ಜಯದೊಂದಿಗೆ ಪ್ಲೇಆಫ್‌ಗೆ ಲಗ್ಗೆಯಿಟ್ಟ ದೆಹಲಿ

Posted by JAYAKIRANA Kirana on Tuesday, 15 May 2012 | 0 comments | Leave a comment...

ಜಯವರ್ಧನೆ-ಓಜಾ ಸಮಯೋಚಿತ ಜೊತೆಯಾಟ
ದೆಹಲಿ: ಆರಂಭದಲ್ಲಿ ಸೋಲಿನ ಭೀತಿಗೆ ಸಿಲುಕಿದರೂ ಮಧ್ಯಮ ಕ್ರಮಾಂಕದಲ್ಲಿ ಮಹೇಲಾ ಜಯವರ್ಧನೆ ಹಾಗೂ ನಮನ್ ಓಜಾ ನಡೆಸಿದ ಸಮಯೋಚಿತ ಆಟದ ನೆರವಿನಿಂದ ಇಲ್ಲಿ ಪಂಜಾಬ್ ವಿರುದ್ಧದ ಪಂದ್ಯವನ್ನು ಡೆಲ್ಲಿ ಡೇರ್‌ಡೆವಿಲ್ಸ್ ಐದು ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಟೂರ್ನಿಯ ಪ್ಲೇಆಫ್‌ಗೆ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ಪರ ಅಗ್ರಮೂವರ ಬ್ಯಾಟ್ಸ್‌ಮೆನ್‌ಗಳು ಉತ್ತಮ ಪ್ರದರ್ಶನ ನೀಡಿದ್ದರೂ ಮದ್ಯಮ ಕ್ರಮಾಂಕದಲ್ಲಿ ಮಾತ್ರ ದಾಂಡಿಗರು ಎಡವಿದರು. ಆದರೂ ನಾಯಕ ಡೇವಿಡ್ ಹಸ್ಸಿ ಏಕಾಂಗಿ ಹೋರಾಟದ ನಡೆಸಿದ ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ೧೩೬ ರನ್‌ಗಳ ಉತ್ತಮ ಮತ್ತವನ್ನು ಪೇರಿಸಿತು. ಹಸ್ಸಿ ೩೫ ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ ಐದು ಬೌಂಡರಿಗಳ ನೆರವಿನಿಂದ ಅಜೇಯ ೪೦ ರನ್ ಗಳಿಸಿದರು. ಸೈನಿ ೨೧ ರನ್ ಗಳಿಸಿದರು. ದೆಹಲಿ ಪರ ಯಾದವ್ ಮೂರು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ದೆಹಲಿ ಕೂಡ ಆರಂಭಿಕ ಆಘಾತ ಕಂಡರೂ ಮಧ್ಯಮ ಕ್ರಮಾಂಕದಲ್ಲಿ ಜಯವರ್ಧನೆ ಹಾಗೂ ನಮನ್ ಓಜಾ ತಂಡವನ್ನು ಮುನ್ನಡೆಸಿದರು. ಪರಿಣಾಮ ತಂಡ ಇನ್ನೂ ಆರು ಎಸೆತಗಳು ಬಾಕಿ ಉಳಿದಿರುವಂತೆ ಐದು ವಿಕೆಟ್ ನಷ್ಟಕ್ಕೆ ೧೪೦ ರನ್ ಗಳಿಸಿ ಜಯದಾಖಲಿಸಿತು. ಮಹೇಲಾ ಅಜೇಯ ೫೬ ರನ್ ಗಳಿಸಿದರು. ಪಂಜಾಬ್ ಪರ ಆವಾನಾ ಮೂರು ವಿಕೆಟ್ ಪಡೆದರು.
ಗುರಿ ಬೆನ್ನತ್ತುವ ಆರಂಭದಲ್ಲೇ ದೆಹಲಿ ಮುಗ್ಗರಿಸಿತು. ಮೊತ್ತ ೨೧ ಆಗಿದ್ದಾಗ ಡೇವಿಡ್ ವಾರ್ನರ್ (೧೪) ಮೊದಲಿಗರಾಗಿ ವಿಕೆಟ್ ಕಳಕೊಂಡರೆ ಸ್ಫೋಟಕ ಸೆಹ್ವಾಗ್ (೮) ವಿಕೆಟ್‌ನ್ನು ಪ್ರವೀಣ್ ಕುಮಾರ್ ಪಡೆದರು. ಈ ವೇಳೆ ಮೊತ್ತ ೨೮ ಆಗಿತ್ತು. ಈ ವೇಳೆ ದಾಳಿಗಿಳಿದ ಆವಾನಾ ತನ್ನ ಒಂದೇ ಓವರ್‌ನಲ್ಲಿ ವೇಣುಗೊಪಾಲ್ (೭) ಹಾಗೂ ಸ್ಫೋಟಕ ರಾಸ್ ಟೇಲರ್ (೦)ಗೆ ಪೆವಿಲಿಯನ್ ದಾರಿ ತೋರಿಸಿದಾಗ ಪಂದ್ಯ ಹೆಚ್ಚು ಕಡಿಮೆ ಪಂಜಾಬ್ ಕೈಯಲ್ಲಿತ್ತು. ಆದರೆ ಓಜಾ ಹಾಗೂ ಮಹೇಲಾ ಐದನೇ ವಿಕೆಟ್‌ಗೆ ೮.೨ ಓವರ್‌ಗಳಲ್ಲಿ ೫೨ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಚೇತರಿಕೆಯೊಂದಿಗೆ ಗೆಲುವಿನ ರುಚಿ ತೋರಿಸಿದರು. ಓಜಾ ಎರಡು ಸಿಕ್ಸ್ ಹಾಗೂ ಮೂರು ಬೌಂಡರಿ ನೆರವಿನಿಂದ ೩೪ ರನ್ ಗಳಿಸಿದರು. ಆದರೆ ಪಂಜಾಬ್ ವೇಗಿಗಳು ಕೆಲವೊಂದು ಕಠಿಣ ಓವರ್‌ನ ನಡೆಸಿದ ಪರಿಣಾಮ ಪಂದ್ಯ ಕುತೂಹಲಕ್ಕೆ ಸಾಗಿತು. ಆದರೆ ಪಠಾಣ್ ಆವಾನಾರ ಓವರ್‌ನಲ್ಲಿ ಎರಡು ಬೌಂಡರಿ ಹಾಗೂ ಒಂದು ಡಬಲ್ಸ್ ನೆರವಿನಿಂದ ಒಟ್ಟಾರೆಯಾಗಿ ೧೫ ತೆಗೆದು ಪಂದ್ಯವನ್ನು ಡೆಲ್ಲಿ ಪರ ವಾಲುವಂತೆ ಮಾಡಿದರು. ಪಠಾಣ್ ಹತ್ತು ಎಸೆತಗಳಲ್ಲಿ ೧೯ ರನ್ ಗಳಿಸಿದರು. ಇವರು ಅಜೇಯ ೪೫ ರನ್‌ಗಳ ಜೊತೆಯಾಟ ನಡೆಸಿದರು. ಪಂಜಾಬ್ ಪರ ಆವಾನಾ ಮೂರು ವಿಕೆಟ್ ಪಡೆದರು.

ಸ್ಪಾಟ್ ಫಿಕ್ಸಿಂಗ್ ಆರೋಪ: ಐವರು ಆಟಗಾರರಿಗೆ ನಿಷೇಧ

Posted by JAYAKIRANA Kirana on | 0 comments | Leave a comment...

ದೆಹಲಿ: ಸುದ್ದಿ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ ಬಗ್ಗೆ ಆರೋಪ ಹೊಂದಿದ್ದ ಟೂರ್ನಿಯ ಐವರು ಆಟಗಾರರ ಮೇಲೆ ನಿನ್ನೆ ಬಿಸಿಸಿಐ ಕಠಿಣ ಕ್ರಮ ತೆಗೆದುಕೊಂಡಿದ್ದು, ಅವರಿಗೆ ಎಲ್ಲಾ ಬಗೆಯ ಕ್ರಿಕೆಟ್‌ನಿಂದಲೂ ನಿಷೇಧ ಹೇರಿದೆ. ಡೆಕ್ಕನ್ ಚಾರ್ಜರ‍್ಸ್‌ನ ಟಿ.ಪಿ. ಸುದೀಂದ್ರ, ಪುಣೆ ವಾರಿಯರ‍್ಸ್‌ನ ಮೊನಿಶ್ ಮಿಶ್ರಾ, ಪಂಜಾಬ್‌ನ ಶಾಲಬ್ ಶ್ರೀವಾಸ್ತವ ಹಾಗೂ ಅಮಿತ್ ಯಾದವ್ ಖೊಕ್ ಪಡೆದ ಐವರು ಆಟಗಾರರಾಗಿದ್ದು, ಇವರ ಮೇಲೆ ಪ್ರಾಥಮಿಕ ತನಿಖೆಗೆ ಆದೇಶಿಸಲಾಗಿದೆ. ಟಿ.ವಿ ಚಾನೆಲ್ ಬಳಿಯಿಂದ ಹಗರಣದ ವೀಡಿಯೋ ತುಣಕನ್ನು ಬಿಸಿಸಿಐ ಕೇಳಿ ವೀಕ್ಷಿಸಿದ ನಂತರವೇ ಬೋರ್ಡ್ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಈ ಬಗ್ಗೆ ನಾವು ರವಿ ಸವಾನಿ ನೇತೃತ್ವದಲ್ಲಿ ಕಠಿಣ ತನಿಖೆಯನ್ನು ನಡೆಸಲಿದ್ದು, ಅಲ್ಲಿಯವರೆಗೆ ನಾವು ಆಟಗಾರರಿಗೆ ನಿಷೇಧ ಹೊಂದಲಿದ್ದಾರೆ. ಟೂರ್ನಿಯಲ್ಲಿ ಯಾವುದೇ ತರಹದ ಭ್ರಷ್ಟಾಚಾರವನ್ನು ನಾವು ಸಹಿಸುವುದಿಲ್ಲ. ನಾವು ಟೂರ್ನಿಯ ಆಂತರಿಕತೆಯನ್ನು ಕಾಪಾಡಲು ಬದ್ದರಾಗಿದ್ದು, ಆಟಗಾರರ ಅನಾಚಾರನ್ನು ನಾವು ನೋಡಿಕೊಂಡು ಸುಮ್ಮನಿರುವುದಿಲ್ಲ ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ. ರವಿ ತನಿಖೆಯ ಅಂತಿಮ ವರದಿಯನ್ನು ೧೫ ದಿನದೊಳಗೆ ಬಿಸಿಸಿಐನ ಶಿಸ್ತುಬದ್ದ ಸಮಿತಿಗೆ ಹಸ್ತಾಂತರಿಸಲಿದ್ದಾರೆ.

ನನ್ನ ವಿರುದ್ಧ ಪಿತೂರಿ: ಶ್ರೀವಾಸ್ತವ

Posted by JAYAKIRANA Kirana on | 0 comments | Leave a comment...

ಮುಂಬಯಿ: ನಾನು ಅಮಾಯಕನಾ ಗಿದ್ದು, ನನ್ನ ವಿರುದ್ಧ ಪಿತೂರಿ ನಡೆಸ ಲಾಗಿದೆ ಎಂದು ಉದ್ದೇಶಪೂರ್ವಕವಾಗಿ ನೊಬಾಲ್ ಎಸೆಯಲು ಹಣ ಪಡೆದಿದ್ದ ಬಗ್ಗೆ ಆರೋಪ ಹೊಂದಿರುವ ಪಂಜಾಬ್ ವೇಗಿ ಶಾಲಬ್ ಶ್ರೀವಾಸ್ತವ ತಿಳಿಸಿದ್ದಾರೆ. ನೊಬಾಲ್ ಮಾಡಬೇಕಾದರೆ ೧೦ ಲಕ್ಷ ರೂ.ಗಳ ಹಣವನ್ನು ನನಗೆ ನೀಡಬೇಕೆಂದು ಶ್ರೀವಾ ಸ್ತವ ಬೇಡಿಕೆ ಮಾಡಿದ್ದನ್ನು ಸುದ್ದಿ ವಾಹಿನಿಯೊಂದು ಕುಟುಕು ಕಾರ್ಯಾಚರಣೆ ಮೂಲಕ ಬಹಿರಂಗ ಮಾಡಿದೆ.
ವೀಡಿಯೊ ತುಣಕನ್ನು ತಿರುಚಲಾ ಗಿದ್ದು,ಈ ಬಗ್ಗೆ ನಾನು ಬಿಸಿಸಿಐ ಬಳಿಯಿಂದ ಬೋಧನೆ ಪಡೆದಿದ್ದೇನೆ. ಡಾಕ್ಟರ್‌ಡ್ ಆಡಿಯೋ ಕ್ಲಿಪ್ ಮೂಲಕ ತುಣಕನ್ನು ತಿರುಚಬಹು ದಾಗಿದ್ದು, ಇದಕ್ಕೆ ನಾನು ಬಲಿ ಯಾಗಿದ್ದೇನೆ. ಅವರು (ಚಾನೆಲ್) ತುಣುಕಿನ ಎಲ್ಲಾವನ್ನೂ ಬಿತ್ತರಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ನಾನು ಬೇಡಿಕೆ ಇಟ್ಟಿದ್ದನ್ನು ಯಾಕೆ ತೋರಿಸುತ್ತಿಲ್ಲ. ಇದರಿಂದಲೇ ನನ್ನನ್ನು ಸಿಲುಕಿಸಲಾಗಿದೆ ಎಂದು ತಿಳಿಯಬಹುದು ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

ಟೆವೆಜ್ ದುರ್ವರ್ತನೆಗೆ ಕ್ಷಮೆಕೋರಿದ ಮ್ಯಾಂಚೆಸ್ಟರ್ ಸಿಟಿ

Posted by JAYAKIRANA Kirana on | 0 comments | Leave a comment...

ಲಂಡನ್: ಇಂಗ್ಲಿಷ್ ಪ್ರಿಮಿಯರ್ ಲೀಗ್ ಗೆದ್ದ ಖುಷಿಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್‌ನ ಕೋಚ್ ಅಲೆಕ್ಸ್ ಫರ್ಗ್ಯುಸನ್ ಬಗ್ಗೆ ಅವಹೇಳನಕಾರಿ ಸಂದೇಶ ತೋರಿಸಿದ್ದ ಮ್ಯಾಂಚೆಸ್ಟರ್ ಸಿಟಿಯ ಖ್ಯಾತ ಆಟಗಾರ ಕಾರ್ಲೊಜ್ ತೆವೆಜ್ ದುರ್ವರ್ತನೆ ಬಗ್ಗೆ ಈಗ ತಂಡ ಕ್ಷಮೆ ಯಾಚಿಸಿದೆ. ಇಪಿಎಲ್ ಗೆದ್ದ ಖುಷಿಯ ಸಂಭ್ರಮದ ವೇಳೆ ಟೆವೆಜ್ ಫರ್ಗ್ಯುಸನ್‌ನ ಚಿತ್ರವಿರುವ ಪೋಸ್ಟರ್ ಕೆಳಗೆ ಅವಮಾನಕಾರಿ ರೀತಿಯಲ್ಲಿ ಬರೆದಿದ್ದರು. ಟೆವೆಜ್ ಫರ್ಗ್ಯುಸನ್ ಬಗ್ಗೆ ಕೆಟ್ಟ ರೀತಿಯ ನಿರ್ಧಾರ ತೆಗೆದುಕೊಂಡಿದ್ದರು. ಕೆಲವೊಮ್ಮೆ ಈ ರೀತಿಯ ಘಟನೆಗಳು ನಡೆಯುತ್ತವೆ. ಆದರೆ ಟೆವೆಜ್ ಮಾಡಿದ ಈ ರೀತಿಯ ವರ್ತನೆ ಬಗ್ಗೆ ನಾವು ಫರ್ಗ್ಯುಸನ್ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ಬಳಿ ಕ್ಷಮೆ ಯಾಚಿಸುತ್ತಿದ್ದೇವೆ ಎಂದು ಸಿಟಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಮ್ಯಾಂಚೆಸ್ಟರ್ ಸಿಟಿ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ಲಂಡನ್ ಮೂಲದ ಕ್ಲಬ್ ಆಗಿದ್ದರೂ ತಂಡಕ್ಕೆ ಈ ಹಿಂದಿನಿಂದಲೂ ಬದ್ದ ವೈರತ್ವವಿದ್ದು, ಅದು ಈ ತಂಡಗಳ ನಡುವಿನ ಪಂದ್ಯದ ವೇಳೆ ಗೊತ್ತಾಗುತ್ತದೆ. ಈ ಬಾರಿಯ ಪ್ರಿಮಿಯರ್ ಲೀಗ್ ಟೂರ್ನಿಯನ್ನು ಸಿಟಿ ಗೆದ್ದ ಮೇಲಂತೂ ಆ ತಂಡದ ಆಟಗಾರರ ಉತ್ಸಾಹ ಮುಗಿಲು ಮುಟ್ಟಿದ್ದ, ಈ ವೇಳೆ ಅವರು ಗೆದ್ದ ಸಂತಸದ ಆಕ್ರೋಶ ನೇರವಾಗಿ ಯುನೈಟೆಡ್ ಕೋಚ್ ಮೇಲೆ ಬಿದ್ದಿತ್ತು.

ಬೆಳ್ಳಿಮಂಡಲ ಫಿಲಂ ಸೊಸೈಟಿ ಅಧ್ಯಕ್ಷರಾಗಿ ಕೊಡಿಯಾಲ್‌ಬೈಲ್

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳೆದ ೩ವರ್ಷಗಳಿಂದ ಸದಭಿರುಚಿಯ ಚಲನಚಿತ್ರಗಳ ಬಗ್ಗೆ ಜನರಲ್ಲಿ ಆಸಕ್ತಿ ಬೆಳೆಸುವ ಉದ್ದೇಶದಿಂದ ನಗರದಲ್ಲಿ ಸಕ್ರಿಯವಾಗಿರುವ ಕರಾವಳಿ ಬೆಳ್ಳಿ ಮಂಡಲದ ಅಧ್ಯಕ್ಷರಾಗಿ ನಾಟಕಕಾರ, ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಡಾ.ಎಸ್. ಎಂ.ಶಿವಪ್ರಕಾಶ್, ಪ್ರೋ.ಎಚ್. ಜಯಂತ, ಕಾರ್ಯದರ್ಶಿಗಳಾಗಿ ಯು.ಪ್ರಕಾಶ್ ಶೆಣೈ, ಜತೆ ಕಾರ್ಯದರ್ಶಿಗಳಾಗಿ ಪಿ.ನಿತ್ಯಾನಂದ ರಾವ್, ಜಗದೀಶ್.ಎಸ್, ಕರುಣಾಕರ ಬಳ್ಕೂರು, ಕೋಶಾಧಿಕಾರಿಗಳಾಗಿ ಜ್ಯೋತಿ ಎಂ.ಭಟ್ ಹಾಗೂ ಸದಸ್ಯರಾಗಿ ಡಾ.ಆರ್.ಶಂಕರ್, ನಿರ್ಮಲಾ ಶೆಟ್ಟಿ, ಶ್ರೀಮತಿ ಜ್ಯೋತಿಕಾ ಜೈನ್, ರಿಯಾಜ್, ಶ್ರೀಮತಿ ಶ್ಯಾಮಲಾ, ಶ್ರೀಮತಿ ಶರ್ಮಿಳಾ, ಸೂರಜ್, ಮಹೇಶ್ ಆರ್ ನಾಯಕ್, ರಾಜೇಶ್ ಶೇಟ್, ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ, ಅನಿಲ್ ನಾವೂರು, ದೀಪಕ್, ಶ್ರೀಮತಿ ಗಾಯತ್ರಿ ನಾಗೇಶ್, ಮನೋ ರಂಜನ್, ಪ್ರಸನ್ನ ಸುರತ್ಕಲ್, ಜಿ.ಆರ್.ರೈ ಆಯ್ಕೆಯಾಗಿರುತ್ತಾರೆ.
ಸದಭಿರುಚಿಯ ಚಲನಚಿತ್ರಗಳ ಬಗ್ಗೆ ಜನರಲ್ಲಿ ಆಸಕ್ತಿ ಬೆಳೆಸುವ ಉದ್ದೇಶವನ್ನಿರಿಸಿಕೊಂಡು ಪ್ರತಿ ತಿಂಗಳ ೩ನೇ ಶನಿವಾರ ಸಾಯಂ ಕಾಲ ಗಂ.೫.೩೦ಕ್ಕೆ ಮಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಆಯ್ದ ಚಲನಚಿತ್ರಗಳನ್ನು ಉಚಿತವಾಗಿ ಪ್ರದರ್ಶನಗೊಳಿಸಲಿರುವುದಾಗಿ ಅಧ್ಯಕ್ಷರಾದ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ. ಇದೇ ತಿಂಗಳ ೧೯ನೇ ತಾರೀಕಿನಂದು ಶಿವಧ್ವಜ್ ನಿರ್ದೇಶನದ ‘ಗಗ್ಗರ’ ಚಿತ್ರವು ಪ್ರದರ್ಶನಗೊಳ್ಳಲಿದೆ.

ಮೇ.೨೦ರಂದು ಸುರತ್ಕಲ್ ಬಂಟರ ಸಂಘದ ಮಹಾಸಭೆ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಸುರತ್ಕಲ್ ಬಂಟರ ಸಂಘ (ರಿ)ಇದರ ವಿಶೇಷ ಮಹಾಸಭೆ ಮೇ ೨೦ರಂದು ಭಾನುವಾರ ಸಂಜೆ ೩ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ ೧೧ಗಂಟೆಗೆ ಸುರತ್ಕಲ್ ಬಂಟರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಯು ನಿರ್ದೇಶಕರ ಸಭೆಯಲ್ಲಿ ನಡೆಯಲಿದೆ. ಮಧ್ಯಾಹ್ನ ೧೨.೩೦ರಿಂದ ೨.೩೦ರವರೆಗೆ ಮಂಗಳೂರಿನ ತಂಡದಿಂದ ವಿಶೇಷ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಜರಗಲಿದೆ.
 ಸಂಜೆ ೩.೦೦ಗಂಟೆಗೆ ನಡೆಯುವ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ. ಇದೇ ಸಮಾರಂಭದಲ್ಲಿ ಇತ್ತೀಚೆಗೆ ಜರಗಿದ ಕ್ರೀಡಾಕೂಟದಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ದೇವಾನಂದ ಶೆಟ್ಟಿ ವಹಿಸಲಿದ್ದಾರೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವಹಿಸುವಂತೆ ಕಾರ್ಯದರ್ಶಿ ಉಲ್ಲಾಸ್ ಆರ್.ಶೆಟ್ಟಿ ಪೆರ್ಮುದೆ ತಿಳಿಸಿದ್ದಾರೆ.

ಹಾಲಂಬಿಯವರಿಗೆ ಹುಟ್ಟೂರ ಸನ್ಮಾನ

Posted by JAYAKIRANA Kirana on | 0 comments | Leave a comment...

ಕುಂದಾಪುರ: ಹಾಲಾಡಿಯಲ್ಲಿ ಹುಟ್ಟಿ ಅಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಗೊಂಡು ಮೊದಲಬಾರಿಗೆ ತನ್ನ ಹುಟ್ಟೂರಿಗೆ ಆಗಮಿಸಿದ ಪುಂಡಲೀಕ ಹಾಲಂಬಿಯವರಿಗೆ ಅದ್ದೂರಿಯ ಸ್ವಾಗತವನ್ನು ನೀಡಲಾಯಿತು.
ಉಪ್ಪುಂದ ಶಂಕರ ಕಲಾಮಂದಿರದಲ್ಲಿ ನೆರವೇರಿದ ಹುಟ್ಟ್ಟೂರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಂದ್ರದ ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿದರು.

ಕುಟುಂಬ ವೈದ್ಯರ ಸಮ್ಮೇಳನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪ್ರತಿಷ್ಠಿತ ಭಾರತೀಯ ವೈದ್ಯಕೀಯ ಸಂಘ ಇದರ ಐ.ಎಂ.ಎ ಕಾಲೇಜ್ ಆಫ್ ಜನರಲ್ ಪ್ರಾಕ್ಟೀಶನರ‍್ಸ್ (ಕುಟುಂಬ ವೈದ್ಯರ) ಘಟಕದ ರಾಜ್ಯ ಸಮ್ಮೇಳನವು ಪ್ರಪ್ರಥಮ ಬಾರಿಗೆ ಕರಾವಳಿ ವಿಭಾಗದಲ್ಲಿ ಜರುಗಲಿದೆ. ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಘಟಕದ ಜಂಟಿ ಆಶ್ರಯದಲ್ಲಿ ಶ್ರೀವಾಸ್ ಕಾಲೇಜ್ ಆಫ್ ಮೆಡಿಕಲ್ ಸೈಸ್ಸ್ ಹಾಗೂ ರಿಸರ್ಚ್ ಸೆಂಟರ್, ಶ್ರೀವಾಸ ನಗರ ಮುಕ್ಕಾ ಇದರ ಸಭಾಂಗಣದಲ್ಲಿ ಮೆ.೨೭ರಂದು ಜರಗಲಿದೆ ಎಂದು ಕುಟುಂಬ ವೈದ್ಯರ ಘಟಕದ (ಐ.ಎಂ.ಎ.ಸಿ.ಜಿ.ಪಿ)ರಾಜ್ಯ ರ್ದೇಶಕರೂ, ಸಮ್ಮೇಳನದ ಸಂಯೋಜಕರು ಆಗಿರುವ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ತಿಳಿಸಿರುತ್ತಾರೆ.

ವಿಕಲಚೇತನ ಬಾಲಕನ ಶವ ಬಾವಿಯಲ್ಲಿ ಪತ್ತೆ

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ: ಅಜ್ಜಿಯೊಂದಿಗೆ ದನ ಕರೆದುಕೊಂಡು ಬರುವ ವೇಳೆ ೧೨ರ ಹರೆಯದ ಬಾಲಕನೊಬ್ಬ ಆವರಣ ಗೋಡೆ ಇಲ್ಲದ ಬಾವಿಗೆ ಬಿದ್ದು ಮೃತ ಪಟ್ಟ ಘಟನೆ ಇಲ್ಲಿನ ತೆಂಕಮಿಜಾರು ಗ್ರಾಮದ ಕೊಪ್ಪದಕುಮೇರಿನಲ್ಲಿ ನಡೆದಿದೆ. ಕೊಪ್ಪದ ಕುಮೇರು ಕೆಳಗಿನಮ ನೆಯ ಸದಾನಂದ-ಸುಜಾತ ದಂಪತಿ ಪುತ್ರ ಸೂರಜ್(೧೨) ಎಂಬಾತನೇ ಮೃತ ಪಟ್ಟ ಬಾಲಕ. ಸೂರಜ್ ಅಲ್ಪ ವಿಕಲ ಚೇತನನಾಗಿದ್ದು ಕಳೆದ ಭಾನುವಾರ ಸಂಜೆ ತನ್ನ ಅಜ್ಜಿಯೊಂದಿಗೆ ಮೇಯಲು ಬಿಟ್ಟಿದ್ದ ದನವನ್ನು ಕರೆತರಲು ಹೋಗಿದ್ದ. ವಾಪಸು ಬರುವಾಗ ತಮ್ಮದೇ ತೋಟದಲ್ಲಿದ್ದ ಆವರಣವಿರದ ಬಾವಿಗೆ ಬಿದ್ದಿದ್ದನೆನ್ನಲಾಗಿದೆ.
ಆತ ಬಾವಿಗೆ ಬಿದ್ದ ಸಂದರ್ಭ ಬೊಬ್ಬೆ ಹಾಕುವ ಸಾಧ್ಯತೆ ಇತ್ತಾದರೂ ಅಜ್ಜಿಗೆ ಕಿವಿ ಕೇಳಿಸುವುದಿಲ್ಲ, ಹೀಗಾಗಿ ಅಜ್ಜಿ ನೇರವಾಗಿ ಮನೆಗೆ ಹೋಗಿದ್ದರು. ತನ್ನ ಹಿಂದೆ ಇದ್ದ ಮೊಮ್ಮಗ ಮಕ್ಕಳೊಂ ದಿಗೆ ಆಟವಾಡುತ್ತಿರಬೇಕೆಂದೇ ನಂಬಿ ದ್ದರು. ಕತ್ತಲೆಯಾದರೂ ಮನೆಗೆ ಬಾರದ ಸೂರಜ್‌ನನ್ನು ಆ ಬಾವಿಯೊಂದನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಹುಡು ಕಾಡಿದ್ದರು. ಈ ಬಗ್ಗೆ ಸೋಮವಾರ ಮೂಡಬಿದ್ರೆ ಪೊಲೀಸರಿಗೆ ದೂರು ಕೂಡಾ ನೀಡಿದ್ದರು. ಮಂಗಳವಾರ ಮಧ್ಯಾಹ್ನದ ವೇಲೆ ಸೂರಜ್‌ನ ಶವ ಆ ಬಾವಿಯಲ್ಲಿ ಪತ್ತೆಯಾಗಿದೆ. ಮೂಡಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರೀತಿಸಿ ಕೈಕೊಟ್ಟ ವಿದ್ಯಾರ್ಥಿನಿ ಯುವಕನಿಂದ ಮಾರಣಾಂತಿಕ ಹಲ್ಲೆ

Posted by JAYAKIRANA Kirana on | 0 comments | Leave a comment...

ಸುಳ್ಯ: ತನ್ನನ್ನು ಪ್ರೀತಿಸುತ್ತಿದ್ದ ಯುವತಿ ಏಕಾಏಕಿ ತನಗೆ ಕೈಕೊಟ್ಟು ಬೇರೊಬ್ಬನನ್ನು ಪ್ರೀತಿಸುತ್ತಿರುವ ವಿಷಯ ತಿಳಿದ ಆಕೆಯ ಪ್ರಿಯತಮ ಆಕೆಯನ್ನು ತನ್ನ ಮನೆಗೆ ಕರೆ ದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅರಂ ತೋಡಿನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅರಂತೋಡಿನ ಮುಬಾರಕ್(೨೮) ಹಾಗೂ ಸುಳ್ಯದ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಓದುತ್ತಿರುವ ಅದೇ ಪಂಗಡಕ್ಕೆ ಸೇರಿದ ಮಡಿಕೇರಿಯ ವಿದ್ಯಾರ್ಥಿನಿ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ. ವಿದ್ಯಾರ್ಥಿನಿ ತನ್ನ ಸ್ನೇಹಿತೆಯ ಅಕ್ಕನ ಮದುವೆಗೆಂದು ಹೋದಾಗ ಮುಬಾರಕ್ ಪರಿಚಯವಾಗಿದ್ದ. ಈಕೆ ಹಾಸ್ಟೆಲ್ ನಲ್ಲಿ ಉಳಿದು ಕಾಲೇಜಿಗೆ ತೆರಳುತ್ತಿದ್ದಳು. ಆದರೆ ಹಠಾತ್ ತನ್ನನ್ನು ತೊರೆದು ಯುವತಿ ಬೇರೊಬ್ಬನನ್ನು ಪ್ರೀತಿಸುತ್ತಿರುವ ವಿಚಾರ ತಿಳಿದ ಮುಬಾರಕ್ ಭಾನುವಾರ ಆಕೆಯನ್ನು ತನ್ನ ಮನೆಗೆ ಬಲವಂತದಿಂದ ಕರೆದೊಯ್ದು ಹಲ್ಲೆ ನಡೆಸಿದ್ದು, ಆಕೆಯ ಬೊಬ್ಬೆ ಕೇಳಿದ ನೆರೆಕರೆಯವರು ಬಂದು ಆಕೆಯನ್ನು ರಕ್ಷಿಸಿದ್ದಾರೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಯುವತಿಯನ್ನು ಚಿಕಿತ್ಸೆಗಾಗಿ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಬಾರಕ್‌ನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರೇಮ ವಿವಾಹ
ಕಳಂಜ ಗ್ರಾಮದ ಮಣಿಮಜಲು ಅಂಗಜ ಎಂಬವರ ಪುತ್ರಿ ಚಂದ್ರಾವತಿ(೨೮) ಹಾಗೂ ಉಪ್ಪಿನಂಗಡಿ ಸಮೀಪದ ಇಚ್ಲಂಪಾಡಿ ಶ್ರೀನಿವಾಸ(೨೮) ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಸೋಮವಾರ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಚಂದ್ರಾವತಿಯ ಅಣ್ಣನಿಗೆ ಈ ಮದುವೆ ಇಷ್ಟ ಇರಲಿಲ್ಲ ಎನ್ನಲಾಗಿದ್ದು, ಆಕೆ ಕಳೆದ ಎರಡು ದಿನಗಳಿಂದ ನಾಪತ್ತೆ ಯಾಗಿದ್ದಳು. ನಿನ್ನೆ ನವವಿವಾಹಿತ ಜೋಡಿ ಪೊಲೀಸ್ ಠಾಣೆಗೆ ಬಂದು ವಿವಾಹ ಆಗಿರುವುದಾಗಿ ತಿಳಿಸಿದ್ದಾರೆ.

ಚಾಲಕನಿಗೆ ಥಳಿತ: ಗೆಳೆಯ ಪರಾರಿ!

Posted by JAYAKIRANA Kirana on | 0 comments | Leave a comment...

ಗೆಳತಿಯ ಭೇಟಿಗೆ ಬಂದ ಗೆಳೆಯ
ಮಂಗಳೂರು: ಪರಸ್ಪರ ಪರಿಚಯದ ಯುವತಿಯನ್ನು ಭೇಟಿ ಮಾಡಲೆಂದು ಬಾಡಿಗೆ ವಾಹನದಲ್ಲಿ ಬಂದಿದ್ದ ಯುವಕ ಮತ್ತು ವಾಹನದ ಚಾಲಕ ಸಂದೇಹಾಸ್ಪದವಾಗಿ ಸ್ಥಳೀಯ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದು. ಚಾಲಕ ಗಂಭೀರವಾಗಿ ಧರ್ಮದೇಟು ತಿಂದು ಪೊಲೀಸರ ಕೈಗೊಪ್ಪಿಸಲ್ಪಟ್ಟರೆ, ಯುವಕ ಬದುಕಿದರೆ ಬೇಡಿ ತಿಂದೆನೆಂದು ಪರಾರಿಯಾದ ಘಟನೆ ನಿನ್ನೆ ಮದ್ಯಾಹ್ನ ಪಡುಬಿದ್ರೆ ಹೊರವಲಯದ ಪಾದೆಬೆಟ್ಟು ಎಂಬಲ್ಲಿ ನಡೆದಿದೆ.
ಚಿಕ್ಕಮಗಳೂರು ಸಮೀಪದ ಅರಸಿನ ಕೊಪ್ಪದ ವಸತಿ ಗೃಹವೊಂದರ ವಾಹನ ಚಾಲಕ ಪುನೀತ್ ಎಂಬಾತ ತನ್ನ ಪರಿಚಯದ ಅದೇ ಊರಿನ ಮತ್ತೋರ್ವ ಮಾರುತಿ ವ್ಯಾನಿನ ಚಾಲಕ ವಿನೋದ್ ಎಂಬಾತನ ಮಾರುತಿಯನ್ನು ಬಾಡಿಗೆಗೆಂದು ನಿಗದಿಪಡಿಸಿದ್ದ. ಇದರಲ್ಲಿ ತನ್ನ ಪರಿಚಯದ ಪಾದೆಬೆಟ್ಟುವಿನ ಪರಿಶಿಷ್ಟ ಜಾತಿಯ ಯುವತಿಯನ್ನು ಭೇಟಿ ಮಾಡಲೆಂದು ನಿನ್ನೆ ಬೆಳಿಗ್ಗೆ ಚಿಕ್ಕಮಗಳೂರಿನಿಂದ ಹೊರಟು ಬಂದಿದ್ದರೆನ್ನಲಾಗಿದೆ. ಯುವತಿ ಮೊಬೈಲ್ ಮೂಲಕ ನೀಡುತ್ತಿದ್ದ ಮಾರ್ಗದರ್ಶನದಲ್ಲೇ ಮುಂದುವರೆದು ಬಂದ ಪುನೀತ್ ಹೆದ್ದಾರಿಯಿಂದ ಪಾದೆಬೆಟ್ಟುವಿನ ಒಳರಸ್ತೆಗೆ ಬಂದು ಆಕೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಎನ್ನಲಾಗಿದೆ. ಹತ್ತು ನಿಮಿಷ ಮಾತುಕತೆ ನಡೆಸಿ, ಆಕೆಯನ್ನು ತಬ್ಬಿ ಹಿಡಿದು ವಿದಾಯ ಹೇಳಿ ಕಾರಿನಲ್ಲಿ ಕುಳಿತು ತಿರುಗಿಸಿದಾಗ ಅದಾಗಲೇ ಸಂದೇಹಗೊಂಡಿದ್ದ ಸಾರ್ವಜನಿಕರು ಸ್ಥಳೀಯ ಹಿಂದೂ ಸಂಘಟನೆಯ ಮುಖಂಡನ ನೇತೃತ್ವದಲ್ಲಿ ವಾಹನವನ್ನು ತಡೆಹಿಡಿದು ವಿಚಾರಿಸಿದ್ದಾರೆ. ಅಪಾಯವನ್ನರಿತ ಪುನೀತ್ ಮಾರುತಿಯಿಂದ ಜಿಗಿದು ಪರಾರಿಯಾಗಿದ್ದಾನೆ. ಆದರೆ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದ ಚಾಲಕ ವಿನೋದ್ ಮಾತ್ರ ಗಂಭೀರವಾದ ಧರ್ಮದೇಟಿಗೆ ಈಡಾಗಿದ್ದಾನೆ. ಆತನನ್ನು ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಒಂದು ಮೂಲದ ಪ್ರಕಾರ ಯುವತಿ ಮತ್ತು ಪುನೀತ್ ನಡುವೆ ಪ್ರೇಮ ವ್ಯವಹಾರವಿದ್ದು, ಹುಡುಗಿ ಚಿಕ್ಕಮಗಳೂರಿನಲ್ಲಿ ಹಾಸ್ಟೆಲ್‌ನಲ್ಲಿ ಉಳಿದು ವಿದ್ಯಾಭ್ಯಾಸ ನಡೆಸುತ್ತಿದ್ದಾಗ ಪರಿಚಿತರಾಗಿದ್ದರೆಂದು ತಿಳಿದು ಬಂದಿದೆ. ಆದರೆ ಸ್ಥಳೀಯರು ಇದೊಂದು ಅಪಹರಣ ಪ್ರಕರಣವಾಗಿರಬಹುದೆಂದು ಶಂಕಿಸಿದ್ದಾರೆ. ಚಾಲಕ ವಿನೋದ್‌ನನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

ಬೆಟ್ಟಿಂಗ್: ನೇಣಿಗೆ ಶರಣು

Posted by JAYAKIRANA Kirana on | 0 comments | Leave a comment...

ಬಜಪೆ: ಕ್ರಿಕೆಟ್ ಬೆಟ್ಟಿಂಗ್‌ನಿಂದ ನಷ್ಟ ಅನುಭವಿಸಿದ ಮಂಗಳೂರಿನ ಮೂಡು ಪೆರಾರದ ಯುವಕ ಮರಕ್ಕೆ ನೇಣು ಬಿಗಿದುಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕಾಶ ಗೌಡ (೨೬) ಬೆಟ್ಟಿಂಗ್‌ನಲ್ಲಿ ೧.೫ ಲಕ್ಷ ರೂ. ಹೂಡಿದ್ದು, ಸತತವಾಗಿ ಹಣ ಕಳೆದುಕೊಂಡಿದ್ದ. ಕೆಲವು ವರ್ಷಗಳಿಂದ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡಿದ್ದ ಈತ ಹಲವು ಬಾರಿ ಹಣ ಗಳಿಸಿದ್ದರೆ ಈ ಬಾರಿ ಪೂರ್ತಿ ದಿವಾಳಿಯಾಗಿದ್ದ.

ಮುಸ್ಲಿಂ ಯೂತ್ ಲೀಗ್ ಸಮಾವೇಶದ ಫ್ಲೆಕ್ಸ್‌ಗೆ ಬೆಂಕಿ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಮುಸ್ಲಿಂ ಯೂತ್ ಲೀಗ್‌ನ ನೇತೃತ್ವದಲ್ಲಿ ನಡೆಯಲಿರುವ ಯುವಜನ ರ‍್ಯಾಲಿ ಹಾಗೂ ಸಮ್ಮೇಳನದ ಪ್ರಚಾರಾರ್ಥ ಸ್ಥಾಪಿಸಲಾದ ಫ್ಲ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಸಮಜಘಾ ತುಕರು ಬೆಂಕಿ ಹಚ್ಚಿ ನಾಶಗೊಳಿಸಿ ದ್ದಾರೆ. ಉಪ್ಪಳ ಪೇಟೆಯಲ್ಲಿದ್ದ ಫ್ಲೆಕ್ಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಆರೋಪಿಗಳ ಪತ್ತೆ ಬಲೆ ಬೀಸಿದ್ದಾರೆ.

ಮುಸ್ಲಿಂ ಯೂತ್ ಲೀಗ್ ಸಮಾವೇಶದ ಫ್ಲೆಕ್ಸ್‌ಗೆ ಬೆಂಕಿ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಮುಸ್ಲಿಂ ಯೂತ್ ಲೀಗ್‌ನ ನೇತೃತ್ವದಲ್ಲಿ ನಡೆಯಲಿರುವ ಯುವಜನ ರ‍್ಯಾಲಿ ಹಾಗೂ ಸಮ್ಮೇಳನದ ಪ್ರಚಾರಾರ್ಥ ಸ್ಥಾಪಿಸಲಾದ ಫ್ಲ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಸಮಜಘಾ ತುಕರು ಬೆಂಕಿ ಹಚ್ಚಿ ನಾಶಗೊಳಿಸಿ ದ್ದಾರೆ. ಉಪ್ಪಳ ಪೇಟೆಯಲ್ಲಿದ್ದ ಫ್ಲೆಕ್ಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಆರೋಪಿಗಳ ಪತ್ತೆ ಬಲೆ ಬೀಸಿದ್ದಾರೆ.

ವಿದ್ಯಾರ್ಥಿಗಳಿಬ್ಬರು ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹತ್ತನೇ ತರಗತಿಯ ವಿದ್ಯಾರ್ಥಿಗಳು ನಾಪತ್ತೆಯಾದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಗುರುವಾಯನಕರೆಯ ಜುಮ ಸೀದಿಯ ದಾರ್ಮಿಕ ಮತ್ತು ಲೌಕಿಕ ಶಿಕ್ಷಣ ಕೇಂದ್ರದ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಬಂಟ್ವಾಳ ತಾಲೂಕಿನ ಅಡ್ಯಾರುಪದವು ನಿವಾಸಿ ಎಂ. ಶರೀಫ್ ಅವರ ಪುತ್ರ ಮಹಮ್ಮದ್ ರಫೀಕ್(೧೬) ಮತ್ತು ಪಾಂಡವರಕಲ್ಲು ಬಳಿಯ ಮಿತ್ತಳಿಕೆ ಅಬ್ದುಲ್ ಖಾದರ್ ಅವರ ಪುತ್ರ ಮಹಮ್ಮದ್ ಇಕ್ಬಾಲ್(೧೬) ಎಂಬವರೇ ನಾಪತ್ತೆಯಾದ ವಿದ್ಯಾರ್ಥಿ ಗಳಾಗಿದ್ದಾರೆ. ಈ ವಿದ್ಯಾರ್ಥಿಗಳು ಮೇ.೧೨ ರಂದು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ೧೦ ಮಂದಿ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ವಿವಿಧೆಡೆ ಅಂಗಡಿಗಳಿಗೆ ಕನ್ನ ಹಾಕಿ ತಾಮ್ರದ ಸೊತ್ತುಗಳನ್ನು ಕಳವುಗೈಯುತ್ತಿದ್ದ ತಂಡದ ೧೦ ಮಂದಿ ಸದಸ್ಯರನ್ನು ಬಂದರು ಠಾಣಾ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ತೌಸಿಫ್, ಇಮ್ರಾನ್, ಅಬ್ದುಲ್ ಸೊಹೈಲ್, ಮಹಮ್ಮದ್ ಶರೀಫ್, ಮಹಮ್ಮದ್ ಶರ್ವಾನ್, ಇಸ್ಮಾಯಿಲ್, ಖಲಂದರ್ ಅಮೀರ್ ಸೊಹೈಲ್, ಮಹಮ್ಮದ್ ಶಾರುಕ್, ರಮ್ಲಾನ್, ಜುನೈದ್ ಎಂದು ಹೆಸರಿಸಲಾಗಿದೆ. ಇವರು ಬಂದರು ಸುತ್ತಮುತ್ತಲಿನ ನಿವಾಸಿಗಳು. ಇವರು ವಿವಿಧ ಕಡೆ ಅಂಗಡಿಗಳಲ್ಲಿ ಕಳ್ಳತನ ನಡೆಸಿ ಪೊಲೀಸರಿಗೆ ಸಿಗದೆ ತಲೆಮರೆಸಿದ್ದರು.

ವಿದ್ಯಾರ್ಥಿನಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಕಾಲೇಜೊಂದರ ಪದವಿ ವಿದ್ಯಾರ್ಥಿನಿ ದೀಕ್ಷಾ(೨೦) ನಾಪತ್ತೆಯಾಗಿರುವ ಬಗ್ಗೆ ಬಂದರ್ ಠಾಣೆಗೆ ದೂರು ನೀಡಲಾಗಿದೆ.
ಈಕೆ ಕಳೆದ ಮೇ ೧೦ರಂದು ಮನೆಯಿಂದ ಕಾಲೇಜ್‌ಗೆಂದು ಹೊರಟಿದ್ದು, ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ.

ಗ್ರಾಮ ಕರಣಿಕ ಸಾವು

Posted by JAYAKIRANA Kirana on | 0 comments | Leave a comment...

ಪುತ್ತೂರು: ಗ್ರಾಮ ಕರಣಿಕ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಅಲೆಂಬಾಡಿ ನಿವಾಸಿ ಬೆಳಿಯಪ್ಪ ಗೌಡ (೫೮) ಅನಾರೋಗ್ಯ ದಿಂದ ಮಂಗಳವಾರ ನಿಧನರಾದರ. ಆರ್ಯಾಪು ಗ್ರಾಮದ ಗ್ರಾಮ ಕರಣಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳಿಯಪ್ಪ ಗೌಡ ಅವರು ಸೋಮವಾರ ರಾತ್ರಿ ದಿಢೀರ್ ಅನಾರೋಗ್ಯಕ್ಕೊಳಗಾಗಿ ನಿಧನರಾದರು. ಅವರು ಪುತ್ತೂರು ಕಸ್ಬಾ, ಕೆಮ್ಮಿಂಜೆ, ಮುಂಡೂರು ಗ್ರಾಮಗ ಳಲ್ಲಿ ಗ್ರಾಮಕರಣಿಕರಾಗಿ ಸೇವೆ ಸಲ್ಲಿಸಿ ದ್ದರು. ಉಪ್ಪಿನಂಗಡಿ ಕಂದಾಯ ನಿರೀ ಕ್ಷಕರಾಗಿಯೂ ಕರ್ತವ್ಯ ನಿರ್ವ ಹಿಸಿದ್ದರು.

ಲಾರಿ-ಸುಮೋ ಡಿಕ್ಕಿ: ಗಾಯ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರದ ಒತ್ತಿನೆಣೆ ತಿರುವಿನಲ್ಲಿ ಬೆಳಗಾಂನತ್ತ ಹೋಗುತ್ತಿದ್ದ ಟಾಟಾ ಸುಮೊಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸಹ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವನನ್ನು ಖಾನಾ ಪುರ ನಿವಾಸಿ ಶಿವಾನಂದ ದೇಸಾಯಿ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ವರದಕ್ಷಿಣೆ ಕಿರುಕುಳ: ದೂರು

Posted by JAYAKIRANA Kirana on | 0 comments | Leave a comment...

ಮಂಗಳೂರು: ವರದಕ್ಷಿಣೆ ಕಿರುಕುಳ ನೀಡಿದಲ್ಲದೇ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ ಪತಿ ನಾರಾಯಣ ಹಾಗೂ ಲೀಲಾ, ಶೇಖರ ಅವರ ವಿರುದ್ಧ ವಕ್ವಾಡಿ ಕಟ್ಕೆರೆಯ ನಿವಾಸಿ ಕನಕ ಕುಂದಾಪುರ ಠಾಣೆಯಲ್ಲಿ ದೂರು ನೀಡಿ ದ್ದಾರೆ. ಮನೆ ಯಲ್ಲಿ ನನ್ನನ್ನು ಸರಿಯಾಗಿ ನೋಡಿ ಕೊಳ್ಳದೇ ಇದ್ದು ಮಗಳ ಮದುವೆಯ ವಿಚಾರ ಮಾತ ನಾಡುವಾಗ ಪತಿಯ ಅಕ್ರಮ ಸಂಬಂಧಿ ಮಹಿಳೆ ಹಾಗೂ ಇತರರು ಸೇರಿ ಹಿಂಸೆ ನೀಡಿದಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಬಾಲಕ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ಸಮೀಪದ ಬೇಳೂರಿನ ಸ್ಫೂರ್ತಿ ಧಾಮದಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಆನವಟ್ಟಿ ನಿವಾಸಿ ರವಿ(೧೨) ಎಂಬಾತ ಕೊಲ್ಲೂರಿಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭ ನಾಪತ್ತೆಯಾ ಗಿರುವ ಬಗ್ಗೆ ಪೊಲೀಸರಿಗೆ ದೂರ ಲಾಗಿದೆ. ಸ್ಫೂರ್ತಿ ಧಾಮದ ಮಕ್ಕಳು ಹಾಗೂ ಸಿಬ್ಬಂದಿ ಕೊಲ್ಲೂರಿಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ. ಬಾಲಕನ ಹೆತ್ತವರಿಗೆ ಮಾಹಿತಿ ನೀಡಲಾಗಿದೆ.

ಸೂರ್ಯನಾರಾಯಣ ದೇವಳಕ್ಕೆ ನುಗ್ಗಿದ ಕಳ್ಳರು

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಶ್ರೀ ಸೂರ್ಯನಾರಾಯಣ ದೇವಳದಲ್ಲಿ ಕಳ್ಳರು ಒಳನುಗ್ಗಿ ಸುಮಾರು ೫ ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗ ದನ್ನು ದೋಚಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಸೋಮವಾರ ಮೇಷ ಸಂಕ್ರಮಣವಾದ್ದರಿಂದ ರಾತ್ರಿ ವಿಶೇಷ ರಂಗ ಪೂಜೆಯೂ ನೆರವೇರಿತ್ತು. ರಾತ್ರಿ ೧೧.೩೦ರ ಹೊತ್ತಿಗೆ ಪೂಜಾ ವಿಧಾನಗಳನ್ನು ಮುಗಿಸಿ ಅರ್ಚಕರು ಬಾಗಿಲು ಹಾಕಿ ಹೋದ ಬಳಿಕದ ಮುಂಜಾನೆ ಕಳ್ಳರು ನುಗ್ಗಿದ್ದಾರೆ. ಭದ್ರತೆಯ ದೃಷ್ಟಿಯಿಂದ ನವೀಕರಣ ಸಂದರ್ಭ ಗರ್ಭಗುಡಿಗೆ ಅತಿ ಭದ್ರತೆಯುಳ್ಳ ಬಾಗಿಲನ್ನು ಅಳವಡಿಸಲಾಗಿತ್ತು. ಕಳ್ಳರು ದೇವರ ಪ್ರಭಾವಳಿ ಸಹಿತ ೫ ಕೆ.ಜಿ.ಬೆಳ್ಳಿಯ ಆಭರಣಗಳು, ೩೭ ಗ್ರಾಂ.ನ ಎರಡು ಚಿನ್ನದ ಸರ ಮತ್ತು ಅರ್ಚಕರ ೭೮,೦೦೦ ನಗದನ್ನು ಕದ್ದೊಯ್ದಿದ್ದಾರೆ. ಅಲ್ಲದೆ ದೇವಸ್ಥಾನದನ ಸನಿಹದಲ್ಲದೆ ಕೈಕವಚ,೫೦೦ ಮುಖ ಬೆಲೆಯ ಒಂದು ನೋಟು, ಕೆಲ ನಾಣ್ಯಗಳು ದೊರತಿವೆ. ದೇವಳದ ಲಾಕರನ್ನು ಒಡೆಯುವ ವಿಫಲ ಯತ್ನ ನಡೆಸಿರುವುದು ಕಂಡು ಬಂದಿದೆ. ಕಳ್ಳತನ ಪ್ರಕರಣ ಕುರಿತು ದೇವಳದ ಆಡಳಿತ ಮೊಕ್ತೇಸರ ವಸಂತ ಭಟ್ ವೇಣೂರು ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಭಾಸ್ಕರ್ ರೈ, ವೇಣೂರು ಎಸ್.ಐ.ಉಮೇಶ್ ಉಪ್ಪಳಿಕೆ ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

ವಿಟ್ಲ: ಬೆಂಕಿಗೆ ಕೊಟ್ಟಿಗೆ ಭಸ್ಮ

Posted by JAYAKIRANA Kirana on | 0 comments | Leave a comment...

ಮಂಗಳೂರು: ವಿಟ್ಲ ಅಡ್ಯನಡ್ಕ ಸಮೀಪದ ಎಣ್ಮಕಜೆ ಗ್ರಾಮದ ಚೌರ್ಕಡು ಕ್ಷೀರೋತ್ಪಾದಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅವರ ಮನೆ ಸಮೀಪದ ಕೊಟ್ಟಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ನಾಶವಾಗಿದೆ. ಸ್ಥಳೀಯರ ನೆರವಿನೊಂದಿಗೆ ಬೆಂಕಿ ಶಮನ ಗೊಳಿಸಲಾಯಿತು. ಸುಮಾರು ಒಂದು ಲಕ್ಷ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.

ಚಂದ್ರಶೇಖರನ್ ಹತ್ಯೆ: ಐವರ ಸೆರೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಮಾರ್ಕಿಸ್ಟ್ ಪಕ್ಷದ ರಾಜ್ಯ ನಾಯಕ ಟಿ.ಪಿ. ಚಂದ್ರಶೇಖರನ್ ಅವರ ಹತ್ಯೆಯ ಆರೋಪಿಗಳಾದ ಐದು ಮಂದಿಯನ್ನು ಬಂಧಿಸಲಾಗಿದೆ. ಆದರೆ ರಹಸ್ಯ ಕೇಂದ್ರದಲ್ಲಿ ಇವರ ತೀವ್ರ ವಿಚಾ ರಣೆ ನಡೆಯುತ್ತಿದ್ದು, ಅಧಿಕೃತವಾಗಿ ಬಂಧನ ದಾಖಲಿಸಲಾಗಿಲ್ಲ.
ಚಂದ್ರಶೇಖರ್ ಹತ್ಯೆಯ ಹಿಂದೆ ಸಿಪಿಎಂ ಪಕ್ಷದ ಉನ್ನತ ನಾಯಕತ್ವದ ಕೈವಾಡವಿರುವ ಆರೋಪವಿದ್ದು, ಕೊಲೆ ಮಾಡಿದವರಿಗಿಂತ ಮಾಡಿಸಿದವರು ಯಾರೆಂದು ಹೆಚ್ಚು ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಬಂಧಿಸಲ್ಪಟ್ಟವರನ್ನು ಸಂಪೂರ್ಣವಾಗಿ ಬಾಯ್ಬಿಡಿಸಿದ ಬಳಿಕ ವಷ್ಟೇ ಅಧಿಕೃತ ಬಂಧನ ದಾಖಲಾ ಗಲಿದೆ.
ಹತ್ಯೆಯ ಪ್ರಮುಖ ಆರೋಪಿ ಗಳಾದ ಕೊಡಿ ಸುನಿಲ್, ರಫೀಕ್ ಎಂಬವರು ಬಂಧಿತ ಐವರಲ್ಲಿದ್ದಾರೆ. ಚಂದ್ರಶೇಖರ್ ಕೊಲೆ ಆಯುಧ ನೀಡಿದ ಹಾಗೂ ಸುನಿಲ್‌ಗೆ ಪೂರ್ವ ಭಾವಿ ಸಿದ್ಧತೆಗಾಗಿ ಬೈಕ್ ನೀಡಿದ ವ್ಯಕ್ತಿಯೂ ಬಂಧಿಸಲ್ಪಟ್ಟಿದ್ದಾನೆ. ಆರೋ ಪಿಗಳು ಕಣ್ಣೂರಿನ ಕುತುಪರಂಬ ಭಾಗದಲ್ಲಿ ತಿರುಗಾಡುತ್ತಿರುವ ಮಾಹಿತಿ ಅರಿತ ಪೊಲೀಸರು ಐವರನ್ನು ಬಲೆಗೆ ಹಾಕಿದ್ದಾರೆ. ಮಾರಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮಧ್ಯೆ ಕಾಸರಗೋಡಿಗೂ ತನಿಖೆಯನ್ನು ಮುಂದುವರಿಸಲಾಗಿದ್ದು, ಕಾಸರಗೋ ಡಿನ ಕೆಲವು ಗೂಂಡಾಗಳನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ.
ಸಿಪಿಎಂನ ಕಲ್ಲಿಕೋಟೆಯ ಪ್ರಮುಖ ನಾಯಕರಾಗಿದ್ದ ಚಂದ್ರಶೇಖರನ್ ಅವರು ತನ್ನ ಸಾವಿರಾರೂ ಮಂದಿ ಬೆಂಬಲಿಗರೊಂದಿಗೆ ಸಿಪಿಎಂನಿಂದ ಹೊರನಡೆದು ಕ್ರಾಂತಿಕಾರಿ ಮಾರ್ಕಿಸ್ಟ್ ಪಕ್ಷವನ್ನು ಕಟ್ಟಿ ಬೆಳೆಸಿದ್ದರು. ಇವರ ಜಯಪ್ರಿಯತೆಯಿಂದಾಗಿ ಒಂಜಿಯಂ ಹಾಗೂ ಆಸುಪಾಸಿನ ಕೆಲವು ಕ್ಷೇತ್ರಗಳಲ್ಲಿ ಸಿಪಿಎಂ ನೆಲಕಚ್ಚಿತ್ತು. ಸಿಪಿಎಂನವರು ತನ್ನನ್ನು ಕೊಲೆಗೈಯಲೆತ್ನಿಸಿದ್ದರು ಎಂದು ಚಂದ್ರಶೇಖರನ್ ಹಲವಾರು ಬಾರಿ ಹೇಳಿದ್ದರು. ಚಂದ್ರಶೇಖರನ್ ಹತ್ಯೆ ಕೇರಳ ರಾಜಕೀಯವನ್ನು ನಡುಗಿಸಿದೆ.

ವಿಟ್ಲ: ಮಹಿಳೆ ಸರ ಎಳೆದ ಓರ್ವನ ಹಿಡಿದ ಸಾರ್ವಜನಿಕರು; ಮತ್ತೋರ್ವ ಪರಾರಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಹಿಳೆ ಕುತ್ತಿಗೆಯಿಂದ ಕರಿಮಣಿ ಎಳೆದು ಪರಾರಿಯಾಗಿದ್ದ ಕಳ್ಳರ ಪೈಕಿ ಒಬ್ಬನನ್ನು ಸಾರ್ವಜನಿಕರು ಹಿಡಿದು ವಿಟ್ಲ ಪೊಲೀಸರಿಗೆ ಒಪ್ಪಿಸಿದರೆ, ಮತ್ತೊಬ್ಬ ಪರಾರಿಯಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಪುತ್ತೂರು ತಾಲೂಕು ಸವಣೂರು ಸಮೀಪದ ಬೆಳಂದೂರು ಗ್ರಾಮದ ಮಜಲಡ್ಕ ನಿವಾಸಿ ದಿನೇಶ್ ಪೂಜಾರಿ(೨೪) ಎಂಬಾತನೇ ಸಿಕ್ಕಿಬಿದ್ದ ಕಳ್ಳ. ಮತ್ತೊಬ್ಬ ಪರಾರಿಯಾಗಿದ್ದ ಆತ ಕುದ್ಮಾರು ಗ್ರಾಮದ ಮೆಟ್ರಮೆ ನಿವಾಸಿ ಚಾಪಳ್ಳ ಅಬ್ಬು ಯಾನೆ ಅಬೂಬಕ್ಕರ್ ಎಂದು ತಿಳಿದುಬಂದಿದೆ.
ಕೊಂತ್ಯೊಟ್ಟು ಚಂದ್ರಗೌಡರ ಪತ್ನಿ ವಸಂತಿ ಎಂಬವರು ಮಂಗಳವಾರ ಮಧ್ಯಾಹ್ನ ಸಂಬಂಧಿಕರ ಮನೆಯಿಂದ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಮಹಿಳೆಯನ್ನು ಕುಂಡಡ್ಯಕ್ಕೆ ಹೋಗುವ ರಸ್ತೆ ಯಾವುದು ಎಂದು ವಿಚಾರಿಸಿದ್ದರೆನ್ನಲಾಗಿದೆ. ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋದ ಯುವಕರು ಮರಳಿ ಅದೇ ದಾರಿಯಲ್ಲಿ ಬಂದು ದಾರಿ ಹೇಳಿದ ಮಹಿಳೆಯ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಸಿದು ಕಬಕದತ್ತ ಬೈಕ್‌ನಲ್ಲಿ ಬಂದಿದ್ದಾರೆ. ತಕ್ಷಣ ವಸಂತಿ ಅವರ ಮಗಳು ಮನೆಗೆ ಓಡಿಹೋಗಿ ಕಬಕದಲ್ಲಿದ್ದ ತನ್ನ ದೊಡ್ಡಪ್ಪ ಗಿರಿಯಪ್ಪ ಗೌಡರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ. ಗಿರಿಯಪ್ಪ ಗೌಡರು ಜಾಗೃತರಾಗಿ ಜನರನ್ನು ಸೇರಿಸಿ ಕಬಕ ಭಜನಾ ಮಂದಿರದ ಬಳಿ ಹೊಂಚು ಹಾಕಿ ಕುಳಿತರು. ಅಪಾಯದ ಅರಿವಿದ್ದ ಕಳ್ಳರು ಗೀತಾ ಬಾರ್ ರಸ್ತೆ ಮೂಲಕ ಚಲಾಯಿಸಿದಾಗ ಸಾರ್ವಜನಿ ಕರು ಎರಡು ಮೂರು ಬೈಕ್‌ಗಳಲ್ಲಿ ಅವರನ್ನು ಬೆನ್ನಟ್ಟಿದರು. ಕುರುಂಬಳ ರಸ್ತೆಯಲ್ಲಿ ಸಾಗಿ ಮನೆಯೊಂದರ ಬಳಿ ಬೈಕ್ ನಿಲ್ಲಿಸಿ ಗುಡ್ಡದಲ್ಲಿ ಮರೆಯಾಗಿ ದ್ದರು. ಗುಡ್ಡದಲ್ಲಿ ಹುಡುಕಾಡಿ ದಿನೇಶ್‌ನನ್ನು ಬಂಧಿಸಿದ್ದಾರೆ. ಆದರೆ ಮತ್ತೊಬ್ಬ ಪರಾರಿಯಾಗಿದ್ದಾನೆ. ಕೆಲವು ದಿನಗಳ ಹಿಂದೆ ಹುಡುಗಿಯೊಬ್ಬಳು ಈತನ ವಿರುದ್ಧ ಕಬಕ ಠಾಣೆಗೆ ದೂರು ನೀಡಿದ್ದಳು.

ಬೈಕ್ ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಳ್ಳಾಲದ ಮಹಮ್ಮದ್ ಶಂಶೀರ್ ಎಂಬವರ ಮನೆಯ ಅಂಗಳದಲ್ಲಿ ಇದ್ದ ಬೈಕನ್ನು ಕಳ್ಳರು ಕಳವುಗೈದ ಘಟನೆ ವರದಿ ಯಾಗಿದೆ. ಮಾರ್ಗತಲೆ ನಿವಾಸಿ ಮಹ ಮ್ಮದ್ ತಸ್ಲೀಮ್ ಎಂಬವರು ಬೈಕೊಂ ದನ್ನು ಖರೀದಿಸಿದ್ದರು. ಅವರು ವಿದೇ ಶಕ್ಕೆ ಹೋಗುವ ಸಮಯದಲ್ಲಿ ಬೈಕನ್ನು ಅವರ ತಮ್ಮ ಅಜ್ಜನಡ್ಕದ ಮಹಮ್ಮದ್ ಶಂಶೀರ್ ಎಂಬವರಿಗೆ ನೀಡಿದ್ದರು. ಅವರು ಮನೆಯ ರಾತ್ರಿ ಅಂಗಳದಲ್ಲಿ ನಿಲ್ಲಿಸಿದ್ದು, ಇದನ್ನು ಕಳ್ಳರು ಕಳವುಗೈದಿ ದ್ದಾರೆ. ಈ ಬಗ್ಗೆ ಮಹಮ್ಮದ್ ಶಂಶೀರ್ ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವ್ಯಕ್ತಿ ಪೊಲೀಶ್ ವಶಕ್ಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಳ್ಳಾಲ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ನಿನ್ನೆ ಮಧ್ಯ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸರು ಆತನನ್ನು ವಿಚಾರಿಸಿ ದಾಗ ಆತ ತಾನು ತಮಿಳ್ನಾಡು ಮೂಲದ ಸುಬ್ರಹ್ಮಣ್ಯ ಎಂದು ಮಾಹಿತಿ ನೀಡಿದ್ದು, ಈ ಬಗ್ಗೆ ಖಾತ್ರಿಪಡಿಸಲು ಆತನನ್ನು ಪೊಲೀಸರು ವಶದಲ್ಲಿರಿಸಿ ತನಿಖೆ ಮುಂದುವರಿಸಿದ್ದಾರೆ.

ರಿಕ್ಷಾಕ್ಕೆ ಜೀಪ್ ಡಿಕ್ಕಿ

Posted by JAYAKIRANA Kirana on | 0 comments | Leave a comment...

ಸುಳ್ಯ: ಕುಕ್ಕುಜಡ್ಕಕ್ಕೆ ಬಾಡಿಗೆಗೆ ಹೋಗಿ ಹಿಂತಿರುಗುತ್ತಿದ್ದ ರಿಕ್ಷಾಕ್ಕೆ ಜೀಪೊಂದು ಡಿಕ್ಕಿ ಹೊಡೆದು ಚಾಲಕ ಗಾಯಗೊಂಡ ಘಟನೆ ಅಕ್ಕೋಜಿ ಪಾಲ್ ಎಂಬಲ್ಲಿ ಮಂಗಳವಾರ ನಡೆದಿದೆ.
ರಿಕ್ಷಾ ಚಾಲಕ ಕಾನತ್ತಿಲ ನಿವಾಸಿ ಪದ್ಮನಾಭ ಎಂಬವರು ಗಾಯಗೊಂ ಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಟ್ಟು ನಿಂತಿದ್ದ ಕಾರನ್ನು ಹಗ್ಗದ ಸಹಾಯದಿಂದ ಜೀಪಿಗೆ ಕಟ್ಟಿ ಎಳೆದುಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾ ಗಿದೆ. ಜೀಪು ಹಾಗೂ ಕಾರನ್ನು ಪೊಲೀ ಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅರಂತೋಡು: ಜೀಪಿಗೆ ಬೈಕ್ ಡಿಕ್ಕಿ
ಸುಳ್ಯ: ಅರಂತೋಡಿನ ಪಾರೆಮ ಜಲು ಎಂಬಲ್ಲಿ ಮಹಮ್ಮದ್ ಎಂಬವರ ಜೀಪಿಗೆ ದಾಮೋದರ ಎಂಬವರ ಬೈಕ್ ಡಿಕ್ಕಿ ಹೊಡೆದಿದ್ದು, ದಾಮೋದರರ ತಲೆಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂ ರಿಗೆ ಕೊಂಡೊಯ್ಯಲಾಗಿದೆ.

ಹೆಚ್ಚುತ್ತಿರುವ ಕಳ್ಳತನ: ಪೊಲೀಸರ ಜನಸಂಪರ್ಕ ಸಭೆ

Posted by JAYAKIRANA Kirana on | 0 comments | Leave a comment...

ವಿಟ್ಲ: ಇಲ್ಲಿಯ ಮೂಡ್ನೂರು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ಸತತವಾಗಿ ಕಳ್ಳತನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಟ್ಲ ಠಾಣಾಧಿಕಾರಿ ರಕ್ಷಿತ್ ಎ.ಕೆ ಅವರು ಕಂಬಳಬೆಟ್ಟು ಗ್ರಾಮಸ್ಥ ರನ್ನು ಕರೆದು ಮಂಗಳವಾರ ಸಂಜೆ ಜನಸಂಪರ್ಕ ಸಭೆ ನಡೆಸಿದರು. ಈ ಸಂದರ್ಭ ಅವರು ಗ್ರಾಮಸ್ಥರಿಗೆ ಮುಂಜಾಗ್ರತ ಕ್ರಮವಾಗಿ ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಪ್ರತಿಯೊ ಬ್ಬರು ತಮ್ಮ ಮನೆಬಾಗಿಲಿನ ಚಿಲಕಗ ಳನ್ನು ರಾತ್ರಿ ಮಲಗುವಾಗ ಭದ್ರಪಡಿಸ ಬೇಕು ಎಂದರು. ತಮ್ಮ ಬೆಲೆಬಾಳುವ ಚಿನ್ನಾಭರಣಗಳನ್ನು ಲಾಕರ್ ಮೂಲಕ ಭದ್ರವಾಗಿಡಬೇಕೆಂದು ತಿಳಿಸಿದರು. ಮನೆಯ ಹೊರಗಡೆ ರಾತ್ರಿ ಹೊತ್ತು ಪಾತ್ರೆಗಳನ್ನು ಜೋಡಿಸಿಡಬೇಕು. ಇದರಿಂದ ಕಳ್ಳರು ಮನೆಯ ಬಾಗಿಲು ಸಮೀಪ ಬಂದಾಗ ಅದರ ಶಬ್ಧದಿಂದ ನಿಮಗೆ ಎಚ್ಚರವಾಗಬಹುದು ಎಂದು ಸಲಹೆ ಕೊಟ್ಟರು. ರಾತ್ರಿ ಹೊತ್ತು ಇಲ್ಲಿಯ ಯುವಕರು ರಸ್ತೆಗಳಲ್ಲಿ ಗಸ್ತು ತಿರುಗಬೇಕು ಎಂದರು. ಅನುಮಾನ ಬಂದ ವ್ಯಕ್ತಿಯನ್ನು ಕಂಡರೆ ಠಾಣೆಗೆ ಮಾಹಿತಿ ನೀಡಬೇಕೆಂದು ತಿಳಿಸಿದರು. ಸಭೆಯಲ್ಲಿ ವಿಟ್ಲ ಪೊಲೀಸ್ ಠಾಣೆ ಸಿಬ್ಬಂದಿ ಬಾಲಕೃಷ್ಣ, ಸುಭಾಸ್ ಶೆಣೈ, ನಾಗರಾಜ, ಜಯರಾಜ್ ಮುಂತಾದವರು ಉಪಸ್ಥಿತರಿದ್ದರು. ಗ್ರಾಮಸ್ಥರ ಪರವಾಗಿ ಅಬ್ದುಲ್ ಖಾದರ್ ಬದ್ರಿಯಾ, ಹಾಜಿ ಮೊಹಿದ್ದೀನ್ ಶಾಫಿ, ಹಮೀದ್ ಜೆಡಿಎಸ್ ಮುಂತಾದವರು ಭಾಗವಹಿಸಿದ್ದರು.

ಫಲ್ಗುಣಿ ನದಿ ಪಾಲಾಗಿದ್ದ ಶ್ರೀನಿವಾಸ ಕುಂದಾಪುರದಲ್ಲಿ ಎದ್ದುಬಂದ!

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳೆದ ಶುಕ್ರವಾರ ಪಣಂಬೂರು ಠಾಣಾ ವ್ಯಾಪ್ತಿಯ ಕೂಳೂರು ಬ್ರಿಡ್ಜ್ ಸಮೀಪ ಸ್ಕೂಟರ್‌ನಲ್ಲಿ ಪತ್ನಿಯೊಂದಿಗೆ ಸಾಗುತ್ತಿದ್ದ ಶ್ರೀನಿವಾಸ ಪದಕಣ್ಣಾಯ ಎಂಬವರು ಲಾರಿಯೊಂದಕ್ಕೆ ಸೈಡ್ ಕೊಡುವ ವೇಳೆ ಫಲ್ಗುಣಿ ನದಿ ಪಾಲಾಗಿದ್ದಾರೆ ಎಂಬ ಕುರಿತು ಹಬ್ಬಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ. ಇತ್ತ ಕೋಸ್ಟ್ ಗಾರ್ಡ್ ಸಿಬ್ಬಂದಿ, ಪೊಲೀಸರು ಫಲ್ಗುಣಿ ನದಿಯನ್ನು ೪೮ ಗಂಟೆಗಳ ಕಾಲ ಜಾಲಾಡಿ ಸುಸ್ತಾಗಿ ತನಿಖೆಯನ್ನು ಪತ್ನಿ ಮತ್ತು ಆಕೆಯ ಹೆತ್ತವರ ಕಡೆ ಕೇಂದ್ರೀಕರಿಸುತ್ತಿದ್ದಂತೆ ಶ್ರೀನಿವಾಸ ಕುಂದಾಪುರದಲ್ಲಿ ಜೀವಂತ ಪ್ರತ್ಯಕ್ಷವಾಗಿದ್ದಾರೆ.
ಘಟನೆಯ ಹಿನ್ನೆಲೆ: ಸುರತ್ಕಲ್ ಸಮೀಪದ ಗಣೇಶಪುರ ನಿವಾಸಿ ಶ್ರೀನಿವಾಸ ಪದಕಣ್ಣಾಯ ಹಾಗೂ ಪತ್ನಿ ಸ್ವಾತಿ ಎಂಬವರು ಕಳೆದ ಶುಕ್ರವಾರ ಮುಂಜಾನೆ ಆರು ಗಂಟೆಯ ಸುಮಾರಿಗೆ ಮಂಗಳೂರಿನಿಂದ ಕೈಕಂಬಕ್ಕೆ ಮರಳುತ್ತಿದ್ದಾಗ ಕೂಳೂರು ಬ್ರಿಡ್ಜ್ ಸಮೀಪ ಟ್ಯಾಂಕರೊಂದು ಅತೀವೇಗವಾಗಿ ಸಾಗಿಬಂದಿದ್ದು, ಇದನ್ನು ಕಂಡು ಗಲಿಬಿಲಿಗೊಂಡು ಸ್ಕೂಟರ್ ಚಲಾಯಿಸುತ್ತಿದ್ದ ಶ್ರೀನಿವಾಸ ಅವರು ಸ್ಕೂಟರ್ ಅನ್ನು ಎಡಗಡೆಗೆ ತಿರುಗಿಸಿದ್ದೇ ರಸ್ತೆಯಿಂದ ಕೆಳಕ್ಕಿಳಿದು ಫಲ್ಗುಣಿ ನದಿ ಪಾಲಾದರು ಎಂದು ಸ್ವಾತಿ ತನ್ನ ಮನೆಗೆ ವಾಪಸ್ ಆದ ಬಳಿಕವಷ್ಟೇ ಪೊಲೀಸರಿಗೆ ದೂರು ನೀಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಕೋಸ್ಟ್ ಗಾರ್ಡ್ ಸಿಬ್ಬಂದಿ ಹಾಗೂ ಪೊಲೀಸರು ಫಲ್ಗುಣಿ ನದಿಯಲ್ಲಿ ೪೮ ಗಂಟೆಗಳ ಕಾಲ ನಿರಂತರ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಸ್ಕೂಟರ್ ನಿಂತಿದ್ದ ರೀತಿ, ಹೊಳೆಗೆ ಉರುಳಿದ್ದಕ್ಕೆ ಯಾವುದೇ ಪುರಾವೆ ಕಂಡುಬಾರದೇ ಇದ್ದುದರಿಂದ ಪೊಲೀಸರು ಮೊದಲೇ ಶಂಕೆಗೊಂಡಿದ್ದರೂ ಕಾನೂನು ಪ್ರಕಾರ ಹುಡುಕಾಟ ನಡೆಸಿದ್ದರು. ಸ್ವಾತಿ ದೂರು ಕೊಟ್ಟ ನಂತರ ಪೊಲೀಸರ ತನಿಖೆಗೆ ಸಹಕರಿಸದೇ ಇದ್ದುದು ಮತ್ತು ಪೊಲೀಸರನ್ನು ತನಿಖೆಯ ಕುರಿತು ವಿಚಾರಿಸದೇ ಇದ್ದುದು ಪ್ರಾರಂಭದಲ್ಲೇ ಶಂಕೆಗೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಶ್ರೀನಿವಾಸ ಅವರ ಪತ್ನಿ ಹಾಗೂ ಆಕೆಯ ಮನೆಮಂದಿಯನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದರು.
ಪ್ರಕರಣ ತಿರುವು ಪಡೆಯುತ್ತಿರುವಂತೆಯೇ ನಿನ್ನೆ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಶ್ರೀನಿವಾಸರನ್ನು ಅಲ್ಲಿನ ಪೊಲೀಸರು ಪಣಂಬೂರು ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಗ್ಯ ಸಮಸ್ಯೆಯೆಂದು ಸುರತ್ಕಲ್‌ನ ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿರುವ ಶ್ರೀನಿವಾಸ ಅವರು ಸದ್ಯ ಇನ್ನೊಂದು ಪ್ರಹಸನ ಆರಂಭಿಸಿದ್ದಾರೆ. ಮೂಲವೊಂದರ ಪ್ರಕಾರ ಮಂಜೇಶ್ವರದ ವ್ಯಕ್ತಿಯೊಬ್ಬರಿಂದ ಒಂದೂವರೆ ಲಕ್ಷ ಸಾಲ ಪಡೆದಿರುವ ಶ್ರೀನಿವಾಸ್ ಅದನ್ನು ಮರುಪಾವತಿ ಮಾಡದ ಕಾರಣ ಅವರ ವಿರುದ್ಧ ಅಲ್ಲಿನ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ. ಇಷ್ಟೇ ಅಲ್ಲದೆ ಬೇರೊಂದು ವ್ಯವಹಾರದಲ್ಲಿ ಕೈ ಸುಟ್ಟುಕೊಂಡಿರುವ ಶ್ರೀನಿವಾಸ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು ಎನ್ನುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇವುಗಳಿಂದ ಹೊರಬರುವ ಕಾರಣದಿಂದ ಶ್ರೀನಿವಾಸ ತಂತ್ರ ರೂಪಿಸಿದರೇ ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಸುರತ್ಕಲ್‌ನ ಪದ್ಮಾವತಿ ಆಸ್ಪತ್ರೆಯಲ್ಲಿದ್ದ ಶ್ರೀನಿವಾಸರನ್ನು ಭೇಟಿಯಾಗಿ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ಪತ್ರಕರ್ತರಿಗೆ ಅವಕಾಶ ನೀಡದೇ ಇರುವುದು ಶಂಕೆಗೆ ಮತ್ತಷ್ಟು ಪುಷ್ಠಿ ನೀಡಿದೆ.

ಪೊಲೀಸರು ಹಣ ಕೇಳಿದ್ದರೇ?
ಪ್ರಕರಣವನ್ನು ಇಲ್ಲಿಗೇ ಸುಖಾಂತ್ಯಗೊಳಿಸಬೇಕಾದರೆ ಐದು ಲಕ್ಷ ರೂ. ನೀಡಬೇಕು, ಇಲ್ಲದಿದ್ದರೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಐದು ಲಕ್ಷ ರೂ. ಕೇಳಿದ್ದರು ಹೀಗೆಂದು ಸ್ವಾತಿ ತಂದೆ ವಿಜಯಾನಂದ ರಾವ್ ಆರೋಪ ಮಾಡಿದ್ದಾರೆ.

ಕಿಡ್ನ್ಯಾಪ್ ಪ್ರಹಸನ?
ಫಲ್ಗುಣಿ ನದಿಯಲ್ಲಿ ಬಿದ್ದು ಕಾಣೆಯಾಗಿದ್ದರೆ ನ್ನಲಾದ ಶ್ರೀನಿವಾಸ ಅವರು ಇದೀಗ ಹೊಸ ಪ್ರಹಸನ ಆರಂಭಿಸಿದ್ದಾರೆ. ‘ನಾನು ಕಳೆದ ಶುಕ್ರವಾರ ಮುಂಜಾನೆ ಆರು ಗಂಟೆಯ ಸುಮಾರಿಗೆ ಫಲ್ಗುಣಿ ನದಿಗೆ ಬಿದ್ದಿದ್ದು ಹೌದು, ಈ ವೇಳೆ ನನ್ನಲ್ಲಿ ೯೬ ಲಕ್ಷ ರೂ. ಚೆಕ್ ಇತ್ತು.
ನದಿಗೆ ಬಿದ್ದ ನನ್ನನ್ನು ಕಾರಿನಲ್ಲಿ ಬಂದ ಅಪರಿಚಿತ ಯುವಕರು ಅಪಹರಿಸಿ ತಲೆ ಬೋಳಿಸಿ ನಿದ್ದೆ ಮಾತ್ರೆ ನೀಡಿದ್ದರು. ಈ ವೇಳೆ ನನ್ನಲ್ಲಿದ್ದ ಚೆಕ್ ನಾಪತ್ತೆಯಾಗಿದೆ. ಕೊನೆಗೆ ಅವರು ನಿನ್ನೆ ರಾತ್ರಿಯ ವೇಳೆ ನನ್ನನ್ನು ಕುಂದಾಪುರದ ರಸ್ತೆ ಬಳಿ ಎಸೆದುಹೋದರು ಎನ್ನುತ್ತಿದ್ದಾರೆ ಶ್ರೀನಿವಾಸ ಪದಕಣ್ಣಾಯ.

ಹುಬ್ಬಳ್ಳಿಯತ್ತ ಕಾಂಗ್ರೆಸಿಗರ ಕಣ್ಣು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮುಂದಿನ ವಾರ ಕಾಂಗ್ರೆಸ್‌ನ ರಾಜಕುಮಾರ ರಾಹುಲ್ ಗಾಂಧಿ ಹುಬ್ಬಳ್ಳಿಗೆ ಬರಲಿದ್ದಾರೆ. ಈ ಸಮಯದ ಸದುಪಯೋಗ ಪಡಿಸಿಕೊಳ್ಳಲು ದ.ಕ. ಜಿಲ್ಲೆಯ ಕಾಂಗ್ರೆಸ್ ನಾಯಕರು ಈಗಿನಿಂದಲೇ ಸಿದ್ಧತೆ ನಡೆಸಿದ್ದಾರೆ.
ವಾಸ್ತವದಲ್ಲಿ ರಾಹುಲ್ ಗಾಂಧಿ ಹುಬ್ಬಳ್ಳಿಗೆ ಬರುತ್ತಿರುವುದು ಯುವ ಕಾಂಗ್ರೆಸ್ ಸಂಘಟನೆಯ ಉದ್ದೇಶಕ್ಕಾಗಿ. ಆದರೆ ಅಲ್ಲಿ ಯುವ ಕಾಂಗ್ರೆಸ್ ಬಗ್ಗೆ ಯೋಚಿಸಲೂ ಆಗದಷ್ಟು ಮುದಿ ಕಾಂಗ್ರೆಸಿಗರು ಅವರನ್ನು ಮುತ್ತಿಕೊಳ್ಳಲಿದ್ದಾರೆ. ಈಗಿನ ಸಿದ್ಧತೆ ನೋಡಿದರೆ ಹಾಗೆಯೇ ಅನಿಸುತ್ತದೆ.
ಮೇ ೨೮-೨೯ರಂದು ಹುಬ್ಬಳ್ಳಿ -ಧಾರವಾಡದಲ್ಲಿ ನಡೆಯುವ ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಎರಡೂ ದಿನಗಳ ಕಾರ್ಯಕ್ರಮದಲ್ಲೂ ಅವರು ಸಕ್ರಿಯರಾಗಿರಲಿದ್ದಾರೆ ಎಂಬುದು ವಿಶೇಷ. ರಾಹುಲ್ ಗಾಂಧಿ ಎರಡು ದಿನಗಳ ಕಾಲ ನಮ್ಮ ಮನೆ ಅಂಗಳದಲ್ಲಿ ಫ್ರೀಯಾಗಿ ಸಿಗಲಿದ್ದಾರೆ ಎಂಬುದೇ ಕಾಂಗ್ರೆಸಿಗ ಪಾಲಿಗೆ ಅದೃಷ್ಟದ ಬಾಗಿಲು ತೆರೆದಂತಾಗಿದೆ. ರಾಹುಲ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ಅವರ ಕೃಪಾಶೀರ್ವಾದ ಪಡೆಯಲು ದ.ಕ. ಜಿಲ್ಲೆಯ ಹಿರಿಯ ಕಾಂಗ್ರೆಸಿಗರು ಕಾತರರಾಗಿದ್ದಾರೆ. ಅದಕ್ಕೆ ಬೇಕಾದ ಸಿದ್ಧತೆಯನ್ನು ಕಳೆದ ತಿಂಗಳಿನಿಂದಲೇ ಮಾಡುತ್ತಿದ್ದಾರೆ. ಆದರೆ ಯಾರನ್ನು ಉದ್ದೇಶವಾಗಿರಿಸಿಕೊಂಡು ರಾಹುಲ್ ಬರುತ್ತಿದ್ದಾರೆಯೊ ಅವರಲ್ಲಿ ಈ ಉತ್ಸಾಹ, ಕಾತುರತೆ ಕಾಣುತ್ತಿಲ್ಲ. ದ.ಕ. ಜಿಲ್ಲೆಯ ಯುವ ಕಾಂಗ್ರೆಸಿಗರು ರಾಹುಲ್ ಬಂದು ಏನು ಮಾಡಲಿಕ್ಕಿದೆ ಎಂಬಂತೆ ಆರಾಮವಾಗಿದ್ದಾರೆ. ನಮಗೆ ಕರೆದಿದ್ದಾರೆ ನಾವು ಹೋಗುತ್ತೇವೆ ಎಂಬ ಉದಾಸೀನ ಭಾವ ಯುವ ಕಾಂಗ್ರೆಸಿಗರದ್ದು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಯಾವುದೇ ಸಂದರ್ಭದಲ್ಲೂ ಸರಕಾರಕ್ಕೆ ಗಂಡಾಂತರ ತಂದಿಡಬಹುದು. ರಾಜ್ಯ ವಿಧಾನ ಸಭೆಗೆ ಅವಧಿಗೆ ಮುನ್ನ ಚುನಾವಣೆ ನಡೆಯುವ ಸಾಧ್ಯತೆಯೇ ಹೆಚ್ಚಾಗಿರುವ ಲಕ್ಷಣಗಳು ಗೋಚರಿಸುತ್ತಿವೆ. ಕಾಂಗ್ರೆಸ್ ಚುನಾವಣೆ ಎದುರಿಸಲು ಅಣಿಯಾಗುತ್ತಿದೆ. ಕಾಂಗ್ರೆಸ್ ಅಣಿಯಾಗುತ್ತಿದೆ ಎನ್ನುವುದಕ್ಕಿಂತ ಟಿಕೆಟ್ ಆಕಾಂಕ್ಷಿಗಳು ಈಗಿನಿಂದಲೇ ಪೈಪೋಟಿ ಆರಂಭಿಸಿದ್ದಾರೆ ಎಂಬುದು ಹೆಚ್ಚು ಅರ್ಥಗರ್ಭಿತವಾಗುತ್ತದೆ. ನಾನೇ ಅಭ್ಯರ್ಥಿಯಾಗಲು ಏನು ಮಾಡಬೇಕು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಎದುರಾಳಿಯ ಕಾಲೆಳೆಯುವ ತಂತ್ರಗಾರಿಕೆಯೂ ಸಿದ್ಧಗೊಳ್ಳುತ್ತಿದೆ. ಇಂತಹ ಕಾರ್ಯತಂತ್ರದ ಭಾಗವಾಗಿಯೇ ರಾಹುಲ್ ಗಾಂಧಿಯನ್ನು ಭೇಟಿಯಾಗುವ ಇಲ್ಲವೆ ರಾಹುಲ್‌ರ ಮೇಲೆ ಪ್ರಭಾವ ಬೀರುವವರನ್ನು ಹಿಡಿಯುವ ಸಿದ್ಧತೆ, ಟಿಕೆಟ್ ಅಕಾಂಕ್ಷಿಗಳು ಈ ಸಿದ್ಧತೆಯನ್ನು ಈಗಾಗಲೇ ಪೂರ್ಣ ಗೊಳಿಸಿಕೊಂಡಿದ್ದಾರೆ. ರಾಹುಲ್ ಬರುವುದಕ್ಕಿಂತ ಎರಡು ದಿನ ಮೊದಲೇ ಹುಬ್ಬಳ್ಳಿಯಲ್ಲಿರಲು ಈಗಲೇ ಟಿಕೆಟ್ ಬುಕ್ ಮಾಡಿದವರು, ಲಾಡ್ಜ್ ರೂಂ ಬುಕ್ ಮಾಡಿದವರು ದ.ಕ. ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿ ದ್ದಾರೆ. ಕೆಲವರು ರಾಹುಲ್‌ರನ್ನು ಭೇಟಿಯಾಗುವ ಸಮಯ ನಿಗಧಿಗಾಗಿ ಸರ್ಕಸ್ ಮಾಡುತ್ತಿದ್ದಾರೆ.

ಅನಧಿಕೃತ ಕಟ್ಟಡ ನಿರ್ಮಾಣದ ವಿರುದ್ಧ ಸಮಗ್ರ ತನಿಖೆಗೆ ಒತ್ತಾಯ

Posted by JAYAKIRANA Kirana on | 0 comments | Leave a comment...

ಪಡುಬಿದ್ರೆ: ಬೆಳ್ಳೆ ಮಾರುಕಟ್ಟೆಯಲ್ಲಿ ಪಂಚಾಯತ್‌ನ ಪರವಾನಿಗೆ ರಹಿತ ವಾಗಿ ನಿರ್ಮಿಸಲಾಗಿರುವ ಅನಧಿಕೃತ ಕಟ್ಟಡದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುವಂತೆ ಗ್ರಾಮಸ್ಥರು ತಾ. ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿ. ಪಂ. ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬೆಳ್ಳೆ ಗ್ರಾ. ಪಂ.ನ ಮೂಡುಬೆಳ್ಳೆ ಮಾರುಕಟ್ಟೆ ಪ್ರದೇಶದಲ್ಲಿ ಗ್ರಾ. ಪಂ. ಅಧ್ಯಕ್ಷರು ತಮ್ಮ ಸಂಬಂಧಿಯೋ ರ್ವರಿಗೆ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡಿದ್ದು, ಮಾರುಕಟ್ಟೆ ಜಾಗವನ್ನು ತಗ್ಗುಗೊಳಿಸಿರುವುದರಿಂದ ಮಳೆಗಾ ಲದಲ್ಲಿ ನೆರೆ ನೀರು ನಿಲ್ಲುವ ಭೀತಿಯೂ ಎದುರಾಗಿದೆ ಎಂದು ದೂರಿನಲ್ಲಿ ಹೇಳ ಲಾಗಿದೆ. ಈ ನಿಟ್ಟಿನಲ್ಲಿ ಕಟ್ಟಡಕ್ಕೆ ನೀಡಿ ರುವ ಪರವಾನಿಗೆ, ಅನುಮತಿ ಪತ್ರ, ಬಳಕೆ ಯಾದ ಅನುದಾನ, ಅಂದಾಜು ಪಟ್ಟಿಯನ್ನು ಪರಿಶೀಲಿಸಿ ಕಾಮಗಾರಿ ಯನ್ನು ನಿರ್ವಹಿಸಿದ ಗುತ್ತಿಗೆದಾರರು ಯಾರು ಮತ್ತು ಅಂಗಡಿಯನ್ನು ಪರಭಾರೆ ಮಾಡಿಕೊಂಡಿರುವವರು ಯಾರು ಎನ್ನುವುದರ ಕುರಿತಾಗಿಯೂ ಸೂಕ್ತ ತನಿಖೆ ನಡೆಸುವಂತೆ ದೂರು ದಾರರು ಒತ್ತಾಯಿಸಿದ್ದಾರೆ. ಈ ಬಗ್ಗೆ ಬೆಳ್ಳೆ ಗ್ರಾ. ಪಂ.ನ ಅಭಿವೃದ್ಧಿ ಅಧಿಕಾರಿ ರಾಮಪ್ಪ ಹಿತ್ತಲಮನಿ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ಈ ಕಟ್ಟಡದ ಬಗ್ಗೆ ಈಗಾಗಲೇ ತಾ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗಿದೆ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಇದನ್ನು ತೆರವು ಗೊಳಿಸಲು ಆದೇಶ ನೀಡಿದ್ದಾರೆ. ಈ ಪ್ರಕರಣ ಕುರಿತು ತನಿಖೆಗಾಗಿ ಸಮಿತಿ ಯೊಂದನ್ನು ರಚಿಸುವಂತೆಯೂ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಯಡಿಯೂರಪ್ಪ ಮೇ ೨೦ರಿಂದ ರಾಜ್ಯ ಪ್ರವಾಸ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ವಿಧಾನ ಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಪಕ್ಷ ತ್ಯಜಿಸುವ ಸಂಬಂಧ ಸಾರ್ವಜನಿಕ ಅಭಿ ಪ್ರಾಯ ಪಡೆಯಲು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಮೇ ೨೦ರಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ.
ರೇಸ್‌ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ಬೆಂಬಲಿಗ ಸಚಿವರು ಶಾಸ ಕರೊಟ್ಟಿಗೆ ಸಮಾಲೋಚನೆ ನಡೆಸಿದ ನಂತರ ಪ್ರವಾಸ ಕೈಗೊಳ್ಳುವ ನಿರ್ಧಾರ ಕೈಗೊಂಡರು. ಪ್ರವಾಸ ನಿರ್ಧಾರ ಕೈಗೊಂಡ ಸಂದರ್ಭದಲ್ಲೇ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ದೆಹಲಿಯಲ್ಲಿ ಅವರ ಮತ್ತು ಅವರ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಿದರು.
ನಾಡಪ್ರಭು ಕೆಂಪೇಗೌಡ ನೆಲೆಬೀಡಾದ ಯಲಹಂಕ ವಿಧಾನ ಸಭಾಕ್ಷೇತ್ರದಿಂದಲೇ ತಮ್ಮ ಪ್ರವಾಸ ಆರಂಭಿಸಿ, ರಾಜ್ಯಾದ್ಯಂತ ಮೂರು ವಾರಗಳ ಕಾಲ ನಿರಂತರವಾಗಿ ಜನರ ಜೊತೆ ಬೆರೆಯಲಿದ್ದಾರೆ. ಇತ್ತೀಚಿಗೆ ಪಕ್ಷ ಮತ್ತು ಸರ್ಕಾರದಲ್ಲಿ ತಮಗಾಗಿರುವ ಅಪಮಾನವನ್ನು ಜನತೆಯ ಮುಂದಿಟ್ಟು, ಅವರ ಸಲಹೆ ಸಹಕಾರ ಪಡೆದು, ತಮ್ಮ ಮುಂದಿನ ರಾಜಕೀಯ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಬೆಂಬಲಿಗರ ಸಭೆಯಲ್ಲಿ ಪಕ್ಷ ತ್ಯಜಿಸದೇ ಪಕ್ಷದಲ್ಲೇ ಉಳಿಯುವುದೇ ಎಂಬ ಬಗ್ಗೆ ನಿನ್ನೆ ಕೂಡ ಸುದೀರ್ಘ ಸಮಾಲೋಚನೆ ನಡೆಸಿ, ನಂತರ ಪ್ರವಾಸದ ನಿರ್ಧಾರ ಕೈಗೊಂಡರು. ಪಕ್ಷದ ವರಿಷ್ಠ ನಾಯಕ ಅರುಣ್ ಜೇಟ್ಲಿ ಹಾಗೂ ಕೆಲ ಸ್ವಾಮೀಜಿಗಳ ಮಾತಿಗೆ ಕಟ್ಟು ಬಿದ್ದು ಪಕ್ಷ ತ್ಯಜಿಸುವ ನಿರ್ಧಾರವನ್ನು ಸಧ್ಯಕ್ಕೆ ಮುಂದೂಡಿರುವ ಯಡಿಯೂರಪ್ಪ ರವರು ಮುಂದಿನ ಕಾರ್ಯನಡೆಯ ಬಗ್ಗೆ ಆಪ್ತರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಉತ್ತರ ವಿಧಾನಸಭಾ ಕ್ಷೇತ್ರ: ಪದಾಧಿಕಾರಿಗಳ ಸಮಿತಿ ವಿಸರ್ಜನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರ ಸ್ವಾಮಿ ಅವರ ಸೂಚನೆಯಂತೆ ಜನತಾದಳ ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿ , ಉಪಸಮಿತಿ ಘಟಕಗಳು ಸಹಿತ ಎಲ್ಲಾ ಸಮಿತಿಗಳನ್ನು ವಿಸರ್ಜಿಸಲಾಗಿದೆ ಎಂದು ದ.ಕ. ಜಲ್ಲಾಧ್ಯಕ್ಷ ಎಂ.ಬಿ. ಸದಾಶಿವ ಅವರು ಹೇಳಿದ್ದಾರೆ. ಪತ್ರಿಕಾ ಪ್ರಕಟನೆ ನೀಡಿರುವ ಅವರು ಇತ್ತೀಚೆಗೆ ಕುಮಾರಸ್ವಾಮಿ ದ.ಕ. ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಉತ್ತರ ವಿಧಾನ ಸಭಾ ಕ್ಷೇತ್ರದ ಪಕ್ಷದೊಳಗಿನ ಆಂತರಿಕ ಗೊಂದಲಗಳ ಬಗ್ಗೆ ವಿಚಾರಿಸಿ ಮಾಹಿತಿ ಪಡಕೊಂಡಿದ್ದರು. ಪತ್ರಿಕಾ ಹೇಳಿಕೆಗಳು, ನಾಯಕರ ವಿಭಿನ್ನ ನಿಲುವುಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ಯುಂಟು ಮಾಡುತ್ತದೆ ಎಂಬ ಕಾರಣ ಕ್ಕಾಗಿ ಎಲ್ಲಾ ಸಮಿತಿಗಳನ್ನು ವಿಸರ್ಜಿಸಲು ಅವರು ಸೂಚನೆ ನೀಡಿರುವು ದಾಗಿ ಎಂ.ಬಿ. ಸದಾಶಿವ ತಿಳಿಸಿದ್ದಾರೆ.

ಯಡ್ಡಿ ಹೇಳಿಕೆಗೆ ಕುಮಾರಸ್ವಾಮಿ, ರೇವಣ್ಣ ತೀವ್ರ ಆಕ್ರೋಶ

Posted by JAYAKIRANA Kirana on | 0 comments | Leave a comment...


ಬೆಂಗಳೂರು: ಡಿ.ವಿ. ಸದಾನಂದ ಗೌಡರು ಜೆಡಿಎಸ್ ಅಣತಿಯಂತೆ ಸರ್ಕಾರ ನಡೆಸು ತ್ತಿದ್ದಾರೆ ಎಂಬ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಕ್ಕೆ ಎಚ್.ಡಿ. ಕುಮಾ ರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಸಹೋದರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತ್ಯೇಕ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ನಮಗೆ ಯಾವ ಕೆಲಸ ಮಾಡಿಕೊಟ್ಟಿದ್ದಾರೆ. ಅವರಿಂದ ನಾವು ಏನು ಸಹಾಯ ಪಡೆದಿದ್ದೇವೆ. ನಾವು ಹೇಳಿದಂತೆ ನಡೆದುಕೊಂಡಿರುವ ಬಗ್ಗೆ ದಾಖಲೆ ಪ್ರದರ್ಶಿಸಲಿ ಎಂದು ಸವಾಲು ಹಾಕಿ ದ್ದಾರೆ. ಜೆಡಿಎಸ್ ಕಚೇರಿಯಲ್ಲಿ ಸುದ್ದಿ ಗಾರರ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಧನಸೌಧದಲ್ಲಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ, ಯಡಿಯೂರಪ್ಪ ಅವರು ನಮ್ಮ ಕುಟುಂಬದ ವಿರುದ್ಧ ಮನಬಂ ದಂತೆ ಬೇಕಾಬಿಟ್ಟಿ ಮಾತನಾ ಡುತ್ತಿದ್ದಾರೆ. ನಾವು ಯಾವತ್ತೂ ಸದಾನಂದಗೌಡರ ಮನೆ ಬಾಗಿಲು ಕಾದಿಲ್ಲ ಎಂದು ಕಿಡಿ ಕಾರಿದರು. ಸದಾನಂದಗೌಡರಿಂದ ನಾವು ಏನಾದರೂ ಪ್ರಯೋಜನ ಪಡೆದ ಬಗ್ಗೆ ದಾಖಲೆ ಇದ್ದರೆ ತೋರಿಸಲಿ. ಯಾವುದಾದರೂ ಜಮೀನು ಡಿನೋ ಟಿಫಿಕೇಷನ್‌ಗೆ ಸಹಿ ಹಾಕಿಸಿಕೊಂಡಿ ದ್ದೇವೆಯೇ ಎಂದು ಪ್ರಶ್ನಿಸಿದರು.

ಕ್ಷೀಣಿಸಿದ ಯಡ್ಡಿ ಬೆಂಬಲಿಗರ ಸಂಖ್ಯೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಕಾಂಗ್ರೆಸ್ ಜತೆ ಕೈಜೋಡಿಸಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದು ಖಚಿತವಾಗಿದೆ. ಒಂದು ವೇಳೆ ಅವರನ್ನು ಪಕ್ಷದಿಂದ ಉಚ್ಛಾಟಿಸಿದರೆ ಬೆರಳೆಣಿಕೆಯ ಸಚಿವರು ಮತ್ತು ಶಾಸಕರು ಮಾತ್ರ ಅವರನ್ನು ಹಿಂಬಾಲಿಸುವ ಸಾಧ್ಯತೆ ಇದೆ. ಇದರ ಸಂಖ್ಯೆ ೫ರಿಂದ ಎಂಟನ್ನು ಮೀರುವುದಿಲ್ಲ ಎಂದು ಹೇಳಲಾಗಿದೆ. ಅಂತಹ ಸಂದರ್ಭದಲ್ಲಿ ಸಚಿವರಾದ ಶೋಭಾ ಕರಂದ್ಲಾಜೆ, ಉಮೇಶ್ ಕತ್ತಿ, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಪಕ್ಷ ತೊರೆಯುವ ಸಾಧ್ಯತೆ ಇದೆ.
ಬೆರಳೆಣಿಕೆಯಷ್ಟು ಮಾತ್ರ ಅವರ ಹಿಂದೆ ಹೋಗಲಿದ್ದು, ಇದರಿಂದ ಪಕ್ಷಕ್ಕೆ ಮತ್ತು ಸರಕಾರಕ್ಕೆ ಯಾವುದೇ ಗಂಡಾಂತರವಾಗುವ ಸಾಧ್ಯತೆ ಇಲ್ಲ. ಈಗಾಗಲೇ ಯಡಿಯೂರಪ್ಪ ಪಕ್ಷ ಬಿಡುತ್ತೇನೆ ಎಂಬ ಹೇಳಿಕೆ ಹೊರಬರುತ್ತಿದ್ದಂತೆ ಅವರ ಬೆಂಬಲಕ್ಕೆ ನಿಂತಿದ್ದ ಬಹುತೇಕರು ಹಿಂದಕ್ಕೆ ಸರಿದಿದ್ದಾರೆ. ಇನ್ನಷ್ಟು ಮಂದಿ ದೂರ ಸರಿಯುವ ಸಾಧ್ಯತೆ ಇದೆ.
ಅವರ ಆಪ್ತರಾಗಿರುವವರು ಮಾತ್ರ ಪಕ್ಷದ ನಿರ್ಧಾರವನ್ನು ವಿರೋಧಿಸಿ ಯಡಿಯೂರಪ್ಪ ಅವರ ಹಾದಿ ತುಳಿಯುವ ಸಾಧ್ಯತೆ ಇದೆ. ಯಡಿಯೂರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಂಡರೆ ಎಷ್ಟು ಮಂದಿ ಹೊರ ಹೋಗುತ್ತಾರೆಂಬ ಮಾಹಿತಿ ಅರಿತೇ ವರಿಷ್ಠರು ಶಿಸ್ತುಕ್ರಮಕ್ಕೆ ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸದಾನಂದ ಗೌಡರ ಸರಕಾರಕ್ಕೆ ಗಂಡಾಂತರ ಬಾರದಂತೆ ನೋಡಿಕೊಳ್ಳಲು ಕೆಲವು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳ ಲಾಗಿದೆ. ಜೆಡಿಎಸ್ ಜತೆ ಕೈಜೋಡಿಸು ವುದೂ ಸೇರಿದಂತೆ ಪಕ್ಷೇತರರ ಬೆಂಬಲ ಪಡೆಯಲು ಕೆಲವು ಸಚಿವರನ್ನು ನಿಯೋ ಜಿಸಿದೆ. ಸಚಿವರಾದ ಬಾಲಚಂದ್ರ ಜಾರಕೀ ಹೊಳೆ ಮತ್ತು ಸಿ.ಪಿ.ಯೋಗೀಶ್ವರ್ ಈ ಕಾರ್ಯದಲ್ಲಿ ಮುಂದಿದ್ದಾರೆ.

ಯಡಿಯೂರಪ್ಪ ವಿರುದ್ಧ ಕಠಿಣ ಕ್ರಮಕ್ಕೆ ಹೈಕಮಾಂಡ್ ನಿರ್ಧಾರ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಬಿಜೆಪಿ ಹಿರಿಯ ನಾಯಕರ ವಿರುದ್ಧ ಬಹಿರಂಗವಾಗಿ ಹರಿಹಾಯ್ದು ಪಕ್ಷ ಬಿಡುವ ಬೆದರಿಕೆಯೊಡ್ಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೈಕಮಾಂಡ್ ನಿರ್ಧರಿಸಿದೆ.
ಪಕ್ಷವನ್ನೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಬಗ್ಗೆ ಜನರಲ್ಲಿ ಅಸಹ್ಯ ಭಾವನೆ ಉಂಟು ಮಾಡಿರುವ ಯಡಿ ಯೂರಪ್ಪ ಪಕ್ಷ ಬಿಟ್ಟರೂ ಸರಿಯೇ ಎಂಬ ತೀರ್ಮಾನಕ್ಕೆ ಬಂದಿರುವ ಹೈಕಮಾಂಡ್, ಶಿಸ್ತಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಇಸ್ರೇಲ್ ಪ್ರವಾಸದಲ್ಲಿರುವ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮೇ ೨೦ರಂದು ಸ್ವದೇಶಕ್ಕೆ ಹಿಂತಿರು ಗುತಿದ್ದಂತೆ ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊ ಳ್ಳಲಿದ್ದಾರೆ. ಇದು ಪಕ್ಷದಿಂದ ಉಚ್ಛಾಟನೆ ಅಥವಾ ಅಮಾನತು ಕ್ರಮವಾದರೂ ಆಗಿರಬಹುದು. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವವರಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಲೇಬೇಕು. ಪಕ್ಷಕ್ಕಿಂತ ಯಾವುದೇ ಸಮುದಾಯದ ನಾಯಕ ದೊಡ್ಡವನಲ್ಲ ಎಂದು ತಿಳಿಸುವ ಸಲುವಾಗಿ ಕ್ರಮ ಕೈಗೊಳ್ಳಬೇಕು ಎಂಬ ನಿರ್ಧಾರಕ್ಕೆ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯೇ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಜತೆ ಕೈ ಜೋಡಿಸಲು ದೆಹಲಿ ಮಟ್ಟ ದಲ್ಲಿ ಅವರ ಬೆಂಬಲಿಗ ಸಚಿವೆ ಶೋಭಾ ಕರಂದ್ಲಾಜೆ ಮಾತುಕತೆ ನಡೆಸಿರುವುದು
ಇದೇ ಸಮಯದಲ್ಲಿ ಯಡಿಯೂರಪ್ಪ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್‌ಕುಮಾರ್, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಹಾಗೂ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ವಿರುದ್ಧ ಟೀಕಾ ಪ್ರಹಾರ ಮಾಡಿರುವುದು ಪಕ್ಷ ವಿರೋಧಿ ಚಟುವಟಿಕೆ ಎಂದು ವರಿಷ್ಠರು ಭಾವಿಸಿದ್ದಾರೆ. ವ್ಯಕ್ತಿಗಿಂತ ಅವರು ಹೊಂದಿರುವ ಸ್ಥಾನಕ್ಕೆ ಪಕ್ಷ ಸದಾ ಕಾಲ ಗೌರವ ಕೊಡುತ್ತದೆ. ಈ ಹಿಂದೆ ಯಾವುದೇ ವ್ಯಕ್ತಿ ಅಥವಾ ನಾಯಕ ಒಂದೇ ಸಮಯದಲ್ಲಿ ಮೂರ‍್ನಾಲ್ಕು ನಾಯಕರ ವಿರುದ್ಧ ಬಹಿರಂಗವಾಗಿ ಟೀಕೆ ಅಥವಾ ಆರೋಪ ಮಾಡಿಲ್ಲ. ಇಂತಹ ಸನ್ನಿವೇಶದಲ್ಲಿ ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದ ಶಿಸ್ತಿಗೆ ಬೆಲೆ ಇರುವುದಿಲ್ಲ ಎಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ.
ಯಡಿಯೂರಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಂದರ್ಭದಲ್ಲೇ ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡುವ ಮೂಲಕ ಕರ್ನಾಟಕದಲ್ಲಿ ಲಿಂಗಾಯಿತ ಸಮುದಾಯ ಹಿಡಿದಿಟ್ಟುಕೊಳ್ಳುವ ತಂತ್ರವನ್ನೂ ರೂಪಿಸಲಾಗಿದೆ. ಯಡಿಯೂರಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಅವರ ಬೆಂಬಲಕ್ಕೆ ನಿಂತಿರುವ ಯಾವ ಶಾಸಕ-ಸಚಿವರ ವಿರುದ್ಧವೂ ಕ್ರಮ ಕೈಗೊಳ್ಳದಿರಲು ನಿರ್ಧರಿಸಲಾಗಿದ್ದು ಈ ಮೂಲಕ ಯಡಿಯೂರಪ್ಪ ಅವರನ್ನು ಏಕಾಂಗಿ ಮಾಡುವ ತಂತ್ರ ರೂಪಿಸಲಾಗಿದೆ. ಸೋಮವಾರ ಪಕ್ಷದ ಪ್ರಮುಖ ನಾಯಕರ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿದ್ದಂತೆ ರಾಜ್ಯ ಘಟಕ ಮತ್ತು ಕೇಂದ್ರ ಘಟಕ ತಡರಾತ್ರಿವರೆಗೂ ಪ್ರತ್ಯೇಕ ಸಭೆ ನಡೆಸಿ ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಣಯ ಹಾಗೂ ರಾಜ್ಯದ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಮಾಲೋಚನೆ ನಡೆಸಿದೆ. ಆ ನಂತರ ಕೇಂದ್ರ ಘಟಕ ಯಡಿಯೂರಪ್ಪ ಮೇಲೆ ರಾಜ್ಯ ಘಟಕ ಕ್ರಮ ಕೈಗೊಳ್ಳುವುದು ಬೇಡ. ಕೇಂದ್ರ ಘಟಕ ಕೈಗೊಳ್ಳಲಿದೆ ಎಂಬ ಸಂದೇಶ ರವಾನಿಸಿದೆ.

ಯಡ್ಡಿಯನ್ನು ಬಿಟ್ಟು ಸದಾನಂದ ಗೌಡರನ್ನು ಬೆಂಬಲಿಸೋಣ

Posted by JAYAKIRANA Kirana on | 0 comments | Leave a comment...


ಈಗಲೇ ರಾಜ್ಯದ ಬಡಜನರಿಗೆ ಬದುಕಲು ತುಂಬಾ ಕಷ್ಟವಾಗುತ್ತಿದೆ ಕಾರಣ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರ ಮಧ್ಯೆ ಅವಧಿಗೆ ಮುನ್ನ ಚುನಾವಣೆ ಘೋಷಣೆಯಾದರೆ ರಾಜ್ಯದ ಜನರಿಗೆ ತಡೆದುಕೊಳ್ಳುವ ಶಕ್ತಿ ಇಲ್ಲ. ಆದ್ದರಿಂದ ಯಡಿಯೂರಪ್ಪನವರು ಮತ್ತು ಅವರ ಬಣದವರು ಶಾಂತರಾಗಿ, ಒಳ್ಳೆಯ ರೀತಿಯಿಂದ ಆಡಳಿತ ನಡೆಸಲು ಸಹಕಾರ ನೀಡಬೇಕೆಂದು ಆನಂದ ಅಸ್ನೋಟಿಕರ್ ಹೇಳಿದ್ದು ನೂರಕ್ಕೆ ನೂರು ಸತ್ಯವಾಗಿದೆ.

ಟಿ. ಇಸ್ಮಾಯಿಲ್, ಮಂಗಳೂರು
ರಾಜ್ಯದ ಹಾಲಿ ಮುಖ್ಯಮಂತ್ರಿಯವರು ಇತ್ತೀಚೆಗಷ್ಟೆ ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡನೆ ಮಾಡಿ ರಾಜ್ಯದ ಜನರಿಗೆ ತೃಪ್ತಿಯಾಗುವ ರೂಪದಲ್ಲಿ ಮಂಡಿಸಿ ಬಿಜೆ ಪಿಗೆ ಉತ್ತಮ ವರ್ಚಸ್ಸು ತಂದಿದ್ದ ಡಿವಿಎಸ್‌ರವರನ್ನು ಟೀಕಿಸು ವುದು ಸರಿಯಲ್ಲ ಎಂದು ಸಚಿವ ಆನಂದ ಅಸ್ನೋಟಿಕರ್ ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಹೇಳಿದರು. ಬಿ.ಎಸ್. ಯಡಿಯೂರಪ್ಪನವರ ಬಗ್ಗೆ ಅಪಾರ ಅಭಿಮಾನವಿದೆ ಮಾತ್ರ ವಲ್ಲ ಅವರ ಅಗತ್ಯ ಭಾರತೀಯ ಜನತಾ ಪಕ್ಷಕ್ಕೆ ಇದೆ. ಆದರೆ ಇತ್ತೀಚಿನ ಬೆಳವಣಿಗೆಯಿಂದ ಮನಸ್ಸಿಗೆ ನೋವಾಗಿದೆ ಎಂದರು.
ಡಿ.ವಿ.ಎಸ್.ನವರು ವರಿಷ್ಠರಿಗೆ ಬರೆದ ಪತ್ರವೇ ಈ ಎಲ್ಲಾ ಪಕ್ಷದ ಆಂತರಿಕ ಅಭದ್ರತೆಗೆ ಕಾರಣವೇ ಎಂಬ ಮಾಧ್ಯಮ ದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಆನಂದ ಅಸ್ನೋಟಿಕರ್ ಮುಖ್ಯಮಂತ್ರಿಯವರು ಬರೆದಿರುವ ಪತ್ರದ ಬಗ್ಗೆ ಅಥವಾ ಅವರ ನಿರ್ಣಯದ ಬಗ್ಗೆ ತಾನು ಹಸ್ತಕ್ಷೇಪ ಮಾಡುವುದಿಲ್ಲ. ಕಾರಣ ಅವರು ಜವಾಬ್ದಾರಿಯುತ ಕೆಲಸ ಮಾಡುತ್ತಾರೆ. ಪತ್ರ ಬರೆದಿರುವುದರ ಬಗ್ಗೆ ಅದರಲ್ಲಿರುವ ವಿಷಯ ಎಷ್ಟು ಸತ್ಯವೆಂ ಬುದು ಸ್ಪಷ್ಟ ಮಾಹಿತಿ ಇಲ್ಲ.
ಒಂದು ವೇಳೆ ಸದಾನಂದ ಗೌಡರು ಬರೆದಿರುವ ಪತ್ರ ದಲ್ಲಿ ಯಡಿಯೂರಪ್ಪನವರಿಗೆ ಸಮಸ್ಯೆಯಾಗಿದ್ದೇ ಅದಲ್ಲಿ ಪಕ್ಷದ ಮುಖಂಡರಾಗಿರುವ ಈಶ್ವರಪ್ಪ ಕೇಂದ್ರದ ಮುಖಂಡರಾಗಿರುವ ನಿತಿನ್ ಗಡ್ಕರಿಯವರೊಂದಿಗೆ ಮಾತನಾಡಿ ಬಗೆಹರಿಸಬಹು ದಾಗಿತ್ತು ಎಂದು ಹೇಳಿದ ಅಸ್ನೋಟಿಕರ್ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಬೆಂಬಲಿತ ಕೆಲವು ಶಾಸಕರು ರಾಜೀನಾಮೆ ನೀಡುವ ನಿರ್ಣಯ ತೆಗೆದುಕೊಂಡಿರುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಆದರೆ ಇವರು ಈ ರೀತಿಯ ನಿರ್ಣಯ ತೆಗೆದುಕೊಳ್ಳದೆ ಪಕ್ಷ ಭದ್ರಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮನಸ್ಸು ಇರಬೇಕಿತ್ತು.
ರಾಜ್ಯ ಭಾರತೀಯ ಜನತಾ ಪಕ್ಷದ ಐದು ಜನ ಮುಖಂಡ ರಾಗಿರುವ ಈಶ್ವರಪ್ಪ, ಸದಾನಂದ ಗೌಡ, ಯಡಿಯೂರಪ್ಪ, ಜಗದೀಶ ಶೆಟ್ಟರ್, ಅನಂತ ಕುಮಾರ್ ಇವರು ಒಂದಾಗಿ ನಿರ್ಣಯ ತೆಗೆದುಕೊಂಡು ಆಂತರಿಕ ಸಮಸ್ಯೆ ಬಗೆಹರಿಸಿದರೆ ಮುಂದಿನ ಒಂದು ವರ್ಷಗಳ ಕಾಲ ಸದಾನಂದ ಗೌಡ ನೇತೃತ್ವ ದಲ್ಲಿ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಲು ಸಾಧ್ಯವಾಗ ಬಹುದು ಎಂದರು. ಈ ಕುರಿತು ಬಾಲಚಂದ್ರ ಜಾರಕಿ ಹೊಳಿ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ದೆಹಲಿ ಯಲ್ಲಿರುವ ಅವರನ್ನು ಭೇಟಿ ಮಾಡಿ ಅವರ ಸಲಹೆಯೊಂದಿಗೆ ಬಿಜೆಪಿ ೨೦ ಜನ ಶಾಸಕರು ಹಾಗೂ ಪಕ್ಷೇತರ ೫ ಜನ ಶಾಸಕ ರೊಂದಿಗೆ ಸೋಮವಾರ ಗೋವಾಕ್ಕೆ ತೆರಳಿ ಸಮಾಲೋಚನೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಒಂದು ವೇಳೆ ಸದಾನಂದ ಗೌಡರನ್ನು ಹೊರತುಪಡಿಸಿ ಮೂರನೆಯವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಲು ಪ್ರಯ ತ್ನಿಸಿದರೆ ತಾನು ಮತ್ತು ತನ್ನೊಂದಿಗಿರುವ ೨೫ ಶಾಸಕರ ಬೆಂಬಲ ಎಂದೆಂದಿಗೂ ಸದಾನಂದ ಗೌಡರಿಗಿರುತ್ತದೆ. ಕಾರಣ ಪ್ರತಿ ಯೊಂದು ಕ್ಷೇತ್ರದಿಂದಲೂ ಜನರು ಅಭ್ಯರ್ಥಿಗಳನ್ನು ಚುನಾ ಯಿತರನ್ನಾಗಿಸಿ ವಿಧಾನ ಸಭೆಗೆ ಕಳಿಸುವುದು ನಮಗೆ ಒಳ್ಳೆಯ ಕೆಲಸವಾಗಬೇಕು. ಸರಕಾರದಿಂದ ಸಿಗುವ ಸವಲತ್ತನ್ನು ನಮಗೆ ತೆಗೆಸಿ ಕೊಡುವ ಭರವಸೆಯಿಂದ ನಮ್ಮನ್ನು ಆರಿಸಿ ಕಳಿಸಿದ್ದು. ೫ ವರ್ಷಕ್ಕೆ ಮುಂಚೆ ಸರಕಾರ ಪತನಗೊಂಡರೆ ನಾವು ಹೇಗೆ ನಮ್ಮ ಕ್ಷೇತ್ರದ ಜನರಿಗೆ ಮುಖ ತೋರಿಸುವುದು ಎಂದು ಅಸ್ನೋಟಿ ಕರ್ ಹೇಳಿದ್ದು ಸರಿಯಾಗಿದೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ದಲ್ಲಿ ಅವರಿಗೆ ಪ್ರತಿಯೊಂದು ವಿಷಯದಲ್ಲೂ ನಾವು ಸಹಕರಿಸಿ ದ್ದೇವೆ. ಆದರೆ ಭೂಹಗರಣ, ಡಿನೋಟಿಫಿಕೇಶನ್ ಬಗ್ಗೆ ನ್ಯಾಯಾ ಲಯದಲ್ಲಿ ಆರೋಪವಿರುವುದರಿಂದ ಆರೋಪಿತ ವ್ಯಕ್ತಿ ಮುಖ್ಯ ಮಂತ್ರಿ ಸ್ಥಾನದಲ್ಲಿ ಕೂರುವುದು ಸರಿಯಲ್ಲ ಎಂದು ವರಿಷ್ಟರ ತೀರ್ಮಾನದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇ ಕಾಯಿತು ಹೊರತು ಪಕ್ಷದ ಒಳಗಿಂದ ಯಡಿಯೂರಪ್ಪನವ ರನ್ನು ಯಾರೂ ಕೆಳಗಿಳಿಸಿಲ್ಲ. ಆರೋಪ ಮುಕ್ತರಾಗಿ ಬಂದರೆ ಕೇಂದ್ರದ ವರಿಷ್ಠರು ಯಡಿಯೂರಪ್ಪನವರಿಗೆ ಸ್ಥಾನ ನೀಡಲು ಹಿಂದೇಟು ಹಾಕುವುದಿಲ್ಲ ಎಂದು ಕೆಲವು ಸಮಯದ ಹಿಂದೆ ಹೇಳಿದ ಮಾತನ್ನು ಅಲ್ಲಗಳೆಯುವಂತಿಲ್ಲ.
ಈಗಲೇ ರಾಜ್ಯದ ಬಡಜನರಿಗೆ ಬದುಕಲು ತುಂಬಾ ಕಷ್ಟ ವಾಗುತ್ತಿದೆ ಕಾರಣ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರು ತ್ತಿದೆ. ಇದರ ಮಧ್ಯೆ ಅವಧಿಗೆ ಮುನ್ನ ಚುನಾವಣೆ ಘೋಷಣೆ ಯಾದರೆ ರಾಜ್ಯದ ಜನರಿಗೆ ತಡೆದುಕೊಳ್ಳುವ ಶಕ್ತಿ ಇಲ್ಲ. ಆದ್ದ ರಿಂದ ಯಡಿಯೂರಪ್ಪನವರು ಮತ್ತು ಅವರ ಬಣದವರು ಶಾಂತರಾಗಿ, ಒಳ್ಳೆಯ ರೀತಿಯಿಂದ ಆಡಳಿತ ನಡೆಸಲು ಸಹ ಕಾರ ನೀಡಬೇಕೆಂದು ಆನಂದ ಅಸ್ನೋಟಿಕರ್ ಹೇಳಿದ್ದು ನೂರಕ್ಕೆ ನೂರು ಸತ್ಯವಾಗಿದೆ. ಈ ಸರಕಾರದ ಅವಧಿ ಮುಗಿಯವವ ರೆಗೂ ಸದಾನಂದ ಗೌಡರ ಕೈಯಲ್ಲೇ ಸರಕಾರ ಮುಂದುವರಿ ಯಲಿ ಎಂದು ಆಶಿಸುತ್ತೇನೆ. ಸದಾನಂದ ಗೌಡರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ. ಎಲ್ಲರೂ ಅದೇ ರೀತಿ ಮಾಡಬೇಕೆಂ ಬುದು ನನ್ನ ವಿನಂತಿಯಾಗಿದೆ.

ಮಹಿಳಾ ಆಟಗಾರರನ್ನು ಪೋತ್ಸಾಹಿಸಿ

Posted by JAYAKIRANA Kirana on | 0 comments | Leave a comment...

ಇತ್ತೀಚೆಗೆ ಕಬ್ಬಡಿಯಲ್ಲಿ ಚಾಂಪಿಯನ್ ಆಗುವ ಮೂಲಕ ಮಮತಾ ಪೂಜಾರಿ ಎನ್ನುವ ಕನ್ನಡದ ಹೆಣ್ಣು ಮಗಳು ಈ ನಾಡಿನ ಕೀರ್ತಿಯನ್ನು ವಿಶ್ವದಗಲಕ್ಕೆ ಕೊಂಡೊಯ್ದಿದ್ದಾರೆ. ಇದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಮಮತಾ ಪೂಜಾರಿಯಂತಹ ಅನೇಕ ಪ್ರತಿ ಭೆಗಳಿರಬಹುದು. ಅವರಿಗೆ ಸರಿಯಾದ ಪ್ರೋತ್ಸಾಹ ದೊರಕದೆ ಹಿಂದೆ ಬಿದ್ದಿರ ಬಹುದು. ಆದ್ದರಿಂದ ಇಂತಹ ಪ್ರತಿಭೆಗ ಳನ್ನು ಗುರುತಿಸುವ ಕೆಲಸಕಾರ್ಯಗಳನ್ನು ಸ್ಥಳೀಯ ಸಂಘ ಸಂಸ್ಥೆಗಳು ಮಾಡಬೇ ಕಾಗಿದೆ. ಇದರಿಂದ ಆ ಸಂಘಟನೆಗಳಿಗೂ ಹೆಸರು, ದೇಶಕ್ಕೂ ಹೆಸರು ಬರುವುದರಲ್ಲಿ ಸಂದೇಹವಿಲ್ಲ. ಮೊದಲಾಗಿ ಕೆಲವೊಂದು ಗ್ರಾಮೀಣ ಪ್ರದೇಶದಲ್ಲಿರುವ ಮೂಢನಂಬಿಕೆಗಳನ್ನು ತೊಲಗಿಸಬೇಕು. ಹೆಣ್ಣು ಮಕ್ಕಳು ಆಟವಾಡಿದರೆ ಗಂಡು ಭೀರಿ ಎಂದು ಕರೆಯುತ್ತಾರೆ. ಇಂತಹ ಕೆಲವೊಂದು ಆಡು ಮಾತು ಗಳನ್ನು ನಿಲ್ಲಿಸಬೇಕು. ಮಮತಾಳಂತಹ ಗಂಡುಬೀರಿಗಳು ನಮ್ಮ ದೇಶಕ್ಕೂ ಇನ್ನಷ್ಟು ಮಂದಿ ಬೇಕಾಗಿದ್ದಾರೆ. ಇದಕ್ಕೆ ಆದಷ್ಟು ಸರಕಾರ ಪೋತ್ಸಾಹ ನೀಡುವ ಅಗತ್ಯವಿದೆ.
ರಮ್ಯಾ, ಉಡುಪಿ

ಪ್ರತಿಭಟನೆ ಮಾಡುವ ಸಮಯ ದೂರವಿಲ್ಲ
ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾವಂಜೆ, ಸಸಿಹಿತ್ಲು, ಹಳೆಯಂಗಡಿ ಈ ಪ್ರದೇಶದ ಮನೆಗಳಿಗೆ ಕುಡಿಯುವ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಪಂಚಾಯತ್‌ನ ಪಂಪ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದಿರುವುದರಿಂದ ಸರಿಯಾಗಿ ಕುಡಿ ಯುವ ನೀರು ಗ್ರಾಮಸ್ಥರಿಗೆ ಪೂರೈಕೆ ಆಗದಿರಲು ಕಾರಣ ವಾಗಿದೆ. ಹಾಗೂ ಇನ್ನೊಂದು ಸಮಸ್ಯೆಯೇನೆಂದರೆ ಹಳೆಯಂಗಡಿ ಹೃದಯಭಾಗದಲ್ಲಿ ಹಾಗೂ ಇಂದಿರಾ ನಗರದ ವಾಸ್ತವ್ಯದ ಮನೆಗಳ ಎದುರು ತ್ಯಾಜ್ಯ ವಸ್ತುಗ ಳನ್ನು ಸರಿಯಾಗಿ ವಿಲೇವಾರಿ ಮಾಡದೇ ಇರುವುದರಿಂದ ಸಾಂಕ್ರಾಮಿಕ ರೋಗಗಳು ಉಲ್ಭಣಿಸುವ ಪರಿಸ್ಥಿತಿ ಇದೆ. ಆದುದರಿಂದ ಸಂಬಂಧಪಟ್ವವರು ಮೇಲಿನ ಎರಡು ಸಮಸ್ಯೆಗಳನ್ನು ಕೂಡಲೇ ಪರಿಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಪಂಚಾಯತ್ ಕಚೇರಿ ಎದುರು ಗಡೆ ಪ್ರತಿಭಟನೆ ಮಾಡುವ ಸಮಯ ದೂರವಿಲ್ಲ.
ಡಿ.ಡಿ.ರಾಜ್, ಹಳೆಯಂಗಡಿ

ಸರ್ವಸಂಗ ಪರಿತ್ಯಾಗಿ ಸ್ವಾಮಿಗಳು ಸಿನಿಮಾ ವೀಕ್ಷಿಸಬಹುದೇ?
ಇತ್ತೀಚೆಗೆ ಕಠಾರಿ ವೀರ.. ಚಿತ್ರದಲ್ಲಿ ಹಿಂದು ಧರ್ಮಕ್ಕೆ ಅವಹೇಳನ ಮಾಡಲಾಗಿದೆ ಎಂದು ಹಿಂದು ಸಂಘಟನೆಗಳು ಪ್ರತಿಭಟಿಸಿದವು. ಚಿತ್ರ ಪ್ರದ ರ್ಶನಕ್ಕೆ ಅಡ್ಡಿ ಪಡಿಸಿದವು. ಧರ್ಮಕ್ಕೆ ಅಪಮಾನವಾದಾಗ ಇದು ಸಹಜ ಪ್ರಕ್ರಿಯೆ ಮತ್ತು ಇದನ್ನು ತಪ್ಪೆನ್ನುವಂತಿಲ್ಲ. ಆದರೆ ಸರ್ವಸಂಗ ಪರಿತ್ಯಾಗಿಗಳಾದ ಸ್ವಾಮೀಜಿಗಳು ಸಿನಿಮಾ ವೀಕ್ಷಣೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನು ವುದು ನನ್ನ ಪ್ರಶ್ನೆ. ಸಿನಿಮಾ ಎನ್ನುವುದು ಮನೋರಂಜನೆಯ ಮಾಧ್ಯಮ. ಇಲ್ಲಿ ಸಮಾಜಕ್ಕೆ ಎಷ್ಟು ಸಂದೇಶ ಇದೆ ಎನ್ನುವುದಕ್ಕಿಂತ ಇತ್ತೀಚಿನ ಸಿನಿಮಾಗ ಳಲ್ಲಿ ಆಶ್ಲೀಲತೆ, ರೋಮ್ಯಾನ್ಸ್, ಪ್ರೀತಿ-ಪ್ರೇಮ, ಪ್ರಣಯದ ದೃಶ್ಯಗಳೇ ಸಾಮಾ ನ್ಯವಾಗಿರುತ್ತದೆ. ಇಂಥಹ ಸಿನಿಮಾಗಳನ್ನು ಎಲ್ಲವನ್ನು ತ್ಯಜಿಸಿ ಕೇವಲ ದೇವರ ಆರಾಧನೆಗೆ ಸೀಮಿತವಾಗಿರುವ ಸ್ವಾಮೀಜಿಗಳು ನೋಡಬಹುದೇ? ಮೊನ್ನೆಯ ಘಟನೆಯಲ್ಲಿ ಸ್ವಾಮೀಜಿಗಳ ಸಾರಥ್ಯದ ಅಗತ್ಯವಿತ್ತು. ಯಾಕೆಂದರೆ ಇದೊಂದು ಧರ್ಮಕ್ಕೆ ಸಂಬಂಧಪಟ್ಟ ವಿಚಾರ. ಹಾಗೆಂದು ನೇರವಾಗಿ ಹೋಗಿ ಸಿನಿಮಾ ವೀಕ್ಷಿಸಿದ್ದು ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ನೀಡುತ್ತದೆ? ಅದೂ ಅಲ್ಲದೇ ಕಠಾರಿ ವೀರ ಸಿನಿಮಾ ವೀಕ್ಷಿಸಿದರೆ ಪಾಪ ಬರುತ್ತದೆ ಎನ್ನುವ ಮಠಾ ಧೀಶರು ಸಿನಿಮಾ ವೀಕ್ಷಿಸಿದ್ದೇ ದೊಡ್ಡ ಪಾಪವಲ್ಲವೇ? ಸಿನಿಮಾದಲ್ಲಿ ಹಿಂದೂ ಧರ್ಮಕ್ಕೆ ಅಪಮಾನವಾಗಿದೆಯೇ ಎನ್ನುವುದನ್ನು ಸ್ವತಹ ಸಿನಿಮಾ ವೀಕ್ಷಣೆ ಮಾಡಿ ನೋಡುವ ಬದಲು ಕೆಲ ಹಿಂದೂ ಮುಖಂಡರ ಹೇಳಿಕೆ ಗಳನ್ನು ಅಧಾರಿಸಿ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಅದು ಬಿಟ್ಟು ಹಿಂದೂ ಧರ್ಮದ ಮೂಲ ವ್ಯಕ್ತಿಗಳು ಅನಿಸಿಕೊಂಡ ಸ್ವಾಮಿಗಳೇ ಮನೋರಂಜನೆಗೆ ಸೀಮಿತವಾದ ಸಿನಿಮಾ ವೀಕ್ಷಿಸಿದ್ದು ಸರಿಯಲ್ಲ. ಇತ್ತೀಚೆಗೆ ಕೆಲ ಸ್ವಾಮೀಜಿ ಗಳು ಫೇಸ್‌ಬುಕ್ ಎನ್ನುವ ಸಾಮಾಜಿಕ ತಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಇನ್ನಷ್ಟು ಮಾಡ್ರನ್ ಆಗುತ್ತಿದ್ದಾರೆ. ಇದರ ಮಧ್ಯೆ ಈ ರೀತಿಯ ವಿನೂತನ ಸಂಪ್ರದಾಯಕ್ಕೆ ಆರಂಭ ಹಾಡುವುದು ಬೇಡವೆನ್ನುವುದು ನನ್ನ ಅಭಿಪ್ರಾಯ.
ಇನ್ನು ಈ ಚಿತ್ರದಲ್ಲಿ ಹಿಂದುಗಳ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಅದನ್ನು ವಿರೋಧಿಸುವುದು ಪ್ರತಿಯೊಬ್ಬ ಹಿಂದುಗಳ ಕರ್ತವ್ಯ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಹಾನಿಯೆಸಗುವ ಅದೆಷ್ಟೋ ಕೃತ್ಯಗಳು ನಡೆಯುತ್ತಲೇ ಇವೆ. ಇವುಗಳನ್ನು ನಿಲ್ಲಿಸಿದಿದ್ದರೆ ಮುಂದೆ ಹಿಂದು ಧರ್ಮವೇ ಹಾಸ್ಯದ ವಸ್ತುವಾಗಬಹುದು.
ಸಂಕೇತ್ ನಾಯಕ್, ಕಂಕನಾಡಿ

ನಾಪತ್ತೆಗೆ ಹೆತ್ತವರೇ ಕಾರಣ
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚು ತ್ತಿವೆ. ಹೆಣ್ಣುಮಕ್ಕಳು ಪ್ರಾಯಕ್ಕೆ ಬಂದಾಗ ಪೋಷಕರು ಜವಾಬ್ದಾರಿ ಯಿಂದ ಎಚ್ಚೆತ್ತುಕೊಳ್ಳದೆ ನಾಪತ್ತೆ ಪ್ರಕ ರಣಗಳಿಗೆ ಅವರೇ ಕಾರಣರಾಗುತ್ತಿ ದ್ದಾರೆ. ಹುಡುಗಿಯರ ಕೈಯಲ್ಲಿ ಬೆಲೆ ಬಾಳುವ ಮೊಬೈಲ್, ಬಂಗಾರದ ಒಡವೆಗಳನ್ನು ಒದಗಿಸಿಕೊಡುತ್ತಿರುವ ಹೆತ್ತವರು ಆಕೆ ಓಡಿ ಹೋದಾಗ ಕೂಗುವುದು, ಪಶ್ಚಾತ್ತಾಪ ಪಡುವುದು ಎಷ್ಟರ ಮಟ್ಟಿಗೆ ಸರಿ? ಹೆತ್ತವರು ಮಕ್ಕಳು ಶಾಲಾಕಾಲೇಜ್‌ಗೆ ಹೋಗುತ್ತಿದ್ದು, ಸಂಜೆ ಮನೆಗೆ ಬರುತ್ತಾರೆಂದು ನಿಶ್ಚಿಂತರಾಗಿರದೆ ಜವಾಬ್ದಾರಿಯಿಂದ ಅವರ ಬಗ್ಗೆ ನಿಗಾ ಇಡಬೇಕಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ. ಶಿಕ್ಷಣ ಕೆಲಸದ ಉದ್ದೇಶದಿಂದ ಮನೆಯಿಂದ ಹೊರಡುವ ಹೆಣ್ಮುಕ್ಕಳು ಯಾವುದೇ ಆಮಿಷಕ್ಕೆ ಬಲಿ ಬಿದ್ದು ಹಾದಿ ತಪ್ಪುವ ಮೊದಲು ಪೋಷಕರು ಜಾಗರೂಕತೆಯಿಂದ ನೋಡಿಕೊಳ್ಳಬೇಕಾದ ಅನಿವಾರ್ಯತೆಯಿದೆ.
ನಾಗರಾಜ್, ಆರ್.ಪಿ.ಸುಳ್ಯ

ಅಪಘಾತ ತಡೆಗೆ ಕ್ರಮ ಕೈಗೊಳ್ಳಿ
ಸರಕಾರ ವಾಹನಗಳಿಂದಾಗುವ ಅಪಘಾತಗಳನ್ನು ನಿಯಂತ್ರಿಸಲು ಏನೆಲ್ಲ ಕ್ರಮಗಳನ್ನು ಕೈಗೊಂಡರೂ ಅವುಗಳ ಪರಿಣಾಮ ಕಿಂಚಿತ್ತೂ ಆಗದೆ ಅವಘಡ ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಬೇಸರದ ಸಂಗತಿ. ಸರಕಾರ ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದವರಿಗೆ ಅಧಿಕ ದಂಡ ವಿಧಿಸಲಿದೆ ಎಂದು ಅನೇಕ ಭಾರೀ ಮಾಧ್ಯಮಗಳು ಎಚ್ಚರಿಸಿದ್ದರೂ ಅದರ ಪರಿಣಾಮ ಮಾತ್ರ ಶೂನ್ಯ. ನಾವು ಯಾವುದಾದರೂ ಒಂದು ರಸ್ತೆಯಲ್ಲಿ ನಿಂತು ಕೇವಲ ಹತ್ತು ನಿಮಿಷ ಗಮನಿಸಿದರೆ ಸಾಕು ಮೊಬೈಲ್‌ನಲ್ಲಿ ಮಾತಾಡಿಕೊಂಡು ಡ್ರೈವಿಂಗ್ ಮಾಡುವ ಚಾಲಕರ ಸಂಖ್ಯೆಗೆ ಮಿತಿಯಿಲ್ಲ. ಇದಕ್ಕೆಲ್ಲಾ ಕಾರಣ ಜನರಲ್ಲಿ ಸುರಕ್ಷಾ ಕ್ರಮಗಳ ಬಗ್ಗೆ ಅಸಡ್ಡೆಯಿರುವುದು ಒಂದೆಡೆಯಾದರೆ ಸಂಬಂಧಿಸಿದ ಇಲಾ ಖೆಯ ನಿಷ್ಕ್ರಿಯತೆಯೂ ಇನ್ನೊಂದು ಕಾರಣವಾಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಆಗುವ ರಸ್ತೆ ಅವಘಡವನ್ನು ತಪ್ಪಿಸಬಹುದು.
ರಘುರಾಮ, ಉಳ್ಳಾಲ

ಎದ್ದೇಳಿ, ಎಚ್ಚರಗೊಳ್ಳಿ
ಸಣ್ಣಪುಟ್ಟ ಸಮಸ್ಯೆಗೆ ಎಚ್ಚೆತ್ತು ಊರು ಒಂದು ಮಾಡುವ ದಲಿತ ಸಂಘಟನೆಗಳು ಮತಾಂತರ, ಅವಿ ವಾಹಿತ ಹೆಣ್ಣುಮಕ್ಕಳ ಪರಾರಿ ಪ್ರಕ ರಣಗಳ ಬಗ್ಗೆ ಯಾಕೆ ಧ್ವನಿಯೆತ್ತು ತ್ತಿಲ್ಲ? ಸಾಮಾನ್ಯವಾಗಿ ದಲಿತರ ಮೇಲೆ ಹಲ್ಲ್ಲೆ, ನಿಂದನೆ ನಡೆದಾಗ ಮಾತ್ರ ದಲಿತ ಸಂಘಟನೆಗಳು ಹೋರಾಟ ಮಾಡುವುದನ್ನು ಕಾಣು ತ್ತೇವೆ. ಆದರೆ ಅಂಕಿಅಂಶಗಳ ಪ್ರಕಾರ ಕ್ರೈಸ್ತ ಮಿಷನರಿಗಳ ಮಾತಿಗೆ ಮರು ಳಾಗಿ ಮತಾಂತರವಾಗುವ ವರೂ ದಲಿತರೇ ಆಗಿರುತ್ತಾರೆ. ಇಲ್ಲಿ ಅವರಿಗೆ ತಮ್ಮ ಜಾತಿಯ ಮೇಲಿನ ಕೀಳರಿ ಮೆಯೇ ಅವರನ್ನು ಮತಾಂತರಕ್ಕೆ ಪ್ರೋತ್ಸಾಹಿಸುತ್ತದೆ ಎಂದರೆ ತಪ್ಪಾ ಗದು. ಸರಕಾರ ದಲಿತ ಜಾತಿ ಯವರಿಗೆ ಸಾಕಷ್ಟು ಪ್ರೋತ್ಸಾಹ ನೀಡು ತ್ತಲೇ ಬಂದಿದ್ದರೂ ಇಂಥಹ ಕೀಳ ರಿಮೆ ಬೆಳೆದಿದ್ದಾದರೂ ಹೇಗೆ? ಈ ಬಗ್ಗೆ ಸಂಘಟನೆಗಳು ಯಾವ ರೀತಿ ಯಾತನೆ ಹಾಕಿಕೊಂಡಿವೆ? ಇನ್ನು ಅಪ್ರಾಪ್ತ, ಪ್ರಾಪ್ತ ವಯಸ್ಕ ಹೆಣ್ಣುಮ ಕ್ಕಳ ನಾಪತ್ತೆ, ಪ್ರೇಮ ಪ್ರಕರಣ, ಪರಾರಿ ಇತ್ಯಾದಿಯೂ ಸಮಾಜದಲ್ಲಿ ಹೆಚ್ಚೆಚ್ಚು ಕಂಡುಬರುತ್ತದೆ. ಹಿಂದೆ ಸಮಾಜದ ಹೆಣ್ಣುಮಕ್ಕಳು ಕಡಿಮೆ ಕಲಿತು ಮನೆ ಯಲ್ಲೇ ಇರುತ್ತಿದ್ದರೆ ಇಂದು ಹೆಚ್ಚು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ, ಇದ ರಿಂದ ಹೆಚ್ಚು ಸ್ವತಂತ್ರರಾಗಿರುವ ಹೆಣ್ಣು ಮಕ್ಕಳು ಇಂತಹ ಕುಕೃತ್ಯಕ್ಕೆ ಇಳಿಯು ತ್ತಿದ್ದಾರೆ. ಇವರು ಶಿಕ್ಷಣ ಪಡೆದಂತೆ ತಮ್ಮ ಜಾತಿಯ ಗಂಡು ಮಕ್ಕಳನ್ನು ಮದುವೆಯಾಗಿ ಸಂಸಾರ ಸಾಗಿಸಲು ಮುಂದೆ ಬರುತ್ತಿಲ್ಲ. ದಲಿತ ಸಮಾ ಜದ ಗಂಡು ಹುಡುಗರು ಸಮಾಜ ದಲ್ಲಿ ಪ್ರತಿಷ್ಠೆ ಹೊಂದಿರುವ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಮುಂದಿನ ಕೆಲವೇ ವರ್ಷಗಳಲ್ಲಿ ದಲಿತ ಸಮಾಜ ಜನಸಂಖ್ಯೆಯಲ್ಲಿ ತೀರಾ ಹಿಂದುಳಿಯುವ ಸಾಧ್ಯತೆ ಯಿದೆ.
ಲಕ್ಷ್ಮಣ, ಬೈಲೂರು

ಎಸ್‌ಎಸ್‌ಎಲ್‌ಸಿಯಲ್ಲಿ ತಾರತಮ್ಯ ಬೇಡ
ಈ ಬಾರಿಯ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯಪುಸ್ತಕದ ವಿಷ ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೇಳಿ ದ್ದರಿಂದ ವಿದ್ಯಾರ್ಥಿಗಳು ಗೊಂದ ಲಕ್ಕೆ ಒಳಗಾಗಿದ್ದರು. ಈ ವಿಷಯ ವನ್ನು ಉತ್ತರ ಪತ್ರಿಕೆಗಳ ಮೌಲ್ಯ ಮಾಪನದ ವೇಳೆ ಶಿಕ್ಷಕರು ಎಸ್ಸೆಸ್ಸೆಲ್ಸಿ ಬೋರ್ಡ್‌ನ ಗಮನಕ್ಕೆ ತಂದಿದ್ದರು.
ಇದೀಗ ವಿದ್ಯಾರ್ಥಿಗಳಿಗೆ ಗಣಿತ ದಲ್ಲಿ ಆರು ಕೃಪಾಂಕಗಳನ್ನು ನೀಡು ವುದಾಗಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇಲ್ಲೂ ಕೆಲವು ಗೊಂದಲಗಳಿವೆ. ಕೆಲವೊಂದು ಮಾಧ್ಯಮಗಳಲ್ಲಿ ಈ ಪಠ್ಯಪುಸ್ತಕದ ವಿಷಯದ ಹೊರತಾಗಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಲು ಯತ್ನಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಈ ಆರು ಕೃಪಾಂಕ ನೀಡಲಾಗುವುದು. ಉತ್ತ ರಿಸುವ ಗೋಜಿಗೇ ಹೋಗದ ವಿದ್ಯಾ ರ್ಥಿಗಳಿಗೆ ಕೃಪಾಂಕ ಇಲ್ಲ ಎಂದು ವರದಿಯಾಗಿದೆ. ಈ ಬಗ್ಗೆ ಸಂಬಂ ಧಿಸಿದವರು ಸ್ಪಷ್ಟೀಕರಣ ನೀಡಬೇ ಕಾಗಿ ವಿನಂತಿ. ಕೃಪಾಂಕ ನೀಡುವು ದಾದರೆ ಎಲ್ಲಾ ವಿದ್ಯಾರ್ಥಿಗಳಿಗೂ ನೀಡಬೇಕು.
ಅದು ಬಿಟ್ಟು ಅಲ್ಲೂ ತಾರ ತಮ್ಯದ ಧೋರಣೆ ಸರಿಯಲ್ಲ.. ಅಲ್ಲವೇ.?! ಇನ್ನಾದರೂ ಸಂಬಂಧ ಪಟ್ಟವರು ಗಮನಿಸಲಿ.
ಓರ್ವ ವಿದ್ಯಾರ್ಥಿ, ಪಡುಬಿದ್ರಿ.

ನಾಯಕರೇ ಹೀಗಾದರೆ ಹೇಗೆ?
ಇತ್ತೀಚೆಗಷ್ಟೇ, ಇನ್ನು ಮುಂದೆ ಅಧಿಕಾರಕ್ಕಾಗಿ ದಿಲ್ಲಿಗೆ ಹೋಗುವುದಿಲ್ಲ ಎಂದಿರುವ ಯಡಿಯೂರಪ್ಪ. ಈಗ ಪುನಹ ಅಧಿಕಾರಕ್ಕಾಗಿ ಕಸರತ್ತು ನಡೆಸು ತ್ತಿರುವುದನ್ನು ನೋಡಿದಾಗ ಇವರು ಹೇಳಿದ ಮಾತನ್ನು ಉಳಿಸಿಕೊಳ್ಳಲಾಗದವರು ಇಡೀ ರಾಜ್ಯಕ್ಕೆ ನೀಡಿರುವ ಭರವಸೆಯನ್ನು ಹೇಗೆ ಈಡೇರಿಸಿಯಾರು? ಯಡಿಯೂ ರಪ್ಪ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದವರು, ಬೆಳೆಸಿದ ವರು. ಅವರೇ ನಿಜವಾದ ನಾಯಕರೆಂದಾದರೆ ಈ ರೀತಿ ಮಾಡುತ್ತಿರಲಿಲ್ಲ. ಏಕೆಂದರೆ ನಾಯಕನ ಸ್ಥಿತಿಯೇ ಹೀಗಾದರೆ ಹೇಗೆ?
ನಾಯಕನೆಂದರೆ ಕಿರಿಯರು ತಪ್ಪಿ ನಡೆದರೆ ಅವ ರಿಗೆ ಬುದ್ಧಿ ಮಾತು ಹೇಳಿ ಅವರನ್ನು ಸರಿದಾರಿಗೆ ತರು ವವರು. ಅದರ ಬದಲು ಅವರೇ ಕಚ್ಚಾಡಿಕೊಂಡರೆ ಅವರನ್ನು ನಾಯಕನೆಂದು ಯಾರು ತಾನೇ ಒಪ್ಪಿಕೊಳ್ಳುತ್ತಾರೆ. ಬಿಜೆಪಿ ಅಧಿಕಾರದ ಅವಧಿ ಪೂರ್ತಿ ಒಂದಲ್ಲಾ ಒಂದು ಗೊಂದಲಗಳನ್ನು ಸೃಷ್ಟಿ ಮಾಡುತ್ತಲೇ ಇದ್ದರೆ ಮತ ಹಾಕುವ ಪ್ರಜೆಗಳು ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾರೆಯೇ? ಅಷ್ಟು ಬುದ್ಧಿ ಇಲ್ಲದ ರಾಜಕಾರಣಿಗ ಳಿಗೆ ಧಿಕ್ಕಾರವಿರಲಿ.
ಕಿರಣ್ ಕುಮಾರ್, ಬಂಟ್ವಾಳ

ಕೋರ್ಟ್ ರಸ್ತೆಯ ತಿರುವಿನಲ್ಲಿರುವ ಹಂಪ್ಸ್‌ನಿಂದ ಅಪಾಯ ಕಟ್ಟಿಟ್ಟಬುತ್ತಿ
ಮಂಗಳೂರಿನ ಕರಂಗಲಪಾಡಿಯಿಂದ ಕೋರ್ಟ್ ರಸ್ತೆಯಲ್ಲಿ ವಾಹನ ಸಂಚಾರ ಮಾಡಿ ದರೆ ಖಂಡಿತ ಅಪಾಯ ಕಾದಿದೆ. ಸುಜಾತಾ ಹೊಟೇಲ್‌ನಿಂದ ಕೋರ್ಟ್ ರಸ್ತೆಯಲ್ಲಿ ಸಾಗಿದರೆ ಕರಂಗಲ್‌ಪಾಡಿಗೆ ಕೆಲವೇ ಕ್ಷಣದಲ್ಲಿ ಮುಟ್ಟಬ ಹುದು. ಇದೊಂದು ಶಾರ್ಟ್‌ಕಟ್ ರಸ್ತೆ. ಆದರೆ ಕೋರ್ಟ್ ಮೇಲ್ಭಾಗದಿಂದ ಕರಂಗಲಪಾಡಿಗೆ ಇಳಿ ಯುವಾಗ ಎರಡು ಬದಿಯಲ್ಲಿ ತುಂಬಾ ಮರಗ ಳಿದ್ದು, ಇದೊಂದು ಕಂದಕ ಪ್ರದೇಶವಾಗಿದೆ. ಇಲ್ಲಿ ತಿರುವಿನಿಂದ ಹಿಡಿದು ಸಂತ ಅಲೋಶಿಯಸ್ ಟೆಕ್ನಿಕಲ್ ಕಾಲೇಜ್ ತನಕ ಕಟ್ಟಿದ ಗೋಡೆ ಜರಿದು ಬಿದ್ದು ಅದೆಷ್ಟೋ ವರ್ಷಗಳಾಗಿವೆ. ೩೦೪೦ ಗಜ ಗಳಷ್ಟಿನ ದಾರಿ ತುಂಬಾ ಡೇಂಜರಾಗಿದೆ. ಇದೊಂದು ಅಗಲ ಕಿರಿದಾದ ರಸ್ತೆ, ವಾಹನ ಚಾಲಕರು ಸ್ವಲ್ಪ ನಿರ್ಲಕ್ಷತನ ತೋರಿದರೂ ವಾಹನ ಖಂಡಿತವಾ ಗಿಯೂ ಆಳವಾದ ಕಂದಕಕ್ಕೆ ಉರುಳುವ ಸಾಧ್ಯತೆ ಜಾಸ್ತಿ. ಹಾಗೆ ಬಿದ್ದಲ್ಲಿ ಪ್ರಾಣಕ್ಕೆ ಅಪಾಯ ಖಂಡಿತ. ಅದಲ್ಲದೆ ಮೇಲಿನ ತಿರುವಿನ ಬಲಬದಿಯಲ್ಲಿ ದೊಡ್ಡ ವಾಹನಗಳನ್ನು ಪಾರ್ಕ್ ಮಾಡಲಾಗುತ್ತದೆ. ಆವಾಗ ತಿರುಗು ಪ್ರದೇಶದಲ್ಲಿ ವಾಹನ ಹಾರ್ನ್ ಮಾಡಿ ಕೊಂಡೊಯ್ಯಲು ತುಂಬಾ ಕಷ್ಟಕರ. ಅದ ಲ್ಲದೆ ಸುಜಾತಾ ಹೊಟೇಲ್‌ನಿಂದ ಕೋರ್ಟ್ ರಸ್ತೆ ಯಾಗಿ ಕರಂಗಲಪಾಡಿಗೆ ಬರುವಾಗ ಮೇಲ್ಭಾ ಗದ ತಿರುವಿನಲ್ಲಿ ಎತ್ತರವಾದ ಒಂದು ಹಂಪ್ಸ್ ಯಿದ್ದು, ಒಂದು ವೇಳೆ ದ್ವಿಚಕ್ರ ವಾಹನದವರು ವೇಗವಾಗಿ ಬಂದು ಈ ಹಂಪ್ಸ್‌ನಲ್ಲಿ ಆಯತಪ್ಪಿ ದರೆ ಎದುರು ದೊಡ್ಡ ಕಂದಕಕ್ಕೆ ಬೀಳುವುದಂತೂ ಗ್ಯಾರಂಟಿ. ಆದ್ದರಿಂದ ಮೇಲ್ಭಾಗದಲ್ಲಿ ರಸ್ತೆ ಬದಿಗೆ ತಡೆಗೋಡೆ ನಿರ್ಮಿಸುವುದು ಅತ್ಯಗತ್ಯ.
ಆದ್ದರಿಂದ ಈ ದಾರಿಯಲ್ಲಿ ಗೋಡೆ ನಿರ್ಮಿಸ ಬೇಕಾಗಿದೆ. ಅದಲ್ಲದೆ ಮೇಲಿನ ತಿರುವಿನಲ್ಲಿ ವಾಹನ ನಿಲ್ಲಿಸುವುದನ್ನು ನಿಷೇಧಿಸಬೇಕಾಗಿದೆ.
ಜೆ.ಎಫ್.ಡಿಸೋಜ, ಮಂಗಳೂರು

16-5-2012

Posted by JAYAKIRANA Kirana on | 0 comments | Leave a comment...

ಮೇಷ : ದೂರ ಸಂಚಾರ ಮಾಡುವುದನ್ನು ಲ್ಲಿಸಿ.
ವೃಷಭ : ಧಾರ್ಮಿಕ ಕೆಲಸಗಳಲ್ಲಿ ಭಾಗವಹಿಸುತ್ತೀರಿ.
ಮಿಥುನ : ಕುಟುಂಬದಲ್ಲಿ ನೆಮ್ಮದಿ ಇರುತ್ತದೆ.
ಕರ್ಕಾಟಕ : ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರುತ್ತದೆ.
ಸಿಂಹ : ಮೇಲಾಧಿಕಾರಿಗಳಿಂದ ಒತ್ತಡ ಇರುತ್ತದೆ.
ಕನ್ಯಾ : ದೂರದ ನೆಂಟರು ಮನೆಗೆ ಬರುತ್ತಾರೆ.
ತುಲಾ : ಮ್ಮ ಮುಖ್ಯ ಕೆಲಸಗಳು ನಡೆಯುತ್ತದೆ.
ವೃಶ್ಚಿಕ : ಮನೆಗೆ ಬೇಕಾಗುವ ಸಾಮಾಗ್ರಿಗಳನ್ನು ಖರೀದಿಸುತ್ತೀರಿ.
ಧನು : ಕೆಲಸ ಕಾರ್ಯಗಳನ್ನು ತಾಳ್ಮೆಯಿಂದ ಮಾಡಿರಿ.
ಮಕರ : ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ.
ಕುಂಭ : ವೃತ್ತಿರಂಗದಲ್ಲಿ ಪ್ರಗತಿ ಇರುತ್ತದೆ.
ಮೀನ : ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿ ಬರಲಿದೆ.

16-05-2012

Posted by JAYAKIRANA Kirana on | 0 comments | Leave a comment...

ತೊಕ್ಕೊಟ್ಟು ಅಸುಪಾಸಿನವರು ಬ್ಯೂಟಿ ಪಾರ್ಲರ್‌ಗೆ ಬೇಕಾಗಿದ್ದಾರೆ. ೯೮೮೦೩೭೮೮೦೬
ಮಂಗಳೂರು : ಮನೆಯಲ್ಲಿ ಉಳಿದು ಕೆಲಸ ಮಾಡಲು ಹೆಂಗಸು ಬೇಕು ೯೭೪೦೯೩೭೭೩೮.
ಮಂಗಳೂರು : ಡಿಟಿಪಿಗೆ ಅನುಭವಿ ಬೇಕು. ೯೪೪೮೨೫೪೯೭೬.
ತೊಕ್ಕೊಟ್ಟು : ಪಂಪು, ಮಿಕ್ಸಿ ರಿಪೇರಿ ಮಾಡುವ ಜನ ಬೇಕು ೯೮೪೫೬೧೭೧೫೨.
ಬಜಪೆ : ಜ್ಯೂಸ್ ಸೆಂಟರ್, ಬೇಕರಿಗೆ ಸೇಲ್ಸ್‌ಗೆ ಜನ ಬೇಕು ೮೨೭೭೦೫೧೫೪೩.
ಮಂಗಳೂರು : ಲೇಡಿ ಸ್ಟಾಫ್ ಬೇಕು ೨೪೯೭೮೬೨.
ಕಟೀಲು : ಮನೆಕೆಲಸಕ್ಕೆ ಜನ ಬೇಕು ೮೭೪೮೦೩೨೬೦೯.
ಎಂ.ಜಿ.ರಸ್ತೆ: ಕೆಲಸಕ್ಕೆ ಪಿಯುಸಿ ಆದವರು ಬೇಕು ೯೭೪೩೩೯೦೭೯೭.
ಬಜಪೆ : ಪ್ಲೈವುಡ್ ಶಾಪಿಗೆ ಸೇಲ್ಸ್‌ಗೆ ಜನ ಬೇಕು ೯೯೦೦೫೨೦೮೦೮.
ಬಜಪೆ : ಎಲೆಕ್ಟ್ರಿಶಿಯನ್ ಮತ್ತು ಹೆಲ್ಪರ್ ಬೇಕು ೯೩೪೧೦೨೬೯೩೯.
ಮಂಗಳೂರು : ಕೆಲಸಕ್ಕೆ ಜನ ಬೇಕು ೯೪೪೯೭೨೩೧೩೩.
ಪಂಪ್‌ವೆಲ್: ಮನೆಕೆಲಸಕ್ಕೆ ಮಹಿಳೆ ಬೇಕು ೯೯೪೫೭೦೪೦೪೨.
ಕುಂಟಿಕಾನ : ಹೋಂ ಪ್ರೋಡಕ್ಟ್‌ಗೆ ಜನ ಬೇಕು ೯೪೮೦೧೧೭೮೫೪.
ಮಂಗಳೂರು : ಸ್ಟೇಷನರಿ ಶಾಪ್‌ಗೆ ಪಾರ್ಟ್ ಟೈಮ್ ಸೇಲ್ಸ್‌ಮೆನ್ ಬೇಕು ೯೮೮೦೦೬೧೬೫೦.
ಮಂಗಳೂರು : ಆಫೀಸೊಂದಕ್ಕೆ ಮಾರ್ಕೆ ಟಿಂಗ್ ಎಕ್ಸಿಕ್ಯೂಟಿವ್ ಬೇಕು ೯೯೪೫೬೬೯೧೨೮.
ಮಂಗಳೂರು : ಸೇಲ್ಸ್ ಎಕ್ಸಿಕ್ಯೂಟಿವ್ ಬೇಕು ೭೭೬೦೪೭೧೦೬೪.
ಮುಡಿಪು ಬಳಿ ಸಸ್ಯಾಹಾರಿ ಹೊಟೇಲಿಗೆ ವೇಟರ್, ಕ್ಲೀನರ್ ಬೇಕು ೦೯೪೪೬೧೬೯೮೮೪.
ಹೊಟೇಲ್‌ಗೆ ಎಲ್ಲಾ ತರದ ಅಡುಗೆಯ ವರು ಬೇಕಾಗಿದ್ದಾರೆ. ೯೯೦೧೯೫೦೧೦೯
ಮಂಗಳೂರು : ಪೂನಾಕ್ಕೆ ಮನೆ ಕೆಲಸಕ್ಕೆ ಮಹಿಳೆ ಬೇಕು. ೦೯೯೬೦೦೫೩೧೪೧.
ಕಂಕನಾಡಿ : ಆಪ್ಟಿಕಲ್ ಶಾಪ್‌ಗೆ ಯುವತಿ ಬೇಕು ೯೦೩೬೬೦೩೧೨೯.
ಮಂಗಳೂರು : ಕೊಂಚಾಡಿಗೆ ಸೈಬರ್ ವೊಂದಕ್ಕೆ ಜನ ಬೇಕು ೯೦೦೮೧೨೨೮೨೯.
ಮಂಗಳೂರು : ಕಾಲ್ ಸೆಂಟರ್‌ಗೆ ಹೌಸ್ ಕೀಪರ್ ಬೇಕು ೯೯೧೬೧೧೯೪೬೯.
ಮಂಗಳೂರು : ಸುರತ್ಕಲ್ - ಬೈಕಂಪಾಡಿಗೆ ಕೊರಿಯರ್ ಏಜೆನ್ಸಿ ಬೇಕು ೯೮೪೫೮೦೬೪೮೦.
ಕಾವೂರು : ಹೊಟೇಲ್‌ಗೆ ಕುಕ್ & ಸಪ್ಲಾಯರ್ ಬೇಕು ೯೮೮೦೭೨೫೪೨೨.
ಮಂಗಳೂರು : ಹೊಟೇಲ್‌ಗೆ ಕಿಚನ್ ಹೆಲ್ಪರ್ ಬೇಕು ೯೪೪೮೩೮೩೭೦೫.
ಮಂಗಳೂರು : ಸ್ಟಾಕ್, ಸೇಲ್ಸ್ ಮೇಲ್ವಿ ಚಾರಣೆಗೆ ಮಹಿಳಾ ಕ್ಲರ್ಕ್, ಮಾರ್ಕೆಟಿಂಗ್‌ಗೆ ಯುವಕರು ಬೇಕು ೯೮೪೫೩೫೩೭೮೯.
ಪುತ್ತೂರು : ದ್ವಿಚಕ್ರವಾಹನ ಶೋರೂಮ್‌ಗೆ ಸೇಲ್ಸ್‌ಮ್ಯಾನ್ ಬೇಕು ೮೭೪೮೯೭೦೨೮೬.
ಮಂಗಳೂರು: ಬೇಕರಿ ಮತ್ತು ಜ್ಯೂಸ್ ಅಂಗಡಿಗೆ ಜನ ಬೇಕು ೯೮೪೪೫೨೧೭೪೩.
ಮಂಗಳೂರು : ಒಪ್ಟಿಕಲ್ ಶಾಪಿಗೆ ಯುವತಿ ಬೇಕು ೯೦೩೬೬೨೧೦೭೯.

ತಟ್ಟ್‌ಗ ಪತ್ತವುನಿ (ಸಟ್ಟುಗ ಹಿಡಿಸುವುದು)

Posted by JAYAKIRANA Kirana on | 0 comments | Leave a comment...

ಮದುವೆಗೆಂದು ಹಾಕಿರುವ ಚಪ್ಪರ ಮತ್ತು ‘ಕೊಡಿ ಮುಂದಿನ ಎಲ್ಲ ಕಾರ್ಯಗಳು ಮುಗಿಯುವವರೆಗೂ ಇರುವುದು. ‘ತಟ್ಟ್‌ಗ ಪತ್ತಾವುನಿ ಸಮಾರಂಭಕ್ಕೆ ಐವತ್ತು ನೂರರ ಸಂಖ್ಯೆಯಲ್ಲಿ ಹೆಣ್ಣಿನ ಕಡೆಯವರು ‘ಬಿನ್ನೆರ್ ಬರುತ್ತಿದ್ದರು. ವಧು ಅವರ ಮನೆಯಲ್ಲಿದ್ದರೆ ಅವಳನ್ನು ಜೊತೆಗೂಡಿ ಬರುತ್ತಿದ್ದರು. ತುಳುನಾಡಿನಲ್ಲಿ ಊಟ ಉಪ ಚಾರಕ್ಕೆ ಯಾವ ಕಾಲದಲ್ಲಿಯೂ ಕೊರತೆ ಇದ್ದಿಲ್ಲ. ತೀರ ಬಡವರಿ ದ್ದರೆ, ಉಳ್ಳವರು, ಗುರಿಕಾರನ ಮನೆಯವರು ಒಂದೆರಡು ಮುಡಿ ಯಕ್ಕಿ, ಬೆಲ್ಲ, ತೆಂಗಿನಕಾಯಿಯನ್ನು ಉದಾರವಾಗಿ ನೀಡುತ್ತಿದ್ದರು.
ಬಂದ ‘ಬಿನ್ನೆರ್ರನ್ನು ತುಳುನಾಡಿನ ಸಾಂಪ್ರದಾಯಿಕ ಪದ್ಧತಿ ಯಲ್ಲಿ ಸ್ವಾಗತಿಸಿ ಆದರಿಸುತ್ತಿದ್ದರು. ಎರಡು ಕಡೆಯ ಗುರಿಕಾರರು ಚಾಪೆಯಲ್ಲಿ ಕುಳಿತು ವೀಳ್ಯ ಗೌರವ ವಿನಿಮಯ ಮಾಡಿಕೊಂಡು ಲೋಕಾಭಿರಾಮದ ಮಾತುಕತೆಗೆ ತೊಡಗುವರು.
ಒಳಗೆ ನೆಂಟರ ಹೆಂಗಳೆಯರು ಸೇರಿ ಮದುಮಗಳನ್ನು ಸಿಂಗ ರಿಸಿ ಅಣಿಗೊಳಿಸುವರು. ಅತ್ತ ಗಂಡಸರ ಸಭೆಯಲ್ಲಿ ಮದುಮಗ ನನ್ನು ‘ಐತ ಮಾಡುವರು. ಅಡುಗೆಯ ಚಪ್ಪರದಲ್ಲಂತೂ ಅಂದು ವಿಶೇಷ ಅಡುಗೆ ತಯಾರಿ ಭರದಿಂದ ಸಾಗುವುದು. ಔತಣಕ್ಕೆ ಮೀನು ಕೋಳಿಗಳ ಅಡುಗೆಯ ಕಂಪು ಎಲ್ಲೆಡೆ ಬೀರುವುದು. ‘ತಟ್ಟುಗ ಪತ್ತಾವುನಿ ಕಾರ್ಯಕ್ರಮದಲ್ಲಿ ಪತಿಗೃಹ ಸೇರಿದ ಹೆಣ್ಣು ಅಡುಗೆ ಮಾಡಿ ತನ್ನ ಗಂಡನಿಗೆ ಬಡಿಸುವ ಸೂಚ್ಯಾರ್ಥವನ್ನು ಬಿಂಬಿಸುವುದು.
ಅಲಂಕೃತಳಾದ ಮದುಮಗಳನ್ನು ನಾದಿನಿಯು ಕೈಹಿಡಿದು ಅಂಗ ಳಕ್ಕೆ ಕರೆತರುವಳು. ಅವಳ ಕೈಯಿಂದ ಮಣೆಹಾಕಿಸಿ ಪತಿರಾಯ ನನ್ನು ಅದರ ಮೇಲೆ ಕೂರಿಸುವರು. ಕೊಡಿ ಬಾಳೆಯ ಎಲೆ ಹಾಕಿ, ಅದನ್ನು ಶುಚಿಗೊಳಿಸಿ ಉಪ್ಪು, ಉಪ್ಪಿನಕಾಯಿ, ಪಲ್ಯ, ಅನ್ನ ಬಡಿಸು ವಳು, ಆ ಬಳಿಕ ವಧು ಕೈಯಲ್ಲಿಟ್ಟಿರುವ ಸಟ್ಟುಗವನ್ನು ಎಲೆಯ ಮೇಲೆ ಹಿಡಿದು ನಿಲ್ಲುವಳು. ಸ್ವಲ್ಪ ಹೊತ್ತು ಹಾಸ್ಯಕ್ಕಾಗಿ ಮದುಮಗ ಸುಮ್ಮನಿದ್ದು, ಬಿಡುವನು. ಸುತ್ತಲ ಜನ ಎರಡು ಪಕ್ಷದಿಂದ ಈ ಹಾಸ್ಯ ಲಹರಿಯನ್ನು ಹೆಚ್ಚಿಸುವರು. ಹೆಣ್ಣು ಈ ಪರಿಸ್ಥಿತಿಯಲ್ಲಿ ನಾಚಿಕೆಯಿಂದ ಸಂದಿಗ್ಧದಲ್ಲಿರುವಳು. ಕೊನೆಗೆ ಮದುಮಗನು ಉಡು ಗೊರೆಯನ್ನು ತೆಗೆದು ಸಟ್ಟುಗದ ಮೇಲಿಡುವನು. ಈಗ ಚಿನ್ನದ ಬಳಕೆ ಯಿಂದಾಗಿ ಉಂಗುರ, ಚೈನು, ಪವನು ಉಡುಗೊರೆ ನೀಡುವ ಕ್ರಮ ಪ್ರಾರಂಭಗೊಂಡಿದೆ. ಆ ಬಳಿಕ ಮದುಮಗಳು ಎಲೆಗೆ ಸಾರು, ಹುಳಿ, ಪಾಯಸ ಇತ್ಯಾದಿಗಳನ್ನು ಬಡಿಸುವಳು. ಬಳಿಕ ಪತಿಯ ಕೈತೊಳೆಸು ವಳು. ಅವನು ಎಲೆಯಲ್ಲಿರುವ ಎಲ್ಲ ವಸ್ತುಗಳ ರುಚಿ ನೋಡಿ ಕೈತೊಳೆದು ಎಲೆ ಬಿಟ್ಟೇಳುವನು. ಆ ಬಳಿಕ ಪತ್ನಿ ಅದೇ ಎಲೆಯ ಮುಂದೆ ಕುಳಿತು ಉಣ್ಣುವ ಶಾಸ್ತ್ರ ಮಾಡಿ ತನ್ನ ‘ಸಹಧರ್ಮಿಣಿತನವನ್ನು ದೃಢ ಪಡಿಸುವಳು. ಅನಂತರ ಮದುಮಗನಿಗೆ ವೀಳ್ಯ ತಯಾರಿಸಿಕೊಡು ವಳು. ಈ ಸನ್ನಿವೇಶದಲ್ಲಿ ವೀಳ್ಯದಲ್ಲಿ ಮೆಣಸಿನ ಕಾಯಿ ಅಥವಾ ಹೊಗೆಸೊಪ್ಪು ಮಿಶ್ರಮಾಡಿ ನೀಡಿ, ಮದುಮಗನನ್ನು ಗೋಳುಹೊ ಯ್ಯುವ ಕೆಲಸವನ್ನು ಯುವತಿಯರ ಗುಂಪು ನಡೆಸುವುದೂ ಉಂಟು.
ಈಗ ಎಲ್ಲರಿಗೆ ಔತಣದ ಸಿದ್ಧತೆ ನಡೆಸುವರು. ನೆಂಟರ ಕಡೆ ಯಿಂದ ಬಂದ ಹಿರಿಯ ಮುತ್ತೈದೆಯರಿಗೆ ಅದರಲ್ಲೂ ಮದುಮ ಗನ ಅತ್ತೆಯಂದಿರಿಗೆ ಸಭೆಯಲ್ಲಿ ವಿಶೇಷ ಗೌರವ ಸಲ್ಲುವುದು, ಅವ ರಿಗೆ ಪಂಕ್ತಿಯಲ್ಲಿ ಊಟಕ್ಕಿಕ್ಕುವ ಮೊದಲು ಕಂಚಿನ ಬಟ್ಟಲಿನಲ್ಲಿ ಹಾಲು ತಂದು ನೀಡಿ ಗೌರವ ನೀಡುವರು.
ಊಟ ಮುಗಿದು ವೀಳ್ಯ ಹಾಕಿಕೊಂಡು ಬಳಿಕ ನಿಧಾನವಾಗಿ ನೆಂಟರು ಹೊರಟು ನಿಲ್ಲುವರು. ಅವರು ಜೊತೆಗೆ ಮದುಮಗಳನ್ನು ಕರೆದೊಯ್ಯು ವರು. ವಧುವಿನ ಕಡೆಯ ಗುರಿಕಾರ ‘ತೊಡಮನೆ (ಮಾಮಿಸೀಕೆ)ಗೆ ಹೆಣ್ಣಿನ ಮನೆಗೆ ‘ಬಿನ್ನೆರ್ ಬರುವಂತೆ ಆಮಂತ್ರಣ ನೀಡುವರು.
ಟಿಪ್ಪಣಿ :
೧) ಸಟ್ಟುಗದ ಉಡುಗೊರೆಯನ್ನು ವರನು ಸಾಮಾನ್ಯವಾಗಿ ಸಟ್ಟು ಗದ ಮೇಲಿಡುವನು. ಕೆಲವು ಪ್ರದೇಶಗಳಲ್ಲಿ ಮದುಮಗಳು ಎಲೆಯ ಮೇಲೆ ಎಲ್ಲವನ್ನೂ ಬಡಿಸಿದ ಬಳಿಕ ಅವಳ ಕೈಯಲ್ಲಿ ನೀಡುವ ಕ್ರಮ ಇದೆ. ೨) ಬಂಟ, ಮೊಗವೀರ ಮೊದಲಾದ ಸಮಾಜಗಳಲ್ಲಿ ‘ತಟ್ಟುಗ ಪತ್ತವುನಿ ಕಾರ್ಯಕ್ರಮಕ್ಕೆ ಅಷ್ಟೊಂದು ಪ್ರಾಧಾನ್ಯತೆ ಇಲ್ಲ.
ತೊಡಮನೆ (ನೆಂಟರೂಟ)
ತೊಡಮನೆಯ ಮರ್ಯಾದೆಗೆ ಗಂಡು ಉತ್ಸಾಹದಿಂದ ತಯಾ ರಾಗುವರು. ಅಂದು ಸತಿಪತಿಗಳ ದಾಂಪತ್ಯ ಬಂಧನದ ಮೊದಲ ದಿನವೂ ಹೌದು. ತುಳು ಸಂಪ್ರದಾಯದಲ್ಲಿ ಗಂಡಿಗೆ ಮದುವೆಯ ಮಾತುಕತೆ ನಡೆದು ‘ನೆಂಟಸ್ಥಿಕೆ ಕೂಡಿ ಬಂದ ಬಳಿಕ ಯಾವ ಕಾರಣಕ್ಕೂ ‘ಮಾಮಿ ಸಿಕೆ ಅಗುವವರೆಗೆ ಅವನು ಅತ್ತೆಯ ಮನೆಯ ಕಡೆಗೆ ಸುಳಿಯುವಂ ತಿಲ್ಲ. ‘ಮಾಮಿಸಿಕೆ ನಡೆದು ‘ತೊಡಮನೆಯ ಮರ್ಯಾದೆ ಪಡೆದ ಬಳಿ ಕವೇ ಅಲ್ಲಿ ಊಟ ಮಾಡಬಹುದು.
ಮದುಮಗನನ್ನು ಚೆಂದುಳ್ಳಿ ಚೆಲುವನಂತೆ ಸಿಂಗರಿಸುವರು. ಗಂಡಿನ ತಾಯಿ ಪ್ರಪ್ರಥಮವಾಗಿ ಸೊಸೆಯ ಮನೆ ನೋಡಲು ಸಂಭ್ರಮದಿಂದ ‘ಬಿನ್ನೆರ್ ಗುಂಪಿನಲ್ಲಿ ಸೇರುವಳು. ಬಂದ ನೆಂಟರನ್ನು ತುಳುನಾಡಿನ ಸಂಪ್ರದಾಯದಂತೆ ಸ್ವಾಗತಿಸುವರು. ಮದುಮಗ, ನಾದಿನಿಯರ ಮತ್ತು ಊರ ಹೆಣ್ಣು ಮಕ್ಕಳ ಕುಚೋದ್ಯಕ್ಕೆ ಸಿಲುಕಿ, ಎಷ್ಟು ಗಂಭೀರವಾಗಿ ದ್ದರೂ, ಸೋಲಿಗೆ ಸಿಲುಕುವುದು ಸಾಮಾನ್ಯ. ಕೈಕಾಲು ತೊಳೆಯಲು ಬಿಸಿ ನೀರನ್ನು ನೀಡಿದರೆ, ಕುಡಿಯಲು ಉಪ್ಪುನೀರು, ವೀಳ್ಯದ ಜೊತೆ ತಿನ್ನಲು ‘ಸೊರೈಲ್ ಬಜ್ಜೆಯಿ ಹೀಗೆ ಗಾಬರಿಗೊಳಗಾಗುವ ‘ಅಳಿಯ ರಾಯರನ್ನು ರಕ್ಷಿಸಲು ಹಿರಿಯರು ಮುಂದಾಗುವರು. ಮೊದಲು ‘ಮರ್ಮಯನನ್ನು, ತೆತ್ತಿಗಾರನನ್ನೂ ಒಳಕ್ಕೆ ಕರೆದು ಕುಡಿಯಲು ಹಾಲು ನೀಡುವರು. ಮದುಮಗಳನ್ನು ಸಿಂಗರಿಸಿ ಪತಿಗೃಹ ಪ್ರವೇಶಿಸುವುದಕ್ಕೆ ಅಣಿ ಗೊಳಿಸುವರು. ತುಂಬಿದ ಸಭೆಯಲ್ಲಿ ಹಸೆಯ ಮೇಲೆ ‘ಪೊಸ ಮರ್ಮಯ ನನ್ನು ನಿಲ್ಲಿಸಿ ಅತ್ತೆಯಂದಿರು ‘ಮಾಮ್ಯಡ್ಲೆ ಮರ್ಯಾದಿಯನ್ನು ನೀಡು ವರು. ಮದುಮಗ ಅತ್ತೆಯಂದಿರ ಕಾಲು ಮುಟ್ಟಿ ನಮಸ್ಕರಿಸುವನು. ಬಳಿಕ ಊಟೋಪಚಾರ. ಆ ಬಳಿಕ ಮದುಮಗನ ಪತ್ನಿ ಸಮೇತ ನೆಂಟರನ್ನು ಕೂಡಿಕೊಂಡು ಸ್ವಗೃಹಕ್ಕೆ ಮರಳುವರು. ಅಂದಿನಿಂದ ಅವರು ಪೂರ್ಣ ಸಂಸಾರಕ್ಕೆ ಅರ್ಹರಾಗುವರು. ಅತ್ತೆಮನೆ ಸೇರುವ ಹೊಸ ಮದುಮಗಳಿಗೆ ‘ಮಜ್ಜಿ ತೆಲಿ ನಿವಾಳಿಸಿ ತೆಗೆಯುವರು.
ಟಿಪ್ಪಣಿ :
೧) ಬಂಟ ಸಮಾಜದಲ್ಲಿ ‘ತೊಡಮನೆ ಸಮಾರಂಭಕ್ಕೆ ಹೆಂಗಸರು ಹೋಗುವ ಕ್ರಮ ಇರಲಿಲ್ಲ. ಆದರೆ ಈಗ ಈ ಕ್ರಮದಲ್ಲಿ ಬದಲಾವಣೆಯಾ ಗಿದೆ. ೨) ಬಂಟರಲ್ಲಿ ಅನುಕೂಲಕ್ಕೆ ಹೊಂದಿಕೊಂಡು ಮದುಮಗಳನ್ನು ಎಲ್ಲ ಮಂಗಳ ಕಾರ್ಯಗಳಲ್ಲಿ ‘ದಂಡಿಗೆಯಲ್ಲಿ ಅಥವಾ ‘ಮಂಚಿಲ್ನಲ್ಲಿ ಕರೆದೊಯ್ಯುವ ಕ್ರಮ ಕೂಡಾ ಚಾಲ್ತಿಯಲ್ಲಿತ್ತು. ಹೊಸ ಮದುಮಗಳು ಪತಿಗೃಹ ಸೇರುವಾಗ ಒಂದು ಕಂಚಿನ ಬಟ್ಟಲಲ್ಲಿ ಪಿಂಗಾಣಿ, ಒಂದು ಹೆಣಿಗೆ ಬಾಳೆಯ ಹಣ್ಣು, ಒಂದು ‘ಕವುಲೆ ವೀಳ್ಯ, ಒಂದು ಅಡಿಕೆ ಇರಿಸಿ ಅದನ್ನು ಅತ್ತೆಯ ಕಾಲಬುಡದಲ್ಲಿ ಇರಿಸಿ, ಕಾಲ್ಮುಟ್ಟಿ ನಮಸ್ಕರಿಸುವಳು. ಈ ಬಟ್ಟಲನ್ನು ಯಾವ ಕಾರಣಕ್ಕೂ ತಾಯಿ ಮನೆಗೆ ಮರಳಿ ಕೊಂಡೊಯ್ಯಲಾಗದು. ಹಾಗೆ ಕೊಂಡು ಹೋದರೆ ಅವಳು ಪತಿಯ ಮನೆಯ ಸಂಬಂಧ ಕಡಿದುಕೊಂಡಂತೆ.
೩) ಮೊಗವೀರ ಸಮಾಜದಲ್ಲಿ ವಿವಾಹಗಳಲ್ಲಿ ಇರುವ ವಿಶೇಷತೆಯನ್ನು ಈ ಕೆಳಗೆ ವಿವರಿಸಲಾಗಿದೆ. ಮದುವೆಯ ದಿನ ಸೂರ್ಯೋದಯಕ್ಕೆ ಮೊದಲು ಅಂಗಳದಲ್ಲಿ ತುಳಸಿ ಕಟ್ಟೆಯ ಮುಂಭಾಗದಲ್ಲಿ ಒಂದು ಕೊಡಪಾನ ಮತ್ತು ನಾಲ್ಕು ಮಣ್ಣಿನ ‘ಮುಗಾಯಿ’ಗಳಲ್ಲಿ ನೀರು - ಮಾವಿನ ಸೊಪ್ಪು - ವೀಳ್ಯ - ಅಡಕೆ ಇಟ್ಟು ‘ಕಲಶ’ ಇಡುವರು. ಆ ಬಳಿಕ ‘ಮದುಮಗ’ನಾದರೆ ಮೊದಲು ಮಡಿವಾಳ ಮುಖಕ್ಷೌರ ಮಾಡುವರು (ದೇವರ ಅಲಂಕಾರ ಸಂಕಲ್ಪ ಮಾಡುವ ಕ್ರಮವಿರುವುದಿಲ್ಲ) ಬಳಿಕ ಮದುಮಗ ಯಾ ಮದುಮಗಳಿಗೆ ಕಲಶದ ನೀರಿ ನಿಂದ ಮೀಯಿಸುವರು. ಆ ಬಳಿಕ ಮಿಂದು ಅಲಂಕಾರ ಮಾಡಿ ಮುಹೂರ್ತ ಸೇಸೆ ನಡೆಯುವುದು. ಕಾಲುಂಗುರವನ್ನು ಮನೆಯ ಒಳಗೆ ಧರಿಸಿಕೊಂಡು ಹೊರಬರುವ ಕ್ರಮ ಇರುವುದು. ತೊಡಮನೆಯಾದ ಬಳಿಕ ಗಂಡು ಹೆಣ್ಣು ಊರ ದೇವಸ್ಥಾನಕ್ಕೆ ಹೋಗಿ ಬಂದು ನಂತರ ಸಂಸಾರ ಹೂಡುವುದು ಕ್ರಮ.
೪) ಕೊರಗ ಸಮಾಜದಲ್ಲಿ ಮದುವೆಯು ಮೇಲಿನ ಕ್ರಮದಂತೆ ನಡೆಯು ವುದು. ಅದರಲ್ಲಿ ಮದುವೆಯ ದಿನ ಮಾಂಸದಡಿಗೆ ಮಾಡುವ ಕ್ರಮ ಇದೆ.

ಖಾಲಿ ಹಾಳೆಯ ಮೇಲೆ ಬರೆದರೆ ನಂಬಿಕೆ ಹುಟ್ಟುವುದಿಲ್ಲ

Posted by JAYAKIRANA Kirana on | 0 comments | Leave a comment...


ಅಬ್ದುಲ್ ಕಲಾಂ, ಜೇಸುದಾಸ್ ಸೇರಿದಂತೆ ಅನೇಕ ಅನ್ಯಧರ್ಮೀಯ ಗಣ್ಯರು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಆದರೆ ಇಲ್ಲಿಯ ತನಕ ಈ ರೀತಿಯ ವಿವಾದ ಎದ್ದಿರಲಿಲ್ಲ. ಇವರ‍್ಯಾರು ಪ್ರವೇಶಕ್ಕೆ ಮುನ್ನ ಲಿಖಿತವಾಗಿ ಬರೆದುಕೊಟ್ಟಿಲ್ಲ ಎಂದು ಇತ್ತೀಚೆಗಷ್ಟೇ ದೇವಸ್ಥಾನದ ಆಡಳಿತ ಮಂಡಳಿಯ ಕೆಲವರು ಸ್ಪಷ್ಟಪಡಿಸಿದ್ದಾರೆ. ಮತಾಂತರಿಗಳ ದೇವಸ್ಥಾನ ಪ್ರವೇಶಕ್ಕೆ ತಡೆ ಒಡ್ಡಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಮೀರಾ ಜಾಸ್ಮಿನ್ ದೇವಸ್ಥಾನವೊಂದಕ್ಕೆ ಭೇಟಿ ನೀಡಿದಾಗ ಆಕೆ ಕ್ರಿಶ್ಚಿಯನ್ ಎಂಬ ಕಾರಣಕ್ಕೆ ವಿರೋಧಿಸಿದರು. ಆಕೆಯಿಂದಲೇ ೨೫ ಸಾವಿರ ರುಪಾಯಿ ಪಡೆದು ದೇವಾ ಲಯವನ್ನು ಶುದ್ದೀಕರಣ ಗೊಳಿಸಿದರು. ಜಾತ್ಯತೀತ ರಾಷ್ಟ್ರ ಎನ್ನುವ ಭಾರತದಲ್ಲಿ ಇಂತಹ ನಿಯಮಗಳು ಎಷ್ಟು ಸರಿ?

ಧ್ವನಿ, ಮಂಗಳೂರು
ಇತ್ತೀಚೆಗಷ್ಟೇ ನನ್ನ ‘ಅನ್ಯಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ? ಎಂಬ ಬರಹಕ್ಕೆ ದಿನಕರ ಮಂಗಳೂರು ಎಂಬವರು ಬರೆದ ಬರಹಕ್ಕೆ ಪ್ರತಿಕ್ರಿಯೆ. ದಿನಕರ ಅವರ ಪ್ರಕಾರ ತಿಮ್ಮಪ್ಪನ ದರ್ಶನಕ್ಕೆ ಮುನ್ನ ಅನ್ಯಧರ್ಮೀ ಯರು ಲಿಖಿತವಾಗಿ ಬರೆದು ಕೊಟ್ಟು ಪ್ರವೇಶಿಸುವುದು ನೂರಕ್ಕೆ ನೂರು ಸರಿ. ಆದರೆ ದಿನಕರ್‌ರವರೇ ಲಿಖಿತವಾಗಿ ‘ನಾನು ತಿಮ್ಮಪ್ಪನನ್ನು ನಂಬುತ್ತೇನೆ, ಅಪಾರ ಭಕ್ತಿಯಿದೆ ಎಂದು ಬರೆದು ಕೊಟ್ಟ ತಕ್ಷಣ ಅವರು ತಿಮ್ಮಪ್ಪನ ಭಕ್ತರಾಗಿ ಒಳಗೆ ಪ್ರವೇಶ ಪಡೆಯುತ್ತಾರೆಯೇ ಎನ್ನುವುದು ನನ್ನ ಪ್ರಶ್ನೆ. ಇದು ಕಂಪ್ಯೂಟರ್ ಯುಗ ಸ್ವಾಮೀ, ಇಲ್ಲಿ ಲಿಖಿತವಾಗಿ ಈ ರೀತಿಯ ಹೇಳಿಕೆ ಕೊಟ್ಟ ತಕ್ಷಣ ಯಾವುದೂ ನಡೆಯುವುದಿಲ್ಲ ಎನ್ನುವುದನ್ನು ದಿನಕರ್‌ರವರು ಅರಿತು ಕೊಳ್ಳಲಿ. ಅಲ್ಲದೇ ಅನ್ಯಧರ್ಮೀಯರು ಪ್ರವೇಶ ಮಾಡುವಾಗ ಆತ ಯಾವ ಧರ್ಮದ ವನು ಎಂದು ಸ್ಕ್ಯಾನ್ ಮಾಡುವ ಯಂತ್ರವನ್ನೇನೂ ಇಟ್ಟಿಲ್ಲ. ಅಥವಾ ಗುರುತು ಪತ್ರ ಇತ್ಯಾದಿಗಳನ್ನು ಯಾರೂ ಕೇಳುವುದಿಲ್ಲ ಎಂದಿದ್ದೀರಿ. ಲಿಖಿತವಾಗಿ ಬರೆದು ಕೊಡಿ ಎಂದು ಅನ್ಯಧರ್ಮಿಯರನ್ನು ಪ್ರತ್ಯೇಕಿಸುವುದೂ ಸ್ಕ್ಯಾನ್ ಮಾಡುವ ಯಂತ್ರ ಇಡುವುದೂ ಒಂದೇ ಅಲ್ಲವೇ? ನಂಬಿಕೆ ಇದೆ ಎಂದು ಬರೆದು ಕೊಡದೆ ಅನ್ಯ ಧರ್ಮೀಯರು ತಿರುಪತಿ ಪ್ರವೇಶ ಮಾಡುವುದು ಯಾಕೆ ಎಂದು ಪ್ರಶ್ನಿಸಿದ್ದೀರಿ. ಆದರೆ ನಿಮ್ಮ ಈ ಅಭಿಪ್ರಾಯ ತಪ್ಪು. ಯಾಕೆಂದರೆ ನಂಬಿಕೆ, ಭಕ್ತಿ ಎನ್ನುವುದು ಒಂದು ಸಣ್ಣ ಕಾಗದ ಹಾಳೆಯ ಮೇಲಿನ ಬರಹದ ಮೇಲೆ ನಿಂತಿಲ್ಲ. ಇದು ಅವರವರ ಧಾರ್ಮಿಕ ನಂಬಿಕೆಗಳಿಗೆ ಬಿಟ್ಟ ವಿಚಾರ. ಇನ್ನು ಚಾಲೆಂಜ್ ಮಾಡಿ ದೇವಾಲಯ ಪ್ರವೇಶಿಸುವವನಿಗೆ ಬರೆದು ಕೊಟ್ಟು ಪ್ರವೇಶಿಸುವುದು ಕಷ್ಟದ ಕೆಲ ಸವೂ ಅಲ್ಲ. ಬರೆದು ಕೊಟ್ಟು ಪ್ರವೇಶ ಪಡೆದ ತಕ್ಷಣ ಆತನಿಗೆ ನಂಬಿಕೆಯೂ ಹುಟ್ಟುವುದಿಲ್ಲ ಎನ್ನುವುದನ್ನು ನೆನಪಿಡಿ.
ತಿರುಪತಿಗೆ ಅನ್ಯಧರ್ಮೀಯರು ಪ್ರವೇಶಿಸಿದ ತಕ್ಷಣ ಅಶುದ್ದವಾಗುತ್ತದೆ, ಸಂಪ್ರದಾಯ ಪಾಲನೆಯಾಗುವುದಿಲ್ಲ ಎಂಬ ಕಾರಣಕ್ಕೆ ಈ ರೀತಿಯ ನಿಯಮ ವನ್ನು ರೂಪಿಸಿಲ್ಲ. ಬದಲಾಗಿ ಇಲ್ಲಿ ಆಗುತ್ತಿರುವುದು ರಾಜಕೀಯವಷ್ಟೇ ಎನ್ನಬ ಹುದು. ಅದರಲ್ಲೂ ಮತಾಂತರಗೊಂಡ ಹಿಂದುಗಳು ಪ್ರವೇಶಿಸಿದ ತಕ್ಷಣ ಇಲ್ಲಿನ ಜಾತಿವಾದಿಗಳಲ್ಲಿ ಧಾರ್ಮಿಕ ಪ್ರೇಮ, ಸಂಪ್ರದಾಯವಾದ ಜಾಗೃತವಾಗುತ್ತದೆ. ಜಗನ್‌ಮೋಹನ್ ರೆಡ್ಡಿ ಪ್ರವೇಶ ಪಡೆಯುವ ಮುನ್ನ ಇದೇ ತಿರುಪತಿಗೆ ಅದೆಷ್ಟೋ ಅನ್ಯಧರ್ಮೀಯರು ಭೇಟಿ ನೀಡಿದ್ದಾರೆ. ಅಬ್ದುಲ್ ಕಲಾಂ, ಜೇಸುದಾಸ್, ಸೇರಿ ದಂತೆ ಅನೇಕ ಅನ್ಯಧರ್ಮೀಯ ಗಣ್ಯರು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಆದರೆ ಇಲ್ಲಿಯ ತನಕ ಈ ರೀತಿಯ ವಿವಾದ ಎದ್ದಿರಲಿಲ್ಲ. ಇವರ‍್ಯಾರು ಪ್ರವೇಶಕ್ಕೆ ಮುನ್ನ ಲಿಖಿತವಾಗಿ ಬರೆದುಕೊಟ್ಟಿಲ್ಲ ಎಂದು ಇತ್ತೀಚೆಗಷ್ಟೇ ದೇವಸ್ಥಾನದ ಆಡಳಿತ ಮಂಡಳಿಯ ಕೆಲವರು ಸ್ಪಷ್ಟಪಡಿಸಿದ್ದಾರೆ. ಅನ್ಯಧರ್ಮೀಯರ ದೇವಸ್ಥಾನ ಪ್ರವೇಶಕ್ಕೆ ತಡೆ ಒಡ್ಡಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಮೀರಾ ಜಾಸ್ಮೀನ್ ದೇವಸ್ಥಾನವೊಂದಕ್ಕೆ ಭೇಟಿ ನೀಡಿದಾಗ ಆಕೆ ಕ್ರಿಶ್ಚಿಯನ್ ಎಂಬ ಕಾರಣಕ್ಕೆ ವಿರೋಧಿಸಿದರು. ಆಕೆಯಿಂದಲೇ ೨೫ ಸಾವಿರ ರುಪಾಯಿ ಪಡೆದು ದೇವಾಲಯವನ್ನು ಶುದ್ದೀಕರಣ ಗೊಳಿಸಿದರು. ಜಾತ್ಯತೀತ ರಾಷ್ಟ್ರ ಎನ್ನುವ ಭಾರತದಲ್ಲಿ ಇಂತಹ ನಿಯಮಗಳು ಎಷ್ಟು ಸರಿ?
ಅದರಲ್ಲೂ ಮತಾಂತರಗೊಂಡವರು ದೇವಸ್ಥಾನ ಪ್ರವೇಶಿಸಿದ ತಕ್ಷಣ ಧಾರ್ಮಿಕ ಪ್ರೇಮ ಜಾಗೃತಗೊಳ್ಳುವ ನಮ್ಮ ಕೆಲ ಹಿಂದೂ ಸಂಪ್ರದಾಯ ವಾದಿಗಳಿಗೆ ಏನೆನ್ನಬೇಕು? ಇದನ್ನೆಲ್ಲಾ ನೋಡುವಾಗ ಮತಾಂತರಗೊಂಡ ಅನ್ಯ ಧರ್ಮೀಯರು ಮಾತ್ರ ಈ ರೀತಿಯ ನಿಯಮಗಳಿಗೆ ಬಲಿಯಾಗುತ್ತಿದ್ದಾರೆ ಎನ್ನುವುದು ಸ್ಪಷ್ಟ.
ಇನ್ನು ದಿನಕರ್‌ವರು ನನ್ನ ಪತ್ರದಲ್ಲಿದ್ದ ಮುಸ್ಲಿಮರ ಮೆಕ್ಕಾ ಮತ್ತು ಕ್ರಿಶ್ಚಿಯ ನ್ನರ ರೋಮ್‌ಗೆ ಮುಕ್ತ ಪ್ರವೇಶವಿದೆ ಎಂಬ ಅಂಶವನ್ನು ತಪ್ಪು ಎಂದಿದ್ದಾರೆ. ಈ ಬಗ್ಗೆ ನನಗೂ ಗೊಂದಲವಿದೆ. ಆದರೆ ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿ ಯಲ್ಲಿ ಕೆಲ ರಾಜ್ಯ ಮಟ್ಟದ ಮುಸ್ಲಿಂ ಮತ್ತು ಕ್ರೈಸ್ತ ನಾಯಕರು ಮುಕ್ತ ಪ್ರವೇಶ ವಿದೆ ಎಂದಿದ್ದರು. ಹಾಗಾಗಿ ನನ್ನ ಪತ್ರದಲ್ಲೂ ಆಯಾ ಧರ್ಮದ ಧಾರ್ಮಿಕ ನಾಯಕರು ಪುಷ್ಠೀಕರಿಸಿದ್ದಾರೆ ಎಂದು ಹೇಳಿದ್ದೇನೆ. ಉಳಿದಂತೆ ಈ ವಿಚಾರವನ್ನು ಸರಿ ಯಾಗಿ ಬಲ್ಲವರು ಇದೇ ಚಾವಡಿ ಅಂಕಣದಲ್ಲಿ ಸಮಗ್ರವಾಗಿ ಚರ್ಚಿಸಲಿ ಎನ್ನು ವುದು ನನ್ನ ಆಶಯ.
ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆಮಡೆಸ್ನಾನವನ್ನು ವಿರೋಧಿಸುವ ನಾವು ತಿರುಪತಿಯಲ್ಲಿ ನಡೆಯುತ್ತಿರುವ ಈ ರೀತಿಯ ಕಾಟಾಚಾರದ ನಿಯಮವನ್ನು, ರಾಜಕೀಯ ಆಟವನ್ನು ಸಮರ್ಥಿಸುವುದು ಎಳ್ಳಷ್ಟೂ ಸರಿಯಲ್ಲ. ಹಾಗೆ ನೋಡಿ ದರೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವುದೂ ಒಂದು ಸಂಪ್ರದಾಯವೇ ಅಲ್ಲವೇ? ಇದನ್ನು ಪ್ರಶ್ನಿಸಿದರೆ ನಂಬಿಕೆಯನ್ನು ಪ್ರಶ್ನಿಸಿದಂತೆ ಆಗುತ್ತದೆ. ನಂಬಿಕೆಯನ್ನು ಪ್ರಶ್ನಿಸಿದರೆ ದೇವರ ಅಸ್ತಿತ್ವನ್ನು ಪ್ರಶ್ನಿಸಿದಂತೆ ಆಗುವುದಿಲ್ಲವೇ? ತಿರುಪತಿಯಲ್ಲಿ ನಡೆಯುತ್ತಿರುವ ಈ ಹೀನ ಸಂಪ್ರದಾಯವನ್ನು ವಿರೋಧಿಸದ ನಾವು ಮಡೆ ಸ್ನಾನವನ್ನು ವಿರೋಧಿಸಿ ಏನು ಪ್ರಯೋಜನ?
ದಿನಕರ್‌ವರು ತಮ್ಮ ಕೊನೆಯ ಪ್ಯಾರಾದಲ್ಲಿ ನಿಯಮಗಳನ್ನು ಪ್ರಶ್ನಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ನಾವು ಪ್ರಶ್ನಿಸದೆ ಹೋದರೆ ದೇವರು ಎಂಬ ನಂಬಿಕೆ ಅರ್ಚಕರ, ಸಂಪ್ರದಾಯವಾದಿ ಗಳ ಕೈಯಲ್ಲಿ ನಲುಗಿ ಹೋಗಬಹುದು. ಮುಂದೊಂದು ದಿನ ಇನ್ನಿಲ್ಲದ ಮೂಢ ನಂಬಿಕೆಗಳನ್ನು, ಇಲ್ಲದ ಅನಾಚಾರಗಳನ್ನು ಅರ್ಚಕ ವರ್ಗ ಮುಂದುವರೆಸಿಕೊಂಡು ಹೋಗಬಹುದು.

ಪತ್ನಿಯ ಜತೆ ಹೊಂದಾಣಿಕೆ ಕಲಿಯಿರಿ

Posted by JAYAKIRANA Kirana on | 0 comments | Leave a comment...

ಸಮಸ್ಯೆ: ನನಗೆ ೪೨ ವರ್ಷ ವಯಸ್ಸು. ಮದುವೆಯಾಗಿ ಒಂಭತ್ತು ವರ್ಷ ಕಳೆಯಿತು. ನನ್ನ ಪತ್ನಿಯ ವಯಸ್ಸು ೪೦. ಆಕೆಯ ಮತ್ತು ನನ್ನ ಜಾತಿ ಬೇರೆ-ಬೇರೆ. ನಾನು ಹೆಣ್ಣುಮಕ್ಕಳೊಂದಿಗೆ ಸ್ನೇಹ ಬೆಳೆ ಸುವುದು ಕಮ್ಮಿ. ಆದರೂ ಆಕೆಯ ಜೊತೆ ಸಂಗ ಬೆಳೆಸಿದೆ. ಆಕೆ ಅದು ಹೇಗೋ ನನ್ನನ್ನು ಮರುಳುಗೊಳಿಸಿದಳು.
ನಾನು ಆಕೆಯೊಂದಿಗೆ ಆಕೆಯ ಒಪ್ಪಿಗೆಯ ಮೇರೆಗೆ ಕೆಲವು ಬಾರಿ ಸೆಕ್ಸ್ ಮಾಡಿದ್ದೆ. ಆಕೆ ನನ್ನಿಂದ ಹೆಚ್ಚಿನ ಸುಖ ಪಡೆದಳು. ಕೊನೆಗೆ ನಾನು ಆಕೆಯನ್ನು ಮದುವೆಯಾದೆ. ನನಗೆ ಆಕೆಯೊಂ ದಿಗೆ ಪ್ರಾರಂಭದಲ್ಲೇ ಸಂಸಾರ ನಡೆಸಲು ಮನಸ್ಸಿರಲಿಲ್ಲ್ಲ. ನನಗೆ ಅಂದಿನಿಂದ ನೆಮ್ಮದಿ ಎನ್ನುವುದೇ ಸಿಗುತ್ತಿಲ್ಲ. ನಮಗೆ ಆರು ವರ್ಷ ಪ್ರಾಯದ ಮಗಳಿದ್ದಾಳೆ. ನನ್ನ ಪತ್ನಿ ನನ್ನೊಂದಿಗೆ ಸಣ್ಣಪುಟ್ಟ ಕಾರ ಣಕ್ಕೂ ಜಗಳವಾಡುತ್ತಾಳೆ. ನಾವು ನೋಡುವವರಿಗೆ ಪತಿ-ಪತ್ನಿಗ ಳಾಗಿದ್ದೇವೆಯೇ ಹೊರತು ನಮ್ಮ ನಡುವೆ ಅಂಥ ಬಾಂಧವ್ಯವಿಲ್ಲ. ನಾನು ಆಕೆಯ ಜೊತೆ ಇದ್ದು ಒಂಥರಾ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದೇನೆ. ನನಗೆ ಹಿಂದಿನಿಂದಲೂ ಸೆಕ್ಸ್‌ನಲ್ಲಿ ಆಸಕ್ತಿ ಹೆಚ್ಚು. ಆದರೆ ಆಕೆ ನನ್ನ ಇಚ್ಛೆಗೆ ಪೂರಕವಾಗಿ ಸ್ಪಂದಿಸುವುದಿಲ್ಲ. ನಾನು ಮಾಡುವುದಕ್ಕೆ ಸ್ಪಂದಿಸದೆ ಹಾಗೆ ಬಿದ್ದಿರುತ್ತಾಳೆ. ನಾನು ಹೇಳಿದಂತೆ ಆಕೆ ಕೇಳುವುದೂ ಇಲ್ಲ.
ಇದರಿಂದ ನನಗೆ ಚಂದದ ಹುಡುಗಿಯರನ್ನು ಕಂಡಾಗ ಕಾಮ ಉಕ್ಕೇರುತ್ತದೆ. ಇದಕ್ಕಾಗಿ ನಾನು ಬೇರೆ ಹೆಂಗಸಿನ ಜತೆ ಸಂಬಂಧವಿರಿಸಿದ್ದೇನೆ. ಪತ್ನಿಯ ಜತೆ ತಿಂಗಳಿಗೆ ಎರಡು ಅಥವಾ ಮೂರು ಬಾರಿ ಮಾತ್ರ ಲೈಂಗಿಕ ಕ್ರಿಯೆ ನಡೆಸುತ್ತೇನೆ. ನನ್ನ ಕಾಮನೆಗೆ ಲಗಾಮು ಹಾಕಿಕೊಂಡು ಪತ್ನಿಯೊಡನೆ ಸೆಕ್ಸ್ ನಡೆಸುತ್ತೇನೆ. ಆದರೆ ನನಗೆ ಲೈಂಗಿಕ ತೃಪ್ತಿ ಸಿಗುವುದಿಲ್ಲ. ನನ್ನ ದೇಹದ ಶಕ್ತಿ ಕಡಿಮೆಯಾದಂತಾಗಿ ಮಾನಸಿಕವಾಗಿ ದುರ್ಬಲ ನಾಗಿದ್ದೇನೆ. ನನ್ನ ಸಮಸ್ಯೆಗೆ ಪರಿಹಾರ ಸೂಚಿಸುವಿರಾಗಿ ನಂಬಿದ್ದೇನೆ.
ಸಲಹೆ: ನಿಮ್ಮ ಸಮಸ್ಯೆ ಏನೆಂದೇ ಅರ್ಥವಾಗುವುದಿಲ್ಲ. ನೀವು ಆಕೆಯ ಜೊತೆ ಸಂಗ ಬೆಳೆಸಿದ್ದರಿಂದ ಮದುವೆಯಾಗಬೇಕಾಯಿತು. ಮದುವೆಗೆ ಒಪ್ಪಿಗೆ ಕೊಡುವಾಗಲೇ ಈ ಬಗ್ಗೆ ಚಿಂತಿಸಬೇಕಿತ್ತು. ಇನ್ನೊಂದು ವಿಷಯವೆಂದರೆ, ನಿಮ್ಮ ಪತ್ನಿ ಕೀಳರಿಮೆಯಿಂದ ಕಾಣಲು ಕಾರ ಣವಿದೆ. ನೀವು ಕೆಲಸವಿದ್ದೂ ಅದರಲ್ಲಿ ತೊಡಗಿಕೊಳ್ಳದೆ ಕೇವಲ ಸೆಕ್ಸ್ ಮತ್ತು ಮಾನಸಿಕ ಸಮಸ್ಯೆ ಎಂದುಕೊಂಡಿದ್ದರೆ ಆಕೆ ಸುಮ್ಮ ನಿರುತ್ತಾಳೆಯೇ? ನಿಮ್ಮಿಬ್ಬರ ಈ ಪ್ರಾಯದಲ್ಲಿ ಲೈಂಗಿಕ ಜೀವ ನಕ್ಕೆ ಯಾವುದೇ ಸಮಸ್ಯೆಯಿಲ್ಲ. ನೀವು ಮದುವೆಯಾಗಿ ಇಷ್ಟು ವರ್ಷ ಕಳೆದಿದೆ.
ನಿಮಗೆ ಅಂದು ಇರದ ಸಮಸ್ಯೆ ಇಂದೇಕೆ ಆರಂಭವಾ ಯಿತು? ಪತ್ನಿಯೊಡನೆ ಸೆಕ್ಸ್ ಅಂದರೆ ಸಂಭೋಗ ಕ್ರಿಯೆ ನಡೆ ಸುತ್ತೀರಾದರೆ ನಿಮ್ಮಿಬ್ಬರ ಆರೋಗ್ಯ ಸರಿಯಾಗಿಯೇ ಇದೆ. ಮೊದಲು ಕೀಳರಿಮೆ ಬಿಟ್ಟು ಬಿಡಿ. ಕೆಲಸಕ್ಕೆ ಹೋಗಿ, ದುಡಿದು ಮನೆಗೆ ಬನ್ನಿ. ಹುಡುಗಿಯರನ್ನು ಕಂಡಾಗ ಕಾಮ ಕೆರಳುವ ವರ್ತನೆ ಕಂಟ್ರೋಲ್ ಮಾಡಿದರೆ ಒಳ್ಳೆಯದು. ಯಾಕೆಂದರೆ ಇದರಿಂದ ನಿಮಗಿರುವ ಮಾನ, ಮರ್ಯಾದೆಯನ್ನೂ ಕಳೆದು ಕೊಳ್ಳಬೇಕಾದೀತು. ಸಮಸ್ಯೆ ಏನಾದರೂ ಇದ್ದರೆ ವಿವರವಾಗಿ ಬರೆಯಿರಿ. ಸಾಧ್ಯವಾದಷ್ಟು ಪತ್ನಿಯ ಜತೆ ಹೊಂದಿಕೊಂಡು ಹೋಗುವುದನ್ನು ಕಲಿಯಿರಿ. ಹಣ ಕೊಟ್ಟು ವೇಶ್ಯೆಯರ ಜತೆಗೋ, ಇನ್ನಾರ ಜತೆಗೋ ಪ್ರೀತಿ ಹಂಚಿಕೊಳ್ಳುವುದು ಸರಿಯಲ್ಲ. ಇದ ರಿಂದ ನೀವು ನಿಮಗೆ ಅರಿವಿಲ್ಲದೆಯೇ ಮಾರಕ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ.

ಯಡ್ಡಿ ಮನೆಗೆ ಸಿಬಿಐ ದಾಳಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಇಂದು ಮುಂಜಾನೆ ಸಿಬಿಐ ದಾಳಿ ನಡೆಸಿದೆ. ಏಕಕಾಲಕ್ಕೆ ಎಸ್.ಪಿ. ನೇತೃತ್ವದ ಸಿಬಿ.ಐ. ತಂಡ ಧವಳಗಿರಿ ಪ್ರಾಪರ್ಟೀಸ್ ಸೇರಿದಂತೆ ಐದು ಕಡೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಡಾಲರ್ಸ್‌ಕಾಲನಿಯಲ್ಲಿರುವ ಯಡಿಯೂರಪ್ಪರ ಮನೆಗೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ದಾಖಲೆ ಪತ್ರಗಳನ್ನು ವಶಪಡಿಸಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆಯಷ್ಟೇ ಯಡಿಯೂರಪ್ಪ ಮತ್ತು ಅವರ ಕುಟುಂಬ ವರ್ಗದವರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ಯಡಿಯೂರಪ್ಪ ಒಂದನೇ ಆರೋಪಿಯಾಗಿದ್ದು, ಅವರ ಪುತ್ರರಾದ ರಾಘವೇಂದ್ರ, ವಿಜೇಯೇಂದ್ರ ಅಳಿಯ ಸೋಹನ್ ಕುಮಾರ್ ಆರೋಪಿಗಳಾಗಿದ್ದರು. ಅಲ್ಲದೇ ಲಂಚ ನೀಡಿದ ಸಂಸ್ಥೆಯ ವಿರುದ್ಧವೂ ಎಫ್‌ಐಆರ್ ದಾಖಲಾಗಿತ್ತು.

ಕಾರಿನ ಗಾಜಿಗೆ ಕಪ್ಪು ಪಟ್ಟಿ ತೆರವು ಕಾರ್ಯಾಚರಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾರಿಗೆ ಅಳ ವಡಿಸಿದ ಕಪ್ಪುಗಾಜನ್ನು ತೆಗೆಯುವಂತೆ ಸುಪ್ರೀಂಕೋರ್ಟು ನೀಡಿದ ಆದೇಶದ ಬಿಸಿ ನಗರದ ಜನತೆಗೂ ತಟ್ಟಿದ್ದು ಪೊಲೀಸರು ಕಪ್ಪುಗಾಜಿನ ಕಾರನ್ನು ತಡೆಹಿಡಿದು ಕಪ್ಪುಪಟ್ಟಿ ತೆರವು ಕಾರ್ಯಾ ಚರಣೆಯನ್ನು ನಿನ್ನೆ ನಗರದಲ್ಲಿ ನಡೆಸಿ ದರು.
ನಗರದ ವಿವಿಧ ಕಡೆ ಏಕ ಕಾಲ ದಲ್ಲಿ ಈ ಕಾರ್ಯಾಚರಣೆ ನಡೆದಿದ್ದು. ಕಾರನ್ನು ತಡೆಹಿಡಿದು ಸ್ಥಳದಲ್ಲೇ ಕಪ್ಪು ಪಟ್ಟಿ ತೆಗೆಯುವಂತೆ ಇಲ್ಲವೇ ದಂಡ ಕಟ್ಟುವಂತೆ ಪೊಲೀಸರು ಬಿಸಿ ಮುಟ್ಟಿಸಿದ ಕಾರಣ ಕಾರಿನ ಮಾಲಕರು ಎರಡು ಮಾತನಾಡದೇ ಗಾಜಿನ ಕಪ್ಪು ಪಟ್ಟಿಯನ್ನು ತೆರವು ಮಾಡಿದ್ದಾರೆ.
ಆದರೂ ಕೆಲವರು ಮಾತ್ರ ಪೊಲೀಸರ ಈ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಪೊಲೀಸರು ಬಲವಂತದಿಂದ ಗಾಜಿನ ಕಪ್ಪ ಪಟ್ಟಿ ತೆರವು ಮಾಡುತ್ತಲೇ ಇದ್ದರು.
ಇತ್ತೀಚಿನ ದಿನದಲ್ಲಿ ಕಪ್ಪು ಗಾಜಿನ ಕಾರಿನಲ್ಲಿ ಅಪಹರಣ, ಕಾರಿನಲ್ಲೇ ಅತ್ಯಾಚಾರದಂತಹ ಘಟನೆಗಳು ಮತ್ತು ಅನುಚಿತ ವರ್ತನೆಗಳು ಅಧಿಕವಾಗು ತ್ತಿರುವುದನ್ನು ಗಂಭೀರವಾಗಿ ಪರಿಗ ಣಿಸಿದ್ದ ಸುಪ್ರೀಂ ಕಾರಿನ ಕಪ್ಪು ಗಾಜನ್ನು ತೆರವು ಮಾಡುವಂತೆ ಆದೇಶ ನೀಡಿತ್ತು. ಮಾತ್ರವಲ್ಲದೆ ಅದನ್ನು ಕೂಡಲೇ ಅನುಷ್ಠಾನಕ್ಕೆ ತರುವಂತೆ ಸೂಚನೆ ನೀಡಿತ್ತು. ಅದರಂತೆ ಕೇಂದ್ರ ಸ್ಥಳಗಳಲ್ಲಿ ಈ ಆದೇಶ ಕೂಡಲೇ ಅನುಷ್ಠಾನಕ್ಕೆ ಬಂದಿದ್ದು ಒಂದು ವಾರ ವಿಳಂ ಬವಾಗಿ ಮಂಗಳೂರಿನಲ್ಲಿ ಪಾಲನೆ ಗೊಂಡಿದೆ.

ಸೈಬರ್ ಕೆಫೆಗಳಿಗೆ ಅಪ್ರಾಪ್ತ ವಿದ್ಯಾರ್ಥಿಗಳ ದೌಡು

Posted by JAYAKIRANA Kirana on | 0 comments | Leave a comment...

ಕಂಗಳಲ್ಲಿ ಹೆಪ್ಪುಗಟ್ಟುತ್ತಿರುವ ನೀಲಿ ಚಿತ್ರಗಳು
ಕುಂದಾಪುರ: ಪರೀಕ್ಷೆಗಳೆಲ್ಲ ಮುಗಿದು ರಜೆ ಅರಸಿ ಬರುತ್ತಿದ್ದ ಹಾಗೆ ಇನ್ನೂ ಸರಿಯಾಗಿ ಮೀಸೆ ಮೂಡದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಒಂದೇ ಸಮನೆ ನಗರದ ಸೈಬರ್ ಕೆಫೆಗಳಿಗೆ ಲಗ್ಗೆಯಿಡಲು ಆರಂಭಿಸಿ ದ್ದಾರೆ. ಹೆಚ್ಚಿನ ಸೈಬರ್ ಕೆಫೆಗಳು ವಿದ್ಯಾ ರ್ಥಿಗಳ ಕಲರವ ಮುಗಿಲುಮುಟ್ಟುವಿಕೆ ಯಿಂದಾಗಿ ತುಂಬಿ ತುಳುಕಾಡಲು ಆರಂಭಿಸಿದೆ.
ಹೆಚ್ಚಿನ ಜ್ಞಾನಾರ್ಜನೆಗಾಗಿ ಇಂಟರ್‌ನೆಟ್ ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ನೀವು ಭಾವಿಸಿದ್ದೀರಾ? ಹಾಗಾದರೆ ತಪ್ಪು ನಿಮ್ಮದು. ಯಾಕೆಂದರೆ ತಲಾ ಎರಡು ಮೂರು ತಂಡಗಳಾಗಿ ಸೈಬರ್ ಕೋಣೆ ಹೊಕ್ಕು ಕುಳಿತ ವಿದ್ಯಾರ್ಥಿಗಳು ಎದುರಿನ ಪುಟ್ಟ ಕಂಪ್ಯೂಟರ್ ಪರದೆಯಲ್ಲಿ ಅನಾಮತ್ತಾಗಿ ಮೂಡಿ ಬರುತ್ತಿರುವುದು ಮಾತ್ರ ಹದಿವಯಸ್ಸಿನ ಕಾಮನೆಗಳಿಗೆ ಹೆಂಡ ಕುಡಿಸುವಂತಹ ನೀಲಿಚಿತ್ರಗಳು. ಗೂಗಲ್‌ನ ಎರಡು ಗೆರೆಗಳ ನಡುವೆ ತಮಗೆ ಬೇಕಾದ ರತಿಕ್ರೀಡೆ ಹೆಸರಿನ ಅಕ್ಷರಗಳನ್ನು ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ ಸರ್ಚ್‌ನ ಗುಂಡಿಯನ್ನು ಕ್ಲಿಕ್ಕಿಸಿದರೆ ಮುಗಿಯಿತು. ಅಲೆಅಲೆಯಾಗಿ ಮೂಡಿ ಬರುತ್ತದೆ ನೀಲಿ ಚಿತ್ರಗಳು. ಪುಟ್ಟ ಹುಡುಗಿಯಿಂದ ಹಿಡಿದು ವಯಸ್ಸಾದ ಆಂಟಿಯ ತನಕ, ಓಪನ್ ಕ್ಯಾಮಾರಾದಿಂದ ಹಿಡಿದು ರಹಸ್ಯ ಕ್ಯಾಮಾರಾದಲ್ಲಿ ಸೆರೆ ಹಿಡಿದ ಅಸಂ ಖ್ಯಾತ ನೀಲಿಚಿತ್ರಗಳು ಅಲ್ಲಿ ಇಳಿದು ಬರುತ್ತದೆ. ಇದೀಗ ಸಣ್ಣ ವಯಸ್ಸಿನ ವಿದ್ಯಾರ್ಥಿಗಳು ಸದ್ರಿ ವೆಬ್‌ಸೈಟನ್ನು ಬಳಸಲು ಚೆನ್ನಾಗಿ ಅರಿತಿರುವುದರಿಂದ ವಯಸ್ಸಿಗೂ ಮೀರಿದ ಕಾಮನೆಗಳಿಂದ ವಿದ್ಯಾರ್ಥಿಗಳು ಜರ್ಜರಿತರಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ವಿಶೇಷವೆಂದರೆ ಮೊನ್ನೆಯಷ್ಟೇ ಎಸ್‌ಎಸ್‌ಎಲ್‌ಸಿಯ ಅಂತಿಮ ಎಕ್ಸಾಂ ಮುಗಿಸಿದ ಜೋಡಿಯೊಂದು ನೇರವಾಗಿ ಹೋಗಿ ಕುಳಿತದ್ದು ನಗರದ ನಟ್ಟ ನಡುವಿನ ಸೈಬರ್ ಕೆಫೆಯೊಂದರಲ್ಲಿ. ಅಲ್ಲಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚಿನ ಸಮಯ ಕಳೆದ ಜೋಡಿ, ಅಲ್ಲಿ ಹೆಚ್ಚಾಗಿ ವೀಕ್ಷಿಸಿದ್ದು ನೀಲಿ ಚಿತ್ರಗಳನ್ನೇ. ಅದೇನಾಯ್ತೋ ತರಾತುರಿಯಲ್ಲಿ ಹೊರಟ ಈ ಜೋಡಿ ಕಂಪ್ಯೂಟರ್ ಶಟ್‌ಡೌನ್ ಮಾಡಲು ಮರೆತಿದೆ. ಅಂದ ಹಾಗೆ ಈ ವಿದ್ಯಾರ್ಥಿನಿ ಕುಂದಾಪುರದ ಪ್ರತಿಷ್ಠಿತ ಮನೆಯವಳಾಗಿದ್ದರೆ, ವಿದ್ಯಾರ್ಥಿ ಪಕ್ಕದ ಗಂಗಾವಳಿ ತೀರದವನು.

ಇರಾ ಗ್ರಾ.ಪಂ. ಎದುರು ಪ್ರತಿಭಟನೆ ಪರ್ವ

Posted by JAYAKIRANA Kirana on | 0 comments | Leave a comment...



ಬಿಜೆಪಿಯೊಂದಿಗೆ ಎಸ್‌ಡಿಪಿಐಯೂ ಕೈ ಜೋಡಿಸಿತು!
ಮಂಗಳೂರು: ಇರಾ ಗ್ರಾಮ ಪಂಚಾಯಿತಿಗೆ ಬಂದ ಸರಕಾರದ ಅನುದಾನದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಿನ್ನೆ ಕಾಂಗ್ರೆಸ್ ಬೆಂಬಲಿತ ಹಾಲಿ ಅಧ್ಯಕ್ಷ ಅಬ್ದುಲ್ ರಝಾಕ್ ವಿರುದ್ಧ ಗ್ರಾಮ ಸ್ಥರು ಪಂಚಾಯಿತಿ ಕಚೇರಿಯೆದರು ಪ್ರತಿಭಟನೆ ನಡೆಸಿದರು. ಇದಕ್ಕೆ ವಿರು ದ್ಧವಾಗಿ ಮಾಜಿ ಅಧ್ಯಕ್ಷ ಸುಧಾಕರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಾಲಿ ಅಧ್ಯಕ್ಷ ರಜಾಕ್ ಬೆಂಬಲಿಗರು ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಇರಾ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮಂಜುನಾಥ ಶೆಟ್ಟಿ, ಕಾಂಗ್ರೆಸ್ ಬೆಂಬಲಿತರು ಆಡಳಿತಕ್ಕೆ ಬಂದ ಎರಡು ವರ್ಷಗಳಲ್ಲಿ ಪಂಚಾಯಿತಿಗೆ ಬಂದ ಸರಕಾರದ ಅನುದಾನದಲ್ಲಿ ಭಾರೀ ಅವ್ಯವಹಾರ ನಡೆದಿದೆ. ಇರಾ ಪಂಚಾಯಿತಿ ಅನುದಾನದಲ್ಲಿ ಇನ್ನೊಂದು ಗ್ರಾಮವನ್ನು ಉದ್ಧಾರ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬಡವರಿಗೆ ಒಂದೇ ಒಂದು ಮನೆ ನಿವೇಶನವನ್ನೂ ನೀಡದಿದ್ದರೂ ಹಾಲಿ ಅಧ್ಯಕ್ಷ ರಝಾಕ್ ಅವರು ೫೦ ಸೆಂಟ್ಸ್ ಸರಕಾರಿ ಜಮೀನನ್ನು ಅತಿಕ್ರಮಿಸಿದ್ದಾರೆ.
ಈ ಬಗ್ಗೆ ಅವರೇ ನ್ಯಾಯಾಲಯದಲ್ಲಿ ದಾವೆ ಹೂಡಿ ಸೋಲನುಭವಿಸಿದ್ದು ಆಡಳಿತ ವೈಖರಿಯ ಬಗ್ಗೆ ಪ್ರಶ್ನಿಸಿದವರನ್ನೇ ಬೆದರಿಸಿದ್ದಾರೆ. ಇಂತಹವರಿಂದ ಗ್ರಾಮಸ್ಥರಿಗೆ ನ್ಯಾಯ ಸಿಗುವುದು ಮರೀಚಿಕೆಯಾಗಿದ್ದು ಅವರು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್ ಆಗಿರುವ ಕಾರಣ ರಾಜೀನಾಮೆ ನೀಡಬೇಕು, ಇಲ್ಲವೇ ಪಂಚಾಯಿತಿಯನ್ನು ಬರ್ಖಾಸ್ತುಗೊಳಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಎಸ್.ಡಿ.ಪಿ.ಐ. ಮುಖಂಡ ಅಶ್ರಫ್, ಅಧ್ಯಕ್ಷರಿಂದ ಕಳೆದ ಎರಡು ವರ್ಷಗಳಲ್ಲಿ ಪಂಚಾಯಿತಿಯಲ್ಲಿ ಜಾತಿ ತಾರತಮ್ಯ, ಪಕ್ಷಪಾತ ಧೋರಣೆ ನಡೆಯುತ್ತಿದೆ. ಅಲ್ಲದೆ ಅಧ್ಯಕ್ಷರಿಂದ ವ್ಯಾಪಕ ಅವ್ಯವಹಾರ ನಡೆದಿದ್ದು ಅವರನ್ನು ತನಿಖೆಗೊಳಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿ. ಪಂ. ಸದಸ್ಯ ಸಂತೋಷ್ ಕುಮಾರ್ ರೈ, ಮಂಗಳೂರು ವಲಯ ಬಿ.ಜೆ.ಪಿ. ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಗೋಪಾಲ ಅಶ್ವತ್ತಡಿ, ಇಬ್ರಾಹಿಂ, ರಮೇಶ್ ಶೆಟ್ಟಿ ಮೂಳೂರು, ಮೊಯಿದ್ದೀನ್ ಕುಂಞಿ, ಅಕ್ಬರಲಿ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಭಟನೆಯ ಬಳಿಕ ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಸಂತ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
ಅಧ್ಯಕ್ಷರಿಂದಲೂ ಪ್ರತಿಭಟನೆ
 ಹಾಲಿ ಅಧ್ಯಕ್ಷ ರಝಾಕ್ ಅವರೂ ನಿನ್ನೆ ತನ್ನ ಬೆಂಬಲಿಗರೊಂದಿಗೆ ಪಂಚಾಯಿತಿ ಎದುರು ಸೇರಿಸಿ ಬಿ.ಜೆ.ಪಿ. ಬೆಂಬಲಿತ ಮಾಜಿ ಅಧ್ಯಕ್ಷ ಸುಧಾಕರ್ ಭಾವಚಿತ್ರವುಳ್ಳ ಬ್ಯಾನರ್ ಹಿಡಿದು ಪ್ರತಿಭಟನೆಗೆ ಸಿದ್ಧರಾದರು.
ಇದರಿಂದ ಆಕ್ರೋಶಗೊಂಡ ಬಿ.ಜೆ.ಪಿ. ಮುಖಂಡರು, ರಝಾಕ್ ಅವರಿಗೆ ಅನುಮತಿ ಇಲ್ಲದ ಕಾರಣ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಬಂಟ್ವಾಳ ಗ್ರಾಮಾಂತರ ಠಾಣಾ ಇನ್ಸ್‌ಪೆಕ್ಟರ್ ಅನಿಲ್ ಎಸ್.ಕುಲಕರ್ಣಿ ಅವರನ್ನು ಒತ್ತಾಯಿಸಿದರು. ಕಾರಣ ಹೇಳಿದ ರಝಾಕ್, ಪ್ರತಿಭಟನೆಯಿಂದ ಹಿಂದಕ್ಕೆ ಸರಿಯಲು ನಿರಾಕರಿಸಿದರು. ಇದರಿಂದ ಕೆರಳಿದ ಬಿ.ಜೆ.ಪಿ. ಮುಖಂಡರು ಇನ್ಸ್‌ಪೆಕ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಇದಾದ ಬಳಿಕ ರಝಾಕ್ ಅವರು ಇನ್ಸ್‌ಪೆಕ್ಟರ್ ಅನಿಲ್ ಎ.ಕುಲಕರ್ಣಿ ಅವರಿಗೆ ಮನವಿ ನೀಡಿ ಸುಧಾಕರ್ ಅವರ ವಿರುದ್ಧ ಎಫ್.ಐ.ಆರ್. ದಾಖಲಾಗಿರುವುದರಿಂದ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು. ಇದೇ ವೇಳೆ ಅವರ ಜತೆಗಿದ್ದ ಬೆಂಬಲಿಗರು ಸುಧಾಕರ್ ವಿರುದ್ಧ ಧಿಕ್ಕಾರ ಕೂಗಿದಾಗ ಆಕ್ರೋಶಗೊಂಡ ಬಿ.ಜೆ.ಪಿ. ಬೆಂಬಲಿಗರು ವಾಪಸ್ ಬಂದರು. ಆ ಸಂದರ್ಭ ಇನ್ನೊಮ್ಮೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಲಕ್ಷಣಗಳು ಗೋಚರಿಸಿತು. ಆದರೆ ಪೊಲೀಸರು ಎಲ್ಲರನ್ನೂ ಚದುರಿಸುವ ಮೂಲಕ ಸಂಭಾವ್ಯ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.

ಕಾರ್ಕಳ ಪುರಸಭಾ ಖಜಾನೆಗೆ ೨ ಕೋಟಿ ರೂ. ನಷ್ಟಕ್ಕೆ ಹೊಣೆಗಾರರ‍್ಯಾರು?

Posted by JAYAKIRANA Kirana on | 0 comments | Leave a comment...


ಕಾರ್ಕಳ: ಪುರಸಭಾ ಸದಸ್ಯರ ಬೇಜವಾಬ್ದಾರಿ ಮತ್ತೊಮ್ಮೆ ಸಾಬೀತಾ ಗಿದೆ. ಜನವಿರೋಧಿ ಯೋಜನೆ ಎಂದೇ ಹೇಳಲಾಗುವ ಬಂಡೀಮಠ ಬಸ್ ನಿಲ್ದಾ ಣದ ಕಾಂಕ್ರೀಟೀಕರಣ ಕಾಮಗಾರಿ ಯೋಜನೆಗಾಗಿ ಸುಮಾರು ಎರಡು ಕೋಟಿ ರೂ. ವ್ಯಯಿಸಿರುವುದು ಇದೀಗ ಊಟಕ್ಕಿಲ್ಲದ ಉಪ್ಪಿನಕಾಯಿಯಂ ತಾಗಿದೆ.
ಪುರಸಭಾ ಸಾಮಾನ್ಯ ಸಭೆಯಲ್ಲಿ ಪಕ್ಷ ಭೇದ ಮರೆತ ಕೌನ್ಸಿಲರು ಏಕಾಏಕಿ ಜ್ಞಾನೋದಯವಾದಂತೆ ನಗರದ ಅಭಿವೃದ್ಧಿ ಎಂಬ ಸೋಗಿನಲ್ಲಿ ಪುರಸಭಾ ಖಜಾನೆಗೆ ಕನ್ನ ಹಾಕಿದ್ದಾರೆ. ಇವರ ವರ್ತನೆಗೆ ನಾಗರಿಕರು ದಂಡ ತೆರುವಂ ತಾಗಿದ್ದಾರೆ. ಬಂಡೀಮಠ ಬಸ್ ನಿಲ್ದಾಣ ಕಾಂಕ್ರೀಟೀಕರಣ ಕಾಮಗಾರಿಗೆಂದೇ ಎರಡು ಕೋಟಿ ರೂ. ಮೀಸಲಿಡುವಂತೆ ಅಂದಿನ ಸಾಮಾನ್ಯ ಸಭೆಯಲ್ಲಿ ಸರ್ವಾ ನುಮತದ ನಿರ್ಣಯ ಕೈಗೊಂಡಿದ್ದರು. ರಶ್ಮಿ ಕನ್‌ಸ್ಟ್ರಕ್ಷಶನ್ ಸಂಸ್ಥೆ ಕಾಮ ಗಾರಿಯನ್ನು ಪೂರ್ಣಗೊಳಿಸಿತ್ತಾದರೂ ಅದರ ಗುಣಮಟ್ಟ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ ಎಂಬುವುದಕ್ಕೆ ಬಸ್ ಓಡಾಟದ ಸಂದರ್ಭದಲ್ಲಿ ಕಾಂಕ್ರೀಟೀಕರಣದಿಂದ ಮೇಲೇಳುತ್ತಿರುವ ಜಲ್ಲಿಪಡಿಯ ಧೂಳು ಇದಕ್ಕೆ ಸಾಕ್ಷ್ಯಾಧಾರವಾಗಿದೆ.
ನಂತರದ ದಿನಗಳಲ್ಲಿ ಕೌನ್ಸಿಲ ರೊಳಗಿನ ವಿಭಿನ್ನ ನೀತಿ ಬಯಲು ಗೊಂಡಿರುವುದರಿಂದ ಜಿಲ್ಲಾಧಿಕಾರಿಯ ವರು ನಿನ್ನೆ ಹೊಸ ಅದೇಶವೊಂದನ್ನು ಜಾರಿಗೊಳಿಸಿದ್ದಾರೆ. ಈ ಹಿಂದೆ ಹೊರ ಡಿಸಿರುವ ತಾತ್ಕಾಲಿಕ ಅದೇಶವನ್ನು ಹಿಂಪಡೆದಿದ್ದು, ಹಿಂದಿನಂತೆ ಖಾಸಗಿ ಬಸ್‌ಗಳು ವಿಸ್ತೃತ ಬಸ್ ನಿಲ್ದಾಣದ ಲ್ಲಿಯೇ ನಿಲ್ಲಿಸಬೇಕೆಂದು ತಿಳಿಸಿದ್ದಾರೆ.
ವಿಸ್ತೃತ ಬಸ್ ನಿಲ್ದಾಣದಲ್ಲಿ ಡಾಂಬರೀಕರಣ ಕಾಮಗಾರಿಗಾಗಿ ಮತ್ತು ಹಳೆಯದಾದ ಕಟ್ಟಡ ಕೆಡವುವ ಉದ್ದೇಶದಿಂದ ಬಸ್ ನಿಲ್ದಾಣವನ್ನು ಬಂಡೀಮಠಕ್ಕೆ ತಾತ್ಕಾಲಿಕವಾಗಿ ಸ್ಥಳಾಂ ತರಿಸಲಾಗಿದೆ ಎಂದು ಅಂದು ಜಿಲ್ಲಾ ಧಿಕಾರಿ ಅವರು ಹೊರಡಿಸಿರುವ ಅದೇಶ ದಲ್ಲಿ ತಿಳಿದುಬಂದಿದೆ. ವಿಸ್ತೃತ ಬಸ್ ನಿಲ್ದಾಣದಲ್ಲಿ ಡಾಂಬರೀಕರಣ ಕಾಮ ಗಾರಿ ಪುರಸಭಾ ಆಡಳಿತ ವರ್ಗ ಈ ಹಿಂದೆ ಹಲವು ಬಾರೀ ನಡೆಸಿದಾಗಲೂ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಬದಲಾಯಿಸಲಿಲ್ಲ. ಹೀಗಿದ್ದು ಲೋಕ ಸಭಾ ಚುನಾವಣೆಯ ಸಂದರ್ಭದಲ್ಲಿ ವಿಸ್ತೃತ ಬಸ್ ನಿಲ್ದಾಣದ ಡಾಂಬರೀ ಕರಣ ಕಾಮಗಾರಿ ಕೈಗೊಂಡಿರುವುದು ನಿಜವಾಗಿದ್ದರೂ, ಹಳೆ ಕಟ್ಟಡ ಯಾವುದು, ಅದನ್ನು ಯಾವಾಗ ಕೆಡವ ಲಾಗಿದೆ ಎಂಬುವುದನ್ನು ಜಿಲ್ಲಾಧಿಕಾರಿ ಅವರೇ ಸ್ಪಷ್ಟ ಪಡಿಸಬೇಕಾಗಿದೆ.
ತಾತ್ಕಾಲಿಕ ಬಸ್ ನಿಲ್ದಾಣವನ್ನು ಬಂಡೀಮಠಕ್ಕೆ ಸ್ಥಳಾಂತರಗೊಳಿಸಿ ಕಾಂಕ್ರೀಟೀಕರಣ ಕಾಮಗಾರಿ ನಡೆಸುವ ಅಗತ್ಯತೆ ಏನಿತ್ತು. ತಾತ್ಕಾಲಿಕ ಬಸ್ ನಿಲ್ದಾಣವನ್ನು ಮುಖ್ಯಮಂತ್ರಿ ಸದಾನಂದಗೌಡ ಅವರಿಂದ ಉದ್ಘಾಟನೆ ಬೇಕಿತ್ತೇ. ಅಂದು ನಡೆದ ಸರಕಾರಿ ಕಾರ್ಯಕ್ರಮಕ್ಕೆ ಲಕ್ಷಾಂತರ ರೂ. ಅನಾ ವಶ್ಯಕವಾಗಿ ವೆಚ್ಚವಾಗಿತ್ತು. ಇದಕ್ಕೆ ಯಾರು ಹೊಣೆ ಎಂಬುವುದು ನಾಗರಿ ಕರ ಪ್ರಶ್ನೆಯಾಗಿದೆ.
ಬಂಡೀಮಠ ಬಸ್ ನಿಲ್ದಾಣಕ್ಕೆಂದು ರಾಜ್ಯ ಸರಕಾರದಿಂದ ವಿಶೇಷ ಅನು ದಾನ ಇದುವರೆಗೆ ಬಿಡುಗಡೆಗೊಂಡಿಲ್ಲ. ರಸ್ತೆ ಅಭಿವೃದ್ಧಿಗಾಗಿ ಬಂದಿದ್ದ ಅನು ದಾನವನ್ನು ದುರುಪಯೋಗಪಡಿಸಿ ಅದನ್ನು ಬಂಡೀಮಠ ಬಸ್ ನಿಲ್ದಾಣ ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ. ರಸ್ತೆ ಅಭಿವೃದ್ಧಿಯ ಅನುದಾನವನ್ನು ಅದಕ್ಕಾಗಿಯೇ ಉಪಯೋಗಿಸುತ್ತಿದ್ದರೆ ನಗರದ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಾಗುತ್ತಿತ್ತು. ಇದ್ಯಾವುದನ್ನು ಆಲೋಚಿಸುವ ಶಕ್ತಿ ಪುರಸಭಾ ಸದಸ್ಯ ರಿಗೆ ಇಲ್ಲದಿರುವುದರಿಂದ ಇದೀಗ ಸಮ ಸ್ಸೆಯ ಅಗರದ ತಾಣವಾಗಿ ಕಾರ್ಕಳ ಪುರಸಭಾ ಮಾರ್ಪಟ್ಟಿದೆ.

ರಸ್ತೆಯಲ್ಲಿ ಶೌಚಾಲಯದ ನೀರು: ಕಣ್ಮುಚ್ಚಿ ಕುಳಿತ ಹಾಸ್ಟೆಲ್ ಆಡಳಿತ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳೆದ ಕೆಲವು ದಿನಗಳಿಂದ ಹಾಸ್ಟೆಲ್ ಶೌಚಾಲಯದ ನೀರು ರಸ್ತೆಯಲ್ಲಿ ಹರಿದಾಡುತ್ತಿದ್ದರೂ ಆಡಳಿತ ಮಂಡಳಿ ಮಾತ್ರ ಕಣ್ಮುಚ್ಚಿ ಕುಳಿತಿದೆ. ಇದರಿಂದ ಆಕ್ರೋಶಗೊಂಡಿ ರುವ ಸಾರ್ವಜನಿಕರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಇಲ್ಲಿನ ಅಡ್ಯಾರ್ ಕಣ್ಣೂರಿನಲ್ಲಿರುವ ಶ್ರೀನಿವಾಸ ಕಾಲೇಜ್ ಹಾಸ್ಟೆಲ್‌ನಲ್ಲಿ ನೂರಾರು ವಿದ್ಯಾರ್ಥಿಗಳು ವಾಸವಿ ದ್ದಾರೆ. ಕಳೆದ ಕೆಲವು ದಿನಗಳಿಂದ ಹಾಸ್ಟೆಲ್ ಶೌಚಾಲಯದ ಚರಂಡಿಗಳು ತುಂಬಿರುವ ಕಾರಣ ಕೊಳಚೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹರಿದಾಡುತ್ತಿದೆ.
ಇದರಿಂದಾಗಿ ಬಿ.ಸಿ.ರೋಡು ಕಡೆಯಿಂದ ಮಂಗಳೂರಿಗೆ ಬರುವ ಘನವಾಹನಗಳ ಚಕ್ರಗಳಿಗೆ ಸಿಲುಕಿ ಹಾರುವ ನೀರು, ದ್ವಿಚಕ್ರ ಸವಾರರು ಹಾಗೂ ಪಾದಚಾರಿಗಳ ಮೈಮೇಲೆ ಸಿಂಚನವಾಗುತ್ತಿದೆ. ಇದು ಮಾರಕ ರೋಗಗಳಿಗೂ ಆಹ್ವಾನ ನೀಡುತ್ತಿದೆ. ಶುಚಿತ್ವದ ಬಗ್ಗೆ ಭೋದಿಸುವ, ಲಕ್ಷಾಂ ತರ ರೂಪಾಯಿ ಡೊನೇಶನ್ ಪಡೆ ಯುವ ಶೈಕ್ಷಣಿಕ ಸಂಸ್ಥೆಯಿಂದಾಗಿ ಸಾರ್ವಜನಿಕರು ಗಂಭೀರವಾದ ಸಮಸ್ಯೆ ಎದುರಿಸುತ್ತಿದ್ದರೂ ಸಂಬಂಧಪಟ್ಟವರು ಮೌನವಾಗಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಸಾರ್ವಜನಿಕರು ಹಾಸ್ಟೆಲ್ ಎದುರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಪತ್ರಿಕೆಗೆ ಲಭಿಸಿದೆ.

ಕ್ರೀಡಾಂಗಣಕ್ಕಾಗಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಿರ್ಮಾಣವಾಗು ತ್ತಿರುವ ಕ್ರೀಡಾಂಗಣ ಕಾಮಗಾರಿಗೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಿನ್ನೆ ಮಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ವಿ.ವಿ.ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.
ಕೊಣಾಜೆಯಲ್ಲಿ ಮಂಗಳೂರು ವಿ.ವಿ ಆರಂಭಗೊಂಡು ೩೦ ವರ್ಷಗಳ ಬಳಿಕ ಸುಸಜ್ಜಿತವಾದ ೪೦೦ ಮೀಟರ್ ಟ್ರ್ಯಾಕ್ ಹೊಂದಿದ ಕ್ರೀಡಾಂಗಣದ ಕಾಮಗಾರಿ ಸರಕಾರದ ಅನುದಾನ ದಿಂದ ವೇಗವಾಗಿ ನಡೆಯುತ್ತಿದೆ. ಇದೇ ವೇಳೆ ಮಂಗಳೂರು ವಿ.ವಿಯಲ್ಲಿರುವ ಕೆಲವೊಂದು ವ್ಯಕ್ತಿಗಳು ಖಾಸಗಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಮಗಾರಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
 ಈ ಹಿನ್ನೆಲೆಯಲ್ಲಿ ವಿ.ವಿ. ಆಡಳಿತ ಮಂಡಳಿ ಸ್ಥಾಪಿತ ಹಿತಾಸಕ್ತಿಗಳ ಷಡ್ಯಂತ್ರಕ್ಕೆ ಬಲಿಯಾಗದೆ ಕ್ರೀಡಾಂಗಣ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿರುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಂಡು, ಮುಂದಿನ ಶೈಕ್ಷಣಿಕ ವರ್ಷದೊಳಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವಂತೆ ಆಗ್ರಹಿಸಿ ಮಂಗಳೂರು ವಿ.ವಿ.ಯ ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ಅವರಿಗೆ ಮನವಿ ನೀಡಿದರು.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

ಬಿಜೆಪಿ ಮುಖಂಡ ಸೇರಿದಂತೆ ಇಬ್ಬರ ಅಪಹರಣ

Posted by JAYAKIRANA Kirana on | 0 comments | Leave a comment...


ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ಅಟ್ಟಹಾಸ

ರಾಯ್‌ಪುರ: ಎರಡು ಪ್ರತ್ಯೇಕ ಘಟನೆಯಲ್ಲಿ, ಛತ್ತೀಸ್‌ಗಢದ ಸುಕುಮಾ ಜಿಲ್ಲೆಯಿಂದ ಬಿಜೆಪಿ ಮುಖಂಡ ಸೇರಿದಂತೆ ಇಬ್ಬರನ್ನು ಮಾವೋವಾದಿಗಳು ಅಪಹರಿಸಿರುವ ಬಗ್ಗೆ ವರದಿಯಾಗಿದೆ.
ಕಳೆದ ತಿಂಗಳು, ಸುಕುಮಾದ ಕಲೆಕ್ಟರ್ ಅಲೆಕ್ಸ್ ಪೌಲ್ ಮೆನನ್‌ನ್ನು ಮಾವೋವಾದಿಗಳು ಅಪಹರಿಸಿ ೧೨ ದಿನಗಳ ಬಳಿಕ ಬಂಧಮುಕ್ತಿಗೊಳಿಸಿದ್ದರು.
ನಿನ್ನೆ ಸಂಜೆಯ ವೇಳೆಗೆ ಸುಕುಮಾ ಜಿಲ್ಲೆಯ ಬಿಜೆಪಿ ಕಾರ್ಯದರ್ಶಿ ಮೊಚಾಕಿ ಜೋಗ ಖಾಸಗಿ ಬಸ್ಸಿನಲ್ಲಿ ಮನೆಗೆ ಹಿಂದಿರುಗುವ ವೇಳೆ ಅಪಹರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ದೋರ್‍ನಾಪಾಲ್ ಪ್ರದೇಶದ ಮೊಚಾಕಿ ಕಚ್ಚೇ ವ್ಯಾಪಾರಿಯನ್ನು ಮಾವೋವಾದಿಗಳು ಅಪಹರಿಸಿದ್ದಾರೆ.
ಅಪಹರಣಕಾರರಿಗೆ ಪೊಲೀಸರು ಬಲೆಬೀಸಿದ್ದು, ಸದ್ಯಕ್ಕೆ ಯಾವ ಪರಿಸರದಲ್ಲಿದ್ದಾರೆ ಎಂಬ ಬಗ್ಗೆ ನಿಖರವಾದ ಮಾಹಿತಿ ದೊರಕಿಲ್ಲ ಎಂದಿದ್ದಾರೆ.

ಪಾ ಚಿತ್ರ ಖ್ಯಾತಿಯ ಬಾಲ ನಟಿ ತರುಣಿ ಮೃತ್ಯು

Posted by JAYAKIRANA Kirana on | 0 comments | Leave a comment...

ನೇಪಾಳ ವಿಮಾನ ಅಪಘಾತ

ನವದೆಹಲಿ: ನೇಪಾಳದಲ್ಲಿ ನಿನ್ನೆ ಸಂಭವಿಸಿದ ವಿಮಾನ ಅಪಘಾತದಲ್ಲಿ ೧೩ ಭಾರತೀಯರು ಮೃತಪಟ್ಟಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ರಾಷ್ಟ್ರೀಯ ಪ್ರಶಸ್ತಿ ವಿಜೇತ "ಪಾ" ಚಿತ್ರದಲ್ಲಿ ನಟಿಸಿದ ಬಾಲನಟಿ ತರುಣಿ ಸಚ್‌ದೇವ್ ಮೃತಪಟ್ಟಿರುವುದು ದೃಡಪಟ್ಟಿದೆ.
ರಸ್ನಾ ಹುಡುಗಿ ಎಂದೇ ಪರಿಚಯಿಸಲ್ಪಟ್ಟಿರುವ ತರುಣಿ, ತಾಯಿ ಗೀತಾ ಸಚ್‌ದೇವ್ ಜೊತೆ ಪ್ರಯಾಣಿಸುತ್ತಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಹಿಂದಿಯ ಮೇರುನಟ ಅಮಿತಾಬ್ ಬಚ್ಚನ್, "ಪಾ ಚಿತ್ರದ ಬಾಲ ನಟಿ ಮೃತಪಟ್ಟಿರುವ ವರದಿಯನ್ನು ಓದಿ, ’ದೇವರೇ ಈ ಸುದ್ದಿ ನಿಜವಾಗದಿರಲಿ’ ಎಂದಿದ್ದಾರೆ". ಅಲ್ಲದೆ ಸುದ್ದಿ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಅಮಿತಾಬ್, "ನೇಪಾಳ ವಿಮಾನ ದುರಂತ ಸುದ್ದಿ ಕೇಳಿ ಆಘಾತವಾಯಿತು. ಓರ್ವ ಸಹ ನಟಿಯನ್ನು ಕಳೆದುಕೊಂಡಿದ್ದೇನೆ ಎಂದು ಮೌನಕ್ಕೆ ಶರಣಾದರು"
೧೮ ಪ್ರಯಾಣಿಕರನ್ನು ಹೊತ್ತು ಕೊಂಡು ಸಾಗುತ್ತಿದ್ದ ಅಗ್ನಿ ಏರ್ ಕಂಪೆನಿ ಒಡೆತನದ ಡೋನಿಯರ್ ಏರ್‌ಕ್ರಾಫ್ಟ್ ಮಂಡಳಿ, ತರುಣಿ ಹಾಗೂ ಆಕೆಯ ತಾಯಿ ಮೃತಪಟ್ಟಿರುವುದನ್ನು ದೃಢಪಡಿಸಿದೆ.
ಪಾ ಚಿತ್ರದಲ್ಲಿಯೇ ಅಲ್ಲದೆ, ತರುಣಿ, ಪ್ರಥ್ವಿರಾಜ್ ಮತ್ತು ಪ್ರಿಯಾಮಣಿ ನಟನೆಯ ಎರಡು ಮಳಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದರು.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (82) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4036) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2490) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (37) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (110) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (259) ln (1) lnews (3666) lokayukta (3) madikeri (1) maleria (1) mangalore (575) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (410) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (270) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (792) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (947) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (45) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)