ಧಾರ್ಮಿಕ ಸಂಘಟನೆ ಬೆಳೆಯಲು ಪ್ರತಿಭೆ ಹಾಗೂ ಚಾರಿತ್ರ್ಯ ಮುಖ್ಯ

Posted by JAYAKIRANA Kirana on Wednesday, 16 May 2012 | 0 comments | Leave a comment...

ಶಮೀರ್, ಕುದ್ರೋಳಿ
ಕೆಲವು ದಿನಗಳ ಹಿಂದೆ ಜಯಕಿರಣ ಪತ್ರಿಕೆಯಲ್ಲಿ ಮುಸ್ಲಿಂ ನೂತನವಾದಿ ಸಂಘಟನೆಯೊಂದರ ನಾಯಕನ ನೈಜಮುಖ ವನ್ನು ಅನಾವರಣ ಮಾಡಲಾಗಿತ್ತು. ಸಚ್ಚಾರಿತ್ರ್ಯ ಹೊಂದಿದ್ದ ತಂದೆಯ ಮಗನಾದ ಈತ ತನ್ನ ವಾಕ್ಚಾತುರ್ಯದಿಂದಾಗಿ ಜನಮರುಳು ಮಾಡಿದ್ದ. ಜೊತೆಗೆ ತನ್ನ ತಂದೆಯ ನಾಮ ಬಲದಿಂದ ಹಲವು ಮುಖ್ಯಸ್ಥರ ಅಭಿಮಾನಿಯಾಗಿದ್ದ. ಇತ್ತೀ ಚೆಗೆ ಸ್ಮರಣ ಸಂಚಿಕೆಯೊಂದರಲ್ಲಿ ತಂದೆಯ ಗುಣಗಾನ ಮಾಡುತ್ತ ಕಣ್ಣೀರಿಳಿಸಿದ್ದ. ಧಾರ್ಮಿಕ ನೇತಾರನಂತಿದ್ದರೂ ಮನೆಗೆ ಮಾರಿಯಾಗಿದ್ದ ಈತ ಪ್ರಾಯಮೀರಿ ನಿಂತ ಸಹೋ ದರಿಯರ ಮದುವೆ ಮಾಡದೆ ತರಾತುರಿಯಲ್ಲಿ ತಾನೇ ಮದುವೆ ಯಾಗಿದ್ದ. ಸಮಾಜದ ಹಲವು ಮಂದಿ ಶ್ರೀಮಂತರಿಂದ ಹಣ ಪಡೆದು ಐಷಾರಾಮದ ಮನೆಯನ್ನು ತನ್ನದಾಗಿಸಿ ತಾನೋರ್ವ ಶ್ರೀಮಂತನಂತೆ ಅಹಂ ಪಡುತ್ತಿದ್ದ. ಈ ಮುಂಚೆ ಹಜ್ ಯಾತ್ರೆಗೆ ತೆರಳುವ ಮುನ್ನ ಅಲ್ಲಲ್ಲಿ ಬಾಕಿಯಿರಿಸಿದ್ದ ಸಾಲವನ್ನು ಸಂದಾಯಿ ಸುವ ಭರವಸೆ ಕೊಟ್ಟು ಯಾರಿಗೂ ಹಣ ಕೊಡದೆ ಹಜ್‌ಗೆ ತೆರಳಿದ ಕೀರ್ತಿಯು ಈತನದ್ದಾಗಿದೆ.
ಇವನ ಹಠಮಾರಿತನದಿಂದ ಬೇಸತ್ತ ಇವನ ಅಭಿಮಾ ನಿಗಳಲ್ಲಿ ಹಲವಾರು ಮಂದಿ ಇವನಿಂದ ದೂರವಾದ ನಿದರ್ಶ ನಗಳಿವೆ. ಆಸ್ಪತ್ರೆಯೊಂದರ ಸಣ್ಣ ಮಸೀದಿಯಲ್ಲಿ ಇಮಾಮ ನಾಗಿದ್ದಾಗ ಇವನ ಅಭಿಮಾನಿ ಮಾಲಕರು ಕೈ ಮುಗಿದು ಹೊರ ಹಾಕಿದ ಘಟನೆಯೂ ನಡೆದಿದೆ. ಸದಾ ಇವನ ಹಿಂದೆ ಸುತ್ತಾಡು ತ್ತಿದ್ದ ಹೊಟೇಲ್ ಉದ್ಯಮಿಯೊಬ್ಬರು ಶಾಶ್ವತವಾಗಿ ಇವನಿಂದ ದೂರ ನಿಂತಿದ್ದಾರೆ.
ಧಾರ್ಮಿಕ ವಿದ್ಯಾಭ್ಯಾಸದ ಮುಂಚೂಣಿಯಲ್ಲಿದ್ದ ಹಲವು ಸಂಸ್ಥೆಯ ವಿರುದ್ಧ ಪೈಪೋಟಿ ನಡೆಸಿ ತನ್ನ ಮದರಸಕ್ಕೆ ಇಂಟರ್ ನ್ಯಾಶನಲ್ ಮದರಸ ಎಂದು ಘೋಷಿಸಿದ್ದ. ಅಶಿಸ್ತಿನಿಂದ ಕೂಡಿದ ಮದರಸದಿಂದ ಹಲವು ಪಾಲಕರು ತಮ್ಮ ಮಕ್ಕಳನ್ನು ಬೇರೆಡೆ ಸೇರಿಸಿದ್ದರು. ಇತ್ತೀಚೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ವಿರಳ ವಾಗ ತೊಡಗಿತ್ತು. ಒಂದು ಮದರಸವನ್ನು ನಡೆಯಲು ಅಸಾಧ್ಯ ವೆನಿಸಿದ ಈತ ಹೆಸರಿಗೆ ಮಾತ್ರ ಹಲವು ಕಡೆ ಮದರಸವನ್ನು ಹುಟ್ಟು ಹಾಕಿದ್ದ. ಮಹಿಳೆಯರ ಕಾರ್ಯಕ್ರಮವಂತೂ ಸಂಪೂರ್ಣ ನಿಂತುಹೋಗಿದೆ.
ಜಮಾಅತೆ ಇಸ್ಲಾಮಿನಿಂದ ಮುನಿಸಿಕೊಂಡು ‘ನೈಸ್’ ಅನ್ನು ಕಟ್ಟಿಕೊಂಡ. ತನ್ನ ಭಾಷಣಕ್ಕೊಂದು ವೇದಿಕೆಯೆಂಬಂತೆ ಕಟ್ಟಿ ಕೊಂಡ ಸಂಘಟನೆಯಲ್ಲಿ ಪ್ರಮುಖ ಭಾಷಣಕಾರ ಈತನೇ ಆದ್ದರಿಂದ ಭಾಷಣ ಮಾಡುವ ಕಲೆಯಲ್ಲಿ ಪಳಗಿದ. ಲುಲು ಸೆಂಟರ್‌ನ ೨-೩ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ ಇತ್ತೀಚೆಗೆ ಬಿಡುಗಡೆಗೊಂಡ ಸ್ಮರಣ ಸಂಚಿಕೆಯಲ್ಲಿ ಇಡೀ ಕಟ್ಟಡ ವನ್ನೇ ದಿವ್ಯಜ್ಯೋತಿಯೆಂದು ಬಿಂಬಿಸಿ ಮೋಸದ ಹಾದಿ ಹಿಡಿ ದಿದ್ದ. ಇವನ ಕತೆಯನ್ನು ಹೇಳುತ್ತಾ ಹೋದರೆ ಬೊಳುವಾ ರರ ಕಾದಂಬರಿಯನ್ನೂ ಮೀರುತ್ತದೆ. ಧಾರ್ಮಿಕ ನೇತಾರರ ಬಗೆಗಿನ ವಿಶ್ವಾಸಕ್ಕೆ ಮಾರಕವಾದೀತು. ಇಲ್ಲಿಯ ನೇತಾರರು ಸತ್ಯಶೋಧನೆ ನಡೆಸಬೇಕು. ಒಂದು ಧಾರ್ಮಿಕ ಸಂಘಟನೆ ಬೆಳೆಸಲು ಒಬ್ಬನ ಪ್ರತಿಭೆ ಮುಖ್ಯವಲ್ಲ. ಅವನ ಚಾರಿತ್ರ್ಯ ಮುಖ್ಯ. ಹೀಗಾಗಿ ಸಂಘಟನೆ ತನ್ನ ಚಟುವಟಿಕೆ ಮುಂದುವರಿಸಬೇಕು. ಉತ್ತಮ ಶೈಕ್ಷಣಿಕ ಮೇಲ್ವಿಚಾರಕರನ್ನು ನೇಮಿಸಿ ಮದರಸ ಮುನ್ನ ಡೆಸಬೇಕು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಬ್ದುಸಲಾಂ ಪುತ್ತಿಗೆ, ಝೆನಿ, ಮುಹಮ್ಮದ್ ಕುಂಞ, ದಾರಿಮಿ, ಶಹ ನಾಜ್ ಇಂಥವರನ್ನು ಆಹ್ವಾನಿಸಿ ಕಾರ್ಯಕ್ರಮ ನೀಡಬಹುದು. ಅದೇ ರೀತಿ ಸಮಾಜಸೇವೆಯಲ್ಲಿ ಇತರ ಸಂಘಟನೆಯು ಜೊತೆ ಗೂಡಿಯೂ ಮುಂದೆ ಹೋಗಬಹುದು.

ಶಿಕ್ಷಣ ಸಂಸ್ಥೆಗಳನ್ನು ಜಾತಿ ಧರ್ಮಗಳಿಂದ ಮುಕ್ತಗೊಳಿಸಿ

Posted by JAYAKIRANA Kirana on | 0 comments | Leave a comment...

ಇತ್ತೀಚಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅಬ್ಬರ ಸ್ವಲ್ಪ ಹೆಚ್ಚೇ ಎನ್ನುವಂತಿದೆ. ಅದರಲ್ಲೂ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನೋಡಿದರೆ ಅದು ಭೋದನಾಲಯವೋ ಅಥವಾ ಧಾರ್ಮಿಕ ಕೇಂದ್ರವೋ ಎಂಬ ಅನು ಮಾನ ಕಾಡುತ್ತದೆ. ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಶಿಲುಬೆ, ಏಸುವಿನ ಮೂರ್ತಿಗ ಳನ್ನು ತರಗತಿಯ ಪ್ರತೀ ಕೊಠಡಿಗಳಲ್ಲಿ ನೇತು ಹಾಕಿರುತ್ತಾರೆ. ಹಿಂದುಗಳ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದು ದೇವರ ಫೋಟೋಗಳನ್ನು, ಮುಸ್ಲಿಮರು ತಮ್ಮ ದೇವರ ಫೋಟೋಗಳನ್ನು ನೇತು ಹಾಕಿರುತ್ತಾರೆ. ಸರ್ವ ಧರ್ಮದ ವಿದ್ಯಾರ್ಥಿ ಗಳೂ ಬರುವ ಶಿಕ್ಷಣ ಕೇಂದ್ರಗಳಲ್ಲಿ ಈ ರೀತಿಯ ಧರ್ಮ ತಾರತಮ್ಯ ಎಷ್ಟು ಸರಿ? ರಾಷ್ಟ್ರದ ಮಹಾನ್ ನಾಯಕರನ್ನು ಪರಿಚಯಿಸಬೇಕಾದ ಶಿಕ್ಷಣ ಸಂಸ್ಥೆ ಗಳು ತರಗತಿಗಳಲ್ಲಿ ಧರ್ಮ ಶಿಕ್ಷಣದ ಭೋದನೆಗೆ ಇಳಿದಂತೆ ಕಾಣುತ್ತಿದೆ. ಜಾತಿ, ಧರ್ಮ ಎನ್ನುವುದು ಅವರವರ ಮನೆ, ಮನಸ್ಸಿಗೆ ಸೀಮಿತವಾಗಿರ ಬೇಕೇ ಹೊರತು ಎಂದಿಗೂ ಶಿಕ್ಷಣ ಸಂಸ್ಥೆಗಳಲ್ಲಿ ತನ್ನ ಪ್ರಾಬಲ್ಯ ಮೆರೆಯಬಾ ರದು. ಅಲ್ಲದೇ ಶಿಕ್ಷಕರು ಕೂಡ ತಮ್ಮ ಧಾರ್ಮಿಕ ವಾದಗಳನ್ನು ಬದಿಗಿಟ್ಟು ತಾನೊಬ್ಬ ಶಿಕ್ಷಕ ಎಂಬ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಶಿಕ್ಷಣ ನೀಡಬೇಕು. ಆಗ ಮಾತ್ರ ಕೋಮು ಭಾವನೆಗಳನ್ನು ಮೊಳಕೆಯಲ್ಲೇ ಚವುಟಿ ಹಾಕಲು ಸಾಧ್ಯ. ಸ್ವಾಮೀಜಿಗಳು, ಚರ್ಚ್‌ಗಳು, ಮಸೀದಿಗಳು ನಡೆಸುವ ಶಿಕ್ಷಣ ಸಂಸ್ಥೆಗಳು ಕೇವಲ ಶೈಕ್ಷಣಿಕ ಕೆಂದ್ರವಾಗಿರಲಿ. ಅದು ಬಿಟ್ಟು ಧರ್ಮ ಭೋದನೆ ಗಿಳಿದರೆ ಬೆಳೆಯುವ ಮಕ್ಕಳನ್ನು ನಾವೇ ಕೋಮುವಾದಿಗಳಾಗಿ ಬೆಳೆಸಿದಂ ತಾಗುತ್ತದೆ. ಮುಂದೆ ಧರ್ಮದ ಹೆಸರಿನಲ್ಲಿ ನಡೆಯುವ ಕಚ್ಚಾಟಗಳಿಗೆ ಈ ಶಿಕ್ಷಣ ಸಂಸ್ಥೆಗಳೇ ಪ್ರಮುಖ ಕಾರಣವಾಗಬಹುದು. ಹಾಗಾಗಿ ಇನ್ನಾದರೂ ಸರ್ಕಾರ ಇವುಗಳನ್ನು ನಿಲ್ಲಿಸುವ ಕೆಲಸ ಮಾಡಲಿ.
ಇಸ್ಮಾಯಿಲ್, ತೊಕ್ಕೊಟ್ಟು

ಹೊರಜಿಲ್ಲೆಗಳ ಕಾರ್ಮಿಕರ ಅವಾಂತರ
ಪಡುಬಿದ್ರಿ, ಎಲ್ಲೂರು, ಮುದರಂ ಗಡಿ ಪರಿಸರದಲ್ಲಿ ಸುಜ್ಲಾನ್ ಮತ್ತು ನಾಗಾರ್ಜುನ ಎಂಬೆರಡು ರಕ್ಕಸ ಕಂಪೆ ನಿಗಳು ತಳವೂರಿದ ಬಳಿಕ ಊರಿನ ಚಿತ್ರಣವೇ ಬದಲಾಗಿದೆ. ಎಲ್ಲಿ ನೋಡಿ ದರೂ ಹೊರರಾಜ್ಯಗಳ ಕಾರ್ಮಿಕರೇ ತುಂಬಿಕೊಂಡಿದ್ದಾರೆ.
ಕಳ್ಳತನ, ದರೋಡೆ, ಅತ್ಯಾಚಾರ, ಕೊಲೆ, ಹೆಣ್ಣುಮಕ್ಕಳ ಚುಡಾವಣೆ ಪ್ರಕ ರಣಗಳು ಹಿಂದೆಂದಿಗಿಂತ ಹೆಚ್ಚಾಗಿ ನಡೆಯುತ್ತಿರುವುದು ಗುಟ್ಟಾಗಿ ಉಳಿ ದಿಲ್ಲ. ಇದೆಲ್ಲ ಕಂಪೆನಿಯ ಅವಾಂತ ರಕ್ಕೆ ಸಣ್ಣ ಉದಾಹರಣೆಯಷ್ಟೇ. ಕೆಲವು ದಿನಗಳ ಹಿಂದಷ್ಟೇ ಸ್ಥಳೀಯ ಯುವತಿ ಯನ್ನು ರೂಮಿಗೆ ಕರೆಸಿ ರಾಸಲೀಲೆ ಯಾಡಿದ ಕಂಪೆನಿಯ ವಿಕೃತಕಾಮಿ ಇಂಜಿನಿಯರ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆಯೂ ಜರು ಗಿದೆ. ಮುಖ್ಯವಾಗಿ ಪೊಲೀಸ್ ಇಲಾಖೆ ಇವರ ಉಪಟಳವನ್ನು ನಿಯಂತ್ರಿಸಲು ಗಂಭೀರವಾಗಿ ಚಿಂತಿಸಿಲ್ಲ. ಕಂಪೆನಿ ಕಾರ್ಮಿಕರ ಮೇಲೆ ತಳೆಯುವ ಮೃದು ಧೋರಣೆಯೇ ಜನರನ್ನು ತ್ರಿಶಂಕು ಸ್ಥಿತಿಯಲ್ಲಿ ಬದುಕುವಂತೆ ಮಾಡಿದೆ. ಇಲ್ಲಿ ಭೂಮಿ ಕಳೆದುಕೊಂಡಿರುವ ರೈತರು ಸಮಸ್ಯೆಯಿಂದಲೇ ದಿನ ಕಳೆ ಯುತ್ತಿದ್ದಾರೆ.
ಕಂಪೆನಿಗಳಲ್ಲಿ ಸಾವಿರಾರು ಮಂದಿ ಹೊರರಾಜ್ಯದ ಕಾರ್ಮಿಕರು ದುಡಿಯುತ್ತಿದ್ದು, ಅಪರಾಧ ಕೃತ್ಯಗಳಲ್ಲಿ ಸುಲಭವಾಗಿ ತೊಡಗಿಕೊಂಡು ಇಲ್ಲಿನ ಠಾಣೆಗಳಲ್ಲಿ ಪ್ರಕರಣ ದಾಖ ಲಾದ ತಕ್ಷಣ ಊರು ತೊರೆಯು ತ್ತಾರೆ. ಪೊಲೀಸ್ ಇಲಾಖೆ ಇನ್ನಾ ದರೂ ಇಲ್ಲಿನ ಜನರ ಸಮಸ್ಯೆಯನ್ನು ಅರಿತುಕೊಳ್ಳಲಿ.
ಕೇಶವ, ಪಡುಬಿದ್ರಿ

ನಕಲಿ ರಶೀದಿ ಕೊಡುವ ಪೊಲೀಸರು!
ಟ್ರಾಫಿಕ್ ನಿಯಮಗಳನ್ನು ಬ್ರೇಕ್ ಮಾಡಿದರೆ ಕೇಸ್ ಹಾಕುವುದು ಪೊಲೀಸರ ಕರ್ತವ್ಯ. ಆದರೆ ಇತ್ತೀಚೆಗೆ ಪೊಲೀಸರು ಕೇಸ್ ಜಡಿದು ಫೈನ್ ಕಿತ್ತುಕೊಂಡ ನಂತರ ಕೊಡುವ ರಶೀದಿ ಡಮ್ಮಿಯಾಗಿರುತ್ತದೆ. ಮೊನ್ನೆ ನಾನು ಮತ್ತು ನನ್ನ ಗೆಳೆಯ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ತಡೆದ ಟ್ರಾಫಿಕ್ ಪೊಲೀಸ್ ಒಬ್ಬರು ಸೈಡ್ ಮಿರರ್ ಇಲ್ಲ ಎಂಬ ಕಾರಣಕ್ಕೆ ಕೇಸ್ ಜಡಿದು ಫೈನ್ ಹಾಕಿ ದರು. ಈ ವೇಳೆ ನಾನು ಕೇಸ್ ಹಾಕಿದ ರಶೀದಿ ಕೊಡಿ ಎಂದು ಕೇಳಿದೆ. ಬೇಕೋ ಬೇಡವೋ ಎಂಬಂತೆ ತಡವರಿಸಿದ ಪೊಲೀಸಪ್ಪ ನಂತರ ಯಾವುದೋ ಓಬೀರಾಯನ ಕಾಲದ ರಶೀದಿ ಕಿತ್ತು ಕೊಟ್ಟ. ಈ ವೇಳೆ ನಾನು ಇದು ಹಳೆಯ ರಶೀದಿ ಅಂದಿದ್ದಕ್ಕೆ ಹೊಸ ರಶೀದಿ ಪ್ರಿಂಟ್‌ಗೆ ಹೋಗಿದೆ ಎಂದು ಸಮಜಾಯಿಸಿ ನೀಡಿದರು. ಇಷ್ಟು ದೊಡ್ಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೇಸ್ ಹಾಕಿದ ನಂತರ ಕೊಡಲು ಪ್ರಸ್ತುತ ವರ್ಷದ ರಶೀದಿ ಇಲ್ಲವೆಂದರೆ ದುರಂತ ವಲ್ಲದೇ ಇನ್ನೇನು? ಅಥವಾ ವಾಹನ ಸವಾರರಿಗೆ ರಶೀದಿ ಕೊಡದೆ ಹಣ ಪೀಕಿಸಬಹುದು ಎಂಬ ಉದ್ದೇಶದಿಂದ ಈ ಮೊಂಡು ಧೈರ್ಯ ಮಾಡಿ ರಬಹುದೇ? ಅಲ್ಲದೇ ಕೆಲವೊಂದು ಟ್ರಾಫಿಕ್ ಪೊಲೀಸ್ ಠಾಣೆಯಿರುವ ವ್ಯಾಪ್ತಿಯಲ್ಲಿ ಸ್ಥಳೀಯ ಠಾಣೆಯ ಪೊಲೀಸರು ವಾಹನದವರಿಂದ ವಸೂ ಲಿಗೆ ನಿಂತಿರುತ್ತಾರೆ. ಮಂಗಳೂರು ನಗರದಲ್ಲಿ ಅಷ್ಟು ದೊಡ್ಡ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಇರುವಾಗ ಅಪರಾಧ ಪತ್ತೆಹಚ್ಚಬೇಕಾದ ಪೊಲೀಸರಿಗೆ ಈ ಉಸಾ ಬರಿ ಯಾಕೆ? ತಮ್ಮ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ್ರಕರಣ ಗಳನ್ನು ಮೊದಲು ಪತ್ತೆ ಹಚ್ಚಲಿ. ಇನ್ನಾದರೂ ಕಮಿಷನರ್ ಇತ್ತ ಗಮನ ಹರಿ ಸುವರೇ?
ಲೋಕೇಶ್ ಕಿರಣ್, ಕಿನ್ಯಾ

ಫಲಿತಾಂಶದ ಬಗ್ಗೆ ಎಚ್ಚರವಿರಲಿ
ಇನ್ನು ಕೆಲವೇ ದಿನಗಳಲ್ಲಿ ಎಸ್ ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾ ರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾ ರ್ಥಿಗಳ ಫಲಿತಾಂಶ ಮುಂದಿನ ದಿನ ಗಳಲ್ಲಿ ಹೊರಬೀಳುವ ಸಾಧ್ಯತೆಯಿದೆ. ಫಲಿತಾಂಶ ಎಂದ ಮೇಲೆ ಅಲ್ಲಿ ಉತ್ತೀರ್ಣ, ಅನುತ್ತೀರ್ಣ ಎರಡೂ ಇದ್ದೇ ಇರುತ್ತದೆ. ಈ ವೇಳೆ ಮನ ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಮೂಹವೂ ದೊಡ್ಡ ದಿದೆ. ಈ ಹಿಂದಿನ ವರ್ಷದಲ್ಲಿ ಅನೇಕ ಮಂದಿ ವಿದ್ಯಾರ್ಥಿಗಳು ಫಲಿತಾಂಶ ದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂ ಡಿದ್ದರು. ಹಾಗಾಗಿ ಈ ಬಾರಿಯಾ ದರೂ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಜಾಗೃತೆ ವಹಿಸಿ. ಮಕ್ಕಳು ಫಲಿತಾಂಶಕ್ಕೆ ತೆರಳುವಾಗ ಸಾಧ್ಯವಾದರೆ ನೀವೂ ಅವರ ಜೊತೆಗೆ ಕಾಲೇಜಿಗೆ ಇಲ್ಲವೇ ಶಾಲೆಗೆ ಹೋಗಿ. ಒಂದು ವೇಳೆ ಅನುತ್ತೀರ್ಣರಾಗಿದ್ದರೂ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ. ಯಾಕೆಂದರೆ ಫಲಿತಾಂಶ ಆ ಒಂದು ಕ್ಷಣಕ್ಕೆ ಎಂಥಹ ಅನಾಹುತವನ್ನೂ ತಂದೊಡ್ಡುವ ಸಾಧ್ಯತೆಯಿದೆ. ಇನ್ನು ನಿಮ್ಮ ಮಕ್ಕಳು ಅನುತ್ತೀರ್ಣರಾದರು ಎಂದ ತಕ್ಷಣ ಉತ್ತೀರ್ಣರಾದವರಿಗೆ ಹೋಲಿಕೆ ಮಾಡುವ ಕೆಟ್ಟ ಚಾಳಿ ಖಂಡಿತಾ ಬೇಡ.
ಸಾದಿಕ್, ಬಂದರ್

ಹಿಂದುಗಳೇ ಹಿಂದುತ್ವವನ್ನು ವಿರೋಧಿಸುವುದು ಸರಿಯಲ್ಲ
ಇತ್ತೀಚೆಗೆ ಕಠಾರಿವೀರ ಚಿತ್ರದಲ್ಲಿ ಹಿಂದು ಧರ್ಮಕ್ಕೆ ಅವಹೇಳನ ಮಾಡಲಾಗಿದೆ ಎಂಬ ಬಗ್ಗೆ ಕನ್ನಡದ ಸುದ್ದಿ ವಾಹಿನಿಯೊಂದರಲ್ಲಿ ಭಾರೀ ಚರ್ಚೆ ನಡೆಯುತ್ತಿತ್ತು. ನಾನು ಕೂಡ ಈ ಚರ್ಚೆಯನ್ನು ವೀಕ್ಷಿಸುತ್ತಿದ್ದೆ. ಈ ವೇಳೆ ವಾಹಿನಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಕಠಾರಿವೀರ ಚಿತ್ರದಲ್ಲಿ ಚಿತ್ರಿ ಸಿದ್ದು ಸರಿ ಎಂದು ಸಮರ್ಥಿಸುತ್ತಾ, ನಮ್ಮ ಧರ್ಮದ ಕೆಲ ತತ್ವಗಳನ್ನೇ ಪ್ರಶ್ನಿಸುವ ಹಂತಕ್ಕೆ ಇಳಿದಿದ್ದ. ಬಹುಶಃ ಇಂಥವರಿದ್ದರೆ ಹಿಂದುತ್ವ ಎಂಬ ಜೀವನ ವಿಧಾನ ಮಾಯವಾಗುವುದರಲ್ಲಿ ಸಂದೇಹವಿಲ್ಲ. ನಮ್ಮಲ್ಲಿ ಕೆಲ ಹಿಂದುಗಳೇ ಹಿಂದುತ್ವವನ್ನು ವಿರೋಧಿಸುತ್ತಾರೆ. ಹಾಗಂತ ನಾನು ಸಂಘಪ ರಿವಾರದವರ ರೀತಿಯ ಹಿಂದುತ್ವನ್ನು ಬೆಳೆಸಿಕೊಳ್ಳಿ ಎಂದು ಹೇಳುತ್ತಿಲ್ಲ. ಬದಲಾಗಿ ನಮ್ಮ ಸನಾತನ ಧರ್ಮವನ್ನು ಆತ್ಮಸಾಕ್ಷಿಗೆ ಬೆಲೆಕೊಟ್ಟಾದರೂ ಗೌರವಿಸಿ. ನಮ್ಮ ಧಾರ್ಮಿಕ ಭಾವನೆಗಳಿಗೆ ಇನ್ನೊಬ್ಬರು ಘಾಸಿ ಮಾಡಿ ದರು ಎನ್ನುವ ಬದಲು ನಾವೇ ನಮ್ಮ ಧಾರ್ಮಿಕ ಭಾವೆನಗಳನ್ನು ಗೌರವಿ ಸುವುದನ್ನು ಕಲಿಯಬೇಕಿದೆ. ಕೆಲ ಹಿಂದುಗಳಿಗೆ ಹಿಂದುತ್ವ ಎಂದರೆ ಸಂಘ ಪರಿವಾರದ ಸ್ವತ್ತು ಎಂಬ ಭಾವನೆಯಿದೆ. ಇಂತಹ ಭಾವೆನೆಯನ್ನು ಬಿಟ್ಟು ಬಿಡಿ. ಸಂಘಪರಿವಾರ ಎನ್ನುವುದು ಕೇವಲ ಹಿಂದುತ್ವದ ರಕ್ಷಣೆಗೆ ಇರುವ ಒಂದು ಸಂಘಟನೆಯಷ್ಟೇ. ಇವರಿಗೆ ಯಾರೂ ಹಿಂದುತ್ವನ್ನು ಗುತ್ತಿಗೆ ಕೊಟ್ಟಿಲ್ಲ. ನಮ್ಮ ಧರ್ಮವನ್ನು ನಾವಾಗಿಯೇ ಪ್ರೀತಿಯಿಂದ ಗೌರವಿಸಿದರೆ ಅದಕ್ಕಿಂತ ಹೆಚ್ಚಿನ ರಕ್ಷಣೆ ನಮ್ಮ ಧರ್ಮಕ್ಕೆ ಬೇಕಿಲ್ಲ.
ಇಂದಿಗೂ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳಲ್ಲಿ ಧಾರ್ಮಿಕ ಭಾವನೆ ಗಳಿಗೆ ಅದರದ್ದೇ ಆದ ಬೆಲೆಯಿದೆ. ಹಾಗಾಗಿಯೇ ಯಾರೊಬ್ಬರೂ ಈ ಎರಡು ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಧೈರ್ಯ ತೋರುವುದಿಲ್ಲ. ನಮ್ಮ ಧರ್ಮವನ್ನು ನಾವೇ ಕೀಳಾಗಿ ಕಂಡರೆ ಇನ್ನೊಬ್ಬ ರಿಗೆ ಅಪಹಾಸ್ಯ ಮಾಡುವುದು ಕಷ್ಟವೇನಲ್ಲ. ಕೆಲ ಮಾಧ್ಯಮಗಳಲ್ಲಿ, ಸಿನಿಮಾ ಗಳಲ್ಲಿ ಹಿಂದು ಧರ್ಮವನ್ನು ಅಪಹಾಸ್ಯ ಮಾಡಿದಾಗ ನಾವದನ್ನು ಸಮ ರ್ಥಿಸಿದರೆ ಹಿಂದುತ್ವದ ರಕ್ಷಣೆ ಖಂಡಿತಾ ಸಾಧ್ಯವಿಲ್ಲ. ಇನ್ನಾದರೂ ಧರ್ಮ ವನ್ನು ನಾವೊಬ್ಬ ಹಿಂದುಗಳಾಗಿ ಗೌರವಿಸೋಣ.
ವಿನ್ಯಾಸ್ ಆರ್.ಶೆಟ್ಟಿ, ಜೆಪ್ಪು

ಆದಾಯ ತೆರಿಗೆ ನಿಗದಿ ಮಾಡಿರುವುದು ಸ್ವಾಗತಾರ್ಹ
ಈ ಬಾರಿಯ ಕೇಂದ್ರ ಮುಂಗಡ ಪತ್ರದಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ೧.೮ ಲಕ್ಷ ರೂ.ಗಳಿಂದ ಎರಡು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಆದರೆ ಈ ಮಿತಿ ಯನ್ನು ೩.೫ ಲಕ್ಷ ರೂ.ಗಳಿಗೆ ಏರಿಸಿ ದ್ದರೆ ಲಕ್ಷಾಂತರ ಉದ್ಯೋಗಿಗಳಿಗೆ ಲಾಭವಾಗುತ್ತಿತ್ತು. ಅದೇ ರೀತಿ ಎರಡು ರಿಂದ ಐದು ಲಕ್ಷ ರೂ. ಆದಾಯ ಗಳಿಸುವವರಿಗೆ ಶೇ.೧೦.೫ರಿಂದ ೧೦ ಲಕ್ಷದವರಿಗೆ ೨೦ ಹಾಗೂ ೧೦ ಲಕ್ಷ ರೂ. ಮೇಲ್ಪಟ್ಟು ಆದಾಯ ಗಳಿಸು ವವರಿಗೆ ಶೇ.೩೦ರಷ್ಟು ತೆರಿಗೆ ನಿಗದಿ ಮಾಡಿರುವುದು ಸ್ವಾಗತಾರ್ಹ.
ಕಾರ್ಪೊರೇಟ್ ಟ್ಯಾಕ್ಸ್‌ನಲ್ಲಿ ಬದಲಾವಣೆ ಮಾಡಬೇಕಿತ್ತು. ಆ ಮೂಲಕ ಬಂಡವಾಳ ಹೂಡಿಕೆಗೆ ಸ್ವಲ್ಪ ಮಟ್ಟಿನ ಪ್ರೋತ್ಸಾಹ ನೀಡಬಹುದಿತ್ತು. ಸೇವಾ ತೆರಿಗೆ ಬಗ್ಗೆ ಮುಂಗಡ ಪತ್ರದಲ್ಲಿ ಸ್ಪಷ್ಟ ಚಿತ್ರಣವಿಲ್ಲ. ಕೆಲ ಕ್ಷೇತ್ರ ಗಳನ್ನು ಸೇವಾ ತೆರಿಗೆಯಿಂದ ಸಂಪೂ ರ್ಣವಾಗಿ ಹೊರಗಿಡಲಾಗಿದೆ. ಆ ಕ್ಷೇತ್ರ ಗಳನ್ನು ಟ್ಯಾಕ್ಸ್ ನೆಟ್‌ನಲ್ಲಿ ತರಬೇಕಿತ್ತು. ಮೈಕ್ರೋ ಫೈನಾನ್ಸ್‌ಗೆ ಉತ್ತೇಜನ ನೀಡಿ ರುವುದು ಒಳ್ಳೆಯದು. ಶಿಕ್ಷಣ ಕ್ಷೇತ್ರಕ್ಕೆ ಸಾಲ ಸೌಲಭ್ಯ ನೀಡಲು ಅನುದಾನ ಮೀಸಲಿಟ್ಟಿರುವುದು ಬಡ ವಿದ್ಯಾರ್ಥಿ ಗಳ ಪಾಲಿಗೆ ವರದಾನವಾಗಲಿದೆ. ಆದರೆ ಚಿನ್ನದ ಗ್ರಾಹಕ ತೆರಿಗೆ ಶೇ ಎರಡರಿಂದ ನಾಲ್ಕಕ್ಕೆ ಏರಿಸಿರುವ ಕ್ರಮ ಖಂಡಿತಾ ಸರಿಯಲ್ಲ. ಈ ಬಗ್ಗೆ ಸರ ಕಾರ ಪರಿಶೀಲನೆ ನಡೆಸಲಿ.
ಕಿರಣ್ ಕುಮಾರ್, ಮಂಗಳೂರು

ಅದೃಷ್ಟದ ಮೆಸೇಜ್‌ಗೆ ಮರುಳಾಗದಿರಿ
ಮೊಬೈಲ್ ಮೂಲಕ ಬೇರೆ-ಬೇರೆ ಕಂಪೆನಿಗಳ ಹೆಸರಿನಲ್ಲಿ ಮೆಸೇಜ್ ಕಳುಹಿಸಿ ‘ನೀವು ಅದೃಷ್ಟ ಶಾಲಿಗಳಾಗಿದ್ದೀರಿ, ನಿಮಗೆ ಬಹುಮಾನ ಬಂದಿದೆ. ಅದರ ಬೆಲೆ ೧೦,೦೦೦ ರೂ., ನಿಮಗೆ ಅದನ್ನು ೧,೫೦೦ರೂ.ಗೆ ಕೊಡುತ್ತೇವೆ ಎನ್ನುವ ಮೆಸೇಜ್‌ಗಳನ್ನು ನಂಬಿ ಅಸಂಖ್ಯ ಜನರು ತಮ್ಮ ಹಣ ಕಳೆದು ಕೊಂಡಿದ್ದಾರೆ. ಇಲ್ಲಿ ಮೆಸೇಜ್ ಕಳುಹಿಸಿದವರ ಹೆಸರು, ವಿಳಾಸ ಲಭ್ಯವಿ ರುವುದಿಲ್ಲ. ಹೀಗಾಗಿ ಯಾರ ಮೇಲೂ ದೂರು ಕೊಡಲಾಗುವುದಿಲ್ಲ. ಹಣ ವನ್ನು ಅಕೌಂಟ್ ನಂಬರ್ ಕೊಟ್ಟು ಅದಕ್ಕೆ ಕಳುಹಿಸಿ ಎಂದಿರುತ್ತದೆ. ಪೊಲೀ ಸರು ತನಿಖೆ ನಡೆಸಿದರೂ ವಂಚಕರು ಸಿಗುವುದಿಲ್ಲ. ಕಾರ್ಕಳ, ಮೂಡಬಿದ್ರೆ, ಮಂಗಳೂರು ಪರಿಸರದಲ್ಲಿ ಅನೇಕ ಮಂದಿ ಮೆಸೇಜ್ ಮೋಸಕ್ಕೆ ಬಲಿ ಯಾಗಿದ್ದಾರೆ. ಈ ಬಗ್ಗೆ ಈಗಾಗಲೇ ಅನೇಕ ಬಾರಿ ಪತ್ರಿಕೆಗಳಲ್ಲಿ ವರದಿಯಾ ಗಿದೆ. ಪೊಲೀಸರೂ ಎಚ್ಚರಿಕೆ ನೀಡಿದ್ದಾರೆ. ಆದರೂ ಜನತೆ ಎಚ್ಚೆತ್ತುಕೊಂ ಡಿಲ್ಲ. ಜನರು ಇನ್ನಾದರೂ ಎಚ್ಚರಗೊಳ್ಳಬೇಕು. ಬಹುಮಾನದ ಹಿಂದಿನ ವಾಸ್ತವ ಸಂಗತಿ ತಿಳಿಯ ಬೇಕು.
ಸುಜಿತ್, ಕಾರ್ಕಳ

ಹಳೆಯಂಗಡಿ ಒಳರಸ್ತೆಯಲ್ಲಿ ಬಸ್, ಲಾರಿ ಸಂಚಾರ ನಿಷೇಧಿಸಿ
ಪಾವಂಜೆ ಬಳಿ ರಾ.ಹೆದ್ದಾರಿಯಿಂದ ಹಳೆಯಂಗಡಿ ಒಳರಸ್ತೆಗೆ ತಿರುವು ಪಡೆದು ಬಸ್‌ಗಳು ಸಂಚರಿಸುತ್ತವೆ. ಸುಗಮ ರಸ್ತೆ ಸಂಚಾರದ ದೃಷ್ಟಿಯಿಂದ ಒಳರಸ್ತೆಯಲ್ಲಿ ಬಸ್, ಲಾರಿ ಮುಂತಾದ ವಾಹನಗಳು ಸಂಚಾರ ನಡೆಸುವುದು ಯೋಗ್ಯವಲ್ಲ. ಯಾಕೆಂದರೆ ಇಲ್ಲಿ ಘನವಾಹನಗಳ ಸಂಚಾರಕ್ಕೆ ಸಾಕಷ್ಟು ಸ್ಥಳಾ ವಕಾಶವಿಲ್ಲ. ರಸ್ತೆಯ ಎರಡೂ ಬದಿಯಲ್ಲಿ ಅಂಗಡಿ-ಮನೆಗಳಿದ್ದು, ಬಸ್, ಲಾರಿಗಳು ಸಂಚ ರಿಸುವಾಗ ರಸ್ತೆ ಬ್ಲಾಕ್ ಆಗುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ರಿಕ್ಷಾ, ಟೆಂಪೋ, ಕಾರು ಗಳು ನಿಂತಿರುತ್ತದೆ. ಇದರಿಂದ ಒಳರಸ್ತೆ ವಾಹನ ಗಳ ಬೇಕಾಬಿಟ್ಟಿ ಓಡಾಟದಿಂದ ಅಸ್ತವ್ಯಸ್ತವಾ ಗಿರುತ್ತದೆ. ಇಲ್ಲಿ ರಸ್ತೆ ಸುರಕ್ಷತೆಗಾಗಿ ಗ್ರಾ.ಪಂ. ಅಗತ್ಯ ಕ್ರಮ ಕೈಗೊಳ್ಳಬೇಕು. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದರೆ ಬಸ್‌ಗಳು ಒಳ ರಸ್ತೆಯಾಗಿ ಸಂಚಾರ ನಡೆಸುವುದು ಕಷ್ಟಸಾಧ್ಯ. ಪ್ರಯಾಣಿಕರು ರಸ್ತೆಯನ್ನು ದಾಟಿ ಬಸ್ ಹಿಡಿ ಯುವುದೂ ಕಷ್ಟ. ಇದನ್ನು ತಪ್ಪಿಸಲು ಒಳರ ಸ್ತೆಯಲ್ಲಿ ಬಸ್ ಸಂಚಾರ ನಿಷೇಧಿಸಿ ಕ್ರಮ ಕೈಗೊ ಳ್ಳಬೇಕಾಗಿ ವಿನಂತಿ.
ಗಣೇಶ್, ಹಳೆಯಂಗಡಿ

ಮೌಲವಿಗಳೇ ನಿಮ್ಮ ವರ್ತನೆ ಸರಿಯೇ?
ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ ಎನ್ನುವ ಮಾತು ಇಂದಿನ ಕೆಲವು ಮೌಲವಿಗಳಿಗೆ ಹೊಂದಾ ಣಿಕೆಯಾಗುತ್ತದೆ. ಲೋಕಾಭಿರಾಮರಾಗಿ ಮಾತನಾಡು ವಾಗ ಪಾಪಪುಣ್ಯ, ಸ್ವರ್ಗ-ನರಕದ ಬಗ್ಗೆ ಕೊರೆಯುವ ಮೌಲವಿಗಳು ಗ್ರೂಫಿಸಂನ ವೇದಿಕೆಗೆ ಬಂದರೆ ಕುಡು ಕರಿಗಿಂತಲೂ ಕೆಟ್ಟದಾಗಿ ಮಾತನಾಡುತ್ತಾರೆ.
ಕೆಲವು ಮೌಲವಿಗಳಿಗೆ ಕಾಂತಪುರಂನ ಎ.ಪಿ. ಪ್ರವಾದಿಯಾದರೆ, ಇನ್ನು ಕೆಲವರಿಗೆ ಇ.ಕೆ.ಯೇ ಸರ್ವಸ್ವ. ಈ ಗ್ರೂಫಿಸಂಗಾಗಿ ಯಾವ ಪರದೂಷಣೆಗೂ ಈ ಮೌಲವಿಗಳು ಹಿಂಜರಿಯುವುದಿಲ್ಲ. ಪರದೂಷಣೆ ನರ ಮಾಂಸ ತಿನ್ನುವುದಕ್ಕೆ ಸಮಾನ ಎನ್ನುವ ಪ್ರವಾದಿ ವಚನ ಇಂತಹ ನೀಚರಿಗೆ ಅನ್ವಯಯವಾಗುವುದಿಲ್ಲವೇ?
ವೇದಿಕೆಯಲ್ಲಿ ಒಬ್ಬ ಮೌಲವಿ ಗ್ರೂಫಿಸಂನ ಹೆಸರಿ ನಲ್ಲಿ ಮತ್ತೊಬ್ಬ ಮೌಲವಿಯನ್ನೇ ಕೀಳಾಗಿ ಬೈದರೆ ಯಾರು ಮೌಲವಿಗಳನ್ನು ಗೌರವಿಸಿಯಾರು?
ತಮ್ಮ ಮಸೀದಿಯ ವ್ಯಾಪ್ತಿಯಲ್ಲಿ ಮದುವೆಯಾಗದೆ ಉಳಿದ ಹೆಣ್ಮಕ್ಕಳ ಬಗ್ಗೆಯಾಗಲೀ ಮನೆಯಿಲ್ಲದವರ ಕುರಿ ತಾಗಲೀ, ತುತ್ತು ಅನ್ನಕ್ಕೆ ಗತಿ ಇಲ್ಲದೆ ಉಪವಾಸವಿರುವ ವರ ಬಗ್ಗೆಯಾಗಲೀ ಒಂದು ಮಾತು ಆಡಲು ಪುರು ಸೊತ್ತು ಇಲ್ಲದ ಮೌಲವಿಗಳು ಗ್ರೂಫಿಸಂಗಾಗಿ ಹಗಲಿ ರಳು ಕಷ್ಟಪಡುತ್ತಾರೆ. ದಿನದಲ್ಲಿ ಬರೇ ಎರಡು ಗಂಟೆ ಕೆಲಸ ಮಾಡಿ ಮೂರು ಹೊತ್ತು ಬೇರೆ-ಬೇರೆ ಮನೆಯ ಮೃಷ್ಟಾನ್ನ ಭೋಜನ ಸವಿಯುವ ಮೌಲವಿಗಳೇ ಗ್ರೂಫಿಸಂ ಹೆಸರಿನಲ್ಲಿ ಸಮಾಜವನ್ನು ಧರ್ಮವನ್ನು ಒಡೆಯದೆ ಅಲ್ಲಾಹು ಮತ್ತು ಮರಣಕ್ಕೆ ಭಯಪಟ್ಟು ಜೀವಿಸಿ, ಆಗ ನಿಮಗೆ ಮುಸ್ಲಿಮರು ನೀಡಿದ ಸಂಬಳ ಮತ್ತು ಊಟದ ಹಿಂದಿನ ಶ್ರಮ ಸಾರ್ಥಕವಾಗಬಹುದು.
ಯಾಕೂಬ್, ಮಂಗಿಲಪದವು

ಭಾರತದ ಮೇಲೂ ಅಮೆರಿಕದ ಕಾಕದೃಷ್ಟಿ
ಅಮೆರಿಕ ಜಗತ್ತಿನ ಇತರ ದೇಶಗಳಿಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಆರಕ್ಷಕನಂತೆ ವರ್ತಿಸುತ್ತಾ ಬಂದಿದೆ. ಅಣ್ವಸ್ತ್ರ ಶಕ್ತಿ ಸಂಪನ್ನ ದೇಶವಾಗಿರುವ ತಾನು ಮಾತ್ರ ಶ್ರೀಮಂತಿಕೆಯನ್ನು, ಸವಲತ್ತುಗಳನ್ನು, ಸರ್ವ ರೀತಿಯ ಶ್ರೇಷ್ಠತೆಯನ್ನು ಹೊಂದಿರಬೇಕೆಂಬ ಸ್ವಾರ್ಥಭಾವನೆ ಈ ದೊಡ್ಡಣ್ಣನದು. ಜಾಗತಿಕ ತೈಲಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಈಗ ಬರಾಕ್ ಒಬಾಮರ ಕಾಕದೃಷ್ಟಿ ಭಾರತ, ಚೀನಾ, ಬ್ರೆಝಿಲ್‌ನಂತಹ ದೇಶಗಳ ಮೇಲೆ ಬಿದ್ದಿದೆ. ಈ ದೇಶಗಳ ಜನರು ಹೆಚ್ಚು-ಹೆಚ್ಚು ವಾಹನಗಳನ್ನು ಖರೀದಿಸುತ್ತಿರುವುದರಿಂದ ಅವರ ಜೀವನಮಟ್ಟ ಏರುತ್ತಿರುವುದರಿಂದ ಕಳವಳಗೊಂಡಿರುವ ಒಬಾಮಾ ಅಸಹನೆ ಪ್ರದರ್ಶಿಸುತ್ತಿದ್ದಾರೆ. ತಲೆಗೊಂದು ಕಾರ್ ಹೊಂದಿರುವ ಅಮೆರಿಕನ್ನರ ಇಂಧನ ಬೇಡಿಕೆ ಪೂರೈಸಲು ಅದು ಮುಂದಿನ ಕೆಲವೇ ಸಮಯದಲ್ಲಿ ಇರಾನ್ ಮೇಲೂ ಯುದ್ಧ ಸಾರಲೂ ಸಿದ್ಧವಾಗಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳ ಬೇಕಿದೆ. ಸೌದಿ ರಾಷ್ಟ್ರಗಳು ತೈಲ ನಿಕ್ಷೇಪ ಹೊಂದಿದ್ದರೂ ಇದರ ಮೇಲೆ ಪ್ರಭುತ್ವ ಹೊಂದಿರುವುದು ಮಾತ್ರ ಅಮೆರಿಕಾ ಎನ್ನುವುದು ದುರದೃಷ್ಟಕರ ವಿಚಾರ.
ರಾಜೇಶ್ ಕುಮಾರ್, ಸುಳ್ಯ

17-05-2012

Posted by JAYAKIRANA Kirana on | 0 comments | Leave a comment...

ಮೇಷ : ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ವೃಷಭ : ರಕ್ತದ ಒತ್ತಡ ಜಾಸ್ತಿಯಾಗುತ್ತದೆ.
ಮಿಥುನ : ಮನೆ ನಿರ್ಮಾಣದ ಕೆಲಸವು ಪ್ರಗತಿಯಲ್ಲಿರುತ್ತದೆ.
ಕರ್ಕಾಟಕ : ಮಕ್ಕಳಿಂದ ಸಂತೋಷವನ್ನು ಅನುಭವಿಸುತ್ತೀರಿ.
ಸಿಂಹ : ಗಣ್ಯ ವ್ಯಕ್ತಿಗಳ ಸಹಾಯ ದೊರೆಯಲಿದೆ.
ಕನ್ಯಾ : ಆರೋಗ್ಯದ ಸಮಸ್ಯೆ ಎದುರಾಗುತ್ತದೆ.
ತುಲಾ : ವ್ಯಾಪಾರ ವ್ಯವಹಾರದಲ್ಲಿ ಲಾಭ ಇರುತ್ತದೆ.
ವೃಶ್ಚಿಕ : ಕೆಲಸಗಳು ಸರಿಯಾಗಿ ನಡೆಯುತ್ತದೆ.
ಧನು : ಸಂಘ ಸಂಸ್ಥೆಯಿಂದ ಸನ್ಮಾನ ದೊರೆಯುತ್ತದೆ.
ಮಕರ : ಹಿರಿಯ ಬಂಧುಗಳಿಂದ ಒತ್ತಡ ಇರುತ್ತದೆ.
ಕುಂಭ : ಪತಿಪತ್ನಿಯರಲ್ಲಿ ಕಲಹ ಇರುತ್ತದೆ.
ಮೀನ : ಶುಭ ಕೆಲಸಗಳಿಗೆ ಹಣ ಖರ್ಚಾಗುತ್ತದೆ.

17-05-2012

Posted by JAYAKIRANA Kirana on | 0 comments | Leave a comment...

ಸುರತ್ಕಲ್ : ಸೇಲ್ಸ್ ಗರ್ಲ್ಸ್, ಬಾಯ್ಸ್ ಬೇಕು ೯೮೪೪೪೬೪೩೭೭.
ಉಡುಪಿ : ಸ್ಟುಡಿಯೋಗೆ ಯುವತಿ ಬೇಕು ೯೮೪೫೮೬೩೦೯೪.
ಎನ್‌ಐಟಿಕೆ : ಕಾಫಿ ಸ್ಟಾಲ್‌ಗೆ ಎಕೌಂಟ್ ಮತ್ತು ಸೇಲ್ಸ್‌ಗೆ ಯುವತಿ ಬೇಕು ೯೭೩೮೯೩೨೭೩೧.
ಉಡುಪಿ : ಲಾಂಡ್ರಿಗೆ ಜನ ಬೇಕು ೯೯೬೪೧೪೧೧೨೨.
ಮಂಗಳೂರು : ಫಾಸ್ಟ್‌ಫುಡ್ ಹೊಟೇಲಿಗೆ ವೇಟರ್ ಬೇಕು ೯೨೪೩೩೦೫೨೩೫.
ಫಳ್ನೀರ್ : ಕ್ಲಿನಿಕ್‌ಗೆ ಲೇಡಿ ರಿಸೆಪ್ಶೆನ್ ಬೇಕು ೯೬೮೬೭೦೯೪೮೦.
ಕುಳಾಯಿ : ಹೊಸಬೆಟ್ಟು ಟಿವಿಎಸ್ ಶೋ ರೂಂಗೆ ಹೆಲ್ಪರ್ ಮತ್ತು ಮೆಕಾನಿಕ್ ಬೇಕು ೯೯೪೫೬೧೯೧೧೦
ಮಂಗಳೂರು: ಹೊಟೇಲಿಗೆ ವೇಟರ್ ಬೇಕು ೯೮೮೬೦೯೨೭೨೬,
ತೊಕ್ಕೊಟ್ಟು : ಲೇಡಿಸ್ ಟೈಲರ್ ಬೇಕು ೯೦೬೦೧೪೪೫೫೦.
ಮಂಗಳೂರು : ಜ್ಯೂಸ್ ಅಂಗಡಿಗೆ ಹೆಲ್ಪರ್, ಕ್ಲೀನರ‍್ಸ್ ಬೇಕು ೯೨೪೩೩೦೨೪೪೬.
ತೊಕ್ಕೊಟ್ಟು ಅಸುಪಾಸಿನವರು ಬ್ಯೂಟಿ ಪಾರ್ಲರ್‌ಗೆ ಬೇಕಾಗಿದ್ದಾರೆ. ೯೮೮೦೩೭೮೮೦೬
ಮಂಗಳೂರು : ಮನೆಯಲ್ಲಿ ಉಳಿದು ಕೆಲಸ ಮಾಡಲು ಹೆಂಗಸು ಬೇಕು ೯೭೪೦೯೩೭೭೩೮.
ಮಂಗಳೂರು : ಡಿಟಿಪಿಗೆ ಅನುಭವಿ ಬೇಕು. ೯೪೪೮೨೫೪೯೭೬.
ತೊಕ್ಕೊಟ್ಟು : ಪಂಪು, ಮಿಕ್ಸಿ ರಿಪೇರಿ ಮಾಡುವ ಜನ ಬೇಕು ೯೮೪೫೬೧೭೧೫೨.
ಬಜಪೆ : ಜ್ಯೂಸ್ ಸೆಂಟರ್, ಬೇಕರಿಗೆ ಸೇಲ್ಸ್‌ಗೆ ಜನ ಬೇಕು ೮೨೭೭೦೫೧೫೪೩.
ಮಂಗಳೂರು : ಲೇಡಿ ಸ್ಟಾಫ್ ಬೇಕು ೨೪೯೭೮೬೨.
ಕಟೀಲು : ಮನೆಕೆಲಸಕ್ಕೆ ಜನ ಬೇಕು ೮೭೪೮೦೩೨೬೦೯.
ಎಂ.ಜಿ.ರಸ್ತೆ: ಕೆಲಸಕ್ಕೆ ಪಿಯುಸಿ ಆದವರು ಬೇಕು ೯೭೪೩೩೯೦೭೯೭.
ಬಜಪೆ : ಪ್ಲೈವುಡ್ ಶಾಪಿಗೆ ಸೇಲ್ಸ್‌ಗೆ ಜನ ಬೇಕು ೯೯೦೦೫೨೦೮೦೮.
ಬಜಪೆ : ಎಲೆಕ್ಟ್ರಿಶಿಯನ್ ಮತ್ತು ಹೆಲ್ಪರ್ ಬೇಕು ೯೩೪೧೦೨೬೯೩೯.
ಮಂಗಳೂರು : ಕೆಲಸಕ್ಕೆ ಜನ ಬೇಕು ೯೪೪೯೭೨೩೧೩೩.
ಪಂಪ್‌ವೆಲ್: ಮನೆಕೆಲಸಕ್ಕೆ ಮಹಿಳೆ ಬೇಕು ೯೯೪೫೭೦೪೦೪೨.
ಕುಂಟಿಕಾನ : ಹೋಂ ಪ್ರೋಡಕ್ಟ್‌ಗೆ ಜನ ಬೇಕು ೯೪೮೦೧೧೭೮೫೪.
ಮಂಗಳೂರು : ಸ್ಟೇಷನರಿ ಶಾಪ್‌ಗೆ ಪಾರ್ಟ್ ಟೈಮ್ ಸೇಲ್ಸ್‌ಮೆನ್ ಬೇಕು ೯೮೮೦೦೬೧೬೫೦.
ಮಂಗಳೂರು : ಆಫೀಸೊಂದಕ್ಕೆ ಮಾರ್ಕೆ ಟಿಂಗ್ ಎಕ್ಸಿಕ್ಯೂಟಿವ್ ಬೇಕು ೯೯೪೫೬೬೯೧೨೮.
ಮಂಗಳೂರು : ಸೇಲ್ಸ್ ಎಕ್ಸಿಕ್ಯೂಟಿವ್ ಬೇಕು ೭೭೬೦೪೭೧೦೬೪.
ಮುಡಿಪು ಬಳಿ ಸಸ್ಯಾಹಾರಿ ಹೊಟೇಲಿಗೆ ವೇಟರ್, ಕ್ಲೀನರ್ ಬೇಕು ೦೯೪೪೬೧೬೯೮೮೪.
ಹೊಟೇಲ್‌ಗೆ ಎಲ್ಲಾ ತರದ ಅಡುಗೆಯ ವರು ಬೇಕಾಗಿದ್ದಾರೆ. ೯೯೦೧೯೫೦೧೦೯

ಕಾಡ್ಗಿಚ್ಚಿಗೆ ಬುಡಕಟ್ಟು ಜನಾಂಗ ಎಂದಿಗೂ ಕಾರಣವಲ್ಲ

Posted by JAYAKIRANA Kirana on | 0 comments | Leave a comment...


ಅರಣ್ಯದ ಸ್ಥಳೀಯ ಬುಡಕಟ್ಟು ನಿವಾಸಿಗಳಿಗೆ ಕೃಷಿ ವಿಸ್ತಾರ ಹೊಂದಿರಲು ಜಮೀನುಗಳೇ ಇರುವುದಿಲ್ಲ. ಅರಣ್ಯಕ್ಕೆ ಬೆಂಕಿ ಬಿದ್ದಾಗ ವಾಸದ ಮನೆ ಯನ್ನು ಅನಿವಾರ್ಯವಾಗಿ ಸಂರಕ್ಷಣೆ ಮಾಡಿಕೊಳ್ಳುವುದು ಮಾತ್ರ ಸಾಧ್ಯ ವಾಗುತ್ತದೆ. ಈ ಅನಿರೀಕ್ಷಿತ ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಾಮಾಣಿಕ ಕರ್ತವ್ಯ ಮಾಡದೆ ಬೆಂಕಿಯಿಂದಾದ ಅರಣ್ಯ ನಾಶಕ್ಕೆ ಸ್ಥಳೀಯ ಬುಡಕಟ್ಟು ಜನರೇ ಹೇಗೆ ಕಾರಣವಾಗಿದ್ದಾರೆಂದು ಅರಣ್ಯ ಇಲಾಖೆ ಪುರಾವೆ ಸಹಿತ ಸ್ಪಷ್ಟಪಡಿಸಲಿ. ಅರಣ್ಯ ಇಲಾಖೆ ಸಿಬ್ಬಂದಿಯ ಕರ್ತವ್ಯ ಲೋಪದಿಂದಾಗಿ ಆಗಿರುವ ಅನಾಹುತವನ್ನು ಮರೆಮಾಚಲು ಬುಡಕಟ್ಟು ಜನರ ಮೇಲೆ ನಿರಾಧಾರ ಆರೋಪಗಳನ್ನು ಹೊರಿಸುತ್ತಿದೆ. ರಾಜ್ಯದ ಕೆಲವು ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಸಹಕಾರ ಪಡೆಯುತ್ತಿಲ್ಲ. ಅರಣ್ಯ ಗ್ರಾಮ ಸಮುದಾಯಗಳು ನೆಪಮಾತ್ರಕ್ಕೆ ಮಾಡಿಕೊಂಡಿರುತ್ತವೆ.

ರಾಜ್ಯ ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆ
ದಿನಾಂಕ ೩-೫-೨೦೧೨ರ ಪತ್ರಿಕೆಯೊಂದರಲ್ಲಿ ಬಂದ ಇಲಾಖೆಯ ವರದಿ ಖಂಡನೀಯ. ಈ ವರ್ಷದ ಪೆಬ್ರವರಿ ತಿಂಗಳಲ್ಲಿ ಬನ್ನೇರುಘಟ್ಟ ಅರಣ್ಯ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದಲ್ಲಿ ಬೆಂಕಿ ಯಿಂದ ಅಮೂಲ್ಯ ಅರಣ್ಯವನ್ನು ಕಳೆದುಕೊಂಡಿರುವುದಕ್ಕೆ ‘ಸ್ಥಳೀಯ ಬುಡಕಟ್ಟು ಜನರೇ ಕಾರಣ ಎಂಬ ಹೇಳಿಕೆ ನೀಡಿರುವ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಆರೋಪ ನಿರಾಧಾರ ಹಾಗೂ ಬುಡ ಕಟ್ಟು ಜನರನ್ನು ಕೆರಳಿಸುವ ಉದ್ದೇಶದಿಂದ ಮಾಡಿರುತ್ತಾರೆ.
 ಈ ಹೇಳಿಕೆಗೆ ನಿರ್ದಿಷ್ಟ ಪುರಾವೆ ಇಲ್ಲದೆ ಅರಣ್ಯ ಇಲಾಖೆಯ ವರದಿಯಾಧರಿಸಿ ಬುಡಕಟ್ಟು ಜನರನ್ನು ಕಾನೂನು ರೀತಿಯ ಆರೋಪ ಗಳಡಿ ಬಂಧಿಸಲು ಬಿ.ಕೆ.ಸಿಂಗ್‌ರವರು ಉದ್ದೇಶವಿರಿಸಿಕೊಂಡು ಕ್ಷುಲ್ಲಕ ಕಾರಣಗಳಿಂದ ದ್ವೇಷವನ್ನು ಸಾಧಿಸಿಕೊಂಡಿರುವುದು ಸಮಂಜಸವಲ್ಲ.
ರಾಜ್ಯದ ಉನ್ನತ ಮಟ್ಟದ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅರಣ್ಯ ಇಲಾಖೆಯ ವರದಿಯನ್ನು ಸೂಕ್ತವಾಗಿ ಪರಿಶೀಲಿಸದೆ ಪತ್ರಿಕೆಗಳ ಮೂಲಕ ನೀಡುವ ಹೇಳಿಕೆ ಬುಡಕಟ್ಟು ಜನರನ್ನು ಕೆರಳಿಸುವಂತಿದ್ದು. ಈ ಬಗ್ಗೆ ರಾಜ್ಯ ಅರಣ್ಯ ವರಿಷ್ಠಾಧಿಕಾರಿ ವಿರುದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗುವುದು.
ಬುಡಕಟ್ಟು ಜನರು ಸಾವಿರಾರು ಶತಮಾನಗಳ ಹಿಂದೆಯೇ ಬ್ರಿಟಿಷ್ ಆಡಳಿತಾವಧಿಯಲ್ಲಿ ಅರಣ್ಯ ಕಾಯ್ದೆ ಜಾರಿಯಲ್ಲಿದ್ದರೂ ಬುಡಕಟ್ಟು ಜನರ ಅರಣ್ಯ ವಾಸ ಹಾಗೂ ಅರಣ್ಯ ಕಿರು ಸಂಪನ್ಮೂಲ ಪಡೆದುಕೊಳ್ಳಲು ಯಾವುದೇ ಕಿರುಕುಳ ನೀಡಿರುವುದಿಲ್ಲ. ಮತ್ತು ಅರಣ್ಯದ ಮರಗಳ ಸಂರಕ್ಷಣೆ ಮಾಡುವ ಬುಡಕಟ್ಟು ಜನರು ಅರಣ್ಯ ಭಾಗದಲ್ಲಿ ವಾಸ ಮಾಡಿಕೊಂಡಿರುವುದಕ್ಕೆ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ಈ ಉದ್ದೇಶ ದಿಂದಲೇ ಬ್ರಿಟಿಷರು ಅರಣ್ಯ ಕಾಯ್ದೆಯಲ್ಲಿ ಬುಡಕಟ್ಟು ಜನರ ಅರಣ್ಯ ಸಂಪನ್ಮೂಲಗಳ ಮೇಲೆ ವಿಶೇಷ ಅಧಿಕಾರದ ಮೂಲಕ ಬುಡಕಟ್ಟು ಜನರಿಗೆ ಕಿರುಕುಳವಾಗುವಂತಹ ಅರಣ್ಯ ಕಾಯ್ದೆಯನ್ನು ಜಾರಿಗೆ ತಂದಿರ ಲಿಲ್ಲ.
ಮಾನ್ಯ ಮಾಜಿ ಪ್ರಧಾನಿಗಳಾಗಿದ್ದ ಐ.ಕೆ ಗುಜ್ರಾಲ್ ನೇತೃತ್ವದ ಕೇಂದ್ರ ಸರ್ಕಾರ ದಿಲೀಪ್ ಸಿಂಗ್ ಭೂರಿಯ ವರದಿ ಆಧರಿಸಿ ೧೧ನೇ ಸಂಸತ್ ಅಧಿವೇಶನದಲ್ಲಿ ಆದಿವಾಸಿ ಪಂಚಾಯತ್ ರಾಜ್ ಕಾಯ್ದೆ-೯೬ ಅಂಗೀ ಕರಿಸಿದೆ. ಈ ಕಾಯ್ದೆಯಲ್ಲಿ ಬುಡಕಟ್ಟು ಜನರ ನೆಲ-ಜಲ ಹಾಗೂ ಅರಣ್ಯಗಳ ಹಕ್ಕನ್ನು ಸಂವಿಧಾನ ರೀತಿ ಬಳಸಿಕೊಳ್ಳಲು ಸ್ವಾಯತ್ತೆ ನೀಡಿರು ತ್ತದೆ. ಸ್ವಾತಂತ್ರ ಪೂರ್ವದಲ್ಲಿಯೇ ಬುಡಕಟ್ಟು ಜನರು ಅರಣ್ಯವನ್ನು ಸಂರಕ್ಷಣೆ ಮಾಡಿಕೊಂಡು ಅವುಗಳಿಂದ ದೊರೆಯುವ(ಅರಣ್ಯ ಪ್ರೋಡೆಕ್ಡ್) ಸಂಪನ್ಮೂಲ ಪಡೆಯುತ್ತಿದ್ದ ಬುಡಕಟ್ಟು ಜನರು ಅರಣ್ಯ ಹಕ್ಕುಗಳನ್ನು ನಿಯಂತ್ರಿಸಿಕೊಳ್ಳಲು ಅರಣ್ಯಕ್ಕೆ ಬೆಂಕಿ ಹಚ್ಚಿ ‘ಅರಣ್ಯ ನಾಶಕ್ಕೆ ಬುಡಕಟ್ಟು ಜನರು ಕಾರಣರಾಗಿದ್ದಾರೆ ಎನ್ನುವ ಆರೋಪಗಳನ್ನು ಮಾಡು ತ್ತಿರುವ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೇಳಿಕೆಗೆ ಯಾವುದೇ ಹುರುಳಿಲ್ಲ. ಬುಡಕಟ್ಟು ಜನರನ್ನು ಅರಣ್ಯ ಪ್ರದೇಶದಿಂದ ಎತ್ತಂಗಡಿ ಮಾಡುವ ಉದ್ದೇಶ ಹಾಗೂ ದ್ವೇಷ ಭಾವನೆ ಹೊಂದಿರುವ ಅರಣ್ಯ ಮಾಫಿಯಾಗಳ ಒತ್ತಡದಿಂದ ಬುಡಕಟ್ಟು ಜನರ ಮೇಲೆ ರಾಜ್ಯದ ಎಲ್ಲಾ ಕಡೆಗಳಲ್ಲಿ ಅರಣ್ಯ ಪ್ರದೇಶಗಳ ಮೇಲೆ ಅರಣ್ಯ ಮಾಫಿಯಾಗಳು ಕಾನೂನು ಬಾಹಿರವಾದ ಚಟುವಟಿಕೆಗಳನ್ನು ನಡೆಸಿಕೊಳ್ಳಲು ಇಲಾಖೆಯ ಕುಮ್ಮಕ್ಕು ಗಳು ನಡೆಯುತ್ತವೆ.
ಇಂತಹ ಸಂದರ್ಭಗಳಲ್ಲಿ ಅರಣ್ಯವಾಸಿ ಬುಡಕಟ್ಟು ಜನರು ಅರಣ್ಯ ಇಲಾಖೆಗೆ ಅಡ್ಡ ಗೋಡೆಯಾಗಿರುವುದರಿಂದ ವಿವಿಧ ರೀತಿಯಲ್ಲಿ ಆರೋಪ ಗಳನ್ನು ಮಾಡಿ ಇವರ ಮೇಲೆ ದೌರ್ಜನ್ಯ ಹಾಗೂ ಆರೋಪಗಳಡಿ ಬಂಧಿಸಿ ಕಾನೂನು ರೀತಿಯ ಕ್ರಮ ಜರುಗಿಸಲು ಅರಣ್ಯ ಇಲಾಖೆಯ ಒಂದು ವ್ಯವ ಸ್ಥಿತ ತಂತ್ರಗಳು ಕರಾವಳಿ ಪ್ರದೇಶದ ಬುಡಕಟ್ಟು ಜನರ ಮೇಲೆ ನಡೆದಿರು ವುದು ಸಾಬೀತಾಗಿದೆ.
ಪದೆಪದೆ ಅರಣ್ಯ ಇಲಾಖೆ ಬುಡಕಟ್ಟು ಜನರನ್ನು ಕೆರಳಿಸುವುದರಿಂದ ಅರಣ್ಯ ಸಂರಕ್ಷಣೆಯಲ್ಲಿ ಅದೆಷ್ಟೋ ಬುಡಕಟ್ಟು ಜನರು ಅರಣ್ಯ ಇಲಾಖೆ ಯಲ್ಲಿಯೇ ಸೇವೆ ಸಲ್ಲಿಸಿದ ಪ್ರತಿಫಲವಾಗಿ ರಾಜ್ಯ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ಮಾಡಿರುವ ಆರೋಪಗಳಿಂದ ವಿಷಾದವಾಗುತ್ತಿದೆ.
ಅರಣ್ಯದ ಸ್ಥಳೀಯ ಬುಡಕಟ್ಟು ನಿವಾಸಿಗಳಿಗೆ ಕೃಷಿ ವಿಸ್ತಾರ ಹೊಂದಿ ರಲು ಜಮೀನುಗಳೇ ಇರುವುದಿಲ್ಲ. ಅರಣ್ಯಕ್ಕೆ ಬೆಂಕಿ ಬಿದ್ದಾಗ ವಾಸದ ಮನೆ ಯನ್ನು ಅನಿವಾರ್ಯವಾಗಿ ಸಂರಕ್ಷಣೆ ಮಾಡಿಕೊಳ್ಳುವುದು ಮಾತ್ರ ಸಾಧ್ಯ ವಾಗುತ್ತದೆ. ಈ ಅನಿರೀಕ್ಷಿತ ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಾಮಾಣಿಕ ಕರ್ತವ್ಯ ಮಾಡದೆ ಬೆಂಕಿಯಿಂದಾದ ಅರಣ್ಯ ನಾಶಕ್ಕೆ ಸ್ಥಳೀಯ ಬುಡಕಟ್ಟು ಜನರೇ ಹೇಗೆ ಕಾರಣವಾಗಿದ್ದಾರೆಂದು ಅರಣ್ಯ ಇಲಾಖೆ ಪುರಾವೆ ಸಹಿತ ಸ್ಪಷ್ಟಪಡಿಸಲಿ.
ಅರಣ್ಯ ಇಲಾಖೆ ಸಿಬ್ಬಂದಿಯ ಕರ್ತವ್ಯ ಲೋಪದಿಂದಾಗಿ ಆಗಿರುವ ಅನಾಹುತವನ್ನು ಮರೆಮಾಚಲು ಬುಡಕಟ್ಟು ಜನರ ಮೇಲೆ ನಿರಾಧಾರ ಆರೋಪಗಳನ್ನು ಹೊರಿಸುತ್ತಿದೆ. ರಾಜ್ಯದ ಕೆಲವು ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಸಹಕಾರ ಪಡೆಯುತ್ತಿಲ್ಲ. ಅರಣ್ಯ ಗ್ರಾಮ ಸಮು ದಾಯಗಳು ನೆಪಮಾತ್ರಕ್ಕೆ ಮಾಡಿಕೊಂಡಿರುತ್ತವೆ.
ಅರಣ್ಯದ ಬಗ್ಗೆ ಮಾಹಿತಿ ಹೊಂದಿರುವ ಜನರುಗಳಿಲ್ಲದೆ ರಾಜಕೀ ಯವಾದ ಕೆಲವು ವ್ಯಕ್ತಿಗಳಾಗಿರುತ್ತಾರೆ ಹಾಗೂ ಅರಣ್ಯ ಇಲಾಖೆ (ವಲಯ ಮಟ್ಟದಲ್ಲಿ) ಗ್ರಾಮಸ್ಥರಲ್ಲಿ ದೌರ್ಜನ್ಯ ರೀತಿಯಲ್ಲಿ ನಡೆದುಕೊಳ್ಳುತ್ತಿರುವು ದರಿಂದ ಕೆಲವು ಸಂದರ್ಭಗಳು ಅನಿರೀಕ್ಷಿತ ಬೆಂಕಿಯಿಂದಾಗಿ ಅರಣ್ಯ ನಾಶವಾದವು. ಸಹಕಾರ ನೀಡುವ ಮನೋಭಾವನೆ ಹೊಂದಿರಲು ಇದೊಂದು ಮುಖ್ಯ ಕಾರಣವಾಗಿರುತ್ತದೆ.
ಅರಣ್ಯ ಪ್ರದೇಶಗಳಲ್ಲಿ ಇತರೆ ಸಮುದಾಯಗಳು ವಾಸವಾಗಿರುತ್ತವೆ. ಎಲ್ಲರ ಸಹಕಾರ ಬಯಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಬೇಕೆ ಹೊರತು ಸರ್ವಾಧಿಕಾರಿ ಧೋರಣೆ ಮಾಡುವುದರಿಂದ ಅರಣ್ಯ ಸಂರ ಕ್ಷಣೆ ಮಾಡಲು ಸಾಧ್ಯವಿಲ್ಲದ ವಿಚಾರ.
ಕರ್ನಾಟಕ ರಾಜ್ಯ ಅರಣ್ಯ ಆಕ್ಟ್(೧೯೦೨)ಜಾರಿಗೆ ಬರುವ ಪೂರ್ವ ದಲ್ಲಿ ಅರಣ್ಯ ವಾಸಿ ಬುಡಕಟ್ಟುಗಳು ಅವುಗಳ ರಕ್ಷಣೆ ಮಾಡಿಕೊಂಡು ಬಂದಿರುತ್ತಾರೆ. ಈ ಉದ್ದೇಶದಿಂದಲೇ ಬ್ರಿಟಿಷ್ ಅರಣ್ಯ ಕಾಯ್ದೆಯಲ್ಲಿ ಈ ಸಮುದಾಯಗಳಿಗೆ ಅರಣ್ಯ ವ್ಯಾಪ್ತಿಯ ಒಳಗೆ ಸಾಕಷ್ಟು ಜಮೀನು ನೀಡ ಲಾಗಿತ್ತು. ಡಿ.ಸಿ ಮನ್ನಾ ಜಮೀನುಗಳು ಈಗಲೂ ಜಾರಿಯಲ್ಲಿದ್ದರೂ ಇತ್ತೀಚಿನ ಅರಣ್ಯೀಕರಣದಿಂದಾಗಿ ದುರ್ಬಲ ಸಮುದಾಯಗಳ ಜಮೀನು ಗಳನ್ನು ಅರಣ್ಯ ಭೂಮಿಯಾಗಿ ಪರಿವರ್ತಿಸಿ ಕೊಂಡಿದೆ. ಇನ್ನುಳಿದ ಅರಣ್ಯ ಭಾಗದ ಜಮೀನು ಬಂಡವಾಳಶಾಹಿ ಹಾಗೂ ಕೈಗಾರಿಕಾ ಉದ್ದೇಶಗ ಳನ್ನು ಮಾಡಿಕೊಳ್ಳಲು ಅರಣ್ಯ ಇಲಾಖೆ ನೀಡುವುದರಿಂದ ಅರಣ್ಯ ವಿನಾ ಶದತ್ತ ಸಾಗಿದೆ. ಅಕ್ರಮ ಗಣಿಗಾರಿಕೆ ಕಾನೂನು ಬಾಹಿರವಾಗಿದೆ.
ಅರಣ್ಯ ಒತ್ತುವರಿ, ಅಕ್ರಮ ಗಾಂಜಾ ಬೆಳೆಯುವಿಕೆಗಳಿಂದ ಅರಣ್ಯ ನಾಶ ಆಗುತ್ತಿರುವುದಕ್ಕೆ ಬುಡಕಟ್ಟು ಜನರು ಕಾರಣರಾಗುತ್ತಿದ್ದಾರೆಯೇ ಎಂದು ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಯವರು ಉತ್ತರಿಸಲು ಶಕ್ತರೆ ಎಂಬುವುದನ್ನು ಸ್ಪಷ್ಟಪಡಿಸಲು ಅರಣ್ಯ ಸಂಪನ್ಮೂಲದ ಲಾಭವನ್ನು ಅರಣ್ಯ ಇಲಾಖೆ ಪಡೆಯುತ್ತಿದೆ. ಈ ಉದ್ದೇಶದಿಂದಲೇ ರಾಜ್ಯದಲ್ಲಿ ಲ್ಯಾಂಪ್ಸ್ ಸೊಸೈಟಿಗಳ ಮೂಲಕ ಅರಣ್ಯ ಕಿರು ಸಂಪನ್ಮೂಲದ ಲಾಭವನ್ನು ಅರಣ್ಯ ಇಲಾಖೆ ಪಡೆಯುತ್ತಿದೆ. ಈ ಉದ್ದೇಶದಿಂದಲೇ ರಾಜ್ಯದಲ್ಲಿ ಲ್ಯಾಂಪ್ಸ್ ಸೊಸೈಟಿಗಳ ಮೂಲಕ ಅರಣ್ಯ ಕಿರು ಸಂಪನ್ಮೂಲದ ಮುಕ್ಕಾಲು ಭಾಗ ಅರಣ್ಯ ಇಲಾಖೆಯ ಅಧಿಕಾರ ಹೊಂದಿಸಿಕೊಳ್ಳುತ್ತಿದೆ. ಲ್ಯಾಂಪ್ಸ್ ಸೊಸೈಟಿಗ ಳಲ್ಲಿ ಗಿರಿಜನರು ನಾಮಕಾವಸ್ಥೆಯಲ್ಲಿರುತ್ತಾರೆ. ಅರಣ್ಯ ಇಲಾಖೆ ಲ್ಯಾಂಪ್ಸ್ ಗಳನ್ನು ಕಪಿಮುಷ್ಠಿಯಲ್ಲಿ ಇರಿಸಿಕೊಂಡು ಗಿರಿಜನರ ಉಪಯೋಜನೆಯಡಿ ಅರಣ್ಯ ಅಭಿವೃದ್ದಿಗಾಗಿ ಕೊಟ್ಯಂತರ ರುಪಾಯಿಗಳ ದುರುಪಯೋಗ ಮಾಡುತ್ತಿದೆ. ಇಂತಹ ಲ್ಯಾಂಪ್ಸ್‌ಗಳ ಮೂಲಕ ಬುಡಕಟ್ಟು ಜನರು ಯಾವು ದನ್ನೂ ನಿರೀಕ್ಷಿಸುತ್ತಿಲ್ಲ.
ಬುಡಕಟ್ಟು ಜನರು ದೇಶದ ಯಾವುದೇ ಪ್ರದೇಶಗಳಲ್ಲಿ ಸಂವಿಧಾನ ಬದ್ದವಾಗಿ ಸಾಮಾಜಿಕವಾದ ಬದುಕು ನಿರ್ವಹಿಸಿಕೊಳ್ಳಲು ಮತ್ತು ಅರಣ್ಯ ಇಲಾಖೆಯ ವಿರುದ್ದವೇ ಬಳಸಿಕೊಳ್ಳಬಹುದಾದ ಸಂವಿಧಾನ ರೀತಿಯ ಕಾನೂನುಗಳು ಪ್ರಜಾಪ್ರಭುತ್ವ ಭಾರತದಲ್ಲಿ ಹೊಂದಿರುತ್ತದೆ. ಬುಡಕಟ್ಟು ಜನರ ಮೇಲೆ ನಿರಂತರ ಆರೋಪಗಳನ್ನು ಮಾಡುತ್ತಿರುವ ಅರಣ್ಯ ಇಲಾಖೆ ರಾಜ್ಯ ಸಂರಕ್ಷಾಣಾಧಿಕಾರಿಯವರ ಹೇಳಿಕೆ ವಿರುದ್ದ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾದಿತ್ತೆಂದು ಎಚ್ಚರಿಸುತ್ತಿದೆ.

ಅತ್ತಾವರ ಎಲ್ಲಪ್ಪ ಗಾಣಿಗ ಎನ್ನಲು ನಾಚಿಕೆಯೇ?

Posted by JAYAKIRANA Kirana on | 0 comments | Leave a comment...


ಸಭೆ ಸಮಾರಂಭಗಳಲ್ಲಿ ಎಲ್ಲಪ್ಪನವರ ಪರಿಚಯ ಹೇಳುವಾಗ, ವೇದಿಕೆಯಲ್ಲಿ ಆಗಮಿಸಿದ ಗಾಣಿಗ ಸಮಾಜದ ಮುಖಂಡರನ್ನು ಪರಿಚಯಿಸುವಾಗ ಆಗಲೀ, ಕಾರ್ಯಕ್ರಮ ನಿರೂಪಕರಾಗಲೀ ಬಂದಂತಹ ಗಾಣಿಗ ಸಮಾಜದ ಅತಿಥಿಗಳು ತಮ್ಮ ಭಾಷಣದಲ್ಲಿ ಅತ್ತಾವರ ಎಲ್ಲಪ್ಪನವರು ‘ಗಾಣಿಗರು’ ಎಂದು ಹೇಳದಂತೆ ಮುನ್ಸೂಚನೆ ಹಾಗೂ ಎಚ್ಚರಿಕೆ ವಹಿಸಲಾಯಿತು.

ನವೀನ್ ಕುಮಾರ್, ಅತ್ತಾವರ
ಸ್ವಾತಂತ್ರ್ಯ ಹೋರಾಟಗಾರ ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ಜನ್ಮಶತ ಮಾನೋತ್ಸವ ಸಮಿತಿಯವರ ವತಿಯಿಂದ ಅತ್ತಾವರ ಎಲ್ಲಪ್ಪನವರ ಹುಟ್ಟು ಹಬ್ಬವನ್ನು ೩-೪ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು. ಆದರೆ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ‘ಗಾಣಿಗ ಸಮಾಜ’ವನ್ನು ಕತ್ತಲಿನಲ್ಲಿಡಲಾ ಯಿತು. ಅತ್ತಾವರ ಎಲ್ಲಪ್ಪನವರು ಗಾಣಿಗರ ಯಾನೆ ಸಫಲಿಗ ಸಮಾಜದವರು ಎಂಬ ನೆಲೆಯಲ್ಲಿ ಶತಮಾನೋತ್ಸವ ಸಮಿತಿ ವಿವಿಧ ಕ್ಷೇತ್ರಗಳ ಗಾಣಿಗ ಸಮಾಜದ ಮುಖಂಡರು, ವಿವಿಧ ಗಾಣಿಗ ಸಂಘಗಳ ಮುಖಂಡರು, ದ.ಕ. ಜಿಲ್ಲಾ ಗಾಣಿಗ ಸಂಘದ ಪದಾಧಿಕಾರಿಗಳನ್ನೊಳಗೊಂಡ ಶೇ. ೧೦೦ ರಷ್ಟು ಗಾಣಿಗರಿಂದಲೇ ಈ ಸಮಿತಿಯ ರಚನೆಯಾಯಿತಂತೆ. ಗಾಣಿಗ ಸಮಾಜದ ಆಡಳಿತವಿರುವ ದಿ. ಕರಾವಳಿ ಸೊಸೈಟಿಯ ವತಿಯಿಂದ ಇದರ ಅಧ್ಯಕ್ಷರು ಒಂದು ಲಕ್ಷ ರೂಪಾಯಿಗಳ ಜಾಹೀರಾತನ್ನೂ ಕೂಡಾ ನೀಡಿ ಸಹಕರಿಸಿದ್ದಾರೆ ಎಂದು ನಿರೂಪಕರು ತಮ್ಮ ನಿರೂಪಣೆಯಲ್ಲಿ ಪ್ರಕಟಿಸಿ ದ್ದಾರೆ.
ಈ ಶತಮಾನೋತ್ಸವವನ್ನು ಸಮಾಜದ ಕಾರ್ಯಕ್ರಮವಾಗಿಸದೆ ಸಾರ್ವ ಜನಿಕ ಕಾರ್ಯಕ್ರಮವಾಗಿ ಆಚರಿಸಬೇಕು. ಅತ್ತಾವರ ಎಲ್ಲಪ್ಪನವರು ರಾಷ್ಟ್ರೀಯ ವ್ಯಕ್ತಿ ಎಂಬ ನಿಟ್ಟಿನಲ್ಲಿ ಹಿರಿಯರೊಬ್ಬರ ಮಾರ್ಗದರ್ಶನದಂತೆ ಈ ಕಾರ್ಯ ಕ್ರಮಕ್ಕೆ ವಿವಿಧ ಕ್ಷೇತ್ರಗಳ ಮುಖಂಡರು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಗಾಣಿಗ ಸಮಾಜದ ಮುಖಂಡರುಗಳನ್ನು ಅತಿಥಿಗಳಾಗಿ ಆಹ್ವಾನಿಸಿದ್ದರು. ಆದರೆ ಅತ್ತಾವರ ಎಲ್ಲಪ್ಪ ಶತಮಾನೋತ್ಸವದ ಆಮಂತ್ರಣ ಪತ್ರಿಕೆಯ ಲ್ಲಾಗಲೀ, ಈ ಬಗ್ಗೆ ಬಂದ ಜಾಹೀರಾತುಗಳಲ್ಲಿ, ಪ್ರಚಾರ ಮಾಧ್ಯಮಗಳಲ್ಲಿ ಅವರು ಗಾಣಿಗ ಸಮಾಜದವರು ಎಂಬ ಉಲ್ಲೇಖವಿರಲಿಲ್ಲ. ಒಂದೆರಡು ಪತ್ರಿಕೆಗಳಲ್ಲಿ ಬರಹಗಾರರು, ಅವರು ಗಾಣಿಗ ಸಮಾಜದಲ್ಲಿ ಜನಿಸಿದವರು ಎಂಬುದನ್ನು ತಿಳಿಸಿದ್ದನ್ನು ಬಿಟ್ಟರೆ ಇನ್ನೆಲ್ಲೂ ಅವರು ಗಾಣಿಗ ಸಮಾಜದವರು ಎಂದು ಹೇಳಿಕೊಳ್ಳಲೇ ಇಲ್ಲ.
ಸಭೆ ಸಮಾರಂಭಗಳಲ್ಲಿ ಎಲ್ಲಪ್ಪನವರ ಪರಿಚಯ ಹೇಳುವಾಗ, ವೇದಿಕೆ ಯಲ್ಲಿ ಆಗಮಿಸಿದ ಗಾಣಿಗ ಸಮಾಜದ ಮುಖಂಡರನ್ನು ಪರಿಚಯಿಸು ವಾಗ ಆಗಲೀ, ಕಾರ್ಯಕ್ರಮ ನಿರೂಪಕರಾಗಲೀ ಬಂದಂತಹ ಗಾಣಿಗ ಸಮಾಜದ ಅತಿಥಿಗಳು ತಮ್ಮ ಭಾಷಣದಲ್ಲಿ ಅತ್ತಾವರ ಎಲ್ಲಪ್ಪನವರು ‘ಗಾಣಿ ಗರು’ ಎಂದು ಹೇಳದಂತೆ ಮುನ್ಸೂಚನೆ ಹಾಗೂ ಎಚ್ಚರಿಕೆ ವಹಿಸಲಾ ಯಿತು. ಸಾರ್ವಜನಿಕ ಕಾರ್ಯಕ್ರಮ ಮಾಡಿ ಎಂಬ ಸಲಹೆಯನ್ನೇ ವ್ಯತಿರಿಕ್ತ ವಾಗಿ ಅರಿತು ತಮ್ಮ ದುರ್ಲಾಭಕ್ಕೆ ಅವರನ್ನು ಗಾಣಿಗ ಎಂದರೆ ತೊಂದರೆ ಯಾದೀತು ಎಂಬು ದೂರಾಲೋಚನೆಯಿಂದ ‘ಗಾಣಿಗರು’ ಎಂಬುದನ್ನು ಹೇಳಲು ನಾಚಿಕೆ, ಸಂಕೋಚ ಹಾಗೂ ಮುನ್ನೆಚ್ಚರಿಕೆ ವಹಿಸಲಾಯಿತು.
ಗಾಣಿಗ ಸಂಘಗಳಿಂದ ಗಾಣಿಗ ಮುಖಂಡರಿಂದ ದೇಣಿಗೆ ಸಂಗ್ರಹಿಸಿ, ಗಾಣಿಗರನ್ನೇ ಈ ಸಮಾರಂಭದ ಸ್ವಯಂಸೇವಕರಾಗಿ ಬಳಸಿ, ಬೇರೆ ಸಾರ್ವ ಜನಿಕರು ಯಾರೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೆ ಗಾಣಿಗ ಜನರೇ ತುಂಬಿ ರುವ ಸಭೆಯಲ್ಲಿ ಅತ್ತಾವರ ಎಲ್ಲಪ್ಪ ಗಾಣಿಗರು ಎಂದು ಹೇಳಲು ನಾಚಿಕೆ, ತಮ್ಮ ಗಾಣಿಗ ಸಮಾಜವನ್ನೇ ಕತ್ತಲಲ್ಲಿಟ್ಟ ಈ ಜನ ಗಾಣಿಗ ಸಮಾಜದ ಉದ್ದಾರಕರೇ? ಎಂಬುದು ಯಕ್ಷಪ್ರಶ್ನೆಯಾಗಿದೆ.

ದಂಪತಿಯಲ್ಲಿ ಒಮ್ಮತದ ಅಭಿಪ್ರಾಯವಿದ್ದರೆ ಸಮಸ್ಯೆ ಬಾರದು

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೩೦ರ ಹರೆಯದ ಗೃಹಿಣಿ. ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾಳೆ. ನನ್ನ ಗಂಡ ವಿದೇಶದಲ್ಲಿ ಉದ್ಯೋಗ ಹೊಂದಿ ದ್ದಾರೆ. ಅವರು ಎರಡು ವರ್ಷಕ್ಕೊಮ್ಮೆ ಊರಿಗೆ ಬರುತ್ತಾರೆ. ನನಗೆ ಎರಡನೇ ಮಗಳು ಹುಟ್ಟಿ ೧೦ ತಿಂಗಳು ಕಳೆಯಿತು. ಮಗುವಿಗೆ ಒಂಬತ್ತು ತಿಂಗಳಾಗುವ ವೇಳೆ ನನ್ನವರು ಊರಿಗೆ ಬಂದಿದ್ದರು. ಹೆರಿಗೆಯ ನಂತರ ೧೦ನೇ ತಿಂಗಳಲ್ಲಿ ನನಗೆ ಮುಟ್ಟು ಪ್ರಾರಂಭವಾ ಗಿದೆ. ನನ್ನ ಗಂಡ ವಿದೇಶದಿಂದ ಬಂದ ನಂತರ ಇನ್ನು ಮಕ್ಕಳು ಬೇಡ ಎಂದು ತೀರ್ಮಾನಿಸಿದ್ದೆವು. ನಾವು ಈ ವೇಳೆಯಲ್ಲಿ ವಾರ ಕ್ಕೊಮ್ಮೆ ಸೇರುತ್ತಿದ್ದೆವು. ನಾವು ಸಂಭೋಗದ ವೇಳೆ ನಿರೋಧ್ ಬಳಸುತ್ತಿ ದ್ದೆವು. ಆದರೆ ಒಂದು ಬಾರಿ ನಿರೋಧ್ ಬಳಸಿರಲಿಲ್ಲ. ಆಗ ಅವರು ವೀರ್ಯವನ್ನು ಹೊರಗೆ ಸ್ರವಿಸಿದ್ದಾರೆ. ಆದರೆ ಅಷ್ಟ ರಲ್ಲಿ ವೀರ್ಯ ಒಳಗಡೆ ಚೆಲ್ಲಿತ್ತು. ಈಗ ನನಗೆ ಮುಟ್ಟು ನಿಂತಿದ್ದು, ಏಳು ದಿವಸ ಕಳೆದಿದೆ. ನನಗೆ ಈ ಸಲ ಮಗು ಬೇಡವಾಗಿದೆ. ನನಗೆ ಗರ್ಭ ನಿಂತಿರಬಹುದೇ ಎಂದು ಭಯವಾಗುತ್ತಿದೆ. ನನಗೆ ಏನಾ ದರೂ ಸುಲಭವಾಗಿ ಉಪಯೋಗಿಸುವ ಮಾತ್ರೆಗಳಿದ್ದರೆ ತಿಳಿಸಿ. ನನಗೆ ಬೇರೇನಾದರೂ ತೊಂದರೆಯಿಂದ ಮುಟ್ಟು ನಿಂತಿರುವ ಸಾಧ್ಯತೆಯಿದೆಯೇ? ಸೂಕ್ತ ಸಲಹೆ ಕೊಡಿ.
ಸಲಹೆ: ವಿನಾಕಾರಣ ಹೆದರಿದ್ದೀರೆಂದೇ ನನಗನಿಸುತ್ತದೆ. ಈಗಲೇ ಇಬ್ಬರು ಹೆಣ್ಣು ಮಕ್ಕಳಿರುವುದರಿಂದ ಮುಂದಕ್ಕೆ ಮಗು ಬೇಡ ಎನ್ನುವ ಯೋಚನೆ ಸರಿಯಾದುದೇ. ನೀವು ಗರ್ಭ ನಿರೋಧಕ ಗಳ ಬಳಕೆಯನ್ನು ಸರಿಯಾಗಿ ಉಪಯೋಗಿಸಬೇಕಿತ್ತು. ಈಗ ಮಾರುಕಟ್ಟೆಯಲ್ಲಿ ನಿರೋಧ್, ವಂಕಿ, ಕಾಪರ್-ಟಿಯಂತಹ ಗರ್ಭ ನಿರೋಧಕ ಸುಲಭ ಸಾಧನಗಳು ಸಿಗುತ್ತವೆ. ಗಂಡ ಸಂಭೋಗದ ಸಮಯ ವೀರ್ಯ ವನ್ನು ಹೊರಕ್ಕೆ ಚೆಲ್ಲಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಮತ್ತೆ ವೀರ್ಯ ಒಳಕ್ಕೆ ಚೆಲ್ಲಿದೆ ಎನ್ನುತ್ತೀರಿ. ಹಾಗೊಂದು ವೇಳೆ ಚೆಲ್ಲಿದ್ದಲ್ಲಿ ಗರ್ಭ ಧರಿಸಿರುವ ಸಾಧ್ಯತೆಯಿದೆ. ಸಂಭೋಗದ ಬಳಿಕ ವೀರ್ಯವನ್ನು ಹೆಣ್ಣಿನ ಜನನಾಂಗದಿಂದ ಹೊರಕ್ಕೆ ಚೆಲ್ಲಿದರೆ ಗರ್ಭ ಧರಿಸುವ ಸಾಧ್ಯತೆ ಇರುವುದಿಲ್ಲ. ಆದರೆ ಈ ವೇಳೆ ತಾಳ್ಮೆ, ಎಚ್ಚರಿಕೆ ಅತ್ಯಗತ್ಯ. ನಿಮಗೆ ಮುಟ್ಟು ನಿಂತಿರು ವುದು ಗರ್ಭ ಧರಿಸಿದ ಕಾರಣಕ್ಕೇ ಎಂದು ತಿಳಿಯಬೇಕಿಲ್ಲ. ಸಾಮಾನ್ಯ ತೊಂದರೆಗಳಿಂದಲೂ ಕೆಲವೊಮ್ಮೆ ಮುಟ್ಟಿನ ಅವಧಿಯಲ್ಲಿ ಏರು ಪೇರು ಉಂಟಾಗುವ ಸಾಧ್ಯತೆಯಿದೆ. ಸಂಶಯವಿದ್ದರೆ ಯಾವು ದಾದರೂ ಮಹಿಳಾ ವೈದ್ಯರ ಸಲಹೆ ಪಡೆಯಿರಿ. ಗರ್ಭ ನಿಂತಿದ್ದರೆ ಕಾನೂನು ಪ್ರಕಾರ ತೆಗೆಯಬಹುದು. ಆದರೆ ಅದಕ್ಕೆ ನಿಮ್ಮ ಗಂಡನ ಒಪ್ಪಿಗೆಯೂ ಬೇಕಾಗುತ್ತದೆ. ಇಲ್ಲದಿದ್ದರೆ ಗರ್ಭಪಾತ ಮಾಡುವುದು ಮತ್ತು ಮಾಡಿಸುವುದು ಅಪರಾಧವಾಗುತ್ತದೆ. ಗರ್ಭ ನಿಲ್ಲುವ ಸಾಧ್ಯತೆ ಗಳಿದ್ದಲ್ಲಿ ಮುಂಜಾಗ್ರತೆಯಾಗಿ ಸಂಭೋಗದ ಬಳಿಕ ಕೆಲವು ಗಂಟೆ ಗಳಲ್ಲಿ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾತ್ರೆಯನ್ನು ತೆಗೆದು ಕೊಂಡರೆ ಪರಿಣಾಮ ಸಾಧ್ಯ. ಆದರೆ ಇದರಲ್ಲಿ ಶೇಕಡಾ ನೂರ ರಷ್ಟು ಪರಿಣಾಮ ನಿರೀಕ್ಷಿಸಲು ಸಾಧ್ಯವಿಲ್ಲ. ನೀವು ನಿಶ್ಚಿಂತೆಯಿಂ ದಿರಿ. ಒಂದು ವೇಳೆ ಗರ್ಭ ಧರಿಸಿದ್ದರೆ ಗಂಡನ ಒಪ್ಪಿಗೆ ಇದ್ದರೆ ತೆಗೆಸಿಬಿಡಿ. ಇನ್ನು ಸಂಭೋಗ ಸಮಯದಲ್ಲಿ ಎಚ್ಚರ ತಪ್ಪದಿರಿ. ನಿರೋಧ್ ಅಥವಾ ಯಾವುದಾದರೊಂದು ಗರ್ಭ ನಿರೋಧಕ ಗಳನ್ನು ಅವಶ್ಯ ಬಳಸಿ. ಈ ಬಗ್ಗೆ ನಿಮಗೆ ಸಂದೇಹವಿದ್ದರೆ ತಡ ಮಾಡದೆ ವೈದ್ಯರ ಸಲಹೆ ಪಡೆಯಿರಿ. ಮಗು ಪಡೆಯುವುದು ಬೇಡವೆಂದಿದ್ದರೆ ಅಗತ್ಯವಾಗಿ ಗರ್ಭನಿರೋಧಕವನ್ನು ಬಳಸಿ. ಅದ ರಲ್ಲಿ ಮುಜುಗರ ಪಡುವ ಅಗತ್ಯವಿಲ್ಲ. ಈಗ ಮಾರುಕಟ್ಟೆಯಲ್ಲಿ ಅನೇಕ ತರದ ಗರ್ಭ ನಿರೋಧಕಗಳಲ್ಲಿ ನಿಮಗೆ ಸೂಕ್ತವಾದು ದನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲಿ ನೀವು ಒಮ್ಮತದ ಅಭಿಪ್ರಾಯಕ್ಕೆ ಬರುವುದು ಸೂಕ್ತವಾಗಿದೆ.

ಲಾರಿಯ ಸೊತ್ತು ಕಳವು

Posted by JAYAKIRANA Kirana on | 0 comments | Leave a comment...

ಮುಲ್ಕಿ: ಇಲ್ಲಿನ ಹಳೆಯಂಗಡಿ ಪಡುಪಣಂಬೂರು ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಲಾರಿಯ ಎರಡೂವರೆ ಲಕ್ಷ ರೂ ಬೆಲೆಬಾಳುವ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ನಿನ್ನೆ ನಡೆದಿದೆ.
ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಲಾಗಿದ್ದ ರಿಚರ್ಡ್ ಎಂಬವರಿಗೆ ಸೇರಿದ ಲಾರಿಯ ಆರು ಟಯರ್ , ಆರು ಡಿಸ್ಕ್, ಎರಡು ಬ್ಯಾಟರಿಗಳನ್ನು ಕಳವುಗೈಯ್ಯಲಾಗಿದೆ. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓಮ್ನಿ-ಬಸ್ ಡಿಕ್ಕಿ: ಓರ್ವ ಸಾವು

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ಬಸ್ ಹಾಗೂ ಓಮ್ನಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಓಮ್ನಿಯಲ್ಲಿದ್ದ ಒಬ್ಬರು ಮೃತಪಟ್ಟಿದ್ದು, ಇನ್ನೋರ್ವನನ್ನು ಗಂಭೀರ ಸ್ಥಿತಿಯಲ್ಲಿ ತೊಕ್ಕೊಟ್ಟು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜೇಶ್ವರ ಬಳಿಯ ಕರೋಡಾ ಮಸೀದಿ ಬಳಿಯ ತಿರುವಿನಲ್ಲಿ ಘಟನೆ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.
ಉಳ್ಳಾಲಬೈಲ್ ನಿವಾಸಿ ಪದ್ಮನಾಭ (೪೨) ಮೃತರು. ಇವರ ಜತೆಗಿದ್ದ ವಿಟ್ಲ ನಿವಾಸಿ ಶಿವಶಂಕರ(೪೦) ಎಂಬವರನ್ನು ಗಂಭೀರ ಸ್ಥಿತಿಯಲ್ಲಿ ತೊಕ್ಕೊಟ್ಟಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನಿಂದ ಕಾಸರ ಗೋಡಿಗೆ ತೆರಳುತ್ತಿದ್ದ ಮಲಬಾರ್ ಎಕ್ಸ್ ಪ್ರೆಸ್ ಬಸ್ ಕರೋಡಾ ಮಸೀದಿ ಬಳಿಯ ತಿರುವಿನಲ್ಲಿ ಹೊಸಂಗಡಿ ಯಿಂದ ಉಳ್ಳಾಲದತ್ತ ಹೋಗುತ್ತಿದ್ದ ಓಮ್ನಿ ಕಾರಿಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಓಮ್ನಿ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಪದ್ಮನಾಭ ಸ್ಥಳದಲ್ಲೇ ಮೃತಪಟ್ಟರು. ಮಂಜೇಶ್ವರ ಪೊಲೀ ಸರು ಸ್ಥಳಕ್ಕಾಗಮಿಸಿ ವಾಹನಗಳನ್ನು ಸ್ಥಳೀಯರ ಸಹಕಾರದಿಂದ ತೆರವು ಗೊಳಿಸಿ ರಸ್ತೆ ಸಂಚಾರ ಸುಗಮವಾಗಿಸಿದರು.

ಲೈಂಗಿಕ ಕಿರುಕುಳ: ಇಲೆಕ್ಟ್ರಿಶಿಯನ್‌ಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಮನೆಯೊಂದರ ಇಲೆಕ್ಟ್ರಾನಿಕ್ ಸಾಮಗ್ರಿಗಳ ರಿಪೇರಿ ಗೆಂದು ಹೋದ ವ್ಯಕ್ತಿಯೋರ್ವ ಲೈಂಗಿಕ ಹಗರಣ ಆರೋಪದಲ್ಲಿ ಸಿಕ್ಕಿಬಿದ್ದ ಘಟನೆ ಬಿ.ಮೂಡ ಗ್ರಾಮದ ಪರ್ಲಿಯಾ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವಕನ ಮೇಲೆ ಸ್ಥಳೀಯ ಯುವಕರ ಗುಂಪು ಹಲ್ಲೆ ನಡೆಸಿತ್ತು. ಆರೋಪಿತ ವ್ಯಕ್ತಿ ವಿಟ್ಲ ಮೂಲದವನಾಗಿದ್ದು, ಅಲ್ಲಿಂದಲೇ ಮದುವೆಯಾಗಿದ್ದನು.
ವಿದ್ಯುತ್ ಉಪಕರಣಗಳ ರಿಪೇರಿ, ಹೋಂ ವಯರಿಂಗ್ ಇತ್ಯಾದಿ ಕೆಲಸ ಗಳನ್ನು ಮಾಡುತ್ತಿದ್ದು, ಇತ್ತೀಚೆಗೆ ಪರ್ಲಿಯಾದಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿದ್ದ ಎನ್ನಲಾಗಿದೆ. ಮನೆಗಳ ವಿದ್ಯುತ್ ಸಾಮಗ್ರಿ ಹಾಗೂ ವಯರಿಂಗ್ ದುರಸ್ಥಿ ಕಾರ್ಯಗಳನ್ನು ಮಾಡಿ ಜೀವನ ನಿರ್ವಹಿಸುತ್ತಿದ್ದು, ಪರ್ಲಿಯಾದಲ್ಲಿ ಈ ಕೆಲಸಗಳನ್ನು ಮಾಡಿ ತುಂಬಾ ಪರಿಚಿತನಾಗಿದ್ದ. ಇಲೆಕ್ಟ್ರಾನಿಕ್ ಸಾಮಗ್ರಿಗಳ ರಿಪೇರಿಗೆಂದು ಇಲ್ಲಿನ ಮನೆಯೊಂದಕ್ಕೆ ಹೋಗಿದ್ದ ಈ ಆಸಾಮಿ ಮನೆಯಲ್ಲಿದ್ದ ವಿವಾಹಿತ ಮಹಿಳೆಯ ಮೇಲೆ ಕಣ್ಣು ಇಟ್ಟಿದ್ದ. ಆಕೆಯ ಜೊತೆಗೆ ಸಲುಗೆ ಬೆಳೆಸಿಕೊಳ್ಳಲು ಯತ್ನಿಸುತ್ತಿದ್ದು, ಕಿರುಕುಳ ನೀಡಿದ್ದ ಎನ್ನಲಾಗಿದೆ.
ಇಲೆಕ್ಟ್ರಿಷನ್‌ನ ಚಲನವಲನಗಳನ್ನು ಗಮನಿಸಿದ ಸ್ಥಳೀಯ ಯುವಕರ ಗುಂಪು ಆತನನ್ನೇ ಹಿಂಬಾಲಿಸಿದ್ದರು. ಮನೆಗಳಲ್ಲಿ ಹೆಂಗಸರ ಜೊತೆಗೆ ಅನ ಗತ್ಯವಾಗಿ ಮಾತುಕತೆ ನಡೆಸುತ್ತಿರುವ ಬಗ್ಗೆಯೂ ದೂರುಗಳು ಕೇಳಿಬಂ ದಿದ್ದವು. ಆತನ ಅನುಚಿತ ವರ್ತನೆಗೆ ಆಕ್ರೋಶಿತರಾದ ಸ್ಥಳೀಯರು ಥಳಿಸಿದ್ದಾರೆ. ಪೆಟ್ಟು ತಿದ್ದ ಇಲೆಕ್ಟ್ರಿಶನ್ ಈಗ ಪರ್ಲಿಯಾ ಬಿಟ್ಟಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಹೋಟೆಲ್ ಮೆನೇಜರ್‌ನಿಂದ ಕಾರ್ಮಿಕನಿಗೆ ಗಂಭೀರ ಹಲ್ಲೆ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಉಡುಪಿ-ಮಣಿ ಪಾಲ ರಾಜ್ಯ ಹೆದ್ದಾರಿಯ ಲಕ್ಷ್ಮೀಂದ್ರ ನಗರದಲ್ಲಿರುವ ಅಟಿಲ್ ಹೊಟೇಲಿನ ಮೆನೇಜರ್‌ನೋರ್ವ ತಡವಾಗಿ ಆಗಮಿ ಸಿದನೆಂದು ಕಾರ್ಮಿಕನಿಗೆ ಗಂಭೀರ ವಾಗಿ ಹಲ್ಲೆ ನಡೆಸಿರುವುದಲ್ಲದೆ, ದೂರು ನೀಡದಂತೆ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ.
ಮೆನೇಜರ್ ಗಣೇಶ್ ಪೂಜಾರಿ ಇನ್ನೋರ್ವ ಸಿಬ್ಬಂದಿಯೊಂದಿಗೆ ಸೇರಿ ಕಾರ್ಮಿಕ ನಾರಾಯಣ ದೇವಾಡಿಗ (೩೩) ಎಂಬವರಿಗೆ ಹಲ್ಲೆ ನಡೆಸಿದ್ದಾರೆ. ನಾರಾಯಣ ಅವರು ಸೋಮವಾರ ತಡವಾಗಿ ಹೊಟೇಲಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ. ಘಟನೆಯಿಂದ ನಾರಾಯಣ ಅವರಿಗೆ ದೃಷ್ಟಿ ದೋಷ ಉಂಟಾಗಿದ್ದು, ಅವ ರನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿ ಸಲಾಗಿದೆ. ಪತ್ನಿಗೆ ಹೆರಿಗೆಯಾಗಿರುವ ಕಾರಣ ಮನೆಯಲ್ಲಿ ಕೆಲಸ ಮುಗಿಸಿ ಬರಬೇಕಾದಲ್ಲಿ ತಡವಾಗಿದೆ ಎಂದು ನಾರಾಯಣ ತಿಳಿಸಿದ್ದಾರೆ.
ಘಟನೆ ಕುರಿತು ನಾರಾಯಣ ಅವರು ಮಣಿಪಾಲ ಠಾಣೆಗೆ ತೆರಳಿ ದೂರು ನೀಡಿದರೂ ಪೊಲೀಸರು ವಿನಾಕಾರಣ ಮೆನೇಜರ್‌ನೊಂದಿಗೆ ಜಗಳಕ್ಕಿಳಿದದ್ದಾಗಿ ಹೇಳಿಕೊಂಡು ನಾರಾಯಣ ಅವರಿಂದಲೇ ಮಣಿಪಾಲ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ಕೊಂಡಿದ್ದಾರೆ ಎನ್ನಲಾಗಿದೆ.
ಅದಲ್ಲದೆ ದೂರು ದಾಖಲಿಸದಂತೆ ನಾರಾಯಣ ಅವರ ಮನೆಗೆ ಆಗಮಿಸಿದ ತಂಡ ಬೆದರಿಕೆಯನ್ನು ಹಾಕಿದೆ.

ಕೂಲಿ ಕಾರ್ಮಿಕನ ಮೇಲೆ ಪೊಲೀಸ್ ದೌರ್ಜನ್ಯ

Posted by JAYAKIRANA Kirana on | 0 comments | Leave a comment...

ಪುತ್ತೂರು: ಕೂಲಿ ಕಾರ್ಮಿಕ ವ್ಯಕ್ತಿ ಯೊಬ್ಬರ ಮೇಲೆ ಬೆಳ್ತಂಗಡಿ ಪೊಲೀ ಸರು ದೌರ್ಜನ್ಯ ನಡೆಸಿದ್ದು, ಇದರಿಂ ದಾಗಿ ಆತ ದುಡಿಯಲಾರದ ಸ್ಥಿತಿ ತಲುಪಿದ್ದಾನೆ. ತಪ್ಪಿತಸ್ಥ ಪೊಲೀಸರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಬಕ ಗ್ರಾ.ಪಂ. ಮಾಜಿ ಸದಸ್ಯ ಚಂದ್ರಶೇಖರ್ ಆಗ್ರಹಿಸಿದ್ದಾರೆ
ಅವರು ಬುಧವಾರ ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಕೊಡಿಪ್ಪಾಡಿ ನಿವಾಸಿ ವೆಂಕಪ್ಪ ಗೌಡ ಎಂಬವರ ಪುತ್ರ ನಾರಾಯಣ ಗೌಡ ಎಂಬವರು ಬೆಳ್ತಂಗಡಿ ತಾಲೂಕಿನ ಪಂಜಿನರಾಯಿ ಶಾಂತಿಬೆಟ್ಟು ನಿವಾಸಿ ಹೊನ್ನಮ್ಮ ಎಂಬವರನ್ನು ಕಳೆದ ೧೭ ವರ್ಷಗಳ ಹಿಂದೆ ಮದುವೆಯಾಗಿದ್ದು ಬಳಿಕ ಅಲ್ಲಿಯೇ ಪತ್ನಿ ಮತ್ತು ೨ ಮಕ್ಕಳೊಂದಿಗೆ ವಾಸ್ತವ್ಯವಿದ್ದರು.
ಕೆಲ ದಿನಗಳ ಹಿಂದೆ ಕ್ಷುಲ್ಲಕ ವಿಚಾರಕ್ಕಾಗಿ ಗಂಡ ಹೆಂಡತಿ ನಡುವೆ ಜಗಳ ನಡೆದಿತ್ತು. ಬಳಿಕ ನಾರಾಯಣ ಗೌಡರ ವಿರುದ್ದ ಪತ್ನಿ ಹೊನ್ನಮ್ಮ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿ ದ್ದರು. ದೂರು ದಾಖಲಿಸಿಕೊಂಡ ಪೊಲೀಸರು ನಾರಾಯಣ ಗೌಡರನ್ನು ಠಾಣೆಗೆ ಕರೆಸಿಕೊಂಡು ಎರಡು ದಿನಗಳ ಕಾಲ ಠಾಣೆಯಲ್ಲಿ ಕೂಡಿ ಹಾಕಿ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಚಂದ್ರಶೇಖರ್ ಅವರು ಇದರಿಂದಾಗಿ ಗಂಭೀರ ಗಾಯಗೊಂಡಿರುವ ಅವರನ್ನು ಚಿಕಿತ್ಸೆ ಕೊಡಿಸಿ ನಡೆಯುವಂತೆ ಮಾಡಿರುತ್ತೇವೆ. ಆದರೆ ಪೊಲೀಸರ ಹೊಡೆತದಿಂದಾಗಿ ಅವರ ಕೈ ಮತ್ತಿತರ ಭಾಗಗಳಿಗೆ ಗಂಭೀರ ಗಾಯವಾಗಿದ್ದು ಅವರು ದುಡಿಯಲು ಅಶಕ್ತರಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು.
ಕೂಲಿ ಕಾರ್ಮಿಕರಾಗಿರುವ ನಾರಾಯಣ ಗೌಡರ ಮೇಲೆ ಪೊಲೀಸರು ನಡೆಸಿದ ಅಮಾನುಷ ಹಲ್ಲೆಯ ಕುರಿತು ರಾಜ್ಯ ಗೃಹ ಸಚಿವರಿಗೆ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಗಾಯಾಳು ನಾರಾಯಣ ಗೌಡ, ಅವರ ತಂದೆ ವೆಂಕಪ್ಪ ಗೌಡ ಮತ್ತು ಸಹೋದರ ಸತೀಶ್ ಗೌಡ ಉಪಸ್ಥಿತರಿದ್ದರು.

ಮಗನ ಉತ್ತರಕ್ರಿಯೆ ಮುನ್ನಾದಿನ ತಾಯಿ ಸಾವು

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ಮನೆಯಲ್ಲಿ ಮಗನ ಉತ್ತರ ಕ್ರಿಯೆಯ ತಯಾರಿ ನಡೆಯು ತಿದ್ದಂತೆ ತಾಯಿಯೋರ್ವಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಪೈವಳಿಕೆ ಬಳಿಯ ಕುರುಡಪದವು ಸಮೀಪದ ಕುರಿಯ ಗುತ್ತುವಿನಲ್ಲಿ ನಡೆದಿದೆ.
ಇಲ್ಲಿನ ದಿ.ಐತಪ್ಪ ಶೆಟ್ಟಿಯ ವರ ಪತ್ನಿ ರಾಧಮ್ಮ(೯೦) ಮೃತಪಟ್ಟ ಮಹಿಳೆ ಯಾಗಿದ್ದಾರೆ. ಇವರ ಪುತ್ರ ರಾಧಾಕೃಷ್ಣ ಅನಾರೋಗ್ಯದಿಂದಾಗಿ ಈ ತಿಂಗಳ ೫ರಂದು ನಿಧನರಾಗಿದ್ದರು. ಇವರ ಉತ್ತರಕ್ರಿಯೆ ಸ್ಥಳೀಯ ದೇವಸ್ಥಾನದಲ್ಲಿ ಇಂದು ನಡೆಯಲಿಕ್ಕಿದ್ದು ಮನೆ ಮಂದಿ ಅದರ ಸಿದ್ದತೆಯಲ್ಲಿರುವಂತೆ ಮನೆಯೊಡತಿಯ ಮರಣ ಮನೆಮಂದಿಯನ್ನು ಮತ್ತೆ ದುಃಖದ ಮಡುವಿಗೆ ತಳ್ಳಿದೆ.

ಬೆಳ್ತಂಗಡಿ: ಸೋದರ ಸಂಬಂಧಿಯಿಂದ ಅಪ್ರಾಪ್ತೆಯ ಅತ್ಯಾಚಾರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೆಳ್ತಂಗಡಿ ಸಮೀಪದ ಕೊಯ್ಯೂರು ಎಂಬಲ್ಲಿ ಅಪ್ರಾಪ್ತ ಬಾಲಕಿಯನ್ನು ಸೋದರ ಸಂಬಂಧಿ ಯುವಕನೇ ಅತ್ಯಾಚಾರಗೈದ ಹೇಯ ಘಟನೆ ಬೆಳಕಿಗೆ ಬಂದಿದೆ. ಉರುವಾಲು ಗ್ರಾಮದ ೧೬ರ ಹರೆಯದ ಅಪ್ರಾಪ್ತ ಬಾಲಕಿಯೇ ಅತ್ಯಾಚಾರಕ್ಕೆ ಈಡಾದವಳು. ಈಕೆಯ ಸೋದರ ಸಂಬಂಧಿ ಕೊಯ್ಯೂರು ನಿವಾಸಿ ಚಂದಪ್ಪ ಎಂಬಾತ ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಕರೆದೊಯ್ದು ಮಲೆಬೆಟ್ಟು ಎಂಬಲ್ಲಿನ ಕಾಡಿನಲ್ಲಿ ಅತ್ಯಾಚಾರವೆಸಗಿರುವುದಾಗಿ ಪೊಲೀಸರಿಗೆ ದೂರಲಾಗಿದೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಚಂದಪ್ಪನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಮಲ್ಪೆ: ನೇಣು ಬಿಗಿದು ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಲ್ಪೆ ಸಮೀಪದ ಕಲ್ಮಾಡಿ ಗರೋಡಿ ಬಳಿಯ ನಿವಾಸಿ ವಿಠಲ ಅಮೀನ್(೬೦) ಎಂಬವರು ತನ್ನ ಮನೆ ಸಮೀಪದ ತೆಂಗಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂ ಡಿದ್ದಾರೆ. ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ಮಾನಸಿಕವಾಗಿ ನೊಂದು ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಚ್ಚಿನ: ಯುವಕ ನೇಣಿಗೆ ಶರಣು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಚ್ಚಿನ ಗ್ರಾಮದ ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಮಾಜಿ ಅರ್ಚಕ ಪ್ರಸಾದ ಮುಚ್ಚಿಂತ್ತಾಯ(೩೮) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಕೃತ್ಯವೆಸಗಿರಬೇಕೆಂದು ಶಂಕಿಸಲಾಗಿದೆ. ಮನೆಯಲ್ಲಿ ರಾತ್ರಿ ೧೦ ಗಂಟೆಯ ಸುಮಾರಿಗೆ ಊಟ ಮುಗಿಸಿ ಮಲಗಲೆಂದು ಹೊರಕ್ಕೆ ತೆರಳಿದ್ದವರು ಪಕ್ಕದ ಸರಕಾರಿ ಪ್ರೌಢಶಾಲೆಯ ನಿರ್ಮಾಣ ಹಂತದ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾವಂಜೆ: ಯುವತಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬ್ರಹ್ಮಾವರ ಸಮೀಪದ ಹಾವಂಜೆ-ಕಂಬಳಿಬೆಟ್ಟು ನಿವಾಸಿ ಸರಿತಾ(೨೫) ಕಳೆದ ಮೇ ೧೩ರಿಂದ ನಾಪತ್ತೆಯಾಗಿದ್ದಾರೆ.
ಹೆಬ್ರಿಯಲ್ಲಿನ ಭಾವನ ಮನೆಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ್ದು, ವಾಪಸ್ ಆಗಿಲ್ಲ ಎನ್ನಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೃಹಿಣಿಗೆ ವರದಕ್ಷಿಣೆ ಕಿರುಕುಳ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹೆಚ್ಚಿನ ವರದಕ್ಷಿಣೆ ತರುವಂತೆ ಗೃಹಿಣಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಪತಿ ಮತ್ತಾತನ ಮನೆಯವರ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
೨೦೦೬ರ ಡಿ.೧೧ರಂದು ಅನಂತಪುರದ ಸತ್ಯಸಾಯಿ ಕಲ್ಯಾಣ ಮಂಟಪದಲ್ಲಿ ರತನ್ ಜ್ಯೋತನ್ ಹಾಗೂ ಶ್ರೀಧರ ಅವರಿಗೆ ಮದುವೆಯಾಗಿತ್ತು. ಈ ಸಂದರ್ಭ ಎರಡು ಲಕ್ಷ ರೂ. ವರದಕ್ಷಿಣೆ, ೧.೫೦ ಲಕ್ಷ ರೂ. ಚಿನ್ನಾಭರಣ ಸೇರಿದಂತೆ ಒಂಬತ್ತು ಲಕ್ಷ ರೂ.ವನ್ನು ಮದುವೆಗೆ ಖರ್ಚು ಮಾಡಲಾಗಿತ್ತು. ಮದುವೆಯಾಗಿ ಸಿಖಂದರಾಬಾದ್‌ಗೆ ತೆರಳಿದ್ದ ರತನ್‌ರಿಗೆ ಪತಿ, ಅತ್ತೆ, ಮಾವ ಸರಿಯಾಗಿ ಆಹಾರ ನೀಡದೆ ಹಿಂಸಿಸುತ್ತಿದ್ದರೆನ್ನಲಾಗಿದೆ. ಇದರಿಂದ ನೊಂದ ರತನ್ ಮಣಿಪಾಲದ ಅಕ್ಕನ ಮನೆಗೆ ವಾಪಸ್ ಆಗಿದ್ದು, ವರದಕ್ಷಿಣೆ ಕಿರುಕುಳದ ವಿರುದ್ಧ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಮಣಿಪಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಉದ್ಯಾವರ ನಿವಾಸಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉದ್ಯಾವರ ಸಮೀಪದ ಎಸ್‌ಡಿಎಂ ಕಾಲೇಜ್ ಬಳಿಯ ನಿವಾಸಿ ಕ್ರಿಸ್ಟೊಫರ್ ದಯಾ ನಂದ(೪೨) ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
ಮೇ ಒಂಬತ್ತರಂದು ಎಲ್ಲೂರಿನ ಯುಪಿಸಿಎಲ್ ಕಂಪೆನಿಗೆ ಕೆಲಸಕ್ಕೆಂದು ತೆರಳಿದ್ದ ಅವರು ಮನೆಗೆ ಬಂದಿಲ್ಲ ಎಂದು ಪತ್ನಿ ಲೀನಾ ದೂರಿದ್ದಾರೆ. ಕನ್ನಡ, ತುಳು, ಹಿಂದಿ, ಇಂಗ್ಲಿಷ್ ಭಾಷೆ ಬಲ್ಲ ಇವರ ಬಗ್ಗೆ ಮಾಹಿತಿ ಇದ್ದವರು ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

ವ್ಯಕ್ತಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಹೊರವಲಯದ ಕುಲಶೇಖರ-ಕಲ್ಪನೆ-ಕಕ್ಕೆಬೆಟ್ಟು ನಿವಾಸಿ ಜನಾರ್ದನ ಕೆ.(೪೮) ಎಂಬವರು ಮೇ ೧೨ರಿಂದ ನಾಪತ್ತೆಯಾಗಿದ್ದಾರೆ. ಸೆಂಟ್ರಲ್ ಮಾರ್ಕೆಟ್‌ಗೆ ಹೋಗಿ ಬರುತ್ತೇನೆಂದು ತೆರಳಿದ್ದ ಇವರು ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳ್ಳರ ಪತ್ತೆ: ಡಾಮರು, ಟೆಂಪೋ ವಶಕ್ಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಶಿವಳ್ಳಿಯ ಸಂತೋಷನಗರ ಮಸೀದಿ ಬಳಿಯ ಮೈದಾನದಿಂದ ಡಾಮರು ತುಂಬಿದ್ದ ಬ್ಯಾರೆಲ್‌ಗಳನ್ನು ಕಳವುಗೈದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ದ್ದಾರೆ.ಬಂಧಿತರನ್ನು ಪೆರ್ಡೂರು-ಹೊಸಂಗಡಿಯ ಗೋಪಾಲಕೃಷ್ಣ ಪಾಟ್ಕರ್(೩೫), ಹಾವೇರಿ-ಬ್ಯಾಡಗಿ ನಿವಾಸಿ ಶಂಕ್ರಪ್ಪ ನಿಂಗಣ್ಣನವರ್(೩೧) ಎಂದು ಹೆಸರಿಸಲಾಗಿದೆ. ಇವರು ೧೩ ಡಾಮರು ತುಂಬಿದ್ದ ಬ್ಯಾರೆಲ್‌ಗಳನ್ನು ಕಳವುಗೈದಿದ್ದರು. ಬಂಧಿತರಿಂದ ೭೩ ಸಾವಿರ ರೂ. ಮೌಲ್ಯದ ಡಾಮರು ಹಾಗೂ ಅದನ್ನು ಸಾಗಿಸಲು ಬಳಸಿದ ಟೆಂಪೋ ಸೇರಿದಂತೆ ಒಟ್ಟು ೨.೭೩ ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ನಾಪತ್ತೆಯಾಗಿದ್ದ ಪ್ರೇಮಿಗಳ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಳಾಯಿ ಮೈಂದಗುರಿ ಎಂಬಲ್ಲಿಂದ ನಾಪತ್ತೆಯಾಗಿದ್ದ ಸುಮಿತ್ರಾ(೨೧) ಮತ್ತು ಸತೀಶ್ (೨೫) ಎಂಬ ಪ್ರೇಮಿಗಳನ್ನು ಬಾಳೆ ಹೊನ್ನೂರಿನಲ್ಲಿರುವ ಸುಮಿತ್ರಾಳ ಮನೆಯಲ್ಲಿ ಪತ್ತೆ ಹಚ್ಚಲಾಗಿದೆ. ಅವರು ನಾಪತ್ತೆಯಾಗಿದ್ದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೇಮಿಗಳು ಬುಧವಾರ ಠಾಣೆಗೆ ಹಾಜರಾಗಿದ್ದು, ಸುಮಿತ್ರಾ ಸತೀಶ್ ಜತೆ ತೆರಳಲು ಇಚ್ಛಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಗೆ ಕತ್ತಿಯಂದ ಹಲ್ಲೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪತಿಯೇ ಪತ್ನಿಗೆ ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕುಂದಾಪುರದ ಕೋಟದಲ್ಲಿ ನಡೆದಿದ್ದು, ಈ ಬಗ್ಗೆ ಕೋಟಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಲಿಗ್ರಾಮ ಕಾರ್ಕಡ ಶೋಭಾ(೩೮) ಎಂಬವರ ಮೇಲೆ ಗಂಡ ಪ್ರಶಾಂತ್ ಎಂಬಾತ ಕೊಲ್ಲುವುದಾಗಿ ಜೀವಬೆದರಿಕೆಯೊಡ್ಡಿ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದು, ತಪ್ಪಿಸಿಕೊಂಡಾಗ ಗಂಡ ಪ್ರಶಾಂತ್ ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಗೋಡೆ ಕುಸಿದು ಕಾರ್ಮಿಕ ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮೊರಾರ್ಜಿ ದೇಸಾಯಿ ಪದವಿಪೂರ್ವ ಅಲ್ಪಸಂ ಖ್ಯಾತ ಕಾಲೇಜು ಹಾಗೂ ವಸತಿ ಶಾಲೆಯ ಕಾಮಗಾರಿ ವೇಳೆ ವೇಳೆ ಗೋಡೆ ಕುಸಿದು ಬಿದ್ದ ಪರಿಣಾಮವಾಗಿ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಂಬಳದವು ಸಮೀಪದ ಸಾಂಬಾರುತೊಟ ನಿವಾಸಿ ಅರಬಿ ಕುಂಞಿ ಯಾನೆ ಪೊಡಿಯಬ್ಬ (೪೦) ಎಂಬವರೇ ಮೃತ ದುರ್ದೈವಿ. ಕಳೆದ ಹಲವು ವರ್ಷಗಳಿಂದ ನಾಟೆಕಲ್ ಸಮೀಪದ ಉರುಮಣೆ ಎಂಬಲ್ಲಿ ಖಾಸಗಿ ಕಟ್ಟಡದಲ್ಲಿ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆ ನಡೆಯು ತ್ತಿತ್ತು. ೨೦೧೨-೧೩ನೇ ಸಾಲಿನಲ್ಲಿ ಸರಕಾರ ಪದವಿಪೂರ್ವ ಕಾಲೇಜು ಮಂಜೂರು ಮಾಡಿತ್ತು.
ಈ ಹಿನ್ನೆಲೆಯಲ್ಲಿ ಪ್ರೌಢ ಶಾಲೆ ಯನ್ನು ಸ್ಥಳಾಂತರಿಸಲಾಗಿದ್ದು ಆ ಜಾಗದಲ್ಲಿ ಪದವಿಪೂರ್ವ ಕಾಲೇಜಿಗೆ ಹೆಚ್ಚುವರಿ ಕೊಠಡಿ ಸೇರಿಸುವ ಸಲು ವಾಗಿ ಕಾಮಗಾರಿ ನಡೆಸಲಾಗುತ್ತಿತ್ತು. ನಿನ್ನೆ ಕಟ್ಟಡದ ಮಾಲೀಕನ ಮಗ, ಮೃತ ವ್ಯಕ್ತಿಯ ಮಗನ ಸಹಿತ ನಾಲ್ವರು ಕಾರ್ಮಿಕರು ಕೆಲಸದಲ್ಲಿ ನಿರತರಾಗಿ ದ್ದರು. ಸಂಜೆ ವೇಳೆ ಪಿಲ್ಲರ್ ಅಳವಡಿಸುವ ಸಲುವಾಗಿ ಹೊಂಡ ತೆಗೆಯಲಾಗುತ್ತಿತ್ತು. ಇದೇ ವೇಳೆ ಪಕ್ಕದಲ್ಲಿ ಕೆಲವು ವರ್ಷಗಳ ಹಿಂದೆ ಕಟ್ಟಲಾಗಿದ್ದ ಸಣ್ಣ ಗೋಡೆ ಕುಸಿದು ಬಿದ್ದಿದೆ. ಆ ಸಂದರ್ಭ ಅಪಾಯ ಅರಿತ ಮೂವರು ಕಾರ್ಮಿಕರು ಸ್ಥಳದಿಂದ ಓಡಿ ಹೋಗಿದ್ದಾರೆ. ಆದರೆ ಹೊಂಡದೊಳಗಿನಿಂದ ಮಣ್ಣು ತೆಗೆದು ಕೊಡುವ ಕೆಲಸದಲ್ಲಿ ನಿರತರಾಗಿದ್ದ ಪೊಡಿಯಬ್ಬ ಅವರು ಕಲ್ಲು ಮಣ್ಣಿನಡಿಗೆ ಸಿಲುಕಿ ಧಾರುಣವಾಗಿ ಮೃತಪಟ್ಟಿದ್ದಾರೆ. ಕೊಣಾಜೆ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ಕೆಲ್ಲಪುತ್ತಿಗೆ: ವ್ಯಕ್ತಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ: ಕೆಲ್ಲಪುತ್ತಿಗೆ ಗ್ರಾಮದ ಶ್ರೀ ದೇವಿ ಕೃಪಾ ಮನೆಯ ಚೀಂಕ್ರ (೫೫) ಎಂಬವರು ಧರ್ಮಸ್ಥಳಕ್ಕೆ ಹೋಗಿ ಬರುತ್ತೇನೆಂದು ಹೋದವರು ಹಿಂತಿರುಗಿ ವಾಪಸ್ ಬಾರದಿರುವ ಬಗ್ಗೆ ಮೂಡಬಿದ್ರೆ ಠಾಣೆಗೆ ಅವರ ಪುತ್ರ ಮೇ ೧೫ರಂದು ದೂರು ನೀಡಿದ್ದಾರೆ.
ಚೀಂಕ್ರ ಅವರು ಎ.೨೯ರಂದು ಮನೆಯಿಂದ ಧರ್ಮಸ್ಥಳಕ್ಕೆ ಹೋಗಿದ್ದಾರೆ. ಇವರ ಬಗ್ಗೆ ಮಾಹಿತಿ ಸಿಕ್ಕವರು ಮೂಡುಬಿದಿರೆ ಠಾಣೆ (೦೮೨೫೮_೨೩೬೩೩೩) ಯನ್ನು ಸಂಪರ್ಕಿಸಬಹುದಾಗಿದೆ.

ತಾಳಿಪಾಡಿ: ವ್ಯಕ್ತಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಿನ್ನಿಗೋಳಿ-ತಾಳಿಪಾಡಿ ನಿವಾಸಿ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.
ಸುಕುಮಾರ(೩೫) ನಾಪತ್ತೆಯಾ ದವರು. ಇವರು ವಿಟ್ಲ-ಅನಂತಾಡಿ ಯಲ್ಲಿನ ಪತ್ನಿಮನೆಗೆ ಮಾ. ೧೯ರಂದು ನೇಮೋತ್ಸವ ಪ್ರಯುಕ್ತ ತೆರಳಿದ್ದು, ಮರುದಿನ ಕೆಲಸಕ್ಕೆ ಹೋಗುತ್ತೇನೆ ಎಂದು ವಾಪಸ್ ಬಂದಿದ್ದರು. ಎಲ್ಲಾ ಕಡೆ ಹುಡುಕಾಡಿ ಫಲ ಸಿಗದೇ ಇದ್ದಾಗ ಪತ್ನು ಶುಭಾ ಎರಡು ತಿಂಗಳ ನಂತರ ಪೊಲೀಸರಿಗೆ ದೂರಿದ್ದಾರೆ.

ಸಹ್ಯಾದ್ರಿ ಸ್ಫೋಟ: ಗಾಯಾಳುಗಳು ಚೇತರಿಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳೆದ ವಾರ ಅಡ್ಯಾರು ಕಣ್ಣೂರಿನಲ್ಲಿರುವ ಸಹ್ಯಾದ್ರಿ ಕಾಲೇಜಿನ ಕ್ಯಾಂಟೀನ್‌ನಲ್ಲಿ ನಡೆದಿದ್ದ ಗ್ಯಾಸ್ ಸ್ಪೋಟದ ಗಾಯಾಳುಗಳು ಚೇತರಿಸುತ್ತಿದ್ದು ಇವರ ಪೈಕಿ ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಕಳೆದ ಶನಿವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿದ್ದ ಸೃಷ್ಟಿ ಕಾರ್ಯಕ್ರಮಕ್ಕೆ ಮುನ್ನ ಕಾಲೇಜ್ ಕ್ಯಾಂಟೀನಿನಲ್ಲಿ ಅಡುಗೆ ಅನಿಲ ಸ್ಪೋಟಗೊಂಡಿತ್ತು. ಅವಘಡದಲ್ಲಿ ಸಿಬ್ಬಂದಿ ಸದಾಶಿವ ಶೆಟ್ಟಿ, ಮಹಾಬಲ ಶೆಟ್ಟಿ, ಹರೀಶ್ ಸುವರ್ಣ, ಸುನಂದಾ, ಶಾರದಾ ಎಂಬವರು ಗಾಯಗೊಂಡಿ ದ್ದರೆ, ಸರಸ್ವತಿ ಎಂಬವರು ಗಂಭೀರ ವಾಗಿ ಗಾಯಗೊಂಡಿದ್ದು ಅವರನ್ನು ಕಂಕನಾಡಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಕ್ಯಾಂಟೀನ್‌ನಲ್ಲಿ ಅನಾಹುತ ನಡೆದ ದಿನ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರೂ ಕೇಸು ದಾಖಲಾಗಿರಲಿಲ್ಲ. ಗಾಯಗೊಂಡವರೂ ದೂರು ನೀಡಲು ಹಿಂಜರಿದಿದ್ದರು. ಘಟನೆಯ ಎರಡು ದಿನಗಳ ಬಳಿಕ ಗಾಯಾಳು ವೋರ್ವರ ಸಂಬಂಧಿಕರು ಪತ್ರಿಕೆಗೆ ಮಾಹಿತಿ ನೀಡಿದ್ದರು. ಆದರೆ ಆಸ್ಪತ್ರೆಯಲ್ಲಿ ಗಾಯಾಳುಗಳ ಜತೆಗಿದ್ದ ಅವರ ಕುಟುಂಬಸ್ಥರು ಘಟನೆಯ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದರು.
ಘಟನೆ ನಡೆದ ಬಳಿಕ ಕಾಲೇಜ್ ಮಾಲೀಕರ ಪತ್ನಿಯೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅಲ್ಲದೆ ಚಿಕಿತ್ಸೆಗಾಗಿ ಎಲ್ಲಾ ರೀತಿಯ ಸಹಕಾರ ನೀಡಿದ್ದು ಆಡಳಿತ ಮಂಡಳಿ ಗಾಯಾಳುಗಳನ್ನು ಚೆನ್ನಾ ಗಿಯೇ ನೋಡಿಕೊಳ್ಳುತ್ತಿದೆ ಎನ್ನುವ ಹೇಳಿಕೆಯನ್ನೂ ನೀಡಿದ್ದರು. ಈ ಕಾರಣ ದಿಂದಲೇ ದೂರು ನೀಡಿಲ್ಲ. ಪತ್ರಿಕೆಗಳಲ್ಲಿ ವರದಿ ಬಂದರೆ ನಮಗೆ ತೊಂದರೆ ಯಾಗುತ್ತದೆ ಎಂದು ಹಲುಬಿದ್ದರು.
ಆದರೆ ಇದೀಗ ಗಾಯಾಳುಗಳು ಧಿಡೀರನೆ ಹೇಳಿಕೆ ಬದಲಾಯಿಸಿದ್ದಾರೆ. ಇದನ್ನು ಗಮನಿಸುವಾಗ ಘಟನೆಗೆ ಕ್ಯಾಂಟೀನ್ ನಿರ್ವಾಹಕರು ಹಾಗೂ ಸಿಬ್ಬಂದಿಯ ಬೇಜವಾಬ್ದಾರಿತನ ಕಾರ ಣವೇ ಎನ್ನುವುದು ಸಾಬೀತಾಗುತ್ತದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ಮಂಡಳಿ ಸೋಮವಾರ ಸಭೆ ಹಾಗೂ ನೇತ್ರಾವತಿ ತಟದಲ್ಲಿ ಗ್ಯಾಸ್ ಬಳಕೆಯ ಬಗ್ಗೆ ಕಾರ್ಯಾಗಾರ ನಡೆಸಿದೆ. ಈ ಸಭೆಯಲ್ಲಿ ಸ್ಪೋಟದ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಸಂದರ್ಭ ಸ್ಪೋಟಕ್ಕೆ ಕ್ಯಾಂಟೀನ್ ನಿರ್ವಾಹಕರ ಬೇಜವಾಬ್ದಾರಿತನದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾ ಗಿದೆ. ಈ ಹಿನ್ನೆಲೆಯಲ್ಲಿ ಸದಾಶಿವ ಶೆಟ್ಟಿ ಅವರಿಗಿದ್ದ ಕ್ಯಾಂಟೀನ್ ನಿರ್ವಹu ಯನ್ನು ರದ್ದುಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯು ಆಕಸ್ಮಿಕ ವಾಗಿ ನಡೆದಿದೆ. ಆಡಳಿತ ಮಂಡಳಿ ಯಾಗಲೀ, ಗಾಯಾಳುಗಳಾ ಗಲೀ ದೂರು ನೀಡದ ಕಾರಣ ಎಫ್‌ಐಆರ್ ದಾಖಲಿಸಿಲ್ಲ ಎಂದು ಕಂಕನಾಡಿ ಇನ್ಸ್ ಪೆಕ್ಟರ್ ರವೀಶ್ ನಾಯಕ್ ತಿಳಿಸಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ಗಂಭೀರ ಗಾಯಗಳೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯೋರ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಸಬೆಟ್ಟು ನಿವಾಸಿ ಥೋಮಸ್ ಎಂಬವರ ಪುತ್ರ ಎಡ್ವರ್ಡ್(೪೫) ಗಾಯಗೊಂಡ ವ್ಯಕ್ತಿಯಾಗಿದ್ದು. ಇವರು ನಿನ್ನೆ ತಡ ರಾತ್ರಿ ಹೊಸಬೆಟ್ಟು ಪೆಟ್ರೋಲ್ ಬಂಕ್ ಬಳಿ ರಸ್ತೆ ಬದಿಯಲ್ಲಿ ತಲೆಬಾಗಕ್ಕೆ ಗಂಭೀರ ಗಾಯಗೊಂಡು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಮನೆಮಂದಿ ನಾಗರಿಕರ ನೆರವಿನಿಂದ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಅನಂತರ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಿದರು.

ಕಾರಿಗೆ ಬಸ್ ಡಿಕ್ಕಿ: ಓರ್ವ ಗಾಯ

Posted by JAYAKIRANA Kirana on | 0 comments | Leave a comment...

ಪುತ್ತೂರು: ಬೊಲೆರೋ ಕಾರು ಮತ್ತು ಕೆಎಸ್ಸಾರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಕಾರು ಚಾಲಕ ಗಾಯಗೊಂಡ ಘಟನೆ ನಗರದ ಹೊರವಲಯದ ಮುಕ್ರಂಪಾಡಿ ಎಂಬಲ್ಲಿ ಬುಧವಾರ ನಡೆದಿದೆ.
ಪುತ್ತೂರಿನಿಂದ ಸುಳ್ಯದ ಕಡೆಗೆ ತೆರಳುತ್ತಿದ್ದ ಬಸ್ ಮತ್ತು ಪುತ್ತೂರು ಕಡೆಗೆ ಆಗಮಿಸುತ್ತಿದ್ದ ಬಸ್ ನಡುವೆ ಡಿಕ್ಕಿ ಸಂಭವಿಸಿತ್ತು. ಅಪಘಾತದಲ್ಲಿ ಕಾರು ಚಾಲಕ ಮೂಲತ: ಕಾಸರಗೋಡು ನಿವಾಸಿ ಸಂದೀಪ್(೩೫) ಗಾಯಗೊಂಡರು. ಗಾಯಾಳುವನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಸುಳ್ಯ: ಮದ್ಯವ್ಯಸನಿಯಾಗಿದ್ದ ಐವರ್ನಾಡಿನ ಬಾಬು(೫೦) ಎಂಬವರು ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಗಂಭೀರ್ ಪಡೆಗೆ ೩೨ ರನ್ ಗೆಲುವು

Posted by JAYAKIRANA Kirana on | 0 comments | Leave a comment...

ನಾರೈನ್ ಮಾರಕ ಸ್ಪಿನ್ ದಾಳಿಗೆ ಮುಂಬೈ ತತ್ತರ
ಮುಂಬಯಿ: ಸುನಿಲ್ ನಾರೈನ್ ನಡೆಸಿದ ಅತ್ಯದ್ಭುತ ಸ್ಪಿನ್ ದಾಳಿಯ ನೆರವಿನಿಂದ ಇಲ್ಲಿ ಆತಿಥೇಯ ಮುಂಬೈ ವಿರುದ್ಧದ ಪಂದ್ಯವನ್ನು ಕೊಲ್ಕತ್ತಾ ನೈಟ್‌ರೈಡರ್ ೩೨ ರನ್‌ಗಳಿಂದ ಗೆದ್ದುಕೊಂಡಿದ್ದು, ಈ ಮೂಲಕ ತಂಡ ಈ ಹಿಂದಿನ ತವರಿನ ಸೋಲಿಗೆ ಸೇಡು ತೀರಿಸಿಕೊಂಡಿತು.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಕೊಲ್ಕತ್ತಾ ಆರಂಭದಲ್ಲೇ ವಿಕೆಟ್ ಕಳಕೊಂಡಿತು. ತಂಡದ ಮೊತ್ತ ಆರು ರನ್ ಆಗಿದ್ದಾಗ ಸ್ಫೋಟಕ ಮೆಕ್‌ಕಲಂ (೧) ಹಾಗೂ ಕ್ಯಾಲಿಸ್ (೦) ವಿಕೆಟ್ ಕಳಕೊಂಡಾಗ ಕೆಕೆಆರ್ ತೀವ್ರ ಹಿನ್ನೆಡೆಯಲ್ಲಿತ್ತು. ನಾಯಕ ಗಂಭೀರ್ (೨೭), ಮನೋಜ್ ತಿವಾರಿ (೪೧) ಹಾಗೂ ಯೂಸುಫ್ ಪಠಾಣ್ (೨೧) ಅಂತಿಮ ಹಂತದಲ್ಲಿ ಪ್ರದರ್ಶಿಸಿದ ಹೋರಾಟದ ಇನ್ನಿಂಗ್ಸ್ ನೆರವಿನಿಂದ ತಂಡ ನಿಗದಿತ ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಹೋರಾಟದ ೧೪೦ ರನ್ ಗಳಿಸಲು ಶಕ್ತವಾಯಿತು. ಮುಂಬೈ ಪರ ಆರ್.ಪಿ. ಸಿಂಗ್ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಮುಂಬೈ ಪರ ಅಗ್ರಕ್ರಮಾಂಕದ ಆಟಗಾರರು ಉತ್ತಮ ಜೊತೆಯಾಟ ನಡೆಸಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವಿಫಲ ಗೊಂಡಿತು. ಅದರಲ್ಲೂ ಸುನಿಲ್ ಪ್ರತಿಯೊಂದು ಎಸೆತಗಳಿಗೂ ಸಮರ್ಥ ಉತ್ತರ ನೀಡುವಲ್ಲಿ ಮುಂಬೈ ಎಡವಿತು. ಹಾಗಾಗಿ ತಂಡ ೧೯.೧ ಓವರ್‌ಗಳಲ್ಲಿ ೧೦೮ ರನ್‌ಗೆ ಸರ್ವಪತನ ಕಂಡಿತು. ನಾರೈನ್ ನಾಲ್ಕು ವಿಕೆಟ್ ಪಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಮುಂಬೈ ಪರ ಅರಂಭಿಕರಾದ ಗಿಬ್ಸ್ (೧೩) ಹಾಗೂ ಸಚಿನ್ (೨೭) ಉತ್ತಮ ಆಟ ನೀಡಿದರು. ಕಾರ್ತಿಕ್ (೨೧) ಕೂಡ ಕೆಲಹೊತ್ತು ಕ್ರೀಸ್‌ನಲ್ಲಿದ್ದರು. ಸಚಿನ್ ಹಾಗೂ ಕಾರ್ತಿಕ್ ಎರಡನೇ ವಿಕೆಟ್‌ಗೆ ೩೪ ರನ್‌ಗಳ ಜೊತೆಯಾಟ ನಡೆಸಿದರು. ರಾಯುಡು (೧೧) ಶಕಿಬ್ ಎಸೆತದಲ್ಲಿ ಸ್ಪಂಟ್ಡ್ ಔಟಾದರು. ಆದರೆ ಈ ವೇಳೆ ೧೬ನೇ ಎಸೆಯಲು ಬಂದ ಕ್ಯಾಲೀಸ್ ತನ್ನ ನಾಲ್ಕು ಹಾಗೂ ಐದನೇ ಎಸೆತದಲ್ಲಿ ಕ್ರಮಾವಾಗಿ ಪೊಲಾರ್ಡ್ (೮) ಹಾಗೂ ಸ್ಮಿತ್ (೦) ಪಡೆದಾಗ ಕೊಲ್ಕತ್ತಾ ಮೇಲುಗೈ ಸಾಧಿಸಿತು. ಮುಂದಿನ ನಾರೈನ್ ಓವರ್‌ನ ಪ್ರಥಮ ಎಸೆತದಲ್ಲಿ ಹರ್ಭಜನ್ (೧) ತನ್ನ ವಿಕೆಟ್ ಕಳಕೊಂಡಾಗ ತಂಡ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿತು. ಆದರೆ ನಾರೈನ್ ತನ್ನ ಐದನೇ ಎಸೆತದಲ್ಲಿ ಏಕೈಕ ನಂಬಿಕಸ್ಥ ಆಟಗಾರನಾಗಿದ್ದ ರೊಹಿತ್ ಶರ್ಮಾ(೧೨) ಗೆ ಪೆವಿಲಿಯನ್ ದಾರಿ ತೋರಿಸುವ ಮೂಲಕ ಸಂಪೂರ್ಣ ಪಂದ್ಯವನ್ನು ಕೆಕೆಆರ್ ಪರ ವಾಲುವಂತೆ ಮಾಡಿದರು. ಈ ಹಿಂದೆ ಗಂಭೀರ್ ಹಾಗೂ ತಿವಾರಿ ಜೋಡಿ ಮೂರನೇ ವಿಕೆಟ್‌ಗೆ ೩೮ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ನಂತರ ತಿವಾರಿ ಶಾಕಿಬ್ (೧೩) ಜೊತೆ ೪೫ ರನ್‌ಗಳ ಜೊತೆಯಾಟ ನಡೆಸಿದರು. ಆದರೆ ಏಳನೇ ವಿಕೆಟ್‌ಗೆ ಭಾಟಿಯಾ (೧೨) ಹಾಗೂ ಪಠಾಣ್ (೨೧) ಕೇವಲ ೧೫ ಎಸೆತಗಳಲ್ಲಿ ೨೯ ರನ್ ಪೇರಿಸಿದ್ದು, ತಂಡಕ್ಕೆ ಮುನ್ನಡೆಯನ್ನು ತಂದುಕೊಟ್ಟಿತು.

ಟೆರ್ರಿಗೆ ಅವಕಾಶ; ಫರ್ಡಿನಾಂಡ್‌ಗೆ ಖೊಕ್

Posted by JAYAKIRANA Kirana on | 0 comments | Leave a comment...

ಯೂರೋ ಕಪ್-೨೦೧೨; ಇಂಗ್ಲೆಂಡ್ ತಂಡ ಪ್ರಕಟ
ಲಂಡನ್: ಮುಂದೆ ನಡೆಯಲಿರುವ ಪ್ರತಿಷ್ಟಿತ ಯೂರೋ ಕಪ್-೨೦೧೨ಕ್ಕೆ ೨೩ ಸದಸ್ಯರ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಚೆಲ್ಸಿ ನಾಯಕ ಜಾನ್ ಟೆರ್ರಿ ತಂಡದಲ್ಲಿ ಸ್ಥಾನ ಪಡೆಯಲು ಸಫಲವಾಗಿದ್ದರೆ ರಿಯೊ ಫರ್ಡಿನಾಂಡ್‌ಗೆ ಖೊಕ್ ನೀಡಲಾಗಿದೆ. ಲಿವರ್‌ಪೂಲ್ ಸ್ಟ್ರೈಕರ್‌ಗಳಾದ ಆಂಡಿ ಕ್ಯಾರೊಲ್ ಹಾಗೂ ಆರ್ಸೆನಾಲ್‌ನ ಅಲೆಕ್ಸ್ ಒಸ್ಲೆಡ್ ಸ್ಥಾನ ಪಡೆದ ಇತರರು. ಕೋಚ್ ರೋಯ್ ಹಡ್ಸನ್ ನೇತೃತ್ವದಲ್ಲಿ ತಂಡವನ್ನು ಪ್ರಕಟಿಸಲಾಗಿದೆ. ಟೆರ್ರಿ ಅಥವಾ ಫರ್ಡಿನಾಂಡ್ ಇವರ ಪೈಕಿ ಒಬ್ಬರಿಗೆ ಅವಕಾಶ ಲಭಿಸುವುದು ಈ ಹಿಂದೆಯೇ ನಿರ್ಧಾರವಾಗಿತ್ತು. ಟೂರ್ನಿಯು ಜೂನ್ ೮ರಿಂದ ಆರಂಭವಾಗಿ ಜುಲೈ ಒಂದರ ವರೆಗೆ ನಡೆಯಲಿದೆ. ಆತಿಥೇಯ ಪೊಲ್ಯಾಂಡ್ ಹಾಗೂ ಗ್ರೀಸ್ ಮಧ್ಯೆ ಉದ್ಘಾಟನಾ ಪಂದ್ಯ ನಡೆಯಲಿದೆ.
ತಂಡ (ಡಿಫೆಂಡರ‍್ಸ್): ಜೊಯ್ ಹರ್ಟ್,ರೊಬರ್ಟ್ ಗ್ರೀನ್, ಜಾನ್ ರೂಡಿ, ಗ್ಲೆನ್ ಜಾನ್ಸನ್, ಜೋನ್ಸ್, ಟೆರ್ರಿ, ಲೆಸ್ಕೊಟ್, ಗ್ಯಾರಿ ಕೆಹಿಲ್, ಕೊಲ್, ಬೈನ್ಸ್ ಮಿಡ್‌ಫೀಲ್ಡರ‍್ಸ್: ವಾಲ್ಕೊಟ್, ಡೊವ್ಲಿಂಗ್, ಅಕ್ಸ್‌ಲೆಡ್, ಜೆರಾರ‍್ಡ್, ಬೆರಿ, ಲಂಪಾರ್ಡ್, ಪಾರ್ಕರ್, ಯಂಗ್, ಜೇಮ್ಸ್ ಮಿಲ್ನರ್, ಸ್ಟ್ರೈಕರ‍್ಸ್: ವೇಯ್ನ್ ರೂನಿ, ವೆಲ್‌ಬ್ಯಾಕ್, ಕ್ಯಾರೊಲ್, ಜೆರ್ಮೆನ್ ಡೆಫೊ.

ದೇಶಿ ಆಟಗಾರರಿಗೆ ಪ್ರತ್ಯೇಕ ಹರಾಜು ಪ್ರಕ್ರಿಯೆ ಸಾಧ್ಯತೆ

Posted by JAYAKIRANA Kirana on | 0 comments | Leave a comment...

ಐಪಿಎಲ್‌ನಲ್ಲಿ ಕಳ್ಳಾಟ: ಕೊನೆಗೂ ಎಚ್ಚೆತ್ತ ಬಿಸಿಸಿಐ
ದೆಹಲಿ: ಐಪಿಎಲ್‌ನಲ್ಲಿ ಕಳ್ಳಾಟ ನಡೆಸಿದ ಆರೋಪ ಬಂದ ಮೇಲೆ ಈಗಾಗಲೇ ಐವರು ಆಟಗಾರರನ್ನು ಬಿಸಿಸಿಐ ನಿಷೇಧಗೊಳಪಡಿಸಿದ್ದು, ಮುಂದೆ ಈ ಘಟನೆ ನಡೆಯದಂತೆ ಅದು ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ಮುಂದಿನ ಋತುವಿನ ಐಪಿಎಲ್‌ನಲ್ಲಿ ದೇಶಿ ಆಟಗಾರರಿಗೆ ಮುಕ್ತ ಅಥವಾ ಪ್ರತ್ಯೇಕ ಹರಾಜು ಪ್ರಕ್ರಿಯೆಯನ್ನು ನಡೆಸಲು ಬಿಸಿಸಿಐ ಆಸಕ್ತಿ ವಹಿಸಿದೆ ಎಂದು ಹೇಳಲಾಗಿದೆ.
ಇಂತಹ ಆರೋಪಗಳು ತಂಡಗಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರುವುದರಲ್ಲಿ ಯಾವುದೇ ಅನುಮಾವನಿಲ್ಲ. ಈ ಪರಿಸ್ಥಿತಿಯನ್ನು ತಪ್ಪಿಸಲು ಇನ್ನು ಭಾರತೀಯ ಹೊಸ ಆಟಗಾರರಿಗೆ ಮುಕ್ತ ಇಲ್ಲವೇ ಪ್ರತ್ಯೇಕ ಹರಾಜು ಪ್ರಕ್ರಿಯೆಯನ್ನು ನಡೆಸಬೇಕಿದ್ದು, ಈ ಬಗ್ಗೆ ನಾವು ಈಗಾಗಲೇ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಬಳಿ ಮನವಿ ಮಾಡಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ನಮಗೆ ಭರವಸೆ ನೀಡಿದ್ದಾರೆ ಎಂದು ಟೂರ್ನಿಯ ತಂಡಗಳು ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ಬಿಸಿಸಿಐ ಪ್ರಕಾರ, ಬೋರ್ಡ್ ಅಡಿಯಲ್ಲಿ ಐದು ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ ಅನುಭವ ಇರುವ ಆಟಗಾರನು ಗರಿಷ್ಠ ೩೦ ಲಕ್ಷ ರೂ. ವೇತನವನ್ನು ಪಡೆಯುತ್ತಿದ್ದಾರೆ. ಆದರೆ ಪ್ರತ್ಯೇಕ ಹರಾಜು ಪ್ರಕ್ರಿಯೆಯು ಬಿಸಿಸಿಐಗೆ ಕಾರ‍್ಯಸಾಧುವಾಗಿರಲಿಕ್ಕಿಲ್ಲ. ಆದರೆ ಇದು ಅತ್ಯಗತ್ಯವಾಗಿದ್ದು, ಇದು ಪಾವತಿಯ ಪಾರದರ್ಶಕತೆಯನ್ನು ಕಾಪಾಡಲು ಸಹಕಾರಿಯಾಗಿದೆ ಎಂದು ಅದು ತಿಳಿಸಿದೆ.

ಜೆಡಿಎಸ್ ಪ್ರಚಾರಕ್ಕೆ ಅಡ್ಡಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಮಂಗ ಳೂರು ವಿಶ್ವವಿದ್ಯಾಲಯಕ್ಕೆ ಪ್ರಚಾರ ಕ್ಕಾಗಿ ಬಂದಿದ್ದ ಜೆಡಿಎಸ್ ಅಭ್ಯರ್ಥಿಗೆ ಪ್ರಾಂಶುಪಾಲರು ಅಡ್ಡಿಪಡಿಸಿದ ಘಟನೆ ನಿನ್ನೆ ನಡೆದಿದೆ.
ರಾಜ್ಯ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಪದವೀಧರರ ಕ್ಷೇತ್ರದಿಂದ ಜೆಡಿಎಸ್ ಅಭ್ಯಥಿಯಾಗಿ ಭೋಜೇಗೌಡ ಅವರು ಸ್ಪರ್ಧಿಸುತ್ತಿದ್ದಾರೆ. ಎದುರಾಳಿಯಾಗಿ ಬಿಜೆಪಿಯ ಶಂಕರಮೂರ್ತಿ ಸ್ಪರ್ಧಿಸು ತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ದಂದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಚಾರಕ್ಕಾಗಿ ಬಿಜೆಪಿಯ ಡಿ.ಎಚ್.ಶಂಕರಮೂರ್ತಿ ಹಾಗೂ ಗಣೇಶ್ ಕಾರ್ಣಿಕ್ ಅವರು ಆಗಮಿಸಿದ್ದರು. ಇದೇ ವೇಳೆ ನಿನ್ನೆ ಭೋಜೇಗೌಡರು ವಿವಿಗೆ ಆಗಮಿಸಿದ್ದರು. ಆದರೆ ಅವರನ್ನು ತಡೆದ ಪ್ರಾಂಶುಪಾಲರು ಇಲ್ಲಿ ಪ್ರಚಾರಕ್ಕೆ ಅವಕಾಶ ಇಲ್ಲ ಎಂದರು.
 ಈ ಸಂದರ್ಭ ಹಿಂದಿನ ದಿನ ಬಿಜೆಪಿ ಅಭ್ಯರ್ಥಿಗಳು ಬಂದಿದ್ದ ಬಗ್ಗೆ ಭೋಜೇಗೌಡರು ಪ್ರಸ್ತಾಪಿಸಿದಾಗ ಪ್ರಾಂಶುಪಾಲರು ಇಲ್ಲ ಎಂದೇ ವಾದಿಸಿದರು. ಆ ವೇಳೆ ಇಬ್ಬರೊಳಗೆ ಮಾತಿನ ಚಕಮಕಿಯೂ ನಡೆಯಿತು. ಕೊನೆಗೆ ಬಿಜೆಪಿ ಅಭ್ಯರ್ಥಿಗಳು ಬಂದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡ ಪ್ರಾಂಶುಪಾಲರು ಅವರು ಬಂದಿರಬಹುದು, ಆದರೆ ನನಗೆ ಮಾಹಿತಿಯಿಲ್ಲ ಎಂದು ತಪ್ಪನ್ನು ಮುಚ್ಚಿಡುವ ಪ್ರಯತ್ನವನ್ನೂ ಮಾಡಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಭೋಜೇಗೌಡರು ವಿವಿ ಪ್ರಾಂಶುಪಾಲರು ಬಿಜೆಪಿ ಅಭ್ಯರ್ಥಿಗಳ ಪರವಾಗಿದ್ದಾರೆ. ಈ ಕಾರಣದಿಂದ ನಮಗೆ ಪ್ರಚಾರಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.

‘ನಾನು ಯಡಿಯೂರಪ್ಪ ಮಗನ ಜೊತೆ ಡೇಟಿಂಗ್ ಮಾಡುತ್ತಿಲ್ಲ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಗಣಿಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೂ ಸಿಬಿಐ ದಾಳಿ ನಡೆಸಿದೆ. ಯಡಿಯೂರಪ್ಪ ಮಗನ ಗೆಳತಿ ನಟಿ ಹರಿಪ್ರಿಯಾ ಅವರ ಸದಾಶಿವ ನಗರದ ಮೇಲೂ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಖಾಸಗಿ ಮಾಧ್ಯಮಗಳ ವರದಿಯನ್ನು ನಟಿ ಹರಿಪ್ರಿಯಾ ಅಲ್ಲಗೆಳೆದಿದ್ದಾರೆ.
ನಾನು ಯಡಿಯೂರಪ್ಪ ಅವರ ಮಗನ ಜೊತೆ ಡೇಟಿಂಗ್ ಮಾಡುತ್ತಿಲ್ಲ. ಯಡಿಯೂರಪ್ಪ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂಬುದೇ ಗೊತ್ತಿರಲಿಲ್ಲ. ನನಗೆ ಅವರ ಮಗ ವಿಜಯೇಂದ್ರ ಗೊತ್ತಿಲ್ಲ. ನನ್ನ ಮನೆ ಮೇಲೆ ಸಿಬಿಐ ದಾಳಿ ನಡೆದಿಲ್ಲ. ಇಷ್ಟಕ್ಕೂ ನನ್ನ ಮನೆ ಇರುವುದು ಯಶವಂತ ಪುರದಲ್ಲಿ, ಸದಾಶಿವನಗರದಲ್ಲಲ್ಲ. ಮಾಧ್ಯಮಗಳ ವರದಿಯಿಂದ ಶಾಕ್ ಆಗಿದೆ.  ಊಹಾಪೋಹ ಸುದ್ದಿಗಳನ್ನು ನಂಬಬೇಡಿ ಎಂದು ಮೋಹಕ ನಟಿ ಹರಿಪ್ರಿಯಾ ಪ್ರತಿಕ್ರಿಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಹಾಗೂ ಹರಿಪ್ರಿಯಾ ಅವರಿಗೆ ಆತ್ಮೀಯ ಗೆಳೆತನವಿದೆ ಎಂದು ಖಾಸಗಿ ಕನ್ನಡ ಸುದ್ದಿ ವಾಹಿನಿಯಲ್ಲಿ ವರದಿ ಮಾಡಲಾಗಿತ್ತು. ಎರಡು ವರ್ಷಗಳ ಹಿಂದೆ ಡಾಲರ್ಸ್ ಕಾಲೋನಿಯಲ್ಲಿ ಹರಿಪ್ರಿಯಾ ಅವರಿದ್ದ ಬಾಡಿಗೆ ಮನೆಯನ್ನೆ ಇಂದಿನ ವರದಿಯಲ್ಲೂ ತೋರಿಸಲಾಗಿತ್ತು. ಆದರೆ, ಹರಿಪ್ರಿಯಾ ಮೇಲೆ ಈ ರೀತಿ ಗಾಸಿಪ್ ಇದೇ ಮೊದಲಲ್ಲ. ಮನಸುಗಳ ಮಾತು ಮಧುರ, ಕಳ್ಳರ ಸಂತೆ ಚಿತ್ರ ಬಿಡುಗಡೆ ಸಮಯದಲ್ಲೂ ಈ ರೀತಿ ಗಾಳಿ ಸುದ್ದಿಗಳು ಹರಡಿತ್ತು. ಈಗ ಕಿಲಾಡಿ ಕಿಟ್ಟಿ ಚಿತ್ರ ಈ ವಾರ ಬಿಡುಗಡೆಯಾಗಬೇಕಿದೆ. ಯಾರೋ ಬೇಕಂತಲೇ ನನ್ನ ಹೆಸರು ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಟಿಸಿರುವ ನನಗೆ ಕನ್ನಡ ಚಿತ್ರರಂಗದಲ್ಲಿ ಬೆಳೆಯಬೇಕು ಎಂಬ ಆಸೆಗೆ ಪದೇ ಪದೇ ಕೊಡಲಿ ಪೆಟ್ಟು ನೀಡಲು ಕೆಲವರು ಕಾದು ಕೂತಿದ್ದಾರೆ ಎಂದು ಹರಿಪ್ರಿಯಾ ಹೇಳಿದ್ದಾರೆ.

ಟಿಂಟ್ ಗ್ಲಾಸ್ ತೆರವಿಗೆ ತಡೆ ನೀಡಲು ನ್ಯಾಯಾಲಯಕ್ಕೆ ಮೊರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದಲ್ಲಿ ಕಾರಿನ ಕಪ್ಪು ಪಟ್ಟಿಯನ್ನು ತೆರವುಗೊಳಿಸುವುದಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಮುಖೇಶ್ ಎಂಬವರು ನ್ಯಾಯಾಲ ಯದಲ್ಲಿ ದಾವೆ ಹೂಡಿದ್ದಾರೆ.
ಮಂಗಳೂರಿನ ವಾತಾವರಣಕ್ಕೆ, ಇಲ್ಲಿನ ಬಿಸಿಲಿನ ಪ್ರಖರತೆಗೆ ಕಾರಿನ ಗಾಜಿಗೆ ಕಪ್ಪು ಪಟ್ಟಿಯ ಅಗತ್ಯತೆ ಇದೆ ಇಲ್ಲಿನ ವಾತಾವರಣಕ್ಕೆ ಈ ಗಾಜು ಮಾತ್ರ ಸೂಕ್ತ ಎಂದವರು ನ್ಯಾಯಾ ಲಯಕ್ಕೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ.
ಕಾರಿನ ಗಾಜಿಗೆ ಕಪ್ಪು ಪಟ್ಟಿ ಅಳ ವಡಿಸುವುದರಿಂದಾಗಿ ಅಪಘಾತ ನಡೆದಾಗ ಕಾರಿನ ಗಾಜು ಒಡೆದು ಹೋದರೂ ಕಾರಿನಲ್ಲಿದ್ದವರಿಗೆ ಹಾನಿ ಯಾಗುವ ಸಂಭವ ತಪ್ಪುತ್ತದೆ. ಸೂರ್ಯನ ಕಿರಣದಿಂದ ಬರುವ ಚರ್ಮರೋಗದಂತಹ ಕಾಯಿಲೆಗಳನ್ನು ತಡೆಯುವಲ್ಲೂ ಕಪ್ಪು ಪಟ್ಟಿ ಸಹಕಾರವನ್ನು ನೀಡುತ್ತದೆ, ಅಲ್ಲದೆ ಕಾರಿನಲ್ಲಿ ಬೆಲೆ ಬಾಳುವ ವಸ್ತುಗಳನ್ನು ಸಾಗಿಸುವಾಗ ಕಪ್ಪು ಪಟ್ಟಿ ಇದ್ದರೆ ವಸ್ತುಗಳನ್ನು ಸುಲಭವಾಗಿ ಸಾಗಿಸಬಹುದು, ಒಂಟಿ ಮಹಿಳೆಯರು ನಿರ್ಭಿತವಾಗಿ ಕಾರು ಚಲಾಯಿಸ ಬಹುದು. ಈ ಎಲ್ಲಾ ಕಾರಣವನ್ನು ಪರಿಗಣಿಸಿಕೊಂಡು ಮಂಗಳೂರಿನಲ್ಲಿ ಕಾರಿಗೆ ಕಪ್ಪಗಾಜನ್ನು ಅಳವಡಿಸಲು ಮತ್ತು ಅಳವಡಿಸಿದ ಕಪ್ಪು ಪಟ್ಟಿಯನ್ನು ತೆರವು ಮಾಡದಂತೆ ಆದೇಶ ನೀಡಬೇಕೆಂದು ಮಂಗಳೂರು ನಿವಾಸಿ ಮುಖೇಶ್ ಮತ್ತವರ ಐವರು ಸ್ನೇಹಿತರು ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಿದ್ದಾರೆ ಎಂದು ತಿಳಿದು ಬಂದಿದೆ.

ಯುವಜಾಗೃತಿ ಸಮಾವೇಶಕ್ಕೆ ೫ ಸಾವಿರ ಕಾರ್ಯಕರ್ತರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಿಜೆಪಿ ಯುವ ಮೋರ್ಚಾ ವತಿಯಿಂದ ಮೇ ೨೨ಕ್ಕೆ ಮಂಗಳೂರು ಕೇಂದ್ರ ಮೈದಾನದಲ್ಲಿ ನಡೆಯುವ ‘ಯುವ ಜಾಗೃತಿ’ ಸಮಾವೇಶಕ್ಕೆ ಮೂಡಬಿದ್ರೆ ಮಂಡಲದಿಂದ ಐದು ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮೂಡಬಿದ್ರೆ ಮಂಡಲ ಅಧ್ಯಕ್ಷೆ ಕಸ್ತೂರಿ ಪಂಜ ತಿಳಿಸಿದ್ದಾರೆ.
ಕಿನ್ನಿಗೋಳಿ ಯುಗಪುರುಷದಲ್ಲಿ ನಡೆದ ಮಂಡಲ ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗವಹಿಸಿದ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್‌ರವರು ಮಾತನಾಡಿ, ದೇಶದಲ್ಲಿ ಭಯೋತ್ಪಾದನೆ, ನಕ್ಸಲ್‌ವಾದ, ಮತಾಂತರ ವಿರುದ್ಧ ಯುವಕರನ್ನು ಜಾಗೃತಗೊಳಿಸುವ ರಾಷ್ಟ್ರಭಕ್ತ ಯುವಕರನ್ನು ಸಂಘಟಿಸುವ ಅಗತ್ಯವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಭುವನಾಭಿರಾಮ ಉಡುಪ, ಕಾರ್ಯದರ್ಶಿ ಸತೀಶ್ ಕುಂಪಲ, ಮೂಡಬಿದ್ರೆ ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ್, ಮೂಡಬಿದ್ರೆ ಮಂಡಲ ಯುವಮೋರ್ಚಾ ಅಧ್ಯಕ್ಷ ಪ್ರಸಾದ್, ಜಿ.ಪಂ. ಸದಸ್ಯರಾದ ಈಶ್ವರ್ ಕಟೀಲ್, ರಿತೇಶ್ ಶೆಟ್ಟಿ, ಆಶಾ ಸುವರ್ಣ, ಸುಚರಿತ ಶೆಟ್ಟಿ, ಕೆ.ಆರ್. ಪಂಡಿತ್, ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು.

ಕಾಲೇಜು ಸ್ಥಳಾಂತರ ಖಂಡನೀಯ: ಸಿಪಿಎಂ

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ಎಡರಂಗ ಸರಕಾ ರದ ಅವಧಿಯಲ್ಲಿ ಸಿ.ಎಚ್. ಕುಂಜಂಬು ಶಾಸಕರಾಗಿದ್ದಾಗ ಮೀಂಜ ಪಂಚಾಯತಿನ ಬಾಳಿಯುರಿ ನಲ್ಲಿ ಕೇಂದ್ರ-ಕೇರಳ ಸರಕಾರದ ಸಹಾಯದೊಂದಿಗೆ ಬಂದರು ಇಲಾಖೆ ನೇತೃತ್ವದಲ್ಲಿ ಸ್ಥಾಪಿಸಲ್ಪಟ್ಟ ಮ್ಯಾರಿಟೈಂ ಇಂಜಿನಿಯರಿಂಗ್ ಕಾಲೇಜನ್ನು ಸ್ಥಳಾಂತರಿಸಿರುವುದು ಖಂಡನೀಯ ವೆಂದು ಸಿ.ಪಿ.ಎಂ ಮಂಜೇಶ್ವರ ಏರಿಯ ಕಮಿಟಿ ಹೇಳಿಕೆಯಲ್ಲಿ ತಿಳಿಸಿದೆ.
ಮೀಂಜ ಗ್ರಾ. ಪಂ. ೧೨.೩೮ ಎಕ್ರೆ ಸ್ಥಳವನ್ನು ಮುಡಂಬೈಲು ಗ್ರಾಮದ ಬಾಳಿಯುರಿನಲ್ಲಿ ಒದಗಿಸಿಕೊಟ್ಟು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಸಂದರ್ಶಿಸಿ ವಿವಿಧ ಇಲಾಖೆಯಿಂದ ಪರಿಶೋಧನೆ ನಡೆಸಿ ಸ್ಥಳದ ಆಯ್ಕೆ ಪೂರ್ಣಗೊಳಿಸಿದ ನಂತರ ಇಲಾ ಖೆಯು ಕಾಲೇಜು ಸ್ಥಾಪನೆಗೆ ಅನುಮತಿ ಕೊಟ್ಟು ಅಧಿಕಾರಿಗಳನ್ನು ನೇಮಕ ಮಾಡಿತು. ಅಂದಿನ ಬಂದರು ಸಚಿವರಾ ಗಿದ್ದ ಎಂ. ವಿಜಯ ಕುಮಾರ್ ಕಾಲೇಜಿನ ಕಟ್ಟಡಕ್ಕೆ ಶಿಲಾನ್ಯಾಸ ಮತ್ತು ಕಾಲೇಜನ್ನು ಉದ್ಘಾಟಿಸಿದರು. ಬಂದ್ಯೋಡಿನ ಖಾಸಗಿ ಕಟ್ಟಡದಲ್ಲಿ ಕಾಲೇಜು ಪ್ರಾರಂಭಗೊಂಡಿತ್ತು. ಪ್ರಥಮ ೪ ಬ್ಯಾಚುಗಳಲಾಗಿ ಬೋಟು ಚಾಲನ ತರಬೇತಿ ಪ್ರಾರಂಬಿಸಲಾಗಿತ್ತು. ಕಾಲೇಜು ಕಟ್ಟಡಕ್ಕೆ ೫ ಕೋಟಿ ರೂ. ಅನುದಾನ ನೀಡಲಾಗಿತ್ತು. ಮಂಗಲ್ಪಾಡಿ ಪಂಚಾಯತ್‌ನಲ್ಲಿ ಅತೀ ಹೆಚ್ಚಿನ ಸಂಖೆಯಲ್ಲಿ ಹಡಗಿನ ಉದ್ಯೋ ಗಾರ್ಥಿಗಳಿದ್ದು ಈಗ ಅವರು ಚೆನೈ, ಮುಂಬಯಿ, ಗೋವಾ, ಗುಜರಾತ್, ವಿಶಾಖಪಟ್ಟಣ ಮುಂತಾದ ಕಡೆಗಳಲ್ಲಿ ಹೋಗಿ ಕಲಿಯಬೇಕಾಗಿದೆ. ಇದಕ್ಕೆ ಪರಿಹಾರ ಎಂಬ ನೆಲೆಯಲ್ಲಿ ಈ ಕಾಲೇಜನ್ನು ಇಲ್ಲಿ ಸ್ಥಾಪಿಸಲು ಎಡ ರಂಗ ಸರಕಾರ ಮುಂದಾಗಿತ್ತು. ಆದರೆ ಯು.ಡಿ.ಎಫ್.
ಸರಕಾರ ಅಧಿಕಾರಕ್ಕೆ ಬಂದಾಗ ಕಾಲೇಜನ್ನು ಇಲ್ಲಿಂದ ಸ್ಥಳಾಂತರ ಮಾಡಲಾಯಿತು. ಮಂಗಳೂರಿನ ವಿದ್ಯಾಭ್ಯಾಸ ಲಾಭಿಗಾಗಿ ಈ ಕಾಲೇಜನ್ನು ಇಲ್ಲಿಂದ ಸ್ಥಳಾಂತರಿ ಸಲಾಯಿತು. ಇದಕ್ಕೆ ಶಾಸಕರ ಕುಮ್ಮಕ್ಕು ಕೂಡ ಇದೆ. ಯು.ಡಿ.ಎಫ್. ಸರಕಾರದ ಒಂದನೇ ವಾರ್ಷಿಕ ನಡೆಯುವಾಗ ವಂಚನೆಯ ಮುಖವಾಡವನ್ನು ಮಂಜೇಶ್ವರದ ಜನತೆ ಕಾಣುವಂತಾ ಯಿತು ಎಂದು ಸಿ.ಪಿ.ಎಂ.ಮಂಜೇಶ್ವರ ಏರಿಯ ಸಮಿತಿ ಕಾರ್ಯದರ್ಶಿ ಕೆ.ಆರ್.ಜಯಾನಂದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸಿಬಿಐ ದುರ್ಬಳಕೆ ಸರಿಯಲ್ಲ: ಸಿ.ಟಿ. ರವಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಮಾಜೀ ಮುಖ್ಮ ಮಂತ್ರಿ ಯಡಿಯೂರಪ್ಪ ಪ್ರಕರಣದಲ್ಲಿ ಕಾಂಗ್ರೆಸ್ ತನ್ನ ಅಧಿಕಾರ ಲಾಲಸೆಗಾಗಿ ಸಿಬಿಐನ್ನು ದುರ್ಬಳಕೆ ಮಾಡಿಕೊಳ್ಳ ಬಾರದು ಎಂದು ಬಿಜೆಪಿ ಆಗ್ರಹಿಸಿದೆ.
ವಿಧಾನಸೌಧದಲ್ಲಿಂದು ಪಕ್ಷದ ಶಾಸಕಾಂಗ ಕಚೇರಿಯಲ್ಲಿ ಸುದ್ದಿ ಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ವಕ್ತಾರ ಸಿ.ಟಿ.ರವಿ, ಕಾಂಗ್ರೆಸ್ ತನ್ನ ಅಧಿಕಾರ ದಾಹಕ್ಕಾಗಿ ಸಿಬಿಐನ್ನು ದುರ್ಬಳಕೆ ಮಾಡಿಕೊಂಡ ಹಲವಾರು ಪ್ರಕರಣಗಳಿವೆ. ಇದೂ ಅಂತಹ ಪ್ರಕರಣಗಳಲ್ಲಿ ಒಂದಾಗಬಾರದು ಎಂದರು.
ಆರೋಪ ಹೊತ್ತವರ ವಿರುದ್ಧ ಸಿಬಿಐ ತನಿಖೆ ನಡೆಸುವುದು ಸಹಜ.ಆ ದೃಷ್ಟಿಯಿಂದ ಇದು ಮಾಜೀ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಗ್ನಿ ಪರೀಕ್ಷೆ.ಆದರೆ ಈ ಅಗ್ನಿ ಪರೀಕ್ಷೆ ಯಲ್ಲಿ ಅವರು ಗೆದ್ದು ಹೊರಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ತನ್ನ ಅಧಿಕಾರ ದಾಹಕ್ಕಾಗಿ ಸಿಬಿಐನ್ನು ದುರ್ಬಳಕೆ ಮಾಡಿಕೊಂಡ ಹಲವಾರು ಉದಾ ಹರಣೆಗಳು ಕಣ್ಣ ಮುಂದಿವೆ.ಉತ್ತರ ಪ್ರದೇಶದಲ್ಲಿ ಮುಲಾಯಂಸಿಂಗ್ ಯಾದವ್,ಮಾಯಾವತಿ,ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಹೀಗೆ ದೇಶದ ಹಲವಾರು ರಾಜ್ಯಗಳ ನಾಯಕರನ್ನು ಹಣಿಯಲು ಕಾಂಗ್ರೆಸ್ ಪಕ್ಷ ಸಿಬಿಐನ್ನು ತನ್ನ ದಾಳವಾಗಿಸಿ ಕೊಂಡಿರುವುದು ಇತಿಹಾಸ ಎಂದರು.
ಆ ದೃಷ್ಟಿಯಿಂದ ಕಾಂಗ್ರೆಸ್‌ನದು ಅನುಮಾನದ ಇತಿಹಾಸ ಎಂದು ಬಣ್ಣಿಸಿದ ಅವರು ಒಟ್ಟಾವಿಯೋ ಕ್ವಟ್ರೋಚಿ ಪ್ರಕರಣದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿ,ಅವರನ್ನು ಬಚಾವು ಮಾಡಲು ಅನುಸರಿಸಿದ ಕಾರ್ಯತಂತ್ರವನ್ನು ನೋಡಿದರೆ ಸಿಬಿಐನ್ನು ಕಾಂಗ್ರೆಸ್ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬುದು ಸ್ಪಷ್ಟವಾಗುತ್ತದೆ.

ಯಡ್ಡಿ ಪಕ್ಷ ವಿರೋಧಿ ಚಟುವಟಿಕೆ: ಹೈಕಮಾಂಡ್‌ಗೆ ರಾಜ್ಯ ಘಟಕದಿಂದ ದೂರು

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಕಾಂಗ್ರೆಸ್ ಜತೆ ಕೈ ಜೋಡಿಸಲು ಹೊರಟಿರುವ ಯಡಿಯೂರಪ್ಪ ಅವರ ಪಕ್ಷ ವಿರೋಧಿ ಕಾರ್ಯಾಚರಣೆ ಕುರಿತು ರಾಜ್ಯ ಘಟಕ ಹೈಕಮಾಂಡ್‌ಗೆ ದೂರು ದಾಖಲಿಸಿದೆ. ಯಡಿಯೂರಪ್ಪ ಇತ್ತೀಚಿನ ದಿನಗಳಲ್ಲಿ ನಡೆಸುತ್ತಿರುವ ಪಕ್ಷ ವಿರೋಧಿ ಚಟುವಟಿಕೆಗಳಿಂದ ಪಕ್ಷ ಮತ್ತು ಸರಕಾರದ ಮೇಲೆ ಆಗಿರುವ ದುಷ್ಪರಿಣಾಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರೇ ಸಂಪೂರ್ಣವಾಗಿ ಮಾಹಿತಿಯನ್ನು ವರಿಷ್ಠರ ಗಮನಕ್ಕೆ ತಂದಿದ್ದಾರೆ. ಆದರೆ ಎಲ್ಲಿಯೂ ಕೂಡಾ ಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿಲ್ಲ ಅವರ ನಡವಳಿಕೆಯನ್ನು ವಿವರಿಸಿರುವ ಈಶ್ವರಪ್ಪ ಉಳಿದ ವಿಚಾರವನ್ನು ವರಿಷ್ಠರಿಗೆ ಬಿಟ್ಟಿದ್ದಾರೆ.
ಮೊದಲಿಗೆ ಯಡಿಯೂರಪ್ಪ ವಿರುದ್ಧ ಯಾವುದೇ ದೂರು ನೀಡಬಾರದೆಂದು ನಿರ್ಧಾರ ಕೈಗೊಂಡಿದ್ದ ರಾಜ್ಯ ಘಟಕ ನಂತರ ವರಿಷ್ಠರ ಆದೇಶದಂತೆ ಘಟನಾವಳಿಗಳ ಮಾಹಿತಿಯನ್ನು ವಿವರವಾಗಿ ನೀಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರವೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಪ್ರಯತ್ನ ನಡೆಸಿದ್ದಾರೆ. ಅದಕ್ಕಾಗಿ ಸದಾನಂದ ಗೌಡರನ್ನು ಅಧಿಕಾರದಿಂದ ಇಳಿಸಲು ಶಾಸಕರು ಮತ್ತು ಸಚಿವರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಅವರ ವಿರುದ್ದ ಬಹಿರಂಗ ಹೇಳಿಕೆಗಳನ್ನು ಕೊಡಿಸಿ ಪಕ್ಷ ಮತ್ತು ಸರಕಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಗೌಡರಿಗೆ ಪರ್ಯಾಯವಾಗಿ ಯಾರನ್ನು ನಾಯಕನನ್ನಾಗಿ ಮಾಡಬೇಕೆಂದು ಅವರಿಂದ ಹೆಸರು ಬರುತ್ತಿಲ್ಲ. ಶಾಸಕಾಂಗ ಸಭೆ ಕರೆದು ಸಭೆಯಲ್ಲಿ ಗೌಡರಿಗೆ ಬೆಂಬಲವಿಲ್ಲ ಎಂಬುದನ್ನು ಸೂಚಿಸಿ ತಾವೇ ಅಧಿಕಾರಕ್ಕೆ ಬರಲು ಇಷ್ಟೆಲ್ಲಾ ಕಸರತ್ತು ನಡೆಸಿದ್ದಾರೆ. ಇದಕ್ಕಾಗಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿರುವುದಲ್ಲದೆ ಮೂವರು ನಾಯಕರ ವಿರುದ್ದವೂ ಕಿಡಿಕಾರಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಾರೆ ಎಂಬ ಮಾಹಿತಿ ನೀಡಲಾಗಿದೆ.
ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಪೂರ್ಣ ಮಾಹಿತಿ ತಲುಪಿದ್ದು ಅವರು ಇಸ್ರೇಲ್‌ನಿಂದ ಹಿಂತಿರುಗಿದ ನಂತರ ಯಡಿಯೂರಪ್ಪ ವಿರುದ್ದ ಕಠಿಣ ನಿರ್ಧಾರ ಕೈಗೊಳ್ಳಲಿದ್ದಾರೆ.

ಯಡ್ಡಿ ಮನೆಗಳಿಗೆ ಸಿಬಿಐ ದಾಳಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಅಕ್ರಮ ಡಿನೋ ಟಿಫಿಕೇಷನ್, ಗಣಿ ಹಗರಣಕ್ಕೆ ಸಂಬಂ ಧಿಸಿದಂತೆ ಸುಪ್ರೀಂಕೋರ್ಟ್ ಆದೇ ಶದ ಅನ್ವಯ ಎಫ್‌ಐಆರ್ ದಾಖ ಲಿಸಿದ್ದ ಸಿಬಿಐ ನಿನ್ನೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರ ನಿವಾಸ ಮತ್ತು ಕಚೇರಿಗಳ ಮೇಲೆ ದೀಢೀರ್ ದಾಳಿ ನಡೆಸಿವೆ.
ಎಫ್‌ಐಆರ್ ದಾಖಲಾದ ೨೪ ಗಂಟೆಯೊಳಗಾಗಿ ಯಡಿಯೂರಪ್ಪ ಮತ್ತು ಕುಟುಂಬದವರಷ್ಟೇ ಅಲ್ಲದೆ, ಅವರ ಸಹವರ್ತಿಗಳಾದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಜಿಂದಾಲ್ ಕಂಪೆನಿ ಹಾಗೂ ಗಣಿ ಉದ್ದಿಮೆ ಪ್ರವೀಣ್ ಚಂದ್ರ ಅವರ ನಿವಾಸ ಕಚೇರಿಗಳ ಮೇಲೂ ದಾಳಿ ನಡೆದಿದೆ.
ಬೆಂಗಳೂರು, ಶಿವಮೊಗ್ಗ, ಬಳ್ಳಾರಿ, ಮೈಸೂರು ನಗರದ ವಿವಿಧ ೨೬ ಕೇಂದ್ರಗಳಲ್ಲಿನಿವಾಸ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ. ಇದೇ ಪ್ರಕರಣದಲ್ಲಿ ಐದನೇ ಆರೋ ಪಿಯಾಗಿರುವ ಗಣಿ ಉದ್ಯಮಿ ಪ್ರವೀಣ್‌ಚಂದ್ರ ನಿವಾಸ, ಬಳ್ಳಾರಿ ಯಲ್ಲಿರುವ ಜಿಂದಾಲ್ ಕಂಪೆನಿ, ಕಚೇರಿ, ಮುಖ್ಯಸ್ಥ ವಿನೋದ್ ನವೆಲ್ ನಿವಾಸ, ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ ಕಚೇರಿ. ಮತ್ತು ಸಿಇಓ ಪಾಂಡೆ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ.
ನಿನ್ನೆ ಬೆಳ್ಳಂ ಬೆಳಗ್ಗೆ ೬ ಗಂಟೆಗೆ ಬೆಂಗಳೂರಿನಲ್ಲಿ ಸಿಬಿಐ ಎಸ್‌ಪಿ ಸುಬ್ರಹ್ಮಣ್ಯೇಶ್ವರ ನೇತೃತ್ವದ ೨೧ ಮಂದಿ ಸಿಬಿಐ ಅಧಿಕಾರಿಗಳ ತಂಡ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಯಡಿಯೂರಪ್ಪ ಮನೆಯಲ್ಲೇ ಇದ್ದರು. ನಿಮ್ಮ ಮನೆಯಲ್ಲಿ ಶೋಧ ಕಾರ್ಯ ಆರಂಭಿಸಬೇಕು ಎಂದು ಖುದ್ದು ಎಸ್.ಪಿ.ಸುಬ್ರಮಣ್ಯೇಶ್ವರರಾವ್ ಹೇಳಿದಾಗ ಯಡಿಯೂರಪ್ಪ ನಿಮ್ಮಿಚ್ಚೆ ಬಂದಂತೆ ತನಿಖೆ ನಡೆಸಬಹುದು ಎಂದರು.
ಇದಾದ ಕೂಡಲೇ ಸಿಬಿಐ ಅಧಿಕಾರಿಗಳ ತಂಡ ಸತತವಾಗಿ ಎಂಟು ಗಂಟೆಗಳ ಕಾಲ ಮನೆಯಲ್ಲಿ ದಾಖಲಾತಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಲ್ಲದೆ ಅವರು ಮತ್ತು ಅವರ ಕುಟುಂಬವರ್ಗದವರಿಂದ ಕೆಲವು ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹಿಸಿದರು.
ಸಿಬಿಐ ತಮ್ಮ ನಿವಾಸಕ್ಕೆ ಆಗಮಿಸಿದಾಗ ಮತ್ತು ಅಧಿಕಾರಿಗಳು ದಾಖಲಾತಿಗಳ ವಿವರಣೆ ಕೇಳಿದಾಗ ಯಡಿಯೂರಪ್ಪ ಉದ್ವೇಗಕ್ಕೆ ಒಳಗಾಗದೆ ಶಾಂತಚಿತ್ತರಾಗಿ ಉತ್ತರಿಸಿದರು ಎನ್ನಲಾಗಿದೆ. ಇದೇ ರೀತಿ ಸಿಬಿಐ ಅಧಿಕಾರಿಗಳ ಇನ್ನಷ್ಟು ತಂಡಗಳು ಡಾಲರ‍್ಸ್ ಕಾಲೋನಿಯಲ್ಲಿರುವ ಬಿಎಸ್‌ವೈ ನಿವಾಸ, ಶೇಷಾದ್ರಿಪುರಂನಲ್ಲಿರುವ ಪ್ರೇರಣಾ ಟ್ರಸ್ಟ್, ಧವಳಗಿರಿ ಪ್ರಾಪರ್ಟೀಸ್ ಕಛೇರಿಗಳ ಮೇಲೂ ದಾಳಿ ನಡೆಸಿ, ಹಲವು ದಾಖಲಾತಿಗಳನ್ನು ವಶಕ್ಕೆ ಪಡೆದಿವೆ.
ಆರ್‌ಪಿಸಿ ಲೇಔಟ್‌ನಲ್ಲಿರುವ ಯಡಿಯೂರಪ್ಪನವರ ಅಳಿಯ ಸೋಹನ್‌ಕುಮಾರ್ ನಿವಾಸದ ಮೇಲೂ ಬೆಳಿಗ್ಗೆಯಿಂದಲೇ ದಾಳಿ ನಡೆದಿದ್ದು, ಇಲ್ಲಿಯೂ ಒಂದಷ್ಟು ದಾಖಲಾತಿಗಳನ್ನು ಸಂಗ್ರಹಿಸಲಾಗಿದೆ. ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ಕೃಷ್ಣಯ್ಯಶೆಟ್ಟಿ ಅವರ ರಾಜಾಜಿನಗರ ಹಾಗೂ ಮಾಲೂರು ನಿವಾಸದ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇವರ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಹಣ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಬಳಿಕ ಹಣ ಎಣಿಸುವ ಯಂತ್ರವನ್ನು ಸಿಬಿಐ ಅಧಿಕಾರಿಗಳು ತರಿಸಿಕೊಂಡರು.ಗಣಿ ಪರವಾನಿಗೆ ಪಡೆಯಲು ಬಿಎಸ್‌ವೈ ಕುಟುಂಬಕ್ಕೆ ಸೇರಿದ ಧವಳಗಿರಿ ಪ್ರಾಪರ್ಟೀಸ್ ಮತ್ತು ಭಗತ್‌ಹೋಮ್ಸ್‌ಗೆ ಆರು ಕೋಟಿ ವಂತಿಗೆ ನೀಡಿದ್ದ ಉದ್ಯಮಿ ಪ್ರವೀಣ್‌ಚಂದ್ರ ನಿವಾಸದ ಮೇಲೂ ಇಂದು ಬೆಳಿಗ್ಗೆಯಿಂದಲೇ ಸಿಬಿಐ ದಾಳಿ ನಡೆಸಿದೆ. ಪ್ರೇರಣಾ ಟ್ರಸ್ಟ್‌ಗೆ ಸುಮಾರು ೨೦ ಕೋಟಿ ವಂತಿಕೆ ನೀಡಿದ ಜಿಂದಾಲ್ ಕಂಪೆನಿ ಮತ್ತು ಅಂಗಸಂಸ್ಥೆ ಸೌತ್‌ವೆಸ್ಟ್ ಮೈನಿಂಗ್ ಸಂಸ್ಥೆ, ಬಳ್ಳಾರಿ ಕಛೇರಿಗಳ ಮೇಲೆ ಮತ್ತು ಈ ಎರಡೂ ಸಂಸ್ಥೆಗಳ ಮುಖ್ಯಸ್ಥರ ನಿವಾಸಗಳ ಮೇಲೆ ಕೂಡಾ ಸಿಬಿಐ ದಾಳಿ ನಡೆಸಿದ್ದು, ದಾಖಲಾತಿಗಳನ್ನು ವಶಪಡಿಸಿಕೊಂಡಿದೆ. ಗಣಿ ಕಪ್ಪ ಪಡೆದ ಪ್ರಕರಣದಲ್ಲಿ ಪ್ರಮುಖಪಾತ್ರ ವಹಿಸಿರುವುದು ಶಿವಮೊಗ್ಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿರುವ ಪ್ರೇರಣಾ ಟ್ರಸ್ಟ್ ಕಚೇರಿಗಳ ಮೇಲೆ ದಾಳಿ ನಡೆದಿತ್ತು.
ರಾಜಕೀಯವಾಗಿ ನನ್ನ ಮುಗಿಸಲು ಸಂಚು: ಯಡ್ಡಿ
ರಾಜಕೀಯವಾಗಿ ನನ್ನನ್ನು ಮುಗಿಸಲು ಪಕ್ಷದ ಮುಖಂಡರು ನಡೆಸಿದ ಸಂಚಿಗೆ ನಾನು ಬಲಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತರ ಬಳಿ ಅಳಲು ತೊಡಿಕೊಂಡಿದ್ದಾರೆ.
ತಾವು ವಾಸಿಸುವ ರೇಸ್‌ಕೋರ್ಸ್‌ಯ ನಿವಾಸದ ಮೇಲೆ ಸಿಬಿಐ ಅಧಿಕಾರಿ ಗಳು ಸತತ ದಾಳಿ ನಡೆಸಿ, ತಮಗೆ ಬೇಕಾದ ದಾಖಲೆ ವಶಪಡಿಸಿಕೊಂಡು ಹೊರ ನಡೆದ ನಂತರ ಸ್ವಾಂತನ ಹೇಳಲು ಬಂದ ತಮ್ಮ ಬೆಂಬಲಿಗ ಸಚಿವರು, ಶಾಸಕರ ಬಳಿ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ತನಿಖೆಗೆ ಆತಂಕಗೊಳ್ಳದಿದ್ದರೂ, ನಮ್ಮವರಿಂದಲೇ ಆಗಿರುವ ಅನ್ಯಾಯಕ್ಕೆ ಪಾಶ್ಚಾತಾಪಪಟ್ಟುಕೊಂಡ ಯಡಿಯೂರಪ್ಪ ತನಿಖೆಯಿಂದ ಸತ್ಯ ಸತ್ಯತೆ ಹೊರಬರಲಿ ಎಂದಿದ್ದಾರೆ. ಸಿಬಿಐ ದಾಳಿಯ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ.ಎಲ್ಲ ದಾಖಲೆಗಳು ಪರಿಶುದ್ಧವಾಗಿವೆ. ನಾನು ನಿರಪರಾಧಿ. ಹಾಗಂತ ಇವತ್ತಲ್ಲ ನಾಳೆ ಸಾಬೀತಾಗಲಿದೆ. ಹೀಗಾಗಿ ನೀವ್ಯಾರೂ ಆತಂಕಪಡಬೇಡಿ. ನಮ್ಮ ಪಕ್ಷದ ಮುಖಂಡರೇ ನನ್ನ ವಿರುದ್ಧ ಪಿತೂರಿ ನಡೆಸಿದರು.ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವರದಿ ನೀಡಬೇಕಿದ್ದ ಲೋಕಾಯುಕ್ತ ನನ್ನ ವಿರುದ್ಧ ವರದಿ ನೀಡುವಂತೆ ನೋಡಿಕೊಂಡರು. ಆ ಮೂಲಕ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದರು.ಸಿಬಿಐ ದಾಳಿಗೆ ಇವರೇ ಮೂಲ. ನನ್ನ ವಿರುದ್ಧ ಹೋರಾಡುವವರಿಗೆ ಎಲ್ಲ ರೀತಿಯ ನೆರವು ನೀಡಿದ ನಮ್ಮ ಪಕ್ಷದ ನಾಯಕರು ಇವತ್ತು ನನ್ನನ್ನು ಅಗ್ನಿ ಪರೀಕ್ಷೆಗೆ ಗುರಿ ಪಡಿಸಿದ್ದಾರೆ. ಆದರೆ ಏನೂ ಆಗುವುದಿಲ್ಲ. ದೈರ್ಯವಾಗಿರಿ ಎಂದು ಸಮಾಧಾನ ಹೇಳಿದರು. ಸಚಿವರಾದ ಶೋಭಾ ಕರಂದ್ಲಾಜೆ, ಸಿಎಂ ಉದಾಸಿ, ಉಮೇಶ್ ಕತ್ತಿ, ರೇಣುಕಾಚಾರ್ಯ, ಶಾಸಕರಾದ ಬಿ.ಪಿ.ಹರೀಶ್, ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡಿದರು.

ಆರ್‌ಎಂಪಿ ಏಜೆಂಟನ ವಂಚನೆ

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ: ಆರ್‌ಎಂಪಿ ಸಂಸ್ಥೆ ಯಲ್ಲಿ ಹಣ ದ್ವಿಗುಣ ಮಾಡಿ ಕೊಡುತ್ತೇನೆ ಎಂದು ನಂಬಿಸಿ ಅಮಾ ಯಕರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿ ಆರ್‌ಎಂಪಿ ಏಜೆಂಟ್ ನೊಬ್ಬನನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ಬೆಳುವಾಯಿ ಗ್ರಾಮದ ಕರಿಯ ನಂಗಡಿಯ ಹರೀಶ(೨೬) ಎಂಬಾತ ಬಂಧಿತ ಆರೋಪಿ. ಹರೀಶ, ಕೆಲ್ಲ ಪುತ್ತಿಗೆಯ ಯೋಗೀಶ ಮತ್ತು ಮೂಡುಮಾರ್ನಾಡಿನ ಯಶೋಧರ ಎಂಬವರೊಂದಿಗೆ ಸೇರಿಕೊಂಡು ಬೆಳುವಾಯಿ ಹಾಗೂ ಸುತ್ತು ಮತ್ತಲಿನ ಪರಿಸರದ ಹಲವಾರು ಜನರಿಂದ ಆರ್‌ಎಂಪಿಗೆ ಹಣ ಸಂಗ್ರಹಿಸಿದ್ದ.
೮ ಸಾವಿರ ರೂ. ಕಟ್ಟಿದ್ದಲ್ಲಿ ೧೫ ದಿನಗಳಲ್ಲಿ ೨,೫೦೦ ರೂ., ಹೆಚ್ಚುವರಿ ಯಾಗಿ ಹಾಗೂ ಕ್ರಮವಾಗಿ ೫೦೦೦, ೭,೫೦೦ ಹಾಗೂ ೧೦ ಸಾವಿರದಂತೆ ಮರುಪಾವತಿಸುವುದಾಗಿ ನಂಬಿಸಿದ್ದ. ಅದರಂತೆ ಈ ಭಾಗದ ಹಲವಾರು ಮಂದಿ ಇವರ ಬಣ್ಣದ ಮಾತುಗಳಿಗೆ ಮರುಳಾಗಿ ಹಣ ಕಟ್ಟಿದ್ದರು. ಆದರೆ ಯಾವ ಹಣವನ್ನು ಹಿಂತಿರುಗಿಸದೆ ವಂಚಿಸುತ್ತಿದ್ದರೆನ್ನಲಾಗಿದೆ.
ಈ ಬಗ್ಗೆ ವಂಚಿತರಲ್ಲೋರ್ವರಾದ ಕರಿಯಣಂಗಡಿಯ ಮುಹಮ್ಮದ್ ಅಶ್ಫಾಕ್ ಎಂಬವರು ಮೂಡಬಿದ್ರೆ ಠಾಣೆಗೆ ದೂರು ನೀಡಿದ್ದು ಅದರಂತೆ ಹರೀಶ್‌ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೆಲತಿಂಗಳ ಹಿಂದೆ ಇದೇ ಆರ್‌ಎಂಪಿ ವಿಷಯದಲ್ಲಿ ಹಣಕಳೆದುಕೊಂಡಿದ್ದ ಶೃಂಗೇರಿ ಮೂಲದ ಕೆಲ ಯುವಕರು ಕೆಲ್ಲಪುತ್ತಿಗೆಗೆ ಬಂದಿದ್ದರು. ಕೆಲ್ಲಪುತ್ತಿಗೆಯ ಏಜೆಂಟ್ ಅವರನ್ನು ಬರಹೇಳಿ ತನ್ನ ಬಾಡಿಗೆ ಜನರಿಂದ ಬಂದವರ ಮೇಲೆಯೇ ಹಲ್ಲೆನಡೆಸಿ ವಾಪಸ್ ಕಳಿಸಿದ್ದ. ಇದರಲ್ಲಿ ಹಣ ಕೊಟ್ಟು ಪೆಟ್ಟು ತಿಂದ ಯುವಕರು ವಾಪಾಸ್ಸಾಗಿದ್ದರು. ಆರ್‌ಎಂಪಿ ಎಂಬ ಪಂಗನಾಮ ಸಂಸ್ಥೆಯ ವಿರುದ್ಧ ಹೆಚ್ಚಿನ ಕಡೆಗಳಲ್ಲಿ ವಂಚನಾ ಆರೋಪಕೇಳಿ ಬರುತ್ತಿತ್ತಾದರೂ ಯಾರೂ ಕೂಡಾ ದೂರುನೀಡಲು ಮನಸ್ಸು ಮಾಡಿರಲಿಲ್ಲ. ಏಜೆಂಟರು ತಮ್ಮ ಉದ್ಯೋಗಕ್ಕಾಗಿ ಆ ಸಂಸ್ಥೆಗೆ ಸೇರಿಕೊಂಡಿರಬಹುದು. ವಂಚನೆ ಆಗುತ್ತದೆ ಎಂದು ಅವರಿಗೂ ತಿಳಿದಿರಲಾರದು. ಆದರೆ ಇದರ ಮುಖ್ಯಸ್ಥರೆನಿಸಿಕೊಂಡವರನ್ನು ಬಂಧಿಸಿದ್ದಲ್ಲಿ ಹೆಚ್ಚಿನ ವಿವರಗಳು ಲಭ್ಯವಾಗಬಹುದು.

ನದಿಗೆ ಬಿದ್ದ ಶ್ರೀನಿವಾಸ ಮತ್ತೊಂದು ಕಥೆ ಹೆಣೆದ!

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೂಳೂರು ಫಲ್ಗುಣಿ ನದಿಗೆ ಬಿದ್ದು ಬಳಿಕ ನಾಪತ್ತೆಯಾಗಿ ಸಾಕಷ್ಟು ಕೂತೂಹಲವನ್ನು ಕೆರಳಿಸಿದ್ದ ಕೃಷ್ಣಾಪುರ ನಿವಾಸಿ ಶ್ರೀನಿವಾಸ ಪದಕಣ್ಣಾಯ ಕುಂದಾಪುರದಲ್ಲಿ ಪತ್ತೆಯಾಗುವ ಮೂಲಕ ಸ್ಕೂಟರ್ ಸ್ಕಿಡ್ ಪ್ರಕರಣ ತಿರುವು ಪಡೆದುಕೊಂಡಿದೆ.
ಆರಂಭದಿಂದಲೂ ಶಂಕೆಯನ್ನು ಮೂಡಿಸಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸ್ ಆಯುಕ್ತರೇ ಆಸಕ್ತಿಯನ್ನು ವಹಿಸಿದ್ದು ವಿಚಾರಣೆ ಮುಂದುವರಿದಿದೆ. ಶ್ರೀನಿವಾಸ ಪದಕಣ್ಣಾಯ ನಾಪತ್ತೆ ಪ್ರಕರಣ ಕೌಟುಂಬಿಕ ನಾಟಕ ಎನ್ನುವುದನ್ನು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ಶುಕ್ರವಾರ ಸ್ಕೂಟರ್ ಸ್ಕಿಡ್ ಆಗಿ ಕೂಳೂರು ನದಿಗೆ ಬಿದ್ದಿದ್ದ ಶ್ರೀನಿವಾಸ ಐದು ದಿನಗಳ ಬಳಿಕ ಕುಂದಾಪುರದಲ್ಲಿ ಎದ್ದು ಬಂದಿದ್ದಾನೆ. ಈ ಮೂಲಕ ಮಂಗಳೂರಲ್ಲಿ ನದಿಗೆ ಬಿದ್ದಾತ ಕುಂದಾಪುರದಲ್ಲಿ ಪತ್ತೆಯಾಗಿದ್ದು ಹೇಗೆ? ಎನ್ನುವ ಕುತೂಹಲ ಉಂಟಾಗಿದೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶ್ರೀನಿವಾಸ ಪದಕಣ್ಣಾಯ ಅಪಹರಣದ ಕಥೆ ಕಟ್ಟಿದ್ದಾನೆ. ಸ್ಕೂಟರ್ ಸ್ಕಿಡ್ ಕಥೆಗೆ ಅಪಹರಣದ ತಿರುವು ಸಿಕ್ಕಿರುವ ಕಾರಣ ಪೊಲೀಸರು ತಲೆ ಚಚ್ಚಿ ಕೊಳ್ಳುತ್ತಿದ್ದಾರೆ. ಪೊಲೀಸ್ ಫೈಲ್‌ನಲ್ಲಿ ಈ ಕಥೆ ಬರೆದರೆ ಸಿನಿಮಾ ಸ್ಕ್ರಿಫ್ಟ್ ಆಗುತ್ತದೆ ಎಂದು ಪೊಲೀಸರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ತನ್ನ ಅಪಹರಣದ ಕಥೆಯನ್ನು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಶ್ರೀನಿವಾಸ ಬಾಯ್ಬಿಟ್ಟಿದ್ದನಾದರೂ ಇದು ಸುಳ್ಳಿನ ಕಂತೆ ಎನ್ನುವುದು ಪೊಲೀಸರ ಅಂದಾಜು. ಹೀಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಶ್ರೀನಿವಾಸ ಅವರನ್ನು ಬುಧವಾರ ರಾತ್ರಿ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಿದ್ದಾರೆ. ಸಾಲದ ಶೂಲದಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಶ್ರೀನಿವಾಸ ಮತ್ತಾತನ ಕುಟುಂಬ ಹೆಣೆದಿರುವ ತಂತ್ರ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದ್ದು ಈ ಸಂಬಂಧ ಪೊಲೀಸರು ಶ್ರೀನಿವಾಸನ ಕುಟುಂಬದ ಸದಸ್ಯರ ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಶುಕ್ರವಾರ ಶ್ರೀನಿವಾಸ ಮತ್ತಾತನ ಪತ್ನಿ ಸ್ವಾತಿ ಸ್ಕೂಟರಿನಲ್ಲಿ ಮಂಗಳೂರಿಗೆ ಬರುತ್ತಿರುವಾಗ ಕೂಳೂರು ಕಿಸ್ಕೋ ರಸ್ತೆ ಬಳಿ ಟಿಪ್ಪರ್ ಲಾರಿಗೆ ಸೈಡ್ ಕೊಡುವ ವೇಳೆ ಸ್ಕೂಟರ್ ಸ್ಕಿಡ್ ಆಗಿ ಶ್ರೀನಿವಾಸ ಅವರು ನೀರಿಗೆ ಬಿದ್ದದ್ದರು. ಆದರೆ ಇವರನ್ನು ರಕ್ಷಿಸ ಬೇಕಾಗಿದ್ದ ಪತ್ನಿ ಸ್ವಾತಿ ಅಪಘಾತಕ್ಕೀಡಾದ ಅದೇ ಸ್ಕೂಟರಿನಲ್ಲಿ ನೇರವಾಗಿ ಕೃಷ್ಣಾಪುರದಲ್ಲಿರುವ ಮನೆಗೆ ಬಂದು ಮನೆಮಂದಿಗೆ ವಿಷಯ ತಿಳಿಸಿದ್ದು ಬಳಿಕ ನೇರವಾಗಿ ಪಣಂಬೂರು ಪೊಲೀಸರಿಗೆ ದೂರು ನೀಡಿದ್ದರು. ಅದಾಗಲೇ ಘಟನೆ ನಡೆದು ಎರಡು ತಾಸು ಕಳೆದಿದ್ದು, ಈ ಪ್ರಕರಣ ಸಾಕಷ್ಟು ಕುತೂಹಲ ಮತ್ತು ಶಂಕೆಯನ್ನು ಉಂಟು ಮಾಡಿತ್ತು. ಹೀಗಿದ್ದರೂ ಪೊಲೀಸರು ೨೪ ತಾಸು ಕೂಳೂರು ನದಿಯಲ್ಲಿ ಶ್ರೀನಿವಾಸನ ಶವಕ್ಕಾಗಿ ಹುಡುಕಾಡಿದ್ದರು. ಆದರೂ ಪ್ರಯೋಜನ ವಾಗಲಿಲ್ಲ.
ವಿಶೇಷ ಎಂದರೆ ಶ್ರೀನಿವಾಸ ಅವರ ಪತ್ನಿ ನದಿ ತೀರಕ್ಕಿಂತ ಹತ್ತು ಹೆಜ್ಜೆ ದೂರದಲ್ಲಿ ಸ್ಕೂಟರ್ ಸ್ಕಿಡ್ ಆಗಿದೆ ಎಂದು ಸ್ಥಳ ತನಿಖೆ ವೇಳೆ ಪೊಲೀಸರಿಗೆ ತೋರಿಸಿದ್ದರು.
ಅಲ್ಲಿಂದ ಉರುಳಿಕೊಂಡು ಹೋಗಿದ್ದರೂ ಶ್ರೀನಿವಾಸ ಅವರು ನದಿ ತೀರಕ್ಕೆ ಬೀಳ ಬೇಕಿತ್ತು. ಆದರೆ ಅವರು ನದಿ ಮಧ್ಯಕ್ಕೆ ಬಿದ್ದಿದ್ದಾರೆ ಅವರು ಮುಳುಗುವುದನ್ನು ತಾನು ನೋಡಿರುವುದಾಗಿ ಪತ್ನಿ ಹೇಳಿಕೆ ನೀಡಿದ್ದರು. ಆದರೆ ಸ್ಕಿಡ್ ಆಗುವ ವೇಳೆ ಸ್ಕೂಟರ್‌ಗೆ ಯಾವುದೇ ರೀತಿಯಲ್ಲೂ ಜಖಂ ಆಗಿರಲಿಲ್ಲ. ಅಲ್ಲದೆ ಸ್ವಾತಿಗೆ ಯಾವುದೇ ಗಾಯಗಳೂ ಆಗಿರಲಿಲ್ಲ. ಒಂದು ವೇಳೆ ಅಪಘಾತ ನಡೆದು ಶ್ರೀನಿವಾಸ ನೀರಿಗೆ ಬಿದ್ದಿರುವುದು ನಿಜವಾಗಿದ್ದರೂ ಅದನ್ನು ಕಂಡ ಅವರ ಪತ್ನಿ ನೇರವಾಗಿ ಮನೆಗೆ ಬರುವ ಸಾಧ್ಯತೆ ಮಾನವೀಯತೆಗೆ ಸವಾಲು ಎನ್ನಲಾಗುತ್ತಿದೆ.
ನದಿಗೆ ಯಾರೇ ಬಿದ್ದರೂ ಅದನ್ನು ಕಂಡವರು ಬಿದ್ದವರನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಆದರೆ ಪತಿಯೇ ನದಿಗೆ ಬಿದ್ದರೂ ಪತ್ನಿ ಕೂಗಿ ಯಾರನ್ನೂ ರಕ್ಷಣೆಗೆ ಕರೆಯದೇ ಇದ್ದದ್ದು ಶಂಕೆ ಮೂಡಿಸಿತ್ತು. ಇದೆಲ್ಲ ಪ್ರಶ್ನೆಯನ್ನು ಇಟ್ಟು ಕೊಂಡ ಪೊಲೀಸರು ಶ್ರೀನಿವಾಸನ ಮನೆಮಂದಿಯನ್ನು ವಿಚಾರಣೆ ನಡೆಸುತ್ತಿರುವಾಗಲೇ ಶ್ರೀನಿವಾಸ ಕುಂದಾಪುರದಲ್ಲಿ ಪತ್ತೆಯಾಗಿ ಸುರತ್ಕಲ್ ಆಸ್ಪತ್ರೆ ಸೇರಿದ್ದಾರೆ. ಆರಂಭದಲ್ಲಿ ಮಾಧ್ಯಮ ಮತ್ತು ಪೊಲೀಸರಿಗೆ ಹೇಳಿಕೆ ನೀಡಲು ಶ್ರೀನಿವಾಸ ಹಿಂಜರಿದಿದ್ದು ಮನೆ ಮಂದಿ ಮಾಧ್ಯಮದವರ ಮೇಲೆಯೇ ಹರಿ ಹಾಯ್ದಿದ್ದರು. ಅನಾರೋಗ್ಯದ ಕಾರಣದಿಂದ ಶ್ರೀನಿವಾಸ ವಿಚಾರಣೆ ತಪ್ಪ್ಪಿಸಿಕೊಳ್ಳುವ ಯತ್ನ ನಡೆಸಿದ್ದ.
ಈ ನಡುವೆ ಇಪ್ಪತ್ತು ಲಕ್ಷಕ್ಕೂ ಅಧಿಕ ಸಾಲದ ಹೊರೆಯನ್ನು ಹೊತ್ತುಕೊಂಡಿರುವ ಶ್ರೀನಿವಾಸ ಅವರ ಮೇಲೆ ವ್ಯಕ್ತಿಯೊಬ್ಬರು ಮಂಜೇಶ್ವರ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ ಇದಲ್ಲದೆ ಇಲ್ಲಿಯೂ ಹಲವಾರು ಮಂದಿಗೆ ಹಣ ನೀಡಲು ಬಾಕಿ ಇರುವುದು ಬೆಳಿಕಿಗೆ ಬಂದಿದ್ದು, ಈ ಕಾರಣದಿಂದಾಗಿ ಸಾಲಗಾರರ ಶೂಲದಿಂದ ತಪ್ಪಿಸಿಕೊಳ್ಳಲು ಶ್ರೀನಿವಾಸ ತಂತ್ರ ಹೆಣೆದಿರಬೇಕು ಎನ್ನುತ್ತಾರೆ ಪೊಲೀಸರು.

‘ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ ಸಲ್ಲದು’

Posted by JAYAKIRANA Kirana on | 0 comments | Leave a comment...

ಮಂಗಳೂರು: ದೇಶದಲ್ಲಿ ಪತ್ರಿಕೆಗ ಳಿಗೆ ಅದರದ್ದೇ ಆದ ಸ್ವಾತಂತ್ರ್ಯ ನೀಡಲಾ ಗಿದೆ. ಲೇಖಕರು ಮತ್ತು ಬರಹಗಾರರು ಸ್ವಾತಂತ್ರ್ಯದ ಹೆಸರಲ್ಲಿ ಅನಗತ್ಯ ಲೇಖನ ಗಳನ್ನು ಪ್ರಕಟಿಸುವ ಮೂಲಕ ಸ್ವಾತಂತ್ರ್ಯ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಮುಸ್ಲಿಂ ಧಾರ್ಮಿಕ ನೇತಾರ ಕೆ.ಎಂ.ಇಬ್ರಾಹಿಂ ಬಾಖವಿ ಕಿವಿಮಾತು ಹೇಳಿದರು.
ಬುಧವಾರ ಕೇಂದ್ರ ಜುಮಾ ಮಸೀದಿ ಕಟ್ಟಡದಲ್ಲಿರುವ ಕಿಸಾ ಕಾರ್ಯಾಲಯದಲ್ಲಿ ನಡೆದ ಸುನ್ನೀ ಸಂದೇಶ ಮಾಸಿಕ ಪತ್ರಿಕೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಣ್ಣ ವರದಿ ಹಾಗೂ ಲೇಖನ ಇಡೀ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತದೆ. ಅದೇ ರೀತಿ ಅದೇ ಲೇಖನವು ಇನ್ನೊಬ್ಬರ ಸಾವಿಗೂ ಕಾರಣವಾಗುವ ಘಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಲೇಖಕರು ಮತ್ತು ಬರಹಗಾರರು ತಮಗಿರುವ ಸ್ವಾತಂತ್ರ್ಯದ ಅಡಿಪಾಯವನ್ನು ಅರಿತುಕೊಳ್ಳಬೇಕು. ಅದೇ ರೀತಿಯ ಜವಾಬ್ದಾರಿ ಪತ್ರಿಕೆಗ ಳಿಗೂ ಇವೆ ಎಂದರು.
ದಿನವಿಡೀ ಮಸೀದಿಯಲ್ಲಿ ಕುಳಿತು ನಮಾಝ್ ಮಾಡುವುದರಿಂದ ಯಾವುದೇ ಲಾಭವಿಲ್ಲ. ಮನುಷ್ಯ ಮಾಡುವ ಯಾವುದೇ ಕೆಲಸವನ್ನು ಶುದ್ಧ ಮನಸ್ಸಿನಿಂದ ಮಾಡಿದರೆ ಮಾತ್ರ ಅದರಿಂದ ಇಹ, ಪರಗಳಲ್ಲಿ ವಿಜಯ ಸಾಧಿಸಬಹುದು. ಇತ್ತೀಚಿನ ದಿನಗಳಲ್ಲಿ ಜನರು ಯಾವುದೇ ಕೆಲಸವನ್ನು ಮಾಡುವಾಗಲೂ ಅದರಿಂದಾಗುವ ಲಾಭದ ಬಗ್ಗೆ ಲೆಕ್ಕ ಹಾಕುತ್ತಾರೆ. ನಮಾಝ್ ನಿರ್ವಹಿಸುವಾಗಲೂ ಅದ ರಿಂದ ಇಹಲೋಕ ಮತ್ತು ಪರಲೋ ಕದ ಲಾಭವನ್ನು ಲೆಕ್ಕ ಹಾಕುತ್ತಾರೆ. ಆದರೆ ಸುನ್ನೀ ಸಂದೇಶ ಪತ್ರಿಕೆ ನಷ್ಟ ದಲ್ಲಿದ್ದರೂ ಅದನ್ನು ಮುನ್ನಡೆಸುತ್ತಿರು ವವರು ಹಾಗೂ ಲೇಖಕರು ಯಾವುದೇ ಪ್ರತಿಫಲ ನಿರೀಕ್ಷಿಸದೆ ಸುನ್ನೀ ಸಂದೇಶ ವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದು ಎಲ್ಲರೂ ಇವರೊಂದಿಗೆ ಕೈಜೋಡಿಸುವ ಮೂಲಕ ಅಲ್ಲಾಹನ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ಹೈದರ್ ದಾರಿಮಿ ವಹಿಸಿದ್ದರು.

ವೈದ್ಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆ ವಿರುದ್ಧ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಆಸ್ಪತ್ರೆ ಸಿಬ್ಬಂದಿ ನೀಡಿದ ಔಷಧದಿಂದ ವ್ಯಕ್ತಿ ಮೃತಪ ಟ್ಟಿದ್ದಾರೆಂದು ಆರೋಪಿಸಿದ ಮೃತರ ಕುಟುಂಬಿಕರು ಮತ್ತು ಗ್ರಾಮಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಿನ್ನೆ ಬೆಳಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ನಡೆದಿದೆ.
ಮೇ ೧ರಂದು ಮಲೇರಿಯಾ ಜ್ವರದ ಕಾರಣದಿಂದ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿದ್ದ ಕಿನ್ನಿಗೋಳಿ ನಿವಾಸಿ ರಾಘವೇಂದ್ರ ಶೆಟ್ಟಿ (೨೮) ಅವರು ಭಾನುವಾರ ಮೃತಪಟ್ಟಿದ್ದರು. ಕೇವಲ ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ರಾಘವೇಂದ್ರ ಅವರಿಗೆ ಆಸ್ಪತ್ರೆ ಸಿಬ್ಬಂದಿ ನೀಡಿದ ಔಷಧ ಮತ್ತು ಗ್ಲೂಕೋಸ್‌ನ ಕಾರಣ ದಿಂದ ಅವರು ಮೃತಪಟ್ಟಿದ್ದಾರೆಂದು ಮನೆಮಂದಿ ಆರೋಪಿಸಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಒಂದು ವಾರದಿಂದ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಜ್ವರ ಗುಣವಾಗುವ ಬದಲು ಉಲ್ಬಣ ವಾಗುತ್ತಿತ್ತಲ್ಲದೆ ಗ್ಲೂಕೋಸ್ ಹಾಕಿದ್ದ ಕೈ ಬಾತುಕೊಂಡು ಕೀವು ತುಂಬಿ ಕೊಂಡಿತ್ತು. ಈ ಕಾರಣದಿಂದ ಇವರನ್ನು ಶ್ರೀನಿವಾಸ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಎಜೆ ಆಸ್ಪತ್ರೆಗೆ ದಾಖಲು ಮಾಡಲು ಸಿದ್ದತೆ ನಡೆಸಲಾ ಗಿತ್ತು. ಆದರೆ ಎಜೆಗೆ ಸೇರಿಸುವ ಮುನ್ನವೇ ರಾಘವೇಂದ್ರ ಅವರು ಮೃತ ಪಟ್ಟಿದ್ದರು. ಎಜೆಯಲ್ಲಿ ರಾಘವೇಂದ್ರ ಅವರನ್ನು ಪರೀಕ್ಷಿಸಿದ ವೈದ್ಯರು ರೋಗಿಯ ದೇಹ ಕರಟಿದಂತಾಗಿರು ವುದಾಗಿ ತಿಳಿಸಿದ್ದರು. ಇದಕ್ಕೆ ಶ್ರೀನಿವಾಸ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ ಮನೆ ಮಂದಿ ಗ್ರಾಮಸ್ಥರ ನೆರವಿನಿಂದ ನಿನ್ನೆ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ವೈದ್ಯರ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟ ನಾಕಾರರನ್ನು ಸಮಾಧಾನ ಪಡಿಸಿದ್ದು ಮರಣೊತ್ತರ ವರದಿಯನ್ನು ಆಧರಿಸಿ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಹೀಗಾಗಿ ಪ್ರತಿಭಟನೆಯನ್ನು ಹಿಂಪಡೆ ಯಲಾಯಿತು. ಘಟನೆ ಬಗ್ಗೆ ಮೃತರ ಕುಟುಂಬಿಕರು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ರಾಘವೇಂದ್ರ ಅವರು ಒಂದು ವರ್ಷದ ಹಿಂದೆ ಊರಿಗೆ ಮರಳಿದ್ದು ಕಿನ್ನಿಗೋಳಿ ಯಲ್ಲಿರುವ ತಂದೆಯ ಹೊಟೇಲನ್ನು ನೋಡಿಕೊಳ್ಳುತ್ತಿದ್ದರು. ಕೇವಲ ಒಂದು ವಾರದ ಜ್ವರ ಆಸ್ಪತ್ರೆಯ ನಿರ್ಲಕ್ಷ್ಯದ ಕಾರಣ ಯುವಕನನ್ನು ಬಲಿ ಪಡೆದಿರು ವುದು ಜನರ ಆಕ್ರೋಶ ಕಾರಣವಾಗಿತ್ತು.

ಸೆಕ್ಯುರಿಟಿ ಗಾರ್ಡ್‌ಗೆ ಒಲಿಯಿತು ಕೋ.ರೂ.

Posted by JAYAKIRANA Kirana on | 0 comments | Leave a comment...

ಮಂಗಳೂರು: ಅದೊಂದು ಬಡ ಕುಟುಂಬ, ಬಾಡಿಗೆ ಮನೆಯಲ್ಲಿ ವಾಸ, ಜೀವನ ಸಾಗುತ್ತಿರುವುದು ವಾಚ್‌ಮೆನ್ ಕೆಲಸ ಹಾಗೂ ಬೀಡಿ ಕಟ್ಟುವುದರಿಂದ, ಅಂತವರಲ್ಲಿ ಲಕ್ಷ ಹಣದ ಮಾತು ಬಿಡಿ ಸಾವಿರದ ನೋಟು ನೋಡುವುದೇ ಅಪರೂಪ. ಆದರೆ ಇದೀಗ ಅವರಿಗೆ ಒಲಿದಿರುವ ಲಕ್ಷ್ಮಿ ಸಾಮಾನ್ಯ ಅಲ್ಲ. ಒಂದು ಕೋಟಿ ರೂ.
‘ಕೌನ್ ಬನೇಗಾ ಕರೋಡ್‌ಪತಿ ಅಥವಾ ‘ಕನ್ನಡದ ಕೋಟ್ಯಾಧಿಪತಿ ಎಂದು ಸಾಮಾನ್ಯವಾಗಿ ಎಲ್ಲರೂ ತಿಳಿದಿರಬಹುದು. ಆದರೆ ಇಲ್ಲಿ ನಡೆದದ್ದೇ ಬೇರೆ ಕರ್ನಾಟಕದಲ್ಲಿ ನಿಷೇಧಗೊಂಡಿದ್ದರೂ, ಕೇರಳದಲ್ಲಿ ಚಾಲ್ತಿಯಲ್ಲಿರುವ ಕಾರುಣ್ಯ ಲಾಟರಿಯ ಅದೃಷ್ಟಶಾಲಿಯಾಗಿ ಬಡ ಕುಟುಂಬದ ಆಧಾರಸ್ತಂಭ ಆಯ್ಕೆ ಗೊಂಡಿರುವುದು ಅವರ ಬದುಕನ್ನೇ ಬದಲಿಸಿದೆ.
ಕೋಟೆಕಾರಿನ ಕೈಕಂಬದ ಒಲವಿನ ಹಳ್ಳಿಯ ನಿವಾಸಿ ಚಂದ್ರ ಶೇಖರ್ ಈ ಅದೃಷ್ಟವಂತರು. ಕೋಟೆಕಾರಿನ ಉಮಾವತಿ ಎಂಬ ವರನ್ನು ವಿವಾಹವಾಗಿರುವ ಚಂದ್ರ ಶೇಖರ್ ಮೀನಾದಿ ಶಾಲೆಯಲ್ಲಿ ಏಳನೆ ತರಗತಿಯಲ್ಲಿ ಕಲಿಯುತ್ತಿರುವ ಪುತ್ರಿ ಲಿಖಿತಾಳೊಂದಿಗೆ ಕೋಟೆಕಾರು ಗ್ರಾಮದ ಒಲವಿನಹಳ್ಳಿಯ ಮಾದವ ರಾವ್ ಎಂಬವರ ಮನೆಯಲ್ಲಿ ಬಾಡಿಗೆ ದಾರರಾಗಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ತಲಪಾಡಿ ಕೆ.ಸಿ.ನಗರದಲ್ಲಿರುವ ಯೂನಿಕ್ ವುಡ್ ಪ್ರಾಡೆಕ್ಟ್ಸ್ ಕಂಪೆನಿ ಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕರ್ನಾಟಕ ಕೇರಳ ಗಡಿ ಪ್ರದೇಶ ವಾದ ಮೇಲಿನ ತಲಪಾಡಿಯಲ್ಲಿ ಏಜೆಂಟ್ ಕನಕದಾಸರಿಂದ ೫೦ ರೂ ನೀಡಿ ಖರೀದಿಸಿದ ಕಾರುಣ್ಯ ಕೆ.ಜೆ ೧೮೯೦೭೫ ನಂಬರಿಗೆ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ. ಶನಿವಾರವೇ ಡ್ರಾ ನಡೆದಿ ದ್ದರೂ ಲಾಟರಿ ಟಿಕೆಟ್ ಫಲಿತಾಂಶ ವನ್ನು ಬುಧವಾರ ಅದೇ ಏಜೆಂಟ್‌ನಲ್ಲಿ ಪರಿಶೀಲಿಸಿದಾಗ ಒಂದು ಕೋಟಿ ಬಂಪರ್ ಬಹುಮಾನ ಬಂದಿರುವುದು ಖಚಿತವಾಯಿತು.
ಯೂನಿಕ್ ವುಡ್ ಪ್ರಾಡೆಕ್ಟ್ಸ್‌ನಲ್ಲಿ ಐದು ಸಾವಿರ ಸಂಬಳ ಹೊಂದಿರುವ ಚಂದ್ರಶೇಖರ್ ಅವರ ಪತ್ನಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ. ಈ ಬಾರಿ ಮಗಳ ಶಾಲೆ ರಜೆಯಲ್ಲಿ ಹಣದ ಕೊರತೆಯಿಂದ ಊರಿಗೆ (ಕೇರಳ) ಹೋಗುವುದನ್ನು ಕಳೆದು ಕೊಂಡಿದ್ದಾರೆ. ಆದರೆ ಇದೀಗ ಒಲಿದಿರುವ ಲಕ್ಷ್ಮಿಯಿಂದ ಜಾಗ ಖರೀದಿಸಿ ಮನೆ ಕಟ್ಟುವ ಕನಸು ಹೊಂದಿದ್ದು, ಉಳಿದ ಹಣದಲ್ಲಿ ಮಗಳ ಶಿಕ್ಷಣಕ್ಕೆ ಖರ್ಚು ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದಾರೆ.
ಎಜೆಂಟ್ ಕನಕದಾಸ ಚಂದ್ರ ಶೇಖರ್ ಅವರನ್ನು ಕರೆದುಕೊಂಡು ಮಂಜೇಶ್ವರದಲ್ಲಿ ಪ್ರಮುಖ ಕಚೇರಿ ಹೊಂದಿರುವ ಮಂಜೇಶ್ವರ ಸರ್ವಿಸ್ ಕೋ. ಅಪರೇಟ್ ಬ್ಯಾಂಕ್‌ನ ಮೂಲಕ ಲಾಟರಿಯನ್ನು ಸಂಬಂಧಿತ ಇಲಾಖೆಗೆ ನೀಡಿ ಹಣ ಪಡೆಯಲು ಅರ್ಜಿ ಸಲ್ಲಿಸಿದ್ದು, ಮುಂದಿನ ೩ ತಿಂಗಳಲ್ಲಿ ಚಂದ್ರಶೇಖರ್ ಖಾತೆಗೆ ಹಣ ಜಮೆಯಾಗಲಿದೆ.

ರಸ್ತೆ ಸಂಪರ್ಕ ಕಡಿತ: ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ವ್ಯಕ್ತಿಯೊಬ್ಬರು ಸ್ವಂತ ಉಪಯೋಗಕ್ಕಾಗಿ ಸಾರ್ವಜನಿಕ ರಸ್ತೆಯನ್ನು ಅಗೆದು ಗೇಟ್ ಅಳವಡಿ ಸುವ ಕ್ರಮವನ್ನು ವಿರೋಧಿಸಿ ಮಾಡೂರು ಗುತ್ತು ಸಮೀಪದ ನಿವಾಸಿಗಳು ಬುಧವಾರ ಕೋಟೆಕಾರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಇಲ್ಲಿನ ನಿವಾಸಿಗಳು ಸುಮಾರು ೭ ವರ್ಷಗಳಿಂದ ಉಪಯೋಗಿಸುತ್ತಿದ್ದ ಸಾರ್ವಜನಿಕ ರಸ್ತೆಯನ್ನು ದೃಢೀಕರಿ ಸುವ ಎಲ್ಲಾ ದಾಖಲೆಗಳಿದ್ದರೂ ಖಾಸಗಿ ವ್ಯಕ್ತಿಯೊಬ್ಬರು ಅದನ್ನು ತನ್ನ ಆಸ್ತಿ ಎಂದು ಬಿಂಬಿಸಿ ರಸ್ತೆ ಅಗೆದು ಹಾಕಿ ಗೇಟ್ ಅಳವಡಿಸಿದ್ದಾರೆ. ಇದರಿಂದಾಗಿ ಕೋಟೆಕಾರು ಹಾಗೂ ದೇರಳಕಟ್ಟೆ ಸಂಪರ್ಕಕ್ಕೆ ಸಾಧಿಸಲು ಪರದಾಡು ವಂತಾಗಿದೆ ಎಂದು ಮಾಡೂರು ಗುತ್ತು ಸಮೀಪದ ನಿವಾಸಿಗಳು ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ.
ರಸ್ತೆ ಸಮಸ್ಯೆ ಬಗ್ಗೆ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದ್ದ ಹಿನ್ನೆಲೆ ಯಲ್ಲಿ ನ್ಯಾಯ ಸಮಿತಿ ಸಭೆ ಕರೆಯ ಲಾಗಿತ್ತಾದರೂ ಸಮಸ್ಯೆ ಬಗೆಹರಿಸು ವಲ್ಲಿ ವಿಫಲವಾಗಿದೆ. ವಿವಾದಿತ ರಸ್ತೆಯ ಕುರಿತಾಗಿ ಯಾರೂ ಕೂಡ ಸಮಸ್ಯೆಗೆ ಅವಕಾಶ ಕಲ್ಪಿಸಿ ಕೊಡಬಾರದು ಎಂದು ಪಂಚಾಯಿತಿ ಹಿಂದೆಯೇ ಆದೇಶ ನೀಡಿತ್ತು. ಆದರೆ ಖಾಸಗಿ ವ್ಯಕ್ತಿ ಮಾತ್ರ ರಸ್ತೆ ಅಗೆದಿದ್ದು ಮಾತ್ರವಲ್ಲದೆ, ಗೇಟ್ ಅಳವಡಿಸುವ ಮೂಲಕ ಪಂಚಾಯಿತಿ ಆದೇಶ ಗಾಳಿಗೆ ತೂರಿದ್ದಾರೆ. ಆದರೆ ಇದುವರೆಗೂ ಅವರ ವಿರುದ್ಧ ಕಠಿಣ ತೀರ್ಮಾನ ಕೈಗೊಳ್ಳದೆ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ತಾಳಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಪಂಚಾಯಿತಿ ಆಡಳಿತ ಮೌನಕ್ಕೆ ಶರಣಾ ಗುವ ಮೂಲಕ ಖಾಸಗಿ ವ್ಯಕ್ತಿಗೆ ಇನ್ನಷ್ಟು ಬಲ ನೀಡಿದಂತಾಗಿದೆ ಎಂದು ಪ್ರತಿಭಟ ನಾಕಾರರು ಆರೋಪಿಸಿದ್ದಾರೆ.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (82) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4036) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2490) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (37) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (110) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (259) ln (1) lnews (3666) lokayukta (3) madikeri (1) maleria (1) mangalore (575) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (410) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (270) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (792) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (947) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (45) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)