ಬಿಲ್ಲವ
ನಾನು ೨೬ರ ಹರೆಯದ ಬಿಲ್ಲವ ಯುವತಿ ಎಸ್‌ಎಸ್‌ಎಲ್‌ಸಿ ಓದಿದ್ದೇನೆ. ೩೦ ಒಳಗಿನ ಗಂಡು ಇದ್ದರೆ ತಿಳಿಸಿ.
ನಾನು ೩೫ರ ಹರೆಯದ ಬಿಲ್ಲವ ಯುವಕ ಎಸ್‌ಎಸ್‌ಎಲ್‌ಸಿ ಓದಿದ್ದೇನೆ . ೩೦ರ ಒಳಗಿನ ವಧು ಇದ್ದರೆ ತಿಳಿಸಿ.
ನಾನು ೩೨ರ ಹರೆಯದ ಬಿಲ್ಲವ ಯುವತಿ. ನನಗೆ ೩೫ರ ಹರೆಯದ ಯುವಕ ಇದ್ದರೆ ತಿಳಿಸಿ. ಬ್ರಾಹ್ಮಣ ಹುಡುಗನಾದರೂ ಆಗಬಹುದು.
ನಾನು ೨೨ರ ಹರೆಯದ ಬಿಲ್ಲವ ಯುವತಿ. ೩೦ರ ಒಳಗಿನ ವಿಶ್ವಕರ್ಮ ವರ ಇದ್ದರೆ ತಿಳಿಸಿ.
ನಾನು ೪೨ರ ಹರೆಯದ ವಿಶ್ವಕರ್ಮ ಯುವಕ ಡೈವೋರ್ಸ್ ಆಗಿದೆ ೩೫ರ ಒಳಗಿನ ವಧು ಇದ್ದರೆ ತಿಳಿಸಿ.
೩೦ರ ಹರೆಯದ ಬಿಲ್ಲವ ಯುವಕನಿಗೆ ವಿಚ್ಚೇದಿತ ವಧು ಬೇಕು.
೨೨ರ ಹರೆಯದ ಬಿಲ್ಲವ ಯುವತಿಗೆ ೨೬ರ ಒಳಗಿನ ಯುವಕ ಬೇಕು.
ಗೌಡ
ನಾನು ೪೧ರ ಹರೆಯದ ಗೌಡ ಯುವಕ. ಮದುವೆ ಆಗಿ ಡೈವೋರ್ಸ್ ಆಗಿದೆ ನನಗೆ ೩೮ರ ಒಳಗಿನ ವಿಚ್ಚೇದಿತ ಮಹಿಳೆ ಅಥವಾ ಬೇರೆ ಜಾತಿಯ ವಧು ಇದ್ದರೆ ತಿಳಿಸಿ.
ನಾನು ೪೭ರ ಹರೆಯದ ಗೌಡ ಯುವಕ. ಮದುವೆಯಾಗಿ ವಿಚ್ಚೇದನ ಆಗಿದೆ. ೪೦ರ ಒಳಗಿನ ವಧು ಇದ್ದರೆ ತಿಳಿಸಿ.
ಅಂತರ್ಜಾತಿ
ನಾನು ೨೪ರ ಹರೆಯದ ಅಂತರ್ಜಾತಿ ಯುವತಿ. ಎಂ.ಕಾಂ.ಪದವೀಧರೆ ಉದ್ಯೋಗ ಇದೆ. ೩೦ರ ಒಳಗಿನ ವಿಶ್ವಕರ್ಮ ಅಥವಾ ಬಂಟ್ಸ್ ವರ ಇದ್ದರೆ ತಿಳಿಸಿ.
ನಾನು ೨೨ರ ಹರೆಯದ ವಿಶ್ವಕರ್ಮ ಯುವತಿ. ೨೬ರ ಒಳಗಿನ ಯುವಕ ಇದ್ದರೆ ತಿಳಿಸಿ.
ಬ್ರಾಹ್ಮಣ
೩೫ರ ಹರೆಯದ ಬ್ರಾಹ್ಮಣ ವರನಿಗೆ ೩೦ರ ಹರೆಯದ ವಧು ಬೇಕು. ಉದ್ಯೋಗ ಇದೆ. ೨೯ರ ಹರೆಯದ ವಿಶ್ವಕರ್ಮ ಮಲಯಾಳಿ ವಿಶ್ವಕರ್ಮ ವರಗೆ ವಧು ಬೇಕು. ಬೇರೆ ಜಾತಿ ಆಗಬಹುದು.
ಮಲಯಾಳಿ ಬಿಲ್ಲವ
೩೩ರ ಹರೆಯದ ಮಲಯಾಳಿ ಬಿಲ್ಲವ ಯುವಕನಿಗೆ ಪದವೀದರೆ ಯುವತಿ ಬೇಕು . ಉದ್ಯೋಗ ಇದೆ.
ಮಲಯಾಳಿ ತೀಯಾ
೨೮ರ ಹರೆಯದ ಮಲಯಾಳಿ ತೀಯಾ ಯುವತಿಗೆ ವರ ಬೇಕು.
ಮುಸ್ಲಿಂ
೨೪ರ ಹರೆಯದ ಮುಸ್ಲಿಂ ಯುವತಿಗೆ ೩೦ರ ಒಳಗಿನ ವರಬೇಕು.
ಕ್ರಿಶ್ಚಿಯನ್
೩೫ರ ಹರೆಯದ ಕ್ರಿಶ್ಚಿಯನ್ ಯುವಕನಿಗೆ ೩೦ರ ಒಳಗಿನ ಯುವತಿ ಬೇಕು.
ಗಾಣಿಗ
ನಾನು ೨೮ರ ಹರೆಯದ ಪದವೀಧರೆ ಗಾಣಿಗ ಯುವತಿ. ಮದುವೆಯಾಗಿ ಡೈವೋರ್ಸ್ ಆಗಿದೆ. ಮಗು ಇದೆ. ೪೦ರ ಒಳಗಿನ ಗಾಣಿಗ ಅಥವಾ ಬೇರೆ ಜಾತಿಯ ವಿಧುರ, ವಿಚ್ಛೇದಿತ ವರ ಇದ್ದರೆ ತಿಳಿಸಿ.
ವಿಶ್ವಕರ್ಮ
ನಾನು ೨೯ರ ಹರೆಯದ ವಿಶ್ವಕರ್ಮ ಯುವಕ ಸಿವಿಲ್ ಇಂಜಿನಿಯರ್ ಪದವೀಧರ . ಉದ್ಯೋಗ ಇದೆ. ೨೫ರ ಒಳಗಿನ ಯುವತಿಇದ್ದರೆ ತಿಳಿಸಿ.
ಮಲಯಾಳಿ
ನಾನು ೩೩ರ ಹರೆಯದ ಮಲಯಾಳಿ ಬಿಲ್ಲವ ಯುವಕ-ಉದ್ಯೋಗ ಇದೆ. ಪದವೀಧರೆ ಯುವತಿ ಇದ್ದರೆ ತಿಳಿಸಿ.
ಬಿಲ್ಲವ
ನಾನು ೩೦ರ ಹರೆಯದ ಬಿಲ್ಲವ ಯುವಕ. ೨೫ರ ಒಳಗಿನ ಯುವತಿ ಇದ್ದರೆ ತಿಳಿಸಿ.
ಗೌಡ
ನಾನು ೨೪ರ ಹರೆಯದ ಗೌಡ ಯುವತಿ. ೩೦ರ ಒಳಗಿನ ವರ ಇದ್ದರೆ ತಿಳಿಸಿ
ಗಟ್ಟಿ
ನಾನು ೩೫ರ ಒಳಗಿನ ಗಟ್ಟಿ ವರ. ೩೦ರ ಒಳಗಿನ ವಧು ಇದ್ದರೆ ತಿಳಿಸಿ
Tagged with
marriage
ಮೇಷ : ಕೆಲಸ ಕಾರ್ಯದ ಬಗ್ಗೆ ಚಿಂತೆ ಇರುತ್ತದೆ.
ವೃಷಭ : ದೂರ ಪ್ರಯಾಣ ಮಾಡುತ್ತೀರಿ.
ಮಿಥುನ : ಶತ್ರುಗಳಿಂದ ತೊಂದರೆ ಇರುತ್ತದೆ.
ಕರ್ಕಾಟಕ : ದೂರದ ಬಂಧುಗಳು ಮನೆಗೆ ಬರುತ್ತಾರೆ.
ಸಿಂಹ : ಮಾನಸಿಕ ನೆಮ್ಮದಿ ಇರುವುದಿಲ್ಲ.
ಕನ್ಯಾ : ಆದಷ್ಟು ತಾಳ್ಮೆಯಿಂದ ಇರಬೇಕು.
ತುಲಾ : ಮಕ್ಕಳಿಂದ ಕಿರಿಕಿರಿ ಇರುತ್ತದೆ.
ವೃಶ್ಚಿಕ : ವ್ಯಾಪಾರದಲ್ಲಿ ಉತ್ತಮ ಪ್ರಗತಿ ಇರುತ್ತದೆ.
ಧನು : ಮನೆಗೆ ಬೇಕಾಗುವ ಸಾಮಾಗ್ರಿ ಖರೀದಿ ಮಾಡುತ್ತೀರಿ.
ಮಕರ : ಹಣಕಾಸಿನ ಬಗ್ಗೆ ಚಿಂತೆ ಇರುತ್ತದೆ.
ಕುಂಭ : ಮಾನಸಿಕವಾಗಿ ತುಂಬಾ ನೊಂದುಕೊಳ್ಳುವಿರಿ.
ಮೀನ : ಗೆಳೆಯರಿಂದ ಸಹಾಯ ದೊರೆಯುತ್ತದೆ.
Tagged with
bhavishya
ಕಾವೂರು : ಕಾರ್ ಡ್ರೈವರ್ ಬೇಕು ೭೨೦೪೬೪೩೪೫೫.
ಮಂಗಳೂರು : ಸೇಲ್ಸ್ ಗರ್ಲ್ಸ್ ಬೇಕು ೮೨೭೭೧೬೫೬೬೨.
ಮಂಗಳೂರು : ಕಾರ್ ಡ್ರೈವರ್‌ಬೇಕು ೦೮೨೪-೪೨೬೮೫೨೪.
ಮಂಗಳೂರು : ಕಂಪ್ಯೂಟರ್ ತರಗತಿ, ಟ್ಯೂಷನ್ ಮತ್ತು ಸಂಸ್ಥೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಅನುಭವ ಇರುವವರು ಬೇಕು ೭೨೦೪೬೪೩೪೫೫.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಮ್ಯಾನ್ ಬೇಕು ೯೮೪೪೪೬೪೩೭೭.
ಮೋರ್ಗನ್‌ಗೇಟ್ : ಟ್ಯೂಷನ್ - ಕಂಪ್ಯೂಟರ್ ತರಗತಿ ನೀಡಲು ಪುರುಷರು, ಮಹಿಳೆಯರು ಬೇಕು ೯೯೭೨೭೨೫೩೫೭.
ಕೊಡಿಯಾಲ್‌ಬೈಲ್ : ಟ್ರಾವೆಲ್ ಏಜೆನ್ಸಿಗೆ ಲೇಡೀಸ್ ಸ್ಟಾಫ್ ಬೇಕು ೨೪೯೭೮೬೨.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೈಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಟೈಲರ್ & ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.
ಕಾವೂರು : ಲೇಡಿಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು : ಲೇಡಿಸ್ ಹಾಸ್ಟೆಲ್‌ಗೆ ಮಹಿಳಾ ಅಡುಗೆಯವರು ಬೇಕು ೯೨೪೧೨೧೪೧೨೨.
ಮಂಗಳೂರು : ಮನೆ ಬಾಡಿಗೆಗೆ ಇದೆ ೯೮೮೬೩೩೦೨೭೧.
ಸುರತ್ಕಲ್ : ಬಟ್ಟೆ ಅಂಗಡಿ ಕೆಲಸಕ್ಕೆ ಆಸುಪಾಸಿನ ಜನ ಬೇಕು ೮೪೯೪೮೫೮೫೪೪.
ಮಂಗಳೂರು : ಎಕೌಂಟೆಂಟ್, ಶೋರೂಂಗೆ ಜನ ಬೇಕು ೭೨೫೯೧೨೪೬೯೨.
ಬಲ್ಮಠ : ಬುಕ್‌ಸ್ಟಾಲ್‌ಗೆ ಜನ ಬೇಕು ೨೪೨೪೭೪೪.
ಮಂಗಳೂರು : ಕೆಲಸಕ್ಕೆ ಜನ ಬೇಕು ೯೮೪೫೮೦೬೪೮೦.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ಏಕೌಂಟ್ಸ್ ಗೊತ್ತಿರುವವರು ಬೇಕು ೯೮೪೫೮೭೪೦೬೮.
ಪಡುಬಿದ್ರೆ : ಗೃಹೋಪಕರಣ ಶೋರೂಂ ಗೆ ಸೇಲ್ಸ್‌ಮ್ಯಾನ್, ಲೇಡಿ ಎಕೌಂಟೆಂಟ್, ಸ್ಟೋರ್‌ಕೀಪರ್, ಡ್ರೈವರ್ ಬೇಕು ೯೮೪೫೮೮೪೫೭೪.
ಮಂಗಳೂರು : ಕಾಲ್‌ಸೆಂಟರ್‌ಗೆ ಹೌಸ್‌ಕೀಪರ್ ಬೇಕು ೯೯೧೬೧೧೯೪೬೯.
ಜಪ್ಪು: ಕಚೇರಿ ಕೆಲಸಕ್ಕೆ ಯುವತಿ ಬೇಕು ೯೮೪೪೦೦೯೯೦೫.
ಕಂಕನಾಡಿ: ಪೆಟ್ರೋಲ್‌ಪಂಪ್‌ಗೆ ಜನ ಬೇಕು ೯೯೪೫೦೯೫೧೨೩.
ಸುರತ್ಕಲ್: ನೆಸ್‌ಕೆಫೆ ಸ್ಟಾಲ್‌ಗೆ ಸೇಲ್ಸ್‌ಗೆ ಲೇಡೀಸ್ ಬೆಕು ೯೭೩೮೯೩೨೭೩೧.
ಬಲ್ಮಠ: ಅಡುಗೆ ಮಾಡಲು ಮಹಿಳೆ ಬೇಕು ೮೪೫೩೯೭೨೯೯೪.
ಮಂಗಳೂರು: ಟೈಲರ್, ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.
ಕಾವೂರು: ಲೇಡೀಸ್ ಟೈಲರ್‌ಬೇಕು ೯೪೪೯೫೫೧೨೦೦.
Tagged with
udyoga
ಜ್ಞಾನಕ್ಕಿಂತ ಅರ್ಧಜ್ಞಾನ ಅಪಾಯಕಾರಿ. ನಮ್ಮಲ್ಲಿ ಅನೇಕ ವಿಚಾರ ಗಳಲ್ಲಿ ಅರ್ಧಜ್ಞಾನದಿಂದಲೇ ಹಲವು ಯಡವಟ್ಟುಗಳಾಗಿವೆ. ಯಾರೂ ಪರಿಪೂರ್ಣರಲ್ಲ. ಆದರೆ ಪರಿಪೂರ್ಣತೆಯೆಡೆಗೆ ವಿಧೇಯರಾಗಿ ಕಲಿ ಯುತ್ತಾ ಬದಲಾವಣೆಗಳನ್ನು ಸ್ವೀಕರಿಸುತ್ತಾ ಸಾಗಬೇಕಾದ್ದು ನ್ಯಾಯ.
ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರ ದಲ್ಲಿ ಅನೇಕ ಆಭಾಸಗಳನ್ನು ಸೃಷ್ಟಿಸಲಾಗಿದೆ. ಅವರ ಬರಹಗಳನ್ನು ಓದದೇ, ಸರಿಯಾಗಿ ಗ್ರಹಿಸದೇ ಅರ್ಧಜ್ಞಾನಿಗಳು ಸೃಷ್ಟಿಸಿದ ಅವಾಂತರ ಗಳೇ ಅಂಬೇಡ್ಕರ್‌ರವರ ನಿಜವಾದ ವಿಚಾರಧಾರೆಗಿಂತ ಹೆಚ್ಚು ಪ್ರಚಲಿತ ದಲ್ಲಿದೆ. ಕೆಲವರು ಉದ್ದೇಶಪೂರ್ವಕವಾಗಿ ಅಂಬೇಡ್ಕರ್‌ರವರ ವಿಚಾರ ಧಾರೆಗಳನ್ನು ತಿರುಚಿದರು. ಅದನ್ನು ಪರಿಶೀಲಿಸದೆ ಹಲವರು ಅದನ್ನೇ ಸತ್ಯವೆಂಬಂತೆ ಪ್ರಚಾರ ಮಾಡಿದ ಪರಿಣಾಮವಾಗಿ ಇಂದಿಗೂ ಅಂತಹ ಅಪದ್ದ ವಿಚಾರಧಾರೆಗಳನ್ನೇ ಅಂಬೇಡ್ಕರ್‌ರವರ ವಿಚಾರಧಾರೆಗಳೆಂದು ನಂಬಿ ಪ್ರಚಾರ ಮಾಡಲಾಗುತ್ತಿದೆ. ಇವು ಸೋಮಾರಿ, ಸೋಗಲಾಡಿ ಹಾಗೂ ಪರಾವಲಂಬಿ ಅರ್ಧಜ್ಞಾನಿಗಳ ಆಚಾತುರ್ಯಗಳು.
ಮಿಥ್೧: ಅಂಬೇಡ್ಕರ್‌ರವರು ಕಡು ಬಡವರಾಗಿದ್ದರು. ತಿನ್ನಲು ಸರಿಯಾಗಿ ಊಟವೇ ಇರಲಿಲ್ಲ. ಉಡಲು ಬಟ್ಟೆ ಇರಲಿಲ್ಲ. ಎಲ್ಲರೂ ಮಲಗುವಷ್ಟು ಸ್ಥಳಾವಕಾಶವೇ ಇಲ್ಲದೆ ಒಬ್ಬರ ನಂತರ ಒಬ್ಬರು ಸರದಿ ಯಲ್ಲಿ ಮಲಗುತ್ತಿದ್ದರು. ಹೀಗೆಂದು ಅನೇಕ ಪುಸ್ತಕಗಳಲ್ಲಿ ಬರೆಯಲಾ ಗಿದೆ. ನಿಜವೆಂದರೆ, ಅಂಬೇಡ್ಕರ್ ತಂದೆಯವರು ಆಗಲೇ ಸೈನ್ಯದಲ್ಲಿ ಸುಬೇದಾರ್ ಹುದ್ದೆಯಲ್ಲಿದ್ದರು. ತೀರಾ ಬಡತನವೇನೂ ಇರಲಿಲ್ಲ. ಮಕ್ಕಳ ಹೊಟ್ಟೆಗೆ ಬಟ್ಟೆಗೆ ರಾಮ್ ಜಿ ಸಕ್ಪಾಲ್‌ರವರು ಎಂದಿಗೂ ಕೊರತೆ ಮಾಡಿರಲಿಲ್ಲ ಎಂದು ಸ್ವತಹ ಅಂಬೇಡ್ಕರ್‌ರವರು ತಮ್ಮ ‘ವೆಯಿಟಿಂಗ್ ಫಾರ್ ವೀಸಾ ಎಂಬ ಆತ್ಮಕಥನದಲ್ಲಿ ಬರೆದಿದ್ದಾರೆ.
ಮಿಥ್೨: ತಂದೆಯವರೊಡನೆ ರಜಾ ಕಳೆಯಲು ಅಂಬೇಡ್ಕರ್ ಮತ್ತು ಅವರ ಸೋದರ ಕೋರೇಗಾಂವ್‌ಗೆ ತೆರಳುವಾಗ ಅವರ ಮಹರ್ ಎಂದು ತಿಳಿದ ಗಾಡಿಯವನು, ಸಿಟ್ಟಿನಿಂದ ಗಾಡಿಯನ್ನು ಎತ್ತಿ ಮೊಗಚಿ ಅವರನ್ನು ಹಳ್ಳಕ್ಕೆ ಬೀಳಿಸಿದನು ಎಂದು ದೊಡ್ಡ ವಿದ್ವಾಂ ಸರೂ ಸೇರಿದಂತೆ ಇಂದಿಗೂ ಅನೇಕರು ಬರೆಯುತ್ತಿದ್ದಾರೆ. ಆದರೆ ಮೇಲಿನ ಅದೇ ಪುಸ್ತಕದಲ್ಲಿ ಅಂಬೇಡ್ಕರ್‌ರವರೇ ಹೇಳಿರುವಂತೆ ಇವರು ಮಹರ್ ಎಂದು ಗೊತ್ತಾಗಿ ಗಾಡಿಯವರು ಬರಲು ನಿರಾಕರಿಸುತ್ತಾರೆ. ಆದರೆ ದುಪ್ಪಟ್ಟು ಕಾಸು ಕೊಡುವುದಾಗಿ ಹೇಳಿದಾಗ ಓರ್ವ ಸವ ರ್ಣಿಯನು ಬರುವುದಾಗಿ ಒಪ್ಪಿಕೊಂಡು ಗಾಡಿಯನ್ನು ಅವರಿಗೇ ಹೊಡೆಯಲು ನೀಡಿ ತಾನೇ ನಡೆದು ಬರುತ್ತಾನೆ. ಸ್ವಲ್ಪ ದೂರ ನಡೆದ ನಂತರ ಯಾರೂ ಇಲ್ಲದನ್ನು ಗಮನಿಸಿ ಗಾಡಿಯವನು ತಾನೇ ಗಾಡಿ ಹೊಡೆಯುತ್ತಾನೆ.
ಮಿಥ್೩: ಶಿಕ್ಷಣ, ಸಂಘಟನೆ, ಹೋರಾಟ ಇವು ಅಂಬೇಡ್ಕರ್ ನೀಡಿದ ಮೂರು ಸೂತ್ರಗಳು. ಇದನ್ನರಿತು ಇಂದಿಗೂ ದಲಿತ ಸಂಘ ಟನೆಗಳು ಬಳಸುತ್ತಲೇ ಇವೆ. ಆದರೆ ಅಂಬೇಡ್ಕರ್ ಹೇಳಿರುವುದು ಹಾಗಲ್ಲ. ಎಜುಕೇಟ್, ಅಜಿಟೇಟ್ ಆಂಡ್ ಆರ್ಗನೈಸ್ ಎಂದು ಮೊದಲ ಸಂಪುಟದಲ್ಲೂ ಇದೆ. ಬಾಬಾ ಸಾಹೇಬರ ಆಪ್ತ ಕಾರ್ಯದರ್ಶಿ ನಾನಕ್ ಚಂದ್ ರತ್ತುರವರು ಬರೆದಿರುವ ‘ಲಾಸ್ಟ್ ಫೈವ್ ಹಿಯರ‍್ಸ್ ಆಫ್ ಅಂಬೇಡ್ಕರ್ ಎಂಬ ಪುಸ್ತಕದ ‘ದಿ ಲಾಸ್ಟ್ ಮೆಸೇಜ್ ಅಧ್ಯಾಯದಲ್ಲೂ ಇದೆ.
ಅದರರ್ಥ ಜಾಗೃತರಾಗಿ, ಚಿಂತನೆ ಮಾಡಿ ಮತ್ತು ಸಂಘಟಿತರಾಗಿ ಎಂದು. ಅಂದರೆ ಅವುಗಳು ಕ್ರಿಯಾ ಪದಗಳಾಗಿವೆ. ಅವುಗಳಿಗೆ ಚಲನ ಶೀಲತೆ ಇದೆ. ಅವುಗಳನ್ನು ಅಂಬೇಡ್ಕರ್‌ರವರು ಬುದ್ದಂ, ಧಮ್ಮಂ, ಸಂಘವೆಂಬ ಬುದ್ದನ ವಿಚಾರಧಾರೆಯಿಂದ ಹೇಳಿದ್ದಾರೆ. ಆದರೆ ಸಂಪುಟ ಒಂದನ್ನು ಅನುವಾದಿಸಿದವರು ಅವುಗಳನ್ನು ನಾಮಪದವಾಗಿಸಿ, ಅದಲು ಬದಲು ಮಾಡಿ ಒಂದು ಸಮುದಾಯದ ಚಿಂತನೆಯನ್ನೇ ವ್ಯವಸ್ಥಿತ ವಾಗಿ ಇಷ್ಟು ವರ್ಷಗಳ ಕಾಲ ದಿಕ್ಕು ತಪ್ಪಿಸಿದರು! ಇದು ಅಪರಾಧವಲ್ಲವೇ?
ಡಾ.ಅಂಬೇಡ್ಕರ್ ಬರಹಗಳು ಭಾಷಣಗಳ ಮೊದಲ ಸಂಪುಟದ ಈ ತಪ್ಪು ಅನುವಾದ ಕುರಿತು ಹತ್ತು ವರ್ಷಗಳ ಹಿಂದೆಯೇ ನಾವು ಅನುವಾದಕರಿಗೆ ಖುದ್ದಾಗಿ ಹೇಳಿದಾಗ್ಯೂ ಇದೀಗ ಅದೇ ಸಂಪುಟದ ಮರು ಮುದ್ರಣದಲ್ಲೂ ಅದೇ ದೋಷ ಮುಂದುವರೆದಿರುವುದು ಬೇಜ ವಾಬ್ದಾರಿ ಧೋರಣೆಯಲ್ಲವೇ?
ಮಿಥ್೪: ಅಂಬೇಡ್ಕರ್ ಆಧುನಿಕ ಮನು ಎಂದು ಹಲವಾರು ಪುಸ್ತಕಗಳಲ್ಲಿ, ಭಾಷಣಗಳಲ್ಲಿ ದಾಖಲಿಸಿದ್ದಾರೆ. ಇದಂತೂ ಕುಚೋದ್ಯವೇ ಅರಿ. ಅಂಬೇಡ್ಕರ್‌ರವರಷ್ಟು ತೀವ್ರವಾಗಿ ಮನು ಮತ್ತು ಮನುವಾದವನ್ನು ಮತ್ತೊಬ್ಬರು ಟೀಕಿಸಿಲ್ಲ. ಜೀವವಿರೋಧಿ ಎಂದು ಬಗೆದು ರಾಜಾರೋಷ ವಾಗಿ ಬೀದಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ‘ಮನುಸ್ಮೃತಿಯನ್ನು ಸುಟ್ಟು ಅಂಬೇಡ್ಕರ್ ಅಸಮಾನತೆಗೆ ಸವಾಲು ಹಾಕಿದ್ದಾರೆ. ಸಮಾನತೆ, ಸಹೋದರತೆ, ಮತ್ತು ಮಾನವೀಯ ಘನತೆಯನ್ನು ಸಾರಿದ ಅಂಬೇಡ್ಕರ್ ರವರನ್ನು ಆಧುನಿಕ ಮನು ಎನ್ನುವುದು ಸೂಕ್ತವೇ? ಹಾಗಿದ್ದರೆ ಕಳ್ಳಕಾ ಕರನ್ನು, ಕೇಡಿ ರೌಡಿಗಳನ್ನು, ಕೊಂದವರನ್ನು ಆಧುನಿಕ ಕೇಡಿ ರೌಡಿಗಳೆನ್ನ ಬಹುದೇ?
ಮಿಥ್೫: ದೇವಸ್ಥಾನ ಪ್ರವೇಶಕ್ಕಾಗಿ ಅಂಬೇಡ್ಕರ್‌ರವರು ಚಳವಳಿ ನಡೆಸಿದರು. ಹಾಗೆಯೇ ಸವರ್ಣೀಯರ ಕೆರೆಗಳನ್ನು ಮುಟ್ಟಿಸಿಕೊಳ್ಳಲು ಹೋರಾಟ ನಡೆಸಿದರು. ಹೀಗೆಂದು ನಂಬಿ ಇಂದಿಗೂ ದೇವಸ್ಥಾನ ಚಳ ವಳಿಗಳನ್ನು ನಡೆಸುವುದರಲ್ಲೇ ಸಂಘಟನೆಗಳು ನಿರತವಾಗಿದೆ. ನಿಜವೇ ನೆಂದರೆ, ಕಾಲಾರಾಂ ದೇವಸ್ಥಾನ, ಹಗೂ ಚೌಡಾರ್ ಕೆರೆ ಚಳವಳಿ ಎರ ಡನ್ನೂ ಅಂಬೇಡ್ಕರ್‌ರವರು, ಹಿಂದೂಗಳೂ ಅಸ್ಪೃಶ್ಯರನ್ನು ಹಿಂದೂಗ ಳೆಂದು ಪರಿಗಣಿಸುತ್ತಿಲ್ಲ. ನಾವೂ ಹಿಂದೂಗಳಾಗಿದ್ದರೆ ನಮಗೆ ವಿರೋಧ ಒಡ್ಡುತ್ತಿರಲಿಲ್ಲ. ಆದುದರಿಂದ ನಾವು ಹಿಂದೂಗಳಲ್ಲವೆಂದು ಹಿಂದೂ ಗಳೇ ಒಪ್ಪಿಕೊಳ್ಳುತ್ತಾರೆ. ಹಾಗೆಯೇ ನಾವು ಒಪ್ಪೊಕೊಳ್ಳುತ್ತೇವೆ. ನಮ್ಮನ್ನು ಹಿಂದೂಯೇತರರು ಸಮುದಾಯವೆಂದು ಪರಿಗಣಿಸಿ ವಿಶೇಷ ಹಕ್ಕು ಅಧಿಕಾರಗಳನ್ನು ಕೊಡಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ಮನವಿ ಸಲ್ಲಿಸುವುದಕ್ಕಾಗಿ ಪುರಾವೆ ಸೃಷ್ಟಿಸಲಿಕ್ಕಾಗಿ ಮಾಡುತ್ತಾರೆ. ಅವೆ ರೆಡು ಚಳವಳಿಗಳನ್ನಷ್ಟೇ ನಡೆಸಿದರು. ಮುಂದೆಂದೂ ಅವರು ಇಂತಹ ಕೆಲಸದಲ್ಲಿ ಕಾಲಹರಣ ಮಾಡಲಿಲ್ಲ. ಆದರೆ ದುರಂತವೆಂದರೆ ನಾವು ನಿಲ್ಲಿಸಲಿಲ್ಲ.
ಮಿಥ್೬: ‘ಮೀಸಲಾತಿ ಕಲ್ಪನೆ ಅಂಬೇಡ್ಕರ್‌ರವರದ್ದು. ಇದು ಅಪ್ಪಟ ಸುಳ್ಳು. ನಿಜಕ್ಕೂ ಮೀಸಲಾತಿ ಕಲ್ಪನೆ ಮನುಸ್ಮೃತಿಯದ್ದು. ಅಲ್ಲಿ ಚಾತುರ್ವರ್ಣ ವಾಗಿ ವಿಂಗಡಿಸಿ ಇಂತಿಂಥಾ ಕೆಲಸಗಳೆಂದೂ, ಹಕ್ಕು ಅಧಿಕಾರಗಳನ್ನು ಹಂಚಿಕೆ ಮಾಡಲಾಗಿದೆ. ವಿದ್ಯೆ ಕಲಿವ, ಸಂಪತ್ತು ಗಳಿಸುವ, ಅಧಿಕಾರ ನಡೆಸುವ, ಅತ್ಯಂತ ಮೇಲ್‌ಸ್ತರದ ಅವಕಾಶಗಳನ್ನು ಬ್ರಾಹ್ಮಣರಿಗೆ ಮೀಸಲಾಗಿರಿಸಲಾ ಗಿತ್ತು. ಉಳಿದವರಿಗೆ ನಿಷೇಧಿಸಲಾಗಿತ್ತು. ೧೯೦೨ರಲ್ಲಿ ಮನುವಾದಕ್ಕೆ ವ್ಯತಿರಿಕ್ತ ವಾಗಿ ಕೊಲ್ಲಾಪುರದ ಮಹಾರಾಜ ಛತ್ರಪತಿ ಶಾಹುರವರು ಇತರ ಹಿಂದು ಳಿದ ವರ್ಗಗಳಲ್ಲಿ ಅಧಿಕಾರದಲ್ಲಿ ಮೀಸಲಾತಿ ತಂದರು. ಅದನ್ನೇ ಅಂಬೇಡ್ಕರ್ ರವರು ಸಂವಿಧಾನ ಬದ್ದಗೊಳಿಸಿದರು ಅಷ್ಟೇ. ಆ ಕಾರಣಕ್ಕೆ ಅಂಬೇಡ್ಕರ್ ಅವರನ್ನು ಅಲ್ಲಗೆಳೆಯುವ ಅಗತ್ಯವಿಲ್ಲ.
ಮಿಥ್೭: ಅಂಬೇಡ್ಕರ್ ಬೌದ್ದಧರ್ಮಕ್ಕೆ ಮತಾಂತರ ಹೊಂದಿದರು. ಇದು ಅಪ್ಪಟ ಸುಳ್ಳು. ಅದು ಮತಾಂತರವೇ ಅಲ್ಲ. ಮೂಲ ನಿವಾಸಿ ಬಹುಜನರ ಮೂಲ ಧಮ್ಮವೇ ಬೌದ್ದ ಧಮ್ಮ. ಕಾಲಾಂತರದಲ್ಲಿ ಅವರು ಹಿಂದೂಗಳಾಗಿ ಬಲವಂತವಾಗಿ ಮಾರ್ಪಡಿಸಲ್ಪಟ್ಟಿದ್ದರಿಂದಾಗಿ ಅಸ್ಪೃಶ್ಯರಾಗಿದ್ದರು. ಆದ್ದರಿಂದ ನಾವು ಮತಾಂತರಗೊಳ್ಳುತ್ತಿಲ್ಲ. ಬದಲಾಗಿ ನಮ್ಮ ಮೂಲ ಧರ್ಮಕ್ಕೆ ಬೌದ್ದ ರಾಗಿ ಹಿಂದಿರುಗುತ್ತಿದ್ದೇವೆ ಎಂದು ನಾಗಪುರದ ದೀಕ್ಷಾ ಸಮಾರಂಭದಲ್ಲಿ ಬಾಬಾ ಸಾಹೇಬರು ಲಕ್ಷಾಂತರ ಅನುಯಾಯಿಗಳನ್ನುದ್ದೇಶಿಸಿ ಮಾತನಾಡಿ ದ್ದಾರೆ.
ಮಿಥ್೮: ಅಂಬೇಡ್ಕರ್ ಅಂತರ್ಜಾತಿ ವಿವಾಹಕ್ಕಾಗಿ ಬ್ರಾಹ್ಮಣ ವಧುವನ್ನು ಎರಡನೇ ಮದುವೆಯಾದರು. ಅಂಥಾದ್ದೇನೂ ಇಲ್ಲ. ಎರಡನೇ ಮದುವೆಯ ಅಗತ್ಯವೇ ಅಂಬೇಡ್ಕರ್‌ರವರಿಗಿಲ್ಲ. ಅಂತರ್‌ಜಾತಿ ವಿವಾಹದ ಉದ್ದೇಶವೇ ಅವರಿಗಿರಲಿಲ್ಲ. ಅಂಬೇಡ್ಕರ್‌ರವರಿಗೆ ಕೆಲವು ಧೀರ್ಘ ಕಾಲದ ಖಾಯಿಲೆಗಳಿ ದ್ದವು. ಅವರನ್ನು ಮನೆಯಲ್ಲಿಯೇ ನೋಡಿಕೊಳ್ಳಲು ಡಾ. ಶಾರದಾ ಕಬೀರ್‌ರ ವರನ್ನು ನೇಮಿಸಲಾಗಿತ್ತು. ಆ ಕಾಲದಲ್ಲಿ ಬ್ರಾಹ್ಮಣರೇ ಹೆಚ್ಚು ವೈದ್ಯರಾಗಿರುತ್ತಿ ದ್ದರು. ಅವರ ಮನೆಯಲ್ಲಿದ್ದುಕೊಂಡು ಶುಶ್ರೂಷೆ ಮಾಡುವುದಕ್ಕೆ ವಿಪರೀತ ಅಪಾರ್ಥಗಳನ್ನು ಕೆಲವರು ಸೃಷ್ಟಿಸಿದ್ದರಿಂದಾಗಿ, ಅಂಬೇಡ್ಕರ್‌ರವರು ಅವರನ್ನು ಹೆಂಡತಿಯಾಗಿಯೇ ಸ್ವೀಕರಿಸಿದರು. ಆದರೆ, ತಾವೆಂದೂ ಸತಿಪತಿಗಳಂತೆ ಇರಲಿಲ್ಲ ಎಂದು ಅಂಬೇಡ್ಕರ್‌ರವರೇ ಹೇಳಿದ್ದಾರೆ.
ಮಿಥ್೯: ಕಾಂಗ್ರೆಸ್ ಪಕ್ಷದಿಂದ ಅಂಬೇಡ್ಕರ್‌ರವರು ಕಾನೂನು ಸಚಿವ ರಾಗಿದ್ದರು. ಇದು ಅಪ್ಪಟ ಸುಳ್ಳು. ಅಂಬೇಡ್ಕರ್‌ರವರು ಒಬ್ಬ ಮತ್ಸ್ಯದ್ದಿ ರಾಜಕಾ ರಣಿ ಎಂಬುದು ನಿಜ. ಆದರೆ ಅಂಬೇಡ್ಕರ್‌ರವರು ತಮ್ಮದೇ ಸ್ವಂತ ಪಕ್ಷ ‘ಪರಿ ಶಿಷ್ಟ ಜಾತಿ ಒಕ್ಕೂಟದಿಂದ ಗೆದ್ದು ಬಂದಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರೇ ವಿನಾ ಅವರೆಂದೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದ ಸ್ಯರೂ ಆಗಿರಲಿಲ್ಲ ಎಂದು ಅವರೇ ಬರೆದುಕೊಂಡಿದ್ದಾರೆ.
ಹೀಗೆ ಇನ್ನೂ ಅನೇಕ ಸುಳ್ಳುಗಳನ್ನು ಇಷ್ಟು ವರ್ಷಗಳಲ್ಲಿ ನಂಬಿ ಪ್ರಚಾರ ಮಾಡಿ ಅಂಬೇಡ್ಕರ್‌ರವರ ಮೂಲ ವಿಚಾರಧಾರೆಗಳನ್ನು ಮರೆಮಾಡಲಾಗಿದೆ. ಈಗ ಅಂಬೇಡ್ಕರ್ ಅವರೇ ಬರೆದಿರುವ ಇಂಗ್ಲೀಷ್‌ನ ೨೧ ಸಂಪುಟಗಳ ಲಭ್ಯ ವಿದೆ. ಅವುಗಳಲ್ಲಿ ನಿಜವಾದ ವಿಚಾರಧಾರೆ ದೊರೆಯುತ್ತದೆ. ಇನ್ನಾದರೂ ಮಿಥ್ಯಗಳನ್ನು ತೊರೆದು ಸತ್ಯಗಳನ್ನು ಅನುಸರಿಸುವುದೇ ಒಳ್ಳೆಯದು.
Tagged with
ambedkar,
lekhana
ಸಲೀಂ, ಡಿ.ವಿ.ಬೈರಿಕಟ್ಟೆ, ವಿಟ್ಲ
ಕೇರಳದ ಗತಿಸಿಹೋದ ಅಗ್ರಗಣ್ಯ ವಿದ್ವಾಂಸರೋರ್ವರಾದ ಶಂಶುಲ್ ಉಲಮಾ ಇ.ಕೆ. ಅಬೂಬಕ್ಕರ್ ಮುಸ್ಲಿಯಾರ್‌ರವರ ಅನುಯಾಯಿಗಳೆಂದು ಹೇಳಲ್ಪಡುವ ಕೆಲ ಕಪಟ ಪ್ರೇಮಿಗಳು, ಆ ಮಹಾ ವಿದ್ವಾಂಸರ ತತ್ವ, ಸಿದ್ದಾಂತ ಆದರ್ಶಗಳನ್ನು ಗಾಳಿಗೆ ತೂರಿ ಅವಮಾನಿಸುತ್ತಿರುವ ಪ್ರವೃತ್ತಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
‘ಶಂಶುಲ್ ಉಲಮಾ ಅನುಸ್ಮರಣೆ ‘ಸಮಸ್ತ ಸಮಾವೇಶ ಎಂಬಿತ್ಯಾದಿ ಪುಣ್ಯ ಕಾರ್ಯವೆಂದು ನಂಬಿಸಿ ಅವರ ಮೇಲೆ ತಹ್‌ಲೀಲ್ ಸಮರ್ಪಣೆ, ಕುರಾನ್ ಹದಿಯಾ, ದುವಾ ಇತ್ಯಾದಿಗಳನ್ನು ಮಾಡದೆ ಮಹಾತ್ಮರ ಆತ್ಮತೃಪ್ತಿ ಪಡದ ಪರದೂಷಣೆ, ನಿಂದನೆ, ಪರಿಹಾಸ್ಯ, ಅನೈಕ್ಯತೆಗಳಿಗೆ ಸೀಮಿತಗೊಳಿಸಿ ಜನಸಾಮಾನ್ಯರ ಮನಸ್ಸಿನಲ್ಲಿ ಆ ಮಹಾತ್ಮರ ಬಗ್ಗೆ ತಪ್ಪು ಭಾವನೆ ಉಂಟು ಮಾಡಲು ಯತ್ನಿಸುತ್ತಿರುವುದು ದುರಂತವೆನ್ನದೆ ವಿಧಿಯಿಲ್ಲ.
ಶತಮಾನದ ಸಾಧಕರಾದ, ಜಾಗತಿಕ ಮುಸ್ಲಿಮರಲ್ಲಿ ಬಹುತೇಕರು ಗೌರವಿ ಸಲ್ಪಡುವ ಅಂತಾರಾಷ್ಟ್ರೀಯ ಮುಸ್ಲಿಂ ವಿದ್ವಾಂಸರಲ್ಲಿ ಒಬ್ಬರಾದ, ಪ್ರಸ್ತುತ ಮಾನ ವೀಯತೆಯ ಜಾಗೃತಿಗಾಗಿ ಎಂಬ ಘೋಷಣೆಯೊಂದಿಗೆ ಕೇರಳ ಯಾತ್ರೆ ಕೈಗೊಂಡು ಯಶಸ್ವಿ ಸಮಾಪ್ತಿಗೊಳಿಸಿದ ಅಖಿಲ ಭಾರತ ಸುನ್ನಿ ಜಂಇಯ್ಯತುಲ್ಲ ಉಲಮಾದ ಪ್ರಧಾನ ಕಾರ್ಯದರ್ಶಿ ಶೈಖುನಾ ಕಮರುಲ್ ಉಲಮಾ ಕಾಂತ ಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರರವರನ್ನು ನಿಂದಿಸುವುದೇ ಶಂಶುಲ್ ಉಲಮಾರ ಪರಮಗುರಿ ಎಂಬಂತೆ ಬಿಂಬಿಸಿ ಮಹಾ ಸಾಧನೆ ಮಾಡಿದ ಸಾರ್ಥ ಕತೆಯಲ್ಲಿ ಮೆರೆಯುತ್ತಿದ್ದಾರೆ.
ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಕ್ಕೆ ಗಣನೀಯವಾಗಿ ಸೇವೆ ಸಲ್ಲಿಸು ತ್ತಿರುವ ಕಾಂತಪುರಂ ಉಸ್ತಾದರ ಉನ್ನತಿಯನ್ನು ಸಹಿಸದವರು ಆಧ್ಯಾತ್ಮಿಕ ಶೋಷಣೆ ಮಾಡುತ್ತಿದ್ದಾರೆಂದು ವೃಥಾ ಆರೋಪಿಸಿ ಸಮ್ಮೇಳನ, ಯಾತ್ರೆಗ ಳನ್ನು ಹಮ್ಮಿಕೊಂಡು ಫಲಶೂನ್ಯರಾಗಿ ಮೈಪರಚಿಕೊಳ್ಳುತ್ತಿದ್ದಾರೆ. ಶಂಶುಲ್ ಉಲಮಾರ ಖಾಸಾ ವ್ಯಕ್ತಿಗಳೆನ್ನುವ ತೋಡಾರಿನ ಬದ್ರಿಯಾ ಜಮಾಅತೆ ಸಮಿತಿ ಯವರು ಹಾಗೂ ಶಂಶುಲ್ ಉಲಮಾ ಎಜುಕೇಶನ್ ಟ್ರಸ್ಟ್‌ನವರು ಮಸೀದಿ ಆವರಣದಲ್ಲಿ ಇತ್ತೀಚೆಗೆ ಪರಸ್ಪರ ಹೊಡೆದಾಟ, ಬಡಿದಾಟ, ರಕ್ತಪಾತಗಳನ್ನು ನಡೆಸಿ ಮಸೀದಿಯ ಪಾವಿತ್ರ್ಯತೆಯನ್ನು ಶಂಶುಲ್ ಉಲಮಾರ ಹೆಸರನ್ನು ಬಹಿ ರಂಗವಾಗಿ ಬೀದಿಪಾಲು ಮಾಡಿರುವುದು ಕಣ್ಯಯತ್ ಉಸ್ತಾದರ ಶಾಪದ ಫಲವೇ?
ಆಧ್ಯಾತ್ಮಿಕ ಶೋಷಣೆಯ ವಿರುದ್ಧ ಜನಜಾಗೃತಿ ಮೂಡಿಸುವವರು ಶಂಶುಲ್ ಉಲಮಾ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ಆಧ್ಯಾತ್ಮಿಕ ಕಬಳಿಕೆಯ ವಿರುದ್ಧ ಜನ ಜಾಗೃತಿ ಮೂಡಿಸಿಲ್ಲವೇಕೆ? ಪ್ರಶ್ನಿಸಿದ ಜಮಾಅತ್ ಕಮಿಟಿಯ ವಿರುದ್ಧವೇ ತಲ ವಾರು ಬೀಸಿದ್ದು ಸರಿಯೇ? ಶಂಶುಲ್ ಉಲಮಾ ತೃಪ್ತಿಪಡುವರೇ?
ನೂತನವಾದಿಗಳ ಬಗ್ಗೆ ಕಠೋರ ನಿಲುವು ತಾಳಿದ ಮಹಾನುಭಾವರು ‘ಈ ವರ್ಗವನ್ನು ಈ ಊರಿನಲ್ಲಿ ಒಮ್ಮೆಯೂ ಅನುಮತಿಸಿಲ್ಲ. ಅವರ ಆಶಯವನ್ನು ಅರಬಿ ಸಮುದ್ರಕ್ಕೆ ಎಸೆಯುತ್ತಿದ್ದೇನೆ. ಅವರು ಸಿಕ್ಕರೆ ಒದ್ದು ಓಡಿಸಬೇಕು ಎಂದು ಕರೆ ನೀಡಿ ಅವರ ಜೊತೆಗಿನ ಸಂಬಂಧಗಳನ್ನು ವಿಚ್ಛೇಧಿಸಿದ್ದರು. ಆದರೆ ಅವರ ಸಮಸ್ತದವರೆಂದು ವಾದಿಸುತ್ತಿರುವ ವ್ಯಕ್ತಿಗಳನ್ನು ನೂತನವಾದಿಗಳ ಬಗ್ಗೆ ಮೃದು ಧೋರಣೆ ಹೊಂದಿ ವೇದಿಕೆ ಹಂಚಿಕೊಳ್ಳುತ್ತಿರುವುದು ಸರ್ವೆಸಾಮಾನ್ಯವಾಗಿದೆ. ಶಂಶುಲ್ ಉಲಮಾರ ಅಚಲ ಸುನ್ನಿ ವಿಶ್ವಾಸ ಆದರ್ಶವನ್ನು ಮಣ್ಣು ಪಾಲು ಮಾಡುತ್ತಿದ್ದಾರೆ!
ಎಳೇ ವಯಸ್ಸಿನಲ್ಲೇ ಖ್ಯಾತ ವಿದ್ವಾಂಸರು, ಸಂಘಟಕರು ವಾಗ್ಮಿಯೂ ಆದ ಕಾಂತಪುರಂ ಉಸ್ತಾದರ ಕಾರ್ಯವೈಖರಿಯನ್ನು ವಿಶಾಲ ದೂರ ದೃಷ್ಟಿಕೋ ನವಿರುವ ಶಂಶುಲ್ ಉಲಮಾರೇ ಗಮನಿಸಿ ಸಮಸ್ತದ ಜೊತೆ ಕಾರ್ಯದರ್ಶಿ ಯಾಗಿ ನಿಯುಕ್ತಿಗೊಳಿಸಿದ್ದರು. ತಾಜುಲ್ ಉಲಮಾ ಉಳ್ಳಾಲ ತಂಙಳ್ ಸಮಸ್ತದ ಉಪಾಧ್ಯಕ್ಷರಾಗಿದ್ದರು. ಬಲಿಷ್ಠ ನಾಯಕರ ನೇತೃತ್ವ ಸಮಸ್ತಕ್ಕಿರುವಾಗ ಇದನ್ನು ಸಹಿಸದ ಕೆಲ ರಾಜಕೀಯ ಪುಡಾರಿಗಳು ಹಾಗೂ ನೂತನವಾದಿಗಳ ಷಡ್ಯಂತ್ರದಿಂದಾಗಿ ಪರಸ್ಪರ ಬೇರ್ಪಡಿಸಲು ಶ್ರಮಿಸಿ ಯಶಸ್ವಿಯಾದರು. ಸುನ್ನಿ ಸಮೂಹಕ್ಕಾದ ಬಲುದೊಡ್ಡ ನಷ್ಟ ಅದು.
ಕಾಂತಪುರಂ ಉಸ್ತಾದರ ಬಗ್ಗೆ
ಪ್ರಥಮವಾಗಿ ಅರಿಕ್ಕೋಡ್ ಮಸೀದಿಯ ಹಣ ಕಬಳಿಸಿದರೆಂದು ಆರೊಪ ಮಾಡಿದ ಸಂದರ್ಭದಲ್ಲಿ ಅದನ್ನು ನಿರಾಕರಿಸಿ ಅವರ ಜೊತೆಗಿದ್ದು ಸಾಂತ್ವನಪಡಿಸಿ, ವಿದೇಶದಿಂದ ಮರಳಿ ರೈಲ್ವೇ ನಿಲ್ದಾಣಕ್ಕೆ ಆಗಮಿಸುವಾಗ ಗಂಟೆಗಟ್ಟಲೆ ಕಾದು ಕುಳಿತು ಸ್ವಾಗತಿಸಿ ಬರಮಾಡಿಕೊಂಡದ್ದು ಶಂಶುಲ್ ಉಲಮಾರಾಗಿದ್ದರು.
ಶಂಶುಲ್ ಉಲಮಾ ಹಾಗೂ ಕಮರುಲ್ ಉಲಮಾ ಪರಸ್ಪರ ಅನ್ಯೋನ್ಯರಾಗಿ ದ್ದರು. ಈಗಿನ ವಿದ್ಯಮಾನದಲ್ಲಿ ಪ್ರವಾದಿ ಪುಣ್ಯ ಕೇಶ ಕಾಂತಪುರಂ ಉಸ್ತಾದರ ಕೈಗೆ ದೊರತಂದಿನಿಂದ ಅಸೂಯೆ ಎಂಬ ವ್ಯಾಧಿ ಸರ್ವವ್ಯಾಪಕವಾಗಿದೆ. ೪೦ ಕೋಟಿ ವೆಚ್ಚದ ಮಸೀದಿ ನಿರ್ಮಾಣ ಹಾಗೂ ಅದರ ಪ್ಲೆಕ್ಸ್‌ಗಳನ್ನು ನೋಡಿದಾಗ ಆಕಾಶ ಕಳಚಿ ತಲೆ ಮೇಲೆ ಬಿದ್ದಂತೆ ಹೊರಳಾಡುತ್ತಿದ್ದಾರೆ. ಕನಿಷ್ಟ ವೇದಿಕೆಯಲ್ಲಿ ತಾನೇನು ಹೇಳುತ್ತಿದ್ದೇನೆಂಬ ಅರಿವೂ ಇಲ್ಲವಾಗಿದೆ. ‘ನಾನೇ ಕೇಶಕ್ಕೆ ಸನದ್ ರಚಿ ಸಿದ್ದು, ಅದಕ್ಕೆ ಅಸಲಿಯತ್ ಇಲ್ಲ. ಆದ್ದರಿಂದ ಅದು ಪುಣ್ಯ ಕೇಶವಲ್ಲ ಎಂದು ಎಲ್ಲಾ ಕಡೆ ವೇದಿಕೆಗಳಲ್ಲಿ ಆರೋಪಿಸಿದ ಮಲಯಮ್ಮ ಸಖಾಫಿ ಇತ್ತೀಚೆಗೆ ಮಂಗ ಳಪದವಿನ ಕಬ್ಬಡಿ ಯುವಕರು ಸಂಘಟಿಸಿದ ಅನುಸ್ಮರಣೆ ಕಾರ್ಯಕ್ರಮವೆಂಬ ಗೀಬತ್ ಕಾರ್ಯಕ್ರಮದಲ್ಲಿ ‘ಸನದ್‌ನ ಮೂಲಕ ದೃಢಪಡಿಸಬೇಕಾದುದಲ್ಲ ಪುಣ್ಯ ಕೇಶ. ನೀವು ಯಾರ ಸನದ್ ಕೇಳಬೇಡಿ ಎಂಬ ಸ್ಪಷ್ಟ ಸತ್ಯವನ್ನು ಎಸ್.ಕೆ. ಯುವ ಕರ ಹೃದಯಕ್ಕೆ ನಾಟುವ ರೂಪದಲ್ಲಿ ಹೇಳಿರುವುದು ಪ್ರಸಂಶನೀಯ. ಪ್ರವಾದಿ ಮುಅಜಿಝತ್ತನ್ನು ಪರೀಕ್ಷೆಗೊಳಪಡಿಸಬಾರದೆಂಬ ಅದವನ್ನು ಕಲಿತರೆ ಮಲಯಮ್ಮ ತಿರುಗಿ ಮರಳಬಹುದೆಂಬ ನಿರೀಕ್ಷೆ ಇದೆ. ಮರಳಿದರು ವೇದಿಕೆಗೆ ಅವಕಾಶವಿಲ್ಲ. ಅರ್ಹತೆ, ಜ್ಞಾನದ ಮಾನದಂಡದಲ್ಲಿ ಕಾಂತಪುರಂ ಉಸ್ತಾದರ ವೇದಿಕೆಗೆ ಅವಕಾ ಶವಿರುತ್ತದೆ. ತಪ್ಪು ಗ್ರಹಿಸಿ ರಾಜಕೀಯ ಲಾಬಿಗಳನ್ನು ನಂಬಿ ಶಂಶುಲ್ ಉಲಮಾ ಏನಾದರೂ ಹೇಳಿದರೆ ಅದೇನೂ ದೊಡ್ಡ ಸಂಗತಿಯೇನಲ್ಲ. ಮಹಾನರು ಯಾರನ್ನೂ ಹೀಯಾಳಿಸಿಲ್ಲ. ಹೀಯಾಳಿಸಲು ಅಪಮಾನಿಸಲು, ಅನೈಕ್ಯತೆ ಸೃಷ್ಟಿ ಮಾಡಲು ಎಲ್ಲಿಯೂ ಹೇಳಿಲ್ಲ. ಬದಲು ಇಂಥಹಾ ಅನಿಷ್ಠಗಳ ವಿರುದ್ಧ ಸಮರ ಸಾರಿದವರು. ಅವರ ಜೀವನ ಶೈಲಿಯೇ ಅದಕ್ಕೆ ಸಾಕ್ಷಿ.
ಸಮಸ್ತವನ್ನು ಒಗ್ಗೂಡಿಸಲು ಕಠಿಣಶ್ರಮಪಟ್ಟು, ಬೇಕಾದ ಸೂತ್ರಗಳನ್ನು ತಿಳಿಸಿ ದವರು. ಸುನ್ನೀ ವಿಶ್ವಾಸ ಧಾರೆಗಳನ್ನು ಮೈಗೂಡಿಸಿಕೊಂಡಿರುವ ಮುಗ್ದ ಸುನ್ನಿ ಗಳು ಶಂಶುಲ್ ಉಲಮಾ ಹಾಗೂ ಕಮರುಲ್ ಉಲಮಾರನ್ನು ಸಮಾನ ಮನ ಸ್ಕರಾಗಿ ಗೌರವಿಸುತ್ತಿದ್ದಾರೆ. ಈ ವಿದ್ವತ್ ಪ್ರತಿಭೆಗಳು ಯಾರದೇ ಖಾಸಗಿ ವ್ಯಕ್ತಿಗಳ ದ್ದಲ್ಲ. ನಮ್ಮ ಸಮುದಾಯದ್ದೇ. ಸ್ವಪ್ರತಿಷ್ಠೆಗಾಗಿ ಸ್ವಾರ್ಥ, ಅಸೂಯೆಗಾಗಿ ಶಂಶುಲ್ ಉಲಮಾರ ಹೆಸರನ್ನು ದುರುಪಯೋಗಪಡಿಸುವ ಪ್ರವೃತ್ತಿಯನ್ನು ಇನ್ನಾದರೂ ಕೈ ಬಿಡಿ. ಸಮುದಾಯದ ಸುನ್ನಿಗಳಿಂದ, ತೆರೆಮರೆಯಲ್ಲಿ ನೂತನವಾದಿಗಳ ಕೃಪೆ ಯಿಂದ ಸಾವಿರಾರು ಹಣ ಸಂಗ್ರಹಿಸಿ ತಾಜುಲ್ ಉಲಮಾ, ಕಮರುಲ್ ಉಲಮಾ ರಂತಹ ಉನ್ನತ ವಿದ್ವಾಂಸರು ನೇತೃತ್ವ ಕೊಡುವ ‘ಸಮಸ್ತವನ್ನು ಮುಖ್ಯ ಗುರಿಯಾ ಗಿಸಿ ಸಭೆ, ಸಮ್ಮೇಳನಗಳನ್ನು ಶಂಶುಲ್ ಉಲಮಾರ ಹೆಸರಿನಿಂದ ಮಾಡುವು ದನ್ನು ಬಿಟ್ಟುಬಿಡಿ.
ಸಮಾಜಕ್ಕೆ ಎಳ್ಳಷ್ಟು ಒಳಿತಿಲ್ಲದ ಅನೈಕ್ಯತೆ, ಸಂಘರ್ಷ ಹಾಗೂ ವಿದ್ವಾಂಸರ ತೇಜೋವಧೆಯನ್ನೇ ಮುಖ್ಯ ಧ್ಯೇಯವನ್ನಾಗಿಸಿ ಕಾರ್ಯಾಚರಿಸುತ್ತಿರುವ ವ್ಯಕ್ತಿ, ಸಂಘ ಸಂಸ್ಥೆಗಳ ಬಗ್ಗೆ ಮುಸ್ಲಿಂ ಜನ ಸಾಮಾನ್ಯರು ಜಾಗೃತರಾಗಬೇಕಾಗಿದೆ. ಈಮಾನ್, ವಿಶ್ವಾಸ, ಹಾಗೂ ಸತ್ಕರ್ಮಗಳನ್ನು ನುಂಗಿಬಿಡುವ ಅಪಾಯಕಾರಿ ಕಂಪೆನಿಗಳು ಹಾಗೂ ಏಜೆಂಟ್‌ಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕಾದುದು ಕಾಲದ ಬೇಡಿಕೆಯಾಗಿದೆ.
Tagged with
chavadi
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೨೯ ವರ್ಷ. ಗೃಹಿಣಿಯಾಗಿದ್ದೇನೆ. ನನ್ನ ಮದುವೆಯಾಗಿ ಏಳು ವರ್ಷವಾಯಿತು. ಇಬ್ಬರು ಹೆಣ್ಣು ಮಕ್ಕಳಿ ದ್ದಾರೆ. ನನ್ನ ಗಂಡ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ವರ್ಷಕ್ಕೊಮ್ಮೆ ಊರಿಗೆ ಬರುತ್ತಾರೆ. ನನಗೆ ಎರಡನೇ ಮಗಳು ಹುಟ್ಟಿ ೧೦ ತಿಂಗಳು ಕಳೆಯಿತು. ಮಗುವಿಗೆ ಒಂಬತ್ತು ತಿಂಗಳಾ ಗುವ ವೇಳೆ ನನ್ನವರು ಊರಿಗೆ ಬಂದಿದ್ದರು. ಹೆರಿಗೆಯ ನಂತರ ೧೦ನೇ ತಿಂಗಳಲ್ಲಿ ನನಗೆ ಮುಟ್ಟು ಶುರುವಾಗಿದೆ. ನನ್ನ ಗಂಡ ಮತ್ತು ನಾನು ಇನ್ನು ಮಕ್ಕಳು ಬೇಡ ಎಂದು ತೀರ್ಮಾನಿಸಿ ದ್ದೇವೆ. ನಾವು ಈ ವೇಳೆಯಲ್ಲಿ ವಾರಕ್ಕೆ ಎರಡು ಬಾರಿ ಸೇರುತ್ತಿ ದ್ದೆವು. ಗರ್ಭ ಧರಿಸುವುದು ಬೇಡ ಎಂದು ಸಂಭೋಗದ ವೇಳೆ ನಿರೋಧ್ ಬಳಸುತ್ತಿದ್ದೆವು. ಆದರೆ ಒಂದು ಬಾರಿ ನಿರೋಧ್ ಬಳಸಿರಲಿಲ್ಲ. ನನ್ನವರು ಸೆಕ್ಸ್ ವೇಳೆ ಸ್ಖಲಿಸುವ ಸಂದರ್ಭದಲ್ಲಿ ಜನನಾಂಗ ಹೊರಕ್ಕೆ ತೆಗೆದಿದ್ದರೂ ಕೆಲವು ಹನಿಯಷ್ಟು ನನ್ನ ಜನನಾಂಗದೊಳಗೆ ಸ್ರವಿಸಿದ್ದಾರೆ. ಇದು ಅವರ ಗಮನಕ್ಕೆ ಬಂದಿ ರಲಿಲ್ಲ. ನನ್ನ ಅನುಭವಕ್ಕೆ ಬಂದಿದೆ. ಈಗ ಮುಟ್ಟು ನಿಂತಿದ್ದು, ಏಳು ದಿವಸ ಕಳೆದಿದೆ. ನನಗೆ ಈ ಸಲ ಮಗು ಬೇಡವಾಗಿದೆ. ಗರ್ಭ ನಿಂತಿದೆಯೇ ಎಂದು ಭಯವಾಗುತ್ತಿದೆ. ನನಗೆ ಗರ್ಭ ಧಾರಣೆಯಾಗದಂತೆ ಸುಲಭವಾಗಿ ಬಳಸುವ ಮಾತ್ರೆಗಳಿದ್ದರೆ ತಿಳಿಸಿ. ಆರೋಗ್ಯದಲ್ಲಿ ಬೇರೇನಾದರೂ ತೊಂದರೆಯಿಂದ ಮುಟ್ಟು ನಿಂತಿರುವ ಸಾಧ್ಯತೆಯಿದೆಯೇ? ಸೂಕ್ತ ಸಲಹೆ ಕೊಡಿ.
ಸಲಹೆ: ನೀವು ವಿನಾಕಾರಣ ಹೆದರಿದ್ದೀರೆಂದೇ ನನಗನಿ ಸುತ್ತದೆ. ನಿಮಗೆ ಈಗಲೇ ಇಬ್ಬರು ಹೆಣ್ಣುಮಕ್ಕಳಿರುವುದರಿಂದ ಮುಂದಕ್ಕೆ ಮಗು ಬೇಡ ಎನ್ನುವ ಯೋಚನೆ ಸರಿಯಾದದ್ದು. ಮೊದಲೇ ಗರ್ಭ ನಿರೋಧಕಗಳ ಬಳಕೆಯನ್ನು ಸರಿಯಾಗಿ ಉಪಯೋಗಿಸಬೇಕಿತ್ತು. ಮಾರುಕಟ್ಟೆಯಲ್ಲಿ ನಿರೋಧ್, ವಂಕಿ, ಕಾಪರ್-ಟಿಯಂತಹ ಸುಲಭ ಗರ್ಭ ನಿರೋಧಕ ಸಾಧನಗಳು ಸಿಗುತ್ತವೆ. ಸಂಭೋಗದ ಸಮಯ ವೀರ್ಯವನ್ನು ಹೊರಕ್ಕೆ ಚೆಲ್ಲಿ ದರೆ ಯಾವುದೇ ಸಮಸ್ಯೆಯಿಲ್ಲ. ಆದರೆ ನೀವು ವೀರ್ಯ ಜನನಾಂ ಗದ ಒಳಕ್ಕೆ ಚೆಲ್ಲಿದೆ ಎಂದು ಶಂಕೆ ವ್ಯಕ್ತಪಡಿಸುತ್ತೀರಿ. ಹಾಗೊಂದು ವೇಳೆ ಚೆಲ್ಲಿದ್ದಲ್ಲಿ ಗರ್ಭ ಧರಿಸಿರುವ ಸಾಧ್ಯತೆಯಿದೆ. ಸಂಭೋಗದ ವೇಳೆ ಕಾಂಡೋಂ ಬಳಸದೇ ಲೈಂಗಿಕ ಕ್ರಿಯೆ ನಡೆಸುವುದು ಯಾವತ್ತೂ ಅಪಾಯಕಾರಿಯೇ. ಯಾಕೆಂದರೆ ಇಲ್ಲಿ ತಾಳ್ಮೆ, ಎಚ್ಚರಿಕೆ ಅತ್ಯಗತ್ಯ. ನಿಮಗೆ ಮುಟ್ಟು ನಿಂತಿರುವುದು ಗರ್ಭ ಧರಿಸಿದ ಕಾರಣಕ್ಕೇ ಎಂದು ತಿಳಿಯಬೇಕಿಲ್ಲ. ಸಾಮಾನ್ಯ ತೊಂದರೆಗಳಿಂದಲೂ ಕೆಲವೊಮ್ಮೆ ಮುಟ್ಟಿನ ಅವಧಿಯಲ್ಲಿ ಏರುಪೇರು ಉಂಟಾಗುವ ಸಾಧ್ಯತೆಯಿದೆ. ಸಂಶಯ ವಿದ್ದರೆ ಯಾವುದಾದರೂ ಮಹಿಳಾ ವೈದ್ಯರ ಸಲಹೆ ಪಡೆಯಿರಿ. ಗರ್ಭ ನಿಂತಿದ್ದರೆ ಕಾನೂನು ಪ್ರಕಾರ ತೆಗೆಯಬಹುದು. ಆದರೆ ಅದಕ್ಕೆ ನಿಮ್ಮ ಗಂಡನ ಒಪ್ಪಿಗೆಯೂ ಬೇಕು.
ಇಲ್ಲದಿದ್ದರೆ ಗರ್ಭಪಾತ ಮಾಡುವುದು ಮತ್ತು ಮಾಡಿಸುವುದು ಅಪರಾಧವಾಗುತ್ತದೆ. ಗರ್ಭ ನಿಲ್ಲುವ ಸಾಧ್ಯತೆಗಳಿದ್ದಲ್ಲಿ ಮುಂಜಾಗ್ರ ತೆಯಾಗಿ ಸಂಭೋಗದ ಬಳಿಕ ಕೆಲವು ಗಂಟೆಗಳಲ್ಲಿ ಈಗ ಮಾರುಕ ಟ್ಟೆಯಲ್ಲಿ ಲಭ್ಯವಿರುವ ಮಾತ್ರೆಯನ್ನು ತೆಗೆದುಕೊಂಡರೆ ಪರಿಣಾಮ ಸಾಧ್ಯ. ಆದರೆ ಇದರಲ್ಲಿ ಶೇಕಡಾ ನೂರರಷ್ಟು ಪರಿಣಾಮ ನಿರೀಕ್ಷಿ ಸಲು ಸಾಧ್ಯವಿಲ್ಲ. ನೀವು ನಿಶ್ಚಿಂತೆಯಿಂದಿರಿ. ಒಂದು ವೇಳೆ ಗರ್ಭ ಧರಿಸಿದ್ದರೆ ಗಂಡನ ಒಪ್ಪಿಗೆ ಇದ್ದರೆ ಮಹಿಳಾ ವೈದ್ಯರನ್ನು ಭೇಟಿ ಯಾಗಿ. ಇನ್ನು ಮುಂದೆ ಸಂಭೋಗ ಸಮಯದಲ್ಲಿ ಎಚ್ಚರ ತಪ್ಪ ದಿರಿ. ನಿರೋಧ್ ಅಥವಾ ಯಾವುದಾದರೊಂದು ಗರ್ಭ ನಿರೋಧ ಕಗಳನ್ನು ಅವಶ್ಯ ರೂಢಿ ಮಾಡಿಕೊಳ್ಳಿ.
Tagged with
gupta
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಸುಮಾರು ೫,೬೦೦ಕ್ಕೂ ಹೆಚ್ಚಿನ ರಿಕ್ಷಾ ಗಳು ಓಡಾಟ ನಡೆಸುತ್ತಿದ್ದು, ಸುಮಾರು ೩೫೦ಕ್ಕೂ ಹೆಚ್ಚಿನ ರಿಕ್ಷಾ ನಿಲ್ದಾಣಗಳು ಗುರುತಿಸಲ್ಪಟ್ಟಿದ್ದರೂ, ಕೇವಲ ೭೪ ಮಾತ್ರ ಅಧಿಕೃತ ರಿಕ್ಷಾ ನಿಲ್ದಾಣಗ ಳೆಂದು ಘೋಷಿಸಲಾಗಿದೆ.
ಅವುಗಳಲ್ಲಿ ಕೆಲವೊಂದು ನಿಲ್ದಾಣಗಳನ್ನು ರಸ್ತೆ ಅಗಲೀಕರಣ, ಕಾಂಕ್ರೀಟೀಕರಣ ಸಂದ ರ್ಭದಲ್ಲಿ ತೆಗೆದು ಹಾಕಲಾಗಿದ್ದು, ಅವ್ಯವಸ್ಥೆಯ ಸ್ಥಿತಿಯನ್ನು ತಲುಪಿವೆ. ಈ ಮೂಲಕ ರಿಕ್ಷಾ ಚಾಲಕ ವರ್ಗಕ್ಕೆ ನಿಲ್ದಾಣಗಳನ್ನು ಒದಗಿಸಿಕೊ ಡದೇ ನಿರ್ಲಕ್ಷ್ಯಿಸಲಾಗಿದೆ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಲಾಗಿದ್ದರೂ, ಸಭೆಗಳೂ ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸುಸಜ್ಜಿತವಾದ ರಿಕ್ಷಾ ನಿಲ್ದಾಣಗಳನ್ನು ಸ್ಥಾಪಿ ಸಲು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳು ಒಟ್ಟಾಗಿ ಸ್ಥಳ ಗುರು ತಿಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಉಡುಪಿ, ಕುಂದಾಪುರ ಹಾಗೂ ಇನ್ನಿತರ ಕಡೆಗಳಲ್ಲಿ ಮಳೆ ಮತ್ತು ಬಿಸಿಲಿನ ತಾಪದಿಂದ ತಡೆಯಲು ಸುಸ ಜ್ಜಿತವಾದ ನಿಲ್ದಾಣಗಳನ್ನು ಒದಗಿಸಲಾಗಿದ್ದು, ಈ ಮಾದರಿಯ ನಿಲ್ದಾಣಗಳನ್ನು ಖಾಸಗಿ ಸಂಸ್ಥೆ ಗಳ ಸಹಭಾಗಿತ್ವದಲ್ಲಿ ನಗರಪಾಲಿಕೆಯು ಯಾವುದೇ ಹಣವೆಚ್ಚ ಇಲ್ಲದೇ ನಿರ್ಮಾಣ ಮಾಡಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯ ೬೦ ವಾರ್ಡುಗಳಲ್ಲಿ ಈಗಾಗಲೇ ಗುರುತಿಸ ಲ್ಪಟ್ಟ ೩೦೦ಕ್ಕೂ ಹೆಚ್ಚಿನ ಖಾಯಂ ರಿಕ್ಷಾ ನಿಲ್ದಾಣ ಗಳನ್ನು ಸ್ಥಳೀಯ ಕಾರ್ಪೊರೇಟರ್‌ಗಳು ತಮ್ಮ-ತಮ್ಮ ಕ್ಷೇತ್ರದಲ್ಲಿ ಸ್ಥಳಗಳನ್ನು ಗುರುತಿಸಿ, ನಿಲ್ದಾಣ ವನ್ನು ಒದಗಿಸಿಕೊಡುವಲ್ಲಿ ಸಹಕರಿಸಬೇಕು. ಈ ಎಲ್ಲಾ ಕೆಲವೊಂದು ಪ್ರಮುಖ ಬೇಡಿಕೆಯ ಪೂರೈಕೆಗಾಗಿ ರಿಕ್ಷಾ ಚಾಲಕರು ಮುಂದಿನ ದಿನಗ ಳಲ್ಲಿ ಪ್ರತಿಭಟಿಸುವುದು ಅನಿವಾರ್ಯವಾಗಿದೆ.
ಐವನ್ ಡಿಸೋಜ, ಅಧ್ಯಕ್ಷರು, ಮಂಗಳೂರು ಮಹಾನಗರ ಆಟೋರಿಕ್ಷಾ ಚಾಲಕರ ಸಂಘ
ವಿಠಲನ ಪ್ರಕರಣದಲ್ಲಿ ವಿದ್ಯಾರ್ಥಿ ಸಂಘಟನೆಗಳೇಕೆ ಮೌನವಾಗಿದೆ?
ವಿಠಲ ಮಲೆಕುಡಿಯ ಎಂಬ ಬಡ ಪತ್ರ್ರಿಕೋದ್ಯಮ ವಿದ್ಯಾರ್ಥಿಯನ್ನು ನಕ್ಸಲ ರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದಲ್ಲಿ ಬಂಧಿಸಲಾಗಿದೆ. ಈತನಿಗೆ ಪರೀಕ್ಷೆ ಬರೆಯಲು ಕೂಡ ಅವಕಾಶವನ್ನು ನಿರಾಕರಿಸಲಾಗಿತ್ತು.
ಇಷ್ಟೆಲ್ಲ ಆದರೂ ಒಂದೇ ಒಂದು ವಿದ್ಯಾರ್ಥಿ ಸಂಘಟನೆಯೂ ವಿಠಲನನ್ನು ಬೆಂಬಲಿಸಿ ಪ್ರತಿಭಟಿಸದಿರುವುದು ಮಾತ್ರ ವಿಪರ್ಯಾಸ. ಸಣ್ಣಪುಟ್ಟ ವಿಚಾರಗಳನ್ನು ಹಿಡಿದು ಅನಗತ್ಯವಾಗಿ ಬೀದಿಗಿಳಿದು ಪ್ರತಿ ಭಟಿಸುವ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿ ವಿಠಲನಿಗೆ ಸಾಥ್ ನೀಡ ದಿರಲು ಕಾರಣವೇನು? ಇವರೆಲ್ಲರೂ ಈತನನ್ನು ನಕ್ಸಲ್ ಎಂದೇ ತೀರ್ಮಾ ನಿಸಿದ್ದಾರೆಯೇ? ಯಾವುದೇ ಪ್ರಕರ ಣದಲ್ಲಿ ಇಲಾಖೆ ಬಂಧಿಸಿ ಜೈಲಿನ ಲ್ಲಿಟ್ಟ ತಕ್ಷಣ ಆತ ತಪ್ಪಿತಸ್ಥನಾಗುವು ದಿಲ್ಲ. ಅಲ್ಲದೇ ವಿಠಲನನ್ನು ನಕ್ಸಲ್ ಎನ್ನಲು ಇಲಾಖೆಯ ಬಳಿ ಯಾವುದೇ ಬಲವಾದ ಸಾಕ್ಷಿ-ಪುರಾವೆಗಳೂ ಇಲ್ಲ. ಹೀಗಿ ರುವಾಗ ಓರ್ವ ವಿದ್ಯಾರ್ಥಿ ಎಂಬ ನೆಲೆಯಲ್ಲಿ ಪ್ರತಿಭಟಿಸಲು ಸಂಘಟನೆಗಳಿಗೆ ಸಾಧ್ಯ ವಿಲ್ಲವೇ? ಅಥವಾ ವಿಠಲ ಎಡಪಂಥೀಯ ಎಂಬ ಅಂಶ ಇವರ ಬೆಂಬಲಕ್ಕೆ ಅಡ್ಡ ಬರುತ್ತಿ ದೆಯೇ? ಏನೇ ಆದರೂ ವಿಠಲನ ಪ್ರಕರಣ ದಲ್ಲಿ ವಿದ್ಯಾರ್ಥಿ ಸಂಘಟ ನೆಗಳು ಮೌನ ತಳೆದಿರು ವುದು ಸರಿಯಲ್ಲ. ವಿದ್ಯಾರ್ಥಿ ಎಂಬ ನೆಲೆ ಯಲ್ಲಾದರೂ ವಿಠಲನಿಗೆ ಬೆಂಬಲ ನೀಡುವ ಕೆಲಸ ಸಂಘಟನೆಗಳಿಂದ ಆಗಬೇಕಿದೆ.
ಓರ್ವ ವಿದ್ಯಾರ್ಥಿ, ಮಂಗಳೂರು
ಹಿರೇಮಠರಿಗೆ ಪೂರ್ಣ ರಕ್ಷಣೆ ನೀಡಿ
ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್‌ರವರ ಕೆಲಸ ಅತ್ಯದ್ಭುತ. ದೇಶದ ಸಂಪತ್ತನ್ನು ಲೂಟಿ ಮಾಡಿ ಕೋಟ್ಯಂತರ ರೂಪಾಯಿ ಗಳಿಸಿ ಗಣ್ಯರಂತೆ ನಟಿಸು ವವರಿಗೆ ಇವರು ಸಿಂಹಸ್ವಪ್ನ ವಾಗಿದ್ದಾರೆ. ದೇಶದ ಸಂಪತ್ತು ಕೊಳ್ಳೆ ಹೊಡೆದವರನ್ನು ಪರಿ ಸರ ನಾಶ ಮಾಡಿದವರನ್ನು ಕಳ್ಳ-ಖದೀಮರನ್ನು ನ್ಯಾಯಾ ಲಯದ ಕಟಕಟೆಯಲ್ಲಿ ನಿಲ್ಲಿಸಿ ಕೆಲವರನ್ನು ಜೈಲಿಗೆ ಸೇರಿಸಿ, ಇನ್ನುಳಿದವರನ್ನು ಜೈಲಿಗೆ ಸೇರಿಸಲು ಪ್ರಯತ್ನಿಸುವ ಹಿರೇಮಠರಂಥ ನಿಷ್ಠಾವಂತ ಅಧಿಕಾರಿಗಳಿಗೆ ಸಂಪೂರ್ಣ ರಕ್ಷಣೆ ಯನ್ನು ಸರಕಾರ ನೀಡಬೇಕು. ಈ ದೇಶದ ರಾಜಕಾ ರಣಿಗಳು ಮತ್ತು ಅವರ ತಾಳಕ್ಕೆ ತಕ್ಕಂತೆ ಕುಣಿ ಯುವ ಪೊಲೀಸರಿಂದಲೇ ಅವರಿಗೆ ರಕ್ಷಣೆ ಬೇಕಾ ಗಿದೆ. ದೇಶದ ಸಂಪತ್ತಿನ ಉಳಿವಿಗೆ ಹಾಗೂ ಬಡಜ ನರು ನೆಮ್ಮದಿಯಿಂದ ಬಾಳುವಂತಾಗಲು ಇನ್ನಷ್ಟು ಹಿರೇಮಠರಂತಹ ಜನರು ಎದ್ದು ನಿಲ್ಲಲಿ. ಸಾರ್ವ ಜನಿಕ ನೀತಿವಂತರು ಅವರ ರಕ್ಷಣೆಗೆ ನಿಲ್ಲುವ ಮೂಲಕ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರಲಿ.
ಹರಿಕೃಷ್ಣ ಪುನರೂರು, ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್
ಮಲೇರಿಯಾ ವಿರುದ್ಧ ಮನಪಾ ಎಚ್ಚೆತ್ತುಕೊಳ್ಳುವುದೇ?
ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಆದರೆ ಆಗಾಗ ಸುರಿಯು ತ್ತಿರುವ ತುಂತುರು ಮಳೆಯಿಂದಾಗಿ ರೋಗ ಹರಡುವ ಭೀತಿ ಉಂಟಾಗಿದೆ.
ಪಾಲಿಕೆ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ತುಂತುರು ಮಳೆಯ ನೀರು ನಿಂತ ಪರಿಣಾಮ ಸೊಳ್ಳೆ ಉತ್ಪಾದನಾ ಘಟಕಗಳಾಗಿ ಮಾರ್ಪ ಟ್ಟಿದೆ. ಇದರಿಂದ ಮಲೇರಿಯಾದಂತಹ ರೋಗ ಗಳು ಭಾದಿಸುವುದರಲ್ಲಿ ಅನುಮಾನವಿಲ್ಲ. ಪರಿಸ್ಥಿತಿ ಹೀಗಿದ್ದರೂ ಪಾಲಿಕೆಯ ಆರೋ ಗ್ಯಾಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆಯೇ ಎಂಬ ಅನುಮಾನ ಕಾಡುತ್ತದೆ. ಜನರ ಆರೋ ಗ್ಯದ ಹಿತದೃಷ್ಟಿಯಿಂದ ಪಾನಿಪುರಿ ಅಂಗಡಿ ಗಳ ಮೇಲೆ ದಾಳಿ ನಡೆಸುವ ಆರೋಗ್ಯಾಧಿ ಕಾರಿಗಳು ಸೊಳ್ಳೆ ಉತ್ಪಾದಿಸುವ ಕೊಳಚೆ ಪ್ರದೇ ಶಗಳ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ? ಕಾವೂರು, ಕಂಕನಾಡಿ, ಬಂದರ್, ಜೆಪ್ಪು ಮುಂತಾದ ಕಡೆಗಳಲ್ಲಿ ಮಳೆನೀರು ನಿಂತು ಕೊಳಚೆ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಈ ಭಾಗದ ಕಾರ್ಪೋರೇಟರ್‌ಗಳು ಯಾಕೆ ಗಮನ ಹರಿಸುತ್ತಿಲ್ಲ ಎನ್ನುವುದೇ ತಿಳಿಯು ತ್ತಿಲ್ಲ. ರೋಗ ಬಂದ ನಂತರ ಕ್ರಮ ಕೈಗೊ ಳ್ಳುವ ಪಾಲಿಕೆ ಮೊದಲೇ ಈ ಪ್ರದೇಶಗಳಲ್ಲಿ ಫಾಗಿಂಗ್ ನಡೆಸಿದರೆ ಒಳ್ಳೆಯದಲ್ಲವೇ?
ಆಗ ಸೊಳ್ಳೆ ಉತ್ಪಾದನೆಯಾಗುವುದನ್ನು ತಪ್ಪಿಸಬಹುದು. ಇದರಿಂದ ಮಲೇರಿಯಾ ದಂತಹ ರೋಗ ಹರಡುವುದನ್ನು ನಿಲ್ಲಿಸ ಬಹುದು. ಇನ್ನಾದರೂ ಪಾಲಿಕೆಯ ಆರೋ ಗ್ಯಾಧಿಕಾರಿಗಳು ಇತ್ತ ಗಮನಹರಿಸಲಿ.
ಸಂಕೇತ್ ನಾಯಕ್, ಕಂಕನಾಡಿ
ನೌಷಾದ್ ಖಾಸಿಂಜೀ ಹತ್ಯೆ ತನಿಖೆಯ ಹಾದಿ ಎತ್ತ ಸಾಗುತ್ತಿದೆ?
ಯುವ ವಕೀಲ ನೌಷಾದ್ ಖಾಸಿಂಜೀಯವರ ಹತ್ಯೆಯಾಗಿ ಮೂರು ವರ್ಷ ಗಳು ಕಳೆದುಹೋಯಿತು. ಪ್ರಕರಣದಲ್ಲಿ ಭಾಗಿಯಾದವರು ಮತ್ತು ಇದಕ್ಕೆ ಕಾರಣ ಕರ್ತರಾದವರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಪ್ರಕರಣದ ನೈಜ ಆರೋ ಪಗಳ ಬಂಧನ ಮಾತ್ರ ಇದುವರೆಗೂ ಸಾಧ್ಯವಾಗಿಲ್ಲ. ಸಾಧ್ಯವಾಗುವ ಸಂಭವ ಕೂಡಾ ಕಾಣುತ್ತಿಲ್ಲ. ಏಕೆಂದರೆ ಈ ಹತ್ಯೆಯ ಹಿಂದೆ ಪೊಲೀಸ್ ಅಧಿಕಾರಿಗಳ ನೇರ ಕೈವಾ ಡವಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಹತ್ಯೆಯ ಬಳಿಕ ಹಲವು ಸಾಮಾಜಿಕ ಕಳಕಳಿಯುಳ್ಳ ಪ್ರಗತಿಪರ ಸಂಘಟನೆಗಳು ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿತ್ತು. ಆದರೆ ಇದೀಗ ಸಂಘಟನೆಗಳೂ ಸುಮ್ಮನಾಗಿವೆ. ಇನ್ನು ವಕೀ ಲರು ಕೂಡಾ ತಮ್ಮ ಸಹೋದ್ಯೋಗಿಯ ಹತ್ಯೆಯಾಗಿ ಮೂರು ವರ್ಷಗಳು ಸಂದರೂ ಕೂಡಾ ಪ್ರಕರಣಕ್ಕೆ ನ್ಯಾಯ ಒದಗಿಸಲು ಯಾಕೆ ಪ್ರಯತ್ನಿಸುತ್ತಿಲ್ಲ? ಸಣ್ಣಪುಟ್ಟ ವಿಷ ಯಗಳಿಗೂ ಪ್ರತಿಭಟಿಸುವ ವಕೀಲರು ಇದಕ್ಕೆ ಯಾಕೆ ಪ್ರತಿಭಟಿಸುತ್ತಿಲ್ಲ? ನೌಷಾದ್ ಖಾಸಿಂಜೀಯ ಹತ್ಯೆ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ವಿಫಲವಾ ಗಿರುವುದರಿಂದ ನೈಜ ಆರೋಪಿಗಳು ಬಂಧನವಾಗಬೇಕಾದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಲು ಪ್ರಗತಿಪರ ಸಂಘಟನೆಗಳು, ವಕೀಲರ ಸಹಕಾರವನ್ನು ಆಗ್ರಹಿಸುವ ಕೆಲಸವಾಗಬೇಕಾಗಿದೆ.
ಇಸ್ಮಾಯಿಲ್ ಶಾಫಿ, ಅಳೇಕಾಲ-ಉಳ್ಳಾಲ
ಕಳ್ಳರನ್ನು ನಿಯಂತ್ರಿಸಿ
ಪುತ್ತೂರು ಪೇಟೆ ಹಾಗೂ ಸುತ್ತಲಿನ ಪ್ರದೇಶಗ ಳಲ್ಲಿ ಕಳ್ಳರ ಹಾವಳಿ ಮಿತಿಮೀರಿದೆ. ಪ್ರತಿನಿತ್ಯ ಎಲ್ಲಾ ದರೊಂದು ಕಡೆ ಸಣ್ಣಪುಟ್ಟ ಕಳ್ಳತನವಾದರೂ ನಡೆದೇ ನಡೆಯುತ್ತದೆ. ಪೊಲೀಸ್ ಇಲಾಖೆ ಎಷ್ಟೇ ಪ್ರಯತ್ನ ಪಟ್ಟರೂ ಕಳ್ಳರನ್ನು ಸಂಪೂರ್ಣ ಮಟ್ಟಹಾಕಲು ಸಾಧ್ಯ ವಿಲ್ಲದಾಗಿದೆ. ಮನೆಯ ಹೊರಗಿಟ್ಟ ಅಲ್ಯೂಮಿನಿ ಯಂ ಸೊತ್ತು, ಕಬ್ಬಿಣ, ಪಂಪ್ ಸೆಟ್ ಎಲ್ಲವೂ ಕಳ್ಳರ ಪಾಲಾಗುತ್ತಿದೆ. ಬೆಳಗ್ಗೆ ಒಂದು ಮನೆಯನ್ನು ಗುರು ತಿಸಿ ರಾತ್ರಿಯ ವೇಳೆ ಅನಾಯಾಸವಾಗಿ ಕೃತ್ಯಕ್ಕೆ ಇಳಿ ಯುತ್ತಾರೆ. ಗುಜರಿ ಹೆಕ್ಕುವ, ಸೇಲ್ಸ್ ಮೆನ್‌ಗಳ ವೇಷ ಧರಿಸಿ ಕಳ್ಳರು ಹಗಲು ಹೊತ್ತು ಆರಾಮಾಗಿ ತಿರುಗಾ ಡುತ್ತಾರೆ. ಪೊಲೀಸರು ರಾತ್ರಿಯ ವೇಳೆ ಗಸ್ತು ನಿರತ ರಾಗಿರುವಂತೆಯೇ ಕಳ್ಳರು ಚಾಕಚಕ್ಯತೆಯಿಂದ ಕೃತ್ಯ ಕ್ಕಿಳಿಯುತ್ತಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಬೇಕು. ಕಳ್ಳರನ್ನು ನಿಯಂತ್ರಿ ಸಲು ನಾಗರಿಕರ ಸಹಾಯದೊಂದಿಗೆ ಪ್ರತ್ಯೇಕ ತಂಡ ವನ್ನು ರಚಿಸಿ ಕಾರ್ಯಾಚರಣೆಗೆ ಇಳಿಯುವುದು ಒಳ್ಳೆ ಯದು. ಇದರಿಂದ ನಾಗರಿಕರು ನೆಮ್ಮದಿಯಿಂದ ಇರ ಬಹುದಾಗಿದೆ.
ನಾಗೇಶ್ ಕೆ., ಪುತ್ತೂರು
ಮಠಾಧೀಶರ ಲಾಬಿ ಯಾಕೆ?
ರಾಜ್ಯದಲ್ಲಿ ಬಿಜೆಪಿ ಸರಕಾರ ಉರುಳಲಿ, ಉರುಳದೇ ಇರಲಿ. ಸಾಮಾನ್ಯ ಜನರಿಗೆ ಅದರ ಬಗೆಗಿನ ಆಸಕ್ತಿ ಮಾಯವಾಗಿದೆ. ಪ್ರತೀ ಬಾರಿ ಸರಕಾರ ಅಸ್ಥಿರತೆಯನ್ನು ಕಾಣುವಾಗಲೂ ವಿವಿಧ ಮಠಗಳ ಮಠಾಧೀಶರು ಸರಕಾರದ ಪರ ಇಲ್ಲವೇ ವಿರುದ್ಧ ಲಾಬಿ ನಡೆಸುತ್ತಾರೆ. ಮಾಜಿ ಮುಖ್ಯ ಮಂತ್ರಿ, ಹಾಲಿ ಮುಖ್ಯಮಂತ್ರಿ ಎಲ್ಲರೂ ಮಠಾ ಧೀಶರ ಬಳಿ ಓಡಿಹೋಗಿ ಸಾಷ್ಟಾಂಗ ಬೀಳು ತ್ತಾರೆ. ಇವರಿಗೆ ‘ಸಂಕಟ ಬಂದಾಗ ವೆಂಕಟರ ಮಣ’ ಎನ್ನುವಂತೆ ಮಠಾಧೀಶರೇ ದಾರಿ ತೋರಿ ಸುತ್ತಾರೆ. ಇದು ನಿಜಕ್ಕೂ ಆಶ್ಚರ್ಯ ತರಿಸುತ್ತದೆ. ಲೌಕಿಕ ಸುಖದಿಂದ ವಿಮುಕ್ತರಾಗಬೇಕಾದ ಮಠಾ ಧೀಶರು ಕುಚಿ, ಪದವಿಗಳ ಕುರಿತು ಯೋಚಿಸು ವುದೂ ತಪ್ಪು ಎನ್ನುವುದು ನನ್ನ ಭಾವನೆ. ಹೀಗಿರು ವಾಗ ಮಠಾಧೀಶರು ಯಾಕೆ ಹಿಂಗಾಡ್ತಾರೋ?
ಗೀತಾ ಸತೀಶ್, ಪುತ್ತೂರು
ನಗರದ ಖಾಸಗಿ ಬಸ್ಸಿನ ಸೀಟು ಕಿತ್ತು ಹಾಕಿ
ಗೋಲ್ಡನ್ ಎಂಬ ಹೆಸರು ಬರೆದ ಕೆಲವು ಬಸ್ಸುಗಳು ನಗರದ ರಸ್ತೆಗಳಲ್ಲಿ ಓಡಾಡುತ್ತಿದೆ. ಈ ಬಸ್‌ಗಳಲ್ಲಿ ಸೀಟುಗಳನ್ನು ಒತ್ತೊತ್ತಾಗಿ ಬಹ ಳಷ್ಟು ಸಮೀಪ ಅಳವಡಿಸಲಾಗಿದ್ದು ಪ್ರಯಾ ಣಿಕರಿಗೆ ಹಿಂಸೆಯಾಗುತ್ತಿದೆ. ೪೫ಇ ಕೆಎ ೧೯ ಸಿ ೧೦೦೧ ನಂಬರಿನ ಬಸ್‌ನಲ್ಲಿ ಡ್ರೈವರ್ ಸೀಟಿನ ಹಿಂಭಾಗದಲ್ಲಿ ಅಳವಡಿಸಲಾದ ಲೇಡಿಸ್ ಸೀಟು ಗಳೂ ಬಹಳ ಸಮೀಪವಾಗಿದ್ದು. ಮಹಿಳೆಯ ರಿಗೆ ಕುಳಿತುಕೊಳ್ಳಲು ಇದರಲ್ಲಿ ತುಂಬಾ ಕಷ್ಟ ವಾಗುತ್ತಿದೆ.
ಹಿಂದೆ ಆರು ಅಡಿಗಿಂತ ಹೆಚ್ಚು ಎತ್ತರ ಇರುವವರಿಗೆ ಬಸ್‌ಗಳಲ್ಲಿ ಕುಳಿತುಕೊಳ್ಳಲು ಕಷ್ಟವಾಗುತ್ತಿತ್ತು. ಈಗ ರಸ್ತೆಗಿಳಿಯುತ್ತಿರುವ ಬಸ್ಸು ಗಳಲ್ಲಿ ಐದು, ಐದೂವರೆ ಅಡಿ ಎತ್ತರ ಇರುವ ಪುರುಷ, ಮಹಿಳೆಯರಿಗೂ ನಿತ್ಯ ಹಿಂಸೆ ಆಗುತ್ತಿದೆ.
ಇತ್ತೀಚೆಗೆ ಸಾರಿಗೆ ಅದಾಲತ್‌ನಲ್ಲಿ ಸೀಟು ಗಳ ಅಂತರ ಕಡಿಮೆ ಇರುವ ಬಗ್ಗೆ ಪ್ರಸ್ತಾಪ ವಾಗಿದ್ದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳು ವುದಾಗಿ ಸಾರಿಗೆ ಅಧಿಕಾರಿಗಳು ಭರವಸೆ ನೀಡಿ ದ್ದರು. ಇದಾಗಿ ಒಂದೆರಡು ವಾರ ಕಳೆಯುವು ದರ ಒಳಗೆ ‘ಗೋಲ್ಡನ್’ ಎಂಬ ಹೆಸರಿನ ಕೆಲವು ಬಸ್‌ಗಳು ರಸ್ತೆಗಿಳಿದಿದೆ. ಸಾರಿಗೆ ಅಧಿ ಕಾರಿಗಳು ಈ ಬಸ್‌ಗಳನ್ನು ಪರಿಶೀಲನೆ ಮಾಡದೆ ಅನುಮತಿ ನೀಡಿದ್ದಾರೆಂದು ಅನಿ ಸುತ್ತಿದೆ. ಇನ್ನೂ ಅನೇಕ ಬಸ್‌ಗಳಲ್ಲಿ ಸೀಟು ಗಳ ಅಂತರ ಬಹಳಷ್ಟು ಕಡಿಮೆ ಇದೆ ಇಂಥ ಬಸ್‌ಗಳನ್ನು ತಪಾಸಣೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
ವಿದ್ಯಾಶ್ರೀ, ಕುಳಾಯಿ
ಉಡುಪಿಯಲ್ಲಿ ಕುಡಿಯಲು ನೀರಿಲ್ಲ
ಉಡುಪಿ ಜಿಲ್ಲೆಯ ಜನರು ಕುಡಿಯುವ ನೀರಿ ಗಾಗಿ ಪರದಾಟ ಆರಂಭಿಸಿದ್ದಾರೆ. ಜಿಲ್ಲೆಯ ಜೀವ ನದಿ ಎಂದೇ ಕರೆಸಿಕೊಂಡಿ ರುವ ಸ್ವರ್ಣಾ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿ ರುವುದು ಸಮಸ್ಯೆ ಸೃಷ್ಟಿಸಿದೆ. ಈ ಬಾರಿ ಮಳೆಯೂ ವಿಳಂ ಬವಾಗಿದ್ದು, ಇನ್ನೂ ಕೆಲವು ಕಾಲ ಮಳೆ ಬಾರದೇ ಹೋದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಉಡುಪಿ ನಗರಸಭೆ ಉಡುಪಿ ಜಿಲ್ಲೆಗೆ ಹೊರಗಿನಿಂದ ನೀರು ತರಲು ವ್ಯವಸ್ಥೆ ಮಾಡಲಿ. ಮನೆ-ಮನೆಗೆ ಕುಡಿಯುವ ನೀರನ್ನು ಪೂರೈಕೆ ಮಾಡಲು ನಗರಸಭೆ ಯೋಜನೆ ಹಾಕಿ ಕೊಳ್ಳಲಿ.
ಸುಚಿತ್ರಾ ಶೆಣೈ, ಉಡುಪಿ
Tagged with
auto,
nimminda
ಹನುಮಂತ ಗೌಡ, ಕಾರ್ನಾಡು-ಮೂಲ್ಕಿ
ಎನ್‌ಆರ್‌ಎಚ್‌ಎಂ ಫಂಡಿನ ದುರುಪಯೋಗ ಮತ್ತು ಅದರಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಸಿಲುಕಿ ಉತ್ತರಪ್ರದೇಶ ರಾಜ್ಯದ ಓರ್ವ ಮಂತ್ರಿಯೇ ಜೈಲು ಸೇರಿರಬೇಕಾದರೆ ಇತ್ತ ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆಯ ಒಂದು ಸಣ್ಣ ಅಂಗವಾದ ಮುಲ್ಕಿಯ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಕಳೆದ ೩-೪ ವರ್ಷದಿಂದ ಲಕ್ಷಾಂತರ ರೂಪಾಯಿ ಅವ್ಯ ವಹಾರ ನಡೆದಿದೆ ಹಾಗೂ ಈಗಲೂ ನಡೆಯುತ್ತಿರಬೇಕಾ ದರೆ ಒಟ್ಟಾರೆ ಕರ್ನಾಟಕ ರಾಜ್ಯದಲ್ಲಿ ಎಷ್ಟು ಕೋಟಿಯ ಹಗ ರಣ ನಡೆದಿರಬಹುದು. ಇದೆಲ್ಲದರ ಬಗ್ಗೆ ತಿಳಿದಿದ್ದರೂ ಅದ ರಲ್ಲಿ ಶಾಮೀಲಾಗಿರುವ ಜಿಲ್ಲಾ ಆರೋಗ್ಯಕಾರಿ ಮತ್ತು ಅವರ ಇಲಾಖೆಯ ಇತರರು ಹಗರಣಗಳನ್ನು ಮುಚ್ಚಿ ಹಾಕುತ್ತಾ ಬಂದಿದ್ದಾರೆ.
ಸುಮಾರು ನಾಲ್ಕು ವರ್ಷದ ಹಿಂದೆ ಅಲ್ಲಿ ಗುಮಾಸ್ತ ನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅಲ್ಲಿಯೇ ವೈದ್ಯಾಧಿ ಕಾರಿಯಾಗಿದ್ದ ಮಹಿಳೆ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಯಲ್ಲಿ ಹಿಂದೆ ಎಟೆಂಡರ್ ಆಗಿದ್ದು, ಇತ್ತೀಚೆಗೆ ಗುಮಾಸ್ತ ನಾಗಿ ಭಡ್ತಿ ಹೊಂದಿರುವ ವ್ಯಕ್ತಿಯೊಬ್ಬರು ಸೇರಿ ಸುಮಾರು ರೂಪಾಯಿ ೧.೫೦ ಲಕ್ಷದಷ್ಟು ಮೊತ್ತವನ್ನು ಗುಳುಂ ಮಾಡಿರು ತ್ತಾರೆ. ಈ ವಿಚಾರ ಬೆಳಕಿಗೆ ಬಂದಾಗ ಇಲಾಖೆಯಿಂದಲೇ ಲೆಕ್ಕ ಪರಿಶೋಧನೆ ನಡೆಸಿ ಗುಮಾಸ್ತನನ್ನು ಅವರ ಮನೆಗೆ ಹತ್ತಿರದ ಜಾಗಕ್ಕೆ ವರ್ಗಾವಣೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲಾಯಿತು.
ಇದಾದ ನಂತರ ಎಟೆಂಡರ್ ಆಗಿದ್ದ ವ್ಯಕ್ತಿ ವಾರದಲ್ಲಿ ೨ ದಿನ ಓ.ಓ.ಡಿ. ಮೇಲೆ ಮುಲ್ಕಿಯಲ್ಲಿ ಸೇವೆ ಮಿಕ್ಕ ನಾಲ್ಕು ದಿನ ಮಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೇವೆ ಮಾಡುವ ನೆಪ ದಲ್ಲಿ ಮುಲ್ಕಿ ಮತ್ತು ಕೇಂದ್ರ ಕಚೇರಿಗೆ ಸಂಪರ್ಕ ಸೇತುವಾಗಿ ಅಥವಾ ಒಂದು ರೀತಿಯ ದಲ್ಲಾಳಿ ರೂಪದಲ್ಲಿ ಕೆಲಸ ಮಾಡುತ್ತಾ ಇನ್ನೋರ್ವ ಮಹಿಳಾ ಗುಮಾಸ್ತೆಯ ಜತೆ ಸೇರಿ ಕಳೆದ ಮೂರು ವರ್ಷದಿಂದ ಬಡರೋಗಿಗಳ ಉದ್ಧಾರಕ್ಕಾಗಿ ಇರುವ ಈ ಫಂಡಿನ ಬಹುತೇಕ ಹಣವನ್ನು ಆಸ್ಪತ್ರೆಗೆ ಬೇಕಾದ ಸಾಮಾಗ್ರಿ ಖರೀದಿ ಮಾಡುವಾಗ ಬಿಲ್‌ನಲ್ಲಿ ಗೋಲ್‌ಮಾಲ್ ಮಾಡಿಸಿ ಇಬ್ಬರೂ ಹಂಚಿ ತಿನ್ನುತ್ತಿದ್ದಾರೆ. ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಿ ಬಿಲ್ಲಿನ ಜಾಡು ಹಿಡಿದರೆ ಎಲ್ಲಾ ವಿಚಾರ ಬಯಲಿಗೆ ಬರಲಿದೆ. ಈ ವಿಚಾರ ಕಾರ್ನಾಡು ಮತ್ತು ಮುಲ್ಕಿ ಪರಿಸರದ ಎಲ್ಲಾ ಅಂಗ ಡಿಯವರಿಗೂ ತಿಳಿದಿದೆ. ಯಾಕೆಂದರೆ, ಅಂಗಡಿಯವರ ಹತ್ತಿರ ಹೇಳುವಾಗ ಇದರಲ್ಲಿ ಶೇಕಡಾ ೨೫ ಜಿಲ್ಲಾ ವೈದ್ಯಾಧಿಕಾರಿಗೆ ಸಲ್ಲಬೇಕಾಗುತ್ತದೆ. ಆದ್ದರಿಂದ, ಅದನ್ನು ಸೇರಿಸಿ ಬಿಲ್ ಮಾಡಿರಿ ಎಂದು ಈ ಅಟೆಂಡರ್ ಅಂಗಡಿಯವರ ಹತ್ತಿರ ಹೇಳಿಕೊಳ್ಳುವ ವಿಚಾರ ಗುಟ್ಟಾಗಿ ಉಳಿದಿಲ್ಲ.
ಈ ಎಲ್ಲಾ ಹಗರಣ ಹಾಗೂ ಆರೋಗ್ಯ ಕೇಂದ್ರದ ಅವ್ಯವ ಸ್ಥೆಯ ಮೂಲ ಸೂತ್ರಧಾರಿ ಇಲ್ಲಿಯ ಮುಖ್ಯ ವೈದ್ಯಾಧಿಕಾರಿ ಮಹಿಳೆಯಾಗಿದ್ದಾರೆ. ಇವರು ಕಳೆದ ಸುಮಾರು ೧೫ ವರ್ಷಗ ಳಿಂದ ಇಲ್ಲಿ ಒಂದು ರೀತಿಯ ಅನಾರೋಗ್ಯಕರವಾಗಿ ಕರ್ತವ್ಯ ನಡೆಸುತ್ತಿದ್ದಾರೆಂದರೆ ತಪ್ಪಾಗಲಾರದು. ಕಾನೂನು ಪ್ರಕಾರ ಇಲ್ಲಿ ಸರಕಾರ ಕೊಡಮಾಡಿರುವ ವಸತಿಗೃಹದಲ್ಲಿ ವಾಸಮಾಡಿ ರೋಗಿ ಗಳ ಸೇವೆಗೆ ಇವರು ಸದಾ ಲಭ್ಯರಿರಬೇಕಾಗಿದ್ದು, ಆದರೆ ಇಲ್ಲಿಂದ ಸುಮಾರು ಎಂಟು ಕಿ.ಮೀ. ದೂರದ ಪಡುಬಿದ್ರಿಯಲ್ಲಿ ಇವರ ಐಶಾರಾಮಿ ಬಂಗಲೆ ಇದ್ದು ಪಕ್ಕದಲ್ಲಿಯೇ ಸ್ವಂತ ಖಾಸಗಿ ನರ್ಸಿಂಗ್ ಹೋಮ್ ಮತ್ತು ಕ್ಲಿನಿಕ್‌ಗೆ ಲಕ್ಷಾಂತರ ರೂಪಾಯಿ ಹೂಡಿಕೆ (ಗಂಡ-ಹೆಂಡತಿ ಇಬ್ಬರೂ ಸರಕಾರಿ ವೈದ್ಯರಾಗಿರು ವುದು ಇದಕ್ಕೆ ಕಾರಣ) ಮಾಡಿರುವುದರಿಂದ ಸಹಜವಾಗಿಯೇ ಇವರು ಇಲ್ಲಿ ವಾಸ ಮಾಡಲಿಕ್ಕಾಗುವುದಿಲ್ಲ.
ಇಷ್ಟೆಲ್ಲಾ ತಿಳಿದರೂ ಮಂಗಳೂರಿಗೆ ಜಿಲ್ಲಾ ವೈದ್ಯಾಧಿಕಾರಿ ಗಳಾಗಿ ಬರುವ ಭ್ರಷ್ಟರಿಗೆ ಪ್ರತೀ ತಿಂಗಳು ಕಪ್ಪಕಾಣಿಕೆಯನ್ನು ಇವರ ದಲ್ಲಾಳಿ ಅಟೆಂಡರ್‌ನ ಮುಖಾಂತರ ಸಮರ್ಪಣೆ ಮಾಡುತ್ತಾ ಬಂದಿರುವುದರಿಂದ ಇವರ ಸ್ವೇಚ್ಛಾಚಾರ ಕಳೆದ ೧೫ ವರ್ಷಗಳಿಂದ ಯಾವುದೇ ಆತಂಕವಿಲ್ಲದೆ ನಡೆಯುತ್ತಾ ಬಂದಿದೆ. ಇವರು ಈ ಆಸ್ಪತ್ರೆಗೆ ಕಾಲಿಟ್ಟ ನಂತರ ಇಲ್ಲಿನ ಸೇವೆಯು ಯಾವ ಮಟ್ಟದಲ್ಲಿ ಇದೆ ಎಂಬುವುದರ ಬಗ್ಗೆ ಬಡರೋಗಿಗಳ ಬಗ್ಗೆ ನಿಜವಾದ ಕಾಳಜಿಯುಳ್ಳ ಮೇಲಧಿಕಾ ರಿಗಳು ಬಂದು ಅಮೂಲಾಗ್ರ ವಿಚಾರಣೆ ಮಾಡಿದರೆ ಮಾತ್ರ ಸಾಧ್ಯ, ಮಾತ್ರವಲ್ಲದೆ ಕೇವಲ ಕಾಟಾಚಾರಕ್ಕೆ ಭೇಟಿ ನೀಡಿದರೆ ಸಾಲದು. ಸಾರ್ವಜನಿಕರ ದೂರಿಗೆ ಬೆಲೆಕೊಟ್ಟು ಕಳೆದ ಬಾರಿ ವೈದ್ಯಾಧಿಕಾರಿ ಮಹಿಳೆಯನ್ನು ದೂರದ ಬಾಗಲಕೋಟೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ದಲ್ಲಾಳಿ ಅಟೆಂಡರ್‌ನ ಮುಖೇನ ಬೆಂಗಳೂರಿನ ದೊರೆಗಳಿಗೆ ಲಕ್ಷಾಂ ತರ ರೂಪಾಯಿ ಕಪ್ಪ ಕೊಟ್ಟು ವರ್ಗಾವಣೆಯನ್ನು ರದ್ದುಗೊ ಳಿಸಲಾಗಿತ್ತು. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತು ಈ ಹೆಂಗ ಸನ್ನು ಇಲ್ಲಿಂದ ಎತ್ತಂಗಡಿ ಮಾಡದಿದ್ದರೆ ಸಾರ್ವಜನಿಕರ ಹಿತ ದೃಷ್ಟಿ ಯಿಂದ ನಾವು ಕೋರ್ಟಿನಲ್ಲಿ ದಾವೆ ಹೂಡಬೇಕಾಗ ಬಹುದು.
ಇದಕ್ಕೆಲ್ಲಾ ಪರಿಹಾರವೆಂದರೆ ಇಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಸಮಯ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಯನ್ನು ಮತ್ತು ವೈದ್ಯರನ್ನು ಇಲ್ಲಿಂದ ಬೇರೆಡೆ ವರ್ಗಾವಣೆ ಮಾಡುವುದಾಗಿದೆ. ಈ ಎಲ್ಲಾ ಅಂಶಗಳ ಬಗ್ಗೆ ಸಂಬಂಧಪಟ್ಟವರು ವೈಯಕ್ತಿಕ ಕಾಳಜಿ ವಹಿಸಿ ಸಾರ್ವಜನಿ ಕರ ಸೊತ್ತು ಪೋಲಾಗುವುದರ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಸಿ ಸಂಬಂಧಪಟ್ಟವರಿಗೆ ಸೂಕ್ತ ಶಿಕ್ಷೆ ವಿಧಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಇಲಾಖೆಯ ಬಗ್ಗೆ ಇರುವ ಕೆಟ್ಟ ಅಭಿಪ್ರಾಯವನ್ನು ದೂರಮಾಡಬೇಕಾಗಿ ಸಮಸ್ತ ನಾಗರಿಕರ ಪರವಾಗಿ ತಮ್ಮಲ್ಲಿ ವಿನಂತಿ ಮಾಡುತ್ತಿದ್ದೇನೆ.
Tagged with
bahiranga
ಬೆಂಗಳೂರಿನಲ್ಲಿ ಮೊನ್ನೆ-ಮೊನ್ನೆ ನಡೆದಿದ್ದ ಒಂದು ಪತ್ರಿಕಾಗೋಷ್ಠಿಯಿಂದ ಹೊಸ ಸುದ್ದಿ ಸಿಕ್ಕಿದೆ. ಭಾರೀ ಪ್ರಚಾರ ಪಡೆದು ಬಿಡುಗಡೆಯಾಗಿರುವ ‘ಪರಿ’ ಚಿತ್ರ ಲಾಸ್ ಅಂತೆ, ಅದರ ತಂಡದಲ್ಲಿ ಗಂಭೀರ ಒಡಕು ಮೂಡಿದೆಯಂತೆ. ಅದು ಅಲ್ಲ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಈ ಪತ್ರಿಕಾಗೋಷ್ಠಿಗೆ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ ಅವರು ಗೈರುಹಾಜರಾಗಿದ್ದರು. ಪತ್ರಕರ್ತರೆಲ್ಲರೂ ಸುಧೀರ್‌ಗಾಗಿ ಕಾದಿದ್ದೇ ಬಂತು, ಅವರ ಮುಖದರ್ಶನವಾಗಲೇ ಇಲ್ಲ. ಕೇಳಿದಾಗ ಸಿಕ್ಕಿದ ಉತ್ತರ ಇಷ್ಟೆ, ದಿಢೀರ್ ಆಗಿ ಪತ್ರಿಕಾಗೋಷ್ಠಿ ನಡೆಸಿದರೆ ನಾನೇನು ಮಾಡಲಿ? ಪತ್ರಿಕಾಗೋಷ್ಠಿ ನಡೆಯುವ ಹೊತ್ತಿಗೆ ನಾನು ಮಂಗಳೂರಿನಲ್ಲಿದ್ದೆ. ನನ್ನ ಅಕ್ಕನ ಮಗಳು ಗತಿಸಿ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಂಗಳೂರಿಗೆ ಬಂದಿದ್ದೆ. ಇಂಥ ಹೊತ್ತಿನಲ್ಲಿ ಪತ್ರಿಕಾಗೋಷ್ಠಿ ನಡೆದರೆ ನಾನು ಹಾಜರಾಗುವುದು ಹೇಗೆ ಸಾಧ್ಯ ಎಂದು ಮರು ಪ್ರಶ್ನೆ ಹಾಕಿದ್ದಾರಂತೆ ಸುಧೀರ್ ಅತ್ತಾವರ.
ನಿರ್ಮಾಪಕರಾದ ತ್ರಿವಿಕ್ರಮ ಮತ್ತು ಅರುಣ್‌ಕುಮಾರ್ ಮಾತ್ರ ಪತ್ರಿಕಾಗೋಷ್ಠಿಯಲ್ಲಿ ತುಂಬಾ ಬೇಸರದಿಂದ ಮಾತಾಡಿದರು. ನಾವು ಪರಿ ಚಿತ್ರ ಸೋತಿರುವ ಕಾರಣ ತುಂಬಾ ಸಂಕಷ್ಟದಲ್ಲಿ ಸಿಲುಕಿದ್ದೇವೆ. ಮೊದಲು ನಾವು ಒಂದೂವರೆ ಕೋಟಿ ರೂಪಾಯಿಯಲ್ಲಿ ಸಿನಿಮಾ ಮುಗಿಸುವ ಯೋಜನೆ ಹಾಕಿದ್ದೆವು. ಆದರೆ ಸಿನಿಮಾ ಪೂರ್ತಿಯಾಗುವಾಗ ಮೂರು ಕೋಟಿ ಮುಗಿದಿದೆ. ಇದಕ್ಕೆ ನಾವು ಸುಧೀರ್ ಅತ್ತಾವರನನ್ನು ಟೀಕಿಸಿ ಪ್ರಯೋಜನವಿಲ್ಲ. ಟೀಕಿಸಿದ ಮಾತ್ರಕ್ಕೆ ನಷ್ಟ ತುಂಬುವುದಿಲ್ಲವಲ್ಲ ಎನ್ನುತ್ತಾರವರು. ಇದಕ್ಕೆ ಪ್ರತಿಯಾಗಿ ಸುಧೀರ್ ಹೇಳಿದ್ದೇನೆಂದರೆ, ಎರಡು ದೊಡ್ಡಮಟ್ಟದ ಸಿನಿಮಾ ಬಿಡುಗಡೆಯಾಗುವ ಹೊತ್ತಿಗೆ ಪರಿ ಸಿನಿಮಾವನ್ನು ಬಿಡುಗಡೆ ಮಾಡುವುದು ಬೇಡ ಎಂದು ನಾನು ಹೇಳಿದ್ದೆ. ಆದರೆ ನನ್ನ ಮಾತನ್ನು ನಿರ್ಮಾಪಕರು ಕೇಳಲೇ ಇಲ್ಲ. ಪರಿಣಾಮವಾಗಿ ಒಳ್ಳೆಯ ಸಿನಿಮಾವೊಂದು ಹಾಳಾಗಿ ಹೋಗುವಂತಾಯ್ತು ಎಂದು. ಅಂತೂ ಒಡಕು ಮೂಡಿರುವುದೂ ಹೌದು, ಲಾಸ್ ಆಗಿರುವುದೂ ಹೌದು ಎಂದು ಹೇಳಲು ಹಿಂಜರಿಯಬೇಕಾಗಿಲ್ಲ.
Tagged with
cnnews
ಕಾರ್ಕಳ ಮೂಲದ ಮುಂಬಯಿ ಹುಡುಗ ಕಾರ್ತಿಕ್ ಶೆಟ್ಟಿ ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿರುವ ಪ್ರತಿಭೆ. ಇವರಿಗೆ ಇದೀಗ ಹೊಸತೊಂದು ಕನ್ನಡ ಸಿನಿಮಾ ಸಿಕ್ಕಿದೆ. ನಿರ್ದೇಶಕರೂ ಹೊಸಬರೇ. ಬ್ಯಾಂಕ್ ಜನಾರ್ದನ್ ಅವರ ಪುತ್ರ ಗುರುಪ್ರಸಾದ್ ನಿರ್ದೇಶನದ ಸಾಹಸಮಯ ಸಿನಿಮಾ ‘ಅಗ್ನಿಮುಷ್ಠಿ’ಯಲ್ಲಿ ಕಾರ್ತಿಕ್ ನಾಯಕನಾಗಿ ನಟಿಸಲಿದ್ದಾರೆ. ಇವರಿಗೆ ಇದರಲ್ಲಿ ರಪ್ ಆಂಡ್ ಟಫ್ ಕ್ಯಾರೆಕ್ಟರ್ ನಾಯಕನ ಪಾತ್ರ.
ಈ ಹಿಂದೆಯೂ ಸಾಹಸಪ್ರಧಾನ ಚಿತ್ರಗಳಲ್ಲಿ ನಟಿಸಿರುವ ಕಾರ್ತಿಕ್ ಈ ಚಿತ್ರದ ಕಥೆ ಕೇಳಿದ ಕೂಡಲೇ ಇಂಪ್ರೆಸ್ ಆಗಿ ನಟಿಸಲು ಒಪ್ಪಿಕೊಂಡರಂತೆ. ಇದರ ಕಥೆ ಕೂಡ ಗುರುಪ್ರಸಾದ್ ಅವರ ಆಯ್ಕೆಯಾಗಿದೆ. ಕಥೆ ಇಷ್ಟವಾಗಿಯೇ ಫಿರೋಜ್ ಖಾನ್ ಎಂಬ ಉದ್ಯಮಿ ಇದನ್ನು ಸಿನಿಮಾ ಮಾಡಲು ಮುಂದಾದರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜನಿಯರ್ ಆಗಿರುವ ಗುರುಪ್ರಸಾದ್ ಅವರು ನಟನೆ ಬಗ್ಗೆ ಆಸಕ್ತಿ ಹೊಂದಿಲ್ಲವಾದರೂ ನಿರ್ದೇಶನದ ಬಗ್ಗೆ ಒಲವು ಉಳ್ಳವರು. ಕಳೆದ ಒಂದು ವರ್ಷದಿಂದ ಈ ಸಿನಿಮಾಕ್ಕಾಗಿ ಅವರು ತಯಾರಿ ನಡೆಸುತ್ತಿದ್ದಾರಂತೆ. ಇದೊಂದು ಪಕ್ಕಾ ಆಕ್ಷನ್, ಸಸ್ಪೆನ್ಸ್, ರೋಮ್ಯಾನ್ಸ್, ಥ್ರಿಲ್ಲರ್ ಸಿನಿಮಾವಂತೆ. ಟೆರರಿಸಂ ಆಧಾರದ ಕಥೆಯಾಗಿದ್ದರೂ ಇದರ ಒಳಗೆ ತ್ರಿಕೋನ ಪ್ರೇಮಕಥೆ ಇದೆ. ಹೆಚ್ಚಿನ ಚಿತ್ರೀಕರಣ ಚಿಕ್ಕಮಗಳೂರಿನ ಪಾಳೂರ್ ಫಾರ್ಮ್ಸ್‌ನಲ್ಲಿ ನಡೆಯಲಿದೆಯಂತೆ. ಹಿಂದೆಲ್ಲ ಹಿರಿಯ ನಟರ ಮಕ್ಕಳೇ ನಿರ್ದೇಶಕರು, ನಾಯಕನಟರಾಗುತ್ತಿದ್ದರು. ಈಗ ಪೋಷಕ ನಟ ಬ್ಯಾಂಕ್ ಜನಾರ್ದನ ಅವರ ಪುತ್ರ ನಿರ್ದೇಶಕನಾಗುವ ಮೂಲಕ ಹೊಸತೊಂದು ಅಧ್ಯಾಯ ಆರಂಭವಾದಂತಾಗಿದೆ. ಚಿತ್ರೀಕರಣದ ಮುಹೂರ್ತದ ಸಂದರ್ಭವೂ ಹೆಚ್ಚಾಗಿ ಪೋಷಕ ನಟರೇ ಹಾಜರಿದ್ದರು ಎಂಬುದು ಉಲ್ಲೇಖನೀಯ. ಸಾಹಸ ದೃಶ್ಯಗಳಲ್ಲಿ ಅಭಿನಯಿಸಲು ವಿಶೇಷ ಆಸಕ್ತಿ ತೋರಿಸುತ್ತಿರುವ ಕಾರ್ತಿಕ್‌ಗೆ ಈ ಸಿನಿಮಾ ಎಷ್ಟು ಅದೃಷ್ಟ ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.ಯುವ ಕಾರ್ತಿಕ್ ಸಿನಿಮಾದಲ್ಲಿ ಸಾಹಸ ದೃಶ್ಯದಲ್ಲಿ ಮಿಂಚಿದ್ದ ಕಾರ್ತಿಕ್ ಶೆಟ್ಟಿಗೆ ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ಲಭಿಸಿದೆ.
Tagged with
cnnews
ಹಿರಿಯ ನಟಿ ಅನುರಾಧಾ ಅವರ ಪುತ್ರಿ ಅಭಿನಯಶ್ರೀ ಅವರು ನಾಯಕಿಯಾಗಿರುವ ಮತ್ತು ಹರೀಶ್‌ರಾಜ್ ನಾಯಕನಾಗಿ ಕಾಣಿಸಿಕೊಂಡಿರುವ ಹೊಸ ಚಿತ್ರ ‘ಮಧುಚಂದ್ರ’ ಹೆಸರಿನಲ್ಲಿ ಸಿದ್ಧವಾಗುತ್ತಿದೆಯಂತೆ. ಇದರಲ್ಲಿ ಈ ಹಿಂದೆ ಧ್ಯಾನ್‌ಗೆ ನಾಯಕಿಯಾಗಿ ‘ಪ್ರೀತಿ ಮಾಡಬಾರದು’ ಸಿನಿಮಾದಲ್ಲಿ ನಟಿಸಿರುವ ತನುರೈ ಕೂಡ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಭಿನಯಶ್ರೀ ಈ ಹಿಂದೆ ಕರಿಯ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ತುಂಬಾ ಅಂತರದಲ್ಲಿ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಗುರು ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ ಹೊಸಬರದ್ದೇ ಕಾರುಬಾರಂತೆ. ಹನಿಮೂನ್ ಸಂದರ್ಭದಲ್ಲಿ ನಡೆ ಯುವ ಕೆಲವು ವಿಲಕ್ಷಣ ಘಟನೆಗಳ ಕುರಿತು ಈ ಸಿನಿಮಾದಲ್ಲಿ ತೋರಿಸಿಕೊಡಲಿದ್ದಾರೆ. ಹೆಚ್ಚು ದೃಶ್ಯಗಳನ್ನು ರಾತ್ರಿಯ ಹೊತ್ತಿ ನಲ್ಲಿಯೇ ಚಿತ್ರೀಕರಣ ನಡೆಸಲಾಗುತ್ತಿದೆಯಂತೆ. ಇದೊಂದು ಲವ್ ಸಿನಿಮಾ ಆದರೂ ಹಾರರ್ ದೃಶ್ಯಗಳೂ ಯಥೇಚ್ಛವಾಗಿವೆಯಂತೆ.
Tagged with
cnnews
ಪಂಕಜ್ ಅಭಿನಯದ ‘ರಣ’ ಸಿನಿಮಾ ಸದ್ಯವೇ ಬಿಡುಗಡೆಯಾಗಲಿದೆ. ಆದರೆ ಅದು ಬಿಡುಗಡೆಯಾಗುವ ಮೊದಲೇ ಅವರು ಮತ್ತೊಂದು ಸಿನಿಮಾಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ರಣದ ನಿರ್ಮಾಪಕ ಶಿವಾನಂದ ಮಾದಶೆಟ್ಟಿ ಅವರು ಪಂಕಜ್ ಅಭಿನಯಕ್ಕೆ ಮನಸೋತು ತನ್ನ ಮುಂದಿನ ರೆಡ್ ಎಂಬ ಹೆಸರಿನ ಸಿನಿಮಾಕ್ಕೆ ಪಂಕಜ್‌ನನ್ನೇ ಹೀರೋ ಮಾಡಿಕೊಂಡಿದ್ದಾರೆ. ನಾಯಕಿ ಯಾರು ಎಂಬುದು ಇನ್ನಷ್ಟೇ ನಿರ್ಧಾರವಾಗಲಿದೆ.
ರೆಡ್ ಎಂದರೆ ಪ್ರೀತಿ, ಬೆಂಕಿ ಮತ್ತು ಅಪಾಯದ ಸಂಕೇತ. ಇದೇ ಮೂರು ವಿಷಯಗಳಲ್ಲಿ ಸಿನಿಮಾ ಮುಂದುವರಿಯಲಿದೆಯಂತೆ. ಶಿವಾನಂದರಿಗೆ ಇದು ಮೂರನೆಯ ಚಿತ್ರ. ಪ್ರಕಾಶ್ ಜಡಯೆ ಅವರ ಕಥೆ ಮತ್ತು ಚಿತ್ರಕಥೆ. ನಿರ್ದೇಶನ ಕೂಡ ಇವರದ್ದೇ.
ಇದೊಂದು ಪಕ್ಕಾ ಲವ್ ಮತ್ತು ಆಕ್ಷನ್ ಚಿತ್ರ. ಜತೆಗೆ ಸೆಂಟಿಮೆಂಟ್ ಮತ್ತು ಹಾಸ್ಯವೂ ಇದೆ. ರಣದಲ್ಲಿ ಪಂಕಜ ಅಭಿನಯ ಅದ್ಭುತವಾಗಿತ್ತು. ಅದು ಸೂಪರ್‌ಹಿಟ್ ಆಗಲಿದೆ. ಇದೇ ಕಾರಣಕ್ಕೆ ಪಂಕಜ್‌ನನ್ನು ಬಳಸಿಕೊಂಡು ಮತ್ತೊಂದು ಸಿನಿಮಾ ಮಾಡುವ ಧೈರ್ಯ ತೋರಿಸುತ್ತಿದ್ದೇನೆ. ಎಲ್ಲ ಅಂದು ಕೊಂಡಂತೆ ನಡೆದರೆ ಮೇ ೧೦ರಂದು ಮುಹೂರ್ತ ನಡೆಯಲಿದೆ ಎಂದು ಹೇಳುತ್ತಿದ್ದಾರೆ ಶಿವಾನಂದ ಮಾದಶೆಟ್ಟಿ.
Tagged with
cnnews
ಮಂಗಳೂರು: ತಲಪಾಡಿ-ಕುಂದಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥ ಕಾಮಗಾರಿಯ ನಡುವೆ, ಉಡುಪಿ ಜಿಲ್ಲೆಯ ಪಡುಬಿದ್ರಿ ಎಂಬಲ್ಲಿ ವಿವಾದಾಸ್ಪದವಾಗಿದ್ದ ಬೈಪಾಸ್ ನಿರ್ಮಾಣ ಕಾಮಗಾರಿಗೆ ಕೊನೆಗೂ ಮುಕ್ತಿ ದೊರೆಕಿದ್ದು, ಬೈಪಾಸ್ ನಿರ್ಮಾಣ ವಿರೋಧಿಸಿ ಉಚ್ಛ ನ್ಯಾಯಾಲಯದಲ್ಲಿ ಹೂಡಲಾಗಿದ್ದ ಸಾರ್ವಜನಿಕರ ಹಿತಾಸಕ್ತಿ ಅರ್ಜಿಯೊಂದನ್ನು ಹೈಕೋರ್ಟ್ ವಜಾಗೊಳಿಸಿದೆ.
ರಾಜ್ಯದ ಮುಖ್ಯಮಂತ್ರಿಗಳು ಬೈಪಾಸ್ ರಚನೆಗೆ ಅನುಮೋದಿಸಿ ಹೊರಡಿಸಿದ್ದ ಜ. ೨೭ರಂದಿನ ಆದೇಶ ವನ್ನು ಪ್ರಶ್ನಿಸಿ, ಶೇಖರ ಹೆಜಮಾಡಿ ಎಂಬ ದಲಿತ ಮುಖಂಡರೋರ್ವರು ಸಮಾನಾಸಕ್ತರೊಂದಿಗೆ ಸೇರಿಕೊಂಡು ರಾ.ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಸರಕಾರವನ್ನು ಪ್ರತಿವಾದಿಯನ್ನಾಗಿಸಿ ಬೈಪಾಸ್ ನಿರ್ಮಾಣವನ್ನು ಕೈಬಿಡಬೇಕು ಮತ್ತು ಹಾಲಿ ಇರುವ ಹೆದ್ದಾರಿಯನ್ನೇ ಚತುಷ್ಪಥಗೊಳಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕ ಹಿಸಾಕ್ತಿ ಅರ್ಜಿ ದಾಖಲಿಸಿದ್ದರು.
ಅರ್ಜಿಯನ್ನು ವಿಚಾರಣೆಗೆತ್ತಿ ಕೊಂಡು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ನ್ಯಾಯಾಲಯ, ಈ ಅರ್ಜಿಯ ವಿಚಾರದಲ್ಲಿ ಮಧ್ಯಪ್ರವೇಶಿಸುವ ಪ್ರಮೇಯವೇ ಇಲ್ಲ ಎಂದು ಹೇಳಿದೆ.
Tagged with
lnews,
udupi
ಮಂಗಳೂರು: ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ಕಂಬಳಗಳಲ್ಲಿ ಹಾದು ಹೋದ ಕೇಬಲ್ ಟಿವಿ ತಂತಿಗಳನ್ನು ಸರಿಪಡಿಸುತ್ತಿದ್ದ ಯುವಕನೋರ್ವ ಕಂಬದಿಂದ ಕೆಳಗೆ ಬಿದ್ದು ಆಸ್ಪತ್ರೆ ಸೇರಿದ ಘಟನೆ ಪಡುಬಿದ್ರಿಯಲ್ಲಿ ನಿನ್ನೆ ನಡೆದಿದೆ.
ಕಂಬದಿಂದ ಬಿದ್ದ ಯುವಕ ಪ್ರೀತಂ ಎಂಬಾತ ಹೆಜಮಾಡಿಯವನಾಗಿದ್ದು ಸ್ಥಳೀಯ ಕೇಬಲ್ ಆಪರೇಟರ್ ಓರ್ವರ ಬಳಿ ದುಡಿಯುತ್ತಿದ್ದನೆನ್ನಲಾಗಿದೆ. ಕೆಳಗೆ ಬಿದ್ದ ಯುವಕ ಪ್ರೀತಂ, ಹಲವಾರು ಸಂಪರ್ಕ ವಿದ್ಯುತ್ ತಂತಿಗಳ ಪೈಕಿ ಒಂದಕ್ಕೆ ಕೈ ತಗುಲಿ ಕೆಳಗೆ ಬಿದ್ದನೆಂದು ಹೇಳಲಾಗುತ್ತಿದೆಯಾದರೂ ಆತ ಮೂರ್ಛೆ ರೋಗಿಯೆಂದೂ, ಏಣಿಯಿಂದ ಕಾಲುಜಾರಿ ಕೆಳಗೆ ಬಿದ್ದನೆಂದೂ ಆತನೊಂದಿಗಿದ್ದವರು ಹೇಳಿದ್ದಾರೆ.
ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತನೊಂದಿಗಿದ್ದವರು ಆಸ್ಪತ್ರೆ ಸಿಬ್ಬಂದಿಯೊಂದಿಗೆ ಉದ್ದಟತನದಿಂದ ವರ್ತಿಸಿ ಅಲ್ಲಿಂದ ಬೇರೆಡೆಗೆ ಕೊಂಡೊಯ್ದರೆಂದು ತಿಳಿದು ಬಂದಿದೆ. ಕೇಬಲ್ ಕೆಲಸಗಾರರು ಸದಾಕಾಲ ವಿದ್ಯುತ್ ಪ್ರವಹಿಸುತ್ತಿರುವ ಕಂಬಗಳಲ್ಲಿ ಅಪಾಯಕಾರಿಯಾಗಿ ಮತ್ತು ನಿರ್ಲಕ್ಷ್ಯ ದಿಂದಲೇ ಕೆಲಸ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಪಾದಿಸಿದ್ದಾರೆ.
Tagged with
dk,
lnews
ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಟಿಕೆಟ್ ಹಣ ಕೇಳಿದ ಬಸ್ ಕಂಡಕ್ಟರ್ ಮತ್ತು ವಿದೇಶಿ ಮಹಿಳೆ ಜಟಾಪಟಿ ನಡೆದ ಘಟನೆ ನಿನ್ನೆ ಜ್ಯೋತಿ ಸರ್ಕಲ್ ಬಳಿ ನಡೆದಿದೆ.
ನಿನ್ನೆ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಬಸ್‌ನಲ್ಲಿ ವಿದೇಶಿ ಮಹಿಳೆ ರೊನೆಕೊ ಮೊನಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸನ್ನೇರಿದ್ದಳು. ಬಸ್ ಜ್ಯೋತಿ ಸರ್ಕಲ್ ಬಳಿ ಬಂದಾಗ ಕಂಡಕ್ಟರ್ ಪ್ರದೀಪ್ ಎನ್ನುವವರು ಆಕೆ ಬಳಿ ಬಂದು ಟಿಕೆಟ್ ಹಣ ಕೇಳಿದ. ಆದರೆ ಆಕೆ, ನಾನು ನಿನಗೆ ಆಗಲೇ ಒಂದು ಸಾವಿರ ರೂ. ನೀಡಿದ್ದೇನೆ ಎಂದು ಹೇಳಿ ವಾದಕ್ಕಿಳಿದಳು. ಹಾಗಾದರೆ ಟಿಕೆಟ್ ತೋರಿಸಿ ಎಂದು ಪ್ರದೀಪ್ ಕೇಳಿದಾಗ, ಆಕೆ ಮತ್ತಷ್ಟು ಗರಂ ಆಗಿ ವಾದಕ್ಕಿಳಿದಳು. ಟಿಕೆಟ್ ಇಲ್ಲದಿದ್ದರೆ ಬಸ್‌ನಿಂದ ಇಳಿಯಿರಿ ಎಂದು ಕಂಡೆಕ್ಟರ್ ಹೇಳಿದಾಗ, ಆಕೆ ಥಳಿಸಿ, ಬಸ್‌ನಿಂದ ಇಳಿಯಲು ನಿರಾಕರಿಸಿದಳು ಎಂದು ಪ್ರದೀಪ್ ಆರೋಪಿಸಿದ್ದಾರೆ. ಆದರೆ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಸೇರಿ ನನಗೆ ಹಲ್ಲೆ ನಡೆಸಿದ್ದಾರೆ ಎಂದು ರೊನೆಕೊ ಮೊನಾ ಆರೋಪಿಸಿದ್ದಾಳೆ. ಕದ್ರಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Tagged with
cnews
ಬಂಟ್ವಾಳ: ಪಾಣೆಮಂಗಳೂರು, ಮೆಲ್ಕಾರ್ ನರಹರಿ ಪರ್ವತ ಬಳಿ ನಿನ್ನೆ ಕೋಸ್ಟಲ್ ಕೋಳಿ ಫುಡ್ ಸಾಗಾಟ ಮಾಡುತ್ತಿದ್ದ ಈಚರ್ ಟೆಂಪೋವೊಂದು ಸ್ಥಳೀಯ ನಿವಾಸಿ ಕ್ಯಾರೇಜ್ ನೌಕರ ಉಮೇಶ್(೪೨) ಎಂಬವರಿಗೆ ನಿನ್ನೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದ್ದು, ಗಾಯಾಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಮೇಶ್ ಕ್ಯಾರೇಜ್ ಕೆಲಸ ಮುಗಿಸಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಈ ದುರ್ಘಟನೆ ಸಂಭವಿಸಿದ್ದು, ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಪಘಾತಕ್ಕೊಳಗಾದ ಟೆಂಪೋ ಹೆದ್ದಾರಿ ಬಳಿಯ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದ್ದು, ವಿದ್ಯುತ್ ಕಂಬ ಭಾಗಶಃ ಹಾನಿಗೊಂಡಿದೆ.
Tagged with
cnews
ಮಂಗಳೂರು: ಪಣಂಬೂರ್ ಬೀಚ್‌ಗೆ ಸೋಮವಾರ ಬಂದಿದ್ದ ಅಪರಿಚಿತ ಜೋಡಿ ವಿಷ ಸೇವಿಸಿದ್ದು, ಪುರುಷ ಮೃತಪಟ್ಟಿದ್ದರೆ, ಮಹಿಳೆ ಗಂಭೀರ ಸ್ಥಿತಿಯಲ್ಲಿ ವೆನ್‌ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಸಂಜೆ ೬:೪೫ರ ಸುಮಾರಿಗೆ ಪಣಂಬೂರ್ ಬೀಚ್‌ಗೆ ಬಂದಿದ್ದ ಜೋಡಿ ವಿಷ ಸೇವಿಸಿ ಹೊರ ಳಾಡುತ್ತಿದ್ದರು. ಇದನ್ನು ಗಮಿನಿಸಿದ ಸಾರ್ವಜನಿಕರು ಆಂಬ್ಯೂಲೆನ್ಸ್‌ನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅವರಿಬ್ಬರಿಗೆ ವೆನ್‌ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾ ಯಿತು. ಗಂಡಸು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರೆ, ಪ್ರeಹೀನ ಸ್ಥಿತಿಯಲ್ಲಿ ರುವ ಮಹಿಳೆಗೆ ಚಿಕಿತ್ಸೆ ಒದಗಿಸಲಾಗುತ್ತಿದೆ.
Tagged with
cnews
ನಾಗರಿಕರೇ ಹುಷಾರು!
ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಹಾಗೂ ಅದರ ಸುತ್ತಲಿನ ಪರಿಸರದಲ್ಲಿ ಕಳ್ಳರ ಕಾರುಬಾರು ದಿನಕಳೆದಂತೆ ಹೆಚ್ಚುತ್ತಿರು ವುದು ನಾಗರಿಕರಿಗೆ ತಲೆನೋವಾಗಿ ಪರಿಣಮಿಸಿದೆ. ರಾತ್ರಿಯ ವೇಳೆ ಗಂಡಸರು ಇಲ್ಲದಿರುವ ಮನೆಗಳನ್ನೇ ಟಾರ್ಗೆಟ್ ಮಾಡಿಕೊಳ್ಳುವ ಕಳ್ಳರು ಸಲೀಸಾಗಿ ಕೃತ್ಯವೆಸಗಿ ಪರಾರಿಯಾ ಗುತ್ತಿರುವುದು ಜನರ ಅಸಹನೆಗೆ ಕಾರಣ ವಾಗಿದ್ದು, ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬರುತ್ತಿದೆ.
ಕಿನ್ನಿಗೋಳಿ, ಮೂಲ್ಕಿ ಗ್ರಾಮೀಣ ವಲಯಗಳಾಗಿದ್ದು, ಇಲ್ಲಿ ಜನಸಂಖ್ಯೆ ಹೆಚ್ಚೇ ಇದೆ. ಹಗಲು ಹೊತ್ತಿನಲ್ಲಿ ಏನಾದರೊಂದು ನೆಪ ಹುಡುಕಿ ಮನೆಗೆ ಬರುವ ಕಳ್ಳರು ಮನೆಯವರ ಚಲನ ವಲನಗಳನ್ನು ಅರಿತುಕೊಂಡು ರಾತ್ರಿಯ ವೇಳೆ ಕುಕೃತ್ಯಕ್ಕೆ ಕೈಹಾಕುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಮೂಲ್ಕಿ ಠಾಣಾ ವ್ಯಾಪ್ತಿಯ ನಾನಾ ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಠಾಣಾ ವ್ಯಾಪ್ತಿಯಲ್ಲಿ ಕೆಲವು ತಿಂಗಳ ಹಿಂದೆ ನಡೆದ ವೃದ್ಧೆಯ ಕೊಲೆಗೈದು ದರೋಡೆ, ತೋಕೂರು ದೇವಳದಲ್ಲಿ ಚಿನ್ನ, ಬೆಳ್ಳಿಯ ಆಭರಣ ಕಳ್ಳತನ ಪ್ರಕರಣವೂ ಸೇರಿದಂತೆ ಹತ್ತಾರು ಸರ ಸೆಳೆದ ಪ್ರಕರಣಗಳು ವರದಿಯಾಗಿವೆ.
ಮುಲ್ಕಿ ಠಾಣೆಯಲ್ಲಿ ಕಳೆದ ಹಲವು ವರ್ಷಗಳಿಂದ ಬೇರು ಬಿಟ್ಟಿದ್ದ ಕೆಲವು ಮಂದಿ ಪೊಲೀಸರಿಗೆ ಬೇರೆ ಠಾಣೆಯ ದಾರಿ ತೋರಿಸಲಾಗಿದ್ದರೂ ಇಲ್ಲಿನ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ ಎನ್ನುತ್ತಾರೆ ಬಲ್ಲವರು. ಹಿಂದೆ ಕೊಣಾಜೆ ಠಾಣೆಯಲ್ಲಿ ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿದ್ದ ಸುನಿಲ್ ಪಾಟೀಲ್ ಇಲ್ಲಿಗೆ ಎಸ್.ಐ. ಆಗಿ ಬಂದನಂತರ ಸಾರ್ವಜನಿಕರು ನೆಮ್ಮದಿಯಿಂದ ಇರ ಬಹುದು ಎಂದುಕೊಂಡಿದ್ದರೂ ಜನರ ನಿರೀಕ್ಷೆ ತಲೆಕೆಳಗಾಗಿದೆ. ಹಿರಿಯ ಅಧಿಕಾರಿಗಳ ನಡುವಿನ ಕಾದಾಟಕ್ಕೆ ಇನ್ನೂ ಪೂರ್ಣವಿರಾಮ ಸಿಕ್ಕಿಲ್ಲ, ಹೀಗಾಗಿ ಕಳ್ಳತನ, ದರೋಡೆ ಪ್ರಕರಣ ಗಳ ಸಮರ್ಪಕ ತನಿಖೆ ನಡೆಯುತ್ತಿಲ್ಲ ಎಂದು ಬೇಸರ ಪಡುತ್ತಿದ್ದಾರೆ ನಾಗರಿಕರು.
ಸರಗಳ್ಳತನ, ಮನೆಗಳ್ಳತನ ಪ್ರಕರಣಗಳು ಮುಲ್ಕಿ ಠಾಣಾ ವ್ಯಾಪ್ತಿ ಯಲ್ಲಿ ತೀರಾ ಸಾಮಾನ್ಯವೆಂಬಂತೆ ನಡೆಯುತ್ತಿದೆ. ಹೀಗಾಗಿ ಜನರು ತಮ್ಮ ಮನೆ, ಬೆಲೆಬಾಳುವ ಸೊತ್ತುಗಳನ್ನು ಕಳ್ಳರ ದೃಷ್ಟಿಯಿಂದ ಕಾಪಾಡಲು ತಾವೇ ಯೋಜನೆ ರೂಪಿಸುತ್ತಿದ್ದಾರೆ. ಶ್ರೀಮಂತರು ತಮ್ಮ ಮನೆ ಬಾಗಿಲಿಗೆ ಸಿ.ಸಿ. ಕ್ಯಾಮೆರಾ ಅಳವಡಿಸಿದ್ದರೆ, ಬಡವರ್ಗದ ಜನರು ಕಳ್ಳರ ಕಾಟದಿಂದ ಹೈರಾಣಾಗುತ್ತಿದ್ದಾರೆ. ರಾತ್ರಿಯ ಗಸ್ತನ್ನು ಪೊಲೀಸರು ಚುರುಕುಗೊಳಿಸುವ ಮೂಲಕ ಕಳ್ಳರಿಗೆ ಬಿಸಿ ಮುಟ್ಟಿಸುವ ಕೆಲಸ ನಡೆಯಬೇಕಿದೆ.
Tagged with
cnews
ಮಂಗಳೂರು: ಕಾಸರಗೋಡು ನಗರದ ತಳಂಗೆರೆಯ ಸಿರಾಮಿಕ್ಸ್ ರಸ್ತೆ ಬಳಿಯ ರಹ್ಮತ್ ನಗರದ ಮನೆಯೊಂದರ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಯ ಕತ್ತಿಂದ ಚಿನ್ನದ ಸರ ಅಪಹರಿಸಿದ ಘಟನೆ ನಿನ್ನೆ ನಡೆದ ಬಗ್ಗೆ ಕಾಸರಗೋಡು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೈಕ್‌ನಲ್ಲಿ ಮನೆ ಅಂಗಳಕ್ಕೆ ಬಂದ ಅಪರಿಚಿತ ನೂರುಲ್ ಖಯಾಮ್ ಎಂಬವರ ಪುತ್ರಿ ನೆರಮನೆಯ ಮಕ್ಕಳೊಂದಿಗೆ ಆಟ ಆಡುತ್ತಿದ್ದಾಗ ಈ ಘಟನೆ ನಡೆದಿದೆ.
Tagged with
cnews
ಮಂಗಳೂರು: ಯಾವುದೇ ಪರವಾನಿಗೆ ಇಲ್ಲದೆ ಮರದ ದಿಮ್ಮಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಉಡುಪಿ ಪೊಲೀಸರು ಉಡುಪಿ ಹೇರೂರು ಗ್ರಾಮದ ರುಡ್‌ಸೆಟ್ ಬಳಿ ಬಂಧಿಸಿದ್ದಾರೆ. ಮೂಡುತೊನ್ಸೆ ಗ್ರಾಮದ ನೇಜಾರು ರೋ ಡಿಸೋಜಾ(೩೨), ಕಲ್ಯಾಣಪುರ ನಂಯಪಳ್ಳಿ ರತ್ನಾಕರ್ (೫೫) ಬಂಧಿತ ಆರೋಪಿಗಳು. ಇವರಿಂದ ಗೂಡ್ಯಸ್ ವಾಹನದಲ್ಲಿ ೩೦ ಸಾವಿರ ರೂ. ಮೌಲ್ಯದ ಹಲಸಿನ ಮರದ ೧೩ ದಿಮ್ಮಿ, ದೂಪದ ಮರದ ೫ದಿಮ್ಮಿ, ಆರು ಗೋಣಿ ಚಿಲ ಮರದ ಹುಡಿ, ೩ಕ್ವಿಂಟಾಲ್ ಹಲಸು, ದೂಪದ ಕಟ್ಟಿಗೆ ವಶಪಡಿಸಿಕೊಳ್ಳಲಾಗಿದೆ.
Tagged with
cnews
ದ್ವಿತೀಯ ಪ್ಲೇ-ಆಫ್‌ಗೆ ಪ್ರವೇಶಿಸಿದ ಚೆನ್ನೈ
ಬೆಂಗಳೂರು: ಅದೃಷ್ಟದ ಆಟದಿಂದಲೇ ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈಗ ಅಚ್ಚರಿಯ ರೀತಿಯಲ್ಲಿ ಎರಡನೇ ಪ್ಲೇ-ಆಫ್‌ಗೆ ಪ್ರವೇಶಿಸಿದೆ. ನಾಯಕ ಧೋನಿ ಹಾಗೂ ಡ್ವೇಯ್ನ್ ಬ್ರಾವೊ ನಡೆಸಿದ ಆಕರ್ಷಕ ಆಟದ ನೆರವಿನಿಂದ ಮುಂಬೈ ವಿರುದ್ಧದ ಕಠಿಣ ಪಂದ್ಯವನ್ನು ಚೆನ್ನೈ ೩೮ ರನ್‌ಗಳಿಂದ ಗೆದ್ದುಕೊಂಡಿದ್ದು, ಈ ಮೂಲಕ ಅದು ದೆಹಲಿ ವಿರುದ್ಧ ಕಾದಾಡಲಿದೆ. ಇಲ್ಲಿ ಜಯಿಸುವ ತಂಡ ಕೊಲ್ಕತ್ತಾ ವಿರುದ್ಧ ಫೈನಲ್‌ನಲ್ಲಿ ಹೋರಾಟ ನಡೆಸಲಿದೆ.
ಬೌಲಿಂಗ್ ಆಯ್ದುಕೊಂಡ ಮುಂಬೈ ನಿರ್ಧಾರವನ್ನು ಬೌಲರ್‌ಗಳು ಪಂದ್ಯದ ಬಹುತೇಕ ಹಂತದವರೆಗೆ ಸಮರ್ಥಿಸಿಕೊಂಡರು. ಅದರಲ್ಲೂ ಧವಲ್ ಕುಲಕರ್ಣಿ ಸತತ ಎರಡು ಎಸೆತಗಳಲ್ಲಿ ಅಪಾಯಕಾರಿ ಮುರುಳಿ (೧) ಹಾಗೂ ರೈನಾ (೧) ವಿಕೆಟ್ ಪಡೆದುಕೊಂಡಿದ್ದರು. ಬದ್ರಿನಾಥ್ (೪೭) ಹಾಗೂ ಹಸ್ಸಿ (೪೯) ಜೋಡಿ ೧೨ ಓವರ್‌ಗಳಲ್ಲಿ ೯೪ ರನ್‌ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಆದರೆ ಆರನೇ ವಿಕೆಟ್ ಧೋನಿ ಹಾಗೂ ಬ್ರಾವೊ ನಡೆಸಿದ ಅಟ ಪಂದ್ಯದ ಗತಿಯನ್ನೇ ಬದಲಾಯಿಸಿತು. ಈ ಜೋಡಿ ಕೇವಲ ೨೮ ಎಸೆತಗಳಲ್ಲಿ ಅಜೇಯ ೭೩ ರನ್‌ಗಳನ್ನು ಸ್ಫೋಟಿಸಿತು. ಅದರಲ್ಲೂ ಧೋನಿ ೨೦ ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸ್ ನೆರವಿನಿಂದ ೫೧ ರನ್ ಗಳಿಸಿದರು. ಬ್ರಾವೊ ೧೪ ಎಸೆತಗಳಲ್ಲಿ ೩೩ ರನ್ ಗಳಿಸಿದರು. ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೧೮೭ ರನ್ ಗಳಿಸಿತು. ಮುಂಬೈ ಪರ ಕುಲಕರ್ಣಿ ಮೂರು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಮುಂಬೈ ಆರಂಭಿಕ ಜೋಡಿ ಹೊರತುಪಡಿಸಿದರೆ ಯಾವ ಹಂತದಲ್ಲೂ ಹೋರಾಟದ ಆಟವನ್ನು ನೀಡಲಿಲ್ಲ. ಅದರಲ್ಲೂ ಬ್ರಾವೊ ಹಾಗೂ ಮೊರ್ಕೆಲ್ ಬೌಲಿಂಗ್‌ಗೆ ಸರಿಯಾದ ಉತ್ತರ ನೀಡಲು ತಂಡ ವಿಫಲವಾಯಿತು. ಪರಿಣಾಮ ತಂಡ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ ೧೪೯ ರನ್ ಗಳಿಸಲಷ್ಟೇ ಶಕ್ತವಾಯಿತು. ಇಬ್ಬರೂ ಬೌಲರ್‌ಗಳು ತಲಾ ಎರಡು ವಿಕೆಟ್ ಪಡೆದರು.
ಸಚಿನ್ ಹಾಗೂ ಸ್ಮಿತ್ ಜೋಡಿ ಮೊದಲ ವಿಕೆಟ್‌ಗೆ ಕೇವಲ ೪.೫ ಓವರ್‌ಗಳಲ್ಲಿ ೪೭ ರನ್ ಗಳಿಸಿದಾಗ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಅನಾವಶ್ಯಕ ರನ್‌ಗೆ ಕೈಹಾಕಿದ ಸ್ಮಿತ್ (೩೮) ಒಂದು ಕಡೆಯಿಂದ ಓಡಿದಾಗ ಮತ್ತೊಂದು ಕಡೆಯಲ್ಲಿದ್ದ ಸಚಿನ್ (೧೧) ತನ್ನ ವಿಕೆಟ್‌ನ್ನು ತ್ಯಾಗ ಮಾಡಿದರು. ಆದರೆ ಇದರ ಲಾಭ ಪಡೆಯಲು ಸ್ಮಿತ್ ಎಡವಿದರು. ಸ್ಮಿತ್ ಜಕಾತಿಗೆ ವಿಕೆಟ್ ನೀಡಿದರು. ಈ ವೇಳೆ ದಾಳಿಗಿಳಿದ ಮೊರ್ಕೆಲ್ ಸ್ಫೋಟಕ ಕಾರ್ತಿಕ್ (೬) ಹಾಗೂ ರೋಹಿತ್ (೧೪) ವಿಕೆಟ್ ಪಡೆಯುವ ಮೂಲಕ ಚೆನ್ನೈಗೆ ಮುನ್ನಡೆ ತಂದುಕೊಟ್ಟರು. ರಾಯುಡು (೧೧) ಹಾಗೂ ಫ್ರಾಂಕ್ಲಿನ್ (೧೩) ಕೂಡ ಎಡವಿದಾಗ ಪಂದ್ಯ ಬಹುತೇಕ ಕೈವಶವಾಯಿತು. ಅತ್ತ ಪೊಲಾರ್ಡ್ (೧೬) ಕೂಡ ರನ್‌ಬರ ಎದುರಿಸಿದಾಗ ಪಂದ್ಯವನ್ನು ಚೆನ್ನೈ ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿತು.
Tagged with
tnews

ಮುಂಬಯಿ: ಆರ್‌ಸಿಬಿ ಆಟಗಾರ ಲೂಕ್ ಪೊಮರ‍್ಸ್‌ಬ್ಯಾಚ್ ವಿರುದ್ಧದ ಕೇಸ್‌ನ್ನು ಮುಂದುವರೆಸುವಲ್ಲಿ ನಮಗೆ ಇಚ್ಛೆಯಿಲ್ಲ ಎಂದು ಹಲ್ಲೆಗೊಳಗಾದ ಸಾಹಿಲ್ ಸಹೋದರ ಫಿರೋಜ್ ತಿಳಿಸಿದ್ದಾರೆ. ಪ್ರಕರಣವನ್ನು ಎರಡೂ ಕಡೆ ತಂಡಗಳು ಕೋರ್ಟ್‌ನ ಹೊರ ಗಡೆ ಇತ್ಯರ್ಥಪಡಿಸುವಲ್ಲಿ ಹೆಚ್ಚು ಆಸಕ್ತಿ ಹೊಂದಿದೆ ಎಂದು ಹೇಳಲಾಗಿದೆ. ಸಾಹಿಲ್ ಪ್ರೇಮಿಯಾಗಿರುವ ಜೊಹಲ್ ಹಮೀದ್ ಕೋಣೆಯೊಳಗೆ ಪೊಮರ‍್ಸ್‌ಬ್ಯಾಚ್ ಅಕ್ರಮವಾಗಿ ನುಗ್ಗಿದ್ದು, ಅಲ್ಲದೆ ಹಲ್ಲೆ ಕೂಡ ನಡೆಸಿ ದ್ದನು ಎಂದು ಆರೋಪಿಸಲಾಗಿತ್ತು. ಜೋಹಲ್ ಜೊತೆ ಸಾಹಿಲ್‌ಗೆ ನಿಶ್ಚಿತಾಥವಾಗಿಲ್ಲ ಎಂದು ಇದೇ ವೇಳೆ ಫಿರೋಜ್ ಅಧಿಕೃತ ಪ್ರಕಟನೆ ಹೊರಡಿಸುವ ಮೂಲಕ ಅಚ್ಚರಿಯ ಸಂಗತಿಗೆ ಕಾರಣವಾಗಿದ್ದಾರೆ. ಪೊಮರ‍್ಸ್‌ಬ್ಯಾಚ್ ಮಹಿಳೆಗೆ ಗೌರವ ಕೊಡುವ ವ್ಯಕ್ತಿಯಲ್ಲ, ಅವರು ಪ್ರಮಾದ ಮಾಡಿರುವುದು ಖಚಿತ. ಆದರೆ ಅದಕ್ಕಾಗಿ ಕ್ಷಮೆ ಕೋರಲು ಅವರು ಹಿಂದೇಟು ಹಾಕುತ್ತಿದ್ದಾರೆ. ಆದರೆ ನಾವು ಆತ ನಿಗೆ ಕ್ಷಮೆ ನೀಡಲು ತಯಾ ರಿದ್ದು, ಹಾಗೂ ಪ್ರಕರಣವನ್ನು ಮರೆತು ಬಿಡಬೇಕಿದೆ. ಹಾಗಾಗಿ ಲೂಕ್ ವಿರುದ್ಧದ ಕೇಸ್‌ನ್ನು ಮುಂದುವರೆಸಲು ನಾವು ಇಚ್ಛಿಸುವುದಿಲ್ಲ. ಆದರೆ ಈ ಬಗ್ಗೆ ನಾವು ಯಾರಿಂದಲೂ ಒತ್ತಡ ಅಥವಾ ಮನವಿಯನ್ನು ಪಡೆದಿಲ್ಲ. ಅಲ್ಲದೆ ಸಿದ್ದಾರ್ಥ್ ಮಲ್ಯ ಟ್ವಿಟ್ಟರ್‌ನಲ್ಲಿ ಜೋಹಲ್ ವಿರುದ್ಧ ಬರೆದ ಅವಮಾನಕರ ಸಂಗತಿಯ ವಿರುದ್ಧ ಕೂಡ ಕೋರ್ಟ್ ಮೆಟ್ಟಿಲೇರಲು ಬಯಸುವುದಿಲ್ಲ. ಸದ್ಯ ಏನು ಸಂಭವಿಸಿದೆಯೋ ಅದು ತೀರಾ ದುರದೃಷ್ಟವಾಗಿದೆ ಎಂದು ಫಿರೋಜ್ ತಿಳಿಸಿದ್ದಾರೆ. ಶುಕ್ರವಾರ ಬಂಧಿಯಾಗಿದ್ದ ಪೊಮರ‍್ಸ್‌ಬ್ಯಾಚ್‌ಗೆ ನಂತರ ದೆಹಲಿಯ ಪಟಿಯಾಲ ಕೋರ್ಟ್ ಸೂಕ್ತ ಸಾಕ್ಷ್ಯಾಧಾರವಿಲ್ಲದ ಕಾರಣ ಜಾಮೀನು ನೀಡಿತ್ತು.
Tagged with
tnews
ಬಾರ್ಸೆಲೊನಾ: ಮುಂದಿನ ತಿಂಗಳಿ ನಿಂದ ಆರಂಭವಾಗಲಿರುವ ಪ್ರತಿಷ್ಟಿತ ಯೂರೋ ಕಪ್-೨೦೧೨ ಟೂರ್ನಿಯಿಂದ ಸ್ಪೇಯ್ನ್‌ನ ಪ್ರಖ್ಯಾತ ಆಟಗಾರ ಡೇವಿಡ್ ವಿಲ್ಲಾ ಗಾಯದ ಕಾರಣ ಹೊರಬಿದ್ದಿದ್ದಾರೆ. ಸ್ಪೇಯ್ನ್‌ಗೆ ವಿಶ್ವಕಪ್ ದಕ್ಕಿಸಿಕೊಡುವಲ್ಲಿ ವಿಲ್ಲಾ ಪ್ರಮುಖ ಪಾತ್ರ ವಹಿಸಿದ್ದು, ವಿಶ್ವಕಪ್ ಹೀರೋ ಎಂದೇ ಪರಿಗಣಿಸಲ್ಪಟ್ಟಿದ್ದಾರೆ. ೨೦೦೮ರ ಯೂರೋ ಕಪ್‌ನಲ್ಲಿ ವಿಲ್ಲಾ ಗೋಲ್ಡನ್ ಬೂಟ್ ಕೂಡ ಗೆದ್ದುಕೊಂಡಿ ದ್ದರು ಎಂಬುದನ್ನು ನಾವಿಲ್ಲ ನೆನಪಿಸಿ ಕೊಳ್ಳಬಹುದು. ಟೂರ್ನಿಯಲ್ಲಿ ಭಾಗವಹಿಸಲು ನಾನು ಸಾಕಷ್ಟು ಪ್ರಯತ್ನಪಟ್ಟೆ. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ರಾಷ್ಟ್ರೀಯ ತಂಡದ ಕೋಚ್‌ನ್ನು ಕರೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದೆ, ಅದು ಪ್ರಾಮಾಣಿಕತೆಯಿಂದ ಕೂಡಿತ್ತು. ಈ ವೇಳೆ ಜನತೆ ನೀಡಿದ ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದು, ಸದ್ಯದಲ್ಲಿಯೇ ಕ್ಲಬ್ ಹಾಗೂ ದೇಶದ ತಂಡಕ್ಕೆ ಸೇರಿಕೊಳ್ಳುವ ವಿಶ್ವಾಸವಿದೆ ಎಂದು ವಿಲ್ಲಾ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಡಿಸೆಂಬರ್‌ನಲ್ಲಿ ಅಲ್-ಸದ್ ವಿರುದ್ಧದ ಬ್ಲೌಗ್ರಾನಾ ಕ್ಲಬ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದ ವೇಳೆ ವಿಲ್ಲಾ ಕಾಲು ಮುರಿತಕ್ಕೆ ಒಳಗಾಗಿದ್ದು, ಈಗ ಅದರಿಂದ ಚೇತರಿಸಿಕೊಳ್ಳಲು ವಿಫಲವಾಗಿರುವುದೇ ಹೊರಬೀಳಲು ಕಾರಣವಾಗಿದೆ.
Tagged with
tnews
ಮಂಗಳೂರು: ಹಿಂದೂ ದೇವರು, ದೇವತೆಗಳನ್ನು ಅವಮಾನ ಮಾಡಿದ ಆರೋಪಕ್ಕೆ ಗುರಿಯಾ ಗಿರುವ ಕನ್ನಡ ಸಿನಿಮಾ ಕಠಾರಿವೀರ ಸುರಸುಂದರಾಂಗಿಯ ವಿರುದ್ಧ ಬಂದರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಳೆದ ಶುಕ್ರವಾರ ಸಿನಿಮಾ ಬಿಡುಗಡೆಗೊಂಡಾಗ ಬಜರಂಗದಳ
ವಿರೋಧ ವ್ಯಕ್ತಪಡಿಸಿತ್ತಲ್ಲದೆ ಪ್ರದರ್ಶನಕ್ಕೂ ಅಡ್ಡಿಪಡಿಸಿತ್ತು. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಮುನಿರತ್ನ ಬಜರಂಗದಳದ ಮುಖಂಡರ ಜೊತೆ ನಡೆಸಿದ್ದ ಮಾತುಕತೆ ವಿಫಲವಾಗಿತ್ತು. ಸಿನಿಮಾದಲ್ಲಿರುವ ಆಕ್ಷೇಪಾರ್ಹ ಆರು ದೃಶ್ಯಗಳನ್ನು ರದ್ದುಪಡಿಸಿರುವುದಾಗಿ ಘೋಷಿಸಿದ್ದ ನಿರ್ಮಾಪಕ, ಬಳಿಕ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದರಿಂದ ಸಿನಿಮಾ ಪ್ರದರ್ಶನ ನಿರಾತಂಕವಾಗಿ ಮುಂದುವರಿದಿತ್ತು.
ಈ ಹಿನ್ನೆಲೆಯಲ್ಲಿ ಪಂಪ್‌ವೆಲ್ ನಿವಾಸಿ ಸುನಿಲ್ ಎಂಬವರು ನಿನ್ನೆ ಸುಚಿತ್ರ್ರಾ ಟಾಕೀಸ್ ಮಾಲಕ ಪ್ರಶಾಂತ್, ವ್ಯವಸ್ಥಾಪಕ ರವಿ, ಸಿನಿಮಾ ನಟ ಉಪೇಂದ್ರ, ನಿರ್ಮಾಪಕ ಮುನಿರತ್ನ ಹಾಗೂ ನಿದೇಶಕ ಸುರೇಶ್ ಕೃಷ್ಣನ್ ವಿರುದ್ಧ ಬಂದರ್ ಠಾಣೆಗೆ ದೂರು ನೀಡಿದ್ದಾರೆ. ಸಿನಿಮಾದಲ್ಲಿರುವ ವಿವಾದಿತ ದೃಶ್ಯಗಳ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಿಂದು ದೇವತೆಗಳನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸಿದ ಕನ್ನಡ ಚಲನಚಿತ್ರ ಕಠಾರಿವೀರ ಸುರಸುಂದರಾಂಗಿ ಕೂಡಲೇ ರದ್ದುಗೊಳಿಸಬೇಕಾಗಿ ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ಚಿತ್ರ ಪ್ರದರ್ಶನ ನಡೆಸುತ್ತಿರುವ ಗೀತಾಂಜಲಿ ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದರು.
Tagged with
cnews,
katariveera
ಬೆಂಗಳೂರು: ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ನಿನ್ನೆ ಆರ್‌ಸಿಬಿ ಸೇರಿದಂತೆ ಹಲವು ಫ್ರಾಂಚೈಸಿ ಕಚೇರಿಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿ ಹಲವಾರು ದಾಖಲೆಗಳನನ್ನು ವಶಕ್ಕೆ ತೆಗೆದುಕೊಂಡಿವೆ. ಪುಣೆ ವಾರಿಯರ‍್ಸ್ ಕಚೇರಿಗಳ ಮೇಲೂ ದಾಳಿಯನ್ನು ಸಂಘಟಿಸಲಾಗಿತ್ತು. ತನಗೆ ಹರಾಜು ಮೊತ್ತಕ್ಕಿಂತ ಹೆಚ್ಚಿನ ದುಡ್ಡನ್ನು ತಂಡ ನೀಡಿತ್ತು ಎಂದು ಪುಣೆ ತಂಡದ ಆಟಗಾರ ಮೊನಿಶ್ ಮಿಶ್ರಾರ ಹೇಳಿಕೆ ನಂತರ ಐಟಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಈ ಹಿನ್ನೆಲೆಯಿಂದಲೇ ದಾಳಿಗಳು ನಡೆದಿವೆ.
ನಮ್ಮನ್ನು ಟೂರ್ನಿಯ ವ್ಯವಹಾರಗಳ ದಾಖಲೆ ಮತ್ತು ವಿವರ, ಪಾಳು ಹಿಡುವಳಿ ಸ್ವರೂಪ ಹಾಗೂ ಆರ್ಥಿಕ ಹೂಡಿಕೆಗಳ ಬಗೆಗಿನ ವಿವರಗಳನ್ನು ಸಂಗ್ರಹಿಸುವ ಸಲುವಾಗಿ ಕಳುಹಿಸಲಾಗಿದೆ. ಪುಣೆಯ ಆಂಬಿ ವ್ಯಾಲಿ ಮೇಲೂ ದಾಳಿ ನಡೆಸಲಾಗಿದೆ ಎಂದು ಐಟಿ ಅಧಿಕಾರಿಗಳ ಮೂಲಗಳು ತಿಳಿಸಿವೆ. ಆದರೆ ಪ್ರಮುಖ ಮೂಲಗಳ ಪ್ರಾಥಮಿಕ ವರದಿಗಲ ಪ್ರಕಾರ, ಇದೊಂದು ಸಾಮಾನ್ಯ ಭೇಟಿಯಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಸದ್ಯದ ಟೂರ್ನಿಯು ಹಲವಾರು ವಿವಾದಗಳಿಂದಲೇ ಸುದ್ದಿಯಾಗಿದ್ದು, ಇದೀಗ ಐಟಿ ದಾಳಿ ಕೂಡ ತಂಡಗಳ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆ ತಂದಿರುವುದರಲ್ಲಿ ಸಂಶಯವಿಲ್ಲ ಎಂದು ಹೇಳಬಹುದು.
Tagged with
tnews
ಕಾಸರಗೋಡು: ಕೇರಳದ ಸಿಪಿಎಂ ಪಕ್ಷದ ರಾಜಕೀಯ ವಿರೋಧಿಯಾದ ಕ್ರಾಂತಿಕಾರಿ ಮಾರ್ಕ್ಸಿಸ್ಟ್ ಪಕ್ಷದ ರಾಜ್ಯ ನಾಯಕ, ಕಲ್ಲಿಕೋಟೆ ಒಂಜಿಯಂನ ಟಿ.ಪಿ.ಚಂದ್ರಶೇಖರನ್ ಅವರ ಬರ್ಬರ ಹತ್ಯೆ ಪ್ರಕರಣದಲ್ಲಿ ನೇರ ಶಾಮೀಲಾದ ಆರೋಪಿಯೋರ್ವನನ್ನು ಸೆರೆ ಹಿಡಿ ಯುತ್ತಿರುವುದರೊಂದಿಗೆ ಪ್ರಕರಣದ ಎಲ್ಲ ನಿಗೂಢತೆಗಳು ಬಯಲಾಗುವ ಸಾಧ್ಯತೆ ಗೋಚರಿಸಿದೆ.
ಬಂಧಿತನನ್ನು ಕಣ್ಣೂರು ನ್ಯೂ ಮಾಹಿಯ ನಿವಾಸಿ ಶಿಜಿತ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಇದರೊಂದಿಗೆ ೧೩ ಮಂದಿ ಬಂಧಿತ ರಾದರೂ, ಈ ಹಿಂದೆ ಸೆರೆಯಾದ ೧೨ ಮಂದಿ ಕೂಡಾ ಹಂತಕರಿಗೆ ನೆರವು ನೀಡಿದವರು ಮಾತ್ರವಾಗಿದ್ದಾರೆ. ಇದೀಗ ನೇರ ಶಾಮೀಲಾದ ಓರ್ವನು ಬಂಧನಕ್ಕೊಳಗಾಗಿದ್ದು, ಇನ್ನು ಮುಖ್ಯ ಹಂತಕರಾದ ಕೊಡಿ ಸುನಿ ಮತ್ತು ಅನೂಪ್ ಸೇರಿದಂತೆ ಆರು ಮಂದಿ ಸೆರೆ ಸಿಗಬೇಕಾಗಿದೆ.
ಕಾರ್ಮಿಕ ವರ್ಗದ ಪಕ್ಷವೆನ್ನಲಾದ ಸಿ.ಪಿಎಂ ಪಕ್ಷದ ಸದ್ಯದ ನಾಯಕತ್ವದ ಬಲಪಂಥೀಯ ನಿಲುವು ಹಾಗೂ ಭ್ರಷ್ಟಾಚಾರ ವಿರೋಧಿಸಿ ಚಂದ್ರಶೇಖರರ ನೇತೃತ್ವದಲ್ಲಿ ಸಿ.ಪಿ.ಎಂ ಕಾರ್ಯಕರ್ತರು ರಾಜೀನಾಮೆ ನೀಡಿ ಕ್ರಾಂತಿಕಾರಿ ಪಕ್ಷ ರೂಪಿಸಿದ್ದರು. ಸಿ.ಪಿ.ಎಂನ ಅಧಿಕೃತ ಬಣವಾದ ಪಿಣರಾಯಿ ವಿಜಯನ್ ವಿಭಾಗದೊಂದಿಗೆ ಬದ್ಧ ರಾಜಕೀಯ ವಿರೋಧ ಪ್ರಕಟಿಸುತ್ತಿದ್ದರು. ಇದೀಗ ಚಂದ್ರಶೇಖರರ ಹತ್ಯೆಯಾಗಿದ್ದು ಸಿ.ಪಿ.ಎಂ.ನ ಕಣ್ಣೂರು ಲಾಬಿಯು ಇವರ ಕೊಲೆ ನಡೆಸಿರುವುದಾಗಿ ಆರೋಪವುಂಟಾಗಿದೆ. ಮೇ ನಾಲ್ಕರಂದು ರಾತ್ರಿ ಚಂದ್ರಶೇಖರರ ಕೊಲೆ ನಡೆದಿತ್ತು.
ಚಂದ್ರಶೇಖರರ ಹತ್ಯೆ ಹಾಗೂ ಬಳಿಕದ ರಾಜಕೀಯ ವಿದ್ಯಮಾನಗಳಿಂದ ಬೇಸತ್ತಿರುವ ಸಿ.ಪಿ.ಎಂ ನ ಆದರ್ಶವಾದಿ ಮುತ್ಸಧ್ದಿ ವಿ.ಎಸ್ ಅಚ್ಚುತಾನಂದನ್ ಅವರು ಪಿಣರಾಯಿ ವಿಜಯನ್‌ರನ್ನು ಪಕ್ಷ ನಾಯಕತ್ವದಿಂದ ಹೊರ ಹಾಕಲು ಒತ್ತಾಯಿಸಿ ಕೇಂದ್ರ ನಾಯಕತ್ವಕ್ಕೆ ದೂರು ಸಲ್ಲಿಸಿರುವ ವಿದ್ಯಮಾನವೂ ಸಂಭವಿಸಿದೆ.
Tagged with
cnews
ಮುಲ್ಕಿ: ಇಲ್ಲಿನ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯ ಮುಖ್ಯರಸ್ತೆಯಲ್ಲಿ ನಿನ್ನೆ ಕಳ್ಳನೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ಆತ ಅಂತರಾಜ್ಯ ಕಳ್ಳನಾಗಿದ್ದಾನೆ ಎಂದು ತಿಳಿದುಬಂದಿದೆ.
ಮೂಲತಃ ಉಪ್ಪಿನಂಗಡಿಯ ನಿವಾಸಿಯಾಗಿದ್ದು, ಈತ ಪುನರೂರು ಬಳಿಯ ಕೆರೆಕಾಡಿನ ಬಾಡಿಗೆ ಮನೆ ಯಲ್ಲಿ ಇತ್ತೀಚೆಗಷ್ಟೇ ವಾಸವಾಗಿದ್ದನು ಎಂಬ ಮಾಹಿತಿ ದೊರೆತಿದ್ದು, ಪೊಲೀ ಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈತ ಪರಿಸರದಲ್ಲಿ ಮತ್ತು ಇತರ ಠಾಣಾ ವ್ಯಾಪ್ತಿಯಲ್ಲಿ ಭಾರಿ ಕಳ್ಳತನ ನಡೆಸಿರುವ ಸಾಧ್ಯತೆಯಿದ್ದು ಬೈಕೊಂದನ್ನು ಸಹ ವಶಪಡಿಸಿ ಕೊಂಡಿದ್ದಾರೆ ಎನ್ನಲಾಗಿದೆ. ಮುಲ್ಕಿ ಪೊಲೀಸರು ಮಾಧ್ಯಮಕ್ಕೆ ಸ್ಪಷ್ಟ ಮಾಹಿತಿ ನೀಡಲು ನಿರಾಕರಿಸುತ್ತಿದ್ದು ರಿಕವರಿ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.
Tagged with
cnews
ಸುಳ್ಯ: ಪೆರಾಜೆ ಗ್ರಾಮದ ಅಬ್ದುಲ್ ನಜೀರ್ ಎಂಬವರು ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿ ಇರುವ ತಮ್ಮ ಅತ್ತೆಯಾದ ನೆಬಿಸಾ ಎಂಬವರ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಕಾರು ಕಳ ವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ೧೪ನೇ ತಾರೀಕು ಕೆ.ಎ೨೧-ಎನ್.೭೯೭೧ ನೋಂದಣಿ ಹೊಂದಿರುವ ಕಾರನ್ನು ಇಟ್ಟು ಹೋಗಿದ್ದು, ೧೮ನೇ ತಾರೀಕಿನಂದು ಬರುವಾಗ ಅದು ಕಾಣೆ ಯಾಗಿತ್ತು ಎಂದವರು ತಿಳಿಸಿದ್ದಾರೆ.
Tagged with
cnews
ಬೆಳ್ತಂಗಡಿ: ಮೇ ೨೦ರಂದು ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಸೋಣಂದೂರು ಗ್ರಾಮದ ಮುಂಡಾ ಡಿಯಲ್ಲಿ ನಡೆದ ಶಶಿಕಲಾ ಎಂಬವರ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿರುವ ಸಂತೋಷ್ ಶೆಟ್ಟಿ ಯಲ್ಲದೆ ಇನ್ನೂ ಹಲವಾರು ಭಾಗಿ ಯಾಗಿದ್ದು, ಇವರೆಲ್ಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮೃತ ಶಶಿಕಲಾಳ ಸಹೋದರ ರಾಮಣ್ಣ ಶೆಟ್ಟಿ ಪುಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಹೇಳಿರುವಂತೆ ಮೃತಳ ಪತಿ ವಿಜಯ ಶೆಟ್ಟಿ, ಮಾವ ಸುಂದರ ಶೆಟ್ಟಿ ಹಾಗೂ ಮನೆಯಲ್ಲಿದ್ದ ಇತರರು ವರದಕ್ಷಿಣೆ ತರುವಂತೆ ಶಶಿಕಲಾಳಿಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಆಕೆಯ ಕೊಲೆಗೆ ಸಂಚು ರೂಪಿಸಿದ್ದರು. ಅದರಲ್ಲಿ ಪ್ರಮುಖ ಆರೋಪಿಯಾದ ಸಂತೋಷನೊಂದಿಗೆ ಈತನ ತಾಯಿ ಲಲಿತ, ಬೇಬಿ ಶೆಟ್ಟಿ, ಪ್ರಶಾಂತ್, ಸತೀಶ್ ಶೆಟ್ಟಿ, ಪ್ರಮೀಳ, ಶ್ರೀಕಾಂತ್, ಚಂದ್ರಶೇಖರ, ದಯಾನಂದ ಎಂಬವರು ಕೊಲೆಗೆ ಸಂಚು ರೂಪಿಸಿದ್ದರು ಎಂದು ರಾಮಣ್ಣ ಶೆಟ್ಟಿ ಅವರು ನೀಡಿದ ದೂರಿನಲ್ಲಿದೆ. ಮೇ ೨೦ರಂದು ಮಧ್ಯಾಹ್ನದ ವೇಳೆ ಯಾವುದೇ ಗಲಾಟೆಗಳು ನಡೆ ಯದಿದ್ದರೂ ಬೀಡಿ ಕಟ್ಟುತ್ತಿದ್ದ ಶಶಿಕಲಾಳನ್ನು ಏಕಾಏಕಿ ಬಂದ ಸಂತೋಷ್ ಶೆಟ್ಟಿ ಹತ್ಯೆ ಮಾಡಿದ್ದಾನೆ. ಇದನ್ನು ಗಮನಿಸಿದರೆ ಇದು ವ್ಯವಸ್ಥಿತವಾಗಿ ರೂಪುಗೊಂಡ ಕಾರ್ಯಸೂಚಿಯಂತೆ ನಡೆದ ಕೊಲೆ ಎಂದು ಅನುಮಾನ ಮೂಡುತ್ತದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಶಶಿಕಲಾಳ ಮನೆಯವರು ಪ್ರಕರಣದ ತನಿಖೆಯನ್ನು ಕೇವಲ ಒಂದಿಬ್ಬರಿಗೆ ಸೀಮಿತಗೊಳಿಸದೆ ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ಮೃತ ಶಶಿಕಲಾಳು ಮನೆಯವರ ಯಾವುದೋ ರಹಸ್ಯದ ಬಗ್ಗೆ ಧ್ವನಿ ಎತ್ತಿದ್ದೇ ಕೊಲೆಗೆ ಕಾರಣವೆಂದು ಮೃತಳ ಅಣ್ಣ ರಾಮಣ್ಣ ಶೆಟ್ಟಿಯವರು ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಕೊಲೆಗೆ ಕಾರಣಕರ್ತರಾದ ಎಲ್ಲರನ್ನು ವಿಚಾರಣೆಗೆ ತೆಗೆದುಕೊಂಡು ಸೂಕ್ತ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಪುಂಜಾಲಕಟ್ಟೆ ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
Tagged with
cnews,
shashikala
ಪಡುಬಿದ್ರಿ: ಕಾಪು ಠಾಣಾ ವ್ಯಾಪ್ತಿಯ ಏಣಗುಡ್ಡೆ ಕಾಳಿಕಾಂಬ ಮಂದಿರದಲ್ಲಿ ಮಂಗಳವಾರ ರಾತ್ರಿ ಕಳ್ಳನೋರ್ವ ಕಳ್ಳತನಕ್ಕೆ ಪ್ರಯತ್ನಿಸಿ ಸಿಕ್ಕಿಬಿದ್ದ ಘಟನೆ ಸಂಭವಿಸಿದೆ.
ಮಂಗಳವಾರ ರಾತ್ರಿಯ ಪೂಜೆ ಗೆಂದು ದೇವಳದ ಅರ್ಚಕ ಜನಾರ್ದನ ಪುರೋಹಿತ್‌ರವರು ದೇವಳಕ್ಕೆ ಬಂದಾಗ, ಓರ್ವ ದೇವರ ಗರ್ಭಗುಡಿಯಲ್ಲಿ ದೇವರ ಮೂರ್ತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕದಿಯಲು ಪ್ರಯತ್ನಿಸುತ್ತಿದ್ದ. ಇದನ್ನು ಕಂಡ ಪುರೋಹಿತರು ಬೊಬ್ಬೆ ಹಾಕಿದಾಗ, ಕಳ್ಳ ಓಡಲು ಪ್ರಯತ್ನಿಸಿದನಾದರೂ ಸ್ಥಳೀಯರು ಅಲ್ಲಿಗೆ ಬಂದ ಪರಿಣಾಮ ಸಿಕ್ಕಿ ಬಿದ್ದಿದ್ದಾನೆ. ಕಳ್ಳತನಕ್ಕೆ ಪ್ರಯತ್ನ ಪಟ್ಟ ಯುವಕನನ್ನು ಹೇಮಂತ ಆಚಾರ್ಯ ಎಂದು ಗುರುತಿಸಲಾಗಿದೆ. ಅರ್ಚಕ ಜನಾರ್ದನ ಪುರೋಹಿತ್‌ರವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews
ಮಂಗಳೂರು: ಧರ್ಮಸ್ಥಳಕ್ಕೆ ಯಾತ್ರಿಕನಾಗಿ ಬಂದಿದ್ದ ಬಾಲಕ ಬುಧವಾರ ತೀರ್ಥಸ್ನಾನ ಮಾಡುವಾಗ ಕಾಲುಜಾರಿ ನೇತ್ರಾವತಿ ನದಿಗೆ ಬಿದ್ದು ಮೃತಪಟ್ಟಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಎಸೆಗಲ್ಲು ಮನೆ ಎಚ್.ಎನ್.ಗೋಪಾಲ್ ಅವರ ಪುತ್ರ ನಿಂಗರಾಜ್(೧೫) ಮೃತ ಬಾಲಕ.
ಕುಟುಂಬದವರ ಜತೆಗೆ ದೇವರ ದರ್ಶನಕ್ಕೆ ಬಂದಿದ್ದಾಗ ನೇತ್ರಾವತಿ ಸ್ನಾನ ಘಟ್ಟದ ಬಳಿ ತೀರ್ಥಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.
Tagged with
cnews
ಕಾಸರಗೋಡು: ೨೦೦೨ರ ಗುಜರಾತ್ ಗಲಭೆಯ ವೇಳೆ ಹೆತ್ತವರು ಹಾಗೂ ಕುಟುಂಬದವರಿಂದ ಅನಿರೀ ಕ್ಷಿತವಾಗಿ ದೂರವಾಗಿ ಬಳಿಕ ಊರೂರು ಅಲೆದಾಡಿ ಕಾಸರ ಗೋಡಿನಲ್ಲಿ ಅಭಯ ಕಂಡುಕೊಂಡ, ಇದೀಗ ೧೫ರ ಹರೆಯಕ್ಕೆ ಕಾಲಿರಿಸಿರುವ ಬಾಲಕ ನಿಗೂಢ ಸ್ಥಿತಿಯಲ್ಲಿ ನಾಪತ್ತೆ ಯಾಗಿದ್ದಾನೆ.
ಮೂಲತ: ಗುಜರಾತ್ ನಿವಾಸಿಯಾಗಿರುವ, ೨೦೦೫ರ ನವಂ ಬರ ತಿಂಗಳಿನಿಂದ ಇಲ್ಲಿನ ಅಂಬಲತ್ತರೆ ಪಾರಪ್ಪಳ್ಳಿಯ ಮುಸ್ಲಿಂ ಜಮಾಯತ್ ಅಧೀನದ ಪಿ.ವಿ.ಎಂ. ಅನಾಥ ಮಂದಿರ ದಲ್ಲಿ ವಾಸಿಸುವ ಬಾಲಕ ಹಾಶಿಂ(೧೫) ಕಣ್ಮರೆಯಾದಾತ. ನಿನ್ನೆ ಬೆಳಿಗ್ಗೆ ಚಾ ಕುಡಿದ ಬಳಿಕ ಈತ ಹಾಲ್‌ನಲ್ಲಿ ಮಲ ಗಿದ್ದ ಎನ್ನಲಾಗಿದೆ. ಆ ಬಳಿಕ ಕಾಣೆ ಯಾಗಿದ್ದಾನೆ. ಆರಂಭದಲ್ಲಿ ಯತೀಂ ಖಾನ ಅಧಿಕೃತರು ಈತ ಮದ್ರಸಾಕ್ಕೆ ತೆರಳಿದ್ದಾನೆಂದು ನಂಬಿದ್ದರೂ, ಮದ್ರಸಾ ಬಿಡುವ ಸಮಯವಾಗಿಯೂ ಕಾಣ ದಿದ್ದಾಗ ಸಂಪರ್ಕಿಸಿ ವಿಚಾರಿಸಿದಾಗ ಮದ್ರಸಾಕ್ಕೆ ತಲುಪಿಯೇ ಇಲ್ಲವೆಂಬ ವಿಚಾರ ತಿಳಿದುಬಂತು.
ಯತೀಂಖಾನ ಅಧಿಕೃತರು ಅಂಬಲತ್ತರೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಹಿಂದೊಮ್ಮೆ ಯತೀಂಖಾನದಿಂದ ನಾಪತ್ತೆಯಾಗಿದ್ದ ಹಾಶಿಂನನ್ನು ಬಳಿಕ ಮಂಗಳೂರಿನಿಂದ ಪತ್ತೆ ಹಚ್ಚಲಾಗಿತ್ತು.
Tagged with
cnews,
missing
ಮಂಗಳೂರು: ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್‌ಗೆ ಬಿದ್ದು ಬಾಲಕನೋರ್ವ ಸಾವನ್ನಪ್ಪಿದ್ದು, ಮತ್ತೋರ್ವ ಬಾಲಕ ರಕ್ಷಿಸಲ್ಪಟ್ಟ ಘಟನೆ ಪಂಜದ ಪಲ್ಲೋಡಿಯಲ್ಲಿ ಸಂಭವಿಸಿದೆ.
ಪಲ್ಲೋಡಿ ಶಿವಾಜಿ ಜನತಾ ಕಾಲನಿಯ ದಿ.ಬಾಬು ಕೊರಗ ಮತ್ತು ದಿ.ಬೇಬಿ ಕೊರಗ ದಂಪತಿ ಮಗ ರೋಶನ್ (೧೧)ಸಾವನ್ನಪ್ಪಿದನು. ಆತನ ತಮ್ಮ ಪ್ರವೀಣ್ (೯) ಬದುಕುಳಿದ ಬಾಲಕ ಪಲ್ಲೋಡಿಯಲ್ಲಿ ಅವರ ಮನೆ ಸಮೀಪವಿರುವ ೨.೫ಮೀ.ಎತ್ತರದ ನೀರಿನ ಟ್ಯಾಂಕ್‌ಗೆ ಹತ್ತಿ ಅದರ ಮುಚ್ಚಳ ತೆಗೆದ ರೋಶನ್ ಮತ್ತು ಪ್ರವೀಣ್ ಸಹೋದರರು ಒಳಗೆ ಇಳಿದಿದ್ದರು. ಈ ವೇಳೆ ರೋಶನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದನು. ಪ್ರವೀಣ್ ಈಜುತ್ತಾ ಏದುಸಿರು ಬಿಡುತ್ತಿರುವಾಗ ಸ್ಥಳಕ್ಕೆ ಬಂದ ಪಂಚಾಯತ್ ಪಂಪ್ ಆಪರೇಟರ್ ಲಿಂಗಪ್ಪ ನಾಯ್ಕರು ಟ್ಯಾಂಕ್‌ನೊಳಗೆ ಶಬ್ದ ಕೇಳಿ ಮೇಲೆ ಹತ್ತಿ ನೋಡಿದರು. ಟ್ಯಾಂಕ್‌ನೊಳಗೆ ನೀರಿನಲ್ಲಿ ಪುಟ್ಟ ಬಾಲಕ ಏದುಸಿರು ಬಿಡುತ್ತಾ ಈಜುತ್ತಿರುವುದನ್ನು ಕಂಡು ಆತನನ್ನು ಮೇಲಕ್ಕೆತ್ತಿ ರಕ್ಷಿಸಿದರು. ಸ್ವಲ್ಪ ಸುಧಾರಿಸಿಕೊಂಡ ಬಾಲಕ ಅಣ್ಣನು ಒಳಗಡೆ ಇರುವುದಾಗಿ ಹೇಳಿದಾಗ ಲಿಂಗಪ್ಪ ನಾಯಕ್ ಟಾಂಕಿಯೊಳಗೆ ಇಳಿದು ಹುಡುಕಿ ರೋಶನ್‌ನನ್ನು ಮೇಲಕ್ಕೆತ್ತಿದರು. ಆ ವೇಳೆಗಾಗಲೇ ಆ ಬಾಲಕ ಸಾವನ್ನಪ್ಪಿದ್ದ. ಬಳಿಕ ಊರವರಿಗೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಲಾಯಿತು.
ಅನಾಥ ಮಕ್ಕಳು: ಎರಡು ವರ್ಷಗಳ ಹಿಂದೆ ರೋಶನ್‌ನ ತಂದೆ ಬಾಬು ಅನಾರೋಗ್ಯದಿಂದ ಮೃತರಾಗಿದ್ದು, ತಾಯಿ ಬೇಬಿ ಕೂಡಾ ಅನಾರೋಗ್ಯದಿಂದ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ರೋಶನ್‌ನ ಅಣ್ಣ ಜೀವನ್ ಈಗ ೮ನೇ ತರಗತಿಯಲ್ಲಿ ಓದುತ್ತಿದ್ದಾನೆ. ರೋಶನ್ ೩ನೇ ತರಗತಿ ಉತ್ತೀರ್ಣಗೊಂಡು ೪ನೇ ತರಗತಿಗೆ ಸೇರಬೇಕಾಗಿತ್ತು. ಮೂರನೆಯವನು ಪ್ರವೀಣ್ ಪಂಜ ಸರಕಾರಿ ಹಿ.ಪ್ರಾ.ಶಾಲೆಯ ೨ನೇ ತರಗತಿ ವಿದ್ಯಾರ್ಥಿ ತಬ್ಬಲಿ ಮಕ್ಕಳನ್ನು ಬಾಬು ಅವರ ಸಹೋದರಿ ರೇಖಾ ರವಿಯವರು ಆಶ್ರಯ ನೀಡಿ ಶಾಲೆಗೆ ಕಳುಹಿಸುತ್ತಿದ್ದಾರೆ. ಬಾಬು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದ ಮನೆ ಈಗ ಮಣ್ಣುಪಾಲಾಗಿದೆ.
Tagged with
cnews
ಬಂಟ್ವಾಳ: ಕಾಂಗ್ರೆಸ್ ಮುಖಂಡ ಓರ್ವರು ಕೆಎಸ್‌ಆರ್‌ಟಿಸಿ ಉದ್ಯೋಗಸ್ಥರ ಮೇಲೆ ಕೈ ಹಾಕಿದ ಘಟನೆ ತಾಲೂಕಿನ ಶಂಭೂರು ಎಂಬಲ್ಲಿ ನಡೆದಿದೆ. ಜಮೀನು ಸರ್ವೇ ಕಾರ್ಯದಲ್ಲಾದ ಎಡವಟ್ಟೇ ಘಟನೆಗೆ ಕಾರಣ ಎನ್ನಲಾಗಿದೆ.
ಹಲ್ಲೆಗೊಳಗಾದವರನ್ನು ಕೆಎಸ್‌ಆರ್‌ಟಿಸಿಯ ತಾಂತ್ರಿಕ ಸಿಬ್ಬಂದಿ ಯಾದವ ಎಂದು ಗುರುತಿಸಲಾಗಿದ್ದು, ಬಂಟ್ವಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನರಿಕೊಂಬು ನಿವಾಸಿ ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರಕಾಶ ಕಾರಂತ ಎನ್ನುವವರ ಹಲ್ಲೆಗೈದಿರುವುದಾಗಿ ಯಾದವ್ ಗ್ರಾಮಾಂತರ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಶಂಭೂರಿನಲ್ಲಿ ರಸ್ತೆ ನಿರ್ಮಿಸುವ ಉದ್ದೇಶದಲ್ಲಿ ಜಮೀನು ಸರ್ವೇ ಕಾರ್ಯ ಕೈಗೆತ್ತಿಕೊಂಡಿದ್ದು, ಕಂದಾಯ ಇಲಾಖೆಯ ಭೂ ಮಾಪನ ಶಾಖೆಯಿಂದ ಶಿವಣ್ಣ ಎಂಬರನ್ನು ಕರೆಸಲಾಗಿತ್ತು. ಜಮೀನಿಗೆ ಸಂಬಂಧಿಸಿದವರಿಗೆ ನೊಟೀಸ್ ಕಳುಹಿಸದೇ ಸರ್ವೇ ಕೆಲಸ ನಡೆಸಿದ್ದನ್ನು ಸ್ಥಳೀಯರು ಆಕ್ಷೇಪಿಸಿದ್ದರು. ಆದರೆ ಆಕ್ಷೇಪಕ್ಕೆ ಸರ್ವೇಯರ್ ಸ್ಪಂದಿಸಿರಲಿಲ್ಲ. ಅವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿದ್ದ ಪ್ರಕಾಶ್ ಕಾರಂತರು ಸರ್ವೇಯರ್ ಪರವಹಿಸಿ ವಾದಿಸಿದ್ದರು. ಇದರಿಂದ ಅಸಮಧಾನಗೊಂಡ ಯಾದವ, ನೀವೇನು ಡೀಸಿನಾ? ನಮಗೆ ಕಂದಾಯ ಇಲಾಖೆಯ ಅಧಿಕಾರಿಗಳು ನೊಟೀಸ್ ಕೊಡಲಿ ಎಂದು ಪ್ರತಿಕ್ರಿಯಿಸಿದ್ದು, ಇದರಿಂದ ಕುಪಿತರಾದ ಪ್ರಕಾಶ ಕಾರಂತ, ಯಾದವ್ ಮೇಲೆ ಕೈ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕಾಶ್ ಕಾರಂತ ಜೀವ ಬೆದರಿಕೆ ಒಡ್ಡಿರುವುದಾಗಿ ಯಾದವ್ ಆರೋಪಿಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ನರಿಕೊಂಬು ಗ್ರಾ. ಪಂ. ಅಧ್ಯಕ್ಷ ಆನಂದ ವಿವಾದವನ್ನು ಪರಸ್ಪರ ಬಗೆಹರಿಸಿದ್ದರು. ಸರ್ವೇ ಕಾರ್ಯದಲ್ಲಿ ಉಂಟಾದ ವಿವಾದದಿಂದಾಗಿ ಮಾತುಕತೆ ನಡೆದಿದ್ದು, ಈ ಸಂದರ್ಭ ಯಾದವ್ ಪ್ರಕಾಶ ಕಾರಂತ ಮೇಲೆ ಹಲ್ಲೆಗೆಯ್ಯಲು ಯತ್ನಿಸಿರುವುದಾಗಿ ಪ್ರತಿದೂರು ನೀಡಲಾಗಿದೆ. ಪ್ರಕರಣ ಈಗ ಗ್ರಾಮಾಂತರ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ಮುಂದುವರಿದಿದೆ. ಸರ್ವೇ ಗೊಂದಲವೇ ವಿವಾದಕ್ಕೆ ಕಾರಣ ಎನ್ನಲಾಗಿದ್ದು, ಸರ್ವೇ ಶಿವಣ್ಣ ವಿರುದ್ಧ ಸ್ಥಳೀಯರು ಮೇಲಧಿಕಾರಿಗೆ ದೂರು ನೀಡಿದ್ದಾರೆ.
Tagged with
cnews
ಮಂಗಳೂರು: ಮಹಾರಾಷ್ಟ್ರದಿಂದ ಕುಂದಾಪುರಕ್ಕೆ ರೈಲಿನಲ್ಲಿ ಬರುತ್ತಿದ್ದ ಕುಟುಂಬವೊಂದನ್ನು ರೈಲಿನೊಳಗೆ ಸುತ್ತುವರಿದ ಅಪರಿಚಿತ ೬ ಮಂದಿಯ ತಂಡ ಅವರ ಬ್ಯಾಗಿನಲ್ಲಿದ್ದ ೩,೪೨,೦೦೦ಮೌಲ್ಯದ ಚಿನ್ನಾಭರಣ ಹಾಗೂ ಒಂದು ಸಾವಿರ ನಗದನ್ನು ದೋಚಿದ್ದಾರೆ.ಬೈಂದೂರು ಠಾಣಾ ವ್ಯಾಪ್ತಿಯ ಬಿಜೂರು ರೈಲ್ವೇ ನಿಲ್ದಾಣದ ಸಮೀಪ ಮೇ ೨೨ರ ಮುಂಜಾನೆ ಈ ದರೋಡೆ ನಡೆದಿದೆ.
ಕಾಳಾವರದ ಕೆ. ಭುಜಂಗ ಶೆಟ್ಟಿ ಅವರು ನೀಡಿದ ದೂರಿನಂತೆ ಕೊಂಕಣ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಕುಂದಾಪುರ ತಾ.ನ.ಕಾಳಾವರ ಗ್ರಾಮದ ಕೆ.ಭುಜಂಗ ಶೆಟ್ಟಿ ಮತ್ತು ಅವರ ಕುಟುಂಬದವರು ಕುರ್ಲಾದಲ್ಲಿದ್ದು, ಕಾಳಾವರಕ್ಕೆ ಬರಲೆಂದು ಮೇ ೨೧ರಂದು ಸಂಜೆ ಕುರ್ಲಾ ಟರ್ಮಿನೆಸ್‌ನಿಂದ ಕೊಚ್ಚಿವೆಲ್ ಕಡೆಗೆ ಹೋಗುವ ಗರೀಬ್ ರಥ ರೈಲಿನಲ್ಲಿ ಕುಳಿತಿದ್ದರು.ಮೇ ೨೨ರ ಮುಂಜಾನೆ ೬.೧೫ ರ ಸಮಯದಲ್ಲಿ ಬಿಜೂರು ಸಮೀಪ ಧಾವಿಸಿ ಬಂದ ೬ ಮಂದಿ ಕಳ್ಳರು ಭುಜಂಗ ಶೆಟ್ಟಿ ಮತ್ತವರ ಕುಟುಂಬದವರನ್ನು ಸುತ್ತುವರೆದು ಬ್ಯಾಗು ತೆರೆದು ೩,೪೩,೦೦೦ ಮೌಲ್ಯದ ಸೊತ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
Tagged with
cnews
ಗರ್ಭಿಣಿಯರ ಪರದಾಟ
ಕುಂದಾಪುರ: ಒಂದೊಮ್ಮೆ ಜಿಲ್ಲೆಯಲ್ಲಿಯೇ ಸುಸಜ್ಜಿತ ಆಸ್ಪತ್ರೆಯೊಂದು ಹೆಸರು ಗಳಿಸಿದ್ದ ಕುಂದಾಪುರ ಸರ್ಕಾರಿ ಆಸ್ಪತ್ರೆಯ ಸ್ಥಿತಿ ಅಧೋಗತಿಗೆ ಇಳಿ ದಿದ್ದು, ಹೆರಿಗೆ ವೈದ್ಯರುಗಳಿಲ್ಲದೆ ಕೆಲವು ದಿನಗಳು ಉರುಳಿ ಸರ್ಕಾರಿ ಆಸ್ಪತ್ರೆ ಯನ್ನೇ ಅವಲಂಬಿಸಿರುವ ಬಡ ಗರ್ಭಿಣಿ ಮಹಿಳೆಯರು ದಿಕ್ಕು ತೋಚದಂತಾಗಿದ್ದಾರೆ. ಇವರ ಪರಿಸ್ಥಿತಿ ಹೇಗಿದೆಯೆಂದರೆ ಒಂದೋ ದುಬಾರಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕು ಅಥವಾ ದೂರದ ಉಡುಪಿ ಹೆರಿಗೆ ಆಸ್ಪತ್ರೆ ಸೇರುವಂತಾಗಿದೆ.
ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹಲವು ವರ್ಷಗಳ ಹಿಂದೆ ಡಾ| ಉದಯಕುಮಾರ್ ಅವರು ವೈದ್ಯಾಧಿಕಾರಿಯಾಗಿ ಆಗಮಿಸಿದ ನಂತರ ಸರ್ಕಾರಿ ಆಸ್ಪತ್ರೆಯ ಸ್ಥಿತಿ ನಿಜಕ್ಕೂ ಅದ್ಭುತವಾಗಿ ಸುಧಾರಣೆಗೊಂಡಿತ್ತು. ತದನಂತರ ಉಡುಪಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಇದೇ ಆಸ್ಪತ್ರೆಗೆ ಸುಸಜ್ಜಿತವಾದ ಹೆರಿಗೆ ವಾರ್ಡನ್ನು ನಿರ್ಮಿಸಿ ಕೊಟ್ಟು ಬಡವರ ಜೊತೆಗೆ ಸಿರಿವಂತ ಗರ್ಭಿಣಿಯರೂ ಚಿಕಿತ್ಸೆ ಪಡೆಯುವಂತಹ ಅವಕಾಶ, ಸೌಲಭ್ಯವನ್ನು ಒದಗಿಸಿಕೊಟ್ಟಿತು. ಇತ್ತೀಚಿನ ತನಕ ಹೆರಿಗೆ ವೈದ್ಯರಾದ ಡಾ| ಚಂದ್ರ ಮರಕಾಲ ಹಾಗೂ ಡಾ| ಆರತಿ ಮೇಡಂ ಉತ್ತಮ ಸೇವೆಯನ್ನು ನೀಡುತ್ತಾ ಬಡ ಗರ್ಭಿಣಿಯರ ಪಾಲಿಗೆ ನಿಜಕ್ಕೂ ವರದಾನದಂತಿದ್ದರು. ಆದರೆ ಅದೇನಾಯ್ತೋ ಡಾ| ಚಂದ್ರ ಮರಕಾಲರು ಏಕಾಏಕಿ ವರ್ಗಾವಣೆಗೊಂಡಿದ್ದರೆ ಡಾ| ಆರತಿ ಮೇಡಂ ರಜೆ ಹಾಕಿ ಬಿಮ್ಮನೆ ಕುಳಿತು ಬಿಟ್ಟಿದ್ದಾರೆ. ಹಾಗಾಗಿ ಹೆರುವ ಆಸೆಯಲ್ಲಿ ತುಂಬು ಗರ್ಭವನ್ನು ಹೊತ್ತು ಬರುತ್ತಿರುವ ಗರ್ಭಿಣಿಯರಿಗೆ ಗತ್ಯಂತರವಿಲ್ಲದೆ ಆಸ್ಪತ್ರೆ ಸಿಬ್ಬಂದಿ ‘ಡಾಕ್ಟರಿಲ್ಲಮ್ಮ ಬೇರೆ ಕಡೆಗೆ ಹೋಗಿ ಎಂದು ಹೇಳುತ್ತಿದ್ದಾರೆ. ನಾರ್ಮಲ್ ಡೆಲಿವರಿಯಾದರೆ ರಿಸ್ಕ್ ತೆಗೆದುಕೊಂಡಾದರೂ ನಾವು ಮಾಡಬಹುದು. ಅದರೆ ಒಮ್ಮೊಮ್ಮೆ ಮಾನವೀಯತೆಯೇ ಮುಳುವಾಗುತ್ತದೆ. ಹಾಗಾಗಿ ನಾವು ಅಸಹಾಯಕರು ಎಂದು ಕೈಚೆಲ್ಲುವ ಸಿಬ್ಬಂದಿ ತುಂಬು ಗರ್ಭಿಣಿಯರನ್ನು ಹಿಂದಕ್ಕೆ ಕಳುಹಿಸುವ ಬಗ್ಗೆ ವೇದನೆ ಇದೆ. ಸದ್ಯಕ್ಕೆ ಕುಂದಾಪುರ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡಿನ ಬೆಡ್ಡುಗಳು ಖಾಲಿಖಾಲಿಯಾಗಿದ್ದು ಇಂದು ನಾಳೆ ವೈದ್ಯರು ಬರಬಹುದು ಎಂದು ಕಾದದ್ದೇ ಬಂತು. ಆದರೆ ವೈದ್ಯರ ಪತ್ತೆಯೇ ಇಲ್ಲ. ಈ ಬಗ್ಗೆ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಸಹಾ ಯಾವುದಾದರೂ ಕ್ರಮಕೈಗೊ ಳ್ಳಬಹುದೆಂದು ಬಡ ಗರ್ಭಿಣಿಯರು ನಿರೀಕ್ಷಿಸಿದ್ದೇ ಬಂತು ಆದರೆ ಯಾವುದೇ ಪ್ರಯೋಜನವಿಲ್ಲ. ಇನ್ನು ಜನಪ್ರತಿನಿಧಿಗಳ ವಿಚಾರ ಬಿಟ್ಟುಬಿಡಿ ಜನಪ್ರಿಯತೆಯ ಅಲೆಯ ಎದುರು ಅವರಿಗಿದು ತೀರಾ ಕ್ಷುಲ್ಲಕ ವಿಚಾರ. ಹಾಗಾಗಿ ಸದ್ಯಕ್ಕೆ ಕುಂದಾಪುರ ಸರ್ಕಾರಿ ಅಸ್ಪತ್ರೆಯಲ್ಲಿ ‘ ನೋ ಡೆಲಿವರಿ
Tagged with
lnews,
udupi
ಮಂಗಳೂರು : ಕಾರಿಡಾರ್ ರಸ್ತೆ ನಿರ್ಮಿಸಲು ಎಂಎಸ್‌ಇಝಡ್ ಫಲ್ಗುಣಿ ನದಿಗೆ ಮುಣ್ಣು ಹಾಕಿರುವು ದನ್ನು ಇನ್ನೂ ತೆರವು ಮಾಡದಿರು ವುದನ್ನು ಖಂಡಿಸಿ ಕೂಳೂರು-ಕೊಪ್ಪಳ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಎಂಎಸ್‌ಇಝಡ್ ಫಲ್ಗುಣಿ ನದಿಗೆ ಹಾಕಿರುವ ಮಣ್ಣನ್ನು ತೆರವು ಮಾಡದೇ ಇದ್ದರೆ ಮುಂದೆ ಇಲ್ಲಿನ ಜನತೆ ಸಾವು ಕಾಣುವುದು ಸಿದ್ದ ಎನ್ನುವುದನ್ನು ಪ್ರತಿಬಿಂಬಿಸಲು ಪ್ರತಿಭಟನೆ ವೇಳೆ ಗ್ರಾಮಸ್ಥರು ಶವದಂತೆ ಮಲಗಿದ್ದರು.
ಎಂಎಸ್‌ಇಝಡ್ ಕಾರಿಡಾರ್ ರಸ್ತೆ ಕಾಮಗಾರಿ ನಡೆಸಲು ಆರಂಭಿಸಿ ದಾಗಲೇ ಜನ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಅದಾಗಲೇ ಸ್ಥಳ ತನಿಖೆ ನಡೆಸಿದ್ದ ಎಂಎಸ್‌ಇಝಡ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದ್ದರು. ಆ ಬಳಿಕ ಪೇಜಾವರ ಸ್ವಮೀಜಿಯವರೂ ಸ್ಥಳಕ್ಕೆ ಬೇಟಿ ನೀಡಿ ಜನರ ಬದುಕಿನ ಹಕ್ಕನ್ನು ಕಸಿಯದಂತೆ ಮನವಿ ಮಾಡಿದ್ದರು. ಇದೆಲ್ಲ ನಡೆದು ಇಂದಿಗೆ ತಿಂಗಳು ಎರಡು ಕಳೆಯುತ್ತಾ ಬಂದರೂ ನದಿ ಯಿಂದ ಮಣ್ಣು ತೆರವುಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜನ ಉಗ್ರ ಹೋರಾಟದ ಹಾದಿ ಹಿಡಿದಾಗ ಕಣ್ಣೊರೆಸುವ ನಾಟಕವಾಡಿದ ಎಂಎಸ್‌ಇಝಡ್ ಜೆಸಿಬಿ ಮತ್ತು ಟಿಪ್ಪರ್ ತರಿಸಿ ಒಂದೆರಡು ಲಾರಿ ಮಣ್ಣನ್ನು ತೆರವು ಮಾಡಿತ್ತು. ಬಳಿಕ ಮತ್ತೆರಡೇ ದಿನದಲ್ಲಿ ಅಲ್ಲಿಗೆ ಮಣ್ಣು ಹಾಕಿ ಹಿಂದಿನ ಲೋಪ ಸರಿ ಮಾಡಿಕೊಂಡು ಕೈ ತೊಳೆದು ಕೊಂಡಿತ್ತು. ಈಗಾಗಲೇ ಜಿಲ್ಲೆಯಲ್ಲಿ ಮಳೆಯ ಮುನ್ಸೂಚನೆ ದೊರೆತ್ತಿದ್ದು ಫಲ್ಗುಣಿ ನದಿಗೆ ಮಣ್ಣು ಬೀಳುತ್ತಲೇ ಇರುವ ಕಾರಣ ಕೂಳೂರು ಕೊಪ್ಪಳ ನಿವಾಸಿಗಳು ನೆರೆ ಭೀತಿಯಿಂದ ತತ್ತರಿಸುತ್ತಿದ್ದಾರೆ. ವಾರ ದೊಳಗೆ ಸೂಕ್ತ ಪರಿಹರ ನೀಡದೆ ಇದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ಪ್ರತಿಭಟನಾಕಾರರು ನೀಡಿದ್ದಾರೆ.
Tagged with
dk,
lnews
ಕಾಸರಗೋಡು: ಕೇಂದ್ರ ಸರಕಾರ ಏಕಾಏಕಿ ಪೆಟ್ರೋಲ್ ಬೆಲೆ ಏರಿಕೆ ಮಾಡಿ ರುವುದನ್ನು ಖಂಡಿಸಿ ಎಡರಂಗ ಕರೆ ನೀಡಿದ್ದ ಕೇರಳ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕಾಸರ ಗೋಡಿನಲ್ಲಿ ವಾಹನ ಸಂಚಾರ ಸ್ಥಗಿತ ಗೊಂಡು ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರ ಸರಕಾರ ಬೆಲೆ ಏರಿಕೆ ಮಾಡಿರುವುದನ್ನು ಘೋಷಣೆಯಾಗು ತ್ತಿರುವಂತೆಯೇ ಕಾಸರಗೋಡಿನ ಮುಖ್ಯಪೇಟೆಗಳಲ್ಲಿ ಜನರು ಆಕ್ರೋಶ ಭರಿತರಾಗಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಎಡರಂಗ ಕರೆ ನೀಡಿದ್ದ ಕೇರಳ ಬಂದ್ ಯಶಸ್ವಿಯಾಗಿದೆ.
ಇತ್ತ ಮಂಗಳೂರಿನಲ್ಲಿ ಡಿವೈಎಫ್‌ಐ ಸಂಘಟನೆ ನಿನ್ನೆ ರಾತ್ರಿ ಪ್ರತಿಭಟನೆ ನಡೆಸಿತು. ಕಳೆದ ಒಂದು ವರುಷದಲ್ಲಿ ಐದು ಬಾರಿ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರಕಾರ ನಿನ್ನೆ ಏಕಾಏಕಿ ಲೀಟರಿಗೆ ೭.೫೦ ರೂ ಏರಿಕೆ ಮಾಡಿದ್ದು ಇದು ಈವರೆಗಿನ ಬೆಲೆ ಏರಿಕೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣ ದ್ದಾಗಿದೆ.
ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಕೇಂದ್ರ ಸರಕಾರ ಈ ಬಾರಿ ಚೇತರಿಸಲಾರದಂತಹ ಹೊಡೆತ ನೀಡಿದೆ. ಬೆಲೆ ಏರಿಕೆ ಬಗ್ಗೆ ಕೇಂದ್ರ ಸರಕಾರ ಸಮರ್ಥನೆಯನ್ನು ನೀಡುತ್ತಿದ್ದು ದೇಶಕ್ಕೆ ತೈಲ ಪೂರೈಕೆ ಮಾಡುತ್ತಿದ್ದ ಇರಾನ್‌ಗೆ ಭಾರತ ಹಣ ಸಾಲ ಇಟ್ಟಿರುವ ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತ ಕಂಡಿರುವುದರಿಂದ ಬೆಲೆ ಏರಿಕೆ ಅನಿವಾರ್ಯ ಎನ್ನುತ್ತಿದೆ. ಆದರೆ ಈ ಹಿಂದಿನ ಏರಿಕೆಗೆ ಇವು ಕಾರಣ ಆಗಿರಲಿಲ್ಲ ಎನ್ನುವುದು ಗಮನಾರ್ಹ. ಕೇಂದ್ರ ಸರಕಾರ ನಿನ್ನೆ ಮಧ್ಯ ರಾತ್ರಿಯಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆ ಮಾಡಿರುವ ಕಾರಣ ನಿನ್ನೆ ನಗರದ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳಲು ಜನ ಸರದಿ ಸಾಲಿನಲ್ಲಿ ಕಾದು ಕುಳಿತಿದ್ದರು. ರಾವ್ ಆಂಡ್ ರಾವ್ ಸರ್ಕಲ್ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ವಾಹನದ ಸಾಲು ಮೈಲಿನಷ್ಟು ಬೆಳೆದಿತ್ತು. ಕೆಲ ಪೆಟ್ರೋಲ್ ಬಂಕ್ ಪೆಟ್ರೋಲ್ ಇದ್ದರೂ ಸ್ಟಾಕ್ ಇಲ್ಲ ಎಂಬ ಬೋರ್ಡ್ ಹಾಕಿದ್ದರು. ಹೀಗಾಗಿ ಪೆಟ್ರೋಲ್ ಸಿಗದೆ ಜನ ಪರದಾಡುವಂತಾಯಿತು. ಬೆಲೆ ಏರಿಕೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಇಂದು ಮುಷ್ಕರಕ್ಕೆ ಕರೆ ನೀಡಿದೆ.
Tagged with
kasaragod,
lnews
ಮುಲ್ಕಿ: ಮಕ್ಕಳು ಉತ್ಸಾಹದಿಂದ ನಿನ್ನೆ ಪಿಯುಸಿ ಫಲಿತಾಂಶಕ್ಕೆ ಕಿನ್ನಿಗೋಳಿಯ ವಿವಿಧ ಸೈಬರ್ ಸೆಂಟರ್‌ಗೆ ಹೋದಾಗ ಅಲ್ಲಿ ಮಾತ್ರ ಅವರಿಗೆ ನಿರಾಶೆ ಕಾದಿತ್ತು. ಕಾರಣ ಬ್ರಾಡ್‌ಬ್ಯಾಂಡ್ ಸರಿಯಿಲ್ಲದೇ ಫಲಿತಾಂಶವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು.
ಕಿನ್ನಿಗೋಳಿ ದೂರವಾಣಿ ಕೇಂದ್ರದಲ್ಲಿ ತಾಂತ್ರಿಕ ಅಡಚಣೆಯಿಂದ ಬ್ರಾಡ್‌ಬ್ಯಾಂಡ್ ಕೆಲಸ ಮಾಡದೇ ಕೇವಲ ಮಕ್ಕಳ ಫಲಿತಾಂಶವಲ್ಲ, ಅಲ್ಲಿನ ಸುಮಾರು ೧೫ ವಿವಿಧ ಬ್ಯಾಂಕ್‌ಗಳು, ಷೇರು ಬ್ರೋಕಿಂಗ್, ಮನೆಯಲ್ಲಿಯೇ ಇಂಟರ್‌ನೆಟ್ ಬಳಸುವವರಿಗೂ ಸಹ ತೊಂದರೆಯಾಗಿ ದೂರವಾಣಿ ಕೇಂದ್ರಕ್ಕೆ ಹಿಡಿಶಾಪ ಹಾಕುತ್ತಿದ್ದರು. ಕೇಂದ್ರಕ್ಕೆ ಫೋನ್ ಮಾಡಿದರೆ ಮಂಗಳೂರಿನಲ್ಲಿಯೇ ಸರಿಯಿಲ್ಲ ಎಂಬ ಉತ್ತರ ಬರುತ್ತಿದ್ದು, ಪಕ್ಕದ ಮುಲ್ಕಿಯಲ್ಲಿ ಸರಿಯಿದೆ ಎಂದಾಗ ಮಾತ್ರ ಫೋನ್ ಡಿಸ್‌ಕನೆಕ್ಟ್. ಜಪ್ಪಯ್ಯ ಅಂದರು ಮತ್ತೆ ಫೋನ್ ಸಂಪರ್ಕ ಸಿಗಲೇ ಇಲ್ಲ ಎಂದು ಸೈಬರ್‌ನ ಮಾಲೀಕರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ. ಎಂಟು ಕಿ.ಮೀ. ದೂರದ ಮುಲ್ಕಿಗೆ ಕೆಲವು ಮಕ್ಕಳು ಅಲ್ಲಿನ ಸೈಬರ್ ಸೆಂಟರ್‌ನಲ್ಲಿ ಫಲಿತಾಂಶವನ್ನು ನೋಡುತ್ತಿದ್ದರೆ, ದುಬಾರಿಯಾದರು ಅನಿವಾರ್ಯವಾಗಿ ಮೊಬೈಲಿನ ಮೂಲಕ ಫಲಿತಾಂಶಕ್ಕೆ ಪ್ರಯತ್ನ ನಡೆಸುತ್ತಿದ್ದರು. ಕಿನ್ನಿಗೋಳಿ ದೂರವಾಣಿ ಕೇಂದ್ರಕ್ಕೆ ಖಾಸಗಿ ಮೊಬೈಲ್ ಕಂಪೆನಿಯವರು ಸ್ವಲ್ಪ ಅಡ್ಜೆಸ್ಟ್ ಮಾಡಿದ್ದಾರೇನೋ ಎಂದು ವಿದ್ಯಾರ್ಥಿಗಳು ಚರ್ಚಿಸುತ್ತಿದ್ದರು.
ಸ್ಥಳೀಯ ಶಾಲೆಯಲ್ಲಿಯೂ ಸಹ ಫಲಿತಾಂಶವನ್ನು ಗುರುವಾರ ಪಡೆಯುವ ಸೂಚನೆ ಸಿಕ್ಕಿದ್ದರಿಂದ ಮಾಧ್ಯಮದ ಮಂದಿಗೆ ಭಾರಿ ನಿರಾಶೆ ಆಗಿದೆ ಎಂದು ತಿಳಿದು ಬಂದಿದೆ.
Tagged with
dk,
lnews
ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಶೇಕಡಾ ೫೭.೦೩ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವುದರ ಮೂಲಕ ದಾಖಲೆಯ ಫಲಿತಾಂಶ ನೀಡಿದ್ದಾರೆ.
ಕಳೆದ ಒಂದು ದಶಕದಲ್ಲಿ ಈ ಬೃಹತ್ ಪ್ರಮಾಣದಲ್ಲಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ಇದೇ ಮೊದಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ. ೯ರಷ್ಟು ಹೆಚ್ಚು ಫಲಿತಾಂಶ ಹೊರಬಿದ್ದಿದೆ. ರಾಜ್ಯದಲ್ಲಿ ವೃತ್ತಿ ಶಿಕ್ಷಣ ಸಂಸ್ಥೆಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಬೆನ್ನಲ್ಲೆ ಇಂಜಿನಿಯರಿಂಗ್ ಹಾಗೂ ದಂತವೈದ್ಯಕೀಯ ಕಾಲೇಜು ಗಳಲ್ಲಿ ಭರ್ತಿಯಾಗದೇ ಉಳಿದ ಸೀಟು ಗಳಿಗೆ ಈ ಬಾರಿಯ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.
ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಗುಣಮಟ್ಟ ಹೆಚ್ಚಿಸಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶೇ.೭೦ರಷ್ಟು ಫಲಿತಾಂಶ ತರಲು ಸರ್ಕಾರ ಮುಂದಾಗಿದೆ ಎಂದು ಪಿಯುಸಿ ಫಲಿತಾಂಶ ಪ್ರಕಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ತಿಳಿಸಿದರು.
ಒಟ್ಟಾರೆ ಈ ವರ್ಷ ೫೯೫೧೯೭ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಅದರಲ್ಲಿ ೩೩೯೪೨೧ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇದು ದಾಖ ಲೆಯ ಫಲಿತಾಂಶ. ಈ ಫಲಿತಾಂಶ ಹೊರ ಬೀಳಲು ವಿದ್ಯಾರ್ಥಿಗಳ ಸತತ ಅಭ್ಯಾಸದ ಜೊತೆಗೆ ಉಪನ್ಯಾಸಕರ ಶ್ರಮವೂ ಇದರಲ್ಲಿ ಅಡಗಿದೆ ಎಂದರು.
ಬಾಲಕಿಯರು ೭೪.೩೦ ರಷ್ಟು ಉತ್ತೀರ್ಣರಾಗಿ, ಎಂದಿನಂತೆ ಪ್ರಥಮ ಸ್ಥಾನದಲ್ಲಿದ್ದರೆ, ಬಾಲಕರು ಶೇಕಡಾ ೫೪.೫೮ ರಷ್ಟು ತೇರ್ಗಡೆ ಹೊಂದಿದ್ದಾರೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು ಗ್ರಾಮೀಣ ಪ್ರದೇಶ ದಲ್ಲಿ ಶೇಕಡಾ ೭೧.೨೭ರಷ್ಟು ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದು ನಗರ ಪ್ರದೇಶದಲ್ಲಿ ಈ ಪ್ರಮಾಣ ೬೯.೦೭ಕ್ಕೆ ಕುಸಿದಿದೆ.ಕಲಾ ವಿಭಾಗದಲ್ಲಿ ಶೇಕಡಾ ೬೩.೫೭, ವಾಣಿಜ್ಯ ವಿಭಾಗದಲ್ಲಿ ೭೭.೬೭ ಹಾಗೂ ವಿಜ್ಞಾನ ವಿಭಾಗದಲ್ಲಿ ೬೪.೬೫ ರಷ್ಟು ಫಲಿತಾಂಶ ಬಂದಿದೆ. ಎಂದಿನಂತೆ ಕರಾವಳಿ ತೀರದ ಮಂಗಳೂರಿನ ವಿದ್ಯಾರ್ಥಿಗಳು ಶೇಕಡಾ ೮೫.೭೦ರಷ್ಟು ಪಡೆದು ಮೊದಲ ಸ್ಥಾನದಲ್ಲಿದ್ದರೆ ಶೇಕಡಾ ೩೨.೨೧ ವಿದ್ಯಾರ್ಥಿಗಳು ಪಾಸಾಗುವ ಮೂಲಕ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಈ ಬಾರಿ ದ್ವಿತೀಯ ಪಿಯುಸಿ ಯಲ್ಲಿ ೩೨ ಪದವಿ ಪೂರ್ವ ಕಾಲೇಜುಗಳು ಶೇಕಡಾ ೧೦೦ ರಷ್ಟು ಫಲಿತಾಂಶ ಪಡೆದಿವೆ. ಈ ಪೈಕಿ ೨ ಸರ್ಕಾರಿ, ೪ ಅನುದಾನಿತ ಹಾಗೂ ೨೬ ಅನುದಾನರಹಿತ ಕಾಲೇಜುಗಳಿವೆ ಎಂದರು. ಕಲಾ ವಿಭಾಗದಲ್ಲಿ ೫೬೯ ಅಂಕಗಳಿಸಿರುವ ವಿದ್ಯಾರ್ಥಿಯೊಬ್ಬ ಶೇಕಡಾ ೯೪.೮೩ ರಷ್ಟು ಅಂಕಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಉಳಿ ದಂತೆ ವಾಣಿಜ್ಯ ವಿಭಾಗದಲ್ಲಿ ೫೯೧ ಅಂಕ ಪಡೆದಿದ್ದು ಶೇಕಡಾ ೯೮.೫೦ ಸಾಧನೆ ಮಾಡಿದ್ದು ವಿಜ್ಞಾನ ವಿಭಾಗದಲ್ಲಿ ಶೇಕಡಾ ೯೮.೮೩ ಜೇಷ್ಠತೆಯೊಂದಿಗೆ ೫೯೩ ಅಂಕಗ ಳನ್ನು ವಿದ್ಯಾರ್ಥಿಯೊಬ್ಬರು ಪಡೆದಿರು ವುದು ಈ ಬಾರಿಯ ಗರಿಷ್ಟ ಅಂಕಗಳ ಸಾಧನೆ ಎಂದು ಅವರು ವಿವರಿಸಿದರು.
Tagged with
puc,
snews
ಮಂಗಳೂರು: ಪೊ. ಪಟ್ಟಾಭಿ ಪ್ರಕರಣದಲ್ಲಿ ತಪ್ಪಿತಸ್ಥ ಸಂಘಟನೆಯ ವಿರುದ್ಧ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಮತ್ತು ಹೊಸ ಜಾನುವಾರು ಹತ್ಯಾ ನಿಷೇಧ ಕಾನೂನನ್ನು ವಿರೋಧಿಸಲು ಹಾಗೂ ನಗರಪಾಲಿಕೆಯ ಮಾಂಸಾ ಹಾರಿ ವಿರೋಧಿ ನೀತಿಯನ್ನು ಖಂಡಿ ಸಲು ಹಲವಾರು ಜನಪರ ಸಂಘಟ ನೆಗಳ ಸಹಭಾಗಿತ್ವದಲ್ಲಿ ನಾಳೆ ಸಂಜೆ ೪.೦೦ಕ್ಕೆ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆಯನ್ನು ಕೋಮುಸೌಹಾರ್ದ ವೇದಿಕೆ ದ.ಕ. ಜಿಲ್ಲೆ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯ ದರ್ಶಿ ಕೆ.ಎಲ್. ಅಶೋಕ್ ಭಾಗವಹಿಸಲಿದ್ದಾರೆ.
Tagged with
dk,
lnews
ಬೆಂಗಳೂರು: ವಿಧಾನ ಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ತಮಗೆ ಐದು ಸೀಟುಗಳನ್ನು ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ನಾಯಕರನ್ನು ಆಗ್ರಹಿಸಿದ್ದಾರೆ. ಅಲ್ಲದೆ ನಾಮಕರಣ ಸದಸ್ಯತ್ವಕ್ಕೆ ತಾವು ಸೂಚಿಸಿದ ಇಬ್ಬರನ್ನು ನೇಮಕ ಮಾಡಬೇಕೆಂದು ಒತ್ತಡ ಹೇರಿದ್ದಾರೆ.ಪಕ್ಷ ಈಗಾಗಲೇ ಯಾರನ್ನು ಆಯ್ಕೆ ಮಾಡಬೇಕೆಂದು ಹಲವು ಸುತ್ತಿನ ಮಾತುಕತೆ ನಡೆಸಿದೆ. ಈ ಸಭೆಗ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರನ್ನು ಕರೆದಿರಲಿಲ್ಲ. ಇದರಿಂದ ಕೋಪದ್ರಿಕ್ತಗೊಂಡಿರುವ ಅವರು ತಾವು ಹೇಳಿದವರನ್ನೇ ಪರಿಷತ್‌ಗೆ ನೇಮಕ ಮಾಡಬೇಕೆಂದು ಒತ್ತಡ ಹೇರಿದ್ದಾರೆ.
ತಮ್ಮ ಬೆಂಬಲಿಗರಾಗಿರುವ ಲಕ್ಷ್ಮೀನಾರಾಯಣ , ಬಿ.ಜೆ.ಪುಟ್ಟಸ್ವಾಮಿ, ತಿಪ್ಪಣ್ಣ ಮೊದಲಾದವರಿಗೆ ಅವಕಾಶ ನೀಡುವಂತೆ ವರಿಷ್ಠರಿಗೆ ಆದೇಶಿಸಿದ್ದಾರೆ. ಬಹುತೇಕ ಯಡಿಯೂರಪ್ಪ ಮಾಡಿರುವ ಶಿಫಾರಸ್ಸನ್ನು ರಾಜ್ಯ ಬಿಜೆಪಿ ಘಟಕ ತಿರಸ್ಕರಿಸಿದೆ. ವಿಧಾನ ಸಭೆಯ ಬಲಾಬಲದ ಆಧಾರದ ಮೇಲೆ ಪಕ್ಷಕ್ಕೆ ಆರು ಸ್ಥಾನಗಳು ಲಭ್ಯವಾಗಲಿದೆ. ಅದರಲ್ಲಿ ಐದನ್ನು ತಮಗೆ ಬಿಟ್ಟುಕೊಡಬೇಕೆಂದು ಒತ್ತಡ ಹೇರಿದ್ದಾರೆ. ಕೊನೆಯಲ್ಲಿ ಎರಡು ಸ್ಥಾನಗಳನ್ನು ಅವರು ಸೂಚಿಸುವವರಿಗೆ ಅವಕಾಶ ಮಾಡಿಕೊಡಬಹುದು. ಬಿಜೆಪಿಗೆ ಆರು, ಕಾಂಗ್ರೆಸ್‌ಗೆ ಮೂರು , ಜೆಡಿಎಸ್‌ಗೆ ಒಂದು ಸ್ಥಾನ ದೊರೆಯಲಿದೆ.
Tagged with
snews,
yeddi
ಜನಸಾಮಾನ್ಯರು ಕಂಗಾಲು
ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ ಭಾರೀ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಠಾತ್ ಆಗಿ ಪೆಟ್ರೋಲ್‌ಗೆ ೭.೫ ರೂ. ಹೆಚ್ಚಳ ಮಾಡಿದ್ದು, ಇದರಿಂದ ಜನಸಾಮಾನ್ಯರ ಮೇಲೆ ಭಾರೀ ಹೊರೆ ಬಿದ್ದಿದೆ. ಮಧ್ಯರಾತ್ರಿಯಿಂದ ಪೆಟ್ರೋಲ್ ಬೆಲೆಯನ್ನು ಹೆಚ್ಚಳ ಮಾಡಿದ ಕಾರಣ ನಿನ್ನೆ ಸಂಜೆ ವೇಳೆಗೆ ಪೆಟ್ರೋಲ್ ಪಂಪ್‌ಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ೮೨ ರೂ. ಆಗುವ ಸಾಧ್ಯತೆಗಳಿವೆ. ರಾಷ್ಟ್ರದಲ್ಲಿ ಕರ್ನಾಟಕದಲ್ಲೇ ಪೆಟ್ರೋಲ್‌ಗೆ ಅತ್ಯಂತ ದುಬಾರಿ ಬೆಲೆಯಾಗಿದೆ.
ದೆಹಲಿಯಲ್ಲಿ ೬೫.೬೪ ರೂ. ಇದ್ದ ಪೆಟ್ರೋಲ್ ೭೩.೧೪ ಆಗಲಿದೆ. ಕೊಲ್ಕತ್ತಾದಲ್ಲಿ ೭೭. ೬೯ರೂ., ಮುಂಬೈಯಲ್ಲಿ ೭೮.೧೬ರೂ., ಮತ್ತು ಚೆನ್ನೈಯಲ್ಲಿ ೭೭.೨೩ ರೂ. ಆಗಲಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ತೆರಿಗೆ ಇರುವ ಕಾರಣ ಪೆಟ್ರೋಲ್ ಬೆಲೆ ೮೨ಕ್ಕೇರಲಿದೆ.
ಪೆಟ್ರೋಲ್ ಆಮದು ಬೆಲೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆಯನ್ನು ಹೆಚ್ಚಳ ಮಾಡುವುದು ಅನಿವಾರ‍್ಯವಾಗಿದೆ. ಪೆಟ್ರೋಲ್ ಬೆಲೆ ಏರಿಕೆಯನ್ನು ೨೦೧೦ ಜೂನ್‌ನಲ್ಲಿ ಮಾರುಕಟ್ಟೆಗೆ ಮುಕ್ತಗೊಳಿಸಿತ್ತು. ಕಳೆದ ನವಂಬರ್‌ನಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿತ್ತು. ಡಾಲರ್ ಮುಂದೆ ರೂಪಾಯಿ ಬೆಲೆ ಕುಸಿತ ಕಂಡ ಕಾರಣ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಡಾಲರ್ ಮುಂದೆ ರೂಪಾಯಿ ಕುಸಿದ ಹಿನ್ನೆಲೆಯಲ್ಲಿ ತೈಲ ಕಂಪೆನಿಗಳು ವಾರ್ಷಿಕವಾಗಿ ಎಂಟು ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತದೆ ಎಂದರು.
Tagged with
feature,
nnews,
petrol
ಜಾತಿ ತಂದ ಅವಾಂತರ
ಸುಳ್ಯ: ಕೀಳು ಜಾತಿಯ ಹುಡುಗ ನಿಗೆ ಮದುವೆ ಮಾಡಿಕೊಟ್ಟಿದ್ದೀರಿ ಎಂಬ ಕಾಲನಿಯವರ ಮಾತಿನಿಂದ ನೊಂದ ಹುಡುಗಿಯ ತಂದೆ ಮಾತಿಗಿಳಿದಾಗ ಹುಡುಗನ ಕಡೆಯವರು ಹುಡುಗಿ ಯನ್ನು ಮನೆಗೆ ಸೇರಿಸಲು ನಿರಾಕರಿ ಸಿದ್ದರಿಂದ ಮದುವೆಯಾದ ದಿನವೇ ವಧು ತವರು ಮನೆ ಸೇರಿದ ಘಟನೆ ಬುಧವಾರ ಸುಳ್ಯದಲ್ಲಿ ನಡೆದಿದೆ.
ಜಾಲ್ಸೂರು ಗ್ರಾಮದ ಕುಕ್ಕಂದೂರು ಸಿ.ಆರ್.ಸಿ. ಕಾಲನಿಯ ನಾಗರಾಜ(೨೫) ಹಾಗೂ ಕಾಸರ ಗೋಡು ತಾಲೂಕು ನೀಲೇಶ್ವರದ ಜ್ಯೋತಿ(೨೨)ಯ ವಿವಾಹ ಎರಡೂ ಕಡೆಯವರ ಒಪ್ಪಿಗೆಯೊಂದಿಗೆ ಬುಧವಾರ ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ನಡೆದಿತ್ತು. ನಾಗರಾಜ ಖಾಸಗಿ ರಬ್ಬರ್ ತೋಟವೊಂದರಲ್ಲಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದು, ಶ್ರೀಲಂಕಾ ನಿರ್ವಸಿತರ ತಮಿಳು ಜನಾಂಗಕ್ಕೆ ಸೇರಿದ್ದಾನೆ. ವಧು ಮಣಿಯಾಣಿ(ಯಾದವ) ಜಾತಿಗೆ ಸೇರಿದವಳು. ಮದುವೆ ಬಳಿಕ ಕಾಲನಿ ಮಂದಿ ಕೀಳು ಜಾತಿಯ ಹುಡುಗನಿಗೆ ಹುಡುಗಿಯನ್ನು ಮದುವೆ ಮಾಡಿ ಕೊಟ್ಟದ್ದು ಸರಿಯಲ್ಲ ಎಂದು ಹೇಳಿಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ಹುಡುಗಿ ತಂದೆ ಹುಡುಗನನ್ನು ಪ್ರಶ್ನಿಸಿದ್ದರು. ಅಷ್ಟಕ್ಕೆ ಅವರ ಕಡೆಯವರು ಆಕೆಯನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಹುಡುಗಿ ಕಡೆಯವರಿಗೆ ಧಮಕಿ ಹಾಕಿದ್ದರು. ಇದರಿಂದ ನೊಂದ ಅವರು ನವವಧುವನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಾರೆ.
Tagged with
dk,
feature,
lnews
ಕಾರ್ಕಳ: ಮೇಲಿನ ಶೀರ್ಷಿಕೆ ಕಂಡು ಒಮ್ಮೆ ಬೆರಗಾಗುವುದು ಸಹಜ ವಾಗಿದ್ದರೂ, ಅದು ಕಾರ್ಕಳ ಮಟ್ಟಿ ಗಂತೂ ಸತ್ಯವಾಗಿದೆ. ನಂಬಿದವ ರಿಗೆ ಅಭಯ ನೀಡುವ ದೈವ ಗುಳಿಗ ನಾಗಿದ್ದಾನೆ. ಆದುದರಿಂದಲೇ ಅದನ್ನು ಪೊಲೀಸ್ ಇಲಾಖೆಯ ಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಆರಾಧಿಸಿಕೊಂಡು ಬರು ತ್ತಿರಲು ಕಾರಣವಾಗಿದೆ.
ಕುಕ್ಕುಂದೂರು ಭಾವದಗುತ್ತಿಗೆ ಸೇರಿರುವ ಗುಳಿಗನ ಸಂಚಾರವು ಹಳೆ ಪೊಲೀಸ್ ಠಾಣೆ ವ್ಯಾಪ್ತಿಯೊಳಗೆ ಬರುತ್ತದೆ. ಸುಮಾರು ೫೦ ವರ್ಷಗಳ ಹಿಂದೆ ಪೊಲೀಸ್ ಠಾಣೆಯಲ್ಲಿದ್ದ ರೈಫಲ್‌ವೊಂದು ಸಿಬ್ಬಂದಿ ಅಚಾತು ರ್ಯಕ್ಕೆ ನಾಪತ್ತೆಯಾಗಿತ್ತಂತೆ. ಸಿಬ್ಬಂದಿ ಯೋರ್ವ ಅದನ್ನು ಸಮೀಪದ ಬಾವಿ ಯೊಂದಕ್ಕೆ ಎಸೆದಿದ್ದನೆಂದು ತಿಳಿದು ಬಾವಿಯಲ್ಲಿ ಹುಡುಕಾಡಿದರೂ ಯಾವುದೇ ಪ್ರಯೋಜನ ಬಾರದಿರು ವುದನ್ನು ಕಂಡ ಪೊಲೀಸರು ಕೊನೆಗೆ ಗುಳಿಗನಲ್ಲಿ ಮೊರೆಹೋಗುತ್ತಾರೆ. ಅದೇ ಬಾವಿಯಲ್ಲಿ ಮತ್ತೊಮ್ಮೆ ಹುಡುಕಾಡಿ ಎಂದು ನುಡಿ ಹೇಳಿದ ಗುಳಿಗ ನನ ಗೇನು ನೀಡುತ್ತೀರಿ? ಎಂದು ಪ್ರಶ್ನಿಸಿ ದಾಗ ಇಲಾಖಾ ಸಿಬ್ಬಂದಿ ವತಿಯಿಂದ ವರ್ಷಾವಧಿ ಕೋಲ ನೀಡುತ್ತೇವೆಂದು ಶಪಥ ಮಾಡಿದ್ದರಂತೆ.
ಗುಳಿಗ ನುಡಿದಂತೆ ರೈಫಲ್ ಅದೇ ಬಾವಿಯಲ್ಲಿ ದೊರೆಕಿತ್ತು. ನಂತರದ ವರ್ಷದಿಂದ ಪೊಲೀಸ್ ಇಲಾಖಾ ಸಿಬ್ಬಂದಿ ಕೋಲ ಕೊಡುವ ಪದ್ಧತಿ ಯನ್ನು ಅನುಸರಿಸಿರುವುದರಿಂದಲೇ ಅದಕ್ಕೆ ಪೊಲೀಸ್ ಗುಳಿಗ ಎಂಬ ಹೆಸರು ಚಾಲ್ತಿಗೆ ಬಂತು. ಠಾಣೆಯಲ್ಲಿ ರಾತ್ರಿ ವೇಳೆ ಪಾಳಿಯಲ್ಲಿರುವ ಸಿಬ್ಬಂದಿ ನಿದ್ರೆಗೊಳಗಾದಾಗ ಗಂಟೆ ಬಡಿದು ಎಚ್ಚರಿಸುವ ಕಾರ್ಯವನ್ನು ಗುಳಿಗ ಮಾಡುತ್ತಿದ್ದನಂತೆ.(ಇಂತಹ ಅನುಭವ ವನ್ನು ನಿವೃತ್ತ ಪೊಲೀಸ್ ಸಿಬ್ಬಂದಿ ಹಂಚಿಕೊಳ್ಳುತ್ತಾರೆ) ಮಾತ್ರವಲ್ಲದೇ ವರ್ಷಾವಧಿ ಕೋಲ ಕೊಡುವಾಗ ವಿಳಂಬವಾದಾಗ ನಾಗರಹಾವೊಂದು ಠಾಣೆಯೊಳಗೆ ಅವಿತು ಕುಳಿತು ಕೊಳ್ಳುವುದು. ತಪ್ಪುಕಾಣಿಕೆ ಅರ್ಪಿಸಿದ ಬಳಿಕವಷ್ಟೇ ಅಲ್ಲಿಂದ ತೆರಳುವ ಆ ಹಾವು ಠಾಣೆಯ ಮುಂಭಾಗದಲ್ಲಿದ್ದ ಮಾವಿನ ಮರದ ಕೆಳಭಾಗದಲ್ಲಿದ್ದ ಬಿಲದೊಳಗೆ ಸೇರುತ್ತಿತ್ತಂತೆ. ಆರೋಪಿಯೊಬ್ಬನನ್ನು ಬಂಧಿಸಲು ಕಾರ್ಯಕ್ಕೆ ಮುಂದಾಗುವ ಪೊಲೀಸರು ಮೊದಲಿಗೆ ಗುಳಿಗನಲ್ಲಿ ಪ್ರಾರ್ಥಿಸುವ ಸಂಪ್ರದಾಯ ಇದೀಗ ಬೆಳೆಸಿಕೊಂ ಡಿದ್ದಾರೆ. ಅದು ಯಶಸ್ಸು ಅಗುತ್ತದೆ ಎಂಬ ನಂಬಿಕೆ ಈಗಲೂ ಪೊಲೀಸರಲ್ಲಿದೆ.
ಮಂಗಳವಾರ ರಾತ್ರಿ ವೇಳೆಗೆ ಕುಕ್ಕುಂದೂರು ಭಾವದ ಗುತ್ತುನಿಂದ ಮೆರವಣಿಗೆ ಮೂಲಕ ಅಭರಣವನ್ನು ಹುಡ್ಕೋ ಕಾಲನಿಗೆ ತರಲಾಗಿತ್ತು. ಹೀಗೆ ಬರುವಾಗ ಜೊತೆ ಗುತ್ತಿನ ಮನೆಯ ಮುಖ್ಯಸ್ಥ ಸುಕುಮಾರ್ ಜೈನ್ ಅವರು ಅಗಮಿಸುತ್ತಾರೆ. ಪೊಲೀಸ್ ವೃತ್ತನಿರೀಕ್ಷಕ ವೆಲೆಂಟಿನ್ ಡಿಸೋಜಾ ಅವರ ನೇತೃತ್ವದಲ್ಲಿ ಪೊಲೀಸ್ ಗುಳಿಗನ ಹರಕೆಯ ಕೋಲವು ಸಾಂಗವಾಗಿ ನೆರೆವೇರಿತ್ತು. ಇಲಾಖೆಯಲ್ಲಿರುವ ಬಹುತೇಕ ಸಿಬ್ಬಂದಿ ಪಾಲ್ಗೊಂಡು ದೈವದ ಕೃಪೆಗೆ ಪಾತ್ರರಾಗಿದ್ದರು. ಹೆಚ್ಚುತ್ತಿರುವ ಕಳವು ಪ್ರಕರಣಕ್ಕೆ ತಡೆ ನೀಡುವಂತೆ ಹಾಗೂ ಆರೋಪಿಗಳ ಪತ್ತೆಗೆ ಸಹಕರಿಸುವಂತೆ ಪೊಲೀಸರು ಗುಳಿಗನಲ್ಲಿ ಪ್ರಾರ್ಥಿಸಿಕೊಂಡಿರುವುದು ವಿಶೇಷವಾಗಿತ್ತು. ಅದಕ್ಕೆ ನುಡಿ ನೀಡಿದ ಗುಳಿಗ ಕರ್ತವ್ಯ ಮಾಡಿ ಯಶಸ್ಸು ಸಿಗುತ್ತದೆ ಎಂಬ ಅಭಯ ನೀಡಿರುವುದು ಸಭೆಯ ಗಮನ ಸೆಳೆಯಿತು.
Tagged with
feature,
lnews,
udupi
ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಎಂಬಲ್ಲಿ ನೂತನ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ಬಡಿಸಲೆಂದು ಬಂದಿದ್ದ ವ್ಯಕ್ತಿಯು ಮನೆಯಲ್ಲಿದ್ದ ಬೆಲೆಬಾಳುವ ಪೂಜಾ ಸಾಮಾಗ್ರಿಗಳನ್ನು ದೋಚಿ ಪೊಲೀಸರ ವಶವಾದ ಘಟನೆ ನಿನ್ನೆ ನಡೆದಿದೆ.
ಬಂಧಿತ ಆರೋಪಿಯನ್ನು ಪೊಳಲಿ ನಿವಾಸಿ ಮೋಹನ್ ಭಟ್(೫೪) ಎಂದು ಗುರುತಿಸಲಾಗಿದೆ. ಕಳೆದ ಮೇ ನಾಲ್ಕನೇ ತಾರೀಖಿನಂದು ಈತ ಸುಂಕದಕಟ್ಟೆಯ ಪ್ರವೀಣ್ ಕುಮಾರ್ ಎಂಬವರು ಹೊಸದಾಗಿ ಕಟ್ಟಿರುವ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ಊಟ ಬಡಿಸಲೆಂದು ಬಂದಿದ್ದ. ಈ ವೇಳೆ ಮನೆಯವರ ಗಮನ ಬೇರೆಡೆ ಸೆಳೆದು ಪೂಜಾಕೋಣೆಯಲ್ಲಿದ್ದ ಬೆಳ್ಳಿಯ ಕೌಳಿಗೆ ಹಾಗೂ ಚಮಚ ಕಳ್ಳತನ ಮಾಡಿದ್ದ. ಸಂಜೆಯ ವೇಳೆ ಮನೆಮಂದಿಗೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿತ್ತು. ಊಟ ಬಡಿಸಲೆಂದು ಬಂದಿದ್ದ ಮೋಹನ ಭಟ್ಟನ ಮೇಲೆ ಶಂಕೆ ಉಂಟಾಗಿ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದರು.
ನಿನ್ನೆ ಸಂಜೆ ಬಜ್ಪೆ ಇನ್ಸ್‌ಪೆಕ್ಟರ್ ದಿನಕರ್ ಶೆಟ್ಟಿ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿ ಆತನಿಂದ ಬೆಳ್ಳಿಯ ಹಾಗೂ ಹಿತ್ತಾಳೆಯ ಪೂಜಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದೆ. ಆರೋಪಿ ಇದೇ ರೀತಿ ಬೇರೆ-ಬೇರೆ ಕಡೆಗಳಿಂದ ಪೂಜಾ ಸಾಮಗ್ರಿಗಳನ್ನು ಕಳವುಗೈದಿರು ವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Tagged with
cnews,
feature
ಕಾರ್ಕಳ: ಐತಿಹಾಸಿಕ ಹಿನ್ನೆಲೆ ಯುಳ್ಳ ನೆಲ್ಲಿಕಾರು-ನಲ್ಲೂರು ಹರಿ ಯಪ್ಪ ಕೆರೆ ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ದುರುಪಯೋಗ ಪಡಿಸಿ ರುವ ಅಂಶಬೆಳಕಿಗೆ ಬಂದಿದೆ. ಕಾರ್ಕಳ ನಗರದ ಅನಂತಶಯನ ದೇವಳದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವಂತಹ ಕೃಷ್ಣಶಿಲೆ ಪ್ರಭೆಯ ಬೃಹತ್ ಗಾತ್ರದ ಏಕಶಿಲಾ ಮೂರ್ತಿಯಾದ ಅನಂತಶಯನ ವಿಗ್ರಹವು ನಲ್ಲೂರು ಹರಿಯಪ್ಪನ ಕೆರೆಯಲ್ಲಿ ದೊರೆತ್ತಿರುವಂತಹದು. ೧೬ನೇ ಶತಮಾನದಲ್ಲಿ ಕಾರ್ಕಳವನ್ನಾಳಿದ ಬೈರರಸ ರಾಜನು ತನ್ನ ಧರ್ಮ ಪ್ರಚಾರಕ್ಕಾಗಿ ಕಟ್ಟಿಸಿದ ಬಸದಿಯನ್ನು ಹಿಂದು ಧಾರ್ಮಿಕ ಮಠಾಧೀಶರ ಕೋರಿಕೆಯಂತೆ ಅದನ್ನು ದೇವಸ್ಥಾನವನ್ನಾಗಿ ಪರಿವರ್ತಿಸಲು ಅನುವು ಮಾಡಿಕೊಟ್ಟಿದ್ದರಲ್ಲದೇ ಅದರಲ್ಲಿಯೇ ಅನಂತಶಯನ ವಿಗ್ರಹವನ್ನು ಪ್ರತಿಷ್ಠಾಪಿಸಲು ಉದಾರ ಮನೋಭಾವವನ್ನು ತೋರುವ ಮೂಲಕ ಸರ್ವ ಧರ್ಮವನ್ನು ಗೌರವಿಸಿರುವ ಕೀರ್ತಿಗೆ ಪಾತ್ರರಾಗಿದ್ದರೆಂಬುವುದು ಇತಿಹಾಸ ಪುಟಗಳಿಂದ ತಿಳಿಯಬಹು ದಾಗಿದೆ.
ಇದರ ಹಿನ್ನೆಲೆಯಲ್ಲಿ ಹರಿಯಪ್ಪ ಕರೆಯನ್ನು ಉಳಿಸುವ ಸದುದ್ದೇಶದಿಂದ ಕೆರೆ ಅಭಿವೃದ್ಧಿಗಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸರಕಾರವು ಲಕ್ಷಾಂತರ ರೂ. ಅನುದಾನಗಳು ಬಿಡುಗಡೆಗೊಳಿಸುತ್ತಿದೆಯಾದರೂ ಅದು ಸದುಪಯೋಗವಾಗುವುದಿಲ್ಲ ಎಂಬುವುದಕ್ಕೆ ಕೆಲ ತಿಂಗಳುಗಳ ಹಿಂದೆ ನಡೆದಿರುವ ಕಾಮಗಾರಿ ಉತ್ತಮ ನಿರ್ದಶನವಾಗಿದೆ. ಸುಮಾರು ೨೦ ಲಕ್ಷ ರೂ. ವೆಚ್ಚದ ನಲ್ಲೂರು ಹರಿಯಪ್ಪ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗೋಪಾಲ ಭಂಡಾರಿ ಅವರು ೨೦೧೧ ನವಂಬರ್ ೪ರಂದು ಚಾಲನೆ ನೀಡಿದ್ದರು. ನಲ್ಲೂರು ಗ್ರಾ. ಪಂ. ಅಧ್ಯಕ್ಷ ಉದಯಕುಮಾರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದಿರು ವಂತಹ ಈ ಕಾರ್ಯಕ್ರಮದಲ್ಲಿ ತಾ. ಪಂ.ನ ಅಧ್ಯಕ್ಷ ಜಯರಾಮ ಸಾಲ್ಯಾನ್, ಜಿ.ಪಂ. ಸದಸ್ಯ ಉದಯ ಎಸ್. ಕೋಟ್ಯಾನ್, ತಾ. ಪಂ. ಸದಸ್ಯ ಸುಗುಣ ಆರ್. ಸುವರ್ಣ ಮೊದಲಾ ದವರು ಉಪಸ್ಥಿತರು. ಕೆಲ ವರ್ಷಗಳ ಹಿಂದೆಯಷ್ಟೇ ಹರಿಯಪ್ಪ ಕೆರೆ ಅಭಿವೃದ್ಧಿಗಾಗಿ ಸರಕಾರವು ಲಕ್ಷಾಂತರ ರೂ. ವಿನಿ ಯೋಗಿಸಿದ್ದು, ಕೆರೆಯ ಸುತ್ತ ಮುತ್ತಲಿನಲ್ಲಿ ತಡೆಗೋಡೆ, ಕಾಲು ಸೇತುವೆ ನಿರ್ಮಾಣ ಕಾಮಗಾರಿ ಗಳನ್ನು ನಡೆಸಲಾಗಿತ್ತು. ಪ್ರಸ್ತುತ ಸಾಲಿನಲ್ಲಿ ಕೆರೆ ವಿಸ್ತರಿಸುವ ಯೋಜ ನೆಗೆ ಪಟ್ಟಿ ಸಿದ್ಧಗೊಂಡಿತ್ತು.
ಅದರಂತೆ ಸುಮಾರು ೫೦೦ಕ್ಕೂ ಮಿಕ್ಕಿ ಟಿಪ್ಪರ್ ಲೋಡ್‌ನಷ್ಟು ಮಣ್ಣನ್ನು ಹೊರತೆಗೆದು ಅದನ್ನು ಕರೆಯ ಸುತ್ತಲಿನಲ್ಲಿಯೇ ಹಾಕಿರುವುದು ಕಂಡುಬಂದಿದೆ. ಕೆರೆಯ ಒಂದು ಪಾರ್ಶ್ವದ ಎತ್ತರದ ಪ್ರದೇಶದಲ್ಲಿ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ರಸ್ತೆ ಅಂಚಿನಲ್ಲಿ ಕೂಡಾ ಮಣ್ಣನ್ನು ಹಾಕಿರುವುದು ಕಂಡುಬಂದಿದೆ. ಹೀಗೆ ಹಾಕಲಾಗಿರುವ ರಾಶಿ ಮಣ್ಣು ಶೇಡಿ ಗುಣ ಮಟ್ಟದಾಗಿರುತ್ತದೆ. ಮಳೆ ಗಾಲದ ಸಂದರ್ಭದಲ್ಲಿ ಹರಿದು ಬರುವ ನೀರಿನ ರಭಸಕ್ಕೆ ಹಾಕಲಾಗಿರುವ ಮಣ್ಣು ಮತ್ತೇ ಕೆರೆಯಲ್ಲಿ ಲೀನವಾಗುವ ಸಾಧ್ಯ ತೆಗಳು ಬಹುತೇಕವಾಗಿದೆ. ಕೆರೆಯಲ್ಲಿ ಶೇಖರಣೆಯಾಗುವ ಹೆಚ್ಚುವರಿ ನೀರು ಪಕ್ಕದ ತೋಟಗಳಿಗೆ ಹರಿಯುವು ದರಿಂದ ಫಲವತ್ತಾದ ಭೂಮಿಗೂ ಇದರಿಂದ ದುಷ್ಪರಿಣಾಮವಾಗಲಿದೆ ಎಂಬ ಆರೋಪವು ಸ್ಥಳೀಯ ಕೃಷಿಕ ದ್ದಾಗಿದೆ. ಉದ್ವಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತ ರಾಗಿದ್ದ ಜನಪ್ರತಿನಿಧಿಗಳು, ಇಲಾ ಖಾಧಿಕಾರಿಗಳು ನಂತರದ ದಿನಗಳು ಆ ಯೋಜನೆ ಎಷ್ಟರ ಮಟ್ಟಿಗೆ ಫಲಪ್ರದವಾಗಿದೆ ಎಂಬುದನ್ನು ಅರಿತುಕೊಳ್ಳಲು ಮುಂದಾಗದಿರುವುದ ರಿಂದಲೇ ಆ ಯೋಜನೆಯು ಜನ ವಿರೋಧಿ ಯೋಜನೆಯಾಗಲು ಕಾರಣವಾಗಿದೆ.
Tagged with
dk,
feature,
lnews
ಮಂಗಳೂರು: ಉತ್ತರ ಕರ್ನಾ ಟಕದ ೧೨೩ ತಾಲೂಕುಗಳಲ್ಲಿ ಬರಗಾಲ ತಾಂಡವವಾಡುತ್ತಿದ್ದು ಇಂತಹ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಕೋಟ್ಯಾಂತರ ರೂ. ಖರ್ಚು ಮಾಡಿ ಯುವಜಾಗೃತಿ ಸಮಾವೇಶ ನಡೆಸಿದ್ದು ಯಾವ ಪುರುಷಾರ್ಥಕ್ಕೆ ಎಂದು ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ವಿಜಯ ಕುಮಾರ್ ಪ್ರಶ್ನಿಸಿದ್ದಾರೆ. ನಿನ್ನೆ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ಮಂತ್ರಿಗಳು ಹಗರಣ, ಭ್ರಷ್ಟಾಚಾರ, ಅನೈತಿಕ ಮತ್ತು ಅಶ್ಲೀಲ ಚಟುವಟಿಕೆಗಳ ಮೂಲಕ ರಾಜ್ಯದ ಮರ್ಯಾದೆಯನ್ನು ಮಣ್ಣುಪಾಲು ಮಾಡಿದ್ದಾರೆ. ಇಂತಹವರು ಯುವಜನರಿಗೆ ಮಾದರಿಯಾಗಬೇಕೇ ಎಂದು ಲೇವಡಿ ಮಾಡಿದರು. ಕಾಂಗ್ರೆಸ್‌ಗೆ ಅಧಿಕಾರ ಇಲ್ಲದಿದ್ದರೆ ಅದರ ನಾಯಕರಿಗೆ ನಿದ್ದೆ ಬರುವುದಿಲ್ಲ ಎಂದು ಬಿಜೆಪಿಯವರು ಲೇವಡಿ ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ್ದರೆ, ಬಿಜೆಪಿ ಮುಖಂಡರು ಅಧಿಕಾರಕ್ಕೆ ಬಂದು ಜೈಲು ಸೇರಿದರು ಎಂದು ವ್ಯಂಗ್ಯವಾಡಿದ ಶೆಟ್ಟಿ, ಚುನಾವಣಾ ಪ್ರಣಾಳಿಕೆಯಲ್ಲಿ ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಭತ್ಯೆ ನೀಡುವುದಾಗಿ ಘೋಷಿಸಿದ್ದ ಬಿಜೆಪಿ, ಅಧಿಕಾರಕ್ಕೆ ಬಂದ ಬಳಿಕ ಬೇಡಿಕೆ ಈಡೇರಿಸದೆ ಯುವಕರಿಗೆ ಮೋಸ ಮಾಡಿದೆ.
ಯುವಜಾಗೃತಿ ಸಮಾವೇಶದಲ್ಲಿ ೧.೨೦ಲಕ್ಷ ಜನ ಸೇರುವ ನಿರೀಕ್ಷೆ ಬಿಜೆಪಿ ಮುಖಂಡರದ್ದಾಗಿತ್ತು. ಆದರೆ ಬರೇ ೩೦ ಸಾವಿರ ಜನ ಮಾತ್ರವೇ ಸೇರಿದ್ದು ಅದರಲ್ಲೂ ದ.ಕ.ಜಿಲ್ಲೆಯ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದನ್ನು ಗಮನಿಸಿದಾಗ ಬಿಜೆಪಿ ಮಾಡಿದ ಮೋಸ ಜನರಿಗೆ ಗೊತ್ತಾಗಿದೆ ಎಂದು ಅವರು ವಿಶ್ಲೇಷಿಸಿದರು. ಪತ್ರಿಕಾಗೋಷ್ಟಿಯಲ್ಲಿ ಸುರೇಶ್ ಬಳ್ಳಾಲ್, ಫಾರೂಕ್ ಉಳ್ಳಾಲ್, ಟಿ.ಕೆ.ಸುಧೀರ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.
ಸೆಝ್ ಪರ ಶೆಟ್ಟಿ ಬ್ಯಾಟಿಂಗ್
ಯುವಜಾಗೃತಿ ಸಮಾವೇಶ ವನ್ನು ಟಾರ್ಗೆಟ್ ಮಾಡಿ ಪತ್ರಿಕಾ ಗೋಷ್ಟಿ ನಡೆಸಿದ್ದ ವಿಜಯಕುಮಾರ್ ಶೆಟ್ಟಿ ಬಳಿಕ ತಮ್ಮ ಮಾತನ್ನು ಎಂಎಸ್‌ಇಝೆಡ್‌ನತ್ತ ಹೊರಳಿಸಿ ದರು. ದ.ಕ.ಜಿಲ್ಲೆಯಲ್ಲಿ ಸೆಝ್‌ಗಾಗಿ ಕೃಷಿ ಭೂಮಿಯನ್ನು ಡಿ.ನೋಟಿಫಿಕೇಶನ್‌ಗೆ ಒಪ್ಪಿಗೆ ಸೂಚಿಸಿದ್ದ ರಾಜ್ಯ ಸರಕಾರ ಸ್ವಾಮೀಜಿಯವರ ಒತ್ತಡಕ್ಕೆ ಮಣಿದು ಡಿ.ನೋಟಿಫಿಕೇಶನ್ ಹಿಂದಕ್ಕೆ ಪಡೆದಿದೆ.
ಸೆಝ್‌ನಿಂದಾಗಿ ಜಿಲ್ಲೆಯ ಸಾಕಷ್ಟು ಮಂದಿಗೆ ಕೆಲಸ ಸಿಗುತ್ತಿತ್ತು. ಈ ಹಿನ್ನೆಲೆಯಲ್ಲಿ ೮೫ಶೇ.ಕೃಷಿಕರು ಭೂಮಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಸರಕಾರ ಡಿನೋಟಿಫಿಕೇಶನ್ ಹಿಂದಕ್ಕೆ ಪಡೆಯುವ ಮೂಲಕ ಜನರಿಗೆ ದ್ರೋಹ ಮಾಡಿದೆ. ಇದರಿಂದಾಗಿ ಮುಂದೆ ಕೈಗಾರಿಕಾ ಕಂಪೆನಿಗಳು ಜಿಲ್ಲೆಯಿಂದ ದೂರವುಳಿಯಲಿದೆ ಎಂದ ಶೆಟ್ಟಿ, ಪ್ರಥಮ ಹಾಗೂ ದ್ವಿತೀಯ ಹಂತದ ಸೆಝ್ ಕಾಮಗಾರಿಯ ವೇಳೆ ಭೂಮಿ ಕಳೆದುಕೊಂಡವರಿಗೆ ಕೆಲಸ ಸಿಗುವುದು ಖಚಿತ. ಇದರಲ್ಲಿ ಸಂಶಯವೇ ಬೇಡ. ಪೂರ್ಣ ಪ್ರಮಾಣದಲ್ಲಿ ಕಂಪೆನಿಗಳು ಕಾರ್ಯಾಚರಣೆ ಮಾಡದಿರುವುದರಿಂದ ಕೆಲಸ ನೀಡುವುದರಲ್ಲಿ ವಿಳಂಬವಾಗಿದೆ ಎಂದು ಪಕ್ಕಾ ಸೆಝ್ ಅಧಿಕಾರಿಯಂತೆ ಮಾತನಾಡಿದರು.
Tagged with
feature,
vijayakumarshetty
ಸುದ್ದಿ ವಿಶ್ಲೇಷಣೆ
ಮೊನ್ನೆ ಮೊನ್ನೆ ತನ್ನ ಎರಡನೇ ಅವಧಿಯ ಮೂರು ವರ್ಷಗಳನ್ನು ಪೂರೈಸಿದ ಕೇಂದ್ರದ ಯುಪಿಎ ಸರಕಾರ ಇದೀಗ ಮತದಾರರ ಮೇಲೆ ಕನಸಲ್ಲೂ ನಿರೀಕ್ಷಿಸಲಾಗದಂಥ ಪ್ರಹಾರ ನೀಡಿದೆ. ಈ ಹಿಂದೆಂದೂ ಏರಿಸದಷ್ಟು ಪೆಟ್ರೋಲ್ ಬೆಲೆಯನ್ನು ಏರಿಸಲಾಗಿದೆ. ಪೆಟ್ರೋಲ್ ರಾತ್ರಿ ಬೆಳಗಾಗುವ ಮೊದಲು ಒಂದೇ ಏಟಿಗೆ ೭.೫೦ ರೂ. ದುಬಾರಿಯಾಗಿದೆ. ರೂಪಾಯಿ ಅಪಮೌಲ್ಯದ ಕಾರಣ ಮುಂದಿಟ್ಟುಕೊಂಡು ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗಿರುವುದು ಅನಿವಾರ್ಯವೋ, ಜನರ ತಾಳ್ಮೆಯ ಪರೀಕ್ಷೆಯೋ ಅಥವಾ ಜನತೆಯ ಮೇಲೆ ಮಾಡುವ ದಬ್ಬಾಳಿಕೆಯೋ ಎಂದು ಪ್ರಶ್ನಿಸಬೇಕಾಗುತ್ತದೆ.
ಸರಕಾರ ತನ್ನ ಕೆಲವು ದುರ್ಬಲ ಆರ್ಥಿಕ ನೀತಿಯಿಂದಾಗಿ ರೂಪಾಯಿ ಅಪಮೌಲ್ಯದ ಸಮಸ್ಯೆಯನ್ನು ಮೈಗೆಳೆದುಕೊಂಡಿರುವುದಕ್ಕೆ ಜನರಿಗೆ ಬೆಲೆಯೇರಿಕೆ ಬಿಸಿ ನೀಡುತ್ತಿರುವುದು ಎಷ್ಟು ಸರಿ. ನಿಜಕ್ಕೂ ನಮ್ಮ ಜನತೆ ಈ ಬೆಲೆಯೇರಿಕೆಯನ್ನು ಎದುರಿಸುವಷ್ಟು ಸಮರ್ಥರಾಗಿದ್ದಾರಾ ಎಂಬ ಬಗ್ಗೆ ಕಿಂಚಿತ್ತೂ ವಿಮರ್ಶಿಸದೆ ಸೀದಾ ಬೆಲೆಯೇರಿಕೆ ಮಾಡಿರುವುದು ಅಕ್ಷಮ್ಯ, ಕಠೋರ ನಿರ್ಧಾರ. ಕೇವಲ ೩೨ ರೂ. ಆದಾಯ ಇರುವ ವ್ಯಕ್ತಿ ಬಡವನಲ್ಲ ಎಂದು ಹೇಳಿರುವ ಸರಕಾರವಲ್ಲವೇ ನಮ್ಮದು? ಪೆಟ್ರೋಲ್ ಬೆಲೆ ಏರಿಕೆಗೆ ಕೇವಲ ಕಾಂಗ್ರೆಸ್ ಮಾತ್ರ ಕಾರಣವಾಗುವುದಿಲ್ಲ. ಯುಪಿಎಯಲ್ಲಿ ಒಳಗೊಂಡಿರುವ ಎಲ್ಲ ಮೈತ್ರಿಪಕ್ಷಗಳೂ ಇದರ ಹೊಣೆ ಹೊರಬೇಕಾಗುತ್ತದೆ. ಅವರೆಲ್ಲರೂ ಮತದಾರರಿಗೆ ತಕ್ಕ ಉತ್ತರ ನೀಡಲೇಬೇಕಾಗುತ್ತಿದೆ. ಸದ್ಯೋಭವಿಷ್ಯದಲ್ಲಿ ಯಾವುದೇ ಚುನಾವಣೆ ಇಲ್ಲ ಎಂಬುದನ್ನು ಖಾತರಿ ಮಾಡಿಕೊಂಡೇ ಯುಪಿಎ ಸರಕಾರ ಇಂಥ ಸಾಹಸಕ್ಕೆ ಧೈರ್ಯ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಕಳೆದ ರೈಲ್ವೇ ಬಜೆಟ್‌ನಲ್ಲಿ ಪ್ರಯಾಣದರದಲ್ಲಿ ಪೈಸೆ ಲೆಕ್ಕದಲ್ಲಿ ಏರಿಕೆ ಮಾಡಿರುವುದನ್ನು ವಿರೋಧಿಸಿ ತನ್ನ ಪಕ್ಷದ ಸಚಿವರ ತಲೆದಂಡವನ್ನು ಪಡೆದಿದ್ದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇದೀಗ ಕೇಂದ್ರ ಸರಕಾರದ ನಿರ್ಧಾರವನ್ನು ಹೇಗೆ ಸಮರ್ಥಿಸುತ್ತಾರೆ ಅಥವಾ ಯಾವ ರೀತಿಯಲ್ಲಿ ವಿರೋಧಿಸುತ್ತಾರೆ ಎಂಬುದು ಕುತೂಹಲದ ವಿಷಯ. ತನ್ನ ರಾಜ್ಯಕ್ಕೆ ಹೆಚ್ಚು ಅನುದಾನ ನೀಡಬೇಕು ಎಂದು ಕೇಂದ್ರ ಸರಕಾರದೊಂದಿಗೆ ಒಂದು ರೀತಿಯ ಜಗಳಕ್ಕೆ ನಿಂತಿರುವ ಮತ್ತು ಅದೇ ವಿಷಯದಲ್ಲಿ ಬಿಜೆಪಿ ಮುಖ್ಯಸ್ಥ ರಾಜನಾಥ್ ಸಿಂಗ್ ಅವರ ಬೆಂಬಲವನ್ನೂ ಗಳಿಸಿಕೊಂಡಿರುವ ಮಮತಾ ಬ್ಯಾನರ್ಜಿ ಅವರು ಇದೀಗ ಪೆಟ್ರೋಲ್ ಬೆಲೆ ಏರಿಕೆಗೆ ಸಂಬಂಧಿಸಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಅವರ ಮುಂದಿನ ರಾಜಕೀಯ ನಡೆಯ ದ್ಯೋತಕವೂ ಆಗುವ ಸಾಧ್ಯತೆ ಇದೆ. ಅವರು ಯುಪಿಎಯಲ್ಲಿರಲು ವಿಶೇಷ ಆಸಕ್ತಿ ತೋರಿಸುತ್ತಿಲ್ಲ. ಸೂಕ್ತ ಕಾರಣ ಸಿಕ್ಕಿದರೆ ಮತ್ತು ಮೈತ್ರಿಗೊಂದು ಸರಿಯಾದ ಪಕ್ಷ ಸಿಕ್ಕಿದರೆ ಅವರು ಯುಪಿಎ ತೊರೆಯುವ ಸಂಭವವಿದೆ ಎಂದು ಹೇಳುತ್ತಿದ್ದಾರೆ ರಾಜಕೀಯ ತಜ್ಞರು. ಇದೀಗ ಪೆಟ್ರೋಲ್ ಬೆಲೆಯೇರಿಕೆಯು ಮಮತಾ ಮತ್ತು ಯುಪಿಎ ನಡುವೆ ಡೈವೋರ್ಸ್‌ಗೆ ಹೇತುವಾಗುತ್ತದೋ ಎಂಬುದನ್ನು ಕಾದು ನೋಡಬೇಕಷ್ಟೆ.
ಮೈತ್ರಿ, ರಾಜಕೀಯ ನಡೆ ಯಾವುದೇ ಇರಲಿ, ಮಮತಾ ಬ್ಯಾನರ್ಜಿ ನಿಜವಾಗಿಯೂ ಬಡವರ ಬಗ್ಗೆ, ಜನತೆಯ ಮೇಲೆ ಕಾಳಜಿ ಹೊಂದಿರುವುದಾದಲ್ಲಿ ಅವರು ಪೆಟ್ರೋಲ್ ಬೆಲೆಏರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ರೈಲು ಪ್ರಯಾಣ ದರ ಏರಿಕೆ ವಿಷಯದಲ್ಲಿ ವರ್ತಿಸಿದಂತೆ ವರ್ತಿಸಬೇಕು. ಇಲ್ಲವಾದಲ್ಲಿ ಅವರು ರೈಲ್ವೇ ಸಚಿವ ದಿನೇಶ್ ತ್ರಿವೇದಿಯನ್ನು ಯಾವುದೇ ಪೂರ್ವಾಗ್ರಹಕ್ಕೆ ಮಣಿದು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂದು ಭಾವಿಸುವುದು ಅನಿವಾರ್ಯವಾಗುತ್ತದೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಸಾಮಾನ್ಯ ಜನತೆಯ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎಂದು ಸರಕಾರ ಸಮರ್ಥಿಸಲು ಮುಂದಾಗಬಹುದು. ಆದರೆ ಮಧ್ಯಮ ವರ್ಗದ ಜನರೂ ಈ ಬೆಲೆಏರಿಕೆಯನ್ನು ಸಹಿಸುವಷ್ಟ ಆರ್ಥಿಕ ಶಕ್ತಿ ಹೊಂದಿಲ್ಲ ಎಂಬುದು ಸರಕಾರಕ್ಕೆ ತಿಳಿದಿರಬೇಕಾಗಿದೆ.
ಹಾಗೆಂದು ಪೆಟ್ರೋಲ್ ಬೆಲೆಏರಿಕೆಯ ಸಂಪೂರ್ಣ ಹೊಣೆಯನ್ನು ಕೇಂದ್ರ ಸರಕಾರದ ಮೇಲೆ ಹೊರಿಸಿ ರಾಜ್ಯ ಸರಕಾರ ಕೂರುವಂತಿಲ್ಲ. ಜನತೆಯ ಮೇಲೆ ಪ್ರೀತಿ ಇರುವ ಯಾವುದೇ ಸರಕಾರ ತಿಂಗಳ ಹಿಂದೆ ಗೋವಾ ಸರಕಾರ ಕೈಗೊಂಡ ಕ್ರಮವನ್ನು ಅನುಸರಿಸಿ ತನ್ನ ಪಾಲಿನ ತೆರಿಗೆ ಇಳಿಸಿ ಪೆಟ್ರೋಲ್ ಒಂದಿಷ್ಟು ತುಟ್ಟಿಯಾಗಿಸಲು ಶ್ರಮಿಸಬಹುದು. ಅತ್ತ ಕೇಂದ್ರ ಸರಕಾರವನ್ನು ದೂರುತ್ತಾ, ಜನರ ಬೆವರಿನ ಹಣದಿಂದ ಸಿಗುವ ತೆರಿಗೆ ಲಾಭದಿಂದ ಹೊಟ್ಟೆ ತುಂಬಿಸಿಕೊಳ್ಳುವುದು ರಾಜ್ಯ ಸರಕಾರಕ್ಕೆ ಶೋಭೆ ಎನಿಸುವುದಿಲ್ಲ. ಕೇಂದ್ರವನ್ನು ಟೀಕಿಸುವ ಮೊದಲು ರಾಜ್ಯ ಸರಕಾರ ತನ್ನ ಪಾಲಿನದ್ದು ಎಂದು ಕಿಂಚಿತ್ತಾದರೂ ತೆರಿಗೆ ಇಳಿಸಬೇಕು.
Tagged with
feature,
petrol,
vishleshane