ಟಿಂಟ್ ಗ್ಲಾಸ್ ನಿಷೇಧ ಎಷ್ಟು ಸರಿ?
Posted by JAYAKIRANA Kirana on Thursday, 24 May 2012 | 0 comments | Leave a comment...
ಹೀಗೆ ಉಚ್ಛ ನ್ಯಾಯಾಲಯದ ತೀರ್ಪನ್ನು ವಿರೋಧಿಸುವ ವರು ಹೇಳುವ ಪ್ರಕಾರ ಈ ತೀರ್ಪು ನೆಗಡಿಯಾಯಿತೆಂದು ಮೂಗನ್ನೇ ಕತ್ತರಿಸಬೇಕೆಂದು ತೀರ್ಪು ಕೊಟ್ಟ ಹಾಗಾಗಿದೆಯಂತೆ! ಅನೈತಿಕ ಚಟುವಟಿಕೆಗಳು ಕೇವಲ ಕಾರ್‌ಗಳಲ್ಲಿ ಮಾತ್ರ ನಡೆಯು ವುದೇ? ಕೆಲ ಲಾಡ್ಜುಗಳಲ್ಲಿ ಮತ್ತೆ ಕೆಲವು ಮನೆಗಳಲ್ಲಿ ಕೂಡಾ ಅನೈತಿಕ ಚಟುವಟಿಕೆಗಳು ನಡೆಯುವುದಿಲ್ವೇ? ಹಾಗಂತ ಲಾಡ್ಜ್ಜ್ ಕಟ್ಟ ಬಾರದು, ಮನೆ ಕಟ್ಟಬಾರದು ಎನ್ನಲು ಸಾಧ್ಯಾನಾ? ಎಂದು ಪ್ರಶ್ನಿಸುತ್ತಿ ದ್ದಾರೆ ಇವರು. ಗೆಳೆಯರೇ, ನಿಮಗೇನನ್ನಿಸುತ್ತಿದೆ? ಈ ಸನ್‌ಸ್ಕ್ರೀನ್ ಬೆಂಬಲಿಗರ ವಾದ/ಅಭಿಪ್ರಾಯದಲ್ಲಿ ಹುರುಳಿಲ್ಲ ಎಂದಾಗಿದೆಯೇ ನಿಮ್ಮ ಭಿಪ್ರಾಯ?
ನನ್ನ ಪ್ರಕಾರವಂತೂ ಇವರ ವಾದದಲ್ಲಿ ಹುರುಳಿದೆ. ಅರ್ಥವಿದೆ. ನಮಗೆ ನೆಗಡಿಯಾಯಿತೆಂದಿಟ್ಟುಕೊಳ್ಳಿ. ನಾವು ಏನು ಮಾಡುತ್ತೇವೆ. ನೆಗಡಿ ದೆಸೆಯಿಂದ ವೈದ್ಯರಲ್ಲಿಗೆ ತೆರಳಿ ಸಾರ್, ಈ ಕಿರಿ ಕಿರಿ ಸಹಿಸಲಾಗು ತ್ತಿಲ್ಲ ಮೂಗನ್ನೊಮ್ಮೆ ಕತ್ತರಿಸಿ ತೆಗೆದುಬಿಡಿ ಎಂದು ಹೇಳಿಕೊಂಡೆವು ಎಂದಿಟ್ಟುಕೊಳ್ಳಿ. ಆಗ ವೈದ್ಯನಾದವನು ಮೂಗು ಕತ್ತರಿಸುತ್ತಾನಾ? ಅಲ್ಲಾ ನೆಗಡಿಗೆ ಔಷಧಿ ಕೊಟ್ಟು ನೆಗಡಿಯನ್ನು ಶಮನಗೊಳಿಸುತ್ತಾನಾ? ಖಂಡಿ ತವಾಗಿಯೂ ಆ ವೈದ್ಯ ನೆಗಡಿಗೆ ಔಷಧಿ ಕೊಟ್ಟು ನಮ್ಮ ಮೂಗನ್ನು ಅದರ ಪಾಡಿಗೆ ಬಿಟ್ಟು ಬಿಡುವುದಿಲ್ವಾ? ಅದೇ ರೀತಿ ಕೆಲ ದುರುಳರು ಕಾರ್‌ಗಳ ಗಾಜಿಗೆ ಸನ್‌ಸ್ಕ್ರೀನ್ ಸ್ಟಿಕ್ಕರ್ ಅಂಟಿಸಿ ಅದರೊಳಗಡೆ ಅನೈ ತಿಕ ಚಟುವಟಿಕೆಗಳ, ಸಮಾಜ ಬಾಹಿರ ಕೃತ್ಯಗಳು ನಡೆಸುತ್ತಿರುವುದು ಕಂಡು ಬಂದರೆ ಏನು ಮಾಡಬೇಕಿತ್ತು? ಸನ್‌ಸ್ಕ್ರೀನನ್ನು ಬಳಸಬಾ ರದು ಎಂದು ಒಂದೇ ಉಸಿರಿನಲ್ಲಿ ತೀರ್ಮಾನಿಸಿ ಬಿಡುವುದು ಸರಿಯಾ ಗುತ್ತದಾ? ಸನ್‌ಸ್ಕ್ರೀನ್ ಸ್ಟಿಕ್ಕರ್ ತಪ್ಪು ಮಾಡಿದೆಯಾ? ಕಾರಿನ ಗಾಜು ತಪ್ಪು ಮಾಡಿದೆಯಾ? ಅಥವಾ ಕಾರ್ ತಪ್ಪು ಮಾಡಿದೆಯಾ? ಮತ್ಯಾಕೆ ಕಾರು ಅಥವ ಕಾರಿನ ಗಾಜಿನ ಮೇಲೆ ಸವಾರಿ!? ಅದು ಮಾತನಾಡು ವುದಿಲ್ಲ ಎಂದು ತಾತ್ಸಾರನಾ!? ಗೆಳೆಯರೇ, ಇದನ್ನೆಲ್ಲ ಯೋಚಿಸು ವಾಗ ಕಾರನ್ನೇ ಬಳಸಬಾರದು ಎಂದು ನ್ಯಾಯಾಲಯ ತೀರ್ಪು ಕೊಡದಿದ್ದುದು ಪುಣ್ಯ ಎಂದೆನಿಸುತ್ತಿದೆ!
ಉಚ್ಚ ನ್ಯಾಯಾಲಯದ ಈ ತೀರ್ಪು ಏನು ಧ್ವನಿಸುತ್ತದೆಯೆಂ ದರೆ ಸನ್‌ಸ್ಕ್ರೀನ್ ಸ್ಟಿಕ್ಕರ್ ಅಂಟಿಸಿರುವ ಭಾರತೀಯ ಪ್ರಜೆಗಳೆಲ್ಲರೂ ಅನೈತಿಕ ಚಟುವಟಿಕೆ ಅಥವಾ ಸಮಾಜ ಬಾಹಿರ ಕೃತ್ಯ ಎಸಗುವ ಉದ್ದೇಶದಿಂದಲೇ ತಮ್ಮ ಕಾರುಗಳಿಗೆ ಅದನ್ನು ಅಂಟಿಸಿದ್ದಾರೆ ಎನ್ನು ವಂತಿದೆ (ಅಂದರೆ ಇಷ್ಟರವರೆಗೆ ತಮ್ಮ ಕಾರುಗಳಿಗೆ ಸನ್‌ಸ್ಕ್ರೀನ್ ಸ್ಟಿಕ್ಕರ್ ಅಂಟಿಸಿದವರೆಲ್ಲರೂ ನೀಚರು ಎಂದಾಯ್ತು) ಹಾಗಾದರೆ ಉಚ್ಚ ನ್ಯಾಯಾ ಲಯಕ್ಕೆ ಈ ಅಂಶ ಹೇಗೆ ಕಂಡು ಹಿಡಿದಿದೆ? ಎಷ್ಟು ಕಂಡು ಹಿಡಿದಿದೆ? ಯಾವ ಮಟ್ಟದಲ್ಲಿ ಸತ್ಯಾಸತ್ಯತೆ ಪರಿಶೀಲಿಸಿದೆ?
ನಮಗೆಲ್ಲ ತಿಳಿದಿರುವ ಪ್ರಕಾರ ಉಚ್ಚ ನ್ಯಾಯಾಲಯ ಆ ಬಗ್ಗೆ ಸರಿ ಯಾಗಿ ಪರಿಶೀಲನೆ ನಡೆಸಿಯೇ ಇಲ್ಲ. ಪ್ರಜೆಗಳ ಅಭಿಪ್ರಾಯ ಕೇಳಿಯೇ ಇಲ್ಲ. ಚರ್ಚೆಗೆ ಅವಕಾಶ ಕೊಟ್ಟೇ ಇಲ್ಲ. ಈ ದೇಶದಲ್ಲಿ ಸನ್‌ಸ್ಕ್ರೀನ್ ಹೊಂದಿರುವ ಒಟ್ಟು ಕಾರ್‌ಗಳ ಸಂಖ್ಯೆ ಎಷ್ಟು? ಅವುಗಳಲ್ಲಿ ಅಪರಾಧ ನಡೆಸಿರುವುದು ಸಾಬೀತಾದ ಕಾರ್‌ಗಳು ಎಷ್ಟು? ಅಪರಾಧ ನಡೆಸುವಾತ ನಿಗೆ ಅಪರಾಧ ನಡೆಸಲು ಹತ್ತು ಹಲವಾರು ಬೇರೆ ಬೇರೆ ತರದ ಅವಕಾ ಶಗಳಿರುವಾಗ ಉಚ್ಛ ನ್ಯಾಯಾಲಯ ಈ ಸನ್‌ಸ್ಕ್ರೀನ್ ಹೊಂದಿರುವ ಕಾರ್‌ಗಳ ಮೇಲೆ ಮಾತ್ರ ನಿಷೇಧ ವಿಧಿಸಲು ಕಾರಣವೇನು? ಜನರಿಗೆ ಒಂದೂ ಆರ್ಥವಾಗುತ್ತಾ ಇಲ್ಲ!
ಇಲ್ಲಿ ಗಮನಿಸಿ. ಪ್ರಸಕ್ತ ಮುಂಬಯಿಯಲ್ಲಿ ಮಾರುತಿ ಓಮ್ನಿ ಕಾರಿಗೆ ನಿಷೇಧವಿದೆ. ಅದಕ್ಕೆ ಕಾರಣ ಈ ಒಮ್ನಿ ಕಾರಿನಲ್ಲಿ ಅಪಹರಣ ಕೃತ್ಯಗಳು ಮುಂಬಯಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದುದು. ನಿಷೇಧ ಹೇರಿದ ಸಂದ ರ್ಭದಲ್ಲಿ ಸಾರ್ವಜನಿಕರಿಂದ ಆ ಬಗ್ಗೆ ಅಂಥಾ ಪ್ರತಿರೋಧ ಏನೂ ವ್ಯಕ್ತ ವಾಗಲಿಲ್ಲ. ಬಹುತೇಕ ಜನರು ನಿಷೇಧವನ್ನು ಮುಕ್ತ ಮನಸ್ಸಿನಲ್ಲಿ ಸ್ವಾಗತಿ ಸಿದ್ದರು. ಜನರ ಈ ಒಪ್ಪಿಗೆಗೆ ಕಾರಣ ಒಮ್ನಿ ನಿಷೇಧಕ್ಕೆ ಒಂದು ಅರ್ಥ ವಿತ್ತು. ನಿಷೇಧದ ವ್ಯಾಖ್ಯೆ ಎಂಥವನೂ ಒಪ್ಪಿಕೊಳ್ಳುವಂತಿತ್ತು. ಅದೂ ಅಲ್ಲದೆ ಸರಕಾರ ನಿಷೇಧಿಸಿದ್ದು ಒಮ್ನಿ ಕಾರನ್ನು ಮಾತ್ರ. ಎಲ್ಲಾ ಕಾರನ್ನು ನಿಷೇಧಿಸಿರಲಿಲ್ಲ. ಜನರಿಗೆ ಒಮ್ನಿಗೆ ಸ್ವಲ್ಪಮಟ್ಟಿಗೆ ಪರ್ಯಾಯವಾದ ಬೇರೆ ವಾಹನಗಳ ಲಭ್ಯವಿತ್ತು. ಅದರೊಂದಿಗೆ ಸದ್ರಿ ಓಮ್ನಿ ನಿಷೇಧ ಓಮ್ನಿ ಕಾರಿ ನಲ್ಲಿ ಅಪಹರಣ, ದರೋಡೆ ಕೃತ್ಯಗಳು ಬೇಜಾನ್ ನಡೆಯುತ್ತಿದ್ದ ಮುಂಬ ಯಿಗೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ ಎಲ್ಲಾ ಸ್ತರಗಳಲ್ಲಿ ಮುಂಬಯಿ ಯಲ್ಲಿ ಒಮ್ನಿ ನಿಷೇಧ ಅಂಗೀಕರಿಸಲ್ಪಟ್ಟಿತ್ತು. ಆದರೆ ಈಗ ದೇಶವ್ಯಾಪಿ ಕಾರ್‌ಗಳ ಸನ್‌ಸ್ಕ್ರೀನ್ ಬಳಕೆಗೆ ನಿಷೇಧ ವಿಧಿಸಿರುವ ವಿಚಾರ ಮಾತ್ರ ಸ್ವಲ್ಪ ಅತಿರೇಕವೆಂದೆನಿಸುತ್ತಿದೆ.
ನಾನು ಮೇಲೆ ಹೇಳಿದಂತೆ ಅಪರಾಧ ಮಾಡುವಾತನಿಗೆ ಈ ದೇಶ ದಲ್ಲಿ ಹತ್ತು ಹಲವಾರು ಸುಲಭ ಅವಕಾಶಗಳಿವೆ. ಒಂದು ಕಡೆ ಅವನನ್ನು ತಡೆದರೆ ಇನ್ನೊಂದು ಕಡೆ ಆತ ಖಂಡಿತಾ ಅದನ್ನು ಮಾಡುತ್ತಾನೆ. ಪರ್ಯಾಯ ಮಾರ್ಗಗಳನ್ನು ಆತ ಕಂಡು ಹುಡುಕಿಯೇ ಹುಡುಕುತ್ತಾನೆ. ಕಾರಿನ ಟಿಂಟ್ ಪ್ರಕರಣವೂ ಅಷ್ಟೇ. ಕಾರಿನ ಟಿಂಟ್ ನಿಷೇಧಿಸಿದ ತಕ್ಷಣ ಕಾರಿನೊಳಗಡೆ ಕೂರುವ ದುಷ್ಟ ತನ್ನ ಅಪರಾಧ ಕೃತ್ಯವನ್ನು ನಡೆಸುವ ಉದ್ದೇಶದಿಂದ ವಿಮುಖನಾಗುತ್ತಾನೆ ಎನ್ನುವ ಯಾವ ಖಚಿತತೆಯೂ ಇಲ್ಲ. ನಿಜ ಹೇಳಬೇಕೆಂದರೆ ಕಾರಿನ ಗಾಜಿನ ಮೇಲೆ ಅಂಟಿಸಲಾಗುವ ಸನ್ ಸ್ಕ್ರೀನ್ ಸ್ಟಿಕ್ಕರ್ ತೆಗೆಯುವ ಬದಲು ಆ ಕಾರಿನೊಳಗಡೆ ಕೂತು ಸಂಚು ಹೂಡುವ ದುಷ್ಟನ ಹೃದಯದ ಮೇಲೆ ಅಂಟಿರುವ ಕೆಡುಕೆನ್ನುವ ಸ್ಟಿಕ್ಕರ್ ತೆಗೆಯುವ ಕೆಲಸ ನಡೆಯಬೇಕಾಗಿದೆ. ಇದು ಸಾಧ್ಯವಾದರೆ ಎಂಥಾ ಸಂದ ರ್ಭದಲ್ಲೂ ಎಂಥವನೂ ಅಪಹರಣಕ್ಕೊಳಗಾಗಲ್ಲ. ಎಂಥವನೂ ದರೋಡೆ ಗೊಳಗಾಗಲ್ಲ.
ಈ ಸನ್‌ಸ್ಕ್ರೀನ್ ಬಳಕೆ ನಿಷೇಧ ಪ್ರಕರಣ ‘ಇಲಿಗೆ ಪೆಟ್ಟು ಕೊಡಲು ಹೋಗಿ ಗಣಪತಿಗೆ ಪೆಟ್ಟುಕೊಟ್ಟ’ ಎಂಬ ಗಾದೆಯನ್ನು ನೆನಪಿಸುತ್ತಿದೆ. ಕಾರ್‌ಗಳಲ್ಲಿ ದರೋಡೆ ನಡೆಯುತ್ತಿರುವುದನ್ನು ತಡೆಯಲು ಹೋಗಿ ಕಾರ್‌ಗಳನ್ನೇ ದರೋಡೆಗೈಯಲು ಮುಕ್ತ ಅವಕಾಶ ಮಾಡಿಕೊಡಲಾಗುತ್ತಿ ರುವುದಂತೂ ಸ್ಪಷ್ಟ. ಸನ್‌ಸ್ಕ್ರೀನ್ ಹೊಂದಿರುವ ಒಟ್ಟು ಕಾರ್‌ಗಳ ಸಂಖ್ಯೆ ಗಳನ್ನು ಗಣನೆಗೆ ತೆಗೆದುಕೊಂಡು ಮತ್ತವುಗಳಲ್ಲಿ ನಡೆಯುತ್ತಿರುವ ಅಪ ರಾಧ ಪ್ರಕರಣಗಳನ್ನು ಪರಿಶೀಲಿಸಿದರೆ ಅಪರಾಧಕೃತ್ಯಗಳಿಗೆ ಬಳಕೆಯಾಗುವ ಟಿಂಟ್ ಗ್ಲಾಸ್‌ಗಳ ಕಾರುಗಳ ಸಂಖ್ಯೆ ಒಟ್ಟು ಸನ್‌ಸ್ಕ್ರೀನ್ ಕಾರುಗಳ ಪೈಕಿ ಶೇಕಡಾ ಹತ್ತರಷ್ಟೂ ಇರಲಿಕ್ಕಿಲ್ಲ ಎಂಬುವುದನ್ನು ಧೈರ್ಯವಾಗಿ ಹೇಳಬಹುದು. ಅಂದರೆ ಇದರರ್ಥ ಶೇಕಡಾ ತೊಂಭತ್ತರಷ್ಟು ಜನರು ತಮ್ಮ ಕಾರ್‌ಗಳಿಗೆ ಸನ್ ಸ್ಕ್ರೀನ್ ಅಳಡಿಸಿಕೊಂಡಿರುವುದು ಇತರ ಕಾರಣಗಳಿಗಾಗಿ ಎನ್ನಬಹುದು. ಗಣ್ಯ ವ್ಯಕ್ತಿಗಳಿಗೆ, ಶ್ರೀಮಂತರಿಗೆ, ಉದ್ಯಮಿಗಳಿಗೆ, ಮಹಿಳೆಯರಿಗೆ, ಕೆಲವು ಸಂದರ್ಭ ಗಳಲ್ಲಿ ತಂದೆ ತಾಯಂದಿರು ಬೇರೆ ಬೇರೆ ಕಡೆಯಿದ್ದು ಒಬ್ಬಂಟಿಯಾಗಿ ಶಾಲಾ ಕಾಲೇಜುಗಳಿಗೆ ಹೋಗಬೇಕಾಗಿ ಬರುವ ಒಬ್ಬಂಟಿ ಶ್ರೀಮಂತರ ಮಕ್ಕಳಿಗೆ, ಇನ್ನು ಕೆಲವು ಜೀವಭಯ ಎದುರಿಸುತ್ತಿರುವ ವ್ಯಕ್ತಿಗಳಿಗೆ ಟಿಂಟ್ ಗ್ಲಾಸ್‌ಗಳನ್ನು ಹೊಂದಿರುವ ಕಾರ್‌ಗಳಲ್ಲೇ ಪ್ರಯಾಣಿಸುವುದು ಅನಿವಾರ್ಯ. ಇಲ್ಲದಿದ್ದರೆ ಇವರೆಲ್ಲ ದುಷ್ಕರ್ಮಿಗಳ ಕೈಗೆ ಸುಲಭ ತುತ್ತಾಗುವ ಸಾಧ್ಯತೆ ಇರುತ್ತದೆ. ಬಹ ಳಷ್ಟು ಜನರಿಗೆ ಟಿಂಟ್ ಗ್ಲಾಸ್‌ಗಳಿರುವ ಕಾರುಗಳಲಿನ್ಲ ಪ್ರಯಾಣ ಒಬ್ಬ ಪೊಲೀಸ್ ಅಧಿಕಾರಿ ತಮ್ಮ ಹತ್ತಿರವೇ ಇದ್ದಷ್ಟು ಧೈರ್ಯ ಕೊಡುತ್ತದೆ. ತಮ್ಮ ಬೆಲೆಬಾ ಳುವ ಆಭರಣ, ಹಣ, ಲ್ಯಾಪ್‌ಟಾಪ್ ಮತ್ತಿತರ ಪರಿಕರಗಳನ್ನು ಕಾರ್‌ನಲ್ಲೇ ಬಿಟ್ಟು ಆರಾಮವಾಗಿ ತಿರುಗಾಡಿ ಬರಲು ಧೈರ್ಯ ಬರುತ್ತದೆ.
ಇಷ್ಟಾದ ಮೇಲೂ ಟಿಂಟ್ ಗ್ಲಾಸ್‌ಗಳುಲ್ಲ ಕಾರ್‌ಗಳಲ್ಲಿ ನಡೆಯುತ್ತಿರುವ ಅಪಹರಣ, ದರೋಡೆ ಮೊದಲಾದ ದುಷ್ಕೃತ್ಯಗಳನ್ನು ತಡೆಯುವುದೇ ತನ್ನ ಮೊದಲ ಆದ್ಯತೆಯೆಂದು ನ್ಯಾಯಾಲಯ ಪರಿಗಣಿಸಿದರೆ ಆಗಲೂ ಇಂಥಾ ಕಾರುಗಳಲ್ಲಿ ನಡೆಯುವ ದುಷ್ಕೃತ್ಯಗಳನ್ನು ತಡೆಯಲು ಇನ್ನೊಂದು ಮಾರ್ಗವೂ ಇದೆ. ಪ್ರಜೆಗಳಿಗೆ ಭದ್ರತೆ ಖಚಿತ ಪಡಿಸಲು ಮತ್ತು ಭಯ ನಿವಾರಿಸಲು ನಿಯು ಕ್ತಗೊಂಡ ಪೊಲೀಸರು ಈ ದೇಶದಲ್ಲಿದ್ದಾರೆ. ಎಷ್ಟು ತಡರಾತ್ರಿಯಾದರೂ ಸರಿ ಎಂಥವನಾದರೂ ಸರಿ ಸೀದಾ ಹೋಗಿ ಅವನನ್ನು ಬಂಧಿಸಲು, ತನಿಖೆ ನಡೆ ಸಲು ಪೊಲೀಸರಿಗೂ ಗೊತ್ತಿದೆ. ಅಂಥಾ ಪೊಲೀಸರನ್ನು ಟಿಂಟ್ ಗ್ಲಾಸ್ ಹಾಕಿ ಸಂಚರಿಸುವ ಕಾರುಗಳನ್ನು ಎಲ್ಲಿ ಕಂಡರೂ ತಡೆದು ಸ್ವಲ್ಪ ಗ್ಲಾಸ್ ಕೆಳಗೆ ಸರಿಸಿ ಪ್ಲೀಸ್ ಎಂದು ಪ್ರಯಾಣಿಕರಲ್ಲಿ ಕೇಳಿ ಒಳಗಡೆ ಏನು ನಡೆಯುತ್ತಿದೆ ಎಂದು ಗಮನಿಸತೊಡಗಿದರೆ ಸಮಾಜಘಾತುಕರು ಎಚ್ಚೆತ್ತು ತಮ್ಮ ದುಷ್ಕೃತ್ಯಗಳನ್ನು ಟಿಂಟ್ ಕಾರ್‌ಗಳಿಂದ ವರ್ಗಾಯಿಸುವ ಸಾಧ್ಯತೆ ಇರುತ್ತದೆ. ತನ್ಮೂಲಕ ಟಿಂಟ್ ಗ್ಲಾಸ್ ಬಳಕೆ ಭಯಮುಕ್ತರಾಗಿ ಸಂಚರಿಸುವ ಸಜ್ಜನರ ಹಕ್ಕು ಕಾಪಾಡಿದಂ ತೆಯೂ ಆಗುತ್ತದೆ. ಅಲ್ಲವೇ?




















You can subscribe by e-mail to receive news updates and breaking stories.