ಟೆಂಪೋ-ಬಸ್ ಡಿಕ್ಕಿ: ೨೬ಸಾವು

Posted by JAYAKIRANA Kirana on Sunday, 27 May 2012 | 0 comments | Leave a comment...

ಮುಂಬಯಿ/ಪುಣೆ: ಮುಂಬಯಿ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಟ ೨೬ ಜನರು ಮೃತಪಟ್ಟಿರುವುದು, ೧೭ಜನರು ಗಾಯಗೊಂಡಿರುವುದು ದೃಢಪಟ್ಟಿದೆ.
ಮುಂಬಯಿಯಲ್ಲಿ ನಡೆದಿರುವ ಮದುವೆ ಸಮಾರಂಭದಿಂದ ಹಿಂದಿರುಗುತ್ತಿದ್ದ ವೇಳೆ ಸುಮಾರು ೧ರ ಸಮಯಕ್ಕೆ ಘಟನೆ ಸಂಭವಿಸಿದೆ. ಬಸ್ಸುಗಳೆರಡು ತಾಂತ್ರಿಕ ತೊಂದರೆಯಿಂದಾಗಿ ಕೆಟ್ಟು ನಿಂತಿದ್ದು, ಅದರಲ್ಲಿದ್ದ ಪ್ರಯಾಣಿಕರು ಎರಡು ಬಸ್ಸುಗಳ ಮಧ್ಯೆ ಕುಳಿತಿದ್ದರು. ಅತೀ ವೇಗವಾಗಿ ಚಲಿಸುತ್ತಿದ್ದ ಟೆಂಪೋವೊಂದು ನಿಂತಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸು ಹಿಂದಕ್ಕೆ ಚಲಿಸಿರುವುದೇ ಸಾವಿಗೆ ಕಾರಣವೆನ್ನಲಾಗಿದೆ.
ಗಾಯಾಳುಗಳನ್ನು ತಕ್ಷಣವೇ ಪುಣೆ ಹಾಗೂ ನವಿ ಮುಂಬಯಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಟೆಂಪೋ ಚಾಲಕನನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸದ್ಯವೇ ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದಿರುವ ಪೊಲೀಸರು, ನಿರ್ಲಕ್ಷ್ಯ ಚಾಲನೆ ವಿರುದ್ಧ ಕೇಸು ದಾಖಲಿಸಿದ್ದಾರೆ.

shreedhara bhandary

Posted by JAYAKIRANA Kirana on | 0 comments | Leave a comment...

ಅನಾರೋಗ್ಯದಿಂದ ಮನೆಯಲ್ಲೇ ಇರುವ ಖ್ಯಾತ ಯಕ್ಷಗಾನ ಕಲಾವಿದ ಶ್ರೀಧರ ಭಂಡಾರಿ ಅವರಿಗೆ ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ ಅವರು ೧೦ಸಾವಿರ ರೂ. ಧನ ಸಹಾಯ ನೀಡಿದರು. ಈ ಸಂದರ್ಭದಲ್ಲಿ ವಿಜಯಕುಮಾರ್ ಕೊಡಿಯಾಲ್ ಬೈಲ್, ಬಂಟ್ವಾಳ ಜಯರಾಮ ಆಚಾರ್ಯ, ಎ.ಕೆ.ವಿಜಯ್, ಅನಿಲ್ ಮೊದಲಾದವರು ಉಪಸ್ಥಿತರಿದ್ದರು.

deeksha rao

Posted by JAYAKIRANA Kirana on | 0 comments | Leave a comment...

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿಯಾದ ದೀಕ್ಷಾ ರಾವ್ ಎಕ್ಕೂರು ಇವರು ವಾಣಿಜ್ಯ ವಿಭಾಗದಲ್ಲಿ (೫೭೮ (೯೬.೩೩%) ಅಂಕಗಳನ್ನು ಗಳಿಸಿದ್ದಾರೆ. ಇವರು ವಿನೋದ್ ರಾವ್ ಹಾಗೂ ಕವಿತಾ ರಾವ್‌ರವರ ಸುಪುತ್ರಿ.

ಗಾಳದ ಕೊಂಕಣಿ: ಪ್ರತಿಭಾ ಪುರಸ್ಕಾರ, ಸನ್ಮಾನ, ಪುಸ್ತಕ ವಿತರಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಗಾಳದ ಕೊಂಕಣಿ ಅಭ್ಯುದಯ ಸಂಘದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ, ಉಚಿತ ಪುಸ್ತಕ ವಿತರಣಾ ಸಮಾರಂಭಗಳು ಮುನ್ನೂರು ಗ್ರಾಮದ ಶ್ರೀ ಕ್ಷೇತ್ರ ಸೋಮನಾಥ ಉಳಿಯದಲ್ಲಿ ಈಚೆಗೆ ನಡೆಯಿತು.
ಸಂಘದ ಅಧ್ಯಕ್ಷ ಉಮಾನಾಥ ಉಳ್ಳಾಲ್ ಅಧ್ಯಕ್ಷತೆ ವಹಿಸಿ, ಶೀಘ್ರವೇ ಶ್ರೀ ಸೋಮೇಶ್ವರಿ ಸೌಹಾರ್ದ ಸಹಕಾರಿ ಸಂಸ್ಠೆಯನ್ನು ಸ್ಥಾಪಿಸಲು ಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆದಿವೆ ಎಂದರು. ಇದೇ ವೇಳೆ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಾದ ಪ್ರಿಯಾಂಕ, ಸುಹಾನ್ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾ ಮತ್ತು ಪ್ರತಿಭಾನ್ವಿತ ಕ್ರಿಕೆಟ್ ಪಟು ಶಶಾಂಕ್ ಪಂಪ್‌ವೆಲ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯತು.
ಹಾಗೆಯೇ ಪ್ರಸಕ್ತ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ೬೦೨ ಅಂಕಗಳಿಸಿದ ವಿದ್ಯಾರ್ಥಿನಿ ಶ್ರುತಿ ಎಸ್.ಬಂಟ್ವಾಳ ಮತ್ತು ಪತ್ರಕರ್ತ ವೆಂಕಟೇಶ್ ಬಂಟ್ವಾಳ ಅವರನ್ನು ಸನ್ಮಾನಿಸಲಾಯಿತು. ಒಂದರಿಂದ ಏಳನೇ ತರಗತಿವರೆಗಿನ ಸ್ವಜಾತಿಯ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಈಚೆಗೆ ಸ್ವಜಾತಿ ಬಾಂಧವರಿಗೆ ನಡೆದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾ ಯಿತು. ಸಂಘದ ಕಾರ್ಯದರ್ಶಿ ರಾಮಚಂದ್ರ ಎಸ್.ಜೆ.ಖಜಾಂಚಿ ಚಂದ್ರಶೇಖರ ಬಪ್ಪಾಲ್, ಸಂಘಟನಾ ಕಾರ್ಯದರ್ಶಿ ಪ್ರವೀಣ ನಾಯ್ಕ ವೇದಿಕೆಯಲ್ಲಿದ್ದರು. ಜತೆ ಕಾರ್ಯ ದರ್ಶಿ ಆಶಾ ನಾಯ್ಕ ವರದಿ ವಾಚಿಸಿ, ಮಹೇಶ್ ಬಂಟ್ವಾಳ ಲೆಕ್ಕಪತ್ರ ಮಂಡಿಸಿ ವಂದಿಸಿದರು. ಜಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ನಾಳೆ ತುಳು ಅಕಾಡೆಮಿ ಚಾವಡಿ ಕೂಟ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಾಳೆ ವಿದ್ವಾಂಸರು, ಸಾಹಿತಿಗಳು, ಕಲಾವಿದರು ಹಾಗೂ ಸಂಘಟಕ ರೊಂದಿಗೆ ಚಾವಡಿ ಕೂಟ ಹಾಗೂ ತುಳು ಯಕ್ಷಗಾನ ಬೆಳವಣಿಗೆ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಹಿರಿಯ ಯಕ್ಷಗಾನ ಕಲಾವಿದ ಕೊಳ್ಯೂರು ರಾಮಚಂದ್ರ ರಾವ್, ಅರುವ ಕೊರಗಪ್ಪ ಶೆಟ್ಟಿ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಯಕ್ಷಗಾನ ಪ್ರಸಂಗಕರ್ತರಾದ ನಿತ್ಯಾನಂದ ಕಾರಂತ ಪೊಳಲಿ, ಖ್ಯಾತ ಅಥದಾರಿ ಗಳಾದ ಜಬ್ಬಾರ್ ಸಮೋ ಭಾಗವಹಿಸುವರು.
ಹಿರಿಯ ಯಕ್ಷಗಾನ ಕಲಾವಿದ ಹಾಗೂ ಸಂಘಟಕ ಕೆ.ಟಿ.ಗುಜರನ್ ಅವರಿಗೆ ಸನ್ಮಾನ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇವದಾಸ್ ಕಾಪಿಕಾಡ್ ಅವರಿಗೆ ‘ತುಳುನಾಡ್ದ ಬಿರ್ಸೆ’ ಪುರಸ್ಕಾರ ನೀಡಲಾಗುವುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಳು ಪಠ್ಯ ರಚನಾ ಸಮಿತಿ ಸಭೆ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಪಠ್ಯ ರಚನಾ ಸಮಿತಿಯ ಸಭೆ ಇತ್ತೀಚೆಗೆ ಉಪ್ಪಿನಂಗಡಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಪಠ್ಯ ರಚನಾ ಸಮಿತಿ ಅಧ್ಯಕ್ಷ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸದಸ್ಯರಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ, ಸದಸ್ಯರಾದ ಯಾದವ ಕರ್ಕೇರ, ಮಂಜಳಾ ಶೆಟ್ಟಿ, ಬಿ.ಸೂರ್ಯನಾರಾಯಣ, ಶಿಕ್ಷಕರಾದ ಹೆಚ್. ಶ್ರೀಧರ ರೈ, ನಾರಾಯಣ ರೈ ಕುಕ್ಕುವಳ್ಳಿ ಮತ್ತು ಸಂತೋಷ್ ಆಳ್ವ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡರು. ಒಂಭತ್ತು ಮತ್ತು ಹತ್ತನೇ ತರಗತಿಯ ತುಳು ಪಠ್ಯಗಳ ಕರಡುಪ್ರತಿ ಸಿದ್ಧವಾಗಿದ್ದು, ಸಭೆಯಲ್ಲಿ ಅದರ ಚರ್ಚೆ ನಡೆಯಿತು. ಸಮಿತಿ ಸದಸ್ಯ ಮತ್ತು ಶಾಲಾ ಮುಖ್ಯ ಶಿಕ್ಷಕ ಐತಪ್ಪ ನಾಯ್ಕ ಸ್ವಾಗತಿಸಿ, ವಂದಿಸಿದರು.

ಸುರತ್ಕಲ್ ಬಂಟರ ಸಂಘದಿಂದ ದೇವಾನಂದ ಶೆಟ್ಟಿಯವರಿಗೆ ಸನ್ಮಾನ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ ವತಿಯಿಂದ ಸಂಘದ ಬಲವರ್ಧನೆ ಸಂಘಟ ನಾತ್ಮಕ ಕೆಲಸ ಮತ್ತು ಬಂಟ ಸಮಾಜದ ಸ್ಮರಣೀಯ ಸೇವೆಗಾಗಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಎಂ.ದೇವಾನಂದ ಶೆಟ್ಟಿ ಮತ್ತು ಅವರ ಧರ್ಮಪತ್ನಿ ವೃಂದಾ ದೇವಾನಂದ ಶೆಟ್ಟಿ ಅವರಿಗೆ ಸನ್ಮಾನ ಸಮಾರಂಭ ಬಂಟರ ಭವನ ಸುರತ್ಕಲ್‌ನಲ್ಲಿ ನೆರವೇರಿಸಿತು.
ಇತ್ತೀಚೆಗೆ ಬಂಟರ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ದೇವಾನಂದ ಶೆಟ್ಟಿಯವರ ಸ್ಮರಣೀಯ ಸೇವೆಯನ್ನು ಶ್ಲಾಘಿಸಿ ಅವರನ್ನು ಸಂಘದ ಮಾಜಿ ಅಧ್ಯಕ್ಷ ದಾಮೋದರ ಶೆಟ್ಟಿ ಸನ್ಮಾನಿಸಿದರು.
ಸಮಾರಂಭದಲ್ಲಿ ಸಂಘದ ನೂತನ ಅಧ್ಯಕ್ಷ ಎಂ.ಜೆ.ಶೆಟ್ಟಿ, ಸ್ಥಾಪಕಾಧ್ಯಕ್ಷ ಕೆ.ರೋಹಿತಾಕ್ಷ ರೈ, ನವೀನ್ ಶೆಟ್ಟಿ ಪಡ್ರೆ, ಉಲ್ಲಾಸ್ ಆರ್.ಶೆಟ್ಟಿ, ರತ್ನಾಕರ ಶೆಟ್ಟಿ, ದಿವಾಕರ ಸಾಮಾನಿ ಚೇಳಾರು, ಮಹಾಬಲ ರೈ, ಪ್ರಹ್ಲಾದ್ ಶೆಟ್ಟಿ, ಶ್ರೀಧರ ಶೆಟ್ಟಿ ಮದ್ಯ, ಮಹಿಳಾ ವೇದಿಕೆಯ ಅಧ್ಯಕ್ಷೆ ಮಮತಾ ಶೆಟ್ಟಿ, ಸರಯೂ ಶೆಟ್ಟಿ, ಅಂಜನಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಲೋಕಯ್ಯ ಶೆಟ್ಟಿ ಮುಂಚೂರು ಕಾರ್ಯಕ್ರಮ ನಿರ್ವಹಿಸಿದರು.

ಎಲ್ಲ ದುಗುಡಗಳ ನಡುವೆ ನಿನ್ನ ನೆನಪು....!

Posted by JAYAKIRANA Kirana on | 0 comments | Leave a comment...

ಹಾಯ್,
ನಿಂಗೆ ನಾನು ನೆನಪಾಗ್ತೀನಾ? ಹಾಗಂತ ಬಹಳ ಎಕ್ಸೈಟ್ ಆಗಿ ಅದೊಂದು ದಿನ ನೀನು ಕೇಳಿದ್ದೆ.
ಉತ್ತರ ಇಂದು ಹೇಳುತ್ತಿದ್ದೇನೆ ಕೇಳು. ಹೌದು ನನಗೆ ನೀನು ತುಂಬಾನೆ ನೆನಪಾಗ್ತಿದ್ದಿಯಾ. ಆದರೆ ಹುಡುಗೀ ನಿಜಕ್ಕೂ ನನಗೆ ನೆನಪಾಗುತ್ತಿರುವುದು ನೀನಾ? ನಿನ್ನ ಹೆಸರಾ? ನಿನ್ನ ಮುಖವಾ? ಕಣ್ಣು ಗಳಾ? ಇಲ್ಲ, ಅದರೊಳಗೆ ಕಂಡು ಕಾಣದಂತಿರುವ ನೋವುಗಳಾ? ಗೊತ್ತಾಗುತ್ತಿಲ್ಲ.
ನಿನ್ನ ನೆನಪೆಂಬುದನ್ನು ಈ ದೇಹದಿಂದ ಕಿತ್ತು ಬಿಡಬೇಕು. ಹೃದಯದ ತುಂಬ ಓಡಾಡಿದ ನಿನ್ನ ಹೆಜ್ಜೆ ಗುರುತುಗಳು ಇನ್ನೂ ಕಾಡುತ್ತಿರುವ ಪಿಸು ಮಾತುಗಳು, ರಗಳೆಗಳು, ಮನಿಸು, ಮುದ್ದು... ಇವೆಲ್ಲವನ್ನು ಶಾಶ್ವತವಾಗಿ ಅಳಿಸಿಬಿಡಬೇಕು. ಇಷ್ಟಕ್ಕೂ ನನ್ನದು, ನಿನ್ನದು ಭೇಟಿಯಾಗಿಲ್ಲವೇನೂ ಎಂಬಂತೆ ಬದುಕಿ ಬಿಡಬೇಕು.
ಹಾಗಂತ ಅಂದುಕೊಳ್ಳುತ್ತೇನೆ. ಆದರದು ಸಾಧ್ಯವೇ?
ಅಂದು ಮೊದಲ ಬಾರಿಗೆ ನಿನ್ನ ಕಂಡಾಗ ನೀನು ತಿಳಿಯ ಹಸಿರು ಬಣ್ಣದ ಬಟ್ಟೆ ಧರಿಸಿದ್ದೆ, ಕೈಯಲ್ಲಿ ಫೀಟುದ್ದದ ಬುಕ್ಕೆಗಳು ಸುಮ್ಮನೆ ನೀನು ನಡೆದು ಬರುತ್ತಿದ್ದರೆ ಜಗತ್ತಿನ ಒಂಭತ್ತನೇ ಅದ್ಭುತವೊಂದನ್ನು ಕಾಣುತ್ತಿದ್ದೇನೋ ಎಂಬಂತೆ ನಾನು ನಿಂತಲ್ಲೇ ಕಲ್ಲಾಗಿ ಹೋಗಿದ್ದೆ. ನನ್ನನ್ನು ಕಂಡ ನಿನ್ನ ಕೈಯಲ್ಲಿ ಅದಾಗಲೇ ಸಣ್ಣ ನಡುಕ, ಕಣ್ಣಂಚಿನಲ್ಲಿ ಕಂಡೂ ಕಾಣದಂತಹ ಹೂ ನಗೆ.
ಅಂದು ನನಗೆ ನಾನೇ ಕೇಳಿಕೊಂಡಿದ್ದೆ. ಇದನ್ನೇ ಅಲ್ಲವೇ ಜಗತ್ತು ಪ್ರೀತಿ ಎಂದು ಕರೆಯುವುದು? ನಿನ್ನ ಮೊದಲ ಸಲ ಮಾತನಾಡಿಸಿದಾಗ ಹೊಸ ಹುಡು ಗಿಯೊಂದಿಗೆ ಮಾತಾಡುತ್ತಿದ್ದೇನೆ ಎಂಬ ಭಾವನೆಯೂ ಉಕ್ಕೇರಿಲ್ಲ. ನಿನ್ನ ನಗು, ಮಾತು ಆತ್ಮೀಯ ಎನ್ನಿಸಿದ್ದವು. ಆದರೆ ಈ ಸಂಬಂಧಕ್ಕೊಂದು ಕೊನೆಯಿದೆ ಎಂಬುದನ್ನು ಆ ಕ್ಷಣಕ್ಕೆ ಮಾತು ಅರಿವಿಗೆ ಬರಲಿಲ್ಲ. ಮೊದ ಮೊದಲ ಜಗಳಗಳಲ್ಲಿ ಒಂದು ಬಗೆಯ ಹಿತವಾದ ಖುಷಿಯಿತ್ತು. ಜಗಳ ಮುಗಿಯಿತು ಎಂಬುದಕ್ಕೆ ಸೂಚನೆಯಾಗಿ ಬೈಟೂ ಜ್ಯೂಸ್‌ಗಳಿತ್ತು. ಹತ್ತಾರು ಜನ್ಮ ಗಳಿಗೂ ಮುಗಿಯದಷ್ಟು ಮಾತುಗಳಿತ್ತು. ಹಿತ ವಾದ ಮೌನಗಳಿತ್ತು. ಆದರೆ ಬರಿಯ ಜಗಳಗಳಷ್ಟೇ ನಮ್ಮನ್ನು ಪ್ರೀತಿಗಿಂತ ಹೆಚ್ಚಾಗಿ ಆವರಿಸಿ ಕೊಂಡತ್ತೇ?
ದುರಂತ ನೋಡು. ಬದುಕು ಹಳಿ ತಪ್ಪುತ್ತಿದೆ ಎಂಬ ಯೋಚನೆ ಆಗಲೂ ನಮಗೆ ಸಿಕ್ಕಲೇ ಇಲ್ಲ.
ಆದರೆ ಹುಡುಗಿ ನಾನು ಯಾವತ್ತು ಜಿದ್ದಿಗೆ ಬೀಳದೆ ಸೋಲಪ್ಪಿ ಕೊಳ್ಳದವ. ಅಂದು ನೀನು ಎದ್ದು ಹೋಗುವಾಗ ಮಾತನಾಡಿದೆ. ನಾನು ಊಹುಂ ಅಂತ ಕೂಡ ಹೇಳಲಿಲ್ಲ. ತಪ್ಪು ನಿನ್ನದೂ ಇದೆ. ನನ್ನದೂ ಇದೆ. ಕೈಬೀಸಿ ಕರೆಯುತ್ತಿರುವ ಭವ್ಯ ಭವಿಷ್ಯಕ್ಕೆ ಬದುಕು ನಿನ್ನ ಕರೆದೊಯ್ಯುತ್ತಿದ್ದರೆ ಬೇಡವೆಂದು ಹೇಗೆ ತಾನೇ ಹೇಳಲಿ ಹೇಳು. ಮನ ದಲ್ಲಿ ಅಂದು ಕೂಡಾ ಹುಡುಗಿಗೆ ಒಳ್ಳೆಯದಾಗಲಿ ಎಂಬ ಹಾರೈಕೆಯಿತ್ತು ಇಂದಿನಂತೆ!
ಈಗ ಎಲ್ಲಾ ದುಗುಡಗಳ ನಡುವೆ ಇಂದು ಮತ್ತೆ ನೆನಪಾಗು ತ್ತಿದ್ದಿಯಾ. ನೀನು ನಿಜಕ್ಕೂ ಬದು ಕಿನಿಂದ ಎದ್ದು ಹೋಗಿಬಿಟ್ಟೆಯಾ? ಕೇಳಿಕೊಳ್ಳು ತ್ತಿದ್ದೇನೆ. ಇಷ್ಟಕ್ಕೂ ಅವಳು ಸಿಕ್ಕಿದ್ದಾದರೂ ಯಾವಾಗ? ಎಂದು ಮನಸ್ಸು ಗೊಳ್ಳನೆ ನಕ್ಕುಬಿಡುತ್ತದೆ. ಬದುಕಿ ನಲ್ಲಿ ಆಗಾಗ ಬಂದು ಹೋಗುವ ವವಿಧ ಪಾತ್ರಗ ಳಲ್ಲಿ ನೀನೂ ಒಂದು, ಅದೂ ಈಗಷ್ಟೇ ಅರಿವಾಗಿದೆ. ನೀನು ಬಂದಿದ್ದೆ ಎಂದಾಗ ಈಗ ಸಂಭ್ರಮವೂ ಆಗುತ್ತಿಲ್ಲ. ಎದ್ದು ಹೋದೆ ಎಂಬ ಬಗ್ಗೆ ದುಃಖವೂ ಆಗುತ್ತಿಲ್ಲ. ಈಗ ನಿಧಾನವಾಗಿ ಹೊಂದಿಕೊಳ್ಳುತ್ತಿ ದ್ದೇನೆ. ಯಾಕೆಂದರೆ ಒಂಟಿತನ ಕ್ಕಿಂತ ಬೇಗನೆ ರೂಢಿಯಾಗುವ ಸಂಗತಿ ಜಗ ತ್ತಿನಲ್ಲಿ ಬೇರಾವುದೂ ಇಲ್ಲವಂತೆ.
ಆದರೂ ನೆನಪುಗಳ ಮೆರವಣಿಗೆಗೆ ಕೊನೆಯೆಲ್ಲಿ ಯದು? ಇರಲಿ, ಇವೆಲ್ಲವುಗಳ ಮುಂದೆ ಅವುಗಳನ್ನು ಜೊತೆ ಯಲ್ಲಿಟ್ಟುಕೊಂಡು ನಗುವುದು ಕೂಡಾ ಅಭ್ಯಾಸ ಮಾಡಿಕೊ ಳ್ಳುತ್ತೇನೆ.
ಇಂತಿ ನಿನ್ನ ನೆನಪಿನ ಹುಡುಗ
ಎ.ಕೆ.

ಮುಂಡ್ಕೂರು ರಾಜು ಶೆಟ್ರು

Posted by JAYAKIRANA Kirana on | 0 comments | Leave a comment...

ಇವರು ಜನಪ್ರಿಯ ವ್ಯಕ್ತಿ. ಕಂಬಳವೆಂದರೆ ಎಲ್ಲಿಲ್ಲದ ಉತ್ಸಾಹ ಇವರಿಗೆ. ಮಿಜಾರು ಕಂಬಳದ ಪ್ರೋತ್ಸಾಹಕರಾದ ಇವರು ಗೆದ್ದ ಕೋಣಗಳ ಪಾಲಕರಿಗೆ ಬಹುಮಾನವಾಗಿ ರಸ ಗೊಬ್ಬರ ಹಾಗೂ ಇನ್ನಿತರ ರೂಪದಲ್ಲಿ ಪ್ರೋತ್ಸಾಹ ನೀಡು ತ್ತಿದ್ದಾರೆ.
೧೯೮೨ರಲ್ಲಿ ಇವರು ಸೀನಿಯರ್ ಹಗ್ಗದ ಕೋಣಗಳನ್ನು ತಯಾರಿಸಿದರು. ಹಿಂದೆ ಅವರಲ್ಲಿದ್ದ ಜ್ಯೂನಿಯರ್ ಹಗ್ಗದ ಕೋಣಗಳು ಹೆಸರಾದವುಗಳು. ಅವುಗಳನ್ನೇ ಪೋಷಿಸಿ, ತರ ಬೇತಿ ನೀಡಿ ಸೀನಿಯರ್ ವಿಭಾಗಕ್ಕೆ ತಂದರು.
೧೯೮೨ರಲ್ಲಿ ಕೊನೆಯದಾದ ಸುರತ್ಕಲ್ ಕಂಬಳಕ್ಕೆ ಇವರ ಸೀನಿಯರ್ ಕೋಣಗಳು ಬಂದವು. ಮೊದಲಿಗೆ ರಾಜು ಶೆಟ್ರು ಜ್ಯೂನಿಯರ್ ಕೋಣಗಳನ್ನು ಕಂಬಳಕ್ಕೆ ತರುವುದು ಅವರ ಚಿರಪರಿಚಿತರಿಗೆ ಅಸಮಾಧಾನವಾಗಿತ್ತು. ರಾಜು ಶೆಟ್ರ ಘನ ತೆಗೆ ಮರಿಕೋಣಗಳೇಕೆ? ದೊಡ್ಡ ಜೊತೆ ಓಟದ ಕೋಣ ಗಳೇ ಗೌರವ ತರುವಂತಹವು ಎಂದಾಸೆಯಿತ್ತು.
ರಾಜು ಶೆಟ್ರಾದರೋ ಸಣ್ಣ ಜೊತೆಗಳಿಂದ ಪಡೆದ ಅನುಭವವೇ ಮುಂದಕ್ಕೆ ದೊಡ್ಡ ಕೋಣಗಳನ್ನು ಪಳಗಿ ಸಲು ಸಹಾಯವಾದೀತೆಂಬ ಸ್ಥಿರ ಬುದ್ಧಿಯಿಂದಿದ್ದರು.
ಈ ಬಾರಿ ತನಗೆ ಯಶಸ್ಸನ್ನು ತಂದ ಜ್ಯೂನಿಯರ್ ಜೊತೆಯಲ್ಲಿ ಒಂದಾದ ಬೊಳ್ಳ ಕೋಣನಿಗೆ ಅತ್ತೂರು ಮೊಲಾಜೆ ತನಿ ಪೂಜಾರಿಯವರಿಂದ ಒಂದು ಕೋಣ ವನ್ನು ತಂದು ಸೀನಿಯರ್ ವಿಭಾಗದ ಸ್ಪರ್ಧೆಗೆ ತಯಾರಿ ಸಿದರು.
ಸುರತ್ಕಲ್ ಕಂಬಳದಲ್ಲಿ ಈ ಜೊತೆಯನ್ನು ಕಂಡ ವರು ಪಳಗಿದ ಸೀನಿಯರ್ ಕೋಣಗಳಿಗೆ ಸರಿಯಾಗಿ ಓಡಲು ಇವಕ್ಕೆ ಅನುಭವ ಸಾಲದೆಂದು ಮಾತಾಡಿಕೊಂ ಡರು. ಅಂತೆಯೇ ಎರಡು ಬಾರಿ ಬಿಡಿಯಾಗಿ ಓಡಿಸುವಾಗ ಈ ಹೊಸ ಜೋಡಿಗಳು ಒಂದಕ್ಕೊಂದು ಹೊಂದಿಕೊಂ ಡಂತೆ ಕಾಣಲಿಲ್ಲ. ಓಟವೇನೋ ರಭಸದಲ್ಲಿತ್ತು. ಅನಂ ತರ ಜೋಕಿ ಭಾಸ್ಕರ ಶೆಟ್ಟರು ಈ ಜೋಡಿಗಳನ್ನು ಓಡಿಸಿ ದರು. ಆ ಓಟದ ರೀತಿಯನ್ನು ಕಂಡವರು ಸಹಜವಾಗಿ ಮೂಗಿನಮೇಲೆ ಬೆರಳಿಟ್ಟು ಆಶ್ಚರ್ಯ ವ್ಯಕ್ತಪಡಿಸಿದರು. ಇದಾವುದು? ಪಾಕಬೆಟ್ಟಿನದೋ ಯಾ ಕಾಡಬೆಟ್ಟಿನದೋ? ಈಗಿನ ಓಟದ ರಭಸವು ಮಿಕ್ಕಿದ್ದು ಎಂಬರ್ಥ.
ಮತ್ತೊಂದು ಬಾರಿ ಈ ಕೋಣಗಳ ಓಟವನ್ನು ಕಾದು ನಿಂತು ನೋಡಿದರು. ‘ತಾಳಬದ್ಧವಾದ ಹೆಜ್ಜೆಗ ಳಿಂದ ಕೋಣಗಳನ್ನು ಗುರುತಿಸಲಾರದಷ್ಟು ವೇಗದಿಂದ ಓಡಿದವು. ಭೇಷ್! ೧೯೮೩ರ ಸ್ಪರ್ಧೆಗೆ ಒಂದು ಉತ್ತಮ ಜತೆಯನ್ನು ರಾಜು ಶೆಟ್ರು ತಯಾರಿಸಿದರೆಂಬ ತೃಪ್ತಿ ಕಂಬಳ ಪ್ರಿಯರಿಗಾಯ್ತು.
ಅಣಾಜೆ ಗಣೇಶ ರೈಗಳು
ಕಂಬಳದ ಕೋಣಗಳನ್ನು ಸಾಕುವುದರಲ್ಲಿ ಕಂಬಳ ಕ್ರೀಡೆಯಲ್ಲಿ ಉತ್ಸಾಹಿಗಳಿವರು. ಒಳ್ಳೆಯ ಕೃಷಿಕ.
ತನ್ನ ಹಟ್ಟಿಯಲ್ಲಿ ಹುಟ್ಟಿ, ಬೆಳೆದ ಕಾಟಿ ಕೋಣಗ ಳನ್ನು ಓಟದ ಅಭ್ಯಾಸ ಮಾಡಿಸಿ ಉತ್ತಮ ತರಬೇತಿ ನೀಡಿದರು. ಜಿಲ್ಲೆಯಲ್ಲಿ ಇವರ ಕೋಣಗಳಿಗೆ ಹೆಸ ರಿತ್ತು. ಇದರಿಂದಾಗಿ ರೈಗಳಿಗೂ ಕೀರ್ತಿ ಬಂದಿತ್ತು.
ಕಾಟಿ ಕೋಣಗಳು ಸರಿಯಾದ ನೆಗೆತ ತೆಗೆದು ಓಡಿದರೆ ಬಲಿಷ್ಠ ದೇಹಗಾತ್ರದ ಈ ಕೋಣಗಳ ಜೊತೆಗೆ ನಮ್ಮ ತುಳುಗಟ್ಟದ ಕೋಣಗಳು ಕನಿಷ್ಠ ೧೫ ಮೀಟರಿ ನಷ್ಟು ಹಿಂದೆ ಬೀಳಬೇಕಾದೀತು.
ಅಣಾಜೆ ಗಣೇಶ ರೈಗಳು ಈ ಜೊತೆಗಳನ್ನು ಚೆನ್ನಾಗಿ ಪಾಲಿಸಿಕೊಂಡು ಬಂದಿರುತ್ತಾನೆ. ಚಿಕ್ಕ ವಯಸ್ಸಿನ ಈ ಕಾಟಿಗಳಿಗೆ ಉತ್ತಮ ಭವಿಷ್ಯ ಕಾದಿದೆ. ಮಿಜಾರ ಕಂಬಳ ದಲ್ಲಿ ಮೂರನೇ ಬಹುಮಾನ ಪಡೆದವು.

ಪೇಜಾವರ ಶ್ರೀಗಳು ಸ್ವಲ್ಪ ಕಾಲ ವಿಶ್ರಾಂತಿ ಪಡೆದುಕೊಳ್ಳಲಿ

Posted by JAYAKIRANA Kirana on | 0 comments | Leave a comment...

ರಂಗನಾಥ, ಉಡುಪಿ
ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳು ಇತ್ತೀಚಿನ ದಿನಗಳಲ್ಲಿ ಬಹಿರಂ ಗವಾಗಿ ಸಾರ್ವಜನಿಕರ ಟೀಕೆಗೆ ಒಳಗಾಗುತ್ತಿರುವುದು ಬೇಸರದ ಸಂಗತಿಯಾ ಗಿದೆ. ಈ ರೀತಿಯಾಗಿ ಹಿಂದೂ ಸ್ವಾಮೀಜಿಯೋರ್ವರು ಟೀಕೆಗೆ ಒಳಗಾಗಲು ಕಾರಣವೇನೆಂದು ನೋಡಿದರೆ. ಇದಕ್ಕೆ ಬೇರೆ ಯಾರೂ ಕಾರಣರಲ್ಲ, ಸ್ವತಹ ಸ್ವಾಮೀಜಿಯವರೇ ಕೋಲು ಕೊಟ್ಟು ಹೊಡಿಸಿಕೊಳ್ಳುವ ರೀತಿಯಲ್ಲಿ ವರ್ತಿ ಸುತ್ತಿರುವುದು ಕಂಡು ಬರುತ್ತಿದೆ. ಜನರಲ್ಲಿ ಧಾರ್ಮಿಕ ಶ್ರದ್ದೆ ಉಂಟು ಮಾಡು ವಂತೆ ಮಾಡುವುದು, ಧರ್ಮದ ಮೂಲಕ ಮಾನವ ತನ್ನ ವಿಕಾಸವನ್ನು ಹೊಂದು ವಂತೆ ಮಾಡುವಲ್ಲಿ ಸ್ವಾಮೀಜಿಗಳು ಪ್ರಮುಖ ಪಾತ್ರ ವಹಿಸಬೇಕಾದುದು ಈಗಿನ ಕಾಲದ ಕರೆಯಾಗಿದೆ. ಆದರೆ ಪೇಜಾವರ ಸ್ವಾಮಿಗಳು ಅಂಧ ಶ್ರದ್ಧೆಯನ್ನೇ ಮತ್ತಷ್ಟು ಬಲಗೊಳಿಸುತ್ತಾ ಸಾಗುತ್ತಿರುವುದು, ಮೂಢನಂಬಿಕೆಗಳಿಗೆ ಪೂರಕ ವಾಗುವಂತಹಾ ಹೇಳಿಕೆಗಳನ್ನು ನೀಡುತ್ತಾ ಮಾನವ ಸಂಕುಚಿತತೆಯ ಕಡೆಗೆ ಸಾಗುತ್ತಿರುವಂತೆ ಮಾಡುತ್ತಿರುವುದು ವಿಷಾದನೀಯ. ಪ್ರಗತಿಪರ ಸ್ವಾಮಿಗಳು ಎಂದು ಕರೆಸಿಕೊಂಡ ಇವರು ಇತ್ತೀಚಿನ ದಿನಗಳಲ್ಲಿ ವರ್ತಿಸುವ ರೀತಿಯನ್ನು ಕಂಡರೆ ಇವರು ತಮ್ಮ ಪೂರ್ವಜರ ತತ್ವಗಳಿಗೆ ಜೋತುಬಿದ್ದು ಈಗಿನ ಕಾಲದ ಕರೆಯನ್ನು ಧಿಕ್ಕರಿಸುತ್ತಿರುವಂತೆ ಭಾಸವಾಗುತ್ತಿದೆ.
ಈ ಮೇಲಿನದು ಒಂದು ಅಪವಾದವಾದರೆ ಇನ್ನೊಂದು ಪ್ರಮುಖ ಅಪವಾದ ಏನೆಂದರೆ ಇವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಪ್ರಕರಣ ನಡೆ ದರೂ ಅದಕ್ಕೆ ತಕ್ಷಣ ಕೈ ಹಾಕಿ ತನ್ನ ಉಪಸ್ಥಿತಿಯನ್ನು ಅಲ್ಲಿ ತೋರಿಸುತ್ತಾ ನಗೆ ಪಾಟಲಿಗೀಡಾಗುವುದು. ಇಲ್ಲಿ ಏನಾದರೂ ಒಂದು ಕಾರ್ಯಕ್ರಮ, ಕೆಲಸ ನಡೆ ಯಬೇಕಾದರೆ ಪೇಜಾವರ ಶ್ರೀಗಳು ಅತೀ ಅಗತ್ಯ ಎಂದು ತೋರಿಸಿಕೊಡುವ ಮಾನಸಿಕತೆಯಿಂದ ಶ್ರೀಗಳು ಜನರ ಮನಸ್ಸಿನಿಂದ ದೂರ ಬಲು ದೂರ ಸಾಗುತ್ತಿ ದ್ದಾರೆ. ಇಲ್ಲಿ ಪ್ರಮುಖವಾಗಿ ಪ್ರಭಾವ ಬೀರುತ್ತಿರುವ ಬೃಹತ್ ಕೈಗಾರಿಕೆಗಳ ಅಕ್ರಮ, ಜನರ ಶೋಷಣೆಯಂತಹಾ ಕಾರ್ಯಾಚರಣೆಗಳ ವಿರುದ್ಧ ಹೋರಾಟ ದಲ್ಲಿ ಅಗತ್ಯವಿಲ್ಲದೆ ಸೇರಿಕೊಂಡು ಹೋರಾಟದ ದಿಕ್ಕು ತಪ್ಪಿಸುತ್ತಿರುವುದು ಗೋಚ ರವಾಗುತ್ತಿದೆ. ನೇತೃತ್ವವನ್ನು ಕೈಗೆತ್ತಿಕೊಂಡು ಉಪವಾಸದ ಬೆದರಿಕೆ ಹಾಕಿ ಅದನ್ನು ಕುಂಟು ನೆಪ ಒಡ್ಡಿ ಮುಂದೂಡುತ್ತಾ, ಕೈಬಿಡುತ್ತಾ ಬೃಹತ್ ಕೈಗಾರಿಕೆಗಳ ಸಂತ್ರ ಸ್ತರಿಗೆ ಒಂದು ತಲೆನೋವಾಗಿ ಪರಿಣಮಿಸುತ್ತಿದ್ದಾರೆ.
ಬಡತನ, ಅಸ್ಪೃಶ್ಯತೆ, ನಕ್ಸಲ್ ಸಮಸ್ಯೆ, ಮೂಢನಂಬಿಕೆ, ಧರ್ಮ, ಮತಾಂತರ ಇತ್ಯಾದಿ ಇತ್ಯಾದಿ ಎಲ್ಲಾ ವಿಚಾರಗಳಲ್ಲಿ ತನ್ನದೇ ಆದ ಧಾಟಿಯಲ್ಲಿ ಹೇಳಿಕೆ ನೀಡುತ್ತಾ, ಆಶ್ವಾಸನೆ ಕೊಡುತ್ತಾ. ಸಹಾಯ, ಸಹಕಾರದ ಘೋಷಣೆ ನೀಡುತ್ತಾ ಕೊನೆಗೆ ಜಾರಿಕೊಳ್ಳುವುದು ಅಥವಾ ಸುಮ್ಮನಿದ್ದು ಬಿಡುವುದು ಇವರು ಮರೆತು ಬಿಟ್ಟರೂ ಅದನ್ನು ಕೇಳಿಸಿಕೊಂಡವರು ಮರೆತು ಬಿಡುತ್ತಾರೆ ಎಂದು ಭಾವಿಸು ವುದು ಒಂದು ರೀತಿಯಲ್ಲಿ ಮೂರ್ಖತನವೂ ಆಗಿದೆ. ಇವರ ಹಿಂಬಾಲಕರು ಕೆಲವರು ಇವರು ಮಾಡಿದ ಸಣ್ಣ ಪುಟ್ಟ ಸಹಾಯ, ಕೆಲಸಗಳಿಗೆ ರೆಕ್ಕೆ ಪುಕ್ಕ ಕಟ್ಟ್ಚಿ ಪ್ರಚಾರ ಮಾಡಿದರು. ಭಾರತದ ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಭಾವಿ ವ್ಯಕ್ತಿ, ರಾಷ್ಟ್ರದ, ರಾಜ್ಯದ, ಸ್ಥಳೀಯ ಸಮಸ್ಯೆ, ವಿವಾ ದಗಳು ತಮ್ಮಿಂದ ಬಗೆಹರಿಯಬಹುದು. ಆ ಬಗ್ಗೆ ಸಂಧಾನಕ್ಕೆ ಯತ್ನಿಸಿದ್ದೇನೆ ಎಂದು ಹೇಳಿ ಕೊಳ್ಳುವ ಇವರಿಂದ ಆದ ಜನೋಪಯೋಗಿ ಕೆಲಸಗಳು ಯಾವುದು ಎಂದು ಬಹಿರಂಗ ಪಡಿಸಬೇಕಾಗಿದೆ.
ಸ್ವಾಮೀಜಿಗಳು ಮುಗ್ಧರು, ಕಪಟ ವಂಚನೆ ಅರಿಯದವರು ಎಂದು ಕೆಲವರು ಹೇಳಿಕೊ ಳ್ಳುತ್ತಾರೆ. ಒಂದು ವೇಳೆ ಹಾಗೆಂದು ಭಾವಿಸಿ ಕೊಂಡರೂ ಇವರು ತಮ್ಮ ಪ್ರತಿಷ್ಠೆಗೆ ಧಕ್ಕೆ ತಂದು ಕೊಂಡದ್ದು ಹೇಗೆ ಎಂದು ನೋಡಿದರೆ ಇವರು ವಿಪ್ರ ಸಮಾಜದಲ್ಲಿ ಹೇಳಿದ ಬಹಳಷ್ಟು ವಿಚಾರಗಳು ಟೀಕೆ, ಚರ್ಚೆಗೆ ಒಳಗಾದ ಮಾತುಗಳು ನೆನಪಿಗೆ ಬರುತ್ತವೆ. ‘ಮಾಂಸ, ಮದ್ಯ ಸೇವಿಸುವವರ ಜತೆ ಸಹ ಭೋಜನ ಮಾಡಿದರೆ ಅವರ ಗುಣಗಳು ಸಸ್ಯಾಹಾರಿಗಳಿಗೆ ಅಂಟಿಕೊಂಡು ಅವರೂ ಮಾಂಸ, ಮದ್ಯ ಸೇವಿಸುವ ಸಾಧ್ಯತೆಗಳಿವೆ’ ಈ ಮಾತಿನಂತೆಯೇ ಪೇಜಾವರ ಸ್ವಾಮಿಗಳು ಹೆಸರು ಕೆಡಿಸಿಕೊಂಡದ್ದು ಭ್ರಷ್ಟಾಚಾರಿಗಳ, ಕೆಟ್ಟವರ, ಸ್ವಾರ್ಥಿಗಳ, ಸ್ವಜನಪಕ್ಷಪಾತಿಗಳ ಸಹವಾಸದಿಂದಲೇ ಆಗಿದೆ. ರಾಜಕಾರಣಿಗಳು, ಬೃಹತ್ ಕೈಗಾರಿಕೆಗಳನ್ನು ಜಿಲ್ಲೆಯ ಮೇಲೆ ಹೇರುವವರ ಅತಿಯಾದ ಸಹವಾಸ ವನ್ನು ಇವರು ಮಾಡಿದ್ದಾರೆ. ಇವರೆಲ್ಲಾ ಪೇಜಾವರ ಶ್ರೀಗಳನ್ನು ತಮ್ಮ ಕೈಗೊಂಬೆಗ ಳಂತೆ ಕುಣಿಸಿದ್ದಾರೆ. ಯಾವುದೇ ರಾಜಕಾರಣಿಗಳ, ಹಣವಂತರ, ಪ್ರಭಾವಿಗಳ ಸಹವಾಸಕ್ಕೆ ಪೇಜಾವರ ಶ್ರೀಗಳು ಸುಲಭವಾಗಿ ಸಿಲುಕಿಕೊಳ್ಳುತ್ತಾರೆ ಎಂಬುದೂ ಇತ್ತೀಚಿನ ದಿನಗಳಲ್ಲಿ ಸಾಬೀತಾಗಿದೆ. ಈ ಜ್ಞಾನೋದಯ ವಿಪ್ರರ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಹೇಳಬಹುದೇ?
ಮದ್ಯ, ಮಾಂಸ ಸೇವಿಸುವವರ ಜೊತೆ ಸಹಭೋಜನ ನಿರಾಕರಿಸುವ ಪೇಜಾ ವರ ಶ್ರೀಗಳು ರಾಜಕಾರಣಿ, ಮತ್ತಿತರ ಭ್ರಷ್ಟ ವ್ಯಕ್ತಿಗಳ ಸಹವಾಸವನ್ನು ಯಾಕೆ ಮಾಡಿಕೊಳ್ಳುತ್ತಾರೆ? ಈ ಮೂಲಕ ಹಿಂದೂ ಸಮಾಜದ ಸ್ವಾಮೀಜಿಯೋರ್ವರು ಬಹಿರಂಗವಾಗಿ ಟೀಕೆಗೆ ಗುರಿಯಾಗಿ ಹಿಂದೂ ಸಮಾಜಕ್ಕೆ ಯಾಕೆ ಕುಂದು ಉಂಟು ಮಾಡುತ್ತಿದ್ದಾರೆ. ರಾಜಕೀಯದ ಆಟ, ಬಂಡವಾಳಗಾರರ ಹೂಟ, ಕ್ರಿಮಿ ನಲ್, ಭ್ರಷ್ಟಾಚಾರಿಗಳ ತಂತ್ರ ಇವೆಲ್ಲವನ್ನೂ ಮುಗ್ಧರಾದ ಪೇಜಾವರ ಶ್ರೀಗಳು ತಿಳಿದುಕೊಳ್ಳದೆ ಸ್ವತಃ ಅಪಮಾನಕ್ಕೆ ಒಳಗಾಗುತ್ತಿದ್ದಾರೆ ಎಂಬುದೂ ಕೆಲವರ ವಾದ. ಹಾಗಿರುವಾಗ ಪೇಜಾವರ ಶ್ರೀಗಳಿಗೆ ಇಂದಿನ ದಿನದಲ್ಲಿ ವಿಶ್ರಾಂತಿಯ ಅಗತ್ಯವಿದೆ ಎಂದು ಅನಿಸುತ್ತಿದೆ. ಕಂಡ ಕಂಡ ಕಡೆಗಳಲ್ಲಿ ಮೂಗು ತೂರಿಸಿದೆ ಸ್ವಲ್ಪ ಸಮಯ ಆಧ್ಯಾತ್ಮಿಕ ಸಾಧನೆಯಲ್ಲಿ ಶ್ರೀಗಳು ಕಾಲ ಕಳೆಯುವುದು ಒಳ್ಳೆಯದು. ಇದು ಹಿಂದೂ ಸಮಾಜಕ್ಕೂ, ಶ್ರೀಗಳಿಗೂ ಒಳ್ಳೆಯದು ಎಂಬುದು ಸಜ್ಜನರ ಅಭಿಪ್ರಾ ಯವಾಗಿದೆ.

ಧೈರ್ಯವಿಲ್ಲದ ಮೇಲೆ ಪ್ರೀತಿಸಿ ಪ್ರಯೋಜನವೇನೂ ಇಲ್ಲ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬಂಟ್ವಾಳ
ಸಮಸ್ಯೆ: ಸರ್, ನಾನು ೨೩ರ ಹರೆಯದ ಯುವಕ. ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದೇನೆ. ನಾನು ಹತ್ತನೇ ತರಗತಿ ಓದುತ್ತಿ ದ್ದಾಗ ಸಂಬಂಧಿ ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಆದರೆ ಅವಳಿಗೆ ವಿಷಯ ಹೇಳಲು ಧೈರ್ಯವಿರಲಿಲ್ಲ. ಅವಳು ಪಿಯುಸಿ ಮುಗಿಸಿ ಮನೆಯಲ್ಲೇ ಇದ್ದಳು. ನಾನು ಅವಳೊಂದಿಗೆ ಆಗಾಗ ಫೋನ್ ನಲ್ಲಿ ಮಾತಾಡುತ್ತಿದ್ದೆ. ಅವಳಿಗೂ ನಾನು ಮಾತಾಡುವುದು ಇಷ್ಟ ವಿತ್ತು. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಆದರೆ ನಾನು ನನ್ನ ಮನೆಯ ಸಮಸ್ಯೆಯಲ್ಲಿ ಆಕೆಯ ಬಗ್ಗೆ ಹೆಚ್ಚು ತಲೆಕೆಡಿಸಲು ಹೋಗಲಿಲ್ಲ. ಆದರೆ ಒಂದು ದಿನ ನನಗೆ ಅವಳ ಮದುವೆಯ ವಿಚಾರ ಮನೆಯಲ್ಲಿ ತಿಳಿಯಿತು. ನಾನು ಈ ವಿಷಯ ಕೇಳಿ ಹುಚ್ಚ ನಂತಾದೆ. ಆದರೆ ಅಷ್ಟರಲ್ಲಿ ಅವಳ ಮದುವೆಯ ಕಾಗದ ಮುದ್ರ ಣವಾಗಿತ್ತು.
ನನಗೆ ಅವಳನ್ನು ಹಾರಿಸಿಕೊಂಡು ಹೋಗಲು ಬೇಕಾಗು ವಷ್ಟು ಧೈರ್ಯವಿರಲಿಲ್ಲ. ಈ ನಡುವೆ ನನಗೊಮ್ಮೆ ಫೋನ್‌ನಲ್ಲಿ ಅವಳು ನನಗೆ ಮಾತಾಡಲು ಸಿಕ್ಕಿದಳು. ನಾನು ಅವಳಲ್ಲಿ ನಿನ್ನನ್ನು ನಾನೇ ಮದುವೆಯಾಗುತ್ತಿದ್ದೆ ಎಂದೆ. ಆಗ ಆಕೆ ಪ್ರೀತಿಸುತ್ತಿದ್ದ ವಿಷಯ ಹೇಳಿದಳು. ಅವಳು ಮನೆಮಂದಿಯ ಒತ್ತಾಯದಿಂದ ಬೇರೆ ಮದುವೆಗೆ ಒಪ್ಪಿದ್ದಾಗಿ ಹೇಳಿದಳು. ಈಗ ಆಕೆಯ ಗಂಡ ವಿದೇಶದಲ್ಲಿದ್ದಾರೆ. ನಾವಿಬ್ಬರೂ ಫೋನ್ ಮಾಡಿ ಮಾತಾಡುತ್ತೇವೆ. ಆಕೆ ನನ್ನ ಜತೆ ಚೆನ್ನಾಗಿ ಮಾತಾಡುತ್ತಾಳೆ. ನನಗೆ ಆಕೆಯನ್ನು ಮತ್ತೊಮ್ಮೆ ಪ್ರೀತಿಸುವ ಮನಸ್ಸಾಗುತ್ತದೆ. ಇದು ತಪ್ಪೆಂದು ನನಗೂ ತಿಳಿದಿದೆ. ಸರ್, ನಾನು ಮಾಡುವುದು ಸರಿಯೇ? ಆಕೆ ನನ್ನನ್ನು ದೂರ ಮಾಡಬಹುದೇ? ನನಗೆ ಕೆಲಸ ಮಾಡಲು ಆಸಕ್ತಿಯಿಲ್ಲ. ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನೀವು ಆಕೆಯನ್ನು ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿಸುತ್ತಿದ್ದೀರೆಂದು ಅನಿಸುತ್ತಿದೆ. ನಿಮ್ಮ ಮನಸ್ಸು ಕೆಟ್ಟ ಯೋಚನೆ ಮಾಡುತ್ತಿಲ್ಲ ಎಂಬುದು ನಿಮ್ಮ ಮಾತಿನಿಂದ ತಿಳಿಯುತ್ತದೆ. ಆದರೂ ನೀವು ಮಾಡಬೇಕೆಂದಿರುವುದು ತಪ್ಪು. ಹಿಂದೆ ಆಕೆ ಮದುವೆಯಾಗುವ ಮುನ್ನ ನೀವು ಪ್ರೀತಿಸುವುದನ್ನು ಹೇಳಲು ಧೈರ್ಯ ಸಾಲದೆ ಈಗ ಆಕೆಗೆ ಹೇಳಲು ಹೊರಟಿರುವುದು ಎಲ್ಲಿಯ ನ್ಯಾಯ? ಇದರಿಂದ ನೀವು ಆಕೆಯ ದೃಷ್ಟಿಯಲ್ಲಿ ಖಳನಾಗಿ ಗೋಚರಿಸಲೂಬಹುದು. ಈಗ ಆಕೆಗೆ ಬೇರೆ ಮದುವೆಯಾಗಿದೆ. ನೀವು ಆಕೆಗೆ ಹತ್ತಿರವಾದರೆ ಸಮಾಜ ನಿಮ್ಮ ಮತ್ತು ಆಕೆಯ ಬಗ್ಗೆ ತಪ್ಪು ತಿಳಿಯುತ್ತದೆ. ಮುಂದೆ ಆಕೆಯ ಸಂಸಾರ ಹಾಳಾಗಬ ಹುದು. ಆಕೆಯನ್ನು ನಿರ್ಮಲ ಮನಸ್ಸಿನಿಂದ ಇಷ್ಟಪಟ್ಟಿದ್ದರೆ, ಆಕೆಯ ಗುಂಗಿನಿಂದ ಹೊರಬನ್ನಿ. ಆಕೆ ಯಾವತ್ತೋ ನಿಮ್ಮವ ಳಾಗಿದ್ದಳು, ಆದರೆ ಇಂದು ಆಕೆ ಬೇರೊಬ್ಬರ ಸೊತ್ತು. ಆಕೆಯ ಗಂಡನೂ ನಿಮ್ಮಂತೆಯೇ ತನ್ನ ಪತ್ನಿಯ ನೆನಪಲ್ಲೇ ಇರಬಹುದ ಲ್ಲವೇ? ನೀವು ಮುಂದುವರಿದರೆ ಆತನಿಗೆ ದ್ರೋಹವೆಸಗಿದಂತೆ. ನಿಮ್ಮಿಬ್ಬರ ಮಾತು ಗೆಳೆತನಕ್ಕೆ ಮಾತ್ರ ಸೀಮಿತವಾಗಿರಲಿ. ಆಕೆ ಮುಂದುವರಿದರೂ ಆಕೆಗೆ ಬುದ್ಧಿ ಹೇಳಬೇಕಾದ್ದು ನಿಮ್ಮ ಕರ್ತವ್ಯ. ಕೆಲಸದ ಕಡೆ ಗಮನಕೊಡಿ.

28-05-2012

Posted by JAYAKIRANA Kirana on | 0 comments | Leave a comment...

ಮೇಷ : ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿದೆ.
ವೃಷಭ : ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯಲಿದೆ.
ಮಿಥುನ : ಆಧ್ಯಾತ್ಮಿಕ ಕಾರ್ಯಗಳನ್ನು ಮಾಡಲಿದ್ದೀರಿ.
ಕರ್ಕಾಟಕ : ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.
ಸಿಂಹ : ವಿರೋಧಿಗಳಿಂದ ತೊಂದರೆ ಇರುತ್ತದೆ.
ಕನ್ಯಾ : ದೇವತಾ ಕ್ಷೇತ್ರಗಳ ದರ್ಶನ ಮಾಡುತ್ತೀರಿ.
ತುಲಾ : ಕುಟುಂಬದಲ್ಲಿ ಒತ್ತಡ ಇರುತ್ತದೆ.
ವೃಶ್ಚಿಕ : ಕೆಲಸ ಕಾರ್ಯಗಳು ಮಂದ ಗತಿಯಿಂದ ನಡೆಯಲಿದೆ.
ಧನು : ಬಂಧು ಮಿತ್ರರ ಸಹಾಯ ದೊರೆಯುವುದು.
ಮಕರ : ವ್ಯಾಪಾರ ವ್ಯವಹಾರಗಳು ಉತ್ತಮವಾಗಿ ನಡೆಯಲಿದೆ.
ಕುಂಭ : ಖರ್ಚು ಹೆಚ್ಚಾಗಿದ್ದು, ಆದಾಯ ಕಡಿಮೆ ಇರುತ್ತದೆ.
ಮೀನ : ಮನೆಯಲ್ಲಿ ಒಮ್ಮತದ ಕೊರತೆ ಇರುತ್ತದೆ.

28-05-2012

Posted by JAYAKIRANA Kirana on | 0 comments | Leave a comment...

ಮೂಲ್ಕಿ: ಪ್ರಿಂಟರ್ ಬೇಕು ೮೭೪೮೮೭೦೬೯೧.
ಕಾವೂರು: ಲೇಡೀಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು: ಕಚೇರಿ ಕೆಲಸಕ್ಕೆ ಹುಡುಗರು ಬಏಕು ೯೪೪೮೮೪೩೪೯೯.
ಬಂದರ್: ಕೆಲಸಕ್ಕೆ ಜನ ಬಏಕು ೯೪೪೮೩೦೭೬೭೯೯.
ಅಳಕೆ: ಪ್ರಿಂಟಿಂಗ್ ಪ್ರೆಸ್‌ಗೆ ಬೈಂಡಿಂಗ್ ತಿಳಿದಿರುವವ ಯುವತಿಯರು ಬೇಕು ೯೮೮೬೬೯೨೨೧೫.
ಮಂಗಳೂರು: ಪವರ್ ಸರ್ವಿಸ್ ಸಂಸ್ಥೆಗೆ ಡೀಸೆಲ ಮೆಕ್ಯಾನಿಕ್ ಬೇಕು. ೯೮೪೫೨೫೩೫೮೨
ಕಾರ್ಕಳ : ಬಾರ್ & ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೇಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ್ ಬೇಕು ೯೪೪೮೧೦೯೬೮೬.
ಕೊಣಾಜೆ : ಸ್ಟುಡಿಯೋಗೆ ಕೆಲಸಕ್ಕೆ ಜನ ಬೇಕು ೮೭೨೨೭೨೧೦೫೦.
ಉಡುಪಿ : ಸಸ್ಯಾಹಾರಿ ಹೊಟೇಲಿಗೆ ತಿಂಡಿ ಮಾಡುವವರು, ಸಪ್ಲಾಯರ್ ೯೬೬೩೦೯೮೦೨೫.
ಕಾವೂರು : ಕಾರ್ ಡ್ರೈವರ್ ಬೇಕು ೭೨೦೪೬೪೩೪೫೫.
ಮಂಗಳೂರು : ಸೇಲ್ಸ್ ಗರ್ಲ್ಸ್ ಬೇಕು ೮೨೭೭೧೬೫೬೬೨.
ಮಂಗಳೂರು : ಕಾರ್ ಡ್ರೈವರ್‌ಬೇಕು ೦೮೨೪-೪೨೬೮೫೨೪.
ಮಂಗಳೂರು : ಕಂಪ್ಯೂಟರ್ ತರಗತಿ, ಟ್ಯೂಷನ್ ಮತ್ತು ಸಂಸ್ಥೆಯ ಮೇಲ್ವಿಚಾರಣೆ ಗೆ ಜನ ಬೇಕು ೭೨೦೪೬೪೩೪೫೫.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಮ್ಯಾನ್ ಬೇಕು ೯೮೪೪೪೬೪೩೭೭.
ಮೋರ್ಗನ್‌ಗೇಟ್ : ಟ್ಯೂಷನ್ - ಕಂಪ್ಯೂಟರ್ ತರಗತಿ ನೀಡಲು ಪುರುಷರು, ಮಹಿಳೆಯರು ಬೇಕು ೯೯೭೨೭೨೫೩೫೭.
ಕೊಡಿಯಾಲ್‌ಬೈಲ್ : ಟ್ರಾವೆಲ್ ಏಜೆನ್ಸಿಗೆ ಲೇಡೀಸ್ ಸ್ಟಾಫ್ ಬೇಕು ೨೪೯೭೮೬೨.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೈಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಟೈಲರ್ & ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.
ಕಾವೂರು : ಲೇಡಿಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು : ಲೇಡಿಸ್ ಹಾಸ್ಟೆಲ್‌ಗೆ ಮಹಿಳಾ ಅಡುಗೆಯವರು ಬೇಕು ೯೨೪೧೨೧೪೧೨೨.
ಮಂಗಳೂರು : ಮನೆ ಬಾಡಿಗೆಗೆ ಇದೆ ೯೮೮೬೩೩೦೨೭೧.
ಸುರತ್ಕಲ್ : ಬಟ್ಟೆ ಅಂಗಡಿ ಕೆಲಸಕ್ಕೆ ಆಸುಪಾಸಿನ ಜನ ಬೇಕು ೮೪೯೪೮೫೮೫೪೪.
ಮಂಗಳೂರು : ಎಕೌಂಟೆಂಟ್, ಶೋರೂಂಗೆ ಜನ ಬೇಕು ೭೨೫೯೧೨೪೬೯೨.
ಬಲ್ಮಠ : ಬುಕ್‌ಸ್ಟಾಲ್‌ಗೆ ಜನ ಬೇಕು ೨೪೨೪೭೪೪.
ಮಂಗಳೂರು : ಕೆಲಸಕ್ಕೆ ಜನ ಬೇಕು ೯೮೪೫೮೦೬೪೮೦.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ಏಕೌಂಟ್ಸ್ ಗೊತ್ತಿರುವವರು ಬೇಕು ೯೮೪೫೮೭೪೦೬೮.

ಸಿನಿಮಾ ಪ್ರದರ್ಶನಕ್ಕಿಂತ ಗಂಭೀರ ಸಮಸ್ಯೆ ಜಿಲ್ಲೆಯಲ್ಲಿದೆ

Posted by JAYAKIRANA Kirana on | 0 comments | Leave a comment...

ಹಿಂದೂ ಸಂಘಟನೆಗಳು ‘ಕಠಾರಿವೀರ ಸುರಸುಂದರಾಂಗಿ’ ಎನ್ನುವ ಚಿತ್ರದ ವಿರುದ್ಧ ಸಮರ ಸಾರಿವೆ. ಏನೇ ಆಗಲಿ, ಪ್ರದರ್ಶನ ನಡೆ ಯಲು ಬಿಡುವುದಿಲ್ಲ ಎಂದು ಕೆಲವು ಕಾವಿಧಾರಿ ಗಳು ಹೇಳಿದ ಬಳಿಕವೂ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೂ ಬೆನ್ನು ಬಿಡದ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿವಿಧ ಠಾಣೆಗಳಿಗೆ ಚಿತ್ರವನ್ನು ಪ್ರದರ್ಶಿಸಲು ಬಿಡಬೇಡಿ ಎಂದು ದೂರು ಕೊಡುತ್ತಿದ್ದಾರೆ. ಇದನ್ನು ತಪ್ಪಲ್ಲ ಎನ್ನಬಹುದಾದರೂ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇದ ಕ್ಕಿಂತ ಜ್ವಲಂತ ಸಮಸ್ಯೆಗಳು ಇನ್ನೂ ಬೇಕಾದ ಷ್ಟಿವೆ. ಹಿಂದೂ ದೇವತೆಗಳಿಗೆ ಅವಮಾನವಾಗು ವುದನ್ನು ಖಂಡಿಸಬೇಕು ನಿಜ. ಆದರೆ ಇನ್ನು ಕೆಲವೇ ಸಮಯದಲ್ಲಿ ನಮ್ಮ ಭೂಮಿಯೇ ವಿದೇಶಿ ಕಂಪೆನಿಗಳ ಪಾಲಾಗಲಿವೆ. ಇದನ್ನು ವಿರೋಧಿ ಸುವವರಾರು? ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ನಾಗಾರ್ಜುನ ಎನ್ನುವ ರಕ್ತಬೀಜಾಸುರ ಅವ ತಾರವೆತ್ತಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಝ್ ಎನ್ನುವ ವಿಷವರ್ತುಲ ಜನರನ್ನು ಅಪೋಶನ ತೆಗೆದುಕೊಳ್ಳಲು ತಯಾರಾಗಿದೆ. ಈಗಾಗಲೇ ಸಾವಿರಾರು ಎಕರೆಯಷ್ಟು ಕೃಷಿಭೂಮಿ ನಾಶ ವಾಗಿದೆ. ಜನರು ಗುಳೇ ಹೋಗಿದ್ದಾರೆ. ಮಠ-ಮಂದಿರಗಳು ಕೆಡವಲ್ಪಟ್ಟಿವೆ. ಇದರ ಬಗ್ಗೆ ಜಿಲ್ಲೆಯ ಹಿಂದೂ ಸಂಘಟನೆಗಳಿಗೆ ಕಾಳ ಜಿಯೇ ಇಲ್ಲ.
ಯಾಕೆಂದರೆ ಸೆಝ್ ಇರಲಿ, ಇನ್ನಿತರ ಬೃಹತ್ ಕಂಪೆನಿಗಳಿರಲಿ ಇದನ್ನು ಜಿಲ್ಲೆಗೆ ತಂದ ವರು ಇವರನ್ನು ಸಾಕಿ ಸಲಹುತ್ತಿರುವವರು ಕೇಸರಿ ಪಕ್ಷವೇ ತಾನೇ? ಹೀಗಾಗಿ ಹಿಂದೂ ಸಂಘಟನೆಗಳು ಇಂಥ ಸಮಸ್ಯೆಗಳ ವಿರುದ್ಧ ಹೋರಾಡಿ ಜನರಿಗೆ ನ್ಯಾಯ ಕೊಡಿಸುವು ದನ್ನು ಬಿಟ್ಟು ಯಾವುದೋ ಪ್ರಯೋಜನಕ್ಕೆ ಬಾರದ ಸಿನಿಮಾದ ವಿರುದ್ಧ ಹೋರಾಡು ವುದು ನಾಚಿಕೆಗೇಡಿನ ವರ್ತನೆಯೇ ಸರಿ.
ದೇಶಭಕ್ತ, ಉಳ್ಳಾಲ

ಗಲ್ಲಿ ಕ್ರಿಕೆಟ್‌ನಲ್ಲಿ ಮಕ್ಕಳ ಜೂಜಾಟವನ್ನು ನಿಲ್ಲಿಸಿ
ಮಕ್ಕಳು ಕ್ರಿಕೆಟ್ ಆಡುವುದು ಸಾಮಾನ್ಯ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಮಕ್ಕಳು ಗಲ್ಲಿ ಕ್ರಿಕೆಟ್‌ನ ನೆಪದಲ್ಲಿ ಹಣವಿಟ್ಟು ಪಂದ್ಯಾಟ ವಾಡುವಲ್ಲಿ ತೊಡಗಿದ್ದಾರೆ. ನಗರ ಪ್ರದೇಶವನ್ನು ಬಿಟ್ಟು ಹಳ್ಳಿ ಪ್ರದೇಶಗಳತ್ತ ತೆರಳಿದರೆ ಇಂತಹ ಅದೆಷ್ಟೋ ಗಲ್ಲಿ ಕ್ರಿಕೆಟ್‌ನ ಚಿತ್ರಣ ದೊರೆಯು ತ್ತದೆ. ಇನ್ನೂ ಮೀಸೆ ಚಿಗುರದ ಸಣ್ಣ ಸಣ್ಣ ಮಕ್ಕಳು ಮೈದಾನದ ಶುಲ್ಕ ಪಡೆದು ಕ್ರಿಕೆಟ್ ಪಂದ್ಯಗಳನ್ನು ನಡೆಸುತ್ತಿದ್ದಾರೆ. ನೂರರಿಂದ ಇನ್ನೂರು ರುಪಾಯಿವರೆಗೆ ಪಡೆದು ಸಾವಿರ ರುಪಾಯಿಯವರೆಗೆ ಬಹುಮಾನವಿಟ್ಟು ಮಕ್ಕಳ ಸಾರಥ್ಯದಲ್ಲೇ ಕ್ರಿಕೆಟ್ ಪಂದ್ಯಾಟಗಳು ನಡೆ ಯುತ್ತಿವೆ. ಈ ವೇಳೆ ಹಣದ ವಿಚಾರವಾಗಿ ಮಕ್ಕಳು ಹೊಡೆದಾಡಿಕೊಳ್ಳುವ ಘಟನೆಗಳೂ ನಡೆಯುತ್ತಿವೆ. ಭಾನುವಾರ ಹೆಚ್ಚಾಗಿ ಈ ರೀತಿಯ ಪಂದ್ಯಾಟಗಳು ನಡೆಯುತ್ತಿರುವ ಕಾರಣ ಸಾಕಷ್ಟು ಮಕ್ಕಳು ಇದರಲ್ಲಿ ಭಾಗವಹಿಸುತ್ತಾರೆ. ಕೆಲ ವೊಂದು ವೇಳೆ ದೊಡ್ಡವರು ಕೂಡ ಮಕ್ಕಳ ಈ ಜೂಜಾಟಕ್ಕೆ ಸಾಥ್ ನೀಡುತ್ತಿದ್ದು, ಗಲಾಟೆ ಎದ್ದಾಗ ಮಾತ್ರ ಅಲ್ಲಿಂದ ಕಾಲ್ಕೀಳುತ್ತಾರೆ. ಇನ್ನಾ ದರೂ ಸ್ಥಳೀಯ ಪೊಲೀಸರು ಇತ್ತ ಗಮನ ಹರಿಸಿ ಈ ರೀತಿಯ ಜೂಜಾಟದ ಗಲ್ಲಿ ಕ್ರಿಕೆಟ್ ಗಳತ್ತ ಗಮನ ಹರಿಸಲಿ.
ಇಸ್ಮಾಯಿಲ್, ತೊಕ್ಕೊಟ್ಟು

ಲೈಟ್‌ಹೌಸ್ ಬಸ್ ನಿಲ್ದಾಣ ಕುಸಿಯಲಿದೆ!
ಹಳೆಯಂಗಡಿ ಸಮೀಪದ ಲೈಟ್ ಹೌಸ್-ತೋಕೂರು ರಸ್ತೆಯ ಬದಿ ಬಸ್ ತಂಗುದಾಣವೊಂದಿದೆ. ಸ್ಥಳೀಯ ಸಂಘ ಟನೆ ಪಂಚಾಯತ್ ಸಹಯೋಗದೊಂ ದಿಗೆ ಹಲವು ವರ್ಷಗಳ ಹಿಂದೆ ಇದನ್ನು ನಿರ್ಮಿಸಿದೆ. ಇದು ಬಸ್ ಕಾಯುವ ಜನ ರಿಗೆ ಬಿಸಿಲು, ಮಳೆಯಿಂದ ಆಶ್ರಯ ನೀಡುತ್ತಿತ್ತು. ಆದರೆ ಈಗ ಬಸ್ ನಿಲ್ದಾಣದ ಮೇಲಿನ ಸೂರು ಕುಸಿಯುವ ಹಂತಕ್ಕೆ ತಲುಪಿದೆ. ಕಬ್ಬಿಣದ ಬೀಮ್‌ಗಳು ತುಕ್ಕು ಹಿಡಿದು ಮುರಿಯಲ್ಪಟ್ಟಿವೆ. ಸಿಮೆಂಟ್ ಸ್ಲ್ಯಾಬ್‌ನಲ್ಲೂ ಬಿರುಕು ಕಾಣಿಸಿಕೊಂಡಿದ್ದು ಮಳೆಗಾಲದಲ್ಲಿ ಇದು ಕುಸಿಯುವ ಸೂಚನೆ ನೀಡುತ್ತಿದೆ. ಸಂಬಂಧಪಟ್ಟ ಪಂಚಾಯತ್ ಈ ಬಗ್ಗೆ ತಕ್ಷಣ ಗಮನಿ ಸಬೇಕು. ಈಗಲೂ ಬಸ್ ಪ್ರಯಾಣಿಕರು ಇದರಡಿ ನಿಂತು ಬಸ್ ಕಾಯುತ್ತಾರೆ. ಒಂದು ವೇಳೆ ಅನಾಹುತ ಸಂಭವಿಸಿದರೆ ಸಂಬಂಧಪಟ್ಟವರೇ ಹೊಣೆ ಹೊರ ಬೇಕಾ ಗುತ್ತದೆ. ಆದ್ದರಿಂದ ಇದನ್ನು ಒಡೆದು ತೆಗೆ ಯುವುದು ಇಲ್ಲವೇ ಬಸ್ ತಂಗುದಾ ಣಕ್ಕೆ ಪ್ರವೇಶ ನಿರ್ಬಂಧಿಸುವುದು ಒಳಿತು. ಇಲ್ಲಿ ಸಾರ್ವಜನಿಕರ ಸಹಕಾರದಿಂದ ಹೊಸ ಬಸ್ ತಂಗುದಾಣ ನಿರ್ಮಿಸಲು ಸ್ಥಳೀಯಾಡಳಿತ ಮುಂದಾಗಲಿ.
ಓರ್ವ ನಾಗರಿಕ, ಹಳೆಯಂಗಡಿ

ಆಂಬ್ಯುಲೆನ್ಸ್‌ಗಳ ಸ್ಥಿತಿ ಹೀಗೇಕೆ?
ಮಂಗಳೂರಿನ ಸರಕಾರಿ ವೆನ್‌ಲಾಕ್ ಆಸ್ಪತ್ರೆಯ ಆಂಬ್ಯುಲೆನ್ಸ್‌ಗಳು ಜನರಿಗೆ ಸಕಾಲದಲ್ಲಿ ನೆರವಾದ ಉದಾ ಹರಣೆಗಳೇ ಇಲ್ಲವೆನ್ನಬಹುದು. ತುರ್ತು ಸಂದರ್ಭ ಇಲ್ಲಿಗೆ ಕರೆ ಮಾಡಿದರೆ, ಆಂಬ್ಯುಲೆನ್ಸ್ ಸರಿಯಿಲ್ಲ, ಚಾಲಕರು ಇಲ್ಲ, ಟೈರ್ ಪಂಕ್ಚರ್ ಆಗಿದೆ ಎಂಬ ಉತ್ತರ ಸಾಮಾನ್ಯವಾ ಗಿದೆ.
ವೆನ್‌ಲಾಕ್ ಆಸ್ಪ ತ್ರೆಯ ವಠಾರದಲ್ಲಿ ವಿವಿಧ ಸಾಮಾಜಿಕ ಸಂಘ-ಸಂಸ್ಥೆಗಳು ಉದಾರ ದಾನವಾಗಿ ಕೊಡಮಾಡಿದ ಹತ್ತಾರು ಆಂಬ್ಯು ಲೆನ್ಸ್‌ಗಳು ಪಾಳು ಬಿದ್ದಿವೆ. ಕೆಲವಂತೂ ಗುಜರಿಗೂ ಲಾಯ ಕ್ಕಿಲ್ಲದೆ ತುಕ್ಕು ಹಿಡಿದಿದೆ. ಈ ಬಗ್ಗೆ ಸಂಬಂಧಪಟ್ಟವರು ಕಣ್ತೆರೆದು ನೋಡಿಲ್ಲವೆಂದೇ ತೋರುತ್ತಿದೆ. ಸರಕಾರಿ ಆಸ್ಪ ತ್ರೆಯಲ್ಲಿನ ಆಂಬ್ಯುಲೆನ್ಸ್‌ಗಳನ್ನು ಇನ್ನಾದರೂ ಸುಸ್ಥಿತಿಯ ಲ್ಲಿಡುವ ಮೂಲಕ ಜನರ ಸಮಸ್ಯೆಗೆ ವೆನ್‌ಲಾಕ್ ಆಡಳಿತ ಸ್ಪಂದಿಸುವುದೇ?
ಕೀರ್ತನ್, ನೀರ್‌ಮಾರ್ಗ

ಅನ್‌ಲೈನ್ ಅರ್ಜಿದಾರರೇ ಎಚ್ಚರಿಕೆ
ರಾಜ್ಯ ರಾಜಕೀಯದ ಭ್ರಷ್ಟಾಚಾರದ ಸಾಲಿಗೆ ಇನ್ನೊಂದು ಸೇರ್ಪಡೆ ಎಂದರೆ ಬ್ಯಾಂಕ್ ನೇಮಕಾತಿ ಪರೀಕ್ಷೆ. ಅನ್‌ಲೈನ್ ಅರ್ಜಿ, ಪರೀಕ್ಷಾ ಶುಲ್ಕ, ಸೇವಾಶುಲ್ಕವೆಂದು ವಿದ್ಯಾರ್ಥಿಗಳನ್ನು-ನಿರುದ್ಯೋಗಿಗಳನ್ನು ಲೂಟಿ ಮಾಡುವ ಹಗಲು ದರೋಡೆಗೆ ಸಂಬಂಧಪಟ್ಟ ಕಾನೂನು ಇಲಾಖೆ ಕಡಿವಾಣ ಹಾಕಬೇಕಾಗಿದೆ. ಪರೀಕ್ಷೆಗೆ ಪೂರ್ವ ತಯಾರಿ, ತರಬೇತಿಗೆಂದು ನಾಯಿಕೊಡೆಗಳಂತೆ ಹಲವಾರು ತರಬೇತಿ ಸಂಸ್ಥೆಗಳು ಹುಟ್ಟಿಕೊಂ ಡಿದ್ದು, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಗಳ ಶೋಷಣೆಯಲ್ಲಿ ತೊಡಗಿವೆ.
ಶಾಲಾ-ಕಾಲೇಜು ಪರೀಕ್ಷೆ ಸಂಕಟದಲ್ಲಿ ಹೆತ್ತವರ ನಿರೀಕ್ಷೆಯನ್ನು ಸಾಧಿಸುವಲ್ಲಿ ಆಶಾ ಭಂಗವಾಗಿ ಮಾನಸಿಕ ಖಿನ್ನತೆಯಿಂದ ಎಷ್ಟೋ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರ ಣಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದುದರಿಂದ ವಿದ್ಯಾರ್ಥಿಗಳೇ, ನಿರುದ್ಯೋಗಿ ಗಳೇ, ಖಾಸಗಿ ನೌಕರರೇ, ಇನ್ನಾದರೂ ಎಚ್ಚೆ ತ್ತುಕೊಳ್ಳಿ. ಅನ್ಯಾಯದ ವಿರುದ್ಧ ಸಂಘಟಿತರಾಗಿ ಶೋಷಣೆ, ಸುಲಿಗೆಯಂತಹ ಭ್ರಷ್ಟ ಅವ್ಯವಸ್ಥೆ ಯನ್ನು ಕಿತ್ತೊಗೆಯಲು ಸನ್ನದ್ಧರಾಗಿ, ಸ್ವಚ್ಛ ವ್ಯವಸ್ಥೆಯನ್ನು ಹೊಂದುವ ನಮ್ಮ ಹಕ್ಕುನ್ನು ಪ್ರತಿಪಾದಿಸೋಣ.
ಪಿ.ಆರ್., ಸಫಲಿಗ

ತಾಲೂಕು ಕಚೇರಿಯಲ್ಲೊಂದು ಮಾಫಿಯಾ!
ಮಂಗಳೂರು ತಾಲೂಕು ಕಚೇರಿಯಲ್ಲಿ ಪಹಣಿ ತಿದ್ದುಪಡಿ ಶಾಖೆ ಆ.ಅ.ಖ. ಮತ್ತು ಹಾಗೂ ಖ.ಖ.ಖಿ.ಅ.ಖ ಶಾಖೆ ಯಾ ಪ್ರಥಮ ದರ್ಜೆಯ ಹಾಗೂ ದ್ವಿತೀಯ ದರ್ಜೆಯ ನೌಕರರು ಬ್ರೋಕರ್‌ಗಳ (ಏಜೆಂಟ್)ಜೊತೆ ಶಾಮೀಲಾ ಗಿದ್ದಾರೆ. ಇವರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದು, ಲಂಚ ಕೊಡುವ ವ್ಯಕ್ತಿಗಳಿಗೆ ಮಾತ್ರ ಬೇಗ ಅರ್ಜಿ ವಿಲೇವಾರಿ ಆಗುತ್ತದೆ. ಇದರಿಂದ ದೂರದಿಂದ ಬರುವ ಅರ್ಜಿದಾರರೂ ಲಂಚ ಕೊಡುವ ಅನಿವಾರ್ಯತೆ ಬಂದೊದಗಿದೆ. ಕರ್ನಾಟಕದಲ್ಲಿ ನಾಗರಿಕ ಸೇವಾ ಖಾತರಿ ಯೋಜನೆ ಜಾರಿಯಲ್ಲಿದ್ದೂ ಪ್ರಯೋ ಜನ ಆಗಿಲ್ಲ. ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೊಂದಾವಣಿ ಅದ ಮೇಲೆ, ಮಂಗಳೂರು ತಾಲೂಕು ಕಚೇರಿಯಲ್ಲಿ ಪಹಣಿ ಪ್ರತಿಗೆ ಚೆಕ್ ಲಿಸ್ಟ್ಟ್ ತೆಗೆಯು ವಾಗ, ಲಂಚ ಪಡೆಯುವ ಸಲುವಾಗಿ ತಪ್ಪಾಗಿ ಹೆಸರು ನಮೂದನೆ ಕಾರ್ಯ ಭೂಮಿ ಶಾಖೆಯ ನೌಕರರು ಮಾಡುತ್ತಿದ್ದು, ಇದರಿಂದ ತಿಂಗಳುಗಟ್ಟಳೆ ತಾಲೂಕು ಕಛೇರಿಯನ್ನು ಅಲೆದಾಡುವ ಸಂದರ್ಭ ಅರ್ಜಿದಾರರಿಗೆ ಒದಗಿ ಬರುತ್ತದೆ. ಇದಕ್ಕೆ ಇಲಾಖೆ ಕೊಟ್ಟ ಹೆಸರು ಡಿ.ಸಿ.ಅರ್ ಶಾಖೆ. ಸರಕಾರಿ ನೌಕ ರರು ತಪ್ಪು ಮಾಡಿದರೆ ಬಡ ಅರ್ಜಿದಾರರು ಪರದಾಡುವಂತಹ ಕಾರ್ಯ ನಡೆ ಯುತ್ತದೆ. ಇದನ್ನು ಸರಿ ಮಾಡಲು ತಿಂಗಳು ಗಟ್ಟಲೆ ಕಾಲ ವ್ಯಯಿಸುತ್ತಾರೆ. ಇದೊಂದು ತಾಲೂಕು ಕಛೇರಿಯಲ್ಲಿರುವ ದೊಡ್ಡ ಮಾಫಿಯಾ. ಇಂತಹ ಪ್ರಕ ರಣಗಳು ಎಷ್ಟ್ಟಿವೆ? ಎಂದು ಸರಕಾರ ತನಿಖೆ ಮಾಡಿ ಪತ್ತೆ ಹಚ್ಚಿ ಕ್ರಮ ಜರಗಿಸಿ ದರೆ, ಭ್ರ್ರಷ್ಟ ಅಧಿಕಾರಿಗಳಿಂದ ಹಾಗೂ ದಲ್ಲಾಳಿಗಳಿಂದ ಅರ್ಜಿದಾರರಿಗೆ ಮುಕ್ತಿ ಸಿಗಬಹುದು.
ಉದಾ; ಭೂ ಪರಿವರ್ತನೆಗೆ ಸಕಾಲದಲ್ಲಿ ಅರ್ಜಿ ವಿಲೇವಾರಿಗೆ ೧೨೦ ದಿನ. ಆದರೆ ಚಿgeಟಿಣ ಕ್ಯೆಯಲ್ಲಿ ಕೊಟ್ಟರೆ ಹತ್ತು ದಿವಸದಲ್ಲಿ ಆಗುತ್ತದೆ. ಈ ಬಗ್ಗೆ ಮಂಗಳೂರು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ, ಅಪಾರ ಜಿಲ್ಲಾಧಿಕಾರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈ ಗೊಂಡಿಲ್ಲ. ಪ್ರಕರಣದಲ್ಲಿ ಮಂಗ ಳೂರು ತಹಶೀಲ್ದಾರರೂ ಬಾಗಿಯಾಗಿದ್ದಾರೆ ಎಂಬ ಅನುಮಾನ ಮಂಗಳೂ ರಿನ ಜನತೆಯಲ್ಲಿದೆ. ಈ ಬಗ್ಗೆ ಸರಕಾರ ಕೂಡಲೇ ತನಿಖೆ ನಡೆಸಿ ಮಂಗಳೂರಿನ ಜನತೆಗೆ ನ್ಯಾಯ ಒದಗಿಸ ಬೇಕಾಗಿ ಕೇಳಿಕೊಳ್ಳುತ್ತೇವೆ .
ನೊಂದ ನಾಗರಿಕರು, ಮಂಗಳೂರು

ಸೆಝ್ ಗೂಂಡಾಗಿರಿಯ ವಿರುದ್ದ ಎದ್ದು ನಿಲ್ಲೋಣ
ಕೂಳೂರಿನ ಫಲ್ಗುಣಿ ನದಿಗೆ ಅಕ್ರಮವಾಗಿ ಮಣ್ಣು ತುಂಬಿಸಿರುವ ಸೆಝ್ ಅಧಿಕಾರಿಗಳು ಸ್ಥಳೀಯರ ವಿರುದ್ಧ ಗೂಂಡಾಗಿರಿಗೆ ಇಳಿಯುವುದು ಸರಿಯಲ್ಲ. ನದಿ ಯಾರೊ ಬ್ಬನ ಸೊತ್ತೂ ಅಲ್ಲ. ಹೀಗಿರುವಾಗ ನದಿಯನ್ನು ಸ್ವಚ್ಛಂ ದವಾಗಿ ಹರಿಯಲು ಬಿಡದೆ ತಡೆಯೊಡ್ಡಿದರೆ ನಾಳೆ ನದಿ ಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿ ಪಕ್ಕದ ಮನೆಗಳು ಮುಳುಗಡೆಯಾಗುವ ಭೀತಿಯಿದೆ. ಹೀಗಾಗಿ ಸೆಝ್ ಗೂಂಡಾಗಿರಿಗೆ ಕಡಿವಾಣ ಹಾಕಲೇ ಬೇಕಿದೆ. ಕೂಳೂರು, ಮೇಲ್‌ಕೊಪ್ಪಳ ನಿವಾಸಿಗಳು ಮಾತ್ರ ಇದನ್ನು ವಿರೋ ಧಿಸಿದರೆ ಸಾಲದು. ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳುತ್ತಿರುವ ಬೃಹತ್ ಕಂಪೆನಿಗಳ ವಿರುದ್ಧ ನಾಗರಿಕರು ಒಂದಾಗಿ ಪ್ರತಿ ಭಟಿಸಬೇಕು. ಹೋರಾಟಗಾರರನ್ನು ಬಂಧಿಸಿ ಜೈಲಿನಲ್ಲಿಟ್ಟ ಕೂಡಲೇ ಹೋರಾಟವನ್ನು ದಮನ ಮಾಡಿದಂತಾಗು ತ್ತದೆ ಎಂಬ ಭ್ರಮೆಯಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಇನ್ನಾದರೂ ಹೊರಬರಬೇಕು. ಯಾಕೆಂದರೆ ವ್ಯವಸ್ಥೆ ಜನ ಪರವಾಗಿ ಕಾರ್ಯನಿರ್ವಹಿಸದೇ ಇದ್ದರೆ ಮುಂದೊಂದು ದಿನ ಜನರೇ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವುದು ನಿಶ್ಚಿತ.
ನಿತಿನ್, ಕೋಡಿಕಲ್

ವಿವಾಹ ವಿಚ್ಛೇದನೆಯಲ್ಲಿ ಫೇಸ್‌ಬುಕ್‌ಗೆ ಪ್ರಥಮ ಸ್ಥಾನ!
ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಇತ್ತೀಚೆಗೆ ಅಮೇರಿಕಾದ ಸಂಸ್ಥೆಯೊಂದು ಫೇಸ್‌ಬುಕ್ ಕುರಿತು ನಡೆಸಿದ ಸಮೀಕ್ಷೆಯಲ್ಲಿ ವಿವಾಹ ವಿಚ್ಛೇದನೆಯಲ್ಲಿ ಫೇಸ್‌ಬುಕ್ ಪ್ರಥಮ ಸ್ಥಾನ ಪಡೆದಿರುವುದನ್ನು ಪತ್ರಿಕಾ ವರದಿ ಬಹಿ ರಂಗ ಪಡಿಸಿದೆ. ಮಕ್ಕಳಿಂದ ವೃದ್ಧರವರೆಗೂ ಮೆಚ್ಚಿ ಕೊಂಡಿರುವ ಫೇಸ್‌ಬುಕ್‌ನಿಂದ ಸಾಮಾ ಜಿಕ ವ್ಯವಸ್ಥೆಯಲ್ಲಿ ಎಷ್ಟೊಂದು ಬದಲಾವಣೆ ಉಂಟಾಗಿದೆ, ಎಷ್ಟು ಯುವಜನರು ತಪ್ಪು ಹಾದಿ ತುಳಿದಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಫೇಸ್‌ಬುಕ್ ದಂಪತಿಯ ನಡುವೆ ಜಗಳಕ್ಕೆ ಕಾರಣವಾಗಿ ಅವರ ವಿಚ್ಛೇದನೆಗೂ ಸಹಕಾರ ನೀಡುತ್ತಿರುವುದು ಗಂಭೀರವಾಗಿ ಚರ್ಚಿಸಲೇಬೇಕಾದ ಸಂಗತಿ. ಫೇಸ್‌ಬುಕ್ ಖಾತೆ ಹೊಂದಿರುವ ವಿವಾಹಿತ ಮಹಿಳೆಯರು ಬಲು ಬೇಗನೆ ಬೇರೆ ಗಂಡಸರತ್ತ ಆಕರ್ಷಣೆ ಬೆಳೆಸಿ ಕೊಳ್ಳುತ್ತಾರೆ ಎಂದು ವರದಿ ಹೇಳಿರುವುದು ನಿಜಕ್ಕೂ ಖೇದಕರ. ಆದ್ದರಿಂದ ಇನ್ನಾದರೂ ಫೇಸ್ ಬುಕ್ ಬಳಸುವ ಮುನ್ನ ಎಚ್ಚೆತ್ತುಕೊಳ್ಳಿ. ಒಂದು ವೇಳೆ ಬಳಕೆ ಮಾಡಿದರೂ ಮಿತಿಯ ಲ್ಲಿರಲಿ.
ರೆಹಮಾನ್ ಖಾನ್, ಬಂದರ್

ಮುಖ್ಯಮಂತ್ರಿಗಳೇ, ಇದೆಂಥಾ ಯುವಜಾಗೃತಿ?
ಇತ್ತೀಚೆಗೆ ಬಿಜೆಪಿ ಯುವಮೋರ್ಚಾ ವತಿ ಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ಯುವಜಾಗೃತಿ ಸಮಾವೇಶ ನಡೆಯಿತು. ಮುಖ್ಯ ಮಂತ್ರಿ ಸದಾನಂದ ಗೌಡ ಸಹಿತ ಸರಕಾರದ ವಿವಿಧ ಇಲಾಖೆಗಳ ಸಚಿವರು, ಶಾಸಕರುಗಳು ಸಮಾವೇಶದಲ್ಲಿ ಪಾಲ್ಗೊಂಡರು. ಇದೇ ವೇಳೆ ಇಲ್ಲಿ ಆಗಮಿಸಿದ ಯುವಜನತೆ ವೀಕ್ಷಿಸಲೆಂದು ಪ್ರದರ್ಶನ ಗ್ಯಾಲರಿ ತೆರೆಯಲಾಗಿತ್ತು. ಇದರಲ್ಲಿ ದೇಶಭಕ್ತರ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿ ಕಾರಿ ಯುವಜನರ ಸಾಧನೆ, ಬದುಕಿನ ಚಿತ್ರಣ ವನ್ನು ಯುವಜನತೆಗೆ ವಿವರಿಸಬಹುದು ಎಂದು ಒಳಹೊಕ್ಕರೆ ಅಲ್ಲಿದ್ದದ್ದೇ ಬೇರೆ. ವರ್ಣಿಸಲು ಆಗದಂಥ ಘನಘೋರ ದೃಶ್ಯಾವಳಿಗಳು! ಹಿಂದೂ ಸಂಘಟನೆಗಳ ನಾಯಕರಾಗಿ ಮೆರೆದ ರೌಡಿ ಹಿನ್ನೆಲೆಯ ಯುವಕರ ಭಾವಚಿತ್ರಗಳನ್ನು ಅಲ್ಲಿ ಇಡಲಾಗಿತ್ತು. ಅದರ ಮೇಲ್ಗಡೆ ಅವರು ಗೋ ಹತ್ಯೆ, ಮತಾಂತರ, ಮುಸ್ಲಿಮರ ದೌರ್ಜನ್ಯವನ್ನು ಖಂಡಿಸಿದ್ದಕ್ಕೆ ಕೊಲೆ ಮಾಡಲಾಯಿತು ಎಂದು ಬರೆದು ದೇಶಸೇವೆಗೆ ಅದನ್ನು ಹೋಲಿಸಲಾ ಗಿತ್ತು. ಇಷ್ಟೇ ಅಲ್ಲದೆ ಗುಜರಾತ್ ಗಲಭೆಯಲ್ಲಿ ಮಚ್ಚಿನೇಟಿಗೆ ರುಂಡ ಕತ್ತರಿಸಲ್ಪಟ್ಟು ಸತ್ತ ಅಲ್ಲಿನ ಇಬ್ಬರು ಯುವಕರ ಮೃತದೇಹದ ಭಾವಚಿತ್ರ ವನ್ನು ಇರಿಸಿ ಹೂವಿನ ಹಾರ ಹಾಕಲಾಗಿತ್ತು. ಆ ಭಾವಚಿತ್ರಗಳು ಎಷ್ಟರ ಮಟ್ಟಿಗೆ ಕ್ರೌರ್ಯ ವನ್ನು ಬಿಂಬಿಸುತ್ತಿತ್ತೆಂದರೆ ನೋಡಿದವರ ಮನಸ್ಸು ವಿಚಲಿತವಾಗುತ್ತಿತ್ತು.
ಕೆಲವರು ಅದನ್ನೇ ತದೇಕಚಿತ್ತದಿಂದ ನೋಡಿ ‘ಮುಸ್ಲಿಮರನ್ನು ಬಡಿಯಬೇಕು’ ಎಂದು ಇಲ್ಲೇ ಹೇಳುತ್ತಿದ್ದರೆ, ಮತ್ತೆ ಕೆಲವರು ಅತ್ತಕಡೆ ನೋಡ ಲಾಗದೆ ಹಿಂದೂ ಸಂಘಟನೆಗಳಿಗೆ ಶಪಿಸಿ ಕೊಂಡೇ ಮುಂದೆ ಹೋಗುತ್ತಿದ್ದರು. ಇದೆಂಥಾ ವಿಪರ್ಯಾಸ? ಬಿಜೆಪಿ ಯುವ ಮೋರ್ಚಾ ಸಂಘಟನೆ ವಿದ್ಯಾರ್ಥಿಗಳಿಗೆ, ಯುವಜನರಿಗೆ ಉಂಟುಮಾಡುವ ಜಾಗೃತಿಯೆಂದರೆ ಹೀಗೆಯೇ? ಯಾರೋ ಅಮಾಯಕ, ಮುಗ್ಧ ಹಿಂದೂ ಯುವಕರನ್ನು ಮುಸ್ಲಿಮರ ವಿರು ದ್ಧವೋ, ಕ್ರೈಸ್ತರ ವಿರುದ್ಧವೋ ಛೂ ಬಿಟ್ಟು ಅವರು ಪ್ರತಿದಾಳಿ ನಡೆಸಿದಾಗ ಸಾಯುವುದು ದೇಶಕ್ಕಾಗಿ ಬಲಿದಾನವೇ? ಹಿಂದೂ ಸಂಘ ಟನೆಗಳ ಕೋಮು ಪ್ರಚೋದಕ ಹೇಶಾರವಕ್ಕೆ ಮುಖ್ಯಮಂತ್ರಿಗಳು ನಗುತ್ತಲೇ ಬೆಂಬಲ ನೀಡಿದ್ದು, ದೇಶದ ಅತೀ ದೊಡ್ಡ ದುರಂತ. ಯುವಜನರೇ, ಇಂಥ ವಿಕೃತಿಗೆ ಬಲಿಯಾ ಗಬೇಡಿ. ಪ್ರಚೋದನೆ ಮಾಡುವವರು ಎಂದೂ ಸತ್ತು ಹುತಾತ್ಮರಾಗುವುದಿಲ್ಲ ಎನ್ನು ವುದು ನಿಮ್ಮ ನೆನಪಿನಲ್ಲಿರಲಿ.
ರವಿಕಿರಣ್, ಮಂಗಳೂರು

ಪ್ರತಿಭಾ ಪಾಟೀಲರಂತೆ ದುಬಾರಿ ವೆಚ್ಚದ ರಾಷ್ಟ್ರಪತಿ ಆಯ್ಕೆ ಆಗದಿರಲಿ

Posted by JAYAKIRANA Kirana on | 0 comments | Leave a comment...


ರಾಷ್ಟ್ರಪತಿಯಾಗುವ ಅಭ್ಯರ್ಥಿ ಸರ್ವಧರ್ಮ ದವರಿಗೂ ಸಮಾನ ದೃಷ್ಟಿಕೋನ ಉಳ್ಳವರಾಗಬೇಕು. ಯಾವುದೇ ರಾಜಕೀಯ ಪಕ್ಷಕ್ಕೆ ಒತ್ತು ನೀಡುವವರಾಗಿರ ಕೂಡದು. ಸ್ವಾರ್ಥ ಮನೋಭಾವ ಹಾಗೂ ಯಾವುದೇ ವ್ಯಕ್ತಿಯ ಕೈಗೊಂಬೆ ಯಾಗಿರಕೂಡದು. ಸಂಸಾರ ಸಹಿತ ಮನಬಂದಂತೆ ಅನಾವಶ್ಯಕ ಮೋಜಿಗಾಗಿ ವಿದೇಶ ಪ್ರವಾಸ ಮಾಡಿ ಸರಕಾರಕ್ಕೆ ನಷ್ಟ ಉಂಟು ಮಾಡುವ ಮನೋಭಾವ ಉಳ್ಳವರಾಗಿರಕೂಡದು.

ವಿಠ್ಠಲ ಮಾಸ್ತರ್, ದಲಿತ ನಾಯಕ-ಭದ್ರಗಿರಿ
ನಮ್ಮ ದೇಶದಲ್ಲಿ ಅತೀ ಉನ್ನತವಾದ ಹುದ್ದೆ ಎಂದರೆ ರಾಷ್ಟ್ರಪತಿ ಹುದ್ದೆ. ಅವರೇ ದೇಶದ ಪ್ರಥಮ ಪ್ರಜೆ. ಅತೀ ಉನ್ನತ ಈ ಹುದ್ದೆಯನ್ನು ಅಲಂಕರಿಸುವವರು ಭಾರತದ ಪ್ರಜೆ ಹಾಗೂ ದೇಶಾಭಿಮಾನಿಯಾಗಿದ್ದು, ಧೈರ್ಯ-ಸಾಹಸ ದಿಂದ ದೇಶವನ್ನು ಮುನ್ನಡೆಸಿಕೊಂಡು ಹೋಗಲು ಸಮ ರ್ಥರಾಗಿರುವ ಅರ್ಹತೆ, ಗುಣಗಳು ಅವರಲ್ಲಿರಬೇಕು. ಈಗ ರಾಷ್ಟ್ರಪತಿಯವರ ಕಾಲಾವಧಿ ಮುಗಿಯುತ್ತಾ ಬಂದಿರುವ ಹಿನ್ನೆಲೆಯಲ್ಲಿ ಮುಂದಿನ ರಾಷ್ಟ್ರಪತಿ ಯಾರಾಗಬೇಕು ಎಂಬ ಬಗ್ಗೆ ಬಿರುಸಿನ ಚರ್ಚೆ ನಡೆಯುತ್ತಲೇ ಇದೆ.
ಯೋಗ್ಯ ಹಾಗೂ ಸಮರ್ಥರಾದವರೇ ಆಯ್ಕೆಯಾಗಲಿ. ಅಂತೂ ಪ್ರತಿಭಾ ಪಾಟೀಲರು ರಾಷ್ಟ್ರಪತಿಯಾದ ನಂತರ ಸರ ಕಾರದ ಬೊಕ್ಕಸದಿಂದ ಜಗತ್ತಿನ ಎಲ್ಲಾ ದೇಶಗಳಿಗೆ ಪ್ರವಾಸ ಹೊರಟು ಆಸೆ ಈಡೇರಿಸಿಕೊಂಡಿದ್ದಾರೆ. ಎರಡನೆಯದಾಗಿ ತನ್ನ ಜೊತೆಗೆ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೋಗಬೇಕೆಂಬ ಆಕಾಂಕ್ಷೆ ಕೂಡಾ ಈಡೇರಿದೆ. ಹೀಗೆ ಒಟ್ಟು ೨೨ ದೇಶಗಳಿಗೆ ಪ್ರವಾಸ ಮಾಡಿ ಬರೋಬ್ಬರಿ ರೂ. ೨೦೫ ಕೋಟಿಯಷ್ಟು ಹಣ ವೆಚ್ಚ ಮಾಡಿ ಇಡೀ ದೇಶದ ಜನರಿಗೆ ಪರಮಾಶ್ಚರ್ಯ ಉಂಟುಮಾಡಿ ದುಬಾರಿ ರಾಷ್ಟ್ರಪತಿ ಎಣಿಸಿ ಕೊಂಡಿರುವುದೇ ಖೇದಕರ. ಇಂತ ರಾಷ್ಟ್ರಪತಿಯವರು ನಮಗೆ ಬೇಕೇ? ಭೂಹಗರಣ, ಗಣಿಹಗರಣ ಎಂಬ ಹಗರಣಗಳು ಕೇಳಿಬರುತ್ತಿರುವ ಈ ಸಮಯದಲ್ಲಿ ಸರಕಾರಕ್ಕೆ ನಷ್ಟ ಉಂಟು ಮಾಡಿರುವ ಇದನ್ನು ಯಾವ ಹಗರಣ ಎಂದು ಕರೆಯಬೇಕು? ಬಾಬು ರಾಜೇಂದ್ರ ಪ್ರಸಾದ್ ಪ್ರಥಮ ರಾಷ್ಟ್ರಪತಿಯಿಂದ ಹಿಡಿದ ಅಬ್ದುಲ್ ಕಲಾಂರವರವರೆಗೆ ಯಾವ ಒಬ್ಬ ರಾಷ್ಟ್ರಪತಿ ಕೂಡಾ ಇವರಷ್ಟು ದುಂದುವೆಚ್ಚದ ಪ್ರವಾಸವನ್ನು ಕೈಗೊಂಡಿರಲಿಲ್ಲ ಎಂಬು ವುದಂತೂ ಸತ್ಯ.
ಈಗ ನೂತನ ರಾಷ್ಟ್ರಪತಿ ಸ್ಥಾನಕ್ಕೆ ಪ್ರಣವ್ ಮುಖರ್ಜಿ, ಅನ್ಸಾರಿ, ಆಸ್ಕರ್ ಫೆರ್ನಾಂಡಿಸ್, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಜಾಫರ್ ಶರೀಫ್ ಹೀಗೆ ಅನೇಕರ ಹೆಸರು ಕೇಳಿಬರುತ್ತಿದೆ. ಆದರೆ ಮುಂದಿನ ರಾಷ್ಟ್ರಪತಿಯಾ ಗುವ ಅಭ್ಯರ್ಥಿ ಸರ್ವಧರ್ಮದವ ರಿಗೂ ಸಮಾನ ದೃಷ್ಟಿಕೋನ ಉಳ್ಳ ವರಾಗಬೇಕು. ಯಾವುದೇ ರಾಜ ಕೀಯ ಪಕ್ಷಕ್ಕೆ ಒತ್ತು ನೀಡುವವ ರಾಗಿರಕೂಡದು. ಸ್ವಾರ್ಥ ಮನೋ ಭಾವ ಹಾಗೂ ಯಾವುದೇ ವ್ಯಕ್ತಿಯ ಕೈಗೊಂಬೆಯಾಗಿರ ಕೂಡದು. ಅಗ ತ್ಯದ ಕೆಲಸ ಕಾರ್ಯಗಳಿಗೆ ಮಾತ್ರ ವಿದೇಶ ಪ್ರವಾಸ ಮಾಡಬೇಕಲ್ಲದೆ ಪ್ರತಿಭಾ ಪಾಟೀಲರ ಹಾಗೆ ಸಂಸಾರ ಸಹಿತ ಮನ ಬಂದಂತೆ ಅನಾವಶ್ಯಕ ಮೋಜಿಗಾಗಿ ವಿದೇಶ ಪ್ರವಾಸ ಮಾಡಿ ಸರಕಾರಕ್ಕೆ ನಷ್ಟ ಉಂಟು ಮಾಡುವ ಮನೋಭಾವ ಉಳ್ಳವರಾಗಿರ ಕೂಡದು. ಈ ಎಲ್ಲಾ ವಿಷಯಗಳನ್ನು ಅವ ಲೋಕಿಸಿದಾಗ ಡಾ.ಎ.ಪಿ.ಜೆ ಅಬ್ದುಲ್ ಕಲಾಂರವರೇ ಸಮರ್ಥ ಅಭ್ಯರ್ಥಿ ಎನ್ನುವುದು ಬಹುತೇಕ ಜನಾಭಿಪ್ರಾಯವಾಗಿರುತ್ತದೆ. ಇವರಂಥ ಅತಿಸರಳ ವ್ಯಕ್ತಿ ನಮ್ಮ ದೇಶದ ರಾಷ್ಟ್ರಪತಿಯಾದರೆ ದೇಶದ ಕೀರ್ತಿಪತಾಕೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಹಾರಾಡಲಿದೆ.

ಧಾರಾವಾಹಿ ನೋಡಿ ಹೃದಯಾಘಾತ

Posted by JAYAKIRANA Kirana on | 0 comments | Leave a comment...

ಬೆಳಗಾವಿ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾ ಗುತ್ತಿದ್ದ ಕೌಟುಂಬಿಕ ಧಾರಾವಾಹಿ ನೋಡಿ ವೃದ್ಧೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಕರುಣಾಜನಕ ಘಟನೆ ಬೆಳಗಾವಿಯ ಬೈಲಹೊಂಗದ ಬಸಾಪುರ ಎಂಬ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವೃದ್ಧೆಯ ಹೆಸರು ಕಾಸವ್ವ ಬಡೇಲಪ್ಪ. ಅವರಿಗೆ ೭೨ ವರ್ಷ ವಯಸ್ಸಾಗಿತ್ತು. ಧಾರಾವಾಹಿಯ ಲ್ಲಿನ ನಾಯಕಿಯನ್ನು ರೌಡಿಗಳು ಅಟ್ಟಿಸಿಕೊಂಡು ಹೋಗುವ ದೃಶ್ಯವನ್ನು ನೋಡಿ ಕಿಟಾರನೆ ಕಿರುಚಿಕೊಂಡ ಹಿರಿಯ ಜೀವ ಕುಳಿತಲ್ಲೇ ಕುಸಿದುಬಿದ್ದಿದೆ.
ಕೂಡಲೆ ವೈದ್ಯರನ್ನು ಕರೆಸಿ ಪರೀಕ್ಷಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಕಾಲ ಮೀರಿಹೋಗಿತ್ತು. ಈ ಅಜ್ಜಿ ಪ್ರತಿನಿತ್ಯ ಈ ಧಾರಾವಾಹಿಯನ್ನು ತಪ್ಪದೆ ವೀಕ್ಷಿಸುತ್ತಿದ್ದರು. ಉದಯ ವಾಹಿನಿಯಲ್ಲಿ ಪ್ರಸಾg ವಾಗುವ ಬಂಗಾರ ಧಾರಾವಾಹಿಯನ್ನೇ ಕಾಸಮ್ಮ ತಪ್ಪದೆ ನೋಡುತ್ತಿದ್ದರು. ಆದರೆ ಅವರ ಮನೆಯಲ್ಲಿ ಟಿವಿ ಇಲ್ಲದ ಕಾರಣ ಪಕ್ಕದ ಮನೆಯಲ್ಲಿ ಈ ಧಾರಾವಾಹಿ ಪ್ರಸಾರವಾಗುವ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದರು. ಇಲ್ಲಿನ ಪಾತ್ರವೊಂದನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದ ಅಜ್ಜಿ ರೌಡಿಗಳು ನಾಯಕಿಯನ್ನು ಅಟ್ಟಿಸಿಕೊಂಡು ಹೋಗುವುದನ್ನು ನೋಡಿ ಶಾಕ್ ಆಗಿ, ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಪಿಕ್‌ನಿಕ್‌ಗೆ ತೆರಳಿದ್ದ ಡಾಕ್ಟರ್ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಟುಂಬ ಸಮೇತ ಪಿಕ್‌ನಿಕ್‌ಗೆಂದು ತೆರಳಿದ ವೈದ್ಯರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುಂಡ್ಯದಲ್ಲಿ ಭಾನುವಾರ ನಡೆದಿದೆ.
 ಕುತ್ತಾರು ನಿವಾಸಿ ಡಾ.ದಿನೇಶ್ ಅಮೀನ್ ಮೃತ ದುರ್ದೈವಿ. ಭಾನುವಾರ ಸುಮಾರು ೨೦ ಜನರನ್ನೊಳಗೊಂಡ ಕುಟುಂಬ ಸದಸ್ಯರೊಂದಿಗೆ ಗುಂಡ್ಯಕ್ಕೆ ತೆರಳಿದ್ದ ಅವರು ಮಧ್ಯಾಹ್ನದ ಊಟ ಮುಗಿಸಿ ತನ್ನ ಇಬ್ಬರು ಮಕ್ಕಳನ್ನು ನೀರಿನಲ್ಲಿ ಆಟವಾಡಲು ಪಕ್ಕದ ಹೊಳೆಗೆ ಕರೆದುಕೊಂಡು ಹೋಗಿದ್ದರು. ಮಕ್ಕಳಿಗೆ ಆಡಲು ಸೂಕ್ತವಾಗುವ ಸ್ಥಳ ಆರಿಸುತ್ತಾ ಹಿಂದೆ ಹಿಂದೆ ಹೆಜ್ಜೆ ಇಡುತ್ತಾ ಸಾಗಿದ ಅವರು ಆಳವಾದ ಸ್ಥಳದಲ್ಲಿ ಆಯತಪ್ಪಿ ಸಿಲುಕಿಕೊಂಡು ಮುಳುಗಿದರು. ಅದೇ ಕ್ಷಣದಲ್ಲಿ ದಡದಲ್ಲಿದ್ದ ಮಕ್ಕಳು ಬೊಬ್ಬೆ ಹೊಡೆದಾಗ ಕುಟುಂಬ ಸದಸ್ಯರು ಓಡಿ ಬಂದರೂ ಆ ತಂಡದಲ್ಲಿದ್ದ ಯಾರೊಬ್ಬರಿಗೂ ಈಜಲು ಬಾರದಿರುವುದರಿಂದ ವೈದರನ್ನು ಪತ್ತೆ ಹಚ್ಚಿ ದಡಕ್ಕೆ ತರಲು ಸಾಧ್ಯವಾಗಲಿಲ್ಲ. ಅದಾಗ್ಯೂ ಕುಟುಂಬದವರ ರೋಧನಕ್ಕೆ ಅನತಿ ದೂರದಲ್ಲಿದ್ದ ಜನ ಅವರನ್ನು ನೀರಿನಿಂದ ಮೇಲಕ್ಕೆತ್ತಿ ತಂದರೂ ಅದಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಡಾಕ್ಟರ್ ದಿನೇಶ್ ಅಮೀನ್ ಅವರು ಕುಂಪಲ ಹಾಗೂ ಅಂಬ್ಲಮೊಗರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದು, ಜನಾನುರಾಗಿದ್ದರು. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತನಿಗೆ ನ್ಯಾಯಾಂಗ ಬಂಧನ

Posted by JAYAKIRANA Kirana on | 0 comments | Leave a comment...

ಕಳ್ಳಭಟ್ಟಿ ದಂಧೆ ಹಿನ್ನಲೆ
ಬಂಟ್ವಾಳ: ಮೂಡನಡುಗೋಡು ಅಬಕಾರಿ ಕಾರ್ಯಾಚರಣೆಯಲ್ಲಿ ಬಂಧಿತನಾದ ಕಾಂಗ್ರೆಸ್ ಕಾರ್ಯಕರ್ತ, ಸ್ಥಳೀಯ ವಾರ್ಡ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲೋಕಯ್ಯ ಪೂಜಾರಿಗೆ ಬಂಟ್ವಾಳ ಜೆಎಂಎಫ್‌ಸಿ ನ್ಯಾಯಾಲಯ ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮೇ.೨೨ರಂದು ಮೂಡನಡುಗೋಡು ಗ್ರಾಮದ ದಂಡೆ ಎಂಬಲ್ಲಿನ ಲೋಕಯ್ಯ ಪೂಜಾರಿ ಮನೆಗೆ ದಾಳಿ ನಡೆಸಿದ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳದ ಸಿಬ್ಬಂದಿ ಮನೆಯ ಶೆಡ್ಡಿನಲ್ಲಿ ದಾಸ್ತಾನು ಇರಿಸಿದ್ದ ಸುಮಾರು ಎರಡು ಲೀಟರ್ ಕಳ್ಳಭಟ್ಟಿ ಸಾರಾಯಿ, ಒಂದು ದೊಡ್ಡ ಹಂಡೆ, ಎರಡು ಅಲ್ಯೂಮಿನಿಯಂ ಪಾತ್ರೆಗಳನ್ನು ವಶಪಡಿಸಿದ್ದರು. ಅಬಕಾರಿ ಪಶ್ಚಿಮ ವಲಯದ ಪೊಲೀಸ್ ಉಪಾಧೀಕ್ಷರ ಆದೇಶದಂತೆ, ಅಬಕಾರಿ ಪೊಲೀಸ್ ನಿರೀಕ್ಷಕ ಎನ್. ರವೀಂದ್ರ ಅವರ ಸೂಚನೆಯಂತೆ ಪೊಲೀಸ್ ಸಿಬ್ಬಂದಿಯಾದ ಪ್ರದೀಪ್ ಮತ್ತು ರಾಜೇಶ್ ಅವರು ದಾಳಿ ಕಾರ್ಯಾಚರಣೆ ನಡೆಸಿದ್ದರು. ಕಳ್ಳಭಟ್ಟಿ ಸಾರಾಯಿಯು ಆರೋಗ್ಯಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಇರುವುದನ್ನು ಮನಗಂಡ ಅಬಕಾರಿ ವಿಶೇಷ ಪೊಲೀಸ್ ದಳದ ತನಿಖಾಧಿಖಾರಿ ಚಂದ್ರಶೇಖರ್ ಅಬಕಾರಿ ಕಾಯಿದೆ ೧೩(೧), (ಎಫ್) ೩೨ ಮತ್ತು ೩೪ ಕಲಂ ೩೨೮ ಐಪಿಸಿ ಅನ್ವಯ ಪ್ರಕರಣ ದಾಖಲಿಸಿದ್ದರು. ಕಾರ್ಯಾಚರಣೆ ಸಂದರ್ಭ ಸಿಕ್ಕಿಬಿದ್ದ ಆರೋಪಿಯನ್ನು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.
ಕಳ್ಳಭಟ್ಟಿಗೆ ಕಾಂಗ್ರೆಸ್ ಬೆಂಗಾವಲು!
ಕಳ್ಳಭಟ್ಟಿ ಪ್ರಕರಣ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಲೋಕಯ್ಯ ಪೂಜಾರಿ ಮೂಡನಡುಗೋಡು ವಾರ್ಡ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದು, ಪಕ್ಷದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಪೊಲೀಸ್ ಮಾಹಿತಿಯನ್ವಯ ಲೋಕಯ್ಯ ಮೇಲೆ ಕೆಲವೊಂದು ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳಿವೆ. ಆದರೂ ಲೋಕಯ್ಯಗೆ ಪಕ್ಷದ ಮುಖಂಡರಾಗಲೀ, ಜನಪ್ರತಿನಿಧಿಗಳಾಗಲೀ ಎಚ್ಚರಿಕೆ ನೀಡಿರಲಿಲ್ಲ. ಇದು ಅವರ ಕ್ರಿಮಿನಲ್ ಹಿನ್ನೆಲೆಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಾಯಿತು. ಇದೀಗ ಕಳ್ಳಭಟ್ಟಿ ತಯಾರಿಸಿದ ಆರೋಪ ಎದುರಿಸುತ್ತಿರುವ ಲೋಕಯ್ಯಗೆ ಕಾಂಗ್ರೆಸ್ ಪ್ರತ್ಯಕ್ಷವಾಗಿ ಬೆಂಗಾವಲಾಗಿ ನಿಂತಿದೆ ಎನ್ನುವುದು ಪಕ್ಷದಲ್ಲಿರುವ ನಿಷ್ಠಾವಂತರ ಮುಖಂಡರ ಆರೋಪ. ಅಲ್ಲದೇ ಲೋಕಯ್ಯ ಬಂಧನ, ಅಬಕಾರಿ ದಾಳಿ ಪ್ರಕರಣವನ್ನು ಖಂಡಿಸಿ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳದ ಮಂಗಳೂರು ವಿಶೇಷ ಪೊಲೀಸ್ ಠಾಣೆ ಮುಂಭಾಗ ಮೇ.೨೯ರಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಿಭಟನೆಗೆ ಕರೆ ನೀಡಿದ್ದೂ ಆಕ್ರೋಶಕ್ಕೆ ಎಡೆ ಮಾಡಿದೆ. ಕಾಂಗ್ರೆಸ್‌ನ ಮತ್ತೊಂದು ಪ್ರತಿಭಟನೆಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದು, ಡಿ.ಸಿ.ಸಿ.ಗೆ ಕಸಿವಿಸಿ ಉಂಟು ಮಾಡಿದೆ.

ಪೊಲೀಸರಿಂದಲೇ ಆಭರಣ ಖರೀದಿ: ಅರೋಪಿ ಬಿಡುಗಡೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳವು ಪ್ರಕರಣ ವೊಂದಕ್ಕೆ ಸಂಬಂಧಿಸಿ ಚಿನ್ನದ ಅಂಗಡಿಯ ಮಾಲಕರಿಂದ ಪಡೆದು ಕೊಂಡ ಹಣದಿಂದ ಕಳವಾಗಿರುವ ರೀತಿಯ ಹೊಸ ಚಿನ್ನಾಭರಣಗಳನ್ನು ಪೊಲೀಸರು ಖರೀದಿಸಿ ನ್ಯಾಯಾ ಲಯಕ್ಕೆ ಹಾಜರುಪಡಿಸಿದ ಕುತೂಹಲ ಕಾರಿ ಘಟನೆ ಕುಂದಾಪುರದಲ್ಲಿ ನಡೆದಿದೆ. ಉಡುಪಿ-ಕೋಟತಟ್ಟು ಗ್ರಾಮದ ಖಾದ್ರಿ ಬ್ಯಾರಿ ಎನ್ನುವವರ ಮನೆಯಿಂದ ರಾತ್ರಿ ವೇಳೆ ಚಿನ್ನದ ನೆಕ್ಲೆಸ್, ಉಂಗುರ ಮತ್ತು ಇತರ ಚಿನ್ನಾಭರಣಗಳು ಕಳವಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರನ್ನು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಬ್ಯಾರಿ ಅವರ ಸಂಬಂಧಿಕನಾದ ಹಾವೇರಿಯ ಜೈನುದ್ದೀನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆತನ ಹೇಳಿಕೆಯಂರೆ ಚಿಕ್ಕೇರೂರು ಗ್ರಾಮದ ಸೋಮೇಶ್ವರ ಜ್ಯುವೆಲ್ಲರಿ ವರ್ಕ್ಸ್‌ನಿಂದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು. ಪೊಲೀಸರು ಅದನ್ನೇ ಆರೋಪಪಟ್ಟಿಯಲ್ಲಿ ದಾಖಲಿಸಿದ್ದರು. ಆದರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಸಂದರ್ಭ ಸಾಕ್ಷಿ ನುಡಿದ ಫಿರ್ಯಾದಿದಾರ ಅಕ್ಕಸಾಲಿಗನು ನೀಡಿದ ಹಣದಿಂದ ಪೊಲೀಸರು ಕುಂದಾಪುರದ ಚಿನ್ನದ ಅಂಗಡಿಯಿಂದ ಹೊಸ ಆಭರಣ ಖರೀದಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ, ಈ ವೇಳೆ ತಾನೂ ಹಾಜರಿದ್ದುದಾಗಿ ಹೇಳಿಕೆ ನೀಡಿದ. ಇದರಿಂದ ಜೈನುದ್ದೀನ್ ಮೇಲೆ ಮಾಡಿರುವ ಆರೋಪ ರುಜುವಾತು ಆಗಿಲ್ಲ ಎಂದಿರುವ ನ್ಯಾಯಾಲಯ ಆತನ ಬಿಡುಗಡೆಗೆ ಆದೇಶ ನೀಡಿದೆ. ಆರೋಪಿಯ ಪರ ವಕೀಲ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.

ನೀರಿಗೆ ಬಿದ್ದು ಮೀನುಗಾರ ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮೀನುಗಾರಿಕೆಯ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಆಯ ತಪ್ಪಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ನಗರದ ಬಂದರಿನಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ.
ಆಂಧ್ರಪ್ರದೇಶದ ನೆಲ್ಲೂರು ನಿವಾಸಿ ಚಂಚಯ್ಯ (೨೭) ಮೃತ ಕಾರ್ಮಿಕ. ಜೀಸಸ್ ಕ್ರೈಸ್ಟ್ ಬೋಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈತ ನಿನ್ನೆ ಸಂಜೆ ವೇಳೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಆಯ ತಪ್ಪಿ ನೀರಿಗೆ ಬಿದ್ದು ಮೃತಪಟ್ಟಿ ದ್ದಾನೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತ: ಗಾಯಾಳು ಮೃತ್ಯು

Posted by JAYAKIRANA Kirana on | 0 comments | Leave a comment...

ಪುತ್ತೂರು: ಪುತ್ತೂರು ತಾಲೂ ಕಿನ ಕಬಕ ಗ್ರಾಮದ ಮುರ ಸಮೀಪ ಮಾಣಿ ಮೈಸೂರು ರಾಜ್ಯ ಹೆದ್ದಾರಿ ಯಲ್ಲಿ ಕಳೆದ ಗುರುವಾರ ರಾತ್ರಿ ಸಂಭ ವಿಸಿದ್ದ ರಸ್ತೆ ಅಫಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಎಂ ೮೦ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ನೆಲಪ್ಪಾರು ನಿವಾಸಿ ಕಾಂತಪ್ಪ ಗೌಡ (೭೫) ಮೃತ ಪಟ್ಟ ವ್ಯಕ್ತಿ. ಕಳೆದ ಗುರುವಾರ ರಾತ್ರಿ ಕಾಂತಪ್ಪ ಗೌಡ ಅವರು ಕಲ್ಲೇಗದ ಕಲ್ಕುಡ ದೈವಸ್ಥಾನದಿಂದ ಅಗೇಲು (ಪ್ರಸಾದ) ಪಡೆದುಕೊಂಡು ಎಂ.೮೦ ಯಲ್ಲಿ ಮನೆಗೆ ಪ್ರಯಾಣಿಸು ತ್ತಿದ್ದ ವೇಳೆ ಮುರ ಸಮೀಪ ಹಿಂಬದಿ ಯಿಂದ ಬಂದ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯಲ್ಲಿ ನಿಂತಿದ್ದ ಮೂವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿತ್ತು.
ಈ ಘಟನೆಯಿಂದಾಗಿ ಕಾಂತಪ್ಪ ಗೌಡ ಅವರು ಗಂಭೀರ ಗಾಯಗೊಂ ಡಿದ್ದರು. ಅಲ್ಲದೆ ನಗರ ನಿವಾಸಿ ಸಂಜೀವ (೪೦), ಕಾರೆಕ್ಕಾಡು ನಿವಾಸಿ ಸುಂದರ (೪೦) ಮತ್ತು ಕೆ.ರಾಮ (೫೫) ಎಂಬವರು ಗಾಯಗೊಂಡಿದ್ದರು. ಗಾಯಾಳುಗಳನ್ನು ಪುತ್ತೂರಿನ ಮಹಾ ವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗಂಭೀರ ಗಾಯಗೊಂಡಿದ್ದ ಕಾಂತಪ್ಪ ಗೌಡ ಅವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿರುವು ದಾಗಿ ತಿಳಿದು ಬಂದಿದೆ.

ಕಾರ್ ಡಿಕ್ಕಿ: ಪಾದಚಾರಿ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾರು ಡಿಕ್ಕಿಯಾದ ಪರಿಣಾಮ ಪಾದಚಾರಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನೆಲ್ಯಾಡಿ ಪೇಟೆಯಲ್ಲಿ ನಿನ್ನೆ ನಡೆದಿದೆ. ನೆಲ್ಯಾಡಿ ಸೈಂಟ್ ಜಾರ್ಜ್ ಕಾಲೇಜ್‌ನ ಬಳಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಜೋಸೆಫ್(೬೮) ಮೃತಪಟ್ಟವರು. ಇವರಿಗೆ ಡಿಕ್ಕಿ ಹೊಡೆದ ಕಾರು ನಿಲ್ಲಿಸದೆ ಪರಾರಿ ಯಾಗಿದ್ದು, ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ನೆಲ್ಯಾಡಿ ಹೊರಠಾಣಾ ಸಿಬ್ಬಂದಿ ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ ಡಿಕ್ಕಿ ಗಾಯಾಳು ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಪುತ್ತೂರು ತಾಲೂಕಿನ ಕಬಕ ಗ್ರಾಮದ ಮುರದಲ್ಲಿ ಕಾರ್ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಕಾಂತಪ್ಪ ಗೌಡ (೭೫)ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಪೂತ್ತೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಬಜಾಜ್ ಎಂ-೮೦ ವಾಹನದಲ್ಲಿ ಸಾಗುತ್ತಿದ್ದಾಗ ಎದುರಿನಿಂದ ಬಂದ ಕಾರ್ ಡಿಕ್ಕಿ ಹೊಡೆದಿತ್ತೆನ್ನಲಾಗಿದೆ. ಕಾಂತಪ್ಪ ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ಬಗ್ಗೆ ಪೂತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉತ್ತರ ಪ್ರದೇಶದ ಯುವಕ ಪುತ್ತೂರಿನಿಂದ ನಾಪತ್ತೆ

Posted by JAYAKIRANA Kirana on | 0 comments | Leave a comment...

ಪುತ್ತೂರು : ಪುತ್ತೂರು ಪೇಟೆ ಯಲ್ಲಿ ಐಸ್ ಕ್ಯಾಂಡಿ ಮಾರಾಟ ಮಾಡು ತ್ತಿದ್ದ ಉತ್ತರ ಪ್ರದೇಶದ ಯುವಕನೊಬ್ಬ ಹಣದೊಂದಿಗೆ ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಪುತ್ತೂರಿನಲ್ಲಿ ಬಾಡಿಗೆ ಮನೆ ಯೊಂದರಲ್ಲಿ ಸಂಸಾರ ಸಮೇತ ವಾಸವಾಗಿದ್ದ, ಮೂಲತಃ ಉತ್ತರ ಪ್ರದೇಶದ ಆಸ್‌ತೋನ್ (೨೫) ನಾಪತ್ತೆಯಾಗಿರುವ ಯುವಕ. ಪುತ್ತೂರಿನ ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಸಮೀಪದ ನಿವಾಸಿ ರಾಮ್‌ಸಿಂಗ್ ಎಂಬವರ ಕೈಕೆಳಗೆ ಐಸ್ ಕ್ಯಾಂಡಿ ಲೈನ್ ಸೇಲ್ ವ್ಯಾಪಾರ ಮಾಡುತ್ತಿದ್ದ ಆಸ್‌ತೋನ್ ಅವರು ಕಳೆದ ಮಾರ್ಚ್೨ ರಂದು ರಾಮ್ ಸಿಂಗ್ ಅವರಿಂದ ರೂ. ೨೦ ಸಾವಿರ ಪಡೆದುಕೊಂಡು ಸೈಕಲ್‌ನಲ್ಲಿ ಐಸ್‌ಕ್ಯಾಂಡಿ ವ್ಯಾಪಾರಕ್ಕೆಂದು ಹೋದವರು ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ ,
ಆಸ್‌ತೋನ್ ಈ ಹಿಂದೊ ಮ್ಮೆಯೂ ಕಾಣೆಯಾಗಿ ಬಳಿಕ ಮರಳಿ ಬಂದಿರುವುದರಿಂದ ಆತ ಕಾಣೆಯಾ ಗಿರುವ ಕುರಿತು ದೂರು ನೀಡುವಲ್ಲಿ ತಡವಾಗಿದೆ ಎಂದು ರಾಮ್‌ಸಿಂಗ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚೀನಾ ಮೂಲದ ವ್ಯಕ್ತಿ ಮಲೇರಿಯಾಕ್ಕೆ ಬಲಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಚೀನಾದಿಂದ ಮಂಗಳೂರಿಗೆ ಬಂದು ಇಲ್ಲಿಯ ಯುವತಿಯನ್ನು ವಿವಾಹವಾಗಿ ೩೦ ವರ್ಷಗಳಿಂದ ಇಲ್ಲಿಯೇ ವಾಸ್ತವ್ಯ ಹೂಡಿದ್ದ ಕ್ಸಿಯಾವೋ ವುಸನ್ (೮೫)ಮೃತಪಟ್ಟಿದ್ದಾರೆ. ಮಲೇರಿಯಾದಿಂದ ಬಳಲುತ್ತಿದ್ದ ಅವರನ್ನು ರವಿವಾರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದಾಗಿ ತಿಳಿಸಲಾಗಿದೆ.
ನಗರದ ಚೈನಿಸ್ ಹೊಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಬೋಳೂರಿನಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಪುತ್ರನೊಂದಿಗೆ ವಾಸವಾಗಿದ್ದರು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಾಯಾಳು ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ತಿಂಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅಶೋಕನಗರ ರಾಜು ದೇವಾಂಗ (೫೦)ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ನಗರದ ಬಾವುಟ ಗುಡ್ಡೆಯಲ್ಲಿರುವ ಎಸ್‌ಟಿಡಿ ಬೂತ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಎ.೨೫ರಂದು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿದ್ದರು. ಪ್ರಾರಂಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಇವರು, ಬಳಿಕ ವೆನ್‌ಲಾಕ್ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ರಾಜು ದೇವಾಂಗ್ ಪತ್ನಿ ಪುತ್ರನನ್ನು ಅಗಲಿದ್ದಾರೆ. ಈ ಬಗ್ಗೆ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನೇಣು ಬಿಗಿದು ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹಳೆಯಂಗಡಿ ತೋಕೂರು ಗ್ರಾಮದ ಮನೆಯೊಂ ದರಲ್ಲಿ ವ್ಯಕ್ತಿಯೋರ್ವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳೀಯ ಬಾಡಿಗೆ ಮನೆ ವಾಸಿ ಗಂಗಾಧರ ಮಣಿಯಾಣಿ (೪೫)ಮೃತ ವ್ಯಕ್ತಿ. ಮೂಲತಃ ಮಂಜೇಶ್ವರ ಕಣ್ವತೀರ್ಥ ಸಮೀಪದ ಕುಂಜತ್ತೂರಿನವರಾದ ಗಂಗಾಧರ ತೂಕೂರಿನಲ್ಲಿ ಬಾಡಿಗೆಮನೆಯಲ್ಲಿ ವಾಸವಾಗಿದ್ದರು. ಇವರ ಪತ್ನಿ ಬೇಬಿ ಮತ್ತು ಮಕ್ಕಳು ಮೇ (೨೪)ರಂದು ಊರಿಗೆ ಹೋಗಿದ್ದ ಸಂದರ್ಭದಲ್ಲಿ ಮನೆಯ ನಡುಕೋಣೆಯ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂ ಡಿದ್ದಾರೆ ಎಂದು ಹೇಳಲಾಗಿದೆ.
ರವಿವಾರ ಊರಿನಿಂದ ಮರಳಿದ ಪತ್ನಿ ಬಾಗಿಲು ತೆರೆಯುವಾಗ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಮನೆಯೊಳಗೆ ಕಂಡುಬಂದಿತೆನ್ನಲಾಗಿದೆ.
ಅತಿಯಾದ ಕುಡಿತದ ಚಟ ಹೊಂದಿದ್ದ ಇವರು ಎರಡು ವರ್ಷ ಗಳಿಂದ ಅನಾರೋಗ್ಯ ಪೀಡಿತರಾಗಿ ದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಡಿದ್ದರೂ ಗುಣಮುಖ ರಾಗಿರಲಿಲ್ಲ. ಕುಡಿತದ ಚಟವನ್ನೂ ಬಿಟ್ಟಿರಲಿಲ್ಲ ಎಂದು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ರುವ ದೂರಿನಲ್ಲಿ ತಿಳಿಸಲಾಗಿದೆ.

ಕೋಟ: ವಿಮಾನ ನಿಲ್ದಾಣ ಭೂಮಿಗೆ ಬೆಂಕಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ-ಭಟ್ಟರಕಟ್ಟೆಯ ಉದ್ದೇಶಿತ ವಿಮಾನ ನಿಲ್ದಾಣದ ಬಂಜರು ಭೂಮಿಗೆ ನಿನ್ನೆ ಮತ್ತೆ ಆಕಸ್ಮಿಕ ಅಗ್ನಿಸ್ಪರ್ಶಗೊಂಡ ಘಟನೆ ನಡೆದಿದೆ.
ಶುಕ್ರವಾರ ಇಲ್ಲಿಯೇ ಆಕಸ್ಮಿಕ ಬೆಂಕಿ ತಗುಲಿ ಅಂದಾಜು ೬೦೦ ಎಕರೆ ಹುಲ್ಲುಗಾವಲು ನಾಶವಾ ಗಿತ್ತು. ನಿನ್ನೆ ಮತ್ತೆ ಅದೇ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ವಿದ್ಯಾರ್ಥಿನಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೆಪಿಟಿ ಬಳಿಯ ಉದಯನನಗರ ನಿವಾಸಿ ಯುವತಿ ಸ್ಮೀತಾ (೨೧)ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಿಕಾಂ ಪರೀಕ್ಷೆ ಬರೆದಿದ್ದ ಈಕೆ ಫಲಿತಾಂಶದ ನಿರೀಕ್ಷೆಯಲ್ಲಿದ್ದಳು. ರವಿವಾರ ತಂದೆ ಮತ್ತು ಚಿಕ್ಕಮ್ಮ ಪೂತ್ತೂರಿಗೆ ಹೋಗಿದ್ದು. ಮನೆಯಲ್ಲಿ ಯಾರೂ ಇಲ್ಲದ ಸಮಯ ಸ್ಮೀತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಐದು ವರ್ಷಗಳ ಹಿಂದೆ ತಾಯಿ ಮೃತ ಪಟ್ಟಿದ್ದು. ಇದೇ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕದ್ರಿ ಪೊಲೀಸ್ ಠಾಣಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

ನಾಮಫಲಕದಲ್ಲಿ ಭಾರೀ ಅವ್ಯವಹಾರ!

Posted by JAYAKIRANA Kirana on | 0 comments | Leave a comment...

ಮುಖ್ಯಾಧಿಕಾರಿಯ ಸಹೋದರ ಶಾಮೀಲು
ಕಾರ್ಕಳ: ನಾಮಫಲಕ ಅಳವ ಡಿಸಿರುವ ಪ್ರಕರಣದಲ್ಲಿ ಭಾರೀ ಅವ್ಯ ವಹಾರದಲ್ಲಿ ಮುಖ್ಯಾಧಿಕಾರಿಯವರ ಸಹೋದರ ಭಾಗಿಯಾಗಿದ್ದಾರೆಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.
ಪುರಸಭಾ ವ್ಯಾಪ್ತಿಯ ರಸ್ತೆಗಳಿಗೆ ಹೆಸರು ಸೂಚಿಸುವ ನಾಮಫಲಕ ಅಳವಡಿಸುವ ಕಾರ್ಯವು ಕಳೆದ ಒಂದು ವರ್ಷದಿಂದ ನಡೆಯುತ್ತಾ ಬಂದಿದ್ದರೂ, ಇನ್ನೂ ಪೂರ್ಣಗೊಂಡಿಲ್ಲ. ಇದು ಟೆಂಡರ್ ನಿಯಮಾವಳಿಯ ಉಲ್ಲಂ ಘನೆಗೊಳಪಟ್ಟಿದೆ ಎಂದು ತಿಳಿದು ಬಂದಿದೆ. ವಿಭಿನ್ನ ಗುಣಮಟ್ಟದ ನಾಮ ಫಲಕಗಳು ಅಲ್ಲಲ್ಲಿ ಕಂಡುಬರುತ್ತದೆ. ಹೀಗಾಗಲೇ ಅಳವಡಿಸಿದ ಕೆಲವೊಂದು ನಾಮಫಲಕಗಳು ಧರಾಶಾಹಿಯಾಗಿದೆ. ಅದನ್ನೇ ಮತ್ತೇ ಅದೇ ಜಾಗದಲ್ಲಿ ಅಳವಡಿಸಲಾಗಿದೆ.
ಪ್ರತಿಯೊಂದು ನಾಮಫಲಕ ಅಳವಡಿಸಲು ಪುರಸಭೆಯು ೨೧೫೦ ರೂಪಾಯಿ ನಿಗದಿಪಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು ಪತ್ರಿಕೆಗೆ ವಿವರಿಸಿದ್ದಾರೆಯಾ ದರೂ ಅದರ ಒಟ್ಟು ವೆಚ್ಚದ ಬಗ್ಗೆ ಇನ್ನೂ ಲೆಕ್ಕಚಾರವಾಗಲಿಲ್ಲವೆಂದು ತಿಳಿಸಿದ್ದಾರೆ. ಅಂದರೆ ಯೋಜನೆಯ ಬಗ್ಗೆ ರೂಪುರೇಷೆ ಇನ್ನೂ ಸಿದ್ಧಗೊ ಳ್ಳದೇ ಇರುವುದರ ಹಿಂದೆ ಭಾರೀ ಅವ್ಯವಹಾರ ಇರುವುದು ಮತ್ತೊಮ್ಮೆ ಸಾಬೀತಾಗಿದೆ.
ಅಳವಡಿಸಿದ ಬಹುತೇಕ ನಾಮ ಫಲಕಗಳಲ್ಲಿ ಮಾರ್ಗದ ಹೆಸರು ಸೂಚಿಸದೇ ಹಾಗೆಯೇ ಉಳಿದಿದೆ. ಈ ಕಾಮಗಾರಿಯನ್ನು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರ ಸಹೋದರನಾಗಿರುವ ಪ್ರಥಮದರ್ಜೆ ಕಂಟ್ರಾಕ್ಟರ್‌ದಾರ ಅನಂತಕೃಷ್ಣ ಶೆಟ್ಟಿ ವಹಿಸಿದ್ದಾರೆಂಬುವುದು ಕಚೇರಿ ಮೂಲಗಳಿಂದ ತಿಳಿದುಬಂದಿದೆ.
ಭವಾನಿ ಮಿಲ್ ಸಮೀಪದಲ್ಲಿ ಹಾದೂ ಹೋಗುವ ರಾಜ್ಯ ಹೆದ್ದಾರಿಯ ಅನತಿ ದೂರದಲ್ಲಿ ಹಾಗೂ ನಗರದ ವಿವಿದೆಡೆಗಳಲ್ಲಿ ಅಳವಡಿಸಿರುವ ಕೆಲವೊಂದು ನಾಮಫಲಕಗಳು ತುಂಡಾಗಿ ಹೋಗಿದೆ. ಮುರಿದು ಬಿದ್ದ ನಾಮಫಲಕಗಳನ್ನು ಯಥಾ ಸ್ಥಳದಲ್ಲಿ ಮತ್ತೇ ಅಳವಡಿಸಿರುವ ಹಿಂದೆ ಅದನ್ನು ಕೂಡಾ ಲೆಕ್ಕಚಾರಕ್ಕೆ ಒಳಪಡಿಸುವ ಸಂಚು ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಸುಮಾರು ೩೦೦ಕ್ಕೂ ಮಿಕ್ಕಿ ನಾಮಫಲಕಗಳು ಕಂಡು ಬಂದಿದೆ.
ಯಾವುದೇ ರಸ್ತೆಗಳಿಗೆ ಹೆಸರನ್ನು ಅಧಿಕೃತವಾಗಿ ಘೋಷಿಸಬೇಕಾದರೆ ಸ್ಥಳೀಯಾಡಳಿತದ ಅನುಮತಿ ಬೇಕು. ಮಾತ್ರವಲ್ಲದೇ ಅಂತಹ ರಸ್ತೆಗೆ ಯಾವುದೇ ಹೆಸರಿಡಬೇಕಾದರೆ ಸ್ಥಳೀ ಯಾಡಳಿತದಲ್ಲಿ ನಿರ್ಣಯ ಕೂಡಾ ಕೈಗೊಳ್ಳಬೇಕೆಂಬ ನಿಯಾಮಾವಳಿ ಗಳಿದ್ದರೂ, ಅವುಗಳನ್ನು ಇಲ್ಲಿ ಸಂಪೂ ರ್ಣವಾಗಿ ನಿರ್ಲಕ್ಷ್ಯಿಸಲಾಗಿದೆ ಎಂಬು ದಕ್ಕೆ ಹಲವು ಪುರಾವೆಗಳು ಲಭ್ಯವಾಗಿದೆ. ಅದರ ಹಿಂದೆ ಸ್ಥಳೀಯ ಕೆಲ ಕೌನ್ಸಿಲರು ಶಾಮೀಲಾಗಿರುವುದು ತಿಳಿದುಬಂದಿದೆ. ಇಂತಹ ಆರೋಪವು ಒಂದನೇ ವಾರ್ಡ್‌ನಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

ಮೌಲಾನ ಅಬ್ದುಲ್ ಬಾರಿ ಮಾರಿಪಳ್ಳಕ್ಕೆ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಇಸ್ಲಾಂನ ಖ್ಯಾತ ಆಧ್ಯಾತ್ಮಿಕ ಗುರು ನಂದಿ ಜಾಮಿಅಃ ದಾರುಸ್ಸಲಾಂ ಇದರ ನಿವೃತ್ತ ಪ್ರಾಧ್ಯಾಪಕ ಮೌಲಾನಾ ಅಬ್ದುಲ್ ಬಾರಿ ಉಸ್ತಾದ್ ತಲಿಪ್ಪರಂಬುಜಿಲ್ಲಾ ಅವರು ಮೇ.೨೯ಕ್ಕೆ ಮಾರಿಪಳ್ಳಕ್ಕೆ ಆಗಮಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ದಾರಿಮೀಸ್ ಎಸೋಸಿಯೇಶನ್ ಇಲ್ಲಿನ ಮಾರಿಪಳ್ಳ, ಸುಜೀರು ಗುಡ್ಡೆ ಇರ್ಷಾದುಲ್ ಅತ್ಫಾಲ್ ಮದ್ರಸದಲ್ಲಿ ಆಯೋಜಿಸುವ ತ್ವರೀಖತ್ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ನಕಲಿ ಪತ್ರಕರ್ತ ಅನ್ವರ್‌ನ ಅಸಲಿಯತ್ತು

Posted by JAYAKIRANA Kirana on | 0 comments | Leave a comment...

ಮಂಗಳೂರು: ಜಯಕಿರಣ ಹಾಗೂ ಸಹಾಯ ಚಾನೆಲ್ ಹೆಸರು ಹೇಳಿಕೊಂಡು ವಿದ್ಯಾರ್ಥಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ಪೀಕಿಸಿ ಈಗ ಜೈಲು ಕಂಬಿ ಎಣಿಸುತ್ತಿರುವ ನಕಲಿ ಪತ್ರಕರ್ತ ಅಡ್ಯಾರ್‌ಕಟ್ಟೆ ನಿವಾಸಿ ಅನ್ವರ್‌ನ ಇನ್ನಷ್ಟು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈತನಿಗೆ ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಡ್ಯಾರ್ ನಿವಾಸಿಯಾಗಿರುವ ಈತ ಕೆಲಸವಿಲ್ಲದೆ ಅಬ್ಬೇಪಾರಿಯಾಗಿ ತಿರುಗಾಡುತ್ತಿದ್ದವ. ಕಷ್ಟಪಡದೆ ಹಣ ಸಂಪಾದಿಸುವ ಪ್ಲ್ಯಾನ್ ಮಾಡಿದ್ದ ಖದೀಮ ಅದಕ್ಕಾಗಿ ಬಳಸಿದ್ದೇ ಪತ್ರಿಕೆ, ಮಾಧ್ಯಮಗಳ ಹೆಸರನ್ನು. ಹೋದಲ್ಲೆಲ್ಲಾ ಒಂದೊಂದು ಪತ್ರಿಕೆಯ ಹೆಸರನ್ನು ಹೇಳಿ ಅದಕ್ಕೆಲ್ಲಾ ಈ ಭಾಗದ ವರದಿ ಗಾರ ಎಂದು ಬೋಂಗು ಬಿಡುತ್ತಿದ್ದನು. ಆತನ ಮಾತನ್ನು ನಿರ್ಲಕ್ಷಿಸಿದರೆ ಯಾವು ದಾದರೂ ಪತ್ರಿಕೆಯ ವರದಿಗಾರರಿಗೆ ಕರೆ ಮಾಡಿ ವಿರೋಧಿಗಳ ಬಗ್ಗೆ ಆರೋಪಗಳನ್ನು ಮಾಡಿ ನಂಬಿಸುವ ಪ್ರಯತ್ನವನ್ನೂ ಮಾಡುತ್ತಿದ್ದನು.
ಒಂಟಿ ಮಹಿಳೆಯರು ಇರುವ ಕಡೆಗಳಿಗೆಲ್ಲಾ ವಕ್ಕರಿಸುತ್ತಿದ್ದ ಈತ ಮಹಿಳೆಯರ ಬಳಿ ನೈಸಾಗಿ ಮಾತನಾಡಿ ನಂಬಿಕೆ ಹುಟ್ಟುವಂತೆ ಮಾಡುತ್ತಿದ್ದನು. ಈ ರೀತಿಯಾಗಿ ನಂಬಿಸಿ ಓರ್ವ ಮಹಿಳೆಗೆ ಜಾಗ ಖರೀದಿ ವಿಷಯದಲ್ಲಿ ಮದ್ಯಸ್ಥಿಕೆ ವಹಿಸಿ ಲಕ್ಷಾಂತರ ಹಣ ಏಮಾರಿಸಿದ್ದು ಮಹಿಳೆ ಇಂದಿಗೂ ಹಣಕ್ಕಾಗಿ ಅಲೆದಾಡುತ್ತಲೇ ಇದ್ದಾರೆ. ಆದರೆ ಅಸಾಮಿ ಅನ್ವರ್ ಅವರ ಕೈಗೆ ಸಿಗದಿದ್ದು ಈಗ ಜೈಲಲ್ಲಿರುವ ಕಾರಣ ಮಹಿಳೆ ಕಂಗಾಲಾಗಿದ್ದಾರೆ.
ಫರಂಗಿಪೇಟೆ, ವಳಚ್ಚಿಲ್, ಅಡ್ಯಾರ್, ಕಣ್ಣೂರು ಮುಂತಾದ ಕಡೆಗಳಲ್ಲಿ ಮರಳು ಉದ್ಯಮಿಗಳ ಬಳಿ ಹಣ ಪೀಕಿಸಿದ್ದಾನೆ ಎನ್ನುವ ಮಾಹಿ ತಿಯೂ ಪತ್ರಿಕೆಗೆ ಲಭಿಸಿದೆ. ಹಣ ನೀಡದವರ ಮೇಲೆ ಕೆಂಗಣ್ಣು ಬೀರಿ ಮರಳು ವಿರೋಧಿಗಳನ್ನು ಛೂ ಬಿಟ್ಟು ಪ್ರತಿಭಟನೆ ನಡೆಸುವುದನ್ನು, ಆ ಸಂದರ್ಭ ಮಾಧ್ಯಮ ಹಾಗೂ ಪತ್ರಿಕಾ ಪ್ರತಿನಿಧಿಗಳಿಗೆ ಮಾಹಿತಿ ನೀಡುವ ಕೆಲಸ ವನ್ನೂ ಈತ ಮಾಡುತ್ತಿದ್ದ ಎನ್ನುವ ಮಾಹಿತಿ ಈಗ ಬಹಿರಂಗ ಗೊಂಡಿದೆ. ಇಷ್ಟೆಲ್ಲಾ ಹರಾಮಿ ಕೆಲಸ ಮಾಡಿದ್ದ ಅನ್ವರ್ ಈಗ ಜೈಲು ಪಾಲಾಗಿರುವು ದರಿಂದ ಸಂತಸಗೊಂಡಿರುವ ವಿರೋಧಿಗಳು ಶನಿ ಕಾಟ ತಪ್ಪಿದೆ ಎನ್ನುತ್ತಿದ್ದಾರೆ.

ಜಯಕಿರಣವೇ ಏಕೆ?
ತನಗೆ ರಮಾನಾಥ ರೈ ಕ್ಲೋಸ್, ಅಲ್ಲದೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಹೇಳುತ್ತಿದ್ದ ಈತ ಏನೇ ಸಮಸ್ಯೆ ಬಂದರೂ ಸರಿ ಮಾಡುತ್ತೇನೆ ಎಂದು ಬೋಂಗು ಬಿಡುತ್ತಿದ್ದನು. ಈತನ ಮಾತು ನಂಬಿದವರಲ್ಲಿ ಸಾವಿರಾರು ಮೊತ್ತದ ಡಿಮಾಂಡ್ ಇಡುತ್ತಿದ್ದನು. ತಾನು ಸ್ಥಳೀಯ ವರದಿಗಾರ ಎಂದು ಎಲ್ಲಾ ಪತ್ರಿಕೆಗಳ ಹೆಸರು ಹೇಳುತ್ತಿದ್ದರೂ ‘ಜಯಕಿರಣ’ ಹೆಸರನ್ನು ಎಲ್ಲಾ ಕಡೆಗಳಲ್ಲಿ ಬಳಸುತ್ತಿದ್ದನು.
ಸಹಾಯ ಚಾನೆಲ್ ಬಂದ ಬಳಿಕ ಅದರ ಹೆಸರನ್ನೂ ಛೂ ಬಿಡುತ್ತಿದ್ದನು. ಪ್ರಸ್ತುತ ಕ್ರೈಂ, ರಾಜಕೀಯ ಹಾಗೂ ಇತರ ವಿಷಯದ ವರದಿಗಾರಿಕೆಯಲ್ಲಿ ಜಯಕಿರಣ ನಂ.೧ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಕಡೆಗಳಲ್ಲಿ ಜಯಕಿರಣದ ಹೆಸರನ್ನೇ ಬಳಸಿ ಹಣ ಪೀಕಿಸುತ್ತಿದ್ದನು. ಈಗ ಈತ ಜೈಲಲ್ಲಿದ್ದರೂ ಈತನ ಬುದ್ಧಿ ಹೊಂದಿರುವ ಅದೆಷ್ಟೋ ಮಂದಿ ಜಯಕಿರಣ ಹೆಸರು ಹೇಳಿ ಹಣ ಕಮಾಯಿಸುತ್ತಿದ್ದಾರೆ. ಇಂಥವರು ಗಮನಕ್ಕೆ ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅಥವಾ ಜಯಕಿರಣ ಪತ್ರಿಕೆಯನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ.

ಸುಬ್ರಹ್ಮಣ್ಯದಲ್ಲಿ ಜನಸಾಗರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಆಶ್ಲೇಷ ಬಲಿ, ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ ಮತ್ತಿತರ ಸೇವೆಗಳು ಅಧಿಕವಾಗಿ ನೆರವೇರುತ್ತಿವೆ.
ರವಿವಾರ ಸುಬ್ರಹ್ಮಣ್ಯಕ್ಕೆ ೨೫ ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದು, ರವಿವಾರ ಒಂದೇ ದಿನದಲ್ಲಿ ೨೦೭೬ ಆಶ್ಲೇಷಾ ಬಲಿ ನೆರವೇರಿದ್ದು ಇದೊಂದು ದಾಖಲೆ ಎಂದು ಅಂದಾಜಿಸಲಾಗಿದೆ.
ಜಾತ್ರೆಯ ದಿನಗಳ ಹೊರತಾಗಿ ಅತೀ ಹೆಚ್ಚು ಭಕ್ತರು ಆಗಮಿಸಿದ ದಿನವಾಗಿ ಕಳೆದ ರವಿವಾರ ಕಂಡು ಬಂದಿತು.
ರವಿವಾರ ವಿಶೇಷ ದಿನವಾಗಿತ್ತು. ಈ ದಿನ ಜೇಷ್ಠಶುದ್ಧ ಷಷ್ಠಿ, ಆಶ್ಲೇಷ ನಕ್ಷತ್ರ ಮತ್ತು ದೇವರು ಒಳಾಂಗಣ ಪ್ರವೇಶಿಸಿ ಉತ್ಸವಾದಿಗಳು ಕೊನೆಗೊಳ್ಳುವ ದಿನವಾಗಿದೆ. ಈ ಮೂರು ಏಕದಿನದಲ್ಲಿ ಬರುವುದು ಅಪರೂಪ.

ಚೊಚ್ಚಲ ಬಾರಿಗೆ ಐಪಿಎಲ್ ಜಯಿಸಿದ ಕೆಕೆಆರ್

Posted by JAYAKIRANA Kirana on | 0 comments | Leave a comment...

ಚೆನ್ನೈನ ಹ್ಯಾಟ್ರಿಕ್ ಗೆಲುವಿನ ಕನಸಿಗೆ ಕೊಳ್ಳಿಯಿಟ್ಟ ಬಿಸ್ಲಾ
ಚೆನ್ನೈ: ಕಳೆದೆರಡು ಐಪಿಎಲ್ ಋತುಗಳಲ್ಲಿ ಇತರೆ ತಂಡಗಳ ಮೇಲೆ ಮೇಲುಗೈ ಹೊಂದಿದ್ದ ಚೆನ್ನೈ ಈ ಬಾರಿಯ ಕೂಟದಲ್ಲಿ ಮಾತ್ರ ಅದನ್ನು ತೋರಿಸಲು ವಿಫಲವಾಗಿದೆ. ನಿನ್ನೆ ಇಲ್ಲಿನ ಚೆಪಾಕ್ ಅಂಗಣದಲ್ಲಿ ನಡೆದ ಕೆಕೆಆರ್ ವಿರುದ್ಧದ ಗ್ರ್ಯಾಂಡ್ ಫಿನಾಲೆಯಲ್ಲಿ ಚೆನ್ನೈ ದೊಡ್ಡ ಮೊತ್ತದ ಸ್ಕೋರ್ ದಾಖಲಿಸಿದ್ದರೂ ಮನ್ವಿಂದರ್ ಬಿಸ್ಲಾ ಹಾಗೂ ಜಾಕ್ ಕ್ಯಾಲೀಸ್ ನಡೆಸಿದ ಜವಾಬ್ದಾರಿಯೊಂದಿಗೆ ಸ್ಫೋಟಕ ಆಟವು ಕೆಕೆಆರ್‌ಗೆ ಚೊಚ್ಚಲ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಅತ್ತ ಚೆನ್ನೈ ಹ್ಯಾಟ್ರಿಕ್ ಪ್ರಶಸ್ತಿ ಗೆಲುವಿನ ಕನಸು ಈ ಮೂಲಕ ಭಗ್ನಗೊಂಡಿತು.
ಆರಂಭದಲ್ಲಿ ಎಲ್ಲವೂ ನಾಯಕ ಧೋನಿ ಲೆಕ್ಕಾಚಾರದಂತೆ ನಡೆಯಿತು. ಟಾಸ್ ಗೆದ್ದ ಸಿಎಸ್‌ಕೆಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನೇ ನೀಡಿತು. ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ತಂಡ ನಿಗದಿತ ೨೦ ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ೧೯೦ ರನ್‌ಗಳ ಉತ್ತಮ ಮೊತ್ತವನ್ನೇ ಕಳೆಹಾಕಿತು.
ಗುರಿ ಬೆನ್ನತ್ತಿದ್ದ ಕೆಕೆಆರ್ ಇನ್ನೂ ಎರಡು ಎಸೆತ ಬಾಕಿ ಉಳಿದಿರುವಂತೆ ಐದು ವಿಕೆಟ್ ನಷ್ಟಕ್ಕೆ ೧೯೨ ರನ್ ಗಳಿಸಿ ಜಯದಾಖಲಿಸಿತು. ತಂಡ ಆರಂಭದಲ್ಲೇ ಆಘಾತ ಕಂಡಿತು. ನಾಯಕ ಗಂಭೀರ್ ಕೇವಲ ಎರಡು ರನ್‌ಗೆ ನಿರ್ಗಮಿಸಿದಾಗ ಚೆನ್ನೈ ಸತತ ಮೂರನೇ ಬಾರಿಗೆ ಟೂರ್ನಿ ಗೆಲ್ಲಲಿದೆ ಎಂದೇ ಹಲವರು ಅಭಿಪ್ರಾಯ ತಿಳಿಸಿದ್ದರು. ಆದರೆ ಎಲೆಮರಿಯಕಾಯಿಯಾಗಿ ಉಳಿದಿದ್ದ ಬಿಸ್ಲಾ ಇಡೀ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಇದಕ್ಕೆ ಕ್ಯಾಲಿಸ್‌ರ ಉತ್ತಮ ಬೆಂಬಲ ಕೂಡ ದೊರೆಯಿತು. ಆರಂಭದಿಂದಲೇ ಧೋನಿ ಪಡೆಯ ಮೇಲೆ ಹರಿಹಾಯ್ದ ಬಿಸ್ಲಾ ಸ್ಫೋಟಕ ರೂಪವನ್ನೇ ತಾಳಿದರು. ಈ ಜೋಡಿ ಕೇವಲ ೧೩.೪ ಓವರ್‌ಗಳಲ್ಲಿ ಬರೊಬ್ಬರಿ ೧೩೬ ರನ್ ಕಲೆಹಾಕಿದಾಗ ತಂಡಕ್ಕೆ ಗೆಲುವಿನ ನಿರೀಕ್ಷೆ ಮೂಡಿತು. ಬಿಸ್ಲಾ ಈ ವೇಳೆ ನಿರ್ಗಮಿಸಿದರೂ ಕೇವಲ ೪೮ ಎಸೆತಗಳಲ್ಲಿ ಐದು ಸಿಕ್ಸ್ ಹಾಗೂ ಎಂಟು ಬೌಂಡರಿ ನೆರವಿನಿಂದ ೮೯ ರನ್ ಗಳಿಸಿದ್ದರು. ನಂತರ ಹೊಣೆಯನ್ನು ತನ್ನ ಹೆಗಳಿಗೇರಿಸಿಕೊಂಡ ಕ್ಯಾಲಿಸ್ ರನ್ ಗಳಿಸಲು ಶುರುಮಾಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಶುಕ್ಲಾ (೩) ಹಾಗೂ ಪಠಾಣ್ (೧) ನಿರ್ಗಮಿಸಿದಾಗ ಪಂದ್ಯಕ್ಕೆ ಇನ್ನಷ್ಟು ರೋಚಕತೆ ಲಭಿಸಿತು. ಅಲ್ಲದೆ ಉತ್ತಮವಾಗಿ ಆಡುತ್ತಿದ್ದ ಕ್ಯಾಲೀಸ್ ಕೂಡ ಪೆವಿಲಿಯನ್‌ಗೆ ಮರಳಿದಾಗ ಚೆನ್ನೈಗೆ ಗೆಲುವಿನ ರುಚಿ ಕಂಡಿತು. ಕ್ಯಾಲಿಸ್ (೧೧) ೪೯ ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ ಏಳು ಬೌಂಡರಿ ನೆರವಿನಿಂದ ೬೯ ರನ್ ಗಳಿಸಿದರು. ಹಸನ್ ಕೂಡ ಉತ್ತಮವಾಗಿ ಆಡಿದರು. ಅಂತಿಮ ಓವರ್‌ನಲ್ಲಿ ಒಂಬತ್ತು ರನ್‌ಗಳ ಅಗತ್ಯವಿತ್ತು. ಮೊದಲೆರಡು ಎಸೆತಗಳಲ್ಲಿ ಎರಡು ರನ್ ಬಂದಾಗ ಇನ್ನಷ್ಟು ರೋಚಕತೆಗೆ ಸಿಲುಕಿತು. ಆದರೆ ಆದರೆ ಕ್ರೀಸ್‌ನಲ್ಲಿದ್ದ ಮನೋಜ್ ತಿವಾರಿ (೯) ಸತತ ಎರಡು ಬೌಂಡರಿ ಸಿಡಿಸಿದಾಗ ಇಡೀ ಕೆಕೆಆರ್ ಮೊಗದಲ್ಲಿ ಸಂತಸ ಮನೆಮಾಡಿತು. ಯಾಕೆಂದರೆ ಅದು ತಂಡಕ್ಕೆ ಚೊಚ್ಚಲ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಸಿಎಸ್‌ಕೆ ಪರ ಹಿಲ್ಫೆನಾಸ್ ಎರಡು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಚೆನ್ನೈ ಉತ್ತಮ ಆರಂಭವನ್ನೇ ಪಡೆಯಿತು. ಮುರಳಿ ವಿಜಯ್ (೪೨) ಹಾಗೂ ಮೈಕಲ್ ಹಸ್ಸಿ ಭರ್ಜರಿ ಪ್ರದರ್ಶನ ನೀಡಿದರು. ಈ ಜೋಡಿ ಮೊದಲ ೧೦.೨ ಓವರ್‌ಗಳಲ್ಲಿ ೮೭ ರನ್‌ಗಳ ಕಾಣಿಕೆಯನ್ನು ನೀಡಿತು. ಈ ವೇಳೆ ಭಾಟಿಯಾ ಎಸೆತದಲ್ಲಿ ವಿಜಯ್ ಔಟಾದರು. ನಂತರ ಬಂದ ರೈನಾ ಇನ್ನೂ ಹೆಚ್ಚಿನ ಪ್ರತಾತ ತೋರಿದರು. ಕೇವಲ ೩೮ ಎಸೆತಗಳಲ್ಲಿ ಐದು ಸಿಕ್ಸ್ ಹಾಗೂ ಮೂರು ಬೌಂಡರಿ ನೆರವಿನಿಂದ ೭೩ ರನ್ ಗಳಿಸಿ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಿದರು. ಹಸ್ಸಿ (೫೪) ಕೂಡ ಆಕರ್ಷಕ ಅರ್ಧಶತಕ ಸಿಡಿಸಿದರು.

ಐಪಿಎಲ್ ಆದಾಯದ ಭಾಗ ಕೇಳಿದ ಮಹಿಳಾ ಕ್ರಿಕೆಟರ‍್ಸ್

Posted by JAYAKIRANA Kirana on | 0 comments | Leave a comment...

ದೆಹಲಿ: ಭಾರತೀಯ ಕ್ರಿಕೆಟ್ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದ ಮಾಜಿ ಆಟಗಾರರನ್ನು ಬಿಸಿಸಿಐ ವಿಶೇಷ ರೀತಿಯಲ್ಲಿ ಗೌರವಿಸಿ ಒಂದೇ ಬಾರಿಯ ಪಾವತಿ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಕ್ರಿಕೆಟ್‌ನ ಮಾಜಿ ನಾಯಕಿ ಡಯಾನ ಎಡಲ್ಜಿ, ತಮಗೂ ಈ ರೀತಿಯಲ್ಲಿ ಗೌರವಿಸಬೇಕೆಂದು ಕೇಳಿಕೊಂಡಿದ್ದಾರೆ. ೨೦೦೪ರಲ್ಲಿ ನಿವೃತ್ತಿ ಹೊಂದಿದ ಭಾರತದ ಮಾಜಿ ಟೆಸ್ಟ್ ಹಾಗೂ ಪ್ರಥಮ ದರ್ಜೆ ಪುರುಷ ಆಟಗಾರರಿಗೆ ಇನಾಮು ರೂಪದಲ್ಲಿ ಬಿಸಿಸಿಐ ಸುಮಾರು ೭೦ ಕೋಟಿ. ರೂ ವ್ಯಯಿಸಲು ನಿರ್ಧರಿಸಿದೆ.
ಮಾಜಿ ಆಟಗಾರರನ್ನು ಗೌರವಿಸುವ ನಿರ್ಧಾರ ತೆಗೆದುಕೊಂಡ ಬಿಸಿಸಿಐ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಇದು ಅವರ ಸಾಧನೆಯನ್ನು ಗೌರವಿಸಿದಂತಾಗುತ್ತದೆ. ಅದರಲೂ ನಮ್ಮನ್ನೂ ಇದೇ ರೀತಿ ನಡೆದುಕೊಂಡರೆ ಅದಕ್ಕೆ ಇನ್ನಷ್ಟು ಉತ್ತಮ ಅರ್ಥ ಬರುತ್ತದೆ. ಪುರುಷ ಆಟಗಾರರಿಗೆ ಮಾಡಿದ ಗೌರವವನ್ನು ನಮಗೂ ಮಾಡಬೇಕಿದೆ. ನಮ್ಮನ್ನೂ ಕೂಡ ಒಂದೇ ಬಾರಿಯ ಪಾವತಿ ಕೋಟಾದಡಿಯಲ್ಲಿ ಸೇರಿಸಿಕೊಳ್ಳಬೇಕಿದೆ. ದಿವಂಗತ ಮಾಜಿ ಆಟಗಾರರ ಪತ್ನಿಯರನ್ನೂ ಬಿಸಿಸಿಐ ಇದೇ ರೀತಿಯ ಗೌರವಕ್ಕೆ ಒಳಪಡಿಸಬೇಕಿದೆ. ಒಂದು ವೇಳೆ ಇದು ಸಾಧ್ಯವಾದರೆ ಅದಕ್ಕಿಂತ ಉತ್ತಮ ಕಾರ್ಯ ಮತ್ತೊಂದಿಲ್ಲ. ಬೋರ್ಡ್ ನೀಡುವ ಸಣ್ಣ ಪ್ರಮಾಣದ ಹಣವು ನಮಗೆ ವರ ನೀಡಿದಂತಾಗುತ್ತದೆ. ನಾನು ಈ ಬಗ್ಗೆ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಹಾಗೂ ಕಾರ್ಯದರ್ಶಿ ಸಂಜಯ್ ಜಗದಳೆ ಬಗ್ಗೆ ಮಾತನಾಡಿದ್ದು, ಇದನ್ನು ಗಂಭೀರವಾಗಿ ಪರಿಗಣಿ ಸುವುದಾಗಿ ಅವರು ಭರವಸೆ ನೀಡಿದ್ದಾರೆ. ಅವರ ನಿರ್ಧಾರಕ್ಕೆ ನಾನು ಕಾಯುತ್ತಿದ್ದೇನೆ ಎಂದು ಡಯಾನ ತಿಳಿಸಿದ್ದಾರೆ. ೧೯೭೬-೯೩ರ ಅವಧಿಯಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದ ಡಯಾನ ೩೪ ಟೆಸ್ಟ್, ೨೦ ಏಕದಿನ ಪಂದ್ಯಗಳನ್ನು ಆಡಿದ್ದು, ಪ್ರತಿಷ್ಟಿತ ಅರ್ಜುನ ಪ್ರಶಸ್ತಿಯನ್ನೂ ಕೂಡ ಪಡೆದುಕೊಂಡಿದ್ದರು.

ಫ್ರೆಂಚ್ ಓಪನ್: ಶುಭಾರಂಭ ಮಾಡಿದ ಸ್ಟೋಸರ್

Posted by JAYAKIRANA Kirana on | 0 comments | Leave a comment...

ಪ್ಯಾರಿಸ್: ನಿನ್ನೆ ಇಲ್ಲಿ ಆರಂಭವಾದ ಪ್ರತಿಷ್ಟಿತ ಫ್ರೆಂಚ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ಸಮಂತಾ ಸ್ಟೋಸರ್ ಶುಭಾರಂಭ ಮಾಡಿದ್ದಾರೆ. ಅಮೆರಿಕಾದ ಇಲೆನಾ ಬಲ್ಟೆಚ್ಚಾ ವಿರುದ್ಧ ನೇರ ಅಂತರದ ಗೆಲುವು ಸಾಧಿಸುವ ಮೂಲಕ ಭರ್ಜರಿ ಆರಂಭ ಪಡೆದಿದ್ದಾರೆ.
ಪ್ರಥಮ ಸುತ್ತಿನಲ್ಲಿ ಸ್ವಲ್ಪ ಎಡವಿದಂತೆ ಕಂಡುಬಂದರೂ ದ್ವಿತೀಯ ಸುತ್ತಿನಲ್ಲಿ ಮಾತ್ರ ತನ್ನ ಪರಾಕ್ರಮವನ್ನು ಆರನೇ ಶ್ರೇಯಾಂಕದ ಸ್ಟೋಸರ್ ತೋರ್ಪಡಿಸಿದರು. ಅಂತಿಮವಾಗಿ ಪಂದ್ಯವನ್ನು ಸ್ಟೋಸರ್ ೬-೪ ಹಾಗೂ ೬-೦ಯ ಉತ್ತಮ ಅಂತರದಲ್ಲಿ ಗೆಲುವು ಸಾಧಿಸಲು ಸ್ಟೋಸರ್ ಸಫಲರಾದರು.
ಗೆಲುವಿನ ನಂತರ ಪ್ರತಿಕ್ರಿಯಿಸಿದ ಸ್ಟೋಸರ್, ನಾನು ವಿಶ್ವದ ೬೮ನೇ ಶ್ರೇಯಾಂಕದ ಆಟಗಾರ್ತಿಯ ಆಟವನ್ನು ಗಮನಿಸುವ ಸಲುವಾಗಿಯೇ ಪಂದ್ಯವನ್ನು ಇಷ್ಟು ದೀರ್ಘವಾಗಿ ಆಡಿದೆ ಎಂದು ತಿಳಿಸಿದ್ದಾರೆ.

ಮುಂದಿನ ಐಪಿಎಲ್‌ನಲ್ಲಿ ಪಾಕ್ ಆಟಗಾರರಿಗೆ ಅವಕಾಶ?

Posted by JAYAKIRANA Kirana on | 0 comments | Leave a comment...

ದೆಹಲಿ: ಕಳೆದ ನಾಲ್ಕು ಐಪಿಎಲ್ ಋತುವಿನಲ್ಲಿ ಟೂರ್ನಿ ಆಡುವುದರಿಂದ ವಂಚಿತರಾಗಿದ್ದ ಪಾಕಿಸ್ತಾನ ಆಟಗಾರರಿಗೆ ಮುಂದಿನ ಬಾರಿಯ (ಆರನೇ ಋತು) ಟೂರ್ನಿಯಲ್ಲಿ ಆಡುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗಿದೆ. ಸ್ವತಹ ಪಾಕ್ ಕ್ರಿಕೆಟ್ ಬೋರ್ಡ್ ಮಾಜಿ ಅಧ್ಯಕ್ಷ ಇಜಾಜ್ ಬಟ್ ಈ ವಿಷಯದಲ್ಲಿ ಖಚಿತತೆ ವ್ಯಕ್ತಪಡಿಸಿರುವುದು ಸಾಧ್ಯತೆಯನ್ನು ಪುಷ್ಠೀಕರಿಸುತ್ತದೆ. ಕಳೆದ ವಾರ ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ಹಾಗೂ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾರನ್ನು ಬಟ್ ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ್ದರು.
ಮುಂದಿನ ಟೂರ್ನಿಯಲ್ಲಿ ನಮ್ಮ ಆಟಗಾರರಿಗೆ ಐಪಿಎಲ್‌ನಲ್ಲಿ ಸ್ಥಾನ ಕಲ್ಪಿಸುವ ಬಗ್ಗೆ ಬಿಸಿಸಿಐನ ಉನ್ನತ ಮೂಲಗಳು ನನಗೆ ಭರವಸೆ ನೀಡಿದೆ. ಇಂಡೋ-ಪಾಕ್ ಕ್ರಿಕೆಟ್ ಬಗ್ಗೆ ನಾನು ಪವಾರ್ ಹಾಗೂ ಶುಕ್ಲಾ ಬಳಿ ಮಾತನಾಡಿದ್ದೇನೆ. ಟೂರ್ನಿಯಲ್ಲಿ ಅವಕಾಶ ಕಲ್ಪಸುವ ಬಗ್ಗೆ ನನಗೆ ಭರವಸೆ ನೀಡಿದ್ದಾರೆ ಎಂದು ಬಟ್ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಸಿಬಿ ಅಧ್ಯಕ್ಷ ಜಾಕಾ ಅಶ್ರಫ್, ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಈ ರೀತಿ ನಡೆಯುವುದು ಅತ್ಯಂತ ವಿರಳವಾಗಿದೆ ಎಂದು ತಿಳಿಸಿದ್ದಾರೆ. ಅಶ್ರಫ್ ನಿನ್ನೆ ನಡೆದ ಚೆನ್ನೈ ಹಾಗೂ ಕೆಕೆಆರ್ ನಡುವಿನ ಐಪಿಎಲ್ ಫೈನಲ್ ಪಂದ್ಯದಲ್ಲಿ ವಿಶೇಷ ಆಹ್ವಾನಿತರಾಗಿದ್ದರು.

ಖೊಕ್ ಪಡೆದ ಸೊಲ್ಡಾಡೊ; ಅಲ್ವಾರೊಗೆ ಮಣೆ

Posted by JAYAKIRANA Kirana on | 0 comments | Leave a comment...

ಯೂರೋ ಕಪ್-೨೦೧೨: ಸ್ಪೇಯ್ನ್ ತಂಡ ಪ್ರಕಟ
ಮ್ಯಾಡ್ರಿಡ್: ಮುಂದೆ ನಡೆಯಲಿರುವ ಪ್ರತಿಷ್ಟಿತ ಯೂರೋ ಕಪ್-೨೦೧೨ ಟೂರ್ನಿಗೆ ಫೆವರೇಟ್ ಎಂದೇ ಬಣ್ಣಿಸಲಾದ ೨೩ ಸದಸ್ಯರ ಸ್ಪೇಯ್ನ್ ತಂಡವನ್ನು ಅಂತಿಮಗೊಳಿಸಲಾಗಿದ್ದು, ಮಾರ್ಚ್‌ನಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಸ್ಟ್ರೈಕರ್ ರೊಬರ್ಟೊ ಸೊಲ್ವಾಡೊಗೆ ಖೊಕ್ ನೀಡಲಾಗಿದ್ದು, ಆ ಜಾಗದಲ್ಲಿ ಅಲ್ವಾರೊ ನೆಗ್ರೆಡೊಗೆ ಅವಕಾಶ ಕಲ್ಪಿಸಲಾಗಿದೆ.
ತಂಡದ ಕೋಚ್ ವಿನ್ಸೆಂಟೊ ಡೆಲ್ ಬೊಸ್ಕ್ ಸಾರಥ್ಯದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿದೆ. ಈಗಾಗಲೇ ಗಾಯದ ಸಮಸ್ಯೆಯಿಂದ ಪ್ರಮುಖ ಆಟಗಾರರಾದ ಕಾರ್ಲೆಜ್ ಪುಯೊಲ್ ಹಾಗೂ ಡೇವಿಡ್ ವಿಲ್ಲಾ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ತಂಡ: ಕ್ಯಾಸಿಲ್ಲಾಸ್ (ನಾ), ಪೆಪೆ ರೀನಾ, ವಿಕ್ಟರ್ ವಾಲ್ದಾಸ್, ಅಲ್ವಾರೊ ಅರೆಬೆಲೊ, ರಾಮೋಸ್, ಜ್ವಾನಿಫ್ರಾನ್, ಜೊರೊಡಿ ಅಲ್ಬಾ, ರಾಲ್ ಅಲ್ಬೊಲ್, ಜೆರಾರ‍್ಡ್ ಪಿಖೆ, ಜಾವಿ ಮಾರ್ಟಿನೆಜ್, ಕ್ಷಾವಿ, ಬಸ್ಖೆಟ್ಸ್, ಇನಿಯೆಸ್ಟಾ, ಕ್ಷಾಬಿ ಅಲೊನ್ಸೊ, ಡೇವಿಡ್ ಸಿಲ್ವಾ, ಸಾಂಟಿ ಕಾಜೊರ‍್ಲಾ, ಸೆಸ್ ಫ್ಯಾಬ್ರಿಗಾಸ್, ಜುವಾನ್ ಮಾತಾ, ಜೆಸಸ್ ನೆವಾಸ್, ಪೆಡ್ರೊ, ಫರ್ನಾಂಡೊ ಲೊರೆಂಟೊ, ಟೋರಸ್, ಅಲ್ವಾರೊ.

ಲಂಡನ್ ಒಲಿಂಪಿಕ್ಸ್‌ಗೆ ಅಲ್‌ಖೈದಾ ಕರಿನೆರಳು

Posted by JAYAKIRANA Kirana on | 0 comments | Leave a comment...

ಲಂಡನ್: ಮುಂದೆ ನಡೆಯಲಿ ರುವ ಪ್ರತಿಷ್ಟಿತ ಲಂಡನ್ ಒಲಿಂಪಿಕ್ಸ್ ಆರಂಭಕ್ಕೆ ಮೊದಲೇ ವಿಘ್ನ ಎದುರಾ ಗಿದೆ. ಮಹತ್ವದ ಕೂಟಕ್ಕೆ ಪಾಕ್ ಮೂಲದ ಅಲ್‌ಖೈದಾ ಉಗ್ರರು ಟಾರ್ಗೆಟ್ ಮಾಡುವ ಸಾಧ್ಯತೆಯಿದೆ ಎಂದು ಯುರೋಪಿಯನ್ ಯೂನಿ ಯನ್‌ನ ಕ್ರಿಮಿನಲ್ ಇಂಟಲಿಜೆನ್ಸ್ ಏಜೆನ್ಸಿ ಎಚ್ಚರಿಕೆ ನೀಡಿದೆ. ಟೂರ್ನಿಯ ಸಾಂಕೇತಿಕ ಮೌಲ್ಯದ ಹಿನ್ನೆಲೆಯಿಂ ದಲೇ ದಾಳಿಯ ಸಾಧ್ಯತೆಯಿದೆ ಎಂದು ಏಜೆನ್ಸಿ ತಿಳಿಸಿದೆ. ಜುಲೈನಲ್ಲಿ ಒಲಿಂಪಿಕ್ಸ್ ಟೂರ್ನಿ ಆರಂಭಗೊಳ್ಳಲಿದೆ.
ಅಲ್‌ಖೈದಾ ನಾಯಕ ಒಸಾಮ ಬಿನ್ ಲಾದೆನ್ ಹತ್ಯಗೆ ಪ್ರತಿಕಾರವಾಗಿ ಆ ಸಂಘಟನೆ ಒಲಿಂಪಿಕ್ಸ್ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ. ಇತ್ತೀ ಚಿಗಿನ ದಿನಗಳಲ್ಲಿ ಜೆಹಾದ್ ಸಾರಿರುವ ಈ ಸಂಘಟನೆ ವಿಶ್ವಕ್ಕೆ ಮಾರಕವಾಗಿದೆ. ಈ ಬಗ್ಗೆ ಭದ್ರತಾ ಇಲಾಖೆ ಜಾಗೃತ ವಾಗಿರಬೇಕಿದೆ ಎಂದು ಏಜೆನ್ಸಿ ತಿಳಿಸಿದೆ.

ಯಡಿಯೂರಪ್ಪ ಬಿಜೆಪಿಯ ‘ಮಾನವ ಬಾಂಬ್: ಠಾಕ್ರೆ

Posted by JAYAKIRANA Kirana on | 0 comments | Leave a comment...

ಮುಂಬೈ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡ್ಡಿಯೂ ರಪ್ಪ ಅವರನ್ನು ಬಿಜೆಪಿಯ ಮಾನವ ಬಾಂಬ್ ಎಂದು ಜರೆದಿರುವ ಶಿವ ಸೇನಾ ವರಿಷ್ಠ ಬಾಳಾ ಠಾಕ್ರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ ಗಡ್ಕರಿ ಹಾದಿಯು ನೆಲಬಾಂಬ್‌ಗಳಿಂದ ಕೂಡಿದೆ ಎಂದು ಎಚ್ಚರಿಸಿದ್ದಾರೆ.
ಪಕ್ಷದೊಳಗಿನ ಬಿರುಕಿನ ಬಗ್ಗೆ ಮಾತನಾಡಿರುವ ಠಾಕ್ರೆ, ಮುಂಬೈನಲ್ಲಿ ಜರಗಿದ ಪಕ್ಷದ ರಾಷ್ಟ್ರೀಯ ಕಾರ್ಯ ಕಾರಿಣಿ ಸಮಿತಿ ಸಭೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಜ ರಾಗಬೇಕೆಂಬ ಏಕೈಕ ಉದ್ದೇಶದಿಂದ ಸಂಜಯ ಜೋಶಿ ಅವರನ್ನು ಬಲಿಪಶು ಮಾಡಲಾಗಿದೆ ಎಂದು ವ್ಯಂಗ್ಯವಾಡಿದರು.
ಗಡ್ಕರಿ ಎರಡನೇ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದು ವರಿಯಲು ಮೋದಿ ಕಾರಣರಾಗಿದ್ದು, ಹಾಗಾಗಿ ಸಂಜಯ್ ಜೋಶಿ ಅವರಿಂದ ರಾಜೀನಾಮೆ ಪಡೆಯಲಾ ಗಿದೆ ಎಂದು ಶಿವಸೇನಾ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ವರದಿ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಲಿಂಗಾ ಯಿತ ಸಮುದಾಯದ ಪ್ರಬಲ ನಾಯಕ ಯಡ್ಡಿಯೂರಪ್ಪ ಅವರಿಂದಾಗಿ ದಕ್ಷಿಣ ಭಾರತದಲ್ಲಿ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಪಕ್ಷಕ್ಕೆ ಹಾನಿಯಾಗಿದೆ ಎಂದು ತಿಳಿಸಿರುವ ಠಾಕ್ರೆ, ಮಾಜಿ ಸಿಎಂ ಯಡಿ ಯೂರಪ್ಪ ಅವರನ್ನು ಬಿಜೆಪಿಯ ಮಾನವ ಬಾಂಬ್ ಎಂದಿದ್ದಾರೆ. ಮಾತು ಮುಂದುವರಿಸಿದ ಅವರು ತಾವು ಸಾಗುತ್ತಿರುವ ಹಾದಿಯು ನೆಲಬಾಂಬ್‌ಗಳಿಂದ ತುಂಬಿಕೊಂಡಿದೆ ಎಂಬುದನ್ನು ಗಡ್ಕರಿ ಮರೆಯಬಾರದು ಎಂದು ಎಚ್ಚರಿಸಿದ್ದಾರೆ.

ಗುಂಡಿನ ಮತ್ತು ಕಡಿಮೆಯಾಗಲಿದೆ

Posted by JAYAKIRANA Kirana on | 0 comments | Leave a comment...

ನವದೆಹಲಿ: ಇನ್ನು ಮುಂದೆ ಬಿಯರ್, ವೈನ್, ವಿಸ್ಕಿ, ರಂ, ಜಿನ್ ಹಾಗೂ ವೊಡ್ಕಾಗಳಲ್ಲಿನ ಆಲ್ಕೊ-ಹಾಲ್ ಪ್ರಯಾಣ ನಿಯಂತ್ರಿಸಲಾಗುತ್ತದೆ. ಆಹಾರ ಸುರಕ್ಷೆ ಹಾಗೂ ಮಾನದಂಡ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಇದೇ ಮೊದಲ ಬಾರಿ ಇಂತಹದ್ದೊಂದು ಕ್ರಮಕ್ಕೆ ಮುಂದಾಗಿದ್ದು ಈ ಸಂಬಂಧ ಕರಡು ಮಾನದಂಡವನ್ನು ಅಂತಿಮಗೊಳಿಸಿದೆ.
ಇವುಗಳಲ್ಲಿ ಆಲ್ಕೊಹಾಲ್‌ನ ಗರಿಷ್ಟ ಅನು-ಮೋದಿತ ಪ್ರಮಾಣವನ್ನು ನಿಗದಿ ಮಾಡಲಾಗುತ್ತದೆ. ಅಲ್ಲದೇ ಇವುಗಳಲ್ಲಿ ಸುರಕ್ಷಾ ಮಾನದಂಡ ಪಾಲಿಸುವುದನ್ನು ಕಡ್ಡಾಯಗೊಳಿಸಲಾಗುತ್ತದೆ. ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಕರಡು ಮಾನದಂಡ ಕುರಿತು ಅಂತಿಮ ಸುತ್ತಿನ ಚರ್ಚೆ ನಡೆಸಲಾಗುತ್ತದೆ. ಜುಲೈ ೧ಕ್ಕೆ ಅಧಿಸೂಚನೆ ಹೊರಡಿಸಲು ನಿರ್ಧರಿಸಲಾಗಿದೆ.
ಉದ್ದೇಶಿತ ಕ್ರಮವು ದೇಶದಲ್ಲಿ ಮಾರಾಟ ಮಾಡಲು ಪರವಾನಗಿ ಪಡೆದುಕೊಂಡಿರುವ ಎಲ್ಲಾ ಬ್ರಾಂಡ್ ಆಲ್ಕೊಹಾಲ್ ಉತ್ಪನ್ನಗಳಿಗೂ ಅನ್ವಯವಾಗಲಿದೆ. ಈ ಕ್ರಮವು ಆಲ್ಕೊಹಾಲ್ ಉದ್ದಿಮೆಯ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಜ್ಯಗಳಿಗೆ ಪ್ರಮುಖವಾಗಿ ವರಮಾನ ತಂದುಕೊಡುವ ಈ ಉದ್ದಿಮೆಯು ವಾರ್ಷಿಕವಾಗಿ ೫೦ಸಾವಿರ ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸುತ್ತದೆ.
ಪ್ರಾಧಿಕಾರದ ವೈಜ್ಞಾನಿಕ ಸಮಿತಿಯು ಕರಡು ಮಾನದಂಡಕ್ಕೆ ಈಗಾಗಲೇ ಅನುಮೋದನೆ ನೀಡಿದೆ.
ಮದ್ಯದಲ್ಲಿ ಆಲ್ಕೊಹಾಲ್ ಮಟ್ಟ ನಿಯಂತ್ರಿಸುವ ಅಧಿಕಾರವು ಎಫ್‌ಎಸ್‌ಎಸ್‌ಎಐಗೆ ಇಲ್ಲ. ಈ ಅಧಿಕಾರವು ಏನಿದ್ದರೂ ರಾಜ್ಯ ಸರಕಾರಗಳಿಗೆ ಮಾತ್ರ ಇರುತ್ತವೆ ಎನ್ನುವುದು ಮದ್ಯ ತಯಾರಕರ ಅನಿಸಿಕೆ.

ಬಿಜೆಪಿ ಕಚೇರಿ ಹೈಜಾಕ್‌ಗೆ ಯಡ್ಡಿ ಯತ್ನ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ರಾಜ್ಯ ನೂತನ ಬಿಜೆಪಿ ಕಚೇರಿ ಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಯಡಿಯೂರಪ್ಪ ಮುಂದಾಗಿದ್ದಾರೆ. ಈಗಾಗಲೇ ಹಳೇ ಕಚೇರಿಯನ್ನು ವಶಕ್ಕೆ ತೆಗೆದು ಕೊಂಡು ಜನ ಸಂಪರ್ಕ ಕಚೇರಿಯನ್ನಾಗಿ ಪರಿವರ್ತಿಸಿದ್ದಾರೆ.
ಕಳೆದ ಶನಿವಾರ ರಾತ್ರಿ ತಮ್ಮ ಬೆಂಬಲಿಗ ಸಚಿವರು, ಶಾಸಕರ ಜತೆಗೂಡಿ ಹಠಾತ್ತನೇ ಬಿಜೆಪಿ ಕಚೇರಿಗೆ ಧಾಳಿ ನಡೆಸಿದ ಯಡಿಯೂರಪ್ಪ ಪಕ್ಷದ ಅಧ್ಯಕ್ಷ ಈಶ್ವರಪ್ಪ ಇತರ ನಾಯಕರನ್ನು ದಂಗುಪಡಿಸಿದರು. ಅಲ್ಲದೆ ಇನ್ನುಮುಂದೆ ಪ್ರತಿನಿತ್ಯ ಕಚೇರಿಗೆ ಭೇಟಿ ನೀಡುತ್ತೇನೆ. ಒಂದು ಗಂಟೆಗಳ ಕಾಲ ಕಾರ್ಯಕರ್ತರ ಜತೆ ಪಕ್ಷದ ಕಚೇರಿಯಲ್ಲೇ ಸಮಾಲೋಚನೆ ನಡೆಸುತ್ತೇನೆ.
ಇದು ನನ್ನ ಕಚೇರಿ ಎಂದು ಸಾರಿದ್ದಾರೆ.ಅಲ್ಲದೆ ನನಗಾಗಿ ವಿಶೇಷ ಕೊಠಡಿಯನ್ನು ಮೀಸಲಿಡುವಂತೆ ಈಶ್ವರಪ್ಪ ಅವರಿಗೆ ಆದೇಶಿಸಿದ್ದಾರೆ. ಬಿಜೆಪಿ ಕಚೇರಿಯನ್ನೇ ತಮ್ಮ ವಶಕ್ಕೆ ತೆಗೆದುಕೊಳ್ಳಲು ಯಡಿಯೂರಪ್ಪ ಇಂತಹ ಪ್ರಯತ್ನ ಮಾಡಿದ್ದಾರೆ.ಸಾಧ್ಯವಾದರೆ ಈಶ್ವರಪ್ಪ ಬಣವನ್ನೇ ಅಲ್ಲಿಂದ ಹೊರಹಾಕುವ ಉದ್ದೇಶ ಅವರಿಗಿದೆ. ಮುಂದೆ ಪ್ರಾದೇಶಿಕ ಪಕ್ಷ ಕಟ್ಟಿದರೆ ಅಥವಾ ಬೇರೆ ಪಕ್ಷದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಈ ಕಚೇರಿಯನ್ನು ನಮ್ಮದು ಎಂದು ಸಾರುವ ಉದ್ದೇಶ ಯಡಿಯೂರಪ್ಪರದ್ದಾಗಿದೆ.
ಇದಕ್ಕಾಗಿ ಯಡಿಯೂರಪ್ಪ ಬಿಜೆಪಿ ಕಚೇರಿಗೆ ಧಾವಿಸಿದ್ದಾಗ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ೧೬ ಕೋಟಿ ರೂ.ಗಳನ್ನು ವೆಚ್ಚಮಾಡಿ ಮಲ್ಲೇಶ್ವರದಲ್ಲಿ ಬಿಜೆಪಿ ಭವನ ನಿರ್ಮಾಣವಾಗಿದೆ. ಅಲ್ಲಿಯವರೆಗೂ ಬಿಜೆಪಿಗೆ ಸ್ವಂತ ಕಟ್ಟಡವೇ ಇರಲಿಲ್ಲ.

ಕಟೀಲು: ನಂದಿನಿ ನದಿಯಿಂದ ವಿದ್ಯುತ್ ಉತ್ಪಾದನೆ

Posted by JAYAKIRANA Kirana on | 0 comments | Leave a comment...

ಜೂನ್ ತಿಂಗಳಿಂದ ಶುಭಾರಂಭ
ಮಂಗಳೂರು: ಆಸ್ತಿಕರ ನೆಲೆ ವೀಡು, ಪುರಾಣ ಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಇನ್ನು ಕೆಲವೇ ದಿನಗಳಲ್ಲಿ ಸ್ವಂತ ಬಳಕೆಗಾಗಿ ವಿದ್ಯುತ್ ಉತ್ಪಾದಿಸುವ ದೇಶದ ಮೊದಲನೇ ದೇವಸ್ಥಾನ ಎಂಬ ಹೆಗ್ಗಳಿ ಕೆಗೆ ಪಾತ್ರವಾಗಲಿದೆ. ಮಳೆಗಾಲದಲ್ಲಿ ದೇವಳದ ಸುತ್ತ ಮೈದುಂಬಿಕೊಂಡು ಹರಿಯುವ ನಂದಿನಿ ನದಿಯಲ್ಲಿ ಟರ್ಬೋ ತಂತ್ರಜ್ಞಾನ ಬಳಸಿ ಕಡಿಮೆ ವೆಚ್ಚದಲ್ಲಿ ಇಪ್ಪತ್ತೈದು ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಪೂರ್ಣಪ್ರಮಾಣದ ಸಿದ್ಧತೆ ನಡೆದಿದ್ದು, ಜೂನ್ ತಿಂಗಳಿನಿಂದ ಯೋಜನೆ ಆರಂಭವಾಗಲಿದೆ.
ಕಟೀಲು ದೇವಳದ ಆಡಳಿತ ಕ್ಕೊಳಪಟ್ಟ ನಾಲ್ಕು ವಿದ್ಯಾಸಂಸ್ಥೆಗಳಲ್ಲಿ ೨೫ ಕಿಲೋ ವ್ಯಾಟ್ ವಿದ್ಯುತ್ ಖರ್ಚಾ ಗುತ್ತದೆ. ವಸತಿಗೃಹ, ಅಡಿಟೋರಿಯಂ ಇತ್ಯಾದಿ ಕಟ್ಟಡಗಳ ನಿರ್ಮಾಣ ಕಾರ್ಯ ಸಂಪೂರ್ಣಗೊಂಡರೆ ಅಂದಾಜು ೧೦೦ ಕಿಲೋವ್ಯಾಟ್‌ನಷ್ಟು ವಿದ್ಯುತ್ ಕಟೀಲು ದೇವಸ್ಥಾನ ಹಾಗೂ ಸಹಸಂಸ್ಥೆಗಳಿಗೆ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ಹೀಗಾಗಿ ನಿತ್ಯ ಉಪಯೋಗಕ್ಕೆ ನಂದಿನಿ ನದಿಯಿಂದಲೇ ಆರು ತಿಂಗಳ ಕಾಲ ನಿರಂತರ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಆರು ಲಕ್ಷ ರೂ. ವೆಚ್ಚದಲ್ಲಿ ಟರ್ಬೋ ಯಂತ್ರವನ್ನು ನಂದಿನಿ ನದಿಯ ಆಣೆಕಟ್ಟಿನ ಮೇಲೆ ಅಳವಡಿಸಲಾಗಿದೆ. ಶೃಂಗೇರಿ ಜಯಪುರದ ಜಿ.ಕೆ.ರತ್ನಾಕರ್ ಅವರು ಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದು, ಇವರು ದೇಶದಾದ್ಯಂತ ೨೭೭ ಕಡೆಗಳಲ್ಲಿ ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಮೂಲಕ ರಾಷ್ಟ್ರಪ್ರಶಸ್ತಿ ಪುರಸ್ಕೃತರೂ ಆಗಿರುವುದು ವಿಶೇಷ.
ವಾರ್ಷಿಕ ಅಂದಾಜು ಹತ್ತು ಲಕ್ಷ ರೂಪಾಯಿಯನ್ನು ವಿದ್ಯುತ್‌ಗಾಗಿಯೇ ಕಟೀಲು ದೇಗುಲ ಭರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನಂದಿನಿ ನದಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎನ್ನುತ್ತಿದೆ ದೇವಳದ ಆಡಳಿತ. ನಂದಿನಿ ನದಿಯ ಆಣೆಕಟ್ಟೆಯಿಂದ ನೂರು ಮೀಟರ್ ದೂರದಲ್ಲಿ ಕುದ್ರು ಸಮೀಪ ಮತ್ತೊಂದು ಕಿಂಡಿ ಅಣೆಕಟ್ಟು ಕಟ್ಟಿ ಅಲ್ಲಿಂದ ನೀರನ್ನು ಪೈಪ್ ಮೂಲಕ ವೇಗವಾಗಿ ಹರಿಸುವ ಮೂಲಕ ವಿದ್ಯುತ್ ಶಕ್ತಿ ಉತ್ಪಾದನೆಯಾಗುವಂತೆ ಮಾಡಲಾಗಿದೆ. ಮುಂದೆ ಇದೇ ತಂತ್ರಜ್ಞಾನಕ್ಕೆ ನೀರು ಮೇಲೆತ್ತುವ ಯಂತ್ರ ಅಳವಡಿಸಿದರೆ ಭಕ್ತರಿಗೆ ಕಾಲು ತೊಳೆಯಲು ನೀರನ್ನು ಯಾವುದೇ ಖರ್ಚಿಲ್ಲದೆ ದಿನವಿಡೀ ನದಿಯಿಂದ ಮೇಲೆತ್ತುವ ಯೋಚನೆಯೂ ದೇವಳದ ಆಡಳಿತ ಮಂಡಳಿಯದ್ದು. ಈಗ ಬೇಸಿಗೆಯಾದ್ದರಿಂದ ನಂದಿನಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಜೂನ್ ಮೊದಲ ವಾರದಲ್ಲಿ ಮಳೆ ಸುರಿಯುವ ನಿರೀಕ್ಷೆಯಿದ್ದು, ನಂದಿನಿ ನದಿಯಿಂದ ವಿದ್ಯುತ್ ಉತ್ಪಾದನೆಯ ಕನಸು ನನಸಾಗಲಿದೆ.

ಪ್ರಿಯತಮೆಗೆ ಕೈಕೊಟ್ಟು ಇನ್ನೊಬ್ಬಳ ವರಿಸಿದ ಭೂಪ!

Posted by JAYAKIRANA Kirana on | 0 comments | Leave a comment...


ಗಂಡನ ಮನೆಯೆದುರು ಕ್ರೈಸ್ತ ಯುವತಿ ಧರಣಿ
ಮಂಗಳೂರು: ಕ್ರೈಸ್ತ ಸಮುದಾಯದ ಯುವತಿಯನ್ನು ಪ್ರೇಮಿಸಿ, ಪಾರ್ಕ್-ಬೀಚ್ ಸುತ್ತಾಡಿ ಕೊನೆಗೆ ಕದ್ರಿ ದೇವಸ್ಥಾನದಲ್ಲಿ ಕುತ್ತಿಗೆಗೆ ತಾಳಿ ಬಿಗಿದು ಮನದನ್ನೆಯಾಗಿ ಸ್ವೀಕರಿಸಿದ್ದೂ ಅಲ್ಲದೆ, ತನ್ನದೇ ಮನೆಯಲ್ಲಿರಿಸಿ ‘ಸಂಸಾರ ನಡೆಸಿದ ಭೂಪನೋರ್ವ ಮನೆಯವರ ಕುಮ್ಮಕ್ಕಿನಿಂದ ಆಕೆಯನ್ನು ನಡುನೀರಿನಲ್ಲಿ ಕೈಬಿಟ್ಟು ಇನ್ನೊಬ್ಬಳ ವರಿಸಿದ ಘಟನೆ ನಗರದ ಪಚ್ಚನಾಡಿ-ಸಂತೋಷ್‌ನಗರ ಎಂಬಲ್ಲಿ ನಡೆದಿದೆ. ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪತಿರಾಯ ತನಗೇ ಸಿಗಬೇಕು ಎಂದು ನ್ಯಾಯಾಲಯದ ಮೊರೆಹೋಗಿ ಜಯ ಸಾಧಿಸಿರುವ ಯುವತಿ ಗಂಡನ ಮನೆಯ ಮುಂದೆ ಅಹೋರಾತ್ರಿ ಧರಣಿ ಕುಳಿತಿದ್ದಾಳೆ.

ಲವ್‌ಸ್ಟೋರಿ ಹಿನ್ನೆಲೆ
ಪಚ್ಚನಾಡಿ ಸಮೀಪದ ಸಂತೋಷ್‌ನಗರ-ಆರ್.ಟಿ.ಒ. ಟೆಸ್ಟ್ ಯಾರ್ಡ್ ಸಮೀ ಪದ ನಿವಾಸಿ ಬಿಲ್ಲವ ಸಮುದಾಯಕ್ಕೆ ಸೇರಿರುವ ಜಯರಾಣಿ-ದೇಜಪ್ಪ ದಂಪತಿಯ ಪುತ್ರ ವಿನೀತ್(೨೫) ಎಂಬಾತ ನಾಲ್ಕು ವರ್ಷಗಳ ಹಿಂದೆ ತಿರುವೈಲ್ ನಿವಾಸಿ ಕ್ರೈಸ್ತ ಯುವತಿ ಗ್ಲೆನಿಟಾ ಫ್ಲೇವಿಯಾ ಸಿಕ್ವೇರಾ(೨೨)ಳನ್ನು ಪ್ರೀತಿಸಲು ಆರಂಭಿಸಿದ್ದ. ಕಣ್ಸನ್ನೆ ಯಲ್ಲೇ ಆರಂಭವಾಗಿದ್ದ ಇವರ ಪ್ರೀತಿ ಪಾರ್ಕ್-ಬೀಚ್ ಸುತ್ತಾಟದವರೆಗೆ ಮುಂದುವರಿದಿತ್ತು. ‘ತಾನೆಂದೂ ನಿನಗೆ ಕೈ ಕೊಡುವುದಿಲ್ಲ, ಮದುವೆಯಾಗು ತ್ತೇನೆ ಎಂಬುದಾಗಿ ನಂಬಿಸಿದ್ದ ವಿನೀತ್ ಆಕೆಯಿಂದ ಸರ್ವಸ್ವವನ್ನೂ ಪಡೆದು ಕಳೆದ ೨೦೦೮ನೇ ಇಸವಿಯ ಡಿ.೩೦ ರಂದು ಕದ್ರಿ ಮಂಜುನಾಥನ ಸನ್ನಿಧಿ ಯಲ್ಲಿ ತಾಳಿ ಬಿಗಿದು ಮದುವೆಯಾಗಿದ್ದ. ಗ್ಲೆನಿಟಾ ಫ್ಲೇವಿಯಾ ವಿದ್ಯಾ ಆಗಿ ಹಿಂದೂ ಧರ್ಮಕ್ಕೆ ಮತಾಂತರಗೊಂ ಡಿದ್ದರು. ಈ ಸಂದರ್ಭ ವಿದ್ಯಾಳಿಗೆ ೧೮ ವರ್ಷ ಪ್ರಾರಂಭವಾಗಿತ್ತಷ್ಟೇ. ನಂತರ ವಿದ್ಯಾಳನ್ನು ತನ್ನ ಮನೆಗೆ ಕರೆದೊಯ್ದಿದ್ದ ವಿನೀತ್ ಎರಡು ವರ್ಷಗಳ ಕಾಲ ಸಂಸಾರ ನಡೆಸಿದ್ದ. ಮತ್ತೆರಡು ವರ್ಷ ಕಾರಣಾಂತ ರದಿಂದ ಬಾಡಿಗೆ ಮನೆ ಮಾಡಿಕೊಂಡು ವಿದ್ಯಾ ಜೊತೆ ವಾಸವಾಗಿದ್ದ. ಈ ನಡುವೆ ವಿನೀತ್ ತಾಯಿ ಹಾಗೂ ಮನೆಮಂದಿ ಆಕೆಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದುದೂ ಅಲ್ಲದೆ ಮನೆಯಿಂದ ವರದಕ್ಷಿಣೆ ಹಣ ತರು ವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಇಷ್ಟೇ ಅಲ್ಲದೆ ಪದೇ ಪದೇ ಧರ್ಮ ನಿಂದನೆ ಮಾಡುತ್ತಿದ್ದು, ಇದನ್ನು ವಿನೀತ್‌ಗೆ ತಿಳಿಸಿದ್ದ ವೇಳೆ ಬೇರೆ ಬಾಡಿಗೆ ಮನೆ ಮಾಡುತ್ತೇನೆ ಎಂದು ಬಳೆ, ಕಿವಿಯ ಓಲೆ, ಸರ ತೆಗೆದು ಕೊಂಡು ಹೋಗಿ ವಂಚನೆ ಮಾಡಿದ್ದ ಎನ್ನಲಾಗಿದೆ.
ಮದುವೆ ಮಾಡಲು ಪ್ಲಾನ್ ರೂಪಿಸಿದ್ದು, ಅದರಂತೆ ವಿದ್ಯಾರನ್ನು ಕಳೆದ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ತವರಿಗೆ ಕಳುಹಿಸಿದ್ದ.
ಇದೇ ವೇಳೆ ವಿನೀತ್ ಸ್ಥಳೀಯ ಆಚಾರ್ಯ ಮನೆತನದ ಹುಡುಗಿ ಅಶ್ವಿನಿಯ ಜೊತೆ ನಗರದ ಆರ್ಯ ಸಮಾಜದಲ್ಲಿ ಎರಡನೇ ಮದುವೆಯಾಗಿದ್ದಾನೆ. ಈ ವಿಷಯ ಬಹಿರಂಗವಾಗದಂತೆ ಮುಚ್ಚುಮರೆ ಮಾಡಲಾಗಿದ್ದು, ಮೂರು ದಿನಗಳ ನಂತರ ವಿದ್ಯಾ ಗಮನಕ್ಕೆ ಬಂದಿತ್ತು. ವಿದ್ಯಾ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ವಿನೀತ್‌ನನ್ನು ಬಂಧಿಸಿ ನ್ಯಾಯಾಂಗ ಬಂಧಕ್ಕೆ ಒಳಪಡಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ತನ್ನ ಪ್ರಭಾವ ಬಳಸಿ ಜೈಲಿನಿಂದ ಹೊರಬಂದ ವಿನೀತ್ ತನ್ನ ಗೆಳೆಯರ ಮೂಲಕ ವಿದ್ಯಾಳ ಮೊಬೈಲ್ ಮೂಲಕ ನಿರಂತರ ಕರೆ ಮಾಡಿ ಪ್ರಕರಣ ಹಿಂದಕ್ಕೆ ಪಡೆಯುವಂತೆ ಬೆದರಿಕೆ ಒಡ್ಡುತ್ತಿದ್ದನಲ್ಲದೆ, ಆಸಿಡ್ ಎರಚುವುದಾಗಿ ಹೇಳುತ್ತಿದ್ದ ಎನ್ನಲಾಗಿದೆ. ಈ ಬಗ್ಗೆಯೂ ಕಂಕನಾಡಿ ಠಾಣೆಗೆ ದೂರು ನೀಡಲಾಗಿತ್ತು.
ಇಲ್ಲಿ ವಿದ್ಯಾ-ವಿನೀತ್‌ನನ್ನು ಪ್ರೀತಿಸಿ ಮದುವೆಯಾಗಿರುವುದಕ್ಕೆ ಮದುವೆಯ ಸಂದರ್ಭದ ಫೊಟೋ ಹಾಗೂ ಇನ್ನಿತರ ಸಾಕ್ಷಿಯ ಹೊರತು ಬೇರಾವುದೇ ಅಧಿಕೃತ ದಾಖಲೆಗಳು ಇಲ್ಲದೇ ಇರುವುದು ಪ್ರಾರಂಭದಲ್ಲಿ ಪ್ರಕರಣದಲ್ಲಿ ಹಿನ್ನಡೆ ಅನುಭವಿಸಲು ಕಾರಣವಾಗಿತ್ತು. ತನಗೆ ನ್ಯಾಯ ಒದಗಿಸುವಂತೆ ನಗರದ ಹಿರಿಯ ವಕೀಲ ಅರುಣ್ ಬಂಗೇರಾ ಮೂಲಕ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಮೂರನೇ ಜೆಎಂಎಫ್‌ಸಿ ನ್ಯಾಯಾಲಯ ಕೆಲವು ದಿನಗಳ ಹಿಂದೆ ಆದೇಶ ಜಾರಿಗೊಳಿಸಿದ್ದು, ಅದರಂತೆ ‘ವಿದ್ಯಾ ವಿನೀತ್ ಮನೆಯಲ್ಲಿಯೇ ಇರಬೇಕು ಹಾಗೂ ಆಕೆಗೆ ಪೊಲೀಸ್ ಇಲಾಖೆ ಸಂಪೂರ್ಣ ರಕ್ಷಣೆ ನೀಡಬೇಕು ಎಂದು ಹೇಳಿದೆ.
ವಿದ್ಯಾ ನಿನ್ನೆ ಮುಂಜಾನೆ ನ್ಯಾಯಾಲಯದ ಆದೇಶದನ್ವಯ ವಿನೀತ್‌ನ ಪಚ್ಚನಾಡಿಯ ಮನೆಗೆ ಸೋದರಿಯ ಜೊತೆ ಬಂದಿದ್ದು, ವಿನೀತ್ ಹಾಗೂ ಮನೆಮಂದಿ ಅವರನ್ನು ತಡೆದು ಒಳಕ್ಕೆ ಪ್ರವೇಶಿಸಲು ಬಿಡದೆ ನಿರ್ಬಂಧ ಹೇರಿದರೆಂದು ವಿದ್ಯಾ ಆರೋಪಿಸಿದ್ದಾರೆ. ಇದರಿಂದ ಕಂಗಾಲಾದ ವಿದ್ಯಾ ತನ್ನ ಸೋದರಿಯ ಜೊತೆ ಗಂಡನ ಮನೆಯ ಮುಂದೆ ಧರಣಿ ಕುಳಿತಿದ್ದಾರೆ. ಸ್ಥಳೀಯವಾಗಿ ಸಾಕಷ್ಟು ಕುತೂಹಲ ಕೆರಳಿಸಿರುವ ಪ್ರಕರಣ ಮುಂದೇನು ತಿರುವು ಪಡೆಯುತ್ತದೋ ಕಾದು ನೋಡಬೇಕಿದೆ.

‘ಆತನಿಗೆ ಶಿಕ್ಷೆಯಾಗಲೇಬೇಕು!’
ವಿನೀತ್ ಪೂಜಾರಿಯನ್ನು ಪ್ರೀತಿಸಿ, ಮದುವೆಯಾಗಿ ಇದೀಗ ವಂಚನೆಗೆ ಒಳಗಾಗಿರುವ ಕ್ರೈಸ್ತ ಯುವತಿ ಗ್ಲೆನಿಟಾ ಫ್ಲೇವಿಯಾ ಸಿಕ್ವೇರಾ ಯಾನೆ ವಿದ್ಯಾ ನಿನ್ನೆ ಮುಂಜಾನೆಯಿಂದ ಆತನ ಮನೆಯ ಮುಂದೆ ಧರಣಿ ನಡೆಸುತ್ತಿದ್ದು, ತನ್ನ ಕುಟುಂಬ ವರ್ಗ ಹಾಗೂ ಸ್ನೇಹಿತೆಯರ ಬೆಂಬಲದಿಂದ ಮನೆಯ ಗೇಟಿನ ಎದುರೇ ರಾತ್ರಿ ಕಳೆದಿದ್ದಾರೆ. ಈಕೆಯ ಜೊತೆ ವಿನೀತ್‌ನ ಅಣ್ಣ ಹರ್ಷಿತ್ ಪತ್ನಿಯೂ ಇದ್ದು, ತನ್ನ ಬೆಂಬಲ ಘೋಷಿಸಿರುವುದು ವಿಶೇಷ ವಾಗಿದೆ. ಹರ್ಷಿತ್ ಕಳೆದ ನವೆಂಬರ್‌ನಲ್ಲಿ ಮದುವೆಯಾಗಿದ್ದು, ಈ ಸಂದರ್ಭ ಎರಡೂವರೆ ಲಕ್ಷ ವರದಕ್ಷಿಣೆ, ಹತ್ತು ಪವನ್ ಚಿನ್ನವನ್ನು ಪಡೆದಿದ್ದರೂ ವರದಕ್ಷಿಣೆ ತರುವಂತೆ ಕಿರುಕುಳ ಕೊಟ್ಟು ಮನೆಯಿಂದ ಹೊರದಬ್ಬಿರುವುದು ತಡವಾಗಿ ಬೆಂಕಿಗೆ ಬಂದಿದೆ. ಈಕೆ ಇದೀಗ ತನ್ನ ಗಂಡನ ತಮ್ಮ ವಿನೀತ್‌ನಿಂದ ವಂಚನೆಗೊಳಗಾದ ವಿದ್ಯಾ ಜೊತೆ ಧರಣಿ ಕುಳಿತಿದ್ದಾರೆ. ಇಂದು ಮುಂಜಾನೆ ವಿದ್ಯಾರನ್ನು ಪತ್ರಿಕೆ ಮಾತಾಡಿಸಿದಾಗ... ‘ನನ್ನನ್ನು ಪ್ರೀತಿಸುವುದಾಗಿ ನಂಬಿಸಿ ನಗ-ನಗದು ದೋಚಿದ್ದೂ ಅಲ್ಲದೆ ನನ್ನಿಂದ ಸರ್ವಸ್ವವನ್ನೂ ಪಡೆದು ಇದೀಗ ಬೇರೆ ಹುಡುಗಿಯನ್ನು ಮದುವೆಯಾಗಿರುವ ವಿನೀತ್‌ಗೆ ಶಿಕ್ಷೆಯಾಗಲೇಬೇಕು. ಆತ ನನ್ನ ಬಾಳಿನ ಜೊತೆ ಆಟವಾಡಿದಂತೆ ಬೇರೆ ಯಾವುದೇ ಹುಡುಗಿಯ ಬಾಳಿನಲ್ಲಿ ಆಟವಾಡದಿರಲಿ. ಪೊಲೀಸರು ಇಂಥ ಕಾಮುಕರಿಗೆ ತಕ್ಕ ಶಾಸ್ತಿ ಮಾಡಿದರೆ ಮಾತ್ರ ಹೆಣ್ಮಕ್ಕಳು ನೆಮ್ಮದಿಯಿಂದ ಇರುವಂತಾದೀತು’ ಎನ್ನುವಾಗ ದು:ಖ ಒತ್ತರಿಸಿ ಬರುತ್ತಿತ್ತು. ಈಗಾಗಲೇ ದೂರಿನ ಯಥಾಪ್ರತಿಯನ್ನು ಗೃಹ ಮಂತ್ರಿ, ರಾಜ್ಯ ಮಹಿಳಾ ಆಯೋಗ, ಪೊಲೀಸ್ ಆಯುಕ್ತರಿಗೆ ಸಲ್ಲಿಸಿರುವ ವಿದ್ಯಾಗೆ ನ್ಯಾಯ ಒದಗಿಸುವ ಕೆಲಸ ಮಾನ್ಯ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರದ್ದಾಗಿದೆ. ವಿನೀತ್‌ಗೆ ಒಂದು ಮದುವೆಯಾಗಿದ್ದು, ಹೆಂಡತಿ ಬದುಕಿದ್ದಾಗಲೇ ಇನ್ನೊಂದು ಮದುವೆ ಮಾಡಿಕೊಟ್ಟಿರುವ ‘ಆರ್ಯಸಮಾಜ’ ಎನ್ನುವ ‘ಘನಂದಾರಿ’ ಸಂಸ್ಥೆಯ ಸಾಮಾಜಿಕ ಕಳಕಳಿಯೂ ಈ ಸಂದರ್ಭದಲ್ಲಿ ಪ್ರಶ್ನಾರ್ಥಕವಾಗುತ್ತದೆ. ‘ಹಿಂದೂ ನಾವೆಲ್ಲ ಒಂದು ಎನ್ನುವ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಇಂಥ ಗೋಮುಖ ವ್ಯಾಘ್ರಗಳ ಜೊತೆ ಕೈಜೋಡಿಸಿ, ವಿನೀತ್ ಎಸಗಿರುವ ಪಾಪ ಕೃತ್ಯದಲ್ಲಿ ಪಾಲು ಪಡೆಯುವ ಬದಲು ಆಗಬಾರದ ವಯಸ್ಸಲ್ಲಿ ಎರಡೆರಡು ಮದುವೆಯಾಗಿರುವ ಈತ ಇನ್ನಷ್ಟು ಅಮಾಯಕ ಹೆಣ್ಮಕ್ಕಳ ಬಾಳನ್ನು ಹೊಸಕಿಹಾಕುವ ಮುನ್ನ ಎಚ್ಚೆತ್ತುಕೊಂಡು ಸರಿದಾರಿಗೆ ತರುವ ಪ್ರಯತ್ನ ಮಾಡಲಿ, ನೊಂದ ಹೆಣ್ಣಿಗೆ ನ್ಯಾಯ ದೊರಕಿಸಲಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ ಮತ್ತು ಒತ್ತಾಯವೂ ಆಗಿದೆ.

ಹಳೆಯಂಗಡಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಅಧ್ಯಕ್ಷ ಕಾಂಗ್ರೆಸ್‌ಗೆ?

Posted by JAYAKIRANA Kirana on | 0 comments | Leave a comment...

ಮುಲ್ಕಿ: ಹಳೆಯಂಗಡಿ ಬಿಜೆಪಿ ಬೆಂಬಲಿತ ಗ್ರಾ.ಪಂನ ಅಧ್ಯಕ್ಷ ಮಹಾ ಬಲ ಸಾಲ್ಯಾನ್ ತನ್ನ ಸ್ಥಾನ ಉಳಿಸಿ ಕೊಳ್ಳಲು ಕಾಂಗ್ರೆಸ್‌ನ ಬಾಗಿಲ ಬಳಿ ನಿಂತಿದ್ದಾರೆ.
ಹಳೆಯಂಗಡಿ ಗ್ರಾ.ಪಂ.ನಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಅಧಿಕಾರ ಕ್ಕೇರಿತ್ತು. ಅಧ್ಯಕ್ಷರಾಗಿ ಮಹಾಬಲ ಸಾಲ್ಯಾನ್‌ರನ್ನು ಸ್ಥಳೀಯ ಪಕ್ಷದ ಮುಖಂಡರು ಆರಿಸಿ ಪಟ್ಟಕ್ಕೇರಿಸಿದ್ದರು. ಆದರೆ ಹಗರಣಗಳ ಸಾಲು ಸಾಲ್ಯಾನ್‌ಗೆ ಅಂಟಲು ಆರಂ ಭವಾದಾಗ ತಾ.ಪಂ ಸದಸ್ಯರೋರ್ವರು ಪಕ್ಷದ ಮುಖಂಡ ನೊಂದಿಗೆ ಸೇರಿ ಬುದ್ಧಿಮಾತು ಹೇಳಿದ್ದರು. ಅದನ್ನು ಗಣನೆಗೆ ತೆಗೆದುಕೊಳ್ಳದ ಸಾಲ್ಯಾನ್ ಮತ್ತೆ ಮನೆ ನಂಬ್ರ ಹಾಗೂ ಸಸಿ ಹಿತ್ಲುವಿನಲ್ಲಿ ಬೆಳೆದು ನಿಂತ ಅಕ್ರಮ ರೆಸಾರ್ಟ್‌ಗಳ ಮಾಲೀ ಕರಿಂದಲೂ ಕಪ್ಪ ಪಡೆದುಕೊಂಡಿರುವ ಬಗ್ಗೆ ಆರೋ ಪಗಳು ಕೇಳಿಬಂದಿದೆ.
ಇದು ಬಹಿರಂಗಗೊಳ್ಳುತ್ತಿದ್ದಂತೆ ಇಡೀ ಪಂಚಾಯತ್ ಅಧ್ಯಕ್ಷರನ್ನು ತಿರ ಸ್ಕರಿಸಿತ್ತು. ಅದರಿಂದ ಹೆದರಿ ಒಮ್ಮೆಗೆ ರಾಜೀನಾಮೆ ನೀಡುವುದಾಗಿ ಹೇಳಿ ದರೂ ಮತ್ತೆ ರಾಗ ಬದಲಿಸಿದ ಸಾಲ್ಯಾನ್ ಬಿಜೆಪಿ ಜಿಲ್ಲಾಧ್ಯಕ್ಷರು ಹೇಳಿದಲ್ಲಿ ಮಾತ್ರ ರಾಜೀನಾಮೆ ನೀಡುವುದಾಗಿ ಪಟ್ಟು ಹಿಡಿದಿದ್ದರು. ಈ ನಡುವೆ ಜಿಲ್ಲಾಧ್ಯಕ್ಷರಿಗೂ ಹಗರಣಗಳ ಬಗ್ಗೆ ಮಾಹಿತಿ ತಿಳಿದಿರುವುದನ್ನು ಅರಿತು ಸಸಿಹಿತ್ಲು ಮೂಲದ ಇಬ್ಬರು ಕಾಂಗ್ರೆಸ್ ಮುಖಂಡರೊಂದಿಗೆ ಕೈಜೋಡಿಸಿ ಮಾಜಿ ಅಧ್ಯಕ್ಷರೊಂದಿಗೆ ಸಾಲ್ಯಾನ್ ಮಾತನಾಡಲು ಮುಂದಾಗಿದ್ದಾರೆಂದು ತಿಳಿದುಬಂದಿದೆ. ಆದರೆ ಹಳೆಯಂಗಡಿ ಪಂ. ಸದಸ್ಯ ಹಾಗೂ ಮಾಜಿ ಅಧ್ಯಕ್ಷ ವಸಂತ ಬೆರ್ನಾರ್ಡ್, ಸಾಲ್ಯಾನ್‌ರನ್ನು ವಿರೋಧಿಸಿದ ಹಿನ್ನೆಲೆಯಲ್ಲಿ, ಮೂಡುಬಿದ್ರೆ ಪುರಸಭೆ ಅಧ್ಯಕ್ಷ ರತ್ನಾಕರ್ ದೇವಾಡಿಗ ಮೂಲಕ ಶಾಸಕರನ್ನು ಭೇಟಿ ಮಾಡಿ ಕಾಂಗ್ರೆಸ್‌ಗೆ ಸೇರುವುದಾಗಿ ಹೇಳಿರುವುದಲ್ಲದೆ ಮುಂದಿನ ಆರು ತಿಂಗಳು ತಾನೇ ಅಧ್ಯಕ್ಷ ನಾಗಿರುತ್ತೇನೆ ಎಂಬ ಷರತ್ತುಗಳನ್ನಿಟ್ಟಿದ್ದರು. ಶಾಸಕರು ಹಳೆಯಂಗಡಿ ಕಾಂಗ್ರೆಸ್ ಬೆಂಬಲಿತ ಸದಸ್ಯರಲ್ಲಿ ವಿಷಯ ಪ್ರಸ್ತಾಪಿಸಿದಾಗ ಸಾಲ್ಯಾನ್ ಕಾಂಗ್ರೆಸ್ ಸೇರಿ ದ್ದಲ್ಲಿ ತಾವು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.
ಇದರಿಂದ ಬಿಜೆಪಿಯಿಂದ ಕಾಲು ಹೊರಹಾಕಿರುವ ಸಾಲ್ಯಾನ್ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆಂದು ತಿಳಿದುಬಂದಿದೆ.

ಸ್ಕಾರ್ಪಿಯೋ ಮರಕ್ಕೆ ಢಿಕ್ಕಿ: ಓರ್ವ ಸಾವು

Posted by JAYAKIRANA Kirana on | 0 comments | Leave a comment...

ಮೂಡುಬಿದಿರೆ: ಶನಿವಾರ ರಾತ್ರಿ ಒಂದು ಗಂಟೆಯ ವೇಳೆ ಕಲ್ಲಮುಂ ಡ್ಕೂರು ಬಾನಂಗಡಿ ಬಳಿ ಮೂಡಬಿ ದಿರೆಯ ಇಂಜಿನಿಯರ್ ಓರ್ವರ ಸ್ಕಾರ್ಪಿಯೋ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮೂಲ್ಕಿ ಕಾರ್ನಾಡಿನ ಫಾರೂಕ್ (೩೪) ಎಂಬವರೇ ಈ ಅಪಘಾತದಲ್ಲಿ ಮೃತಪಟ್ಟವರು.
ಮೂಡಬಿದಿರೆ ದೇವಿ ಪ್ರಸಾದ್ ಎಸೋಸಿಯೇಟ್ಸ್‌ನ ಸಿವಿಲ್ ಇಂಜಿನಿ ಯರ್ ದೇವಿ ಪ್ರಸಾದ್ ಶೆಟ್ಟಿಯ ವರೊಂದಿಗೆ ಫಾರೂಕ್ ಅವರು ಶನಿವಾರ ರಾತ್ರಿ ಹೊರಟಿದ್ದರು. ಕೆಲಸ ಮುಗಿಸಿ ಅವರಿಬ್ಬರೂ ಒಟ್ಟಿಗೆ ಹೋಗು ತ್ತಿದ್ದ ವೇಳೆ ಬಾನಂಗಡಿ ಬಳಿ ರಸ್ತೆ ಬದಿಯ ಮರಕ್ಕೆ ಅವರ ಕಾರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಸಂದ ರ್ಭದಲ್ಲಿ ಸ್ಕ್ವಾರ್ಪಿಯೋ ಎಡಬದಿ ಯಲ್ಲಿ ಕುಳಿತಿದ್ದ ಫಾರೂಕ್ ಸ್ಥಳದಲ್ಲೇ ಮೃತಪಟ್ಟರೆ, ಸ್ಕ್ವಾರ್ಪಿಯೋ ಚಲಾ ಯಿಸುತ್ತಿದ್ದ ದೇವಿಪ್ರಸಾದ್ ಶೆಟ್ಟಿ ಗಾಯ ಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಕ್ವಾರ್ಪಿಯೋ ಸಂಪೂರ್ಣ ನಜ್ಜುಗುಜ್ಜಾಗಿದೆ.

ಪ್ರಾಮಾಣಿಕತೆ ಮೆರೆದ ಅಂಬ್ಯುಲೆನ್ಸ್ ಸಿಬ್ಬಂದಿ

ಅಪಘಾತ ನಡೆದ ಸಂದರ್ಭದಲ್ಲಿ ಮೂಡಬಿದಿರೆಯ ೧೦೮ ಅಂಬುಲೆನ್ಸ್‌ನ ವರು ಸ್ಥಳಕ್ಕೆ ಧಾವಿಸಿದ್ದರು. ಆ ಸಂದ ರ್ಭದಲ್ಲಿ ಅಪಘಾತಕ್ಕೊಳಗಾದ ವಾಹ ನದಲ್ಲಿ ೧,೩೫,೦೦೦ ನಗದು, ಒಂದು ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಇನ್ನಿ ತರ ಅಗತ್ಯ ದಾಖಲೆಗಳು ದೊರಕಿದ್ದವು. ಅದನ್ನು ದೇವಿಪ್ರಸಾದ್ ಶೆಟ್ಟಿ ಅವರ ಸಹೋದರ ದಾಸ್ ಪ್ರಕಾಶ್ ಶೆಟ್ಟಿ ಅವರಿಗೆ ಅಂಬುಲೆನ್ಸ್ ತುರ್ತು ವೈದ್ಯಕೀಯ ತಂತ್ರಜ್ಞ ಅಮಿತ್ ಕುಮಾರ್ ಮತ್ತು ಚಾಲಕ ರಾಜೇಶ್ ಅವರು ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಉಲಮಾಗಳ ತೇಜೋವಧೆಗೆ ಪುರಾವೆಗಳಿವೆಯೇ?: ಝೈನಿ

Posted by JAYAKIRANA Kirana on | 0 comments | Leave a comment...

ವಿಟ್ಲ: ಕೆಲ ವ್ಯಕ್ತಿಗಳು ವೇದಿಕೆಯಲ್ಲಿ ಉಲಾಮಾಗಳನ್ನು ತೇಜೋವಧೆ ಮಾಡುತ್ತಿದ್ದಾರೆ, ಆದರೆ ಎಸ್‌ಎಸ್‌ಎಫ್ ಮುಖಂಡರು ಎಂದು ಉಲಾಮಾ ಗಳನ್ನು ನಿಂದಿಸಿಲ್ಲ, ಈ ಬಗ್ಗೆ ಯಾರ ಲ್ಲಾದರೂ ಪುರಾವೆಗಳಿದ್ದಲ್ಲಿ ತೋರಿ ಸಲಿ ಎಂದು ಎಸ್‌ಎಸ್‌ಎಫ್ ದಕ್ಷಿಣ ಭಾರತ ಅಧ್ಯಕ್ಷ ಅಬ್ದುರ್ರಶೀದ್ ಸಖಾಫಿ ಝೈನಿ ಅಲ್ ಕಾಮಿಲ್ ಸವಾಲು ಹಾಕಿದರು.
ಅವರು ನಿನ್ನೆ ಮಂಗಳಪದವಿನಲ್ಲಿ ಜರಗಿದ ಎಸ್‌ಎಸ್‌ಎಫ್ ಮಂಗಳಪದವು ಶಾಖೆ ಇದರ೨೩ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋಮುವಾದ, ಭಯೋತ್ಪಾಧನೆ ಮುಂತಾದ ದೇಶದ್ರೋಹಿ ಚಟುವಟಿಕೆಯಲ್ಲಿ ವಿದ್ಯಾವಂತ ಯುವಶಕ್ತಿಯ ಕೈವಾಡವಿದೆ ಎಂದು ಕೇಂದ್ರ ಗುಪ್ತಚರ ಇಲಾಖೆಯಿಂದ ತನಿಖೆ ಸಂದರ್ಭ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಯುವಶಕ್ತಿಗೆ ಭೌತಿಕ ವಿದ್ಯಾಭ್ಯಾಸವನ್ನು ನೀಡಿ ಅವರಲ್ಲಿ ದೇಶಭಿಮಾನವನ್ನು ಹುಟ್ಟಿಸುವ ಕಾರ್ಯವನ್ನು ಇಂದಿಗೂ ಎಸ್‌ಎಸ್‌ಎಫ್ ಸಂಘಟನೆ ಮಾಡುತ್ತಿದೆ ಎಂದು ಅವರು ತಿಳಿಸಿದರು. ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರು ಭಾಷೆ, ಜಾತಿ ನೆಪದಲ್ಲಿ ಹೊಡೆದಾಡಿಕೊಳ್ಳುವುದರ ಬದಲು ಸೌಹಾರ್ದಯುತವಾಗಿ ಬಾಳಬೇಕೆಂದು ಕರೆ ನೀಡಿರುವುದನ್ನು ಕೇಂದ್ರ ಹಾಗೂ ರಾಜ್ಯ ಮಂತ್ರಿಗಳು ಸ್ವಾಗತಿಸಿದ್ದು, ಇಂತಹ ಗೌರವ ಬೇರೆ ಯಾವ ಸಂಘಟನೆಯ ಮುಖಂಡರಿಗೂ ಸಿಗಲಿಲ್ಲ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸಯ್ಯಿದ್ ಹಬೀಬುಲ್ಲಾ ತಂಙಳ್ ಪೆರುವಾಯಿ, ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‌ಕಟ್ಟೆ ಹಝ್ರತ್, ಅಲ್‌ಹಾಜ್ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು ಮುಂತಾದವರು ಇದ್ದರು.

ಬಡಕುಟುಂಬಕ್ಕೆ ಅಂಗವಿಕಲತೆಯ ಶಾಪ

Posted by JAYAKIRANA Kirana on | 0 comments | Leave a comment...


ಕರುಣೆಯ ಕೈಗಳ ನೆರವು ಬೇಕಾಗಿದೆ!
ಮಂಗಳೂರು: ಬಜ್ಪೆ ಸಮೀಪದ ಗಂಜಿಮಠ-ಗಣೇಶನಗರ ಎಂಬಲ್ಲಿನ ಬಡಕುಟುಂಬವೊಂದರಲ್ಲಿ ಜನಿಸಿದ ಅಕ್ಕ-ತಂಗಿ ಇಬ್ಬರೂ ಬುದ್ಧಿ ಮಾಂದ್ಯತೆಯಿಂದ ಅಂಗವಿಕಲರಾಗಿ ಕತ್ತಲ ಕೋಣೆಯೊಳಗೆ ನರಕಸದೃಶ ಜೀವನ ಸಾಗಿಸುತ್ತಿದ್ದಾರೆ. ಪರಿಶಿಷ್ಟ ವರ್ಗದ ಕುಡುಬಿ ಜನಾಂಗದಲ್ಲಿ ಜನಿಸಿರುವ ಇವರ ಸಹಾಯಕ್ಕೆ ಕರುಣೆಯ ಕೈಗಳ ನೆರವು ಬೇಕಾಗಿದೆ.
ಬಡಗ ಉಳೆಪಾಡಿಯ ಗಣೇಶನಗರ ನಿವಾಸಿ ರುಕ್ಮಯ ಗೌಡ ಮತ್ತು ರಮಣಿ ದಂಪತಿಯ ನಾಲ್ವರು ಮಕ್ಕಳಲ್ಲಿ ಚಂದ್ರಾವತಿ(೨೭) ಮತ್ತು ಪದ್ಮಾವತಿ(೨೩) ವಿಧಿಯ ಕ್ರೂರ ದೃಷ್ಟಿಗೆ ಬಲಿಯಾದವರು. ರುಕ್ಮಯ ಗೌಡ ಸಿಕ್ಕಿದಲ್ಲಿ ಕೂಲಿ ಕೆಲಸ ಮಾಡಿದರೆ, ತಾಯಿ ರಮಣಿ ಬೀಡಿ ಕಟ್ಟುತ್ತಾರೆ. ಇವರ ಅಲ್ಪ ಆದಾಯವೇ ಸಂಸಾರಕ್ಕೆ ಆಧಾರ. ಚಂದ್ರಾವತಿ ಮತ್ತು ಪದ್ಮಾವತಿ ಹುಟ್ಟುವಾಗಲೇ ಅಂಗವೈಕಲ್ಯತೆಯನ್ನು ಹೊಂದಿರಲಿಲ್ಲ.
 ಚಿಕ್ಕವರಿದ್ದಾಗ ನಗರದ ಸರಕಾರಿ ಆಸ್ಪತ್ರೆಗೆ ಮಕ್ಕಳನ್ನು ಚುಚ್ಚುಮದ್ದು ಕೊಡಿಸಲು ಕೊಂಡೊಯ್ದ ವೇಳೆ ಅಲ್ಲಿದ್ದ ದಾದಿಯರು ತಿಳಿಯದೆ ಮಾಡಿದ ಎಡವಟ್ಟಿನಿಂದ ಸಮಸ್ಯೆ ಸೃಷ್ಟಿಯಾಗಿದೆ. ಪ್ರಾರಂಭದಲ್ಲಿ ಇಬ್ಬರ ಕೈ-ಕಾಲಿನಲ್ಲಿ ಗುಳ್ಳೆಗಳು ಮೂಡತೊಡಗಿದ್ದು ಕೈ, ಕಾಲು ಬಲ ಕಳೆದುಕೊಂಡಿತು ಎಂದು ಮುದಿ ಜೀವ ಕಣ್ಣೀರಿಡುತ್ತಿದೆ.
ವಯಸ್ಸು ಬಲಿತರೂ ಬುದ್ಧಿ ಬೆಳೆಯದ ಚಂದ್ರಾವತಿ, ಪದ್ಮಾವತಿಗೆ ಅಮ್ಮ ರಮಣಿ ಎಂದರೆ ಪಂಚಪ್ರಾಣ. ಏನು ಬೇಕಾದರೂ ತಾಯಿಯನ್ನೇ ಕೇಳುತ್ತಾರೆ. ಹಸಿವಾಯಿತೆಂದರೆ ಖಾಲಿ ಹೊಟ್ಟೆ ತೋರಿಸುತ್ತಾರೆ. ಇವಿಷ್ಟೇ ಹೊರತು ಬೇರೇನೂ ಗೊತ್ತಿಲ್ಲ. ಬೆಳಗ್ಗಿನಿಂದ ರಾತ್ರಿಯವರೆಗೆ ಕೈ, ಕಾಲು ಎಳೆದುಕೊಂಡೇ ಮನೆಯೊಳಗೆ ಓಡಾಡುವ ಇಬ್ಬರಿಗೂ ಮನೆಯೇ ಎಲ್ಲಾ.
ಯಾರೋ ಮಾಡಿದ ತಪ್ಪಿಗೆ ಇನ್ನಾರೋ ಶಿಕ್ಷೆ ಅನುಭವಿಸುವಂತೆ ಚಂದ್ರಾವತಿ, ಪದ್ಮಾವತಿ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದಾರೆ. ಕರುಣೆಯ ಕೈಗಳು ಸಹಾಯಹಸ್ತ ಚಾಚಿದರೆ ಇವರು ದಿನಕ್ಕೆ ಮೂರು ಹೊತ್ತು ಊಟವನ್ನಾದರೂ ಮಾಡಬಹುದು. ಮಕ್ಕಳ ದುರ್ವಿಧಿಗೆ ಮರುಗುತ್ತಿರುವ ರುಕ್ಮಯ-ರಮಣಿ ದಂಪತಿಗಳು ಅಷ್ಟರಲ್ಲಾದರೂ ನೆಮ್ಮದಿ ಕಾಣಬಹುದು.
ಪರಿಸರದ ಸಂಘ-ಸಂಸ್ಥೆಗಳು, ವಿವಿಧ ಪಕ್ಷಗಳ ಮುಖಂಡರು, ಸರಕಾರ ಈ ಬಗ್ಗೆ ಅಗತ್ಯ ಗಮನ ಹರಿಸುವುದೊಳಿತು. ಸಮಸ್ಯೆಯ ಬಗ್ಗೆ ಸ್ಪಂದಿಸುವ ಮನಸ್ಸುಳ್ಳವರು ಈ ವಿಳಾಸದಲ್ಲಿ ಮುಖತ: ಭೇಟಿಯಾಗಬಹುದು.
ರುಕ್ಮಯ ಗೌಡ
ಗಣೇಶನಗರ, ಬಡಗ ಉಳೆಪಾಡಿ ಗ್ರಾಮ
ಗಂಜಿಮಠ-೫೭೪೧೪೪
ಗಂಜಿಮಠ ಅಂಚೆ ಕಚೇರಿಯ ಉಳಿತಾಯ ಖಾತೆ ಸಂಖ್ಯೆ ೧೨೧೩೬೫೩ ಅನ್ನು ಸಹಾಯ ಸಲ್ಲಿಸಲು ಬಳಸಬಹುದಾಗಿದೆ.
ಜಯಕಿರಣ ಮನವಿ
ಅಂಗವಿಕಲೆಯರಾದ ಚಂದ್ರಾವತಿ-ಪದ್ಮಾವತಿ ಅವರಿಗೆ ಸಹಾಯ ಸಲ್ಲಿಸಲು ಪತ್ರಿಕೆಯ ಓದುಗರು, ಹಿತೈಷಿಗಳು, ಸಹೃದಯ ದಾನಿಗಳನ್ನು ಜಯಕಿರಣ ಪತ್ರಿಕೆ ಮನವಿ ಮಾಡಿದೆ.

ಬಿಜೆಪಿ ಕೇಂದ್ರ ನಾಯಕರ ಒಳಜಗಳದ ಲಾಭ ಪಡೆಯುವರೇ ಯಡಿಯೂರಪ್ಪ?

Posted by JAYAKIRANA Kirana on | 0 comments | Leave a comment...

ವಿಶ್ಲೇಷಣೆ
ಬಿಜೆಪಿ ಕೇಂದ್ರೀಯ ಘಟಕದಲ್ಲಿ ತಲೆದೋರಿ ರುವ ಭಿನ್ನಮತದಿಂದ ಹೆಚ್ಚು ಸಂತೋಷಗೊಂಡಿ ರುವವರು ಮತ್ತು ಅದರಿಂದ ತನಗೆ ಲಾಭವಾಗ ಬಹುದು ಎಂದು ನಿರೀಕ್ಷಿಸಿರುವವರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನೇ ಮೊದಲ ಸಾಲಲ್ಲಿ ನಿಲ್ಲುತ್ತಾರೆ. ಪ್ರಧಾನಿಯಾಗಲು ನರೇಂದ್ರ ಮೋದಿ ಅವರೇ ಸಮರ್ಥ ವ್ಯಕ್ತಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಡ್ವಾಣಿ ವಿರುದ್ಧವಾಗಿ ದನಿ ಎತ್ತಿದ್ದಾರೆ. ತನಗೆ ಮುಖ್ಯಮಂತ್ರಿ ಸ್ಥಾನ ಮತ್ತೆ ಸಿಗದಿರಲು ಆಡ್ವಾಣಿಯೇ ಪ್ರಮುಖ ಕಾರಣ ಎಂದು ಭಾವಿಸಿರುವ ಮತ್ತು ಹಾಗೆ ಹೇಳಿರುವ ಯಡಿ ಯೂರಪ್ಪ, ಇದೀಗ ನರೇಂದ್ರ ಮೋದಿ ಓಲೈಕೆಗೆ ಹೊರಟ ಲಕ್ಷಣ ಕಂಡು ಬರುತ್ತಿದೆ. ಒಂದೇ ಕಲ್ಲಿಗೆ ಎರಡು ಗುರಿ ಇರಿಸುವ ಉದ್ದೇಶ ಯಡಿಯೂ ರಪ್ಪರಿಗಿದ್ದಂತಿದೆ. ಬಿಜೆಪಿಯಲ್ಲಿ ನರೇಂದ್ರ ಮೋದಿ ಹಿಡಿತ ಗಟ್ಟಿಯಾಗುತ್ತಿರುವುದನ್ನು ಗಮನಿಸಿಕೊಂಡಿ ರುವ ಯಡಿಯೂರಪ್ಪ ಅದೇ ಮೋದಿಯನ್ನು ಬಳಸಿಕೊಂಡು ತನ್ನ ವಿರೋಧಿಗಳನ್ನು ಮಣಿಸಲು ಯೋಜನೆ ಹಾಕಿಕೊಂಡಂತಿದೆ. ತನಗೆ ಅಧಿಕಾರ ನೀಡದಿರುವ ಗಡ್ಕರಿ, ಆಡ್ವಾಣಿ, ಸುಷ್ಮಾ ಮುಂತಾದ ವರೆಲ್ಲರೂ ತನಗೆ ವಿರೋಧಿಗಳೇ ಎಂದು ಯಡಿ ಯೂರಪ್ಪನ ಭಾವಿಸಿಕೊಂಡಂತಿದೆ. ಇವರೆಲ್ಲರೂ ಮೋದಿ ವಿರುದ್ಧ ಗುಂಪಿನಲ್ಲೂ ಗುರುತಿಸಿಕೊಂಡ ವರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಪರೋಕ್ಷವಾಗಿ ಮೋದಿಗೆ ಶರಣಾಗಿದ್ದಾರೆ. ಹಾಗಿರುವಾಗ ನರೇಂದ್ರ ಮೋದಿಯೊಬ್ಬರ ಬೆಂಬಲ ಸಿಕ್ಕಿದರೆ ಸಾಕು ಎಂದು ಯಡಿಯೂರಪ್ಪ ಭಾವಿಸಿರಬೇಕು. ಆದರೆ ಅವರ ಆ ಯೋಚನೆ ಎಷ್ಟು ಸೂಕ್ತವಾಗಿದೆ ಎಂಬುದಕ್ಕೆ ಸದ್ಯಕ್ಕೆ ಉತ್ತರ ಸಿಕ್ಕದು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದ ಯಡಿಯೂರಪ್ಪ ಬಹಿರಂಗವಾ ಗಿಯೇ ಪಕ್ಷದ ರಾಷ್ಟ್ರೀಯ ನಾಯಕತ್ವದ ವಿರುದ್ಧ ಟೀಕೆ ಮಾಡಿದ್ದರು. ನರೇಂದ್ರ ಮೋದಿ ಕೂಡ ಕಾರ್ಯಕಾರಿಣಿಯಲ್ಲಿ ಭಾಗವಹಿಸುವುದಿಲ್ಲ ಎಂದು ನಿರ್ಧರಿಸಿದ್ದುದು ಯಡ್ಡಿಗೆ ಬಲ ತಂದು ಕೊಟ್ಟಿತ್ತು. ಆದರೆ ಅವರಿಬ್ಬರ ಉದ್ದೇಶ ಬೇರೆಬೇರೆಯಾಗಿತ್ತು. ತನ್ನ ಉದ್ದೇಶ ಈಡೇರಿದ ಕೂಡಲೇ ನರೇಂದ್ರ ಮೋದಿ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ನಿರ್ಧರಿಸಿದಾಗ ಒಂದು ರೀತಿಯ ಇಕ್ಕಟ್ಟಿಗೆ ಸಿಲುಕಿ ದಂತೆ ಕಂಡು ಬಂದ ಯಡಿಯೂರಪ್ಪ ಕೂಡ ಕಾರ್ಯಕಾರಿಣಿಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿ, ಮಾತನ್ನು ಕೃತಿಗಿಳಿಸಿದ್ದರು. ತನ್ನ ಕಡು ವಿರೋಧಿ ಸಂಜಂii ಜೋಷಿ ರಾಜೀನಾಮೆ ನೀಡಿದ ಬಳಿಕವೇ, ಅರ್ಥಾತ್ ತನ್ನ ಉದ್ದೇಶ ಈಡೇರಿಸಿ ಕೊಂಡ ನಂತರವಷ್ಟೇ ನರೇಂದ್ರ ಮೋದಿ ಕಾರ್ಯ ಕಾರಿಣಿಯಲ್ಲಿ ಭಾಗವಹಿಸಿದ್ದುದು. ಆದರೆ ಯಡಿ ಯೂರಪ್ಪ ಯಾವುದೇ ಉದ್ದೇಶ ಈಡೇರಿಸಿ ಕೊಂಡಿಲ್ಲ. ಕಾರ್ಯಕಾರಿಣಿಯಲ್ಲಿ ಹಾಜರಾಗಿ ನರೇಂದ್ರ ಮೋದಿಯ ಕಟ್ಟಾ ಬೆಂಬಲಿಗನಾಗಿ ಮುಂದಿನ ದಿನಗಳಲ್ಲಿ ತನ್ನ ಉದ್ದೇಶ ಈಡೇರಿಸಿ ಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿರುವ ಸಾಧ್ಯತೆ ಇದೆ.
ಬಿಜೆಪಿಯಲ್ಲಿ ನರೇಂದ್ರ ಮೋದಿ ಹಿಡಿತ ತುಂಬಾ ಗಟ್ಟಿಯಾಗುತ್ತಿರುವುದು ಆಡ್ವಾಣಿ ಮತ್ತು ಸುಷ್ಮಾರಂಥ ನಾಯಕರು ಮೂಲೆಗುಂಪಾಗುತ್ತಿರುವು ದರ ಲಕ್ಷಣ. ಅದರಲ್ಲೂ ಮೋದಿ ಬೇಡಿಕೆಗೆ ಗಡ್ಕರಿ ಒಪ್ಪಿಕೊಂಡು ಸಂಜಂii ಜೋಷಿ ರಾಜೀನಾಮೆ ಪಡೆದುಕೊಂಡಿರುವುದು ಮೋದಿಗೆ ನಿತಿನ್ ಗಡ್ಕರಿ ಪರೋಕ್ಷವಾಗಿ ಶರಣಾದುದರ ಲಕ್ಷಣ. ಒಂದರ್ಥದಲ್ಲಿ ಹೇಳುವುದಾದರೆ ಇದೀಗ ಬಿಜೆಪಿ ಎಂದರೆ ಮೋದಿ ಎಂಬಂತಾಗಿದೆ. ಈ ಬೆಳವಣಿಗೆ, ಇಂಥ ಬದಲಾ ವಣೆ ಆಡ್ವಾಣಿ ಮತ್ತು ಸುಷ್ಮಾರಿಗೆ ಸಹಜವಾಗಿಯೇ ತಲೆನೋವು ತಂದಿದೆ. ಈ ಇಬ್ಬರು ಪ್ರಬಲ ನಾಯಕರ ಮಾತಿಗೆ ಪಕ್ಷದಲ್ಲಿ ವಿಶೇಷ ಮನ್ನಣೆ ಸಿಗುತ್ತಿಲ್ಲ. ಅದಕ್ಕೊಂದು ಉತ್ತಮ ಉದಾಹರಣೆ ನಿತಿನ್ ಗಡ್ಕರಿ ಅವರು ರಾಜ್ಯಸಭೆಗೆ ಅಂಶುಮಾನ್ ಮಿಶ್ರ ಅವರನ್ನು ಕಳುಹಿಸಿಕೊಟ್ಟಿರುವುದು. ಆಡ್ವಾಣಿ ಮತ್ತು ಸುಷ್ಮಾ ಅವರು ಎಸ್.ಎಸ್. ಅಹ್ಲುವಾಲಿಯಾ ಅವರನ್ನೇ ರಾಜ್ಯಸಭೆಗೆ ಕಳುಹಿಸಬೇಕು ಎಂದು ಹೇಳಿದ್ದರು. ಸಂಸತ್ತು ನಡೆಸಲು ನನಗೆ ಅಹ್ಲುವಾ ಲಿಯೂ ಅಗತ್ಯ ಇದೆ. ಅದಕ್ಕಾಗಿ ಅವರನ್ನೇ ರಾಜ್ಯಸಭೆಗೆ ಕಳುಹಿಸಿ ಎಂದು ಸುಷ್ಮಾ ಹೇಳಿದ್ದರು. ಆದರೆ ತನಗೆ ಪಕ್ಷ ನಡೆಸಲು ಮಿಶ್ರ ಅಗತ್ಯವಿದೆ ಎಂದು ಪ್ರತ್ಯುತ್ತರ ನೀಡಿದ ನಿತಿನ್ ಅವರು ಸುಷ್ಮಾ ಸ್ವರಾಜ್ ಅವರ ಬಾಯಿ ಮುಚ್ಚಿಸಿದ್ದರು, ತನ್ನ ಉದ್ದೇಶ ವನ್ನೇ ಜಾರಿಗೆ ತಂದಿದ್ದರು. ಇಂಥ ಬೆಳವಣಿಗೆಗಳೆಲ್ಲ ಯಡಿಯೂರಪ್ಪನಲ್ಲಿ ಒಂದು ರೀತಿಯ ಸಂತಸದ ವಾತಾವರಣ ಸೃಷ್ಟಿಸುತ್ತಿದೆ.
ಗಡ್ಕರಿ ಅವರು ೨ನೇ ಬಾರಿಗೆ ಅಧ್ಯಕ್ಷರಾಗಿ ರುವುದು ಕೂಡ ಆಡ್ವಾಣಿಗೆ ಸಮಾಧಾನ ತಂದಿಲ್ಲ. ತಾನು ವೃದ್ಧ ಎಂಬ ಕಾರಣಕ್ಕಾಗಿ ಆಡ್ವಾಣಿ ಅವರು ಗಡ್ಕರಿಯಿಂದ ಪರೋಕ್ಷವಾಗಿ ಮೂಲೆಗುಂಪು ಆಗುತ್ತಲೇ ಇದ್ದಾರೆ. ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಮೊದಲು ಹೇಳಿರುವುದು ಕೂಡ ಇದೇ ಗಡ್ಕರಿಯೇ. ಅಂಥ ಗಡ್ಕರಿ ಪಕ್ಷದ ಅಧ್ಯಕ್ಷನಾಗಿ ಇದ್ದಷ್ಟು ಕಾಲ ತಾನು ಬೆಲೆ ಕಳೆದುಕೊಂಡು ಮೂಲೆಯಲ್ಲೇ ಇರಬೇಕು ಎಂಬುದು ಆಡ್ವಾಣಿಗೂ ಗೊತ್ತು. ಇದೇ ಕಾರಣದಿಂದಾಗಿ ಕಾರ್ಯಕಾರಿಣಿಯ ಬಳಿಕ ನಡೆದಿರುವ ರ‍್ಯಾಲಿಯಲ್ಲಿ ಸುಷ್ಮಾ ಸ್ವರಾಜ್ ಮತ್ತು ಆಡ್ವಾಣಿ ಗೈರುಹಾಜರಾಗಿದ್ದುದು ಎಂದು ಹೇಳಲಾಗುತ್ತಿದೆ. ಲೋಕಸಭೆಗೆ ಎರಡು ವರ್ಷ ಮಾತ್ರವೇ ಇರುವ ಹೊತ್ತಿನಲ್ಲಿ ಬಿಜೆಪಿಯಲ್ಲಿ ಇಂಥ ಒಳಜಗಳ ಹೆಚ್ಚುತ್ತಿರುವುದು ಆ ಪಕ್ಷದ ಹಿತದೃಷ್ಟಿಯಿಂದ ನಿಜಕ್ಕೂ ಆತಂಕಕಾರಿ. ಆದರೆ ಇವೆಲ್ಲ ತನ್ನ ವಿರೋಧಿಗಳನ್ನು ಮಣಿಸಲು ತನಗೆ ಪೂರಕವಾಗಿವೆ ಎಂದೇ ಭಾವಿಸಿಕೊಂಡಂತಿದೆ ಯಡಿಯೂರಪ್ಪ.
 ಬಿಜೆಪಿಯಲ್ಲಿ ದಿಢೀರ್ ಆಗಿ ಸ್ಫೋಟಗೊಂಡಿರುವ ಇಂಥ ಭಿನ್ನಮತಗಳಿಂದಾಗಿ ಪಕ್ಷ ತೊರೆಯುವ ನಿರ್ಧಾರವನ್ನು ಯಡಿಯೂರಪ್ಪ ಸದ್ಯಕ್ಕೆ ಪೆಂಡಿಂಗ್ ಇಟ್ಟಂತಿದೆ. ಪಕ್ಷ ತೊರೆದು ತಾನು ಸಾಧಿಸುವುದು ಏನೂ ಇಲ್ಲ ಎಂಬ ಸತ್ಯ ಅವರಿಗೆ ತಿಳಿದೇ ಇದೆ. ಪಕ್ಷದಲ್ಲೇ ಇದ್ದು ಸಾಧಿಸಬೇಕು, ಅದಕ್ಕೆ ಪೂರಕವಾದ ಅವಕಾಶ ಸಿಕ್ಕಿದರೆ ಬಳಸಿಕೊಳ್ಳಬೇಕು ಎಂದು ಭಾವಿಸಿಕೊಂಡಿರುವ ಯಡ್ಡಿಗೆ ಇದೀಗ ಆ ಅವಕಾಶ ಸಿಕ್ಕಿದಂತಾಗಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಲು ಅವರು ನಿರ್ಧರಿಸಿದಂತಿದೆ. ಈಗ ಅವರು ಸೋನಿಯಾರನ್ನು ಹೊಗಳುವುದೂ ಲ್ಲ, ಬಿಜೆಪಿ ನಾಯಕರನ್ನು ತೆಗಳುವುದೂ ಇಲ್ಲ. ಇನ್ನೇನಿದ್ದರೂ ಅದು ಮೋದಿ ಮಹಿಮೆ ಎಂದು ಸ್ವಲ್ಪ ಕಾಲ ಸುಮ್ಮನಿರುತ್ತಾರೋ ?

page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4047) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2502) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3677) lokayukta (3) madikeri (1) maleria (1) mangalore (585) mangaloreairport (1) manglore (7) manipal (29) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (415) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (272) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (799) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (485) udyoga (60) ullal (7) upcl (2) upi (152) uppinangadi (47) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)