ಮೇಷ : ದೂರ ಸಂಚಾರ ಮಾಡುವುದನ್ನು ಲ್ಲಿಸಿ.
ವೃಷಭ : ಧಾರ್ಮಿಕ ಕೆಲಸಗಳಲ್ಲಿ ಭಾಗವಹಿಸುತ್ತೀರಿ.
ಮಿಥುನ : ಕುಟುಂಬದಲ್ಲಿ ನೆಮ್ಮದಿ ಇರುತ್ತದೆ.
ಕರ್ಕಾಟಕ : ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರುತ್ತದೆ.
ಸಿಂಹ : ಮೇಲಾಧಿಕಾರಿಗಳಿಂದ ಒತ್ತಡ ಇರುತ್ತದೆ.
ಕನ್ಯಾ : ದೂರದ ನೆಂಟರು ಮನೆಗೆ ಬರುತ್ತಾರೆ.
ತುಲಾ : ಮ್ಮ ಮುಖ್ಯ ಕೆಲಸಗಳು ನಡೆಯುತ್ತದೆ.
ವೃಶ್ಚಿಕ : ಮನೆಗೆ ಬೇಕಾಗುವ ಸಾಮಾಗ್ರಿಗಳನ್ನು ಖರೀದಿಸುತ್ತೀರಿ.
ಧನು : ಕೆಲಸ ಕಾರ್ಯಗಳನ್ನು ತಾಳ್ಮೆಯಿಂದ ಮಾಡಿರಿ.
ಮಕರ : ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ.
ಕುಂಭ : ವೃತ್ತಿರಂಗದಲ್ಲಿ ಪ್ರಗತಿ ಇರುತ್ತದೆ.
ಮೀನ : ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿ ಬರಲಿದೆ.
Tagged with
bhavishya
ಮಂಗಳೂರು:ಸಾಫ್ಟ್‌ಡ್ರಿಂಕ್ಸ್ ಅಪರೇಟರ್ ಬೇಕು ೯೯೬೪೪೫೫೯೮೮.
ಮಂಗಳೂರು: ಬಟ್ಟೆ ಅಂಗಡಿಗೆ ಜನ ಬೇಕು ೮೨೭೭೪೦೫೩೬೩.
ಕಾಸರಗೋಡು: ಹೌಸ್‌ಕೀಪಿಂಗ್, ಸೂಪರ್ ವೈಸರ್ ಬೇಕು ೯೯೧೬೧೧೯೪೬೯
ಪಿವಿಎಸ್: ಕಂಪೆನಿಗೆ ಕ್ಲರ್ಕ್ ಬೇಕು ೯೭೪೩೩೯೦೭೯೭
ಮೂಲ್ಕಿ: ಪ್ರಿಂಟರ್ ಬೇಕು ೮೭೪೮೮೭೦೬೯೧.
ಕಾವೂರು: ಲೇಡೀಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು: ಕಚೇರಿ ಕೆಲಸಕ್ಕೆ ಹುಡುಗರು ಬಏಕು ೯೪೪೮೮೪೩೪೯೯.
ಬಂದರ್: ಕೆಲಸಕ್ಕೆ ಜನ ಬಏಕು ೯೪೪೮೩೦೭೬೭೯೯.
ಅಳಕೆ: ಪ್ರಿಂಟಿಂಗ್ ಪ್ರೆಸ್‌ಗೆ ಬೈಂಡಿಂಗ್ ತಿಳಿದಿರುವವ ಯುವತಿಯರು ಬೇಕು ೯೮೮೬೬೯೨೨೧೫.
ಮಂಗಳೂರು: ಪವರ್ ಸರ್ವಿಸ್ ಸಂಸ್ಥೆಗೆ ಡೀಸೆಲ ಮೆಕ್ಯಾನಿಕ್ ಬೇಕು. ೯೮೪೫೨೫೩೫೮೨
ಕಾರ್ಕಳ : ಬಾರ್ & ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೇಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ್ ಬೇಕು ೯೪೪೮೧೦೯೬೮೬.
ಕೊಣಾಜೆ : ಸ್ಟುಡಿಯೋಗೆ ಕೆಲಸಕ್ಕೆ ಜನ ಬೇಕು ೮೭೨೨೭೨೧೦೫೦.
ಉಡುಪಿ : ಸಸ್ಯಾಹಾರಿ ಹೊಟೇಲಿಗೆ ತಿಂಡಿ ಮಾಡುವವರು, ಸಪ್ಲಾಯರ್ ೯೬೬೩೦೯೮೦೨೫.
ಕಾವೂರು : ಕಾರ್ ಡ್ರೈವರ್ ಬೇಕು ೭೨೦೪೬೪೩೪೫೫.
ಮಂಗಳೂರು : ಸೇಲ್ಸ್ ಗರ್ಲ್ಸ್ ಬೇಕು ೮೨೭೭೧೬೫೬೬೨.
ಮಂಗಳೂರು : ಕಾರ್ ಡ್ರೈವರ್‌ಬೇಕು ೦೮೨೪-೪೨೬೮೫೨೪.
ಮಂಗಳೂರು : ಕಂಪ್ಯೂಟರ್ ತರಗತಿ, ಟ್ಯೂಷನ್ ಮತ್ತು ಸಂಸ್ಥೆಯ ಮೇಲ್ವಿಚಾರಣೆ ಗೆ ಜನ ಬೇಕು ೭೨೦೪೬೪೩೪೫೫.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಮ್ಯಾನ್ ಬೇಕು ೯೮೪೪೪೬೪೩೭೭.
ಮೋರ್ಗನ್‌ಗೇಟ್ : ಟ್ಯೂಷನ್ - ಕಂಪ್ಯೂಟರ್ ತರಗತಿ ನೀಡಲು ಪುರುಷರು, ಮಹಿಳೆಯರು ಬೇಕು ೯೯೭೨೭೨೫೩೫೭.
ಕೊಡಿಯಾಲ್‌ಬೈಲ್ : ಟ್ರಾವೆಲ್ ಏಜೆನ್ಸಿಗೆ ಲೇಡೀಸ್ ಸ್ಟಾಫ್ ಬೇಕು ೨೪೯೭೮೬೨.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೈಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಟೈಲರ್ & ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.
ಕಾವೂರು : ಲೇಡಿಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು : ಲೇಡಿಸ್ ಹಾಸ್ಟೆಲ್‌ಗೆ ಮಹಿಳಾ ಅಡುಗೆಯವರು ಬೇಕು ೯೨೪೧೨೧೪೧೨೨.
ಮಂಗಳೂರು : ಮನೆ ಬಾಡಿಗೆಗೆ ಇದೆ ೯೮೮೬೩೩೦೨೭೧.
ಸುರತ್ಕಲ್ : ಬಟ್ಟೆ ಅಂಗಡಿ ಕೆಲಸಕ್ಕೆ ಆಸುಪಾಸಿನ ಜನ ಬೇಕು ೮೪೯೪೮೫೮೫೪೪.
Tagged with
udyoga
ಎಚ್.ಡಿ. ಜೈಕುಮಾರ, ಸಕಲೇಶಪುರ
‘ಗುಡಿ, ಚರ್ಚು,ಮಸೀದಿಗಳ ಬಿಟ್ಟು ಹೊರಬನ್ನಿ. ಬಡತನವ ಬುಡಮಟ್ಟ ಕೀಳಬನ್ನಿ ಎಂಬ ಕವಿವಾಣಿ ಕೇವಲ ಲೇಖನ ಹಾಗೂ ಪುಸ್ತಕಕ್ಕೆ ಸೀಮಿತವಾಯಿ ತೇನೋ ಎಂಬಂತೆ ಇಂದು ಖಾಸಗಿ ಒಡೆತನದ ಪ್ರಾರ್ಥನಾ ಮಂದಿರಗಳು ಹೆಚ್ಚಾಗಿ, ಭಕ್ತರ ನಡುವೆಯೂ ಭೇದವೆಣಿಸುವ ಸ್ಥಿತಿ ಬಂದೊದಗಿದೆ. ಕಮರ್ಷಿಯಲ್ ದೇವರುಗಳನ್ನು ಹೊತ್ತು ಮೆರೆಸುವ ಹೈಟೆಕ್ ಭಕ್ತರು, ಮನದಾಳದಲ್ಲಿ ಅಡಗಿರಬೇಕಾದ ತಮ್ಮ ಭಕ್ತಿಯನ್ನು ಆಡಂಬರ, ಶ್ರೀಮಂತಿಕೆಯ ತೋರ್ಪಡಿಕೆಯೊಂದಿಗೆ ಪ್ರದರ್ಶಿಸಲು ಮುಂದಾಗಿರುವುದೇ ಇದಕ್ಕೆಲ್ಲಾ ಕಾರಣ ಎನ್ನಬಹುದು.
ದಿನ ಬೆಳಗಾದರೆ, ಎಲ್ಲೆಂದರಲ್ಲಿ ತಲೆ ಎತ್ತುವ ವಿವಿಧ ದೇವಾಲಯಗಳು ತನ್ನ ಅಭಿವೃದ್ಧಿ ಮಾಡಿಕೊಳ್ಳಲು ದೇವರ ಹೆಸರನ್ನು ನಡುವೆ ತಂದು, ಊರ ಶ್ರೀಮಂತರ ಪಟ್ಟಿ ಮಾಡಿ, ಅದರಲ್ಲಿ ಹಿರಿಯವರಾದವರನ್ನು ಟ್ರಸ್ಟಿಗಳನ್ನಾಗಿಸಿ, ಹಬ್ಬ, ಉತ್ಸವ, ಜಾತ್ರೆ, ಧರ್ಮ ಪ್ರಚಾರದ ನೆಪ ಒಡ್ಡಿ, ವರ್ಷವಿಡೀ ಚಂದಾ ವಸೂಲಿಯಲ್ಲಿ ತೊಡಗಿರುವುದನ್ನು ನೋಡಿದರೆ, ಇದು ಭಕ್ತಿಯೋ, ಸುಲಿಗೆಯೋ ಎಂಬುದು ಅರ್ಥವಾಗುವುದಿಲ್ಲ. ಇಂತಹ ದೇವಸ್ಥಾನಗಳಲ್ಲೇ ತಮ್ಮ ಭಕ್ತಿಯನ್ನು ಅಭಿವ್ಯಕ್ತಿ ಗೊಳಿಸಲು ಇಷ್ಟಪಡುವ ಜನರು ಹಿಂಡು ಹಿಂಡಾಗಿ ಮುಗಿ ಬಿದ್ದು, ಇದ್ದರೂ, ಇಲ್ಲದಿದ್ದರೂ, ಕೊನೆ ಪಕ್ಷ ಸಾಲ ಮಾಡಿಯಾದರೂ ದೇವಸ್ಥಾನಗಳಿಗೆ ದೇಣೀಗೆ ನೀಡುವ ಪರಿಪಾಠ ರೂಢಿಸಿಕೊಂಡಿದ್ದು, ಒಂದು ಬಗೆಯ ಸಮೂಹ ಸನ್ನಿಯಾಗಿ ಭಾಸವಾಗುತ್ತದೆ.
ಇಂತಹ ದೇವಸ್ಥಾನಗಳನ್ನು ನಡೆಸುವವರು, ಭಕ್ತರಿಂದ ಯಾವ ರೀತಿಯಲ್ಲೆಲ್ಲಾ ಹಣ ಪಡೆಯಬಹುದು ಎಂಬು ದನ್ನು ಕೂಡಿ, ಕಳೆದು, ಎಲ್ಲಾ ವಿಧಾನವನ್ನೂ ಪ್ರಯೋ ಗಿಸಿ, ತಮ್ಮ ಬೊಕ್ಕಸ ತುಂಬಿಸಿಕೊಳ್ಳುತ್ತಾರೆ. ವರ್ಷವಿಡೀ ಒಂದಲ್ಲಾ ಒಂದು ಕಾರ್ಯಕ್ರಮವನ್ನು ಆಯೋಜಿಸಿ, ಕೆಲ ಉತ್ಸಾಹಿ ಭಕ್ತರನ್ನು ಸಂಚಾಲಕ, ಕಾರ್ಯಕರ್ತನ ನ್ನಾಗಿಸಿಕೊಂಡು, ಅವರ ಮೂಲಕ ವಸೂಲಿಗಿಳಿಯು ತ್ತಾರೆ. ಹೆಸರಿಗೆ ಮಾತ್ರ ಉದ್ಧಾರದ ಕಾರ್ಯಗಳನ್ನು ಮಾಡಿ, ಇನ್ನುಳಿದ ಶೇ.೯೫ಕ್ಕೂ ಹೆಚ್ಚು ಭಾಗವನ್ನು ಗುಡಿಯೊಳಗೆ ಭದ್ರ ಪಡಿಸಿಕೊಳ್ಳುತ್ತಾರೆ .ಇಂತಹ ಕಮ ರ್ಷಿಯಲ್ ದೇವರುಗಳೇ ಬೇಕೆಂದು ಓಡೋಡಿ ಹೋಗುವ ಭಕ್ತರು ತಮ್ಮ ಪಕ್ಕದ ಮನೆಯಲ್ಲಿ ತಿನ್ನಲು ಒಂದುಹೊತ್ತು ಅನ್ನಕ್ಕೂ ಗತಿ ಇಲ್ಲದ ಬಡ ಸಂಸಾರವಿದ್ದರೂ, ಅತ್ತ ಕಿಂಚಿತ್ತೂ ಚಿತ್ತ ಹರಿಸದೆ, ಎಲ್ಲರೆದುರು ವಯ್ಯಾರದಿಂದ ಬೀಗುತ್ತಾ, ದೇವಸ್ಥಾನಗಳಿಗೆ ದಾನ, ದತ್ತಿ, ಕೊಡುಗೆ, ಕಾಣಿಕೆ, ಹರಕೆ ಮೊದಲಾದ ಹೆಸರಿನಲ್ಲಿ ಹಣ ನೀಡುತ್ತಾರೆ.
ಒಂದು ಊರಿನಲ್ಲಿ ಇಂತಹ ಮೂರು-ನಾಲ್ಕು ದೇವಸ್ಥಾನ ಗಳಿದ್ದರಂತೂ ಮುಗಿಯಿತು. ಅವರಿಗಿಂತ ನಾವೇನು ಎಂಬಂತೆ, ದೇವರುಗಳ ನಡುವೆ ಕಚ್ಚಾಟ ತಂದು, ರಾಜಕೀಯ ಪಕ್ಷಗಳು ಸಂಘಟಕರು, ಕಾರ್ಯಕರ್ತರನ್ನು ಗುಡ್ಡೆ ಹಾಕಿಕೊಳ್ಳುವಂತೆ, ತಮ್ಮ ಪಾಬಲ್ಯ ಮೆರೆಯಲು ಸಂಚು ರೂಪಿಸುತ್ತಿರುತ್ತಾರೆ. ಎಲ್ಲಾ ಧರ್ಮಗಳಲ್ಲಿಯೂ ಇದೇ ಚಾಳಿ ಇದೆಯಾದರೂ, ಹಿಂದೂ ದೇವರುಗಳಲ್ಲಿ ಒಂದು ಕೈ ಮೇಲೆ. ಆ ಊರಲ್ಲಿ ಆಸ್ಪತ್ರೆ, ಅನಾಥಾಲಯ, ವೃದ್ಧಾಶ್ರಮ, ಉತ್ತಮ ಶಾಲೆ-ಕಾಲೇಜುಗಳು ಇರುತ್ತವೋ, ಇಲ್ಲವೋ ಗೊತ್ತಿಲ್ಲ. ಆದರೆ, ಗಲ್ಲಿಗೊಂದು, ಮೂಲೆಗೊಂದು ದೇವಸ್ಥಾನಗಳಂತೂ ಇದ್ದೇ ಇರುತ್ತದೆ. ಯಾರು ಉಂಡರೂ, ಬಿಟ್ಟರೂ, ಹಸಿದು ಸತ್ತರೂ, ಈ ದೇವರುಗಳಿಗೆ ಮಾತ್ರ ಪ್ರತಿದಿನ ಮೃಷ್ಠಾನ್ನ ಭೋಜನ ತಪ್ಪುವುದಿಲ್ಲ.
ಭಕ್ತಿ ಎಂಬುದು ಮನುಷ್ಯನ ಹೃದಯದಲ್ಲಿದ್ದರೆ, ಆತ ನೀಡುವ ಬಿಡಿಗಾಸೂ ಸಹ ದೇವರಿಗೆ ಸಮರ್ಪಿತವಾಗುತ್ತದೆ. ಅದೇ, ಮನ ಸ್ಸಲ್ಲಿ ವಿಷಕಾರಿ, ಕಂಡವರ ಹೊಟ್ಟೆ ಮೇಲೆ ಹೊಡೆದು ಸಂಪಾದಿ ಸಿದ ಹಣವನ್ನು ಚೀಲಗಟ್ಟಲೆ ತಂದು ಇಂತಹ ದೇವರುಗಳ ಮುಂದೆ ಸುರಿದರೂ ಅದು ನಿರರ್ಥಕ. ದುಡ್ಡು ಕೊಟ್ಟರೆ ಮಾತ್ರವೇ ದೇವರು ಒಲಿಯುವುದೇನೋ ಎಂಬ ಮನಸ್ಥತಿ ಎಲ್ಲರಲ್ಲಿ ನೆಲೆಯೂರಿದಂತೆ ತೋರುತ್ತಿದ್ದು, ತಮಗಿಲ್ಲದಿದ್ದರೂ, ದೇವರಿಗೆ ಕಾಣಿಕೆ ನೀಡುವ ಬಡ ಭಕ್ತರು, ದೇವಸ್ಥಾನಕ್ಕೆ ಬರುವ ಇತರೆ ಶ್ರೀಮಂತರಿಗೆ ಸರಿಸಮ ವಾಗಲು ಹವಣಿಸುತ್ತಾರೆ. ದೇವರಿಗೆ ನೀಡಿದರೆ ನಾವು ಅವರಂತೆ ಹಣ ಮಾಡುತ್ತೇವೆ ಎಂದು ಭ್ರಮಿಸುತ್ತಾರೆ.
ನಮ್ಮ ನಾಡಿನಲ್ಲಿರುವ ಎಷ್ಟೋ ಮುಜರಾಯಿ ದೇವಾಲಯ ಗಳು ಇಂದು ಶಿಥಿಲಗೊಳ್ಳುತ್ತಿವೆ. ಭಕ್ತರೇ ಬಾರದೆ, ಅಲ್ಲಿನ ಅಸಲಿ ಅರ್ಚಕರು ಅನ್ನಕ್ಕೂ ಗತಿ ಇಲ್ಲದೆ ನಲುಗುತ್ತಿದ್ದಾರೆ ಸರ್ಕಾರಿ ಪ್ರಾರ್ಥನಾ ಮಂದಿರಗಳು ಬಡವರಿಗಾದರೆ, ಖಾಸಗಿ ಮಂದಿರಗಳು ಉಳ್ಳವರ ಸ್ವತ್ತಾಗಿಬಿಟ್ಟಿದೆ. ದುಡ್ಡಿದ್ದವರಿಗೆ ಮಾತ್ರ ಇಲ್ಲಿ ಮಣೆ. ಹಣ ಕೊಟ್ಟರೆ ಮಾತ್ರವೇ ಹಾರ, ತುರಾಯಿ, ದೊಡ್ಡ ದೊಡ್ಡ ಪ್ರಸಾದದ ಬುಟ್ಟಿ ಗಳು, ಶಾಲು ಇತ್ಯಾದಿ. ಇಲ್ಲಾದರೆ, ಕೇವಲ ದೇವರನ್ನು ತೊಳೆದ ನೀರು, ಸ್ವಲ್ಪ ಹೂವು ಅಷ್ಟೆ.
ಇಂತಹ ಕಮರ್ಷಿಯಲ್ ದೇವರುಗಳಿಂದ ಯಾರಿಗೇನು ಲಾಭ ಎಂಬ ಪ್ರಶ್ನೆಗೆ ನೇರ ಉತ್ತರವೆಂದರೆ, ಅದು ಕೇವಲ ದೇವಸ್ಥಾನ ನಡೆಸಿದವರಿಗೆ ಮಾತ್ರ. ಅವರ ಉದ್ಧಾರಕ್ಕಾಗಿ ಭಕ್ತಿಯ ಲೇಪನ ಮಾಡಿ, ಮಿಕ್ಕಿದ್ದೆಲ್ಲವನ್ನೂ ಸುಲಿಗೆ ಮಾಡುವ ಚಾಣಾಕ್ಷರ ಏಳಿಗೆಗೆ ಮಾತ್ರ. ದೇವಸ್ಥಾನಗಳು ಮನಶಾಂತಿ ನೀಡುವ ಪವಿತ್ರ ಕೇಂದ್ರಗಳಾಬೇಕೇ ಹೊರತು, ಸುಲಿಗೆ ಮಾಡುವ ಕಾಳಸಂತೆ ಆಗಬಾರದು. ಭಕ್ತಿಗೆ ಎಷ್ಟು ಬೇಕೋ ಅಷ್ಟರಲ್ಲಿ ಮಾತ್ರ ದೇವರನ್ನು ಕಾಣಬೇಕು. ಆತನಿಗೆ ಸೇವೆ ಸಲ್ಲಿಸಬೇಕು. ದೇವರು ಬಯಸುವುದು ಭಕ್ತಿಯನ್ನು ಮಾತ್ರವೇ ಹೊರತು ಕೊಡು ಕೊಳ್ಳುವ ವ್ಯವಹಾರವೆಲ್ಲಾ ಕೆಲವರ ಸ್ವಾರ್ಥ ಚಿಂತನೆಯ ಟ್ರಸ್ಟ್‌ಗಳಿಗೆ ಎಂಬುದನ್ನು ಎಲ್ಲರೂ ಮನಗಂಡರೆ, ಇಂತಹ ಕಮರ್ಷಿ ಯಲ್ ಪ್ರಾರ್ಥನಾ ಮಂದಿರಗಳಿಗೆ ಕಡಿವಾಣ ಹಾಕಬಹುದು. ಇದು ಕನಸಿನ ಮಾತು ಎಂಬುದು ಸರ್ವಕಾಲಿಕ ಸತ್ಯವಾದರೂ, ಅತ್ಯಂತ ಕುಶಾಗ್ರ ಹಾಗೂ ಬುದ್ಧಿವಂತ ಜೀವಿಯಾದ ಮನುಷ್ಯನ ಸೂಕ್ಷ್ಮ ಚಿಂತನೆಯ ಮನಸ್ಸು, ಒಳ್ಳೆಯ ರೀತಿಯಿಂದ ಸಮಾಜಮುಖಿಯಾಗಿ ಚಿಂತಿಸಿದರೆ, ಈ ಕೆಲಸ ಕಷ್ಟವೇನೂ ಅಲ್ಲ
Tagged with
lekhana,
varakkondu
ಮಂಗಳೂರು ಮಹಾನಗರ ಪಾಲಿಕೆ ಅಥವಾ ಸರ್ಕಾರ ಇಂತಹ ಮಹಾನ್ ನಾಯಕನ ಹೆಸರನ್ನು ಸ್ಮರಣೀಯಗೊಳಿಸಲು ಅತ್ತಾವರದ ಒಂದು ರಸ್ತೆಗೆ ‘ಅತ್ತಾವರ ಎಲ್ಲಪ್ಪ ರಸ್ತೆ’ ಎಂದು ನಾಮಕರಣ ಮಾಡಲಿ, ಈ ಮಹಾನ್ ನಾಯಕನ ಪ್ರತಿಮೆಯನ್ನು ಸ್ಥಾಪಿಸಿ ಶಾಶ್ವತ ಸ್ಮಾರಕ ರಚನೆಯಾಗಲಿ. ಮಂಗಳೂರು ವಿಶ್ವ ವಿದ್ಯಾನಿಯದಲ್ಲಿ ವಿಶೇಷ ಅಧ್ಯಯನ ಕೇಂದ್ರದ ಸ್ಥಾಪನೆಯಾಗಲಿ.
ಬಿ.ಎಸ್, ಎಡಪದವು
ಮೇ ೧೭ರಂದು ಪ್ರಕಟವಾದ ಚಾವಡಿ ಬರಹಕ್ಕೆ ಪ್ರತಿಕ್ರಿಯೆ
ಅತ್ತಾವರ ಎಲ್ಲಪ್ಪ ಶತಮಾನೋತ್ಸವದ ಬಗ್ಗೆ ಬರೆದ ಲೇಖನವೊಂ ದರಲ್ಲಿ ಲೇಖಕರೊಬ್ಬರು ಬರೆದಂತೆ ‘ಈ ನಾಡಿಗೆ ಗಾಣಿಗನೊಬ್ಬನ ಸೇವೆ ಯನ್ನು ಅದರ ಮಾಹಿತಿಯನ್ನು ಹೆಚ್ಚಿನ ರೀತಿಯಲ್ಲಿ ಆಸಕ್ತಿ ವಹಿಸಿ ಪ್ರಚಾರ ಪಡಿಸಬೇಕಾದದ್ದು ಗಾಣಿಗರ ಆದ್ಯ ಕರ್ತವ್ಯ.
೨೦೧೨ರ ಜನ್ಮ ಶತಮಾನೋತ್ಸವ ಉತ್ಸವವನ್ನು ಗಾಣಿಗರ ಹಬ್ಬ ವೆಂದು ಆಚರಿಸಬೇಕು’ ಎಂದು ಹೇಳಿದ್ದರು. ಆದರೆ ಅತ್ತಾವರ ಎಲ್ಲಪ್ಪ ಗಾಣಿಗ ಎನ್ನಲು ನಾಚಿಕೆಯೇ? ಎಂದು ನವೀನ್ ಕುಮಾರ್ ಅತ್ತಾವರ ಎಂಬವರು ಬರೆದಂತೆ ಗಾಣಿಗ ಸಮಾಜವನ್ನು ಸಂಪೂರ್ಣ ಕತ್ತಲಿನಲ್ಲಿ ಡಲಾಯಿತು ಎಂಬುದು ಸಂಪೂರ್ಣ ಸತ್ಯ ವಿಚಾರ. ಇಲ್ಲಿ ಈ ಶತಮಾ ನೋತ್ಸವದಲ್ಲಿ ಅವರು ‘ಗಾಣಿಗರು’ ಎಂಬುದನ್ನು ತಿಳಿಸಲು ಸಂಕೋಚ ಪಟ್ಟದ್ದು ಯಾಕೆ ಎಂದು ಅರ್ಥವಾಗುವುದಿಲ್ಲ.
ಬಾಲಣ್ಣ ಸಪಳಿಗ ಹಾಗೂ ವೆಂಕಮ್ಮ ಇವರ ಸುಪುತ್ರ ದೇಶಭಕ್ತ ಅತ್ತಾ ವರ ಎಲ್ಲಪ್ಪನವರು ತಮ್ಮ ಪತ್ನಿ ಸೀತಮ್ಮನ ಜೊತೆ ಕೇವಲ ೧೭ ದಿನ ಸಂಸಾರ ನಡೆಸಿ ತಮ್ಮ ಪ್ರಾಣವನ್ನು ದೇಶಕ್ಕೆ ಅರ್ಪಣೆ ಮಾಡಿದ ಧೀಮಂತ ವ್ಯಕ್ತಿ! ಇಂತಹ ಮಹಾನ್ ವ್ಯಕ್ತಿಯ ಶತಮಾನೋತ್ಸವ ಸಮಾರಂಭದಲ್ಲಿ ಅದು ಸಾರ್ವಜನಿಕ ಕಾರ್ಯಕ್ರಮವಾಗಿದ್ದರೂ ಅವರು ಗಾಣಿಗ ಜಾತಿ ಯಲ್ಲಿ ಹುಟ್ಟಿದವರು ಎಂದು ಹೇಳಲು ನಾವು ಹೆಮ್ಮೆ ಪಡಬೇಕಿತ್ತು. ಗಾಣಿಗ ಸಮಾಜದ ಸಂಘಟನೆ, ಅಭಿವೃದ್ಧಿ, ಉದ್ದಾರ ಎಂದು ವೇದಿಕೆಯಲ್ಲಿ ಗಂಟ ಗಟ್ಟಲೆ ಭಾಷಣ ಬಿಗಿಯುವ ನಮ್ಮ ಸಮಾಜದ ಮುಖಂಡರ ಬಾಯಲ್ಲೂ ಅವರು ಗಾಣಿಗ ಎಂದು ಹೇಳಲು ಅಸಹ್ಯವಾದದ್ದು ಯಾಕೆ?
ಮಂಗಳೂರು ಮಹಾನಗರ ಪಾಲಿಕೆ ಅಥವಾ ಸರ್ಕಾರ ಇಂತಹ ಮಹಾನ್ ನಾಯಕನ ಹೆಸರನ್ನು ಸ್ಮರಣೀಯಗೊಳಿಸಲು ಅತ್ತಾವರದ ಒಂದು ರಸ್ತೆಗೆ ‘ಅತ್ತಾವರ ಎಲ್ಲಪ್ಪ ರಸ್ತೆ’ ಎಂದು ನಾಮಕರಣ ಮಾಡಲಿ, ಈ ಮಹಾನ್ ನಾಯಕನ ಪ್ರತಿಮೆಯನ್ನು ಸ್ಥಾಪಿಸಿ ಶಾಶ್ವತ ಸ್ಮಾರಕ ರಚನೆಯಾಗಲಿ. ಮಂಗ ಳೂರು ವಿಶ್ವ ವಿದ್ಯಾನಿಯದಲ್ಲಿ ವಿಶೇಷ ಅಧ್ಯಯನ ಕೇಂದ್ರದ ಸ್ಥಾಪನೆಯಾ ಗಲಿ.
ದ.ಕ. ಜಿಲ್ಲಾ ಗಾಣಿಗ ಸಂಘ ಹಾಗೂ ಇನ್ನಿತರ ತಾಲೂಕು, ಗ್ರಾಮೀಣ ಸಂಘಗಳು ಜೊತೆಯಾಗಿ ಗಾಣಿಗ ಸಮಾಜದ ಮೂಲಕ ಸರ್ಕಾರಕ್ಕೆ ಒತ್ತಾಯ ತರುವುದು ಇಂದಿನ ಅಗತ್ಯವಾಗಿದೆ. ಅತ್ತಾವರ ಎಲ್ಲಪ್ಪರಂತಹ ವೀರ ಯೋಧರ ನೆನಪಿಗಾಗಿ ಶಿಕ್ಷಣ ಸಂಸ್ಥೆಗಳು ಗಾಣಿಗ ಸಂಘಗಳ ಮೂಲಕ ಸ್ಥಾಪನೆಯಾದಾಗ ಮಾತ್ರ ಇದು ಸಮಾಜಕ್ಕೆ ದೊಡ್ಡ ಕೊಡುಗೆ ಯಾಗಬಹುದು. ಈ ನಿಟ್ಟಿನಲ್ಲಿ ನಮ್ಮ ಸಮಾಜ ಬಾಂಧವರು, ಸಂಘ ಸಂಸ್ಥೆಗಳು ಯೋಚಿಸಲಿ.
ಅತ್ತಾವರ ಎಲ್ಲಪ್ಪ ಶತಮಾನೋತ್ಸವ ಗಾಣಿಗ ಸಂಘಗಳ ಪ್ರಾಧಾನ್ಯತೆ ಯಿಂದ ಜರಗಿರುತ್ತಿದ್ದರೆ ಬಹುಷಃ ಇದು ಗಾಣಿಗರ ಹಬ್ಬವಾಗಿ ಪರಿ ವರ್ತನೆಯಾಗಿ ಇನ್ನೂ ಹೆಚ್ಚಿನ ಸಂಭ್ರಮ, ಹಾಗೂ ವೈಭವದಿಂದ ಆಚರಿ ಸಬಹುದಿತ್ತು ಸ್ವಾತಂತ್ರ್ಯ ವೀರರ ಬಗ್ಗೆ ಸಾರ್ವಜನಿಕ ಸಂಭ್ರಮ ಇದು ಆದರೂ ಸಂಘ, ಸಮಾಜಗಳಿಗೆ ಪ್ರಾಧಾನ್ಯತೆ ಕೊರತೆಯಾದ ಕಾರಣ ‘ಗಾಣಿಗ ಸಮಾಜ’ ಕತ್ತಲೆಯಲ್ಲೇ ಉಳಿಯಿತು.
Tagged with
chavadi
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ಸರ್, ನನಗೆ ೧೯ ವರ್ಷ ವಯಸ್ಸು. ನಾನು ಪಿಯುಸಿ ಮುಗಿಸಿ ಕಂಪ್ಯೂಟರ್ ಕಲಿಯುತ್ತಿದ್ದೇನೆ. ನನಗೆ ಒಬ್ಬ ಹುಡು ಗನ ಜತೆ ಲವ್ ಆಗಿದೆ. ಆತನೂ ನನ್ನ ಬ್ಯಾಚ್‌ನಲ್ಲೇ ಇದ್ದಾನೆ. ನಾವು ನಾಲ್ಕು ತಿಂಗಳಿನಿಂದ ಪ್ರೀತಿಸುತ್ತಿದ್ದೇವೆ. ಆತನಿಗೆ ೨೨ ವರ್ಷ ವಯಸ್ಸು. ನಮ್ಮದು ಒಂದೇ ಜಾತಿ ಆಗಿರುವ ಕಾರಣ ನಾವು ತುಂಬಾ ಕ್ಲೋಸ್ ಆಗಿದ್ದೇವೆ. ಆತ ನನ್ನನ್ನು ಕೆಲವೊಮ್ಮೆ ಕ್ಲಾಸ್ ಮುಗಿದ ಬಳಿಕ ಮನೆಯವರೆಗೆ ಬೈಕ್‌ನಲ್ಲಿ ಡ್ರಾಪ್ ಕೊಡು ತ್ತಾನೆ. ನನ್ನ ಮನೆಯಲ್ಲಿ ತುಂಬಾ ಸ್ಟ್ರಿಕ್ಟ್ ಇದ್ದಾರೆ. ನಾನು ಮತ್ತು ಆತ ಮುಂದೆ ಮದುವೆಯಾಗುವ ಯೋಚನೆ ಹೊಂದಿಲ್ಲ. ನಾವಿಬ್ಬರೂ ಮದುವೆಯಾಗುವವರೆಗೆ ಪ್ರೀತಿಸೋಣ ಎಂದು ಕೊಂಡಿದ್ದೇವೆ.
ನಾನು ನೋಡಲು ಆಕರ್ಷಕವಾಗಿದ್ದೇನೆ. ನಾವು ತಿಂಗಳಿ ಗೊಮ್ಮೆ ಸುತ್ತಾಡಲು ಹೋಗುತ್ತೇವೆ. ಬೀಚ್‌ಗಳಿಗೆ ತೆರಳಿದಾಗ ಆತ ನನ್ನ ಜತೆ ತುಂಬಾ ರೊಮ್ಯಾನ್ಸ್ ಮಾಡುತ್ತಾನೆ. ನನಗೂ ಆತ ನನ್ನ ಜೊತೆ ರೊಮ್ಯಾನ್ಸ್ ಮಾಡುವುದು ಖುಷಿ ಆಗು ತ್ತದೆ. ನಾವು ಈವರೆಗೆ ಸೆಕ್ಸ್ ಮಾಡಿಲ್ಲ. ಆತ ಒತ್ತಾಯಿಸಿದರೂ ನಾನು ಬೇಡ ಎಂದಿದ್ದೇನೆ. ಆತ ನನ್ನ ಮಾತನ್ನು ಕೇಳುತ್ತಾನೆ. ಆತ ಏಕಾಂತದಲ್ಲಿ ನನ್ನ ಸ್ತನಗಳನ್ನು ಹಿಡಿದು ಉದ್ರೇಕಿಸುತ್ತಾನೆ. ಆತನಿಗೆ ಹಾಗೆ ಮಾಡುವುದೆಂದರೆ ತುಂಬಾ ಇಷ್ಟವಂತೆ. ಹಾಗೆಲ್ಲಾ ಮಾಡಬಾರದು ಎಂದು ಹೇಳಿದರೆ ಪ್ರೀತಿಯಲ್ಲಿ ಇದೆಲ್ಲಾ ಕಾಮನ್ ಎಂದಿದ್ದಾನೆ. ಇದು ನಿಜವೇ? ನನ್ನ ಗೆಳತಿಯೊಬ್ಬಳು ಮಾತ್ರ ಸ್ತನಗಳನ್ನು ಹಿಡಿದು ಒತ್ತುವುದರಿಂದ ಸ್ತನ ಕ್ಯಾನ್ಸರ್ ಬರುತ್ತದೆ ಎಂದಿದ್ದಾಳೆ. ನನಗೆ ಏನು ಮಾಡಬೇಕೆಂದೇ ತೋಚುತ್ತಿಲ್ಲ. ನನ್ನ ಸ್ತನದ ಗಾತ್ರ ಹಿಂದೆ ಇದ್ದುದಕ್ಕಿಂತ ದೊಡ್ಡದಾಗಿದೆ. ನಾನು ಮುಂದೆಯೂ ಆತನಿಗೆ ಸೆಕ್ಸ್‌ಗೆ ಅವ ಕಾಶ ನೀಡುವುದಿಲ್ಲ. ಇದು ಯಾವುದಾದರೂ ಖಾಯಿಲೆಯ ಲಕ್ಷಣವೇ? ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನೀವು ಕಲಿಯುವ ವೇಳೆಯಲ್ಲಿ ಪ್ರೀತಿ, ಪ್ರೇಮ ಎಂದು ಸಮಯ ವನ್ನು ವ್ಯರ್ಥ ಮಾಡುತ್ತಿದ್ದೀರಿ ಎಂದೇ ಅನಿಸುತ್ತಿದೆ. ನೀವಿಬ್ಬರೂ ಮುಂದೆ ಮದುವೆಯಾಗುವುದಿಲ್ಲ. ಆದರೂ ಪರಸ್ಪರ ಸಂಗ ಬೆಳೆ ಸಿದ್ದೀರಿ. ಆತ ನಿಮ್ಮಂತೆಯೇ ಇನ್ನಾರನ್ನೋ ಇದೇ ರೀತಿ ನಂಬಿಸಿ ರುವ ಸಾಧ್ಯತೆಯೂ ಇದೆ.
ಇಂಥವರು ಬೇಕಾದಷ್ಟು ಮಂದಿ ಸಿಗುತ್ತಾರೆ. ನೀವೀಗ ಸ್ವಲ್ಪವೇ ಎಚ್ಚರ ತಪ್ಪಿದರೂ ಆತ ನಿಮ್ಮನ್ನು ಯಾಮಾರಿಸಿ ತನ್ನ ಕೆಲಸವನ್ನು ಪೂರ್ತಿಗೊಳಿಸುತ್ತಾನೆ. ಅನಗತ್ಯ ಆತನೊಂದಿಗೆ ಓಡಾಟ ಬೇಡ. ಸ್ತನವನ್ನು ಮರ್ದಿಸುವುದು, ಬಾಯಿ ಹಾಕಿ ಚೀಪುವುದು ಲೈಂಗಿಕ ಕ್ರಿಯೆಯ ವೇಳೆ ಹೆಣ್ಣನ್ನು ಉದ್ರೇಕಿಸುವ ಒಂದು ಸಾಮಾನ್ಯ ಭಾಗ. ಇದರಿಂದ ಯಾವ ಖಾಯಿಲೆಯೂ ಬರುವುದಿಲ್ಲ. ಆದರೆ ಅದಕ್ಕೂ ಕೆಲವೊಂದು ನಿಯಮಗಳಿವೆ. ಅತಿರೇಕದ ವರ್ತನೆ ಯಾವುದಕ್ಕೂ ಒಳ್ಳೆಯದಲ್ಲ. ರೊಮ್ಯಾನ್ಸ್ ಸಂದರ್ಭದಲ್ಲಿ ಇಂತಹಾ ವರ್ತನೆಗೆ ಹೆಚ್ಚು ಅವಕಾಶ ಕೊಡಬೇಡಿ. ಪದೇ ಪದೇ ಸ್ತನವನ್ನು ಹಿಡಿದು ಅಮುಕುವುದರಿಂದ, ಗಟ್ಟಿಯಾಗಿ ಹಿಡಿಯುವುದರಿಂದ ಸ್ತನದ ಒಳಗಡೆ ಒತ್ತಡ ಸೃಷ್ಟಿಯಾಗಿ ನೋವುಂಟಾಗುವ ಸಾಧ್ಯ ತೆಯೂ ಇದೆ. ಇದು ಕೆಲವು ದಿನಗಳವರೆಗೂ ಕಾಡಬಹುದು. ಆದರೆ ಇದನ್ನೇ ಸ್ತನ ಕ್ಯಾನ್ಸರ್ ಅನ್ನಲಾಗದು. ಸ್ತನವನ್ನು ಹಿಡಿದು ಅಮುಕುತ್ತಿದ್ದರೆ, ಗಾತ್ರ ಬೆಳೆಯುವುದು, ಜೋತು ಬೀಳುವುದು ಸಾಮಾನ್ಯ. ನಿಮ್ಮ ಎದೆಯ ಸುತ್ತಳತೆಗೆ ಸರಿಹೊಂದುವ ಬ್ರೇಸಿ ಯರ್ ಬಳಸಿ. ಇದರಿಂದ ಸ್ತನದ ಸೌಂದರ್ಯ ಕಾಪಾಡಬಹುದು. ನಾಳೆ ಆತನನ್ನು ದೂರವಿಡುವ ಬದಲು ಆತನನ್ನು ಈಗಿಂದೀ ಗಲೇ ದೂರ ಮಾಡುತ್ತಾ ಬನ್ನಿ. ಏಕಾಂತದಲ್ಲಿ ಭೇಟಿಯಾಗಬೇಡಿ.
Tagged with
gupta
ಹೊಸ ಕಾಲದ ವ್ಯಾಕರಣ, ವರಸೆ, ಜಾಣ್ಮೆಗಳನ್ನು ನಾವು ಮೈಗೂಡಿಸಿಕೊಳ್ಳದೇ ಹೋದರೆ ಬದುಕಿನ ನಾಗಾಲೋಟದಲ್ಲಿ ಹಿಂದೆ ಉಳಿಯುವುದು ಸಹಜ. ಆದರೆ ಏಳಿಗೆ ಏರುಪಲ್ಲಟವೆಂದರೆ ಬದುಕಿನ ಆಂಗ್ಲೀಕರಣವಲ್ಲ. ನೆಲದ ಭಾಷೆಯನ್ನಷ್ಟೇ ನೆಚ್ಚಿಕೊಂಡರೆ ನಭಕ್ಕೇರಲು, ಬಾನಾಡಿಯಂತೆ ಹಾರಾಡಲು ಸಾಧ್ಯವಾಗದು ಎಂಬ ಕೆಲವರ ಅನಿಸಿಕೆಗಳನ್ನು ಭಯ ಎನ್ನಬೇಕೋ, ಭ್ರಮೆ ಎನ್ನಬೇಕೋ ತಿಳಿಯದಾಗಿದೆ.
ಧನು, ಮೂಡಬಿದ್ರೆ
ಕನ್ನಡ, ಕನ್ನಡ ಬನ್ನಿ ನಮ್ಮ ಸಂಗಡ, ಕನ್ನಡ ಬಳಸಿ, ಕನ್ನಡ ಬೆಳೆಸಿ ಕನ್ನಡವನುಳಿದೆನೆಗೆ ಅನ್ಯ ಜೀವನವಿಲ್ಲ, ಕನ್ನ ಡಕೆ ಹೋರಾಡು ಕನ್ನಡದ ಕಂದ, ಕನ್ನಡ ಇಲ್ಲಿ ಅನ್ನ, ಕಲಿಯಿರಿ ತಿನ್ನುವ ಮುನ್ನ’ ಮುಂತಾದ ಸುಂದರ ಸಾಲುಗಳು ಭಾಷಣ ದಲ್ಲಷ್ಟೇ ಅಲ್ಲ, ಬದುಕಿನಲ್ಲೂ ಬಳಸಲ್ಪಡಬೇಕು. ನಾಮಫಲಕ ಗಳಲ್ಲಿ ಕನ್ನಡ ಕಡ್ಡಾಯವಾದರಷ್ಟೇ ಸಾಲದು. ಚಿತ್ತಛಿತ್ತಿಯಲ್ಲೂ ಕನ್ನಡ ಅಚ್ಚೊತ್ತಿ ನಿಂತು ಸುಂದರ ಚಿತ್ತಾರ ರೂಪುಗೊಳ್ಳ ಬೇಕು. ಕನ್ನಡ ಅನುಷ್ಠಾನ, ಕನ್ನಡ ಸಂಸ್ಕೃತಿಯ ಉತ್ಥಾನವಾ ಗಬೇಕಾದರೆ ಅಭಿಮಾನಕ್ಕಿಂತಲೂ ಪ್ರೀತಿ ಮುಖ್ಯ. ಪ್ರೀತಿ ಇದ್ದರೆ ನಂಬಿಕೆ, ಭರವಸೆಗಳೂ ಇರುತ್ತವೆ. ಆಗ ದಕ್ಷಿಣ ಭಾರತದ ಭಾಷೆಗಳಲ್ಲಿ ಅತೀ ವೇಗವಾಗಿ ಅವಸಾನದ ಅಂಚಿನಲ್ಲಿರುವ ಭಾಷೆ ಎಂದರೆ ಕನ್ನಡ ಎಂಬುದಾಗಿ ಅಮೆರಿಕದ ಎಥಿನಿಕ್ ಡಾಟ್‌ಕಾಮ್ ನಡೆಸಿರುವ ಸಮೀಕ್ಷಾ ವರದಿಗೆ ನಾವು ಬೆಚ್ಚಿ ಬೀಳುವುದಿಲ್ಲ. ಎಕ್ಸ್‌ಪಯರಿ ಡೇಟ್ ವಸ್ತುವಿಗಷ್ಟೇ ಇರುತ್ತದೆ. ಭಾಷೆಗೆ, ಸಂಬಂಧಗಳಿಗೆ ಅದು ಸಂಬಂಧಿಸಿದ್ದಲ್ಲ. ಭಾಷೆ ಚಿರಂತನ. ಚಿರನೂತನ. ಬಳಸಿದರಷ್ಟೇ ಭಾಷೆಯೊಂದು ಬೆಳೆ ಯುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಅಮೃತ ಭಾಷೆಯಾದ ಸಂಸ್ಕೃತ ಕೂಡ ಮತ ಎಂಬುವುದಾಗಿ ಕೆಲ ವೊಂದು ಸ್ಯಾಡಿಸ್ಟ್‌ಗಳು ಸಾರುವುದಕ್ಕೆ ಬಳಕೆ ಕ್ಷೀಣಿಸಿದ್ದೇ ಕಾರಣ. ನಮ್ಮ ಅಧಿಕೃತ ಭಾಷೆಯಾದ ಆಡಳಿತ ಭಾಷೆಯಾದ ಕನ್ನಡ ವನ್ನು ಎಲ್ಲಾ ವಯೋಮಾನಗಳ ಜನರು ಎಲ್ಲ ಸಂದರ್ಭಗ ಳಲ್ಲಿ ಬಳಸುವಂತಾದರೆ, ಗುಮ್ಮ ಬಂತು ಗುಮ್ಮ ಮೊಸಳೆ ಬಂತು ಮೊಸಳೆ ಕಥೆಗಳೆಲ್ಲ ಅಲ್ಲಲ್ಲೇ ಕರಗುತ್ತವೆ.
ಕಾಲ ಬದಲಾಗಿದೆ ನಿಜ. ಹೈಟೆಕ್ ಕಾಲವನ್ನು ಹೈಟೆಕ್ ಕಾಲ ಎಂದೆಲ್ಲಾ ಕಟಕಿಯಾಡುವವರೂ ಇದ್ದಾರೆ. ಈ ಕಾಲ ದಲ್ಲಿ ಇಷ್ಟವೆನಿಸುವ ಸಂಗತಿಗಳೆಲ್ಲವೂ ಸೋಜಿಗಮಯ. ಇ ಪತ್ರಿಕೆ, ಇ-ಬ್ಯಾಂಕಿಂಗ್, ಇ-ಆಡಳಿತ, ಇ-ಕಚೇರಿಗಳ ಭರಾಟೆ ಯಲ್ಲಿ ಇ-ಬದುಕು ನಮ್ಮದಾಗಿದೆ. ಕಾಗದ ರಹಿತ ಕಚೇರಿ, ವೆಬ್‌ಸೈಟ್, ಇಂಟರ್‌ನೆಟ್, ಅನ್‌ಲೈನ್, ಬ್ಲಾಗ್, ವಿಡಿಯೋ ಕಾನ್ಫ್ಸ ರೆನ್ಸ್, ಲೈವ್ ಟೆಲಿಕಾಸ್ಟ್, ಚಮಕ್ ಚಮಕ್ ಚಾನಲ್ಸ್, ಕ್ರೈಮ್ ನ್ಯೂಸ್, ಲೀಡಿಂಗ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಿಯಾಲಿಟಿ ಶೋ, ಕ್ರುಯಾಲಿಟಿ ಶೋ, ಮಾಲ್, ಕಮಾಲ್‌ಗಳ ಸದ್ದು ಗದ್ದಲ ದಲ್ಲಿ ಬದುಕೆಂಬುದು ಗೊಂದಲಗಳ ಗೊಬ್ಬರದ ಗುಂಡಿ ಯಾಗಿದೆ. ಮಾಧ್ಯಮಗಳ ಸೆಲೆಬ್ರಿಟಿಯ ಸಂಭ್ರಮದಲ್ಲಿ ಕೊಳ್ಳು ಬಾಕ ಸಂಸ್ಕೃತಿಯ ಸರಕು ಸಂತೆಯಲ್ಲಿ ಸಂಕಟಗಳಷ್ಟೇ ಸ್ನೇಹ, ಸಜ್ಜನಿಕೆ, ಸರಳತೆ, ಮೌಲ್ಯ, ಮಮತೆ, ಸಂಬಂಧ, ಸಹಾನು ಭೂತಿಗಳೆಲ್ಲ ತುಟಿ. ಹೀಗೆ ಜಗತ್ತಿನ ಜೋಳಿಗೆಯಲ್ಲಿ ಜಾಗತೀ ಕರಣ ಎಂಬ ಜಗಜಟ್ಟಿ ಜಗಮಗಿಸುತ್ತಿರುವಾಗ ನಮ್ಮ ನಂಬಿಕೆ ಗಳೆಲ್ಲ ಹಳೆಯದೆನಿಸಿ, ಹಳಸಿವೆ. ಕಣ್ಣಪಾತಿಯಿಂದ ಜಿನು ಗುವ ಹನಿಗಳಿಗೆ ಬೆಲೆಯೇ ಇಲ್ಲವಾಗಿದೆ. ಜೀವನದ ಧಡಕಿ ಗಳಿಗೆ ಮೈಯೊಡ್ಡಿ ಗೆಲ್ಲುವ ಭರದಲ್ಲಿ ಸವಾಲುಗಳನ್ನು ಮೆಟ್ಟಿ ಹೊಸ ಬದುಕು ಕಟ್ಟುವ ಕಾಲಘಟ್ಟದಲ್ಲಿ ನಮ್ಮ ನಾಡು, ನಮ್ಮ ನುಡಿ, ನಮ್ಮ ಮಾತೃಭಾಷೆ, ನಮ್ಮ ಕನ್ನಡ ಎಂಬುದು ಕೆಲವರಿಗೆ ಗೋಗರೆತದಂತೆ ದುಃಖದ ಅಲಾಪನೆಯಂತೆ, ಅರ್ಥಹೀನ ಅಪಸ್ವರದಂತೆ ಕೇಳಿಸಿದರೆ ಅಚ್ಚರಿಯೇನಿಲ್ಲ. ಈಗ ಆಗುತ್ತಿರು ವುದು ಅದೇ.
ಹೊಸ ಕಾಲದ ವ್ಯಾಕರಣ, ವರಸೆ, ಜಾಣ್ಮೆಗಳನ್ನು ನಾವು ಮೈಗೂಡಿಸಿಕೊಳ್ಳದೇ ಹೋದರೆ ಬದುಕಿನ ನಾಗಾಲೋಟ ದಲ್ಲಿ ಹಿಂದೆ ಉಳಿಯುವುದು ಸಹಜ. ಆದರೆ ಏಳಿಗೆ ಏರು ಪಲ್ಲಟವೆಂದರೆ ಬದುಕಿನ ಆಂಗ್ಲೀಕರಣವಲ್ಲ. ನೆಲದ ಭಾಷೆ ಯನ್ನಷ್ಟೇ ನೆಚ್ಚಿಕೊಂಡರೆ ನಭಕ್ಕೇರಲು, ಬಾನಾಡಿಯಂತೆ ಹಾರಾ ಡಲು ಸಾಧ್ಯವಾಗದು ಎಂಬ ಕೆಲವರ ಅನಿಸಿಕೆಗಳನ್ನು ಭಯ ಎನ್ನಬೇಕೋ, ಭ್ರಮೆ ಎನ್ನಬೇಕೋ ತಿಳಿಯದಾಗಿದೆ. ಐಟಿ ಬಿಟಿ, ಎಂಟಿ, ಕಂಪ್ಯೂಟರ್, ಕಾಲ್‌ಸೆಂಟರ್ ಮುಂತಾದ ತರ ಹೇವಾರಿ ತೆವಲುಗಳ ಟಿಪ್ಪಣಿ ಮಾಡುತ್ತಾ, ಕನ್ನಡ ಇಲ್ಲಿ ಯಾರಿಗೆ ಬೇಕ್ರೀ? ಅದು ಅನ್ನ ಕೊಡುತ್ತೇನ್ರೀ? ತುಂಬಾ ಸಂಬಳ ಸಿಗುತ್ತೇನ್ರೀ? ಎಂದೆಲ್ಲಾ ಕಟಕಿಯಾಡುವ ಕಟುಕರಿಂದ ಕನ್ನಡ ರಕ್ಷಿಸುವುದು ನಮ್ಮೆಲ್ಲಾ ಕನ್ನಡಿಗರ ಆದ್ಯ ಕರ್ತವ್ಯ.
Tagged with
bahiranga
ಪುಣ್ಯ ಕ್ಷೇತ್ರವಾದ ಸುಬ್ರಹ್ಮಣ್ಯ ಬಸ್ ನಿಲ್ದಾಣ ವೆಲ್ಲಾ ಹೊಂಡಮಯವಾಗಿದೆ. ನಿಲ್ದಾಣದ ಶೌಚಾಲಯದ ನೀರನ್ನು ಇಲ್ಲಿಯೇ ತೋಡಿಗೆ ಬಿಡುವುದರಿಂದಾಗಿ ಸುತ್ತಲಿನ ಪ್ರದೇಶವೆಲ್ಲ ಗಬ್ಬುವಾಸನೆಯಿಂದ ಕೂಡಿದೆ. ಅದಲ್ಲದೆ ಈಗ ಪ್ರತಿದಿನವೂ ಮಳೆ ಬರುತ್ತಿರುವುದರಿಂದ ಹೊಂಡ ದಲ್ಲಿ ನೀರು ತುಂಬಿ ಗದ್ದೆಯಂತೆ ಕಾಣುತ್ತಿದೆ. ನಿಲ್ದಾಣಕ್ಕೆ ಸಿಮೆಂಟು ಹಾಸಿರುವಲ್ಲಿ ಮಾತ್ರ ಪ್ರಯಾಣಿಕರಿಗೆ ನಡೆದಾಡಲು ಆಗುತ್ತದೆಯೇ ಹೊರತು ಅಲ್ಲಿಂದ ಇಳಿದು ಹೋಗಲು ಆಗುವು ದಿಲ್ಲ. ಬಸ್‌ಗಳು ನಿಲ್ದಾಣದ ಹೊಂಡದಲ್ಲಿ ಇಳಿದು ಹೋಗುವಾಗ ಜೋಕಾಲಿಯಲ್ಲಿ ತೂಗಿದ ಅನುಭವವಾಗುತ್ತದೆ. ಇಂತಹ ಜನದಟ್ಟಣೆಯಿರುವ ಸ್ಥಳಗಳಲ್ಲಿ ಸರಿಯಾದ ವ್ಯವಸ್ಥೆ ಮಾಡದೆ ಯಾಕೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ತಿಳಿಯದು. ಇಲ್ಲಿ ಪ್ರತಿದಿನವೂ ಜನದಟ್ಟಣೆ ಹೆಚ್ಚಾಗಿ ರುತ್ತದೆ. ಅಷ್ಟೇ ಅಲ್ಲದೆ ಬೆಂಗಳೂರು, ಮಂಗಳೂರು, ಹಾಸನ ಮೊದಲಾದ ಕಡೆಗಳಿಂದ ಬಸ್ ಬರುತ್ತದೆ. ಆದ್ದರಿಂದ ಇನ್ನಾದರೂ ಪ್ರಯಾಣಿಕರಿಗೆ ಸರಿಯಾದ ವ್ಯವಸ್ಥೆಯನ್ನು ಮಾಡಿ, ಮೂಲ ಭೂತ ಸೌಕರ್ಯವನ್ನು ಒದಗಿಸಿ.
ರಾಜೇಶ್, ಪುತ್ತೂರು
ಕಾರ್ಯಕರ್ತರೇ ಉತ್ತರಿಸುವಿರಾ?
ಬಿಜೆಪಿ ಯುವಮೋರ್ಚಾ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಇತ್ತೀಚೆಗೆ ಮಂಗಳೂ ರಿನ ನೆಹರೂ ಮೈದಾನದಲ್ಲಿ ಬಿಜೆಪಿ ಯುವ ಸಮಾವೇಶವು ನಡೆಯಿತು. ಈ ಸಮಾವೇಶವು ಬಿಜೆಪಿ ಪಕ್ಷದ ಸಮಾವೇಶ ಎನ್ನುವುದಕ್ಕಿಂತ ಹಿಂದೂ ಸಮಾವೇಶವೆಂದೇ ಹೇಳ ಬಹುದು. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆಯೇ ಬಿಜೆಪಿ ಎಂಬ ಕೋಮುವಾದಿ ಪಕ್ಷವು ತನ್ನ ನರಿ ಬುದ್ಧಿಯನ್ನು ತೋರಿಸಲು ಸಿದ್ಧವಾ ಗುತ್ತದೆ. ಆಗ ಅವರಿಗೆ ಕಾಣಿಸುವುದು ಯುವ ಸಮಾವೇಶ, ರಥಯಾತ್ರೆ, ಹಿಂದೂ ಸಮಾಜೋತ್ಸವ, ಹಿಂದು ಸಮಾಗಮ ಎಂಬ ಕಾರ್ಯಕ್ರಮ ಗಳು. ಕೇಂದ್ರ ಸರಕಾರ ನಡೆಸಿದ ಭ್ರಷ್ಟಾಚಾರ, ಅಥವಾ ಇತರ ಹಗರ ಣಗಳ ಬಗ್ಗೆ ಮಾತನಾಡುವ ಇವ ರಿಗೆ ಬಿಜೆಪಿ ಪಕ್ಷದ ಭ್ರಷ್ಟಾಚಾರ ಅಥವಾ ಇತರ ಹಗರಣಗಳು ಇವರ ಕಣ್ಣಿಗೆ ಕಾಣಿಸುತ್ತಿಲ್ಲ.
ಇನ್ನು ಇವರನ್ನು ಬೆಂಬಲಿಸುವ ಕಾರ್ಯಕರ್ತರನ್ನು ಏನು ಅನ್ನ ಬೇಕೆಂದು ತಿಳಿಯುತ್ತಿಲ್ಲ. ಅಲ್ಲದೇ ಈ ಯುವ ಸಮಾವೇಶದಲ್ಲಿ ದ.ಕ. ಜಿಲ್ಲೆಯ ಕಾರ್ಯಕರ್ತರ ಸಂಖ್ಯೆ ಬಹಳ ಕಡಿಮೆ. ಹೊರಜಿಲ್ಲೆಯ ವರೇ ಅಧಿಕ ಸಂಖ್ಯೆಯಲ್ಲಿದ್ದರು. ಇನ್ನು ಈ ಕಾರ್ಯಕ್ರಮದಲ್ಲಿ ಪಕ್ಷದ ಸಾಧನೆ ಮತ್ತು ಸಮಸ್ಯೆಯ ಬಗ್ಗೆ ಭಾಷಣ ಮಾಡುವುದಕ್ಕಿಂತಲೂ ಮುಸ್ಲಿಮರನ್ನು ಎತ್ತಿ ಕಟ್ಟುವುದೇ ಇವರ ಮುಖ್ಯ ಉದ್ದೇಶವಾಗಿತ್ತು. ಮುಸ್ಲಿಮ ರನ್ನು ಭಯೋತ್ಪಾದಕರಂತೆ ಬಣ್ಣಿ ಸಿದ್ದು, ಲವ್‌ಜಿಹಾದ್‌ನ ಬಗ್ಗೆ ಒಂದೇ ಒಂದು ಪ್ರಕರಣ ದಾಖಲಾಗದಿ ದ್ದರೂ ಲವ್ ಜಿಹಾದ್ ನಡೆಸಿದ್ದಾ ರೆಂದು ಪ್ರಚಾರಪಡಿಸಿ ಹಿಂದೂ ಮುಸ್ಲಿಮರ ಮಧ್ಯೆ ವಿಷ ಬೀಜವನ್ನು ಬಿತ್ತುತ್ತಿದ್ದಾರೆ.
ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದ ದುಷ್ಕೃತ್ಯಕ್ಕೆ ಬಲಿಯಾದ ಸಂಘ ಪರಿವಾರದ ಪುಡಾರಿಗಳಾದ ಕ್ಯಾಂಡಲ್ ಸಂತು, ಪೊಳಲಿ ಅನಂತು, ಮಂಜುನಾಥ ಮುಂತಾದವರನ್ನು ವೀರರಂತೆ ತೋರಿಸುವ ಫೋಟೋ ಗಳು ರಾರಾಜಿಸುತ್ತಿತ್ತು. ಇದೆಲ್ಲವನ್ನು ಯಾವ ಉದ್ದೇಶದಿಂದ ತೋರಿಸಲಾ ಗಿದೆ. ಇದರ ಹಿಂದೆ ಇರುವ ಉದ್ದೇಶ ವಾದರೂ ಏನು? ಹಿಂದೂ ಮುಸ್ಲಿಂ ಮಧ್ಯೆ ಎತ್ತಿ ಕಟ್ಟುವುದಕ್ಕೋಸ್ಕರವೇ? ಇದನ್ನು ಬಿಜೆಪಿ ಕಾರ್ಯಕರ್ತರು ಉತ್ತರಿಸುವರೇ?
ಇಸ್ಮಾಯಿಲ್ ಶಾಫಿ, ಅಳೇಕಾಲ, ಉಳ್ಳಾಲ
ಗೋಡೆಗೆ ಪೋಸ್ಟರ್‌ಗಳನ್ನು ಹಾಕುವವರ ವಿರುದ್ಧ ಕ್ರಮಕೈಗೊಳ್ಳಿ
ಸುರತ್ಕಲ್-ಬಿ.ಸಿ.ರೋಡ್ ರಸ್ತೆ ಕಾಮಗಾರಿ ಶುರುವಾಗಿ ಸುಮಾರು ಹತ್ತು ವರ್ಷವೇ ಕಳೆದಿದೆ. ಆದರೂ ಕಾಮಗಾರಿ ಇನ್ನೂ ಪೂರ್ತಿಗೊಂಡಿಲ್ಲ. ಇದಕ್ಕಾಗಿ ಅಲ್ಲಲ್ಲಿ ಪ್ಲೈಓವರ್ ನಿರ್ಮಾ ಣಗೊಂಡಿದೆ. ಕೆಲವೊಂದು ಕಡೆ ಪ್ಲೈಓವರ್ ಕಾಮಗಾರಿ ಪೂರ್ತಿಯಾ ದರೂ ಕೆಲವೊಂದು ಕಡೆ ಇನ್ನೂ ಆಮೆ ಗತಿಯಲ್ಲಿ ಸಾಗುತ್ತಿದೆ. ಬಿಕರ್ನಕಟ್ಟೆ ಕೈಕಂ ಬದಲ್ಲಿ ಪ್ಲೈಓವರ್ ಕಾಮಗಾರಿ ಶುರು ವಾಗಿಯೇ ಒಂಭತ್ತು ವರ್ಷ ಕಳೆಯಿತೆ ನ್ನಬಹುದು. ಇನ್ನು ಪೂರ್ತಿಯಾಗಿಲ್ಲ.
ಅದಲ್ಲದೆ ಎಲ್ಲಾ ಕಡೆ ಪ್ಲೈಓವರ್‌ಗೆ ಸಿನಿಮಾದ ಪೋಸ್ಟರ್ ಅಂಟಿಸುವ ಗೋಡೆಯಾಗಿದೆ. ಮಂಗಳೂರಿನಲ್ಲಿ ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಗೋಡೆಗೆ ಅಂಟಿಸು ವುದು ಸಾಮಾನ್ಯವಾಗಿದೆ. ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳು ವುದಿಲ್ಲ.
ಒಂದು ರೀತಿಯಲ್ಲಿ ಇದು ನಗರದ ಅಂದವನ್ನು ಕೆಡಿಸುತ್ತದೆ ಎಂದರೆ ತಪ್ಪಾಗಲಾಗದು. ರಾತ್ರಿ ಹೊತ್ತಿನಲ್ಲಿ ಈ ಪೋಸ್ಟರ್‌ಗಳನ್ನು ಅಂಟಿಸಲೆಂದೇ ಕೆಲ ವೊಂದು ಹುಡುಗರಿದ್ದು, ಇವರು ಸಿಕ್ಕಿ ದಲ್ಲಿ ಅಂಟಿಸಿಕೊಂಡು ಹೋಗು ತ್ತಾರೆ.
ಕೆಲವೊಂದು ಪೋಸ್ಟರ್‌ಗಳನ್ನು ನೋಡಲು ಅಸಹ್ಯವಾಗುವ ರೀತಿಯ ಲ್ಲಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಪೋಸ್ಟರ್‌ಗಳನ್ನು ಹಾಕಿರು ವುದರಿಂದ ಇದರತ್ತ ಹೋಗಲು ಅಸಹ್ಯವಾಗುತ್ತದೆ. ಆದ್ದರಿಂದ ನಗ ರದ ಯಾವುದೇ ಗೋಡೆಯಾಗಲೀ, ಪ್ಲೈಓವರ್‌ಗಾಗಲೀ ಯಾವುದೇ ಪೋಸ್ಟರ್‌ಗಳನ್ನು ಅಂಟಿಸಬಾರದು. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಪ್ರಜಾ, ಮಂಗಳೂರು
ಮಿನಿಬಸ್‌ಗಳಿಂದ ಸಾರ್ವಜನಿಕರ ಪಾಡು ಹೇಳತೀರದು
ಬಿ.ಸಿ.ರೋಡ್-ಮಣಿಹಳ್ಳ ವಾಮದಪದವು ನಡುವೆ ಹಾದುಹೋಗುವ ಬಸ್ಸು ಸಂಚಾರಕ್ಕೆ ಏನು ಅಡಚಣೆಯಿಲ. ಈ ರಸ್ತೆಯಲ್ಲಿ ಎಲ್ಲಾ ಸಮಯ ದಲ್ಲೂ ಬಸ್ಸುಗಳು ಓಡಾಡುತ್ತದೆ. ಆದರೆ ಇವುಗ ಳಲ್ಲಿ ಬಹುತೇಕ ಬಸ್‌ಗಳು ಮಿನಿಬಸ್‌ಗಳೇ ಆಗಿವೆ. ಇವುಗಳಿಂದ ಜನರು ಎಂತಹ ಪಾಡು ಅನುಭವಿ ಸಬೇಕಾಗುತ್ತದೆ ಎಂದು ಅರಿವಾಗುವುದು ಮುಂಜಾನೆ ವೇಳೆ. ಇನ್ನು ಶಾಲೆ, ಕಾಲೇಜು ಹೋಗುವ ಮಕ್ಕಳು ಹಾಗೂ ಕೆಲಸಕ್ಕೆ ಹೋಗುವ ತರಾತುರಿಯಲ್ಲಿ ಜನರಿರುತ್ತಾರೆ. ಬಸ್ ಬಂದರೂ ಅದರಲ್ಲಿ ಪ್ರಯಾ ಣಿಕರು ಕಿಕ್ಕಿರಿದು ತುಂಬಿರುತ್ತಾರೆ. ಒಳಗಡೆ ಕಾಲಿಡು ವುದಕ್ಕೂ ಜಾಗವಿರುವುದಿಲ್ಲ. ಜನರಿಂದ ತುಂಬಿ ಕೊಂಡು ಒಂದು ಬದಿ ವಾಲುತ್ತಾ ನಿಧಾನಕ್ಕೆ ಸಂಚ ರಿಸುವ ಈ ಮಿನಿ ಬಸ್‌ಗಳು ಯಾವಾಗ ಎಲ್ಲಿ ಅರ್ಧಕ್ಕೆ ಬಾಕಿಯಾಗುತ್ತದೆ ಎಂದು ಹೇಳಲು ಬರು ವುದಿಲ್ಲ.
ದಿನವಿಡೀ ಮಿನಿ ಬಸ್ ಆಗಿರುವುದರಿಂದ ಅದರಲ್ಲಿ ಎಲ್ಲಾ ಪ್ರಯಾಣಿಕರು ತುಂಬುವುದಿಲ್ಲ. ಈ ರೂಟ್‌ಗೆ ಮೊದಲು ದೊಡ್ಡ ಗಾತ್ರದ ರೂಪ ಹೆಸರಿನ ಬಸ್‌ಗಳು ಇತು. ಆಮೇಲೆ ಅದು ಬದಲಾಗಿ ಸೈಂಟ್ ಪೀಟರ್‌ಯೆಂಬ ಹೆಸರಿನ ಬಸ್‌ಗಳು ಕೆಲವು ವರ್ಷದಿಂದ ಪ್ರಯಾಣಿಸುತ್ತಿತ್ತು. ಈಗ ಆ ರೀತಿಯ ಬಸ್‌ಗಳು ಈ ರೂಟ್‌ಗೆ ಬರುವು ದಿಲ್ಲ. ಆದ್ದರಿಂದ ಇನ್ನಾದರೂ ಬಸ್ ಮಾಲಕರು ಇತ್ತ ಗಮನಹರಿಸಿ ಕುಂಬರಬೈಲು ದಂಡೆಗೊಳಿ ವಾಮದಪದವು ರೂಟ್‌ಗೆ ದೊಡ್ಡ ಗಾತ್ರದ ಬಸ್ ಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕೆಂದು ಇಲ್ಲಿಯ ಜನತೆಯ ಸಮಾಧಾನದ ಮಾತು ಕೇಳಿ ಬರುತ್ತಿದೆ.
ನೋಣಯ ಕೈಲಾರು, ಮೂಡುನಡುಗೋಡು
ಶರಣ್ ಗೂಂಡಾ ಆದರೆ ಸೋಮಯಾಜಿ ಏನು?
ಮೊನ್ನೆಯಷ್ಟೇ ಕೋಸೌವೇ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟಿಸಿತ್ತು. ಈ ವೇಳೆ ಸಂಘಟನೆ ಬಜರಂಗದಳದ ಮುಖಂಡ ಶರಣ್ ಪಂಪ್‌ವೆಲ್ ಗೂಂಡಾ ಎಂದು ಹೇಳುವ ಮೂಲಕ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿತ್ತು. ಈ ರೀತಿ ಹೇಳಿಕೆ ನೀಡಿದ ಕೋಸೌವೇಯಲ್ಲಿ ನನ್ನದೊಂದು ಪ್ರಶ್ನೆ. ದನಸಾಗಾಟದ ವಿರುದ್ದ ನಿಲ್ಲುವ, ಮತಾಂತರದ ವಿರುದ್ದ ಹೋರಾ ಡುವ, ಹಿಂದು ಹೆಣ್ಣುಮಕ್ಕಳ ರಕ್ಷಣೆಗೆ ನಿಲ್ಲುವ ಹಿಂದೂ ಸಂಘಟನೆಯ ನಾಯಕ ನೊಬ್ಬ ಗೂಂಡಾ ಅನ್ನುವುದಾದರೆ ಬಹಿರಂಗವಾಗಿ ದನದ ಮಾಂಸ ತಿನ್ನಲು ಹೇಳುವ ಸೋಮಯಾಜಿ ಏನು? ಈ ವ್ಯಕ್ತಿ ಮೇಲ್ನೋಟಕ್ಕೆ ಪ್ರಾಚಾರ್ಯನಂತೆ ಕಂಡರೂ ಮಾಡುವ ಕೆಲಸಗಳು ಮಾತ್ರ ತೀರಾ ಹಿಂದು ವಿರೋಧಿಯಾಗಿದೆ. ಅನ್ಯಧರ್ಮೀಯರ ಪರನಿಂತು ಹಿಂದುಗಳ ವಿರುದ್ದ ಅವರನ್ನು ಎತ್ತಿ ಕಟ್ಟುವ ಈ ವ್ಯಕ್ತಿಯನ್ನೂ ಗೂಂಡಾ ಅನ್ನಬಹುದು. ಹಿಂದು ಸಂಘಟನೆಯ ನಾಯಕರು ಬಹಿರಂಗವಾಗಿ ಹೋರಾಡುತ್ತಾರೆಯೇ ವಿನಃ ಸೋಮಯಾಜಿಯಂತೆ ವೇದಿಕೆ ಗಳಲ್ಲಿ ಬಡಾಯಿ ಕೊಚ್ಚಿಕೊಂಡು ಅನ್ಯಧರ್ಮೀಯರನ್ನು ಎತ್ತಿಕಟ್ಟುವುದಿಲ್ಲ. ಕಾಲೇಜಿನಲ್ಲಿ ಪಾಠ ಕಲಿಸುವ ಬದಲು ಧರ್ಮದ ವಿಚಾರವೆತ್ತುವುದಿಲ್ಲ. ಆದರೆ ಸೋಮಯಾಜಿ ತಾನೊಬ್ಬ ಎಡಪಂಥೀಯ ಎಂಬ ನಿಟ್ಟಿನಲ್ಲಿ ಈ ರೀತಿ ವರ್ತಿ ಸುತ್ತಿದ್ದಾರೆ. ಅಷ್ಟಕ್ಕೂ ಸೋಮಯಾಜಿಯವರಿಗೆ ಸೆಗಣೆ ಹಾಕಿದ್ದು ಅಪರಾಧ ವಾದರೂ ಇದರಲ್ಲಿ ಖಂಡಿತಾ ತಪ್ಪಿಲ್ಲ ಎನ್ನಬಹುದು. ಹಿಂದೂ ನಾಯಕರು ಬಹಿರಂಗವಾಗಿ ಗುದ್ದಾಟಕ್ಕೆ ಇಳಿದು ಗೂಂಡಾ ಎಂದು ಕರೆಸಿಕೊಂಡರೆ ಸೋಮ ಯಾಜಿಯಂತಹ ವ್ಯಕ್ತಿಗಳು ಧರ್ಮಗಳನ್ನು ಎತ್ತಿ ಕಟ್ಟಿ ಪರೋಕ್ಷವಾಗಿ ಗೂಂಡಾ ಗಳನ್ನು ಸೃಷ್ಟಿಸುತ್ತಿದ್ದಾರೆ. ಕೋಸೌವೇ ಮೊನ್ನೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಮಾಡಿದ ಭಾಷಣ ಉಗ್ರವಲ್ಲವೇ?
ಓರ್ವ ಹಿಂದೂ, ಮಂಗಳೂರು
ವೀರಕಂಬದಲ್ಲೊಂದು ಜಾತಿ ರಾಜಕೀಯ
ವೀರಕಂಭ ಗ್ರಾಮ ಪಂಚಾಯತಿನ ಓರ್ವ ಸದಸ್ಯರು ಸರಕಾರದ ಯೋಜನೆಗಳಾದ ಉದ್ಯೋಗ ಖಾಸಗಿ, ಭೀಮಾ ಸ್ವಾಸ್ಥ್ಯ ಯೋಜನೆ ಮತ್ತು ಉಚಿತ ಕೋಳಿ ವಿತರಣೆಯಲ್ಲಿ ತಾರತಮ್ಯವೆಸಗಿದ್ದಾರೆ. ಇವನ್ನು ತಮ್ಮ ಪಕ್ಷದ ಮತ್ತು ಜಾತಿ ಬಂಧುಗಳಿಗೆ ವಿತರಿಸುವ ಅನ್ಯಾಯವೆಸಗಿದ್ದಾರೆ. ಉದ್ಯೋಗ ಖಾತರಿ ಯೋಜನೆಯಲ್ಲೂ ಅವ್ಯವಹಾರ ನಡೆಸಿದ್ದಾರೆ. ನೀರು ಪೂರೈಕೆ ಯಲ್ಲೂ ರಾಜಕೀಯ ಮಾಡುತ್ತಿದ್ದಾರೆ.
ಓರ್ವ ಮತದಾರ, ವೀರಕಂಭ
ನ್ಯಾಯಯುತ ಹೋರಾಟಕ್ಕೆ ಸಹಕರಿಸಿ
ಜೋಕಟ್ಟೆ ರೈಲ್ವೇ ಹಳಿಯಿಂದ ಒಂದು ಕಿ.ಮೀ.ದೂರವಿರುವ ಮಾಡಿಲ ಎಂಬ ಪ್ರದೇಶ ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ತೆರಳುವ ರಸ್ತೆಯಾ ಗಿದ್ದು, ಸದ್ರಿ ಈ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಮಾತ್ರವಲ್ಲದೆ ಅಪಘಾತ ಗಳಿಗೆ ಕಾರಣವಾಗುವ ಎಲ್ಲಾ ಸಾಧ್ಯತೆಗಳಿವೆ. ಜೋಕಟ್ಟೆ ನಾಗರಿಕರು ಸುರ ತ್ಕಲ್ ಮತ್ತು ಮಂಗಳೂರಿಗೆ ಬಸ್ಸಿನಲ್ಲಿ ತೆರಳುವುದಾದರೆ ಇದೇ ರಸ್ತೆಯನ್ನು ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವುದಾದರೆ ಜೀವ ಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ರಸ್ತೆಯನ್ನು ದುರಸ್ಥಿ ಮಾಡಬೇಕು. ಜೋಕಟ್ಟೆಯ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಕೆ.ಬಿ.ಎಸ್.ರೈಲ್ವೆ ಹಳಿ ಬಳಿಯಿಂದ ತೋಕೂರು ರೈಲ್ವೆ ಸ್ಟೇಷನ್‌ನವರೆಗೆ ರಸ್ತೆ ದುರಸ್ಥಿ ಮಾಡಿಕೊಡಬೇಕು. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸವಿವರವಾಗಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ದ್ದರೂ ಕಾಮಗಾರಿಯ ಕುರಿತು ಯಾವುದೇ ಪ್ರಗತಿ ಕಾಣದ ಕಾರಣ ಅನಿರ್ದಿ ಷ್ಟಾವಧಿ ಪ್ರತಿಭಟನೆ ಮಾಡುವ ಕಾಲ ದೂರವಿಲ್ಲ.
ಬಿ.ಶೇಕುಂಙ, ಅಧ್ಯಕ್ಷರು, ಎಸ್‌ಡಿಪಿಐ ಜೋಕಟ್ಟೆ
ಬೀದಿ ಬದಿ ವ್ಯಾಪಾರಸ್ಥರು ಗಮನಿಸುವರೇ?
ಬೀದಿ ಬದಿಯಲ್ಲಿ ವ್ಯಾಪಾರ ನಡೆಸಿದವರನ್ನು ಪಾಲಿಕೆಯ ವಾಹನ ತಂದು ಕಾರ್ಯಾ ಚರಣೆ ನಡೆಸುವುದು ಪಾಲಿಕೆಗೆ ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಅದೇ ರೀತಿ ಬೀದಿ ಬದಿ ವ್ಯಾಪಾರಿಗಳಿಗೂ ಮತ್ತೆ ಅಲ್ಲಿ ಬಂದು ಕೂರುವುದು ಸಾಮಾನ್ಯವಾಗಿದೆ. ಆದರೆ ಬೀದಿ ಬದಿ ವ್ಯಾಪಾರಿಗಳು ಮಾಡುವುದು ಎಷ್ಟು ಸರಿ? ನೀವು ಕೂಡ ಬಡವರು ಎನ್ನುವುದೇನೋ ಸರಿ. ಹಾಗೆಂದು ಸಾವಿರಾರು ರೂಪಾಯಿ ಬಾಡಿಗೆ ಕೊಟ್ಟು ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವ ನಿಮ್ಮಂಥಹ ಇತರೆ ಬಡ ವ್ಯಾಪಾರಿಗಳ ಹೊಟ್ಟೆಗೆ ಹೊಡೆಯುವುದು ಸರಿಯೇ? ನಮ್ಮಲ್ಲಿ ಎಲ್ಲವನ್ನೂ ವ್ಯವಸ್ಥಿತವಾಗಿ ನಡೆಸಲು ಸಾಧ್ಯವಿಲ್ಲ ಎನ್ನುವುದೇನೋ ನಿಜ. ಆದರೆ ಇಲ್ಲಿಯ ತನಕ ಕೇಂದ್ರ ಮಾರುಕಟ್ಟೆಯಲ್ಲಿ ಒಂದು ಹಂತಕ್ಕೆ ವ್ಯವಸ್ಥಿತವಾಗಿ ವ್ಯವಹಾರ ನಡೆಯುತ್ತಿತ್ತು. ಆದರೆ ಈಗ ಬೀದಿ ಬದಿಯಲ್ಲಿ ವ್ಯಪಾರ ನಡೆಸುವ ಮೂಲಕ ನೂರಾರು ವ್ಯಾಪಾರಿಗಳ ವ್ಯವಹಾ ರಕ್ಕೆ ನಿಮ್ಮಿಂದ ಏಟು ಬೀಳುತ್ತಿದೆ.
ಅಷ್ಟೇ ಅಲ್ಲದೇ ಫುಟ್‌ಪಾತ್‌ಗಳಲ್ಲಿ ತರಕಾರಿಗಳನ್ನು ರಾಶಿ ಹಾಕಿ ಮಾರಾಟ ಮಾಡುವು ದರಿಂದ ಟ್ರಾಫಿಕ್ ನಿಯಮಗಳನ್ನು ಕೂಡ ಗಾಳಿಗೆ ತೂರಿದಂತಾಗುವುದಿಲ್ಲವೇ? ಸಣ್ಣ ಪುಟ್ಟ ಗೂಡಂಗಡಿಗಳಿಗೆ ಮಾಲ್‌ಗಳು ಸಡ್ಡು ಹೊಡೆದಂತೆ ನಿಯಮ ಬದ್ದವಾಗಿ ವ್ಯಾಪಾರ ನಡೆಸುವ ಮಾರ್ಕೆಟ್ ವ್ಯಾಪಾರಿಗಳಿಗೆ ನಿಮ್ಮಿಂದ ತೊಂದರೆಯಾಗುತ್ತಿದೆ ಎನ್ನುವುದು ಸತ್ಯ. ಹಾಗೆಂದು ನಿಮ್ಮನ್ನು ವಿರೋಧಿಸುತ್ತಿಲ್ಲ. ಆದರೆ ಈ ರೀತಿ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವುದು ಬೇಡ. ನಿಮಗೂ ಸಂಘಟನೆ ಅನ್ನುವುದಿದೆ. ಆ ಮೂಲಕ ಪಾಲಿಕೆಗೆ ಮನವಿ ಸಲ್ಲಿಸಿ. ಬೀದಿ ಬದಿಯನ್ನು ಬಿಟ್ಟು ಕೇಂದ್ರ ಮಾರುಕಟ್ಟೆಯನ್ನು ವಿಸ್ತ್ತರಿಸಿ ಅಲ್ಲೇ ವ್ಯಾಪಾರ ನಡೆಸಲು ಅನುಮತಿ ಕೋರಿ. ಆಗ ವ್ಯವಹಾರದಲ್ಲಿ ನಿಯಮಾನುಸಾರ ಸ್ಪರ್ಧೆ ನಡೆಸಿದಂತಾಗುತ್ತದೆ. ಇನ್ನಾದರೂ ಬೀದಿ ಬದಿ ವ್ಯಾಪಾರಿ ಗಳು ಇತ್ತ ಗಮನ ಹರಿಸಲಿ.
ನೊಂದ ಗ್ರಾಹಕ, ಮಂಗಳೂರು
Tagged with
nimminda
ಪ್ಯಾರಿಸ್: ರೋಲ್ಯಾಂಡ ಗ್ಯಾರಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫ್ರೆಂಚ್ ಓಪನ್ ಗ್ರಾಂಡ್‌ಸ್ಲಾಮ್ ಟೆನ್ನಿಸ್ ಟೂರ್ನಮೆಂಟ್‌ನ ಮಹಿಳಾ ಡಬಲ್ಸ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಭಾರತದ ಸಾನಿಯಾ ಮಿರ್ಜಾ ನಿರ್ಗಮನದ ಹಾದಿ ಹಿಡಿದಿದ್ದಾರೆ. ಈ ಮೂಲಕ ಭಾರತದ ಒಲಿಂಪಿಕ್ ಕನಸಿಗೆ ಭಾರಿ ಹಿನ್ನಡೆ ಯುಂಟಾಗಿದೆ.
ಸದ್ಯ ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ೧೦ನೇ ಸ್ಥಾನದಲ್ಲಿರುವ ಸಾನಿಯಾ ಲಂಡನ್ ಒಲಿಂ ಪಿಕ್ಸ್‌ಗೆ ನೇರ ಅರ್ಹತೆಯನ್ನು ಗಿಟ್ಟಿಸಿಕೊಳ್ಳ ಬೇಕಾದ್ದಲ್ಲಿ ಜೂನ್ ೧೧ರಂದು ಬಿಡುಗಡೆ ಯಾಗುವ ಅಂತಿಮ ಪಟ್ಟಿ ವೇಳೆ ಅಗ್ರ ೧೦ರೊಳಗಿನ ಸ್ಥಾನವನ್ನು ಖಾತ್ರಿಪಡಿಸಬೇ ಕಾಗಿದೆ.
ಆದರೆ ಬ್ರುಸೆಲ್ಸ್ ಓಪನ ಚಾಂಪಿಯನ್ ಎನಿಸಿಕೊಂಡಿದ್ದರೂ ಫ್ರೆಂಚ್ ಓಪನ್ ಮೊದಲ ಸುತ್ತಿನಲ್ಲೇ ಸೋಲಿನ ಆಘಾತ ಅನುಭವಿಸಿರುವ ಸಾನಿಯಾ ಒಲಿಂಪಿಕ್ ಕನಸಿಗೆ ಭಾರಿ ಹಿನ್ನಡೆಯುಂಟಾಗಿದೆ. ಅಮೆರಿಕಾದ ಬೆಥನ್ ಮಾಟೆಕ-ಸ್ಯಾಂಡ್ ಜತೆಗೂಡಿ ರೋಲ್ಯಾಂಡ್ ಗ್ಯಾರೆಸ್‌ನಲ್ಲಿ ಕಣಕ್ಕಿಳಿದಿದ್ದ ಸಾನಿಯಾ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ್ದರು.
Tagged with
tnews
ನವದೆಹಲಿ: ಭಾರತ-ಪಾಕಿಸ್ತಾನ ಕ್ರಿಕೆಟ್ ಬಾಂಧವ್ಯ ಪುನರಾರಂಭ ಸಾಧ್ಯತೆ ಮತ್ತಷ್ಟು ಹೆಚ್ಚಿದ್ದು, ಮುಂಬರುವ ಡಿಸೆಂಬರ್ ತಿಂಗಳಲ್ಲಿ ಉಭಯ ದೇಶಗಳ ನಡುವೆ ಕ್ರಿಕೆಟ್ ಸರಣಿ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿದೆ ಎನ್ನಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಪಾಕಿಸ್ತಾನ ಕ್ರಿಕೆಟ ಮಂಡಳಿ (ಪಿಸಿಬಿ) ನಡುವಣ ಸಭೆಯ ಬಳಿಕ ಈ ಪ್ರಸ್ತಾಪಕ್ಕೆ ಮತ್ತಷ್ಟು ಬಲ ಬಂದಿದೆ.
ಡಿಸೆಂಬರ್ ೨೩ರಿಂದ ಜನವರಿ ೧೦ರ ನಡುವಣ ಬಿಡುವಿನ ಅವಧಿಯಲ್ಲಿ ಉಭಯ ದೇಶಗಳ ನಡುವೆ ಮೂರು ಅಥವಾ ಎರಡು ಏಕದಿನ ಪಂದ್ಯ ಹಾಗೂ ಒಂದು ಟ್ವೆಂಟಿ-೨೦ ಪಂದ್ಯ ನಡೆಯುವ ಸಾಧ್ಯತೆಯಿದೆ. ಈ ಬಗೆಗಿನ ಮಾತು ಞಕತೆಗಳು ಪ್ರಗತಿಯಲ್ಲಿದೆ.
ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-೨೦ ಹಾಗೂ ಏಕದಿನ ಸರಣಿಯ ಮಧ್ಯೆ ಈ ಸರಣಿ ನಡೆಯಲಿದೆ. ಈ ಅವದಿಯಲ್ಲಿ ಭಾರತಪ್ರವಾಸ ಕೈಗೊಳ್ಳಲಿರುವ ಆಂಗ್ಲರ ಪಡೆ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ತವರಿಗೆ ಮರಳಲಿದೆ. ಹಾಗಾಗಿ ಈ ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಸರಣಿ ಆಯೋಜನೆ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಹಾಗಿದ್ದರೂ ಉಭಯ ದೇಶಗಳ ನಡುವಣ ಕ್ರಿಕೆಟ್ ಬಾಂಧವ್ಯ ಪುನರಾರಂಭವಾಗಬೇಕಾದ್ದಲ್ಲಿ ಸರಕಾರದಿಂದ ಹಸಿರು ನಿಶಾನೆ ಸಿಗಬೇಕಾಗಿದೆ. ಈ ಹಿಂದೆ ೨೦೦೭ರಲ್ಲಿ ಪಾಕಿಸ್ತಾನ ಕೊನೆಯದಾಗಿ ಭಾರತ ಪ್ರವಾಸ ಕೈಗೊಂಡಿತ್ತು.
Tagged with
tnews
ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಎಲ್ಲ್ಲಾ ಕ್ರಿಕೆಟಿಗರು ಉತ್ತರಿಸ ಬೇಕೆಂದಿಲ್ಲ ಎಂದು ಭಾರತದ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿ ದ್ದಾರೆ.
ಬಿಸಿಸಿಐನಿಂದ ನೀಡಲಾಗಿದ್ದ ಒನ್ ಟೈಮ್ ಪಾವತಿ ಪ್ರಯೋಜನದಿಂದ ಕೆಲವು ಮಾಜಿ ಆಟಗಾರರನ್ನು ಕಡೆಗಣಿಸಲಾಗಿತ್ತು. ಇದಕ್ಕೆ ಉತ್ತರವಾಗಿ ವಿಶ್ವ ವಿಖ್ಯಾತ ಮಾಜಿ ಆಲ್‌ರೌಂಡರ್ ಕಪಿಲ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಯಾರೆಲ್ಲ ಬಿಸಿಸಿಐನಿಂದ ಲಾಭವನ್ನು ಪಡೆ ಯುತ್ತಾರೋ ಅಥವಾ ಗುತ್ತಿಗೆ ಒಪ್ಪಂದವನ್ನು ಹೊಂದಿ ದ್ದಾರೋ ಅವರು ಮಂಡಳಿಗೆ ಉತ್ತರಿಸಬೇಕಾಗುತ್ತದೆ. ಆದರೆ ಎಲ್ಲ್ಲಾ ಆಟಗಾರರು ಉತ್ತರ ನೀಡಬೇಕೆಂದಿಲ್ಲ ಎಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇ-ಆಫ್ ಪಂದ್ಯಗಳ ವೇಳೆ ಮಾಜಿ ಆಟಗಾರರನ್ನು ಬಿಸಿಸಿಐ ಭಾರಿ ಮೊತ್ತ ನೀಡಿ ಸನ್ಮಾನಿಸಿತ್ತು. ಆದರೆ ಇದರಿಂದ ಬಂಡಾಯ ಕ್ರಿಕೆಟ್ ಲೀಗ್ (ಐಸಿಎಲ್) ಹುಟ್ಟು ಹಾಕಿದ್ದ ಕಪಿಲ್‌ದೇವ್ ಹಾಗೂ ಕೆಲವು ಮಾಜಿ ಆಟಗಾರರನ್ನು ಹೊರತುಪಡಿಸಲಾಗಿತ್ತು.
ಒಂದು ವೇಳೆ ನನ್ನ ಸೇವೆಯನ್ನು ಗುರುತಿಸಲು ಬಿಸಿಸಿಐ ಬಯಸದಿದ್ದಲ್ಲಿ ನನಗೆ ಯಾವುದೇ ತೊಂದರೆಯಿಲ್ಲ. ಹೌದು ನಾನು ಐಸಿಎಲ್ ಜತೆ ಬದ್ಧವಾಗಿದ್ದೇನೆ. ಯಾಕೆಂದರೆ ಕ್ರಿಕೆಟಿಗೆ ಉತ್ತೇಜನ ನೀಡುವುದು ನನ್ನ ಕೆಲಸವಾಗಿತ್ತು. ಇದೀಗ ಐಪಿಎಲ್ ಆರಂಭಿಸುವ ಮೂಲಕ ಬಿಸಿಸಿಐ ಸಹ ಅದನ್ನೇ ಮಾಡಿದೆ ಎಂದು ಕಪಿಲ್ ಉಲ್ಲೇ ಖಿಸಿದರು.
Tagged with
tnews
ಮಾಸ್ಕೋ: ಸಾಕಷ್ಟು ಏಳು ಬೀಳಿನ ನಂತರ ಮಾಸ್ಕೋದಲ್ಲಿ ನಡೆಯು ತ್ತಿರುವ ವಿಶ್ವ ಚೆಸ್ ಚಾಂಪಿ ಯನ್ ಸ್ಪರ್ಧೆಯಲ್ಲಿ ಭಾರತದ ವಿಶ್ವನಾಥನ್ ಆನಂದ್ ಐದನೇ ಬಾರಿಗೆ ವಿಶ್ವ ವಿಜೇತರಾಗಿ ಮೂಡಿಬಂದಿದ್ದಾರೆ. ಆನಂದ್ ತಮ್ಮ ಎದುರಾಳಿ ಇಸ್ರೇಲ್‌ನ ಬೋರಿಸ್ ಗೆಲ್‌ಫೆಂಡ್ ೨.೫ ಹಾಗೂ ೧.೫ರ ಅಂತರದಲ್ಲಿ ಈ ಗೆಲುವನ್ನು ತನ್ನದಾಗಿಸಿಕೊಂಡಿದ್ದಾರೆ.
ಟೈಬ್ರೇಕರ್‌ನ ಮೊದಲ ೩೩ನಡೆಯಲ್ಲಿ ವಿಶ್ವನಾಥನ್ ಆನಂದ್ ಡ್ರಾದಲ್ಲಿ ಅಂತ್ಯ ಗೊಳಿಸಿದರೆ ಆನಂತರದ ೭೭ನೇ ನಡೆಯಲ್ಲಿ ಫಲಿತಾಂಶ ಮೂಡಿ ಬಂತು. ಟ್ರೈಬ್ರೇಕರ್‌ನ ನಾಲ್ಕನೇ ಸುತ್ತಿನಲ್ಲಿ ಎರಡು ಸುತ್ತು ಡ್ರಾದಲ್ಲಿ ಮುಕ್ತಾಯಗೊಂಡರೆ ಉಳಿದ ಎರಡು ಸುತ್ತಿ ನಲ್ಲಿ ಖಚಿತ ಫಲಿತಾಂಶ ಬಂತು. ಈ ಮೊದಲು ವಿಶ್ವನಾಥನ್ ಆನಂದ್ ಹಾಗೂ ಬೋರಿಸ್ ಗೆಲ್‌ಫೆಂಡ್ ನಡುವೆ ೧೦ ಪಂದ್ಯಾ ವಳಿ ಸಮಾನ ಫಲಿತಾಂಶ ಬಂದಿತ್ತು. ಇನ್ನೆ ರಡು ಪಂದ್ಯದಲ್ಲಿ ತಲಾ ಒಂದೊಂದು ಅಂಕ ದೊರಕಿತ್ತು. ಆನಂತರದ ಎರಡು ಪಂದ್ಯದಲ್ಲಿ ಗೆಲ್‌ಫೆಂಡ್ ಆನಂ ದ್‌ಗೆ ಪ್ರಬಲ ಪೈಪೋಟಿ ನೀಡಿ ದ್ದರು. ವಿಜೇತ ವಿಶ್ವನಾಥ್ ಆನಂದ್ ೧೪ಲಕ್ಷ ಡಾಲರ್ ಹಣವನ್ನು ಪಡೆದರೆ ಎದುರಾಳಿ ಬೋರಿಸ್ ೧೧.೫ ಲಕ್ಷ ಡಾಲರ್ ಪಡೆಯಲಿದ್ದಾರೆ. ೪೨ರ ಹರೆಯದ ವಿಶ್ವನಾಥನ್ ಆನಂದ್ ಸತತ ಮೂರನೇ ಬಾರಿಗೆ ಈ ಪ್ರಶಸ್ತಿ ಗೆದ್ದರೆ ನಾಲ್ಕನೇ ಬಾರಿ ವಿಶ್ವ ಚಾಂಪಿಯನ್ ಬಿರುದು ಪಡೆದುಕೊಂಡಿ ದ್ದಾರೆ. ೨೦೦೦, ೨೦೦೭, ೨೦೦೮ ಹಾಗೂ ೨೦೧೦ರಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದರು. ೨೦೦೭ರಲ್ಲಿ ವಿಶ್ವ ನಾಥನ್ ಆನಂದ್ ಎಂಟು ಪ್ರತಿಸ್ಪರ್ಧಿಗಳನ್ನು ಎದುರಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು. ೧೯೮೭ರಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆಗಿ ಮೂಡಿ ಬಂದಿರುವ ವಿಶ್ವನಾಥನ್ ಆನಂದ್ ಸುದೀರ್ಘ ಅಂತರದ ನಡುವೆ ಗೆಲುವು ತನ್ನದಾಗಿಸಿಕೊಳ್ಳುವ ಮೂಲಕ ಚೆಸ್ ಸಾಮ್ರಾಜ್ಯದಲ್ಲಿ ಇನ್ನೂ ತನ್ನ ಅಸ್ತಿತ್ವನ್ನು ಉಳಿಸಿಕೊಂಡಿದ್ದಾರೆ.
Tagged with
tnews
ಮಲೇಶಿಯಾ: ಮಲೇಶ್ಯಾದ ಐಪೋ ಎಂಬಲ್ಲಿ ನಡೆಯುತ್ತಿರುವ ಅಜ್ಞಾನ್ ಶಾ ಹಾಕಿ ಟೂರ್ನಿಯಲ್ಲಿ ಗೆಲ್ಲಲು ಏದುಸಿರು ಬಿಟ್ಟ ಭಾರತ ಸೋಲನ್ನೊಪ್ಪಿಕೊಂಡು ತನ್ನ ಹೋರಾಟಕ್ಕೆ ಅಂತ್ಯ ಹಾಡಿದೆ.
ಅರ್ಜೆಂಟೈನಾ ಎದುರು ೨-೩ರ ಅಂತರದಲ್ಲಿ ಸೋಲೊಪ್ಪಿಕೊಂಡ ಭಾರತ ಆರನೇ ಬಾರಿಗೆ ಇದೇ ಹಾಕಿ ಟೂರ್ನಿಯನ್ನು ಗೆಲ್ಲಬೇಕೆಂಬ ಕನಸಿಗೆ ಮುಕ್ತಾಯ ಹಾಡಿತು.
ಆರಂಭದಲ್ಲೇ ಗೋಲು ಗಳಿಸಲು ಶ್ರಮ ಪಟ್ಟ ಭಾರತ ಅರ್ಜೆಂಟೈನಾ ತಂಡದ ವೇಗಕ್ಕೆ ಬೆಕ್ಕಸಬೆರಗಾಯಿತು. ಅರ್ಜೆಂಟೈನಾದ ಗೊಂಝಲೋ ಪಿಲೆಟ್ ಪೆನಾಲ್ಟಿ ಕಾರ್ನರ್‌ನ ಅವಕಾಶ ಪಡೆದುಕೊಂಡು ಗೋಲ್ ಆಗಿ ಪರಿವರ್ತಿಸುವುದರೊಂದಿಗೆ ಅರ್ಜೆಂಟೈನಾದ ಗೆಲುವನ್ನು ಖಚಿತ ಪಡಿಸಿಕೊಂಡರು. ಇದಕ್ಕೂ ಮೊದಲು ಮ್ಯಾಟಿಸ್ ಮತ್ತು ಸಾಂಟಿಗೋ ಚುರುಕಿನ ಆಟವಾಡಿ ಗೋಲು ಗಳಿಸಿಕೊಟ್ಟರು. ಭಾರತದ ರಘುನಾಥ್ ಮತ್ತು ಸರ್ದಾರ್ ಸಿಂಗ್ ಎರಡು ಗೋಲನ್ನು ತಂಡಕ್ಕೆ ಸಂಪಾದಿಸಿಕೊಟ್ಟರೂ ಈ ಗೋಳನ್ನು ಪಡೆಯಲು ಭಾರತ ಭಾರೀ ಪ್ರಯಾಸವನ್ನೇ ಮಾಡಿತ್ತು. ಮೂರನೇ ಗೋಲಿಗಾಗಿ ಸಾಕಷ್ಟು ಪ್ರಯತ್ನ ಪಟ್ಟರೂ ಭಾರತದ ವ್ಯೂಹವನ್ನು ಮುರಿದುಹಾಕುವಲ್ಲಿ ಅರ್ಜೆಂಟೈನಾ ಆಟಗಾರರು ಯಶಸ್ವಿಯಾದರು. ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕರೂ ಅದನ್ನು ಗೋಲನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿಫಲವಾಗಿತ್ತು.
ಐದು ಮ್ಯಾಚ್‌ಗಳಲ್ಲಿ ಮೂರು ಪಂದ್ಯಗಳನ್ನು ಸೋತಿರುವ ಭಾರತ ಇಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಕಳೆದ ಭಾನುವಾರದಂದು ಇಂಗ್ಲಂಡ್ ಎದುರು ಭಾರತ ಸೋಲು ಕಂಡಿತ್ತು.
Tagged with
tnews
ಮುಲ್ಕಿ: ಚಿನ್ನಕ್ಕಾಗಿ ಮಹಿಳೆಯ ಕೈ, ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಉಸಿರುಕಟ್ಟಿಸಿ ಕೊಲೆಗೈದನೆಂದು ಕೊಳಚಿಕಂಬಳದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಲಲಿತಾ(೭೮) ಎಂಬವ ರನ್ನು ಕೊಲೆಗೈದು ಪೊಲೀಸರಿಂದ ಬಂಧಿಸ ಲ್ಪಟ್ಟಿರುವ ಬೆಳ್ಳಾಯರುವಿನ ರಝಾಕ್ ಬಹಿರಂಗಗೊಳಿಸಿದ್ದಾನೆ. ಕಿನ್ನಿಗೋಳಿ ಬಿತ್ತುಲ್‌ನಲ್ಲಿ ಮನೆ ಯೊಂದಕ್ಕೆ ನುಗ್ಗಿ ಕಳ್ಳತನ ನಡೆಸಿದ್ದು, ಅಲ್ಲಿನ ಸಿ.ಸಿ.ಕ್ಯಾಮರಾದಲ್ಲಿ ಚಹರೆ ಪತ್ತೆಯಾಗಿತ್ತು. ಅದರಂತೆ ಸೋಮ ವಾರ ಕಿನ್ನಿಗೋಳಿಯಲ್ಲಿ ಬೆಳ್ಳಾಯರುವಿನ ರಝಾಕ್‌ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈತನ ಕಳ್ಳತನ ಹಾಗೂ ಕೊಲೆ ಕೃತ್ಯಗಳು ಬೆಳಕಿಗೆ ಬಂದಿತ್ತು. ಅದರಂತೆ ಆತನಿಂದ ನಗದು ಹಣ ರೂ, ೪೧,೨೪೦, ರೂ ೧೬,೦೦೦ ಬೆಲೆಬಾಳುವ ತಾಮ್ರದ ಪಾತ್ರೆಗಳು ಹಾಗೂ ಇತರ ೧೫,೦೦೦ ರೂ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಲಲಿತಾ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸದ ಹಿನ್ನೆಲೆಯಲ್ಲಿ ಮನೆಮಂದಿ ದೈವದ ಮೊರೆ ಹೋಗಿದ್ದರು, ಹಾಗೂ ಮಹಿಳಾ ಸಂಘಟನೆಗಳು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ದೂರು ನೀಡಿದ್ದರು.
Tagged with
cnews
ಕಾರ್ಕಳ: ಪಳ್ಳಿ ಗ್ರಾಮವೊಂದರಲ್ಲಿ ಮದುವೆ ಸಮಾರಂಭಕ್ಕೆ ತೆರಳಿ ಚಿನ್ನಾಭರಣ ಎಗರಿಸಿದ ಛಾಯಾಗ್ರಾಹಕನೋರ್ವ ಪೊಲೀಸರ ಅತಿಥ್ಯಕ್ಕೊಳಗಾದ ಘಟನೆ ಸಂಭವಿಸಿದೆ. ಮಿಯ್ಯಾರು ನಿವಾಸಿ ಸುಭಾಸ್ ಕೋಟ್ಯಾನ್ ಎಂಬಾತ ಪ್ರಕರಣದ ಆರೋಪಿಯಾಗಿದ್ದು, ಕೆದಿಂಜೆಯ ಸ್ಟುಡಿಯೋವೊಂದರಲ್ಲಿ ಕೆಲಸ ಮಾಡುತ್ತಿದನು. ಈತ ಈ ಹಿಂದೆ ಇದೇ ರೀತಿಯಲ್ಲಿ ಹಲವೆಡೆ ಕೃತ್ಯ ನಡೆಸಿ ಮಂಗಳಾರತಿ ಮಾಡಿಕೊಂಡಿದ್ದನೆನ್ನಲಾಗಿದೆ. ನಿನ್ನೆ ಬೆಳಿಗ್ಗೆ ಮದುವೆ ಸಮಾರಂಭದ ಮನೆಯೊಂದಕ್ಕೆ ಹೋಗಿ ಫೋಟೋ ಸೆರೆ ಹಿಡಿಯುವ ನೆಪದಲ್ಲಿ ದೇವರ ಕೋಣೆಗೆ ತೆರೆಳಿದ್ದನು. ಮನೆಯವರ ಗಮನವನ್ನು ಬೇರೆಡೆಗೆ ಸೆಳೆಯುವಂತೆ ಮಾಡಿ ಮೂರು ಉಂಗುರಗಳನ್ನು ಎಗರಿಸಿದ್ದನು. ಚಿನ್ನಾಭರಣ ಕಳವಾಗಿರುವ ಮಾಹಿತಿ ಮನೆಮಂದಿ ಗಮನಕ್ಕೆ ಬಂದಿ ತ್ತಾದರೂ, ಅವರ‍್ಯಾರು ಅದರ ಬಗ್ಗೆ ರಾದ್ಧಾಂತ ಮಾಡದೇ ಮದುವೆ ಮುಗಿಯುವವರೆಗೆ ಕಾದಿದ್ದರು. ಮಾತ್ರವಲ್ಲದೇ ಛಾಯಾಗ್ರಾಹಕನ ಚಲನವಲನದ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ಛಾಯಾಗ್ರಾಹಕನನ್ನು ಹಿಂಬಾಲಿಸಿದ ತಂಡ ಸ್ಟುಡಿಯೋದಲ್ಲಿ ಆತನನ್ನು ಕೂಡಿಹಾಕಿ ತದುಕಿದ್ದರು. ಇಷ್ಟಾದರೂ ಯಾವುದೇ ಪ್ರಯೋಜನ ಬಾರದೇ ಇದ್ದುದರಿಂದ ಆತನನ್ನು ಪೊಲೀಸರಿಗೆ ಒಪ್ಪಿಸಲು ಮುಂದಾಗಿದ್ದರು. ಅದಾಗಲೇ ಒಳಉಡುಪಿನಲ್ಲಿ ಬಚ್ಚಿಟ್ಟ ಆಭರಣವನ್ನು ಸಂಬಂಧಪಟ್ಟವರಿಗೆ ಒಪ್ಪಿಸಿದ್ದನೆಂದು ತಿಳಿದುಬಂದಿದೆ.
ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯು ಐಪಿಎಲ್ ಬೆಟ್ಟಿಂಗ್‌ದಾರನಾಗಿದ್ದಾನೆಂದು ತನಿಖೆ ಮೂಲಗಳಿಂದ ತಿಳಿದುಬಂದಿದೆ.
Tagged with
cnews
ಬೆಳ್ತಂಗಡಿ: ಅಪಘಾತವೊಂದರಲ್ಲಿ ಮೆಡಿಕಲ್ ಶಾಪ್ ಮಾಲಕ ದಾರುಣವಾಗಿ ಮೃತಪಟ್ಟ ಘಟನೆ ಧರ್ಮಸ್ಥಳದ ಸನಿಹ ಬುಧವಾರ ಬೆಳಿಗ್ಗೆ ನಡೆದಿದೆ.
ಬೆಳ್ತಂಗಡಿ ಕಸಬಾದ ಕುತ್ಯಾರು ಕೆ.ಜಿ.ರಸ್ತೆಯ ಸುರೇಶ್ ರಾವ್(೫೮) ಎಂಬವರು ಮೃತಪಟ್ಟವರು. ಇವರು ಧರ್ಮಸ್ಥಳದ ಕಡೆಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ರಭಸದಿಂದ ಬಂದ ಟವೇರಾ ಕಾರು ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ನೆಲಕ್ಕೆ ಅಪ್ಪಳಿಸಿದ ರಾವ್ ಅವರು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟರು. ಹಿಂಬದಿ ಸವಾರನಾಗಿದ್ದ ಅವರ ಪುತ್ರ ರಕ್ಷಿತ್ ರಾವ್ (೨೨) ಗಾಯಗೊಂಡಿದ್ದಾರೆ. ಮೃತರು ಧರ್ಮಸ್ಥಳದಲ್ಲಿ ಔಷಧಾಲಯವನ್ನು ಹೊಂದಿದ್ದರು.
Tagged with
accident,
cnews
ಕಾಸರಗೋಡು: ಇಲ್ಲಿನ ಮಧೂರು ಗ್ರಾ.ಪಂ ವ್ಯಾಪ್ತಿಯ ಮೀಪುಗುರಿಯಲ್ಲಿ ಒಂದು ಕೋಮಿನವರ ಎಂಟರಷ್ಟು ಮನೆಗಳನ್ನು ಆಕ್ರಮಿಸಿ ಹಾನಿಗೊಳಿಸಿ ಕೋಮು ದಳ್ಳುರಿ ನಡೆಸಿದ ಪ್ರಕರಣದಲ್ಲಿ ಕುಖ್ಯಾತ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಮೀಪುಗುರಿ ಜೆ.ಪಿ. ಕಾಲನಿಯ ನಿವಾಸಿ ನವೀನ (೩೭) ಬಂಧಿತ. ಗುರುವಾರ ಈತನನ್ನು ಸೆರೆ ಹಿಡಿಯಲಾಗಿದೆ.
ಕಳೆದ ಫೆಬ್ರವರಿ ೧೧ ರಂದು ಮೀಪುಗುರಿಯ ಸಾಹಿರಾಭಾನು, ಅಹಮ್ಮದ್ ಇಕ್ಬಾಲ್, ಅಬ್ದುಲ್ ರಹಿಮಾನ್ ಮೊದಲಾದವರ ಮನೆ ಗಳನ್ನು ಆಕ್ರಮಿಸಿ ಹಾನಿಗೊಳಿಸಿದ ಪ್ರಕರಣದಲ್ಲಿ ನವೀನ ಆರೋಪಿಯಾ ಗಿದ್ದಾನೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ರಿಮಾಂಡ್ ವಿಧಿಸಲಾಗಿದೆ.
ಈತ ಈ ಹಿಂದೆ ಸೂರ್ಲು, ಮೀಪುಗುರಿ ಪ್ರದೇಶಗಳಲ್ಲಿ ನಡೆದಿದ್ದ ಕೋಮು ಸಂಘರ್ಷಗಳ ಸಹಿತ ಹಲ ವಾರು ಪ್ರಕರಣಗಳ ಕುಖ್ಯಾತ ಆರೋಪಿ ಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
Tagged with
cnews
ಮಂಗಳೂರು: ಹಣ ಸಾಲ ಕೇಳಿ ದಾಗ ಕೊಡಲಿಲ್ಲ ಎನ್ನುವ ಕಾರಣಕ್ಕೆ ಹಣ್ಣಿನ ವ್ಯಾಪಾರಿಗೆ ಯುವಕನೊಬ್ಬ ಚೂರಿ ಯಿಂದ ಇರಿದು ಗಾಯಗೊಳಿ ಸಿರುವ ಘಟನೆ ಮಂಗಳವಾರ ತಡರಾತ್ರಿ ರೈಲ್ವೇ ಸ್ಟೇಷನ್ ರಸ್ತೆ ಬಳಿ ನಡೆದಿದೆ. ಮಂಗ ಳೂರು ತಾಲೂಕು ಪಂಚಾ ಯತ್ ಕ್ಯಾಂಟಿನಿನಲ್ಲಿ ಸಪ್ಲೈಯರ್ ಆಗಿ ದುಡಿ ಯುತ್ತಿರುವ ಮೂಡಬಿದ್ರೆ ನಿವಾಸಿ ಸುನೀಲ್ (೨೧)ಎಂಬಾತ ಕ್ಯಾಂಟೀನ್ ಪಕ್ಕದಲ್ಲೇ ಹಣ್ಣಿನ ಅಂಗಡಿಯನ್ನು ನಡೆಸುತ್ತಿರುವ ವೆಲೆನ್ಸಿಯಾ ನಿವಾಸಿ ಅಬುಬಕ್ಕರ್ ಅವರ ಬಳಿ ಹಣ ಸಾಲ ಕೇಳಿದ್ದ. ಆದರೆ ಅವರು ಹಣ ನೀಡಲು ನಿರಾಕರಿಸಿದ್ದರು. ಇದರಿಂದ ಕೋಪ ಗೊಂಡ ಸುನೀಲ್‌ಹಣ್ಣು ಕೊಯ್ಯುವ ಚೂರಿಯಿಂದ ಅಬುಬಕ್ಕರ್ ಅವರಿಗೆ ಇರಿದು ಗಾಯಗೊಳಿಸಿದ್ದ. ಇದನ್ನು ಪಕ್ಕದ ಅಂಗಡಿಯ ಶ್ಯಾಮ್ ಸುಂದರ್ ಎಂಬವರು ಗಮನಿಸಿ ಸುನೀಲ್ ಕೈಯಿಂದ ಅಬುಬಕ್ಕರ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Tagged with
cnews
ಬೆಂಗಳೂರು: ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸುವ ಭಾರತ್ ಬಂದ್‌ಗೆ ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದಲೇ ಪ್ರತಿಕ್ರಿಯೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಬಿಎಂಟಿಸಿ ಬಸ್‌ಗಳನ್ನು ನಿನ್ನೆ ರಾತ್ರಿಯೇ ತಡೆದು ಬೆಂಕಿ ಹಚ್ಚಿದ್ದಾರೆ. ಕೆ.ಆರ್.ಪುರದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡ ಏರ್‌ಪೋರ್ಟ್‌ನತ್ತ ಸಾಗುತ್ತಿದ್ದ ಬಿಎಂಟಿಸಿ ಬಸ್ ತಡೆದು ಅದರ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ಬಳಿಕ ತಾವು ತಂದಿದ್ದ ಪೆಟ್ರೋಲ್‌ನ್ನು ಬಸ್ ಮೇಲೆ ಸುರಿದು ಬೆಂಕಿ ಹಚ್ಚಿ ಪರಾರಿಯಾದರು. ಮತ್ತಿಕೆರೆಯಲ್ಲಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಇಂದು ಬೆಳಗ್ಗೆ ನಡೆಯಿತು. ಹುಬ್ಬಳ್ಳಿಯಲ್ಲೂ ಹಲವು ಕೆಎಸ್ಸಾರ್ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಖಾಸಗಿ ಬಸ್‌ಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ.
Tagged with
snews
ಮಂಗಳೂರು: ಸುರತ್ಕಲ್ ಚಿತ್ರಮಂದಿರ ಸಮೀಪ ಹೆದ್ದಾರಿ ೬೬ರಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಪತ್ರಿಕಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಪತ್ರಿಕೆಯೊಂದರ ಮುದ್ರಣ ವಿಭಾಗದ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಮ್ಯಾಕ್ಸಿಕ್ಯಾಬ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಮೂಲ್ಕಿ ನಿವಾಸಿ ಮಹೇಂದ್ರನ್ (೩೨), ಪರ್ಕಳ ನಿವಾಸಿ ನಿರಂಜನ್ ಶೆಟ್ಟಿ (೨೪), ಪ್ರಸಾದ್ ಆಚಾರ್ಯ, ರವಿರಾಜ್, ಚಂದ್ರಕಾಂತ್ ಗಾಯಗೊಂಡವರು ಬಸ್ ಚಾಲಕನ ವಿರುದ್ದ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews
ಮಂಗಳೂರು: ಬಿ.ಸಿ.ರೋಡ್ ಬಸ್ ನಿಲ್ದಾಣ ಬಳಿ ಮಧ್ಯರಾತ್ರಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಮೂವರನ್ನು ಬಂಟ್ವಾಳ ನಗರ ಪೋಲೀಸರು ಬಂದಿಸಿದ್ದಾರೆ.
ಬಂಧಿತರನ್ನು ಹಾಸನ ಜಿಲ್ಲೆಯ ಬೇಲೂರು ಸಮೀಪದ ಅಗರಿ ನಿವಾಸಿಗಳಾದ ಇಂದ್ರಜಿತ್, ಬಬ್ರುವಾಹನ ಮತ್ತು ಗೋಪಿ ಎಂದು ಗುರುತಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇವರು ಅಲೆಮಾರಿಗಳಂತೆ ತಿರುಗಾಡಿ ರಸ್ತೆ ಬದಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಕಬ್ಬಿಣ, ತಾಮ್ರದ ತಂತಿ ಮತ್ತಿತರ ಸೊತ್ತುಗಳನ್ನು ಕಳವು ಮಾಡುತ್ತಿದ್ದರೆನ್ನಲಾಗಿದೆ.
ಈ ಮೂವರಲ್ಲಿ ಇಂದ್ರಜಿತ್ ಎಂಬಾತನ ವಿರುದ್ಧ ಉಡುಪಿ, ಮೂಡಬಿದ್ರೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Tagged with
cnews
ಸುಳ್ಯ: ನಗರದ ವಿವೇಕಾನಂದ ವೃತ್ತದ ಬಳಿ ಅಟೋರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಪ್ರಯಾಣಿಕ ಪದ್ಮಯ್ಯ ಎಂಬವರಿಗೆ ಗಾಯವಾಗಿದೆ.
ಮಂಡೆಕೋಲಿನ ಪ್ರವೀಣ ಎಂಬಾತ ಅತಿವೇಗದಿಂದ ಹಾಗೂ ನಿರ್ಲಕ್ಷದಿಂದ ಬೈಕ್ ಸವಾರಿ ಮಾಡಿ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಅಟೋರಿಕ್ಷಾ ದೊಡ್ಡತೋಟದ ಉದಯ ಎಂಬವರಿಗೆ ಸೇರಿದೆ. ಅದರಲ್ಲಿ ಪದ್ಮಯ್ಯ ಎಂಬವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದರು.
Tagged with
cnews
ಮಂಗಳೂರು: ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದ ಅಬ್ಬೆಮನೆ ನಿವಾಸಿ ಸುಬ್ರಹ್ಮಣ್ಯ ನಾಯ್ಕ್ (೩೫)ಮನೆ ಸಮೀಪದ ಯಳಂತೂರು ರಸ್ತೆ ಪಕ್ಕದ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಇವರು, ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದರು. ಬುಧsವಾರ ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಹೊರಟವರು ಬಳಿಕ ನೇಣು ಬಿಗಿದು ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅವರ ಸಂಬಂಧಿ ಸುರೇಶ್ ನಾಯ್ಕ ಎಂಬವರು ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
Tagged with
cnews
ಚಿಕ್ಕನಾಯಕನಹಳ್ಳಿ: ತನ್ನ ಪ್ರೇಯಸಿಯೊಂದಿಗೆ ಇದ್ದ ಆಕೆಯ ಇನ್ನೋರ್ವ ಪ್ರಿಯಕರನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಆರೋಪಿಯನ್ನು ಹುಳಿ ಯಾರು ಪೊಲೀಸರು ಬಂಧಿಸಿದ್ದಾರೆ.
ಹಂದನಕೆರೆ ಹೋಬಳಿಯ ಅರಳೀಕೆರೆ ಬೋವಿ ಕಾಲನಿಯ ಹನುಮಂತಸ್ವಾಮಿ ಯಾನೆ ಸ್ವಾಮಿ, ಆತನ ಪ್ರಿಯತಮೆ ಶೈಲಜಾ ಮತ್ತು ಇವರಿಗೆ ಸಹಕರಿಸಿದ ಚಂದ್ರಮ್ಮ ಬಂಧಿತ ಆರೋಪಿಗಳಾಗಿದ್ದಾರೆ.
ಚೆನ್ನರಾಯಪಟ್ಟಣ ತಾಲೂಕಿನ ಭುವನಹಳ್ಳಿ, ವಡ್ಡರಹಟ್ಟಿಯ ಗಾರೆ ಕೆಲಸಗಾರಹನುಮಂತ ಸ್ವಾಮಿ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಪ್ರೇಯಸಿಯೊಂದಿಗೆ ಹಂದನಕೆರೆಯ ಅರಳೀಕೆರೆಯಲ್ಲಿ ವಾಸವಾಗಿದ್ದ. ಇತ್ತೀಚಿನ ದಿನಗಳಲ್ಲಿ ತನ್ನ ಪ್ರೇಯಸಿಯ ವರ್ತನೆ ಸಂಶಯಾಸ್ಪವಾಗಿದ್ದನ್ನು ಗಮನಿಸಿದ್ದ ಹನುಮಂತ ಇದಕ್ಕಾಗಿ ಆಕೆಯೊಂದಿಗೆ ಜಗಳವನ್ನೂ ಮಾಡಿದ್ದ. ಆದರೂ ಆಕೆ ಸುಧಾರಿಸಿಕೊಳ್ಳದೆ ಹತ್ತಿರದ ಬೈರಾಪುರ ಲಮಾಣಿ ತಾಂಡ್ಯದ ರಂಗಸ್ವಾಮಿ ಯಾನೆ ಮಂಜುನಾx ನಾಯ್ಕ ಎಂಬಾತನೊಂದಿಗೆ ತನ್ನ ಸಾಂಗತ್ಯ ಮುಂದುವರಿಸಿದ್ದಳು.
ಆತನಿಗೆ ಪದೆ ಪದೆ ಪೋನ್ ಮಾಡುತ್ತಿರುವುದು ಹನುಮಂತ ಸ್ವಾಮಿ ಗುರುತಿಸಿದ್ದ. ಹನುಮಂತ ಸ್ವಾಮಿ ಬೇರೆ ಊರಿಗೆ ಕೆಲಸಕ್ಕೆ ಹೋದಾಗ ಆತನನ್ನು ತನ್ನ ಮನೆಗೆ ಕರೆಸಿಕೊಂಡು ಲಲ್ಲೆ ಗೆರೆಯುತ್ತಿದ್ದಳು. ಒಂದು ದಿನ ಹನುಮಂತ ಸ್ವಾಮಿ ಬಂದಾಗ ಇವರಿಬ್ಬರೂ ರಾಸಲೀಲೆಯಲ್ಲಿ ತೊಡಗಿದ್ದು ಕಂಡಿತ್ತು. ಹನುಮಂತ ಸ್ವಾಮಿಯ ಕೋಪ ನೆತ್ತಿಗೇರಿತ್ತು. ಮೂಲೆಯಲ್ಲಿದ್ದ ಸುತ್ತಿಗೆಯನ್ನು ಕೈಗೆತ್ತಿಕೊಂಡು ರಂಗಸ್ವಾಮಿಯತಲೆಗೆ ಬಡಿದಿದ್ದ ರಂದಸ್ವಾಮಿಸ್ಥಳದಲ್ಲಿಯೇ ಮೃತ ಪಟ್ಟಿದ್ದರೆ, ಆತನ ಮೃತದೇಹವನ್ನು ಗೋಣಿ ಚೀಲದಲ್ಲಿ ಕಟ್ಟಿ ಸಮೀಪದ ತಿಪ್ಪಜ್ಜನ ಕಟ್ಟೆಯಲ್ಲಿ ಎಸೆದಿದ್ದ. ಮೃತ ದೇಹದ ವಿಲೇವಾರಿಗೆ ಪ್ರಿಯತಮೆ ಶೈಲಜಾ ಮತ್ತು ಮನೆಯ ಪಕ್ಕದ ಚಂದ್ರಮ್ಮ ಎಂಬವರು ಸಹಕರಿಸಿದ್ದರು.
ಇತ್ತ ರಂಗಸ್ವಾಮಿಯಪೋಷಕರು ತಮ್ಮ ಮಗ ಕಾಣೆಯಾದ ಬಗ್ಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Tagged with
cnews
ಮಂಗಳೂರು: ಬಂಧಿತ ಆರೋಪಿ ಗಳಿಗೆ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಎಸ್.ಐ ಪ್ರಕಾಶ್‌ಗೆ ಮಾನವ ಹಕ್ಕು ಆಯೋಗ ತಲಾ ಇಪ್ಪತೈದು ಸಾವಿರೂ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ನೀರ್‌ಮಾರ್ಗ ಚರ್ಚ್‌ನ ಧರ್ಮ ಗುರುವಿಗೆ ಪೋನ್‌ನಲ್ಲಿ ಬೆದರಿಕೆ ಕರೆ ಮಾಡಿದ್ದಾರೆ ಎಂಬ ಆರೋಪದಲ್ಲಿ ನೀರುಮಾರ್ಗದ ಜಸ್ಟಿನ್ ವಾಸ್ (೫೮), ಅವರ ಪುತ್ರ ಎಂಜಿನಿಯರಿಂಗ್ ವಿದ್ಯಾರ್ಥಿ ಜೊಯಲ್ ವಾಸ್ ಮತ್ತು ಗಂಗಾಧರ ಶೆಟ್ಟಿ (೫೦)ಎಂಬವರನ್ನು ಬಂಧಿಸಿದ್ದ ಆಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವಿಶೇಷ ಪೊಲೀಸ್ ದಳದ ಮುಖ್ಯಾದಿ ಕಾರಿಯೂ ಆಗಿದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಂದಿನ ಎಸ್.ಐ ಪ್ರಕಾಶ್ ಮೂವ ರೊಂದಿಗೆ ಅಸಭ್ಯವಾಗಿ ವರ್ತಿಸಿ ಚಿತ್ರಹಿಂಸೆ ನೀಡಿದ್ದರೆಂದು ದೂರು ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಆಯೋಗ ಆರೋಪಿತ ಎಸ್.ಐಗೆ ರೂ.೭೫ ಸಾವಿರ ರೂ ದಂಡ ವಿಧಿಸಿದೆ.
Tagged with
cnews
ಮಂಗಳೂರು: ಮಧೂರು ಸಮೀಪದ ಪಟ್ಲದ ಅಪ್ರಪಾಪ್ತ ಬಾಲಕಿಯನ್ನು ಲೈಂಗಿಕ ದಂಧೆಗೆ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಸುಳಿವು ಪೊಲೀಸರಿಗೆ ದೊರೆತಿದೆ. ಆರೋಪಿಗಳು ಕಾಸರಗೋಡಿನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಪಳ್ಳಿಕ್ಕೆರೆ ನಿವಾಸಿ ಹನೀಫ್‌ನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಎಎಸ್‌ಪಿ ಮಂಜುನಾಥ್ ನೇತೃತ್ವದಲ್ಲಿ ಪೊಲೀಸರ ತಂಡ ಆರೋಪಿಯ ಮನೆಗೆ ದಾಳಿ ನಡೆಸಿದ್ದು, ಮನೆಯ ಮುಂಭಾಗದಲ್ಲಿದ್ದ ಕಾರನ್ನು ವಶಕ್ಕೆ ತೆಗೆದುಕೊಂಡಿದೆ. ಬಾಲಕಿಗೆ ಉಲವು ಬಾರಿ ಕಿರುಕುಳ ನೀಡಿದ ಬಳಿಕ ಆರೋಪಿ ಜಿಲ್ಲೆಯ ಉಲವು ಗಣ್ಯರಿಗೆ ಆಕೆಯನ್ನು ಒಪ್ಪಿಸಿದ್ದ. ಈ ಪ್ರಕರಣದಲ್ಲಿ ಆರೋಪಿ ಹನೀಫಾ ಸಹಿತ ಉಲವರ ವಿರುದ್ದ ಎರ್ನಾಕುಳಂ ವಾರಾಪುಳ ಪೊಲೀಸರು ಪ್ರಕರಣ ದಾಖಲಿಸಿದ್ದರು.
ವಾರಾಪುಳದ ವಸತಿಗೃಹ ದಲ್ಲಿದ್ದುಕೊಂಡು ಬಾಲಕಿಯನ್ನು ಲೈಂಗಿಕ ದಂಧೆಯ ತಂಡಕ್ಕೆ ಒಪ್ಪಿಸಿದ್ದನು ಎಂದು ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು. ಅನೇಕ ಗಣ್ಯರ ಮುಖವಾಡ ಬಯಲಾಗುವ ಭಯದಿಂದ ಹನೀಫಾ ಬಂಧನ ಮತ್ತು ತನಿಖೆಯನ್ನು ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪ ಕೇಳಿ ಬಂದಿದೆ.
Tagged with
cnews
ಕೊಚ್ಚಾಡಿಯನ್ ಚಿತ್ರದ ಒಂದು ರೊಮ್ಯಾಂಟಿಕ್ ಹಾಡಿನಲ್ಲಿ ತನ್ನ ಪ್ರಾಯಕ್ಕಿಂತ ಅರ್ಧಕ್ಕಿಂತಲೂ ಕಡಿಮೆ ಪ್ರಾಯದ ನಟಿ ದೀಪಿಕಾ ಪಡುಕೋಣೆ ಜತೆ ಕುಣಿಯುವುದು ಹಿರಿಯ ನಟ ರಜನೀಕಾಂತ್‌ಗೆ ಅನಿವಾರ್ಯವಾಯಿತು. ದೀಪಿಕಾಳೊಂದಿಗೆ ನಟಿಸಲು ಸಿಗುವುದು ಒಂದು ಒಳ್ಳೆಯ ಅನುಭವ ಎಂದು ಭಾವಿಸುವ ನಟರೇ ಹೆಚ್ಚು. ಅದೇ ರೀತಿ ರಜನೀಕಾಂತ್ ಜತೆಗೆ ನಟಿಸುವುದು ಒಂದು ಅದೃಷ್ಟ ಎಂಬುದು ನಟಿಯರ ಅಭಿಮತ. ಆದರೆ ಇಲ್ಲಿ ಮಾತ್ರ ದೀಪಿಕಾಳೇ ರಜನೀಕಾಂತ್ ಕಲಿಸಬೇಕಾಯಿತಂತೆ! ರಜನೀಕಾಂತ್‌ನಂಥ ಪ್ರಬುದ್ಧ ನಟರು ದೀಪಿಕಾಳಿಂದ ಕಲಿಯಲಿರುವುದು ಏನಪ್ಪಾ ಎಂದು ನೀವು ಹುಬ್ಬೇರಿಸಬಹುದು. ಆದರೆ ಇಲ್ಲಂತು ಕಲಿಸಿದ್ದೂ ಹೌದು, ಧೈರ್ಯ ತುಂಬಿದ್ದೂ ಹೌದು.
ತನಗೆ ೬೦ ದಾಟಿದೆ, ದೀಪಿಕಾಳಿಗೆ ಇನ್ನೂ ೩೦ ಆಗಿಲ್ಲ. ಅಂಥ ನಟಿಯೊಂದಿಗೆ ನಾನು ರೊಮ್ಯಾಂಟಿಕ್ ಆಗಿರುವುದು ಹೇಗಪ್ಪಾ ಎಂಬುದೇ ರಜನೀಕಾಂತ್ ಸಮಸ್ಯೆಯಾಗಿತ್ತಂತೆ. ಒಂದು ರೀತಿಯ ಅಳುಕಿನಿಂದ ರಜನೀಕಾಂತ್‌ಗೆ ಸ್ಟೆಪ್ ಹಾಕುವುದೇ ಸಾಧ್ಯವಾಗಲಿಲ್ಲವಂತೆ. ಅದನ್ನು ತಿಳಿದುಕೊಂಡ ದೀಪಿಕಾ, ಇದು ಕೇವಲ ನಟನೆ ಮಾತ್ರ. ಇಲ್ಲಿ ನೀವು ಅಳುಕು ತೋರಿಸಿದರೆ ಸರಿಯಾಗದು. ಪ್ರಾಯದ ವಿಷಯವನ್ನು ಮನಸ್ಸಿನಿಂದ ದೂರ ಮಾಡಿ ಸಂಪೂರ್ಣವಾಗಿ ನಟನೆಯಲ್ಲಿ ತೊಡಗಿಕೊಳ್ಳಿ. ಡ್ಯಾನ್ಸ್ ಡೈರೆಕ್ಷನ್ ಮಾಡುತ್ತಿರುವ ಸರೋಜ್ ಖಾನ್ ಹೇಳಿದಂತೆ ಸ್ಟೆಪ್ ಹಾಕಿ ಎಂದು ಹೇಳಿ ಧೈರ್ಯ ತುಂಬಿದರಂತೆ. ಮತ್ತೆ ರಜನೀಕಾಂತ್ ಹಾಕಿದ ಸ್ಟೆಪ್ ಅದ್ಭುತವಾಗಿದೆಯಂತೆ. ಆದರೆ ನೀವು ನೋಡಲು ಸ್ವಲ್ಪ ಕಾಲ ಕಾಯಲೇಬೇಕು.
Tagged with
cnnews
ಏಜೆಂಟ್ ವಿನೋದ್ ಚಿತ್ರದಲ್ಲಿ ಕರೀನಾ ಕಪೂರ್ ಅವರು ಗೂಢಚಾರಿಣಿಯ ಪಾತ್ರ ಮಾಡಿದ್ದು ಗೊತ್ತು ತಾನೇ? ಇದೀಗ ಅವರು ನಿಜಜೀವನದಲ್ಲೂ ಆ ಪಾತ್ರದ ಅನುಭವವನ್ನು ಬಳಸಿಕೊಳ್ಳುತ್ತಿದ್ದಾರಾ ಎಂಬ ಸಂಶಯ ಉಂಟಾಗಿದೆ. ಅವರು ಯಾರ ಮೇಲೆ ಗೂಢಚಾರದ ದೃಷ್ಟಿ ಹಾಯಿಸುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿತಾ? ಅದಕ್ಕೆ ಉತ್ತರವಾಗಿ ಹೇಳುವುದಾದರೆ ಅವರ ವುಡ್ ಬಿ ಮೇಲಂತೆ! ಅಂದರೆ ಸೈಫ್ ಅಲಿ ಖಾನ್ ಮೇಲೆ ಅವರಿಗೆ ಏನೋ ಒಂದು ಸಂಶಯ ಬಂದಿದೆಯಂತೆ. ಅದೇ ಕಾರಣಕ್ಕಾಗಿ ಅವರು ಸೈಫ್ ಮೇಲೆ ಸದಾ ಒಂದು ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಶರ್ಮಿಳಾ ಟಾಗೋರ್ ಅವರು ತನ್ನ ಮಗ ಸೈಫ್‌ಗೆ ಕರೀನಾಳನ್ನು ಮದುವೆ ಮಾಡಿ ಈ ವರ್ಷವೇ ಮನೆ ತುಂಬಿಸಿಕೊಳ್ಳುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದರೂ ಕರೀನಾ ಮಾತ್ರ ಸೈಫ್ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿಲ್ಲವಂತೆ. ಅದಕ್ಕೆ ಕಾರಣ ಬಿಪಾಶಾ ಬಸು. ಈ ಹಿಂದೆ ಸೈಫ್ ಮತ್ತು ಬಿಪಾಶಾ ಬಸು ಜತೆಯಾಗಿ ರೇಸ್ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲಿ ಸ್ವಲ್ಪ ಗುಸುಗುಸು ಕೇಳಿ ಬಂದಿತ್ತು. ಆದರೆ ಕ್ರಮೇಣ ಸೈಫ್ ಮತ್ತು ಕರೀನಾ ಹತ್ತಿರವಾದ ಬಳಿಕ ಬಿಪಾಶಾ ದೂರವಾದಳು. ಇದೀಗ ಮತ್ತೆ ಬಿಪಾಶಾ ಮತ್ತು ಸೈಫ್ ಜೋಡಿ ರೇಸ್-೨ ಸಿನಿಮಾದಲ್ಲಿ ಜತೆಯಾಗಿ ನಟಿಸುತ್ತಿದ್ದಾರಂತೆ. ಅವರು ಜತೆಯಾದ ಕಾರಣ ಹತ್ತಿರವಾಗುವ ಅಪಾಯ ಇದೆ ಎಂಬ ಭೀತಿಯಿಂದ ಚಿತ್ರೀಕರಣದ ಸೆಟ್‌ನಲ್ಲಿ ಸದಾ ಹಾಜರಿದ್ದು ಸೈಫ್ ಮೇಲೆ ನಿಗಾ ಇಡುತ್ತಿದ್ದಾರಂತೆ. ಈ ಬಗ್ಗೆ ಪ್ರಶ್ನಿಸಿದರೆ ಹಾಗೇನೂ ಇಲ್ಲ ಎಂದು ಹೇಳುತ್ತಿದ್ದಾರೆ. ನನಗೆ ಮಾಡಲು ಸಾಕಷ್ಟು ಕೆಲಸವಿದೆ, ಇಂಥ ಕೆಲಸದಲ್ಲಿ ನಾನು ತೊಡಗಿಲ್ಲ ಎಂದು ಹೇಳಿದರೂ ಅವರ ಮಾತನ್ನು ಒಪ್ಪುವ ಸ್ಥಿತಿಯಲ್ಲಿಲ್ಲವಂತೆ ಪರಿಸ್ಥಿತಿ.
Tagged with
cnnews
ಮಡಿಕೇರಿ ಹುಡುಗಿ, ಪರಿಚಯ, ಲೈಫು ಇಷ್ಟೇನೇ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಸಿಂಧೂ ಲೋಕನಾಥ್‌ಗೆ ವಿದ್ಯಾ ಬಾಲನ್‌ಳನ್ನು ಅನುಕರಿಸುವ ಆಸೆಯಂತೆ. ಅವಳು ಮಾಡುವಂಥ ಛಾಲೆಂಜಿಂಗ್ ಪಾತ್ರವನ್ನು ತಾನೂ ಮಾಡಬೇಕು ಎಂದು ಬಯಸುವ ಸಿಂಧೂ, ಪ್ರೇಮಿಯೊಂದಿಗೆ ಮರ ಸುತ್ತುವ ಪಾತ್ರ ತುಂಬಾ ಬೋರ್, ಅದನ್ನು ಬಯಸೋದಿಲ್ಲ ಎನ್ನುತ್ತಿದ್ದಾಳೆ. ಚಿತ್ರನಟಿಯಾಗದೆ ಇರುತ್ತಿದ್ದರೆ ಉತ್ತಮ ಆತ್ಲೆಟ್ ಆಗಬಹುದಾಗಿದ್ದ ಈಕೆ, ನಾನು ಯಾವತ್ತೂ ಕಥೆ ಮತ್ತು ಪಾತ್ರಕ್ಕೆ ಆದ್ಯತೆ ನೀಡುತ್ತೇನೆ. ನನಗೆ ಇಂಥದ್ದೇ ಬ್ಯಾನರ್ ಆಗಬೇಕು ಎಂದೇನಿಲ್ಲ ಎಂದು ಹೇಳುತ್ತಿದ್ದಾಳೆ.
ಅವಳು ಮುಂದುವರಿಸುತ್ತಾ, ಚಿತ್ರರಂಗಕ್ಕೆ ಬಂದ ಬಳಿಕ ಗಾಸಿಪ್‌ಗಳು ಸಹಜ. ನಾನು ಯಾವತ್ತೂ ಗಾಸಿಪ್‌ಗಳಿಗೆ ತಲೆ ಕೆಡಿಸೋಲ್ಲ. ಆದರೆ ನಾನು ಚಿತ್ರರಂಗಕ್ಕೆ ಸೇರಿ ಮೂರು ವರ್ಷವಾಗಿದೆ. ಇಷ್ಟರವರೆಗೆ ಯಾವುದೇ ರೀತಿಯ ಗಾಸಿಪ್‌ಗೆ ಒಳಗಾಗಿಲ್ಲ. ಮುಂದೆ ಗಾಸಿಪ್‌ಗೆ ಆಹಾರವಾಗದೆ ಇರಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ನಾನು ಎಷ್ಟೇ ಜಾಗರೂಕರಾಗಿದ್ದರೂ ಗಾಸಿಪ್ ಹುಟ್ಟಿಕೊಳ್ಳುವುದಿದೆ. ಆದರೆ ಅಂಥ ಪರಿಸ್ಥಿತಿ ಬಂದರೂ ನಾನು ಅದಕ್ಕೆ ತಲೆಕೆಡಿಸೋಲ್ಲ ಎಂದು ಮುಕ್ತವಾಗಿ ಹೇಳುವ ಮೂಲಕ ಗಾಸಿಪ್ ಹುಟ್ಟಿಸಿ ತೇಜೋವಧೆ ಮಾಡಲು ಶ್ರಮಿಸಬೇಡಿ ಎಂದು ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾಳೆ.
Tagged with
cnnews
ಕಿಸ್ನಾ, ಲಕ್ ಬೈ ಚಾನ್ಸ್ ಮುಂತಾದ ಬಾಲಿವುಡ್ ಸಿನಿಮಾಗಳಲ್ಲಿ ಗ್ಲ್ಯಾಮರ್ ಆಗಿ ಮೈ ಚಳಿ ಬಿಟ್ಟು ನಟಿಸಿದರೂ ಇಶಾ ಶರ್ವಾಣಿಗೆ ಯಾಕೋ ಹೇಳಿಕೊಳ್ಳುವಂಥ ಅವಕಾಶವಾಗಲೀ, ಬೇಡಿಕೆಗಳಾಗಲಿ ಸಿಗಲಿಲ್ಲ. ಇನ್ನೇನು ಮಾಡುವುದಪ್ಪಾ ಇಲ್ಲಿ ಕುಳಿತು ಎಂದು ಆಲೋಚಿಸುತ್ತಿದ್ದ ಆಕೆಯ ದೃಷ್ಚಿಗೆ ಬಿದ್ದುದು ದಕ್ಷಿಣ ಭಾರತದ ಸಿನಿಮಾ ರಂಗ. ಅದರಲ್ಲೂ ಮಲಯಾಳದತ್ತ ಗಮನ ಹರಿಸಿದಳು. ಪರಿಣಾಮವಾಗಿ ಇದೀಗ ಆಕೆ ಮಲಯಾಳದಲ್ಲಿ ಒಂದು ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಲು ಸಿದ್ಧಳಾಗಿದ್ದಾಳೆ. ಅದೂ ಕೂಡ ಗ್ಲ್ಯಾಮರ್ ಪಾತ್ರವಲ್ಲ. ಅವಳು ಹೇಗೆ ಒಪ್ಪಿಕೊಂಡಳಪ್ಪಾ ಈ ಪಾತ್ರವನ್ನು ಎಂದು ಹುಬ್ಬು ಹಾರಿಸಿದವರೂ ಇದ್ದಾರೆ.
ಇಶಾ ಶರ್ವಾಣಿ ಅವರು ಪ್ರಮೋದ್ ಪಯ್ಯನ್ನೂರ್ ಅವರ ಬಾಲ್ಯಕಾಲ ಸಖಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಇದು ಮಲಯಾಳದ ಪ್ರಖ್ಯಾತ ಕಾದಂಬರಿಕಾರ ವೈಕಂ ಮಹಮ್ಮದ್ ಬಶೀರ್ ಅವರ ಬಾಲ್ಯಕಾಲ ಸಖಿ ಎಂಬ ಕಥೆಯನ್ನು ಆಧರಿಸಿಕೊಂಡು ಅದೇ ಹೆಸರಿನಲ್ಲಿ ತಯಾರಾಗುತ್ತಿರುವ ಸಿನಿಮಾ. ಇದರಲ್ಲಿರುವ ಸುಹರಾ ಎಂಬ ಪಾತ್ರದಲ್ಲಿ ಕಾಣಿಸಲಿದ್ದಾಳೆ ಇಶಾ. ಇದು ಸಂಪೂರ್ಣ ಸಂಪ್ರದಾಯಸ್ಥ ಹುಡುಗಿಯ ಪಾತ್ರ. ಇದರಲ್ಲಿ ನಟಿಸಲು ಹೇಗೆ ಒಪ್ಪಿಕೊಂಡಿರಿ ಎಂದು ಕೇಳಿದಾಗ ಇಶಾ ಉತ್ತರಿಸುವುದು ಹೀಗೆ - ನನಗೆ ಗ್ಲ್ಯಾಮರ್ ಪಾತ್ರ ಮಾಡಿ ಮಾಡಿ ಸಾಕಾಗಿ ಹೋಯಿತು. ಜತೆಗೆ ಒಂದು ಹೊಸ ಭಾಷೆಯ ಸಿನಿಮಾವೂ ಬೇಕಿತ್ತು. ಇದೀಗ ಅವೆರಡೂ ಸಿಕ್ಕಿದೆ. ಸಂತೋಷವಾಗಿದೆ ಎಂದು ಹೇಳುತ್ತಿದ್ದಾರೆ.
Tagged with
cnnews
೧೦೦ ದೃಶ್ಯಕ್ಕೆ ಸೆನ್ಸಾರ್ ಕತ್ತರಿ
ಸಿನಿಮಾಕ್ಕೆ ‘ಯು’ ಸರ್ಟಿಫಿಕೇಟ್ ಎಷ್ಟು ಅವಶ್ಯ ಎನ್ನುವುದು ಸಿನಿಮಾ ರಂಗದ ಬಗ್ಗೆ ಗೊತ್ತಿರುವವರಿಗೆ ತಿಳಿದಿರುವಂಥದ್ದೇ. ತೀರಾ ಹಿಂಸಾತ್ಮಕ, ಅಶ್ಲೀಲ ಸನ್ನಿವೇಶಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಎಲ್ಲರೂ ವೀಕ್ಷಿಸಬಹುದು ಎಂಬ ಸರ್ಟಿಫಿಕೇಟ್ ಅಂದರೆ ‘ಯು’ ಸರ್ಟಿಫಿಕೇಟ್ ಅನ್ನು ಸೆನ್ಸಾರ್ ಮಂಡಳಿ ನೀಡುತ್ತದೆ. ಆದರೆ ಇಲ್ಲೊಂದು ತಮಿಳು ಸಿನಿಮಾಕ್ಕೆ ಬರೋಬ್ಬರಿ ೧೦೦ ದೃಶ್ಯಗಳಿಗೆ ಕತ್ತರಿ ಹಾಕಿ ‘ಯು’ ಸರ್ಟಿಫಿಕೇಟ್ ನೀಡಿದೆ!
ಮಾಯಾಂಗೀನಿ ತಾಯಂಗೀನಿ ಎನ್ನುವ ಹೆಸರಿನ ಈ ಚಿತ್ರದಲ್ಲಿ ಬೆಡ್‌ರೂಂ ದೃಶ್ಯಗಳನ್ನು ನೋಡಲು ಸಾಧ್ಯವಿಲ್ಲ ಎಂದು ಕೇರಳದ ಸೆನ್ಸಾರ್ ಮಂಡಳಿ ಗರಂ ಆಗಿದೆ. ‘ಯು’ ಸರ್ಟಿಫಿಕೇಟ್ ಬೇಕಾದರೆ ೧೦೦ ದೃಶ್ಯಗಳಿಗೆ ಕತ್ತರಿ ಹಾಕಲೇ ಬೇಕು ಎಂದು ತಾಕೀತು ಹಾಕಿತು. ಪರಿಣಾಮ ಈಗ ಸಿನಿಮಾದಲ್ಲಿ ಬರೀ ಏನೇನೂ ಇಲ್ಲ. ೧೦೦ದೃಶ್ಯಗಳನ್ನು ಚಿತ್ರದಿಂದ ತೆಗೆದ ಮೇಲೆ ಆ ಚಿತ್ರದಲ್ಲಿ ಏನು ಉಳಿದೀತು ಎಂದು ಸಿಟ್ಟಾಗಿರುವ ಚಿತ್ರದ ನಿರ್ಮಾಪಕ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಚಿತ್ರದ ನಿರ್ದೇಶಕ ವೇಣ್‌ಧನ್ ಅವರೂ ಇದರಿಂದ ಸಿಟ್ಟಾಗಿದ್ದಾರೆ. ನಿತಿನ್ ಸತ್ಯಾ ಮತ್ತು ದಿಶಾ ಪಾಂಡೆ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ಅಂತೂ ಇಂತೂ ಜೂನ್ ಒಂದಕ್ಕೆ ಬಿಡುಗಡೆಯಾಗಲಿದೆಯಂತೆ. ಅಂದ ಹಾಗೆ ೧೦೦ದೃಶ್ಯಗಳಿಗೆ ಕತ್ತರಿ ಹಾಕಲ್ಪಟ್ಟ ಇಂಥದ್ದೊಂದು ಚಿತ್ರ ಹೇಗಿರಬಹುದು ಎನ್ನುವ ಕಲ್ಪನೆಗೆ ಕೇರಳದ ಪಡ್ಡೆಗಳು ರೋಚಕಗೊಂಡಿದ್ದಾರೆ. ಚಿತ್ರ ಯಾವಾಗ ಚಿತ್ರಮಂದಿರಕ್ಕೆ ಬರುತ್ತದೆ ಎಂದು ಕಾಯುತ್ತಿದ್ದಾರೆ.
Tagged with
cnnews
ಮಂಗಳೂರು: ಸರಕಾರದ ನಿರ್ಲ ಕ್ಷ್ಯಕ್ಕೊಳಗಾಗಿ ದಲಿತ ಸಂಘಟನೆಗಳ ಅಸಮಾಧಾನದಿಂದಾಗಿ ಮಿನಿ ಅಂಬೇ ಡ್ಕರ್ ಭವನದಿಂದಲೂ ಹೊರದಬ್ಬಿಸಿ ಕೊಂಡಿರುವ ಪಾವೂರು ಸರಕಾರಿ ಪ್ರೌಢ ಶಾಲೆಯ ಎರಡು ತರಗತಿಗಳಿಗಾಗಿ ತಗ ಡಿನಿಂದ ಕೂಡಿದ ಚಪ್ಪರ ನಿರ್ಮಿ ಸಲಾಗುತ್ತಿದೆ.
ಪಾವೂರು, ಪಜೀರು, ಹರೇಕಳ ಹಾಗೂ ಬೋಳಿಯಾರು ಗ್ರಾಮಸ್ಥರ ಬೇಡಿಕೆಯಂತೆ ೨೦೦೪-೦೫ರಲ್ಲಿ ಪಾವೂರು ಗ್ರಾಮಕ್ಕೆ ಸರಕಾರಿ ಶಾಲೆ ಯನ್ನು ಮಂಜೂರುಗೊಳಿಸಲಾಗಿತ್ತು. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ೩೦೦ ದಾಟಿ ದ್ದರೂ ಕಳೆದ ಒಂಬತ್ತು ವರ್ಷಗಳಿಂ ದಲೂ ಶಾಲೆಗೆ ಅಗತ್ಯವಿರುವ ಸವಲತ್ತು ನೀಡಲು ಸರಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಎರಡು ತರಗತಿಗಳನ್ನು ಮಿನಿ ಅಂಬೇಡ್ಕರ್ ಭವನದಲ್ಲಿ ನಡೆಸ ಲಾಗುತ್ತಿತ್ತು. ಇಲ್ಲಿ ಕಾರ್ಯಕ್ರಮ ಗಳಿದ್ದರೆ ಮಕ್ಕಳಿಗೆ ಮೈದಾನವೇ ಪಾಠಶಾಲೆಯಾಗುತ್ತಿತ್ತು.
ಈ ಬಗ್ಗೆ ಮಾಧ್ಯಮ-ಪತ್ರಿಕೆಗಳಲ್ಲಿ ಹಲವು ಬಾರಿ ವರದಿ ಪ್ರಕಟಗೊಂಡಿ ದ್ದರೂ ಸಂಬಂಧಪಟ್ಟ ಇಲಾಖೆಗೆ ಕ್ಯಾರ್ ಆಗಲಿಲ್ಲ. ಮಿನಿ ಅಂಬೇಡ್ಕರ್ ಭವನ ನಿರ್ಮಾಣಗೊಂಡು ಎಂಟು ವರ್ಷಗ ಳಾದರೂ ಸಾರ್ವಜನಿಕರ ಉಪಯೋ ಗಕ್ಕೆ ಸಿಕ್ಕಿಲ್ಲ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರು ತಗಾದೆ ತೆಗೆದಿದ್ದ ಕಾರಣ ಎಪ್ರಿಲ್ ೧೪ರಂದೇ ಇಲ್ಲಿಂದ ಶಾಲೆಯನ್ನು ತೆರವುಗೊಳಿಸ ಲಾಗಿದೆ. ಬೇಸಿಗೆ ರಜೆ ಬಳಿಕ ೨೦೧೨-೧೩ನೇ ಸಾಲಿನ ತರಗತಿಗಳು ಮೇ.೩೦ರಿಂದ ಆರಂಭಗೊಂಡಿದೆ. ಈಗಾಗಲೇ ೮ನೇ ತರಗತಿಗೆ ೭೦ ಮಕ್ಕಳು ಪ್ರವೇಶ ಪಡೆ ದಿದ್ದು ಈ ಸಂಖ್ಯೆ ೯೦ ದಾಟುವ ನಿರೀಕ್ಷೆ ಯಿದೆ. ೯ನೇ ತರಗತಿಯಲ್ಲಿ ೮೩ ಹಾಗೂ ೧೦ನೇ ತರಗತಿಯಲ್ಲಿ ೧೧೪ ಮಕ್ಕಳಿದ್ದಾರೆ. ಎರಡು ಕೊಠಡಿಗಳಲ್ಲಿ ತರಗತಿಗಳನ್ನು ನಡೆಸುವುದು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ, ಸ್ಥಳೀಯ ದಾನಿಗಳ ಸಹಕಾರದಿಂದ ಮೈದಾನದಲ್ಲಿ ತಗಡು ನಿರ್ಮಿತ ಚಪ್ಪರ ಹಾಕಿದ್ದು ಇಲ್ಲೇ ೮ ಮತ್ತು ೯(ಎ) ತರಗತಿ ನಡೆಸಲು ಸಿದ್ಧತೆ ನಡೆದಿದೆ. ಗಾಳಿ ಮತ್ತು ಮಳೆಗೆ ತರಗತಿ ನಡೆಸುವುದು ಅಸಾಧ್ಯವಾದರೂ ಸುಧಾರಿಸಿಕೊಂಡು ಹೋಗುತ್ತೇವೆ ಎಂದಿದ್ದಾರೆ ಇಲ್ಲಿನ ಶಿಕ್ಷಕರು. ಇನ್ನಾದರೂ ಸರಕಾರ, ಶಿಕ್ಷಣ ಇಲಾಖೆ ಎಚ್ಚೆತ್ತು ಕೊಠಡಿ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡಲಿ ಎನ್ನುವುದು ಗ್ರಾಮಸ್ಥರ ಆಗ್ರಹ.
Tagged with
dk,
lnews,
school
ಬೆಂಗಳೂರು: ಅಕ್ರಮ ಗಣಿಗಾರಿ ಕೆಯ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಪರ ವಕಾಲತು ವಹಿಸುವ ಮೂಲಕ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ಹೆಗ್ಡೆ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವ ಧಿಯಲ್ಲಿ ಅರಣ್ಯ ಪ್ರದೇಶದಲ್ಲಿ ಗಣಿಗಾ ರಿಕೆಗೆ ಅನುಮತಿ ನೀಡಿದ್ದರು ಎಂಬು ದನ್ನು ಅಣ್ಣಾ ಹಜಾರೆ ತಂಡದ ಸದ ಸ್ಯರು ದಾಖಲೆಗಳ ಸಹಿತ ಬಹಿರಂಗಪ ಡಿಸಿದ್ದಾರೆ. ಇದರ ನಂತರವು ಹೆಗ್ಡೆ ಅವರ ಪರ ವಕಾಲತ್ತು ವಹಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಪಕ್ಷದ ಕಚೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡುತ್ತಿದ್ದ ಅವರು ಕೃಷ್ಣ ಅವಧಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತ ಎಲ್ಲ ಮಾಹಿತಿ ಬಿಜೆಪಿ ಬಳಿಯಿದೆ. ಇದನ್ನು ಶೀಘ್ರದಲ್ಲೇ ಸಾರ್ವಜನಿಕವಾಗಿ ಬಹಿರಂಗಪಡಿ ಸಲಾಗುವುದು. ಇದರಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
Tagged with
eshwarappa,
snews
ಬೆಂಗಳೂರು: ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಹಾಗೂ ಡೆಕ್ಕನ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಲಯ ತಿರಸ್ಕರಿಸಿದೆ.
ಇದೇ ಕಾಲಕ್ಕೆ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀಅರಣ ಸೇರಿದಂತೆ ಒಂಭತ್ತು ಮಂದಿ ವಿರುದ್ಧ ದೋಷಾ ರೋಪ ಪಟ್ಟಿಯನ್ನು ಸಿಬಿಐ ಸಲ್ಲಿಸಿದ್ದು, ಇದರ ವಿಚಾರಣೆಯನ್ನು ನ್ಯಾಯಾಲಯ ಜೂನ್ ಮೊದಲ ವಾರದಲ್ಲಿ ಕೈಗೆತ್ತಿ ಕೊಳ್ಳಲಿದೆ. ಜನಾರ್ದನ ರೆಡ್ಡಿ ಅಕ್ರಮಗಳಿಗೆ ಸಹಕಾರ ನೀಡಿದ ಅವರ ಆಪ್ತ ಆಲಿ ಖಾನ್ ಅವರಿಗೂ ಜಾಮೀನು ನಿರಾಕರಿ ಸಲಾಗಿದೆ.
ಸರ್ಕಾರದ ಮಟ್ಟದಲ್ಲಿ ರೆಡ್ಡಿಯವರ ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡು ತ್ತಿದ್ದರು ಎಂಬ ಆರೋಪದ ಮೇಲೆ ಬಂಧಿತರಾಗಿರುವ ಹಿರಿಯ ಅಧಿಕಾರಿಗ ಳಾದ ಮುತ್ತಯ್ಯ, ಎಸ್.ಪಿ. ರಾಜು, ಮಹೇಶ್ ಪಾಟೀಲ್‌ಗೂ ಜಾಮೀನು ನಿರಾಕರಿಸಿರುವುದರಿಂದ ರೆಡ್ಡಿ ಜೊತೆ ಕಾರಾಗ್ರಹದಲ್ಲೆ ಇವರೂ ಕಾಲ ಕಳೆಯಬೇಕಾಗಿದೆ.
ಎಎಂಸಿ ಅಕ್ರಮ ಗಣಿಗಾರಿಕೆ ಪ್ರಕರ ಣಕ್ಕೆ ಸಂಬಂಧಿಸಿದಂತೆ ಗಾಲಿ ರೆಡ್ಡಿ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಿಬಿಐ ನ್ಯಾಯಾಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ರಾಷ್ಟ್ರದ ಆರ್ಥಿಕ ವ್ಯವಸ್ಥೆಯ ಮೇಲೆ ಪೆಟ್ಟು ಬೀಳುವಂತಹ ಅವ್ಯವಹಾರ ನಡೆಸಿರುವ ಇವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸಿಬಿಐ ಪರ ವಕೀಲರು ಬಲವಾಗಿ ವಾದ ಮಂಡಿಸಿದರು.
ವಾದ ವಿವಾದ ಆಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಧೀಶ ಬಿ.ಎಂ. ಅಂಗಡಿ, ಜನಾರ್ದನ ರೆಡ್ಡಿ ಸೇರಿದಂತೆ ಇತರರ ಜಾಮೀನು ಅರ್ಜಿಯನ್ನು ವಜಾಗೊಳಿಸಿ, ವಿಚಾರಣೆ ಕೈಗೆತ್ತಿಕೊ ಳ್ಳುವುದಾಗಿ ಪ್ರಕಟಿಸಿದರು.
Tagged with
reddy,
snews
ಮಂಗಳೂರು: ಆಂತರಿಕ ತಳಮಳಗೊಂಡಿರುವ ಬಿಜೆಪಿ ತನ್ನ ಬಿಕ್ಕಟ್ಟಿನಿಂದ ಜನರ ಗಮನ ಬೇರೆಡೆಗೆ ಸೆಳೆಯುವ ನಿಮಿತ್ತ ಭಾರತ್ ಬಂದ್ಗೆ ಕರೆ ಕೊಟ್ಟಿದೆಯೇ ಹೊರತು ಅದಕ್ಕೆ ಸಾರ್ವಜನಿಕ ಕಾಳಜಿ ಇಲ್ಲ ಎಂದು ಕಾಂಗ್ರಸ್ ಮುಖಂಡ ಬೊಂಡಾಲ ಜಗನ್ನಾಥ ಶೆಟ್ಟಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೆಟ್ರೋಲ್ ಬೆಲೆ ಏರಿಕೆ ಈ ಹಿಂದೆ ಎನ್ಡಿಎ ಸರಕಾರ ಅಧಿಕಾರದಲ್ಲಿ ಇದ್ದಾಗಲೂ ಆಗಿತ್ತು. ರಾಜ್ಯ ಸರಕಾರಕ್ಕೆ ತೆರಿಗೆ ವಿನಾಯಿತಿ ಮಾಡುವ ಅವಕಾಶ ಇದ್ದರೂ ಆ ಬಗ್ಗೆ ಏನೂ ಯೋಚನೆ ಮಾಡದೇ ಕೇಂದ್ರದ ಮೇಲೆ ಗೂಬೆ ಕೂರಿಸುತ್ತದೆ ಎಂದು ಹೇಳಿದರು. ಸಾಧನ ಸಮಾವೇಂ ಮಾಡುವುದಿಲ್ಲ ಎಂದು ಡಂಗುರ ಸಾರಿದ ಮುಖ್ಯಮಂತ್ರಿ ಈವರೆಗೆ ಮಾಡಿರುವ ಸಾಧನೆ ಎಲ್ಲಿದೆ ಎಂದು ಪಕ್ಷದ ಇನ್ನೋರ್ವ ಮುಖಂಡ ಎಂ.ಎಸ್. ಮಹಮ್ಮದ್ ಪ್ರಶ್ನಿಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರಲೇಬಾರದೆಂದು ತಾಕೀತು ಮಾಡಿದ ಸರಕಾರ ಜಿ.ಪಂ.ಗೆ ಚಿಕ್ಕಾಸನ್ನು ಬಿಡುಗಡೆಗೊಳಿಸಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರಸ್ ಸಮಿತಿ ಅಧ್ಯಕ್ಷ ಪ್ರವೀಣ ಚಂದ್ರ ಆಳ್ವ, ವಿಟ್ಲ ಗ್ರಾ.ಪಂ.ನ ರಮಾನಾತ ವಿಟ್ಲ, ಮಾಜಿ ಅಧ್ಯಕ್ಷ ಎಂ.ಕೆ. ಮೂಸಾ, ಪೆರುವಾಯಿ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಬಾಳೆಕಲ್ಲು ಮೊದಲಾದವರು ಭಾಗವಹಿಸಿದ್ದರು.
Tagged with
bundh,
dk,
lnews
ಮಂಗಳೂರು: ಉಡುಪಿಯ ಮಲ್ಪೆ ಸೈಂಟ್ ಮೇರೀಸ್ ದ್ವೀಪದಲ್ಲಿ ಕೆಲ ತಿಂಗಳ ಹಿಂದೆ ಸುದ್ದಿ ಮಾಡಿದ್ದ ರೇವ್ ಪಾರ್ಟಿ ಕುರಿತಂತೆ ಪ್ರಾದೇಶಿಕ ಆಯುಕ್ತರು ತನಿಖೆ ಪೂರ್ಣಗೊಳಿಸಿ ವರದಿಯನ್ನು ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗೆ ವರದಿ ಸಲ್ಲಿಸಿರುವುದನ್ನು ಆಯುಕ್ತ ಕಚೇರಿ ದೃಢಪಡಿಸಿದ್ದು, ಮೇ ಮೊದಲ ವಾರದಲ್ಲಿ ವರದಿ ಸಲ್ಲಿಸಲಾಗಿದೆ. ಸೈಂಟ್ ಮೇರೀಸ್ ದ್ವೀಪದಲ್ಲಿ ಉತ್ಸವದ ನೆಪದಲ್ಲಿ ವಿದೇಶಿಯರು ಮದ್ಯಪಾನ, ಅಮಲು ಪದಾರ್ಥಗಳನ್ನು ಸೇವಿಸಿ ಅಶ್ಲೀಲ ಚಟುವಟಿಕೆಗಳಲ್ಲಿ ನಿರತರಾಗಿ ನಮ್ಮ ಸಂಸ್ಕೃತಿ ಹಾಳು ಮಾಡಿದ್ದಾರೆಂದು ಆರೋಪಿಸಲಾಗಿತ್ತು.
Tagged with
dk,
lnews,
revparty
ಪುತ್ತೂರು : ರಾಜ್ಯದಲ್ಲಿ ಆಡಳಿತಕ್ಕೆ ಬಂದ ಬಳಿಕ ರಾಜ್ಯ ರಸ್ತೆ ಸಾರಿಗೆ ಬಸ್ ದರ , ವಿದ್ಯುತ್ ದರ , ಕುಡಿ ಯುವ ನೀರಿನ ದರವನ್ನು ಏರಿಕೆ ಮಾಡಿರುವ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಗರಿಗೆ ಪೆಟ್ರೋಲ್ ದರ ಏರಿಕೆ ಮತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಮೊದಲು ಅವರು ಪೆಟ್ರೋಲ್ ತೆರಿಗೆ ಯನ್ನು ಕಡಿತಗೊಳಿಸಿ ಬಳಿಕ ಬೆಲೆ ಏರಿಕೆಯ ವಿರುದ್ಧ ಹೋರಾಟ ನಡೆಸಲಿ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸವಾಲು ಹಾಕಿದರು.
ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರು ಆಡಳಿತಕ್ಕೆ ಬಂದ ಬಳಿಕ ಮೂರು ಬಾರಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ದರ ಏರಿಕೆ ಮಾಡಿದೆ. ವಿದ್ಯುತ್ ದರವನ್ನು ೪ ಬಾರಿ ಏರಿಸಿ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಕುಡಿಯುವ ನೀರಿನ ದರವನ್ನು ದುಪ್ಪಟ್ಟು ಏರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರು.
ರಾಜ್ಯ ಸರ್ಕಾರ ವಿದ್ಯುತ್ ದರವನ್ನ ೪ ಬಾರಿ ಏರಿಸಿದಾಗಲು ಪರಿಸ್ಥಿತಿಯನ್ನು ಅರಿತು ವಿಪಕ್ಷ ಕಾಂಗ್ರೆಸ್ ಪ್ರತಿಭಟನೆ ನಡೆಸಿಲ್ಲ ಎಂದ ಅವರು ಕೇಂದ್ರ ಸರ್ಕಾರವು ಡೀಸೆಲ್ ಮತ್ತು ಅಡುಗೆ ಅನಿಲ ದರ ಏರಿಕೆ ಮಾಡಿಲ್ಲ. ಪೆಟ್ರೋಲ್ ಶ್ರೀಮಂತರ ವಾಹನಗಳಿಗೆ ಬಳಕೆಯಾಗುವ ಇಂಧನ ವಾಗಿದ್ದು, ಪೆಟ್ರೋಲ್ ದರ ಏರಿಕೆಯ ವಿರುದ್ಧ ಬಿಜೆಪಿ ಭಾರತ ಬಂದ್‌ಗೆ ಕರೆ ನೀಡಿರುವುದು ಸರಿಯಲ್ಲ ಎಂದರು. ಮೇ.೩೧ ರಂದು ಹಲವಾರು ಶುಭ ಕಾರ್ಯಕ್ರಮಗಳು ನಡೆಯಲಿದ್ದು ಬಂದ್‌ನಿಂದಾಗಿ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂಬ ಸಾಮಾನ್ಯ ಪರಿಜ್ಞಾನ ಕೂಡ ಬಿಜೆಪಿಯವರಿಗೆ ಇಲ್ಲ ಎಂದ ಅವರು, ಬಂದ್ ವೇಳೆ ಬಲಾ ತ್ಕಾರವಾಗಿ ಅಂಗಡಿಗಳನ್ನು ಮುಚ್ಚಿಸು ವುದು , ವಾಹನಗಳನ್ನು ತಡೆಯುವ ಪ್ರಯತ್ನ ಮಾಡಿದಲ್ಲಿ ಪೊಲೀಸರು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.
ಪುರಸಭಾ ವಿಪಕ್ಷ ನಾಯಕ ಎಚ್. ಮಹಮ್ಮದ್ ಆಲಿ , ಕಾಂಗ್ರೇಸ್ ಮುಖಂಡ ಕಿಟ್ಟಣ್ಣ ಗೌಡ ಬಪ್ಪಳಿಗೆ, ಪುರಸಭಾ ಸದಸ್ಯ ಅನ್ವರ್‌ಖಾಸಿಂ ಸುದ್ದಿ ಗೋಷ್ಠಿಯಲ್ಲಿ ಹಾಜರಿದ್ದರು.
Tagged with
dk,
lnews
ಜಯಕಿರಣ ವರದಿಯ ಫಲಶ್ರುತಿ
ಕಾರ್ಕಳ: ಹೊಂಡವೊಂದನ್ನು ಮುಚ್ಚುವ ವಿಚಾರದಲ್ಲಿ ಉಂಟಾದ ರಾಜಕೀಯಾಟಕ್ಕೆ ಕೊನೆಗೂ ಮುಕ್ತಿ ದೊರೆತಿದೆ.
ನಗರದ ಹೃದಯಭಾಗವಾದ ವಿಸ್ತೃತ ಬಸ್‌ನಿಲ್ದಾಣದಿಂದ ಉಡುಪಿ-ಹೆಬ್ರಿ ಕಡೆಗೆ ಹೋಗುವ ಮಾರ್ಗ ಮಧ್ಯೆ ಯಲ್ಲಿ ಕಳೆದೊಂದು ವರ್ಷದಿಂದ ಭಾರೀ ಗಾತ್ರದ ಹೊಂಡವೊಂದು ಕಾಣಿ ಸಿತ್ತು. ಇದನ್ನು ಮುಚ್ಚುವಂತೆ ಸ್ಥಳೀಯ ಪ್ರಜ್ಞಾವಂತ ನಾಗರಿಕರು ಪುರಸಭಾ ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಅದಕ್ಕೆ ಸ್ಪಂದಿಸಿಲ್ಲವೆಂಬ ಆರೋಪ ವ್ಯಾಪಕವಾಗಿ ಕೇಳಿಬಂದಿದೆ.
ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶಾಸಕ ಹೆಚ್.ಗೋಪಾಲ ಭಂಡಾರಿ ಮತಯಾಚನೆಗೆ ಇದೇ ಪರಿಸರಕ್ಕೆ ಬಂದಿದ್ದಾಗ ಸ್ಥಳೀ ಯರು ಈ ಸಮಸ್ಯೆಯನ್ನು ಅವರ ಗಮನಕ್ಕೂ ತಂದಿದ್ದರು. ಸ್ಥಳದಲ್ಲಿದ್ದ ಪುರಸಭಾ ಅಧ್ಯಕ್ಷೆ ಪ್ರತಿಮಾ ಮೋಹನ್ ರಾಣೆ ಅವರಲ್ಲಿ ಕೂಡಲೇ ಕ್ರಮಕೈಗೊ ಳ್ಳುವಂತೆ ಸೂಚಿಸಿದ್ದರು. ವಿಪರ್ಯಾಸ ವೆಂದರೆ ಸಮಸ್ಯೆಯ ಗೂಡಾಗಿರುವ ಈ ಪ್ರದೇಶ ಅಧ್ಯಕ್ಷರು ಚುನಾಯಿತರಾಗಿದ್ದ ವಾರ್ಡ್ ಆಗಿತ್ತು.
ಮಾರ್ಚ್ ೨೩ರಂದು ಈ ಬಗ್ಗೆ ಪತ್ರಿಕೆಯು ಅಧ್ಯಕ್ಷೆ ಪ್ರತಿಮಾಮೋಹನ್ ರಾಣೆ ಅವರನ್ನು ಸಂಪರ್ಕಿಸಿದಾಗ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಗಮನ ಹರಿಸುತ್ತೇನೆಂದು ಭರವಸೆ ನೀಡಿದ್ದರು. ಸಮಸ್ಸೆಯು ಸಮಸ್ಯೆಯಾಗಿಯೇ ಉಳಿದಿರುವಾಗ ಪತ್ರಿಕೆಯು ಶಾಸಕ ಹೆಚ್. ಗೋಪಾಲ ಭಂಡಾರಿ ಅವರನ್ನು ಸಂಪರ್ಕಿಸಿ ಗಮನ ಸೆಳೆದಿತ್ತು. ಇದೇ ವಿಚಾರದಲ್ಲಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರನ್ನು ತರಾಟೆಗೆ ತೆಗೆದ ಶಾಸಕ ಹೆಚ್.ಗೋಪಾಲಭಂಡಾರಿ ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಮಾಡದಂತೆ ಎಚ್ಚರಿಸಿದ್ದರು. ಈ ಬಗ್ಗೆ ಮಂಗಳ ವಾರದಂದು ಜಯಕಿರಣ ಪತ್ರಿಕೆ ಶಾಸಕ ಗೋಪಾಲ ಭಂಡಾರಿಯನ್ನು ಕಡೆಗಣಿಸಿದ ಕಾರ್ಕಳ ಪುರಸಭೆ ಎಂಬ ಶೀರ್ಷಿಕೆಯಡಿಯಲ್ಲಿ ಸಮಗ್ರ ವರದಿ ಯೊಂದನ್ನು ಪ್ರಕಟಿಸಿದನ್ನು ಇಲ್ಲಿ ನೆನಪಿಸಬಹುದು. ಇದರಿಂದ ತಬ್ಬಿಬ್ಬಾದ ಪುರಸಭಾ ಆಡಳಿತ ವರ್ಗವು ತರಾತುರಿಯಲ್ಲಿ ಎಲ್ಲೋ ಉಳಿದ ಡಾಮಾರು ಮಿಶ್ರಿತ ಜಲ್ಲಿ ಪುಡಿಯನ್ನು ಇಲ್ಲಿ ತಂದು ಹಾಕಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂಬುದನ್ನು ತೋರ‍್ಪಡಿಸಲು ಮುಂದಾಗಿತ್ತು. ಉಡುಪಿ ಜಿಲ್ಲಾ ಪತ್ರಕರ್ತ ಸಂಘದ ಉಪಾಧ್ಯಕ್ಷ ಮಹಮ್ಮದ್ ಶರೀಫ್ ಕಾಮಗಾರಿಯ ಬಗ್ಗೆ ತೀವ್ರವಾಗಿ ಅಕ್ಷೇಪ ವ್ಯಕ್ತಪಡಿಸಿದ್ದರು. ಸಂಜೆಯ ವೇಳೆಗೆ ಪ್ಯಾಚ್‌ವರ್ಕ್ ಕಾಮಗಾರಿ ನಡೆಸುವುದರೊಂದಿಗೆ ವಿವಾದವು ತೆರೆಕಂಡಿದೆ.
Tagged with
jkimpact,
lnews,
udupi
ಸಾರಿಗೆ ಪ್ರಾದೇಶಿಕ ಕಚೇರಿಗೆ ಕಾಯಕಲ್ಪ
ಮಂಗಳೂರು: ಮಂಗಳೂರು ಸಾರಿಗೆ ಪ್ರಾದೇಶಿಕ ಕಚೇರಿಯನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ತ್ವರಿತ ಸೇವೆಗಳನ್ನು ನೀಡಲು ಸೂಕ್ತವ್ಯವಸ್ಥೆ ಮಾಡಲಾಗುವುದು ಎಂದು ಸಾರಿಗೆ ಪ್ರಾಧಿಕಾರದ ಅಧಿಕಾರಿ ಸಿ.ಮಲ್ಲಿಕಾರ್ಜುನ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಇವರು ಮಾತನಾಡಿ ದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.
೧೯೮೩ರಲ್ಲಿ ಸ್ಥಾಪನೆಯಾಗಿರುವ ಪ್ರಾದೇಶಿಕ ಸಾರಿಗೆ ಕಚೇರಿ ಕಿರಿದಾಗುತ್ತಿದ್ದು, ಪ್ರತಿನಿತ್ಯ ೧೨೦೦ರಿಂದ ೧೫೦೦ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಬೇಕಾದ ಅನಿವಾರ್ಯತೆ ಸಿಬ್ಬಂದಿಗಳಿಗೆ ಇದೆ.
ಅಲ್ಲದೆ ಇಲ್ಲಿನ ವ್ಯವಸ್ಥೆಯನ್ನು ಬದಲಾಯಿಸಿ ತ್ವರಿತ ಸೇವೆ ನೀಡುವ ನಿಟ್ಟಿನಲ್ಲೂ ಹೆಚ್ಚುವರಿ ಸಿಬ್ಬಂದಿಗಳ ನೇಮಕ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನೂತನ ಕಚೇರಿಗೆ ಕಾಯಕಲ್ಪ ನೀಡುವ ಕೆಲಸ ಪ್ರಗತಿಯಲ್ಲಿದೆ. ಕಚೇರಿಯ ಕೆಳಭಾಗದಲ್ಲಿ ಪಾರ್ಕಿಂಗ್‌ಗ್ ವ್ಯವಸ್ಥೆ , ಮೊದಲ ಮಹಡಿಯಲ್ಲಿ ಡ್ರೈವಿಂಗ್ ಲೈಸನ್ಸ್ ವಿಭಾಗ, ಎರಡನೇ ಮಹಡಿಯಲ್ಲಿ ಟ್ರಾನ್ಸ್‌ಪೋರ್ಟ್‌ಗೆ ಸಂಬಂಧಿಸಿದ ಕಚೇರಿ...ಹೀಗೆ ವ್ಯವಸ್ಥಿತವಾಗಿ ಎಲ್ಲವನ್ನೂ ನಿರ್ವಹಿಸಲಾಗುವುದು. ಈ ತಿಂಗಳಾಂತ್ಯಕ್ಕೆ ಮೊದಲ ಮಹಡಿ ಕಾರ್ಯ ಪೂರ್ಣಗೊಳ್ಳಲಿದೆ. ಎಂದರು.
೧೮ ಜನ ಮೋಟಾರು ನಿರೀಕ್ಷಕರ ಅಗತ್ಯವಿದ್ದರೆ ಈಗ ಕೇವಲ ೧೨ ಜನ ಇದ್ದಾರೆ. ಉಳಿದಂತೆ ಇತರ ವಿಭಾಗಗಳಲ್ಲೂ ಸಿಬ್ಬಂದಿ ಕೊರತೆ ಇದೆ. ಈಗಾಗಲೇ ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲಾಗಿದ್ದು, ಹುದ್ದೆ ತುಂಬುವ ಭರವಸೆ ಇದೆ ಎಂದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.
Tagged with
dk,
lnews,
rto
ಬೆಂಗಳೂರು: ಅಕ್ರಮ ಗಣಿಗಾರಿಕೆ ಯಲ್ಲಿ ಭಾಗಿಯಾಗಿರುವ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಧರಂಸಿಂಗ್ ಹಾಗೂ ಕುಮಾರಸ್ವಾಮಿ ಅವರ ವಿರುದ್ಧದ ಕಾನೂನು ಹೋರಾಟ ವನ್ನು ತೀವ್ರಗೊಳಿಸುವುದಾಗಿ ಸಮಾಜ ಪರಿವರ್ತನ ಸಂಸ್ಥೆಯ ಎಸ್.ಆರ್. ಹಿರೇಮಠ್ ತಿಳಿಸಿದ್ದಾರೆ.
೨೦೦೦ ದಿಂದ ೨೦೦೪ ಅವಧಿ ಹಾಗೂ ೨೦೦೪ ರಿಂದ ೨೦೧೨ ರವರೆಗಿನ ಸರ್ಕಾರಗಳು ನಡೆಸಿರುವ ಅಕ್ರಮ ಗಣಿಗಾರಿಕೆಯ ಸಮಗ್ರ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.
ಈ ಮಾಜಿ ಮುಖ್ಯಮಂತ್ರಿಗಳ ಅವಧಿಯಲ್ಲಿ ನಡೆದಿರುವ ಅಕ್ರಮದ ವಿರುದ್ದ ಕಾನೂನು ಹೋರಾಟ ಮಾಡಲಾಗುವುದು. ಈ ಸಂಬಂಧ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರ ಜತೆ ಚರ್ಚಿಸಲಾಗಿದೆ.
ಕೃಷ್ಣ, ಧರಂಸಿಂಗ್, ಕುಮಾರಸ್ವಾಮಿ ವಿರುದ್ದ ತಮಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಅವರು ಮಾಡಿರುವ ಅಕ್ರಮದ ವಿರುದ್ದ ಹೋರಾಟ ನಡೆಸುತ್ತೇನೇ ಹೊರತು ಯಾರನ್ನು ಬ್ಲಾಕ್‌ಮೇಲ್ ಮಾಡುತ್ತಿಲ್ಲ.
ಹೀಗೆ ಬ್ಲಾಕ್‌ಮೇಲ್ ಮಾಡುವ ಅಗತ್ಯವೂ ತಮಗಿಲ್ಲ.ಆದ್ದರಿಂದ ಈ ಕುರಿತು ತಮ್ಮ ವಿರುದ್ದ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅಕ್ರಮ ಗಣಿಗಾರಿಕೆ ಕುರಿತು ಈ ಮುಖಂಡರು ತಮ್ಮ ಜತೆ ಚರ್ಚೆ ನಡೆಸಲು ಬಯಸಿದರೆ ತಾವು ಸದಾ ಸಿದ್ದ ಎಂದರು.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಾಮಾಜಿಕ ಸಂಘಟನೆಗಳ ಸಹಕಾರದೊಂದಿಗೆ ಆಗಸ್ಟ್ ೯ ರಿಂದ ಭ್ರಷ್ಟರೇ ಸಾರ್ವಜನಿಕ ಜೀವನದಿಂದ ತೊಲಗಿ ಹಾಗೂ ನೈಸರ್ಗಿಕ ಸಂರಕ್ಷಣೆ ಸಂಬಂಧ ಆಂದೋಲನ ನಡೆಸಲಾಗುವುದು. ಪ್ರಭಾವಿಗಳು ಕಬಳಿಸಿರುವ ಗೋಮಾಳಗಳ ಎದುರಿಗೆ ಪ್ರತಿಭಟನೆ ನಡೆಸಿ ಸರ್ಕಾರದ ವಶಕ್ಕೆ ಒಪ್ಪಿಸುವಂತೆ ಆಗ್ರಹಿಸುವುದಾಗಿ ಹಿರೇಮಠ್ ತಿಳಿಸಿದರು.
Tagged with
snews
ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅಮಾನತು ಗೊಂಡಿದ್ದ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿಯವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜ್ಯ ಬಿಜೆಪಿ ಅವಕಾಶ ಮಾಡಿಕೊಟ್ಟಿದೆ.
ಯಡಿಯೂರಪ್ಪ ಪಕ್ಷ ಮತ್ತು ಸರ್ಕಾರದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎಷ್ಟೇ ಬಂಡಾಯ ಎದ್ದಿ ದ್ದರೂ, ಅವರ ಮಾತಿಗೆ ಮಣಿದಿರುವ ರಾಷ್ಟ್ರೀಯ ನಾಯಕರು ಆರು ಸ್ಥಾನ ಗಳಲ್ಲಿ ಅವರ ಇಬ್ಬರು ಬೆಂಬಲಿಗರಿಗೆ ಟಿಕೆಟ್ ನೀಡಿದ್ದಾರೆ. ವಿಧಾನ ಸಭೆ ಯಿಂದ ವಿಧಾನ ಪರಿಷತ್‌ನ ೧೧ ಸ್ಥಾನ ಗಳಿಗೆ ಜೂನ್ ೧೧ ರಂದು ಚುನಾವಣೆ ನಡೆಯಲಿದ್ದು, ತಮಗೆ ಧಕ್ಕಲಿರುವ ಆರು ಸ್ಥಾನಗಳನ್ನು ಗಳಿಸಲು ಇಂದು ಇಡೀ ದಿನ ನಡೆದ ಕಸರತ್ತಿನ ನಂತರ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಳಿಸಿದೆ. ಯಡಿಯೂರಪ್ಪ ಒತ್ತಡಕ್ಕೆ ಮಣಿದ ವರಿಷ್ಠರು ಪುಟ್ಟಸ್ವಾಮಿಯವರ ಅಮಾನತು ರದ್ದು ಮಾಡಿ, ಚುನಾವಣಾ ಕಣಕ್ಕಿಳಿಯಲು ಅವಕಾಶ ಮಾಡಿಕೊಡು ವುದರ ಜೊತೆಗೆ ಅವರ ಮತ್ತೊಬ್ಬ ಬೆಂಬಲಿತ ಅಭ್ಯರ್ಥಿ ಡಿ.ಎಸ್. ವೀರಯ್ಯ ಅವರಿಗೂ ಮತ್ತೊಂದು ಅವಧಿಗೆ ಅನುವು ಮಾಡಿಕೊಟ್ಟಿದೆ.
Tagged with
snews
ಮಂಗಳೂರು: ಮಳೆಗಾಲದಲ್ಲಿ ಕಳ್ಳತನ ನಡೆಯುವ ಸಾzsತೆಯ ಬಗ್ಗೆ ಬ್ರಹ್ಮಾವರ ಪೊಲೀಸರು ಮನೆಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇನ್‌ಸ್ಪೆಕ್ಟರ್ ಪ್ರಭು ಡಿ.ಟಿ., ಎಸೈ ಗಿರೀಶ್‌ಕುಮಾರ್, ಪ್ರೊಭೇಷನರಿ ಎಸೈ ಮಂಜು ಮತ್ತು ಸಿಬ್ಬಂದಿ ಮಂಗಳವಾರ ಹಂದಾಡಿ ಗ್ರಾಮ ಹಾಗೂ ಆದರ್ಶ ನಗರದ ಮನೆಗಳಿಗೆ ತೆರಳಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.
Tagged with
dk,
lnews
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಯಡಿಯೂರಪ್ಪ ಬೆಂಬಲಿಗರಿಗೆ ಎರಡು ಸ್ಥಾನಗಳನ್ನು ನೀಡುವುದರ ಮೂಲಕ ಅವರನ್ನು ಸಮಾಧಾನ ಮಾಡುವ ಯತ್ನ ನಡೆದಿದೆ. ಪಕ್ಷದಲ್ಲೇ ಯಡಿಯೂರಪ್ಪ ರನ್ನು ಉಳಿಸಿಕೊಂಡು ಮುಂಬರುವ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲೇ ನಡೆಸಲು ಮುಂದಾಗಿದೆ.
ಈ ಉದ್ದೇಶದಿಂದಲೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿ-ದ್ದಾರೆಂದು ಆರೋಪಿಸಿ ಅಮಾನತು ಮಾಡಲಾಗಿದೆ. ಬಿ.ಜೆ.ಪುಟ್ಟಸ್ವಾಮಿಗೆ ವಿಧಾನಪರಿಷತ್ ಟಿಕೇಟ್ ಕಲ್ಪಿಸಲಾಗಿದೆ ಅಲ್ಲದೆ ಅವರ ಮತ್ತೊಬ್ಬ ಅಭ್ಯರ್ಥಿ ವೀರಯ್ಯಗೂ ಅವಕಾಶ ಮಾಡಿಟ್ಟಿದ್ದಾರೆ. ಮೂರು ಸ್ಥಾನಗಳನ್ನು ಕೇಳಿದರೂ ಎರಡನ್ನು ಬಿಟ್ಟುಕೊಟ್ಟು ಉಳಿದ ನಾಲ್ಕನ್ನು ಅನಂತಕುಮಾರ್ ಈಶ್ವರಪ್ಪ ಅರುಣ್ ತಮ್ಮ ಬೆಂಬಲಿಗರಿಗೆ ನೀಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಸದಾನಂದ ಗೌಡ ದಕ್ಷಿಣಕನ್ನಡದ ಒಂದು ಸ್ಥಾನನ್ನು ಕೊಡಿಸಲು ಭಾರೀ ಪ್ರಯತ್ನ ನಡೆಸಿದ-ರಾದರೂ ಅದು ಸಾಧ್ಯವಾಗಲಿಲ್ಲ. ವಿಧಾನಪರಿಷತ್‌ಗೆ ನಾಮ ನಿರ್ದೇಶನ ಮಾಡುವ ಸಂದರ್ಭದಲ್ಲಿ ಕರಾವಳಿ ತೀರದ ಒಬ್ಬರಿಗೆ ಅವಕಾಶ ಮಾಡಿ-ಕೊಡುವ ಭರವಸೆ ಇತ್ತಿದೆ. ಈ ಹಿನ್ನಲೆಯಲ್ಲಿ ಸದಾನಂದ ಗೌಡರು ಮೂವರ ಹೆಸರನ್ನು ಶಿಫಾರಸು ಮಾಡಿ ದ್ದರೂ ಅವರಿಗೆ ಒಂದು ಸ್ಥಾನವೂ ದಕ್ಕಲಿಲ್ಲ. ಅನಂತಕುಮಾರ್ ಎರಡು ಸ್ಥಾನಗಳನ್ನು ತನ್ನ ಬೆಂಬಲಿಗರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಈಶ್ವರಪ್ಪ , ಅಶೋಕ್ ತಮ್ಮ ಸ್ವಜಾತಿಯವರಿಗೆ ಕೊಡಿಸುವಲ್ಲಿ ಯಶಸ್ಸು ಕಂಡಿದ್ದಾರೆ. ನಾಮಪತ್ರ ಸಲ್ಲಿಸಲು ನಾಳೆ ಕಡೆಯ ದಿನವಾಗಿದ್ದು, ಅವಶ್ಯ ಇದ್ದರೆ ಜೂನ್ ೧೧ರಂದು ತೆರವಾಗುತ್ತಿರುವ ೧೧ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ಗೆ ೩ ಸ್ಥಾನ ಜೆಡಿಎಸ್ ೧ ಸ್ಥಾನ ದೊರೆಯಲಿದೆ. ಮತ್ತೊಂದು ಸ್ಥಾನ ಎಂಟು ಪಕ್ಷಗಳ ಹೆಚ್ಚುವರಿ ಮತಗಳು ಕೊಡಿಸಿದಲ್ಲಿ ಪಕ್ಷೇತರರಿಗೆ ಲಾಭವಾಗಲಿದೆ. ಕಾಂಗ್ರೆಸ್ ಬಹುತೇಕ ಮೋಟಮ್ಮ ಅವರಿಗೆ ಟಿಕೇಟು ನಿರಾಕರಿಸುವ ಸಾಧ್ಯತೆ ಇದೆ. ಬಿ.ಎಲ್.ಶಂಕರ್, ಸಿ.ಎಂ.ಇಬ್ರಾಹಿಂ ರಾಣಿ ಸತೀಶ್ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಜೆಡಿಎಸ್‌ನಿಂದ ರಾಮನಗರದ ಆಗ ಹಾಗೂ ಬಳ್ಳಾರಿಯ ಸೂರ್ಯನಾರಾಯಣ ರೆಡ್ಡಿಯವರ ಹೆಸರು ಪ್ರಬಲವಾಗಿ ಕೇಳಿಬಂದಿದೆ.
Tagged with
snews
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಂದು ಬೆಳಿಗ್ಗೆ ಕಾಡುಕೋಣವೊಂದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ಹಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ಪ್ರಾಧಿಕಾರ ತಿಳಿಸಿದೆ.
ಮಂಗಳೂರು ವಿಮಾನ ನಿಲ್ದಾಣ ಕೆಂಜಾರಿನ ಟೇಬಲ್ ಟಾಪ್ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಪರಿಸರ ತುಂಬಾ ಕಾಡು ಗುಡ್ಡಗಳಿಂದ ಆವ್ರತವಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡು ನಾಶವಾಗುತ್ತಿದ್ದು, ಕಂಗೆಟ್ಟು ದಾರಿ ಕಾಣದ ಕಾಡು ಪ್ರಾಣಿಗಳು ನಗರ ಪ್ರವೇಶಿಸುತ್ತಿದೆ. ವಿಮಾಣ ನಿಲ್ದಾಣದಾದ್ಯಂತ ಸಂಪೂರ್ಣ ಭದ್ರತೆ ಒದಗಿಸುತ್ತಿದ್ದರೂ, ಪ್ರಾಣಿ-ಪಕ್ಷಿಗಳಿಂದ ತೊಂದರೆ ತಪ್ಪಿದ್ದಲ್ಲ.
ಕಾಡುಕೋಣ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಕಾಡುಕೋಣ ಹಿಡಿಯಲು ಅರಣ್ಯಾಧಿಕಾರಿಗಳು ಹರಸಾಹಸ ಪಡುವಂತಾಗಿದೆ.
Tagged with
dk,
feature,
lnews,
mangaloreairport
ಮಂಗಳೂರು: ಬಿಜೆಪಿಯ ತುಡಿತ, ಕಾಂಗ್ರೆಸಿನ ಅಸಹಕಾರ, ಬಸ್ ಮಾಲಕರ ಬೆಂಬಲ, ಜನಸಾಮಾನ್ಯರ ದ್ವಂದ್ವ ನಿಲುವು, ಸಾಮಾಜಿಕ ಸಂಘ ಟನೆಗಳ ಧಿಕ್ಕಾರ ಇವುಗಳಿಂದ ಕೂಡಿದ ಇಂದಿನ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಂದಿನಂತೆ ಎನ್ನುವಂತಿಲ್ಲವಾ ದರೂ ಸಾಮಾನ್ಯ ಎನ್ನುವಂತೆ ವಾಹನ ಸಂಚಾರ ಕಂಡು ಬಂದಿದ್ದು, ಜಿಲ್ಲೆಗೆ ಬಂದ್ ಬಿಸಿ ಅತಿಯಾಗಿ ತಟ್ಟಲಿಲ್ಲ. ಅಂಗಡಿ ಮುಂಗಟ್ಟುಗಳ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆಲವೊಂದು ಅಂಗಡಿ ಗಳು ತೆರೆದಿದ್ದರೂ ಇನ್ನು ಕೆಲವು ಕಡೆ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಇಂದು ತುಂಬಾ ಶುಭ ಕಾರ್ಯಗಳು ನಡೆ ಯಲಿರುವ ಕಾರಣ ಶುಭ ಕಾರ್ಯಕ್ಕೆ ಬಂದ್‌ನಿಂದ ವಿನಾಯ್ತಿಯನ್ನು ನೀಡ ಲಾಗಿದೆ. ಈ ಕಾರಣದಿಂದ ಬಂದ್ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಲಿಲ್ಲ. ಕೇಂದ್ರ ಸರಕಾರ ಜನಸಾಮಾನ್ಯ ರಿಗೆ ಹೊರೆಯಾಗುವ ರೀತಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯನ್ನು ಮಾಡಿ ರುವುದನ್ನು ಖಂಡಿಸಿ ವಿವಿಧ ಸಂಘ ಟನೆಗಳು ಮೇ ೩೧ ರಂದು ಭಾರತ್ ಬಂದ್ಗೆ ಕರೆ ನೀಡಿದ್ದವು. ಆದರೆ ಮದುವೆ ಮುಂಜಿ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಹೋಗುವ ವರಿಗೆ ಅವಕಾಶವನ್ನು ಮಾಡಿಕೊಡ ಲಾಗಿದ್ದು ಇದರ ಲಾಭವನ್ನು ಸಾಮಾನ್ಯರೂ ಪಡೆದುಕೊಂಡ ಕಾರಣ ಬಂದ್ ಸಫಲಗೊಂಡಿಲ್ಲ.
ಕೇಂದ್ರ ಸರಕಾರದ ಜನವಿರೋಧಿ ನೀತಿ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದ ಬಿಜೆಪಿ ಬಂದ್‌ಗೆ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿತ್ತು. ಅಲ್ಲದೆ ನಿನ್ನೆ ನಗರದ ವಿವಿಧ ಅಂಗಡಿ ಹೊಟೇಲುಗಳಿಗೆ ತೆರಳಿ ಸ್ವಯಂಪ್ರೇರಿತವಾಗಿ ಬಂದ್ ನಡೆಸಿ ಬೆಂಬಲ ನೀಡುವಂತೆ ವಿನಂತಿಸಿಕೊಂಡಿತ್ತು. ಬಿಜೆಪಿಗರ ಈ ಮನವಿಗೆ ಸ್ಪಂದನೆ ನಿರಾಸದಾಯಕವಾಗಿತ್ತು.
ಶಾಲಾ ಕಾಲೇಜುಗಳಿಗೆ ರಜೆ
ದೇಶವ್ಯಾಪಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.
ಬಸ್ ಮಾಲಕರ ಸಂಘ ಬೆಂಬಲ
ಖಾಸಗಿ ಬಸ್ ಮಾಲಕರ ಸಂಘ ಮತ್ತು ಸಿಟಿ ಬಸ್ ಮಾಲಕರ ಸಂಘ ಈ ಬಂದ್‌ಗೆ ಬೆಂಬಲ ನೀಡಿತ್ತು. ಹೀಗಿದ್ದರೂ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಖಾಸಗಿ ವಾಹನಗಳು ಮತ್ತು ಸರಕಾರಿ ಬಸ್ ಓಡಾಟಕ್ಕೆ ಅವಕಾಶ ನೀಡದ ಕಾರಣ ಗೊಂದಲ ಉಂಟಾಗಿತ್ತು. ಕೆಲವು ಕಡೆ ಮದುವೆ ದಿಬ್ಬಣಕ್ಕೆ ಬರಲು ಖಾಸಗಿ ಬಸ್‌ನವರು ಒಪ್ಪದ ಕಾರಣ ಸರಕಾರಿ ಬಸ್ ಆಶ್ರಯಿಸಿರುವುದು ಕಂಡು ಬಂದಿದೆ.
Tagged with
bundh,
dk,
feature,
lnews
ಮುಲ್ಕಿ: ವೃತ್ತಿಯಲ್ಲಿ ಶಿಕ್ಷಕನಾಗಿರುವ, ಇಲ್ಲಿಯ ಶಿಕ್ಷಕ ಸಂಯೋಜಕ ಎಂಬ ಹುದ್ದೆಯನ್ನು ಹೊಂದಿರುವ ಗೇರುಕಟ್ಟೆ ನಿವಾಸಿ ಕ್ಲಸ್ಟರ್ ದಿನೇಶ್ ಎಂಬ ಶಿಕ್ಷಕನಿಂದ ಯುವತಿಯೋ ರ್ವಳು ವಂಚನೆಗೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ.
ವಂಚನೆಗೆ ಒಳಗಾದ ಯುವತಿ ಪದ್ಮನೂರು ಬಳಿಯ ಹೊಸಕಾವೇರಿ ನಿವಾಸಿಯೆಂದು ತಿಳಿದುಬಂದಿದೆ. ೨೧ರ ಹರೆಯದ ಯುವತಿ ಪದ್ಮನೂರು ಸರ ಕಾರಿ ಶಾಲೆಯಲ್ಲಿ ಅಕ್ಷರ ದಾಸೋಹ ಕೆಲಸಕ್ಕೆ ವರ್ಷದ ಹಿಂದೆ ಸೇರಿಕೊಂ ಡಿದ್ದಳು. ಅಲ್ಲಿನ ಕ್ಲಸ್ಟರ್ ಹುದ್ದೆಯಲ್ಲಿ ರುವ ದಿನೇಶ್ ಆಕೆಯನ್ನು ತನ್ನ ಬಲೆಗೆ ಹಾಕಿಕೊಂಡು ವಾರದ ಹಿಂದೆ ಕಾಪು ವಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ಇಟ್ಟು ಆಕೆಯ ಸರ್ವಸ್ವವನ್ನು ಪಡೆದು ಕೊಂಡನಲ್ಲದೆ ಅಲ್ಲಿಯೇ ದೇವರ ಎದು ರಿನಲ್ಲಿ ಕರಿಮಣಿಯನ್ನು ಕಟ್ಟಿ ಮದು ವೆಯೂ ಆಗಿದ್ದಾನೆ ಎಂದು ಆಕೆ ಮುಲ್ಕಿ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ದಿನೇಶ್ ಈಗಾಗಲೇ ತೊಕ್ಕ್ಕೊಟ್ಟು ಮೂಲದ ಯುವತಿಯೊಂದಿಗೆ ಮದು ವೆಯಾಗಿ ಎರಡು ಮಕ್ಕಳ ತಂದೆಯಾ ಗಿದ್ದಾನೆ. ಈಗ ಎರಡನೇ ಮದುವೆ ಯಾಗಿರುವುದು ಅಪರಾಧವಾಗಿದ್ದು ಇದರಿಂದ ಸರಕಾರಿ ಕೆಲಸವನ್ನು ಕಳೆದು ಕೊಳ್ಳುವ ಭೀತಿಯೂ ಎದುರಾಗಿದೆ. ದಿನೇಶ್ ಈ ಹಿಂದೆ ಲಿಂಗಪ್ಪಯ್ಯ ಕಾಡಿನಲ್ಲಿ ಶಾಲಾ ಶಿಕ್ಷಕನಾಗಿದ್ದಾಗಲೇ ಲವ್ವಿ ಡವ್ವಿಯಿಂದ ಹೆಸರುವಾಸಿಯಾಗಿ ದ್ದಾನೆ ಎನ್ನುತ್ತಾರೆ ಸ್ಥಳೀಯರು. ಈ ನಡುವೆ ಶಿಕ್ಷಕಿಯೋ ರ್ವ ಳೊಂದಿಗೆ ಅಕ್ರಮ ಸಂಬಂಧವನ್ನಿ ಟ್ಟುಕೊಂಡಿರುವ ಈತ ನಡುಗೋಡು ಶಾಲೆಯಲ್ಲಿ ಅಕ್ಷರ ದಾಸೋಹದಲ್ಲಿದ್ದ ಯುವತಿ ಯೊರ್ವರಿಗೆ ಕೈ ಹಾಕಿ ಸೌಟಿನಲ್ಲಿ ಹೊಡೆತ ತಿಂದಿರುವ ಬಗ್ಗೆಯೂ ಮಾಹಿತಿ ಕೊಡುತ್ತಾರೆ ಅಲ್ಲಿನ ಸ್ಥಳೀಯರು. ಹುದ್ದೆಯಲ್ಲಿ ಬಡ್ತಿಹೊಂದಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಾಗಿ ಇರ ಬೇಕಾದ ಈತ ಕೋಣೆಯಲ್ಲಿ ಕುಳಿತು ಪಾಠ ಹೇಳಲು ಆಗದೆ ಶಿಕ್ಷಕ ಸಂಯೋಜಕ ಹುದ್ದೆಯನ್ನು ಶಿಕ್ಷಣಾಧಿಕಾರಿಯನ್ನು ತನ್ನತ್ತ ಸೆಳೆದುಕೊಂಡು ಗಿಟ್ಟಿಸಿದ್ದನೆನ್ನಲಾಗಿದೆ. ಈತ ಅನೇಕ ಶಾಲಾ ಶಿಕ್ಷಕರಿಂದ ಕೈ ಸಾಲ ಮಾಡಿಕೊಂಡು, ಕೊಟ್ಟ ಹಣ ಕೇಳಿದರೆ ತಾನು ದಲಿತ ಶಿಕ್ಷಕ ನೆನಪಿರಲಿ ಎಂದು ಜಾತಿ ನಿಂದನೆ ಕೇಸು ಹಾಕುತ್ತೇನೆ ಎಂದು ಬೆದರಿಸುತ್ತಾನೆ ಎನ್ನುತ್ತಾ ಹಲವು ಶಿಕ್ಷಕರು ಅಲ ವತ್ತ್ತುಕೊಂಡಿದ್ದಾರೆ.
Tagged with
dk,
feature,
lnews,
teacher
ಕಾಸರಗೋಡು: ಅಂಗಡಿ ಮುಚ್ಚಿ ಮನೆಗೆ ಮರಳಲು ವಾಹನಕ್ಕೆ ಕಾಯುತ್ತಿದ್ದ ಅಮಾಯಕ ಯುವಕನ ಹೆಸರು ಕೇಳಿದ ತಂಡ ಮಾರಣಾಂ ತಿಕವಾಗಿ ಹಲ್ಲೆ ನಡೆಸಿ ಪರಾರಿಯಾ ಗಿರುವ ಘಟನೆ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಮೊನ್ನೆ ರಾತ್ರಿ ನಡೆದಿದೆ. ಹೊಸ ಬಸ್ ನಿಲ್ದಾಣದಲ್ಲಿರುವ ಮೊಬೈಲ್ ಅಂಗಡಿ ನೌಕರ, ಮೊಗ್ರಾಲ್ ಪುತ್ತೂರು ನಿವಾಸಿ ಪಿ. ಎಂ. ಸಂಶುದ್ದೀನ್ (೨೧) ಹಲ್ಲೆಗೊ ಳಗಾದ ಯುವಕ. ಈತನನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ಸೇರಿಸಲಾಗಿದೆ. ಇರಿತ ಹಾಗೂ ತಲೆಗೆ ಕಲ್ಲಿನಿಂದ ಜಜ್ಜಿದ ಗಾಯ ಹೊಂದಿರುವ ಸಂಶುದ್ದೀನ್ ಸದ್ಯ ಚೇತರಿಸಿದ್ದಾನೆ. ಮೊನ್ನೆ ರಾತ್ರಿ ಕೃತ್ಯ ನಡೆಸಲಾಗಿತ್ತು.
ಮೊಬೈಲ್ ಅಂಗಡಿ ಮುಚ್ಚಿದ ಬಳಿಕ ಹೊಸ ಬಸ್ ನಿಲ್ದಾಣದ ಹೊರ ಬದಿಯಲ್ಲಿ ಮಿತ್ರನ ಬೈಕ್‌ಗಾಗಿ ಸಂಶುದ್ದೀನ್ ಕಾದು ನಿಂತಿದ್ದಾಗ ಆಟೋರಿಕ್ಷಾದಲ್ಲಿ ಬಂದ ಅಪರಿಚಿತ ತಂಡ ಈತನ ಬಳಿಗೆ ಬಂದು ಹೆಸರು ಕೇಳಿತ್ತು. ತನ್ನ ಹೆಸರು ಸಂಶುದ್ದೀನ್ ಎಂದು ಹೇಳಿದ್ದೇ ತಡ, ತಂಡವು ಒಂದೇ ಸವನೆ ಯದ್ವಾತದ್ವಾ ಇರಿದು ರಸ್ತೆಗೆ ಬಿದ್ದ ತನ್ನ ತಲೆಗೆ ಭಾರೀ ಗಾತ್ರದ ಕಲ್ಲನ್ನು ಹಾಕಿ ಕೊಲೆಗೆ ಯತ್ನಿಸಿತೆಂದು ಗಾಯಾಳು ದೂರಿದ್ದಾರೆ. ಯುವಕನ ಬೊಬ್ಬೆ ಕೇಳಿ ಆಸುಪಾಸಿನವರು ಓಡಿ ಬರುವಷ್ಟರಲ್ಲಿ ದುಷ್ಕರ್ಮಿಗಳು ರಿಕ್ಷಾವನ್ನೇರಿ ಕರಂದ ಕ್ಕಾಡು ಕಡೆಗೆ ಪರಾರಿಯಾದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಜನರಲ್ ಆಸ್ಪತ್ರೆಗೆ ತಲುಪಿಸಿದ ಈತನನ್ನು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ನಗರ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
Tagged with
cnews,
feature
ಮಂಗಳೂರು: ಖಾಸಗಿ ಬಸ್ ಚಾಲಕನ ಅತಿವೇಗದ ಚಾಲನೆಗೆ ಉಪ್ಪಿನಂಗಡಿ ಮೂಲದ ಐಸ್‌ಕ್ಯಾಂಡಿ ವ್ಯಾಪಾ ರಸ್ಥ ಬಸ್‌ನಡಿ ಸಿಲುಕಿ ಗಂಭೀರ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ನಿನ್ನೆ ಸಂಜೆ ವೇಳೆ ಜರಗಿದೆ.
ಸ್ಕೂಟರ್ ಸವಾರ ಉಪ್ಪಿನಂಗಡಿ ಸಮೀಪದ ನೆಲ್ಯಾಡಿ ನಿವಾಸಿ ಅಬ್ಬಾಸ್(೪೦) ಮೃತಪಟ್ಟವರು.
ನಿನ್ನೆ ಮಧ್ಯಾಹ್ನ ವೇಳೆ ರಾ.ಹೆ.೬೬ರಲ್ಲಿ ರಸ್ತೆ ತಡೆಯುಂಟಾಗಿದ್ದರಿಂದಾಗಿ ಬಸ್ಸುಗಳು ಸಮಯ ಪಾಲನೆ ನೆಪದಲ್ಲಿ ಅತಿವೇಗದಲ್ಲಿ ಸಂಚರಿಸುತ್ತಿದ್ದವು. ಅದರಲ್ಲಿ ಸಂಜೆ ವೇಳೆ ತಲಪಾಡಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕ ಅತಿವೇಗವಾಗಿ ತೊಕ್ಕೊಟ್ಟು ಬಸ್ ನಿಲ್ದಾಣವನ್ನು ಒಳಪ್ರವೇ ಶಿಸುತ್ತಿದ್ದಂತೆ ಎದುರಿನಲ್ಲಿದ್ದ ಸ್ಕೂಟರ್ ಡಿಕ್ಕಿ ಹೊಡೆದು ಬಸ್‌ನಡಿ ಸವಾರ ಸಮೇತ ಸಿಲುಕಿದರು. ಗಂಭೀರವಾಗಿ ಗಾಯಗೊಂಡು ಬಸ್‌ನಡಿ ಸಿಲುಕಿದ್ದ ಅಬ್ಬಾಸ್‌ರನ್ನು ಸಾರ್ವಜನಿಕರು ತೊಕ್ಕೊಟ್ಟುವಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಸ್ಸು ಚಾಲಕರು ಸಮಯಪಾಲನೆಯ ಕಾರಣವನ್ನಿಟ್ಟುಕೊಂಡು ತೊಕ್ಕೊಟ್ಟು ಬಸ್ಸು ನಿಲ್ದಾಣಕ್ಕೆ ಒಳಹೋಗುವಾಗ ಅತಿವೇಗದಿಂದ ಅಜಾಗರೂಕತೆಯಿಂದ ಚಲಿಸುತ್ತಿದ್ದಾರೆ. ಸ್ಥಳದಲ್ಲಿ ವೇಗ ತಡೆಯನ್ನು ಅಳವಡಿಸಬೇಕೆಂದು ಸ್ಥಳೀಯ ಟೂರಿಸ್ಟ್ ವಾಹನ ಚಾಲಕ-ಮಾಲಕರು ಶಾಸಕರನ್ನು ಹಾಗೂ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
accident,
cnews,
feature
ಕುರಿಯ ಓಟೆತ್ತಿಮಾರು ನಾಗರಿಕರ ಅಳಲು
ಪುತ್ತೂರು: ತಾಲೂಕಿನ ಕುರಿಯ ಗ್ರಾಮದ ಓಟೆತ್ತಿಮಾರು ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನಲೆಯಲ್ಲಿ ಅಲ್ಲಿನ ನಾಗರಿಕರು ಬುಧವಾರ ಕುಡಿಯಲು ನೀರು ಕೊಡಿ ,ಇಲ್ಲವೇ ವಿಷ ಕೊಡಿ ಎಂದು ಆಗ್ರಹಿಸಿ ಆರ್ಯಾಪು ಗ್ರಾಮ ಪಂಚಾ ಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಓಟೆತ್ತಿಮಾರು ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿನ ಕುಟುಂಬಗಳು ಸೇರಿದಂತೆ ಈ ಪ್ರದೇಶದಲ್ಲಿನ ಸುಮಾರು ೨೫ ಬಡಕುಟುಂಬಗಳು ಗ್ರಾ. ಪಂ.ನ ಕುಡಿಯುವ ನೀರಿನ ಯೋಜನೆಯನ್ನೇ ಅವಲಂಬಿಸಿದ್ದು, ಕಳೆದ ಆರೇಳು ತಿಂಗಳಿನಿಂದ ಸರಿಯಾಗಿ ನೀರು ಬರುತ್ತಿಲ್ಲ. ಕಳೆದೊಂದು ತಿಂಗಳಿನಿಂದ ಹನಿ ನೀರು ಕೂಡ ಬಂದಿಲ್ಲ. ಈ ಕುರಿತು ಗ್ರಾಮ ಪಂಚಾಯತ್‌ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಅಲ್ಲಿನ ಮಹಿಳೆಯರೂ ಸೇರಿದಂತೆ ನಾಗರಿಕರು ಖಾಲಿ ಕೊಡಪಾನ ಪ್ರದರ್ಶಿಸಿ ಪಂಚಾಯತ್ ವಿರುದ್ದ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಎಂ.ಕೂಸಪ್ಪ ಅವರು ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯಗಳಲ್ಲೊಂದಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡುವಲ್ಲಿ ಜವಾಬ್ದಾರಿ ವಹಿಸಬೇಕಾಗಿತ್ತು ಎಂದರು.
ಈ ಭಾಗದಲ್ಲಿ ದಲಿತರೇ ಹೆಚ್ಚಾಗಿ ವಾಸಿಸುತ್ತಿರುವ ಕಾರಣಕ್ಕಾಗಿ ಪಂಚಾಯತ್ ಆಡಳಿತ ವ್ಯವಸ್ಥೆ ಮತ್ತು ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಸಂಶಯ ವ್ಯಕ್ತಪಡಿಸಿದ ಅವರು ಗ್ರಾಮ ಪಂಚಾಯತ್‌ನ ಜನವಿರೋಧಿ ನೀತಿಯನ್ನು ಖಂಡಿಸಿದರು.
ಸ್ಥಳೀಯರಾದ ಈಶ್ವರಿ ಭಟ್ ,ಕಮಲಾ ,ಎಂ.ಬಿ.ಅಬ್ದುಲ್ ಬಶೀರ್ ಓಟೆತ್ತಿಮಾರು, ಲೀಲಾವತಿ ಅವರು ಮಾತನಾಡಿ ಓಟೆತ್ತಿಮಾರು ವ್ಯಾಪ್ತಿಯಲ್ಲಿ ಪ್ರತ್ಯೇಕ ಕೊಳವೆ ಬಾವಿ ಕೊರೆದು ಕೂಡಲೇ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.
ಭರವಸೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಆರ್ಯಾಪು ಗ್ರಾಮ ಪಂಚಾಯತ್ ಕಾರ್ಯದರ್ಶಿ ಪುರುಷೋತ್ತಮ ಮಣಿಯಾನ್ ಮತ್ತು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಸುಂದರ ಪೂಜಾರಿ ಅವರು ಪುತ್ತೂರು ಪುರಸಭೆಯಿಂದ ಟ್ಯಾಂಕರ್ ಮೂಲಕ ನೀರು ತರಿಸಿ ಓಟೆತ್ತಿಮಾರಿನಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಅವರು ನೀಡಿದ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
Tagged with
dk,
feature,
lnews
ಮಂಗಳೂರು: ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೇಂದ್ರೀಕೃತ ಮಾದರಿ ಯಲ್ಲಿ ಕೌನ್ಸಿಲಿಂಗ್ ಮುಖಾಂತರ ಪ್ರವೇಶ ಪ್ರಕ್ರಿಯೆಯನ್ನು ಎಲ್ಲಾ ಜಿಲ್ಲೆಗಳ ನೋಡೆಲ್ ಕೇಂದ್ರಗಳಲ್ಲಿ ನಡೆಸುವಂತೆ ಆಗ್ರಹಿಸಿ ಅಖಿಲ ಭಾರ ತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಶಾಖೆಯು ನಗರದ ಹೊರವಲಯದ ಬಸವೇಶ್ವರ ವೃತ್ತದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭ ಟಿಸಿತು. ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸರ್ಕಾರದ ನಿರ್ಧಾರ ವನ್ನು ಖಂಡಿಸಿ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಅಭಾವಿಪ ರಾಜ್ಯ ಕಾರ್ಯದರ್ಶಿ ರಮೇಶ್ ಕೆ.ರವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಮೂರು ವರ್ಷದ ಅವಧಿಯ ವಿವಿಧ ತಾಂತ್ರಿಕ ಮತ್ತು ತಾಂತ್ರಿಕೇತರ ವಿಷಯಗಳಲ್ಲಿನ ಡಿಪ್ಲೋಮಾ ಕೋರ್ಸ್‌ಗಳಿಗೆ ೨೦೧೨-೧೩ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೇಂದ್ರೀಕೃತ ಮಾದರಿ ಯಲ್ಲಿ ಕೌನ್ಸಿಲಿಂಗ್‌ನ್ನು ಬೆಂಗಳೂರಿನ ಕರ್ನಾಟಕ ಪರೀಕ್ಷಾ ಕೇಂದ್ರದಲ್ಲಿ ನಡೆಸುವುದನ್ನು ಖಂಡಿಸುತ್ತದೆ. ಈ ಹಿಂದೆ ರಾಜ್ಯದಲ್ಲಿ ಡಿಪ್ಲೋಮಾ ಪ್ರವೇಶ ಪ್ರಕ್ರಿಯೆ ಅತ್ಯಂತ ಯಶಸ್ವಿಯಾಗಿ ಎಲ್ಲಾ ಜಿಲ್ಲೆಗಳ ನೋಡೆಲ್ ಕೇಂದ್ರಗಳಲ್ಲಿಯೇ ನಡೆಯುತ್ತಿತ್ತು. ಆದರೆ ದಿಢೀರನೆ ಪರೀಕ್ಷಾ ಪ್ರಾಧಿಕಾರವು ಇದೇ ವರ್ಷದಿಂದ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಕೌನ್ಸಿಲಿಂಗನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ನಡೆಸಲು ತೀರ್ಮಾನಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಡಿಪ್ಲೋಮಾದಲ್ಲಿ ಪ್ರವೇಶ ಬಯಸಲು ಬಂದಿರುವ ವಿದ್ಯಾರ್ಥಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಾಗಿರುವುದರಿಂದ ಅವರ ಮನೆಯ ಬಡತನದ ಪರಿಸ್ಥಿತಿ ಆ ವಿದ್ಯಾರ್ಥಿಯನ್ನು ಪ್ರವೇಶ ಪಡೆಯದಂತೆ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ದೂರದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಬಾಡಿಗೆ ಕೊಠಡಿಯನ್ನು ಪಡೆದು ಕೌನ್ಸಿಲಿಂಗ್ ಎದುರಿಸುವ ಪರಿಸ್ಥಿತಿ ತುಂಬಾ ಕಷ್ಟಕರವಾದುದಾಗಿದೆ. ಇದರಿಂದ ಬಹಳಷ್ಟು ವಿದ್ಯಾರ್ಥಿಗಳು ತೊಂದರೆಗೀಡಾ ಗುವುದರಿಂದ ಈ ಹಿಂದಿನಂತೆಯೇ ಜಿಲ್ಲೆಗಳ ನೋಡೇಲ್ ಕೇಂದ್ರಗಳಲ್ಲಿಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಪ್ರವೇಶ ಪ್ರಕ್ರಿಯೆಯನ್ನು ನಡೆಸಬೇಕೆಂದು ಅವರು ಆಗ್ರಹಿಸಿದರು.
ನಗರ ಸಂಘಟನಾ ಕಾರ್ಯದರ್ಶಿ ವಿನಯ್ ಹೊರಟ್ಟಿ, ಚಿನ್ಮಯ್ ರೈ, ತಾಲೂಕು ಸಂಚಾಲಕ ಜಗದೀಶ್, ನಗರ ಸಹ ಕಾರ್ಯದರ್ಶಿ ಬಿಂದು ಮಾಧವ, ಸೂರಜ್, ಕಿಶೋರ್, ವಿಘ್ನೇಶ್, ಅಕ್ಷಿತಾ, ದಿವ್ಯಾ, ಮಿಥುನ್, ದೀಕ್ಷಿತ್, ಯತೀಶ್, ಧೀರಜ್, ರಾಕೇಶ್, ಅರುಣ್, ದೇವರಾಜ್, ಸಂದೇಶ್, ಯಶವಂತ್, ಕಿರಣ್, ವಿಜಯ್, ರೂಪೇಶ್, ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
Tagged with
abvp,
dk,
feature,
lnews,
protest
ಮಂಗಳೂರು: ರಾಜ್ಯ ಹೈಕೋ ರ್ಟ್ ನೀಡಿದ ತಡೆಯಾಜ್ಞೆಯನ್ನು ಉಲ್ಲಂಘಿಸಿ ಕೂಳೂರು ಪ್ರದೇಶ ವ್ಯಾಪ್ತಿ ಯಲ್ಲಿ ಪಲ್ಗುಣಿ ನದಿಗೆ ಮಣ್ಣು ತುಂಬಿಸಲಾಗಿದೆ ಎಂದು ನಾಗರಿಕ ವೇದಿಕೆಯ ಸಂಘಟಕಿ ವಿದ್ಯಾದಿನಕರ್ ಆರೋಪಿಸಿದ್ದಾರೆ.
ವಿವಾದಿತ ಪ್ರದೇಶದಲ್ಲಿ ನಿನ್ನೆ ಬೆಳಗ್ಗೆ ಎಂಟು ಗಂಟೆಯಿಂದ ಕಾಮಗಾರಿ ಆರಂಭಿಸಿದ ಎಂಎಸ್‌ಇಝೆಡ್ ಆಡಳಿತ ಗಾರರು ಅಪರಾಹ್ನ ನಾಲ್ಕು ಗಂಟೆ ಯವರೆಗೂ ಕಾಮಗಾರಿ ಮುಂದುವ ರಿಸಿದ್ದರು. ರಾಜ್ಯ ಉಚ್ಛ ನ್ಯಾಯಾಲ ಯದ ಆದೇಶದ ಪಾಲನೆ ಮಾಡದ ಎಂಎಸ್‌ಇಝೆಡ್ ಆಡಳಿತಗಾರರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಪೂರ್ವಾಹ್ನ ನಾಲ್ಕು ಗಂಟೆಯ ಹೊತ್ತಿಗೆ ಬಂದ ಎಸಿಪಿ ಪುಟ್ಟ ಮಾದಯ್ಯ ಕಾಮಗಾರಿ ನಿಲ್ಲಿಸಿದ್ದಾರೆ ಎಂದು ವಿದ್ಯಾ ದಿನಕರ್ ಮಾಹಿತಿ ನೀಡಿದ್ದಾರೆ. ವಿವಾದಿತ ಸ್ಥಳದಲ್ಲಿ ನಾಳೆಯೂ ಕಾಮಗಾರಿ ಮುಂದುವರಿಸಿದರೆ ಎಂಎಸ್‌ಇಝೆಡ್ ಆಡಳಿತಗಾರರ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿ ಸಲು ನಿರ್ಧರಿಸಲಾಗಿದೆ ಎಂದು ವಿದ್ಯಾ ದಿನಕರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಆದೇಶ
ಉಚ್ಚ ನ್ಯಾಯಾಲಯದ ಮುಂದಿನ ಆದೇಶ ಬರುವವರೆಗೆ ವಿವಾದಿತ ಸ್ಥಳ ದಲ್ಲಿ ಕಾಮಗಾರಿ ನಡೆಸದಂತೆ ದ.ಕ. ಜಿಲ್ಲಾಧಿಕಾರಿ ಎಂಎಸ್‌ಇಝೆಡ್ ಆಡಳಿತ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಮೇ ೨೮ರಂದು ಉಚ್ಛ ನ್ಯಾಯಾಲಯ ಹೊರಡಿಸಿರುವ ಮಧ್ಯಂ ತರ ಆದೇಶವನ್ನು ಉಲ್ಲೇಖಿಸಿರುವ ಜಿಲ್ಲಾಧಿಕಾರಿ ಕಾರಿಡಾರ್ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ.
Tagged with
dk,
feature,
lnews,
sez
ಕೊಲ್ಕತ್ತಾದಲ್ಲಿ ಮುಗಿಲುಮುಟ್ಟಿದ ಕೆಕೆಆರ್ ವಿಜಯೋತ್ಸವ
ಕೊಲ್ಕತ್ತಾ: ನಿನ್ನೆ ಕೊಲ್ಕತ್ತಾದಲ್ಲಿ ಕೆಕೆಆರ್ ಅಭಿಮಾನಿಗಳ ಚೀರಾಟ ಹಾಗೂ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇಡೀ ನಗರಕ್ಕೆ ನಗರವೇ ಹುಚ್ಚೆದ್ದು, ಕುಣಿದರು. ಇದಕ್ಕೆಲ್ಲಾ ಕಾರಣ ನಿನ್ನೆ ನಗರದಲ್ಲಿ ಐಪಿಎಲ್‌ನಲ್ಲಿ ಪರಾಕ್ರಮ ಮೆರೆದಿದ್ದ ಕೆಕೆಆರ್ ತಂಡಕ್ಕೆ ಪಶ್ಚಿಮ ಬಂಗಾಳ ಸರಕಾರ ನೇತೃತ್ವದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದ ವಿಜಯೋತ್ಸವ. ಸ್ವತಹ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೆಕೆಆರ್ ಮಾಲಕರಾದ ಶಾರುಖ್ ಖಾನ್ ಹಾಗೂ ಜೂಹಿ ಚಾವ್ಲಾ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಲ್ಗೊಂಡು ಆಟಗಾರರನ್ನು ಹುರಿದುಂಬಿಸಿದರು.
ಅನೇಕ ಸಮಯದಿಂದ ನಾವು ಈ ಅದ್ಭುತ ಸಮಯಕ್ಕೆ ಕಾಯುತ್ತಿದ್ದು, ಅದೀಗ ಈಡೇರಿದೆ. ಕೆಕೆಆರ್ ತಂಡದ ಪರ ನಾನು ದೀದಿ (ಮಮತಾ), ಕೊಲ್ಕತ್ತಾ ಜನತೆಯನ್ನು ಅಭಿನಂದಿಸುತ್ತೇನೆ. ಕೊಲ್ಕತ್ತಾ ಮಾತ್ರ ಆಡಳಿತ ನಡೆಸಲು ಸಾಧ್ಯ ಎಂದು ಕೊಲ್ಕತ್ತಾದ ಬ್ರಾಂಡ್ ಅಂಬಾಸಿಡರ್ ಕೂಡ ಆಗಿರುವ ಶಾರುಖ್ ತಿಳಿಸಿದರು. ಇದೇ ವೇಳೆ ಮಾತನಾಡಿದ ತಂಡದ ನಾಯಕ ಗೌತಮ್ ಗಂಭೀರ್, ಮಮತಾ ದೀದಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದು, ನಾಡಿನ ಜನತೆಯನ್ನು ಚಿರಋಣಿಯಾಗಿದ್ದೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವೇಳೆ ವಿಭಿನ್ನ ಉಡುಪಿನಲ್ಲಿ ಕಂಡುಬಂದರು. ನೀಲಿ ಬಾರ್ಡರ್ ಇರುವ ಬಿಳಿ ಸೀರೆಯಲ್ಲಿ ಕಾಣಿಸಿಕೊಂಡ ಮಮತಾ ಎಲ್ಲರ ಗಮನ ಸೆಳೆಯುವಲ್ಲಿ ಸಫಲರಾದರು. ಈ ವೇಳೆ ಪ್ರತಿಕ್ರಿಯಿಸಿದ ಅವರು, ಜಯವು ಕೊಲ್ಕತ್ತಾಗೆ ಹೆಚ್ಚಿನ ಹೆಮ್ಮೆಯನ್ನು ತಂದಿದೆ. ಕೆಕೆಆರ್ ಜಯವೆಂದರೆ ಅದು ವಿಶ್ವದ ಜಯವೆಂದು ಇದೇ ವೇಳೆ ಅವರು ಸಂತಸದ ಮಾತನ್ನಾಡಿದರು. ಮಮತಾ ಕೂಡ ವಿಜಯೋತ್ಸವದ ಬಸ್‌ನಲ್ಲಿ ಕೆಲಹೊತ್ತು ಪ್ರಯಾಣಿಸಿದ್ದು, ವಿಶೇಷವಾಗಿತ್ತು.
ನಗರದಲ್ಲಿ ಕೆಕೆಆರ್ ಸಂಭ್ರಮದ ರೋಡ್‌ಶೋ
ಇದಕ್ಕೂ ಮುನ್ನ ನಗರದಲ್ಲಿ ತಂಡದ ಸಂಭ್ರಮದ ರೋಡ್‌ಶೋ ನಡೆಯಿತು. ಹಜಾರಾ ಕ್ರಾಸ್‌ನಿಂದ ೧೧ ಗಂಟೆಗೆ ಆರಂಭವಾದ ವಿಜಯೋತ್ಸವವು ಮುಖ್ಯಮಂತ್ರಿಯ ನಿವಾಸ ಹರೀಶ್ ಚಟರ್ಜಿ ಸ್ಟ್ರೀಟ್‌ನಿಂದ ಸಾಗಿ ಬರಹಗಾರರ ಕಟ್ಟಡದ ಮೂಲಕ ಸ್ಟೇಡಿಯಂ ತಲುಪಿತು. ಈ ವೇಳೆ ದಾರಿಯುದ್ದಕ್ಕೂ ಬೃಹತ್ ಸಂಖ್ಯೆಯಲ್ಲಿ ನೆರೆದ ಅಭಿಮಾನಿಗಳು ನೀಲಿ ಹಾಗೂ ಬಂಗಾರದ ಬಣ್ಣದ ಉಡುಪನ್ನು ಧರಿಸಿ ತಂಡದ ಪರ ಚೀತ್ಕಾರ ಕೂಗಿದರು. ಈ ವೇಳೆ ರೈಲ್ವೇ ಸಚಿವ ಮುಕುಲ್ ರಾಯ್ ಕೂಡ ಉಪಸ್ಥಿತರಿದ್ದರು.
Tagged with
tnews
ಕೆಕೆಆರ್‌ಗೆ ಬೆಂಬಲ ಹಿನ್ನೆಲೆ
ಕೊಲ್ಕತ್ತಾ: ಚೆನ್ನೈ ಹಾಗೂ ಕೊಲ್ಕತ್ತಾ ನಡುವೆ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ ಖ್ಯಾತ ಬಹುಭಾಷಾ ನಟಿ ಹಾಗೂ ತಮಿಳುನಾಡು ಮೂಲದ ತ್ರಿಷಾ ಕೃಷ್ಣನ್ ಶಾರುಖ್ ಬಳಗದಲ್ಲಿ ಕಾಣಿಸಿಕೊಂಡಿದ್ದು, ಆಕೆಯ ತವರಿನ ಅಭಿಮಾನಿ ಗಳ ಕಣ್ಣು ಕೆಂಪಗಾಗಿಸಿದೆ. ಇದಕ್ಕೆ ಚೆನ್ನೈ ಮೂಲದ ಕ್ರಿಕೆಟ್ ಅಭಿಮಾನಿಗಳು ಹಾಗೂ ಅಂತರ್ಜಾಲದ ಸಮುದಾಯದಲ್ಲಿರುವ ತಮಿಳು ಭಾಷಿಕರು ತಮ್ಮ ಕೋಪವನ್ನು ಟ್ವಿಟ್ಟರ್ ಮೂಲಕ ಬಹಿರಂಗ ಪಡಿಸಿದ್ದಾರೆ. ಇಲ್ಲಿ ತ್ರಿಷಾ ವಿರುದ್ಧ ತೀರಾ ಆಕ್ರೋಶಭರಿತ ಕಮೆಂಟ್‌ಗಳನ್ನು ಟ್ವೀಟ್ ಮಾಡುವ ಮೂಲಕ ತಮ್ಮ ಅಂತರಾಳದ ಕ್ರೋಧವನ್ನು ವ್ಯಕ್ತಪಡಿಸಿದ್ದಾರೆ.
ಇದರಿಂದ ಎಚ್ಚತ್ತುಕೊಂಡಿರುವ ಮೋಹಕ ನಟಿ ತ್ರಿಷಾ, ಇದನ್ನು ದೊಡ್ಡ ವಿವಾದವನ್ನಾಗಿ ಮಾಡಬೇಡಿ, ನಾನು ಕೇವಲ ಚೆನ್ನೈ ಸೂಪರ್ ಕಿಂಗ್ಸ್‌ನ ಅಭಿಮಾನಿಯಾಗಿದ್ದೇನೆ. ಆದರೆ ಕೊಲ್ಕತ್ತಾ ಬಳಗದಲ್ಲಿ ನನ್ನ ಅನೇಕ ಮಿತ್ರರು ಇರುವುದರಿಂದ ಅಲ್ಲಿನ ಕ್ಯಾಂಪ್‌ನಲ್ಲಿ ಕಾಣಿಸಿಕೊಂಡಿದ್ದೆ. ಬೇರೆಯವರ ವಿರುದ್ಧ ಕರುಣೆ ತೋರಿಸುವುದು ಒಳ್ಳೆಯ ಲಕ್ಷಣ ಎಂದು ತ್ರಿಷಾ ತಿಳಿಸಿದ್ದಾರೆ.
ಕ್ರಿಕೆಟ್‌ನ ಕಟ್ಟಾ ಅಭಿಮಾನಿಗಳಲ್ಲಿ ತ್ರಿಷಾ ಕೂಡ ಒಬ್ಬರಾಗಿದ್ದಾರೆ. ಇತ್ತೀಚಿಗೆ ಇನ್ಶೂರೆನ್ಸ್ ಕಂಪೆನಿಯೊಂದು ಖ್ಯಾತ ಆಟಗಾರ ಸಚಿನ್ ತೆಂಡೂಲ್ಕರ್ ಸಹಿ ಹಾಕಿದ ಬ್ಯಾಟ್ ಅನ್ನು ತ್ರಿಷಾ ಉಡುಗೊರೆ ರೂಪದಲ್ಲಿ ನೀಡಿದ್ದನ್ನು ನಾವಿಲ್ಲಿ ಗಮನಿಸಬಹುದು.
Tagged with
cnnews,
tnews
ಫ್ರೆಂಚ್ ಓಪನ್: ಶುಭಾರಂಭ ಮಾಡಿದ ಕ್ವಿಟ್ಟೊವಾ, ತಿಪ್ಸರ್ವಿಕ್
ಪ್ಯಾರಿಸ್: ವಿಶ್ವದ ಮಾಜಿ ನಂಬರ್ ವನ್ ಆಟಗಾರ್ತಿ ರಶ್ಯಾದ ಮರಿಯಾ ಶರಪೋವಾ ಇಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಅತ್ತ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟ್ಟೊವಾ ಕೂಟ ತನ್ನ ಪ್ರಥಮ ಸುತ್ತಿನಲ್ಲಿ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಅತ್ತ ಪುರುಷರ ವಿಭಾಗದಲ್ಲಿ ಸ್ಲೊವಾಕಿಯಾದ ಲುಕಾಸ್ ಲ್ಯಾಕೊ ವಿರುದ್ಧ ೬-೩, ೬-೪, ೬-೧ರ ಅಂತರದ ಗೆಲುವು ಸಾಧಿಸಿದ ಸ್ಪೇಯ್ನ್‌ನ ಡೇವಿಡ್ ಫೆರರ್ ಹಾಗೂ ಅಮೆರಿಕಾದ ಸ್ಯಾಮ್ ಕ್ವೆರಿಗೆ ೨-೬, ೬-೪, ೭-೬ ಹಾಗೂ ೬-೩ರ ಅಂತರದಲ್ಲಿ ಗೆಲುವು ಕಂಡ ಸರ್ಬಿಯಾದ ಜನ್ಕೊ ವಿಪ್ಸರ್ವಿಕ್ ಕೂಡ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ.
ರೊಮೇನಿಯಾದ ಅಲೆಕ್ಸಾಂಡ್ರಾ ಕಂಡಂತು ಶರಪೋವಾ ವಿರುದ್ಧ ತೀವ್ರ ರೀತಿಯಲ್ಲಿ ದಂಡನೆಗೊಳಪಟ್ಟರು. ಪಂದ್ಯದಲ್ಲಿ ಕಂಡಂತು ಕೇವಲ ಒಂದು ಪಾಯಿಂಟ್ ಕೂಡ ಗಳಿಸಲು ವಿಫಲವಾಗಿದ್ದು, ಶರಪೋವಾ ಅಬ್ಬರಕ್ಕೆ ಸಾಕ್ಷಿಯಾಗಿತ್ತು. ಪಂದ್ಯವನ್ನು ರಶ್ಯನ್ ಸುಂದರಿ ೬-೦, ೬-೦ಯ ಅಚ್ಚರಿಯ ಅಂತರದಲ್ಲಿ ಗೆದ್ದು ಮುನ್ನಡೆದಿದ್ದಾರೆ. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟ್ಟೋವಾ ಕೂಡ ಗೆಲುವಿನ ಸಿಹಿಯುಂಡರು. ಜೂನಿಯರ್ ವಿಂಬಲ್ಡನ್ ಚಾಂಪಿಯನ್ ಆಶ್ಲೆ ಬಾರ್ಟಿ ವಿರುದ್ಧದ ಪಂದ್ಯವನ್ನು ಕ್ವಿಟ್ಟೊವಾ ೬-೧ ಹಾಗೂ ೬-೨ರ ಅಂತರದಲ್ಲಿ ಗೆದ್ದುಕೊಂಡರು. ಪ್ರಥಮ ಸುತ್ತಿನಲ್ಲಿ ಪಂದ್ಯದ ಆರಂಭದ ಸೆmನ್ನು ಎದುರಾಳಿಗೆ ಬಿಟ್ಟುಕೊಟ್ಟಾಗ ಬಾರ್ಟಿ ತೀವ್ರ ಹೋರಾಟ ನೀಡಲಿದ್ದಾರೆ ಎಂಬ ವಿಶ್ವಾಸ ಮೂಡಿತು. ಆದರೆ ಛಲಬಿಡದ ಶರಪೋವಾ ನಂತರ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಗೆಲುವು ಸಾಧಿಸಿದರು.
Tagged with
tnews
ಪಡುಬಿದ್ರಿ: ಹೆಜಮಾಡಿ ಶಿವ ನಗರದಲ್ಲಿ ಶಾಂಭವಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿ ರುವುದನ್ನು ಸ್ಥಳೀಯರು ತಡೆದು ಪೊಲೀಸರಿಗೆ ದೂರು ನೀಡಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಕಟಪಾಡಿ ಮೂಲದ ಗುತ್ತಿಗೆದಾ ರರು ಲೀಸ್ ಆಧಾರದಲ್ಲಿ ಹೆಜಮಾಡಿ ಶಿವನಗರ ತಗ್ಗು ಭಾಸ್ಕರ ಶೆಟ್ಟಿ ಎಂಬ ವರಿಗೆ ಸೇರಿದ ಜಾಗದಲ್ಲಿ ಮರಳು ಸಾಗಾಟ ನಡೆಸುತ್ತಿದ್ದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪರವಾನಿಗೆ ಪಡೆಯದೆ ನಿರಂತರ ಮರಳು ಸಾಗಾಟ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಮಂಗಳವಾರ ಸಂಜೆ ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಪೊಲೀ ಸರು ಮರಳು ಸಾಗಾಟ ಮಾಡುತಿದ್ದ ಟೆಂಪೋಗಳನ್ನು ತಡೆದರು.
ಸ್ಥಳೀಯರು ನೀಡಿದ ದೂರಿನಂತೆ ಮೂರು ದಿನಗಳ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಾಳಿ ನಡೆಸಿದ್ದು, ಈ ಸಂದರ್ಭ ಮರಳುಗಾರಿಕೆ ಸ್ಥಗಿತಗೊಂಡಿತ್ತು. ಆದರೆ ಮಂಗಳವಾರ ಮತ್ತೆ ಮರಳುಗಾರಿಕೆ ಆರಂಭಗೊಂ ಡಿದ್ದರಿಂದ ಆಕ್ರೋಶಿತರಾದ ಸ್ಥಳೀ ಯರು ಹೆಜಮಾಡಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಮರಳುಗಾರಿಕೆ ತಡೆಗೆ ಒತ್ತಾಯಿಸಿದ್ದರು. ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವರದಾಕ್ಷಿ ಪಿ.ಸಾಲ್ಯಾನ್, ಅಭಿವೃದ್ಧಿ ಅಧಿಕಾರಿ ಪ್ರತಿಭಾ ಕುಡ್ತಡ್ಕ, ಮಾಜಿ ಅಧ್ಯಕ್ಷ ಸುಭಾಶ್ ಜಿ.ಸಾಲ್ಯಾನ್, ಸದಸ್ಯ ಕೃಷ್ಣ ಮರಳುಗಾರಿಕೆ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಪಡುಬಿದ್ರಿ ಪೊಲೀಸರನ್ನು ಕರೆಸಿದ್ದರು. ಮತ್ತು ಉಡುಪಿ ತಹಸೀಲ್ದಾರರಿಗೆ ದೂರು ನೀಡಿದ್ದರು. ಸಿಆರ್‌ಝಡ್ ನಿಯಮ ಉಲ್ಲಂಘಿಸಿ ಹೊಳೆಗೆ ಪಡುಬಿದ್ರಿ ಪರಿ ಸರದ ತ್ಯಾಜ್ಯಗಳನ್ನು ಮತ್ತು ಮಣ್ಣು ತುಂಬಿಸಿ ಶಾಂಭವಿ ನದಿಯನ್ನು ಸಮತಟ್ಟು ಗೊಳಿಸಿ ಮರಳುಗಾರಿಕೆ ನಡೆ ಸುತ್ತಿದ್ದುದು ಗೊತ್ತಾಗಿದೆ. ಸಿಆರ್‌ಝೆಡ್ ನಿಯಮ ಉಲ್ಲಂಘಿಸಿ ಹೊಳೆ ಒತ್ತುವರಿ ಮಾಡಲಾಗಿದೆ ಎಂದೂ ಸ್ಥಳೀಯರು ಗ್ರಾಪಂಗೆ ದೂರು ನೀಡಿದ್ದಾರೆ.
Tagged with
cnews
ಪಡುಬಿದ್ರೆ: ಎಲ್ಲೂರಿನಲ್ಲಿ ಕಾರ್ಯಾ ಚರಿಸುತ್ತಿರುವ ಯುಪಿಸಿಎಲ್‌ನ ಇಬ್ಬರು ಕಾರ್ಮಿಕರಿಗೆ ಸ್ಥಾವರ ವಿರೋಧಿ ಹೋರಾಟ ಸಮಿತಿಯ ಕಾರ್ಯಕ ರ್ತರು ಹಲ್ಲೆ ನಡೆಸಿರುವ ಬಗ್ಗೆ ಪಡು ಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒರಿಸ್ಸಾ ಮೂಲದ ಕಾರ್ಮಿಕರಾದ ಚಿನ್ನು ಯಾದವ್ ಮತ್ತು ಧನಂಜಯ ಎಂಬವರಿಗೆ ಎಲ್ಲೂರು ಪಂಚಾಯತ್ ಸದಸ್ಯ ಜಯಂತ್ ಭಟ್, ಕಿಶನ್ ಮತ್ತು ಗಣೇಶ್ ಪ್ರಸಾದ್ ಎಂಬವರು ಕಾರ್ಮಿಕರ ಕಾಲೋನಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರತಿದೂರು: ಎಲ್ಲೂರು ಪಂಚಾಯತ್ ವ್ಯಾಪ್ತಿಯ ಕೆಮುಂಡೇಲು ಪರಿಸರ ದಲ್ಲಿ ಯುಪಿಸಿಎಲ್ ಕಾರ್ಮಿಕರ ಉಪಟಳ ಮಿತಿಮೀರಿದ್ದು, ಹೆಂಗಸರ ಚುಡಾವಣೆ ಮತ್ತು ನೈರ್ಮಲ್ಯ ಸಮಸ್ಯೆಯಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಇವರ ವಿರುದ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಸದಸ್ಯ ಜಯಂತ್ ಭಟ್ ಪ್ರತಿದೂರು ಸಲ್ಲಿಸಿದ್ದಾರೆ.
Tagged with
cnews
ಮುಲ್ಕಿ: ಇಲ್ಲಿನ ಕೊಳಚಿಕಂಬಳದ ಮನೆಯೊಂ ದರಲ್ಲಿ ಕಳ್ಳತನಕ್ಕೆಂದು ಬಂದು ಮನೆಯಲ್ಲಿದ್ದ ಒಂಟಿ ಮಹಿಳೆಯ ಕೈ, ಕಾಲುಗಳನ್ನು ಕಟ್ಟಿ ಮುಖಕ್ಕೆ ಬಟ್ಟೆಯನ್ನು ತುರುಕಿ ಉಸಿರುಗಟ್ಟಿಸಿ ಅಮಾನುಷವಾಗಿ ಕೊಲೆ ಮಾಡಿ ಚಿನ್ನವನ್ನು ದೋಚಿದ ಪ್ರಕರಣದ ಸೂತ್ರದಾರನನ್ನು ಮುಲ್ಕಿ ಪೊಲೀಸರು ಸೆರೆ ಹಿಡಿದಿರುವ ಬಗ್ಗೆ ಮಾಹಿತಿ ಪತ್ರಿಕೆಗೆ ದೊರೆತಿದೆ.
ಕಳೆದ ನವೆಂಬರ್ ೧೯ರಂದು ಬೆಳಕಿಗೆ ಬಂದಿದ್ದ ಈ ಪ್ರಕರಣದಲ್ಲಿ ಕೊಲೆಯಾದ ಮಹಿಳೆಯನ್ನು ಏಳಿಂಜೆ ಪಟ್ಟೆಯ ದಿ.ಶೀನ ಅಂಚನ್‌ರವರ ಪತ್ನಿ ಕೊಳಚಿಕಂಬಳದ ನಿವಾಸಿ ಲಲಿತಾ ಪೂಜಾರ್ತಿ(೭೮) ಆಗಿದ್ದು, ಈಕೆಗೆ ಮಕ್ಕಳಿದ್ದರೂ ಅವರಿಂದ ದೂರವಾಗಿದ್ದರಿಂದ ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದರು. ಈ ಕೊಲೆ ಪ್ರಕರಣ ಸ್ಥಳೀಯವಾಗಿ ಭಾರಿ ಕುತೂಹಲಕ್ಕೆ ಕಾರಣವಾಗಿತ್ತಲ್ಲದೇ ಕುಟುಂಬದವರನ್ನೇ ಸಂಶಯದಿಂದ ನೋಡುವಂತಾಗಿ ಸ್ಥಳೀಯರು ತನಿಖೆಯನ್ನು ಶೀಘ್ರವಾಗಿ ನಡೆಸಲು ಪೊಲೀಸರಿಗೆ ಮನವಿಯನ್ನು ನೀಡಿ ಆಗ್ರಹಿಸಿದ್ದರು. ಪ್ರಸ್ತುತ ಮುಲ್ಕಿ ಪೊಲೀಸರು ಬಂಧಿಸಿರುವ ವ್ಯಕ್ತಿಯು ಕಳೆದ ಒಂದು ವಾರದ ಹಿಂದೆ ಕಿನ್ನಿಗೋಳಿ ಮನೆಯೊಂದರಲ್ಲಿ ಹಗಲಿನಲ್ಲಿ ತೆಂಗಿನಕಾಯಿ ತೆಗೆದು ರಾತ್ರಿ ಅದೇ ಮನೆಗೆ ಕನ್ನ ಹಾಕಿದ ಭೂಪ. ಈತ ಉಪ್ಪಿನಂಗಡಿ ಮೂಲದ ಕೆರೆಕಾಡು ಬೆಳ್ಳಾಯರು ನಿವಾಸಿಯಾಗಿದ್ದು, ಇಲ್ಲಿನ ವಿವಾದಾತ್ಮಕ ಮದರಸದ ಬಳಿಯ ಯುವತಿಯನ್ನು ಮದುವೆಯಾಗಿ, ಪತ್ನಿ ಮನೆಯಲ್ಲೇ ಎಂಟು ವರುಷದಿಂದ ನೆಲೆಸಿದ್ದಾನೆ ಎಂದು ತಿಳಿದು ಬಂದಿದೆ.
ಮಂಗಳೂರಿನಲ್ಲಿ ಕಂಪೆನಿಯೊಂದರ ಮೊಬೈಲ್ ಮಾರಾಟದ ಉದ್ಯಮಿ ಆಗಿರುವ ಕಿನ್ನಿಗೋಳಿ ಬಿತ್ತುಲ್ ಪರಿಸರದಲ್ಲಿನ ಮನೆಗೆ ನುಗ್ಗಿದ್ದ ಈತ ಅಲ್ಲಿನ ಸಿ.ಸಿ ಕ್ಯಾಮಾರದಲ್ಲಿ ಸೆರೆ ಸಿಕ್ಕಿದ್ದರಿಂದ ಕಿನ್ನಿಗೋಳಿ ರಾಮ ರೆಸ್ಟೋರೆಂಟ್ ಬಳಿ ಸಾರ್ವಜನಿಕರ ಸಹಾಯದಿಂದ ಪೊಲೀಸರು ಕಳೆದ ವಾರ ಸೆರೆ ಹಿಡಿದಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈತನನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಸುಮಾರು ೧೮ ಕಡೆಗಳಲ್ಲಿ ಕಳ್ಳತನ ನಡೆಸಿದ್ದನಲ್ಲದೇ ಕೊಳಚಿಕಂಬಳದಲ್ಲಿ ಒಂಟಿ ವೃದ್ದೆಯ ಕೊಲೆಯನ್ನು ಸಹ ಮಾಡಿರುವ ಬಗ್ಗೆ ತಿಳಿಸಿದ್ದು, ನಿನ್ನೆ ಸಂಜೆ ಮುಲ್ಕಿ ಪೊಲೀಸರು ಆರೋಪಿಯೊಂದಿಗೆ ಸ್ಥಳೀಯ ಘಟನಾ ಸ್ಥಳದಲ್ಲಿ ಪರೇಡ್ ನಡೆಸಿದರು.
ಈತ ಇಲ್ಲಿ ನದಿ ಪ್ರದೇಶದಲ್ಲಿ ಮೀನು ಹಿಡಿಯಲು ಆಗಾಗ ಬರುತ್ತಿದ್ದನು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಕ್ಕದ ಪಡುಬಿದ್ರಿಯಲ್ಲಿ ಕದ್ದ ಚಿನ್ನವನ್ನು ಅಡವು ಇಡುತ್ತಿದ್ದ ಈತನ ಮನೆಯಲ್ಲಿ ಟಿ.ವಿ.ಯ ಹಿಂದೆ ಅಡಗಿಸಿಟ್ಟಿದ್ದ ಚಿನ್ನಾಭರಣವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆರೆಕಾಡಿನ ನಿವಾಸಿಯಾದ ಈತ ಮೂರು ವರುಷದ ಹಿಂದೆ ಇಲ್ಲಿನ ಬಸ್ ನಿಲ್ದಾಣದಲ್ಲಿದ್ದ ಕೊರ‍್ದಬ್ಬು ದೇವಸ್ಥಾನದ ಕಾಣಿಕೆ ಡಬ್ಬಿ, ಭಜನಾ ಮಂದಿರದ ಕಾಣಿಕೆ ಡಬ್ಬಿ, ಕೆಲವು ಮನೆಗಳ ನೀರಿನ ಮೀಟರ್, ನಳ್ಳಿಗಳು ಹಾಗೂ ಕೆಂಚನಕೆರೆ ಬಳಿಯಲ್ಲಿನ ಮನೆಯೊಂದರಿಂದ ಬೆಲೆ ಬಾಳುವ ವಸ್ತುಗಳು ಸಹ ಕಳ್ಳತನವಾಗಿದ್ದು, ಇದೆಲ್ಲವನ್ನು ಈಗ ಈತನೇ ಮಾಡಿದ್ದಾನೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರಲ್ಲದೇ ಕೆಲವೊಂದು ಪ್ರಕರಣದಲ್ಲಿ ದೂರು ಗಳನ್ನು ಸಹ ದಾಖಲಿಸಿಲ್ಲ ಎಂದು ತಿಳಿದು ಬಂದಿದೆ. ಕೊಳಚಿಕಂಬಳದಲ್ಲಿ ಈ ಹಿಂದೆ ಮಹಿಳೆಯ ಕುತ್ತಿಗೆಯಿಂದ ಕರಿ ಮಣಿಯನ್ನು ರಾತ್ರಿ ಸಮಯದಲ್ಲಿ ಲೂಟಿ ಮಾಡಿದ್ದರ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಪೊಲೀಸರು ಈ ಕಳ್ಳನಿಂದ (ರಿಕವರಿ) ವಸೂಲಾತಿಯನ್ನು ನಡೆಸುತ್ತಿರುವುದರಿಂದ ಯಾವುದೇ ರೀತಿಯಲ್ಲೂ ಮಾಹಿತಿ ನೀಡುತ್ತಿಲ್ಲ ಎನ್ನ ಲಾಗಿದೆ. ಬೇಕಿದ್ದರೆ ಹಿರಿಯ ಅಧಿಕಾರಿಗಳಲ್ಲಿ ಕೇಳಿ ಎಂಬ ಉತ್ತರ ಮಾಧ್ಯಮದವರಿಗೆ ದೊರೆಯುತ್ತಿದೆ.
Tagged with
cnews
ಸುಳ್ಯ: ಮಂಗಳೂರಿನ ಬೆಂಗ್ರೆ ಕಸಬಾ ಎಂಬಲ್ಲಿಯ ಯುವತಿಯೊಬ್ಬಳಿಗೆ ಯುವಕನೊಬ್ಬ ಕರೆ ಮಾಡಿ ಸುಳ್ಯ ಬಸ್ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದು, ನಿಲ್ದಾಣದಲ್ಲಿ ಕಾದು ಸುಸ್ತಾದ ಯುವತಿಯನ್ನು ಪೊಲೀಸರು ಮರಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗ್ರೆ ಕಸಬಾದ ಯುವತಿಗೆ ಯುವಕನೊಬ್ಬ ತನ್ನ ಮೊಬೈಲ್ ನಂಬರ್ ಬರೆದ ಚೀಟಿಯನ್ನು ನೀಡಿದ್ದು, ಯುವತಿ ಆ ನಂಬರ್‌ಗೆ ಕರೆ ಮಾಡಿದಾಗ, ಸುಳ್ಯ ಬಸ್ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದ ಎನ್ನಲಾಗಿದೆ. ಮಾನಸಿಕ ವಾಗಿ ಅಸ್ವಸ್ಥಳಾಗಿದ್ದ ಯುವತಿ ಸೋಮವಾರ ಸಂಜೆ ಸುಳ್ಯ ಬಸ್ ನಿಲ್ದಾಣಕ್ಕೆ ಬಂದು ಕರೆ ಮಾಡಿದಾಗ ಆ ನಂಬರ್ ಸ್ವಿಚ್ ಆಫ್ ಆಗಿತ್ತು. ಹಾಗಿದ್ದೂ ಯುವತಿ ರಾತ್ರಿವರೆಗೂ ನಿಲ್ದಾಣದಲ್ಲೇ ಕಾದು ಕುಳಿತಿದ್ದಳು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು, ಪೊಲೀಸರು ಆಕೆಯನ್ನು ವಿಚಾರಿಸಿದಾಗ ಆಕೆ ಮಂಗಳೂರಿನವಳೆಂದು ತಿಳಿದು, ಆಕೆಯ ಹೆತ್ತವರಿಗೆ ಕರೆ ಮಾಡಿ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಅಪರಿಚಿತ ಯುವಕ ಯಾರೆಂದು ಇನ್ನೂ ತಿಳಿದು ಬಂದಿಲ್ಲ.
Tagged with
cnews
ಕಾಸರಗೋಡು: ಚಲಿಸುತ್ತಿದ್ದ ಲಾರಿಯಿಂದ ಚಾಲಕ ಹಾಗೂ ಕ್ಲೀನರ್‌ನನ್ನು ಬೆದರಿಸಿ ರಬ್ಬರ್ ಹಾಳೆ ಕಳವುಗೈದ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಕಾಞಂಗಾಡ್ ಚಿತ್ತಾರಿ ನಿವಾಸಿ ಫಾಂಟಂ ಶರೀಫ್ ಯಾನೆ ಶರೀಫ್ (೩೨) ಎಂಬಾತ ಬಂಧಿತ ಆರೋಪಿ. ಈತನಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾಞಂಗಾಡ್ ಹಾಗೂ ವೆಳ್ಳೇರಿಕುಂಡು ಪೊಲೀಸು ಠಾಣೆಗಳಲ್ಲಿ ಈತನ ವಿರುಧ್ಧ ರಬ್ಬರ್ ಕಳವು, ಕೊಲೆ ಯತ್ನ ಪ್ರಕರಣಗಳು ಚಾಲ್ತಿಯಲ್ಲಿವೆ. ಈತ ಈ ತಿಂಗಳ ೨೫ ರಂದಷ್ಟೇ ಜಾಮೀನು ಮೂಲಕ ಹೊರ ಬಂದಿದ್ದ. ತಂಡದ ಇತರ ಇಬ್ಬರು ಆರೋಪಿಗಳಾಧ ಕಾಞಂಗಾಡ್ ಮಾಣಿಕ್ಕೋತಿನ ಫೈಸಲ್, ಅಜಾನೂರಿನ ಅಶ್ರಫ್ ಎಂಬವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು ಇನ್ನೊಬ್ಬಾತ ತಲೆಮರೆಸಿಕೊಂಡಿದ್ದಾನೆ.
ಕಳೆದ ಎಪ್ರಿಲ್ ೨೮ ರಂದು ಚೆರ್ಕಳದಲ್ಲಿ ಲಾರಿಯೊಂದರಿಂದ ಏಳೂವರೆ ಕ್ವಿಂಟಾಲ್ ರಬ್ಬರ್ ಹಾಳೆ ಕಳವು ನಡೆದ ಘಟನೆಯಲ್ಲಿ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿದ್ದು ಈ ಪ್ರಕರಣದನ್ವಯ ಇದೀಗ ಬಂಧನ ನಡೆದಿದೆ.
Tagged with
cnews
ಕಾಸರಗೋಡು : ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಪುಟಾಣಿ ಸಹಿತ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.
ಮಂಜೇಶ್ವರ ಹೊಸಂಗಡಿಯ ಕರ್ಟನ್ ವ್ಯಾಪಾರಿ ಇಬ್ರಾಹಿಂ (೪೨) ಹಾಗೂ ಇವರ ಎರಡರ ಹರೆಯದ ಮಗು ಗಾಯಗೊಂಡಿದ್ದಾರೆ. ನಿನ್ನೆ ಪೂರ್ವಾಹ್ನ ೧೧ ಗಂಟೆಯ ವೇಳೆಗೆ ಮಂಜೇಶ್ವರ ಚೆಕ್‌ಪೋಸ್ಟ್ ಬಳಿ ದುರಂತ ಘಟಿಸಿದೆ. ಮಂಜೇಶ್ವರದಿಂದ ಕಾಸರಗೋಡಿಗೆ ಬರುತ್ತಿದ್ದ ಇಬ್ರಾಹಿಂ ಚಲಾಯಿಸುತ್ತಿದ್ದ ಬೈಕ್ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಗಾಗಿ ನಿಲ್ಲಿಸಿದ್ದ ಸರಕು ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಬೈಕ್‌ನಿಂದ ಎಸೆಯಲ್ಪಟ್ಟ ಇಬ್ರಾಹಿಂ ಹಾಗೂ ಮಗು ಗಂಭೀರ ಜಖಂಗೊಂಡಿದ್ದು ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
Tagged with
cnews
ಮೂಡುಬಿದಿರೆ: ಮಹಿಳೆಯೋರ್ವರು ವಿಷಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ನಂತರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ಕಡಂದಲೆಯಲ್ಲಿ ನಡೆದಿದೆ. ಮೃತಪಟ್ಟಿರುವ ಮಹಿಳೆಯನ್ನು ಕಡಂದಲೆ ಬಿ.ಟಿ.ರೋಡ್ ನಿವಾಸಿ ಪ್ರಮೀಳಾ (೪೦) ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಬಂದಿರುವ ಈಕೆ ತವರು ಮನೆಯಲ್ಲಿ ತಾಯಿ ಹಾಗೂ ತಂಗಿಯೊಂದಿಗೆ ವಾಸವಾಗಿದ್ದರು. ತೀರಾ ಬಡತನದಲ್ಲಿದ್ದ ಇವರು ಕಳೆದ ರವಿವಾರ ಕಡಲಕೆರೆ ಬಳಿ ವಿಷಪದಾರ್ಥ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
Tagged with
cnews
ಸುಳ್ಯ: ತನಗೆ ಮಂಜುನಾಥ್ ಹೊಳ್ಳ ಎಂಬವರು ಜೀವ ಬೆದರಿಕೆ ಹಾಕಿದ್ದಾಗಿ ಶ್ರೀಶಕುಮಾರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ವರ್ಟರ್ ಡೀಲರ್ ಆಗಿರುವ ಮಂಜುನಾಥ ಹೊಳ್ಳ ಸುಳ್ಯದಲ್ಲಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿರುವ ಕುಕ್ಕುಜಡ್ಕದ ಶ್ರೀಶಕುಮಾರ್‌ರಿಗೆ ಇನ್ವರ್ಟರ್‌ನ್ನು ಜೋಡಿಸಿಕೊಟ್ಟಿದ್ದರು. ಇದರ ಬಾಬ್ತು ಶ್ರೀಶಕುಮಾರ್ ಬಿಲ್ ಮೊತ್ತದಲ್ಲಿ ಸ್ವಲ್ಪ ಹಣ ನೀಡಲು ಬಾಕಿ ಇತ್ತು ಎನ್ನಲಾಗಿದೆ. ಇದನ್ನು ನೀಡದಿ ದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
Tagged with
cnews
ಮಂಗಳೂರು: ಉಡುಪಿಯ ಸಾಲಿಗ್ರಾಮ ಪೆರಂಪಳ್ಳಿಯ ಶ್ಯಾಮ ದೇವಾಡಿಗ, ಶಾಂತಾ ದಂಪತಿಯ ಪುತ್ರಿ ದಿವ್ಯಾ(೨೩)ಎಂಬಾಕೆಯನ್ನು ಬೆಂಗಳೂರಿನಲ್ಲಿ ದುಷ್ಕರ್ಮಿಗಳ ಕೂಟ ಕೊಲೆ ಮಾಡಿದ ಘಟನೆ ವರದಿಯಾಗಿದೆ.
ಪಿಯುಸಿ ಓದಿದ್ದ ದಿವ್ಯಾ ಅವರು ಬೆಂಗಳೂರಿಗೆ ತೆರಳಿ ಪೋಷಕರ ಜತೆ ಎನ್‌ಎಸ್ ಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು. ಬೆಂಗಳೂರಿನ ತಾವರಕೆರೆಯ ಶೂ ಕಂಪನಿಯಲ್ಲಿ ಕೆಲಸದಲ್ಲಿದ್ದಳು. ಭಾನುವಾರ ಕೆಲಸ ಮುಗಿಸಿ ಬೆಂಗಳೂರು ಬಿಟಿಎಂ ಲೇಔಟ್‌ನ ಎರಡನೇ ಹಂತದಲ್ಲಿ ಬಸ್‌ನಿಂದ ಇಳಿದು ಮನೆಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕತ್ತಿಗೆ ಮಾರಕಾಯುಧಗಳಿಂದ ಹೊಡೆದು ಕೊಲೆ ಮಾಡಿ ಪಾರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದ ದಿವ್ಯಾಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ದಿವ್ಯಾ ಕೊಲೆಗೆ ಪ್ರೇಮಾ ಪ್ರಕರಣವೇ ಘಟನೆಗೆ ಕಾರಣವೆನ್ನಲಾಗಿದೆ.
Tagged with
cnews,
murder
ಮಂಗಳೂರು: ಉಡುಪಿಯ ಗೀತಾಂಜಲಿ ಚಿತ್ರ ಮಂದಿರದ ಬಳಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಆರೋಪದಲ್ಲಿ ಕುತ್ಪಾಡಿಯ ಹರೀಶ್ ಎಂಬಾತನನ್ನು ಉಡುಪಿ ನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಯುವ ಸಾರ್ವಜನಿಕರಿಂದ ಸಂಗ್ರಹಿಸಿದ್ದ ೧೧೯೦ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Tagged with
cnews
ಮಂಗಳೂರು: ಮೋಂಟುಗೋಳಿ ಬಳಿ ಬಸ್‌ನ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ೩೯ ಮಂದಿಯ ವಿರುದ್ಧ ಕೋಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಸ್ ಮಾಲಕ ನಡೆಸಿರುವನೆನ್ನಲಾದ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಉಂಟಾದ ಪ್ರತಿಕ್ರಿಯೆಯಲ್ಲಿ ಮೇ ೨೧ರಂದು ಕಲ್ಲು ತೂರಾಟ ನಡೆದಿತ್ತು. ಮೋಂಟುಗೋಳಿ ನಿವಾಸಿಗಳಾದ ಇಸ್ಮಾಯಿಲ್ ಮೊಯ್ದಿನ್ ಕುಂಞಿ, ಕುಂಞಿ ಮೋನು, ಜಲೀಲ್, ಮುಹಮ್ಮದ್, ವಿದ್ಯಾನಗರ ನಿವಾಸಿ ಮುಹಮ್ಮದ್ ಯಾಝ್, ಎ.ಬಿ.ಶರೀಫ್ ಮತ್ತು ಮುವತ್ತು ಮಂದಿ ಕಲ್ಲು ತೂರಾಟ ನಡೆಸಿ ಬಸ್‌ಗೆ ಹಾನಿ ಉಂಟು ಮಾಡಿದ್ದಾಗಿ ಆರೋಪಿಸಲಾಗಿದೆ.
Tagged with
cnews
ಮಂಗಳೂರು:ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ವಾಲ್ತೂರಿನ ನಾರಾಯಣ ಎಂಬವರು ತನ್ನ ಮೇಲೆ ಮರದ ಸೋಂಟೆಯಿಂದ ಹಲ್ಲೆ ನಡೆಸಿದ್ದಾಗಿ ವಾಲ್ತೂರಿನ ಗುರುರಾಜ್ ಎಂಬವರು ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಹೋದರಿಗೆ ತಮಾಷೆ ಮಾಡುತ್ತಿದ್ದ ಬಗ್ಗೆ ಕೇಳಲು ಹೋದಾಗ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
Tagged with
cnews
ಮೂಡುಬಿದಿರೆ: ಉರಿಯುತ್ತಿದ್ದ ಚಿಮಿಣಿ ದೀಪ ಅಡ್ಡಬಿದ್ದು ಅಕಸ್ಮಿವಾಗಿ ಬೆಂಕಿ ತಾಗಿ ಮಹಿಳೆಯೋರ್ವರು ಮೃತಪಟ್ಟ ದಾರುಣ ಘಟನೆ ನಿಡ್ಡೋಡಿ ಯಲ್ಲಿ ನಡೆದಿದೆ.
ಬೆಳುವಾಯಿಯ ರಂಗನಾಥ ಎನ್ನುವವರ ಪತ್ನಿ ಶಕುಂತಲಾ (೨೮) ಕಳೆದ ಗುರುವಾರ ತನ್ನ ನಿಡ್ಡೋಡಿಯ ತವರು ಮನೆಗೆ ಹೋಗಿದ್ದರು. ಅಲ್ಲಿ ಚಿಮಿಣಿ ದೀಪ ಉರಿಸುವ ವೇಳೆಗೆ ದೀಪ ಅಡ್ಡಬಿದ್ದು ಧರಿಸಿದ್ದ ನೈಟಿಗೆ ತಾಗಿ ಆಕೆಯ ಮೈ ಸುಟ್ಟು ಹೋಗಿತ್ತು.
ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಆಕೆ ಮಂಗಳವಾರ ಬೆಳಿಗ್ಗೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews
ಮಂಗಳೂರು: ಮೀನುಗಾರ ಮಹಿಳೆಯರಿದ್ದ ಗೂಡ್ಸ್ ರಿಕ್ಷಾಕ್ಕೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದು ರಿಕ್ಷಾ ಉರುಳಿ ಬಿದ್ದ ಘಟನೆ ಮಂಗಳವಾರ ಮುಂಜಾನೆ ಉಡುಪಿಯ ಕರಾವಳಿ ಜಂಕ್ಷನ್ ಬಳಿ ಸಂಭವಿಸಿದ್ದು, ಘಟನೆಯಲ್ಲಿ ಕೋಡಿಬೆಂಗ್ರೆಯ ಕಮಲಾಕ್ಷಿ, ಸುಶೀಲ, ಲಕ್ಷ್ಮಿ ಮತ್ತು ಟೆಂಪೊ ಚಾಲಕ ರಾಘವೇಂದ್ರ ಗಾಯಗೊಂಡಿದ್ದಾರೆ.
Tagged with
cnews
ಮಂಗಳೂರು: ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿರುವ ಸೂರ್ಯ ನಾರಾಯಣ ದೇವಾಸ್ಥಾನ ದಿಂದ ಇತ್ತೀಚೆಗೆ ಕಳ್ಳತನವಾಗಿದ್ದ ಸೊತ್ತುಗಳಲ್ಲಿ ಕೆಲವು ದೇವಸ್ಥಾನದಿಂದ ಎರಡು ಫರ್ಲಾಂಗ್ ದೂರದಲ್ಲಿ ಸಿಕ್ಕಿವೆ.
ದೇವಸ್ಥಾನದಲ್ಲಿ ೧೫ದಿನಗಳ ಹಿಂದೆ ಕಳ್ಳತನವಾಗಿತ್ತು. ದೇವರ ಪ್ರಭಾವಳಿ ಸಹಿತ ವಿವಿಧನಗ ಹಾಗೂ ನಗದನ್ನು ಕಳ್ಳರು ಒಯ್ದಿದ್ದರು. ರಜತ ಪ್ರಭಾವಳಿಯ ಹಿಂದೆ ಆಧಾರವಾಗಿದ್ದ ಮರದ ಆಕೃತಿ ಮತ್ತು ಬೆಳ್ಳಿಯ ಕವಚ ತೆಗೆಯಲ್ಪಟ್ಟ ಶಂಖ ಈಗ ದೊರೆತಿದೆ.
Tagged with
cnews