ಬಂಟ್ವಾಳ: ಬಿ.ಸಿ.ರೋಡಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ದಲ್ಲಿ ನಡೆದ ಬಂಟ್ವಾಳ ತಾಲೂಕಿನ ೫ನೇ ಚುಟುಕು ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರೊಂದಿಗೆ ಅತಿಥಿಗಳು ಹೆಜ್ಜೆ ಹಾಕಿ ಗಮನ ಸೆಳೆದರು.
ಸಮ್ಮೇಳನದ ಸಮಾರೋಪ ಸಮಾರಂಭದ ಬಳಿಕ ಸಜೀಪ ಮುನ್ನೂರು ಚಿಣ್ಣರಲೋಕ ಟ್ರಸ್ಟ್ ಮುಖ್ಯಸ್ಥ ಮೋಹನ ದಾಸ್ ಕೊಟ್ಟಾರಿ ನಿರ್ದೇಶನದಲ್ಲಿ ತುಳು ಸಾಂಸ್ಕೃತಿಕ ವೈಭವ ಏರ್ಪಡಿಸಲಾಗಿತ್ತು. ತುಳು ನಾಡಿನ ಹಿನ್ನೆಲೆಯನ್ನು ಸಾರುವ ಜಾನ ಪದ ನೃತ್ಯ, ದೈವಾರಾಧನೆ, ಕಂಬಳ, ತುಳು ಮಾಸಗಳ ಆಚರಣೆ, ಸಂಪ್ರದಾ ಯಗಳನ್ನು ನೃತ್ಯ ರೂಪಕಗಳ ಮೂಲಕ ಪ್ರದರ್ಶಿಸಿದ್ದರು. ಯುವ ಕಲಾವಿದ-ಕಲಾವಿದೆಯರ, ಬಾಲಪ್ರತಿಭೆಗಳ ನೃತ್ಯ, ಮಾತುಗಾರಿಕೆ, ಹಾಡುಗಾರಿಕೆಗೆ ಸಭಿಕರು ಅಕ್ಷರಶಃ ಸಾಥ್ ನೀಡಿದ್ದರು. ಸಂಚ ಯಗಿರಿಯ ವಠಾರ ಮನರಂಜನೆ ಯಲ್ಲಿ ತೇಲಿ ಹೋಗಿತ್ತು. ಎಕ್ಕಸಕ..ಎಕ್ಕಸಕ.. ಎನ್ನುವ ತುಳುನಾಡಿನ ಜನಪ್ರಿಯ ಹಾಡಿಗೆ ಚಿಣ್ಣರ ಲೋಕದ ತಂಡದ ಬಾಲಕಿಯರು ಸಾಮಾಹಿಕ ನೃತ್ಯ ಹಾಕುತ್ತಿದ್ದಂತೆಯೇ ವೇದಿಕೆಯ ಕೆಳಗೆ ಕುಳಿತಿದ್ದ ಸಮ್ಮೇಳನದ ಅತಿಥಿಗಳು ವೇದಿಕೆಯೇರಿದರು. ನೃತ್ಯದ ತಾಳಕ್ಕೆ; ಹಾಡಿನ ಪಲ್ಲವಿಗೆ ಕಲಾವಿದರ ಜೊತೆಗೆ ಹೆಜ್ಜೆ ಇಡುತ್ತಿದ್ದಂತೆಯೇ ಸಭೆಯಲ್ಲೊಮ್ಮೆ ಸಂಚಲನ ಉಂಟು ಮಾಡಿತು.
ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸರ್ಕಾರದ ಬಾಲಭವನ ಅಕಾಡೆಮಿಯ ಸದಸ್ಯೆ ರತ್ನಹಾಲಪ್ಪ ಗೌಡ, ಚುಟುಕು ಸಾಹಿತ್ಯ ವಿಚಾರ ಗೋಷ್ಠಿಯಲ್ಲಿ ಉಪನ್ಯಾಸನ ನೀಡಿದ ಕೆರೋಡಿ ಎಂ.ಲೋಲಾಕ್ಷಿ ಅವರು ನೃತ್ಯದಲ್ಲಿ ಭಾಗವಹಿಸಿದ್ದರು. ಅವರ ಜೊತೆಗೆ ಸತ್ಯ ನಾರಾಯಣ ರಾವ್, ಸುಲಲಿತಾ ಶೆಟ್ಟಿ ಅವರೂ ಹೆಜ್ಜೆ ಹಾಕಿದರು. ಅತಿಥಿಗಳ ನೃತ್ಯ ಪ್ರದರ್ಶನ ಸಭಿಕರಲ್ಲಿ ಹರ್ಷೋಲ್ಲಾಸ ನೀಡಿತು. ಪ್ರೇಕ್ಷಕ ವರ್ಗದಲ್ಲಿ ಕುಳಿತಿದ್ದ ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ ಡಾ. ಎಂ.ಜಿ.ಆರ್.ಅರಸು, ಚುಟುಕು ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಇರಾ ನೇಮು ಪೂಜಾರಿ, ಚುಸಾಪ ತಾಲೂಕು ಘಟಕದ ಗೌರಾವಾಧ್ಯಕ್ಷ ತುಕಾರಾಂ ಪೂಜಾರಿ, ಅಧ್ಯಕ್ಷ ರಾಜಾರಾಮ್ ನಾಯಕ್ ಮತ್ತಿತರ ಗಣ್ಯರು ನೃತ್ಯಕ್ಕೆ ತಾಳ ಹಾಕುತ್ತಿದ್ದರು.
Tagged with
dk,
lnews
ಮಂಗಳೂರು: ಸದಸ್ಯರನ್ನು ಕಡೆಗಣಿಸುತ್ತಿರುವ ಅಧ್ಯಕ್ಷ ಸಂಘಟನೆ ಹೆಸರಲ್ಲಿ ಹಣ ಸಂಗ್ರಹಿಸುವ ಮೂಲಕ ಸ್ವಹಿತಕ್ಕಾಗಿ ಬಳಕೆ ಮಾಡಿರುವ ಹಿನ್ನೆಲೆ ಯಲ್ಲಿ ನ್ಯೂ ಏಜ್ ಇಂಡಿಯಾ ಫಾರಂ (ನೈಫ್) ಸಂಘಟನೆಯನ್ನು ಬರ್ಖಾ ಸ್ತುಗೊಳಿಸಲಾಗಿದೆ.
ಜಮಾಅತೆ ಇಸ್ಲಾಮೀ ಹಿಂದ್‌ನಲ್ಲಿ ಗುರುತಿಸಿಕೊಂಡಿದ್ದ ರಫೀವುದ್ದೀನ್ ಕುದ್ರೋಳಿ ಕೆಲವು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನೈಫ್ ಎನ್ನುವ ಸಂಘ ಟನೆ ಆರಂಭಿಸಿದ್ದರು. ಕೆಲವೇ ಮಂದಿ ಯನ್ನು ಹೊಂದಿದ್ದ ಸಂಘಟ ನೆಯ ಅಧ್ಯಕ್ಷನ ಧಾರ್ಮಿಕ ಭಾಷಣ ಮುಸ್ಲಿ ಮರನ್ನು ಆಕರ್ಷಿಸುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ಸಂಘಟನೆಯನ್ನು ವಿಸ್ತರಿಸುವ ಕೆಲಸಕ್ಕೆ ಕೈಹಾಕಲಾಗಿತ್ತು. ತೊಕ್ಕೊಟ್ಟಿನಲ್ಲಿ ಧಾರ್ಮಿಕ ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಲಾಗಿತ್ತು.
ಸುನ್ನೀ, ಸಲಫಿ ಹಾಗೂ ಜಮಾ ಅತೆ ಇಸ್ಲಾಮೀ ಹಿಂದ್ ವಿರುದ್ಧ ಸಂಘಟನೆ ಕಾರ್ಯಾಚರಿಸುತ್ತಿದ್ದರೂ ಜಮಾಅತೆ ಇಸ್ಲಾಮಿ ಹಿಂದ್‌ನ ಮುಖಂಡರ ವಿರುದ್ಧ ಹರಿಹಾಯುತ್ತಿದ್ದ ಅಧ್ಯಕ್ಷ ಸತ್ಯ ಹೇಳಿದ ಕಾರಣಕ್ಕೆ ತನ್ನನ್ನು ಆ ಸಂಘಟನೆಯಿಂದ ಹೊರಹಾಕ ಲಾಯಿತು ಎಂದು ಆರೋಪಿಸುತ್ತಿ ದ್ದರು. ಅಲ್ಲದೆ ತಮ್ಮದು ಮಾತ್ರವೇ ಇಸ್ಲಾಮಿನಲ್ಲಿರುವ ಸತ್ಯ ಸಂಘಟ ನೆಯಾಗಿದೆ ಎಂದು ಪ್ರತಿಪಾದಿಸುತ್ತಾ ಬಂದಿದ್ದರು. ಇದನ್ನು ಗಮನಿಸಿದಾಗ ನೈಫ್, ಮಂಗಳೂರಿನ ಮುಸ್ಲಿಂ ವಲ ಯದಲ್ಲಿ ಇನ್ನೊಂದು ಪಂಗಡ ವಾಗಿ ಬೆಳೆಯಲಿದೆ ಎಂದೇ ಭಾವಿಸ ಲಾಗಿತ್ತು.
ಆದರೆ ಕಳೆದ ತಿಂಗಳು ಸ್ಥಾಪಕಾ ಧ್ಯಕ್ಷನಿಂದ ಸಂಭವಿಸಿದ ಧರ್ಮ ವಿರೋಧಿ ಕೆಲಸ ಸಂಘಟನೆಯ ಹೆಸ ರಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಈ ಪ್ರಕರಣದ ಬಗ್ಗೆ ಪತ್ರಿಕೆ ಹಾಗೂ ಅಂತರ್ಜಾಲದಲ್ಲಿ ವರದಿ ಪ್ರಕಟಗೊಂ ಡಾಗ ಅದು ಸುಳ್ಳು ಸುದ್ದಿ ಎಂದು ಬಿಂಬಿಸುವ ಕೆಲಸವೂ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮೇ.೪ರಂದು ಸಭೆ ನಡೆಸಿದ ಸಂಘ ಟನೆಯ ಕಾರ್ಯಕರ್ತರು ವರದಿಯ ಬಗ್ಗೆ ಸತ್ಯಾಸತ್ಯತೆಯನ್ನು ಬಹಿರಂಗ ಪಡಿ ಸುವಂತೆ ಅಧ್ಯಕ್ಷರನ್ನು ಆಗ್ರಹಿ ಸಿದ್ದರಲ್ಲದೆ ಸಮಿತಿಯನ್ನು ಬರ್ಖಾಸ್ತುಗೊಳಿಸಿದ್ದು ಸಲೀಂ ಮಲಾರ್ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು.
ಆದರೆ ವರದಿಯ ಹಿಂದಿನ ಅಸಲಿ ಯತ್ತನ್ನು ಇದುವರೆಗೂ ಬಹಿರಂಗ ಪಡಿಸುವಲ್ಲಿ ಅಧ್ಯಕ್ಷ ವಿಫಲವಾಗಿರುವ ಹಿನ್ನೆಲೆಯಲ್ಲಿ ಇದೇ ತಿಂಗಳ ೨೬ರಂದು ನೈಫ್ ಸಭೆಯು ಮಂಗಳೂರಿನಲ್ಲಿ ನಡೆದಿತ್ತು. ಈ ಸಭೆಯಲ್ಲಿ ಅಧ್ಯಕ್ಷನ ವಿರುದ್ಧ ಅಸಮಾಧಾನವೂ ವ್ಯಕ್ತವಾಗಿತ್ತು ಎನ್ನ ಲಾಗಿದೆ.
ರಫೀವುದ್ದೀನ್ ಸಂಘಟನೆ ಯನ್ನು ಸ್ವಂತ ಲಾಭಕ್ಕಾಗಿ ಬಳಸಿಕೊ ಳ್ಳುತ್ತಿದ್ದು ಹಣ ಸಂಗ್ರಹ ಮಾಡುತ್ತಿರುವ ಬಗ್ಗೆಯೂ ಆಕ್ರೋಶ ವ್ಯಕ್ರವಾಗಿದೆ ಎಂದು ಹೇಳ ಲಾಗಿದೆ. ಸಂಘಟನೆಯಲ್ಲಿ ಸದಸ್ಯರಿಗೆ ಯಾವುದೇ ಮನ್ನಣೆ ಇಲ್ಲದ ಕಾರಣ ಬರ್ಖಾಸ್ತು ಮಾಡಲಾಗಿದೆ ಎಂದು ಹಂಗಾಮಿ ಅಧ್ಯಕ್ಷರಾಗಿದ್ದ ಸಲೀಂ ಮಲಾರ್ ತಿಳಿಸಿದ್ದಾರೆ.
Tagged with
dk,
lnews
ಸುಳ್ಯ: ಕಲ್ಲುರ್ಟಿ ದೈವದ ಪೂಜೆ ಮಾಡಲು ಬಂದ ಪಾತ್ರಿಗೆ ಊರವರು ವಿರೋಧ ವ್ಯಕ್ತಪಡಿಸಿದ ಕಾರಣ ಪೋಲೀಸ್ ಮಧ್ಯಸ್ಥಿಕೆಯಲ್ಲಿ ಆತನನ್ನು ಹಿಂದಕ್ಕೆ ಕಳುಹಿಸಿದ ಪ್ರಸಂಗ ಬೆಳ್ಳಾರೆ ಸಮೀಪದ ನೆಟ್ಟಾರುವಿನಲ್ಲಿ ನಡೆದಿದೆ.
ಇಲ್ಲಿಯ ಮನೆಯೊಂದಕ್ಕೆ ಕೊಣಾಜೆಯ ಪೂಜಾರಿಯೊಬ್ಬರು ಪೂಜೆ ನಡೆಸಲು ಆಗಮಿಸಿದ್ದರು. ಇದನ್ನು ತಿಳಿದ ಸ್ಥಳೀಯ ಯುವಕರು ಈತನನ್ನು ತಡೆದು ಆತನ ಪೂಜಾ ಕ್ರಮವನ್ನು ಪ್ರಶ್ನಿಸಿ ಹಿಂದಕ್ಕೆ ಹೋಗುವಂತೆ ಒತ್ತಾಯಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಾತ್ರಿಯನ್ನು ಮತ್ತು ಈತನನ್ನು ಕರೆಯಿಸಿದ ಮನೆಯವರನ್ನೂ ಠಾಣೆಗೆ ಕರೆ ತಂದರು. ತಮ್ಮ ಮನೆಯಲ್ಲಿ ಈತನೇ ಪೂಜೆ ನಡೆಸಬೇಕು ಎಂದು ಮನೆಯ ಯಜಮಾನ ಪಟ್ಟು ಹಿಡಿದರು. ಆದರೆ ಊರ ಜನರ ವಿರೋಧ ಇರುವ ಕಾರಣ ಇಲ್ಲಿ ಪೂಜೆ ನಡೆಸಬಾರದು ಎಂದು ಪಾತ್ರಿಯಿಂದ ಮತ್ತು ಮನೆಯವರಿಂದ ಮುಚ್ಚಳಿಕೆ ಬರೆಯಿಸಿ ಪೊಲೀಸರು ಇವರನ್ನು ಹಿಂದಕ್ಕೆ ಕಳುಹಿಸಿದ್ದಾರೆ.
Tagged with
dk,
lnews
ಮಂಗಳೂರು: ವಿವಾದಿತ ಕುದ್ರೋಳಿ ಕಸಾಯಿಖಾನೆಯಲ್ಲಿ ಪಾಲಿ ಸಬೇಕಾದ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ಈ ಹಿನ್ನೆಲೆಯಲ್ಲಿ ಕಸಾಯಿಖಾನೆಯನ್ನು ಮುಚ್ಚುವಂತೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಮನಪಾ ಆಯುಕ್ತರನ್ನು ಒತ್ತಾಯಿಸಿದೆ.
ಕುದ್ರೋಳಿ ಕಸಾಯಿಖಾನೆಯನ್ನು ಪರಿಸರ ಮಾಲಿನ್ಯ ಉಂಟಾಗಿ ಸಾರ್ವ ಜನಿಕರಿಗೆ ತೊಂದರೆಯಾಗುತ್ತಿದೆ ಎನ್ನುವ ದೂರಿನ ಆಧಾರದಲ್ಲಿ ೨೦೦೯ರಲ್ಲಿ ಮುಚ್ಚಲಾಗಿತ್ತು. ಈ ಸಂದರ್ಭ ಪಚ್ಚನಾಡಿಯಲ್ಲಿ ಜಾಗ ಗುರುತಿಸಿದ್ದ ಮನಪಾ ಅಲ್ಲೇ ವದಾಗೃಹ ನಿರ್ಮಿಸುವುದಾಗಿ ರಾಜ್ಯ ಪರಿಸರ ನಿಯಂತ್ರಣ ಮಂಡಳಿಗೆ ಭರವಸೆ ನೀಡಿತ್ತು.
ಈ ಮಧ್ಯೆ ಮಂಡಳಿಯಿಂದ ತಡೆಯಾಜ್ಞೆಯಿದ್ದರೂ ೨೦೧೨ರ ಮಾರ್ಚ್ ಕೊನೆಯ ವಾರದಲ್ಲಿ ಮತ್ತೆ ಕಸಾಯಿಖಾನೆಗೆ ಕಾನೂನು ಬಾಹಿರವಾಗಿ ಟೆಂಡರ್ ಕರೆಯಲಾಗಿತ್ತು. ಈ ಸಂದರ್ಭ ಕುದ್ರೋಳಿ ನಿವಾಸಿಯೋರ್ವರು ಮೂರು ತಿಂಗಳ ಅವಧಿಗೆ ೧.೧೦ಲಕ್ಷಕ್ಕೆ ಟೆಂಡರ್ ಪಡೆದಿದ್ದರು. ಈ ಸಂದರ್ಭ ಪರಿಸರಕ್ಕೆ ಹಾನಿಯಾಗದಂತೆ ಕಸಾಯಿಖಾನೆಯನ್ನು ನಿರ್ವಹಣೆ ಮಾಡಬೇಕೆನ್ನುವ ಸೂಚನೆಯನ್ನೂ ನೀಡಲಾಗಿತ್ತು. ಆದರೆ ಪರಿಸರ ನಿಯಂತ್ರಣ ಮಂಡಳಿ ನೀಡಿರುವ ನಿಯಮವನ್ನು ಕಳೆದೆರಡು ತಿಂಗಳುಗಳಲ್ಲಿ ಉಲ್ಲಂಘಿಸಲಾಗಿದ್ದು ಈ ಬಗ್ಗೆ ಸಂಘಟನೆಯ ಗೋರಕ್ಷಕ್ ಪ್ರಮುಖ್ ಪ್ರದೀಪ್ ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ಕಲೆ ಹಾಕಿದ್ದರು.
ಇದೇ ವೇಳೆ ಪಚ್ಚನಾಡಿಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ವದಾಗೃಹ ನಿರ್ಮಿಸುವ ಬಗ್ಗೆ ಮನಪಾ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಿದ್ದ ಭರವಸೆ ಕಳೆದ ತಿಂಗಳು ೧೭ಕ್ಕೆ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಮಂಡಳಿಯೂ ಕಸಾಯಿಖಾನೆ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಇವೆಲ್ಲವನ್ನೂ ಮುಂದಿಟ್ಟುಕೊಂಡಿರುವ ಬಜರಂಗದಳ, ಕುದ್ರೋಳಿ ಕಸಾಯಿ ಖಾನೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.
Tagged with
bajaranga,
dk,
lnews
ಪುತ್ತೂರು: ಪೂಂಜಾಲ್ ಕಟ್ಟೆ ಠಾಣಾ ವ್ಯಾಪ್ತಿಯ ಸೋಣಂದೂರು ಗ್ರಾಮದ ಮುಂಡಾಡಿಯಲ್ಲಿ ನಡೆದ ಶಶಿಕಲಾ ಶೆಟ್ಟಿ ಕೊಲೆ ಪ್ರಕರಣವು ಸಂಚು ರೂಪಿಸಿ ನಡೆಸಲಾದ ಪೂರ್ವ ನಿಯೋಜಿತ ಕೊಲೆ ಕೃತ್ಯವಾ ಗಿದ್ದು, ಇದರಲ್ಲಿ ಹಲವಾರು ಮಂದಿ ಶಾಮೀಲಾಗಿದ್ದಾರೆ ಎಂದು ಆರೋಪಿ ಸಿರುವ ಮೃತಳ ಸಹೋದರ ರಾಮಣ್ಣ ಶೆಟ್ಟಿ ಅವರು ಪ್ರಕರಣದ ಕುರಿತು ಸಮಗ್ರ ಮರು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಶಿಕಲಾ ಶೆಟ್ಟಿಯನ್ನು ಆಕೆಯ ಮೈದುನ (ಪತಿಯ ಸಹೋದರ) ಸಂತೋಷ್ ಶೆಟ್ಟಿ ತಲೆಗೆ ಮರದ ದೊಣ್ಣೆಯಿಂದ ಹೊಡೆದು ಕೊಲೆ ನಡೆಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನ ಆರೋಪಿ ಸಂತೋಷ್ ಶೆಟ್ಟಿ, ಆಕೆಯ ಪತಿ ವಿಜಯ ಶೆಟ್ಟಿ ಮತ್ತು ಮಾವ ಸುಂದರ ಶೆಟ್ಟಿ ಎಂಬವರನ್ನು ಈಗಾಗಲೇ ಪೊಲೀಸರು ಬಂಧಿಸಿ ದ್ದಾರೆ. ಆದರೆ ಈ ಕೊಲೆ ಕೃತ್ಯದಲ್ಲಿ ಈ ಮೂವರು ಮಾತ್ರವಲ್ಲ. ಇನ್ನೂ ಕೆಲವರು ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದರು.
ಬಂಧಿತ ಆರೋಪಿಗಳ ಜೊತೆಗೆ ಬಂಧಿತ ಸುಂದರ ಶೆಟ್ಟಿ ಅವರ ಪತ್ನಿ ಲಲಿತಾ, ಸಹೋದರಿ ಬೇಬಿ ಶೆಟ್ಟಿ, ಆಕೆಯ ಪುತ್ರಿ ಪ್ರಮೀಳಾ ಶೆಟ್ಟಿ ಯಾನೆ ಚುಮ್ಮಿ , ಆಕೆಯ ಪುತ್ರರಾದ ಪ್ರಶಾಂತ್ ಯಾನೆ ಅಣ್ಣು ಮತ್ತು ಸತೀಶ್ ಶೆಟ್ಟಿ ಯಾನೆ ಅಪ್ಪು, ಅಳಿಯಂದಿರಾದ ಚಂದ್ರಶೇಖರ ಶೆಟ್ಟಿ ಮತ್ತು ಕಕ್ಕೆಪದವಿನ ದಯಾನಂದ ಶೆಟ್ಟಿ ಹಾಗೂ ಮಡಂತ್ಯಾರಿನ ಫೂಟ್‌ವೇರ್ ಆಂಡ್ ಬ್ಯಾಗ್ಸ್ ಅಂಗಡಿಯ ಮಾಲಕ ಶ್ರೀಕಾಂತ್ ಶೆಟ್ಟಿ ಕೊಲೆ ಸಂಚಿನಲ್ಲಿ ಭಾಗಿಗಳಾಗಿದ್ದಾರೆ ಎಂದು ಆರೋಪಿಸಿದ ಅವರು ಅವರೆಲ್ಲರನ್ನೂ ತನಿಖೆಗೊಳಪಡಿಸಿ ಕೊಲೆಯಲ್ಲಿನ ಅವರ ಪಾತ್ರವನ್ನು ಬಯಲಿಗೆಳೆಯಬೇಕು ಮಾತ್ರವಲ್ಲದೆ ಅವರ ವಿರುದ್ದವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುಂದರ ಶೆಟ್ಟಿ ಅವರ ಸಂಬಂಧಿಯಾದ ಶ್ರೀಕಾಂತ್ ಶೆಟ್ಟಿ ಮತ್ತು ಸುಂದರ ಶೆಟ್ಟಿ ಅವರ ಸಹೋದರಿಯ ಪುತ್ರಿಯಾದ ಪ್ರಮೀಳಾ ಎಂಬಾಕೆಯ ನಡುವೆ ಪ್ರೇಮವಿತ್ತು. ಇವರ ಪ್ರೇಮದ ವಿಚಾರವನ್ನು ಶಶಿಕಲಾ ಅವರು ಮನೆ ಮತ್ತು ನೆರೆಕರೆಯವರಿಗೆ ತಿಳಿಸಿದ್ದು ಸಂಬಂಧಿಕರ ನಡುವೆ ಘರ್ಷಣೆಗೂ ಕಾರಣವಾಗಿತ್ತು. ಈ ಘಟನೆಯಿಂದಾಗಿ ಶಶಿಕಲಾ ಅವರು ಪತಿಯ ಮನೆಯಲ್ಲಿ ಹಿಂಸೆ ಅನುಭವಿಸಬೇಕಾಗಿ ಬಂದಿತ್ತು ಎಂದು ಆರೋಪಿಸಿದ ಅವರು ಇದೇ ವಿಚಾರದಲ್ಲಿ ಆರೋಪಿಗಳೆಲ್ಲರೂ ಸೇರಿಕೊಂಡು ಕೊಲೆ ನಡೆಸಿರುವ ಸಾಧ್ಯತೆ ಇದೆ ಎಂದು ತಿಳಿಸಿದರು. ಕೊಲೆ ಕೃತ್ಯದಲ್ಲಿ ಭಾಗಿಗಳಾದ ಇತರರನ್ನು ವಿಚಾರಣೆಗೊಳಪಡಿಸುವಂತೆ ಈಗಾಗಲೇ ಆರೋಪಿಗಳ ಹೆಸರು ಸಹಿತ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ಆರೋಪಿ ಶ್ರೀಕಾಂತ್ ತನ್ನ ರಾಜಕೀಯ ಬಲ ಮತ್ತು ಹಣದ ಬಲವನ್ನು ಪ್ರಯೋಗಿಸಿ ಆರೋಪವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ದೂರಿದರು. ಕೃತ್ಯದಲ್ಲಿ ಭಾಗಿ ಗಳಾದ ಎಲ್ಲಾ ಆರೋಪಿಗಳನ್ನು ವಿಚಾರಣೆಗೊಳಪಡಿಸಿ ತಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು. ಮಹಾಲಿಂಗ ಕೆ ಮತ್ತು ಜಗದೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
Tagged with
dk,
lnews
ಬೆಂಗಳೂರು: ವಿಧಾನ ಸಭೆ ಯಿಂದ ವಿಧಾನ ಪರಿಷತ್ತಿನ ೧೧ ಸ್ಥಾನ ಗಳಿಗೆ ನಡೆಯುತ್ತಿರುವ ಚುನಾವಣೆ ಯಲ್ಲಿ ಉಪಸಭಾಪತಿ ವಿಮಲಾಗೌಡ ಅವರಿಗೆ ಮತ್ತೊಂದು ಅವಧಿಗೆ ಮುಂದುವರೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ.
ತೆರವಾಗುತ್ತಿರುವ ಸ್ಥಾನಗಳಿಗೆ ಜೂನ್ ೬ ರಂದು ಚುನಾವಣೆ ನಡೆ ಯಲಿದ್ದು, ಪಕ್ಷಕ್ಕೆ ದೊರೆಯಲಿರುವ ಆರು ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಗಾಗಿ ಇಂದು ಮಧ್ಯಾಹ್ನ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದೆ.
ದಕ್ಷಿಣ ಕನ್ನಡದ ಪ್ರತಾಪ್‌ಸಿಂಹ ನಾಯಕ್, ಮೋನಪ್ಪ ಭಂಡಾರಿ ಇಲ್ಲವೆ ಉದಯ್‌ಕುಮಾರ್ ಶೆಟ್ಟಿ ಇವರಲ್ಲಿ ಒಬ್ಬರಿಗೆ ಪಕ್ಷ ಅವಕಾಶ ಮಾಡಿ ಕೊಡ ಲಿದೆ.
ಈಗಾಗಲೇ ಅಭ್ಯರ್ಥಿಗಳು ಯಾರೆಂಬುದು ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಹಾಗೂ ಮುಖ್ಯ ಮಂತ್ರಿ ಸದಾನಂದಗೌಡ ನಿರ್ಧರಿಸಿದ್ದು, ಇಂದಿನ ಸಭೆ ನೆಪಮಾತ್ರಕ್ಕೆ ಸೀಮಿತ ವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ನಾಲ್ಕು ಸ್ಥಾನಗಳನ್ನು ಬಿಟ್ಟುಕೊಡಬೇಕೆಂದು ಒತ್ತಡ ಹೇರಿದ್ದು, ಅವರ ಇಬ್ಬರು ಬೆಂಬಲಿಗರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.
ಆದರೆ ಅವರ ಬೆಂಬಲಿಗರಾದ ಮೈಸೂರಿನ ತೋಂಟದಾರ್ಯ, ಸಿಬಿಐ ಕುಣಿಕೆಯಲ್ಲಿ ಸಿಲುಕಿ ಜೈಲಿನಲ್ಲಿರುವ ಜಿ.ಜನಾರ್ದನ ರೆಡ್ಡಿ ಅವರಿಗೆ ಟಿಕೆಟ್ ನಿರಾಕರಿಸಲಿದ್ದಾರೆ. ಅವರ ರಾಜಕೀಯ ಕಾರ್ಯದರ್ಶಿಯಾಗಿ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದಿದ್ದ ಬಿ.ಜೆ. ಪುಟ್ಟಸ್ವಾಮಿ ಮತ್ತು ಡಿ.ಎಸ್.ವೀರಯ್ಯ ಅವರಿಗೆ ಈ ಬಾರಿ ಅವಕಾಶ ಮಾಡಿಕೊಡುವ ಸಾಧ್ಯತೆಗಳಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ ಇದೇ ಕಾಲಕ್ಕೆ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಯಡಿ ಯೂರಪ್ಪನವರ ವಿರೋಧಿ ಗುಂಪಿನಲ್ಲಿ ಕಾಣಿಸಿಕೊಂಡಿರುವ ಭಾನುಪ್ರಕಾಶ್ ಪರಿಷತ್ ಟಿಕೆಟ್ ಪಡೆಯುವುದು ಖಚಿತ.
ವಿಧಾನ ಸಭೆಯ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿಗೆ ಆರು, ಕಾಂಗ್ರೆಸ್‌ಗೆ ಮೂರು ಹಾಗೂ ಜೆಡಿಎಸ್‌ಗೆ ಒಂದು ಸ್ಥಾನ ಸುಲಭವಾಗಿ ದೊರೆಯಲಿದೆ. ಮತ್ತೊಂದು ಸ್ಥಾನ ಯಾವುದಾದರೂ ಎರಡು ಪಕ್ಷದ ಸದಸ್ಯರು ಪಕ್ಷೇತರರ ಜೊತೆ ಕೈ ಜೋಡಿಸಿದರೆ ಆ ಸ್ಥಾನವನ್ನು ಗಳಿಸಬಹುದಾಗಿದೆ.
Tagged with
snews
ಮಂಗಳೂರು: ಮೆಸ್ಕಾಂ ವಾಮಂ ಜೂರು ವಿಭಾಗದ ಶಾಖಾಧಿಕಾರಿ ಗುರುಮೂರ್ತಿಯವರ ಬೇಜವಾ ಬ್ದಾರಿ ತನದಿಂದ ದುರಂತಕ್ಕೀಡಾಗಿರುವ ಜೆರಾಲ್ಡ್ ವೇಗಸ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ವಿವಿಧ ಕ್ರೈಸ್ತ ಸಂಘಟನೆಗಳು ಒತ್ತಾಯಿಸಿವೆ.
ಕಳೆದ ಮೇ ೧೩ ರಂದು ನಡೆದಿ ರುವ ವಿದ್ಯುತ್ ಆಘಾತದಿಂದ ಗಂಭೀರ ಸ್ಥಿತಿಗೆ ತಲುಪಿರುವ ಜೆರಾಲ್ಡ್ ವೇಗಸ್ ಅವರ ಬಗ್ಗೆ ಮೆಸ್ಕಾಂ ಯಾವುದೇ ದಯೆ ತೋರಿಲ್ಲ. ಅಲ್ಲದೆ ಜೆರಾಲ್ಡ್ ಅವರ ದುರಂತ ಬದುಕಿಗೆ ಕಾರಣರಾ ದವರ ಮೇಲೂ ಪೊಲೀಸರು ರೀತಿಯ ಕ್ರಮಕೈಗೊಂಡಿಲ್ಲ. ಆರೋಪಿಯನ್ನು ರಕ್ಷಿಸುವ ಕೆಲಸ ಮೆಸ್ಕಾಂ ಮೇಲಧಿ ಕಾರಿಗಳಿಂದಲೇ ನಡೆಯುತ್ತಿದೆ ಎಂದು ಕ್ರೈಸ್ತ ಸಂಘಟನೆಗಳು ಆರೋಪಿಸಿವೆ.
ವಾಮಂಜೂರು ಶಾಖಾಧಿಕಾರಿ ಗುರುಮೂರ್ತಿಯವರು ಕಳೆದ ಮೇ ೧೩ ರಂದು ವಾಮಂಜೂರು ವಿಭಾಗದ ಲೈನ್ ದುರಸ್ಥಿ ಮಾಡಲು ಈ ವಿಭಾಗದ ಸಿಬ್ಬಂದಿಯನ್ನು ಬಳಸಿಕೊಳ್ಳುವ ಬದಲು ಕಾವೂರು ವಿಭಾಗದ ಸಿಬ್ಬಂದಿ ಯನ್ನು ಇಲ್ಲಿನ ವಿಭಾಗಧಿಕಾರಿಯ ಅನುಮತಿ ರಹಿತವಾಗಿ ಕರೆದುಕೊಂಡು ಹೋಗಿ ಯಾವುದೇ ಸುರಕ್ಷಿತ ಸಾಧನ ಇಲ್ಲದೆ ಕೆಲಸ ನಿರ್ವಹಿಸುವಂತೆ ತಿಳಿಸಿ ದ್ದರು. ಅಲ್ಲದೆ ಕೆಲಸ ನಿರ್ವಹಿಸುತ್ತಿ ರುವಾಗಲೇ ವಿದ್ಯುತ್ ಲೈನ್ ಆನ್ ಮಾಡಿ ಜೆರಾಲ್ಡ್ ಅವರಿಗೆ ವಿದ್ಯುತ್ ಆಘಾತ ಉಂಟು ಮಾಡಿದ್ದರು ಮಾತ್ರವಲ್ಲದೆ ಜೆರಾಲ್ಡ್ ಅವರು ವಿದ್ಯುತ್ ಆಘಾತಕ್ಕೆ ಒಳಗಾಗಿ ತಂತಿಯಲ್ಲಿ ನೇತಾ ಡುತ್ತಿದ್ದರೂ ಅವರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖ ಲಾಗಿತ್ತು. ಹೀಗಿದ್ದರೂ ಗುರುಮೂರ್ತಿ ವಿರುದ್ಧ ಪೊಲೀಸರು ಕರಮ ಕೈಗೊಂಡಿ ಲ್ಲವಾದ ಕಾರಣ ಉಘ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಕ್ರೈಸ್ತ ಸಂಘ ಟನೆಗಳು ನೀಡಿದೆ.
Tagged with
dk,
lnews,
mescom
ಸುಳ್ಯ: ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಎಂಬಲ್ಲಿ ಮಂಗಳವಾರ ಮುಂಜಾನೆ ಲಘುವಾಗಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೆಳಿಗ್ಗೆ ೧೧-೩೦ರ ಸುಮಾರಿಗೆ ಒಂದೆರಡು ಸೆಕುಂಡ್‌ಗಳ ಕಾಲ ಭೂಮಿ ಕಂಪಿಸಿದೆ. ಉಳಿದಂತೆ ಎಲ್ಲೂ ಕಂಪನ ಅನುಭವ ಆಗಿಲ್ಲ. ಹಾಗಾಗಿ ದಿನವಿಡೀ ತಾಲೂಕಿನಲ್ಲಿ ಈ ಕುರಿತು ವದಂತಿಗಳೇ ತುಂಬಿದ್ದವು.
Tagged with
dk,
lnews,
quake
ಪುತ್ತೂರು: ಕೇಂದ್ರ ಸರಕಾರ ರಾತ್ರೋ ರಾತ್ರಿ ಪೆಟ್ರೋಲ್ ದರ ಏರಿಕೆ ಮಾಡುವ ಮೂಲಕ ಜನರ ಬದುಕಿಗೆ ಬೆಂಕಿ ಇಟ್ಟಿದೆ. ಪೆಟ್ರೋಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ವಿಚಾರದಲ್ಲಿ ರಾಜ್ಯ ಸರಕಾರವು ನಿಷ್ಠುರ ನಿಲುವು ತಾಳುವ ಮೂಲಕ ಜನರ ಬದುಕಿಗೆ ಮತ್ತಷ್ಟು ಹೊಡೆತ ನೀಡಿದ್ದು, ಇಲ್ಲಿ ರೂಪಾಯಿ ಮೌಲ್ಯಕ್ಕಿಂತಲೂ ಕೇಂದ್ರ ಮತ್ತು ರಾಜ್ಯ ಸರಕಾರದ ಮೌಲ್ಯ ಸಂಪೂರ್ಣ ಕುಸಿದಿದೆ ಎಂದು ಪುತ್ತೂರು ತಾಲೂಕು ಎಸ್‌ಡಿಪಿಐ ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಲೇವಡಿ ಮಾಡಿದರು.
ತಾಲೂಕು ಎಸ್‌ಡಿಪಿಐ ನೇತೃತ್ವದಲ್ಲಿ ಮಂಗಳವಾರ ಪುತ್ತೂರಿನ ಉಪವಿಭಾಗಾಧಿಕಾರಿಗಳ ಕಛೇರಿ ಎದರು ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಪುತ್ತೂರು ಪೇಟೆಯಲ್ಲಿ ಬೈಕ್ ದೂಡಿಕೊಂಡು ಪ್ರತಿಭಟನಾ ರ‍್ಯಾಲಿ ನಡೆಸಿದ ಪ್ರತಿಭಟನಾಕಾರರು ಉಪ ವಿಭಾಗಾಧಿಕಾರಿ ಕಛೇರಿಯ ಎದುರು ಪ್ರತಿಭಟನಾ ಸಭೆ ನಡೆಸಿ ಬಳಿಕ ಉಪ ವಿಭಾಗಾಧಿಕಾರಿ ಕಛೇರಿಯ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ತಾಲೂಕು ಎಸ್‌ಡಿಪಿಐ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಬೆಟ್ಟಂಪಾಡಿ, ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಜ್ ನನ್ನಿಕಲ್ಲು, ಜಿಲ್ಲಾ ಸಮಿತಿಯ ಸದಸ್ಯ ರಾದ ಇಬ್ರಾಹಿಂ ಸಾಗರ್, ಇ.ಬಿ.ಕೆ. ಮಹಮ್ಮದ್ , ನಗರ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಪಡೀಲ್ , ಕುಂಬ್ರ ವಲಯಾಧ್ಯಕ್ಷ ಉಮ್ಮರ್ ಪರ್ಪುಂಜ , ಜುನೈದ್ ಮುದ್ದೋಡಿ , ನೌಫಲ್ ಸಾಲ್ಮರ , ರಝಾಕ್ ಕೆರೆಮೂಲೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Tagged with
dk,
lnews,
petrol,
protest
ಮಂಗಳೂರು: ಹೃದಯದ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ವೈದ್ಯರ ನಿರ್ಲಕ್ಷದಿಂದಾಗಿ ಮಾನಸಿಕ ಸ್ಥಿರತೆ ಕಳಕೊಂಡ ವ್ಯಕ್ತಿಯೊಬ್ಬರಿಗೆ ಪರಿಹಾರ ರೂಪದಲ್ಲಿ ೧೭.೫೦ ಲಕ್ಷ ರೂ.ಗಳನ್ನು ನೀಡುವಂತೆ ಮಂಗಳೂರಿನ ಒಮೆಗಾ ಆಸ್ಪತ್ರೆಗೆ ರಾಜ್ಯ ಹೈಕೋರ್ಟ್ ಆದೇಶಿಸಿದೆ.
೨೦೦೨ರ ಸೆಪ್ಟೆಂಬರ್‌ನಲ್ಲಿ ಭಟ್ಕಳದ ಮುಗ್ದುಮ್ ಕಾಲನಿಯ ನಿವಾಸಿ ಮಹಮ್ಮದ್ ಅಶ್ರಫ್ ರುಕ್ನುದ್ದೀನ್ ಹೃದಯ ನೋವು ಕಾಣಿಸಿಕೊಂಡ ಪರಿಣಾಮ ಒಮೆಗಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಿದ ಡಾ. ಮುಕುಂದ್, ಸರ್ಜನ್ ಎ.ಜೆ. ಜಯಕೃಷ್ಣ, ಡಾ.ಜೀತೇಂದ್ರ ಕುಮಾರ್, ಡಾ. ಗೋಪಾಲ್ ಕುಮಾರ್, ನೇತೃತ್ವದ ತಂಡದ ನಿರ್ಲಕ್ಷ್ಯದಿಂದಾಗಿ ರೋಗಿಯು ಜೀವನ ಪರ್ಯಂತ ಮಾನಸಿಕ ಸ್ಥಿರತೆ ಕಳಕೊಳ್ಳುವಂತಾಯಿತು ಎಂದು ಆರೋಪ ಕೂಡ ಈ ವೇಳೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಶ್ರಫ್‌ರ ಪತ್ನಿ ಹಾಗೂ ಕುಟುಂಬದವರು ದ.ಕ. ಜಿಲ್ಲಾ ಗ್ರಾಹಕ ರಕ್ಷಣಾ ವೇದಿಕೆಯ ಮೆಟ್ಟಿಲೇರಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ ಗ್ರಾಹಕರ ವೇದಿಕೆ ಸಂತ್ರಸ್ತರಿಗೆ ೧೫ ಲಕ್ಷ ರೂ. ಪರಿಹಾರ ಮೊತ್ತ ನೀಡುವಂತೆ ಆದೇಶಿಸಿತ್ತು. ಇದರ ವಿರುದ್ಧ ಒಮೆಗಾ ಆಸ್ಪತ್ರೆಯ ವೈದ್ಯರು ಹೈಕೋರ್ಟ್‌ನ ಮೊರೆ ಹೋಗಿ ದ್ದರು. ಆದರೆ ಅಲ್ಲಿಯೂ ಗ್ರಾಹಕ ವೇದಿಕೆ ಆದೇಶ ವನ್ನು ಕೋರ್ಟ್ ಎತ್ತಿಹಿಡಿದ ಪರಿಣಾಮ ಅಶ್ರಫ್ ಕುಟುಂಬಕ್ಕೆ ೧೭.೫೦ ಲಕ್ಷ ರೂ.ಗಳನ್ನು ಮೂರು ತಿಂಗಳ ಒಳಗಾಗಿ ಪಾವತಿಸುವಂತೆ ಆದೇಶಿಸಿದೆ.
Tagged with
dk,
lnews,
omega
ಕಾಪು (ಪಡುಬಿದ್ರಿ): ಪೆಟ್ರೋಲ್ ದರ ಏರಿಕೆ ಕೂಡಲೇ ಹಿಂಪಡೆಯ ಬೇಕು ಎಂದು ಅಗ್ರಹಿಸಿ ಮೇ ೩೧ ರಂದು ಕರೆ ನೀಡಿರುವ ಸ್ವಯಂ ಪ್ರೇರಿತ ಭಾರತ್ ಬಂದ್ ಶಾಂತಿಯುತವಾಗಿ ಪಕ್ಷಭೇದ ರಹಿತವಾಗಿ ಯಶಸ್ವಿಗೊ ಳಿಸಲು ಕಾಪು ಶಾಸಕ ಲಾಲಾಜಿ ಮೆಂಡನ್ ಕರೆ ನೀಡಿದ್ದಾರೆ.
ಶುಭ ಕಾರ್ಯಗಳಿಗೆ ತೆರಳುವ ವಾಹನಗಳಿಗೆ ಯಾವುದೇ ತಡೆಯೊಡ್ಡಬಾರದು ಎಂದು ಶಾಸಕರು ವಿನಂತಿಸಿದ್ದು, ಅಲ್ಲದೇ ಶುಭ- ಸಮಾರಂಭದ ಬಗ್ಗೆ ವಾಹನದಲ್ಲಿ ಭಿತ್ತಿ ಪತ್ರ ಅಂಟಿಸಲು ಕೋರಿರುತ್ತಾರೆ.
Tagged with
bundh,
lnews,
udupi
ಬೆಂಗಳೂರು: ಆಂತರಿಕ ಕಚ್ಚಾಟ, ಬಣ ರಾಜಕೀಯದ ಹೊಡೆತಕ್ಕೆ ಸಿಲುಕಿ ಕಂಗಾಲಾಗಿರುವ ಬಿಜೆಪಿ ಸರ್ಕಾರ ಮೇ ೩೧ ಕ್ಕೆ ನಾಲ್ಕು ವರ್ಷ ಪೂರೈಸ ಲಿದ್ದು,ಅದೇ ಕಾಲಕ್ಕೆ ಐದನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮವನ್ನು ಆಚರಿಸಿ ಕೊಳ್ಳಲಾಗದ ಪರಿಸ್ಥಿತಿಗೆ ತಲುಪಿದೆ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿದ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಹಗರಣ ಗಳು, ಸ್ವಜನಪಕ್ಷಪಾತ, ಭೂಹಗರಣ, ಸ್ವಪಕ್ಷದಿಂದಲೇ ಬಂಡಾಯ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಿ ನಾಲ್ಕು ವರ್ಷ ಪೂರೈಸಲಿದೆ.
ಐದನೇ ವರ್ಷಕ್ಕೆ ಸರ್ಕಾರ ಕಾಲಿ ಡುತ್ತಿರುವ ಸಂಭ್ರಮವನ್ನು ಆಚರಿಸಲು ಸದಾನಂದಗೌಡರೂ ಸಿದ್ದರಿಲ್ಲ. ಸಂಭ್ರಮ ಆಚರಿಸಿದರೆ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಸಹನೆ ಯಿಂದ ಇರಲಾರರು ಎಂಬ ಧಾವಂತ ಮುಖ್ಯಮಂತ್ರಿ ಅವರಿಗಿದೆ.
ಸದಾನಂದಗೌಡರೇನೋ ಕಳೆದ ಅರವತ್ತು ವರ್ಷಗಳಲ್ಲಿ ಯಾವುದೇ ಸರ್ಕಾರ ಮಾಡದ ಸಾಧನೆಯನ್ನು ಬಿಜೆಪಿ ಮಾಡಿದೆ ಎನ್ನುತ್ತಾರೆ.ಆದರೆ ಸಂಭ್ರಮಾಚರಣೆ ಆಚರಿಸಲು ಮಾತ್ರ ಅವರು ತಯಾರಿಲ್ಲ.
ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರಕ್ಕೆ ನಾಲ್ಕು ವರ್ಷ ಕಳೆದಿದೆ ಎಂದು ಸಂಭ್ರಮಾಚರಣೆ ಮಾಡಬೇಕಿಲ್ಲ. ವರ್ಷಗಳು ಕಳೆಯುತ್ತಲೇ ಇರುತ್ತವೆ. ಆದರೆ ನಾವು ಮಾಡಿದ ಸಾಧನೆ ಮಾತ್ರ ಜನರ ಮನಸ್ಸಿನಲ್ಲಿ ನೆಲೆಯೂರಿದರೆ ಸಾಕು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಮಾಜದ ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯಒದಗಿಸಿದೆ. ವಿಶೇಷವಾಗಿ ಅಭಿವೃದ್ದಿ ಕಾರ್ಯಕ್ರಮದ ಪ್ರಯೋಜನ ಎಲ್ಲ ಪ್ರಜೆಗಳಿಗೂ ಸಮಾನವಾಗಿ ದೊರೆಯುವಂತೆ ಮಾಡಿದೆ. ಪ್ರತಿಪಕ್ಷಗಳ ಅಸಹಕಾರಕ್ಕಿಂತ ಜನರ ಮೆಚ್ಚುಗೆಗೆ ಸರ್ಕಾರ ಪಾತ್ರವಾಗಿದೆ ಎಂದರು.
Tagged with
snews,
yeddi
ಬೆಂಗಳೂರು: ಪಕ್ಷ ಮತ್ತು ಸರ್ಕಾರದಲ್ಲಿ ಕಾಣಿಸಿಕೊಂಡಿರುವ ಗೊಂದಲ ನಿರಂತರವಾಗಿ ಮುಂದುವರಿಯಲಿದ್ದು, ಸದ್ಯಕ್ಕೆ ಅದು ಪರಿಹಾರವಾಗುವ ಲಕ್ಷಣಗಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಬಿಜೆಪಿಯಲ್ಲಿನ ಗೊಂದಲಗಳು ನಿರಂತರ. ಇದಕ್ಕೆ ಒಂದೇ ಬಾರಿ ಪರಿಹಾರ ದೊರೆಯುವ ಲಕ್ಷಣವಿಲ್ಲ ಎಂದರು.
ಗೊಂದಲವನ್ನು ಪರಿಹರಿಸುವ ದಿಸೆಯಲ್ಲಿ ಪ್ರಯತ್ನವನ್ನೇ ಮಾಡಬಾರದು ಎಂದಲ್ಲ. ಬದಲಿಗೆ ಬಿಜೆಪಿಯಲ್ಲಿ ನಿರಂತರವಾಗಿ ಮುಂದುವರಿಯುತ್ತಿರುವ ಗೊಂದಲವನ್ನು ಪರಿಹರಿಸಲು ಪಕ್ಷದ ಹಿರಿಯರ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ಗಡ್ಕರಿ, ಹಿರಿಯ ಮುಖಂಡರಾದ ಅರುಣ್‌ಜೇಟ್ಲಿ, ರಾಜನಾಥ್‌ಸಿಂಗ್ ನಾಳೆ ಬೆಂಗಳೂರಿಗೆ ಆಗಮಿಸಲಿದ್ದು ಅವರೊಂದಿಗೆ ಕೆಲವು ಮಹತ್ವದ ಚರ್ಚೆಗಳನ್ನು ನಡೆಸಲಾಗುವುದು. ಈ ಬಾರಿ ಸಮಸ್ಯೆಗಳಿಗೆ ಪರಿಹಾರ ದೊರೆಯುವ ವಿಶ್ವಾಸವಿದೆ ಎಂದರು.
Tagged with
yeddi
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಸಿಬಿಐ ವಿಶೇಷ ಕೋರ್ಟ್ ಜೂನ್ ೧ಕ್ಕೆ ಮುಂದೂಡಿದೆ. ಪ್ರಕರಣ ಕುರಿತಂತೆ ಸಿಬಿಐ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
Tagged with
snews,
yeddi
ತುಳುನಾಡಿನ ಜನರಲ್ಲಿ ಬಳಕೆಯಲ್ಲಿರುವ ಈ ತೆರನ ಮರುಮದುವೆಗೆ ಹೋಲಿಕೆಯಾಗುವ ಸಂಪ್ರದಾಯಗಳು ದೇಶದ ಇತರೆಡೆಗಳಲ್ಲೂ ಕಂಡು ಬಂದಿವೆ. ಪಂಜಾಬಿನ ಸುತ್ತ ಮುತ್ತ ಇಂದಿಗೂ ಜನ ಬಳಕೆಯಲ್ಲಿ ‘ಚಾದರ್ ಡಾಲ್ನ ಕ್ರಮ ಇದೆ. ಹೆಣ್ಣೋರ್ವಳ ಪತಿ ತೀರಿಕೊಂಡಾಗ ಅವಳಿಗೆ ಮದುವೆಯಾಗಿರದ ಮೈದುನನಿದ್ದರೆ, ಹತ್ತು ಜನ ಸೇರಿ, ವಿಧವೆಯನ್ನು ಮೈದುನನ ಜೊತೆಗೂಡಿಸಿ ಅವರ ಮೇಲೆ ಚಾದರ ಹಾಸುವ ಮೂಲಕ ಅವರನ್ನು ಸತಿ ಪತಿಗಳೆಂದು ಸಾರುತ್ತಿದ್ದರು. ಈ ರೀತಿ ಮಾಡುವುದಕ್ಕೆ ಗಂಡು ಅಥವಾ ಹೆಣ್ಣಿನ ಒಪ್ಪಿಗೆಯನ್ನು ಕೇಳುವ ಕ್ರಮ ಇರಲಿಲ್ಲ.
ಗಂಡು ಮತ್ತು ಹೆಣ್ಣು ಪರಸ್ಪರ ಒಂದಾಗಿ ಬಾಳಲು ಒಪ್ಪಿರುವ ವಿಷಯ ಎರಡು ಕಡೆಯ ಹಿರಿಯರಿಂದ ಗುರಿಕಾರನ ಕಿವಿಗೆ ಮುಟ್ಟುತ್ತದೆ. ಆಗ ಗಂಡು ಮತ್ತು ಹೆಣ್ಣಿನ ಕಡೆಯ ಗುರಿಕಾ ರರು ಎರಡೂ ಮನೆಯ ಹಿರಿಯರಲ್ಲಿ ಮಾತುಕ ತೆಯಾಡಿ ಬುಡುದಾರೆಗೆ ದಿನ ನಿಗದಿಗೊಳಿ ಸುವರು. ಬುಡುದಾರೆಯನ್ನು ಕಡ್ಡಾಯವಾಗಿ ರಾತ್ರಿ ಕಾಲದಲ್ಲಿಯೇ ಜರಗಿಸಲಾಗುವುದು. ಈ ಸರಳ ಸಮಾರಂಭಕ್ಕೆ ಗಂಡು ಮತ್ತು ಹೆಣ್ಣಿನ ಮನೆಯವರಲ್ಲದೆ ಇತರ ಅವಿವಾಹಿತ ಯುವಕ ಯುವತಿಯರಿಗೆ ಪ್ರವೇಶವಿರುವುದಿಲ್ಲ. ಬುಡು ದಾರೆ ನಡೆಯುವುದು ಹೆಣ್ಣಿನ ಮನೆಯಲ್ಲಿ ಎರಡೂ ಕಡೆಯ ಇಬ್ಬಿಬ್ಬರು ಗುರಿಕಾರರು ಮದು ವೆಗೆ ಸಾಕ್ಷಿಯಾಗಿರಲು ಬರುವರು. ಇತ್ತಂಡ ಗಳ ಹಿರಿಯರು ಕೂಡಾ ಭಾಗವಹಿಸುವರು. ಬುಡುದಾರೆಗೆ ದಿನದ ಮದುವೆಯಂತೆ ವಾದ್ಯ ಘೋಷಗಳ ಉತ್ಸವದ ವಾತಾವರಣವಿರುವು ದಿಲ್ಲ.
ಕತ್ತಲಾದ ಬಳಿಕ ಸಂಬಂಧಿಸಿದವರೆಲ್ಲರು ಹೆಣ್ಣಿನ ಮನೆಯಲ್ಲಿ ಸೇರುವರು. ಆಗ ಎರಡು ತಂಡದ ಗುರಿಕಾರರು ಬುಡುದಾರೆಯ ಮಾತು ಕತೆಗೆ ತೊಡಗುವರು. ಗುರಿಕಾರನು ಪರಸ್ಪರ ವೀಳ್ಯ ಗೌರವವನ್ನು ಪಡೆದಾದ ಬಳಿಕ ಗಂಡು ಮತ್ತು ಹೆಣ್ಣನ್ನು ಕರೆದು ಬುಡುದಾರೆಗೆ ಪರಸ್ಪರ ಒಪ್ಪಿಗೆಯನ್ನು ಬಾಯಿಬಿಟ್ಟು ತಿಳಿಸುವಂತೆ ಕೇಳಿಕೊಳ್ಳು ವುದು ಅಲ್ಲಿ ಸೇರಿದ ಜನರ ಸಮಕ್ಷಮದಲ್ಲಿ ಗಂಡು ಮತ್ತು ಹೆಣ್ಣು ಮುಕ್ತವಾಗಿ ತಮ್ಮ ಸಮ್ಮತಿ ನೀಡಿದರೆ ಮಾತ್ರ ಬುಡು ದಾರೆ ನಡೆಯುತ್ತಿತ್ತು. ಇದಾದ ಬಳಿಕ ಹುಡುಗನ ಕಡೆ ಯವರು ಹೆಣ್ಣಿಗೆ ಹೊಸ ಸೀರೆ ಉಡಿಸಿ ಸಿಂಗರಿಸುವರು. ಮನೆಯ ಒಳ ಆವರಣದಲ್ಲಿ ಚಿಮಿಣಿ ದೀಪದ ಮಂದ ಬೆಳಕಿನಲ್ಲಿ ಸದ್ದುಗದ್ದಲವಿಲ್ಲದೆ ನಡೆಯುವ ಈ ಸಮಾರಂ ಭಕ್ಕೆ ತನ್ನದೇ ಆದ ಸ್ವಂತಿಕೆ ಇದೆ.
ಈಗ ಎರಡು ಜನ ಚಾವಡಿಯಲ್ಲಿ ಬಿಳಿ ವಸ್ತ್ರವನ್ನು ಪರದೆಯ ರೀತಿ ಅಡ್ಡ ಹಿಡಿಯುವರು. ಪರದೆಯ ಒಂದು ಪಾರ್ಶ್ವದಲ್ಲಿ ವರನ ಸಮೇತ ಇತರ ಗಂಡಸರು ನಿಲ್ಲು ವರು. ಪರದೆಯ ಮತ್ತೊಂದಡೆ ಹೆಣ್ಣನ್ನು ಕೂಡಿಕೊಂಡು ಇತರ ಹೆಂಗಸರು ನಿಲ್ಲುವರು. ಆಗ ಗುರಿಕಾರರು ಬುಡ ದಾರೆಯನ್ನು ಘೋಷಿಸುವರು. ಉದಾ: ರಾಮ ಪನ್ಪಿನ ಆಣಗ್ ಅಕ್ಕಣಿ ಪನ್ಪಿನ ಪೊಣ್ಣನ್ ಬುಡುದಾರೆ ಮಲ್ಪುಂಡು (ರಾಮ ಎನ್ನುವ ಗಂಡಿಗೆ ಅಕ್ಕಣಿ ಎಂಬ ಹೆಣ್ಣನ್ನು ಬುಡುದಾರೆ ಮಾಡುವೆವು ಎಂದು.) ಆಗ ಪರದೆಯ ಕೆಳಭಾಗ ದಲ್ಲಿ ಗಂಡಿನ ಕೈಯನ್ನು ಹೆಣ್ಣಿನ ಕೈಯಲ್ಲಿ ಹಿಡಿಸಿ ‘ಕೈಪತ್ತವುನಿ ಕೆಲಸ ಮಾಡುವರು.
ವೈದಿಕ ವಿಧಿ ವಿಧಾನದ ಒಂದಿನಿತೂ ಪ್ರಭಾವವಿಲ್ಲದ ಕಾಲದಲ್ಲಿ ಗಂಡು ಹೆಣ್ಣಿನ ಜೀವನವನ್ನು ಮತ್ತೊಮ್ಮೆ ಚಿಗುರಿಸುವಲ್ಲಿ ಕೈ ಹಿಡಿಸುವ ಸರಳ ವಿಧಾನ ಕೂಡ ಬಹಳ ಪ್ರಾಮುಖ್ಯತೆಯನ್ನು ಪಡೆಯುವುದು. ಜನಮನ ದಲ್ಲಿ ಆಧುನಿಕ ಸಮಾಜದ ಬದಲಾವಣೆಗಳು ಕ್ರಮೇಣ ಪ್ರವೇಶಿಸಿದ ಬಳಿ ಕವೇ ಕರಿಮಣಿ ಕಟ್ಟುವ ಕ್ರಮ ಕಾಣಿಸಿಕೊಂಡಿತು. ಆದರೆ ಬುಡುದಾರೆಗೆ ಕರಿಮಣಿ ಕಡ್ಡಾಯವಂತು ಇರಲಿಲ್ಲ. ಬಳಿಕ ಅಲ್ಲಿ ನೆರೆದವರಿಗೆ ಊಟದ ಏರ್ಪಾಡು ಮಾಡುತ್ತಿದ್ದರು.
ಟಿಪ್ಪಣಿ :
೧) ತುಳುನಾಡಿನ ಜನರಲ್ಲಿ ಬಳಕೆಯಲ್ಲಿರುವ ಈ ತೆರನ ಮರುಮದು ವೆಗೆ ಹೋಲಿಕೆಯಾಗುವ ಸಂಪ್ರದಾಯಗಳು ದೇಶದ ಇತರೆಡೆಗಳಲ್ಲೂ ಕಂಡು ಬಂದಿವೆ.
ಪಂಜಾಬಿನ ಸುತ್ತಮುತ್ತ ಇಂದಿಗೂ ಜನ ಬಳಕೆಯಲ್ಲಿ ‘ಚಾದರ್ ಡಾಲ್ನ ಕ್ರಮ ಇದೆ. ಹೆಣ್ಣೋರ್ವಳ ಪತಿ ತೀರಿಕೊಂಡಾಗ ಅವಳಿಗೆ ಮದು ವೆಯಾಗಿರದ ಮೈದುನನಿದ್ದರೆ, ಹತ್ತು ಜನ ಸೇರಿ, ವಿಧವೆಯನ್ನು ಮೈದು ನನ ಜೊತೆಗೂಡಿಸಿ ಅವರ ಮೇಲೆ ಚಾದರ ಹಾಸುವ ಮೂಲಕ ಅವ ರನ್ನು ಸತಿ ಪತಿಗಳೆಂದು ಸಾರುತ್ತಿದ್ದರು. ಈ ರೀತಿ ಮಾಡುವುದಕ್ಕೆ ಗಂಡು ಅಥವಾ ಹೆಣ್ಣಿನ ಒಪ್ಪಿಗೆಯನ್ನು ಕೇಳುವ ಕ್ರಮ ಇರಲಿಲ್ಲ.
೨) ಬುಡಕಟ್ಟು ಜನಾಂಗಗಳಲ್ಲಿ ಗಂಡು ತೀರಿಕೊಂಡರೆ ಹೆಂಡತಿ (ವಿಧವೆ)ಯ ಮೈದುನನ್ನು ಮದುವೆಯಾಗುವ ಅಥವಾ ಹೆಂಡತಿ ತೀರಿ ಕೊಂಡರೆ ವಿಧುರರು ತನ್ನ ನಾದಿನಿಯನ್ನು ವಿವಾಹವಾಗುವ ‘ಕೂಡಿಕೆ ಕ್ರಮ ಈಗಲೂ ಬಳಕೆಯಲ್ಲಿದೆ. ಇಂತಹ ಸಂಪ್ರದಾಯವನ್ನು ಅನುಸರಿ ಸುವುದರಿಂದ ಕೆಲವು ಇತಿಮಿತಿಗಳು ಕೂಡಾ ಇವೆ. ಗಂಡು ಮತ್ತು ಹೆಣ್ಣು ನಡುವೆ ಬರುವ ಪ್ರಾಯದ ಅಂತರ ಗಣನೀಯವಾಗಿ ಅಥವಾ ಗಂಡಿನ ಪ್ರಾಯ ಹೆಣ್ಣಿಗಿಂತ ಕಡಿಮೆಯಾಗಿದ್ದು ಅರ್ಥಪೂರ್ಣವಲ್ಲದ ದಾಂಪತ್ಯ ಒದಗುವುದೂ ಇದೆ.
೩) ಸಮಾಜದ ನಡೆಯಲ್ಲಿ ಕಾಲು ಜಾರಿದ ಹೆಣ್ಣು ಗಂಡುಗಳನ್ನು ಅತ್ಯಂತ ಸರಳ ರೀತಿಯಲ್ಲಿ ಮರು ದಾಂಪತ್ಯಕ್ಕೆ ಒಳಪಡಿಸುವ ಇಂತಹ ವೈವಾಹಿಕ ರೀತಿ ನೀತಿಗಳು. ತುಳುವರ ಪ್ರಗತಿಶೀಲತೆಯನ್ನು ಎತ್ತಿ ತೋರಿ ಸುತ್ತವೆ. ಈ ತೆರನಾದ ಪ್ರಗತಿಪರ, ಜನಪರ ಹೊಂದಾಣಿಕೆಗಳಿಗೆ ತುಳುವ ನೆಲ ಸದಾ ಆಶ್ರಯತಾಣವಾಗಿತ್ತು. ಈ ಬಗ್ಗೆಯ ಬುಡುದಾರೆಯ ರೀತಿ ಮಲೆಯಾಳ ಭಾಷೆ ಮಾತನಢುವ ‘ಮೋಯರ್ (ಬೋವಿ)ಗಳಲ್ಲೂ ರೂಢಿ ಯಲ್ಲಿದೆ. ಈ ಪದ್ಧತಿಯನ್ನು ಅವರು ತುಳುವರೀಂದ ಸ್ವೀಕರಿಸಿದ ಸಾಧ್ಯ ತೆಯನ್ನು ಅಲ್ಲಗಳೆಯಲಾಗುವುದಿಲ್ಲ.
Tagged with
babuamin,
lekhana
ಹೊಸ ಹೊಸ ಮೂಢನಂಬಿಕೆಗಳನ್ನು ಖಾಸಗಿ ಟಿ.ವಿ. ವಾಹಿನಿಗಳ ಜ್ಯೋತಿಷಿ - ವಾಸ್ತು ಪಂಡಿತರು ಹುಟ್ಟುಹಾಕಿ ಜನರನ್ನು ದಿನಾಲು ಹಾದಿ ತಪ್ಪಿಸುತ್ತಿದ್ದರೂ ಹಿಂದೂ ಸಂಘಟ ನೆಗಳೇಕೆ ಪ್ರತಿಭಟಿಸುತ್ತಿಲ್ಲ?
ಪಿ.ಶಿವರಾಮ ಶೆಟ್ಟಿ, ಮಣ್ಣಗುಡ್ಡ
ಯಾವುದೇ ಹಿಂದೂ ಶಾಸ್ತ್ರಗಳಲ್ಲಿ ಎಲ್ಲಿಯೂ ಉಲ್ಲೇಖವಿಲ್ಲದ ಹೊಸ ಹೊಸ ಮೂಢನಂಬಿಕೆಗಳನ್ನು ಖಾಸಗಿ ಟಿ.ವಿ. ವಾಹಿನಿಗಳ ಜ್ಯೋತಿಷಿ - ವಾಸ್ತು ಪಂಡಿತರು ಹುಟ್ಟು ಹಾಕಿ ಜನರನ್ನು ದಿನನಿತ್ಯ ಹಾದಿ ತಪ್ಪಿಸುತ್ತಿದ್ದರೂ ಹಿಂದೂ ಸಂಘಟನೆಗಳೇಕೆ ಪ್ರತಿಭಟಿಸುತ್ತಿಲ್ಲ? ಹಿಂದೂ ಧರ್ಮಕ್ಕೆ ಕಠಾರಿ ವೀರ ಚಲನಚಿತ್ರಕ್ಕಿಂತ ಟಿ.ವಿ.ಗಳ ಜ್ಯೋತಿಷಿಗಳೇ ಹೆಚ್ಚು ಡ್ಯಾಮೇಜ್ ಮಾಡು ತ್ತಿರುವುದು. ‘ವೇದ - ಉಪನಿಷತ್ತುಗಳಲ್ಲಿ ಅದು ಬರೆದಿದೆ, ಇದು ಉಲ್ಲೇಖ ವಿದೆ’ ಎಂದು ಅನುದಿನವೂ ಸುಳ್ಳು ಹೇಳಿ ನಮ್ಮ ಪವಿತ್ರ ವೇದಗಳು ಮೌಢ್ಯದ ಗುಡಾಣವೇ ಆಗಿದೆ ಎನ್ನುವಂತೆ ಬಿಂಬಿಸುತ್ತಾರೆ. ದೇವರ ದೀಪದ ಬತ್ತಿ ಎಷ್ಟು ಉದ್ದವಿರಬೇಕು, ಬತ್ತಿಯ ತುದಿಯ ಕರಕಲು ಯಾವುದರಿಂದ ಕತ್ತರಿಸಬೇಕು, ಮೊಬೈಲ್ ರಿಂಗ್ ಟೋನ್ ಹೇಗಿರಬೇಕು. ಕಾರ್ ಬೈಕುಗಳ ಬಣ್ಣ ಹೇಗಿರಬೇಕು ಎನ್ನುವ ಬಾಲಿಶ ವಿಚಾರಗಳು ಹಿಂದೂ ಶಾಸ್ತ್ರಗಳಲ್ಲಿ ಉಲ್ಲೇಖಿತವಿದೆಯೆನ್ನು ವಂತೆ ಬಂಡಲ್ ಬಿಡುತ್ತಾರೆ (ವೇದ ಕಾಲದಲ್ಲಿ, ಮೊಬೈಲ್, ಕಾರ್, ಬೈಕುಗಳು ಎಲ್ಲಿದ್ದವು)?
ಚೀನಾದ ಫೆಂಗ್‌ಶ್ವೆಯನ್ನು ಭಾರತೀಯ ದೇವರೊಟ್ಟಿಗೆ ಅಕ್ರಮವಾಗಿ ಸಮೀ ಕರಿಸಿ ತಾಮಸಿಕ ದೇವರಾದ ಮಾರಿ, ದುರ್ಗೆ, ಕಾಳಿ, ಉಗ್ರನರಸಿಂಹ, ವೀರ ಭದ್ರ ಇವರೆಲ್ಲರ ಫೋಟೊ ಮನೆಯಲ್ಲಿಡಬಾರದು. ಕಾರಣ ಈ ದೇವರುಗಳ ಕೈಯಲ್ಲಿರುವ ಆಯುಧಗಳು ನೆಗೆಟಿವ್ ಎನರ್ಜಿ ಕಾರುತ್ತವೆ ಎಂದು ವೀಕ್ಷಕ ರನ್ನು ಜ್ಯೋತಿಷಿಗಳು ಹೆದರಿಸುತ್ತಾರೆ.
ಆಯಾಯ ಹಿಂದೂ ದೇವರಿಗೆ ವಾರದ ನಿಗದಿತ ದಿನ ಮಾತ್ರ ಪೂಜಿಸ ಬೇಕು, ಇಲ್ಲದಿದ್ದರೆ ಅನಾಚಾರವಾಗುತ್ತದೆ ಎಂದು ವೇದಗಳಲ್ಲಿ ಬರೆದಿದೆಯೆಂದು ಇವರು ಸುಳ್ಳು ಹೇಳುತ್ತಾರೆ. ಮೂಲತಹ ವೇದಗಳಲ್ಲಿ ಏಳು ದಿನಗಳ ವಾರದ ಉಲ್ಲೇಖವೇ ಇಲ್ಲ! ವೇದಗಳು ೬ ಸಾವಿರ ವರ್ಷ ಹಳೆಯವು. ಆದರೆ ಏಳು ಗ್ರಹ ಆಧಾರಿತ ಏಳು ದಿನಗಳ ‘ವಾರ’ ಕೇವಲ ಮೂರು ಸಾವಿರ ವರ್ಷ ಮಾತ್ರ ಹಳೆಯದು. ಇದೂ ಭಾರತೀಯ ಮೂಲದ್ದಲ್ಲ. ಅದು ಬೆಬಿಲೋನ್ (ಇರಾಕ್) ಮೂಲದ್ದು, ಇದು ಮುಂದೆ ಬೆಬಿಲೋನ್‌ನಿಂದ ಈಜಿಪ್ತ್, ಗ್ರೀಸ್, ರೋಮ್‌ಗೆ ಹರಡಿ ನಂತರ ಅರೇಬಿಯಾದ ವ್ಯಾಪಾರಿಗಳ ಮೂಲಕ ೫ನೇ ಶತಮಾನಕ್ಕೆ ಭಾರತ ಹರಡಿದರೂ, ಜನಸಾಮಾನ್ಯರಲ್ಲಿ ಅದು ಬಳಕೆಗೆ ಬರಲಿಲ್ಲ. ಹನ್ನೊಂ ದನೇ ಶತಮಾನದಲ್ಲಿ ಯವನರ ಆಡಳಿತ ಕಾಲದಲ್ಲಿ ಏಳು ದಿನಗಳ ವಾರ ಅಧಿ ಕೃತ ಚಲಾವಣೆಗೆ ಬಂದಿತು.
ಅದಕ್ಕೆ ಮುಂಚೆ ಭಾರತದಲ್ಲಿ ಇದ್ದ ದಿನಗಣನೆಯ ಪದ್ಧತಿಯೆಂದರೆ, ಚಂದ್ರಮಾನ ಆಧಾರಿತ ೧೫ ತಿಥಿಗಳ ಎರಡು ಪಕ್ಷ (ಶುಕ್ಲ, ಕೃಷ್ಣಪಕ್ಷ) ಹಾಗೂ ೯ ಗ್ರಹಗಳ ಅಧಿಪತ್ಯದ ೨೭ ನಕ್ಷತ್ರಗಳ ದಿನಗಣನೆ ಮಾತ್ರ. ಹಾಗಾಗಿ ಭಾರತದ ವೈದಿಕ ದೇವರೊಟ್ಟಿಗೆ ‘ಅವೈದಿಕ’ ವಾರದ ದಿನಗಳನ್ನು ಹೊಂದಿಸುವುದು ಅನೈತಿಕ ಹಾಗೂ ಸನಾತನ ಧರ್ಮಕ್ಕೆ ಅಪಚಾರ.
ಮಧ್ವಾಚಾರ್ಯ, ವಾದಿರಾಜರ ಕಾಲದಲ್ಲಿ ಧಾರ್ಮಿಕ ಉತ್ಪಾತದ ಸಂಧಿ ಯಲ್ಲಿ ಶಿವನಿಗೆ ಸೋಮವಾರ ನಿಗದಿತವಾಗಿದ್ದರೆ, ವೈಷ್ಣವರು ಕೃಷ್ಣನಿಗೂ, ವಿಷ್ಣುವಿಗೂ ಒಂದು ದಿನ ನಿಗದಿ ಮಾಡದೇ ಇರಲು ಸಾಧ್ಯವೇ ಇರಲಿಲ್ಲ. ಸಮಾಜದ ಪ್ರತಿಯೊಂದು ವಿಷಯದಲ್ಲೂ ವಿಮರ್ಶೆ, ವಿಶ್ಲೇಷಣೆ, ವಿಡಂಬನೆ ಮಾಡಿರುವ ‘ವಿಚಾರವಾದಿ’ ಸರ್ವಜ್ಞ ಕವಿಯೂ ಏಳು ದಿನಗಳ ವಾರದ ಬಗ್ಗೆ ಏನೂ ಹೇಳದಿರುವುದು, ಸರ್ವಜ್ಞನ ಕಾಲದಲ್ಲಿ ಈ ವಾರದ ಲೆಕ್ಕಾಚಾರ ಇರಲಿಲ್ಲವೆಂಬುದಕ್ಕೆ ಸಾಕ್ಷಿ. ಪುರಂದರದಾಸ ವಿರಚಿತ ಭಾಗ್ಯದ ಲಕ್ಷ್ಮೀ ಬಾರಮ್ಮಾ ಹಾಡಿನಲ್ಲಿ ಶುಕ್ರವಾರದ ಪೂಜೆಯ ಉಲ್ಲೇಖವಿದ್ದರೂ, ಅದು ಮೂಲತಹ ಪುರಂದರದಾಸರದ್ದೇ ಅಥವಾ ನಂತರ ಸೇರಿಸಿದ್ದೇ ಎಂಬುದು ಹಲವರ ಜಿಜ್ಞಾಸೆ.
Tagged with
chavadi
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೨೧ ವರ್ಷ ವಯಸ್ಸು. ಇಂಜಿನಿಯರಿಂಗ್ ಎರ ಡನೇ ಸೆಮಿಸ್ಟರ್‌ನಲ್ಲಿ ಕಲಿಯುತ್ತಿದ್ದೇನೆ. ನಾನು ಮೂಲತ: ಹುಬ್ಬಳ್ಳಿ ಯವನು. ನನ್ನನ್ನು ಮೊದಲ ಸೆಮಿಸ್ಟರ್ ಸೇರುವಾಗ ಇಲ್ಲಿನ ಕಾಲೇಜ್ ಹಾಸ್ಟೆಲ್‌ನಲ್ಲೇ ಉಳಿಸಿದ್ದಾರೆ. ನನ್ನ ರೂಮಿನಲ್ಲಿ ಒಟ್ಟು ನಾಲ್ಕು ಮಂದಿ ಇದ್ದಾರೆ. ಇಬ್ಬರು ಇಲ್ಲಿಯವರೇ ಆದರೆ ಒಬ್ಬಾತ ಉತ್ತರ ಭಾರತದವನು. ಆತ ಮೊದಲ ವರ್ಷ ನನ್ನ ರೂಮಿನಲ್ಲಿ ಇರಲಿಲ್ಲ, ಬೇರೆ ರೂಮಿನಲ್ಲಿದ್ದ. ನನ್ನ ಜತೆ ಆಗಾಗ ಮಾತಾಡಲು ಬರುತ್ತಿದ್ದ. ಆದರೆ ಈ ವರ್ಷ ನನ್ನ ರೂಮಿನಲ್ಲೇ ಇದ್ದಾನೆ. ಆತ ಪ್ರಾರಂಭ ದಲ್ಲೇ ನನ್ನ ಜೊತೆ ಹೆಚ್ಚಿನ ಸಲುಗೆಯಿಂದ ನಡೆದು ಕೊಳ್ಳುತ್ತಿದ್ದ. ನಾನು ಆತನ ಜತೆ ಕ್ಲೋಸ್ ಫ್ರೆಂಡ್ ಆಗಿದ್ದೆ. ನಾವು ಸಂಜೆ ಹೊರಗೆ ತಿರುಗಾಡಲು ಒಟ್ಟಿಗೇ ಹೋಗುತ್ತಿದ್ದೆವು. ಆತ ನನ್ನ ಜತೆ ಮಾತಾಡುತ್ತಾ ತೊಡೆಗೆ ಚಿವುಟುವುದು, ನನ್ನ ಚಡ್ಡಿಯ ಮೇಲೆ ಕೈ ತಾಗಿಸಿ ಜನನಾಂಗ ಹಿಚುಕುವುದು ಮಾಡುತ್ತಿದ್ದ. ನಾನು ನನ್ನ ಗೆಳೆಯನಲ್ಲವೇ ಎಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ರಾತ್ರಿ ನಾನು ಒಬ್ಬನೇ ರೂಮಿನಲ್ಲಿ ಇರುವಾಗ ನನ್ನ ಜೊತೆ ಮಾತಾ ಡುತ್ತ ನನಗೆ ಕಿಸ್ ಕೊಡುತ್ತಿದ್ದ. ನಾನು ಫ್ರೆಂಡ್ ಎಂದು ಆತನಿಗೆ ಏನೂ ಹೇಳುತ್ತಿರಲಿಲ್ಲ. ರಾತ್ರಿ ನಮ್ಮಿಬ್ಬರದ್ದೂ ಒಂದೇ ಬೆಡ್. ಆತ ರಾತ್ರಿಯ ವೇಳೆ ನನ್ನನ್ನು ತಬ್ಬಿಕೊಂಡು ಜನನಾಂಗಕ್ಕೆ ಕೈ ಹಾಕು ತ್ತಿದ್ದ. ನನಗೆ ಇದರಿಂದ ಖುಷಿ ಸಿಗುತ್ತಿತ್ತು. ಆತನ ಜತೆ ಗೊತ್ತಿಲ್ಲದೆ ಸಲಿಂಗಕಾಮ ನಡೆಸುತ್ತಿದ್ದೆ. ನಾವು ಪರಸ್ಪರ ಜನನಾಂಗ ಚೀಪುತ್ತಾ ಖುಷಿ ಪಡುತ್ತಿದ್ದೆವು. ಆದರೆ ಅವನು ಪ್ರತೀ ರಾತ್ರಿ ಅದಕ್ಕಾಗಿ ಹಠ ಮಾಡುತ್ತಾನೆ. ನನಗೆ ಇದರಿಂದ ಖುಷಿಯಾದರೂ ಭಯ ಪ್ರಾರಂಭ ವಾಗಿದೆ. ಪೇಪರ್, ಪುಸ್ತಕಗಳಲ್ಲಿ ಓದಿ ಇದು ತಪ್ಪೆಂದು ಅನಿಸುತ್ತಿದೆ. ನನಗೆ ಆತ ನಿಂದ ಖಾಯಿಲೆ ಬಂದಿರಬಹುದು ಎಂದು ಭಯವೂ ಆಗುತ್ತದೆ. ನನಗೆ ಅರಿವಿ ಲ್ಲದೆ ಈ ಚಟಕ್ಕೆ ಬಿದ್ದಿದ್ದೇನೆ. ಕಾಲೇಜ್ ಕಲಿಯುವ ಹಾಸ್ಟೆಲ್‌ನಲ್ಲಿ ಇರುವ ಹೆಚ್ಚಿನ ಹುಡುಗ-ಹುಡುಗಿಯರಲ್ಲಿ ಇದು ಕಾಮನ್ ಎಂದು ಆತ ಹೇಳುತ್ತಾನೆ. ಇದನ್ನು ಬಿಡಬೇಕೆಂದರೂ ಸಾಧ್ಯವಾಗುತ್ತಿಲ್ಲ, ನಾನೇನು ಮಾಡಲಿ? ಸರ್, ನನ್ನ ಜೀವನ ಹಾಳಾಗುತ್ತಿದೆ, ಕಲಿಕೆಯ ಕಡೆಗೆ ಗಮನ ಕೊಡಲಾಗುತ್ತಿಲ್ಲ. ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನಿಮ್ಮ ಸಮಸ್ಯೆ ಗಂಭೀರವಾದುದು. ಮನೆಮಂದಿಯಿಂದ ದೂರ ವಿದ್ದು, ಅವರ ಪ್ರೀತಿ, ವಾತ್ಸಲ್ಯದಿಂದ ವಂಚಿತರಾಗಿ ಹಾಸ್ಟೆಲ್‌ನಲ್ಲಿ ಕಲಿಯುವ ಕೆಲವು ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಸಲಿಂಗ ಕಾಮದ ಚಟ ಬೆಳೆದಿರು ತ್ತದೆ. ಇಲ್ಲಿ ಎಲ್ಲ ಹುಡುಗ-ಹುಡುಗಿಯರೂ ಸಲಿಂಗಕಾಮಕ್ಕೆ ಬಲಿ ಯಾಗುತ್ತಾರೆ ಎನ್ನಲಾಗದು. ಆದರೆ ಕೆಲವು ಮಕ್ಕಳು ಬೆಳೆಯುತ್ತಾ ಹೋದಂತೆ ಹಾಸ್ಟೆಲ್‌ನಲ್ಲಿರುವ ತಮ್ಮದೇ ವಯಸ್ಸಿನ ಸಲಿಂಗಿಗಳ ಜತೆ ಸ್ನೇಹ ಬೆಳೆಸುತ್ತಾರೆ. ಗಂಡು-ಗಂಡು, ಹೆಣ್ಣು-ಹೆಣ್ಣು ಸ್ನೇಹ ಬೆಳೆಸುವುದನ್ನು ಈಗಿನ ಸಮಾಜ ಕಟ್ಟುನಿಟ್ಟಾಗಿ ವಿರೋಧಿಸುವುದೂ ಇಲ್ಲ. ಆದರೆ ಹಾಸ್ಟೆಲ್‌ನಲ್ಲಿ ಜತೆಯಲ್ಲಿರುವಾಗ ಬೆಳೆದ ಸ್ನೇಹ ನಂತರ ಏಕಲಿಂಗಿ ಅಥವಾ ಸಲಿಂಗಿಗಳ ಪ್ರೀತಿಯಾಗಿ ಬದಲಾವಣೆಯಾಗು ತ್ತದೆ. ಆದರೆ ಈ ಚಟಕ್ಕೆ ಒಮ್ಮೆ ಬಲಿಯಾದರೆ ಮತ್ತೆ ಹೊರಬರು ವುದು ತುಂಬಾ ಕಷ್ಟ. ಇನ್ನೂ ಕೆಲವರು ಸಮಯ ಕಳೆದಂತೆ ಈ ಚಟ ದಿಂದ ಬಿಡುಗಡೆ ಪಡೆಯುತ್ತಾರೆ. ಈ ಚಟಕ್ಕೆ ಬಲಿ ಬಿದ್ದವರು ಏಡ್ಸ್‌ನಂ ತಹ ಗಂಭೀರ ಖಾಯಿಲೆಗೆ ಬಲಿಯಾಗುವ ಸಾಧ್ಯತೆಯೂ ಇದೆ. ಸಲಿಂಗಕಾಮ, ಗುದ ಸಂಭೋಗದಿಂದ ಏಡ್ಸ್ ಹರಡುವ ಸಾಧ್ಯತೆ ಹೆಚ್ಚು. ನೀವು ಆದಷ್ಟು ಬೇಗ ಆತನ ಸಂಗವನ್ನು ಬಿಟ್ಟುಬಿಡಿ.
ನಿಮಗೆ ಹಾಸ್ಟೆಲ್ ಬೇರೆ ಸಿಗುತ್ತದೆ, ಅಲ್ಲಿಯೇ ಇದ್ದರೆ ನಿಮ್ಮ ಆರೋಗ್ಯಕ್ಕೆ ಅಪಾಯವೂ ಇದೆ. ಸರಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ, ಹೆಚ್‌ಐವಿ ಪರೀಕ್ಷೆ ಮಾಡಿಸುವುದೂ ಅಗತ್ಯ. ಭಯಪಡಬೇಕಾದ ಅಗತ್ಯವಿಲ್ಲ. ಸಲಿಂಗಕಾಮಕ್ಕೆ ಒಳಗಾದವನು ಎಂಬ ಪಾಪ ಪ್ರಜ್ಞೆ ಬೇಡ. ನಡೆದಿರುವುದನ್ನು ಮರೆತು ಹೊಸ ಜೀವನ ನಡೆಸಿ. ದೇವರ ಧ್ಯಾನ, ಉತ್ತಮ ಸಾಹಿತ್ಯ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆತ ನಿಗೆ ಇನ್ನೂ ಮುಂದುವರಿಯಲು ಅವಕಾಶ ಮಾಡಿಕೊಟ್ಟರೆ ನೀವು ಆತನ ಗುಲಾಮರಾಗುತ್ತೀರಿ. ಆತ ನಿಮ್ಮನ್ನು ಬೇಕಾದಂತೆ ಬಳಸಿಕೊ ಳ್ಳುವ ಸಾಧ್ಯತೆಯಿದೆ. ಆದ್ದರಿಂದ ಈಗಲೇ ಈ ಬಗ್ಗೆ ಕಠಿಣ ನಿರ್ಧಾರ ತಳೆದು, ಓದಿನತ್ತ ಗಮನಹರಿಸಿ.
Tagged with
gupta
ಮೇಷ : ದೂರ ಪ್ರಯಾಣ ಮಾಡುವುದು ಒಳ್ಳೆಯದಲ್ಲ.
ವೃಷಭ : ಶತ್ರುಗಳಿಂದ ತೊಂದರೆ ಇರುತ್ತದೆ.
ಮಿಥುನ : ಕೆಲಸ ಕಾರ್ಯಗಳನ್ನು ಧೈರ್ಯದಿಂದ ಮಾಡಿರಿ.
ಕರ್ಕಾಟಕ : ವೃತ್ತಿಯಲ್ಲಿ ಅಭಿವೃದ್ಧಿಯನ್ನು ಕಾಣುವಿರಿ.
ಸಿಂಹ : ಪುಣ್ಯ ಸ್ಥಳಗಳಿಗೆ ಭೇಟಿ ಡುತ್ತೀರಿ.
ಕನ್ಯಾ : ಪ್ರಯತ್ನಿಸಿದ ಕೆಲಸಗಳಿಗೆ ಜಯ ದೊರೆಯಲಿದೆ.
ತುಲಾ : ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ.
ವೃಶ್ಚಿಕ : ಸ್ತ್ರೀಯರಿಂದ ತೊಂದರೆಯನ್ನು ಅನುಭವಿಸುವಿರಿ.
ಧನು : ಕೆಲಸ ಕಾರ್ಯಗಳಲ್ಲಿ ಜಯವಾಗಲಿದೆ.
ಮಕರ : ಬಂಧು ಬಳಗದವರಿಂದ ಪ್ರಶಂಸೆ ಸಿಗಲಿದೆ.
ಕುಂಭ: ಕೆಲಸ ಕಾರ್ಯಗಳು ಬಯಸಿದಂತೆ ನಡೆಯುವುದು.
ಮೀನ : ದೇವತಾ ಕಾರ್ಯಗಳಿಗೆ ತಡೆ ಇರುತ್ತದೆ.
Tagged with
bhavishya
ಮಂಗಳೂರು:ಸಾಫ್ಟ್‌ಡ್ರಿಂಕ್ಸ್ ಅಪರೇಟರ್ ಬೇಕು ೯೯೬೪೪೫೫೯೮೮.
ಮಂಗಳೂರು: ಬಟ್ಟೆ ಅಂಗಡಿಗೆ ಜನ ಬೇಕು ೮೨೭೭೪೦೫೩೬೩.
ಕಾಸರಗೋಡು: ಹೌಸ್‌ಕೀಪಿಂಗ್, ಸೂಪರ್ ವೈಸರ್ ಬೇಕು ೯೯೧೬೧೧೯೪೬೯
ಪಿವಿಎಸ್: ಕಂಪೆನಿಗೆ ಕ್ಲರ್ಕ್ ಬೇಕು ೯೭೪೩೩೯೦೭೯೭
ಮೂಲ್ಕಿ: ಪ್ರಿಂಟರ್ ಬೇಕು ೮೭೪೮೮೭೦೬೯೧.
ಕಾವೂರು: ಲೇಡೀಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು: ಕಚೇರಿ ಕೆಲಸಕ್ಕೆ ಹುಡುಗರು ಬಏಕು ೯೪೪೮೮೪೩೪೯೯.
ಬಂದರ್: ಕೆಲಸಕ್ಕೆ ಜನ ಬಏಕು ೯೪೪೮೩೦೭೬೭೯೯.
ಅಳಕೆ: ಪ್ರಿಂಟಿಂಗ್ ಪ್ರೆಸ್‌ಗೆ ಬೈಂಡಿಂಗ್ ತಿಳಿದಿರುವವ ಯುವತಿಯರು ಬೇಕು ೯೮೮೬೬೯೨೨೧೫.
ಮಂಗಳೂರು: ಪವರ್ ಸರ್ವಿಸ್ ಸಂಸ್ಥೆಗೆ ಡೀಸೆಲ ಮೆಕ್ಯಾನಿಕ್ ಬೇಕು. ೯೮೪೫೨೫೩೫೮೨
ಕಾರ್ಕಳ : ಬಾರ್ & ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೇಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ್ ಬೇಕು ೯೪೪೮೧೦೯೬೮೬.
ಕೊಣಾಜೆ : ಸ್ಟುಡಿಯೋಗೆ ಕೆಲಸಕ್ಕೆ ಜನ ಬೇಕು ೮೭೨೨೭೨೧೦೫೦.
ಉಡುಪಿ : ಸಸ್ಯಾಹಾರಿ ಹೊಟೇಲಿಗೆ ತಿಂಡಿ ಮಾಡುವವರು, ಸಪ್ಲಾಯರ್ ೯೬೬೩೦೯೮೦೨೫.
ಕಾವೂರು : ಕಾರ್ ಡ್ರೈವರ್ ಬೇಕು ೭೨೦೪೬೪೩೪೫೫.
ಮಂಗಳೂರು : ಸೇಲ್ಸ್ ಗರ್ಲ್ಸ್ ಬೇಕು ೮೨೭೭೧೬೫೬೬೨.
ಮಂಗಳೂರು : ಕಾರ್ ಡ್ರೈವರ್‌ಬೇಕು ೦೮೨೪-೪೨೬೮೫೨೪.
ಮಂಗಳೂರು : ಕಂಪ್ಯೂಟರ್ ತರಗತಿ, ಟ್ಯೂಷನ್ ಮತ್ತು ಸಂಸ್ಥೆಯ ಮೇಲ್ವಿಚಾರಣೆ ಗೆ ಜನ ಬೇಕು ೭೨೦೪೬೪೩೪೫೫.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಮ್ಯಾನ್ ಬೇಕು ೯೮೪೪೪೬೪೩೭೭.
ಮೋರ್ಗನ್‌ಗೇಟ್ : ಟ್ಯೂಷನ್ - ಕಂಪ್ಯೂಟರ್ ತರಗತಿ ನೀಡಲು ಪುರುಷರು, ಮಹಿಳೆಯರು ಬೇಕು ೯೯೭೨೭೨೫೩೫೭.
ಕೊಡಿಯಾಲ್‌ಬೈಲ್ : ಟ್ರಾವೆಲ್ ಏಜೆನ್ಸಿಗೆ ಲೇಡೀಸ್ ಸ್ಟಾಫ್ ಬೇಕು ೨೪೯೭೮೬೨.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೈಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಟೈಲರ್ & ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.
ಕಾವೂರು : ಲೇಡಿಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು : ಲೇಡಿಸ್ ಹಾಸ್ಟೆಲ್‌ಗೆ ಮಹಿಳಾ ಅಡುಗೆಯವರು ಬೇಕು ೯೨೪೧೨೧೪೧೨೨.
ಮಂಗಳೂರು : ಮನೆ ಬಾಡಿಗೆಗೆ ಇದೆ ೯೮೮೬೩೩೦೨೭೧.
ಸುರತ್ಕಲ್ : ಬಟ್ಟೆ ಅಂಗಡಿ ಕೆಲಸಕ್ಕೆ ಆಸುಪಾಸಿನ ಜನ ಬೇಕು ೮೪೯೪೮೫೮೫೪೪.
Tagged with
udyoga
ಪ್ರಜಾ, ಮಂಗಳೂರು
ಭಾರತದಲ್ಲಿ ಕೌಟುಂಬಿಕ ದೌರ್ಜನ್ಯವು ಬರಿಯ ಕಣ್ಣಿಗೆ ಕಾಣದ ಸಮಸ್ಯೆಯಾಗಿದೆ. ಯಾಕೆಂದರೆ ಮನೆ ಎಂಬುವು ದನ್ನು ಪುರುಷರು ನಿಯಂತ್ರಿಸುವ ಖಾಸಗಿ ಕ್ಷೇತ್ರವಾಗಿ ಪರಿಗ ಣಿಸಲಾಗಿದೆ. ಮಹಿಳೆ ಒಂದು ವೇಳೆ ಮನೆಯಲ್ಲಾಗುವ ಹಿಂಸೆ ಯನ್ನು ಇತರರಿಗೆ ತಿಳಿಸಿದರೆ ಕುಟುಂಬ ಆಕೆಯನ್ನು ದ್ರೋಹಿ ಯಂತೆ ನೋಡುತ್ತದೆ. ಇದು ಮತ್ತು ಇದರ ಜೊತೆಗೆ ಅನೇಕ ಅಂಶಗಳ ಪರಿಣಾಮವಾಗಿ ಕೌಟುಂಬಿಕ ದೌರ್ಜನ್ಯ ಸರಿಯಾಗಿ ವರದಿಯಾಗುವುದಿಲ್ಲ. ೧೯೯೯ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ೧೦ರಲ್ಲಿ ನಾಲ್ಕು ಮಂದಿ ಮಹಿಳೆಯರು ತಮ್ಮ ಮನೆಯಲ್ಲೇ ದೌರ್ಜನ್ಯಕ್ಕೀಡಾಗುತ್ತಾರೆ ಎನ್ನುವುದನ್ನು ನೀವು ನಂಬಬಹುದೇ? ಅದರಲ್ಲೂ ಶೇಕಡಾ ೪೫ರಷ್ಟು ಮಹಿಳೆಯರು ಕಡಿಮೆ ಪಕ್ಷ ಒಮ್ಮೆಯಾದರೂ ದೈಹಿಕ ಅಥವಾ ಮಾನಸಿಕ ಹಿಂಸೆಯನ್ನು ಅವರ ಬದುಕಿನ ಅವಧಿಯಲ್ಲಿ ಅನುಭವಿಸಿದ್ದಾರೆ.
ಜನಾಂಗ, ಧರ್ಮ, ವರ್ಗ, ಲೈಂಗಿಕತೆ ಅಥವಾ ಜೀವನ ಕ್ರಮದವರು ಎಂಬುದನ್ನು ಲೆಕ್ಕಿಸದೆ ಕೌಟುಂಬಿಕ ದೌರ್ಜನ್ಯ ವನ್ನು ಅನುಭವಿಸುವುದು ಸಾಧ್ಯ. ಹಿಂಸೆಗೊಳಪಡುವವರು ಹಿಂಸೆ ಮಾಡುವವರಿಗೆ ಮದುವೆ ಮೂಲಕ, ರಕ್ತ ಸಂಬಂಧದ ಮೂಲಕ ಅಥವಾ ಜೊತೆಗೆ ವಾಸಿಸುವ ಮೂಲಕ ಸಂಬಂಧಿ ಗಳಾಗಿರುತ್ತಾರೆ. ದೌರ್ಜನ್ಯ ಮಾಡುವವರು ಯಾವುದೇ ಹಿನ್ನೆ ಲೆಯ ಯಾರೂ ಆಗಿರಬಹುದು. ಅವರು ಪುರುಷ ಅಥವಾ ಮಹಿಳೆಯಾಗಿರಬಹುದು. ಆದರೆ ಪ್ರಸ್ತುತ ಪರಿಸ್ಥಿತಿಯ ಪ್ರಕಾರ ಬಹುಪಾಲು ಪುರುಷರೇ ಅಪರಾಧವೆಸಗುತ್ತಿರುವವರು. ಇದಕ್ಕೆ ಹಿಂಸೆ ನೀಡುವವರೇ ಜವಾಬ್ದಾರರಾಗಿರುತ್ತಾರೆ. ಅಲ್ಲದೆ ಇದಕ್ಕೆ ಯಾವುದೇ ಕ್ಷಮೆ ಇಲ್ಲ. ಜನರ ನಂಬಿಕೆಯಂತೆ ಕೌಟುಂಬಿಕ ದೌರ್ಜನ್ಯಕ್ಕೆ ಮಾನಸಿಕ ಒತ್ತಡ, ಮಾನಸಿಕ ಅಸ್ಥಿರತೆ, ಕುಡಿತ ಅಥವಾ ಮಾದಕದ್ರವ್ಯ ವ್ಯಸನಿಯಾಗಿರುವುದು ಕಾರಣವಾಗಿ ರುವುದಿಲ್ಲ. ಹಿಂಸೆ ಮಾಡುವುದಕ್ಕೆ ಹಿಂಸಾಪ್ರವೃತ್ತಿಯನ್ನು ಆಯ್ದು ಕೊಳ್ಳುವುದೊಂದೇ ನಿಜವಾದ ಕಾರಣ. ಖಂಡಿತವಾಗಿಯೂ ಹಿಂಸೆ ಮಾಡುವವರ ವರ್ತನೆಗೆ ಹಿಂಸೆ ಅನುಭವಿಸುವವರು ಜವಾಬ್ದಾರರಲ್ಲ. ಅನೇಕ ಸಂದರ್ಭಗಳಲ್ಲಿ ಸಂಗಾತಿಯನ್ನು ಆರೋಪಿಸುವುದರ ಮೂಲಕ ಹಿಂಸೆ ನೀಡುವವರು ಹಿಂಸೆಯ ವರ್ತನೆಯನ್ನು ಸಮರ್ಥಿಸುತ್ತಾರೆ. ಇದು ಹಿಂಸೆಯ ವರ್ತ ನೆಯ ಭಾಗವಾಗಿದೆ ಮತ್ತು ಸ್ವಯಂ ಹೀನಾಯವಾಗಿದೆ. ಮಹಿಳೆಯರು ಅನೇಕ ಸಂದರ್ಭಗಳಲ್ಲಿ ದೌರ್ಜನ್ಯಕ್ಕೆ ತಾವೇ ಜವಾಬ್ದಾರರು ಎಂದು ಭಾವಿಸಿಕೊಳ್ಳುತ್ತಾರೆ. ಹಿಂಸೆ ನಡೆಯಲು ತಾನು ಕಾರಣಳಲ್ಲ ಎಂದು ಅವರಿಗೆ ತಿಳಿಯುವುದು ಬಹಳ ಮುಖ್ಯವಾಗಿದೆ.
ಮಹಿಳೆಯರು ಎದುರಿಸಬೇಕಾದ ಆರ್ಥಿಕ ಮತ್ತು ಸಾಮಾ ಜಿಕ ಸತ್ಯಗಳನ್ನು ಇದು ಅಲ್ಲಗೆಳೆಯುತ್ತದೆ. ಆರ್ಥಿಕ ಬಿಕ್ಕಟ್ಟು, ಸಾಮಾಜಿಕ ಅಭದ್ರತೆಗಳನ್ನು ಅನೇಕ ಮಹಿಳೆಯರು ಎದುರಿಸ ಬೇಕಾಗುತ್ತದೆ. ಆಶ್ರಯ ಎಂಬುದು ಇರುವುದೇ ಇಲ್ಲ. ಇನ್ನು ಕುಟುಂಬ ಗೆಳೆತಿಯರು ಮತ್ತು ಕೆಲಸದ ಸ್ಥಳದಿಂದ. ಹೀಗೆ ಯಾವುದೇ ಬೆಂಬಲ ಇರುವುದಿಲ್ಲ. ಬದಲಾಗಿ ಮದುವೆ ಮುರಿದು ಸಾಮಾಜಿಕ ಕಳಂಕ ಎದುರಿಸಬೇಕಾಗು ತ್ತದೆ. ಕಾಪಾಡಿ ಕೊಂಡು ಬಂದ ಕೌಟುಂಬಿಕ ಸಂಪ್ರದಾಯದ ಕಟ್ಟುಪಾಡುಗಳನ್ನು ಮುನ್ನ ಡೆಸಲು, ದೈನಂದಿನ ಜೀವನಕ್ಕೆ ಅವಶ್ಯವಾದ ಆರ್ಥಿಕ ಮುಗ್ಗಟ್ಟುಗಳನ್ನು ಎದುರಿಸಲು ಸ್ವತಹ ತನಗೆ ಮತ್ತು ತನ್ನ ಮಕ್ಕಳಿಗೆ ಸಹಕ ರಿಸಲು ತಮ್ಮಿಂದ ಅಸಾಧ್ಯ ಎಂದು ಮಹಿಳೆ ಯರೇ ಭಾವಿಸ ಬಹುದು. ಎಲ್ಲಕ್ಕಿಂ ತಲೂ ಮಿಗಿ ಲಾಗಿ ಕೆಲವೊಮ್ಮೆ ಮಹಿಳೆ ದೈಹಿಕ ಅಪಾಯ ಎದುರಿಸುವ ಸಂದರ್ಭ ಗಳೂ ಇರಬಹುದು. ಒಂದು ವೇಳೆ ಕ್ರೂರಿ ಸಂಗಾತಿಯನ್ನು ತೊರೆಯು ವುದರಿಂದ ಸಾವು ಕೂಡಾ ಸಂಭವಿಸಬಹುದು. ಕೆಲ ವೊಮ್ಮೆ ಮಹಿಳೆಯರು ತಮ್ಮ ಗಂಡನನ್ನು ಪ್ರೀತಿಸುತ್ತಿದ್ದು, ಅವನು ಒಳ್ಳೆಯ ರೀತಿಯಲ್ಲಿ ಬದಲಾಗಬಹುದೆಂಬ ಭಾವನೆ ಹೊಂದಿರ ಬಹುದು.
ಕೌಟುಂಬಿಕ ದೌರ್ಜನ್ಯದ ಪರಿಣಾಮ ಅಥವಾ ಹಿಂಸೆಯ ಅನುಭವ ತುಂಬಾ ಸಮಯ ಉಳಿಯುವಂತಹದ್ದು. ಸಂಗಾತಿ ಅಥವಾ ಬಹಳ ಹತ್ತಿರದ ಸಂಬಂಧಿಕರಿಂದ ಪದೇ ಪದೇ ಹಿಂಸೆ ಪಡೆವ ವ್ಯಕ್ತಿಯು ಅನೇಕ ತೊಂದರೆಗಳಿಂದ ಬಳಲುತ್ತಿರುತ್ತಾರೆ, ಮಾನಸಿಕವಾಗಿ ಕುಗ್ಗಿರುತ್ತಾರೆ. ತಕ್ಷಣ ಕೋಪ ಮತ್ತು ಆತಂಕ ದಿಂದಿರುತ್ತಾರೆ, ಸ್ವಯಂ ಘನತೆ ಕಡಿಮೆ ಇರುತ್ತದೆ, ಬೇರೆಯ ವರ ಮೇಲೆ ನಂಬಿಕೆಯ ಕೊರತೆ ಮತ್ತು ಸಂಬಂಧ ದುರ್ಬಲ ವಾಗಿರುತ್ತವೆ. ತಿರಸ್ಕಾರ ತುಂಬಾ ನೋವು ನೀಡುತ್ತದೆ ಮತ್ತು ಒಂಟಿತನದ ಭಾವನೆ ತುಂಬಿರುತ್ತದೆ. ಸುದೀರ್ಘ ಆರೋಗ್ಯದ ಸಮಸ್ಯೆಗಳು, ಅಮಲು ಪದಾರ್ಥ ಸೇವನೆ, ನಿದ್ರೆ ತೊಂದರೆಗಳು ಮತ್ತು ಕೆಲಸ ನಿರ್ವಹಿಸಲು ಸಾಧ್ಯವಾಗದೇ ಹೋಗುತ್ತದೆ.
ಕೌಟುಂಬಿಕ ದೌರ್ಜನ್ಯಗಳನ್ನು ತಡೆಗಟ್ಟಲು ಕೆಲವೊಂದು ಮಾರ್ಗೋಪಾಯಗಳನ್ನು ಕಂಡುಹಿಡಿಯಬಹುದು. ನಾವು ಏಕಾಂಗಿಯಾಗಿ ಕೊರಗಬೇಕಾಗಿಲ್ಲ. ನಿಮ್ಮ ಸ್ಥಿತಿಗತಿಯ ಬಗ್ಗೆ ಆತ್ಮೀಯರಿಗೆ ತಿಳಿಸಿ ಅವರಿಗೆ ಸಲಹೆಗಳನ್ನು ಪಡೆದುಕೊಂಡು ಸಂಭವಿಸಬಹುದಾದ ದೌರ್ಜನ್ಯಕ್ಕೆ ಪ್ರತಿಕ್ರಿಯಿಸಲು ಸಿದ್ಧರಾಗಿರು ವಂತೆ ಮಾಡಿದಂತಾಗುತ್ತದೆ. ಮನೆಯಿಂದ ಅಥವಾ ಕೆಲಸದ ಸ್ಥಳಗಳಿಂದ ಹೊರಹೋಗಲು ತುರ್ತು ನಿರ್ಗಮನ ಮಾರ್ಗಗ ಳನ್ನು ರೂಪಿಸಿಕೊಳ್ಳಿ. ಜೊತೆಗೆ ತುರ್ತು ಸಂದರ್ಭಗಳು ಎದು ರಾದಾಗ ನೆರವು ನೀಡಬಲ್ಲ ಸುರಕ್ಷತೆಯ ಸ್ಥಳಗಳನ್ನು ಗುರುತು ಮಾಡಿಟ್ಟುಕೊಳ್ಳಿ. ನಿಮ್ಮ ಮತ್ತು ನಿಮ್ಮ ಮಕ್ಕಳ ರಕ್ಷಣೆಗಾಗಿ ಪೊಲೀ ಸರಿಗೆ, ಆರೋಗ್ಯ ಕಾರ್ಯಕರ್ತರಿಗೆ ತಿಳಿಸಿ ಮತ್ತು ಆಪ್ತ ಸಮಾ ಲೋಚಕರೊಂದಿಗೆ ಮಾತುಕತೆ ನಡೆಸಿ, ಕಾನೂನು ರೀತಿಯ ಸಹಕಾರಗಳನ್ನು ಪಡೆದುಕೊಳ್ಳಿ.
ಕೌಟುಂಬಿಕ ದೌರ್ಜನ್ಯ ಅನುಭವಿಸುತ್ತಿರು ವರ ಸಂದರ್ಭವನ್ನು ನಿಭಾಯಿಸುವುದು ಹೇಳು ವಷ್ಟು ಸುಲಭವೇನು ಅಲ್ಲ. ಹಿಂಸೆ ಅನುಭವಿಸುತ್ತಿ ರುವವರೊಂದಿಗೆ ಸಂಪರ್ಕವಿರಿಸಿಕೊಳ್ಳುವುದು, ಹಿಂಸೆಗೆ ವಿರುದ್ಧವಾಗಿ ಮಾತುಕತೆ ನಡೆಸುವುದು ಕೂಡಾ ಕೆಲವೊಮ್ಮೆ ಹಿಂಸೆ ಅನುಭವಿಸುವವ ರಿಗೆ ಸಂದರ್ಭೋಚಿತ ನಿರ್ಧಾರ ತೆಗೆದುಕೊಳ್ಳಲು ಬಹಳ ಸಹಕಾರಿಯಾಗುತ್ತದೆ.
ಕೌಟುಂಬಿಕ ದೌರ್ಜನ್ಯವನ್ನು ತಡೆಯಲು ಸಮುದಾಯ ಮತ್ತು ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾದುದು. ಯಾರೇ ಆಗಲಿ ಕೌಟುಂ ಬಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ತಿಳಿದ ತಕ್ಷಣ ಹಿಂಸೆಯ ವಿರುದ್ಧ ಹೋರಾಟ ನಡೆಸ ಬೇಕು. ಅಹಿಂಸೆಯ ಕಡೆಗೆ ಒಲವು ಹೆಚ್ಚಿಸಲು ಹೆಚ್ಚಿನ ಶಿಕ್ಷಣ ಮತ್ತು ಜಾಗೃತಿ ಪ್ರಕ್ರಿಯೆ ಹಮ್ಮಿಕೊಳ್ಳಿ. ಪ್ರತಿಯೊಬ್ಬ ವ್ಯಕ್ತಿಯ ಕುಟುಂಬದ ಹಿಂಸೆಯ ಬಗ್ಗೆ ಮಾತಾಡಲು ಉತ್ತೇಜಿಸಿ. ಪರಸ್ಪರ ಗೌರವ ಬೆಳೆಸಿ ಮತ್ತು ಹಕ್ಕುಗಳ ಪರವಾದ ನಿಲುವು ಬಲಪ ಡಿಸಿ, ಹಿಂಸೆಗೊಳಪಟ್ಟ ಮಹಿಳೆಯನ್ನು ರಕ್ಷಿಸುವ ಮತ್ತು ಅವ ಳಿಗೆ ಸ್ಥಳೀಯವಾಗಿಯೇ ಸಹಕರಿಸುವಂತೆ ಕೌಟುಂಬಿಕ ದೌರ್ಜನ್ಯ ದಿಂದ ಮಹಿಳೆಯರ ರಕ್ಷಣಾ ಕಾಯ್ದೆ ೨೦೦೫ ಅನ್ನು ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಅನುಷ್ಠಾನಗೊಳ್ಳುವಂತೆ ಪ್ರತಿಪಾ ದಿಸಿ. ಕಾನೂನು ಸೇವಾ ನೌಕರರಿಗೆ ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತರಿಗೆ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆ ೨೦೦೫ರ ತರಬೇತಿ ನೀಡುವುದನ್ನು ಕಡ್ಡಾಯ ಪಡಿಸಿ. ಆಶ್ರಯ ನೀಡುವ ವ್ಯವಸ್ಥೆಗೆ ಬೆಂಬಲಿಸಿ, ಸ್ವಯಂ ಸೇವ ಕರನ್ನು ಸಹಾಯವಾಣಿ ಹುದ್ದೆಗೆ ನೇಮಕ ಮಾಡಿ ಸೂಕ್ತ ತರ ಬೇತಿ ನೀಡುವಂತೆ ನೋಡಿಕೊಳ್ಳಿ. ನ್ಯಾಯಾಲಯದ ಮೊರೆ ಹೋಗಲು ಹಿಂಸೆ ಅನುಭವಿಸಿದವರನ್ನು ಜೊತೆ ಸೇರಿಸಿಕೊಳ್ಳಿ. ಆಶ್ರಯ ನೀಡುವ ವ್ಯವಸ್ಥೆಗಳಿಗೆ ಮತ್ತು ನೊಂದವರಿಗೆ ನೀಡುವ ಸೇವೆಗಳಿಗೆ ಆಡಳಿತಾತ್ಮಕ ನೆರವು ನೀಡಲು ಸಹಕರಿಸಿ, ವೈದ್ಯರು ಮತ್ತು ಆರೋಗ್ಯ ಸೇವಾ ಸಂಸ್ಥೆಗಳನ್ನು ಗುರುತಿಸಿ ಜೊತೆಗೆ ವೈದ್ಯಕೀಯ ಸಂಪರ್ಕ ಬೆಳೆಸಿ.
ಕೌಟುಂಬಿಕ ದೌರ್ಜನ್ಯದಲ್ಲಿದ್ದವರಿಗೆ ಸೂಕ್ತ ಕಾನೂನು ಪ್ರ್ರಾತಿನಿಧಿತ್ವ ಒದಗಿಸಿ, ಎಲ್ಲಾ ಜನಾಂಗದವರಿಗೆ ಸೇವಾ- ಸೌಲ ಭ್ಯಗಳು ಎಟಕುವಂತೆ ಪ್ರತಿಪಾದಿಸಬೇಕು. ೨೦೦೫ರ ಪ್ರಕಾರ ನ್ಯಾಯಾಲಯದ ಆದೇಶ ಉಲ್ಲಂಘಿಸಿದರೆ, ಅಥವಾ ತಕ್ಕ ರೀತಿ ಯಲ್ಲಿ ನಡೆದುಕೊಳ್ಳದೇ ಹೋದರೆ ಅದು ಕ್ರಿಮಿನಲ್ ಅಪರಾಧ ವಾಗುತ್ತದೆ. ಅಂಥ ಸಂದರ್ಭಗಳಲ್ಲಿ ಮಹಿಳೆ ನ್ಯಾಯಾಧೀಶ ರಲ್ಲಿ ಅಥವಾ ಪೊಲೀಸರಲ್ಲಿ ಅಥವಾ ನೇಮಿಸಲ್ಪಟ್ಟ ರಕ್ಷಣಾಧಿಕಾರಿ ಯಲ್ಲಿ ದೂರು ಕೊಡಬಹುದು. ಈ ದೂರಿನ ಆಧಾರದ ಮೇರೆಗೆ ಹಿಂಸೆಕೋರರನ್ನು ಬಂಧಿಸಿ ಅಗತ್ಯದ ಕ್ರಮ ಕೈಗೊಳ್ಳಬಹುದು.
Tagged with
bahiranga
‘ವಾಹನ ಚಾಲನೆಯ ವೇಳೆ ಮೊಬೈಲ್ ಬಳಸ ದಿರಿ’ ಎನ್ನುವ ನ್ಯಾಯಾಲಯ, ಪೊಲೀಸ್ ಇಲಾಖೆ ಯ ಆದೇಶವನ್ನು ಯಾರೂ ಪಾಲಿಸುತ್ತಿಲ್ಲ. ಯುವ ಕರು ಬೈಕ್ ಚಾಲನೆಯ ವೇಳೆ ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡೇ ಸಂಚರಿಸುತ್ತಾರೆ. ಒಂದು ವೇಳೆ ಹೆಲ್ಮೆಟ್ ಧರಿಸಿದ್ದರೆ ಮೊಬೈಲ್ ಅನ್ನು ಹೆಲ್ಮೆಟ್ ಒಳಗಿಟ್ಟುಕೊಂಡು ಓಡಾಡುತ್ತಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಿಕ್ಕಿಬೀಳುವುದೇ ಅಪ ರೂಪ. ಪೊಲೀಸರನ್ನು ದೂರದಲ್ಲೇ ಕಂಡು ಮೊಬೈಲ್ ಬಚ್ಚಿಟ್ಟುಕೊಳ್ಳುತ್ತಾರೆ. ಇನ್ನು ಇದಕ್ಕಾಗಿ ಇಲಾಖೆ ಬಳಸಿ ಕೊಂಡಿರುವ ಇಂಟರ್‌ಸೆಪ್ಟರ್ ವಾಹನ ಎಂಥ ಕೆಲಸ ಮಾಡುತ್ತದೋ ಭಗವಂತನೇ ಬಲ್ಲ. ಯಾಕೆಂದರೆ ಇಂಟ ರ್‌ಸೆಪ್ಟರ್ ಬಳಸಿ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬಹುದಾದರೂ ಇಲಾಖೆ ಅದಕ್ಕೆ ಮನಸ್ಸು ಮಾಡು ತ್ತಿಲ್ಲ. ಮೊಬೈಲ್ ಬಳಸುತ್ತಾ ಮೈಮರೆತು ಅಪಘಾ ತಕ್ಕೆ ಆಹ್ವಾನ ನೀಡುತ್ತಿದ್ದಾರೆ. ಇನ್ನಾದರೂ ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಲಿ. ವಾಹನ ಚಾಲನೆಯ ವೇಳೆ ಮೊಬೈಲ್ ನಿಷೇಧವಾಗಲಿ.
ಕೇಶವ, ವಿಟ್ಲ
ಅಂಗಡಿಗಳ ಟಿಂಟ್ ಗಾಜನ್ನೂ ತೆಗೆಸಿ
ಕಾರ್‌ಗಳಲ್ಲಿ ಟಿಂಟ್ ಗಾಜನ್ನು ಅಳವಡಿಸಿ ಮುಂಬೈ, ಬೆಂಗಳೂರು, ದೆಹಲಿ, ಕಲ್ಕತ್ತಾದಂಥ ಮುಂದುವರಿದ ನಗರ ಗಳಲ್ಲಿ ಹೆಣ್ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ, ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ ಟಿಂಟ್ ಗಾಜು ನಿಷೇಧಿಸಿ ಆದೇಶ ಹೊರಡಿಸಿದೆ. ಎಲ್ಲೋ ಬೆರಳೆಣಿ ಕೆಯ ಕಾರುಗಳು ಇನ್ನೂ ಟಿಂಟ್ ಧರಿಸಿ ಓಡಾಡಿದರೆ ಬಹು ತೇಕ ಕಾರ್‌ಗಳ ಟಿಂಟ್ ಅನ್ನು ಪೊಲೀಸರೇ ಒತ್ತಾಯದಿಂದ ತೆಗೆಸಿದ್ದೂ ಆಗಿದೆ. ಆದರೆ ಇದರಿಂದ ದೇಶದಲ್ಲಿ ನಡೆಯುತ್ತಿ ರುವ ಹೆಣ್ಮಕ್ಕಳ ಮೇಲಿನ ದೌರ್ಜನ್ಯವನ್ನು ಸಂಪೂರ್ಣ ನಿಯಂ ತ್ರಿಸಲು ಸಾಧ್ಯವಾಗುತ್ತದೆ ಎನ್ನುವುದು ದೂರದ ಮಾತು. ಯಾಕೆ ಂದರೆ ಹೆಣ್ಮಕ್ಕಳು ಕೆಲಸ ಮಾಡುವಲ್ಲಿ ಸಹೋದ್ಯೋಗಿ, ಮಾಲ ಕರಿಂದ ಹೆಚ್ಚಾಗಿ ದೌರ್ಜನ್ಯಕ್ಕೆ ಈಡಾಗುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ. ಹೆಣ್ಮಕ್ಕಳೇ ದುಡಿಯುವ ಕಚೇರಿಗಳಲ್ಲಿ ಹೊರಗಡೆ ಟಿಂಟ್ ಗಾಜು ಅಳವಡಿಸಿ ಒಳಗಡೆ ಮುಗ್ಧ, ಅಮಾಯಕ ಹೆಣ್ಮಕ್ಕಳ ಬಾಳಿನ ಜೊತೆ ಚೆಲ್ಲಾಟವಾಡುವ ಅದೆಷ್ಟೋ ಘಟನೆ ಗಳು ನಡೆಯುತ್ತವೆ. ಇಲ್ಲಿ ಹೆಣ್ಮಕ್ಕಳಿಗೆ ರಕ್ಷಣೆ ಎನ್ನುವುದೇ ಮರೀಚಿಕೆಯಾಗಿದೆ. ಕೆಲವು ಮಂದಿ ಇಂಥ ಕಾರಣಕ್ಕಾಗಿಯೇ ಕಚೇರಿಗಳಿಗೆ ಟಿಂಟ್ ಗಾಜು ಅಳವಡಿಸುವುದೂ ಇದೆ. ಈ ಬಗ್ಗೆ ಇನ್ನಾದರೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ವಾಹನಗಳ ಟಿಂಟ್ ಗಾಜು ಕಿತ್ತಂತೆ ಟಿಂಟ್ ಗಾಜು ಅಳವಡಿ ಸಿಕೊಂಡಿರುವ ಕಚೇರಿಗಳ ಟಿಂಟ್ ಗಾಜನ್ನು ಕೀಳುವಲ್ಲಿಯೂ ನ್ಯಾಯಾಲಯ, ಪೊಲೀಸ್ ಇಲಾಖೆ ಆಸಕ್ತಿ ವಹಿಸುವಂತಾ ಗಲಿ.
ಅವನಿ, ಮಂಗಳೂರು
ಯುವಜಾಗೃತಿಯಲ್ಲಿ ‘ವಿಕೃತಿ’ಯ ವಿರುದ್ಧ ಕ್ರಮ ಕೈಗೊಳ್ಳಿ
ಇತ್ತೀಚೆಗೆ ಮಂಗಳೂರಿನಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ಜರುಗಿದ ಯುವಜಾಗೃತಿ ಸಮಾವೇಶದಲ್ಲಿ ಕೋಮು ಗಲಭೆಯಲ್ಲಿ ಮೃತಪಟ್ಟವರ ಭಾವಚಿತ್ರವನ್ನು ದೇಶಭಕ್ತರ ಸಾಲಿನಲ್ಲಿ ಪ್ರದರ್ಶಿಸಿರುವುದು ಸರ್ವತ್ರ ಖಂಡನೀಯ. ಇದು ದೇಶಭಕ್ತಿ ಪ್ರಚಾ ರಪಡಿಸುವ ಸಂಘಟನೆಯೊಂದು ದೇಶಭಕ್ತ ರಿಗೆ ತೋರಿಸಿದ ಅವಮರ್ಯಾದೆಯೇ ಸರಿ. ಕೋಮುಗಲಭೆಯನ್ನು ಸಮಾಜದ ಯಾರೂ ಬಯಸುವುದಿಲ್ಲ.
ಹೀಗಿರುವಾಗ ಬಿಜೆಪಿ, ಯುವಮೋರ್ಚಾ ಮತ್ತದರ ಪರಿವಾರ ಸಂಘಟನೆಗಳು ಮತ್ತೆ ಕೋಮುಗಲಭೆಯಲ್ಲಿ ಮೃತಪಟ್ಟವರ ಭಾವಚಿತ್ರ ವನ್ನು ತೂಗುಹಾಕುವ ಮೂಲಕ ಸಮಾಜವನ್ನು ಪರೋಕ್ಷವಾಗಿ ಗಲಭೆಗೆ ಪ್ರಚೋದಿಸುವ ಕೆಲಸ ಮಾಡಿದೆ. ಗುಜರಾತ್ ಗಲಭೆಯಲ್ಲಿ ಸಾವಿಗೀಡಾದ ಯುವಕರ ಮೃತದೇಹದ ಭಾವಚಿತ್ರ ಪ್ರದರ್ಶಿಸು ವುದು ಯುವಜನತೆಗೆ ನೀಡುವ ಸಂದೇಶವೇ? ರಾಜ್ಯದ ಮುಖ್ಯಮಂತ್ರಿ, ಗೃಹಮಂತ್ರಿ ಹಾಗೂ ಇನ್ನಿ ತರ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದ ಸಮಾವೇಶದಲ್ಲಿ ಇಂಥ ವಿಕೃತಿ ಪ್ರದ ರ್ಶನ ಸರಿಯೇ? ನಾಡಿನ ಮುಖ್ಯಮಂತ್ರಿಗಳ ಸಮೇತ ವಿವಿಧ ಇಲಾಖೆಯ ಅಧಿಕಾರಿಗಳು ಇದನ್ನು ವೀಕ್ಷಿಸಿ ಖುಷಿಪಟ್ಟಿರುವುದು ನಾಚಿಕೆಗೇಡು. ವಿವಿಧ ಧರ್ಮ ಗಳ ನಡುವಿನ ಸಾಮರಸ್ಯವನ್ನು ಹಾಳುಗೆಡಹುವ ಇಂಥ ಪ್ರದರ್ಶನಕ್ಕೆ ಪ್ರeವಂತ ಶಾಂತಿಪ್ರಿಯ ನಾಗ ರಿಕರು ಬೆಂಬಲ ನೀಡಿರುವುದಾದರೂ ಸರಿಯೇ? ಯುವಜಾಗೃತಿ ಸಮಾವೇಶ ಕೋಮುಪ್ರಚೋ ದಕ ಸಮಾವೇಶವಾಗಿ ಬದಲಾಗಿರುವುದು ದುರದೃಷ್ಟಕರ. ವಿವೇಕಾನಂದ, ಭಗತ್ ಸಿಂಗ್, ಸಾವರ್ಕರ್, ರಾಜ್‌ಗುರು, ಸುಖ್‌ದೇವ್, ಚಂದ್ರ ಶೇಖರ್ ಆಜಾದ್‌ರಂಥ ದೇಶಪ್ರೇಮಿಗಳ ಜೀವನ ಚರಿತ್ರೆಯನ್ನು ತಿಳಿಸಿ ಯುವಜನರನ್ನು ದೇಶದ ಮೇಲೆ ಪ್ರೀತಿ ಬೆಳೆಸುವಂತೆ ಕರೆ ನೀಡ ಬೇಕಾದ ಬಹಿರಂಗ ವೇದಿಕೆಯಲ್ಲಿ ಬಿಜೆಪಿ, ಸಂಘ ಪರಿವಾರದ ನಾಯಕರು ಕೋಮು ಪ್ರಚೋದನೆಯ ಕರೆ ಕೊಟ್ಟಿರುವುದು ಬಿಜೆಪಿ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾ ಗಿದೆ.
ಕೆ.ರವೀಶ್, ಮಂಗಳೂರು
ಮದರಂಗಿಯಲ್ಲಿ ಮದ್ಯ ನಿಷೇಧಿಸಿ
ಈಗೀಗ ‘ಮದರಂಗಿ’ ಕಾರ್ಯಕ್ರಮಗಳು ಮದುವೆ ಸಮಾರಂಭ ಕ್ಕಿಂತಲೂ ಗೌಜಿಯಲ್ಲಿ ವೈಭವೋಪೇತವಾಗಿ ನಡೆಯುತ್ತವೆ. ಬಡ ಕುಟುಂ ಬದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿದರೆ ಶ್ರೀಮಂತರು ಲಕ್ಷಾಂತರ ರೂಪಾಯಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಹಿಂದೆ ಮದರಂಗಿ ಶಾಸ್ತ್ರದಂದು ಪೂಜೆ, ಶಾಖಾಹಾರಿ ಊಟವಿರು ತ್ತಿದ್ದರೆ, ಇಂದು ಮದ್ಯದ ಸಮಾರಾಧನೆ, ಬಾಡೂಟ ಬೇಕಾಬಿಟ್ಟಿ ನಡೆ ಯುತ್ತದೆ. ಕೆಲವು ಕಡೆಗಳಲ್ಲಿ ಮದ್ಯದ ಹೊಳೆಯೇ ಹರಿಯುತ್ತದೆ.
ಮದರಂಗಿ ಕಾರ್ಯಕ್ರಮದಲ್ಲಿ ಕಂಠಪೂರ್ತಿ ಕುಡಿದು, ಕುಣಿಯ ಲೆಂದೇ ಬೇರೆ ಊರಿನಿಂದ ಯುವಕರನ್ನು ಕರೆತರುವ ಸಂಪ್ರದಾಯವೂ ಕೆಲವು ಕಡೆ ಚಾಲ್ತಿಯಲ್ಲಿದೆ. ಕುಡಿದು ಚಿತ್ತಾಗಿ ಯುವಕರ ಗುಂಪು ಪರ ಸ್ಪರ ಹೊಡೆದಾಟ ನಡೆಸಿರುವ ಅದೆಷ್ಟೋ ಉದಾಹರಣೆಗಳಿವೆ. ಇಷ್ಟು ಸಾಲದೆಂಬಂತೆ ಈಗೀಗ ಮದರಂಗಿ ಕಾರ್ಯಕ್ರಮಗಳಲ್ಲಿ ವಿಭಿನ್ನ ಗುಂಪುಗಳ ಯುವಕರ ನಡುವೆ ತಲವಾರು ಕಾಳಗ ನಡೆದು ಹೆಣಗಳೂ ಉರುಳುತ್ತಿವೆ. ಇದಕ್ಕೆಲ್ಲ ಪೊಲೀಸ್ ಇಲಾಖೆಯ ಸಡಿಲ ನೀತಿಯೇ ಕಾರಣ. ಮದರಂಗಿಯಲ್ಲಿ ಮದ್ಯ ಸೇವಿಸಿ ಕೊಲೆ ಮಾಡುವಲ್ಲಿಯವ ರೆಗೆ ಮುಟ್ಟಿರುವ ಯುವಕರು ಸಮಾಜಕಂಟಕರಾಗುತ್ತಿದ್ದಾರೆ. ಇವರಿಗೆ ಬಿಸಿ ಮುಟ್ಟಿಸುವ ಕೆಲಸ ಪೊಲೀಸ್ ಇಲಾಖೆಯಿಂದ ತಕ್ಷಣ ಆಗಬೇ ಕಿದೆ. ಹಿಂದೆ ಮದರಂಗಿಯನ್ನು ಸಿಂಪಲ್ ಆಗಿ ಆಚರಿಸುತ್ತಿದ್ದರು, ಆಗ ಜನರು ಮದುವೆಯಾಗುತ್ತಿರಲಿಲ್ಲವೇ? ಜನರಿಗೆ ಅಂದು ಇರದ ಹುಚ್ಚು ಈಗೇಕೆ ಬಂತು? ಆದ್ದರಿಂದ ಕಮಿಷನರ್ ಅವರು ಈ ಬಗ್ಗೆ ಕೂಡಲೇ ಸ್ಪಂದಿಸಿ ಮದರಂಗಿ ಕಾರ್ಯಕ್ರಮದಲ್ಲಿ ಮದ್ಯಪಾನ ನಿಷೇಧಿಸಬೇಕು. ಮದ್ಯವನ್ನು ಪೂರೈಕೆ ಮಾಡುವ ಮತ್ತು ಸೇವಿಸುವವರೆಲ್ಲರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ. ಇನ್ನಾದರೂ ಪೊಲೀಸ್ ಇಲಾಖೆ ಇತ್ತ ಗಮನ ಹರಿಸಲಿ.
ರೇಶ್ಮಾ, ಬಂಟ್ವಾಳ
ಬಾಲಕರು ಯಾಕೆ ಹಿಂದೆ?
ಪ್ರತೀ ಬಾರಿ ಶಾಲೆ-ಕಾಲೇಜ್‌ಗಳ ವಾರ್ಷಿಕ ಫಲಿ ತಾಂಶ ಪ್ರಕಟವಾದಾಗಲೂ ಬಾಲಕಿಯರೇ ಮೇಲುಗೈ ಸಾಧಿಸುತ್ತಾರೆ. ಇದಕ್ಕೆ ಕಾರಣ ಬಾಲಕರು ಕಲಿಯು ವುದಿಲ್ಲವೆಂದೇನಲ್ಲ, ಈಗಲೂ ಶಿಕ್ಷಣ ಪಡೆಯುವಲ್ಲಿ ಬಾಲಕಿಯರಿಗಿಂತ ಬಾಲಕರೇ ಮುಂದಿದ್ದಾರೆ. ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಮಾತ್ರ ಬಾಲಕರು ಹಿಂದೆ ಬೀಳುತ್ತಾರೆ. ಶಿಕ್ಷಣ ಪಡೆಯುವ ಸಮಯದಲ್ಲಿ ಬೇಡವಾದ ಕೆಟ್ಟ ಹವ್ಯಾಸಗಳನ್ನು ಬೆಳೆಸಿ ಕೊಳ್ಳುವಲ್ಲಿ ಬಾಲಕರೇ ಮುಂದೆ. ಇದರಿಂದ ಸಹಜ ವಾಗಿ ಅವರು ಫಲಿತಾಂಶ ಬಂದಾಗ ದ್ವಿತೀಯ ಸ್ಥಾನ ಪಡೆಯುತ್ತಾರೆ. ಓರ್ವ ಹೆಣ್ಣು ತನಗೆ ಸಿಗುವ ಅವಕಾ ಶವನ್ನು ಜಾಣತನದಿಂದ ಬಳಸಿಕೊಳ್ಳುತ್ತಾಳೆ. ಆಕೆಯ ದೃಷ್ಟಿ ಕಲಿಕೆಯ ಕಡೆಗೆ ಮಾತ್ರವೇ ಇರುತ್ತದೆ. ಆದರೆ ಹುಡುಗರು ಕೆಟ್ಟ ವ್ಯಸನಗಳಿಗೆ ಬಲಿಯಾಗಿ ಹಾದಿ ತಪ್ಪುತ್ತಿದ್ದಾರೆ.
ಗಣೇಶ್ ಬಿಜೈ
ಲಂಚಕೋರರನ್ನು ಶೀಘ್ರವಾಗಿ ದಮನಿಸಿ
ಸರಕಾರಿ ಆಫೀಸ್‌ಗಳಲ್ಲಿ ದಾಖಲೆ-ಪತ್ರಗಳಿಗಾಗಿ ಹಣ ಪಡೆಯುವುದು, ಶೋಷಿ ಸುವುದು ಮಾಮೂಲಿಯಾಗಿದೆ. ಜನರನ್ನು ಸುಶಿಕ್ಷಿತರನ್ನಾಗಿಸುವ ಉದ್ದೇಶ ಹೊಂದಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಫೀಸ್ ಗಳಲ್ಲೂ ಇದು ತೀವ್ರವಾಗಿ ಕಂಡುಬರು ತ್ತಿದೆ. ಆಯುಕ್ತರ ಕಚೇರಿ, ಜಿಲ್ಲಾ ಕಚೇ ರಿಯ ಗುಮಾಸ್ತರೆಲ್ಲರೂ ತಮಗಿರುವ ಬೆದ ರಿಕೆಗಳನ್ನು ಲೆಕ್ಕಿಸದೆ ಲಂಚ ಸ್ವೀಕರಿಸಲು ಹಾತೊರೆಯುತ್ತಿರುತ್ತಾರೆ. ಕೆಲವೊಂದು ಕಡೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯಲ್ಲಿ ಗುಮಾಸ್ತರು, ಶಿಕ್ಷಕಿಯರು ಹಾಗೂ ಶಿಕ್ಷಕರಿಗೆ ಕಿರುಕುಳ ನೀಡಿ ಶೋಷಣೆ ಮಾಡುತ್ತಿದ್ದಾರೆ. ಸನ್ಮಾನ್ಯ ಲೋಕಾಯುಕ್ತರು ತಕ್ಷಣ ಅಲ್ಲೆಲ್ಲ ದಾಳಿ ನಡೆಸಿ ವಿದ್ಯಾಂಗ ಇಲಾಖೆ ಯಲ್ಲಿ ಒಳಗಿಂದೊಳಗೆ ನಡೆಯುತ್ತಿರುವ ವಸೂಲಿ ತಡೆಯಲಿ.
ಶಿಕ್ಷಕ-ಶಿಕ್ಷಕಿಯರ ಸ್ವಾತಂತ್ರ್ಯವನ್ನು ಕಸಿ ದುಕೊಳ್ಳುತ್ತಿರುವ ಇಂತಹ ಪಾತಕಿಗಳನ್ನು ಶೀಘ್ರವಾಗಿ ದಮನಿಸಬೇಕಾಗಿ ವಿನಂತಿ.
ಸರಸ್ವತಿ.ಕೆ., ಮಂಗಳೂರು
ಮಲೇರಿಯಾ ಜಾಗೃತಿ ಅಗತ್ಯ
ಮಳೆಗಾಲ ಆರಂಭವಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಜನರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತಿದೆ. ಇದಕ್ಕೆ ಕಾರಣ ನಗರವಾಸಿ ಗಳನ್ನು ಬೆಂಬಿಡದೆ ಕಾಡುತ್ತಿರುವ ಮಲೇರಿಯಾ ರೋಗ.
ಪ್ರತೀ ಬಾರಿ ಮಳೆಗಾಲದಲ್ಲೂ ನಗರದ ಜನರಿಗೆ ಮಲೇರಿಯಾ ಭೀತಿ ಆರಂಭವಾಗುತ್ತದೆ. ಬೇಸಿಗೆಯಲ್ಲಿ ಮಲೇರಿಯಾ ರೋಗ ನಿಯಂತ್ರಣಕ್ಕಾಗಿ ಫಾಗಿಂಗ್ ಅನ್ನು ಸರಿಯಾದ ರೀತಿಯಲ್ಲಿ ಮಾಡಿ ದ್ದರೆ ಇಂಥ ಸಮಸ್ಯೆ ಎದುರಾಗುವುದಿಲ್ಲ. ಆದರೆ ಮನಪಾ ಆರೋಗ್ಯ ಇಲಾಖೆ ಮಾಡಿಸುವ ಫಾಗಿಂಗ್ ಕೂಡಾ ಇತ್ತೀಚೆಗೆ ಸಮಸ್ಯೆ ಸೃಷ್ಟಿಸಿ ದ್ದನ್ನು ನೋಡಿದ್ದೇವೆ. ಫಾಗಿಂಗ್ ಮಾಡಿದ ಮನಪಾ ಕಾರ್ಮಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲು ಮನಪಾ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವೇ ಪ್ರಧಾನ ಕಾರಣ ವಾಗಿದೆ.
ಜನರಿಗೆ ಮಲೇರಿಯಾ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಅದನ್ನು ನಿಯಂತ್ರಿಸುವ ವಿಧಾನಗಳನ್ನು ತಿಳಿಸಿದ್ದರೆ ಜನರು ಸಕಾಲದಲ್ಲಿ ಎಚ್ಚೆತ್ತು ರೋಗಭಯದಿಂದ ಮುಕ್ತರಾಗಬಹುದು. ಮನಪಾ ಆಡಳಿತ ಇನ್ನಾದರೂ ಸೂಕ್ತ ಗಮನ ಕೊಡಲಿ.
ದಿನೇಶ್, ಮಂಗಳೂರು
Tagged with
nimminda
ಕಾರ್ಕಳ: ಕಾರ್ಕಳ-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ ೧೩ರ ಸಾಣೂರು ಮುರತ್ತಂಗಡಿ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಬೈಕ್ ಸವಾರನೊಬ್ಬ ದಾರುಣ ರೀತಿಯಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಸಹ ಸವಾರ ಗಂಭೀರ ರೀತಿಯಲ್ಲಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸ ಲಾಗಿದೆ.
ಕರಿಯಕಲ್ಲುಯ ನಿವಾಸಿ ಮಂಜು ನಾಥ ಎಂಬವರ ಮಗ ಸಂತೋಷ್ (೨೨) ಎಂಬಾತ ಘಟನೆಯಲ್ಲಿ ಸಾವಿ ಗೀಡಾದವನು. ನೆರೆಕರೆಯ ಸಾಧು ಕುಲಾಲ್‌ರವರ ಮಗ ಸುರೇಂದ್ರ(೨೪) ಎಂಬಾತ ಗಂಭೀರವಾಗಿ ಗಾಯ ಗೊಂಡವನು. ಇವರಿಬ್ಬರು ಕಾರ್ಕಳ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದಾಗ ಅತೀ ವೇಗದಲ್ಲಿ ಬಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಡಿಕ್ಕಿ ಹೊಡೆದಿರುವುದು ಘಟನೆಗೆ ಕಾರಣವಾಗಿದೆ.
ಕಳೆದ ತಿಂಗಳ ಹಿಂದೆಯಷ್ಟೇ ಬೆಳ್ವಾಯಿಯಿಂದ ಬಜಗೋಳಿ ತನಕ ಡಾಮಾರೀಕರಣ ನಡೆದಿತ್ತು. ಆದರೆ ಅಪಾಯಕಾರಿ ಫಲಕಗಳ ಬಗ್ಗೆ ಪತ್ರಿಕೆ ಈ ಹಿಂದೆಯೇ ವರದಿ ಮಾಡಿತ್ತು. ವರದಿ ಪ್ರಕಟವಾದ ಬಳಿಕ ರಸ್ತೆ ಸೂಚಕ ಫಲಕ, ರಸ್ತೆ ವಿಭಜಕ ಗುರುತು ಹಾಕಿತ್ತು. ರಸ್ತೆ ಸರಿಯಾದ ನಂತರ ಇಲ್ಲಿ ಹೆಚ್ಚಿನ ವಾಹನಗಳು ಅಪಾಯಕಾರಿ ವೇಗದಲ್ಲಿ ಸಂಚರಿಸುತಿತ್ತು. ಇದೀಗ ಇದೇ ವೇಗಕ್ಕೆ ಅಮಾಯಕನೊಬ್ಬ ಬಲಿಯಾಗಿದ್ದಾನೆ.
Tagged with
cnews,
feature
- ಗಂಡ ಎರಡನೇ ಪತ್ನಿಯೊಂದಿಗೆ ಬಾಡಿಗೆ ಮನೆಗೆ
- ತಿರುವು ಪಡೆದ ‘ಪಚ್ಚನಾಡಿ ಲವ್ ಸ್ಟೋರಿ
ಮಂಗಳೂರು: ಪ್ರೀತಿಸಿ ಕದ್ರಿ ದೇವಸ್ಥಾನದಲ್ಲಿ ಹೂಹಾರ ಬದಲಿಸಿ ಮದುವೆಯಾದ ಪ್ರೇಮಿ ತನ್ನನ್ನು ಅರ್ಧ ದಲ್ಲೇ ಕೈಬಿಟ್ಟು ಬೇರೊಬ್ಬಳನ್ನು ವರಿಸಿದ್ದ ರಿಂದ ನೊಂದ ಕ್ರೈಸ್ತ ಯುವತಿ ಪಚ್ಚನಾ ಡಿಯ ಆತನ ಮನೆಯ ಮುಂದೆ ಧರಣಿ ಕುಳಿತ ಘಟನೆ ತಿರುವು ಪಡೆದು ಕೊಂಡಿದೆ. ಅಹೋರಾತ್ರಿ ಮನೆಯ ಗೇಟ್‌ನ ಮುಂದೆ ಧರಣಿ ನಡೆಸಿದ್ದ ಯುವತಿಯ ಬೆಂಬಲಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾ ಖೆಯ ಅಧಿಕಾರಿಗಳು ಆಕೆಯನ್ನು ಮರಳಿ ಗಂಡನ ಮನೆಯೊಳಕ್ಕೆ ಸೇರಿ ಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ನಡುವೆ ಆರೋಪಿ ಗಂಡ ಮಾತ್ರ ಎರಡನೇ ಹೆಂಡತಿಯನ್ನು ಕಟ್ಟಿಕೊಂಡು ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದಿ ರುವುದು ಬೆಳಕಿಗೆ ಬಂದಿದೆ.
ಪಚ್ಚನಾಡಿ ಸಂತೋಷ್‌ನಗರದಲ್ಲಿನ ಆರ್‌ಟಿಒ ಟೆಸ್ಟ್‌ಯಾರ್ಡ್ ಸಮೀಪದ ‘ದೇಜಪ್ಪ ಕಂಪೌಂಡ್ ನಿವಾಸಿ ವಿನೀತ್ ಪೂಜಾರಿ ಎಂಬಾತ ನಾಲ್ಕು ವರ್ಷಗಳ ಹಿಂದೆ ತಿರುವೈಲ್ ನಿವಾಸಿ ಗ್ಲೆನಿಟಾ ಫ್ಲೇವಿಯಾ ಸಿಕ್ವೇರಾಳ ಸೌಂದರ್ಯಕ್ಕೆ ಮರುಳಾಗಿ ಪ್ರೀತಿಸಲು ಆರಂಭಿಸಿದ್ದ. ಇನ್ನೂ ೧೮ ವಯಸ್ಸು ತುಂಬಿರದ ಗ್ಲೆನಿಟಾ ಕೂಡಾ ವಿನೀತ್‌ನ ಪ್ರೇಮ ಪಾಶಕ್ಕೆ ಬಿದ್ದು ತನಗರಿವಿಲ್ಲದೆ ಪ್ರೀತಿಸಲು ಆರಂಭಿಸಿದ್ದಳು. ಪಾರ್ಕ್, ಬೀಚ್ ಎಂದು ಸುತ್ತಾಡಿ ತನ್ನದೆಲ್ಲವನ್ನೂ ಸಮ ರ್ಪಿಸಿದ ಗ್ಲೆನಿಟಾ ಜೊತೆ ಮಾತಿನಲ್ಲೇ ಅರಮನೆ ಕಟ್ಟುತ್ತಿದ್ದ ವಿನೀತ್ ಆಕೆಗೆ ೧೮ ವಯಸ್ಸು ತುಂಬಿದ ಬಳಿಕ ೨೦೦೮ರ ಡಿಸೆಂಬರ್ ೩೦ರಂದು ಕದ್ರಿ ದೇವಸ್ಥಾನದಲ್ಲಿ ಹೂಹಾರ ಬದಲಿಸಿ ಮದುವೆಯಾಗಿದ್ದ. ಈ ವೇಳೆ ಮದುವೆಯನ್ನು ನೋಂದಣಿ ಮಾಡಿಸಬೇಕೇ, ಇಲ್ಲವೇ ಎನ್ನುವುದನ್ನು ಅರಿತಿರದ ಗ್ಲೆನಿಟಾ ಹಿಂದೂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನೂ ವಿದ್ಯಾ ಎಂಬುದಾಗಿ ಬದಲಿಸಿದ್ದಳು. ಮದುವೆಯ ನಂತರ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದ ವಿನೀತ್ ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದ್ದ. ಈ ವೇಳೆ ವಿನೀತ್ ತಾಯಿ ಜಯರಾಣಿ ಮತ್ತು ತಂದೆ ದೇಜಪ್ಪ ಅವರು ಗ್ಲೆನಿಟಾರಿಗೆ ವರದಕ್ಷಿಣೆ ಹಣ ತರುವಂತೆ ಪದೇ ಪದೇ ಕಿರುಕುಳ ನೀಡಲು ಆರಂಭಿಸಿದ್ದರು. ಕಳೆದ ಕ್ರಿಸ್ಮಸ್ ಹಬ್ಬದ ಸಂದರ್ಭ ವಿದ್ಯಾರನ್ನು ತವರಿಗೆ ಕಳುಹಿಸಿದ್ದ ವಿನೀತ್ ಆಕೆಗೆ ತಿಳಿಯದೆ ಸ್ಥಳೀಯ ವಿಶ್ವಕರ್ಮ ಸಮುದಾಯದ ಅಶ್ವಿನಿಯನ್ನು ಮದುವೆಯಾಗಿದ್ದ. ವಿನೀತ್ ಅಣ್ಣ ಹರ್ಷಿತ್ ಕಳೆದ ನವೆಂಬರ್‌ನಲ್ಲಿ ಮದುವೆಯಾಗಿದ್ದು, ತನ್ನ ಮನೆಮಂದಿಯ ಜೊತೆ ಸೇರಿ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದೂ ಅಲ್ಲದೆ ಮನೆಯಿಂದ ಹೊರದಬ್ಬಿರುವ ಆರೋಪವೂ ಇದೆ. ವಿದ್ಯಾ ತನ್ನ ಗಂಡನ ಮರುಮದುವೆ ಪ್ರಕರಣದಿಂದ ಕಂಗಾಲಾಗಿ ಕಂಕನಾಡಿ ಠಾಣೆಯಲ್ಲಿ ದೂರು ನೀಡಿದ್ದೂ ಅಲ್ಲದೆ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿ ದ್ದರು. ನ್ಯಾಯಾಲಯ ಕೆಲವು ದಿನಗಳ ಹಿಂದೆ ‘ವಿದ್ಯಾ ಗಂಡನ ಮನೆಯಲ್ಲಿ ಇರಬಹುದು ಎಂದು ಆದೇಶ ನೀಡಿದ ಬೆನ್ನಿಗೆ ಮಾವ ದೇಜಪ್ಪ, ಗಂಡ ವಿನೀತ್ ಮತ್ತಾತನ ಎರಡನೇ ಪತ್ನಿ ಅಶ್ವಿನಿ, ಆತನ ಅಣ್ಣ ಹರ್ಷಿತ್ ಕೂಡಾ ನಾಪತ್ತೆಯಾಗಿದ್ದಾರೆ. ಮನೆಯಲ್ಲಿ ಒಬ್ಬಂಟಿಯಾಗಿದ್ದ ಅತ್ತೆ ಜಯರಾಣಿ ಮನೆಯ ಕಿಟಕಿ-ಬಾಗಿಲುಗಳನ್ನು ಮುಚ್ಚಿ ವಿದ್ಯಾ ಹಾಗೂ ವಿನೀತ್ ಸೋದರ ಹರ್ಷಿತ್‌ನ ಪತ್ನಿಯನ್ನು ಒಳಕ್ಕೆ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದರು. ಇದನ್ನು ಪ್ರತಿಭಟಿಸಿದ ವಿದ್ಯಾ ಗಂಡನ ಮನೆಯ ಮುಂದೆ ಅಹೋರಾತ್ರಿ ಧರಣಿ ನಡೆಸಿದ್ದಳು. ಈ ಬಗ್ಗೆ ‘ಜಯಕಿರಣ ಪತ್ರಿಕೆ ಸವಿವರವಾದ ವರದಿಯನ್ನು ಪ್ರಕಟಿಸಿತ್ತು.
ಪತ್ರಿಕಾ ವರದಿಯನ್ನು ಗಮನಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾ ಖೆಯ ಅಧಿಕಾರಿಗಳು ವಿದ್ಯಾ ಧರಣಿ ಕೂತಲ್ಲಿಗೆ ಬಂದು ಆಕೆ ಹಾಗೂ ಹರ್ಷಿತ್‌ನ ಪತ್ನಿಯನ್ನು ಮನೆಯೊಳಗೆ ಸೇರಿಸುವಂತೆ ಅತ್ತೆ ಜಯರಾಣಿ ಅವರಿಗೆ ಸೂಚನೆ ನೀಡಿದ್ದರು. ಕಂಕನಾಡಿ ಠಾಣಾಧಿಕಾರಿ ರವೀಶ್, ಸಬ್ ಇನ್ಸ್‌ಪೆಕ್ಟರ್ ಮುನಿಸ್ವಾಮಿ ಅವರು ವಿದ್ಯಾರ ಹೋರಾಟಕ್ಕೆ ಬೆಂಬಲ ನೀಡಿದ್ದರು. ವಿದ್ಯಾ ಪತಿ ವಿನೀತ್ ತನ್ನ ಎರಡನೇ ಹೆಂಡತಿಯ ಜೊತೆ ಕಾವೂರಿನ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಮಾಹಿತಿ ದೊರಕಿದೆ. ವಿನೀತ್ ತಂದೆ ದೇಜಪ್ಪ, ಸೋದರ ಹರ್ಷಿತ್ ಮನೆಗೆ ಬಾರದೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹಿಂದೂ ಸಂಘಟನೆಗಳು ಅವಶ್ಯ ಗಮನಿಸಲಿ
ಹಿಂದೂ ಯುವಕನನ್ನು ಪ್ರೀತಿಸಿ, ಆತನ ಮೇಲಿನ ನಂಬಿಕೆಯಿಂದ ಕ್ರೈಸ್ತ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಗ್ಲೆನಿಟಾ ಫ್ಲೇವಿಯಾ ಸಿಕ್ವೇರಾ ಯಾನೆ ವಿದ್ಯಾ ನಂಬಿ ಬಂದವನಿಂದಲೇ ವಂಚನೆ ಗೊಳಗಾಗಿರುವುದು ದುರದೃಷ್ಟಕರ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬಂದಿದೆ. ವಿದ್ಯಾ ಗಂಡನ ಮನೆಯ ಮುಂದೆ ರಾತ್ರಿ-ಹಗಲು ಧರಣಿ ಕುಳಿತಾಗ ಹಿಂದೂ ಸಂಘಟನೆಗಳ ಕೆಲವು ಕಾರ್ಯಕರ್ತರು ತಮ್ಮ ಬೆಂಬಲವನ್ನೂ ನೀಡಿದ್ದರು. ಆದರೆ ಹಿಂದೂ ಸಂಘಟನೆಗಳ ಜವಾಬ್ದಾರಿ ಇಲ್ಲಿಗೇ ಮುಗಿಯುವುದಿಲ್ಲ. ತನ್ನ ೨೫ನೇ ವಯಸ್ಸಿನೊಳಗೆ ಎರಡೆರಡು ಮದುವೆ ಯಾಗಿ ನೈಜ ಪ್ರೀತಿಗೆ ಅಪಚಾರವೆಸಗಿರುವ ವಿನೀತ್‌ನಂಥ ಗೋಮುಖ ವ್ಯಾಘ್ರಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಇಲಾಖೆಯನ್ನು ಒತ್ತಾಯಿಸುವ ಕೆಲಸವನ್ನು ಹಿಂದೂ ಸಂಘಟನೆಗಳು ಮಾಡ ಬೇಕಿದೆ. ಹಾಗೆಯೇ ನೊಂದಿರುವ ವಿದ್ಯಾ ಬದುಕಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸಕ್ಕೂ ಸಂಘಟನೆಗಳು ಮುಂದಾಗಬೇಕಿದೆ.
Tagged with
dk,
feature,
lnews
ಕಾಸರಗೋಡು: ಕಾಣಿಕೆ ಡಬ್ಬಿ ಕಳವುಗೈದ ಆರೋಪ ಹೊರಿಸಿ ವ್ಯಕ್ತಿ ಯನ್ನು ಮನೆಯಿಂದ ಕರೆದೊಯ್ದು ತಲೆಗೆ ಭಾರೀ ಗಾತ್ರದ ಕಲ್ಲು ಹಾಕಿ ಕಗ್ಗೊಲೆ ನಡೆಸಲಾಗಿದೆ. ಇಲ್ಲಿನ ಕಾಞಂಗಾಡ್ ಅಡ್ಕತ್‌ಪರಂಬ ನಿವಾಸಿ ವೇಣು (೪೩) ಎಂಬವರೇ ಬಲಿಯಾದವರು. ಮೊನ್ನೆ ತಡರಾತ್ರಿ ೧೦ ಗಂಟೆಯ ವೇಳೆಗೆ ಈ ಭೀಕರ ಕೃತ್ಯ ನಡೆದಿದೆ.
ಮೊನ್ನೆ ರಾತ್ರಿ ೯.೪೫ ರ ವೇಳೆಗೆ ವೇಣುವಿನ ಮನೆಗೆ ಇವರನ್ನು ಹುಡುಕಿ ಕೊಂಡು ತಂಡವೊಂದು ಬಂದಿತ್ತು. ತಂಡ ಮನೆಗೆ ಬರುತ್ತಿರುವುದನ್ನು ಕಂಡು ಭೀತರಾದ ವೇಣು ಹಿಂಬದಿ ಮೂಲಕ ಓಡಿ ತಪ್ಪಿಸಿದ್ದರೂ, ಬಂದವರು ಮರ ಳಿದರೆಂದು ನಂಬಿ ಅಲ್ಪ ಹೊತ್ತಿನಲ್ಲೇ ಮನೆಗೆ ಮರಳಿದ್ದರು. ಆದರೆ ಮತ್ತೆ ಬಂದ ಹಂತಕರು ಇವರನ್ನು ಮನೆ ಯಿಂದ ಹಿಡಿದೆಳೆದು ಕೊಂಡೊಯ್ದಿ ದ್ದರು.
ಅಡ್ಕತ್ತಪರಂಬದ ಗುಳಿಗನ ಕಾಣಿಕೆ ಡಬ್ಬಿ ಮೊನ್ನೆ ಕಳವಾಗಿತ್ತು. ಇದು ವೇಣುವಿನ ಕೃತ್ಯವೆಂದು ಆರೋ ಪಿಸಿದ ತಂಡ ಇವರನ್ನು ಕರೆದೊಯ್ದು ಚಾಲಕ್ಕಡವು - ನೀಲೇಶ್ವರ ರಸ್ತೆಯಲ್ಲಿ ವಿಚಾರಣೆ ನಡೆಸಿದ ಬಳಿಕ ತಲೆಗೆ ಕಲ್ಲು ಹಾಕಿ ಕೊಲೆಗೈದಿತ್ತು. ತಡರಾತ್ರಿ ವೇಳೆ ಇವರ ಶವ ತಲೆಗೆ ಕಲ್ಲು ಹಾಕಿ ಜಜ್ಜಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಊರವರ ಮಾಹಿತಿಯನ್ವಯ ತಲುಪಿದ ನೀಲೇಶ್ವರ ಪೊಲೀಸರು ಇವರನ್ನು ಆಸ್ಪತ್ರೆಗೆ ಸಾಗಿಸಿ ದರೂ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನೆ ಸಂಬಂಧ ಇಬ್ಬರನ್ನು ಪೊಲೀ ಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಎರಡು ಬಾರಿ ಕಳ್ಳತನ ಪ್ರಕರಣಗಳಲ್ಲಿ ಸಿಲುಕಿ ಜೈಲು ಶಿಕ್ಷೆ ಅನು ಭವಿಸಿದ್ದ ವೇಣು ಇತ್ತೀಚೆಗೆ ಹೊರ ಬಂದಿದ್ದರು. ಕಳ್ಳತನ ನಡೆಸಿದಲ್ಲಿ ಪೊಲೀಸರಿಗೆ ಹಿಡಿದು ಕೊಡುವ ಬದಲು ನೈತಿಕ ಪೊಲೀಸರಂತೆ ವರ್ತಿಸಿ ಕೊಲೆಗೈದಿರುವುದು ಪ್ರತಿಭಟನೆಗೆ ಕಾರಣವಾಗಿದೆ.
Tagged with
cnews,
feature
ಮೂಡುಬಿದಿರೆ: ಬೀಡಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ತಮ್ಮ ಹೋರಾಟಕ್ಕೆ ಸರ್ಕಾರ ಹಾಗೂ ಬೀಡಿ ಮಾಲಕರು ಸ್ಪಂದಿಸಿಲ. ಕೆಲವು ಬೀಡಿ ಮಾಲಕರು ರಾತ್ರಿ ಹೊತ್ತಿನಲ್ಲಿ ಬೀಡಿಯನ್ನು ಕಾರ್ಮಿಕರಿಂದ ಸಂಗ್ರಹಿ ಸುತ್ತಿದ್ದಾರೆ ಎಂಬ ಗುಮಾನಿ ಇದೆ. ಇದು ನಿಜವಾದರೆ ಬೀಡಿಯ ಡಿಪ್ಪೊಗಳಿಗೆ ತೆರಳಿ ಸೀಮೆ ಎಣ್ಣೆ ಸುರಿದು ಬೆಂಕಿ ಹಾಕುವುದಾಗಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಉಪಾಧ್ಯಕ್ಷೆ ರಮಣಿ ಎಚ್ಚರಿಕೆ ನೀಡಿದ್ದಾರೆ.
ಅವರು ಮೂಡುಬಿದಿರೆಯ ಗಣೇಶ್ ಬೀಡಿ ಕಂಪನಿಯ ಆವರಣದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಬೆಂಬಲಿಸಿ ಮಂಗಳವಾರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬೇಡಿಕೆ ಈಡೇರದೆ ಹೋದಲ್ಲಿ ಮುಂದೆ ಉಗ್ರ ಹೋರಾಟ ಮಾಡುವುದಾಗಿಯೂ ಅವರು ಎಚ್ಚರಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ ಬೀಡಿ ಕಾರ್ಮಿಕರಿಗೆ ಯಾವುದೇ ರೀತಿಯ ಸವಲತ್ತು ಸಿಗುತ್ತಿಲ್ಲ. ಈ ಮುಷ್ಕರಕ್ಕೆ ಯಾವುದೇ ರಿತಿಯ ಸ್ಪಂದನೆ ದೊರಕಿಲ್ಲ ಜನಪ್ರತಿನಿಧಿಗಳು ಬೀಡಿ ಮಾಲಿಕರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನ್ಯಾಯ ಸಿಗುವ ವರೆಗೆ ನಮ್ಮ ಹೋರಾಟ ಮುಂದುವರೆಸುತ್ತೇವೆ ಈ ಹೋರಾಟದ ಮೂಲಕ ರಾಜಕೀಯವಾಗಿ ಸಾಮಾಜಿಕವಾಗಿ ಪ್ರಜ್ಞಾವಂತರಾಗುತ್ತೇವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಸಿಐಟಿಯು ಸಂಯೋಜಿತ ಮುಷ್ಕರದಲ್ಲಿ ೨೦೦ಕ್ಕೂ ಹೆಚ್ಚು ಬೀಡಿ ಕಾರ್ಮಿಕರು ಭಾಗವಹಿಸಿದ್ದು ೧೦೦೦ ಬೀಡಿಗೆ ೧೧೬.೨೦ ಪೈಸೆ. ಕನಿಷ್ಟ ಕೂಲಿ ನೀಡುವಂತೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ. ಸಂಬಂಧಿತ ವ್ಯಕ್ತಿಗಳಿಂದ ನಿರ್ದಿಷ್ಟ ಪ್ರತಿಕ್ರಿಯೆಯಾಗಿ ಕಾಯುತ್ತಿದ್ದಾರೆ.
Tagged with
beedi,
dk,
feature,
lnews
ಮಂಗಳೂರು: ಕಳ್ಳಭಟ್ಟಿ ಸಾಗಾಟದ ಆರೋಪ ಹೊರಿಸಿ ಸುಳ್ಳು ಕೇಸು ದಾಖಲಿಸಿ ಜೈಲು ಸೇರುವಂತೆ ಮಾಡುತ್ತಿರುವ ಅಬಕಾರಿ ಜ್ಯಾರಿ ಮತ್ತು ಲಾಟರಿ ನಿಷೇಧ ದಳದ ವಿರುದ್ಧ ನಿನ್ನೆ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಬಂಟ್ವಾಳ ಮೂಡನಡುಗೋಡು ನಿವಾಸಿ ಕಾಂಗ್ರೆಸ್ ವಾರ್ಡ್ ಸಮಿತಿಯ ಅಧ್ಯಕ್ಷ ಲೋಕಯ್ಯ ಪೂಜಾರಿ ಮೇಲೆ ಕಳ್ಳಬಟ್ಟಿ ಸಾಗಾಟದ ಆರೋಪ ಹೊರಿಸಿದ್ದ ಇಲಾಖೆಯ ಪಿ.ಸಿಗಳಾದ ರಾಜೇಶ್ ಹಾಗೂ ಪ್ರದೀಪ್ ಬಂಧಿಸಿದ್ದು ಕಳೆದ ಮೂರು ದಿನಗಳಿಂದ ಲೋಕಯ್ಯ ಜೈಲಲ್ಲಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ಇಲಾಖೆಯ ಕಚೇರಿಯೆದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಂಟ್ವಾಳ ಶಾಸಕ ರಮಾನಾಥ ರೈ, ಕೆಲಸ ಇಲ್ಲದೆ ಇರುವ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಮೂಲಕ ಮಧ್ಯದ ಬಾಟಲಿಗಳನ್ನು ತೋರಿಸಿ ಅಮಾಯಕರ ಮೇಲೆ ಆರೋಪ ಹೊರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಬಂಟ್ವಾಳದ ಗೋವಿಂದ ಪ್ರಭು ಜಿಲ್ಲೆಯಾದ್ಯಂತ ಮದ್ಯ ಮಾರಾಟ ಮಾಡುತ್ತಿದ್ದು ಬಂಟ್ವಾಳದ ಸಾಕಷ್ಟು ಗೂಡಂಗಡಿಗಳಲ್ಲಿ ಇವೆ. ಇದರ ಬಗ್ಗೆ ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿಯಿದ್ದರೂ ಮೌನವಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಸುದರ್ಶನ ಜೈನ್ ಮಾತನಾಡಿ, ನಕಲಿ ಮದ್ಯ ಮಾರಾಟದ ಆರೋಪ ಹೊರಿಸಿ ಪಿ.ಸಿಗಳಾದ ರಾಜೇಶ್ ಮತ್ತು ಪ್ರದೀಪ್ ಅವರು ೫೦೦ ಎಂ.ಎಲ್.ನ ಬಾಟಲ್‌ನಲ್ಲಿ ದ್ರವವನ್ನು ತುಂಬಿಸಿ ತಂದು ಅದನ್ನು ತೋರಿಸಿ ಲೋಕಯ್ಯರನ್ನು ೫.೩೦ಕ್ಕೆ ಬಂಧಿಸಿ ಮಧ್ಯರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರೂ ಎಫ್‌ಐಆರ್‌ನಲ್ಲಿ ೩.೩೦ಕ್ಕೆ ಬಂಧಿಸಲಾಗಿದೆ ಎಂದು ದಾಖಲಿಸಿದರು. ಅವರನ್ನು ಬಂಧಿಸಿದ ಬಳಿಕ ೩೦ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಬಕಾರಿ ಜ್ಯಾರಿ ಮತ್ತು ಲಾಟರಿ ನಿಷೇಧ ಇಲಾಖೆ ಅಮಾಯಕರನ್ನು ಬಂಧಿಸಿ ಸಾವಿರಾರು ಹಣಕ್ಕೆ ಬೇಡಿಕೆ ಇಡುತ್ತಿರುವುದು ಮಾಮೂಲಿಯಾಗಿದೆ. ಹಿಂದೆ ಇನೋಳಿಯ ಜೆರಾಲ್ಡ್ ಬ್ರಾಗ್ಸ್ ಅವರ ಮೇಲೂ ಇದೇ ರೀತಿಯ ಆರೋಪ ಹೊರಿಸಿ ೨೦ ದಿನ ಜೈಲಲ್ಲಿರುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು. ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಬಿಜೆಪಿ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೋಕಯ್ಯ ಬಂಧನ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ವಿಷಯವನ್ನು ವಿಧಾಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ಅಭಯಚಂದ್ರ ಜೈನ್ ಎಚ್ಚರಿಸಿದರು.
Tagged with
dk,
feature,
lnews,
protest
ಮಂಗಳೂರು: ಗುಟ್ಕಾದಿಂದ ರೋಗ ಬರುತ್ತದೆಯೆನ್ನುವ ಕಾರಣಕ್ಕೆ ಕೇಂದ್ರ ಸರಕಾರ ಗುಟ್ಕಾ ನಿಷೇಧಕ್ಕೆ ಮುಂದಾಗಿದ್ದರೂ ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಮುಂದಾಗಿಲ್ಲ. ಒಂದು ವೇಳೆ ಗುಟ್ಕಾ ನಿಷೇಧಗೊಂ ಡರೂ ಅದರಿಂದ ಅಡಿಕೆ ಬೆಳೆಗಾರರ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು ಅಭಿಪ್ರಾಯಪಟ್ಟರು.
ನಿನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಕೇಂದ್ರ ಸರಕಾರ ನೂತನ ಸುತ್ತೋಲೆ ಹೊರಡಿಸಿರುವುದರ ಪರಿಣಾಮವಾಗಿ ಅಡಿಕೆ ಬೆಲೆಯಲ್ಲಿ ಕುಸಿತ ಕಂಡಿದೆ. ಅಲ್ಲದೆ ಕಳೆದ ಬಾರಿ ಇದೇ ಸಮಯದಲ್ಲಿ ಹಳೆ ಅಡಿಕೆಗೆ ಭಾರೀ ಬೇಡಿಕೆಯಿತ್ತು. ಆದರೆ ಈ ಬಾರಿ ಹೊಸ ಅಡಿಕೆಗೆ ಬೇಡಿಕೆ ಬಂದಿದೆ.
ಮಧ್ಯಪ್ರದೇಶದಲ್ಲಿ ಗುಟ್ಕಾಕ್ಕೆ ನಿಷೇಧ ಹೇರಿದ್ದರೂ ರಾಜ್ಯದ ಅಡಿಕೆ ಬೆಳೆಗಾರರಿಗೆ ನಷ್ಟ ವಾಗಿರಲಿಲ್ಲ. ಈ ಹಿನ್ನೆಲೆ ಯಲ್ಲಿ ಕೇರಳ ದಲ್ಲಿ ಗುಟ್ಕಾ ನಿಷೇಧ ದಿಂದ ಯಾವುದೇ ಪರಿಣಾಮವೂ ಇಲ್ಲ. ಈಗಿನ ಬೆಲೆ ಕುಸಿತ ತಾತ್ಕಾಲಿಕ ವಾಗಿದ್ದು ಅದನ್ನು ನಿಭಾಯಿಸುವ ಸಾಮರ್ಥ್ಯ ಕ್ಯಾಂಪ್ಕೋಗೆ ಇದೆ. ಆದರೆ ಅಡಿಕೆ ಬೆಳೆ ಗಾರರು ತಮ್ಮ ಅಗತ್ಯಕ್ಕೆ ಬೇಕಾಗುವಷ್ಟು ಅಡಿಕೆ ಮಾರಾಟ ಮಾಡಿ ಉಳಿದ ಅಡಿಕೆಯನ್ನು ಬೆಲೆ ಹೆಚ್ಚಳವಾದಾಗ ಮಾರಾಟ ಮಾಡುವಂತೆ ಇದೇ ವೇಳೆ ಅವರು ಸಲಹೆ ನೀಡಿದರು. ಪತ್ರಿಕಾ ಗೋಷ್ಟಿಯಲ್ಲಿ ಸುರೇಶ್ ಭಂಡಾರಿ ಮತ್ತು ಸತೀಶ್ಚಂದ್ರ ಉಪಸ್ಥಿತರಿದ್ದರು.
Tagged with
campco,
dk,
feature,
lnews
ಮಂಗಳೂರು : ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಗುಡುಗುತ್ತಿರುವ ರಾಜ್ಯ ಸರಕಾರಕ್ಕೆ ಸವಾಲೊಡ್ಡಿರುವ ಕೇಂದ್ರದ ಮಾಜಿ ವಿತ್ತ ಸಚಿವ ಜನಾದನ ಪೂಜಾರಿ ರಾಜ್ಯ ಸರಕಾರ ತೆರಿಗೆ ಕಡಿತ ಮಾಡಿ ಪೆಟ್ರೋಲ್ ಬೆಲೆಯನ್ನು ಇಳಿಸಿ ದೇಶಪ್ರೇಮವನ್ನು ಪ್ರದರ್ಶಿಸಲಿ ಎಂದಿದ್ದಾರೆ.
ಡಾಲರ್ ಬೆಲೆ ಏರಿಕೆಯಾಗಿ ರೂ. ಮೌಲ್ಯ ಕುಸಿತಗೊಂಡ ಹಿನ್ನೆಲೆಯಲ್ಲಿ ಪೆಟ್ರೋಲನ್ನು ಹೊರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ದರವೂ ಅಧಿಕವಾಗಿದೆ. ಹೀಗಾಗಿ ಕೇಂದ್ರ ಸರಕಾರಕ್ಕೆ ಪೆಟ್ರೋಲ್ ಬೆಲೆ ಏರಿಕೆ ಅನಿವಾರ್ಯವಾಗಿತ್ತು ಬಿ. ಜನಾರ್ದನ ಪೂಜಾರಿ ಎಂದು ಪೂಜಾರಿ ಬೆಲೆ ಏರಿಕೆಯನ್ನು ಸಮರ್ಥಿಸಿದರು.
ನೆರೆಯ ಕೇರಳದಲ್ಲಿ ಪೆಟ್ರೋಲ್‌ಗೆ ಲೀಟರೊಂದಕ್ಕೆ ೭೫.೩೨ ರೂ.ಗಳಿದ್ದು, ಚಿಕ್ಕ ರಾಜ್ಯವಾದ ಗೋವಾದಲ್ಲಿ ೬೨.೫೦ ರೂ.ಗಳು. ಇದಲ್ಲದೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಮಾಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಲೀಟರೊಂದಕ್ಕೆ ೮೧.೨೦ ಪೈಸೆ. ಇದಕ್ಕೆ ಮುಖ್ಯ ಕಾರಣ ಪೆಟ್ರೋಲ್ ಮೇಲೆ ರಾಜ್ಯ ಸರಕಾರ ಹಾಕಿರುವ ತೆರಿಗೆ ಎಂದರು.
ದೇಶದಲ್ಲಿ ಬಂದ್ ಆಚರಿಸಿದರೆ ೨೦೦೦ ಕೋಟಿ ರೂ. ನಷ್ಟ ಆಗಲಿದೆ. ಕೇಂದ್ರದ ೧೫ ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ ಶೇ. ೨೮ರಷ್ಟು ಭಾಗವನ್ನು ರಾಜ್ಯಗಳಿಗೆ ನೀಡಬೇಕಾಗುತ್ತದೆ. ಡಾಲರ್ ಬೆಲೆ ಏರಿಕೆಯಾದಾಗ ಪೆಟ್ರೋಲ್ ಉತ್ಪನ್ನಗಳ ಬೆಲೆಯೂ ಹೆಚ್ಚುತ್ತದೆ. ಬೆಲೆ ಹೆಚ್ಚೆಂದು ಕೂತರೆ ಪೆಟ್ರೋಲ್ ಸಿಗುವುದಿಲ್ಲ. ಅಥವ ಇಂತಿಷ್ಟು ಪೆಟ್ರೋಲ್ ಮಾತ್ರ ಎಂದು ಸರಕಾರವೇ ಫಾರ್ಮಾನು ಹೊರಡಿಸ ಬೇಕಾಗುತ್ತದೆ ಎಂದು ಪೂಜಾರಿ ತಿಳಿಸಿದರು.
ಎನ್‌ಡಿಎ ಹಾಗೂ ಎಡ ಪಕ್ಷಗಳು ಮೇ ೩೧ರಂದು ಕರೆ ನೀಡಿರುವ ಬಂದ್ ಕಾನೂನು ಬಾಹಿರವಾಗಿವಾಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಬಂದ್‌ನಿಂದ ಆಗುವ ನಷ್ಟವನ್ನು ಬಂದ್ ನಡೆಸುವ ಪಕ್ಷಗಳೇ ಭರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಹರಿಕೃಷ್ಣ ಬಂಟ್ವಾಳ, ಕಳ್ಳಿಗೆ ತಾರನಾಥ ಶೆಟ್ಟಿ, ಅರುಣ್ ಕುವೆಲ್ಲೋ, ಸುರೇಶ್ ಬಲ್ಲಾಳ್ ಉಪಸ್ಥಿತರಿದ್ದರು.
Tagged with
dk,
feature,
lnews,
petrol,
poojary
ಮೊನ್ನೆಯಷ್ಟೇ ರಿಕ್ಷಾ ಚಾಲಕರ ಪರವಾಗಿ ಪ್ರತಿ ಭಟನೆ ನಡೆಸಿದ ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡಿ ಕೊಳ್ಳುವ ಅವಶ್ಯಕತೆ ಇದೆ. ರಿಕ್ಷಾ ಚಾಲಕರ ಅನೇಕ ಬೇಡಿಕೆಗಳನ್ನು ಈಡೇರಿಸಿ ಎಂದು ಒತ್ತಾಯಿಸುವ ಕಾಂಗ್ರೆಸ್ ತನ್ನ ಆಡಳಿತದಲ್ಲಿ ರಿಕ್ಷಾ ಚಾಲಕರ ಯಾವೆಲ್ಲಾ ಬೇಡಿಕೆಗಳನ್ನು ಈಡೇರಿಸಿದೆ? ಈ ಹಿಂದೆ ಇದೇ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತವಿತ್ತು. ಆಗಲೂ ರಿಕ್ಷಾ ಚಾಲಕರು ಅನೇಕ ಬಾರಿ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದರು. ಆದರೆ ಕಾಂಗ್ರೆಸ್ ಸಾಧಿಸಿದ್ದೇನು? ಈಗಲೂ ಅದೇ ಕಾಂಗ್ರೆಸ್ ಆಡಳಿತವಿದೆ. ಈಗ ಸಾಧಿಸುತ್ತಿರುವುದೇನು? ಪೆಟ್ರೋಲ್ ಬೆಲೆಯೇರಿಸಿದ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರೆ ನಿಮ್ಮ ಪಕ್ಷ ಪ್ರೇಮ ಜಾಗೃತವಾಗುವುದಾದರೆ ನಿಮಗೆ ಯಾಕೆ ಬೇಕು ಈ ಪ್ರತಿಭಟ ನೆಯ ಉಸಾಬರಿ? ಮುಂದಿನ ಚುನಾವಣೆಗೆ ನಗರದ ರಿಕ್ಷಾ ಚಾಲಕರ ವರ್ಗ ವನ್ನು ಗುರಿಯಾಗಿಸಿ ನೀವು ಪ್ರತಿಭಟಿಸಿದ್ದನ್ನು ಬಿಟ್ಟರೆ ಬೇರೆ ಯಾವ ಉದ್ದೇ ಶವೂ ನಿಮ್ಮಲ್ಲಿ ಇದ್ದಂತಿಲ್ಲ. ರಿಕ್ಷಾ ಚಾಲಕರೇ, ಇನ್ನಾದರೂ ಕಾಂಗ್ರೆಸಿಗರ ನರಿ ಬುದ್ಧಿಯನ್ನು ಅರಿಯಿರಿ. ಇವರ ಸರ್ಕಾರ ಆಡಳಿತದಲ್ಲಿದ್ದಾಗ ನಿಮಗೆ ಏನೆಲ್ಲಾ ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಮೊದಲು ಯೋಚಿಸಿ. ರಿಕ್ಷಾ ಚಾಲಕ ವರ್ಗ ಒಂದು ಪಕ್ಷದ ಅಡಿಯಾಳಲ್ಲ.
ಪ್ರತಿಭಟಿಸುವುದಾದರೆ ಸ್ವಂತಿಕೆಯಿಂದ ಪ್ರತಿಭಟಿಸಿ. ಅದನ್ನು ಬಿಟ್ಟು ಕೆಲವು ನರಿಬುದ್ಧಿಯ ರಾಜಕಾರಣಿಗಳ ಜೊತೆ ಸೇರಬೇಡಿ. ಪ್ರತಿಭಟನೆಗಳನ್ನು ಇನ್ನೊ ಬ್ಬರ ಕಾಲ ಬುಡದಲ್ಲಿ ನಡೆಸುವ ಅಗತ್ಯತೆ ಖಂಡಿತಾ ಇಲ್ಲ. ಹೀಗಿರುವಾಗ ಕಾಂಗ್ರೆಸ್‌ನ ನರಿಬುದ್ದಿಯ ರಾಜಕೀಯ ನಾಯಕರನ್ನು ಪ್ರತಿಭಟನೆಗಳಿಗೆ ಸೇರಿಸಿಕೊಳ್ಳಬೇಡಿ. ಅವರನ್ನು ದೂರವಿಡಿ.
ಓರ್ವ ನಾಗರಿಕ, ಮಂಗಳೂರು
ಸೇವಿಸುವ ಆಹಾರದಲ್ಲೇ ವಿಷ!
ನಾವು ನಿತ್ಯ ಸೇವಿಸುವ ಆಹಾರ ವಸ್ತು, ತರಕಾರಿ, ಹಣ್ಣುಹಂಪಲು ಎಲ್ಲ ದರಲ್ಲೂ ವಿಷಯುಕ್ತ ರಾಸಾಯನಿಕ ವಸ್ತು ಅಡಕವಾಗಿರುತ್ತದೆ. ಹಿಂದೆ ತರಕಾರಿ ಬೆಲೆಗಳ ಗಿಡದ ಬೇರಿಗೆ ರಾಸಾ ಯನಿಕಗಳನ್ನು ಸಿಂಪಡಣೆ ಮಾಡುತ್ತಿದ್ದರೆ ಇಂದು ತರಕಾರಿ, ಹಣ್ಣು- ಹಂಪಲಿನ ಮೇಲೆ ಕಾಲಕಾಲಕ್ಕೆ ಬಗೆ ಬಗೆಯ ರಾಸಾಯನಿಕ ಸಿಂಪಡಿಸುತ್ತಾರೆ.
ಕೀಟ ನಿಯಂತ್ರಣ ಮಾಡಿ ಅಧಿಕ ಇಳುವರಿ ಪಡೆಯುವ ಮನುಷ್ಯನ ದುರಾ ಸೆಯೇ ಆತನ ಅಂತ್ಯಕ್ಕೆ ಕಾರಣವಾಗು ತ್ತಿದೆ. ಇದರಿಂದ ಸೇವಿಸುವ ಆಹಾರ ಪದಾರ್ಥಗಳು ವಿಷಯುಕ್ತವಾಗಿ ಮಾರ್ಪ ಡುತ್ತದೆ ಮಾತ್ರವಲ್ಲದೆ ಬಲು ಬೇಗನೆ ಮನುಷ್ಯನ ದೇಹವನ್ನು ರೋಗಪೀ ಡಿತವನ್ನಾಗಿ ಮಾಡುತ್ತದೆ. ಕ್ಯಾನ್ಸರ್ ನಂಥ ಅತೀ ಭೀಕರ ಖಾಯಿಲೆಗಳು ಹೆಚ್ಚಲು ಇದೇ ಪ್ರಮುಖ ಕಾರಣ ವೆಂದರೂ ತಪ್ಪಾಗದು. ಆದ್ದರಿಂದ ಸಾವಯವ ಕೃಷಿಗೆ ಸರಕಾರ, ಕೃಷಿ ಇಲಾಖೆ ಹೆಚ್ಚಿನ ಒತ್ತು ಕೊಡಬೇಕು. ಸಾವಯವ ಗೊಬ್ಬರಗಳ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ದೇಶದ ಜನರನ್ನು ರೋಗಮುಕ್ತರನ್ನಾಗಿಸುವ ಹೊಣೆಯನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಹೊರಬೇಕು.
ಕೀರ್ತನ್, ನಡುಗೋಡು
ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುತ್ತೆ
ಜೂನ್‌ನಲ್ಲಿ ನಡೆಯಲಿರುವ ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಜೆಡಿಎಸ್‌ನ ಇಬ್ಬರೂ ಅಭ್ಯ ರ್ಥಿಗಳು ಅತ್ಯಧಿಕ ಮತಗಳಿಂದ ಗೆದ್ದು ಈ ಬಾರಿಯ ಅಚ್ಚರಿಯ ಫಲಿತಾಂಶ ನೀಡಲಿ ದ್ದಾರೆ.
ರಾಜ್ಯದಲ್ಲಿ ಬಿಜೆಪಿಯ ದುರಾಡಳಿತಕ್ಕೆ ಕಾಂಗ್ರೆಸ್‌ನ ವಿರೋಧವೇ ಇಲ್ಲದಂತಾಗಿದೆ. ಇವೆರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಬೇಜವಾಬ್ದಾರಿ ಯಿಂದ ವರ್ತಿಸುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ೨ಜಿ ಸ್ಪೆಕ್ಟ್ರಂನ ಲಕ್ಷ ಕೋಟಿ ಹಣ ಹಾಗೂ ವಿದೇಶಿ ಕಾಳಧನವನ್ನು ವಸೂಲಿ ಮಾಡಿ ಸರಕಾರದ ಖಜಾನೆ ತುಂಬಿಸುವ ಬದಲು ಜನತೆಯ ಮೇಲೆ ಮತ್ತಷ್ಟು ತೆರಿಗೆಯ ಬರೆ ಯನ್ನು ಹಾಕಿ ಬಡ ಮಧ್ಯಮ ವರ್ಗದ ವರು ಬದುಕಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಿಸುತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದು ಕಡೆ ಮೇಲಿಂದ ಮೇಲೆ ತೆರಿಗೆ ವಿಧಿಸುತ್ತಾ, ಇನ್ನೊಂದು ಕಡೆ ಅದೇ ದರೋಡೆ ಮಾಡಿದ ಹಣದಿಂದ ಲಕ್ಷ ಕೋಟಿ ಬಜೆಟ್ ಮಂಡಿಸುವುದು ಕೇವಲ ಅಗ್ಗದ ಪ್ರಚಾ ರಕ್ಕಾಗಿ ಮಾತ್ರ ಎಂಬಂತಾಗಿದೆ.
ವಿದ್ಯಾವಂತ ಮತದಾರರು ಪದೇ ಪದೇ ಜನಸಾಮಾನ್ಯರನ್ನು ಮರುಳು ಮಾಡುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿಗೆ ಈ ಬಾರಿ ಮರೆ ಯಲಾರದ ತಕ್ಕ ಪಾಠ ಕಲಿಸಲಿದ್ದಾರೆ.
ಗುಲಾಂ ಮಹಮ್ಮದ್, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ
ಪ್ರವೇಶಕ್ಕೆ ಅರ್ಜಿ ಆಹ್ವಾನ
ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ೨೦೧೨-೧೩ನೇ ಸಾಲಿನ ಬಿ.ಕಾಂ, ಬಿ.ಎ ಮತ್ತು ಬಿಬಿ ಎಂ ತರಗತಿಗಳಿಗೆ ಪ್ರವೇಶ ಆರಂಭವಾಗಿದೆ. ಈ ಕಾಲೇಜು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಶ್ರೇಯಾಂಕನ ಸಂಸ್ಥೆ ಯಿಂದ ‘ಬಿ ಗ್ರೇಡ್ ಮಾನ್ಯತೆ ಪಡೆದಿದೆ. ಇಲ್ಲಿ ಅನುಭವಿ ಉಪನ್ಯಾಸಕರಿಂದ ಬೋಧನೆ ನಡೆಸುವ ಕಾರಣ ಉತ್ತಮ ಫಲಿತಾಂಶವಿದೆ. ಉಚಿತ ಕಂಪ್ಯೂಟರ್ ಸೌಲಭ್ಯ, ಗ್ರಂಥಾ ಲಯ, ಉದ್ಯೋಗ ಆಧಾರಿತ ತರಬೇತಿಗಳು, ಉದ್ಯೋಗ ಮಾರ್ಗದರ್ಶನ ಕೇಂದ್ರ ಇತ್ಯಾದಿ ಸೌಲಭ್ಯಗಳನ್ನು ಒದಗಿ ಸಲಾಗಿದೆ. ಕ್ರೀಡಾ ಚಟುವಟಿಕೆಗಳಿಗೆ ಪೂರ್ಣಕಾಲಿಕ ಉಪ ನ್ಯಾಸಕರಿದ್ದಾರೆ. ಇತ್ತೀಚೆಗೆ ಈ ಪರಿಸರದಲ್ಲಿ ಉತ್ತಮ ಕಾಲೇಜ್ ಎಂಬ ಹೆಸರು ಗಳಿಸಿದೆ. ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಕಾಲೇಜಿನ ಕಚೇರಿಯಲ್ಲಿ ಅರ್ಜಿ ಸಲ್ಲಿಸ ಬಹುದಾಗಿದೆ. ಪ್ರಾಂಶುಪಾಲರು, ಸರ್ಕಾರಿ ಪ್ರಥಮ
ದರ್ಜೆ ಕಾಲೇಜು, ಹಳೆಯಂಗಡಿ
ತ್ಯಾಜ್ಯವನ್ನು ಎಲ್ಲಿ ಹಾಕಬೇಕು?
ಬಜ್ಪೆ ಗ್ರಾಮ ಪಂಚಾಯತ್ ತ್ಯಾಜ್ಯ ವಿಲೇವಾ ರಿಗೆ ಸೂಕ್ತ ವ್ಯವಸ್ಥೆ ಮಾಡದೆ ಜನರಿಂದ ಉಗಿಸಿ ಕೊಳ್ಳುತ್ತಿದೆ. ಪಂಚಾಯತ್ ಆಡಳಿತ ವರ್ತಕರು ಮತ್ತು ಸ್ಥಳೀಯ ನಾಗರಿಕರಿಗೆ ಎಚ್ಚರಿಕೆಯನ್ನು ನೀಡಿದ್ದು, ತ್ಯಾಜ್ಯವನ್ನು ಎಲ್ಲೂ ಎಸೆಯಬೇಡಿ, ಎಸೆದರೆ ದಂಡ ವಿಧಿಸಲಾಗುತ್ತದೆ ಎಂದಿದೆ. ಪಂಚಾಯತ್ ಆವರಣ ದಲ್ಲಿ ತ್ಯಾಜ್ಯವನ್ನು ರಾಶಿ ಹಾಕಲಾಗಿದ್ದು, ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡೇ ಸಂಚ ರಿಸಬೇಕಾಗಿದೆ. ಇದನ್ನೆಲ್ಲ ನೋಡುತ್ತಿದ್ದರೆ ಬಜ್ಪೆ ಪಂಚಾ ಯತ್ ಆಡಳಿತಗಾರರಿಗೆ ತಲೆ ಸರಿಯಿದೆಯೇ, ಇಲ್ಲವೇ ಎಂದು ಶಂಕೆಯಾಗುತ್ತದೆ. ಯಾಕೆಂದರೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ ಎನ್ನುವ ಪಂಚಾಯತ್ ಅದಕ್ಕೊಂದು ನಿಗದಿ ಜಾಗ ತೋರಿಸಬೇಕಲ್ಲವೇ? ಒಂದು ವೇಳೆ ಪಂಚಾಯತ್ ಎದುರೇ ತ್ಯಾಜ್ಯವನ್ನು ವಿಲೇವಾರಿ ಮಾಡಬಹುದಾದರೆ ಅಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿ ಜನರನ್ನು ಬೆದರಿಸುವುದು ಎಷ್ಟರಮಟ್ಟಿಗೆ ಸರಿ? ಈ ಬಗ್ಗೆ ಪಂಚಾಯತ್ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತ್ಯಾಜ್ಯವನ್ನು ಪಂಚಾ ಯತ್ ಕಚೇರಿ ಆವರಣದಲ್ಲೇ ರಾಶಿ ಹಾಕುವ ಮೂಲಕ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ.
ಅಂಗಡಿ ಮಾಲಕ, ಬಜ್ಪೆ
ವೈದ್ಯ ವೃತ್ತಿಯ ಪಾವಿತ್ರ್ಯತೆ ಕಾಪಾಡಿ
ವೈದ್ಯ ವೃತ್ತಿ ಎನ್ನುವುದು ಒಂದು ಮಹತ್ವದ ವೃತ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿಯೇ ತನ್ನ ಅರ್ಥ ಕಳೆದುಕೊಳ್ಳುತ್ತಿದೆ ಎನ್ನಬಹುದು. ಜೀವನದಲ್ಲಿ ಜವಾಬ್ದಾರಿಯೇ ಇಲ್ಲದ ಯುವಕರು ಬಿಳಿ ಕೋಟ್ ಏರಿ ಸಿಕೊಂಡು ಅಂತೂ ಇಂತೂ ವೈದ್ಯಕೀಯ ಪದವಿ ಮುಗಿ ಸುತ್ತಾರೆ. ಇಲ್ಲಿ ಪೋಷಕರ ಒತ್ತಾಯಕ್ಕೆ ಮಣಿದು ವೈದ್ಯ ಕೀಯ ಪದವಿ ಮುಗಿಸುವವರೂ ಇದ್ದಾರೆ. ಇಂಥವರಿಗೆ ಜೀವನ ಎನ್ನುವುದೇ ಜಾಲಿ. ಹೀಗಿರುವಾಗ ರೋಗಿಗಳನ್ನು ಇವರು ಹೇಗೆ ತಾನೆ ಉಪಚರಿಸಬಹುದು. ನಗರದ ಬಹು ತೇಕ ಪ್ರತಿಷ್ಠಿತ ಆಸ್ಪತ್ರೆಗಳ ಒಳ ಹೊಕ್ಕರೆ ಇಂಥದ್ದೊಂದು ಚಿತ್ರಣ ನಮಗೆ ಲಭ್ಯವಾಗುತ್ತದೆ. ಆಸ್ಪತ್ರೆಯ ಕಾರಿಡಾರ್‌ಗ ಳಲ್ಲಿ ಬಿಳಿ ಕೋಟ್ ಏರಿಸಿಕೊಂಡು ಸುತ್ತಾಡುವ ‘ಡಾಕ್ಟರ್ ಜೋಡಿಗಳಿಗೆ ರೋಗಿಗಳ ಪರಿವೆಯೇ ಇರುವುದಿಲ್ಲ. ರೋಗಿಗಳನ್ನು ಯಾವ ರೀತಿ ಉಪಚರಿಸಬೇಕು ಎನ್ನು ವುದು ಕೂಡ ಗೊತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಆಸ್ಪತ್ರೆಯ ಆಡಳಿತ ಮಂಡಳಿ ಹದಿಹರೆಯದ ವೈದ್ಯರ ಚಲನವಲನಗಳ ಮೇಲೆ ನಿಗಾ ಇಡಿ. ಹಿರಿಯ ವೈದ್ಯರುಗಳು ಇನ್ನಾದರೂ ಮುಂದಿನ ವೈದ್ಯ ಜನಾಂಗವನ್ನು ಸರಿದಾ ರಿಗೆ ತರಲಿ.
ಸಂಕೇತ್ ನಾಯಕ್, ಕಂಕನಾಡಿ
ತೊಕ್ಕೊಟ್ಟಿನಲ್ಲೊಂದು ಫೈವ್‌ಸ್ಟಾರ್ ಹೊಟೇಲ್!
ತೊಕ್ಕೊಟ್ಟು ಬಸ್‌ನಿಲ್ದಾಣ ದಕ್ಕೆ ಪ್ರವೇಶ ಪಡೆಯುವ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಹೊಟೇಲ್‌ವೊಂ ದಿದೆ. ಇಲ್ಲಿ ಊಟ, ತಿಂಡಿಯ ವೆಚ್ಚ ನೋಡಿದರೆ ಮಾತ್ರ ಬೆಚ್ಚಿಬೀಳುವಂ ತಿದೆ. ಸಾಮಾನ್ಯವಾಗಿ ಮಾಂಸಾ ಹಾರಿ ಊಟಕ್ಕೆ ಹೆಚ್ಚೆಂದರೆ ನಗರ ವ್ಯಾಪ್ತಿಯಲ್ಲಿ ೩೦ರಿಂ೩೫ ರೂಪಾಯಿ ಇದೆ. ಆದರೆ ಈ ಹೊಟೇಲ್‌ನಲ್ಲಿ ೪೦ರಿಂದ ೪೫ ರೂಪಾಯಿಯವ ರಗೆ ಹಣ ಕೀಳುತ್ತಾರೆ. ಹಾಗೆಂದು ಇಲ್ಲಿ ಸಿಗುವುದು ಬೊಂಬಾಟ್ ಭೋಜನ ಅಂದುಕೊಂಡರೆ ನಮ್ಮ ಊಹೆ ತಪ್ಪಾಗುತ್ತದೆ. ಇಷ್ಟೆಲ್ಲಾ ಹಣ ಕೊಟ್ಟು ಊಟ ಮಾಡಿದರೂ ಇಲ್ಲಿನ ಅಶುಚಿತ್ವಕ್ಕೆ ಊಟ ಹೊಟ್ಟೆಗೆ ಸೇರುವ ಗ್ಯಾರಂಟಿಯೇ ಇಲ್ಲ. ದುಬಾರಿ ವೆಚ್ಚ ಕೊಟ್ಟು ಇಲ್ಲಿ ಊಟ ಮಾಡಿದರೂ ಇಲ್ಲಿ ಆಹಾರ ವಸ್ತು ಗಳು ಸ್ವಚ್ಛವೇ ಎಂಬ ಬಗ್ಗೆ ಅನು ಮಾನ ಕಾಡುತ್ತದೆ. ಇನ್ನಾದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಹೊಟೇಲ್ ಬಗ್ಗೆ ಗಮನ ಹರಿ ಸಲಿ. ಇಲ್ಲಿ ಸ್ವಚ್ಛತೆಗೆ ಎಷ್ಟರ ಮಟ್ಟಿಗೆ ಆದ್ಯತೆ ನೀಡಲಾಗುತ್ತಿದೆ ಎನ್ನುವು ದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು.
ಸೈಮನ್ ಡೇಸಾ, ಕೊಣಾಜೆ
ತುಳುನಾಡ ಜನತೆಯ ಗೋಳು ಕೇಳುವವರಾರು?
ಈಗ ನಮ್ಮ ಕರ್ನಾಟಕವನ್ನು ತುಳುವ ದೊರೆ ಸದಾನಂದ ಗೌಡರೇ ಆಳುತ್ತಿದ್ದಾರೆ. ಪರಿಸರ ನಾಶದಿಂದಾಗಿ ಇಲ್ಲಿನ ವಾತಾವರಣ ವೈಪರೀತ್ಯದಿಂ ದಾಗಿ ಜನರು ಗುಳೇ ಹೋಗುವಂತಾಗಿದೆ. ಇಲ್ಲಿಯ ಜನರು ಹಣಕ್ಕಾಗಿ ಏನ ನ್ನಾದರೂ ಮಾಡಲು ಸಿದ್ಧರು ಎಂದು ತಿಳಿದ ಹೊರರಾಜ್ಯದ ಹಾಗೂ ಕೋಟ್ಯಧೀಶ ರಾಜಕಾರಣಿಗಳು ಇಲ್ಲಿಯ ನೆಲವನ್ನು ಖರೀದಿಸಿ ತುಳುವ ರನ್ನು ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ. ಮುಲ್ಕಿ ಪರಿಸರದಲ್ಲಿ ಆಂಧ್ರದ ರೆಡ್ಡಿಗಳು ಸಾವಿರಾರು ಎಕ್ರೆ ಜಾಗವನ್ನು ಯಾರ‍್ಯಾರದೋ ಹೆಸರಲ್ಲಿ ಖರೀ ದಿಸಿ ಇಲ್ಲಿಯ ಜನತೆ ವಲಸೆ ಹೋಗುವಂತೆ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ ಇಲ್ಲಿಯ ರಾಜಕಾರಣಿಗಳು. ಸರಕಾರಿ ಅಧಿಕಾರಿಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿ ಬಡವರ ಮತ್ತು ತುಳುವರ ಬಗ್ಗೆ ಹೋರಾಟ ಮಾಡುವವರ ದಮನವೇ ಇವರ ಗುರಿಯಾದಂತಿದೆ.
ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಮೊನ್ನೆ ನಡೆದ ಜಿಲ್ಲಾಧಿಕಾರಿ ಭೇಟಿ ಪ್ರಹಸನ. ಫಲ್ಗುಣಿ ನದಿಗೆ ಮಣ್ಣು ತುಂಬಿಸಿ ರಸ್ತೆ ನಿರ್ಮಿಸಿ ಕೈಗಾರಿಕೆ ಗಾಗಿ ಎಂದು ಬಿಂಬಿಸಿ ಬಡವರನ್ನು ಒಕ್ಕಲೆಬ್ಬಿಸುವ ಕೆಲಸ ನಿರಂತರ ನಡೆ ಯುತ್ತಿದ್ದರೆ, ಈ ಬಗ್ಗೆ ಪ್ರeವಂತ ನಾಗರಿಕರು ಎದ್ದು ಸಂಘಟಿಸಿ ಹೋರಾಟ ಮಾಡಿದರೆ ಅವರನ್ನು ಕಾರಾಗೃಹಕ್ಕೆ ತಳ್ಳುವ ಕೆಲಸ ರಾಜಕಾರಣಿಗಳು, ಜಿಲ್ಲಾ ಧಿಕಾರಿಗಳ ಮೂಲಕ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ಯಾ ಗ್ರಹ ಮಾಡಿ ಮನವಿ ನೀಡಿದಾಗ ಸ್ಥಳಕ್ಕೆ ಭೇಟಿ ನೀಡುತ್ತೇನೆಂದ ಜಿಲಾಧಿ ಕಾರಿ ಬಾರದೇ ಇದ್ದು ಮಾತು ತಪ್ಪಿದಾಗ ಕೇಳಲು ಬಂದ ಬಡವರ ಕಣ್ಮಣಿ ಸಿಟಿಜನ್ ಫೋರಮ್ಮಿನ ವಿದ್ಯಾ ದಿನಕರ್ ಮತ್ತು ಸೆಝ್ ಸಂತ್ರಸ್ತರನ್ನು ಕೆಲ ಸಕ್ಕೆ ಅಡ್ಡಿಪಡಿಸಿದ ಕಾರಣ ನೀಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಈ ಬಗ್ಗೆ ಪ್ರeವಂತ ತುಳುವರಿಂದ ಏಕೆ ಮೌನ? ನಿಮಗೆ ಹಣ ಮತ್ತು ರಾಜಕೀಯವೇ ಮುಖ್ಯವೇ? ನಿಮ್ಮನ್ನು ಹೊತ್ತು ಹೆತ್ತ ತುಳುವ ನೆಲ ಬೇಡವೇ? ಪಕ್ಷಭೇದ ರಾಜಕಾರಣ ಬಿಟ್ಟು ಸಾರ್ವಜನಿಕ ತುಳುವರು ಎದ್ದೇಳಿ ತುಳುನಾ ಡನ್ನು, ಪರಿಸರವನ್ನು ಉಳಿಸಿ. ಕಣ್ಣಿಗೆ ಕಾಣದ ದಿವ್ಯ ಶಕ್ತಿ ಸುಮ್ಮನೆ ಇರುವು ದಿಲ್ಲ. ಉಪ್ಪು ತಿಂದವ ನೀರು ಕುಡಿಯಲೇಬೇಕು.
ಧರ್ಮದರ್ಶಿ ಹರಿಕೃಷ್ಣ ಪುನರೂರು
Tagged with
nimminda
ಮೊನ್ನೆ ನಡೆದ ಯುವ ಜಾಗೃತಿ ಸಮಾವೇಶ ಆ ಯಾವುದೇ ಕೆಲಸಗಳನ್ನು ಮಾಡಿಲ್ಲ. ಬಿಜೆಪಿ ಕೇವಲ ರಾಜಕೀಯ ಕಾರಣಕ್ಕಾಗಿ ಯುವಕರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡಿದೆ. ದೇಶದಲ್ಲಿರುವ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ನೈಸರ್ಗಿಕ ಸಂಪತ್ತಿನ ಲೂಟಿ ಮುಂತಾದುವುಗಳ ಬಗ್ಗೆ ಯುವಶಕ್ತಿಯನ್ನು ಜಾಗೃತಗೊಳಿಸಬಹುದಿತ್ತು.
ಎಂ.ಎಸ್., ಮಂಗಳೂರು
ಬದಲಾವಣೆಯ ಹೆಸರಿನಲ್ಲಿ ಅಧಿಕಾರ ಪಡೆದ ಬಿಜೆ ಪಿಯ ನಾಲ್ಕು ವರ್ಷದ ಅವಧಿ ಪಕ್ಷದ ಆಂತರಿಕ ಕಚ್ಚಾಟ ದಲ್ಲೇ ಕಳೆದು ಹೋಯಿತು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನೈಸರ್ಗಿಕ ಸಂಪತ್ತಿನ ಲೂಟಿ, ವ್ಯಭಿಚಾರ, ಅನೈತಿಕ ಕಾರ್ಯಗಳು ಬಿಜೆಪಿ ಸರಕಾರದ ಸಾಧನೆಯಾಯಿತು. ಬಿಜೆಪಿ ಸರ್ಕಾರ ತನ್ನ ಆಡಳಿತದ ಆರಂಭದಲ್ಲೇ ಮಾಡಿಕೊಂಡ ಸ್ವಯಂಕೃತ ಅಪರಾಧಗಳು ಇಂದಿನ ದುಸ್ಥಿತಿಗೆ ಕಾರಣ ಅನ್ನೋದು ರಾಜ್ಯಕ್ಕೆ ತಿಳಿದಿದೆ. ಬಿಜೆಪಿಯು ಕಳೆದ ನಾಲ್ಕು ವರ್ಷಗಳನ್ನು ಕೇವಲ ಸ್ವಜನ ಪಕ್ಷಪಾತ, ಅಧಿಕಾರದ ವ್ಯಾಮೋಹ, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಭ್ರಷ್ಟಾಚಾರದಲ್ಲಿ ಕಾಲವನ್ನು ಕಳೆ ಯಿತು. ದೇಶದ ನೆಲ, ಜಲ, ಸಂಸ್ಕೃತಿಯನ್ನು ತಾಯಿ ಎನ್ನುತ್ತಾ ಅಧಿಕಾರ ಪಡೆದವರು ಮಹಿಳೆಯರು ತಲೆ ಎತ್ತಿ ಓಡಾಡಲು ಸಾಧ್ಯವಾಗದ ರೀತಿಯ ಕಾರ್ಯಗಳನ್ನು ಮಾಡಿದರು. ಓರ್ವ ಮಂತ್ರಿ ಮಹಿಳೆಗೆ ಮುತ್ತಿಟ್ಟರೆ, ಮತೋರ್ವ ಸ್ನೇಹಿತನ ಹೆಂಡ ತಿಯತ್ತ ದೃಷ್ಟಿ ನೆಟ್ಟ. ಮೂವರು ಮಂತ್ರಿಗಳು ನೋಡಬಾರ ದ್ದನ್ನು ನೋಡಬಾರದ ಜಾಗದಲ್ಲಿ ನೋಡಿ ರಾಜ್ಯದ ಮಾನ ವನ್ನು ವಿಶ್ವದ ಮುಂದೆ ಹರಾಜು ಹಾಕಿದರು. ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕಾಗಿ ಮಾಜಿ ಮುಖ್ಯಮಂತ್ರಿ ಜೈಲು ಸೇರು ವಂತಾಯಿತು.
ಇನ್ನು ಪೈಪೋಟಿಗೆ ಬಿದ್ದವರಂತೆ ಅನೇಕ ಮಾಜಿಮಂ ತ್ರಿಗಳು ಜೈಲು ಸೇರಿದರು. ಮತ್ತೊಬ್ಬ ಮಾಜಿ ಮಂತ್ರಿ ಗಣಿ ಹಗರಣದಲ್ಲಿ ಇನ್ನೂ ಕಂಬಿ ಎಣಿಸುತ್ತಿದ್ದಾನೆ. ಕೆಲವರು ಜೈಲಿ ನಲ್ಲಿದ್ದರೆ ಇನ್ನೂ ಕೆಲವರು ಬೇಲ್ ಮೇಲೆ ಹೊರಗೆ ಬಂದಿ ದ್ದಾರೆ. ಇನ್ನೂ ಹಲವಾರು ಶಾಸಕರು ಮತ್ತು ಮಂತ್ರಿಗಳು ಜೈಲು ಸೇರಲು ಸರತಿ ಸಾಲಿನಲ್ಲಿದ್ದಾರೆ. ಸಿ.ಇ.ಸಿ. ಶಿಫಾರಸಿನ ಅನ್ವಯ ಸುಪ್ರಿಂ ಕೋರ್ಟ್ ಆದೇಶದಂತೆ ಯಡಿಯೂರಪ್ಪ ವಿರುದ್ದ ಸಿಬಿಐ ತನಿಖೆ ನಡೆಸುತ್ತಿದ್ದು, ಯಡಿಯೂರಪ್ಪ ಮತ್ತು ಕುಟುಂಬದವರು ಬಂಧನದ ಭೀತಿಯಲ್ಲಿದ್ದಾರೆ. ರಾಜ್ಯದ ಗಣಿ ಹಗರಣ ಸರಕಾರದ ಕೊರಳನ್ನು ಸುತ್ತಿದ್ದು, ಇನ್ನು ಬಿಗಿಯಲು ಮಾತ್ರ ಬಾಕಿ ಉಳಿದಿವೆ. ರಾಜ್ಯದಿಂದ ಗಣಿ ಕಪ್ಪವನ್ನು ಪಡೆದ ಕೇಂದ್ರದ ಬಿಜೆಪಿ ನಾಯಕರ ಬಂಡವಾಳವು ಬಯಲಾಗು ವುದರಲ್ಲಿದೆ.
ಇನ್ನೂ ಬಿಜೆಪಿಯ ಆಂತರಿಕ ಕಚ್ಚಾಟ ಮುಗಿಲು ಮುಟ್ಟಿದ್ದು ನಾಯಕರು ಪರಸ್ಪರ ಮುಖ ಕೊಟ್ಟು ಮಾತನಾಡದ ಸ್ಥಿತಿ ಯಲ್ಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ನಿಶ್ಚಿತವಾಗಿದ್ದು, ಅದಕ್ಕಾಗಿ ಬಿಜೆಪಿ ಮತ್ತು ಸಂಘಪರಿವಾರ ಯುವಕರ ಭಾವನೆಗಳನ್ನು ಕೆರಳಿಸಿ ಅಧಿಕಾರ ಪಡೆಯುವ ಯೋಜನೆಯನ್ನು ಹಮ್ಮಿಕೊಂಡಿದೆ. ಅದರ ಭಾಗ ವಾಗಿ ಮೊನ್ನೆ ಮಂಗಳೂರಿನಲ್ಲಿ ಯುವ ಜಾಗೃತಿ ಸಮಾವೇಶ ವನ್ನು ಹಮ್ಮಿಕೊಳ್ಳುವುದರ ಮೂಲಕ ಯೋಜನೆಗೆ ಚಾಲನೆ ನೀಡಿದೆ. ಸಮಾವೇಶವು ಯುವಕರನ್ನು ಹಾದಿ ತಪ್ಪಿಸಲು ಮಾಡಿದ ಕಾರ್ಯ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಸಮಾವೇಶದಲ್ಲಿ ನಾಯ ಕರ ಭಾಷಣಗಳು ಅದನ್ನು ಸಾಕ್ಷೀಕರಿಸಿತ್ತು. ಸಮಾವೇಶದಲ್ಲಿ ಮಾತನಾಡಿದ ಪ್ರಮುಖರ ಮಾತುಗಳು ಯುವಕರನ್ನು ಪ್ರಚೋ ದಿಸುವ ಮಾತುಗಳಾಗಿತ್ತು.
ಯುವಕರನ್ನು ಜಾಗೃತಿಗೊಳಿಸುವುದಾಗಿದ್ದರೆ, ರಾಜ್ಯ ಮತ್ತು ದೇಶದಲ್ಲಿರುವ ಹಲವು ಜ್ವಲಂತ ಸಮಸ್ಯೆಗಳ ವಿರುದ್ದ ಯುವ ಶಕ್ತಿಯನ್ನು ಜಾಗೃತಗೊಳಿಸಬಹುದಿತ್ತು. ದೇಶದಲ್ಲಿರುವ ಬಡ ತನ, ನಿರುದ್ಯೋಗ, ಭ್ರಷ್ಟಾಚಾರ, ನೈಸರ್ಗಿಕ ಸಂಪತ್ತಿನ ಲೂಟಿ ಮುಂತಾದವುಗಳ ಬಗ್ಗೆ ಯುವಶಕ್ತಿಯನ್ನು ಜಾಗೃತಗೊಳಿಸಬ ಹುದಿತ್ತು. ಆದರೆ ಯುವ ಜಾಗೃತಿ ಸಮಾವೇಶ ಆ ಯಾವುದೇ ಕೆಲಸಗಳನ್ನು ಮಾಡಿಲ್ಲ. ಬಿಜೆಪಿ ಕೇವಲ ರಾಜಕೀಯ ಕಾರಣ ಕ್ಕಾಗಿ ಯುವಕರ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಮಾಡಿದೆ. ರಾಜ್ಯ ಸರಕಾರ ಹಗರಣದ ಕೂಪದಲ್ಲಿ ಮುಳುಗಿ ಒದ್ದಾಡುತ್ತಿದ್ದರೂ, ಯಾವೊಬ್ಬ ನಾಯಕನೂ ಅದರ ವಿರುದ್ಧ ಸ್ವರ ಎತ್ತದೇ ಇದ್ದುದು ರಾಷ್ಟ್ರ ರಕ್ಷಣೆಯ ಮುಖವಾಡ ಹೊತ್ತ ವರ ನೈಜಮುಖವನ್ನು ಅನಾವರಣಗೊಳಿಸಿತ್ತು.
ಸಮಾವೇಶದಲ್ಲಿ ಯುವಕರಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೆಯಿ ಅವರ ಆದರ್ಶಗಳನ್ನು ಪಾಲಿಸಲು ಕರೆ ನೀಡಲಾಯಿತು. ಷಂಡ ಭಾರತವನ್ನು ಧೈರ್ಯಶಾಲಿ ಭಾರತ ವನ್ನಾಗಿ ರೂಪುಗೊಳಿಸಿದ್ದು ವಾಜಪೇಯಿ ಎಂಬ ಹಸಿ ಹಸಿ ಸುಳ್ಳನ್ನು ಪ್ರಚಾರಪಡಿಸಿದರು. ಅಜರ್ ಮಸೂದ್ ಎಂಬ ಭಯೋ ತ್ಪಾದಕನನ್ನು ಪಾಕಿಸ್ತಾನಕ್ಕೆ ಕಳುಹಿಸಿ ಕೊಟ್ಟ ಕೆಟ್ಟ ಪ್ರಧಾನಿ ವಾಜ ಪೇಯಿ ಎಂಬುದನ್ನು ಅವರು ಮರೆತುಹೋಗಿದ್ದರು. ಭಾರ ತವೆಂಬ ಶಕ್ತಿಶಾಲಿ ದೇಶವನ್ನು ಜಗತ್ತಿನ ಮುಂದೆ ತಲೆ ತಗ್ಗಿಸು ವಂತೆ ಮಾಡಿದ್ದು ವಾಜಪೇಯಿ ಎಂಬ ಸತ್ಯವನ್ನು ಅವರು ತಿಳಿ ಯದೇ ಹೋದರು. ಅದಕ್ಕಿಂತ ಮಿಗಿಲಾಗಿ, ತನ್ನನ್ನು ಜೈಲಿ ನಿಂದ ಬಿಡುಗಡೆಗೊಳಿಸಿದರೆ ತಾನು ನಿಮ್ಮ ವಿರುದ್ದ ಹೋರಾಟ ನಡೆಸುವುದಿಲ್ಲವೆಂದು ಬ್ರಿಟಿಷರ ಕಾಲಿಗೆ ಬಿದ್ದು ಮುಚ್ಚಳಿಕೆ ಬರೆದು ಕೊಟ್ಟಂತಹ ವಾಜಪೇಯಿ ಈ ದೇಶದ ಪ್ರಧಾನಿಯಾಗಿದ್ದು ಈ ದೇಶದ ದುರಂತ ಅನ್ನೋದನ್ನು ಅವರು ತಿಳಿಯ ಬೇಕಾಗಿತ್ತು. ಇಂತಹ ನಾಯಕನನ್ನು ಆದರ್ಶವಾಗಿಟ್ಟು ಕೊಂಡರೆ ಈ ದೇಶದ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಬಹುದು ಅನ್ನುವುದನ್ನು ಊಹಿಸುವುದೂ ಅಸಾಧ್ಯ.
ಬಿಜೆಪಿ ಕೇವಲ ರಾಜಕೀಯ ಕಾರಣಗಳಿಗೆ ಯುವಕರನ್ನು ಪ್ರಚೋದನೆಗೆ ಒಳಪಡಿಸುತ್ತಿದೆ ಎಂಬ ಸತ್ಯವನ್ನು ಯುವ ಸಮೂಹ ಅರಿತುಕೊಳ್ಳಬೇಕಾಗಿದೆ. ದೇಶ ಮತ್ತು ರಾಜ್ಯದ ಮಾನ ವನ್ನು ವಿಶ್ವದ ಮುಂದೆ ಹರಾಜು ಹಾಕಿದ ಬಿಜೆಪಿ ಮತ್ತು ಅದರ ನಾಯಕರ ಬಗ್ಗೆ ಯುವಶಕ್ತಿ ಜಾಗೃತಗೊಳ್ಳಬೇಕು. ಇಲ್ಲದಿದ್ದರೆ ಈ ದೇಶದ ನಾಶಕ್ಕೆ ಯುವಕರೇ ಕಾರಣರಾಗುತ್ತೇವೆ.
Tagged with
bahiranga
ಸಾಧಾರಣ ೧೮೨೦ರಲ್ಲಿ ಆಗಿನ ಮಾಧ್ವ ಸ್ವಾಮಿಗಳು ಹೆಬ್ಬಾರರಿಗೆ ಸಾಲಿಗ್ರಾಮಾದಿ ಹೆಚ್ಚಿನ ಮರ್ಯಾದೆಗಳನ್ನು ಕೊಟ್ಟು ಅವರನ್ನು ತನ್ನ ವಶಪಡಿಸಿ ಕೊಂಡು ದೇವಳದ ಅರ್ಚಕತನವನ್ನು ತಾವೇ ವಹಿಸಿಕೊಳ್ಳಬೇಕೆಂದು ಪ್ರಯತ್ನಿಸಿದ್ದರು. ಆದರೆ ಹೆಬ್ಬಾರರು ಒಪ್ಪಿದರೂ ಅರ್ಚಕರಾದ ಮೊರೋಜರು ಒಪ್ಪಲಿಲ್ಲ. ಅರ್ಚಕತನದ ವಿಷಯದಲ್ಲಿ ಸ್ವಾಮಿಗಳಿಗೂ ಮೊರೋಜರಿಗೂ ದೊಡ್ಡ ಹೊಡೆದಾಟವೇ ಆಗಿದೆಯೆಂದು ತಿಳಿದು ಬರುತ್ತದೆ. ಇದರಲ್ಲಿ ಸ್ವಾಮಿಗಳ ಕೈ ಮೊರೋಜರಲ್ಲಿ ಸಾಗದೇ ಇದ್ದುದರಿಂದ ಮೊರೋಜರ ಕುಟುಂಬಕ್ಕೆ ಮಾಟ ಚ್ಛಿದ್ರ ಮಾಡಿಸಿದರೆಂದೂ ಅದರ ಭಯಕ್ಕೆ ಹೆದರಿದ ಮರೋಜರು ಪೂಜೆಯ ಹಕ್ಕನ್ನು ಸ್ವಾಮಿಗೆ ಕೊಡದೆ ಕೊಕ್ಕಡದಿಂದ ಬಂದ ನಾರಾಯಣ ಎಡಪಡಿತ್ತಾಯ ಎಂಬವರಿಗೆ ಬಳ್ಪದ ತನ್ನ ಪಾಲಿನ ಮನೆಯೊಂದನ್ನೂ ಕೊಟ್ಟು ಅದರೊಂದಿಗೆ ಶ್ರೀ ಸುಬ್ರಹ್ಮಣ್ಯೇಶ್ವರನ ಅರ್ಚಕತನವನ್ನು ಬಿಟ್ಟುಕೊಟ್ಟು ತಾವು ಮಡಿಕೇರಿಯ ಹುದುಕೆರಿನಾಡು ಎಂಬಲ್ಲಿಗೆ ಹೋದರೆಂದು ತಿಳಿದು ಬರುತ್ತದೆ.
ಮೋರೋಜ ಅಂದರೆ ಮೋರ=ಮೈಯೂರ, ಓಜ ಚಾರ್ಯ ಅದರಂತೆಯೇ ನಟ್ಟೋಜ ಅಂದರೆ ಪ್ರತಿಷ್ಠಾಪನಾ ಆಚಾರ್ಯ ಎಂಬ ಹೆಸರು ಬಂದಂತಾಗಿದೆ- ಪುತ್ತೂರಿನ ನಟ್ಟೋಜಿ ಮನೆತನದವರು ಪೂರ್ವದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವರ ಸ್ಥಾಪನೆ ಮತ್ತು ಅರ್ಚಕರಾಗಿದ್ದಾರೆಂದು ಸಾಧಾರಣ ೧೮೪೫ರ ನಂತರವೇ ಅದಕ್ಕೆ ಮಾಧ್ವ ವೈಷ್ಣವ ಅರ್ಚಕರು ಬಂದಿರಬಹು ದೆಂದೂ ಪ್ರತೀತಿ ಇದೆ -ಅದರಂತೆಯೆ ಶ್ರೀಸುಬ್ರಹ್ಮಣ್ಯದಲ್ಲಿ ಬಳ್ಪದ ಮೊರೋಜರು ಶ್ರೀಸುಬ್ರಹ್ಮಣ್ಯೇಶ್ವರನ ಅರ್ಚಕರಾಗಿದ್ದರು. ಅದ ರಿಂದಲೇ ಮೊರೋಜ ಎಂಬ ಮನೆತನವು ಉಂಟಾಯಿತೆಂದು ತಿಳಿಯಬೇಕಾಗಿದೆ.
ಈ ಮೊರೋಜರ ಮೂಲ ಸ್ಥಳ ಸುಬ್ರಹ್ಮಣ್ಯ ದೇವಸ್ಥಾನ ದಿಂದ ಸಾಧಾರಣ ೯-೧೦ ಮೈಲು ದೂರವಿರುವ ಬಳ್ಪ ಗ್ರಾಮದ ಲ್ಲಿದೆ. ಈ ಮನೆತನದವರಿಗೆ ಈಗಲೂ ಸಾಧಾರಣ ೧೨೦ ರೂಪಾ ತಸದೀಕು ಇರುವುದು. ಬಹಳ ಪುರಾತನವಾದ ದುರ್ಗಾ ಪರಮೇ ಶ್ವರೀ ದೇವಸ್ಥಾನದ ಅರ್ಚಕತನವು ಬಳ್ಪದಲ್ಲಿದೆ. ಇದು ಬಹಳ ಪುರಾತನ ದೇವಾಲಯವೆಂದು ದೇವಾಲಯದ ಶಿಲಾ ಸ್ಥಂಭ ಗಳೂ ಗೋಪುರ ಮತ್ತು ಗರ್ಭಗೃಹದ ಮಾಡಿಗೆ ಮುಚ್ಚಿದ ದಪ್ಪ ವಾದ ಶಿಲಾ ಹಲಿಗೆಗಳ ದೃಶ್ಯದಿಂದ ವೇದ್ಯವಾಗುತ್ತದೆ. ಇವರ ಅರ್ಚಕತನವು ಶ್ರೀಸುಬ್ರಹ್ಮಣ್ಯದಲ್ಲಿ ಸಾಧಾರಣ ೧೮೨೦ರ ವರೆಗೆ ಇತ್ತೆಂದೂ ಆ ಮೇಲೆ ಮಾಧ್ವ ವೈಷ್ಣವರಾದ ಆಸ್ರಣ್ಣರ ಅರ್ಚಕತ ನವು ಕ್ರಮೇಣ ದೇವಳಕ್ಕೆ ಬಂತೆಂದು ತಿಳಿದು ಬರುತ್ತದೆ. ೧೮೪೫ರ ನಂತರ ಮಾಧ್ವ ಸ್ವಾಮಿಗಳ ಆಡಳಿತೆ ದೇವಳಕ್ಕೆ ಬಂದ ನಂತರ ಮೊರೋಜರು ತಮ್ಮ ಪೂರ್ಣ ಅರ್ಚಕತನವನ್ನು ಕಳಕೊಂಡರು. ಇವರು ಸ್ಮಾರ್ತರಾದ ಸ್ಥಾಕ ಶಿವ ಬ್ರಾಹ್ಮಣರು.
ಈ ಕೆಳಗಿನ ಆಧಾರಗಳಿಂದ ಸ್ಥಾನಿಕ ಶಿವ ಬ್ರಾಹ್ಮಣರು ದೇವ ಳಗಳ ಆಡಳಿತೆ ಮತ್ತು ಅರ್ಚಕರಾಗಿ ಇದ್ದರೆಂದು ತಿಳಿದು ಬರು ತ್ತದೆ.
ಉಟossಚಿಡಿಥಿ-oಜಿ ರಿuಜiಛಿiಚಿಟ ಚಿಟಿಜ ಖeveಟಿue ಣeಡಿms ಚಿಟಿಜ oಜಿ useಜಿuಟ ತಿoಡಿಜs ಚಿಛಿಛಿuಡಿiಟಿg iಟಿ oಜಿಜಿiಛಿiಚಿಟ ಜoಛಿumeಟಿಣs-ಖeಟeeಣiಟಿg ಣo ಣhe ಚಿಜmiಟಿisಣಡಿಚಿಣioಟಿ oಜಿ ಣhe ಉoveಡಿಟಿmeಟಿಣ oಜಿ ಃಡಿiಣish Iಟಿಜiಚಿ Pಚಿge ೪೯೦-ಛಿoಟ-ಣiಟಟ ಣhe heಟಜಿ oಜಿ II voಟumಟಿ ಸ್ಥಾನಿಕ-oಟಿe ತಿho hoಟಜs oಡಿ beಟoಟಿgs ಣo ಚಿ ಠಿಟಚಿಛಿe, oಟಿe ತಿho hoಟಜs ಚಿಟಿ oಜಿಜಿiಛಿe, ಚಿ ಠಿಟಚಿಛಿe mಚಿಟಿ ಚಿ goveಡಿಟಿoಡಿ, oಡಿ suಠಿಚಿಡಿiಟಿಣeಟಿಜeಟಿಣ oಜಿ ಚಿ ಆisಣಡಿiಛಿಣ, ಣhe ಜiಡಿeಛಿಣoಡಿ oಡಿ ಚಿ mಚಿಟಿಚಿgeಡಿ oಜಿ ಚಿ ಣemಠಿಟe, some-ಣimes heಟಜ heಡಿiಜeಣಚಿಡಿಥಿ, ಚಿ ಠಿeಡಿsoಟಿ ತಿho suಠಿಚಿಡಿiಟಿಣeಟಿಜeಟಿಣs ಣhe ಛಿeಡಿemoಟಿies, oಡಿ oಜಿಜಿiಛಿiಚಿಣes iಟಿ ಚಿ ಖಿemಠಿಟe ಚಿಟಿ oಜಿಜಿiಛಿಚಿಣiಟಿg ಠಿಡಿeisಣ oಡಿ ಃಡಿಚಿhmiಟಿ.
ಅದೂ ಅಲ್ಲದೆ ೧೮೫೮ರವರೆಗೆ ಕನ್ನಡ ಜಿಲ್ಲೆಯ ಹೆಚ್ಚಿನ ದೇವಾಲಯಗ ಳಲ್ಲಿ ಸ್ಮಾರ್ತರಾದ ಸ್ಥಾನಿಕರೇ ಅರ್ಚಕರಾಗಿದ್ದರೆಂಬುದಕ್ಕೆ ಆಧಾರವಾಗಿ ೧೮೩೨ ಮತ್ತು ೧೮೫೮ರಲ್ಲಿ ಪ್ರಕಟವಾದ ಕನ್ನಡದಿಂದ ಇಂಗ್ಲಿಷಗೆ ಪರಿವರ್ತಿಸಲ್ಪಟ್ಟ ಡಿಕ್ಷನರಿಯಲ್ಲಿ (ಶಬ್ದಕೋಶ) ಬರೆದವರು ಅಚಿಟಿಚಿಡಿese ಚಿಟಿಜ ಇಟಿgಟish ಆiಛಿಣioಟಿಚಿಡಿಥಿ bಥಿ me ಖev. W. ಖeeve. ಖeviseಜ ಅoಡಿಡಿeಛಿಣeಜ ಚಿಟಿಜ ಚಿbಡಿiಜgeಜ bಥಿ ಆಚಿಟಿieಟ Sಚಿಟಿಜeಡಿsoಟಿ ಗಿesಟeಥಿಚಿಟಿ missioಟಿಚಿಡಿಥಿ ಠಿಡಿiಟಿಣeಜ ಃಚಿಟಿgಚಿಟoಡಿe Wesಟeಥಿಚಿಟಿ missioಟಿ ಠಿಡಿess. ಇದರಲ್ಲಿ ಸ್ಥಾನಿಕ ಎಂಬ ಪದಕ್ಕೆ ಪುಟ ೨೬ರಲ್ಲಿ ಂ Suಠಿeಡಿiಟಿಣeಟಿಜeಟಿಣ oಡಿ ಉoveಡಿಟಿoಡಿ oಜಿ ಚಿ Pಟಚಿಛಿe ೧. ಂ ಜಿixeಜ ತಿoಡಿshiಠಿಠಿeಡಿ iಟಿ ಚಿ ಣemಠಿಟe oಡಿ ಐoಛಿಚಿಟ beಟoಟಿgiಟಿg ಣo ಚಿ ಠಿಟಚಿಛಿe, siಣuಚಿಣioಟಿ ಎಂದು ಅರ್ಥ ಬರೆದದರಲ್ಲಿ ಸ್ಥಾನಿಕ ಎಂದರೆ ದೇವಸ್ಥಾನದ ಕಾಯಂ ಅರ್ಚಕರಾಗಿದ್ದರೆಂದು ಸ್ಪಷ್ಟವಾಗುತ್ತದೆ.
ಇಂಜಾಡಿಯಲ್ಲಿದ್ದ ಮಾಧ್ವ ಸ್ವಾಮಿಗಳ ಮಠವು ಸುಟ್ಟು ಹೋಯಿತೆಂ ತಲೂ ಅವರು ಬೇರೆ ಸ್ಥಾನ ತನಗೆ ಇಲ್ಲದೇ ಇದ್ದುದರಿಂದ ಆಗಿನ ದೇವಳದ ಆಡಳಿತೆದಾರರಾದ ಹೆಬ್ಬಾರರ ಒಪ್ಪಿಗೆ ಮೇರೆಗೆ ದೇವಳದ ಒಳ ಪೌಳಿಯ ಆಗ್ನೇಯ ಮೂಲೆಯಲ್ಲಿ ಇದ್ದುಕೊಂಡು ಸ್ವಾಮಿಗಳು ದೇವಳದಲ್ಲಿ ಉಪಾಧಿ ಗಳನ್ನು ನಡೆಸುವ ಉದ್ಯೋಗವನ್ನು ವಹಿಸಿಕೊಂಡರೆಂತಲೂ, ಇವರ ಅಪೇಕ್ಷೆ ಮೇರೆಗೆ ದೇವಳದಲ್ಲಿ ಪೂಜೆ ಕೆಲಸಗಳಿಗೆ ಸಹಕರಿಸಲು ಕೊಕ್ಕಡ ಮತ್ತು ನೇರೆಂಕಿ ಎಂಬ ಎರಡು ಮನೆಯ ಎರಡು ಜನ ಮಾಧ್ವ ಹುಡುಗರು ಇಲ್ಲಿ ಬಂದು ಸೇರಿಕೊಂಡರೆಂತಲೂ, ದೇವಳದ ಆಡಳಿತೆಯು ೧೮೧೭ರಲ್ಲಿ ಬಂದ ರೆಗ್ಯುಲೇಶನ್ ಆಕ್ಟ್ ಪ್ರಕಾರ ಕಂಪೆನಿ ಸರಕಾರದ ವಶ ಬಂದ ನಂತರ ಮೊರೋ ಜರ ಪೂಜೆಯು ತಪ್ಪಿಹೋಗಿರಲೂಬಹುದೆಂದು ತಿಳಿದುಬರುತ್ತದೆ. ೧೮೦೧ರಿಂದ ೧೮೧೨ರವರೆಗೆ ಕಡುಮಾಧ್ವರಾದ ಮೈಸೂರು ದಿವಾನ್ ಪೂರ್ಣಯ್ಯನ ಬೆಂಬಲ ದಿಂದ ಇಲ್ಲಿಯ ಮಾಧ್ವ ಸ್ವಾಮಿಗಳು ಪ್ರಾಬಲ್ಯವನ್ನು ಹೊಂದಿದುರಿಂದ ಹೆಬ್ಬಾ ರರು ಸ್ವಲ್ಪ ಅವರಿಗೆ ಮರ್ಯಾದೆ ಕೊಟ್ಟದ್ದು ಕಡೆಗೆ ಹೆಬ್ಬಾರರ ಅಧಿಕಾರಕ್ಕೆ ಅದು ವಿನಾಶವನ್ನು ತಂದೊಡ್ಡಿತು-ಮೊರೋಜರೂ ತಮ್ಮ ಪೂಜೆಯನ್ನು ಕೂಡ ಬಿಡುವ ಪ್ರಸಂಗ ಬಂತು.
ಸಾಧಾರಣ ೧೮೨೦ರಲ್ಲಿ ಆಗಿನ ಮಾಧ್ವ ಸ್ವಾಮಿಗಳು ಹೆಬ್ಬಾರರಿಗೆ ಸಾಲಿ ಗ್ರಾಮಾದಿ ಹೆಚ್ಚಿನ ಮರ್ಯಾದೆಗಳನ್ನು ಕೊಟ್ಟು ಅವರನ್ನು ತನ್ನ ವಶಪಡಿಸಿ ಕೊಂಡು ದೇವಳದ ಅರ್ಚಕತನವನ್ನು ತಾವೇ ವಹಿಸಿಕೊಳ್ಳಬೇಕೆಂದು ಪ್ರಯ ತ್ನಿಸಿದ್ದರು. ಆದರೆ ಹೆಬ್ಬಾರರು ಒಪ್ಪಿದರೂ ಅರ್ಚಕರಾದ ಮೊರೋಜರು ಒಪ್ಪ ಲಿಲ್ಲ. ಅರ್ಚಕತನದ ವಿಷಯದಲ್ಲಿ ಸ್ವಾಮಿಗಳಿಗೂ ಮೊರೋಜರಿಗೂ ದೊಡ್ಡ ಹೊಡೆದಾಟವೇ ಆಗಿದೆಯೆಂದು ತಿಳಿದು ಬರುತ್ತದೆ. ಇದರಲ್ಲಿ ಸ್ವಾಮಿಗಳ ಕೈ ಮೊರೋಜರಲ್ಲಿ ಸಾಗದೇ ಇದ್ದುದರಿಂದ ಮೊರೋಜರ ಕುಟುಂಬಕ್ಕೆ ಮಾಟ ಚ್ಛಿದ್ರ ಮಾಡಿಸಿದರೆಂದೂ ಅದರ ಭಯಕ್ಕೆ ಹೆದರಿದ ಮರೋಜರು ಪೂಜೆಯ ಹಕ್ಕನ್ನು ಸ್ವಾಮಿಗೆ ಕೊಡದೆ ಕೊಕ್ಕಡದಿಂದ ಬಂದ ನಾರಾಯಣ ಎಡಪಡಿ ತ್ತಾಯ ಎಂಬವರಿಗೆ ಬಳ್ಪದ ತನ್ನ ಪಾಲಿನ ಮನೆಯೊಂದನ್ನೂ ಕೊಟ್ಟು ಅದ ರೊಂದಿಗೆ ಶ್ರೀಸುಬ್ರಹ್ಮಣ್ಯೇಶ್ವರನ ಅರ್ಚಕತನವನ್ನು ಬಿಟ್ಟುಕೊಟ್ಟು ತಾವು ಮಡಿ ಕೇರಿಯ ಹುದುಕೆರಿನಾಡು ಎಂಬಲ್ಲಿಗೆ ಹೋದರೆಂದು ತಿಳಿದು ಬರುತ್ತದೆ.
ಈ ಮೊರೋಜ ಮನೆತನಗಳಲ್ಲಿ ಒಂದು ಕುಟುಂಬದವರು ಈಗಲೂ ಬಳ್ಪದ ಸಾಧಾರಣ ನೂರ ಇಪ್ಪತ್ತು ರೂಪಾ ತಸದೀಕು ಇರುವ ಬಹಳ ಪುರಾ ತನ ದುರ್ಗಾಪರಮೇಶ್ವರೀ ದೇವಸ್ಥಾನದ ಪೂಜೆ, ಆಡಳಿತೆಯನ್ನು ನಡೆಸುತ್ತಿ ದ್ದಾರೆ. ಸುಬ್ರಹ್ಮಣ್ಯದಲ್ಲಿ ಮೊರೋಜರು ಇದ್ದರೆಂಬುದಕ್ಕೆ ಅವರ ಹೆಸರಿನ ಮೊರೋಜ ಹಿತ್ತಿಲು ಎಂಬ ಸ್ಥಳವಿರುವುದು ದೃಷ್ಟಾಂತವಾಗಿದೆ. ಈಗ ಇದ ರಲ್ಲಿ ಅವರ ಮತದವರೇ ಆದ ಒಳದೇವ ಕಾರ್ಯದ ದೇವಗದ್ದೆ ಈಶ್ವರಪ್ಪ ಯ್ಯನವರ ಮಕ್ಕಳು ಇದ್ದಾರೆ.
Tagged with
dharmabrashta,
lekhana
ಉಮಾನಾಥ ಕುಮಾರ್, ಕೋಡಿಕಲ್
ಭೂಪಟದಲ್ಲಿ ತ್ರಿಕೋನ ಆಕೃತಿಯ ಅತ್ಯಂತ ಸುಂದರವಾಗಿ ನಮ್ಮ ರಾಷ್ಟ್ರ ಕಾಣುತ್ತಿದೆ. ಹಿಂದೂ ಮಹಾಸಾಗರಕ್ಕೆ ರಾಷ್ಟ್ರದ ಪಶ್ಚಿಮ ಮತ್ತು ಪೂರ್ವ ಮತ್ತು ದಕ್ಷಿಣದ ಭೂಭಾಗಗಳು ವ್ಯಾಪಿಸಿಕೊಂಡಿರುವುದೇ ನಮ್ಮಲ್ಲಿ ಪುಣ್ಯಕ್ಷೇತ್ರ ಗಳು ಹುಟ್ಟಿಕೊಳ್ಳಲು ಕಾರಣ ಎಂಬ ಮಾತು ಸುಳ್ಳಲ್ಲ. ಸರ್ವಮತಗಳು ಅಷ್ಟೇ ಭಾಷೆ, ಸಂಸ್ಕೃತಿಗಳು ಪಾವಿತ್ರ್ಯತೆಗಳು ಐಕ್ಯತೆಯು ಬಲವಾಗಿ ವಿಜೃಂಭಿಸುತ್ತಿದೆ. ಈ ವಿಶಾಲ ರಾಷ್ಟ್ರವು ಭೂಮಧ್ಯರೇಖೆಯಲ್ಲಿದ್ದು ಉತ್ತರ ಭಾಗದಲ್ಲಿ ದಟ್ಟ ಶೀತ ವಲಯವಿದ್ದರೆ ದಕ್ಷಿಣ ಭಾಗದಲ್ಲಿ ಅತ್ಯಂತ ಹೆಚ್ಚು ಉಷ್ಣತೆ ವಿಭಿನ್ನ ಅಸಮತೋ ಲನದ ಹವಾಮಾನ ಇರುವುದನ್ನು ಕಾಣಬಹುದು. ಇಂತಹ ಪ್ರದೇಶದ ಜನರು ಕರಿವರ್ಣದವರಾಗಿದ್ದಾರೆ. ಮಾನವೀಯ ಗುಣದವರಾಗಿದ್ದಾರೆ. ಸಮುದ್ರತೀರ ದಲ್ಲಿ ಹುಟ್ಟಿದವರಿಗೆ ಬುದ್ದಿ ಮತ್ತು ತಂತ್ರಜ್ಞಾನ ಬಹಳ ಬೇಗನೆ ತಲೆಗೆ ಹೊಕ್ಕುತ್ತದೆಂ ಬುದನ್ನು ಇನ್ನೊಮ್ಮೆ ಅದರ ಬಗೆಗೆ ಹೇಳುವ ಅಗತ್ಯವಿಲ್ಲ. ಇಡೀ ನಾಡು ಜಾತಿಗ ಳಿಂದ ಆವೃತಗೊಂಡರೂ ಅಷ್ಟೇ ಕೆಲಸಗಳು ಮೀಸಲಿದ್ದು, ಸಂಪತ್ತಿಗೆ ಕೊರತೆ ಇಲ್ಲ. ಭಾವೈಕ್ಯತೆ ಇದ್ದುದರಿಂದ ಜಗತ್ತಿನಲ್ಲಿ ಇವತ್ತು ಬಹುದೊಡ್ಡ ಪ್ರಜಾಪ್ರಭುತ್ವ ವನ್ನು ಹೊಂದಿದ್ದೇವೆ.
ಆರ್ಥಿಕವಾಗಿ ನಾವು ಎಷ್ಟು ಮುಂದೆ ಸಾಗುತ್ತಿದ್ದೇವೆಯೋ ಅಷ್ಟೇ ವೇಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರ, ಸಂಶೋಧನೆ, ಸಾಧನೆಗಳ ಮೈಲಿಗಲ್ಲು ಪ್ರಪಂಚದ ಇತಿಹಾಸದಲ್ಲಿ ಸ್ಥಾಪಿಸಿದ್ದೇವೆ.
ಆದರೆ ಆಧುನಿಕ ೨೧ನೇ ಶತಮಾನದಲ್ಲಿ ಇನ್ನೂ ಜೀವಂತ ಇರುವ ರಾಷ್ಟ್ರದ ಕೆಲವು ರಾಜ್ಯಗಳ ಪುರಸಭೆಗಳ ಆಡಳಿತ ವ್ಯಾಪ್ತಿಯಲ್ಲಿ ಚರಂಡಿಗೆ ಮುಳುಗಿ ಮಲತ್ಯಾಜ್ಯ ಮೇಲಕ್ಕೆತ್ತಿ ಚಾಕರಿ ಜೀವನ ಸಾಗಿಸುವವರು ಇದ್ದಾರೆ. ಕಕ್ಕಸದಲ್ಲಿ ಮಾನವ ವಿಸರ್ಜಿತ ಲದ್ದಿ ತಲೆ ಮೇಲೆ ಹೊತ್ತು ಬದುಕುವವರೂ ಇದ್ದಾರೆ. ಎಲ್ಲ ಮತಗಳ ಜನರು ಇದಕ್ಕಾಗಿಯೇ ಕೆಲವು ನಿರ್ದಿಷ್ಟ ಜಾತಿಗಳ ಬಳಕೆಯ ಸ್ಪಷ್ಟ ಚಿತ್ರ ಕಣ್ಮುಂದೆ ಇದ್ದಾಗ ಡೆಮಾಕ್ರಸಿ ರಕ್ಷಿಸಬೇಕಾದ ಧುರೀಣರ ನಿಜಬಣ್ಣ ಬಯ ಲಾದಂತಿದೆ. ಇಲ್ಲೊಂದು ತಮಾಷೆ ಎಂದರೆ ಇಂತಹ ಅನಿಷ್ಠ ಪದ್ಧತಿ ಈಗ ಎಲ್ಲೂ ಇಲ್ಲ. ಇದ್ದರೆ ಹುಡುಕಿ ಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಎರಡು ವರ್ಷಗಳ ಹಿಂದೆ ಜಾಹೀರಾತುಗಳಲ್ಲಿ ಘೋಷಿಸಲಾಗಿತ್ತು. ಈಗ ನಿಜ ವಿಷಯ ತಿಳಿದಿರಬಹುದೋ ಏನೋ. ತಲೆ ಮರೆಸಿಕೊಂಡಿರುವ ಸುದ್ದಿ ಕೂಡಾ ಆಗಿದೆ. ಇಂಥಹುದನ್ನು ಹೇಳಲು ಹೇಸಿಗೆ ಎಂದೆನಿಸುತ್ತದೆ. ಶತಮಾನಗಳ ಹಿನ್ನೆಲೆ ಚರಿತ್ರೆ ಹೇಳುವಂತೆ ಸಮಾಜದಲ್ಲಿ ಎಷ್ಟು ಜಾತಿಗಳಿದೆಯೋ ಅಷ್ಟೇ ಚಾಕರಿ ಕಸುಬುಗಳನ್ನು ಹುಟ್ಟು ಹಾಕಲಾಗಿದೆ. ಅಜ್ಞಾನದಲ್ಲಿ ಎಷ್ಟು ಜಾತಿಗಳಿ ದೆಯೋ ಅಷ್ಟೇ ಚಾಕರಿ ಕಸುಬುಗಳನ್ನು ಹುಟ್ಟು ಹಾಕಲಾಗಿದೆ.
ಅಜ್ಞಾನದ ಪರಮಾವಧಿ ಅನ್ನುವುದಕ್ಕೆ ಅಡ್ಡಿಯಿಲ್ಲ. ಅನಕ್ಷರಸ್ಥ ಪಶುಗಳಂ ತಹ ಜನರು ಎಲ್ಲೂ ಉತ್ತಮ ಕೆಲಸದ ಅವಕಾಶ ಸಿಗದಿದ್ದರೆ ಕೊನೆಗೆ ಬದು ಕಲು ದಾರಿ ಕಾಣದಿದ್ದಾಗ ಇಂತಹ ಮೌಢ್ಯಕ್ಕೆ ಶರಣು ಹೋಗುತ್ತಿರುವುದು. ಅಕ್ಷರಶಃ ಸತ್ಯ. ಅದರ ಸೃಷ್ಟಿಗೆ ಕಾರಣಕರ್ತ ಪಾಳೇಗಾರ ಕುರುಹು ನವಪೀಳಿಗೆ ಯಲ್ಲಿ ಉಳಿದಂತಿದೆ. ಜಾತಿಯು ಇಡೀ ಸಮಾಜವನ್ನೇ ಕೊರೆದು ಹಾಳು ಮಾಡುತ್ತಿದೆ. ಬೇರೂರಿದ ಅನಿಷ್ಠತೆ ತೊಲಗಿದರೆ ಸಂಪ್ರದಾಯ ಉಳಿಯುವು ದಿಲ್ಲ. ಪ್ರಾಯಶಃ ಹಳೇ ತಲೆಮಾರು ಜೀವಿಗಳಲ್ಲಿ ಇದ್ದೇ ಇರುವಂತದ್ದು. ಅವರು ಸಮಪಾಲು ಗಳಿಸಿದರೆ ರಕ್ತ ಸಂಬಂಧ ಬೆಳೆಸಿದರೆ ಇಂತಹ ಅನಿಷ್ಟ ಕೆಲಸಗಳನ್ನು ಎಲ್ಲ ಮತಗಳ ಜನ ಮಾಡಬೇಕಾಗುತ್ತದೆ. ಇಂಥ ನಿಗೂಢತೆ ಅವರ ನೇತಾಗ ಳಲ್ಲಿ ಇದ್ದುದರಿಂದಾಗಿ ಅಂತಹ ಹೊಲಸು ಮಲ ಹೊರುವ ಪದ್ಧತಿ ಶತಮಾನ ಗಳ ಹಿಂದೆಯೇ ಇದನ್ನು ನಿರ್ದಿಷ್ಟ ಜಾತಿಗಳಿಗೆ ಮೀಸಲು ಇಟ್ಟಂತಿದೆ ಎನ್ನಲಾ ಗಿದೆ.
ವಿಶ್ವದ ಪ್ರತಿಷ್ಠೆಯ ನೋಬೆಲ್ ಪಾರಿತೋಷಕ, ಜ್ಞಾನಪೀಠ ಇನ್ನಿತರ ಪ್ರಶಸ್ತಿ ಗಳು ಶೂದ್ರರಿಗೆ ಮತ್ತು ದಲಿತರಿಗೆ ದೊರೆಯುವುದಿಲ್ಲ. ಪ್ರಧಾನಿ ಪಟ್ಟವೂ ಸಾಧ್ಯ ವಾಗುವುದಿಲ್ಲ. ಜಾತ್ಯತೀತ ವ್ಯವಸ್ಥೆಯಲ್ಲಿ ಅದ್ಯಾಕೆ ಕಷ್ಟವಾಗುತ್ತಿದೆ? ಅದರ ಹಿನ್ನಲೆ ಯಲ್ಲಿ ಆಳವಾಗಿ ಅಥೈಸಿಕೊಂಡರೆ ಅರಿವು ಮೂಡಬಹುದು. ಕೆಲವು ವರ್ಷಗಳ ಹಿಂದೆ ನಮ್ಮಲ್ಲಿನ ದೊಡ್ಡ ದೊಡ್ಡ ಬುದ್ದಿಜೀವಿಗಳು ಸಮಾಜ ಪಂಡಿತರು ಜಾತಿ ಬಿಡಿ ಮತ ಬಿಡಿ ಭಾರತೀಯನಾಗಲು ಕೈಜೋಡಿಸಿ ಭಾರೀ ಸ್ಲೋಗನ್ ಆರ್ಭಟಿ ಸುತ್ತಾ ಮೆರವಣಿಗೆ ನಡೆಸಿದ್ದಾರೆ. ಪಾಪ ಅವರ ಶ್ರಮಕ್ಕೆ ಪರಿಣಾಮ ಏನಾದರೂ ಆಗಿದೆಯೇ? ಮಲ ತೆಗೆಯುವಂತಹ ಅತ್ಯಂತ ಹೇಯ ಪದ್ಧತಿ ಯಾವ ರಾಷ್ಟ್ರ ದಲ್ಲಿಯೂ ಇಲ್ಲ. ವಿದೇಶಗಳಲ್ಲಿ ಶೌಚಾಲಯಗಳು ವೈಜ್ಞಾನಿಕವಾಗಿ ಇದೆ. ಅಚ್ಚರಿ ಎಂದರೆ ನಮ್ಮಲ್ಲಿ ಹಲವು ಕಡೆ ಅದರ ಬಗ್ಗೆ ದುರ್ನಾತ ಇದ್ದು. ಅದರ ನಿರ್ಮೂ ಲನಕ್ಕೆ ಕಾನೂನಿನ ನಿಷೇಧ ಇದ್ದಂತಿದ್ದು ಏನೂ ಪ್ರಯೋಜನ ಇಲ್ಲದಂತಿದೆ. ಅದರ ವಿರುದ್ದ ಯಾವ ಸಂಘಟನೆಯ ಹೋರಾಟವೂ ಇಲ್ಲದೇ ಇರುವುದು ಅನಿಷ್ಠತೆ ಇನ್ನೂ ಜೀವಂತ ಇರುವುದಕ್ಕೆ ಕಾರಣವಾಗಿದೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೇಂದ್ರದಲ್ಲಿ ಜನತಾ ಪಕ್ಷದ ಸರ್ಕಾರವಿದ್ದಾಗ ಹುಟ್ಟು ಹೋರಾಟಗಾರ ಬಾಬೂ ಜಗಜೀವನ್ ರಾಮ್ ಭಾರತದ ಉಪಪ್ರಧಾನಿಯಾಗಿದ್ದರು. ಅವರ ಅಧಿಕಾರದ ಅವಧಿಯಲ್ಲಿ ರಾಷ್ಟ್ರಾದ್ಯಂತ ಮಲ ಹೊರುವ ಪದ್ಧತಿಗೆ ಕಾನೂನಿನ ನಿಷೇಧ ಹೇರಿಕೆಗೆ ಹಾಗೂ ಪರ್ಯಾಯ ಹೊಸ ವ್ಯವಸ್ಥೆಗೆ ಪಾರ್ಲಿಮೆಂಟಿನಲ್ಲಿ ಗಂಭೀರವಾಗಿ ಚರ್ಚೆ ನಡೆದಿತ್ತು. ಪ್ರತೀ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲೂ ಪಾಯಿಖಾನೆಗಳಿಗೆ ಆಳಗುಂಡಿ ನಿರ್ಮಾಣ ವ್ಯವಸ್ಥೆ ಕಡ್ಡಾಯಗೊಳಿಸಿ ನಿಯಮಾವಳಿಗಳ ತಪ್ಪಿತಸ್ಥರಿಗೆ ಅಪಾರ ದಂಡ ಹಾಗೂ ಕಠಿಣ ಶಿಕ್ಷೆಗೊಳಪಡಿಸುವ ಶಿಫಾರಸ್ಸು ಕೇಂದ್ರ ಸರ್ಕಾರದಿಂದ ಎಲ್ಲಾ ಮುಖ್ಯ ಮಂತ್ರಿಗಳಿಗೆ ಹಸ್ತಾಂತರಿಸಲಾಗಿತ್ತು.
ಟೆಕ್ನಾಲಜಿಯಲ್ಲಿ ಮುಂದಿರುವ ನಮ್ಮ ರಾಜ್ಯದಲ್ಲೂ ಮಲ ಹೊರುವ ಕೆಲಸ ಸ್ವಲ್ಪ ಅಧಿಕವಾಗಿಯೇ ಇತ್ತಂತೆ. ಆವಾಗ ರಾಜ್ಯ ಸರ್ಕಾರದಲ್ಲಿ ಮುನಿಸಿಪಾಲಿಟಿ ಆಡಳಿತ ಮತ್ತು ಸಮಾಜ ಕಲ್ಯಾಣ ಸಚಿವರಾಗಿದ್ದ ಬಸವಲಿಂಗಪ್ಪನವರು ಮಾಡಿದ ಸೇವೆ ಮರೆಯುವಂತಿಲ್ಲ. ರಾಜ್ಯದ ಸ್ಥಳೀಯ ಆಡಳಿತ ಉನ್ನತಾಧಿಕಾರಿಗಳ ಸಭೆ ಕರೆದು ಮಲ ಹೊರುವ ಕೆಲಸದ ನಿಷೇಧ ಹೇರಿಕೆಯಾಗಿತ್ತು. ಕಾರ್ಮಿಕರಿಗೂ ಪರ್ಯಾಯ ವ್ಯವಸ್ಥೆಗೆ ಹೆಚ್ಚು ಅನುದಾನಕ್ಕೂ ಒತ್ತು ನೀಡಲಾಗಿತ್ತೆಂಬುದು ಮಾಧ್ಯ ಮಗಳಲ್ಲಿ ವರದಿಯಾಗಿತ್ತು. ಆದರೆ ಹಲವು ಕಡೆ ಅಸಡ್ಡೆ, ಬೇಜವಾಬ್ದಾರಿಯಿಂದ ನಮ್ಮಲ್ಲಿ ಗುಂಡಿ ಮಲ ತೆಗೆಯುವ ಅನಿಷ್ಠ ಪದ್ದತಿ ಅಲ್ಲೊಂದು ಇಲ್ಲೊಂದು ಜೀವಂತ ಇರುವುದನ್ನು ಮಾಧ್ಯಮಗಳು ಬೆಳಕಿಗೆ ತಂದಿದೆ. ಆದರೆ ಇಲ್ಲಿ ಯಾರಿಗೂ ಶಿಕ್ಷೆಯಾದ ಬಗ್ಗೆ ವರದಿಗಳು ಇಲ್ಲ.
ಒಳಚರಂಡಿ, ಕಕ್ಕಸು ಗುಂಡಿಯ ಮಲತ್ಯಾಜ್ಯ ತೆಗೆಯಲು ಕಾರ್ಮಿಕರ ಬಳಕೆ ಮಾಡದಿರಿ. ಈಗ ಪೈಪ್ ಮೂಲಕ ಗುಂಡಿ ತ್ಯಾಜ್ಯ ಎತ್ತಲು ಸಾಕಷ್ಟು ಸುಸಜ್ಜಿತ ಯಾಂತ್ರಿಕ ಬೃಹತ್ ಟ್ಯಾಂಕರ್‌ಗಳ (ಸಕ್ಕಿಂಗ್) ಸೇವೆ ಲಭ್ಯವಿದ್ದು, ಬಳಕೆದಾರರು ಇತ್ತ ಗಮನ ಹರಿಸಿದರೆ ಖಂಡಿತಾ ಮಲ ಹೊರುವ ಅನಿಷ್ಠ ಪದ್ಧತಿಗೆ ತೆರೆ ಬೀಳುವ ಸಾಧ್ಯತೆ ಇದೆ.
Tagged with
chavadi
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ಎಂಟು ವರ್ಷಗಳ ಹಿಂದೆ ಮದುವೆಯಾಗಿ ಪತ್ನಿಗೆ ಡೈವೋರ್ಸ್ ನೀಡಿದ್ದೇನೆ. ನನಗೆ ಸ್ವಂತ ಮನೆಯಿದೆ. ನನ್ನ ಮಗಳು ಪತ್ನಿಯ ಜೊತೆ ಇದ್ದಾಳೆ. ನನಗೆ ಆರ್ಥಿಕ ಸಮಸ್ಯೆಗಳಿಲ್ಲ. ನಾನು ೪೦ರ ವಯಸ್ಸಿನ ಮಹಿಳೆಯ ಜೊತೆ ಸಂಬಂಧವಿರಿಸಿದ್ದೇನೆ. ಆಕೆ ನಾನು ಕರೆದಾಗ ಮನೆಗೆ ಬರುತ್ತಾಳೆ. ನಾವು ಸೆಕ್ಸ್‌ನಲ್ಲಿ ಸ್ವಯಂ ಆಸಕ್ತಿಯಿಂದ ಸುಖ ಪಡೆಯುತ್ತೇವೆ. ಆಕೆ ಸೆಕ್ಸ್‌ನಲ್ಲಿ ನನಗಿಂತ ಎಕ್ಸ್ ಫರ್ಟ್. ಮೊದಮೊದಲು ನನ್ನನ್ನು ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದಳು. ಆದರೆ ಈಗ ಆ ಬಗ್ಗೆ ಕೇಳುತ್ತಿಲ್ಲ. ನನಗೂ ಬೇರೆ ಮದುವೆಯಾಗಲು ಮನಸ್ಸಿದೆ. ಆಕೆಯ ಜೊತೆ ಎಷ್ಟು ಬಾರಿ ಸೆಕ್ಸ್ ಮಾಡಿದರೂ ಆಕೆಯ ಚಪಲ ತಗ್ಗುವುದಿಲ್ಲ. ಕೆಲವೊಮ್ಮೆ ನಾನು ಆಕೆಗೆ ಬೇಕೆನಿಸಿದಂತೆ ಸುಖ ಕೊಡದಿದ್ದರೆ ಆಕೆಗೆ ನನ್ನ ಮೇಲೆ ಕೋಪ ಬರುತ್ತದೆ. ನನಗೆ ಆಕೆಯಿಂದ ಹುಚ್ಚು ಹಿಡಿದಂತಾ ಗಿದೆ. ನನ್ನ ಸಮಸ್ಯೆಯೇನೆಂದರೆ ನಾನು ಆಕೆಯೊಂದಿಗೆ ಸೇರಿದ ಮರುದಿನ ಜನನಾಂಗದ ಚರ್ಮವನ್ನು ಹಿಂದಕ್ಕೆ ಸರಿಸುವ ಜಾಗದ ಮಧ್ಯದಲ್ಲಿ ಕೀವು ತುಂಬಿದ ಕೆಲವು ಗುಳ್ಳೆಗಳು ಕಂಡುಬರುತ್ತವೆ. ಇದು ಯಾವುದರ ಲಕ್ಷಣ? ಕೆಲವೊಮ್ಮೆ ಯಾವುದಾದರೂ ರೋಗ ಹರಡಿರಬಹುದೇ ಎಂದು ಭಯವಾಗುತ್ತಿದೆ. ಮೆಡಿಕಲ್‌ನಿಂದ ಕ್ರೀಂ ತಂದು ಹಚ್ಚಿದರೂ ಪರಿಹಾರ ಸಿಕ್ಕಿಲ್ಲ. ನಾನು ವೈದ್ಯರಲ್ಲಿ ಪರೀಕ್ಷೆ ಮಾಡಿಸಬೇಕೆ? ನನಗೆ ಸಲಹೆ ಕೊಡಿ.
ಸಲಹೆ: ಜನನಾಂಗದಲ್ಲಿ ಆಗಾಗ ಮೂಡುವ ಕೀವು ತುಂಬಿದ ಗುಳ್ಳೆಗಳಿಂದ ಸಮಸ್ಯೆಗೆ ಈಡಾಗಿದ್ದೀರಿ. ಇದಕ್ಕೆ ನಿರ್ದಿಷ್ಟ ಕಾರಣಗ ಳನ್ನು ಸೂಚಿಸಲು ಸಾಧ್ಯವಿಲ್ಲ. ನಿಮ್ಮ ಅತಿಯಾದ ಕಾಮವಾಂಛೆಯೂ ಇದಕ್ಕೆ ಕಾರಣವಾಗಿರಬಹುದು. ಯಾವುದೂ ಅತಿಯಾದರೆ ಆರೋಗ್ಯಕ್ಕೆ ಹಾನಿ ತರ ಬಲ್ಲುದು ಎನ್ನುವುದು ನಿಮಗೆ ತಿಳಿದಿದೆ ತಾನೇ? ನೀವು ವಿವಾಹವಾಗಿದ್ದು, ಹೆಂಡತಿ ಯನ್ನು ತೊರೆದ ಮೇಲೆ ಬೇರೊಂದು ಹೆಂಗಸಿನ ಸಹವಾಸ ಮಾಡಿದ್ದೀರಿ. ಆಕೆ ನಿಮ್ಮಂತೆಯೇ ಬೇರೆ ಗಂಡಸರ ಜತೆ ಸಂಬಂಧವಿರಿಸಿಕೊಂಡಿರಬಹುದಲ್ಲವೇ? ಆಕೆಯ ಜತೆ ನಿಮಗೆ ಬೇಕಾದಂತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದೀರಿ. ಅತಿಯಾದ ಲೈಂಗಿಕ ಕ್ರಿಯೆ ನಡೆಸುವುದರಿಂದ ಇಂತಹ ಸಮಸ್ಯೆ ಸಾಮಾನ್ಯ. ವಾರದಲ್ಲಿ ಕೆಲವು ದಿನ ಮಾತ್ರ ಪರಿಪೂರ್ಣ ಸೆಕ್ಸ್ ನಡೆಸಿ. ಇನ್ನುಳಿದ ದಿನ ಆರಾಮ ಪಡೆಯಿರಿ. ಖಾರ, ಮಸಾಲೆ ಹೆಚ್ಚಿ ರುವ ಆಹಾರ ಪದಾರ್ಥ ಸೇವಿಸಿ, ನೀರು ಕಡಿಮೆ ಸೇವಿಸಿದರೆ ಜನನಾಂಗದ ತುದಿ ಉರಿಯುವ, ನೀರು ಗುಳ್ಳೆ ಏಳುವ ಸಾಧ್ಯತೆಯಿದೆ. ಇದಕ್ಕೆ ಚಿಕಿತ್ಸೆ ಬೇಕು. ನೀವು ಚರ್ಮರೋಗ ತಜ್ಞರಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಿ. ಔಷಧಿ ಅಥವಾ ಕ್ರೀಂ ಹಚ್ಚುವುದರಿಂದ ಪರಿಣಾಮ ದೊರೆಯುತ್ತದಾದರೂ ಅದು ತಾತ್ಕಾಲಿಕ. ಈ ಕೂಡಲೇ ರಕ್ತ ಪರೀಕ್ಷೆ ಮತ್ತು ಹೆಚ್‌ಐವಿ ಪರೀಕ್ಷೆ ಮಾಡಿಸಿ. ಯಾವುದಾದರೂ ಸೋಂಕು ತಗಲಿ ದ್ದಲ್ಲಿ ತಿಳಿಯುತ್ತದೆ. ಭಯ ಬೇಡ. ಆಕೆಗೆ ಅತಿಯಾದ ಆಸಕ್ತಿ ಇದೆ ಎಂದು ಪ್ರತಿನಿತ್ಯ ಲೈಂಗಿಕ ಕ್ರಿಯೆ ನಡೆಸಲೇಬೇಕೆಂದಿಲ್ಲ. ಆಕೆಯ ಲೈಂಗಿಕ ಬಯಕೆಯನ್ನು ತಣಿಸಲು ಸಂಭೋಗದ ಬದಲು ಇನ್ನಿತರ ಆರೋಗ್ಯ ಪೂರ್ಣ ಮಾರ್ಗಗಳಿವೆ. ಆ ಬಗ್ಗೆ ತಿಳಿದುಕೊಳ್ಳಿ. ಇನ್ನು ಆಕೆಯನ್ನು ಮದುವೆಯಾಗುವುದಾದಲ್ಲಿ ಆಕೆಯ ಜೊತೆ ಚರ್ಚಿಸಿ. ಮದುವೆಯಾ ಗದೆ ಲೈಂಗಿಕ ಸಂಬಂಧ ಹೊಂದುವುದು ಅಪಾಯಕಾರಿ. ನಿಮ್ಮ ಆರೋಗ್ಯ ವನ್ನು ಚೆನ್ನಾಗಿ ಕಾಪಾಡಿಕೊಳ್ಳಿ. ಲೈಂಗಿಕ ಸಂಗಾತಿಗಳನ್ನು ಪದೇ ಪದೇ ಬದಲಾಯಿಸಿ ಕೊಳ್ಳುವುದು ಅಪಾಯಕಾರಿಯೂ ಆಗಿದೆ.
Tagged with
gupta
ಮೇಷ : ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿದೆ.
ವೃಷಭ : ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯಲಿದೆ.
ಮಿಥುನ : ಆಧ್ಯಾತ್ಮಿಕ ಕಾರ್ಯಗಳನ್ನು ಮಾಡಲಿದ್ದೀರಿ.
ಕರ್ಕಾಟಕ: ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.
ಸಿಂಹ : ವಿರೋಧಿಗಳಿಂದ ತೊಂದರೆ ಇರುತ್ತದೆ.
ಕನ್ಯಾ : ದೇವತಾ ಕ್ಷೇತ್ರಗಳ ದರ್ಶನ ಮಾಡುತ್ತೀರಿ.
ತುಲಾ : ಕುಟುಂಬದಲ್ಲಿ ಒತ್ತಡ ಇರುತ್ತದೆ.
ವೃಶ್ಚಿಕ : ಕೆಲಸ ಕಾರ್ಯಗಳು ಮಂದ ಗತಿಯಿಂದ ನಡೆಯಲಿದೆ.
ಧನು : ಬಂಧು ಮಿತ್ರರ ಸಹಾಯ ದೊರೆಯುವುದು.
ಮಕರ : ವ್ಯಾಪಾರ ವ್ಯವಹಾರಗಳು ಉತ್ತಮವಾಗಿ ನಡೆಯಲಿದೆ.
ಕುಂಭ : ಖರ್ಚು ಹೆಚ್ಚಾಗಿದ್ದು, ಆದಾಯ ಕಡಿಮೆ ಇರುತ್ತದೆ.
ಮೀನ : ಮನೆಯಲ್ಲಿ ಒಮ್ಮತದ ಕೊರತೆ ಇರುತ್ತದೆ.
Tagged with
bhavishya
ಕಾಸರಗೋಡು: ಹೌಸ್‌ಕೀಪಿಂಗ್, ಸೂಪರ್ ವೈಸರ್ ಬೇಕು ೯೯೧೬೧೧೯೪೬೯
ಪಿವಿಎಸ್: ಕಂಪೆನಿಗೆ ಕ್ಲರ್ಕ್ ಬೇಕು ೯೭೪೩೩೯೦೭೯೭
ಮೂಲ್ಕಿ: ಪ್ರಿಂಟರ್ ಬೇಕು ೮೭೪೮೮೭೦೬೯೧.
ಕಾವೂರು: ಲೇಡೀಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು: ಕಚೇರಿ ಕೆಲಸಕ್ಕೆ ಹುಡುಗರು ಬಏಕು ೯೪೪೮೮೪೩೪೯೯.
ಬಂದರ್: ಕೆಲಸಕ್ಕೆ ಜನ ಬಏಕು ೯೪೪೮೩೦೭೬೭೯೯.
ಅಳಕೆ: ಪ್ರಿಂಟಿಂಗ್ ಪ್ರೆಸ್‌ಗೆ ಬೈಂಡಿಂಗ್ ತಿಳಿದಿರುವವ ಯುವತಿಯರು ಬೇಕು ೯೮೮೬೬೯೨೨೧೫.
ಮಂಗಳೂರು: ಪವರ್ ಸರ್ವಿಸ್ ಸಂಸ್ಥೆಗೆ ಡೀಸೆಲ ಮೆಕ್ಯಾನಿಕ್ ಬೇಕು. ೯೮೪೫೨೫೩೫೮೨
ಕಾರ್ಕಳ : ಬಾರ್ & ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೇಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ್ ಬೇಕು ೯೪೪೮೧೦೯೬೮೬.
ಕೊಣಾಜೆ : ಸ್ಟುಡಿಯೋಗೆ ಕೆಲಸಕ್ಕೆ ಜನ ಬೇಕು ೮೭೨೨೭೨೧೦೫೦.
ಉಡುಪಿ : ಸಸ್ಯಾಹಾರಿ ಹೊಟೇಲಿಗೆ ತಿಂಡಿ ಮಾಡುವವರು, ಸಪ್ಲಾಯರ್ ೯೬೬೩೦೯೮೦೨೫.
ಕಾವೂರು : ಕಾರ್ ಡ್ರೈವರ್ ಬೇಕು ೭೨೦೪೬೪೩೪೫೫.
ಮಂಗಳೂರು : ಸೇಲ್ಸ್ ಗರ್ಲ್ಸ್ ಬೇಕು ೮೨೭೭೧೬೫೬೬೨.
ಮಂಗಳೂರು : ಕಾರ್ ಡ್ರೈವರ್‌ಬೇಕು ೦೮೨೪-೪೨೬೮೫೨೪.
ಮಂಗಳೂರು : ಕಂಪ್ಯೂಟರ್ ತರಗತಿ, ಟ್ಯೂಷನ್ ಮತ್ತು ಸಂಸ್ಥೆಯ ಮೇಲ್ವಿಚಾರಣೆ ಗೆ ಜನ ಬೇಕು ೭೨೦೪೬೪೩೪೫೫.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಮ್ಯಾನ್ ಬೇಕು ೯೮೪೪೪೬೪೩೭೭.
ಮೋರ್ಗನ್‌ಗೇಟ್ : ಟ್ಯೂಷನ್ - ಕಂಪ್ಯೂಟರ್ ತರಗತಿ ನೀಡಲು ಪುರುಷರು, ಮಹಿಳೆಯರು ಬೇಕು ೯೯೭೨೭೨೫೩೫೭.
ಕೊಡಿಯಾಲ್‌ಬೈಲ್ : ಟ್ರಾವೆಲ್ ಏಜೆನ್ಸಿಗೆ ಲೇಡೀಸ್ ಸ್ಟಾಫ್ ಬೇಕು ೨೪೯೭೮೬೨.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೈಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಟೈಲರ್ & ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.
ಕಾವೂರು : ಲೇಡಿಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು : ಲೇಡಿಸ್ ಹಾಸ್ಟೆಲ್‌ಗೆ ಮಹಿಳಾ ಅಡುಗೆಯವರು ಬೇಕು ೯೨೪೧೨೧೪೧೨೨.
ಮಂಗಳೂರು : ಮನೆ ಬಾಡಿಗೆಗೆ ಇದೆ ೯೮೮೬೩೩೦೨೭೧.
ಸುರತ್ಕಲ್ : ಬಟ್ಟೆ ಅಂಗಡಿ ಕೆಲಸಕ್ಕೆ ಆಸುಪಾಸಿನ ಜನ ಬೇಕು ೮೪೯೪೮೫೮೫೪೪.
ಮಂಗಳೂರು : ಎಕೌಂಟೆಂಟ್, ಶೋರೂಂಗೆ ಜನ ಬೇಕು ೭೨೫೯೧೨೪೬೯೨.
ಬಲ್ಮಠ : ಬುಕ್‌ಸ್ಟಾಲ್‌ಗೆ ಜನ ಬೇಕು ೨೪೨೪೭೪೪.
Tagged with
udyoga
ಪರೀಕ್ಷೆಯಲ್ಲಿ ಫೇಲ್
ಮಂಗಳೂರು: ಪರೀಕ್ಷೆಯಲ್ಲಿ ಫೇಲ್ ಆದ ಚಿಂತೆಯಲ್ಲಿ ಮಣಿಪಾಲ ಎಂಐಟಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ಕೊಲ್ಕತ್ತಾ ಮೂಲದ ಪ್ರೀತಮ್ ಬ್ಯಾನರ್ಜಿ (೨೧) ಎಂದು ಗುರುತಿಸಲಾಗಿದೆ.
ಪ್ರೀತಮ್ ಆರನೇ ಸೆಮಿಸ್ಟರ್‌ನ ಮೆಕ್ಯಾನಿಕಲ್ ವಿದ್ಯಾರ್ಥಿಯಾಗಿದ್ದ. ಉತ್ತೀರ್ಣರಾದ ಮೆಕ್ಯಾನಿಕಲ್ ವಿದ್ಯಾರ್ಥಿಗಳನ್ನು ಎಂಐಟಿಯಿಂದ ತರಬೇತಿಗಾಗಿ ಮಂಗಳೂರಿನ ಎಂಆರ್‌ಪಿಎಲ್‌ಗೆ ಕಳುಹಿಸಿ ಕೊಡಲಾಗುತ್ತದೆ. ಆದರೆ ಐದು ವಿಷಯಗಳಲ್ಲಿ ಅನುತ್ತೀರ್ಣರಾದ ಪ್ರೀತಮ್‌ಗೆ ಮಾತ್ರ ಹೋಗಲು ಸಾಧ್ಯವಾಗಿರಲಿಲ್ಲ. ಈ ವಿಷಯವನ್ನು ಎಂಆರ್‌ಪಿಎಲ್‌ನಲ್ಲಿ ಉದ್ಯೋಗದಲ್ಲಿ ರುವ ತನ್ನ ತಂದೆಯ ಜೊತೆ ಹೇಳಿಕೊಳ್ಳಲು ಸಾಧ್ಯವಾಗದ ಕೊರಗಿನಲ್ಲಿ ಪ್ರೀತಮ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ : ಬ್ರಹ್ಮಾವರ ಸಮೀಪದ ಕಾರ್ಕಡ ನಿವಾಸಿ ಕಮಲಾ(೭೦) ಎಂಬವರು ಮನೆಯ ಬಾವಿ ದಂಡೆಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
Tagged with
cnews
ಮಂಗಳೂರು: ಅಪರಿಚಿತ ಯುವಕನೋರ್ವ ನಾರು ಹಗ್ಗವನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರು ಬಾವಿ ಬಳಿಯ ಫಲ್ಗುಣಿ ನದಿ ಕಿನಾರೆಯಲ್ಲಿ ಬೆಳಕಿಗೆ ಬಂದಿದೆ.
ಅಂದಾಜು ೨೮-೩೦ ವರ್ಷ ಹರೆಯದ ಯುವಕ ಸಾಧಾರಣ ಶರೀರ ಹೊಂದಿದ್ದು, ಗೋಧಿ ಮೈಬಣ್ಣದವ ನಾಗಿದ್ದಾನೆ. ಮೃತದೇಹದ ಎದೆಯ ಎಡಭಾಗದಲ್ಲಿ ಕಪ್ಪು ಮಚ್ಚೆ ಹಾಗೂ ಎಡತೋಳಿನ ಎದುರು ಕಪ್ಪು ಮಚ್ಚೆ ಇದೆ. ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಹಿಂದಿ ಭಾಷಿಗನಾಗಿರಬೇ ಕೆಂದು ಶಂಕಿಸಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿ ಕೊಂಡಿರಬೇಕೆಂದು ಶಂಕಿಸಲಾಗಿದ್ದು, ಮೃತದೇಹವನ್ನು ವೆನ್‌ಲಾಕ್ ಶವಾಗಾ ರದಲ್ಲಿ ಇರಿಸಲಾಗಿದೆ. ಮೃತ ಯುವಕನ ಬಗ್ಗೆ ಮಾಹಿತಿ ಇದ್ದಲ್ಲಿ ಪಣಂಬೂರು ಠಾಣೆ ಸಂಪರ್ಕಿಸಲು ಕೋರಲಾಗಿದೆ.
Tagged with
cnews
ಮಂಗಳೂರು: ಶಿವಮೊಗ್ಗದಿಂದ ಉಡುಪಿಗೆ ಮಾರಾಟ ಮಾಡಲೆಂದು ಸಾಗಿಸುತ್ತಿದ್ದ ಆರು ಲಕ್ಷ ರೂ. ಮೌಲ್ಯದ ಎರಡು ಕೃಷ್ಣ ಮೃಗ ಮತ್ತು ಕಾಡು ಕುರಿಯೊಂದರ ಚರ್ಮವನ್ನು ಮಂಗಳೂರು ಪೊಲೀಸ್ ಅರಣ್ಯ ಸಂಚಾರಿ ದಳ (ಸಿಐಡಿ) ವಶಪಡಿಸಿ ಕೊಂಡ ಘಟನೆ ನಿನ್ನೆ ಮಧ್ಯಾಹ್ನ ಪರ್ಕಳದಲ್ಲಿ ನಡೆದಿದೆ.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸ್ ಅರಣ್ಯ ಸಂಚಾರಿ ದಳ ಪಿಎಸೈ ಮಂಜುನಾಥ ನೇತೃತ್ವದ ತಂಡ, ಉಡುಪಿ ಪರ್ಕಳ ಬಸ್ ನಿಲ್ದಾ ಣದ ಬಳಿ ಚರ್ಮದೊಂದಿಗೆ ಗ್ರಾಹಕರಿ ಗಾಗಿ ಕಾಯುತ್ತಿದ್ದ ಉಡುಪಿ ಪೆರಂಪಳ್ಳ ನಿವಾಸಿ ರಿತೇಶ್ ಎಂಬಾತನನ್ನು ಬಂಧಿಸಿ ಆತನ ಬಳಿಯಿಂದ ಎರಡು ಕೃಷ್ಣಮೃಗದ ಚರ್ಮ ಹಾಗೂ ಕಾಡು ಕುರಿಯೊಂದರ ಚರ್ಮವನ್ನು ವಶಕ್ಕೆ ತೆಗೆದುಕೊಂಡಿದೆ.
ಎರಡು ಕೃಷ್ಣಮೃಗಗಳ ಚರ್ಮದ ಮೌಲ್ಯ ೪.೮ ಲಕ್ಷ ರೂ. ಎಂದು ಅಂದಾ ಜಿಸಲಾಗಿದೆ ಅದೇ ರೀತಿ ಕುರಿ ಚರ್ಮದ ಮೌಲ್ಯ ೧.೨ಲಕ್ಷ ರೂ. ಎಂದು ಅಂದಾ ಜಿಸಲಾಗಿದೆ. ಶಿವಮೊಗ್ಗದ ಕಾಡಿನಲ್ಲಿ ಮಹಾಂತೇಶ ಎಂಬಾತ ಕಾಡು ಪ್ರಾಣಿ ಗಳಿಗೆ ಉರುಳು ಹಾಕಿ ಹಿಡಿದು ರಿತೇಶ್ ನಿಗೆ ಕೊಡುತ್ತಿದ್ದ ರಿತೇಶ ಚರ್ಮ ಸುಲಿದು ಮಾರಾಟದ ವ್ಯವಸ್ಥೆ ಮಾಡು ತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Tagged with
cnews
ಮಂಗಳೂರು: ಟಿಪ್ಪರ್ ಹಿಂದಕ್ಕೆ ಚಲಿಸಿದ ಪರಿಣಾಮ ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ನಿನ್ನೆ ಮುಂಜಾನೆ ಮುಕ್ಕ ಚೆಕ್‌ಪೋಸ್ಟ್ ಬಳಿ ಸಂಭವಿಸಿದೆ.
ನವಯುಗ್ ಸಂಸ್ಥೆಯ ಹಿತಾಚಿಯಲ್ಲಿ ಹೆಲ್ಪರ್ ಆಗಿ ದುಡಿಯುತ್ತಿದ್ದ ಜಾರ್ಖಂಡ್ ಮೂಲದ ಮೊಹಮ್ಮದ್ ತಸ್ಲೀಮ್ (೨೧) ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ. ಭಾನುವಾರ ರಾತ್ರಿ ಪಾಳಿಯ ಕೆಲಸ ನಿರ್ವಹಿಸುತ್ತಿದ್ದ ಈತ ಜಲ್ಲಿ ತಂದು ಹಾಕುತ್ತಿದ್ದ ಟಿಪ್ಪರ್ ಹಿಂಭಾಗದಲ್ಲಿ ನಿಂತಿದ್ದ. ಈ ವೇಳೆ ಟಿಪ್ಪರ್ ಚಾಲಕ ಹಿಮ್ಮುಖ ಚಾಲನೆ ಮಾಡಿದ ಕಾರಣ ಟಿಪ್ಪರ್ ಅಡಿಗೆ ಸಿಲುಕಿದ ತಸ್ಲೀಮ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Tagged with
cnews
ಪುತ್ತೂರು: ವಿದ್ಯುತ್ ಚಾಲಿತ ಅರೆಯುವ ಕಲ್ಲಿನ ಮೂಲಕ ವಿದ್ಯುತ್ ಪಸರಿಸಿ ಅಡುಗೆ ನಿರತ ಗೃಹಿಣಿಯೊ ಬ್ಬರು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಬಂಗಾ ರಡ್ಕ ಎಂಬಲ್ಲಿ ಸಂಭವಿಸಿದೆ.
ಬಲ್ನಾಡು ಗ್ರಾಮದ ಬಂಗಾರಡ್ಕ ನಿವಾಸಿ ಚಂದ್ರಶೇಖರ ನಾಯ್ಕ ಅವರ ಪತ್ನಿ ಸುಂದರಿ ಯಾನೆ ಸುಮ (೨೮) ಮೃತಪಟ್ಟ ಗೃಹಿಣಿ.
ಸುಂದರಿ ಅವರ ಮನೆಮಂದಿ ಎಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ್ದರು. ಇಬ್ಬರು ಎಳೆಯ ಪ್ರಾಯದ ಗಂಡು ಮಕ್ಕಳೊಂದಿಗೆ ಮನೆಯಲ್ಲಿ ಉಳಿದು ಕೊಂಡಿದ್ದ ಸುಂದರಿ ಅವರು ಸಂಜೆ ವಿದ್ಯುತ್ ಮೋಟಾರು ಅಳವಡಿಸಿದ ಕಡೆ ಯುವ ಕಲ್ಲಿನಲ್ಲಿ ಅಕ್ಕಿಯನ್ನು ರುಬ್ಬುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವು ದಾಗಿ ತಿಳಿದು ಬಂದಿದೆ.
ಈ ಘಟನೆ ಅವರ ಅತ್ತೆ ಮನೆಗೆ ಬಂದ ಬಳಿಕವಷ್ಟೇ ಬೆಳಕಿಗೆ ಬಂದಿದೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
Tagged with
cnews
ಕೊಲ್ಕತ್ತಾ: ಐಪಿಎಲ್ ಐದರ ಆವ ತರಣಿಕೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ವಿಕೆಟ್ ಅಂತರ ದಿಂದ ಸೋಲಿಸಿ ಚೊಚ್ಚಲ ಬಾರಿಗೆ ಟೂರ್ನಿಯನ್ನು ಮುಡಿಗೇರಿಸಿಕೊಂಡಿ ರುವ ಕೊಲ್ಕತ್ತಾ ನೈಟ್‌ರೈಡರ್ ತಂಡವನ್ನು ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸನ್ಮಾನಿಸಲಿದ್ದಾರೆ. ದಕ್ಷಿಣ ಕೊಲ್ಕತ್ತಾದ ಹಜ್ರಾ ಕ್ರಾಸಿಂಗ್‌ನಿಂದ ರೋಡ್‌ಶೋ ಆರಂಭವಾಗಿ ರಾಜ್ಯ ಕಾರ್ಯದರ್ಶಿ ಕಟ್ಟಡಕ್ಕೆ ತೆರಳಲಿದ್ದು, ಅಲ್ಲಿಂದ ನೇರ ವಾಗಿ ಈಡನ್ ಗಾರ್ಡನ್ ಮೈದಾನಕ್ಕೆ ಸಾಗಲಿದೆ. ಅಲ್ಲಿ ಬ್ಯಾನರ್ಜಿ ತಂಡವನ್ನು ಸನ್ಮಾನಿಸಲಿದ್ದಾರೆ. ಅನೇಕ ಸಚಿವರು ಕೂಡ ಇದರಲ್ಲಿ ಭಾಗವಹಿ ಸಲಿದ್ದಾರೆ.
ಇದೊಂದು ಅತ್ಯತ್ತಮ ಸಾಧನೆ ಎನ್ನುವುದರಲ್ಲಿ ಯಾವುದೇ ಅನುಮಾನ ವಿಲ್ಲ. ರಾಜ್ಯದ ನಗರವು ಇದನ್ನು ಸಾಧಿಸಿದ್ದಕ್ಕೆ ನಾವೆಲ್ಲಾ ಹೆಮ್ಮೆ ಪಡು ತ್ತೇವೆ. ತಂಡದ ಮಾಲಕ ಶಾರುಖ್ ಖಾನ್ ರಾಜ್ಯದ ಬ್ರಾಂಡ್ ಅಂಬಾಸಿ ಡರ್ ಕೂಡ ಆಗಿದ್ದು, ಅವರ ನೇತೃ ತ್ವದ ತಂಡ ಜಯಗಳಿಸಿರುವುದರಿಂದ ರಾಜ್ಯದ ಪರವಾಗಿ ನಾವು ಕೆಕೆಆರ್ ತಂಡವನ್ನು ಸನ್ಮಾನಿಸುತ್ತೇವೆ. ಕಾರ್ಯದರ್ಶಿ ಕಟ್ಟಡದಲ್ಲಿ ನಾನೇ ಸ್ವತಹ ತಂಡವನ್ನು ಸ್ವಾಗತಿಸುತ್ತೇನೆ ಎಂದು ಬ್ಯಾನರ್ಜಿ ತಿಳಿಸಿದರು. ಸಮಾ ರಂಭದಲ್ಲಿ ಕೆಕೆಆರ್ ತಂಡದ ಧ್ಯೇಯ ವಾಕ್ಯವಾಗಿರುವ ‘ಕೊರ‍್ಬೊ ಲೊರ‍್ಬೊ ಜೀತ್ಬೊರೆ ಎಂಬ ಸಂದೇಶ ಬರೆದಿ ರುವ ದೊಡ್ಡ ಕೇಕ್ ಕೂಡ ಪ್ರದರ್ಶನಗೊಳ್ಳಲಿದೆ.
Tagged with
tnews
ಬ್ರುಸ್ಸೆಲ್ಸ್: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪ್ರಸಕ್ತ ಋತುವಿನ ಎರಡನೇ ಒಟ್ಟಾರೆಯಾಗಿ ೧೪ನೇ ಡಬ್ಲ್ಯುಟಿಎ ಟೂರ್ನಿಯನ್ನು ಗೆದ್ದು ಕೊಂಡಿದ್ದಾರೆ. ಇಲ್ಲಿ ನಡೆಯುತ್ತಿದ್ದ ಬ್ರುಸ್ಸೆಲ್ಸ್ ಓಪನ್‌ನ ಡಬಲ್ಸ್ ವಿಭಾಗದಲ್ಲಿ ಬೆಥನಿ ಮಾಟೆಕ್ ಹಾಗೂ ಸಾನಿಯಾ ಜೋಡಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫೈನಲ್‌ನಲ್ಲಿ ಪೊಲಂಡ್‌ನ ಅಲಿಜಾ ರೊಲ್ಕೊಸ್ಕಾ ಹಾಗೂ ಚೀನಾದ ಝೆಂಗ್ ಜೀ ವಿರುದ್ಧ ನೇರ ಅಂತರದಲ್ಲಿ ಗೆಲ್ಲುವ ಮೂಲಕ ಇಂಡೋ-ಅಮೆರಿಕನ್ ಜೋಡಿ ಈ ಸಾಧನೆ ಮೆರೆಯಿತು.
ನಾಲ್ಕನೇ ಶ್ರೇಯಾಂಕದ ಇಂಡೋ-ಅಮೆರಿಕನ್ ಜೋಡಿ ಎದುರಾಳಿ ವಿರುದ್ದ ಎಲ್ಲಾ ಹಂತಗಳಲ್ಲೂ ಪ್ರಾಬಲ್ಯ ಮೆರೆಯಿತು. ಜೋಡಿಯ ಆಟಕ್ಕೆ ಎದುರಾಳಿ ತಕ್ಕ ಪ್ರತಿರೋಧ ಒಡ್ಡುವಲ್ಲಿ ವಿಫಲವಾಯಿತು. ಒಂದು ಘಂಟೆ ಹಾಗೂ ಹತ್ತು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ೬-೩ ಹಾಗೂ ೬-೨ರ ನೇರ ಅಂತರದಲ್ಲಿ ಗೆಲ್ಲುವ ಮೂಲಕ ಪ್ರಶಸ್ತಿ ಹಾಗೂ ೬೩೭, ೪೦೦ ಯುಎಸ್ ಡಾಲರ್ ಮೊತ್ತವನ್ನು ಜೋಲಿಗೆಗೆ ಹಾಕಿಕೊಂಡಿತು. ಈ ಹಿಂದೆ ಸಾನಿಯಾ ಅನಸ್ತೇಸಿಯಾ ರೊಡ್ವಿನೊವಾ ಜೊತೆ ಪಟ್ಟಾಯ ಓಪನ್ ಜಯಿಸಿಕೊಂಡಿದ್ದರು. ದುಬೈನಲ್ಲಿ ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿದ್ದ ಸಾನಿಯಾ, ಇಂಡಿಯಾನ ವೇಲ್ಸ್ ಕೂಟದಲ್ಲಿ ರಶ್ಯಾದ ಎಲೆನಾ ವೆಸ್ನಿನಾ ಜೊತೆ ಪ್ರಶಸ್ತಿ ಗೆದ್ದುಕೊಂಡಿದ್ದರು.
Tagged with
cnews
ಕೊಲ್ಕತ್ತಾ: ಐದನೇ ಆವv ರಣಿಕೆಯ ಐಪಿಎಲ್ ಗೆಲ್ಲುವಲ್ಲಿ ಕೊಲ್ಕತ್ತಾ ನೈಟ್‌ರೈಡರ್ ತಂಡ ಅರ್ಹವಾಗಿತ್ತು ಎಂದು ತಂಡದ ಈ ಹಿಂದಿನ ನಾಯಕ ಸೌರವ್ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ. ತಂಡ ನೀಡಿದ ಅತ್ಯುತ್ತಮ ಪ್ರದರ್ಶನ ವನ್ನು ಗಂಗೂಲಿ ಮುಕ್ತಕಂಠದಿಂದ ಅಭಿನಂದಿಸಿದ್ದಾರೆ.
ಪ್ರಥಮ ಆರು ಓವರ್‌ಗಳ ನಂತರ ಕೆಕೆಆರ್ ಇನ್ನಿಂಗ್ಸ್‌ನ್ನು ನೋಡುವಾಗ ತಂಡ ೧೯೧ ರನ್ ಚೇಸ್ ಮಾಡಲಿದೆ ಎಂದು ಮನದಟ್ಟಾಯಿತು. ಅದರಲ್ಲೂ ಮನ್ವಿಂದರ್ ಬಿಸ್ಲಾ ಅತ್ಯುತ್ತಮವಾಗಿಯೇ ಆಡಿ ದರು. ಅತ್ತ ಕ್ಯಾಲಿಸ್ ಕೂಡ ಉತ್ತಮ ನಿರ್ವಹಣೆ ನೀಡಿದರು ಎಂದು ಗಂಗೂಲಿ ತಿಳಿಸಿದ್ದಾರೆ. ಎರಡು ಬಾರಿ ಸತತವಾಗಿ ಪ್ರಶಸ್ತಿಗೆ ಮುತ್ತಿಕ್ಕಿದ್ದ ಚೆನ್ನೈ ಪಡೆ ಐದನೇ ಆವತರಣಿಕೆಯಲ್ಲಿ ಮಾತ್ರ ಎಡವಿದ್ದು, ಕೆಕೆಆರ್ ವಿರುದ್ಧ ಐದು ವಿಕೆಟ್‌ಗಳ ಸೋಲುಂಡು ಹ್ಯಾಟ್ರಿಕ್ ಗೆಲುವಿನ ಕನಸಿನಿಂದ ವಂಚಿತವಾಗಿದೆ.
Tagged with
tnews
ಫ್ರೆಂಚ್ ಓಪನ್: ಸಫರೋವಾ, ವೀನಸ್ ದ್ವಿತೀಯ ಸುತ್ತಿಗೆ
ಪ್ಯಾರಿಸ್: ಇಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಫ್ರೆಂಚ್ ಓಪನ್ ಟೆನಿಸ್‌ನಲ್ಲಿ ಆರು ಬಾರಿಯ ವಿಶ್ವಚಾಂಪಿಯನ್ ಅಮೆರಿಕಾದ ವೀನಸ್ ವಿಲಿಯಮ್ಸ್ ಭರ್ಜರಿಯಾಗಿ ದ್ವಿತೀಯ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಅತ್ತ ವಿಶ್ವದ ನಂಬರ್ ವನ್ ಆಡಗಾರ್ತಿ ಬೆಲರೂಸ್‌ನ ವಿಕ್ಟೋರಿಯಾ ಅಜ್ರೆಂಕಾ ಪ್ರಥಮ ಸುತ್ತಿನ ಸೋಲಿನಿಂದ ತಪ್ಪಿಸಿ ಕೊಂಡು ಕಠಿಣ ರೀತಿಯಲ್ಲಿ ಕೂಟ ದಲ್ಲಿ ಮುನ್ನಡೆ ಪಡೆದುಕೊಂಡರು. ಆಟೊಯ್ ಮ್ಯೂನ್ ರೋಗದಿಂದ ಬಳಲುತ್ತಿದ್ದ ವೀನಸ್ ಇದೇ ಮೊದಲ ಬಾರಿಗೆ ಪ್ರತಿಷ್ಟಿತ ಕೂಟದಲ್ಲಿ ಕಾಣಿಸಿ ಕೊಂಡಿದ್ದಾರೆ. ಅತ್ತ ಅಮೆರಿಕಾದ ಆಂಡಿ ರಾಡಿಕ್ ನಿಕೊಲಾಸ್ ಮಾಹುತ್ ವಿರುದ್ಧ ೬-೩, ೬-೩, ೪-೬, ೬-೨ರ ಅಂತರದಲ್ಲಿ ಸೋತು ನಿರ್ಗಮಿಸಿದರೆ ಸ್ಪೇಯ್ನ್‌ನ ಲಾರಾ ವಿರುದ್ಧ ಸರ್ಬಿಯಾದ ಇವನೊವಿಕ್ ೬-೧, ೬-೧ರ ನೇರ ಅಂತರದಲ್ಲಿ ಗೆದ್ದು ಮುನ್ನಡೆದರು.
ಏಳು ಬಾರಿಯ ಗ್ರ್ಯಾಂಡ್‌ಸ್ಲ್ಯಾಮ್ ಚಾಂಪಿಯನ್ ಕೂಡ ಆಗಿರುವ ವೀನಸ್ ಅರ್ಜೆಂಟೀನಾದ ೧೯ರ ಹರೆಯದ ಪೌಲಾ ಒಮೆರ‍್ಚಿಯಾ ವಿರುದ್ಧ ೪-೬, ೬-೧ ಹಾಗೂ ೬-೩ ಅಂತರ ದಲ್ಲಿ ಗೆದ್ದುಕೊಂಡು ದ್ವಿತೀಯ ಸುತ್ತಿಗೆ ಪ್ರವೇಶಿಸಿದರು. ಪ್ರಥಮ ಸುತ್ತಿನಲ್ಲಿ ಸೊಲುಂಡಾಗ ವೀನಸ್ ಆಟದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದರೆ ನಂತರದೆರಡು ಸುತ್ತಿನಲ್ಲಿ ಭರ್ಜರಿ ಅಂತರದಲ್ಲಿ ಗೆದ್ದುಕೊಂಡು ಶುಭಾ ರಂಭ ಮಾಡಿದರು. ಇನ್ನು ಇಟಲಿಯ ಅಲ್ಬೆರ್ಟಾ ಬ್ರಿಯಾಂಟಿ ವಿರುದ್ಧ ೬-೭ (೬-೮), ೬-೪ ಹಾಗೂ ೬-೨ರ ಅಂತ ರದಲ್ಲಿ ಗೆದ್ದು ಸೋಲಿನಿಂದ ಪಾರಾ ದರು. ಮುಂದಿನ ಸುತ್ತಿನಲ್ಲಿ ಅಜ್ರಂಕಾ ಜರ್ಮನಿಯ ಕ್ವಾಲಿಫಾಯರ್ ದಿನಾಹ್ ವಿರುದ್ಧ ಹೋರಾಟ ನಡೆಸಲಿದ್ದಾರೆ. ಅತ್ತ ಜರ್ಮನಿಯ ಆಂಜಲಿಕೆ ಕೆರ್ಬರ್ ಹಾಗೂ ಜೆಕ್ ಗಣರಾಜ್ಯದ ಲೂಸಿ ಸಫರೋವಾ ಕೂಡ ಮುನ್ನಡೆದಿದ್ದಾರೆ.
Tagged with
tnews
ಮುಂಬೈ: ಪೂನಂ ಪಾಂಡೆ ಅಂದ ತಕ್ಷಣ ನೆನಪಾಗುವುದು ಆಕೆಯ ಅರೆಬೆತ್ತಲೆ ಗೆಟಪ್. ಈ ವಿವಾದಿತ ರೂಪದರ್ಶಿಗೆ ಇದನ್ನು ಬಿಟ್ಟರೆ ಬೇರೆ ಕೆಲಸವಿಲ್ಲ ಅನ್ನಿಸುತ್ತದೆ. ಆಕೆ ಪದೇ ಪದೇ ಬೆತ್ತಲಾಗುತ್ತಳೇ ಇದ್ದಾಳೆ. ತನ್ನ ಬೆತ್ತಲೆ ಫೋಟೋಗಳನ್ನು ಪ್ರದರ್ಶನ ಕ್ಕಿಡುತ್ತಲೇ ಇದ್ದಾಳೆ. ಈ ಬಾರಿಯೂ ಐಪಿಎಲ್‌ಗಾಗಿ ಪೂನಂ ತನ್ನ ಬೆತ್ತಲೆ ಫೋಟೋವನ್ನು ಪ್ರಕಟಿಸುವ ಮೂಲಕ ಯುವಕರ ಮೈಬಿಸಿಯೇರಿಸಿದ್ದಾಳೆ.
ಈಕೆಗೆ ಕ್ರಿಕೆಟ್ ಮೇಲೆ ಇಷ್ಟೊಂದು ಪ್ರೀತಿ, ಅಭಿಮಾನವಿದ್ದರೆ ಆಟಗಾರ ರನ್ನು ಬೇರೆ ತರಹ ಹುರಿದುಂಬಿಸ ಬಹುದಿತ್ತು. ಆದರೆ ಆಕೆ ಹಾಗೆ ಮಾಡದೆ ತನ್ನದೇ ದಾರಿ ಕಂಡುಕೊಂಡಿದ್ದಾಳೆ.
ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತದ ತಂಡ ಗೆದ್ದರೆ ಸಂಪೂರ್ಣ ಬೆತ್ತಲಾ ಗುತ್ತೇನೆ ಎಂದು ಹೇಳಿದ್ದ ಈಕೆ ಕಡೆಗೂ ತನ್ನ ಮಾತನ್ನು ಉಳಿಸಿಕೊಂಡಿದ್ದಳು. ಈಗ ಮತ್ತೊಂದು ಬೆತ್ತಲೆ ಫೋಟೋ ವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿ ವಿಜೃಂಭಿಸಿದ್ದಾಳೆ!
ಐಪಿಎಲ್‌ನಲ್ಲಿ ಶಾರುಕ್ ನೇತೃತ್ವದ ಕೋಲ್ಕತ್ತಾ ನೈಡ್‌ರೈಡರ‍್ಸ್ ಗೆಲುವಿಗೆ ಬೆತ್ತಲಾಗುವ ಮೂಲಕ ಶುಭಾಶಯ ಕೋರಿದ್ದಾಳೆ.
ಇದರ ಜೊತೆಗೆ ಆಕೆಯ ಟ್ವಿಟ್ಟರ್‌ನಲ್ಲಿ ಇನ್ನೂ ಒಂದು ಸಂದೇಶ ವಿದೆ, ಎಚ್ಚರ ೧೮ ಹಾಗೂ ಅದಕ್ಕಿಂ ತಲೂ ಕಡಿಮೆ ವಯಸ್ಸಿನವರು ಈ ಚಿತ್ರವನ್ನು ನೋಡುವ ಪ್ರಯತ್ನ ಮಾಡಬೇಡಿ. ಅಪ್ರಾಪ್ತರು ಈ ಚಿತ್ರ ನೋಡಿದರೆ ನಾನು ಜವಾಬ್ದಾರಳಲ್ಲ ಎಂದು ಪೂನಂ ಎಚ್ಚರಿಕೆಯನ್ನೂ ಕೊಟ್ಟಿದ್ದು ಈ ಹಿಂದೆ ಈಕೆಯ ಬೆತ್ತಲೆ ಬೆದರಿಕೆಯ ವಿರುದ್ಧ ಕೋರ್ಟ್‌ಗೆ ಹೋಗಿದ್ದ ಹಿನ್ನೆಲೆಯಲ್ಲಿ ಇದನ್ನು ಪ್ರಸ್ತಾಪಿಸಿದ್ದಾಳೆ.
ಸದ್ಯಕ್ಕೆ ಪೂನಂ ಪಾಂಡೆಯ ಫೇಸ್‌ಬುಕ್‌ಗೆ ಲಕ್ಷಾಂತರ ಮಂದಿ ಓದುಗರಿದ್ದಾರೆ.
Tagged with
nnews,
tnews
ಸುಳ್ಯ: ಮಡಿಕೇರಿಯ ಗಡಿಭಾಗವಾದ ಚೆಂಬು ಗ್ರಾಮದ ಕುದು ರೆಪಾಯ ಎಂಬಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆ ಮೀನಾಕ್ಷಿ(೪೮) ಎಂಬವರನ್ನು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೀನಾಕ್ಷಿಯ ಗಂಡ ಲೋಕಯ್ಯ ಕೆಲವು ಸಮಯಗಳ ಹಿಂದೆ ನಿಧನರಾಗಿದ್ದು, ಮೀನಾಕ್ಷಿ ಒಬ್ಬರೇ ಮನೆಯಲ್ಲಿ ವಾಸವಿದ್ದರು. ಮಗ ವಿಜಯ ಕುಮಾರ್ ಮಂಗಳೂರಿನಲ್ಲಿ ಚಾಲಕರಾಗಿದ್ದು ವಾರಕ್ಕೊಮ್ಮೆ ಮನೆಗೆ ಬರುತ್ತಾರೆ. ಮಗಳು ಶಶಿಕಲಾ ಹಾಗೂ ಅಳಿಯ ಮೋಹನ ಅದೇ ಜಮೀನಿನ ಒಂದು ಜಮೀನಿನ ಒಂದು ಭಾಗದಲ್ಲಿ ಮನೆ ಕಟ್ಟಿ ವಾಸವಿದ್ದರು. ನಿನ್ನೆ ಸಂಜೆ ಮಗ ವಿಜಯಕುಮಾರ್ ಮನೆಗೆ ಬಂದಾಗ ತಾಯಿ ರಕ್ತದ ಮಡುವಿನಲ್ಲಿ ಅಂಗಳದಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂದಿತ್ತು. ಕೂಡಲೇ ಅಕ್ಕ-ಭಾವನ ಮನೆಗೆ ಹೋದಾಗ ಅವರಿಬ್ಬರೂ ಅಲ್ಲಿರಲಿಲ್ಲ. ನಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಶಂಕೆಯ ಮೇಲೆ ಮೋಹನನನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಯ ಹಿಂದಿನ ಸತ್ಯಾಂಶ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.
Tagged with
cnews
ಮಂಗಳೂರು: ತೆಕ್ಕಟ್ಟೆ ಕನ್ನುಕರೆ ನವಶಕ್ತಿ ಕಲ್ಯಾಣ ಮಂದಿರದ ಎದುರು ರಾ.ಹೆದ್ದಾರಿ ೬೬ರಲ್ಲಿ ನಿನ್ನೆ ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟಿದ್ದಾರೆ. ಮೃತರನ್ನು ಕೊರವಡಿ ನಿವಾಸಿ ಕೃಷ್ಣ ಪೂಜಾರಿ(೫೩) ಎಂದು ಹೆಸರಿಸಲಾಗಿದೆ. ಕುಂದಾಪುರದೆಡೆಗೆ ಹೋಗುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ. ಸಹಸವಾರ ಲಿಂಗ ಪೂಜಾರಿ ತೀವ್ರ ಗಾಯಗೊಂಡಿದ್ದಾರೆ.
ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಜಖಂಗೊಂಡಿದೆ. ಆಕ್ರೋಶಿತರಾದ ಸ್ಥಳೀಯರು ಕಾರು ಚಾಲಕನಿಗೆ ಹಲ್ಲೆ ನಡೆಸಿದ್ದಾರೆ. ಕೋಟ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews
ಸುಳ್ಯ: ಎಲಿಮಲೆಯಲ್ಲಿ ರಸ್ತೆಬದಿ ಆಟವಾಡುತ್ತಿದ್ದ ಬಾಲಕನಿಗೆ ಬೈಕ್ ಡಿಕ್ಕಿ ಹೊಡೆದು ಆತನ ಕಾಲಿಗೆ ಗಾಯವಾದ ಘಟನೆ ನಡೆದಿದೆ.
ಎಲಿಮಲೆಯಲ್ಲಿ ಹೊಟೇಲ್ ನಡೆಸುತ್ತಿರುವ ರಾಜೇಶ್ ಎಂಬವರ ಪುತ್ರ, ೯ನೇ ತರಗತಿ ವಿದ್ಯಾರ್ಥಿ ದೀಕ್ಷಿತ್ ರಸ್ತೆ ಬದಿ ಆಟವಾಡುತ್ತಿದ್ದಾಗ ಚೆಂಡು ರಸ್ತೆಗೆ ಹೋಗಿದ್ದು, ಅದನ್ನು ಹೆಕ್ಕಲು ಹೋದಾಗ ಸೂಫಿ ಎಂಬವರ ಬೈಕ್ ಡಿಕ್ಕಿಯಾಗಿದೆ. ಕಾಲಿಗೆ ಗಾಯಗೊಂಡ ದೀಕ್ಷಿತ್‌ನನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಾಸ್ಟೆಲ್ ರೂಮಿನಲ್ಲಿ ಕಳವು : ಮಣಿಪಾಲದ ಎಂಐಟಿ ಹಾಸ್ಟೆಲ್‌ನಲ್ಲಿ ವಾಸವಿರುವ ವಿದ್ಯಾರ್ಥಿ ಮುದಿತ್ ರಾಜೋರಿಯಾ ಎಂಬಾತನ ಲ್ಯಾಪ್‌ಟಾಪ್ ಕಳವಾಗಿರುವ ಬಗ್ಗೆ ಮಣಿಪಾಲ ಠಾಣೆಗೆ ದೂರಲಾಗಿದೆ. ಮೇ ೨೫ರಂದು ಪರೀಕ್ಷೆ ಬರೆಯಲು ತೆರಳಿದ್ದ ವೇಳೆ ಕೋಣೆಯ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ಲ್ಯಾಪ್‌ಟಾಪ್ ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Tagged with
cnews
ಮಂಗಳೂರು: ಕುಂಬ್ಳೆ ಸಮೀಪದ ಪೆರ್ಮುದೆ ಎಡಕ್ಕಾನ ಪವನಗಿರಿ ವಿವೇಕಾನಂದ ಆಶ್ರಮದ ಪ್ರಣವಾನಂದ ಸ್ವಾಮೀಜಿಯ ಮೇಲೆ ತಂಡವೊಂದು ಹಲ್ಲೆ ನಡೆಸಿ ಆಶ್ರಮಕ್ಕೆ ಹಾನಿಗೈದ ಘಟನೆ ಆದಿತ್ಯವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಭಕ್ತನೊಬ್ಬ ಖಿನ್ನತೆ ರೋಗದ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಇದನ್ನೇ ನೆಪವಾಗಿಟ್ಟುಕೊಂಡು ನೂರಿನ್ನೂರು ಯುವಕರ ಗುಂಪು ಆಶ್ರಮಕ್ಕೆ ದಾಳಿ ಮಾಡಿದೆ. ಕುಂಬ್ಳೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ. ೨೦೦೧ ಎಡಕ್ಕಾನ ಪವನಗಿರಿಯಲ್ಲಿ ವಿವೇಕಾನಂದ ಆಶ್ರಮವನ್ನು ಸ್ಥಾಪಿಸಿದ್ದರು.
Tagged with
cnews
ಮಂಗಳೂರು: ಚತುಷ್ಪಥ ಹೆದ್ದಾರಿಗಾಗಿ ದೇವಾಲಯಕ್ಕೆ ಸೇರಿದ ಜಾಗ ವಶಪಡಿಸಿಕೊ ಳ್ಳುತ್ತಿರುವುದನ್ನು ವಿರೋಧಿಸಿ ಸಾಮೂಹಿಕ ಉಪವಾಸ ಧರಣಿಯಲ್ಲಿ ಭಾಗವಹಿಸಿದ್ದ ಭಕ್ತನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ರವಿವಾರ ನೀಲೇಶ್ವರದಲ್ಲಿ ನಡೆದಿದೆ.
ನೀಲೇಶ್ವರ ಕರುವಾಚ್ಚೇರಿಯ ತೋಟತ್ತಿಲ್ ಕೃಷ್ಣನ್(೬೫) ಮೃತ
ವ್ಯಕ್ತಿ. ನೀಲೇಶ್ವರ ಪಳ್ಳಿಕೆರೆ ಪಾಲರಕಿಳಲ್ ಶ್ರೀ ವಿಷ್ಣುಮೂರ್ತಿ ಕ್ಷೇತ್ರಕ್ಕೆ ಸೇರಿದ ಜಾಗವನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಸ್ವಾಧೀನ ಪಡಿಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಇದನ್ನು ವಿರೋಧಿಸಿ ಕೃಷ್ಣನ್ ಸೇರಿದಂತೆ ನೂರಾರು ಮಂದಿ ರವಿವಾರ ಬೆಳಗ್ಗೆ ನೀಲೇಶ್ವರದಲ್ಲಿ ಉಪವಾಸ ಆರಂಭಸಿದ್ದರು. ಧರಣಿ ಆರಂಭವಾದ ಅರ್ಧಗಂಟೆಯಲ್ಲಿ ಕೃಷ್ಣನ್ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.
Tagged with
cnews
ವಿಟ್ಲ: ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಕಳ್ಳರ ಹಾವಳಿ ಮುಂದುವರೆದಿದ್ದು, ಭಾನುವಾರ ರಾತ್ರಿ ವಿಟ್ಲ ಸಮೀಪದ ಕುದ್ದುಪದವು ಎಂಬಲ್ಲಿನ ಮನೆಗೆ ನುಗ್ಗಿದ ಕಳ್ಳರು ಒಂದು ಪವನ್ ಚಿನ್ನದ ಬೆಂಡೋಲೆ ಮತ್ತು ೫೦೦ ರೂ ದೋಚಿ ಪರಾರಿಯಾಗಿದ್ದಾರೆ. ಕಳೆದ ಎರಡು ವಾರಗಳಿಂದ ಕಂಬಳಬೆಟ್ಟು, ಸಿಪಿಸಿ ಆರ್‌ಐ ಮುಂತಾದ ಕಡೆಗಳಲ್ಲಿ ಕಳ್ಳರು ಈ ಕೃತ್ಯ ಎಸಗುತ್ತಿದ್ದು, ಇದೀಗ ಅವರು ಕಾಸರಗೋಡು ರಸ್ತೆಯ ಕುದ್ದುಪ ದವುನತ್ತ ಲಗ್ಗೆ ಇಟ್ಟಿದ್ದಾರೆ.
ಅಬ್ದುಲ್ಲ ಕುಂಞ್ಞ ಎಂಬವರ ಮನೆಗೆ ಭಾನುವಾರ ಮಧ್ಯರಾತ್ರಿ ಹಿಂಬಾಗಿಲಿನ ಚಿಲಕ ಮುರಿದು ಮನೆ ಯೊಳಗೆ ನುಗ್ಗಿದ ಕಳ್ಳರು ಕೋಣೆಯ ಲ್ಲಿದ್ದ ಕಪಾಟುಗಳನ್ನು ಜಾಲಾಡಿ ಅದರಲ್ಲಿದ್ದ ಸುಮಾರು ಒಂದು ಪವನ್ ಚಿನ್ನದ ಬೆಂಡೋಳೆ ಮತ್ತು ೫೦೦ರೂ ದೋಚಿ ಪರಾರಿಯಾಗಿದ್ದಾರೆ.
ಇನ್ನೊಂದು ಕೊಠಡಿಯಲ್ಲಿದ್ದ ಕಪಾಟಿನ ಬಾಗಿಲು ತೆಗೆದು ಅದರಲ್ಲಿ ಚಿನ್ನಾಭರಣ ಮತ್ತು ನಗದನ್ನು ಹುಡು ಕಾಡುತ್ತಿದ್ದ ಸಂದರ್ಭ ಮನೆಯವರಿಗೆ ಎಚ್ಚರವಾಗಿದೆ ಎನ್ನಲಾಗಿದೆ. ಆ ಕೂಡಲೇ ಮನೆಮಂದಿ ಅವರನ್ನು ಓಡಿಸಿಕೊಂಡು ಹೋಗಿದ್ದಾರೆ. ಕಳ್ಳರಿಗೆ ಪರಾರಿಯಾಗಲು ಯಾವುದೇ ದಾರಿ ಯಿಲ್ಲವಾಗಿದ್ದರಿಂದ ಅವರು ಗಲಿಬಿಲಿ ಗೊಂಡು ತಾವು ತೆರೆದ ಬಾಗಿಲ ಬದಲಿಗೆ ಇನ್ನೊಂದು ಬಾಗಿಲಿಗೆ ಜೋರಾಗಿ ಬಡಿದು ಕೊನೆಗೆ ದೀಪ ವನ್ನು ತಾವೇ ಆರಿಸಿ ಪರಾರಿಯಾಗಿ ದ್ದಾರೆ. ಮನೆಯಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ಮೂರು ಕೈಗಡಿ ಯಾರ ಕೂಡ ನಾಪತ್ತೆಯಾಗಿತ್ತು. ಆದರೆ ಸಂಜೆ ಹೊತ್ತಿಗೆ ಅದು ಮನೆ ಸಮೀಪ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಹೆಮ್ಮಾಡಿ: ನಿಶ್ಚಿತಾರ್ಥವಾಗಿದ್ದ ಯುವತಿ ನಾಪತ್ತೆ
ವಿವಾಹ ನಿಶ್ಚಿತಾರ್ಥವಾಗಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಆಲೂರು-ಕಾಳಿಕಾಂಬ ನಗರದಲ್ಲಿ ನಡೆದಿದೆ.
ಪ್ರೇಮ ವ್ಯವಹಾರದ ಹಿನ್ನೆಲೆಯಲ್ಲಿ ನಾಪತ್ತೆಯಾಗಿರಬೇಕೆಂದು ಶಂಕಿಸಲಾಗಿದೆ.
Tagged with
cnews
ಮಂಗಳೂರು: ಗೆಳೆಯನಿಗೆ ಅಮಲು ಪದಾರ್ಥ ನೀಡಿ ಮೂರು ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಸೊತ್ತು ಅಪಹರಿಸಿದ ಘಟನೆ ಉಡುಪಿಯಲ್ಲಿ ನಿನ್ನೆ ನಡೆದಿದೆ.
ಮಂಗಳೂರಿನ ಪಶು ವೈದ್ಯ ಜಯಪ್ರಕಾಶ್ ಶೆಟ್ಟಿ ನಗ, ನಗದು ಮತ್ತು ಕಾರ್ ಕಳೆದು ಕೊಂಡಿರುವ ವ್ಯಕ್ತಿ. ಇವರಿಗೆ ಪರಿಚಯದ ರೋಹನ್ ಎಂಬಾತ ಮಗುವಿಗೆ ಸೌಖ್ಯವಿಲ್ಲ ಉಡುಪಿಗೆ ಬರುವಂತೆ ಕೋರಿದ್ದ. ಅದರಂತೆ ಜಯಪ್ರಕಾಶ್ ತಮ್ಮ ಕಾರ್‌ನಲ್ಲಿ ರೋಹನ್‌ನೊಂದಿಗೆ ಹೊರಟಿದ್ದರೆ ಇವರೊಂದಿಗೆ ರಾಜೇಶ್ ಎಂಬಾತ ಸೇರಿಕೊಂಡಿದ್ದ. ಮಣಿಪಾಲಕ್ಕೆ ಬಂದು ಸುಷ್ಮಾ ಲಾಡ್ಜ್‌ನಲ್ಲಿ ಎರಡು ಕೊಠಡಿ ಪಡೆದು ಒಂದರಲ್ಲಿ ಜಯಪ್ರಕಾಶ್ ತಂಗಿದ್ದರೆ, ಇನ್ನೊಂದರಲ್ಲಿ ರೋಹನ್ ಮತ್ತು ರಾಜೇಶ್ ಇದ್ದರು. ಮೂವರೂ ರಾತ್ರಿ ಅಮಲು ಪದಾರ್ಥ ಸೇವಿಸಿದ್ದು ಬಳಿಕ ಜಯಪ್ರಕಾಶ್ ತಮ್ಮ ಕೊಠಡಿಗೆ ಬೀಗ ಹಾಕದೆ ಮಲಗಿದ್ದರು. ಸೋಮವಾರ ಬೆಳಗ್ಗೆ ಎದ್ದಾಗ ಜಯಪ್ರಕಾಶರ ಕುತ್ತಿಗೆಯಲ್ಲಿದ್ದ ಎರಡೂವರೆ ಪವನ್‌ನ ಚಿನ್ನದ ಸರ, ಹಣದ ಪರ್ಸ್ ಹಾಗೂ ಲಾಡ್ಜ್ ಎದುರು ನಿಲ್ಲಿಸಿದ್ದ ಆಲ್ಟೋ ಕಾರ್ ಕಾಣೆಯಾಗಿತ್ತು. ರಾತ್ರಿ ಇವರೊಂದಿಗೆ
ತಂಗಿದ್ದ ರೋಹನ್ ಮತ್ತು ರಾಜೇಶ್ ನಾಪತ್ತೆಯಾಗಿದ್ದರು. ನಗ, ನಗದು ಮತ್ತು ಕಾರ್‌ನ್ನು ಅವರೇ ಕದ್ದೊಯ್ದಿದ್ದಾರೆ ಎಂದು ಜಯಪ್ರಕಾಶ್ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Tagged with
cnews