣುತ್ತದೆ. ಯಾಕೆಂ ದರೆ ಎಸ್‌ಡಿಪಿಐ ಎಲ್ಲೂ ಮುಂಜಿ ಕಾರ್ಯಕ್ರಮ ನಡೆಸುವುದಿಲ್ಲ.
ಇನ್ನು ಕಾರ್ಯಕರ್ತರಿಗೆ ಗುಡ್ಡ ಗಾಡು ತರಬೇತಿ ನೀಡಲು ಎಸ್‌ಡಿಪಿಐ ಉಗ್ರಗಾಮಿ ಸಂಘಟನೆಯಲ್ಲ, ಇದೊಂದು ಶೋಷಿತ ಸಮಾಜಕ್ಕೆ ರೂಪಿತವಾದ ರಾಜಕೀಯ ಪಕ್ಷ ಎನ್ನುವು ದನ್ನು ಅರಿತುಕೊಳ್ಳಿ. ಎಸ್‌ಡಿಪಿಐ ಸಂಘ ಟನೆ ವತಿಯಿಂದ ರಕ್ತದಾನ, ಬಡ ಕುಟುಂಬಕ್ಕೆ ಆರ್ಥಿಕ ನೆರವು, ಮಕ್ಕಳಿಗೆ ಪುಸ್ತಕ ವಿತರಣೆಯಂಥ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಎಸ್‌ಡಿ ಪಿಐ ತನ್ನ ಕ್ಯಾಂಪ್‌ಗಳಲ್ಲಿ ಸಂಗ್ರಹಿಸುವ ರಕ್ತವನ್ನು ಹಿಂದೂ-ಮುಸ್ಲಿಂ-ಕ್ರೈಸ್ತ ರೆಂಬ ಬೇಧಭಾವವಿಲ್ಲದೆ ಎಲ್ಲ ರಿಗೂ ದಾನವಾಗಿ ನೀಡುತ್ತಿದೆ. ಇಲ್ಲಿ ಧರ್ಮ ರಾಜಕೀಯಕ್ಕೆ ಅವಕಾಶ ನೀಡುವುದಿಲ್ಲ. ಎಸ್‌ಡಿಪಿಐ ಪಕ್ಷದ ಏಳಿಗೆಯನ್ನು ಸಹಿಸದ ಕುಹಕಿಗಳು ವ್ಯರ್ಥವಾಗಿ ಸಂಘಟನೆಯ ಕಾಲೆಳೆ ಯುವ ಪ್ರಯತ್ನ ಮಾಡಿರುವುದು ಸ್ಪಷ್ಟವಾಗುತ್ತದೆ. ಇನ್ನಾದರೂ ಪಕ್ಷದ ಕುರಿತು ಅವಹೇಳನಕಾರಿ ಬರಹ ಪ್ರಕಟಿಸುವುದನ್ನು ನಿಲ್ಲಿಸುವುದೊ ಳಿತು. ಎಸ್‌ಡಿಪಿಐ ವಿರುದ್ಧ ಏನೇನೋ ಬರೆದು ಕೊನೆಗೆ ‘ನೊಂದ ಎಸ್‌ಡಿಪಿಐ ಕಾರ್ಯ ಕರ್ತರು’ ಎಂದು ಬರೆದ ಮಾತ್ರಕ್ಕೆ ನೀವೇನೂ ಸುಭಗರಾಗುವುದಿಲ್ಲ. ಸಂಘಟನೆಯ ಬಗ್ಗೆ ಬರೆಯುವು ದಾದರೆ ನಿಮ್ಮ ಸ್ಪಷ್ಟ ವಿಳಾಸ ಹಿಡಿದು ಪುರಾವೆಯೊಂದಿಗೆ ಬನ್ನಿ.
ಅಶ್ರಫ್, ಮಂಚಿ ಎಸ್‌ಡಿಪಿಐ-ಮಂಚಿ

ಹಳೆಯಂಗಡಿ-ಕಿನ್ನಿಗೋಳಿ ರಸ್ತೆಯಲ್ಲಿ ಅನಗತ್ಯ ಹಂಪ್ಸ್‌ಗಳು!
ಹಳೆಯಂಗಡಿಯಿಂದ ಕಿನ್ನಿ ಗೋಳಿ ಕಡೆ ಸಂಚರಿಸುವ ರಸ್ತೆ ಯನ್ನು ಇಂಟರ್‌ಲಾಕ್ ಹಾಕಿ ಮೇಲ್ದ ರ್ಜೆಗೆ ಏರಿಸಲಾಗಿದೆ. ಹಿಂದೆ ಗುಂಡಿ ನಿರ್ಮಾಣವಾಗಿ ವಾಹನ ಸವಾರ ರಿಗೆ ಸವಾಲಾಗಿದ್ದ ಸುಮಾರು ಅರ್ಧ ಕಿ.ಮೀ. ದೂರದ ರಸ್ತೆಯಲ್ಲಿ ಈಗ ಅನಗತ್ಯ ಹಂಪ್ಸ್‌ಗಳು ರಾರಾಜಿಸು ತ್ತಿವೆ. ಕೆಲವೇ ಮೀಟರ್ ಅಂತರ ದಲ್ಲಿ ಹಂಪ್ಸ್‌ಗಳನ್ನು ಹಾಕಲಾಗಿದ್ದು, ರಸ್ತೆ ಸಂಚಾರಕ್ಕೆ ಅನಗತ್ಯ ವಿಳಂಬ ವಾಗುತ್ತಿದೆ. ಇಂಟರ್‌ಲಾಕ್ ಕಾಮ ಗಾರಿಯ ಮೇಲೆ ಒಟ್ಟು ಮೂರು ಕಡೆ ಹಂಪ್ಸ್ ಇದ್ದರೆ, ರೈಲ್ವೇ ಗೇಟ್ ಸಮೀಪ ಮತ್ತೊಂದು ಇದೆ. ರಾತ್ರಿ ಇಲ್ಲವೇ ನಸುಕಿನ ವೇಳೆ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಂಪ್ಸ್ ಗಮನಕ್ಕೆ ಬಾರದೆ ಸ್ಕಿಡ್ ಆಗುವ ಸಂಭ ವವೂ ಇದೆ. ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಅಗತ್ಯವಾಗಿ ಗಮನಿಸ ಬೇಕು. ಅನಗತ್ಯ ಹಂಪ್ಸ್‌ಗಳನ್ನು ಕಿತ್ತುಹಾಕುವ ಮೂಲಕ ಸುಗಮ ಸಂಚಾರಕ್ಕೆ ಶ್ರಮಿಸಬೇಕಾಗಿ ವಿನಂತಿ.
ಗಣೇಶ್, ಹಳೆಯಂಗಡಿ

ಎಂಡೋ ಪೀಡಿತರಿಗೆ ಪರಿಹಾರ ಕೊಡಿ
ಕೇರಳ ಸರಕಾರ ಎಂಡೋ ಸಲ್ಫಾನ್ ಪೀಡಿತರಿಗೆ ಇನ್ನೂ ಸರಿ ಯಾಗಿ ಪರಿಹಾರ ನೀಡಿಲ್ಲ. ಎಂಡೋ ಪೀಡಿತರನ್ನು ಗಣನೆಗೆ ತೆಗೆದುಕೊಳ್ಳದೆ ಹೀನಾಯವಾಗಿ ಕಾಣುತ್ತಿದೆ. ಹಾಸಿಗೆ ಹಿಡಿದಿರುವ ರೋಗಿಗಳು ಅಥವಾ ಮೃತಪಟ್ಟಿರುವ ವರ ಹತ್ತಿರದ ಬಂಧುಗಳಿಗೆ ಪರಿ ಹಾರ ಧನ ವಿತರಿಸುವುದಾಗಿ ಹೇಳಿದ್ದ ಕೇರಳ ಸರಕಾರ ತನ್ನ ಮಾತಿನಿಂದ ನುಣುಚಿ ಕೊಂಡಿದೆ. ಸಂತ್ರಸ್ತರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ವರು ಹಾಸಿಗೆ ಹಿಡಿದು ನರಳುತ್ತಿದ್ದರೆ ಕೇರಳ ಸರಕಾರ ಪ್ರಯೋಜನಕ್ಕೆ ಬಾರದ ಯೋಜನೆಗಳನ್ನು ರೂಪಿಸು ತ್ತಿದೆ. ಎಂಡೋ ಸಲ್ಫಾನ್ ಪೀಡಿತರಿಗೆ ಇನ್ನಾದರೂ ಕೇರಳ ಸರಕಾರ ಆಶಾ ಕಿರಣವಾಗಲಿ.
ರವೀಶ್, ಕಾಸರಗೋಡು

ಕಾನೂನನ್ನೇ ತಿದ್ದಿಕೊಳ್ಳುವ ರಾಜಕಾರಣಿಗಳು ಬೇಕೇ?
ಈಗಿನ ಬಹುತೇಕ ರಾಜಕಾರಣಿಗಳು ಕೀಳುಮಟ್ಟದ ರಾಜಕೀಯಕ್ಕಿಳಿ ದಿದ್ದಾರೆ ಎಂದರೆ ತಪ್ಪಾಗಲಾರದು. ಒಬ್ಬರನ್ನೊಬ್ಬರು ಹೀಯಾಳಿಸುವುದು ಮಾಮೂಲಿಯಾಗಿದೆ. ಕಾನೂನನ್ನೇ ತಿದ್ದಿಕೊಳ್ಳುವಷ್ಟರ ಮಟ್ಟಿಗೆ ಈಗಿನ ರಾಜ ಕೀಯ ಬೆಳೆದಿದೆ. ಇದರಿಂದ ನ್ಯಾಯಾಂಗದ ಘನತೆಗೆ ಧಕ್ಕೆಯಾಗುತ್ತಿದೆ. ಇಂಥವರನ್ನು ಹೀಗೆಯೇ ಬಿಟ್ಟರೆ ನ್ಯಾಯಾಂಗ ತನ್ನ ಪಾವಿತ್ರ್ಯತೆಯನ್ನು ಕಳೆದು ಕೊಳ್ಳಬಹುದು. ತನ್ನ ಶಕ್ತಿ ಏನೆಂಬುದನ್ನು ನ್ಯಾಯಾಲಯ ತೋರಿಸಬೇಕಾಗಿದೆ. ನ್ಯಾಯಮೂರ್ತಿಗಳನ್ನು ಹೀಯಾಳಿಸುತ್ತಿರುವ ಭ್ರಷ್ಟ ರಾಜಕಾರಣಿಗಳ ವಿರುದ್ಧ ನ್ಯಾಯಾಲಯ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿಸಿಕೊಂಡು ಭ್ರಷ್ಟ ರಾಜಕಾರಣಿಗಳ ದುರಹಂಕಾರಕ್ಕೆ ತಕ್ಕ ಶಾಸ್ತ್ರಿ ಮಾಡಬೇಕಾಗಿದೆ.
ಕಿರಣ್ ಕುಮಾರ್, ಮಂಗಳೂರು

ಗಾಡ್ಗಿಳ್ ಶಿಫಾರಸ್ಸು ಜಾರಿಗೆ ಬರುವುದೇ?
ಪಶ್ಚಿಮಘಟ್ಟ ಪ್ರದೇಶದ ಅಸಮತೋಲನಕ್ಕೆ ಕಾರಣವಾಗುತ್ತಿರುವ ವಾಣಿಜ್ಯ ಬೆಳೆಗಳಾದ ಚಹಾ, ಕಾಫಿ, ರಬ್ಬರ್ ಅನ್ನು ಘಟ್ಟ ವ್ಯಾಪ್ತಿಯಿಂದ ನಿಷೇ ಧಿಸಬೇಕೆಂಬ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದಿಂದ ನೇಮಿಸಲ್ಪಟ್ಟಿದ್ದ ಗಾಡ್ಗಿಳ್ ಸಮಿತಿಯ ವರದಿಯನ್ನು ಚಾಚೂ ತಪ್ಪದೇ ಜಾರಿ ಮಾಡುವ ಉಪಕ್ರಮವನ್ನು ಕೇಂದ್ರ ಅನುಸರಿ ಸಬೇಕು. ಚಹಾ, ಕಾಫಿ, ರಬ್ಬರ್ ಸೇರಿದಂತೆ ಕೆಲವೊಂದು ವಾಣಿಜ್ಯ ಬೆಳೆಗಳಿಗೆ ಯದ್ವಾ ತದ್ವಾ ರಸಾಯನಿಕಗಳನ್ನು ಸಿಂಪಡಿಸಿ ಸಮಸ್ತ ಜೀವ ಜಗತ್ತಿಗೆ ಹಾನಿ ಮಾಡಲಾಗುತ್ತಿದೆ. ಇದರಿಂದಾಗಿ ಪಶ್ಚಿಮಘಟ್ಟದಲ್ಲಿ ಜೀವಜಾಲಗಳ ಕೊಂಡಿ ತಪ್ಪಿ ಹೋಗಿದೆ. ಈಗಂತೂ ಶ್ರೀಮಂತರ ತೆವಲಾಗಿ ಹೋಗಿರುವ ರೆಸಾರ್ಟ್ ಸಂಸ್ಕೃತಿ ಅಲ್ಲಲ್ಲಿ ಅನುಷ್ಠಾ ನಕ್ಕೆ ಬರುತ್ತಿದೆ.
ಅರಣ್ಯದಲ್ಲಿ ಖಾಸಗಿ ಜಮೀನಿಗೆ ಹೊಂದಿ ಕೊಂಡ ತುಂಡು ಭೂಮಿಯನ್ನು ಖರೀದಿಸಿ ಆನಂತರ ಇಡೀ ಅರಣ್ಯಕ್ಕೆ ಬೇಲಿ ಹಾಕುವುದು ಮುಂದುವರಿದಿದೆ. (ಇದೇ ಕಾರಣಕ್ಕೆ ಇತ್ತೀಚೆಗೆ ಅರಣ್ಯ ಸಂರಕ್ಷಣಾಧಿ ಕಾರಿ ಮದನ ನಾಯ್ಕ್ ದಾಂಡೇಲಿಯಲ್ಲಿ ಬಲಿಯಾ ದರು) ಕೇರಳದಿಂದ ಮಲಯಾಳಿಗಳು ಚಾರ್ಮಾಡಿ ಘಾಟಿಯಲ್ಲಿ ಜಮೀನು ಖರೀದಿಸಿ ಬೇಲಿ ಹಾಕಿದ್ದಾರೆ. ಆದರೂ ಜಿಲ್ಲಾಡಳಿತ ಇವರನ್ನೆಲ್ಲಾ ಮುಟ್ಟದೆ ಕಾಡಿ ನಲ್ಲಿ ತಲೆತಲಾಂತರದಿಂದ ವಾಸ ಮಾಡುತ್ತಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುತ್ತಾರೆ. ಚಾರ್ಮಾಡಿ ಯಲ್ಲಂತೂ ಮಂಗಳೂರಿನ ಕೆಲವೊಂದು ಶ್ರೀಮಂ ತರ ಜಮೀನು ಬೇಕಾದಷ್ಟು ಇದೆ. ಅರಣ್ಯ ಇಲಾಖೆ ಇದನ್ನು ವಾಪಸ್ ಪಡೆಯಲು ಪ್ರಯತ್ನಿಸುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿರುವ ಜಮೀನಿಗೆ ಕೆಲವೊಂದು ಮಂತ್ರಿ ಗಳೇ ಅಕ್ರಮ ಅಪ್ಪಂದಿರು.
ಗಾಡ್ಗಿಳ್ ವರದಿ ಇದರ ಬಗ್ಗೆಯೂ ಗಮನ ಹರಿಸಲಿ. ಈಗಾಗಲೇ ಪ್ರಾಕೃತಿಕ ಏರುಪೇರಿನಿಂದಾಗಿ ಭೂಮಿಯ ತಾಪಮಾನ ಏರುತ್ತಿದೆ. ಕನಿಷ್ಟ ಇರುವ ಅರಣ್ಯವನ್ನಾದರೂ ಉಳಿಸೋಣ. ಹೆಚ್ಚು-ಹೆಚ್ಚು ಮರಗಳನ್ನು ಬೆಳೆಸೋಣ.
ಚಂದ್ರ, ಚಾರ್ಮಾಡಿ

ರಿಕ್ಷಾ ಚಾಲಕರು ರಾಜಕೀಯ ಪಕ್ಷಗಳ ಕೈಗೊಂಬೆಯಲ್ಲ ಎಂದು ತಿಳಿದುಕೊಳ್ಳಲಿ

Posted by JAYAKIRANA Kirana on | 0 comments | Leave a comment...


ರಿಕ್ಷಾ ಚಾಲಕ ಸಂಘಟನೆಗಳು ಎಲ್ಲಾ ಭಿನ್ನಮತ ಬದಿಗಿಟ್ಟು ಐಕ್ಯ ಚಳುವಳಿಗೆ ಮುಂದಾದಾಗ ಐವನ್ ಡಿಸೋಜ ಇದರಲ್ಲಿ ರಾಜಕೀಯ ಬೆರೆಸಲೆತ್ನಿಸಿದ್ದು ಸರಿಯೇ? ಪೆಟ್ರೋಲ್ ದರ ಏರಿಕೆ ಯುಪಿಎ ಸರಕಾರ ರಿಕ್ಷಾ ಚಾಲಕರಿಗೆ ಸೃಷ್ಟಿಸಿದ ಸಮಸ್ಯೆಯಲ್ಲವೇ? ಯಾವುದೇ ಸಂಘಗಳೊಂದಿಗೆ ಚರ್ಚಿಸದೆ, ಕಾಂಗ್ರೆಸ್ ನಾಯಕರನ್ನೇ ಉದ್ಘಾಟನೆಗೆ ಕರೆಸಿದ್ದು ಸರಿಯೇ?

ಬಿ.ವಿಷ್ಣುಮೂರ್ತಿ, ಕಾರ್ಯದರ್ಶಿ-ಸಮನ್ವಯ ಸಮಿತಿ, ದ.ಕ.ಜಿಲ್ಲಾ ರಿಕ್ಷಾ ಚಾಲಕರು
ಮಂಗಳೂರಿನಲ್ಲಿ ಆಟೋರಿಕ್ಷಾ ಚಾಲಕರ ಹಲವಾರು ಸಂಘಟನೆಗಳಿದ್ದರೂ ರಿಕ್ಷಾ ಚಾಲಕರ ಐಕ್ಯತೆಗೆ ಅವುಗಳೊಳ ಗಿನ ಭಿನ್ನಮತ ತೊಡಕಾಗಿತ್ತು. ಇದನ್ನು ನಿವಾರಿಸುವ ಆಸಕ್ತಿ ಯಿದ್ದುದರಿಂದಲೇ ಮೇ ಏಳರಂದು ಐವನ್ ಡಿಸೋಜ ಕರೆದ ಸಭೆಗೆ ಎಲ್ಲಾ ಸಂಘಟನೆಗಳು ಓಗೊಟ್ಟವು. ಅಂದಿನ ಸಭೆಯಲ್ಲಿ ಬರೇ ಜಿಲ್ಲಾಧಿಕಾರಿ ಚಲೋ ಅಲ್ಲ ಮಹಾನಗರ ಪಾಲಿಕೆ ಚಲೋ ಕೂಡಾ ನಡೆಸುವಂತೆ ಎಲ್ಲಾ ಸಂಘಟನೆಗಳು ಒಕ್ಕೊರಳಿನಿಂದ ಒತ್ತಾಯಿಸಿದಾಗ ಅದಕ್ಕೊಪ್ಪಿದ ಐವನ್ ಡಿಸೋ ಜರು ಚಳುವಳಿಯ ರೂಪುರೇಷೆಗಳಿಗೆ ಐದು ಮಂದಿಯ ಕೋರ್ ಕಮಿಟಿ ರಚಿಸಿ ಸಭೆ ವಿಸರ್ಜಿಸಿದರು.
ಮೇ೨೧ರಂದು ಕೋರ್ ಕಮಿಟಿ ಸಭೆ ಕರೆದು ಅದರಲ್ಲಿ ಮೇ೨೫ರ ಶುಕ್ರವಾರದಂದು ಚಳವಳಿಯ ಬಗ್ಗೆ ಅವರೇ ತಯಾ ರಿಸಿದ ಕಾರ್ಯಕ್ರಮ ಮುಂದಿಟ್ಟರು. ಅದರ ಬಗ್ಗೆ ಸಮನ್ವಯ ಸಮಿತಿಯ ಅಧ್ಯಕ್ಷ ಆಲಿ ಆಸನ್ ಮತ್ತಿತರರು ಸೂಚಿಸಿದ ಕುಂದುಕೊರತೆಗಳನ್ನು ತಳ್ಳಿಹಾಕಿ ಅಂದೇ ಚಳುವಳಿ ನಿರ್ಧ ರಿಸಿದರು. ಅಂದಿನ ತೀರ್ಮಾನದಂತೆ ವಿತರಿಸಲು ಮೇ೨೧ ರಂದು ಕರಪತ್ರ ಬರಲಿಲ್ಲ. ಮೇ ೨೨ರ ಪತ್ರಿಕಾ ಹೇಳಿಕೆಯನ್ನು ಕೂಡಾ ಯಾವ ಸಂಘಟನೆಗಳೂ ನೋಡಿಲ್ಲ. ಆದರೆ ಮೇ ೨೫ರ ಚಳುವಳಿಯನ್ನು ಮಹಾನಗರ ಆಟೋರಿಕ್ಷಾ ಚಾಲಕರ ಸಂಘದ ಚಳುವಳಿ ಎಂದೇ ಪತ್ರಿಕೆಗಳಲ್ಲಿ ವರದಿಯಾಯಿತು.
ಮೇ ೨೫ರಂದು ಬೆಳಿಗ್ಗೆ ಗಂಟೆ ೧೦:೩೦ಕ್ಕೆ ಚಳುವಳಿ ಉದ್ಘಾ ಟನೆಗೆ ಕಾಂಗ್ರೆಸ್ ನಾಯಕರು ಬಂದಾಗ ರಿಕ್ಷಾ ಚಾಲಕರಿಗೂ, ಇತರ ಎಲ್ಲಾ ಸಂಘಟನೆಗಳವರಿಗೂ ಆಘಾತವಾಗಿತ್ತು. ಐವನ್ ಡಿಸೋಜರು ಯಾರಲ್ಲೂ ಕೇಳದೆ ಕೈಗೊಂಡ ನಿರ್ಧಾರ ಅದಾಗಿತ್ತು. ಮೆರವಣಿಗೆ ಆರಂಭಗೊಂಡಾಗ ರಿಕ್ಷಾ ಚಾಲ ಕರು ಪಾರ್ಕ್ ರಚನೆ ಬೇಡಿಕೆಯ ಜೊತೆ ಆಗ ತಾನೇ ಒಂದೂ ವರೆ ದಿನದ ಹಿಂದೆ ಕೇಂದ್ರದ ಯುಪಿಎ ಸರಕಾರ ವಿಧಿಸಿದ ಪೆಟ್ರೋಲ್ ದರ ಏರಿಕೆಯ ವಿರುದ್ಧ ಕೂಡಾ ಘೋಷಣೆ ಕೂಗಿದರು.
ಇದು ಉದ್ಘಾಟನೆಗೆ ಬಂದ ಒಂದೂಂದೇ ಕಾಂಗ್ರೆಸ್ ನಾಯಕರನ್ನು ಸ್ಥಳ ಖಾಲಿ ಮಾಡುವಂತೆ ವಾತಾವರಣ ಸೃಷ್ಟಿ ಸಿತು. ಐವನ್ ಡಿಸೋಜರು ಎಷ್ಟೇ ವಿನಂತಿಸಿದ್ದರೂ ಲೆಕ್ಕಿಸದೆ ರಿಕ್ಷಾ ಚಾಲಕರು ಪೆಟ್ರೋಲ್ ದರ ಏರಿಕೆಯನ್ನು ಖಂಡಿಸಿ, ಜೋರಾಗಿ ಘೋಷಣೆ ಕೂಗಿದರು. ನಗರಪಾಲಿಕೆಯ ಜಂಟಿ ಆಯುಕ್ತರಿಗೆ ಅರ್ಪಿಸಿದ ಐವನ್ ಡಿಸೋಜ ತಯಾರಿಸಿದ ಮನವಿ ಕೂಡಾ ಅವರ ಮನೋಭಾವವನ್ನು ಪ್ರತಿಬಿಂಬಿಸು ವಂತಿತ್ತು. ಮನವಿಯ ಕೊನೆಗೆ ಎಲ್ಲಾ ಸಂಘಟನೆಗಳ ನಾಯ ಕರ ಸಹಿ ಬೇಕು. ಕೇವಲ ತನ್ನ ಸಹಿ ಮಾತ್ರ ಇದ್ದರೆ ಸಾಲದೆಂಬ ಐಕ್ಯತೆಯ ಪ್ರಜ್ಞೆ ಕೂಡಾ ಅವರಿಗೆ ಇಲ್ಲದೆ ಹೋಯಿತು.
ಮಹಾನಗರ ಪಾಲಿಕೆ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇ ರಿಯೆದುರು ಆಲಿ ಹಸನ್, ಎಲ್‌ಟಿ ಸುವರ್ಣ, ಅಶೋಕ್ ಕುಮಾರ್ ಶೆಟ್ಟಿ, ಬಿ.ವಿಷ್ಣುಮೂರ್ತಿ ಮುಂತಾದ ಎಲ್ಲಾ ಸಂಘಟನೆಗಳ ನಾಯ ಕರು ಭಾಷಣ ಮಾಡಿದ್ದರು. ಹೆಚ್ಚಿನ ಪತ್ರಿಕೆಗಳು ಕೇವಲ ಎಲ್‌ಟಿ ಸುವರ್ಣ ಮತ್ತು ಐವನ್ ಡಿಸೋಜರ ಬಗ್ಗೆ ಮಾತ್ರ ಬರೆದವು.
ಮಂಗಳೂರು ನಗರದಲ್ಲಿ ೩೨೦ಕ್ಕೂ ಹೆಚ್ಚು ಪಾರ್ಕ್‌ಗಳ ರಚ ನೆಗೆ ಒತ್ತಾಯಿಸಿ, ಕಳೆದ ೧೫ ವರ್ಷಗಳಿಂದ ದ.ಕ. ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘ ಹಾಗೂ ಕಳೆದ ಆರೇಳು ವರ್ಷಗಳಿಂದ ಸಮ ನ್ವಯ ಸಮಿತಿಯ ನೇತೃತ್ವದಲ್ಲಿರುವ ಎಲ್ಲಾ ಸಂಘಗಳು ನಿರಂತರ ವಾಗಿ ಹಲವಾರು ಬಾರಿ ಮನವಿ ನೀಡಿ, ಒತ್ತಾಯಿಸುತ್ತಾ ಬಂದಿವೆ. ಈ ಚಳುವಳಿಯು ನಿರ್ಣಾಯಕ ಹಂತ ತಲುಪಿ, ಕಳೆದ ಜುಲೈ ೨೦೧೧ರಲ್ಲಿ ಪಾಲಿಕೆಯ ಅಧಿಕಾರಿಗಳು ಇದಕ್ಕೆ ಸ್ಪಂದಿಸಲಾರಂಭಿ ಸಿದರು.
ಇದರ ಪರಿಣಾಮವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಎರಡು ಸಭೆಗಳು ನಡೆದು ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ಪಾರ್ಕ್ ರಚನಾ ಸಮಿತಿ ಅಸ್ತಿತ್ವಕ್ಕೆ ಬಂತು. ಅದರಂತೆ ಅಕ್ಟೋಬರ್ ೧೦ರೊ ಳಗೆ ಪಾರ್ಕ್‌ಗೆ ಬೇಕಾದ ಸ್ಥಳ ಗುರುತಿಸಿ ತಿಳಿಸಲು ಎಲ್ಲಾ ಸಂಘಗ ಳಿಗೆ ತಿಳಿಸಲಾಯಿತು. ದ.ಕ. ಆಟೋರಿಕ್ಷಾ ಚಾಲಕರ ಸಂಘ (ರಿ) ಮತ್ತು ನಾಲ್ಕು ಸಂಘಟನೆಗಳನ್ನೊಳಗೊಂಡ ಸಮನ್ವಯ ಸಮಿತಿ ಗಳ ವತಿಯಿಂದ ಮಾತ್ರ ೩೨೦ ಪಾರ್ಕ್‌ಗಳ ರಚನೆಗೆ ಒತ್ತಾಯಿಸಿ, ಪಾಲಿಕೆಗೆ ಮನವಿ ಬಂದ ಹಿನ್ನೆಲೆಯಲ್ಲಿ ಅಕ್ಟೋಬರ್ ಕೊನೆಯಲ್ಲಿ ಪಾಲಿಕೆಯ ಟೌನ್ ಪ್ಲಾನಿಂಗ್ ವಿಭಾಗ, ರೆವಿನ್ಯೂ ವಿಭಾಗಗಳು, ಸಂಚಾರಿ ಪೊಲೀಸ್ ಮತ್ತು ಸಮನ್ವಯ ಸಮಿತಿಯ ಪ್ರತಿನಿಧಿಗ ಳಿದ್ದು ಮನವಿಯಲ್ಲಿದ್ದ ಎಲ್ಲಾ ಪಾರ್ಕ್‌ಗಳನ್ನು ಪರಿಶೀಲನೆ ನಡೆಸ ಲಾಗಿತ್ತು. ಈ ಸಂದರ್ಭದಲ್ಲಿ ಐವನ್ ಡಿಸೋಜರ ಸಂಘವಾ ಗಲೀ, ಃಒS,ಅIಖಿU ಸಂಘಗಳಾಗಲೀ ಸ್ಪಂದಿಸಿಲ್ಲವೆಂಬುದು ಗಮನಾರ್ಹ.
ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಪರಿಶೀಲನೆ ನಡೆಸಿ ಪಾಲಿಕೆಯ ಸಭೆಯಲ್ಲಿ ಅಂಗೀಕರಿಸಿ, ಜಿಲ್ಲಾಧಿ ಕಾರಿಯವರಿಗೆ ಕಳುಹಿಸಿದರೆ, ಅವರು ಪಾರ್ಕ್ ಅಧಿಕೃತಗೊಳಿ ಸುವ ಪ್ರಕಟಣೆಯಷ್ಟೇ ಬಾಕಿಯಿದೆ. ರಿಕ್ಷಾ ಚಾಲಕ ಸಂಘಟನೆ ಗಳು ಎಲ್ಲಾ ಭಿನ್ನಮತ ಬದಿಗಿಟ್ಟು ಐಕ್ಯ ಚಳವಳಿಗೆ ಮುಂದಾ ದಾಗ ಐವನ್ ಡಿಸೋಜ ಇದರಲ್ಲಿ ರಾಜಕೀಯ ಬೆರೆಸಲೆತ್ನಿ ಸಿದ್ದು ಸರಿಯೇ? ಪೆಟ್ರೋಲ್ ದರ ಏರಿಕೆ ಯುಪಿಎ ಸರಕಾರ ರಿಕ್ಷಾ ಚಾಲಕರಿಗೆ ಸೃಷ್ಟಿಸಿದ ಸಮಸ್ಯೆಯಲ್ಲವೇ? ಯಾವುದೇ ಸಂಘಗಳೊಂದಿಗೆ ಚರ್ಚಿಸದೆ, ಕಾಂಗ್ರೆಸ್ ನಾಯಕರನ್ನೇ ಉದ್ಘಾ ಟನೆ ಕರೆಸಿದ್ದು ಸರಿಯೇ? ಈ ನಾಯಕರು ಆಡಳಿತದಲ್ಲಿದ್ದಾಗ ೧೯೯೭ರಿಂದೀಚೆಗೆ ೧೦ ವರ್ಷಗಳಲ್ಲಿ ಯಾಕೆ ಪಾರ್ಕ್ ರಿಜಿಸ್ಟ್ರೇ ಷನ್ ಮಾಡಿಲ್ಲ? ಉತ್ತರಿಸುವರೇ?
ಚಳುವಳಿಯಲ್ಲಿ ಯಾರಾದರೂ ಪಟಾಕಿ ಸಿಡಿಸಿ, ಬ್ಯಾಂಡ್ ಬಾರಿಸಿ ಸಂಭ್ರಮಿಸುತ್ತಾರೆಯೇ? ಇದೇನು ವಿಜಯೋತ್ಸವವೇ? ಹಾಗಿದ್ದರೆ ಇದರ ಹಿಂದಿನ ತಂತ್ರಗಾರಿಕೆ ಏನು? ಮನವಿಯ ಅಂತ್ಯದಲ್ಲಿ ಯಾಕೆ ಎಲ್ಲಾ ಸಂಘಟನೆಗಳ ನಾಯಕರ ಹೆಸರು, ಸಹಿ ಇಲ್ಲ. ಐವನ್ ಡಿಸೋಜರದ್ದು ಮಾತ್ರ ಯಾಕೆ?
 ಚಳುವಳಿಯ ಖರ್ಚುವೆಚ್ಚಗಳನ್ನು ಭರಿಸಲು ಎಲ್ಲಾ ಸಂಘಗಳು ಮುಂದೆ ಬರೆದಿದ್ದರೂ ತಾನೇ ಎಲ್ಲಾ ಖರ್ಚು ಮಾಡಿದ್ದಾಗಿ ಘೋಷಿಸಿದ್ದು ಸರಿಯೇ? ಈ ಎಲ್ಲಾ ಪ್ರಶ್ನೆಗಳ ಹಿನ್ನೆಲೆಯಲ್ಲಿ ಚಳುವಳಿ ಮುಗಿದ ಕೂಡಲೇ ಕೋರ್ ಕಮಿಟಿ ಕರೆಯಲು ಒಪ್ಪಿದ ಐವನ್ ಡಿಸೋಜರು ಯಾಕೆ ಈವರೆಗೂ ಕರೆಯಲಿಲ್ಲ? ಈ ಚಳುವಳಿಯ ಪ್ರಾಮಾಣಿಕ ನಾಯಕತ್ವ ವಹಿಸಿ ದವರಿಗೆ ಐವನ್ ಡಿಸೋಜರು ಈ ಪ್ರಶ್ನೆಗಳಿಗೆ ಉತ್ತರಿಸಲಿ. ಇಲ್ಲವಾದರೆ ಮೇ ೨೫ರಂದು ಎಲ್ಲಾ ಸಂಘಟನೆಗಳ ಮತ್ತು ಪಾರ್ಕ್ ಸಮಿತಿಗಳ ಜಂಟಿ ನಾಯಕತ್ವದಲ್ಲಿ ನಡೆದ ಚಳುವಳಿ ಯನ್ನು ತನ್ನ ನಾಯಕತ್ವದಲ್ಲಿ ನಡೆದ ಹೋರಾಟವೆಂದು ಬಿಂಬಿ ಸಿದ್ದು ತಪ್ಪು ಎನ್ನುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ.

ಸದಾನಂದಗೌಡರಿಗೆ ಅದರಲ್ಲಿ ನಂಬಿಕೆ ಇಲ್ಲ; ಆದರೆ ಕಾರ್ಯಕರ್ತರಿಗೆ?

Posted by JAYAKIRANA Kirana on | 0 comments | Leave a comment...


ಕರ್ನಾಟಕದ ಸಿಂಹಾಸನ ಎನ್ನುವುದು ಎಲ್ಲಾ ಪಕ್ಷಕ್ಕೂ ಮುಳ್ಳಿನ ಹಾಸಿಗೆ ಆಗಿಬಿಟ್ಟಿದೆ. ಇಂತಹಾ ಮುಳ್ಳಿನ ಹಾಸಿಗೆಯ ಮೇಲೆ ಏರಲು ಯಾವ ವಿಪಕ್ಷೀಯನೂ ಸದ್ಯದ ಮಟ್ಟಿಗೆ ಸಿದ್ಧನಿಲ್ಲ. ಯಾರಾದರು ಇದಕ್ಕೆ ಮನಸ್ಸು ಮಾಡಿದಲ್ಲಿ. ಆತ ಸಿಂಹಾಸ ನವನ್ನು ಏರುವ ಮೊದಲೇ ಅತನನ್ನು ಕೆಡವಿ ಹಾಕಲು ತಂತ್ರಗಾ ರಿಕೆ, ಕುತಂತ್ರಿಗಳ ಗುಂಪು ಸಿದ್ಧವಾಗುತ್ತದೆ. ಮುಖ್ಯಮಂತ್ರಿಯಾ ಗಲು ಇಚ್ಛಿಸುವ ವ್ಯಕ್ತಿಯ ಮೂಗುದಾರ ಹಿಡಿದವರು ಮುಖ್ಯಮಂತ್ರಿ ಸಂಪಾದಿಸುವುದಕ್ಕಿಂತ ಹೆಚ್ಚು ಸಂಪಾದನೆಯನ್ನು ಮಾಡಲು ಹಾತೊರೆಯುತ್ತಿರುತ್ತಾರೆ!

ಅಂತೂ ಇಂತೂ ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಬಣ್ಣಿಸಲಾದ ಕರ್ನಾಟಕದ ಬಿಜೆಪಿ ಸರಕಾರಕ್ಕೆ ನಾಲ್ಕು ವರ್ಷಗಳು ಸಂದಿವೆ. ಪ್ರಜಾಪ್ರಭುತ್ವ ಎಂಬ ವ್ಯವಸ್ಥೆ ಯಾವ ಪ್ರಮಾಣದಲ್ಲಿ ಕೆಟ್ಟು ಹೋಗಿದೆ ಎಂಬುದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಒಂದು ಒಳ್ಳೆಯ ಉದಾಹರಣೆಯಾಗಿದೆ. ಪ್ರಜಾಪ್ರಭುತ್ವ ಅಂದರೆ ಅದರಲ್ಲಿ ಬಿಜೆಪಿ ಮಾತ್ರ ಬರುವುದಲ್ಲ. ಕಾಂಗ್ರೆಸ್ ಮತ್ತಿ ತರ ಪಕ್ಷಗಳೂ ಸೇರುತ್ತವೆ. ಒಂದು ಪಕ್ಷದೊಳಗೆ ಸಾಕಷ್ಟು ಅಸಮಾಧಾನ, ಪರಸ್ಪರ ಹೋರಾಟ, ಮುಸುಕಿನ ಗುದ್ದಾಟ ನಡೆಯುತ್ತಿದ್ದರೂ. ಇದು ಬಹಿರಂಗವಾಗಿ ಪ್ರಕಟವಾಗಿ ರಾಜ್ಯವನ್ನಾಳುತ್ತಿರುವ ಪಕ್ಷ ಇಂದು ಒಡೆಯುತ್ತದೆ, ನಾಳೆ ಒಡೆಯುತ್ತದೆ. ಈ ಕ್ಷಣದಲ್ಲಿ ಸರಕಾರ ಬಿದ್ದಾಯಿತು. ನಾಳೆಯಿಂದ ಇನ್ನೊಂದು ಸರಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಅನಿಸಿದರೂ ಪರಿಸ್ಥಿತಿ ಯಾವ ಬದಲಾವಣೆ ಯನ್ನೂ ಕಾಣುವುದಿಲ್ಲ. ಅದೇ ಪಕ್ಷ. ಅದೇ ಮುಖ ಅದೇ, ಮಾತು ಅದೇ, ವರಸೆ.
ಪಕ್ಷವೊಂದು ಬಿದ್ದು ಹೋಗಿ ಹೊಸ ಸರಕಾರ ರಚನೆ ಯಾಗುವುದಕ್ಕೆ. ಅಥವಾ ರಾಜ್ಯ ಆಳುವ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುವುದಕ್ಕೆ ಕೆಲವೊಂದು ಬಾರಿ ವಿರೋಧ ಪಕ್ಷಗಳೂ ಹಾತೊರೆಯುವುದುಂಟು. ಪ್ರಜಾ ಪ್ರಭುತ್ವದ ವ್ಯವಸ್ಥೆಯೊಳಗೆ ಏನೆಲ್ಲಾ ಕುತಂತ್ರ ಮಾಡಿ ಅಧಿಕಾರ ಗಳಿಸುವುದೂ ಉಂಟು. ಆದರೆ ಕರ್ನಾಟಕ ಸರಕಾರದ ಇತ್ತೀಚಿಗಿನ ಮಹಾ ಬಿಕ್ಕಟಿನ ಪರಿಸ್ಥಿತಿಯ ಲಾಭವನ್ನು ಇಲ್ಲಿರುವ ವಿರೋಧ ಪಕ್ಷಗಳು ಪಡೆದುಕೊಳ್ಳಲು ಪ್ರಯತ್ನಿಸುತ್ತಿಲ್ಲ. ಆಳುವ ಪಕ್ಷದ ಬಗ್ಗೆ ತೀವ್ರವಾದ ಟೀಕೆ ಟಿಪ್ಪಣಿಗಳನ್ನು ಮಾಡುವುದರ ಹೊರತು ಅಧಿಕಾರವನ್ನು ತನ್ನದಾಗಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ವಿಪಕ್ಷಗಳು ಮಾಡುತ್ತಿಲ್ಲ. ಹಾಗಾದರೆ ಕರ್ನಾಟಕದ ಬಿಜೆಪಿಯೇತರ ಪಕ್ಷಗಳು ಅಷ್ಟೂ ಸಾಚಾ, ಪ್ರಾಮಾಣಿಕ ಪಕ್ಷಗಳೇ? ಇವರಿಗೆ ಹೀಗೆಲ್ಲಾ ವಾಮಮಾರ್ಗದ ಅಧಿಕಾರ ಬೇಡ. ನೇರವಾಗಿ ಚುನಾವಣೆ ಮೂಲಕ ಅಧಿಕಾರ ಪಡೆಯುತ್ತೇವೆ ಎಂದು ಸುಮ್ಮನೆ ಕುಳಿತಿದ್ದಾರೆಯೇ?
ನಿಜವಾಗಿ ನೋಡಿದಲ್ಲಿ ಅಡಗಿರುವ ಸತ್ಯ ಏನೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಬಂಗಾರದ ಹರಿವಾಣದಲ್ಲಿ ರಾಜ್ಯದ ಗದ್ದುಗೆ ಎಂಬ ಫಲವನ್ನು ಇಟ್ಟು ಹೂಹಾರ ಹಿಡಿದುಕೊಂಡು ನಿಂತರೂ ಯಾವ ಗಂಡುಮಗನೂ ಕೊರಳೊಡ್ಡುವುದಕ್ಕೆ ಸಿದ್ಧನಿಲ್ಲ. ಯಾಕೆಂದರೆ ಪರಿ ಸ್ಥಿತಿ ಅಷ್ಟು ಕೆಟ್ಟು ಹೋಗಿದೆ. ಕರ್ನಾಟಕದ ಸಿಂಹಾಸನ ಎನ್ನುವುದು ಎಲ್ಲಾ ಪಕ್ಷಕ್ಕೂ ಮುಳ್ಳಿನ ಹಾಸಿಗೆ ಆಗಿಬಿಟ್ಟಿದೆ. ಇಂತಹಾ ಮುಳ್ಳಿನ ಹಾಸಿಗೆಯ ಮೇಲೆ ಏರಲು ಯಾವ ವಿಪಕ್ಷೀಯನೂ ಸದ್ಯದ ಮಟ್ಟಿಗೆ ಸಿದ್ಧನಿಲ್ಲ. ಯಾರಾದರು ಇದಕ್ಕೆ ಮನಸ್ಸು ಮಾಡಿದಲ್ಲಿ. ಆತ ಸಿಂಹಾಸ ನವನ್ನು ಏರುವ ಮೊದಲೇ ಅತನನ್ನು ಕೆಡವಿ ಹಾಕಲು ತಂತ್ರಗಾ ರಿಕೆ, ಕುತಂತ್ರಿಗಳ ಗುಂಪು ಸಿದ್ಧವಾಗುತ್ತದೆ. ಮುಖ್ಯಮಂತ್ರಿಯಾ ಗಲು ಇಚ್ಛಿಸುವ ವ್ಯಕ್ತಿಯ ಮೂಗುದಾರ ಹಿಡಿದವರು ಮುಖ್ಯಮಂತ್ರಿ ಸಂಪಾದಿಸುವುದಕ್ಕಿಂತ ಹೆಚ್ಚು ಸಂಪಾದನೆಯನ್ನು ಮಾಡಲು ಹಾತೊರೆ ಯುತ್ತಿರುತ್ತಾರೆ!
ಮಾನ್ಯ ಸದಾನಂದ ಗೌಡರೂ ಈಗ ಮುಖ್ಯಮಂತ್ರಿ ಗಾದಿಯ ಮೇಲೆ ‘ಮರ್ಯಾದೆಗೋಸ್ಕರ’ ಪೇಚಾಡುತ್ತಿರುವುದು ಕಂಡು ಬರು ತ್ತದೆ. ಇಲ್ಲವಾದಲ್ಲಿ ಇಂದಿನ ದಿನಗಳಲ್ಲಿ ಅಧಿಕಾರ ಗ್ರಹಣ ಮಾಡಿದ ವರ್ಷಾಚರಣೆಯನ್ನು ಮಾಡಲು ಹಿಂಜರಿಯುವ ಮೂರ್ಖನಾದರೂ ಯಾರು? ನನಗೆ ಇಂಥಹುದರಲ್ಲಿ ನಂಬಿಕೆ ಇಲ್ಲ ವರ್ಷಾಚರಣೆ ಇದೆಲ್ಲಾ ಅರ್ಥಹೀನ ಎಂದು ಸದಾನಂದ ಗೌಡರು ಸಂಭಾವಿತನಂತೆ ಹೇಳಬ ಹುದು. ಆದರೆ ಈ ಮಾತುಗಳ ಹಿಂದೆ ಅಡಗಿರುವ ಸತ್ಯ ಇಂದಿನ ಪರಿ ಸ್ಥಿತಿಯಲ್ಲಿ ಯಾವ ಮೂರ್ಖನಿಗೂ ಅರ್ಥವಾಗುತ್ತದೆ.
ಕರ್ನಾಟಕದಲ್ಲಿ ಬಿಜೆಪಿ ಸರಕಾರ ಈಗ ಹೆಜ್ಜೆ ಹೆಜ್ಜೆಗೂ ಮುಜುಗರ ವನ್ನು ಎದುರಿಸುತ್ತಿದೆ. ಸಣ್ಣ ಪುಟ್ಟ ಸಭೆ ಸಮಾರಂಭಗಳಿಂದ ಹಿಡಿದು ಬೃಹತ್ ಕಾರ್ಯಕ್ರಮಗಳಲ್ಲೂ ಬಿಜೆಪಿ ನಾಯಕರು ಮುಜುಗರ ಪಡುವ ಪ್ರಸಂಗಗಳು ನಡೆಯುತ್ತಿವೆ. ಇಂತಹಾ ಸಾರ್ವಜನಿಕ ಕಾರ್ಯಕ್ರಮಗಳು ಮಾತ್ರವಲ್ಲ ಬಿಜೆಪಿ ನಾಯಕರುಗಳ ಖಾಸಗೀ ಕಾರ್ಯಕ್ರಮಗಳಲ್ಲೂ ಅವ ರಿಗೆ ಮುಜುಗರ ತರುವ ಘಟನೆಗಳು ನಡೆಯುತ್ತಿವೆ. ಹಾಗಿರುವಾಗ ಈ ಸಂದರ್ಭದಲ್ಲಿ ನಾಲ್ಕನೇ ವರ್ಷದ ಆಚರಣೆಯನ್ನು ಮಾಡಿದರೆ ಅದರಲ್ಲಿ ಖಂಡಿತವಾಗಿಯೂ ಸಂಭವಿಸುವುದು ಮುಜುಗರವೇ ಹೊರತು ಸಂಭ್ರಮ ವಲ್ಲ.
ಇಂತಹಾ ಒಂದು ಕಾರ್ಯಕ್ರಮ ಬಿಜೆಪಿಯ ಭಿನ್ನರಿಗೆ ತಮ್ಮ ಬಲ ವನ್ನು ಪ್ರದರ್ಶನ ಮಾಡುವ ಕಣವಾಗಿ ಪರಿವರ್ತನೆಯಾಗಬಹುದು. ವೇದಿ ಕೆಗಳಲ್ಲಿ ಪರಸ್ಪರ ಕಸರೆರಚಾಟ ನಡೆಯಬಹುದು. ಸದಾನಂದ ಗೌಡರು ಅಧಿಕಾರ ವಹಿಸಿಕೊಂಡು ತನ್ನ ಮಾತು ತಪ್ಪಿ ನಡೆಯುತ್ತಿದ್ದಾರೆ ಎಂದು ಯಡಿಯೂರಪ್ಪನವರಿಗೆ ಅನಿಸಿದಾಗ ಅವರೊಂದು ಕಡೆ ‘ನಾನು ರಾಜ್ಯ ಆಳುತ್ತಿರುವಾಗ ರಾಜ್ಯಕ್ಕೆ ಬರ ಬಂದಿರಲಿಲ್ಲ’ ಎಂದು ಸದಾನಂದ ಗೌಡರ ಹೆಗಲ ಮೇಲೆ ಗೂಬೆ ಕೂರಿಸುವ ಮಾತುಗಳನ್ನು ಆಡಿದ್ದರು! ಇಂತಹಾ ಟೀಕೆ, ಟಿಪ್ಪಣಿ, ಕುಟುಕು, ಚಿವುಟುಗಳಿಗೆ ಬಿಜೆಪಿಯ ನಾಲ್ಕನೇ ವರ್ಷದ ಆಧಿಕಾರದ ಆಚರಣೆ ವೇದಿಕೆಯಾಗಬಹುದೆಂದೇ ಮುಖ್ಯಮಂತ್ರಿ ಸದಾನಂದ ಗೌಡರು ‘ನನಗೆ ಅಂತಹದರಲ್ಲೆಲ್ಲಾ ವಿಶ್ವಾಸವಿಲ್ಲ’ ಎಂದು ಹೇಳಿ ಜಾಣತನ ಮೆರೆದಿದ್ದಾರೆ.
ವರ್ಷಾಚರಣೆಯ ಉತ್ಸಾಹ ಬಿಜೆಪಿ ಕಾರ್ಯಕರ್ತರಿಗೂ ಇದ್ದಂತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತರೇ ಹೇಳುವಂತೆ ಯಾವ ಬಿಜೆಪಿ ಗನಿಗೂ ತಲೆ ಎತ್ತಿ ತಿರುಗಾಡುವ, ಮಾತನಾಡುವ ಧೈರ್ಯವಿಲ್ಲ.
ನಿಜವಾಗಿಯೂ ನೋಡಿದರೆ ವರ್ಷಾಚರಣೆಯಂತಹಾ ಸಂದರ್ಭಗಳು ಪಕ್ಷಗಳ ಪಾಲಿಗೆ ಸುವರ್ಣಾವಕಾಶವಾಗಿರುತ್ತದೆ. ಅದರಲ್ಲೂ ವಿವಾದಗಳೇನೇ ಇರಲಿ ಬಿಜೆಪಿಯಂತಹಾ ಪಕ್ಷಕ್ಕೆ ದಕ್ಷಿಣ ಭಾರತದ ಕರ್ನಾಟಕದಲ್ಲಿ ನಾಲ್ಕು ವರ್ಷ ಪೂರೈಸಿದ ಅವಧಿ ಸುವರ್ಣ ಮಹೋತ್ಸವದಂತಹಾ ಉತ್ಸವವಾಗ ಬೇಕಾಗಿತ್ತು. ಯಾಕೆಂದರೆ ಐದನೇ ವರ್ಷದಲ್ಲಿ ಚುನಾವಣೆಯ ಕಾವೇರುವುದ ರಿಂದ ಆ ಸಂದರ್ಭದಲ್ಲಿ ವರ್ಷಾಚರಣೆಗೆ ಸಂಪೂರ್ಣವಾದ ಅವಕಾಶ ದೊರೆ ಯಲಾರದು. ಬಿಜೆಪಿ ಕಾರ್ಯಕರ್ತರಿಗೆ ಜನರನ್ನು ಮುಟ್ಟುವುದಕ್ಕೆ ಇಂತಹಾ ಸಂದರ್ಭ ಒಂದು ಸದಾವಕಾಶವಾಗುತ್ತಿತ್ತು. ಆದರೆ ತಮ್ಮ ನಾಯಕರ ದೆಸೆಯಿಂ ದಾಗಿ ತಮ್ಮ ಸಾಂಪ್ರದಾಯಿಕ ಮತದಾರರ ನಡುವೆಯೇ ತಲೆ ತಗ್ಗಿಸಿ ನಿಲ್ಲಬೇ ಕಾದ ಪರಿಸ್ಥಿತಿ ಕಾರ್ಯಕರ್ತರಿಗೆ ಒದಗಿ ಬಂದಿದೆ.
ಇಂದಿನ ಪೀಳಿಗೆಯ ಬಿಜೆಪಿಯ ಹೈಫೈ ಕಾರ್ಯಕರ್ತರು ಇಂತಹಾ ವಿಚಾರಗಳನ್ನು ತಲೆಗೆ ಹಚ್ಚಿಕೊಂಡಿರಲಾರರು. ಆದರೆ ಬಿಜೆಪಿ ಎಂಬ ಪಕ್ಷಕ್ಕೆ ಅನ್ನ ನೀರು ಬಿಟ್ಟು, ರಾತ್ರಿ ಹಗಲು ನಿದ್ದೆ ಕೆಟ್ಟು ಶ್ರಮವನ್ನು ದಾನ ಮಾಡಿ ಈಗ ಮೂಲೆ ಗುಂಪಾದವರಂತೂ ಬಿಜೆಪಿ ಎಂಬ ಪಕ್ಷದ ದೈನೇಸಿ ಪರಿಸ್ಥಿತಿ ನೋಡಿ ಗರ ಬಡಿದವರಂತಾಗಿದ್ದಾರೆ.

ಕೃಷ್ಣಾಪುರದಲ್ಲಿ ಶಾಂತಿ ಕಾಪಾಡಿ

Posted by JAYAKIRANA Kirana on | 0 comments | Leave a comment...


ಈ ಪ್ರದೇಶದಿಂದ ಹಿಂದೂಗಳನ್ನು ಸಂಪೂರ್ಣವಾಗಿ ಹೊಡೆದೋಡಿಸಿ ತಮ್ಮ ಅಕ್ರಮ ಹಾಗೂ ದೇಶದ್ರೋಹಿ ಚಟುವಟಿಕೆಗಳ ಕಾರಸ್ಥಾನವನ್ನಾಗಿ ಮಾಡುವ ಉದ್ದೇಶವನ್ನು ಕೆಲವು ಗುಂಪುಗಳು ಹೊಂದಿರುವಂತೆ ಕಂಡು ಬರುತ್ತಿದೆ.

ನೊಂದ ನಾಗರಿಕ, ಕೃಷ್ಣಾಪುರ
ಇತ್ತೀಚೆಗೆ ಕಾಟಿಪಳ್ಳ ಮತ್ತು ಕೃಷ್ಣಾಪುರ ಪ್ರದೇಶದಲ್ಲಿ ಸತತವಾಗಿ ಹಿಂದುಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿರುವುದು ಕಂಡು ಬರು ತ್ತಿದೆ. ಕೃಷ್ಣಾಪುರದ ವ್ಯಕ್ತಿಯೊಬ್ಬರು ಬೆಳಿಗ್ಗೆ ಹಾಲು ತರುತ್ತಿದ್ದಾಗ ಅವರ ಮೇಲೆ ಮುಸುಕುಧಾರಿ ವ್ಯಕ್ತಿಗಳು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದರು. ಇದಕ್ಕಿಂತ ಸ್ವಲ್ಪ ಸಮಯದ ಮೊದಲು ಓರ್ವರಿಗೆ ಕ್ಷುಲ್ಲಕ ನೆಪ ಒಡ್ಡಿ ರಾಡ್ ನಿಂದ ಹಲ್ಲೆ ನಡೆಸಲಾಯಿತು. ಅದಕ್ಕಿಂತ ಮೊದಲು ವಿಶ್ವಕರ್ಮ ಜನಾಂಗದ ವ್ಯಕ್ತಿಯೋರ್ವರ ಮೇಲೆ ವಿನಾ ಕಾರಣ ಹಲ್ಲೆ ನಡೆಸಲಾಗಿತ್ತು.
ಇಷ್ಟೆಲ್ಲಾ ನಡೆದರೂ ಇಲ್ಲಿ ಯಾವುದೇ ರಾಜಕೀಯ ಪಕ್ಷಗಳಾಗಲೀ, ಸಂಘಟ ನೆಗಳಾಗಲೀ, ಪೊಲೀಸ್ ಇಲಾಖೆಯವರಾಗಲಿ ಹಿಂದುಗಳ ರಕ್ಷಣೆಗೆ ಬರುತ್ತಿಲ್ಲ. ಹಿಂದುಗಳು ಅಲ್ಪಸಂಖ್ಯಾತರಾಗಿದ್ದ ಪ್ರದೇಶಗಳಲ್ಲಿ ಇಂತಹಾ ಪ್ರಸಂಗಗಳು ಹೆಚ್ಚಾಗಿ ನಡೆಯುತ್ತಿದ್ದು. ಇಲ್ಲಿ ಹಿಂದುಗಳು ಭೀತಿಯ ವಾತಾವರಣವನ್ನು ಎದುರಿಸುತ್ತಿದ್ದಾರೆ.
ಮೊದ ಮೊದಲು ಬ್ಯಾನರ್ ಹರಿಯುವುದು, ದೈವಸ್ಥಾನಗಳಿಗೆ ದಾಳಿ ಮಾಡುವುದು ಇತ್ಯಾದಿ ಕೃತ್ಯಗಳು ನಡೆಯುತ್ತಿದ್ದವು. ಶಾಂತಿ ಕದಡಬಾರದು ಎಂಬ ದೃಷ್ಟಿಯಿಂದ ಸಂಯಮದಿಂದಿದ್ದ ಹಿಂದುಗಳ ಮೇಲೆ ಈಗ ರಾಡ್, ತಲವಾರುಗಳಿಂದ ಮಾರಣಾಂತಿಕ ಹಲ್ಲೆ ನಡೆಯುವವರೆಗೆ ಮುಂದುವರಿದಿದೆ.
ಈ ಪ್ರದೇಶದಿಂದ ಹಿಂದೂಗಳನ್ನು ಸಂಪೂರ್ಣವಾಗಿ ಹೊಡೆದೋಡಿಸಿ ತಮ್ಮ ಅಕ್ರಮ ಹಾಗೂ ದೇಶದ್ರೋಹಿ ಚಟುವಟಿಕೆಗಳ ಕಾರಸ್ಥಾನವನ್ನಾಗಿ ಮಾಡುವ ಉದ್ದೇಶವನ್ನು ಕೆಲವು ಗುಂಪುಗಳು ಹೊಂದಿರುವಂತೆ ಕಂಡು ಬರುತ್ತಿದೆ. ಇವರಿಗೆ ಇಲ್ಲಿ ಹೇಗಾದರೂ ಮಾಡಿ ಕೋಮು ಗಲಭೆ ಮಾಡುವ ಉದ್ದೇಶ ಇದ್ದಂತೆ ಕಂಡು ಬರುತ್ತಿದೆ.
ಇಲ್ಲಿನ ಹಿಂದು ಸಂಘಟನೆಗಳು ನಾಗಮಂಡಲ, ಬ್ರಹ್ಮಕಲಶ ಮುಂತಾದ ಧಾರ್ಮಿಕ ಡೊಂಬರಾಟಗಳಲ್ಲಿ ಮುಳುಗಿ ಹೋಗಿದ್ದಾರೆ. ಇಲ್ಲಿ ಹೆಚ್ಚಿನ ಮುಸ್ಲಿ ಮರೂ ಶಾಂತಿ ಕದಡುವ ಕೆಲಸವನ್ನು ಮಾಡುವುದಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದಾರೆ. ಹಿಂದಿನಿಂದಲೂ ಇಲ್ಲಿ ಹಿಂದುಗಳೊಂ ದಿಗೆ ಸಹಬಾಳ್ವೆ ನಡೆಸಿಕೊಂಡ ಬಂದ ಮುಸ್ಲಿಮರು ಅನೇಕ ಮಂದಿ ಇದ್ದಾರೆ. ಅವರ ಧಾರ್ಮಿಕ ಕಾರ್ಯಕ್ರಮಗಳನ್ನು ಸಾಂಗವಾಗಿ ನೆರವೇರಿಸಿ ಕೊಂಡು ಹೋಗಿ ಹಿಂದುಗಳ ಧಾರ್ಮಿಕ ಕಾರ್ಯಕ್ರಮಗಳಿಗೂ ಯಾವುದೇ ತೊಂದರೆ ಯನ್ನು ಯಾರೂ ಉಂಟು ಮಾಡುತ್ತಿರಲಿಲ್ಲ. ಶಾಂತಿ ಕದಡುವಲ್ಲಿ ಇಲ್ಲಿ ಬಹು ಕಾಲದಿಂದ ವಾಸಿಸುವ ಮುಸ್ಲಿಮರಿಗೆ ಯಾವುದೇ ವಿಶ್ವಾಸವಿಲ್ಲ. ಆದರೆ ಇತ್ತೀ ಚಿನ ದಿನಗಳಲ್ಲಿ ಗುಂಪೊಂದು ಸಮಾಜ ವಿರೋಧಿ ಕೃತ್ಯಗಳನ್ನು ಮಾಡುವುದ ರಲ್ಲಿ ನಿರತವಾಗಿದ್ದು. ಗಲಭೆ ಹುಟ್ಟಿಸುವುದಕ್ಕೆ ಶತಾಯ ಗತಾಯ ಪ್ರಯತ್ನಿಸು ತ್ತಿದೆ ಎಂದು ಅನಿಸುತ್ತಿದೆ. ಸ್ಥಳೀಯ ಹಿಂದುಗಳಿಗೆ ದಾರಿಯಲ್ಲಿ ನಡೆಯುವು ದಕ್ಕೂ ಹೆದರಿಕೆಯಾಗುತ್ತಿದೆ.
ಸುರತ್ಕಲ್ ಪೊಲೀಸರು ಪರೋಕ್ಷವಾಗಿ ಈ ಗುಂಪಿನೊಂದಿಗೆ ಸಹಕರಿ ಸುತ್ತಿರುವಂತೆ ಕಂಡು ಬರುತ್ತಿದೆ. ಇಲ್ಲಿ ಈವರೆಗೆ ಒಂಭತ್ತು ಹಿಂದೂ ವಿರೋಧಿ ದೌರ್ಜನ್ಯಗಳು ನಡೆದು ಕೇಸು ದಾಖಲಾಗಿದ್ದರೂ ಪೊಲೀಸರು ಯಾವುದೇ ತನಿಖೆ ನಡೆಸದೆ ಸುಮ್ಮನಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಆದರೆ ಹಿಂದುಗಳ ವಿರುದ್ಧ ಕೇಸು ದಾಖಲಾದರೆ ರಾತೋರಾತ್ರಿ ಮನೆಗೆ ನುಗ್ಗಿ ಬಂಧಿಸುವ ಪೊಲೀಸರು ಸಮಾಜ ವಿರೋಧಿ ಮುಸ್ಲಿಮರ ಬಗ್ಗೆ ಮೃದು ಭಾವನೆಯನ್ನು ತಳೆಯುವುದು ಯಾಕೆ?
ಈ ಭಾಗದ ರಾಜಕಾರಣಿಗಳೂ ಇಂತಹಾ ವಿಚಾರದಲ್ಲಿ ಡೊಂಬರಾಟ ಆಡುತ್ತಿದ್ದಾರೆ. ಯಾರಿಂದ ಯಾರಿಗೆ ಹಲ್ಲೆಯಾದರೂ ಅದನ್ನು ಸರಿಯಾದ ರೀತಿ ಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಬಗ್ಗೆ ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಮಾಡಬೇಕಾಗಿದೆ. ಆದರೆ ಇಲ್ಲಿನ ಜನಪ್ರತಿನಿಧಿಗಳು ಹಲ್ಲೆಯಂ ತಹಾ ವಿಚಾರಗಳಲ್ಲಿ ಸುಮ್ಮನಿದ್ದು ಕೋಮು ವಿದ್ವೇಷ ಜನರಲ್ಲಿ ತುಂಬಿಕೊಳ್ಳುವಂತೆ ಮಾಡುತ್ತಿದ್ದಾರೆ.
ಇದು ಯಾರಿಗೂ ಒಳ್ಳೆಯದಲ್ಲ. ಜನರಿಗೆ, ರಾಜಕಾರಣಿಗಳಿಗೆ, ಪೊಲೀಸರಿಗೆ ಎಲ್ಲರಿಗೂ ಇದರಿಂದ ತೊಂದರೆ ಇದೆ. ಕಾಟಿಪಳ್ಳ - ಕೃಷ್ಣಾಪುರದ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಇಲ್ಲಿ ಮತ್ತೊಂದು ದೊಡ್ಡ ಮಟ್ಟದ ಕೋಮುಗಲಭೆಗೆ ಕಾರಣವಾಗಬಹುದು. ಆದುದರಿಂದ ಎಲ್ಲರೂ ಸೇರಿ ಇಲ್ಲಿ ನಡೆದ ಹಲ್ಲೆ ಪ್ರಕರಣ ಗಳಲ್ಲಿ ಭಾಗಿಯಾದವರಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡಿ ಕೋಮು ಗಲಭೆ, ಕೋಮು ವಿದ್ವೇಷದ ಮೊಳಕೆಯನ್ನು ಚಿವುಟಿ ಹಾಕಬೇಕಾಗಿದೆ. ಕೋಮು ಸೌಹಾ ರ್ದಕ್ಕಾಗಿ ಯಾತ್ರೆ, ಸಭೆ ಸಮಾರಂಭ ಮಾಡುವವರು. ಜಾತ್ಯತೀತೆಯ ಬಗ್ಗೆ ಭಾಷಣ ಮಾಡುವವರು ತಮ್ಮ ಘೋಷಣೆ, ಭಾಷಣಗಳನ್ನು ಬದಿಗಿಟ್ಟು ಇಂತಹಾ ಪ್ರದೇಶದಲ್ಲಿ ಕಾರ‍್ಯೋನ್ಮುಖರಾಗಿ ದುಷ್ಮರ್ಮಿಗಳ ಅಟ್ಟಹಾಸವನ್ನು ತಡೆಗಟ್ಟುವುದ ರೊಂದಿಗೆ ಹಿಂದೂ ಮುಸ್ಲಿಮರಲ್ಲಿ ಪರಸ್ಪರ ಸೌಹಾರ್ದತೆ ಮೂಡುವಂತೆ ಪ್ರಯ ತ್ನಿಸಬೇಕಾಗಿದೆ.
ಕಾಟಿಪಳ್ಳ-ಕೃಷ್ಣಾಪುರದ ಶಾಂತಿಪ್ರಿಯ ಮುಸ್ಲಿಮರು ತಮ್ಮ ಪರಿಸರದಲ್ಲಿ ಶಾಂತಿ ಕದಡುವ ಕೆಲವೇ ಕೆಲವು ಮುಸ್ಲಿಮರನ್ನು ನಿಯಂತ್ರಿಸಿ ಕಾಟಪಳ್ಳ-ಕೃಷ್ಣಾಪುರ ಸೌಹಾರ್ದತೆಯ ಪ್ರದೇಶ ಎಂದು ಸಾಬೀತುಪಡಿಸುವರೇ?

ಎಣ್ಣೆಯ ತಿಂಡಿಗಳಿಗೆ ವಿದಾಯ ಹೇಳಿದರೆ ಪರಿಣಾಮ ಸಿಗಲಿದೆ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನ್ನ ವಯಸ್ಸು ೨೨. ನಾನು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ೧೭ ವಯಸ್ಸಿನಿಂದಲೇ ನನ್ನ ಮುಖದ ಪೂರ್ತಿ ದೊಡ್ಡ ಗಾತ್ರದ ಮೊಡವೆಗಳು ಏಳುತ್ತಿವೆ. ಇದರಿಂದ ನನಗೆ ಚಿಂತೆ ಯಾಗಿದೆ. ನಾನು ಆರೋಗ್ಯವಾಗಿದ್ದು, ಬೇರೆ ಯಾವುದೇ ಸಮಸ್ಯೆಗ ಳಿಲ್ಲ. ಮೊಡವೆಗಳು ಹೆಚ್ಚೆಚ್ಚು ಬೆಳೆಯುವುದರಿಂದ ನನಗೆ ಹೊರ ಗಡೆ ಹೋಗಿ ಮುಖ ತೋರಿಸಲು ಅಸಹ್ಯವಾಗುತ್ತದೆ. ಈ ಬಗ್ಗೆ ನನ್ನ ಗೆಳತಿಯರಲ್ಲಿ ಕೇಳಿದರೆ ಬೇರೆ, ಬೇರೆ ಕಾರಣ ಹೇಳಿದರು. ಅದು ಸತ್ಯವೇ ಸುಳ್ಳೇ ದಯವಿಟ್ಟು ಉತ್ತರಿಸಿ. ನಾನು ವಾರಕ್ಕೊಮ್ಮೆ ಅಥವಾ ಎರಡು ಸಲ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದ ರಿಂದ ಮುಖದಲ್ಲಿ ಮೊಡವೆ ಬೆಳೆಯುತ್ತದೆಯೇ? ನನಗೆ ಸೆಕ್ಸ್ ಬಗ್ಗೆ ಸಾಕಷ್ಟು ಜ್ಞಾನ ಇದೆ. ಆದರೆ ನಾನು ಬಾಯ್‌ಫ್ರೆಂಡ್ ಎಂದು ಯಾರನ್ನೂ ಹೊಂದಿಲ್ಲ. ಮುಖದ ಮೇಲೆ ಬಿದ್ದಿರುವ ಮೊಡವೆಗಳನ್ನು ನಾನು ಕೀಳುತ್ತೇನೆ. ಇದು ತಪ್ಪೇ? ನನಗೆ ಸರಿಯಾದ ಸಲಹೆ ಕೊಡಿ.
ಸಲಹೆ: ನೀವು ಸುಮ್ಮನೆ ಹೆದರಿದ್ದೀರಿ. ಮೊಡವೆ ಹದಿಹರೆಯದ ವರಿಗೆ ಬೀಳುವುದು ಸಾಮಾನ್ಯ ಸಂಗತಿಯೇ ಹೊರತು ಇದೇನೂ ದೊಡ್ಡ ರೋಗವಲ್ಲ. ನಿಮ್ಮದು ಮೊಡವೆ ಬೀಳುವ ವಯಸ್ಸು. ಇದಕ್ಕೆ ಹಲವಾರು ಕಾರಣಗಳಿವೆ. ಹೆಚ್ಚಾಗಿ ಬಿಸಿಲಿನಲ್ಲಿ ಒಣಗಿದರೆ ಮುಖ ಬೆವರಿ ಅಲ್ಲಿಯೇ ಒಣಗಿ ಮೊಡವೆ ಏಳಬಹುದು. ಮುಖವನ್ನು ಆಗಾಗ್ಗೆ ಶುದ್ಧ ನೀರಿನಿಂದ ತಿಕ್ಕಿ ತೊಳೆಯಬೇಕು.
ಮುಖದ ಆರೋಗ್ಯದ ಕಡೆಗೆ ಗಮನ ಕೊಡದಿದ್ದರೆ ಮೊಡವೆ ಬೀಳು ತ್ತದೆ. ಸಾಮಾನ್ಯವಾಗಿ ಜಿಡ್ಡಿನಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮೊಡವೆ ಬೀಳುತ್ತದೆ. ತೈಲದ ಅಂಶ ಹೊಂದಿರುವ ಚರ್ಮ ಹೊಂದಿರುವವರಲ್ಲಿ ಇದರ ಪ್ರಮಾಣ ಹೆಚ್ಚು. ಈ ಬಗ್ಗೆ ಚಿಂತಿಸುವುದು ಮತ್ತು ಮೊಡವೆಗಳನ್ನು ಆಗಾಗ ಚಿವುಟುವುದು ತಪ್ಪು. ಇದರಿಂದ ಮುಖದಲ್ಲಿ ಮೊಡವೆ ಮಾಯವಾದರೂ ಕಲೆ ಹಾಗೆಯೇ ಉಳಿಯುವ ಸಾಧ್ಯತೆಯಿದೆ.
ಮೊಡವೆ ಹಣ್ಣಾದಾಗ ಮಾತ್ರ ಅದನ್ನು ಕೀಳಬಹುದಾಗಿದೆ. ಮುಖಕ್ಕೆ ಬಿಸಿನೀರಿನ ಹಬೆ ಹಿಡಿದು ಸ್ವಚ್ಛ ವಸ್ತ್ರದಿಂದ ಮೊಡವೆಯೊಳಗಿದ್ದ ನೀರನ್ನು ಬೇರೆ ಕಡೆ ಪಸರಿಸದಂತೆ ಒರೆಸಿ ತೆಗೆಯಿರಿ. ಬಿಸಿಲಿಗೆ ಹೊರಗಡೆ ಹೋಗಿ ಮನೆಗೆ ಬಂದಾಗ ಶುದ್ಧವಾದ ನೀರಿನಿಂದ ಮುಖ ತೊಳೆ ಯುವುದನ್ನು ರೂಢಿ ಮಾಡಿಕೊಳ್ಳಿ. ಹೊರಗಡೆ ತೆರಳಿದಾಗ ಮತ್ತು ಮನೆಯಲ್ಲಿದ್ದಾಗಲೂ ಸಾಧ್ಯವಾದಷ್ಟು ಬಾರಿ ಮುಖವನ್ನು ಶುದ್ಧ ನೀರಿ ನಿಂದ ತೊಳೆಯಿರಿ. ಮುಖಕ್ಕೆ ಸಾಬೂನು ಬಳಸುವುದು ಬೇಡ. ಇದ ರಿಂದ ಮುಖದ ತ್ವಚೆ ಶುಷ್ಕವಾಗುತ್ತದೆ. ಕಡಲೆ ಹಿಟ್ಟಿನಿಂದ ಮುಖ ವನ್ನು ತೊಳೆಯಿರಿ, ಪರಿಣಾಮ ಖಂಡಿತಾ ಸಿಗಲಿದೆ. ಹೆಚ್ಚು ಬಿಸಿಲಿನಲ್ಲಿ ನಿಲ್ಲದಿರಿ. ಎಣ್ಣೆಯ ವಸ್ತುಗಳನ್ನು ತ್ಯಜಿಸಿ. ಹಸ್ತ ಮೈಥುನಕ್ಕೂ ಮೊಡವೆ ಗಳಿಗೂ ಯಾವುದೇ ಸಂಬಂಧವಿಲ್ಲ. ಹಸ್ತಮೈಥುನ ಎನ್ನುವುದು ಸಾಮಾನ್ಯ ಲೈಂಗಿಕ ಚಟುವಟಿಕೆ. ಹದಿಯರೆಯಕ್ಕೆ ಕಾಲಿಟ್ಟ ಗಂಡು-ಹೆಣ್ಣು ತಮ್ಮ ಲೈಂಗಿಕ ಬಯಕೆಯನ್ನು ನಿಗ್ರಹಿಸಲು ಜನನಾಂಗವನ್ನು ಕೈಬೆರಳಿನ ಮೂಲಕ ಪ್ರಚೋದಿಸುತ್ತಾರೆ. ಇದನ್ನು ತಪ್ಪೆನ್ನಲಾಗದು. ಹಾಗೆಂದು ಇದು ಸರಿ ಎಂದು ಕೂಡಾ ಹೇಳಲಾಗದು. ಇದನ್ನು ಬಿಟ್ಟುಬಿಡುವುದು ಒಳ್ಳೆಯದು. ಇದರಿಂದ ದೇಹಾರೋಗ್ಯಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಕೀಳರಿಮೆ ಉಂಟಾಗುತ್ತದೆ. ಕೀಳರಿಮೆಯೇ ಒಂದು ದೊಡ್ಡ ರೋಗ. ಈಗ ಓದು ವುದರ ಕಡೆಗೆ ಗಮನಕೊಡಿ. ಹಾಗೆ ಮಾಡುವುದು ತಪ್ಪು ಎಂದು ಕೊರ ಗುತ್ತಾ ಕುಳಿತುಕೊಳ್ಳದಿರಿ. ಮುಖದ ಮೊಡವೆಗಳು ವಯಸ್ಸಾದಂತೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತವೆ. ಈ ಬಗ್ಗೆ ಭಯ ಬೇಡ. ವೈದ್ಯರ ಸಲಹೆ ಮೇರೆಗೆ ಔಷಧಿ, ಕ್ರೀಂ ಪಡೆಯಬಹುದಾದರೂ ಇದು ಅಷ್ಟಾಗಿ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ. ಹೀಗಾಗಿ ಈಗ ಹೇಳಿ ದಷ್ಟು ಮಾಡಿದರೆ ಸಾಕು.

02-06-2012

Posted by JAYAKIRANA Kirana on | 0 comments | Leave a comment...

ಮೇಷ : ಉದ್ಯೋಗದಲ್ಲಿ ಅಭಿವೃದ್ಧಿಯಾಗುತ್ತದೆ.
ವೃಷಭ : ಹಣಕಾಸಿನ ವ್ಯವಹಾರದಲ್ಲಿ ಮಿಶ್ರ ಫಲ ಇರುತ್ತದೆ.
ಮಿಥುನ : ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಇರುತ್ತದೆ.
ಕರ್ಕಾಟಕ : ಶೃಂಗಾರ ಸಾಧನಗಳನ್ನು ಖರೀದಿ ಮಾಡುತ್ತೀರಿ.
ಸಿಂಹ : ಭೂಮಿ ಖರೀದಿಸುವ ಸಾಧ್ಯತೆ ಇದೆ.
ಕನ್ಯಾ : ಸಹೋದರರಿಂದ ಸಹಕಾರ ಸಿಗುತ್ತದೆ.
ತುಲಾ : ಜಂಟಿ ವ್ಯಾಪರದಲ್ಲಿ ಸಮಸ್ಯೆ ಇರುತ್ತದೆ.
ವೃಶ್ಚಿಕ : ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ.
ಧನು : ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ.
ಮಕರ : ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಕುಂಭ : ಮಾನಸಿಕವಾಗಿ ಸಂತೋಷ ಇರುತ್ತದೆ.
ಮೀನ : ಹಣಕಾಸಿನ ಲಾಭ ವಿವಿಧ ಮೂಲಗಳಿಂದ ಬರಲಿದೆ.

02-06-2012

Posted by JAYAKIRANA Kirana on | 0 comments | Leave a comment...

ಮಂಗಳೂರು : ಕಂಪ್ಯೂಟರ್ ತಿಳಿದವರು ಬೇಕು ೯೮೮೬೪೧೪೮೯೮.
ಕೊಟ್ಟಾರ : ಪೆಟ್ರೋಲ್ ಪಂಪ್‌ಗೆ ಕೆಲಸಕ್ಕೆ ಯುವಕರು ಬೇಕು ೯೪೮೨೦೩೮೯೭೧.
ಮಂಗಳೂರು : ರೈಲ್ವೇ ರನ್ನಿಂಗ್ ರೂಂಗೆ ಕ್ಲೀನರ್ ಮತ್ತು ಕುಕ್ಕ್ ಬೇಕು ೯೬೮೬೫೧೮೬೧೦.
ಬಿಜೈ ಬಳಿಯ ಲಾಡ್ಜ್ ಒಂದಕ್ಕೆ ರೂಂಬಾಯ್ ಬೇಕಾಗಿದ್ದಾರೆ. ೯೯೮೦೯೫೧೫೯೯
ಮಂಗಳೂರು:ಸಾಫ್ಟ್‌ಡ್ರಿಂಕ್ಸ್ ಅಪರೇಟರ್ ಬೇಕು ೯೯೬೪೪೫೫೯೮೮.
ಮಂಗಳೂರು: ಬಟ್ಟೆ ಅಂಗಡಿಗೆ ಜನ ಬೇಕು ೮೨೭೭೪೦೫೩೬೩.
ಕಾಸರಗೋಡು: ಹೌಸ್‌ಕೀಪಿಂಗ್, ಸೂಪರ್ ವೈಸರ್ ಬೇಕು ೯೯೧೬೧೧೯೪೬೯
ಪಿವಿಎಸ್: ಕಂಪೆನಿಗೆ ಕ್ಲರ್ಕ್ ಬೇಕು ೯೭೪೩೩೯೦೭೯೭
ಮೂಲ್ಕಿ: ಪ್ರಿಂಟರ್ ಬೇಕು ೮೭೪೮೮೭೦೬೯೧.
ಕಾವೂರು: ಲೇಡೀಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು: ಕಚೇರಿ ಕೆಲಸಕ್ಕೆ ಹುಡುಗರು ಬಏಕು ೯೪೪೮೮೪೩೪೯೯.
ಬಂದರ್: ಕೆಲಸಕ್ಕೆ ಜನ ಬಏಕು ೯೪೪೮೩೦೭೬೭೯೯.
ಅಳಕೆ: ಪ್ರಿಂಟಿಂಗ್ ಪ್ರೆಸ್‌ಗೆ ಬೈಂಡಿಂಗ್ ತಿಳಿದಿರುವವ ಯುವತಿಯರು ಬೇಕು ೯೮೮೬೬೯೨೨೧೫.
ಮಂಗಳೂರು: ಪವರ್ ಸರ್ವಿಸ್ ಸಂಸ್ಥೆಗೆ ಡೀಸೆಲ ಮೆಕ್ಯಾನಿಕ್ ಬೇಕು. ೯೮೪೫೨೫೩೫೮೨
ಕಾರ್ಕಳ : ಬಾರ್ & ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೇಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ್ ಬೇಕು ೯೪೪೮೧೦೯೬೮೬.
ಕೊಣಾಜೆ : ಸ್ಟುಡಿಯೋಗೆ ಕೆಲಸಕ್ಕೆ ಜನ ಬೇಕು ೮೭೨೨೭೨೧೦೫೦.
ಉಡುಪಿ : ಸಸ್ಯಾಹಾರಿ ಹೊಟೇಲಿಗೆ ತಿಂಡಿ ಮಾಡುವವರು, ಸಪ್ಲಾಯರ್ ೯೬೬೩೦೯೮೦೨೫.
ಕಾವೂರು : ಕಾರ್ ಡ್ರೈವರ್ ಬೇಕು ೭೨೦೪೬೪೩೪೫೫.
ಮಂಗಳೂರು : ಸೇಲ್ಸ್ ಗರ್ಲ್ಸ್ ಬೇಕು ೮೨೭೭೧೬೫೬೬೨.
ಮಂಗಳೂರು : ಕಾರ್ ಡ್ರೈವರ್‌ಬೇಕು ೦೮೨೪-೪೨೬೮೫೨೪.
ಮಂಗಳೂರು : ಕಂಪ್ಯೂಟರ್ ತರಗತಿ, ಟ್ಯೂಷನ್ ಮತ್ತು ಸಂಸ್ಥೆಯ ಮೇಲ್ವಿಚಾರಣೆ ಗೆ ಜನ ಬೇಕು ೭೨೦೪೬೪೩೪೫೫.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಮ್ಯಾನ್ ಬೇಕು ೯೮೪೪೪೬೪೩೭೭.
ಮೋರ್ಗನ್‌ಗೇಟ್ : ಟ್ಯೂಷನ್ - ಕಂಪ್ಯೂಟರ್ ತರಗತಿ ನೀಡಲು ಪುರುಷರು, ಮಹಿಳೆಯರು ಬೇಕು ೯೯೭೨೭೨೫೩೫೭.
ಕೊಡಿಯಾಲ್‌ಬೈಲ್ : ಟ್ರಾವೆಲ್ ಏಜೆನ್ಸಿಗೆ ಲೇಡೀಸ್ ಸ್ಟಾಫ್ ಬೇಕು ೨೪೯೭೮೬೨.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೈಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಟೈಲರ್ & ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.

ಹಾವು ಕಡಿದು ಯುವಕ ಬಲಿ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಇಲ್ಲಿಗೆ ಸಮೀಪದ ದುರ್ಗ ಮಣ್ಣಮೇಲುಮನೆ ಎಂಬಲ್ಲಿ ಹಾವು ಕಡಿತಕ್ಕೆ ಯುವಕನೊಬ್ಬ ಸಾವಿ ಗೀಡಾದ ಘಟನೆ ಸಂಭವಿಸಿದೆ.
ಸುಬ್ಬು ಮೇರಾ(೩೮) ಮೃತ ದುರ್ದೈವಿ. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಯಾವುದೋ ಕೆಲಸಕ್ಕೆ ಮುಂದಾಗಿದ್ದಾಗ ನಾಗರಹಾವು ಕಡಿದಿತ್ತು. ಮನೆಮಂದಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಪ್ರಯೋಜನವಾ ಗಲಿಲ್ಲ.
ಒಂದು ದಿನದ ಹಿಂದೆಯಷ್ಟೇ ಅತ್ತೂರು ಎಂಬಲ್ಲಿ ವೃದ್ಧೆ ಗುಳ್ಳಿ(೭೮) ಎಂಬವರು ನಾಗರಹಾವು ಕಡಿತಕ್ಕೊಳ ಗಾಗಿ ಸಾವಿಗೀಡಾಗಿದ್ದರು.
ಕಳೆದ ಕೆಲ ದಿನಗಳ ಹಿಂದೆ ಹಿರ್ಗಾನ ಎಂಬಲ್ಲಿ ಗಾಯಗೊಂಡಿದ್ದ ನಾಗರಹಾವು ಮನೆಯೊಳಗೆ ಅವಿತು ಕೊಂಡಿದ್ದು, ಅದನ್ನು ಕಾಡಿಗೆ ಬಿಟ್ಟ ಘಟನೆ ನಡೆದಿತ್ತು. ಬಿಸಿಲ ತಾಪ ತಾಳಲಾರದೆ ಹಾವುಗಳು ಮನೆಯೊಳಗೆ ಬರುತ್ತಿರುವುದು ಇತ್ತೀಚೆಗೆ ಸಾಮಾನ್ಯ ವಾಗಿದೆ.

ಮರದ ತುಂಡು ಬಿದ್ದು ಕಾರ್ಮಿಕ ಯುವತಿ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಹುಮಹಡಿ ಕಟ್ಟಡದ ಕಾಮಗಾರಿ ನಡೆಸುತ್ತಿದ್ದ ಯುವತಿ ತಲೆಮೇಲೆ ಮರದ ತುಂಡು ಬಿದ್ದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಎಮ್ಮೆಕೆರೆಯಲ್ಲಿ ನಿನ್ನೆ ಸಂಭವಿಸಿದೆ.
ಬಾದಾಮಿ ಮೂಲದ ಚಿದಾನಂದ ಎಂಬವರ ಪುತ್ರಿ ಲಕ್ಷ್ಮಿಬಾಯಿ (೧೮) ಮೃತ ಯುವತಿ. ಬಹುಮಹಡಿ ಕಟ್ಟಡ ದಲ್ಲಿ ಪೋಷಕರೊಂದಿಗೆ ಕಾರ್ಮಿಕ ಳಾಗಿ ದುಡಿಯುತ್ತಿದ್ದ ಲಕ್ಷ್ಮಿಬಾಯಿ ನಿನ್ನೆ ಬೆಳಗ್ಗೆ ಕೆಲಸಕ್ಕೆ ಅಣಿಯಾಗುತ್ತಿದ್ದಾಗ ಕಟ್ಟಡದ ಮೇಲೆ ಕಾರ್ಯನಿರ್ವಹಿಸು ತ್ತಿರುವವರ ನಿರ್ಲಕ್ಷದಿಂದ ಮರದ ತುಂಡೊಂದು ಆಕೆಯ ತಲೆಯ ಕೆಳಗೆ ಬಿತ್ತೆನ್ನಲಾಗಿದೆ. ಗಂಭೀರ ಗಾಯ ಗಳೊಂದಿಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಪಾಂಡೇಶ್ವರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.

ಅಕ್ರಮ ಸ್ಪಿರಿಟ್: ಇಬ್ಬರ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಖಚಿತ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ವಲಯ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಕೋಟೆಕಾರ್ ನಲ್ಲಿರುವ ಕೇರಳ ಮೂಲದ ಸೀತಾ ಸದನ ಎನ್ನುವ ಹೆಸರಿನ ಟ್ರಾನ್ಸ್ ಪೋರ್ಟ್ ಕಂಪೆನಿಗೆ ಸೇರಿದ ಗೋಡೌ ನಿಗೆ ದಾಳಿ ನಡೆಸಿ ಕೇರಳಕ್ಕೆ ಅಕ್ರಮವಾಗಿ ಸಾಗಾಟ ಮಾಡಲು ದಾಸ್ತಾನಿರಿಸಿದ್ದ ೩೦ಸಾವಿರ ಮೌಲ್ಯದ ೧೦೦ ಲೀ. ಸ್ಪಿರಿಟ್ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿ ದ್ದಾರೆ. ಕೇರಳ ಮೂಲದ ಮೋಹನ್ ಕೆ.ಟಿ. ಮತ್ತು ಕೆ.ಸುರೇಂದ್ರನ್ ಎಂಬ ವರೇ ಬಂಧಿತರು.
ದ.ಕ. ಜಿಲ್ಲೆಯ ಅಬಕಾರಿ ಉಪ ಆಯುಕ್ತ ಬಿ.ಎ. ಹೂವಪ್ಪ ಗೌಡ ಇವರ ನಿರ್ದೇಶನದ ಮೇರೆಗೆ ಮಂಗಳೂರು ಒಂದನೇ ಉಪ ವಿಭಾಗದ ಅಬಕಾರಿ ಉಪರೀಕ್ಷಕ ಕೆ.ಪ್ರಶಾಂತ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ದಕ್ಷಿಣ ವಲಯ ಎರಡನೇ ವಿಭಾಗದ ಅಬಕಾರಿ ನಿರೀಕ್ಷಕ ಎಂ.ಕೆ. ಕೇಶವಮೂರ್ತಿ ಅವರ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.ಅಬಕಾರಿ ನಿರೀಕ್ಷಕ ಚೇತನ್, ಉಠಿನಿರೀ ಕ್ಷಕರುಗಳಾದ ಎ.ಕುಶಾಲಪ್ಪ ಗೌಡ, ಹೆಚ್.ವಿ.ಸುರೇಶ್, ಕೆ.ಮೋಹನ್ ರಾವ್, ರೋಹಿತಾಶ್ವ ಮತ್ತು ಸಿಬ್ಬಂದಿಯವರಾದ ಚೆನಿಯಪ್ಪ ನಾಯ್ಕ, ಮಹಾಂತಪ್ಪ ಸವಳಿ, ವಾಮನ, ಹರಿಯಪ್ಪ ಹಾಗೂ ಬಸವರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಟಿಪ್ಪರ್‌ನಡಿ ಸಿಲುಕಿ ಬಾಲಕ ಸಾವು

Posted by JAYAKIRANA Kirana on | 0 comments | Leave a comment...

ಕಾರ್ಕಳ: ನಂದಳಿಕೆ ಕಜೆಮಾರು ಎಂಬಲ್ಲಿ ನಿನ್ನೆ ನಸುಕಿನ ಜಾವದಲ್ಲಿ ಬಾಲಕನೊಬ್ಬನ ತಲೆಯು ಟಿಪ್ಪರ್‌ನಡಿ ಸಿಲುಕಿ ದಾರುಣ ರೀತಿಯಲ್ಲಿ ಮೃತ ಪಟ್ಟಿರುವ ಘಟನೆ ನಡೆದಿದೆ.
ಬಿಜಾಪುರ ಹನುಮಂತ ಎಂಬ ವರ ಮಗ ಸುಭಾಸ್(೮) ಮೃತ ಬಾಲಕ. ನಸುಕಿನ ಜಾವ ಸುಮಾರು ಐದು ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಕಡುಬೇಸಿಗೆ ಕಾಲವಾದುದರಿಂದ ಶೆಖೆ ಯಿಂದಾಗಿ ಹನುಮಂತರ ಮನೆ ಮಂದಿ ಗುಡಿಸಲಿನಿಂದ ಹೊರಭಾಗದಲ್ಲಿ ಮಲಗಿದ್ದರು. ಈ ವೇಳೆ ಅಲ್ಲಿ ನಿಲ್ಲಿಸಿದ್ದ ಟಿಪ್ಪರ್ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಅದರ ಚಕ್ರ ಬಾಲಕನ ತಲೆಮೇಲೆ ಹರಿದಿತ್ತು.

ಓವರ್‌ಟೇಕ್ ವಿವಾದ: ಕಂಡಕ್ಟರ್‌ಗೆ ಥಳಿತ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹೆದ್ದಾರಿಯಲ್ಲಿ ಸಾಗುತ್ತಿದ್ದ ಖಾಸಗಿ ತಡೆರಹಿತ ಬಸ್ಸೊಂದು ಓವರ್‌ಟೇಕ್ ಮಾಡಿ ಮುಂದೆ ಸಾಗಲು ಬಿಡಲಿಲ್ಲ ಎಂಬ ತಗಾದೆ ತೆಗೆದ ಕಾರಿನಲ್ಲಿ ಸಾಗುತ್ತಿದ್ದ ತಂಡವೊಂದು ಬಸ್ ಅನ್ನು ತಡೆದು ನಿಲ್ಲಿಸಿ ನಿರ್ವಾಹಕನನ್ನು ಬಸ್‌ನಿಂದ ಎಳೆದು ಹಾಕಿ ಯದ್ವಾತದ್ವಾ ಥಳಿಸಿದ ಘಟನೆಯೊಂದು ಪಡುಬಿದ್ರಿ ಹೊರ ವಲಯದ ಕನ್ನಂಗಾರು ಬೈಪಾಸಿನಲ್ಲಿ ನಿನ್ನೆ ಸಂಜೆ ನಡೆದಿದೆ.
ಏಟು ತಿಂದಿರುವ ಬಸ್ಸಿನ ನಿರ್ವಾಹಕ ಕುಂಜತ್ತಬೈಲಿನ ಜಮಾ ಲುದ್ದೀನ್ ಎಂಬವರು ಪಡುಬಿದ್ರಿಯ ಖಾಸಗಿ ನರ್ಸಿಂಗ್ ಹೋಂಗೆ ದಾಖ ಲಾಗಿದ್ದಾರೆ. ಬಸ್‌ನ ಹಿಂದಿದ್ದ (ಕೆ.ಎ೧೯ ಎಂ.ಎನ್ ೫೫) ನೋಂದಣಿಯ ಸ್ಕಾರ್ಪಿಯೋ ವಾಹನದಲ್ಲಿದ್ದ ಆರು ಮಂದಿಯ ತಂಡ ಗಣೇಶ್ ಶಿಪ್ಪಿಂಗ್ ಕಂಪೆನಿಯ ಬಸ್ಸಿಗೆ ಕಾರನ್ನು ಅಡ್ಡವಿರಿಸಿ ಚಾಲಕನನ್ನು ಹೊರಗೆಳೆಯಲು ಪ್ರಯತ್ನಿಸಿದಾಗ ಬಿಡಿಸಲು ಬಂದ ನಿರ್ವಾಹಕನಿಗೆ ಥಳಿಸಿತೆಂದು ಪೊಲೀ ಸರಿಗೆ ದೂರು ನೀಡಲಾಗಿದೆ.
ಬಸ್ ಯೂನಿಯನ್‌ನ ಮಂಗ ಳೂರು ಪದಾಧಿಕಾರಿಗಳು ಪೊಲೀ ಸರನ್ನು ಸಂಪರ್ಕಿಸಿದ್ದು ಆರೋಪಿಗಳ ಪತ್ತೆಗೆ ಒತ್ತಾಯಿಸಿದ್ದಾರೆ.

ವಿಟ್ಲ: ನಾಪತ್ತೆ

Posted by JAYAKIRANA Kirana on | 0 comments | Leave a comment...

ವಿಟ್ಲ: ಪತ್ನಿ ಮನೆಯಿಂದ ನಾಲ್ಕು ತಿಂಗಳ ಹಿಂದೆ ನಾಪತ್ತೆ ಯಾಗಿರುವ ವೀರ ಕಂಭ ಗ್ರಾಮದ ಬಾಯಿಲ ನಿವಾಸಿ ವಾಸು ಶೆಟ್ಟಿ ಯಾನೆ ರೇವಣ್ಣಗೌಡ(೫೦) ಎಂಬವರ ಬಗ್ಗೆ ಅವರ ಪತ್ನಿ ಶೋಭಾ ಶೆಟ್ಟಿ ಬಾಯಿಲ ಅವರು ಶುಕ್ರವಾರ ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಅವರು ತನ್ನ ಹುಟ್ಟ್ಟೂರಾದ ಮೂಡಿಗೆರೆ ತಾಲೂಕಿನ ಬೈದಳ್ಳಿಗೆ ಹೋಗಿ ಬರುವುದಾಗಿ ನಾಲ್ಕು ತಿಂಗಳ ಹಿಂದೆ ವಿಟ್ಲದಿಂದ ಹೋದವರು ನಾಪತ್ತೆಯಾಗಿದ್ದಾರೆ.

ಟಿಪ್ಪರ್ ಡಿಕ್ಕಿ: ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಟಿಪ್ಪರ್ ಢಿಕ್ಕಿ ಹೊಡೆದು ಬಜ್ಪೆ ನಿವಾಸಿ ವೆಲಿಯನ್ ರೊಡ್ರಿಗಸ್ (೮೨) ಎಂಬವರು ಮೃತ ಪಟ್ಟ ಘಟನೆ ನಿನ್ನೆ ಬೆಳಗ್ಗೆ ಪಣಂಬೂರ್ ಬಳಿ ಸಂಭವಿಸಿದೆ.
ಹೆದ್ದಾರಿ ಹೊಂದಿಕೊಂಡಿರುವ ಕಚ್ಚಾ ಒಳರಸ್ತೆಯಲ್ಲಿ ಸಾಗುತ್ತಿದ್ದ ಟಿಪ್ಪರ್ ರಸ್ತೆ ಬದಿಯಲ್ಲಿ ನಡೆದು ಬರುತ್ತಿದ್ದ ವೆಲಿಯನ್‌ರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು. ಪಣಂಬೂರು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಗ್ಯಾರೇಜ್‌ನಿಂದ ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಂಟ್ವಾಳ ಸಮೀಪದ ಭಂಡಾರಿಬೆಟ್ಟು ವಿಲ್ಸನ್ ಗ್ಯಾರೇಜ್‌ನಿಂದ ಅಂದಾಜು ೪೨ ಸಾವಿರ ರೂ. ಮೌಲ್ಯದ ವಿವಿಧ ಸಾಮಾಗ್ರಿಗಳನ್ನು ಕಳವುಗೈದಿರುವ ಬಗ್ಗೆ ಮಾಲಕ ವೆಲೇರಿಯನ್ ರಾಡ್ರಿಗಸ್ ಪೊಲೀಸರಿಗೆ ದೂರಿ ದ್ದಾರೆ. ಮೇ ೧೦ರಂದು ಗ್ಯಾರೇಜ್‌ಗೆ ಬೀಗ ಹಾಕಿ ಹೋಗಿದ್ದು, ಕಳೆದ ೨೦ ದಿನಗಳಿಂದ ಅನಾರೋಗ್ಯ ನಿಮಿತ್ತ ಗ್ಯಾರೇಜ್ ಬಾಗಿಲು ತೆರೆದಿರಲಿಲ್ಲ. ಈ ಸಂದರ್ಭ ಕಳ್ಳತನ ನಡೆದಿರ ಬೇಕೆಂದು ಶಂಕಿಸಲಾಗಿದೆ. ಏರ್ ಕಂಪ್ರೆಸರ್, ಲಾರಿ ಬಾಡಿ ಸೆಟ್, ಟಿಪ್ಪರ್ ಹಿಂದಿನ ಬಾಗಿಲು, ಕಬ್ಬಿಣದ ಗೇಟ್ ಕಳ್ಳತನ ನಡೆದಿದೆ ಎನ್ನಲಾಗಿದೆ.

ಅಕ್ರಮ ಮದ್ಯ: ಆರೋಪಿ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ಸಮೀಪದ ಕಟ್‌ಬೆಲ್ತೂರು ಜಂಕ್ಷನ್ ಬಳಿ ಪರವಾನಿಗೆ ಇಲ್ಲದೆ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಕಟ್‌ಬೆಲ್ತೂರು ನಿವಾಸಿ ಸೋಮಶೇಖರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ಯುವತಿ ಬೆಂಗಳೂರಿನಲ್ಲಿ ಕೊಲೆ: ಮಾಜಿ ಪ್ರಿಯಕರ ಸಹಿತ ಇಬ್ಬರ ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಹತ್ಯೆಯಾದ ಕುಂದಾಪುರ ಸಾಲಿಗ್ರಾಮದ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಿಯಕರ ರಂಜಿತ್ ಸಹಿತ ಆತನ ಗೆಳೆಯನನ್ನು ಬೆಂಗಳೂರು ಪೊಲೀಸರು ಬಂಧಿಸಿ ದ್ದಾರೆ.
ಕುಂದಾಪುರ ಸಾಲಿಗ್ರಾಮದ ಶ್ಯಾಮ ಹಾಗೂ ಶಾಂತ ದಂಪತಿ ಪುತ್ರಿ ದಿವ್ಯಾ ಳನ್ನು ಮೇ.೨೮ ರಂದು ರಾತ್ರಿ ಕೋರ ಮಂಗಲದ ಕಂಪೆನಿಯಲ್ಲಿ ಕೆಲಸ ಮುಗಿಸಿ ಮನೆ ಕಡೆಗೆ ವಾಪಸ್ಸಾಗುತ್ತಿದ್ದ ಸಂದರ್ಭ ಬೈಕಿನಲ್ಲಿ ಬಂದಿದ್ದ ಇಬ್ಬರು ಅಪರಿ ಚಿತರು ಕುತ್ತಿಗೆ ಕುಯ್ದು ಹತ್ಯೆ ನಡೆಸಿ ದ್ದರು. ಜನನಿಬಿಡವಾಗಿದ್ದ ಸಂದರ್ಭ ದಲ್ಲಿಯೇ ಹತ್ಯೆ ನಡೆದಿತ್ತಾದರೂ ಆರೋಪಿಗಳನ್ನು ಆ ಕೂಡಲೇ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ದಿವ್ಯಾ ಮೊಬೈಲನ್ನು ಪರಿಶೀಲಿಸಿದಾಗ ಆಕೆಗಿದ್ದ ಪ್ರಿಯಕರ ರಂಜಿತ್ ಎಂಬಾ ತನ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅಲ್ಲದೆ ದಿವ್ಯಾಳಿಗೆ ಪ್ರದೀಪ್ ಎಂಬಾ ತನ ಜತೆ ನಿಶ್ಚಿತಾರ್ಥಗೊಂಡ ಬಳಿಕ ಆಕೆ ಪ್ರೀತಿಯನ್ನು ತೊರೆದಿದ್ದಳೆಂದು ತಿಳಿದುಬಂದಿದೆ. ಇದರಿಂದ ಮಾಜಿ ಪ್ರಿಯಕರ ರಂಜಿತ್ ಗೆಳೆಯನೊಂದಿಗೆ ಸೇರಿ ಹತ್ಯೆ ನಡೆಸುವ ಹುನ್ನಾರ ನಡೆಸಿ ಮುಗಿಸಿದ್ದರು. ಇಬ್ಬರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಏಳು ಲಕ್ಷ ರೂ. ಮೌಲ್ಯದ ಕೇಸರಿ ವಶ

Posted by JAYAKIRANA Kirana on | 0 comments | Leave a comment...

ಮಂಗಳೂರು: ದುಬೈಯಿಂದ ವಿಮಾನದ ಮೂಲಕ ಕಾಸರಗೋಡಿಗೆ ತರಲು ಯತ್ನಿಸುತ್ತಿದ್ದ ಏಳು ಲಕ್ಷ ರೂ. ಮೌಲ್ಯದ ಕುಂಕುಮ ಕೇಸರಿ ಹೂ, ಮತ್ತು ಚಿನ್ನದ ಬಿಲ್ಲೆ ಸಹಿತ ಕಾಸರಗೋಡು ನೆಲ್ಲಿಕುಂಜ ನಿವಾಸಿ ಮುಹಮ್ಮದ್ ನಿಯಾಝ್(೩೨)ಎಂಬಾತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಮೇ ೨೯ರಂದು ದುಬೈಯಿಂದ ಏರ್ ಇಂಡಿಯಾ ವಿಮಾನದ ಮೂಲಕ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಹಹಮ್ಮದ್ ನಿಯಾಝ್ ಗ್ರೀನ್ ಚಾನೆಲ್ ಮೂಲಕ ವಿಮಾನ ನಿಲ್ದಾಣದಿಂದ ಹೊರಗೆ ಬಂದಿದ್ದ. ಈ ಸಂದರ್ಭದಲ್ಲಿ ಸಂಶಯಗೊಂಡ ಏರ್ ಕಸ್ಟಮ್ಸ್ ಅಧಿಕಾರಿಗಳು ಆತನ ಬ್ಯಾಗ್ ತಪಾಸಣೆ ನಡೆಸಿದಾಗ ೩.೪೮ ಲಕ್ಷ ರೂ. ಮೌಲ್ಯದ ೪.೨೫ಕಿ.ಗ್ರಾಂ. ಕೇಸರಿ ಹೂ, ೩.೩ಲಕ್ಷ ರೂ. ಅಂದಾಜಿನ ೧೧೭ಗ್ರಾಂ ಚಿನ್ನದ ಬಿಲ್ಲೆಗಳು ಪತ್ತೆಯಾದವು ಎಂದು ಹೇಳಲಾಗಿದೆ. ಆತನನ್ನು ಬಂಧಿಸಿ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಮುಂಬೈ ನಿಲ್ದಾಣದಲ್ಲಿ ಮುಹಮ್ಮದ್ ನಿಯಾಝ್‌ನನ್ನು ಬಂಧಿಸಿರುವ ವಿಷಯವನ್ನು ಅಲ್ಲಿಯ ಏರ್‌ಕಸ್ಟಮ್ಸ್ ಇಂಟಲಿಜನ್ಸ್ ಅಧಿಕಾರಿಗಳು ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರೇಮಿಗಳ ಮೃತದೇಹ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮೊನ್ನೆ ಕಾಸರಗೋಡು ಬಳಿಯ ಕಾರ್ಯಂಗೋಡು ಹೊಳೆಗೆ ಹಾರಿ ಆತ್ಮಹತ್ಯೆಗೈದ ಪ್ರೇಮಿಗಳಾದ ಚಿಮೇನಿ ನಿವಾಸಿ ಪಿ.ಜಿ.ಮನು ಮತ್ತು ಆತನ ಪ್ರೇಯಸಿ ಕನಕಪಳ್ಳಿ ಡ್ಯಾನಿಯಾ ಮೃತದೇಹ ನಿನ್ನೆ ತೀವ್ರಶೋಧದ ನಂತರ ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಲಾಗಿದೆ.

ಮಹಡಿಯಿಂದ ಬಿದ್ದು ಕಾರ್ಮಿಕ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಎಂಆರ್‌ಪಿಎಲ್ ಟೌನ್‌ಶಿಪ್‌ನ ವಸತಿಗೃಹದ ಮಹಡಿಯಿಂದ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ನಿನ್ನೆ ನಡೆದಿದೆ.
ಶೀಟ್ ಅಳವಡಿಕೆ ಕಾರ್ಯದಲ್ಲಿ ನಿರತನಾಗಿದ್ದ ರಾಜಸ್ಥಾನದ ಸುಖಾರಾಂ(೨೮) ಮೃತಪಟ್ಟವರು. ಎಂಆರ್‌ಪಿಎಲ್‌ನ ಎಸ್.ಡಿ. ಕಂಪೆನಿಗೆ ಶೀಟ್ ಅಳವಡಿಸುವ ಕೆಲಸವನ್ನು ವಿಜಯನಾಥ ರೂಫಿಂಗ್ ಕಂಪೆನಿಗೆ ಉಪಗುತ್ತಿಗೆ ನೀಡಲಾಗಿತ್ತು. ವಿಜಯನಾಥ ರೂಫಿಂಗ್ ಕಾರ್ಮಿಕನಾಗಿದ್ದ ಈತ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವುದೇ ಘಟನೆಗೆ ಕಾರಣವೆನ್ನಲಾಗಿದೆ.

ಕಾರ್ ಹೊಂಡಕ್ಕೆ: ನಾಲ್ವರಿಗೆ ಗಾಯ

Posted by JAYAKIRANA Kirana on | 0 comments | Leave a comment...

ಮಂಜೇಶ್ವರ : ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಹೊಂಡಕ್ಕೆ ಬಿದ್ದು ಅದರಲ್ಲಿದ್ದ ನಾಲ್ವರು ಪ್ರಯಾ ಣಿಕರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾದ ಘಟನೆ ಇಲ್ಲಿನ ಪೊಸೊಟ್ ಬಳಿ ನಡೆದಿದೆ.
ಮಂಗಳೂರು ಅಳಪೆ ನಿವಾಸಿ ಗಳಾದ ಉಪೇಂದ್ರ ಆಚಾರ್ಯ, ಪತ್ನಿ ಚಂದ್ರಾವತಿ, ಸಹೋದರ ರವೀಂದ್ರ ಆಚಾರ್ಯರವರ ಪತ್ನಿ ಕುಶಲ ಮತ್ತು ಇವರ ಮಗಳು ಕ್ಷಮ ಎಂಬವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಬೆಳ್ತಂಗಡಿ: ಕಾರ್ ಡಿಕ್ಕಿ; ಮಹಿಳೆ ಮೃತ್ಯು

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ಬೆಳ್ತಂಗಡಿಯ ಅಳದಂಗಡಿಯ ಪಿಲ್ಯ ಸಮೀಪ ನಿನ್ನೆ ಅಪರಾಹ್ನ ಕಾರು ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದಾರೆ. ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿದ್ದು, ಅದರೊಳಗಿದ್ದ ಏಳು ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಪಿಲ್ಯ ಸಮೀಪದ ಗುರುವ ಮೂಲ್ಯ ಎಂಬವರ ಪುತ್ರಿ ನೀಲಾ(೫೬) ಎಂದು ಹೆಸರಿಸಲಾಗಿದೆ. ಕಾರ್ಕಳ ಕಡೆಯಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಹ್ಯುಂಡೈ ಕಾರು ನಿಯಂತ್ರಣ ಕಳೆದುಕೊಂಡು ಮೋರಿಯ ದಂಡೆಯಲ್ಲಿ ಕುಳಿತಿದ್ದ ನೀಲಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಚರಂಡಿಗೆ ಪಲ್ಟಿಯಾಗಿದೆ. ಮಹಿಳೆ ಕಾರಿನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೇಣೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುರುವಾಯನಕೆರೆ: ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಗುರುವಾಯನಕೆರೆ ಸಮೀಪದ ಪಣೆಜಾಲು ಎಂಬಲ್ಲಿ ನಿನ್ನೆ ಮಧ್ಯಾಹ್ನ ವಿದ್ಯುತ್ ಕಂಬಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಕೆಲವು ತಾಸು ರಸ್ತೆ ಸಂಚಾರ ವ್ಯತ್ಯಯವಾಯಿತು.
ಪುತ್ತೂರು ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಲಾರಿಯು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಆರು ವಿದ್ಯುತ್ ಕಂಬ ಹಾಗೂ ವೈರ್ ರಸ್ತೆಗೆ ಬಿದ್ದಿತ್ತು. ತಕ್ಷಣ ಮೆಸ್ಕಾಂ ಸಿಬ್ಬಂದಿ ಗಮನಿಸಿ ತೆರವು ಕಾರ್ಯಾಚರಣೆ ನಡೆಸಿದರು. ಭಾಗವಹಿಸಿ ಹಿಂದಿರುಗುತಿದ್ದಾಗ ಈ ಅವಘಡ ಸಂಭವಿಸಿದೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4067) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2514) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (150) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3688) lokayukta (3) madikeri (1) maleria (1) mangalore (593) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (419) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (805) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (953) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)