ಜಾತಿ ಹೆಸರಿನಲ್ಲಿ ಕಾರ್ಯಕ್ರಮಗಳು ಅಗತ್ಯವೇ?
Posted by JAYAKIRANA Kirana on Thursday, 31 May 2012 | 0 comments | Leave a comment...
ನಮ್ಮ ದೇಶದಲ್ಲಿ ಜಾತಿ ಸಮಾವೇಶ ಗಳನ್ನು ನಡೆಸದಂತೆ, ಮಾಧ್ಯಮಗಳಲ್ಲಿ ಜಾತಿ ಹೆಸರು ಬಳಸದಂತೆ ನಿರ್ಬಂಧ ಹೇರುವ ನಡೆ ಯಲಿ.
ಪ್ರಜಾ, ಮಂಗಳೂರು
ಇತ್ತ ಗಮನಿಸಲಿ
ಕೇಂದ್ರ ಸರಕಾರ ಜಾರಿಗೆ ತಂದಿ ರುವ ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಟಾನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದ ಬಗ್ಗೆ ಸಾರ್ವ ಜನಿಕರಿಗೆ ಅನುಮಾನಗಳಿವೆ. ಏಕೆಂ ದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಎಲ್ಲಾ ಅಕ್ರಮ ವ್ಯವಹಾರಗಳಿಗೆ ತರಬೇತಿ ದೊರೆಯುವುದೇ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ. ಖಾಸಗಿ ಶಿಕ್ಷಣ ಸಂಸ್ಥೆಗಳ ಕಾನೂನುಬಾಹಿರ ದಂಧೆ ಗಳು, ಅವ್ಯವಹಾರಗಳು ಮಕ್ಕಳಿಗೂ ಗೊತ್ತಿವೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಏನೂ ಗೊತ್ತಿಲ್ಲ ದವರಂತೆ ನಟಿಸುತ್ತಾರೆ. ಶಿಕ್ಷಣ ಹಕ್ಕು ಕಾಯಿದೆ ಅನುಷ್ಠಾನದ ವಿಷಯ ದಲ್ಲೂ ಇಲಾಖೆ ಜಾಣಕುರುಡು ಮತ್ತು ಕಿವುಡುತನ ಪ್ರದರ್ಶಿಸುವ ಸಾಧ್ಯತೆ ಇದೆ. ಶಿಕ್ಷಣ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಈ ಕುರಿತು ಎಚ್ಚರವಹಿಸಬೇಕು.
ರಾಜೇಶ್, ಮಂಗಳೂರು
ಕವನಗಳಿಗೆ ಸೆನ್ಸಾರ್ ಸರಿಯೇ?
ಮೊನ್ನೆ ತಾನೇ ಬಿ.ಸಿ.ರೋಡ್ ನಲ್ಲಿ ಬಂಟ್ವಾಳ ತಾಲೂಕು ಮಟ್ಟದ ಚುಟುಕು ಕವಿಗೋಷ್ಠಿ ನಡೆಯಿತು. ಇದರಲ್ಲಿ ಕೆಲವೇ ಮಂದಿಗೆ ಕವನ ವಾಚಿಸಲು ಅವಕಾಶ ನೀಡಲಾಯಿತು. ಕಾರಣ ಕವನಗಳಿಗೆ ಸೆನ್ಸಾರ್ ಹಾಕಿದ್ದು, ಇಂದಿನ ದಿನದಲ್ಲಿ ತುಳು, ಕನ್ನಡ, ಕೊಂಕಣಿ ಭಾಷೆಯಲ್ಲಿ ಯಾವುದೇ ಕೃತಿ ರಚಿಸದವರು ಇದರ ಅಧ್ಯಕ್ಷರಾ ಗಿದ್ದಾರೆ. ಇವರೊಂದಿಗಿರುವ ಕೆಲವೇ ಸಾಹಿತಿಗಳು ಸೆನ್ಸಾರ್ ಹಾಕಿ ದ್ದಾರೆ. ಇನ್ನಾದರೂ ಕವನ ಓದಲು ಅವಕಾಶ ನೀಡಿ.
ನೊಂದವರು, ಕಲ್ಲಡ್ಕ
ಪ್ರಯಾಣಿಕರಿಗೆ ಸಹಕರಿಸಿ
ವಿಟ್ಲ-ಮಂಗಳೂರು ಮಧ್ಯ ಚಲಿ ಸುವ ಸಿ.ಸಿ.ಬಸ್ಸುಗಳು ಜನರಿಗೆ ಬೇಕಾ ದಲ್ಲಿ ನಿಲ್ಲಿಸುತ್ತವೆ. ಆದರೆ ಕೆಎಸ್ ಆರ್‌ಟಿಸಿ ಬಸ್ಸುಗಳು ಬೋರ್ಡು ಇರು ವಲ್ಲಿ ಮಾತ್ರ ನಿಲ್ಲುತ್ತವೆ ಇದರಿಂದ ಪ್ರಯಾಣಿಕರಿಗೆ ತೊಂದರೆಯಾ ಗುತ್ತದೆ. ಖಾಲಿ ಬಸ್ಸುಗಳನ್ನು ಬಿಡಿಸಿ ಸರಕಾರಕ್ಕೆ ನಷ್ಟ ಉಂಟು ಮಾಡುವ ಬದಲು ಕೆಎಸ್‌ಆರ್‌ಟಿಸಿ ಪ್ರಯಾಣಿ ಕರಿಗೆ ಉತ್ತಮ ಸೇವೆ ಒದಗಿಸಲಿ ಎಂಬುವುದೇ ನನ್ನ ಹಾರೈಕೆ.
ಪ್ರಯಾಣಿಕ, ಕಲ್ಲಡ್ಕ
ಕೆಟರಿಂಗ್‌ನವರಿಗಿಂಥ ಅಡುಗೆ ಭಟ್ಟರೇ ವಾಸಿ!
ಕೇಟರಿಂಗ್ ಉದ್ಯಮ ಬೆಳೆದಂತೆಲ್ಲಾ ಇಲ್ಲಿಯೂ ಗ್ರಾಹಕರನ್ನು ಬೋಳಿ ಸುವ ದಂಧೆ ಆರಂಭವಾಗಿದೆ. ಒಂದು ಊಟಕ್ಕೆ ೧೫೦ಕ್ಕಿಂತಲೂ ಹೆಚ್ಚು ದರ ವಿಧಿಸುವ ಕೇಟರಿಂಗ್‌ನವರು ವಿಶೇಷ ಖಾದ್ಯಕ್ಕಾದರೆ ಇನ್ನೂ ಹೆಚು ವಸೂಲು ಮಾಡುತ್ತಾರೆ. ಮಂಗಳೂರಿನಂತಹ ನಗರದಲ್ಲಿ ಅಡುಗೆ ಮಾಡುವ ಕಿರಿಕಿರಿ ಬೇಡವೆಂದು ಹೆಚ್ಚಿನವರು ತಮ್ಮ ಮನೆಯ ಸಮಾರಂಭಕ್ಕೆ ಕೇಟರಿಂಗ್‌ನವ ರನ್ನೇ ಹೇಳುತ್ತಾರೆ.
ಇಂಥ ಪರಿಪಾಠ ಹಳ್ಳಿಗಳಲ್ಲೂ ಆರಂಭವಾಗಿದೆ. ಆದರೆ ನಾನು ಗಮನಿ ಸಿದ ಮಟ್ಟಿಗೆ ಕೇಟರಿಂಗ್‌ಗಿಂತ ಶುಚಿ ಹಾಗೂ ಮಿತ ದರದಲ್ಲಿ ಅಡುಗೆ ಭಟ್ಟರು ಉತ್ತದ ಖಾದ್ಯ ತಯಾರಿಸಬಲ್ಲರು. ಪ್ರತೀ ಊರಲ್ಲೂ ಅಡುಗೆ ಭಟ್ಟರು ಇದ್ದೇ ಇರುತ್ತಾರೆ. ಅವರಿಗೆ ದಿನದ ಸಂಬಳ ಕೊಟ್ಟು ಕೇಟರಿಂಗ್ ನವರಿಗಿಂತಲೂ ಉತ್ತಮ ಪದಾರ್ಥಗಳನ್ನು ಮಾಡಿಸಬಹುದು. ನಗರದ ಕೇಟರಿಂಗ್‌ನ ಅಡುಗೆ ವಿಭಾಗವನ್ನು ಒಮ್ಮೆ ನೋಡಿದವರು ಆನಂತರ ಅದ ರತ್ತ ತಲೆ ಹಾಕಿಯೂ ಮಲಗುವುದಿಲ್ಲ. ಅಲ್ಲದೆ ಖರ್ಚಿನ ದೃಷ್ಟಿಯಿಂದ ನೋಡಿದರೂ ಅರ್ಧಕ್ಕರ್ಧ ಲಾಭವಂತೂ ಗ್ಯಾರಂಟಿ. ಸಣ್ಣ ಪುಟ್ಟ ಸಮಾ ರಂಭ ಮಾಡಬೇಕಿದ್ದರೂ ಲಕ್ಷಾಂತರ ರುಪಾಯಿಗಳನ್ನು ವ್ಯಯಿಸಬೇಕಾದ ಇಂದಿನ ದಿನಗಳಲ್ಲಿ ಊರವರೆಲ್ಲಾ ಸೇರಿಕೊಂಡು ತಯಾರಿಸುವ ಅಡುಗೆ ಯಲ್ಲಿ ರುಚಿ, ಶುಚಿ ಮಾತ್ರವಲ್ಲ ಮಾನವೀಯ ಸಂಬಂಧವೂ ಅಡಗಿದೆ. ಪ್ರತಿ ಯೊಬ್ಬರು ಅಡುಗೆಯ ಕೆಲಸದಲ್ಲಿ ಪಾಲ್ಗೊಳ್ಳುವುದರಿಂದ ಸೌಹಾರ್ದತಾ ಸಂಬಂ ಧವೂ ಬೆಳೆಯುತ್ತದೆ. ಕೆಟರಿಂಗ್‌ನವರ ಸಪ್ಪೆ ಅಡುಗೆ, ಪಕ್ಕಾ ವಾಣಿಜ್ಯ ಧೋರ ಣೆಯ ಬದಲು ಒಮ್ಮೆ ನಿಮ್ಮ ಊರಲ್ಲಿಯೋ, ಮನೆಯಲ್ಲೋ ಇರುವ ಅಡುಗೆ ಭಟ್ಟರಿಂದ ಅಡುಗೆ ಮಾಡಿಸಿ ನೋಡಿ. ಆನಂತರ ಕೆಟರಿಂಗ್‌ನ ಲೆಕ್ಕಕ್ಕೂ ನಿಮ್ಮ ಲೆಕ್ಕಕ್ಕೂ ತಾಳೆ ಹಾಕಿ ನೋಡಿ. ಇಂದು ಹಳ್ಳಿಗಳಲ್ಲೂ ಪ್ರತಿಯೊಂದು ಕಾರ‍್ಯಕ್ರ ಮಕ್ಕೆ ಕೆಟರಿಂಗ್‌ನವರನ್ನು ಕರೆಯುತ್ತಾರೆ.
ಮನುಷ್ಯ ಸಂಬಂಧವೂ ಇಲ್ಲಿಲ್ಲ. ಊಟದ ಸಮಯಕ್ಕೇ ಸರಿಯಾಗಿ ನೆಂಟರಿಸ್ಟರು ಹಾಜರು. ಸರಿಯಾದ ಮಾತುಕತೆಯಿಲ್ಲ. ಕರೆದಿದ್ದಾರೆ... ಹೋಗ ಬೇಕಲ್ಲ ಎನ್ನುವ ಮನೋಭಾವನೆ. ಅದರ ಬದಲು ಬೆಳ್ಳಂಬೆಳಗ್ಗೆಯೇ ಊರಿನ ಯುವಕರು ನೀರುಳ್ಳಿ ಕತ್ತರಿಸುವುದನ್ನು, ಈಳಿಗೆ ಮನೆಯಲ್ಲಿ ಕೆಲಸ ಮಾಡುತ್ತಾ ಹೆಂಗಸರು ಸುಖ-ದು:ಖವನ್ನು ಮಾತನಾಡುತ್ತಾ ಇಡೀ ಸಮಾರಂಭ ತಮ್ಮದೇ ಕಾರ‍್ಯಕ್ರಮ ಎನ್ನುತ್ತಾ ಪಾಲ್ಗೊಳ್ಳುವ ಸುಖ ಕೆಟರಿಂಗ್‌ನವರಿಂದ ವಂಚಿತವಾ ಗಿದೆ ಎಂದು ಅನ್ನಿಸುವುದಿಲ್ಲವೇ?
ಪ್ರಮೋದ್ ಶೆಟ್ಟಿ, ಮೂಡುನಡುಗೋಡು
ಗೋಕರ್ಣನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳ ಸಮವಸ್ತ್ರ ಬದಲಾಯಿಸಿ
ಗೋಕರ್ಣನಾಥೇಶ್ವರ ಕಾಲೇಜಿನ ೨೦೧೨೧೩ರ ಪ್ರಸಕ್ತ ಸಾಲಿನಲ್ಲಿ ಜಾರಿಗೆ ಬರುವ ಸಮವಸ್ತ್ರ ಸರಿಯಾಗಿಲ್ಲ. ಹೀಗೆ ಆರಿಸಿಕೊಂಡಿರುವ ಸಮವಸ್ತ್ರವು ಹುಡುಗರಿಗೆ ಕೆಂಪು ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟನ್ನು ಹಾಗೂ ಹುಡುಗಿಯರಿಗೆ ಕೆಂಪುಬಣ್ಣದ ಟಾಪ್‌ನ್ನು ಮತ್ತು ಬೂದು ಬಣ್ಣದ ಪ್ಯಾಂಟನ್ನು ಧರಿಸುವಂತೆ ಘೋಷಿಸ ಲಾಗಿದೆ. ಸಮವಸ್ತ್ರ ಬಣ್ಣ ಬದಲಾವಣೆ ಯಾಗಬೇಕು. ಕಾಲೇಜ್‌ನಲ್ಲಿರುವ ಯಾವುದೇ ವಿದ್ಯಾರ್ಥಿ ಈ ಸಮ ವಸ್ತ್ರವನ್ನು ಧರಿಸಲು ಇಷ್ಟಪಡುತ್ತಿಲ್ಲ.
ಎಲ್‌ಕೆಜಿ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳು ಧರಿ ಸುವ ಸಮವಸ್ತ್ರ ನೀಡಿ ನಮ್ಮ ಕಾಲೇಜಿನ ಹಾಗೂ ನಮ್ಮ ಮರ್ಯಾದೆಯನ್ನು ತೆಗೆದು ಹಾಕಲು ನೀವು ಪ್ರಯತ್ನಿಸು ತ್ತಿದ್ದೀರಿ. ಇದರಿಂದ ತುಂಬಾ ಬೇಸರವಾಗಿದೆ. ಕಾಲೇಜು ಗಳಲ್ಲಿಯೂ ಮುಜುಗರವಾಗಿದೆ. ಇದರ ಬಗ್ಗೆ ಚರ್ಚಿ ಸಲು ಹೋದರೆ ಟೀಸಿ ಕೊಡುತ್ತೇನೆ ಎಂದು ಹೇಳಿ ಬಾಯಿ ಮುಚ್ಚಿಸಿ ಬಿಡುತ್ತಾರೆ.
ಸಮವಸ್ತ್ರ ಜಾರಿಗೆಯಾದದ್ದು ಸಂತೋಷದ ವಿಷ ಯವೇ. ಆದರೆ ಅವರ ಬಣ್ಣ ಯಾವುದೇ ರೀತಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹೋಲಿಕೆಯಾಗುವುದಿಲ್ಲ. ದಯ ವಿಟ್ಟು ಇದನ್ನು ಸರಿಪಡಿಸಿ ವಿದ್ಯಾರ್ಥಿಗಳ ಇಚ್ಛೆಗೆ ಅನು ಸಾರವಾಗಿ ಹಾಗೂ ಸಮವಸ್ತ್ರದ ಬದಲಾವಣೆಯನ್ನು ಕಾಲೇಜು ವಿದ್ಯಾರ್ಥಿ ಸಂಘಟನೆಯ ಈ ಸದಸ್ಯರ ಸಮ್ಮುಖ ದಲ್ಲಿ ಸಭೆ ಕರೆದು ಚರ್ಚಿಸಬೇಕಾಗಿ ವಿನಂತಿಸುತ್ತೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇದಕ್ಕೆ ಸಂಬಂಧಪಟ್ಟವರು ಇದರ ಬಗ್ಗೆ ಗಮನಿಸಿ ನಿಯಾಮನುಸಾರ ಸರಿಯಾದ ರೀತಿಯಲ್ಲಿ ಸಮವಸ್ತ್ರ ಜಾರಿಗೆಗೊಳಿಸಲು ಕೇಳಿಕೊಳ್ಳುತ್ತಿವೆ.
ಮನನೊಂದ ವಿದ್ಯಾರ್ಥಿಗಳು, ಶ್ರೀಗೋಕರ್ಣನಾಥೇಶ್ವರ ಕಾಲೇಜು
ಗೋಲ್‌ಮಾಲ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿ ನಿಂದನೆ ಪ್ರಕರಣ ಠಾಣೆಗಳಲ್ಲಿ ದಾಖಲಾಗುವುದು ಸರ್ವೇ ಸಾಮಾನ್ಯವಾಗಿದೆ. ದಲಿತರ ಕಷ್ಟದಲ್ಲಿ ಭಾಗಿ ಯಾಗದಿದ್ದರೂ ಪರವಾಗಿಲ್ಲ. ಆದರೆ ದಲಿತರ ಜಾತಿ ನಿಂದನೆ ಎಂಬ ಸುಳ್ಳು ಕೇಸು ದಾಖಲಿಸಲು ಕೆಲವು ರಾಜಕೀಯ ಪ್ರೇರಿತ ದಲಿತ ನಾಯ ಕರು ತುದಿಕಾಲಲ್ಲಿ ನಿಂತಿರಲು ಒಂದೇ ಕಾರಣ ಅದು ಏನು ಗೊತ್ತೇ?
ದಲಿತ ದೌರ್ಜನ್ಯ ಕೇಸು ಠಾಣೆಗಳಲ್ಲಿ ದಾಖ ಲಾದರೆ ಆ ಸಂಘಕ್ಕೆ ದಲಿತರಿಗೆ ಪರಿಹಾರ ಎಂಬ ನೆಪದಲ್ಲಿ ಸರಕಾರದಿಂದ ಹೋಗುವ ೫೦೦೦೦ ರೂ.ನ್ನು ಗೋಲ್‌ಮಾಲ್ ಮಾಡಲು ದಲಿತ ನಾಯಕರು ತುದಿಕಾಲಲ್ಲಿ ನಿಂತಿರುವುದು ಒಂದೇ ಕಾರಣ. ಸಣ್ಣ ಪುಟ್ಟ ಮಾತುಕತೆಯಾದರೂ ಅದನ್ನು ಜಾತಿ, ನಿಂದನೆ ಎಂಬ ಹಣೆಪಟ್ಟಿ ಕಟ್ಟಿ ಅಮಾಯ ಕರ ವಿರುದ್ಧ ಕೇಸು ದಾಖಲಿಸಲು ಎಸ್‌ಪಿ ಸಾಹೇಬ್ರ ರಿಗೆ ಫೋನ್ ಮೂಲಕ ಒತ್ತಡ ಹೇರುವ ಈ ಗೋಲ್ ಮಾಲ್ ದಲಿತ ನಾಯಕರಿಗೆ ಎನ್‌ಮಾ ಡ್ಬೇಕು ಸ್ವಾಮಿ?
ಇತ್ತೀಚಿನ ದಿನಗಳಲ್ಲಿ ವಿಐಪಿಗಳಂತೆ ವರ್ತಿ ಸುವ ಈ ದಲಿತ ಕಪಟ ನಾಯಕರಿಗೆ ಪೊಲೀಸ್ ಭದ್ರತೆ ನೀಡಬೇಕು ಎಂಬ ಬೇಡಿಕೆಗೆ ಪೊಲೀಸರು ಸ್ಪಂದಿ ಸಿದರೆ ಅವರ ಅವತಾರಕ್ಕೆ ಆ ದೇವರೇ ಗತಿ. ಹಣ ಮಾಡುವ ಒಂದೇ ಉದ್ದೇಶದಿಂದ ಹುಟ್ಟಿರುವ ದಲಿತ ಸಂಘದ ನಾಯಕರ ವಿರುದ್ಧ ಸೂಕ್ತ ಕ್ರಮವನ್ನು ಸರಕಾರ ಕೈಗೊಳ್ಳಬೇಕು.
ಅಮಾಯಕರ ವಿರುದ್ಧ ಎಫ್‌ಐಆರ್ ದಾಖ ಲಿಸುವ ಠಾಣಾಧಿಕಾರಿಗಳು ಏನು ಎಂಥ ಅಂತ ವಿಚಾರಿಸಬೇಕು. ಕೋರ್ಟಿನಲ್ಲಿ ಕಪಟ ದಲಿತ ನಾಯ ಕರ ಸಾಹಸ ದೋಷದಿಂದ ಹಾಕಿರುವ ಕೇಸು ಸುಳ್ಳು ಎಂಬ ಸಾಬೀತು ಆದರೆ ಅಮಾಯಕರಿಗೆ ಕೋರ್ಟ್ ಕಚೇರಿ ವೆಚ್ಚವನ್ನು ಕೇಸು ದಾಖಲಿಸಿದ ದಲಿತರಿಂದ ಅಮಾಯಕರಿಗೆ ಸಿಗಬೇಕು.
ಇಂತಹ ಕಾನೂನು ಅನ್ನು ಕರ್ನಾಟಕ ಸರ ಕಾರ ಕೂಡಲೇ ಜಾರಿಗೊಳಿಸಬೇಕು. ಸುಳ್ಳು ಕೇಸು ದಾಖಲಿಸುವ ದಲಿತರಿಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು. ದಲಿತರಿಗಾಗಿ ಕೆಲಸ ಮಾಡುವ ನಿಜವಾದ ಕಾಳಜಿಯ ದಲಿತ ನಾಯಕರು ಈ ಬಗ್ಗೆ ಗಮನ ಹರಿಸು ವಂತಾಗಬೇಕು.
ಸುರೇಶ್, ಬೆಳ್ತಂಗಡಿ
ಎಸ್‌ಇಝಡ್ ವಿರೋಧಿಸೋಣ
ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳುತ್ತಿ ರುವ ಎಂಎಸ್‌ಇಝಡ್ ಯೋಜ ನೆಯ ತ್ಯಾಜ್ಯ ನೀರನ್ನು ಪೈಪ್‌ಲೈನ್ ಮೂಲಕ ಸಮುದ್ರಕ್ಕೆ ಸೇರಿಸುವ ಯತ್ನ ಖಂಡನೀಯ ವಾದುದು. ಇದರಿಂದ ಸಮುದ್ರ ಕಲುಷಿತವಾಗು ವುದಲ್ಲದೆ ಮೀನಿನ ಸಂತತಿಯೇ ನಾಶವಾಗುವ ಸಾಧ್ಯತೆಯಿದೆ. ಮೀನು ಗಾರಿಕೆಯನ್ನೇ ವೃತ್ತಿಯನ್ನಾಗಿ ಸ್ವೀಕ ರಿಸಿ ಅದರ ಆಧಾರದಿಂದಲೇ ಸಂಸಾ ರವನ್ನು ನಿಭಾಯಿಸುತ್ತಿರುವ ಮೀನು ಗಾರರು ಇದರಿಂದ ನಿರುದ್ಯೋಗಿ ಗಳಾಗಲಿದ್ದಾರೆ. ಕಂಪೆನಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ನಿರ್ಣಯ ಕೈಗೊಂಡು ಸಮುದ್ರಕ್ಕೆ ತ್ಯಾಜ್ಯದ ಪೈಪ್‌ಲೈನ್ ಅಳವಡಿಸಲು ಮುಂದಾಗಿರುವುದು ಜಿಲ್ಲೆಯ ಜನರು ಒಂದಾಗಿ ತಡೆಯ ಬೇಕಿದೆ. ಕೇವಲ ಮೊಗವೀರ ಜಾತಿ ಬಾಂಧವರು ಮಾತ್ರ ಇಲ್ಲಿ ಮೀನುಗಾರಿಕೆ ನಡೆಸು ತ್ತಿಲ್ಲ. ಬದಲಿಗೆ ಇತರ ಜಾತಿ, ಸಮು ದಾಯಕ್ಕೆ ಸೇರಿರುವ ಜನರೂ ಮೀನು ಗಾರಿಕೆಯನ್ನು ಜೀವನ ನಿರ್ವಹಣೆಗೆ ನೆಚ್ಚಿಕೊಂಡಿದ್ದಾರೆ. ಸರಕಾರ ರೈತನ ಅನ್ನದ ಬಟ್ಟಲಿಗೆ ವಿಷ ಹಾಕಿದ್ದನ್ನೇ ಇಲ್ಲಿಯೂ ಮುಂದುವರಿಸುವ ಯತ್ನ ಬೇಡ. ಆದ್ದರಿಂದ ಪರಿಸರ ಪ್ರೇಮಿ ಗಳು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಸಮುದ್ರ ತೀರಕ್ಕೆ ಕಂಪೆನಿಗಳು ಬೇಲಿ ಹಾಕಿ ಅದನ್ನು ತಮ್ಮ ಖಾಸಗಿ ಸೊತ್ತು ಎಂದುಕೊಳ್ಳ ಬಹುದು. ಇಂಥ ಪ್ರಯತ್ನವನ್ನು ಪ್ರಾರಂಭದಲ್ಲೇ ತಡೆಯುವುದು ಒಳಿತ ಲ್ಲವೇ?
ನಾಗರಿಕರು, ಮುಕ್ಕ



















You can subscribe by e-mail to receive news updates and breaking stories.