ಚಂಢೀಘರ್: ಹರಿಯಾಣದ ಭಗತ್ ಫೂಲ್ ಸಿಂಗ್ ಮಹಿಳ ವಿಶ್ವವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿಯನ್ನು ನಾಲ್ವರು ಯುವಕರು ಅತ್ಯಾಚಾರವೆಸಗಿದ ಕಾರಣ ಹತ್ತಿರದ ಸೋನಿಪಥ್ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಕಳೆದ ಶುಕ್ರವಾರ ನಡೆದಿದೆ.
ವಿದ್ಯಾರ್ಥಿನಿ ನೀಡಿರುವ ದೂರಿನಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಯುವತಿ ಕ್ಯಾಂಪಸ್‌ನ ಹಾಸ್ಟೆಲ್‌ವೊಂದರಲ್ಲಿ ತಂಗಿದ್ದಳು.
ವಿಶ್ವವಿದ್ಯಾಲಯದ ಕ್ಯಾಂಟೀನ್ ನಡೆಸುತ್ತಿದ್ದ ಅಮಿತ್ ಎಂಬಾತನೇ ಈ ಕೃತ್ಯವೆಸಗಿರುವುದಾಗಿ ದೂರಿರುವ ಬಾಲಕಿ, ಸ್ಕಾರ್ಪಿಯೋ ಕಾರಿನಲ್ಲಿ ತನ್ನನ್ನು ಕರೆದೊಯ್ದಿರುವುದಾಗಿ ದೂರಿದ್ದಾಳೆ.
ಗುರುವಾರದವರೆಗೆ ತನ್ನ ಮೇಲೆ ನಾಲ್ವರು ಸತತ ಅತ್ಯಾಚಾರವೆಸಗಿದ್ದಾರೆ. ನಂತರ ತನ್ನನ್ನು ಗುರುವಾರ ಸಂಜೆ ವೇಳೆ ವಿಶ್ವವಿದ್ಯಾಲಯದ ಗೇಟಿನ ಬಳಿ ಎಸೆದಿದ್ದಾರೆ. ಈ ಘಟನೆ ಕುಲಪತಿಗಳ ಗಮನಕ್ಕೆ ಬಂದಿದ್ದು, ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Tagged with
feature,
nnews