
ಸುಪ್ರೀಂಕೋರ್ಟ್ ಕೊನೆಗೂ ದೃಢ ನಿರ್ಧಾರ ತಳೆದು ಟಿಂಟ್ ಗಾಜು ಅಳವಡಿಸಿ ರುವ ಕಾರುಗಳ ಮೇಲೆ ಕಠಿಣ ಕ್ರಮ ಕೈಗೊಂಡಿ ರುವುದು ಸ್ವಾಗತಾರ್ಹ ವಿಚಾರ. ಮುಂಬೈ, ಕಲ್ಕತ್ತಾ, ದೆಹಲಿಯಂಥ ಮುಂದುವರಿದ ನಗರಗಳಲ್ಲಿ ಚಲಿಸುವ ಕಾರಿನೊಳಗೆ ನಡೆಯುತ್ತಿದ್ದ ಅಮಾ ಯಕ ಹೆಣ್ಮಕ್ಕಳ ಅತ್ಯಾಚಾರ, ಲೈಂಗಿಕ ಶೋಷ ಣೆಯ ಬಗ್ಗೆ ನ್ಯಾಯಾಲಯ ತಡವಾಗಿಯಾದರೂ ಎಚ್ಚೆತ್ತು ಕೊಂಡಿದೆ. ಟಿಂಟ್ ಹಾಕಿರುವ ಕಾರು ಗಳಿಂದ ಮೇ ೧೯ರ ನಂತರ ದಂಡ ವಸೂಲಿ ಮಾಡಲಾಗುತ್ತದೆ ಎಂದು ಕೋರ್ಟ್ ಈಗಾಗಲೇ ತಿಳಿಸಿದ್ದರೂ ಮಂಗಳೂರಿನ ರಸ್ತೆಗಳಲ್ಲಿ ಇನ್ನೂ ಟಿಂಟ್ ಹಾಕಿರುವ ಕಾರುಗಳು ಓಡಾಡುತ್ತಿವೆ. ಕೆಲವು ಕಾರುಗಳಲ್ಲಿ ಟಿಂಟ್ ಪಟ್ಟಿ ತೆಗೆದು ಒಳಗಿ ದ್ದವರು ಅರೆಬರೆ ಕಾಣುವ ಪಟ್ಟಿಯನ್ನು ಹಾಕಲಾ ಗಿದೆ. ಇದು ತುಂಬಾ ಅಪಾಯಕಾರಿಯಾದುದು. ಯಾಕೆಂದರೆ ಇದರಿಂದ ಕಾರಿನ ಒಳಗಿದ್ದವರು ಸ್ಪಷ್ಟ ವಾಗಿ ಕಾಣುವುದಿಲ್ಲ. ಇದು ಕಳ್ಳರು, ದರೋಡೆಕೋ ರರು, ಕಾಮುಕರ ಪಾಲಿಗೆ ವರದಾನವಾಗಲಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಕೆಲವು ನಗರ ಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಿದರೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲವು ಶ್ರೀಮಂತ ವ್ಯಕ್ತಿಗಳು ತಮಗೆ ಬೇಕಾದ ಹಾಗೆ ಬದಲಾ ಯಿಸಿರುವುದು ಕಂಡುಬರುತ್ತಿದೆ. ಕಾರಿಗೆ ಟಿಂಟ್ ಗಾಜು ಅಳವಡಿಸಬಾರದು, ಒಳಗಿದ್ದವರು ಸ್ಪಷ್ಟ ವಾಗಿ ಕಾಣಬೇಕು ಎಂದು ಆದೇಶದಲ್ಲಿದ್ದರೆ ಮಬ್ಬುಮಬ್ಬಾಗಿ ಕಾಣುವ ಪಟ್ಟಿ ಧರಿಸುವುದು ನ್ಯಾಯಾಲಯದ ಆದೇಶ ಧಿಕ್ಕರಿಸಿದಂತೆ ಅಲ್ಲವೇ? ಆದ್ದರಿಂದ ಈ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಟಿಂಟ್ ಹಾಕಿರುವ ಕಾರುಗಳು ಹೆಣ್ಣುಮಕ್ಕಳ ಲೈಂಗಿಕ ಶೋಷಣೆ, ಕಿರುಕುಳ ಇತ್ಯಾದಿ ಪ್ರಕರಣಗಳಿಗೆ ಹೆಚ್ಚು ಬಳಕೆಯಾಗು ತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಂಡು ಸರ್ವೋಚ್ಛ ನ್ಯಾಯಾಲಯದ ಆದೇಶ ಗೌರವಿಸಲಿ.
ಶಶಿಕಾಂತ್, ರಥಬೀದಿ
ಇಂಟರ್‌ಲಾಕ್ ಯಾವಾಗ?
ಹಳೆಯಂಗಡಿ ಜಂಕ್ಷನ್‌ನಿಂದ ಕಿನ್ನಿಗೋಳಿ ಕಡೆ ಸಾಗುವ ರಸ್ತೆಯ ಇಂದಿರಾನಗರ ರೈಲ್ವೇ ಗೇಟ್‌ಗೂ ಹಿಂದೆ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಲು ಇಂಟ ರ್‌ಲಾಕ್ ತಂದು ರಸ್ತೆ ಬದಿಯಲ್ಲಿ ರಾಶಿ ಹಾಕಲಾಗಿದೆ. ಆದರೆ ಹಾಗೆ ರಾಶಿ ಹಾಕಿ ತಿಂಗಳು ಕಳೆಯುತ್ತಿ ದ್ದರೂ ಇಷ್ಟರವರೆಗೆ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಇದರಿಂದ ವಾಹನ ಸವಾರರು, ಪಾದಚಾರಿಗಳು ಸುಗಮ ಸಂಚಾರಕ್ಕೆ ಸಮಸ್ಯೆ ಎದು ರಿಸುವಂತಾಗಿದೆ. ಹದಗೆಟ್ಟ ರಸ್ತೆ ಯನ್ನು ಅಗೆದು ಸಮತಟ್ಟು ಮಾಡ ಲಾಗಿದ್ದು, ಇಂಟರ್‌ಲಾಕ್ ಯಾವಾಗ ಹಾಕುತ್ತಾರೆ ಎಂದು ಜನರು ಕಾಯು ವಂತಾಗಿದೆ. ಇಲ್ಲಿ ರಸ್ತೆಯ ವಿಸ್ತಾ ರವೂ ಕಡಿಮೆಯಿದ್ದು, ಎರಡು ಘನ ವಾಹನಗಳು ಎದುರು-ಬದುರಾದರೆ ರಸ್ತೆ ಬ್ಲಾಕ್ ಆಗುತ್ತದೆ. ಹಳೆಯಂಗಡಿ ಗ್ರಾ.ಪಂ.ಗೆ ಜನರ ಸಮಸ್ಯೆ ಕಣ್ಣಿಗೆ ಕಾಣುತ್ತಿಲ್ಲವೇ? ಇಲ್ಲಿ ಇಂಟ ರ್‌ಲಾಕ್ ಹಾಕುವುದಾದರೆ ಒಂದು ದಿನದ ಮಟ್ಟಿಗೆ ರಸ್ತೆಯನ್ನು ಬಂದ್ ಮಾಡಿ, ಕಾಮಗಾರಿ ನಡೆಸುವುದೊ ಳಿತು. ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿದಲ್ಲಿ ಸಮಸ್ಯೆಯಿರದು. ಇಂಟರ್‌ಲಾಕ್ ಹಾಕಿದಲ್ಲಿ ಜನರ ಬಹುದಿನಗಳ ಸಮಸ್ಯೆಗೆ ಪರಿಹಾರವೂ ಸಿಕ್ಕೀತು.
ನಾಗರಿಕ, ಹಳೆಯಂಗಡಿ
‘ಸತ್ಯಮೇವ ಜಯತೇ ನಮಗೆ ಯಾಕಿಲ್ಲ?
ಸತ್ಯಮೇವ ಜಯತೇ ಎಂಬ ಸಾಮಾಜಿಕ ಕಾರ್ಯಕ್ರಮವೊಂದು ಟಿವಿಯಲ್ಲಿ ಪ್ರಸಾರವಾಗು ತ್ತಿದೆ ಎಂದಾಗ ಇದು ಕೂಡ ಸಾಮಾನ್ಯ ರಿಯಾ ಲಿಟಿ ಶೋ ಆಗಿರಬಹುದು ಎಂದು ಊಹಿಸಿದ್ದೆ. ಅಷ್ಟಾಗಿ ಹಿಂದಿ ಚಾನೆಲ್ ವೀಕ್ಷಿಸದ ನಾನು ಇತ್ತೀ ಚೆಗೆ ಈ ಕಾರ್ಯಕ್ರಮದ ಬಗ್ಗೆ ಬಂದ ಅಭೂತ ಪೂರ್ವ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಈ ಕಾರ್ಯ ಕ್ರಮ ವೀಕ್ಷಿಸಿದೆ.
ನಿಜಕ್ಕೂ ಇದೊಂದು ಸಾಮಾಜಿಕ ಪರಿಣಾಮ ಬೀರಬಲ್ಲ ಕಾರ್ಯಕ್ರಮ ಆಗುವುದರಲ್ಲಿ ಎರಡು ಮಾತಿಲ್ಲ. ಅಮೀರ್ ಖಾನ್ ಹಿಂದಿ ಚಿತ್ರರಂಗದಲ್ಲಿ ಉತ್ತಮ ನಟ. ಅಧ್ಬುತ ಕಲಾವಿದ. ಆದರೆ ಸಿನಿಮಾ ನಟರು ರಿಯಾಲಿಟಿ ಶೋಗಳಿಗೆ ಬಂದು ಕಡೆದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಈ ಹಿಂದೆ ಅಮಿ ತಾಬ್ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಕ್ರಾಂತಿ ಮಾಡಿದರಾದರೂ ಸಾಮಾಜಿಕವಾಗಿ ಕೊಟ್ಟ ಸಂದೇ ಶವೇನೂ ಇಲ್ಲ ಎನ್ನಬಹುದು. ನಂತರ ರಿಯಾ ಲಿಟಿ ಶೋಗಳಲ್ಲಿ ಭಾಗವಹಿಸಿದ ಎಲ್ಲಾ ನಟರು ಅಮಿತಾಬ್‌ರನ್ನೇ ಹಿಂಬಾಲಿಸಿ ಸಾಕಷ್ಟು ಹಣ ಗಳಿ ಸಿದರೆ ಹೊರತು ಸಮಾಜಕ್ಕೆ ಕೊಟ್ಟ ಮೆಸೇಜ್ ಅಷ್ಟರಲ್ಲೇ ಇದೆ. ಆದರೆ ಅಮೀರ್ ಖಾನ್ ಎಂಬ ಚಿಂತಕ ನಟ ಸಮಾಜಕ್ಕೆ ಒಂದೊಳ್ಳೆ ಸಂದೇಶ ಖಂಡಿತಾ ನೀಡುತ್ತಾನೆ ಎನ್ನುವುದು ಈ ಕಾರ್ಯ ಕ್ರಮ ವೀಕ್ಷಿಸಿದರೆ ಅರಿವಿಗೆ ಬರುತ್ತದೆ. ತಾನೊಬ್ಬ ನಟ, ನಿರ್ದೇಶಕ ಎಂಬ ಅಹಂಕಾರವನ್ನು ಬಿಟ್ಟು ನಿರೂಪಿಸುವ ಶೈಲಿ ಈತನ ಸರಳ ವ್ಯಕ್ತಿತ್ವಕ್ಕೆ ಸಾಕ್ಷಿ. ಆದರೆ ಕನ್ನಡಿಗರಿಗೆ ಈ ಕಾರ್ಯಕ್ರಮ ವೀಕ್ಷಿಸುವ ಭಾಗ್ಯ ಇಲ್ಲ ಎನ್ನುವುದೇ ನಮ್ಮ ದೌರ್ಭಾಗ್ಯ ಎನ್ನ ಬಹುದು.
ಕನ್ನಡದಲ್ಲಿ ಕಮಂಗಿ ಚೇಷ್ಟೆಯ ರಿಯಾಲಿಟಿ ಶೋಗಳಿಗೆ ಬರವಿಲ್ಲ. ನಮ್ಮಲ್ಲಿ ಕೊರತೆಯಿರುವುದೇ ಸಮಾಜಕ್ಕೆ ಸಂದೇಶ ನೀಡುವ ಉತ್ತಮ ರಿಯಾ ಲಿಟಿ ಶೋಗಳಿಗೆ. ಹೀಗಿರುವಾಗ ಸತ್ಯಮೇವ ಜಯ ತೇಯಂತಹ ಕಾರ್ಯಕ್ರಮವನ್ನು ಕನ್ನಡದಲ್ಲಿ ಡಬ್ ಮಾಡಿ ಪ್ರಸಾರ ಮಾಡುವುದರಲ್ಲಿ ಖಂಡಿತಾ ತಪ್ಪಿಲ್ಲ. ಕೆಟ್ಟ ಪರಿಣಾಮ ಬೀರುವ ರಿಯಾಲಿಟಿ ಶೋಗಳ ಮಧ್ಯೆ ಸತ್ಯಮೇವ ಜಯತೇ ಕನ್ನಡದಲ್ಲಿ ಪ್ರಸಾರವಾಗಲಿ ಎನ್ನುವುದು ನನ್ನ ಆಶಯ. ಈ ಆಶಯ ಈಡೇರುವುದೇ?
ಧ್ವನಿ, ಮಂಗಳೂರು
ರಾಜ್ಯದ ಮುಖ್ಯಮಂತ್ರಿಯ ನಿಂದನೆ ಶಿಕ್ಷಾರ್ಹ ಅಪರಾಧವಲ್ಲವೇ?
ಕೊಪ್ಪಳದ ಗಂಗಾವತಿಯಲ್ಲಿ ಶ್ರೀರಾಮುಲು ಸುದ್ದಿಗಾರರೊಂದಿಗೆ ಮಾತಾಡಿದ ಸಂದರ್ಭದಲ್ಲಿ, ‘ಮುಖ್ಯಮಂತ್ರಿ ಸದಾನಂದ ಗೌಡರಿಗೆ ಅಧಿಕಾರ ನಡೆಸಲು ಗೊತ್ತಿಲ್ಲ ಇವರು ಬಾವಿಯೊಳಗೆ ಇದ್ದ ಕಪ್ಪೆಯ ಹಾಗೆ’ ಎಂದು ಟೀಕಿಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಒಳಪಟ್ಟ ಬಳ್ಳಾರಿಯ ಗಣಿಯನ್ನು ಯಾವುದೇ ಪರವಾನಿಗೆ ಇಲ್ಲದೆ ಅಲ್ಲಿಯ ಗಣಿಯ ಮಣ್ಣನ್ನು ವಿದೇಶಕ್ಕೆ ಸಾಗಿಸಿ ಸಾವಿರ ಕೋಟಿ ಹಣ ಲಪಟಾಯಿಸಿದ ಜನಾ ರ್ದನ ರೆಡ್ಡಿ ಮತ್ತು ಅಪ್ತಮಿತ್ರರಾದ ಶ್ರೀರಾಮುಲು ಸನ್ಮಾನ್ಯ ಮುಖ್ಯಮಂತ್ರಿಯನ್ನು ನಿಂದಿಸಲು ಅರ್ಹರೇ? ಮಾತ್ರವಲ್ಲದೆ ಬಿಜೆಪಿಯನ್ನು ತೊರೆದು ಬಿಜೆಪಿಯನ್ನು ಬೈದು ತಾನು ಸ್ಪರ್ಧಿಸಿದ ಕ್ಷೇತ್ರ ದಿಂದ ಚುನಾಯಿತರಾದ ಬಳಿಕ ಯಡಿಯೂ ರಪ್ಪರವರ ಮೇಲೆ ಕರುಣೆ ಬಂದದ್ದು ನೋಡು ವಾಗ ಯಡಿಯೂರಪ್ಪರವರ ಜೊತೆ ಸೇರಲು ಡಿ.ವಿ.ಎಸ್.ರವರನ್ನು ನಿಂದಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ ಇಂತಹ ನಿಂದನೆಯಿಂದ ಶ್ರೀರಾಮುಲು ನುಣುಚಿಕೊಳ್ಳಲು ಸಾಧ್ಯವಿಲ್ಲ. ಮಾಧ್ಯಮದವರು ತಮ್ಮ ಮುಂದೆ ಮೈಕ್ ಹಿಡಿದು ನಿಂತರೆ ತಾನು ಏನು ಬೇಕಾದರೂ ಮಾತಾಡಬಹುದು ಎಂದು ಶ್ರೀರಾಮುಲುಗೆ ಅನಿಸಿ ರಲೂಬಹುದು.
ನನ್ನ ಲೆಕ್ಕ ಪ್ರಕಾರ ಈ ಮಾತನ್ನು ಕೇಳಿ ಮುಖ್ಯಮಂತ್ರಿಯವರು ಸುಮ್ಮನೆ ಬಿಡಲಿಕ್ಕಿಲ್ಲ. ಯಾಕೆಂದರೆ ಒಬ್ಬ ಮುಖ್ಯಮಂತ್ರಿಯನ್ನು ನಿಂದಿ ಸುವುದು ಅಂದರೆ ಮಕ್ಕಳಾಟಿಕೆ ಅಲ್ಲ. ಆಂಧ್ರಪ್ರ ದೇಶದಿಂದ ರಾಜ್ಯಕ್ಕೆ ಬಂದು ಬಳ್ಳಾರಿಯಲ್ಲಿ ನೆಲೆಸಿ ಇಲ್ಲಿನ ಜನರಿಗೆ ಮೋಸ ಮಾಡಿದ ಶ್ರೀರಾಮುಲು ಶೀಘ್ರದಲ್ಲಿಯೇ ಮಾನಹಾನಿ ಮೊಕದ್ದಮೆಗೆ ಒಳ ಗಾಗಲಿದ್ದಾರೆ. ಮಾನ್ಯ ಮುಖ್ಯಮಂತ್ರಿಯವರು ತಡಮಾಡದೆ ಮಾನಹಾನಿ ಮೊಕದ್ದಮೆ ದಾವೆ ಹೂಡಿದರೆ ಇನ್ನು ಮುಂದೆ ಇಂತಹ ಚಿಲ್ಲರೆ ಜನರು ಮುಖ್ಯಮಂತ್ರಿಯನ್ನು ಬಹಿರಂಗ ವೇದಿ ಕೆಗಳಲ್ಲಿ ನಿಂದಿಸುವುದು ಕಡಿಮೆಯಾಗಬಹುದು ಎಂದು ಭಾವಿಸುತ್ತೇನೆ.
ಡಿ.ವಿ.ಎಸ್.ರವರು ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡದವರಾಗಿರುವ ಕಾರಣ ಇಂಥ ಹೇಳಿಕೆಗೆ ಸ್ಪಂದಿಸುವುದು ಅನಿವಾರ್ಯವಾ ಗುತ್ತದೆ. ಬಹುಶಃ ಶ್ರೀರಾಮುಲುಗೆ ವಿದ್ಯಾ ಭ್ಯಾಸದ ಕೊರತೆಯಿರ ಬಹುದು ಎನ್ನುವುದು ನನ್ನ ಅನಿಸಿಕೆ. ಇಲ್ಲದಿದ್ದರೆ ಇಷ್ಟು ಕೇವಲ ವಾಗಿ ಮಾತಾಡುತ್ತಿರಲಿಲ್ಲ. ರಾಜ್ಯದ ಮುಖ್ಯ ಮಂತ್ರಿಗೆ ನಿಂದಿಸುವುದು ಸರಿಯೇ?
ಟಿ.ಇಸ್ಮಾಯಿಲ್, ತಲಪಾಡಿ
ಉಡುಪಿ ಪುತ್ತಿಗೆ ಶ್ರೀಗಳಿಗೊಂದು ಬಹಿರಂಗಪತ್ರ
ಪುತ್ತಿಗೆ ಶ್ರೀಗಳೇ, ತಮ್ಮ ಅಧೀನದಲ್ಲಿರುವ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವಸ್ಥಾನ ದಲ್ಲಿ ಶುಚಿತ್ವ ಎನ್ನುವುದೇ ಕಂಡುಬರುತ್ತಿಲ್ಲ. ತೀರ್ಥ ಕುಂಡಗಳು, ಪ್ಲಾಸ್ಟಿಕ್, ಪೈಬರ್ ಮತ್ತು ಹೂಗಳು ಎಲ್ಲೆಂದರಲ್ಲಿ ಬಿದ್ದು ಕೊಳೆತು ವಾಸನೆ ಬರು ತ್ತದೆ. ದೇವಸ್ಥಾನದ ಒಳಗಿರುವ ಕಸದ ತೊಟ್ಟಿ ಯಲ್ಲಿ ಕಸ ತುಂಬಿ ತುಳುಕುತ್ತಿರುತ್ತದೆ.
ದೇವಸ್ಥಾನದ ಆವರಣದೊಳಗೆ ಸೀಯಾಳ ಸಿಪ್ಪೆಗಳು ಅಲ್ಲಲ್ಲಿ ಬಿದ್ದಿರುತ್ತದೆ. ಚಂದ್ರೇಶ್ವರ ದೇವ ಸ್ಥಾನದ ಒಳಗಿರುವ ಪಾರಿಜಾತದ ಕಟ್ಟೆಯ ಬದಿ ಕೆಲವು ಸಲ ಕೆಸರಿನಿಂದ ತುಂಬಿರುವ ಕಾರಣ ತುಳಸಿಕಟ್ಟೆಗೆ ಸುತ್ತು ಹಾಕಲು ಆಗುವುದಿಲ್ಲ. ಅನಂ ತೇಶ್ವರ ದೇವಳದ ಒಳಗೆ ತೀರ್ಥ ಕೊಡುವ ಸ್ಥಳ ಬಹಳ ಇಕ್ಕಟ್ಟಾಗಿದ್ದು, ಭಕ್ತರಿಗೆ ಅಡಚಣೆಯಾಗು ತ್ತಿದೆ. ಕೆಲವು ವರ್ಷಗಳ ಹಿಂದೆ ದೇವಸ್ಥಾನದ ಎಡಪಕ್ಕದ ವಿಶಾಲ ಪ್ರದೇಶದಲ್ಲಿ ಗಂಧ-ತೀರ್ಥ ಕೊಡುತ್ತಿದ್ದರು. ಆದರೆ ಈಗ ೩-೪ ವರ್ಷಗಳಿಂದ ದೇವರ ಗರ್ಭಗುಡಿಯ ಕಂಬದ ಮರೆಯಲ್ಲಿ ಗಂಧ-ಪ್ರಸಾದ ಕೊಡುತ್ತಾರೆ. ಕೆಲವು ಸಲ ಮಂಗಳಾ ರತಿ ಮಾಡುವುದು, ಗಂಧ, ತೀರ್ಥ ಕೊಡುವುದು, ಬೇರೆ ಪೂಜೆ ಎಲ್ಲ ಮಾಡುವುದು ಒಬ್ಬರೇ.
ಅನಂತೇಶ್ವರ ದೇವಾಲಯದೊಳಗೆ ಕೆಲವು ಸಲ ಬನ್ನಂಜೆಯವರ ಪ್ರವಚನ ಸಾಯಂಕಾಲ ನಡೆ ಯುತ್ತದೆ. ಈ ವೇಳೆ ಅಲ್ಲಿಯ ಎಲ್ಲಾ ಗಂಟೆಗಳನ್ನು ಹಗ್ಗದಲ್ಲಿ ಕಟ್ಟಿ ಗಂಟೆ ಬಾರಿಸದ ಹಾಗೆ ಮಾಡು ತ್ತಾರೆ. ಆಗ ಮಂಗಳಾರತಿಯೂ ಮಾಡುವುದಿಲ್ಲ. ಅನಂತೇಶ್ವರ ದೇವಳದ ಹೊರಗಿನ ಜಗಲಿಗಳಲ್ಲಿ ಪೆಟ್ಟಿಗೆಗಳನ್ನೆಲ್ಲಾ ಇಡುತ್ತಾರೆ. ಅಲ್ಲದೆ ದೇವಸ್ಥಾನದ ಎದುರುಗಡೆಯ ಅಂಗಡಿಯವರು ಅಲ್ಲಿಯ ಕಂಬದ ಬದಿಯಲ್ಲಿ ಸರಕು ತುಂಬಿದ ಗೋಣಿಗಳನ್ನು ಇಡು ವುದರಿಂದ ಭಕ್ತರಿಗೆ ನಡೆದಾಡಲೂ ಆಗುವುದಿಲ್ಲ. ಇನ್ನಾದರೂ ಮಠಾಧಿಪತಿಗಳೇ, ಶುಚಿತ್ವಕ್ಕೆ ಆದ್ಯತೆ ಯನ್ನು ಕೊಡಿ.
ಕೆ.ಆರ್. ಪ್ರಸಾದ್, ಉಡುಪಿ
ಇಂಥವರಿಗೆ ಮಾಡಲು ಬೇರೆ ಕೆಲಸ ಇಲ್ಲವೇ?
ಜಯಕಿರಣದ ನಿಮ್ಮಿಂದ, ಬಹಿರಂಗಪತ್ರ ಮತ್ತು ಚಾವಡಿ ಅಂಕಣದಲ್ಲಿ ಕಾಟಿಪಳ್ಳ ಮಸೀ ದಿಗೆ ಸಂಬಂಧಪಟ್ಟಂತೆ ಪ್ರಕಟವಾದ ಹಲವು ಪತ್ರಗಳನ್ನು ಓದಿದ್ದೇನೆ. ನಾನು ಅರ್ಥಮಾಡಿ ಕೊಂಡಂತೆ ಪ್ರಕಟವಾದ ಪತ್ರಗಳೆಲ್ಲವೂ ಅಲ್ಲಿಯ ಮಸೀದಿ ಆಡಳಿತ ಮತ್ತು ಓರ್ವ ಮೌಲವಿಯ ವರಿಗೆ ಸಂಬಂಧಿಸಿದ್ದಾಗಿದೆ. ಆದರೆ ಇಷ್ಟೆಲ್ಲ ಆದರೂ ಅಲ್ಲಿಯ ಆಡಳಿತ ಸಮಿತಿ ಯಾವ ಪ್ರತಿಕ್ರಿಯೆಯನ್ನೂ ನೀಡದೆ ಸಹನೆ ಮುಂದು ವರಿಸಿದೆ.
ಮುಜದ್ದೀನ್ ಅವರು ಈ ಮೊದಲು ಅಲ್ಲಿಯ ಉಪನ್ಯಾಸಕರು ಪರ್ದಾ ಇಲ್ಲದೆ ನೇರವಾಗಿ ಮಹಿ ಳೆಯರನ್ನುದ್ದೇಶಿಸಿ ಭಾಷಣ ಮಾಡುತ್ತಾರೆ ಎಂದು ಬರೆದಿದ್ದರು. ಆದರೆ ಈಗ ಅದನ್ನು ಮರೆತು ಮಹಿ ಳೆಯರಿಗೆ ಮಾತ್ರ ಏಕೆ ಪುರುಷರಿಗೂ ಭಾಷಣ ಆಲಿಸುವ ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಆಡಳಿತ ಸಮಿತಿ ವಜಾ ಆಯಿತು, ವಕ್ಫ್‌ನ ಆಡ ಳಿತ ಬಂತು, ಆನಂತರ ಚುನಾವಣೆಯಾಗಿ ನೂತನ ಸಮಿತಿ ಅಸ್ತಿತ್ವಕ್ಕೆ ಬಂತು. ಆದರೆ ಮುಜದ್ದೀನ್‌ರ ವರ ಬರಹ ಮಾತ್ರ ನಿಂತಿಲ್ಲ. ಬಹುಶಃ ಚುನಾವಣೆ ಯಲ್ಲಿ ಮುಜದ್ದೀನ್‌ರವರ ಪಂಗಡ ಸೋತಿದ್ದರಿಂದ ಅವರು ಹತಾಶರಾಗಿ ಮತ್ತೆ-ಮತ್ತೆ ಬರೆಯುತ್ತಿ ರಲು ಕಾರಣವಾಗಿರಬೇಕು. ಮಸೀದಿ ಖಜಾನೆ ಯಿಂದ ಸೋರಿಕೆ ಮಾಡಿದವರು ಎಂಬ ಆರೋಪ ವಿರುವವರೇ ಮರು ಆಯ್ಕೆಯಾಗಿರುವುದರಿಂದ ಈಗ ಅವರ ವಿರೋಧಿಗಳು ಸೋರಿಕೆಯ ವಿಷಯ ವನ್ನು ಮರೆತು ಬಿಟ್ಟಿದ್ದಾರೆ. ಅಲ್ಲಿನ ಜಮಾತ್‌ನವರೇ ನಮಗೆ ಭ್ರಷ್ಟಾಚಾರ ಆರೋಪವನ್ನು ಹೊತ್ತಿರುವ ಅಧ್ಯಕ್ಷ, ಕಾರ್ಯದರ್ಶಿಯವರೇ ಬೇಕು ಎನ್ನುವಾಗ ಮುಜದ್ದೀನ್‌ರಂಥವರು ಭೂಮಿ-ಆಕಾಶ ಬಿರಿಯು ವಂತೆ ಅರ್ಭಟಿಸಿದರೂ ಪ್ರಯೋಜನವಾಗದು.
ಜಮಾತ್‌ನಲ್ಲಿರುವ ಭಿನ್ನಾಭಿಪ್ರಾಯಗಳನ್ನು ಪತ್ರಿ ಕೆಗಳಿಗೆ ಬರೆದು ಅದನ್ನು ಸಾರ್ವತ್ರಿಕ ವಿಷಯವ ನ್ನಾಗಿ ಮಾಡುವ ಬದಲು ಜಮಾತ್‌ನಲ್ಲಿಯೇ ಬಗೆಹ ರಿಸಿಕೊಳ್ಳಿ. ಪತ್ರಿಕೆಗಳಿಗೆ ಬರೆದರೆ ಅದನ್ನು ಮುಸ್ಲಿಮೇ ತರರು ಕೂಡಾ ಓದುವುದರಿಂದ ಜಮಾತ್‌ನ ಗೌರ ವಕ್ಕೆ ತೊಂದರೆಯಾಗುತ್ತದೆ. ಮುಜದ್ದೀನ್ ಅವರಿಗೆ ಅಲ್ಲಾಹನು ಇನ್ನಾದರೂ ಸಮೃದ್ಧಿಯನ್ನು ನೀಡಲಿ.
ಜಿ.ಮಯ್ಯದ್ದಿ, ಪಾಣೆಮಂಗಳೂರು
ಬಂಡಿಮಠಕ್ಕೆ ಬಸ್‌ಗಳ ಬದಲಿ ಸಂಚಾರ ಮಾರ್ಗ ಬೇಗ ಆಗಲಿ
ಕಾರ್ಕಳದ ಹಳೆ ಬಸ್ ನಿಲ್ದಾ ಣಕ್ಕೆ ಮತ್ತೆ ಸ್ಥಳಾಂತರಗೊಂಡ ನಿಲ್ದಾ ಣವು ನಿತ್ಯ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂತಸ ತಂದಿದೆ ಯಾದರೂ ಮೂರು ಮಾರ್ಗದ ಬಳಿ ಮಾತ್ರ ವಾಹನಗಳೆಲ್ಲ ಸಂಚಾ ರಕ್ಕೆ ಸಮಸ್ಯೆ ಎದುರಿಸುವಂತಾಗಿದೆ. ರಸ್ತೆ ಅವ್ಯವಸ್ಥೆಯಿಂದಾಗಿ ಅಂಬ್ಯು ಲೆನ್ಸ್ ಸಿಲುಕಿದರೆ ಗಾಯಾಳುಗಳು ರಸ್ತೆಯಲ್ಲಿಯೇ ಕೊನೆಯುಸಿರೆಳೆ ದರೂ ಆಶ್ಚರ್ಯ ಪಡಬೇಕಿಲ್ಲ. ಆಡ ಳಿತಗಾರರು ಮಲತಾಯಿ ಧೋರಣೆ ಬಿಟ್ಟು ಪುರಸಭಾ ವ್ಯಾಪ್ತಿಯ ಪೇಟೆ ಯೊಳಗೆ ವಾಹನಗಳಿಗೆ ಏಕಮುಖ ಸಂಚಾರಕ್ಕೆ ಆದೇಶ ನೀಡಬೇಕು. ಎಲ್ಲ ಕಡೆಯಿಂದ ಬರುವ ಬಸ್‌ಗಳು ಪ್ರಯಾಣಿಕರನ್ನು ಮೊದಲು ಹಳೇ ನಿಲ್ದಾಣದಲ್ಲಿ ಇಳಿಸಿ, ಹತ್ತಿಸಿ ನಂತರ ಬಂಡಿಮಠ ನಿಲ್ದಾಣದಲ್ಲಿ ತಂಗಿ ನಿಗ ದಿತ ವೇಳೆಗೆ ಹೊರಡ ಬೇಕು. ಅದೇ ರೀತಿ ಬಂಡಿಮಠ ಬಿಟ್ಟು ಮಂಗ ಳೂರು ಬೆಳ್ತಂಗಡಿಯತ್ತ ತೆರಳುವ ಬಸ್‌ಗಳು ಹಳೇ ನಿಲ್ದಾಣಕ್ಕೆ ಬಂದು ಹೋಗಲಿ.
ಶಶಿಧರ ಭಂಡಾರಿ, ರಥಬೀದಿ-ಕಾರ್ಕಳ
Tagged with
nimminda
ಇಂದು ಪ್ರಾಥಮಿಕ ಶಿಕ್ಷಣವನ್ನು ಜನಸಾಮಾನ್ಯರು ಹೊಂದಬಾರದೆಂಬ ರೀತಿಯಲ್ಲಿ ವ್ಯವಸ್ಥಿತ ಸಂಚು ನಡೆಯುತ್ತಾ ಇದೆ. ಈ ಬಗ್ಗೆ ಯಾವುದೇ ಸಂಘಟನೆಗಳು ಹಾಗೂ ಯಾವುದೇ ರಾಜಕೀಯ ಪಕ್ಷಗಳು ಮಾತೆತ್ತುವುದೇ ಇಲ್ಲ. ಮಂಗಳೂರಿನಲ್ಲಿರುವ ಯಾವುದೇ ಇಂಗ್ಲೀಷ್, ಮೀಡಿಯಂ ಶಾಲೆಗಳಲ್ಲಿ ೧೨ ಸಾವಿರಕ್ಕಿಂತ ಕಡಿಮೆ ಫೀಸು ಎಲ್ಲೂ ಇಲ್ಲ. ಹೀಗಾದರೆ ಬಡಜನರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಲು ಸಾಧ್ಯವೇ? ಇದಕ್ಕೆ ಕಡಿವಾಣ ಹಾಕುವವರು ಯಾರು?
ಉಮೇಶ್, ಮಂಗಳೂರು
ನಾವು ರಾಜಕೀಯ ಮಾತಾಡಬೇಕು. ಆದರೆ ಯಾರ ಬಗ್ಗೆಯೂ ಕಾಳಜಿ ಇಟ್ಟು ಮಾತಾಡಬಾರದು. ನಾವು ಯಾವ ರಾಜಕೀಯ ಪಕ್ಷವನ್ನೂ ಸೇರಬಾರದು. ಯಾವುದೇ ಪಕ್ಷಕ್ಕೆ ಸೇರಿದರೂ ಪಕ್ಷದ ಪ್ರಮುಖರು ಹೇಳಿದ ಹಾಗೆ ಕೇಳಬೇಕಾ ಗುತ್ತದೆ. ಅವರನ್ನು ವಿರೋಧಿಸುವಂತಿಲ್ಲ. ಅಲ್ಲದೆ ನಮ್ಮದೇ ಪಕ್ಷದವರು ಮಾಡುವ ಯಾವುದೇ ಭ್ರಷ್ಟಾಚಾರದ ಬಗ್ಗೆ ಮಾತತ್ತೆದಂತೆ ನಮಗೆ ಎಚ್ಚರಿಸುವರು. ಆದರೆ ಈಗೀಗ ಜನರು ಪಕ್ಷಕ್ಕೆ ಸೇರಿರುವಂತೆ ಹಾಗೂ ಅದು ಮಾಡುವ ಅನ್ಯಾಯ ಗಳ ಹಾಗೂ ಭ್ರಷ್ಟಾಚಾರದಲ್ಲಿ ನಮಗೂ ಪಾಲಿದೆ ಎಂಬ ರೀತಿಯಲ್ಲಿ ಸಮರ್ಥಿಸುವುದನ್ನು ನೋಡಬಹುದು. ನಮ್ಮಂ ತಹ ಸಾಮಾನ್ಯ ಜನರಿಗೆ ಯಾವುದೇ ಪಕ್ಷದ ಪರ ವಾದಿಸು ವುದು ಸಮಂಜಸವಲ್ಲ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ-ತಮ್ಮ ಪಕ್ಷಕ್ಕೆ ಜನರನ್ನು ಸೇರಿಸಿ ಮುಂದೆ ಅವರ ಭ್ರಷ್ಟಾಚಾರ ಹಾಗೂ ಅನ್ಯಾಯಗಳ ಸಮಂಜಸವಾದ ಉತ್ತರಗಳನ್ನು ಆಪಾ ದಿಸುವವರಿಗೆ ಹೇಳುವಂತೆ ತಾಕೀತು ಮಾಡುತ್ತಾರೆ. ದಯ ಮಾಡಿ ಯಾರೂ ಪಕ್ಷಕ್ಕೂ ಸೇರದೆ ಸ್ವತಂತ್ರವಾಗಿ ತಪ್ಪು ಇಲ್ಲವೇ ಸರಿ ಯಾವುದೆಂದು ಅರಿತು ತಪ್ಪನ್ನು ತಪ್ಪೆಂದೂ, ಸರಿಯಾ ದುದನ್ನು ಸರಿ ಎಂದು ಹೇಳುವುದೇ ಸೂಕ್ತ. ಯಾವ ಪಕ್ಷದ ವರೂ ಈಗಿರುವ ವಿದ್ಯೆ, ವ್ಯಾಪಾರೀಕರಣ ಹಾಗೂ ಖಾಸಗಿ ಆಸ್ಪತ್ರೆಯಲ್ಲಾಗುವ ಅನಾಚಾರ ಹಾಗೂ ಬಡಜನರ ಕೊಳ್ಳೆ ಹೊಡೆಯುವುದರ ವಿರುದ್ಧ ಮಾತೆತ್ತುವುದಿಲ್ಲ. ಎಲ್ಲರೂ ರಾಜ ಕೀಯ ನಾಯಕರ ಸಮಸ್ಯೆಯ ಬಗ್ಗೆಯೇ ಮಾತಾಡುವಂತೆ ಪ್ರೇರೇಪಿಸುತ್ತಾರೆ. ಜನಸಾಮಾನ್ಯರು ಕೂಡ ತಮ್ಮನ್ನು ತಾವು ಮರೆತು ಅವರೊಂದಿಗೆ ಧ್ವನಿಗೂಡಿಸುತ್ತಾರೆ. ತಮ್ಮ ಮೂಲ ಭೂತ ಸೌಕರ್ಯಗಳ ಬಗ್ಗೆ ಧ್ವನಿ ಎತ್ತುವುದನ್ನೇ ಮರೆತು ಯಾವುದಕ್ಕೂ ಬೊಬ್ಬೆ ಹೊಡೆಯುವಂತೆ ದಾರಿ ತಪ್ಪಿಸುತ್ತಿದ್ದಾರೆ ನಮ್ಮ ರಾಜಕೀಯ ನಾಯಕರು. ನಮಗೆ ಬೇಕಾಗಿರುವುದು ವಿದ್ಯೆ, ಆರೋಗ್ಯ, ಉದ್ಯೋಗ ಹಾಗೂ ಉಳಿದುಕೊಳ್ಳಲೊಂದು ಮನೆಯ ಬಗ್ಗೆ ಯಾರೊಬ್ಬರು ಕೂಡ ಧ್ವನಿ ಎತ್ತುವುದಿಲ್ಲ. ಇದರ ಬಗ್ಗೆ ಅನ್ಯಾಯಕ್ಕೆ ಒಳಗಾದವರು ಕೂಡ ಧ್ವನಿ ಎತ್ತುವು ದಿಲ್ಲ. ಧ್ವನಿ ಎತ್ತಿದರೂ ಯಾರೂ ಅದಕ್ಕೆ ಗಮನ ಕೊಡುವವರಿಲ್ಲ.
ವಿದ್ಯೆ ಖಾಸಗೀಕರಣದಿಂದ ತೀರಾ ಆರ್ಥಿಕವಾಗಿ ಹಿಂದು ಳಿದ ಜಾತಿಯವರನ್ನು ಉಚ್ಛ ಶಿಕ್ಷಣದಿಂದ ದೂರವಿಡುವ ಸಂಚು ನಡೆಯುತ್ತಾ ಇದೆ. ಇದರ ಬಗ್ಗೆ ಯಾರೂ ಗಮನಿಸಿದಂತೆ ಕಾಣುವುದಿಲ್ಲ. ಇಂದು ಪ್ರಾಥಮಿಕ ಶಿಕ್ಷಣವನ್ನು ಜನಸಾಮಾ ನ್ಯರು ಹೊಂದಬಾರದೆಂಬ ರೀತಿಯಲ್ಲಿ ವ್ಯವಸ್ಥಿತವಾಗಿ ಸಂಚು ನಡೆಯುತ್ತಾ ಇದೆ. ಈ ಬಗ್ಗೆ ಯಾವುದೇ ಸಂಘಟನೆಗಳು ಹಾಗೂ ಯಾವುದೇ ರಾಜಕೀಯ ಪಕ್ಷಗಳು ಮಾತೆತ್ತುವುದೇ ಇಲ್ಲ. ಮಂಗಳೂರಿನಲ್ಲಿರುವ ಯಾವುದೇ ಇಂಗ್ಲೀಷ್ ಮೀಡಿ ಯಂ ಶಾಲೆಗಳಲ್ಲಿ ೧೨ ಸಾವಿರಕ್ಕಿಂತ ಕಡಿಮೆ ಫೀಸು ಎಲ್ಲೂ ಇಲ್ಲ. ಹೀಗಾದರೆ ಬಡಜನರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಲಸಾಧ್ಯ. ಇದಕ್ಕೆ ಕಡಿವಾಣ ಹಾಕುವವರು ಯಾರು? ಹೀಗಾದಲ್ಲಿ ಎಲ್ಲರೂ ವಿದ್ಯೆಯಿಂದ ವಂಚಿತರಾಗಬೇಕಾಗಬ ಹುದು. ಅದೂ ಅಲ್ಲದೆ ಒಂದೊಂದು ತರಗತಿಯಲ್ಲಿ ೬೫ಕ್ಕಿಂ ತಲೂ ಜಾಸ್ತಿ ಮಕ್ಕಳು ಇದ್ದಾರೆ, ಇದರ ಬಗ್ಗೆ ಕೇಳುವವರೇ ಇಲ್ಲದಂತಾಗಿದೆ. ಇದರ ಬಗ್ಗೆ ಈಗಲೇ ಎಚ್ಚೆತ್ತರೆ ಒಳ್ಳೆಯದು.
ಇನ್ನು ಆರೋಗ್ಯದ ಬಗ್ಗೆ ಮಾತಾಡುವುದಾದರೆ, ಪಾಪ ದವರು ಅಂದರೆ ಆರ್ಥಿಕವಾಗಿ ಹಿಂದುಳಿದವರು ಇನ್ನು ಮುಂದೆ ಯಾವುದೇ ವಿಧದ ಚಿಕಿತ್ಸೆ ಪಡೆಯಲಸಾದ್ಯ. ಇದು ಎಲ್ಲರಿಗೂ ತಿಳಿದ ವಿಷಯ. ಇದರ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಸರ ಕಾರಿ ಆಸ್ಪತ್ರೆಗಳ ಖಾಸಗೀಕರಣ ಕೆಲಸ ಭಾರೀ ಬಿರುಸಿನಿಂದ ನಡೆಯುತ್ತಾ ಇದೆ.
ಉದ್ಯೋಗದ ಬಗ್ಗೆ ಮಾತಾಡುವುದಾದರೆ ಎಲ್ಲರಿಗೂ ಈಗಿನ ವಿದ್ಯಮಾನಕ್ಕೆ ಹೊಂದಿಕೊಂಡು ಹೋಗಬಲ್ಲ, ಜೀವನ ನಡೆಸಲು ಸಾಧ್ಯವಿರುವ ಸಂಬಳದ ಉದ್ಯೋಗ ಸಿಗುವಂತಾ ದರೆ ಎಷ್ಟೊಂದು ಒಳ್ಳೆಯದು. ಇಂದು ಬಡಜನರು ನಗರ ದಲ್ಲಿ ವಾಸಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಸರಿಯಾದ ಕ್ರಮವನ್ನು ಸರಕಾರ ತೆಗೆದುಕೊಂಡಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದಂತಾಗುತ್ತದೆ. ಭೂಮಿಯನ್ನು ರಾಷ್ಟ್ರೀ ಕರಣ ಮಾಡಿದಲ್ಲಿ ಎಲ್ಲರಿಗೂ ಭೂಮಿ ಸಿಗುವಂತಾಗಬಹುದು. ಜನಸಾಮಾನ್ಯರಿಗೆ ಕೈಗೆಟಕುವ ರೀತಿಯಲ್ಲಿ ವಿದ್ಯೆ, ಆರೋಗ್ಯ, ಉದ್ಯೋಗ ಹಾಗೂ ಭೂಮಿ ಸಿಗುವಂತಾದರೆ ಎಷ್ಟೊಂದು ಚೆಂದ? ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗೋಣ.
Tagged with
bahiranga
ಮೊದಲು ಮದುವೆಯಾಗದೆ ಇದ್ದ ಗಂಡು ಅನ್ಯಾನ್ಯ ಕಾರಣಗಳಿಂದ ಬುಡುದಾರೆಗೆ ಒಪ್ಪಿಗೆ ನೀಡಿದರೆ, ಅಂತಹ ಹುಡುಗಲನಿಗೆ ಮದುಮಗನ ಅಲಂಕಾರ ಮಾಡಿ ಗೊನೆ ಹಾಕಿದ ಬಾಳೆಯ ಗಿಡದ ಬಳಿಗೆ ಕರೆದೊಯ್ದು ಧಾರೆ ಎರೆದು ಮದುವೆ ಕ್ರಮ ಮಾಡುತ್ತಿದ್ದರು. ಬಾಳೆಯ ಗಿಡವನ್ನು ನವವಧುವೆಂದು ಪರಿಗಣಿಸಿ ಧಾರೆ ನಡೆಸಿದ ಬಳಿಕ ಬುಡುದಾರೆ ಜರಗಿಸುತ್ತಿದ್ದರು. ತುಳುವ ಸಮುದಾಯದಲ್ಲಿ ನಡೆಯುವ ಈ ಅರ್ಥಪೂರ್ಣ ಆಚರಣೆಗೆ ಉದಾಹರಣೆಯಾಗಿ ಮಹಾಭಾರತದಲ್ಲಿ ನಡೆದ ಘಟನೆಯೊಂದರ ಉಲ್ಲೇಖ ಬರುತ್ತದೆ. ಗಾಂಧಾರ ದೇಶದ ರಾಜಕುಮಾರಿ ಗಾಂಧಾರಿಗೆ ವೈಧವ್ಯ ಯೋಗವಿದೆ ಎನ್ನುವುದನ್ನು ತಿಳಿದ ಅವಳ ಹೆತ್ತವರು ಅವಳನ್ನು ಆಡೊಂದಕ್ಕೆ ವಿಧವತ್ತಾಗಿ ಧಾರೆ ಎರೆದುಕೊಡುವರು. ಆ ಬಳಿಕವೇ ದೃತರಾಷ್ಟ್ರನ ಜೊತೆ ವಿವಾಹ ನಡೆಯುವುದು.
ಎಲ್ಲ ಸಂದರ್ಭಗಳಲ್ಲೂ ಗಂಡು ವಿಧುರನಾಗಲಿ, ವಿವಾಹ ವಿಚ್ಛೇದನ ಮಾಡಿಕೊಂಡಿರಲಿ. ಅವನ ಮರುಮದುವೆಯ ಪ್ರಾಯ ಸಮಾಜ ಒಪ್ಪುವಂತೆ ಇದ್ದರೆ ಆತನಿಗೆ ‘ಕೈದಾರೆ’ಯೇ ನಡೆಯುತ್ತಿತ್ತು. ಹೆಣ್ಣು ಮಗಳು ಮಾತ್ರ ಇದರಿಂದ ವಂಚಿತೆಯಾಗುತ್ತಿದ್ದಳು. ತುಳುನೆಲದಲ್ಲಿ ಪುರುಷ ಪ್ರಧಾನ ಪದ್ಧತಿ ಕ್ರಮೇಣ ಬಲಗೊಂಡುದರಿಂದಲೇ ಸಮಾಜದಲ್ಲಿ ಎಲ್ಲವನ್ನೂ ನಿಯಂತ್ರಿಸುವ ಹಕ್ಕನ್ನು ಪಡೆದ ಗಂಡು ತನ್ನ ಸ್ವಂತ ಸುಖಕ್ಕಾಗಿ ಮದುವೆಯ ಸಿದ್ಧಾಂತವನ್ನು ಕೂಡಾ ಬದಲಿಸಿಕೊಂಡಿರುವ ಸಾಧ್ಯತೆ ಇದೆ.
ಗಂಡು ಯಾ ಹೆಣ್ಣಿಗೆ ವಿಧಿವತ್ತಾಗಿ ಹಗಲಲ್ಲಿ ನಡೆಯುವ ಮದುವೆ ‘ಕೈದಾರೆ’ಯಾದರೆ. ಕೆಲವು ನಿರ್ದಿಷ್ಟ ಕಾರಣಗಳಿಂದಾಗಿ ರಾತ್ರಿ ಕಾಲದಲ್ಲಿ ಜರಗುವ ಗೌಪ್ಯ ವಿವಾಹವೇ ‘ಬುಡುದಾರೆ’.
ತುಳುನಾಡು ಅನೇಕ ಭವ್ಯ ಪರಂಪರೆಗಳ ತವರೂರು. ಇದರಲ್ಲಿ ‘ಬುಡುದಾರೆ’ಯಂತಹ ಪ್ರಗತಿಪರ ಸಂಪ್ರದಾಯ ಕೂಡಾ ಒಂದಾ ಗಿದೆ. ಗಂಡಾಗಲಿ, ಹೆಣ್ಣಾಗಲಿ ಪ್ರಾಯಪ್ರಬುದ್ಧರಾದಾಗ ಮದುವೆ ಯೆಂಬ ಧಾರ್ಮಿಕ ಒಪ್ಪಂದದೊಂದಿಗೆ ಸತಿಪತಿಗಳಾಗಿ, ಸಾಮಾಜಿಕ ವಾಗಿ ಗುರುತಿಸಿಕೊಂಡು ಆ ಮೂಲಕ ದೈಹಿಕ ಸುಖ ಪಡೆಯು ವುದು ನಿಸರ್ಗದತ್ತ ಪ್ರಕ್ರಿಯೆ.
ಗಂಡ ತೀರಿಕೊಂಡ ಹೆಣ್ಣು ವಿಧವೆ. ಮಡದಿಯನ್ನು ಕಳೆದು ಕೊಂಡ ಗಂಡು ವಿಧುರನಾಗುವನು. ಹೀಗಾಗಿ ಅವರು ದಾಂಪತ್ಯ ಜೀವನದಿಂದ ವಂಚಿತರಾಗುವರು. ಇಂತಹ ಸನ್ನಿವೇಶಗಳಲ್ಲಿ ಸಮಾ ಜದ ಕಟ್ಟುಪಾಡುಗಳಿಗೆ ತಲೆಬಾಗಿ, ಪ್ರತಿಕೂಲ ಪರಿಸ್ಥಿತಿಗೆ ಹೊಂದಿ ಕೊಂಡು ಜೀವನ ನಡೆಸುವುದು ಬಹಳ ಜನರಿಗೆ ಕಷ್ಟಸಾಧ್ಯವಾಗು ವುದು. ಅದರಲ್ಲೂ ಯೌವ್ವನದಲ್ಲಿ ಜೀವನ ಸಂಗಾತಿಯ ಅಗಲುವಿಕೆ ಯಿಂದ ಒದಗಿದ ಕೊರತೆಯನ್ನು ತುಂಬಲು ಸಂಯಮವೆನ್ನುವ ಆದರ್ಶಕ್ಕೆ ಬಲಿಬಿದ್ದು ಬಾಳನ್ನು ಸಾಗಿಸುವುದು ವೈಜ್ಞಾನಿಕವಾಗಿಯೂ ಸಮಂಜಸವಲ್ಲ ಎನ್ನುವುದು ಸಮಾಜ ಶಾಸ್ತ್ರಜ್ಞರ ಅಭಿಪ್ರಾಯ ಕೂಡ.
ಇಂತಹ ಸಂದಿಗ್ಧದಲ್ಲಿ ಪ್ರಗತಿಪರರ ವೈಚಾರಿಕ ಸಂಕೇತವಾಗಿ ಬುಡುದಾರೆಯೆನ್ನುವ ಕ್ರಮ ತುಳುನೆಲದಲ್ಲಿ ಆಧುನಿಕ ನಾಗರಿಕತೆ ಕಾಲಿಡುವ ಮೊದಲೇ ಚಾಲ್ತಿಯಲ್ಲಿತ್ತು ಎಂದು ನೆನೆದಾಗ, ತುಳು ಸಂಸ್ಕೃತಿಯ ಬಗೆಗೆ ನಮಗೆ ಹೆಮ್ಮೆ ಎನಿಸುವುದು. ತುಳು ನೆಲದ ವೈಚಾರಿಕ ಚಿಂತನೆಗೆ ತಲೆಬಾಗಬೇಕಾಗುತ್ತದೆ.
ಸತಿಸಹಗಮನದ ಪದ್ಧತಿ ಬೇರೆಡೆಯಿಂದ ತುಳುನಾಡಿಗೆ ನಂತ ರದ ದಿನಗಳಲ್ಲಿ ಬಂದಿರುವುದು ತಿಳಿದುಬರುತ್ತದೆ. ಮೇಲಾಗಿ ತುಳು ನಾಡಿನ ಜನ ಬದುಕಿಗೆ ಬೆನ್ನು ತಿರುಗಿಸುವ ಪಲಾಯನವಾದಕ್ಕೆ ಹೊಂದಿ ಕೊಂಡವರೂ ಅಲ್ಲ. ಏನಿದ್ದರೂ ಜೀವನವನ್ನು ತಮ್ಮದೇ ಆದ ಸಾಮಾ ಜಿಕ ಕಟ್ಟುಪಾಡುಗಳನ್ನು ರೂಪಿಸಿಕೊಂಡು ಅದಕ್ಕೆ ಬದ್ಧರಾದವರು.
ಆಣಗ್ ಬುಡುದಾರೆ (ಗಂಡಿಗೆ ಮರುಮದುವೆ)
೧) ಗಂಡು ಮೊದಲೊಂದ ಮದುವೆಯಾಗಿ ಆ ದಾಂಪತ್ಯದಲ್ಲಿ ಮಕ್ಕಳನ್ನು ಪಡೆದ ಬಳಿಕ ಇಳಿವಯಸ್ಸಿಯಲ್ಲಿ ವಿಧುರನಾದರೆ ಅವ ನಿಗೆ ಸಾಮಾನ್ಯವಾಗಿ ಮರುಮದುವೆಗೆ ಕನ್ಯೆ ಸಿಗುವುದು ಕಷ್ಟವಾಗು ವುದು.
೨) ಕೂಡು ಕುಟುಂಬ ಪದ್ಧತಿಯಲ್ಲಿ ಮನೆಯ ಯಜಮಾನ ನಿಗೆ ಮನೆತನದ ಕಾರ್ಯಕಲಾಪಗಳ ಮೇಲೆ ಪೂರ್ಣ ಹತೋಟಿ ಇರುತ್ತಿತ್ತು. ಹೀಗಾಗಿ ಕ್ಷುಲ್ಲಕ ಕಾರಣಕ್ಕೂ ಮನೆಯ ಗಂಡು ಮಕ್ಕ ಳಿಗೆ ‘ಹೆಂಡತಿಯನ್ನು ಬಿಡಿಸುವುದು’ (ವಿಚ್ಚೇದನ) ನಡೆಯುತ್ತಿತ್ತು. ಇಂತಹ ಸಂದರ್ಭದಲ್ಲಿ ಪುನಃ ಧಾರೆ ಮದುವೆಗೆ ಹೆಣ್ಣು ಸಿಗದಿದ್ದರೆ ಬುಡುದಾರೆ ಮಾಡುತ್ತಿದ್ದರು.
ಪೊಣ್ಣಗ್ ಬುಡುದಾರೆ (ಹೆಣ್ಣಿಗೆ ಮರುಮದುವೆ)
೧) ಮೊದಲ ದಿನಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿ ಜರಗು ತ್ತಿದ್ದವು. ಹೆಣ್ಣು ಮದುವೆಯಾದ ಬಳಿಕ ‘ಮೈನರೆಯುವ’ ತನಕ ತವರಿ ನಲ್ಲಿ ಉಳಿಯುತ್ತಿದ್ದಳು. ಅವಳು ‘ದೊಡ್ಡವಳಾಗಿ’ ಪತಿಗ್ರಹ ಸೇರುವ ಮೊದಲೇ ಗಂಡ ತೀರಿಕೊಳ್ಳುವ ಘಟನೆಗಳು ಅನೇಕವಿದೆ. ಇಂತಹ ಹೆಣ್ಣಿಗೆ ಅದೇ ರೀತಿ ತೊಂದರೆಗೊಳಗಾದ ವಿಧುರ ಯಾ ಪರಪುರುಷ ನೊಡನೆ ಸಲಿಗೆ ಬೆಳೆದು ಅವರು ಪರಸ್ಪರ ಮದುವೆಯಾಗಲು ಒಪ್ಪಿದರೆ.
೨) ಹೆಣ್ಣೊಬ್ಬಳು ವಿವಾಹವಾಗಿ ಮಕ್ಕಳನ್ನು ಪಡೆದು ಅಥವಾ ಪಡೆ ಯದೆ ಮಧ್ಯಪ್ರಾಯದಲ್ಲಿ ಪತಿಯನ್ನು ಕಳೆದುಕೊಂಡರೆ;
೩) ಪತಿ ಜೀವಂತವಿದ್ದು ಅವರಿಂದ ಹೆಣ್ಣು ಪರಿತ್ಯಜಿಸಲ್ಪಟ್ಟರೆ - ಬುಡುದಾರೆ ನಡೆಸುತ್ತಿದ್ದರು.
ಟಿಪ್ಪಣಿ :
ಮೇಲೆ ತಿಳಿಸಿದ ಕಾರಣಗಳಿಗೆ ವ್ಯತಿರಿಕ್ತವಾಗಿ ಅವಿವಾಹಿತ ಗಂಡು ಅಥವಾ ಹೆಣ್ಣು
೧) ಮದುವೆಗೆ ಮೊದಲೇ ಪರಸ್ಪರ ಸಲಿಗೆ ಬೆಳೆದು, ದೈಹಿಕ ಸಂಬಂಧ ದಲ್ಲಿ ಮುಂದುವರಿದು ಹೆಣ್ಣು ಗರ್ಭ ಧರಿಸಿದರೆ,
೨) ಅವಿವಾಹಿತ ಗಂಡು, ಗಂಡ ಬಿಟ್ಟ ಅಥವಾ ವಿಧವೆ ಹೆಣ್ಣೊಬ್ಬಳ ಜೊತೆ ಸಲಿಗೆ ಇದ್ದು ಮದುವೆಗೆ ಒಪ್ಪಿಕೊಂಡಲ್ಲಿ ಕೂಡಾ ಬುಡುದಾರೆ ನಡೆಯುತ್ತಿತ್ತು.
ಮೊದಲು ಮದುವೆಯಾಗದೆ ಇದ್ದ ಗಂಡು ಅನ್ಯಾನ್ಯ ಕಾರಣಗಳಿಂದ ಬುಡುದಾರೆಗೆ ಒಪ್ಪಿಗೆ ನೀಡಿದರೆ, ಅಂತಹ ಹುಡುಗಲನಿಗೆ ಮದುಮಗನ ಅಲಂ ಕಾರ ಮಾಡಿ ಗೊನೆ ಹಾಕಿದ ಬಾಳೆಯ ಗಿಡದ ಬಳಿಗೆ ಕರೆದೊಯ್ದು ಧಾರೆ ಎರೆದು ಮದುವೆ ಕ್ರಮ ಮಾಡುತ್ತಿದ್ದರು. ಬಾಳೆಯ ಗಿಡವನ್ನು ನವವಧು ವೆಂದು ಪರಿಗಣಿಸಿ ಧಾರೆ ನಡೆಸಿದ ಬಳಿಕ ಬುಡುದಾರೆ ಜರಗಿಸುತ್ತಿದ್ದರು. ತುಳುವ ಸಮುದಾಯದಲ್ಲಿ ನಡೆಯುವ ಈ ಅರ್ಥಪೂರ್ಣ ಆಚರಣೆಗೆ ಉದಾ ಹರಣೆಯಾಗಿ ಮಹಾಭಾರತದಲ್ಲಿ ನಡೆದ ಘಟನೆಯೊಂದರ ಉಲ್ಲೇಖ ಬರು ತ್ತದೆ. ಗಾಂಧಾರ ದೇಶದ ರಾಜಕುಮಾರಿ ಗಾಂಧಾರಿಗೆ ವೈಧವ್ಯ ಯೋಗವಿದೆ ಎನ್ನುವುದನ್ನು ತಿಳಿದ ಅವಳ ಹೆತ್ತವರು ಅವಳನ್ನು ಆಡೊಂದಕ್ಕೆ ವಿಧವತ್ತಾಗಿ ಧಾರೆ ಎರೆದುಕೊಡುವರು. ಆ ಬಳಿಕವೇ ದೃತರಾಷ್ಟ್ರನ ಜೊತೆ ವಿವಾಹ ನಡೆ ಯುವುದು. ಎಲ್ಲ ಸಂದರ್ಭಗಳಲ್ಲೂ ಗಂಡು ವಿಧುರನಾಗಲಿ, ವಿವಾಹ ವಿಚ್ಛೇ ದನ ಮಾಡಿಕೊಂಡಿರಲಿ. ಅವನ ಮರುಮದುವೆಯ ಪ್ರಾಯ ಸಮಾಜ ಒಪ್ಪು ವಂತೆ ಇದ್ದರೆ ಆತನಿಗೆ ‘ಕೈದಾರೆ’ಯೇ ನಡೆಯುತ್ತಿತ್ತು. ಹೆಣ್ಣು ಮಗಳು ಮಾತ್ರ ಇದರಿಂದ ವಂಚಿತೆಯಾಗುತ್ತಿದ್ದಳು. ತುಳುನೆಲದಲ್ಲಿ ಪುರುಷ ಪ್ರಧಾನ ಪದ್ಧತಿ ಕ್ರಮೇಣ ಬಲಗೊಂಡುದರಿಂದಲೇ ಸಮಾಜದಲ್ಲಿ ಎಲ್ಲವನ್ನೂ ನಿಯಂತ್ರಿಸುವ ಹಕ್ಕನ್ನು ಪಡೆದ ಗಂಡು ತನ್ನ ಸ್ವಂತ ಸುಖಕ್ಕಾಗಿ ಮದುವೆಯ ಸಿದ್ಧಾಂತವನ್ನು ಕೂಡಾ ಬದಲಿಸಿಕೊಂಡಿರುವ ಸಾಧ್ಯತೆ ಇದೆ.
ಅದೇ ರೀತಿ ಗಂಡನಿಂದ ಪರಿತ್ಯಜಿತಳಾದ ಹೆಣ್ಣು ತನ್ನ ಗಂಡ ಮರು ಮದುವೆಯಗುವ ತನಕ ತಾನು ಬುಡುದಾರೆ ಮಾಡಿಕೊಳ್ಳದೆ ಕಾಯುತ್ತಿದ್ದ ಒಂದು ಸಂಪ್ರದಾಯ ಹೆಣ್ಣಿನ ನೈತಿಕ ಮತ್ತು ನೈಷ್ಠಿಕ ಆಚರಣೆಗೆ ಸಾಕ್ಷಿ ಹೇಳು ತ್ತದೆ.
Tagged with
babuamin,
lekhana
ಇದೀಗ ಜನ್ಮಶತಮಾನೋತ್ಸವ ನಡೆದಾಗಿದೆ. ಇದೀಗ ಅತ್ತಾವರ ಎಲ್ಲಪ್ಪರವರ ಹೆಸರು ಅಜರಾಮರವಾಗಿ ಉಳಿಯುವಂತೆ ಮಾಡಲು, ಅವರ ತತ್ವ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೂ ನೆನಪಿಸುವಂತಹ ಕಾರ್ಯ ನಿಮ್ಮಿಂದಾಗಬೇಕಾಗಿದೆ. ಸಂಘಟಕರು ಸರಕಾರಗಳಿಗೆ ಕೆಲವೊಂದು ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಬಗ್ಗೆ ಸರಕಾರವನ್ನು ಎಚ್ಚರಿಸುವ/ನೆನಪಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ.
ಕರುಣಾಕರ, ಮಾರಿಪಳ್ಳ
ಮೇ ೧೭ ರ ಚಾವಡಿ ವಿಭಾಗದಲ್ಲಿ ನವೀನ್ ಕುಮಾರ್ ಅತ್ತಾವರ ಇವರು ‘ಅತ್ತಾವರ ಎಲ್ಲಪ್ಪ ಗಾಣಿಗ ಎನ್ನಲು ನಾಚಿಕೆಯೇ?’ ಎಂಬ ಪತ್ರಕ್ಕೆ ನನ್ನ ಅನಿಸಿಕೆ.
ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್‌ರ ನಿಕಟ ವರ್ತಿ, ಮಹಾನ್ ಚೇತನ, ‘ಅತ್ತಾವರ ಎಲ್ಲಪ್ಪ’ ಇವರ ಜನ್ಮ ಶತಮಾನೋತ್ಸವ ಇತ್ತೀಚೆಗೆ ಬಲು ವಿಜೃಂಭಣೆಯಿಂದ ನಡೆದದ್ದು ತಮಗೆಲ್ಲರಿಗೂ ತಿಳಿದ ವಿಚಾರ. ವಿವಿಧ ಕಾರ್ಯಕ್ರಮಗಳ ಮೂಲಕ ಅದರಲ್ಲೂ ಆರೋಗ್ಯ ತಪಾಸಣಾ ಶಿಬಿರದಂ ತಹ ಉತ್ತಮ ಸೇವೆಗಳ ಮೂಲಕ ಅವರನ್ನು ನೆನಪಿಸುವ ಕಾರ್ಯಕ್ರಮ ಜರಗಿತ್ತು.
ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ ‘ಅತ್ತಾವರ ಎಲ್ಲಪ್ಪ’ನವರು ಯಾವ ಜಾತಿ/ಪಂಗಡದವರು ಎಂದು ಎಲ್ಲೂ ಹೆಸರಿಸದೇ ಇರುವುದು. ಆದ್ದ ರಿಂದ ಅವರ ಗಣ್ಯತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದಕ್ಷತೆಯನ್ನು ಮೆರೆದ ದೇಶದ ಮಹಾಯೋಧ ಪರಮ ರಾಷ್ಟ್ರಭಕ್ತ, ದಕ್ಷತೆಯ ಪ್ರತಿಮಾಮೂರ್ತಿ ಎಂದು ನಾವು ಹೇಳಬೇಕಾಗಿಲ್ಲ.
ನವೀನ್ ಕುಮಾರ್‌ರವರೇ ಗಾಣಿಗ/ಸಪಲಿಗ ಜನಾಂಗಕ್ಕೆ ಸೀಮಿತವಾದ ವ್ಯಕ್ತಿ ಅವರು ಅಲ್ಲ. ಅವರು ಈ ರಾಷ್ಟ್ರದ ಮಹಾನ್ ಚೇತನ. ಆದ್ದರಿಂದಲೇ ಸಂಘಟ ಕರು ಎಲ್ಲೂ ಗಾಣಿಗ/ಸಪಲಿಗ ಎಂದು ಹೇಳಿಲ್ಲ.
ನೀವು ಕೇವಲ ಜಾತಿ/ಧರ್ಮದ ಬಗ್ಗೆಯೇ ಚಿಂತೆ ಮಾಡುವವರು. ಇಲ್ಲಿ ಜಾತಿ/ಪಂಗಡ ಮುಖ್ಯವಲ್ಲ. ಅವರ ಸಾಧನೆ, ಅವರ ಹೋರಾಟ ಮುಖ್ಯ. ನಿಮ್ಮ ಹಾಗೆ ಸ್ವಾರ್ಥ ಇರುತ್ತಿದ್ದರೆ, ‘ಬಾರ್ ಎಟ್ ಲಾ’ ದಂತಹ ಮಹೋನ್ನತ ಪದವಿ ಯನ್ನು ಪ್ರಥಮ ರ‍್ಯಾಂಕ್‌ನೊಂದಿಗೆ ಪಡೆದರೂ ಯಾವುದೇ ಹುದ್ದೆಯನ್ನು ಪಡೆ ಯದೆ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತ ದುಡಿಯುತ್ತಿರಲಿಲ್ಲ. ಅವರು ಕೇವಲ ಜಾತಿಗೆ ಮೀಸಲಾದ ವ್ಯಕ್ತಿ ಅಲ್ಲ. ಮರೆಯಲಾರದ, ಮರೆಯಬಾರದ ಮಂಗಳೂರಿನ ಮಹಾಯೋಧ. ಸಂಘಟಕರು ಗಾಣಿಗ/ಸಪಲಿಗರಾದರು ಅಂದಿನ ಕಾರ್ಯಕ್ರಮದಲ್ಲಿ ಹಾಲ್ ತುಂಬಿತ್ತು. ಅದರಲ್ಲಿ ಗಾಣಿಗರೇ ಇದ್ದದ್ದಲ್ಲ. ದೇಶಪ್ರೇ ಮಿಯ ಬಗ್ಗೆ ತಿಳಿಯುವ ಹಂಬಲದಿಂದ ನನ್ನಂತವರೂ ಇದ್ದರು.
ನವೀನ್ ಕುಮಾರ್‌ರವರೇ, ಇದೀಗ ಜನ್ಮಶತಮಾನೋತ್ಸವ ನಡೆದಾಗಿದೆ. ಇದೀಗ ಅತ್ತಾವರ ಎಲ್ಲಪ್ಪರವರ ಹೆಸರು ಅಜರಾಮರವಾಗಿ ಉಳಿಯುವಂತೆ ಮಾಡಲು, ಅವರ ತತ್ವ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೂ ನೆನಪಿಸು ವಂತಹ ಕಾರ್ಯ ನಿಮ್ಮಿಂದಾಗಬೇಕಾಗಿದೆ. ಸಂಘಟಕರು ಸರಕಾರಗಳಿಗೆ ಕೆಲ ವೊಂದು ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಬಗ್ಗೆ ಸರಕಾರವನ್ನು ಎಚ್ಚರಿಸುವ/ನೆನ ಪಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ನೀವೇನಂತೀರಿ?
Tagged with
chavadi
ಸತ್ಯವೇನೆಂದರೆ ಪ್ರತಿವರ್ಷ ಏಪ್ರಿಲ್ ೧೨ ರಿಂದ ೨೫ ರ ಒಳಗೆ ಕರಾವಳಿಯಲ್ಲಿ ತಪ್ಪದೇ ಮಳೆ ಬಂದೇ ಬರುತ್ತದೆ. ಅದು ಇಲ್ಲಿಯ ಪ್ರಕೃತಿ ನಿಯಮ. ಈ ಕಾರಣಕ್ಕಾಗೇ ಇಲ್ಲಿನ ಬಹುತೇಕ ಐತಿಹಾಸಿಕ ದೇವಾಲಯಗಳು ವಾರ್ಷಿಕ ಜಾತ್ರೆಯನ್ನು ನಮ್ಮ ಹಿರಿಯರು ಇದೇ ಅವಧಿಯಲ್ಲಿ ಇಟ್ಟಿದ್ದಾರೆ. ಆಸ್ತಿಕ ಜನರು ಭಾವಿಸುವುದು ಜಾತ್ರೆಯ ಕಾರಣಿಕದಿಂದ ಮಳೆ ಬಂದಿದೆ ಎಂದು. ನಿಜದಲ್ಲಿ ಇದೇ ಅವಧಿಯಲ್ಲಿ ಪ್ರತಿವರ್ಷ ಮಳೆ ಬರುತ್ತದೆ ಎಂಬ ಕಾರಣಕ್ಕೆ. ಹಿಂದಿನ ಕಾಲದಲ್ಲಿ ಪ್ರಕೃತಿಯನ್ನು ನಿಖರವಾಗಿ ಅಭ್ಯಸಿ ಸಿದ ಪೂರ್ವಜರು ಜಾತ್ರೆಗಳನ್ನು ಇದೇ ಕಾಲಕ್ಕೆ ನಿಗದಿಪಡಿಸಿದರು.
ಶಿವರಾಮ ಶೆಟ್ಟಿ, ಮಣ್ಣಗುಡ್ಡ
ಕಳೆದ ತಿಂಗಳು ಮಂಗಳೂರಿನ ಗೋಪಾಲಕೃಷ್ಣ ದೇವಾಲಯದ ಕೋಟಿ ನಾಮಾರ್ಚನೆಯ ಸಮಾರೋಪ ಸಮಾರಂಭದಲ್ಲಿ ಇಲ್ಲಿಯ ಸಂಸದರು ಹೇಳಿ ದ್ದೇನೆಂದರೆ - ‘ಈ ಕೋಟಿ ನಾಮಾರ್ಚನೆ ಪೂಜೆಯಿಂದಾಗಿ ಮಳೆ ಬಂದು ಒಣಗಿದ ತುಂಬೆ ಡ್ಯಾಮ್ ತುಂಬಿಕೊಂಡು ಮಂಗಳೂರಿಗೆ ಬರಬಹುದಾದ ಕುಡಿಯುವ ನೀರಿನ ಘೋರ ಸಂಕಟ ತಪ್ಪಿತು’.
ಆದರೆ ಈ ಸಂಸದರಿಗೆ ಗೊತ್ತಿರಬೇಕಾದ ಸತ್ಯವೇನೆಂದರೆ ಪ್ರತಿವರ್ಷ ಏಪ್ರಿಲ್ ೧೨ ರಿಂದ ೨೫ ರ ಒಳಗೆ ಕರಾವಳಿಯಲ್ಲಿ ತಪ್ಪದೇ ಮಳೆ ಬಂದೇ ಬರು ತ್ತದೆ. ಅದು ಇಲ್ಲಿಯ ಪ್ರಕೃತಿ ನಿಯಮ. ಈ ಕಾರಣಕ್ಕಾಗೇ ಇಲ್ಲಿನ ಬಹುತೇಕ ಐತಿಹಾಸಿಕ ದೇವಾಲಯಗಳು ವಾರ್ಷಿಕ ಜಾತ್ರೆಯನ್ನು ನಮ್ಮ ಹಿರಿಯರು ಇದೇ ಅವಧಿಯಲ್ಲಿ ಇಟ್ಟಿದ್ದಾರೆ. ಆಸ್ತಿಕ ಜನರು ಭಾವಿಸುವುದು ಜಾತ್ರೆಯ ಕಾರಣಿಕ ದಿಂದ ಮಳೆ ಬಂದಿದೆ ಎಂದು. ನಿಜದಲ್ಲಿ ಇದೇ ಅವಧಿಯಲ್ಲಿ ಪ್ರತಿವರ್ಷ ಮಳೆ ಬರುತ್ತದೆ ಎಂಬ ಶುಭ ಕಾರಣಕ್ಕೆ. ಹಿಂದಿನ ಕಾಲದಲ್ಲಿ ಪ್ರಕೃತಿಯನ್ನು ನಿಖರ ವಾಗಿ ಅಭ್ಯಸಿಸಿದ ನಮ್ಮ ಪೂರ್ವಜರು ಜಾತ್ರೆಗಳನ್ನು ಇದೇ ಕಾಲಕ್ಕೆ ನಿಗದಿಪಡಿ ಸಿದರು. ಹಿಂದಿನ ಕಾಲದಲ್ಲಿ ಪ್ರಕೃತಿ ವೈಚಿತ್ರ್ಯ ಕಂಡಲ್ಲೆಲ್ಲಾ ನಮ್ಮ ಪೂರ್ವಜರು ಪವಿತ್ರ ಕ್ಷೇತ್ರಗಳನ್ನು ಸ್ಥಾಪಿಸಿದರು. ತದನಂತರದ ತಲೆಮಾರು ಈ ಸಂಗತಿ ಯನ್ನು ತಿರುವು ಮುರುವಾಗಿಸಿ, ಆ ಕ್ಷೇತ್ರದ ದೇವರ ಕಾರಣಿಕದಿಂದಾಗಿ ಆ ಪ್ರಕೃತಿ ವೈಚಿತ್ರ್ಯ ಉಂಟಾಯಿತು ಎಂಬಂತೆ ಸ್ಥಳಪುರಾಣ ಹೊಸೆದು ತೇಲಿಬಿಟ್ಟರು.
ನಮ್ಮ ಪೂರ್ವಜರು ಪ್ರಚಂಡ ಕಲ್ಪನಾಶಕ್ತಿ ಹೊಂದಿದ್ದರು ಎಂದು ಪೌರಾ ಣಿಕ ಕಥೆಗಳಿಂದ ಸಾಬೀತಾಗುತ್ತದೆ. ನಮ್ಮ ಪೂರ್ವಜರ ಈ ಕಾಲ್ಪನಿಕ ಸ್ಥಳ ಪುರಾಣಗಳನ್ನೇ ನಾವು ಈಗಲೂ ನಿಜವೆಂದು ನಂಬುತ್ತೇವೆ. ರಾಕ್ಷಸ ಜಾತಿ ಈ ಭೂಮಿಯ ಮೇಲೆ ಎಂದೂ ಇರದೇ ಇದ್ದರೂ, ಈ ಕಾಲ್ಪನಿಕ ರಾಕ್ಷಸ ಜಾತಿ ಯನ್ನು ಕೊಲ್ಲಲು ದೇವರು ಚಿತ್ರ - ವಿಚಿತ್ರ ಪ್ರಾಣಿ ರೂಪ ಅಥವಾ ಕೀಟ ರೂಪ ದಲ್ಲಿ ಬಂದಿದ್ದರು ಎಂದು ಮೌಢ್ಯ ನಮ್ಮದು. ಪೂಜೆ - ಯಜ್ಞಗಳ ನಂತರ ನಡೆ ಯುವ ಧಾರ್ಮಿಕ ಸಭೆಗಳಲ್ಲಿ ಹರಿಯುವ ಭಾಷಣಗಳ ಮಹಾಪೂರವೇ ಈ ಮೌಢ್ಯಗಳನ್ನು ಸಮಾಜದಲ್ಲಿ ಆಳವಾಗಿ ಬೇರೂರಿಸುವ ಸಾಧನಗಳಾಗಿವೆ.
ಇದರಿಂದಾಗಿ ಆ ಸಭೆಗಳಲ್ಲಿ ಭಾಗವಹಿಸುವ ರಾಜಕಾರಣಿಗಳಿಗೆ ಹಾಗೂ ಅನೀತಿವಂತರಿಗೆ ಅನಿಸುವುದೇನೆಂದರೆ, ತಾವು ಎಷ್ಟೇ ದೊಡ್ಡ ದುಷ್ಕೃತ್ಯ ಮಾಡಿ ದ್ದರೂ ದೇವರಿಗೊಂದು ಗಡದ್ದಾಗಿ ಪೂಜೆ ಮಾಡಿದರೆ ಎಲ್ಲಾ ಪಾಪ ಪರಿ ಹಾರವಾಗುತ್ತದೆ. ಈ ಭಂಡ ಧೈರ್ಯವೇ ಅವರಿಗೆ ಇನ್ನೂ ಹೆಚ್ಚು ಹೆಚ್ಚು ಕೆಟ್ಟ ಕೆಲಸ ಮಾಡಲು ಮನೋಬಲ ಕೊಡುತ್ತಲೇ ಹೋಗುತ್ತದೆ. ಕೆಟ್ಟ ಕೆಲಸ ಮಾಡು ವವರು ಎಷ್ಟೇ ದೊಡ್ಡ ಪೂಜೆ ಮಾಡಿದರೂ ಅದರಿಂದ ಫಲವಿಲ್ಲ ಎಂದು ಧಾರ್ಮಿಕ ಸಭೆಯಲ್ಲಿ ಯಾವುದೇ ಮಠಾಧೀಶ ಈವರೆಗೂ ಹೇಳಿಲ್ಲ.
Tagged with
chavadi
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೨೫ ವರ್ಷ ವಯಸ್ಸು. ನಾನು ಒಬ್ಬಳನ್ನು ಲವ್ ಮಾಡುತ್ತಿದ್ದೇನೆ. ಅವಳಿಗೆ ೧೮ ವರ್ಷ ವಯಸ್ಸು. ಅವಳು ಪಿಯುಸಿಯಲ್ಲಿ ಕಲಿಯುತ್ತಿದ್ದಾಳೆ. ನಾನು ಎರಡು ತಿಂಗಳ ಹಿಂದೆ ಅವಳ ಜೊತೆ ಸೆಕ್ಸ್ ಮಾಡಿದ್ದೇನೆ. ನನಗೆ ಸೆಕ್ಸ್ ಬಗ್ಗೆ ಆಸಕ್ತಿ ಹೆಚ್ಚು. ಅವಳಿಗೂ ಆಸಕ್ತಿ ಇದೆ. ನಾನು ಕಾಲೇಜಿನಲ್ಲಿದ್ದಾಗ ಮನೆ ಸಮೀಪದ ಆಂಟಿಯೊಬ್ಬರು ನನ್ನನ್ನು ಮೊದಲ ಬಾರಿ ಸೆಕ್ಸ್ ಮಾಡಿಸಿಕೊಂಡರು. ಆಗ ನನಗೆ ಈ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಆದರೂ ಅವರ ಮನೆಯಲ್ಲಿ ಅವರು ಹೇಳಿದಂತೆ ಸೆಕ್ಸ್ ಮಾಡಿ ದ್ದೇನೆ. ಆನಂತರ ನಾನು ಅವರ ಜೊತೆ ಕೆಲವು ಬಾರಿ ಸೆಕ್ಸ್ ಮಾಡಿದ್ದೇನೆ. ಆದರೆ ನಂತರ ಅವರು ಮುಂಬೈಗೆ ಹೋದರು. ನಾನು ಅವರ ಜೊತೆ ಸೇರುವಾಗ ಅವರೇ ನನಗೆ ಕಾಂಡೋಂ ಹಾಕಿಸುತ್ತಿದ್ದರು. ಹೀಗಾಗಿ ಯಾವುದೇ ಸಮಸ್ಯೆ ಇರಲಿಲ್ಲ. ನಾನು ಪ್ರೀತಿಸಿದ ಹುಡುಗಿ ಮೊದಲು ನಾನು ಹೇಳಿದ್ದಕ್ಕೆ ಒಪ್ಪಿಗೆ ಕೊಡ ಲಿಲ್ಲ. ಆದರೆ ನಂತರ ನನ್ನನ್ನು ಬೇಜಾರು ಮಾಡಬಾರದೆಂದು ಬಂದಳು. ಆದರೆ ಆಕೆ ಪ್ರಾರಂಭದಲ್ಲಿಯೇ ನನ್ನೊಂದಿಗೆ ತೀರಾ ವಿಚಿತ್ರವಾಗಿ ನಡೆದುಕೊಂಡಳು. ನಾನು ಆಕೆಯೊಂದಿಗೆ ಸೆಕ್ಸ್ ನಲ್ಲಿ ತೊಡಗುವಾಗ ನನ್ನನ್ನು ಒಮ್ಮೆಲೇ ತಿರಸ್ಕರಿಸಿದಳು. ನನಗೆ ಇದೆಲ್ಲಾ ಬೇಡ, ಈಗಲೇ ಇದೆಲ್ಲಾ ಬೇಡ ಎಂದಳು. ನನಗೆ ಆಕೆಯ ದೇಹವನ್ನು ನೋಡಿ ಕಂಟ್ರೋಲ್ ಮಾಡಿಕೊಳ್ಳಲು ಆಗಲಿಲ್ಲ. ನಾನು ಅವಳಿಗೆ ಎಷ್ಟು ಬಾರಿ ಹೇಳಿದರೂ ಆಕೆ ಕೇಳ ಲಿಲ್ಲ. ಕೊನೆಗೆ ನಾನೇ ಬಲವಂತದಿಂದ ಆಕೆಯ ಜೊತೆ ಸೆಕ್ಸ್ ಮಾಡಿದ್ದೇನೆ. ಆದರೆ ಆಕೆ ನನ್ನ ಜೊತೆ ಅಷ್ಟೊಂದು ಆಸಕ್ತಿ ತೋರಲಿಲ್ಲ. ಸೆಕ್ಸ್‌ನಲ್ಲಿ ವಿಪರೀತ ನೋವಾಗುತ್ತದೆ ಎಂದಳು. ನಾನು ಆಕೆಯೊಂದಿಗೆ ಸೇರುವಾಗ ನಿರೋಧ್ ಕೂಡಾ ಹಾಕಿಲ್ಲ. ಆಕೆಯೊಂದಿಗೆ ಸೇರುವಾಗ ನನ್ನ ಮೂಡ್ ಕೂಡಾ ಸರಿಯಿರಲಿಲ್ಲ. ಹೀಗಾಗಿ ನನಗೆ ಏನು ಮಾಡಿದರೂ ಜನನಾಂಗ ಸ್ಖಲಿಸ ಲಿಲ್ಲ. ಕೊನೆಗೆ ನಾನೇ ಸುಸ್ತಾದೆ. ಆಕೆ ಆನಂತರ ನಾನು ಎಲ್ಲಿಯೇ ಕರೆದರೂ ಬರು ತ್ತಿಲ್ಲ. ಕೇಳಿದರೆ ನಿಮ್ಮ ಮೇಲೆ ನನಗೆ ನಂಬಿಕೆ ಇಲ್ಲ ಎನ್ನುತ್ತಾಳೆ. ನೀವು ನನ್ನನ್ನು ಮೊದಲು ಮದುವೆಯಾಗಿ, ಆಮೇಲೆ ನಾನು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳು ತ್ತೇನೆ ಎನ್ನುತ್ತಾಳೆ. ಆಕೆಯ ಜಾತಿ ಬೇರೆ. ಆದರೆ ಆಕೆ ನೋಡಲು ಚೆನ್ನಾಗಿದ್ದಾಳೆ. ಆಕೆಯನ್ನು ಮರೆಯಲು ನನ್ನಿಂದ ಆಗುತ್ತಿಲ್ಲ. ನಾನು ಆಕೆಯನ್ನು ಮದುವೆಯಾದ ಮೇಲೂ ಹೀಗೇ ಆದರೆ ಏನು ಮಾಡಲಿ? ನನಗೆ ಸಲಹೆ ಕೊಡಿ.
ಸಲಹೆ: ನೀವು ಸೆಕ್ಸ್ ಬಗ್ಗೆ ಈಗಾಗಲೇ ಜ್ಞಾನ ಹೊಂದಿರುವ ವರು. ಆದರೆ ನೀವು ಪ್ರೀತಿಸುತ್ತಿರುವ ಹುಡುಗಿ ಇನ್ನೂ ಚಿಕ್ಕವಳು. ಆಕೆಯ ಮನಸ್ಸು, ಬುದ್ಧಿ ಲೈಂಗಿಕ ಕ್ರಿಯೆ, ಅದರ ಅನುಭವ ಮತ್ತಿ ತರ ವಿಚಾರಗಳ ಬಗ್ಗೆ ಯೋಚಿಸುವಷ್ಟು ಪಕ್ವವಾಗಿಲ್ಲ. ನಿಮ್ಮದು ಜಾತಿ ಬೇರೆ-ಬೇರೆಯಾದರೆ ಕಾನೂನು ಪ್ರಕಾರ ಮದುವೆಯಾ ಗಲು ತೊಂದರೆಯಿಲ್ಲ. ನೀವು ಈಗಲೇ ಆಕೆಯ ಜೊತೆ ಸೆಕ್ಸ್ ಗಾಗಿ ಹಾತೊರೆಯುತ್ತಿರುವುದು ಸರಿಯಲ್ಲ. ಆಕೆಗೆ ಬರೇ ೧೮ ವರ್ಷ. ಆಕೆ ಲೈಂಗಿಕ ವಿಚಾರದಲ್ಲಿ ಅನುಭವ ಪಡೆಯಲು ಸ್ವಲ್ಪ ಕಾಲಾವಕಾಶ ಬೇಕು. ಈ ವೇಳೆ ಮನಸ್ಸು ಲೈಂಗಿಕ ವಿಚಾರಗ ಳನ್ನು ತಿಳಿಯಲು ಮನಸ್ಸು ಮಾಡಿದರೂ, ದೇಹ ಸಿದ್ಧವಾಗಿರುವು ದಿಲ್ಲ. ಎಲ್ಲರೂ ಪ್ರಾಯಕ್ಕೆ ಬಂದಕೂಡಲೇ ಸೆಕ್ಸ್ ಬಗ್ಗೆ ತಿಳಿದಿರುವು ದಿಲ್ಲ ಎನ್ನಲಾಗದು. ಯಾಕೆಂದರೆ ಮಾಧ್ಯಮಗಳ ಪ್ರಭಾವದಿಂದ ಇಂದಿನ ಮಕ್ಕಳು ಬೇಗನೆ ಪ್ರಬುದ್ಧರಾಗುತ್ತಾರೆ. ಲೈಂಗಿಕ ಕ್ರಿಯೆ ಯಲ್ಲಿ ಮೊದಲ ಬಾರಿ ತೊಡಗಿಕೊಳ್ಳುವಾಗ ಸಾಮಾನ್ಯ ಅಥವಾ ಅತಿಯಾದ ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಭಯವೂ ಸಾಮಾನ್ಯ. ಈ ಬಗ್ಗೆ ಕಲ್ಪನೆ ಮಾಡಿಕೊಂಡು ಆಕೆಗೇ ನಾದರೂ ಸಮಸ್ಯೆ ಇರಬಹುದು ಎಂದು ತಿಳಿಯುವುದು ಮೂರ್ಖ ತನ. ಆಕೆಯನ್ನು ಪ್ರೀತಿಸುತ್ತೀರಾದರೆ ಚೆನ್ನಾಗಿ ಅರಿತುಕೊಳ್ಳಿ. ಆಕೆಗೆ ನಿಮ್ಮ ಮೇಲೆ ಸಂಪೂರ್ಣ ವಿಶ್ವಾಸ ಬರುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಆಕೆ ನಿಮ್ಮನ್ನು ನಂಬುವುದಾದರೂ ಹೇಗೆ? ನೀವು ಜೀವನದಲ್ಲಿ ಸರಿಯಾದ ನೆಲೆ ಕಂಡುಕೊಳ್ಳಿ. ಮದುವೆಯವರೆಗೆ ಸೆಕ್ಸ್ ಕಡೆಗೆ ಗಮನ ಕೊಡದಿರಿ.
Tagged with
gupta
ಮೇಷ : ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ.
ವೃಷಭ : ಕೆಲಸ ಕಾರ್ಯಗಳಲ್ಲಿ ಒತ್ತಡ ಇರುತ್ತದೆ.
ಮಿಥುನ : ಶತ್ರುಗಳಿಂದ ದೂರ ಇರಬೇಕು.
ಕರ್ಕಾಟಕ : ದೂರ ಪ್ರಯಾಣದಿಂದ ಲಾಭ ಇರುತ್ತದೆ.
ಸಿಂಹ : ಪ್ರಯಾಣದಲ್ಲಿ ಎಚ್ಚರ ವಹಿಸಿರಿ.
ಕನ್ಯಾ : ಕೆಲಸವನ್ನು ತಾಳ್ಮೆಯಿಂದ ಮಾಡಿರಿ.
ತುಲಾ : ಮನೆಯಲ್ಲಿ ಮಕ್ಕಳ ಬಗ್ಗೆ ಚಿಂತೆ ಇರುತ್ತದೆ.
ವೃಶ್ಚಿಕ : ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯಲಿದೆ.
ಧನು : ಮನಸ್ಸಿಗೆ ಸಮಾಧಾನ ಇರುವುದಿಲ್ಲ.
ಮಕರ : ಹಣಕಾಸಿನ ವಿಷಯದಲ್ಲಿ ಜಾಗ್ರತೆ ಮಾಡಿರಿ.
ಕುಂಭ : ಮಾನಸಿಕ ನೆಮ್ಮದಿ ಇರುವುದಿಲ್ಲ.
ಮೀನ : ಸಹೋದರರಿಂದ ಸಹಾಯ ಸಿಗಲಿದೆ.
Tagged with
udyoga
ಮಂಗಳೂರು : ಟೈಲರ್ & ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.
ಕಾವೂರು : ಲೇಡಿಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು : ಲೇಡಿಸ್ ಹಾಸ್ಟೆಲ್‌ಗೆ ಮಹಿಳಾ ಅಡುಗೆಯವರು ಬೇಕು ೯೨೪೧೨೧೪೧೨೨.
ಮಂಗಳೂರು : ಮನೆ ಬಾಡಿಗೆಗೆ ಇದೆ ೯೮೮೬೩೩೦೨೭೧.
ಸುರತ್ಕಲ್ : ಬಟ್ಟೆ ಅಂಗಡಿ ಕೆಲಸಕ್ಕೆ ಆಸುಪಾಸಿನ ಜನ ಬೇಕು ೮೪೯೪೮೫೮೫೪೪.
ಮಂಗಳೂರು : ಎಕೌಂಟೆಂಟ್, ಶೋರೂಂಗೆ ಜನ ಬೇಕು ೭೨೫೯೧೨೪೬೯೨.
ಬಲ್ಮಠ : ಬುಕ್‌ಸ್ಟಾಲ್‌ಗೆ ಜನ ಬೇಕು ೨೪೨೪೭೪೪.
ಮಂಗಳೂರು : ಕೆಲಸಕ್ಕೆ ಜನ ಬೇಕು ೯೮೪೫೮೦೬೪೮೦.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ಏಕೌಂಟ್ಸ್ ಗೊತ್ತಿರುವವರು ಬೇಕು ೯೮೪೫೮೭೪೦೬೮.
ಪಡುಬಿದ್ರೆ : ಗೃಹೋಪಕರಣ ಶೋರೂಂ ಗೆ ಸೇಲ್ಸ್‌ಮ್ಯಾನ್, ಲೇಡಿ ಎಕೌಂಟೆಂಟ್, ಸ್ಟೋರ್‌ಕೀಪರ್, ಡ್ರೈವರ್ ಬೇಕು ೯೮೪೫೮೮೪೫೭೪.
ಮಂಗಳೂರು : ಕಾಲ್‌ಸೆಂಟರ್‌ಗೆ ಹೌಸ್‌ಕೀಪರ್ ಬೇಕು ೯೯೧೬೧೧೯೪೬೯.
ಜಪ್ಪು: ಕಚೇರಿ ಕೆಲಸಕ್ಕೆ ಯುವತಿ ಬೇಕು ೯೮೪೪೦೦೯೯೦೫.
ಕಂಕನಾಡಿ: ಪೆಟ್ರೋಲ್‌ಪಂಪ್‌ಗೆ ಜನ ಬೇಕು ೯೯೪೫೦೯೫೧೨೩.
ಸುರತ್ಕಲ್: ನೆಸ್‌ಕೆಫೆ ಸ್ಟಾಲ್‌ಗೆ ಸೇಲ್ಸ್‌ಗೆ ಲೇಡೀಸ್ ಬೆಕು ೯೭೩೮೯೩೨೭೩೧.
ಬಲ್ಮಠ: ಅಡುಗೆ ಮಾಡಲು ಮಹಿಳೆ ಬೇಕು ೮೪೫೩೯೭೨೯೯೪.
ಮಂಗಳೂರು: ಟೈಲರ್, ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.
ಕಾವೂರು: ಲೇಡೀಸ್ ಟೈಲರ್‌ಬೇಕು ೯೪೪೯೫೫೧೨೦೦.
ಮೂಡಬಿದ್ರೆ: ಹೊಟೇಲಿಗೆ ವೇಟರ್, ಹೆಲ್ಪರ್, ದೋಸಾವಾಲಾ ಮತ್ತು ಜೂಸ್ ಮೇಕರ್ ಬೇಕು ೯೮೪೫೯೮೨೬೨೫.
ಮೂಡಬಿದ್ರೆ: ಮೊಬೈಲ್ ಅಂಗಡಿಗೆ ಯುವಕರು ಬೇಕು ೯೯೦೨೦೭೧೫೪೯.
ಮಂಗಳೂರು: ಪ್ರಸಿದ್ಧ ಡಿಜಿಟಲ್ ಶಾಪ್‌ಗೆ ಫೋಟೋಶಾಪ್, ಕೊರಲ್ ಡ್ರಾ ತಿಳಿದಿರುವ ಅನುಭವಸ್ಥ ಡಿಸೈನರ್ ಬೇಕು.. ೯೮೪೫೯೩೨೮೮೧
ಮಂಗಳೂರು : ಅಡುಗೆ ಅನಿಲ ಸಾಗಿಸುವ ಗಾಡಿಗೆ ಡ್ರೈವರ್ ಬೇಕು ೯೪೪೮೯೫೨೯೦೩.
ಮಂಗಳೂರು : ಬ್ಯಾಡ್ಜ್ ಹೊಂದಿರುವ ಅನುಭವಿ ಲಾರಿ ಡ್ರೈವರ್ ೯೯೭೨೩೭೧೭೨೩.
ಮಂಗಳೂರು : ಪಾನ್‌ಸ್ಟಾಲ್‌ಗೆ ಜನ ಬೇಕು ೯೦೬೦೯೩೨೩೫೧.
ಕೊಟ್ಟಾರ : ಕಾರಿಗೆ ಚಾಲಕ ಬೇಕು ೯೫೯೧೩೪೮೭೧೮.
ತೊಕ್ಕೊಟ್ಟು ಅಸುಪಾಸಿನವರು ಬ್ಯೂಟಿ ಪಾರ್ಲರ್‌ಗೆ ಬೇಕಾಗಿದ್ದಾರೆ. ೯೬೬೩೬೨೨೦೫೧
ಮಂಗಳೂರು : ಶೋರೂಂಗೆ ಆಫೀಸ್ ಬಾಯ್ & ಡೆಲಿವರಿ ಬಾಯ್ ಬೇಕು ೦೮೨೪೪೨೫೪೦೧೦.
Tagged with
udyoga
ಬೆಂಗಳೂರು: ೨೦೧೧-೧೨ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಕಳೆದ ೧೦ ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿ ಅತ್ಯಧಿಕ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಕಾಗೇರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಮೊದಲ ಸ್ಥಾನ - ಶೇ. ೮೫.೭೦
ಉಡುಪಿ ದ್ವಿತೀಯ ಸ್ಥಾನ - ಶೇ. ೮೫.೩೨
ಕೊಡಗು ತೃತೀಯ ಸ್ಥಾನ - ಶೇ. ೭೩.೧೧
ಯಾದಗಿರಿ ಕೊನೆಯ ಸ್ಥಾನ - ಶೇ. ೩೨.೨೧
೨ ಸರಕಾರಿ ಕಾಲೇಜು ಹಾಗೂ ೩೦ ಖಾಸಗಿ ಸೇರಿದಂತೆ ಒಟ್ಟು ೩೨ ಕಾಲೇಜುಗಳಿಗೆ ಶೇ. ೧೦೦ ಫಲಿತಾಂಶ
೨೭ ಕಾಲೇಜುಗಳಿಗೆ ಶೂನ್ಯ ಫಲಿತಾಂಶ
ಪಾಸಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ೩,೩೯,೪೨೧
೧೯,೨೬೭ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್
೧,೫೪,೨೯೬ ವಿದ್ಯಾರ್ಥಿಗಳು ಪ್ರಥಮ ದರ್ಜೆ
೮೧,೨೨೪ ವಿದ್ಯಾರ್ಥಿಗಳು ದ್ವಿತೀಯ ದರ್ಜೆ
೮೪,೬೩೪ ವಿದ್ಯಾರ್ಥಿಗಳು ತೃತೀಯ ದರ್ಜೆ ಪಡೆದುಕೊಂಡಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ
http://karresults.nic.in ವೆಬ್‌ಸೈಟ್ ನೋಡಿ
Tagged with
feature,
puc,
snews
ಮಂಗಳೂರು: ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಹುಟ್ಟೂರು ಪುತ್ತೂರು ತಾಲೂಕಿನ ಪಡುಮಲೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಾಗೂ ಕೋಟಿ ಚೆನ್ನಯರ ಸ್ಮಾರಕ ನಿರ್ಮಾಣಕ್ಕೆ ಪೂರಕವಾದ ಯೋಜನೆಯನ್ನು ಹಮ್ಮಿಕೊಳ್ಳಲಾಗು ವುದು ಎಂದು ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿ ದ್ದಾರೆ.
ಅಖಿಲ ಭಾರತ ಬಿಲ್ಲವರ ಯೂನಿಯನ್ ಪ್ರತಿನಿಧಿಗಳು ಮುಖ್ಯ ಮಂತ್ರಿಗಳನ್ನು ಬೇಟಿಯಾಗಿ ಪಡು ಮಲೆ ಕ್ಷೇತ್ರದಲ್ಲಿ ಸ್ಮಾರಕ ನಿರ್ಮಾಣ ಮತ್ತು ಸಮಗ್ರ ಅಭಿವೃದ್ಧಿಗೆ ಬೇಡಿಕೆ ಇರಿಸಿ ಮನವಿ ಸಲ್ಲಿಸಿದರು.
ಯೂನಿಯನ್‌ನ ನಿಯೋಗದಲ್ಲಿ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ, ಉಪಾಧ್ಯಕ್ಷ ಕೆ.ಲೋಕನಾಥ್, ಕೋಶಾಧಿಕಾರಿ ಬಿ.ದೇರಣ್ಣ, ಜತೆ ಕಾರ್ಯದರ್ಶಿಗಳಾದ ಚಂದ್ರಶೇಖರ್ ಸನಿಲ್, ಕೆ.ಟಿ.ಸುವರ್ಣ ಹಾಗೂ ಕೆ.ಎ.ಜಯಚಂದ್ರ ಇದ್ದರು.
Tagged with
briefs
ಮಂಗಳೂರು: ಬಂಟ್ವಾಳ ತಾಲೂಕಿನ ಮುಡಿಪು ಕುರ್ನಾಡಿನಲ್ಲಿ ಸೂರಜ್ ಇಂಟರ್‌ನ್ಯಾಷನಲ್ ಹೈಯರ್ ಪ್ರೈಮರಿ ಸ್ಕೂಲ್ ಮತ್ತು ಜ್ಞಾನದೀಪ ಹೈಸ್ಕೂಲ್ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದ್ದು, ಇದೀಗ ಇಲ್ಲಿ ೨೦೧೨-೨೦೧೩ನೇ ಸಾಲಿನ ನರ್ಸರಿ ಯಿಂದ ಹತ್ತನೇ ತರಗತಿವರೆಗಿನ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.
ಸೂರಜ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಥಾಪನೆಗೊಂಡ ಸೂರಜ್ ಇಂಟರ್ ನ್ಯಾಶನಲ್ ಹೈಯರ್ ಪ್ರೈಮರಿ ಮತ್ತು ಜ್ಞಾನದೀಪ ಹೈಸ್ಕೂಲ್ ಜಾತಿಮತ ಬೇಧವಿಲ್ಲದೆ ಶಿಕ್ಷಣ ನೀಡುತ್ತಿದೆ.
ಲೌಕಿಕ ಜ್ಞಾನದ ಅರಿವಿನೊಂದಿಗೆ ಅತ್ಯಾಧುನಿಕ ಶಿಕ್ಷಣ ಅದಕ್ಕೆ ಪೂರಕ ವಾಗಿರಬೇಕು ಎಂಬುದು ಸೂರಜ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಆಶಯವಾಗಿದೆ. ಮಂಗಳೂ ರಿನ ಸೂರಜ್ ಜ್ಯುವೆಲ್ ಪ್ಯಾಲೇಸ್‌ನ ಮಾಲಕರಾದ ಮಂಜುನಾಥ್ ಎಸ್. ರೇವಣ್‌ಕರ್ ಅಧ್ಯಕ್ಷರಾಗಿದ್ದು, ಇವರ ಸಮರ್ಥ ಮಾರ್ಗದರ್ಶನದಲ್ಲಿ ಈ ವಿದ್ಯಾಸಂಸ್ಥೆ ಮುನ್ನಡೆಯುತ್ತಿದೆ.
ಎಸ್.ಎಸ್.ಎಲ್.ಸಿ. ಸಾಧನೆ : ಈ ಸಂಸ್ಥೆಯ ಪ್ರಥಮ ಹಂತದ ವಿದ್ಯಾರ್ಥಿಗಳು ೨ ವಿಶೇಷ ಶ್ರೇಣಿಗಳಲ್ಲಿ ಹಾಗೂ ೮ ಮಂದಿ ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣರಾಗಿದ್ದು ೧೦೦% ಫಲಿತಾಂಶ ಗಳಿಸಿದೆ. ಶಮೀದ ಎ.ಆರ್. ಮತ್ತು ಶಮೀಮ ವಿಶೇಷ ಶ್ರೇಣಿಗಳಲ್ಲಿ ಉತ್ತೀರ್ಣರಾಗಿದ್ದಾರೆ.
Tagged with
briefs
ಕಿನ್ನಿಗೋಳಿ: ತಾಳಿಪಾಡಿಗುತ್ತು ಧನಪಾಲ ಶೆಟ್ಟಿಯವರ ಕಟೀಲು ಮೇಳದ ಹರಕೆ ಬಯಲಾಟ ಗುರುವಾರ ತಾಳಿಪಾಡಿ ಗುತ್ತುವಿನಲ್ಲಿ ನಡೆದಾಗ ಮೇಳದ ಅಗ್ರಗಣ್ಯ ಭಾಗವತ ಪಟ್ಲ ಸತೀಶ್ ಶೆಟ್ಟಿಯವರನ್ನು ಸನ್ಮಾನಿಸಲಾ ಯಿತು. ಕಟೀಲಿನ ಅರ್ಚಕ ಲಕ್ಷ್ಮೀನಾರಾ ಯಣ ಆಸ್ರಣ್ಣ ಸನ್ಮಾನ ನೆರವೇರಿಸಿದರು, ಭುವನಾಭಿರಾಮ ಉಡುಪ, ಚಂದ್ರಹಾಸ ಹೆಗ್ಡೆ, ಶಿಮಂತೂರಿನ ಡಾ| ನಾರಾಯಣ ಶೆಟ್ಟಿ, ಸಂತೋಷ್ ಕುಮಾರ್ ಹೆಗ್ಡೆ, ರಾಮಣ್ಣ ಶೆಟ್ಟಿ, ಮಹಾಬಲ ಶೆಟ್ಟಿ, ಸತೀಶ್ ಹೆಗ್ಡೆ ಉಪಸ್ಥಿತರಿದ್ದರು. ಧನಪಾಲ ಶೆಟ್ಟಿ ಸ್ವಾಗತಿಸಿ, ಸಂಜಯ್ ಕುಮಾರ್ ಅಭಿನಂದನ ಭಾಷಣ ಮಾಡಿದರು. ರಘುನಾಥ ಕಾಮತ್ ಸನ್ಮಾನ ಪತ್ರ ವಾಚಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Tagged with
briefs
ಮಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಬೆಂಗರೆ ಶಾಖೆಯ ೧೬ನೇ ವಾರ್ಷಿಕೋತ್ಸವ ಸಮಾರಂಭ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಎಸ್ಸೆಸ್ಸೆಫ್ ರಾಜ್ಯ ಕಾರ್ಯ ದರ್ಶಿ ಕೆ.ಎ.ಅಬ್ದುರ್ರಹ್ಮಾನ್ ರಿಝ್ವಿ ಕಲ್ಕಟ್ಟರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ದ.ಕ.ಜಿಲ್ಲಾ ಎಸ್ಸೆಸ್ಸೆಪ್ ಅಧ್ಯಕ್ಷರಾದ ವಿ.ಯು.ಇಸ್ವಾಕಂ ಝಪ್ರಿ ಉದ್ಘಾಟಿಸಿದರು. ಸೆಲೀಂ ಮದನಿ ಕುತ್ತಾರ್ ಭಾಗವಹಿಸಿದ್ದರು. ಪ್ರತಿ ರಾತ್ರಿ ಯುವ ವಾಗ್ಮಿಗಳಿಂದ ನಡೆದ ಪ್ರೌಢೋಜ್ವಲ ಮತಪ್ರಭಾಷಣ ಕಾರ್ಯ ಕ್ರಮದಲ್ಲಿ ಜಮಾಲುದ್ದೀನ್ ಮುಸ್ಲಿ ಯಾನ್ ಸಜಿಪ, ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು, ಅಶ್ರಫ್ ಸಖಾಫಿ ಕನ್ನಂಗಾರ್ ಭಾಗವಹಿಸಿ ದ್ದರು. ಜಾಫರ್ ಸಅದಿ ಉಜಿರೆ ಮತ್ತು ಬಳಗದ ವರು ನಡೆಸಿಕೊಟ್ಟ ‘ಬುರ್ದಾ ಆಲಾಪಣೆ’ ನೆರೆದ ಜನರ ಮೆಚ್ಚುಗೆಗೆ ಪಾತ್ರವಾಯಿತು.
Tagged with
briefs
ಮಂಗಳೂರು: ಉತ್ತರ ಕ್ಷೇತ್ರ ವ್ಯಾಪ್ತಿಯ ಮಹಾನಗರಪಾಲಿಕೆ ಪ್ರದೇಶದ ಜೆಡಿಎಸ್ ಕಾರ್ಯಕರ್ತರ ಸಭೆಯು ಮೇ ಆರರಂದು ಡಾ. ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಜರಗಿತು. ಮುಂಬರುವ ಚುನಾವಣೆಗಳ ಪೂರ್ವ ಸಿದ್ಧತೆಗಾಗಿ ಪಕ್ಷ ಪುನಃ ಸಂಘಟನೆ ಮತ್ತು ಸ್ಥಳೀಯ ಮಟ್ಟದ ಸಮಗ್ರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಈ ಸಭೆಯಲ್ಲಿ ಒಂದನೇ ವಾರ್ಡ್‌ನ ಅಧ್ಯಕ್ಷರಾದ ವಾಹಬ್. ಉದಯ ಸುವರ್ಣ, ಮೂರನೇ ಮತ್ತು ನಾಲ್ಕನೇ ವಾರ್ಡ್‌ಗಳ ಮಾಧವ ದೇವಾಡಿಗ, ಉಮರಬ್ಬ, ಬಿ.ಹುಸೈನ್, ಅಬೂಬಕ್ಕರ್, ಅಜ್ಮೀರ್ ಹುಸೈನ್ ಬಿ.ಎಂ. ಅಮೀರುದ್ದೀನ್ ಕೂಳೂರು ಪ್ರದೇಶದ ಕನಕದಾಸ, ಡೈನಿ ಡಿಸೋಜ, ದಯಾನಂದ. ಶೇಕರ್, ಚೇತನ್, ಕಾವೂರು-ಮರಕಡ ವ್ಯಾಪ್ತಿಯ ಉಮರಬ್ಬ ಹನೀಪ್, ಮೊಯ್ದಿನ್, ಕಾರ್ಯಕರ್ತರು ಉಪಸ್ಥಿತರಿದ್ದರು.
Tagged with
briefs
ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಕೆಕೆಆರ್
ಪುಣೆ: ಐಪಿಎಲ್ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಕೆಕೆಆರ್ ಫೈನಲ್ ಪ್ರವೇಶಿಸಿದೆ. ನಿನ್ನೆ ಪುಣೆಯಲ್ಲಿ ನಡೆದ ಮೊದಲ ಪ್ಲೇ-ಆಫ್ ಪಂದ್ಯದಲ್ಲಿ ಯೂಸುಫ್ ಪಠಾಣ್ ನಡೆಸಿದ ಸ್ಫೋಟಕ ಬ್ಯಾಟಿಂಗ್ ಹಾಗೂ ಜಾಕ್ ಕ್ಯಾಲೀಸ್‌ರ ಸವ್ಯಸಾಚಿ ಆಟದಿಂದ ಡೆಲ್ಲಿ ವಿರುದ್ಧದ ಪಂದ್ಯವನ್ನು ಗಂಭೀರ್ ಪಡೆ ೧೮ ರನ್‌ಗಳಿಂದ ಗೆದ್ದಿದೆ. ಅತ್ತ ಡೆಲ್ಲಿಗೆ ಎಲ್ಲವೂ ಮುಗಿದಿಲ್ಲ, ಇಂದು ನಡೆಯುವ ಎರಡನೇ ಪ್ಲೇ-ಆಫ್‌ನಲ್ಲಿ ಜಯಗಳಿಸುವ ತಂಡವನ್ನು ಡೆಲ್ಲಿ ಎದುರಿಸಲಿದ್ದು, ವಿಜೇತೆ ತಂಡ ಫೈನಲ್‌ಗೇರಲಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕೊಲ್ಕತ್ತಾಗೆ ಆರಂಭಿಕ ಹಂತದಲ್ಲಿ ಗಂಭೀರ್ ಹಾಗೂ ಮೆಕ್‌ಕಲಂ (೩೧) ಜೋಡಿ ೫.೫ ಓವರ್‌ಗಳಲ್ಲಿ ೪೮ ರನ್‌ಗಳನ್ನು ಒಟ್ಟುಗೂಡಿಸಿದ್ದರು. ಗಂಭೀರ್ ೧೬ ಎಸೆತದಲ್ಲಿ ೩೨ ರನ್ ಗಳಿಸಿದರು. ನಂತರ ಗಂಭೀರ್ ರನೌಟ್ ಬಲೆಗೆ ಬಿದ್ದರು. ಕ್ಯಾಲೀಸ್ (೩೦) ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸೆರೆಯಾದರು. ಆದರೆ ಅಂತಿಮ ಹಂತದಲ್ಲಿ ಯೂಸುಫ್ ಹಾಗೂ ಲಕ್ಷ್ಮೀ ಶುಕ್ಲಾ ಜೋಡಿ ಐದನೇ ವಿಕೆಟ್‌ಗೆ ನಾಲ್ಕು ಓವರ್‌ಗಳಲ್ಲಿ ಅಜೇಯ ೫೬ ರನ್‌ಗಳ ಜೊತೆಯಾಟವು ಎಲ್ಲವನ್ನೂ ಬದಲಾಯಿಸಿತು. ಪಠಾಣ್ ಕೇವಲ ೨೧ ಎಸೆತದಲ್ಲಿ ಎರಡು ಸಿಕ್ಸ್ ಹಾಗೂ ಮೂರು ಬೌಂಡರಿಗಳ ನೆರವಿನಿಂದ ೪೦ ರನ್ ಗಳಿಸಿದರೆ ಶುಕ್ಲಾ ೧೧ ಎಸೆತಗಳಲ್ಲಿ ೧೧ ಎಸೆತದಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸ್ ನೆರವಿನಿಂದ ೨೪ ರನ್ ಗಳಿಸಿದ್ದು, ತಂಡಕ್ಕೆ ಆಧಾರವಾಯಿತು. ಪರಿಣಾಮ ಕೆಕೆಆರ್ ನಿಗದಿತ ೨೦ ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೧೬೨ ರನ್ ಗಳಿಸಿತು.
ಗುರಿ ಬೆನ್ನತ್ತಿದ್ದ ಡೆಲ್ಲಿ ಯಾವ ಹಂತದಲ್ಲೂ ಎದುರಾಳಿ ತಕ್ಕ ಹೋರಾಟ ನೀಡಲಿಲ್ಲ. ಆರಂಭಿಕ ಆಘಾತ ಹಾಗೂ ಮಧ್ಯಮ ಕ್ರಮಾಂಕದಲ್ಲಿ ತಂಡ ರನ್ ಬರ ಎದುರಿಸಿದ ಪರಿಣಾಮ ಸೆಹ್ವಾಗ್ ಪಡೆ ನಿಗದಿತ ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ೧೪೪ ರನ್‌ಗಳಷ್ಟೇ ಗಳಿಸಲು ಶಕ್ತವಾಯಿತು. ಮೊದಲು ತಂಡಕ್ಕೆ ವಾರ್ನರ್ (೭) ಹಾಗೂ ಸೆಹ್ವಾಗ್ (೧೦) ಜೋಡಿ ಮೊದಲ ವಿಕೆಟ್‌ಗೆ ಕೇವಲ ಎರಡು ಓವರ್‌ಗಳಲ್ಲಿ ೨೪ ರನ್‌ಗಳನ್ನು ಜೋಡಿಸಿದ್ದರು. ನಂತರ ಎರಡು ಬೆನ್ನುಬೆನ್ನಿಗೆ ವಿಕೆಟ್ ಕಳಕೊಂಡು ಪೆವಿಲಿಯನ್‌ಗೆ ಸಾಗಿದರು. ಶಕಿಬ್ ಹಾಗೂ ಬಾಲಾಜಿ ಈ ವಿಕೆಟ್ ಪಡೆದರು. ಆದರೆ ಜಯವರ್ಧನೆ (೪೦) ಹಾಗೂ ಓಜಾ (೨೮) ಮೂರನೇ ವಿಕೆಟ್‌ಗೆ ೮.೧ ಓವರ್‌ಗಳಲ್ಲಿ ೫೮ ರನ್‌ಗಳ ಜೊತೆಯಾಟ ನಡೆಸಿದಾಗ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಮೊದಲು ಓಜಾ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಕಳಕೊಂಡೆ ಜಯವರ್ಧನೆ ಕೂಡ ಅದೇ ಹಾದಿಯನ್ನು ತುಳಿದರು. ನಂತರ ಯಾರು ಕೂಡ ಹೋರಾಟದ ಆಟ ನೀಡಲಿಲ್ಲ. ಕ್ಯಾಲೀಸ್ ಹಾಗೂ ನಾರೈನ್ ಎರಡು ವಿಕೆಟ್ ಪಡೆದರು.
Tagged with
tnews
ಇಂದು ದ್ವಿತೀಯ ಪ್ಲೇ-ಆಫ್ ಪಂದ್ಯ
ಬೆಂಗಳೂರು: ಡೆಕ್ಕನ್ ವಿರುದ್ಧ ಆರ್‌ಸಿಬಿ ಸೋಲುಂಡ ಹಿನ್ನೆಲೆಯಲ್ಲಿ ಅಚ್ಚರಿಯ ರೀತಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಚೆನ್ನೈ ಇಂದು ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಎರಡನೇ ಪ್ಲೇ-ಆಫ್ ಪಂದ್ಯದಲ್ಲಿ ಉತ್ತಮ ಉತ್ಸಾಹದಲ್ಲಿರುವ ಮುಂಬೈ ವಿರುದ್ಧ ಕಾದಾಡಲಿದೆ.
ಲೀಗ್ ಪಂದ್ಯದಲ್ಲಿ ಬ್ಯಾಟಿಂಗ್ ಕೈಕೊಟ್ಟಿದ್ದು, ಚೆನ್ನೈಗೆ ಹಿನ್ನೆಡೆ ತಂದು ಕೊಟ್ಟಿದ್ದು, ಅದನ್ನು ಸುಧಾರಿಸುವತ್ತ ತಂಡ ಈಗ ಮುಂದಡಿ ಇಟ್ಟಿದೆ. ಒಂದು ವೇಳೆ ಚೆನ್ನೈ ಫೈನಲ್‌ಗೆ ಪ್ರವೇಶಿಸಬೇ ಕಾದರೆ ಆರಂಭಿಕ ಹಂತ ಸಿಡಿದೇಳ ಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ಮುರುಳಿ ವಿಜಯ್ ಕಳಪೆ ಫಾರ್ಮ್ ತಂಡಕ್ಕೆ ಚಿಂತೆಂ iiದರೂ ಕಳೆದ ಕೆಲವೊಂದು ಪಂದ್ಯಗಳಲ್ಲಿ ಕೊಂಚ ಸಮಾಧಾನಕರ ಪ್ರದರ್ಶನ ನೀಡಿರುವುದು ಅದಕ್ಕೆ ಕೊಂಚ ನೆಮ್ಮದಿಯ ಸಂಗತಿ. ಹಸ್ಸಿ, ಧೋನಿ, ರೈನಾ, ಬ್ರಾವೋ ಹಾಗೂ ಮೊರ್ಕೆಲ್ ತಂಡದ ಪ್ರಮುಖ ಬ್ಯಾಟಿಂಗ್ ಟ್ರಂಪ್‌ಕಾರ್ಡ್‌ಗಳು. ಜಡೇಜಾ ಆಲ್‌ರೌಂಡರ್‌ಗಳ ವಿಭಾಗದಲ್ಲಿ ದ್ದಾರೆ. ಹಿಲ್ಫೆನಾಸ್, ಜಕಾತಿ ಕೂಡ ತಂಡಕ್ಕೆ ಪ್ರಮುಖ ಆಧಾರ. ಇನ್ನು ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಮುಂಬೈ ಕೂಡ ಪ್ರಥಮ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿ ಸಲು ನೋಡುತ್ತಿದೆ. ಕೊನೆಯ ಪಂದ್ಯದಲ್ಲಿ ತಂಡಕ್ಕೆ ಸಚಿನ್ ಹಾಗೂ ಸ್ಮಿತ್ ನೀಡಿದ ಆರಂಭಿಕ ಆಟ ಅದರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ. ರೋಹಿತ್, ಪೊಲಾರ್ಡ್, ರಾಯುಡು, ಕಾರ್ತಿಕ್ ಮುಂತಾದ ಬ್ಯಾಟ್ಸ್‌ಮೆನ್‌ಗಳ ಬಲ ಅದಕ್ಕಿದೆ. ಮಲಿಂಗಾ, ಪಟೇಲ್ ಸೇರಿದಂತೆ ಬಲಿಷ್ಠ ಬೌಲಿಂಗ್ ಆಕ್ರಮಣ ಕೂಡ ತಂಡಕ್ಕಿದೆ. ಒಟ್ಟಿನಲ್ಲಿ ಕದನ ಕುತೂಹಲ ಕೆರಳಿಸಿದೆ.
Tagged with
tnews
ದೆಹಲಿ: ಭಾರತೀಯ ಮೂಲದ ಅಮೆರಿಕನ್ ಮಹಿಳೆ ಜೊತೆ ಅಸಭ್ಯ ರೀತಿಯಲ್ಲಿ ವರ್ತಿಸಿದ್ದ ಆರ್‌ಸಿಬಿ ಆಟಗಾರ ಲೂಕ್ ಪೊಮರ‍್ಸ್‌ಬ್ಯಾಚ್‌ನ ವಿರುದ್ಧದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ತಕ್ಷಣದಲ್ಲೇ ಹಗರಣ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹಗರಣದ ತನಿಖೆ ಬಹುತೇಕ ಪೂರ್ಣ ಗೊಂಡಿದೆ. ಮುಂದಿನ ಏಳು-ಎಂಟು ದಿನಗಳ ಅವಧಿಯೊಳಗೆ ಜಾರ್ಜ್‌ಶೀಟನ್ನು ಕೋರ್ಟ್‌ಗೆ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೋಹಲ್ ಹಮೀದ್ ಎಂಬ ಮಹಿಳೆಯ ಮೇಲೆ ಅಸಭ್ಯ ರೀತಿಯಲ್ಲಿ ವರ್ತಿಸಿದ್ದ ಆರೋಪದ ಹಿನ್ನೆಲೆಯಿಂದ ಶುಕ್ರವಾರದಂದು ಪೊಮರ‍್ಸ್‌ಬ್ಯಾಚ್‌ನನ್ನು ಪೊಲೀಸರು ಬಂಧಿಸಿದ್ದು, ನಂತರ ಸೂಕ್ತ ಸಾಕ್ಷ್ಯಾಧಾರವಿಲ್ಲದೆ ಕಾರಣ ಶನಿವಾರ ಜಾಮೀನು ಕೂಡ ಲಭಿಸಿತ್ತು. ಆದರೆ ಸಿಸಿ ಟಿವಿ. ತುಣುಕಿನಲ್ಲಿ ತಂಡದ ಮತ್ತೋರ್ವ ಆಟಗಾರ ಕೆ.ಪಿ. ಅಪ್ಪಣ್ಣ ಕೂಡ ಹಗರಣದಲ್ಲಿ ಭಾಗಿಯಾಗಿರುವುದು ಸಾಬೀತಾಗಿದ್ದು, ಹಗರಣಕ್ಕೆ ಇನ್ನಷ್ಟು ರೋಚಕತೆ ಲಭಿಸಿತ್ತು. ಪೊಮರ‍್ಸ್‌ಬ್ಯಾಚ್‌ಗೆ ಅಪ್ಪಣ್ಣ ದಾಳಿಯ ವೇಳೆ ನೆರವು ನೀಡುತ್ತಿರುವುದು ಸಿಸಿ ಟಿವಿಯಲ್ಲಿ ಪತ್ತೆಯಾಗಿತ್ತು. ಆರೋಪಿ ಹಾಗೂ ಬಲಿಪಶು ಇಬ್ಬರೂ ಕೂಡ ವಿದೇಶಿಗರಾಗಿರುವುದ ರಿಂದ ಈ ಬಗೆಗಿನ ಕೇಸ್ ಆದಷ್ಟು ಬೇಗ ಪೂರ್ಣ ಗೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ತಂಡದ ಕೋಚ್ ರೇ ಜೆನ್ನಿಂಗ್ಸ್ ಹಾಗೂ ಪಾರ್ಟಿಯ ಆಯೋಜಕರ ಹೇಳಿಕೆಯನ್ನು ಪಡೆದುಕೊಳ್ಳಲಾ ಗುವುದು ಎಂದು ಇದೇ ವೇಳೆ ಅಧಿಕಾರಿ ತಿಳಿಸಿದ್ದಾರೆ.
Tagged with
tnews
ದೆಹಲಿ: ಯುರೋಪಿಯನ್ ಚಾಂಪಿಯನ್ ಲೀಗ್‌ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಚೆಲ್ಸಿಗೆ ಟೂರ್ನಿ ಗೆದ್ದುಕೊಟ್ಟಿದ್ದ ಐವರಿ ಕೋಸ್ಟ್ ಮೂಲದ ಆಟಗಾರ ದಿದಿರ್ ದ್ರೋಗ್ಬಾ ಮುಂದಿನ ತಿಂಗಳು ಭಾರತಕ್ಕೆ ತನ್ನ ಚೊಚ್ಚಲ ಭೇಟಿ ನೀಡಲಿದ್ದಾರೆ. ಜೂನ್ ೧೭ರಂದು ನಡೆಯುವ ಪೆಪ್ಸಿ ಟಿ-೨೦ ಫುಟ್ಬಾಲ್ ಗ್ರ್ಯಾಂಡ್ ಫಿನಾಲೆಯ ಹಿನ್ನೆಲೆಯಲ್ಲಿ ದ್ರೋಗ್ಬಾರ ಈ ಭೇಟಿ ನಡೆಯಲಿದೆ.
ವಿಶ್ವದ ಅತ್ಯದ್ಭುತ ಆಟಗಾರರಲ್ಲಿ ಒಬ್ಬರಾಗಿರುವ ದ್ರೊಗ್ಬಾ ಭಾರತಕ್ಕೆ ಆಗಮಿಸುತ್ತಿರುವುದು ಸಂತಸದ ಸಂಗತಿಯಾಗಿದ್ದು, ಅವರ ಭೇಟಿಯು ಭಾರತದಲ್ಲಿ ಫುಟ್ಬಾಲ್ ಆಟದ ಪ್ರಚಾರತೆಯನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಪೆಪ್ಸಿಕೊ ಇಂಡಿಯಾದ ಹೊಮಿ ಬಾಟಿಯಾವಾಲಾ ತಿಳಿಸಿದ್ದಾರೆ. ದ್ರೋಗ್ಬಾ ಹಾಗೂ ಚೆಲ್ಸಿ ತಂಡದ ಇತರೆ ಆಟಗಾರರಾದ ಫರ್ನಾಂಡೋ ಟೋರಸ್ ಹಾಗೂ ಫ್ರಾಂಕ್ ಲಂಪಾರ್ಡ್ ಪೆಪ್ಸಿ ಜಾಹೀರಾತಿನಲ್ಲಿದ್ದು, ಇಲ್ಲಿ ಟೀಮ್ ಇಂಡಿಯಾದ ಧೋನಿ, ಕೊಹ್ಲಿ, ಭಜ್ಜಿ ಹಾಗೂ ರೈನಾ ಕೂಡ ಇದ್ದಾರೆ.
Tagged with
tnews
ದೆಹಲಿ: ಜುಲೈನಿಂದ ಆರಂಭವಾಗಲಿರುವ ಪ್ರತಿಷ್ಠಿತ ಲಂಡನ್ ಒಲಿಂಪಿಕ್ಸ್ ಕೂಟದ ಹಾಕಿ ವಿಭಾಗದಲ್ಲಿ ಹಾಲೆಂಡ್ ವಿರುದ್ಧ ಭಾರತ ತನ್ನ ಅಭಿಯಾನ ಆರಂಭಿಸಲಿದ್ದು, ಈ ಪಂದ್ಯ ಜುಲೈ ೩೦ರಂದು ನಡೆಯಲಿದೆ. ದ್ವಿತೀಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಕಾದಾಟ ನಡೆಸಲಿದೆ. ಎಂದು ಭಾರತೀಯ ಒಲಿಂಪಿಕ್ಸ್ ಮಹಾಮಂಡಲಿ ನಿನ್ನೆ ಬಿಡುಗಡೆಗೊಳಿಸಿದ ವೇಳಾಪಟ್ಟಿಯಲ್ಲಿ ಹೇಳಲಾಗಿದೆ.
ಒಟ್ಟು ೧೨ ತಂಡಗಳು ಹಾಕಿ ಕೂಟದಲ್ಲಿ ಭಾಗವಹಿಸಲಿದ್ದು, ಇಲ್ಲಿ ಹತ್ತನೇ ರ‍್ಯಾಂಕ್‌ನಲ್ಲಿರುವ ಭಾರತ ‘ಬಿ ಗುಂಪಿನಲ್ಲಿದೆ. ನೆದರ್ಲೆಂಡ್ ಜೊತೆಗೆ ಗುಂಪಿನಲ್ಲಿ ಜರ್ಮನಿ (೨), ಕೊರಿಯಾ (೬), ನ್ಯೂಜಿಲ್ಯಾಂಡ್ (೭), ಬೆಲ್ಜಿಯಂ (೧೧) ಭಾಗವಹಿಸುವ ಇತರೆ ತಂಡಗಳಾಗಿವೆ. ‘ಎ ಗುಂಪಿನಲ್ಲಿ ಅಗ್ರಶ್ರೇಯಾಂಕದ ಆಸ್ಟ್ರೇಲಿಯಾ, ಬ್ರಿಟನ್ (೪), ಸ್ಪೇಯ್ನ್ (೫), ಪಾಕಿಸ್ತಾನ (೮), ಅರ್ಜೆಂಟೀನಾ (೯) ಹಾಗೂ ದಕ್ಷಿಣ ಆಫ್ರಿಕಾ (೧೨) ಇತರೆ ತಂಡಗಳಾಗಿವೆ.
Tagged with
tnews
ಸುಳ್ಯ: ಪಂಜ ಸಮೀಪದ ಅಡ್ಡಬೈಲು ಎಂಬಲ್ಲಿ ಮುಖ್ಯ ರಸ್ತೆಯಲ್ಲಿ ಲಾರಿ ಮತ್ತು ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ನೆಡದಿದೆ.
ಪಂಜ ಕಡೆ ಬರುತ್ತಿದ್ದ ಬೈಕ್ ಮತ್ತು ಎದುರಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆಯಿತು. ಬೈಕ್ ಸವಾರ ಮಹಮ್ಮದ್ ಹನೀಫ್ ಮತ್ತು ಹಿಂಬದಿ ಸವಾರ ನವೀನ್ ಕುಮಾರ್ ಗಾಯ ಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Tagged with
cnews
ಪಡುಬಿದ್ರಿ: ಕಾಪು ಸಮೀಪದ ಮೂಳೂರು ಎಂಬಲ್ಲಿ ಸುಜ್ಲಾನ್ ಕಂಪೆನಿ ಸ್ವಾಧೀನ ಪಡಿಸಿಕೊಂಡಿದೆ ಎಂದು ಹೇಳಲಾದ ನೂರಾರು ಎಕರೆ ಪ್ರದೇಶಕ್ಕೆ ಮಂಗಳವಾರ ಮಧ್ಯಾಹ್ನ ಬೆಳಿಗ್ಗೆ ಬೆಂಕಿಬಿದ್ದಿದೆ.
ಸುಜ್ಲಾನ್ ಕಂಪೆನಿಗಾಗಿ ಎಂದು ಸುಮಾರು ಮುನ್ನೂರು ಎಕರೆ ಪ್ರದೇಶ ಜಾಗವನ್ನು ಖಾಸಗಿಯವರು ಮೂಳೂರು ಹಾಗೂ ಉಚ್ಚಿಲದ ಪೊಲ್ಯ ಎಂಬಲ್ಲಿ ಬಯಲು ಗದ್ದೆ ಖರೀದಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಮೂಳೂರಿನ ಬಯಲು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಸಂದರ್ಭ ಬೀಸಿದ ತೀವ್ರಗಾಳಿಗೆ ಬೆಂಕಿ ಪರಿಸರದಲ್ಲೆಲ್ಲಾ ಪಸರಿಸಿದೆ. ಬೆಂಕಿಯು ಉಚ್ಚಿಲ ಪೊಲ್ಯ ಪರಿಸರದ ನಾಗಬನ ಪ್ರದೇಶಕ್ಕೆ ವ್ಯಾಪಿಸಿದೆ.
ಬೆಂಕಿ ನಂದಿಸಲು ಉಡುಪಿ ಅಗ್ನಿ ಶಾಮಕದಳ ಹಾಗೂ ಪಡುಬಿದ್ರಿಯ ಲ್ಯಾಂಕೋ ಕಂಪೆನಿಯಿಂದ ನೀರು ಸಹಿತ ಅಗ್ನಿ ಶಮನದಳ ಮತ್ತು ಸ್ಥಳೀ ಯರು ಅವರೊಂದಿಗೆ ಸಹಕರಿಸಿದ್ದಾರೆ.
Tagged with
fire,
lnews,
udupi
ಸುಳ್ಯ: ವಿಪರೀತ ಮದ್ಯಸೇವನೆ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ಮನೆ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸೋಣಂಗೇರಿ ಸಿ.ಆರ್.ಸಿ. ಕಾಲೋನಿಯಲ್ಲಿ ನಡೆದಿದೆ.
ಕಾಲನಿಯ ಆರ‍್ಮಗಂ(೬೩) ಆತ್ಮ ಹತ್ಯೆ ಮಾಡಿಕೊಂಡವರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ಈ ಕೃತ್ಯ ಎಸಗಿದ್ದಾರೆ. ಅವರಿಗೆ ಪತ್ನಿ ಸೆಲ್ವನಾಯಕಿ, ಹಾಗೂ ಮೂವರು ಗಂಡು ಮಕ್ಕಳು ಇದ್ದಾರೆ.
Tagged with
cnews
ಸುಳ್ಯ: ಗುತ್ತಿಗಾರು ಸಮೀಪದ ನಾಲ್ಕೂರು ಗ್ರಾಮದ ದಂಡಿನ ಮನೆ ತಾರನಾಥರ ಪತ್ನಿ ನೂಜಿ ಬಾಳ್ತಿಲದಲ್ಲಿ ಕಿರಿಯ ಆರೋಗ್ಯ ಸಹಾಯಕಿ (ಎಎನ್‌ಎಂ) ಆಗಿರುವ ದಯಾಕಿರಣ ಎಂಬವರು ಪತಿಯ ತಲೆಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ತಾರಾನಾಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೂನಡ್ಕದ ಬಾಲಕೃಷ್ಣ ಗೌಡರ ಪುತ್ರಿಯಾದ ದಯಾಕಿರಣರನ್ನು ೧೦ ವರ್ಷಗಳ ಹಿಂದೆ ತಾರನಾಥರಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ದಯಾಕಿರಣರು ಕೆಲವು ವರ್ಷಗಳಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಇದರಿಂದ ಕುಟುಂಬದ ನೆಮ್ಮದಿ ಹಾಳಾಗಿತ್ತು. ಹಾಗಾಗಿ ತಾರನಾಥರು ಆಕೆಯನ್ನು ವಿಚ್ಚೇದನ ನೀಡುವ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಸೋಮವಾರ ದಂಡಿನ ಮನೆಗೆ ಬಂದಿದ್ದ ದಯಾಕಿರಣ ರಾತ್ರಿ ವೇಳೆ ಮೂತ್ರ ಶಂಕೆಗೆಂದು ಹೊರಗೆ ಹೋಗಿದ್ದ ತಾರನಾಥರ ತಲೆಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಅವರ ಬೊಬ್ಬೆ ಕೇಳಿದ ಅವರ ತಾಯಿ ಆಕೆಯ ಕೈಯಿಂದ ದೊಣ್ಣೆಯನ್ನು ಎಳೆದು ತಾರನಾಥರನ್ನು ರಕ್ಷಿಸಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿ ಸಲಾಗಿದೆ. ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Tagged with
cnews
ಮಂಗಳೂರು: ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಮತ್ತು ಕೊಲೆ ಸಂಚು ಪ್ರಕರಣದ ೧೫ ಮಂದಿ ಆರೋಪಿಗಳ ಪೈಕಿ ೧೨ ಮಂದಿ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಕಳೆದ ಎಪ್ರಿಲ್ ೧೦ರಂದು ಮಣಿಪಾಲದ ಗೋಲ್ಡನ್ ಸುರೇಶ್ ತನ್ನ ಸಹಚರರೊಂದಿಗೆ ಸೇರಿ ಮಣಿಪಾಲ-ಶಾಂತಿನಗರದ ಮಹೇಂದ್ರ, ಅನುಪಮಾ ದಂಪತಿ ಹಾಗೂ ಅವರ ಭಾವ ಶಬರೀಶರನ್ನು ಕೊಲೆ ಮಾಡಿ ದರೋಡೆಗೆ ಸಂಚು ರೂಪಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿ ಅಲೆವೂರಿನ ಶಕೀಲ್ ಅಹ್ಮದ್, ಕುಕ್ಕಿಕಟ್ಟೆ-ಇಂದಿರಾನಗರ ನಿವಾಸಿ ಜಾಕೀರ್ ಹುಸೇನ್, ಉಡುಪಿ-ಬೈಲೂರಿನ ಸಂತೋಷ ಪೂಜಾರಿ, ಗಂಗೊಳ್ಳಿ ಗುಡ್ಡೆಕೇರಿಯ ಹರೀಶ ಖಾರ್ವಿ, ಅಲೆವೂರಿನ ಗುರುಪ್ರಸಾದ ಶೆಟ್ಟಿ, ಅಲೆವೂರಿನ ಸಲೀಂ, ಗಂಗೊಳ್ಳಿಯ ಮಹೇಶ ಪೂಜಾರಿ, ಮಲ್ಲಾರಿನ ಬಶೀರ್, ಕುಂದಾಪುರದ ಸುಧೀರ್ ಪೂಜಾರಿ ಅವರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿದೆ. ಅತ್ರಾಡಿ ನಿವಾಸಿ ರವಿಕಿರಣ್‌ಗೆ ಜಾಮೀನು ನಿರಾ ಕರಿಸಲಾಗಿದೆ. ಪ್ರಮುಖ ಆರೋಪಿ ಗೋಲ್ಡನ್ ಸುರೇಶ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾನೆ.
Tagged with
cnews
ಕಾಸರಗೋಡು: ೪೦ ಗ್ರಾಂ ಗಾಂಜಾ ಸಹಿತ ಯುವಕನನ್ನು ಕುಂಬಳೆ ಅಬಕಾರಿ ದಳ ಬಂಧಿಸಿದೆ. ಇಲ್ಲಿನ ಕೊಯಿಪ್ಪಾಡಿ ಫಿಶರೀಸ್ ಕಾಲನಿಯ ನಿವಾಸಿ ಮುಹಮ್ಮದ್ ಹನೀಫಾ(೩೪) ಎಂಬಾತ ಬಂಧಿತ ಆರೋಪಿ. ಈತನನ್ನು ನ್ಯಾಯಾಲ ಯಕ್ಕೆ ಹಾಜರುಪಡಿಸಲಾಗಿದೆ.
Tagged with
cnews
ಪುತ್ತೂರು : ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಮೂವರು ಸೇರಿಕೊಂಡು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಪುತ್ತೂರು ತಾಲ್ಲೂಕಿನ ಕಾಣಿಯೂರು ಸಮೀಪ ಸೋಮವಾರ ಸಂಭವಿಸಿದೆ.
ಕಾಣಿಯೂರು ಸಮೀಪದ ಪುಣ್ಚತ್ತಾರು ದರ್ಕಾಸು ನಿವಾಸಿ ಐತ್ತ ಎಂಬವರ ಪುತ್ರ ಗಣೇಶ್ ಹಲ್ಲೆಗೊಳ ಗಾದವರು. ಅವರಿಗೆ ತನಿಯ, ಬಾಬು ಮತ್ತು ಶೀನಪ್ಪ ಎಂಬವರು ಸೇರಿ ಕೊಂಡು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಈ ಹಿಂದೆ ಗಣೇಶ್ ಮತ್ತಿತರರು ಸೇರಿಕೊಂಡು ಸೋಮಶೇಖರ್ ಎಂಬವರಿಗೆ ಹಲ್ಲೆ ನಡೆಸಿದ್ದರು ಎನ್ನುವ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಈ ಕೃತ್ಯ ಎಸಗಿರು ವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Tagged with
cnews
ಮಂಗಳೂರು: ತಂದೆಯ ವಯಸ್ಸಿನ ವ್ಯಕ್ತಿಯೋರ್ವರ ಕಾಲು ತಾಗಿದ್ದನ್ನೇ ನೆಪಕ್ಕಿಟ್ಟುಕೊಂಡ ‘ನಿತ್ಯ ಸುಮಂಗಲಿ’ ಎಂದು ಗುರುತಿಸಲ್ಪಟ್ಟಿರುವ ಮಹಿಳೆಯೋರ್ವರು ತುಂಬಿದ ಬಸ್ಸಿನಲ್ಲಿ ಸಾರ್ವಜನಿಕರಿಂದಲೇ ಉಗಿಸಿಕೊಂಡು ಬಸ್ಸಿಳಿದು ಹೊರಟುಹೋದ ಘಟನೆಯೊಂದು ರಾ. ಹೆದ್ದಾರಿಯ ಮುಲ್ಕಿಯಲ್ಲಿ ಸಾಗುತ್ತಿದ್ದ ಬಸ್ಸೊಂದರಲ್ಲಿ ನಿನ್ನೆ ನಡೆಯಿತು.
ಮಹಿಳೆ ಸುರತ್ಕಲ್‌ನಲ್ಲಿ ಬಸ್ಸನ್ನೇರಿ ಪಡುಬಿದ್ರಿಗೆಂದು ಟಿಕೇಟು ಪಡೆದು ಗಂಡಸರ ಸೀಟಿನಲ್ಲಿ ಕುಳಿತಿದ್ದರು. ಎದುರುಗಡೆ ಸೀಟಿನಲ್ಲಿ ತೀರ್ಥಕ್ಷೇತ್ರ ಸಂದರ್ಶನ ಮಾಡಿ ಹಿಂದಿರುಗುತ್ತಿದ್ದ ನಡುವಯಸ್ಸಿನೋರ್ವರು ಮನೆ ಮಂದಿಯೊಂದಿಗೆ ತನ್ನ ಪಾಡಿಗೆ ತಾನು ಕುಳಿತಿದ್ದರು. ಅವರು ಕಾಲು ಅಲುಗಿಸಿದಾಗ ಅವರ ಹಿಮ್ಮಡಿ ಅಕಸ್ಮಾತ್ತಾಗಿ ಹಿಂಬದಿಯಲ್ಲಿದ್ದ ಮಹಿಳೆಯ ಚಪ್ಪಲಿಗೆ ತಾಗಿದ್ದೇ ವಿವಾದಕ್ಕೆರವಾಯಿತು. ಗಂಡಸಿನ ಅವಗಾಹನೆಗೆ ಬರುವ ಮೊದಲೇ ಮಹಿಳೆ ಅವರಿಗೆ ಸಹಸ್ರನಾಮಾರ್ಚನೆ ಸಹಿತ ಹಿರಿಯರಿಗೂ ಅಶ್ಲೀಲವಾಗಿ ಬೈಯ ತೊಡಗಿದರು. ಗಂಡಸು ತಬ್ಬಿಬ್ಬಾಗಿ ಉತ್ತರಿಸಿದರೂ ಸುಮಂಗಲಿಯ ಪಾತಿವೃತ್ಯ ಗರಿಗೆದರಿತ್ತು. ಇದನ್ನು ಕಂಡು ಸಹಿಸಲಾಗದ ಸಹಪ್ರಯಾಣಿಕರೋರ್ವರು ಮಹಿಳೆಯನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡು ಜಾಡಿಸತೊಡಗಿದರು. ಈ ನಡುವೆ ಈಕೆಯ ಪೂರ್ವಾಪರ ತಿಳಿದಿದ್ದವರೊಬ್ಬರಂತೂ ‘ನೀನು ಯಾವ ಲಾಡ್ಜ್‌ಗೆ ಈಗ ತೆರಳುತ್ತಿದ್ದಿ?’ ಎಂಬಲ್ಲಿಂದ ಪ್ರಾರಂಭಿಸಿ ‘ಅಲ್ಲಿಗೆ ಪೊಲೀಸ್ ದಾಳಿ ನಡೆಸುವೆ’ ಎಂಬಲ್ಲಿಯವರೆಗೆ ಗದರತೊಡಗಿದರು.
ಕಂಗಾಲಾದ ಈ ಅಭಿನವ ಗರತಿ ಗಂಗವ್ವ ಪಡುಬಿದ್ರಿಗೆಂದು ಟಿಕೇಟು ಖರೀದಿಸಿದ್ದವರು ಮುಲ್ಕಿಯಲ್ಲಿಯೇ ಬಸ್ಸಿಳಿದು ಕಣ್ಮರೆಯಾದರು. ಈ ನಡುವೆ ಈಕೆಯ ಮಧ್ಯಾಹ್ನದ ಗಿರಾಕಿ ಮಾಡಿದ ಅರ್ಜೆಂಟ್ ಕರೆಗೂ ಈಕೆ ಅಸಹನೆಯಿಂದಲೇ ಉತ್ತರಿಸಿದ್ದು ಸಾರ್ವಜನಿಕರಿಗೆ ಕೇಳಿಸಿತು.
Tagged with
cnews
ಪುತ್ತೂರು: ಬೈಕ್‌ನಿಂದ ಪೆಟ್ರೋಲ್ ಕಳವು ನಡೆಸಿದ ಆರೋಪದ ಮೇಲೆ ಓರ್ವ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖ ನಿವಾಸಿ ಮಹಮ್ಮದ್ ಸಾಂಪತ್(೨೧) ಬಂಧಿತ ಆರೋಪಿ. ಇಲ್ಲಿನ ಕರ್ನೂರು ಸಮೀಪದ ಸರೋಳಿ ಮೂಲೆ ನಿವಾಸಿ ಬಿ.ಎಚ್. ಮೂಸಾನ್ ಎಂಬವರು ತನ್ನ ಮನೆಯ ಬಳಿ ನಿಲ್ಲಿಸಿದ್ದ ಬೈಕ್‌ನಿಂದ ಆರೋಪಿ ಪೆಟ್ರೋಲ್ ಕಳವುಗೈಯುತ್ತಿದ್ದ ವೇಳೆ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ. ಬಿ.ಎಚ್. ಮೂಸಾನ್ ನೀಡಿದ ದೂರಿನಂತೆ ಕೇಸು ದಾಖಲಿ ಸಿಕೊಂಡಿರುವ ಸಂಪ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾ ಲಯಕ್ಕೆ ಹಾಜರು ಪಡಿಸಿದ್ದಾರೆ.
Tagged with
cnews
ಸುಳ್ಯ: ಐವತ್ತೊಕ್ಲು ಗ್ರಾಮದ ತೋಟದ ಮನೆ ಎಂಬಲ್ಲಿ ಅಬ್ದುಲ್ ರಹಿಮಾನ್ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿದ ತಂಡ ಅಲ್ಲಿ ಹಂದಿ ಮಾಂಸದ ಅಡುಗೆ ಮಾಡಿ ತಿಂದು ಮದ್ಯ ಸೇವಿಸಿ ದಾಂಧಲೆ ನಡೆಸಿದ ಕುರಿತು ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಲಾಗಿದೆ. ಭಾಸ್ಕರ ಗೌಡ ಎಂಬವರಿಗೆ ಸೇರಿದ ಈ ಮನೆಯನ್ನು ಅಬ್ದುಲ್ ರಹಿಮಾನ್ ಲೀಸ್‌ಗೆ ಪಡೆದಿದ್ದರು. ಸೋಮವಾರ ಅವರು ತಮ್ಮ ಕುಟುಂಬದವರೊಂದಿಗೆ ಮಂಗಳೂ ರಿನ ಬಂಧುಗಳ ಮನೆಗೆ ಹೋಗಿ ದ್ದರು. ರಾತ್ರಿ ವೇಳೆ ನಿರಂಜನ, ಸೀತಾರಾಮ ಹಾಗೂ ರಮೇಶ ಎಂಬವರು ದಾಂಧಲೆ ನಡೆಸಿರು ವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Tagged with
cnews
ಮಂಗಳೂರು: ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯ ಬ್ಯಾಗನ್ನು ಕಳ್ಳ ನೊಬ್ಬ ಕಸಿದುಕೊಂಡು ಪರಾರಿಯಾದ ಘಟನೆ ನಿನ್ನೆ ರಾತ್ರಿ ಆಗ್ನೆಸ್ ಬಳಿ ಸಂಭವಿಸಿದೆ.
ಇಲ್ಲಿನ ಶಾಪ್‌ವೊಂದರಲ್ಲಿ ದುಡಿಯುತ್ತಿದ್ದ ಯುವತಿಯೊಬ್ಬಳು ಕೆಲಸ ಮುಗಿಸಿ ಮನೆಗೆ ತೆರಳೆಂದು ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಅಲ್ಲೇ ನಿಂತಿದ್ದ ಯುವಕ ಏಕಾಏಕಿ ಯುವತಿಯ ಬ್ಯಾಗ್ ಕಸಿದು ಕಂಪೌಂಡ್ ಜಿಗಿದು ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ
Tagged with
cnews
ಕಾಸರಗೋಡು: ಚಲಿಸುತ್ತಿದ್ದ ಬಸ್ಸಿಗೆ ಬೆಂಕಿ ತಗಲಿ ಹೊತ್ತಿ ಉರಿಯಿ ತಾದರೂ ತಕ್ಷಣ ಕಾರ್ಯ ಪ್ರವೃತ್ತರಾದ ಹಿನ್ನೆಲೆಯಲ್ಲಿ ಸಂಭಾವ್ಯ ಭಾರೀ ದುರಂತ ಸ್ವಲ್ಪದರಲ್ಲೇ ತಪ್ಪಿಹೋಗಿದೆ. ಇಲ್ಲಿನ ಕಾಞಂಗಾಡ್ ಪೇಟೆ ಬಳಿಯಲ್ಲಿ ನಿನ್ನೆ ಮಧ್ಯಾಹ್ನ ಘಟನೆ ಸಂಭವಿಸಿದೆ.
ಪಯ್ಯನ್ನೂರಿನಿಂದ ಕಾಞಂ ಗಾಡಿಗೆ ಬರುತ್ತಿದ್ದ ಟಿ.ಪಿ. ೭೦೪ ನಂಬ್ರದ ಕೇರಳ ಸಾರಿಗೆ ಬಸ್ಸಿಗೆ ಬೆಂಕಿ ತಗಲಿದೆ. ಕಾಞಂಗಾಡಿನ ಮಂಜುನಾಥ ಪೆಟ್ರೋಲ್ ಪಂಪ್ ದಾಟಿ ಬಸ್ ಮುಂದಕ್ಕೆ ಚಲಿಸಿದಾಗ ಹಿಂಬದಿ ಯಲ್ಲಿದ್ದ ಬೈಕ್ ಸವಾರನು ಇವರ ಬಸ್ಸಿನ ಹಿಂಬದಿ ಚಕ್ರ ಹೊತ್ತಿ ಉರಿಯುತ್ತಿ ದ್ದದನ್ನು ಗಮನಿಸಿದ್ದರು. ತಕ್ಷಣ ಅವರು ವೇಗವಾಗಿ ಬೈಕನ್ನು ಒಯ್ದು ಬಸ್‌ನ್ನು ಓವರ್‌ಟೇಕ್ ಮಾಡಿ ಅಡ್ಡಗಟ್ಟಿ ಮಾಹಿತಿ ನೀಡಿದ್ದರು. ವಿಷಯವರಿತು ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲ ಹೆದರಿ ತರಾತುರಿಯಲ್ಲಿ ಕೆಳಗಿಳಿದರು.
ತಕ್ಞಣ ಧಾವಿಸಿದ ಕಾಞಂಗಾಡ್ ಅಗ್ನಿಶಾಮಕ ದಳದವರು ನಾಗರಿಕರ ನೆರವಿನಿಂದ ಬೆಂಕಿಯನ್ನಾರಿಸಿದ್ದರು. ಬಸ್ಸಿಗೆ ೫೦ ಶೇ. ಹಾನಿಯುಂಟಾಗಿದೆ. ಬಸ್ ಪಡನ್ನಕಾಡ್ ದಾಟಿದಾಗಲೇ ಬಿಸಿಯ ಅನುಭವವಾಗಿತ್ತೆಂದು ಪ್ರಯಾ ಣಿಕರು ಹೇಳುತ್ತಾರೆ. ಬ್ರೇಕ್ ಲೈನರ್ ಮೂಲಕ ಚಕ್ರಕ್ಕೆ ಬೆಂಕಿ ವ್ಯಾಪಿಸಿರ ಬೇಕೆಂದು ಶಂಕಿಸಲಾಗಿದೆ.
Tagged with
cnews
ಕಾರ್ಕಳ: ಅಪರಿಚಿತ ಮಧ್ಯ ವಯಸ್ಕ ವ್ಯಕ್ತಿಯ ಸಂಪೂರ್ಣ ಕೊಳೆತ ಶವ ನೀರೆ ಬೈಲೂರಿನಲ್ಲಿ ಪತ್ತೆಯಾಗಿದೆ. ನೀರೆ ಬೈಲೂರು ಗ್ರಾಮದ ಕುಡ್ಪರ ಹಾಡಿಯಲ್ಲಿ ಸಮೀಪದ ಜಮೀನಿನಲ್ಲಿ ಸುಮಾರು ಮಧ್ಯ ವಯಸ್ಕ ವ್ಯಕ್ತಿಯ ಕೊಳೆತು ದುರ್ನಾತ ಬೀರುತ್ತಿರುವ ತಲೆ ಬುರುಡೆ ಪತ್ತೆಯಾಗಿದೆ. ಕಾರ್ಕಳ ನಗರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Tagged with
cnews
ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ನರಿಮೊಗರು ಗ್ರಾಮ ಪಂಚಾಯತ್ ಪಿಡಿಒ ಸುಭಾಶ್ಚಂದ್ರ ವಿ.ಎಂ.ನನ್ನು ಲೋಕಾಯುಕ್ತ ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೂನ್ ಮೂರನೇ ತಾರೀಖಿನವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Tagged with
cnews
ಮಂಗಳೂರು: ತ್ಯಾಜ್ಯವನ್ನು ಎಸೆಯುವವರನ್ನು ಪತ್ತೆಹಚ್ಚಿ ದಂಡ ವಿಧಿಸಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಬಜ್ಪೆ ಗ್ರಾಮ ಪಂಚಾಯತ್ ಅಳವಡಿದ್ದ ಸಿ.ಸಿ.ಕ್ಯಾಮೆರಾದ ಕೇಬಲ್ ವೈರ್ ಅನ್ನು ಕಿಡಿಗೇಡಿಗಳು ಅಲ್ಲಲ್ಲಿ ಕತ್ತರಿಸಿ ಹಾನಿಯೆಸಗಿದ ಘಟನೆ ಮೊನ್ನೆ ತಡರಾತ್ರಿ ನಡೆದಿದ್ದು, ಬಜ್ಪೆ ಠಾಣೆಗೆ ದೂರು ನೀಡಲಾಗಿದೆ.
ಬಜ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಸರ್ಜನೆಗೆ ಸೂಕ್ತ ಜಾಗವಿಲ್ಲ. ಇದು ಆಡಳಿತಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಪೇಟೆಯ ಅಲ್ಲಲ್ಲಿ ಇಡಲಾದ ಕಸದ ತೊಟ್ಟಿಯಿಂದ ತರಲಾದ ತ್ಯಾಜ್ಯವನ್ನು ಬಜ್ಪೆ ಪಂಚಾಯತ್ ಆವರಣ ಗೋಡೆಯ ಹೊರಗಡೆ ರಾಶಿ ಹಾಕಲಾಗಿದೆ. ಇಲ್ಲಿ ಸಾರ್ವಜನಿಕರು ತ್ಯಾಜ್ಯ ಎಸೆಯುವುದನ್ನು ನಿಷೇಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಂದಾಜು ೪೦ ಸಾವಿರ ರೂ. ವೆಚ್ಚದಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಿತ್ತು.
ಸಿ.ಸಿ. ಕ್ಯಾಮೆರಾ ಅಳವಡಿಸಿರುವ ಬಗ್ಗೆ ಬಜ್ಪೆ ಗ್ರಾಮ ಪಂಚಾಯತ್ ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ಪರ-ವಿರೋಧ ಚರ್ಚೆಗೂ ಕಾರಣವಾಗಿತ್ತು. ಮೊನ್ನೆ ತಡರಾತ್ರಿ ೧೦:೫೮ರವರೆಗೆ ಸಿ.ಸಿ.ಕ್ಯಾಮೆರಾದಲ್ಲಿ ಚಿತ್ರೀಕರಣ ದಾಖಲಾಗಿದ್ದು, ಆನಂತರ ಕ್ಯಾಮೆರಾ ಚಿತ್ರೀಕರಣ ನಡೆಸಿಲ್ಲ. ಈ ಅವಧಿಯಲ್ಲಿ ಕಿಡಿಗೇಡಿಗಳು ಸಿ.ಸಿ.ಕ್ಯಾಮೆರಾಕ್ಕೆ ಹಾನಿಯೆಸಗಿರಬ ಹುದು ಎಂದು ಶಂಕಿಸಲಾಗಿದೆ. ಗ್ರಾ.ಪಂ.ಅಧ್ಯಕ್ಷ ಶಾಹುಲ್ ಹಮೀದ್ ಬಜ್ಪೆ ಠಾಣೆಗೆ ದೂರಿದ್ದಾರೆ.
Tagged with
cnews
ಪುತ್ತೂರು: ಬೈಕಿನಲ್ಲಿ ಮದ್ಯಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಸಂಪ್ಯ ಪೊಲೀಸರು ಪುತ್ತೂರು ತಲೂಕಿನ ನೆಟ್ಟಣಿಗೆ ಮುಡ್ನೂರಿನ ಪಂಚೋಡಿ ಎಂಬಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಹಿರಿಯಾನ ದರ್ಖಾಸು ಮನೆ ನಿವಾಸಿ ಭಾಸ್ಕರ ಮುಖಾರಿ ಬಂಧಿತ. ಈತ ಒಂದು ಬಾಕ್ಸ್ ಮದ್ಯವನ್ನು ೪೮ ಬಾಟಲಿ ಬೈಕಿನಲ್ಲಿ ಸಾಗಾಟ ಮಾಡುತ್ತಿದ್ದಾಗ ಸಂಪ್ಯ ಪೊಲೀಸರು ಕಾರ‍್ಯಾಚರಣೆ ಮಾಡಿ ಪತ್ತೆ ಮಾಡಿದ್ದಾರೆ. ಬೈಕ್ ಸಮೇತ ಈತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Tagged with
cnews
ಮಂಗಳೂರು: ಉಪ್ಪಿನಂಗಡಿ ನಿಡ್ಲೆ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಪಾರ್ಪಿಕಲ್ಲು ಕಪಿಲ ನದಿಯ ಅಮವಾಸೆ ಗುಂಡಿಯಲ್ಲಿ ಸೋಮವಾರ ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಶವವು ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ಲಿಯೋ ಡಿ ಕುನ್ಹ(೫೦) ಎಂಬವರದೆಂದು ಪತ್ತೆ ಹಚ್ಚಲಾಗಿದೆ. ಎರಡು ದಿನಗಳ ಹಿಂದೆ ಕಾಣಿಯಾಗಿದ್ದ ಇವರು ಅವಿವಾಹಿತ ರಾಗಿದ್ದು, ಕಾಪಿನಬಾಗಿಲು ಎಂಬಲ್ಲಿ ತನ್ನ ಅಣ್ಣನ ಮನೆ ಸಮೀಪ ಒಂಟಿಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಜೀವನದಲ್ಲಿ ಜಿಗುಪ್ಸೆ ಗೊಂಡು ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews
ಮಂಗಳೂರು: ರಸ್ತೆಬದಿ ವ್ಯಾಪಾರ ನಡೆಸುವ ಕೈಲಾಶ್ ಪಾನಿಪುರಿ ಅಂಗಡಿಗಳ ಮೇಲೆ ಮನಪಾ ಆರೋಗ್ಯ ವಿಭಾಗದ ಅಧಿಕಾರಿಗಳು ನಿನ್ನೆಯೂ ದಾಳಿಯನ್ನು ಮುಂದುವರಿಸಿದ್ದಾರೆ.
ಕದ್ರಿ, ಕಂಕನಾಡಿ, ಜೆಪ್ಪು, ನಂತೂರು ಇತ್ಯಾದಿ ಕಡೆಗಳಲ್ಲಿ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಎಂಟು ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರು.
Tagged with
cnews
ಮಂಗಳೂರು: ಉಡುಪಿ ತಾಲೂಕಿನ ಮಾಬುಕುಳ ಚೇತನಾ ಹೈಸ್ಕೂಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತರಾಗಿದ್ದಾರೆ. ಮೃತರನ್ನು ಲಾರಿ ಚಾಲಕ ಬೆಳ್ತಂಗಡಿ ಮೂಲದ ಬೇಬಿ(೪೦) ಎಂದು ಹೆಸರಿಸಲಾಗಿದೆ. ನಿನ್ನೆ ಮಧ್ಯ ರಾತ್ರಿ ವೇಳೆ ಉಡುಪಿಯಿಂದ ಕುಂದಾಪುರ ಕಡೆ ಹೋಗುತ್ತಿದ್ದ ಟಾಟಾ ೯೦೯ ಲಾರಿ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು. ಟಾಟಾ ೯೦೯ ಲಾರಿ ಚಾಲಕ ಹಾಗೂ ಕ್ಲೀನರ್‌ಗೆ ಗಾಯವಾಗಿದೆ. ಈ ಬಗ್ಗೆ ಕೋಟಾ ಠಾಣೆಯಲ್ಲಿ ದೂರು ದಾಖಲಾಗಿದೆ.
Tagged with
cnews
ಮಂಗಳೂರು: ಮುಲ್ಕಿ ಸಮೀಪದ ಪಡುಪಣಂಬೂರು ಸಂತಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಆಟೋರಿಕ್ಷಾವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ನಡೆದಿದೆ.ಮೋಟಾರ್ ಸೈಕಲ್ ಸವಾರ ಪಡುಪಣಂಬೂರು ನಿವಾಸಿ ರವಿ ಗಾಯಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews
ಮಂಗಳೂರು: ಬೈಂದೂರು ಹುಲ್ಕಡಿಕೆ ಎಂಬಲ್ಲಿ ಸರಕಾರಿ ಸ್ಥಳದ ಕಾಡು ಪ್ರದೇಶದಲ್ಲಿ ಹಣಪಣವಾಗಿಟ್ಟುಕೊಂಡು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಪೂಜಾರಿ ಯಡ್ತರೆ, ಮಹೇಶ್ ಖಾರ್ವಿ ಪಡುವರಿ, ರಾಘವೇಂದ್ರ ಪೂಜಾರಿ ತಗ್ಗರ್ಸೆ, ಚಂದ್ರಖಾರ್ವಿ ಪಡುವರಿ, ರಾಘವೇಂದ್ರ ಬೈಂದೂರು ಹಾಗೂ ಕೃಷ್ಣೇಶ್ ಗಾಣಿಗ ತಗ್ಗರ್ಸೆ ಎಂಬವರೇ ಬಂಧಿತ ಆರೋಪಿಗಳು.
ಬಂಧಿತರಿಂದ ೬೦೫೦ ರೂ. ನಗದು ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
Tagged with
cnews
ಮಂಗಳೂರು: ಕೊಣಾಜೆ ಗ್ರಾಮ ಪಂಚಾಯತ್‌ನ ತಿಬ್ಲೆಪದವು ಪ್ರದೇಶದ ಜನರು ಕುಡಿಯುವ ನೀರಿ ಗಾಗಿ ಪರಿತಪಿಸಬೇಕಾದ ಪರಿಸ್ಥಿತಿ ಬಂದೊದಗಿದ್ದು, ನಾಗರಿಕರಿಂದ ಸರಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿ ನೀರಿಗಾಗಿ ಎರಡ್ಮೂರು ಬೋರ್ ಗಳನ್ನು ಹಾಕಲಾಗಿದ್ದರೂ ಅದರಲ್ಲಿ ನೀರು ಇಲ್ಲ. ನೂರಾರು ಮನೆಯ ನಿವಾಸಿಗಳು ರಸ್ತೆ ಬದಿ ಕೊಡಪನ ಇಟ್ಟು ನೀರಿಗಾಗಿ ಬಿಸಿಲಲ್ಲಿಯೇ ಕಾಯಬೇಕು. ಇಲ್ಲಿ ತಲೆದೋರಿರುವ ನೀರಿನ ಸಮಸ್ಯೆಯ ಬಗ್ಗೆ ಪಂಚಾ ಯತ್‌ನ ಗಮನಹರಿಸಿದಾಗ ಪಂಚಾ ಯತ್‌ನಿಂದ ಬೆಳಗ್ಗಿನ ವೇಳೆ ಒಂದು ಟ್ಯಾಂಕರ್ ನೀರು ಸರಬರಾಜು ಮಾಡುತ್ತದೆ. ಆದರೆ ಈ ನೀರು ಇಲ್ಲಿನ ನಾಗರಿಕರಿಗೆ ಸಾಕಾಗುತ್ತಿಲ್ಲ. ನಾಗ ರಿಕರ ಜೀವನಕ್ಕೆ ನೀರು ಅಗತ್ಯವಾಗಿ ಬೇಕಾಗಿರುವುದರಿಂದ ಇಲ್ಲಿನ ನಾಗರಿಕರು ಒಟ್ಟಾಗಿ ಹಣ ಕೊಟ್ಟು ಒಂದು ಟ್ಯಾಂಕರ್ ನೀರು ತರಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಣಾಜೆ ಗ್ರಾಮದ ನಾಲ್ಕನೇ ಬ್ಲಾಕ್ ತಿಬ್ಲೆಪದವುನ ನೀರಿನ ಸಮಸ್ಯೆಯ ಬಗ್ಗೆ ಜಿಲ್ಲಾ ಪಂಚಾಯತ್‌ಗೆ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಅರ್ಪಿ ಸಲಾಗಿದೆ. ಆದರೆ ಯಾವುದೇ ಸ್ಪಂದನ ದೊರೆತಿಲ್ಲ ಜಿಲ್ಲಾ ಪಂಚಾಯತ್ ನೀರಿನ ಸೌಕರ್ಯ ಮಾಡಲು ಹಣ ಇಲ್ಲ ಎನ್ನುತ್ತಿದೆ. ಶಾಸಕರು ಈ ಬಗ್ಗೆ ಗಮನ ಹರಿಸುವುದಿಲ್ಲ. ಈಗಿನ ಜಿಲ್ಲಾ ಪಂಚಾಯತ್‌ನ ಸದಸ್ಯರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಇದರಿಂದ ಇಲ್ಲಿನ ಜನತೆ ನೀರಿಗಾಗಿ ಪರಿತಪಿಸಬೇಕಾದ ಪರಿಸ್ಥಿತಿ ಒದಗಿದೆ ಎಂದು ಇಲ್ಲಿನ ಪಂಚಾಯತ್ ಸದಸ್ಯ ಮಹಮ್ಮದ್ ಆರೋಪಿಸಿದ್ದಾರೆ.
ಇಲ್ಲಿನ ನಾಗರಿಕರ ಒತ್ತಾಯ ದಿಂದ ಪಂಚಾಯತ್ ಸರಬರಾಜು ಮಾಡುವುದು ಒಂದು ಟ್ಯಾಂಕರ್ ನೀರು ಮಾತ್ರ. ಇಲ್ಲಿ ನೀರಿಗಾಗಿ ಟಾಂಕಿ ನಿರ್ಮಿಸಲಾಗಿದೆ. ಆದರೆ ಇದ ರಲ್ಲಿ ನೀರು ಇಲ್ಲ. ಒಂದು ಬೋರ್ ನಲ್ಲಿ ಇರುವ ಸ್ನಲ್ಪ ನೀರು ಅರ್ಧ ಗಂಟೆಗೊಮ್ಮೆ ಸರಬ ರಾಜಾಗುತ್ತದೆ. ಬುಳಷ್ಟು ಮನೆಗಳಲ್ಲಿ ಬಾವಿಗಳ ಸೌಕರ್ಯ ಇಲ್ಲ. ಎಲ್ಲರೂ ಪಂಚಾ ಯತ್ ನೀರನ್ನು ನಂಬಿ ಕೂತಿದ್ದಾರೆ. ಆದರೆ ಪಂಚಾಯತ್ ಮತ್ತು ಜನಪ್ರತಿನಿಧಿಗಳು ಈ ವಿಚಾರದಲ್ಲಿ ಮೌನವಾಗಿದ್ದಾರೆ. ನೀರಿನ ಸಮಸ್ಯೆ ಹಾಗೆಯೇ ಮುಂದು ವರಿದು ಇಲ್ಲಿನ ಜನತೆ ಸಂಕಷ್ಟಕ್ಕೀ ಡಾಗಿದ್ದಾರೆ ಎಂಬುದು ಇಲ್ಲಿನ ನಾಗರಿಕರ ದೂರು.
Tagged with
dk,
lnews,
water
ಬೆಂಗಳೂರು: ರಾಜ್ಯ ಬಿಜೆಪಿಯ ಆಂತರಿಕ ಕಚ್ಚಾಟವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಹೊರಟಿರುವ ಕಾಂಗ್ರೆಸ್ ನಾಯಕರು ಇದೀಗ ತುಮ ಕೂರಿನ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಿಸಲು ಮುಂದಾ ಗಿದ್ದಾರೆ.
ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ, ತುಮ ಕೂರಿಗೆ ಧಾವಿಸಿ ಶ್ರೀಗಳ ಗುರುವಂ ದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳಿದ್ದರು. ವೀರಶೈವ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಇದೀಗ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಿಸಲು ರಾಜ್ಯ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಿದ್ದಾರೆ. ಅನ್ನದಾಸೋಹ ಹಾಗೂ ಬಡ ಮಕ್ಕಳಿಗೆ ವಿದ್ಯದಾನ, ಸಮಾಜ ಸೇವೆಯಿಂದ ಶ್ರೀಕ್ಷೇತ್ರ ವಿಶ್ವಕ್ಕೆ ಚಿರಪರಿಚಿತ ಈಗಾಗಲೇ ರಾಜ್ಯ ಸರ್ಕಾರ ಕೂಡ ಹಲವು ಭಾರಿ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಶಿಫಾರಸ್ಸು ಮಾಡಿದೆ.
ದಶಕಗಳ ಕಾಲ ನಾಡಿನ ಜನ ಸಾಮಾನ್ಯರ ಹಿತಕ್ಕಾಗಿ ದುಡಿದ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಲಭ್ಯವಾದರೆ ರಾಜ್ಯದ ಜನ ಸಂತೋಷ ಪಡುತ್ತಾರೆ.ಅದೇ ಕಾಲಕ್ಕೆ ಇದರ ಲಾಭ ಕಾಂಗ್ರೆಸ್‌ಗೆ ಸಿಗಲಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಸೋನಿಯಾಗೆ ವಿವರಿಸಿದ್ದಾರೆ.
ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಲಭ್ಯವಾದರೆ ಸಹಜವಾಗಿಯೇ ರಾಜ್ಯದ ಬಹುಸಂಖ್ಯಾತ ಸಮುದಾಯ ಸಂತೋಷಪಡುತ್ತದೆ. ಅದರ ಅಲೆಯಲ್ಲಿ ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ಗೆದ್ದು ಬರಲು ದಾರಿಯಾಗುತ್ತದೆ ಎಂಬುದು ರಾಜ್ಯ ಕಾಂಗ್ರೆಸ್ ನಾಯಕರ ವಾದ.
Tagged with
siddaganga,
snews
ವಿಟ್ಲ: ವಿಟ್ಲದಲ್ಲಿ ಕಳ್ಳ ಖದೀಮರ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಗ್ರಾಮಸ್ಥರು ಭಯದ ವಾತಾವರ ಣದಲ್ಲಿ ಬದುಕುತ್ತಿದ್ದಾರೆ.
ಎರಡು ವಾರದ ಹಿಂದೆ ಕಂಬಳಬೆಟ್ಟು ಪರಿಸರದ ಮೊಹಿದ್ದೀನ್ ಶಾಫಿ ಅವರ ಮನೆಯಿಂದ ಖದೀಮರು ೩೪ ಪವನ್ ಚಿನ್ನ ಮತ್ತು ೪ಲಕ್ಷ ರೂ. ಹಣ ಎಗರಿಸಿದ್ದರು. ಅದೇ ರೀತಿ ಕರೀಂ ಅವರ ಮನೆಯಿಂದ ೫ ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಎಗರಿಸಿದ್ದರು. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಕಳ್ಳರ ದೊಡ್ಡ ದಂಡೇ ಇದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ವಿಟ್ಲ ಪೊಲೀ ಸರು ಕಳ್ಳರನ್ನು ಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮೂರು ವಾರದ ಹಿಂದೆ ಮಾಣಿ ಪರಿಸರದಲ್ಲಿ ನಡೆದ ಸರಣಿ ಅಂಗಡಿ ಕಳ್ಳತನ ಪ್ರಕರಣವನ್ನು ಕೇವಲ ಒಂದೇ ದಿನದಲ್ಲಿ ಭೇದಿಸಿ ವಿಟ್ಲ ಠಾಣಾಧಿಕಾರಿ ರಕ್ಷಿತ್ ಎಕೆ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿದ್ದು, ಪ್ರಮುಖ ಆರೋಪಿ ೨೭ ಪ್ರಕರಣಗಳ ರೂವಾರಿ ಉಡುಪಿ ಮೂಲದ ಸುಂದರ ಎಂಬ ಕಳ್ಳನನ್ನು ಬಂಧಿಸಿ ದ್ದರು. ಆರು ತಿಂಗಳ ಹಿಂದೆ ಕನ್ಯಾನ, ಬೈರಿಕಟ್ಟೆ, ಸಾಲೆತ್ತೂರು, ಕಂಬಳಬೆಟ್ಟು ಮುಂತಾದ ಕಡೆ ಹಲವು ಮನೆಗಳಿಗೆ ಕನ್ನ ಹಾಕುತ್ತಿದ್ದ ಆರೋಪಿ ಚಿಕ್ಕಮಗಳೂರು ಮೂಲದ ಇತ್ತೇ ಬರ್ಪೆ ಅಬೂಬಕ್ಕರ್‌ನನ್ನು ವಿಟ್ಲ ಪೊಲೀಸರು ಬಂಧಿಸಿ ದ್ದರು. ಇದೀಗ ವಿಟ್ಲ ಪರಿಸರದಲ್ಲಿ ಕಳ್ಳ-ಖದೀಮರ ಅಟ್ಟಹಾಸ ಮುಂದುವರಿದಿದ್ದರಿಂದ ಇಲ್ಲಿಯ ನಿವಾಸಿಗಳು ಆತಂಕಕ್ಕೀ ಡಾಗಿದ್ದಾರೆ. ಕಂಬಳಬೆಟ್ಟು ಕಳ್ಳತನ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿ ಆರೋಪಿಗಳನ್ನು ಶೀಘ್ರದಲ್ಲೆ ಬಂಧಿಸು ತ್ತೇವೆ ಎಂದು ವಿಟ್ಲ ಠಾಣಾಧಿಕಾರಿ ಹೇಳಿದ್ದಾರೆ.
ಸಿಬ್ಬಂದಿಗಳ ಕೊರತೆ: ಕರ್ನಾಟಕ-ಕೇರಳ ಗಡಿ ಪ್ರದೇಶವಾದ ವಿಟ್ಲ ಪ್ರದೇಶಕ್ಕೆ ಇರುವುದು ಒಂದೇ ಒಂದು ಪೊಲೀಸ್ ಠಾಣೆ ಇಲ್ಲಿರುವಂತಹ ಪೊಲೀಸ್ ಸಿಬ್ಬಂದಿ ತಮ್ಮ ಕಾರ್ಯ ವ್ಯಾಪ್ತಿಗೆ ಬರದ ಎಲ್ಲಾ ಕೆಲಸವನ್ನು ಮಾಡ ಬೇಕಾದ ಅನಿವಾರ್ಯತೆಯಿದೆ. ಆದರೆ ಇಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆಯಿದ್ದು, ಸರ್ಕಾರ ಇತ್ತ ಗಮನ ಹರಿಸಬೇಕು ಎಂಬ ಕೂಗು ಕೇಳಿ ಬಂದಿದೆ.
Tagged with
dk,
lnews
ಮಂಗಳೂರು: ನಿನ್ನೆ ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಿಂದ ಸಿಇಟಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ ಘಟನೆ ನಡೆದಿದೆ.
ಬಲ್ಮಠದ ಸರಕಾರಿ ಪಿಯು ಕಾಲೇಜ್ ಹಾಗೂ ಮಿಲಾಗ್ರಿಸ್ ಪಿಯು ಕಾಲೇಜ್ ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಇಟಿ ಪರೀಕ್ಷೆಯಡಿ ರಸಾಯನ ಶಾಸ್ತ್ರ ಪರೀಕ್ಷೆಯು ನಿನ್ನೆ ೨:೪೦ರಿಂದ ೩:೫೦ರವರೆಗೆ ನಡೆಯುತ್ತಿತ್ತು. ಆದರೆ ಇದೇ ಸಮಯಕ್ಕೆ ಸರಿಯಾಗಿ ಜ್ಯೋತಿ ವೃತ್ತದಿಂದ ಭಾರೀ ಸದ್ದುಗದ್ದಲದೊಂದಿಗೆ ಸಮಾವೇಶದ ರ‍್ಯಾಲಿ ಆರಂಭಗೊಂಡಿತು. ಇದರಿಂದಾಗಿ ಪರೀಕ್ಷಾ ಕೇಂದ್ರದಲ್ಲಿದ್ದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಯಿತು. ಮೆರವಣಿಗೆಯ ಕಾರಣ ವಾಹನ ಸಂಚಾರದ ಮಾರ್ಗ ಬದಲಿಸಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ಕಷ್ಟ ಪಡಬೇಕಾಯಿತು. ಅನೇಕ ಮಂದಿ ವಿದ್ಯಾರ್ಥಿಗಳು ನಡೆದೇ ಪರೀಕ್ಷಾ ಕೇಂದ್ರ ತಲುಪಿದರು.
Tagged with
dk,
lnews
ಮಂಗಳೂರು : ಮಲೇರಿಯಾ ನಿಯಂತ್ರಣ ಔಷಧಿಯ ಪ್ರಾಯೋಗಿಕ ಪರೀಕ್ಷೆ ವೇಳೆ ಅಸ್ವಸ್ಥಗೊಂಡ ಸಿಬ್ಬಂದಿಗೆ ಮನಪಾ ವತಿಯಿಂದ ಸೂಕ್ತ ಚಿಕಿತ್ಸೆ ದೊರಕಿಸಿ ಕೊಡುವುದಾಗಿ ಮಂಗ ಳೂರು ಮಹಾನಗರ ಪಾಲಿಕೆ ಆಯು ಕ್ತರು ತಿಳಿಸಿದ್ದಾರೆ.
ಪತ್ರಿಕೆ ಜೊತೆ ಮಾತನಾಡಿದ ಮನಪಾ ಆಯುಕ್ತರಾದ ಹರೀಶ್ ಅವರು ಮಲೇರಿಯಾ ನಿಯಂತ್ರಣ ಔಷಧಿಯ ಪ್ರಾಯೋಗಿಕ ಪರೀಕ್ಷೆ ಬಗ್ಗೆ ಆರೋಗ್ಯಾಧಿಕಾರಿಗಳೇ ಜವಬ್ದಾರಿ ವಹಿಸಿಕೊಂಡಿದ್ದರು. ಸಿಬ್ಬಂದಿಗೆ ತೊಂದರೆ ಆಗಿರುವ ಬಗ್ಗೆಯೂ ನನಗೆ ಯಾವುದೇ ರೀತಿಯ ಮಾಹಿತಿಯೂ ಬಂದಿಲ್ಲ. ಪತ್ರಿಕೆಯಲ್ಲಿ ಬಂದಿರುವ ವರದಿಯನ್ನು ಗಮನಿಸಿ ಆರೋಗ್ಯಾ ಧಿಕಾರಿಯವರಲ್ಲಿ ವಿಚಾರಿಸಿದಾಗ ಸಿಬ್ಬಂದಿಗೆ ತೊಂದರೆ ಆಗಿರುವುದು ನಿಜ ಎಂದು ತಿಳಿಸಿದ್ದಾರೆ. ಹೀಗಾಗಿ ಅಸ್ವಸ್ಥಗೊಂಡ ಸಿಬ್ಬಂದಿಗೆ ಮನಪಾ ವತಿಯಿಂದಲೇ ಚಿಕಿತ್ಸೆ ಒದಗಿಸಿ ಕೊಡುವುದಲ್ಲದೆ ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ವಿಶೇಷ ಎಂದರೆ ಮಲೇರಿಯಾ ನಿಯಂತ್ರಣ ಔಷಧಿಯ ಪ್ರಾಯೋಗಿಕ ಪರೀಕ್ಷೆ ಮನಪಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದರೂ ಆರೋಗ್ಯಾಧಿ ಕಾರಿಗಳು ಈ ಬಗ್ಗೆ ಆಯುಕ್ತರ ಗಮನಕ್ಕೆ ತಂದಿಲ್ಲ. ಈ ಪರೀಕ್ಷೆಯಿಂದ ಸಿಬ್ಬಂದಿಗೆ ತೊಂದರೆ ಆದಾಗಲೂ ಆಯುಕ್ತರಿಗೆ ತಿಳಿಸಿಲ್ಲ. ಅಸ್ವಸ್ಥಗೊಂಡ ಸಿಬ್ಬಂದಿಯೇ ಮೇಯರ್ ಹಾಗೂ ಆಯುಕ್ತರಲ್ಲಿ ತಮ್ಮ ಸಮಸ್ಯೆ ತೋಡಿಕೊಳ್ಳಲು ಮುಂದಾ ಗಿದ್ದರು. ಅಧಿಕಾರಿಗಳ ಈ ಬೇಜವಾ ಬ್ದಾರಿತನದಿಂದಾಗಿ ಸಾಮಾನ್ಯ ನೌಕ ರರು ತೊಂದರೆ ಪಡುವಂತಾಗಿದ್ದು ಮೇಯರ್ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Tagged with
dk,
lnews
ಶೋಭಾ ಕರಂದ್ಲಾಜೆ ಆರೋಪ
ಬೆಂಗಳೂರು: ತೈಲ ಕಂಪೆನಿಗಳು ಮತ್ತು ಗ್ಯಾಸ್ ಏಜೆನ್ಸಿಗಳ ನಡುವೆ ಅಕ್ರಮ ಹೊಂದಾಣಿಕೆ ಏರ್ಪಟ್ಟ ಪರಿಣಾಮ ವಾಗಿ ರಾಜ್ಯದಲ್ಲಿ ಅಡುಗೆ ಅನಿಲದ ಕೃತಕ ಕೊರತೆ ಸೃಷ್ಟಿಯಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಪೂರೈಕೆ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕೃತಕ ಕೊರತೆಗೆ ರಾಜ್ಯ ಸರ್ಕಾರ ಹೊಣೆ ಅಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು ತೈಲ ಕಂಪೆನಿ ಮತ್ತು ಎಜೆನ್ಸಿಗಳ ನಡುವಿನ ಅಕ್ರಮ ಹೊಂದಾ ಣಿಕೆ ತಡೆಗಟ್ಟಲು ಕೇಂದ್ರ ತಕ್ಷಣವೇ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ದರು. ಇವರ ಅಕ್ರಮ ಹೊಂದಾಣಿಕೆ ಯಿಂದಲೇ ರಾಜ್ಯದಲ್ಲಿ ೨೦ ಲಕ್ಷಕ್ಕೂ ಹೆಚ್ಚು ಅನಧೀಕೃತ ಅಡುಗೆ ಅನಿಲದ ಸಂಪರ್ಕಗಳಿವೆ ಎಂಬುದು ನಮ್ಮ ಇತ್ತೀಚಿನ ಪರಿಶೀಲನಾ ಕಾರ್ಯದಿಂದ ಬಹಿರಂಗಗೊಂಡಿದೆ. ದಾಖಲೆ ಸಮೇತ ಕೇಂದ್ರಕ್ಕೆ ಮಾಹಿತಿ ನೀಡಿದ್ದರೂ ಇದುವರೆಗೂ ಯಾವುದೇ ಕಠಿಣ ನಿಲುವು ತೆಗೆದುಕೊಳ್ಳಲು ಕೇಂದ್ರ ವಿಫಲವಾಗಿದೆ ಎಂದು ದೂರಿದರು.
ಈ ಸಮಸ್ಯೆ ಕೇವಲ ಕರ್ನಾಟಕ ದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಆಗಿದೆ ಎಂದ ಅವರು,ಇಷ್ಟೆಲ್ಲದರ ನಡುವೆ ನಾವು ರಾಜ್ಯದ ಗ್ರಾಹಕರ ಹಿತ ರಕ್ಷಿಸಲು ಮಧ್ಯೆ ಪ್ರವೇಶಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ ಅಂತ ನುಡಿದರು. ಇವತ್ತಿಗೂ ತೈಲ ಕಂಪೆನಿಗಳ ಬಳಿ ರಾಜ್ಯದ ಗ್ರಾಹಕರ ಕುರಿತು ವಿವರವೇ ಇಲ್ಲ.ಈ ವಿವರ ಸಂಪೂರ್ಣ ವಾಗಿ ಗ್ಯಾಸ್ ಏಜೆನ್ಸಿಗಳ ಬಳಿಯಿದೆ. ಹೀಗಾಗಿ ತೈಲ ಕಂಪೆನಿಗಳು ರಾಜ್ಯದಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರ ವಿವರ ಪಡೆಯಬೇಕು.
ಆದರೆ ತೈಲ ಕಂಪೆನಿಗಳು ಇಂತಹ ವಿವರವನ್ನೇ ಹೊಂದಿರುವುದಿಲ್ಲ. ಪರಿಣಾಮವಾಗಿ ಗ್ಯಾಸ್ ಏಜೆನ್ಸಿಗಳು ನಕಲಿ ಗ್ರಾಹಕರನ್ನು ಸೃಷ್ಟಿಸಿ ಆಟೋ ಗಳಿಗೆ, ಹೋಟೆಲ್‌ಗಳಿಗೆ ಸೇರಿದಂತೆ ವಿವಿಧ ಮೂಲಗಳಿಗೆ ಅಕ್ರಮವಾಗಿ ಸರಬರಾಜು ಮಾಡುತ್ತಿವೆ. ಇದು ನಿಲ್ಲ ಬೇಕೆಂದರೆ ತೈಲ ಕಂಪೆನಿಗಳು ಆಯಾ ರಾಜ್ಯಗಳ ಗ್ರಾಹಕರ ನೈಜ ವಿವರ ಪಡೆದು ಅದರ ಆಧಾರದ ಮೇಲೆ ಅಡುಗೆ ಅನಿಲ ವಿತರಣೆ ಮಾಡಬೇಕು ಎಂದರು.
ಇನ್ನು ಅಡುಗೆ ಅನಿಲ ವಿತರಣೆ ಯಲ್ಲಿ ಆಗುತ್ತಿರುವ ವಿಳಂಬಕ್ಕೆ ಎರಡು ಬಾರಿ ನಡೆದ ಲಾರಿ ಮುಷ್ಕರವೇ ಕಾರಣ ಎಂದು ತೈಲ ಕಂಪನಿಗಳು ಹೇಳುತ್ತವೆ. ಹೀಗಾಗಿಯೇ ಸಧ್ಯಕ್ಕೆ ಅಡುಗೆ ಅನಿಲ ವಿತರಣೆಯಲ್ಲಿ ತೊಂದರೆಯಾಗುತ್ತಿದೆ ಎಂದು ವಿವರಿಸುತ್ತಿವೆ.
ಆದರೆ ಕೇಂದ್ರ ಸರ್ಕಾರ ತಕ್ಷಣವೇ ತೈಲ ಕಂಪನಿಗಳಿಗೆ ಒಂದು ಷರತ್ತು ವಿಧಿಸಿ ಅಡುಗೆ ಅನಿಲ ವಿತರಣೆಗೆ ಪೂರಕವಾಗಿ ಲಾರಿಗಳನ್ನು ಹೊಂದಿರ ಬೇಕು ಎಂದು ಹೇಳಬೇಕು.ಶೇಕಡಾ ನೂರಕ್ಕೆ ನೂರರಷ್ಟು ಅಲ್ಲವಾದರೂ ಶೇಕಡಾ ಐವತ್ತರಷ್ಟು ಲಾರಿಗಳನ್ನಾದರೂ ತೈಲ ಕಂಪೆನಿಗಳು ಹೊಂದಿರಬೇಕು. ಇದರಿಂದ ಸಮಸ್ಯೆ ಬಗೆಹರಿಸಬಹುದು ಎಂದರು.
Tagged with
gas,
shobha,
snews
ಮಣಿಪಾಲ: ಮಗಳು ನಾಪತ್ತೆಯಾಗಿರುವ ಕುರಿತು ಮಲ್ಪೆ ಪೊಲೀಸರಿಗೆ ದೂರು ನೀಡಲು ಹೋದ ಬಡ ಕೂಲಿ ಕಾರ್ಮಿಕೆ ತಾಯಿಯನ್ನು ಹಿಂತಿರುಗಿಸಿ ಒಂದು ವಾರ ಸಂಬಂಧಿಕರ ಮನೆಗಳಲ್ಲಿ ಹುಡುಕಿ ಬಳಿಕ ದೂರು ನೀಡಲು ಹೇಳಿದ ಪೊಲೀಸರು ನಾಪತ್ತೆಯಾಗಿ ಎರಡು ತಿಂಗಳಾದರೂ ಪತ್ತೆ ಮಾಡದ ಹಿನ್ನೆಲೆಯಲ್ಲಿ ನೊಂದ ತಾಯಿ ದಸಂಸ ನೇತೃತ್ವದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವ ಎಚ್ಚರಿಕೆಯನ್ನು ನೀಡಿ ದ್ದಾರೆನ್ನಲಾಗಿದೆ.
ಮಲ್ಪೆ ಉಜಾರುಬೆಟ್ಟು ನಿವಾಸಿ ಶಾರದಾ ಎಂಬವರ ಮಗಳು ಉಷಾ (೧೭) ಎಂಬಾಕೆ ಮಾ.೬ರಂದು ನಾಪತ್ತೆಯಾಗಿದ್ದಾಳೆ. ಅಂದು ಸಂಜೆ ದೂರು ನೀಡಲು ಹೋದ ಆಕೆಯ ತಾಯಿಯನ್ನು ಹಿಂದಕ್ಕೆ ಕಳುಹಿಸಿದ ಮಲ್ಪೆ ಪೊಲೀಸರು ಸ್ಥಳೀಯ ಪರಿಸರದಲ್ಲಿ ಹುಡುಕಿ ಮತ್ತೆ ಒಂದು ವಾರ ಬಿಟ್ಟು ಬನ್ನಿ ಎಂದು ವಾಪಸ್ ಕಳುಹಿಸಿದ್ದರು. ನಂತರ ದೂರು ದಾಖಲಿಸಿರುವ ಪೊಲೀಸರು ಎರಡು ತಿಂಗಳಾದರೂ ಪತ್ತೆ ಮಾಡದೇ ಅಸಡ್ಡೆ ವಹಿಸಿದ್ದಾರೆ. ಅಲ್ಲದೆ ಆಕೆಯನ್ನು ಹುಡುಕಿಕೊಡಲು ಆಗುವ ಖರ್ಚು ರೂ.೧,೫೦೦ ನ್ನು ನೀಡಬೇಕೆಂದು ಶಾರದಾ ಅವರನ್ನು ಒತ್ತಾಯಿಸಿ ದ್ದರೆನ್ನಲಾಗಿದೆ.
ಪ್ರಿಯತಮನೊಂದಿಗೆ ಪರಾರಿ
ಉಡುಪಿಯ ಫ್ಯಾನ್ಸಿ ಸ್ಟೋರ್ ಒಂದರಲ್ಲಿ ಕೆಲಸಕ್ಕಿದ್ದ ಉಷಾಳಿಗೆ ಬಸ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕೆಳ ನೇಜಾರಿನ ಅವಿನಾಶ್ ಪೂಜಾರಿ ಎಂಬಾತನೊಂದಿಗೆ ಪರಿಚಯವಾಗಿ ಬಳಿಕ ಪ್ರೇಮಾಂಕುರವಾಗಿತ್ತೆನ್ನಲಾಗಿದೆ. ಅವರಿಬ್ಬರೂ ಜತೆಯಾಗಿಯೇ ಪರಾರಿ ಯಾಗಿರಬೇಕೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ನಾಪತ್ತೆ ಯಾದ ಕೆಲ ದಿನಗಳಲ್ಲಿ ಯುವತಿ ಮಾವನಿಗೆ ಕಲ್ಲಿಕೋಟೆಯಿಂದ ಯುವಕ ನೋರ್ವ ಕರೆ ಮಾಡಿ ‘ನಾನು ಅವಳನ್ನು ಅಪಹರಿಸಿಲ್ಲ, ಅವಳಾಗಿಯೇ ಬಂದಿರು ವುದಾಗಿ ಹೇಳಿ ಫೋನ್ ಕಟ್ ಮಾಡಿ ದ್ದನು. ಆನಂತರವೂ ಪೊಲೀಸರಿಗೆ ತಿಳಿಸಿದ್ದರೂ ಅವರು ತನಿಖೆ ನಡೆಸಿರಲಿಲ್ಲ. ಯುವಕ ಮುಂಬೈ ಹೊಟೇಲಿನಲ್ಲಿ ಕೆಲಸಕ್ಕಿದ್ದು, ಆತ ಉಷಾಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಮಾರಾಟ ಮಾಡಿರಬಹುದೆಂಬ ಶಂಕೆಯನ್ನು ದಸಂಸ ವ್ಯಕ್ತಪಡಿಸಿ, ಈ ಹಿನ್ನೆಲೆಯಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಮುಂದಾಗಿ ದ್ದಾರೆನ್ನಲಾಗಿದೆ.
Tagged with
lnews,
udupi
ಬೆಂಗಳೂರು: ಒಬ್ಬ ವ್ಯಕ್ತಿ ನಡೆಸುವ ಭ್ರಷ್ಟಾಚಾರಕ್ಕೆ ಪಕ್ಷ ಹೊಣೆ ಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ವ್ಯಂಗ್ಯವಾಡಿರುವ ಬೆನ್ನಲ್ಲೇ, ಮಾಜೀ ಮುಖ್ಯಮಂತ್ರಿ ಯಡಿಯೂರಪ್ಪ, ಭ್ರಷ್ಟಾಚಾರಕ್ಕೆ ಪಕ್ಷ ಮಾತ್ರವಲ್ಲ, ವ್ಯಕ್ತಿಯ ಕುಟುಂಬವೂ ಹೊಣೆಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಮಾಧ್ಯಮದ ಮೂಲಕವೇ ಒಬ್ಬರನ್ನೊಬ್ಬರು ತಿವಿಯುವ ಕೆಲಸ ಮಾಡಿಕೊಳ್ಳು ತ್ತಿದ್ದಾರೆ. ಈಶ್ವರಪ್ಪ ಅವರ ಇತ್ತೀಚಿನ ಹೇಳಿಕೆಗಳು ಅರ್ಥವಾಗುತ್ತದೆ.ಆದರೆ ಅದೇ ಕಾಲಕ್ಕೆ ಈಶ್ವರಪ್ಪ ಅವರೂ ನನ್ನ ಮಾತನ್ನು ಅರ್ಥ ಮಾಡಿಕೊಳ್ಳಲಿ ಎಂದ ಅವರು,ಒಬ್ಬ ವ್ಯಕ್ತಿ ನಡೆಸುವ ಭ್ರಷ್ಟಾ ಚಾರಕ್ಕೆ ಆತನೇ ಹೊಣೆ ಎಂಬುದು ನನಗೂ ಗೊತ್ತಿದೆ ಎಂದರು.
ಇಂತಹ ಪ್ರಕರಣಗಳ ಕುರಿತು ನ್ಯಾಯಾಲಯ ವಿಚಾರಣೆ ಮಾಡುತ್ತದೆ.ತಪ್ಪು ಮಾಡದಿದ್ದವರು ಬಚಾವಾಗಿ ಹೊರ ಬರುತ್ತಾರೆ.ತಪ್ಪು ಮಾಡಿದ್ದರೆ ಶಿಕ್ಷೆಗೆ ಗುರಿ ಆಗುತ್ತಾರೆ ಎಂದರು.
ವಿಧಾನಪರಿಷತ್ ಚುನಾವಣೆ ಯಲ್ಲಿ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣಕ್ಕಿಳಿ ಯಲಿದ್ದಾರೆ ಎಂದು ನುಡಿದರು.
ಭೂ ಹಗರಣ ಸೇರಿದಂತೆ ಯಾವುದೇ ಪ್ರಮುಖ ಹಗರಣಗಳ ತನಿಖೆ ನಡೆಸುವ ಅಧಿಕಾರಿಗಳಿಗೆ ಇನ್ನು ಮುಂದೆ ರಾಜ್ಯ ಸರ್ಕಾರ ಸೂಕ್ತ ರಕ್ಷಣೆ ಒದಗಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
Tagged with
snews,
yeddi
ಬೆಂಗಳೂರು: ಯಡಿಯೂರಪ್ಪ ಪಕ್ಷ ತೊರೆದರೆ ಅವರನ್ನು ಬೆಂಬಲಿಸುವ ೩೪ ಸಚಿವ, ಶಾಸಕರ ಕ್ಷೇತ್ರಗಳಿಗೆ ಬಿಜೆಪಿ ಪರ್ಯಾಯ ಅಭ್ಯರ್ಥಿಗಳನ್ನು ಗುರುತಿಸಿದೆ.
ಅಲ್ಲದೆ ಮುಂಬರುವ ವಿಧಾನ ಸಭಾ ಚುನಾವಣೆಗೆ ಸಜ್ಜಾಗುವಂತೆ ಸೂಚಿಸಿದೆ. ಒಂದು ವೇಳೆ ಇವರು ಪಕ್ಷದಿಂದ ತೊರೆಯದಿದ್ದರೂ ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೇಟು ನೀಡುವುದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಪಕ್ಷದ ಆಂತರಿಕ ಕಲಹಕ್ಕೆ ಎಡೆಮಾಡಿ ಪಕ್ಷದ ವರ್ಚಸ್ಸು ಮತ್ತು ಸರಕಾರಕ್ಕೆ ಧಕ್ಕೆ ತಂದಿದ್ದಾರೆ.
ಈ ಹಿನ್ನಲೆಯಲ್ಲಿ ಇವರಿಗೆ ಟಿಕೇಟು ನೀಡಬಾರದೆಂದು ಬಿಜೆಪಿ ನಿರ್ಧರಿಸಿದೆ. ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ರೇಣುಕಾಚಾರ್ಯ, ಶಾಸಕರಾದ ಬಿ.ಪಿ.ಹರೀಶ್, ಗೋಪಾಲಕೃಷ್ಣ, ಹಾಲಪ್ಪ ಸೇರಿದಂತೆ ೩೪ ಮಂದಿಗೆ ಟಿಕೇಟು ನೀಡದಿರಲು ಬಿಜೆಪಿ ನಿರ್ಧರಿಸಿದೆ.ಅಲ್ಲದೆ ಈ ಕ್ಷೇತ್ರಗಳಲ್ಲಿ ಈಗಾಗಲೇ ಪರ್ಯಾಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಹೊಣೆಗಾರಿಕೆ ವಹಿಸಿದೆ. ಈ ೩೪ ಮಂದಿಯಲ್ಲಿ ಬಹುತೇಕರು ಕಾಂಗ್ರೆಸ್, ಜನತಾಪರಿವಾರದಿಂದ ಬಂದವರಾಗಿದ್ದಾರೆ. ಈ ಕ್ಷೇತ್ರಗಳಲ್ಲಿ ಮೂಲ ಬಿಜೆಪಿ ಇಲ್ಲವೇ ಆರ್‌ಎಸ್‌ಎಸ್ ಕಾರ್ಯಕರ್ತರನ್ನೇ ಆಯ್ಕೆ ಮಾಡಲಾಗಿದೆ.ಹೊರಗಿನವರಿಗೆ ಅವಕಾಶ ನೀಡದಿರಲು ಪಕ್ಷ ತೀರ್ಮಾನಿಸಿದೆ. ಯಡಿಯೂರಪ್ಪ ಪಕ್ಷ ತೊರೆಯುವುದು ಬಹುತೇಕ ಖಚಿತ. ಅವರ ಹಿಂದೆ ತಕ್ಷಣವೆ ಇಲ್ಲವೇ ಚುನಾವಣಾ ಸಂದರ್ಭದಲ್ಲಿ ಹೊರಹೋಗದಿದ್ದರೂ ಅವರಿಗೆ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ. ಅಲ್ಲದೆ ಕಳೆದ ಚುನಾವಣೆಯಲ್ಲಿ ಪರಾಭವಗೊಂಡು ಯಡಿಯೂರಪ್ಪ ಬೆಂಬಲಕ್ಕೆ ನಿಂತಿರುವ ಕ್ಷೇತ್ರಗಳಲ್ಲೂ ಪರ್ಯಾಯ ಅಭ್ಯರ್ಥಿಗಳ ಆಯ್ಕೆ ನಡೆದಿದೆ. ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ಈ ಕ್ಷೇತ್ರಗಳಲ್ಲೇ ಬಿಡಾರ ಹೂಡಿ ಅಭ್ಯರ್ಥಿಗಳ ಆಯ್ಕೆ ಮಾಡಿದ್ದಾರೆ.
Tagged with
snews,
yeddi
ಮಂಗಳೂರು: ನಿನ್ನೆ ಬಿಜೆಪಿ ಯುವಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿದ್ದ ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಅವರು, ವೆನ್‌ಲಾಕ್ ಆಸ್ಪತ್ರೆಗೆ ಭೇಟಿಕೊಟ್ಟು ಅವ್ಯವಸ್ಥೆಯ ಕುರಿತು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಇದೇ ವೇಳೆ ಮಾಧ್ಯಮದ ಜೊತೆ ಮಾಡಾಡಿದ ರಾಮದಾಸ್ ಅವರು, ವೆನ್‌ಲಾಕ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಹಗರಣ, ಅವ್ಯವಸ್ಥೆಯ ಬಗ್ಗೆ ನೂರಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ತನಿಖೆಗಾಗಿ ಬೆಂಗಳೂರಿನಿಂದ ಡಾ. ರಘುಪತಿ ಎಂಬವರ ಸಮಿತಿ ರಚಿಸಿ, ವರದಿ ತರಿಸಿಕೊಂಡಿದ್ದೇನೆ. ಇಲ್ಲಿನ ಅವ್ಯವಸ್ಥೆಯನ್ನು ಗಮನಿಸಿದ್ದೇನೆ ಎಂದರು.
ವೆನ್‌ಲಾಕ್ ಆಸ್ಪತ್ರೆಯನ್ನು ಕೆಎಂಸಿ ಸಹಯೋಗದೊಂದಿಗೆ ನಡೆಸಲಾಗುತ್ತಿದ್ದು, ಕೆಎಂಸಿ ನಿರ್ಲಕ್ಷ್ಯ ತಳೆದಿದೆ ಎಂದು ರಾಮದಾಸ್ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ೧೧೦ ಮಂದಿ ವೈದ್ಯರು ಇರಬೇಕಿದ್ದು, ಪ್ರಸ್ತುತ ೫೮ ಮಂದಿ ಮಾತ್ರ ಇದ್ದಾರೆ. ಅವರಲ್ಲಿ ೧೧ ಮಂದಿ ವೈದ್ಯರು ಒಂದು ತಿಂಗಳಿಂದ ಹಾಗೂ ೯ ಮಂದಿ ವೈದ್ಯರು ಒಂದು ವಾರದಿಂದ ಕೆಲಸಕ್ಕೆ ಬಂದಿಲ್ಲ ಎಂದರು. ಆಸ್ಪತ್ರೆಯ ಅವ್ಯವಹಾರವನ್ನು ತಡೆಗಟ್ಟಲು ಶೀಘ್ರವೇ ಮಂಗಳೂರಿನಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಚಿಂತಿಸಲಾಗಿದೆ ಎಂದು ರಾಮದಾಸ್ ಹೇಳಿದ್ದಾರೆ.
Tagged with
dk,
lnews,
ramdas,
wenlock
ಮಂಗಳೂರು: ಕಾಸರಗೋಡುವಿನ ಕುಖ್ಯಾತ ತಳಂಗರೆ ಖಾಸಿಲೇನ್ ಜೋಡಿ ಕೊಲೆ ಪ್ರಕರಣದ ದೋಷಾರೋಪ ಪಟ್ಟಿಯನ್ನು ಪ್ರಥಮ ದರ್ಜೆ ನ್ಯಾಯಾಲಯವು ವಿಚಾರಣಾ ನ್ಯಾಯಾಲಯವಾದ ಜಿಲ್ಲಾ ಸೆಷನ್ಸ್ ನ್ಯಾಯಾಲ ಯಕ್ಕೆ ಸಲ್ಲಿಸಿದೆ.
ಬೆಂಗಳೂರು ದಂಡುಪಾಳ್ಯ ತಂಡಕ್ಕೆ ಸೇರಿದ ತಿರುಪಟೂರು ಈಚನ್ನೂರಿನ ವೆಂಕಟ ಯಾನೆ ರಮೇಶ(೨೮), ಆತನ ಪತ್ನಿ ಪದ್ಮಾ, ಬೆಂಗಳೂರು ಕುದುಕೋಳಿ ದೀನಾರ್ ಕಾಲನಿಯ ವೆಂಕಟೇಶ್(೩೩), ಆತನ ಪತ್ನಿ ಸಾವಿತ್ರಿ(೨೩), ಬೆಂಗಳೂರು ದಂಡುಪಾಳ್ಯದ ದೊಡ್ಡ ಹನುಮ(೩೬), ಪೆರಿಯ ಪಟ್ಟಣದ ನೆಲ್ಲತಿಮ್ಮ(೨೮), ಬೆಂಗಳೂರು ಹೊಸಕೋಟೆ ದೊಡ್ಡ ಹನುಮನ ಪತ್ನಿ ಲಕ್ಷ್ಮೀ(೩೦) ಮತ್ತು ತಿರುಪಟ್ಟೂರು ಈಚನ್ನೂರಿನ ಕೃಷ್ಣಡು(೨೦) ಪ್ರಕರಣದ ಆರೋಪಿಗಳಾಗಿದ್ದಾರೆ.
ಆರೋಪಿಗಳನ್ನು ಬೆಂಗಳೂರು ಪರಪ್ಪನ ಆಗ್ರಹಾರ ಸೆಂಟ್ರಲ್ ಜೈಲಿನಿಂದ ಕಾಸರಗೋಡು ಪೊಲೀಸರು ಭದ್ರತೆಯೊಂದಿಗೆ ಕರೆತಂದು ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ರ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಬಳಿಕ ಈ ಪ್ರಕರಣದ ದೋಷಾರೋಪ ಪಟ್ಟಿಯಯನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದರು. ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.
Tagged with
dk,
lnews
ಮಂಗಳೂರು: ನಮ್ಮ ದೇಶದಲ್ಲಿ ಸಾಕಷ್ಟು ಭಯೋತ್ಪಾದನಾ ದಾಳಿ ನಡೆದಿವೆ. ಸಂಸತ್ ಮೇಲೆ ಉಗ್ರ ಅಫ್ಜಲ್ ಗುರು ನಡೆಸಿದ ದಾಳಿಗೆ ಸಂಬಂಧಪಟ್ಟಂತೆ ಆತನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಗಲ್ಲು ಶಿಕ್ಷೆಯ ತೀರ್ಪು ಹೊರಬಂದರೂ ಅದು ಜಾರಿಗೆ ಬಂದಿಲ್ಲ. ಭಯೋತ್ಪಾದಕರಿಗೆ ಗಲ್ಲು ಶಿಕ್ಷೆಯ ವಿಷಯ ಬಂದಾಗ ಕಾಂಗ್ರೆಸ್ ಮುಖಂಡರ ಕೈಕಾಲುಗಳು ನಡುಗುತ್ತವೆ ಎಂದು ಭಾರತೀಯ ಜನಾತಾಪಕ್ಷದ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅನುರಾಗ್ ಸಿಂಗ್ ಠಾಕೂರ್ ಕಿಡಿ ಕಾರಿದರು.
ಮನ್‌ಮೋಹನ್‌ಸಿಂಗ್ ಪ್ರಧಾನಿ ಯಾಗಿ ಅಧಿಕಾರ ವಹಿಸಿಕೊಂಡಾಗ ಅರ್ಥಶಾಸ್ತ್ರ ತಜ್ಞ ಎನ್ನುವ ಹೆಮ್ಮೆ ದೇಶದ ಜನರಿಗಿತ್ತು. ಆದರೆ ಅವರ ಎಂಟು ವರ್ಷಗಳ ಆಡಳಿತದ ಅವಧಿಯಲ್ಲಿ ಕಳೆದ ೬೦ ವರ್ಷಗಳಲ್ಲಿ ನಡೆಯದಂತಹ ಹಗರಣಗಳು ನಡೆದಿವೆ. ಬಡಜನರು ಹಸಿವಿನಿಂದ ಸಾವೀಗೀಡಾಗುತ್ತಿದ್ದರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಲೆಯೇರಿಕೆ, ಭ್ರಷ್ಟಾಚಾರ, ಹಗರಣಗಳೇ ಅವರು ಜನತೆಗೆ ನೀಡಿದ ಕೊಡುಗೆಯಾಗಿದೆ. ಆದರೆ ಸೋನಿಯಾ ಗಾಂಧಿ ಪ್ರಧಾನಿಗೆ ಪತ್ರ ಬರೆಯುವಲ್ಲಿ ನಿರತರಾಗಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ಪ್ರತಿಯೊಬ್ಬ ಮಂತ್ರಿಗಳೂ ಅನಾರೋಗ್ಯ ಪೀಡಿತರಾದರೆ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುತ್ತಾರೆ. ಈ ರೀತಿಯಾದರೆ ಆರೋಗ್ಯ ಸಚಿವರು ಇರುವುದಾದರೂ ಯಾಕೆ? ಅವರ ಅರೋಗ್ಯ ಭಾರತದ ವೈದ್ಯರಿಂದ ಸರಿಯಾಗುವುದಿಲ್ಲ ಎನ್ನುವ ಸಂಶಯ ಇದ್ದ ಮೇಲೆ ಅವರು ಹೇಳುವ ಮಾತನ್ನು ನಾವು ನಂಬಬೇಕೇ? ಎಂದು ಪ್ರಶ್ನಿಸಿದ ಖ್ಯಾತ ಲೇಖಕ ಚಕ್ರವರ್ತಿ ಸೂಲಿಬೆಲೆ, ನಾವು ಸ್ವಾಭಿಮಾನಿ ಶೂನ್ಯರಾಗಿ ಬದುಕುವುದನ್ನು ಕೈಬಿಡಬೇಕು ಎಂದು ಕಿವಿಮಾತು ಹೇಳುವ ಮೂಲಕ ವೇದಿಕೆಯಲ್ಲಿದ್ದ ಮಂತ್ರಿಗಳಿಗೆ ಮಾತಿನ ಚಾಟಿ ಬೀಸಿದರು.
ಯುವಕರಿಗೆ ರಾಜಕಾರಣದಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್, ಲಾಲ್ ಬಹುದ್ದೂರ್ ಶಾಸ್ತ್ರಿ ಮತ್ತು ಅಟಲ್ ಬಿಹಾರಿ ವಾಜಪೇಯಿ ರೋಲ್ ಮಾಡೆಲ್‌ಗಳಾಗಿರಬೇಕು. ಅವರಲ್ಲದೆ ಇನ್ಯಾರನ್ನೂ ರೋಲ್‌ಮಾಡೆಲ್‌ಗಳಾಗಿ ಕಾಣಬಾರದು ಎಂದು ಇದೇ ಸಂದರ್ಭ ಸೂಲಿಬೆಲೆ ಕಿವಿಮಾತು ಹೇಳಿದರು.
ಹೊರಜಿಲ್ಲೆಯವರದ್ದೇ ಕಾರುಬಾರು!
ನಿನ್ನೆ ನಗರದ ನೆಹರೂ ಮೈದಾನದಲ್ಲಿ ನಡೆದ ಬಿ.ಜೆ.ಪಿ. ಯುವಜಾಗೃತಿ ಸಮಾವೇಶದಲ್ಲಿ ಭಾರೀ ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದ್ದರು. ಇದನ್ನು ಕಂಡು ಸೂಲಿಬೆಲೆ, ಅನುರಾಗ್ ಠಾಕೂರ್ ಹಾಗೂ ಇತರರು ಹರ್ಷಚಿತ್ತರಾಗಿ ಹೊಗಳಿದ್ದೂ ನಡೆಯಿತು.
ಆದರೆ ಸಮಾವೇಶದಲ್ಲಿ ಭಾಗವಹಿಸಿದ್ದ ೮೫ಶೇ. ಜನರು ಹೊರಜಿಲ್ಲೆಯವರಾಗಿದ್ದು ವಿಶೇಷವಾಗಿತ್ತು. ಅವರನ್ನು ಸರಕಾರಿ ಹಾಗೂ ಖಾಸಗಿ ಬಸ್ಸುಗಳ ಮೂಲಕ ಕರೆತರಲಾ ಗಿತ್ತು. ದ.ಕ.ಜಿಲ್ಲೆಯ ಕಾರ್ಯಕರ್ತರ ಸಂಖ್ಯೆ ತೀರಾ ವಿರಳ ವಾಗಿತ್ತು. ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಉತ್ಸಾಹ ಭರಿತ ಭಾಷಣ ಮಾಡಿದರೂ ಚಪ್ಪಾಳೆ ಸದ್ಧು ಅಪರೂಪ ವಾಗಿದ್ದು, ಹೊರಜಿಲ್ಲೆಯವರಿಗೆ ಹಿಂದಿ ಭಾಷೆ ಬರದಿದ್ದು ಇದರಿಂದಲೇ ಸಾಬೀತಾಗಿತ್ತು.
ಈ ಬಗ್ಗೆ ಪಕ್ಷದ ಮುಖಂಡರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು. ಇದೆಲ್ಲವಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಂಡಾಯವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಸಮಾವೇಶದ ಯಾವುದೇ ಬ್ಯಾನರ್ ಕಟೌಟ್‌ಗಳಲ್ಲಿ ಯಡಿಯೂರಪ್ಪ ಅವರ ಭಾವಚಿತ್ರವೂ ಇರಲಿಲ್ಲ. ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅನಾರೋಗ್ಯದಿಂದಾಗಿ ಸಮಾವೇಶದಲ್ಲಿ ಗೈರು ಹಾಜರಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರನ್ನು ಮನೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
Tagged with
dk,
feature,
lnews
ಪೆನುಕೊಂಡ: ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲೊಂದಕ್ಕೆ ಡಿಕ್ಕಿ ಹೊಡೆದ ಭೀಕರ ದುರಂತದಲ್ಲಿ ೨೫ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ೫೦ಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದಾರೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಮಂಗಳವಾರ ಮುಂಜಾವಿನ ವೇಳೆ ಮೂರು ಗಂಟೆಗೆ ಹಂಪಿ ಎಕ್ಸ್‌ಪ್ರೆಸ್ ರೈಲಿನ ಡ್ರೈವರ್ ಪೆನಕೊಂಡ ರೈಲ್ವೆ ನಿಲ್ದಾಣದಲ್ಲಿ ಸಿಗ್ನಲ್‌ನ್ನು ಉಲ್ಲಂಘಿಸಿ ಮುಂದುವರಿದಿದ್ದೇ ದುರಂತಕ್ಕೆ ಕಾರಣವೆನ್ನಲಾಗಿದೆ. ಸದರ್ನ್ ರೈಲ್ವೆಗೆ ಒಳಪಟ್ಟಿರುವ ಪೆನಕೊಂಡದಲ್ಲಿ ಹಂಪಿ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳು ದುರಂತದಿಂದ ಹಾನಿಗೀಡಾಗಿವೆ. ಒಂದು ಬೋಗಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಅದರಲ್ಲಿದ್ದ ಕೆಲವು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ.
ಹುಬ್ಬಳ್ಳಿ ಮತ್ತು ಹೊಸಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ತಿಳಿದುಬಂದಿದೆ. ಈಗಾಗಲೇ ೨೫ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು ೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಅನಂತಪುರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಬೋಗಿಯೊಳಗೆ ಸಿಲುಕಿದ್ದವರನ್ನು ಹೊರಗೆ ತೆಗೆಯಲು ಗ್ಯಾಸ್ ಕಟ್ಟರ್‌ಗಳನ್ನು ಬಳಸಿಕೊಳ್ಳಲಾಗಿದೆ. ಅಗ್ನಿಶಾಮಕ ದಳ ಮತ್ತು ರೈಲ್ವೆ ಪೊಲೀಸರು ರಕ್ಷಣಾ ಕಾರ‍್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ರೈಲ್ವೆ ಮೂಲಗಳು ಹೇಳಿವೆ.
Tagged with
feature,
nnews,
train
ಉಡುಪಿ: ಅಪಘಾತದಿಂದ ಕಳೆದೊಂದು ವರ್ಷದಿಂದ ಕೋಮಾ ಸ್ಥಿತಿಯಲ್ಲಿದ್ದ ಮಾಜಿ ಸಂಸದ ಕೆ.ಜಿ.ಶಿವಪ್ಪ (೬೭) ನಿನ್ನೆ ಮುಂಜಾನೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
೨೦೧೧ ಜನವರಿಯಲ್ಲಿ ಶಿವಮೊಗ್ಗ ಮತ್ತು ಕುಮ್ಶಿ ಪ್ರದೇಶದ ನಡುವೆ ಇವರು ಸಂಚರಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ನಡೆದಿತ್ತು. ಇದರಿಂದ ಗಂಭೀರ ಗಾಯಗಳೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದ ತೀವ್ರತೆಗೆ ಒಂದು ವರ್ಷದಿಂದ ನಿನ್ನೆ ಮುಂಜಾನೆವರೆಗೂ ಕೋಮ ಸ್ಥಿತಿಯಲ್ಲಿದ್ದರು.
೧೯೯೧ ಸಾಲಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕ ಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಶಿವಮೊಗ್ಗ ಸಂಸದರಾಗಿ ಆಯ್ಕೆಗೊಂಡಿದ್ದರು. ಕಾರ್ಕಳ ಮಾಜಿ ಶಾಸಕ ಸುನಿಲ್ ಕುಮಾರ್ ಪತ್ನಿ ಪ್ರಿಯಾಂಕರ ತಂದೆಯಾಗಿರುವ ಇವರಿಗೆ ಪ್ರತಿಭಾ ಮತ್ತು ಪ್ರಶಾಂತ ಸೇರಿ ಒಟ್ಟು ಮೂವರು ಮಕ್ಕಳು. ಮಾಜಿ ಮುಖ್ಯಮಂತ್ರಿ ದಿ| ಬಂಗಾರಪ್ಪ ಅವರ ಪತ್ನಿ ಹಾಗೂ ಕೆ.ಜಿ.ಶಿವಪ್ಪ ಅವರ ಪತ್ನಿ ಸಹೋದರಿಯರಾಗಿದ್ದು, ಅವರಿಗೂ ಸಂಬಂಧಿಕರಾಗಿದ್ದಾರೆ.
ನಿನ್ನೆ ಸಂಜೆ ಸಾಗರದ ತ್ಯಾಗರ್ಪಿ ಎಂಬಲ್ಲಿಯ ಮಕ್ಕಳ ಮನೆಯಲ್ಲಿ ಕೆ.ಜಿ.ಶಿವಪ್ಪರ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತ ವಿಷಯ ತಿಳಿದೊಡನೆ ಆಸ್ಪತ್ರೆಗೆ ಮಾಜಿ ಶಾಸಕ ಸುನಿಲ್ ಕುಮಾರ್, ಶಾಸಕ ರಘುಪತಿ ಭಟ್, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಪ್ರ.ಕಾ.ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮತ್ತು ಬಿಜೆಪಿ ಪ್ರಮುಖರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
Tagged with
death,
feature,
lnews,
udupi
ಮಂಗಳೂರು: ಅವಿಭಜಿತ ಜಿಲ್ಲೆ ಯಾದ್ಯಂತದ ಹಲವಾರು ಪೊಲೀಸು ಠಾಣೆಯ ವ್ಯಾಪ್ತಿಯಲ್ಲಿ ಅನೇಕ ಕಳ್ಳತನ ನಡೆಸಿದ್ದ ಮತ್ತು ಇತ್ತೀಚೆಗೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಹೆಜಮಾಡಿಯ ದಾದಿಯೋರ್ವರ ಮನೆ ಬೀಗ ಮುರಿದು ಸಹಸ್ರಾರು ರೂಪಾಯಿ ಮೌಲ್ಯದ ಚಿನ್ನ ಮತ್ತು ಸೊತ್ತು ಅಪಹರಿಸಿದ್ದ ಕುಖ್ಯಾತ ಕಳ್ಳನೋರ್ವನನ್ನು ಕಾರ್ಕಳ ಡಿವೈಎಸ್ಪಿ ನೇತೃತ್ವದ ಅಪರಾಧ ಪತ್ತೆ ದಳದ ಪೊಲೀಸರು ಪಡುಬಿದ್ರಿ ಪೊಲೀಸರ ನೆರವಿನಿಂದ ನಿನ್ನೆ ಬಂಧಿಸಿದ್ದಾರೆ.
ಬಂಧನಕ್ಕೊಳಗಾದ ಕಳ್ಳ ಮೂಲತಃ ಕಟಪಾಡಿಯ ಪಳ್ಳಿಗುಡ್ಡೆ ನಿವಾಸಿಯಾಗಿದ್ದು ಕಳೆದೆರಡು ವರ್ಷ ಗಳಿಂದ ಹೆಜಮಾಡಿಯ ಕೊಕ್ರಾಣೆ ಎಂಬಲ್ಲಿ ವಾಸಿಸುತ್ತಿದ್ದ ವಿಜಯ ಕುಮಾರ್ ಯಾನೆ ಗೌರೀಶ ಯಾನೆ ಚಮ್ಮ ಎಂಬಾತನಾಗಿದ್ದಾನೆ. ಈತನಿಂದ ಮೇ ಆರರಂದು ಹೆಜಮಾಡಿ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ದಾದಿ ಗೀತಾ ಎಂಬವರ ಮನೆ ಬಾಗಿಲು ಮುರಿದು ಕಳ್ಳತನ ನಡೆಸಿದ್ದ ಸುಮಾರು ೬೩ ಸಾವಿರ ರೂಪಾಯಿ ಮೌಲ್ಯದ ಒಂದೂವರೆ ಪವನಿನ ಒಂದು ಚಿನ್ನದ ಚೈನು, ಒಂದೂಕಾಲು ಪವನಿನ ಒಂದು ಚಿನ್ನದ ಚೈನು, ಹವಳದ ಉಂಗುರ ಮತ್ತು ಮೂರು ಸಾವಿರ ರೂ. ಮೌಲ್ಯದ ಮೊಬೈಲ್ ಒಂದನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ದಾದಿ ಗೀತಾ ಎಂಬವರು ಮಂಜೇಶ್ವರದ ಮನೆಗೆಂದು ಸರಕಾರಿ ಆಸ್ಪತ್ರೆಯ ಹೆಜಮಾಡಿ ವಸತಿಗೃಹ ದಿಂದ ಗಂಡನೊಂದಿಗೆ ತೆರಳಿದ್ದಾಗ ಕಳ್ಳ ವಿಜಯಕುಮಾರ್ ಸಂದರ್ಭ ನೋಡಿ ಮನೆ ಹೊಕ್ಕು, ಗೀತಾಳ ಗಂಡ ಅಕ್ಕಿಯ ಡಬ್ಬಿಯೊಳಗೆ ಅಡಗಿ ಸಿಟ್ಟಿದ್ದ ಚಿನ್ನದೊಡವೆಗಳನ್ನು ಕಳವುಗೈದು ಪರಾರಿಯಾಗಿದ್ದ. ನಿನ್ನೆ ಸಂಜೆ ಸಂದೇಹಾಸ್ಪದ ರೀತಿಯಲ್ಲಿ ಕೊಕ್ರಾಣೆಯಲ್ಲೇ ಪೊಲೀಸರಿಂದ ಬಂಧಿಸ ಲ್ಪಟ್ಟಿದ್ದಾನೆ. ಆರೋಪಿ ವಿಜಯಕುಮಾರ್ ೨೦೦೪ನೇ ಇಸವಿಯಿಂದ ಕಳ್ಳತನದ ಅಪರಾಧ ಕ್ಕಿಳಿದಿದ್ದು, ಮಲ್ಪೆ ಠಾಣೆಯಲ್ಲಿ ಅಂಗಡಿ ಮುರಿದು ಕಂಪ್ಯೂಟರ್, ಸೊತ್ತು, ಉಡುಪಿ ನಗರ ಠಾಣೆಯಲ್ಲಿ ಬೈಕ್ ಮತ್ತು ಕಂಪ್ಯೂಟರ್, ದ.ಕ.ದ ಬರ್ಕೆಯಲ್ಲಿ ಎರಡು ಬೈಕ್, ಮುಲ್ಕಿ ಮಾನಂಪಾಡಿಯಲ್ಲಿ ಬೀಗ ಮುರಿದು ಕಳವು ಮತ್ತು ಕಿನ್ನಿಗೋಳಿ ತಾಳಿಪ್ಪಾಡಿಯಲ್ಲಿನ ಮನೆ ಕಳವು ಪ್ರಕರಣಗಳ ಆರೋಪಿಯೂ ಆಗಿದ್ದಾನೆ.
ಕಾರ್ಕಳ ಡಿವೈಎಸ್ಪಿ ಜಯಂತ್ ವಿ.ಶೆಟ್ಟಿಯವರ ತನಿಖಾ ತಂಡದ ಕಾನ್‌ಸ್ಟೇಬಲ್‌ಗಳಾದ ಸಂದೀಪ್ ಮತ್ತು ಸುರೇಶ್, ಪಡುಬಿದ್ರಿ ಠಾಣಾ ಉಪನಿರೀಕ್ಷಕ ಮಹಾದೇವ ಶೆಟ್ಟಿ ತಂಡದ ನೆರವಿನಿಂದ ಪತ್ತೆ ಕಾರ್ಯ ನಡೆಸಿದ್ದರು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Tagged with
cnews,
feature
ಮಂಗಳೂರು: ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಿಕ್ಷಾ ನಿಲ್ದಾಣಗಳ ಸ್ಥಾಪನೆಗೆ ಒತ್ತಾಯಿಸಿ ಇದೇ ತಿಂಗಳ ೨೫ರಂದು ಆಟೋರಿಕ್ಷಾ ಚಾಲಕರು ಉರ್ವಸ್ಟೋರಿನಿಂದ ಪಾದ ಯಾತ್ರೆ ಮೂಲಕ ದ.ಕ.ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಕಾರ್ಯಕ್ರಮ ಹಮ್ಮಿಕೊಂ ಡಿದ್ದಾರೆ.
ನಗರದಲ್ಲಿ ೫,೬೦೦ಕ್ಕೂ ಹೆಚ್ಚು ಆಟೋರಿಕ್ಷಾಗಳು ಓಡಾಡುತ್ತಿದ್ದು ೩೫೦ಕ್ಕೂ ಹೆಚ್ಚು ನಿಲ್ದಾಣಗಳನ್ನು ಗುರುತಿಸಲಾಗಿದೆ. ಆದರೆ ಕೇವಲ ೭೪ ಅಂಗಡಿಗಳು ಮಾತ್ರವೇ ಇವೆ. ಇವುಗಳ ಪೈಕಿ ಕೆಲವು ಪಾರ್ಕ್‌ಗಳು ರಸ್ತೆ ಅಗಲೀಕರಣದಿಂದಾಗಿ ಅವ್ಯವಸ್ಥೆ ಯಿಂದ ಕೂಡಿದೆ. ಇದರ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ೨೫ರಂದು ಬೆಳಗ್ಗೆ ಉರ್ವಸ್ಟೋರ್‌ನಿಂದ ಪಾದಯಾತ್ರೆ ಆರಂಭಿಸಿ ೧೧.೩೦ಕ್ಕೆ ಮಾನಪಾ ಎದುರು ಪ್ರತಿಭಟನೆ ನಡೆಸಲಾಗುತ್ತದೆ. ನಂತರ ಮಧ್ಯಾಹ್ನ ೨ ಗಂಟೆಯವರೆಗೆ ಜಿಲ್ಲಾಧಿ ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ನಿನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಐವನ್ ಡಿ’ಸೋಜ ತಿಳಿಸಿದ್ದಾರೆ.
Tagged with
auto,
dk,
feature,
lnews
ಇದು ಆಲೆಟ್ಟಿ-ಬಡ್ಡಡ್ಕ ರಸ್ತೆಯ ದುಸ್ಥಿತಿ
ಸುಳ್ಯ: ಅಂತಾರಾಜ್ಯ ರಸ್ತೆಯಾದ ಸುಳ್ಯ-ಆಲೆಟ್ಟಿ-ಬಡ್ಡಡ್ಕ ರಸ್ತೆಯ ದುರಸ್ಥಿ ಕಾರ್ಯಕ್ಕಾಗಿ ಮುಖ್ಯಮಂತ್ರಿಯ ಗ್ರಾಮೀಣ ಅಭಿವೃದ್ಧಿ ನಿಧಿಯಿಂದ ೨೫ ಲಕ್ಷ ರೂ ಬಿಡುಗಡೆಯಾಗಿದ್ದರೂ, ಡಾಮರು ಬಳಸದೆ ಹೊಂಡಗಳಲ್ಲಿ ದೊಡ್ಡ ಜಲ್ಲಿ ಮತ್ತು ಮಣ್ಣು ತುಂಬಿ ಮುಚ್ಚಲಾಗಿದೆ. ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಸಮ್ಮತಿ ಯೊಂದಿಗೆ ಈ ರೀತಿಯ ಕಾಟಾ ಚಾರದ ದುರಸ್ಥಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೊಂಡ ಗುಂಡಿ ತುಂಬಿ ಸಂಚಾರಕ್ಕೆ ದುಸ್ತರವಾದ ರಸ್ತೆಯ ಯಾತ್ರಿಕರ ಬವಣೆಗೆ ಪರಿಹಾರ ಎಂಬಂತೆ ಕೂರ್ನಡ್ಕದಿಂದ ಆಲೆಟ್ಟಿ ಸಮೀಪದ ಎಲಿಕ್ಕಳದವರೆಗೆ ರಸ್ತೆ ಅಭಿವೃದ್ಧಿ ಮಾಡಲು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿಯಿಂದ ಶಾಸಕ ಎಸ್.ಅಂಗಾರ ಅವರ ಪ್ರಯತ್ನದಿಂದ ೨೫ ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದರು. ಕೂರ್ನಡ್ಕ ದಿಂದ ಬಡ್ಡಡ್ಕದವರೆಗೆ ಡಾಮರು ಬಳಸಿ ಅಲ್ಲಲ್ಲಿ ದುರಸ್ಥಿ ಮಾಡಲಾಗಿದೆ.
ಬಡ್ಡಡ್ಕದಿಂದ ಎಲಿಕ್ಕಳದ ವರೆಗೆ ಮಣ್ಣು ಮತ್ತು ಜಲ್ಲಿ ತುಂಬ ಲಾಗಿದೆ. ಹಾಕಿದ ಮಣ್ಣೆಲ್ಲ ಈಗಾಗಲೇ ಧೂಳಾಗಿದ್ದು ಡಾಮರು ರಸ್ತೆ ಕಚ್ಚಾ ರಸ್ತೆಯಂತೆ ಧೂಳುಮಯವಾಗಿದೆ. ಜಲ್ಲಿ ಎದ್ದು ಬರ ತೊಡಗಿದೆ. ಇನ್ನು ಮಳೆ ಗಾದಲ್ಲಿ ಜಲ್ಲಿ ಎಲ್ಲವೂ ಎದ್ದು ರಸ್ತೆಯಲ್ಲಿ ಹರಡಿ ಸಂಚಾರ ನಡೆಸುವುದು ಹೇಗೆ ಎಂಬ ಚಿಂತೆ ಎಂದು ಸಾರ್ವಜನಿ ಕರನ್ನು ಕಾಡಿದೆ.
ಮಳೆಯ ಕಾರಣ ನೀಡಿ ಮಣ್ಣು ತುಂಬಿಸಿ ಈ ರೀತಿಯಲ್ಲಿ ದುರಸ್ಥಿ ಮಾಡಲಾಗಿದೆ ಎಂದು ಸಾರ್ವಜನಿಕರು ಕೇಳಿದಾಗ ಗುತ್ತಿಗೆದಾರರು ಮತ್ತು ಎಂಜಿನಿಯರ್ ಸಮಜಾಯಿಷಿಕೆ ನೀಡು ತ್ತಾರೆ. ಆದರೆ ಕಳೆದ ೧೫ ದಿನಗಳಿಂದ ಈ ಭಾಗದಲ್ಲಿ ಮಳೆ ಬಂದಿಲ್ಲ. ಸರಿ ಯಾಗಿ ಕೆಲಸ ಮಾಡುತ್ತಿದ್ದರೂ ಈಗಾ ಗಲೇ ಕಾಮಗಾರಿ ಮುಗಿಯು ತ್ತಿತ್ತು. ಮಳೆಯ ನೆಪ ಹೇಳಿ ಡಾಮರು ಬದಲು ಮಣ್ಣು ತುಂಬಿ ಕೆಲಸ ನಿಲ್ಲಿಸಲಾಗಿದೆ. ದುರಸ್ಥಿಗೆಂದು ತಂದ ಜಲ್ಲಿಗಳೆಲ್ಲವೂ ಅರ್ಧಂಬರ್ಧ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದಾರೆ. ಈ ವಿಷಯದ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಳನ್ನು ವಿಚಾರಿಸಿದ್ದೇನೆ. ಈಗ ನಡೆಸಿ ರುವ ದುರಸ್ತಿಗೆ ಬಿಲ್ ಪಾವತಿ ಮಾಡು ವುದಿಲ್ಲ. ಸಮರ್ಪಕವಾದ ದುರಸ್ಥಿ ಮಾಡಿದ ಬಳಿಕ ವಷ್ಟೇ ಬಿಲ್ ಪಾವತಿ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಮೇನಾಲ ಹೇಳುತ್ತಾರೆ.
Tagged with
dk,
feature,
lnews,
road
ಕೆಲವು ಆಯ ಕಟ್ಟಿನ ಕೇಂದ್ರಗಳಲ್ಲಿರುವ ಪತ್ರ ಕರ್ತರ ಆದಾಯದ ಬಗ್ಗೆ ತನಿಖೆ ನಡೆದರೆ ಇನ್ನಷ್ಟು ಬೆಚ್ಚಿ ಬೀಳಿಸು ವಂಥ ಸುದ್ದಿಗಳು ಹೊರ ಬರು ವುದು ಖಚಿತ. ಸಮಾಜಕ್ಕೆ ಅಂಥ ಪತ್ರಕರ್ತರು ಶಾಪವೋ ಅಥವಾ ವರವೋ ಎಂಬುದು ಆಗ ಗೊತ್ತಾ ಗುತ್ತದೆ. ಸಮಾಜದ ಅನಾರೋ ಗ್ಯಕ್ಕೆ ಅಂಥ ಪತ್ರಕ ರ್ತರ ಕೊಡುಗೆ ಎಷ್ಟು, ಯಾರ‍್ಯಾ ರಿಗೋ ಉಪದೇಶ ನೀಡುವ, ಮತ್ತಿನ್ಯಾ ರದೋ ಭ್ರಷ್ಟಾಚಾರವನ್ನು ಹೊರಗೆಡಹುವ, ತಾವು ಧರ್ಮ ರಾಯನ ಸಂತತಿಯವರು ಎಂದು ಹೇಳಿಕೊಳ್ಳುವ ಇಂಥ ಪತ್ರಕರ್ತರ ನಿಜಬಣ್ಣ ತಿಳಿಯಬೇಕಾದರೆ ಅವರ ಆದಾಯದ ತನಿಖೆಯಾಗಲೇಬೇಕು.
ಗಣಿಕಪ್ಪ ಹಗರಣಕ್ಕೆ ಸಂಬಂಧಿಸಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಿಂದ ವಶಪಡಿಸಿಕೊಂಡಿರುವ ಡೈರಿಯಲ್ಲಿ ಅವರೊಂದಿಗೆ ಶಾಮೀ ಲಾಗಿರುವ ಮತ್ತು ಅವರಿಂದ ಮಾಮೂಲು ಪಡೆಯುತ್ತಿದ್ದರು ಎಂದು ಹೇಳಲಾಗಿರುವ ನೂರಾರು ಪತ್ರಕರ್ತರ ಹೆಸರು ಪತ್ತೆಯಾಗಿರು ವುದು ಮಾಧ್ಯಮ ಕ್ಷೇತ್ರ ಎಷ್ಟು ಕೆಟ್ಟು ಹೋಗಿದೆ ಎಂಬುದರ ದ್ಯೋತಕವಾ ಗಿದೆ. ಒಂದು ಕಾಲದಲ್ಲಿ ಗೌರವಾನ್ವಿತ ಕ್ಷೇತ್ರ ಎಂದೇ ಗುರುತಿಸಿಕೊಂಡಿದ್ದ ಮಾಧ್ಯಮ ರಂಗ ಇಷ್ಟು ಕೆಟ್ಟು ಹೋಗಲು ಕಾರಣವೇನು ಎಂಬುದು ಚರ್ಚೆಯ ಸಂಗತಿ, ವಿಮಶೆಯ ವಿಷಯ.
ಯಡಿಯೂರಪ್ಪನ ಡೈರಿಯಲ್ಲಿ ಅಕ್ರಮಿಗಳ ಸಾಲಲ್ಲಿ ಗುರುತಿಸಿಕೊಂ ಡಿರುವ ಪತ್ರಕರ್ತರಲ್ಲಿ ಮಂಗಳೂರು-ಉಡುಪಿಯ ಪತ್ರಕರ್ತರೂ ಇದ್ದಾರೆ ಎಂಬುದು ಮತ್ತಷ್ಟು ಆತಂಕದ ಸಂಗತಿ. ಮಾಧ್ಯಮ ಭ್ರಷ್ಟಾಚಾರದಲ್ಲಿ ಬುದ್ಧಿವಂತರ ಜಿಲ್ಲೆ ಯ ನಗರ ವಾಗಿರುವ ಮಂಗಳೂರಿನ ಪಾಲೂ ಇದೆ ಎಂಬುದು ಬೇಸರದ ವಿಷಯ. ಮಂಗಳೂರು ಈಗ ದೇಶಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ನಗರವೂ ಹೌದು. ಅದೇ ಕಾರಣದಿಂದ ಇಲ್ಲಿನ ಪತ್ರಕರ್ತರು ಕೂಡ ಭ್ರಷ್ಟಾಚಾರಿಗಳಾ ಗುತ್ತಿದ್ದಾರಾ? ಇಷ್ಟು ದೊಡ್ಡ ಮಟ್ಟದಲ್ಲಿ ಪತ್ರಕರ್ತರು ಲಂಚಕೋರರಾಗಲು ಅದು ಕಾರಣವಿರಲೂಬಹುದು ಎಂದು ಹೇಳಬಹುದಾದರೂ, ಮಂಗಳೂರಿನಲ್ಲಿ ರಾಜಕಾರಣಿಗಳ ಮತ್ತು ಬೃಹತ್ ಕಂಪೆನಿಗಳ ಎಂಜಲೆಲೆ ನೆಕ್ಕುವ ಪತ್ರಕರ್ತರು ಈ ಹಿಂದೆಯೂ ಇದ್ದರು, ಈಗಲೂ ಇದ್ದಾರೆ ಎಂಬುದು ವಾಸ್ತವ. ಈಗ ಗುರುತಿಸಿಕೊಂಡಿರುವವರು ಕೆಲವ ರಾದರೂ, ಸಿಕ್ಕಿಹಾಕಿಕೊಳ್ಳದ ಪತ್ರ ಕರ್ತರ ಸಂಖ್ಯೆ ಇನ್ನೂ ಹೆಚ್ಚಿರಲೇಬೇಕು.
ಹಿಂದೆ ಮಂಗಳೂರಿನ ಹಿರಿಯ ಕಾಂಗ್ರೆಸ್ ನಾಯಕರೋರ್ವರು ಹಂಚುವ ಎಂಜಲಿಗೆ ಪ್ರತಿಷ್ಠಿತ ಪತ್ರಿಕೆಯ ಪತ್ರಕರ್ತರು ಸೇರಿದಂತೆ ಸ್ವಂತಿಕೆ, ಸ್ವಾಭಿಮಾನ ಇಲ್ಲದ ಕೆಲವು ಪತ್ರಕರ್ತ ರೂ ಸಾಲು ನಿಲ್ಲುತ್ತಿದ್ದುದು ಗುಟ್ಟಿನ ಸಂಗತಿಯೇನಲ್ಲ. ಸಣ್ಣ ಪತ್ರಿಕೆಗಳನ್ನು ಕೇವಲವಾಗಿ ಮಾತನಾಡಿ ತಾವು ಪ್ರತಿಷ್ಠಿತರು ಎಂದು ಕರೆಸಿಕೊಳ್ಳುವ ಬೆಳಗ್ಗಿನ ಪತ್ರಿಕೆಗಳಲ್ಲಿ ಎಷ್ಟು ಭ್ರಷ್ಟ ಪತ್ರಕರ್ತರಿದ್ದಾರೆ ಎಂಬುದಕ್ಕೆ ಯಡಿ ಯೂರಪ್ಪನವರ ಡೈರಿ ಒಂದು ಉತ್ತಮ ಉದಾಹರಣೆ. ಯಾವುದೇ ಸುದ್ದಿಗಳು ಪ್ರಾಮಾಣಿಕವಾಗಿ ಜನರಿಗೆ ತಲುಪ ಬೇಕಿದ್ದರೆ ಸಂಜೆ ಪತ್ರಿಕೆಗಳೇ ಅನಿ ವಾರ್ಯ ಎಂಬಂಥ ಸ್ಥಿತಿ ನಿರ್ಮಾಣ ವಾಗಿರುವುದು ಸಭ್ಯರ ಸೋಗಿನಲ್ಲಿರುವ ಇಂಥ ಭ್ರಷ್ಟ ಹಾಗೂ ಪಕ್ಷಪಾತಿ ಪತ್ರಕರ್ತರಿಂದ ಎಂಬುದು ವಾಸ್ತವ ಮತ್ತು ಕಟುಸತ್ಯ. ತಾವು ಪಡೆದು ಕೊಂಡಿರುವ ಮಾಮೂಲಿನ ಋಣ ತೀರಿಸಲು ಹೆಣಗುವ ಪ್ರತಿಷ್ಠಿತರು ಎಂದು ಸಮಾಜದಿಂದ ಗುರುತಿಸಿ ಕೊಂಡಿರುವ ಪತ್ರಕರ್ತರೇ ಭ್ರಷ್ಟ ರಾಜಕಾರಣಿಗಳ ಸಂಖ್ಯೆಯನ್ನು ಹೆಚ್ಚಿಸಲು ಕಾರಣ ಮತ್ತು ಭ್ರಷ್ಟಾಚಾರದ ಪ್ರಮಾಣವನ್ನು ಹೆಚ್ಚಿಸಲು ಕಾರಣ ಎಂಬುದು ಹೇಳಲೇಬೇಕಾದ ಸತ್ಯ. ರೆಡ್ಡಿ ಸಹೋದರರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪದಲ್ಲೂ ಕೆಲವು ಪತ್ರಕರ್ತರ ಹೆಸರು ಅಲ್ಲಲ್ಲಿ ಸುದ್ದಿಗೆ ಬಂದಿತ್ತು. ಆದರೆ ಯಾವ ಸರಕಾರವೂ ಪತ್ರ ಕರ್ತರ ವಿರುದ್ಧ ತನಿಖೆಗೆ ಮುಂದಾ ಗಲಿಲ್ಲ, ಲೋಕಾಯುಕ್ತರೂ ಇಂಥ ಕೆಲಸಕ್ಕೆ ಕೈ ಹಾಕಲಿಲ್ಲ. ಆದ್ದರಿಂದಲೇ ಲಂಚಕೋರ ಪತ್ರಕರ್ತರು ಇನ್ನೂ ಮೀಸೆ ತಿರುವುತ್ತಿರುವುದು. ಪತ್ರಿಕೆ ಮತ್ತು ಟಿವಿ ಚಾನೆಲ್‌ಗಳು ಸಮಾಜ ವನ್ನು ತಿದ್ದುವುದಕ್ಕಿರುವುದು ಎಂಬ ಮಾತು ಈಗ ಸಂಪೂರ್ಣ ಸತ್ಯವಾಗಿಲ್ಲ. ತಮ್ಮ ಸ್ವಂತ ಲಾಭಕ್ಕಾಗಿರು ವುದು ಮತ್ತು ತಮ್ಮ ಅಕ್ರಮಗಳನ್ನು ಮುಚ್ಚಿಟ್ಟು ಇತರರ ಅಕ್ರಮಗಳ ತೋರಿಸುವ ಬೆದರಿಕೆಯೊಡ್ಡಿ ಹಣ ಮಾಡುವ ಮಾಧ್ಯಮವಾಗಿ ಪತ್ರಿಕೋದ್ಯಮ ಬದಲಾಗಿರುವುದು ನಿಜಕ್ಕೂ ಆತಂಕದ ಸಂಗತಿಯೇ.
ಮಾಧ್ಯಮ ರಂಗ ಇಷ್ಟು ಕೆಟ್ಟು ಹೋಗಲು ಟಿವಿ ಚಾನೆಲ್‌ಗಳೇ ಕಾರಣ ಎಂಬುದು ನಿರ್ವಿವಾದ ಸಂಗತಿ. ಚಾನೆಲ್‌ಗಳು ಹಣ ಮಾಡುವ ದಂಧೆಯ ಕೇಂದ್ರವಾಗಿ ಬದಲಾಗಿರುವುದೇ ಕೆಲವೊಂದು ಸಣ್ಣ ಸುದ್ದಿಯೂ ದಿನಪೂರ್ತಿ ಚಾನೆಲ್‌ಗಳಲ್ಲಿ ಚರ್ಚೆಯಾಗಲು ಕಾರಣ ಮತ್ತು ಮತ್ತೆ ಕೆಲವು ಗಂಭೀರ ಸುದ್ದಿಗಳು ಮೂಲೆಗೆ ಸೇರುವುದು ಕೂಡ ಇದೇ ಕಾರಣದಿಂದಾಗಿ. ಕೆಲವು ಆಯಕಟ್ಟಿನ ಕೇಂದ್ರಗಳಲ್ಲಿರುವ ಪತ್ರಕರ್ತರ ಆದಾಯದ ಬಗ್ಗೆ ತನಿಖೆ ನಡೆದರೆ ಇನ್ನಷ್ಟು ಬೆಚ್ಚಿ ಬೀಳಿಸುವಂಥ ಸುದ್ದಿಗಳು ಹೊರ ಬರುವುದು ಖಚಿತ. ಸಮಾಜಕ್ಕೆ ಅಂಥ ಪತ್ರಕರ್ತರು ಶಾಪವೋ ಅಥವಾ ವರವೋ ಎಂಬುದು ಆಗ ಗೊತ್ತಾಗುತ್ತದೆ. ಸಮಾಜದ ಅನಾ ರೋಗ್ಯಕ್ಕೆ ಅಂಥ ಪತ್ರಕರ್ತರ ಕೊಡುಗೆ ಎಷ್ಟು, ಯಾರ‍್ಯಾರಿಗೋ ಉಪದೇಶ ನೀಡುವ, ಮತ್ತಿನ್ಯಾರದೋ ಭ್ರಷ್ಟಾಚಾರವನ್ನು ಹೊರಗೆಡಹುವ, ತಾವು ಧರ್ಮರಾಯನ ಸಂತತಿಯವರು ಎಂದು ಹೇಳಿಕೊಳ್ಳುವ ಇಂಥ ಪತ್ರಕರ್ತರ ನಿಜಬಣ್ಣ ತಿಳಿಯಬೇಕಾದರೆ ಅವರ ಆದಾಯದ ತನಿಖೆಯಾಗಲೇಬೇಕು.
ಪತ್ರಕರ್ತರು ನಡೆದದ್ದೇ ದಾರಿ, ಅವರು ಕಾನೂನಿಗೆ ಅತೀತರು, ಅವರು ತಪ್ಪು ದಾರಿ ತುಳಿದರೆ ಅವರನ್ನು ಪ್ರಶ್ನಿಸಬಾರದು, ಅವರು ವಿಶೇಷ ರಿಯಾಯಿತಿಗೆ ಅರ್ಹರು ಮುಂತಾದ ತಪ್ಪು ಭಾವನೆಗಳಿಂದ ಕಾನೂನುಭಂಜಕರಾಗುವ ಪತ್ರಕರ್ತರು ನಮ್ಮ ಸುತ್ತ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂಥವರನ್ನು ಬೆಂಬಲಿಸುವ ಮತ್ತು ಪೋಷಿಸುವವರ ಸಂಖ್ಯೆ ಅದಕ್ಕಿಂತಲೂ ದೊಡ್ಡದಿದೆ. ಪತ್ರಕರ್ತರು ಕೂಡ ಎಲ್ಲರಂತೆ ಸಾಮಾನ್ಯ ಪ್ರಜೆಗಳು, ಅವರು ಕಾನೂನು ಉಲ್ಲಂಘಿಸುವುದು ಶಿPರ್ಹ ಎಂಬ ವಾಸ್ತವವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಮತ್ತು ಅದರಂತೆ ನಡೆ ಯುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿರು ವುದು ಅನಾರೋಗ್ಯಕರ ಸಂಗತಿ. ಜನರ ಸಮಸ್ಯೆಗಳಿಗೆ ಧ್ವನಿಯಾಗ ಬೇಕಾದ ಪತ್ರಕರ್ತರೇ ಸಮಾಜದಲ್ಲಿ ಸಮಸ್ಯೆ ಸೃಷ್ಟಿಸಲು, ಸಮಾಜದ ಆರೋಗ್ಯವನ್ನು ಹಾಳು ಮಾಡಲು ಮುಂದಾ ಗುವಾಗ ಸರಕಾರ ಕೈಕಟ್ಟಿ ಕುಳಿತುಕೊಳ್ಳಬೇಕೇ ಎಂಬುದು ಸಾಮಾನ್ಯ ಜನತೆಯ ಪ್ರಶ್ನೆ. ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳನ್ನು ಮಾತ್ರ ಭ್ರಷ್ಟಾಚಾರಿಗಳು ಎಂದು ಹೇಳುವ ಸಮಾಜ ಕೂಡ ಇಂಥ ಪತ್ರಕರ್ತರ ವಿರುದ್ಧ ಸಿಡಿದೇಳ ಬೇಕಾದ ಕಾಲ ಇದೀಗ ಸನ್ನಿಹಿತವಾಗಿದೆ. ಯಡಿಯೂರಪ್ಪನ ಭ್ರಷ್ಟಾಚಾರದಲ್ಲಿ ಪಾಲು ಪಡೆದ ಪತ್ರಕ ರ್ತರು ಸೇರಿದಂತೆ ಇತರ ಶಂಕಿತ ಪತ್ರಕರ್ತರ ವಿರುದ್ಧ ಸರಕಾರ ತನಿಖೆ ನಡೆಸಬೇಕು, ಒಂದು ಹದ್ದಿನ ಕಣ್ಣಿಡ ಬೇಕು. ಪತ್ರಕರ್ತರೆಂದು ರಿಯಾಯಿತಿ ನೀಡಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಜಟಿಲವಾಗಲಿದೆ.
ಹಾಗೆಂದು ಮಾಧ್ಯಮರಂಗದ ಮೇಲೆ ನಿರೀಕ್ಷೆ ಇಡಲೇ ಬಾರದು ಎಂದು ಹೇಳುವಂತಿಲ್ಲ. ಧೀಮಂತ ಮತ್ತು ಪ್ರಾಮಾಣಿಕ ಪತ್ರಕರ್ತರಿಗೆ ಈಗ ಕೊರತೆಯಿಲ್ಲ. ಅಂಥ ಪತ್ರಕರ್ತರಿರು ವುದರಿಂದಲೇ ಮಾಧ್ಯಮರಂಗದಿಂದ ಸಮಾಜಕ್ಕೆ ಸೇವೆ ಸಲ್ಲುತ್ತಿರುವುದು. ಆದರೆ ಇವರ ನಡುವೆ ನುಸುಳಿರುವ ಭ್ರಷ್ಟ ಪತ್ರಕರ್ತರಿಂದಾಗಿ ಅಮಾಯಕರು ಮತ್ತು ಪ್ರಾಮಾ ಣಿಕರನ್ನೂ ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ.
Tagged with
corruption,
feature,
vishleshane