ಡಿಯರ್ ಮಿಚ್ಚಿ,
ಪ್ರೇಮಿಗಳು ದೂರ ಇದ್ದಷ್ಟು ಮನಸ್ಸಿಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಹೆಚ್ಚೆಚ್ಚು ನೆನಪಾಗುತ್ತಾರೆ. ಪ್ರೀತಿ ಹೆಮ್ಮರವಾಗುತ್ತಾ ಹೋಗುತ್ತೆ ಅನ್ನೋ ಮಾತು ಎಷ್ಟೊಂದು ನಿಜ ಅಲ್ವಾ ಗೆಳತಿ, ನಿನ್ನಮುದ್ದು ಮುಖ ನೋಡದೆ ಎರಡು ತಿಂಗ ಳಾಗುತ್ತಾ ಬಂತು. ಆದರೆ ಆ ಎರಡು ತಿಂಗಳಲ್ಲಿ ನಿನ್ನ ನೆನಪಾಗದ ದಿನವಿಲ್ಲ. ಆ ನಿನ್ನ ಮಧುರವಾದ ಮಾತುಗಳು ನನ್ನ ಕಿವಿಗೆ ಕೇಳಿಸದಂತೆ ಭಾಸವಾಗದ ಕ್ಷಣಗಳಿಲ್ಲ. ನೀ ಕೊಟ್ಟ ಸಿಹಿಮುತ್ತು, ಆ ಮೊದಲ ಸ್ಪರ್ಶ, ನನ್ನನ್ನು ಕಾಡದ ನಿಮಿಷಗಳಿಲ್ಲ ಕಣೇ. ಕಳೆದೊಂದು ವರುಷಗಳಿಂದ ನನ್ಗೋಸ್ಕರ ಪ್ರೇಮಗಂಗೆ ಯನ್ನು ಹರಿಸಿದವಳು ನೀನು. ಜಗತ್ತಿನಲ್ಲಿ ಇನ್ನು ಮುಂದೆ ನನಗ್ಯಾರೂ ಕೊಡಲಿಕ್ಕಾಗದಷ್ಟು ಪ್ರೀತಿಯ ಅಮೃತ ವನ್ನು ಕುಡಿಸಿದವಳು. ಎಲ್ಲ ನೋವುಗಳನ್ನು ನನಗೋಸ್ಕರ ನಮ್ಮ ಪ್ರೀತಿಗೋಸ್ಕರ ಸಹಿಸಿಕೊಂಡವಳು ನೀನು. ಇಷ್ಟೆಲ್ಲಾ ಮಾಡಿದ ನೀನು ನನಗೆ ನೆನಪಾಗದೇ ಇರುವುದಾದರೂ ಹೇಗೆ ಪುಟ್ಟಾ... ನೀನು ನನ್ನ ಜೀವದ ಕಣಕಣಗಳಲ್ಲೂ ಸೇರಿಕೊಂಡು ಬಿಟ್ಟಿದ್ದಿಯಾ...
ನಮ್ಮ ಪ್ರೀತಿಯ ಆರಂಭ ನೆನಪಿಸಿಕೊಂಡಾಗ ಎಷ್ಟೊಂದು ಖುಷಿಯಾಗುತ್ತೆ ಗೊತ್ತಾ. ಚಿನ್ನೂ. ಮರು ಭೂಮಿಯಲ್ಲಿ ಸಿಕ್ಕ ನೀರ ಹನಿಯಂತೆ, ಬೇಸಿಗೆಯಲ್ಲಿ ಬೀಸಿದ ತಂಗಾಳಿಯಂತೆ, ಆ ನೆನಪು ಮತ್ತೆ ಮತ್ತೆ ಬೇಕು ಅನಿಸುತ್ತೆ ಕಣೇ. ಆ ನಿನ್ನ ಮುದ್ದು ಮುಖ ಚಂದ್ರನನ್ನೇ ಒಂದು ಕ್ಷಣ ನಾಚಿಸುವ ಬೆಳದಿಂಗಳಿನಂತಹಾ ಕಣ್ಣುಗಳು. ಮುತ್ತಿನಂಥಾ ಮಾತು. ಫೋನ್‌ನಲ್ಲಿ ಆಗಾಗ ನನಗೆ ಐ ಲವ್ ಯೂ ಹೇಳುತ್ತಿದ್ದ ರೀತಿ ಎಲ್ಲವೂ ನಂಗಿಷ್ಟ ಕಣೇ. ಮಧ್ಯ ರಾತ್ರಿಯಲ್ಲಿ ನಾನು ಪ್ರಪೋಸ್ ಮಾಡಿದ್ದು, ನೀನು ಖುಷಿ ಯಿಂದ ಗ್ರೀನ್ ಸಿಗ್ನಲ್ ಕೊಟ್ಟದ್ದು. ನಮ್ಮಿಬ್ಬರ ಮೊದಲ ಭೇಟಿ. ಮೊದಲ ಸಲ ನನ್ನ ಗಟ್ಟಿಯಾಗಿ ಅಪ್ಪಿಕೊಂಡು ಕಣ್ಣುಗಳನ್ನು ಮುಚ್ಚುತ್ತಾ ನೀನು ನನಗೆ ಕೊಟ್ಟ ಆ ಸಿಹಿ ಮುತ್ತು ಕನಸಲ್ಲೂ ನನ್ನ ಎಷ್ಟೊಂದು ಕಾಡುತ್ತೆ ಗೊತ್ತಾ...
ಆದರೆ ವಿಪರ್ಯಾಸ ನೋಡು ಜಗತ್ತಿನ ಕಣ್ಣಿಗೆ ಪ್ರೇಮಿಗಳಾಗಿ, ದಂಪತಿಗಳಾಗಿ ಬಾಳುವ ಅದೃಷ್ಟ ನಮ ಗಿಲ್ಲ ಕಣೇ. ಪ್ರಪಂಚದ ಜನರ ಕಣ್ಣಿಗೆ ನೀನು ಯಾವ ತ್ತಿದ್ದರೂ ಇನ್ನೊಬ್ಬರಿಗೇ ಸೇರಬೇಕಾದೋಳು ಪುಟ್ಟಾ. ನಮ್ಮಿಬ್ಬರ ಪ್ರೀತಿ ನಮ್ಮ ಕುಟುಂಬವನ್ನು ಬೇರೆ ಮಾಡೋದು ಬೇಡ ಎಂದು ಅವತ್ತೇ ನಾವಿ ಬ್ಬರು ತೀರ್ಮಾನ ಮಾಡಿದ್ದೆವು ಅಲ್ವಾ?
ನನ್ನ ಪ್ರೀತಿಯ ರಾಜಕುಮಾರಿಯಾಗಿ ಎಂದೆಂದಿಗೂ ನೀನಿರುತ್ತಿ ಪುಟ್ಟಾ ಏಳೇಳು ಜನ್ಮಕ್ಕೂ ನನ್ನ ಪ್ರಾಣ ಸಖಿಯಾಗಿ ನಿನ್ನನ್ನೇ ಪ್ರೀತಿ ಮಾಡುವೆ...
ಇತೀ
ಪ್ರೀತಿಯ
ತಚ್ಚಿ
Tagged with
lekhana,
premakirana
ಬೊಳಂತೂರು ಕಂಬಳದಲ್ಲಿ ಈ ಕೋಣಗಳ ಭವಿಷ್ಯವನ್ನು ಕಾಣಬೇಕೆಂಬ ಆತುರ ಕಂಬಳ ಪ್ರಿಯ ರಲ್ಲಿತ್ತು. ಜಯರಾಮ ಶೆಟ್ರ ಕೋಣಗಳನ್ನು ಪಾಕಬೆಟ್ಟು - ಕಾಡಬೆಟ್ಟು ಕೋಣಗಳೊಂದಿಗೆ ಹೋಲಿಸಿ, ತುಲನೆ ಮಾಡುತ್ತಿದ್ದರು.
ಕಾಡಬೆಟ್ಟಿನ ಎ ಜೊತೆಯೊಂದಿಗೆ ಜಯರಾಮ ಶೆಟ್ರ ಕೋಣಗಳು ಗೆಲುವು ಸಾಧಿಸುವುದೆಂತೋ ಎಂದು ಜನರು ಕಾತುರದಿಂದ ಕಾದಿದ್ದರು.
ಹಾ! ಬುಡಿ ಎಂದು ಇಬ್ಬದಿಯ ಕರೆಗಳಲ್ಲಿ ಕಾಡ ಬೆಟ್ಟು ಎ ಮತ್ತು ಜಯರಾಮ ಶೆಟ್ರ ಕೋಣಗಳನ್ನು ಬಿಟ್ಟರು. ಕರೆಯಲ್ಲಿ ಮುಕ್ಕಾಲಂಶ ಕ್ರಮಿಸುವ ತನಕ ಕೋಣಗಳಲ್ಲಿ ಹಿಂದು ಮುಂದಿಲ್ಲದ ಓಟ ಸಾಗಿತ್ತು. ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತು ಫಲಿತಾಂಶ ನಿರೀಕ್ಷಿಸು ತ್ತಿದ್ದಾರೆ. ಜಯರಾಮ ಶೆಟ್ರ ನೀಲಪ್ಪ - ಗೋಪಾಲರು ಇನ್ನಷ್ಟು ರಭಸದ ಹೆಜ್ಜೆಯಿಕ್ಕಲಿದ್ದಾರೆ. ಹಾ! ಹಾಕಾರ! ಜಾಕಿ ಶೀನ ಮಡಿವಾಳರು ಹಗ್ಗ ಕೈತಪ್ಪಿ ಬಿದ್ದುಬಿಟ್ಟರು. ಓಟ ಸ್ಥಗಿತವಾಯಿತು. ಕ್ಷಣದಲ್ಲಿ ಕಾಡಬೆಟ್ಟಿನ ಕೋಣ ಗಳು ಮಂಜೊಟ್ಟಿಯೇರಿದವು. ಪ್ರೇಕ್ಷಕರಿಗಾದ ನಿರಾಶೆ ಹೇಳಲಸಾಧ್ಯ. ಎಲ್ಲರೂ ನಿರ್ಣಾಯಕವಾದ ಈ ಓಟ ವನ್ನು ಕಾಣಬಯಸಿದ್ದರು. ಪಾಕಬೆಟ್ಟು ಮತ್ತು ಕಾಡ ಬೆಟ್ಟಿನ ಕೋಣಗಳಿಗೆ ಸರಿಸಮವೆಂಬ ಭಾವನೆಯಿಂದ ನಿರೀಕ್ಷೆಗೆ ಫಲ ದೊರೆಯದೆ ಆತಂಕದಿಂದ ಪರಾಭವ ಗೊಂಡ ಕೋಣಗಳ ಬಗ್ಗೆ ಬೇಸರದಿಂದ ಜನ ಚದುರಿ ದರು. ಇನ್ನೊಂದು ಕಂಬಳದಲ್ಲಿ ಕಾಣುವ ಆಸೆಯಿಂದ ಮರಳಿದರು.
ಜಾಕಿ ಶೀನ ಮೂಲ್ಯರ ಮಾತು ನನಗೀಗಲೂ ಮರೆಯದೆ ಉಳಿದಿದೆ. ಜಯರಾಮ ಶೆಟ್ರ ಕೋಣಗಳ ರಹಸ್ಯ ತಿಳಿದವನಿಗೇ ಗೊತ್ತು. ಅನುಭವದಿಂದ ಹೇಳು ವುದಾದರೆ ಬಿಟ್ಟ ಕೋಣಗಳು ಓಡಲು ಕ್ರಮಿಸಿದಾಗ ಮತ್ತದರ ಕೋಣದ ಹಿಂದಕ್ಕೆ ಜಾಕಿಯಿರಬೇಕು. ಅರ್ಧ ಕಂಬಳಕ್ಕೆ ಬರುವಾಗ ಒಳಗಿನ (ಬಲದ) ಕೋಣದ ಹಿಂದೆ ಬಂದು ಸಂಜ್ಞೆ ಕೊಟ್ಟರೆ ಈ ಕೋಣಗಳ ಓಟ ಕಣ್ಣಿನ ಕಿಡಿ ಹಾರಿಸೀತು ಎನ್ನುತ್ತಾರೆ.
ಸಾಮಾನ್ಯ ಜಾಕಿಗಳಿಂದ ಕೋಣಗಳ ಹಿಂದೆ ಓಡ ಲಸದಳವಂತೆ. ಇದು ಜಾಕಿ ಶೀನಣ್ಣನ ಅನುಭವ ಸಿದ್ದ ಮಾತು.
ಈ ಎಲ್ಲ ರೀತಿಯ ವಿಮರ್ಶೆಗಳಿಂದ ೧೯೮೨ರ ಕಂಬಳಗಳಲ್ಲಿ ಇವುಗಳು ಪ್ರಥಮ ಶ್ರೇಣಿಯ ಓಟದ ಕೋಣಗಳೆಂಬ ಅಭಿಮಾನ ತಾಳಿದರೆ ತಪ್ಪಲ್ಲ. ಆದರೆ ಉತ್ತಮ ಸಾಕಣೆಯ ಈ ಕೋಣಗಳು ಇತರ ಕಂಬಳಗ ಳಲ್ಲಿ ರಭಸದ ಓಟದಲ್ಲಿದ್ದರೂ ಇವುಗಳ ಉಪಟಳ ಹದ್ದು ಮೀರಿತು. ಕಂಬಳ ಪ್ರಿಯರಿಗೆ ಇದರಿಂದ ನಿರಾಶೆಯಾಯಿತು.
೧೯೮೩ರ ಹೊತ್ತಿಗೆ ಈ ಕೋಣಗಳ ಹಾಯುವಿ ಕೆಯನ್ನು ಯಾವ ಹದ್ದುಬಸ್ತಿನಲ್ಲಿಡುವರೆಂದೂ, ತರ್ಜುಮೆ ಹೇಗಾಗುತ್ತದೆಂದು ಜನರು ಕಾದು ನೋಡು ತ್ತಿದ್ದರು. ಇವುಗಳ ಓಟದ ದೃಶ್ಯವನ್ನು ಕಾಣುವಾಸೆ ಕಂಬಳಾಭಿಮಾನಿಗಳಿಗೆ ಇತ್ತು.
ನೇಗಿಲಿನ ಮತ್ತು ಸೀನಿಯರ್ ಹಗ್ಗ ಎಂಬೆರಡು ಜೊತೆ ಕೋಣಗಳ ಯಜಮಾನರಾದ ಮುಂಡ್ಕೂರು ಜಯರಾಮ ಶೆಟ್ಟರು ಕಂಬಳ ಕ್ರೀಡೆಯ ಬಗ್ಗೆ ಬಹ ಳಷ್ಟು ವೆಚ್ಚ ಮಾಡಿದವರು. ಕಂಬಳ ಪ್ರೇಕ್ಷಕರಿಗೂ ಇವರ ಕೋಣಗಳೆಂದರೆ ಬಹಳ ಆಸಕ್ತಿ ಇತ್ತು.
Tagged with
kambula,
lekhana
ಅಶೋಕ್ ಹಲಾಯಿ, ಬಂಟ್ವಾಳ
ಬಂಡವಾಳಶಾಹಿಯ ಬೆಳವಣಿಗೆ, ಇತಿಮಿತಿ ಇಲ್ಲದ ಲಾಭದ ದುರಾಸೆ, ಆಸ್ತಿ ಮತ್ತು ಹಣ, ಎಲ್ಲ್ಲಾ ಧರ್ಮ, ದೈವ, ದೇವರುಗಳಿಗಿಂತಲೂ ಪ್ರಾಮುಖ್ಯ ಮತ್ತು ಶ್ರೇಷ್ಠ ಎಂಬ ಭಾವನೆಯ ಬೆಳವಣಿಗೆಯೇ ಅಧಃಪತನಕ್ಕೆ ಕಾರಣವೆಂದು ಬುದ್ದಿಯಿರುವವರ ಗಮನಕ್ಕೆ ಬರುತ್ತದೆ.
ಶಿಕ್ಷಣ ಕ್ಷೇತ್ರವಿಂದು ಬಂಡವಾಳಶಾಹಿಗಳ ಕೈಯಲ್ಲಿ ಕುಣಿಯುತ್ತಿದೆ. ಹೊಸ ಹೊಸ ಪದವಿಗಳ ಸೃಷ್ಟಿಯಾಗುತ್ತಿವೆ. ವ್ಯವಹಾರಕ್ಕೆಂದೇ ಅದರ ಅಧ್ಯಯನಕ್ಕಾ ಗಿಯೇ ವಿವಿಧ ಸರ್ಟಿಫಿಕೇಟು, ಸ್ಕೀಮುಗಳು ಮೂರು ವರ್ಷದ ಅವಧಿಗೆ ವ್ಯವಸ್ಥೆಗೊಳಿಸಲಾಗಿದೆ. ವೈಜ್ಞಾನಿಕ, ಎಲೆಕ್ಟ್ರಾನಿಕ್ಸ್, ಮ್ಯಾನೇಜ್‌ಮೆಂಟ್, ಕಂಪ್ಯೂ ಟರ್, ಕಟ್ಟಡ, ಯಂತ್ರ, ವಾಹನಕ್ಕೆ ಸಂಬಂಧಿಸಿದ ಇಂಜಿನಿಯರಿಂಗ್ ಕೋರ್ಸು. ಕಂಪ್ಯೂಟರ್ ಸಾಯನ್ಸ್, ಸಾಫ್ಟ್‌ವೇರ್ ಇತ್ಯಾದಿ ಹೊಸ ಹೊಸ ಹೆಸರಿನಿಂದ ಆಕರ್ಷಣೆಗೊಳಪಡಿಸಿ ಯುವಕ - ಯುವತಿಯರಿಗೆ ಯಾವುದನ್ನು ಆಯ್ಕೆ ಮಾಡಲಿ ಎಂಬ ಹಂತ ಬಂದು ಮುಟ್ಟಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ದುಡ್ಡು ಸುರಿಯವು ಬಂಡವಾಳ ಶಾಹಿಗಳು ಹೆಚ್ಚಿನ ಲಾಭ ಪಡೆಯುವ ಮೂಲ ಉದ್ದೇಶ ಹೊಂದಿ ರುವ ಕಾರಣ ಅಲ್ಲಲ್ಲಿ ಖಾಸಗಿ ಕಾಲೇಜುಗಳು ಅತ್ಯಾಧುನಿಕ ಶೈಲಿಯಿಂದ ಕಾಣುತ್ತವೆ. ಯುವ ಜನತೆಗೆ ನಿಜವಾಗಿ ದೊರೆಯಬೇಕಾದ ಶಿಕ್ಷಣ ಮುಂದಿನ ಬದುಕಿಗೆ ಆಧಾರವಾಗಿ ನಿಲ್ಲುವ ಶಿಕ್ಷಣ ಸಿಗುತ್ತಿದೆಯೇ ಯೋಚನೆ ಮಾಡಿ.
ತಾಂತ್ರಿಕ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಿರುವ ಕಾರಣ ಶೇಕಡಾ ೮೫ ಜನ ಇಂಜಿನಿಯರಿಂಗ್ ಮಾಡಿದರೆ ಅವರಿಗೆ ಉದ್ಯೋಗ ಎಲ್ಲಿ? ಹೊರದೇಶದಲ್ಲಿ ಸಿಗುತ್ತದೆಂಬ ಆಶಾಭಾವನೆಯಿಂದ ಕಲಿತರೂ ದೇಶ ಬಿಟ್ಟು ಹೊರಗೆ ಹೋದರೆ ಈತ ಕಲಿತ ವಿಷಯಕ್ಕೆ ಉದ್ಯೋಗ ದೊರಕದೆ, ಬೇರೆಯೇ ರೀತಿಯಲ್ಲಿ ಆ ದೇಶದ ಕೂಲಿಗಳಂತೆ ದುಡಿಯುವ ಸಂದರ್ಭಗಳು ಹೆಚ್ಚು. ಇದು ನೈಜ ಮತ್ತು ವಾಸ್ತವ.
ತಾನು ಕಲಿತ ಕಾಲೇಜಿನ ಆಡಳಿತ ವ್ಯವಸ್ಥೆ ಉದ್ಯೋಗ ದೊರಕಿಸಿ ಕೊಡು ವುದಿಲ್ಲ. ಕಲಿಯುವವರೆಗೆ ಮಾತ್ರ ಗಮನ. ನಂತರ ಅವರ ತಲೆಗೆ ಅವರ ಕೈ. ಲಕ್ಷಗಟ್ಟಲೆ ನೀಡಿ ಕಲಿತ ವಿದ್ಯೆಯಿಂದ ಆತನ ಹೆತ್ತ ತಾಯಿ - ತಂದೆಗೆ ಮತ್ತು ಇತರ ಸದಸ್ಯರಿಗೆ ಅನ್ನ ನೀಡಲಾಗದಿದ್ದರೆ. ಮೂಲಭೂತ ಅವಶ್ಯಕತೆ ಪೂರೈಸ ಲಾಗದಿದ್ದರೆ ಸಾಲ ಮಾಡಿ ತನ್ನ ಮಕ್ಕಳಿಗೆ ಕಲಿಸಿದ ತಂದೆ ತಾಯಿಯರ ಪರಿ ಸ್ಥಿತಿ ಯಾರಿಗೂ ಬೇಕಿಲ್ಲ. ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿ, ಉದ್ಯೋಗ ಸಿಗದೆ ಸಾಲ ಕಟ್ಟಲಾಗದ ಹೀನ ಸ್ಥಿತಿಯಲ್ಲಿ ಒಳಗೊಳಗೆ ದುಃಖಿಸುವ ಪೋಷಕರ ಪರಿಸ್ಥಿತಿ ಯಾವ ಶೈಕ್ಷಣಿಕ ಬಂಡವಾಳಶಾಹಿಗಳಿಗೂ ಬೇಕಾಗಿಲ್ಲ. ಬಂಡವಾಳಿ ಗರ ಬಂಡವಾಳವು ಇಮ್ಮಡಿಯಾಗಿ ಸಿಕ್ಕಿದರೆ ಅವರಿಗೆ ಅಷ್ಟೇ ಸಾಕು. ಯಾರು ಯಾರಿಗಾಗಿ ಕಣ್ಣೀರು ಸುರಿಸಬಲ್ಲರು? ಯಾರು ಯಾರ ಕಣ್ಣೀರು ಒರಸಬ ಲ್ಲರು? ಅವರವರೇ ಒರಸಿಕೊಳ್ಳಬೇಕು. ಎಷ್ಟು ದೊಡ್ಡ ಕೋರ್ಸು, ಪದವಿ ಪಡೆ ದವರೂ ಪರ್ಯಾಯವಾಗಿ ಏನಾದರೂ ಉದ್ಯೋಗ ಕಲ್ಪಿಸಿಕೊಳ್ಳಬೇಕು. ಅದು ಕೃಷಿಯೇ ಅಗಿರಬಹುದು. ಹೀಗೆ ಮಾಡದಿದ್ದರೆ ನಿರುದ್ಯೋಗ ಸೃಷ್ಟಿಯಾಗು ತ್ತದೆ. ಕುಟುಂಬ ಆಧಾರ ರಹಿತವಾಗುತ್ತದೆ. ಯುವ ಜನತೆ ಒಂದು ಸಮಸ್ಯೆ, ಸವಾಲಾಗಿ ಪರಿಣಮಿಸುತ್ತಾರೆ. ಇದರಿಂದ ಡಕಾಯಿತರು, ರೌಡಿಗಳು, ನಕ್ಸಲ್‌ರು ಹುಟ್ಟುತ್ತಾರೆ. ಉದ್ಯೋಗದಾತರನ್ನಾಗಿ ರೂಪಿಸಬೇಕಾದ ಶಿಕ್ಷಣ ಸಿಗಬೇಕು. ಕಲಿತು ಉದ್ಯೋಗ ಬೇಡುವ ಪರಿಸ್ಥಿತಿಗಿಂತ ಉದ್ಯೋಗ ಬೇಡಿದವರಿಗೆ ಕೊಡು ವವನಾಗಬೇಕು. ಬೇಡುವ ಕೈಗಳನ್ನೇ ಸೃಷ್ಟಿಸಿದ್ದೇವೆ. ಶಿಕ್ಷಣ ಬೇಡುವವರನ್ನು ಹೆಚ್ಚುಗೊಳಿಸಿ ನೀಡುವವರನ್ನು ಕಡಿಮೆಗೊಳಿಸಿದ ಕಾರಣ ನಿರುದ್ಯೋಗ ಎಂಬ ಪದ ಅನುಭವಿಸುವಂತಾಗಿದೆ.
ಕೃಷಿ ಆಧಾರಿತ ಕೋರ್ಸ್‌ಗಳು ಇದ್ದರೂ ಪ್ರಚಾರದ ಕೊರತೆಯಿಂದ ಕ್ಷೀಣಿ ಸುತ್ತಿದೆ. ಕೃಷಿ ಅವಲಂಬಿತರನ್ನಾಗಿಸದೆ ದೇಶದ ಅಭ್ಯುದಯವಿಲ್ಲ. ಕೃಷಿ ಕ್ಷೇತ್ರಕ್ಕೆ ಯುವ ಶಕ್ತಿ ಮನ ಮಾಡುವಂತೆ ಪ್ರೇರಣೆ ಸಿಗದಿದ್ದರೆ ಕೈಗಾರಿಕೆಗಳೇ ಸ್ಥಾಪಿ ಸುವ ನಿಟ್ಟಿನಲ್ಲಿ ಪ್ರೋತ್ಸಾಹ ಕೊಟ್ಟರೆ ಮುಂದೆ ಹಸಿವಿಗೆ ಏನನ್ನು ತಿನ್ನಬೇಕು? ಹಿಂದಿನ ಕಾಲದಲ್ಲಿ ಒಂದು ಉದ್ಯೋಗದ ಆಯ್ಕೆಯಲ್ಲಿ ಹೆಚ್ಚಿನ ಸಮಸ್ಯೆಗಳು ಇರು ತ್ತಿರಲಿಲ್ಲ. ಏಕೆಂದರೆ ಮಗನು ವಂಶಪಾರಂಪರ‍್ಯವಾಗಿ ಬಂದ ಉದ್ಯೋಗ ವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದನು. ಆದರೆ ಇತ್ತೀಚೆಗೆ ವಂಶಪಾರಂಪರ‍್ಯ ವೃತ್ತಿಗೆ ಮಕ್ಕಳು ಮನಮಾಡುವುದಿಲ್ಲ. ಕೃಷಿಕನ ಮಗ ಕೃಷಿಕನಾಗಲ್ಲ. ಹೊರ ದೇಶಕ್ಕೆ ಹೋಗಿ ಶ್ರೀಮಂತನಾಗುವ ಕನಸು ಕಾಣುತ್ತಾನೆ. ಪ್ರತಿಭಾ ಪಲಾಯನವು ನಮ್ಮ ದೇಶದ ಒಂದು ಸಮಸ್ಯೆ. ಪರದೇಶದ ಪ್ರೋತ್ಸಾಹಕರ ಉದ್ಯೋಗಗಳು ಮತ್ತು ಅತ್ಯುತ್ತಮ ಸೌಲಭ್ಯಗಳ ಭರವಸೆಯಿಂದ ಯುವಜನತೆ ದೇಶ ಬಿಟ್ಟು ಹೋಗು ವುದೇ ಆಶ್ಚರ್ಯವೇನಲ್ಲ.
‘ಕೆಲಸವಿಲ್ಲದ ಆಲಸ್ಯ ಮನಸ್ಸೊಂದು ದೆವ್ವದ ಮನೆ’ ಎಂಬ ನುಡಿಯುಂಟು. ಕೆಲಸ ಕೈಗಳಿಗೆ ನೀಡುವ ಜವಾಬ್ದಾರಿ ವ್ಯವಸ್ಥೆಯೆಲ್ಲಿದೆ. ಸರ್ಕಾರ, ಶಿಕ್ಷಣ, ಉನ್ನತ ಶಿಕ್ಷಣ, ಬದುಕಿಗೆ ಆಧಾರ ನೀಡುವ ಉದ್ಯೋಗ ದೊರಕಿಸಿಕೊಡುವಂತಹ ನೆಲೆ ಯಲ್ಲಿ ಯೋಚಿಸಿ ಯೋಜನೆ ರೂಪಿಸಬೇಕು. ಇಲ್ಲವಾದರೆ ಯುವ ಜನತೆ ಉದ್ಯೋಗ ವಿಲ್ಲದೆ ಅಡ್ಡದಾರಿಗೆ ಸಾಗುವ ಅಪಾಯವಿದೆ. ಕೃಷಿ ಕ್ಷೇತ್ರದಲ್ಲಿ ವಿಪುಲವಾದ ಉದ್ಯೋಗ ಸೃಷ್ಟಿಯ ಅವಶ್ಯಕತೆ ಇದೆ. ಕೃಷಿ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಪರಿಣಾಮಕಾ ರಿಯಾಗಬೇಕು. ಪರಮಹಂಸರ ನುಡಿಯೊಂದಿದೆ. ‘ಒಂದು ತಾಸು ಓದಿದರೆ ಎರಡು ತಾಸು ದುಡಿಯಿರಿ. ಮೂರು ತಾಸು ವಿಚಾರ ಮಾಡಿ ದುಡಿಮೆಯ ಪಾಠ ನಮ್ಮ ಮಕ್ಕಳಿಗೆ ನಾವು ಕಲಿಸದಿದ್ದರೆ ನಮ್ಮ ಮಕ್ಕಳು ಕೆಲಸಕ್ಕಾಗದ ಶಕ್ತಿ ಇಲ್ಲದ ಗೊಂಬೆಗಳಂತಾಗುತ್ತಾರೆ. ಕೃಷಿ ಚಟುವಟಿಕೆಯನ್ನೂ ನಮ್ಮ ಮಕ್ಕಳಿಗೆ ಪರಿಚಯಿಸ ಬೇಕು. ನೊಗ, ನೇಗಿಲು, ಗದ್ದೆ, ಎತ್ತು ಕೋಣ, ಭತ್ತ, ಅಕ್ಕಿ, ಉಳುಮೆ, ಭತ್ತದ ನಾಟಿ ಇತ್ಯಾದಿಗಳ ಹಾಗೂ ತರಕಾರಿ ಬೆಳೆಸುವುದು, ಹೂ ಗಿಡ, ತೆಂಗು, ಅಡಿಕೆ ಬಾಳೆ ಗಿಡ ಇತ್ಯಾದಿ ನೆಡುವ ವಿಧಾನ ಪರಿಚಯ ಮಾಡಿಸಬೇಕು.
ಗಾಂಧೀಜಿಯವರ ಮಾತಿನಂತೆ ಕಷ್ಟದ ಜೀವನವೇ ಶಿಸ್ತನ್ನು ಕಲಿಸುವ ಪಾಠ ಶಾಲೆ. ತಂದೆ ತಾಯಿ ಅನುಭವಿಸುವ ಸಾಂಸಾರಿಕ ತಾಪತ್ರಯ ಮಕ್ಕಳಿಗೆ ಕಾಣಿಸುವು ದಿಲ್ಲ. ಇದು ದೊಡ್ಡ ತಪ್ಪು. ಸಂಸಾರ ನಿಭಾಯಿಸುವ ಕಷ್ಟಗಳನ್ನು ಮಕ್ಕಳಿಗೂ ಕಾಣಿ ಸಬೇಕು. ಅವರೂ ಮುಂದೆ ಮದುವೆಯಾಗಿ ಸಂಸಾರ ನಿಭಾಯಿಸುವವರಾಗಿ ತಯಾರಾಗಬೇಕು. ಇಲ್ಲವಾದಲ್ಲಿ ಸಮಸ್ಯೆ ಬಂದಾಗ ವಿಚಲಿತರಾಗುವ ಸಾಧ್ಯತೆ ಇದೆ. ಮದುವೆಯು ಒಂದು ಶಿಕ್ಷಣ. ಅದು ಪ್ರೇಮವಿವಾಹವಾಗಲಿ, ಏನೇ ಆಗಲಿ ವಿವಾಹ ಶಿಕ್ಷಣ, ಸಂಸ್ಕಾರ ಎಂಬುದನ್ನು ಅರ್ಥವಿಸಬೇಕು. ವಾಸ್ತವ ಮರೆಮಾಚಿ ಕಾಲ್ಪನಿಕ ವಿಚಾರ ವೈಭವೀಕರಿಸುವ ಶಿಕ್ಷಣ ಮಕ್ಕಳನ್ನು ಗಟ್ಟಿಗೊಳಿಸಲಾರದು. ಶೈಕ್ಷಣಿಕವಾಗಿ ದೇಶದೊಳಗಿರುವ ಅತ್ಯಾಧುನಿಕ ಉನ್ನತ ಶಿಕ್ಷಣ, ಪದವಿ, ಪ್ರೌಢ, ಪ್ರಾಥಮಿಕ ಶಾಲೆಗಳ, ಸಂಸ್ಥೆಗಳಲ್ಲಿ ಪಾಠ ಪ್ರವಚನದ ವಿಧಾನದಲ್ಲಿ ಬದಲಾವಣೆ ಆಗಬೇಕಾಗಿದೆ. ಅಂಕಗಳೇ ಆಧಾರ ಎಂಬುದನ್ನು ವೈಭವೀಕರಿಸದೆ ಅಂಕದ ಬದಲು ಅನುಭವ ಮುಖ್ಯವಾಗಬೇಕು. ಇವತ್ತು ಅಂಕವೇ ಆಧಾರವಾಗಿರುವ ಪರಿಸ್ಥಿತಿ ಎದುರಾಗಿದೆ. ಅಂಕವಿಲ್ಲದ ವಿದ್ಯಾರ್ಥಿಗಳಿಗೆ ಸೀಟು ಸಿಗಲ್ಲ. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ, ಶುಭಾಶಯಗಳು, ಕಡಿಮೆ ಅಂಕ ಪಡೆದವರಿಗೆ ಬೈಗುಳ, ಅವಮಾನ ಇದು ನಿಲ್ಲಬೇಕು. ಒತ್ತಡದ ಮೂಲಕ ಹೇರುವ ಶಿಕ್ಷಣದಿಂದ ಪ್ರಯೋ ಜನ ಶೂನ್ಯ. ಉದ್ಯೋಗ ಆಧಾರಿತ ಶಿಕ್ಷಣ ಅವರವರೇ ಸ್ವಂತ ಅಯ್ಕೆ ಮಾಡುವಂ ತಿರಬೇಕು.
ಎಲ್ಲಾ ಶಾಲೆಗಳಲ್ಲಿ ಕನ್ನಡಕ್ಕೆ ಪ್ರಥsಮ ಆದ್ಯತೆ. ಉನ್ನತ ಶಿಕ್ಷಣದಲ್ಲೂ ಕನ್ನಡ ವಿರಬೇಕು. ವಿಜ್ಞಾನ ವಿಭಾಗದಲ್ಲೂ ಕನ್ನಡ ಕಡ್ಡಾಯವಾಗಬೇಕು. ಕನ್ನಡ ನಾಡಿನ ಭಾಷೆ ಕನ್ನಡಿಗರಿಗೆ ಬೇಡವೆಂದಾದರೆ ಇಂಗ್ಲೀಷ್ ಮಾತನಾಡುವವರೇ ವಿದ್ಯಾವಂತ ರೆಂಬ ತಪ್ಪು ಕಲ್ಪನೆ ಹೋಗಬೇಕು. ಹೀಗೆ ಆಗಬೇಕಾದರೆ ಕನ್ನಡ ಕಲಿಕೆ. ಪ್ರಾ. ಪ್ರೌಢ, ಕಾಲೇಜು, ಉನ್ನತ ತಾಂತ್ರಿಕ ಶಿಕ್ಷಣ, ಒಟ್ಟು ಶಿಕ್ಷಣದ ಎಲ್ಲಾ ಮಜಲುಗಳಲ್ಲಿ ಕನ್ನಡವಿರಬೇಕು. ಕನ್ನಡದಲ್ಲಿ ಅಂಕ ನೋಡಿ ಸೀಟು ಸಿಗುವ ಪರಿಸ್ಥಿತಿ ಎದುರಾಗಬೇಕು. ಆಗ ಕನ್ನಡ ಬೆಳೆಯುತ್ತದೆ. ಶಿಕ್ಷಣ ವ್ಯಾಪಾರೀಕರಣ ನಿಲ್ಲಬೇಕು. ಬಂಡವಾಳಿಗರ ಸೊತ್ತು ಶಿಕ್ಷಣವಾಗಬಾರದು.
Tagged with
chavadi
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೨೬ ವರ್ಷದ ಯುವಕ. ಕಳೆದ ಐದು ತಿಂಗ ಳಿಂದ ಒಬ್ಬಳನ್ನು ಇಷ್ಟಪಟ್ಟಿದ್ದೇನೆ. ಅವಳೂ ನನ್ನನ್ನು ಇಷ್ಟಪಟ್ಟು ನನ್ನ ಜೊತೆ ಸ್ನೇಹ ಬೆಳೆಸಿದ್ದಾಳೆ. ಆದರೆ ನಾವಿಬ್ಬರೂ ಪ್ರೀತಿಸು ತ್ತಿಲ್ಲ. ಆಕೆಯಲ್ಲಿ ನಾನು ಈ ಬಗ್ಗೆ ಕೇಳಿಯೂ ಇಲ್ಲ. ಆಕೆ ಮತ್ತು ನನ್ನ ಜಾತಿ ಬೇರೆ-ಬೇರೆ. ಆದರೆ ನನಗೆ ಈಗೀಗ ಆಕೆಯನ್ನು ಮದುವೆಯಾಗುವ ಮನಸ್ಸಾಗುತ್ತಿದೆ. ನಾನು ಆಕೆಯನ್ನು ಒಂದು ಬಾರಿ ಬೆಂಗಳೂರಿಗೆ ಹೋಗುವಾಗ ಬಸ್‌ನಲ್ಲಿ ಭೇಟಿ ಮಾಡಿದ್ದೆ. ಆ ಬಳಿಕ ನಮ್ಮ ನಡುವೆ ಗೆಳೆತನ ಉಂಟಾಗಿದೆ. ಆಕೆ ಬೆಂಗಳೂರಿ ನಲ್ಲಿ ಇದ್ದಾಳೆ. ಕಳೆದ ಎರಡು ತಿಂಗಳ ಹಿಂದೆ ನಾವು ಮಣಿಪಾಲ ದಲ್ಲಿ ಒಂದು ಬಾರಿ ಭೇಟಿ ಮಾಡಿದ್ದೇವೆ. ಬೀಚ್ ಸುತ್ತಾಡಿದ ನಾವು ಸಂಜೆಯ ವೇಳೆ ಒಟ್ಟಿಗೆ ರಾತ್ರಿ ಕಳೆಯುವ ಉದ್ದೇಶದಿಂದ ಅಲ್ಲಿನ ಲಾಡ್ಜ್ ಒಂದರಲ್ಲಿ ರೂಂ ಮಾಡಿಕೊಂಡು ಉಳಿದೆವು. ಈ ವೇಳೆ ಪರಸ್ಪರ ಒಪ್ಪಿಗೆಯಿಂದ ನಾಲ್ಕು ಬಾರಿ ಲೈಂಗಿಕ ಕ್ರಿಯೆ ನಡೆಸಿ ದ್ದೇವೆ. ನನಗೆ ಇದು ಮೊದಲ ಅನುಭವವಾಗಿತ್ತು. ಅವಳು ಕೂಡಾ ಮೊದಲ ಅನುಭವ ಎಂದೇ ಹೇಳಿದ್ದಾಳೆ. ನನಗೆ ಆಕೆಯಿಂದ ತುಂಬಾ ಖುಷಿ ಸಿಕ್ಕಿದೆ. ಆದರೆ ಈಗ ಆಕೆ ನನ್ನ ಜೊತೆ ಮಾತಾಡು ವುದು ಕಡಿಮೆ ಮಾಡಿದ್ದಾಳೆ ಎಂದೇ ಅನಿಸುತ್ತಿದೆ. ನನ್ನ ಮೆಸೇಜ್ ಗಳಿಗೆ ಬೇಗನೆ ರಿಪ್ಲೈ ಮಾಡುವುದೂ ಇಲ್ಲ. ಈ ಬಗ್ಗೆ ಆಕೆಯನ್ನು ಕೇಳಿದ್ದಕ್ಕೆ ಆಕೆ ಹಾಗೇನೂ ಇಲ್ಲ. ಟೈಂ ಸಿಗುತ್ತಿಲ್ಲ ಎಂದು ಸುಮ್ಮ ನಾಗುತ್ತಾಳೆ. ಆದರೆ ಆಕೆ ಬೇರೆ ಯಾರದ್ದೋ ಗೆಳೆತನ ಬೆಳೆಸಿದ್ದಾಳೆ ಎಂದೇ ಅನಿಸುತ್ತಿದೆ. ಕೆಲವೊಮ್ಮೆ ಆಕೆಯ ಮೇಲೆ ದ್ವೇಷ ಬೆಳೆಯು ತ್ತದೆ. ನಾನು ಆಕೆಯನ್ನು ಇಷ್ಟಪಟ್ಟಿರುವುದರಿಂದ ನನಗೆ ಬಿಡಲು ಮನಸ್ಸಿಲ್ಲ. ಆಕೆ ಕೆಲವು ದಿನಗಳ ಹಿಂದೆ ನನ್ನಂತೆಯೇ ಆಕೆಗೆ ಇನ್ನೊಬ್ಬ ಬಾಯ್‌ಫ್ರೆಂಡ್ ಇರುವುದಾಗಿ ಹೇಳಿದ್ದಾಳೆ. ಆದರೆ ಅವರ ನಡುವಿನ ಸಂಬಂಧ ಏನು ಎನ್ನುವುದನ್ನು ಮಾತ್ರ ಆಕೆ ಹೇಳಿಲ್ಲ. ಆಕೆ ನನಗೆ ದ್ರೋಹ ಮಾಡಿದ್ದಾಳೆ ಎಂದೇ ನನ್ನ ಮನಸ್ಸು ಹೇಳುತ್ತಿದೆ. ನನಗೆ ಆಕೆಯ ನೆನಪಿನಿಂದ ಹೊರಗೆ ಬರಲಾಗುತ್ತಿಲ್ಲ. ನಾನು ಆಕೆಗೆ ಈಗ ಪ್ರೀತಿಸುತ್ತಿರುವ ವಿಷಯ ಹೇಳಿಯೂ ಆಕೆ ಆತನ ಜೊತೆ ಸಂಬಂಧ ಹೊಂದಿದ್ದರೆ ನಾನು ಮೋಸ ಹೋದಂತಾಗುವುದಿಲ್ಲವೇ? ನಾನು ಇದರಿಂದ ತುಂಬಾ ನೊಂದಿದ್ದೇನೆ. ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನೀವು ಬೇಕು ಬೇಕೆಂದೇ ಸಮಸ್ಯೆಯನ್ನು ಮೈಗೆಳೆದುಕೊಳ್ಳುವ ಯತ್ನ ದಲ್ಲಿದ್ದೀರಿ. ನೀವು ಬೆಂಗಳೂರಿಗೆ ಹೋಗುವ ವೇಳೆ ಗುರುತು ಪರಿಚಯವಿಲ್ಲದ ಹುಡುಗಿಯ ಜೊತೆ ಸ್ನೇಹ ಬೆಳೆಸಿರುವುದು ಸರಿಯಲ್ಲ. ಅಷ್ಟು ಮಾತ್ರವಲ್ಲದೆ ಆಕೆಯನ್ನು ಮಣಿಪಾಲಕ್ಕೆ ಕರೆ ದೊಯ್ದು ಆಕೆಯ ಒಪ್ಪಿಗೆ ಇರಲಿ, ಇಲ್ಲದೇ ಇರಲಿ ಸೆಕ್ಸ್ ನಡೆಸಿ ದ್ದೀರಿ. ಇಲ್ಲಿ ಆಕೆಯ ಜೊತೆ ಸುರಕ್ಷಿತ ಸೆಕ್ಸ್ ನಡೆಸಿದ್ದರೆ ಯಾವುದೇ ಸಮಸ್ಯೆಯಿಲ್ಲ. ಆದರೆ ಯಾರನ್ನೂ ನೋಡಲು ಅಂದವಾಗಿ ದ್ದಾರೆ ಎಂದ ಮಾತ್ರಕ್ಕೆ ಅವರು ಒಳ್ಳೆಯವರು ಎಂದು ತೀರ್ಮಾ ನಿಸಲು ಆಗದು. ಆಕೆಗೆ ನಿಮ್ಮ ಹಾಗೆಯೇ ಬೇರೆ ಬಾಯ್ ಫ್ರೆಂಡ್‌ಗಳಿದ್ದಾರೆ ಎಂದರೆ ಆಕೆ ಬಸ್‌ನಲ್ಲಿ ಸಂಚರಿಸುವಾಗ ಗುರುತು-ಪರಿಚಯವಿಲ್ಲದವರ ಜೊತೆ ಸ್ನೇಹ ಬೆಳೆಸುವ ಖಯಾಲಿ ಹೊಂದಿರುವ ಸಾಧ್ಯತೆಯೂ ಇದೆ. ಹೀಗಿರುವಾಗ ಆಕೆಯನ್ನು ಜೀವನ ಸಂಗಾತಿಯಾಗಿ ಸ್ವೀಕರಿಸುವ ಮುನ್ನ ಆಕೆಯ ಪೂರ್ವಾ ಪರ ತಿಳಿಯಿರಿ. ಆ ಬಳಿಕ ಆಕೆಗೆ ನೀವು ಪ್ರೀತಿಸುವ ವಿಚಾರ ತಿಳಿಸಿ. ನಿಮಗೆ ಆಕೆ ಜೀವನ ಪರ್ಯಂತ ನಿಮ್ಮ ಜೊತೆಗಿರ ಬೇಕು ಎಂಬ ಬಯಕೆ ಇದೆ. ಆದರೆ ನೀವು ಇಷ್ಟಪಟ್ಟ ಹುಡುಗಿ ‘ಟೈಂ ಪಾಸ್ಗಾಗಿ ಹುಡುಗರ ಹಿಂದೆ ಬೀಳುವವಳು. ಸತ್ಯ ವನ್ನು ಕಣ್ಣಾರೆ ಕಾಣದೆ ಆಕೆಯ ಮೇಲೆ ಸಂಶಯ ಪಡುವುದೂ ಸರಿಯಲ್ಲ. ಯಾವುದಕ್ಕೂ ಅವಸರ ಪಡಬೇಡಿ. ಉದ್ವಿಗ್ನತೆಗೆ ಒಳಗಾಗಿ ಕೆಟ್ಟದ್ದನ್ನು ಚಿಂತಿಸಬೇಡಿ. ಯಾರನ್ನಾದರೂ ಪ್ರೀತಿ ಸುವ ಮುನ್ನ ಆ ಪ್ರೀತಿಯನ್ನು ಪಡೆಯಲು ನಾವು ಯೋಗ್ಯರೇ ಅಥವಾ ಆ ಪ್ರೀತಿಗೆ ಅವರು ಯೋಗ್ಯರೇ ಎಂದು ಪರೀಕ್ಷಿಸ ಬೇಕು. ಆಕೆ ನಿಮ್ಮ ಅಭಿರುಚಿಗೆ ಸರಿಹೊಂದುವುದಿಲ್ಲವಾದಲ್ಲಿ ಆಕೆಯನ್ನು ಮರೆತು ನಿಮ್ಮಷ್ಟಕ್ಕೆ ನೀವಿರಿ.
Tagged with
gupta
ಮೇಷ : ಮನೆಯಲ್ಲಿ ನೆಮ್ಮದಿಯಿಂದ ದಿನ ಕಳೆಯುತ್ತೀರಿ.
ವೃಷಭ : ಸಂಘ ಸಂಸ್ಥೆಯಿಂದ ಗೌರವ ಸಿಗುತ್ತದೆ.
ಮಿಥುನ : ಉದ್ಯೋಗದಲ್ಲಿ ಒತ್ತಡ ಜಾಸ್ತಿ ಇರುತ್ತದೆ.
ಕರ್ಕಾಟಕ : ಭೂಮಿ, ವಾಹನ ಖರೀದಿಸುವ ಸಾಧ್ಯತೆ ಇದೆ.
ಸಿಂಹ : ಪ್ರಯತ್ನಿಸಿದ ಕೆಲಸದಲ್ಲಿ ಜಯ ದೊರೆಯತ್ತದೆ.
ಕನ್ಯಾ : ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ತುಲಾ : ಉದ್ಯೋಗ ವ್ಯವಹಾರದಲ್ಲಿ ಲಾಭ ಇರುತ್ತದೆ.
ವೃಶ್ಚಿಕ : ವಾಹನ, ಯಂತ್ರಗಳಿಂದ ವ್ಯವಹಾರವನ್ನು ಮಾಡುತ್ತೀರಿ.
ಧನು : ದೂರ ಪ್ರಯಾಣ ಮಾಡುತ್ತೀರಿ.
ಮಕರ : ಸಾಲದಿಂದ ತೊಂದರೆಯನ್ನು ಅನುಭವಿಸುತ್ತೀರಿ.
ಕುಂಭ : ಮಕ್ಕಳಿಂದ ಹಣಕಾಸಿನ ನಷ್ಟ ಆಗುತ್ತದೆ.
ಮೀನ : ಗೆಳೆಯರ ಆಗಮನದಿಂದ ಸಂತೋಷ ಇರುತ್ತದೆ.
Tagged with
bhavishya
ಮೂಡಬಿದ್ರೆ: ಹೊಟೇಲಿಗೆ ವೇಟರ್, ಹೆಲ್ಪರ್, ದೋಸಾವಾಲಾ ಮತ್ತು ಜೂಸ್ ಮೇಕರ್ ಬೇಕು ೯೮೪೫೯೮೨೬೨೫.
ಮೂಡಬಿದ್ರೆ: ಮೊಬೈಲ್ ಅಂಗಡಿಗೆ ಯುವಕರು ಬೇಕು ೯೯೦೨೦೭೧೫೪೯.
ಪಡುಬಿದ್ರೆ: ಎಲೆಕ್ಟ್ರಾನಿಕ್ಸ್ ಅಂಗಡಿಗೆ ಸೇಲ್ಸ್ ಮ್ಯಾನ್, ಎಕೌಂಟೆಂಟ್, ಡೋರ್‌ಕೀಪರ್, ಡ್ರೈವರ್ ಬೇಕು ೯೮೪೫೮೮೪೫೭೪.
ಮಂಗಳೂರು: ಪ್ರಸಿದ್ಧ ಡಿಜಿಟಲ್ ಶಾಪ್‌ಗೆ ಫೋಟೋಶಾಪ್, ಕೊರಲ್ ಡ್ರಾ ತಿಳಿದಿರುವ ಅನುಭವಸ್ಥ ಡಿಸೈನರ್ ಬೇಕು.. ೯೮೪೫೯೩೨೮೮೧
ಮಂಗಳೂರು : ಅಡುಗೆ ಅನಿಲ ಸಾಗಿಸುವ ಗಾಡಿಗೆ ಡ್ರೈವರ್ ಬೇಕು ೯೪೪೮೯೫೨೯೦೩.
ಮಂಗಳೂರು : ಬ್ಯಾಡ್ಜ್ ಹೊಂದಿರುವ ಅನುಭವಿ ಲಾರಿ ಡ್ರೈವರ್ ೯೯೭೨೩೭೧೭೨೩.
ಮಂಗಳೂರು : ಪಾನ್‌ಸ್ಟಾಲ್‌ಗೆ ಜನ ಬೇಕು ೯೦೬೦೯೩೨೩೫೧.
ಕೊಟ್ಟಾರ : ಕಾರಿಗೆ ಚಾಲಕ ಬೇಕು ೯೫೯೧೩೪೮೧೧೮.
ತೊಕ್ಕೊಟ್ಟು ಅಸುಪಾಸಿನವರು ಬ್ಯೂಟಿ ಪಾರ್ಲರ್‌ಗೆ ಬೇಕಾಗಿದ್ದಾರೆ. ೯೬೬೩೬೨೨೦೫೧
ಮಂಗಳೂರು : ಶೋರೂಂಗೆ ಆಫೀಸ್ ಬಾಯ್ & ಡೆಲಿವರಿ ಬಾಯ್ ಬೇಕು ೦೮೨೪೪೨೫೪೦೧೦.
ಮಂಗಳೂರು : ಕೊರಿಯರ್‌ಗೆ ಜನ ಬೇಕು ೯೯೦೦೪೩೪೯೪೮.
ಮೂಡುಬಿದ್ರೆ : ಮೊಬೈಲ್ ಅಂಗಡಿಗೆ ಯುವತಿ ಬೇಕು ೯೯೦೨೦೭೧೫೪೯.
ಮೂಡಬಿದ್ರೆ : ಟ್ಯುಟೋರಿಯಲ್ ಆಫೀಸ್ ಕೆಲಸಕ್ಕೆ ಯುವತಿ ಬೇಕು ೦೮೨೪೫೮೨೬೧೦೬೦.
ಮಂಗಳೂರು : ಅಡುಗೆ ಅನಿಲ ಸಾಗಿಸುವ ಗಾಡಿಗೆ ಡ್ರೈವರ್ ಬೇಕು ೯೪೪೮೯೫೨೯೦೩.
ಮಂಗಳೂರು : ಬಾಡ್ಜ್ ಹೊಂದಿರುವ ಅನುಭವಿ ಲಾರಿ ಡ್ರೈವರ್ ಬೇಕು ೯೯೭೨೩೭೧೭೨೩.
ಸುರತ್ಕಲ್ : ಸೇಲ್ಸ್ ಗರ್ಲ್ಸ್, ಬಾಯ್ಸ್ ಬೇಕು ೯೮೪೪೪೬೪೩೭೭.
ಉಡುಪಿ : ಸ್ಟುಡಿಯೋಗೆ ಯುವತಿ ಬೇಕು ೯೮೪೫೮೬೩೦೯೪.
ಎನ್‌ಐಟಿಕೆ : ಕಾಫಿ ಸ್ಟಾಲ್‌ಗೆ ಎಕೌಂಟ್ ಮತ್ತು ಸೇಲ್ಸ್‌ಗೆ ಯುವತಿ ಬೇಕು ೯೭೩೮೯೩೨೭೩೧.
ಉಡುಪಿ : ಲಾಂಡ್ರಿಗೆ ಜನ ಬೇಕು ೯೯೬೪೧೪೧೧೨೨.
ಮಂಗಳೂರು : ಫಾಸ್ಟ್‌ಫುಡ್ ಹೊಟೇಲಿಗೆ ವೇಟರ್ ಬೇಕು ೯೨೪೩೩೦೫೨೩೫.
ಫಳ್ನೀರ್ : ಕ್ಲಿನಿಕ್‌ಗೆ ಲೇಡಿ ರಿಸೆಪ್ಶೆನ್ ಬೇಕು ೯೬೮೬೭೦೯೪೮೦.
ಕುಳಾಯಿ : ಹೊಸಬೆಟ್ಟು ಟಿವಿಎಸ್ ಶೋ ರೂಂಗೆ ಹೆಲ್ಪರ್ ಮತ್ತು ಮೆಕಾನಿಕ್ ಬೇಕು ೯೯೪೫೬೧೯೧೧೦
ಮಂಗಳೂರು: ಹೊಟೇಲಿಗೆ ವೇಟರ್ ಬೇಕು ೯೮೮೬೦೯೨೭೨೬,
ತೊಕ್ಕೊಟ್ಟು : ಲೇಡಿಸ್ ಟೈಲರ್ ಬೇಕು ೯೦೬೦೧೪೪೫೫೦.
ಮಂಗಳೂರು : ಜ್ಯೂಸ್ ಅಂಗಡಿಗೆ ಹೆಲ್ಪರ್, ಕ್ಲೀನರ‍್ಸ್ ಬೇಕು ೯೨೪೩೩೦೨೪೪೬.
Tagged with
udyoga

ಲೆಕ್ಕಕ್ಕೆ ಸಿಗದಷ್ಟು ಖಾಸಗಿ ಚಾನೆಲ್‌ಗಳು ತಮ್ಮ ಟಿಆರ್ ಪಿಯನ್ನು ಏರಿಸುವ ಸಲುವಾಗಿ ಬಣ್ಣ-ಬಣ್ಣದ ಕಾರ್ಯ ಕ್ರಮಗಳನ್ನು ಪ್ರಸಾರ ಮಾಡುತ್ತವೆ. ದಿನಕ್ಕೊಂದು ಕಥಾವ ಸ್ತುವನ್ನೊಳಗೊಂಡ ಧಾರಾವಾಹಿಗಳು ಟಿ.ವಿ. ಪರದೆಯಲ್ಲಿ ಬರುತ್ತವೆ. ಹಿಂದೆ ಸಿನಿಮಾ ಮಾತ್ರ ರಿಮೇಕ್ ಮಾಡು ತ್ತಿದ್ದರೆ, ಇಂದಿನ ಬಹುತೇಕ ಧಾರಾವಾಹಿಗಳನ್ನು ತಮಿಳು ಇಲ್ಲವೇ ಹಿಂದಿ ಭಾಷೆಯಿಂದ ರಿಮೇಕ್ ಮಾಡಿರುತ್ತಾರೆ. ಒಂದೆರಡು ಎಪಿಸೋಡ್ ನೋಡುತ್ತಿದ್ದಂತೆ ಇದನ್ನು ಎಲ್ಲೋ ನೋಡಿದ್ದೇವಲ್ಲ ಎಂದು ಅನಿಸುತ್ತದೆ. ಯಾಕೆಂದರೆ ಕಥೆ ಯನ್ನು ಒಂಚೂರೂ ಬದಲಾಯಿಸದೆ ಕಲಾವಿದರನ್ನು ಮಾತ್ರ ಬದಲಿಸಿ ನಮ್ಮದು ಸ್ವಮೇಕ್ ಎನ್ನುವ ನಿರ್ದೇಶ ಕರು ಸಾಕಷ್ಟು ಮಂದಿ ಇದ್ದಾರೆ. ಆದರೆ ಈ ಧಾರಾವಾಹಿ ಗಳಲ್ಲಿ ಇರುವ ಸಾಮಾನ್ಯ ಅಂಶವೆಂದರೆ ಇವುಗಳಲ್ಲಿ ಇರು ವುದು ಯಾರದ್ದೋ ಮನೆಯೊಡೆಯುವ, ಇನ್ನಾ ರದ್ದೋ ಸಂಸಾರ ಹಾಳು ಮಾಡುವ ಕಥೆಯೇ ಆಗಿರು ತ್ತದೆ. ಈ ಧಾರಾವಾಹಿಗಳನ್ನು ನಮ್ಮ ಹೆಣ್ಮಕ್ಕಳು ಭಾರೀ ಇಷ್ಟಪಟ್ಟು ನೋಡುವುದರಿಂದ ಅವರಲ್ಲಿ ಸಂಸಾರ, ಮನೆ, ದಾಂಪತ್ಯ, ಸಮಾಜ ಇವೆಲ್ಲದರ ಬಗೆಗಿನ ಕಲ್ಪನೆ ನಿಧಾನ ಗತಿಯಲ್ಲಿ ಬದಲಾಗುತ್ತಿದೆ. ಮನೆಯಲ್ಲಿ ದ್ವೇಷದ ವಾತಾ ವರಣ, ಕ್ರೌರ್ಯ ಇತ್ಯಾದಿ ಬಿಂಬಿಸುವ ಧಾರಾವಾಹಿಗಳು ಮನಸ್ಸನ್ನು ಹಾಳುಮಾಡುವುದರ ಜೊತೆಗೆ ಮನೆಯನ್ನೂ ಒಡೆಯುತ್ತದೆ. ಕೆಲವರು ತಮ್ಮದೇ ಮನೆಯ ಕಥೆಯೆಂ ಬಂತೆ ಪಾತ್ರಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊ ಳ್ಳುವುದು ವಿಪರ್ಯಾ ಸವಲ್ಲದೇ ಇನ್ನೇನು? ಆದ್ದರಿಂದ ಇಂಥ ಟಿ.ವಿ. ಶೋಗಳು, ಧಾರಾವಾಹಿಗಳಿಂದ ಸಭ್ಯ ಹೆಣ್ಮಕ್ಕಳು ದೂರವಿರುವುದೇ ಲೇಸು. ಧಾರಾವಾಹಿಗಳ ವೀಕ್ಷಣೆಯನ್ನು ಹವ್ಯಾಸ ಮಾಡಬೇಡಿ. ಇದರಿಂದ ಸ್ವಸ್ಥ ಸಮಾಜ ನಿರ್ಮಾ ಣದ ಕನಸು ನನಸಾಗಲು ಸಾಧ್ಯವಿದೆ.
ಧರಿತ್ರಿ ಭಟ್, ಮಂಗಳೂರು
ಇಂಗ್ಲಿಷ್‌ಮಯವಾದ ಸರಕಾರಿ ವೆಬ್‌ಸೈಟ್‌ಗಳು
ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಜವಳಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಹಕಾರಿ, ಆಹಾರ, ಕೃಷಿ ಮೊದ ಲಾದ ಇಲಾಖೆಗಳು ಸೇರಿದಂತೆ ವೆಬ್‌ಸೈಟನ್ನು ಮಾಡಿರುವುದು ಬಹಳ ಸಂತೋಷದ ವಿಚಾರ. ಆದರೆ ಈ ವೆಬ್‌ಸೈಟಿನಲ್ಲಿ ಶೇ. ಮುಕ್ಕಾಲು ಭಾಗದಷ್ಟು ಸೈಟ್‌ಗಳಲ್ಲಿ ಕನ್ನಡ ದಲ್ಲಿ ಇರಬೇಕಾದ ಮಾಹಿತಿ ಮಾಯವಾಗಿ ಇಂಗ್ಲಿಷ್ ಭಾಷೆ ರಾರಾಜಿಸುತ್ತಿದೆ. ಕನ್ನಡವನ್ನು ಕೇವಲ ಬಳಕೆಗಾಗಿ ಮಾತ್ರ ಅಳವಡಿಸಿದ್ದಾರೆ. ಇದರಲ್ಲಿ ಇಲಾಖೆಯ ಹೆಸರು ಮಾತ್ರ ಕನ್ನಡ ದಲ್ಲಿವೆ. ಅದರ ಅಂತರ್ಯಕ್ಕೆ ಆಂಗ್ಲ ಭಾಷೆ ಯಿಂದ ಹೊಟ್ಟೆ ತುಂಬಿಸಿಕೊಂಡಿರುವ ಸರ ಕಾರಕ್ಕೆ ಕನ್ನಡದ ಬಗ್ಗೆ ಇರುವ ಕಾಳಜಿಯ ಪರಿಯನ್ನು ತಿಳಿಸುವಂತಿದೆ. ಕನ್ನಡಕ್ಕೆ ಪ್ರಾಶಸ್ತ್ಯ ನೀಡಬೇಕೆಂಬ ನಿಯಮದಿಂದ ಕನ್ನಡ ವನ್ನು ಮೊದಲು ಆರಂಭಿಸಿ, ಅದರ ಹೊಟ್ಟೆಗೆ ಇಂಗ್ಲಿಷ್ ಅನ್ನು ತುಂಬುತ್ತಿರುವ ಬಗ್ಗೆ ಸರಕಾರಿ ವೆಬ್ ತಾಣಗಳ ಕಡೆ ಸರ ಕಾರ ಸ್ವಲ್ಪ ಗಮನ ಹರಿಸಬೇಕಿದೆ.
ಇದಕ್ಕೆ ಕನ್ನಡಿಗರ ಒತ್ತಡವೂ ಹೆಚ್ಚಾಗ ಬೇಕು. ಕನ್ನಡ ಭಾಷೆ ಕೇವಲ ಮಾತ ನಾಡಲು ಮಾತ್ರ ಸೀಮಿತವಾಗದೇ ಅದರ ಬರವಣಿಗೆಯು ಸರಕಾರದ ಎಲ್ಲಾ ವೆಬ್ ತಾಣಗಳಲ್ಲಿ ಕಡ್ಡಾಯಗೊಳಿಸಬೇಕಿದೆ. ಇದ ರಿಂದ ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ಪಡೆಯಲು ಸಹಕಾರಿಯಾಗು ತ್ತದೆ. ರಾಜ್ಯದಲ್ಲಿ ಎಲ್ಲವೂ ಕನ್ನಡಮಯ ವಾಗಬೇಕು. ಕನ್ನಡ ಕಲಿಕೆ ಕಡ್ಡಾಯಗೊಳಿಸ ಬೇಕಿದೆ. ಇದರಿಂದ ಸಾರ್ವಜನಿಕರಿಗೆ ಸುಲ ಭವಾಗಿ ಮಾಹಿತಿ ಪಡೆಯಲು ಸಹಕಾರಿ ಯಾಗುತ್ತದೆ. ರಾಜ್ಯದಲ್ಲಿ ಎಲ್ಲವೂ ಕನ್ನಡ ಮಯವಾಗಬೇಕು. ಕನ್ನಡ ಕಲಿಕೆ ಕಡ್ಡಾ ಯವೆಂಬುದು ಶಾಲೆಗಳಿಂದ ಪ್ರಾರಂಭಿ ಸಲಿ. ಇದು ಕೋಟಿ-ಕೋಟಿ ಕನ್ನಡಿಗರ ಅಭಿಲಾಷೆ. ಇದಕ್ಕೆ ಸರಕಾರವೂ ಕನ್ನಡದಲ್ಲಿ ಆಡಳಿತವನ್ನು ನಡೆಸಲೂ ಮುಂದಾಯಿತು. ಆದರೆ ಇದುವರೆಗೂ ಸರಕಾರದ ಇಲಾ ಖೆಯ ಎಲ್ಲಾ ಅಂತರ್ಜಾಲ ತಾಣಗಳು ಕನ್ನಡಮಯವಾಗಿಲ್ಲ. ಹೆಸರಿಗೆ ಮಾತ್ರ ಇಲಾಖೆಗಳು ಕನ್ನಡದ ವೆಬ್‌ತಾಣಗಳನ್ನು ತೆರೆದಿವೆ. ಆದರೆ ಅವುಗಳನ್ನು ಸತತವಾಗಿ ಅಭಿವೃದ್ಧಿ ಪಡಿಸುತ್ತಿಲ್ಲ. ಆದ್ದರಿಂದ ಇದರ ಬಗ್ಗೆ ಸರಕಾರವು ಮುತುವರ್ಜಿ ವಹಿಸಿ ಸಮಗ್ರ ಮಾಹಿತಿಯನ್ನು ಅಂತರ್ಜಾಲವು ಕನ್ನಡದಲ್ಲಿ ಒದಗಿಸಬೇಕಾಗಿ ವಿನಂತಿ.
ಕನ್ನಡಾಭಿಮಾನಿ, ಪಡುಬಿದ್ರ್ರಿ
‘ಕಠಾರಿವೀರದ ಪ್ರತಿಭಟನೆಯಲ್ಲಿ ಡೀಲ್ ನಡೆದಿರಬಹುದೇ?
ಕಠಾರಿವೀರ ಚಿತ್ರದಲ್ಲಿ ಹಿಂದು ದೇವರಿಗೆ ಅವ ಹೇಳನ ಮಾಡಲಾಗಿದೆ, ಹಿಂದುತ್ವವನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಪ್ರತಿ ಭಟಿಸಿದ್ದು ಕೇವಲ ನಾಟಕವೇ ಎಂಬ ಅನುಮಾನ ಕಾಡುತ್ತಿದೆ. ಕೇವಲ ಒಂದೆರೆಡು ದಿನ ಪ್ರತಿಭಟಿಸಿ ಹಿಂದೂ ಸಂಘಟನೆಗಳು ಸುಮ್ಮನಾಗಿವೆ. ಆದರೆ ಚಿತ್ರ ಮಾತ್ರ ಯಾವುದೇ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕದೇ ಪ್ರದರ್ಶಿತಗೊಳ್ಳುತ್ತಿದೆ. ಈಗೆಲ್ಲಿದೆ ಹಿಂದೂ ಸಂಘಟನೆ? ಈ ಹಿಂದೆ ತನ್ನ ಕಥೆ ಎಂದು ಬೊಬ್ಬೆ ಹೊಡೆಯುತ್ತಿದ್ದ ನಿರಂಜನ್ ಶೆಟ್ಟಿಯೂ ಈಗ ಸುಮ್ಮನಿರುವುದನ್ನು ನೋಡಿದಾಗ ಇಲ್ಲೂ ಫಿಕ್ಸಿಂಗ್ ನಡೆದಿರಬಹುದೇ? ಮೂಲತಃ ಕರಾವಳಿಯವರಾದ ನಿರಂಜನ್ ಶೆಟ್ಟಿ ಹಿಂದೂ ಸಂಘಟನೆಗಳೊಂದಿಗೆ ಡೀಲ್ ನಡೆಸಿರಬ ಹುದೇ? ಉಪೇಂದ್ರ ಚಿತ್ರಗಳಿಗೆ ಅದ್ಬುತ ಕಲೆಕ್ಷನ್ ತಂದು ಕೊಡುವ ಕರಾವಳಿ ಜಿಲ್ಲೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಅಡ್ಡಿಯುಂಟು ಮಾಡುವ ಕೆಲಸ ನಡೆದಿರಬಹುದೇ? ಇಷ್ಟೆಲ್ಲಾ ಅನುಮಾನ ಮೂಡಲು ಕಾರಣವಿದೆ. ಚಿತ್ರದಲ್ಲಿ ಒಟ್ಟು ಏಳು ದೃಶ್ಯಗಳ ಮೇಲೆ ಹಿಂದೂ ಸಂಘಟನೆಗಳು ಆಕ್ಷೇಪ ಎತ್ತಿದ್ದವು. ಅವುಗಳಿಗೆ ಕತ್ತರಿ ಹಾಕದೆ ಪ್ರದರ್ಶನ ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದವು. ಆದರೆ ಈಗ ಕೇವಲ ಎರಡು ದೃಶ್ಯಗಳಿಗೆ ಮಾತ್ರ ಕತ್ತರಿ ಬಿದ್ದು, ಚಿತ್ರ ಯಶಸ್ವಿಯಾಗಿ ಪ್ರದ ರ್ಶನಗೊಳ್ಳುತ್ತಿದೆ. ಹೀಗಿರುವಾಗ ಈಗ ಯಾಕೆ ಹಿಂದೂ ಸಂಘಟನೆಗಳು ಪ್ರತಿಭಟಿಸುತ್ತಿಲ್ಲ? ಅಲ್ಲದೇ ಕರಾವಳಿ ಜಿಲ್ಲೆಯಲ್ಲಿ ಮಾತ್ರ ಈ ಮಟ್ಟಿನ ಪ್ರತಿಭಟನೆ ವ್ಯಕ್ತವಾಗಿದ್ದು. ಬೇರೆ ಕಡೆಗಳಲ್ಲಿ ತೋರಿಕೆಗೆ ಪ್ರತಿಭಟಿಸಿದ್ದಾರೆ ಅಷ್ಟೇ. ಅದೂ ಅಲ್ಲದೇ ಈ ಹಿಂದೆ ಇದೇ ಉಪೇಂದ್ರ ತನ್ನ ಚಿತ್ರಗಳಲ್ಲಿ ಗಣಪತಿ ದೇವರಿಗೆ ಅವಹೇಳನ ಮಾಡಿದ್ದ. ಇನ್ನೂ ಅನೇಕ ಚಿತ್ರಗಳಲ್ಲಿ ಇಂತಹ ಅದೆಷ್ಟೋ ಹಿಂದೂ ಧರ್ಮದ ಅವಹೇಳನಗಳಾಗಿವೆ. ಆಗ ಎಲ್ಲಿತ್ತು ಹಿಂದೂ ಸಂಘಟನೆಗಳು? ಇದನ್ನೆಲ್ಲಾ ಗಮನಿಸುವಾಗ ಈ ವಿವಾದದಲ್ಲಿ ಡೀಲ್ ನಡೆದಿರಬಹುದೇ ಎಂಬ ಅನುಮಾನ ವ್ಯಕ್ತ ವಾಗದೇ ಇರದು. ಅಲ್ಲದೇ ಮುನಿರತ್ನರೊಂದಿಗೆ ಡೀಲ್ ನಡೆದು ಪ್ರತಿಭಟನೆಗಳು ಹಳ್ಳಹಿಡಿ ದಿರಬಹುದೇ? ಈ ಬಗ್ಗೆ ಹಿಂದೂ ಸಂಘಟನೆಗಳೇ ಉತ್ತರಿಸಲಿ. ಒಂದು ವೇಳೆ ಹೀಗಾಗಿದ್ದರೆ ನಿಮ್ಮ ಪ್ರತಿಭಟನೆಗ ಸಮಸ್ತ ಹಿಂದೂಗಳ ಧಿಕ್ಕಾರವಿರಲಿ.
ಆರ್. ಎಸ್ ನಾಯಕ್, ಕೊಣಾಜೆ
ಹೆದ್ದಾರಿಯೋ? ಕೆಸರುಗದ್ದೆಯೋ?
ಮಾಣಿ-ಮೈಸೂರು ಹೆದ್ದಾರಿ ಸಂಚಾರ ಈ ವರ್ಷ ಬಿದ್ದ ತುಂತುರು ಮಳೆಗೆ ಕೆಸರುಗದ್ದೆಯಾಗಿದೆ ಎಂದರೆ ನೀವೇ ಯೋಚಿಸಿ, ಇನ್ನು ಮಳೆಗಾ ಲಕ್ಕೆ ಪರಿಸ್ಥಿತಿ ಯಾವ ರೀತಿಯಾಗ ಬಹುದೆಂದು? ಕೆಆರ್‌ಡಿಸಿಎಲ್ ಕಾಮಗಾರಿಯ ವೈಫಲ್ಯದಿಂದ ಈ ಭಾಗದಲ್ಲಿ ಮಳೆಗೆ ಇಡೀ ರಸ್ತೆ ಗಬ್ಬೆದ್ದು ಹೋಯಿತು, ನೂರಾರು ವಾಹನ ಗಳು ಕೆಸರಲ್ಲಿ ಸಿಕ್ಕಿಹಾಕಿಕೊಂಡವು. ಹಲವರು ಬಿದ್ದರು, ಇನ್ನೂ ಕೆಲವರು ಒದ್ದಾಡಿದರು. ಕೆಲವೊಂದು ವಾಹನ ಗಳು ರಸ್ತೆ ಕೆಸರು ಗದ್ದೆಯಾಗಿರುವು ದನ್ನು ಕೇಳಿಯೇ ಯಾವುದೋ ಮಾರ್ಗವಾಗಿ ಎಲ್ಲೆಲ್ಲೋ ಅಲೆದಾಡಿ ಕೊಂಡು ಹೋಗುವ ಪರಿಸ್ಥಿತಿ ಕಂಡುಬರುತ್ತಿದೆ. ಮಣ್ಣು ಹಾಕಿದ ರಸ್ತೆಗಳು ಮಳೆಗೆ ಕದಡಿ ಕೆಸರು ಕೊಂಪೆಯಾಗಿದೆ. ಮಳೆಗಾಲಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಮುಂದೆ ರಸ್ತೆ ಸಂಚಾರ ಹೇಗೆ ಎನ್ನು ವುದನ್ನು ಊಹಿಸುವುದಕ್ಕೂ ಸಾಧ್ಯ ವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ?
ಅನ್ವರ್, ಪುತ್ತೂರು
ಬಿಜೆಪಿ ಯುವ ಸಮಾವೇಶ ಯಾವ ಪುರುಷಾರ್ಥಕ್ಕಾಗಿ?
ಮೇ ೨೨ರಂದು ನಗರದ ಕೇಂದ್ರ ಮೈದಾನದಲ್ಲಿ ಬಿಜೆಪಿ ಯುವ ಜಾಗೃತಿ ಸಮಾವೇಶ ನಡೆಯಲಿದ್ದು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಹಿತ ಅನೇಕ ಗಣ್ಯರು ಆಗಮಿಸುವ ನಿರೀಕ್ಷೆಗಳಿವೆ. ಆದರೆ ಕರ್ನಾಟಕದಲ್ಲಿ ಬಿಜೆಪಿಯ ಹೀನಾಯ ಪರಿಸ್ಥಿತಿಯ ಮಧ್ಯೆ ಇಷ್ಟು ದೊಡ್ಡ ಜಾಗೃತಿ ಸಮಾವೇಶದ ಅವಶ್ಯ ಕತೆ ಇತ್ತೇ ಎನ್ನುವುದು ಈಗಿರುವ ಪ್ರಶ್ನೆ. ಯುವಕರಲ್ಲಿ ಪಕ್ಷದ ಬಗ್ಗೆ ಜಾಗೃತಿ ಮೂಡಿಸುವ ಬದಲು ಪಕ್ಷದಲ್ಲಿನ ಕೆಲ ಹಿರಿಯ ನಾಯಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರೆ ಒಳಿತು. ನನ್ನ ಪ್ರಕಾರ ಬಿಜೆಪಿಯ ಯುವ ಕಾರ್ಯಕರ್ತರು ಜಾಗೃತರಾಗಿಯೇ ಇದ್ದಾರೆ. ಈಗ ಅಜಾಗರೂಕರಂತೆ ವರ್ತಿಸುತ್ತಿರುವುದು ರಾಜ್ಯದ ಕೆಲ ಬಿಜೆಪಿಯ ಹಿರಿಯ ಮುಖಂಡರು. ಪ್ರಜ್ಞಾವಂತ ಬಿಜೆ ಪಿಯ ನಾಯಕ ನರೇಂದ್ರ ಮೋದಿಯವರನ್ನು ಮಂಗ ಳೂರಿಗೆ ಕರೆತಂದು ಭಾಷಣ ಮಾಡಿಸುವ ಬದಲು ಬೆಂಗಳೂರಿಗೆ ಕರೆದುಕೊಂಡು ಹೋಗಿ ಯಡಿಯೂ ರಪ್ಪ, ಈಶ್ವರಪ್ಪ, ಅನಂತ್‌ಕುಮಾರ್ ಸೇರಿದಂತೆ ಬಿಜೆ ಪಿಯ ರಾಜ್ಯ ನಾಯಕರಿಗೆ ಪಾಠ ಹೇಳಿಸಿದರೆ ಒಳ್ಳೆ ಯದು. ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಸರಿ ಯಾಗಿ ಗಮನಿಸಿದರೆ ಮತಿಭ್ರಮಣರಂತೆ ವರ್ತಿಸುತ್ತಿ ರುವುದು ಯಾರೆಂದು ಸ್ಪಷ್ಟವಾಗುತ್ತದೆ. ಸುಮ್ಮನೆ ಮಂಗ ಳೂರಿನಲ್ಲಿ ಯುವ ಕಾರ್ಯಕರ್ತರ ಶಕ್ತಿ ಪ್ರದರ್ಶನ ನಡೆಸುವ ಬದಲು ಹುಚ್ಚು ಕುದುರೆಗಳಂತಾಡುವ ಹಿರಿಯ ನಾಯಕರನ್ನು ಸರಿ ದಾರಿಗೆ ತನ್ನಿ. ಪೋಷಕರೇ ಸರಿ ಇಲ್ಲ ಎಂದ ಮೇಲೆ ಮಕ್ಕಳನ್ನು ಸರಿ ದಾರಿಗೆ ತರುವ ಕೆಲಸ ಮಾಡುವುದು ಸರಿಯಲ್ಲ. ಮೊದಲು ಪೋಷಕರನ್ನು ಅಂದರೆ ಹಿರಿಯ ನಾಯಕರನ್ನು ಸರಿ ದಾರಿಗೆ ತರುವ ಕೆಲಸ ಮಾಡಿ. ನಂತರ ಬೇಕಾದರೆ ಬಿಜೆಪಿ ಯುವ ಸಮಾವೇಶ, ಜಾಗೃತಿ ಸಮಾವೇಶ ಎಂಬ ಹಣ ಪೋಲು ಮಾಡುವ ಸಮಾವೇಶಗಳನ್ನು ಮಾಡಿ.
ವಿನ್ಯಾಸ್ ಆರ್, ಶೆಟ್ಟಿ, ಜೆಪ್ಪು
ಪತ್ರಿಕೋದ್ಯಮ ಈ ಮಟ್ಟಕ್ಕೆ ಇಳಿಯಿತೇ?
ಇತ್ತೀಚೆಗೆ ಕಿನ್ನಿಗೋಳಿಯಲ್ಲಿ ಹೋರ್ಡಿಂಗ್ ಒಂದು ಪ್ರತ್ಯಕ್ಷ ವಾಯಿತು. ಯಾವುದೋ ಪತ್ರಿಕೆಯ ಸಂಪಾದಕನಾಗಿ ಈತ ಆಯ್ಕೆ ಯಾಗಿದ್ದಾನೆಂದು ಸ್ಥಳೀಯ ವ್ಯಾಯಾಮ ಶಾಲೆಯೊಂದು ಶುಭಾಶಯ ಕೋರಿ ಹೋರ್ಡಿಂಗ್ ನೇತು ಹಾಕಿದ್ದರು. ಫ್ಲೆಕ್ಸ್ ತಂತ್ರಜ್ಞಾನ ಬಂದ ನಂತರ ಕುರಿ-ನರಿಗಳಿಗೂ ತಮ್ಮನ್ನು ತಾವು ಬಿಲ್ ಕ್ಲಿಂಟನ್, ಬರಾಕ್ ಒಬಾಮ, ರಾಹುಲ್ ಗಾಂಧಿ ಮಟ್ಟಕ್ಕೆ ಹೋಲಿಸಿಕೊಂಡು ಊರು ತುಂಬಾ ಫ್ಲೆಕ್ಸ್ ಹಾಕಿಸಿಕೊಳ್ಳುವ ಕಾತರ. ಮೊನ್ನೆ ಮೊನ್ನೆ ಇಲ್ಲಿನ ಬಂಟ ಸಮುದಾಯದ ವ್ಯಕ್ತಿಯೊಬ್ಬರು ಊರು ತುಂಬಾ ತಮ್ಮದೇ ಖರ್ಚಿನಲ್ಲಿ ಯಾರ‍್ಯಾರದೂ ಹೆಸರಿ ನಲ್ಲಿ ಫ್ಲೆಕ್ಸ್ ಹಾಕಿಸಿ ಸಂತಸ ಪಟ್ಟಿದ್ದರು.
ಇದು ಹೋಗಲಿ ಸಾಧನೆ ಎಂದು ಒಪ್ಪಿಕೊಳ್ಳೋಣ. ಆದರೆ ಪತ್ರಿಕೆಯೊಂದರ ಸಂಪಾದಕನಾಗುವುದು ಸಾಧನೆಯೇ? ದೊಡ್ಡ ದೊಡ್ಡ ಪತ್ರಿಕೆಯ ಸಂಪಾದಕನಾಗುವುದು ನಿಜಕ್ಕೂ ಸಾಧನೆ. ಹಾಗೆಂದು ನಿಜವಾದ ಪತ್ರಕರ್ತ ಅದನ್ನು ಹೇಳಿಕೊಂಡು ಊರು ತುಂಬಾ ತಿರುಗಾಡುವುದಿಲ್ಲ. ಮರಣವಾಣಿಯಲ್ಲಿ ಈ ಬಗ್ಗೆ ಜಾಹೀ ರಾತು ಹಾಕಿಸಿ ಖುಷಿ ಪಡಲಾರ. ಕಿನ್ನಿಗೋಳಿಯಲ್ಲಿ ಇಂದಿಗೂ ಹೆಸರು ಮಾಡಿದ ಪತ್ರಕರ್ತರು ಅನೇಕರಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಯುಗಪುರುಷದಂತಹ ಮೌಲ್ಯಯುತ ಪತ್ರಿಕೆ ಇಂದಿಗೂ ಪ್ರಕಟವಾಗುತ್ತಿರುವುದು ಹೆಮ್ಮೆಯ ಸಂಗತಿ. ಅನಂತ ಪ್ರಕಾಶದಂ ತಹ ಪತ್ರಿಕೆ ಇವತ್ತಿಗೂ ಅನೇಕ ಸಾಹಿತ್ಯಿಕ ಪ್ರತಿಭೆಗಳನ್ನು ಗುರುತಿ ಸಿಕೊಂಡು ಬಂದಿದೆ. ಕಿನ್ನಿಗೋಳಿ ಆಸುಪಾಸಿನ ಕಟೀಲಿನಲ್ಲಿ ಪತ್ರಿಕೋದ್ಯಮದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಎಕ್ಕಾರು ಉಮೇಶ್ ರಾವ್ ಅವರಂತಹ ಸಜ್ಜನರು ಇದ್ದಾರೆ. ಕಿನ್ನಿಗೋಳಿಯಲ್ಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಿಯತಕಾಲಿ ಕೆಗಳಲ್ಲಿ ಕೆಲಸ ಮಾಡುವ ಅಪರೂಪದ ಬರವಣಿಗೆಯ ಪತ್ರಕ ರ್ತರಿದ್ದಾರೆ. ಆದರೆ ಇವರು ತಮ್ಮನ್ನು ತಾವು ಹೊಗಳಿಸಿಕೊಂಡು ಫ್ಲೆಕ್ಸ್ ಹಾಕಿಲ್ಲ. ಆದರೆ ಕಿನ್ನಿಗೋಳಿಯಲ್ಲಿ ರಾತ್ರೋ ರಾತ್ರಿ ಅದ್ಯಾ ವನೋ ಮನುಷ್ಯ ಪತ್ರಿಕೆಯೊಂದರ ಸಂಪಾಕನೆಂದು ಹೋರ್ಡಿಂಗ್ ಹಾಕಿಸಿ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದಾನೆ. ನೆಟ್ಟಗೆ ಸೀಳಿ ದರೆ ಎರಡಕ್ಷರವೂ ಸೃಷ್ಟಿಯಾಗದ ಇಂತಹ ಮಹಾನುಭಾವರು ನಾಳೆ ಮುಲ್ಕಿ ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರಾದರೂ ಅಚ್ಚರಿಯಿಲ್ಲ. ಭೂಗತ ಜೀವಿಗಳ ಹೆಸರಿನಲ್ಲಿ ಉದ್ಯಮಿಗಳಿಗೆ ಫೋನು ಮಾಡಿ ಹಫ್ತಾ ವಸೂಲಿ ಮಾಡುವುದು ಪತ್ರಿಕೋದ್ಯಮ ಎನ್ನುವುದಾದರೆ ನಿಜವಾದ ಪತ್ರಕರ್ತ ಖಂಡಿತ ಆತಂಕ ಪಡಬೇಕಾದದ್ದೇ.
ಈಗ ಪತ್ರಿಕೆಯನ್ನು ಯಾರೂ ಬೇಕಾದರೂ ಆರಂಭಿಸಬ ಹುದು. ಪತ್ರಿಕೆಯ ಟೈಟಲ್ ಯಾರಿಗೆ ಬೇಕಾದರೂ ಸಿಗುತ್ತದೆ. ಇದರಲ್ಲಿ ಸಾಧನೆ ಏನು ಬಂತು? ಪತ್ರಿಕೆ ತರುವುದಕ್ಕಿಂತ ಪತ್ರಿಕೆ ಯನ್ನು ಗುಣಮಟ್ಟದಲ್ಲಿ ನಿರಂತರವಾಗಿ ನಡೆಸಿಕೊಂಡು ಬರು ವುದೇ ನಿಜವಾದ ಸಾಧನೆ.
ಈಶ್ವರ್ ಕಟೀಲ್ ಅವರಂಥವರು ಇಂಥವಕ್ಕೆ ಬೆಂಬಲ ಕೊಡ ಬಾರದು. ಅವರ ಬಗ್ಗೆ ನಮಗೆಲ್ಲರಿಗೂ ಗೌರವವಿದೆ. ಕರಾಟೆ ಗುರುಗಳಾಗಿ ಅವರು ಸುತ್ತಮುತ್ತಲಿನ ಊರುಗಳಲ್ಲಿ ಅಪಾರ ಶಿಷ್ಯ ರನ್ನು ಹೊಂದಿದ್ದಾರೆ. ಈಗ ಜಿ.ಪಂ ಸದಸ್ಯರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಂಥವರು ಯಾರೋ ಅಬ್ಬೆಪಾರಿಗಳಿಗೆ ಶುಭಾ ಶಯ ಕೋರಿ ಜಾಹೀರಾತು ಕೊಡುವುದೆಂದರೆ...ಛೆ! ಅದರಲ್ಲೂ ಮೊನ್ನೆ ಮೊನ್ನೆ ಕಿನ್ನಿಗೋಳಿಯ ಮಣ್ಣಿನ ಮಗ, ಖ್ಯಾತ ಹೃದ್ರೋಗ ತಜ್ಞರಾದ ಡಾ.ದೇವಿ ಶೆಟ್ಟಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಬಂದಾಗ ಸಂಭ್ರಮಿಸದವರು ಯಾವುದೇ ಹೆಸರೇ ಕೇಳದ ಪತ್ರಿ ಕೆಯ ಸಂಪಾದಕನಿಗೆ ಶುಭಾಶಯ ಕೋರುವುದೆಂದರೆ...?
ಪಕ್ಕು ಉಳೇಪಾಡಿ
Tagged with
nimminda
ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಟಿಂಟ್ ಗ್ಲಾಸ್‌ಗಳನ್ನು ನಿಷೇಧಿಸುವುದರಿಂದ ಅಪರಾಧ ಪ್ರಕರಣಗಳಲ್ಲಿ ಸಣ್ಣಮಟ್ಟಿನ ಇಳಿಕೆ ಕಂಡುಬರುವ ಸಾಧ್ಯತೆ ಖಂಡಿತಾ ಇದೆ. ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾದಾಗ ಪೊಲೀಸರ ಮೇಲೆ, ಇಲಾಖೆಯ ಮೇಲೆ ಹರಿಹಾಯುವ ಸಾರ್ವಜನಿಕರು ಇಲಾಖೆಗೆ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಸಾಧ್ಯವಿರುವ ಕೆಲವೊಂದು ನಿಯಮಗಳಿಗೆ ಸ್ಪಂದಿಸಬೇಕು.
ಧ್ವನಿ, ಮಂಗಳೂರು
ಸುಪ್ರೀಂಕೋರ್ಟ್ ಕಾರ್‌ಗಳಲ್ಲಿ ಬಳಸಲಾಗುವ ಟಿಂಟ್ ಗಳನ್ನು(ಕಪ್ಪು ಪಟ್ಟಿ) ನಿಷೇಧಿಸಿ ಇತ್ತೀಚೆಗಷ್ಟೆ ಆದೇಶ ಹೊರ ಡಿಸಿತ್ತು. ಮೊನ್ನೆಯಿಂದ ಜಿಲ್ಲೆಯಲ್ಲೂ ಟ್ರಾಫಿಕ್ ಪೊಲೀಸರು ಟಿಂಟ್ ಗ್ಲಾಸ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಇಳಿದಿದ್ದಾರೆ. ಒಂದು ಹಂತಕ್ಕೆ ಪೊಲೀಸರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಆದರೆ ಮೊನ್ನೆಯಷ್ಟೇ ಈ ಆದೇಶ ವನ್ನು ಮತ್ತೆ ಪರಾಮರ್ಶಿಸಬೇಕೆನ್ನುವ ಒತ್ತಾಯದ ಹಿನ್ನೆಲೆ ಯಲ್ಲಿ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೆಲ ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಂಗ ವಿಧಾನ ದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಸಮಾಜದ ಹಿತದೃಷ್ಟಿಯಿಂದ ನೀಡಲಾದ ಆದೇಶವನ್ನು ಪ್ರಶ್ನಿಸುವುದು ಎಷ್ಟು ಸರಿ ಎನ್ನುವುದು ನನ್ನ ಪ್ರಶ್ನೆ.
ಕಾರ್‌ಗಳ ಗ್ಲಾಸ್‌ಗೆ ಕಪ್ಪು ಪಟ್ಟಿ ಅಳವಡಿಸಿ ಅದರೊಳಗೆ ನಡೆಸಲಾಗುತ್ತಿದ್ದ ಅನಾಚಾರಗಳು ಒಂದೆರೆಡಲ್ಲ. ಈ ಹಿಂದೆ ಈ ರೀತಿಯ ಅದೆಷ್ಟೋ ಘಟನೆಗಳು ಪತ್ರಿಕೆಗಳಲ್ಲಿ ವರದಿ ಯಾಗಿದ್ದವು. ಈ ಹಿನ್ನೆಲೆಯಲ್ಲಿ ಕೋರ್ಟ್ ತೀರ್ಪನ್ನು ಮೆಚ್ಚ ತಕ್ಕದ್ದೇ. ಆದರೆ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿ ಅರ್ಜಿದಾರರು ನೀಡಿರುವ ಕೆಲ ಸಮಜಾಯಿಷಿಗಳು ಮಾತ್ರ ಒಪ್ಪತಕ್ಕದ್ದಲ್ಲ ಎನ್ನಬಹುದು. ಕಪ್ಪು ಪಟ್ಟಿ ಇದ್ದರೆ ವಾಹನ ಅಪಘಾತದಲ್ಲಿ ವಾಹನದ ಗ್ಲಾಸ್ ಒಡೆದರೆ ದೇಹದ ಮೇಲೆ ಗ್ಲಾಸ್ ಚೂರು ಗಳು ಚುಚ್ಚಿಕೊಳ್ಳುವುದಿಲ್ಲ ಎನ್ನುವುದು ಅರ್ಜಿದಾರರ ವಾದ. ಆದರೆ ಗ್ಲಾಸ್ ಚೂರು ಚುಚ್ಚಿಕೊಳ್ಳದಂತೆ ಕಪ್ಪು ಪಟ್ಟಿಯನ್ನೇ ಬಳಸಬೇಕೆಂದಿಲ್ಲ. ಅದರ ಬದಲಾಗಿ ಹೊರಗಡೆ ಕಾಣುವ ಪಾರದರ್ಶಕ ಪಟ್ಟಿಯನ್ನು ಕೂಡ ಬಳಸಬಹುದಲ್ಲವೇ? ಇನ್ನು ಕಪ್ಪು ಪಟ್ಟಿಯಿದ್ದರೆ ಬೆಲೆಬಾಳುವ ವಸ್ತುಗಳನ್ನು ಸಾಗಿಸಬಹುದು ಎನ್ನುವುದು ಇನ್ನೊಂದು ವಾದ. ಈ ವಾದ ಒಪ್ಪತಕ್ಕದ್ದೇ. ಆದರೂ ಬೆಲೆಬಾಳುವ ವಸ್ತುಗಳನ್ನು ಸಾಗಿಸುವಾಗ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ಕಪ್ಪು ಪಟ್ಟಿಯ ಅವಶ್ಯಕತೆ ಇದೆಯೇ? ಉಳಿದಂತೆ ಇನ್ನೂ ಅನೇಕ ವಾದಗಳನ್ನು ಅರ್ಜಿದಾರರು ಕೋರ್ಟಿನ ಮುಂದಿಟ್ಟಿದ್ದಾರೆ. ಮೇಲ್ನೋಟಕ್ಕೆ ಇವರ ಯಾವ ವಾದಗಳೂ ಒಪ್ಪುವಂಥದ್ದಲ್ಲ.
ಕಾರಿನ ಟಿಂಟ್ ಗ್ಲಾಸ್ ಏರಿಸಿಕೊಂಡು ಸರಸ ಸಲ್ಲಾಪ ವಾಡುವ ಜೋಡಿ ಸಿಕ್ಕಿಬಿದ್ದರೆ ಪೊಲೀಸರೇನು ಮಾಡುತ್ತಿದ್ದಾರೆ ಎಂದು ಇಲಾಖೆಯನ್ನೇ ಪ್ರಶ್ನಿಸುವ ನಾವುಗಳು ಕೋರ್ಟಿನ ಉತ್ತಮ ಆದೇಶವನ್ನು ವಿರೋಧಿಸುವುದೇಕೆ? ಟಿಂಟ್ ಗ್ಲಾಸ್ ನಿಂದ ಇಲ್ಲಿಯತನಕ ಎಷ್ಟರ ಮಟ್ಟಿಗೆ ಉಪಯೋಗವಾಗಿದೆಯೋ ಗೊತ್ತಿಲ್ಲ. ಆದರೆ ಕೊಲೆ, ದರೋಡೆ, ಅನಾಚಾರಗಳಂತಹ ಅಪ ರಾಧ ಕೃತ್ಯಗಳಿಗೆ ಈ ಟಿಂಟ್ ಗ್ಲಾಸ್‌ಗಳು ಪರೋಕ್ಷವಾಗಿ ಸಾಕಷ್ಟು ಸಹಕಾರವನ್ನು ನೀಡಿದೆ. ಟಿಂಟ್ ಗ್ಲಾಸ್ ತೆರವಿನಿಂದ ಸ್ವಲ್ಪ ಮಟ್ಟಿಗೆ ಕಾರ್ ಡೆಕೋರೇಶನ್ ಅಂಗಡಿಗಳಿಗೆ ಏಟು ಬೀಳ ಬಹುದು. ಅವರ ಲಾಭದ ಪ್ರಮಾಣದಲ್ಲಿ ಅಲ್ಪ ಮಟ್ಟಿನ ಇಳಿಕೆ ಕಾಣಬಹುದು. ಹಾಗೆಂದು ಅನೈತಿಕತೆಗೆ ಸಹಕರಿಸುವ ಟಿಂಟ್ ಗ್ಲಾಸ್‌ಗಳನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್‌ನ ಕ್ರಮವನ್ನು ಪ್ರಶ್ನಿಸುವುದು ಎಷ್ಟು ಸರಿ?
ಈ ಹಿಂದೆ ರಾಜ್ಯದಲ್ಲಿ ಸಾರಾಯಿ ನಿಷೇಧವಾದಾಗ ಸಾರಾಯಿ ಮಾರಾಟಗಾರರ ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದವು. ಈ ವೇಳೆ ಕೆಲವರು ಸಾರಾಯಿ ನಿಷೇಧದ ವಿರುದ್ದ ಕೂಗು ಹಾಕಿದರು. ಹಾಗೆಂದು ಲಕ್ಷಾಂತರ ಜನರ ಬದುಕಿನ ಜೊತೆ ಆಟವಾಡುವ ಸಾರಾಯಿ ನಿಷೇಧವನ್ನು ಸರ್ಕಾರ ಹಿಂತೆಗೆದು ಕೊಂಡಿತ್ತೇ? ಅಥವಾ ಈ ಹಿಂದೆ ಸಾರಾಯಿ ಮಾರಾಟ ಮಾಡು ತ್ತಿದ್ದವರು ಬೀದಿಗೆ ಬಿದ್ದರೇ? ಇಲ್ಲವಲ್ಲ. ಅದೇ ರೀತಿ ಇದು ಕೂಡ. ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಇಂತಹ ಟಿಂಟ್ ಗ್ಲಾಸ್‌ಗಳನ್ನು ನಿಷೇಧಿಸುವುದರಿಂದ ಅಪರಾಧ ಪ್ರಕರ ಣಗಳಲ್ಲಿ ಸಣ್ಣಮಟ್ಟಿನ ಇಳಿಕೆ ಕಂಡುಬರುವ ಸಾಧ್ಯತೆ ಖಂಡಿತಾ ಇದೆ. ಇನ್ನು ಕಾರ್ ಡೆಕೋರೇಶನ್ ವ್ಯವಹಾರ ಮಾಡುವ ಸಂಸ್ಥೆಯವರಿಗೆ ಗ್ಲಾಸ್‌ಗಳಿಗೆ ಟಿಂಟ್ ಅಳವಡಿಸುವುದೊಂದೇ ಕೆಲಸವಲ್ಲ. ಕಾರ್ ಎಂದ ಮೇಲೆ ಇನ್ನೂ ಅನೇಕ ರೀತಿಯ ಅಲಂಕಾರಗಳು ಇದ್ದೇ ಇದೆ. ಸಾರಾಯಿ ನಿಷೇಧದಂತೆ ಸಂಪೂ ರ್ಣವಾಗಿ ಕಾರ್‌ಗಳ ಅಲಂಕಾರವನ್ನೇನು ಸರ್ಕಾರ ನಿಷೇಧಿ ಸಿಲ್ಲವಲ್ಲ? ಹೀಗಿರುವಾಗ ಉತ್ತಮ ಆದೇಶವೊಂದನ್ನು ಪ್ರಶ್ನಿ ಸದೆ ನಾವೂ ಅದನ್ನು ಬೆಂಬಲಿಸಬೇಕಿದೆ. ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾದಾಗ ಪೊಲೀಸರ ಮೇಲೆ, ಇಲಾಖೆಯ ಮೇಲೆ ಹರಿಹಾಯುವ ಸಾರ್ವಜನಿಕರು ಇಲಾ ಖೆಗೆ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಸಾಧ್ಯವಿರುವ ಇಂತಹ ನಿಯಮಗಳಿಗೆ ಸ್ಪಂದಿಸಬೇಕು. ಅದು ಬಿಟ್ಟು ಒಂದಿಬ್ಬರ ಹಿತಾಸಕ್ತಿಯಿಂದ ತೀರ್ಪನ್ನೇ ಪ್ರಶ್ನಿಸುವುದು ಸರಿಯಲ್ಲ.
Tagged with
bahiranga
ಜಿಲ್ಲೆಯಲ್ಲಿ ಚಾಪರ‍್ಕ ತುಳುನಾಟಕ ತಂಡ ಮತ್ತು ಕಲಾಸಂಗಮದ ಬ್ಯುಸಿ ಟೈಮ್‌ನಲ್ಲಿ ಜಿಲ್ಲೆಯಲ್ಲಿ ಬೇರಾವುದೇ ತುಳು ನಾಟಕತಂಡಗಳಿರಲಿಲ್ಲ. ಆ ಸಂದರ್ಭದಲ್ಲಿ ಮೂಡುಬಿದಿರೆ ಪರಿಸರದಲ್ಲಿ ತಲೆಯೆತ್ತಿದ್ದು ನಮ್ಮ ಬೆದ್ರ ಎಂಬ ತಂಡ. ೧೫ ವರುಷಗಳ ಹಿಂದೆ ಬೆದ್ರದಲ್ಲಿ ಈಗಿನ ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಉಮೇಶ್ ಮಿಜಾರ್, ಪಾಂಡುರಂಗ ಪೈ, ಇಂದು ಎಸ್.ಮಂಗಳೂರು ಮೊದಲಾದವರು ಕಟ್ಟಿದ ತಂಡವೀಗ ‘ನಮ್ಮ ಕಲಾವಿದೆರ್ ಬೆದ್ರ’ ತಂಡದ ಸೂಪರ್ ನಾಟಕ ಎನಿಸಿದ ‘ಬುದ್ಧಿ ಬುಡಯೆ’ ೨೦೦ರ ಸಂಭ್ರಮದಲ್ಲಿದೆ. ಮಂಗಳೂರಿನ ಪುರಭವನದಲ್ಲಿ ಮೇ.೨೪ರಂದು ‘ಬುದ್ಧಿ ಬುಡಯೆ’ ೨೦೦ರ ಪ್ರದರ್ಶನ ಕಾಣಲಿದೆ.
ಮೊದಮೊದಲು ಜಿ.ಜಿ.ಪುತ್ತಿಗೆ, ಇಂದುಶೇಖರ್, ಕೆ.ಜಿ.ಕೊಕ್ರಾಡಿ, ಅಶೋಕ್ ಶೆಟ್ಟಿ ತೋಡಾರು ಮೊದಲಾದವರ ರಚನೆಯ ನಾಟಕಗಳನ್ನಾಡಿ ಪ್ರೇಕ್ಷಕ ವರ್ಗದವರಿಂದ ಸೈ ಎನಿಸಿಕೊಂಡ ತಂಡವು ಮತ್ತೆ ಸುರೇಂದ್ರಕುಮಾರ್ ಕಳತ್ರಪಾದೆಯವರ ನಾಟಕಗಳನ್ನು ಪ್ರದರ್ಶಿಸುತ್ತಿತ್ತು. ಇದೀಗ ಉಮೇಶ್ ಮಿಜಾರ್ ಅವರ ನಾಟಕಗಳಿಂದ ಜಿಲ್ಲೆಯುದ್ದಕ್ಕೂ ಹಾಗೂ ಮುಂಬೈಯಲ್ಲೂ ಸಾಕಷ್ಟು ಪ್ರದರ್ಶನಗಳನ್ನು ಕಾಣುತ್ತಿದೆ. ಪ್ರಬುದ್ಧ ರಂಗಕಲಾವಿದರನ್ನೊಳಗೊಂಡ ತಂಡದ ನೇತೃತ್ವವನ್ನು ಉಮೇಶ್ ಮಿಜಾರ್ ವಹಿಸಿಕೊಂಡಿದ್ದಾರೆ. ಸಂಚಾಲಕ ರಾಗಿರುವ ವಸಂತ ಶೆಟ್ಟಿ ತೋಡಾರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು. ಈ ತಂಡದ ಗಟ್ಟಿತನಕ್ಕೊಂದು ಸಾಕ್ಷಿ.
ಇನ್ನು ಚಿತ್ರನಟ ಚೇತನ್ ರೈ ಮಾಣಿ. ಸತೀಶ್ ಕಲ್ಲಮುಂಡ್ಕೂರು, ಲಕ್ಷ್ಮೀಶ ಗಂಜೀಮಠ, ಹರಿಶ್ಚಂದ್ರ ಪೆರಾಡಿ, ಚಂದ್ರಹಾಸ ಶೆಟ್ಟಿ ಅಶ್ವತ್ಥಪುರ, ಚಂದ್ರಹಾಸ ಸಾಣೂರು, ಶರಣ್ ಕೈಕಂಬ, ನಾರಾಯಣ ಭಟ್ ಪುತ್ತಿಗೆ, ಹರೀಶ್ ಕಡಂದಲೆ, ಕು.ಸುಶ್ಮಿತಾ ಕಾವೂರು (ಹೊಸ ಸೇರ್ಪಡೆ)ಮುಂತಾದ ಪ್ರಬುದ್ಧ ಕಲಾವಿದರು ತಂಡದಲ್ಲಿದ್ದಾರೆ. ಶ್ರೀನಾಥ್ ಅಂಚನ್ ಮೂಡಬಿದ್ರೆ ಅವರ ಸಂಗೀತ, ವಿಲಿಯಂ ಪಿಂಟೋ ಪದ್ರೆಂಗಿ ಬಳಗದ ಸೆಟ್ಟಿಂಗ್ ವ್ಯವಸ್ಥೆ ಕೂಡಾ ಈ ನಾಟಕ ತಂಡದ ಯಶಸ್ಸಿನಲ್ಲಿ ಪಾತ್ರವಹಿಸುತ್ತಿದೆ.
ಎಮ್.ಎಸ್.ಕಿರೋಡಿ ಚಂದ್ರಹಾಸ ಶೆಟ್ಟಿ ಮಾಣಿ. ಭಾಸ್ಕರ ಸಾಣೂರು ಮುಂತಾದ ಹೆಸರಾಂತ ಕಲಾವಿದರು ಮತ್ತು ಸಾವಿರಾರು ಸಂಖ್ಯೆಯ ಅಭಿಮಾನಿಗಳ ನಿರಂತರ ಪೋತ್ಸಾಹದಿಂದ ತಂಡ ಮುನ್ನಡೆಯುತ್ತಿದೆ. ಈವರೆಗೆ ಪ್ರದರ್ಶನ ಕಂಡ ಎಲ್ಲಾ ಕಡೆಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು ಮೇ.೨೪ರ ಸಂಜೆ ಮಂಗಳೂರು ಪುರಭವನದಲ್ಲಿ ‘ಬುದ್ಧಿ ಬುಡಯೆ’ ನಾಟಕದ ೨೦೦ನೇ ಪ್ರದರ್ಶನ ನಡೆಯಲಿದೆ. ನಾಟಕ ಉಚಿತ ಪ್ರವೇಶದ್ದಾಗಿದ್ದು ಈ ಸಂದರ್ಭದಲ್ಲಿ ಸಂಗ್ರಹವಾದ ಹಣವನ್ನು ವಜ್ರದೇಹಿ ಸ್ವಾಮೀಜಿಯವರ ಮೂಲಕ ಅನಾಥ ಮಕ್ಕಳ ಕಟ್ಟಡ ಸಹಯಾರ್ಥಕ್ಕೆ ನೀಡಲಾಗುವುದು ಎಂಂದು ತಂಡದ ವ್ಯವಸ್ಥಾಪಕ ಉಮೇಶ್ ಮಿಜಾರ್ ಈಗಾಗಲೇ ತಿಳಿಸಿರುವುದು ಅವರು ಸಹೃದಯತೆಗೆ ಸಾಕ್ಷಿಯಾಗಿದೆ.
.ಅಶ್ರಫ್ ಮೂಡಬಿದ್ರೆ
Tagged with
cnnews
ಮೈದುನನ ಆಕ್ರೋಶಕ್ಕೆ ಅತ್ತಿಗೆ ಬಲಿ
ಮಂಗಳೂರು: ಮನೆಯ ವಿಚಾರವನ್ನು ನೆರೆಕೆರೆಯವರಿಗೆ ತಿಳಿಸುತ್ತಾಳೆ ಎಂಬ ನೆಪದಲ್ಲಿ ಆಕ್ರೋಶಗೊಂಡ ಮೈದುನ ಅತ್ತಿಗೆಯ ಮೇಲೆ ಸೋಂಟೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ರವಿವಾರ ಸಂಜೆ ಬೆಳ್ತಂಗಡಿ ತಾಲೂಕಿನ ಸೊಣಂದೂರು ಗ್ರಾಮದ ಮುಂಡಾಡಿಯಲ್ಲಿ ನಡೆದಿದೆ.
ರಿಕ್ಷಾ ಚಾಲಕ ವಿಜಯ ಶೆಟ್ಟಿ ಎಂಬವರ ಪತ್ನಿ ಶಶಿಕಲಾ ಶೆಟ್ಟಿ(೩೫)ಮೃತ ಮಹಿಳೆ. ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ಮೈದುವ ಸಂತೋಷ ಶೆಟ್ಟಿ ಸಹೋದರಿಯರ ವಿವಾಹ ಕಾರ್ಯ ನೆರವೇರಿಸಲು ಊರಿಗೆ ಬಂದಿದ್ದ. ವಿವಾಹದ ಬಳಿಕ ಎಲ್ಲರೂ ತೆರಳಿದ್ದರೆ ಇವನೊಬ್ಬ ಉಳಿದುಕೊಂಡಿದ್ದ.
ಕೌಟಂಬಿಕ ವಿಚಾರವನ್ನು ನೆರೆಕೆರೆಯವರಿಗೆ ಹೇಳುತ್ತಿದ್ದಾರೆ ಎಂಬ ವಿಚಾರದಲ್ಲಿ ಅಸಮಾಧಾನ ಹೊಂದಿದ್ದ ಮೈದುನ ಮಧ್ಯಾಹ್ನ ಮನೆಮಂದಿ ಮಲಗಿದ್ದ ಹೊತ್ತಿನಲ್ಲಿ ಅತ್ತಿಗೆಯನ್ನ ತರಾಟೆಗೆ ತೆಗೆದುಕೊಂಡಿದ್ದ. ಮಾತನಾಡುತ್ತಲೇ ತಾಳ್ಮೆ ಕಳೆದುಕೊಂಡ ಸಂತೋಷ ಸೋಂಟೆಯಿಂದ ಹಲ್ಲೆ ನಡೆಸಿದ್ದ. ಆಯಕಟ್ಟಿನ ಜಾಗದಲ್ಲಿಬಿದ್ದ ಪೆಟ್ಟಿಗೆ ಶಶಿಕಲಾರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಕೌಟಂಬಿಕ ಸಮಸ್ಯೆಯ ಬಗ್ಗೆ ಶಶಿಕಲಾ ತನ್ನ ಸಹೋದರನಲ್ಲಿ ದೂರಿಕೊಂಡಿದ್ದರೆನ್ನಲಾಗಿದ್ದು ಈ ವಿಚಾರವಾಗಿ ಕಳೆದ ಮೇ೪ರಂದು ಆಕೆಯ ಸಹೋದರ ಬಂದು ಪಂಚಾಯಿತಿಕೆ ನಡೆಸಿ ಹಿಂದಿನದೆಲ್ಲ ಮರೆತು ಸಂಸಾರದಲ್ಲಿ ಮುನ್ನಡೆಯು ವಂತೆ ಸಲಹೆ ನೀಡಿ ಹೋಗಿದ್ದರು. ಆದರೆ ಅದು ಸಂತೋಷನಿಗೆ ಸಹ್ಯವಾಗಿರಲಿಲ್ಲ ಎನ್ನಲಾಗಿದೆ. ಶಶಿಕಲಾರ ಕೊಲೆಯ ವಿಚಾರ ತಿಳಿಯುತ್ತಿದ್ದಂತೆಯೇ ನೆರೆಕೆರೆಯ ಮಂದಿ ಜಮಾಯಿಸಿದ್ದರು. ಆರಂಭದಲ್ಲಿ ಇದನ್ನು ಅಸಹಜ ಸಾವು ಎಂದು ಬಿಂಬಿಸುವ ಪ್ರಯತ್ನ ನಡೆದಿತ್ತಾದರೂ ನೆರೆಕೆರೆಯವರು ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡು ವಿಷಯ ಮನವರಿಕೆ ಮಾಡಿದ್ದರು. ಬಳಿಕ ಮೃತ ದೇಹದ ಮಹಜರು ನಡೆಸಲಾಯಿತು.
Tagged with
cnews
ಪುತ್ತೂರು: ಜಮೀನು ತಕರಾರಿಗೆ ಸಂಬಂಧಿಸಿ ತಂದೆಯೇ ಮಗನ ಮೇಲೆ ಏರ್‌ಗನ್‌ನಿಂದ ಗುಂಡು ಹಾರಿಸಿದ ಘಟನೆ ರವಿವಾರ ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಉರು ವಾಲು ಗ್ರಾಮದ ಮಜಿಕನಾಲು ಎಂಬಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಐತ್ತಪ್ಪ ಗೌಡ ಎಂಬವರು ತನ್ನ ಪುತ್ರ ಸುಂದರ ಗೌಡ ಎಂಬವರಿಗೆ ಏರ್‌ಗನ್‌ನಿಂದ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಗಾಯಾಳು ಸುಂದರ ಗೌಡರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಳಿಕ ಆರೋಪಿ ತಂದೆ ಐತ್ತಪ್ಪ ಗೌಡ ತಲೆಮರೆಸಿಕೊಂಡಿದ್ದಾರೆ.
ಐತಪ್ಪ ಗೌಡರ ಮೊದಲ ಪತ್ನಿಯ ಮಗ ಸುಂದರ ಗೌಡರಿಗೆ ಆಸ್ತಿಯಲ್ಲಿ ಪಾಲು ನೀಡುವ ವಿಚಾರದಲ್ಲಿ ತಕರಾರು ಇದ್ದು, ಈ ಹಿನ್ನಲೆಯಲ್ಲಿ ಗುಂಡು ಹಾರಿಸಿರುವುದಾಗಿ ತಿಳಿದು ಬಂದಿದೆ. ಸುಂದರ ಗೌಡರು ತನ್ನ ಪಾಲಿನ ತೋಟದಲ್ಲಿ ಅಡಿಕೆ ಹೆಕ್ಕುತ್ತಿದ್ದಾಗ ಇದನ್ನು ಆಕ್ಷೇಪಿಸಿದ ಐತ್ತಪ್ಪ ಗೌಡರು ಗುಂಡು ಹಾರಿಸಿರುವುದಾಗಿ ತಿಳಿದು ಬಂದಿದೆ. ಹೊಟ್ಟೆಯ ಭಾಗಕ್ಕೆ ಗುಂಡು ಗಳು ತಗಲಿದ ಸುಂದರ ಗೌಡ ಅಪಾಯ ದಿಂದ ಪಾರಾಗಿದ್ದಾರೆ.
Tagged with
cnews
ಬಸ್ ಮಾಲಕನ ಪರಾರಿ ಪುರಾಣ
ಮಂಗಳೂರು: ಪ್ರೇಮದ ಹೆಸರಲ್ಲಿ ಮುಸ್ಲಿಂ ಯುವತಿಯನ್ನು ಪಟಾಯಿಸಿದ ಬಸ್ ಮಾಲಕ ಕಂ ಚಾಲಕ ಆಕೆಯನ್ನು ಬಲವಂತಪಡಿಸಿ ವರ್ಷದ ಹಿಂದೆಯೇ ರಿಜಿಸ್ಟ್ರರ್ ವಿವಾಹವಾಗಿದ್ದಾನೆ ಎನ್ನುವ ಮಾತುಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ.
ಮಂಜನಾಡಿಗೆ ಹೋಗುತ್ತಿದ್ದ ಪರ್ಸಿ ಬಸ್ಸಿನಲ್ಲಿ ಕಾಲೇಜಿಗೆ ಪ್ರಯಾಣಿಸುತ್ತಿದ್ದ ಮೊಂಟೆಪದವು ಸಮೀಪದ ಮುಸ್ಲಿಂ ಯುವತಿಯನ್ನು ಚಾಲಕ ಕಂ ಮಾಲಕ ನಾಗಿರುವ ವಿನ್ಸೆಂಟ್ ಬಲೆಗೆ ಹಾಕಿಕೊಂಡಿದ್ದ. ಕಳೆದ ಗುರುವಾರ ಯುವತಿಗೆ ಸಂಬಂಧಿಕನ ಜತೆ ನಿಶ್ಚಿತಾರ್ಥವೂ ಆಗಿದ್ದು. ೨೦ ದಿನಗಳಲ್ಲಿ ಮದುವೆ ನಡೆ ಯಬೇಕಿತ್ತು. ಆದರೆ ಶುಕ್ರವಾರ ಮಧ್ಯಾಹ್ನ ಶಾಲಾ ಸರ್ಟಿಫಿಕೇಟ್‌ಗಳ ಜತೆ ಮನೆಯಿಂದ ಹೋಗಿದ್ದ ಯುವತಿ ನಂತರ ವಾಪಸ್ ಬಂದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಶನಿವಾರ ಕೊಣಾಜೆ ಠಾಣೆಗೆ ದೂರು ನೀಡಲೆಂದು ಹೋಗಿದ್ದರು. ಆದರೆ ಅದಕ್ಕೂ ಮೊದಲೇ ಜೋಡಿ ಠಾಣೆಗೆ ಬಂದು ತಾವಿಬ್ಬರು ವರ್ಷದ ಹಿಂದೆಯೇ ರಿಜಿಸ್ಟ್ರರ್ ವಿವಾಹ ಮಾಡಿ ಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಯುವತಿ ಮನೆಯವರಿಂದ ಕೇಸು ಸ್ವೀಕರಿಸಿಲ್ಲ ಎಂದು ಹೇಳಲಾಗುತ್ತಿದೆ. ತನ್ನ ಬಸ್ಸಿಗೆ ದೇವರ ಹೆಸರನ್ನು ಇಟ್ಟಿದ್ದ ವಿನ್ಸೆಂಟ್ ಅದರಲ್ಲಿ ಚಾಲಕನಾಗಿ ದುಡಿಯುತ್ತಿದ್ದ. ಈ ಸಂದರ್ಭ ಹಲವು ಹುಡುಗಿಯರಿಗೆ ಕಿರಿಕ್ ನೀಡಿದ್ದಾನೆ ಎನ್ನುವ ಆರೋಪ ಈತನ ಮೇಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಧರ್ಮದವರೂ ಆತನ ವಿರುದ್ಧ ನಿಂತಿದ್ದರು.
ಮುಸ್ಲಿಂ ಯುವತಿಯ ಜೊತೆ ಪರಾರಿಯಾದ ವಿಷಯ ತಿಳಿಯುತ್ತಲೇ ದೇರಳಕಟ್ಟೆಯಲ್ಲಿ ಜಮಾಯಿಸಿದ್ದ ಆ ಸಮುದಾಯದವರು ಬಸ್ಸನ್ನು ತಡೆಗಟ್ಟಿ ಟೈರ್‌ನ ಗಾಳಿಯನ್ನು ತೆಗೆದಿದ್ದರು. ಈ ಸಂದರ್ಭ ಆಗುವ ಅನಾಹುತವನ್ನು ಅರಿತ ಪೊಲೀಸರು ಬಸ್ಸನ್ನು ಠಾಣೆಗೆ ಕೊಂಡೊಯ್ಯುವ ಮೂಲಕ ರಕ್ಷಣೆ ನೀಡಿದ್ದಾರೆ. ನಿನ್ನೆ ಬಸ್ಸನ್ನು ಬಿಡಿಸುವ ಲಾಬಿ ನಡೆದಿದೆ ಎನ್ನಲಾಗಿದ್ದರೂ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
Tagged with
cnews
ಮೂಡುಬಿದಿರೆ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವನನ್ನು ಮೂಡುಬಿದಿರೆ ಪೊಲೀಸರು ರವಿವಾರ ಸಂಜೆ ಬಂಧಿಸಿ ದ್ದಾರೆ.
ಆಲಂಗಾರಿನ ಅಪ್ರಾಪ್ತ ಬಾಲಕಿ ಯನ್ನು ಅತ್ಯಾಚಾರ ನಡೆಸಿದ ಯುವಕ ನನ್ನು ಪುತ್ತಿಗೆ ಪಳಕಳದ್ರ ಇಮ್ತಿಯಾಜ್ ಎಂದು ಗುರುತಿಸಲಾಗಿದೆ.
ಆಲಂಗಾರಿನ ಕಾನಾದಲ್ಲಿರುವ ಮನೆಯಲ್ಲಿ ಶನಿವಾರ ಸಂಜೆ ಬಾಲಕಿ ಒಬ್ಬಳೇ ಇದ್ದಾಗ ಬಂದ ಆರೋಪಿ ಇಮ್ತಿಯಾಜ್ ಆಕೆಯನ್ನು ಅತ್ಯಾಚಾರ ನಡೆಸಿ ನಂತರ ಓಡಿ ಹೋಗಿದ್ದಾನೆಂದು ಬಾಲಕಿಯ ತಾಯಿ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Tagged with
cnews
ಮಣಿಪಾಲ: ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಉದಯ್ ಕುಮಾರ್ ಶೆಟ್ಟಿ ಮತ್ತು ಆತನ ಪತ್ನಿ ಹಾಗೂ ಇತರ ಮೂರು ಜನರ ವಿರುದ್ದ ಬ್ಯಾಂಕ್ ಏಲಂ ಜಾಗವನ್ನು ಕಡಿಮೆ ಕ್ರಾಯಕ್ಕೆ ಪಡೆದುಕೊಂಡಿರುವ ವಿರುದ್ಧ ನ್ಯಾಯಾ ಲಯದಲ್ಲಿ ಖಾಸಗಿ ಮೊಕದ್ದಮೆ ದಾಖ ಲಾಗಿದೆ.
ಮುಂಬೈನಲ್ಲಿ ವಾಸವಿರುವ ಗುಜ ರಾತಿನಲ್ಲಿ ಹೊಟೇಲ್ ಉದ್ಯಮ ನಡೆ ಸುತ್ತಿರುವ ನೂತನ್ ವಿ.ಶೆಟ್ಟಿ ಎಂಬ ವರಿಗೆ ಅಂಬಲಪಾಡಿಯಲ್ಲಿ ೫೦ ಸೆಂಟ್ಸ್ ಜಾಗವಿತ್ತು. ೨೦೦೧ ರಲ್ಲಿ ಅವರು ಜನತಾ ಕಾಅಪರೇಟಿವ್ ಬ್ಯಾಂಕಿನಲ್ಲಿ ೫೦ ಸೆಂಟ್ಸ್ ಜಾಗದ ಮೇಲೆ ೩,೨೫,೦೦೦ ರೂ ಸಾಲ ಪಡೆದುಕೊಂಡಿದ್ದರು. ಅದನ್ನು ಮರುಪಾವತಿಸಲು ವಿಫಲ ರಾದ ಹಿನ್ನೆಲೆಯಲ್ಲಿ ಜಾಗವನ್ನು ಏಲಂಗಿಟ್ಟಿರುವ ಬಗ್ಗೆ ಪ್ರಚಾರವನ್ನು ಮಾಡಲಾಗಿತ್ತು. ಆದರೆ ಬ್ಯಾಂಕ್ ಮೆನೇಜರ್ ಯು.ಜಿ.ಉಪಾಧ್ಯಾಯ ಅವರು ಜಾಗವನ್ನು ೩,೨೫,೦೦೦ ರೂಗಳಿಗೆ ರಾಮಚಂದ್ರ ಹೊಳ್ಳ ಎಂಬವರ ಮಗ ರಾಹುಲ್ ಹೊಳ್ಳ ಎಂಬಾತನ ಹೆಸರಿಗೆ ಮಾರಾಟ ಮಾಡಿದ್ದರು. ಇದರ ಹಿಂದೆ ಕಿದಿಯೂರಿನ ಉದಯ ಕುಮಾರ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಹಾಗೂ ಎಸ್.ಎಸ್ ಕಟ್ಟೆಗೇರಿ ಎಂಬವರು ಸೇರಿ ಜಾಗವನ್ನು ಲಪಟಾ ಯಿಸಿದ್ದಾರೆಂದು ನೂತನ್ .ವಿ.ಶೆಟ್ಟಿ ನ್ಯಾಯಾಲಯದಲ್ಲಿ ದೂರು ದಾಖ ಲಿಸಿದ್ದಾರೆ.
Tagged with
cnews
ಪುತ್ತೂರು: ಈಜಲೆಂದು ನದಿಗೆ ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಬೆಳ್ಳಿಪ್ಪಾಡಿ ಗ್ರಾಮದ ಕಠಾರ ಎಂಬಲ್ಲಿ ನಡೆದಿದೆ.
ಕಠಾರದಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಗೆ ಈಜಲು ಹೋದ ಪುತ್ತೂರು ಹೊರವಲಯದ ಮುರ ಸಮೀಪದ ಬನಾರಿ ನಿವಾಸಿ ಹಮೀದ್ ಎಂಬವರ ಪುತ್ರ ಅರ್ಶದ್(೧೮) ಎಂಬ ಯುವಕ ನೀರಲ್ಲಿ ಮುಳುಗಿ ಮತಪಟ್ಟ ಘಟನೆ ಭಾನುವಾರ ಸಂಜೆ ಸಂಭವಿಸಿದೆಮೃತ ಯುವಕ ತನ್ನ ಸ್ನೇಹಿತರಾದ ಅಯ್ಯೂಬ್ ಖಾನ್, ಸಂಶುದ್ದೀನ್ ಮತ್ತು ನಿತಿನ್ ಬನಾರಿ ಎಂಬವರ ಜತೆಯಲ್ಲಿ ೨ ಬೈಕ್‌ಗಳಲ್ಲಿ ಕಠಾರಕ್ಕೆ ತೆರಳಿದ್ದ.
Tagged with
cnews
ಪುತ್ತೂರು :ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ೨೦ ಅಡಿ ಆಳಕ್ಕೆ ಬಿದ್ದು, ೫ ಮಂದಿ ಗಾಯಗೊಂಡ ಘಟನೆ ಶನಿವಾರ ಕೊಕ್ಕಡ ಸಮೀಪದ ದಡ್ಡಾಲಪಳಿಕೆ ಎಂಬಲ್ಲಿ ಸಂಭವಿಸಿದೆ. ಕಾರ್ಕಳ ಸಮೀಪದ ಮುದ್ರಾಡಿ ನಿವಾಸಿ ವಿಜಯ(೩೫), ಪತ್ನಿ ಪವಿತ್ರಾ(೨೫), ಮಕ್ಕಳಾದ ವಿಪಿನ್(೧೧), ವಿಪುಲ್(೧೧),ವೃದ್ಧಿ(೪) ಗಾಯಗೊಂಡವರು. ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಯ ಅವರು ಪತ್ನಿ ಮಕ್ಕಳ ಜೊತೆ ಕಾರ್ಕಳದಿಂದ ಬೆಂಗಳೂರಿಗೆ ಪ್ರಯಾಣಿಸುತಿದ್ದ ವೇಳೆ ಈ ಅವಘಡ ಸಂಭವಿಸಿದೆ.
Tagged with
cnews
ಮಂಗಳೂರು: ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ತಂಡವೊಂದು ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಅಡ್ಯಾರ್‌ನಿಂದ ವರದಿಯಾಗಿದೆ.
ಹಲ್ಲೆಗೊಳಗಾದವರನ್ನು ಅಡ್ಯಾರ್ ನಿವಾಸಿ ಸಫ್ವಾನ್ ಮತ್ತು ಆತನ ಅಜ್ಜಿ ಆಸಿಯಮ್ಮ ಎಂದು ಹೆಸರಿಸಲಾಗಿದೆ.
ಸಫ್ವಾನ್ ಎಂಬಾತನ ಮೇಲೆ ಅದೇ ಊರಿನ ಅಶ್ರಫ್, ನವಾಝ್, ಮುಸ್ತಫಾ ಮತ್ತು ಮುಸ್ತಫಾ ಸೇರಿ ಹಲ್ಲೆ ನಡೆಸಿದ್ದು ಇದನ್ನು ತಡೆಯಲು ಬಂದ ಆತನ ಅಜ್ಜಿ ಆಸಿಯಮ್ಮ ಎಂಬವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಫ್ವಾನ್ ಎಂಬಾತ ಅಶ್ರಫ್ ಎಂಬಾತನನ್ನು ತನ್ನ ಬೈಕ್‌ನಲ್ಲಿ ಕುಳ್ಳಿರಿಸಿ ಮಂಗಳೂರು ಸುತ್ತಾಡಲು ಕರಕೊಂಡು ಹೂಗುತ್ತಿದ್ದ್ದನೆನ್ನಲಾಗಿದೆ. ಕೆಲವು ಸಮಯಗಳಿಂದ ಸಫ್ವಾನ್ ಅಶ್ರಫ್‌ನನ್ನು ಬೈಕ್‌ನಲ್ಲಿ ಕರಕೊಂಡು ಹೋಗುವುದನ್ನೇ ನಿಲ್ಲಿಸಿದ್ದು, ಇದನ್ನೇ ನೆಪವಾಗಿಟ್ಟು ಕೊಂಡು ಅಶ್ರಫ್‌ಎಂಬಾತ ನಾಲ್ವರನ್ನು ಜೊತೆಯಲ್ಲಿ ಕರಕೊಂಡು ಬಂದು ಸಫ್ವಾನ್‌ನ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಹಲ್ಲೆಯನ್ನು ತಡೆಯಲು ಬಂದ ಆತನ ಅಜ್ಜಿ ಆಸಿಯಮ್ಮ ಎಂಬವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
Tagged with
cnews
ಬೆಂಗಳೂರು: ಭ್ರಷ್ಟರ ವಿರುದ್ಧ ದನಿ ಎತ್ತಿದ್ದ ದಕ್ಷ ಕೆಎಎಸ್ ಅಧಿಕಾರಿ ಮಹಾಂತೇಶ ಅವರು ದುರಂತ ಸಾವನ್ನಪ್ಪಿದ್ದಾರೆ. ಮೇ.೧೫ರಂದು ತೀವ್ರ ಗಾಯಗೊಂಡಿದ್ದ ಮಹಾಂತೇಶ, ಜೀವ ನ್ಮರಣ ಹೋರಾಟ ನಡೆಸಿದ್ದರು. ಭಾನುವಾರ (ಮೇ.೨೦) ಬೆಳಗ್ಗೆ ೬.೩೦ರ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೇ.೧೫ರಂದು ನಗರದ ಏಟ್ರಿಯಾ ಹೋಟೆಲ್ ಬಳಿ ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಮಹಾಂತೇಶ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಕಳೆದ ನಾಲ್ಕು ದಿನಗಳಿಂದ ಮಹಾಂತೇಶ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಕೋಮಾಗೆ ಜಾರಿದ್ದ ಮಹಾಂ ತೇಶ ಅವರು ಭಾನುವಾರ ಅಸುನೀಗಿದ್ದಾರೆ.
ಸಹಕಾರಿ ಸಂಘಗಳ ಲೆಕ್ಕ ವಿಭಾಗದ ಉಪ ಆಯುಕ್ತರಾಗಿ ಮಹಾಂತೇಶ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ಈ ಹಿಂದೆ ಕೂಡಾ ಸಾಕಷ್ಟು ಬಾರಿ ಜೀವ ಬೆದರಿಕೆ ಕರೆಗಳು ಬಂದಿತ್ತು. ಹಲ್ಲೆ ಯತ್ನ ಕೂಡಾ ನಡೆದಿತ್ತು. ಅಪಘಾತದಿಂದ ಮಹಾಂತೇಶ ಅವರ ಸಾವು ಸಂಭವಿಸಿದೆ. ಹಲ್ಲೆ ನಡೆದಿಲ್ಲ ಎಂದು ಪೊಲೀಸರು ಕೇಸು ಮುಚ್ಚಿ ಹಾಕಲು ಯತ್ನಿಸುತ್ತಿ ದ್ದಾರೆ. ನನ್ನ ಪತಿ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗಬೇಕು ಎಂದು ಮಹಾಂತೇಶ ಅವರ ಪತ್ನಿ ಆಗ್ರಹಿಸಿದ್ದಾರೆ.
Tagged with
snews
ಮಂಗಳೂರು: ಕೆಲಸ ಮುಗಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಸರವನ್ನು ಅಪರಿಚಿತರಿಬ್ಬರು ಬೈಕ್‌ನಲ್ಲಿ ಬಂದು ಕಸಿದು ಪರಾರಿಯಾದ ಘಟನೆ ವರದಿಯಾಗಿದೆ. ಸುರತ್ಕಲ್ ನಿವಾಸಿ ನಾಗಮ್ಮ (೪೨) ಎಂಬವರು ಉರ್ವಸ್ಟೋರ್‌ನಲ್ಲಿರುವ ಭಾರತ್ ಮಹಲ್‌ನಲ್ಲಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ನಿನ್ನೆ ಅವರು ಕೆಲಸ ಮುಗಿಸಿ ರಸ್ತೆಯಲ್ಲಿ ನಡಕೊಂಡು ಹೋಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ಅಪರಿಚಿತರ ತಂಡ ಅವರ ಕುತ್ತಿಗೆಯಿಂದ ೩೨ ಸಾವಿರ ಮೌಲ್ಯದ ಒಂದೂವರೆ ಪವನ್ ತೂಕದ ಚಿನ್ನ ಕಸಿದು ಪರಾರಿಯಾಗಿದ್ದಾರೆ.
Tagged with
cnews
ಮಂಗಳೂರು: ವಿದೇಶಕ್ಕೆ ತೆರಳುವ ಮುನ್ನಾ ದಿನ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ವೆಳ್ಳಿಕೋತ್ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ. ರಾವಣೇಶ್ವರ ಪಾಡಿಕ್ಕಲ್ ನಿವಾಸಿ ದಿ.ನಾರಾಯಣ ಪೊದುವಾಳ್- ಪುಷ್ಪವೇಣಿ ದಂಪತಿ ಪುತ್ರ ಸಜಿತ್(೨೯)ಮೃತ ಯುವಕ. ಶನಿವಾರ ಸಂಜೆ ಸಜಿತ್ ವಳ್ಳಿಕೋತ್ ರಸ್ತೆಯ ಮೂಲಕ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
Tagged with
cnews
ಮಂಗಳೂರು: ಕುಳಾಯಿಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ಅಪಹರಿಸಿದ ಘಟನೆ ಶನಿವಾರ ರಾತ್ರಿ ನಡೆದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಳಾಯಿ ಸಿಂಡಿಕೇಟ್ ಬ್ಯಾಂಕ್ ಹಿಂಬದಿಯ ನಿವಾಸಿ ವಿನಾಯಕ ಕೃಷ್ಣ ಬಾಲ್ಗಿ ಎಂಬವರ ಮನೆಗೆ ನುಗ್ಗಿದ ಕಳ್ಳರು ಮಲಗುವ ಕೋಣೆಯ ಕಪಾಟ್‌ನಲ್ಲಿ ಇಟ್ಟಿದ್ದ ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಆರು ಸಾವಿರ ರೂ. ನಗದು ಹಾಗೂ ಮೊಬೈಲ್ ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮನೆಗೆ ಮೂರು ಬಾಗಿಲುಗಳಿದ್ದು, ಮುಂಬಾಗಿಲು ಮತ್ತು ಮಾಳಿಗೆಯ ಮೇಲಿನ ಬಾಗಿಲು ಮುಚ್ಚಿತ್ತು. ಮನೆಯ ಒಂದು ಬದಿಯ ಬಾಗಿಲು ಅರ್ಧ ತೆರೆದಿಟ್ಟು ಕಾರ್‌ನ ಚಾಲಕ ಮಲಗಿದ್ದ ಎನ್ನಲಾಗಿದ್ದು, ಇದೇ ಬಾಗಿಲಿಂದ ಕಳ್ಳರು ಒಳಗೆ ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದೆ.ಇದೇ ಕಳ್ಳರು ಕಾರ್ ಚಾಲಕನ ಮೊಬೈಲನ್ನೂ ಅಪಹರಿಸಿದ್ದಾರೆ.
ಕುಂದಾಪುರ: ಕಾರುಗಳ ಮುಖಾಮುಖಿ ಡಿಕ್ಕಿ: ಇಲ್ಲಿಗೆ ಸಮೀಪದ ಹೆಮ್ಮಾಡಿ ಮೂವತ್ತುಮುಡಿ ಎಂಬಲ್ಲಿ ಭಾನುವಾರ ಮಾರುತಿ ಓಮ್ನಿ ಕಾರೊಂದು ಎದುರಿನಿಂದ ಬರುತ್ತಿದ್ದ ಮಾರುತಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಸೆಲಿನಾ ಆಲ್ಮೇಡ, ವಿಕ್ಟೋರಿಯಾ, ಆಲಿಸ್ ರೊಡ್ರಿಗಸ್ ಎಂಬವರು ಗಾಯಗೊಂಡಿದ್ದಾರೆ.
ಸುರತ್ಕಲ್: ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ: ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಇಲ್ಲಿನ ಕಾಶೀ ಮಠದ ಬಳಿಯ ನಿವಾಸಿ ಗಿರೀಶ್ ಕಾಮತ್(೪೪) ಎಂಬವರು ಭಾನುವಾರ ಮುರುಡೇಶ್ವರ ಬಳಿ ಪತ್ತೆಯಾಗಿದ್ದಾರೆ. ಅವರನ್ನು ಕರೆತರಲು ಪೊಲೀಸರು ಹಾಗೂ ಅವರ ಮನೆಯವರು ಮುರುಡೇಶ್ವರಕ್ಕೆ ತೆರಳಿದ್ದಾರೆ.
Tagged with
cnews
ಮಂಗಳೂರು: ಎಕ್ಕೂರು ಭಜನಾ ಮಂದಿರದ ಬಳಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆ ಬಾಗಶ: ಭಸ್ಮವಾದ ಘಟನೆ ವರದಿಯಾಗಿದೆ.
ವಿಶಾಲಾಕ್ಷಿ ವಿಶ್ವನಾಥ ನಾಯರ್ ಎಂಬವರಿಗೆ ಸೇರಿದ ಮನೆ ಬೆಂಕಿಗಾಹುತಿಯಾಗಿದ್ದು ಈ ಮನೆಯಲ್ಲಿ ಬಂಟ್ವಾಳ ಎಂಬವರು ಕುಟುಂಬ ಸಹಿತವಾಗಿ ಬಾಡಿಗೆಗೆ ಇದ್ದಾರೆ. ರಜಾ ಸಮಯದಲ್ಲಿ ಈ ಕುಟುಂಬ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ತೆರಳಿದ್ದು, ಈ ವೇಳೆ ಈ ಘಟನೆ ಸಂಭವಿಸಿದೆ. ಇದರಿಂದ ಮನೆಯಲ್ಲಿದ್ದ ಪೀಠೋಪಕರಣ ಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಕಲಾಗಿವೆ. ಸುಮಾರು ಎರಡು ಲಕ್ಷ ರೂ. ನಷ್ಟ ಸಂಭವಿ ಸಿದ್ದು, ಸಾರ್ಟ್‌ಸರ್ಕಿಟ್‌ನಿಂದ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
Tagged with
cnews
ಮಂಗಳೂರು: ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಗಡಿಕಾರರಾದ ಗುತ್ತಿನಾರ್ ಪಿ.ಪ್ರಭಾಕರ ಶೆಟ್ಟಿ (೭೯) ಅವರು ಶಿಬರೂರಿನ ಸ್ವಗೃಹದಲ್ಲಿ ಭಾನುವಾರ ನಿಧನರಾದರು. ಅವರು ಶಿಬರೂರು ಗುತ್ತು ಮನೆತನದ ಯಜಮಾನ ರಾಗಿದ್ದ ಅವರು ಅವಿವಾಹಿತರಾಗಿದ್ದರು. ಮುಂಬಯಿಯ ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್‌ನಲ್ಲಿ ಉದ್ಯೋಗಿಯಾಗಿದ್ದ ಅವರು ೧೯೮೭ರಲ್ಲಿ ಗಡಿ ಪ್ರದಾನವಾದ ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಕ್ಷೇತ್ರದಲ್ಲಿ ಎರಡು ವರ್ಷ ಹಿಂದೆ ನಡೆದ ಬ್ರಹ್ಮ ಕುಂಭಾಭಿಷೇಕದಲ್ಲಿ ಸಮಿತಿಯ ಗೌರವಾಧ್ಯಕ್ಷರಾಗಿದ್ದರು. ಕಳೆದ ವರ್ಷ ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು.
Tagged with
death
ಮಂಗಳೂರು: ಪೊಲೀಸರೆಂದು ಹೇಳಿಕೊಂಡ ಇಬ್ಬರು, ವ್ಯಕ್ತಿಯೋರ್ವರ ನಗದು ಮತ್ತು ಸೊತ್ತು ದೋಚಿದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಕಾರ್ಕಳ ತಾಲೂಕಿನ ಕುಕ್ಕಾಜೆ ಗ್ರಾಮದ ದೊಂಡೇರಂಗಡಿಯ ನಾರಾಯಣ ಕಿಣಿ ಎಂಬವರು ಶನಿವಾರ ಪುರ್ವಾಹ್ನ ೧೧ ಗಂಟೆಯ ಸುಮಾರಿಗೆ ತಮ್ಮ ಕಾರ್‌ನಲ್ಲಿ ಮಣಿಪಾಲದತ್ತ ಸಾಗುತ್ತಿದ್ದಾಗ ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದ ಬಳಿ ಬಿಳಿ ಮಾರುತಿ ಕಾರ್‌ನಲ್ಲಿ ಬಂದ ಇಬ್ಬರು ಕಾರ್ ತಡೆದು ತಾವು ಪೊಲೀಸರೆಂದು ಪರಿಚಯಿಸಿಕೊಂಡುನಗದು ಹಾಗೂ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡರು. ಕಾರ್ ಮಣಿಪಾಲ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೊಗುತ್ತೇವೆ.
ಕಾರ್ ಬಿಡಬೇಕಿದ್ದರೆ ಎರಡು ಲಕ್ಷ ರೂ. ಕೊಡಬೇಕು ಎಂದು ಬೆದರಿಸಿದ್ದರು. ಸಂಜೆ ಕೊಡುತ್ತೇನೆ ಎಂದು ಒಪ್ಪಿಕೊಂಡ ನಾರಾಯಣ ಕಿಣಿ ಸಂಜೆ ಮಣಿಪಾಲದ ಹೋಟೆಲ್ ಒಂದರ ಬಳಿ ಬರುವಂತೆ ತಿಳಿಸಿದ್ದರು. ಸಂಜೆ ಹೋಟೆಲ್ ಬಳಿ ಕಾದರೂ ಅವರು ಬಂದಿರಲಿಲ್ಲ. ಬಳಿಕ ನಾರಾಯಣ ಕಿಣಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಅಪರಿಚಿತ ಆರೋಪಿಗಳು ನಾರಾಯಣ ಕಿಣಿಯವರಿಂದ ೧೦ ಸಾವಿರ ನಗದು, ಮೊಬೈಲ್, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಐಡಿ ಕಾರ್ಡ್, ಕಾರ್‌ನ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದನ್ನು ಹಿಂಪಡೆಯಲು ನಾರಾಯಣ ಕಿಣಿ ಹೋಟೆಲ್ ಬಳಿ ಕಾದಿದ್ದರಾದರೂ ಆರೋಪಿಗಳು ಅತ್ತ ಸುಳಿಯಲೇ ಇಲ್ಲ. ಸಿಕ್ಕಷ್ಟು ಸಾಕೆಂದುಕೊಂಡಿರಬಹುದು.
Tagged with
cnews
ಪುತ್ತೂರು: ಮಾಣಿ- ಮೈಸೂರು ರಾಜ್ಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಬದಿಯ ಮರ ಗಳನ್ನು ಕಡಿಯುತ್ತಿದ್ದ ಸಂದರ್ಭದಲ್ಲಿ ಚಲಿಸುತ್ತಿದ್ದ ಬೈಕೊಂದರ ಮೇಲೆ ಮರ ಬಿದ್ದು ಸವಾರ ತೀವ್ರಸ್ವರೂಪದ ಗಾಯಗೊಂಡಿರುವ ಘಟನೆ ಶನಿವಾರ ಕೌಡಿಚ್ಚಾರ್ ಸಮೀಪದಿಂದ ವರದಿ ಯಾಗಿದೆ.
ಅಮ್ಚಿನಡ್ಕ ನಿವಾಸಿ ಆದಿತ್ಯ ಕಲ್ಲೂರಾಯ ಗಾಯಗೊಂಡವರು.
ಗಾಯಾಳುವನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿ ಸಿರುವುದಾಗಿ ತಿಳಿದು ಬಂದಿದೆ.
ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews
ಮಂಗಳೂರು: ತಾಲೂಕು ಕಚೇರಿ ಎದುರು ನಿವಾಸಿ ಚೆನ್ನಕೇಶವ ಎಂಬವರ ಪತ್ನಿ ರೇಷ್ಮಾ (೨೯) ಭಾನುವಾರ ಮಧ್ಯಾಹ್ನ ತನ್ನ ಮನೆಯ ಬೆಡ್‌ರೂಂನೊಳಗೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದೂವರೆ ವರ್ಷದ ಹಿಂದೆ ಹೊಸದುರ್ಗದ ಪನತ್ತಡಿಯ ರೇಷ್ಮಾ ಮತ್ತು ಸುಳ್ಯದ ಚೆನ್ನಕೇಶವ ಅವರ ವಿವಾಹ ನಡೆದಿತ್ತು. ಗಂಡ-ಹೆಂಡತಿ ಅನ್ಯೋನ್ಯತೆಯಿಂದಿದ್ದು ಮಕ್ಕಳಾಗಿಲ್ಲ ಎಂಬ ಚಿಂತೆಯಿಂದ ಅವರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನ ಪತಿ ಚೆನ್ನಕೇಶವ ಮನೆಗೆ ಬಂದಾಗ ಕೊಠಡಿ ಬಾಗಿಲು ಹಾಕಿಕೊಂಡಿತ್ತು. ಕರೆದಾಗ ಪತ್ನಿ ರೇಷ್ಮಾ ಬಾರದೇ ಇದ್ದಾಗ ಬಾಗಿಲು ಹಾಕಿರುವುದು ಕಂಡುಬಂತು. ನಂತರ ಕಿಟಕಿಯಿಂದ ನೋಡಿದಾಗ ನೇಣು ಬಿಗಿದುಕೊಂಡಿರುವುದು ಕಂಡುಬಂತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews
ಮಂಗಳೂರು: ತುಂಬು ಗರ್ಭಿಣಿಯೋರ್ವರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿಮಧ್ಯೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಕರಣ ಪಾವಂಜೆಯಲ್ಲಿ ನಡೆದಿದೆ. ಮೂಲತಃ ಬಿಜಾಪುರದವರಾಗಿರುವ ಮಮತೈನ್ ಫಿರ್‌ಶೈನ್ ಶೇಖ್ ಹಾಗೂ ಹಸೀನಾ (೨೮) ಕುಟುಂಬ ಕೆಲವು ವರ್ಷಗಳಿಂದ ಮುಲ್ಕಿಯ ಲಿಂಗಪ್ಪಯ್ಯ ಕಾಡು ಎಂಬಲ್ಲಿ ವಾಸವಿದೆ. ಈಗಾಗಲೇ ಮೂವರು ಮಕ್ಕಳನ್ನು ಹೊಂದಿರುವ ಹಸೀನಾ ಅವರು ನಾಲ್ಕನೇ ಬಾರಿ ಗರ್ಭಿಣಿಯಾಗಿದ್ದರು.
ಶನಿವಾರ ಸಂಜೆ ಹೆರಿಗೆಗಾಗಿ ಇವರನ್ನು ಮುಲ್ಕಿಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನಿನ್ನೆ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ೧೦೮ ಆಂಬುಲೆನ್ಸ್‌ಗೆ ಕರೆ ಮಾಡಲಾಗಿತ್ತು. ೧೧ ಗಂಟೆಗೆ ಆಂಬುಲೆನ್ಸ್ ಮೂಲಕ ಮಹಿಳೆಯನ್ನು ಮಂಗ ಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು.
ಪಾವಂಜೆ ಸೇತುವೆ ಬಳಿ ತಲುಪಿದಾಗ ಮಹಿಳೆಗೆ ತೀವ್ರ ತರದ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಸಂದರ್ಭ ಕಾರ್ಯಪ್ರವೃತ್ತರಾದ ವಾಹನದ ತುರ್ತು ವೈದ್ಯಕೀಯ ಸಿಬ್ಬಂದಿ ಕೇಶವ ಮೂರ್ತಿ ಹಾಗೂ ಚಾಲಕ ಪೈಲಟ್ ಗಿರೀಶ್ ಅವರು ವಾಹನವನ್ನು ಅಲ್ಲೇ ನಿಲ್ಲಿಸಿ ಮಹಿಳೆಗೆ ಗ್ಲೂಕೋಸ್ ಅಳವಡಿಸಿ ಹೆರಿಗೆ ಮಾಡಿಸುವ ಕೆಲಸದಲ್ಲಿ ನಿರತರಾಗಿ ೩೦ ನಿಮಿಷಗಳ ಪ್ರಯತ್ನದ ಬಳಿಕ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದರು.
Tagged with
dk,
lnews
ಮಣಿಪಾಲ: ಇಲ್ಲಿನ ನಗರದಾ ದ್ಯಂತ ನೀರಿನ ಹಾಹಾಕಾರ ಇನ್ನೂ ಮುಂದುವರಿದಿದ್ದು, ಈಗಾಗಲೇ ನಗರದ ಕೆಲವು ಹೊಟೇಲು ಕ್ಯಾಂಟೀನು ಗಳು ಮುಚ್ಚಿದರೆ ನೀರಿಲ್ಲದ ಕಾರಣಕ್ಕಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆ ರೋಗಿ ಗಳನ್ನು ಸಹ ದಾಖಲಿಸಿಕೊಳ್ಳುತ್ತಿಲ್ಲ.
ಸ್ವರ್ಣ ಪ್ರಥಮ ಹಂತದ ನೀರು ಮಣಿಪಾಲ ಆಸ್ಪತ್ರೆಗೆ ನೀಡಲಾಗುತ್ತಿದ್ದು, ಇತ್ತೀಚಿನ ಕೆಲವು ದಿನಗಳಿಂದಾಗಿ ಉಡುಪಿ ನಗರಸಭೆಯು ನೀರಿನ ಅಭಾ ವದಿಂದಾಗಿ ಆಸ್ಪತ್ರೆಗೆ ನೀರು ಸರಬ ರಾಜು ಕಡಿತಗೊಳಿಸಿದೆ. ಆದ್ದರಿಂದ ಇಲ್ಲಿನ ರೋಗಿಗಳು ಮತ್ತು ಅವರ ಸಂಬಂಧಿಕರು ನೀರಿಗಾಗಿ ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವುದು ಕಂಡುಬಂದಿದೆ. ಬೇರೆ ವ್ಯವಸ್ಥೆ ಮಾಡಿದ ಆಸ್ಪತ್ರೆ ಆಡಳಿತ ಮಂಡಳಿ ಇದೀಗ ಏಕಾಏಕಿ ಅದನ್ನು ತಡೆದು ರೋಗಿಗಳನ್ನೇ ಆಸ್ಪತ್ರೆಗೆ ತೆಗೆದು ಕೊಳ್ಳದ ನಿರ್ಣಯಕ್ಕೆ ಬಂದಿದೆ. ಕೇವಲ ತುರ್ತು ಸಂದರ್ಭವಿದ್ದಲ್ಲಿ ಮಾತ್ರ ಸೇರಿಸಿಕೊಳ್ಳುತ್ತಿದ್ದಾರೆ. ಉಳಿದ ರೋಗಗಳನ್ನು ಸೇರಿಸಿಕೊಳ್ಳುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ. ಉಡುಪಿ ನಗರದಾದ್ಯಂತ ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ ಹಾಗೂ ತಾಲೂಕು ಕಚೇರಿ ಬಳಿಯಿರುವ ಶೌಚಾಲಯಗಳು ನೀರಿನ ಅಭಾವದಿಂದಾಗಿ ಬಾಗಿಲು ಮುಚ್ಚಿದ್ದು, ಇದರಿಂದ ಬಸ್ ಚಾಲಕರು, ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಈಗಾಗಲೇ ಎರಡು ದಿನಕ್ಕೊಮ್ಮೆ ನೀರನ್ನು ವಿತರಿಸುತ್ತಿರುವ ನಗರಸಭೆಯಂತು ಈ ಮೊದಲೇ ಬಳಕೆದಾರಿಗೆ ಪತ್ರಿಕೆಗಳಲ್ಲಿ ಎಚ್ಚರಿಕೆ ನೀಡುವ ಬದಲು ಉಡುಪಿ ನಗರದ ಜನತೆಗೆ ಯಾವುದೇ ನೀರಿನ ತೊಂದರೆಯಿರುವುದಿಲ್ಲ ಎಂದು ಹೇಳಿರುವುದು ನೀರಿನ ಅಭಾವಕ್ಕೆ ಕಾರಣ ಎನ್ನಲಾಗಿದೆ. ಹೆಚ್ಚಿನ ಕಟ್ಟಡಗಳು ನಗರಸಭೆ ಕುಡಿಯುವ ನೀರನ್ನೇ ಬಳಸಿಕೊಂಡು ಕಾಮಗಾರಿಯನ್ನು ನಡೆಸುತಿರುವ ಆರೋಪ ಇಲ್ಲಿನ ಜನತೆಯದ್ದಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವ ದಲ್ಲಿ ಉಡುಪಿ ಶ್ರೀ ಕೃಷ್ಣ ಮಠ ಹಾಗೂ ಅನಂತೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಇಂದು ಪ್ರಾರ್ಥನೆಯೂ ನಡೆಯಲಿರುವ ಬಗ್ಗೆ ತಿಳಿದುಬಂದಿದೆ.
Tagged with
lnews,
udupi,
water
ಸ್ವಪಕ್ಷೀಯರಿಂದಲೇ ವಿರೋಧ
ಮುಲ್ಕಿ: ಸದಾ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದ್ದ ಹಳೆಯಂಗಡಿ ಗ್ರಾಮ ಪಂಚಾಯತ್ ಇದೀಗ ಮತ್ತೊಂದು ತೊಂದರೆಯಲ್ಲಿ ಸಿಲುಕಿದೆ. ಅಧ್ಯಕ್ಷ ಮಹಾಬಲ ಸಾಲ್ಯಾನ್ ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ಕೊಡುವ ವಿಷಯದಲ್ಲಿ ಐದು ಲಕ್ಷ ರುಪಾಯಿ ಕೇಳಿದ್ದಾರೆಂದು ಅವರದ್ದೇ ಪಕ್ಷದ ಸದಸ್ಯ ಆರೋಪ ಮಾಡಿದ್ದು ಈ ಹಿನ್ನೆಲೆಯಲ್ಲಿ ಮಹಾ ಬಲ ಸಾಲ್ಯಾನ್ ತಕ್ಷಣವೇ ರಾಜೀ ನಾಮೆ ನೀಡಬೇಕೆಂದು ಬಿಜೆಪಿ ಸ್ಥಾನೀಯ ಸಮಿತಿ ಒತ್ತಡ ಹೇರಿದೆ.
ಸಸಿಹಿತ್ಲು ಕಡಲ ಕಿನಾರೆಯಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣ ನಡೆಯುತ್ತಿರುವುದು ಕಾಂಗ್ರೆಸ್ ಆಡಳಿತ ಇರುವ ಕಾಲ ದಿಂದಲೂ ನಡೆದು ಬಂದಿದೆಯಾದರೂ ಪ್ರಸ್ತುತ ಎಲ್ಲಾ ನಿಯಮಾವಳಿಗಳನ್ನು ಉಲ್ಲಂಘಿಸಿ ರೆಸಾರ್ಟ್ ನಿರ್ಮಾಣ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.ಮುಂಬೈ ಮೂಲದ ಮಂಗಳೂರಿನವರೇ ಆಗಿರುವ ಧನಂಜಯ ಎಂಬವರು ಸಸಿಹಿತ್ಲುವಿನಲ್ಲಿ ರೆಸಾರ್ಟ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಈ ಹಿನ್ನೆಲೆಯಲ್ಲಿ ಪಂಚಾಯತ್ ಲೆವಲ್ಲಿನಲ್ಲಿ ಆಗಬಹುದಾದ ಅಡ್ಡಿ-ಆತಂಕಗಳ ನಿವಾರಣೆಗೆ ಆರಂಭದಲ್ಲೇ ಸಾಲ್ಯಾನ್ ಅವರಿಗೆ ಕಾಸು ಕೊಟ್ಟಿದ್ದರು. ಈ ಹಣ ಸಾಕಾಗದೆ ಮಹಾಬಲ ಸಾಲ್ಯಾನ್ ಮತ್ತೆ ಐದು ಲಕ್ಷ ರುಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಸದಸ್ಯರೊಬ್ಬರು ಆರೋಪಿಸಿದ್ದರು.
ರೆಸಾರ್ಟ್ ನಿರ್ಮಾಣ ಮಾಡಲು ಉದ್ದೇಶಿಸಿದವರು ಈ ಬಗ್ಗೆ ಬಹಿರಂಗ ಆರೋಪ ಮಾಡದಿದ್ದರೂ ಸಂಬಂಧಪಟ್ಟವರಿಗೆ ಸಾಲ್ಯಾನ್ ಅವರ ದೊಡ್ಡ ಮೊತ್ತದ ಬೇಡಿಕೆಯ ಬಗ್ಗೆ ತಿಳಿಸಿದ್ದಾರೆನ್ನಲಾಗಿದೆ. ಇದರಿಂದ ಕೆಂಡಾಮಂಡಲವಾಗಿರುವ ಹಳೆಯಂಗಡಿಯ ಬಿಜೆಪಿ ಮುಖಂಡ, ಹಳೆಯಂಗಡಿ ಪಂಚಾಯತ್‌ನಲ್ಲಿ ಬಿಜೆಪಿ ಧ್ವಜ ಮೊದಲ ಬಾರಿಗೆ ಹಾರಿಸಲು ಕಾರಣವಾಗಿದ್ದ ಸತೀಶ್ ಭಟ್ ಕೊಳುವೈಲು ಕೂಡಲೇ ಸಾಲ್ಯಾನ್‌ಗೆ ಛೀಮಾರಿ ಹಾಕಿ ತತ್‌ಕ್ಷಣ ರಾಜೀನಾಮೆ ಕೊಡಬೇಕು, ಇಂಥ ಆರೋಪ ಹೊತ್ತು ಪಂಚಾಯತ್ ಅಧ್ಯಕ್ಷ ಸ್ಥಾನದಲ್ಲಿ ಕೂರಬಾರದು ಎಂದಿದ್ದಾರೆ. ಆದರೆ ಸಾಲ್ಯಾನ್ ಇದಕ್ಕೆ ಒಪ್ಪಿಲ್ಲ. ಆದರೆ ಪಟ್ಟು ಬಿಡದ ಸತೀಶ್ ಭಟ್ ನಿಮ್ಮನ್ನು ಈ ಸ್ಥಾನದಲ್ಲಿ ಕೂರಿಸಿದವರು ನಾವು. ಕೂರಿಸಿದವರಿಗೆ ತೆಗೆದು ಹಾಕುವುದು ಹೇಗೆಂಬುದು ಗೊತ್ತು ಎಂದಿದ್ದಾರೆ.
ಸಾಲ್ಯಾನ್ ರಾಜೀನಾಮೆ ನೀಡಿದರೆ ಸದ್ಯ ಈಗ ಇರುವ ಉಪಾಧ್ಯಕ್ಷೆ ಮಮತಾ ಮೆಂಡನ್ ಅವರನ್ನು ಅಧ್ಯಕ್ಷೆಯನ್ನಾಗಿ ಮಾಡುವ ಸಾಧ್ಯತೆ ಇದೆ. ಆದರೆ ಇಲ್ಲಿ ಬಿಜೆಪಿಯ ಸದಸ್ಯ ಬಲ ಏಳಕ್ಕೆ ಕುಸಿದಿದ್ದು ಕಾಂಗ್ರೆಸ್ ಒಂಬತ್ತು ಸ್ಥಾನ ಹೊಂದಿದೆ. ಆರು ತಿಂಗಳಷ್ಟೇ ಉಳಿದಿರುವ ಅಧ್ಯಕ್ಷ ಅವಧಿಗೆ ಬಿಜೆಪಿ ಅಧ್ಯಕ್ಷ ಪದವಿಗೆ ಏರಲು ಸಾಧ್ಯವಾಗದಿದ್ದರೆ ತೊಂದರೆಯಿಲ್ಲ. ಕಾಂಗ್ರೆಸಿಗರು ಬೇಕಾದರೆ ಆ ಪದವಿ ಏರಲಿ. ಆದರೆ ಭ್ರಷ್ಟಾಚಾರ ಆರೋಪ ಹೊತ್ತು ಅಧ್ಯಕ್ಷ ಪದವಿಯಲ್ಲಿ ಮುಂದುವರಿಯಬಾರದು ಎಂದು ಸತೀಶ್ ಭಟ್ ಹೇಳಿದ್ದಾರೆ. ಇಲ್ಲಿನ ಬಿಜೆಪಿಯವರು ಕೂಡಾ ಇದನ್ನೇ ಹೇಳುತ್ತಿದ್ದಾರೆ.
ಸಾಲ್ಯಾನ್ ಮೇಲಿನ ಭ್ರಷ್ಟಾಚಾರ ಆರೋಪದಿಂದಾಗಿ ಇಲ್ಲಿ ಬಿಜೆಪಿಯನ್ನು ಹೇಗಾದರೂ ಮಾಡಿ ಕೆಳಗಿಳಿಸಿ ಕಾಂಗ್ರೆಸನ್ನು ಅಧಿಕಾರಕ್ಕೇರಿಸಬೇಕೆಂದು ಕನಸು ಕಾಣುತ್ತಿದ್ದ ಕಾಂಗ್ರೆಸಿಗರಿಗೆ ಈಗ ದಾರಿ ಸುಗಮವಾದಂತಾಗಿದೆ.
‘ಆರೋಪವನ್ನು ಸಾಬೀತು ಮಾಡಿ; ಕೆಳಗಿಳಿಯುತ್ತೇನೆ!’
ರಾಜೀನಾಮೆ ಸಲ್ಲಿಸುವ ಒತ್ತಡಕ್ಕೆ ಬಿದ್ದಿರುವ ಮಹಾಬಲ ಸಾಲ್ಯಾನ್ ಅವರು ನನ್ನ ಮೇಲೆ ಆರೋಪ ಮಾಡಿರುವ ಸದಸ್ಯನೇ ಮಹಾ ಭ್ರಷ್ಟ. ಆತನೇ ಹಣ ಪಡೆದಿದ್ದಾನೆ. ಬೇರೆ ಯಾರೂ ಆರೋಪ ಮಾಡಿಲ್ಲ. ನನ್ನ ಮೇಲಿನ ಆರೋಪವನ್ನು ಪುರಾವೆ ಸಮೇತ ಸಾಬೀತು ಪಡಿಸಲಿ. ಆನಂ ತರ ನಾನು ಬೇಕಾದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಅಲ್ಲದೆ ಕೇವಲ ಸ್ಥಾನೀಯ ಸಮಿತಿಯವರು ಕೇಳಿದರೆಂದು ರಾಜೀನಾಮೆ ನೀಡಲು ಸಾಧ್ಯವಿಲ್ಲ. ಕ್ಷೇತ್ರ ಸಮಿತಿ, ತಾ.ಪಂ ಮತ್ತು ಜಿ.ಪಂ ಸದಸ್ಯರೂ ನನ್ನ ರಾಜೀನಾಮೆ ಬೇಕೆಂದು ಕೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ನನ್ನ ಮೇಲೆ ಹಿಂದಿನಿಂದಲೂ ಅಷ್ಟು ಹಣ ಪಡೆದಿದ್ದೇನೆ, ಇಷ್ಟು ಹಣ ಪಡೆದಿದ್ದೇನೆಂದು ಆರೋಪ ಮಾಡುತ್ತಿದ್ದರು. ಆದರೆ ಅದನ್ನು ಯಾರೂ ಸಾಬೀತು ಮಾಡಿಲ್ಲ. ಮೊದಲು ಆ ಕೆಲಸವನ್ನು ಮಾಡಲಿ ಎಂದು ಸಾಲ್ಯಾನ್ ಎದಿರೇಟು ನೀಡಿದ್ದಾರೆ.
Tagged with
dk,
lnews
ಲೀಗ್‌ನ ಅಂತಿಮ ಪಂದ್ಯ; ಸಚಿನ್-ಸ್ಮಿತ್ ಮುರಿಯದ ಜೊತೆಯಾಟ
ಜೈಪುರ್: ಚೆನ್ನೈ ವಿರುದ್ಧದ ಮಹತ್ವಪೂರ್ಣ ಸೆಮಿಫೈನಲ್‌ಗೂ ಮುನ್ನ ಮುಂಬೈ ಇಂಡಿಯನ್ಸ್ ನಿನ್ನೆ ಉತ್ತಮವಾಗಿ ಅಭ್ಯಾಸ ನಡೆಸಿದೆ. ಸಚಿನ್ ತೆಂಡೂಲ್ಕರ್ ಹಾಗೂ ಡ್ವೇಯ್ನ್ ಸ್ಮಿತ್ ಪ್ರದರ್ಶಿಸಿದ ಅತ್ಯದ್ಭುತ ಜೊತೆಯಾಟದ ನೆರವಿನಿಂದ ನಿನ್ನೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹತ್ತು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ಆರಂಭದಲ್ಲೇ ವೇಗಿ ಕುಲಕರ್ಣಿ ದಾಳಿಗೆ ಸಿಲುಕಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಶೇನ್ ವಾಟ್ಸನ್ (೪೫) ಹಾಗೂ ರೋಜರ್ ಬಿನ್ನಿ ನಡೆಸಿದ ಸ್ಫೋಟಕ ಆಟದ ನೆರವಿನಿಂದ ನಿಗದಿತ ಓವರ್‌ಗಳಲ್ಲಿ ತಂಡ ಆರು ವಿಕೆಟ್ ನಷ್ಟಕ್ಕೆ ೧೬೨ ರನ್‌ಗಳ ಉತ್ತಮ ಮೊತ್ತವನ್ನು ಪೇರಿಸಿತು. ಬಿನ್ನಿ ಕೇವಲ ೧೭ ಎಸೆತಗಳಲ್ಲಿ ಎರಡು ಸಿಕ್ಸ್ ಹಾಗೂ ಮೂರು ಬೌಂಡರಿ ನೆರವಿನಂದ ೩೦ ರನ್ ಗಳಿಸಿದರು. ಈ ಜೋಡಿ ಐದನೇ ವಿಕೆಟ್‌ಗೆ ಆರು ಓವರ್‌ಗಳಲ್ಲಿ ೫೩ ರನ್‌ಗಳ ಉತ್ತಮ ಮೊತ್ತಗಳ ಜೊತೆಯಾಟ ನಡೆಸಿದರು. ಓವೈಸ್ ಷಾ ಅಜೇಯ ೨೮ ರನ್ ಗಳಿಸಿದರು. ಮುಂಬೈ ಪರ ಧವಲ್ ಕುಲಕರ್ಣಿ ಮೂರು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಮುಂಬೈ ನಂತರ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು. ಸಚಿನ್ ಜೊತೆ ಆರಂಭಿಕರಾಗಿ ಕಾಣಿಸಿಕೊಂಡಿದ್ದ ಡ್ವೇಯ್ನ್ ಸ್ಮಿತ್ ತಾನೊಬ್ಬ ಎಂತಹ ಆಟಗಾರ ಎಂಬುದನ್ನು ತೋರಿಸಿಕೊಟ್ಟರು. ತಂಡ ಇನ್ನೂ ೧೨ ಎಸೆತ ಬಾಕಿ ಉಳಿದಿರುವಂತೆ ೧೬೩ ರನ್ ಗಳಿಸಿ ಭರ್ಜರಿಯಾಗಿ ಪಂದ್ಯವನ್ನು ಕೈವಶ ಮಾಡಿಕೊಂಡಿತು. ಅದರಲ್ಲೂ ವಾಟ್ಸನ್, ಟೇಟ್ ಹಾಗೂ ತ್ರಿವೇದಿ ತೀವ್ರವಾಗಿ ದಂಡನೆಗೊಳಗಾದರೂ ವಿಕೆಟ್ ಪಡೆಯುವ ಯಾವುದೇ ಅವಕಾಶವನ್ನು ಮುಂಬೈ ಬ್ಯಾಟ್ಸ್‌ಮೆನ್‌ಗಳು ನೀಡಲಿಲ್ಲ. ಅನೇಕ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು, ತಂಡಕ್ಕೆ ಮಾರಕ ಕೂಡ ಆಯಿತು.
ಮುಂಬೈ ಪರ ಸ್ಮಿತ್ ಕೇವಲ ೫೮ ಎಸೆತಗಳಲ್ಲಿ ಮೂರು ಸಿಕ್ಸ್ ಹಾಗೂ ಹತ್ತು ಬೌಂಡರಿಗಳ ನೆರವಿನಿಂದ ೮೭ ರನ್ ಗಳಿಸಿದರೆ ಸಚಿನ್ ಕೂಡ ಆಕರ್ಷಕ ೫೮ ರನ್ ಸಿಡಿಸಿದರು. ಆದರೆ ಶೇನ್ ವಾಟ್ಸನ್ ಮಾತ್ರ ತಾನೆಸೆದ ಮೂರು ಓವರ್‌ಗಳಲ್ಲಿ ಕೇವಲ ೧೭ ರನ್ ಬಿಟ್ಟುಕೊಟ್ಟು ಉತ್ತಮ ಬೌಲರ್ ಎನಿಸಿಕೊಂಡರು.
Tagged with
tnews
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿಗೆ ಸೋಲು
ಹೈದರಾಬಾದ್: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಚೇಸ್ ಮಾಡುವುದು ಕಠಿಣ ಎಂದು ಗೊತ್ತಿದ್ದರೂ ಡೆಕ್ಕನ್ ಒಡ್ಡಿದ್ದ ಅಲ್ಪ ಮೊತ್ತವನ್ನು ಬೆನ್ನಟ್ಟುವಲ್ಲಿ ಬೆಂಗಳೂರು ಸಂಪೂರ್ಣವಾಗಿ ಎಡವಿದ್ದು, ಈ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದೆ. ಅತ್ತ ಚೆನ್ನೈ ಕೂಡ ಆರ್‌ಸಿಬಿಯಷ್ಟೇ ೧೭ ಅಂಕ ಹೊಂದಿದ್ದರೂ ನೆಟ್ ರನ್‌ರೇಟ್ ಆಧಾರದಲ್ಲಿ ಮುಂದಿದ್ದ ಕಾರಣ ಧೋನಿ ಪಡೆ ಅಚ್ಚರಿಯ ರೀತಿಯಲ್ಲಿ ಸೆಮೀಸ್‌ಗೆ ಲಗ್ಗೆಯಿಟ್ಟಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಡೆಕ್ಕನ್ ಆರ್‌ಸಿಬಿ ಬೌಲರ್‌ಗಳ ಮಾರಕ ದಾಳಿಗೆ ಸಂಪೂರ್ಣವಾಗಿ ನೆಲಕಚ್ಚಿದರೂ ಮಧ್ಯಮ ಕ್ರಮಾಂಕದಲ್ಲಿ ಜೆಪಿ ಡ್ಯುಮಿನಿ ನಡೆಸಿದ ಭರ್ಜರಿ ಅರ್ಧಶತಕದ ನೆರವಿನಿಂದ ತಂಡ ನಿಗದಿತ ೨೦ ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೧೩೨ ರನ್ ಗಳಿಸಲಷ್ಟೇ ಶಕ್ತವಾಯಿತು. ಡ್ಯುಮಿನಿ ಕೇವಲ ೫೩ ಎಸೆತದಲ್ಲಿ ೭೩ ರನ್ ಗಳಿಸಿದರು. ಆರ್‌ಸಿಬಿ ಪರ ವಿನಯ್ ಕುಮಾರ್ ಮೂರು ಹಾಗೂ ಜಹೀರ್ ಎರಡು ವಿಕೆಟ್ ಪಡೆದರು. ಆದರೆ ಗುರಿ ಬೆನ್ನತ್ತಿದ್ದ ಆರ್‌ಸಿಬಿಗೆ ಸ್ಫೋಟಕ ಕ್ರಿಸ್ ಗೇಲ್ ಸ್ಫೋಟಕ ಆರಂಭ ನೀಡಿದ್ದರೂ ಡೇಲ್ ಸ್ಟೇಯ್ನ್ ಹಾಗೂ ಅಮಿತ್ ಮಿಶ್ರಾ ಅತ್ಯದ್ಭುತ ಬೌಲಿಂಗ್ ಉತ್ತರ ಕೊಡುವಲ್ಲಿ ತಂಡ ಸಂಪೂರ್ಣವಾಗಿ ಎಡವಿತು. ಪರಿಣಾಮ ತಂಡ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ ೧೨೩ ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮ ಓವರ್‌ನಲ್ಲಿ ತಂಡಕ್ಕೆ ೧೪ ರನ್‌ಗಳ ಅಗತ್ಯವಿದ್ದರೂ ಕೇವಲ ಐದು ರನ್ ಗಳಿಸಲಷ್ಟೇ ಗಳಿಸಿತು. ಗೇಲ್ ಕೇವಲ ೧೦ ಎಸೆತಗಳಲ್ಲಿ ಎರಡು ಸಿಕ್ಸ್ ಹಾಗೂ ಮೂರು ಬೌಂಡರಿ ನೆರವಿನಿಂದ ೨೭ ರನ್ ಗಳಿಸಿದಾಗ ತಂಡ ಉತ್ತಮ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದು ಎಲ್ಲರೂ ನಂಬಿದ್ದರು. ಆದರೆ ಸ್ಟೇಯ್ನ್ ಎಲ್ಲವನ್ನು ಬದಲಾಯಿಸಿದರು. ಗೇಲ್ ಹಾಗೂ ದಿಲ್ಶಾನ್ (೫) ವಿಕೆಟ್ ಪಡೆಯುವುದರೊಂದಿಗೆ ಆರ್‌ಸಿಬಿಗೆ ತೀವ್ರ ಹಿನ್ನೆಡೆ ತಂದರು. ಆದರೆ ನಂತರ ದಾಳಿ ನಡೆಸಿದ ಮಿಶ್ರಾ ತನ್ನ ಒಂದೇ ಓವರ್‌ನಲ್ಲಿ ಸ್ಫೋಟಕ ಡಿವಿಲಿಯರ‍್ಸ್ ಹಾಗೂ ಅಗರ್‌ವಾಲ್ (೦) ವಿಕೆಟ್ ಪಡೆದಾಗ ಆರ್‌ಸಿಬಿ ಮರ್ಮಾಘಾತ ಕಂಡಿತು. ಈ ವೇಳೆ ಆರ್‌ಸಿಬಿ ಸ್ಥಿತಿ ೫೭ ರನ್‌ಗೆ ನಾಲ್ಕು ವಿಕೆಟ್. ಆದರೆ ಕೊಹ್ಲಿ ಹಾಗೂ ತಿವಾರಿ ಆರನೇ ವಿಕೆಟ್‌ಗೆ ೪೬ ರನ್‌ಗಳ ಅಮೂಲ್ಯ ಜೊತೆಯಾಟ ನಡೆಸಿದರು. ಆದರೆ ತಲಾ ಎರಡು ಸಿಕ್ಸ್ ಹಾಗೂ ಬೌಂಡರಿ ನೆರವಿನಿಂದ ೪೦ ರನ್ ಗಳಿಸಿದ್ದ ಕೊಹ್ಲಿ ಔಟಾದಾಗ ತಂಡ ಹಣೆಬರಹವೂ ಬದಲಾಯಿತು.
Tagged with
tnews
ದೆಹಲಿ: ಸದ್ಯದ ಐಪಿಎಲ್ ಋತು ವಿವಾದದಿಂದಲೇ ಸುದ್ದಿಯಲ್ಲಿರುವಾಗ ಟೂರ್ನಿಗೆ ಮತ್ತೊಂದು ಹೊಡೆತ ಬೀಳುವ ಲಕ್ಷಣ ಗೋಚರಿಸಿದೆ. ಐಪಿಎಲ್ ವಿರುದ್ಧ ಸಮರಸಾರಿರುವ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ನಾಯಕ ಕೀರ್ತಿ ಆಜಾದ್ ಟೂರ್ನಿ ಯನ್ನು ನಿಷೇಧಿಸಬೇಕೆಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದ ಎದುರು ನಿನ್ನೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ವೇಳೆ ಮತ್ತೊರ್ವ ಮಾಜಿ ಕ್ರಿಕೆಟರ್ ವಿವೇಕ್ ರಜ್ದಾನ್ ಉಪಸ್ಥಿತರಿದ್ದರು.
ಟೂರ್ನಿಯನ್ನು ವೀಕ್ಷಿಸುವ ಎಲ್ಲರಿಗೂ ಒಂದು ಪ್ರಶ್ನೆಯನ್ನು ನಾನು ಕೇಳಲು ಬಯಸುತ್ತೇನೆ. ಐಪಿಎಲ್ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಂಡಿದೆಯೇ? ಅಲ್ಲದೆ ಕ್ರೀಡೆಯಲ್ಲಿ ರಾಜಕೀಯವೇ ತುಂಬಿ ಕೊಂಡಿದೆ. ಕ್ರಿಕೆಟ್‌ನ್ನು ದೇಶದಲ್ಲಿ ಧರ್ಮ ವಾಗಿ ಸ್ವೀಕರಿಸಿದ್ದಾರೆ. ಆದರೆ ಈಗಿನ ಯುವ ಆಟಗಾರರು ಐಪಿಎಲ್‌ನಲ್ಲಿ ಆಡಲು ಇಚ್ಛೆ ಹೊಂದಿದ್ದಾರೆಯೇ ವಿನಹ ದೇಶದ ಪರ ಅಲ್ಲ ಎಂದು ಆಜಾದ್ ಇದೇ ವೇಳೆ ತಿಳಿಸಿದರು. ಈ ಹಿಂದೆ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಟೂರ್ನಿಯ ಐವರು ಯುವ ಆಟಗಾರರನ್ನು ಬಿಸಿಸಿಐ ಅಮಾನತುಗೊಳಿಸಿತ್ತು.
ಕೆಕೆಆರ್ ಮಾಲಕ ಶಾರುಖ್ ಖಾನ್ ಮೈದಾನದ ಭದ್ರತಾ ಅಧಿಕಾರಿ ಜೊತೆ ವಾಗ್ವಾದ ನಡೆಸಿದ್ದು ಅಸಭ್ಯ ವರ್ತನೆ ಅಲ್ಲದೆ ಆರ್‌ಸಿಬಿ ಆಟಗಾರ ನೊಬ್ಬ ಮಹಿಳೆಯ ಮೇಲೆ ಅಸಭ್ಯ ರೀತಿಯಲ್ಲಿ ವರ್ತಿಸಿದ್ದ ಎಂಬ ಆರೋಪ ಟೂರ್ನಿಗೆ ಕಪ್ಪು ಚುಕ್ಕೆಯಾಗಿದೆ.
Tagged with
tnews
ವಿಟ್ಲ: ಪ್ರಖ್ಯಾತ ವಾಗ್ಮಿ ಹಾಗೂ ಮುಸ್ಲಿಮರ ಖ್ಯಾತನಾಯಕ ಫಾರೂಕ್ ನಈಮಿ ಕೊಲ್ಲಂ ಅವರು ಇಂದು ವಿಟ್ಲ ಸಮೀಪದ ಕೊಡಂಗಾಯಿಗೆ ಆಗಮಿಸಲಿದ್ದಾರೆ.
ಕೊಡಂಗಾಯಿ ಟಿಪ್ಪುನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್‌ನ ಕಾರ್ಯದರ್ಶಿ ಕೆ.ಎ ಹಮೀದ್ ಕೊಡಂಗಾಯಿ ಅವರು ವಿಟ್ಲದಲ್ಲಿ ಇತ್ತೀಚೆಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕೊಡಂಗಾಯಿ ಟಿಪ್ಪುನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್‌ನ ವತಿಯಿಂದ ಇದೇ ೨೧ರ ಸೋಮವಾರ ರಾತ್ರಿ ಎರಡನೇ ಸ್ವಲಾತ್ ವಾರ್ಷಿಕ ಮಹಾ ಸಮ್ಮೇಳನ ಟಿಪ್ಪುನಗರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ದುಬಾಯಿ ಇಮಾಮರಾದ ಮಹಮ್ಮದ್ ಮುಸ್ಲಿಯಾರ್ ಅವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಶೈಖುನಾ ತಾಜುಲ್ ಉಲಾಮಾ ಉಳ್ಳಾಲ ತಂಙಳ್ ವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಾರುನ್ನಜಾತ್ ಎಜುಕೇಶನಲ್ ಸೆಂಟರ್‌ನ ಜತೆ ಕಾರ್ಯದರ್ಶಿ ಅಬ್ದುಲ್ ಹಮೀದ್ ಸಖಾಫಿ, ಸಂಚಾಲಕರಾದ ಅಬ್ದುಲ್ ಖಾದರ್ ಫೈಝಿ, ಟಿಪ್ಪುನಗರ ಖತೀಬರಾದ ಅಬೂಬಕ್ಕರ್ ಮದನಿ, ಎಸ್‌ವೈಎಸ್ ವಿಟ್ಲ ಅಧ್ಯಕ್ಷರಾದ ಉಮ್ಮರ್ ವಿಟ್ಲ, ಕಾರ್ಯದರ್ಶಿ ಲತೀಫ್ ಪರ್ತಿಪ್ಪಾಡಿ, ಕೋಶಾಧಿಕಾರಿ ಹಸೈನಾರ್, ಎಸ್‌ಎಸ್‌ಎಫ್ ವಿಟ್ಲ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಸಅದಿ, ಮುಖಂಡ ಮುಸ್ತಾಫ ಕೋಡಪದವು ಉಪಸ್ಥಿತರಿದ್ದರು.
Tagged with
dk,
lnews
ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಬಿ.ಎಸ್.ಯಡಿಯೂರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ.ವಿದೇಶ ಪ್ರವಾಸದಲ್ಲಿದ್ದ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ಗಡ್ಕರಿ ಹಿಂತಿರುಗಿದ್ದು ಯಾವುದೇ ಕ್ಷಣದಲ್ಲಿ ಯಡಿಯೂರಪ್ಪ ಅವರಿಗೆ ಶೋಕಾಸ್ ನೀಡುವ ಸಾಧ್ಯತೆ ಇದೆ. ಮುಂಬಾಯಿನಲ್ಲಿ ನಡೆಯಲಿ ರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೂ ಮುನ್ನವೇ ಅಥವಾ ನಂತರವೇ ಎಂಬ ಬಗ್ಗೆ ಜಿeಸೆ ಇದೆ. ಆದರೆ ಗಡ್ಕರಿಯವರೇ ಸ್ವತಃ ತಕ್ಷಣವೇ ಯಡಿಯೂರಪ್ಪರ ವಿರುದ್ದ ಶಿಸ್ತುಕ್ರಮಕೈಗೊಳ್ಳಲು ಆಸಕ್ತರಾಗಿದ್ದಾರೆ.
ಆದರೆ ವಾರಾಂತ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ವಿಷಯ ಚರ್ಚೆಗೆ ಗ್ರಾಸವಾಗ ಬಾರದೆಂಬ ಮಾತು ಕೇಳಿ ಬಂದಿದೆ. ಒಂದು ವೇಳೆ ಸಹಮತ ವ್ಯಕ್ತಗೊಂಡರೆ ರಾಷ್ಟ್ರೀಯ ಕಾರ್ಯಕಾರಿಣಿಯ ನಂತರ ಪಕ್ಷದಿಂದಲೇ ಯಡಿಯೂರಪ್ಪ ರನ್ನು ಉಚ್ಚಾಟಿಸುವ ನಿರ್ಧಾರ ತೆಗೆದು ಕೊಳ್ಳಲಿದೆ. ಕರ್ನಾಟಕ ಜನತಾಪಾರ್ಟಿ ಎಂಬ ಪ್ರಾದೇಶಿಕ ಪಕ್ಷ ರಚನೆಗೆ ಹೊರಟಿರುವ ಯಡಿಯೂರಪ್ಪ ಪಕ್ಷದಿಂದಲೇ ಉಚ್ಛಾಟಿಸಿಕೊಳ್ಳಲು ನಿತ್ಯ ಪಕ್ಷದ ಮುಖಂಡರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಸ್ವತಃ ಪಕ್ಷ ತೊರೆಯುವ ಬದಲು ಉಚ್ಚಾಟನೆಗೊಂಡರೆ ಜನರಿಂದ ಅನುಕಂಪ ದೊರೆಯುತ್ತದೆ ಎಂಬ ಭಾವನೆ ಅವರದ್ದು, ಇದಕ್ಕಾಗಿ ಅಡ್ವಾಣಿ ವಿರುದ್ಧವೇ ಟೀಕಾಪ್ರಹಾರ ಮಾಡಿದ್ದಾರೆ. ಉಚ್ಚಾಟನೆ ಗೊಳ್ಳುವ ವರೆಗೂ ಹೇಳಿಕೆಗಳನ್ನು ನೀಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.
Tagged with
snews,
yeddi
ಹಣಕ್ಕಾಗಿ ಯಡ್ಡಿಗೆ ಕೈಯೊಡ್ಡಿದ ಮಾಧಮ ಮಿತ್ರರು
ಯಡ್ಡಿಯ ಡೈರಿ ತೆರೆದಿಟ್ಟ ರಹಸ್ಯ
ಮಂಗಳೂರು: ಗಣಿಹಗರಣದಲ್ಲಿ ಸಿಲುಕಿ ಸಿಬಿಐ ತನಿಖೆ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಾನು ಮುಳುಗುತ್ತಿರುವುದಲ್ಲದೆ ಇನ್ನಷ್ಟು ಜನರನ್ನು ಎಳೆದುಕೊಳ್ಳುವ ಸಾಧ್ಯತೆ ಇದೆ. ಗಣಿ ಹಗರಣದ ಧೂಳು ಮೆತ್ತಿಕೊಂಡವರಲ್ಲಿ ಪತ್ರಕರ್ತ ಮಿತ್ರರೂ ಇದ್ದಾರೆ ಎಂಬ ವಿಷಯವೀಗ ಯಡ್ಡಿ ಡೈರಿಯಿಂದ ಬಹಿರಂಗವಾಗಿದೆ.
ಕಳೆದ ಮೇ೧೬ರಂದು ಬೆಳಿಗ್ಗೆ ಎಸ್ಪಿ ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದ ಸಿಬಿಐ ತಂಡ ಯಡಿಯೂರಪ್ಪರವರ ಬೆಂಗಳೂರಿನ ಮನೆಗಳು, ಕಚೇರಿ ಹಾಗೂ ಶಿವಮೊಗ್ಗದಲ್ಲಿರುವ ಅವರ ಮತ್ತು ಅವರ ಮಗಳ ಮನೆಗಳಿಗೆ ಏಕ ಕಾಲದಲ್ಲಿ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಹೀಗೆ ವಶಪಡಿಸಿಕೊಂಡ ದಾಖಲೆಗಳಲ್ಲಿ ಒಂದಾ ಗಿರುವ ಯಡಿಯೂರಪ್ಪರ ಪರ್ಸನಲ್ ಡೈರಿಯಲ್ಲಿ ಯಡ್ಡಿಯಿಂದ ಹಫ್ತಾ ಪಡೆ ಯುತ್ತಿದ್ದ ರಾಜ್ಯದ ಪತ್ರಕರ್ತರ ದೊಡ್ಡ ಪಟ್ಟಿಯೇ ಇದೆ.
ಯಡ್ಡಿಯಿಂದ ಲಕ್ಷ ಲಕ್ಷ ರೂ.ಗಳ ಮೊತ್ತದಲ್ಲಿ ಹಫ್ತಾ ಪಡೆಯುತ್ತಿದ್ದ ೧೭೯ಪತ್ರಕರ್ತರ ಪ್ರಸ್ತಾಪವಿರುವುದು ಬಹಿರಂಗಗೊಂಡಿದೆ. ಇದರಲ್ಲಿ ೧೧೪ಪತ್ರಕರ್ತರ ಹೆಸರು ಸ್ಪಷ್ಟವಾಗಿದ್ದರೆ ೬೫ ಪತ್ರಕರ್ತರ ಹೆಸರು ಸ್ಪಷ್ಟವಾಗಿಲ್ಲ. ಬದಲಿಗೆ ಸಂದಾಯವಾಗುತ್ತಿದ್ದ ಹಣದ ಪ್ರಸ್ತಾಪ ಇದೆ. ಯಡ್ಡಿಯಿಂದ ಹಫ್ತಾ ಪಡೆಯುತ್ತಿದ್ದವರಲ್ಲಿ ಬೆಂಗಳೂರಿನ ಪತ್ರಕರ್ತರದು ಸಿಂಹಪಾಲು, ಅದರ ನಂತರದ ಸ್ಥಾನದಲ್ಲಿರುವುದೇ ಮಂಗಳೂರು ಎಂಬುದು ಒಂದು ವಿಶೇಷ. ಯಡ್ಡಿಯ ಡೈರಿಯಲ್ಲಿ ಬೆಂಗಳೂರಿನ ೩೭ಪತ್ರಕರ್ತರ ಹೆಸರು ಸ್ಪಷ್ಟವಾಗಿ ನಮೂದಾಗಿದ್ದರೆ, ಇತರ ೧೮ಮಂದಿಯ ಪ್ರಸ್ತಾಪ ಮಾತ್ರ ಇದೆ. ಮಂಗಳೂರಿನ ಪತ್ರಕರ್ತರಲ್ಲಿ ಐವರ ಹೆಸರು ಸ್ಪಷ್ಟವಾಗಿದ್ದು, ಇತರ ೧೨ಮಂದಿಯ ಪ್ರಸ್ತಾಪ ಮಾಡಲಾಗಿದೆ. ಪತ್ರಕರ್ತರ ಹೆಸರು ಹಾಗೂ ಅವರಿಗೆ ಸಂದಾಯವಾಗುತ್ತಿದ್ದ ಮೊತ್ತವನ್ನು ಸಿಬಿಐ ಅಧಿಕಾರಿಗಳು ವಿಂಗಡಿಸಿದ್ದು, ಈ ವಿಷಯ ತನಿಖೆ ನಡೆಸಲಿದ್ದಾರೆ.
ಯಡ್ಡಿಯಿಂದ ಹಪ್ತಾ ಪಡೆಯುತ್ತಿದ್ದ ಮೈಸೂರಿನ ಎಂಟು ಮಂದಿಯ ಹೆಸರು ಸ್ಪಷ್ಟವಾಗಿದ್ದರೆ, ಎಂಟು ಮಂದಿಯ ಪ್ರಸ್ತಾಪ ಮಾತ್ರ ಇದೆ. ಚಾಮರಾಜ ನಗರ, ಉಡುಪಿಯಲ್ಲಿ ಇಬ್ಬರು, ಬಾಗಲಕೋಟೆ, ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ)ಮೂವರು, ದಾವಣಗೆರೆಯಲ್ಲಿ ನಾಲ್ವರ ಹೆಸರು ಸ್ಪಷ್ಟವಾಗಿದೆ.
ಹಾಸನದಲ್ಲಿ ಆರು ಮಂದಿಯ ಹೆಸರು ಹಾಗೂ ನಾಲ್ವರ ಪ್ರಸ್ತಾಪ ಇದೆ. ಚಿಕ್ಕಬಳ್ಳಾಪುರದಲ್ಲಿ ನಾಲ್ವರ ಹೆಸರು ಇಬ್ಬರ ಪ್ರಸ್ತಾಪ ಇದೆ. ಕೋಲಾರದಲ್ಲಿ ನಾಲ್ವರ ಹೆಸರು ಐವರ ಪ್ರಸ್ತಾಪ ಇದೆ. ತುಮಕೂರಿನಲ್ಲಿ ನಾಲ್ವರ ಹೆಸರು ಏಳು ಮಂದಿಯ ಪ್ರಸ್ತಾಪ ಇದೆ. ಚೆಕ್ಕಮಗಳೂರಿನಲ್ಲಿ ಮೂವರ ಹೆಸರು ನಾಲ್ವರ ಪ್ರಸ್ತಾಪ ಇದೆ. ಕೊಡಗಿನಲ್ಲಿ ಐವರ ಹೆಸರು ನಾಲ್ವರ ಪ್ರಸ್ತಾಪ ಇದೆ. ಶಿವಮೊಗ್ಗದಲ್ಲಿ ನಾಲ್ವರ ಹೆಸರು ಹನ್ನೊಂದು ಮಂದಿಯ ಪ್ರಸ್ತಾಪ ಇದೆ. ಭದ್ರಾವತಿಯಲ್ಲಿ ಇಬ್ಬರ ಹೆಸರು ನಾಲ್ವರ ಪ್ರಸ್ತಾಪ ಇದೆ. ತೀರ್ಥಹಳ್ಳಿಯಲ್ಲಿ ಇಬ್ಬರ ಹೆಸರು ಮೂವರ ಪ್ರಸ್ತಾಪ ಇದೆ. ಬೆಳಗಾವಿಯಲ್ಲಿ ಇಬ್ಬರ ಹೆಸರು ಮೂವರ ಪ್ರಸ್ತಾಪ ಇದೆ. ಯಡ್ಡಿಯಿಂದ ಹಫ್ತಾ ಪಡೆಯುತ್ತಿದ್ದವರಲ್ಲಿ ಪ್ರತಿಷ್ಠಿತ ಪತ್ರಿಕೆಗಳ ಮತ್ತು ದೃಶ್ಯ ಮಾಧ್ಯಮದ ಪತ್ರಕರ್ತರು ಮಾತ್ರವಲ್ಲದೆ ತೀರಾ ಲೋಕಲ್ ಪತ್ರಿಕೆಗಳ ಪತ್ರಕರ್ತರು, ಸ್ಥಳಿಯ ಚಾನೆಲ್‌ಗಳ ಪ್ರತಿನಿಧಿಗಳೂ ಇರುವುದು ವಿಶೇಷ.
ಮಂಗಳೂರಿನ ಪತ್ರಕರ್ತರ ಜೇಬಿಗೆ ಕೈ ಹಾಕಲಿದೆಯೇ ಸಿಬಿಐ
ಸಿಬಿಐ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಂದ ವಶಪಡಿಸಿಕೊಂಡ ಪರ್ಸನಲ್ ಡೈರಿಯಲ್ಲಿ ಮಂಗಳೂರಿನ ಪತ್ರಕರ್ತರ ಹೆಸರೂ ಇದೆ. ಯಡ್ಡಿ ಸಂದಾಯ ಮಾಡುತ್ತಿದ್ದ ಹಫ್ತಾ ಮಂಗಳೂರಿನ ಆಯ್ದ ೧೭ಪತ್ರಕರ್ತರ ಜೇಬು ಸೇರುತ್ತಿತ್ತು. ಇದರಲ್ಲಿ ದೇವರ ನಾಮದ ಐವರ ಹೆಸರು ಸ್ಪಷ್ಟವಾಗಿ ನಮೂದಾಗಿದ್ದರೆ, ೧೨ಮಂದಿಯ ಪ್ರಸ್ತಾಪ ಮಾತ್ರ ಇದೆ. ಇದರಲ್ಲಿ ರಾಷ್ಟ್ರ ಮಟ್ಟದ ಆಂಗ್ಲ ದೈನಿಕದ ಹಿರಿಯರೊಬ್ಬರ ಕರ ಸೇರಿದ ಮೊತ್ತವೂ ಇದೆ. ಲೋಕಲ್ ಸುದ್ದಿವಾಹಿನಿಯ ಪ್ರತಿನಿಧಿಗಳ ಹೆಸರೂ ಇದೆ. ಐವರಲ್ಲಿ ನಾಲ್ವರು ತಲಾ ಎರಡು ಲಕ್ಷದಂತೆ ಪಡೆಯುತ್ತಿದ್ದರೆ, ಇನ್ನೋರ್ವ ಒಂದು ಲಕ್ಷ ಪಡೆಯುತ್ತಿದ್ದ ಬಗ್ಗೆ ಪ್ರಸ್ತಾಪ ಇದೆ. ಉಳಿದ ಹನ್ನೆರಡು ಮಂದಿ ಪಡೆಯುತ್ತಿದ್ದ ಮೊತ್ತದ ವಿವರ ಇಲ್ಲ.
ಇದರಲ್ಲಿ ಸುದ್ದಿವಾಹಿನಿಯೊಂದರ ಪತ್ರಕರ್ತ ನೋರ್ವನ ಹೆಸರು ಪ್ರಸ್ತಾಪ ಆಗಿರುವುದು ಸ್ಥಳೀಯ ಪತ್ರಕರ್ತರಿಗೆ ಅಚ್ಚರಿಯ ವಿಷಯ ಎಂದೇನೂ ಅನಿಸುತ್ತಿಲ್ಲ. ಏಕೆಂದರೆ ಈತ ತಿರುಪೋಕಿ ಯಾಗಿದ್ದರೂ ಗಳಿಕೆಯಲ್ಲಿ ಹುಷಾರು. ಪತ್ರಕರ್ತರ ಸಂಘದಲ್ಲಿ ಆಯಕಟ್ಟಿನ ಜಾಗ ಅತಿಕ್ರಮಿಸಿ ಕುಳಿತಿರುವ ಚಾನೆಲ್ ಪತ್ರಕರ್ತ. ಪತ್ರಕರ್ತರ ಸಂಘದ ಕಾರ್ಯಕ್ರಮಗಳಲ್ಲೂ ಮೂಗು ತೂರಿಸಿ ತನ್ನ ವ್ಯವಹಾರಕ್ಕೆ ಅನುಕೂಲ ಆಗುವವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸುವ ಪರಿಪಾಠ ಬೆಳೆಸಿಕೊಂಡಿದ್ದಾನೆ.
ಬೆಳಗ್ಗೆ ಎದ್ದರೆ ಪಾಲೇಮಾರರ ಮನೆ ಎದುರು ಕಾಣಿಸಿ ಕೊಳ್ಳುತ್ತಿದ್ದ ತಿರುಪೋಕಿ ಅವರ ಮಂತ್ರಿಸ್ಥಾನ ಹೋದ ಬಳಿಕ ಅತ್ತ ಮುಖ ಹಾಕಿಯೂ ಮಲಗುತ್ತಿಲ್ಲ. ವಸೂಲಿಯಲ್ಲಿಯೇ ಬ್ಯುಸಿಯಾಗಿರುವ ಈತ ಸುದ್ದಿಗಾಗಿ ಬೇರೆ ಪತ್ರಕರ್ತರನ್ನು ಆಶ್ರಯಿ ಸಿರುತ್ತಾನೆ. ತಾಲೂಕು ಮಟ್ಟದಲ್ಲಿ ಅಸಿಸ್ಟೆಂಟ್‌ಗಳನ್ನು ನೇಮಿ ಸಿಕೊಂಡಿದ್ದರೂ ಅವರಿಗೆ ಗೌರವ ಧನ ಕೊಡದೆ ಅವರಿಂದಲೂ ಉಗಿಸಿಕೊಳ್ಳುತ್ತಿದ್ದಾನೆ.
Tagged with
cbi,
feature,
lnews
ಸುಳ್ಯ: ೨೫ ದಿನಗಳ ಹಿಂದೆಯಷ್ಟೆ ಮದುವೆಯಾಗಿದ್ದ ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದು, ಕಡಬದಲ್ಲಿ ಭಾನುವಾರ ಪತ್ತೆಯಾಗಿದ್ದಾರೆ. ಶಾಂತಿನಗರ ನಿವಾಸಿ ವಿಶ್ವನಾಥ ಎಂಬವರ ಪತ್ನಿ ಉಮಾವತಿ (೨೨) ನಾಪತ್ತೆಯಾಗಿರುವ ಕುರಿತು ಶನಿವಾರ ಸುಳ್ಯ ಪೊಲೀಸರಿಗೆ ದೂರು ನೀಡಲಾಗಿತ್ತು.
ಉಪ್ಪಿನಂಗಡಿ ಸಮೀಪದ ಆತೂರಿನ ಚೀನಪ್ಪ ಎಂಬವರ ಪುತ್ರಿ ಉಮಾವತಿಯನ್ನು ಸುಳ್ಯ ಸಮೀಪದ ಶಾಂತಿನಗರ ನಿವಾಸಿ ರಾಮ ಎಂಬವರ ಪುತ್ರ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ವಿಶ್ವನಾಥ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಕಳೆದ ಎಪ್ರಿಲ್ ೨೫ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಈ ವಿವಾಹ ನೆರವೇರಿತ್ತು. ಉಮಾವತಿಗೆ ಈ ಸಂಬಂಧ ಇಷ್ಟವಿರಲಿಲ್ಲ, ಆಕೆ ರಾಮಕುಂಜ ನಿವಾಸಿ ಕಂಞಣ್ಣ ಎಂಬ ವರ ಪುತ್ರ ವಿಜಯ ಎಂಬಾತನನ್ನು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದಳು. ತಂದೆಯ ಒತ್ತಾಯಕ್ಕೆ ಈಕೆ ವಿಶ್ವನಾಥನೊಂದಿಗೆ ವಿವಾಹವಾಗಿದ್ದಳು ಎನ್ನಲಾಗಿದೆ. ಶನಿವಾರ ನಸುಕಿನ ಐದು ಗಂಟೆಗೆ ವಿಶ್ವನಾಥರ ಮೊಬೈಲ್‌ಗೆ ಕರೆಯೊಂದು ಬಂದಿದ್ದು, ಉಮಾವತಿ ಅದನ್ನು ಸ್ವೀಕರಿಸಿದ್ದಳು. ಮತ್ತು ಒಳ ಬಂದ ಕರೆಯ ನಂಬರ್‌ನ್ನು ಆಕೆ ಬಳಿಕ ಡಿಲೀಟ್ ಮಾಡಿದ್ದಳು. ಬಳಿಕ ಆಕೆ ಶೌಚಾಲಯಕ್ಕೆ ತೆರಳಿ ಹಿಂತಿರುಗಿ ಮನೆಯಿಂದ ನೇರವಾಗಿ ರಾಮಕುಂಜದ ತನ್ನ ಪ್ರಿಯಕರನ ಮನೆಗೆ ತೆರಳಿದ್ದಳು. ಭಾನುವಾರ ಕಡಬದಲ್ಲಿ ಈ ಜೋಡಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸುಳ್ಯ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
Tagged with
cnews,
feature
ದಲಿತೆಯ ಕೊಲೆ ಪ್ರಕರಣ
ಮೂಡುಬಿದಿರೆ: ದಲಿತ ಮಹಿಳೆಯೋರ್ವರನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿ ಸಿದಂತೆ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ ಬಗ್ಗೆ ಬೋರುಗುಡ್ಡೆಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಒಂದು ವಾರದೊಳಗೆ ಆರೋಪಿಯನ್ನು ಪತ್ತೆಹಚ್ಚದಿದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೋರುಗುಡ್ಡೆಯ ಗ್ರಾಮಸ್ಥರು ರವಿವಾರ ಸಂಜೆ ಯುವಕ ಮಂಡಲದ ಬಳಿ ಸಭೆ ನಡೆಸಿ ಈ ಬಗ್ಗೆ ನಿರ್ಣಯ ಕೈಗೊಂಡಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ (ಎ.೨೧) ನೆಲ್ಲಿಕಾರು ಗ್ರಾ.ಪಂ.ವ್ಯಾಪ್ತಿಯ ಬೋರುಗುಡ್ಡೆಯಲ್ಲಿ ದಲಿತ ಮಹಿಳೆ ಪ್ರೇಮಾ(೪೫) ಎಂಬವರ ಮೇಲೆ ಯಾರೋ ದುಷ್ಕರ್ಮಿಗಳು ಅತ್ಯಾಚಾರ ನಡೆಸಿ ನಂತರ ಕೊಲೆಗೈದು ಮೃತದೇಹವನ್ನು ಬೋರುಗುಡ್ಡೆಯ ಯುವಕ ಮಂಡಲದ ಬಳಿ ಇರುವ ಮನೆಯೊಂದರ ತಾರಸಿನ ಮೇಲೆ ಹಾಕಿದ್ದರು.
ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಮೂಡುಬಿದಿರೆ ಪೊಲೀಸರು ನಿರಾಪರಾಧಿಗಳನ್ನು ಠಾಣೆಗೆ ಕರೆದುಕೊಂಡು ಹೋಗಿ ಅವರಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸಿದ್ದಾರೆಯೇ ಹೊರತು ನಿಜವಾದ ಆರೋಪಿಗಳನ್ನು ಹುಡುಕುವಲ್ಲಿ ಸೋತಿದ್ದಾರೆ ಅಥವಾ ಹಿಂದೇಟು ಹಾಕಿದ್ದಾರೆ ಎಂದು ಹೇಳಬಹುದು ಎಂದು ತಾ.ಪಂ. ಸದಸ್ಯ ರುಕ್ಕಯ ಪೂಜಾರಿ ಆರೋಪಿಸಿದ್ದಾರೆ.
ಗ್ರಾ.ಪಂ ಸದಸ್ಯ ಜಯಂತ್ ಮಾತನಾಡಿ ಪ್ರಕರಣ ಸಂಬಂಧಿಸಿದಂತೆ ತನಿಖೆ ಯಾವ ರೀತಿ ನಡೆಯುತ್ತಿದೆ ಎಂಬುದರ ಬಗ್ಗೆ ವಿವರಣೆ ನೀಡುವಂತೆ ಪೊಲೀಸರಲ್ಲಿ ಗ್ರಾಮಸ್ಥರು ಎರಡೆರಡು ಬಾರಿ ಕೇಳಿ ಕೊಂಡರು ಸಭೆಗೆ ಬಾರದೆ ತಪ್ಪಿಸಿಕೊಂಡಿದ್ದಾರೆ. ಮೃತಪಟ್ಟಿರುವ ಪ್ರೇಮಾ ಹಾಗೂ ಪುತ್ರಿ ಹಾಗೂ ಪುತ್ರನನ್ನು ಸರಿಯಾಗಿ ವಿಚಾರಣೆ ನಡೆಸಿಲ್ಲ ಅಲ್ಲದೆ ಇಂದಿನ ಸಭೆಗೆ ಅವರಿಬ್ಬ ರನ್ನು ಬರುವಂತೆ ಹೇಳಿದ್ದರೂ ಅವರು ಬಾರದೆ ತಪ್ಪಿಸಿಕೊಂಡಿದ್ದಾರೆ. ಆದ್ದರಿಂದ ಮೊದಲು ಅವರಿಬ್ಬನ್ನು ವಿಚಾರಣೆ ನಡೆಸಿದರೆ ಅಪರಾಧಿಗಳು ಯಾರೆಂದು ತಿಳಿಯಬಹುದು .ಪೊಲೀಸರು ತನಿಖೆಯನ್ನು ನಿಧಾನ ಗತಿಯಲ್ಲಿ ಸಾಗಿಸಿದರೆ ಆರೋಪಿಗಳು ತಪ್ಪಿಸಿಕೊಳ್ಳಲು ಸುಲಭವಾಗುತ್ತದೆ ಎಂದು ಪೊಲೀಸರ ಈ ನಿರ್ಲಕ್ಷ್ಯದಿಂದಲೇ ಕೊಲೆ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ನೆಲ್ಲಿಕಾರು ಗ್ರಾ.ಪಂ.ಅಧ್ಯಕ್ಷ ಹರೀಶ್ ಆಚಾರ್ಯ, ಸದಸ್ಯರಾದ ಪ್ರೇಮಾ, ಸುಶೀಲ, ಮಾಂಟ್ರಾಡಿ ಅಶೋಕ್ ಕುಮಾರ್, ಸ್ಥಳೀಯರಾದ ಉದಯ ಕುಮಾರ್, ರಮೇಶ್ ಕುಮಾರ್ ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.
Tagged with
dk,
feature,
lnews
ಪ್ರಕಾಶ್ ಕಾರಟ್ ಆರೋಪ
ಮಂಗಳೂರು: ದೇಶದಲ್ಲಿ ಹಿಂದೆ ಪೋಟಾ ಕಾಯ್ದೆ ಜಾರಿಯಲ್ಲಿದ್ದಾಗ ಮುಸ್ಲಿಮರನ್ನೇ ಟಾರ್ಗೆಟ್ ಮಾಡಲಾ ಗುತ್ತಿದ್ದರೆ, ಇಂದು ನಕ್ಸಲರಿಗೆ ಬೆಂಬಲ ನೀಡುತ್ತಾರೆ ಎನ್ನುವ ಆರೋಪ ಹೊರಿಸಿ ಮಲೆಕುಡಿಯ ಸಮುದಾ ಯವನ್ನು ಟಾರ್ಗೆಟ್ ಮಾಡಲಾಗು ತ್ತಿದೆ ಎಂದು ಸಿಪಿಐ(ಎಂ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಆರೋಪಿಸಿದ್ದಾರೆ.
ನಿನ್ನೆ ಮಂಗಳೂರಿನ ಸರಕಾರಿ ನೌಕರರ ಸಭಾಂಗಣದಲ್ಲಿ ಮಾನವತಾ ವೇದಿಕೆಯ ವತಿಯಿಂದ ಅಯೋಜಿಸ ಲಾಗಿದ್ದ ನಕ್ಸಲ್ ವಾದದ ಪಿಡುಗು ಮತ್ತು ಆದಿವಾಸಿ ಜನರ ಮಾನವ ಹಕ್ಕುಗಳ ಮೇಲೆ ಪ್ರಭುತ್ವದ ದೌರ್ಜನ್ಯ ಗಳು ಎನ್ನುವ ವಿಷಯದಲ್ಲಿ ನಡೆದ ವಿಚಾರಗೋಷ್ಟಿಯನ್ನುದ್ದೇಶಿಸಿ ಮಾತ ನಾಡಿದರು.
ದೇಶದ ವಿವಿಧ ಭಾಗಗಳಲ್ಲಿ ಗಣಿಗಾರಿಕೆ ಮತ್ತು ಕೈಗಾರಿಕಾ ಕಂಪೆನಿ ಗಳು ಅರಣ್ಯ ಪ್ರದೇಶಗಳನ್ನು ಲೂಟಿ ಮಾಡಲು ಮುಂದಾಗಿದ್ದು ಈ ಹಿನ್ನೆಲೆ ಯಲ್ಲಿ ಬುಡಕಟ್ಟು ಮತ್ತು ಆದಿವಾಸಿ ಜನಾಂಗದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ. ಇದರ ವಿರುದ್ಧ ಧ್ವನಿ ಎತ್ತಿದವರ ಮೇಲೆ ನಕ್ಸಲ್ ಪಟ್ಟ ಕಟ್ಟಿ ಜೈಲಿಗೆ ತಳ್ಳಲಾಗುತ್ತಿದೆ ಎಂದು ಕಾರಟ್ ಕಿಡಿಕಾರಿದರು.
ಅರಣ್ಯವನ್ನೇ ನಂಬಿ ಬದುಕುತ್ತಿ ರುವವರಿಗಾಗಿ ಎಡಪಕ್ಷಗಳು ಕೇಂದ್ರದ ಮೇಲೆ ಹೇರಿದ್ದ ಒತ್ತಡದ ಫಲವಾಗಿ ೨೦೦೭ರಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತರಲಾಗಿದ್ದರೂ ಅದು ಇನ್ನೂ ಜಾರಿಗೆ ಬಂದಿಲ್ಲ. ಕುತ್ಲೂರಿನ ಅರಣ್ಯ ಪ್ರದೇಶದಲ್ಲಿ ವಾಸವಿರುವ ೩೨ ಮಲೆಕುಡಿಯ ಕುಟುಂಬಗಳನ್ನು ಹೊರದಬ್ಬುವ ಸಲುವಾಗಿ ನೀಡಿದ ೧೦ ಲಕ್ಷ ಪರಿಹಾರ ಧನವನ್ನು ನಿರಾ ಕರಿಸಿದವರ ಮೇಲೆ ನಕ್ಸಲ್ ಆರೋಪ ಹೊರಿಸಿ ಕೇಸು ಹಾಕುವ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಕಾರಟ್ ಆಪಾದಿಸಿದರು. ಭಗತ್ ಸಿಂಗ್ ಬ್ರಿಟೀಷರ ವಿರುದ್ಧ ಹೋರಾಡಿದ ಕಾರಣಕ್ಕೆ ದೇಶದ್ರೋಹದ ಆರೋಪ ಹೊರಿಸಿ ಗಲ್ಲಿಗೇರಿಸಲಾಯಿತು. ಅಂತಹ ಭಗತ್‌ಸಿಂಗ್, ಕುಲದೀಪ ನಾಯರ್ ಬಗೆಗಿನ ಅನುವಾದಿತ ಪುಸ್ತಕಗಳು ವಿಠಲನ ಬಳಿ ಇತ್ತೆನ್ನುವ ಕಾರಣಕ್ಕೆ ನಕ್ಸಲ್ ಪಟ್ಟ ಕಟ್ಟಿ ಜೈಲಿಗೆ ಕಳುಹಿಸಲಾಗಿದೆ ಎಂದು ಕಾರಟ್ ವ್ಯಂಗ್ಯವಾಡಿದರು.
ಜೈಲಿಗೆ ಭೇಟಿ ನೀಡಿದ ಕಾರಟ್
ನಿನ್ನೆ ಮಂಗಳೂರಿಗೆ ಬಂದಿದ್ದ ಪ್ರಕಾಶ್ ಕಾರಟ್ ಸಬ್‌ಜೈಲಿಗೆ ಭೇಟಿ ನೀಡಿ ವಿಠಲ ಹಾಗೂ ಆತನ ತಂದೆ ಲಿಂಗಪ್ಪ ಅವರ ಜತೆ ಮಾತು ಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ನಕ್ಸಲ್ ಆರೋಪದಲ್ಲಿ ಬಂಧಿತರಾಗಿ ರುವ ಅವರನ್ನು ಬೇಷರತ್ತಾಗಿ ಬಿಡುಗಡಗೊ ಳಿಸಬೇಕು. ಈ ಸಂಬಂಧ ರಾಜ್ಯ ಹೈ ಕೋರ್ಟ್ ಹಾಗೂ ಅಗತ್ಯಬಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗಲಾ ಗುವುದು ಎಂದು ಕಾರಟ್ ಹೇಳಿದರು.
Tagged with
dk,
feature,
lnews,
vittala
ಸುಳ್ಯ: ಸುಳ್ಯ ನಗರದಲ್ಲಿ ಕಸದ ಸಮಸ್ಯೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಕಸ ವಿಲೇವಾರಿ ಸರಿ ಯಾಗಿ ಮಾಡಲಾಗದೆ ಸಾರ್ವಜನಿಕರು ಅನುಭವಿಸುತ್ತಿದ್ದ ತೊಂದರೆಗೆ, ಪೆರಾಜೆ ಬಳಿಯ ಕಲ್ಚೆರ್ಪೆಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಆದಾಗ ಇತಿಶ್ರೀ ದೊರೆಯುವ ನಿರೀಕ್ಷೆ ಇತ್ತು. ಆದರೆ ಅದು ಕೂಡಾ ಸರಿಯಾಗಿ ನಡೆಯದೆ ಸ್ಥಳೀಯರು ತೊಂದರೆಗೆ ಒಳಗಾಗ ತೊಡಗಿರುವುದರಿಂದ ಮತ್ತೆ ಸಮಸ್ಯೆ ಎದುರಾಗುವಂತಾಗಿದೆ.
ಕಳೆದ ಆರು ತಿಂಗಳಿಂದ ಸುಳ್ಯ ನಗರದ ಘನತಾಜ್ಯವನ್ನು ಆಲೆಟ್ಟಿ ಗ್ರಾಮದ ಪೆರಾಜೆ ಬಳಿಯ ಕಲ್ಚೆರ್ಪೆ ಎಂಬಲ್ಲಿ ರಾಶಿ ಹಾಕಲಾಗುತ್ತಿದ್ದು ಇದನ್ನು ಸೂಕ್ತ ರೀತಿಯಲ್ಲಿ ಸಂಸ್ಕರಣೆ ಮಾಡಲಾಗುತ್ತಿಲ್ಲ ಎನ್ನುವ ಆರೋಪ ಗಳು ಕೇಳಿಬಂದಿವೆ. ಈ ಹಿಂದೆ ನ್ಯಾಯಾಲಯ ನೀಡಿದ ಆದೇಶ ಮತ್ತು ಸೂಚನೆಯಂತೆ ವಿಲೇವಾರಿ ಮಾಡದೆ ರಾಶಿ ಹಾಕುವುದರಿಂದ ಈ ಪ್ರದೇಶ ದಲ್ಲಿ ವಾಸಿಸುತ್ತಿರುವ ಹಲವು ಮಂದಿ ಬವಣೆ ಪಡತೊಡಗಿದ್ದಾರೆ.
ಮುಖ್ಯವಾಗಿ ಕುಡಿಯುವ ನೀರಿನ ಬಣ್ಣವೇ ಬದಲಾಗಿದೆ. ಈ ಭಾಗದ ಮಂದಿ ಕುಡಿಯುವ ಬಾವಿ-ಕೆರೆ ನೀರು ತ್ಯಾಜ್ಯ ಕಲ್ಮಶ ಮಿಶ್ರಿತವಾಗಿ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಕುಡಿಯುವುದಕ್ಕೂ, ಇತರ ಬಳಕೆಗೂ, ಕೃಷಿಗೂ ಬೇಡ ದಂತಾಗಿದೆ. ಇಡೀ ಪ್ರದೇಶದಲ್ಲಿ ದುರ್ವಾಸನೆ ಗಾಳಿಯಲ್ಲಿ ತೇಲಿ ಬರುತ್ತಿದೆ. ಕಸದ ರಾಶಿಯಲ್ಲಿ ತಂದು ಹಾಕಲಾದ ಸತ್ತ ಕೋಳಿ, ಇತರ ಮಾಂಸ ಮುದ್ದೆ, ಇತರ ಪ್ರಾಣಿಗಳ ಎಲುಬುಗಳು ಪಕ್ಕದ ಮನೆಗಳ ಅಂಗಳಕ್ಕೆ ನಾಯಿ, ಬೆಕ್ಕು ತಂದು ಹಾಕುತ್ತಿದೆ.
ನ್ಯಾಯಾಲಯ ಆದೇಶದ ಪಾಲನೆ ಇಲ್ಲ: ನಗರದಲ್ಲಿ ಘನತ್ಯಾಜ್ಯ ವಿಲೇವಾ ರಿಯ ಸಮಸ್ಯೆ ಎಷ್ಟೋ ವರ್ಷಗಳಿಂದ ಇದ್ದರೂ ಅದಕ್ಕೆ ಶಾಶ್ವತ ಪರಿಹಾರ ಸಿಕ್ಕಿರಲಿಲ್ಲ. ಈ ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ಅಜ್ಜಾವರ, ಆಲೆಟ್ಟಿ, ದುಗ್ಗಲಡ್ಕ ಮತ್ತು ಉಬರಡ್ಕ ಪ್ರದೇಶದಲ್ಲಿ ಜಾಗ ಗುರುತಿಸಿ, ಅದಕ್ಕೆ ಸಾಕಷ್ಟು ವಿರೋಧಗಳು ಬಂದ ಹಿನ್ನೆಲೆಯಲ್ಲಿ ಕೊನೆಗೆ ಆಲೆಟ್ಟಿ ಗ್ರಾಮದ ಈ ಕಲ್ಚೆರ್ಪೆ ಪ್ರದೇಶದಲ್ಲಿ ಜಾಗ ಗುರುತಿಸಲಾಯಿತು. ಈ ಸಂದರ್ಭ ಅಲ್ಲಿ ಕಸ ವಿಲೇವಾರಿ ಬೇಡ ಎಂದು ಸ್ಥಳೀಯ ಪೆರಾಜೆ ಗ್ರಾಮಸ್ಥರು ಮತ್ತು ಆಲೆಟ್ಟಿ ಗ್ರಾಮದವರು ವಿರೋಧ ಮಾಡಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಕಸ ಹಾಕುವು ದಕ್ಕೆ ನ್ಯಾಯಾಲಯ ಕೆಲವು ಶರತ್ತು ಗಳನ್ನು ವಿಧಿಸಿ ನಗರ ಪಂಚಾಯತಿಗೆ ಅನುಮತಿ ನೀಡಿತ್ತು. ಜನರಿಗೆ, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಯಾವುದೇ ಆರೋಗ್ಯ ಸಮಸ್ಯೆಯನ್ನು ಜನ ಎದುರಿ ಸುವಂತಿರ ಬಾರದು ಎಂಬುದು ಆದೇಶದಲ್ಲಿದೆ. ಆದರೆ ನ್ಯಾಯಾಲಯದ ಆದೇಶ ಮಾತ್ರ ಪಾಲನೆಯಾಗುತ್ತಿಲ್ಲ.
ತ್ಯಾಜ್ಯ ಘಟಕದಲ್ಲಿ ಕಸದ ವಿಭಾಗೀಕರಣ ಆಗಬೇಕು. ಈಗಿನ ನೂತನ ತಾಂತ್ರಿಕತೆ ಬಳಸಿ ಕಸಕ್ಕೆ ಅಂತ್ಯ ಕಾಣಿಸಬೇಕು. ಆದರೆ ಪಂಚಾಯತಿ ಮಾತ್ರ ನಗರದ ಕಸವನ್ನು ಲಾರಿಯಲ್ಲಿ ತುಂಬಿಸಿ ತಂದು ರಾಶೀ ಹಾಕುತ್ತಿದೆ. ಸಂಸ್ಕರಣೆ ಮಾಡುತ್ತಿಲ್ಲ. ಈಗ ಅದು ಡಂಪಿಂಗ್ ಯಾರ್ಡ್ ಮಾತ್ರ ಆಗಿದೆ. ಘಟಕದ ವ್ಯಾಪ್ತಿಯಲ್ಲಿ ಮರಗಳ ಕೆಳಗೆ ಈ ಕಸದ ದೊಡ್ಡ ರಾಶಿ ಬಿದ್ದಿದೆ. ಕಸದ ರಾಶಿ ಮೇಲೆ ನಾಯಿಗಳ ಹಾರಾಟ, ಓಡಾಟ ಹೆಚ್ಚಾಗಿದೆ. ಕಸ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ. ಅದರಿಂದ ದುರ್ವಾಸನೆ ಬೀರುತ್ತಿದೆ. ಎಷ್ಟೆಂದರೆ ಅಲ್ಲಿನ ಕಸದ ರಾಶಿಗೆ ಆವರಣ ಗೋಡೆ ಇದ್ದರೂ ಗೇಟ್ ಮಾತ್ರ ಹಾಕಿಕೊಳ್ಳದೇ ನಾಯಿ ಇತರ ಪಕ್ಷಿ ಪ್ರಾಣಿಗೆ ಒಳನುಗ್ಗಲು ಅವಕಾಶ ಮಾಡಿಕೊಟ್ಟಂತಾಗಿದೆ.
ಪ್ಲಾಸ್ಟಿಕ್, ಬಾಟಲ್ ಇತರ ಕೆಲವು ವಸ್ತುಗಳನ್ನು ಪ್ರತ್ಯೇಕಿಸಿ ಅದರಲ್ಲಿ ಸಸ್ಯಜನ್ಯ ಮತ್ತು ತರಕಾರಿ ತ್ಯಾಜ್ಯಗಳನ್ನು ಪ್ರತ್ಯೇಕ ಮಾಡಿ ಎರೆಹುಳ ಘಟಕವನ್ನು ನಿರ್ಮಿಸಲಾಗಿದೆ. ಆದರೆ ಈ ಘಟಕದಲ್ಲಿ ಈ ಹಿಂದೆ ಒಮ್ಮೆ ರಾಶಿ ಹಾಕಲಾದ ಕಸ ಮಾತ್ರ ಉಳಿದಿದೆಯೇ ಹೊರತು ಅದನ್ನು ಸೂಕ್ತ ಘಟಕವಾಗಿ ಇನ್ನೂ ಮಾರ್ಪಾಡು ಮಾಡಿಲ್ಲ. ಮುಂದಿನ ಮಳೆಗಾಲದಲ್ಲಿ ಈ ಕಸ ಮತ್ತು ಅದರ ತ್ಯಾಜ್ಯ ಇತರ ಪ್ಲಾಸ್ಟಿಕ್‌ಗಳು ಮಳೆ ನೀರಿಗೆ ಕೊಚ್ಚಿ ಹೋಗಿ ಪಯಸ್ವಿನಿ ಸೇರುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.
ರೋಗ ಬಾಧಿತರು: ಈ ಪ್ರದೇಶದಲ್ಲಿರುವ ಮನೆ ಮಂದಿಗೆ ತುರಿಕೆ, ಅಲರ್ಜಿ ಇತ್ಯಾದಿಗಳು ಕಾಣಿಸಿಕೊಂಡಿದೆ. ಅಲ್ಲದೆ ಜ್ವರ, ಶೀತ ತಲೆನೋವು ಮಾಮೂಲಿ ಆಗಿದೆ. ಇನ್ನು ಏನೆಲ್ಲಾ ರೋಗ ಬರಬಹುದೋ ಎಂಬ ಭೀತಿಯಲ್ಲಿ ಈ ಭಾಗದ ಮಂದಿ ಇದ್ದಾರೆ. ಅವರು ಕುಡಿಯುವ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಈಗ ಈ ಮಂದಿ ಈ ನೀರು ಕುಡಿಯದೇ ಕಿ.ಮೀ. ದೂರ ಹೋಗಿ ಬೇರೆ ಯವರ ಮನೆಗಳಿಂದ ಕುಡಿಯುವ ನೀರು ತರುತ್ತಿದ್ದಾರೆ.
ಅನುದಾನ ಬಳಸದ ನಗರ ಪಂಚಾಯತ್: ಈ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕ ಸೂಕ್ತ ರೀತಿಯಲ್ಲಿ ಮಾಡುವುದಕ್ಕೆ ಲಕ್ಷಾಂತರ ರೂಪಾಯಿ ಅನುದಾನವನ್ನು ನಗರ ಪಂಚಾಯತ್ ಈಗಾಗಲೇ ಮೀಸಲಿರಿಸಿದೆ. ಅಲ್ಲದೆ ಅದಕ್ಕಾಗಿ ವಿಶೇಷ ಅನುದಾನವನ್ನು ತರಿಸಿಕೊಂಡಿದೆ. ಆದರೆ ಈ ಅನುದಾನಗಳನ್ನು ಸೂಕ್ತ ರೀತಿಯಲ್ಲಿ ಬಳಸುವುದಕ್ಕೆ ಪಂಚಾಯತ್ ವಿಫಲವಾಗಿದೆ ಎನ್ನುವ ಆರೋಪಗಳು ಇವೆ. ಕೇವಲ ನಾಮ್‌ಕಾವಸ್ಥೆ ಎಂಬಂತೆ ಒಂದು ಕಾಂಪೌಂಡ್ ರಚಿಸಲಾಗಿದೆ. ಅದೂ ಕೂಡ ನಿಯಮದ ಪ್ರಕಾರ ಮಾಡದೇ ಅದರಿಂದ ಪ್ರಯೋಜನವಾಗುತ್ತಿಲ್ಲ. ಕಾಂಪೌಂಡ್‌ಗೆ ಸೂಕ್ತ ರೀತಿಯಲ್ಲಿ ಗೇಟ್ ಕೂಡ ಇಲ್ಲ. ಒಟ್ಟಿನಲ್ಲಿ ನಗರದ ಕಸವನ್ನು ಲಾರಿಯಲ್ಲಿ ತೆಗೆದುಕೊಂಡು ಹೋಗಿ ಅಲ್ಲಿ ಡಂಪ್ ಮಾಡುವ ಕೆಲಸ ಮಾತ್ರ ನಗರ ಪಂಚಾಯತ್ ಮಾಡುತ್ತಿದೆ. ಅದರ ಹೊರತು ಎಲ್ಲಿಯೂ ನಿಯಮ ಪಾಲನೆಆಗುತ್ತಿಲ್ಲ ಎನ್ನುತ್ತಾರೆ ಅಲ್ಲಿನ ಜನತೆ.
ಪ್ರತಿಭಟನೆ ಎಚ್ಚರಿಕೆ: ಆಲೆಟ್ಟಿ ಗ್ರಾಮ ಪಂಚಾಯತಿ ಮತ್ತು ಪೆರಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಿಕರೂ ಈ ಕಸ ತ್ಯಾಜ್ಯದಿಂದ ಆಗುವ ಸಮಸ್ಯೆಗಳ ವಿರುದ್ಧ ನಗರ ಪಂಚಾಯತ್ ಎದುರು ಪ್ರತಿಭಟನೆ ಮಾಡುವ ಅಥವಾ ತ್ಯಾಜ್ಯ ಹೊತ್ತು ತರುವ ಲಾರಿಯನ್ನೇ ತಡೆದು ನಿಲ್ಲಿಸುವ ಪ್ರತಿಭಟನೆ ಮಾಡುವ ನಿರ್ಧಾರ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ನ್ಯಾಯಾಲಯದ ಮೊರೆ ಹೋಗುವ ನಿರ್ಧಾರವನ್ನೂ ಮಾಡಿದ್ದಾರೆ ಎನ್ನಲಾಗಿದೆ.
Tagged with
dk,
feature,
lnews
ಸುಳ್ಯ: ವಿವಾಹಿತೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯ ನಗರದಲ್ಲಿ ನಡೆದಿದೆ. ಕುರುಂಜಿಭಾಗ್‌ನ ಗಾರ್ಡನ್ ಆಸ್ಪತ್ರೆಯ ಎದುರಿನ ಗಣೇಶ್‌ಕೃಪಾ ಐಸ್‌ಕ್ರೀಮ್ ಪಾರ್ಲರ್‌ನ ಮಾಲಕ ಚೆನ್ನಕೇಶವ ಯಾನೆ ಗಣೇಶ ಎಂಬವರ ಪತ್ನಿ ರೇಷ್ಮಾ(೨೫) ಮೃತ ಮಹಿಳೆ. ಇವರು ಭಾನುವಾರ ಮಧ್ಯಾಹ್ನ ಪಾರ್ಲರ್ ಹಿಂಬದಿಯ ಮನೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮದ ಚೆರುಪನತ್ತಡಿಯ ಮಹಾಲಸಾ ನಿವಾಸದಲ್ಲಿ ಮುರಳೀಧರ ಪೈ ಮತ್ತು ದಿ.ಸಂಧ್ಯಾ ಎಂಬವರ ಪುತ್ರಿ ರೇಷ್ಮಾರ ವಿವಾಹವು ಚೆನ್ನಕೇಶರೊಂದಿಗೆ ಒಂದೂವರೆ ವರ್ಷದ ಹಿಂದೆ ನಡೆದಿತ್ತು. ಮಕ್ಕಳಿಲ್ಲದೆ ಕೊರಗಿನಿಂದ ಈಕೆ ಆತ್ಮಹತ್ಯೆ ಮಾಡಿದ್ದಾರೆ ಎಂದು ಶಂಕಿಲಾಗಿದೆ.
Tagged with
cnews,
feature
ಮಂಗಳೂರು: ಹಿಂದೂ ದೇವತೆ ಗಳನ್ನು ಅಪಹಾಸ್ಯ ಮಾಡಿರುವ ಕನ್ನಡ ಚಲನಚಿತ್ರ ಕಠಾರಿವೀರ ಸುರಸುಂದ ರಾಂಗಿಯ ಸೈನ್ಯವನ್ನು ಮಂಗಳೂರಿನ ಠಾಣೆಗಳಿಗೆ ಕರೆತರಲು ಬಜರಂಗದಳ ಸಿದ್ಧತೆ ನಡೆಸುತ್ತಿದೆ ಎನ್ನುವ ಮಾಹಿತಿ ಪತ್ರಿಕೆಗೆ ಲಭಿಸಿದೆ.
೧೬ ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಿ ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಗೊಂಡಿರುವ ಕಠಾರಿವೀರ ಹಿಂದೂ ದರ್ಮ, ದೇವತೆ, ಯಮ, ಚಿತ್ರಗುಪ್ತ, ಸ್ವರ್ಗವನ್ನು ಅಪಹಾಸ್ಯ ಮಾಡಿದ್ದಾನೆ ಎಂದು ಆರೋಪಿಸಿ ಬಜರಂಗದಳ ಕಳೆದ ಶನಿವಾರ ಮಂಗಳೂರು ಮತ್ತು ಉಡುಪಿಯಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಅಡ್ಡಿಮಾಡಿತ್ತು.
ಇದರಿಂದ ಬೆದರಿದ್ದ ನಿರ್ಮಾಪಕ ಮುನಿರತ್ನ, ವಿತರಕ ರಾಕ್‌ಲೈನ್ ವೆಂಕ ಟೇಶ್, ಚಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮತ್ತು ಇತರರನ್ನೊಳಗೊಂಡ ತಂಡ ಅದೇ ದಿನ ರಾತ್ರಿ ವಿಮಾನದ ಮೂಲಕ ಮಂಗಳೂರಿಗೆ ದೌಡಾಯಿಸಿ ವಿಎಚ್‌ಪಿ ಹಾಗೂ ಬಜರಂಗದಳದ ಮುಖಂಡರ ಜತೆ ಮಾತುಕತೆ ನಡೆಸಿತ್ತು.
ಆದರೆ ಇಲ್ಲಿ ನಡೆದ ಮಾತುಕತೆ ವಿಫಲವಾಗಿತ್ತು. ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಚಿತ್ರದಲ್ಲಿನ ವಿವಾದಕ್ಕೊಳಗಾಗಿರುವ ಎಂಟು ದೃಶ್ಯಗಳನ್ನು ರದ್ದುಗೊಳಿಸುವು ದಾಗಿ ಮುನಿರತ್ನ ಹೇಳಿದ್ದರಿಂದ ಮತ್ತೆ ಚಿತ್ರ ಪ್ರದರ್ಶನ ಆರಂಭಗೊಂಡಿತ್ತು. ಆದರೆ ಆಡಿದ ಮಾತನ್ನು ಉಳಿಸಿ ಕೊಳ್ಳದ ಮುನಿರತ್ನ, ಮನರಂಜನೆಗೆ ಬಜರಂಗದಳ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಲೇರಿ ದೃಶ್ಯ ರದತಿ ವಿರುದ್ಧ ತಡೆಯಾಜ್ಞೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಮುಖಭಂಗ ಕ್ಕೊಳಗಾಗಿರುವ ಬಜರಂಗದಳ, ಮುನಿರತ್ನ ವಿರುದ್ಧ ಸೇಡು ತೀರಿಸಲು ಮುಂದಾಗಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಮುನಿರತ್ನ, ನಾಯಕ ನಟ ಉಪೇಂದ್ರ ಹಾಗೂ ಇತರ ಇನ್ನಿ ಬ್ಬರ ಮೇಲೆ ಕೇಸು ದಾಖಲಿಸಲು ನಿರ್ಧ ರಿಸಿದೆ. ಇದು ಮಾತ್ರವಲ್ಲದೆ ಉಪೇಂದ್ರ ಅವರು ತಮ್ಮ ಚಿತ್ರಗಳಲ್ಲಿ ಹಿಂದೂ ದೇವರುಗಳನ್ನೇ ಟಾರ್ಗೆಟ್ ಮಾಡುತಿ ದ್ದಾರೆ ಎಂದು ಆರೋಪಿಸಲು ಬಜರಂಗ ಮುಂದಾಗಿದೆ. ಇದಕ್ಕಾಗಿ ಎ ಹಾಗೂ ಇನ್ನೆರಡು ಚಿತ್ರಗಳನ್ನು ಉಲ್ಲೇಖಿಸಲು ನಿರ್ಧರಿಸಿದೆ. ಕೇಸು ದಾಖಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.
Tagged with
dk,
feature,
katariveera,
lnews
ವಿಟ್ಲ: ಮೇ೧೫ಕ್ಕೆ ಮಂಗಳೂರು ಪಾಂಡೇಶ್ವರ ಪೊಲೀಸರಿಗೆ ಅಪರಿಚಿತ ವ್ಯಕ್ತಿಯ ಶವ ದೊರೆತ ಪ್ರಕರಣಕ್ಕೆ ಸಂಬಂಧಿಸಿ ಮೃತ ವ್ಯಕ್ತಿಯ ಕುಟುಂಬಿಕರು ಅವರ ಶವದ ಗುರುತನ್ನು ಶನಿವಾರ ಪತ್ತೆಹಚ್ಚಿದ್ದು, ವಿಟ್ಲದ ಕೋಡಪದವು ಕುಕ್ಕಿಲ ನಿವಾಸಿಯ ಶವ ಎಂಬುದು ಬಹಿರಂಗಗೊಂಡಿದ್ದು, ಶವದ ಮೇಲೆ ಗಾಯದ ಗುರುತುಗಳು ಕಾಣಿಸಿಕೊಂಡಿದ್ದು, ಹಣದ ವಿಚಾರವಾಗಿ ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಕುಕ್ಕಿಲ ನಿವಾಸಿ ಕೆ.ಪಿ ಅಬ್ದುಲ್ಲ ಅವರ ಪುತ್ರ ಅಬ್ದುಲ್ ರಝಾಕ್ (೩೪) ಎಂಬವರು ಮೃತಪಟ್ಟವರು. ಇವರು ಕೂಲಿ ಕೆಲಸ ಮಾಡುತ್ತಿದ್ದು, ಕೈತುಂಬ ಸಂಪಾದನೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಇದ್ದವರೇ ಅವರನ್ನು ಕೊಲೆ ನಡೆಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಇವರು ಮೇ೧೪ರಂದು ಮನೆಯಿಂದ ಎಂದಿನಂತೆ ಕೆಲಸಕ್ಕೆಂದು ತೆರಳಿದ್ದರು. ಸಂಜೆ ತುಂಬಾ ಹೊತ್ತಾದರೂ ವಾಪಸ್ಸು ಬಂದಿರಲಿಲ್ಲ. ಬಳಿಕ ಅಬ್ದುಲ್ ರಝಾಕ್ ಅವರು ಮನೆಗೆ ಫೋನ್ ಮಾಡಿ ನಾನು ಈ ದಿನ ಬರುವುದಿಲ್ಲ ಎಂದಿದ್ದರು. ಆ ಸಂದರ್ಭ ಫೋನ್ ಎತ್ತಿದ್ದು ಒಂದು ಪುಟ್ಟ ಮಗುವಾಗಿತ್ತು ಎಂದು ಅವರ ಕುಟುಂಬಿಕರು ತಿಳಿಸಿದ್ದಾರೆ. ಬಳಿಕ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಮೂರು ದಿನ ಕಳೆದರೂ ಅವರು ಪತ್ತೆಯಾ ಗದ ಹಿನ್ನೆಲೆಯಲ್ಲಿ ಅವರ ಪತ್ನಿ ಜೊಹರಾ ಅವರು ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಮೇ೧೫ರ ಮಂಗಳವಾರ ಬೆಳಿಗ್ಗೆ ಪಾಂಡೇಶ್ವರ ಪೊಲೀಸರಿಗೆ ನೂರ್ ಮಸ್ಜೀದ್ ಬಳಿ ಅಪರಿಚಿತ ಶವ ಸಿಕ್ಕಿತ್ತು. ಈ ಬಗ್ಗೆ ಅನಾಥ ಶವ ಸಿಕ್ಕಿದೆ ಎಂದು ಬುಧವಾರ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಬಳಿಕ ಆ ಶವವನ್ನು ವೆನ್ಲಾಕ್ ಶವಗಾರದಲ್ಲಿ ಇರಿಸಲಾಗಿತ್ತು. ಪತ್ರಿಕೆಯಲ್ಲಿ ಮೃತ ವ್ಯಕ್ತಿಯ ಶವದ ಗುರುತು ಕೂಡ ಪತ್ರಿಕೆಯಲ್ಲಿ ವರದಿ ಬಂದಿತ್ತು. ಇದರಿಂದ ಸಂಶಯಗೊಂಡ ರಝಾಕ್ ಅವರ ಸಂಬಂಧಿ ನೌಶಾದ್ ಅವರು ಶನಿವಾರ ಬೆಳಿಗ್ಗೆ ಮಂಗಳೂರಿಗೆ ತೆರಳಿ ಶವದ ಗುರುತು ಪತ್ತೆ ಹಚ್ಚಿದ್ದಾರೆ. ಶನಿವಾರ ರಝಾಕ್ ಅವರ ಮನೆಮಂದಿ ಹಾಗೂ ಮುಸ್ಲಿಂ ಮುಖಂಡರು ಅಲ್ಲಿಗೆ ತೆರಳಿದ್ದರು. ಶವದ ಮೇಲೆ ಚೂರಿಯಿಂದ ಇರಿದ ಗಾಯಗಳಿದ್ದು, ರಝಾಕ್ ಅವರನ್ನು ತಂಡವೊಂದು ಹಣದ ವಿಚಾರವಾಗಿ ಕೊಲೆ ಮಾಡಿರಬಹುದೆಂದು ಅವರ ಕುಟುಂಬಿಕರು ಆರೋಪಿಸಿದ್ದಾರೆ. ಜಿ.ಪಂ ಸದಸ್ಯ ಎಂ.ಎಸ್ ಮಹಮ್ಮದ್, ವಿಟ್ಲ ಪಡ್ನೂರು ಗ್ರಾ.ಪಂ ಅಧ್ಯಕ್ಷ ಅಬ್ದುಲ್ಲ ಕುಕ್ಕಿಲ. ಸದಸ್ಯರಾದ ಸಿದ್ದಿಕ್ ಸರಾವು, ಇಸ್ಮಾಯಿಲ್ ಹಾಜಿ ಅಬ್ದುಲ್ ರಹಿಮಾನ್ ಕಡಂಬು, ಮಾಜಿ ಮೇಹೆರ್ ಅಶ್ರಫ್ ಮುಂತಾದವರು ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆ ಶಂಕೆ ಪ್ರಕರಣ ದಾಖಲು ಮಾಡಿದ್ದಾರೆ.
ರಝಾಕ್ ಅವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಅವರಲ್ಲಿ ತುಂಬಾ ಹಣ ಕೂಡ ಇತ್ತು. ಕೆಲವರಿಗೆ ಇವರು ಸಾಲವನ್ನು ನೀಡಿದ್ದರು. ಈ ಹಿನ್ನೆಯಲ್ಲಿ ಅವರನ್ನು ವ್ಯವಸ್ಥಿತವಾಗಿ ದುಷ್ಕರ್ಮಿಗಳು ಮುಗಿಸಿದ್ದಾರೆ ಎಂದು ಅವರ ಮನೆಯ ವರು ಆರೋಪಿಸಿದ್ದಾರೆ. ಅವರು ಮನೆಯಿಂದ ಹೊರಟು ಮೆಲ್ಕಾರ್ ಸಮೀಪ ನಾಪತ್ತೆಯಾದಂದೇ ಸಂಜೆ ೪ ಗಂಟೆ ವರೆಗೆ ಅಲ್ಲಿ ಕೆಲಸ ಮಾಡಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಬಳಿಕ ಅವರು ಮನೆಗೆ ಬರುವ ಬದಲು ಮಂಗಳೂರಿಗೆ ಏಕೆ ತೆರಳಿದ್ದಾರೆ? ಅವರ ಶವದ ಮೇಲೆ ಚಾಕುವಿನಿಂದ ಇರಿದ ಗಾಯಗಳು ಇರಲು ಕಾರಣವೇನು? ಎಂಬ ಸಂಶಯ ಅವರ ಮನೆಮಂದಿಯನ್ನು ಕಾಡುತ್ತಿದೆ. ಪೊಲೀಸರು ಮಾತ್ರ ಶಂಕೆಯನ್ನು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ರಝಾಕ್ ಅವರು ಕೋಡಪದವು ಶಾಖೆಯ ಎಸ್‌ಎಸ್‌ಎಫ್ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದು, ಎಲ್ಲರಿಗೂ ಪರಿಚಿತರು. ಎಸ್‌ಎಸ್‌ಎಫ್ ಕೋಡಪದವು ಶಾಖೆಯು ಇವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದೆ. ಇದು ಅಸಹಜ ಸಾವು ಅಲ್ಲವಾಗಿದ್ದು, ಇದೂಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದೆ. ವಿಟ್ಲ ಪಡ್ನೂರು ಗ್ರಾಮ ಸಮಿತಿ ಕಾಂಗ್ರೆಸ್ ಈ ಪ್ರಕರಣವನ್ನು ಸಿಓಡಿ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ
ಜಿ.ಪಂ ಸದಸ್ಯ ಎಂ.ಎಸ್ ಮಹಮ್ಮದ್, ವಿಟ್ಲ ಪಡ್ನೂರು ಗಾ.ಪಂ ಅಧ್ಯಕ್ಷರಾದ ಅಬ್ದುಲ್ಲ ಕುಕ್ಕಿಲ, ಸದಸ್ಯರಾದ ಸಿದ್ದಿಕ್ ಸರಾವು, ಅಬ್ದುಲ್ ರಹಿಮಾನ್, ಇಸ್ಮಾಯಿಲ್ ಹಾಜಿ ರಝಾಕ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಂಗಳೂರಿಗೆ ತೆರಳಿ ಅಲ್ಲಿ ಬೇಕಾದ ಎಲ್ಲಾ ಕಾರ್ಯ ನಡೆಸಿ ಶವನ್ನು ಕುಕ್ಕಿಲ ಮನೆಗೆ ತಂದರು. ಅಲ್ಲಿಯೂ ಎಲ್ಲಾ ಕಾರ್ಯವನ್ನು ಮುಗಿಸಿ ಬಳಿಕ ಶವವನ್ನು ದಫನ ಮಾಡಲಾಯಿತು
Tagged with
cnews,
feature
ಕಾಸರಗೋಡು: ಗೂಡಂಗಡಿಯ ಶೆಡ್‌ನಲ್ಲಿ ಮಲ ಗಿದ್ದ ಯುವಕನ ಮೃತದೇಹ ಬರ್ಬರವಾಗಿ ಕೊರಳು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಣ್ಣೂರು ಜಿಲ್ಲೆಯ ಆಯಿಕ್ಕೆರೆ ಮೊಯ್ದೀನ್ ಮಸೀದಿ ಬಳಿಯ ಗೂಡಂಗಡಿಯ ಶೆಡ್‌ನಲ್ಲಿ ನಿನ್ನೆ ಬೆಳಿಗ್ಗೆ ರುಂಡದಿಂದ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಶವ ಕಂಡುಬಂದಿದೆ. ಕೊಲೆಯಾದ ವ್ಯಕ್ತಿಯನ್ನು ಕಣ್ಣೂರು ತಳಿಪ್ಪರಂಬ, ಪೆರುಂಬಡವ್ ನಿವಾಸಿ ಕಬೀರ್ (೩೯) ಎಂದು ಗುರುತಿಸಲಾಗಿದೆ.
ಸುತ್ತಾಟವನ್ನೇ ಕಸುಬಾಗಿಸಿದ್ದ ಕಬೀರ್ ಯಾವ ಕೆಲಸದಲ್ಲೂ ಶಾಶ್ವತವಾಗಿ ನಿಂತವನಲ್ಲ. ಸ್ವಂತ ಮನೆಗೆ ತೆರಳುವುದೇ ಅಪರೂಪವಾದ ಇವರು ಕಳೆದ ಕೆಲವು ಸಮಯದಿಂದ ಸಕೀನಾ ಎಂಬ ಒಂಟಿ ಮಹಿಳೆಯ ಜೊತೆಗೆ ತನ್ನ ಮನೆಯಲ್ಲಿ ಕಳೆದಿದ್ದ ಎನ್ನಲಾಗಿದೆ. ಹೆಚ್ಚಿನ ಅವಧಿ ಯಲ್ಲಿ ಅಂಗಡಿ ವರಾಂಡದಲ್ಲೋ, ರಸ್ತೆ ಬದಿಯಲ್ಲೋ ಮಲಗಿ ನಿದ್ರಿಸುತ್ತಿದ್ದರು.
ಮೊನ್ನೆ ತಡರಾತ್ರಿ ಆವಿಕ್ಕೆರೆಯಲ್ಲಿ ಕೆಲವರ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದುದನ್ನು ಕಂಡವರಿದ್ದಾರೆ. ಆ ಬಳಿಕ ಅಂಗಡಿ ಶೆಡ್‌ನಲ್ಲಿ ಮಲಗಿದ್ದಾತ ನಿನ್ನೆ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಈ ವಾಗ್ವಾದವೇ ಕೊಲೆಯಲ್ಲಿ ಪರ್ಯಾ ವಸನವಾಯಿತೇ ಎಂದು ಶಂಕಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೆತ್ತಿಕೊಂಡ ಪೊಲೀಸರು, ಗಲಭೆಯಲ್ಲಿ ದ್ದವರ ಮಾಹಿತಿ ಸಂಗ್ರಹಿಸಿದ್ದಾರೆ. ಶವ ಮಹಜರು ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟು ಕೊಡಲಾಗಿದೆ.
Tagged with
cnews,
feature
ಎಸ್‌ಡಿಪಿಐನಿಂದ ಪುರಸಭೆಗೆ ದೂರು
ಮಂಗಳೂರು: ಬಂಟ್ವಾಳ ಪುರ ಸಭಾ ವ್ಯಾಪ್ತಿಗೊಳಪಟ್ಟ ಒಂದನೇ ವಾರ್ಡ್ ಆಗಿರುವ ಕಸ್ಬಾ ಬೆಂಗ್ರೆ ಅವ್ಯ ವಸ್ಥೆಯ ಆಗರವಾಗಿದ್ದು ಇಲ್ಲಿನ ಸಮ ಸ್ಯೆಗಳ ಬಗ್ಗೆ ಎಸ್‌ಡಿಪಿಐ ವತಿಯಿಂದ ಪುರಸಭೆಗೆ ದೂರು ನೀಡಲಾಗಿದೆ.
ಇಲ್ಲಿನ ಲೊರೆಟ್ಟೋಪದವು ಬಾರೆ ಕ್ಕಾಡ್ ಎಂಬಲ್ಲಿ ೪೫೦ ಮನೆಗಳಿದ್ದು, ಕುಡಿಯುವ ನೀರಿನ ಸಮಸ್ಯೆ ಜನರನ್ನು ಕಂಗೆಡಿಸಿದೆ. ನೀರು ಹರಿದು ಹೋಗಲು ಸರಿಯಾದ ಚರಂಡಿ ಇಲ್ಲದಿದ್ದು ಇಲ್ಲಿನ ಕೌನ್ಸಿಲರ್ ಅರ್ಧಂ ಬರ್ಧ ಕಾಮಗಾರಿ ನಡೆಸಿ ನಂತರ ಇತ್ತ ಕಡೆ ಗಮನಹರಿಸಿಲ್ಲ. ಇದರ ಪರಿಣಾಮವಾಗಿ ರಸ್ತೆಯಲ್ಲೆಲ್ಲಾ ಕೊಳಚೆ ನೀರು ಹರಿದಾಡುತ್ತಿದ್ದು ಇದರಿಂದ ಹೊರಹೊಮ್ಮುವ ದುರ್ವಾ ಸನೆಯಿಂದಾಗಿ ಸಾರ್ವಜನಿಕರು ನಡೆದಾ ಡುವುದೂ ಅಸಹ್ಯವಾಗಿದೆ. ಅಲ್ಲದೆ ಮಾರಕ ರೋಗದ ಭೀತಿಯೂ ಎದು ರಾಗಿದೆ.
ಫುಟ್‌ಪಾತ್ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ಶಾಲೆ ಹಾಗೂ ಮದ್ರಸಾಕ್ಕೆ ಹೋಗುವ ಮಕ್ಕಳ ಪರಿ ಪಾಡು ಹೇಳ ತೀರದು.
ಇಲ್ಲಿನ ಸಮ ಸ್ಯೆಗಳ ಬಗ್ಗೆ ಸಂಬಂಧಪಟ್ಟ ಜನ ಪ್ರತಿನಿಧಿ ಗಳಲ್ಲಿ ಹೇಳಿಕೊಂಡರೂ ಅವರು ನಿರ್ಲಕ್ಷ್ಯ ತಾಳಿದ್ದಾರೆ. ಈ ಹಿನ್ನೆಲೆ ಯಲ್ಲಿ ಅಧಿಕಾರಿಗಳೇ ಆಸಕ್ತಿ ವಹಿಸಿ ಸಮಸ್ಯೆಗಳನ್ನು ಬಗೆಹರಿ ಸುವಂತೆ ಎಸ್‌ಡಿಪಿಐ ಮನವಿಯಲ್ಲಿ ತಿಳಿಸಿದೆ.
Tagged with
dk,
feature,
lnews
ಸುಳ್ಯ: ೨೫ ದಿನಗಳ ಹಿಂದೆಯಷ್ಟೆ ಮದುವೆಯಾಗಿದ್ದ ಮಹಿಳೆ ಯೊಬ್ಬರು ನಾಪತ್ತೆಯಾಗಿರುವ ಕುರಿತು ಸುಳ್ಯ ಪೊಲೀಸರಿಗೆ ದೂರು ನೀಡಲಾಗಿದೆ.
ಉಪ್ಪಿನಂಗಡಿ ಸಮೀಪದ ಆತೂರಿನ ಚೀನಪ್ಪ ಎಂಬವರ ಪುತ್ರಿ ಉಮಾವತಿ(೨೨) ನಾಪತ್ತೆಯಾದಾಕೆ. ಈಕೆಯನ್ನು ಸುಳ್ಯ ಸಮೀಪದ ಶಾಂತಿನಗರ ನಿವಾಸಿ ರಾಮ ಎಂಬವರ ಪುತ್ರ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ವಿಶ್ವನಾಥ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಕಳೆದ ಎಪ್ರಿಲ್ ೨೫ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಈ ವಿವಾಹ ನೆರವೇರಿತ್ತು. ಉಮಾವತಿಗೆ ಈ ಸಂಬಂಧ ಇಷ್ಟವಿರಲಿಲ್ಲ, ಆಕೆ ಬೇರೊಬ್ಬನನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಳು. ತಂದೆಯ ಒತ್ತಾಯಕ್ಕೆ ಈಕೆ ವಿವಾಹವಾಗಿದ್ದಳು ಎನ್ನಲಾಗಿದೆ. ಶನಿವಾರ ನಸುಕಿನ ಐದು ಗಂಟೆಗೆ ವಿಶ್ವನಾಥರ ಮೊಬೈಲ್‌ಗೆ ಕರೆಯೊಂದು ಬಂದಿದ್ದು, ಉಮಾವತಿ ಅದನ್ನು ಸ್ವೀಕರಿಸಿದ್ದಳು. ಮತ್ತು ಒಳ ಬಂದ ಕರೆಯ ನಂಬರ್‌ನ್ನು ಆಕೆ ಬಳಿಕ ಡಿಲೀಟ್ ಮಾಡಿದ್ದಳು. ಬಳಿಕ ಆಕೆ ಶೌಚಾಲಯಕ್ಕೆ ತೆರಳಿ ಹಿಂತಿರುಗಿ ಮನೆಯಿಂದ ಹೊರಗಡೆ ಹೋಗಿದ್ದಳು. ಆ ಬಳಿಕ ಮನೆಗೆ ಹಿಂತಿರುಗಿಲ್ಲ ಎಂದು ವಿಶ್ವನಾಥ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Tagged with
cnews,
feature,
missing
ದೇರಳಕಟ್ಟೆಯಲ್ಲಿ ಬಸ್ ತಡೆದ ಜನರು
ಮಂಗಳೂರು: ಬಸ್ ಮಾಲೀಕ ಕಂ ಚಾಲಕನೂ ಆಗಿರುವ ಯುವಕ ನೋರ್ವ ಭಿನ್ನಕೋಮಿನ ಯುವತಿಯನ್ನು ಮರುಳುಗೊಳಿಸಿ ಆಕೆಯ ಜತೆ ಪರಾರಿಯಾದ ಘಟನೆಯಿಂದ ಆಕ್ರೋಶಿರಾಗಿರುವ ಜನರು ಬಸ್ಸನ್ನು ತಡೆದಿಟ್ಟಿರುವ ಪ್ರಕರಣ ದೇರಳಕಟ್ಟೆಯಲ್ಲಿ ನಡೆದಿದೆ.
ಮಂಜನಾಡಿ ಹಾಗೂ ಕೊಣಾಜೆ ಕಡೆಗೆ ಹೋಗುವ ಪರ್ಸಿ ಎನ್ನುವ ಸರ್ವಿಸ್ ಬಸ್ಸೊಂದರಲ್ಲಿ ದೇರಳಕಟ್ಟೆಯ ಮುಸ್ಲಿಂ ಹುಡುಗಿ ಮಂಗಳೂರಿನ ಕಾಲೇಜಿಗೆ ಹೋಗುತ್ತಿದ್ದಳು. ಅದೇ ಬಸ್ಸಿನ ಮಾಲೀಕ ಕಂ ಚಾಲಕ ನಾಗಿರುವ ವಿನ್ಸೆಂಟ್ ಈಕೆಯನ್ನು ಬುಟ್ಟಿಗೆ ಹಾಕಿಕೊಂಡಿದ್ದ.
ಕೆಲವು ದಿನಗಳ ಹಿಂದೆ ಈ ವಿದ್ಯಾರ್ಥಿನಿಯನ್ನು ನಗರದ ಖಾಸಗಿ ನ್ಯಾಯವಾದಿ ಬಳಿ ಕರೆದೊಯ್ದಿದ್ದ ವಿನ್ಸೆಂಟ್ ಅಲ್ಲಿ ಖಾಲಿ ಕಾಗದಕ್ಕೆ ಬಲವಂತದಿಂದ ಸಹಿ ಹಾಕಿಸಿದ್ದ ಎನ್ನ ಲಾಗಿದೆ. ಅದರಲ್ಲಿ ನಾನು ಈತನನ್ನು ಸ್ವಇಚ್ಛೆಯಿಂದ ಮದುವೆಯಾಗುತ್ತಿದ್ದೇನೆ ಎಂದು ಬರೆದು ಕಾಗದವನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ.
ತಿಂಗಳ ಹಿಂದೆ ಯುವತಿಗೆ ಸಂಬಂಧಿಕನ ಜತೆ ವಿವಾಹ ನಿಶ್ಚಿತಾ ರ್ಥವಾಗಿತ್ತು. ಅದುವರೆಗೆ ಮನೆಯ ವರಲ್ಲಿ ಚೆನ್ನಾಗಿಯೇ ಇದ್ದ ಯುವತಿ ಶುಕ್ರವಾರ ಮಧ್ಯಾಹ್ನ ಮನೆಯಿಂದ ಹೋದವಳು ಏಕಾಏಕಿಯಾಗಿ ನಾಪತ್ತೆ ಯಾಗಿದ್ದಳು. ಇದರಿಂದ ಆತಂಕ ಗೊಂಡ ಆಕೆಯ ಹೆತ್ತವರು ಕೊಣಾಜೆ ಠಾಣೆಗೆ ದೂರು ನೀಡಲು ಹೋಗಿದ್ದರು ಎನ್ನಲಾಗಿದೆ. ಅದೇ ಸಂದರ್ಭ ಠಾಣೆಗೆ ಕಾಗದವೊಂದು ಬಂದಿದ್ದು ಅದರಲ್ಲಿ ಯುವತಿಯ ಸಹಿ ಇದ್ದು ತನಗೆ ವಿನ್ಸೆಂಟ್ ಜೊತೆ ಮದುವೆಯಾಗುವುದಾಗಿ ಬರೆದಿತ್ತು ಎನ್ನಲಾಗಿದೆ.
ಇದನ್ನೇ ಕುಂಟು ನೆಪವಾಗಿಸಿಕೊಂಡ ಪೊಲೀಸರು ಕೇಸು ದಾಖಲಿಸಲು ನಿರಾಕರಿಸಿದ್ದಾರೆ. ಅಲ್ಲದೆ ವಿನ್ಸೆಂಟ್ ಕೂಡಾ ಪೊಲೀಸರು ತನ್ನ ಮುಷ್ಠಿಯಲ್ಲಿದ್ದು ಹಣ ಕೊಟ್ಟರೆ ಏನೂ ಬೇಕಾದರೂ ಮಾಡುತ್ತಾರೆ ಎಂದು ಹೇಳಿಕೊಳ್ಳುತ್ತಿದ್ದ. ಇದೀಗ ಪೊಲೀಸರು ವಿನ್ಸೆಂಟ್ ಪರ ಮಾತನಾಡುತ್ತಿರುವುದು ಕೂಡಾ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು ದೇರಳಕಟ್ಟೆಯ ಜನರು ಪರ್ಸಿ ಬಸ್ಸನ್ನು ತಡೆದಿಟ್ಟಿದ್ದು ವಿನ್ಸಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ವಿನ್ಸಿಯ ಹೆಸರು ಈ ಹಿಂದೆ ಕೂಲಿಗಾಗಿ ಕಾಳು ಯೋಜನೆಯ ಅಕ್ಕಿ ಕಳ್ಳತನ ಪ್ರಕರಣದಲ್ಲಿಯೂ ಕೇಳಿ ಬಂದಿತ್ತು. ಈ ಸಂದರ್ಭದಲ್ಲಿ ಸ್ಥಳೀಯರು ಈತನ ಮುಖಮೂತಿ ನೋಡದೆ ಗೂಸಾ ಕೊಟ್ಟಿದ್ದರು. ಸದಾ ತನ್ನ ಬಸ್ಸಲ್ಲಿ ಬರುವ ಹುಡುಗಿಯರ ಹಿಂದೆ ಬೀಳುವ ಈತನ ಬಗ್ಗೆ ಸ್ಥಳೀಯವಾಗಿ ಉತ್ತಮ ಹೆಸರು ಇರಲಿಲ್ಲ. ಈ ಹಿಂದೆ ಬೇರೆ ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದ ಚಾಲಕನ ಕಿವಿ ಕಚ್ಚಿ ತಿಂದ ಪ್ರಕರಣವೂ ಈತನ ಮೇಲಿತ್ತು.
ಈತನ ಕಾಮದಾಟಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು
ಬಸ್ ಚಾಲಕ ಕಂ ಮಾಲೀಕನ ಪ್ರೇಮ, ಕಾಮ ಪುರಾಣ ಹಿಂದೆಯೂ ನಡೆದಿದೆ ಎನ್ನಲಾಗಿದೆ. ಈಗಾಗಲೇ ಮೂವರು ಯುವತಿಯರ ಜೀವನದಲ್ಲಿ ಚಕ್ಕಂದ ಆಡಿದ್ದು. ಇದರ ಪರಿಣಾಮವಾಗಿ ಓರ್ವ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇನ್ನೋರ್ವ ಯುವತಿ ಬೇರೊಬ್ಬನ ಜತೆ ಪರಾರಿಯಾಗಿದ್ದಾಳೆ. ಆದರೂ ಪ್ರೇಮದಾಟ ಮುಂದುವರಿಸಿರುವ ಮಾಲೀಕ ಕಂ ಚಾಲಕ ಈಗ ಮುಸ್ಲಿಂ ಯುವತಿಯ ಜೊತೆ ಪರಾರಿಯಾಗಿ ಸ್ಥಳೀಯರ ಆಕ್ರೋಶಕ್ಕೆ ತುತ್ತಾಗಿದ್ದಾನೆ.
Tagged with
cnews,
feature
ಟಿಂಟ್ ಗಾಜು ತೆರವು ಆದೇಶ
ಮಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ದೇಶಾದ್ಯಂತ ಕಾರಿಗೆ ಅಳವಡಿಸಿರುವ ಟಿಂಟ್ ಗಾಜು(ಕಪ್ಪು ಪಟ್ಟಿ) ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದರಿಂದ ದೇಶದ ಮಹಾನಗರಗಳಾದ ಮುಂಬೈ, ದೆಹಲಿ, ಕಲ್ಕತ್ತಾ ಹಾಗೂ ಇತರೆಡೆ ಹೆಚ್ಚಾಗಿ ನಡೆಯುತ್ತಿದ್ದ ಗ್ಯಾಂಗ್‌ರೇಪ್, ಡಕಾಯಿತಿ, ಕಿಡ್ನ್ಯಾಪ್, ಮರ್ಡರ್‌ಗಳಂಥ ಗಂಭೀರ ಪ್ರಕರಣ ಗಳನ್ನು ನಿಯಂತ್ರಿಸುವ ಉದ್ದೇಶ ಸರಕಾರ ಹಾಗೂ ನ್ಯಾಯಾಂಗಕ್ಕೆ ಇದೆಯಾದರೂ ಇದು ಸಾರ್ವಜನಿಕರ ಮಟ್ಟಿಗಂತೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಂದೆಡೆ ಟಿಂಟ್ ಗಾಜು ಅಳವಡಿಸದಿದ್ದರೆ ಬಿಸಿಲಿನ ತಾಪ ತಡೆ ಯಲಸಾಧ್ಯ ಎಂಬ ಮಾತುಗಳು ಕೇಳಿ ಬಂದರೆ ಮತ್ತೊಂದೆಡೆ ಟಿಂಟ್ ಗಾಜು ಅಳವಡಿಸಿ ಕಾರಿನಲ್ಲೇ ಸರಸ-ಸಲ್ಲಾಪ ನಡೆಸುತ್ತಿದ್ದ ಯುವಜೋಡಿಗಳು ‘ಮುಂದೇನು ದಾರಿ ಎಂದು ತಲೆಬಿಸಿ ಮಾಡುತ್ತಿರುವ ಸುದ್ದಿಯೂ ಕೇಳಿಬರುತ್ತಿದೆ. ಕಾರಿನ ಟಿಂಟ್ ಗಾಜು ಏರಿಸಿದರೆ ಒಳಗಿದ್ದವರು ಕಾಣುವುದಿಲ್ಲ, ಹಾಗೆಂದು ಕಾರಿನೊಳಗಿದ್ದವರಿಗೆ ಹೊರಗಿನ ಜಗತ್ತು ಸ್ಪಷ್ಟವಾಗಿ ಕಾಣುತ್ತದೆ. ಮುಂಬೈ, ದೆಹಲಿ, ಕರಾವಳಿಯಲ್ಲಿ ಸೆಖೆಯ ತೀವ್ರತೆ ಕೊಂಚ ಹೆಚ್ಚೇ ಇರುವ ಕಾರಣ ಕಾರಿಗೆ ಟಿಂಟ್ ಆಳವಡಿಸದಿದ್ದರೆ ಸಂಚರಿಸುವುದೂ ಕಷ್ಟ. ಹೀಗಾಗಿ ಬಹುತೇಕ ಮಂದಿ ಕಾರಿಗೆ ಟಿಂಟ್ ಗಾಜು ಹಾಕುತ್ತಾರೆ. ಇದು ಟಿಂಟ್ ಗಾಜಿನ ಸಾಧಕವಾದರೆ, ಇದರ ಬಾಧಕಗಳೂ ಅಷ್ಟೇ ಇವೆ. ಟಿಂಟ್ ಗಾಜು ಕಾಮುಕರಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಯಾಕೆಂದರೆ ಕಾರಿನಲ್ಲಿ ಟಿಂಟ್ ಗಾಜು ಇರುವುದರಿಂದ ಯಾವ ಹುಡುಗಿಯನ್ನೇ ಆಗಲಿ, ಪುಸಲಾಯಿಸಿ ಧೈರ್ಯದಿಂದ ಕರೆದೊಯ್ಯಬಹುದು. ಆಕೆ ಹೊರಜಗತ್ತಿಗೆ ಕಾಣುವುದಿಲ್ಲ. ಇನ್ನು ಆಕೆಯ ಜೊತೆ ಸರಸವಾಡಲು ಹೋಟೆಲ್ ರೂಂ, ಲಾಡ್ಜ್‌ಗೆ ಕರೆದೊಯ್ಯಬೇಕಾದ ಅವಶ್ಯಕತೆಯಿಲ್ಲ. ಎಲ್ಲಾದರೂ ನಿರ್ಜನ ಸ್ಥಳದಲ್ಲಿ ಕಾರನ್ನು ಪಾರ್ಕ್ ಮಾಡಿದರೆ ಮುಗೀತು. ಕಾರಿನಲ್ಲೇ ಎಲ್ಲವನ್ನೂ ಮುಗಿಸಿ ಬಿಡಬಹುದು ಎಂಬ ಲೆಕ್ಕಾಚಾರ ವಿದೇಶಿ ಸಂಸ್ಕೃತಿಯಲ್ಲಿ ಮಿಂದೇಳುವ ಯುವ ಜನರಲ್ಲೂ ಇತ್ತು.
ದೆಹಲಿ, ಮುಂಬೈ, ಕಲ್ಕತ್ತಾ ನಗರಗಳಲ್ಲಿ ಟಿಂಟ್ ಗಾಜು ಹಾಕಿರುವ ಕಾರನ್ನು ಅಪರಾಧ ಕೃತ್ಯಗಳಲ್ಲಿ ಜಾಸ್ತಿಯಾಗಿ ಬಳಕೆ ಮಾಡಿದ್ದೇ ಸುಪ್ರೀಂ ಕೋರ್ಟ್‌ನ ಕಣ್ಣು ಕೆಂಪಗಾಗಲು ಕಾರಣ. ಕಳೆದ ಐದಾರು ವರ್ಷಗಳಲ್ಲಿ ದೇಶದ ಪ್ರಮುಖ ನಗರ ಮುಂಬೈ ಹಾಗೂ ದೆಹಲಿಗಳಲ್ಲಿ ಚಲಿಸುತ್ತಿದ್ದ ಟಿಂಟ್ ಗಾಜಿನ ಕಾರುಗಳಲ್ಲೇ ಅವೆಷ್ಟೋ ಬಾಲೆಯರು ತಮ್ಮ ಮಾನ ಕಳೆದುಕೊಂಡಿದ್ದಾರೆ. ಟಿಂಟ್ ಗಾಜು ಏರಿಸಿ ಎಲ್ಲವನ್ನೂ ಸೂರೆಗೈದು ಕೊನೆಗೆ ಅಮಾಯಕ ಹೆಣ್ಮಕ್ಕಳನ್ನು ಕೊಲೆಗೈದೋ, ಸ್ಮೃತಿ ತಪ್ಪಿಸಿಯೋ ರಸ್ತೆ ಬದಿ ಎಸೆದುಹೋದ ಪ್ರಕರಣಗಳು ಮಾಮೂಲಿಯಾಗಿದ್ದವು. ಇದೇ ಕಾರಣಗಳಿಂದ ಕಾರಿನ ಟಿಂಟ್ ಗಾಜು ವಿವಾದಕ್ಕೆಡೆ ಮಾಡಿಕೊಟ್ಟಿತ್ತು.
ಇನ್ನು ನಮ್ಮ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಯುವಜೋಡಿಗೆ ಟಿಂಟ್ ಹಾಕಿದ ಕಾರುಗಳೇ ಸರಸ-ಸಲ್ಲಾಪದ ಶಯನಗೃಹಗಳಾಗಿದ್ದವು. ಇಂದಿನ ಕಾಲೇಜ್ ವಿದ್ಯಾರ್ಥಿಗಳು ಸೆಕ್ಸ್ ಬಗ್ಗೆ ಹಿಂದಿದ್ದ ಮಡಿವಂತಿಕೆಯಿಂದ ಹೊರಬಂದ ಹಾಗೆ ಟಿಂಟ್ ಗಾಜಿನ ಕಾರುಗಳು ಅವರಿಗೆ ಸ್ವರ್ಗಸದೃಶವಾಗಿದ್ದವು. ಎಲ್ಲೋ ಬೀಚ್, ಪಾರ್ಕ್, ಲಾಡ್ಜ್ ರೂಂಗಳಲ್ಲಿ ಮೈಮರೆತು ‘ಎಡವಟ್ಟು ಮಾಡಿಕೊಳ್ಳುವ ಬದಲು ಟಿಂಟ್ ಅಳವಡಿಸಿದ ಗಾಜಿನ ಕಾರುಗಳಲ್ಲೇ ಸ್ವರ್ಗದ ಕದ ತಟ್ಟುತ್ತಿದ್ದರು. ಇಲ್ಲಿ ಯಾಮಾರಿದ ಅವೆಷ್ಟೋ ಹೆಣ್ಮಕ್ಕಳು ‘ನೀಲಿಚಿತ್ರ ಸುಂದರಿಯರಾಗಿ ನಡುಬೀದಿಯಲ್ಲಿ ಬಿಕರಿಯಾಗಿದ್ದು ಹಳೇ ಸುದ್ದಿ.
ಇದೀಗ ಸುಪ್ರೀಂಕೋರ್ಟ್ ಟಿಂಟ್ ಗಾಜಿನ ಕಾರುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವುದರಿಂದ ಟಿಂಟ್ ಗಾಜು ಪ್ರಿಯರು ಬೇಸ್ತು ಬೀಳುವಂತಾಗಿದೆ. ‘ತೆಗೆದರೆ ಮಾನ ಹೋಗುತ್ತದೆ, ತೆಗೆಯದಿದ್ದರೆ ಕಾನೂನು ಬಿಡುವುದಿಲ್ಲ ಎಂಬಂತಾಗಿದೆ ಯುವಜೋಡಿಯ ಪಾಡು. ನಿಶ್ಚಿಂತೆಯಿಂದ ಯಾವುದೋ ಹುಡುಗಿಯನ್ನು ಕಾರಿನಲ್ಲಿ ಪಿಕಪ್ ಮಾಡಿ ಕರೆದೊಯ್ಯುತ್ತಿದ್ದ ಭೂಪರು ಇಂಗು ತಿಂದ ಮಂಗನಂತಾಗಿದ್ದಾರೆ. ಟಿಂಟ್ ಗಾಜು ಏರಿಸಿ ಕಾರಿನಲ್ಲಿ ಮತ್ತೇರಿಸಿಕೊಳ್ಳುತ್ತಿದ್ದ ಪ್ರಣಯ ಪಕ್ಷಿಗಳು ಕೇರಳದಲ್ಲಿರುವಂತೆ ‘ಸ್ಕ್ರೀನ್ ಅಳವಡಿಸುವ ಚಿಂತೆಯಲ್ಲಿದ್ದಾರೆ. ಟಿಂಟ್ ಗಾಜು ನಿಷೇಧದಿಂದ ಮುಂದೆ ಪಾರ್ಕ್, ಬೀಚ್‌ಗಳು ಮತ್ತೆ ರಂಗೇರಿಸಿಕೊಳ್ಳುವ ಸಾಧ್ಯತೆಯಿದೆ, ಹೋಟೆಲ್-ಲಾಡ್ಜ್‌ಗಳ ಕೊಠಡಿಗಳಲ್ಲಿ ಪ್ರಣಯಪಕ್ಷಿಗಳು ತುಂಬಿಹೋಗುವ ಸಾಧ್ಯತೆಯಿದೆ ಎನ್ನುವುದು ಕುಹಕಿಗಳ ಲೆಕ್ಕಾಚಾರ.
‘ಜನಾಭಿಪ್ರಾಯ ಸಂಗ್ರಹಿಸಬೇಕಿತ್ತು
‘ಸುಪ್ರೀಂ ಕೋರ್ಟ್ ದೇಶಾದ್ಯಂತ ಕಾರು ಮತ್ತು ಇತರ ವಾಹನಗಳ ಟಿಂಟ್ ಗಾಜು ಕೀಳಬೇಕೆಂದು ಆದೇಶ ನೀಡಿದ್ದನ್ನು ಪ್ರಶ್ನಿಸಲಾಗದು. ಆದರೆ ಜನಾಭಿಪ್ರಾಯಕ್ಕೂ ಮನ್ನಣೆ ನೀಡಬೇಕಿತ್ತು. ಯಾಕೆಂದರೆ ಮಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸೆಖೆಯಿಂದಾಗಿ ಟಿಂಟ್ ಗಾಜು ಇರದೆ ಕಾರಿನಲ್ಲಿ ಪ್ರಯಾಣಿಸುವಂತಿಲ್ಲ, ಇಲ್ಲಿನ ಹವಾಗುಣಕ್ಕೆ ಟಿಂಟ್ ಗಾಜು ಸೂಕ್ತವೂ ಆಗಿದೆ. ಇಷ್ಟೇ ಅಲ್ಲದೆ ಎ.ಸಿ.ಬೇಗನೆ ಕೂಲ್ ಆಗುವಲ್ಲಿಯೂ ಟಿಂಟ್ ಗಾಜು ಸಹಕಾರಿ ಮತ್ತು ವಾಹನದ ಮೈಲೇಜ್ ಕೂಡಾ ಗರಿಷ್ಠ ಸಿಗುತ್ತದೆ. ಹೀಗಾಗಿ ಟಿಂಟ್ ಗಾಜು ಕೀಳುವ ಆದೇಶವನ್ನು ಮತ್ತೊಮ್ಮೆ ಪರಾಮರ್ಶಿ ಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೇಲೆ ನ್ಯಾಯಾಲಯದ ಮೆಟ್ಟಿಲೇರಲು ತೀರ್ಮಾನ ಕೈಗೊಂಡಿದ್ದೇನೆ ಎನ್ನುತ್ತಾರೆ ಮಂಗಳೂರಿನ ‘ಕಾರ್ ಡೆಕೊರ್ ಸಂಸ್ಥೆಯ ಮಾಲಕ ಮುಖೇಶ್.
Tagged with
dk,
feature,
lnews
ಬೆಂಗಳೂರು: ದೇವರಾಜ ಅರಸು, ಬಂಗಾರಪ್ಪ, ರಾಮಕೃಷ್ಣ ಹೆಗಡೆ ನಂತರ ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರದಿ.
ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿರುವ ಯಡಿಯೂರಪ್ಪ ‘ಕರ್ನಾಟಕ ಜನತಾಪಾರ್ಟಿ ಸ್ಥಾಪಿಸು ವುದು ಬಹುತೇಕ ಖಚಿತವಾಗಿದೆ.
ರಾಜಕೀಯವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಸಿಲುಕಿರುವ ಯಡಿಯೂರಪ್ಪ ತಾನು ಏನು ಎಂಬುದು ಸಾಬೀತುಪಡಿಸಲೇಬೇಕಾಗಿದೆ. ಇದಕ್ಕೆ ಪ್ರಾದೇಶಿಕ ಪಕ್ಷ ಸ್ಥಾಪನೆ ಒಂದೇ ದಾರಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಕರ್ನಾಟಕದಲ್ಲಿ ನಾನಿದ್ದರೆ ಬಿಜೆಪಿ. ಇಲ್ಲದಿದ್ದರೆ ಇಲ್ಲ ಎಂಬ ಸಂದೇಶ ರವಾನಿಸಬೇಕು. ತನಗೆ ಅಧಿಕಾರ ಸಿಗದಿದ್ದರೂ ತಾನಿಲ್ಲದ ಬಿಜೆಪಿ ರಾಜ್ಯದಲ್ಲಿ ತಳಮುಟ್ಟಬೇಕು ಎಂದು ತೀರ್ಮಾನಿಸಿರುವ ಯಡಿಯೂರಪ್ಪ ನೂತನ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಯಡಿಯೂರಪ್ಪ ಅವರ ನಿರ್ಧಾರದಿಂದ ರಾಜ್ಯ ಬಿಜೆಪಿ ಇಬ್ಭಾಗವಾಗುವ ಹಾದಿಯತ್ತ ಸಾಗಿದ್ದು ಈಗಾಗಲೇ ಬಳ್ಳಾರಿ ರೆಡ್ಡಿ ಸಹೋದರರು ಪ್ರಾದೇಶಿಕ ಪಕ್ಷ ರಚಿಸಿ ಐದಾರು ಜಿಲ್ಲೆಗಳಲ್ಲಿ ಬಿಜೆಪಿ ಬುಡ ಅಲ್ಲಾಡಿಸಿದ್ದು, ಇದೀಗ ಯಡಿಯೂರಪ್ಪ ಹೊಸ ಪಕ್ಷ ಸ್ಥಾಪಿಸಿದರೆ ರಾಜ್ಯಾದ್ಯಂತ ಬಿಜೆಪಿ ನೆಲೆ ಅರ್ಧದಷ್ಟು ಕಳಚುವ ಸಾಧ್ಯತೆಯಿದ್ದು, ಬಿಜೆಪಿ ರಾಜ್ಯದಲ್ಲಿ ೨೦ ವರ್ಷ ಹಿಂದಕ್ಕೆ ಹೋಗುವುದು ಖಚಿತ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪಿಸಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಯಡಿಯೂರಪ್ಪ ಈಗಾಗಲೇ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.
ಕರ್ನಾಟಕ ಜನತಾಪಾರ್ಟಿ ಸ್ಥಾಪಿಸುವ ಸಂಬಂಧ ದೆಹಲಿಯಲ್ಲಿ ಯಡಿಯೂರಪ್ಪ ಅವರಿಗೆ ಆಪ್ತರಾಗಿರುವವರು ಕೇಂದ್ರ ಚುನಾವಣಾ ಆಯೋಗದ ಜತೆ ಸತತ ಸಂಪರ್ಕ ಸಾಧಿಸಿ ನೂತನ ಪಕ್ಷದ ನೋಂದಣಿ ಮಾಡಿಸಿದ್ದಾರೆ.
ನೂತನ ಪಕ್ಷ ಸ್ಥಾಪನೆಗೆ ಮುನ್ನ ರಾಜ್ಯ ಪ್ರವಾಸ ಕೈಗೊಂಡು ಆ ನಂತರ ಅಧಿಕೃತವಾಗಿ ಪಕ್ಷ ಸ್ಥಾಪನೆ ಘೋಷಣೆ ಮಾಡುವುದು ಸದ್ಯದ ಯಡಿಯೂರಪ್ಪ ಯೋಜನೆ. ಚುನಾವಣಾ ಕಾಲಕ್ಕೆ ಗಣಿ ರೆಡ್ಡಿ ಸಹೋದರರ ಬಿಎಸ್‌ವೈ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿಗೆ ಪಾಠ ಕಲಿಸುವುದು ಯಡಿಯೂರಪ್ಪ ಉದ್ದೇಶ. ಸಾಧ್ಯವಾದರೆ ಶ್ರೀರಾಮುಲು ಪಕ್ಷ ಯಡಿಯೂರಪ್ಪ ಅವರ ಪಕ್ಷದಲ್ಲಿ ವಿಲೀನವಾಗುವ ಸಾಧ್ಯತೆಯಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಪ್ರಾಥಮಿಕ ಹಂತದ ಮಾತುಕತೆಗಳು ನಡೆದಿದ್ದು, ಶ್ರಿರಾಮುಲು ರಾಜ್ಯ ಪ್ರವಾಸ ಮುಗಿಯುವಷ್ಟರಲ್ಲಿ ಯಡಿಯೂರಪ್ಪ ಅವರ ನೂತನ ಪಕ್ಷದ ಪ್ರಕ್ರಿಯೆಗಳು ಒಂದು ಹಂತಕ್ಕೆ ಬರಲಿದ್ದು ಜುಲೈ ವೇಳೆಗೆ ರಾಜ್ಯ ರಾಜಕೀಯದ ಸ್ಪಷ್ಟ ಚಿತ್ರಣ ದೊರೆಯಲಿದೆ. ಈ ಮಧ್ಯೆ, ಯಡಿಯೂರಪ್ಪ ಅವರ ನಡೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ. ಸಿಬಿಐ ಬಲೆಗೆ ಸಿಲುಕಿರುವ ಅವರು ದೆಹಲಿ ಕಾಂಗ್ರೆಸ್ ನಾಯಕರ ಅಣತಿಯಂತೆ ಹೆಜ್ಜೆ ಇಡುತ್ತಿದ್ದಾರೆ. ಯಡಿಯೂರಪ್ಪ ಪ್ರತ್ಯೇಕ ಪಕ್ಷ ಸ್ಥಾಪಿಸಿದರೆ ಸಿಬಿಐ ಬಂಧನ ತಪ್ಪಲಿದೆ ಎಂಬ ಸಂದೇಶ ಅಲ್ಲಿಂದ ರವಾನೆಯಾಗಿದೆ ಎಂದು ಹೇಳಲಾಗಿದೆ.
Tagged with
feature,
snews,
yeddi
ಬೆಂಗಳೂರು:ಬಿಜೆಪಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ನಂತರ ಅವರ ಸ್ಥಾನ ತುಂಬುವ ಸಾಮರ್ಥ್ಯ ವಿರುವ ನಾಯಕನ ಕೊರತೆಯಿದೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಮೂಲಕ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ವಾಜಪೇಯಿ ಅವರು ಅಧಿಕಾರದಲ್ಲಿದ್ದಾಗ ಪಕ್ಷದ ವರ್ಚಸ್ಸು ಕೇವಲ ರಾಷ್ಟ್ರದಲ್ಲಷ್ಟೇ ಅಲ್ಲದೇ, ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಶಂಸೆಗೆ ಒಳಗಾಗಿತ್ತು. ಆದರೆ ಅಟಲ್‌ಜೀ ಯವರು ನೇಪಥ್ಯಕ್ಕೆ ಸರಿದ ನಂತರ ಆ ಸ್ಥಾನವನ್ನು ತುಂಬು ವಂತಹ ಸಮರ್ಥ ನಾಯಕತ್ವ ಪಕ್ಷಕ್ಕೆ ದೊರೆಯದಿರುವುದು ದುರ್ದೈವದ ಸಂಗತಿ ಎಂದು ಹೇಳಿದ್ದಾರೆ.
ಅಡ್ವಾಣಿಯವರನ್ನು ಕೆಲವರು ದಿಕ್ಕು ತಪ್ಪಿಸುತ್ತಿದ್ದಾರೆ. ಅದರಲ್ಲಿ ನಮ್ಮ ರಾಜ್ಯದವರೇ ಆದ ಅನಂತ್‌ಕುಮಾರ್ ಮುಂಚೂಣಿಯಲ್ಲಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಕರ್ನಾಟಕದಲ್ಲಿ ಬಿಜೆಪಿ ಗೆ ಭವಿಷ್ಯವಿಲ್ಲ ಎಂದು ತಿಳಿಸಿದರು.
ಮಲ್ಲೇಶ್ವರಂನಲ್ಲಿರುವ ನೂತನ ಕಚೇರಿಯಲ್ಲಿ ಸುದ್ದಿ ಗಾರರ ಜತೆ ಮಾತನಾಡಿದ ಅವರು, ಅನಂತಕುಮಾರ್ ಪಿತೂರಿಗೆ ರಾಷ್ಟ್ರೀಯ ನಾಯಕರಿಂದ ರಾಜ್ಯ ನಾಯಕರವರೆಗೆ ಎಲ್ಲರೂ ಬಲಿಯಾಗಿದ್ದಾರೆ.ಪಕ್ಷದ ರಾಜ್ಯಾಧ್ಯಕ್ಷರು ಅವರ ಕಪಿಮುಷ್ಟಿಯಲ್ಲೇ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ವರಿಷ್ಠರ ವರ್ತನೆ ತಮಗೆ ನೋವು ತಂದಿದ್ದು ಇನ್ನು ಮುಂದೆ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ತಾವು ಪಾಲ್ಗೊಳ್ಳುವುದಿಲ್ಲ. ಮುಂಬೈನಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ ಭಾಗವಹಿಸುವುದಿಲ್ಲ ಎಂದು ತಿಳಿಸಿ ನನ್ನ ದಾರಿ ನನಗೆ ಎಂದು ಹೇಳಿದರು.
ಕೇವಲ ಬಿಜೆಪಿಯಲ್ಲಿ ನನ್ನೊಬ್ಬನನ್ನೇ ಕಡೆಗಣಿಸಿಲ್ಲ. ಶತ್ರುಘ್ನಸಿನ್ಹಾ, ಅರುಣ್ ಶೌರಿ ಅವರಂತಹ ಹಿರಿಯ ಮುತ್ಸದ್ದಿಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಯಾವ ಕಾರಣಕ್ಕಾಗಿ ಇವರನ್ನೆಲ್ಲಾ ದೂರ ಇಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದರು.
Tagged with
snews,
yeddi