ಬಹರೈಚ್ (ಉ.ಪ್ರ.): ಕಳೆದ ತಡರಾತ್ರಿ ಬಸ್ ಮತ್ತು ಗೂಡ್ಸ್ ಲಾರಿಯೊಂದರ ನಡುವೆ ಸಂಭವಿಸಿದ ಅಪಘಾತದಲ್ಲಿ ೧೬ ಜನರು ಮೃತಪಟ್ಟಿದ್ದು, ಎರಡು ಡಜನ್ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಸ್‌ನಲ್ಲಿ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದು, ಅದು ಸುಲ್ತಾನ್‌ಪುರದಿಂದ ಅಜ್ಮೇರ್ ಶರೀಫ್ ಕಡೆ ಚಲಿಸುತ್ತಿತ್ತು. ಬಸ್ ಲಾರಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಬೆಂಕಿ ಹತ್ತಿಕೊಂಡಿರುವುದು ಪ್ರಯಾಣಿಕರಿಗೆ ಪಾರಾಗಲು ಕಷ್ಟಕರವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜಿಲ್ಲಾ ದಂಡಾಧಿಕಾರಿ ಕಿಂಜಾಲ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿದ್ದು, ೫೪ ಸೀಟ್‌ಗಳನ್ನೊಳಗೊಂಡ ಬಸ್‌ನಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸ್ಥಳಿಯರ ಹಳ್ಳಿಗರು ರಕ್ಷಣ ಕಾರ್ಯಾಚರಣೆ ನಡೆಸಿದ್ದು, ಹೆಚ್ಚಿನ ದೇಹಗಳು ಗುರುತು ಪತ್ತೆ ಹಚ್ಚಲು ಅಸಾಧ್ಯವಾಗುವಷ್ಟು ಕರಟಿ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಸ್‌ನಲ್ಲಿದ್ದ ಅಡುಗೆ ಅನಿಲ ಸ್ಫೋಟದಿಂದ ಬೆಂಕಿ ಹತ್ತಿಕೊಂಡಿದೆ ಎಂದು ಸಂಶಯಿಸಲಾಗಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
Tagged with
feature,
nnews
ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಮರಗಳ್ಳರ ಅಟ್ಟಹಾಸ ಮುಂದುವರೆ ದಿದ್ದು, ಇದರ ಹಿಂದೆ ಇಲಾಖೆಯ ಕೆಲ ಅಧಿಕಾರಿಗಳ ಕೈವಾಡವಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು, ಕೆಲಿಂಜ, ಮಾಣಿ, ಕನ್ಯಾನ, ಕುಂಡಡ್ಕ, ಚಂದಳಿಕೆ ಮುಂತಾದ ಕಡೆಗಳಿಂದ ಕೇರಳಕ್ಕೆ ಅಕ್ರಮವಾಗಿ ಮರ ಸಾಗಾಟ ಅವ್ಯಾಹತವಾಗಿ ನಡೆಯುತ್ತಲೇ ಇದೆ.
ಸುಬ್ರಹ್ಮಣ್ಯ, ಹಾಸನ ಮುಂತಾದ ಕಡೆಗಳಿಂದ ಮರಗಳನ್ನು ಖರೀದಿಸಿ ದಂತಹ ವ್ಯಕ್ತಿಗಳು ಯಾವುದೇ ರೀತಿಯ ಪರವಾನಿಗೆ ಇಲ್ಲದೆ ವಿಟ್ಲ ಮಾರ್ಗವಾಗಿ ಕೇರಳಕ್ಕೆ ಮರದ ದಿಮ್ಮಿ ಗಳನ್ನು ಸಾಗಿಸುತ್ತಿದ್ದಾರೆ. ಇನ್ನೂ ಕೆಲ ವರು ಕಾಡಿನಿಂದ ಮರಗಳನ್ನು ಕಳ್ಳತನ ನಡೆಸಿ ಅದನ್ನು ಕೇರಳಕ್ಕೆ ಕೊಂಡೊ ಯ್ಯುತ್ತಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಿದೆ. ಈ ಕೃತ್ಯವು ಹೆಚ್ಚಾಗಿ ರಾತ್ರಿ ಹೊತ್ತುಗಳಲ್ಲಿ ನಡೆಯುತ್ತಲೇ ಇದೆ. ೩-೪ ವರ್ಷಗಳ ಹಿಂದೆ ವಿಟ್ಲ ವ್ಯಾಪ್ತಿಯಲ್ಲಿ ಅಕ್ರಮ ಮರ ಸಾಗಾಟದ ಒಂದು ದೊಡ್ಡ ದಂಧೆ ವಿಟ್ಲ ವ್ಯಾಪ್ತಿಯಲ್ಲಿ ಕಾರ‍್ಯಾಚರಣೆ ಮಾಡುತ್ತಿತ್ತು. ವಿಟ್ಲ ಠಾಣಾಧಿಕಾರಿ ರಕ್ಷಿತ್ ಎ.ಕೆ ಅವರು ಇದಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು. ಅವರು ವಿಟ್ಲ ಪೊಲೀಸ್ ಠಾಣೆಗೆ ಬಂದಾಗಿನಿಂದ ಮರಗಳ್ಳರ ಹಾವಳಿ ಸ್ಥಗಿತಗೊಂಡಿದ್ದವು. ಆದರೆ ಮತ್ತೆ ಮರಸಾಗಾಟಗಾರರು ವಿಟ್ಲ ಪೊಲೀಸರ ಕಣ್ಣು ತಪ್ಪಿಸಿ ಈ ಕೃತ್ಯವನ್ನು ಅವ್ಯಾಹತವಾಗಿ ನಡೆಸುತ್ತಿದ್ದಾರೆ. ರಾತ್ರಿ ಹೊತ್ತು ವಿಟ್ಲ ಪೊಲೀಸರು ಗಸ್ತು ತಿರುಗುತ್ತಿದ್ದಾರೆ ಎಂಬ ಭಯದಿಂದ ಮರಸಾಗಾಟಗಾರರು ಹಗಲು ಹೊತ್ತಲ್ಲೇ ಕೇರಳಕ್ಕೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದಾರೆ. ಇದಕ್ಕೆ ಕೆಲ ಅರಣ್ಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಪುತ್ತೂರು ಕಡೆಯಿಂದ ಬೆಳಿಗ್ಗೆ ೬ ಗಂಟೆಯಿಂದ ೧೧ ಗಂಟೆವರೆಗೆ ಹಾಗೂ ಸಂಜೆ ೪ರಿಂದ ೬ಗಂಟೆವರೆಗೆ ವಿಟ್ಲ ಮಾರ್ಗವಾಗಿ ಅಕ್ರಮವಾಗಿ ಕೇರಳಕ್ಕೆ ಮರಸಾಗಟ ನಡೆಯುತ್ತಿದೆ ಎಂದು ಹೆಸರು ಹೇಳಲು ಇಚ್ಚೆಪಡದ ವ್ಯಕ್ತಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ಈ ಪ್ರಕರಣ ಪೊಲೀಸರ ಕಾರ್ಯ ವ್ಯಾಪ್ತಿಗೆ ಬರದಿದ್ದರೂ ಕೂಡ ವಿಟ್ಲ ಪೊಲೀಸರು ಇದಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸಾಲೆತ್ತೂರು, ಚಂದಳಿಕೆ ಮುಂತಾದ ಕಡೆಗಳಲ್ಲಿ ಹಲವು ಅಕ್ರಮ ಮರಸಾಗಾಟ ತಂಡವನ್ನು ಪತ್ತೆ ಹಚ್ಚಿದ ವಿಟ್ಲ ಠಾಣಾಧಿಕಾರಿ ರಕ್ಷಿತ್ ಎ.ಕೆ. ಪೊಲೀಸ್ ತಂಡ ಪ್ರಕರಣವನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಪೊಲೀಸರ ಈ ರೀತಿಯ ಶ್ರಮವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಹಿಸಿದ್ದರೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಅಕ್ರಮ ಮರ ಸಾಗಾಟವನ್ನು ತಡೆಯಬಹುದು ಎಂಬ ಅಭಿಪ್ರಾಯ ಸಾರ್ವಜನಿಕರದ್ದು. ಸಂಬಂಧಪಟ್ಟ ಅಧಿಕಾರಿಗಳು ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆಯುವಂತಹ ಮರಸಾಗಾಟಕ್ಕೆ ಕಡಿವಾಣ ಹಾಕಬೇಕು. ಈ ಕೃತ್ಯ ನಡೆಸಲು ಸಹಕಾರ ನೀಡುವ ಅಧಿಕಾರಿಗಳ ವಿರುದ್ಧ ನಿರ್ಧಕ್ಷಿಣ ಕಾನೂನು ಕ್ರಮವನ್ನು ಜರಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Tagged with
cnews
ಮುಲ್ಕಿ: ನಿನ್ನೆಯಷ್ಟೇ ಪ್ರಕಟಗೊಂಡ ಎಸ್.ಎಸ್.ಎಲ್.ಸಿ ಫಲಿತಾಂಶವು ವಿದ್ಯಾರ್ಥಿಯೊಬ್ಬನನ್ನು ಬಲಿತೆಗೆದು ಕೊಂಡ ಹೃದಯವಿದ್ರಾವಕ ಘಟನೆ ಮುಲ್ಕಿ ಬಳಿಯಲ್ಲಿ ನಡೆದಿದೆ.
ಮುಲ್ಕಿ ಕವತ್ತಾರು ನೆಲಗುಡ್ಡೆಯ ನಿವಾಸಿ ದಿ.ವಿಠಲ ಪೂಜಾರಿ ಎಂಬ ವರ ಮಗ ವಿಶ್ವಾಸ್ ಪೂಜಾರಿ(೧೬) ಎಂಬ ವಿದ್ಯಾರ್ಥಿಯೇ ಆತ್ಮಹತ್ಯೆ ಮಾಡಿ ಕೊಂಡವ. ಶುಕ್ರವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿಯಲ್ಲಿ ತಾನು ಅನುತ್ತೀರ್ಣನಾದೆ ಎಂದು ಮಾನಸಿಕ ವಾಗಿ ನೊಂದು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ ಎನ್ನಲಾಗಿದೆ.
ದಿ.ವಿಠಲ ಪೂಜಾರಿಗೆ ಮೂವರು ಗಂಡು ಮಕ್ಕಳಿದ್ದು ಮೊದಲನೆಯವ ಮಿಥುನ್‌ರಾಜ್ ಪೂಜಾರಿ ಮಂಗಳೂ ರಿನ ಕೆಪಿಟಿಯಲ್ಲಿ ಎಲೆಕ್ಟ್ರಿಕಲ್ ಡಿಪ್ಲೋ ಮಾ ಕಲಿಯುತ್ತಿದ್ದಾನೆ. ಎರಡನೆ ಮಗನೇ ವಿಶ್ವಾಸ್ ಪೂಜಾರಿ ಆಗಿದ್ದು, ಮೂರನೇಯ ವಿಜೇತ ಪೂಜಾರಿ ಮೈಲೊಟ್ಟು ಪಂಜಿನಡ್ಕದ ಕೆಪಿಎಸ್‌ಕೆ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.
ಮೃತ ವಿಶ್ವಾಸ್ ಪೂಜಾರಿ ಈ ಹಿಂದೆ ೨೦೧೧ರಲ್ಲಿ ಪಂಜಿನಡ್ಕದ ಕೆಪಿಎಸ್‌ಕೆ ಶಾಲೆಯಲ್ಲಿ ಹತ್ತನೇ ತರಗತಿ ಯಲ್ಲಿದ್ದಾಗ ನಾಲ್ಕು ವಿಷಯದಲ್ಲಿ ಅನು ತ್ತೀರ್ಣವಾಗಿದ್ದನು. ನಂತರ ಮರಳಿ ಮುಲ್ಕಿ ಬಪ್ಪನಾಡುವಿನ ಬ್ರಿಲಿಯಂಟ್ ಟ್ಯುಟೋರಿಯಲ್‌ನಲ್ಲಿ ಖಾಸಗಿಯಾಗಿ ಎಸ್.ಎಸ್.ಎಲ್.ಸಿಗೆ ಸೇರಿದ್ದ. ಶುಕ್ರ ವಾರ ಅದರ ಫಲಿತಾಂಶ ಪ್ರಕಟಗೊಂಡಾಗ ಅನುತ್ತೀರ್ಣನಾದ ಕಾರಣ ಮನನೊಂದು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮನೆಯಲ್ಲಿ ತಾಯಿ ಸುಜಾತರವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದು ಸಹೋದರರಿಬ್ಬರು ಸಹ ಹೊರಗೆ ಹೋಗಿದ್ದಾಗ ಒಂಟಿಯಾಗಿದ್ದ ಸಮಯದಲ್ಲಿ ಈ ಕೃತ್ಯ ನಡೆಸಿದ್ದು, ಸಂಜೆ ತಾಯಿ ಮರಳಿ ಮನೆಗೆ ಬಂದಾಗ ಆತ್ಮಹತ್ಯೆಯ ಬಗ್ಗೆ ತಿಳಿದು ಬಂದಿದೆ. ವಿಶ್ವಾಸ್ ಸ್ಥಳೀಯವಾಗಿ ನೆಲಗುಡ್ಡೆಯಲ್ಲಿ ನಡೆಸುತ್ತಿರುವ ಸತ್ಸಂಗ ನಿರಂಹಂಕಾರಿ ಭಜನಾ ಸಂಕೀರ್ತನೆಯಲ್ಲೂ ಆಗಾಗ ಪಾಲ್ಗೊಳ್ಳುತ್ತಿದ್ದು ಮನೆಯವರು ಇದರ ಬಗ್ಗೆ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ.
ಮುಲ್ಕಿ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಶವ ಪರೀಕ್ಷೆಯನ್ನು ಶನಿವಾರ ನಡೆಸಲಾಗುವುದು ಎಂದು ಆಸ್ಪತ್ರೆಯ ಮೂಲವು ತಿಳಿಸಿದೆ.
Tagged with
cnews
ಕಾಸರಗೋಡು: ಉಗ್ರಗಾಮಿ ತರಬೇತಿ ನೀಡುತ್ತಿದ್ದ ರಹಸ್ಯ ಕೇಂದ್ರಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ಓರ್ವ ಉಸ್ತಾದ್‌ನ ಸಹಿತ ಹನ್ನೊಂದು ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಜೇಶ್ವರ ಮಚ್ಚಂಪಾಡಿ ಕೋಡಿ ಎಂಬಲ್ಲಿ ರಹಸ್ಯ ಕೇಂದ್ರದಲ್ಲಿ ನಡೆಯುತ್ತಿದ್ದಂತಹ ಉಗ್ರಗಾಮಿ ತರಬೇತಿ ಬಗ್ಗೆ ಖಚಿತ ಮಾಹಿತಿ ಪಡೆದ ಮಂಜೇಶ್ವರ ಪೊಲೀಸರು ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ ಹನ್ನೊಂದು ಮಂದಿಯನ್ನು ಬಂಧಿಸಿದ್ದಾರೆ. ಉಗ್ರಗಾಮಿ ತರಬೇತಿ ನೀಡುತ್ತಿದ್ದ ಎರ್ನಾಕುಲಂ ನಿವಾಸಿ ಉಸ್ತಾದ್ ಓರ್ವನನ್ನು ಹಾಗೂ ಮಚ್ಚಂಪಾಡಿ ಆಸುಪಾಸಿನ ಹತ್ತು ಮಂದಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಬಂಧಿತರ ಬಗ್ಗೆ ಇದುವರೆಗೆ ಅಧಿಕೃತ ದೂರು ದಾಖಲಾಗಿಲ್ಲ. ಕಾಸರಗೋ ಡಿನ ಉನ್ನತ ಪೊಲೀಸ್ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
Tagged with
cnews
ಕಾರ್ಕಳ: ಹೆಬ್ರಿ ಸಮೀಪದ ಅಳವಳಿ ವಾಂಜಳ ಎಂಬಲ್ಲಿರುವ ಅರಣ್ಯ ಸಂಪತ್ತು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಅರಣ್ಯ ವಲಯಾಧಿಕಾರಿ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಿಬ್ಬಂದಿ ಬಂಧಿಸಿದ್ದಾರೆ.
ಮಂಜುನಾಥ ನಾಯ್ಕ, ರತ್ನಾಕರ ಶೆಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಬೆಲೆಬಾಳುವ ಕೀರಾಲ್ಬೋಗಿ ಮರಗಳನ್ನು ರಕ್ಷಿತಾರಣ್ಯದಿಂದ ಕಡಿದು ಬ್ರಹ್ಮಾವರದ ಮರದ ಮಿಲ್‌ಗೆ ೪೦೭ ಟೆಂಪೋವೊಂದರಲ್ಲಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ ಎಂದು ತಿಳಿದುಬಂದಿದೆ. ಮರದ ಮೌಲ್ಯ ೭೦ ಸಾವಿರ ಎಂದು ತಿಳಿದುಬಂದಿದೆ.
Tagged with
cnews
ಮಂಗಳೂರು: ಅನ್ಯಕೋಮಿನ ಯುವಕರೊಂದಿಗೆ ಮಾದಕ ಪದಾರ್ಥ ಸೇವಿಸಿ ಮಜಾ ಉಡಾಯಿಸುತ್ತಿದ್ದ ಹಿಂದೂ ಯುವತಿಯೊಬ್ಬಳ ಬಾಡಿಗೆ ಮನೆಗೆ ಕಂಕನಾಡಿ ಪೊಲೀಸರು ದಾಳಿ ನಡೆಸಿ, ಯುವತಿ ಮತ್ತು ಮೂವರು ಯುವಕರನ್ನು ವಶಕ್ಕೆ ತೆಗೆದುಕೊಂಡ ಘಟನೆ ನಂತೂರಿನ ತಾರೆ ತೋಟ ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಉಡುಪಿ ಮೂಲದ ಯುವತಿ ಯೊಬ್ಬಳು ತಾರೆತೋಟ ಸಮೀಪದ ಬಜ್ಜೋಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಈಕೆಯ ಮನೆಗೆ ಆಗಾಗ ಕೆಲ ಅನ್ಯಕೋಮಿನ ಯುವಕರು ಆಗಮಿಸಿ ಗಾಂಜಾದಂತಹ ಅಮಲು ಪದಾರ್ಥ ಸೇವಿಸಿ ಮಜಾ ಉಡಾಯಿ ಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮೊದಲೇ ಮಾಹಿತಿಯಿದ್ದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ನಿನ್ನೆ ತಡರಾತ್ರಿ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭ ಸ್ಥಳದಲ್ಲಿದ್ದ ಮೂವರು ಕ್ರಿಶ್ಚಿಯನ್ ಯುವಕರು ಅರೆನಗ್ನ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ. ಈ ವೇಳೆ ಪೊಲೀಸರು ಮತ್ತು ಹಿಂಜಾವೇ ಕಾರ್ಯಕರ್ತರ ಮಧ್ಯೆ ಕೆಲ ಹೊತ್ತು ಮಾತಿನ ಚಕಮಕಿ ಕೂಡ ನಡೆದಿದ್ದು, ನಂತರ ಪೊಲೀಸರು ಯುವಕರನ್ನು ಠಾಣೆಗೆ ಕರೆತಂದು ತಡರಾ ತ್ರಿಯ ತನಕ ವಿಚಾರಣೆ ನಡೆಸಿದ್ದಾರೆ. ತಡರಾತ್ರಿಯವರೆಗೆ ವಿಚಾರಣೆ ಮುಂದು ವರೆದಿದ್ದು ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.
Tagged with
cnews
ಉಪ್ಪಿನಂಗಡಿ: ಮಂಗಳೂರಿನ ಸುರತ್ಕಲ್ ಎಂಬಲ್ಲಿಂದ ತಿರುಪತಿಗೆಂದು ಮಿನಿ ಬಸ್ಸಿನಲ್ಲಿ ಹೊರಟ ಮಂದಿ ಅವಘಡಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ಮಿನಿ ಬಸ್ಸಿಗೆ ಕೆ.ಎಸ್. ಆರ್.ಟಿ.ಸಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಇದರಲ್ಲಿದ್ದ ೧೧ ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾ ಗಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡವರನ್ನು ಸುರ ತ್ಕಲ್‌ನ ಮಲ್ಲಿಕಾ, ಚಾರ್ವಿ, ಯಶಸ್ವಿನಿ, ಕೃಷ್ಣಾ, ಮೀನಾಕ್ಷಿ, ಮಹಾಬಲ, ಚಂದ್ರಾವತಿ, ಲೀಲಾವತಿ, ಮಂಜುನಾಥ, ಕೇಶವ ಹಾಗೂ ರೇಶ್ಮಾ ಎಂದು ಗುರುತಿಸಲಾಗಿದೆ.
ಇವರು ತಿರುಪತಿಯಲ್ಲಿ ದೇವರ ಸೇವೆ ನಡೆಸುವ ಸಲುವಾಗಿ ಹೊರ ಟಿದ್ದು, ವಿಪರೀತ ವೇಗದಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಮಿನಿ ಬಸ್ಸಿಗೆ ಡಿಕ್ಕಿ ಹೊಡೆಯಿತು ಎಂದು ತಿಳಿದು ಬಂದಿದೆ.
Tagged with
cnews
ಮಂಗಳೂರು : ಕಾವೂರು ನಿವಾಸಿ ವಿಧವೆ ಮಹಿಳೆ ಮೇಲೆ ಆಸಿಡ್ ಮಾದರಿಯ ರಾಸಾಯನಿಕ ಸಿಂಪಡಿಸಿ ಆಭರಣ ದೋಚಿದ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಕೃತ್ಯ ಎಂದು ಅಂದಾಜಿಸಿರುವ ಪೊಲೀಸರು ಮಹಿಳೆಯ ಕುಟುಂಬದ ಸದಸ್ಯರ ವಿಚಾರಣೆ ನಡೆಸುತ್ತಿದ್ದಾರೆ. ಕಾವೂರು ನಿವಾಸಿ ಪ್ರೀತಿ ಎಂಬಾಕೆಯೇ ರಾಸಾಯನಿಕ ದಾಳಿಗೆ ಒಳಗಾದ ಮಹಿಳೆ. ಇವರು ಕಳೆದ ಶನಿವಾರ ಮನೆಯಲ್ಲಿ ಏಕಾಂಗಿಯಾಗಿದ್ದ ವೇಳೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಒಳ ನುಗ್ಗಿದ ಆರೋಪಿಗಳು ಪ್ರೀತಿ ಮೇಲೆ ರಾಸಾಯನಿಕ ಚೆಲ್ಲಿ ಅವರ ಕೈಯಲ್ಲಿದ್ದ ಬಲೆಯನ್ನು ಕಸಿದು ಪರಾರಿಯಾಗಿದ್ದರು. ಬಂಗಾರವನ್ನು ಕಸಿಯಲು ಈ ಕೃತ್ಯ ನಡೆಸಲಾಗಿದೆ ಎಂದು ಬಿಂಬಿಸಲು ತನ್ನ ಕೈಯಲ್ಲಿದ್ದ ಬಳೆ ಕಸಿಯಲಾಗಿದೆಯೇ ಹೊರತು ಇದು ವೈಯಕ್ತಿಕ ದ್ವೇಷದಿಂದ ನಡೆದ ಕೃತ್ಯ ಎಂದು ಪ್ರೀತಿ ಆರೋಪಿಸಿದ್ದಾರೆ. ಘಟನೆ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದಾರೆ.
Tagged with
cnews
ಮಂಗಳೂರು: ಇತ್ತೀಚೆಗೆ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನಾಭರಣ ಪಡೆದು ವಂಚನೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಮನ್ಸೂರ್ ಎಂಬವರು ತಮಗೆ ಬಜರಂಗದಳ ಸಂಘಟನೆಯ ಹೆಸರು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿಯು ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ಪೊಲೀಸರಿಗೆ ದೂರಿ ದ್ದಾರೆ. ಮನೆಯ ಸ್ಥಿರ ದೂರವಾಣಿಗೆ ಕರೆ ಮಾಡಿದ್ದ ವ್ಯಕ್ತಿಯು ಮನ್ಸೂರ್ ಎಲ್ಲಿದ್ದಾನೆ, ಆತ ಸೀತಾ ಎಂಬವರ ಮೇಲೆ ಸುಳ್ಳು ದೂರು ನೀಡಿದ್ದಾನೆ. ಆತನನ್ನು ಕೊಂದು ಹಾಕುತ್ತೇನೆ ಎಂಬು ದಾಗಿ ಬೆದರಿಸಿದ್ದಾಗಿ ದೂರಲಾಗಿದೆ.
Tagged with
cnews
ವಿಟ್ಲ: ವ್ಯಕ್ತಿಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದು, ಈ ಬಗ್ಗೆ ಆತನ ಪತ್ನಿ ಜೋಹಾರ ಎಂಬಾಕೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಸಮೀಪದ ಕುಕ್ಕಿಲ ನಿವಾಸಿ ಅಬ್ದುಲ್ ರಝಾಕ್(೩೪) ಎಂಬವರು ನಾಪತ್ತೆಯಾದವರು. ಇವರು ಕೂಲಿ ಕೆಲಸ ಮಾಡುತ್ತಿದ್ದು, ಮೇ ೧೪ರಂದು ತನ್ನ ಮನೆಯಿಂದ ಕೆಲಸಕ್ಕೆಂದು ಮನೆಯಿಂದ ತೆರಳಿದ್ದರು. ಸಂಜೆ ಅವರು ಮನೆಗೆ ಫೋನ್ ಮಾಡಿ ನಾನು ಇವತ್ತು ಬರುವುದಿಲ್ಲ ಎಂದಿದ್ದರು ಎಂದು ದೂರಲಾಗಿದೆ. ಮರುದಿನವು ಕೂಡ ಅವರು ಮನೆಗೆ ಬಾರದೇ ಇದ್ದಿದ್ದರಿಂದ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು ಎಂದು ಅವರು ಪತ್ನಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews,
missing
ಬೆಳ್ತಂಗಡಿ: ಬೈಕ್ ಹಾಗೂ ಪಿಕ್‌ಅಪ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ವೇಣೂರು ಠಾಣಾ ವ್ಯಾಪ್ತಿಯ ಶಿರ್ಲಾಲು ಎಂಬಲ್ಲಿ ಶುಕ್ರವಾರ ನಡೆದಿದೆ.
ಬೈಕ್ ಸವಾರ ಉಡುಪಿ ತಾಲೂಕಿನ ಸಾಸ್ತಾನದ ಆಸೀಫ್(೨೬) ಎಂದು ಗುರುತಿಸಲಾಗಿದೆ. ಗಾಯಗೊಂಡ ಸವಾರನನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ.
Tagged with
cnews
ಕಾಸರಗೋಡು: ಎದೆನೋವಿನಿಂದ ಆಸ್ಪತ್ರೆಗೆ ಸೇರಿದ ಮಹಿಳೆಯ ತಪಾಸಣೆಗೆ ವೈದ್ಯರು ವಿಳಂಬ ಮಾಡಿ ದರೆಂದು ಆರೋಪಿಸಿ ವೈದ್ಯರ ಮನೆಗೆ ಅಕ್ರಮ ಪ್ರವೇಶಗೈದ ತಂಡ ವೈದ್ಯರು ಹಾಗೂ ಅವರ ಪತ್ನಿಯ ಮೇಲೆ ಗಂಭೀರ ಹಲ್ಲೆಗೈದು ಮನೆಗೆ ಹಾನಿ ನಡೆಸಿದೆ. ಮನೆ ಸಾಮಗ್ರಿಗಳಿಗ್ನೂ ಹಾನಿ ಮಾಡಲಾಗಿದೆ. ಮೊನ್ನೆ ತಡರಾತ್ರಿ ಇಲ್ಲಿನ ಬಂದಡ್ಕದಲ್ಲಿ ಘಟನೆ ಸಂಭವಿಸಿದೆ. ಕೃತ್ಯ ಪ್ರತಿಭಟಿಸಿ ಊರ ನಾಗರಿಕರು ನಿನ್ನೆ ಬಂದಡ್ಕ ಪೇಟೆಯಲ್ಲಿ ಬಂದ್ ನಡೆಸಿದರು. ವೈದ್ಯರ ಮನೆ ಅಕ್ರಮ ಪ್ರವೇಶಗೈದ, ದಂಪತಿ ಮೇಲೆ ಮಾರಣಾಂತಿಕ ದೌರ್ಜನ್ಯವೆಸಗಿದ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ನಾಗರಿ ಕರು ಬಂದ್ ನಡೆಸಿದ್ದರು. ಇಬ್ಬರ ವಿರುಧ್ದ ಕೇಸು ದಾಖಲಿಸಿರುವ ಪೊಲೀ ಸರು ಈ ಪೈಕಿ ಓರ್ವನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಬಂದಡ್ಕದ ದೀಪಾ ಆಸ್ಪತ್ರೆ ಮಾಲಕ, ನೀರ್ಚಾಲಿನ ಡಾ. ಉದಯಶಂಕರ(೩೮) ಹಾಗೂ ಪತ್ನಿ ದೀಪಾ(೩೦) ಎಂಬವರ ಮೇಲೆ ಹಲ್ಲೆ ನಡೆದಿದೆ. ಇವರ ಮನೆ ಬಾಗಿಲು ಮುರಿದ ಸ್ಥಿತಿಯಲ್ಲಿದ್ದು ಕಿಟಿಕಿ ಗಾಜುಗಳು ಉದುರಿ ಹೋಗಿವೆ. ಈ ಸಂಬಂಧ ಬಂದಡ್ಕ ಪಡ್ಪು ನಿವಾಸಿಗಳಾದ ಅಶ್ಕರ್, ಖಾದರ್ ಎಂಬವರ ವಿರುದ್ಧ ಬೇಡಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಅಶ್ಕರ್‌ನ ತಾಯಿ ಸುಬೈದಾರನ್ನು ಎದೆನೋವಿನಿಂದ ದೀಪಾ ಆಸ್ಪತ್ರೆಗೆ ತರಲಾಗಿತ್ತು. ವೈದ್ಯರಿಲ್ಲದೆ ವಿಚಾರಿಸಿದಾಗ ಮನೆಯಲ್ಲಿ ಊಟ ಮಾಡುತ್ತಿರುವುದಾಗಿಯೂ ತಕ್ಷಣ ಬರುವುದಾಗಿಯೂ ದಾದಿಯರು ತಿಳಿಸಿದ್ದರು. ಆದರೆ, ಅರ್ಧ ತಾಸಿನ ಬಳಿಕವೂ ವೈದ್ಯರು ತಲುಪದೆ ಕೆರಳಿದ ಮಂದಿ ಆಸ್ಪತ್ರೆ ಬಳಿಯಲ್ಲೇ ಇರುವ ವೈದ್ಯರ ಮನೆಗೆ ಅಕ್ರಮ ಪ್ರವೇಶಗೈದು ದಾಂಧಲೆ ಮಾಡಿದ್ದಾರೆ.
Tagged with
cnews
ಮಂಗಳೂರು: ಮದುವೆ ವಯಸ್ಸಿಗೆ ಬಂದ ಮಕ್ಕಳಿರುವ ವಿವಾಹಿತ ಮಧ್ಯವಯಸ್ಕ ವ್ಯಕ್ತಿಯ ಜೊತೆ ಮನೆತೊರೆದು ನಾಪತ್ತೆಯಾಗಿದ್ದ ಯುವತಿಯನ್ನು ಪತ್ತೆಹಚ್ಚಿದ ಉಪ್ಪಿನಂಗಡಿ ಠಾಣಾ ಪೊಲೀಸರು ಆಕೆಯನ್ನು ರಿಮಾಂಡ್ ಹೋಂ ಸೇರಿಸಿದ್ದಾರೆ.
ಕೊಣಾಜೆ ಗ್ರಾಮದ ಪುತ್ತಿಲ ನಿವಾಸಿ ಯುವತಿ ಮೇ ೧೪ರಂದು ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಉಪ್ಪಿನಂಗಡಿ ಠಾಣಾ ಪೊಲೀಸರಿಗೆ ದೂರಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆಕೆ ನೂಜಿಬಾಳ್ತಿಲ-ದೋಂತಿಲಡ್ಕ ನಿವಾಸಿ ಸುಂದರ ಗೌಡ(೫೦) ಎಂಬಾತನ ಜೊತೆ ಪರಾರಿಯಾಗಿದ್ದನ್ನು ಪತ್ತೆಹಚ್ಚಿದ್ದರು. ಸುಂದರ ಗೌಡ ವಿವಾಹಿತನಾಗಿದ್ದು, ಮದುವೆ ವಯಸ್ಸಿಗೆ ಬಂದಿರುವ ಮಕ್ಕಳೂ ಇದ್ದಾರೆ. ಆದರೆ ಇವರಿಬ್ಬರೂ ಕೆಲವು ಸಮಯಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಜೋಡಿಯನ್ನು ಮೇ ೧೬ರಂದು ಪತ್ತೆಹಚ್ಚಿದ್ದ ಪೊಲೀಸರು ಪ್ರಕರಣವನ್ನು ಸೌಹಾರ್ದಯುತವಾಗಿ ಮುಗಿಸಲು ಚಿಂತಿಸಿದ್ದರೂ ಯುವತಿಯನ್ನು ಆಕೆಯ ಮನೆಯವರು ಸ್ವೀಕರಿಸಲು ಒಪ್ಪದ ಕಾರಣ ಆಕೆಯನ್ನು ರಿಮಾಂಡ್ ಹೋಂ ಸೇರಿಸಲಾಗಿದೆ. ಮಧ್ಯವಯಸ್ಕ ವ್ಯಕ್ತಿಯೊಂದಿಗೆ ಚಕ್ಕಂದವಾಡಿ ಪರಾರಿಯಾದ ತಪ್ಪಿಗೆ ಯುವತಿ ರಿಮಾಂಡ್ ಹೋಂ ಸೇರಿ ಪರಿತಪಿಸುವಂತಾಗಿದೆ.
Tagged with
cnews
ಮಂಗಳೂರು: ಪ್ರೀತಿಸಿದ ತಪ್ಪಿಗೆ ಹುಡುಗನ ಕಡೆಯವರಿಂದ ಕೊಲೆ ಬೆದರಿಕೆಗೆ ಒಳಗಾದ ಯುವತಿ ಮನನೊಂದು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೈಂದೂರು ಠಾಣಾ ವ್ಯಾಪ್ತಿಯ ಬಡಾಕೆರೆ ಎಂಬಲ್ಲಿ ನಡೆದಿದೆ.
ಬಡಾಕೆರೆ ಜನತಾ ಕಾಲನಿಯ ನಿವಾಸಿ ರಜನಿ ಹಾಗೂ ನೆರೆಮನೆಯ ಸುರೇಶ್ ಪೂಜಾರಿ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ. ಇವರ ಪ್ರೀತಿಗೆ ಸುರೇಶನ ಮನೆಯಲ್ಲಿ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಅನೇಕ ಬಾರಿ ಜಗಳವನ್ನೂ ಆಡಿದ್ದರು. ಕಳೆದ ಮೇ ೧೬ರಂದು ರಜನಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸುರೇಶನ ತಾಯಿಯ ಸೋದರ ವಾಸುದೇವ ಪೂಜಾರಿ ಹಾಗೂ ಸಂಬಂಧಿ ವಾಸು ಪೂಜಾರಿ ಎಂಬವರಿ ದಾರಿಗೆ ಅಡ್ಡ ನಿಂತು, ‘ನೀನು ಸುರೇಶನನ್ನು ಮದುವೆಯಾಗಲು ಬಿಡುವುದಿಲ್ಲ, ಹಾಗೊಂದು ವೇಳೆ ಹಠದಿಂದ ಆತನನ್ನೇ ಮದುವೆ ಮಾಡಿಕೊಂಡರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದ ರಜನಿ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಮೃತಿ ತಪ್ಪಿದ್ದ ಆಕೆಯನ್ನು ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
Tagged with
cnews
ಮಂಗಳೂರು: ಸ್ಕೂಟರ್ ಸ್ಕಿಡ್ ಮತ್ತು ಅಪಹರಣದ ನಾಟಕವಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ನದಿಗೆ ಬಿದ್ದ ಶ್ರೀನಿವಾಸ, ಆತನ ಪತ್ನಿ ಮತ್ತು ಆಕೆಯ ತಂದೆಗೆ ನ್ಯಾಯಾಲಯ ಜಾಮೀನು ನೀಡಿದೆ.
ಕೃಷ್ಣಾಪುರ ನಿವಾಸಿ ಶ್ರೀನಿವಾಸ ಪದಕಣ್ಣಾಯ ಎಂಬಾತ ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡು ಲಕ್ಷಾಂತರ ರೂ. ಸಾಲ ಮಾಡಿದ್ದ. ಕೊನೆಗೆ ಇದರಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಅಪಹರಣದ ನಾಟಕವಾಡಿದ್ದ. ಆದರೆ ಪೊಲೀಸರಿಂದ ತಲೆಮರೆಸಿ ಕೊಳ್ಳಲಾಗದ ಪದಕಣ್ಣಾಯ ಕೊನೆಗೂ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದ. ಈ ನಿಟ್ಟಿನಲ್ಲಿ ಪೊಲೀಸರು ಈತನ ಮೇಲೆ ಹಾಗೂ ಈತನಿಗೆ ಸಹಕರಿಸಿದ ಪತ್ನಿ ಸ್ವಾತಿ ಹಾಗೂ ಆಕೆಯ ತಂದೆ ಮೇಲೆ ವಂಚನೆ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡಿದೆ.
Tagged with
cnews
ಮಂಗಳೂರು: ಎಂಡೊಸಲ್ಫಾನ್ ದುಷ್ಪರಿಣಾಮದಿಂದ ಬಳಲುತ್ತಿದ್ದ ಕೇರಳ ತೋಟಗಾರಿಕೆ ನಿಗಮದ ಗೇರುತೋಟದ ನಿವೃತ್ತ ಕಾರ್ಮಿಕ ಕಾಸರಗೋಡು ಎಡನೀರು ಬಳಿಯ ಕೂರ್ಕಪ್ಪಾಡಿ ಹೊಸಮನೆ ನಿವಾಸಿ ಕೃಷ್ಣ ಮಣಿಯಾಣಿ (೬೮)ಮೃತಪಟ್ಟಿದ್ದಾರೆ. ಇವರು ೧೯೬೫ರಿಂದ ೧೯೮೫ರವರೆಗೆ ಕೇರಳ ತೋಟಗಾರಿಗೆ ನಿಗಮದಲ್ಲಿ ಕಾರ್ಮಿಕರಾಗಿ ದುಡಿದಿದ್ದರು.
ವೃದ್ಧೆ ಆತ್ಮಹತ್ಯೆ : ನಗರದ ಅತ್ತಾವರದ ವಯೋವೃದ್ಧೆಯೊಬ್ಬರು ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಕಮಲಾ(೭೦) ಎಂದು ಹೆಸರಿಸಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಕೃತ್ಯವೆಸಗಿರಬೇಕೆಂದು ಶಂಕಿಸಲಾಗಿದ್ದು, ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews
ಬಸ್ ಚಾಲಕನ ಮೇಲೆ ಹಲ್ಲೆ ಪ್ರಕರಣ
ಮಂಗಳೂರು: ಎ.೩೦ರಂದು ಮುಡಿಪುವಿನ ಮಿತ್ತಕೋಡಿ ಎಂಬಲ್ಲಿ ಬಸ್ ಚಾಲಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಪಜೀರ್ ಗ್ರಾಮ ಪಂಚಾಯತ್ ಅಧ್ಯಕ್ಷ ನಜರ್ ಮೊಯ್ದಿನ್, ಪಂಚಾಯತ್ ಸದಸ್ಯ ನಝರ್, ಅರಾಫತ್ ಅವರು ಜಿಲ್ಲಾ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದು ಕೊಣಾಜೆ ಠಾಣೆಗೆ ಶುಕ್ರವಾರ ಹಾಜರಾಗಿದ್ದಾರೆ
ಕಾರಿಗೆ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣವನ್ನು ಮುಂದಿಟ್ಟು ಮುಡಿಪು ಬಳಿ ಕಾರಿನಲ್ಲಿ ಬಂದ ಈ ಮೂವರು ಆರೋಪಿಗಳು ಶಾರದಾ ಬಸ್‌ನನ್ನು ಅಡ್ಡ ನಿಲ್ಲಿಸಿ ಬಸ್ ಚಾಲಕನನ್ನು ಎಳೆದು ಹಾಕಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಆಕ್ರೋಶಗೊಂಡ ಬಸ್ ನಿರ್ವಾಹಕರು ಬಸ್ ಅನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದರು. ಇದರಿಂದ ಆಕ್ರೋಶಗೊಂಡ ಬಸ್ ಚಾಲಕ ಮತ್ತು ನಿರ್ವಾಹಕರು ಪ್ರಕರಣ ದಾಖಲಾದ ಮೇಲೂ ಆರೋಪಿಗಳನ್ನು ಪೊಲೀಸರು ಬಂಧಿಸಲಿಲ್ಲ ಎಂದು ಆಪಾದಿಸಿ ಮತೊಮ್ಮೆ ಬಸ್ ಬಂದ್ ಮಾಡಿ ಆರೋಪಿಗಳ ಬಂಧನಕ್ಕೆ ಗಡುವು ನೀಡಿದ್ದರು. ಈ ವೇಳೆ ಪರಾರಿಯಾಗಿದ್ದ ಆರೋಪಿಗಳು ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿದೆ. ನಿರೀಕ್ಷಣಾ ಜಾಮೀನು ಪಡೆದ ಪ್ರಮುಖ ಆರೋಪಿಗಳಾದ ಪಜೀರ್ ಗ್ರಾಮ ಪಂಚಾಯತ್ ಅಧ್ಯಕ್ಷ ನಜರ್ ಮೊಯ್ದಿನ್, ಪಂಚಾಯತ್ ಸದಸ್ಯ ನಝರ್, ಅರಾಫತ್ ಅವರು ಶುಕ್ರವಾರ ಸಂಜೆ ಕೊಣಾಜೆ ಠಾಣೆಗೆ ನಿರೀಕ್ಷಣಾ ಜಾಮೀನಿನೊಂದಿಗೆ ಹಾಜರಾಗಿದ್ದಾರೆ.
Tagged with
cnews
ಬೆಳ್ತಂಗಡಿ: ನೆರಿಯಾ ಗ್ರಾಮದ ಅಣಿಯೂರು ಎಂಬಲ್ಲಿ ವಿದ್ಯುತ್ ಗೋಪುರವೊಂದು ಧರಾಶಾಹಿ ಯಾಗಿದೆ. ಕಂಪೆನಿಯೊಂದರ ಪೂರ್ಣ ನಿರ್ಮಿತ ಹಾಗೂ ವಿದ್ಯುತ್ ತಂತಿ ಗಳನ್ನು ಜೋಡಿಸಿದ್ದ ಬೃಹತ್ ಟವರ್ ಮುರಿದು ಬಿದ್ದಿದೆ.
Tagged with
cnews
ಬೆಳ್ತಂಗಡಿ: ಪುತ್ತಬೈಲು ಎಂಬಲ್ಲಿ ಜೀಪು-ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಉಳ್ಳಾಲದ ಅರುಣ್ ಕ್ರಾಸ್ತಾ ಎಂಬವರು ಗಾಯಗೊಂಡಿದ್ದಾರೆ.
Tagged with
cnews
ದುಬೈ: ಮಾಟ-ಮಂತ್ರ ಮಾಡುತ್ತಾ ಜನರನ್ನು ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಒಮನ್ ಪೊಲೀಸರು ಭಾರತ ಮೂಲದ ೧೩ ಮಹಿಳೆಯರೂ ಸೇರಿದಂತೆ ಒಟ್ಟು ೨೪ ಮಂದಿಯನ್ನು ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ.
ಫ್ಲ್ಯಾಟ್‌ಗಳಲ್ಲಿ ವಾಸವಾಗಿದ್ದ ಇವರು ಮನುಷ್ಯರ ತಲೆಬುರುಡೆ, ಮೂಳೆಗಳು, ಮಾಂತ್ರಿಕ ಕಲ್ಲುಗಳನ್ನು ಬಳಸಿಕೊಂಡು ಮಾಟ-ಮಂತ್ರ ಮಾಡುತ್ತಿದ್ದರೆಂದು ಆರೋಪಿಸಲಾಗಿತ್ತು. ಇವರು ತಮ್ಮ ವಾಸ್ತವ್ಯದ ಫ್ಲ್ಯಾಟ್‌ಗಳನ್ನೇ ಬಳಸಿಕೊಂಡು ಗಿರಾಕಿಗಳನ್ನು ಸಂಪರ್ಕಿಸಿ ಕೃತ್ಯವೆಸಗುತ್ತಿದ್ದರೆನ್ನಲಾಗಿದೆ. ಇವರು ಅಲ್ಪಾವಧಿ ವೀಸಾ ಬಳಸಿಕೊಂಡು ಭಾರತದಿಂದ ಬಂದು ಮಾಟ-ಮಂತ್ರವನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರ ದೂರಿನನ್ವಯ ಫ್ಲ್ಯಾಟ್‌ಗೆ ದಾಳಿ ನಡೆಸಿದ ಪೊಲೀಸರು ೨೪ ಮಂದಿ ಭಾರತೀಯರನ್ನು ವಶಕ್ಕೆ ಪಡೆದಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.
Tagged with
inews
ಮಂಗಳೂರು: ಮೋಜಿಗಾಗಿ ನೀರಿನ ಟ್ಯಾಂಕ್‌ನಲ್ಲಿ ಇಳಿದು ಆಟ ಆಡುತ್ತಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದ ಪಳ್ಳೋಡಿ ಕಾಲನಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ಮತ್ತೋರ್ವ ಬಾಲಕನನ್ನು ರಕ್ಷಿಸಲಾಗಿದೆ. ರೋಶನ್ (೧೦)ಮೃತ ಬಾಲಕ. ನೀರಿನಲ್ಲಿ ಮುಳುಗುತ್ತಿದ್ದ ಈತನ ಹಿರಿಯ ಸಹೋದರ ಪ್ರಶಾಂತ್ (೧೨)ಎಂಬಾತನನ್ನು ರಕ್ಷಿಸಲಾಗಿದೆ.
ಕೆಲವು ವರ್ಷಗಳ ಹಿಂದೆ ಈ ಬಾಲಕರ ತಂದೆ ತಾಯಿ ಮೃತಪಟ್ಟಿದ್ದರೆ, ಇವರನ್ನು ಸೋದರಮಾವ ರವಿ ಕೊರಗ ಎಂಬವರು ಸಾಕುತ್ತಿದ್ದರು. ರೋಶನ್ ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿದ್ದರೆ, ಪ್ರಶಾಂತ್ ಆರನೇ ತರಗತಿಯಲ್ಲಿ ಓದುತ್ತಿದ್ದಾನೆ. ನಿನ್ನೆ ಮನೆಯವರು ಕೆಲಸಕ್ಕೆ ಹೋಗಿದ್ದ ಸಂದರ್ಭ ಇವರು ನೀರಿನ ಟ್ಯಾಂಕ್‌ನಲ್ಲಿ ಇಳಿದು ಆಟ ಆಡುತ್ತಿದ್ದು, ಈ ಸಂದರ್ಭ ರೋಶನ್ ನೀರಿನಲ್ಲಿ ಮುಳುಗಿದ್ದಾನೆ. ಪ್ರಶಾಂತ್‌ನನ್ನು ಸ್ಥಳೀಯ ಲಿಂಗಪ್ಪ ನಾಯ್ಕ್ ರಕ್ಷಿಸಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
Tagged with
cnews
ಬೆಂಗಳೂರು: ಗಣಿ ಕಂಪೆನಿ ಗಳಿಂದ ಅಕ್ರಮವಾಗಿ ಕಿಕ್‌ಬ್ಯಾಕ್ ಪಡೆದ ಆರೋಪಕ್ಕೆ ಗುರಿಯಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ವಿರುದ್ಧ ದಾಳಿ ನಡೆಸಿರುವ ಸಿಬಿಐ ಇದೀಗ ಇಡೀ ಹಗರಣಕ್ಕೆ ಸಂಬಂಧಿಸಿದಂತೆ ಹಲವು ಸಚಿವರು, ಐಎಎಸ್ ಅಧಿಕಾರಿ ಗಳು ಮತ್ತು ಯಡ್ಡಿಯ ಆಪ್ತ ಸಿಬ್ಬಂದಿ ಸೇರಿದಂತೆ ೧೨೭ ಮಂದಿಯನ್ನು ವಿಚಾ ರಣೆಗೊಳಪಡಿಸಲು ಸಿದ್ಧತೆ ನಡೆಸಿದೆ.
ಉನ್ನತ ಮೂಲಗಳ ಪ್ರಕಾರ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಕೈಗಾರಿಕಾ ಇಲಾಖೆಯ ಆಯಕಟ್ಟಿನ ಜಾಗದಲ್ಲಿ ಕುಳಿತ ಅಧಿಕಾರಿಗಳು ಸೇರಿದಂತೆ ಹಲವು ಉನ್ನತ ಅಧಿಕಾರಿಗಳು, ಯಡ್ಡಿಯ ಆಪ್ತ ಸಚಿವರು ಮತ್ತು ಆಪ್ತ ಸಿಬ್ಬಂದಿ ಪಟ್ಟಿ ತಯಾರಿಸಿದ್ದು, ಅದರನುಸಾರ ೧೨೭ ಮಂದಿಯ ಮೇಲೆ ಇದೀಗ ಸಿಬಿಐ ಕತ್ತಿ ತೂಗಾಡತೊಡಗಿದೆ.
ಡೀನೋಟಿಫಿಕೇಷನ್ ವ್ಯವಹಾರ ಗಳಿಗೆ ಸಂಬಂಧಿಸಿದಂತೆ ಯಡಿಯೂ ರಪ್ಪ ಎಡಗೈ ಬಲಗೈಗಳಂತಿದ್ದ ಎಇಇ ಹಾಗೂ ಉಪನ್ಯಾಸಕರಿಬ್ಬರು ಈ ಪಟ್ಟಿಯಲ್ಲಿದ್ದು ಶಿವಮೊಗ್ಗದಲ್ಲಿ ಅವರ ಕುಟುಂಬದ ಆರ್ಥಿಕ ವಹಿವಾಟುಗಳ ವಿವರ ಬಲ್ಲ ಕೆಲವರ ಹೆಸರುಗಳು ಸಿಬಿಐನ ಹದ್ದುಗಣ್ಣಿಗೆ ಬಿದ್ದಿವೆ.
ಕಂದಾಯ, ನಗರಾಭಿವೃದ್ಧಿ, ಬೃಹತ್ ಕೈಗಾರಿಕೆ, ಅರಣ್ಯ, ಗಣಿ ಇಲಾಖೆ, ಹಾಗೂ ಬಂದರು ಮತ್ತು ಮೀನುಗಾರಿಕೆ ಇಲಾಖೆಗೆ ಸೇರಿದ ಅಧಿಕಾರಿಗಳು ಪಟ್ಟಿಯಲ್ಲಿದ್ದಾರೆ. ಅಲ್ಲದೆ ಗಣಿಗಾರಿಕೆ ಮತ್ತು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಸಹಕಾರ ನೀಡಿದ ಕೆಲವು ಸಚಿವರು, ಶಾಸಕರು ಹಾಗೂ ಸಾರ್ವಜನಿಕ ವ್ಯಕ್ತಿಗಳು ಇದರಲ್ಲಿ ಸೇರಿದ್ದಾರೆ.
ಗಣಿ ಲಂಚ ಹಗರಣ ಪ್ರಕರಣ ವನ್ನು ಸುಪ್ರೀಂ ಕೋರ್ಟ್ ತನಿಖೆ ನಡೆಸಿ, ವರದಿ ನೀಡುವಂತೆ ಸಿಇಸಿಗೆ ಆದೇಶಿಸಿದ ಸಂದರ್ಭದಲ್ಲೇ ಸಿಬಿಐ ಕರ್ನಾಟಕದಲ್ಲಿ ತನ್ನ ಕಾರ್ಯಾಚರಣೆ ನಡೆಸಿ, ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಸುಪ್ರಿಂ ಕೋರ್ಟ್ ತೀರ್ಪಿನ ನಂತರ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡರು. ಆದರೆ ಇದಕ್ಕೂ ಮೊದಲೇ ಸಿಬಿಐ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳಿಗೆ ತೆರಳಿ ಈ ಕಡತಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಕೆಲವು ದಾಖಲೆ ವಶಪಡಿಸಿಕೊಂಡಿದ್ದರು.
ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡ ಸಂದರ್ಭದಲ್ಲೇ ಗಣಿ, ಕಂದಾಯ ಮತ್ತು ಅರಣ್ಯ ಇಲಾಖೆಗಳನ್ನು ಜಾಲಾಡಿದ್ದ ಅಧಿಕಾರಿಗಳು ಆ ಸಮಯದಲ್ಲೇ ಕೆಲವು ಕಡತಗಳನ್ನು ವಶಪಡಿಸಿಕೊಂಡಿದ್ದರು. ಲಂಚ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ಈ ಅಧಿಕಾರಿಗಳ ವಿಚಾರಣೆ ನಡೆಸಲಿದ್ದಾರೆ. ಅಧಿಕಾರಿಗಳಿಂದ ಬಂದ ಮಾಹಿತಿ ಆಧಾರದ ಮೇಲೆ ಯಡಿಯೂರಪ್ಪ ಅವರ ಮಕ್ಕಳು ಮತ್ತು ಅಳಿಯರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಮೊದಲ ಆರೋಪಿಯಾಗಿರುವ ಯಡಿಯೂರಪ್ಪ ಅವರನ್ನು ವಿಚಾರಣೆಗೆ ಇಲ್ಲವೆ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
Tagged with
snews,
yeddi
ಮಂಗಳೂರು: ಬಜ್ಪೆ ಗ್ರಾಮ ಪಂಚಾಯತ್ ಆಡಳಿತ ಆಯಕಟ್ಟಿನ ಸ್ಥಳದಲ್ಲಿ ಕಸ ಎಸೆಯುವವರನ್ನು ಶಿಕ್ಷಿ ಸಲು ಅಳವಡಿಸಿರುವ ಸಿ.ಸಿ. ಕ್ಯಾಮೆರಾ ಸ್ಥಳೀಯ ಅಂಗಡಿ ವರ್ತಕರ ನಿದ್ದೆ ಗೆಡುವಂತೆ ಮಾಡಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯದ ತೊಟ್ಟಿಗಳು ತುಂಬಿ ತುಳುಕುತ್ತಿದ್ದು, ಕಸವನ್ನು ವಿಲೇವಾರಿ ಮಾಡಲು ಸೂಕ್ತ ಜಾಗ ಸಿಗದ ಕಾರಣ ಜನರು ಆಡಳಿತವನ್ನು ಶಪಿಸುವಂತಾಗಿದೆ.
ಬಜ್ಪೆ ಗ್ರಾ.ಪಂ. ವ್ಯಾಪ್ತಿಯ ಅಂಗಡಿ-ಮತ್ತು ಮನೆಗಳಿಂದ ಸಂಗ್ರಹವಾಗುವ ತ್ಯಾಜ್ಯವನ್ನು ಒಡ್ಡಿದಕಲ ಎಂಬಲ್ಲಿನ ೨೫ ಸೆಂಟ್ಸ್ ಜಾಗವನ್ನು ಈ ಹಿಂದೆಯೇ ಗುರು ತಿಸಲಾಗಿತ್ತು. ಆದರೆ ಸ್ಥಳೀಯರು ತ್ಯಾಜ್ಯ ಸಂಗ್ರಹಕ್ಕೆ ವಿರೋಧ ವ್ಯಕ್ತಪ ಡಿಸಿದ್ದ ಕಾರಣ ಅಲ್ಲಿನ ಜಾಗವನ್ನು ಖಾಲಿ ಬಿಡಲಾಗಿದೆ. ಈ ನಡುವೆ ಪೇಟೆಯ ಹಲವೆಡೆ ತೊಟ್ಟಿಗಳನ್ನಿರಿಸಿ ತ್ಯಾಜ್ಯವನ್ನು ಸಂಗ್ರಹಿಸಲು ಪಂಚಾಯತ್ ಮುಂದಾಗಿದ್ದರೂ ಅದನ್ನು ಎಸೆಯಲು ಜಾಗವಿಲ್ಲದೆ ಪಂಚಾಯತ್ ಸಮಸ್ಯೆ ಎದುರಿ ಸುತ್ತಿದೆ. ಗ್ರಾ.ಪಂ. ಸಮಸ್ಯೆಯ ಬೆಂಕಿಗೆ ತುಪ್ಪ ಸುರಿಯುವಂತೆ ಅಂಗಡಿ ಹಾಗೂ ಮನೆಗಳಿಗೆ ಸೂಚನೆ ನೀಡಿ ದ್ದು, ಅದರಂತೆ ‘ತ್ಯಾಜ್ಯವನ್ನು ಎಲ್ಲೂ ಎಸೆಯುವಂತಿಲ್ಲ, ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದ್ದು, ಸ್ಥಳದಲ್ಲೇ ತಪ್ಪಿತಸ್ಥರನ್ನು ಹಿಡಿದು ದಂಡ ವಸೂಲಿ ಮಾಡಲಾಗುತ್ತದೆ ಎಂದು ಹೇಳಿರು ವುದು ಸ್ಥಳೀಯ ವರ್ತಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಜ್ಪೆ ಪೇಟೆಯ ಮಾರುಕಟ್ಟೆ ಸ್ಟಾಲ್‌ಗಳು, ಅಂಗಡಿ, ಹೋಟೆಲ್ ಗಳಲ್ಲಿ ತ್ಯಾಜ್ಯ ರಾಶಿಬಿದ್ದಿದೆ. ಕೆಲವು ಅಂಗಡಿ ಮಾಲಕರು ತ್ಯಾಜ್ಯವನ್ನು ಕಷ್ಟಪಟ್ಟು ಮನೆಗೆ ಸಾಗಿಸಿ ಬೆಂಕಿ ಕೊಟ್ಟು ಸುಡುವುದು ಮಾಡುತ್ತಿದ್ದಾರೆ. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ.
ತ್ಯಾಜ್ಯವನ್ನು ರಾಶಿ ಹಾಕಿರುವ ಬಜ್ಪೆ ಗ್ರಾಮ ಪಂಚಾಯತ್ ಆವರಣ ದಲ್ಲಿ ತ್ಯಾಜ್ಯವನ್ನು ಸುಡಲಾಗುತ್ತಿದ್ದು, ಇಲ್ಲಿಯೇ ಸಿ.ಸಿ. ಕ್ಯಾಮೆರಾ ಅಳವಡಿಸಿ ರುವುದು ಜನರ ಅಸಹನೆಗೆ ಕಾರಣ ವಾಗಿದೆ. ‘ಪಂಚಾಯತ್ ಸಿ.ಸಿ. ಕ್ಯಾಮೆರಾ ಅಳವಡಿಸಲಿ, ಆದರೆ ಅದಕ್ಕೂ ಮೊದಲು ತ್ಯಾಜ್ಯವನ್ನು ವಿಸರ್ಜಿಸಲು ಸೂಕ್ತ ಜಾಗ ಹುಡುಕಿಕೊಡಲಿ ಎನ್ನುವುದು ಜನರ ಬೇಡಿಕೆ ಮತ್ತು ಮನವಿಯೂ ಆಗಿದೆ.
ತ್ಯಾಜ್ಯ ಎಸೆಯುವುದಾದರೂ ಎಲ್ಲಿ?
‘ಬಜ್ಪೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಯದ್ದೇ ದೊಡ್ಡ ಸಮಸ್ಯೆ. ಇದನ್ನು ಪರಿಣಾಮಕಾರಿ ಯಾಗಿ ಎದುರಿಸಲು ಗ್ರಾ.ಪಂ. ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ. ಪಂಚಾಯತ್ ಅಧ್ಯಕ್ಷರು ಸಿ.ಸಿ. ಕ್ಯಾಮೆರಾ ಅಳವಡಿ ಸಲು ಅನಾವಶ್ಯವಾಗಿ ೪೦ ಸಾವಿರ ರೂ. ಹಣ ಪೋಲು ಮಾಡಿದ್ದಾರೆ. ಸಿ.ಸಿ. ಕ್ಯಾಮೆರಾ ಅಳವಡಿಕೆ ಕುರಿತಂತೆ ಗ್ರಾಮಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡಿಲ್ಲ. ಬಜ್ಪೆ ಪೇಟೆಯಲ್ಲಿನ ಅಂಗಡಿ ಮಾಲಕರು ತ್ಯಾಜ್ಯ ವಿಲೇವಾರಿ ಮಾಡಲಾಗದೆ ಕಷ್ಟ ಪಡುತ್ತಿದ್ದಾರೆ. ಎನ್ನುತ್ತಾರೆ ಬಜ್ಪೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಲೋಕೇಶ್ ಪೂಜಾರಿ ಅವರು.
Tagged with
dk,
lnews
ಮಂಗಳೂರು: ಮಹಿಳೆಯೋರ್ವರ ಕತ್ತಿನಿಂದ ಕರಿಮಣಿ ಸರ ಅಪಹರಿಸಿದ ಆರೋಪಿಯನ್ನು ವ್ಯಕ್ತಿಯೋರ್ವರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕುಂದಾಪುರ ತಾಲೂಕಿನ ಹರ್ಕೂರು ಗ್ರಾಮದ ನಾರ್ಕಳಿ ಎಂಬಲ್ಲಿ ನಡೆದಿದೆ. ನಾರ್ಕಳಿ ನಿವಾಸಿ ವನಜಾ ಎಂಬವರು ತಮ್ಮ ಪುತ್ರಿ ಸುಶ್ಮಿತಾ ಎಂಬವರೊಂದಿಗೆ ನಡೆದು ಹೊಗುತ್ತಿದ್ದಾಗ ನಾಗೇಂದ್ರ ಗಾಣಿಗ ಎಂಬಾತ ಪರಿಚಯ ಮಾಡಿಕೊಂಡು ಮ್ಮ ಮನೆ ಎಲ್ಲಿ ಎಂದು ಕೇಳಿದ್ದ. ಸ್ವಲ್ಪ ದೂರದಲ್ಲಿದೆ ಎಂದು ತಿಳಿಸಿ ಅರ್ಧ ಕಿ.ಮೀ. ಸಾಗಿದಾಗ ಮತ್ತೆ ಬಂದ ನಾಗೇಂದ್ರ ಬಾಯಿ ಒತ್ತಿ ಹಿಡಿದು ವನಜಾರ ಕತ್ತಿನಲ್ಲಿದ್ದ ಎರಡು ಎಳೆಯ ಕರಿಮಣಿ ಸರ ಎಳೆದು ಪರಾರಿಯಾಗಿದ್ದ. ವನಜಾ ಬೊಬ್ಬೆ ಹೊಡೆದಾಗ ಅದೇ ದಾರಿಯಲ್ಲಿ ಬರುತ್ತಿದ್ದ ಅರುಣ್ ಎಂಬವರು ಕಳ್ಳನನ್ನು ಬೆನ್ನಟ್ಟಿ ಕಟ್ಟಿನಮಕ್ಕಿಯಲ್ಲಿ ಹಿಡಿದು ಗಂಗೊಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
Tagged with
cnews
ಮಂಗಳೂರು: ಅಂಬ್ಲಮೊಗರು ಗ್ರಾಮ ಪಂಚಾಯಿತಿ ಸದಸ್ಯೆಯ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ಆರೋಪಿಸಿ ಡಿವೈಎಫ್‌ಐ ಮುಖಂಡರ ಮೇಲೆ ಕೇಸು ದಾಖಲಿಸಿರುವುದನ್ನು ವಿರೋಧಿಸಿ ನಿನ್ನೆ ಸಂಜೆ ಅಂಬ್ಲಮೊಗ ರುವಿನಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಡಿವೈಎಫ್‌ಐ ಮಂಗಳೂರು ನಗರ ಸದಸ್ಯ ಇಮ್ತಿಯಾಝ್, ಪಂಚಾಯಿತಿ ಸದಸ್ಯೆ ಇಂದಿರಾ ಅವರ ಮಾನಭಂಗ ಆರೋ ಪಕ್ಕೊಳಗಾಗಿ ಬಂಧಿತರಾದ ಆರೋಪಿ ಗಳು ನಿರ್ದೋಷಿಗಳಾಗಿದ್ದು, ಅವರ ಬಂಧನದ ಮೂಲಕ ಡಿವೈಎಫ್‌ಐ ಸಂಘಟನೆಯನ್ನು ಗ್ರಾಮೀಣ ಭಾಗದಲ್ಲಿ ನೆಲಕಚ್ಚುವಂತೆ ಮಾಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು. ಅಂಬ್ಲಮೊಗರು ಗ್ರಾಮದಲ್ಲಿ ಕುಡಿಯುವ ನೀರು, ಹಕ್ಕುಪತ್ರ, ನಿವೇ ಶನ ರಹಿvರ ಸಮಸ್ಯೆ, ಅಂಬ್ಲಮೊ ಗರು- ಮಂಗಳೂರು ಸರಕಾರಿ ಬಸ್ ಸಂಚಾರಕ್ಕೆ ಸಂಘಟನೆಯ ಮುಖಂಡರು ಅವಿರತ ಹೋರಾಟ ನಡೆಸಿದ್ದರು. ಆದರೆ ಹೋರಾಟಗಾರರ ಮೇಲೆಯೇ ಪಂಚಾ ಯಿತಿ ಸದಸ್ಯೆಯ ಮಾನಭಂಗ ಆರೋಪ ಹೊರಿಸಲಾ ಗಿರುವುದು ದುರಂತ ಎಂದರು. ಉಳ್ಳಾಲ ವಲಯ ಸಿಪಿಎಂ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಡಿವೈಎಫ್‌ಐ ಉಳ್ಳಾಲ ವಲಯ ಅಧ್ಯಕ್ಷ ಮಹಾಬಲ ದಬ್ಬೆಲಿಮಾರ್, ಕಾರ್ಯ ದರ್ಶಿ ಅಶೋಕ್ ಶೆಟ್ಟಿ, ಸದಸ್ಯ ಅರುಣ್ ಕುಮಾರ್ ತೊಕ್ಕೊಟ್ಟು, ಡಿವೈಎಫ್‌ಐ ಜಿಲ್ಲಾ ಸಮಿತಿ ಸದಸ್ಯ ರಫೀಕ್ ಹರೇಕಳ, ಅಂಬ್ಲಮೊ ಗರು ಘಟಕದ ಅಧ್ಯಕ್ಷ ಇಬ್ರಾಹಿಂ ಹಾಗೂ ಲತೀಫ್ ಉಪಸ್ಥಿತರಿದ್ದರು.
Tagged with
dk,
lnews
ಡೆಕ್ಕನ್‌ಗೆ ಐದು ವಿಕೆಟ್ ಅಚ್ಚರಿಯ ಗೆಲುವು
ಡೆಕ್ಕನ್: ತವರಿನ ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಡೆಕ್ಕನ್ ಚಾರ್ಜರ‍್ಸ್ ಕೊನೆಗೂ ಸಫಲವಾಗಿದೆ. ನಿನ್ನೆ ಡೆಕ್ಕನ್ ವಿರುದ್ಧದ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ಐದು ವಿಕೆಟ್‌ಗಳಿಂದ ಸೋಲುವ ಮೂಲಕ ಟೂರ್ನಿಯ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಹಾಗಾಗಿ ದ್ರಾವಿಡ್ ಪಡೆ ಆಘಾತ ಕಂಡಿದೆ. ಡೆಕ್ಕನ್ ಪರ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ್ದ ಡೇಲ್ ಸ್ಟೇಯ್ನ್ ಎರಡು ವಿಕೆಟ್ ಪಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ಅಮಿತ್ ಮಿಶ್ರಾ ಹಾಗೂ ಸ್ಟೇಯ್ನ್ ದಾಳಿಗೆ ತತ್ತರಿಸಿತು. ತಂಡದ ಪರ ನಾಯಕ ರಾಹುಲ್ ದ್ರಾವಿಡ್ (೩೯) ದೀರ್ಘ ಸ್ಕೋರ್‌ನ್ನು ಪೇರಿಸಿದರೂ ಉಳಿದ ಆಟಗಾರರ ಬೆಂಬಲ ಅಷ್ಟಾಗಿ ದೊರೆಯಲಿಲ್ಲ. ಅದರೆ ಮಧ್ಯಮ ಕ್ರಮಾಂಕದಲ್ಲಿ ಓವೈಸ್ ಷಾ (೨೮) ಅಂತಿಮ ಹಂತದವರೆಗೆ ಬ್ಯಾಟಿಂಗ್ ನಡೆಸಿದ ಪರಿಣಾಮ ತಂಡ ನಿಗದಿ ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ೧೨೬ ರನ್‌ಗಳನ್ನು ಪೇರಿಸಿತು. ಸ್ಟೇಯ್ನ್ ಹಾಗೂ ಮಿಶ್ರಾ ಅಲ್ಪ ರನ್ ನೀಡಿ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಡೆಕ್ಕನ್ ಉತ್ತಮ ಆರಂಭ ಪಡೆಯಿತು. ಆದರೆ ಅಂತಿಮ ಹಂತದಲ್ಲಿ ತಂಡ ವಿಕೆಟ್ ಕಳಕೊಂಡರೂ ಇನ್ನೂ ಎಂಟು ಎಸೆತ ಬಾಕಿ ಉಳಿದಿರುವಂತೆ ಐದು ವಿಕೆಟ್ ನಷ್ಟಕ್ಕೆ ೧೨೮ ರನ್ ಗಳಿಸಿ ಜಯದಾಖಲಿಸಿತು. ಆರಂಭಿಕರಾದ ಅಕ್ಷತ್ ರೆಡ್ಡಿ (೪೨) ಹಾಗೂ ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಶಿಖರ್ ಧವನ್ (೨೬) ಮೊದಲ ವಿಕೆಟ್‌ಗೆ ೬೩ ರನ್‌ಗಳ ಉತ್ತಮ ಜೊತೆಯಾಟ ನಡೆಸಿದ್ದು, ತಂಡಕ್ಕೆ ಆಧಾರವಾಯಿತು. ರಾಜಸ್ಥಾನ್ ಪರ ಸಿದ್ದಾರ್ಥ್ ತ್ರಿವೇದಿ ಎರಡು ವಿಕೆಟ್ ಪಡೆದರು.
ಡೆಕ್ಕನ್ ಉತ್ತಮ ಆರಂಭ ದೊರೆತರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮೆನ್‌ಗಳು ವೈಫಲ್ಯ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ಯಾಮರೊನ್ ವೈಟ್ (೧) ಹಾಗೂ ಲಿನ್ (೬) ಅಲ್ಪಮೊತ್ತಕ್ಕೆ ನಿರ್ಗಮಿಸಿದ್ದು, ತಂಡಕ್ಕೆ ಆಘಾತವಾಯಿತು. ಆದರೆ ಏಕಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದ ಜೆಪಿ ಡ್ಯುಮಿನಿ (೨೪) ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಆದರೆ ಒಂದು ಹಂತದಲ್ಲಿ ಡ್ಯುಮಿನಿ ಕೂಡ ಪೆವಿಲಿಯನ್ ದಾರಿ ಹಿಡಿದಾಗ ತಂಡಕ್ಕೆ ಮತ್ತೆ ಆಘಾತ. ಈ ವೇಳೆ ಆಶಿಶ್ ರೆಡ್ಡಿ (೧೦) ಟೇಟ್ ಎಸೆತದಲ್ಲಿ ಎರಡು ಬೌಂಡರಿ ಬಾರಿಸಿ ಗೆಲುವು ತಂದು ಕೊಟ್ಟರು.
Tagged with
tnews
ಮಹಿಳೆ ಜೊತೆ ಅಸಭ್ಯ ವರ್ತನೆ ಹಿನ್ನೆಲೆ
ದೆಹಲಿ: ಹೊಟೇಲ್‌ನಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ ಮಾಡಿದ್ದ ಆರ್‌ಸಿಬಿ ಆಟಗಾರ ಲೂಕ್ ಪೊಮರ‍್ಸ್‌ಬ್ಯಾಚ್ ನಿನ್ನೆ ಬಂಧನಕ್ಕೊಳಗಾಗಿದ್ದು, ನಂತರ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಆಸೀಸ್ ಮೂಲದ ಆಟಗಾರನಿಗೆ ಒಂದು ದಿನದ ಮಟ್ಟಿಗೆ ಜಾಮೀನು ಲಭಿಸಿದೆ. ಪಂದ್ಯದ ನಂತರ ಇಲ್ಲಿನ ಐಟಿಸಿ ಮೌರ್ಯದಲ್ಲಿ ನಡೆದ ಪಾರ್ಟಿಯ ವೇಳೆ ಈ ಘಟನೆ ನಡೆದಿದೆ.
ಗುರುವಾರ ದೆಹಲಿ ವಿರುದ್ಧ ಪಂದ್ಯದ ನಂತರ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದ ಭಾರತೀಯ ಮೂಲದ ಅಮೆರಿಕಾ ನಿವಾಸಿ ಜೊಹಲ್ ಹಮೀದ್ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಇದ್ದ ಕೊಣೆಗೆ ಅಕ್ರಮವಾಗಿ ಪ್ರವೇಶಗೈದ ಪೊಮರ‍್ಸ್‌ಬ್ಯಾಚ್ ಜೋಡಿಯ ಜೊತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು. ಈ ವೇಳೆ ಪೊಮರ‍್ಸ್‌ಬ್ಯಾಚ್ ನನಗೆ ಮುತ್ತು ನೀಡಲು ಪ್ರಯತ್ನಿಸಿದ್ದು, ಜೊತೆಗೆ ಅಸಭ್ಯವಾಗಿ ವರ್ತಿಸಿದ್ದರು. ಆಗ ಇದನ್ನು ತಡೆಯಲು ಬಂದ ಪ್ರಿಯಕರ ಸಾಹಿಲ್ ಮೇಲೆ ಪೊಮರ‍್ಸ್‌ಬ್ಯಾಚ್ ನಿರಂತರವಾಗಿ ಹಲ್ಲೆ ನಡೆಸಿದರು ಎಂದು ಮಹಿಳೆ ಜೊಹಲ್ ಆಪಾದಿಸಿದ್ದಾರೆ. ಕೂಡಲೇ ಜೊಹಲ್ ಭದ್ರತಾ ಅಧಿಕಾರಿಗಳು ತಿಳಿಸಿದ್ದು, ಕೂಡಲೇ ಅವರು ಪೊಮರ‍್ಸ್‌ಬ್ಯಾಚ್‌ರನ್ನು ವಶಕ್ಕೆ ತೆಗೆದುಕೊಂಡರು ಎನ್ನಲಾಗಿದೆ. ನಂತರ ಪೊಮರ‍್ಸ್‌ಬ್ಯಾಚ್‌ರನ್ನು ಬಂಧಿಸಿದ ಪೊಲೀಸರು ಕೋರ್ಟ್ ಹಾಜರುಪಡಿಸಿದರು. ಇಲ್ಲಿ ಆಟಗಾರನಿಗೆ ನವಿತಾ ಕುಮಾರಿ ಬಾಗಾ ಒಂದು ದಿನದ ಮಟ್ಟಿಗೆ ಮಧ್ಯಂತರ ಜಾಮೀನು ನೀಡಿದ್ದಾರೆ. ಅಲ್ಲದೆ ಈ ವೇಳೆ ಜೊಹಲ್ ಹೊಸದೊಂದು ಆಪಾದನೆ ಮಾಡಿದ್ದಾರೆ. ಪೊಮರ‍್ಸ್‌ಬ್ಯಾಚ್ ವಿರುದ್ಧದ ಕೇಸ್‌ನ್ನು ಹಿಂಪಡೆಯುವಂತೆ ಅನಾಮಧೇಯ ವ್ಯಕ್ತಿಗಳು ನನಗೆ ಬೆದರಿಕೆ ಒಡ್ಡಿದ್ದರು ಎಂದು ಜೊಹಲ್ ಆಪಾದಿ ಸಿದ್ದಾರೆ. ಕೋರ್ಟ್ ವಿಚಾರಣೆಯ ವೇಳೆ ಪೊಮರ‍್ಸ್ ಬ್ಯಾಚ್ ಮೂರ್ಛೆಗೆ ಒಳಗಾಗಿದ್ದರು. ಆದರೆ ಕೂಡಲೇ ಆಟಗಾರನಿಗೆ ಪೊಲೀಸರು ನೀರು ನೀಡಿದರು.
ಸಿಸಿಟಿವಿ ತುಣುಕು ತರಲು ನ್ಯಾಯಧೀಶರ ಆದೇಶ
ನಿನ್ನೆ ಆಸೀಸ್ ಮೂಲದ ಆಟಗಾರ ಪೊಮರ‍್ಸ್‌ಬ್ಯಾಚ್‌ಗೆ ಒಂದು ದಿನದ ಮಟ್ಟಿಗೆ ಮ್ಯಾಜಿಸ್ಟ್ರೇಟ್ ಬಾಗಾ ಜಾಮೀನು ಮಂಜೂರು ಮಾಡಿದ್ದಾರೆ. ಅಲ್ಲದೆ ಹೊಟೇಲ್ ರೂಮ್‌ನ ಸಿಸಿ ಕ್ಯಾಮೆರಾದ ವೀಡಿಯೊ ತುಣುಕು ಹಾಗೂ ಅಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ವಿಭಾಗದಲ್ಲಿ ದಾಖಲಾಗಿರುವ ಜೊಹಲ್‌ಳ ಪ್ರಿಯಕರ ಸಾಹಿಲ್‌ರ ವೈದ್ಯಕೀಯ ವರದಿಯನ್ನು ತರುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ.
ಖತರ್‌ನಾಕ್ ಹಿನ್ನೆಲೆಯ ಪೊಮರ‍್ಸ್‌ಬ್ಯಾಚ್
ಪೊಮರ‍್ಸ್‌ಬ್ಯಾಚ್ ನಿನ್ನೆ ನಡೆಸಿದ ಕೃತ್ಯ ಐಪಿಎಲ್‌ಗೆ ಕಪ್ಪುಚುಕ್ಕೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಆಸೀಸ್ ಮೂಲದ ಆಟಗಾರನ ಮೊದಲ ಕೃತ್ಯವಲ್ಲ. ತನ್ನ ತಾಯ್ನಾಡಿನಲ್ಲೂ ಆಟಗಾರ ಪೊಲೀಸರ ಜೊತೆ ತಳ್ಳಾಟ ನಡೆಸಿದ ಆರೋಪ ಹೊಂದಿದ್ದಾರೆ. ೨೦೦೯ರಲ್ಲಿ ಹುಚ್ಚುಹಿಡಿದವರಂತೆ ಕಾರ್ ಚಲಾಯಿಸಿದ ಪರಿಣಾಮ ಪೊಲೀಸರಿಗೆ ಸುಮಾರು ೩೫೦೦ ಡಾಲರ್ ದಂಡ ಹಾಗೂ ಆರು ತಿಂಗಳ ಕಾಲ ಡ್ರೈವಿಂಗ್ ನಿಷೇಧಕ್ಕೆ ಒಳಪಟ್ಟಿದ್ದರು. ಆರು ಆಪಾದನೆಯನ್ನು ಅವರು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣ ಕಡಿತಗೊಂಡಿತ್ತು.
Tagged with
tnews
ಮುಂಬಯಿ: ಬುಧವಾರ ಮುಂಬ್ಯೆನ ವಾಂಖೇಡೆ ಮೈದಾನದ ಭದ್ರತಾ ಅಧಿಕಾರಿಗಳ ಜೊತೆ ಜಟಾಪಟಿ ನಡೆಸಿದ್ದ ಶಾರುಖ್ ಖಾನ್ ಈಗ ಅದಕ್ಕೆ ಭಾರೀ ದಂಡ ತೆತ್ತಿದ್ದಾರೆ. ವಾಂಖೇಡೆ ಮೈದಾನ ಪ್ರವೇಶಿಸದಂತೆ ಶಾರುಖ್‌ಗೆ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಐದು ವರ್ಷಗಳ ನಿಷೇಧ ಹೇರಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ, ಅಂತಿಮ ನಿರ್ಧಾರವನ್ನು ನಾವು ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ. ಎಮ್‌ಸಿಎ ವ್ಯವಸ್ಥಾಪಕ ಸಮಿತಿ ಈ ಅವಿರೋಧ ನಿರ್ಧಾರವನ್ನು ತೆಗೆದು ಕೊಂಡಿತ್ತು. ಎಮ್‌ಸಿಎ ಅಧ್ಯಕ್ಷ ವಿಲಾಸ್‌ರಾವ್ ದೇಶ್‌ಮುಖ್ ಅಧ್ಯಕ್ಷತೆ ವಹಿಸಿದ್ದರು. ತಪ್ಪು ಮಾಡುವ ಯಾವನೇ ವ್ಯಕ್ತಿ ಆಗಿರಲಿ. ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ದೇಶ್‌ಮುಖ್ ಈ ವೇಳೆ ತಿಳಿಸಿದರು. ರಾಜ್ಯ ಸಂಸ್ಥೆಗಳು ಈ ರೀತಿಯ ನಿರ್ಧಾರವನ್ನು ಅನುಮೋದನೆ ಮಾಡಬಹುದಷ್ಟೇ ಆದರೆ ಅಂತಿಮ ನಿರ್ಧಾರವನ್ನು ಮಾತ್ರ ಬಿಸಿಸಿಐಗೆ ತೆಗೆದುಕೊಳ್ಳುವ ಹಕ್ಕಿದೆ. ಹಾಗಾಗಿ ನಿರ್ಧಾರವನ್ನು ನಾವೇ ತೆಗೆಯಲಿದ್ದೇವೆ ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
Tagged with
tnews
ಕಾಟಿಪಳ್ಳ: ಗಣೇಶಪುರ ಕಾಟಿಪ ಳ್ಳದ ಅಜೇಯ ಫ್ರೆಂಡ್ಸ್ ಸರ್ಕಲ್ ವತಿ ಯಿಂದ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ಫೈನಲ್‌ನಲ್ಲಿ ಕೃಷ್ಣಾಪುರದ ಪ್ಯಾರಡೈಸ್ ತಂಡ ಕಾಟಿ ಪಳ್ಳದ ಆಝಾದ್ ತಂಡವನ್ನು ಸೋಲಿಸಿ ಅಜೇಯ ಟ್ರೋಪಿ ೨೦೧೨ ಪ್ರಶಸ್ತಿಯನ್ನು ಪಡೆಯಿತು. ಪ್ರಶಸ್ತಿ ಟ್ರೋಪಿ ಮತ್ತು ನಗದು ಮೊತ್ತವನ್ನು ಒಳಗೊಂಡಿತ್ತು.
ಅಝಾದ್ ಕ್ರಿಕೆಟ್‌ನ ಇಕ್ಬಾಲ್ ಉತ್ತಮ ಬ್ಯಾಟ್ಸ್‌ಮೆನ್, ಪ್ಯಾರಡೈಸ್‌ನ ಜಯಶೀಲ ಉತ್ತಮ ಬೌಲರ್, ರಿಯಾಝ್ ಪಂದ್ಯಶ್ರೇಷ್ಠ, ತನ್ವೀರ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕಾಟಿಪಳ್ಳ ನಂದ ಗೋಕುಲದ ವಿಶ್ವನಾಥ ಶೆಟ್ಟಿ, ಛಾಯಾಗ್ರಾಹಕ ದೇವ ರಾಜ ಶೆಟ್ಟಿ, ವಕೀಲ ಸದಾಶಿವ ಐತಾಳ್, ಕಾಟಿಪಳ್ಳ ಹಿಂದೂಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ಸುಕುಮಾರ ಭಂಡಾರಿ, ಗಣೇಶಪುರ ಶ್ರೀ ಮಹಾ ಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಫ್ಲುಲಚಂದ್ರ ರೈ, ಚೇತನ್ ಶೆಟ್ಟಿ ಕೇಂಞ, ಶ್ರೀಧರ ಜಿ. ಸೂರಿಂಜೆ, ಜಯಶೀಲ ಸೂರಿಂಜೆ, ಅಜೇಯ ಫ್ರೆಂಡ್ಸ್‌ಸರ್ಕಲ್ ರಿ. ಇದರ ಅಧ್ಯಕ್ಷ ನವೀನ್ ಶೆಟ್ಟಿ ಕೇಂಞ, ಅಜೇಯ್ ಕ್ರಿಕೆಟರ‍್ಸ್‌ನ ಕಪ್ತಾನ ಚೇತನ್ ಕುಮಾರ್ ಮತ್ತಿತರರು ಇದ್ದರು.
Tagged with
dk,
lnews,
tnews
ಕಾರ್ಕಳ: ರಾಣೆಯಾರ್ ಸಮಾಜ ಸೇವಾ ಸಂಘ ಉಚ್ಚಂಗಿನಗರ ಕಾರ್ಕಳ ಇದರ ವತಿಯಿಂದ ಮೇ.೨೦ರಂದು ಬೆಳಿಗ್ಗೆ ೧೦-೦೦ಗಂಟೆಗೆ ಶ್ರೀ ನಾರಾಯಣಗುರು ಸಭಾಭವನ, ಪೆರ್ವಾಜೆ, ಕಾರ್ಕಳದಲ್ಲಿ ಅಖಿಲ ಕರ್ನಾಟಕ ರಾಣೆಯಾರ್ ಸಮಾಜದ ವಧೂ-ವರರ ಅನ್ವೇಷಣಾ ಸಮಾವೇಶ ಜರುಗಲಿದೆ ಎಂದು ಅಖಿಲ ಕರ್ನಾಟಕ ರಾಣೆಯಾರ್ ಸಮಾಜದ ಅಧ್ಯಕ್ಷರಾದ ಗಣೇಶ್ ರಾಣೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Tagged with
lnews,
udupi
ಉಪ್ಪಿನಂಗಡಿ: ಗ್ಯಾಸ್ ಬುಲೆಟ್ ಟ್ಯಾಂಕರೊಂದು ಸೇತುವೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮವಾಗಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ ೭೫ರ ಪೆರ್ನೆ ಎಂಬಲ್ಲಿ ನಡೆದಿದೆ.
ಉಪ್ಪಿನಂಗಡಿ ಸಮೀಪದ ಪೆರ್ನೆ ಅಮೈ ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಸೇತುವೆಗೆ ಡಿಕ್ಕಿ ಹೊಡೆದು ಸುಮಾರು ೫೦ ಅಡಿ ಆಳಕ್ಕೆ ಉರುಳಿ ಬಿತ್ತು. ಈ ವೇಳೆ ಹಠಾತ್ ಟ್ಯಾಂಕರ್‌ನಲ್ಲಿ ಬೆಂಕಿ ಹತ್ತಿಕೊಂಡ ಕಾರಣ ಚಾಲಕ ಸ್ಥಳದ ಲ್ಲಿಯೇ ಮೃತಪಟ್ಟ. ಮೃತ ಚಾಲಕನನ್ನು ತಮಿಳುನಾಡಿನ ನೇಮಕಲ್ ನಿವಾಸಿ ಮಹಮ್ಮದ್ ರಫೀಕ್ ಪಾಷಾ(೩೮) ಎಂದು ಗುರುತಿಸಲಾಗಿದೆ. ಟ್ಯಾಂಕರ್‌ಗೆ ಹತ್ತಿಕೊಂಡ ಬೆಂಕಿ ಚಾಲಕನ ದೇಹಕ್ಕೂ ಹಬ್ಬಿದ ಪರಿಣಾಮವಾಗಿ ಈತನ ದೇಹದ ಬಹುಭಾಗ ಸುಟ್ಟು ಹೋಗಿದೆ. ಗ್ಯಾಸ್ ಟ್ಯಾಂಕರ್ ಖಾಲಿ ಯಾಗಿದ್ದು, ಘಟನೆ ವೇಳೆ ಟ್ಯಾಂಕರ್‌ನ ಮುಂಭಾಗಕ್ಕೆ ಮಾತ್ರ ಬೆಂಕಿ ಹತ್ತಿಕೊಂ ಡಿತ್ತು. ಚಾಲಕ ರಫೀಕ್ ಪಾಷಾ ಒಳಗಡೆ ಸಿಲುಕಿ ಬೆಂಕಿಗೆ ಆಹುತಿಯಾದ.
Tagged with
cnews,
feature,
tanker
ಕಾಸರಗೋಡು: ಹೆರಿಗೆ ಶುಶ್ರೂಷೆ ಗಾಗಿ ಮನೆಯಲ್ಲಿ ಕೆಲಸಕ್ಕೆ ನಿಂತಿದ್ದ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಲಾಗಿ ತಡೆದ ಮಹಿಳೆಗೆ ಗಂಭೀರವಾಗಿ ಹಲ್ಲೆಗೈಯ್ಯಲಾಗಿದೆ.
ಇಲ್ಲಿನ ಚೆರ್ಕಳ ಮಹಾತ್ಮ ಶಾಲೆ ಬಳಿಯ ನಿವಾಸಿ ದಿ. ಮುಹಮ್ಮದ್ ಶಾಫಿ ಎಂಬವರ ಪತ್ನಿ ಅಲೀಮಾ(೩೨) ಗಂಭೀರ ಹಲ್ಲೆಗೊಳಗಾದವರು. ಮುಖ ಹಾಗೂ ಎಡ ಕಣ್ಣಿಗೆ ಗಂಭೀರ ಗಾಯ ಗೊಂಡ ಸ್ಥಿತಿಯಲ್ಲಿ ಇವರನ್ನು ನಗರದ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಮೊನ್ನೆ ಸಾಯಂಕಾಲ ಘಟನೆ ಸಂಭವಿ ಸಿದೆ.
ಚೆಂಗಳ ಇಂದಿರಾ ನಗರದ ಮನೆಯೊಂದರಲ್ಲಿ ಮೂರು ದಿನಗಳ ಹಿಂದೆ ಹೆರಿಗೆ ಶುಶ್ರೂಷೆಗಾಗಿ ಇವರು ಬಂದಿದ್ದರು. ಇದಕ್ಕಿದ್ದಂತೆ ಮೊನ್ನೆ ಸಂಜೆ ಮನೆ ಮಾಲಕನ ಸಹೋದರ ಇವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಈತನ ಯತ್ನವನ್ನು ತಡೆದಾಗ ಮುಖಕ್ಕೆ ಬಲವಾಗಿ ಹೊಡೆ ದನೆನ್ನಲಾಗಿದೆ. ಈ ಬಗ್ಗೆ ಮನೆ ಮಂದಿಯಲ್ಲಿ ಹೇಳಿದಾಗ ಆ ಮನೆಯವರು ತನ್ನನ್ನು ಹೊರಹಾಕಿದರೆಂದೂ ಮಹಿಳೆ ದೂರಿದ್ದಾರೆ. ಈ ಬಗ್ಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಹಿಳೆಯಿಂದ ಹೇಳಿಕೆ ದಾಖಲಿಸಿಕೊಂಡಿರುವ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Tagged with
cnews,
feature
ಮುಖ್ಯಮಂತ್ರಿ ಬಿಡಿ, ರಾಜ್ಯಾಧ್ಯಕ್ಷನ ಸ್ಥಾನವನ್ನೂ ನೀಡಿಲ್ಲ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ಹೋಗಲಿ ರಾಜ್ಯಾಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿದ್ದ ಬಿಜೆಪಿ ಹೈಕಮಾಂಡ್ ಅದನ್ನೂ ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮಲ್ಲಿರುವ ಅಸಹನೆ ಹೊರಗೆಡವಿದ್ದಾರೆ.
ಮಲ್ಲೇಶ್ವರದಲ್ಲಿ ತಮ್ಮ ನೂತನ ‘ಜನಸಂಪರ್ಕ ಕಚೇರಿ ಉದ್ಘಾಟಿಸಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರದ ನಾಯಕರು ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ಬಿಜೆಪಿ ಹೈಕಮಾಂಡ್ ಮೇಲೆ ನೇರ ವಾಗ್ದಾಳಿ ನಡೆಸಿದರು.
ಅಕ್ರಮ ಗಣಿಗಾರಿಕೆಗೆ ಸಂಬಂಧಿ ಸಿದಂತೆ ಲೋಕಾಯುಕ್ತ ವರದಿ ನೀಡಿ ದಾಗ ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಈ ಸಂದರ್ಭದಲ್ಲಿ ನಮ್ಮ ಪಕ್ಷದ ವರಿಷ್ಟರು, ಆರೋಪ ಮುಕ್ತರಾದ ಕೂಡಲೇ ನಿಮ್ಮನ್ನು ಸಿಎಂ ಹುದ್ದೆಯ ಮೇಲೆ ಕೂರಿಸುವುದಾಗಿ ಹೇಳಿದ್ದರು.ಆ ನಂತರ ಒಮ್ಮೆ ಪಕ್ಷದ ರಾಜ್ಯಾ ಧ್ಯಕ್ಷ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾವ ಭರವಸೆಗಳು ಈಡೇ ರಲಿಲ್ಲ. ಇನ್ನು ಮುಂದೆ ನಾನು ಮುಖ್ಯ ಮಂತ್ರಿ ಅಥವಾ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ದೆಹಲಿ ನಾಯಕರ ಮುಂದೆ ನಿಲ್ಲುವುದಿಲ್ಲ ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ತಮ್ಮದು ಪ್ರತ್ಯೇಕ ದಾರಿ ಎಂಬ ಸುಳಿವು ನೀಡಿದರು. ಸರ್ಕಾರ ಮತ್ತು ಪಕ್ಷಕ್ಕೆ ಪರ್ಯಾಯವಾಗಿ ತಾವು ಯಾವುದೇ ಶಕ್ತಿ ಕೇಂದ್ರವಾಗಿ ಹೋರಾಟ ನಡೆಸಲು ಮುಂದಾಗುತ್ತಿಲ್ಲ. ಜನರ ಮಧ್ಯೆ ಇರುವ ಸಲುವಾಗಿ ಮಾತ್ರವೇ ಈ ಕಚೇರಿಯನ್ನು ಪ್ರಾರಂಭಿಸಿದ್ದೇನೆ. ಇದು ಸದಾನಂದಗೌಡ, ಈಶ್ವರಪ್ಪ ಅವರ ಕುರ್ಚಿಗೆ ಪರ್ಯಾಯ ಶಕ್ತಿ ಕೇಂದ್ರವಲ್ಲ ಎಂದರು.ಇದು ಪಕ್ಷಾತೀತ ಕಚೇರಿ. ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸಲು ಕಚೇರಿ ತೆರೆದಿದ್ದೇನೆ ಹೊರತು ಯಾವುದೇ ರಾಜಕೀಯ ದುರುದ್ದೇಶದಿಂದಲ್ಲ ಎಂದು ಸ್ಪಷ್ಟಪಡಿಸಿದರು.
ರೇಸ್‌ಕೋರ್ಸ್ ರಸ್ತೆಯ ನಿವಾಸ ಸರ್ಕಾರದ್ದು, ಅದನ್ನು ತೊರೆಯಬೇಕಾದ ಸಂದರ್ಭ ಬಂದಿರುವುದರಿಂದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸ್ಥಾನದಲ್ಲಿ ಕಚೇರಿ ತೆರೆದಿದ್ದೇನೆ. ಈ ಕಚೇರಿಯಲ್ಲಿ ಜನ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಬಂದು ಹೋಗಬಹುದು
ಸಾಮಾನ್ಯ ಸ್ಥಿತಿಯಿಂದ ಹಿಡಿದು ಮುಖ್ಯಮಂತ್ರಿಯಾಗಿ ಜನತಾ ದರ್ಶನ ನಡೆಸುವವರೆಗೆ ನಾನು ಜನರ ಕಷ್ಟಗಳನ್ನು ನೋಡಿದ್ದೇನೆ. ಅವರ ಸಂಕಟಗಳನ್ನು ಅರ್ಥ ಮಾಡಿಕೊಂಡಿದ್ದೇನೆ.ನನಗೆ ಅಂತಹ ಜನರ ಸೇವೆ ಮಾಡುವುದೇ ಇಷ್ಟ.ಹೀಗಾಗಿ ಈ ಕಛೇರಿ ಪ್ರಾರಂಭವಾಗಿದೆ ಎಂದರು. ಗಣಿ ಕಂಪನಿಗಳಿಂದ ಆಕ್ರಮವಾಗಿ ಕಪ್ಪ ಪಡೆದ ಆರೋಪದ ಮೇಲೆ ನಡೆಯುತ್ತಿರುವ ಸಿಬಿಐ ತನಿಖೆಯಿಂದ ನಾನೇನೂ ವಿಚಲಿತನಾಗಿಲ್ಲ.ನನ್ನ ಜೀವನದಲ್ಲೇ ಎಂದೂ ನಾನು ಕಷ್ಟಕ್ಕೆ ಕೈ ಊರಿ ನಡೆದಿಲ್ಲ. ಈಗಲೂ ಕೈ ಊರುವುದಿಲ್ಲ ಎಂದರು.
Tagged with
feature,
snews,
yeddi
ಬೆಂಗಳೂರು: ಮೊನ್ನೆಯಷ್ಟೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಹಾಡಿ ಹೊಗಳಿದ್ದ ಯಡಿಯೂರಪ್ಪ ಬಿಜೆಪಿಗೆ ದೊಡ್ಡ ಶಾಕ್ ನೀಡಿದ್ದು, ತನ್ನ ಹೊಸ ಕಚೇರಿಯಲ್ಲಿ ಸೋನಿಯಾ ಫೋಟೊ ತೂಗು ಹಾಕಿದ್ದಾರೆ. ಮಲ್ಲೇಶ್ವರಂ ೧೭ನೇ ಕ್ರಾಸ್‌ನಲ್ಲಿ ಜನಸಂಪರ್ಕ ಕಚೇರಿಯನ್ನು ಸ್ವತಃ ಯಡಿಯೂರಪ್ಪ ಉದ್ಘಾಟಿ ಸಿದ್ದಾರೆ.
ಯಡಿಯೂರಪ್ಪ ಜನಸಂಪರ್ಕ ದೊಳಕ್ಕೆ ಹೆಜ್ಜೆಯಿಟ್ಟ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ, ನಿತಿನ್ ಗಡ್ಕರಿ ಅವರ ಫೋಟೋಗಳನ್ನು ಗೋಡೆಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಅಲ್ಲಿ ಅಡ್ವಾಣಿ ಅವರ ಫೋಟೊ ಮಾತ್ರ ಹಾಕಲೇ ಇಲ್ಲ. ಆದರೆ ಸೋನಿಯಾ ಗಾಂಧಿ ಅವರ ಫೋಟೋವನ್ನು ಎದ್ದು ಕಾಣುವಂತೆ ಹಾಕಿದ್ದಾರೆ. ಅದು ಮೈಸೂರಿನಲ್ಲಿ ನಡೆದ ಇನ್ಫೋಸಿಸ್ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಷಣ ಮಾಡುತ್ತಿರುವ, ಸೋನಿಯಾ ಗಾಂದಿ, ನಾರಾಯಣ ಮೂರ್ತಿ, ವೇದಿಕೆ ಮೇಲಿರುವ ಫೋಟೊ. ಜತೆಗೆ ತಾವು ಸಿಎಂ ಆಗಿದ್ದಾಗ ಮುಖ್ಯಮಂತ್ರಿ ಕಚೇರಿಯಲ್ಲಿ ಹಾಕಿದ್ದ ಫೋಟೋಗಳನ್ನು ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ತೆಗೆದುಹಾಕಲಾಗಿತ್ತು. ಅವುಗಳಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಪ್ರಧಾನಿ ಮನಮೋಹನ್ ಸಿಂಗ್, ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರ ಫೋಟೋಗಳನ್ನು ತಂದು ಈ ಹೊಸ ಕಚೇರಿಯಲ್ಲಿ ಹಾಕಿದ್ದಾರೆ. ಸೋನಿಯಾ ಗಾಂಧಿ ಫೋಟೊವನ್ನು ಬಳಿಕ ತೆಗೆದರೂ ಅದಾಗಲೇ ಏನು ಸಂದೇಶ ತಲುಪಬೇಕಿತ್ತೋ ಅದು ಪಕ್ಷದ ವರಿಷ್ಠರಿಗೆ ತಲುಪಿಯಾಗಿತ್ತು. ಇದನ್ನು ಮನದಲ್ಲಿಯೇ ನೆನಪಿಸಿಕೊಂಡು ಯಡಿಯೂರಪ್ಪ ಒಂದು ನಗೆ ನಕ್ಕಿದ್ದಾರೆ. ಸಿಬಿಐನಿಂದ ಬಂಧನ ಭೀತಿಯನ್ನು ತಪ್ಪಿಸಿಕೊಳ್ಳಲು ಯಡಿಯೂರಪ್ಪ ಉರುಳಿಸಿದ ಒಂದು ದಾಳ ಇದಾಗಿದೆ.
Tagged with
snews,
yeddi
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ವಯಂಕೃತವಾಗಿ ಮಾಡಿಕೊಂಡ ಅಪರಾಧದಿಂದ ಇಂದು ಸಿಬಿಐ ಕುಣಿಕಿಗೆ ಸಿಲುಕಿ ದ್ದಾರೆ ಎಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಲೋಕಾಯುಕ್ತನಾಗಿದ್ದ ಸಂದರ್ಭದಲ್ಲಿ ನಾನೇ ಖುದ್ದಾಗಿ ಯಡಿಯೂರಪ್ಪ ಅವರನ್ನು ಭೇಟಿ ನಿಮ್ಮ ಸಚಿವ ಸಂಪುಟದ ಕೆಲ ಸದಸ್ಯರು ಮತ್ತು ಶಾಸಕರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ. ಹೊಸಪೇಟೆ, ಬಳ್ಳಾರಿಗಳಿಂದ ಪರ್ಮಿಟ್ಟೇ ಇಲ್ಲದೇ ಕಬ್ಬಿಣದ ಅದಿರು ರವಾನಿಸುತ್ತಿದ್ದಾರೆ. ತಡೆಗಟ್ಟಿ ಎಂದಿದ್ದೆ. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ವಾಸ್ತವವಾಗಿ ೨೦೦೨ರಿಂದ ೨೦೦೬ರವರೆಗಿನ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ವರದಿಯನ್ನು ರೂಪಿಸಲಾಗಿತ್ತು. ಆದರೆ ವರದಿ ಅಂತಿಮ ಹಂತದಲ್ಲಿದ್ದ ಸಂದರ್ಭದಲ್ಲಿ ಯಡಿಯೂರಪ್ಪ, ೨೦೦೨ ರಿಂದ ೨೦೧೦ ರವರೆಗಿನ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆಯ ಕುರಿತು ವರದಿ ನೀಡುವಂತೆ ಹೇಳಿದರು.ಈ ನಿರ್ಧಾರದಿಂದ ಅವರೇ ತೋಡಿಕೊಂಡ ಖೆಡ್ಡಾದಲ್ಲಿ ಅವರು ಬಿದ್ದಿದ್ದಾರೆ ಎಂದು ಬಣ್ಣಿಸಿದ ಅವರು, ಇಂತಹ ಪರಿಸ್ಥಿತಿಯನ್ನು ನಿರ್ಮಿಸಿಕೊಂಡಿದ್ದು ಅವರೇ ಆದ್ದರಿಂದ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಅದರನುಸಾರ ನಾನು ನಮ್ಮ ಅಧಿಕಾರಿಗಳ ಜತೆಗೂಡಿ ೨೦೦೨ ರಿಂದ ೨೦೧೦ರ ತನಕ ನಡೆದ ಅಕ್ರಮ ಗಣಿಗಾರಿಕೆಯ ಇಂಚಿಂಚು ಮಾಹಿತಿ ಕೊಟ್ಟಿದ್ದೇವೆ. ಆದರೆ ಈ ವರದಿಯನ್ನೇ ಓದದವರು, ಇದು ಕೇವಲ ಜನಾರ್ದನರೆಡ್ಡಿ ಹಾಗೂ ಯಡಿಯೂರಪ್ಪ ಅವರ ವಿರುದ್ಧ ರೂಪಿಸಿದ ಷಡ್ಯಂತ್ರ ಎಂದು ಆರೋಪಿಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನಾನು ಕೊಟ್ಟ ವರದಿಯನ್ನೇ ಓದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಾನು ಕೊಟ್ಟ ವರದಿ ೨೬ ಸಾವಿರ ಪುಟಗಳಷ್ಟು ಸುದೀರ್ಘವಾಗಿದ್ದು ಎಷ್ಟೇ ಕಷ್ಟಪಟ್ಟರೂ ಅದನ್ನು ಓದಲು ಹತ್ತು ದಿನಗಳಾದರೂ ಬೇಕೇ ಬೇಕು ಎಂದು ನುಡಿದರು.
ಈ ವರದಿಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಸರ್ಕಾರಗಳು ಇದ್ದ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆಯ ಸಂಪೂರ್ಣ ವಿವರ ನೀಡಿರುವುದಾಗಿ ಅವರು ಸ್ಪಷ್ಟ ಪಡಿಸಿದರು.
Tagged with
santhoshhegde,
snews,
yeddi
ಮದುವೆಗೆ ಕೆಲವೇ ಗಂಟೆ ಮೊದಲು ಮಸಣ ಸೇರಿದ ಮದುಮಗ!
ಕುಶಾಲನಗರ: ನೀರಿನಲ್ಲಿ ಮುಳುಗುತ್ತಿದ್ದ ತಾಯಿ-ಮಗುವನ್ನು ರಕ್ಷಿಸಲು ಹೋದ ಮದುಮಗ ಮದುವೆಗೆ ಕೆಲವೇ ಗಂಟೆಗಳ ಮೊದಲು ನೀರಿನಲ್ಲಿ ಮುಳುಗಿ ಮೃತಪಟ್ಟ ಅತ್ಯಂತ ಹೃದಯವಿದ್ರಾವಕ ಘಟನೆ ಇಲ್ಲಿನ ಕಣಿವೆ ಗ್ರಾಮದಲ್ಲಿ ನಡೆದಿದ್ದು, ಮದುವೆ ಮನೆ ಶೋಕ ಸಾಗರದಲ್ಲಿ ಮುಳುಗಿದೆ.
ಇಪ್ಪತ್ತೇಳು ವರ್ಷದ ಶಿವಣ್ಣನಿಗೆ ನಿನ್ನೆ ಮದುವೆಯ ದಿನ. ಆದರೆ ಮದುವೆ ಶಾಸ್ತ್ರಗಳನ್ನು ಪೂರೈಸುತ್ತಾ ಹಸೆಮಣೆ ಯೇರಬೇಕಿದ್ದ ಮದುಮಗ ಕಾವೇರಿ ನದಿಯ ಪಾಲಾದ ದುರ್ಘಟನೆ ನಡೆದಿದೆ. ಈ ಆಕಸ್ಮಿಕದಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಶಿವಣ್ಣ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ನಿವಾಸಿ. ಘಟನೆಯಲ್ಲಿ ಶಿವಣ್ಣ, ಆತನ ತಾಯಿ ನಿರ್ಮಲ (೪೫), ಸೋದರ ಸಂಬಂಧಿ ಗೌರಿ (೩೫) ಹಾಗೂ ನಿರ್ಮಲ ಅವರ ಮಗಳು ಗೌರಿ (೮) ಮೃತಪಟ್ಟಿದ್ದಾರೆ. ಕೊಪ್ಪದ ಶಿವಣ್ಣ ವಿವಾಹವು ಬೆಟ್ಟಂಗಳದ ಬಾಣವಾರ ನಿವಾಸಿ ಲಕ್ಷ್ಮೀ ಎಂಬವರೊಂದಿಗೆ ಕಣಿವೆಯ ರಾಮಲಿಂಗೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿತ್ತು. ಅದಕ್ಕಾಗಿ ವರನ ಕಡೆಯವರು ಗುರುವಾರ ಸಂಜೆ ಕಲ್ಯಾಣ ಮಂಟಪಕ್ಕೆ ಆಗಮಿಸಿ ಅಲ್ಲಿ ತಂಗಿದ್ದರು. ಶುಕ್ರವಾರ ವರ ಶಿವಣ್ಣನ ಸೋದರ ಸಂಬಂಧಿಯೊಬ್ಬರ ಮಗಳು ಗೌರಿ ಪಕ್ಕದಲ್ಲೇ ಹರಿಯುವ ಕಾವೇರಿ ನದಿಯ ಆಚೆ ದಡಕ್ಕೆ ತೂಗು ಸೇತುವೆಯ ಮೂಲಕ ಹೋಗಿದ್ದು, ಅಲ್ಲಿ ನದಿಗಿಳಿದು ಕೈಕಾಲುಗಳನ್ನು ತೊಳೆಯುತ್ತಿದ್ದಳು ಎನ್ನಲಾಗಿದೆ.
ಬಂಡೆಕಲ್ಲಿನ ಮೇಲೆ ಕುಳಿತಿದ್ದ ಬಾಲಕಿ ಜಾರಿ ನದಿಗೆ ಬಿದ್ದಿದ್ದು, ನದಿಯಲ್ಲಿ ಮುಳುಗಿದಳೆನ್ನಲಾಗಿದೆ. ಇದನ್ನು ಕಂಡ ಆಕೆಯ ತಾಯಿ (ಗೌರಿ) ಕೂಡಾ ನದಿಗೆ ಹಾರಿದ್ದು, ಆಕೆಯೂ ನೀರಿನಲ್ಲಿ ಮುಳುಗಿದ್ದಾರೆ. ಇವರನ್ನು ರಕ್ಷಿಸಲು ವರನ ತಾಯಿ ನಿರ್ಮಲ ಧಾವಿಸಿದ್ದು, ಅಷ್ಟರಲ್ಲಿ ವರ ಕೂಡಾ ಇವರ ರಕ್ಷಣೆಗಾಗಿ ನದಿಗೆ ಹಾರಿದ್ದಾರೆ. ಆದರೆ, ಇವೆರಲ್ಲರೂ ನದಿ ನೀರಿನಲ್ಲಿ ಮುಳುಗಿದ್ದಾರೆ. ನಾಲ್ವರ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ. ಸ್ಥಳಕ್ಕೆ ಕುಶಾಲನಗರ ಎಸ್‌ಐ ಚಿಕ್ಕಯ್ಯ, ಸೋಮವಾರಪೇಟೆ ತಹಶೀಲ್ದಾರ ಭಾಸ್ಕರ ಹಾಗೂ ಶಾಸಕ ಅಪ್ಪಚ್ಚುರಂಜನ ಭೇಟಿ ನೀಡಿದ್ದಾರೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews,
feature
ಮಂಗಳೂರು: ನಕ್ಸಲ್ ಜತೆ ಸಂಪರ್ಕದ ಆರೋಪ ಹೊರಿಸಿ ಮಲೆಕುಡಿಯ ಸಮುದಾಯದ ವಿಠಲ ಮತ್ತು ಆತನ ತಂದೆ ಲಿಂಗಪ್ಪ ಅವ ರನ್ನು ಬಂಧಿಸಿರುವ ರಾಜ್ಯ ಸರಕಾರ ನಾಶವಾಗಿ ಹೋಗಲಿ ಎಂದು ಸಿಪಿಐ ಮುಖಂಡ ಪಿ.ಸಂಜೀವ ಅವರು ಹಿಡಿಶಾಪ ಹಾಕಿದ್ದಾರೆ.
ಸಿಪಿಐ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಜಾರ್ಖಂಡ್, ಚತ್ತೀಸ್‌ಗಡ, ಬಿಹಾರ, ಒರಿಸ್ಸಾ, ಆಂಧ್ರಪ್ರದೇಶ, ಮಹಾರಾಷ್ಟ್ರದ ಅರಣ್ಯ ಪ್ರದೇಶದಲ್ಲಿ ಸಹಸ್ರಾರು ವರ್ಷಗಳಿಂದ ವಾಸಿಸು ತ್ತಿರುವ ಮೂಲವಾಸಿಗಳು, ಆದಿವಾಸಿ ಗಳು, ಬುಡಕಟ್ಟು ಜನರನ್ನು ಒಕ್ಕಲೆ ಬ್ಬಿಸಿ, ಅಲ್ಲಿರುವ ಮರಗಳನ್ನು ಕಡಿದು ಬೃಹತ್ ಉದ್ದಿಮೆಗಳನ್ನು ನಿರ್ಮಿ ಸುವ ಕೆಲಸ ಸರಕಾರದಿಂದ ನಡೆ ಯುತ್ತಾ ಬಂದಿದೆ.
ಇದೇ ರೀತಿಯ ದೌರ್ಜನ್ಯ ದ.ಕ.ಜಿಲ್ಲೆಯ ಬೆಳ್ತಂಗಡಿ ಕುತ್ಲೂರಿನಲ್ಲಿ ನಡೆಯುತ್ತಿದೆ. ಒಕ್ಕಲೆಬ್ಬಿಸುವುದನ್ನು ವಿರೋಧಿಸುವವರ ಮೇಲೆ ಆರೋಪ ಹೊರಿಸಿ ಅವರನ್ನು ಜೈಲಿಗೆ ತಳ್ಳಲಾಗು ತ್ತಿದೆ. ಇದೇ ರೀತಿಯ ಕ್ರಮವನ್ನು ಲಿಂಗಪ್ಪ ಮತ್ತು ವಿಠಲನ ವಿರುದ್ಧ ಕೈಗೊ ಳ್ಳಲಾಗಿದೆ. ಅವರ ಮೇಲೆ ಮರಣ ದಂಡನೆಗೆ ಕಾರಣವಾಗಬಲ್ಲ ದೇಶ ದ್ರೋಹದ ಆರೋಪ ಹೊರಿಸಲಾ ಗಿದೆ ಎಂದು ಸ್ವಾತಂತ್ರ್ಯ ಹೋರಾಟ ಗಾರ ಬಿ.ವಿ.ಕಕ್ಕಿಲ್ಲಾಯ ಆರೋಪಿಸಿ ದ್ದಾರೆ.
ಪ್ರತಿಭಟನೆಯಲ್ಲಿ ಬಿ.ಶೇಖರ್, ಬಿ.ಕೆ.ಕೃಷ್ಣಪ್ಪ, ಬಿ. ವಿಶ್ವನಾಥ ನಾಯಕ್, ಸುರೇಶ್ ಕುಮಾರ್, ಕರುಣಾಕರ್ ಉಪಸ್ಥಿತರಿದ್ದರು.
Tagged with
dk,
feature,
lnews
ಉಪ್ಪಿನಂಗಡಿ ಸಮುದಾಯ ಆಸ್ಪತ್ರೆ:
ಉಪ್ಪಿನಂಗಡಿ: ಜನತೆಯ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ತಾಲೂಕಿನ ಆಸ್ಪತ್ರೆಗಳಲ್ಲಿ ಉಪ್ಪಿನಂಗಡಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವಿಶಿಷ್ಟ ಸ್ಥಾನ ಪಡೆದಿದೆ. ಇದಕ್ಕೆ ಕಾರಣ ಉಪ್ಪಿನಂಗಡಿ ಹಲವಾರು ಊರುಗಳ ಕೇಂದ್ರವಾ ಗಿರುವುದು. ಪುತ್ತೂರು ತಾಲೂಕಿನಲ್ಲಿ ಈ ಕೇಂದ್ರವಿದ್ದರೂ ಬೆಳ್ತಂಗಡಿ ತಾಲೂಕಿನ ಬಹುತೇಕ ಜನತೆಯ ಆರೋಗ್ಯ ರಕ್ಷಣೆಯ ಭಾರ ಈ ಕೇಂದ್ರ ವಹಿಸುತ್ತಿದೆ. ಹಾಗಾಗಿ ಬೆಳ್ತಂಗಡಿ, ಪುತ್ತೂರು ತಾಲೂಕಿನ ಜನತೆಯಲ್ಲದೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಈ ಊರಿನ ಹಿನ್ನೆಲೆಯಲ್ಲಿ ಜನತೆಯ ಬೇಡಿಕೆಗೆ ಪೂರಕವಾಗಿ ಹಾಗೂ ಆಗಿನ ಎಂ.ಎಲ್.ಎ ಶಕುಂತಳಾ ಶೆಟ್ಟಿಯವರ ಪ್ರಯತ್ನದ ಫಲವಾಗಿ ಸರಕಾರ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿತು. ಕೇವಲ ೬ ಬೆಡ್ ಗಳ ಈ ಆರೋಗ್ಯ ಕೇಂದ್ರವನ್ನು ೩೦ಬೆಡ್‌ಗಳ ಸಮುದಾಯ ಆಸ್ಪತ್ರೆಯನ್ನಾಗಿ ಮಾಡುವ ಆದೇಶ ನೀಡಿತು. ಈ ಆದೇಶಕ್ಕೆ ಇದೀಗ ೩ ವರ್ಷ. ಆದರೆ ಈ ಆಸ್ಪತ್ರೆಯ ನಾಮ ಫಲಕ ಮತ್ತು ಮೊಹರು(ಸೀಲ್) ಮೇಲ್ದ ರ್ಜೆಗೆ ಏರಿದ್ದು ಬಿಟ್ಟರೆ ಬೇರೇನೂ ಬದಲಾವಣೆಯಾಗಿಲ್ಲ...!
ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಸ್ಥಿತಿಯಲ್ಲಿಯೇ ಇರುವ ಈ ಸಮುದಾಯ ಆಸ್ಪತ್ರೆ ವ್ಯವಸ್ಥೆಗಳಿಲ್ಲದೆ ನರಳುತ್ತಿದೆ. ಇಲ್ಲಿ ೫ ಮಂದಿ ವೈದ್ಯಾಧಿಕಾರಿಗಳು ಇರಬೇಕಾಗಿದ್ದು, ಕೇವಲ ಒಬ್ಬ ವೈದ್ಯರಿದ್ದಾರೆ. ೩ ಮಂದಿ ದಾದಿಯರು ಮಾತ್ರ ಇಲ್ಲಿದ್ದಾರೆ. ಇವರಿಗೆ ಕ್ವಾಟ್ರಸ್ ವ್ಯವಸ್ಥೆಗಳಿಲ್ಲ. ರೋಗಿಗಳಿಗೆ ಸರಿಯಾದ ಬೆಡ್‌ಗಳಿಲ್ಲ. ಡಿ ದರ್ಜೆ ನೌಕರರಿಗೂ ಇಲ್ಲಿ ತತ್ವಾರ.
ಈ ಸಮುದಾಯ ಆಸ್ಪತ್ರೆಯಲ್ಲಿ ಸೌಲಭ್ಯಕ್ಕೆ ಕೊರತೆ ಇದ್ದರೂ ಇಲ್ಲಿಗೆ ಬರುವ ರೋಗಿಗಳಿಗೆ ಕೊರತೆಯಿಲ್ಲ. ಪ್ರಸ್ತುತ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ವೈದ್ಯೆ ಡಾ.ಶಶಿಕಲಾ ಇಲ್ಲಿಗೆ ಬರುವ ರೋಗಿಗಳ ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತು ಉತ್ತಮ ಹೆಸರು ಗಳಿಸಿದ್ದಾರೆ. ಬಡ ರೋಗಿಗಳಿಗೆ ಅನುಕೂಲವಾಗಿರುವ ಇಂತಹ ಸರಕಾರಿ ಆಸ್ಪತ್ರೆಗಳನ್ನು ಕೇಳುವವರಿಲ್ಲ ಎಂಬುವುದಕ್ಕೆ ಈ ಸಮುದಾಯ ಆರೋಗ್ಯ ಕೇಂದ್ರ ಉತ್ತಮ ಉದಾಹರಣೆ. ಮೇಲ್ದರ್ಜೆ ಆದೇಶಕ್ಕೆ ೩ ವರ್ಷಗಳಾದರೂ ಇದುವರೆಗೆ ಯಾವುದೇ ಸೌಲಭ್ಯಗಳು ಇಲ್ಲಿಗೆ ಬಂದಿಲ್ಲ. ಈ ಬಗ್ಗೆ ಇಲ್ಲಿನ ಶಾಸಕಿಯಾಗಲೀ, ಜನಪ್ರತಿನಿಧಿ ಗಳಾಗಲೀ ಮೌನ ಮುರಿಯುತ್ತಿಲ್ಲ. ಪುತ್ತೂರಿನ ಡಿ.ವಿ. ಸದಾನಂದ ಗೌಡ ಈಗ ರಾಜ್ಯದ ಮುಖ್ಯಮಂತ್ರಿಯಾ ಗಿದ್ದರೂ ಈ ಸಮುದಾಯ ಆಸ್ಪತ್ರೆಗೆ ಶುಕ್ರದೆಸೆ ಉಂಟಾಗಿಲ್ಲ ಎಂಬುವುದು ಜನಪ್ರತಿನಿಧಿಗಳು ಬಡಜನತೆಯ ಆರೋಗ್ಯದ ಬಗ್ಗೆ ಎಷ್ಟು ನಿಗಾ ವಹಿಸು ತ್ತಾರೆ ಎನ್ನುವುದಕ್ಕೆ ಉದಾಹರಣೆ ಯಾಗಿದೆ.
Tagged with
dk,
feature,
lnews
ಮಂಗಳೂರು: ನ್ಯಾಷನಲ್ ವಿಮೆನ್ಸ್ ಫ್ರಂಟ್ ಆಫ್ ಇಂಡಿಯಾ ಇದರ ವತಿಯಿಂದ ಹಮ್ಮಿಕೊಳ್ಳಲಾಗಿ ರುವ ವರದಕ್ಷಿಣೆ ವಿರೋಧಿ ಸಮಾವೇಶ ಇದೇ ತಿಂಗಳ ೨೧ರಂದು ಮಂಗಳೂ ರಿನ ಪುರಭವನದಲ್ಲಿ ನಡೆಯಲಿದೆ.
ನಿನ್ನೆ ನಗರದಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಸಂಘಟ ನೆಯ ರಾಜ್ಯಾಧ್ಯಕ್ಷೆ ಶಾಹಿದಾ, ಇಂದು ವರದಕ್ಷಿಣೆ ಎಂಬುದು ಸಮಾಜದಲ್ಲಿ ಮಾರಕವಾದ ಪಿಡುಗು ಆಗಿ ಕಾಡುತ್ತಿದೆ. ಇದು ಮಹಿಳಾ ಸಬಲೀಕರಣಕ್ಕೆ ಅಡ್ಡಿ ಯಾಗುತ್ತಿದೆ. ವರದಕ್ಷಿಣೆ ನಿರ್ಮೂಲನೆ ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನಿರಂತರ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದೆ ಎಂದು ತಿಳಿಸಿದರು.
ಮೇ ೧೫ರಂದು ಮೈಸೂರಿನಲ್ಲಿ ಅಭಿಯಾನವನ್ನು ಉದ್ಘಾಟಿಸಲಾಗಿದ್ದು ೨೦ರಷ್ಟು ಜಿಲ್ಲಾ ಸಮಾವೇಶಗಳನ್ನು ನಡೆಸಲಾಗಿದೆ. ನೂರಕ್ಕೂ ಹೆಚ್ಚು ಗ್ರಾಮೀಣ ಮಟ್ಟದ ಜಾಗೃತಿ ಕಾರ್ಯ ಕ್ರಮ, ಸಾಂತ್ವನ ಎನ್ನುವ ಹೆಸರಿನ ಸಿಡಿ ಬಿಡುಗಡೆ, ಶಾಂತಿಗಾಗಿ ವಿವಾಹ ಎನ್ನುವ ಪುಸ್ತಕ ಬಿಡುಗಡೆ, ಸಾಂಸ್ಕ್ರತಿಕ ಕಾರ್ಯಕ್ರಮ, ರ‍್ಯಾಲಿಗಳನ್ನು ನಡೆಸಲಾಗಿದೆ.
ಇದೇ ಸೋಮವಾರ ಮಂಗಳೂರು ಪುರಭವನದಲ್ಲಿ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಉಪಾಧ್ಯಕ್ಷೆ ಎ.ಎಸ್. ಝೈನಬ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಮಹಿಳೆ-ವರದಕ್ಷಿಣೆ-ಸಬಲೀಕರಣ ಎಂಬ ವಿಚಾರದಲ್ಲಿ ಚಾವಡಿ ಚರ್ಚೆ ಯೂ ನಡೆಯಲಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಅಧ್ಯಕ್ಷೆ ಶಾಹಿದಾ ತಸ್ನೀಮ್ ವಹಿಸಲಿದ್ದಾರೆ.
ಮೇಯರ್ ಗುಲ್ಜಾರ್ ಬಾನು, ಅತ್ರಾಡಿ ಅಮೃತ, ಎನ್‌ಡಬ್ಲ್ಯುಎಫ್ ರಾಷ್ಟ್ರೀಯ ಸದಸ್ಯೆ ಕವಿತಾ, ಶಿಕ್ಷಣ ಸಂಪನ್ಮೂಲ ಒಕ್ಕೂಟದ ಅಧ್ಯಕ್ಷೆ ಕಮಲಾ ಗೌಡ, ನ್ಯಾಯವಾದಿ ನುಶ್ರತ್ ಜಹಾನ್ ಖಾಸಿಂಜಿ, ಎಸ್.ಐ.ಭಾರತಿ, ಕೃಷ್ಣಾಪುರ ಅಲ್ ಬದ್ರಿಯಾ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶು ಪಾಲೆ ಝೊಹರಾ ಅಬ್ಬಾಸ್ ಭಾಗವಹಿ ಸಲಿದ್ದಾರೆ ಎಂದು ಅವರು ಕಾರ್ಯ ಕ್ರಮದ ವಿವರ ನೀಡಿದರು. ಪತ್ರಿಕಾ ಗೋಷ್ಟಿಯಲ್ಲಿ ಸಯೀದ ಯೂಸುಫ್, ಮೈಮುನಾ ಇಸ್ಮಾಯಿಲ್ ಮತ್ತು ಸಮೀನಾ ಮಲಾರ್ ಉಪ ಸ್ಥಿತರಿದ್ದರು.
Tagged with
dk,
feature,
lnews
ಸಂಕೇತ್ ನಾಯಕ್, ಕಂಕನಾಡಿ
ನಾನು ಜಯಕಿರಣ ಪತ್ರಿಕೆಯ ನಿತ್ಯ ಓದುಗನಾಗಿದ್ದು. ಇತರೆ ಪತ್ರಿಕೆಗಳನ್ನೂ ಓದುವ ಹವ್ಯಾಸ ಇಟ್ಟುಕೊಂಡಿದ್ದೇನೆ. ಅಲ್ಲದೇ ಜಯಕಿರಣ ಪತ್ರಿಕೆಯ ಒಬ್ಬ ಅಭಿಮಾನಿ ಬರಹಗಾ ರನೂ ಆಗಿದ್ದೇನೆ. ಈಗಾಗಲೇ ನನ್ನ ಅನೇಕ ಪತ್ರಗಳು ಪತ್ರಿಕೆ ಯಲ್ಲಿ ಪ್ರಕಟಗೊಂಡಿವೆ. ಜಯಕಿರಣವನ್ನು ಬಿಟ್ಟು ನಾನು ಬೇರೆ ಯಾವ ಪತ್ರಿಕೆಗೂ ಬರೆಯುತ್ತಿಲ್ಲ. ಆದರೆ ಕೆಲ ದಿನಗಳ ಹಿಂದೆ ಜಯಕಿರಣದಲ್ಲಿ ಪ್ರಕಟಗೊಂಡಿದ್ದ ನನ್ನ ಪತ್ರವೊಂದನ್ನು ‘ಕರಾ ವಳಿಯ ಮತ್ತೊಂದು ಪತ್ರಿಕೆಯವರು ಯಥಾವತ್ತಾಗಿ ನಕಲು ಮಾಡಿ ಪ್ರಕಟಿಸಿದ್ದರು. ಆದರೆ ಹೆಸರು ಮಾತ್ರ ಬದಲಾವಣೆ ಯಾಗಿತ್ತು. ಈ ವೇಳೆ ನಾನು ಆ ಪತ್ರಿಕೆಯ ಕಚೇರಿಗೆ ಕರೆ ಮಾಡಿ ನಿಮಗೆ ಆ ಪತ್ರ ಎಲ್ಲಿಂದ ಬಂತು ಎಂದು ಕೇಳಿದ್ದೆ, ಅಲ್ಲದೇ ನಾಳೆ ನಿಮ್ಮ ಕಚೇರಿಗೆ ಬಂದರೆ ಆ ಪತ್ರದ ಪ್ರತಿ ಸಿಗ ಬಹುದೇ ಎಂದು ಕೇಳಿದ್ದಕ್ಕೆ ಆಲ್ಲಿನ ಸಿಬ್ಬಂದಿಯಲ್ಲಿ ಉತ್ತರವೇ ಇರಲಿಲ್ಲ. ಅಂದು ಫೋನ್ ಎತ್ತಿದ ಮಹಾಶಯನಿಗೆ ಸರಿಯಾಗಿ ಉಗಿದು ಫೋನ್ ಇಟ್ಟಿದ್ದೆ. ಆಗಲೇ ಈ ಪತ್ರಿಕೆಯ ನಕಲು ಶೂರತ್ವ ನನ್ನ ಅರಿವಿಗೆ ಬಂದಿತ್ತು.
ಇತ್ತೀಚೆಗೆ ಇಂಥದ್ದೇ ಮತ್ತೊಂದು ನಕಲು ನನಗೆ ಈ ಪತ್ರಿಕೆಯಲ್ಲಿ ಕಂಡು ಬಂತು. ಖ್ಯಾತ ನಾಟಕ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್‌ರ ಸಂದರ್ಶನವನ್ನು ಈ ‘ಕರಾ ವಳಿಯ ಪತ್ರಿಕೆ ತನ್ನ ಮೇ ೧೪ರ ಸಂಚಿಕೆಯಲ್ಲಿ ಪ್ರಕಟಿಸಿತ್ತು. ಅದು ಕೂಡ ಎರಡನೇ ಪುಟದಲ್ಲಿ! ಮೇಲ್ನೋಟಕ್ಕೆ ತನ್ನ ಪತ್ರಿ ಕೆಯೇ ಸಂದರ್ಶನ ಮಾಡಿತ್ತು ಎಂದು ಓದುಗ ತಿಳಿಯಬೇಕು ಎನ್ನುವಂತಿತ್ತು ಆ ಬರಹ. ಆದರೆ ಇತರೆ ಪತ್ರಿಕೆಗಳನ್ನು ಓದುವ ನಾನು ಮೇ ೧೩ರ ‘ಸಂಡೆ ಇಂಡಿಯನ್ ಎಂಬ ಪತ್ರಿಕೆಯಲ್ಲಿ ಈ ಮೊದಲೇ ಈ ಸಂದರ್ಶನವನ್ನು ಓದಿದ್ದೆ. ‘ಸಂಡೆ ಇಂಡಿ ಯನ್ ಪತ್ರಿಕೆಯ ತುಳು ಸಿನಿಮಾ ಲೋಕದ ಮುಂಗಾರು ಎಂಬ ಲೇಖನದಲ್ಲಿ ‘ಸಂಡೆ ಇಂಡಿಯನ್ ಪತ್ರಿಕೆಯ ಎನ್.ಕೆ ಸುಪ್ರಭಾ ಎಂಬವರು ಪ್ರಸಿದ್ದ ತುಳು ನಿರ್ದೇಶಕರ ಸಂದರ್ಶನ ನಡೆಸಿ ದ್ದರು. ಅದರಲ್ಲಿ ‘ಆಮೇಟ್ ಅಸಲ್, ಈಮೇಟ್ ಕುಸಲ್ ಚಿತ್ರದ ನಿರ್ದೇಶಕ ರಂಜನ್ ರಾಘು ಶೆಟ್ಟಿ, ಬಂಗಾರ‍್ದ ಕುರಲ್ ಖ್ಯಾತಿಯ ರಾಮ್ ಶೆಟ್ಟಿ ಮತ್ತು ಒರಿಯರ್ದೊರಿ ಅಸಲ್ ಖ್ಯಾತಿಯ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್‌ರ ಸಂದರ್ಶನ ಪ್ರಕಟಗೊಂಡಿತ್ತು. ಅದರಲ್ಲಿದ್ದ ಕೊಡಿಯಾಲ್‌ಬೈಲ್‌ರವರ ಸಂದರ್ಶನವನ್ನು ಮಾತ್ರ ಈ ಕರಾವಳಿ ಪತ್ರಿಕೆ ಯಥಾವತ್ತಾಗಿ ನಕಲು ಮಾಡಿ ಪ್ರಕಟಿಸಿ, ತನ್ನದೇ ಸಂದರ್ಶನ ಎಂದು ಬೀಗಿದೆ ಎನ್ನುವುದು ಮೇ ೧೩ರ ಸಂಡೇ ಇಂಡಿಯನ್ ಪತ್ರಿಕೆ ನೋಡಿದರೆ ಸ್ಪಷ್ಟವಾಗುತ್ತದೆ.
ಇಲ್ಲಿ ಮೂವರು ನಿರ್ದೇಶಕರ ಸಂದರ್ಶನವಿದ್ದರೂ ಕೊಡಿ ಯಾಲ್ ಬೈಲ್‌ರ ಸಂದರ್ಶನವನ್ನೇ ಆರಿಸಲು ಈ ಪತ್ರಿಕೆಗೆ ಮಹತ್ವದ ಇನ್ನೊಂದು ಕಾರಣ ಹೀಗಿರಬಹುದೇ? ಈ ಹಿಂದೆ ಜಯಕಿರಣ ಪತ್ರಿಕೆಯಲ್ಲ್ಲಿ ನಿರ್ದೇಶಕ ವಿಜಯ್‌ಕುಮಾರ್ ಕೊಡಿ ಯಾಲ್‌ಬೈಲ್ ಕರಾವಳಿ ಪತ್ರಿಕೆಯ ವಿರುದ್ದ ಹರಿಹಾಯ್ದಿದ್ದ ವರದಿ ಪ್ರಕಟಗೊಂಡಿತ್ತು. ‘ಕರಾವಳಿ ಕುಲೆ ಎಂಬ ನಾಟಕ ನಿರ್ದೇಶಿಸು ವುದಾಗಿ ಇದೇ ವೇಳೆ ಕೊಡಿಯಾಲ್‌ಬೈಲ್ ಹೇಳಿದ್ದರು. ಇದ ರಿಂದ ಓದುಗರಿಗೆ ಈ ಪತ್ರಿಕೆಗೂ ಕೊಡಿಯಾಲ್ ಬೈಲ್‌ರಿಗೂ ಇರುವ ಸಂಬಂಧದ ಬಗ್ಗೆ ಅರಿವಾಗಿರಬಹುದು. ಈ ಹಿನ್ನೆಲೆಯಲ್ಲಿ ನಮ್ಮಿಬ್ಬರ ನಡುವೆ ಏನೂ ಆಗಿಲ್ಲ ಎಂದು ತೋರಿಸುವ ಉದ್ದೇಶ ದಿಂದಲೇ ಈ ‘ಕರಾವಳಿಯ ಪತ್ರಿಕೆ ‘ಸಂಡೆ ಇಂಡಿಯನ್ ಸಂದರ್ಶನವನ್ನು ನಕಲಿ ಮಾಡಿ ಪ್ರಕಟಿಸಿರಬಹುದು. ಹೀಗೆ ಸಂದರ್ಶನವನ್ನು ಪ್ರಕಟಿಸಿದರೆ ಕೊಡಿಯಾಲ್ ಬೈಲ್ ‘ಕರಾವಳಿ ಪತ್ರಿಕೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ, ಯಾವುದೇ ರೀತಿಯ ಮನಸ್ತಾಪಗಳು ಇಲ್ಲ ಎನ್ನುವುದನ್ನು ಓದುಗರ ಮನಸ್ಸಿ ನಲ್ಲಿ ಹುಟ್ಟು ಹಾಕುವ ಉದ್ದೇಶ ಅಡಗಿರಬಹುದು.
ಆದರೆ ‘ಕರಾವಳಿ’ ಪತ್ರಿಕೆ ಓದುಗರನ್ನು ದಡ್ಡರು ಅಂದು ಕೊಳ್ಳುವುದನ್ನು ಬಿಟ್ಟು ಬಿಡಲಿ. ಯಾಕೆಂದರೆ ಓದುಗರು ಎಂದ ಮೇಲೆ ಬಹುತೇಕ ಎಲ್ಲಾ ಪತ್ರಿಕೆಗಳನ್ನು ಓದುತ್ತಾರೆ. ಇನ್ನೊಂ ದರಿಂದ ಕದ್ದು ತನ್ನದೇ ಎಂದು ಪ್ರಕಟಿಸುವ ಮುನ್ನ ಕರಾವಳಿ ಪತ್ರಿಕೆ ಈ ಬಗ್ಗೆ ಆತ್ಮಾವಲೋಕನ ನಡೆಸಲಿ. ಉತ್ತಮ ಲೇಖನ ವನ್ನು ಕದ್ದು ಪ್ರಕಟಿಸುವುದು ತಪ್ಪೆಂದು ನಾನು ಹೇಳುತ್ತಿಲ್ಲ. ಆದರೆ ಪ್ರಕಟಿಸುವ ವೇಳೆ ಮೂಲ ಲೇಖಕರಿಗೆ, ಮೂಲ ಪತ್ರಿ ಕೆಗೆ ಧಕ್ಕೆಯಾಗದಿರಲಿ. ಸಂದರ್ಶನವನ್ನು ನಕಲು ಮಾಡುವ ವೇಳೆ ‘ಸಂಡೆ ಇಂಡಿಯನ್ ಕೃಪೆ ಎಂದು ಬರೆಯುವ ಕನಿಷ್ಟ ಜ್ಞಾನವೂ ಈ ಪತ್ರಿಕೆಯವರಿಗೆ ಇಲ್ಲದೇ ಇರುವುದು ವಿಪರ್ಯಾಸ. ಇಷ್ಟೇ ಅಲ್ಲದೇ ಮೇ ೧೬ರ ಸಂಚಿಕೆಯಲ್ಲಿ ಅಂದರೆ ಮರುದಿನವೇ ‘ಸ್ಪಂದನ’ ವಿಭಾಗದಲ್ಲಿ ಮತ್ತೆ ಕೊಡಿಯಾಲ್‌ಬೈಲ್‌ರನ್ನು ಹೊಗಳಿ ಪತ್ರವೊಂದು ಪ್ರಕಟಗೊಂಡಿತ್ತು. ಈ ಪತ್ರದಲ್ಲಿ ಕರಾವಳಿಯಲ್ಲಿ ಪ್ರಕಟಗೊಂಡ ‘ವಿಶೇಷ ಸಂದರ್ಶನ’ವನ್ನು ಹೊಗಳಿ ಬರೆಯ ಲಾಗಿತ್ತು. ಈ ರೀತಿ ಕೊಡಿಯಾಲ್‌ಬೈಲ್‌ರನ್ನು ಹೊಗಳಿದರೆ ‘ಕರಾವಳಿ ಕುಲೆ’ ನಾಟಕ ನಿರ್ದೇಶನವನ್ನು ವಿಜಯ್ ಕುಮಾರ್ ಕೈ ಬಿಡಬಹುದು ಎಂಬ ಊಹೆಯೂ ಈ ಪತ್ರಿಕೆಯವರಿಗೆ ಇದ್ದಂತೆ ತೋರುತ್ತದೆ. ಕದ್ದ ಮಾಲುಗಳಲ್ಲೇ ಪತ್ರಿಕೆಯ ಪುಟ ತುಂಬಿಸುವ ಈ ಪತ್ರಿಕೆಯಿಂದ ಇತರೆ ಪತ್ರಿಕೆಗಳಿಗೂ ಕೆಟ್ಟ ಹೆಸರು. ಏನೇ ಆದರೂ ಈ ರೀತಿಯ ‘ನಕಲು’ ಪತ್ರಿಕೆಗೆ ಒಳ್ಳೆ ಯದಲ್ಲ. ಓದುಗರೂ ಇದನ್ನು ಗಮನಿಸುತ್ತಾರೆ ಎನ್ನುವುದನ್ನು ಪತ್ರಿಕೆಯವರು ಅರಿತು ಕೊಳ್ಳಲಿ. ಈ ಹಿಂದೆ ನನಗಾದ ಸ್ವಂತ ಅನುಭವದಿಂದ ಈ ಪತ್ರ ಬರೆಯುತ್ತಿದ್ದೇನೆ. ಪತ್ರದ ಜೊತೆಗೆ ‘ಸಂಡೇ ಇಂಡಿಯನ್ ಪತ್ರಿಕೆಯನ್ನೂ ಕಳಿಸಿಕೊಟ್ಟಿದ್ದೇನೆ. ಓದುಗರು ಗಮನಿಸಲಿ. ಪತ್ರಿಕೋದ್ಯಮದಲ್ಲಿ ಆರೋಗ್ಯಕರ ಸ್ಪರ್ಧೆ ಯಿರಲಿ ಎನ್ನುವುದಷ್ಟೇ ನನ್ನ ಕಾಳಜಿ.
Tagged with
bahiranga
ಇನ್ನೇನು ಕೆಲವೇ ದಿನಗಳಲ್ಲಿ ಮಾವಿನ ಹಣ್ಣಿನ ಅಬ್ಬರ ಆರಂಭ ವಾಗಲಿದೆ. ಈಗಾಗಲೇ ಮಾರುಕಟ್ಟೆಗೆ ಮಾವು ಪ್ರವೇಶಿಸಿದ್ದು, ಬೆಲೆ ವಿಪರೀತ ಹೆಚ್ಚಾಗಿದೆ. ಇದನ್ನೇ ಬಂಡವಾಳವಾ ಗಿಸಿ ಕೆಲವರು ಇನ್ನೂ ಹಣ್ಣಾಗದ ಮಾವಿನ ಕಾಯಿಗಳನ್ನು ಕೊಯ್ದು ಕೆಮಿಕಲ್ ಹಾಕಿ ಹಣ್ಣಾಗಿಸುತ್ತಾರೆ. ಮಾವಿನ ಕಾಯಿಯನ್ನು ಹಣ್ಣಾಗಿಸಲು ಕಾರ್ಬೈಟ್ ಎಂಬ ಕೆಮಿಕಲ್ ಬಳಸ ಲಾಗುತ್ತದೆ. ಇದು ಅತ್ಯಂತ ವಿಷಕಾರಿ ರಾಸಾಯನಿಕವಾಗಿದ್ದು, ವೆಲ್ಡಿಂಗ್ ಕೆಲಸಗಳಲ್ಲಿ ಬಳಸಲಾಗುತ್ತದೆ. ಮಾವಿನ ಕಾಯಿಗಳನ್ನು ಕೊಯ್ದು ಬಹಳ ಬೇಗನೇ ಹಣ್ಣಾಗಿಸಲು ಈ ವಿಷಕಾರಕವನ್ನು ಬಳಸುವುದು ಸರಿ ಯಲ್ಲ. ಕಳೆದ ಹಲವು ವರ್ಷಗಳಿಂದ ಈ ರೀತಿಯ ವಿಷಕಾರಿ ವಸ್ತುವನ್ನು ಮಾವಿನ ಕಾಯಿಯನ್ನು ಹಣ್ಣಾಗಿಸಲು ಬಳಸುತ್ತಾರೆ. ಇನ್ನಾದರೂ ಸಂಬಂಧ ಪಟ್ಟವರು ಇಂಥವರ ವಿರುದ್ದ ಕ್ರಮ ಕೈಗೊಂಡು ಸಾರ್ವಜನಿಕರ ಆರೋಗ್ಯ ಕಾಪಾಡಲಿ.
ಸಾದಿಕ್, ವಿಟ್ಲ
ದುಬಾರಿ ಶುಲ್ಕ ಪಡೆವ ಶಿಕ್ಷಣ ಸಂಸ್ಥೆಗಳು
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡು ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದ ಕಡೆಗೆ ಮುಖ ಮಾಡುತ್ತಾರೆ. ಈ ವೇಳೆ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಆರಿಸು ವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ. ಆದರೆ ಇದನ್ನೇ ಬಂಡವಾಳವನ್ನಾಗಿಸಿ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆತ್ತವರು ಮತ್ತು ಪೋಷಕರಿಂದ ವಸೂ ಲಿಗೆ ನಿಲ್ಲುತ್ತವೆ.
ಶಿಕ್ಷಣದಲ್ಲೂ ತಮ್ಮದೇ ಆದ ಟ್ರೇಡ್ ಮಾರ್ಕ್ ರೂಪಿಸಿಕೊಂಡು ‘ನಮ್ಮಲ್ಲಿ ಆ ರೀತಿ ಶಿಕ್ಷಣ ದೊರೆ ಯುತ್ತದೆ, ಈ ರೀತಿ ಶಿಕ್ಷಣ ಸಿಗುತ್ತದೆ ಎಂದು ನಂಬಿಸಿ ದುಬಾರಿ ಶುಲ್ಕ ವಸೂಲಿ ಮಾಡುತ್ತವೆ. ಎಲ್‌ಕೆಜಿ ಮಕ್ಕಳಿಗೂ ೨೦ರಿಂದ ೨೫ ಸಾವಿರ ರೂಪಾಯಿ ಶುಲ್ಕ ಪಡೆಯುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮಂಗಳೂರಿನ ಆಸುಪಾಸಿನಲ್ಲಿವೆ. ದೇವರ, ಧರ್ಮದ ಹೆಸರಿನಲ್ಲಿ ಹಗಲು ದರೋಡೆಗೆ ಇಳಿ ಯುವ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯ ಸ್ಥರು ಸಮಾಜದ ಪ್ರತಿಷ್ಠಿತ ವ್ಯಕ್ತಿಗಳೇ ಆಗಿರುತ್ತಾರೆ ಎನ್ನುವುದು ವಿಪರ್ಯಾಸ. ವೇದಿಕೆಗಳಲ್ಲಿ ಸಾಮಾ ಜಿಕ ಕಳಕಳಿಯ ಬಗ್ಗೆ ಗಂಟೆಗಟ್ಟಲೇ ಭಾಷಣ ಬಿಗಿ ಯುವ ಇವರುಗಳು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಮಾಡುವುದು ಮಾತ್ರ ಹಗಲು ದರೋಡೆ. ಅಪ್ಪಿತಪ್ಪಿ ಒಬ್ಬನೇ ಒಬ್ಬ ವಿದ್ಯಾರ್ಥಿಗೆ ಉಚಿತ ಶಿಕ್ಷಣ ನೀಡು ವಷ್ಟು ಮಾನವೀಯತೆ ಕೂಡ ಇವರಿಗಿರುವುದಿಲ್ಲ. ಒಬ್ಬ ವ್ಯಕ್ತಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಮುಖ್ಯವಾಗಿ ಬೇಕಾಗಿರುವುದು ಬುದ್ಧಿವಂತಿಕೆಯೇ ವಿನಹ ಖಾಸಗಿ ಶಿಕ್ಷಣ ಸಂಸ್ಥೆಗಳು ಹೇಳಿಕೊಳ್ಳುವ ‘ಟ್ರೇಡ್‌ಮಾರ್ಕ್ ಶಿಕ್ಷಣವಲ್ಲ. ಇಂದಿಗೂ ರ‍್ಯಾಂಕ್ ಪಡೆಯುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಮತ್ತು ಕಡಿಮೆ ಶುಲ್ಕ ಪಡೆಯುವ ಶಿಕ್ಷಣ ಸಂಸ್ಥೆ ಗಳಿಂದಲೇ ಬಂದವರು ಎನ್ನುವುದು ನೆನಪಿರಲಿ. ಇನ್ನಾದರೂ ದುಬಾರಿ ಶುಲ್ಕ ತೆರುವ ಮುನ್ನ ಯೋಚಿಸಿ.
ವಿನ್ಯಾಸ್. ಆರ್.ಶೆಟ್ಟಿ, ಜೆಪ್ಪು
ವಿವಾಹ ಮಹೋತ್ಸವ ಅದ್ಧೂರಿತನ ಬೇಕೆ?
ಹಿಂದೆ ವಿವಾಹ ಸಮಾರಂಭ ವನ್ನು ಭಾರೀ ಗೌಜಿಯಿಂದ ನಡೆಸು ತ್ತಿದ್ದರು. ಹಣವಿದ್ದವರು ಸಹಜವಾ ಗಿಯೇ ಆಡಂಬರ ಪ್ರದರ್ಶಿಸಿದರೆ ಹಣವಿಲ್ಲದವರು ಸಾಲ ಮಾಡಿಯಾ ದರೂ ಅದ್ಧೂರಿಯಾಗಿ ವಿವಾಹ ಸಮಾರಂಭ ಏರ್ಪಡಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮದುವೆ ಕಾರ್ಯಕ್ರ ಮಕ್ಕಿಂತ ಅದ್ಧೂರಿಯಾಗಿ ವಿವಾಹದ ಒಂದನೇ ವರ್ಷ, ಹತ್ತನೇ ವರ್ಷ, ಇಪ್ಪತ್ತೈದನೇ ವರ್ಷಗಳ ಆಚರಣೆ ಮಾಡುವುದನ್ನು ಕಾಣುತ್ತೇವೆ. ಇದಕ್ಕಾಗಿ ಒಂದೆರಡು ಲಕ್ಷ ರೂ. ಖರ್ಚು ಮಾಡುತ್ತಿಲ್ಲ. ಬರೋಬ್ಬರಿ ಒಂದೆರಡು ಕೋಟಿ ರೂ.ಗಳನ್ನಾದರೂ ದುಂದುವೆಚ್ಚ ಮಾಡುತ್ತಾರೆ. ಅತಿಥಿಗಳಿಗೆ ಊಟ, ಭರ್ಜರಿ ಮದ್ಯ ಸೇವನೆಯ ವ್ಯವಸ್ಥೆ, ಬೆಲೆಬಾಳುವ ಆಭರಣ, ಬಟ್ಟೆಬರೆ ಎಲ್ಲದಕ್ಕೂ ಹಣ ವನ್ನು ನೀರಿನಂತೆ ವ್ಯಯಿಸುತ್ತಾರೆ. ಈ ಹಣದಲ್ಲಿ ಸಮಾ ಜದ ಬಡವರಿಗೆ ನೆರವಾಗುವುದು ಬೇಡ, ಇಂಥ ಸಮಾ ರಂಭ ಏರ್ಪಡಿಸುವವರ ಸಮಾಜ ದಲ್ಲೇ ಸಾವಿರಾರು ಮಂದಿ ನಿರ್ಗತಿ ಕರು, ಮನೆಯಿಲ್ಲದವರು, ಒಪ್ಪೊತ್ತಿನ ಊಟಕ್ಕೆ ಕಷ್ಟಪಡುವವರು ಇರುತ್ತಾರೆ. ಇವರಿಗೆ ಈ ಹಣದಲ್ಲಿ ಯೋಗ್ಯ ವ್ಯವಸ್ಥೆ ಮಾಡಿದರೆ ಸುಖೀ ಸಂಸಾ ರಕ್ಕೆ ಅವರ ಹಾರೈಕೆಯೂ ಜೊತೆಗಿ ರುತ್ತದೆ. ಆದರೆ ಸ್ವಾರ್ಥಿ ಮಾನವರು ಪರರ ಬಗ್ಗೆ. ಸಮಾಜದ ಬಗ್ಗೆ ಚಿಂತಿಸದೆ ವೈಯಕ್ತಿಕ ಹಿತವನ್ನೇ ಮುಖ್ಯ ಎಂದುಕೊ ಳ್ಳುತ್ತಾರೆ. ಹಿಂದೆ ಮದುವೆಯಾಗಿ ೫೦ ವರ್ಷವನ್ನು ಅದ್ಧೂರಿ ಯಾಗಿ ಆಚರಿಸುತ್ತಿದ್ದರೆ, ಈಗ ೨೫ ವರ್ಷಕ್ಕೆ ಭಾರೀ ಗೌಜಿಯ ಸಮಾರಂಭ ಆಯೋಜಿಸುತ್ತಾರೆ. ಇದು ಮುಂದೆ ಐದು, ಎರಡು ವರ್ಷಗಳಿಗೊಮ್ಮೆ ಆಚರಣೆಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ವೈeನಿಕ ಯುಗದಲ್ಲಿ ೫೦ ವರ್ಷ, ೨೫ ವರ್ಷ ಜೊತೆಯಾಗಿ ದಾಂಪತ್ಯ ನಡೆಸುವಷ್ಟು ವ್ಯವ ಧಾನ ಯಾರಿಗಿರುತ್ತೆ ಹೇಳಿ? ಹೀಗಾಗಿ ಇಂಥ ಆಚರಣೆ ನಡೆಯುತ್ತಿದೆಯೇ?
ಕಿರಣ್ ಶೆಟ್ಟಿ ಸಿ., ಮಂಗಳೂರು
ಕಾಮುಕರ ಸ್ವರ್ಗವಾಗುತ್ತಿರುವ ಮಲ್ಪೆ ಬೀಚ್
ಮಲ್ಪೆ ಬೀಚ್‌ನಲ್ಲಿ ಮಲೇಷ್ಯಾ ಮೂಲದ ಮಣಿ ಪಾಲ ಕಾಲೇಜ್‌ನ ವಿದ್ಯಾರ್ಥಿನಿಯನ್ನು ಸ್ಥಳೀಯ ಕಾಮು ಕರು ಅತ್ಯಾಚಾರಗೈದ ಸುದ್ದಿ ಎಲ್ಲೆಡೆ ಪ್ರಚಾರದಲ್ಲಿದೆ. ಪೊಲೀ ಸರು ರೆಡ್ ಹ್ಯಾಂಡ್ ಆಗಿ ಇಬ್ಬರು ಕಾಮು ಕರನ್ನು ಹಿಡಿದಿದ್ದರೂ ಆರೋ ಪಿಗಳು ರಾಜ ಕೀಯ ಪಕ್ಷವೊಂದರ ಕೃಪೆಯಿಂದಾಗಿ ಠಾಣೆಯಿಂದಲೇ ಹೊರ ಬಂದಿ ರುವುದು ದುರದೃಷ್ಟಕರ. ಮಲ್ಪೆ ಬೀಚ್ ನಲ್ಲಿ ವಿದೇಶಿಯರ ಅಸಭ್ಯ ಸಂಸ್ಕೃತಿಗೆ ಕಡಿವಾಣ ಹಾಕಲಾಗದ ಉಡುಪಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮತ್ತೊಮ್ಮೆ ಸಾರ್ವಜನಿಕರ ಕಣ್ಣಲ್ಲಿ ಬೆತ್ತಲಾಗಿದೆ. ವಿದೇಶಿ ಯುವ ತಿಯ ಅತ್ಯಾಚಾರ ಪ್ರಕರಣವನ್ನು ರಾಜ ಕೀಯ ಪ್ರಭಾವ ಬಳಸಿ ಮುಚ್ಚಿಹಾ ಕಲು ಪೊಲೀಸ್ ಇಲಾಖೆ ಶ್ರಮ ಪಡು ತ್ತಿರುವುದು ಸರಿಯಲ್ಲ. ಮಲ್ಪೆ ಬೀಚ್ ನಲ್ಲಿ ನವದಂಪತಿ, ಪ್ರೇಮಿಗಳಿಗೆ ಸುರಕ್ಷೆ ಎನ್ನುವುದೇ ಇಲ್ಲ. ಕಾಮುಕರು ಇಲ್ಲೇ ಕುಡಿದು ಬಹಿರಂಗ ಚುಡಾವಣೆಗೆ ಇಳಿ ಯುತ್ತಾರೆ. ಇವರಿಗೆ ಪೊಲೀಸರ ಭಯವಿಲ್ಲ. ಇನ್ನಾದರೂ ಮಲ್ಪೆ ಬೀಚ್ ನಲ್ಲಿ ಕಾಮುಕರ ಉಪಟಳ ನಿಯಂ ತ್ರಿಸಿ ಪ್ರವಾಸಿಗರಿಗೆ ರಕ್ಷಣೆ ನೀಡುವಲ್ಲಿ ಮುತುವರ್ಜಿ ವಹಿಸುವರೇ?
ರಕ್ಷಿತ್ ಕಾಮತ್, ಆದಿಉಡುಪಿ
ಕಪಟ ಪಾದ್ರಿಯನ್ನು ಓಡಿಸುವಿರಾ?
ಮಂಗಳೂರಿನ ಸಿ.ಎಸ್.ಐ ಬಿಷಪರು ಜನರು ಮೆಚ್ಚದ ಕೆಲಸವೊಂದನ್ನು ಮಾಡುತ್ತಿದ್ದಾರೆ. ಬೊಕ್ಕಪಟ್ಣ ಸಭೆಗೆ ಕಪಟ ಪಾದ್ರಿಯೊಬ್ಬರನ್ನು ನೇಮಿಸಿದ್ದಾರೆ. ಕಳೆದ ಒಂದು ವರ್ಷಗಳಿಂದೀಚೆಗೆ ಬಂದ ಪಾದ್ರಿಯ ಕಾರ್ಯವೈಖರಿ ನಿಜಕ್ಕೂ ಖಂಡನೀಯ. ಉತ್ತಮ ಆದಾಯವಿರುವ ಸಭೆಯನ್ನೇ ಆಯ್ಕೆ ಮಾಡಲು ಆಡಳಿತ ಮಂಡಳಿಯಲ್ಲಿ ಲಾಭಿ ನಡೆಸಿ ಬೊಕ್ಕಪಟ್ಣ ಚರ್ಚ್ ಪಾದ್ರಿಯಾಗಿ ಬಂದ ದಿನದಿಂದಲೂ ತನ್ನ ಸ್ವಂತ ಲಾಭದ ದೃಷ್ಟಿಯನ್ನೇ ಇಟ್ಟುಕೊಂಡು ಕೆಲಸ ಮಾಡಲು ಪ್ರಾರಂಭಿಸಿದರು. ಮನೆ ಭೇಟಿ ಭತ್ಯೆ, ಪ್ರಯಾಣ ಭತ್ಯೆ, ಪ್ರಾರ್ಥನಾ ಭತ್ಯೆ, ಮಕ್ಕಳ ಶಿಕ್ಷಣ ಎಂದೆಲ್ಲಾ ಹೇಳಿ ತಿಂಗಳಿಗೆ ೨೫ ಸಾವಿರದಿಂದ ೩೦ ಸಾವಿರದವರೆಗೆ ಬಿಲ್ಲು ಮಾಡುತ್ತಾರಂತೆ. ದೇವರ ಕಾರ್ಯಕ್ಕಾಗಿ ನಾವೆಲ್ಲರೂ ಕಾಣಿಕೆ ಹಾಕಿದರೂ ಅದನ್ನು ತಿಂದು ತೇಗುತ್ತಿರುವ ಪಾದ್ರಿಗೆ ಏನೆಂದು ಹೇಳಲಿ?
ಇಷ್ಟರವರೆಗೆ ನಮ್ಮ ಸಭೆಯವರು ಸುಮ್ಮನೆ ಇದ್ದೇವೆ. ಈಗ ಪುನಹ ಬಿಲ್ಡಿಂಗ್ ನವೀಕರಣ ಎಂದು ನೆಪವೊಡ್ಡಿ ಹಣವಂತಿಕೆ ಮಾಡಲು ಪ್ರಾರಂ ಭಿಸಿದ್ದಾರಂತೆ. ಇಲ್ಲಿಯ ಅಕ್ರಮ ಗಳಿಕೆಯನ್ನು ತನ್ನ ಸಹೋದರರಿಗೆ ವ್ಯಾಪಾರ ಉದ್ದಿಮೆ ಮಾಡಲು ಕಳುಹಿಸುತ್ತಾರೆಂಬ ಗುಮಾನಿಯೂ ಇದೆ. ಇವರಿಗೆ ಓಡಾಡಲು ಕಾರು ಬೇಕು, ಹಿಂದಿನವರು ಬಸ್ಸಿನಲ್ಲಿ, ಸ್ಕೂಟರ್‌ನಲ್ಲಿ ತಮ್ಮ ಕರ್ತವ್ಯ ಮಾಡಲಿಲ್ಲವಾ? ದೇವರ ಸೇವೆ ಮಾಡುವುದು ಈ ರೀತಿಯಾ? ಕೆಲವು ಸಭೆಗಳ ಚರ್ಚ್‌ಗಳು ಇನ್ನೂ ಹಳೇ ಮಣ್ಣಿನ ಗೋಡೆಗಳ ಕಟ್ಟಡ ವನ್ನು ಹೊಂದಿದೆ. ನಾವೆಲ್ಲರೂ ಸೇರಿ ಅದನ್ನು ಅಭಿವೃದ್ದಿ ಪಡಿಸುವ. ಅದು ಬಿಟ್ಟು ನನಗೆ ಲೂಟಿ ಹೊಡೆಯಲು ಹಣ ಬೇಕೆಂದು ೫ವರ್ಷದ ಹಿಂದಿನ ಕಟ್ಟವನ್ನು ಕೆಡವಲು ಹೊರಟಿದ್ದೀರಲ್ಲಾ? ಬಿಷಪರೇ ತಾವು ಸಭಾ ಆಡಳಿ ತಕ್ಕೆ ಹೊಸಬರು. ತಾವು ಕಾಲೇಜಿನ ಪ್ರಿನ್ಸಿಪಾಲ್ ಆಗಿ ಮಾತ್ರ ಅನುಭವ ಹೊಂದಿರುವಿರಿ. ಇನ್ನಾದರೂ ಪಾದ್ರಿಯನ್ನು ಬದಲಿಸಿ.
ಸೆಬೆಷ್ಟಿನ್ ಕುಮಾರನ್, ಬೊಕ್ಕಪಟ್ಣ
ಕನ್ನಡಕ ಬದಲಾಗಿ ಕಣ್ಣು ಕೋಸ್!
ಈ ವರ್ಷದ ಎಪ್ರಿಲ್ ತಿಂಗಳಲ್ಲಿ ಕೆ.ಎಮ್.ಸಿ ಆಸ್ಪತ್ರೆ ಹಾಗೂ ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಇವರು ಯು.ಬಿ.ಎಮ್.ಸಿ ಹಿರಿಯ ಪ್ರಾಥ ಮಿಕ ಶಾಲೆ, ಹಳೆಯಂಗಡಿಯಲ್ಲಿ ಉಚಿತ ಕಣ್ಣು ತಪಾಸಣೆ ಶಿಬಿರ ನಡೆಸಿ ದ್ದರು. ಆದರೆ ಕನ್ನಡಕವನ್ನು ಮಾತ್ರ ೨೦ ದಿನ ಬಿಟ್ಟು ಮಿಶನ್ ಕಂಪೌಂಡ್‌ನ ಕರ್ಕಡರ ಮನೆಯಲ್ಲಿಯೇ ಯಾವುದೇ ವೈದ್ಯರು ಬಾರದೇ ವಿನೂತನ ಕರ್ಕಡರೇ ನೀಡಿರುತ್ತಾರೆ. ಇದರಿಂದಾಗಿ ರೋಗಿಗಳ ಕನ್ನಡಕ ಅದಲು ಬದ ಲಾಗಿ ಹತ್ತು ರೋಗಿಗಳ ಕಣ್ಣು ‘ಕೋಸ್(ಓರೆಗಣ್ಣು) ಆಗಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ವಿಪರೀತ ಕಣ್ಣು ರೋಗ ಉಂಟಾಗಿದೆ. ಅಲ್ಲದೇ ಕರ್ಕಡರ ಕಣ್ಣು ಕೂಡಾ ಕೋಸ್ ಆಗಿದೆ. ಈ ಬಗ್ಗೆ ಸಂಬಂಧಪಟ್ಟ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಬಳಕೆದಾರರ ನ್ಯಾಯಾಲಯದಲ್ಲಿ ಪರಿಹಾರಕ್ಕಾಗಿ ಮೊರೆ ಹೋಗುತ್ತೇವೆ.
ನೊಂದ ಕಣ್ಣು ನೋವಿನ ರೋಗಿಗಳು
ಬಸ್ ಒದಗಿಸಿ
ಮೂಡಬಿದ್ರೆಯಿಂದ ಸಂಪಿಗೆ ಮಾರ್ಗವಾಗಿ ಪುತ್ತಿಗೆ ಸೋಮನಾಥೇ ಶ್ವರ ದೇವಳಕ್ಕೆ ಬೆರಳೆಣಿಕೆಯ ಬಸ್ ಗಳು ಸಂಚಾರ ನಡೆಸುತ್ತವೆ. ಇದರಿಂದ ಪರಿಸರದ ಜನರು ಮತ್ತು ದೇವಸ್ಥಾನಕ್ಕೆ ತೆರಳುವ ಭಕ್ತಾದಿಗಳಿಗೆ ಸಮಸ್ಯೆಯಾ ಗುತ್ತಿದೆ. ಬಸ್ ಹಿಡಿಯಬೇಕಾದರೆ ಒಂದೋ ಸಂಪಿಗೆ ತಲುಪಲು ಕೆಲವು ಕಿ.ಮೀ. ನಡೆಯಬೇಕು ಇಲ್ಲವೇ ರಿಕ್ಷಾ ಮಾಡಿಕೊಂಡು ಸಂಚರಿಸಬೇಕಾಗಿದೆ. ಇನ್ನಾದರೂ ಹೆಚ್ಚುವರಿ ಬಸ್ ಒದಗಿಸಿ.
ವೇಣು, ಪುತ್ತಿಗೆ
ಬರಗಾಲದ ಬಗ್ಗೆ ಚಿಂತೆಯಿಲ್ಲ!
ರಾಜ್ಯದ ಜನತೆ ಹಿಂದೆಂದೂ ಕಂಡಿರದ ಬರಗಾಲಕ್ಕೆ ಈ ಬಾರಿ ತುತ್ತಾಗಿದ್ದಾರೆ. ರಾಜ್ಯದ ನಾನಾ ಭಾಗಗಳಲ್ಲಿ ಜಾನುವಾರುಗಳು ಮೇವಿಲ್ಲದೆ ಸಾವಿಗೀಡಾಗುತ್ತಿವೆ. ಜನರು ಕುಡಿಯಲು ನೀರಿಲ್ಲದೆ ಗುಳೇ ಹೋಗುತ್ತಿ ದ್ದಾರೆ. ಬೆಳೆಸಿದ ಬೆಳೆ ಯಾವತ್ತೋ ನೆಲಕಚ್ಚಿದೆ. ಈ ಸಂದರ್ಭದಲ್ಲಿ ರಾಜ್ಯ ಸರಕಾರ, ಶಾಸಕರು ಮಾತ್ರ ಅಧಿಕಾರದ ಜಪ ಮಾಡುತ್ತಿದ್ದಾರೆ. ಬರಗಾಲ ಬಂದು ಜನರು ಏನೇ ಆದರೂ ತಾವು ಮಾತ್ರ ಕುರ್ಚಿಯಲ್ಲಿ ಮೆರೆಯ ಬೇಕು ಎಂದು ರಾಜಕಾರಣಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗಾದರೆ ರಾಜ್ಯದ ಜನರ ಪಾಡೇನು? ಪ್ರತೀ ಬಾರಿ ಬೇಸಿಗೆಯಲ್ಲೂ ರಾಜ್ಯದ ಸ್ಥಿತಿ ಇದೇ ಆಗಿರುತ್ತದೆ. ಬರಗಾಲ ಎನ್ನುವುದು ಕೇವಲ ವಾರ್ತಾ ಪತ್ರಿಕೆ, ಛಾನೆಲ್ ಗಳಲ್ಲಿ ಮಾತ್ರ ಸುದ್ದಿಯಾಗುತ್ತದೆ. ಕೇಂದ್ರದಿಂದ ಬರ ಅಧ್ಯಯನಕ್ಕೆ ಬಂದಿದ್ದ ತಂಡದ ಜೊತೆಗೂ ರಾಜ್ಯ ಸರಕಾರ ಸೂಕ್ತವಾಗಿ ಸ್ಪಂದಿಸದೇ ಇರುವುದು ನಾಚಿಕೆಗೇಡು. ಇದರಿಂದ ಸರಕಾರಕ್ಕೆ ಜನರ ಮೇಲಿರುವ ಕಾಳಜಿ ಬಯ ಲಾಗಿದೆ.
ಲೋಕೇಶ್ ಗೌಡ, ಪುತ್ತೂರು
ಪಣಂಬೂರು ಬೀಚ್ ಬಳಿ ‘ಭಿಕ್ಷುಕರ ಬಸ್‌ಸ್ಟ್ಯಾಂಡ್’
ಪಣಂಬೂರು ಬೀಚ್‌ಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸು ತ್ತಾರೆ. ವಾರದ ರಜಾದಿನಗಳಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಇನ್ನೂ ಹೆಚ್ಚು. ಈಗಂತೂ ಶಾಲೆ-ಕಾಲೇಜ್‌ಗಳ ವಾರ್ಷಿಕ ರಜಾಸಮಯವಾದ ಕಾರಣ ಬೀಚ್‌ನಲ್ಲಿ ಜನರು ತುಂಬಿ ತುಳುಕು ತ್ತಾರೆ. ಇಲ್ಲಿ ಬೀಚ್‌ಗೆ ಪ್ರವೇಶ ಪಡೆಯುವಲ್ಲಿ ರಸ್ತೆಯ ಎರಡೂ ಬದಿ ಬಸ್‌ಸ್ಟ್ಯಾಂಡ್‌ಗಳನ್ನು ಎಂದೋ ನಿರ್ಮಿ ಸಲಾಗಿದೆ. ಆದರೆ ಈ ಎರಡೂ ಬಸ್‌ಸ್ಟ್ಯಾಂಡ್‌ಗಳನ್ನು ಪ್ರಯಾಣಿಕರು ಬಳಸುವಂತಿಲ್ಲ. ಕಾರಣ ಇದರ ಮೇಲೆ ಮಂಗಳಮುಖಿಯರು, ಭಿಕ್ಷುಕರು ಆರಾಮವಾಗಿ ಮಲಗಿ ನಿದ್ರಿಸುತ್ತಿರುತ್ತಾರೆ.
ಕುಡುಕರು ಅಲ್ಲಿಯೇ ಬಿದ್ದಿರುತ್ತಾರೆ. ಬಸ್ ನಿಲ್ದಾಣದ ಪರಿಸ್ಥಿತಿ ನೋಡಿದರೆ ಸಭ್ಯಸ್ಥರು ನಿಲ್ದಾಣ ಪ್ರವೇಶಿಸುವಂತೆಯೇ ಇಲ್ಲ. ಬಸ್ ಪ್ರಯಾಣಿಕರು ಬಸ್‌ಸ್ಟ್ಯಾಂ ಡ್‌ನೊಳಗೆ ನಿಲ್ಲದೆ ರಸ್ತೆ ಬದಿ ಕಾದು ನಿಂತರೂ ಈ ಬಗ್ಗೆ ಯಾರೂ ಗಮನಿ ಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಇಲಾಖೆ ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಮುಂದಾ ಗಲಿ. ಇಲ್ಲಿನ ಬಸ್ ತಂಗುದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ಸಿಗುವಂತಾಗಲಿ.
ರೇಣುಕಾ, ಬಲ್ಮಠ
ಟೈರ್ ಕಂಪೆನಿ ಸ್ಥಾಪನೆ ಬೇಡ
ಮುಖ್ಯಮಂತ್ರಿ ಸದಾನಂದ ಗೌಡರು ಟೈರ್ ಕಂಪೆನಿಯನ್ನು ತೊಡಿಕಾ ನದ ಅಡ್ಯಡ್ಕದಲ್ಲಿ ಸ್ಥಾಪನೆಗೆ ಮುಂದಾಗಿರುವುದು ಸರಿಯಲ್ಲ. ಇದರಿಂದ ಗ್ರಾಮಸ್ಥರಿಗೆ ತೊಂದರೆ ತಪ್ಪಿದ್ದಲ್ಲ. ಈಗಾಗಲೇ ಟೈರ್ ಕಂಪೆನಿಗಾಗಿ ಅಜ್ಜಾ ವರ ಗ್ರಾಮದ ಮುಳಿಯ ಮತ್ತು ಮಂಡೆಕೋಲಿನಲ್ಲಿ ಸ್ಥಳ ಸಮೀಕ್ಷೆ ನಡೆಸಿ ದ್ದರೂ ಅಲ್ಲಿ ಕಾರ್ಖಾನೆ ಸ್ಥಾಪನೆಗೆ ಪರಿಸರ ಸೂಕ್ತವಾಗಿಲ್ಲ ಎಂದು ವಿವರಿಸಿ ಅಂತಿಮವಾಗಿ ಅಡ್ಯಡ್ಕವನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ಒಂದೊಮ್ಮೆ ಕಾರ್ಖಾನೆ ಪ್ರಾರಂಭಗೊಂಡರೆ ಜನರು ಸಮಸ್ಯೆ ಎದುರಿಸಬಹುದು. ಮುಖ್ಯ ಮಂತ್ರಿಗಳು ತವರೂರಿನಲ್ಲಿ ಇಂಥ ಕಾರ್ಖಾನೆ ಬೇಡವೇ ಬೇಡ. ಪರಿಸರ ಮಾರಕ ಟೈರ್ ಕಾರ್ಖಾನೆಯ ವಿರುದ್ಧ ಈಗಲೇ ಜನರು ಒಕ್ಕೊರಲಿನಿಂದ ಹೋರಾಡಿದರೆ ಮಾತ್ರ ಫಲ ಸಿಗಬಹುದು.
ನಾಗರಿಕರು, ಅಡ್ಯಡ್ಕ
Tagged with
nimminda
‘ಇವರೊರ್ವರು ವಿಚಿತ್ರ ವ್ಯಕ್ತಿ!’
ಹಾಗೆಂದು ಕೆಲವರು ಇವರ ಮುಂದೆಯೇ ಹೇಳಿಕೊಂಡರೆ, ಇನ್ನು ಕೆಲವರು ಹಿಂದಿನಿಂದ ಹೇಳಿಕೊಳ್ಳುತ್ತಿದ್ದಾರೆ.
ಹೌದು ಜಗತ್ತಿನ ಯಾವುದೇ ಸಾಧಕರ ಜೀವ ನವನ್ನು ಬೇಕಾದರೂ ಅಧ್ಯಯನ ಮಾಡಿ ಅವರಲ್ಲಿ ಯಾವುದಾದರೂ ಒಂದು ವಿಚಿತ್ರ ಕಂಡು ಬರು ತ್ತದೆ. ‘ವಿಚಿತ್ರ’ಕ್ಕೂ ‘ಸಾಧನೆ’ಗೂ ಅದೇನೋ ನಂಟಿ ದೆಯೇ ಎಂದು ಕೆಲವೊಮ್ಮೆ ಅನಿಸುವುದೂ ಇದೆ.
ಇವರು ಹನ್ನೆರಡು ವರ್ಷಗಳಿಂದ ಒಂದು ಆಂಗ್ಲ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಂದಿನ ದಿನಗಳಲ್ಲಿ ಪ್ರಖ್ಯಾತ ಕನ್ನಡ ಪತ್ರಿಕೆಗಳೇ ಆರ್ಥಿಕ ಕೊರತೆಯಿಂದ ಮುಗ್ಗರಿಸುತ್ತಿರುವ ಇಂತಹಾ ಸಂದರ್ಭದಲ್ಲಿ ಕರ್ನಾಟಕದ ತುಳುನಾ ಡಿನಲ್ಲಿ ‘ಇಶ್ಯೂಸ್ ಆಂಡ್ ಕನ್ಸರ್ನ್ಸ್’ (ಸಮಸ್ಯೆಗಳು ಮತ್ತು ಕಾಳಜಿಗಳು) ಎಂಬ ಒಂದು ಆಂಗ್ಲ ಮಾಸಪತ್ರಿಕೆಯನ್ನು ನಿರಂ ತರವಾಗಿ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದರೆ ಅದೂ ಒಂದು ವಿಚಿತ್ರವೇ ಸರಿ.
ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರಾಗಿರುವ, ಮಕ್ಕಳಲ್ಲಿ ಸ್ವಚ್ಛತೆ, ಜ್ಞಾನದ ಅರಿವನ್ನು ಉಂಟು ಮಾಡುವಲ್ಲಿ, ಅವರನ್ನು ಪೌಷ್ಠಿಕತೆಯ ಕಡೆಗೆ ಸಾಗಿಸುವಲ್ಲಿ ತಮ್ಮಿಂದಾದ ಕಿಂಚಿತ್ ಸೇವೆಯನ್ನು ಮಾಡುತ್ತಾ ಸದಾ ಕ್ರಿಯಾಶೀಲರಾಗಿರುವ ಇವರು ಇತರ ಹಲವಾರು ಸಂಸ್ಥೆಗಳ ಸಕ್ರಿಯ ಸದಸ್ಯರಾಗಿದ್ದು, ಲಯನ್ಸ್ ಕ್ಲಬ್‌ನ ಸದಸ್ಯರೂ ಹೌದು.
ಸರಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಬಡಮಕ್ಕಳು ಕಲಿಯುತ್ತಿರುವ ಸುಮಾರು ಹತ್ತು ಹದಿನೈದು ಆಯ್ದ ಶಾಲೆಗಳಿಗೆ ಉಚಿತವಾಗಿ ಶುದ್ಧ ನೀರು ಒದಗಿಸುವ ಆಕ್ವೋಗಾರ್ಡ್ ನೀಡಿದ ಇವರಿಗೆ ಲಯನ್ಸ್ ಕ್ಲಬ್ ಮುಖಾಂತರ ಕೂಲಿ ಕಾರ್ಮಿಕರ ಮತ್ತು ಬಡವರ್ಗದ ಮಕ್ಕಳು ಕಲಿಯುತ್ತಿರುವ ಬೈಕಂಪಾ ಡಿಯ ಬಳಿಯ ಅಂಗರಗುಂಡಿ ಸರಕಾರಿ ಸಂಯುಕ್ತ ಪ್ರೌಢ ಶಾಲೆಗೆ ಅಕ್ವೋಗಾರ್ಡ್ ಒದಗಿಸಬೇಕೆಂಬ ವಿನಂತಿ ಬಂದಿತ್ತು.
ಈ ಬಗ್ಗೆ ಅಂಗರಗುಂಡಿ ಶಾಲೆಗೆ ಭೇಟಿ ನೀಡಿದ ಇವರು ಅಲ್ಲಿಯ ಮಕ್ಕಳಿಗೆ ತಕ್ಕಮಟ್ಟಿನ ಪೌಷ್ಠಿಕ ಆಹಾರವನ್ನು ಕೈಯಾರೆ ವಿತರಿಸಿ ಮಕ್ಕ ಳೊಂದಿಗೆ ಬೆರೆತರು. ಈ ಸಂದರ್ಭದಲ್ಲಿ ವಿಜಯ ಕುಮಾರಿ ಎಂಬ ಶಿಕ್ಷಕಿಯೊಬ್ಬರು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ ಜೀವ ನಕ್ಕಾಗುವ ಒಂದಿಷ್ಟು ಹಿತವಚನಗಳನ್ನು ನೀಡಬೇಕು ಎಂದು ಕೇಳಿಕೊಂ ಡರು.
ಹತ್ತನೇ ತರಗತಿ ಪ್ರವೇಶ ಮಾಡಿದ ಇವರು ಮಕ್ಕಳಿಗೆ ಜೀವನ ಮೌಲ್ಯಗಳ ಬಗ್ಗೆ ತಿಳುವಳಿಕೆ ನೀಡುತ್ತಾ ಪ್ರತಿ ವಿದ್ಯಾರ್ಥಿಯ ಕುಟುಂಬದ ಹಿನ್ನೆಲೆ, ವಿದ್ಯಾಭ್ಯಾಸ ಮಟ್ಟವನ್ನು ಅರಿತುಕೊಂಡರು. ಶಾಲಾ ಮುಖ್ಯೋ ಪಾಧ್ಯಾಯರಾದ ತಿಮ್ಮಪ್ಪ ಗೌಡ, ಶಿಕ್ಷಕ ಜಯಪ್ರಕಾಶ್ ಮತ್ತು ವಿಜಯ ಕುಮಾರಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂಪೂರ್ಣ ವಿವರ ಒದಗಿಸಿ ದರು. ಈ ಮೂಲಕ ಅಲ್ಲಿರುವ ಒಟ್ಟ್ಟು ಮೂವತ್ತ ಮೂರು ಎಸೆಸ್ಸೆಲ್ಸಿ ವಿದ್ಯಾ ರ್ಥಿಗಳಲ್ಲಿ ಒಂಭತ್ತು ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಸಾಧಾರಣವಾಗಿದ್ದರೆ ಎರಡು ವಿದ್ಯಾರ್ಥಿಗಳು ಪಾಸಾಗಲು ಸಾಧ್ಯವೇ ಇಲ್ಲ ಎಂಬುದನ್ನು ಕಂಡು ಕೊಂಡರು.
ಇದೇ ಶಾಲೆಯನ್ನು ತಮ್ಮ ಪ್ರಯೋಗಶಾಲೆಯನ್ನಾಗಿ ಮಾಡಬೇಕೆಂದು ಬಯಸಿದ ಇವರು ಆ ಬಗ್ಗೆ ಮುಖ್ಯೋಪಾಧ್ಯಾಯ ಮತ್ತು ಇತರ ಶಿಕ್ಷಕರಲ್ಲಿ ತಮ್ಮ ಮನದ ಇಚ್ಛೆಯನ್ನು ತಿಳಿಸಿದರು. ಈ ಶಾಲೆಯಲ್ಲಿ ಈ ಬಾರಿ ಎಸೆಸ್ಸೆಲ್ಸಿ ಯಲ್ಲಿ ಶೇಕಡಾ ನೂರು ಫಲಿತಾಂಶವನ್ನು ತಂದೇ ತರಬೇಕೆಂಬ ಇವರ ಬಯಕೆಗೆ ಎಲ್ಲರೂ ಸಹಕಾರ ಸೂಚಿಸಿದರು.
‘ಓದಿರಿ, ಚರ್ಚಿಸಿ, ಬರೆಯಿರಿ ಇದೇ ಪರಿಪೂರ್ಣತೆಗೆ ನಾಂದಿ’ ಎಂಬ ಘೋಷಣೆಯೊಂದಿಗೆ ಇವರ ಕಾರ್ಯಯೋಜನೆ ಆರಂಭವಾಯಿತು. ಮಕ್ಕ ಳಿಗೆ ಹೇಗೆ ಓದಬೇಕು. ಓದಿದ್ದನ್ನು ಯಾವ ರೀತಿ ಅರ್ಥಮಾಡಿಕೊಳ್ಳಬೇಕು. ಅದನ್ನು ಹೇಗೆ ಬರೆಯಬೇಕು ಎಂಬುದರ ಬಗ್ಗೆ ತಿಳುವಳಿಕೆ ನೀಡಲಾರಂಭಿ ಸಿದರು.
ತರಗತಿಯಲ್ಲಿ ವಿದ್ಯಾಭ್ಯಾಸದಲ್ಲಿ ಮುಂದಿರುವ ಆರು ಮಂದಿ ವಿದ್ಯಾರ್ಥಿ ಗಳನ್ನು ಆಯ್ಕೆಮಾಡಿ ಅವರ ನಾಯಕತ್ವದಲ್ಲಿ ಆರು ಗುಂಪುಗಳನ್ನು ರಚಿಸಿ ದರು. ಈ ಗುಂಪಿನೊಳಗೆ ಚರ್ಚೆ, ಅರ್ಥವಾಗದೇ ಇದ್ದ ಪ್ರಶ್ನೆಗಳಿಗೆ ಸರಿ ಯಾದ ಮಾರ್ಗದರ್ಶನ. ವಿದ್ಯಾರ್ಥಿಗಳು ಯಾವುದೇ ಅಂಜಿಕೆ ಇಲ್ಲದೆ ಪರಸ್ಪರ ಚರ್ಚಿಸುತ್ತಾ ಕಲಿಯತೊಡಗಿದರು. ತಮಗೆ ಅರ್ಥವಾಗದ ಪ್ರಶ್ನೆಗ ಳಿಗೆ ಇತರ ಗುಂಪಿನವರೊಂದಿಗೆ ಚರ್ಚಿಸಿದರು. ಅಲ್ಲೂ ಅರ್ಥವಾಗದೇ ಇದ್ದರೆ ಶಿಕ್ಷಕರ ಮೊರೆ ಹೋದರು. ಪ್ರತಿಯೊಬ್ಬರು ತಾವು ಕಲಿತು ಇತರ ರನ್ನೂ ತಮ್ಮೊಂದಿಗೆ ಕರೆದೊಯ್ಯ ತೊಡಗಿದರು. ಪ್ರತಿ ಶನಿವಾರ ಮಧ್ಯಾಹ್ನ ಮತ್ತು ಆದಿತ್ಯವಾರ ಸ್ವತಹ ಇವರೇ ಹಾಜರಿದ್ದು ಕಲಿಕೆಯ ಪ್ರಕ್ರಿಯೆಯನ್ನು ಪ್ರೋತ್ಸಾಹಿಸತೊಡಗಿದರು. ಶಿಕ್ಷಕರು ಕೂಡಾ ಒಬ್ಬೊಬ್ಬರಂತೆ ಪಾಳಿಯಲ್ಲಿ ರಜೆಯ ದಿನಗಳಲ್ಲಿ ಶಾಲೆಗೆ ಹಾಜರಾಗತೊಡಗಿದರು. ಇವೆಲ್ಲದರ ಒಟ್ಟು ಫಲಿತಾಂಶ ತರಗತಿಯ ಆಂತರಿಕ ಪರೀಕ್ಷೆಯಲ್ಲಿ ಗೋಚರಿಸತೊಡಗಿತು. ನೂರಕ್ಕೆ ನೂರು ಫಲಿತಾಂಶದ ಆಶಾಕಿರಣ!. ವಿದ್ಯಾರ್ಥಿಗಳು ಉತ್ಸಾಹ ದಿಂದ ಕಲಿಯುತ್ತಲೇ ಸಾಗಿದರು.
ಈ ನಡುವೆ ಇವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಬಂಪರ್ ಬಹುಮಾನ ಘೋಷಿಸಿದರು. ಶಾಲೆಯಲ್ಲಿರುವ ಪ್ರತಿಯೊಬ್ಬ ಮಕ್ಕಳು ಪಾಸಾಗಬೇಕು. ಬುದ್ದಿವಂತ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದು ಳಿದ ವಿದ್ಯಾರ್ಥಿಗಳನ್ನು ತಮ್ಮೊಂದಿಗೆ ಕರೆದೊಯ್ದು ಪಾಸ್ ಮಾಡಿಸ ಬೇಕು ಶೇಕಡಾ ನೂರು ಫಲಿತಾಂಶ ಬಂದರೆ ಮಾತ್ರ ಎಲ್ಲಾ ವಿದ್ಯಾರ್ಥಿಗ ಳಿಗೆ ತಲಾ ಒಂದೊಂದು ಸಾವಿರ ರೂಪಾಯಿ ನೀಡಲಾಗುವುದು!
ಈ ವಿಚಿತ್ರ ವ್ಯಕ್ತಿಯ ಯೋಜನೆ ಫಲ ನೀಡಿದೆ. ಸರಕಾರಿ ಸಂಯುಕ್ತ ಪ್ರೌಢ ಶಾಲೆ ಅಂಗರಗುಂಡಿ ಬೈಕಂಪಾಡಿಯಲ್ಲಿ ಈಗ ಶೇಕಡಾ ನೂರಕ್ಕೆ ನೂರು ಫಲಿತಾಂಶದ ಸಂಭ್ರಮ. ಖಾಸಗಿ ಶಾಲೆ, ಟ್ಯೂಷನ್ ಭರಾಟೆ ಯಲ್ಲಿ ಸರಕಾರಿ ಶಾಲೆಗಳು ಯಾರಿಗೂ ಬೇಡವಾಗಿರುವ ಇಂದಿನ ದಿನಗ ಳಲ್ಲಿ ಮಂಗಳೂರಿನ ಹೊರವಲಯದ ಬೈಕಂಪಾಡಿಯಲ್ಲಿ ಬಡವರ್ಗ ಮತ್ತು ಕಾರ್ಮಿಕರ ಮಕ್ಕಳೇ ಇರುವ ಶಾಲೆಯೊಂದು ತನ್ನ ಸೀಮಿತ ಚೌಕಟ್ಟಿನೊಳಗೆ ನೂರಕ್ಕೆ ನೂರು ಫಲಿತಾಂಶವನ್ನು ಪಡೆಯುತ್ತದೆ ಎಂದರೆ ಅದೊಂದು ವಿಚಿತ್ರವೇ ಸರಿ. ಅದರ ಹಿಂದಿರುವ ವ್ಯಕ್ತಿಯೂ ಇದಕ್ಕೆ ತಾನು ಕಾರಣ ಎಂದು ಒಪ್ಪಿಕೊಳ್ಳದಿರುವುದೂ ಒಂದು ವಿಚಿತ್ರ. ಇವರೇ ನನ್ನುತ್ತಾರೆಂದರೆ ಇದರಲ್ಲಿ ನನ್ನದೇನೂ ಇಲ್ಲ. ಈ ಶಾಲೆಯ ವಿದ್ಯಾರ್ಥಿಗ ಳಿಗೆ ನನ್ನ ದೊಡ್ಡ ಸೆಲ್ಯೂಟ್. ನನ್ನ ಪ್ರಯೋಗ ಶಾಲೆಯ ಯಶಸ್ವಿಗೆ ಕಾರಣೀಕರ್ತರಾದ ಇಲ್ಲಿನ ವಿದ್ಯಾಥಿಗಳು ಮತ್ತು ಅಧ್ಯಾಪಕರುಗಳಿಗೆ ಈ ಎಲ್ಲಾ ಯಶಸ್ಸು ಸಲ್ಲುತ್ತದೆ ಎನ್ನುತ್ತಾರೆ ಇವರು.
ಈ ವಿಚಿತ್ರ ವ್ಯಕ್ತಿ ಯಾರು ಎಂದು ತಿಳಿದುಕೊಳ್ಳುವ ಕುತೂಹಲವಿ ದೆಯೇ? ಖಂಡಿತವಾಗಿಯೂ ಅದನ್ನು ತಿಳಿಸುತ್ತೇನೆ. ಆದರೆ ಅದಕ್ಕಾಗಿ ಇವರ ಕ್ಷಮೆಯನ್ನೂ ಕೇಳುತ್ತಿದ್ದೇನೆ. ಯಾಕೆಂದರೆ ಇವರು ಎಲ್ಲೂ ತಮ್ಮ ಹೆಸರನ್ನು ಹೇಳಿಕೊಳ್ಳುವುದಕ್ಕೆ ಬಯಸುವುದಿಲ್ಲ. ಇವರು ಸಾಕಷ್ಟು ಜನೋ ಪಯೋಗಿ ಕೆಲಸಗಳನ್ನು ಮಾಡಿದ್ದರೂ ಅದರ ಪ್ರಯೋಜನ ಪಡೆಯುತ್ತಿ ರುವವರಿಗೆ ಆ ಕೆಲಸಗಳನ್ನು ಇವರೇ ಮಾಡಿದ್ದು ಎಂದು ಇಂದಿಗೂ ಗೊತ್ತಿಲ್ಲ. ಇವರೇನೂ ಹೆಸರಿಗೂ ನನಗೂ ಸಂಬಂಧವಿಲ್ಲ ಎಂದು ಹೇಳ ಬಹುದು. ಆದರೆ ಆ ಹೆಸರನ್ನು ಹೇಳದೇ ಇದ್ದರೆ ಬಲು ದೊಡ್ಡ ತಪ್ಪಾ ಗುತ್ತದೆ. ಇಂತಹಾ ವಿಚಿತ್ರ ವ್ಯಕ್ತಿ ಯಾರು ಗೊತ್ತೇ? ಅವರೇ ಸುರತ್ಕಲ್‌ನ ಮಾರಿಗುಡಿ ರಸ್ತೆಯ ನೆರಳು ಎಂಬ ನಿವಾಸದಲ್ಲಿ ವಾಸಿಸುತ್ತಿರುವ ಶ್ರೀಯುತ ಜಯರಾಮ್ ಶ್ರೀಯಾನ್.
Tagged with
lekhana,
rkdinachari
ದಿನಕರ ಮಂಗಳೂರು
ಧ್ವನಿ ಎಂಬವರು ಅನ್ಯಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ? ಎಂದು ಬರೆದ ಬರಹಕ್ಕೆ ಪ್ರತಿಯಾಗಿ ನಾನು ಬರೆದ ಪ್ರತಿಕ್ರಿಯೆಗೆ ಧ್ವನಿ ಯವರು ಉತ್ತರ ನೀಡಿದ್ದಾರೆ. ಈ ಬಗ್ಗೆ ಮತ್ತಷ್ಟು ಅಭಿಪ್ರಾಯಗಳನ್ನು ಬರೆ ಯಲು ಇಷ್ಟಪಡುತ್ತಿದ್ದೇನೆ. ಈ ಚರ್ಚೆಯು ಧರ್ಮೀಯ, ಅನ್ಯಧರ್ಮೀಯ ಎಂಬ ವ್ಯಾಪ್ತಿಯನ್ನು ಮೀರಿ ಮತಾಂತರಗೊಂಡ ಹಿಂದುಗಳ ಕಡೆಗೆ ಸಾಗಿರು ತ್ತದೆ. ಧ್ವನಿಯವರು ‘ಮತಾಂತರಗೊಂಡ ಹಿಂದುಗಳು ಕೆಲವು ದೇವಸ್ಥಾನ ವನ್ನು ಪ್ರವೇಶಿಸುವಾಗ ಸಂಪ್ರದಾಯವಾದಿಗಳಿಗೆ ಧಾರ್ಮಿಕ ಪ್ರೇಮ, ಸಂಪ್ರ ದಾಯವಾದ ಜಾಗೃತವಾಗುತ್ತದೆ ಎಂದಿದ್ದಾರೆ.
ಖಾಲಿ ಹಾಳೆಯ ಮೇಲೆ ಬರೆದರೆ ನಂಬಿಕೆ ಹುಟ್ಟುವುದಿಲ್ಲ ಎಂಬುವುದು ಧ್ವನಿಯವರ ಬರಹದ ತಲೆಬರಹ. ನಿಜವಾಗಿ ನೋಡಿದರೆ ನಂಬಿಕೆ ಎಂದರೆ ಖಾಲಿಹಾಳೆಯೇ ಆಗಿದೆ. ಆದರೆ ಕ್ಷಣ ಕ್ಷಣಕ್ಕೆ ಸ್ವಾರ್ಥಕ್ಕಾಗಿ ನಂಬಿಕೆ ಬದಲಿಸು ವವರ ಮನಸ್ಸಿನ ಹಾಳೆ ಖಾಲಿಯಾಗಿರುವುದಿಲ್ಲ. ಅದರಲ್ಲಿ ಒಂದೇ ಒಂದು ನಂಬಿಕೆ ಅಚ್ಚಾಗಿರುವುದೂ ಇಲ್ಲ. ಅವರ ಮನಸ್ಸಿನ ಹಾಳೆ ಸ್ವಾರ್ಥಪರ ಚಿತ್ತು ಚಿತ್ತಾದ ಒಂದರ್ಥದಲ್ಲಿ ಹರಿದು ಹರಕಲಾದ ಹಾಳೆಯಾಗಿರುತ್ತದೆ. ಮತಾಂ ತರಿಗಳಿಗೆ ಈ ಮಾತು ಅಕ್ಷರಶಃ ಒಪ್ಪುತ್ತದೆ. ಹಾಗಿರುವಾಗ ಯಾವ ಮತಾಂ ತರಿ ವ್ಯಕ್ತಿ ಮತ್ತು ತಾನು ಮತಾಂತರ ಹೊಂದಿದ ವ್ಯಕ್ತಿ ಎಂದು ತೋರಿಸಿ ಕೊಳ್ಳುತ್ತಾನೋ ಅಂತವರು ಸಂಪ್ರದಾಯವಾದಿ ತಿರುಪತಿ ಮುಂತಾದ ದೇವ ಸ್ಥಾನಗಳನ್ನು ಪ್ರವೇಶಿಸುವುದು ಭಕ್ತಿ, ನಂಬಿಕೆಯಿಂದ ಅಲ್ಲವೇ ಅಲ್ಲ. ಹಾಗಿರು ವಾಗ ಇಂಥವರು ದೇವಸ್ಥಾನವನ್ನು ಪ್ರವೇಶಿಸುವಾಗ ಸಂಪ್ರದಾಯವಾದಿಗಳಿಗೆ ಖಂಡಿತವಾಗಿಯೂ ಕಸಿವಿಸಿಯಾಗುತ್ತದೆ. ಈತನಿಗೆ ಭಕ್ತಿ, ನಂಬಿಕೆ ಇದೆಯೋ ಇಲ್ಲವೋ ಎಂಬ ಸಂಶಯ ಉಂಟಾಗುತ್ತದೆ. ಅದಕ್ಕಾಗಿ ಅಂತಹ ವ್ಯಕ್ತಿಗಳು ಖಾಲಿ ಹಾಳೆಯ ಮೇಲೆ ನಂಬಿಕೆ ಇದೆ ಎಂದು ಬರೆದು ಕೊಡ ಬೇಕು ಎಂದು ಬಯಸುವುದು ತಪ್ಪಾಗಲಾರದು.
ಅಬ್ದುಲ್ ಕಲಾಂ, ಜೇಸುದಾಸ್‌ರಂತಹ ವ್ಯಕ್ತಿಗಳು ದೇವಸ್ಥಾನವನ್ನು ಪ್ರವೇ ಶಿಸುವಾಗ ಸಂಪ್ರದಾಯವಾದಿಗಳಿಗೆ ಖಂಡಿತವಾಗಿಯೂ ಕಸಿವಿಸಿಯಾಗಲಾ ರದು. ಯಾಕೆಂದರೆ ಅವರು ತಮ್ಮ ಜೀವನದಲ್ಲಿ ಎಂದಿಗೂ ಹಿಂದೂ ಧರ್ಮ. ಪದ್ಧತಿ, ನಂಬಿಕೆಗಳನ್ನು ನಿರಾಕರಿಸಿಲ್ಲ. (ಹಾಗಿದ್ದೂ ಜೇಸುದಾಸರಿಗೆ ಗುರುವಾ ಯೂರು ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಲಾಗಿತ್ತು. ಈ ಕಾರಣಕ್ಕಾಗಿ ಅವರ ಹಿಂದೂ ಸಂಪ್ರದಾಯವಾದಿ ಗುರು ಜೇಸುದಾಸ್‌ಗಾಗಿ ದೇವಸ್ಥಾನದ ಹೊರಗಡೆ ಮಂಟಪವೊಂದನ್ನು ಸ್ವಂತ ಖರ್ಚಿನಿಂದ ನಿರ್ಮಿಸಿ ಹಾಡಲು ಅವಕಾಶ ನೀಡಿದ್ದರು), ಆದರೆ ಮತಾಂತರಿಗಳು ಎಂದರೆ ಯಾರು? ಅವರು ಹಿಂದೂ ದೇವರು, ಧರ್ಮ, ನಂಬಿಕೆಗಳನ್ನು ನಿರಾಕರಿಸಿದವರಲ್ಲವೇ? ಇಂಥ ವರು ದೇವಸ್ಥಾನ ಪ್ರವೇಶಿಸಿದರೆ ಸಂಪ್ರದಾಯವಾದಿಗಳು ದೇವಸ್ಥಾನ ಅಶುದ್ಧ ವಾಯಿತು ಎಂದು ಭಾವಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಯಾವ ಸ್ವಾರ್ಥ ಕ್ಕಾಗಿ ಜಗಮೋಹನ್ ರೆಡ್ಡಿಯ ಅಜ್ಜ ಹಿಂದೂ ಧರ್ಮವನ್ನು ಬಿಟ್ಟು ಮಿಶಿನರಿ ಕ್ರೈಸ್ತ ಧರ್ಮ (ನೈಜ ಕ್ರೈಸ್ತ ಧರ್ಮವಲ್ಲ) ವನ್ನು ಸ್ವೀಕಾರ ಮಾಡಿದನೋ ಅದೇ ರೀತಿ ರಾಜಕೀಯ ಸ್ವಾರ್ಥ ಮೊಮ್ಮಗನಲ್ಲಿ ಸಂಪ್ರದಾಯವಾದಿಗಳು ಕಂಡು ಕೊಂಡದ್ದರಲ್ಲಿ ಯಾವುದೇ ಆಶ್ಚರ್ಯ ಇಲ್ಲ. ಜಗಮೋಹನ್ ರೆಡ್ಡಿ ತನಗೆ ದೇವರ ಮೇಲೆ ಅಪಾರ ನಂಬಿಕೆ ಭಕ್ತಿ ಇದೆ ಎಂದು ಬರೆದುಕೊಡುವುದಕ್ಕೆ ಹಿಂದೆ ಮುಂದೆ ನೋಡಿ ನಿಯಮ ಭಂಗ ಮಾಡಿ ರಾಜಕೀಯ ಮಾಡುತ್ತಾ ರಾದರೆ ಸಂಪ್ರದಾಯವಾದಿಗಳು ತಮ್ಮ ಸಂಪ್ರದಾಯವಾದವನ್ನು ಯಾಕೆ ಬಿಡಬೇಕು? ರಾಜಶೇಖರ ರೆಡ್ಡಿ, ಜಾಫರ್ ಶರೀಫ್ ಕೂಡಾ ನನಗೆ ನಂಬಿಕೆ ಇದೆ ಎಂದು ಬರೆದು ದೇವಸ್ಥಾನ ಪ್ರವೇಶಿಸಿದ ಉಲ್ಲೇಖಗಳು ಇವೆ. ಹೀಗಿರು ವಾಗ ಜಗಮೋಹನ್ ರೆಡ್ಡಿಗೇನು ತೊಂದರೆ? ಇವರು ಇಲ್ಲಿ ರಾಜಕೀಯ ಮಾಡಿದ್ದಾರೆಯೇ ಹೊರತು ಬೇರೆ ಯಾರೂ ಅಲ್ಲ.
ಮತಾಂತರಗೊಂಡ ಹಿಂದುಗಳು ಇಂಥಹುದಕ್ಕೆ ಬಲಿಯಾಗುತ್ತಾರೆ ಎಂಬುದು ನಿಮಗೆ ಸ್ಪಷ್ಟವಾಗಿ ಗೊತ್ತಿದೆ. ಯಾವ ಅಚ್ಚ, ಸ್ವಚ್ಛ ಮುಸ್ಲಿಂ, ಕ್ರೈಸ್ತರಿದ್ದಾರೋ ಅಂಥವರು ಇದಕ್ಕೆ ಬಲಿಯಾಗಲಾರರು. ಮತಾಂತರಿಗಳ ಮನಸ್ಸನ್ನು ಮತಾಂ ತರ ಮಾಡುವವರು ಎಷ್ಟು ಕೆಡಿಸಿ ಅವರನ್ನು ಎಡೆಬಿಡಂಗಿಗಳನ್ನಾಗಿಸಿದ್ದಾರೆ ಎಂಬು ದಕ್ಕೆ ಇದು ಒಂದು ಉದಾಹರಣೆಯೂ ಆಗಿದೆ. ಯಾವುದೋ ಕೆಲವು ಕಾರಣಗ ಳಿಗಾಗಿ ಭಾರತ ಜಾತ್ಯತೀತ ರಾಷ್ಟ್ರ ಆಗಿದ್ದಿರಬಹುದು. ಆದರೆ ದೇವಸ್ಥಾನ, ಚರ್ಚ್, ಮಸೀದಿಗಳು ಎಂದಿಗೂ ಜಾತ್ಯತೀತವಲ್ಲ ಎಂಬುದನ್ನು ಗಮನಿಸಬೇಕು. ಇವೆಲ್ಲಾ ಆಯಾ ಧರ್ಮದ ಸ್ವತ್ತುಗಳಾಗಿಯೇ ಇವೆ. ಹಿಂದೂ ದೇವಾಲಯಗಳು ಜಾತ್ಯತೀ ತವಾಗಬೇಕು ಎಂಬುದರಲ್ಲಿ ಯಾವ ಅರ್ಥವೂ ಇಲ್ಲ.
ನಾನು ಮೇಲಿಂದ ಮೇಲೆ ತಿಳಿದುಕೊಂಡಂತೆ ರೋಮ್ ಮುಂತಾದ ಕ್ರಿಶ್ಚಿ ಯನ್ ಪವಿತ್ರ ಕ್ಷೇತ್ರಗಳಿಗೆ ಯಾರ ಪ್ರವೇಶವನ್ನೂ ನಿರ್ಬಂಧಿಸುವುದಿಲ್ಲ. ಆದರೆ ಮೆಕ್ಕಾ, ಮದೀನಾಕ್ಕೆ ಮುಸ್ಲಿಮರಲ್ಲದವರು ಪ್ರವೇಶಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಈ ಬಗ್ಗೆ ಇತರ ಧರ್ಮದವರು ಸರಿಯಾದ ಅಭಿಪ್ರಾಯವನ್ನು ನೀಡಬೇ ಕಾಗಿದೆ ಎಂದು ನಾನೂ ಬಯಸುತ್ತೇನೆ.
ಮಡೆಸ್ನಾನ ಮತ್ತು ದೇವಾಲಯಗಳ ನಿಯಮಗಳಿಗೂ ತಾಳೆ ಹಾಕುವುದು ಸರಿಯಲ್ಲ. ಮಡೆಸ್ನಾನ ಹೆಚ್ಚಿನೆಲ್ಲಾ ದೇವಾಲಯಗಳಲ್ಲಿ ಇದೆ. ಇದು ಒಂದು ನಂಬಿಕೆ. ಆದರೆ ಮಡೆ ಮಡಸ್ನಾನ ಒಂದು ರೀತಿಯಲ್ಲಿ ಅತಿಯಾದ ನಂಬಿಕೆ. ಅತಿಯಾದ ನಂಬಿಕೆ ಮೂಢನಂಬಿಕೆಯಾಗುತ್ತದೆ. ದೇವಸ್ಥಾನಗಳಲ್ಲಿರುವ ನಿಯ ಮಗಳು ಕಾಟಾಚಾರಕ್ಕೆ ಇರುವಂತದ್ದಲ್ಲ. ಅಲ್ಲಿನ ಪಾವಿತ್ರ್ಯತೆ, ಶಾಂತಿ, ಸುವ್ಯವಸ್ಥೆ ಯನ್ನು ಕಾಪಾಡುವುದಕ್ಕೆ ಇರುವಂತದ್ದು. ಇಂತಹಾ ನಿಯಮಗಳು ದೇವಸ್ಥಾನಗ ಳಲ್ಲಿ ಮಾತ್ರ ಇರುವುದಲ್ಲ ಎಲ್ಲಾ ಕಡೆಗಳಲ್ಲೂ ಇರುತ್ತದೆ, ಮ್ಯೂಸಿಯಂ, ಸಭೆ, ಸಮಾರಂಭ, ಶಾಲಾ ಕಾಲೇಜುಗಳಲ್ಲೂ ಇರುತ್ತದೆ. ಯಾರಾದರೂ ಒಬ್ಬರು ಈ ನಿಯಮ ಮೀರಿದರೆ ವ್ಯವಸ್ಥೆಗೆ ತೊಡಕಾಗುತ್ತದೆ. ನಿರ್ದಿಷ್ಠ ದೇವಸ್ಥಾನದಲ್ಲಿ ನಿರ್ದಿಷ್ಠ (ಹಿಂದುವಾದರೆ ಹಿಂದೂ ನಂಬಿಕೆ, ಕ್ರೈಸ್ತನಾದರೆ ಕ್ರೈಸ್ತ ನಂಬಿಕೆ, ಮುಸ್ಲಿಮನಾದರೆ ಮುಸ್ಲಿಂ ನಂಬಿಕೆ) ದೇವರ ಮೇಲೆ ನಂಬಿಕೆ ಇಲ್ಲವೆಂದು ಸಾಬೀತಾದ ವ್ಯಕ್ತಿ ನಿರ್ದಿಷ್ಠ ದೇವಾಲಯಕ್ಕೆ ಪ್ರವೇಶಿಸುತ್ತಾನೆ ಎಂದರೆ ಆತನ ಬಗ್ಗೆ ಅಲ್ಲಿ ಸೇರಿದ ವ್ಯಕ್ತಿಗಳಿಗೆ ರೋಷ, ಕೋಪ ಉಂಟಾಗುವ ಸಾಧ್ಯತೆಗಳು ಇವೆ. ಇದು ಒಂದು ವ್ಯವಸ್ಥೆಗೆ ತೊಡಕಾಗಬಹುದು.
ಅಬ್ದುಲ್ ಕಲಾಂ ಸರಸ್ವತಿಯ ಆರಾಧಕ ತಾನು ಎಂದು ಯಾವುದೇ ಭಯ ವಿಲ್ಲದೆ ಹೇಳಿಕೊಳ್ಳುತ್ತಾರೆ. ಗೀತೆ, ಹಿಂದೂ ಧರ್ಮದ ಶ್ಲೋಕಗಳನ್ನು ಬಹಿರಂಗ ಸಭೆಗಳಲ್ಲಿ ಹೇಳಿ ಅರ್ಥ ವಿವರಿಸುತ್ತಾರೆ. ಏಸುದಾಸರನ್ನು ಹಿಂದೂ ದೇವರ ಮೇಲೆ ಭಕ್ತಿ, ನಂಬಿಕೆ ಇಲ್ಲದವರೆಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಇವರನ್ನು ದೇವರ ಮೇಲೆ ನಂಬಿಕೆ ಇದೆ ಎಂದು ಬರೆದುಕೊಡಿ ಎಂದು ಕೇಳು ವುದು ಸಮಂಜಸವಲ್ಲ. ಎಮ್.ಎಫ್. ಹುಸೈನ್ ಬದುಕಿದ್ದಾಗ ಅವರನ್ನು ದೇವಸ್ಥಾ ನಕ್ಕೆ ರತ್ನಗಂಬಳಿ ಹಾಕಿ ಸ್ವಾಗತಿಸಿದ್ದರೆ ಏನಾಗುತ್ತಿತ್ತು? ತಿರುಪತಿಗೆ ಕ್ರೈಸ್ತ ಮಿಶನರಿ ಗಳನ್ನು ನುಗ್ಗಿಸಿ ಬಹಿರಂಗವಾಗಿ ಮತಾಂತರಕ್ಕೆ ಕುಮ್ಮಕ್ಕು ನೀಡಿ ಹಿಂದೂ ಧರ್ಮ, ದೇವರ ವಿರೋಧಿಯಾಗಿ ವರ್ತಿಸಿದ ಸಾಮ್ಯುವೆಲ್ ರಾಜಶೇಖರ ರೆಡ್ಡಿಯ ಮಗ ಜಗಮೋಹನ್ ರೆಡ್ಡಿ? ಇವರು ನಂಬಿಕೆ ಇದೆ ಎಂದು ಕಾಟಾಚಾರಕ್ಕಾದರೂ ಖಾಲಿಹಾಳೆಯ ಮೇಲೆ ಬರೆದು ಕೊಡಲೇ ಬೇಕಾಗುತ್ತದೆ. ಈಗಾಗಲೇ ಭಕ್ತಿಯ ನಾಟಕವಾಡುವ ಪುರೋಹಿತರುಗಳಿಂದ ದರೋಡೆಗೊಳಗಾಗುತ್ತಿರುವ ಹಿಂದೂ ದೇವಸ್ಥಾನಗಳು ಕೆಲವು ನಿಯಮಗಳನ್ನು ಅಳವಡಿಸಿಕೊಳ್ಳದೇ ಇದ್ದಲ್ಲಿ ಮುಂ ದೊಂದು ದಿನ ಜಾತ್ಯತೀತತೆಯ ನೆಪದಲ್ಲಿ ಗೋಮುಖ ವ್ಯಾಘ್ರ ರಾಜಕಾರಣಿಗಳ ‘ಹಗಲು ದರೋಡೆಗೆ ಒಳಗಾಗಬಹುದು.
Tagged with
chavadi
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೨೯ ವರ್ಷ ಪ್ರಾಯ. ಮದುವೆಯಾಗಿ ಐದು ವರ್ಷವಾಯಿತು. ನಮ್ಮದು ಪ್ರೇಮ ವಿವಾಹ, ಮೂರು ವರ್ಷದ ಮಗನಿದ್ದಾನೆ. ನನಗೆ ಹಾಗೂ ನನ್ನ ಪತಿಗೆ ಸೆಕ್ಸ್‌ನಲ್ಲಿ ಸಮಾನ ಆಸಕ್ತಿಯಿದೆ. ನಾವು ವಾರಕ್ಕೆ ಒಂದೆರಡು ಬಾರಿ ಸೇರುತ್ತೇವೆ. ನನ್ನ ಸ್ತನಗಳು ಹಾಗೂ ಜನನಾಂಗ ಸಡಿಲವಾಗಿದೆ. ಆದರೆ ನನ್ನವರು ಮಗುವಾದ ಬಳಿಕ ಸೆಕ್ಸ್‌ನಲ್ಲಿ ಆಸಕ್ತಿ ತೋರಿಸುತ್ತಿಲ್ಲ. ನನಗೂ ಹಿಂದಿನಷ್ಟು ಸುಖ ಸಿಗುತ್ತಿಲ್ಲ. ನಾನು ಕೇಳಿದರೆ, ನನಗೆ ತೃಪ್ತಿ ಸಿಗು ತ್ತಿಲ್ಲ ಎನ್ನುತ್ತಾರೆ. ಅದಕ್ಕಾಗಿ ಸೆಕ್ಸ್ ಮಾಡುವ ವೇಳೆ ಮನೆಯಲ್ಲೇ ಮದ್ಯ ಸೇವಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಇದನ್ನು ನಾನೂ ಬೇಡವೆನ್ನುವುದಿಲ್ಲ. ಅವರಿಗೆ ಇದರಿಂದ ಖುಷಿ ಸಿಗುತ್ತದೆ ಎನ್ನು ತ್ತಾರೆ. ಆದರೆ ಅವರು ಬೇಗನೆ ಸ್ಖಲಿಸುತ್ತಾರೆ. ನನಗೆ ಮತ್ತೆ ಲೈಂಗಿಕ ಬಯಕೆ ಜಾಸ್ತಿಯಾದರೂ ಅವರು ಸುಸ್ತಾಗಿ ಮಲಗುತ್ತಾರೆ. ಯೋನಿ ದ್ವಾರವನ್ನು ಶಸ್ತ್ರಚಿಕಿತ್ಸೆಯಿಂದ ಬಿಗಿಗೊಳಿಸಲು ಸಾಧ್ಯವಿದೆ ಎಂದು ನನ್ನ ಗೆಳತಿಯೊಬ್ಬರು ಸಲಹೆ ನೀಡಿದ್ದಾರೆ. ಇದು ನಿಜವೇ? ಈ ಬಗ್ಗೆ ನನಗೆ ಸಲಹೆ ಕೊಡಿ.
ಸಲಹೆ: ಸೆಕ್ಸ್ ಅನ್ನುವುದು ವಿವಾಹ ನಂತರದ ಜೀವನಕ್ಕೆ ಮುಖ್ಯವಾದುದು. ಆದರೆ ಮದುವೆಯಾದ ನಂತರ ಎಷ್ಟು ವರ್ಷ ಕಳೆದರೂ ಸೆಕ್ಸ್ ಬಗೆಗಿನ ಆಸಕ್ತಿ ಹಾಗೇ ಉಳಿದಿರುತ್ತದೆ ಎನ್ನಲಾ ಗುವುದಿಲ್ಲ. ಯಾಕೆಂದರೆ ಲೈಂಗಿಕ ಅಂಗಗಳಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಂತೆ ಕಾಮವಾಂಛೆಯು ತಗ್ಗುತ್ತದೆ. ನಿಮ್ಮ ಗಂಡ ಲೈಂಗಿಕ ಸುಖ ಸಿಗುವುದಿಲ್ಲ ಎನ್ನಲು ಕಾರಣವಿದೆ. ಮದು ವೆಯ ಹೊಸತರಲ್ಲಿ ಹೆಣ್ಣಿನ ಜನನಾಂಗದ ದ್ವಾರವು ಬಿಗಿಯಾ ಗಿದ್ದು, ಲೈಂಗಿಕ ಸಂವೇದನೆ ಪ್ರಮಾಣ ಹೆಚ್ಚಿರುತ್ತದೆ. ಆದರೆ ಕ್ರಮೇಣ ನಿರಂತರ ಸಂಭೋಗದಿಂದಾಗಿ ಜನನಾಂಗವು ತನ್ನ ಬಿಗಿಯನ್ನು ಕಳೆದು ಕೊಳ್ಳುತ್ತದೆ. ಒಂದು ಮಗುವಾದ ನಂತರವಂತೂ ಸಂಭೋಗದಲ್ಲಿ ಮೊದಲಿನ ಆಸಕ್ತಿ ಇರುವುದಿಲ್ಲ. ಇದರಿಂದ ಗಂಡನಿಗೆ ಸೆಕ್ಸ್‌ನಲ್ಲಿ ಹೆಚ್ಚಿನ ಸುಖ ಸಿಗದಿರುವುದು ಸಾಮಾನ್ಯ. ಆದರೆ ಸೆಕ್ಸ್‌ನಲ್ಲಿ ಸುಖ ಕೊಡುವ ಕಲೆ ಹೆಣ್ಣಿಗೆ ತಿಳಿದಿರಬೇಕು. ಸೆಕ್ಸ್ ಎಂದರೆ ಕೇವಲ ಸಂಭೋಗ ಮಾತ್ರವಲ್ಲ. ಬೇರೆ ಬೇರೆ ವಿಧಾನಗಳ ಮೂಲಕ ಲೈಂಗಿಕ ಪರಮಸುಖ ವನ್ನು ಪಡೆಯಬಹುದು. ಸಂಭೋಗದ ಆಸನಗಳನ್ನು ಬದಲಾಯಿಸಿದರೆ ಸಂಪೂರ್ಣ ಆನಂದ ಪಡೆಯಲು ಸಾಧ್ಯವಿದೆ. ಈ ಬಗ್ಗೆ ಗಂಡನಲ್ಲಿ ನೇರವಾಗಿ ಹೇಳಿ. ಅವರಿಗೆ ಯಾವ ರೀತಿ ಇಷ್ಟ ಎಂಬುದನ್ನು ಅರಿಯಿರಿ. ಆಗ ಯಾವುದೇ ಸಮಸ್ಯೆಯಾಗುವುದಿಲ್ಲ. ಗಂಡ ಸುಖಕ್ಕಾಗಿ ಬೇರೆ ಹೆಂಗ ಸರ ಕಡೆಗೆ ಮನಸ್ಸು ಮಾಡಿದರೆ ಸಮಸ್ಯೆಯಾಗಬಹುದು.
ಮದ್ಯ ಸೇವಿಸಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡರೆ ಕಾಮ ಚಟುವಟಿಕೆಗಳಲ್ಲಿ ಆಸಕ್ತಿ ಬರುವುದು ಸಹಜ. ಆದರೆ ಇದನ್ನೇ ಅಭ್ಯಾಸ ಮಾಡುವುದು ಬೇಡ. ಮದ್ಯ ಸೇವಿಸದೆ ಸೆಕ್ಸ್‌ನಲ್ಲಿ ಆಸಕ್ತಿ ಹೇಗೆ ತಂದುಕೊಳ್ಳುವುದೆಂದು ಅವರಿಗೆ ತಿಳಿಸಿ. ಶೀಘ್ರಸ್ಖಲನವನ್ನು ತಡೆಯಲು ಸೆಕ್ಸ್ ವೇಳೆ ಕೆಲವೊಂದು ಪ್ರಯತ್ನವನ್ನು ನೀವೇ ಮಾಡಿ ನೋಡಬಹುದು. ಜನನಾಂಗದ ಚಲನೆ ವೇಳೆ ನಿಲ್ಲಿಸಿ ಮತ್ತೆ ಮುಂದು ವರಿಯುವುದು, ಸ್ತ್ರೀ ಪ್ರಧಾನ ಆಸನ(ಹೆಣ್ಣು ಮೇಲಕ್ಕೆ ಬರುವಂತೆ) ಸಂಭೋಗ ಮತ್ತಿತರ ಸಾಮಾನ್ಯ ವಿಧಾನದಿಂದ ಪರಿಣಾಮ ಸಾಧ್ಯ ವಿದೆ. ವೈದ್ಯರ ಸಲಹೆ ಔಷಧಿಯನ್ನು ಬಳಕೆ ಮಾಡಬಹುದು. ಹೆಚ್ಚಿನ ಮಾಹಿತಿ ಬೇಕಾದಲ್ಲಿ ವೈದ್ಯರನ್ನು ಅವಶ್ಯವಾಗಿ ಸಂಪರ್ಕಿಸಿ ಸುಖ ಮಯ ಜೀವನ ನಡೆಸಿ. ಇನ್ನು ಲೈಂಗಿಕ ಅಂಗ ಯೋನಿದ್ವಾರ ವನ್ನು ಬಿಗಿಗೊಳಿಸುವ ಶಸ್ತ್ರಚಿಕಿತ್ಸೆ ವಿದೇಶಗಳಲ್ಲಿ ಜನಜನಿತವಾಗಿದೆ. ಸಣ್ಣ ಶಸ್ತ್ರಚಿಕಿತ್ಸೆಯಿಂದ ಸಮಸ್ಯೆಯನ್ನು ನಿವಾರಿಸಬಹುದಾದ ಕಾರಣ ಅಲ್ಲಿನ ಬಹುತೇಕ ಹೆಣ್ಣುಮಕ್ಕಳು ಇದಕ್ಕೆ ಮೊರೆಹೋಗುತ್ತಾರೆ. ನೀವು ಈ ಬಗ್ಗೆ ನುರಿತ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಸಮಾ ಲೋಚನೆ ನಡೆಸುವುದೊಳಿತು. ಅವರು ಈ ಬಗ್ಗೆ ನಿಮಗೆ ಸಲಹೆ ಯನ್ನು ಕೊಡುತ್ತಾರೆ. ದಾಂಪತ್ಯ ಜೀವನದಲ್ಲಿ ಇಂಥ ಸಮಾನ್ಯ ಸಮಸ್ಯೆಗಳು ಕಾಡುವುದು ಸಹಜ. ಆದತೆ ಅದನ್ನೇ ಗಂಭೀರವಾಗಿ ತೆಗೆದುಕೊಳ್ಳದಿರಿ.
Tagged with
gupta
ಮೇಷ : ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ.
ವೃಷಭ : ಗಣ್ಯ ವ್ಯಕ್ತಿಗಳ ಸಹಕಾರ ದೊರೆಯುತ್ತದೆ.
ಮಿಥುನ : ವಿದ್ಯಾರ್ಥಿಗಳಿಗೆ ಆಲಸ್ಯ ಇರುತ್ತದೆ.
ಕರ್ಕಾಟಕ : ಧಾರ್ಮಿಕ ಕಾರ್ಯಗಳಿಗೆ ಅಡಚಣೆಯಾಗುತ್ತದೆ.
ಸಿಂಹ : ಪ್ರಯಾಣದಲ್ಲಿ ನಷ್ಟ ಉಂಟಾಗಲಿದೆ.
ಕನ್ಯಾ : ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯಲಿದೆ.
ತುಲಾ : ವೃತ್ತಿರಂಗದಲ್ಲಿ ಮುನ್ನಡೆ ಇರುತ್ತದೆ.
ವೃಶ್ಚಿಕ : ಮಕ್ಕಳಿಂದ ಕಿರಿಕಿರಿ ಇರುತ್ತದೆ.
ಧನು : ದೇವತಾ ಕೆಲಸಗಳನ್ನು ನಡೆಸುತ್ತೀರಿ.
ಮಕರ : ಮಿತ್ರರಿಂದ ತೊಂದರೆಯನ್ನು ಅನುಭವಿಸುತ್ತೀರಿ.
ಕುಂಭ : ಜಂಟಿ ವ್ಯಾಪಾರದಲ್ಲಿ ನಷ್ಟ ಉಂಟಾಗಲಿದೆ.
ಮೀನ : ಕೆಲಸ ಕಾರ್ಯಗಳು ಮಂದ ಗತಿಯಿಂದ ಸಾಗುತ್ತದೆ.
Tagged with
bhavishya
ಮಂಗಳೂರು: ಪ್ರಸಿದ್ಧ ಡಿಜಿಟಲ್ ಶಾಪ್‌ಗೆ ಪೊಟೋಶಾಪ್, ಕೊರಲ್ ಡ್ರಾ ತಿಳಿದಿರುವ ಅನುಭವಸ್ಥ ಡಿಸೈನರ್ ಬೇಕು.. ೯೮೪೫೯೩೨೮೮೧
ಮಂಗಳೂರು : ಅಡುಗೆ ಅನಿಲ ಸಾಗಿಸುವ ಗಾಡಿಗೆ ಡ್ರೈವರ್ ಬೇಕು ೯೪೪೮೯೫೨೯೦೩.
ಮಂಗಳೂರು : ಬ್ಯಾಡ್ಜ್‌ಹೊಂದಿರುವ ಅನುಭವಿ ಲಾರಿ ಡ್ರೈವರ್ ೯೯೭೨೩೭೧೭೨೩.
ಮಂಗಳೂರು : ಪಾನ್‌ಸ್ಟಾಲ್‌ಗೆ ಜನ ಬೇಕು ೯೦೬೦೯೩೨೩೫೧.
ಕೊಟ್ಟಾರ : ಕಾರಿಗೆ ಚಾಲಕ ಬೇಕು ೯೫೯೧೩೪೮೧೧೮.
ತೊಕ್ಕೊಟ್ಟು ಅಸುಪಾಸಿನವರು ಬ್ಯೂಟಿ ಪಾರ್ಲರ್‌ಗೆ ಬೇಕಾಗಿದ್ದಾರೆ. ೯೬೬೩೬೨೨೦೫೧
ಮಂಗಳೂರು : ಶೋರೂಂಗೆ ಆಫೀಸ್ ಬಾಯ್ & ಡೆಲಿವರಿ ಬಾಯ್ ಬೇಕು ೦೮೨೪೪೨೫೪೦೧೦.
ಮಂಗಳೂರು : ಕೊರಿಯರ್‌ಗೆ ಜನ ಬೇಕು ೯೯೦೦೪೩೪೯೪೮.
ಮೂಡುಬಿದ್ರೆ : ಮೊಬೈಲ್ ಅಂಗಡಿಗೆ ಯುವತಿ ಬೇಕು ೯೯೦೨೦೭೧೫೪೯.
ಮೂಡಬಿದ್ರೆ : ಟ್ಯುಟೋರಿಯಲ್ ಆಫೀಸ್ ಕೆಲಸಕ್ಕೆ ಯುವತಿ ಬೇಕು ೦೮೨೪೫೮೨೬೧೦೬೦.
ಮಂಗಳೂರು : ಅಡುಗೆ ಅನಿಲ ಸಾಗಿಸುವ ಗಾಡಿಗೆ ಡ್ರೈವರ್ ಬೇಕು ೯೪೪೮೯೫೨೯೦೩.
ಮಂಗಳೂರು : ಬಾಡ್ಜ್ ಹೊಂದಿರುವ ಅನುಭವಿ ಲಾರಿ ಡ್ರೈವರ್ ಬೇಕು ೯೯೭೨೩೭೧೭೨೩.
ಸುರತ್ಕಲ್ : ಸೇಲ್ಸ್ ಗರ್ಲ್ಸ್, ಬಾಯ್ಸ್ ಬೇಕು ೯೮೪೪೪೬೪೩೭೭.
ಉಡುಪಿ : ಸ್ಟುಡಿಯೋಗೆ ಯುವತಿ ಬೇಕು ೯೮೪೫೮೬೩೦೯೪.
ಎನ್‌ಐಟಿಕೆ : ಕಾಫಿ ಸ್ಟಾಲ್‌ಗೆ ಎಕೌಂಟ್ ಮತ್ತು ಸೇಲ್ಸ್‌ಗೆ ಯುವತಿ ಬೇಕು ೯೭೩೮೯೩೨೭೩೧.
ಉಡುಪಿ : ಲಾಂಡ್ರಿಗೆ ಜನ ಬೇಕು ೯೯೬೪೧೪೧೧೨೨.
ಮಂಗಳೂರು : ಫಾಸ್ಟ್‌ಫುಡ್ ಹೊಟೇಲಿಗೆ ವೇಟರ್ ಬೇಕು ೯೨೪೩೩೦೫೨೩೫.
ಫಳ್ನೀರ್ : ಕ್ಲಿನಿಕ್‌ಗೆ ಲೇಡಿ ರಿಸೆಪ್ಶೆನ್ ಬೇಕು ೯೬೮೬೭೦೯೪೮೦.
ಕುಳಾಯಿ : ಹೊಸಬೆಟ್ಟು ಟಿವಿಎಸ್ ಶೋ ರೂಂಗೆ ಹೆಲ್ಪರ್ ಮತ್ತು ಮೆಕಾನಿಕ್ ಬೇಕು ೯೯೪೫೬೧೯೧೧೦
ಮಂಗಳೂರು: ಹೊಟೇಲಿಗೆ ವೇಟರ್ ಬೇಕು ೯೮೮೬೦೯೨೭೨೬,
ತೊಕ್ಕೊಟ್ಟು : ಲೇಡಿಸ್ ಟೈಲರ್ ಬೇಕು ೯೦೬೦೧೪೪೫೫೦.
ಮಂಗಳೂರು : ಜ್ಯೂಸ್ ಅಂಗಡಿಗೆ ಹೆಲ್ಪರ್, ಕ್ಲೀನರ‍್ಸ್ ಬೇಕು ೯೨೪೩೩೦೨೪೪೬.
ಮಂಗಳೂರು : ಮನೆಯಲ್ಲಿ ಉಳಿದು ಕೆಲಸ ಮಾಡಲು ಹೆಂಗಸು ಬೇಕು ೯೭೪೦೯೩೭೭೩೮.
ಮಂಗಳೂರು : ಡಿಟಿಪಿಗೆ ಅನುಭವಿ ಬೇಕು. ೯೪೪೮೨೫೪೯೭೬.
ತೊಕ್ಕೊಟ್ಟು : ಪಂಪು, ಮಿಕ್ಸಿ ರಿಪೇರಿ ಮಾಡುವ ಜನ ಬೇಕು ೯೮೪೫೬೧೭೧೫೨.
ಬಜಪೆ : ಜ್ಯೂಸ್ ಸೆಂಟರ್, ಬೇಕರಿಗೆ ಸೇಲ್ಸ್‌ಗೆ ಜನ ಬೇಕು ೮೨೭೭೦೫೧೫೪೩.
Tagged with
udyoga