22-05-2012

Posted by JAYAKIRANA Kirana on Monday, 21 May 2012 | 0 comments | Leave a comment...

 ಕರ್ನಾಟಕ ರಾಜ್ಯ ಕಂಪ್ಯೂಟರ್ ಶಿಕ್ಷಕರ ಸಂಘ(ಸಿಐಟಿಯು)ದ ನೇತೃತ್ವದಲ್ಲಿ ವಿವಿಧ ಬೇಡಿಕೆಗೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಂಪ್ಯೂಟರ್ ಶಿಕ್ಷಕರು ಮಂಗಳೂರಿನ ಜೈಲು ರಸ್ತೆಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸಿದರು. ಪ್ರಮುಖ ಬೇಡಿಕೆಗಳು: ಪ್ರತಿ ತಿಂಗಳ ೧ನೇ ತಾರೀಕಿನಂದೇ ಸಂಬಳದ ವ್ಯವಸ್ಥೆ ಮಾಡಬೇಕು. ಕಂಪ್ಯೂಟರ್ ಶಿಕ್ಷಣವನ್ನು ಕಡ್ಡಾಯವನ್ನಾಗಿಸುವ ಮೂಲಕ ಕೆಲಸವನ್ನು ಖಾಯಂಗೊಳಿಸಬೇಕು. ಕನಿಷ್ಟ ವೇತನ ತಿಂಗಳಿಗೆ ರೂ. ೧೦,೦೦೦ ನಿಗದಿಪಡಿಸಬೇಕು. ಫೇಸ್ ೧ರಲ್ಲಿ ಕೆಲಸ ಮಾಡಿರುವ ಶಿಕ್ಷಕರನ್ನು ಕಡ್ಡಾಯವಾಗಿ ಫೇಸ್ ೩ರಲ್ಲಿ ಮುಂದುವರಿಸಬೇಕು. ಮಹಿಳಾ ಶಿಕ್ಷಕಿಯರಿಗೆ ೬ ತಿಂಗಳ ಹೆರಿಗೆ ರಜೆ ನೀಡಬೇಕು. ಸಿಎಲ್ ಮತ್ತು ಇಎಲ್ ರಜಾ ಸೌಲಭ್ಯ ಒದಗಿಸಬೇಕು. ಕಾನೂನಿಗೊಳಪಡುವ ಪಿಎಫ್, ಸ್ಲಿಪ್, ವೇತನ ಚೀಟಿ ಹಾಗೂ ಉದ್ಯೋಗ ಚೀಟಿ ಸೌಲಭ್ಯಗಳನ್ನು ನೀಡಬೇಕು. ಕಲ್ಯಾಣ ಸವಲತ್ತು, ಸಾಮಾಜಿಕ ಭದ್ರತೆ ಒದಗಿಸಬೇಕು.


ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ರಿಕ್ಷಾ ನಿಲ್ದಾಣಗಳ ಸ್ಥಾಪನೆಗೆ ಒತ್ತಾಯಿಸಿ ೨೫.೫.೨೦೧೨ನೇ ಶುಕ್ರವಾರ ಬೆಳಿಗ್ಗೆ ೧೦.೩೦ಕ್ಕೆ ಉರ್ವಾಸ್ಟೋರಿನಿಂದ ‘ಜಿಲ್ಲಾಧಿಕಾರಿ ಚಲೋ’ ಪಾದಯಾತ್ರೆ ನಡೆಸಲಾಗುವುದು ಎಂದು ಮಂಗಳೂರು ಮಹಾನಗರ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಐವನ್ ಡಿ’ಸೋಜ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಆಲಿ ಹಾಸನ್, ಐವನ್ ಡಿ’ಸೋಜ, ಎಲ್ ಟಿ ಸುವರ್ಣ ಮತ್ತಿತರಿದ್ದರು.




ಕರ್ನಾಟಕ ರಾಜ್ಯ ಶಾಲಾ ಕಾಲೇಜು ಕಂಪ್ಯೂಟರ್ ಶಿಕ್ಷಕರ ಸಂಘದ ವತಿಯಿಂದ ಬಾಕಿ ವೇತನ ಮತ್ತು ಹುದ್ದೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಉಡುಪಿ ಡಿಡಿಪಿಐ ಕಚೇರಿಯೆದುರು ಪ್ರತಿಭಟನೆ ನಡೆಸಲಾಯಿತು.


ಉಡುಪಿಯಲ್ಲಿ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವರುಣನ ಕೃಪೆಗಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಉಡುಪಿ ಅನಂತೇಶ್ವರ ದೇವಳಕ್ಕೆ ಸೀಯಾಳಾಭಿಷೇಕವನ್ನು ನೀಡಿ ಮಳೆಗಾಗಿ ಪ್ರಾರ್ಥನೆಗೈದರು


ಹಿಂದೂ ದೇವತೆಗಳನ್ನು ಅವಮಾನಿಸಿರುವ ಚಿತ್ರ ‘ಕಠಾರಿವೀರ ಸುರಸುಂದರಾಂಗಿ’ಯಲ್ಲಿ ಮತ್ತೆ ಎಂಟು ದೃಶ್ಯಗಳನ್ನು ಕಡಿತಗೊಳಿಸದೆ ಕೇವಲ ಎರಡು ದೃಶ್ಯಗಳನ್ನು ಮಾತ್ರ ತೆಗೆದು ಮೋಸ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂದು ಜನಜಾಗೃತಿ ಸಮಿತಿ ಸುಚಿತ್ರ ಚಿತ್ರಮಂದಿರದ ಎದುರು ಶಾಂತಿಯುತ ಪ್ರತಿಭಟನೆ ನಡೆಸಿ ಚಿತ್ರದ ಪ್ರದರ್ಶನ ನಿಲ್ಲಿಸುವಂತೆ ವ್ಯವಸ್ಥಾಪಕರಿಗೆ ಮನವಿ ಮಾಡಿತು.


ಕಣ್ಣೂರು ರಾಷ್ಟ್ರೀಯ ಹೆದ್ದಾರಿಗೆ ಚರಂಡಿ ನಿರ್ಮಿಸುವಂತೆ ಅಗ್ರಹಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ೫೨ನೇ ಕಣ್ಣೂರು ವಾರ್ಡಿನ ವತಿಯಿಂದ ಪ್ರತಿಭಟನೆ ನಡೆಯಿತು

ಬಂದರಿನಲ್ಲಿರುವ ಗುಜರಿ ಅಂಗಡಿಗೆ ಶಾರ್ಟ್‌ಸರ್ಕ್ಯೂಟ್ ಪರಿಣಾಮ ಬೆಂಕಿ ತಗುಲಿದ ಘಟನೆ ನಿನ್ನೆ ನಡೆದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.


ಮೂಲ್ಕಿಯಲ್ಲಿ ಸಿಗುವ ನಂದಿನಿ ಹಾಲು ಕಳೆದ ಕೆಲದಿನಗಳಿಂದ ಉಪಯೋಗಕ್ಕೆ ಬಾರದೆ ಹಾಳಾಗುತ್ತಿದೆ. ನಿನ್ನೆ ಸಿಕ್ಕಿದ ಹಾಲಿನ ಪ್ಯಾಕೆಟ್‌ನಲ್ಲಿ ತಯಾರಿಸಲಾದ ದಿನಾಂಕವನ್ನು ನೋಡಿದರೆ ಇಂದಿನ ದಿನಾಂಕವನ್ನು ಮುದ್ರಿಸಲಾಗಿದ್ದು, ಹೆಚ್ಚಿನ ಕಡೆಗಳಲ್ಲಿ ದಿನಾಂಕವನ್ನು ಮೊದಲೇ ಮುದ್ರಿಸಿ ಫ್ರೆಶ್ ಹಾಲು ಎಂದು ಮಾರಾಟ ಮಾಡಲಾಗುತ್ತಿರುವುದು ಬೆಳಕಿಗೆ ಬಂದಿದೆ.





ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ನೇತ್ರಾವತಿ ಸೇತುವೆಯ ಕಲ್ಲಾಪು ಭಾಗದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು. ಇದರಿಂದ ಅರ್ಧತಾಸಿನವರೆಗೆ ವಾಹನ ಸಂಚಾರಕ್ಕೆ ತೊಂದರೆಯಾಯಿತು.

ನೃತ್ಯ-ಪ್ರತಿಭಾ ಪ್ರದರ್ಶನ ಸಪ್ತಾಹ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ೧೫೦ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿ ‘ಅದ್ಭುತ ಬಾಲಕಿ’ ಎಂದೇ ಹೆಸರು ಮಾಡಿರುವ ಕು.ಅಯನಾ ವಿ.ರಮಣ್ ಇವರ ನೃತ್ಯ-ಪ್ರತಿಭಾ ಪ್ರದರ್ಶನ ಸಪ್ತಾಹ ಮೇ೨೦ರಿಂದ ೨೬ರವರೆಗೆ ಮುಂಬೈ ಮಹಾನಗರದಲ್ಲಿ ನಡೆಯಲಿದೆ.
ಭರತನಾಟ್ಯ, ಸಂಗೀತ ಮತ್ತಿತರ ವಿಶೇಷ ಪ್ರತಿಭಾ ಪ್ರದರ್ಶನ ಗಳಿರುವ, ಸಂಗೀತ-ನೃತ್ಯ ಮತ್ತು ಸಂಸ್ಕೃತಿಗಳ ಜಾಗೃತಿ ಅಭಿಯಾನವಾ ಗಿರುವ ಈ ಕಾರ್ಯ ಕ್ರಮ ಮನೆ-ಮನೆಗೆ ಭರತನಾಟ್ಯ ಅಥವಾ ದಿ ಜರ್ನಿ ಆಫ್ ಡ್ಯಾನ್ಸ್ ಟು ಹೌಸಸ್ ಹೆಸರಿನಿಂದ ಜನಪ್ರಿಯವಾಗಿದೆ.
ಮೇ ೨೦ರಿಂದ ೨೬ರವರೆಗೆ ಮುಂಬೈಯ ಬಂಟರ ಸಂಘ, ಕಲಾ ಜಗತ್ತು, ಪೇಜಾವರ ಮಠ, ವೇ.ಮೂ. ಹರಿಭಟ್ಟರ ನಿವಾಸ, ಆಯ್ದ ಕೊಳೆ ಗೇರಿಗಳು ಮತ್ತು ನೃತ್ಯ ಕೇಂದ್ರಗಳಲ್ಲಿ ಈಗಾಗಲೇ ಪ್ರದರ್ಶನಗಳು ನಿಗದಿ ಯಾಗಿವೆ. ಕರ್ನಾಟಕ ಬ್ಯಾಂಕ್ ಇಂಡಿ ಯನ್ ಓವರ್‌ಸಿಸ್ ಬ್ಯಾಂಕ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಭೂತನಾಥೇಶ್ವರ ದೇವಸ್ಥಾನ ಮತ್ತು ಈ ಕನಸುಡಾಟ್ ಕಾಮ್ ಅಂತ ರ್ಜಾಲ ಪತ್ರಿಕೆಗಳ ಸಹಯೋಗದಲ್ಲಿ ‘ರಂಗಭಾರತಿ’ ಮಂಗಳೂರು ಸಂಸ್ಥೆ ಈ ಸಪ್ತಾಹವನ್ನು ಆಯೋಜಿಸುತ್ತಿದೆ.

ಬಲ್ಯಾಯ ಸಂಘದಿಂದ ಯುವ ಉತ್ಸವ ಝೆಂಕಾರ ಕಾರ್ಯಕ್ರಮ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಲ್ಯಾಯ ಯಾನೆ ಕಣಿಶನ್ ಮಹಾಜನ ಸಂಘ(ರಿ) ಮಂಗಳೂರು ಇದರ ಆಶ್ರಯದಲ್ಲಿ ಸ್ವಜಾತಿ ಭಾಂದವರ ಯುವ ಪ್ರತಿಭೆಗಳ ಕಾರ್ಯಕ್ರಮ ಝೆಂಕಾರ ನಗರದ ಸಮೃದ್ಧಿ ಸಭಾ ಭವನ ಗರೋಡಿ, ಕಂಕನಾಡಿ, ಮಂಗಳೂರು ಇಲ್ಲಿ ಜರುಗಿತು.
ದೀಪ ಬೆಳಗಿಸಿ ಕಾರ್ಯ ಕ್ರಮವನ್ನು ಡಾ.ಶ್ರೀಪತಿ ಪಂಡಿತ್, ಕಿನ್ನಿಕಂಬಳ ಇವರು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಜೆ.ನಾಗೆಂದ್ರ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪದ್ಮನಾಭ ಜೋಷಿ, ಭಾಸ್ಕರ್ ಜಿ.ಬಿ. ಕೆಂಬಾರ್ ಭಾಗವಹಿಸಿದ್ದರು.
ಕಾರ್ಯದರ್ಶಿಯಾದ ದಿವಾಕರ್ ಪಂಡಿತ್ ಕೊಟ್ಟಾರ ಪ್ರಸ್ತಾವಿಕ ಭಾಷಣಗೈದರು. ಪ್ರಧಾನ ಸಂಚಾಲಕ ರಾದ ಅಮಿತ್ ಆನಂದ್ ಪೆರ್ಮಂಕಿ ಸ್ವಾಗತಿಸಿದರು. ಕು. ಸೂರ್ಯಶ್ರೀ ಕುದ್ರೋಳಿ ಕಾರ್ಯ ಕ್ರಮ ನಿರೂಪಿಸಿದರು. ಸಂಚಾಲಕ ರಾದ ಡಾ. ರಾಜೇಶ್ ಧನ್ಯವಾದ ಗೈದರು.

ಜಯಪ್ಪ ಲಮಾಣಿಗೆ ಅಬಕಾರಿ ಮಿತ್ರ ಅನರ್ಘ್ಯ ರತ್ನ ಪ್ರಶಸ್ತಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಅಬಕಾರಿ ಕಚೇರಿಯಲ್ಲಿ ಅಬಕಾರಿ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಸ್ ಜಯಪ್ಪ ಲಮಾಣಿ ಅವರಿಗೆ ಇಲಾಖೆಯಲ್ಲಿನ ದಕ್ಷ, ನಿಷ್ಠ, ಪ್ರಾಮಾಣಿಕ ಸೇವೆಗಾಗಿ ಹಾಗೂ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ಅವರಿಗೆ ಅಬಕಾರಿ ಮಿತ್ರ ಅನರ್ಘ್ಯ ರತ್ನಪ್ರಶಸ್ತಿನೀಡಿ ಗೌರವಿಸಲಾಯಿತು. ಅವರು ಈ ಹಿಂದೆ ೨೦೧೧ ರಲ್ಲಿ ಜೆಸಿಐ ಮಂಗಳೂರು ಇವರಿಂದ ಔಟ್‌ಸ್ಟಾಂಡಿಂಗ್ ಯಂಗ್‌ಪರ್ಸನ್ ಅವಾರ್ಡ್ ಹಾಗೂ ಚಿತ್ರದುರ್ಗದ ಶ್ರೀ ಡಾ|ಮುರುಘ ಶರಣ ಸ್ವಾಮೀಜಿಯ ವರಿಂದ ರಾಜ್ಯಮಟ್ಟದ ಶ್ರೀ ಸೇವಾ ಲಾಲ್ ಪ್ರಶಸ್ತಿಯನ್ನು ಪಡೆದುಕೊಂ ಡಿರುತ್ತಾರೆ.

ದುಬಾಯಿಯಲ್ಲಿ ಶಿವಧ್ವಜ್‌ಗೆ ಸನ್ಮಾನ

Posted by JAYAKIRANA Kirana on | 0 comments | Leave a comment...

ದುಬಾಯಿ: ಇತ್ತೀಚೆಗೆ ದುಬಾಯಿ ಯಲ್ಲಿ ನಡೆದ ಯು.ಎ.ಇ.ಬಂಟರ ಸಮ್ಮಿಲನ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಟ ಶಿವಧ್ವಜ್ ಶೆಟ್ಟಿ ಅವರಿಗೆ ಜೀವಮಾನದ ಕಲಾ ಸೇವೆಗಾಗಿ ಬಂಟ ವಿಭೂಷಣ ಪ್ರಶಸ್ತಿ ಯನ್ನು ಡಾ.ಬಿ.ಆರ್.ಶೆಟ್ಟಿ ಮತ್ತು ರಾಯ ಭಾರಿ ಎಚ್.ಇ.ಲೋಕೇಶ್ ಅವರು ನೀಡಿ ಸನ್ಮಾನಿಸಿದರು. ದುಬಾಯಿ ಕನ್ನಡ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಎಂ.ಜಯರಾಮ್, ಯುಎಇ ಎಕ್ಸ್ ಚೇಂಜ್‌ನ ಸುಧೀರ್ ಶೆಟ್ಟಿ ಮತ್ತು ಬಂಟರ ಸಂಘದ ಅಧ್ಯಕ್ಷರು ಸದಸ್ಯರು ಭಾಗ ವಹಿಸಿದ್ದರು.
ಶೀಘ್ರದಲ್ಲೇ ದುಬಾಯಿಯಲ್ಲಿ ‘ಬಂಗಾರ‍್ದ ಕುರಲ್’ ಚಲನ ಚಿತ್ರವನ್ನು ಬಿಡುಗಡೆಗೊಳಿಸಲಾ ಗುವುದು ಎಂದು ಅಲ್ಲಿಯ ಸಂಘಟಕರು ತಿಳಿಸಿದ್ದಾರೆ.

ರಜೆಯ ಕಾಲದಲ್ಲಿ ಸಹಸ್ರನಾಮ ಪಠಣ ಶಿಬಿರ

Posted by JAYAKIRANA Kirana on | 0 comments | Leave a comment...

ಮಂಗಳೂರು: ವಿದ್ಯಾಲಯಗಳ ರಜೆ ಕಾಲದಲ್ಲಿ ಬ್ರಾಹ್ಮಣ ವಟುಗಳಿಗೆ ಸಂದ್ಯಾವಂದನ ಜಪ, ಹಾಗೂ ಸಹಸ್ರ ನಾಮಾವಳಿ ಪಠಣದ ಶಿಬಿರವನ್ನು ಪುನರೂರು ವಿಶ್ವನಾಥ ದೇವಾಲಯ ದಲ್ಲಿ ಹದಿನೈದು ದಿನ ನಡೆಸಲಾಯಿತು. ಸುಮಾರು ೪೦ ಮಂದಿ ವಟುಗಳು ಇದರಲ್ಲಿ ಭಾಗವಹಿಸಿದ್ದರು. ಸಹಸ್ರ ನಾಮ ಪಠಣಕ್ಕೆ ಹೆಂಗಸರು ಮಕ್ಕಳು ಸೇರಿ ನೂರಾರು ಜನ ಭಾಗ ವಹಿಸಿದ್ದರು. ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಉಸ್ತು ವಾರಿಯಲ್ಲಿ ಈ ಕಾರ್ಯಕ್ರಮ ನೆರವೇರಿತು. ಸಮಾರೋಪ ಸಮಾರಂಭ ಪಠೇಲ್ ವೆಂಕಟೇಶ ರಾಯರ ಅಧ್ಯಕ್ಷತೆ ಯಲ್ಲಿ ನೆರವೇರಿತು. ಕಿನ್ನಿಗೋಳಿಯ ಯುಗ ಪುರುಷದ ಭುವನಾ ಭಿರಾಮ ಉಡುಪರು ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಠೇಲ್ ವಾಸುದೇವ ರಾವ್, ನಿಧಿ ಸುರೇಶ್ ರಾವ್, ಸುಧಾಕರ ಶೀನಪ್ಪಯ್ಯ ಕೋಡಿ ಅತಿಥಿಯಾಗಿ ಭಾಗವಹಿಸಿದ್ದರು.

ಮಣಿಪಾಲ: ಸಿಇಟಿಯಲ್ಲಿ ವಿದ್ಯಾರ್ಥಿಯ ಗೋಲ್‌ಮಾಲ್

Posted by JAYAKIRANA Kirana on | 0 comments | Leave a comment...

ಮಣಿಪಾಲ: ಇಲ್ಲಿನ ಜ್ಯೂನಿಯರ್ ಕಾಲೇಜಿನಲ್ಲಿ ನಡೆಯುತ್ತಿದ್ದ ಸಿಇಟಿ ಪರೀಕ್ಷೆ ವೇಳೆ ಬೇರೊಬ್ಬನ ಹಾಲ್ ಟಿಕೆಟಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ನಕಲಿ ಅಭ್ಯರ್ಥಿಯನ್ನು ಮೇಲ್ವಿ ಚಾರಕರು ಪತ್ತೆಹಚ್ಚಿದ್ದು, ಆದರೆ ಶಾಲಾ ಆಡಳಿತ ಮಂಡಳಿ ಪ್ರಕರಣವನ್ನು ಪೊಲೀಸರಿಗೊಪ್ಪಿಸದೆ ಅಲ್ಲಿಗೆ ಮುಗಿಸಿದೆಯೆನ್ನಲಾಗಿದೆ.
ನಿನ್ನೆ ಜ್ಯೂನಿಯರ್ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ನಡೆಯುತಿತ್ತು. ಈ ಸಂದರ್ಭ ಹಾಲ್ ಟಿಕೆಟಿಗೆ ಸಹಿ ಹಾಕಿ ಹಾಗೂ ಸಹಿ ಸಂಗ್ರಹಿಸುತ್ತಿದ್ದ ಮೇಲ್ವಿಚಾರಕರಿಗೆ ಭಾವಚಿತ್ರದಲ್ಲಿ ಮತ್ತು ಹಸ್ತಾಕ್ಷರದಲ್ಲಿ ಸಂಶಯ ಕಂಡು ಬಂತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯನ್ನು ವಿಚಾರಣೆಗೆ ತೆಗೆದುಕೊಂಡಾಗ ಅಸಲಿಯತ್ತು ಬಹಿರಂಗವಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತಾದರೂ ಶಾಲಾ ಆಡಳಿತ ಮಂಡಳಿ ಮಾತ್ರ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದೆ ಎನ್ನಲಾಗಿದೆ.

ಲಂಚ ಸ್ವೀಕಾರ: ಪಿಡಿಒ ಲೋಕಾಯುಕ್ತ ಬಲೆಗೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಪುತ್ತೂರು ತಾಲೂಕು ನರಿಮೊಗರು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ(ಪಿಡಿಒ) ಲೋಕಾ ಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ನರಿಮೊಗರು ಗ್ರಾ. ಪಂ.ನ ಪಿಡಿಒ ಸುಭಾಶ್ಚಂದ್ರ ವಿ.ಎಂ. ಎಂಬವರು ಮನೆ ನಿರ್ಮಾಣದ ಪರವಾನಿಗೆಗಾಗಿ ಸೋಮ ವಾರ ಸಂಜೆ ಗ್ರಾಮಸ್ಥರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಹಠಾತ್ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ನರಿಮೊಗರು ನಿವಾಸಿ ನಾಗರಾಜ್ ಭಟ್ ಎಂಬವರು ನೂತನ ಮನೆ ನಿರ್ಮಿಸಲೆಂದು ತನ್ನ ತಾಯಿಯ ಹೆಸರಿನಲ್ಲಿ ಒಂದೂವರೆ ವರ್ಷಗಳ ಹಿಂದೆ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಪಿಡಿಒ ಪರವಾನಿಗೆ ನೀಡಲು ರೂ.೨ ಸಾವಿರ ಲಂಚದ ಬೇಡಿಕೆ ಮುಂದಿಟ್ಟು ಅವರನ್ನು ಸತಾಯಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ನಾಗರಾಜ್ ಭಟ್ ದೂರು ಸಲ್ಲಿಸಿದ್ದರು.
ಲೋಕಾಯುಕ್ತ ಆಧಿಕಾರಿಗಳ ನಿರ್ದೇಶನದಂತೆ ಸೋಮವಾರ ಸಂಜೆ ನಾಗರಾಜ್ ಭಟ್ ಅವರು ಪಂಚಾಯತ್ ಕಚೇರಿಗೆ ತೆರಳಿ ರೂ. ೨ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಜಿಲ್ಲಾ ಎಸ್‌ಪಿ ಜಗಮಯ್ಯನವರ್ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಂಚ ಸ್ವೀಕರಿಸುತ್ತಿದ್ದ ಪಿಡಿಒ ಸುಭಾಶ್ಚಂದ್ರ ಅವರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಸದಾನಂದ ವರ್ಣೆಕರ್, ಇನ್ಸ್‌ಪೆಕ್ಟರ್‌ಗಳಾದ ಉದಯ ನಾಯಕ್, ದಿಲೀಪ್ ಕುಮಾರ್, ಉಮೇಶ್ ಶೇಟ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧಿತನಾಗಿರುವ ಪಿಡಿಒ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯು ನರಿಮೊಗರು ಗ್ರಾ. ಪಂ. ವ್ಯಾಪ್ತಿಯಲ್ಲಿ ಬಸವ ಕಲ್ಯಾಣ ಯೋಜನೆಯಲ್ಲಿಯೂ ಅವ್ಯವಹಾರ ನಡೆಸಿರುವ ಬಗ್ಗೆ ಸ್ಥಳೀಯ ಫಲಾನುಭವಿಯೊಬ್ಬರು ದೂರು ನೀಡಿದ್ದು, ಈ ಕುರಿತು ತನಿಖೆ ನಡೆಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಮೀನು ಮಾರಾಟಗಾರರ ಹೊಡೆದಾಟ

Posted by JAYAKIRANA Kirana on | 0 comments | Leave a comment...

ಸುಳ್ಯ: ಗಾಂಧಿನಗರದ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ನಡೆಸುತ್ತಿದ್ದಾತನ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀನು ಮಾರುಕಟ್ಟೆಯಲ್ಲಿ ಕೆಲಸ ಕ್ಕಿದ್ದ ಮಹಮ್ಮದ್ ಶಾಹಿ ಎಂಬಾತನ ಮೇಲೆ ಸಿದ್ದಿಕ್ ಮತ್ತು ಆತನ ಸಹೋ ದರ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿ ಮೀನು ಖರೀದಿಸಲು ಬಂದ ರಾಜೇಶ್ ಎಂಬಾತನು ಹಲ್ಲೆಯನ್ನು ಬಿಡಿಸಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ರಾಜೇಶ್‌ನ ಮೇಲೂ ಹಲ್ಲೆ ನಡೆಸ ಲಾಗಿದೆ. ಹೊಡೆದಾಟ ಸಂಭವಿಸಿದ ಸಂದರ್ಭದಲ್ಲಿ ಮಹಮ್ಮದ್ ಶಾಹಿಯ ೧೫,೦೦೦ ರೂ ಮತ್ತು ರಾಜೇಶ್‌ನ ಎರಡೂವರೆ ಪವನ್‌ನ ಚಿನ್ನಾಭರಣ ದೋಚಲಾಗಿದೆ ಎಂದು ದೂರಲಾಗಿದೆ. ಸುಳ್ಯ ಮೀನು ಮಾರುಕಟ್ಟೆಯ ಮೊದಲು ಏಲಂ ಪಡೆದಿದ್ದ ಉಂಬಾಯಿ ಮತ್ತು ಈಗ ಏಲಂ ಪಡೆದಿರುವ ಅಬ್ದುಲ್ ರಜಾಕ್ ಎಂಬವರ ಮಧ್ಯೆ ಮೀನು ಮಾರಾಟ ವಿಷಯದಲ್ಲಿ ಉಂಟಾಗಿರುವ ವೈಮನಸ್ಸು ಹೊಡೆದಾಟಕ್ಕೆ ಕಾರಣ. ಈ ಕುರಿತು ಹಲವು ಬಾರಿ ಎರಡೂ ಗುಂಪುಗಳ ಮಧ್ಯೆ ಗಲಾಟೆ, ಹೊಡೆ ದಾಟ ನಡೆದಿತ್ತು.
ಕಳೆದ ಎರಡು ಬಾರಿ ಹೊಡೆದಾಟ ನಡೆದಾಗ ಅದನ್ನು ರಾಜಿ ಪಂಚಾತಿಕೆ ಯಲ್ಲಿ ಮುಗಿಸಲಾಗಿತ್ತು.

ಗರ್ಭಿಣಿ ಪತ್ನಿಗೆ ವಂಚಿಸಿ ಪರಾರಿಯಾದಾತ ಎಂಟು ವರ್ಷಗಳ ಬಳಿಕ ಸೆರೆಸಿಕ್ಕಿದ!

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಮತಾಂತರ ಗೊಂಡು ವಿವಾಹಿತನಾಗಿ ಬಳಿಕ ಪತ್ನಿಯು ಗರ್ಭವತಿಯಾದಾಗ ಕಾಲ್ಕಿತ್ತ ಭೂಪನನ್ನು ಎಂಟು ವರ್ಷಗಳ ಬಳಿಕ ಸೆರೆ ಹಿಡಿಯಲಾಗಿದೆ.
ಮೂಲತ: ತಿರುವನಂತಪುರ ಶಂಖುಮುಖ ನಿವಾಸಿ ರಾಮಚಂದ್ರ ಯಾನೆ ಮುಸ್ತಾಫ ಎಂಬಾತನನ್ನು ಕುಂಬಳೆ ಪೊಲೀಸರು ದಸ್ತಗಿರಿಗೈದಿ ದ್ದಾರೆ. ಕುಂಬಳೆ ಮೊಗ್ರಾಲ್ ನಿವಾಸಿ ಯಾದ ಯುವತಿ ದೂರು ನೀಡಿದವ ರಾಗಿದ್ದಾರೆ.
ಉದ್ಯೋಗ ಅರಸಿ ರಾಮಚಂದ್ರ ಅಂದು ಮೊಗ್ರಾಲ್‌ಗೆ ಬಂದಿದ್ದ. ಬಳಿಕ ಇಲ್ಲೇ ಬಾಡಿಗೆ ಕೊಠಡಿಯಲ್ಲಿ ತಂಗಿ ದ್ದಲ್ಲದೆ ಇಸ್ಲಾಂ ಧರ್ಮ ಸ್ವೀಕರಿಸಿದ್ದ. ಆ ಬಳಿಕ ಇಲ್ಲೇ ಹುಡುಗಿ ಹುಡುಕಿ ಮೊಗ್ರಾಲ್‌ನ ಯುವತಿಯನ್ನು ವರಿಸಿ ಮೊಗ್ರಾಲ್‌ನಲ್ಲೇ ಉಳಿದುಕೊಂಡಿದ್ದ. ಈ ಮಧ್ಯೆ ಪತ್ನಿ ಬಸುರಿಯಾಗಿದ್ದರು. ಆರು ತಿಂಗಳ ಗರ್ಭವತಿಯನ್ನು ಬಿಟ್ಟು ಇದ್ದಕ್ಕಿದ್ದಂತೆ ಯಾರಲ್ಲೂ ಹೇಳದೆ ಊರು ಬಿಟ್ಟಿದ್ದ. ರಾಮಚಂದ್ರ ಯಾನೆ ಮುಸ್ತಾಫನ ವಿರುದ್ಧ ಗರ್ಭವತಿ ಪತ್ನಿ ದೂರು ದಾಖಲಿಸಿದ್ದರು. ಆ ದೂರಿ ನನ್ವಯ ಅಂದೇ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದರೂ ಬಂಧನ ಸಾಧ್ಯವಾಗಿರಲಿಲ್ಲ.
ಇದೀಗ ಎಲ್ಲ ವಾರೆಂಟ್ ಆರೋಪಿಗಳನ್ನು ಬಂಧಿಸುವಂತೆ ಜಿಲ್ಲಾ ಪೊಲೀಸ್ ಅಧಿಕಾರಿ ಹೊರಡಿಸಿದ ಆದೇಶದ ಅನುಸಾರ ಕುಂಬಳೆ ಪೊಲೀಸರು ತಿರುವನಂತಪುರಕ್ಕೆ ತೆರಳಿ ಈತನನ್ನು ಬಂಧಿಸಿ ಕರೆತಂದಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತನಿಗೆ ತಿರುವನಂತಪುರದಲ್ಲಿಯೂ ಪತ್ನಿ ಹಾಗೂ ಮಕ್ಕಳಿರುವುದಾಗಿ ತಿಳಿದು ಬಂದಿದೆ.

‘ಲೇಡಿಬಾಸ್ ವೀಕ್ಷಿಸಲು ತೆರಳಿದ್ದ ಯುವತಿ ಪತ್ತೆ

Posted by JAYAKIRANA Kirana on | 0 comments | Leave a comment...

ವಿಟ್ಲ: ಮಾಣಿ ಸಮೀಪದ ಬುಡೋಳಿ ಎಂಬಲ್ಲಿಯ ಯುವತಿಯೊ ಬ್ಬಳು ಭಾನುವಾರ ಬೆಳಗ್ಗಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಮೊಬೈಲ್ ಫೋನ್ ಆಧಾರದಲ್ಲಿ ಆಕೆ ಯನ್ನು ವಿಟ್ಲ ಪೊಲೀಸರು ಮಂಗಳೂರಿ ನಲ್ಲಿ ಪತ್ತೆ ಹಚ್ಚಿ ಸೋಮವಾರ ಠಾಣೆಗೆ ಕರೆತಂದಿದ್ದಾರೆ. ಆಕೆ ತೆರಳಿದ್ದು ಲೇಡಿಬಾಸ್ ಸಿನಿಮಾ ನೋಡಲು.
ಈಕೆ ಭಾನುವಾರ ಬೆಳಿಗ್ಗಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಆತಂಕ್ಕೀಡಾದ ಆಕೆಯ ಮನೆ ಯವರು ಎಲ್ಲೆಡೆ ಹುಡುಕಾಟ ನಡೆಸಿ ಬಳಿಕ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈಕೆ ನಾಪತ್ತೆಯಾದ ದಿನ ತನ್ನ ತಂದೆಯ ಮೊಬೈಲ್ ಫೋನನ್ನು ಜತೆಯಲ್ಲಿ ತೆಗೆದುಕೊಂಡು ಹೋಗಿ ದ್ದಳು. ಇದರ ಆಧಾರದ ಮೇಲೆ ವಿಟ್ಲ ಠಾಣಾಧಿಕಾರಿ ರಕ್ಷಿತ್ ಅವರು ಆಕೆ ಯನ್ನು ಮಂಗಳೂರಿನಲ್ಲಿ ಪತ್ತೆ ಹಚ್ಚಿ ದ್ದಾರೆ. ಆಕೆ ಠಾಣೆಯಲ್ಲಿ ನನಗೆ ಬಹಳ ದಿನದಿಂದ ಲೇಡಿಬಾಸ್ ಸಿನಿಮಾ ನೋಡುವ ಆಸೆಯಿತ್ತು. ಆದರೆ ಅದಕ್ಕೆ ನನ್ನ ಮನೆಯವರು ಆಸ್ಪದ ನೀಡಿರಲಿಲ್ಲ ಅದಕ್ಕೆ ನಾನು ಯಾರಲ್ಲಿಯೂ ಹೇಳದೇ ಹೋಗಿದ್ದೇನೆ ಎಂದು ತಿಳಿಸಿದ್ದಾಳೆ. ಪುತ್ತೂರಿನ ಅರುಣಾ ಸಿನಿಮಾ ಮಂದಿರದಲ್ಲಿ ಸಿನಿಮಾ ವೀಕ್ಷಿಸಿ ಮಾಣಿಗೆ ಬಂದು ಅಲ್ಲಿಯ ಒಂದು ಹೊಸ ಕಟ್ಟಡದಲ್ಲಿ ನಿದ್ರಿಸಿ ಮರುದಿನ ಬೆಳಿಗ್ಗೆ ಮಂಗಳೂರಿಗೆ ತೆರಳಿದ್ದೆ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಇದೀಗ ಆಕೆಯ ಕುಟುಂಬಿಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಅಂಬಾಗಿಲು ಶೂಟೌಟ್ ಪ್ರಕರಣ: ತನಿಖೆ ಮಂದಗತಿಯಲ್ಲಿ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಅಂಬಾಗಿಲು ಶೂಟೌಟ್ ಪ್ರಕರಣದ ತನಿಖೆ ಮಂದ ಗತಿಯಲ್ಲಿ ಸಾಗುತ್ತಿದ್ದು, ಪೊಲೀಸರು ಆರೋಪಿಗಳ ಸುಳಿವು ಪತ್ತೆಹಚ್ಚುವಲ್ಲಿ ಈವರೆಗೆ ವಿಫಲರಾಗಿದ್ದಾರೆ.
ಅಂಬಾಗಿಲಿನ ಆದರ್ಶ ಬೇಕರಿ ಯಲ್ಲಿ ಗುರುವಾರ ರಾತ್ರಿ ಹತ್ತು ಗಂಟೆ ಹೊತ್ತಿಗೆ ಇಬ್ಬರು ಬೈಕಿನಲ್ಲಿ ಬಂದ ಮುಸುಕುಧಾರಿಗಳು ಒಂದು ಸುತ್ತು ಗುಂಡು ಹಾರಾಟ ನಡೆಸಿ ಬೈಕಿನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಬೇಕರಿ ಮಾಲೀಕ ಅಶೋಕ್ ಕರ್ನೇಲಿಯೋ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಪ್ರಕರಣ ನಡೆದು ಹಲವು ದಿನಗಳಾದರೂ ಪೊಲೀಸರ ತನಿಖೆಯಲ್ಲಿ ಪ್ರಗತಿ ಕಂಡುಬಂದಿಲ್ಲ. ಈ ಶೂಟೌಟ್ ಪ್ರಕರಣವನ್ನು ಮಲ್ಪೆಯ ಕೇಬಲ್ ಉದ್ಯಮಿಯನ್ನು ಕೊಲೆಗೈದ ಆರೋಪಿ ಹಾಗೂ ಪೊಲೀಸರ ಬೆಂಗಾ ವಲಿನಿಂದ ತಪ್ಪಿಸಿಕೊಂಡು ಹೋಗಿರುವ ಖೈದಿ ನಡೆಸಿರುವ ಬಗ್ಗೆ ಸಂಶಯವನ್ನು ಬೇಕರಿ ಮಾಲೀಕರು ವ್ಯಕ್ತಪಡಿಸಿದ್ದಾರೆ.

ಸರಗಳ್ಳನ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಹಿಳೆಯ ಕತ್ತಿ ನಿಂದ ಚಿನ್ನದ ಸರ ಎಳೆದು ಪರಾರಿ ಯಾಗುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಿನ್ನೆ ಮಧ್ಯಾಹ್ನ ನಗರದ ಸ್ಟೇಟ್ ಬ್ಯಾಂಕ್ ಸರ್ಕಲ್ ಬಳಿ ಸಂಭವಿಸಿದೆ. ಕೇರಳ ಎರ್ನಾ ಕುಲಂ ನಿವಾಸಿ ಜೋಕಿಂ ಜೊಯ್ (೨೮) ಬಂಧಿತ ಆರೋಪಿಯಾಗಿ ದ್ದಾನೆ. ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಹೋಗಿದ್ದ ಜಪ್ಪಿನ ಮೊಗರು ನಿವಾಸಿ ಲತಾ ಎಂಬವರು ಸ್ಟೇಟ್‌ಬ್ಯಾಂಕ್ ಬಳಿ ಬಸ್‌ಗಾಗಿ ಕಾಯು ತ್ತಿದ್ದ ವೇಳೆ ಹಿಂದಿನಿಂದ ಬಂದ ಜೋಕಿಂ ಲತಾರ ಕತ್ತಿನಲ್ಲಿದ್ದ ಚಿನ್ನದ ಸರ ಎಳೆದು ಪರಾರಿಯಾಗಲೆತ್ನಿಸಿದ್ದ. ಇದನ್ನು ಕಂಡ ಸ್ಥಳೀಯರು ಜೋಕೀಂ ನನ್ನು ಬೆನ್ನತ್ತಿ ಹಿಡಿದು ಪಾಂಡೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಸರಣಿ ಅಪಘಾತ: ಓರ್ವ ಗಂಭೀರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೆಳ್ತಂಗಡಿ ತಾಲೂಕಿನ ಲೈಲಾ ಗ್ರಾಮದ ಕಾಶಿಬೆಟ್ಟು ಸನಿಹ ಎಂಬಲ್ಲಿ ಸೋಮವಾರ ನಡೆದ ಸರಣಿ ಅಪಘಾತದಲ್ಲಿ ಓರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ. ಲಾಯಿಲದಿಂದ ಉಜಿರೆ ಕಡೆ ಹೋಗು ತ್ತಿದ್ದ ಬೈಕ್ ಕಾಶಿಬೆಟ್ಟುವಿನಲ್ಲಿ ಪಿಕ್‌ಅಪ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆಯಿತು. ಇದರಿಂದ ಸವಾರ ಗುರುವಾಯನ ಕರೆಯ ಪ್ರಸಾದ್ (೩೪) ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೈಕ್ ಸವಾರ ರಸ್ತೆಗೆ ಬಿದ್ದಾಗ ಉಜಿರೆ ಕಡೆಯಿಂದ ರಿಕ್ಷಾವೊಂದು ಬಂದಿತ್ತು. ಅಪಘಾತದ ಸಂದರ್ಭ ಅದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.

ಕುಂದಾಪುರ: ಅಂದರ್-ಬಾಹರ್; ನಾಲ್ವರ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ಠಾಣಾ ವ್ಯಾಪ್ತಿಯ ಬಸ್ರೂರು-ಕೊಳ್ಕೇರಿ ಎಂಬಲ್ಲಿ ಅಂದರ್ ಬಾಹರ್ ಆಟದಲ್ಲಿ ನಿರತರಾಗಿದ್ದ ನಾಲ್ವರನ್ನು ಉಡುಪು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಸ್ರೂರು ಕೊಳ್ಕೇರಿಯ ಸುರೇಶ ಆಚಾರಿ, ಶ್ರೀಧರ ಆಚಾರಿ, ಭುಜಂಗ, ಶಿವರಾಮ ಪೂಜಾರಿ ಎಂದು ಹೆಸರಿಸಲಾಗಿದೆ. ಸೋಮ ನಾಯ್ಕ ಎಂಬಾತ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆಟಕ್ಕೆ ಬಳಸಿದ ೯೦೫೦ ರೂ. ನಗದು, ಐದು ಮೊಬೈಲ್ ಫೋನ್, ನಾಲ್ಕು ಬೈಕ್ ಮತ್ತಿತರ ಸೊತ್ತು ವಶಕ್ಕೆ ಪಡೆಯಲಾಗಿದೆ.

ಹೊಳೆಗೆ ಬಿದ್ದು ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ಸಮೀಪದ ಹಳ್ಳಿಹೊಳೆ ಗ್ರಾಮದ ಶೆಟ್ಟಿ ಪಾಲು ಎಂಬಲ್ಲಿ ಸ್ನಾನಕ್ಕೆಂದು ಹೊಳೆಗೆ ಇಳಿದಿದ್ದ ಯುವಕ ಸಾವಿ ಗೀಡಾದ ಘಟನೆ ನಿನ್ನೆ ನಡೆದಿದೆ.
ಸ್ನಾನಕ್ಕೆಂದು ನೀರಿಗೆ ಇಳಿದಿದ್ದ ವೇಳೆ ಪಾಚಿ ಬೆಳೆದಿದ್ದ ಬಂಡೆಗಲ್ಲಿನ ಮೇಲೆ ಕುಳಿತುಕೊಳ್ಳಲು ಯತ್ನಿಸಿದ್ದು, ನೀರು ಪಾಲಾದರೆಂದು ಹೇಳಲಾಗಿದೆ. ಸುಧಾಕರ ನಾಯ್ಕ್ ನೀಡಿದ ದೂರಿನ ಮೇಲೆ ಶಂಕರನಾರಾಯಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಸುಳ್ಯ: ಬೈಕ್-ಬೈಕ್ ಡಿಕ್ಕಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೈಕ್‌ಗೆ ಇನ್ನೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಸುಳ್ಯ ಸಮೀಪದ ಕನಕಮಜಲು ಎಂಬಲ್ಲಿ ನಡೆದಿದೆ.

ಕಳ್ಳನ ಅವಾಂತರದಿಂದ ಹೃದಯಾಘಾತ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಂಜನಾಡಿ ಜಾತ್ರೆಯಲ್ಲಿ ವ್ಯಾಪಾರಕ್ಕೆಂದು ಬಂದ ವ್ಯಕ್ತಿಯ ಕಳ್ಳತನ ಪ್ರಯತ್ನಕ್ಕೆ ಸ್ಥಳೀಯರೊಬ್ಬರು ಜೀವತೆತ್ತ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆತನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಮಂಜನಾಡಿ ಜಾತ್ರೆಯ ಕಡೆಯ ಬಂಡಿಯಂದು ರಾತ್ರಿ ಸುಮಾರು ಎರಡೂವರೆ ಹೊತ್ತಲ್ಲಿ ಕಳ್ಳನೊಬ್ಬ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದಾಗ ಮನೆಯವರು ಎಚ್ಚರಗೊಂಡು ಬೊಬ್ಬೆ ಹಾಕಿದ್ದರು. ತಕ್ಷಣ ಪಕ್ಕದ ಮನೆಮಂದಿ ಓಡಿಬಂದು ಮನೆಯವರಿಗೆ ಸಮಾಧಾನ ಹೇಳಿದರು. ಆದರೆ ಆ ವ್ಯಕ್ತಿ ಹೃದಯ ಕಾಯಿಲೆಯಿಂದ ಬಳಲುತ್ತಿದ್ದು, ಕಳ್ಳನ ಅವಾಂತರಕ್ಕೆ ಹೆದರಿ ಹೃದಾಯಾಘಾತಕ್ಕೆ ತುತ್ತಾದರು ಎಂದು ಶಂಕಿಸಲಾಗಿದೆ.
ಸ್ಥಳೀಯರು ವ್ಯಕ್ತಿಯ ಮರಣದ ಆಘಾತದಲ್ಲಿದ್ದಾಗ ಕಳ್ಳ ಮಾತ್ರ ಅದೇ ಸಮಯವನ್ನು ಸದುಪಯೋಗಪಡಿಸಿಕೊಂಡು ಇನ್ನೊಂದು ಮನೆಗೆ ಕಳ್ಳತನಕ್ಕೆ ಯತ್ನಿಸಿದ್ದ. ಮನೆಯ ಕೊಠಡಿ ಯೊಂದಕ್ಕೆ ನುಗ್ಗಲು ಯತ್ನಿಸಿದಾಗ ಮಹಿಳೆಯೊಬ್ಬರು ಆತನನ್ನು ಸರಿಯಾಗಿ ಗಮನಿಸಿ ಕಳ್ಳನೆಂದು ಖಚಿತಪಡಿಸಿಕೊಂಡು ಬೊಬ್ಬೆ ಹೊಡೆದರು. ಕಳ್ಳ ಕಾಲ್ಕಿತ್ತಿದ್ದನು. ಸ್ಥಳೀಯವಾಗಿ ಯಾವುದೇ ಜಾತ್ರೆ ನಡೆಯುವ ಮರುದಿನ ಸಂತೆಯಿರುತ್ತದೆ. ಅದೇ ರೀತಿ ಮಂಜನಾಡಿ ಜಾತ್ರೆಯ ಮರುದಿನ ಸಂತೆ ಇದ್ದುದರಿಂದ ಆ ಮಹಿಳೆ ಬಳೆ ಖರೀದಿಗೆಂದು ತೆರಳಿದ್ದರು. ಅಷ್ಟರಲ್ಲಿ ಫ್ಯಾನ್ಸಿ ಉಂಗುರ ಹಾಗೂ ಕಡಿಮೆ ಬೆಲೆಯ ಚಪ್ಪಲಿಗಳನ್ನು ಮಾರುತ್ತಿ ದ್ದಾತನ ಕಡೆಗೆ ಕಣ್ಣು ಹಾಯಿಸಿದಾಗ ಹಿಂದಿನ ರಾತ್ರಿ ಕೋಣೆಗೆ ನುಗ್ಗಿಸಲು ಯತ್ನಿಸಿದ ಕಳ್ಳ ಅವನೇ ಎಂದು ಖಚಿತಪಡಿಸಿಕೊಂಡರು. ತಕ್ಷಣ ತನ್ನ ಸಹೋದರನಿಗೆ ಮಾಹಿತಿ ನೀಡಿದ ಮಹಿಳೆ ಕಳ್ಳನನ್ನು ಸೆರೆಹಿಡಿಯಲು ತಂತ್ರ ರೂಪಿಸಿದರು. ಯುವಕರ ತಂಡ ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿ ಕೈಗೆ ರಿಂಗ್ ಹಾಕುವ ವ್ಯಾಪಾರಿ ಯನ್ನು ಕೈಕೋಳ ಹಾಕಿ ಕರೆದೊಯ್ದರು.

ಬ್ರಹ್ಮಾವರ: ಮಹಿಳೆ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬ್ರಹ್ಮಾವರ ಸಮೀಪದ ಬೇಳೂರು-ಕೋಣಬಗೆಯ ರೇಶ್ಮಾ(೨೬) ಮೇ ೧೯ರಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ. ತನ್ನ ಗೆಳತಿಗೆ ಸೌಖ್ಯವಿಲ್ಲ, ಆಕೆಯನ್ನು ನೋಡಿ ಬರುವುದಾಗಿ ತೆರಳಿದ್ದ ಈಕೆ ವಾಪಸ್ ಆಗಿಲ್ಲ ಎನ್ನಲಾಗಿದೆ.

ಕಿನ್ನಿಗೋಳಿ: ಮನೆ ಬಾಗಿಲು ಮುರಿದು ಕಳ್ಳತನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ-ತಾಳಿಪಾಡಿ ಎಂಬಲ್ಲಿನ ಮನೆಯೊಂದರ ಬಾಗಿಲು ಮುರಿದು ನಗದು ಹಾಗೂ ಬಟ್ಟೆ ಮತ್ತು ಹಿತ್ತಾಳೆಯ ಸೊತ್ತುಗಳನ್ನು ಕಳವು ಮಾಡಲಾಗಿದೆ.
ಎಲಿಯಾಸ್ ಮಥಾಯಿಸ್ ಅವರು ಮುಂಬೈಯಲ್ಲಿದ್ದು, ಮನೆಕೆಲಸದಾಳು ಜೋಸೆಫ್ ಪೀಟರ್ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯ ಬಾಗಿಲು ಮುರಿದಿದ್ದು, ತಾಮ್ರ ಹಾಗೂ ಹಿತ್ತಾಳೆಯ ನೀರಿನ ನಳ್ಳಿ, ಕಪಾಟಿನಲ್ಲಿದ್ದ ಏಳು ಸಾವಿರ ನಗದು, ಗ್ಯಾಸ್ ಸ್ಟವ್‌ನ ಹಿತ್ತಾಳೆ ಬರ್ನರ್ ಇತ್ಯಾದಿಯನ್ನು ಕಳವು ಮಾಡಿರುವುದಾಗಿ ದೂರಲಾ ಗಿದೆ. ಕಳವಾದ ಸೊತ್ತುಗಳ ಅಂದಾಜು ಮೌಲ್ಯ ೨೨ ಸಾವಿರ ರೂ. ಎನ್ನಲಾಗಿದೆ.

ಶಿರೂರಿನ ಮಹಿಳೆ ಮುಂಡಗೋಡದಲ್ಲಿ ಶಂಕಾಸ್ಪದ ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೈಂದೂರು ಸಮೀಪದ ಶಿರೂರು-ಕೊಸಳ್ಳಿಯ ಮಹಿಳೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿನ ಗಂಡನ ಮನೆಯಲ್ಲಿ ಶಂಕಾಸ್ಪದ ಸಾವಿಗೀಡಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಯಡ್ತರೆ ಗ್ರಾ.ಪಂ. ವ್ಯಾಪ್ತಿಯ ಕೊಸಳ್ಳಿಯ ಕೆ.ಕೆ.ವರ್ಗಿಸ್ ಅವರ ಪುತ್ರಿ ಜೈಮೋಳ್(೨೭) ಎಂಬಾಕೆಯನ್ನು ೨೦೦೫ರ ಮೇ ೧೫ರಂದು ಮುಂಡಗೋಡದ ಜೇಮಾನ್‌ಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯ ನಂತರ ಒಂದೆರಡು ವಾರದಲ್ಲಿಯೇ ಗಂಡನ ಮನೆಯಲ್ಲಿ ಕಿರುಕುಳ ಆರಂಭವಾಗಿದ್ದು, ತವರು ಮನೆಯಲ್ಲಿ ಈ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಬಗ್ಗೆ ರಾಜಿ ಪಂಚಾತಿಕೆಯೂ ನಡೆದಿತ್ತು. ಆದರೆ ಬಳಿಕ ಮತ್ತೆ ಗಂಡನ ಮನೆಯಲ್ಲಿ ಕಿರುಕುಳ ಆರಂಭವಾಗಿತ್ತೆನ್ನಲಾಗಿದೆ. ಶುಕ್ರಚಾರ ಜೈಮೋಳ್ ಗಂಡನ ಮನೆಯಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದು, ಆಕೆಯ ಮುಖ ಹಾಗೂ ದೇಹದ ಇತರ ಭಾಗಗಳನ್ನು ಸುಟ್ಟಂತೆ ಕಾಣುತ್ತದೆ ಎಂದು ಮನೆಮಂದಿ ಮುಂq ಗೋಡ ಠಾಣೆಗೆ ದೂರು ನೀಡಿದ್ದಾರೆ.

ಮಹಿಳೆಯ ಕೊಲೆ: ಮೂವರ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೆಳ್ತಂಗಡಿ ಸೋಣಂದೂರು ಗ್ರಾಮದ ಮುಂಡಾಡಿ ಎಂಬಲ್ಲಿ ಭಾನುವಾರ ಸಂಜೆ ನಡೆದ ಮಹಿಳೆಯೊಬ್ಬರ ಕೊಲೆ ಪ್ರಕರಣದ ಸಂಬಂಧ ಮೂವರನ್ನು ಬಂಧಿಸಲಾಗಿದೆ. ವಿಜಯ ಕುಮಾರ್ ಎಂಬವರ ಪತ್ನಿ ಶಶಿಕಲಾ (೩೫) ಕೊಲೆಯಾದವರು. ಅವರ ಪತಿ ವಿಜಯಕುಮಾರ್, ಮೈದುನ ಸಂತೋಷ್ ಹಾಗೂ ಮಾವ ಸುಂದರ ಶೆಟ್ಟಿ ಎಂಬವರು ಬಂಧಿತರು.

ಅಮಾವಾಸೆಗುಂಡಿಯಲ್ಲಿ ಕೊಳೆತ ಶವ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಪಾರ್ಪಿಕಲ್ಲು ಕಪಿಲ ನದಿಯ ಅಮವಾಸೆ ಗುಂಡಿಯಲ್ಲಿ ಸೋಮವಾರ ಬೆಳಗ್ಗೆ ಕೊಳೆತ ಶವ ಪತ್ತೆಯಾಗಿದೆ. ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ಲಿಯೋ ಡಿ’ಕುನ್ನ (೫೦) ಅವರ ಶವ ಎಂದು ಗುರುತಿಸಲಾಗಿದೆ.
ಅವಿವಾಹಿತರಾಗಿದ್ದ ಅವರು ಕಾಪಿನಬಾಗಿಲು ಎಂಬಲ್ಲಿ ತನ್ನ ಅಣ್ಣನ ಮನೆ ಸಮೀಪ ಒಂಟಿಯಾಗಿ ವಾಸಿಸುತ್ತಿದ್ದರು.
ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದ್ದು, ಸೋಮವಾರ ಬೆಳಗ್ಗೆ ನದಿಯಲ್ಲಿ ಶವವನ್ನು ನೋಡಿದವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಉಪ್ಪಿನಂಗಡಿ ಉಪ ನಿರೀಕ್ಷಕರು ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.

ಮಹಿಳೆಯ ಸರ ಕಸಿದು ಪರಾರಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಉರ್ವಸ್ಟೋರ್ ಬಳಿ ಭಾನುವಾರ ರಾತ್ರಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಸೆಳೆದುಕೊಂಡು ಪರಾರಿಯಾಗಿದ್ದಾರೆ. ಸುರತ್ಕಲ್‌ನ ನಾಗಮ್ಮ ಎಂಬವರು ಸರ ಕಳೆದುಕೊಂಡವರು. ಬೈಕ್‌ನಲ್ಲಿ ಬಂದ ಇಬ್ಬರು ನಾಗಮ್ಮ ಅವರ ಕುತ್ತಿಗೆಯಲ್ಲಿದ್ದ ಸುಮಾರು ೩೫ ಸಾವಿರ ರೂ. ಮೌಲ್ಯದ ಚಿನ್ನದ ಸರವನ್ನು ಸೆಳೆದುಕೊಂಡು ಪರಾರಿಯಾಗಿದ್ದಾರೆ. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ: ಹೋಮ್ ಗಾರ್ಡ್‌ಗೆ ಗಾಯ

Posted by JAYAKIRANA Kirana on | 0 comments | Leave a comment...

ಸುಳ್ಯ: ಸುಳ್ಯ ನಗರದಲ್ಲಿ ಸಂಚಾರ ನಿಯಂತ್ರಣ ಮಾಡುತ್ತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ಪ್ರಭಾಕರ ಪೈ ಎಂಬ ವರಿಗೆ ಬೈಕ್ ಡಿಕ್ಕಿ ಹೊಡೆದು ಗಾಯ ಗೊಂಡಿದ್ದಾರೆ. ಸಂಚಾರ ನಿಯಂತ್ರಣ ಮಾಡುತ್ತಿದ್ದ ವೇಳೆ ನುಗ್ಗಿ ಬಂದ ಬೈಕ್ ಡಿಕ್ಕಿ ಹೊಡೆಯಿತು.

ಬೆಳ್ಳಾರೆ ಪ್ರಕರಣ: ನಿರೀಕ್ಷಣಾ ಜಾಮೀನು

Posted by JAYAKIRANA Kirana on | 0 comments | Leave a comment...

ಸುಳ್ಯ: ಬೆಳ್ಳಾರೆಯಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಕಿರಣ್‌ಕುಮಾರ್, ಜಯಂತ, ಸಂತೋಷ, ಪುರಂದರ ಎಂಬವರಿಗೆ ಪುತ್ತೂರು ತ್ವರಿತಗತಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಇದೇ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಸುಭಾಸ್ ಮತ್ತು ಮಧುಚಂದ್ರರಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಇಂದು ಪ್ಲೇಆಫ್‌ನಲ್ಲಿ ಸೆಹ್ವಾಗ್-ಗಂಭೀರ್ ಮಧ್ಯೆ ಕಾದಾಟ

Posted by JAYAKIRANA Kirana on | 0 comments | Leave a comment...

ಪುಣೆ: ಅಗ್ರ ಸ್ಥಾನದಲ್ಲಿರುವ ಡೆಲ್ಲಿ ಡೇರ್‌ಡೇವಿಲ್ಸ್ ಮತ್ತು ಎರಡನೇ ಸ್ಥಾನದಲ್ಲಿರುವ ಕೊಲ್ಕತ್ತಾ ನೈಟ್‌ರೈಡರ‍್ಸ್ ಇಂದು ನಡೆಯಲಿರುವ ಮೊದಲ ಪ್ಲೇಆಫ್‌ನಲ್ಲಿ ಪರಸ್ಪರ ಸೆಣಸಲಿದೆ.
ದೆಹಲಿಯ ಆಟಗಾರರೇ ಮುನ್ನಡೆಸುತ್ತಿರುವ ಎರಡು ತಂಡಗಳು ಎದುರಾಗುತ್ತಿದ್ದು, ಇದು ಕ್ರಿಕೆಟ್ ಪ್ರೇಮಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಸೆಹ್ವಾಗ್ ನೇತೃತ್ವದ ಡೆಲ್ಲಿ ಕಳೆದ ಕೆಲವು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನೇ ನೀಡುತ್ತಿದೆ. ಡೆಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಉತಮವಾಗಿದ್ದು, ಎದುರಾಳಿ ಪಾಳಯಕ್ಕೆ ಯಾವುದೇ ಸಮಯದಲ್ಲಿ ನೀರು ಕುಡಿಸುವ ಸಾಮರ್ಥ್ಯ ಹೊಂದಿದೆ. ಡೆಲ್ಲಿ ಆರಂಭಿಕರಾದ ಸೆಹ್ವಾಗ್ ಮತ್ತು ವಾರ್ನರ್ ಮೇಲೆ ಹೆಚ್ಚು ಅವಲಂಬಿತಾಗಿದೆ. ಇವರಿಬ್ಬರು ಸಿಡಿದರೆ ಡೆಲ್ಲಿಗೆ ಗೆಲುವು ಕಟ್ಟಿಟ್ಟ ಬುತ್ತಿ. ಡೆಲ್ಲಿಯ ಮಧ್ಯಮ ಸರದಿಯಲ್ಲಿ ಜಯವರ್ಧನೆ, ಟೇಲರ್ ಮತ್ತು ನಮನ್ ಓಜ್ಹಾ ಅವರಂತಹ ಆಟಗಾರರು ದೊಡ್ಡ ಮೊತ್ತ ಪೇರಿಸುವ ಸಾಮರ್ಥ್ಯ ಹೊಂದಿದ್ದಾರೆ.
ಆದರೆ ಡೆಲ್ಲಿ ಬ್ಯಾಟಿಂಗ್ ಪಾಳಯಕ್ಕೆ ತಕ್ಕ ತಿರುಗೇಟು ನೀಡಲು ಕೊಲ್ಕತ್ತಾ ಬೌಲಿಂಗ್ ಸಜ್ಜಾಗಿದೆ. ಅದರಲ್ಲೂ ಈ ಪಂದ್ಯವನ್ನು ಸುನಿಲ್ ನರೈನ್ ಮತ್ತು ಸೆಹ್ವಾಗ್ ನಡುವಿನ ಹೋರಾಟವೆಂದೇ ಬಿಂಬಿಸಲಾಗುತ್ತಿದೆ. ಬಾಲಾಜಿ, ಕ್ಯಾಲೀಸ್ ಕೂಡ ರನ್ ಗತಿಗೆ ಕಡಿವಾಣ ಹಾಕಲು ಸಮರ್ಥರಾಗಿದ್ದಾರೆ. ಸ್ಪಿನ್ನರ್ ಅಬ್ದುಲ್ಲಾ ಕೂಡ ಕೊಲ್ಕತ್ತಾ ಬೌಲಿಂಗ್ ಪಾಳಯದ ಟ್ರಂಪ್ ಕಾರ್ಡ್ ಆಗಿದ್ದಾರೆ.
ಕೊಲ್ಕತ್ತಾದ ಬ್ಯಾಟಿಂಗ್ ಕಪ್ತಾನ ಗೌತಮ್ ಗಂಭೀರ್, ಮೆಕ್‌ಕಲಮ್ ಮತ್ತು ಕ್ಯಾಲೀಸ್ ಅವರಿಂದ ಬಲಿಷ್ಠವಾಗಿದ್ದು, ಮಧ್ಯಮ ಸರದಿಯಲ್ಲಿ ಮನೋಜ್ ತಿವಾರಿ, ಯೂಸುಫ್ ಪಠಾಣ್ ಕೂಡ ಇದ್ದಾರೆ. ಆದರೆ ಪಠಾಣ್ ಈ ಐಪಿಎಲ್‌ನಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಿಲ್ಲ. ಗಂಭೀರ್ ಕೊಲ್ಕತ್ತಾದ ಆಧಾರಸ್ತಂಭವಾಗಿದ್ದಾರೆ. ಆದರೆ ಡೆಲ್ಲಿ ಬೌಲರ್‌ಗಳನ್ನು ಕಾಡಲು ಮೆಕ್‌ಕಲಮ್ ಮತ್ತು ಕ್ಯಾಲೀಸ್ ಕೂಡ ಸಜ್ಜಾಗಿದ್ದಾರೆ.
 ಡೆಲ್ಲಿ ಮೊರ್ನೆ ಮೊರ್ಕೆಲ್, ಉಮೇಶ್ ಯಾದವ್ ಅರೋನ್ ಅವರಿಂದಾಗಿ ಯಾವುದೇ ತಂಡದ ಬ್ಯಾಟ್ಸ್‌ಮೆನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಬಲ್ಲರು. ಎರಡೂ ತಂಡಗಳು ಬಲಿಷ್ಠವಾಗಿರುವ ಕಾರಣ ಪ್ರಬಲ ಹೋರಾಟವನ್ನು ನಿರೀಕ್ಷಿಸಲಾಗಿದೆ.

ಪ್ಲೇಆಫ್‌ಗೆ ಆತ್ಮವಿಶ್ವಾಸ ಹೆಚ್ಚಿದೆ: ಡ್ವೆಯ್ನ್ ಸ್ಮಿತ್

Posted by JAYAKIRANA Kirana on | 0 comments | Leave a comment...

ಜೈಪುರ: ರಾಜಸ್ಥಾನ ರಾಯಲ್ಸ್ ವಿರುದ್ಧ ಹತ್ತು ವಿಕೆಟ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಆರಂಭಿಕ ಡ್ವೆಯ್ನ್ ಸ್ಮಿತ್, ಪ್ಲೇಆಫ್‌ನಲ್ಲಿ ಇದೇ ಆತ್ಮವಿಶ್ವಾಸದೊಂದಿಗೆ ತಂಡ ಆಡಲಿದೆ ಎಂದು ಹೇಳಿದ್ದಾರೆ.
ನಾವು ಇಷ್ಟು ಸುಲಭ ಗೆಲುವನ್ನು ನಿರೀಕ್ಷಿಸಿ ರಲಿಲ್ಲ. ಅವರ ಬೌಲಿಂಗ್ ಕಳಪೆಯಾಗಿತ್ತು ಎಂದಲ್ಲ, ಆದರೆ ನಾವು ತುಂಬಾ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೇವೆ ಎಂದು ಸ್ಮಿತ್ ತಿಳಿಸಿ ದರು.
ನಾನು ಸಚಿನ್ ಅವರೊಂದಿಗೆ ಒಳ್ಳೆಯ ಜತೆಯಾಟ ನಡೆಸಿದೆ ಮತ್ತು ಇದರಿಂದ ನಮಗೆ ಸುಲಭವಾಗಿ ಗೆಲುವು ದಾಖಲಿಸಲು ಸಾಧ್ಯವಾ ಗಲಿಲ್ಲ. ನಾನು ಕೇವಲ ಸಚಿನ್ ಹೇಳಿದ್ದನ್ನು ಕೇಳುತ್ತಿದ್ದೆ ಮತ್ತು ಇದರಿಂದ ಸುಲಭವಾಗಿ ರನ್ ಬಂದಿದೆ ಎಂದು ಸ್ಮಿತ್ ತನ್ನ ಆಟದ ವಿವರವನ್ನು ನೀಡಿದರು.
ಈ ಗೆಲುವು ನಮಗೆ ಹೆಚ್ಚಿನ ಆತ್ಮವಿಶ್ವಾಸ ವನ್ನು ತಂದುಕೊಟ್ಟಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪ್ಲೇಆಫ್‌ನಲ್ಲಿ ಇದನ್ನೇ ಮುಂದು ವರಿಸಲಿದ್ದೇವೆ ಎಂದು ವೆಸ್ಟ್‌ಇಂಡೀಸ್‌ನ ಆಟಗಾರ ಹೇಳಿದರು.

ರೇವ್ ಪಾರ್ಟಿ: ತನಿಖೆಯ ಬಳಿಕ ಬಿಸಿಸಿಐ ಉತ್ತರ

Posted by JAYAKIRANA Kirana on | 0 comments | Leave a comment...

ನವದೆಹಲಿ: ಮುಂಬೈಯಲ್ಲಿ ನಡೆದ ರೇವ್ ಪಾರ್ಟಿ ವೇಳೆ ಸಿಕ್ಕಿಬಿದ್ದ ಪುಣೆ ವಾರಿಯರ್ಸ್ ತಂಡದ ಇಬ್ಬರು ಆಟಗಾರರಾದ ವೆಯ್ನ್ ಪರ್ನೆಲ್ ಮತ್ತು ರಾಹುಲ್ ಶರ್ಮಾ ಅವರ ಬಗ್ಗೆ ಬಿಸಿಸಿಐ ಮತ್ತು ಐಪಿಎಲ್ ತಂಡಗಳು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದೆ.
ಬಿಸಿಸಿಐ ಮತ್ತು ಐಪಿಎಲ್ ತಂಡಕ್ಕೆ ಇದರ ಬಗ್ಗೆ ತಿಳಿದಿದೆ. ಆದರೆ ತನಿಖೆ ಪೂರ್ಣಗೊಳ್ಳುವ ತನಕ ಯಾವುದೇ ಹೇಳಿಕೆ ನೀಡದಿರಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಕಾರ‍್ಯದರ್ಶಿ ಸಂಜಯ್ ಜಗ್ದಲೆ ತಿಳಿಸಿದ್ದಾರೆ. ಭಾನುವಾರ ಸಂಜೆ ರೇವ್ ಪಾರ್ಟಿಯಲ್ಲಿ ಪರ್ನೆಲ್ ಮತ್ತು ಶರ್ಮಾ ಕಾಣಿಸಿಕೊಂಡಿದ್ದರು. ಪೊಲೀಸ್ ದಾಳಿ ಮಾಡಿ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಇದರಲ್ಲಿ ಪರ್ನೆಲ್ ಮತ್ತು ಶರ್ಮಾ ಕೂಡ ಇದ್ದರು.
೨೦೧೨ರ ಐಪಿಎಲ್ ಪಂದ್ಯಗಳು ಅಂತ್ಯಗೊಂಡಿದ್ದರೂ ಈ ಇಬ್ಬರು ಆಟಗಾರರು ಪುಣೆ ವಾರಿಯರ್ಸ್ ಇಂಡಿಯಾ ಮತ್ತು ಐಪಿಎಲ್‌ನ ಒಪ್ಪಂದದಲ್ಲಿದ್ದಾರೆ ಎಂದು ಜಗ್ದಲೆ ಹೇಳಿದ್ದಾರೆ.

ವೃತ್ತಿ ಶಿಕ್ಷಣ ಅವ್ಯವಹಾರ ತಡೆಗಟ್ಟಲು ಆನ್‌ಲೈನ್ ಕೌನ್ಸೆಲಿಂಗ್: ರಾಮ್‌ದಾಸ್

Posted by JAYAKIRANA Kirana on | 0 comments | Leave a comment...

ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಗೊಂದಲ, ವಿಳಂಬ, ಹಂಚಿಕೆಯಲ್ಲಿ ನಡೆಯುವ ಅವ್ಯವಹಾರ ತಡೆಗಟ್ಟಲು ಪ್ರಸಕ್ತ ವರ್ಷದಿಂದಲೇ ಸಿಇಟಿ ಆನ್‌ಲೈನ್ ಕೌನ್ಸೆಲಿಂಗ್ ನಡೆಸಲಾಗು ವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಪ್ರಕಟಿಸಿದ್ದಾರೆ.
ಆನ್‌ಲೈನ್ ಕೌನ್ಸ್‌ಲಿಂಗ್ ನಡೆಸುವ ಮೂಲಕ ಅವ್ಯವಹಾರಗಳನ್ನು ತಡೆ ಗಟ್ಟುವ ಉದ್ದೇಶದಿಂದಷ್ಟೇ ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು, ಗೊಂದಲಕ್ಕೆ ಒಳಗಾ ಗುವ ಅವಶ್ಯವಿಲ್ಲ ಎಂದರು. ಮುಂದಿನ ವರ್ಷದಿಂದ ಸಿಇಟಿ ಬದಲಿಗೆ ರಾಷ್ಟ್ರಾದ್ಯಂತ ಏಕರೂಪ ಪ್ರವೇಶ ಪರೀಕ್ಷೆ ನಡೆಸಲು ಸರ್ಕಾರ ಎಲ್ಲಾ ಸಿದ್ಧತೆ ನಡೆಸಿಕೊಂಡಿದೆ.
ಎನ್‌ಇಇಟಿ ಪರೀಕ್ಷೆಯಿಂದ ರಾಜ್ಯದ ಪ್ರತಿಭಾವಂತ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಅನ್ಯಾಯವಾಗುವುದಿಲ್ಲ. ಅವರಿಗೆ ಇದುವರೆಗೂ ದೊರಕುತ್ತಿದ್ದ, ಸೀಟು ಗಳು ಈ ಪರೀಕ್ಷೆಯಲ್ಲೂ ಲಭ್ಯವಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಜುಲೈ ೧೫ರ ಒಳಗೆ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸು ತ್ತೇವೆ. ಈ ಹಿನ್ನೆಲೆಯಲ್ಲಿ ಜೂನ್ ೧೦ ರಿಂದ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇ ಶ ಬಯಸುವ ವಿದ್ಯಾರ್ಥಿಗಳ ದಾಖಲೆ ಪರಿಶೀಲನ ಕಾರ್ಯ ನಡೆಯಲಿದೆ.

ಶಂಕರಮೂರ್ತಿ, ಗಣೇಶ್ ಕಾರ್ಣಿಕ್ ಸಾಧನೆ ಶೂನ್ಯ: ಭೋಜೇಗೌಡ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಶಿಕ್ಷಕರ ಕ್ಷೇತ್ರದಲ್ಲಿ ಡಿ.ಎಚ್.ಶಂಕರಮೂರ್ತಿ ಹಾಗೂ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಾಧನೆ ಶೂನ್ಯ. ವಿಧಾನ ಪರಿಷತ್‌ನಲ್ಲೂ ಅವರು ಶಿಕ್ಷಕರ ಪರವಾಗಿ ಧ್ವನಿ ಎತ್ತಿದವರಲ್ಲ. ಅವರಿಂದ ಯಾವುದೇ ಸಾಧನೆ ಆಗಿಲ್ಲ ಎಂದು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಆರೋಪಿಸಿದ್ದಾರೆ.
ಭಾನುವಾರ ಪಡುಬಿದ್ರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಭೋಜೇ ಗೌಡ, ಒಂದು ವೇಳೆ ಇವರು ಸಾಧನೆ ಮಾಡಿದಲ್ಲಿ ಸರಕಾರಿ ಕಚೇರಿಗಳಲ್ಲಿ ಏಕೆ ಮತಪ್ರಚಾರ ನಡೆಸುತ್ತಿದ್ದರು ಎಂದು ಪ್ರಶ್ನಿಸಿದ ಅವರು, ೪ಲಕ್ಷಕ್ಕೂ ಅಧಿಕ ಪದವೀ ಧರರಿದ್ದರೂ ಈ ಬಾರಿ ನೈರುತ್ಯ ಕ್ಷೇತ್ರದಲ್ಲಿ ಕೇವಲಾ೫೩ಸಾವಿರ ಪದವೀಧರು ಮಾತ್ರ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರು, ಬಿಜೆಪಿಗರು ಕನಿಷ್ಠ ಎಲ್ಲರಿಗೂ ಅರ್ಹತೆ ದೊರಕಿಸಬೇಕಿತ್ತು ಎಂದರು.

ವಿಮಾನ ದುರಂತಕ್ಕೆ ೨ ವರ್ಷ ಪರಿಹಾರಕ್ಕೆ ಹಾತೊರೆಯುವ ಕುಟುಂಬ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಕಾಸರಗೋಡು ಜಿಲ್ಲೆಯ ನಿವಾಸಿಗಳ ಸಹಿತ ೧೫೮ ಮಂದಿಯ ಅತ್ಯಂತ ದಾರುಣ ಮರಣಕ್ಕೆ ಕಾರಣವಾದ ಮಂಗಳೂರು ವಿಮಾನ ದುರಂತಕ್ಕೆ ಇಂದು ಎರಡು ವರ್ಷ ಪೂರ್ತಿಯಾಗುತ್ತಿದೆ. ಇಡೀ ದೇಶವನ್ನೇ ಒಂದೇ ಸವನೆ ನಲುಗಿಸಿದ ದುರಂತಕ್ಕೆ ಎರಡು ವರ್ಷ ಪೂರ್ತಿಯಾದರೂ ಕೂಡಾ ಮೃತರ ಕುಟುಂಬಗಳಿಗೆ ಘೋಷಣೆಯಾದ ನಷ್ಟ ಪರಿಹಾರ ವಿತರಣೆ ಇನ್ನು ಕೂಡಾ ಪೂರ್ತಿಯಾಗಿಲ್ಲ.
೨೦೧೦ರ ಮೇ ೨೨ ರಂದು ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾದ ವಿಮಾನವು ಪತನವಾಗಿತ್ತು. ದುಬಾಯಿಯಿಂದ ಬಂದ ವಿಮಾನವು ಬಜಪೆ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ರನ್‌ವೇಯಿಂದ ಮತ್ತೂ ಮುಂದಕ್ಕೆ ಹೋದ ಫಲವಾಗಿ ಆಳದ ಕಂದಕಕ್ಕೆ ಉರುಳಿ ಸುಟ್ಟು ಭಸ್ಮವಾಗಿತ್ತು.
ದುರಂತದಲ್ಲಿ ಮೃತಪಟ್ಟವರಲ್ಲಿ ಹಲವರು ಕಾಸರಗೋಡು ನಿವಾಸಿಗ ಳಾಗಿದ್ದಾರೆ. ಪೈಲಟ್‌ಗಳ ನಡುವಿನ ವಿವಾದವೇ ವಿಮಾನ ಪತನಕ್ಕೆ ಕಾರಣ ವೆಂದು ಬಳಿಕ ತನಿಖೆಯಿಂದ ಸ್ಪಷ್ಟ ವಾಗಿತ್ತು. ದುರಂತದಲ್ಲಿ ಮೃತಪಟ್ಟವರ ಪೈಕಿ ೧೦ ಮಂದಿಯ ದೇಹಗಳನ್ನು ಗುರುತಿಸಲಾರದ ಸ್ಥಿತಿಯಲ್ಲಿ ಸಾರ್ವ ಜನಿಕವಾಗಿ ದಹನ ಮಾಡಲಾಗಿತ್ತು.
೧೫೮ ಮಂದಿ ಸಜೀವ ದಹನವಾದ ದುರಂತ ಘಟಿಸಿ ಎರಡು ವರ್ಷ ಸಂದರೂ ಅರ್ಹ ನಷ್ಟ ಪರಿಹಾರ ಲಭ್ಯ ವಾಗದೆ ಮಿಕ್ಕ ಕುಟುಂಬಗಳೂ ಆತಂಕಿ ತವಾಗಿವೆ. ನಷ್ಟ ಪರಿಹಾರ ವಿತರಣೆ ಯಲ್ಲಿ ಅಧಿಕೃತರು ತೋರಿದ ಅಸಡ್ಡೆ ಭಾರೀ ಪ್ರತಿಭಟನೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ತಲಾ ೭೫ ಲಕ್ಷ ರೂಪಾಯಿಯಂತೆ ಪರಿಹಾರ ನೀಡಲು ಕೇರಳ ಉಚ್ಛ ನ್ಯಾಯಪೀಠವು ತೀರ್ಪು ನೀಡಿತ್ತು. ಈ ಮಧ್ಯೆ, ೧೧೬ ಮಂದಿಯ ಆಶ್ರಿತರಿಗೆ ಪರಿಹಾರವಾಗಿ ೧೦೭.೩೫ ಕೋಟಿ ರೂ. ನೀಡಿರುವುದಾಗಿ ಏರ್ ಇಂಡಿಯಾ ಅಧಿಕೃತರು ಸ್ಪಷ್ಟೀಕರಿ ಸಿದ್ದಾರೆ. ಅಂತೂ ಇನ್ನೂ ಅನೇಕ ಕುಟುಂಬಗಳು ಅರ್ಹ ನಷ್ಟ ಪರಿಹಾರ ಕ್ಕಾಗಿ ಕಾಯುತ್ತಲೇ ಇವೆ.

ಅಭಯರಿಂದ ಕೀಳುಮಟ್ಟದ ರಾಜಕೀಯ: ಅಧಿಕಾರಿ ಆರೋಪ

Posted by JAYAKIRANA Kirana on | 0 comments | Leave a comment...

ಮೂಡುಬಿದಿರೆ: ಮೂಡುಬಿದಿರೆಯ ೩ ಓವರ್ ಹೆಡ್ ಟ್ಯಾಂಕ್‌ನ ಉದ್ಘಾಟನೆಯನ್ನು ರದ್ದು ಮಾಡಿಸಿದ್ದೇ ಇಲ್ಲಿನ ಶಾಸಕರು. ನಗರಾಭಿವೃದ್ಧಿ ಸಚಿವರಾದ ಸುರೇಶ್ ಕುಮಾರ್ ಮೂಡುಬಿದಿರೆಗೆ ಬಂದಿದ್ದಾಗ ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ಸೊಂಟದ ಕೆಳಗಿನ ಭಾಷೆಯಲ್ಲಿ ಬೈದು ನಿಂದಿಸಿದ್ದಾರೆ, ಮೂರುಬಾರಿ ಶಾಸಕರಾದವರಿಗೆ ಇಂತಹ ಕೀಳುಮಟ್ಟದ ರಾಜಕೀಯ ಶೋಭೆ ತರುವುದಿಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿಯವರು ಹೇಳಿದ್ದಾರೆ.
ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಭಿವೃದ್ಧಿಯ ಹೆಸರಿನಲ್ಲಿ ಚಿಲ್ಲರೆ ರಾಜಕಾರಣ ಮಾಡುತ್ತಿರುವ ಶಾಸಕರು ತಮ್ಮ ಇಂತಹ ದುರ್ಬುದ್ಧಿಯನ್ನು ಬಿಟ್ಟು ಬಿಡಬೇಕೆಂದು ಸಲಹೆ ನೀಡಿದ್ದಾರೆ.
ಮೂಡಬಿದಿರೆ ಪುರಸಭೆ ೨೦೦೯ ರಿಂದ ೨೦೧೨ರವರೆಗೆ ಕಟ್ಟಡ ನಿರ್ಮಾಣ ಪರವಾನಿಗೆ ಸ್ಥಗಿತಗೊಂಡಿತ್ತು. ಈ ಅವಧಿಯಲ್ಲಿ ಕರ್ನಾಟಕ ಸರಕಾರದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ೨೦೧೧ರ ನವಂಬರ್ ೨೧ರ ಸುತ್ತೋಲೆಯಲ್ಲಿ ಯಾವುದೇ ಪರವಾನಿಗೆಗಳನ್ನು ಪೂರ್ಣಪ್ರಮಾಣದ ನಗರ ಯೋಜನೆ ಪ್ರಾಧಿಕಾರ ರಚನೆಯಾಗುವವರೆಗೆ ತಡೆಹಿಡಿಯದಂತೆ ತಿಳಿಸಲಾಗಿದೆ. ಈ ಅವಧಿಯಲ್ಲಿ ಕಟ್ಟಡ ಪರವಾನಿಗೆಗಳು ಸ್ಥಗಿತಗೊಂಡಿದ್ದಲ್ಲಿ ಪುರಸಭೆಯ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ನ ಕಾನೂನು ಅರಿವಿನ ಕೊರತೆಯೇ ಕಾರಣವೆಂದು ಅವರು ಆರೋಪಿಸಿದರು. ಸುರೇಶ್ ಕುಮಾರ್ ಮಾಡಿರುವ ಆದೇಶವನ್ನು ಶಾಸಕರೇ ಮಾಡಿದ್ದು ಎಂದು ಶಾಸಕರ ಸಹಚರರು ಜೆರಾಕ್ಸ್ ರಾಜಕೀಯ ಮಾಡುತ್ತಿದ್ದಾರೆ, ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕೆಂದೂ ಅವರು ಹೇಳಿದರು.

ಪುರಸಭೆಯಲ್ಲಿ ನಿರ್ಲಕ್ಷ ಮತ್ತು ಪಕ್ಷಪಾತ ಧೋರಣೆ
ಮೂಡುಬಿದಿರೆ ಪುರಸಭೆಯ ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಅಭಿವೃದ್ಧಿಯ ಬಗೆ ಏಕಪಕ್ಷೀಯವಾಗಿ ನಿರ್ಣಯಗಳನ್ನು ತಿದ್ದುಪಡಿ ಮಾಡಿಕೊಂಡು ಪುರಸಭೆಯ ನಾಗರಿಕ ಕಾನೂನುಗಳನ್ನು ಪಕ್ಷಪಾತ ಧೋರಣೆಯೊಂದಿಗೆ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಮೂಡಾ ಅಧ್ಯಕ್ಷ ಪುರಸಭಾಸದಸ್ಯ ಎಂ. ಬಾಹುಬಲಿ ಪ್ರಸಾದ್ ಇದೇ ಸಂದರ್ಭದಲ್ಲಿ ಆರೋಪಿಸಿದರು.
ಬಿಜೆಪಿ ಮುಖಂಡ ಸುದರ್ಶನ ಎಂ., ಪುರಸಭಾ ಸದಸ್ಯರಾದ ಲಕ್ಷ್ಮಣ ಪೂಜಾರಿ, ಪ್ರಸಾದ್ ಕುಮಾರ್ ಉಷಾಕಿರಣ್, ರಾಜೇಶ್ ಮಲ್ಯ, ಹರಿಶ್ ಎಂ.ಕೆ., ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕಟಪಾಡಿ ಕೃಷಿಮೇಳ: ರಾಜಕಾರಣಿಗಳ ಬಾಯಿಗೆ ಬೀಗ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಕಟಪಾಡಿಯಲ್ಲಿ ಶನಿವಾರ ಮತ್ತು ರವಿವಾರ ನಡೆದ ಕೃಷಿಮೇಳದಲ್ಲಿ ರಾಜಕಾರಣಿಗಳನ್ನು ವೇದಿಕೆಯಲ್ಲಿ ಕುಳ್ಳಿರಿಸಿ ಅವರು ಏನನ್ನೂ ಮಾತಾಡದಂತೆ ಸಂಘಟಕರು ತಾಕೀತು ಮಾಡಿದ್ದಾರೆ.
 ಶನಿವಾರ ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಾಂಭದಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಮತ್ತಿತರ ರಾಜಕಾರಣಿಗಳನ್ನು ವೇದಿಕೆಗೆ ಕರೆದು ಕುಳ್ಳಿರಿಸಿದ್ದಾರೆ. ಸಂಘಟನಾಕಾರರು ಚುನಾವಣೆಯ ನೀತಿ ಸಂಹಿತೆಯ ಕಾರಣ ನೀಡಿ ಅವ ರನ್ನು ಮಾತನಾಡದಂತೆ ತಡೆದಿದ್ದಾರೆ. ಇದರಿಂದ ರಾಜಕಾರಣಿಗಳು ವಿಚಲಿತ ರಾದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ರವಿವಾರ ಸಂಜೆ ನಡೆದ ಸಮಾ ರೋಪ ಸಮಾರಂಭದಲ್ಲಿಯೂ ಮಂಗಳೂರಿನಿಂದ ಕರಾವಳಿ ಪ್ರಾಧಿ ಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಸಮಯಕ್ಕೆ ಸರಿಯಾಗಿ ಭಾಗವಹಿಸಿ ದ್ದರೂ, ಸಮಾರೋಪ ಕಾರ್ಯಕ್ರಮ ಸುಮಾರು ಒಂದು ಗಂಟೆ ತಡವಾಗಿ ಪ್ರಾರಂಭಿಸಿದ್ದಾರೆ. ಕೇವಲ ಶೋ ಪೀಸ್‌ಗಳಂತೆ ವೇದಿಕೆಯಲ್ಲಿ ಕುಳಿತಿದ್ದ ಲಾಲಾಜಿ ಮೆಂಡನ್ ತನಗೆ ಅರ್ಜೆಂಟ್ ಕೆಲಸ ಎಂದು ವೇದಿಕೆಯಿಂದ ನಿರ್ಗಮಿಸಿದರು. ಸಭಾಕಾರ್ಯಕ್ರಮ ಮುಗಿಯುವುದನ್ನೇ ಕಾಯುತ್ತಿದ್ದ ನಾಗರಾಜ ಶೆಟ್ಟಿ ಬುಸು ಗುಟ್ಟುತ್ತಲೇ ವೇದಿಕೆಯಿಂದ ಕೆಳಗಿಳಿದು ವೇದಿಕೆಯಲ್ಲಿ ತಾನು ಹೇಳಲಿದ್ದ ಮಾತನ್ನು ಖಾಸಗಿ ವಾಹಿನಿಯವ ರೊಂದಿಗೆ ಹೇಳಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿ ಇದ್ದರೂ, ರಾಜಕಾರಣಿಗಳು ಆಶ್ವಾಸನೆ ಹಾಗೂ ಹೊಸ ಘೋಷಣೆ ಹಾಕದಿರುವಂತೆ ಸೂಚನೆ ಇದೆ. ಆದರೆ ವೇದಿಕೆಗೆ ಕರೆದು ಶುಭ ಹಾರೈಕೆ ನೀಡಲೂ ಆಸ್ಪದ ನೀಡದಿದ್ದುದರ ಬಗ್ಗೆ ಕೆಲ ರಾಜಕಾರಣಿಗಳು ಕಿಡಿ ಕಾರಿದ್ದಾರೆ.
ಕೃಷಿಮೇಳದಲ್ಲಿ ಕೆಲ ನಿರ್ಣಯ ಗಳನ್ನು ಕೈಗೊಂಡಿದ್ದರೂ. ಅದರ ಪ್ರತಿಗಾಗಿ ಪತ್ರಕರ್ತರು ಹಲವಾರು ಬಾರಿ ವಿನಂತಿ ಮಾಡಿದರೂ ಯಾವೊಬ್ಬ ಸಂಘಟಕನೂ ಒಂದು ಪ್ರತಿಯನ್ನೂ ಕೊಡುವ ಸೌಜನ್ಯತೆ ತೋರಿಲ್ಲ.

ಪಾನಿಪುರಿ ಅಂಗಡಿಗೆ ದಾಳಿ: ಮನಪಾ ಕಾರ್ಯಾಚರಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಆಹಾರ ಪದಾ ರ್ಥಗಳನ್ನು ತೆರೆದಿಟ್ಟು ರಸ್ತೆ ಬದಿ ವ್ಯವಹಾರ ನಡೆಸುತ್ತಿದ್ದ ಪಾನಿಪುರಿ ಅಂಗಡಿಗಳಿಗೆ ಮನಪಾ ಅಧಿಕಾರಿಗಳು ನಿನ್ನೆ ದಾಳಿ ನಡೆಸಿ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.
ಕಾನೂನು ಮೀರಿ ಪಾನಿಪುರಿ ವ್ಯವಹಾರ ನಡೆಸುತ್ತಿದ್ದರೂ ತಾನು ಮನಪಾ ಆರೋಗ್ಯ ಅಧಿಕಾರಿಗೆ ತಿಂಗ ಳಿಗೆ ೪೦ ಸಾವಿರ ಲಂಚ ನೀಡುತ್ತೇನೆ, ಎನ್ನುವ ಹೇಳಿಕೆ ನೀಡಿ ಅಧಿಕಾರಿ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿದ್ದ ಕೈಲಾಸ್ ಪಾನಿಪುರಿ ಅಂಗಡಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಕೈಲಾಸ್ ಪಾನಿಪುರಿ ಹೆಸರಿನಲ್ಲಿ ಮಂಗಳೂರು ಮತ್ತು ಸುರತ್ಕಲ್‌ನಲ್ಲಿ ೩೮ ಅಂಗಡಿಗಳಿದ್ದು ಇದರ ನಿರ್ವಹಣೆ ಒಬ್ಬನಿಗೆ ಸೇರಿದೆ. ಈತನಿಗೆ ಸಾಮಾನ್ಯ ಆರೋಗ್ಯ ಸೂತ್ರ ಅಳವಡಿಸುವಂತೆ ಮನಪಾ ಅಧಿಕಾರಿಗಳು ಈ ಹಿಂದೆಯೇ ತಿಳಿಸಿದ್ದರೂ ಈತ ಅದನ್ನು ಗಾಳಿಗೆ ತೂರಿ ವ್ಯವಹಾರ ನಡೆಸಿದ್ದಲ್ಲದೆ ಅಧಿ ಕಾರಿಗಳ ಮೇಲೆಯೇ ಆರೋಪ ಮಾಡಿದ್ದ. ಹೀಗಾಗಿ ಮನಪಾ ಅಧಿಕಾ ರಿಗಳು ದಾಳಿ ನಡೆಸಿದ್ದಾರೆ.

ಶಿಲ್ಪಾಗೆ ಗಂಡು ಮಗು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ನಿನ್ನೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಪತಿ ರಾಜ್ ಕುಂದ್ರಾ ಟ್ವಿಟರ್ ಮೂಲಕ ಬಹಿರಂಗಪಡಿಸಿ ಸಂತಸ ಹಂಚಿಕೊಂಡಿದ್ದಾರೆ.
ಶಿಲ್ಪಾ ತನಗೆ ನೀಡಿರುವ ಅತೀ ದೊಡ್ಡ ಉಡುಗೊರೆ ಇದಾಗಿದೆ ಎಂದಿರುವ ಪತಿ ರಾಜ್ ಕುಂದ್ರಾ ಅವರು, ಇದರಿಂದ ತನಗೆ ಹಾಗೂ ಇಡೀ ಕುಟುಂಬವರ್ಗಕ್ಕೆ ಅತೀವ ಸಂತಸವಾಗಿದೆ ಎಂದಿ ದ್ದಾರೆ. ಮುಂಡ್ಕೂರು ಮೂಲದ ಶಿಲ್ಪಾ ಶೆಟ್ಟಿ ಕಳೆದ ೨೦೦೯ರಲ್ಲಿ ಉದ್ಯಮಿ ರಾಜ್ ಕುಂದ್ರಾನನ್ನು ಮದುವೆ ಯಾಗಿದ್ದರು. ಬಾಲಿವುಡ್ ನಟಿಗೆ ಗಂಡು ಮಗುವಾಗಿ ರುವುದಕ್ಕೆ ಬಾಲಿವುಡ್‌ನ ಖ್ಯಾತನಾಮರು ಅಭಿನಂದಿಸಿ ದ್ದಾರೆ. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಸೀಮಂತದ ಸಮಯದಲ್ಲಿ ಪತಿ ರಾಜ್ ಕುಂದ್ರಾ ಚಿನ್ನದ ಚಮಚ ನೀಡಿದ್ದರು.

ಯಡ್ಡಿಯಿಂದ ದೂರ ಸರಿಯುತ್ತಿರುವ ಆಪ್ತರು

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷ ಕಟ್ಟಿದಲ್ಲಿ ಅವರನ್ನು ಕೈ ಹಿಡಿಯುವವರು ಬೆರಳೆಣಿಕೆಯಷ್ಟು ಮಾತ್ರ. ಅಧಿಕಾರ ಇಲ್ಲದಿದ್ದರೂ ಹತ್ತಕ್ಕೂ ಹೆಚ್ಚು ಸಚಿವರು ಸೇರಿದಂತೆ ೫೦ರಿಂದ ೬೦ ಶಾಸಕರು ಅವರನ್ನು ಸದಾ ಸುತ್ತುವರಿದಿದ್ದರು. ಆದರೆ ಅವರು ಪಕ್ಷದಿಂದ ದೂರ ಸರಿಯುತ್ತಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಅವರಿಗೆ ತೀವ್ರ ಅತ್ಯಂತ ಆಪ್ತರಾಗಿದ್ದವರೇ ದೂರ ಸರಿಯುತ್ತಿದ್ದಾರೆ.
ಕೆಲವರಂತೂ ತಮ್ಮ ಮೊಬೈಲ್ ನಂಬ್ರಗಳನ್ನೇ ಬದಲಾವಣೆ ಮಾಡಿದ್ದಾರೆ. ಒಂದು ವೇಳೆ ಅವರು ಪಕ್ಷ ತೊರೆದದ್ದೆ ಆದರೆ ಒಂದಿಬ್ಬರು ಸಚಿವರು ಸೇರಿದಂತೆ ಏಳೆಂಟು ಶಾಸಕರು ಮಾತ್ರ ಅವರ ಹಿಂದೆ ಹೋಗಲಿದ್ದಾರೆ. ಅವರಿಗೆ ಸದಾಕಾಲ ಬೆನ್ನ ಹಿಂದೆಯೇ ನಿಲ್ಲುತ್ತಿದ್ದ ಬಸವರಾಜ್ ಬೊಮ್ಮಾಯಿ , ನಿರಾಣಿ, ಉದಾಸಿ, ರಾಜೂಗೌಡ ಸೇರಿದಂತೆ ಮತ್ತೆ ಕೆಲವರು ಬಿಜೆಪಿಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ.
ಪಕ್ಷದಲ್ಲಿದ್ದರೆ ಮಾತ್ರ ನಾವು ಅವರಿಗೆ ಬೆಂಬಲ ನೀಡುತ್ತೇವೆ. ಅವರು ಪಕ್ಷದಿಂದ ಹೊರಹೋದರೆ ಅವರ ದಾರಿ ಅವರಿಗೆ , ನಮ್ಮ ದಾರಿ ನಮಗೆ ಎಂದಿದ್ದಾರೆ. ಶೋಭಾ ಕರಂದ್ಲಾಜೆ, ಸುರೇಶ್‌ಗೌಡ, ಹರೀಶ್, ಸೋಮಣ್ಣ, ಉಮೇಶ್ ಕತ್ತಿ ಮೊದಲಾದವರು ಯಡಿಯೂರಪ್ಪರ ಹೊಸ ಪಕ್ಷಕ್ಕೆ ಸೇರಲಿದ್ದಾರೆ.ಯಡಿಯೂರಪ್ಪ ಇನ್ನೂ ಒಂದೆರೆಡು ತಿಂಗಳ ಕಾಲ ಬಿಜೆಪಿಯಲ್ಲೇ ಮುಂದುವರಿದು ಪಕ್ಷದ ವರ್ಚಸ್ಸನ್ನು ಕುಂದಿಸುವ ಕೆಲಸ ಮಾಡಲಿದ್ದಾರೆ. ತಾವಾಗಿಯೇ ಹೊರಹೋಗುವ ಬದಲು ಪಕ್ಷವೇ ತಮ್ಮನ್ನು ಉಚ್ಚಾಟಿಸಲಿ ಎಂದು ಕಾಯುತ್ತಿದ್ದಾರೆ. ಉಚ್ಛಾಟಿಸಿದರೆ ತಮಗೆ ಅನುಕಂಪದ ಅಲೆ ಸಿಗಲಿದೆ ಎಂಬ ಲೆಕ್ಕಾಚಾರ ಯಡಿಯೂರಪ್ಪ ಅವರದ್ದು. ಇದಕ್ಕೆ ಅವಕಾಶ ನೀಡದಿರಲು ತಿರ್ಮಾನಿಸಿದ್ದಾರೆ. ರಾಜ್ಯ ನಾಯಕರು ಅವರೇ ಹೊರ ಹೋಗಲಿ. ಅಲ್ಲಿಯವರೆಗೂ ಅವರನ್ನು ಉಚ್ಛಾಟಿಸಬೇಡಿ ಎಂದು ಕೇಂದ್ರದ ಮೇಲೆ ಒತ್ತಡ ಹೇರಿದ್ದಾರೆ.
ಯಡಿಯೂರಪ್ಪ ಮಾತ್ರ ದಿನನಿತ್ಯ ಪಕ್ಷ ವಿರೋಧಿ ಚಟುವಟಿಕೆಗಳ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಸಾಧನೆ ಶೂನ್ಯ: ಪುಟ್ಟಣ್ಣ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪದವೀಧರ ಹಾಗೂ ಶಿಕ್ಷಕರ ಕ್ಷೇತರದಲ್ಲಿ ಡಿ.ಎಚ್. ಶಂಕರಮೂರ್ತಿ ಹಾಗೂ ಕ್ಯಾ. ಗಣೇಶ್ ಕಾರ್ಣಿಕ್ ಅವರ ಸಾಧನೆ ಶೂನ್ಯ. ವಿಧಾನ ಪರಿಷತ್‌ನಲ್ಲಿ ಶಿಕ್ಷಕರ ಅಥವಾ ವಿದ್ಯಾರ್ಥಿಗಳ ಪರ ಧ್ವನಿ ಎತ್ತಿಲ್ಲ. ಈ ಹಿನ್ನೆಲೆಯಿಂದ ಈ ಬಾರಿ ಅವರ ವಿರುದ್ಧ ಮತ ಚಲಾಯಿಸಿ ಈ ಕ್ಷೇತ್ರದಲ್ಲಿ ಬದಲಾವಣೆ ತರಬೇಕು ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಪುಟ್ಟಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ೧೮೬ ಪದವಿ ಪೂರ್ವ ಕಾಲೇಜು, ೧೦೪೬ ಹೈಸ್ಕೂಲ್, ೬೫೦ ಪದವಿ, ೬ ವೈದ್ಯಕೀಯ, ೧೫ ಎಂಜಿನಿಯರಿಂಗ್ ಅಲ್ಲದೇ ನರ್ಸಿಂಗ್ ಫಿಸಿಯೊಥೆರಪಿ ಕಾಲೇಜುಗಳಿಗೆ ಅನುಮತಿ ನೀಡಿದ್ದರು. ಇದರಲ್ಲಿ ಶಂಕರಮೂರ್ತಿ ಕೊಡುಗೆ ಏನೂ ಇಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಎಂ.ಜಿ. ಹೆಗಡೆ, ಡಿ.ಎಂ. ಅಸ್ಲಾಂ, ಸುಶೀಲ್ ನೊರುನ್ಹಾ, ವಸಂತ ಪೂಜಾರಿ ಉಪಸ್ಥಿತರಿದ್ದರು.

ತುಳು ಲಿಪಿ ಅಕ್ಷರಮಾಲೆ ಪುಸ್ತಕದ ಹರಿಕಾರ ಜಿ.ವಿ.ಎಸ್. ಉಳ್ಳಾಲ್

Posted by JAYAKIRANA Kirana on | 0 comments | Leave a comment...

ಮಂಗಳೂರು: ಶೇ.೯೦ರಷ್ಟು ಜನ ತುಳುವಿಗೆ ಲಿಪಿ ಇಲ್ಲವೆಂದು ತಿಳಿದಿದ್ದಾರೆ. ಆದರೆ ಜಿ.ವಿ.ಎಸ್. ಉಳ್ಳಾಲ್ ಈ ಬಗ್ಗೆ ಸಂಶೋಧನೆ ಮಾಡಿ, ತುಳುಭಾಷೆಯನ್ನು ಯುವ ಜನತೆ ಕಲಿತು ಉಳಿಸುವಲ್ಲಿ ಸಹಕಾರಿ ಯಾಗುವಂತೆ ತುಳು ಲಿಪಿ ಅಕ್ಷರ ಮಾಲೆಯನ್ನು ಒಳಗೊಂಡ ಪುಸ್ತಕ ರಚಿಸಿ ಪ್ರಕಟಿಸಿದ್ದಾರೆ.
ತುಳುಭಾಷೆಯನ್ನು ಎಂಟನೇ ಪರಿಚ್ಛೇದದಲ್ಲಿ ಸೇರಿಸಲು ಬೇಕಾದ ಎಲ್ಲಾ ಅರ್ಹತೆಗಳಿದ್ದರೂ ಹಾಗೆಯೇ ಉಳಿದಿರುವುದು ಅಚ್ಚರಿಯ ವಿಷಯ ತುಳು ಸಾಹಿತ್ಯ ಅಕಾಡೆಮಿ ಅಂಗೀ ಕರಿಸಿದ ಲಿಪಿಯನ್ನು ಆಧರಿಸಿ ಸುಲಭ ವಾಗಿ ತುಳು ಲಿಪಿ ಕಲಿಯುವಂತಾ ಗಲು ತುಳು ಕನ್ನಡ ಇಂಗ್ಲಿಷ್‌ನಲ್ಲಿ ಉದಾಹರಣೆ ಸಹಿತ ಈ ಪುಸ್ತಕ ರಚಿಸಲಾಗಿದೆ. ಈ ಪುಸ್ತಕದಲ್ಲಿ ಸ್ತರಗಳು, ವ್ಯಂಜನಗಳು, ಗುಣಿತಾಕ್ಷರ ಗಳು, ಅಂಕಗಳು, ಒತ್ತಕ್ಷರ, ಅನುಸ್ವಾರ ಗಳನ್ನು ಗುರುತಿಸಲಾಗಿದೆ. ತುಳು ಲಿಪಿಯಲ್ಲಿ ವಾಕ್ಯ ರಚನೆ ಮಾಡುವ ಕುರಿತು ಮಾಹಿತಿಯನ್ನು ನೀಡಲಾಗಿದೆ. ‘ಏ’ಕಾರ ಮತ್ತು ‘ಓ’ಕಾರ ಅಕ್ಷರಗಳಿಗೆ ದೀರ್ಘ ಅಕ್ಷರಗಳಲ್ಲಿ ದೀರ್ಘ ಅಕ್ಷರ ಗಳಿಲ್ಲ. ಹಲವು ವಿದ್ವಾಂಸರು ತುಳು ಪುಸ್ತಕದ ರಚನೆಗೆ ಮಾರ್ಗದರ್ಶನ ನೀಡಿದ್ದಾರೆ ಎನ್ನುವುದು ಲೇಖಕರ ಅಭಿಪ್ರಾಯ. ಲಿಟ್ಸ್‌ಬರ್ಡ್‌ಗ್ರಾಫಿಕ್ಸ್ ಈ ಪುಸ್ತಕದ ವಿನ್ಯಾಸವನ್ನು ರಚಿಸಿದ್ದು , ಅಫ್‌ಸೆಟ್ ಪ್ರಿಂಟರ‍್ಸ್ ಮುದ್ರಿಸುವಲ್ಲಿ ಸಹಕರಿಸಿದ್ದಾರೆ. ಧರ್ಮಸ್ಥಳ ಧರ್ಮಾ ಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮುನ್ನುಡಿ ಬರೆದಿದ್ದಾರೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಎ.ಕೋಟ್ಯಾನ್, ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಭಾರತ ಸಂಸ್ಕೃತಿ ಪ್ರತಿಷ್ಠಾನದ ಕುಲಪತಿ ಡಾ. ಏರ್ಯ ಲಕ್ಷ್ಮೀನಾರಾ ಯಣ ಆಳ್ವ ಹಲವು ವಿದ್ವಾಂಸರು ಪ್ರೋತ್ಸಾಹ ನೀಡಿದ್ದಾರೆ.

ಹೆಬ್ಬಾರರ ಅಧಿಕಾರ ವಿಚಾರ

Posted by JAYAKIRANA Kirana on | 0 comments | Leave a comment...

O.S. No. 27 of ೧೮೮೬ ವ್ಯಾಜ್ಯದ ಜಡ್ಜ್‌ಮೆಂಟಿನ ೧೬ನೇ ಪಾರದಲ್ಲಿ ಹೆಬ್ಬಾರರ ಅಧಿಕಾರ ವಿಚಾರ ಹೀಗಿದೆ : In the Statement L.X. IV made by the two Hebbars Narnappa and the six Upadhi’s, they confirmed the reasons given by the Swami and Asranna in Exibit L.X. III for their being appointted by the Government as three Muktessars but contended that the two Hebbars were the ancieut owners of the temple and entitled to receive the presents and the offerings and to keep an account of the same and also to invite men entitled to honours in the pagoda and to act as its principal men and Consequently that, if any vacancy arose among muktessars, the right of appointing a successor vested with the two serviving muktessars in conjunction with right of them (two Hebbaras and 6 upahis) in the presence of the office bearers and the Villagers O.S. No. 27 of ೧೮೮೬ನೇ ವ್ಯಾಜ್ಯದ ಪಾರ ೧೬ರಲ್ಲಿ ಹೆಬ್ಬಾರರಾದ ನಾರಣಪ್ಪ ಮತ್ತು ಸುಬ್ರಾಯ ಎಂಬವ ರಿಗೆ ಆರು ಉಪಾಧಿಗಳು ಇತ್ತೆಂದೂ ಸ್ವಾಮಿಗಳು ಸನದಿ ಮೊಕ್ತೇಸರ ರೆಂದೂ ಹೆಬ್ಬಾರರಾದ ನಾವು ಅನಾದಿಯಿಂದಲೇ ದೇವಳದ ಅಧಿಕಾ ರಿಗಳಾಗಿದ್ದ ಖದಿಂ ಮೊಕ್ತೇಸರರೆಂದೂ, ದೇವಳಕ್ಕೆ ಬರುವ ಉಂಬಳಿ ಹರಿಕೆ ಕಾಣಿಕೆಗಳನ್ನು ವಸೂಲು ಮಾಡುವ ಹಕ್ಕು, ಅವುಗಳ ಲೆಕ್ಕಪತ್ರ ಇಡುವುದು ಮುಖ್ಯ ಮುಖ್ಯ ಮರ್ಯಾದಸ್ಥರಾದ ಮನುಷ್ಯರನ್ನು ದೇವ ಳಕ್ಕೆ ಕರೆಸಿ ಅವರಿಗೆ ಯೋಗ್ಯ ಮರ್ಯಾದೆ ಕೊಡುವುದು ಖಾಲಿ ಬಿದ್ದ ಮೊಕ್ತೇಸರಿಕೆಗೆ ಹೊಸ ಮೊಕ್ತೇಸರರನ್ನು ಇತರ ಮೊಕ್ತೇಸರ ರನ್ನು ಸೇರಿಸಿಕೊಂಡು ನೇಮಿಸುವ ಹಕ್ಕು ಉಳ್ಳವರೆಂದೂ ಅಲ್ಲದೆ ಖಾಲಿ ಬಿದ್ದ ದೇವಳ ಉದ್ಯೋಗಸ್ಥರನ್ನು ನೇಮಿಸುವ ಅಧಿಕಾರವು ಅವರದ್ದೆಂದು ಹೀಗೆ ದೇವಳದ ಮುಖ್ಯಸ್ಥರಾಗಿ ವರ್ತಿಸುವುದು ಹೆಬ್ಬಾ ರರ ಆರು ಉಪಾಧಿಗಳಲ್ಲಿ ಸೇರಿದವುಗಳೆಂದು ವಿವರಿಸಲ್ಪಟ್ಟಿವೆ.
ಇತ್ಯಾದಿಗಳಿಂದ ಹೆಬ್ಬಾರರ ಅಧಿಕಾರವು ವಿವರಿಸಲ್ಪಟ್ಟಿದೆ. ಇದನ್ನು ಅಧಿಕಾರವಾಗಿಟ್ಟುಕೊಂಡೆ ಕಡೆಗೆ ಜಡ್ಜ್‌ಮೆಂಟಿನಲ್ಲಿ ಪಾರಾ ೧೯ರಲ್ಲಿ : My finding therefore is that the temple is a public institution richly endowed by the piety and genarosity of several Rajas and other individuals from all parts of Southern India, that still 1817 it was probably under the administration of Native rulers, cheifs of 5 out of the 64 Village reffered to in V and BB and the Staniks (V) and the other principal office bearers that since that year down to 1845, it was managed by the collector through a monigar and since that period by the muktessars appointed by him till 1863 and afterwards by the temple committee, That neither the Swami mutt nor anybody else has any independent or heridetary right of management, peffs only right in the temple is that of office bearer holding the Upadiships of Ashtothra and mula manthra to one of which he got is as a mortgagee as stated in the sub collector’s order XII of 1828 and that being a Swami of some position living in the temple premisers. ಅಂದರೆ ಅದೇ ಜಡ್ಜ್‌ಮೆಂಟಿನಲ್ಲಿ ಅಂತ್ಯಕ್ಕೆ ಜಡ್ಜರು ನನ್ನ ತೀರ್ಪು (my finding) ಎಂಬಲ್ಲಿಂದ ಈ ದೇವಳವು ಸಾರ್ವ ಜನಿಕ ದೇವಳವೆಂದೂ ಹೇರಳ ಕಾಣಿಕೆ ಉಂಬಳಿ ವರಾಡಗಳಿಂದ ಕೂಡಿದ್ದೆಂದೂ ೧೮೧೭ನೇ ಇಸವಿ ವರೆಗೆ ಈ ದೇವಳವು ಪಾಳೆಗಾರರ ಅರಸರ ಆಳ್ವಿಕೆಯಲ್ಲಿ ಸ್ಥಾನಿಕರು ಮತ್ತು ಇತರ ಕೆಲವು ಊರಿನ ಮುಖ್ಯ ಉದ್ಯೋಗಸ್ಥರ ಆಡಳಿತೆಯಲ್ಲಿ ಇತ್ತೆಂದೂ ಆ ಮೇಲೆ ೧೮೪೫ರ ವರೆಗೆ ಸರಕಾರದ ಆಡಳಿತೆಯಲ್ಲಿ ಊರಿನ ಕಲೆಕ್ಟರರ ಮುಖಾಂತರ ನೇಮಿಸಲ್ಪಟ್ಟ ಮಣೆಗಾರ ಆಡಳಿತೆಯು ನಡೆಯುತ್ತಿತ್ತೆಂದೂ ಆ ಮೇಲೆ ದೇವಳವು ದೇವಸ್ಥಾನದ ಕಮಿಟಿ ಮೆಂಬರರಿಂದ ನೇಮಿಸಲ್ಪಟ್ಟ ಆಡಳಿತೆದಾರರಿಂದ ನಡೆಯುತ್ತಿತ್ತೆಂದೂ ತಿಳಿಸಿದ್ದಾರೆ.
ವಾದಿಯಾದ ಸ್ವಾಮಿಗಳು ಬರೇ ದೇವಳದಲ್ಲಿ ೧೮೨೮ ಇಸವಿಯ ಜಿಲ್ಲಾ ಕಲೆಕ್ಟರರ ಹುಕುಂ ಪ್ರಕಾರ ಅಷ್ಟೋತ್ತರ ಮತ್ತು ಮೂಲ ಮಂತ್ರ ವನ್ನು ಪಾರಾಯಣ ಮಾಡಿ ಅದಕ್ಕೆ ಸಿಕ್ಕುವ ಪಡಿ ಅಕ್ಕಿಯನ್ನು ತೆಗೆದು ಕೊಂಡು ದೇವಳದ ಕಟ್ಟೋಣದ (ಪೇಳಿ)ಲ್ಲಿ ವಾಸಿಸುವ ಉಪಾಧಿವಂತ ರಾಗಿದ್ದರೆಂದೂ ವಿವರಿಸಿದ್ದಾರೆ. ಶ್ರೀಸಿ. ಗುರುರಾಜ ಭಟ್ರು ಪ್ರಕಟಿಸಿದ ತುಳುನಾಡು ಪುಸ್ತಕದ ಪುಟ ೧೧೮ ಮತ್ತು ೧೧೯ರಲ್ಲಿ ಹೆಬ್ಬಾರರ ವಿಚಾರದಲ್ಲಿ ಹೀಗೆ ವಿವರಿಸಿರುತ್ತಾರೆ.
ಶ್ರೀಸುಬ್ರಹ್ಮಣ್ಯ ದೇವಸ್ಥಾನ ಸ್ಥಾಕ ಹೆಬ್ಬಾರರ ಮೂಲಿವರ್ಗ ನಂಬ್ರ ೩ರಲ್ಲಿತ್ತು; ಅದು ಅನಂತರ ಪರಂಬೋಕು ಆದುದು... ಈ ಸುಬ್ರ ಹ್ಮಣ್ಯದಲ್ಲಿ ಹೆಬ್ಬಾರರ ಅಧಿಕಾರ ಮತ್ತು ಮೋರೋಜರ ಅರ್ಚಕತನವಿ ತ್ತೆಂಬುದಕ್ಕೆ ದೇವಳದ ಸುತ್ತುಮುತ್ತಿನ ತೋಟಗಳಿಗೆ ಈಗಲೂ ಹೆಬ್ಬಾರ ತೋಟ ಮೋರೋಜ ಹಿತ್ಲು ಎಂಬ ಹೆಸರು ಇರುವುದು ಸಾಕ್ಷ್ಯವಾಗಿದೆ. ಈ ಮೋರೋಜ ಹಿತ್ತಿಲಲ್ಲಿ ಈಗಲೂ ಒಳ ದೇವರ ಕಾರ್ಯದವರಾದ ಸ್ಥಾನಿಕ ಈಶ್ವರಪ್ಪಯ್ಯನವರ ಮನೆ ಇರುವುದು. ಅವರಿಗೆ ಹಿಂದಿನಿಂದ ಇದ್ದ ಆಸ್ತಿಗೆ ದೇವರ ಗದ್ದೆ ಎಂಬ ಹೆಸರು ಇರುವುದು, ಈ ಸಂಗತಿ ಗಳಿಂದ ಅವರ ಮನೆತನದವರು ದೇವಳದ ಮೂಲ ಪುರುಷರಾಗಿದ್ದ ರೆಂದು ತಿಳಿದು ಬರುತ್ತದೆ. ಅದೂ ಅಲ್ಲದೆ ಅವರ ಹಿರಿಯರಾದ ರಾಮಪ್ಪ ಎಂಬವರು ಸ್ವಾಮಿಗಳ ಆಡಳಿತೆ ಬಂದ ನಂತರವೂ ಸಾಧಾರಣ ೨೦ ವರ್ಷಗಳ ಕಾಲ ದೇವಳದಲ್ಲಿ ಮೇನೇಜರರಾಗಿದ್ದರು. ಇದನ್ನು ರುಜುಪಡಿ ಸಲೂ ದೇವಳದಲ್ಲಿ ಈಗ ಉಪಯೋಗಿಸುತ್ತಿರುವ ಹಳೆಯ ತಾಮ್ರದ ಕಡಾಯಿ ಮತ್ತು ಹಂಡೆಗಳಲ್ಲಿ ರಾಮಪ್ಪ ಎಂಬ ಹೆಸರು ಇರುವುದನ್ನು ಕಾಣ ಬಹುದು. ಇವರ ನಂತರ ಎಂದರೆ ಕ್ರಿ.ಶ. ೧೮೮೨ರ ಅನಂತರದಲ್ಲಿ ಶಿವಳ್ಳಿ ಯವರಾದ ಬಾಗಲೋಡಿ ರಾಮಕೃಷ್ಣಯ್ಯನವರಿಗೆ ಈ ಅಧಿಕಾರವು ಬಂದುದು.
ದೇವಳದ ತಾಮ್ರ ಶಾಸನ ೩ರಲ್ಲಿ ಆ ದೇವಳದ ಧರ್ಮವನ್ನು ಸ್ಥಾನಿ ಕರು ನಡೆಸಿ ಬರುವುದು ಎಂತಲೂ ಇದೆ. ಅಂದರೆ ಈರ್ವರು ಹೆಬ್ಬಾರರು ಆರು ಉಪಾಧಿಗಳು ಇದನ್ನು ನಡೆಸಿಕೊಂಡು ಬರತಕ್ಕದ್ದು. ಈ ದೇವಳದ ಮುಖ್ಯ ಆಡಳಿತೆ ಸನದು ಮೊಕ್ತೇಸರರಾದ ಸ್ವಾಮಿಗಳಿಗೂ ಎರಡು ಜನ ಶಿವಳ್ಳಿ ಪೂಜೆಯವರಿಗೂ ಹೋದ ನಂತರ ಉಳಿದ ಆರು ಉಪಾಧಿಗಳು :- ೧) ದೇವಳದ ಮಣೆಗಾರನಾಗಿ ಮುದ್ರೆ ಸರ ಧರಿಸಿ ದೇವಳದ ಲೆಕ್ಕ ಪತ್ರ ಇಡುವುದು. ೨) ವಾರಕ್ಕೊಂದು ಸಲ ಗರ್ಭಗೃಹಕ್ಕೆ ಹೋಗಿ ಹುತ್ತದಿಂದ ಮೂಲ ಮೃತ್ತಿಕೆ ತೆಗೆಯುವುದು. ೩) ಷಷ್ಠಿ ಉತ್ಸವದ ವೇಳೆ ಅನ್ನದ ಪಲ್ಲಕ್ಕೆ ನಾಲ್ಕು ಸಮಸ್ತರ ಮುಂದೆ ಪ್ರಾರ್ಥನೆ ಮಾಡಿ ಚಿನ್ನದ ಹೆಡೆಯಳ್ಳ ಅಕ್ಷಯ ಸಟ್ಟುಗ ಕುತ್ತುವುದು. ೪) ದೇವಳದ ಮುಖ್ಯಸ್ಥನಾಗಿ ಭಕ್ತಾದಿಗಳಿಂದ ಕಾಣಿಕೆ, ಹರಕೆ ಸ್ವೀಕರಿಸಿ ಅದರ ಲೆಕ್ಕವಿಟ್ಟು ಪ್ರಸಾದ ಕೊಡುವುದು. ೫) ಸರಕಾರಿ ನೌಕರರಿಗೆ ಮತ್ತು ಇತರ ಶ್ರೀಮಂತರಿಗೆ ಆಮಂತ್ರಣ ಕೊಟ್ಟು ಸತ್ಕರಿಸು ವುದು. ೬) ಎಂಟು ಜನ ಆಡಳಿತೆದಾರರಲ್ಲಿ ಖಾಲಿ ಬಿದ್ದ ಮೊಕ್ತೇಸರತನಕ್ಕೆ ಹೊಸ ಆಡಳಿತೆಯವರನ್ನು ನೇಮಿಸುವುದು - ಹೀಗೆ ಆರು ಉಪಾಧಿಗಳು.
ದೇವಳದಿಂದಲೇ ಪ್ರಕಟಿಸಲ್ಪಟ್ಟ ಕ್ಷೇತ್ರ ವರ್ಣನೆ ಪುಸ್ತಕಗಳಲ್ಲಿ ತಾಮ್ರ ಶಾಸನ ೩ರ ಅಂತ್ಯದಲ್ಲಿ ಈ ಧರ್ಮವನ್ನು ಬಂಗರ ಒಡೆತನದಲ್ಲಿ ಅಲ್ಲಿಯ ಸ್ಥಾನಿಕರು ನಡೆಸಿಹರು ಎಂದು ಇದೆ.
ಈ ಮೇಲೆ ವಿವರಿಸಿದ ದಾಕ್ಲೆಗಳಿಂದ ಈ ದೇವಸ್ಥಾನವು ೧೮೧೭ರ ಮೊದಲು ಸ್ಮಾರ್ತ ಸ್ಥಾನಿಕ ಹೆಬ್ಬಾರರ ಆಡಳಿತೆಯಲ್ಲಿತ್ತೆಂದು ಸ್ಪಷ್ಟವಾಗು ತ್ತದೆ.
ಮುಂದಿನ ವಾರ :
ದೇವಳದ ಅರ್ಚಕರು, ಮೊರೋಜರು ಮತ್ತು ಅಸ್ರಣ್ಣರು

ಪರಲೋಕದಲ್ಲಿ ಶಿಕ್ಷೆ ಭ್ರಷ್ಟಾಚಾರಿಗಳಿಗೆ ಪಾಠವಾದೀತೇ?

Posted by JAYAKIRANA Kirana on | 0 comments | Leave a comment...


ಓರ್ವ ಭ್ರಷ್ಟ ಆಗುವುದಕ್ಕೆ ದುಡ್ಡಿನ ಕೊರತೆ ಕಾರಣ ಅಲ್ಲ, ಲಕ್ಷ, ಕೋಟಿಗಟ್ಟಲೆ ದುಡ್ಡಿರುವವರೇ ಇವತ್ತು ಭ್ರಷ್ಟಾಚಾರದಲ್ಲಿ ಅತ್ಯಂತ ಮುಂದಿನ ಸಾಲಿನಲ್ಲಿದ್ದಾರೆ. ದುರಾಸೆ, ಬದುಕಿನ ಮೇಲಿನ ಅತಿಯಾದ ಪ್ರೀತಿಯೇ ಹೆಚ್ಚಿನ ಮಂದಿಯನ್ನು ಬೆತ್ತಲಾಗಿಸಿರುವುದು.

ಅಬ್ದುಲ್ಲಾ, ಮಂಗಳೂರು
ಭ್ರಷ್ಟಾಚಾರ ಪ್ರತಿಯೊಂದು ಕ್ಷೇತ್ರದಲ್ಲೂ ತಾಂಡವವಾಡು ತ್ತಿದೆ. ಸಾಮಾನ್ಯವಾಗಿ ಸಣ್ಣ ಸಣ್ಣ ಸರಕಾರಿ ಕಚೇರಿಗಳಿಂದ ಹಿಡಿದು ದೊಡ್ಡ ದೊಡ್ಡ ಅಧಿಕಾರಿಗಳವರೆಗೆ ಭ್ರಷ್ಟಾಚಾರ ನಿರಂ ತರವಾಗಿ ಇಂದು ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ನಮ್ಮ ರಾಜ್ಯದಲ್ಲೇ ನೋಡಿದರೆ ಎಷ್ಟೊಂದು ಭ್ರಷ್ಟಾಚಾರಿಗ ಳನ್ನು ರೆಡ್‌ಹ್ಯಾಂಡಾಗಿ ಹಿಡಿದರೂ ಭ್ರಷ್ಟಾಚಾರ ನಿರಂತರ ವಾಗಿ ನಡೆಯುತ್ತಿರುವುದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ.
ಪ್ರಾಮಾಣಿಕತೆ ಅನ್ನುವುದು ರಾಜಕಾರಣಗಳಲ್ಲಿ, ಪೊಲೀ ಸರಲ್ಲಿ, ಸರಕಾರಿ ಉದ್ಯೋಗಿಗಳಲ್ಲಿ ಹೀಗೆ ಆಯ್ದ ವರ್ಗಗಳಲ್ಲಿ ಮಾತ್ರ ಇರಬೇಕಾದ ವಿಶೇಷ ಗುಣ ಎಂಬೊಂದು ಭಾವನೆ ಅನೇಕರಲ್ಲಿದೆ. ಆದರೆ ಅದು ಇಂದಿನ ಕಾಲದಲ್ಲಿ ಸರಿ ವಿರುದ್ಧ ವಾಗಿದೆ. ಅಣ್ಣಾ ಹಜಾರೆಯ ತಂಡ ನಗೆಪಾಟಲಿಗೆ ಒಳಗಾಗಿ ರುವುದು, ಕೇಜ್ರಿವಾಲ್, ಕಿರಣ್ ಬೇಡಿಗಳೆಲ್ಲಾ ‘ಭ್ರಷ್ಟ’ ಹಣ ವನ್ನು ವಾಪಸು ಮಾಡುತ್ತಿರುವುದೆಲ್ಲಾ ಇಂಥ ಭಾವನೆ ಕಾರಣ ದಿಂದಲೇ. ಒಂದು ರೂಪಾಯಿ ಚಿಲ್ಲರೆ ಕೊಡದ ಬಸ್ ಕಂಡ ಕ್ಟರ್‌ನನ್ನು ಹಿಗ್ಗಾಮುಗ್ಗಾ ಪ್ರಶ್ನಿಸುವ ಮಂದಿಯೇ ಮಾಲ್‌ಗೆ ಹೋದರೆ, ಹೊಟೇಲ್‌ಗೆ ತೆರಳಿದರೆ ೫ ರೂಪಾಯಿ ಮರಳಿ ಕೊಡದಿದ್ದರೂ ಶಾಂತವಾಗಿ ಹೊರಬರುವುದಿದೆ. ಗ್ರಾಮಕರ ಣಿಕನೊಬ್ಬ ೫೦೦ ರೂಪಾಯಿ ಲಂಚ ಪಡಕೊಂಡ ಲೋಕಾ ಯುಕ್ತರಿಗೆ ಸಿಕ್ಕಿಬಿದ್ದ ಸುದ್ದಿಯನ್ನು ಓದಿ ಸಂತಸಪಡುವ ವ್ಯಕ್ತಿಯೇ ೫೦೦ರೂಪಾಯಿ ಕೊಟ್ಟು ಜನರ ಸರ್ಟಿಫಿಕೇಟ್ ಪಡೆಕೊ ಳ್ಳುವುದಿದೆ. ಒಂದು ಬಗೆಯ ರಾಜಿ, ವೈರುಧ್ಯ ಇವತ್ತಿನ ಸಮಾ ಜದ ಭಾಗವಾಗಿ ಬಿಟ್ಟಿದೆ. ಇಂಥ ಹೊತ್ತಲ್ಲಿ ಕ್ರಿಕೆಟಿಗರೋರ್ವ ದುಡ್ಡು ಪಡಕೊಂಡು ನೋಬಾಲ್ ಎಸೆಯುವುದು, ಕ್ಯಾಚ್ ಕೈ ಚೆಲ್ಲುವುದನ್ನೆಲ್ಲಾ ಅಘಾತಕಾರಿಯೆಂಬಂತೆ ನೋಡುವುದಾದರೂ ಹೇಗೆ?
ಕ್ರೀಡೆಗೆ ಆದರದ್ದೇ ಆದ ಚೆಲುವು ಇದೆ. ಅದಕ್ಕೆ ಕೋಟ್ಯಂ ತರ ಮಂದಿ ವೀಕ್ಷಕರಿದ್ದಾರೆ. ಓರ್ವ ರಾಜಕಾರಣಿಯ ಸಭೆಗೂ ಕ್ರೀಡೆಗೂ ಇರುವ ವ್ಯತ್ಯಾಸವೇನೆಂದರೆ ರಾಜಕಾರಣಿಯ ಸಭೆಗೆ ದುಡ್ಡು ಕೊಟ್ಟು ಜನರನ್ನು ಕರೆ ತರಬೇಕಾಗುತ್ತದೆ. ಆದರೆ ಫುಟ್ಬಾಲ್, ಕ್ರಿಕೆಟಿಗಾದರೋ ಜನರೇ ದುಡ್ಡು ತೆತ್ತು ನೋಡಲು ಹೋಗು ತ್ತಾರೆ. ರಾಜಕಾರಣಿ ಎಂಬ ಪದವೇ ವಿಶ್ವಾಸದ್ರೋಹದ, ಲಂಚದ, ಅಪ್ರಾಮಾಣಿಕತೆಯ ಗುರುತು ಆಗಿರುವಾಗ ಜನರಿಗೆ ಅವರಲ್ಲಿ ಆಸಕ್ತಿ ಹುಟ್ಟುವುದಾದರೂ ಹೇಗೆ? ನಿಜವಾಗಿ ವ್ಯಕ್ತಿಯೋರ್ವನ ಮೇಲಿನ ವಿಶ್ವಾಸ ಕುಸಿಯುತ್ತಾ ಹೋದಂತೆ ಆತ ನಿಧಾನ ವಾಗಿ ಆಕರ್ಷಣೆಯನ್ನು ಕಳೆದುಕೊಳ್ಳ ತೊಡಗುತ್ತಾನೆ. ಅಂತಿಮ ವಾಗಿ ಆತ ಭಾಷಣ ಮಾಡುವುದನ್ನು, ಆಡುವುದನ್ನು, ನೋಡು ವುದಕ್ಕೆ ಜನರಲ್ಲಿ ಯಾವ ಆಸಕ್ತಿಯೂ ಉಳಿದಿರುವುದಿಲ್ಲ.
ಇಷ್ಟಕ್ಕೂ ಗಾಡಿ ಎಳೆಯುವ, ಬೀದಿ ಬದಿ ತರಕಾರಿ ಮಾರುವ ಕೂಲಿ ಮಾಡುವ ಸಾಮಾನ್ಯರಿಗೆ ಹೋಲಿಸಿದರೆ ಕ್ರಿಕೆಟಿಗರು ಖಂಡಿತ ಕುಬೇರರೇ. ಅವರ ಪ್ರತಿ ಎಸೆತ, ಪ್ರತಿ ರನ್ನೂ ಸಾವಿ ರಗಟ್ಟಲೆ ದುಡ್ಡನ್ನು ಜಮೆ ಮಾಡುತ್ತದೆ. ಇಷ್ಟಿದ್ದೂ ಓರ್ವ ಗಾಡಿ ಎಳೆಯುವವನ ನಿಯತ್ತೂ ಆಟಗಾರರಿಗೆ ಇಲ್ಲವೆಂದಾದರೆ ಅದನ್ನೇಕೆ ಸಹಿಸಿಕೊಳ್ಳಬೇಕು? ನಿಜವಾಗಿ, ಓರ್ವ ಭ್ರಷ್ಟ ಆಗುವು ದಕ್ಕೆ ದುಡ್ಡಿನ ಕೊರತೆ ಕಾರಣ ಅಲ್ಲ, ಲಕ್ಷ, ಕೋಟಿಗಟ್ಟಲೆ ದುಡ್ಡಿ ರುವವರೇ ಇವತ್ತು ಭ್ರಷ್ಟಾಚಾರದಲ್ಲಿ ಅತ್ಯಂತ ಮುಂದಿನ ಸಾಲಿ ನಲ್ಲಿದ್ದಾರೆ. ದುರಾಸೆ, ಬದುಕಿನ ಮೇಲಿನ ಅತಿಯಾದ ಪ್ರೀತಿಯೇ ಹೆಚ್ಚಿನ ಮಂದಿಯನ್ನು ಬೆತ್ತಲಾಗಿಸಿರುವುದು. ಇದನ್ನು ಕುಟುಕು ಕಾರ್ಯಾಚರಣೆಯಿಂದ, ಲಂಡನ್ನಿನದ್ದೋ ದೆಹಲಿಯದ್ದೋ ನ್ಯಾಯಾಲಯದಿಂದ ತಡೆದು ನಿಲ್ಲಿಸಲು ಸಾಧ್ಯವಿಲ್ಲ. ದೇವನು ಸದಾ ತನ್ನನ್ನು ನೋಡುತ್ತಿರುತ್ತಾನೆ, ಮೋಸಕ್ಕೆ, ಕಳ್ಳಾಟಕ್ಕೆ ಆತ ಪರಲೋಕದಲ್ಲಿ ಶಿಕ್ಷೆ ವಿಧಿಸುತ್ತಾನೆ ಅನ್ನುವ ಬಲವಾದ ನಂಬು ಗೆಯೊಂದೇ ವ್ಯಕ್ತಿಯನ್ನು ಭ್ರಷ್ಟನಾಗದಂತೆ ತಡೆಯಬಲ್ಲುದು.

ಡ್ರಗ್ಸ್ ಜಾಲದ ತನಿಖೆಯಾಗಲಿ

Posted by JAYAKIRANA Kirana on | 0 comments | Leave a comment...

ಹಿಂದೆ ಮುಂಬೈ, ಕಲ್ಕತ್ತಾ ಮುಂತಾದ ನಗರ ಗಳಲ್ಲಿ ಕೇಳಿಬರುತ್ತಿದ್ದ ಡ್ರಗ್ಸ್ ಜಾಲ ಎನ್ನುವ ಪದ ಕಡಲತಡಿಯ ಮಂಗಳೂರಿನಲ್ಲೂ ಕೇಳಿಬರುತ್ತಿದೆ. ಇಲ್ಲಿ ವಿದ್ಯಾಭ್ಯಾಸಕ್ಕೆಂದು ಬರುವ ಹೊರ ರಾಜ್ಯ, ರಾಷ್ಟ್ರಗಳ ವಿದ್ಯಾರ್ಥಿಗಳನ್ನು ಗುರಿಯನ್ನಾಗಿಸಿ ದಂಧೆ ನಡೆಯುತ್ತಿದ್ದು, ನಿರುದ್ಯೋಗಿ ಯುವಕರ ತಂಡ ಸುಲ ಭವಾಗಿ ಹಣ ಗಳಿಸಬಹುದು ಎಂಬ ಕಾರಣಕ್ಕೆ ಈ ದಂಧೆಯನ್ನು ನೆಚ್ಚಿಕೊಂಡಿದೆ. ಡ್ರಗ್ಸ್ ಜಾಲದ ಕೆಲ ವೊಂದು ಮಂದಿ ಪೊಲೀಸರ ಕೈಗೆ ಸಿಕ್ಕಿಬಿದ್ದರೂ ಈ ಜಾಲವನ್ನು ಸಂಪೂರ್ಣ ಬೇಧಿಸುವಲ್ಲಿ ಪೊಲೀಸ್ ಇಲಾಖೆ ಇನ್ನೂ ಯಶಸ್ಸು ಕಂಡಿಲ್ಲ. ಮಾನ್ಯ ಪೊಲೀಸ್ ಕಮಿಷನರ್ ಅವರು ಡ್ರಗ್ಸ್ ಜಾಲದ ಕೊಂಡಿಗಳನ್ನು ಸರಿಯಾದ ತನಿಖೆ ನಡೆಸಬೇಕು. ನಗರದ ಪ್ರತಿಷ್ಠಿತ ಕಾಲೇಜ್‌ಗಳಲ್ಲಿ ಈ ಜಾಲ ವ್ಯವಸ್ಥಿತವಾಗಿ ಕಾರ್ಯಾ ಚರಿಸುತ್ತಿದ್ದು, ಪೊಲೀಸ್ ಇಲಾಖೆ ಇತ್ತ ತಕ್ಷಣ ಗಮ ನಹರಿಸಬೇಕಾಗಿದೆ.
ಸುರೇಂದ್ರ, ಮಂಗಳೂರು

ಕಳಪೆ ಸೇವೆಯ ಏರ್‌ಟೆಲ್ ಇಂಟರ್‌ನೆಟ್
ಒಂದು ಕಾಲದಲ್ಲಿ ಮೊಬೈಲ್ ಸಂಪರ್ಕ ಕೇತ್ರದಲ್ಲಿ ಏರ್‌ಟೆಲ್‌ಗೆ ತನ್ನದೇ ಆದ ಸ್ಥಾನ ವಿತ್ತು. ಹೆಚ್ಚಿನವರು ತಮ್ಮ ಮೊಬೈಲ್ ಕನೆಕ್ಷನ್ ಆಗಿ ಏರ್‌ಟೆಲ್ ಅನ್ನೇ ಆರಿಸುತ್ತಿದ್ದರು. ಆದರೆ ಇತ್ತೀಚೆಗೆ ತನ್ನ ಕಳಪೆ ಸೇವೆಯಿಂದಾಗಿ ಏರ್ ಟೆಲ್ ಜನರಿಂದ ದೂರವಾಗುತ್ತಿದೆ ಎಂಬುದು ಅಷ್ಟೇ ಸತ್ಯ.
ಇತ್ತೀಚೆಗಷ್ಟೆ ನಮ್ಮ ಸಂಸ್ಥೆಯ ಕಂಪ್ಯೂಟ ರ್‌ಗೆ ಏರ್‌ಟೆಲ್ ಇಂಟರ್‌ನೆಟ್ ಸಂಪರ್ಕ ಪಡೆ ದಿದ್ದೆ. ಆದರೆ ಆಗಾಗ ಕೈ ಕೊಡುವ ಏರ್ ಟೆಲ್ ಇಂಟರ್‌ನೆಟ್‌ನಿಂದ ಬೇಸತ್ತಿದ್ದೇನೆ. ಇಂಟರ್‌ನೆಟ್ ಬಳಸುತ್ತಿರುವಾಗಲೇ ಅರ್ಧ ಗಂಟೆಗೊಮ್ಮೆ ಕೈಕೊಡುವ ಏರ್‌ಟೆಲ್‌ನಿಂ ದಾಗಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದೇ ಒಂದು ದೊಡ್ಡ ಸಾಧನೆ ಎನ್ನುವಂತಾಗಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಏರ್ ಟೆಲ್ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ ಸೂಕ್ತ ಸ್ಪಂದನೆ ದೊರಕುತ್ತಿಲ್ಲ. ಸುಮ್ಮನೆ ಕಾಲ್ ಹೋಲ್ಡ್ ಮಾಡಿ ನಮ್ಮ ಸಮಯದ ಜೊತೆ ಚೆಲ್ಲಾಟವಾಡುವುದು ಕಸ್ಟಮರ್ ಕೇರ್ ತಂಡಕ್ಕೆ ಮಾಮೂಲಾಗಿ ಹೋಗಿದೆ. ಇನ್ನು ಈ ಸಮಸ್ಯೆಯನ್ನು ಆಲಿಸಲು ವಾರಗಳ ನಂತರ ಬಂದ ಏರ್‌ಟೆಲ್‌ನ ವ್ಯಕ್ತಿಯದ್ದು ಬೇರೆಯದ್ದೇ ಕಥೆ. ಈತ ನಮ್ಮ ಕಚೇರಿಗೆ ಬಂದು ಸಮಸ್ಯೆ ಆಲಿಸಿ ಪರಿಹಾರ ಕಂಡು ಕೊಳ್ಳುವ ಬದಲು ಕಾಲ ಮೇಲೆ ಕಾಲು ಹಾಕಿ ಫೇಸ್‌ಬುಕ್‌ನಲ್ಲಿ ಚಾಟ್ ಮಾಡುವಲ್ಲೇ ನಿರತ ನಾಗಿದ್ದ. ತನ್ನ ಕರ್ತವ್ಯದ ಅವಧಿಯಲ್ಲಿ ಫೇಸ್ ಬುಕ್ ಚಾಟ್ ಮಾಡುವ ಇಂತಹ ಕೆಲಸಗಾ ರರೂ ಏರ್‌ಟೆಲ್‌ನಲ್ಲಿದ್ದಾರೆ.
ನಮ್ಮದು ದೊಡ್ಡ ಸಂಸ್ಥೆ, ಗ್ರಾಹಕರ ಸೇವೆಗೆ ಸದಾ ಸಿದ್ದ ಎನ್ನುವ ಏರ್‌ಟೆಲ್ ಮೊದಲು ಸಿಬ್ಬಂದಿಗೆ ಗ್ರಾಹಕ ಸೇವೆಯ ಬಗ್ಗೆ ತರಬೇತಿ ನೀಡಲಿ. ಅಲ್ಲದೇ ತನ್ನ ಗುಣಮಟ್ಟದಲ್ಲೂ ಬದಲಾವಣೆ ಮಾಡಿಕೊಳ್ಳಲಿ.
ಭರತ್‌ರಾಜ್, ಮಂಗಳೂರು

ಥಿಯೇಟರ್‌ಗಳ ವಿರುದ್ದ ಕ್ರಮ ಯಾಕಿಲ್ಲ?
‘ಪೋಸ್ಟರ್ ಹಚ್ಚಬೇಡಿ ಎನ್ನುವ ಬರಹಗಳು ನಗರದ ಕೆಲ ಗೋಡೆಗಳ ಮೇಲೆ ಕಾಣುತ್ತವೆ. ಆದರೆ ಅದರ ಮೇಲೆಯೇ ಅಶ್ಲೀಲ ಪೋಸ್ಟರ್‌ಗಳನ್ನು ಅಂಟಿಸುವ ಕೆಟ್ಟ ಚಾಳಿ ನಗರದಲ್ಲಿದೆ. ಈ ರೀತಿ ಪೋಸ್ಟರ್ ಅಂಟಿಸುವವರು ಸಿನಿಮಾ ಥಿಯೇಟರ್‌ನವರೇ ಆಗಿದ್ದರೂ ಯಾರೊಬ್ಬರೂ ಕ್ರಮ ಕೈಗೊಳ್ಳುತ್ತಿಲ್ಲ. ನಗರದ ಜ್ಯೋತಿ, ಹಂಪನ್‌ಕಟ್ಟೆ, ಬಂಟ್ಸ್‌ಹಾಸ್ಟೆಲ್ ಮುಂತಾದ ಕಡೆಗಳಲ್ಲಿ ಕೆಲ ಶಾಲಾ- ಕಾಲೇಜುಗಳ, ಖಾಸಗಿ ಸಂಸ್ಥೆಗಳ ಆವರಣ ಗೋಡೆಗಳು ಸಂಪೂರ್ಣ ಪೋಸ್ಟರ್ ಮಯವಾಗಿರು ತ್ತದೆ. ಇಲ್ಲೆಲ್ಲಾ ಹೆಚ್ಚಾಗಿ ಕಂಡುಬರುವುದೇ ಅಶ್ಲೀಲ ಸಿನಿಮಾ ಪೋಸ್ಟರ್ ಗಳು. ಹೀಗಿರುವಾಗ ಇವರ ಮೇಲೆ ಕ್ರಮ ಕೈಗೊಳ್ಳುವುದು ಕಷ್ಟದ ಕೆಲಸವೇ ನಲ್ಲ. ಸಿನಿಮಾ ಪೋಸ್ಟರ್ ಎಂದ ಮೇಲೆ ಥಿಯೇಟರ್‌ಗಳ ಹೆಸರು ಕೂಡ ಅಲ್ಲೇ ಇರುತ್ತದೆ. ಹೀಗಿರುವಾಗ ಥಿಯೇಟರ್ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಯಾಕೆ ಭಯ? ಪಾಲಿಕೆ ಕೆಲವೊಮ್ಮೆ ಈ ರೀತಿ ಆದೇಶ ಹೊರಡಿಸಿ ಸುಮ್ಮನಾಗುತ್ತದೆ. ಆದರೆ ನಂತರ ಯಾರೊಬ್ಬರೂ ಈ ಬಗ್ಗೆ ಗಮನ ಹರಿಸುವುದೇ ಇಲ್ಲ. ಇನ್ನಾದರೂ ಸಂಬಂಧಪಟ್ಟ ಕಾಲೇಜಿನ ಆಡ ಳಿತ, ಖಾಸಗಿ ಸಂಸ್ಥೆಗಳು ಅಶ್ಲೀಲ ಪೋಸ್ಟರ್‌ಗಳನ್ನು ಹಚ್ಚುವ ಥಿಯೇಟರ್ ಮಾಲೀಕರ ವಿರುದ್ದ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಿ.
ನೊಂದ ನಾಗರಿಕ, ಮಂಗಳೂರು

ಹೆಣ್ಣು ಅಬಲೆಯೇ?
ಸಮಾಜದಲ್ಲಿ ಪ್ರತಿನಿತ್ಯವೆಂಬಂತೆ ಮುಗ್ಧ, ಅಮಾಯಕ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ ನಡೆಯುತ್ತಲೇ ಇದೆ. ಅಪ್ರಾಪ್ತ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡಿರುವ ಕಾಮುಕರು ಅವರ ಬಾಳನ್ನೇ ಹೊಸಕಿ ಹಾಕುವುದೂ ನಡೆ ಯುತ್ತಿದೆ. ಆದರೆ ಇಂತಹ ಘಟನೆ ಗಳು ಅವೆಷ್ಟು ನಡೆ ದರೂ ಸಮಾಜ ಮಾತ್ರ ಇದನ್ನು ಸಶ ಕ್ತವಾಗಿ ಎದುರಿಸು ವಲ್ಲಿ ನಿರಾಸಕ್ತಿಯನ್ನೇ ತಾಳುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಪ್ರತೀ ಗಂಟೆಯಲ್ಲಿ ಅವೆಷ್ಟೋ ಮಂದಿ ಹೆಣ್ಣುಮಕ್ಕಳು ಶೀಲ ಕಳೆದುಕೊಳ್ಳುತ್ತಿದ್ದಾರೆ. ಇಲ್ಲಿ ಸಾಮಾಜಿಕ ಸಂಘಟನೆಗಳು ಅದರಲ್ಲೂ ಮಹಿಳಾ ಸಂಘಟನೆಗಳು ಹೆಣ್ಣಿನ ಮೇಲಾಗುತ್ತಿರುವ ದೌರ್ಜ ನ್ಯವನ್ನು ಖಂಡಿಸುವ ಗೋಜಿಗೂ ಹೋಗದಿರು ವುದು ವಿಪರ್ಯಾಸವೇ ಸರಿ. ಹೆಣ್ಣು ಅಬಲೆಯಲ್ಲ, ಎಲ್ಲಾ ರೀತಿಯಲ್ಲಿ ಸಬಲೆ ಎಂದು ಹೇಳಲಾಗು ತ್ತಿದ್ದರೂ ಇದನ್ನು ಗಮನಿಸುವಾಗ ಎಲ್ಲೂ ಆಕೆ ಸಬಲೆ ಎಂದು ತಿಳಿಯುವುದಿಲ್ಲ. ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ನಡೆದಾಗ ಸ್ತ್ರೀ ಶಕ್ತಿ ಒಂದಾಗಿ ಪ್ರತಿಭಟಿಸುವುದು ಅಗತ್ಯ.
ಪ್ರತೀಕ್ ಜೈನ್, ವಿಟ್ಲ

ವೆನ್‌ಲಾಕ್ ಔಷಧ ಹಗರಣ ಏನಾಯ್ತು?
ಜಯಕಿರಣ ಪತ್ರಿಕೆ ಬಹಿರಂಗಪಡಿಸಿದ ವೆನ್‌ಲಾಕ್ ಆಸ್ಪತ್ರೆಯ ಅಕ್ರಮ ಔಷಧ ಹಗರಣ ಏನಾಯ್ತು ಎನ್ನುವುದೇ ತಿಳಿಯುತ್ತಿಲ್ಲ. ಪತ್ರಿಕೆ ವರದಿ ಪ್ರಕಟಿಸಿದ ತಕ್ಷಣ ಎಚ್ಚೆತ್ತ ವೈದ್ಯ ಕೀಯ ಶಿಕ್ಷಣ ಸಚಿವ ರಾಮ್‌ದಾಸ್ ಈ ಬಗ್ಗೆ ತನಿಖೆಗೆ ಆದೇಶ ನೀಡಿದ್ದರು. ಆದರೆ ಇಷ್ಟು ದೊಡ್ಡ ಪ್ರಕರಣದಲ್ಲಿ ಇಲಾಖೆ ಮಾತ್ರ ತನಿಖೆ ನಡೆಸುವಲ್ಲಿ ನಿರಾಸಕ್ತಿ ತಾಳುತ್ತಿ ದೆಯೇ ಎಂಬ ಅನುಮಾನ ಕಾಡುತ್ತಿದೆ. ಸರ್ಕಾರಿ ಆಸ್ಪತ್ರೆಗಳು ಸುಸ್ಥಿತಿಯಲ್ಲಿರಬೇಕು, ಬಡಜನರ ಸೇವೆಗೆ ಎಂದಿಗೂ ಸಿದ್ದ ವಾಗಿರಬೇಕು ಎನ್ನುವ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಹೀಗಾದರೆ ಇಲ್ಲಿಗೆ ಬರುವ ರೋಗಿಗಳ ಬಗ್ಗೆ ಇಲ್ಲಿನ ವೈದ್ಯರು ಎಷ್ಟರ ಮಟ್ಟಿಗೆ ಕಾಳಜಿ ವಹಿಸಬಹುದು? ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕದ ಮಧ್ಯೆ ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿರುವ ಬಡ ರೋಗಿ ಗಳು ಎಲ್ಲಿಗೆ ಹೋಗಬೇಕು? ಜನಪ್ರತಿನಿಧಿಗಳಿಗೆ ಸಮಸ್ಯೆ ಯನ್ನು ಸವಿವರವಾಗಿ ವಿವರಿಸಿದರೂ ಈ ರೀತಿ ನಿರಾಸಕ್ತಿ ತಾಳಿರುವುದು ಸರಿಯಲ್ಲ. ಇನ್ನಾದರೂ ಸಂಬಂಧಪಟ್ಟವರು ವಿಶೇಷ ಕಾಳಜಿ ವಹಿಸಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇ ಕಾಗಿ ವಿನಂತಿ.
ಅರುಣ್ ಪಿಂಟೋ, ಬಿಜೈ

ಕಾಂಡೋಂ ಮನೆ ಬಾಗಿಲಿಗೆ ತಲುಪಿಸಿ
ಜನಸಂಖ್ಯೆ ನಿಯಂತ್ರಣ ಹಾಗೂ ಲೈಂಗಿಕ ವ್ಯಾಧಿಗಳಿಂದ ದೂರವಿರಲು ಸರ ಕಾರ ಕಾಂಡೋಂ ಮಾರಾಟ ಮತ್ತು ಬಳ ಕೆಗೆ ಪೋತ್ಸಾಹ ನೀಡುತ್ತಿದೆ. ಏಡ್ಸ್ ಪೀಡಿ ತರ ಸಂಖ್ಯೆ ಬೆಳೆಯುತ್ತಿರುವುದರಿಂದ ಎಚ್ಚೆ ತ್ತುಕೊಂಡ ಏಡ್ಸ್ ನಿಯಂತ್ರಣ ಮಂಡಳಿ ಕೆಲವು ವರ್ಷಗಳ ಹಿಂದೆ ನಗರದ ಅಲ್ಲಲ್ಲಿ ಕಾಂಡೋಂ ಟೆಲ್ಲರ್ ಮೆಷಿನ್‌ಗಳನ್ನು ಸ್ಥಾಪಿ ಸಲು ಕ್ರಮ ಕೈಗೊಂಡಿತ್ತು.
ಆದರೆ ಈ ಯೋಜನೆಯೂ ಫಲಪ್ರದ ವಾಗದ ಕಾರಣ ಸರಕಾರ ಅದನ್ನು ಕೈಬಿಟ್ಟಿದೆ. ಈಗ ನಮ್ಮ ರಾಜ್ಯವು ಏಡ್ಸ್ ರೋಗಿಗಳ ಪಟ್ಟಿಯಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕು ವಲ್ಲಿ ದಾಪುಗಾಲು ಇಡುತ್ತಿದೆ. ಇದು ತೀರಾ ಕಳವಳಕಾರಿಯಾದ ಸಂಗತಿ. ಹೀಗಾಗಿ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ವಿನೂತನ ಯೋಜನೆ ಗಳನ್ನು ಹಾಕಿಕೊಳ್ಳಬೇಕು. ಕೇರಳ ಸರಕಾರ ರೂಪಿಸಿದಂತೆ ಕಾಂಡೋಂ ಅನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ನಮ್ಮಲ್ಲೂ ಆಗಲಿ. ಏಕೆಂದರೆ ಮಹಿಳೆಯರು ಇಂದಿಗೂ ಸ್ವತಂತ್ರರಾಗಿ ಮೆಡಿಕಲ್ ಶಾಪ್‌ಗೆ ಹೋಗಿ ಕಾಂಡೋಂ ಪಡೆಯುವಷ್ಟು ಮುಂದುವರಿ ದಿಲ್ಲ. ಗ್ರಾಮೀಣ ಭಾಗದ ಮಹಿಳೆಯರಲ್ಲಿ ಇನ್ನೂ ಈ ಬಗೆಗಿನ ಮೂಢನಂಬಿಕೆ, ಅeನ ಹಾಗೆಯೇ ಇದೆ. ಆದ್ದರಿಂದ ಕಾಂಡೋಂ ಅನ್ನು ಪ್ರತೀ ಮನೆ-ಮನೆಗೆ ಅಂಚೆ ಪೇದೆಯ ಮೂಲಕ ತಲುಪಿಸಲು ಯೋಜನೆ ಹಾಕಿಕೊ ಳ್ಳಬೇಕು. ಇದರಿಂದ ಜನರಿಗೆ ಏಡ್ಸ್ ಮತ್ತಿತರ ಮಾರಕ ರೋಗಗಳ ಬಗ್ಗೆ ಮಾಹಿತಿಯೂ ದೊರೆಯುತ್ತದೆ.
ರಘುನಾಥ್ ಎಂ, ಬ್ರಹ್ಮಾವರ

ಪ್ಲಾಸ್ಟಿಕ್ ಚೀಲ ನಿಷೇಧ ಸರಿಯೇ?
ಎಲ್ಲೆಡೆ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲಾಗಿದೆ. ಕಪ್ಪು ಬಣ್ಣದ ಪ್ಲಾಸ್ಟಿಕ್ ಚೀಲದ ಬದಲಿಗೆ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳು ಮಾರುಕಟ್ಟೆಗೆ ಬಂದಿವೆ. ಆದರೆ ಇದರಿಂದಲೂ ಪರಿಸರಕ್ಕೆ ಅಲ್ಪಪ್ರಮಾಣದ ಹಾನಿಯಿದೆ. ಪ್ಲಾಸ್ಟಿಕ್ ಬದ ಲಿಗೆ ಕಾಗದದ ಚೀಲ ಮಾರುಕಟ್ಟೆಗೆ ಬರುವುದೆಂದು ನಂಬ ಲಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇ ಶಿಸಿಲ್ಲ. ಕಾಗದದ ಚೀಲ ತಯಾರಿಸುವ ಘಟಕಗಳ ಸಂಖ್ಯೆಯೂ ಕಡಿಮೆಯೇ. ಪ್ಲಾಸ್ಟಿಕ್ ಚೀಲ ನಿಷೇಧದಿಂದ ಅಂಗಡಿಗಳಲ್ಲಿ ಸಾಮಾನು ಖರೀದಿಸಿದರೆ ಕೈಯಲ್ಲಿ ಕೊಂಡೊಯ್ಯುವ ಪರಿಸ್ಥಿತಿ ಬಂದಿದೆ. ಹಾಲು, ಮೊಸರು ಇತ್ಯಾದಿಯನ್ನು ಕಾಗದದಲ್ಲಿ ಕಟ್ಟಿಕೊಡುತ್ತಾರೆ. ಪ್ಲಾಸ್ಟಿಕ್ ಚೀಲ ಕೊಡಿ ಎಂದರೆ ದುಬಾರಿ ೫-೧೦ ರೂ.ಗಳ ಪ್ಲಾಸ್ಟಿಕ್ ಚೀಲ ಕೊಡುತ್ತಾರೆ. ಇಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದಿ ಲ್ಲವೇ? ಐದು ರೂಪಾಯಿಯ ಸಾಮಾನು ಕೊಂಡೊ ಯ್ಯಲು ಐದು ರೂ. ಚೀಲಕ್ಕಾಗಿ ವ್ಯಯಿಸುವುದು ಎಲ್ಲಿಯ ನ್ಯಾಯ? ಆದ್ದರಿಂದ ಸರಕಾರ ಪ್ಲಾಸ್ಟಿಕ್ ಚೀಲ ನಿಷೇಧ ಆದೇಶವನ್ನು ಮರುಪರಿಶೀಲಿಸುವುದು ಒಳಿತು.
 ಶೇಖರ್, ವಾಮಂಜೂರು

ಅಧಿಕಾರಿಗಳು ಗಮನಿಸುವರೇ?
ಹಳೆಯಂಗಡಿ ಗ್ರಾಮದ ಸರ್ವೇ ನಂಬ್ರ ೪೫-೩ಪಿ೨-ಪಿ೧ರಲ್ಲಿ ೦.೦೨ಸೆಂಟ್ಸು ಸ್ಥಳದಲ್ಲಿ ಮೀನುಗಾರಿಕಾ ಇಲಾಖೆಯವರು ಕೊಳುವೈಲು ರಸ್ತೆಗೆ ಕಾಂಕ್ರೀಟು ಹಾಕಿಸಿ ಮಳೆಗಾಲದ ನೀರು ಹೋಗುವ ತೋಡಿಗೆ ಬಂಡೆಕಲ್ಲಿನ ಮೋರಿ ಯನ್ನು ೨೦೧೧ನೇ ಸಾಲಿನ ಪಂಚಾಯತ್ ಅಧ್ಯಕ್ಷರ ಮುತುವರ್ಜಿಯಲ್ಲಿ ಕಟ್ಟಿಸಲಾಗಿತ್ತು. ಆದರೆ ಮೊನ್ನೆ ಹಳೆಯಂಗಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಮೋರಿಯನ್ನು ಕಿತ್ತು ಅಲ್ಲಿ ಪಿಲ್ಲರ್ ಹಾಕಿಸಿ ಹಾಲಿನ ಡಿಪೋ ರಚಿಸಲು ಯತ್ನಿಸುತ್ತಿದ್ದಾರೆ. ಪಂಚಾಯತ್ ಅಧ್ಯಕ್ಷರು ಮತ್ತು ಅಭಿವೃದ್ದಿ ಅಧಿಕಾರಿ ಈ ಕಟ್ಟಡ ರಚಿಸಲು ಪರವಾನಿಗೆ ನೀಡಿರು ತ್ತಾರೆ. ಪರವಾನಿಗೆ ರದ್ದತಿಗೆ ನ್ಯಾಯಲಯದಲ್ಲಿ ದಾವೆ ಹೂಡಲಾಗಿದೆ. ಎರಡು ಸೆಂಟ್ಸ್ ಜಾಗದಲ್ಲಿ ಮುಂದಾಗುವ ಅನಾಹುತ ಲೆಕ್ಕಿಸದೆ ಡಿಪೋ ನಿರ್ಮಿ ಸಲು ಪರವಾನಿಗೆ ನೀಡಿರುವುದು ಕಾನೂನು ಬಾಹಿರ. ಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಆದೇಶ ಉಲ್ಲಂಫಿಸಿ ಅಕ್ರಮ ಕಟ್ಟಡ ಕಟ್ಟುವ ಪ್ರಯತ್ನದಲ್ಲಿ ದ್ದಾರೆ. ಅಧಿಕಾರಿಗಳು ಗಮನಿಸುವಿರಾ? ಡೇನಿಯಲ್ ದೇವರಾಜ್,
 ಜಿಲ್ಲಾ ಬಡಜನರ ಅಭಿವೃದ್ದಿ ಸಂಘ

ಪಂಚಾಯತ್ ವ್ಯಾಪ್ತಿಗೆ ಸಿಸಿ ಕ್ಯಾಮರಾ ಹಾಕಿ
ಇತ್ತೀಚೆಗಷ್ಟೇ ಬಜ್ಪೆ ಪಂಚಾ ಯತ್ ತನ್ನ ಕಛೇರಿ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಕೆಲವರ ಕೆಂಗಣ್ಣಿಗೆ ಗುರಿ ಯಾಗಿದೆ. ಆದರೆ ಬಜ್ಪೆ ಪಂಚಾಯ ತ್‌ನ ಈ ಕೆಲಸ ಶ್ಲಾಘನೀಯ. ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತೆ ಕಾಪಾಡಿ ಎಂದು ಮೌಖಿಕ ಇಲ್ಲವೇ ಲಿಖಿತ ಆದೇಶ ನೀಡಿದರೆ ಯಾರೊ ಬ್ಬರೂ ಕೇಳುವುದಿಲ್ಲ.
ಆದೇಶಗಳು ಕೇವಲ ಪಂಚಾ ಯತ್‌ನ ಕಡತಗಳಲ್ಲಿಯೇ ಉಳಿಯು ತ್ತವೆ. ಆದರೆ ಸಿಸಿ ಕ್ಯಾಮರಾದಲ್ಲಾ ದರೆ ಸ್ವಲ್ಪ ಮಟ್ಟಿಗಾದರೂ ಸ್ವಚ್ಚತೆಯತ್ತ ಗಮನ ಹರಿಸಬಹುದು. ಬಜ್ಪೆ ಪಂಚಾ ಯತ್ ಕಸ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ಇಲ್ಲಿನ ನಾಗ ರಿಕರು ಸಿಸಿ ಕ್ಯಾಮರಾದ ವಿರುದ್ದ ಅಸ ಮಧಾನ ವ್ಯಕ್ತಪಡಿಸಿದ್ದಾರಷ್ಟೇ ಎನ್ನಬ ಹುದು.
ಬಜ್ಪೆ ಪಂಚಾಯತ್‌ನ ರೀತಿ ಯಲ್ಲೇ ಜಿಲ್ಲೆಯ ಎಲ್ಲಾ ಪಂಚಾಯ ತ್‌ಗಳು ತನ್ನ ಆದಾಯದ ಮೂಲ ದಲ್ಲಿ ಕೆಲ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೆ ಒಳ್ಳೆಯದು. ಆಗ ಸಾರ್ವಜನಿಕರು ಅನಿವಾರ್ಯ ವಾಗಿ ಸ್ವಚ್ಚತೆಯತ್ತ ಗಮನಹರಿಸುತ್ತಾರೆ. ಅಲ್ಲದೇ ಈ ಸಿಸಿ ಕ್ಯಾಮರಾಗಳು ಅಪ ರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲೂ ಸಹಕಾರಿಯಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಪಂಚಾಯತ್ ರಾಜ್ ಇಲಾಖೆ ಗಮನ ಹರಿಸಲಿ.
ಜಿಲ್ಲೆಯ ಎಲ್ಲಾ ಪಂಚಾಯತ್, ಪುರಸಭೆಗಳಿಗೆ ಸಿಸಿ ಕ್ಯಾಮರಾ ಪೂರೈ ಸಲಿ. ಆಧುನಿಕತೆಯತ್ತ ಸಾಗುತ್ತಿರುವ ಈ ಯುಗದಲ್ಲಿ ಈ ರೀತಿಯ ತಂತ್ರ ಜ್ಞಾನವನ್ನು ಸರ್ಕಾರ ಬಳಕೆಗೆ ತಂದರೆ ಉತ್ತಮ.
ಇಸ್ಮಾಯಿಲ್, ತೊಕ್ಕೊಟ್ಟು

ಮುಲ್ಕಿ ಸರಕಾರಿ ಆಸ್ಪತ್ರೆಯ ಗೋಳನ್ನು ಕೇಳುವವರಿಲ್ಲವೇ?
ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿರುವ ಆರೋಗ್ಯ ಕೇಂದ್ರದ ಸಮಸ್ಯೆ ಹೇಳಿ ಪ್ರಯೋಜನವಿಲ್ಲ. ರಾತ್ರಿ ಪಾಳಿಯಲ್ಲಿ ತುರ್ತು ಸಂದರ್ಭ ಎದುರಾದರೆ ವೈದ್ಯರು ಸಿಗದೆ ರೋಗಿಗಳು ಕಕ್ಕಾಬಿಕ್ಕಿಯಾಗುವ ಪರಿಸ್ಥಿತಿ ಇಲ್ಲಿನದು. ಇಲ್ಲಿನ ಹಾಸಿಗೆಯಲ್ಲಿ ಒಂದು ವಾರವಾದರೂ ಬೆಡ್‌ಶೀಟ್ ಬದ ಲಿಸುವುದಿಲ್ಲ. ಇಲ್ಲಿರುವ ಶೌಚಾಲಯ ದುರ್ನಾತ ಬೀರುತ್ತದೆ. ಇಲ್ಲಿ ಕುಡಿ ಯಲು ನೀರು ಬೇಕಾದರೆ ಹೊರಗಡೆ ಬಿಸ್ಲೆರಿ ಕೊಂಡುತರುವ ಪರಿಸ್ಥಿತಿ ಯುಂಟಾಗಿದೆ. ಮುಲ್ಕಿ ಆರೋಗ್ಯ ಕೇಂದ್ರದ ಪರಿಸ್ಥಿತಿ ಇದೇ ರೀತಿಯಾ ದರೆ ಇಲ್ಲಿನ ಬಡವರ ಗತಿಯೇನು? ಸಂಬಂಧಿತರು ಇನ್ನಾದರೂ ಈ ಬಗ್ಗೆ ಗಮನ ಹರಿಸುವಿರಾ..?
ನಾಗೇಶ್.ಪಿ.ಕೆ, ಮುಲ್ಕಿ

22-05-2012

Posted by JAYAKIRANA Kirana on | 0 comments | Leave a comment...

ಮೇಷ : ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ವಹಿಸುತ್ತೀರಿ.
ವೃಷಭ : ಗಣ್ಯ ವ್ಯಕ್ತಿಗಳ ಸಹಕಾರ ಇರುತ್ತದೆ.
ಮಿಥುನ : ಶುಭ ಕಾರ್ಯಗಳಿಗೆ ವಿಘ್ನಗಳು ಬರುತ್ತದೆ.
ಕರ್ಕಾಟಕ : ಪ್ರಯಾಣದಲ್ಲಿ ನಷ್ಟ ಉಂಟಾಗಲಿದೆ.
ಸಿಂಹ : ಮಕ್ಕಳ ಬಗ್ಗೆ ಜಾಗ್ರತೆ ಮಾಡಿರಿ.
ಕನ್ಯಾ : ದೂರದ ನೆಂಟರು ಮನೆಗೆ ಬರುತ್ತಾರೆ.
ತುಲಾ : ಹಣಕಾಸಿನ ತೊಂದರೆ ಎದುರಾಗುತ್ತದೆ.
ವೃಶ್ಚಿಕ : ದೂರ ಪ್ರಯಾಣ ಮಾಡುವ ಸಂಭವ ಇದೆ.
ಧನು : ಮನೆಯಲ್ಲಿ ಶುಭ ಕೆಲಸಗಳನ್ನು ನಡೆಸುತ್ತೀರಿ.
ಮಕರ : ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ಕುಂಭ : ವಿರೋಧಿಗಳಿಂದ ತೊಂದರೆ ಇರುತ್ತದೆ.
ಮೀನ : ಹಿರಿಯರ ಸಮಸ್ಯೆ ದೂರವಾಗುತ್ತದೆ.

22-05-2012

Posted by JAYAKIRANA Kirana on | 0 comments | Leave a comment...

ಮಂಗಳೂರು:ಕಾಲ್‌ಸೆಂಟರ್‌ಗೆ ಹೌಸ್‌ಕೀಪರ್ ಬೇಕು ೯೯೧೬೧೧೯೪೬೯.
ಜಪ್ಪು: ಕಚೇರಿ ಕೆಲಸಕ್ಕೆ ಯುವತಿ ಬೇಕು ೯೮೪೪೦೦೯೯೦೫.
ಕಂಕನಾಡಿ: ಪೆಟ್ರೋಲ್‌ಪಂಪ್‌ಗೆ ಜನ ಬೇಕು ೯೯೪೫೦೯೫೧೨೩.
ಸುರತ್ಕಲ್: ನೆಸ್‌ಕೆಫೆ ಸ್ಟಾಲ್‌ಗೆ ಸೇಲ್ಸ್‌ಗೆ ಲೇಡೀಸ್ ಬೆಕು ೯೭೩೮೯೩೨೭೩೧.
ಬಲ್ಮಠ: ಅಸುಗೆ ಮಾಡಲು ಮಹಿಳೆ ಬೇಕು ೮೪೫೩೯೭೨೯೯೪.
ಮಂಗಳೂರು: ಟೈಲರ್, ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.
ಕಾವೂರು: ಲೇಡೀಸ್ ಟೈಲರ್‌ಬೇಕು ೯೪೪೯೫೫೧೨೦೦.
ಮೂಡಬಿದ್ರೆ: ಹೊಟೇಲಿಗೆ ವೇಟರ್, ಹೆಲ್ಪರ್, ದೋಸಾವಾಲಾ ಮತ್ತು ಜೂಸ್ ಮೇಕರ್ ಬೇಕು ೯೮೪೫೯೮೨೬೨೫.
ಮೂಡಬಿದ್ರೆ: ಮೊಬೈಲ್ ಅಂಗಡಿಗೆ ಯುವಕರು ಬೇಕು ೯೯೦೨೦೭೧೫೪೯.
ಪಡುಬಿದ್ರೆ: ಎಲೆಕ್ಟ್ರಾನಿಕ್ಸ್ ಅಂಗಡಿಗೆ ಸೇಲ್ಸ್ ಮ್ಯಾನ್, ಎಕೌಂಟೆಂಟ್, ಡೋರ್‌ಕೀಪರ್, ಡ್ರೈವರ್ ಬೇಕು ೯೮೪೫೮೮೪೫೭೪.
ಮಂಗಳೂರು: ಪ್ರಸಿದ್ಧ ಡಿಜಿಟಲ್ ಶಾಪ್‌ಗೆ ಫೋಟೋಶಾಪ್, ಕೊರಲ್ ಡ್ರಾ ತಿಳಿದಿರುವ ಅನುಭವಸ್ಥ ಡಿಸೈನರ್ ಬೇಕು.. ೯೮೪೫೯೩೨೮೮೧
ಮಂಗಳೂರು : ಅಡುಗೆ ಅನಿಲ ಸಾಗಿಸುವ ಗಾಡಿಗೆ ಡ್ರೈವರ್ ಬೇಕು ೯೪೪೮೯೫೨೯೦೩.
ಮಂಗಳೂರು : ಬ್ಯಾಡ್ಜ್ ಹೊಂದಿರುವ ಅನುಭವಿ ಲಾರಿ ಡ್ರೈವರ್ ೯೯೭೨೩೭೧೭೨೩.
ಮಂಗಳೂರು : ಪಾನ್‌ಸ್ಟಾಲ್‌ಗೆ ಜನ ಬೇಕು ೯೦೬೦೯೩೨೩೫೧.
ಕೊಟ್ಟಾರ : ಕಾರಿಗೆ ಚಾಲಕ ಬೇಕು ೯೫೯೧೩೪೮೭೧೮.
ತೊಕ್ಕೊಟ್ಟು ಅಸುಪಾಸಿನವರು ಬ್ಯೂಟಿ ಪಾರ್ಲರ್‌ಗೆ ಬೇಕಾಗಿದ್ದಾರೆ. ೯೬೬೩೬೨೨೦೫೧
ಮಂಗಳೂರು : ಶೋರೂಂಗೆ ಆಫೀಸ್ ಬಾಯ್ & ಡೆಲಿವರಿ ಬಾಯ್ ಬೇಕು ೦೮೨೪೪೨೫೪೦೧೦.
ಮಂಗಳೂರು : ಕೊರಿಯರ್‌ಗೆ ಜನ ಬೇಕು ೯೯೦೦೪೩೪೯೪೮.
ಮೂಡುಬಿದ್ರೆ : ಮೊಬೈಲ್ ಅಂಗಡಿಗೆ ಯುವತಿ ಬೇಕು ೯೯೦೨೦೭೧೫೪೯.
ಮೂಡಬಿದ್ರೆ : ಟ್ಯುಟೋರಿಯಲ್ ಆಫೀಸ್ ಕೆಲಸಕ್ಕೆ ಯುವತಿ ಬೇಕು ೦೮೨೪೫೮೨೬೧೦೬೦.
ಮಂಗಳೂರು : ಅಡುಗೆ ಅನಿಲ ಸಾಗಿಸುವ ಗಾಡಿಗೆ ಡ್ರೈವರ್ ಬೇಕು ೯೪೪೮೯೫೨೯೦೩.
ಮಂಗಳೂರು : ಬಾಡ್ಜ್ ಹೊಂದಿರುವ ಅನುಭವಿ ಲಾರಿ ಡ್ರೈವರ್ ಬೇಕು ೯೯೭೨೩೭೧೭೨೩.
ಸುರತ್ಕಲ್ : ಸೇಲ್ಸ್ ಗರ್ಲ್ಸ್, ಬಾಯ್ಸ್ ಬೇಕು ೯೮೪೪೪೬೪೩೭೭.
ಉಡುಪಿ : ಸ್ಟುಡಿಯೋಗೆ ಯುವತಿ ಬೇಕು ೯೮೪೫೮೬೩೦೯೪.
ಎನ್‌ಐಟಿಕೆ : ಕಾಫಿ ಸ್ಟಾಲ್‌ಗೆ ಎಕೌಂಟ್ ಮತ್ತು ಸೇಲ್ಸ್‌ಗೆ ಯುವತಿ ಬೇಕು ೯೭೩೮೯೩೨೭೩೧.

ಲೈಂಗಿಕ ವಿಚಾರಗಳು ಮನಸ್ಸನ್ನು ಆವರಿಸಲು ಬಿಡಬೇಡಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನ್ನ ವಯಸ್ಸು ೨೧ ವರ್ಷ. ನಾನು ಕಲಿಯುತ್ತಿ ದ್ದೇನೆ. ನನಗೆ ಹೆಣ್ಣು ಮಕ್ಕಳ ಮೇಲೆ ಆಸಕ್ತಿ. ನನಗೆ ಕೆಲವು ಮಂದಿ ಗರ್ಲ್‌ಫ್ರೆಂಡ್‌ಗಳಿದ್ದಾರೆ. ನನಗೆ ಅವರ ಜತೆ ಸೆಕ್ಸ್ ನಡೆ ಸಬೇಕೆಂಬ ಮನಸ್ಸಿದೆ. ಆದರೆ ಅಷ್ಟು ಧೈರ್ಯ ನನ್ನಲ್ಲಿಲ್ಲ. ಅವರು ನನ್ನನ್ನು ಟೈಂಪಾಸ್‌ಗಾಗಿ ಇಷ್ಟ ಪಡುತ್ತಾರೆಯೇ ಹೊರತು ನನ್ನನ್ನು ಯಾರೂ ಲವ್ ಮಾಡುತ್ತಿಲ್ಲ. ನನಗೆ ಕೆಲವೊಮ್ಮೆ ಲೈಂಗಿಕ ಬಯಕೆಯನ್ನು ತಡೆದುಕೊಳ್ಳಲು ಆಗುತ್ತಿಲ್ಲ. ರಾತ್ರಿ ಪ್ರತಿನಿತ್ಯ ಹಸ್ತ ಮೈಥುನ ಮಾಡಿಕೊಳ್ಳುತ್ತೇನೆ. ಇದರಿಂದ ನನಗೆ ಸಂತೋಷ ಸಿಗುತ್ತದೆ. ನನಗೆ ಒಂದು ದಿನ ಹಸ್ತಮೈಥುನ ಮಾಡಿಕೊಳ್ಳದಿ ದ್ದರೂ ನಿದ್ದೆಯಲ್ಲಿ ವೀರ್ಯ ಸ್ರವಿಸುತ್ತೇನೆ. ನನ್ನ ಸಹಪಾಠಿ ಗೆಳೆಯರ ಜೊತೆ ಸಲಿಂಗಕಾಮದ ಬಯಕೆಯಾಗುತ್ತದೆ. ಈ ಸಮಸ್ಯೆಗಳಿಂದ ನನಗೆ ಓದಿನಲ್ಲಿ ತೊಡಗಿಕೊಳ್ಳಲು ಆಗುತ್ತಿಲ್ಲ. ಕಾಲೇಜಿನಲ್ಲೂ ನನಗೆ ಹುಡುಗಿಯರನ್ನು ಕಂಡಾಗ ಅವರ ಬಗ್ಗೆ ಕಲ್ಪನೆ ಮಾಡಿದರೆ ಕಾಮೋದ್ರೇಕವಾಗುತ್ತದೆ. ಆಗ ಓದಿನ ಕಡೆಗೆ ಗಮನ ಕೊಡಲಾಗುವುದಿಲ್ಲ. ನಾನು ನನ್ನನ್ನು ಕಂಟ್ರೋಲ್ ಮಾಡಿ ಕೊಳ್ಳುವುದು ಹೇಗೆ? ಲೈಂಗಿಕ ಬಯಕೆಗಳು ಮನಸ್ಸಿನಲ್ಲಿ ಮೂಡ ದಿರಲು ಸಾಧ್ಯವೇ? ನನಗೆ ಸಲಹೆ ಕೊಡಿ.
ಸಲಹೆ: ನೀವು ಮೊದಲು ಕಲಿಯುವ ಸಮಯದಲ್ಲಿ ಕಾಮೋತ್ತೇಜಕ ಚಟುವಟಿಕೆ, ಕಲ್ಪನೆಯಿಂದ ದೂರವಿದ್ದು ಓದಿನ ಕಡೆಗೆ ಗಮನವನ್ನು ಹರಿಸಬೇಕು. ಚೆನ್ನಾಗಿ ಓದಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲ ನಿಮ್ಮಲ್ಲಿ ಮೂಡ ಬೇಕು. ಹದಿಹರೆಯದಲ್ಲಿ ನಿಮ್ಮ ಮನಸ್ಸು ಆಗಾಗ ಏಕಾಗ್ರತೆ ಕಳೆದುಕೊಳ್ಳುವುದು ಸಹಜ. ಲೈಂಗಿಕತೆಯ ಬಗ್ಗೆ ಕಪೋಲ ಕಲ್ಪಿತ ಸುದ್ದಿಗಳು, ನಾನಾ ಬಗೆಯ ಚಿತ್ರ, ವಿಚಿತ್ರ ಕಲ್ಪನೆಗಳಿಂದ ಮನಸ್ಸು ಲೈಂಗಿಕತೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತಳೆಯು ತ್ತದೆ. ಇದನ್ನು ತಪ್ಪೆನ್ನಲಾಗದು. ಕಾಲೇಜಿನಲ್ಲಿ ಗರ್ಲ್‌ಫ್ರೆಂಡ್ಸ್ ಹೊಂದಿದ್ದರೆ ಪರ ವಾಗಿಲ್ಲ. ಹಾಯ್-ಬಾಯ್ ಆಗಿದ್ದರೆ ಒಳ್ಳೆಯದು. ಅದು ಮುಂದು ವರಿದು ಬೇರೆ ಹಾದಿ ಹಿಡಿಯುವುದು ಬೇಡ. ಇದರಿಂದ ಮುಂದೆ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಲೈಂಗಿಕ ಬಯಕೆಯನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯ ನಮ್ಮಲ್ಲಿಯೇ ಇರುತ್ತದೆ. ನೀವು ಜೀವನದಲ್ಲಿ ಮುಂದ ಬರಬೇಕು, ಎಲ್ಲರಂತೆ ಆಗಬೇಕು ಎಂದು ಬಯಸಿದ್ದೀರಿ ಅಲ್ಲವೇ? ನೀವು ಕಲ್ಪಿಸಿದ್ದೆಲ್ಲಾ ನಿಜವಾಗಬೇಕಾ ದರೆ ಕಠಿಣ ಪರಿಶ್ರಮ ಅಗತ್ಯ. ಆದ್ದರಿಂದ ಬೇಡವಾದ ಯೋಚನೆ ಬಿಟ್ಟುಬಿಡಿ. ಕಾಮದ ಬಗೆಗಿನ ವಿಚಾರ ಮನಸ್ಸಿಗೆ ಬಂದ ತಕ್ಷಣ ಏಕಾಂತದಿಂದ ಹೊರಬಂದು ಮನೆಯ ಸದಸ್ಯರ ಜತೆ ಕಾಲ ಕಳೆಯಿರಿ. ದೇವರ ಧ್ಯಾನ, ಉತ್ತಮ ಪುಸ್ತಕ ಓದುವಿಕೆಯಿಂದ ನೀವು ಇಂತಹ ಸಮಸ್ಯೆಯಿಂದ ದೂರವಿರಬಹುದು. ಕಾಮದ ವಾಂಛೆ ಅತಿಯಾದರೆ ಮಾತ್ರ ತಡೆಯಬೇಡಿ.
ಆಗ ಹಸ್ತಮೈಥುನ ಮಾಡುವ ಮೂಲಕ ಆನಂದ ಪಡು ವುದೊಳ್ಳೆಯದು. ಇನ್ನೂ ಒಂದು ಮಾತು. ಹಸ್ತ ಮೈಥುನ ಮಾಡು ತ್ತೀರೆಂದಾದರೆ ಅದರಿಂದ ಕೀಳು ಭಾವನೆ ಬೆಳೆಸಿಕೊಳ್ಳಬೇಡಿ. ಹದಿ ಹರೆಯದ ಗಂಡು-ಹೆಣ್ಣು ಸಾಮಾ ನ್ಯವಾಗಿ ಇದರಿಂದ ಆನಂದ ಪಟ್ಟು ಕೊಳ್ಳುತ್ತಾರೆ. ಹಸ್ತ ಮೈಥುನ ಮಾಡುವುದರಿಂದ ಯಾವುದೇ ತೊಂದರೆಯಿಲ್ಲ. ಆದರೆ ಅದನ್ನೇ ಅಭ್ಯಾಸ ಮಾಡಿಕೊಂಡು ಅತಿ ಯಾಗದಂತೆ ನೋಡಿಕೊಳ್ಳಿ. ಇನ್ನು ಸಲಿಂಗಕಾಮದಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಏಡ್ಸ್‌ನಂತಹ ಮಾರಕ ರೋಗಕ್ಕೂ ಸಿಕ್ಕಿ ಬಳಲ ಬೇಕಾದೀತು. ಆದ್ದರಿಂದ ಲೈಂಗಿಕ ವಿಚಾರಗಳು ಮನಸ್ಸನ್ನು ಆವ ರಿಸಲು ಬಿಡಬೇಡಿ.

ಶುದ್ದೀಕರಣ ಮನಸ್ಸಿನಿಂದಾಗಲಿ; ತೊಳೆಯುವುದರಿಂದಲ್ಲ

Posted by JAYAKIRANA Kirana on | 0 comments | Leave a comment...

ಅಶೋಕ್ ಹಲಾಯಿ, ಬಂಟ್ವಾಳ
ಜಯಕಿರಣ ಚಾವಡಿ ವಿಭಾಗದಲ್ಲಿ ದಿನಕರ ಮಂಗಳೂರು, ಧ್ವನಿ ಮಂಗ ಳೂರು ಇವರ ಪತ್ರ ಪ್ರಕಟವಾಗಿತ್ತು. ೧೬ರ ಧ್ವನಿಯವರ ಪತ್ರದ ಧ್ವನಿ ಏನು ಎಂಬುದನ್ನು ಅರ್ಥವಿಸಿದರೆ ಪತ್ರದ ಆರಂಭದಿಂದ ಕೊನೆಯವರೆಗೂ ದೇವ ಸ್ಥಾನ, ಮಸೀದಿ, ಚರ್ಚ್ ಇವುಗಳಿಗೆ ಎಲ್ಲಾ ಧರ್ಮದವರೂ ಪ್ರವೇಶಿಸಬೇ ಕೆಂಬ ಆಶಯವಿತ್ತು. ಇದು ಒಳ್ಳೆಯ ಆಶಯ. ನಮ್ಮ ದೇಶದ ಸಂವಿಧಾನಕ್ಕೆ ಪೂರಕವಾದದ್ದು ಎನ್ನುವುದರಲ್ಲಿ ಅನುಮಾನವಿಲ್ಲ.
ದೇವಸ್ಥಾನ ನಿರ್ಮಾಣದ ಉದ್ದೇಶವೇನು? ಒಂದು ಊರಿನಲ್ಲಿ ಶಾಲೆ, ದೇವಸ್ಥಾನ, ಮಸೀದಿ ಚರ್ಚ್‌ಗಳಿರಬೇಕು. ದೇವಸ್ಥಾನದವರು ಮಸೀದಿಗೆ ಹೋಗುವವರನ್ನು ದೇವಸ್ಥಾನಕ್ಕೆ ಬರಬಾರದು. ಮಸೀದಿಯವರು ಹಿಂದು ಕ್ರಿಶ್ಚಿಯನ್‌ರರು ಬರಬಾರದು. ಚರ್ಚ್‌ಗೆ ಹಿಂದುಗಳು ಹೋಗಬಾರದು. ಈ ತರಹದ ಬೇಧ ಸೃಷ್ಟಿಸಿ ಪರಸ್ಪರ ಬಡಿದಾಟಕ್ಕಾಗಿ ಧಾರ್ಮಿಕ ಸ್ಥಳಗಳನ್ನು ನಮ್ಮ ಹಿರಿಯರು ಪ್ರಾಚೀನ ಕಾಲದಲ್ಲಿ ನಿರ್ಮಿಸಿದ್ದಲ್ಲ ಎಂಬುದನ್ನು ಮೊದಲು ತಿಳಿಯಬೇಕು. ದೇವಸ್ಥಾನ ಅಂದರೇನು? ದೇವಸ್ಥಾನದೊಳಗೇನಿದೆ? ತಿರು ಪತಿಯಲ್ಲಿನ, ಸುಬ್ರಹ್ಮಣ್ಯದಲ್ಲಿನ ಅಥವಾ ಉಳ್ಳಾಲ ದರ್ಗಾದಲ್ಲಿನ, ಅತ್ತೂರು ಚರ್ಚ್‌ನ ದೇವತಾ ಸಾನಿಧ್ಯವೇನು? ವಿಚಾರ ಮಾಡೋಣ.
ಪ್ರಪಂಚದ ಹಿರಿಯ ಮತಗಳೆಲ್ಲವೂ ದೇವರನ್ನು ಮನುಷ್ಯರೂಪದಲ್ಲಿ ಕಲ್ಪ್ಪಿಸಿಕೊಂಡಿದೆ. ಮಾನವ ತನ್ನ ರೂಪವನ್ನು ದೇವರಿಗೆ ಕೊಟ್ಟ. ಕೆಲವು ವೇಳೆ ಅವನ ಹೆಚ್ಚುಗಾರಿಕೆ ತೋರಿಸುವುದಕ್ಕಾಗಿ ಒಂದೆರಡು ತಲೆ, ಕೈಗಳನ್ನೂ ಅದಕ್ಕೆ ಬೇರೆ ಬೇರೆ ಆಯುಧಗಳನ್ನೂ ಕೊಟ್ಟ ಕಾರಣ ವಿಭಿನ್ನ ರೂಪದಲ್ಲಿ ದೇವರ ಆರಾಧನೆ ಜರಗುತ್ತ ಬಂತು. ದೇವಸ್ಥಾನವೆಂದರೆ ದೇವರ ಮನೆ, ಅದು ಮಸೀದಿ, ಚರ್ಚ್‌ಗಳೂ ಅದೇ ಆಗಿದೆ. ಅಲ್ಲಾಹನೂ ಮನುಷ್ಯ ಯೇಸು ಕ್ರಿಸ್ತನೂ ಮನುಷ್ಯರೂಪ. ಎಲ್ಲವೂ ಮನುಷ್ಯ. ಮನುಷ್ಯನಿಗಾಗಿ ನಿರ್ಮಿಸಿದ ವ್ಯವಸ್ಥೆ. ದೇವಸ್ಥಾನದೊಳಗೆ ಏನಿದೆ? ಮೂರ್ತಿ. ಅದು ಮನುಷ್ಯನೇ ನಿರ್ಮಿ ಸಿದ ಮೂರ್ತಿ. ಮನುಷ್ಯರೇ ಪೂಜೆ ಮಾಡುವ ಕ್ರಮ. ಇದು ಚರ್ಚ್, ಮಸೀದಿ ಗಳಲ್ಲೂ ಬೇರೆ ಬೇರೆ ರೂಪಗಳಲ್ಲಿ ಇವೆ. ದೇವಸ್ಥಾನದಲ್ಲಿ ಅರ್ಚಕರೂ ಪೂಜೆ ಮಾಡಿದರೆ ಮಸೀದಿಗಳಲ್ಲಿ ಮುಕುರಿಗಳು, ಚರ್ಚ್‌ನಲ್ಲಿ ಗುರುಗಳು ಪ್ರಾರ್ಥನಾ ವಿಧಿ ನೆರವೇರಿಸುವ ಕ್ರಮ ಕಾಣುತ್ತೇವೆ. ಸಂಸ್ಕೃತ ಶ್ಲೋಕ ಹೇಳುತ್ತದೆ. ‘ಅರ್ಚ ಕಸ್ಯ ಪ್ರಭಾವೇಣ ಶಿಲಾ ಭವತೀ ಶಂಕರಃ’. ಅಂದರೆ ವಿದ್ಯಾ ವಿನಯ ಸಂಪನ್ನ ಸದಾಚಾರ ನಿಷ್ಠನು, ಶ್ರದ್ಧಾಭಕ್ತಿಯುತನೂ ಆದ ಅರ್ಚಕನ ಪ್ರಭಾವದಿಂದ ಜಡವಾಗಿರುವ ಶಿಲೆಯು ಶಂಕರತ್ವವನ್ನು ಹೊಂದುತ್ತದೆ. ಅರ್ಥಾತ್ ಅದರಲ್ಲಿ ದೇವತಾ ಸಾನಿಧ್ಯವು ತಾನಾಗಿಯೇ ಬರುತ್ತದೆ ಎಂಬುದು. ಒಳ್ಳೆಯ ಆಚಾರ ಎಲ್ಲಾ ಧರ್ಮದವರನ್ನೂ ಪ್ರೀತಿಸುವವನಾಗಿದ್ದರೆ ಆತ ಪೂಜೆ ಮಾಡುವ, ದೇವಸ್ಥಾನದಲ್ಲಿ ಅದೇ ಭಾವನೆ ಸ್ಫುಟಗೊಳ್ಳುತ್ತದೆ. ಉದಾಹರಣೆಗೆ ಧರ್ಮ ಸ್ಥಳ, ಕುದ್ರೋಳಿ, ಕಟೀಲು, ಕೊಲ್ಲೂರು, ಉಳ್ಳಾಲದ ದರ್ಗಾ, ಅತ್ತೂರಿನ ಚರ್ಚ್, ಬಪ್ಪನಾಡಿನ ದೇವಸ್ಥಾನ ಇತ್ಯಾದಿ. ಎಲ್ಲಾ ಧರ್ಮದವರನ್ನೂ ತನ್ನೆಡೆಗೆ ಸೆಳೆಯುತ್ತದೆಂದರೆ ಇದರ ಅರ್ಥ ಇಷ್ಟೇ. ಅಂತಹ ಕ್ಷೇತ್ರ ಸ್ಥಾಪನೆಯಾದ ಸಮಯದಲ್ಲಿ ಒಳ್ಳೆಯ ಮನಸ್ಸಿನ ಅರ್ಚಕರು, ಗುರುಗಳು, ಪೂಜೆ ಮಾಡಿದ ಪ್ರಭಾವವೇ ಮೂಲಕಾರಣವಾಗಿದೆಯೇ ಹೊರತು ಬೇರೇನೂ ಅಲ್ಲ. ಈಗಿನ ಅರ್ಚಕರ, ಗುರುಗಳ, ಮುಕುರಿಗಳ ಪ್ರಭಾವವಲ್ಲ. ಪ್ರಾಚೀನ ಕಾಲದಿಂದ ಅರ್ಚನೆ ಮತ್ತು ಅರ್ಚಕನ ಪ್ರಭಾವ ಇದೇ ನಿಜವಾದ ಗುಟ್ಟು.
ದೇವಸ್ಥಾನಕ್ಕೆ ಇತರ ಧರ್ಮದವರ ಪ್ರವೇಶವೆಂದಾಕ್ಷಣ ದೇವಸ್ಥಾನ ಅಶುದ್ಧವಾಗುತ್ತದೆಂಬ ಭಾವನೆ ಮೂರ್ಖತನದ ಪರಮಾವಧಿ. ಬರೆದುಕೊಟ್ಟ ಪ್ರವೇಶವು ತಿರುಪತಿಯಲ್ಲಿದೆ ಎಂದು ನಾನು ತಿಳಿದ ಮಟ್ಟಿಗೆ ಗಮನಕ್ಕೆ ಬಂದಿಲ್ಲ. ಬಹುಶಃ ಈ ತರದ ಸಂಪ್ರದಾಯವಿದ್ದರೆ ಅದು ಖಂಡನೀಯ.
ಧ್ವನಿಯವರ ಪತ್ರದಲ್ಲಿನ ಮಡೆ ಮಡೆಸ್ನಾನದ ಬಗೆಗಿರುವ ಅಭಿಪ್ರಾಯ ಸರಿಯಲ್ಲ. ಸಂಪ್ರದಾಯ ಮತ್ತು ದೇವರ ಅಸ್ತಿತ್ವದ ಪ್ರಶ್ನೆ ಎತ್ತಲಾಗಿದ್ದು ವೈಚಾ ರಿಕವಾಗಿ ಚಿಂತನೆ ನಡೆಸಿದರೆ ಸಂಪ್ರದಾಯವೆಂಬುದು ಕಟ್ಟುಪಾಡುಗಳು. ಇವು ದೇವ ನಿರ್ಮಿತವಲ್ಲ. ಮನುಷ್ಯ ನಿರ್ಮಿತ ವಿಚಾರವಿದು. ಯಾವ ಸಂಪ್ರ ದಾಯವು ಒಟ್ಟು ಮಾನವ ಕುಲಕ್ಕೆ ಅವಮಾನ, ಶೋಷಣೆ ಮಾಡುವಂತಿದ್ದರೆ ಅದು ಖಂಡನೀಯ. ತಿರುಪತಿಯಲ್ಲಿ ಹೀನ ಸಂಪ್ರದಾಯವಿದ್ದರೂ ಅದೂ ಖಂಡನೀಯ.
ಹಿಂದು, ಕ್ರೈಸ್ತ, ಮುಸ್ಲಿಮರು ಮನುಷ್ಯರೇ ಆಗಿದ್ದು. ಅವರವರು ನಿರ್ಮಿ ಸಿದ ದೇವಮಂದಿರಗಳು ಒಂದೇ ಉದ್ದೇಶ ಹೊಂದಿದೆ. ಒಂದೇ ಆಧಾರವನ್ನು ಹೊಂದಿದೆ. ಆಧಾರವೇನು? ‘ಪ್ರಾರ್ಥನೆ’ಯೇ ಆಧಾರ. ಈ ಮೂರು ಮನು ಷ್ಯರ ಪ್ರಾರ್ಥನಾ ವಿಧಾನಗಳಲ್ಲಿ ವಿಭಿನ್ನತೆ ಇದೆ ಅಷ್ಟೇ. ದೇವರು ಈ ಮೂರು ಮಂದಿಗೂ ಒಬ್ಬನೇ. ಶಿವ, ಅಲ್ಲಾಹ್, ಯೇಸು, ದುರ್ಗೆ, ಮೇರಿ ಹೀಗೆ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಟ್ಟರೂ ಚೈತನ್ಯ ಒಂದೇ. ಎಲ್ಲಕ್ಕಿಂತ ಹೆಚ್ಚಾಗಿ. ಮನುಷ್ಯನೊಳಗಿರುವ ಒಂದು ಚೈತನ್ಯವೇ ದೇವರು. ಅದು ಜಾಗೃತ ಸ್ಥಿತಿಯಲ್ಲಿ ದ್ದರೆ ಅದರಿಂದ ಸಕಲವೃದ್ಧಿ. ಆ ಚೈತನ್ಯ ಸ್ಥಿರ ಮತ್ತು ಚಿಲುಮೆಯಂತಿರಬೇ ಕಾದರೆ ದೇವಸ್ಥಾನ, ಮಂದಿರ, ಮಸೀದಿ, ಚರ್ಚ್‌ಗಳಲ್ಲಿನ ಪ್ರಾರ್ಥನೆಗೆ ಅಗತ್ಯ. ದೇವ ಮಂದಿರಗಳಲ್ಲಿ ಏನೂ ಇಲ್ಲ. ಜಾಗೃತಿಗಾಗಿ ಸರ್ವರೂ ಕೂಡಿಬಾಳುವ ಒಳ್ಳೆಯ ಮನಸ್ಸಿಗಾಗಿ ಇವು ಅತೀ ಅಗತ್ಯ. ಈ ಮೂರಕ್ಕೂ ಹೋಗದೆ ಯಾವ ಪ್ರಾರ್ಥನೆಯನ್ನೂ ಮಾಡದವರೂ ಇದ್ದಾರೆ. ಅವರಲ್ಲಿ ಚೈತನ್ಯವಿಲ್ಲ ಎಂದಲ್ಲ. ಮನದೊಳಗಿನ ಮೌನವೂ ಪ್ರಾರ್ಥನೆಯೇ ಆಗಿದೆ.
ಮಾನವ ಮತದ ಹಿಂದಿರುವ ತತ್ತ್ವಗಳು ಯಾವುವು? ಸರ್ವೇಸಮತಾ ಭಾವ. ನ್ಯಾಯ, ನೀತಿ, ಪ್ರೀತಿ. ನಮಗೆ ಬೇಕಾದ ದೇವರು ಎಂಥವನು ಎಂದು ಯೋಚಿಸುವಾಗ ನಾವು ಅವನಲ್ಲಿ ಬಯಸಿದ ಗುಣಗಳು ಇವು. ನಮಗೆ ದೇವರು ಮೌಲ್ಯ ರಕ್ಷಕ. ಉದಾತ್ತ ಗುಣವೇ ದೇವರು. ಭಾರತ ದೇಶಕ್ಕೆ ನಾಲ್ಕೈದು ಸಾವಿರ ವರ್ಷಗಳ ಇತಿಹಾಸವಿದೆ. ವೈವಿಧ್ಯತೆಯಲ್ಲಿ ಏಕತೆ ಸಾಧಿಸುವುದು ಅತೀ ಅಗತ್ಯ. ನಂಬಿಕೆ, ಆಚರಣೆ, ಎಲ್ಲವುಗಳಲ್ಲಿ ವೈವಿಧ್ಯತೆಗಳಿವೆ. ಎಲ್ಲವನ್ನೂ ಒಟ್ಟು ಸೇರಿಸಿ ಏಕರೂಪದಲ್ಲಿ ಏಕತೆ ಸಾಧಿಸಿದರೆ ಇಂತಹಾ ಪ್ರವೇಶ ನಿಷೇಧ. ಬರೆದು ಕೊಟ್ಟು ದೇವಸ್ಥಾನ ಪ್ರವೇಶ, ಅನ್ಯಧರ್ಮೀಯರ ಪ್ರವೇಶದಿಂದಾದ ಅಶುದ್ಧದ ಶುದ್ದೀಕರಣ ಇವೆಲ್ಲಕ್ಕೂ ಸ್ಥಾನವೇ ಇರುವುದಿಲ್ಲ.
ಜನರಲ್ಲಿ ಮೌಢ್ಯ, ನಿಷ್ಕ್ರೀಯತೆ, ಅನೈಕ್ಯತೆ ಮತ್ತು ಕ್ರೌರ್ಯಗಳನ್ನು ಬೆಳೆ ಸುವ ನಂಬಿಕೆಗಳು ಮತ್ತು ಆಚರಣೆಗಳು, ಧರ್ಮ ಧರ್ಮಗಳಲ್ಲಿ ವಿಭಿನ್ನತೆ ಸೃಷ್ಠಿಸುವ ಯಾವ ಸಂಪ್ರದಾಯವು ಅಪಾಯಕಾರಿ. ಕೋಮು ವಿದ್ವೇಷ ಹಾಗೂ ಜಾತಿಬೇಧಗಳು ಈ ದೇಶವನ್ನೂ ನಮ್ಮನ್ನೂ ಮತ್ತೆಂದಿಗೂ ಒಂದಾಗದಂತೆ ತುಂಡರಿಸುವ ಅಪಾಯವಿದೆ. ಸರ್ವಧರ್ಮ ಸಮ್ಮೇಳನ ನಡೆಸಿ ಸರ್ವಧರ್ಮ ಸಹಿಷ್ಣುತೆ ಮತ್ತು ಸಮನ್ವಯತೆ ಬೋಧಿಸುತ್ತಾರೆ. ಮತ್ತೊಂದು ದಿನ ಬೇರೆ ಧಾರ್ಮಿಕ ಸಮಾರಂಭ ಪ್ರತ್ಯೇಕ ನಡೆಸಿ ಸ್ವಧರ್ಮದ ಶ್ರೇಷ್ಠತೆ, ಪರ ಧರ್ಮಗಳ ದ್ವೇಷಗಳ ಕುರಿತು ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಇದಕ್ಕೆ ಕಾರಣ ಜನರಲ್ಲಿ ವಾಸ್ತವಿಕ ಬೋಧೆ, ಲೌಕಿಕ ಮನೋವೃತ್ತಿ ಬೆಳೆಯದಂತೆ, ಧರ್ಮ ಮಾನವೀಯ ಸಂಬಂಧ, ಕೋಮು ಭೇದರಹಿತವಾದ ಸೌಹಾರ್ದತೆ ಬೇರೂರದಂತೆ, ಶೋಷಣೆ ಅನ್ಯಾಯ ವಿರುದ್ಧ ಪ್ರತಿಭಟನೆ ಪ್ರಕಟವಾಗದಂತೆ, ಶ್ರಮ ಜೀವಿಗಳಿಗೆ ಬಡವರಿಗೆ ಧರ್ಮದ ಅರಿವಳಿಕೆ ಕುಡಿಸಿವುದು. ಇದರ ಉದ್ದೇಶ. ನಾವು ಯಾವ ಅರಿವಳಿಕೆಗೂ ಅಳವಡಿಕೆಯಾಗದೆ ಸ್ವಚಿಂತನೆ ಮೂಲಕ ‘ವಿಚಾರ ಜ್ಞಾನ’ ಎಂಬ ಅಸ್ತ್ರ ಪ್ರಯೋಗಿಸಿ, ದೇವಸ್ಥಾನ, ಮಸೀದಿ, ಇಗರ್ಜಿ ಮೊದಲಾದ ಪ್ರಾರ್ಥನಾ ಮಂದಿ ರದ ಪಾವಿತ್ರ್ಯವೇನು? ಸರ್ವರನ್ನೂ ಸಮಾನ ವಾಗಿ ಕಾಣುವುದೇ ಪಾವಿತ್ರ್ಯ. ಶುದ್ಧೀಕರಣ ಮನಸ್ಸಿನಿಂದಾಗಬೇಕು. ದೇವಸ್ಥಾನ ತೊಳೆದರೆ ಆಗದು ಅಲ್ಲವೇ?

ಈಶ್ವರಪ್ಪರಿಂದ ಆತ್ಮಹತ್ಯೆಗೆ ಪ್ರಚೋದನೆ: ಯಡ್ಡಿ ಆರೋಪ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ರಚಿಸಿರುವ ತಂಡಗಳಲ್ಲಿ ಹಿರಿಯರನ್ನು ಕಡೆಗಣಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ತಮ್ಮ ಜನಸಂಪರ್ಕ ಕಚೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡುತ್ತಿದ್ದ ಅವರು ಚುನಾವಣಾ ಪ್ರಚಾರಕ್ಕೆ ತಮ್ಮನ್ನು ಆಹ್ವಾನಿಸಿಲ್ಲ. ಆಹ್ವಾನವಿಲ್ಲದೆ ತಾವು ಪಕ್ಷದ ಯಾವುದೇ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಚಾರಕ್ಕಾಗಿ ರಚಿಸಿರುವ ತಂಡಗಳಲ್ಲಿ ಹಿರಿಯ ರನ್ನು ಕಡೆಗಣಿಸಲಾಗಿದ್ದು, ಇದು ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಬಹುದು, ಪ್ರಚಾರ ಮಾಡಲು ಪಕ್ಷದ ನಾಯಕರು ನಾಲ್ಕು ತಂಡಗಳನ್ನು ರಚಿಸಿದ್ದು ಈ ತಂಡದಲ್ಲಿ ತಮ್ಮ ಹೆಸರಿಲ್ಲದಿರುವುದನ್ನು ನೋಡಿದರೆ ನಾನು ಪ್ರಚಾರ ಮಾಡುವ ಅಗತ್ಯ ಪಕ್ಷಕ್ಕಿಲ್ಲ ಎಂಬಂತೆ ಕಾಣುತ್ತಿದೆ. ಹಾಗಂತ ನಾನೇನೂ ದುಂಬಾಲು ಬಿದ್ದು ಪ್ರಚಾರಕ್ಕೆ ಹೋಗುವುದಿಲ್ಲ ಎಂದರು.
ಹಿರಿಯರನ್ನು ಕಡೆಗಾಣಿಸಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲುವಂತೆ ಮಾಡಲಾಯಿತು. ಇದೀಗ ಇತಿಹಾಸ ಮರುಕಳಿಸುವ ಲಕ್ಷಣಗಳು ಕಾಣುತ್ತಿವೆ ಎಂದರು. ಒಂದು ವೇಳೆ ನನ್ನ ಮಾತು ಮೀರಿ ನಡೆದುಕೊಂಡು ಪಕ್ಷದ ಅಭ್ಯರ್ಥಿಗಳು ಸೋತರೆ ನನ್ನನ್ನು ದೂರುವ ಕೆಲಸ ನಡೆಯಬಾರದು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತೀನ್ ಗಡ್ಕರಿ ಅವರಿಗೆ ನನ್ನ ವಿರುದ್ಧವೇ ದೂರು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಇದೀಗ ನನ್ನ ಮೇಲೆ ಅನುಕಂಪ ತೋರಿಸುವ ನೆಪದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ವ್ಯಂಗ್ಯವಾಡಿದರು.
ಯಡಿಯೂರಪ್ಪ ಅವರ ಜಾಗದಲ್ಲಿ ನಾನಿದ್ದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದಿರುವ ಈಶ್ವರಪ್ಪ ಪರೋಕ್ಷವಾಗಿ ನಾನು ಈ ಕೆಲಸ ಮಾಡಿಕೊಳ್ಳಬೇಕಿತ್ತು ಎಂದು ಹೇಳಿದಂತಿದೆ. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡುವ ಕೆಲಸ. ನನ್ನ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ ಎಂಬುದು ನಿಜ. ಆದರೆ ಅದಕ್ಕಾಗಿ ಪಕ್ಷದ ರಾಜ್ಯ ನಾಯಕರಾಗಲೀ, ರಾಷ್ಟ್ರೀಯ ನಾಯಕರಾಗಲೀ ನನ್ನ ಮೇಲೆ ಅನುಕಂಪ ತೋರಿಸುವ ಅಗತ್ಯವಿಲ್ಲ. ನಾನೂ ಕಾನೂನು ಹೋರಾಟ ನಡೆಸು ತ್ತೇನೆ. ಗೆದ್ದು ಬರುತ್ತೇನೆ ಎಂಬ ವಿಶ್ವಾಸ ಇದೆ. ಅದಕ್ಕಾಗಿ ಇವರ ಅನುಕಂಪದ ನಾಟಕ ಬೇಕಿಲ್ಲ ಎಂದರು.

ಮನಪಾ ನಿರ್ಲಕ್ಷ್ಯದಿಂದ ಇಬ್ಬರ ದೃಷ್ಟಿನಾಶ: ಐವರು ಸಿಬ್ಬಂದಿ ಅಸ್ವಸ್ಥ

Posted by JAYAKIRANA Kirana on | 0 comments | Leave a comment...

ಮಲೇರಿಯಾದ ಹೊಸ ಔಷಧಿ ತಂದ ದುರಂತ
ಮಂಗಳೂರು: ಮಲೇರಿಯಾ ನಿಯಂತ್ರ ಣಕ್ಕೆ ಸಂಬಂಧಿಸಿದ ರಾಸಾಯನಿಕ ಔಷಧಿ ಯ ಪ್ರಾಯೋಗಿಕ ಸಿಂಪಡನೆಗೆ ತೆರಳಿದ್ದ ಮಂಗಳೂರು ಮಹಾನಗರ ಪಾಲಿಕೆಯ ಏಳು ಸಿಬ್ಬಂದಿ ಗಂಭೀರವಾಗಿ ಅಸ್ವಸ್ಥ ಗೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ಮಲೇರಿಯಾ ನಿಯಂತ್ರಣ ಔಷಧಿಯ ಪ್ರಾಯೋಗಿಕ ಪರೀಕ್ಷೆಗಾಗಿ ನಗರಕ್ಕೆ ಬಂದಿ ರುವ ಕೇಂದ್ರ ಮಲೇರಿಯಾ ನಿಯಂತ್ರಣ ಘಟಕದ ಅಧಿಕಾರಿಗಳ ಹಾಗೂ ಮಂಗ ಳೂರು ಮಹಾ ನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಮನಪಾದ ಐವರು ಗುತ್ತಿಗೆ ಕಾರ್ಮಿಕರು ಮತ್ತು ಇಬ್ಬರು ಆರೋಗ್ಯ ಸಹಾಯಕರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಇಬ್ಬರಿಗೆ ದೃಷ್ಟಿ ದೋಷದ ಸಮಸ್ಯೆ ಕಾಣಿಸಿಕೊಂಡಿದ್ದರೆ, ಮಹಿಳಾ ಸಿಬ್ಬಂದಿಯ ಕೈಯಲ್ಲಿ ಬೊಕ್ಕೆ ಎದ್ದಿದೆ ಎಂದು ತಿಳಿದು ಬಂದಿದೆ.
ಅತ್ಯಂತ ಹೆಚ್ಚು ವಿಷಕಾರಿಯಾದ ಅಕ್ವ ಕೆ-ಆಥ್ರಿನ್ (ಂquಚಿ-ಞ-oಣhಡಿiಟಿe)ಎಂಬ ರಾಸಾಯನಿಕವನ್ನು ಯಾವುದೇ ಮುಂಜಾಗ್ರತೆ ವ್ಯವಸ್ಥೆ ಇಲ್ಲದೆ ಗುತ್ತಿಗೆ ಆಧಾರಿತ ಕಾರ್ಮಿಕರ ಮೂಲಕ ಸಿಂಪಡಿಸಿರುವುದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಉತ್ತರಿಸಬೇಕಾಗಿದ್ದ ಕೇಂದ್ರ ಮಲೇರಿಯಾ ನಿಯಂತ್ರಣದ ಅಧಿಕಾರಿಗಳು ತಮ್ಮ ಮುಂದಿನ ಪ್ರಯೋಗ ನಡೆಸಲು ಉತ್ತರ ಪ್ರದೇಶಕ್ಕೆ ಪ್ರಯಾಣ ಹೊರಟಿದ್ದಾರೆ.
ದೇಶದ ಬಹುತೇಕ ರಾಜ್ಯವನ್ನು ಕಾಡುತ್ತಿರುವ ಮಲೇರಿಯಾ ನಿಯಂತ್ರಣಕ್ಕೆ ಸಂಬಂಧಿಸಿ ಕೇಂದ್ರ ಮಲೇರಿಯಾ ನಿಯಂತ್ರಣ ಘಟಕ ಹೊಸ ಔಷಧವನ್ನು ಕಂಡು ಹಿಡಿದಿತ್ತು. ಇದರ ಪ್ರಾಯೋಗಿಕ ಪರೀಕ್ಷೆಯನ್ನು ಐದು ರಾಜ್ಯಗಳಲ್ಲಿ ನಡೆಸಲು ಕೇಂದ್ರ ಮಲೇರಿಯಾ ನಿಯಂತ್ರಣ ಘಟಕ ಯೋಜನೆ ರೂಪಿಸಿತ್ತು. ಅದರಂತೆ ೧೫ ದಿನದ ಹಿಂದೆ ಮಲೇರಿಯಾ ನಿಯಂತ್ರಣ ಘಟಕದ ಅಧಿಕಾರಿಗಳಾದ ಜೋಶ್, ಡಾ. ಹೋಜಾ ಹಾಗೂ ಮೂವರು ಸಿಬ್ಬಂದಿ ನಗರಕ್ಕೆ ಆಗಮಿಸಿದ್ದರು. ಇವರ ಕೋರಿಕೆಯಂತೆ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಮತ್ತು ಮನಪಾ ಮಲೇರಿಯಾ ನಿಯಂತ್ರಣಾಧಿಕಾರಿ ಮನಪಾದ ಐವರು ಗುತ್ತಿಗೆ ಕಾರ್ಮಿಕರನ್ನು ಹಾಗೂ ಇಬ್ಬರು ಖಾಯಂ ಸಿಬ್ಬಂದಿಯನ್ನು ಪ್ರಾಯೋಗಿಕ ಪರೀಕ್ಷೆಗೆ ನೇಮಕ ಮಾಡಿ ಕಳುಹಿಸಿಕೊಟ್ಟಿದ್ದರು. ಆದರೆ ಈ ಬಗ್ಗೆ ಆಯುಕ್ತರ ಅನುಮತಿಯನ್ನಾಗಲಿ ಪ್ರಾಯೋಗಿಕ ಪರೀಕ್ಷೆ ವೇಳೆ ಅನುಸರಿಸಬೇಕಾದ ಕ್ರಮದ ಬಗ್ಗೆಯಾಗಲೀ ಯಾವುದೇ ರೀತಿಯ ಒಪ್ಪಂದವನ್ನು ನಡೆಸಿರಲಿಲ್ಲ. ನಗರದಲ್ಲಿ ಪ್ರಯೋಗ ನಡೆಸಲಿರುವ ಹೊಸ ಔಷಧದ ಬಗ್ಗೆ ಕನಿಷ್ಠ ಮನಪಾ ಅಧಿಕಾರಿಗಳಿಗೂ ಮಾಹಿತಿ ಇರಲಿಲ್ಲ, ಔಷಧ ಸಿಂಪಡಿಸುವ ರೀತಿಯ ಬಗ್ಗೆ ಸಿಬ್ಬಂದಿಗೆ ತರಬೇತಿಯನ್ನೂ ನೀಡಿರಲಿಲ್ಲ. ಹೀಗಾಗಿ ಹೊಸ ಔಷಧಿ ಬಗ್ಗೆ ಮಾಹಿತಿ ಇಲ್ಲದ ಮನಪಾ ಸಿಬ್ಬಂದಿ ಈಗ ಸಂಕಷ್ಟಕ್ಕೆ ಈಡಾಗಿದ್ದಾರೆ.
ಒಂದು ವಾರ ಕಾಲ ಬೆಳಗ್ಗೆ ೫ ಗಂಟೆಗೆ ಹಾಗೂ ರಾತ್ರಿ ೧೨ ಗಂಟೆಗೆ ನಗರದ ವಿವಿಧ ಕಡೆ ಇರುವ ನಿರ್ಮಾಣ ಹಂತದ ಕಟ್ಟಡಗಳಿಗೆ ತೆರಳಿ ಅಕ್ವ- ಕೆ-ಆಥ್ರಿನ್ (ಂquಚಿ-ಞ-oಣhಡಿiಟಿe)ಔಷಧವನ್ನು ಸಿಂಪಡಿಸಬೇಕು. ಅಕ್ವ- ಕೆ-ಆಥ್ರಿನ್ ರಾಸಾಯನಿಕದ ಉಪಯೋಗದ ಬಗ್ಗೆ ಇರುವ ಮಾಹಿತಿ ಪತ್ರದಲ್ಲಿ ಇದು ಅತ್ಯಂತ ಹೆಚ್ಚು ವಿಷಕಾರಿ ರಾಸಾಯನಿಕವಾದ ಕಾರಣ ದೇಹವನ್ನು ಸಂಪೂರ್ಣವಾಗಿ ಜಾಕೆಟ್ ಮೂಲಕ ಮುಚ್ಚಿಕೊಂಡು ಮುಖಕ್ಕೆ, ಕೈಗಳಿಗೆ ಸೂಕ್ತ ಕವಚ ಧರಿಸಿ ಕಣ್ಣಿಗೆ ವಿಶೇಷ ಗ್ಲಾಸನ್ನು ಬಳಸಿಕೊಂಡ ಬಳಿಕ ಫಾಗಿಂಗ್ ಮಾಡಬೇಕು ಎನ್ನಲಾಗಿದೆ. ಹೀಗಿದ್ದರೂ ದೆಹಲಿಯಿಂದ ಬಂದಿರುವ ಅಧಿಕಾರಿಗಳು ಪ್ರತಿದಿನ ಮನಪಾ ಸಿಬ್ಬಂದಿಗಳನ್ನು ಬೆಳಗ್ಗೆ ೪ ಸುಮಾರಿಗೆ ಎಬ್ಬಿಸಿ ಅವರಿಗೆ ಯಾವುದೇ ರೀತಿಯ ರಕ್ಷಾ ಕವಚ ನೀಡದೆ ಫಾಗಿಂಗ್ ನಡೆಸಲಾಗಿದೆ. ಹೀಗಾಗಿ ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಆರೋಗ್ಯ ಸಹಾಯಕರಾದ ತುಕರಾಮ ಹಾಗೂ ಚಂದ್ರಹಾಸ ಇವರ ಕಣ್ಣಿಗೆ ತೊಂದರೆ ಉಂಟಾಗಿದ್ದು ಕಣ್ಣು ಉರಿ ಕಾಣಿಸಿಕೊಂಡಿದೆ. ಮೈ ಚರ್ಮ ಕಂದು ಬಣ್ಣಕ್ಕೆ ತಿರುಗಿದೆ ಅದೇ ರೀತಿ ಇವರ ಜೊತೆಗಿದ್ದ ಗುತ್ತಿಗೆ ಆಧಾರಿತ ಕಾರ್ಮಿಕರಾದ ಕೀರ್ತಿ, ರತ್ನಕುಮಾರ್, ಕೃಷ್ಣ, ಸುನೀಲ್, ಲೋಕಯ್ಯ ಎಂಬ ವರೂ ಅಸ್ವಸ್ಥಗೊಂಡಿದ್ದಾರೆ.
ಈ ಬಗ್ಗೆ ದೆಹಲಿ ಅಧಿಕಾರಿಗಳ ಬಳಿ ಕೇಳಿದರೆ ಅವರು ಸಿಬ್ಬಂದಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಬಿಟ್ಟಿದ್ದಾರೆ. ಅಲ್ಲಿ ಕೇವಲ ನೋವು ನಿವಾರಕ ಔಷಧ ಮತ್ತು ಕಣ್ಣಿಗೆ ಡ್ರಾಪ್ಸ್ ನೀಡಿ ಕಳುಹಿಸಿಕೊಟ್ಟಿದ್ದಾರೆ. ಹೀಗಾಗಿ ಸಿಬ್ಬಂದಿಯ ನೋವು ಕಡಿಮೆಗೊಂಡಿಲ್ಲ. ಈ ಬಗ್ಗೆ ಆರೋಗ್ಯಾಧಿಕಾರಿಗಳಿಗೂ, ಮನಪಾ ಮಲೇರಿಯಾ ನಿಯಂತ್ರಣಾಧಿಕಾರಿಗೂ ಮಾಹಿತಿಯೇ ಇಲ್ಲ ‘ತೊಂದರೆ ಆಗಿದೆ ಗಮನ ಹರಿಸಿದ್ದೇವೆ ಎನ್ನುತ್ತಿದ್ದಾರೆ. ಆದರೆ ಸಂಕಷ್ಟಕ್ಕೀಡಾಗಿರುವ ಸಿಬ್ಬಂದಿ ಆತಂಕಿತರಾಗಿದ್ದಾರೆ.

ಮೂರು ಸಾವಿರದ ಟೆಸ್ಟ್‌ಗೆ ಒಂದು ಲಕ್ಷದ ಬಿಲ್!
ಪ್ರಾಯೋಗಿಕ ಪರೀಕ್ಷೆಗೆ ಮನಪಾ ಸಿಬ್ಬಂದಿ ಯನ್ನು ಬಳಸಿಕೊಳ್ಳುವ ಮುನ್ನ ಅವರನ್ನು ಮಲ್ಲಿ ಕಟ್ಟೆಯ ವೈದ್ಯರೊಬ್ಬರ ಮೂಲಕ ಇಸಿಜಿ, ರಕ್ತ ಪರೀಕ್ಷೆ, ನರ ಕ್ರಿಯಾಶೀಲತೆ ಬಗ್ಗೆ ಪರೀಕ್ಷೆ ನಡೆಸಿ ದ್ದರು. ಇದರ ಒಟ್ಟು ಮೌಲ್ಯ ಮೂರು ಸಾವಿರ ಮೀರಿರಲಿಲ್ಲ. ಆದರೆ ದೆಹಲಿಯ ಅಧಿಕಾರಿಗಳು ಮಾತ್ರ ಈ ಪರೀಕ್ಷೆಗೆ ಬರೊಬ್ಬರಿ ಒಂದು ಲಕ್ಷದ ಬಿಲ್ ಮಾಡಿದ್ದಾರೆ. ಈ ಹೊಸ ಔಷಧ ಪ್ರಯೋಗ ಪ್ರಕ್ರಿಯೆಗೆ ಕೇಂದ್ರ ಸರಕಾರ ಒಂದು ಕೋಟಿ ಅನು ದಾನ ನೀಡಿದೆ. ಈ ಪೈಕಿ ಕೇವಲ ಏಳು ಜನರ ವೈದ್ಯಕೀಯ ಪರೀಕ್ಷೆಗೆ ಒಂದು ಲಕ್ಷ ವ್ಯಯವಾಗು ವುದಾದರೇ ಇನ್ನು ದೇಶದಾದ್ಯಂತ ನಡೆಯಲಿರುವ ಪ್ರಾಯೋಗಿಕ ಕ್ರಿಯೇ ವೇಳೆ ಇನ್ನೆಷ್ಟು ಹಣ ಗುಳುಂ ಆಗ ಬಹುದು ?ಎನ್ನುವುದು ಈ ಯೋಜನೆ ಬಗ್ಗೆ ತಿಳಿದವರ ಅಂಬೋಣ.

ಆಲ್ಟೋ ಕಾರಿನಲ್ಲಿ ನಾಲ್ಕು ದನಗಳು!

Posted by JAYAKIRANA Kirana on | 0 comments | Leave a comment...



ಮಂಗಳೂರು: ಐದು ಜನರಿಗೆ ಸರಿಯಾಗಿ ಕುಳಿತು ಕೊಳ್ಳಲು ಕಷ್ಟವಾಗುವಂತಹ ಆಲ್ಟೋ ಕಾರಿನಲ್ಲಿ ನಾಲ್ಕು ಬೃಹದಾಕಾರದ ಜಾನುವಾರುಗಳನ್ನು ಸಾಗಿಸುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಆರೋಪಿ ಪರಾರಿಯಾಗಿ ವಾಹನ ಸಹಿತ ಜಾನುವಾರುಗಳು ಉಳ್ಳಾಲ ಪೊಲೀಸರ ವಶಕ್ಕೆ ಬಿದ್ದಿರುವ ಘಟನೆ ಅಳೇಕಲದಲ್ಲಿ ನಡೆದಿದೆ,
ಅಳೇಕಲ ನಿವಾಸಿ ಇಬ್ರಾಹಿಂ ಎಂಬಾತ ತನ್ನ ಆಲ್ಟೋ ಕಾರಿನ ಹಿಂಬದಿಯ ಸೀಟು ತೆಗೆದು ನಾಲ್ಕು ಜಾನುವಾರುಗಳನ್ನು ತನ್ನ ನಿವಾಸಕ್ಕೆ ಮಾಂಸ ಮಾಡ ಲೆಂದು ಕರೆತರುತ್ತಿದ್ದ ಸಂದರ್ಭ ನಾಟೆಕಲ್ ಸಮೀಪ ಪೊಲೀಸರ ಕಣ್ಣಿಗೆ ಬಿದ್ದಿದ್ದನು. ಆದರೆ ಪೊಲೀಸರನ್ನು ಕಂಡ ಕೂಡಲೇ ಆರೋಪಿ ಕಾರನ್ನು ಬಿಟ್ಟು ಪರಾರಿಯಾಗಿದ್ದ. ಕಾರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಅದರೊ ಳಗಿದ್ದ ನಾಲ್ಕು ಜಾನುವಾರುಗಳನ್ನು ಕಂಡು ಬೆರಗಾಗಿ ದ್ದರು.
ಒಟ್ಟು ೧೮ ಸಾವಿರ ರೂ ಮೌಲ್ಯದ ಜಾನುವಾರುಗಳು ಹಾಗೂ ಆಲ್ಟೋ ಕಾರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.

ವರದಕ್ಷಿಣೆ ವಿರುದ್ಧ ಸಿಡಿದೆದ್ದ ಮುಸ್ಲಿಂ ಮಹಿಳೆಯರು

Posted by JAYAKIRANA Kirana on | 0 comments | Leave a comment...

ಮಹಿಳಾ ಸಮಾವೇಶದಲ್ಲಿ ಹರಿತ ಮಾತುಗಳು
ಮಂಗಳೂರು: ಮುಸ್ಲಿಂ ಸಮುದಾಯದದಲ್ಲಿ ಅಧಿಕವಾಗಿರುವ ವರದಕ್ಷಿಣೆಯ ವಿರುದ್ಧ ಮುಸ್ಲಿಂ ಮಹಿಳೆಯರೇ ಸಿಡಿದೆದ್ದಿದ್ದು, ವರದಕ್ಷಿಣೆ ಮಹಿಳಾ ಬದುಕಿಗೆ ಅವನತಿಯ ಹಾದಿ ತೋರಿಸುತ್ತದೆ. ಹೀಗಾಗಿ ಮಹಿಳೆಯರೇ ಇದರ ವಿರುದ್ಧ ಸಿಡಿದೇಳ ಬೇಕು ಎನ್ನುವ ಕೂಗು ನಿನ್ನೆ ಮಂಗಳೂರು ಪುರಭವನದಲ್ಲಿ ಪ್ರತಿಧ್ವನಿಸಿತ್ತು.
ವರದಕ್ಷಿಣೆ ಮೋಹಿಗಳು ಸಮಾಜ ದ್ರೋಹಿಗಳು ಎಂಬ ಧ್ಯೇಯವಾಕ್ಯದಡಿ ವರದಕ್ಷಿಣೆ ವಿರೋಧಿ ಅಭಿಯಾನದ ಅಂಗವಾಗಿ ನ್ಯಾಶನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡ ರಾಜ್ಯ ಮಟ್ಟದ ಮಹಿಳಾ ಸಮಾವೇಶ ದಲ್ಲಿ ವರದಕ್ಷಿಣೆ ವಿರೋಧಿ ಕೂಗು ಕೇಳಿ ಬಂದಿತ್ತು.
ಎಷ್ಟೇ ಪ್ರಬಲ ಕಾನೂನು ಅನುಷ್ಠಾನಕ್ಕೆ ಬಂದರೂ ದೇಶದಲ್ಲಿ ಸ್ತ್ರೀ ಶೋಷಣೆ ನಿಲ್ಲದು ಸ್ತ್ರೀ ದಿನದಿಂದ ದಿನಕ್ಕೆ ದೈಹಿಕ ಮತ್ತು ಮಾನಸಿಕವಾಗಿಯೂ ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ ಎಂದು ನ್ಯಾಶನಲ್ ವಿಮೆನ್ಸ್ ಫ್ರಂಟ್‌ನ ರಾಷ್ಟ್ರೀಯ ಉಪಾಧ್ಯಕ್ಷೆ ಎ.ಎಸ್ ಝೈನಬಾ ಕೇರಳ, ತಿಳಿಸಿದರು.
ಮಹಿಳೆ-ವರದಕ್ಷಿಣೆ-ಸಬಲೀಕರಣ ವಿಷಯದಲ್ಲಿ ಮಾತನಾಡಿದ ಎನ್‌ಡಬ್ಲ್ಯುಎಫ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಫಾತಿಮಾ ನಸೀಮಾ ಇಸ್ಲಾಂ ಧರ್ಮವು ಮಹಿಳೆಗೆ ಅತ್ಯುನ್ನತ ಸ್ಥಾನ ನೀಡಿದೆ. ಆದರೆ ಧಾರ್ಮಿಕ ಮೌಲ್ಯದ ಕೊರತೆಯಿಂದಾಗಿ ಮಹಿಳೆ ಅಡ್ಡದಾರಿ ತುಳಿಯಲು ವರದಕ್ಷಿಣೆ ಕೂಡ ಕಾರಣ. ಈ ನಿಟ್ಟಿನಲ್ಲಿ ಶೈಕ್ಷಣಿಕ, ಧಾರ್ಮಿಕ, ರಾಜಕೀಯವಾಗಿ ಮಹಿ ಳೆಯು ಸಬಲೀಕರಣಗೊಳ್ಳಬೇಕಾಗಿದೆ ಎಂದರು.
ಮಹ್‌ರ್ ವ್ಯವಸ್ಥೆಯ ನಿರಾಕರಣೆ, ಆಡಂಬರದ ಮದುವೆಗಳು, ಹೆಣ್ಣಿಗೆ ಹೆಣ್ಣೇ ಶತ್ರು, ಟಿವಿ ಧಾರವಾಹಿಗಳ ಪರಿಣಾಮಗಳು, ಆತ್ಮಹತ್ಯಾ ಪ್ರಕರಣಗಳು ಎಂಬ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ವರದಕ್ಷಿಣೆಯ ಮದುವೆಗೆ ಯಾರೂ ಹೋಗಬಾರದು, ಹೋದರೂ ಆ ಮದುವೆಯ ಊಟ ಮಾಡಲೇಬಾರದು ಎಂದು ಮಹಿಳೆಯರು ದೃಢ ವಿಶ್ವಾಸ ತಾಳಬೇಕು ಎಂಬ ಮಾತು ಚರ್ಚೆಯಲ್ಲಿ ಕೇಳಿಸಿತು.
ಒಂದು ದಿನ ನಡೆದ ಸಮಾವೇಶದಲ್ಲಿ ವಿವಿಧ ವಿಚಾರಗಳ ಬಗ್ಗೆ ಮಹಿಳೆಯರೇ ಅದರಲ್ಲೂ ವಿಶೇಷವಾಗಿ ಮುಸ್ಲಿಂ ಮಹಿಳೆಯರೇ ವಿವಿಧ ವಿಚಾರಗಳ ಮಂಡನೆ ನಡೆಸಿ ಚರ್ಚೆ ನಡೆಸಿದರು.

ಸತ್ತ ಸ್ಥಿತಿಯಲ್ಲಿ ದಂಪತಿ: ಕಂದಮ್ಮಗಳ ಕೂಗು!

Posted by JAYAKIRANA Kirana on | 0 comments | Leave a comment...


ಮುಲ್ಕಿ: ಇಲ್ಲಿಯ ಕಿನ್ನಿಗೋಳಿ ಚರ್ಚ್‌ನ ಬಳಿ ನಡು ಬಿಸಿಲಿನ ಹೊತ್ತಿಗೆ ಸುಮಾರು ಒಂದು ಗಂಟೆಯ ವೇಳೆಗೆ ದಂಪತಿ ಮತ್ತು ಎರಡು ಚಿಕ್ಕ ಮಕ್ಕಳನ್ನು ನೋಡಿದಾಗ ದಂಪತಿ ಕಂಠಪೂರ್ತಿ ಕುಡಿದಿದ್ದು ಬಸ್ ತಂಗುದಾಣದಲ್ಲಿ ಮಲಗಿದ್ದರು. ಇವರನ್ನು ಈ ಚಿಕ್ಕ ಹುಡುಗ ಎಬ್ಬಿಸಲು ಪ್ರಯತ್ನಿಸುತ್ತಿದ್ದ. ಆದರೆ ಇವರು ಜಗತ್ತಿನ ಪರಿವೇ ಇಲ್ಲದಂತೆ ಮಲಗಿದ್ದ ಸಂಗತಿ ಬೆಳಕಿಗೆ ಬಂತು.
ಸ್ವಲ್ಪ ಸಮಯದ ಬಳಿಕ ಕಿನ್ನಿಗೋಳಿ ಚರ್ಚ್‌ನ ಬಳಿ ಇರುವ ಮಳೆಯ ನೀರು ಹರಿಯುವ ತೋಡಿನಲ್ಲಿ ದಂಪತಿ ಸತ್ತ ಸ್ಥಿತಿಯಲ್ಲಿದ್ದು ಮಕ್ಕಳು ರಸ್ತೆಯಲ್ಲಿ ಚಲಿಸುವ ವಾಹ ನಗಳಿಗೆ ಅಡ್ಡಾದಿಡ್ಡಿ ಓಡುತ್ತಿದ್ದಾಗ ವಾಹನ ಚಾಲಕರು ನಿಲ್ಲಿಸಿ ಮಕ್ಕಳನ್ನು ಹಿಡಿದು ಅಪ್ಪ ಅಮ್ಮ ಎಲ್ಲಿದ್ದಾರೆ? ಎಂದಾಗ ಅದಕ್ಕೆ ಉತ್ತರಿಸಿದ ಮಕ್ಕಳು ಇಲ್ಲಿಯೇ ಇದ್ದಾರೆ ಎಂದರು. ಎಲ್ಲಿ ಎಂದು ನೋಡಿದಾಗ ಸತ್ತ ಸ್ಥಿತಿಯಲ್ಲಿ ಬಿದ್ದಿದ್ದರು. ಹತ್ತಿರದಲ್ಲಿ ನೋಡಲು ಹೋದಾಗ ಅಮಲು ಪದಾರ್ಥದ ದುರ್ವಾಸನೆ ಮೂಗಿಗೆ ಬಡಿಯಿತು. ಇದನ್ನು ತಿಳಿದ ವಾಹನ ಚಾಲಕರು ಹಾಗೂ ಸ್ಥಳೀಯರು ಹತ್ತಿರದ ಮನೆಯಿಂದ ಒಂದು ಕೊಡ ನೀರು ತಂದು ಅವರಿಬ್ಬರ ಮೇಲೆ ಸುರಿದರು. ನಂತರ ಇಬ್ಬರು ಅಮಲಿನಿಂದ ಎಚ್ಚರಗೊಂಡು ಸಾರ್ವಜನಿಕರಿಗೆ ಮತ್ತು ಅಲ್ಲಿನ ಸ್ಥಳೀಯರಿಗೆ ಬೈಯ್ಯಲು ಆರಂಭಿಸಿದರು. ಇದರಿಂದ ಸಿಟ್ಟಾದ ಸಾರ್ವಜನಿಕರು ಥಳಿಸಿದ ಘಟನೆ ನಡೆಯಿತು. ಎಲ್ಲಿಯವರು ಎಂದು ಕೇಳಿದಾಗ ಮರಕಡ ಕುಂಜತ್ತಬೈಲು ಎಂದು ಹೇಳಿದ. ಅಮಾಯಕ ಎರಡು ವರ್ಷದ ಹೆಣ್ಣು ಮಗು ಹಾಗೂ ಆರು ವರ್ಷದ ಗಂಡು ಮಗು ಅನ್ನ ಆಹಾರವಿಲ್ಲದೆ ಹಸಿವೆಯಿಂದ ಕಂಗಾಲಾಗಿ ರಸ್ತೆಯಲ್ಲಿ ಕೂಗುತ್ತಾ ಅತ್ತಿಂದ ಇತ್ತ ಓಡುತ್ತಿದ್ದರು. ಇದನ್ನು ಕಂಡು ಸಾರ್ವಜನಿಕರು ಮಕ್ಕಳಿಗೆ ಆಹಾರ ನೀಡಿ ಸಮಾಧಾನ ಪಡಿಸಿದರು.

ಅಂತಿಮ ಪರೀಕ್ಷೆ ಬರೆದ ವಿಠಲ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಕ್ಸಲ್ ಬೆಂಬ ಲದ ಆರೋಪದಲ್ಲಿ ಬಂಧಿತನಾಗಿರುವ ಬೆಳ್ತಂಗಡಿ ಕುತ್ಲೂರು ನಿವಾಸಿ ಮಲೆ ಕುಡಿಯ ಸಮುದಾಯದ ವಿಠಲ ಜೈಲು ಸೇರಿದ ಬಳಿಕ ನಿನ್ನೆ ಎರಡನೇ ಬಾರಿ ಪರೀಕ್ಷೆ ಬರೆದ.
ವಿಠಲ ಹಾಗೂ ಆತನ ತಂದೆ ಲಿಂಗಪ್ಪ ಅವರನ್ನು ನಕ್ಸಲ್ ನಿಗ್ರಹದಳದ ಪೊಲೀಸರು ಮಾರ್ಚ್ ೨ರಂದು ಬಂಧಿಸಿದ್ದರು. ಕಳೆದ ಎರಡು ತಿಂಗಳು ಗಳಿಂದ ಮಂಗಳೂರು ಸಬ್ ಜೈಲಿ ನಲ್ಲಿರುವ ಮಂಗಳೂರು ವಿಶ್ವವಿದ್ಯಾ ಲಯದ ಪ್ರಥಮ ವರ್ಷದ ಪತ್ರಿಕೋ ದ್ಯಮ ವಿಭಾಗದ ವಿದ್ಯಾರ್ಥಿ ವಿಠಲ ನ್ಯಾಯಾಲಯದ ಅನುಮತಿ ಮೇರೆಗೆ ಎಪ್ರಿಲ್‌ನಲ್ಲಿ ನಡೆದಿದ್ದ ಆಂತರಿಕ ಪರೀಕ್ಷೆ ಬರೆದಿದ್ದನು.
ಮೇ ೨೧ ಸೋಮವಾರದಿಂದ ಅಂತಿಮ ಪರೀಕ್ಷೆ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ವಿಠಲ ಮತ್ತೊಮ್ಮೆ ಪರೀಕ್ಷೆ ಬರೆಯಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದನು. ವಿಠಲನ ಮನವಿ ಪುರಸ್ಕರಿಸಿದ್ದ ನ್ಯಾಯಾ ಲಯ ಪರೀಕ್ಷೆ ಬರೆಯಲು ಅನುಮತಿ ನೀಡುವ ಅಧಿಕಾರ ವಿಶ್ವ ವಿದ್ಯಾಲಯಕ್ಕೆ ನೀಡಿತ್ತು. ಆದರೆ ಈ ಬಗ್ಗೆ ಅಂತಿಮ ಹಂತದವರೆಗೂ ಗೊಂದಲವಿದ್ದ ಕಾರಣ ವಿಠಲ ಆತಂಕಿತನಾಗಿದ್ದ.
ಸೋಮವಾರ ಬೆಳಗ್ಗೆ ೮.೩೦ರ ವೇಳೆಗೆ ವಿಠಲನನ್ನು ಪೊಲೀಸ್ ಬಂದೋಬಸ್ತಿನಲ್ಲಿ ವಿ.ವಿ.ಗೆ ಕರೆತರಲಾ ಯಿತು. ೯.೩೦ರ ವೇಳೆಗೆ ಪರೀಕ್ಷಾ ಕೊಠಡಿಗೆ ಬಂದ ವಿ.ವಿ.ಪರೀಕ್ಷಾಂಗ ಕುಲಸಚಿವ ಪ್ರೊ.ಯಡಪಡಿತ್ತಾಯ, ಡಾ.ಮಲ್ಲಯ್ಯ, ಕೊಣಾಜೆ ಠಾಣಾಧಿಕಾರಿ ಶಿವಪ್ರಕಾಶ್ ಅವರು ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಹಾಲ್ ಟಿಕೆಟ್ ನೀಡಿದರು.
ವಿಠಲನ ಮೇಲೆ ಆರೋಪ ಬರುವ ಮೊದಲು ಕಾಲೇಜು ಲೈಬ್ರೆರಿಯಿಂದ ಪುಸ್ತಕ ಪಡೆ ದಿದ್ದನು. ಆದರೆ ಅದು ಹಿಂದಿರುಗಿಸದ ಕಾರಣ ಕಾಲೇಜ್ ನಿಯಮದಂತೆ ಸೋಮವಾರ ದಂಡವನ್ನೂ ಕಟ್ಟಿದನು. ಈ ಬಾರಿ ಆತನನ್ನು ಕರೆತರುವಾಗ ಕೈಕೋಳ ಹಾಕಿರಲಿಲ್ಲ.
ಪರೀಕ್ಷೆ ಬರೆದ ಬಳಿಕ ಪತ್ರಕರ್ತ ರೊಡನೆ ಮಾತನಾಡಿದ ವಿಠಲ, ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಅನುಮತಿ ನೀಡುವ ಬಗ್ಗೆ ಸಂಶಯ ಇತ್ತು. ಸೋಮವಾರ ಪರೀಕ್ಷೆ ಹಾಲ್‌ಗೆ ಬಂದ ಬಳಿಕ ಕೊನೆಯ ಗಳಿಗೆಯಲ್ಲಿ ಹಾಲ್ ಟಿಕೆಟ್ ನೀಡಿ ದ್ದರಿಂದ ಆತಂಕ ದೂರವಾಗಿದೆ ಎಂದು ಹೇಳಿದನು.
ನನ್ನ ಪುಸ್ತಕಗಳು ಈಗಲೂ ಹಾಸ್ಟೆಲ್‌ನಲ್ಲಿದ್ದು ಪೊಲೀಸರು ಅದನ್ನು ನೀಡಿಲ್ಲ. ಆದರೆ ಸ್ನೇಹಿತರು ಅಗತ್ಯ ವಿರುವ ಪುಸ್ತಕಗಳನ್ನು ನೀಡಿದ್ದರಿಂದ ಪರೀಕ್ಷೆ ಬರೆಯಲು ಸಹಕಾರಿಯಾ ಯಿತು. ಇಂದಿನ ಪರೀಕ್ಷೆಯೂ ಸುಲಭ ವಾಗಿತ್ತು. ಆದರೆ ಮಾನಸಿಕ ಹಿಂಸೆ ಯಿಂದಾಗಿ ಪುಸ್ತಕ ಓದಿದರೂ ನೆಮ್ಮದಿ ಇಲ್ಲ. ನಾನು ಇದುವರೆಗೂ ಅನಗ ತ್ಯವಾಗಿ ತರಗತಿಗೆ ಗೈರು ಹಾಜರಾಗಿಲ್ಲ. ಆದರೆ ನನ್ನ ಮೇಲೆ ಆರೋಪ ಹೊರಿಸಿ ಜೀವನವನ್ನೇ ಹಾಳು ಮಾಡಿದರು ಎಂದ ವಿಠಲ, ಜೈಲಿಗೆ ಪ್ರೊ. ಗೋವಿಂದ ರಾವ್, ಸಂಸದ ರಾಜೇಶ್, ಪ್ರಕಾಶ್ ಕಾರಟ್ ಹಾಗೂ ಇತರರು ಭೇಟಿ ನೀಡಿದ ಬಳಿಕವೂ ಯಾವುದೇ ಬದಲಾವಣೆಗಳಾಗಿಲ್ಲ. ಆದರೆ ಅವರ ಭೇಟಿಯಿಂದ ಧೈರ್ಯ ಬಂದಿದೆ ಎಂದಿ ದ್ದಾನೆ.

ಚಿಕಿತ್ಸೆಗಾಗಿ ಮಂಗಳೂರಿಗೆ ಬಂದು ಕಂಗಾಲಾದ ಯುವಕ

Posted by JAYAKIRANA Kirana on | 0 comments | Leave a comment...

ಮಂಗಳೂರು: ಒಂದೆಡೆ ಒಂಟಿ ತನ, ಇನ್ನೊಂದೆಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಆನೆಕಾಲು ರೋಗದಿಂದಾಗಿ ೯೬ಕೆಜಿ ಭಾರವಿ ರುವ ಕಾಲಿನ ಸಮಸ್ಯೆ. ಇವುಗಳಿಂದ ಮುಕ್ತಿ ಪಡೆಯುವ ಉದ್ದೇಶದಿಂದ ಚಿಕಿತ್ಸೆಗಾಗಿ ಮಂಗಳೂರಿಗೆ ಬಂದು ಹಣವಿಲ್ಲದೆ ಕಂಗಾಲಾಗಿರುವ ಯುವಕನ ವ್ಯಥೆಯಿದು.
ಈತನ ಹೆಸರು ವಿಶ್ವನಾಥ. ಈಗಿನ್ನೂ ೨೪ರ ಹರೆಯ. ದಾವಣಗೆರೆ ದೇವನಹಳ್ಳಿ ನಿವಾಸಿ. ತಂದೆ, ತಾಯಿ ಯಾರೂ ಇಲ್ಲದ ಒಂಟಿ ಜೀವನ. ೮ ವರ್ಷವಾಗಿರುವಾಗಲೇ ಸಣ್ಣ ಮಟ್ಟಿನಲ್ಲಿ ಕಾಡಿದ ಆನೆಕಾಲು ರೋಗ ಈಗ ಗಂಭೀರ ರೂಪ ತಾಳಿದೆ. ಎಷ್ಟರ ಮಟ್ಟಿಗೆ ಎಂದರೆ ಈತನ ಎರಡು ಕಾಲುಗಳ ಭಾರ ಬರೋಬ್ಬರಿ ೯೬ ಕೆಜಿ ಇದೆ. ಕಾಲಿನ ಭಾರದಿಂದ ಕಂಗೆಟ್ಟ ಈತ ನೋವಿನಿಂದಾಗಿ ನಡೆದಾ ಡಲೂ ಆಗದೆ ಪರಿತಪಿಸುತ್ತಿದ್ದಾನೆ.
ಹಲವಾರು ವೈದ್ಯರಲ್ಲಿ ಮದ್ದು ಮಾಡಿದರೂ ಫಲಿತಾಂಶ ಮಾತ್ರ ಶೂನ್ಯ. ಕಾಸರಗೋಡು ಆಯು ರ್ವೇದಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುತ್ತಾರೆ ಎಂದು ತಿಳಿದ ವಿಶ್ವನಾಥ ೨೫ ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದಾನೆ. ಆಸತ್ರೆಗೆ ಹೋದಾಗ ಅಲ್ಲಿ ೧.೫೦ಲಕ್ಷ ಹಣ ಬೇಕು ಎಂದಿದ್ದಾರೆ. ಅದಾಗಲೇ ಕೈಯಲ್ಲಿದ್ದ ಹಣವೂ ಖಾಲಿಯಾಗಿದೆ. ವಾಪಸ್ ಊರಿಗೆ ಹೋಗಲು ಹಣವಿಲ್ಲದ ಕಾರಣ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡಿ ಲಾಡ್ಜೊಂದರಲ್ಲಿ ಉಳಿದುಕೊಂ ಡಿರುವ ಆತನ ಚಿಕ್ಕಪ್ಪನ ಮಗ ರವಿ ಕುಮಾರ್ ಹಾಗೂ ಇತರ ಏಳು ಮಂದಿಯ ಜತೆ ವಿಶ್ವನಾಥನೂ ಉಳಿದು ಕೊಂಡಿದ್ದಾನೆ. ಈತನ ದುಸ್ಥಿತಿ ಕಂಡ ರಿಕ್ಷಾ ಚಾಲಕರೊಬ್ಬರು ಯುವಕನಿಗೆ ದೈರ್ಯ ನೀಡಿ, ದ.ಕ.ಜಿಲ್ಲೆಯ ಜನರು ಅದರಲ್ಲೂ ಜಯಕಿರಣ ಪತ್ರಿಕೆಯ ಓದುಗರು ಹೃದಯವಂತರಾಗಿದ್ದು ತನ್ನ ದಯನೀಯ ಸ್ಥಿತಿ ಕಂಡು ಮರುಗಿ ಚಿಕಿತ್ಸೆಗೆ ಸಹಾಯ ಮಾಡುವರೆಂಬ ವಿಶ್ವಾಸದಲ್ಲಿ ಪತ್ರಿಕಾ ಕಚೇರಿಗೆ ಕರೆ ತಂದು ಮಾಹಿತಿ ನೀಡಿದ್ದಾರೆ. ಈತನಿಗೆ ಸಹಾಯಹಸ್ತ ಚಾಚಲು ಬಯಸು ವವರು ಸಿಂಡಿಕೇಟ್ ಬ್ಯಾಂಕ್, ದೇವರಹಳ್ಳಿ ಶಾಖೆಯ ೧೯೧೨೨೨೦೦೦೫೬೮೩೦ ಈ ನಂಬರಿಗೆ ಹಣ ಜಮಾಯಿಸಬಹುದು. ಅಥವಾ ಆತನ ಮೊಬೈಲ್ ೯೬೧೧೬೨೮೧೨೮ ನಂಬರಿಗೆ ಕರೆ ಮಾಡಬಹುದು.
ಜಯಕಿರಣ ಮನವಿ
ಆನೆಕಾಲು ರೋಗದಿಂದ ನಡೆಯಲೂ ಆಗದಿರುವ ಸ್ಥಿತಿ ತಲುಪಿರುವ ವಿಶ್ವನಾಥನಿಗೆ ಪತ್ರಿಕೆಯ ಸಹೃದಯಿ ಓದುಗರು, ಅಭಿಮಾನಿಗಳು ಕೈಲಾದ ಸಹಾಯ ಮಾಡ ಬೇಕೆಂದು ಜಯಕಿರಣ ಕಳಕಳಿಯ ಮನವಿ ಮಾಡಿದೆ.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (82) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4036) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2490) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (37) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (110) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (259) ln (1) lnews (3666) lokayukta (3) madikeri (1) maleria (1) mangalore (575) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (410) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (270) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (792) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (947) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (45) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)