
ಕಾಸರಗೋಡು: ಕ್ರಾಂತಿಕಾರಿ ಮಾರ್ಕಿಸ್ಟ್ ಪಕ್ಷದ ರಾಜ್ಯ ನಾಯಕ, ಕಲ್ಲಿಕೋಟೆ ಒಂಜಿಯಂನ ಟಿ.ಪಿ. ಚಂದ್ರಶೇಖರನ್ ಅವರ ಬರ್ಬರ ಕೊಲೆಗೆ ಹಂತಕರು ಸಂಚು ರೂಪಿಸಿದ್ದು ಮಾಹಿ ಪಳ್ಳೂರಿನಲ್ಲಿರುವ ಪಂದಕ್ಕಲ್ ಬಾರಿನಲ್ಲಿ. ಈ ನಿಗೂಢ ಸಂಚಿನಲ್ಲಿ ಸಿ.ಪಿ.ಎಂ. ಪಕ್ಷದ ಪ್ರಮುಖ ಮುಖಂಡರು ಭಾಗವಹಿಸಿದರೆಂದೂ ತನಿಖಾ ತಂಡವು ನಿನ್ನೆ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಿದೆ. ಆದರೆ ಅತ್ಯಂತ ಪ್ರಮುಖರಾದ ಈ ನಾಯಕರು ಯಾರೆಂಬ ಬಗ್ಗೆ ಪೊಲೀಸರು ಬಹಿರಂಗಪಡಿಸಿಲ್ಲ. ಟಿ.ಪಿ.ಚಂದ್ರಶೇಖರನ್ ಹತ್ಯೆಯಲ್ಲಿ ಸಿ.ಪಿ.ಎಂ.ನ ಕಣ್ಣೂರು ಜಿಲ್ಲೆಯ ಮುಖ್ಯ ನಾಯಕನಾದ ಮಾಜಿ ಶಾಸಕ ಹಾಗೂ ಪಕ್ಷದ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯರ ಬಗ್ಗೆ ಈಗಾಗಲೇ ಖಚಿತ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ ವರದಿ ಮಹತ್ವ ಪಡೆದಿದೆ. ಚೆರುಕಲ್ಲಾಯಿ ಜೋಡಿಕೊಲೆ ಆರೋಪಿ ಸುಮೇಶ್ ಎಂಬಾತನ ಜೊತೆಗೆ ಸಿ.ಪಿ.ಎಂ ನಾಯಕರು ಬಾರಿನಲ್ಲಿ ಸಂಚು ಹೆಣೆದರೆನ್ನಲಾಗಿದೆ. ತಮ್ಮ ಪಕ್ಷಕ್ಕೆ ಕಂಟಕ ಪ್ರಾಯವಾಗಿರುವ ಚಂದ್ರಶೇಖರರನ್ನು ಎರಡು ತಿಂಗಳೊಳಗೆ ಮುಗಿಸುವಂತೆ ಸ್ಕೆಚ್ ರೂಪಿಸಬೇಕೆಂದು ಸಿ.ಪಿ.ಎಂ ಮುಖಂಡರು ಸುಮೇಶ್‌ನೊಡನೆ ಆಗ್ರಹಿಸಿದ್ದರೆಂದು ಈತನ ವಿಚಾರಣೆಯಲ್ಲಿ ತಿಳಿದುಬಂದಿದೆ. ಹತ್ಯೆಯ ವೇಳೆ ಹಂತಕರ ಸುಮೋ ವಾಹನದಲ್ಲಿದ್ದ ಆರೋಪಿಗಳ ಹೆಸರನ್ನೂ ಪೊಲೀಸರು ನ್ಯಾಯಾಲಯಕ್ಕೆ ನೀಡಿದ್ದಾರೆ. ಕೊಡಿ ಸುನಿ, ಶಾಫಿ, ಕಿರ್ಮಾನಿ, ಮನೋಜ್, ಶನೋಜ್, ರಜನೀಕಾಂತ್ ಹಾಗೂ ಟಿ.ಕೆ. ಎಂಬ ಹೆಸರಿನಲ್ಲಿ ಅರಿಯಲ್ಪಡುವ ಓರ್ವನೂ ಹತ್ಯಾ ವಾಹನದಲ್ಲಿದ್ದರೆಂದು ತನಿಖಾ ತಂಡ ತಿಳಿಸಿದೆ.
ಮತ್ತೋರ್ವನ ಸೆರೆ: ಟಿ.ಪಿ.ಚಂದ್ರಶೇಖರರ ಬರ್ಬರ ಹತ್ಯೆ ಪ್ರಕರಣದಲ್ಲಿ ಓರ್ವ ಸಿ.ಪಿಎಂ ಕಾರ್ಯಕರ್ತನನ್ನು ಕೂಡಾ ಸೆರೆ ಹಿಡಿಯಲಾಗಿದೆ. ಪಾನೂರು ನಿವಾಸಿ, ಶೇಂದಿ ಅಂಗಡಿ ಕಾರ್ಮಿಕನಾದ ಮನೋಜ್ ಎಂಬಾತನೇ ನಿನ್ನೆ ಸಂಜೆ ಬಂಧಿಸಲ್ಪಟ್ಟವ.
Tagged with
cnews
ಮಂಗಳೂರು: ಉಡುಪಿ ನಗರದ ಹೋಟೆಲ್ ರೂಮಿನಲ್ಲಿ ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಐವರನ್ನು ನಿನ್ನೆ ಮಧ್ಯಾಹ್ನ ನಗರ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಹಿರಿಯಡ್ಕ ಸಮೀಪದ ಅತ್ರಾಡಿಯ ಕರುಣಾಕರ, ಪೆರ್ಡೂರು ಗ್ರಾಮದ ವನಜಾ, ಸಾವಿತ್ರಿ, ಪಾರಂಪಳ್ಳಿ ನಿವಾಸಿ ಮೋಹನ ಹಾಗೂ ದಾಮೋದರ ಬಂಧಿತ ಆರೋಪಿಗಳು. ಖಚಿತ ವರ್ತಮಾನದ ಮೇರೆಗೆ ಹೋಟೆಲ್‌ಗೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಬಂಧಿತರಿಂದ ೨,೦೨೦ ರೂ. ನಗದು, ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Tagged with
cnews
ಉಪ್ಪಿನಂಗಡಿ: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಲ್ಲಿ ಕಲ್ಲಿನ ಕೋರೆ ನಡೆಸಿ ಸ್ಪೋಟಕ ಸಿಡಿಸುತ್ತಿದ್ದ ವ್ಯಕ್ತಿ ಯೊಬ್ಬರನ್ನು ಪುತ್ತೂರು ಎ.ಎಸ್.ಪಿ ಅನುಚೇತ್ ತಂಡ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು ಸಿಡಿತಕ್ಕೆ ಬಳಸುತ್ತಿದ್ದ ಅಪಾರ ಪ್ರಮಾಣದ ಸ್ಪೋಟಕ ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಜಾರಿಗೆ ಬೈಲು ಎಂಬಲ್ಲಿ ೧.೫೦ ಎಕರೆ ಸ್ಥಳದಲ್ಲಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಈ ಜಲ್ಲಿ ಕೋರೆ ನಡೆಸಲಾಗುತ್ತಿದ್ದು, ಇದರ ಮಾಲಕ ವಸಂತ ಮಜಲು ಎಂಬವರನ್ನು ಬಂಧಿಸಲಾಗಿದೆ. ೧೬ ಗೋಣಿಚೀಲ ಸ್ಪೋಟಕ ಸಾಮಗ್ರಿ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಕಲ್ಲೇರಿ ಎಂಬಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಈ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಿ ದ್ದರು. ಬಳ್ಳ ಮಂಜ ಎಂಬಲ್ಲಿಗೆ ಇದ್ದ ರಸ್ತೆಯೊಂದನ್ನು ಹಾಳು ಮಾಡಲಾಗಿದ್ದು, ಇದನ್ನು ತಕ್ಷಣ ತೆರವು ಮಾಡುವಂತೆ ಜನತೆ ಸಭೆಯಲ್ಲಿ ಒತ್ತಾಯಿಸಿದ್ದರು. ಈ ಕೋರೆಗೆ ಈ ಹಿಂದೆ ತಹಶೀಲ್ದಾರ್ ಭೇಟಿ ನೀಡಿ ಕೆಲಸ ನಿಲ್ಲಿಸಲು ಸೂಚನೆ ನೀಡಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದ ಮಾಲಕ ರಾಜಾರೋಷವಾಗಿ ಜಲ್ಲಿ ಕಲ್ಲಿನ ಕೋರೆ ನಡೆಸಿ ಈ ಭಾಗದ ಜನತೆಗೆ ಸಮಸ್ಯೆ ಉಂಟು ಮಾಡಿದ್ದರು ಎಂದು ತಿಳಿದು ಬಂದಿದೆ.
Tagged with
cnews
ಮಂಜೇಶ್ವರ: ಬಸ್ಸಿನಲ್ಲಿ ಪ್ರಯಾ ಣಿಸುತ್ತಿದ್ದ ಯುವಕರ ತಂಡವೊಂದು ಕ್ಷುಲ್ಲಕ ಕಾರಣಕ್ಕೆ ಬಸ್ ನಿರ್ವಾಹಕ ಹಾಗೂ ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ಇಲ್ಲಿನ ಪೋಸೋಟು ಬಳಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಕಂಡರೆ ಗುರುತು ಪತ್ತೆ ಹಚ್ಚಬಹುದಾದ ಐವರ ವಿರುದ್ದ ಕೇಸು ದಾಖಲಿಸಿರುವ ಮಂಜೇ ಶ್ವರ ಪೊಲೀಸರು ಕೇಸು ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ನಿರ್ವಾಹಕ ಉಪ್ಪಳ ಪೆರಿಂಗಡಿ ನಿವಾಸಿ ಸತೀಶ ಹಾಗು ಚಾಲಕ ಕುಂಬಳೆ ಪೆರ್ವಾಡ ನಿವಾಸಿ ಪುರು ಷೋತ್ತಮ ಹಲ್ಲೆಗೊಳಗಾದವರಾಗಿದ್ದು ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಕಾಸರಗೋಡಿನಿಂದ ತಲಪಾಡಿಗೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಹೊಸಂಗಡಿ ಬಳಿ ಹತ್ತಿದ ಐವರ ತಂಡ ನಿರ್ವಾಹಕನಲ್ಲಿ ವಿನಾ ಕಾರಣ ತಗಾದೆ ಎತ್ತಿ ಪೋಸೋಟು ಸಮೀಪಿಸುತ್ತಿದ್ದಂತೆ ಆತನಿಗೆ ಹಲ್ಲೆ ನಡೆಸಿತು. ಇದನ್ನು ಕಂಡ ಚಾಲಕ ತಡೆಯಲು ಬಂದಾಗ ಆತನಿಗೂ ಹಲ್ಲೆ ನಡೆಸಿ ತಂಡ ಪರಾರಿಯಾಯಿತೆಂದು ಗಾಯಾಳು ದೂರಿದ್ದಾರೆ.
Tagged with
cnews
ಸುಳ್ಯ: ಇಲ್ಲಿನ ಕೆವಿಜಿ ಎಂಜಿನಿ ಯರಿಂಗ್ ಕಾಲೇಜಿನ ಅಂತಿಮ ವರ್ಷದ ಮೂವರು ವಿದ್ಯಾರ್ಥಿಗಳು ಮೂರನೇ ಸೆಮಿಸ್ಟರ್‌ನ ವಿದ್ಯಾರ್ಥಿ ಯೋರ್ವನ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಕುರಿತು ಪೊಲೀಸರಿಗೆ ದೂರು ನೀಡ ಲಾಗಿದೆ.
ಅಂಬಟೆಡ್ಕದ ಗಂಗಾಧರ ಎಂಬ ವರ ಕಟ್ಟಡದಲ್ಲಿ ಬಾಡಿಗೆಗೆ ಕೊಠಡಿ ಮಾಡಿಕೊಂಡಿರುವ ಪುತ್ತೂರಿನ ದೀಪಕ್ ಲಾವೆಟ್ ಪಿರೇರಾ ಎಂಬ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯನ್ನು ರಾತ್ರಿ ಒಂದು ಗಂಟೆ ವೇಳೆಗೆ ಎಬ್ಬಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲಾಗಿದೆ ಎಂದು ಅಂತಿಮ ಸೆಮಿ ಸ್ಟರ್‌ನ ಅಜಿತ್, ಸ್ವಾಗತ್ ಹಾಗೂ ಪುಷ್ಪರಾಜ್ ಎಂಬವರ ಮೇಲೆ ದೂರು ನೀಡಲಾಗಿದೆ. ದೀಪಕ್ ಮೇಲೆ ಹಲ್ಲೆ ನಡೆಸಿದಾಗ ತಡೆಯಲು ಬಂದ ಆತನ ರೂಮಿನಲ್ಲಿ ಇರುವ ಇತರ ಮಿತ್ರರಿಗೂ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಹಿರಿಯ ವಿದ್ಯಾರ್ಥಿಗಳಿಗೆ ಗೌರವ ಕೊಡಬೇಕು ಎಂದು ಗೊತ್ತಿಲ್ಲವಾ ಎಂದು ಹಲ್ಲೆ ನಡೆಸಿದವರು ಪ್ರಶ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Tagged with
cnews
ಮಂಗಳೂರು: ಮಂಗಳೂರಿನ ಅಂಚೆ ಕಚೇರಿಯಲ್ಲಿ ಕೆಲಸ ಮಾಡು ತ್ತಿರುವ ಮಹಿಳೆಗೆ ಆಕೆಯ ಗಂಡ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಪರಿಣಾಮ ಗಂಡನನ್ನು ಮಹಿಳಾ ಪೊಲೀಸರು ಸೋಮವಾರ ಬಂಧಿಸಿದ ಘಟನೆ ನಡೆದಿದೆ. ಮೂಲತ: ವಿಟ್ಲ ನಿವಾಸಿ ಕೃಪಾ ಲತಾ ಲೋಬೋ(೪೦) ಅಂಚೆಕಚೇರಿ ಯಲ್ಲಿ ಉದ್ಯೋಗಿಯಾಗಿದ್ದು, ೨೦ ವರ್ಷಗಳ ಹಿಂದೆ ಬಂಟ್ವಾಳ ಕಳ್ಳಿಗೆ ಪನ್ನಡ್ಕ ಎಂಬಲ್ಲಿಯ ವಾಲ್ಟರ್ ಮೊಂತೇರೋ ಎಂಬವರನ್ನು ಮದು ವೆಯಾಗಿದ್ದರು. ಅಮೆರಿಕಾದಲ್ಲಿದ್ದ ವಾಲ್ಟರ್ ಆನಂತರ ತನ್ನ ಊರಲ್ಲೇ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಹೋಗುತ್ತಿದ್ದ ಪತ್ನಿಯ ಬಗ್ಗೆ ಸದಾ ಸಂಶಯ ವ್ಯಕ್ತಪಡಿಸುತ್ತಿದ್ದ ವಾಲ್ಟರ್ ಎರಡು ಮಕ್ಕಳಾದ ನಂತರವೂ ಇದೇ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಕೃಪಾಲತಾ ತಿಳಿಸಿದ್ದಾರೆ.
ಗಂಡನ ನಿರಂತರ ಕಿರುಕುಳದಿಂದ ಬೇಸತ್ತ ಕೃಪಾಲತಾ ೨೦೦೮ರಿಂದ ತಾಯಿ ಮನೆಯಲ್ಲಿ ವಾಸಮಾಡ ತೊಡಗಿದರು. ಮಂಗಳೂರಿಗೆ ವರ್ಗವಾದ ನಂತರ ಊರ್ವಾಸ್ಟೋರ್‌ನಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡತೊಡಗಿದ ಕೃಪಾಲತಾರಿಗೆ ಆನಂತರವೂ ಗಂಡನ ಮಾನಸಿಕ ಮತ್ತು ದೈಹಿಕ ಹಿಂಸೆ ಮುಂದುವರಿದಾಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದು ಅನಿವಾರ‍್ಯವಾಯಿತು.
ಫೆಬ್ರವರಿಯಲ್ಲಿ ಡೈವೋರ್ಸ್‌ಗೆ ಅರ್ಜಿ ಹಾಕಿ ಗಂಡನ ಕಿರುಕುಳದಿಂದ ಮುಕ್ತಿ ಕೊಡುವಂತೆ ನ್ಯಾಯಾಲಯವನ್ನು ಕೋರಿದ್ದರು. ಗಂಡನೂ ಡೈವೋರ್ಸ್‌ಗೆ ಒಪ್ಪಿದರೂ ಅರ್ಜಿ ಹಾಕಿದ ನಂತರ ಗಂಡನ ಕಿರುಕುಳ ಇನ್ನಷ್ಟು ಹೆಚ್ಚಾಯಿತು. ಕೊನೆಗೆ ಗಂಡನ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಕೃಪಾಲತಾ ದೂರು ನೀಡಿದರು. ಈ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೊಲೀಸರು ಸೋಮವಾರ ಗಂಡ ವಾಲ್ಟರ್ ಮೊಂತೆರೋನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನಿನ್ನೆ ವಾಲ್ಟರ್‌ಗೆ ಜಾಮೀನು ದೊರೆತಿದೆ. ೨೦ವರ್ಷಗಳಿಂದ ಗಂಡನ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ಬೇಸತ್ತಿರುವ ಕೃಪಾಲತಾ ಡೈವೋರ್ಸ್ ನೀಡಿ ಗಂಡನಿಂದ ಮುಕ್ತಿ ನೀಡುವಂತೆ ಕೋರಿದ್ದಾರೆ.
Tagged with
cnews
ಮುಲ್ಕಿ: ಮಹಿಳೆಯ ಹತ್ತಿರ ವಿಳಾಸ ಕೇಳುವ ನೆಪದಲ್ಲಿ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆದು ಪರಾರಿಯಾದ ಘಟನೆ ಗುರುವಾರ ಬೆಳಿಗ್ಗೆ ಮುಲ್ಕಿ ಠಾಣಾ ವ್ಯಾಪ್ತಿಯ ಕೆರೆಕಾಡಿನಲ್ಲಿ ನಡೆದಿದೆ.
ಕೆರೆಕಾಡು ನಿವಾಸಿ ಕುಸುಮಾರ ವರು ಬೆಳಿಗ್ಗೆ ಎಂದಿನಂತೆ ಮನೆ ಯೊಂದರಿಂದ ಹಾಲು ತರುತ್ತಿದ್ದಾಗ ಮುಖ್ಯ ರಸ್ತೆಯಲ್ಲಿ ಇಬ್ಬರು ಒಂದೇ ಬೈಕಿನಲ್ಲಿ ಬಂದು ಅದರಲ್ಲಿ ಓರ್ವನು ಕೆಳಗಿಳಿದು ದೇವಿಪ್ರಸಾದ್ ಮನೆ ಎಲ್ಲಿ ವಿಚಾರಿಸುತ್ತಾ ಮಾತಿಗೆ ಇಳಿದ ತಕ್ಷಣ ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು ೮೦ಸಾವಿರ ಮೌಲ್ಯದ ಚಿನ್ನದ ರೋಪ್ ಚೈನನ್ನು ಎಳೆದು ಅದೇ ಬೈಕಿನಲ್ಲಿ ಕೆಂಚನಕೆರೆ ರಸ್ತೆಯಲ್ಲಿ ಪರಾರಿಯಾದರು ಎಂದು ದೂರು ನೀಡಿದ್ದಾರೆ.
ಮುಲ್ಕಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Tagged with
cnews
ವಿಟ್ಲ: ಮೂರ್ಛೆ ರೋಗವಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಕನ್ಯಾನ ಗ್ರಾಮದಲ್ಲಿ ನಡೆದಿದೆ. ಕನ್ಯಾನ ಗ್ರಾಮದ ಮಕ್ಕೂರಿ ನಿವಾಸಿ ಮಾಂಕು ಬೆಳ್ಚಡ ಅವರ ಪುತ್ರ ಸತೀಶ(೨೬) ಎಂಬಾತನೇ ಮೃತಪ ಟ್ಟಾತ. ಇವರು ಕಳೆದ ಹಲವಾರು ಸಮಯ ಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದರು.
Tagged with
cnews
ಕಾಸರಗೋಡು: ಮಂಜೇಶ್ವರ ಗ್ರಾ. ಪಂ. ಆಡಳಿತ ಸಮಿತಿಯಲ್ಲಿ ಹಾಗೂ ಆಡಳಿತ ಪಕ್ಷವಾದ ಮುಸ್ಲಿಂ ಲೀಗ್‌ನಲ್ಲಿ ಪರಸ್ಪರ ಒಡಕು ತೀವ್ರವಾಗಿದ್ದು ಈ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ಪಂಚಾಯತ್ ಆಡಳಿತ ಸಮಿತಿ ಸಭೆಯನ್ನು ಈ ತಿಂಗಳ ೨೧ಕ್ಕೆ ಮುಂದೂಡಲಾಗಿದೆ.
ಗ್ರಾ. ಪಂ. ಅಧ್ಯಕ್ಷರಾದ ಲೀಗ್ ನಾಯಕರು ಸ್ವಪಕ್ಷೀಯರನ್ನು ಕಡೆಗಣಿಸಿ ಏಕಪಕ್ಷೀಯ ಹಾಗೂ ಪಕ್ಷಪಾತಿ ನಿಲುವು ತಳೆಯುತ್ತಿರುವುದಾಗಿ ಅಸಮಾಧಾನ ವೆದ್ದಿದೆ. ಅಧ್ಯಕ್ಷರನ್ನು ಸ್ವಸ್ಥಾನದಿಂದ ಬದಲಾಯಿಸುವಂತೆ ಲೀಗ್‌ನ ಪ್ರಾದೇಶಿಕ ಘಟಕಗಳು ನೇತೃತ್ವದೊಡನೆ ಒತ್ತಾಯಿಸುತ್ತಿವೆ. ಮಂಜೇಶ್ವರ ಗ್ರಾ. ಪಂ.ನಲ್ಲಿ ಆಡಳಿತ ರೂಢ ಐಕ್ಯರಂಗವು ಒಟ್ಟು ೧೦ ಸೀಟುಗಳುನ್ನು ಹೊಂದಿದ್ದು, ಈ ಪೈಕಿ ಮುಸ್ಲಿಂ ಲೀಗ್ ಒಂಭತ್ತು ಹಾಗೂ ಕಾಂಗ್ರೆಸ್ ಒಂದು ಸೀಟು ಹೊಂದಿವೆ. ಮಹಿಳಾ ಮೀಸಲಾತಿ ಅಧ್ಯಕ್ಷ ಸ್ಥಾನದಲ್ಲಿ ಲೀಗ್‌ನ ಸುಹರಾ ನೆಲೆಸಿದ್ದಾರೆ. ಒಟ್ಟು ಪಂಚಾಯತಿನ ಸದಸ್ಯ ಬಲ ೨೧ ಆಗಿದೆ. ಐಕ್ಯರಂಗಕ್ಕೆ ಸ್ಪಷ್ಟ ಬಹುಮತ ಇಲ್ಲದ ಸ್ಥಿತಿಯಲ್ಲಿ ಅಂದು ಎಸ್.ಡಿ.ಪಿ.ಐ ಯ ಓರ್ವ ಸದಸ್ಯ ಕೂಡ ಬೆಂಬಲಿಸಿದ್ದರು. ಇದೀಗ ಲೀಗ್‌ನ ಬಂಡುಕೋರರು, ಕಾಂಗ್ರೆಸ್, ಎಸ್.ಡಿ.ಪಿ.ಐ, ಎಡರಂಗ ಸದಸ್ಯರು ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಯತ್ನ ಆರಂಭಿಸಿದ್ದಾರೆ.
Tagged with
cnews
ಮಂಗಳೂರು: ಪೀಟರ್ ಇಂಗ್ಲೆಂಡ್ ಕಂಪೆನಿಯ ಶರ್ಟ್‌ಗಳೆಂದು ನಕಲಿ ಶರ್ಟ್‌ಗಳನ್ನು ಮಾರಾಟ ಮಾಡುತ್ತಿರುವ ಘಟನೆ ಉಡುಪಿಯ ಬಟ್ಟೆಯಂಗಡಿಯಲ್ಲಿ ಬೆಳಕಿಗೆ ಬಂದಿದೆ.
ಉಡುಪಿಯ ಕೆನರಾ ಜುವೆಲ್ಸ್‌ಟೆಕ್ಸ್ ಫ್ರೈ.ಲಿ. ಅಂಗಡಿಯಲ್ಲಿ ಮಧುರಾ ಫ್ಯಾಶನ್ ಆಂಡ್ ಲೈಫ್‌ಸ್ಟೈಲ್ ಕಂಪೆನಿ ಉತ್ಪಾದಿಸಿದ ಶರ್ಟ್‌ಗಳನ್ನು ಪೀಟರ್ ಇಂಗ್ಲೆಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಆರೋಪಿ ಜಫರುಲ್ಲಾ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಲಿಕಾ ಸಾವಿನ ತನಿಖೆಗೆ ಮನವಿ: ಪುತ್ತೂರು ಸಮೀಪದ ಕುಂಬ್ರ ಎಂಬಲ್ಲಿ ಇತ್ತೀಚೆಗೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಮಲ್ಲಿಕಾ ರೈ ಪ್ರಕರಣವನ್ನು ಮರುತನಿಖೆ ನಡೆಸುವಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ಶಾಸಕರು, ಸಹಾಯಕ ಕಮಿಷನರ್, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದೆ.
Tagged with
cnews
ಸುಳ್ಯ: ನಾರ್ಣಕಜೆಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸುಶೀಲ ಎಂಬವರಿಗೆ ಬೈಕ್ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಗುರುವಾರ ನಡೆದಿದೆ.
ಮದ್ಯವರ್ಜನ ಶಿಬಿರದ ಸಮಾ ರೋಪ ಸಮಾರಂಭಕ್ಕೆ ಸ್ವಸಹಾಯ ಸಂಘದ ಸದಸ್ಯೆಯಾಗಿರುವ ಸುಶೀಲ ರಸ್ತೆ ಬದಿ ನಡೆದುಕೊಂಡು ಹೋಗು ತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿದೆ. ಗಾಯಗೊಂಡ ಮಹಿಳೆಯನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲಿಮಲೆಯ ಶಾಫಿ ಎಂಬಾತನ ಬೈಕ್ ಡಿಕ್ಕಿ ಹೊಡೆದಿದೆ ಎಂದು ದೂರಲಾಗಿದೆ.
Tagged with
cnews
ವಿಟ್ಲ: ನೇಮೋತ್ಸವಕ್ಕೆಂದು ತನ್ನ ಪತ್ನಿ ಮನೆಗೆ ಬಂದ ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ಮಾರ್ಚ್ ೨೦ರಂದು ಅನಂತಾಡಿ ಗ್ರಾಮದ ಬಾರೇಲ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಅವರ ಪತ್ನಿ ಬುಧವಾರ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಿನ್ನಿಗೋಳಿ ತಾಳಿಪ್ಪಾಡಿ ನಿವಾಸಿ ಸುಕುಮಾರ(೩೫) ಎಂಬವರೇ ನಾಪತ್ತೆಯಾದವರು. ಇವರು ಮಾರ್ಚ್೧೯ರಂದು ವಿಟ್ಲ ಸಮೀಪದ ಅನಂತಾಡಿ ಗ್ರಾಮದ ಬಾರೇಲ ಎಂಬಲ್ಲಿಯ ತನ್ನ ಪತ್ನಿ ಮನೆಗೆ ನೇಮೋತ್ಸವಕ್ಕೆಂದು ಹೋಗಿದ್ದರು.
Tagged with
cnews,
missing
ಮಂಗಳವಾರ: ಕುಂದಾಪುರದ ಹಂಗಾರಕಟ್ಟೆ ಸೀತಾ ನದಿಯಲ್ಲಿ ಮರುವಾಯಿ ಆರಿಸುವ ವಿಚಾರದಲ್ಲಿ ಜಗಳ ನಡೆದು ಪರಸ್ಪರ ಹಲ್ಲೆ ನಡೆಸಿಕೊಂಡ ಘಟನೆ ನಡೆದಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರುಗಳು ದಾಖಲಾಗಿವೆ. ಬಸವ ಖಾರ್ವಿ ಎಂಬವರಿಗೆ ಭಾಸ್ಕರ್ ಖಾರ್ವಿ ಮತ್ತು ದಯಾನಂದ ಖಾರ್ವಿ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾಸ್ಕರ್ ಖಾರ್ವಿ ಪ್ರತಿದೂರು ದಾಖಲಾಗಿದ್ದು, ಹಂಗಾರಕಟ್ಟೆ ಬೋಟ್ ಜೆಟ್ಟಿಯಯ ಸಮೀಪ ಹೊಗುತ್ತಿರುವಾಗ ಬಸವ ಖಾರ್ವಿ ಎಂಬಾತ ತಡೆದು ನಿಲ್ಲಿಸಿ ಹಿಂದೆ ಆದ ಕೇಸ್ ಹಿಂಪಡೆಯ ಬೇಕು ಎಂದು ಬೆದರಿಸಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
Tagged with
cnews
ಮಂಗಳೂರು: ಕುಂದಾಪುರ ತಾಲೂಕಿನ ಸಾಲಿಗ್ರಾಮ ಮೂಡುಹಡು ಗ್ರಾಮದ ಮೋಹನ್ ಆಚಾರ್ ಎಂಬವರಿಗೆ ಸೇರಿದ ಟಾಟಾ ನ್ಯಾನೊ ಕಾರ್ ಕೊಲ್ಲೂರು ಸಮೀಪದ ನಾಗೋಡಿ ಗಾಟಿಯಲ್ಲಿ ಮೇ ೨ರಂದು ಪತ್ತೆಯಾಗಿದೆ. ಆದರೆ ಕಾರ್‌ನ ಮಾಲಕ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಮೋಹನ್ ಆಚಾರ್‌ರನ್ನು ಗುರುತಿಸಿದವರು ಕೊಲ್ಲೂರು (೦೮೨೫೪-೨೫೮೨೩೩)ಅಥವಾ ಬೈಂದೂರು (೦೮೨೫೪-೨೫೧೦೩೧)ಪೊಲೀಸ್ ಠಾಣೆಗೆ ಮಾಹಿತಿ ಡುವಂತೆ ಕೋರಲಾಗಿದೆ.
Tagged with
cnews,
missing
ಸುಳ್ಯ: ಮಹಿಳೆಯ ಹೆಸರಿನಲ್ಲಿ ಸರಕಾರಿ ಯೋಜನೆಯನ್ನು ಪಡೆದು ಅದನ್ನು ನೀಡದೆ ವಂಚನೆ ಮಾಡಲಾಗಿದೆ ಎಂದು ದೂರು ನೀಡಲಾದ ಘಟನೆ ಸುಳ್ಯದಲ್ಲಿ ನಡೆದಿದೆ.
ಸರಕಾರದಿಂದ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕೊಡಮಾಡುವ ತೆರೆದ ಬಾವಿ ಮತ್ತು ಪಂಪ್ ಸೆಟ್ ಯೋಜನೆಯಡಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣ ಪಡೆದು ತನಗೆ ನೀಡದೆ ಇಲಾಖಾ ಅಧಿಕಾರಿಗಳ ಸಹಕಾರದಿಂದ ಅಜ್ಜಾವರ ನೇಲ್ಯಡ್ಕದ ಕುಸುಮಾ ಮತ್ತು ಬಾಲಕೃಷ್ಣ ನಾಯ್ಕ ಎಂಬವರು ವಂಚನೆ ಮಾಡಿದ್ದಾರೆ ಎಂದು ಮಂಡೆಕೋಲು ಗ್ರಾಮದ ಪೇರಾಲು ಕುಂಠಿಕಾನದ ದಲಿತ ಮಹಿಳೆ ಸೀತಮ್ಮ ಪುತ್ತೂರು ಸಹಾಯಕ ಕಮಿಷನರ್‌ರಿಗೆ ದೂರು ನೀಡಿದ್ದಾರೆ. ತನ್ನ ಪಟ್ಟಾ ಜಾಗದಲ್ಲಿ ಸುಮಾರು ೨೫ ವರ್ಷಗಳ ಹಿಂದೆ ತೆಗೆದ ಪಾಳು ಬಾವಿಯನ್ನು ತೋರಿಸಿ ಬಾವಿ ಸಂಪೂರ್ಣವಾಗಿದೆ ಎಂದು ಹಣ ಪಡೆಯಲಾಗಿದೆ ಮತ್ತು ವಿದ್ಯುತ್ ನಿಗಮಕ್ಕೆ ಅರ್ಜಿಯನ್ನೂ ಸಲ್ಲಿಸಿ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಿ ಪಂಪನ್ನೂ ಪಡೆದಿದ್ದಾರೆ. ಆದರೆ ತನಗೆ ಯಾವುದೇ ಸೌಲಭ್ಯವನ್ನೂ ನೀಡಿಲ್ಲ. ವಿದ್ಯುತ್ ಪಂಪನ್ನು ಕುಸುಮಾ ಇಟ್ಟುಕೊಂಡಿದ್ದು ಬಂದಂತಹ ಒಂದು ಲಕ್ಷ ರೂ.ಯನ್ನು ಬಾಲಕೃಷ್ಣ ಮತ್ತು ಕುಸುಮಾ ಹಂಚಿಕೊಂಡಿದ್ದಾರೆ. ಇದರಲ್ಲಿ ಅಧಿಕಾರಿಗಳೂ ಶಾಮೀಲಾ ಗಿರುವ ಶಂಕೆಯಿದೆ. ಇದರ ಕುರಿತು ಸೂಕ್ತವಾದ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಸೀತಮ್ಮ ಸಹಾಯಕ ಕಮಿಷನರ್‌ರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ತನಗೆ ಕುಡಿಯಲು ನೀರಿಲ್ಲದೆ ಒಂದೂವರೆ ಮೈಲು ದೂರದಿಂದ ನೀರು ತರಬೇಕಾಗಿದೆ. ಆದರೂ ತನಗೆ ಸೌಲಭ್ಯ ನೀಡಿಲ್ಲ ಎಂದು ಅವರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
Tagged with
cnews
ಮಂಗಳೂರು : ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿರುವ ಅಪರಿಚಿತ ವ್ಯಕ್ತಿಯ ಮೃತ ದೇಹ ನಿನ್ನೆ ಸಂಜೆ ಸುರತ್ಕಲ್ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದೆ.ಸುಮಾರು ಎಪ್ಪತ್ತು ವರುಷದ ಆಸುಪಾಸಿನ ಮೃತ ವ್ಯಕ್ತಿ ಬುಧವಾರ ರಾತ್ರಿಯಿಂದ ಬಸ್ ನಿಲ್ದಾಣದಲ್ಲೇ ಇದ್ದು ಅಸ್ವಸ್ಥನಂತೆ ಕಂಡು ಬಂದಿದ್ದ. ಗುರುವಾರ ಮದ್ಯಾಹ್ನದ ವೇಳೆ ಈ ವ್ಯಕ್ತಿ ಮೃತ ಪಟ್ಟಿರ ಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮೃತ ವ್ಯಕ್ತಿಯ ಸಂಬಂಧಿಕರು ಇದ್ದಲ್ಲಿ ಸುರತ್ಕಲ್ ಪೊಲೀಸರನ್ನು ಸಂಪರ್ಕಿಸ ಬಹುದಾಗಿದೆ.
Tagged with
cnews
ಪಾಟ್ನಾ: ಕರ್ನಾಟಕದಲ್ಲಿ ಬಿ.ಟೆಕ್ ಪದವಿ ಪಡೆದಿದ್ದ ಉಗ್ರಗಾಮಿ ಚಟುವಟಿಕೆ ಕುರಿತಂತೆ ಉತ್ತರ ಕನ್ನಡ ಭಟ್ಕಳದಲ್ಲಿ ವಿಶೇಷ ತರಬೇತಿ ಪಡೆದಿದ್ದ ಬಿಹಾರ ಮೂಲದ ಶಂಕಿತ ಉಗ್ರನೊಬ್ಬನನ್ನು ಸೌದಿ ಅರೇಬಿಯಾದಲ್ಲಿ ಕಳೆದ ವಾರ ಬಂಧಿಸಲಾಗಿದೆ. ಈತನ್ನನು ಫಸೀಹ್ ಮೆಹಮೂದ್ ಎಂದು ಹೆಸರಿಸಲಾಗಿದೆ. ಈತ ಬಿಹಾರದ ದರ್ಬಾಂಗ್ ಜಿಲ್ಲೆಯವನು. ವಿಶೇಷವೆಂದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಕಫೀಲ್ ಕೂಡಾ ದರ್ಬಾಂಗ್ ಜಿಲ್ಲೆಯವನೇ ಆಗಿದ್ದಾನೆ. ಈಗಾಗಲೇ ಸೌದಿಯಲ್ಲಿದ್ದ ಮೆಹಮೂದ್‌ನ ಪತ್ನಿಯನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದ್ದು, ಮೆಹಮೂದ್‌ನನ್ನು ಭಾರತದ ವಶಕ್ಕೆ ಒಪ್ಪಿಸುವ ಸಾಧ್ಯತೆಗಳಿವೆ.
Tagged with
nnews
ಮಂಗಳೂರು: ಪಡುಬಿದ್ರಿ ಠಾಣಾ ವ್ಯಾಪ್ತಿಯ ಪಲಿಮಾರು ರಸ್ತೆ ಬಳಿ ಅನಾಥ ಸ್ಥಿತಿಯಲ್ಲಿ ಪತ್ತೆಯಾದ ಓಮ್ನಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.ಗೋವಾ ರಾಜ್ಯ ನೋಂದಣಿ ಹೊಂದಿರುವ ನೀಲಿ ಬಣ್ಣದ ಓಮ್ನಿಯ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ವಾಹನದ ಮಾಲಕರು ಇದ್ದಲ್ಲಿ ಪಡುಬಿದ್ರಿ ಠಾಣಾ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.
Tagged with
cnews
ಮಂಗಳೂರು: ಕಾಪು ಸಮೀಪದ ಜನಾರ್ದನ ದೇವಸ್ಥಾನದ ಮುಂಭಾಗದಲ್ಲಿ ನಿನ್ನೆ ಅಲ್ಟೋ ಕಾರುಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಂದು ಕಾರು ಚರಂಡಿಗೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ.
Tagged with
cnews
ಗೇಲ್ ಸುನಾಮಿಗೆ ಕೊಚ್ಚಿಹೋದ ಡೆಲ್ಲಿ
ದೆಹಲಿ: ಕ್ರಿಸ್ ಗೇಲ್ ಸಿಡಿತುನಿಂತರೆ ಎದುರಾಳಿ ತಂಡ ಯಾವ ರೀತಿಯಲ್ಲಿ ಧೂಳೀಪಟವಾಗುತ್ತದೆ ಎಂದು ನಿನ್ನೆ ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಆಟವೇ ಸಾಕ್ಷಿ. ನಿನ್ನೆ ಇಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕ್ರಿಸ್ ಗೇಲ್ ಪ್ರದರ್ಶಿಸಿದ ಅಜೇಯ ಶತಕದ ನೆರವಿನಿಂದ ಬೆಂಗಳೂರು ಪಂದ್ಯವನ್ನು ರೋಚಕ ೨೧ ರನ್‌ಗಳಿಂದ ಗೆದ್ದುಕೊಂಡಿದ್ದು, ಈ ಮೂಲಕ ಸೆಮಿಸ್ ಆಸೆಯನ್ನು ಜೀವಂತವಾಗಿರಿಸಿದೆ. ಗೇಲ್ ಹಾಗೂ ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ ೧೭.೪ ಓವರ್‌ಗಳಲ್ಲಿ ಮುರಿಯದ ೨೦೪ ರನ್‌ಗಳ ಜೊತೆಯಾಟ ನಡೆಸಿದ್ದು, ದಾಖಲೆಯ ಜೊತೆಗೆ ಬ್ಯಾಟಿಂಗ್ ವೈಭವಕ್ಕೆ ಸಾಕ್ಷಿಯಾಗಿತ್ತು. ಇನ್ನು ಆರ್‌ಸಿಬಿಗೆ ಮುಂದಿನ ಹಂತಕ್ಕೆ ಪ್ರವೇಶಿಸಲು ಉಳಿದಿರುವ ಡೆಕ್ಕನ್ ವಿರುದ್ಧದ ಏಕೈಕ ಪಂದ್ಯವನ್ನು ಜಯಿಸಲೇ ಬೇಕಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಳೂರು ಅತ್ಯಂತ ಉಗ್ರ ರೂಪವನ್ನೇ ತಾಳಿತು. ದಿಲ್ಶಾನ್ (೧೦) ವಿಕೆಟ್ ಅಗ್ಗಕ್ಕೆ ಕಳಕೊಂಡರೂ ಗೇಲ್ ಹಾಗೂ ಕೊಹ್ಲಿ ಮಾತ್ರ ಉಗ್ರರೂಪವನ್ನೇ ತಾಳಿದರು. ಅದರಲ್ಲೂ ಗೇಲ್ ಪ್ರತಾಪಕ್ಕೆ ಡೆಲ್ಲಿ ಬೌಲರ್‌ಗಳು ತಬ್ಬಿಬ್ಬಾದರು. ಆರಂಭದಿಂದಲೇ ಎದುರಾಳಿ ಬೌಲರ್‌ಗಳನ್ನು ಗೇಲ್ ದಂಡನೆ ಮಾಡಿದ ರೀತಿ ಅಮೋಘವಾಗಿತ್ತು. ಕೊಹ್ಲಿ ಕೂಡ ಜವಾಬ್ದಾರಿಯಿಂದ ಆಟವಾಡಿದರು. ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ ೨೧೫ ರನ್ ಪೇರಿಸಿತು. ಗೇಲ್ ೬೨ ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ೧೩ ಸಿಕ್ಸ್‌ಗಳ ನೆರವಿನಿಂದ ಅಜೇಯ ೧೨೮ ರನ್ ಗಳಿಸಿದರೆ ಕೊಹ್ಲಿ (೭೩) ಕೂಡ ಆಕರ್ಷಕ ಅರ್ಧಶತಕ ಸಿಡಿಸಿದರು.
ಗುರಿ ಬೆನ್ನತ್ತಿದ್ದ ಡೆಲ್ಲಿ ಕೂಡ ತಾನೇನು ಯಾವ ತಂಡಕ್ಕೂ ಕಡಿಮೆಯಿಲ್ಲ ಎಂಬಂತೆ ಬ್ಯಾಟ್ ಬೀಸಿತು. ಒತ್ತಡವಿಲ್ಲದೆ ಆಡಿದ ತಂಡಕ್ಕೆ ಎಲ್ಲರೂ ಉತ್ತಮ ಕಾಣಿಕೆ ನೀಡಿದರು. ಡೆಲ್ಲಿ ಆರಂಭದಿಂದಲೇ ಆರ್‌ಸಿಬಿ ಮೇಲೆ ದಾಳಿ ನಡೆಸಲು ಆರಂಭಿಸಿತು. ಅದರಲ್ಲೂ ವೇಣುಗೋಪಾಲ್ ಹಾಗೂ ರಾಸ್ ಟೇಲರ್ ಅಬ್ಬರಕ್ಕೆ ಒಂದು ಕ್ಷಣ ಆರ್‌ಸಿಬಿ ಆಟಗಾರರು ತಬ್ಬಿಬ್ಬಾದರು. ಆದರೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆರ್‌ಸಿಬಿ ಡೆಲ್ಲಿಗೆ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ ೧೯೪ ಮಾಡಲಷ್ಟೇ ಅವಕಾಶ ಮಾಡಿಕೊಟ್ಟರು. ಟೇಲರ್ ೨೬ ಎಸೆತದಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸ್ ನೆರವಿನಿಂದ ೫೬ ರನ್ ಗಳಿಸಿದರು. ಡೆಲ್ಲಿ ಪರ ಎಲ್ಲಾ ದಾಂಡಿಗರು ಸ್ಫೋಟಕ ಆಟವನ್ನೇ ಪ್ರದರ್ಶಿಸುತ್ತಾ ಸಾಗಿದ್ದು, ಆರ್‌ಸಿಬಿಗೆ ಚಿಂತೆಯಾಗಿತ್ತು. ಒಂದು ವೇಳೆ ಟೇಲರ್ ಎರಡು ಓವರ್ ಹೆಚ್ಚು ಕ್ರೀಸ್‌ನಲ್ಲಿರುತ್ತಿದ್ದರೆ ಆಗ ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆ ಇತ್ತು. ಆದರೆ ಅದಕ್ಕೆ ಅವಕಾಶ ಕೊಡದ ವಿನಯ್ ಕುಮಾರ್ ತನ್ನ ಅದ್ಭುತ ಎಸೆತದಿಂದ ಸ್ಫೋಟಕ ಆಟಗಾರನ ವಿಕೆಟ್ ಪಡೆದರು. ಒಂದು ಹಂತದಲ್ಲಿ ಟೇಲರ್ ಹಾಗೂ ವೇಣುಗೊಪಾಲ್ ಜೋಡಿ ೨೫ ಎಸೆತದಲ್ಲಿ ೪೪ ರನ್ ಸ್ಫೋಟಿಸಿದಾಗ ತಂಡಕ್ಕೆ ಗೆಲುವು ಲಭಿಸಲಿದೆ ಎಂದೇ ತಿಳಿಯಲಾಗಿತ್ತು. ವೇಣುರವರ ಸಿಕ್ಸರ್ ಹೊಡೆತವನ್ನು ಕ್ಯಾಚ್ ಆಗಿ ಪರಿವರ್ತಿಸಿದ ಹರ್ಷಲ್ ಆರ್‌ಸಿಬಿಗೆ ವರವಾದರು. ವೇಣು ೨೪ ಎಸೆತದಲ್ಲಿ ೩೬ ರನ್ ಗಳಿಸಿದರು. ಕೆಳಕ್ರಮಾಂಕದಲ್ಲಿ ಬಂದ ರಸೆಲ್ ಕೇವಲ ೧೫ ಎಸೆತದಲ್ಲಿ ೩೧ ರನ್ ದೋಚಿದರೂ ಅದು ತಡವಾಗಿತ್ತು. ಆರ್‌ಸಿಬಿ ಪರ ಪರಮೇಶ್ವರನ್ ಮೂರು ವಿಕೆಟ್ ಪಡೆದರು.
Tagged with
tnews
ಪಂಜಾಬ್‌ಗೆ ಅಚ್ಚರಿಯ ಗೆಲುವುಣಿಸಿದ ಗಿಲ್‌ಕ್ರಿಸ್ಟ್
ಧರ್ಮಶಾಲಾ: ಎರಡು ಬಾರಿಯ ಡಿಫೆಂಡಿಂಗ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್‌ನ ಈ ಬಾರಿಯ ಪ್ರಶಸ್ತಿಯ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆ ಹೆಚ್ಚಿದೆ. ನಿನ್ನೆ ಪ್ರವೀಣ್ ಕುಮಾರ್ ಹಾಗೂ ಪರ್ವಿಂದರ್ ಆವಾನಾ ನಡೆಸಿದ ಮಾರಕ ಬೌಲಿಂಗ್ ದಾಳಿ ಹಾಗೂ ಆಡಮ್ ಗಿಲ್‌ಕ್ರಿಸ್ಟ್ ಪ್ರದರ್ಶಿಸಿದ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ಇಲೆವೆನ್ ಆರು ವಿಕೆಟ್‌ಗಳ ಜಯ ಸಾಧಿಸಿ ಸೆಮಿಸ್ ಆಸೆಯನ್ನು ಜೀವಂತವಾಗಿರಿಸಿದೆ. ಅತ್ತ ಪ್ಲೇಆಫ್ ಹಂತಕ್ಕೆ ಪ್ರವೇಶಿಸುವ ಚೆನ್ನೈ ಸಾಧ್ಯತೆ ಬಹುತೇಕ ಅಂತ್ಯಗೊಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಕಳಪೆ ಬ್ಯಾಟಿಂಗ್ ಪ್ರದರ್ಶವನ್ನು ನೀಡಿತು. ಅದರಲ್ಲೂ ಪ್ರವೀಣ್ ಹಾಗೂ ಆವಾನಾ ದಾಳಿಗೆ ಸಮರ್ಥ ಉತ್ತರ ನೀಡುವಲ್ಲಿ ಚೆನ್ನೈ ವಿಫಲಗೊಂಡಿತು. ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೧೨೦ ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಡ್ವೇಯ್ನ್ ಬ್ರಾವೊ (೪೮) ಅತೀ ಹೆಚ್ಚಿನ ಮೊತ್ತ ದಾಖಲಿಸಿದರು. ಪ್ರವೀಣ್ ಹಾಗೂ ಆವಾನಾ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಪಂಜಾಬ್ ಪರ ಆರಂಭಿಕ ಮಂದಿಪ್ (೨೪) ಹಾಗೂ ಗಿಲ್‌ಕ್ರಿಸ್ಟ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ ೫೧ ರನ್‌ಗಳ ಜೊತೆಯಾಟ ನಡೆಸಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸೈನಿ (೧), ಡೇವಿಡ್ ಹಸ್ಸಿ (೯) ಹಾಗೂ ಸಿದ್ದಾರ್ಥ್ ಚಿಟ್ನಿ (೧೧) ಬ್ಯಾಟಿಂಗ್ ವೈಫಲ್ಯ ಕಂಡರೂ ಗಿಲ್‌ಕ್ರಿಸ್ಟ್ ಮಾತ್ರ ತಂಡಕ್ಕೆ ಆಧಾರಸ್ತಂಭವಾಗಿ ನಿಂತರು. ಪರಿಣಾಮ ತಂಡ ೧೬.೩ ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೧೨೩ ರನ್ ಪೇರಿಸಿ ಜಯದಾಖಲಿಸಿತು. ಗಿಲ್‌ಕ್ರಿಸ್ಟ್ ಕೇವಲ ೪೬ ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸ್ ನೆರವಿನಿಂದ ಅಜೇಯ ೬೪ ರನ್ ಗಳಿಸಿದ್ದರು. ಚೆನ್ನೈ ಪರ ಬ್ರಾವೊ ಪ್ರಮುಖ ಎರಡು ವಿಕೆಟ್ ಪಡೆದರಾದರೂ ಗೆಲುವಿಗೆ ಕಾರಣವಾಗಲಿಲ್ಲ.
Tagged with
tnews
ಎಮ್‌ಸಿಎ ಭದ್ರತಾ ಅಧಿಕಾರಿಗಳೊಂದಿಗೆ ಜಟಾಪಟಿ
ಮುಂಬಯಿ: ಬುಧವಾರ ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಕೊಲ್ಕತ್ತಾ ಹಾಗೂ ಮುಂಬೈ ನಡುವಿನ ಪಂದ್ಯದ ವೇಳೆ ಭದ್ರತಾ ಅಧಿಕಾರಿಗಳೊಂದಿಗೆ ಜಟಾಪಟಿಯಲ್ಲಿ ಭಾಗವಹಿಸಿದ್ದ ಕೆಕೆಆರ್ ತಂಡದ ಸಹಮಾಲಕ ಶಾರುಕ್ ಖಾನ್ ವಿರುದ್ಧ ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಮ್‌ಸಿಎ) ದೂರು ದಾಖಲಿಸಿದೆ. ಈ ವೇಳೆ ಶಾರುಕ್ ಮದ್ಯಪಾನ ಮಾಡಿದ್ದರು ಎಂದು ಎಮ್‌ಸಿಎ ಆಪಾದಿಸಿದ್ದರೂ ಶಾರುಕ್ ಇದನ್ನು ಅಲ್ಲಗಳೆದಿದ್ದಾರೆ. ಪಂದ್ಯ ಮುಗಿದ ನಂತರ ಶಾರುಕ್ ಫೀಲ್ಡ್‌ಗೆ ಪ್ರವೇಶಿಸಲು ಪ್ರಯತ್ನಿಸಿದ್ದರೆಂದು ಅವರ ಮೇಲೆ ಆರೋಪ ಮಾಡಲಾಗಿದೆ.
ಶಾರುಕ್ ಮದ್ಯಪಾನ ಮಾಡಿ ಮೈದಾನಕ್ಕೆ ಅಕ್ರಮವಾಗಿ ಪ್ರವೇಶಿಸಲು ನೋಡಿದ್ದರು. ಈ ವೇಳೆ ಭದ್ರತಾ ಅಧಿಕಾರಿಗಳು ತಡೆಯಲು ಪ್ರಯತ್ನಿಸಿದಾಗ ಅವರ ಮೇಲೆ ವಾಗ್ದಾಳಿ ನಡೆಸಿದರು. ಅಲ್ಲದೆ ಎಮ್‌ಸಿಎ ಅಧ್ಯಕ್ಷ ವಿಲಾಸ್‌ರಾವ್ ದೇಶ್‌ಮುಖ್ ಸೇರಿದಂತೆ ಇತರೆ ಅಧಿಕಾರಿಗಳ ಮೇಲೆ ತೀವ್ರ ಹರಿಹಾಯ್ದಿದ್ದು, ಹಾಗಾಗಿ ನಾವು ಮರೀನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಅಲ್ಲದೆ ಮೈದಾನಕ್ಕೆ ಪ್ರವೇಶಿಸದಂತೆ ಅವರಿಗೆ ಅಜೀವ ನಿಷೇಧ ಹೇರಲು ನಿರ್ಧರಿಸಿದ್ದೇವೆ ಎಂದು ಎಮ್‌ಸಿಎ ಕಾರ್ಯದರ್ಶಿ ರವಿ ಸಾವಂತ್ ತಿಳಿಸಿದ್ದಾರೆ.
ಶಾರುಕ್ ಮೇಲೆ ಅಜೀವ ನಿಷೇಧ ಹೇರಿದ ಬಗ್ಗೆ ಪ್ರತಿಕ್ರಿಯಿಸಿರುವ ಐಪಿಎಲ್ ಗವರ್ನಿಂಗ್ ಕೌನ್ಸಿಲ್‌ನ ಅಧ್ಯಕ್ಷ ರಾಜೀವ್ ಶುಕ್ಲಾ, ನಿಷೇಧ ನಿರ್ಧಾರವನ್ನು ಕಾರ್ಯಕಾರಿ ಸಮಿತಿಯು ತೆಗೆದು ಕೊಂಡಿದ್ದು, ಹಾಗಾಗಿ ಅಧ್ಯಕ್ಷ ವಿಲಾಸ್‌ರಾವ್ ಜೊತೆ ಈ ಬಗ್ಗೆ ಮಾತನಾಡಿ ವಿವಾದವನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದರು.
ನಾನು ಕೋಪಗೊಂಡಿದ್ದೆ; ಕುಡಿದಿರಲಿಲ್ಲ: ಶಾರುಖ್
ವಾಂಖೆಡೆ ಮೈದಾನದ ಭದ್ರತಾ ಅಧಿಕಾರಿಗಳೊಂದಿಗೆ ಜಟಾಪಟಿ ನಡೆಸಿದ್ದಕ್ಕೆ ಮೈದಾನ ಪ್ರವೇಶಿಸದಂತೆ ಅಜೀವ ನಿಷೇಧ ಪಡೆದುಕೊಂಡಿರುವ ಶಾರುಕ್ ಖಾನ್ ಈಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನಾನು ಆ ಹೊತ್ತಿನಲ್ಲಿ ಕೋಪಗೊಂಡಿದ್ದೇ ವಿನಹ ಮದ್ಯಪಾನ ನಡೆಸಿರಲಿಲ್ಲ ಎಂದು ತಿಳಿಸಿದ್ದಾರೆ.
ನಿಜವಾಗಿಯೂ ನಾನು ಆ ಹೊತ್ತಿನಲ್ಲಿ ಕುಡಿದು ಗಲಭೆ ನಡೆಸಿರಲಿಲ್ಲ. ಮಕ್ಕಳನ್ನು ಕರೆದು ಕೊಂಡು ಹೋಗಲು ಮೈದಾನಕ್ಕೆ ಆಗಮಿಸಲು ಹೋಗಿದ್ದಾಗ ಭದ್ರತಾ ಅಧಿಕಾರಿಗಳು ನನ್ನನ್ನು ತಡೆದರು. ಆಗ ನಾನು ಕೋಪಗೊಂಡು ಅವರ ಜೊತೆ ವಾಗ್ವಾದ ನಡೆಸಿದ್ದೆ. ಆ ವೇಳೆ ನಾನು ಒಬ್ಬಂಟಿಯಾಗಿದ್ದು, ಅವರು ಸುಮಾರು ೨೫ರ ಸಂಖ್ಯೆಯಲ್ಲಿದ್ದು, ನನ್ನ ಮೇಲೆ ತೀವ್ರ ತರವಾದ ಮಾತನ್ನಾಡಿದ್ದರು. ಇದಕ್ಕೆ ಅವರು ನನ್ನ ಬಳಿ ಕ್ಷಮೆ ಕೋರಬೇಕು ಎಂದು ಶಾರುಕ್ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದರು.
Tagged with
tnews
ಮಣಿಪಾಲ: ಉಡುಪಿ ಯೂತ್ ಕಾಂಗ್ರೆಸ್ ವತಿಯಿಂದ ರಾಜ್ಯ ಸರಕಾರದ ಆಡಳಿತ ವೈಫಲ್ಯದ ವಿರುದ್ಧ ಉಡುಪಿ ತಾಲೂಕು ಕಚೇರಿಯೆದುರು ನಿನ್ನೆ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಮಾತನಾಡಿ ಈಗಾಗಲೇ ರಾಜ್ಯ ಸರಕಾರ ಜಾರಿ ಮಾಡಿರುವ ಸಕಾಲ ಯೋಜನೆ ಸಂಪೂರ್ಣ ತೊಂದರೆಗೆ ಒಳಗಾಗಿದ್ದು, ಇದನ್ನು ರದ್ದುಪಡಿಸಿ ಈ ಹಿಂದೆ ಇದ್ದಂತೆ ಯೋಜನೆಯನ್ನು ಮುಂದು ವರಿಸಬೇಕು. ಅಲ್ಲದೆ ಈಗಿರುವ ಸಕಾಲವನ್ನು ಮುಖ್ಯಮಂತ್ರಿ ಕಚೇರಿಗೆ ಮಾತ್ರ ಅಳವಡಿಸಿ ಭ್ರಷ್ಟಾಚಾರ ನಿಯಂ ತ್ರಿಸಲಿ ಎಂದು ಟೀಕಿಸಿದರು. ಸುಮಾರು ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿ ರುವ ರಾಜ್ಯ ಲೋಕಾಯುಕ್ತರನ್ನು ನೇಮಿಸಿರುವುದು ಖಂಡನೀಯ ಎಂದ ಅವರು ಜನಸಾಮಾನ್ಯರಿಗೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ ನೀಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಜನಸಾಮಾನ್ಯರಿಗೆ ಪಡಿತರ ಚೀಟಿ ನೀಡದಿರುವುದು ಮತ್ತು ಉಡುಪಿ ತಾಲೂಕಿನ ಭೂನ್ಯಾಯ ಮಂಡಳಿಗೆ ಎ.ಸಿಯವರನ್ನು ನೇಮಿಸ ಬೇಕು. ಕಂದಾಯ ಇಲಾಖಾ ಕಚೇರಿ ಯಲ್ಲಿ ತ್ವರಿತಗತಿಯಲ್ಲಿ ಕೆಲಸ ಕಾರ‍್ಯ ನಡೆಯದೆ ಇರುವುದರಿಂದ ಜನಸಾಮಾ ನ್ಯರು ತೊಂದರೆಗೀಡಾಗಿದ್ದು, ಅದನ್ನು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿ ಸಿದರು. ಪ್ರತಿಭಟನೆಯ ಬಳಿಕ ತಹಶೀ ಲ್ದಾರರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ವೇಳೆ ಯೂತ್ ಕಾಂಗ್ರಸ್ ಮುಖಂಡರಾದ ಯತೀಶ್ ಕರ್ಕೇರ, ಹಬೀಬ್ ಆಲಿ, ನವೀನ್ ಶೆಟ್ಟಿ, ಅಮೃತ್ ಶೆಣೈ ಉಪಸ್ಥಿತರಿದ್ದರು.
Tagged with
lnews,
udupi
ಬಂಟ್ವಾಳ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಲ್ಲಿ ಬಂಟ್ವಾಳದ ವಿದ್ಯಾ ಗಿರಿ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನವ್ಯಾ ಆರ್. ಎಸ್. ಅವರು ೬೨೩ ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಉತ್ತಮ ಚೆಸ್ ಆಟಗಾರ್ತಿಯೂ ಆಗಿರುವ ನವ್ಯಾ ಬಾಲ್ಯದಿಂದಲೂ ಕಲಿಯುವಿಕೆಯಲ್ಲಿ ಮುಂದಿದ್ದರು. ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದರು. ಸಂಗೀತ, ನೃತ್ಯ ಹವ್ಯಾಸ ವನ್ನೂ ಬೆಳೆಸಿಕೊಂಡಿದ್ದ ನವ್ಯಾ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿರುವುದು ಅವರ ಹೆತ್ತವರಿಗೆ ಸಂತಸ ತಂದಿದೆ. ಎಸ್‌ವಿಎಸ್ ಶಿಕ್ಷಣ ಸಂಸ್ಥೆಯ ಕೀರ್ತಿ ಪತಾಕೆಯನ್ನು ರಾಜ್ಯದಲ್ಲಿ ಹಾರಿಸಿರುವ ನವ್ಯಾ ಮುಂದೆ ಇಂಜಿನಿಯರಿಂಗ್ ಪದವಿ ಮಾಡುವ ಆಸೆ ಹೊಂದಿದ್ದಾರೆ. ಮೂಲತ: ಹೆಬ್ರಿಯ ಹುತ್ತುರ್ಕೆ ನಿವಾಸಿ ಉಪನ್ಯಾಸಕ ರತ್ನಾಕರ ಶೆಟ್ಟಿ ಹಾಗೂ ಪ್ರಭಾವತಿ ಆರ್.ಶೆಟ್ಟಿ ದಂಪತಿಯ ಪುತ್ರಿಯಾಗಿರುವ ನವ್ಯಾ ಕಳೆದ ಹತ್ತು ವರ್ಷಗಳಿಂದ ಬಂಟ್ವಾಳದ ವಿದ್ಯಾಗಿರಿಯಲ್ಲಿ ಕಲಿಯುತ್ತಿದ್ದಾರೆ.
Tagged with
dk,
lnews,
sslc
ಮಂಗಳೂರು: ಆರುತಾಸಿನ ಓದು, ಪುಸ್ತಕದ ಪ್ರೀತಿ, ಹೆತ್ತವರ ಪ್ರೋತ್ಸಾಹ, ಶಿಕ್ಷಕರ ಮಾಗದರ್ಶನ ಇದೇ ನನ್ನ ಗೆಲುವಿನ ಸಿಕ್ರೇಟ್, ಹೀಗೇನ್ನುತ್ತಾಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದ ಸುರತ್ಕಲ್ ಹೊಸಬೆಟ್ಟು ನಿವಾಸಿ ಪಲ್ಲವಿ ರಾವ್, ಇದು ಅವಿಸ್ಮರಣೀಯ ಕ್ಷಣ, ರಾಜ್ಯದ ರ‍್ಯಾಂಕ್ ಪಟ್ಟಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನಿಯಾಗಿ ಟಿ.ವಿ ಪರದೆಯಲ್ಲಿ ನನ್ನ ಹೆಸರು ಕಾಣಿಸಿಕೊಂಡಾಗ ಭಾವೊದ್ವೇಗಕ್ಕೆ ಒಳಗಾಗಿದ್ದೇ.ತಟ್ಟನೇ ಅಮ್ಮನನ್ನು ಬಿಗಿದಪ್ಪಿಕೊಂಡೇ ನನ್ನ ಆ ಸಂತೋಷಕ್ಕೆ ಅವರೇ ಕಾರಣರು. ಹೀಗೆನ್ನುವ ಪಲ್ಲವಿ ಮತ್ತೆ ಮತ್ತೆ ಮುಗಿಲಿನತ್ತ ದಿಟ್ಟಿಸಿ ಕೈ ಮುಗಿಯುತ್ತಾಳೆ. ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ದೇವರಿಗೆ ಥ್ಯಾಂಕ್ಸ್ ಎನ್ನುವುದು ನನ್ನ ಕರ್ತವ್ಯ ಎನ್ನುತ್ತಾಳೆ.
ಪಲ್ಲವಿ ರಾವ್, ಇಂದು ರಾಜ್ಯವೇ ಹೆಮ್ಮೆ ಪಡುತ್ತಿರುವ ಹೆಸರು ಮಂಗಳೂರು ತಾಲೂಕು ಸುರತ್ಕಲ್ ಬಳಿಯ ಹೊಸಬೆಟ್ಟು ನಿವಾಸಿ ಕೆ. ಮಂಜುನಾಥ್ ರಾವ್ ಮತ್ತು ಭುವನೇಶ್ವರಿ ಇವರ ಏಕೈಕ ಮಗಳು. ಸುರತ್ಕಲ್ ವಿದ್ಯಾದಾಯಿನಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ ಅಂಕದಲ್ಲಿ ೬೨೧ ಅಂಕ ಪಡೆದು ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದ ಧೀಮಂತೆ.
ರ‍್ಯಾಂಕ್ ಇಲ್ಲವಾದರೂ ಉತ್ತಮ ಅಂಕ ಪಡೆದು ಮುಂದೆ ವಿಜ್ಞಾನ ವಿಷಯವನ್ನ ಆಯ್ಕೆ ಮಾಡಿಕೊಂಡು ಇಂಜಿನಿಯರ್ ಆಗಬೇಕು ಎಂದುಕೊಂಡ ಪಲ್ಲವಿ ಸಾಮಾನ್ಯ ಎನ್ನುವ ಮನೆತನದಲ್ಲಿ ಹುಟ್ಟಿ ಬೆಳೆದಾಕೆ. ಹೆತ್ತವರ ಪ್ರೋತ್ಸಾಹ, ಶಿಕ್ಷಕರ ಮಾಗದರ್ಶನ ಸ್ನೇಹಿತರ ಸಹಕಾರ, ಬಂಧು ಬಳಗದ ಆಶೀರ್ವಾದ ಮತ್ತು ತನ್ನ ಶ್ರಮ ಹಾಗೂ ಆತ್ಮವಿಶ್ವಾಸದಿಂದಲೇ ಶಿಕ್ಷಣ ರಂಗದಲ್ಲಿ ರಾಜ್ಯದ ಚಿತ್ತವನ್ನು ತನ್ನತ್ತ ಸೆಳೆದಿದ್ದಾಳೆ.
ಪುಸ್ತಕವನ್ನು ಪ್ರೀತಿಸಿ, ಪುಸ್ತಕವನ್ನು ನಮ್ಮ ಬೆಸ್ಟ್ ಫ್ರೆಂಡ್ ಅಂದುಕೊಂಡಾಗ ನಾವು ವಿದ್ಯೆಯನ್ನು ಗೆಲ್ಲುತ್ತೇವೆ, ಪರೀಕ್ಷಾ ದಿನದಲ್ಲಿ ಟಿ.ವಿಯಿಂದ ಆದಷ್ಟು ದೂರ ಇರಿ, ಟಿವಿ ನಮ್ಮ ಏಕಾಗ್ರತೆಯನ್ನು ಕಸಿಯುತ್ತದೆ. ನಮ್ಮೊಳಗಿನ ಸ್ವಂತಿಕೆಯನ್ನು ಬಲಿಪಡೆಯುತ್ತದೆ. ಸಮಯಕ್ಕೆ ಮಹತ್ವ ಕೊಡಿ ಒಂದು ನಿರ್ದಿಷ್ಟ ಸಮಯದ ಟೈಂ ಟೇಬಲ್ ಮಾಡಿಕೊಂಡು ಓದಿದರೆ ಗೆಲುವು ಕಷ್ಟ ಅಲ್ಲ. ನಮಗೆ ಯಾವ ವಿಷಯ ಕಷ್ಟವೋ ಅದಕ್ಕೆ ಹೆಚ್ಚಿನ ಸಮಯವನ್ನು ನೀಡ ಬೇಕು ಅರ್ಥವಾಗದಿದ್ದರೇ ಹತ್ತುಬಾರಿಯಾದರೂ ಪರವಾಗಿಲ್ಲ ಕೇಳಿ ತಿಳಿದುಕೊಳ್ಳ ಬೇಕು, ಹೀಗೆ ಮಾಡುವುದರಿಂದ ನಾವು ಮರ್ಯಾದೆ ಕಳೆದುಕೊಳ್ಳುತ್ತೇವೆ ಎನ್ನುವ ಅಂಜಿಕೆ ಬೇಡ, ಕೇಳುವುದರಿಂದ ನಾವು ತುಂಬಾ ಪಡೆಯುತ್ತೇವೆ ಎನ್ನುವುದು ಮುಖ್ಯ ಎನ್ನುವ ಪಲ್ಲವಿ. ಪರೀಕ್ಷಾ ದಿನದಲ್ಲೂ ಏಳುವುದು ೬ ಗಂಟೆಗೆ ಮಲಗುವುದು ೧೦ ಗಂಟೆಗೆ ದಿನದ ಆರು ತಾಸಿನ ಅವಧಿಯಲ್ಲಿ ಸರಿಯಾದ ಕ್ರಮದಲ್ಲಿ ಓದಿದರೂ ಸಾಕಾಗುತ್ತದೆ ಎನ್ನುವ ಪಲ್ಲವಿ ಅದರಲ್ಲೇ ಗೆಲುವು ಕಂಡಿದ್ದಾಳೆ.
ಪಲ್ಲವಿ ಒಳ್ಳೆ ಯೋಗ ಪಟುವೂ ಹೌದು. ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ೫ ಸ್ಥಾನ ಪಡೆದಿದ್ದರೇ ರಾಜ್ಯ ಮತ್ತು ದಕ್ಷಿಣ ಭಾರತ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಳು.
ಇದಲ್ಲದೆ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಹಂತವನ್ನು ಪೂರೈಸಿರುವ ಪಲ್ಲವಿ ಪ್ರತಿಭಾ ಕಾರಂಜಿ ಹಾಗೂ ಇನ್ನಿತರ ಸ್ಫರ್ಧೆಯಲ್ಲಿ ಹತ್ತಾರು ಬಹುಮಾನ ಪಡೆದುಕೊಂಡಿದ್ದಾಳೆ. ರಂಗೋಲಿ, ಡ್ರಾಯಿಂಗ್‌ನಲ್ಲೂ ಪಲ್ಲವಿ ಮಿಂಚಿದ್ದಾಳೆ. ಸ್ಥಳೀಯ ಚಾನೆಲ್‌ನಲ್ಲಿ ಪಲ್ಲವಿಯ ಯೋಗ ಕಾರ್ಯಕ್ರಮ ಸಾಕಷ್ಟು ಹೆಸರು ಮಾಡಿತ್ತು.
Tagged with
dk,
lnews,
sslc
ಮಂಗಳೂರು: ದಿನವಿಡೀ ಬೀಡಿ ಕಟ್ಟಿದರೂ ಒಂದು ಸಾವಿರ ಆಗುವುದಿಲ್ಲ. ಇಷ್ಟೆಲ್ಲಾ ಕಷ್ಟಪಟ್ಟು ಕಟ್ಟುವ ಸಾವಿರ ಬೀಡಿಗೆ ೧೧೬ರೂ. ೨೦ಪೈ. ನೀಡಲು ಬೀಡಿ ಕಂಪೆನಿ ಮಾಲೀಕರಿಗೆ ಸಾಧ್ಯವಿಲ್ಲದಷ್ಟು ಗತಿ ಗೇಡು ಬಂದಿದೆಯಾ ಎಂದು ಸಿಐಟಿಯು ಮುಖಂಡ ವಸಂತ ಆಚಾರಿ ಪ್ರಶ್ನಿಸಿದ್ದಾರೆ.
ಬೀಡಿಗೆ ಕನಿಷ್ಟ ವೇತನದಲ್ಲಿ ಹೆಚ್ಚಳ ಮಾಡುವಂತೆ ಒತ್ತಾಯಿಸಿ ನಿನ್ನೆ ಸಿಐಟಿಯು ವತಿಯಿಂದ ಬೆಂದೂರ್‌ವೆಲ್‌ನಲ್ಲಿರುವ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರ ಕಚೇರಿಯೆದುರು ನಡೆದ ಪ್ರತಿಭಟನೆ ಯನ್ನುದ್ದೇಶಿಸಿ ಅವರು ಮಾತನಾ ಡಿದರು.
ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಈ ಸಂದರ್ಭ ಸಾವಿರ ಬೀಡಿಗೆ ೧೧೬.೨೦ರೂ. ನೀಡುವಂತೆ ರಾಜ್ಯ ಕಾರ್ಮಿಕ ಇಲಾಖೆಗೆ ಮನವಿ ಮಾಡಿದಾಗ ಈ ಪ್ರಸ್ತಾವಕ್ಕೆ ಕಂಪೆನಿ ಮಾಲೀಕರು ವಿರೋಧ ವ್ಯಕ್ತಪಡಿಸಿ ದ್ದಾರೆ ಎಂದು ಕಾರ್ಯದರ್ಶಿ ಹೇಳಿಕೆ ನೀಡುತ್ತಾರೆ. ಇದನ್ನು ಗಮನಿಸಿದಾಗ ಸರಕಾರ ಮಾಲೀಕರ ಪರವಾಗಿರುವುದು ಸಾಬೀತಾಗುತ್ತದೆ. ಏಳು ದಿನಗಳಲ್ಲಿ ಬೇಡಿಕೆಗೆ ಸ್ಪಂದನೆ ಸಿಗದಿದ್ದಲ್ಲಿ ಮುಂದಿನ ಹೋರಾಟ ಉಗ್ರವಾಗಿ ರುತ್ತದೆ. ಆ ವೇಳೆ ನಡೆಯುವ ಅನಾಹುತಗಳಿಗೆ ಸರಕಾರವೇ ಹೊಣೆಯಾಗಿರುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ಸುನಿಲ್ ಬಜಾಲ್, ಎಲ್.ಟಿ.ಸುವರ್ಣ, ಬಾಲಕೃಷ್ಣ ಶೆಟ್ಟಿ, ಬಾಬು ಪಿಲಾರ್ ಮತ್ತಿತರರು ಉಪಸ್ಥಿತರಿದ್ದರು.
Tagged with
citu,
dk,
lnews
ಕಾಸರಗೋಡು: ಕಳೆದ ಒಂದೂವರೆ ವರ್ಷಗಳಿಂದ ವಿಚಾರಣಾಧೀನ ಖೈದಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳೂ ನಿರಾಕರಿಸಲ್ಪಟ್ಟು ಕಳೆಯುತ್ತಿರುವ ಕೇರಳದ ಪಿ.ಡಿ.ಪಿ ಪಕ್ಷದ ವರಿಷ್ಠಾಧ್ಯಕ್ಷ, ಪ್ರಮುಖ ಮತ ವಿದ್ವಾಂಸ ಅಬ್ದುಲ್ ನಾಸಿರ್ ಮದನಿ ಅವರ ದೃಷ್ಟಿ ಶಕ್ತಿ ಬಹುತೇಕ ಕಳೆಗುಂದಿರುವುದಾಗಿ ತಿಳಿಯಲಾಗಿದೆ. ಕೆಲವು ರೋಗಗಳಿಂದ ಬಳಲುತ್ತಿರುವ ಮದನಿ ಅವರು ತನ್ನ ೭೫ ಶೇಕಡಾದಷ್ಟು ದೃಷ್ಟಿ ಶಕ್ತಿಯನ್ನು ಕಳೆದುಕೊಂಡಿರುವುದಾಗಿ ಅವರ ವೈದ್ಯಕೀಯ ಮೂಲಗಳು ತಿಳಿಸಿವೆ.
ಇದೇ ರೀತಿ ಮುಂದುವರಿದಲ್ಲಿ ಅವರು ಸದ್ಯದಲ್ಲೇ ಪೂರ್ಣ ಅಂಧನಾ ಗುವ ಆತಂಕ ಎದುರಾಗಿದ್ದು, ಅವರನ್ನು ತುರ್ತು ಶಸ್ತ್ರಕ್ರಿಯೆಗೆ ಒಳಪಡಿಸುವುದು ಅನಿವಾರ್ಯವೆಂದು ಅವರನ್ನು ಶುಶ್ರೂಷಿಸುತ್ತಿರುವ ಬೆಂಗಳೂರು ನಾರಾಯಣ ನೇತ್ರ ಚಿಕಿತ್ಸಾಲಯದ ವೈದ್ಯರು ಸಲಹೆಯಿತ್ತಿದ್ದಾರೆ. ಬಲಕಣ್ಣಿನ ದೃಷ್ಟಿ ಶಕ್ತಿ ಬಹುತೇಕ ನಷ್ಟವಾಗಿದೆ. ಸಿಹಿಮೂತ್ರ ರೋಗ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿದ್ದು ಡಯಾಬೆಟಿಕ್ ರೆಟಿನೋಪತಿ ಎಂಬ ರೋಗವೇ ಅವರ ಕಣ್ಣಿನ ಕಾಣುವ ಶಕ್ತಿ ಕಳಕೊಳ್ಳಲು ಕಾರಣ ಎನ್ನಲಾಗಿದೆ. ೨೦೦೪ರ ಬೆಂಗಳೂರು ಸ್ಫೋಟಕ್ಕೆ ಸಂಬಂಧಿಸಿ ೨೦೧೦ರ ಅಗೋಸ್ತು ೧೭ರಂದು ಮದನಿಯವರನ್ನು ಕೊಲ್ಲಂ ಜಿಲ್ಲೆಯ ವಸತಿಯಿಂದ ಕರ್ನಾಟಕ ಪೊಲೀಸರು ಬಂಧಿಸಿದ್ದರು. ಈ ಹಿಂದೆ ಯಾವುದೇ ರೋಗ ಕಂಡು ಬಂದಲ್ಲಿ ಅವರಿಗೆ ತಕ್ಷಣ ಚಿಕಿತ್ಸೆ ಒದಗಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿತ್ತು. ಆದರೆ, ಜೈಲಧಿಕೃತರು ಇದಕ್ಕೆ ಯಾವುದೇ ಸೌಕರ್ಯ ಕಲ್ಪಿಸುತ್ತಿಲ್ಲ ಎನ್ನಲಾಗಿದೆ. ಮದನಿಗೆ ಅಗತ್ಯ ಚಿಕಿತ್ಸೆ ಒದಗಿಸಬೇಕೆಂದು ಕೋರಿ ಈ ಹಿಂದೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ವಿಪಕ್ಷ ನಾಯಕ ವಿ.ಎಸ್. ಅಚ್ಚುತಾನಂದನ್ ಅವರು ಕರ್ನಾಟಕ ಸರಕಾರದೊಡನೆ ಆಗ್ರಹಿಸಿದ್ದಾಗ ಸರ್ಕಾರ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
Tagged with
kasaragod,
lnews
ಮಂಗಳೂರು: ಮೂರು ವರ್ಷ ಗಳ ಹಿಂದೆ ಕಟ್ಟಡ ವ್ಯಾಪಾರಕ್ಕೆ ಸಂಬಂಧಿಸಿ ಕಮಿಷನ್ ಕೇಳಿದ್ದರಿಂದ ಆಕ್ರೋಶಗೊಂಡಿದ್ದ ಬ್ರೋಕರ್ ನೀಡಿದ ದೂರನ್ನೇ ಆಧರಿಸಿ ಇನ್ನೋರ್ವ ಬ್ರೋಕರ್ ವಿರುದ್ಧ ಕೇಸು ದಾಖಲಿಸಿ ಬನ್ನಂಜೆ ರಾಜಾ ಸಹಚರನ ಪಟ್ಟ ಕಟ್ಟಿದ ಘಟನೆ ನಡೆದಿದೆ.
ಘಟನೆಯ ವಿವರ: ೨೦೦೮ರಲ್ಲಿ ಮಂಗಳೂರಿನ ವೆಲೆನ್ಸಿಯಾದಲ್ಲಿದ್ದ ಇಂತಿಯಾಝ್ ಎಂಬವರಿಗೆ ಸೇರಿದ್ದ ನಾಲ್ಕು ಮಹಡಿಯ ಕಟ್ಟಡವೊಂದನ್ನು ಜಾಫರ್, ರಝಾಕ್, ಬಾವಾ, ಕೆರೀಂ, ಖಾದರ್, ರಿಯಾಝ್ ಹರೇಕಳ ಮತ್ತು ಎಂ.ಕೆ.ಬದುರು ಶಫಿ ಎಂಬವರು ಸೇರಿ ೪.೫ ಕೋಟಿಗೆ ವ್ಯಾಪಾರ ಕುದುರಿ ಸಿದ್ದರು. ಈ ಕಟ್ಟಡವನ್ನು ಅಬ್ದುಲ್ ರಝಾಕ್ ಎಂಬವರು ಖರೀದಿಸಿದ್ದರು ಎನ್ನಲಾಗಿದೆ.
ವ್ಯವಹಾರ ಮುಗಿದ ಬಳಿಕ ಪ್ರಮುಖ ಬ್ರೋಕರ್ ಆಗಿದ್ದ ಬದುರು ಶಫಿ ಎಂಬಾತ ಕಮಿಷನ್‌ನಲ್ಲಿ ತನ ಗೊಬ್ಬನಿಗೆ ೨ ಲಕ್ಷ ನೀಡಬೇಕು ಎಂದು ಇತರ ಬ್ರೋಕರ್‌ಗಳಲ್ಲಿ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಅಲ್ಲದೆ ಕಟ್ಟಡದ ಮಾಲೀ ಕರನ್ನು ಸಂಪರ್ಕಿಸಿ ೪.೫ಕೋಟಿ ಬದಲು ೪.೯ಕೋಟಿಗೆ ಕಟ್ಟಡದ ದರ ನಿಗದಿಪಡಿಸಬೇಕು, ಇಲ್ಲವಾದಲ್ಲಿ ವ್ಯವಹಾರವನ್ನು ಕಡಿಯುವುದಾಗಿ ಬೆದರಿಸಿದ್ದ ಎನ್ನಲಾಗಿದೆ.
ಈ ರೀತಿಯಾಗಿ ಮಾಲೀಕರಿಂದ ನಾಲ್ಕು ಲಕ್ಷ ಹಾಗೂ ಕಮಿಷನ್ ರೂಪದಲ್ಲಿ ಎರಡು ಲಕ್ಷ ಪೀಕಿಸಿದ್ದ ಎನ್ನಲಾಗಿದೆ. ನಂತರ ಇತರ ಆರು ಬ್ರೋಕರ್‌ಗಳಿಗೆ ನೀಡಬೇಕಾಗಿದ್ದ ೧,೩೩,೩೦೦ರೂ. ಕಮಿಷನ್ ಬದಲು ರೂ.೧.೩ ಲಕ್ಷ ಮಾತ್ರವೇ ನೀಡುವುದಾಗಿ ತಿಳಿಸಿದ್ದು ಇದಕ್ಕೂ ಇತರ ಬ್ರೋಕರ್‌ಗಳು ಒಪ್ಪಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಅಂತಿಮ ಒಪ್ಪಂದದ ಪ್ರಕಾರವೂ ಹಣ ನೀಡದೆ ಶಫಿ ಮೋಸ ಮಾಡಿದ್ದ.
ಇದರಿಂದ ಅಸಮಾಧಾನಗೊಂಡಿದ್ದ ಓರ್ವ ಬ್ರೋಕರ್ ವರ್ಷದ ಹಿಂದೆ ರಿಯಾಝ್ ಅವರ ಮೊಬೈಲ್‌ನಲ್ಲಿ ಬದುರು ಶಫಿಗೆ ಕರೆ ಮಾಡಿ ಹಣ ನೀಡುವಂತೆ ಒತ್ತಾಯಿಸಿದ್ದ. ಇದರಿಂದ ಕೆರಳಿದ್ದ ಶಫಿ, ಕರೆ ಬಂದ ನಂಬರ್ ಯಾರದ್ದೆಂದು ಗೊತ್ತಿದ್ದರೂ ಬಂಟ್ವಾಳ ಗ್ರಾಮಾಂತರ ಠಾಣೆಗೆ ತೆರಳಿ ತನಗೆ ಬನ್ನಂಜೆ ರಾಜಾನ ಸಹಚರ ಕರೆ ಮಾಡಿ ಒಂದು ಕೋಟಿ ನೀಡುವಂತೆ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಿದ್ದ.
ಆತ ನೀಡಿದ ದೂರಿನ ಬಗ್ಗೆ ಸತ್ಯಾಸತ್ಯತೆಯನ್ನು ಅರಿಯದ ಪೊಲೀಸರು ಅಂದು ಶಫಿ ನೀಡಿದ್ದ ದೂರು ದಾಖಲಿಸಿ ಕಡತವನ್ನು ಕಪಾಟಿನಲ್ಲಿಟ್ಟಿದ್ದರು. ಇತ್ತೀಚೆಗೆ ಬಂಟ್ವಾಳ ಠಾಣೆಗೆ ಬಂದ ಎಸ್.ಐ. ಈ ಕಡತವನ್ನು ನೋಡಿ ತನಿಖೆ ಆರಂಭಿಸಿದ್ದರು. ಕಳೆದ ಶನಿವಾರ ಕೊಣಾಜೆ ಠಾಣೆಗೆ ಬಂದ ಬಂಟ್ವಾಳ ಪೊಲೀಸರು ನಂಬರ್ ಬಗ್ಗೆ ಮಾಹಿತಿ ಕಲೆ ಹಾಕಿ ರಿಯಾಝ್‌ರನ್ನು ಕರೆಸಿ ಬಂಟ್ವಾಳಕ್ಕೆ ಕರೆದೊಯ್ದಿದ್ದರು. ಅಲ್ಲಿ ಕೇಸಿನ ಬಗ್ಗೆ ತಿಳಿಸಿ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಿಶೇಷವೆಂದರೆ ಶಫಿ, ಬನ್ನಂಜೆ ರಾಜಾ ಸಹಚರನ ಹೆಸರಲ್ಲಿ ದೂರು ನೀಡಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೆ ಕಡತವನ್ನು ಮುಚ್ಚಿಟ್ಟಿದ್ದು ಹಾಗೂ ಶಫಿ ದೂರು ನೀಡಿದ ಕೂಡಲೇ ಅದರ ಬಗ್ಗೆ ವಿಚಾರಣೆ ನಡೆಸದೆ ಎಫ್‌ಐಆರ್ ದಾಖಲಿಸಿರುವುದನ್ನು ಗಮನಿಸಿದಾಗ ಪೊಲೀಸರ ಮೇಲೆಯೇ ಸಂಶಯ ಮೂಡುವಂತಾಗಿದೆ. ಈ ರೀತಿಯಾಗಿ ಅಮಾಯಕರ ಮೇಲೆ ಆಪಾದನೆ ಹೊರಿಸಿ ಕೇಸು ನೀಡಿದ ಶಫಿ ವಿರುದ್ಧ ತನಿಖೆ ನಡೆಸಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ.
Tagged with
dk,
lnews
ಮೂಡುಬಿದಿರೆ: ಬೆಳುವಾಯಿ ನಡಿಗುಡ್ಡೆ ಉಮಾ ಎಂಬವರ ಸಾವಿನ ಹಿಂದೆ ಹಲವು ರೀತಿಯ ಸಂಶಯ ಗಳಿದ್ದು ಇದರಲ್ಲಿ ನಿರಪರಾಧಿ ಗಂಡನಿಗೆ ಜೈಲು ಶಿಕ್ಷೆಯಾಗಿದೆ. ನೈಜ ಆರೋ ಪಿಗಳು ತಲೆಮರೆಸಿಕೊಂಡಿದ್ದಾರೆ. ಈ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯ ದೊರಕಿಸಬೇಕೆಂದು ಬೆಳುವಾಯಿ ಗ್ರಾಮಸ್ಥರು ಪೊಲೀಸ್ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.
ಇಲ್ಲಿನ ಪ್ರೆಸ್‌ಕ್ಲಬ್‌ಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರ ಪರವಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿನಕರ್ ಶೆಟ್ಟಿ ಮಾತನಾಡಿದರು.
ಎ.೩೦ರಂದು ಮನೆಯಿಂದ ಹೋಗಿದ್ದ ನಡಿಗುಡ್ಡೆ ಉಮಾ ಅವರ ಮೃತದೇಹವು ಮರುದಿನ ಬೆಳುವಾಯಿ ಪೇಟೆ ಬಳಿಯ ಬಾವಿಯೊಂದರಲ್ಲಿ ಪತ್ತೆಯಾಗಿತ್ತು. ಬಾವಿಯ ಪಕ್ಕದಲ್ಲೇ ಪಾಳು ಬಿದ್ದ ಕಟ್ಟಡವೊಂದಿದೆ. ಬಾವಿ ಹಾಗೂ ಈ ಕಟ್ಟಡ ಅಕ್ಕಪಕ್ಕದಲ್ಲಿ, ಬಾವಿಯ ಪಕ್ಕದಲ್ಲಿ ಒಡೆದ ಬಳೆಯ ಚೂರುಗಳು, ಕಟ್ಟಡದಿಂದ ಎಳೆದು ಕೊಂಡ ಕುರುಹುಗಳು ಪತ್ತೆಯಾಗಿತ್ತು. ಅಲ್ಲದೆ ಉಮಾ ಅವರ ರವಿಕೆ ಬಟನ್ ತೆಗೆದು ಮತ್ತು ಮೃತದೇಹದಲ್ಲಿ ಸೀರೆ ಇಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಇದನ್ನು ಕಂಡಕೂಡಲೇ ಅವರನ್ನು ಯಾರೋ ಅತ್ಯಾಚಾರ ಮಾಡಿ ಕೊಲೆಗೈದು ಬಾವಿಗೆಸೆದಿರಬೇಕೆಂಬ ಶಂಕೆ ಸ್ಥಳೀಯರಲ್ಲಿ ಅಧಿಕವಾಗಿತ್ತು. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಕುಡಿದು ಗಲಾಟೆ ಮಾಡುತ್ತಿದ್ದ ಎನ್ನುವೊಂದೇ ಕಾರಣದಿಂದ ಉಮಾ ಅವರ ಗಂಡ ಚುಕುಡರವರನ್ನು ಬಂಧಿಸಿರುವ ಪೊಲೀಸರು ತರಾತುರಿ ಯಲ್ಲಿ ಜೈಲಿಗೆ ಕಳುಹಿಸಿ ಕೈ ತೊಳೆದುಕೊಂಡಿದ್ದಾರೆಂದು ಆರೋಪಿ ಸಿದ ಗ್ರಾಮಸ್ಥರು, ಇದರಲ್ಲಿ ನಿರಪರಾಧಿಗೆ ಶಿಕ್ಷೆಯಾಗಿದೆ. ನಿಜವಾದ ಆರೋಪಿ ಗಳಿಗೆ ಶಿಕ್ಷೆಗುವಂತೆ ಪೊಲೀಸರು ಮರುತನಿಖೆ ನಡೆಸಬೇಕು ಎಂದು ಒತ್ತಯಿಸಿದ್ದಾರೆ.
Tagged with
dk,
lnews
ಸುಳ್ಯ: ಅಡುಗೆ ಅನಿಲ ಕಾಳ ಸಂತೆ ಯಲ್ಲಿ ವಿತರಣೆಯಾಗುತ್ತಿದೆ. ಗ್ರಾಹಕರಿಗೆ ಸಿಗುತ್ತಿಲ್ಲ, ಸಮಸ್ಯೆಯನ್ನು ಸರಿಪಡಿಸಲು ತಾಲೂಕು ಆಡಳಿತ ಪ್ರಯತ್ನ ನಡೆಸಿಲ್ಲ ಎಂದು ಆರೋಪಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನೇತೃತ್ವದಲ್ಲಿ ತಾಲುಕು ಕಚೇರಿಯ ಎದುರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾಳ ಸಂತೆಯಲ್ಲಿ ಮಾರಾಟ ಮಾಡುವುದು ಗಮನಕ್ಕೆ ಬಂದರೆ ಆಹಾರ ಪೂರೈಕೆ ಇಲಾಖೆಗೆ ಅಥವಾ ಪೊಲೀಸ್ ಇಲಾಖೆಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸುಳ್ಯ ಎಸ್‌ಐ ಗಿರೀಶ್ ಹೇಳಿದರು. ಬಳಿಕ ಸಮಸ್ಯೆಯ ಬಗ್ಗೆ ಚರ್ಚಿಸಲು ಹತ್ತು ದಿನದಲ್ಲಿ ಸಭೆ ಕರೆಯುವುದಾಗಿ ವಿಶೇಷ ತಹಶೀಲ್ದಾರ್ ತಿಳಿಸಿದರು. ಈ ಕುರಿತಾದ ಸಮಗ್ರ ವಿವರವನ್ನು ಮೇ ೨೨ಕ್ಕೆ ನೀಡುವುದಾಗಿ ಲಿಖಿತ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಪ್ರಮುಖರಾದ ಗೋಕುಲ್‌ದಾಸ್, ಆರ್.ಕೆ.ಮಹಮ್ಮದ್, ಸತೀಶ್ ಗೌಡ, ಹರಿಪ್ರಸಾದ್, ಡಾ.ಬಿ. ರಘು, ದಿನೇಶ್ ಅಂಬೆಕಲ್ಲು, ಜಿ.ಕೆ. ಹಮೀದ್, ಶರೀಫ್ ಕಂಠಿ, ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
Tagged with
dk,
lnews
ಬೆಂಗಳೂರು: ಗಣಿ ಕಂಪೆನಿಗಳಿಂದ ಹಣ ಪಡೆದ ಆರೋಪಕ್ಕೆ ಗುರಿಯಾಗಿ ಸಿಬಿಐನಿಂದ ಬಂಧನದ ಭೀತಿಯನ್ನು ಎದುರಿಸುತ್ತಿರುವ ಮಾಜೀ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಯನ್ನು ವಿಶೇಷ ನ್ಯಾಯಾಲಯ ಮೇ ೨೫ಕ್ಕೆ ಮುಂದೂಡಿದೆ.
ಈ ಸಂಬಂಧದ ಅರ್ಜಿಯನ್ನು ನಿನ್ನೆ ವಿಚಾರಣೆಗೆತ್ತಿಕೊಂಡಿದ್ದ ಸಿಬಿಐನ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಯನ್ನು ನಿನ್ನೆಗೆ ಮುಂದೂಡಿತ್ತು. ಆದರೆ ಇದೀಗ ಆ ಪ್ರಕ್ರಿಯೆಯನ್ನು ಮೇ ೨೫ ಕ್ಕೆ ಮುಂದೂಡಿದೆ.
ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಹಾಗೂ ಗಣಿ ಉದ್ಯಮಿ ಪ್ರವೀಣ್‌ಚಂದ್ರ ಎಂಬುವವರಿಂದ ಆರು ಕೋಟಿ ರೂ ಕಿಕ್‌ಬ್ಯಾಕ್ ಪಡೆದ ಆರೋಪಗಳ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸುವಂತೆ ಕೇಂದ್ರೀಯ ಉನ್ನತಾಧಿಕಾರ ಸಮಿತಿ ನೀಡಿದ ಶಿಫಾರಸ್ಸಿನ ಅನುಸಾರ ಸುಪ್ರೀಂ ಕೋರ್ಟ್ ತನಿಖೆಗೆ ಹಸಿರು ನಿಶಾನೆ ತೋರಿಸಿತ್ತು.
ಇದರ ಬೆನ್ನಲ್ಲೇ ಎಫ್‌ಐಆರ್ ದಾಖಲಿಸಿದ ಸಿಬಿಐ ಬುಧವಾರ ಯಡಿ ಯೂರಪ್ಪ ಮತ್ತವರ ಕುಟುಂಬದ ಸದಸ್ಯರ ಮನೆ, ಕಚೇರಿಗಳೂ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕಡೆ ಧಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.
ಇದರ ಬೆನ್ನಲ್ಲೇ ಸಿಬಿಐ ತಮ್ಮನ್ನು ಬಂಧಿಸಲಿದೆ ಎಂಬ ಆತಂಕಕ್ಕೊಳಗಾದ ಯಡಿಯೂರಪ್ಪ ಮತ್ತವರ ಮಕ್ಕಳಾದ ರಾಘವೇಂದ್ರ,ವಿಜಯೇಂದ್ರ,ಅಳಿಯ ಸೋಹನ್‌ಕುಮಾರ್ ಮತ್ತು ಗಣಿ ಉದ್ಯಮಿ ಪ್ರವೀಣ್‌ಚಂದ್ರ ಅವರು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಬುಧವಾರ ನಡೆಸಿದ ಧಾಳಿಯ ಸಂದರ್ಭದಲ್ಲಿ ಯಡಿಯೂರಪ್ಪ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿ ಗಳು ಮೊನ್ನೆ ಯಡ್ಡಿ ಬೆಂಬಲಿಗ ಸಚಿವರು ಮತ್ತು ಶಾಸಕರು ನೀಡಿದ್ದ ರಾಜೀನಾಮೆ ಪತ್ರಗಳನ್ನೂ ವಶಪಡಿಸಿಕೊಂಡಿರುವ ಬೆಳವಣಿಗೆ ಸಹಜವಾಗಿಯೇ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.
Tagged with
snews,
yeddi
ಮಂಗಳೂರು : ನಕ್ಸಲ್ ಬೆಂಬಲಿಗ ಎಂಬ ಸುಳ್ಳು ಆರೋಪಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ದಲಿತ ಪಂಗಡಕ್ಕೆ ಸೇರಿದ ಪತ್ರಿಕೋದ್ಯಮದ ವಿದ್ಯಾರ್ಥಿ ವಿಠಲ ಮಲೆಕುಡಿಯ ಪರೀಕ್ಷೆ ಬರೆಯಲು ಸಾಧ್ಯವಾಗದಂತೆ ಮಂಗ ಳೂರು ವಿಶ್ವವಿದ್ಯಾನಿಯಲದ ಉಪ ಕುಲಪತಿ ಯತ್ನಿಸಿದ್ದಾರೆ. ನ್ಯಾಯಾ ಲಯ ಕೇಳದೇನೇ ಹಾಜರಾತಿಯ ನೆಪವೊಡ್ಡಿ ನ್ಯಾಯಾಲಯಕ್ಕೆ ಪತ್ರ ಬರೆದಿರುವ ಮಂಗಳೂರು ವಿವಿ ಉಪಕುಲಪತಿ ಡಾ| ಟಿ.ಸಿ ಶಿವಶಂಕರ ಮೂರ್ತಿ ವರ್ತನೆ ಯನ್ನು ಡಿವೈಎಫ್‌ಐ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಅಪಘಾತ, ಅನಾರೋಗ್ಯ ಮುಂತಾದ ತನ್ನದಲ್ಲದ ಕಾರಣಕ್ಕೆ ಹಾಜ ರಾತಿಯ ಕೊರತೆಯನ್ನು ಅನುಭವಿಸುವ ವಿದ್ಯಾರ್ಥಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲು ವಿಶ್ವವಿದ್ಯಾನಿಲಯಕ್ಕೆ ಅಧಿಕಾರವಿದೆ. ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ವಿಠಲ ನನ್ನು ಮಾರ್ಚ್ ೦೩ ರಂದು ಪೊಲೀ ಸರು ಬಂಧಿಸಿದ್ದರು. ತಂದೆಯನ್ನು ಪೊಲೀಸರು ಹೊಡೆದಿರುವ ಸುದ್ಧಿ ತಿಳಿದ ವಿಠಲ ಕಾಲೇಜು ಹಾಸ್ಟೆಲ್‌ನಿಂದ ಮನೆಗೆ ಹೋದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದರು. ಇದಾದ ನಂತರ ವಿಠಲ ತರಗತಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಪೊಲೀಸರು ಬಂಧಿಸುವ ಎರಡು ತಿಂಗಳ ಹಿಂದೆ ೮೯ ಶೇಕಡಕ್ಕೂ ಅಧಿಕ ತರಗತಿ ಹಾಜರಾಗಿದ್ದಾನೆ ಎಂದು ವಿಭಾಗ ಮುಖ್ಯಸ್ಥೆ ಡಾ| ವಹಿದಾ ಸುಲ್ತಾನ್ ಪ್ರಮಾಣ ಪತ್ರ ನೀಡಿದ್ದಾರೆ. ಎರಡು ತಿಂಗಳಿಗೂ ಮುಂಚೆ ಶೇಕಡಾ ೧೦೦ ರಷ್ಟು ಹಾಜರಾತಿಯನ್ನು ವಿಠಲ ಹೊಂದಿದ್ದಾನೆ. ಇದೀಗ ಸೆಮಿಸ್ಟರ್ ಪರೀಕ್ಷೆಗೆ ಪರಿಗಣಿಸಲ್ಪಡುವ ಈ ಎರಡು ತಿಂಗಳಲ್ಲಿ ವಿಠಲ ತನ್ನದಲ್ಲದ ತಪ್ಪಿಗೆ ಕಡಿಮೆ ಹಾಜರಾತಿಯನ್ನು ಹೊಂದಿ ದ್ದಾನೆ. ಇದನ್ನು ಮಂಗಳೂರು ವಿವಿ ಉಪಕುಲಪತಿಗಳು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕಿತ್ತು.
ಇಂಟರ್‌ನಲ್ ಎಕ್ಸಾಂ ಬರೆದಿರುವ ವಿಠಲ ಮೇ ೨೧ರಿಂದ ನಡೆಯಲಿರುವ ಸೆಮಿಸ್ಟರ್ ಎಕ್ಸಾಂಗೆ ಜೈಲಿನಲ್ಲೇ ಸಂಪೂರ್ಣ ಸಿದ್ದತೆ ನಡೆಸಿದ್ದ. ಅದಕ್ಕೆ ಬೇಕಾಗುವ ಪುಸ್ತಕ ಮತ್ತಿತರ ಪಠ್ಯ ಸಾಮಾಗ್ರಿಗಳನ್ನು ಜೈಲು ಅಧಿಕಾರಿಗಳ ಸಹಕಾರದಲ್ಲಿ ನಮ್ಮ ಸಂಘಟನೆ ಒದಗಿಸಿತ್ತು. ಮೇ ೧೫ ರಂದು ವಕೀಲ ಶಿವಕುಮಾರ್ ಬೆಳ್ತಂಗಡಿ ನ್ಯಾಯಾಲಯ ದಲ್ಲಿ ವಿಠಲನ ಪರೀಕ್ಷೆಗೆ ಅವಕಾಶ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಆದರೆ ಉಪಕುಲಪತಿ ಶಿವಶಂಕರ ಮೂರ್ತಿ ನ್ಯಾಯಾಲಯಕ್ಕೆ ವಿಠಲನ ಹಾಜರಾತಿ ಕೊರತೆಯ ಬಗ್ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ವಿವಿ ನಿಯಮಾವಳಿಯ ಬಗ್ಗೆ ಬರೆದಿರುವ ಉಪಕುಲತಿಗಳು ವಿಶೇಷ ಪ್ರಕರಣಗಳಲ್ಲಿ ವಿವಿ ನಿಯಮಗಳ ರಿಯಾಯಿತಿಗಳ ಬಗ್ಗೆ ಉಲ್ಲೇಖಿಸದೆ ನ್ಯಾಯಾಲಯದ ದಾರಿ ತಪ್ಪಿಸಿದ್ದಾರೆ. ನ್ಯಾಯಾಲಯ ಅಪೇಕ್ಷೆ ಪಡೆದಿದ್ದರೂ, ವಿವಿ ಕುಲ ಪತಿಯ ಅಭಿಪ್ರಾಯ ಕೇಳದೇ ಇದ್ದರೂ ಯಾವುದೋ ಪೂರ್ವಾಗ್ರಹ ಪೀಡಿತರಾಗಿ ಬಡ ದಲಿತ ವಿದ್ಯಾರ್ಥಿ ವಿರೋಧಿ ನೀತಿಯನ್ನು ಅನುಸರಿಸಿ ದ್ದಾರೆ. ಇದು ಖಂಡನೀಯ ವಾಗಿದ್ದು ಉಪಕುಲಪತಿಗಳ ವಿರುದ್ದ ರಾಜ್ಯಪಾಲ ರಿಗೆ ದೂರು ನೀಡಲಾಗುವುದು ಮತ್ತು ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ವಿವಿ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
Tagged with
dk,
lnews
ಮಂಗಳೂರು: ಕೊಣಾಜೆ ಪದವಿನ ಮಹಾತ್ಮಾ ಗಾಂಧಿ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರ ಕೊರತೆಯಿ ದ್ದರೂ ಈ ಬಾರಿಯೂ ಶೇ.೧೦೦ ಫಲಿತಾಂಶ ದಾಖಲಿಸುವ ಮೂಲಕ ವಿಶಿಷ್ಠ ಸಾಧನೆ ಮಾಡಿದೆ.
೨೦೦೯ರಲ್ಲಿ ಇಲ್ಲಿಗೆ ಪ್ರೌಢ ಶಾಲೆ ಮಂಜೂರುಗೊಂಡಾಗ ಕಟ್ಟಡ ಇರದ ಕಾರಣ ಸ್ಥಳೀಯ ಸಂಘವೊಂದು ಕಚೇರಿಯ ಕಟ್ಟಡದ ಗೋಡೆಗೆ ತಾಗಿ ಯೇ ತೆಂಗಿನ ಗರಿಯ ತಟ್ಟಿಯನ್ನು ನಿರ್ಮಿಸುವ ಮೂಲಕ ತರಗತಿ ನಡೆಸಲು ಅನುವು ಮಾಡಿ ಕೊಟ್ಟಿತ್ತು.
ಅಂದು ೧೯ ಮಕ್ಕಳಿದ್ದು, ಒಬ್ಬ ವಿದ್ಯಾರ್ಥಿ ಅನುತ್ತೀರ್ಣನಾಗಿದ್ದರಿಂದ ಶೇ. ೯೪.೭ ಫಲಿತಾಂಶ ದಾಖಲಿಸಿತ್ತು. ೨೦೧೦-೧೧ರಲ್ಲಿ ೨೩ ಮಕ್ಕಳಿದ್ದು ಶೇ. ನೂರು ಫಲಿತಾಂಶ ದಾಖಲಾಗಿತ್ತು. ಎರಡು ಅವಧಿಯಲ್ಲೂ ವಿದ್ಯಾರ್ಥಿಗಳು ತೆಂಗಿನ ಗರಿಯಲ್ಲಿ ನಿರ್ಮಿಸಲಾಗಿದ್ದ ಕೊಠಡಿಯಲ್ಲಿ ಕಲಿತಿದ್ದರು. ೨೦೧೧-೧೨ರ ಸಾಲಿನ ವಿದ್ಯಾರ್ಥಿಗಳಿಗೆ ಸುಸಜ್ಜಿತ ಕೊಠಡಿಯಲ್ಲಿ ಕಲಿತಿದ್ದು ಈ ಅವಧಿಯಲ್ಲಿ ೪೨ ವಿದ್ಯಾರ್ಥಿಗಳಿದ್ದರು. ಇವರ ಪೈಕಿ ನಾಲ್ವರು ಡಿಸ್ಟಿಂಕ್ಷನ್, ೨೪ ಪ್ರಥಮ ಶ್ರೇಣಿ, ೧೧ ದ್ವಿತೀಯ ಶ್ರೇಣಿ ಹಾಗೂ ಮೂವರು ವಿದ್ಯಾರ್ಥಿ ಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿ ದ್ದಾರೆ.ಈ ಶಾಲೆಯಲ್ಲಿ ಇಂದಿಗೂ ಹಿಂದಿ ಪಾಠಕ್ಕೆ ಶಿಕ್ಷಕಿ ಇಲ್ಲದ ಕಾರಣ ಸಮಾಜ ಪಾಠ ಮಾಡುವ ಶಿಕ್ಷಕಿ ಗೀತಾ ಅವರೇ ಹಿಂದಿ ಪಾಠ ಮಾಡುತ್ತಿ ದ್ದಾರೆ.
ಎರಡು ವರ್ಷಗಳ ಹಿಂದೆ ಕನ್ನಡ ಶಿಕ್ಷಕರ ಕೊರತೆ ಇದ್ದಾಗ ಇದೇ ಶಿಕ್ಷಕಿ ಕನ್ನಡ ಪಾಠ ಮಾಡುವ ಜವಾಬ್ದಾರಿ ಹೊತ್ತಿ ದ್ದರು. ರಜಾ ದಿನಗಳಲ್ಲೂ ವಿಶೇಷ ತರಗತಿ ನಡೆಸುತ್ತಿದ್ದರು. ಅಕ್ಟೋಬರ್ ನಂತರ ಭಾನುವಾರವೂ ಸ್ಪೆಶಲ್ ಕ್ಲಾಸ್ ಇಲ್ಲಿ ನಡೆಸಲಾಗುತ್ತಿದ್ದು ದರಿಂದ ಈ ಶಾಲೆಗೆ ಎರಡನೇ ಬಾರಿಗೆ ಶೇ.ನೂರು ಫಲಿತಾಂಶ ಬಂದಿದೆ.
Tagged with
dk,
lnews
ಮಂಗಳೂರು: ಬಲ್ಯಾಯ ಯಾನೆ ಕಣಿಶನ್ ಮಹಾಜನ ಸಂಘದ ಆಶ್ರಯದಲ್ಲಿ ಸ್ವಜಾತಿ ಯುವ ಜನತೆಯ ಪ್ರತಿಭಾ ಪ್ರದರ್ಶನ ‘ಝೆಂಕಾರ’ ಯುವ ಉತ್ಸವ ನಗರದ ಕಂಕನಾಡಿ ಗರೋಡಿಯ ಸಮೃದ್ಧಿ ಸಭಾಂಗಣ ದಲ್ಲಿ ಮೇ ೨೦ರಂದು ನಡೆಯಲಿದೆ. ಯುವ ಪ್ರತಿಭೆಗಳ ಸಂಗಮವಾದ ಈ ಉತ್ಸವವನ್ನು ಡಾ.ಶ್ರೀಪತಿ ಪಂಡಿತ್ ಕಿನ್ನಿಕಂಬಳ ಉದ್ಘಾಟಿಸುವರು ಎಂದು ಸಂಘದ ಅಧ್ಯಕ್ಷ ಜೆ.ನಾಗೇಂದ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
‘ದಾರಿದೀಪ’ ವಿಚಾರ ಗೋಷ್ಠಿ ಯಲ್ಲಿ ಡಾ.ಸತ್ಯ ನಾರಾಯಣ ಮಲ್ಲಿಪಟ್ಣ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳು ವರು. ಬಳಕ ಕವಿಗೋಷ್ಠಿ ಕಥಾ ವಾಚನ, ಚರ್ಚಾ ಕೂಟ, ಉಪನ್ಯಾಸ ನಡೆಯಲಿದೆ. ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ ಪರಮೇಶ್ವರ ಪೂಜಾರಿ ಹಿಂದುಳಿದ ಜಾತಿಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವರು ಎಂದರು. ೧೪ರಿಂದ ೩೫ ವರ್ಷದೊಳಗಿನ ಯುವ ಜನರು ಭಾಗವಹಿಸುತ್ತಿದ್ದು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿದೆ. ಉಪಾಧ್ಯಕ್ಷೆ ಜ್ಯೋತಿ ಅಶೋಕ್, ಕೋಶಾಧಿಕಾರಿ ಉಮಾಲಕ್ಷ್ಮೀ ಕುಡುಪು, ಗೋಪಾಲ್ ಕಲ್ಲಡ್ಕ, ಅಮಿತ್ ಆನಂದ ಪೆರ್ಮಂಕಿ ಉಪಸ್ಥಿತರಿದ್ದರು.
Tagged with
briefs
ಮಂಗಳೂರು: ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿಯು ವರದಕ್ಷಿಣೆ ವಿರೋಧಿ ಜನಜಾಗೃತಿ ಅಭಿಯಾನದ ಅಂಗವಾಗಿ ಬಜ್ಪೆ ವಲಯದ ವತಿಯಿಂದ ಇತ್ತೀಚೆಗೆ ಮೊಹಲ್ಲಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷೆ ಶಾಹಿದಾ ತಸ್ನೀಂ ಭಾಗವಹಿಸಿದ್ದರು. ಮಮ್ತಾಝ್ ಪಕ್ಕಲಡ್ಕ, ಫರ್ಝಾನ ಕೆಮ್ಮಾರ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷೆ ಸಮೀನಾ ಮಲಾರ್ ವಹಿಸಿದ್ದರು. ಬಜ್ಪೆ ವಲಯಾಧ್ಯಕ್ಷೆ ಸಾರಿಕಾ ಸ್ವಾಗತಿಸಿ ಮುಬೀನಾ ವಂದಿಸಿದರು. ಝೀನತ್ ಕಾರ್ಯ ಕ್ರಮ ನಿರೂಪಿಸಿದರು.
Tagged with
briefs
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಂಗೀಕರಿಸಿದ ಲಿಪಿಯನ್ನು ಆಧಾರವಾಗಿ ಇಟ್ಟು ಕೊಂಡು ಜಿ.ವಿ.ಎಸ್ ಉಳ್ಳಾಲ್‌ರವರು ಬರೆದಿರುವ ‘ತುಳು ಅಕ್ಷರಮಾಲೆ’ ಪುಸ್ತಕವನ್ನು ಮೇ೨೪ರಂದು ಗುರುವಾರ ಸಂಜೆ ೩.೩೦ಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಚಾವಡಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮಾನಾಥ ವಿ.ಕೋಟ್ಯಾನ್ ಬಿಡುಗಡೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಮುಖ್ಯ ಅತಿಥಿಗಳಾಗಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಶಾಸಕರಾದ ಯು.ಟಿ.ಖಾದರ್, ಕಿಶೋರ್ ಡಿ ಶೆಟ್ಟಿ ಮತ್ತು ಡಾ.ಎಸ್.ಆರ್.ವಿಘ್ನರಾಜ್ ಧರ್ಮಸ್ಥಳ ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
Tagged with
briefs

ಮದುವೆ ಮುರಿದ ಮದುಮಗಳು! ಇದು ಸೋಮವಾರದ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸಿದ್ದ ‘ಸುದ್ದಿಯೊಂದರ ತಲೆ ಬರಹ’ - ಉಳ್ಳಾಲದ ಮಾಸ್ತಿಕಟ್ಟೆಯ ೧೭ ವರ್ಷದ ಸವಿತಾ ಎಂಬ ಹುಡುಗಿ ಖುದ್ದು ತಾನೇ ಅಪ್ರಾಪ್ತ ವಯಸ್ಸಿನವಳೆಂಬ ವಿಚಾರ ಪೊಲೀ ಸರು ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾ ರಿಗಳಿಗೆ ತಿಳಿಸಿ ಅವರ ಮುಖಾಂತರ ತನ್ನ ಮದುವೆಯನ್ನು ತಾನೇ ನಿಲ್ಲಿಸಿ ಬಿಟ್ಟಿದ್ದಾಳೆ. ಆಕೆ ಹೇಳುವ ಪ್ರಕಾರ ಸದ್ರಿ ಮದುವೆ ಆಕೆಗೆ ಇಷ್ಟವೇ ಇರಲಿಲ್ಲವಂತೆ! ಆ ಹುಡುಗಿಯ ಸಮುದಾಯದಲ್ಲಿ ಹೆಣ್ಮಕ್ಕಳಿಗೆ ಬಹಳ ಬೇಗನೆ ಅಂದ್ರೆ ವಯಸ್ಸು ೧೪-೧೫ ದಾಟುವ ಸಂಧಿಯಲ್ಲೇ ಮದುವೆ ಮಾಡಿಕೊಡಲಾಗುತ್ತದೆಯಂತೆ. ಇದು ಅವಳಿಗೆ ಇಷ್ಟವಿರ ಲಿಲ್ಲವಂತೆ. ಹೆಣ್ಣು ಅಷ್ಟು ಬೇಗ ಮದುವೆಯಾಗುವುದು ಸಾಮಾಜಿಕ ವಾಗಿ ಹಿನ್ನಡೆಯಾಗಿದೆ ಮತ್ತು ಕಾನೂನು ರೀತ್ಯವಾಗಿ ಅಪರಾಧ ಕೂಡಾ ಆಗಿದೆಯಂತೆ, ಇಂಥಾ ಮದುವೆಯಿಂದ ಹೆಣ್ಮಕ್ಕಳು ದೈಹಿಕ ವಾಗಿ ಮತ್ತು ಮಾನಸಿಕವಾಗಿ ಬಹಳವಾಗಿ ಘಾಸಿಗೊಳಗಾಗಲಿದ್ದು ಹೆಣ್ಮಕ್ಕಳನ್ನು ಅವರ ಹೆತ್ತವರೇ ಇಂಥಾ ಅಪಾಯಕ್ಕೆ ದೂಡುತ್ತಿದ್ದು ಇದು ನಿಲ್ಲಬೇಕು ಎಂದಾಗಿದೆ ಆಕೆಯ ವಾದ. ಇದೆಲ್ಲದರೊಂದಿಗೆ ಆಕೆಯ ಸಮುದಾಯದಲ್ಲಿ ಸಣ್ಣ ಪ್ರಾಯದ ಹೆಣ್ಮಕ್ಕಳಿಗೆ ವಯಸ್ಸಿನಲ್ಲಿ ಬಹಳ ಅಂತರವಿರುವ ಪುರುಷರೊಂದಿಗೆ ವಿವಾಹ ಮಾಡಿಕೊಡ ಲಾಗುತ್ತಿದ್ದು, ಸವಿತಾಳಿಗೂ ಸ್ವಲ್ಪ ಹೆಚ್ಚಿನ ವಯಸ್ಸಿನ ಪುರುಷನೊಂ ದಿಗೆ ಮದುವೆ ನಿಶ್ಚಯವಾಗಿತ್ತಂತೆ! ಪ್ರಾರಂಭದಿಂದಲೇ ತಾನು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೂ ಹೆತ್ತವರು ಅಷ್ಟಾಗಿ ಗಮನ ಕೊಡಲೇ ಇಲ್ಲವಂತೆ!... ಈ ಎಲ್ಲಾ ಕಾರಣಗಳಿಂದಾಗಿ ಆಕೆ ಇಂಥಾ ಹೆಜ್ಜೆ ಇಟ್ಟದ್ದಂತೆ.
ಆ ಕಡೆ ಆ ಹೆಣ್ಣಿನ ‘ಅಂತೆ’ ಹೀಗಾದರೆ ಈ ಕಡೆ ಅವಳ ಹೆತ್ತ ವರ ‘ಅಂತೆ - ಕಂತೆ’ ಬೇರೆಯೇ ಇದೆ. ತಮ್ಮ ಮಗಳಿಗೆ ಹತ್ತಿರದ ಸಂಬಂಧಿಗಳದ್ದೇ ಸಂಬಂಧ ಹುಡುಕಿ ಸುಮಾರು ಆರು ತಿಂಗಳ ಹಿಂದೆಯೇ ನಿಶ್ಚಯ ಮಾಡಲಾಗಿತ್ತು. ತನಗೆ ಮದುವೆ ಬೇಡವೆಂದು ಮಗಳು ಹೇಳಿದ್ದೇ ಇಲ್ಲ. ತಮ್ಮ ಪ್ರೀತಿ - ವಿಶ್ವಾಸಕ್ಕೆ ದ್ರೋಹ ಬಗೆದಿದ್ದ ಲ್ಲದೆ ತಮ್ಮ ಮಾನ - ಮರ್ಯಾದೆ ಎಲ್ಲವನ್ನೂ ಹರಾಜಿಗಿಟ್ಟುಬಿಟ್ಟಳು. ಇಂಥಾ ಮಗಳು ನಮಗೆ ಬೇಡವೇ ಬೇಡ ನೀವೇ ಇಟ್ಟುಕೊಳ್ಳಿ ಎಂದು ಪೊಲೀಸರಿಗೆ ಮತ್ತು ಮಹಿಳಾ ಶಿಕ್ಷಣ ಅಧಿಕಾರಿಗಳಿಗೆ ನೊಂದು ನುಡಿದಿದ್ದಾರೆ ಹೆತ್ತವರು!
ಗೆಳೆಯರೇ, ಇಲ್ಲಿ ಯಾರ ಮಾತನ್ನು ನಂಬುವುದು!? ಒಂದು ತಂದೆ ತಾಯಿ ತಮ್ಮ ಕರುಳ ಕುಡಿಯನ್ನೇ ದ್ರೋಹಿ/ ವಂಚಕಿ ಎನ್ನುತ್ತಿ ರಬೇಕಾದರೆ ಅಥವಾ ಒಂದು ಹೆಣ್ಮಗು ತನ್ನ ಹೆತ್ತವರನ್ನೇ ‘ತಪ್ಪುಗಾ ರರು’ ಎನ್ನುತ್ತಿರಬೇಕಾದರೆ ಅದರ ಬಗ್ಗೆ ಟಿಪ್ಪಣಿ ಮಾಡಲು ಹೊರಗಿ ನವರಿಗೆ ಸಾಧ್ಯವಾಗುವುದಾದರೂ ಏನು!? ಯಾರನ್ನು ಹತ್ತಿರ ಮಾಡು ವುದು? ಯಾರನ್ನು ದೂರ ಮಾಡುವುದು!? ನೀವೇ ಹೇಳಿ.
ಈ ಪ್ರಕರಣದಲ್ಲಿ ನಾವೆಲ್ಲ ಗಮನಿಸಬೇಕಾದ ಅತೀ ಮುಖ್ಯ ಅಂಶವೊಂದಿದೆ. ಅದೇನೆಂದರೆ ಈ ಸವಿತಾ ಎಂಬ ಹೆಣ್ಣಿಗೆ ಮದುವೆ ನಿಶ್ಚಯವಾಗಿ ತಿಂಗಳು ಆರು ಕಳೆಯಿತು ಎಂಬುವುದು. ಈ ಅಂಶ ಅವಲೋಕಿಸಿದರೆ ಹೆತ್ತವರ ಮಾತೇ ನಿಜ ಎನಿಸುತ್ತದೆ. ಯಾಕೆಂದರೆ ಸವಿತಾ ತಾನು ಮದುವೆಗೆ ಸುಮಾರು ಆರು ತಿಂಗಳಿನಿಂದ ನಿರಂ ತರ ವಿರೋಧ ವ್ಯಕ್ತಪಡಿಸುತ್ತಲೇ ಇದ್ದೆ ಎನ್ನುವುದು ನಿಜವೇ. ಆದರೆ ಪ್ರಕರಣ ಈ ರೀತಿ ಅಂತ್ಯಗೊಳ್ಳುವುದು ತಾರ್ಕಿ ಕವಾಗಿ ಸಾಧ್ಯವೇ ಇಲ್ಲ ಎನ್ನಬಹುದು. ತರ್ಕಬದ್ಧವಾಗಿ ಯೋಚಿಸಿದರೆ ಸವಿತಾ ಎಂಬ ದಿಟ್ಟ ಹುಡುಗಿಯ ‘ಮಹಾ ಪುಕ್ಕಲುತನ’ ಪ್ರದರ್ಶನಗೊಳ್ಳುತ್ತದೆ. ಮದುವೆಗೆ ದಿನಾಂಕ ನಿಶ್ಚಯವಾಗಿದ್ದು ನಿನ್ನೆ ಮೊನ್ನೆಯಷ್ಟೇ ಅಥವಾ ಒಂದೆರಡು ವಾರ ಹಿಂದೆಯಷ್ಟೇ ಎಂದಿ ದ್ದರೆ ಸವಿತಾಳ ಮಾತನ್ನು ಧಾರಾಳವಾಗಿ ನಂಬಬಹುದಿತ್ತು. ಹೊರೆಯೊಂ ದನ್ನು ತನ್ನ ಹೆತ್ತವರೇ ಹೇರಲು ಹೊರಟಾಗ ಅದನ್ನು ಏಕಾಏಕಿ ವಿರೋ ಧಿಸಲು ಸಾಧ್ಯವೇ ಆಗದು. ಆ ಮಟ್ಟಿನ ಧೈರ್ಯ ಆ ಎಳೆ ಹುಡುಗಿಗೆ ಬಾರದು. ಹೊರಗಿನವರು ತನಗೆ ಅನ್ಯಾಯ ಮಾಡುತ್ತಿದ್ದರೆ ಅದನ್ನು ತಕ್ಷ ಣವೇ ಒಂದು ಮಗು ಕೂಡಾ ಗ್ರಹಿಸಿಬಿಡುತ್ತದೆ. ಆದರೆ ಹೆತ್ತವರು ಅನ್ಯಾಯ ಮಾಡುತ್ತಾರೆ ಎಂದು ಎಂಥವರೂ ಅಷ್ಟು ಬೇಗ ಗ್ರಹಿಸಿಕೊಳ್ಳಲ್ಲ. ಆದರೆ... ಆದರೆ ಒಂದು ವೇಳೆ ಹೆತ್ತವರು ಕೂಡಾ ಅನ್ಯಾಯ ಮಾಡುತ್ತಿದ್ದಾರೆ ಎನ್ನು ವುದು ಮನವರಿಕೆಯಾಗಬೇಕಾದರೆ ಮತ್ತದನ್ನು ಸೂಕ್ತ ರೀತಿಯಲ್ಲಿ ಎದು ರಿಸಬೇಕಾದರೆ ಎಂಥವನಿ/ಳಿಗು ಆರು ತಿಂಗಳು ಸಮಯಾವಕಾಶ ಮಾತ್ರ ಖಂಡಿತಾ ಬೇಡ!
ಸುದ್ದಿ ಬಿತ್ತರಗೊಂಡ ದಿನದ ಪತ್ರಿಕೆಗಳಲ್ಲಿ ಮದುಮಗನ ಫೋಟೋ ನೀವು ಗಮನಿಸಿರಬಹುದು. ಯಾವ ಕೋನದಲ್ಲಿ ನೋಡಿದರೂ ಹುಡುಗ ನಿಗೆ ‘ವಯಸ್ಸಾಗಿದೆ’ ಎಂದೆನಿಸುವುದೇ ಇಲ್ಲ. ಹುಡುಗ ವಯಸ್ಸು ಮದು ವೆಗೆ ‘ಪಕ್ವ ವಯಸ್ಸು’ ಎನ್ನುವಂತಿದ್ದಾನೆ. ಸುಂದರ ಹುಡುಗ ಬೇರೆ. ಇದ ರರ್ಥ ಸಮಸ್ಯೆ ಇರುವುದು ಹುಡುಗಿಯ ಕಡೆಯಲ್ಲಿ ಮಾತ್ರ ಎನ್ನುವುದು ಖರೆ. ಅಸಲು ವಿಷಯ ಹೀಗಿರುವಾಗ ತನ್ನ ಅಥವಾ ತನ್ನ ಹೆತ್ತವರ ಕಡೆಯ ತಪ್ಪಿಗಾಗಿ ಅಮಾಯಕ ಹುಡುಗನಿಗೆ ಯಾಕೆ ಕಷ್ಟ ಕೊಡಬೇ ಕಿತ್ತು? ಅವನ ಸಮಯ, ದುಡ್ಡು, ಮರ್ಯಾದೆ, ಪ್ರತಿಷ್ಠೆಗಳನ್ನೆಲ್ಲ ಯಾಕೆ ಹಾಳು ಮಾಡಬೇಕಿತ್ತು? ಇಷ್ಟಕ್ಕೂ ಹೆತ್ತವರು ಸವಿತಾಳನ್ನು ಸೂಳೆಗಾರಿಕೆಗೆ ಕೊಡುತ್ತಿದ್ದದ್ದಾ? ದುಡ್ಡು ಪಡೆದು ವಿಟಪುರುಷನಿಗೆ ಮಾರುತ್ತಿದ್ದದ್ದಾ? ಅಲ್ವಲ್ಲಾ? ಮತ್ಯಾಕೆ ಹೆತ್ತವರಿಗೆ ಇಂಥಾ ಅವಮಾನ?
ಗೆಳೆಯರೇ, ಸವಿತಾ ಎಂಬ ಹೆಣ್ಣಿಗೆ ತಿವಿದದ್ದು ಇಷ್ಟು ಸಾಕು ಎಂದೆ ನಿಸುತ್ತದೆ! ಅವಳು ತಪ್ಪು ಮಾಡಿರಬಹುದು. ಆದರೆ ಇಷ್ಟರಲ್ಲೇ ಅವಳ ದನ್ನು ಅರ್ಥಮಾಡಿಕೊಂಡಿರಬಹುದು. ಈಗ ಆಕೆ ಮಕ್ಕಳ ಕಲ್ಯಾಣ ಕೇಂದ್ರ ದಲ್ಲಿ ಕುಳಿತು ಕಣ್ಣೀರು ಹರಿಸುತ್ತಿರಬಹುದು.
ಆದದ್ದಾಯಿತು. ಇನ್ನು ಮುಂದೆ ಹೇಗೆ!?
ಈಗ ಅವಳ ಭವಿಷ್ಯ ಇರುವುದು ಒಬ್ಬರ ಕೈಯಲ್ಲಿ ಮಾತ್ರ. ಅದು ಅವಳ ಹೆತ್ತವರ ಕೈಯಲ್ಲಿ. ಮಗಳು ಎಷ್ಟಾದರೂ ಮಗಳೇ. ಸಂಬಂಧ ಬಾಯಿಮಾತಿಗೆ ಬೇಡವೆನ್ನಬಹುದು. ಆದರೆ ಸಂಬಂಧ ಇಲ್ಲ ಅಥವಾ ಅಲ್ಲ ಎನ್ನಲು ಆಗುವುದೇ ಇಲ್ಲ. ಇನ್ನು ಮುಂದೆ ಎಲ್ಲಾದರೂ ಸವಿತಾ ಏನಾ ದರೂ ಮಾಡಿದರೆ ಹೆಗಲು ಕೊಡಬೇಕಾಗಿ ಬರುವುದು ಹೆತ್ತವರಿಗೇ ಆಗಿದೆ. ಇದನ್ನು ಸವಿತಾ ಹೆತ್ತವರು ಅರ್ಥಮಾಡಿಕೊಳ್ಳಬೇಕು. ಮಗಳು ತಪ್ಪು ಮಾಡಿದ್ದಾಳೆ ನಿಜ. ಆದರೆ ಅಲ್ಲಿ ಅವಳಿಗೆ ಈ ಮದುವೆ (ಅಥವಾ ಈ ಸಂಬಂಧ) ಇಷ್ಟವಿರಲಿಲ್ಲ ಎನ್ನುವುದು ಮಾತ್ರ ನಿಜ. ಆದರೆ ಹೀಗೆ ‘ಇಷ್ಟ ವಿಲ್ಲದಿರುವುದು’ ಆಕೆಗೆ ಬೇರೆ ಯಾವುದೋ ಪುರುಷನೊಂದಿಗೆ ಪ್ರೇಮ ವಿದೆ, ಮತ್ತಿತರ ಸಂಬಂಧವಿದೆ ಎಂಬ ಕಾರಣಕ್ಕೆ ಖಂಡಿತಾ ಅಲ್ಲ ಎನ್ನು ವುದು ಮಾತ್ರ ಸ್ಪಷ್ಟ. ಆ ಮಟ್ಟಿಗೆ ಅವಳು ಪರಿಶುದ್ಧ ಹೆಣ್ಣು. ಹೆತ್ತವರು ಇದನ್ನು ಗಮನಿಸಬೇಕು.
ಎಷ್ಟೋ ಅಂಡೆಪಿರ್ಕಿ ಹೆಣ್ಮಕ್ಕಳ ಪ್ರಕರಣ ನಾವು ಕಂಡಿದ್ದೇವೆ. ಅವಿ ವಾಹಿತ ಪುರುಷರೊಂದಿಗೋ ವಿವಾಹಿತರೊಂದಿಗೋ ಅನೈತಿಕ ಸಂಬಂ ಧವಿಡುವುದೋ, ತನ್ನ ಆಭರಣದೊಂದಿಗೆ ಹೆತ್ತವರ ನಗ - ನಗದನ್ನು ಲಪಟಾಯಿಸಿ ಓಡಿಹೋಗುವುದೋ.. ತರೇವಾರಿ ಪ್ರಕರಣಗಳು ನಾವು ಕಂಡದ್ದು ಲೆಕ್ಕವೇ ಇರಲಿಕ್ಕಿಲ್ಲ. ಕೆಲ ಸಮಯದ ಹಿಂದೆ ನಮ್ಮ ಜಿಲ್ಲೆಯ ಪಕ್ಕದ ಜಿಲ್ಲೆಯಲ್ಲೊಂದು ಕಡೆ ಲಕ್ಷ್ಮಿ ಎಂಬ ಹೆಣ್ಣೋರ್ವಳು ತನ್ನ ಮದು ವೆಗಾಗಿ ಊರ, ಪರವೂರಿನ ತಮ್ಮ ಮತ್ತು ಮದುಮಗನ ನೂರಾರು ಸಂಬಂಧಿಕರು ಸೇರಿರುವಾಗಲೇ ಅವರ ಎದುರೇ ಸರಸರನೆ ಸೀದಾ ಓಡಿ ಹೋಗಿ ಮದುವೆ ಹಾಲ್‌ನ ಮುಖ್ಯದ್ವಾರದ ಎದುರು ಆಗಷ್ಟೇ ಬಂದು ನಿಂತ ಆಟೋವೊಂದಕ್ಕೆ ಏರಿ ಅದರಲ್ಲಿದ್ದ ಆಕೆಯ ಪ್ರೇಮಿಯೊಂದಿಗೆ ಮದುವಣಗಿತ್ತಿಯ ವಸ್ತ್ರ ಧರಿಸಿಕೊಂಡೇ ಓಡಿ ಹೋಗಿ ಸುದ್ದಿ ಮಾಡಿ ದ್ದಳು. ಇಂಥಾ ಮೂರ್ಖ ಹೆಣ್ಮಕ್ಕಳೆದುರು ಸವಿತಾಳ ವರ್ತನೆ ಬಹಳ ಸಣ್ಣಮಟ್ಟದೆನ್ನಬಹುದು.
ಸವಿತಾಳಿಗೆ ಬೇರೆ ಏನೋ ಆಸೆ, ಆಕಾಂಕ್ಷೆಗಳಿವೆ, ಏನೋ ಸಾಧಿಸ ಬೇಕೆಂಬ ಛಲ ಇದ್ದಂತಿದೆ. ಹೆತ್ತವರು ಆ ಬಗ್ಗೆ ಇಷ್ಟರವರೆಗೆ ವಿಚಾರಿಸಿಲ್ಲ ದಂತೆ ಕಾಣುತ್ತದೆ. ತಮ್ಮ ಮಗಳಿಗೆ ಮದುವೆ ಮಾಡುವುದೇ ತಮ್ಮೆದುರಿಗಿ ರುವ ಬಹುದೊಡ್ಡ ಜವಾಬ್ದಾರಿ ಎಂದು ಅವರು ಭಾವಿಸಿಕೊಂಡಂತಿದೆ. ಈಗ ವಿಷಯ ನಾವೆಣಿಸಿದಂತೆ ಇಲ್ಲ ಎನ್ನುವ ಸತ್ಯ ವಿಚಾರ ಅವರಿಗೆ ಮನದಟ್ಟಾಗಿರಬಹುದು. ಕಾಲ ಇನ್ನೂ ಮಿಂಚಿಲ್ಲ. ಮಗಳನ್ನು ಕೂಡಲೇ ಅವರು ಹತ್ತಿರಮಾಡಬೇಕು. ಅವಳು ಇನ್ನೊಮ್ಮೆ ಹುಟ್ಟಿ ಬಂದಳು ಎಂದು ಭಾವಿಸಿ ಅವಳ ಆಸೆ - ಆಕಾಂಕ್ಷೆಗಳನ್ನು ಪೂರೈಸುವ ಎಲ್ಲಾ ಪ್ರಯತ್ನ ಮಾಡಬೇಕು. ಅವಳ ಗುರಿಗೆ ಬೆನ್ನುಲುಬಾಗಿ ನಿಲ್ಲಬೇಕು. ಒಂದು ಹೆಣ್ಮಗ ಳಿಂದ ಆಸೆ ಆಕಾಂಕ್ಷೆಗಳನ್ನು ಆ ಹೆಣ್ಮಗುವಿನ ಹೆತ್ತವರೇ ಪೂರೈಸದಿದ್ದರೆ ಬೇರೆ ಯಾರು ಪೂರೈಸುತ್ತಾರೆ. ಪೊಲೀಸರು, ಮತ್ತಿತರ ಅಧಿಕಾರಿಗಳು ಪೂರೈಸುತ್ತಾರಾ? ಪೂರೈಸಿದರೂ ಎಷ್ಟು ಪೂರೈಸಬಹುದು? ಗುರಿ ಸಾಧಿಸಿ ಮಾಡುವ ವಿಚಾರದಲ್ಲಿ ಪೊಲೀಸರು ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅವಳ ಬೆನ್ನಿಗೆ ಎಷ್ಟು ಕಾಲ ನಿಲ್ಲ ಬಹುದು? ಸರಿಯಲ್ಲವೇ!!?
Tagged with
fariyad,
lekhana
ಈ ಬಾರಿ ಆಯ್ಕೆಯಾದವರಂತೂ ಮಹಾನ್ ವ್ಯಕ್ತಿಗಳೇ. ಈ ಒಂಭತ್ತು ಮಂದಿಯ ಅಯ್ಕೆಯಲ್ಲಿ ನಡೆದಿರುವ ಗೋಲ್‌ಮಾಲ್‌ಗಳು ಅಷ್ಟಿಷ್ಟಲ್ಲ. ಈ ಆಯ್ಕೆಯಲ್ಲಿ ತಮಗೆ ಬೇಕಾದಂತಹಾ ‘ಮಹಾನ್ ವ್ಯಕ್ತಿಗಳನ್ನು ಹಿಂದೂ ಸಂಘಟನೆಯೊಂದರ ಪ್ರಭಾವಿ ವ್ಯಕ್ತಿಯ ಪ್ರಭಾವದಿಂದ ಆಯ್ಕೆಗೊಳಿಸಿದ್ದಾರೆ ಎಂಬ ವದಂತಿಯೂ ಹಬ್ಬಿದೆ. ಈ ಆಯ್ಕೆ ನಡೆದಿರುವುದು ಸರಿಯಲ್ಲ ಇದಕ್ಕೆ ಕೆಲವು ಕಾರಣಗಳು ಈ ರೀತಿ ಇವೆ.
ನೊಂದ ಗ್ರಾಮಸ್ಥರು, ಭಕ್ತವೃಂದ, ಕೊಂಪದವು
ಕೊಂಪದವು ಶ್ರೀವಿಷ್ಣುಮೂರ್ತಿ ದೇವಸ್ಥಾನವು ಧಾರ್ಮಿಕ ಪರಿಷತ್ ನಿಂದ ‘ಸಿಗ್ರೇಡ್ ಹೊಂದಿರುವ ದೇವಸ್ಥಾನವಾಗಿದೆ. ಕೊಂಪದವು ಗ್ರಾಮ ೭೫% ಬಡವರಿಂದ ಕೂಡಿರುವುದರಿಂದ ಈ ದೇವಾಲಯವು ಅಜೀರ್ಣಾವಸ್ಥೆ ಯಲ್ಲಿ ಇದೆ. ಇದಕ್ಕೆ ಕಾರಣ ಕೆಲವು ರಾಜಕೀಯ ವ್ಯಾಪಾರಿಗಳು. ದೇವಸ್ಥಾ ನವನ್ನು ಉದ್ದಾರ ಮಾಡಲು ಹೊರಟರೆ ಅವರ ಕಾಲೆಳೆಯುತ್ತಾರೆ.
ಈ ಹಿಂದೆ ಎರಡು ವರ್ಷಗಳ ಕಾಲ ದೇವಸ್ಥಾನವನ್ನು ಆಡಳಿತಾಧಿಕಾರಿ ಯಾಗಿ ಓರ್ವ ಮಹಿಳೆ ಮುನ್ನಡೆಸುತ್ತಿದ್ದರು. ಇವರಿಗೂ ಕೆಲವು ಮಂದಿ ಕಿವಿಗೆ ಗಾಳಿ ಹಾಕಿ ಅವರ ಮನಸ್ಸನ್ನು ತಿರುಚಿದ್ದರು. ಈಗ ದತ್ತಿ ಕಾಯ್ದೆಯಡಿಯಲ್ಲಿ ಹೊಸ ವ್ಯವಸ್ಥಾಪನಾ ಸಮಿತಿಯು ಏ. ೩ ರಂದು ರಚಿತವಾಗಿ ಏ. ೧೨ರಂದು ಅವರಲ್ಲಿ ಆಯ್ಕೆಯಾದವರಿಗೆ ಪತ್ರಗಳು ಬಂದಿವೆ.
ಈ ಬಾರಿ ಆಯ್ಕೆಯಾದವರಂತೂ ಮಹಾನ್ ವ್ಯಕ್ತಿಗಳೇ. ಈ ಒಂಭತ್ತು ಮಂದಿಯ ಅಯ್ಕೆಯಲ್ಲಿ ನಡೆದಿರುವ ಗೋಲ್‌ಮಾಲ್‌ಗಳು ಅಷ್ಟಿಷ್ಟಲ್ಲ. ಈ ಆಯ್ಕೆಯಲ್ಲಿ ತಮಗೆ ಬೇಕಾದಂತಹಾ ‘ಮಹಾನ್ ವ್ಯಕ್ತಿಗಳನ್ನು ಒಬ್ಬ ಹಿಂದೂ ಸಂಘಟನೆಯೊಂದರ ಪ್ರಭಾವಿ ವ್ಯಕ್ತಿಯ ಪ್ರಭಾವದಿಂದ ಆಯ್ಕೆಗೊಳಿಸಿದ್ದಾರೆ ಎಂಬ ವದಂತಿಯೂ ಹಬ್ಬಿದೆ. ಈ ಆಯ್ಕೆ ನಡೆದಿರುವುದು ಸರಿಯಲ್ಲ. ಇದಕ್ಕೆ ಕೆಲವು ಕಾರಣಗಳು ಈ ರೀತಿ ಇವೆ.
೧. ವ್ಯವಸ್ಥಾಪನಾ ಸಮಿತಿಗೆ ಆಯ್ಕೆಯಾಗಿ ಈಗ ಅದರ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ವ್ಯಕ್ತಿಯೊಬ್ಬರು ಆಯ್ಕೆ ಅರ್ಜಿಯಲ್ಲಿ ತಾವು ಸ್ಥಳೀಯರು ಎಂದು ಬರೆದಿರುತ್ತಾರೆ. ಆದರೆ ಅವರ ಮನೆ ದೇವಸ್ಥಾನದಿಂದ ಸುಮಾರು ಮೂರು ಕಿಲೋ ಮೀಟರ್ ದೂರ ಇದೆ. ಹಾಗಾದರೆ ಅವರು ಹೇಗೆ ಸ್ಥಳೀಯ ರಾದರು? ಅವರನ್ನು ಸ್ಥಳೀಯರೆಂದು ಆಯ್ಕೆ ಮಾಡಿರುವವರ ಬುದ್ದಿಗೆ ಏನು ಹೇಳಬೇಕೋ ತಿಳಿಯದು. ದೇವಸ್ಥಾನದಲ್ಲಿ ಏನಾದರೂ ನಡೆದರೆ ಆ ವಿಷಯ ಅವರಿಗೆ ತಿಳಿದು ಅವರು ದೇವಸ್ಥಾನ ತಲುಪುವಷ್ಟರಲ್ಲಿ ಎಲ್ಲಾ ಮುಗಿದು ಹೋಗಿರುತ್ತದೆ. ಹೀಗಿರುವಾಗ ಇವರನ್ನು ಸ್ಥಳೀಯರೆಂದು ಘೋಷಿಸಿ ಆಯ್ಕೆ ಮಾಡಿದ್ದಾದರೂ ಹೇಗೆ?
೨. ಇನ್ನೋರ್ವರು ಖಾಯಿಲೆಯಿಂದ ಕೂಡಿದ ಮಹಿಳೆ. ದಿನಾ ಆಸ್ಪತ್ರೆಯ ಮುಖ ನೋಡದೆ ಇವರ ದಿನ ಸಾಗಲಾರದು. ಅರ್ಜಿ ಹಾಕುವ ಸಮಯದಲ್ಲಿ ಅರ್ಜಿದಾರರು ಅನಾರೋಗ್ಯದಿಂದ ಕೂಡಿರಬಾರದು ಎಂದು ಹೇಳಲಾಗಿದೆ. ಹಾಗಿರುವಾಗ ಇವರ ಆಯ್ಕೆ ಹೇಗಾಯಿತೆಂದು ಧಾರ್ಮಿಕ ದತ್ತಿ ಇಲಾಖೆಯವರು ಹೇಳುತ್ತಾರೆಯೇ?
೩. ಇನ್ನೋರ್ವ ಮಹಾನ್ ವ್ಯಕ್ತಿ ಓರ್ವ ಬ್ಯಾಂಕ್ ಉದ್ಯಮಿ. ಇವರು ಹಿಂದೂ ಸಂಘಟನೆಯೊಂದರ ಸಕ್ರಿಯ ಕಾರ್ಯಕರ್ತ. ಅಲ್ಲದೆ ಓರ್ವ ರಾಜಕಾರಣಿ. ದೇವಸ್ಥಾನಕ್ಕೆ ಈ ಪುಂಡು ರಾಜಕಾರಣಿಯನ್ನು ತಂದು ದೇವಸ್ಥಾನ ವನ್ನು ಇಲಾಖೆಯವರು ಕೆಡಿಸಿದ್ದಾರೆ. ಅರ್ಜಿ ಹಾಕುವವರು ರಾಜಕಾರಣಿ ಯಾಗಿರುವವರು, ಸರ್ಕಾರದ ಅಧೀನದ ಸಂಸ್ಥೆಯಲ್ಲಿ ಇರಬಾರದು ಎಂಬ ನಿಯಮ ಇದೆ. ಬ್ಯಾಂಕ್ ಒಂದು ಸರ್ಕಾರಿ ಸಂಸ್ಥೆ. ಇಲ್ಲಿ ಉದ್ಯೋಗ ಮಾಡು ವವರ ಆಯ್ಕೆ ಸಮಂಜಸವೇ? ಆಯ್ಕೆಗಾರರೇ ಏನು ಹೇಳುತ್ತೀರಿ?
ಇವರಲ್ಲಿ ಇಬ್ಬರು ಕೊಂಪದವು ಬೊಬ್ಲಾಯಿ ಶ್ರೀಧೂಮಾವತಿ ದೈವಸ್ಥಾನ ಪಾಳು ಬೀಳಲು ಕಾರಣಕರ್ತರು. ಇದು ಎಲ್ಲರಿಗೂ ಗೊತ್ತಿದೆ. ಇವರು ದೇವಸ್ಥಾನಕ್ಕೆ ಬಂದರೆ ಧೂಮಾವತಿ ದೈವಸ್ಥಾನಕ್ಕೆ ಆದ ಶೋಚನೀಯ ಸ್ಥಿತಿಯೇ ಇಲ್ಲಿಗೂ ಬರುವುದರಲ್ಲಿ ಸಂಶಯವಿಲ್ಲ. ಧೂಮಾವತಿ ದೈವಸ್ಥಾನದಲ್ಲಿ ನೇಮೋತ್ಸವ ಆಗದೆ ಎಂಟು ವರ್ಷಗಳು ಕಳೆಯಿತು.
ಧಾರ್ಮಿಕ ದತ್ತಿ ಇಲಾಖೆಯವರಿಗೆ ತಾವು ಯಾವ ದೇವಸ್ಥಾನಕ್ಕೆ ಸಮಿತಿ ಯನ್ನು ರಚಿಸುತ್ತಿದ್ದೇವೆ ಎಂಬ ಪರಿವೆಯೇ ಇಲ್ಲ. ಏಕೆಂದರೆ ಈ ಸಮಿತಿಯು ಪುತ್ತೂರಿನ ಆರ್ಯಾವು ಶ್ರೀದುರ್ಗಾಪರಮೇಶ್ವರೀ ದೇವಳಕ್ಕೆ ರಚಿತವಾಗಿದೆ. ಇದಕ್ಕೆ ಏನು ಹೇಳಬೇಕೆಂದೇ ತೋಚುತ್ತಿಲ್ಲ. ಆದುದರಿಂದ ಈ ಬಗ್ಗೆ ಗ್ರಾಮಸ್ಥರ ವಿನಂತಿ ಏನೆಂದರೆ ಆದಷ್ಟು ಬೇಗ ಈ ದೇವಸ್ಥಾನದಲ್ಲಿ ರಚಿತವಾದ ಸಮಿತಿಯನ್ನು ಅನೂ ರ್ಜಿತಗೊಳಿಸಿ ಬೇರೊಂದು ಸಮಿತಿಯನ್ನು ರಚಿಸಬೇಕು. ಆ ಮೂಲಕ ದೇವಸ್ಥಾ ನದ ಅಭಿವೃದ್ದಿಯಾಗುವಂತೆ ಮಾಡಬೇಕು.
Tagged with
chavadi
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೨೫ರ ಹರೆಯದ ಯುವಕ. ಕೆಲಸ ಮಾಡು ತ್ತಿದ್ದೇನೆ. ನನ್ನ ಸಮಸ್ಯೆ ಏನೆಂದರೆ ನಾನು ತುಂಬಾ ಸಪೂರವಿದ್ದೇನೆ. ನನ್ನ ದೇಹದ ತೂಕ ೪೭ ಕೆ.ಜಿ. ನಾನು ಸೆಕ್ಸ್ ವಿಚಾರಗಳ ಕಡೆ ಹೆಚ್ಚು ಆಸಕ್ತಿ ಹೊಂದಿದ್ದೇನೆ. ನನಗೆ ಕೆಲವೊಮ್ಮೆ ಸೆಕ್ಸ್ ಬಯಕೆಯನ್ನು ನಿಯಂತ್ರಿಸುವುದೇ ಕಷ್ಟವಾಗುತ್ತದೆ. ಹೀಗಾಗಿ ನಿತ್ಯ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದರಿಂದ ನನಗೆ ಸುಖ ಸಿಗುತ್ತದೆ. ಆದರೆ ಹಾಗೆ ಮಾಡಿದ ಬಳಿಕ ಬೇರೇನೂ ಕೆಲಸ ಮಾಡಲು ಮನಸ್ಸು ಬರುವುದಿಲ್ಲ. ಇದೇಕೆ ಹೀಗೆ? ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ. ಆದರೆ ನನಗೆ ಚಂದದ ಹುಡುಗಿಯರನ್ನು ಕಂಡರೆ ಉದ್ರೇ ಕವಾಗುತ್ತದೆ. ಅವರ ಜೊತೆ ಸೆಕ್ಸ್ ಮಾಡಬೇಕು ಎಂದು ಮನಸ್ಸಾ ಗುತ್ತದೆ. ಎಷ್ಟು ಪ್ರಯತ್ನಪಟ್ಟರೂ ಉದ್ರೇಕವನ್ನು ನಿಯಂತ್ರಿಸುವು ದಕ್ಕೆ ಆಗುವುದಿಲ್ಲ. ಇದರಿಂದ ನನಗೆ ಸಮಸ್ಯೆಯಾಗುತ್ತಿದೆ. ಕೆಲಸ ಮಾಡುವಲ್ಲಿಯೂ ಹೆಣ್ಣುಮಕ್ಕಳನ್ನು ಕಂಡರೆ ಲೈಂಗಿಕ ಆಸಕ್ತಿ ಹೆಚ್ಚು ತ್ತದೆ. ನನ್ನ ಈ ಸಮಸ್ಯೆಯ ಪರಿಹಾರ ಹೇಗೆಂದೇ ತಿಳಿಯುವು ದಿಲ್ಲ. ಪ್ರತಿನಿತ್ಯ ಹಸ್ತಮೈಥುನ ಮಾಡದಿದ್ದರೆ ನಿದ್ರೆ ಬೀಳುವುದಿಲ್ಲ. ಇದರಿಂದಲೇ ನಾನು ಸಪೂರವಾಗುತ್ತಿದ್ದೇನೆಯೇ ಎಂದು ಭಯ ಕಾಡಲಾರಂಭಿಸಿದೆ. ನಾನು ಮದುವೆಯಾದ ಮೇಲೆ ಪತ್ನಿಯ ಜೊತೆ ಲೈಂಗಿಕ ಸುಖ ಪಡೆಯಲು ಸಾಧ್ಯವಾಗುತ್ತದೆಯೇ, ಇಲ್ಲವೇ ಎಂದು ಭಯ ಕಾಡುತ್ತದೆ. ನಾನೇನು ಮಾಡಲಿ? ಲೈಂಗಿಕ ಸುಖ ಪಡೆ ಯಲು ಅಸಾಧ್ಯವಾದರೆ ನನಗೆ ಸಾವೇ ಗತಿ. ನಾನು ನಿಮ್ಮ ಪತ್ರಿಕೆ ಯನ್ನು ಓದುತ್ತಿದ್ದು, ನನ್ನ ಸಮಸ್ಯೆಗೆ ಸೂಕ್ತ ಸಲಹೆ ನೀಡುವಿರಾಗಿ ನಂಬಿದ್ದೇನೆ.
ಸಲಹೆ: ನೀವು ಮಾನಸಿಕ ತೊಳಲಾಟದಲ್ಲಿ ಸಿಲುಕಿದ್ದೀರಿ. ವಾಸ್ತವದಲ್ಲಿ ನಿಮ್ಮದು ಸಮಸ್ಯೆಯೇ ಅಲ್ಲ. ಯಾಕೆಂದರೆ ಹಸ್ತಮೈಥುನ ಎನ್ನುವುದು ತೀರಾ ಸಾಮಾನ್ಯ ಲೈಂಗಿಕ ಕ್ರಿಯೆ. ವಯೋಸಹಜ ಕಾಮನೆಯನ್ನು ಹೊಂದಿರುವ ಹದಿಹರೆಯದ ಗಂಡು-ಹೆಣ್ಣುಮಕ್ಕಳು ಲೈಂಗಿಕ ಆಸಕ್ತಿಯನ್ನು ತಣಿಸಿಕೊಳ್ಳಲು ಕಂಡುಕೊಳ್ಳುವ ಸುಲಭ ಉಪಾ ಯವೇ ಹಸ್ತಮೈಥುನ. ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಆದರೆ ಇದನ್ನೇ ಗೀಳನ್ನಾಗಿ ಮಾಡಿಕೊಂಡರೆ ಸಮಸ್ಯೆ ಸೃಷ್ಟಿಯಾಗುತ್ತದೆ. ಲೈಂಗಿಕ ಬಯಕೆ ಜಾಸ್ತಿಯಿದೆ ಎಂದು ಅದನ್ನೇ ಮಾಡುತ್ತಾ ಕುಳಿ ತರೆ ನಿಮ್ಮ ತಲೆಯಲ್ಲಿ ಬೇರೇನು ಬರಲು ಸಾಧ್ಯವಿದೆ? ಹಸ್ತಮೈ ಥುನ ಮಾಡಿಕೊಳ್ಳುವುದು ತಪ್ಪೂ ಅಲ್ಲ, ಅಪರಾಧವೂ ಅಲ್ಲ. ಆದರೆ ಅದಕ್ಕೂ ಒಂದು ಮಿತಿ ಬೇಕು ತಾನೇ? ನಿತ್ಯ ಇದನ್ನು ಮಾಡಬೇ ಕೆಂದಿಲ್ಲ. ವಾರಕ್ಕೆ ಕೆಲವು ದಿನ ಮಾತ್ರ ಮಾಡುತ್ತಾ ಸುಖ ಪಟ್ಟು ಕೊಳ್ಳಿ. ನಿಮ್ಮ ದೇಹ ಪ್ರಕೃತಿಗೂ-ಹಸ್ತಮೈಥುನಕ್ಕೂ ಯಾವುದೇ ಸಂಬಂಧವಿಲ್ಲ.
ಸತ್ವಯುತ ಆಹಾರ ಸೇವಿಸಿ ದೇಹದ ತೂಕವನ್ನು ಹೆಚ್ಚಿಸಿ ಕೊಳ್ಳಿ. ಇನ್ನು ಲೈಂಗಿಕ ಆಸಕ್ತಿ ಹೆಚ್ಚಿದೆ ಎಂದು ಈಗಲೇ ಕಡಿಮೆ ಮಾಡಿಕೊಳ್ಳಲು ವೇಶ್ಯೆಯರ ಸಹವಾಸ ಮಾಡಬೇಡಿ. ಲೈಂಗಿಕ ಸುಖ, ಸಂತೃಪ್ತಿ ಅನುಭವಿಸಲು ಇನ್ನೂ ಬೇಕಾದಷ್ಟು ಸಮಯವಿದೆ. ಕೆಲಸ ಮಾಡುವ ಅವಧಿಯಲ್ಲಿ ಆ ಬಗ್ಗೆ ಚಿಂತೆ ಮಾಡುತ್ತಾ ಕೂರುವುದು ಮೂರ್ಖತನವಾದೀತು. ಹಸ್ತಮೈಥುನ ಮಾಡಿದ ಬಳಿಕ ಅಲ್ಪಮ ಟ್ಟಿನ ನಿಶ್ಶಕ್ತಿ, ಬಳಲಿಕೆ ಕಂಡುಬರುವುದು ಸಾಮಾನ್ಯ. ಇದು ಸಮಸ್ಯೆ ಯಲ್ಲ. ಇನ್ನು ಮದುವೆಯಾದ ಬಳಿಕ ಲೈಂಗಿಕ ಸಂತೃಪ್ತಿ ಪಡುವು ದಕ್ಕೆ ಹಸ್ತಮೈಥುನದಿಂದ ಯಾವುದೇ ತೊಂದರೆಯಿಲ್ಲ. ಅದೇ ಚಿಂತೆಯಲ್ಲಿದ್ದರೆ ಜೀವನದಲ್ಲಿ ಜಿಗುಪ್ಸೆ ಕಾಡಬಹುದು. ಹಸ್ತಮೈ ಥುನ ಮಾಡುತ್ತಿದ್ದೇನೆ ಎಂಬ ಕೀಳರಿಮೆ ಬೆಳೆಸಿಕೊಳ್ಳದಿರಿ. ಇದನ್ನು ಇತರ ಚಟುವಟಿಕೆಯಂತೆ ಕಾಮನ್ ಎಂದುಕೊಳ್ಳಿ. ಆಗ ಸಮಸ್ಯೆ ಬರುವುದಿಲ್ಲ. ಇನ್ನು ನೀವು ಈಗಲೇ ಲೈಂಗಿಕ ಸುಖದ ಬಗ್ಗೆ ಕನವ ರಿಸುವುದು ಬೇಡ. ನಿಮ್ಮ ಕಾಲಮೇಲೆ ನಿಂತು ಮದುವೆಯಾದ ಬಳಿಕ ವಷ್ಟೇ ಲೈಂಗಿಕ ಸುಖದ ಬಗ್ಗೆ ಚಿಂತಿಸಿ.
Tagged with
gupta
ಮೇಷ : ವಾಹನ ಖರೀದಿಸುವ ಯೋಗ ಇದೆ.
ವೃಷಭ : ವ್ಯಾಪಾರದಲ್ಲಿ ಲಾಭ ಕಡಿಮೆ ಇರುತ್ತದೆ.
ಮಿಥುನ : ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ.
ಕರ್ಕಾಟಕ : ಉದ್ಯೋಗದಲ್ಲಿ ತೊಂದರೆ ಇರುತ್ತದೆ.
ಸಿಂಹ : ವಿದ್ಯಾರ್ಥಿಗಳಿಗೆ ಮಾನಸಿಕ ನೆಮ್ಮದಿ ಇರುತ್ತದೆ.
ಕನ್ಯಾ : ಕುಟುಂಬದಲ್ಲಿ ಬಿನ್ನಾಭಿಪ್ರಾಯ ಇರುತ್ತದೆ.
ತುಲಾ : ಹಣಕಾಸಿನ ಅನುಕೂಲ ಇರುತ್ತದೆ.
ವೃಶ್ಚಿಕ : ವ್ಯಾಪಾರದಲ್ಲಿ ಪ್ರಗತಿ ಕಡಿಮೆ ಇರುತ್ತದೆ.
ಧನು : ಹಣಕಾಸಿನ ಅನುಕೂಲ ಇರುತ್ತದೆ.
ಮಕರ : ಹಣಕಾಸಿನ ಲಾಭ ಕಡಿಮೆ ಇರುತ್ತದೆ.
ಕುಂಭ: ಉದ್ಯೋಗದಲ್ಲಿ ಸಮಸ್ಯೆ ಉಂಟಾಗುತ್ತದೆ.
ಮೀನ : ಕೆಲಸ ಕಾರ್ಯಕ್ಕಾಗಿ ಅಲೆದಾಟ ನಡೆಸುತ್ತೀರಿ.
Tagged with
bhavishya
ತೊಕ್ಕೊಟ್ಟು ಅಸುಪಾಸಿನವರು ಬ್ಯೂಟಿ ಪಾರ್ಲರ್‌ಗೆ ಬೇಕಾಗಿದ್ದಾರೆ. ೯೬೬೩೬೨೨೦೫೧
ಮಂಗಳೂರು : ಶೋರೂಂಗೆ ಆಫೀಸ್ ಬಾಯ್ & ಡೆಲಿವರಿ ಬಾಯ್ ಬೇಕು ೦೮೨೪೪೨೫೪೦೧೦.
ಮಂಗಳೂರು : ಕೊರಿಯರ್‌ಗೆ ಜನ ಬೇಕು ೯೯೦೦೪೩೪೯೪೮.
ಮೂಡುಬಿದ್ರೆ : ಮೊಬೈಲ್ ಅಂಗಡಿಗೆ ಯುವತಿ ಬೇಕು ೯೯೦೨೦೭೧೫೪೯.
ಮೂಡಬಿದ್ರೆ : ಟ್ಯುಟೋರಿಯಲ್ ಆಫೀಸ್ ಕೆಲಸಕ್ಕೆ ಯುವತಿ ಬೇಕು ೦೮೨೪೫೮೨೬೧೦೬೦.
ಮಂಗಳೂರು : ಅಡುಗೆ ಅನಿಲ ಸಾಗಿಸುವ ಗಾಡಿಗೆ ಡ್ರೈವರ್ ಬೇಕು ೯೪೪೮೯೫೨೯೦೩.
ಮಂಗಳೂರು : ಬಾಡ್ಜ್ ಹೊಂದಿರುವ ಅನುಭವಿ ಲಾರಿ ಡ್ರೈವರ್ ಬೇಕು ೯೯೭೨೩೭೧೭೨೩.
ಸುರತ್ಕಲ್ : ಸೇಲ್ಸ್ ಗರ್ಲ್ಸ್, ಬಾಯ್ಸ್ ಬೇಕು ೯೮೪೪೪೬೪೩೭೭.
ಉಡುಪಿ : ಸ್ಟುಡಿಯೋಗೆ ಯುವತಿ ಬೇಕು ೯೮೪೫೮೬೩೦೯೪.
ಎನ್‌ಐಟಿಕೆ : ಕಾಫಿ ಸ್ಟಾಲ್‌ಗೆ ಎಕೌಂಟ್ ಮತ್ತು ಸೇಲ್ಸ್‌ಗೆ ಯುವತಿ ಬೇಕು ೯೭೩೮೯೩೨೭೩೧.
ಉಡುಪಿ : ಲಾಂಡ್ರಿಗೆ ಜನ ಬೇಕು ೯೯೬೪೧೪೧೧೨೨.
ಮಂಗಳೂರು : ಫಾಸ್ಟ್‌ಫುಡ್ ಹೊಟೇಲಿಗೆ ವೇಟರ್ ಬೇಕು ೯೨೪೩೩೦೫೨೩೫.
ಫಳ್ನೀರ್ : ಕ್ಲಿನಿಕ್‌ಗೆ ಲೇಡಿ ರಿಸೆಪ್ಶೆನ್ ಬೇಕು ೯೬೮೬೭೦೯೪೮೦.
ಕುಳಾಯಿ : ಹೊಸಬೆಟ್ಟು ಟಿವಿಎಸ್ ಶೋ ರೂಂಗೆ ಹೆಲ್ಪರ್ ಮತ್ತು ಮೆಕಾನಿಕ್ ಬೇಕು ೯೯೪೫೬೧೯೧೧೦
ಮಂಗಳೂರು: ಹೊಟೇಲಿಗೆ ವೇಟರ್ ಬೇಕು ೯೮೮೬೦೯೨೭೨೬,
ತೊಕ್ಕೊಟ್ಟು : ಲೇಡಿಸ್ ಟೈಲರ್ ಬೇಕು ೯೦೬೦೧೪೪೫೫೦.
ಮಂಗಳೂರು : ಜ್ಯೂಸ್ ಅಂಗಡಿಗೆ ಹೆಲ್ಪರ್, ಕ್ಲೀನರ‍್ಸ್ ಬೇಕು ೯೨೪೩೩೦೨೪೪೬.
ಮಂಗಳೂರು : ಮನೆಯಲ್ಲಿ ಉಳಿದು ಕೆಲಸ ಮಾಡಲು ಹೆಂಗಸು ಬೇಕು ೯೭೪೦೯೩೭೭೩೮.
ಮಂಗಳೂರು : ಡಿಟಿಪಿಗೆ ಅನುಭವಿ ಬೇಕು. ೯೪೪೮೨೫೪೯೭೬.
ತೊಕ್ಕೊಟ್ಟು : ಪಂಪು, ಮಿಕ್ಸಿ ರಿಪೇರಿ ಮಾಡುವ ಜನ ಬೇಕು ೯೮೪೫೬೧೭೧೫೨.
ಬಜಪೆ : ಜ್ಯೂಸ್ ಸೆಂಟರ್, ಬೇಕರಿಗೆ ಸೇಲ್ಸ್‌ಗೆ ಜನ ಬೇಕು ೮೨೭೭೦೫೧೫೪೩.
ಮಂಗಳೂರು : ಲೇಡಿ ಸ್ಟಾಫ್ ಬೇಕು ೨೪೯೭೮೬೨.
ಕಟೀಲು : ಮನೆಕೆಲಸಕ್ಕೆ ಜನ ಬೇಕು ೮೭೪೮೦೩೨೬೦೯.
ಎಂ.ಜಿ.ರಸ್ತೆ: ಕೆಲಸಕ್ಕೆ ಪಿಯುಸಿ ಆದವರು ಬೇಕು ೯೭೪೩೩೯೦೭೯೭.
ಬಜಪೆ : ಪ್ಲೈವುಡ್ ಶಾಪಿಗೆ ಸೇಲ್ಸ್‌ಗೆ ಜನ ಬೇಕು ೯೯೦೦೫೨೦೮೦೮.
ಬಜಪೆ : ಎಲೆಕ್ಟ್ರಿಶಿಯನ್ ಮತ್ತು ಹೆಲ್ಪರ್ ಬೇಕು ೯೩೪೧೦೨೬೯೩೯.
ಮಂಗಳೂರು : ಕೆಲಸಕ್ಕೆ ಜನ ಬೇಕು ೯೪೪೯೭೨೩೧೩೩.
Tagged with
udyoga

ನಮ್ಮ ಭಾರತೀಯ ಸಂಸ್ಕೃತಿ ಎಲ್ಲರೂ ಮೆಚ್ಚುವಂತಹ ಸಂಸ್ಕೃತಿ. ಇಲ್ಲಿ ನಡೆಯುವ ಪ್ರತಿಯೊಂದು ಶುಭಕಾರ್ಯವು ಕೂಡಾ ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡಿದೆ. ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯಕ್ಕೆ ತನ್ನದೇ ಆದ ವಿಶೇಷ ಮಹತ್ವವೂ ಇದೆ. ಇಂತಹ ನಮ್ಮ ಸಂಪ್ರದಾಯವನ್ನು ವಿದೇಶಿ ಯರು ಅದರಲ್ಲೂ ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳ ಜನರು ಮೆಚ್ಚುಗೆ ಯಿಂದ ನಮ್ಮ ಹಿರಿಯರೇ ಆಚರಿಸಿಕೊಂಡು ಬಂದಂಥ ನಿಯಮಕ್ಕನುಸಾರವಾಗಿ ಮದುವೆ ಇತ್ಯಾದಿ ಶುಭಕಾರ್ಯವನ್ನು ಮಾಡಿಕೊಳ್ಳುತ್ತಾರೆ. ಆದರೆ ವಿಪರ್ಯಾಸವೆಂದರೆ ನಮ್ಮ ಯುವ ಜನಾಂಗ ತನಗರಿವಿಲ್ಲದೆ ವಿದೇಶಿ ಸಂಸ್ಕೃತಿ ಯನ್ನು ಮೈಗೂಡಿಸಿಕೊಳ್ಳುತ್ತಿದೆ. ಮದುವೆಯ ಮುಂಚಿನ ದಿನ ನಡೆಯುವ ಮದರಂಗಿ ಕಾರ್ಯ ಎಷ್ಟೋ ಅರ್ಥಪೂರ್ಣವಾಗಿದೆ? ಆದರೆ ಇಂದು ಯುವಜನತೆ ಅಮಲು ಪದಾರ್ಥ ಸೇವನೆ ಹಾಗೂ ಮಾಂಸ ಭೋಜನ ಮಾಡಿ ಕೊಂಡು ನಮ್ಮ ಸಂಸ್ಕೃತಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ. ನಮ್ಮ ಪವಿತ್ರ ಹಿಂದೂ ಸಂಸ್ಕೃತಿ ಇಂದು ಅಪವಿತ್ರಗೊಳ್ಳುತ್ತಿದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ನಮ್ಮ ಪೀಳಿಗೆಯವರು ಹಿಂದೂ ಧರ್ಮದ ಪದ್ಧತಿ, ರೀತಿ-ರಿವಾಜನ್ನು ಎಲ್ಲೋ ಓದಿ ತಿಳಿ ಯಬೇಕಾದ ಪರಿಸ್ಥಿತಿ ಬರಬಹುದು. ಏನೇ ಮೋಜು ಇದ್ದರೂ ಅದು ಶುಭಕಾರ್ಯವನ್ನು ಬಿಟ್ಟು ದೂರದಲ್ಲಿರಬೇಕೇ ಹೊರತು ಅದರ ಜೊತೆಗಲ್ಲ, ಹಾಗೆಯೇ ಮದುವೆ, ಮದರಂಗಿ, ನಿಶ್ಚಿತಾರ್ಥದಂತಹ ಶುಭಕಾರ್ಯದಂದು ಮಾಂಸಾಹಾರ, ಅಮಲು ಸೇವನೆಯಿಂದ ದೂರ ವಿರೋಣ. ನಮ್ಮ ಪೂರ್ವಜರ ನಿಯಮವನ್ನು ಸಾಧ್ಯವಾದಷ್ಟು ಪಾಲಿಸೋಣ. ಇದರಿಂದ ನಮ್ಮ ಸಂಸ್ಕೃತಿಯು ಇನ್ನಷ್ಟು ಬೆಳಗುವ ಮೂಲಕ ವಿದೇಶಿಯರಿಗೂ ದಾರಿದೀಪವಾಗುತ್ತದೆ.
ಪ್ರಶಾಂತ್ ಸಾಲಿಯಾನ್, ಕರಿಯಕಲ್ಲು
ಪಿಸಿಆರ್ ವಾಹನಗಳ ದುರ್ಬಳಕೆ ಆಗದಿರಲಿ
ಜಿಲ್ಲಾ ಪೊಲೀಸ್ ಇಲಾಖೆ ಕಮಿಷನರೇಟ್ ವ್ಯವಸ್ಥೆಗೆ ಒಳಪಟ್ಟ ನಂತರ ಬಹಳಷ್ಟು ಸುಧಾರ ಣೆಗಳಾಗಿವೆ. ಅಪರಾಧ ಚಟುವಟಿಕೆ ನಡೆದರೆ ಜನರಿಗೆ ತಕ್ಷಣ ಸಂಪರ್ಕಕ್ಕೆ ಲಭಿಸುವಂತಾಗಲು ಪೊಲೀಸರಿಗೆ ಪಿಸಿಆರ್ ವಾಹನಗಳನ್ನು ಒದಗಿ ಸಲಾಗಿದೆ. ಆದರೆ ಈ ವಾಹನ ಅನೇಕ ಬಾರಿ ದುರ್ಬಳಕೆ ಆಗುವುದು ಗಮನಕ್ಕೆ ಬರುತ್ತಿದೆ.
ಇತ್ತೀಚೆಗೆ ಮಂಗಳೂರು ನಗರದಲ್ಲಿ ಪಿಸಿ ಆರ್ ವಾಹನದಲ್ಲಿ ರಾತ್ರಿ ವೇಳೆ ಪೊಲೀಸರು ಡ್ರೈವಿಂಗ್ ಕಲಿಯುತ್ತಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೇ ರೀತಿ ನಗರದ ವಿವಿಧ ಠಾಣಾ ವ್ಯಾಪ್ತಿಯ ಪಿಸಿಆರ್ ವಾಹನಗಳು ಎಲ್ಲೋ ಬಾರ್, ಗೂಡಂಗಡಿಗಳ ಮುಂದೆ ದಿನವಿಡೀ ನಿಂತಿ ರುತ್ತದೆ. ಈ ವಾಹನಗಳನ್ನು ನಿಲ್ಲಿಸಲು ನಿಗದಿತ ಸ್ಥಳ ಇನ್ನೂ ಗುರುತಿಸಿಲ್ಲವೇ? ಪಿಸಿಆರ್ ವಾಹನ ಗಳನ್ನು ಅದಕ್ಕೆ ಮೀಸಲಿರಿಸಿದ ಜಾಗದಲ್ಲೇ ನಿಲ್ಲಿಸು ವುದು ಒಳಿತು. ಆಯಾ ಠಾಣಾ ವ್ಯಾಪ್ತಿಯ ಪ್ರಧಾನ ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ ಮುಂತಾ ದೆಡೆ ಪಿಸಿಆರ್ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಿ ದರೆ ನಾಗರಿಕರು ಹೆಚ್ಚಿನ ಪ್ರಯೋಜನ ಪಡೆಯು ವಂತಾಗುತ್ತದೆ. ಈ ಕುರಿತು ಪೊಲೀಸ್ ಅಧಿಕಾ ರಿಗಳು ತಕ್ಷಣ ಗಮನಿಸಲಿ.
ಪಿ. ನಾಗೇಶ್, ಕಿನ್ನಿಗೋಳಿ
ಕಾಂಗ್ರೆಸ್ ಹಾಗೂ ಜಿಲ್ಲಾಡಳಿತ ನೇರ ಹೊಣೆ
ಕಾರ್ಕಳದಲ್ಲಿ ಬಸ್‌ಸ್ಟ್ಯಾಂಡ್ ಸ್ಥಳಾಂತರ ಗೊಂಡು ಮೂರು ತಿಂಗಳು ಕಳೆದಿವೆ. ಕಾರ್ಕ ಳದ ಜನರಿಗೆ ಇದರಿಂದ ಬಹಳಷ್ಟು ತೊಂದ ರೆಯಾಗುತ್ತಿದ್ದರೂ ಜನರು ತಾಳ್ಮೆಯಿಂದ ಇದ್ದಾರೆ.
ಇದಕ್ಕೆ ಕಾರಣ ಹಾಲಿ ಹಾಗೂ ಮಾಜಿ ಶಾಸಕರ ಭರವಸೆ. ಇದೀಗ ಜನರು ಸಂಕ ಷ್ಟಕ್ಕೆ ಸಿಲುಕಿ ತಾಳ್ಮೆ ಕಳೆದು ಕೊಳ್ಳುತ್ತಿದ್ದಾರೆ. ಮಾಜಿ ಶಾಸಕ ಸುನಿಲ್ ಕುಮಾರ್ ಅವರಿಗೆ ತಡವಾಗಿ ಜನರ ಕಷ್ಟ ಅರಿವಾಗಿದೆಯಾದರೂ ಹಾಲಿ ಶಾಸಕ ಗೋಪಾಲ ಭಂಡಾರಿಯ ವರಿಗೆ ಇನ್ನೂ ಬಸ್ ನಿಲ್ದಾಣದ ಸಮಸ್ಯೆ ಅರಿವಾದಂತಿಲ್ಲ. ಪುರಸಭೆಯ ಒಬ್ಬ ಕಾಂಗ್ರೆಸ್ ಕೌನ್ಸಿಲರ್ ದಿನಂಪ್ರತಿ ಪತ್ರಿಕೆಗಳಲ್ಲಿ ಹೊಸ ಬಸ್ ನಿಲ್ದಾಣಕ್ಕೆ ೧.೫ ಕೋಟಿ ರೂ. ಖರ್ಚಾಗಿದೆ ಎಂದೂ, ವಿ.ಎಸ್. ಆಚಾರ್ಯರ ಹೆಸರು ಇಟ್ಟಂತಹ ನಿಲ್ದಾಣ ಎಂದೂ ಪದೇ ಪದೇ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಆಗಿದೆ. ಈತ ಕಾಂಗ್ರೆಸ್ಸಿನಲ್ಲಿ ಇರುವುದಾದರೂ ಏತಕ್ಕೆ? ಬಿಜೆಪಿ ಸೇರಿಕೊಂಡು ವಿ.ಎಸ್.ಆಚಾರ್ಯರ ಆತ್ಮಕ್ಕೆ ಶಾಂತಿ ಸಿಗುವ ಕೆಲಸವನ್ನಾದರೂ ಮಾಡಲಿ.
ಅದು ಬಿಟ್ಟು ನಾಗರಿಕರಿಗೆ ತೊಂದರೆ ಆಗುವ ಕೆಲಸ ಮಾಡಿದರೆ ಜನರು ಕಾಂಗ್ರೆಸ್ ಪಕ್ಷವನ್ನೇ ತಿರಸ್ಕರಿಸಲಿದ್ದಾರೆ. ಹೊಸ ಬಸ್ ನಿಲ್ದಾಣ ಮುಂಬೈ ಹಾಗೂ ಬೆಂಗಳೂರು ಬಸ್‌ಗಳ ನಿಲ್ದಾಣವಾಗಲಿ.
ಒಂದು ವೇಳೆ ಹಳೆಯ ಬಸ್ ನಿಲ್ದಾ ಣಕ್ಕೆ ಸ್ಥಳಾಂತರಗೊಳ್ಳದೆ ಇದ್ದಲ್ಲಿ ಕಾರ್ಕಳ ಹಿತ ರಕ್ಷಣಾ ವೇದಿಕೆ ಮುಖಾಂತರ ಪ್ರತಿಭಟನೆ ಮಾಡಲು ಜನರು ತಯಾರಿದ್ದಾರೆ. ಬಸ್ ನಿಲ್ದಾಣ ಸ್ಥಳಾಂತರಗೊಳ್ಳುವವರೆಗೆ ಈ ಹೋರಾಟ ಮುಂದುವರೆಯಲಿದೆ. ಇದರಿಂದ ಆಗುವ ಅನಾಹುತಗಳಿಗೆ ಕಾಂಗ್ರೆಸ್ ಹಾಗೂ ಜಿಲ್ಲಾಡಳಿತ ನೇರ ಹೊಣೆಯಾಗಲಿದೆ.
ಗಣೇಶ್, ಕಾರ್ಕಳ
ರಾತ್ರಿ ತಪಾಸಣೆ ಎಂಬ ಪೊಲೀಸರ ನಾಟಕ!
ಭದ್ರತೆಯ ದೃಷ್ಟಿಯಿಂದ ಕಮಿಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ ಹನ್ನೆರೆಡರ ನಂತರ ನಗರ ವನ್ನು ಪ್ರವೇಶಿಸುವ ಮತ್ತು ಹೊರ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾ ಗುತ್ತದೆ. ಕಮಿಷನರ್ ಆದೇಶದ ಪ್ರಕಾರ ಇದು ಪ್ರತಿ ದಿನವೂ ನಡೆಯಬೇಕಂತೆ. ಆದರೆ ನಮ್ಮ ಪೊಲೀಸರು ಈ ಆದೇಶವನ್ನು ಸರಿಯಾಗಿ ಪಾಲಿಸುತ್ತಿಲ್ಲ. ಮೊನ್ನೆ ನಾನು ಮತ್ತು ನನ್ನ ಸ್ನೇಹಿತ ಎಂದಿನಂತೆ ರಾತ್ರಿಯ ಕೆಲಸ ಮುಗಿಸಿ ತೆರಳುತ್ತಿದ್ದ ವೇಳೆ ಪೊಲೀಸರು ತಡೆದು ನಿಲ್ಲಿಸಿ ಇನ್ನಿಲ್ಲದಂತೆ ತಪಾಸಣೆ ನಡೆಸಿದರು. ಪೊಲೀಸರ ಕರ್ತವ್ಯ ಎಂದು ನಾವೂ ಸಹಕರಿಸಿದೆವು. ಆದರೆ ಈ ತಪಾಸಣೆ ಕೇವಲ ಎರಡೇ ದಿನಕ್ಕೆ ಸೀಮಿತವಾಗಿತ್ತು. ಮತ್ತೆ ಒಂದು ವಾರ ಪೊಲೀಸರಿದ್ದರೂ ತಪಾಸಣೆಯಾಗಲೀ, ವಾಹನದ ನಂಬರ್ ನೋಟ್ ಮಾಡುವ ಕಾಯಕ ವಾಗಲಿ ಯಾರೂ ಮಾಡಿಲ್ಲ. ಒಂದು ವಾರ ಕಳೆದು ಮತ್ತೆ ಅದೇ ದಾರಿಯಲ್ಲಿ ಬಂದಾಗ ಈ ಮತ್ತದೇ ರೀತಿಯ ತಪಾಸಣೆ. ಈ ರೀತಿ ತಪಾಸಣೆ ಪ್ರತೀ ದಿನವೂ ನಡೆಯುತ್ತದೆಯೇ ಅಂತ ಕೇಳಿದರೆ ‘ಹೌದು, ಇದು ಕಮಿಷನರ್ ಆದೇಶ. ಪ್ರತಿ ದಿನವೂ ನಡೆಯಬೇಕು ಎಂಬ ಉತ್ತರ ಸಿಕ್ಕಿತು. ಆದರೆ ನನ್ನ ಗಮನಕ್ಕೆ ಬಂದ ಪ್ರಕಾರ ವಾರದಲ್ಲಿ ಒಂದೆರೆಡು ಬಾರಿ ಮಾತ್ರ ಪೊಲೀಸರು ನಿಯತ್ತಿನಿಂದ ರಾತ್ರಿ ಕಾವಲು ಕಾಯುತ್ತಾರೆ. ಇನ್ನುಳಿದ ದಿನಗಳಲ್ಲಿ ಇವರದ್ದೇ ‘ಲೋಕ’ದಲ್ಲಿ ತೇಲಿ ಹೋಗುತ್ತಾರೆ.
ಯಾಕೆ ಹೀಗೆ ಎಂದು ರಾತ್ರಿ ಪಾಳಿಯ ಪೊಲೀಸರಲ್ಲಿ ಕೇಳಿದರೆ ‘ಕಣ್ಣಿಗೆ ಎಣ್ಣೆ ಬಿಟ್ಟು ಐದು ಘಂಟೆಯ ತನಕ ಡ್ಯೂಟಿ ಮಾಡುತ್ತೇವೆ ಅನ್ನುವ ಉತ್ತರ. ರಾತ್ರಿ ಕೆಲಸದ ಇವರ ಕೋಪಕ್ಕೆ ತುತ್ತಾಗು ವುದು ಮಾತ್ರ ಕೆಲ ರಾತ್ರಿ ಪಾಳಿಯ ಕೆಲಸಗಾರರು. ಪೊಲೀಸರ ಈ ರೀತಿಯ ವರ್ತನೆಗೆ ಕೆಲಸದ ಒತ್ತಡ ಕಾರಣವೋ ಅಥವಾ ನಮ್ಮನ್ನು ಯಾರೂ ಕೇಳುವುದಿಲ್ಲ ಎಂಬ ಮೊಂಡು ಧೈರ್ಯವೋ ಎನ್ನುವ ಪ್ರಶ್ನೆಗೆ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಉತ್ತರಿಸಬೇಕಿದೆ. ಒಂದೆರೆಡು ದಿನದ ನಾಟಕ ಪೊಲೀಸ್ ಇಲಾಖೆಗೆ ಎಂದಿಗೂ ಶೋಭೆಯಲ್ಲ ಎನ್ನುವುದು ನೆನಪಿರಲಿ
ಕರುಣಾಕರ್ ಆರ್. ಕೊಣಾಜೆ
ವಸೂಲಿ ಮಾಡುವವರ‍್ಯಾರು?
ಕಳೆದ ಒಂದುವರೆ ವರ್ಷದಿಂದ ಬೆಂದೂರು ತೋಟಗಾರಿಕಾ ಕಚೇರಿಯಲ್ಲಿ ಶ್ರೀಆನಂದರ ವರು ಉಗ್ರಾಣ ಕೊಠಡಿಯಲ್ಲಿ ವಾಸಿಸುತ್ತಿದ್ದಾರೆ. ಇದರ ಕರೆಂಟ್ ಬಿಲ್ ಸಮೇತ ಸರ್ಕಾರಕ್ಕೆ ಕಟ್ಟುತ್ತಾರೆ. ಆದುದರಿಂದ ಇವರ ಎಲ್ಲಾ ಖರ್ಚು ವೆಚ್ಚವನ್ನು ನ್ಯಾಯಯುತವಾಗಿ ಭರಿಸಬೇಕು. ಅವರ ಬಾಡಿಗೆಯನ್ನು ಯಾರು ವಸೂಲಿ ಮಾಡು ತ್ತಾರೆ ಎಂದು ವಿಚಾರಿಸಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಕೇಳಿಕೊಳ್ಳುತ್ತೇವೆ.
ನೊಂದವರು, ಮಂಗಳೂರು
ಬಾಲಕಾರ್ಮಿಕರೇ ಶಾಲೆಗೆ ಬನ್ನಿ
ಮಕ್ಕಳು ಶಾಲೆಯನ್ನು ಬಿಟ್ಟು ಹೊಟೇಲ್, ಬಾರ್, ಮನೆಗೆಲಸ ಮಾಡುವುದು ಕಂಡುಬರುತ್ತಿದೆ. ಅಂಥವರನ್ನು ಪತ್ತೆಹಚ್ಚಿ ಶಾಲೆಗೆ ಕರೆಸಿ ಒಳ್ಳೆಯ ವಿದ್ಯಾಭ್ಯಾಸವನ್ನು ಒದಗಿ ಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಲ್ಲಿ ಕೇಳಿಕೊಳ್ಳುತ್ತಿದ್ದೇನೆ. ರಾಜ್ಯ ಸರಕಾರವು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸೈಕಲ್, ಬಿಸಿ ಯೂಟ ಕೊಡುವುದರಿಂದ ಶಿಕ್ಷಣ ಪಡೆಯಲು ಸಮಸ್ಯೆ ಬಾರದು. ಆದ್ದ ರಿಂದ ಬಾಲಕಾರ್ಮಿಕರೇ ನೀವು ರಜೆಯಲ್ಲಿ ಕೆಲಸ ಮಾಡಿ, ಶಾಲೆ ಇರುವಾಗ ಶಾಲೆಗೆ ಬನ್ನಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ. ಸರ್ಕಾರವೂ ಗಮನಹರಿಸಲಿ.
ಗುರುಪ್ರಸಾದ್, ಮಂಗಳೂರು
ಬಸ್ ಮುಷ್ಕರ ನಡೆಸುವುದನ್ನು ನಿಲ್ಲಿಸಲಿ
ಕರ್ನಾಟಕ ರಕ್ಷಣಾ ವೇದಿಕೆಯ ಮಂಗ ಳೂರು ಕ್ಷೇತ್ರಾಧ್ಯಕ್ಷರೂ ಆಗಿರುವ ಫಜೀರು ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಎನ್.ಮೊಹಿದ್ದೀನ್ ಅವರು ಬಸ್ ಚಾಲಕನಿಗೆ ಹಲ್ಲೆ ನಡೆಸಿರುವುದು ಖಂಡನೀಯ ಮತ್ತು ಯಾರು ಒಪ್ಪತಕ್ಕದ್ದಲ್ಲ. ಆದರೆ ಹಲ್ಲೆ ನಡೆಸುವಷ್ಟು ಕೆಲವು ಬಸ್ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ ಘರ್ಷಣೆಗೆ ಪ್ರಚೋದಿ ಸುವುದು ಸುಳ್ಳಲ್ಲ. ಮುಡಿಪು ಮಾರ್ಗದ ಹಲವು ಬಸ್ ಸಿಬ್ಬಂದಿ ವೃದ್ಧರು, ಮಹಿಳೆಯರನ್ನು ನಡೆಸಿ ಕೊಳ್ಳುತ್ತಿರುವ ರೀತಿ ಮುಡಿಪು ವ್ಯಾಪ್ತಿಯ ಸಾರ್ವ ಜನಿಕರೆಲ್ಲರೂ ದಿನನಿತ್ಯ ನೋಡುತ್ತಿರುತ್ತೇವೆ ಮತ್ತು ಟೈಮಿಂಗ್ಸ್‌ಗಾಗಿ ಬಸ್ ಸಿಬ್ಬಂದಿಯೇ ತಮ್ಮೊಳಗೆ ಕಚ್ಚಾಡುತ್ತಿರುವುದೂ ಎಲ್ಲರಿಗೂ ತಿಳಿದಿದೆ. ಮುಡಿ ಪುವಿನಲ್ಲಿ ಯಾವ ರೀತಿ ಬಸ್ ಚಲಾಯಿಸು ತ್ತಾರೆಂದರೆ ಸಾರ್ವಜನಿಕರು ಹಾಗೂ ಇತರೇ ವಾಹನ ಚಾಲಕರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸ ಬೇಕಾದ ಸ್ಥಿತಿ ಇದೆ. ಆದರೆ ಇದೀಗ ಬಸ್ ಚಾಲಕನಿಗೆ ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿ ಸಲಿಲ್ಲ, ಆರೋಪಿ ತಲೆಮರೆಸಿ ಕೊಂಡಿದ್ದಾರೆ ಎನ್ನುವ ನೆಪವೊಡ್ಡಿ ರಾಜಕೀಯ ದ್ವೇಷದಿಂದ ಎರಡು ಬಾರಿ ಬಸ್ ಮುಷ್ಕರ ನಡೆಸಿ ಮತ್ತೆ ಮೂರನೇ ಬಾರಿ ಬಸ್ ಮುಷ್ಕರ ನಡೆಸುವುದಾಗಿ ಘೋಷಿಸಿ ಸಾವಿರಾರು ಸಾರ್ವಜನಿಕರಿಗೆ ತೊಂದರೆ ನೀಡಲು ಬಸ್ ಮಾಲ ಕರು ಹಾಗೂ ಸಿಬ್ಬಂದಿ ವರ್ಗ ಸಿದ್ಧವಾಗಿದೆ. ಇವರು ಸಾರ್ವಜನಿಕರಿಗೆ ತೊಂದರೆ ನೀಡಿ ಯಾವ ರೀತಿ ರಾಜಕೀಯವಾಗಿ ಏಳಿಗೆ ಹೊಂದುತ್ತಾರೋ ಅವರೇ ಯೋಚಿಸಬೇಕು. ಬಸ್ ಸಿಬ್ಬಂದಿ ಮುಷ್ಕರ ಮಾಡಿ ಸಾಧಿಸಿದ್ದಾದರೂ ಏನು? ಮತ್ತೆ ಬಸ್ ಸಿಬ್ಬಂದಿ ಮುಷ್ಕರ ನಡೆಸಿದ್ದೇ ಆದರೆ ಖಾಸಗಿ ಬಸ್ ಸಂಚಾರ ವನ್ನು ಅನಿರ್ದಿಷ್ಟಾವಧಿ ತಡೆದು ಪ್ರತಿಭಟನೆ ನಡೆ ಸಲು ನಾವು ಸಿದ್ಧರಾಗಿದ್ದೇವೆ ಮತ್ತು ಸರಕಾರಿ ಬಸ್ ಸಂಚಾರ ಆರಂಭ ಆಗುವವರೆಗೂ ಖಾಸಗಿ ಬಸ್ ಅನ್ನು ಸಾರ್ವಜನಿಕರ ಸಹಕಾರದೊಂದಿಗೆ ತಡೆ ಯಲಿದ್ದೇವೆ.
ಚಂದ್ರ.ಕೆ., ಅಬ್ದುಲ್ ಜಲೀಲ್, ಸದಾನಂದ, ಕ.ರ.ವೇ.-ಮುಡಿಪು
ಲೋಕಾಯುಕ್ತ ಪೊಲೀಸರೆಲ್ಲಿ?
ಕೆಲ ತಿಂಗಳ ಹಿಂದೆ ಜಿಲ್ಲೆಯ ಕೆಲ ಸರ್ಕಾರಿ ಕಚೇರಿಗಳಿಗೆ ದಾಳಿ ನಡೆಸಿ ಭ್ರಷ್ಟಾಚಾರವನ್ನು ಬಯಲು ಗೊಳಿಸಿದ್ದ ಲೋಕಾಯುಕ್ತ ಪೊಲೀ ಸರು ಈಗೆಲ್ಲಿದ್ದಾರೆ? ವರ್ಷದಲ್ಲಿ ಎರಡು ಬಾರಿ ದಾಳಿ ನಡೆಸಿ ಹೋಗುವ ಲೋಕಾಯುಕ್ತ ಪೊಲೀ ಸರ ಮನಸ್ಥಿತಿ ಬಹುತೇಕ ಭ್ರಷ್ಟ ಕುಳ ಗಳಿಗೆ ತಿಳಿದಿದ್ದು, ಇಂದಿಗೂ ಭ್ರಷ್ಟಾ ಚಾರ ನಿರಂತರವಾಗಿದೆ. ಇನ್ನಾ ದರೂ ಲೋಕಾಯುಕ್ತ ಇಲಾಖೆ ಗಮ ನಿಸಿ. ಭ್ರಷ್ಟರ ಮೇಲೆ ಒಂದು ಕಣ್ಣಿ ಡಲಿ.
ನಿಧಿ, ಕೊಲ್ಯ
Tagged with
nimminda
ಗುರುಪುರ ಫಲ್ಗುಣಿ ನದಿ ಹಾಗೂ ಅಡ್ಡೂರು ಪೊಳಲಿ ಸೇತುವೆಯ ಪಕ್ಕದಲ್ಲಿ ಕೂಡ ಅಕ್ರಮ ಮರಳು ಮಾಫಿಯಾ ದಂಧೆ ಹಗಲಿರುಳು ನಡೆಯುತ್ತಿರುತ್ತದೆ. ಮಾನ್ಯ ಜಿಲ್ಲಾಧಿಕಾರಿಯವರು ನೇರವಾಗಿ ಸ್ಥಳಕ್ಕೆ ಆಗಮಿಸಿ ಕಣ್ಣಾರೆ ಕಂಡು ಅಲ್ಲಿಯೇ ವಾಹನಗಳನ್ನು ವಶಕ್ಕೆ ತೆಗೆದು ಅಕ್ರಮ ದಂಧೆಯನ್ನು ಸ್ಥಗಿತಗೊಳಿಸಬೇಕು.
ನಾಗರಿಕ ಸಮಿತಿ, ಅಡ್ಡೂರು-ದ.ಕ.
ಜಿಲ್ಲಾಡಳಿತದ ವೈಫಲ್ಯದಿಂದಾಗಿ ರಾಜಾರೋಷವಾಗಿ ಹಗಲು-ರಾತ್ರಿ ಎನ್ನದೆ ನಿರಂತರವಾಗಿ ಅಕ್ರಮ ಮರಳು ಮಾಫಿಯಾ ನಡೆಯುತ್ತಲೇ ಇದೆ. ಮರಳು ಲಾರಿಗಳ ಓಡಾಟ ದಿಂದಾಗಿ ಈಗಾಗಲೇ ಆಯುಷ್ಯ ಮುಗಿದಿರುವ ಗುರುಪುರ ಸೇತುವೆಯು ಸಾವಿನಂಚಿನಲ್ಲಿದ್ದು, ಅಂತ್ಯ ಕಾಣುವ ದೌರ್ಭಾಗ್ಯ ಬಂದೊದಗಿದೆ. ಮಂಗಳೂರು-ಮೂಡಬಿದ್ರೆ-ಕಾರ್ಕಳಕ್ಕೆ ಸಂಚ ರಿಸುವ ರಾಜ್ಯ ರಸ್ತೆಯ ಪ್ರಮುಖ ಕೊಂಡಿಯಾಗಿರುವ ಗುರು ಪುರ ಸೇತುವೆ ಮುರಿದು ಬಿದ್ದರೆ ವಾಹನ ಸಂಚಾರ ಸಮ ಸ್ಯೆಗೆ ಸಿಲುಕಲಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಗುರುಪುರ ಸೇತುವೆಯ ಇನ್ನಷ್ಟು ಪ್ರಯೋಜನ(ಬದಲಿ ಸೇತುವೆ ಆಗುವಲ್ಲಿಯವರೆಗೆ) ಪಡೆಯಲು ಹರಸಾಹಸ ಪಡುತ್ತಿರುವ ಅಡ್ಡೂರು ನಾಗರಿಕ ಸಮಿತಿಯು ಕಳೆದ ಹಲವು ತಿಂಗಳುಗಳಿಂದ ಜಿಲ್ಲಾಡಳಿತಕ್ಕೆ ಅರ್ಜಿಯನ್ನು ಮೇಲಿಂದ ಮೇಲೆ ಕೊಡುತ್ತಲೇ ಇದ್ದರೂ ಎಲ್ಲವೂ ನೀರ ಮೇಲೆ ಹೋಮವಿಟ್ಟಂತಾಗಿದೆ. ಹೀಗಾಗಿ ಮರಣಶಯ್ಯೆಯಲ್ಲಿ ಒದ್ದಾಡುತ್ತಿರುವ ಗುರುಪುರ ಸೇತುವೆಯ ಕೊನೆಯ ಆಸೆಯಂತೆ ಜಿಲ್ಲೆಯ ಎಲ್ಲಾ ಪತ್ರಿಕಾ ಮಾಧ್ಯಮದ ವರ ಮೊರೆ ಹೋಗಬೇಕಾದ ಪ್ರಸಂಗ ಎದುರಾಗಿದೆ.
ಈ ಬಗ್ಗೆ ಮಾಧ್ಯಮದವರು ಸ್ಥಳಕ್ಕೆ ಬರುವಾಗ ಎಲ್ಲಾ ದಾಖಲಾದ ದೂರಿನ ಯಥಾನಕಲು ಕಡತಗಳೊಂದಿಗೆ ಬಂದು ಸಮಸ್ಯೆಯನ್ನು ಕಣ್ಣಾರೆ ಕಂಡು ನಿಜಸ್ಥಿತಿಯನ್ನು ಅರಿತು ನಂತರ ಜಿಲ್ಲೆಯ ನಾಗರಿಕರಿಗೆ ತಿಳಿಯುವಂತೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗೆ ಚುರುಕು ಮುಟ್ಟಿಸುವಂತಹ ಕೆಲಸ ಮಾಡಬೇಕಾಗಿದೆ.
ಕೂಗಿದವರ ಕಣ್ಣೊರೆಸುವ ತಂತ್ರದಂತೆ ಗುರುಪುರ ಸೇತು ವೆಯ ಇಕ್ಕೆಲಗಳ ಒಂದು ಕಿ.ಮಿ. ವ್ಯಾಪ್ತಿಯ ಪ್ರದೇಶದಲ್ಲಿ ಮರಳು ತೆಗೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸದೆ ಕೇವಲ ಸೇತುವೆಯ ಇಕ್ಕೆಲಗಳಲ್ಲಿ ನಾಮಫಲಕವನ್ನು ಅಳವಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಹಾಯಕ ಆಯುಕ್ತರ ಕಾರ್ಯಾಲಯವು ಸುತ್ತೋಲೆ ಹೊರಡಿಸಿದೆ. ಇದು ಎಷ್ಟರ ಮಟ್ಟಿಗೆ ಸರಿ? ನಾಮಫಲಕ ಅಳವಡಿಸಿದರೆ ಅಕ್ರಮ ದಂಧೆ ನಿಲ್ಲಬಹುದೇ? ಹಾಗೂ ಸೇತುವೆಯ ಇಕ್ಕೆಲಗಳಲ್ಲಿ ಅಕ್ರಮ ವಾಗಿ ಮರಳು ತೆಗೆದು ದಂಧೆ ನಡೆಸಿದ್ದರ ಪರಿಣಾಮ ಬಳ್ಳಾ ರಿಯ ರೆಡ್ಡಿಗಳಂತೆ ದ.ಕ.ಜಿಲ್ಲೆಯಲ್ಲಿಯೂ ಕೂಡಾ ಇನ್ನಷ್ಟು ರೆಡ್ಡಿಗಳು ಹುಟ್ಟುವುದರಲ್ಲಿ ಸಂಶಯವಿಲ್ಲ. ಎಲ್ಲೆ ಮೀರಿ ನಡೆ ಯುವ ಈ ದಂಧೆಗೆ ಕಡಿವಾಣ ಹಾಕುವವರು ಯಾರು? ಜಿಲ್ಲಾಡಳಿತವೇ? ಮಾಧ್ಯಮದವರೇ? ಹೀಗೆ ಮುಂದುವರಿದರೆ ಕಡಿವಾಣ ಹಾಕುವ ಕೆಲಸ ಜಿಲ್ಲಾಡಳಿತದಿಂದ ಜರೂರಾಗಬೇ ಕಾಗಿದೆ.
ರಾಜ್ಯದ ಹಲವು ಕಡೆ ಗಣಿ ಮಾಫಿಯಾ ದಂಧೆಯಂತೆ ಮಂಗಳೂರು ತಾಲೂಕಿನ ಹಲವೆಡೆ ಪರಿಸರ ನಾಶ ಹಾಗೂ ಮುಂದೆ ಸಾರ್ವಜನಿಕರಿಗೆ ತೊಂದರೆ ಆಗುವ ಹಾಗೇ ಸಾರ್ವ ಜನಿಕರ ಸಂಪರ್ಕ ದಾರಿಗೆ ಕಟ್ಟಲಾದ ಸೇತುವೆಯ ಇಬ್ಭಾಗ ದಲ್ಲಿ ಅಕ್ರಮವಾಗಿ ಮರಳು ತೆಗೆದು ಸೇತುವೆಯನ್ನು ಅಪಾಯ ಕಾರಿ ಮಟ್ಟಕ್ಕೆ ಕೊಂಡೊಯ್ಯುವ ಈ ಕ್ರಮಕ್ಕೆ ಜಿಲ್ಲಾಧಿಕಾರಿ ಗಳು ಕೂಡಲೇ ಕಾರ್ಯಪ್ರವೃತರಾಗಬೇಕಾಗಿದೆ. ಬ್ರಿಟಿಷರ ಕಾಲ ದಲ್ಲಿ ನಿರ್ಮಿಸಿದ ಗುರುಪುರ ಸೇತುವೆ ಈಗಾಗಲೇ ಬಿರುಕು ಬಿಟ್ಟಿದ್ದು, ಕ್ಷಯ ರೋಗಿಯ ಎಲುಬುಗಳು ಎದ್ದು ಕಾಣುವಂತೆ ಕಂಬಗಳ ಅಡಿಪಾಯದ ಅವಶೇಷಗಳು ನೀರಿನೊಳಗೆ ಮುಳು ಗಿರುವುದು ಕಂಡುಬರುತ್ತದೆ. ಇದು ಅಪಾಯಕಾರಿ. ಮುಂದೆ ಈ ಸೇತುವೆ ಕುಸಿದಾಗ ಆಗುವ ತೊಂದರೆಗೆ ಯಾರು ಹೊಣೆ?
ಸೇತುವೆಯ ಎರಡೂ ಬದಿಗಳಲ್ಲಿ ನ್ಯಾಯಾಲಯದಿಂದ ಮರಳು ತೆಗೆಯಬಾರದೆಂದು ಆದೇಶವಿದ್ದರೂ ಸೇತುವೆಯ ಪಕ್ಕದಲ್ಲಿಯೇ ಅಕ್ರಮ ದಂಧೆ ಹಗಲಿರುಳು ನಡೆಯುತ್ತಿರುತ್ತದೆ. ಈ ದಂಧೆ ನಡೆಸಲು ಕೇವಲ ೨-೩ ಮಂದಿಗೆ ಮಾತ್ರ ಪರ್ಮಿಟು ಇದ್ದರೂ ಇನ್ನಿತರ ಹಲವಾರು ಮಂದಿ ಸರಕಾರಿ ಆದೇಶವಿಲ್ಲದೆ ಅಕ್ರಮ ದಂಧೆ ನಡೆಸುತ್ತಿದ್ದಾರೆ. ಇಲ್ಲಿ ಗಮನಿಸತಕ್ಕ ವಿಚಾರವೆಂದರೆ, ಅನುಮತಿ ಇದ್ದ ಕೆಲವೇ ಮಂದಿಗೆ ಸೇತುವೆಯಿಂದ ಒಂದು ಕಿ.ಮೀ. ದೂರದ ಅಂತರದ ಪರ್ಮಿಟು ಇದ್ದರೂ, ಅವರುಗಳು ಸೇತುವೆ ಬದಿಯಲ್ಲಿಯೇ ತೆಗೆಯುತ್ತಿರುವುದು ಕಂಡುಬರುತ್ತದೆ. ಅದು ಅಲ್ಲದೇ ರಾತ್ರಿಯ ಹೊತ್ತಿನಲ್ಲಿ ಮರಳನ್ನು ಜೆಸಿಬಿ ಅಥವಾ ಇನ್ನಿತರ ಘನವಾಹನಗಳ ಮೂಲಕ ನೀರಿನೊಳಗಿನಿಂದ ತೆಗೆದು ರಾಶಿ ಹಾಕುತ್ತಿದ್ದು, ಇದು ದಿನನಿತ್ಯದ ಕೆಲಸವಾಗಿರುತ್ತದೆ.
ಗುರುಪುರ ಫಲ್ಗುಣಿ ನದಿ ಹಾಗೂ ಅಡ್ಡೂರು ಪೊಳಲಿ ಸೇತುವೆಯ ಪಕ್ಕದಲ್ಲಿ ಕೂಡ ಅಕ್ರಮ ಮರಳು ಮಾಫಿಯಾ ದಂಧೆ ಹಗಲಿರುಳು ನಡೆಯುತ್ತಿರುತ್ತದೆ. ವಿಷಯ ಗಂಭೀರ ವಾಗಿರುವುದರಿಂದ ಮಾನ್ಯ ಜಿಲ್ಲಾಧಿಕಾರಿಯವರು ನೇರವಾಗಿ ಸ್ಥಳಕ್ಕೆ ಆಗಮಿಸಿ ಕಣ್ಣಾರೆ ಕಂಡು ಅಲ್ಲಿಯೇ ವಾಹನಗಳನ್ನು ವಶಕ್ಕೆ ತೆಗೆದು ಈ ಅಕ್ರಮ ದಂಧೆಯನ್ನು ಕೂಡಲೇ ಸ್ಥಗಿತಗೊಳಿಸ ಬೇಕು. ಇಲ್ಲವಾದಲ್ಲಿ ಮುಂದಾಗುವ ಎಲ್ಲಾ ಅನಾಹುತಗಳಿಗೆ ಅಧಿಕಾರದಲ್ಲಿರುವ ತಾವೇ ತಪ್ಪಿತಸ್ಥರಾಗಬಹುದು. ಹಾಗಾಗ ಬಾರದು, ನಿಮ್ಮಿಂದ ಜಿಲ್ಲೆಯಲ್ಲಿ ಇನ್ನೂ ಪ್ರಗತಿ ಆಗಬೇಕಾಗಿದೆ.
ಅಕ್ರಮ ದಂಧೆಯ ವಿರುದ್ಧ ಹಿಂದಿನ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ದಂಧೆಕೋರರ ವಿರುದ್ಧ ಕ್ರಮ ಕೈಗೊಂಡಿದ್ದರು. ಕೆಲವೇ ಸಮಯದಲ್ಲಿ ಜಿಲ್ಲೆಯಿಂದಲೇ ಅವರ ಎತ್ತಂಗಡಿ ಕೂಡಾ ಆಗಿತ್ತು. ಮರಳು ತೆಗೆಯುವವರಲ್ಲಿ ಈ ಬಗ್ಗೆ ಕೇಳಿದರೆ ಪರ್ಮಿಟ್ ಇದೆ ಎಂದು ಹೇಳಬಹುದು. ಆದರೆ ತೆಗೆಯುವುದು ಇಂಥ ಅಪಾಯಕಾರಿ ಸ್ಥಳದಲ್ಲಿಯೇ. ಅದೂ ರಾತ್ರಿ ಹೊತ್ತಿನಲ್ಲಿ ದೊಡ್ಡ ಇಂಜಿನ್ ಬಳಸಿ ತೆಗೆದು ಬದಿಯಲ್ಲಿಯೇ ರಾಶಿ ಹಾಕಿ ದೋಣಿಯಲ್ಲಿ ಸಾಗಿಸುತ್ತಿದ್ದಾರೆ.
ಕೆಲವು ವರ್ಷಗಳ ಹಿಂದೆ ಶಾಲಾ ಮಕ್ಕಳ ವಾಹನವೊಂದು ಇದೇ ಹೊಳೆಯ ಕವಲಿಗೆ ಬಿದ್ದು ಮಕ್ಕಳು ದಾರುಣ ಸಾವನ್ನಪ್ಪಿದ ಘಟನೆಯೂ ನಡೆದಿದೆ. ನದಿಯಿಂದ ಮರಳನ್ನು ದಿನಂಪ್ರತಿ ತೆಗೆಯುವುದರಿಂದ ನೀರಿನ ಸೆಳೆತ ಹೆಚ್ಚುತ್ತಿದೆ. ಇದೇ ಮುಂದೊಂದು ದಿನ ಸೇತುವೆಯ ಕುಸಿತಕ್ಕೂ ಕಾರಣವಾಗುವ ಸಾಧ್ಯತೆಯಿದೆ. ಸೇತುವೆ ಕುಸಿದರೆ ಮಂಗಳೂರು-ಮೂಡಬಿದ್ರೆ ನಡುವೆ ಸಂಚರಿಸುವ ವಾಹನ ಸವಾರರು ಸಮಸ್ಯೆಗೊಳಗಾಗುವ ಸಾಧ್ಯತೆಯೇ ಹೆಚ್ಚು.
ಆದ್ದರಿಂದ ಇನ್ನಾದರೂ ಸಂಬಂಧಪಟ್ಟ ಅಧಿಕಾರಿವರ್ಗ ಈ ಎಲ್ಲಾ ಸಮಸ್ಯೆಗಳನ್ನು ಕಣ್ಣಾರೆ ಕಂಡು ಸೂಕ್ತ ಕ್ರಮ ಜರುಗಿಸಬೇಕಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸೇತುವೆ ಉಳಿಸುವ ದೃಷ್ಟಿಯಿಂದ ಪರಿಸರ ಪ್ರೇಮಿಗಳು ಹಾಗೂ ನಾಗರಿಕರ ಪರವಾಗಿ ವಿನಂತಿ ಮಾಡುತ್ತಿದ್ದೇನೆ.
Tagged with
bahiranga
ಉಡುಪಿ: ಉಡುಪಿಯ ಉದ್ಯಮಿ ಮೇಲೆ ನಿನ್ನೆ ತಡರಾತ್ರಿ ಇಬ್ಬರು ಅಪರಿಚಿತ ಯುವಕರು ಗುಂಡಿನ ದಾಳಿ ನಡೆಸಿದ್ದು ಉದ್ಯಮಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ಉಡುಪಿ ಅಂಬಾಗಿಲಿನಲ್ಲಿ ಆದರ್ಶ ಬೇಕರಿ ಹೊಂದಿರುವ ಲಿಯೋ ಕರ್ನೆಲಿಯೋ ಎಂಬವರು ಬೇಕರಿ ಯಲ್ಲಿ ಇರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ಬೈಕ್‌ನಲ್ಲಿ ಬಂದ ಯುವಕರಿಬ್ಬರು ಪಿಸ್ತೂಲಿನಿಂದ ದಾಳಿ ನಡೆಸಿದ್ದು, ದಾಳಿಯ ಖಚಿತ ಉದ್ದೇಶ ಹತ್ಯೆಯೋ ಅಥವಾ ಕೇವಲ ಹೆದರಿ ಸುವುದೋ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ. ದುಷ್ಕರ್ಮಿಗಳ ಗುಂಡು ಲಿಯೋ ಅವರ ಮೇಲೆ ಬಿದ್ದಿ ಲ್ಲವಾದರೂ ಬೇಕರಿಯ ಗಾಜುಗಳಿಗೆ ತಾಗಿ ಛಿದ್ರವಾಗಿವೆ.
ಲಿಯೋ ಕರ್ನೆಲಿಯೋ ಇತ್ತೀ ಚೆಗೆ ಭೂವ್ಯವಹಾರಕ್ಕೂ ಇಳಿದಿದ್ದು ಇದರಿಂದ ಭೂಗತ ಲೋಕದ ಕಣ್ಣು ಲಿಯೋ ಅವರತ್ತ ಬಿದ್ದಿತ್ತು. ಕೆಲ ದಿನ ಗಳ ಹಿಂದೆಯಷ್ಟೇ ಭೂಗತ ಪಾತಕಿ ರವಿ ಪೂಜಾರಿಯಿಂದ ಹಫ್ತಾ ಬೆದರಿಕೆ ಕರೆ ಬಂದಿತೆನ್ನಲಾಗುತ್ತಿದೆಯಾದರೂ ಅದಿನ್ನು ಖಚಿತ ಪಟ್ಟಿಲ್ಲ. ಅಲ್ಲದೆ ಲಿಯೋ ಕೂಡಾ ಈ ಬಗ್ಗೆ ಪೊಲೀಸರಿಗೆ ಲಿಖಿತವಾಗಿ ದೂರು ಕೊಟ್ಟಿಲ್ಲ ಎನ್ನಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ ಭೂಗತ ಲೋಕದ ಬೆದರಿಕೆಯ ಬಗ್ಗೆ ಹೊರಗಿನವರಿಗೆ ಗೊತ್ತಾಗುವುದು ಬೇಡ ಎಂದೇ ಇದನ್ನು ನಿರ್ಲಕ್ಷಿಸ ಲಾಗಿತ್ತು.
ಇದೀಗ ಲಿಯೋ ಬೇಕರಿಯಲ್ಲೇ ಶೂಟೌಟ್ ನಡೆದಿದೆ. ಶೂಟೌಟ್ ಮಾಡಿದ ಹುಡುಗರು ಎಲ್ಲಿಯವರು ಎಂದು ತಿಳಿದು ಬಂದಿಲ್ಲ.
ಭೂಗತ ಲೋಕದಿಂದ ಮಾತ್ರ ವಲ್ಲದೆ ಭೂ ವ್ಯವಹಾರಗಳ ಹಿನ್ನೆಲೆ ಯಲ್ಲಿಯೇ ಈ ದಾಳಿ ನಡೆದಿರಬ ಹುದು ಎಂದು ಲಿಯೋ ಆಪ್ತರು ಪತ್ರಿಕೆಗೆ ತಿಳಿಸಿದ್ದಾರೆ. ಆದರೂ ದಾಳಿಯ ಹಿನ್ನೆಲೆ ಗಮನಿಸಿದರೆ ಭೂಗತ ಲೋಕದ ಮಂದಿಯೇ ಇದನ್ನು ಸಂಘಟಿಸಿದಂತಿದ್ದು ಪೊಲೀಸರು ತನಿಖೆಯನ್ನು ಈ ಅಂಶದತ್ತಲೇ ಕೇಂದ್ರೀಕರಿಸಿದ್ದಾರೆ.
Tagged with
cnews,
feature
ಮಂಗಳೂರು: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಿ ನಿನ್ನೆ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಗೇಟಿಗೆ ಸಾಂಕೇತಿಕವಾಗಿ ಬೀಗ ಹಾಕಿ ಪ್ರತಿಭಟಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕ ಭ್ರಷ್ಟಾಚಾರ ದಲ್ಲಿ ಒಂದನೇ ಸ್ಥಾನಕ್ಕೇರಿದೆ. ಆಂತರಿಕ ಕಲಹ, ಭಿನ್ನಾಭಿಪ್ರಾಯ, ಸ್ವಜನಪಕ್ಷಪಾತ, ಜೈಲು, ಜಾಮೀನು ಮುಂತಾದ ವಿಷಯದಲ್ಲೇ ಕಾಲ ಕಳೆ ಯಲಾಗುತ್ತಿದೆ. ಇದರಿಂದಾಗಿ ಪಡಿ ತರ ಚೀಟಿ, ಬಡವರಿಗೆ ಮನೆನಿವೇಶನ ವಿತರಣೆಯಂತಹ ಕೆಲಸಗಳು ನಡೆದಿಲ್ಲ. ಜಿಲ್ಲಾ ಕಚೇರಿಗಳಲ್ಲಿ ಯಾವುದೇ ಕೆಲಸಗಳು ನಡೆಯದ ಕಾರಣ ಜನಸಾಮಾನ್ಯರು ಪರದಾಡುವಂತಾಗಿದೆ. ಅಧಿಕಾರಿಗಳು ಸರಕಾರದ ಕೈಗೊಂಬೆಗಳಾಗಿದ್ದಾರೆ ಎಂದು ಆರೋಪಿಸಿದ ಯುವಕಾಂಗ್ರೆಸ್ ನಿನ್ನೆ ಬೆಳಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಸಂದರ್ಭ ಮಾತನಾಡಿದ ಮಿಥುನ್ ರೈ, ಕೆಲಸ ನಡೆಯದ ತಾಲೂಕು ಕಚೇರಿಗೆ ಬೀಗ ಹಾಕಿಯೇ ಸಿದ್ಧ ಎಂದು ಘೋಷಿಸಿದರು. ಇದನ್ನು ಕೇಳುತ್ತಲೇ ಸ್ಥಳದಲ್ಲಿದ್ದ ಎಸ್.ಐ.ಭಾರತಿ, ಜಿಲ್ಲಾಧಿಕಾರಿ ಕಚೇರಿ ಗೇಟಿಗೆ ಬೀಗ ಹಾಕುವಂತೆ ಪೊಲೀಸರಿಗೆ ಸೂಚಿಸಿದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಬೀಗ ಹಾಕಿದ್ದ ಗೇಟನ್ನು ದೂಡಿ, ಗೇಟಿನ ಮೇಲೆ ಹತ್ತಿ ನಿಂತು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ಸ್ಥಳದಲ್ಲಿ ನಾಲ್ಕೈದು ಪೊಲೀಸರು ಮಾತ್ರವೇ ಇದ್ದ ಕಾರಣ ಎಸೈ ಭಾರತಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅದೇ ವೇಳೆ ಕದ್ರಿ, ಬಂದರ್, ಕಂಕನಾಡಿ ಮುಂತಾದ ಠಾಣೆಗಳಿಂದ ಇನ್ಸ್‌ಪೆಕ್ಟರ್, ಎಸ್ ಐ ಹಾಗೂ ಇತರ ಪೊಲೀಸರು ಸ್ಥಳಕ್ಕೆ ಆಗಮಿಸಿದರು.
ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನೂಕುನುಗ್ಗಾಟ ನಡೆಯುತ್ತಿದ್ದಂತೆಯೇ ಕಾರ್ಯಕರ್ತರು ಗೇಟಿಗೆ ಸಾಂಕೇತಿಕವಾಗಿ ಬೀಗ ಹಾಕಿದಾಗ ಐವನ್ ಡಿ’ಸೋಜ ತಮ್ಮ ಕೆಲಸ ಮುಗಿಯಿತು ಎಂದು ಬೀಗಿದರು. ಇದೇ ವೇಳೆ ಬಂದರ್ ಇನ್ಸ್‌ಪೆಕ್ಡರ್ ಗಾಂವ್ಕರ್ ಅವರು ಪ್ರತಿಭಟನೆಗೆ ಅನುಮತಿ ಪಡೆದಿಲ್ಲ ಹಾಗೂ ಜಿಲ್ಲಾಧಿಕಾರಿ ಕಚೇರಿ ಗೇಟು ಮುಟ್ಟುವ ಹಕ್ಕು ನಿಮಗಿಲ್ಲ ಎಂದು ಗದರಿಸಿದಾಗ ಕಾರ್ಯಕರ್ತರು ಹಾಗೂ ಅವರ ನಡುವೆ ಮಾತಿನ ಚಕಮಕಿ ನಡೆದಾಗ ಪ್ರತಿಭಟನೆಗೆ ಅನುಮತಿ ಪಡೆದಿ ರುವ ಬಗ್ಗೆ ಮುಖಂಡರು ತಿಳಿಸಿ ನಮ್ಮ ಕೆಲಸ ಮುಗಿದಿದೆ ಎಂದು ಪೊಲೀಸರ ಎದುರು ಬೀಗಿದರು. ನಿನ್ನೆಯ ಪ್ರತಿಭಟನೆಯಲ್ಲಿ ಮುಖಂಡರಾದ ಪ್ರವೀಣ್ ಆಳ್ವ, ಡೆನ್ನಿಸ್ ಡಿ.ಸಿಲ್ವಾ, ಮಾಜಿ ಮೇಯರ್ ಅಶ್ರಫ್, ಶಶಿಧರ್ ಹೆಗ್ಡೆ, ಸುರೇಶ್ ಬಲ್ಲಾಳ್, ಜಬ್ಬಾರ್ ಬೋಳಿಯಾರ್, ಮುಸ್ತಫಾ ಹರೇಕಳ, ಝಕರಿಯಾ ಮಲಾರ್ ಮತ್ತಿತರರು ಉಪಸ್ಥಿತರಿದ್ದರು.
Tagged with
dk,
feature,
lnews
ಮಂಗಳೂರು: ಷೇರು ಮಾರುಕಟ್ಟೆ ಯಲ್ಲಿ ನಷ್ಟ ಉಂಟಾಗಿ ಸಾಲ ಅಧಿಕವಾಗಿ ಸಾಲಗಾರರು ಬಾಧಿಸಲು ಆರಂಭಿಸಿದಾಗ ದಿಕ್ಕು ತೋಚದೆ ತಾನು, ಹೆಂಡತಿ ಮತ್ತು ಮನೆಯವರ ಜೊತೆ ಸೇರಿ ಈ ನಾಟಕ ಆಡಿರುವುದಾಗಿ ನದಿಗೆ ಬಿದ್ದ ಶ್ರೀನಿವಾಸ ಒಪ್ಪಿಕೊಂಡಿ ದ್ದಾನೆ.
ಈ ಮೂಲಕ ನಷ್ಟದಿಂದ ಎಸ್ಕೇಪ್ ಆಗಲು ನಾಟಕವಾಡಿದ ಶ್ರೀನಿವಾಸ ಮತ್ತಾತನ ಪತ್ನಿ ಹಾಗೂ ಮನೆ ಮಂದಿ ವಂಚನೆ ಕೇಸು ಜಡಿಸಿಕೊಂಡಿದ್ದಾರೆ. ಕಳೆದ ಶುಕ್ರವಾರ ಶ್ರೀನಿವಾಸ ಪುರಾಣ ಆರಂಭಗೊಂಡಾಗಲೇ ಶ್ರೀನಿವಾಸನ ಹೆಂಡತಿ ಮತ್ತಾಕೆಯ ತಂದೆಯ ಮೇಲೆ ಪೊಲೀಸರ ಶಂಕೆ ನೆಟ್ಟಿತ್ತು. ಈ ನಿಟ್ಟಿನಲ್ಲಿ ಆತನ ಪೂರ್ವಾಪರ ಕೆದಕುವ ಕೆಲಸವನ್ನು ಪೊಲೀಸರು ನಿಶಬ್ದವಾಗಿ ನಡೆಸಿದ್ದರು. ಅದಾಗಲೇ ಪೊಲೀಸ್ ಕಣ್ಣಿಗೆ ಶ್ರೀನಿವಾಸನ ವಂಚನೆ ಕಂಡು ಬಂದಿತ್ತು. ಶ್ರೀನಿವಾಸನ ಬ್ಯಾಂಕ್ ಖಾತೆಯನ್ನು ಪರೀಕ್ಷಿಸಿದಾಗ ಆತ ಮೇ ೧೨ ತಾರೀಖಿನಂದು ಶೃಂಗೇರಿ ಎಸ್‌ಬಿಎಂ ಎಟಿಎಂನಲ್ಲಿ ೭೦೦ ರೂ ಹಾಗೂ ಮೇ ೧೫ ರಂದು ಮುರ್ಡೇಶ್ವರದ ಎಟಿಎಂನಲ್ಲಿ ೧೦೦ ರೂ. ಡ್ರಾ ಮಾಡಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಈ ಎರಡೂ ಎಟಿಎಂನ ಸಿಸಿ ಕ್ಯಾಮ್ ಪರಿಶೀಲಿಸಿದಾಗ ಹಣ ಡ್ರಾ ಮಾಡಿರುವುದು ಶ್ರೀನಿವಾಸನೇ ಎನ್ನುವುದು ತಿಳಿದು ಬಂದಿತ್ತು. ಇತ್ತ ಶ್ರೀನಿವಾಸ ಹೆಂಡತಿ ಮತ್ತು ಮನೆ ಮಂದಿ ತನಿಖೆಗೂ ಸಹಕಾರ ನೀಡಿರಲಿಲ್ಲ ಹೀಗಾಗಿ ಇದು ನಾಟಕ ಎನ್ನುವುದನ್ನು ಪೊಲೀಸರು ಮನಗಂಡಿದ್ದು ಇದನ್ನು ಬಯಲಿಗೆಳೆಯ ಬೇಕು ಅಂದುಕೊಳ್ಳುವಾಗಲೇ ಶ್ರೀನಿವಾಸ ಸುರತ್ಕಲ್‌ನಲ್ಲಿ ಪ್ರತ್ಯಕ್ಷನಾಗಿದ್ದ. ಅಲ್ಲಿಂದ ಮುಂದೆ ಪೊಲೀಸರ ವಿಚಾರಣೆ ಸಾಗುತ್ತಿರುವಂತೆ ಇದನ್ನು ಎದುರಿಸಲಾಗದ ಶ್ರೀನಿವಾಸ ಸತ್ಯ ಬಾಯ್ಬಿಟ್ಟಿದ್ದಾನೆ. ನನಗೇನೂ ಮಾಡಬೇಡಿ, ನಷ್ಟದಿಂದ ಪಾರಾಗಲು ನಾನು ಮಾಡಿದ ನಾಟಕ ಎಂದು ಒಪ್ಪಿಕೊಂಡಿದ್ದಾನೆ. ಹೀಗಾಗಿ ಪೊಲೀಸರು ವಂಚನೆ ಕೇಸು ದಾಖಲಿಸಿದ್ದಾರೆ.
Tagged with
dk,
feature,
lnews
ಬೆಂಗಳೂರು: ಬಿಜೆಪಿ ತೊರೆ ಯಲು ನಿರ್ಧರಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸವನ್ನು ತೊರೆಯುತ್ತಿ ರುವುದಲ್ಲದೆ ಮಲ್ಲೇಶ್ವರಂನಲ್ಲಿ ಪ್ರತ್ಯೇಕವಾದ ಕಚೇರಿಯನ್ನು ನಾಳೆ ವಿದ್ಯುಕ್ತವಾಗಿ ಆರಂಭಿಸುತ್ತಿದ್ದಾರೆ.
ತಮಗೆ ಪಕ್ಷದ ಎಪ್ಪತ್ತು ಶಾಸಕರ ಬೆಂಬಲವಿದ್ದರೂ ಮರಳಿ ಮುಖ್ಯ ಮಂತ್ರಿ ಹುದ್ದೆ ಪಡೆಯಲು ರೇಸ್ ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ರುವ ವಾಸ್ತುದೋಷ ಕಾರಣ ಎಂದು ನಂಬಿರುವ ಯಡಿಯೂರಪ್ಪ ತಮ್ಮ ವಾಸ್ತವ್ಯವನ್ನು ಡಾಲರ‍್ಸ್ ಕಾಲೋನಿಯ ನಿವಾಸಕ್ಕೆ ಬದಲಿಸಲು ನಿರ್ಧರಿಸಿದ್ದಾರೆ.
ಮಲ್ಲೇಶ್ವರಂನಲ್ಲಿ ಈ ಹಿಂದೆ ರಾಜ್ಯ ಬಿಜೆಪಿ ಕಚೇರಿ ಇದ್ದ ಕಟ್ಟಡವನ್ನೇ ಬಾಡಿಗೆಗೆ ಪಡೆದಿರುವ ಯಡ್ಡಿ ಅದನ್ನೇ ಜನ ಸಂಪರ್ಕ ಕಛೇರಿ ಯನ್ನಾಗಿ ಬಳಸಲಿದ್ದಾರೆ. ಮೇ ೨೦ರ ವೇಳೆಗೆ ಪಕ್ಷವೇ ತಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು ಎಂದು ಭಾವಿಸಿರುವ ಯಡಿಯೂರಪ್ಪ ಒಂದು ವೇಳೆ ಪಕ್ಷ ಯಾವುದೇ ಕ್ರಮ ಕೈಗೊಳ್ಳದಿದ್ದರೆ ತಾವಾಗಿಯೇ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ.
ಮತ್ತೆ ಅಧಿಕಾರ ದೊರೆಯು ವುದಿಲ್ಲ ಎಂಬುದು ಖಚಿತವಾಗುತ್ತಿ ದ್ದಂತೆ ಸರ್ಕಾರಿ ಬಂಗಲೆ ತೊರೆದು, ಇದೇ ಕಾಲಕ್ಕೆ ಹೊಸ ಪಕ್ಷಕ್ಕೆ ಕಚೇರಿ ಅವಶ್ಯವಿರುವುದರಿಂದ ಹಳೆಯ ಬಿಜೆಪಿ ಕಚೇರಿಯನ್ನೇ ತಮ್ಮದಾಗಿಸಿಕೊಂಡಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾಗಿನಿಂದ ಇಲ್ಲಿಯವರೆಗೆ ಅಂದರೆ, ಎಂಟು ವರ್ಷಗಳಿಂದ ವಾಸ್ತವ್ಯ ಹೂಡಿದ್ದ ರೇಸ್‌ಕೋರ್ಸ್ ರಸ್ತೆಯ ನಿವಾಸವನ್ನು, ಅದೃಷ್ಠದ ನಿವಾಸವೆಂದು ಇಲ್ಲಿಯವರೆಗೂ ಪರಿಗಣಿಸಿದ್ದ ಯಡಿಯೂರಪ್ಪ ಹಠಾತ್ತನೆ ಇಂತಹ ನಿರ್ಧಾರ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಮುಖ್ಯಮಂತ್ರಿ ಗದ್ದುಗೆಯಿಂದ ಇಳಿದ ನಂತರ ರೇಸ್‌ಕೋರ್ಸ್ ನಿವಾಸವನ್ನು ಮೂರು ತಿಂಗಳಲ್ಲಿ ತೆರವುಗೊಳಿಸಬೇಕಾಗಿತ್ತು. ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರೇಗೌಡರ ಹೆಸರಿಗೆ ಪಡೆದು, ಅವರೇ ಇಲ್ಲಿಯವರೆಗೂ ಅದೃಷ್ಟದ ಮನೆಯೆಂದು ವಾಸವಾಗಿದ್ದರು.
ಖ್ಯಾತ ವಾಸ್ತುಶಾಸ್ತ್ರಜ್ಞ ಕೆ.ಗಂಗಾಧರ್ ಅವರ ಪ್ರಕಾರ, ಯಡಿಯೂರಪ್ಪ ವಾಸ್ತವ್ಯ ಹೂಡಿರುವ ರೇಸ್‌ಕೋರ್ಸ್ ರಸ್ತೆಯ ನಿವಾಸ ಹಲವು ವಾಸ್ತುದೋಷಗಳಿಂದ ಕೂಡಿದ್ದು ನಿವೇಶನದ ದಕ್ಷಿಣ ಭಾಗವನ್ನು ವಿಸ್ತಾರವಾಗಿ ಬಿಟ್ಟಿರುವುದರಿಂದ ಯಡಿಯೂರಪ್ಪ ಅವರ ಸಮಸ್ಯೆ ವಿಸ್ತ್ರತವಾಗುತ್ತಲೇ ಹೋಗುತ್ತಿದೆ. ದೈವಬಲ ತಂದು ಕೊಡುವ ಕಟ್ಟಡದ ಈಶಾನ್ಯ ಭಾಗ ಸಂಪೂರ್ಣವಾಗಿ ಮುಚ್ಚಿದ್ದು ಇದರಿಂದಾಗಿ ಯಡಿಯೂರಪ್ಪ ಅವರಿಗೆ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗುತ್ತಿದೆ.ಹೀಗೆ ಹಲವಾರು ದೋಷಗಳನ್ನು ಹೊಂದಿರುವ ರೇಸ್‌ಕೋರ್ಸ್ ರಸ್ತೆಯ ನಿವಾಸವನ್ನು ಅವರು ತೆರವು ಮಾಡುವುದು ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂಬುದು ವಾಸ್ತು ತಜ್ಞರ ಅಭಿಪ್ರಾಯ.
ವರಸೆ ಬದಲಿಸಿದ ಯಡ್ಡಿ ಬೆಂಬಲಿಗರು
ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕುಣಿಕೆಯಲ್ಲಿ ಸಿಲುಕಿರುವ ಯಡಿಯೂರಪ್ಪನವರಿಗೆ ಮತ್ತೆ ಅಧಿಕಾರ ದೊರೆಯುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಅವರ ಬೆಂಬಲಿಗ ಸಚಿವ, ಶಾಸಕರು ತಮ್ಮ ವರಸೆ ಬದಲಿಸಿ, ಮುಖ್ಯಮಂತ್ರಿ ಸ್ಥಾನದಿಂದ ಸದಾನಂದಗೌಡರನ್ನು ಬದಲಿಸಿ, ಜಗದೀಶ್ ಶೆಟ್ಟರ್ ಅವರನ್ನು ಈ ಸ್ಥಾನಕ್ಕೆ ತನ್ನಿ ಎಂದು ವರಿಷ್ಠರಲ್ಲಿ ಒತ್ತಡ ಹೇರಲು ಮುಂದಾಗಿದ್ದಾರೆ.
ರಾಜ್ಯ ಬಿಜೆಪಿಯಲ್ಲಿನ ಗೊಂದಲ ನಿವಾರಿಸುವ ಸಲುವಾಗಿ ಉಸ್ತುವಾರಿ ಹೊಣೆ ಹೊತ್ತ ಅರುಣ್ ಜೇಟ್ಲಿ ಮತ್ತು ಧರ್ಮೇಂದ್ರ ಪ್ರಧಾನ್ ಇಂದು ನಗರಕ್ಕೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗಿದ್ದ ೭೦ ಶಾಸಕರ ಬೆಂಬಲ ಶೆಟ್ಟರ್‌ಗೆ ಇದ್ದು, ಅವರನ್ನೇ ಹೊಸ ನಾಯಕನನ್ನಾಗಿ ಆಯ್ಕೆ ಮಾಡಿ ಎಂದು ಪಟ್ಟು ಹಿಡಿಯಲಿದ್ದಾರೆ. ಯಡಿಯೂರಪ್ಪ ಬೆಂಬಲಿಗ ಸಚಿವರಾದ ಉಮೇಶ್ ಕತ್ತಿ, ಬಸವರಾಜ್ ಬೊಮ್ಮಾಯಿ, ವಿ. ಸೋಮಣ್ಣ, ರೇಣುಕಾಚಾರ್ಯ, ಮತ್ತಿತರು ಇಂದು ಸಭೆ ಸೇರಿ ಈ ತೀರ್ಮಾನ ಕೈಗೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವ ವಿಷಯದಲ್ಲಿ ಯಡಿಯೂರಪ್ಪ ಅವರಿಗೆ ಸಹಮತ ಇಲ್ಲದಿದ್ದರೂ ಸದಾನಂದಗೌಡರನ್ನು ಕೆಳಗಿಳಿಸಲೇಬೇಕಾಗಿರುವುದರಿಂದ ಮತ್ತು ಸರ್ಕಾರವನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕಾಗಿರುವುದರಿಂದ ಪರ್ಯಾಯ ನಾಯಕ ಎಂದು ಪ್ರತಿಬಿಂಬಿಸಲೇಬೇಕು ಎಂಬುದು ಇವರ ವಾದ.
Tagged with
feature,
snews,
yeddi
ಕುಂದಾಪುರ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ೬೬ರ ಅಂತಿಮ ಹಂತದ ಕಾಮಗಾರಿಗೆ ಕೋಟದ ಹೆದ್ದಾರಿ ಪಕ್ಕದಲ್ಲಿರುವ ಕಾರಂತರ ಮನೆ, ಬಸ್ ನಿಲ್ದಾಣ, ದೇವಸ್ಥಾನವು ಹೆದ್ದಾರಿಗೆ ಆಹುತಿಯಾಗುವುದಲ್ಲದೆ ಇದೀಗ ಪುರಾತನ ಕಾಲದ ಜಾಮಾ ಮಸೀದಿ ಧರೆಗುರುಳಲು ಕ್ಷಣಗಣನೆಯಲ್ಲಿದೆ.
ರಾ.ಹೆ. ಪಕ್ಕ ಹಾಗೂ ಕಾರಂತರ ಮನೆಯ ಸಾಲಿನಲ್ಲಿರುವ ೩೦೦ ವರ್ಷದ ಹಿಂದೆ ಇಮಾಮರು ನಮಾಜು ಮಾಡುವ ಸ್ಥಳದ ಬಗ್ಗೆ ಇತಿಹಾಸವಿದ್ದು, ಹೆದ್ದಾರಿಗೆ ಆಹುತಿಯಾಗಲಿರುವ ೩೦ ವರ್ಷಗಳ ಹಿಂದೆ ಪುನರ್ ನವೀ ಕರಣ ಗೊಂಡ ನಾಲ್ಕನೇ ಪ್ರಾರ್ಥನಾ ಮಂದಿರ ಇದಾಗಿದ್ದು, ಕೋಟದ ಸುತ್ತ ಮುತ್ತಲಿನ ೧೦೮ ಕುಟುಂಬಗಳು ಈ ಶ್ರದ್ಧಾ ಕೇಂದ್ರದಲ್ಲಿ ೧೦೦ ಸಾವಿರಕ್ಕೂ ಹೆಚ್ಚು ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಜುಮಾ ಮಸೀದಿ ತೆರವುಗೊಳಿಸಲು ಹೆದ್ದಾರಿ ಇಲಾಖೆ ಗಡುವು ನೀಡಿದ್ದರಿಂದ ಮುಸ್ಲಿಂ ಬಾಂಧವರು ಆತಂಕ ಗೊಂಡಿದ್ದಾರೆ.
ತರಾತುರಿಯ ನಿರ್ಧಾರಕ್ಕೆ ಆಕ್ರೋಶ: ಈ ಹಿಂದೆ ಹೆದ್ದಾರಿ ಮಧ್ಯದಿಂದ ೨೨.೫೦ ಮೀ. ವರೆಗೆ ಅಂದರೆ ಮಸೀದಿಯ ಮುಂಭಾಗ ಮಾತ್ರ ಹೆದ್ದಾರಿಗೆ ಆಹುತಿಯಾ ಗಿದ್ದು ಪ್ರಾರ್ಥನೆಗೆ ತೊಂದರೆ ಇಲ್ಲದೆ ಇರುವುದರಿಂದ ಅದರ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳದ ಮುಸ್ಲಿಮರು ಇದೀಗ ಒಂದು ತಿಂಗಳ ಹಿಂದೆ ಹೆದ್ದಾರಿ ಇಲಾಖೆಯವರು ಇಲ್ಲಿಗೆ ಆಗಮಿಸಿ ಮೊದಲು ಮಾಡಿದ ಗಡಿಗಿಂತ ಇನ್ನೂ ಹತ್ತು ಅಡಿ ಜಾಸ್ತಿ ಬಿಟ್ಟು ಕೊಡಬೇಕಾಗು ವುದಲ್ಲದೆ ಕೇವಲ ಮೂರು ತಿಂಗಳೊ ಳಗೆ ಮಸೀದಿ ಹಾಗೂ ಮದರಸವನ್ನು ತೆರವುಗೊಳಿಸಬೇಕು ಎಂಬ ಕಟ್ಟಾಜ್ಞೆ ಯಿಂದ ಮತ್ತಷ್ಟು ಕಂಗೆಟ್ಟಿದ್ದಾರೆ.
ಸಮಸ್ಯೆ ಕೇಳುವವರಿಲ್ಲ: ಇಲ್ಲಿ ದಫನ ಮಾಡಿದ ೫೫೦ ಹೆಚ್ಚು ಶವಗ ಳಿದ್ದು, ಅದನ್ನು ಹೊರತೆಗೆಯಲು ಇಲ್ಲಿನ ಜನಗಳು ಯಾರು ಒಪ್ಪದೆ ಇರುವುದರಿಂದ ಹೆಚ್ಚಿಗೆ ಹಣಕೊಟ್ಟು ಶಿವಮೊಗ್ಗದಿಂದ ಜನಗಳನ್ನು ಕರೆಸಿ ಗಡಿಬಿಡಿಯಲ್ಲಿ ೧೫೦ ಕ್ಕೂ ಹೆಚ್ಚು ಶವಗಳನ್ನು ಹೊರತೆಗೆದು ಮಸೀದಿಯ ಹಿಂಭಾಗದಲ್ಲಿ ವಿಧಿಬದ್ದವಾಗಿ ಒಂದು ಕಡೆ ಹೂಳಿದ್ದೇವೆ. ಇಲ್ಲಿರುವ ಸ್ವಲ್ಪ ಜಾಗದಲ್ಲಿ ಹೆದ್ದಾರಿಗೆ ಆಕ್ರಮಿಸಿಕೊಂಡ ನಂತರ ಇನ್ನುಳಿದ ಸ್ವಲ್ಪ ಜಾಗದಲ್ಲಿ ಇದ್ದ ೪೦೦ ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗದೆ ಹೆದ್ದಾರಿ ಇಲಾಖೆ ಯವರು ನೀಡಿದ ಗಡುವಿನ ಒಳಗೆ ಮಸೀದಿ ನಿರ್ಮಾಣಕ್ಕಾಗಿ ಮನಸ್ಸಿಗೆ ನೋವಾದರು ಸಹ ಸಮಾಧಿಯನ್ನು ಮೆಟ್ಟಿಕೊಂಡೇ ಕೆಲಸ ಮಾಡುವ ಸ್ಥಿತಿ ಇದೆ. ಹೆದ್ದಾರಿ ಇಲಾಖೆಯ ಆತುರದ ನಿರ್ಧಾರದಿಂದ ನಮ್ಮ ಸಮಸ್ಯೆಯನ್ನು ಯಾರು ಕೇಳುವ ಸ್ಥಿತಿ ಇಲ್ಲದಾಗಿದ್ದ ರಿಂದ ನಮಗೆ ದಿಕ್ಕು ತೋಚದಂತಾಗಿದೆ.
ಪರಿಹಾರ ಏನೇನು ಸಾಲದು:
ಹೆದ್ದಾರಿ ಇಲಾಖೆಯಿಂದ ೨೬ ಲಕ್ಷದ ಪರಿಹಾರದಲ್ಲಿ ೨೩ ಲಕ್ಷದ ೪೩ ಸಾವಿರ ಮಾತ್ರ ನಮ್ಮ ಕೈ ಸೇರಿದೆ. ಹಿಂದೆ ವಾಣಿಜ್ಯ ಸಂಕೀರ್ಣದಿಂದ ಬರುವ ಬಾಡಿಗೆಯಿಂದ ಮದರಸ ಹಾಗೂ ಮಸೀದಿಯ ಖರ್ಚುಗಳನ್ನು ನಿಭಾಯಿ ಸುತ್ತಿದ್ದೇವೆ. ಮತ್ತೆ ಉಳಿದ ಖರ್ಚಿಗಾಗಿ ಅವರಿವರ ಹತ್ತಿರ ಹಣ ಕೇಳುತ್ತೇವೆ. ಆದರೆ, ಈಗ ಅದೆಲ್ಲಾ ಹೆದ್ದಾರಿಗೆ ಆಹುತಿಯಾದ ಮೇಲೆ ಮುಂದಿನ ಮಸೀದಿ ಕಟ್ಟಡ ನಿರ್ಮಾಣ ಹಾಗೂ ಖರ್ಚು ವೆಚ್ಚಗಳಿಗೆ ಯಾರು ಹೊಣೆ? ಹೊಸದಾಗಿ ನಿರ್ಮಾಣ ವಾಗಲಿರುವ ಮಸೀದಿಗೆ ಒಂದು ಕೋಟಿಗೂ ಹೆಚ್ಚು ಹಣ ಖರ್ಚಾಗ ಲಿದ್ದು, ಇಲ್ಲಿಯವರೆಗೂ ಸಮಾಧಿ ಯಿಂದ ಹೆಣ ಮೇಲಕ್ಕೆ ಎತ್ತಲು ಲಕ್ಷಾಂ ತರ ರೂ ಹಣ ಖರ್ಚಾಗಿದೆ. ಒಟ್ಟಿನಲ್ಲಿ ಹೆದ್ದಾರಿ ಅಗಲೀಕರಣದಿಂದ ೭೦ ಲಕ್ಷಕ್ಕೂ ಅಧಿಕ ಹಣವನ್ನು ತುಂಬಿಸಿ ಕೊಡುವವರು ಯಾರು? ಎಂದು ಮಸೀದಿಯ ಅಧ್ಯಕ್ಷ ಮಹಮ್ಮದ್ ಶರೀಫ್ ತಮ್ಮ ಅಳನ್ನು ತೋಡಿಕೊಂಡಿದ್ದಾರೆ.
ಯಾರಿಂದಲೂ ಸ್ಪಂದನೆ ಇಲ್ಲ:
ಮಸೀದಿಯನ್ನು ಉಳಿಸಿ ಕೊಡಿ ಎಂದು ಹಲವಾರು ಬಾರಿ ಸಂಬಂ ಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿ ಕೊಂಡರು ಯಾರಿಂದಲೂ ಸ್ಪಂದನೆ ಇಲ್ಲ. ನಮಗಾದ ನಷ್ಟದ ಬಗ್ಗೆ ತುಂಬಿಸಿಕೊಡುವ ಬಗ್ಗೆ ಹೇಳಿದಾಗ ಕೇಳುವ ವ್ಯವದಾನವೂ ಯಾರಿಗೂ ಇಲ್ಲ.
ಹೊಸ ಮಸೀದಿಯನ್ನು ಕೇವಲ ಮೂರು ತಿಂಗಳೊಳಗೆ ಮೂಲ ಯಥಾ ರೂಪವನ್ನು ಕಾಯ್ದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ, ಆದರೆ ಹಿಂದೆ ಮಾರ್ಕ್ ಮಾಡಿದ ಗಡಿಗಿಂತ ತಮಗೆ ಖುಷಿಗೆ ಬಂದ ಹಾಗೆ ಇನ್ನೂ ಜಾಸ್ತಿ ವಿಸ್ತರಿಸಲು ಹೊರಟರೆ ನಾವು ಸುಮ್ಮನಿ ರಲು ಸಾಧ್ಯವಿಲ್ಲ, ನಮಗಿರುವ ಸ್ವಲ್ಪ ಜಾಗದಲ್ಲಿ ಮಸೀದಿ, ಮದರಸ, ಶವ ಹೂಳಲು ಜಾಗವಿಲ್ಲದೆ ಮೇಲೆ ನಾವು ಎಲ್ಲಿಗೆ ಹೋಗಬೇಕು...? ಇನ್ನು ಮುಂದೆ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದು ಮಸೀದಿಯ ಉಪಾಧ್ಯಕ್ಷ ಕೋಟ ಇಬ್ರಾಹಿಂ ಸಾಹೇಬ್ ಆಕ್ರೋಶ ವ್ಯಕ್ತಪಡಿ ಸಿದ್ದಾರೆ.
Tagged with
feature,
lnews,
udupi
ಎಂಎಲ್‌ಸಿಯಾಗಿ ನೀವೇನು ಮಾಡಿದ್ದೀರಿ?
ಮಂಗಳೂರು: ಕಳೆದ ೨೪ ವರ್ಷಗಳಲ್ಲಿ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಪರಿಷತ್ ಸದಸ್ಯರಾಗಿರುವ ಡಿ.ಎಚ್.ಶಂಕರಮೂರ್ತಿ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಗಣೇಶ್ ಕಾರ್ಣಿಕ್ ಅವರೇ ನಿಮ್ಮ ಅವಧಿಯಲ್ಲಿ ಮಾಡಿದ ಕೆಲಸವಾದರೂ ಏನು ಎಂದು ಕಾಂಗ್ರೆಸ್ ಮುಖಂಡ ಐವನ್ ಡಿ’ಸೋಜ ಪ್ರಶ್ನಿಸಿದ್ದಾರೆ.
ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪದವೀಧರ ನಿರುದ್ಯೋಗಿಗಳಿಗೆ ೧,೫೦೦ ಭತ್ಯೆ ನೀಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಮಾಡಿದ ಘೋಷಣೆ ಇದುವರೆಗೂ ಈಡೇರಿಲ್ಲ. ನಾಲ್ಕುವರೆ ಲಕ್ಷ ನಿರುದ್ಯೋಗಿ ಯುವಕರು ಕ್ಷೇತ್ರದಲ್ಲಿದ್ದರೂ ಉದ್ಯೋಗ ದೊರಕಿಸಿ ಕೊಡಲು ಪ್ರಯತ್ನಿಸಿಲ್ಲ. ಕನಿಷ್ಟಪಕ್ಷ ಪದವೀಧರರನ್ನು ಖುದ್ದಾಗಿ ಭೇಟಿ ಮಾಡಿ ಮಾತುಕತೆ ನಡೆಸುವ ಸೌಜನ್ಯವನ್ನೂ ತೋರದ ೮೦ ವರ್ಷ ಪ್ರಾಯದ ಶಂಕರಮೂರ್ತಿಯವರು ಈ ಬಾರಿ ಚುನಾವಣೆಗೆ ಸ್ಪರ್ಧಿಸದೆ ಯುವಕರಿಗೆ ಅವಕಾಶ ನೀಡಬೇಕಿತ್ತು ಎಂದು ಐವನ್ ಕಟಕಿಯಾಡಿದ್ದಾರೆ.
ಪಿಯುಸಿಯಲ್ಲಿ ಸೇವೆ ಸಲ್ಲಿಸುತ್ತಿರುವ ೪,೩೦೦ ಶಿಕ್ಷಕರಿಗೆ ಇದುವರೆಗೆ ಸಂಬಳವೇ ಆಗಿಲ್ಲ. ವೇತನದಲ್ಲಿ ತಾರತಮ್ಯ, ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ನೀಡಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಯಾವುದೇ ಕ್ರಮ ಕೈಗೊಳ್ಳುವಲ್ಲಿ ಗಣೇಶ್ ಕಾರ್ಣಿಕ್ ವಿಪಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ರಮೇಶ್ ಜೋಯಪ್ಪ ಹಾಗೂ ಎಸ್.ಪಿ.ದಿನೇಶ್ ಅವರಿಗೆ ಮತ ನೀಡಬೇಕು ಎಂದು ಐವನ್ ಮನವಿ ಮಾಡಿದ್ದಾರೆ.
Tagged with
congress,
dk,
feature,
lnews
ಅಧಿಕಾರಿ-ಜನಪ್ರತಿನಿಧಿಗಳಿಗೆ ರೈತರ ಎಚ್ಚರಿಕೆ
ಬಂಟ್ವಾಳ: ಹಲವಾರು ವರ್ಷ ಗಳಿಂದ ನಿರ್ಲಕ್ಷ್ಯಿತಗೊಂಡ ಮಣಿಹಳ್ಳ-ಸರಪಾಡಿ-ಅಜಿಲಮೊಗರು ಜಿ.ಪಂ. ಮುಖ್ಯ ರಸ್ತೆಯನ್ನು ಅಭಿವೃದ್ಧಿಗೊಳಿ ಸುವಂತೆ ಆಗ್ರಹಿಸಿದ ರೈತ ಮುಖಂಡರು ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಮೇ ೨೬ಕ್ಕೆ ಹೆದ್ದಾರಿ ಬಂದ್ ಹಾಗೂ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುಮಾರು ೧೫ ಕಿ.ಮೀ. ಉದ್ದದ ರಸ್ತೆ ಭಾಗಶಃ ಹದಗೆಟ್ಟಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂ ಡಿತ್ತು. ಸಂಬಂಧಿತ ಜಿ.ಪಂ. ಇಂಜಿನಿ ಯರ್ ವಿಭಾಗದ ಅಧಿಕಾರಿಗಳು ರಸ್ತೆ ಯನ್ನು ಸಮರ್ಪಕವಾಗಿ ನಿರ್ವಹಿಸು ತ್ತಿರಲಿಲ್ಲ. ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನ ಹಾಗೂ ಅಜಿಲಮೊಗರು ದರ್ಗಾಗಳಿಗೆ ಭೇಟಿ ನೀಡುವ ಭಕ್ತಾದಿಗಳು ರಸ್ತೆಯ ದುಸ್ಥಿತಿಗೆ ಸಾಕಷ್ಟು ತೊಂದರೆ ಗೀಡಾಗಿದ್ದರು. ಸ್ಥಳೀಯ ಗ್ರಾ. ಪಂ., ತಾ. ಪಂ., ಜಿ.ಪಂ. ಸದಸ್ಯರು, ವಿಧಾನ ಸಭಾ ಹಾಗೂ ಲೋಕ ಸಭಾ ಕ್ಷೇತ್ರಗಳ ಸದಸ್ಯರು ವಿಶೇಷ ಕಾಳಜಿ ವಹಿಸಿರಲಿಲ್ಲ.
ರಸ್ತೆಯ ಸುಧಾರಣೆಯನ್ನು ಮುಂದಿಟ್ಟು ನಿನ್ನೆ ಮಣಿಹಳ್ಳ ಸಮೀಪ ಜಮಾಯಿಸಿದ ಸರಪಾಡಿ ರೈತರ ಹಿತರಕ್ಷಣಾ ಸಂಘ ಹಾಗೂ ಬಡ್ಡಕಟ್ಟೆ ರಿಕ್ಷಾ ಚಾಲಕರು ಮತ್ತು ಮಾಲಕರು ರಸ್ತೆಯ ತಡೆದು ಪ್ರತಿಭಟಿಸಿದ್ದಾರೆ. ಶೀಘ್ರದಲ್ಲಿ ರಸ್ತೆಗೆ ಕಾಯಕಲ್ಪ ಕಲ್ಪಿಸು ವಂತೆ ಆಗ್ರಹಿಸಿದ್ದಾರೆ. ಇಲಾಖಾಧಿಕಾ ರಿಗಳ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಿ.ರಮಾನಾಥ ರೈ, ಜಿ.ಪಂ.ಸದಸ್ಯೆ ಗಿರಿಜಾ, ಸರಪಾಡಿ ಗ್ರಾ.ಪಂ.ಉಪಾಧ್ಯಕ್ಷ ಪೂವಪ್ಪ ಪೂಜಾರಿ, ಸದಸ್ಯ ಪುರು ಷೋತ್ತಮ ಪೂಜಾರಿ ಧಾವಿಸಿದ್ದಾರೆ.
ಇಲಾಖಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದರೆ, ಮೇ ೨೬ಕ್ಕೆ ಹೆದ್ದಾರಿ ಹೆದ್ದಾರಿ ಬಂದ್, ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ರೈತರ ಹಿತರಕ್ಷಣಾ ಸಂಘದ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
Tagged with
dk,
feature,
lnews