ಬಲ್ಲಾಳ ರಾಜನ ಬಗ್ಗೆ ಕಟ್ಟುಕತೆ

Posted by JAYAKIRANA Kirana on Monday, 14 May 2012 | 0 comments | Leave a comment...

ಈ ದೇವಸ್ಥಾನವು ೧೮೪೫ರ ನಂತರ ಮಾಧ್ವರ ಆಡಳಿತೆಗೆ ಬಂದ ಮೇಲೆ ಈ ವಿಗ್ರಹ ಸ್ಥಾಪನೆ ವಿಚಾರದಲ್ಲಿ ಒಂದು ಕಟ್ಟುಕತೆಯನ್ನು ರಚಿಸಿದರು. ಅದು ಹೀಗಿದೆ :- ಇವರ ಮಾಧ್ವ ಮಠದಲ್ಲಿರತಕ್ಕ ವೇದವ್ಯಾಸ ಸಂಪುಟ ಒಂದು ಅಭೇದ್ಯವಾಗಿದ್ದರೂ ಬಲ್ಲಾಳ ರಾಜರ ಪರಂಪರೆಯ ಒಡೆಯನು ಕುತೂಹಲದಿಂದ ಆನೆಯಿಂದ ಮೆಟ್ಟಿಸಿದನೆಂದೂ ಇದರ ಪರಿಣಾಮವಾಗಿ ಅವಗೆ ಮೈಯೆಲ್ಲಾ ತಾಪವೇಳಲು ಆಗ ಅವನು ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿದ್ದಕ್ಕೆ ದೇವರು ಆತನ ವಿಗ್ರಹವನ್ನು ದೇವರ ಸಧಿಯಲ್ಲಿ ಸ್ಥಾಪಿಸಬೇಕೆಂದೂ ಆದರ ಶಾಂತಿಗಾಗಿ ಹತ್ತಿ, ಕುಂಬಳ ಕಾಯಿ, ಸಾಸಿವೆ, ಬೆಣ್ಣೆ ಇತ್ಯಾದಿಗಳನ್ನು ಅವಗೆ ಸಮರ್ಪಿಸಬೇಕೆಂದು ಹೇಳಿದರೆಂದೂ ಇದರಿಂದಾಗಿ ಇಲ್ಲಿ ಈಗಲೂ ಆ ಪದ್ಧತಿಯು ಬಂತೆಂದೂ ಕತೆ ಕಟ್ಟಿದ್ದಾರೆ. ಈ ಕತೆಯು ಈ ಮಾಧ್ವ ಮಠದವರು ೧೯೨೭ರಲ್ಲಿ ಪ್ರಕಟಿಸಿದ ಸುಬ್ರಹ್ಮಣ್ಯ ಸಂಸ್ಥಾನದ ಸಂಕ್ಷಿಪ್ತ ಇತಿಹಾಸ ಎಂಬ ಪುಸ್ತಕದಲ್ಲಿ ಕಂಡುಬರುತ್ತದೆ. ಅದಕ್ಕಿಂತ ಪೂರ್ವದಲ್ಲಿ ಈ ಕಟ್ಟುಕತೆಯು ಯಾವ ಪುರಾವ ವ ಇತಿಹಾಸದಲ್ಲಿ ಕಂಡುಬರುವುದಿಲ್ಲ. ಈ ಮಾಧ್ವ ಮಠದ ಈ ಮೊದಲಿನ ವ್ಯಾಸತೀರ್ಥ ಸ್ವಾಮಿಗಳು ಈ ಸುಬ್ರಹ್ಮಣ್ಯ ದೇವಸ್ಥಾನವು ತಮ್ಮ ಶಿಲಶಿಲಾ ಹಕ್ಕಿನದ್ದೆಂದು ರುಜುಪಡಿಸಲು ಔ.S. ಓo. ೨೭ oಜಿ ೧೮೮೬ ವ್ಯಾಜ್ಯದ ಮಧ್ಯದಲ್ಲಿ ತಯಾರಿಸಿದ ಪೋರ್ಜರಿ ತಾಮ್ರ ಶಾಸನವು ಒಂದು ಸಲ ಹೈಕೋರ್ಟಿನವರೆಗೂ ಹೋಗಿ ಪೋರ್ಜರಿ ಎಂದು ತೀರ್ಮಾನವಾದುದನ್ನು ಕೆಲವು ಸಮಯ ಒಳಗಿಟ್ಟು ಪುನಃ ಆ ಕತೆಯನ್ನು ಜನರ ಕಣ್ಣಿಗೆ ಬೀಳುವಂತೆ ೧೯೨೭ರಲ್ಲಿ ಅವರು ಪ್ರಕಟಿಸಿದ ಪುಸ್ತಕದಲ್ಲಿ ಪ್ರಕಟಿಸಿರುವುದರಿಂದ ಇವರ ಮಹತ್ವಾಕಾಂಕ್ಷೆ ಇನ್ನೂ ಇದೆ ಎಂಬುದು ವಿಷದವಾಗುತ್ತದೆ. ಈ ಬಲ್ಲಾಳ ರಾಜನು ಒಂದು ಕಾಲದಲ್ಲಿ ರಾಜನಾಗಿದ್ದನೆಂಬ ಕುರುಹಿಗಾಗಿ ಪ್ರತಿದಿನ ರಾತ್ರಿ ಮಂಗಳಾರತಿ ಆದೊಡನೆ ಈ ವಿಗ್ರಹದ ಹತ್ತಿರ ಮಂಗಳಾರತಿ ಒಪ್ಪಿಸುವುದೂ, ಚಂಪಾಷಷ್ಠಿ ದಿವಸ ಬಲ್ಲಾಳರಾಜನ ಕಾಣಿಕೆಯನ್ನು ಸ್ವೀಕರಿಸಿದ ಮೇಲೆ ಉತ್ಸವ ಹೊರಡುವುದೂ ಈಗಲೂ ವಾಡಿಕೆಯಲ್ಲಿದೆ.
ಈ ರಾಜಮನೆತನದವರೇ ಆದ ಬಲ್ಲಾಳರು ಕಾರಣಾಂತರದಿಂದ ಸುಬ್ರಹ್ಮಣ್ಯದಿಂದ ಕೋಣಾಜೆಗೆ ಹೋಗಿ ಅಲ್ಲಿಂದ ಪುನಃ ಕಡಬದ ಹತ್ತಿರ ಇರುವ ರೆಂಜಲಾಡಿ ಎಂಬಲ್ಲಿ ಬೀಡುಕಟ್ಟಿ ವಾಸ್ತವಿಸಿದ್ದಾರೆ ಎಂದು ಆ ರೆಂಜಿಲಾಡಿ ಬೀಡಿನ ಶ್ರೀ ರಾಮಯ ಬಲ್ಲಾಳ ಎಂಬವರು ತಾ. ೨೭-೯-೧೯೪೬ರಲ್ಲಿ ದಿವಂಗತ ಶ್ರೀ ನಟ್ಟೋಜಿ ಶಿವರಾಯರಿಗೆ ಬರೆದ ಪತ್ರದಿಂದ ತಿಳಿದು ಬರುತ್ತದೆ. ಆ ರಾಮಯ್ಯ ಬಲ್ಲಾಳನ ಹಿರಿಯರು ಈಗ ಕೆಲವು ವರ್ಷಗಳ ಹಿಂದೆ ಪ್ರತಿ ಚಂಪಾಷಷ್ಠಿ ಉತ್ಸವದ ವೇಳೆ ಬಂದು ಮುಂಚಿನ ರಾಜಮರ್ಯಾದೆಗಳನ್ನು ಸ್ವೀಕರಿಸುತ್ತಿದ್ದರೆಂದು ತಿಳಿದು ಬರುತ್ತದೆ. ಅಲ್ಲದೆ ಆ ರಾಮಯ ಬಲ್ಲಾಳರಲ್ಲಿ ಈಗ ದೇವಸ್ಥಾನದಲ್ಲಿ ಇರುವಂಥ ನವಿಲು ಮುದ್ರೆಯ ಉಂಗುರವು ಈಗಲೂ ಇರುವುದು ದೃಷ್ಟಾಂತವಾಗಿದೆ. ಬಲ್ಲಾಳ ರಾಯನ ಕಟ್ಟುಕತೆಯ ಪೋರ್ಜರಿ ಶಾಸನವನ್ನು ವಿಮರ್ಶಿಸುವಾಗ ಮಾಧ್ವರ ಆಡಳಿತೆ ದೇವಸ್ಥಾನಕ್ಕೆ ಬಂದ ನಂತರ ಆ ಬಲ್ಲಾಳರಿಗೆ ಏನೊ ಅಪಚಾರಗಳು ನಡೆದು ಅವರು ಊರು ಬಿಟ್ಟು ಹೋಗಿರಬಹುದೆಂದು ಊಹಿಸಬೇಕಾಗುತ್ತದೆ.
ಹೊಸೊಳಿಗಮ್ಮ : ಈ ದೇವಸ್ಥಾನದ ಹೊರ ತೆಂಕು ಅಂಗಣದ ದಕ್ಷಿಣ ಭಾಗದಲ್ಲಿ ಹೊಸಳಿಗೆ ಅಮ್ಮನವರ ಗುಡಿಯೊಂದಿದೆ. ಹೊಸಳಿಗೆ ಅಮ್ಮ ಮತ್ತು ಪುರುಷರಾಯ ಎಂಬ ಎರಡು ಇಲ್ಲಿಯ ಪ್ರಧಾನ ದೈವಗಳು. ಇವುಗಳಿಗೆ ತ್ಯ ಪೂಜೆ ವಗೈರೆ ವಿಯೋಗಗಳು ದೈವಳದಿಂದಲೇ ನಡೆಯುತ್ತದೆ. ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಕಳೆದ ಒಡನೆ ಇವುಗಳಿಗೆ ನೇಮ ಕೊಡುವ ವಾಡಿಕೆ ಇದೆ. ಇಲ್ಲಿ ಭಕ್ತಾದಿಗಳು ಕುಂಕುಮಾರ್ಚನೆ ಮಾಡಿಸುತ್ತಾರೆ. ಈ ದೈವಗಳು ಬಹಳ ಅನಾದಿಯಿಂದ ಇದ್ದವುಗಳಾದುದರಿಂದ ಭೂತ ಕಟ್ಟುವವನು ಮೈಮಾಕೆ ಬಂದ ಒಡನೆ ಅನಾದಿ ಆಡಳಿತೆದಾರರಾದ ಹೆಬ್ಬಾರರನ್ನು ಕರೆಯುವ ಪದ್ಧತಿ ಇದೆ.
ಹೆಬ್ಬಾರರು : ಈ ಸುಬ್ರಹ್ಮಣ್ಯ ದೇವಸ್ಥಾನದ ಅನಾದಿ ಮೊಕ್ತೇಸರರು ಹೆಬ್ಬಾರರ ಮನೆತನದವರು. ಇವರು ಸ್ಥಳೀಯ ಸ್ಮಾರ್ತ ಶಿವಬ್ರಾಹ್ಮಣರು ಇವರು ಶೃಂಗೇರಿ ಮಠದ ಶಿಷ್ಯ ವರ್ಗದವರು. ಇವರ ಭಾಷೆ ತುಳು. ಈ ದೇವಸ್ಥಾನದ ಅಡಿ ಸ್ಥಳವು ಸರಕಾರದವರಿಂದ ಪರಂಬೋಕಾಗಿ ವಿಂಗಡಿಸುವ ಮೊದಲು ಹೆಬ್ಬಾರರಿಗೆ ಸೇರಿದ ಮೂಲಿ ನಂಬ್ರ ೩ರಲ್ಲಿ ಇತ್ತು. ಪುತ್ತೂರು ಮಹಾಲಿಂಗೇಶ್ವರ ದೇವರು ನಟ್ಟೋಜಿ ಮನೆತನದ ಮನೆದೇವರಾಗಿಯೂ ಈ ಮೊದಲು ಇದ್ದಂತೆ ಈ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರನು ಹೆಬ್ಬಾರ ಮನೆತನದ ಮನೆದೇವರಾಗಿ ಇದ್ದರೆಂದು ತಿಳಿದುಬರುತ್ತದೆ. ಈ ಹೆಬ್ಬಾರ ಕುಟುಂಬಕ್ಕೆ ಸೂತಕ ವಗೈರೆಗಳು ಬಂದ ಕಾಲದಲ್ಲಿ ದೇವರಿಗೂ ಸಹ ಶುದ್ಧ ಆಗುವ ವರೆಗೆ ಮುಟ್ಟು ಪೂಜೆ ಆಗುವ ಕ್ರಮವೂ ಇತ್ತಂತೆ.
ಇದನ್ನು ಪುಷ್ಟೀಕರಿಸಲು ಈಗಲೂ ದೇವಸ್ಥಾನದಲ್ಲಿ ಮುಖ್ಯಸ್ಥನಾಗಿ ವರ್ತಿಸುವ ಹೆಬ್ಬಾರ ಉದ್ಯೋಗ ಒಂದು ಇರುವುದು ನಾವು ಕಾಣಬಹುದು. ಈ ಹೆಬ್ಬಾರ ಉದ್ಯೋಗಸ್ಥರ ಕರ್ತವ್ಯದ ಪುಸ್ತಕದಲ್ಲಿ ಇವನ ಉದ್ಯೋಗವನ್ನು ಪರಿಶೀಲಿಸಿದರೆ, ಇವನು ಸ್ಥಾಕ ವಶಿಬ್ರಾಹ್ಮಣನಾಗಬೇಕೆಂದೂ ಇವನ ಕೆಲಸವು ಉಷಾಃ ಕಾಲದಿಂದ ಆರಂಭಿಸಿ ರಾತ್ರೆ ಬೀಗ ಮುದ್ರೆ ಆಗುವ ವರೆಗೆ ಇವನ ಹಾಜರಾತಿಯು ಎಲ್ಲಾ ಕರ್ತವ್ಯಗಳಲ್ಲಿ ಇದೆಯೆಂದು ತಿಳಿದುಬರುತ್ತದೆ. ಆದರೆ ಈಗ ಆ ಉದ್ಯೋಗಕ್ಕೆ ಇತರರನ್ನು ನೇಮಿಸುವುದು ದೇವಳದ ಪದ್ಧತಿಗೆ ವಿರೋಧವಾಗಿದೆ. ಈ ದೇವಸ್ಥಾನದಲ್ಲಿ ಹೊಸ್ತಾರೋಗಣೆ (ಹೊಸ ಅಕ್ಕಿ ಊಟ ಮಾಡುವ ದಿವಸ) ದಿವಸ ಮಹಾ ಪೂಜೆಗೆ ಮುಂಚೆ ಶ್ರೀ ಸುಬ್ರಹ್ಮಣ್ಯೇಶ್ವರಗೆ ಅಭಿಷೇಕವಾದ ಪಂಚಾಮೃತ ಅಂದರೆ ಹಾಲು, ಮೊಸರು, ತುಪ್ಪ, ಸಕ್ರೆ, ಜೇನು ಇತ್ಯಾದಿಗಳನ್ನು ಸ್ಥಾಕ ಶಿವಬ್ರಾಹ್ಮಣ ಬ್ರಹ್ಮಚಾರಿಗಳಿಗೆ ದೇವರ ಮಂಟಪದಲ್ಲಿ ಬಡಿಸಿ ಭೋಜನ ಮಾಡಿಸುವ ಕ್ರಮವು ಇರುತ್ತಿತ್ತು. ಈಗ ಅದನ್ನು ಲ್ಲಿಸಿದ್ದಾರೆ. ಇದರಿಂದ ಒಂದು ಕಾಲದಲ್ಲಿ ಈ ದೇವಳವು ಈ ಬ್ರಾಹ್ಮಣರಿಗೆ ಸಂಬಂಧಪಟ್ಟದೆಂದು ಸ್ಪಷ್ಟವಾಗುತ್ತದೆ. ಈಗ ಆ ಚಪ್ಪೆ ಊಟಕ್ಕಾಗಿ ಮಾಡಿದ ಅಕ್ಕಿ, ನೈವೇದ್ಯ ಅನ್ನವನ್ನು ಸ್ಥಾಕ ಸ್ಮಾರ್ತ ಶಿವ ಬ್ರಾಹ್ಮಣರಾದ ಒಳದೇವ ಕಾರ್ಯಸ್ಥ ಈಶ್ವರಪ್ಪಯ್ಯನವರ ಮಗ ಶಿವರಾಯರ ಮನೆಗೆ ಸಲ್ಲಿಸುವುದು ವಾಡಿಕೆಯಾಗಿ ಂತಿದೆ. ಹೇಗಿದ್ದರೂ ೭ ಸೇರಕ್ಕಿ ನೈವೇದ್ಯವು ಸ್ಥಳದ ಸ್ಮಾರ್ತ ಶಿವ ಬ್ರಾಹ್ಮಣರಿಗೇನೆ ಸಲ್ಲುತ್ತದೆ. ಇದೂ ಅಲ್ಲದೆ ಈ ದೇವಳದ ಗರ್ಭಗುಡಿಯ ನಡು ಮಂಟಪಕ್ಕೆ ಸ್ಮಾರ್ತ ಬ್ರಾಹ್ಮಣರ ಪೈಕಿ ಸ್ಥಾಕರಿಗೆ ಮಾತ್ರ ಪ್ರವೇಶಿಸುವ ಪದ್ಧತಿ ಇರುವುದೂ ಇತ್ಯಾದಿ ಸವೇಶಗಳಿಂದ ಕ್ರಮವಾಗಿ ಒಂದು ಕಾಲದಲ್ಲಿ ಇವರೇ ಇಲ್ಲಿಯ ಆಡಳಿತೆ ಮತ್ತು ಅರ್ಚಕರಾಗಿ ಇದ್ದರೆಂದು ಸ್ಪಷ್ಟಪಡಿಸಬಹುದಾಗಿದೆ.
ಔ.S. ಓo. ೨೭ oಜಿ ೧೮೮೬ ವ್ಯಾಜ್ಯದಲ್ಲಿ ಸಾಕ್ಷಿ ಹೇಳಿದ ಕೊಪ್ಪರಿಗೆ ವೆಂಕಟ್ರಮಣ ಭಟ್ಟನ ಹೇಳಿಕೆಯಲ್ಲಿ ದೇವರ ನೈವೇದ್ಯವು ತಯಾರಾದೊಡನೆ ಅಕ್ಷಯ ಪಾತ್ರದ ಪೂಜೆಯಾಗಬೇಕು. ಇದನ್ನು ದೇವಳದ ಮಣೆಗಾರನು ಮಾಡಬೇಕು. ಅದಕ್ಕೆ ನೈವೇದ್ಯವಾ ೧೦ ಸೇರು ಅಕ್ಕಿ ನೈವೇದ್ಯದ ಅನ್ನವು ಹೆಬ್ಬಾರ ಸ್ಮಾರ್ತ ಬ್ರಾಹ್ಮಣರಿಗೆ ಇಕ್ಕುವುದು ಉಳಿದ ಮಹಾಪೂಜೆ ನೈವೇದ್ಯದ ೩೦ ಸೇರು ಅಕ್ಕಿಯ ಅನ್ನವು ಸರ್ವ ಬ್ರಾಹ್ಮಣರ ಸಂತರ್ಪಣೆಗೂ ಸಲ್ಲುತ್ತದೆ. ಇದರಿಂದ ಅಕ್ಷಯಪಾತ್ರಕ್ಕೆ ಸಂಬಂಧಪಟ್ಟ ಅನ್ನ ಸ್ಮಾರ್ತರೂ ಉಣ್ಣುವುದರಿಂದ ಒಂದು ಕಾಲದಲ್ಲಿ ಈ ದೇವಳದಲ್ಲಿ ಸ್ಮಾರ್ತ ಬ್ರಾಹ್ಮಣರಿಗೆ ಮಾತ್ರ ಕ್ಷೇತ್ರದಲ್ಲಿ ಸಂತರ್ಪಣೆ ಮತ್ತು ನಡೆಯುತ್ತಿತ್ತು ಎಂಬುದನ್ನು ತಿಳಿಯಬಹುದಾಗಿದೆ. ಔ.S. ೨೭೯/೧೮೭೬ ಂ ಂಶ್ಪಿ ॒ಂ.S. ಲ್ಥ್ಹ ೫೧೭/೧೮೭೬ gh॒ಠಿ ॒(೨೬&೬&೧೮೭೮), ಔ.S. ನಂಬ್ರ ೧೩೨ oಜಿ ೧೮೭೯ ಮತ್ತು ಔ.S. ನಂಬ್ರ ೨೭ oಜಿ ೧೮೮೬ ಜಜ್ ಮೆಂಟ್ ಮತ್ತು ಅದರ ಸಾಕ್ಷಿಗಳಿಂದಲೂ ಶಕ ೧೩೨೯ನೇ ತಾಮ್ರ ಶಾಸನದಿಂದಲೂ ಈ ದೇವಳ ಆಡಳಿತೆಯು ಸ್ಮಾರ್ತ ಶಿವ ಬ್ರಾಹ್ಮಣರ ಆಡಳಿತೆಯಲ್ಲಿ ಇತ್ತೆಂದು ವ್ಯಕ್ತವಾಗುತ್ತದೆ. ಈ ಹೆಬ್ಬಾರರು ಸಾಧಾರಣ ೧೮೧೭ರ ವರೆಗೆ ಊರಿನವರ ಕೂಡುವಿಕೆಯಿಂದ ಸ್ವತಂತ್ರವಾಗಿ ಆಡಳಿತೆ ನಡೆಸುತ್ತಿದ್ದರೆಂದು ಆಗ ಅಲ್ಲಿ ಇರುತ್ತಿದ್ದವರಿಂದ ತಿಳಿದು ಬರುತ್ತದೆ. ಆಗ ಅಲ್ಲಿ ಹೆಚ್ಚಿನ ಸ್ಥಳವು ಬ್ರಾಹ್ಮಣರಲ್ಲಿ ಸ್ಥಾಕ ಸ್ಮಾರ್ತ ಮತಸ್ಥರಿಗೆ ಮಾತ್ರ ಇತ್ತು ಇತರರೆಂದರೆ ಪರವ, ಕಮ್ಮಾರ ಜಾಡರ ಜಾತಿಯವರಿಗೆ ಸ್ವಲ್ಪ ಸ್ಥಳವು ಇತ್ತು ಎಂದು ೧೨೭೪ನೇ ಫಸಲಿಯ ಅ ರಿಜಿಸ್ತ್ರಿ ದಾಕ್ಲೆಯಿಂದ ತಿಳಿದು ಬರುತ್ತದೆ. ಈ ಹೆಬ್ಬಾರ ಕುಟುಂಬದಲ್ಲಿ ೪ ಮನೆಗಳು ಇದ್ದುವು. ಅವುಗಳಲ್ಲಿ ಮುಖ್ಯವಾಗಿ ದೇವಳದ ಆಡಳಿತೆ ನಡೆಸುತ್ತಿದ್ದವರು ಬೆಟ್ಟುಮುಕ್ಕಿ ಮತ್ತು ಉಬ್ಬಾ ಮನೆಯವರು. ಇವರ ಮನೆತನದವರೇ ಸಾಧಾರಣ ೧೮೭೬ರ ವರೆಗೆ ಊರ ಮೊಕ್ತೇಸರರಾಗಿ ಸ್ವಾಮಿಗಳೊಂದಿಗೆ ಇದ್ದರು. ಆ ಮೇಲೆ ೧೯೧೫ರ ವರೆಗೆ ಹೆಬ್ಬಾರ ಉದ್ಯೋಗವನ್ನು ಮಾಡುತ್ತಿದ್ದರು. ಇವರಲ್ಲಿ ಕಡೆದಾಗಿ ಹೆಬ್ಬಾರ ಉದ್ಯೋಗವನ್ನು ಮಾಡಿದವರು ಬೆಟ್ಟುಮುಕ್ಕಿ ಮನೆಯ ಹೆಬ್ಬಾರ ಸುಬ್ರಾಯ ಎಂಬವರು ಅವರ ನಂತರ ಹೆಬ್ಬಾರ ಉದ್ಯೋಗವು ಇತರ ಮಾಧ್ವರಿಗೆ ಹೋಯಿತು ಎಂದು ತಿಳಿದು ಬರುತ್ತದೆ. ಮೇಲೆ ಹೇಳಿದ ಹೆಬ್ಬಾರ ಸುಬ್ರಾಯರ ತಂಗಿಯನ್ನು ಕಡಬದ ದಿ. ಕೃಷ್ಣಯ್ಯ ಶ್ಯಾನುಭಾಗರಿಗೆ ಮದುವೆ ಆಗಿರುತ್ತದೆ. ಅದರಲ್ಲಿ ಹುಟ್ಟಿದ ಒಂದು ಹುಡುಗಿಯನ್ನು ಕನ್ಯಾನದ ಹತ್ತಿರ ಇರುವ ದೇಲಂತ ಬೆಟ್ಟು ಶ್ರೀವಾಸ ರಾಯರ ಮಗಗೆ ಮದುವೆಯಾಗಿರುತ್ತದೆ ಎಂದು ತಿಳಿದು ಬರುತ್ತದೆ.

ಖಾಸಗಿ ಟಿವಿ ಛಾನೆಲ್‌ಗಳ ವಿರುದ್ಧವೂ ಭಜರಂಗಿಗಳು ತೊಡೆತಟ್ಟಲಿ

Posted by JAYAKIRANA Kirana on | 0 comments | Leave a comment...


ಹಿಂದೂ ಭಾವನೆಗಳನ್ನು ಘಾಸಿಗೊಳಿಸುವ ಟಿವಿ ಚಾನೆಲ್‌ಗಳ ಕಚೇರಿಗೆ ಎಚ್ಚರಿಕೆಯನ್ನು ನೀಡಿ ಎಚ್ಚರಿಕೆಗೆ ಯಾವುದೇ ಬೆಲೆಯನ್ನೂ ನೀಡದೇ ಇದ್ದರೆ ದಾಳಿಯನ್ನು ಸಂಘಟಿಸುವ ಕೆಲಸವನ್ನೂ ಮಾಡಬೇಕಾಗಿದೆ. ಇದರಿಂದ ಇಂತಹಾ ಮಾಧ್ಯಮಗಳು ಹಿಂದೂ ಧರ್ಮದ ನಾಯಕರು ಮತ್ತು ಸಂಘಟನೆಗಳ ವಿರುದ್ಧ ವ್ಯಾಪಕವಾದ ಅಪಪ್ರಚಾರ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೆಲ್ಲಾ ಬೊಬ್ಬೆ ಹೊಡೆಯಬಹುದು. ಆದರೆ ಇವುಗಳು ಮಾಡುವ ಅಪಪ್ರಚಾರ, ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ಮಾಡುವ ಘೋರ ಅಪಮಾನಕ್ಕೆ ಯಾವುದೇ ಬೆಲೆ ಇಲ್ಲವೆ? ಇವುಗಳನ್ನು ಪ್ರತಿಭಟಿಸುವ ಹಕ್ಕು ಹಿಂದುಗಳಿಗೆ ಇದೆ.

ಪ್ರಭಾಕರ. ಕೆ, ಸುರತ್ಕಲ್
ಕಠಾರಿ ವೀರ - ಸುರಸುಂದರಾಂಗಿ ಎಂಬ ಚಲನಚಿತ್ರವನ್ನು ಮಂಗಳೂರಿನಲ್ಲಿ ನಿಷೇಧಿಸಲು ಹಿಂದೂ ಸಂಘಟನೆಗಳು ಕರೆಕೊಟ್ಟಿದ್ದು ಈ ಚಿತ್ರವನ್ನು ಯಾರೂ ನೋಡಬಾರದು. ರಾಜ್ಯಾದ್ಯಂತ ಇದಕ್ಕೆ ಪ್ರತಿಭಟನೆ ಸೂಚಿಸಬೇಕು ಎಂದು ಹೇಳಿರುವುದು ಸ್ವಾಗತಾರ್ಹವಾಗಿದೆ. ದೃಶ್ಯ ಮಾಧ್ಯಮಗಳು ಮತ್ತು ಚಲನ ಚಿತ್ರಗಳಲ್ಲಿ ಹಿಂದೂ ಧರ್ಮದ ದೇವ ದೇವತೆಗಳನ್ನು ವ್ಯಂಗ್ಯವಾಗಿ, ಅಶ್ಲೀಲವಾಗಿ ಪ್ರದರ್ಶಿಸಿ ವಿಕೃತ ಮಾನಸಿಕ ಸುಖವನ್ನು ಪಡೆಯುತ್ತಿರುವ ನಿರ್ದೇಶಕರು, ನಿರ್ಮಾಪಕರು ಈಗೀಗ ಹೇರಳವಾಗಿ ಕಂಡು ಬರುತ್ತಿದ್ದಾರೆ. ಕೆಲವರಿಗೆ ಇಂತಹ ದೃಶ್ಯಗಳನ್ನು ತಮ್ಮ ಚಿತ್ರಗಳಲ್ಲಿ ತೋರಿಸಿದೇ ಇದ್ದರೆ ನಿದ್ದೆಯೇ ಬರುವುದಿಲ್ಲ. ಭಜರಂಗಿಗಳು ಮತ್ತು ಹಿಂದೂ ಸಂಘಟನೆಗಳು ಇಂತಹಾ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಿಗೆ ನುಗ್ಗಿ ವ್ಯಾಪಕವಾಗಿ ಪ್ರತಿಭಟಿಸಲೇ ಬೇಕಾದ ಅನಿವಾರ್ಯತೆಯನ್ನು ಇವರೇ ಸೃಷ್ಟಿಸಿಕೊಂಡಿದ್ದಾರೆ.
ಭಜರಂಗಿ ಎಂಬ ಹೆಸರಿನ ಸಂಘಟನೆ ಇಂತಹದಕ್ಕೇ ಇರುವುದು ಇವರು ಎಲ್ಲೆಲ್ಲೋ ನುಗ್ಗಿ ಮತಮ್ಮ ಕಪಿಚೇಷ್ಠೆಯನ್ನು ಮಾಡುತ್ತಾರೆ ಎಂದು ಕೆಲವರು ಹೇಳಿಕೆಗಳನ್ನು ನೀಡುತ್ತಾ ಇವರು ಒಳ್ಳೆಯ ಕೆಲಸಗಳಲ್ಲಿ ತಮ್ಮನ್ನು ತೊಡಗಿ ಸಿಕೊಳ್ಳಲಿ ಎಂದು ಹೇಳುತ್ತಿರುತ್ತಾರೆ. ದೇವಾನು ದೇವತೆಗಳನ್ನು ಹೀಯಾ ಳಿಸುವುದನ್ನು ತಡೆಯುವುದು ಉತ್ತಮ ಕೆಲಸವೇ ಆಗಿದೆ. ಭಜರಂಗಬಲಿ ಎಂಬ ಹೆಸರು ಪಡೆದ ವೀರಹನುಮಂತನೂ ಕೆಲವು ಕಡೆಗಳಲ್ಲಿ ಕಪಿಚೇಷ್ಠೆಗಳನ್ನು ಪ್ರದರ್ಶಿಸಿ ದುಷ್ಟರ ನಿಗ್ರಹ ಮಾಡಿದ್ದು ರಾಮಾಯಣದ ಕತೆಗಳಲ್ಲಿ ಕಂಡು ಬರುತ್ತದೆ ಆದುದರಿಂದ ಭಜರಂಗಿಗಳು ಈ ಬಗ್ಗೆ ಬರುವ ವಿರೋಧಿ ಹೇಳಿಕೆಗಳಿಗೆ ಯಾವುದೇ ಬೆಲೆ ಕೊಡಬೇಕಾದ ಅವಶ್ಯಕತೆ ಇರುವುದಿಲ್ಲ.
ಟಿವಿ ಮಾಧ್ಯಮಗಳಲ್ಲಿ ಹಿಂದುಗಳ ಆಚಾರ ವಿಚಾರ, ದೇವತೆಗಳನ್ನು ವ್ಯಾಪಕವಾಗಿ ಹೀಗಳೆಯಲಾಗುತ್ತದೆ. ಹರಿಕಥೆ, ಭಜನೆ, ಸುಪ್ರಭಾತ ಇತ್ಯಾದಿಗಳನ್ನು ಗೇಲಿ ಮಾಡಿ ಜಾಹೀರಾತುಗಳಲ್ಲಿ ಪ್ರದರ್ಶಿಸಲಾಗುತ್ತದೆ. ‘ಹರೇ ರಾಮಾ ಹರೇ ಕೃಷ್ಣ’ ಎಂಬ ಭಜನೆಯನ್ನು ಸ್ಪೈಸಿಯಾಗಿ ತೋರಿಸುವ ದುಸ್ಸಾಹಸದ ಜಾಹೀರಾತು ಪ್ರದರ್ಶನವಾಗುವುದನ್ನು ತಡೆಯಬೇಕು. ಮನೆಯಲ್ಲಿ ನಡೆಯುವ ಹವನವೊಂದಕ್ಕೆ ಹವಿಸ್ಸು ಕೊಡುವಾಗ ಕೈಗೆ ಬೆಂಕಿಯ ಶಾಖ ತಗಲುತ್ತದೆ ಎಂದು ವಯರೊಂದನ್ನು ಮಡಚಿ ಹವಿಸ್ಸು ನೀಡುವುದನ್ನು ತೋರಿಸಿ ಹೋಮ ಹವನಕ್ಕೆ ಅಪಚಾರವಾಗುವಂತೆ ತೋರಿಸಲಾಗುತ್ತದೆ. ಇಂತಹಾ ಹಲವಾರು ಜಾಹೀರಾತುಗಳು ಟಿವಿಗಳಲ್ಲಿ ಪ್ರದರ್ಶನವಾಗುತ್ತಿದೆ.
ಈ ರೀತಿಯಾಗಿ ಹಿಂದು ದೇವ ದೇವತೆಗಳನ್ನು, ಆಚಾರ ವಿಚಾರಗಳನ್ನು ಗೇಲಿ ಮಾಡುವ ಕಂಪೆನಿಗಳ ಉತ್ಪಾದನೆಗಳನ್ನು ಹಿಂದುಗಳು ಸ್ವಪ್ರೇರಣೆಯಿಂದ ನಿಷೇಧಿಸಬೇಕು. ಈ ಕಂಪೆನಿಗಳಿಗೆ ಎಚ್ಚರಿಕೆ ನೀಡಿ ಇಂತಹಾ ಜಾಹೀರಾತು ನಿಲ್ಲಿಸಿ ಎಂದು ಹೇಳಬೇಕು. ನಿಗದಿಪಡಿಸಿದ ದಿನದಂದು ಈ ಜಾಹೀರಾತನ್ನು ನಿಲ್ಲಿಸದೇ ಇದ್ದಲ್ಲಿ ಆ ಉತ್ಪಾದನೆಗಳು ಮಾರಾಟವಾಗುವ ಅಂಗಡಿಗಳಿಗೆ ನುಗ್ಗಿ ಆ ಕಂಪೆನಿಯ ವಸ್ತುಗಳನ್ನು ಹೊರಗೆಸೆದು ಬೆಂಕಿ ಹಚ್ಚಿ ಸುಡುವ ಕ್ರಮಕ್ಕೂ ಮುಂದಾಗಬೇಕು. ಎಚ್ಚರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಹಿಂದುಗಳ ಭಾವನೆಗಳಿಗೆ ಯಾವುದೇ ಬೆಲೆ ನೀಡದೇ ಇದ್ದರೆ. ಹಿಂದುಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸುವುದಕ್ಕಾಗಿ ‘ನೈತಿಕ ಪೊಲೀಸ್‌ಗಿರಿ’ಯನ್ನು ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ.
ಈ ಹಿಂದೆ ಪಟಾಕಿ ಮುಂತಾದ ಕೆಲವು ವಸ್ತುಗಳ ಪೊಟ್ಟಣಗಳಲ್ಲಿ ಹಿಂದು ದೇವತೆಗಳ ಚಿತ್ರವನ್ನು ಪ್ರದರ್ಶಿಸುವ ಕಂಪೆನಿಗಳನ್ನು ಹಿಂದೂ ಹಿತಾಸಕ್ತ ಸಂಘಟನೆಯೊಂದು ಸಂಪರ್ಕಿಸಿ ಅಂತಹ ಚಿತ್ರಗಳನ್ನು ತೆಗೆದು ಹಾಕಬೇಕೆಂದು ವಿನಂತಿ ಮಾಡಿ ಯಶಸ್ವಿಯಾದ ಉದಾಹರಣೆಗಳು ಇವೆ. ಇಂತಹಾ ಕ್ರಮಗಳನ್ನು ಟಿವಿಯಲ್ಲಿ ಬರುವ ಜಾಹೀರಾತು ಮತ್ತು ಚಲನ ಚಿತ್ರಗಳಲ್ಲಿ ಮಾಡಲಾಗುವ ಹಿಂದೂ ದೇವ ದೇವತೆಗಳ ಅವಹೇಳನದ ವಿರುದ್ಧವೂ ಮಾಡಬೇಕು. ಈ ಮನವಿಗೆ ಬೆಲೆ ಕೊಡದೇ ಇದ್ದಲ್ಲಿ ಸಾರ್ವಜನಿಕವಾಗಿ ಬೀದಿಗಿಳಿದು ಪ್ರತಿಭಟಿಸಬೇಕು.
ಕೆಲವು ಖಾಸಗಿ ಟಿವಿ ಛಾನೆಲ್‌ಗಳಿಗೂ ಹಿಂದೂ ದೇವತೆಗಳಾದ ಗಣಪತಿ, ನಾರದ, ಕೃಷ್ಣ, ವಿಷ್ಣು, ಯಮ, ದೇವೇಂದ್ರ, ಈಶ್ವರ ಇವೆಲ್ಲಾ ಗೇಲಿಯ ವಸ್ತುಗಳಾಗಿವೆ. ಭಜನೆ, ಹರಿಕಥೆ, ಸುಪ್ರಭಾತ ಮೂಲಕ ಕೆಟ್ಟ ರಾಗ ತೆಗೆದು ಅವಹೇಳನ ಮಾಡುವ ಕೆಟ್ಟಪದ್ಧತಿಯನ್ನು ಅನುಸರಿಸುತ್ತಿದೆ. ಇವರಿಗೆ ಬೇರೆ ಯಾವುದಾದರೂ ಧರ್ಮದ ದೇವರು, ದೇವ ಮಾನವರನ್ನು ಅವಹೇಳನ ಮಾಡುವ ಧೈರ್ಯ ಇವರಿಗೆ ಇರುವುದಿಲ್ಲ. ಮಾಡಿದರೆ ಇವರಿಗೆ ಬದುಕುವುದಕ್ಕೂ ಕಷ್ಟವಾಗಬಹುದು. ಇತರ ಧರ್ಮದವರು ಇವರ ಟಿವಿ ಛಾನೆಲ್‌ಗಳನ್ನು ವೀಕ್ಷಿಸುವುದೂ ಇಲ್ಲ. ಹಾಗಿದ್ದು ಹಿಂದೂ ಧರ್ಮದ ಅವಹೇಳನ, ದೇವತೆಗಳ ನಿಂದನೆ, ವ್ಯಂಗ್ಯ ಮಾಡುವುದರಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ವೀಕ್ಷಕರಿಗೆ ಇದನ್ನು ಕಂಡು ಜಿಗುಪ್ಸೆ ಉಂಟಾದರೂ ಟಿವಿ ಛಾನೆಲ್‌ಗಳಿಗೆ ಬುದ್ದಿ ಬರುವುದಿಲ್ಲ.
ಪೇಜಾವರ ಶ್ರೀಗಳು, ಪ್ರಮೋದ್ ಮುತಾಲಿಕ್ ಎಂ.ಬಿ. ಪುರಾಣಿಕ್, ಭಜರಂಗದಳ, ಜನಜಾಗೃತಿ ಸಮಿತಿ ಮತ್ತಿತರ ಹಿಂದೂ ಸಂಘಟನೆಗಳು ಹಿಂದೂ ಭಾವನೆಗಳನ್ನು ಘಾಸಿಗೊಳಿಸುವ ಟಿವಿ ಚಾನೆಲ್‌ಗಳ ಕಚೇರಿಗೆ ಎಚ್ಚರಿಕೆಯನ್ನು ನೀಡಿ ಎಚ್ಚರಿಕೆಗೆ ಯಾವುದೇ ಬೆಲೆಯನ್ನೂ ನೀಡದೇ ಇದ್ದರೆ ದಾಳಿಯನ್ನು ಸಂಘಟಿಸುವ ಕೆಲಸವನ್ನೂ ಮಾಡಬೇಕಾಗಿದೆ. ಇದರಿಂದ ಇಂತಹಾ ಮಾಧ್ಯಮಗಳು ಹಿಂದೂ ಧರ್ಮದ ನಾಯಕರು ಮತ್ತು ಸಂಘಟನೆಗಳ ವಿರುದ್ಧ ವ್ಯಾಪಕವಾದ ಅಪಪ್ರಚಾರ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೆಲ್ಲಾ ಬೊಬ್ಬೆ ಹೊಡೆಯಬಹುದು. ಆದರೆ ಇವುಗಳು ಮಾಡುವ ಅಪಪ್ರಚಾರ, ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ಮಾಡುವ ಘೋರ ಅಪ ಮಾನಕ್ಕೆ ಯಾವುದೇ ಬೆಲೆ ಇಲ್ಲವೆ? ಇವುಗಳನ್ನು ಪ್ರತಿಭಟಿಸುವ ಹಕ್ಕು ಹಿಂದುಗಳಿಗೆ ಇದೆ.
ಖಾಸಗಿ ಟಿವಿ ಛಾನೆಲ್‌ಗಳು ತಮಗೆ ದೊರೆತ ಸ್ವಾತಂತ್ರ್ಯವನ್ನು ದುರುಪ ಯೋಗಪಡಿಸಿಕೊಂಡು ಜನರ ಮನಸ್ಸನ್ನು ಕೆಡಿಸುವ ದುರಾಚಾರದ ಕೆಲಸಕ್ಕೆ ಕೊನೆ ನೀಡುವವರಾದರೂ ಯಾರು? ಆದುದರಿಂದ ‘ಕಠಾರಿ ವೀರ, ಸುರಸುಂದರಾಂಗಿ’ ಎಂಬ ಚಿತ್ರವನ್ನು ವ್ಯಾಪಕವಾಗಿ ನಿಷೇಧಿಸಲು ಕರೆ ಕೊಟ್ಟಂತೆ ಹಿಂದೂ ಭಾವನೆಗಳನ್ನು ಘಾಸಿಗೊಳಿಸುವ ಟಿವಿ ಛಾನೆಲ್‌ಗಳ ವಿರುದ್ಧವೂ ವ್ಯವಸ್ಥಿತವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಹಿಂದೂ ಸಂಘಟನೆಗಳು ಈ ಕಡೆ ಗಮನಹರಿಸಲಿ.

ಜನನಾಂಗ ನಿಮಿರುವಿಕೆ ಸಮಸ್ಯೆಗೆ ವಯಾಗ್ರಾ ಪರಿಹಾರ ನೀಡುವುದೇ?

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೪೫ ವರ್ಷ ವಯಸ್ಸು. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಮದುವೆಯಾಗಿ ಹತ್ತು ವರ್ಷ ಕಳೆಯಿತು. ನನ್ನಾಕೆಗೂ-ನನಗೂ ಲೈಂಗಿಕ ಕ್ರಿಯೆಯಲ್ಲಿ ಸಮಾನ ಆಸಕ್ತಿಯಿದೆ. ಆಕೆಗೆ ಈಗ ೩೮ ವರ್ಷ ವಯಸ್ಸು. ನಾವು ವಾರಕ್ಕೊಮ್ಮೆ ಸೆಕ್ಸ್ ನಡೆಸುತ್ತೇವೆ. ಇದರಿಂದ ನನಗೆ ಸುಖ ಸಿಕ್ಕಿದರೂ ನನ್ನಾಕೆಗೆ ತೃಪ್ತಿ ಸಿಗುತ್ತಿಲ್ಲ. ಕಾರಣ, ನನಗೆ ಬೇಗನೆ ಲಿಂಗ ಉದ್ರೇಕಗೊಳ್ಳುವುದಿಲ್ಲ. ಬಹಳ ಹೊತ್ತು ಉದ್ರೇಕಿಸಿದ ನಂತರ ಮೈಥುನ ಕ್ರಿಯೆ ಸಾಧ್ಯವಾದರೂ ಬೇಗನೆ ಸ್ಖಲಿಸುತ್ತೇನೆ. ನಾನು ಗುಪ್ತ ಸಮಾಲೋಚನೆ ಅಂಕಣವನ್ನು ಕಳೆದ ಹಲವು ವರ್ಷಗಳಿಂದ ಓದುತ್ತಿದ್ದೇನೆ. ಓದುಗರ ಸಮಸ್ಯೆಗೆ ತುಂಬಾ ಚೆನ್ನಾಗಿ ಸ್ಪಂದಿಸುತ್ತಿದ್ದೀರಿ. ನಾನು ನನ್ನ ದಾಂಪತ್ಯ ಜೀವನದ ಬಗ್ಗೆ ಕೆಲವೊಂದು ಸಂಶಯ ಹೊಂದಿದ್ದೇನೆ. ಅದನ್ನು ಪರಿಹರಿಸಬೇಕಾಗಿ ವಿನಂತಿ.
೧) ನಾನು ವಯಾಗ್ರಾ ಗುಳಿಗೆ ಯಾವಾಗ ತೆಗೆದುಕೊಳ್ಳಬೇಕು?
೨) ಇದನ್ನು ದಿನಕ್ಕೆ ಎಷ್ಟು ಸಾರಿ ತೆಗೆದುಕೊಳ್ಳಬೇಕು?
೩) ವಯಾಗ್ರಾ ಸೇವಿಸುವುದರಿಂದ ಯಾವುದಾದರೂ ದುಷ್ಪರಿಣಾಮಗಳಿವೆಯೇ? ಮತ್ತು ಇದನ್ನು ತೆಗೆದುಕೊಂಡಲ್ಲಿ ಜನನಾಂಗದ ಉದ್ದ ಹೆಚ್ಚುತ್ತದೆಯೇ? ವಯಾಗ್ರವನ್ನು ಸೆಕ್ಸ್ ಮಾಡುವ ಎಷ್ಟು ಗಂಟೆಯ ಮೊದಲು ತೆಗೆದುಕೊಳ್ಳಬೇಕು? ನನ್ನ ಈ ಸಮಸ್ಯೆಗೆ ಸೂಕ್ತ ಸಲಹೆಯನ್ನು ನೀಡಬೇಕಾಗಿ ವಿನಂತಿ.
ಸಲಹೆ: ನೀವು ವಯಾಗ್ರಾ ಗುಳಿಗೆಗಳ ಬಗ್ಗೆ ಮಾಹಿತಿಯನ್ನು ಕೇಳಿದ್ದೀರಿ. ಸಾಮಾನ್ಯವಾಗಿ ಹೇಳುವುದಾದರೆ ಮೆಡಿಕಲ್ ಶಾಪ್‌ಗಳಲ್ಲಿ ಲಭ್ಯವಿರುವ ವಯಾಗ್ರಾದಂತಹ ಮಾತ್ರೆಗಳನ್ನು ವೈದ್ಯರ ಸೂಕ್ತ ಸಲಹೆ, ಸೂಚನೆ ಇಲ್ಲದೆ ತೆಗೆದುಕೊಳ್ಳುವುದು ಅಪಾಯ ಕೂಡಾ ಹೌದು. ಆದ್ದರಿಂದ ಪ್ರಾರಂಭದಲ್ಲೇ ಕುಟುಂಬ ವೈದ್ಯರನ್ನು ಭೇಟಿ ಮಾಡಿ ಇದರ ಸಾಧಕ ಮತ್ತು ಭಾದಕಗಳ ಬಗ್ಗೆ ತಿಳಿಯುವುದೊಳಿತು. ನೀವು ಈ ಮಾತ್ರೆಯನ್ನು ಸೇವಿಸುವುದಾದಲ್ಲಿ ಮೊದಲು ದಿನಕ್ಕೆ ೨೫ ಮಿ.ಗ್ರಾಂ.ನಂತೆ ಶುರು ಮಾಡಬೇಕು. ಇದನ್ನು ಆಹಾರ ಸೇವಿಸುವ ಮೊದಲು ಅಥವಾ ನಂತರ ಸೆಕ್ಸ್‌ಗೆ ಒಂದು ಗಂಟೆಯ ಮುನ್ನ ತೆಗೆದುಕೊಳ್ಳಬೇಕು. ಇಲ್ಲಿ ಗಮನಾರ್ಹ ಅಂಶವೆಂದರೆ ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ ಒಮ್ಮೆ ಮಾತ್ರ ಈ ಗುಳಿಗೆಯನ್ನು ತೆಗೆದುಕೊಳ್ಳಬಹುದು. ೨೫ ಮಿ.ಗ್ರಾಂ.ನಿಂದ ಉಪಯೋಗ ಆಗದೇ ಇದ್ದಲ್ಲಿ ೫೦ ಮಿ.ಗ್ರಾಂ. ಹಾಗೂ ೧೦೦ಮಿ.ಗ್ರಾಂ.ವರೆಗೆ ತೆಗೆದುಕೊಳ್ಳಬಹುದಾಗಿದೆ. ಇದನ್ನು ತೆಗೆದುಕೊಳ್ಳುತ್ತಿರುವ ಸಮಯದಲ್ಲಿ ಮದ್ಯ ಅಥವಾ ಇನ್ನಿತರ ಅಮಲು ಪದಾರ್ಥ ಸೇವನೆಯಿಂದ ಸಂಪೂರ್ಣ ದೂರವಿರಬೇಕು. ಹೃದಯ ಸಂಬಂಧಿ ಖಾಯಿಲೆ, ರಕ್ತದೊತ್ತಡದಂತಹ ಖಾಯಿಲೆಗಳು ಇದ್ದಲ್ಲಿ ವೈದ್ಯರಲ್ಲಿ ಪರೀಕ್ಷಿಸಿಯೇ ಮಾತ್ರೆಗಳನ್ನು ಸೇವಿಸುವುದು ಒಳಿತು. ಇಲ್ಲವಾದಲ್ಲಿ ಪ್ರಾಣಕ್ಕೆ ಹಾನಿ ಸಂಭವಿಸುವ ಸಾಧ್ಯತೆಯೂ ಇರುತ್ತದೆ. ತಲೆನೋವು, ಕಣ್ಣುಕತ್ತಲೆ ಬರುವುದು, ವಾಂತಿ, ಹೃದಯಾಘಾತ, ಲಕ್ವ, ಸುಸ್ತು ಹಾಗೂ ಕಣ್ಣು ಕೆಂಪಗಾಗುವುದು ಮುಂತಾದ ದುಷ್ಪರಿಣಾಮಗಳನ್ನು ಈ ಮಾತ್ರೆ ಬೀರುವ ಸಾಧ್ಯತೆಯೂ ಇರುತ್ತದೆ. ಇದು ಉದ್ರೇಕದ ಸಮಸ್ಯೆ ಇರುವ ಎಲ್ಲರಿಗೂ ಪ್ರಯೋಜನಕ್ಕೆ ಬರುತ್ತದೆ ಎನ್ನಲಾಗದು. ವೈದ್ಯರ ಅನುಮತಿ ಇಲ್ಲದೆ ತೆಗೆದುಕೊಳ್ಳುವುದು ಆರೋಗ್ಯ, ಪ್ರಾಣಕ್ಕೆ ಹಾನಿಕರವೂ ಆಗಲಿದೆ. ಇನ್ನೊಂದು ಮಾತು ನೆನಪಿಟ್ಟುಕೊಳ್ಳಿ, ವಯಾಗ್ರಾವನ್ನು ಜನನಾಂಗ ನಿಮಿರುವಿಕೆಗೆ ಮಾತ್ರ ಉಪಯೋಗಿಸುತ್ತಾರೆಯೇ ಹೊರತು ಜನನಾಂಗ ಗಾತ್ರವನ್ನು ಹಿಗ್ಗಿಸಲು ಅಥವಾ ಕುಗ್ಗಿಸಲು ಸಾಧ್ಯವಿಲ್ಲ. ಈ ಬಗ್ಗೆ ನಿಮಗೆ ಯಾರೋ ತಪ್ಪು ಮಾಹಿತಿ ಕೊಟ್ಟಿರುವ ಸಾಧ್ಯತೆಯಿದೆ. ಆದ್ದರಿಂದ ವಯಾಗ್ರ ಮಾತ್ರೆಯ ಸಂಪೂರ್ಣ ಬಳಕೆಯ ಬಗ್ಗೆ ಪರಾಮರ್ಶೆ ನಡೆಸಿ, ಆನಂತರವೇ ಬಳಸುವುದೊಳಿತು. ನಿಮ್ಮ ಸಮಸ್ಯೆಯ ಬಗ್ಗೆ ಕುಟುಂಬ ವೈದ್ಯರನ್ನು ಕಂಡು ಸಲಹೆ ಪಡೆಯಿರಿ.

15-05-2012

Posted by JAYAKIRANA Kirana on | 0 comments | Leave a comment...

ಮೇಷ : ಮಾನಸಿಕ ನೆಮ್ಮದಿ ಇರುವುದಿಲ್ಲ.
ವೃಷಭ : ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ.
ಮಿಥುನ : ಬಹಳ ತಾಳ್ಮೆಯಿಂದ ಕೆಲಸಗಳನ್ನು ಮಾಡಿರಿ.
ಕರ್ಕಾಟಕ : ವಿವಿಧ ಮೂಲಗಳಿಂದ ಹಣಕಾಸಿನ ಲಾಭ ಇದೆ.
ಸಿಂಹ : ಸರಕಾರಿ ನೌಕರರಿಗೆ ಹಲವು ಸಮಸ್ಯೆಗಳು ಎದುರಾಗುತ್ತದೆ.
ಕನ್ಯಾ : ಉದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ.
ತುಲಾ : ಮನೆ ನಿರ್ಮಾಣದ ಕೆಲಸ ಪ್ರಗತಿಯಲ್ಲಿರುತ್ತದೆ.
ವೃಶ್ಚಿಕ : ಆಸ್ತಿ ಖರೀದಿಗೆ ಸರಿಯಾದ ಸಮಯ.
ಧನು : ಹಿರಿಯರಿಗೆ ಅನಾರೋಗ್ಯ ಇರುತ್ತದೆ.
ಮಕರ : ನಿರೀಕ್ಷೆ ಮಾಡಿದ ಕೆಲಸಗಳು ವಿಳಂಬವಾಗುತ್ತದೆ.
ಕುಂಭ : ಉದ್ಯೋಗದಲ್ಲಿ ನೆಮ್ಮದಿ ಇರುತ್ತದೆ.
ಮೀನ : ಮನೆಯಲ್ಲಿ ಶುಭ ಕೆಲಸಗಳನ್ನು ನಡೆಸುತ್ತೀರಿ.

15-05-2012

Posted by JAYAKIRANA Kirana on | 0 comments | Leave a comment...

ಮಂಗಳೂರು : ಡ್ರೈವರ್ ಬೇಕು ೯೪೪೮೯೫೨೯೦೩.
ಎಂ.ಜಿ.ರಸ್ತೆ: ಕೆಲಸಕ್ಕೆ ಪಿಯುಸಿ ಆದವರು ಬೇಕು ೯೭೪೩೩೯೦೭೯೭.
ಬಜಪೆ : ಪ್ಲೈವುಡ್ ಶಾಪಿಗೆ ಸೇಲ್ಸ್‌ಗೆ ಜನ ಬೇಕು ೯೯೦೦೫೨೦೮೦೮.
ಬಜಪೆ : ಎಲೆಕ್ಟ್ರಿಶಿಯನ್ ಮತ್ತು ಹೆಲ್ಪರ್ ಬೇಕು ೯೩೪೧೦೨೬೯೩೯.
ಮಂಗಳೂರು : ಕೆಲಸಕ್ಕೆ ಜನ ಬೇಕು ೯೪೪೯೭೨೩೧೩೩.
ಪಂಪ್‌ವೆಲ್: ಮನೆಕೆಲಸಕ್ಕೆ ಮಹಿಳೆ ಬೇಕು ೯೯೪೫೭೦೪೦೪೨.
ಕುಂಟಿಕಾನ : ಹೋಂ ಪ್ರೋಡಕ್ಟ್‌ಗೆ ಜನ ಬೇಕು ೯೪೮೦೧೧೭೮೫೪.
ಮಂಗಳೂರು : ಸ್ಟೇಷನರಿ ಶಾಪ್‌ಗೆ ಪಾರ್ಟ್ ಟೈಮ್ ಸೇಲ್ಸ್‌ಮೆನ್ ಬೇಕು ೯೮೮೦೦೬೧೬೫೦.
ಮಂಗಳೂರು : ಆಫೀಸೊಂದಕ್ಕೆ ಮಾರ್ಕೆ ಟಿಂಗ್ ಎಕ್ಸಿಕ್ಯೂಟಿವ್ ಬೇಕು ೯೯೪೫೬೬೯೧೨೮.
ಮಂಗಳೂರು : ಸೇಲ್ಸ್ ಎಕ್ಸಿಕ್ಯೂಟಿವ್ ಬೇಕು ೭೭೬೦೪೭೧೦೬೪.
ಮುಡಿಪು ಬಳಿ ಸಸ್ಯಾಹಾರಿ ಹೊಟೇಲಿಗೆ ವೇಟರ್, ಕ್ಲೀನರ್ ಬೇಕು ೦೯೪೪೬೧೬೯೮೮೪.
ಹೊಟೇಲ್‌ಗೆ ಎಲ್ಲಾ ತರದ ಅಡುಗೆಯ ವರು ಬೇಕಾಗಿದ್ದಾರೆ. ೯೯೦೧೯೫೦೧೦೯
ಮಂಗಳೂರು : ಪೂನಾಕ್ಕೆ ಮನೆ ಕೆಲಸಕ್ಕೆ ಮಹಿಳೆ ಬೇಕು. ೦೯೯೬೦೦೫೩೧೪೧.
ಕಂಕನಾಡಿ : ಆಪ್ಟಿಕಲ್ ಶಾಪ್‌ಗೆ ಯುವತಿ ಬೇಕು ೯೦೩೬೬೦೩೧೨೯.
ಮಂಗಳೂರು : ಕೊಂಚಾಡಿಗೆ ಸೈಬರ್ ವೊಂದಕ್ಕೆ ಜನ ಬೇಕು ೯೦೦೮೧೨೨೮೨೯.
ಮಂಗಳೂರು : ಕಾಲ್ ಸೆಂಟರ್‌ಗೆ ಹೌಸ್ ಕೀಪರ್ ಬೇಕು ೯೯೧೬೧೧೯೪೬೯.
ಮಂಗಳೂರು : ಸುರತ್ಕಲ್ - ಬೈಕಂಪಾಡಿಗೆ ಕೊರಿಯರ್ ಏಜೆನ್ಸಿ ಬೇಕು ೯೮೪೫೮೦೬೪೮೦.
ಕಾವೂರು : ಹೊಟೇಲ್‌ಗೆ ಕುಕ್ & ಸಪ್ಲಾಯರ್ ಬೇಕು ೯೮೮೦೭೨೫೪೨೨.
ಮಂಗಳೂರು : ಹೊಟೇಲ್‌ಗೆ ಕಿಚನ್ ಹೆಲ್ಪರ್ ಬೇಕು ೯೪೪೮೩೮೩೭೦೫.
ಮಂಗಳೂರು : ಸ್ಟಾಕ್, ಸೇಲ್ಸ್ ಮೇಲ್ವಿ ಚಾರಣೆಗೆ ಮಹಿಳಾ ಕ್ಲರ್ಕ್, ಮಾರ್ಕೆಟಿಂಗ್‌ಗೆ ಯುವಕರು ಬೇಕು ೯೮೪೫೩೫೩೭೮೯.
ಪುತ್ತೂರು : ದ್ವಿಚಕ್ರವಾಹನ ಶೋರೂಮ್‌ಗೆ ಸೇಲ್ಸ್‌ಮ್ಯಾನ್ ಬೇಕು ೮೭೪೮೯೭೦೨೮೬.
ಮಂಗಳೂರು: ಬೇಕರಿ ಮತ್ತು ಜ್ಯೂಸ್ ಅಂಗಡಿಗೆ ಜನ ಬೇಕು ೯೮೪೪೫೨೧೭೪೩.
ಮಂಗಳೂರು : ಒಪ್ಟಿಕಲ್ ಶಾಪಿಗೆ ಯುವತಿ ಬೇಕು ೯೦೩೬೬೨೧೦೭೯.
ಮಂಗಳೂರು: ಸ್ಕ್ರೀನ್‌ಪ್ರಿಂಟಿಂಗ್‌ಗೆ ಜನ ಬೇಕು ೭೭೬೦೬೩೧೪೫೭.
ಮಂಗಳೂರು: ಗ್ರಾಫಿಕ್ಸ್‌ಗೆ ಯುವತಿಯರು ಬೇಕು ೯೦೩೬೪೮೯೦೪೦.
ತೊಕ್ಕೊಟ್ಟು : ಕಚೇರಿ ಕೆಲಸಕ್ಕೆ ಪಿಯುಸಿ ಯಾದ ಯುವತಿ ೭೭೯೫೧೬೯೭೮೭.
ಮಂಗಳೂರು : ಸೇಲ್ಸ್‌ಮ್ಯಾನ್ ಮತ್ತು ಎಕ್ಸಿ ಕ್ಯೂಟಿವ್ ಬೇಕು ೭೨೫೯೩೫೪೮೮೪
ಮಂಗಳೂರು : ಏಜೆನ್ಸಿಯೊಂದಕ್ಕೆ ಸೇಲ್ಸ್‌ಗೆ ಯುವತಿಯರು ಬೇಕು ೨೪೪೩೫೭೬.

‘ಕಠಾರಿವೀರ’ ಪ್ರತಿಭಟನೆ ಸರಿಯೇ?

Posted by JAYAKIRANA Kirana on | 0 comments | Leave a comment...

ರಿಯಲ್‌ಸ್ಟಾರ್ ಉಪೇಂದ್ರ ಅಭಿನಯದ ‘ಕಠಾರಿವೀರ ಸುರಸುಂದರಾಂಗಿ’ ಸಿನಿಮಾ ಬಿಡುಗಡೆ ಕಂಡ ಮರುದಿನ ಬಜರಂಗದಳ, ವಿಹಿಂಪ ಹಿಂದೂ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟಿಸಿ ಪ್ರದರ್ಶನಕ್ಕೆ ತಡೆಯೊಡ್ಡಿರುವುದು ಖಂಡನೀಯ. ಯಾಕೆಂದರೆ ದೇವರಿಗೆ ಸಿನಿಮಾ, ಧಾರಾವಾಹಿಗಳಲ್ಲಿ ಅವಮಾನವಾಗುವುದು ಇದೇ ಮೊದಲಲ್ಲ. ಈ ಹಿಂದೆ ಅದೆಷ್ಟೋ ಸಿನಿಮಾಗಳಲ್ಲಿ ದೇವರ ಪಾತ್ರಧಾರಿಗಳು ಬೇಕಾಬಿಟ್ಟಿ ವರ್ತಿಸಿದ್ದಾರೆ. ಈ ವೇಳೆ ಹಿಂದೂ ಸಂಘಟನೆಗಳು ಎಲ್ಲಿದ್ದವು? ಕನ್ನಡದ ಹಲೋ ಯಮ, ಪ್ರೀತಿ ಯಾಕೆ ಭೂಮಿ ಮೇಲಿದೆ, ಯಮಲೋಕದಲ್ಲಿ ವೀರಪ್ಪನ್, ಸಂಜು ವೆಡ್ಸ್ ಗೀತಾ ಇತ್ಯಾದಿ ಸಾಲು-ಸಾಲು ಚಿತ್ರಗಳ ದೃಶ್ಯ ಮತ್ತು ಹಾಡಿನ ಸನ್ನಿವೇಶದಲ್ಲಿ ಹಿಂದೂ ದೇವ-ದೇವತೆಯ ಮಾನ ಹರಾಜು ಹಾಕಲಾಗಿದೆ. ಇದನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ನೋಡಿ ಆನಂದ ಪಟ್ಟಿಲ್ಲವೇ? ಆಗ ಬಾರದೇ ಇದ್ದ ಆಲೋಚನೆ ಈಗ ಯಾಕೆ ಬಂತು? ಉಡುಪಿಯ ಪರ್ಯಾಯ ಶ್ರೀಗಳು ಸಂಘಟನೆಗಳ ನೇತೃತ್ವ ವಹಿಸಿ ಹೋರಾಟಕ್ಕೆ ಮುಂದಾಗಿರುವುದು ಸರಿಯೆನಿಸದು. ಯಾಕೆಂದರೆ ಉಡುಪಿಯಲ್ಲಿ ಹಿಂದೂ ಸಂಸ್ಕೃತಿಗೆ ಧಕ್ಕೆ ತರುವಂಥ ಅನೇಕ ಕಾರ್ಯಗಳು ನಿತ್ಯ ನಡೆಯುತ್ತಿವೆ. ಈ ಬಗ್ಗೆ ಯತಿವರ್ಯರು ಯಾವುದೇ ಕ್ರಮ ಜರುಗಿಸುತ್ತಿಲ್ಲ ಯಾಕೆ? ಹಿಂದೂ ಸಂಸ್ಕೃತಿಯ ವಿನಾಶ ಎಂದು ಸಿನಿಮಾ ತಡೆದರೆ ಸಾಲದು. ಉಡುಪಿಯ ಬೀದಿಗಳಲ್ಲಿ ವೇಶ್ಯೆಯರು, ಬಾಲ ಭಿಕ್ಷುಕರು ತುಂಬಿಕೊಂಡಿದ್ದಾರೆ. ಇದೂ ಸಂಸ್ಕೃತಿಯ ಅಧ:ಪತನದ ಸಂಕೇತ. ಇದನ್ನು ತಡೆಯಲು ಶ್ರೀಗಳು ಮುಂದಾಗುವರೇ?
ಸುಚಿತ್ ನಾರಾಯಣ್, ಉಡುಪಿ

ಸರಕಾರ ವಿಸರ್ಜಿಸಿ ಚುನಾವಣೆ ಎದುರಿಸಲಿ
ರಾಜ್ಯದ ಜನತೆ ಇಷ್ಟರವರೆಗೆ ಕಂಡಿರದ ರಾಜಕೀಯ ವಿದ್ಯಮಾನ ಗಳು ಬಿಜೆಪಿ ಸರಕಾರದ ಆಡಳಿತ ಅವಧಿಯಲ್ಲಿ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೂಹಗರಣದ ಸುಳಿಯಿಂದ ಮುಕ್ತರಾಗದೆ ಸಿಬಿಐ ತನಿಖೆ ಎದುರಿ ಸುತ್ತಿದ್ದರೂ ಅಧಿಕಾರಕ್ಕೆ ಹಾತೊರೆ ಯುತ್ತಿರುವುದು ದುರದೃಷ್ಟವೇ ಸರಿ. ಸದಾನಂದ ಗೌಡರೂ ಅಷ್ಟೇ. ಬಹಿರಂಗ ವೇದಿಕೆ, ಸಮಾರಂಭಗಳಲ್ಲಿ ವೈಯಕ್ತಿಕ ಟೀಕೆಗೆ ಇಳಿಯುವ ಕೆಟ್ಟ ಚಾಳಿಯನ್ನು ಬಿಟ್ಟುಬಿಡಬೇಕು. ಇದರಿಂದ ರಾಜ್ಯದ ಜನತೆ ಪಕ್ಷದ ಬಗ್ಗೆ ಕೆಟ್ಟ ಅಭಿಪ್ರಾಯ ತಳೆಯುತ್ತಾರೆ. ಆದ್ದರಿಂದ ರಾಜ್ಯಪಾಲರು ಸರಕಾರ ವನ್ನು ವಿಸರ್ಜಿಸಿ ಆದೇಶ ಹೊರಡಿಸ ಬೇಕು. ಅಧಿಕಾರದ ಆಸೆಯಲ್ಲಿರು ವವರು ಮತ್ತೊಮ್ಮೆ ಚುನಾವಣೆ ಯನ್ನು ಎದುರಿಸಿ ಯೋಗ್ಯರು ರಾಜ್ಯ ಭಾರ ಮಾಡುವಂತಾಗಲಿ.
ಕಿಶನ್ ರಾವ್, ಉಡುಪಿ

ಹಾಕಿ ಕ್ರೀಡೆಗೆ ಪೋತ್ಸಾಹ ಸಿಗಲಿ
ಇತ್ತೀಚೆಗೆ ಒಲಿಂಪಿಕ್‌ಗೆ ಅರ್ಹತೆಯನ್ನು ಪಡೆದುಕೊಂಡ ಹಾಕಿ ಆಟಗಾರರು ಈ ದೇಶದ ಹೆಮ್ಮೆಯ ಪುತ್ರರು. ಇವರಿಂದಾಗಿ ಭಾರತ ಮತ್ತೆ ಜಗತ್ತಿನಲ್ಲಿ ಗುರುತಿಸುವಂತಾಯಿತು. ಆ ಆಟಗಾರರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಅಗತ್ಯವಿದೆ. ಹಾಗೆಯೇ ದೇಶದ ಮಹಿಳಾ ಆಟಗಾರರಿಗೆ ಇನ್ನೂ ಹೆಚ್ಚಿನ ತರಬೇತಿಯನ್ನು ನೀಡಿ, ಅವರನ್ನು ಬೆಳೆಸುವಂತಹ ಕೆಲಸ ನಡೆಯಬೇಕಾಗಿದೆ. ಒಲಿಂಪಿಕ್‌ನಲ್ಲಿ ಈ ಬಾರಿ ನಾಲ್ಕೈದು ಚಿನ್ನದ ಪದಕಗಳನ್ನಾ ದರೂ ಗೆಲ್ಲಬೇಕು. ಭಾರತದ ಕ್ರೀಡಾಳು ಗಳ ಬದುಕು ಚಿನ್ನವಾಗಲಿ ಎಂಬ ಹಾರೈಕೆ. ರೋಹಿತ್ ಕುಮಾರ್,
ಮಂಗಳೂರು

ಬಂಟ್ವಾಳದಲ್ಲಿ ಬಿಲ್ಲವ ಸಂಘಟನೆ ಎಲ್ಲಿದೆ?
ಬಂಟ್ವಾಳದಲ್ಲಿ ಬಿಲ್ಲಸ ಸಮಾಜದ ಮಂದಿ ಇದ್ದರೂ ಬಿಲ್ಲವರನ್ನು ಕೇಳುವ ಗತಿ ಇಲ್ಲ ಎನ್ನುವುದಕ್ಕೆ ಇತ್ತೀಚೆಗೆ ಮುಸ್ಲಿಮ್ ಸಂಘಟನೆಯೊಂದು ಬಿಲ್ಲವ ಕುಟುಂಬಕ್ಕೆ ಸಹಾಯ ಮಾಡಿ ರುವುದೇ ಸಾಕ್ಷಿ. ಹಾಗೆ ನೋಡಿದರೆ ಬಂಟ್ವಾಳದಲ್ಲಿ ಹಿಂದೂ ಸಂಘಟ ನೆಗಳೂ ಸತ್ತಿವೆ.
ಕಳೆದ ವರ್ಷ ಗಾಣಿಕ ಸಮು ದಾಯವೊಂದು ಮುಸ್ಲಿಮ್ ಧರ್ಮಕ್ಕೆ ಮತಾಂತರ ಆಗಿ ರಾದ್ಧಾಂತವಾದರೂ ಇಲ್ಲಿನ ಹಿಂದೂ ಸಂಘಟ ನೆಗಳಿಗೆ ಗೊತ್ತೇ ಇರಲಿಲ್ಲ. ಇಲ್ಲಿರುವ ಹಿಂದೂ ಸಂಘಟನೆಗಳ ಕಾರ‍್ಯ ಕರ್ತರಿಗೆ ಮುಸ್ಲಿ ಮರ ಮೇಲೆ ದ್ವೇಷ ಕಾರುವುದೇ ಹಿಂದುತ್ವ ಅನ್ನಿಸಿಕೊಂಡಿದೆ.
ಬಿಲ್ಲವ ಮಾಜದ ಮುಖಂಡರಿ ಗಂತೂ ಇಲ್ಲಿ ಏನೂ ಕಾಣುವುದಿಲ್ಲ. ಒಂದೊತ್ತಿಗೂ ಗತಿಯಿಲ್ಲದ ನೂರಾರು ಬಿಲ್ಲವ ಕುಟುಂಬಗಳು ಈ ವ್ಯಾಪ್ತಿಯಲ್ಲಿದ್ದರೂ ಜನಾರ್ದನ ಪೂಜಾರಿ ಯಂತಹ ಬಿಲ್ಲವ ಸಮು ದಾಯದ ಮುಖಂಡರಿಗೆ ಕುದ್ರೋಳಿ ದೇವಾ ಲಯದಲ್ಲಿ ಬ್ರಹ್ಮಕಲಶ ಮಾಡು ವುದೇ ಮಹತ್ವದ್ದಾಗಿ ಕಾಣುತ್ತದೆ. ಬಿಲ್ಲಸ ಸಮುದಾಯದ ಕಷ್ಟ-ಸುಖಕ್ಕೆ ಆಗದ ಈ ಬಿಲ್ಲವ ಮುಖಂಡರು ಇದ್ದರೆಷ್ಟು ಬಿಟ್ಟರೆಷ್ಟು? ಏನೇ ಆಗಲಿ ಹಿಂದೂ ಕುಟುಂಬಕ್ಕೆ ಸಹಾಯ ಮಾಡಿದ ಮುಸ್ಲಿಮ್ ಸಂಘಟನೆಗೆ ಧನ್ಯ ವಾದಗಳು.
ಆರ‍್ಕೆ ಪೂಜಾರಿ, ಬಂಟ್ವಾಳ

ಬಸ್ ನಿರ್ವಾಹಕರ ಮೇಲೆ ಹಿಡಿತವಿರಲಿ
ಬಸ್ ಕಂಡಕ್ಟರ್‌ನ ಕಿರುಕುಳದಿಂದಾಗಿ ವಿದ್ಯಾರ್ಥಿನಿ ಆತ್ಮಹತ್ಯೆಗೈದ ಘಟನೆ ಕದ್ರಿ ಸಮೀಪ ವರ್ಷದ ಹಿಂದೆ ನಡೆದಿತ್ತು. ವಿದ್ಯಾರ್ಥಿನಿ ತನ್ನ ಸಾವಿಗೆ ಕಂಡಕ್ಟರ್ ನಿತ್ಯ ಸಂಚಾರದ ವೇಳೆ ಕೊಡುತ್ತಿರುವ ಕಿರುಕುಳವೇ ಕಾರಣ ಎಂದು ಗೆಳತಿಯರಲ್ಲಿ ಹೇಳಿದ್ದರೂ ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಲಿಲ್ಲ. ಇದು ಕಾಮುಕ ಕಂಡಕ್ಟರ್‌ಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದೆ ಎಂದೇ ಹೇಳಬಹುದು. ೧೯, ೧೫ ನಂಬರ್‌ನ ಬಹುತೇಕ ಸಿಟಿ ಬಸ್‌ಗಳಲ್ಲಿ ಯುವಕರೇ ಕಂಡಕ್ಟರ್ ಗಳಾಗಿದ್ದಾರೆ. ಇವರು ಶಾಲೆ-ಕಾಲೇಜಿಗೆ ತೆರಳುವ ಹೆಣ್ಣುಮಕ್ಕಳ ಜೊತೆ ವರ್ತಿಸುವ ರೀತಿ ನೋಡಿದರೆ ಸಭ್ಯರಿಗೆ ನಿಜಕ್ಕೂ ಅಸಹ್ಯ ಉಂಟಾಗುತ್ತದೆ. ಸುರತ್ಕಲ್-ಮಂಗಳಾದೇವಿ ರೂಟ್‌ನಲ್ಲಿ ಓಡಾಡುವ ಕೆಲವೊಂದು ಬಸ್‌ಗಳ ಕಂಡಕ್ಟರ್‌ಗಳು ಹುಡುಗಿ ಯರ ಬಳಿ ಬೇಕೆಂದೇ ಮಾತಾಡುವುದು, ನಗು ವುದು, ಪರಿಚಯದ ನೆಪದಲ್ಲಿ ಮೈ-ಕೈ ಮುಟ್ಟು ವುದು ಮಾಡುತ್ತಾರೆ. ಇದನ್ನು ಬಸ್ ಪ್ರಯಾಣಿಕರು ನೋಡಿಕೊಂಡು ಸುಮ್ಮನಿರಬೇಕಾಗುತ್ತದೆ. ಈ ಬಗ್ಗೆ ಪ್ರಶ್ನಿಸಿದರೆ ಕಂಡಕ್ಟರ್‌ಗಳ ಬಾಯಿಯಿಂದ ಹೊರಡುವ ಕೆಟ್ಟ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ. ಮಂಗಳೂರಿನ ಸಿಟಿ ಬಸ್‌ಗಳ ಕೆಲವೊಂದು ಕಂಡಕ್ಟರ್‌ಗಳು ಕರ್ತವ್ಯದ ಅವಧಿಯಲ್ಲಿ ಸಭ್ಯತೆಯಿಂದ ನಡೆದುಕೊಳ್ಳುವುದು ಯಾವಾಗ? ಈ ಬಗ್ಗೆ ಪೊಲೀಸ್ ಇಲಾಖೆ, ಬಸ್ ಮಾಲಕರ ಸಂಘ ಅಗತ್ಯ ಗಮನ ನೀಡಬೇಕಿದೆ.
ಅನಂತ ರಾವ್, ಮಂಗಳೂರು

ಪಶ್ಚಿಮಘಟ್ಟವನ್ನು ಯೂನೆಸ್ಕೋ ಪಟ್ಟಿಗೆ ಸೇರಿಸಿ
ಅಳಿವಿನಂಚಿನ ಅಸಂಖ್ಯ ಜೀವರಾಶಿಗಳಿರುವ, ಅನನ್ಯ ಔಷಧಿ ಸಸ್ಯ ಭಂಡಾರವೆಂದೇ ಕರೆಸಿಕೊಂಡಿರುವ ಪಶ್ಚಿಮ ಘಟ್ಟವನ್ನು ಕೇಂದ್ರದ ಯುನೆಸ್ಕೋ ಪಟ್ಟಿಗೆ ಸೇರಿಸುವ ಬಗ್ಗೆ ರಾಜ್ಯ ಸರಕಾರ ಹಿಂದೆ-ಮುಂದೆ ನೋಡುತ್ತಿರುವುದು ಸರಿಯಲ್ಲ. ಪಶ್ಚಿಮ ಘಟ್ಟ ಒಂದೊಮ್ಮೆ ಯುನೆಸ್ಕೋ ಪಟ್ಟಿಗೆ ಸೇರಿಸಲ್ಪಟ್ಟರೆ ಅದು ಸಂರಕ್ಷಿಸಲ್ಪಡುತ್ತದೆ, ಅಲ್ಲಿ ತಾವು ಯೋಚಿಸಿದ ಯೋಜನೆಗಳನ್ನು ಪ್ರಾರಂಭಿಸಲು ಆಗುವುದಿಲ್ಲ ಎಂದು ತಿಳಿದಿರುವ ಸರಕಾರ ಅದಕ್ಕೆ ಅಭಿವೃದ್ಧಿಯ ನೆಪವೊಡ್ಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮ ಘಟ್ಟಗಳಿಗೆ ಕೊಡಲಿಯೇಟು ಹಾಕಿ ಅಲ್ಲಿ ಬೃಹತ್ ಕೈಗಾರಿಕೆ, ಉದ್ದಿಮೆಗಳನ್ನು ಸ್ಥಾಪಿಸುವ ಇರಾದೆಯನ್ನು ಸರಕಾರ ಹೊಂದಿರುವುದಂತೂ ಸ್ಪಷ್ಟ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಪಶ್ಚಿಮ ಘಟ್ಟದ ಜೀವಸಂಕುಲವನ್ನು ಅಪೋಶನ ತೆಗೆದುಕೊಳ್ಳಲು ಮುಂದಾಗಿದೆ. ಪರಿಸರ ಪ್ರೇಮಿಗಳು, ಸಾಮಾಜಿಕ ಸಂಘಟನೆಗಳು ಖಂಡಿಸಬೇಕು. ಪಶ್ಚಿಮ ಘಟ್ಟವನ್ನು ಬರಿದು ಮಾಡುವ ಸರಕಾರದ ನೀತಿಯ ವಿರುದ್ಧ ಸಾರ್ವತ್ರಿಕ ಪ್ರತಿಭಟನೆ ನಡೆಸುವ ಅಗತ್ಯವಿದೆ.
ಸುದರ್ಶನ್, ಮೂಡಬಿದ್ರೆ

ಬೈಕಂಪಾಡಿ ಬ್ರಿಡ್ಜ್‌ನಲ್ಲಿ ನಿತ್ಯ ಸಮಸ್ಯೆ
ಪ್ರತಿನಿತ್ಯ ಮಧ್ಯಾಹ್ನದ ಬಳಿಕ ಬೈಕಂಪಾಡಿ ಬ್ರಿಡ್ಜ್‌ನಲ್ಲಿ ರಸ್ತೆ ಬ್ಲಾಕ್ ಉಂಟಾಗುತ್ತಿದೆ. ಬೈಕಂಪಾಡಿ ಬಳಿ ಲಾರಿ, ಬೃಹತ್ ಗಾತ್ರದ ಟ್ರಕ್‌ಗಳನ್ನು ಬೇಕಾಬಿಟ್ಟಿ ತಿರುಗಿಸುವುದೇ ರಸ್ತೆತಡೆಗೆ ಕಾರಣವಾಗುತ್ತಿದೆ. ಇದನ್ನು ತಡೆಯಲು ಸ್ಥಳೀಯ ಠಾಣಾ ಪೊಲೀಸರು ಮುಂದಾಗುತ್ತಿಲ್ಲ. ರಸ್ತೆ ಬ್ಲಾಕ್ ಆದನಂತರ ಪೊಲೀಸರು ಸ್ಥಳಕ್ಕೆ ಬರುತ್ತಾರೆ. ಕೆಲವು ನಿಮಿಷ ರಸ್ತೆಯಲ್ಲಿ ನಿಂತು ಮತ್ತೆ ತೆರಳುತ್ತಾರೆ. ಅವರು ಹೋದನಂತರ ಮತ್ತದೇ ಪರಿಸ್ಥಿತಿ. ಕೆಲವೊಮ್ಮೆ ಗಂಟೆಗಳ ಕಾಲ ರಸ್ತೆ ಬ್ಲಾಕ್ ಆಗಿರುತ್ತದೆ. ಇಲ್ಲಿ ಶಾಶ್ವತ ಪರಿಹಾರ ಸಿಗಬೇಕಾದರೆ ಇಲ್ಲಿ ಇನ್ನೊಂದು ಸೇತುವೆ ನಿರ್ಮಾಣವಾಗಬೇಕು.
ನಿತಿನ್, ಕೋಡಿಕಲ್

ಮಲೇರಿಯಾ ಜಾಗೃತಿ ಅಗತ್ಯ
ಪ್ರತೀವರ್ಷ ಮಳೆಗಾಲದಲ್ಲಿ ಜನರನ್ನು ಕಾಡುವ ಬಹುದೊಡ್ಡ ಸಮಸ್ಯೆಯೆಂದರೆ ಮಲೇರಿಯಾ. ಮಂಗಳೂರು ನಗರದ ನಾನಾ ಭಾಗಗಳಲ್ಲಿ ಈ ರೋಗದ ಹಾವಳಿ ಇನ್ನೂ ಹೆಚ್ಚು. ಇದನ್ನು ತಡೆಯಲು ಮಹಾನಗರ ಪಾಲಿಕೆ ವಿಫಲ ವಾಗುತ್ತಿದೆ. ಪ್ರತೀವರ್ಷ ಮಳೆಗಾಲ ಆರಂಭಗೊಂಡ ಬಳಿಕವಷ್ಟೇ ಸ್ಥಳೀಯ ಆಡಳಿತ ಮಲೇರಿಯಾ ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಬಗ್ಗೆ ಯೋಚಿಸುತ್ತದೆ. ಒಂದೊಮ್ಮೆ ಮಳೆ ಬರುವ ಮುನ್ನವೇ ಜಿಲ್ಲಾಡಳಿತ ಈ ಬಗ್ಗೆ ಸಕಾಲಿಕ ತೀರ್ಮಾನ ಕೈಗೊಂಡಿದ್ದರೆ ಇಂಥ ಸಮಸ್ಯೆ ಬರುವುದಿಲ್ಲ. ಆದರೆ ಜನರ ಮೇಲೆ ಎಳ್ಳಷ್ಟೂ ಕಾಳಜಿಯಿಲ್ಲದ ಪಾಲಿಕೆ ಪ್ರತೀವರ್ಷ ಮಳೆಗಾಲದಲ್ಲಿ ಮತ್ತದೇ ಸಮಸ್ಯೆ ಸೃಷ್ಟಿಸುತ್ತಿದೆ. ಆದ್ದರಿಂದ ಇನ್ನಾದರೂ ಜನರಿಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಅವಶ್ಯ ಮಾಹಿತಿ ನೀಡಬೇಕಾಗಿ ವಿನಂತಿ.
ರಘು, ಮಂಗಳೂರು

ಸರಕಾರಿ ಬಸ್‌ನಲ್ಲಿ ಚಕ್ಕರ್‌ಗಳ ಕಾಟ
ಅವ್ಯವಸ್ಥೆಗಳ ಆಗರ, ಸಮಸ್ಯೆಗಳ ಸಾಗರವಾಗಿರುವ ಕೆಎಸ್‌ಆರ್‌ಟಿಸಿ ಬಸ್‌ಗಳು ದಿನನಿತ್ಯ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಸೃಷ್ಟಿಸುವು ದರಲ್ಲಿಯೇ ತಲ್ಲೀನವಾದಂತಿದೆ. ಖಾಸಗಿ ಬಸ್‌ಗಳನ್ನು ನಿಷೇಧಿಸಿ ಎಲ್ಲೆಡೆಯೂ ಸರಕಾರಿ ಬಸ್‌ಗಳನ್ನು ಓಡಿಸುವ ನಿರ್ಧಾರದ ಬೆನ್ನಲ್ಲಿಯೇ ಬಸ್‌ನ ದರದಲ್ಲಿಯೂ ಕೆಲವು ವ್ಯವಸ್ಥೆ ಗಳೂ ಕಟ್ಟುನಿಟ್ಟಾಗಿ ಹೆಚ್ಚಾಯ್ತು. ಕಂಡೆಕ್ಟರ್‌ಗಳು ಟಿಕೆಟ್ ಕೊಡದೆ ಹಣ ನುಂಗುವುದನ್ನು ತಪ್ಪಿಸಲಿಕ್ಕೆಂದು ಬರುವ ಚಕ್ಕಿಂಗ್ ಮನುಷ್ಯರು ಬಾಗಿಲ ಬಳಿ ಸಾಲಗಾರರು ನಿಂತಂತೆ ಪ್ರಯಾಣಿಕರನ್ನು ಹೆದರಿಸುತ್ತಾರೆ.
ಅವರ ಈ ಕ್ರಮಕ್ಕೆ ಹೆದರಿದ ಕಂಡಕ್ಟರ್ ಟಿಕೆಟ್‌ಗಳನ್ನು ಇಶ್ಯೂ ಮಾಡಲಾಗದೆ, ಚಡಪಡಿಸಿ ಬಸ್ ಅನ್ನು ಅಲ್ಲೇ ನಿಲ್ಲಿಸಿ ಎಲ್ಲಾ ಟಿಕೆಟ್ ಇಶ್ಯೂ ಮಾಡಿದ ನಂತರ ಮುಂದುವರಿ ಯುವುದು ನಡೆಯುತ್ತದೆ. ಹೀಗಾಗಿ ಕೆಲಸದ ನಿಮಿತ್ತ, ಶಾಲೆ-ಕಾಲೇಜ್‌ಗಳಿಗೆ ಮನೆಗೆ ಹೋಗುವ ಎಲ್ಲರಿಗೂ ವಿಳಂಬವಾಗುವುದು ಖಂಡಿತ. ಅಲ್ಲದೆ ರಶ್‌ನಲ್ಲಿ ಬಿಟ್ಟು ಹೋದ ಟಿಕೆಟ್‌ಗಾಗಿ ನೂರಾರು ರೂ. ದಂಡ ಕಟ್ಟಿ ಕಂಡಕ್ಟರ್ ನನ್ನು ಕಳ್ಳನನ್ನಾಗಿಸಿ ಬಿಡುತ್ತಾರೆ. ಇವರ ಈ ಕೆಲಸ ಯಾರದೋ ಮೇಲಿನ ದ್ವೇಷಕ್ಕೆ ಮಾಡಿದಂತಾಗುತ್ತದೆಯೇ ಹೊರತು ಹೊಸವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಕಂಡುಬರು ತ್ತಿಲ್ಲ. ಸಾರಿಗೆ ಅಧಿಕಾರಿಗಳು ಗಮನಿಸಿ.
ಭಾಸ್ಕರ, ಕುಲಾಲ್, ಬಂಟ್ವಾಳ

ನಿಷೇಧಿಸಿ
ಶಾಲೆ-ಕಾಲೇಜ್‌ಗಳಿಗೆ ತೆರಳುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಫೇಸ್‌ಬುಕ್ ಹಾವಳಿಯಿಂದ ನೈತಿಕ ದಿವಾಳಿತನಕ್ಕೆ ತುತ್ತಾಗುತ್ತಿದ್ದಾರೆ. ದಿನ ಬೆಳಗ್ಗಾದರೆ ಕಂಪ್ಯೂಟರ್, ಇಂಟರ್ ನೆಟ್ ಎಂದು ಗುರುತು-ಪರಿಚಯ ವಿಲ್ಲದವರ ಜೊತೆ ಸ್ನೇಹ ಬೆಳೆಸಿ ಪ್ರೀತಿ-ಪ್ರೇಮ ಎಂದು ತಲೆಕೆಡಿಸಿ ಕೊಳ್ಳುತ್ತಿದ್ದಾರೆ. ಹೀಗಾಗಿ ಫೇಸ್ ಬುಕ್ ನಿಷೇಧವೇ ಒಳಿತು.
ರಮೇಶ್, ವಗ್ಗ

ಕಳಪೆ ಕಾಮಗಾರಿಗೆ ಯಾರು ಹೊಣೆ?
ರಾಷ್ಟ್ರೀಯ ಹೆದ್ದಾರಿಯ ಸುರತ್ಕಲ್‌ನಿಂದ ನಂತೂರುವರೆಗಿನ ಚತುಷ್ಪಥ ಕಾಮಗಾರಿ ಭಾಗಶ: ಪೂರ್ತಿಗೊಂಡಿದೆ. ಕಳೆದ ಆರು ವರ್ಷಗಳ ಹಿಂದೆ ಪ್ರಾರಂಭವಾದ ಕಾಮಗಾರಿ ಇಷ್ಟು ವಿಳಂಬವಾಗಿ ನಡೆಯಲು ಜನಪ್ರತಿನಿಧಿಗಳ ಅಸಡ್ಡೆಯೇ ಕಾರಣ ಹೊರತು ಬೇರೇನೂ ಅಲ್ಲ. ಈಗಾಗಲೇ ಡಾಮರೀಕಣಗೊಂಡಿರುವ ರಸ್ತೆಯ ಗುಣಮಟ್ಟವೂ ತೀರಾ ಕಳಪೆಯಾಗಿದೆ. ಕೊಟ್ಟಾರದಿಂದ ಕುಂಟಿಕಾನಕ್ಕೆ ಸಾಗುವಲ್ಲಿ ಸಿಗುವ ಫ್ಲೈ ಓವರ್ ಪ್ರಾರಂಭಕ್ಕೂ ಮುನ್ನ ರಸ್ತೆಯ ಅಲ್ಲಲ್ಲಿ ಗುಂಡಿ ನಿರ್ಮಾಣವಾಗಿದೆ. ಇದು ಹೀಗೆಯೇ ಸ್ವಲ್ಪ ಸಮಯ ಕಳೆದರೆ ಗುಂಡಿಯ ಆಳ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಈಗಾಗಲೇ ಇಲ್ಲಿ ಅನೇಕ ರಸ್ತೆ ಅಪಘಾತಗಳು ನಡೆದಿವೆ. ಹೆದ್ದಾರಿಯಲ್ಲಿ ವಾಹನಗಳ ಒತ್ತಡವೂ ಹೆಚ್ಚಿದ್ದು, ಕಾಮಗಾರಿ ಪೂರ್ತಿಗೊಂಡ ರಸ್ತೆಯ ಪರಿಸ್ಥಿತಿಯೇ ಹೀಗಾದರೆ ಹೇಗೆ? ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಿ ತುರ್ತು ಗಮನಿಸಲಿ. ಅದೇ ರೀತಿ ಬೈಕಂಪಾಡಿ-ಪಣಂಬೂರು ಬಳಿಯೂ ಹೆದ್ದಾರಿಯಲ್ಲಿ ಸಣ್ಣ-ಸಣ್ಣ ಗುಂಡಿಗಳು ಕಂಡುಬರುತ್ತವೆ. ವಾಹನಗಳ ಓಡಾಟದಿಂದ ಇವು ಮುಂದೊಂದು ದಿನ ಗಂಭೀರ ಸಮಸ್ಯೆಯಾಗುವ ದಿನ ದೂರವಿಲ್ಲ. ಆದ್ದರಿಂದ ಈ ಬಗ್ಗೆ ಜನಪ್ರತಿನಿಧಿಗಳು ಎಚ್ಚರವಹಿಸಿ ರಸ್ತೆಯ ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು.
ಬಶೀರ್, ಮಂಗಳೂರು

ಸವಲತ್ತು ದೊರೆಯುವವರೆಗೆ ಹೋರಾಟ ನಡೆಸೋಣ!

Posted by JAYAKIRANA Kirana on | 0 comments | Leave a comment...

ಉಮಾನಾಥ ಕುಮಾರ್, ಕೋಡಿಕಲ್
ಇತ್ತೀಚಿನ ದಿನಗಳಲ್ಲಿ ಆ ದಿನಾಚರಣೆ, ಈ ದಿನಾಚರಣೆ ಎಂದು ಆಚರಿಸುತ್ತಾರೆಯೇ ಹೊರತು ಆ ದಿನಾಚರಣೆ ಗಂಭೀರತೆ ಏನು? ದಿನಾಚರಣೆಯ ಮಹತ್ವ ಏನು? ಎಂದು ತಿಳಿದಿರುವುದಿಲ್ಲ. ಕೇವಲ ದಿನಾಚರಣೆಗಳು ಆ ದಿನಕ್ಕೆ ಮಾತ್ರ ಸೀಮಿತವಾಗಿದೆಯೇ ಎಂದು ತಿಳಿಯುತ್ತದೆ. ಯಾವುದೇ ವರ್ಗವಾಗಲಿ, ಪಂಗಡವಾಗಲೀ ಅದಕ್ಕೆ ಸಂಬಂಧಪಟ್ಟ ದಿನಾಚರಣೆಯಾದರೆ ಆ ವರ್ಗದ ಸವಲ ತ್ತುಗಳಿಗಾಗಿ ಕೇವಲ ಆ ದಿನ ಮಾತ್ರ ಪ್ರತಿಭಟನೆ, ಮನವಿ ಸಲ್ಲಿ ಸುವುದು ಮಾತ್ರ. ಅದರ ಜಾರಿಗೆ ಬರಲಿ ಬಾರದೆ ಇರಲಿ ಅದರ ಬಗ್ಗೆ ಅರಿವೇ ಇರುವುದಿಲ್ಲ. ಉದಾಹರಣೆಗೆ ಹೇಳುವುದಾದರೆ ಮೊನ್ನೆ ನಡೆದ ಕಾರ್ಮಿಕ ದಿನಾಚರಣೆಯನ್ನೇ ತೆಗೆದುಕೊಳ್ಳೋಣ.
ಕಾರ್ಮಿಕ ದಿನಾಚರಣೆಯಂದು ಹೊಸ-ಹೊಸ ಹಕ್ಕುಗಳ ಬೇಡಿಕೆ ಜಾರಿಗೆ ಠರಾವು ಅಷ್ಟೊಂದು ಬಿರುಸಾಗಿಲ್ಲದಿರುವುದು ಅದು ವಾಯುವಿನಲ್ಲಿ ವಿಲೀನಗೊಂಡಂತಾಗಿ ಮುಕ್ತಾಯ ಗೊಂಡಿದ್ದು ಖೇದಕರವಾಗಿದೆ. ಇಂದು ಪ್ರಪಂಚಿಕವಾಗಿ ಶೇ.೪೬ ರಷ್ಟು ದಿನಗೂಲಿ ಕಾರ್ಮಿಕರಿದ್ದು, ನಾಯಕರ ಅಸಡ್ಡೆ ಏನೋ ಕೆಲವು ಬಡದೇಶಗಳ ಕಾರ್ಮಿಕರ ಬದುಕು ಚಿಂತಾಜನಕವಾಗುತ್ತಿದೆ.
ಶತ-ಶತಮಾನಗಳ ಹಿಂದೆ ಗುಲಾಮಗಿರಿ ಒಂದು ಕಾಲವಿತ್ತು. ಉನ್ನತ ಕುಲಗಳು, ದನಿಗಳು, ಮಾಲಿಕರು, ಕೂಲಿ ಯಾಳುಗಳನ್ನು ಕತ್ತೆ, ಎತ್ತು, ಕೋಣದಂತೆ ದಿನವಿಡೀ ದುಡಿಸಿ ನಾಯಿಗೆ ತುಂಡು ರೊಟ್ಟಿ ಎಸೆದಂತೆ ಚಿಲ್ಲರೆ ಕೂಲಿ ಕೊಡುವಂತಹ ಜೀತಪದ್ಧತಿ ಬಹುತೇಕ ರಾಷ್ಟ್ರಗಳಲ್ಲಿತ್ತೆಂಬುದನ್ನು ಚರಿತ್ರೆ ಪುಟಗಳು ತಿಳಿಸುತ್ತದೆ. ಕಾಲ ಉರುಳುತ್ತಾ ಜೀತಪದ್ಧತಿ ನಶಿಸುತ್ತಾ ಬಂತು.
ಮೊಟ್ಟಮೊದಲ ಕಾರ್ಮಿಕ ಸಮಾವೇಶ ಪ್ಯಾರಿಸ್‌ನಲ್ಲಿ ನಡೆದಿದ್ದು ಸಮಾಜವಾದ ಸಿದ್ಧಾಂತ ಹುಟ್ಟುಹಾಕಲು ಯಶಸ್ಸು ಕಂಡಿತು. ಅತ್ತ ಪಸರಿಸಿ ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಹಕ್ಕು ಸ್ಥಾಪನೆಗೆ ಚಳುವಳಿಗಳು ಕೊಂಚ ಉಗ್ರರೂಪದಲ್ಲಿ ನಡೆದಿದೆ. ಹೀಗೆ ಹಕ್ಕುಗಳ ಜಾರಿಗೆ ಭಾರೀ ಹೋರಾಟಗಳು ನಡೆದಿದೆ ಎಂಬುದು ಇತಿಹಾಸ ಪುಟದಲ್ಲಿ ತಿಳಿಯುತ್ತದೆ. ಆಳ್ವಿಕೆಗಳು ಬದಲಾವಣೆಯಾಗುತ್ತಾ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದ ಮೇಲೆ ಕಾರ್ಮಿಕ ಕಲ್ಯಾಣದ ಬಗೆಗೆ ಮಹತ್ವದ ಚರ್ಚೆಗಳು ನಡೆದಿದೆ.
ಮಹಾಸಭೆಯಲ್ಲಿ ಒತ್ತಡದ ಮೇರೆಗೆ ಕಾರ್ಮಿಕ ಹಕ್ಕುಗಳ ಪಾಲನೆಗೆ ದಶಕಗಳ ಹಿಂದೆಯೇ ಅದಕ್ಕೊಂದು ದಿನ ನಿಗದಿ ಪಡಿಸಿತು. ಪ್ರತೀವರ್ಷದ ಮೇ ತಿಂಗಳ ಒಂದನೇ ದಿನವನ್ನು ಕಾರ್ಮಿಕ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಘೋಷಿಸುತ್ತಿದ್ದಂ ತೆಯೇ ಇತ್ತ ಈ ಜಯದ ಪತಾಕೆಯನ್ನು ನೆಟ್ಟ ರಾಷ್ಟ್ರ ಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮ ನಡೆದಿದೆ.
ಆದರೆ ಕೆಲವು ಬಲಪಂಥೀಯ ದೇಶದಲ್ಲಿ ಅದರ ಮುಖಂ ಡರು ತನ್ನದೇ ಶೈಲಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಕಾರ್ಮಿಕ ದಿನಾಚರಣೆ ನಡೆಸಿದ ಸುದ್ದಿ ಆಂಗ್ಲ ದೈನಿಕವೊಂದರಲ್ಲಿ ತಿಳಿದು ಬಂದಿದೆ. ಆದರೆ ವಿಶ್ವಸಂಸ್ಥೆ ಸಹಿತ ಯಾವುದೇ ರಾಷ್ಟ್ರವು ತಕರಾರು ಎತ್ತದಿರುವುದು ಬಾಂಧವ್ಯಕ್ಕೆ ಧಕ್ಕೆ ಆಗದಿರುವುದು ಮಹತ್ವವನ್ನು ಪಡೆದಂತಿದೆ. ಪ್ರಸ್ತುತ ಒಗ್ಗಟ್ಟಿನಲ್ಲಿ ಸರ್ವ ರಾಷ್ಟ್ರಗಳ ಸೈದ್ಧಾಂತಿಕ ಮೂಲ ಸಾರ ಒಂದೇ. ಶ್ರಮಿಕ ಕಾರ್ಮಿಕರು ರಾಷ್ಟ್ರವು ಬೆನ್ನೆಲುಬು ಆಗಿದ್ದಾರೆ. ರಾಷ್ಟ್ರದ ಜೀವನಾಡಿ ಸಂಪತ್ತು ಆಗಿದ್ದಾರೆ. ಅವರ ಶ್ರಮ, ದುಡಿಮೆ ಇಲ್ಲದೆ ಯಾವ ರಾಷ್ಟ್ರಕ್ಕೂ ಭವಿಷ್ಯವಿಲ್ಲದಿರುವುದನ್ನು ಜಗತ್ತಿನ ರಾಷ್ಟ್ರಗಳು ಲಿಖಿತವಾಗಿ ಒಪ್ಪಿ ಕೊಂಡಿರುವುದು ಸುಳ್ಳಲ್ಲ. ಕಾರ್ಮಿಕರು ಇಲ್ಲದ ರಾಷ್ಟ್ರವಿಲ್ಲ. ಕಾರ್ಮಿಕರೇ ದೇಶದ ಆಸ್ತಿ ಎಂದರೆ ತಪ್ಪಲ್ಲ. ಬಹುತೇಕ ದೇಶಗಳಲ್ಲಿ ಪ್ರತ್ಯೇಕ ಸಚಿ ವಾಲಯ ಆಡಳಿತವಿದ್ದು, ಆರೋಗ್ಯ ಭಾಗ್ಯ, ಉಚಿತ ಸೇವೆಗೆ ಸುಸಜ್ಜಿತ ಆಸ್ಪತ್ರೆಗಳಿವೆ. ವಿಶೇಷ ಮೂಲಭೂತ ಸೌಲಭ್ಯಗಳಿವೆ. ಕಾಯ್ದೆಗಳ ಪ್ರಕಾರ ಸೂಕ್ತ ಕೂಲಿ ದೊರಕುತ್ತಿದೆ. ಆದರೆ ಇದೆಲ್ಲರ ಕೊರತೆ ನಮ್ಮ ದೇಶದಲ್ಲಿದೆ ಎಂದರೆ ತಪ್ಪಿಲ್ಲ. ಕಾರ್ಮಿಕರಿಗಾಗಿ ಆಸ್ಪತ್ರೆಯಿದ್ದರೂ ಸರಿಯಾದ ವ್ಯವಸ್ಥೆಯಿಲ್ಲ. ಇದೇ ರೀತಿ ಕಾರ್ಮಿಕರು ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಈ ಎಲ್ಲಾ ಹಕ್ಕುಗಳಿಗಾಗಿ ಹೋರಾಟ ಅತ್ಯಗತ್ಯ. ಇದಕ್ಕಾಗಿ ನಾವು ಕಾರ್ಮಿಕ ದಿನಾಚರಣೆಗಾಗಿ ಕಾದು ಕುಳಿತುಕೊಳ್ಳುವ ಅಗತ್ಯವಿಲ್ಲ. ನಮ್ಮ ಗುರಿ ತಲುಪುವವರೆಗೆ ಹೋರಾಟ ನಡೆಸ ಬೇಕಾಗಿದೆ. ಆದ್ದರಿಂದ ಯಾವುದೇ ದಿನಾ ಚರಣೆಯ ದಿನವನ್ನೇ ನಾವು ಕಾದು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ನಮ್ಮ ಕಾರ್ಯ ಯಶಸ್ವಿಗೊಳ್ಳುವವರೆಗೆ ಹೋರಾಟ ನಡೆಸೋಣವೇ?

ಸುರತ್ಕಲ್‌ನಲ್ಲಿ ಬಂಟರ ಕ್ರೀಡಾಕೂಟ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ‘ಕ್ರೀಡಾ ಸ್ಫೂರ್ತಿ ಯನ್ನು ಅಳವಡಿಸಿ ಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯ’ ಎಂದು ಮಧ್ಯ ಶ್ರೀ ಖಡ್ಗೇಶ್ವರ, ಖಡ್ಗೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ದಾಮೋದರ ಶೆಟ್ಟಿ ಅವರು ಹೇಳಿದರು. ಅವರು ಸುರತ್ಕಲ್ ಬಂಟರ ಸಂಘದ ಆಶ್ರಯದಲ್ಲಿ ಸಂಯೋಜಿಸಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ಸಮುದಾಯದ ಅಭಿವೃದ್ಧಿಯಾದಾಗ ನಾಡು, ನಾಡಿನ ಅಭಿವೃದ್ಧಿ ಸಾಧ್ಯ ಎಂದು ಮನಪಾ ಸದಸ್ಯ ಅಶೋಕ್ ಶೆಟ್ಟಿ ತಡಂಬೈಲ್ ಮುಖ್ಯ ಅತಿಥಿ ಯಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘದ ಉಪಾಧ್ಯಕ್ಷ ಎಂ.ಜೆ.ಶೆಟ್ಟಿ ವಹಿಸಿದ್ದರು. ಸಮಾರಂಭದಲ್ಲಿ ಸುರತ್ಕಲ್ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಕುಳಾಯಿ ಗುತ್ತು ರೋಹಿತಾಕ್ಷ ರೈ ಬಂಟರ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಮಮತಾ ಶೆಟ್ಟಿ ಬಂಟರ ಸಂಘದ ನಿರ್ದೇಶಕ, ಗ್ರಾಮ ಪಂಚಾಯತ್ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಚೇಳಾರು, ಕ್ರೀಡಾ ಕಾರ್ಯದರ್ಶಿ ಗುಣಶೇಖರ ಶೆಟ್ಟಿ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ, ಸುಧಾಕರ ಪೂಂಜಾ, ಕ್ರೀಡಾ ನಿರ್ದೇಶಕರಾದ ಹರೀಶ್, ಉದಯ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಉಲ್ಲಾಸ್ ಶೆಟ್ಟಿ ಪೆರ್ಮುದೆ ಸ್ವಾಗತಿಸಿ, ಲೋಕಯ್ಯ ಶೆಟ್ಟಿ ಮುಂಚೂರು ವಂದಿಸಿ, ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಾಂಪ್ರದಾಯಿಕ ಕ್ರೀಡೆಗೆ ಪೋತ್ಸಾಹ ಅಗತ್ಯ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಇಂದಿನ ಯುವ ಪೀಳಿಗೆ ನೃತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಒತ್ತುಕೊಡುವಷ್ಟು ಕ್ರೀಡೆ ಅದರಲ್ಲೂ ಅಪ್ಪಟ ಭಾರತೀಯ ಕುಸ್ತಿ ಆಟಕ್ಕೆ ಒಲವು ಕಡಿಮೆಯಾಗುತ್ತಿದೆ ಎಂದು ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ರಾಜ್‌ಮೋಹನ್ ರಾವ್ ಹೇಳಿದರು.
ಹೊಸಬೆಟ್ಟು ಮೀನುಗಾರರ ಸಹಕಾರಿ ಸಂಘದ ವಜ್ರ ಮಹೋತ್ಸವದ ಅಂಗವಾಗಿ ಹೊಸಬೆಟ್ಟು ಕಡಲ ಕಿನಾರೆಯಲ್ಲಿ ಏರ್ಪಡಿಸಲಾದ ದ.ಕ. ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯ ಸಭಾ ಕಾರ್ಯ ಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಸಂಘಸಂಸ್ಥೆಗಳು ಇಂತಹ ಕ್ರೀಡೆಗೆ ಪೋತ್ಸಾಹ ನೀಡಿ ಭವಿಷ್ಯದ ಕ್ರೀಡಾ ತಾರೆಗಳನ್ನು ರೂಪಿಸುವ ಯೋಜನೆ ಕೈಗೊಳ್ಳ ಬೇಕು. ವಿಶ್ವವಿದ್ಯಾನಿಲಯಗಳೂ ಈ ನಿಟ್ಟಿನಲ್ಲಿ ಕಾರ್ಯ ಪ್ರವರ್ತವಾಗಿವೆ ಎಂದರು.ಕೆ.ಎಫ್.ಡಿ.ಸಿ.ಯ ಮಾಜಿ ಅಧ್ಯಕ್ಷ ರಾಮಚಂದ್ರ ಬೈಕಂಪಾಡಿ, ಹೊಸಬೆಟ್ಟು ಮೊಗವೀರ ಸಂಘದ ಅಧ್ಯಕ್ಷರಾದ ಗಂಗಾಧರ ಎಚ್.ಶರಣ್ಯ ಬೋಟ್ ಇದರ ಮಾಲಕರಾದ ಶರತ್ ಎಲ್ ಕರ್ಕೇರ, ಕುಸ್ತಿ ತರಬೇತುದಾರ ಸುಖಪಾಲ್ ಸಾಲ್ಯಾನ್, ಶಶಿಧರ್ ಗುರಿಕಾರ, ರಮೇಶ್ ಗುರಿಕಾರ, ಪುರಂದರ ಗುರಿಕಾರ, ವಜ್ರ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಉಮೇಶ್ ಟಿ. ಕರ್ಕೇರ, ಸ್ಮರಣ ಸಂಚಿಕೆ ಸಮಿತಿಯ ವಿಠಲ ಬಿ.ಕರ್ಕೇರ, ಮತ್ತಿತರರು ಉಪಸ್ಥಿತರಿ ದ್ದರು.ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎಚ್.ಅಧ್ಯಕ್ಷತೆ ವಹಿಸಿದ್ದರು.ಹರಿಶ್ಚಂದ್ರ ಮೆಂಡನ್ ಸ್ವಾಗತಿಸಿ ನಿರೂಪಿಸಿದರು.

ಪ್ರತಿಭಾ ಪುರಸ್ಕಾರ

Posted by JAYAKIRANA Kirana on | 0 comments | Leave a comment...

ಮಂಗಳೂರು: ದ.ಕ.ಜಿಲ್ಲಾ ಮೂಲ್ಯದ ಯಾನೆ ಕುಲಾಲರ ಸಂಘದ ೮೬ನೇ ಮಹಾಸಭೆಯು ಶ್ರೀ ದೇವಿ ದೇವಸ್ಥಾನ ‘ಓಲ್ಡ್‌ಕೇಟ್’ ಪೋಲಿಸ್ ಲೈನ್ ಮಂಗಳೂರು ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ್ ಕುಂದರ್ ನ್ಯಾಯವಾದಿ ಇವರ ಅಧ್ಯಕ್ಷತೆಯಲ್ಲಿ ಮೇ೨೦ರಂದು ಮಾತೃ ಸಂಘದ ನಾಸಿಕ್ ಬಿ.ಎಚ್.ಬಂಗೇರ ಸಭಾ ಭವನದಲ್ಲಿ ಜರಗಲಿದೆ. ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ಪಿ. , ಭಾಸ್ಕರ ಎಂ.ಪೆರುವಾಯಿ ಭಾಗವಹಿಸಲಿದ್ದಾರೆ. ಕುಮಾರಿ ದೀಪಾ ಏಷ್ಯನ್ ಪವರ್ ಲಿಫ್ಟಿಂಗ್ . ಚಿನ್ನದ ಪದಕ ವಿಜೇತೆಗೆ ಸಮ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ.

ಜೀವ ಬೆದರಿಕೆ: ಮಹಿಳೆ ದೂರು

Posted by JAYAKIRANA Kirana on | 0 comments | Leave a comment...

ಸುಳ್ಯ: ಕಳ್ಳಬಟ್ಟಿ ಸಾರಾಯಿ ಅಡ್ಡೆ ನಡೆಯುತ್ತಿರುವ ಕುರಿತು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ದಾಗಿ ಗುಮಾನಿಯಿಂದ ಮಂಡೆಕೋಲು ಗ್ರಾಮದ ಕನ್ಯಾನ ನಿವಾಸಿಗಳಾದ ಕೃಷ್ಣಪ್ಪ ನಾಯ್ಕ(೬೮) ಮತ್ತು ಮೋಹನ ನಾಯ್ಕ(೪೫) ಎಂಬವರು ತಮಗೆ ಜೀವ ಬೆದರಿಕೆ ಹಾಕಿರುವುದಾಗಿ ನೆರೆಮನೆಯ ಎರ್ಕಲ್‌ಪಾಡಿ ನಿವಾಸಿ ರಾಮಣ್ಣ ನಾಯ್ಕ್‌ರ ಪತ್ನಿ ಪಾರ್ವತಿ(೪೭) ಪೊಲೀಸರಿಗೆ ದೂರು ನೀಡಿದ್ದಾರೆ.ಕಳ್ಳಬಟ್ಟಿ ಶರಾಬು ತಯಾರಿಸುತ್ತಿದ್ದಾರೆ ಎಂದು ಆರೋಪಿಗಳ ಮನೆಗೆ ವಾರದ ಹಿಂದೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದರು. ಈ ವಿಚಾರವನ್ನು ತಾನು ಹಾಗೂ ನೆರೆಮನೆಯ ರಾಮಣ್ಣ ನಾಯ್ಕರು ಇಲಾಖೆಗೆ ನೀಡಿದ್ದಾಗಿ ಗುಮಾನಿಯಿಂದ ಭಾನುವಾರ ರಾತ್ರಿ ತಮ್ಮ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳು ಯಾವುದೇ ಕೃತ್ಯವನ್ನು ಮಾಡಲು ಹೇಸುವವರಲ್ಲ. ಹಾಗಾಗಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಸ್ಟುಡಿಯೋದಿಂದ ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಿಲಾಗ್ರಿಸ್‌ನಲ್ಲಿ ರುವ ಆಯ್ಯುಷ್ ಡಿಜಿಟಲ್ ಸ್ಟುಡಿ ಯೋದಿಂದ ಕಂಪ್ಯೂಟರ್, ಸಿಪಿಒ ಮತ್ತದರ ಬಿಡಿ ಭಾಗಗಳನ್ನು ಕಳವುಗೈ ದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಪ್ರವೀಣ್ ಎಂಬವರ ಮಾಲಕತ್ವದ ಸ್ಟುಡಿಯೋದ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು ಒಂದು ಕಂಪ್ಯೂ ಟರ್, ಮೂರು ಸಿಪಿಒ ಮತ್ತು ಹಾರ್ಡ್ ಡಿಸ್ಕ್ ಕದ್ದೊಯ್ದಿದ್ದಾರೆ ಎಂದು ಪ್ರವೀಣ್ ತಿಳಿಸಿದ್ದಾರೆ. ಹಾರ್ಡ್ ಡಿಸ್ಕ್‌ನಲ್ಲಿ ಪ್ರಾಮುಖ್ಯ ದಾಖಲೆಗಳಿದ್ದವು ಎಂದು ತಿಳಿದು ಬಂದಿದೆ.

ಚಿನ್ನಾಭರಣ ದರೋಡೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಹಿಳೆಯ ಮುಖಕ್ಕೆ ದ್ರಾವಣ ಸಿಂಪಡಿಸಿ ಚಿನ್ನಾ ಭರಣ ದರೋಡೆಗೈದ ಘಟನೆ ಶನಿವಾರ ತಡ ರಾತ್ರಿ ದೇರೆಬೈಲ್ ಲ್ಯಾಡ್‌ಲಿಂಕ್ಸ್‌ನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಪ್ರೀತಿ (೫೨) ಎಂಬವರು ತಡರಾತ್ರಿ ಮನೆಯಲ್ಲಿ ಇಬ್ಬರೇ ಇರುವಾಗ ಘಟನೆ ನಡೆದಿದೆ. ರಾತ್ರಿ ೧೧ ಗಂಟೆಯ ಸುಮಾರಿಗೆ ವಿದ್ಯುತ್ ಕಡಿತವಾಗಿತ್ತು. ಎದುರಿನ ಬಾಗಿಲು ತೆರೆದು ಇನ್ವರ್ಟರ್ ಆನ್ ಮಾಡಲು ಸಿದ್ಧರಾಗುತ್ತಿದ್ದಾಗ ಹೊರ ಗಿನಿಂದ ಒಳ ನುಗ್ಗಿದ ವ್ಯಕ್ತಿಯೋರ್ವ ಪ್ರೀತಿ ಅವರ ಬಾಯಿಗೆ ಬಟ್ಟೆ ಕಟ್ಟಿ ಮುಖಕ್ಕೆ ದ್ರಾವಣ ಸಿಂಪಡಿಸಿ ಪ್ರಜ್ಞೆ ತಪ್ಪಿಸಿ, ಕೈಯಲ್ಲಿದ್ದ ೧೦ ಗ್ರಾಂ ತೂಕದ ಚಿನ್ನದ ಬಳೆ ಕಳವುಗೈದಿರುವುದಾಗಿ ದೂರಿದ್ದಾರೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳವಾದ ರಿಕ್ಷಾ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪಂಪ್‌ವೆಲ್ ಕರ್ನಾಟಕ ಬ್ಯಾಂಕ್ ಎದುರಿನಿಂದ ಕಳವುಗೈದಿರುವ ರಿಕ್ಷಾ ನಿನ್ನೆ ಬೆಳಗ್ಗೆ ಬೆಳ್ತಂಗಡಿಯ ಕಾಶಿಬೆಟ್ಟು ಎಂಬಲ್ಲಿ ಪತ್ತೆಯಾಗಿದೆ. ರಿಕ್ಷಾದಲ್ಲಿ ರಕ್ತದ ಕಲೆ ಇದ್ದು ದಾರಿಮಧ್ಯೆ ರಿಕ್ಷಾ ಉರುಳಿ ಬಿದ್ದಿರುವ ಕುರುಹು ಕಂಡು ಬಂದಿದೆ. ಹೀಗಾಗಿ ಇದು ಅಪಘಾತದಲ್ಲಿ ಗಾಯ ಗೊಂಡವರ ರಕ್ತದ ಕಲೆ ಆಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಕಾಶಿ ಬೆಟ್ಟು ತಲುಪಿದಾಗ ರಿಕ್ಷಾದಲ್ಲಿ ಪೆಟ್ರೋಲ್ ಖಾಲಿಯಾಗಿರುವುದರಿಂದ ಕಳ್ಳರು ರಿಕ್ಷಾವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.

ಪಂಪ್ ಕಳ್ಳರ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪಂಪ್ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಇಬ್ಬರನ್ನು ಕೋಟ ಪೊಲೀಸ್ ಠಾಣೆಯ ಎಸೈ ಅಶೋಕ್ ಪಿ. ರವಿವಾರ ರಾತ್ರಿ ಬ್ರಹ್ಮಾವರ ಸಮೀಪದ ಆವರ್ಸೆ ಗ್ರಾಮದ ನೂಜಿನಕೋಡಿ ಎಂಬಲ್ಲಿಂದ ಬಂಧಿಸಿದ್ದಾರೆ.
ಚೇರ್ಕಾಡಿ ಗ್ರಾಮ ಎಳ್ಳಂಪಳ್ಳಿ ಕ್ರಾಸ್‌ನ ರಾಘವೇಂದ್ರ ಮತ್ತು ರಮೇಶ ಬಂಧಿತರು.
 ರವಿವಾರ ರಾತ್ರಿ ೨:೩೦ರ ಸುಮಾರಿಗೆ ಗಸ್ತಿನಲ್ಲಿ ಸಾಗುತ್ತಿದ್ದ ಎಸೈ ಅಶೋಕ್‌ರಿಗೆ ಇಬ್ಬರು ಮೋಟರ್ ಸೈಕಲ್‌ನಲ್ಲಿ ಪ್ಲಾಸ್ಟಿಕ್ ಚೀಲ ಇಟ್ಟು ನಿಂತಿರುವುದು ಕಂಡಿತು. ಪೊಲೀಸರನ್ನು ಕಂಡು ಓಡಿ ಹೋಗಲು ಯತ್ನಿಸಿದರನ್ನು ಹಿಡಿದು ವಿಚಾರಿಸಿದಾಗ ಮೊದಲು ಸುಳ್ಳು ಹೆಸರು ಹೇಳಿದ್ದು ಪೊಲೀಸ್ ವಿಚಾರಣೆಯ ಬಳಿಕ ಸತ್ಯ ಬಾಯಿ ಬಿಟ್ಟಿದ್ದರು.
ಅವರ ಬಳಿ ಇದ್ದ ಪ್ಲಾಸ್ಟಿಕ್ ಚೀಲ ಪರಿಶೀಲಿಸಿದಾಗ ಅದರಲ್ಲಿ ಮೂರು ಪಂಪ್‌ಸೆಟ್‌ಗಳು ಇರುವುದು ಕಂಡು ಬಂದಿತು. ಇವನ್ನು ಮೂರು ತಿಂಗಳ ಹಿಂದೆ ಮಂದಾರ್ತಿ ಪರಿಸರದಲ್ಲಿ ಕದ್ದಿರುವುದಾಗಿ ತಿಳಿಸಿದರು. ರವಿವಾರ ರಾತ್ರಿ ಆವರ್ಸೆ ಪರಿಸರದ ಬಾವಿಯಿಂದ ಪಂಪ್‌ಸೆಟ್ ಕದ್ದು ಎಲ್ಲವನ್ನು ಗೊಳಿಯಂಗಡಿಯ ಗುಜರಿ ಅಂಗಡಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾಗಿ ಅವರು ತಿಳಿಸಿದರು.

ನೇಮದ ವೇಳೆ ಹಲ್ಲೆ: ಆರೋಪಿಗಳ ಸೆರೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಭೂತದ ನೇಮದ ಸಂದರ್ಭದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಸೋಮವಾರ ಸಂಪ್ಯ ಪೊಲೀಸರು ಬಂಧಿಸಿ, ನ್ಯಾಯಾಲ ಯಕ್ಕೆ ಹಾಜರುಪಡಿಸಿದ್ದಾರೆ.
ಸುಳ್ಯ ತಾಲೂಕಿನ ಅಮರ ಮುಡ್ನೂರು ಗ್ರಾಮದ ಮುಂಡಕಜೆ ದೊಡ್ಡ ತೋಟ ನಿವಾಸಿ ಐತಪ್ಪ ನಾಯ್ಕ, ಅವರ ಪತ್ನಿ ಪ್ರೇಮ ಮತ್ತು ಸಂಬಂಧಿ ಲೋಕೇಶ್ ಎಂಬ ವರ ಮೇಲೆ ಶನಿವಾರ ರಾತ್ರಿ ಹಲ್ಲೆ ನಡೆಸಲಾಗಿತ್ತು. ಹಲ್ಲೆ ನಡೆಸಿದ ಆರೋಪಿಗಳಾದ ಪ್ರೇಮ ಅವರ ಸಹೋದರ ಜಗದೀಶ ನಾಯ್ಕ ಆತನ ಕಡೆಯವರಾದ ತನಿಯಪ್ಪ ನಾಯ್ಕ, ಚೋಮ ನಾಯ್ಕ, ಹರೀಶ ಮತ್ತು ಸತೀಶ ಎಂಬವರನ್ನು ಬಂಧಿಸಲಾಗಿದೆ.
ಜಗದೀಶನ ಬಳ್ಳಿಕಾನ ಮನೆಯಲ್ಲಿ ಶನಿವಾರ ರಾತ್ರಿ ಭೂತದ ಕೋಲ ನಡೆದಿತ್ತು. ಊಟ ಮುಗಿದ ಬಳಿಕ ಪ್ರೇಮಾ ಅವರ ತಾಯಿಗೆ ಊಟದ ವ್ಯವಸ್ಥೆ ಮಾಡದ ಕುರಿತು ಪ್ರೇಮ ಅವರು ಪ್ರಶ್ನಿಸಿದ ಕಾರಣಕ್ಕೆ ಹಲ್ಲೆ ನಡೆಸಲಾ ಗಿತ್ತು. ಪ್ರೇಮ ಮತ್ತು ಆಕೆಯ ಜೊತೆಗಿದ್ದ ಲೋಕೇಶನಿಗೆ ಹಲ್ಲೆ ನಡೆಸಿದ ಆರೋಪಿಗಳು, ಕೋವಿ ತೋರಿಸಿ ಅವರನ್ನು ಬೆದರಿಸಿ ಬಳಿಕ ಮನೆಯ ಹೊರಗಡೆ ನಿಂತಿದ್ದ ಪ್ರೇಮ ಅವರ ಪತಿ ಐತಪ್ಪ ನಾಯ್ಕ ಎಂಬವರಿಗೆ ಕೋವಿಯ ಹಿಡಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಪ್ರೇಮ ಅವರು ನೀಡಿದ ದೂರಿನಂತೆ ಕೇಸು ದಾಖಲಿಸಿ ಕೊಂಡ ಸಂಪ್ಯ ಪೊಲೀಸರು ಆರೋಪಿಗಳೆಲ್ಲರನ್ನೂ ವಶಕ್ಕೆ ಪಡೆದುಕೊಂಡು ಸೋಮವಾರ ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಕ್ರಿಕೆಟ್ ಆಟಗಾರರ ಹೊಡೆದಾಟ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿ ಕ್ರಿಕೆಟ್ ಆಟ ನೆಡೆಯುತ್ತಿದ್ದ ಸಂದರ್ಭ ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡ ಘಟನೆ ಪೂಂಜಾಲ ಕಟ್ಟೆ ಸಮೀಪ ಹೊಕ್ಕಾಡಿಯಲ್ಲಿ ನಡೆದಿದೆ. ಈ ಆಟದ ವೇಳೆ ಸ್ಥಳೀಯ ನಿವಾಸಿ ಜಯರಾಮಶೆಟ್ಟಿ ಅವರ ಮೇಲೆ ಇಲ್ಲಿನ ರವಿ ಶೆಟ್ಟಿ ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದು, ಇದರಿಂದ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೂಡುಪೆರಾರ: ನೇಣು ಬಿಗಿದು ಯುವಕ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಯುವಕ ನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಪೇರಾರದ ದೇವಸ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.
ಸ್ಥಳೀಯ ನಿವಾಸಿ ಕೇಶವ (೨೫)ಮೃತ ವ್ಯಕ್ತಿ. ಅವಿವಾಹಿತರಾಗಿದ್ದ ಇವರು ಈಶ್ವರಕಟ್ಟೆಯಲ್ಲಿ ದಿನಸಿ ಅಂಗಡಿ ಹೊಂದಿದ್ದರು.
ರವಿವಾರ ಅಂಗಡಿಗೆ ಹೋಗದೆ ತಲೆ ಸುತ್ತುತ್ತಿದೆ ಎಂದು ಮನೆಯಲ್ಲಿಯೇ ಇದ್ದರು. ತಡರಾತ್ರಿ ಮನೆ ಪಕ್ಕದ ಮಾವಿನ ಮರದಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇವರ ಸಹೋದರ ಡೊಂಬಯ್ಯ ಗೌಡ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಸೆರೆ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬೊಳಿಯಾರು ಎಂಬಲ್ಲಿ ಮೇ ೭ರಂದು ರಾತ್ರಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂ ಧಪಟ್ಟಂತೆ ಈಗಾಗಲೇ ಆದಿತ್ಯವಾರ ಬೆಳ್ತಂಗಡಿ ಪೊಲೀಸರು ಆರೋಪಿಗ ಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇದೀಗ ಸೋಮವಾರ ತಲೆಮರೆಸಿ ಕೊಂಡಿದ್ದ ಇನ್ನೋರ್ವ ಆರೋಪಿ ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ದ್ದಾರೆ. ಕೊಲೆಗೆ ಸಂಬಂಧಪಟ್ಟ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮೂರನೇ ಆರೋಪಿ ಮನೋಜ್ ಎಂಬವನಾಗಿದ್ದು ಈತ ಸುರತ್ಕಲ್‌ನ ಚೇಳ್ಯಾರುಪದವಿನವರೆಂದು ಹೇಳಲಾ ಗುತ್ತಿದ್ದು ಮುಂಬಯಿಯಲ್ಲಿದ್ದರು. ಅವರು ಇತ್ತೀಚೆಗೆ ಸಂಬಂಧಿಕ ಪ್ರಮು ಖ ಆರೋಪಿ ಹರಿಶ್ಚಂದ್ರ ಅವರ ಮನೆ ಗೆ ಬಂದಾಗ ಪರಿಚಯವಾಗಿ ಕೊಲೆ ಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸ ಲಾಗಿದೆ. ಕೊಲೆ ಸಂದರ್ಭ ಮನೋಜ್ ಕೈಗೂ ಚಾಕು ತಗುಲಿ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.

ರೈಲ್ವೆ ಹಳಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾಸರಗೋಡು ಮಂಜೇಶ್ವರ ಸಮೀಪದ ಪೊಸೋಟು ಮಸೀದಿ ಬಳಿಯ ರೈಲ್ವೆ ಹಳಿಯಲ್ಲಿ ೬೦ ವರ್ಷ ಅಂದಾಜಿನ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿದೆ. ಮೃತದೇಹ ನಜ್ಜು ಗುಜ್ಜಾಗಿದ್ದು, ಮೈಯಲ್ಲಿ ಲುಂಗಿ ಮತ್ತು ಅಂಗಿ ಇದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪ್ರತೆಗೆ ಸಾಗಿಸಿದ್ದಾರೆ.

ಆರೋಪಿ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾಸರಗೋಡು ಅಕ್ರಮ ಮದ್ಯ ಸಾಗಾಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನಗರದ ಕೋಟೆರಸ್ತೆಯ ನಿವಾಸಿ ಇರ್ಶಾದ್ (೪೦) ಎಂಬಾತನನ್ನು ಮಂಜೇಶ್ವರ ಪೊಲೀಸರು ಭಾನುವಾರ ರಾತ್ರಿ ನಗರದಲ್ಲಿ ಬಂಧಿಸಿದ್ದಾರೆ. ೧೯೮೭ರಲ್ಲಿ ನಡೆದ ಅಕ್ರಮ ಮದ್ಯ ಸಾಗಾಟ ಪ್ರಕರಣದಲ್ಲಿ ಈತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದರು.

ಮಿಕ್ಸಿಯೊಳಗೆ ಕೈ ಸಿಲುಕಿ ಬಾಲಕನ ಬೆರಳು ತುಂಡು

Posted by JAYAKIRANA Kirana on | 0 comments | Leave a comment...

ಮಂಗಳೂರು:ಕಾಸರಗೋಡು ಸಮೀಪದ ಕೂಡ್ಲುಮೊಗರು ಬಳಿಯ ಪಲ್ಲೆದಪಡ್ಪು ಎಂಬಲ್ಲಿ ದಿ.ಸುರೇಶ್ ಎಂಬವರ ಪುತ್ರ ಸೂರ್ಯಪ್ರಕಾಶ್ (೯) ಎಂಬಾತನ ಕೈ ಮಿಕ್ಸಿಯಲ್ಲಿ ಸಿಲುಕಿ ಮೂರು ಬೆರಳುಗಳು ತುಂಡಾಗಿದೆ. ಭಾನುವಾರ ರಾತ್ರಿ ವಿದ್ಯುತ್ ವ್ಯತ್ಯಯ ನಡೆದ ವೇಳೆ ಬಾಲಕ ಮಿಕ್ಸಿಯೊಳಗೆ ಕೈ ಹಾಕಿದ್ದು ಇದೇ ಸಮಯದಲ್ಲಿ ವಿದ್ಯುತ್ ಸಂಪರ್ಕ ಬಂದು, ಮಿಕ್ಸಿ ಚಾಲನೆಯಾಗಿ ಈತನ ಕೈ ಮಿಕ್ಸಿಯ ಬ್ಲೇಡ್‌ಗಳೆಡೆ ಸಿಲುಕಿ ತುಂಡಾಗಿದೆ.

ಆರ್‌ಸಿಬಿ ಕೈಯಿಂದ ಗೆಲುವು ಕಸಿದ ರಾಯುಡು

Posted by JAYAKIRANA Kirana on | 0 comments | Leave a comment...


ಬೆಂಗಳೂರು: ಕೈಯಲ್ಲಿದ್ದ ಗೆಲುವನ್ನು ಮುಂಬೈ ಮಡಿಲಿಗೆ ಹಾಕಿದ ಬೆಂಗಳೂರು ಪ್ಲೇಆಫ್ ಹಂತಕ್ಕೆ ತಲುಪುವ ಹಾದಿಯನ್ನು ಕಠಿಣವಾಗಿಸಿದೆ.
೧೭೨ ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟುತ್ತಿದ್ದ ಮುಂಬೈ ಒಂದು ಹಂತದಲ್ಲಿ ೫೧ ರನ್‌ಗಳಿಗೆ ಐದು ವಿಕೆಟ್ ಕಳಕೊಂಡು ಸೋಲಿನ ಸುಳಿಯಲ್ಲಿತ್ತು. ಆದರೆ ಬೆಂಗಳೂರಿನ ಬೌಲರ್‌ಗಳ ಅತಿಯಾದ ಆತ್ಮವಿಶ್ವಾಸದಿಂದ ಪಂದ್ಯ ಕಳಕೊಳ್ಳಬೇಕಾಯಿತು. ಅಂಬಾಟಿ ರಾಯುಡು ಮತ್ತು ಪೊಲಾರ್ಡ್ ಶತಕದ ಜತೆಯಾಟ ನಡೆಸಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು.
ಮುಂಬೈ ಎರಡು ರನ್ ಮಾಡುವಷ್ಟರಲ್ಲಿ ಸಚಿನ್ ವಿಕೆಟ್ ಕಳಕೊಂಡಿತು. ನಾಲ್ಕು ರನ್ ಮಾಡುಷ್ಟರಲ್ಲಿ ಗಿಬ್ಸ್ ರನೌಟ್ ಆಗಿ ಪೆವಿಲಿಯನ್‌ಗೆ ಸೇರಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ರೋಹಿತ್ ಶರ್ಮಾ ಕೇವಲ ಐದು ರನ್ ಮಾಡಿ ವಿನಯ್ ಕುಮಾರ್‌ಗೆ ರಿಟರ್ನ್ ಕ್ಯಾಚಿತ್ತು ನಿರ್ಗಮಿಸಿದಾಗ ಮುಂಬೈ ಮೊತ್ತ ಕೇವಲ ೧೯ ರನ್ ಮಾತ್ರ. ಕಾರ್ತಿಕ್ ಮತ್ತು ರಾಯುಡು ಜತೆಗೂಡಿ ತಂಡವನ್ನು ಆಧರಿಸಲು ಪ್ರಯತ್ನಿಸಿದರು. ೧೬ ರನ್ ಮಾಡಿದ ಕಾರ್ತಿಕ್ ಕೂಡ ಮುರಳಿಗೆ ಬಲಿಯಾದಾಗ ಮುಂಬೈ ಮೊತ್ತ ೪೪ ರನ್. ಡ್ವೆಯ್ನ್ ಸ್ಮಿತ್ ಆರು ರನ್ ಮಾಡಿ ನಿರ್ಗಮಿಸಿದಾಗ ಮುಂಬೈ ಮಾಡಿದ್ದು ೫೧ ರನ್.
ಆದರೆ ಇದರ ಬಳಿಕ ರಾಯುಡು ಮತ್ತು ಪೊಲಾರ್ಡ್ ಜೋಡಿ ಬೆಂಗಳೂರು ಬೌಲರ್‌ಗಳನ್ನು ಮನಬಂದಂತೆ ಚಚ್ಚಿತು. ಅದರಲ್ಲೂ ತುಂಬಾ ಆಕ್ರಮಣಕಾರಿಯಾಗಿ ಆಡಿದ ರಾಯುಡು ಅಂತ್ಯದಲ್ಲಿ ವಿನಯ್ ಕುಮಾರ್ ಹಾಗೂ ಜಹೀರ್ ಬೌಲಿಂಗ್‌ನಲ್ಲಿ ಬೌಂಡರಿ ಹಾಗು ಸಿಕ್ಸರ್ ಸುರಿಮಳೆಗೈದರು. ಅಂತಿಮ ಮೂರು ಓವರ್‌ಗಳಲ್ಲಿ ೪೦ ರನ್ ಕಳೆಹಾಕಿದ ಮುಂಬೈ ಗೆಲುವಿನ ಶಿಖರವನ್ನೇರಿತು. ರಾಯುಡು ೫೪ ಎಸೆತಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಹಿತ ೮೧ ರನ್ ಮತ್ತು ಪೊಲಾರ್ಡ್ ೩೧ ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳೊಂದಿಗೆ ೫೨ ರನ್ ಸಿಡಿಸಿ ಬೀಗುತ್ತಿದ್ದ ಕೊಹ್ಲಿ ಪಡೆಯ ಕೊಬ್ಬಿಳಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಳೂರು ಕ್ರಿಸ್ ಗೇಲ್ ಮತ್ತು ಕೊಹ್ಲಿ ವಿಕೆಟನ್ನು ಬೇಗನೆ ಕಳಕೊಂಡಿತು. ದಿಲ್‌ಶಾನ್ ಮತ್ತು ತಿವಾರಿ ಮೂರನೇ ವಿಕೆಟ್ ಜತೆಯಾಟದಲ್ಲಿ ೩೧ ರನ್ ಮಾಡಿದರು. ತಿವಾರಿ ೨೧ ರನ್ ಮಾಡಿ ಬೇಜವಾಬ್ದಾರಿಯಿಂದ ಹಿಟ್‌ವಿಕೆಟ್ ಆದರು. ಕೆಳಸರದಿಯಲ್ಲಿ ಮಾಯಾಂಕ್ ಅಗರ್‌ವಾಲ್ ೩೦ ಎಸೆತಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಹಿತ ೬೪ ರನ್ ಸಿಡಿಸಿ ತಂಡ ದೊಡ್ಡ ಮೊತ್ತ ಪೇರಿಸಲು ನೆರವಾದರು. ದಿಲ್‌ಶಾನ್ ೫೦ ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸ್ ಸಿಡಿಸಿ ೪೭ ರನ್ ಬಾರಿಸಿದರು.

ಕೊನೆಯ ಎಸೆತದಲ್ಲಿ ಚೆನ್ನೈಗೆ ರೋಚಕ ಗೆಲುವು

Posted by JAYAKIRANA Kirana on | 0 comments | Leave a comment...

ಕೊಲ್ಕತ್ತಾ: ಕೊನೆಯ ಎಸೆತದಲ್ಲಿ ಗೆಲುವಿಗೆ ಐದು ರನ್ ಬೇಕೇಬೇಕು. ಬೌಂಡರಿ ಬಾರಿಸಿದರೂ ಸಾಕಾಗಲ್ಲ, ಸಿಕ್ಸರೇ ಸಿಡಿಸಬೇಕು. ಕ್ರೀಸಿನಲ್ಲಿದ್ದ ಡ್ವೆಯ್ನ್ ಬ್ರಾವೋ ಇದನ್ನು ಮಾಡಿಯೇ ಬಿಟ್ಟರು. ರಜತ್ ಬಾಟಿಯಾ ಎಸೆದ ಅಂತಿಮ ಎಸೆತ ಮುಗಿಲೆತ್ತರಕ್ಕೆ ಸಾಗಿ ಪೆವಿಲಿಯನ್ ಸೇರಿತ್ತು. ಕೊಲ್ಕತ್ತಾ ನೈಟ್‌ರೈಡರ‍್ಸ್ ಕೊನೇ ಎಸೆತದಲ್ಲಿ ಪಂದ್ಯ ಕಳಕೊಂಡಿತು.
ಕೊನೆಯ ಎರಡು ಓವರ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ ೨೭ ರನ್ ಅಗತ್ಯವಿತ್ತು. ೧೯ನೇ ಓವರ್ ಎಸೆಯಲು ಬಂದ ಮರ್ಚೆಂಟ್ ಡೆ ಲಾಂಗ್ ಓವರ್‌ನಲ್ಲಿ ಧೋನಿ ಒಂದು ಸಿಕ್ಸ್ ಎರಡು ಬೌಂಡರಿ ಸಹಿತ ೧೮ ರನ್ ಸೂರೆಗೈದರು. ಅಂತಿಮ ಓವರ್‌ನಲ್ಲಿ ೯ ರನ್ ಬೇಕಿತ್ತು. ಮೊದಲ ಐದು ಎಸೆತಗಳಲ್ಲಿ ಕೇವಲ ನಾಲ್ಕು ರನ್ ನೀಡಿ, ಧೋನಿ ವಿಕೆಟ್ ಕೂಡ ಪಡೆದ ಬಾಟಿಯಾ ಅಂತಿಮ ಎಸೆತವನ್ನು ಫುಲ್‌ಟಾಸ್ ಎಸೆದು ಕೊಲ್ಕತ್ತಾದ ಬಳಿಯಿದ್ದ ಪಂದ್ಯವನ್ನು ಚೆನ್ನೈಗೆ ಒಪ್ಪಿಸಿದರು. ಮೈಕಲ್ ಹಸ್ಸಿ(೫೬) ಮತ್ತು ಮುರಳಿ ವಿಜಯ್(೩೬) ೯೦ ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಇವರಿಬ್ಬರು ಪೆವಿಲಿಯನ್ ಸೇರಿದ ಬಳಿಕ ಚೆನ್ನೈ ಇನ್ನಿಂಗ್ಸ್ ಕುಸಿತ ಕಂಡಿತು. ರೈನಾ ಮತ್ತು ಡು ಪ್ಲೆಸಿಸ್ ಬೇಗನೆ ನಿರ್ಗಮಿಸಿದರು. ಸ್ಪಿನ್ನರ್ ಸುನಿಲ್ ನರೈನ್ ಕೇವಲ ೧೪ ರನ್ ನೀಡಿ ಎರಡು ವಿಕೆಟ್ ಕಬಳಿಸಿ ಕೊಲ್ಕತ್ತಾ ಪಾಳಯದಲ್ಲಿ ಗೆಲುವಿನಾಸೆ ಮೂಡಿಸಿದರು. ಆದರೆ ಅಂತ್ಯದಲ್ಲಿ ಚೆನ್ನೈ ಕೈ ಮೇಲಾಯಿತು. ಗೆಲ್ಲಲೇಬೇಕಾಗಿದ್ದ ಪಂದ್ಯವನ್ನು ಗೆದ್ದಿರುವ ಚೆನ್ನೈ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದುಕೊಂಡಿದೆ. ಗಂಭೀರ್(೬೨) ಮತ್ತು ಮೆಕ್‌ಕಲಮ್(೩೭) ಕೊಲ್ಕತ್ತಾಗೆ ಭರ್ಜರಿ ಆರಂಭವನ್ನು ನೀಡಿದ್ದರು. ಆದರೆ ಕ್ಯಾಲೀಸ್ (೪), ತಿವಾರಿ(೧೨) ಮತ್ತು ಪಠಾಣ್(೧೧) ಬೇಗನೆ ನಿರ್ಗಮಿಸಿದ ಕಾರಣ ಕೊಲ್ಕತ್ತಾದ ದೊಡ್ಡ ಮೊತ್ತದ ಆಸೆಗೆ ತಣ್ಣೀರೆರಚಲಾಯಿತು.

ಸಚಿವನಾಗಲು ಯಡ್ಡಿ ಕಾಲಿಗೆ ಬಿದ್ದಿದ್ದ ಸಿ.ಟಿ.ರವಿ: ರೇಣುಕಾಚಾರ್ಯ ವಾಗ್ದಾಳಿ

Posted by JAYAKIRANA Kirana on | 0 comments | Leave a comment...


ಬೆಂಗಳೂರು: ಪಕ್ಷದ ವಕ್ತಾರ ಸಿ.ಟಿ.ರವಿ ಏನೆಂಬುದು ಜಿಲ್ಲೆ ಜನರಿಗೆ ಗೊತ್ತು. ನಾನು ಚಿಕ್ಕಮಗಳೂರಿಗೆ ಬಂದು ಸವಾಲು ಹಾಕ್ತೇನೆ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ದ್ದಾಗ, ತನ್ನ ಮಂತ್ರಿ ಮಾಡಿ ಅಂತ ಎಷ್ಟು ಬಾರಿ ಅವರ ಕಾಲಿಗೆ ಡೈ ಹೊಡೆದಿದ್ದ ಎಂಬುದು ಗೊತ್ತು... ಹೀಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿ ದವರು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ!
ಸಿ.ಟಿ.ರವಿಗೆ ಚಿಕ್ಕಮಗಳೂರಿನಲ್ಲಿ ಕೋಟಿ ರವಿ ಎಂದು ಕರೆಯುತ್ತಾರೆ. ತನ್ನ ಮಂತ್ರಿ ಮಾಡಿ ಅಂತ ಯಡಿ ಯೂರಪ್ಪನವರ ಕಾಲಿಗೆ ಬೀಳುತ್ತಿದ್ದ ರವಿ, ಈಗ ತನ್ನ ಸ್ವಾರ್ಥ, ತೇವಲಿಗಾಗಿ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಬೆಂಬಲ ನೀಡುತ್ತಿದ್ದಾರೆ. ನನ್ನ ಬಗ್ಗೆ ಮಾತನಾಡಲು, ನಮ್ಮ ನಾಯಕರ ಬಗ್ಗೆ ಮಾತನಾಡಲು ರವಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ನೀನ್ಯಾವ ಸತ್ಯ ಹರಿಶ್ಚಂದ್ರ ಅಂತ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ, ರವಿ ಏನೆಂಬುದು ಚಿಕ್ಕಮಗಳೂರಿನ ಜನತೆಗೆ ಗೊತ್ತಿದೆ. ಈ ಮೊದಲು ಏನಾಗಿದ್ದ, ಈಗ ಏನಾಗಿದ್ದಾನೆ ಎಂದು. ಬೆಂಗಳೂರಿನಲ್ಲಿ ಸಿಟಿ ರವಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ. ನನ್ನ ಕೆಣಕಿದ್ರೆ ಸುಮ್ಮನಿರಲಾರೆ ಹುಷಾರ್. ನಾನು ಚಿಕ್ಕಮಗಳೂರಿಗೆ ಬಂದು ಸವಾಲು ಹಾಕುತ್ತೇನೆ ಎಂದರು.
ಕುಮಾರಸ್ವಾಮಿಯಿಂದ ಹಣ ಪಡೆದ ರವಿ ನನ್ನ ಬಗ್ಗೆ ಆರೋಪ ಮಾಡಲು ಆತ ಯಾರು? ನಾನು ಕ್ಷೇತ್ರದ ಜನತೆಗೆ, ನಮ್ಮ ನಾಯಕರಿಗೆ ಗೌರವ ಕೊಡುತ್ತೇನೆ. ಹಾಗಾಗಿ ನನ್ನ ವಿರುದ್ಧ ಮಾತನಾಡಿದವರಿಗೆ ನಾನು ಗೌರವ ಕೊಡಲ್ಲ, ಯಾರಿಗೂ ಹೆದರಲ್ಲ ಎಂದು ಹೇಳಿದರು.
ರವಿಗೆ ಯಾವ ರೀತಿ ಸವಾಲು ಹಾಕುತ್ತೀರಿ ಎಂಬ ಪ್ರಶ್ನೆಗೆ, ಅದನ್ನು ನಾನು ಚಿಕ್ಕಮಗಳೂರಿಗೆ ಹೋಗಿ ಹೇಳುತ್ತೇನೆ ಎಂದು ರೇಣುಕಾಚಾರ್ಯ ತಿಳಿಸಿದರು. ಕಾಲು ಹಿಡಿಯೋದೇ ರವಿ ಸಂಸ್ಕೃತಿ. ಇವತ್ತು ನಮ್ಮ ಬಗ್ಗೆ ರವಿ ಹಗುರವಾಗಿ ಮಾತನಾಡುತ್ತೀರಾ ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದರು.

ಕೋಟೇಶ್ವರ ಪರಿಸರದಲ್ಲಿ ತ್ಯಾಜ್ಯ

Posted by JAYAKIRANA Kirana on | 0 comments | Leave a comment...

ಕುಂದಾಪುರ: ಕೋಟೇಶ್ವರ ಪಂಚಾಯಿತಿ ವ್ಯಾಪ್ತಿಯಲ್ಲಿ ಅವ್ಯಾಹತ ವಾಗಿ ಮತ್ತೆ ತ್ಯಾಜ್ಯ ಎಸೆದಿದ್ದು ಜನಸಾ ಮಾನ್ಯರಿಗೆ ತಿರುಗಾಡಲು ತೊಂದರೆ ಅನುಭವಿಸುವಂತಾಗಿದೆ.
ಈ ಹಿಂದೆ ಕೋಟೇಶ್ವರ ಪಂಚಾ ಯಿತಿ ವತಿಯಿಂದ ಸ್ಥಳೀಯ ಸಂಘ ಸಂಸ್ಥೆ ಹಾಗೂ ಶಾಲಾ ಕಾಲೇಜು ವತಿಯಿಂದ ಪ್ಲಾಸ್ಟಿಕ್ ಹೆಕ್ಕಿಕೊ, ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆದು, ಮನೆಮನೆಗೆ ತೆರಳಿ ಪ್ಲಾಸ್ಟಿಕ್ ನಿಂದ ಪರಿಸರದ ಮೇಲೆ ಆಗುವ ಹಾನಿಯ ಬಗ್ಗೆ ಜನರಿಗೆ ಮನದಟ್ಟು ಮಾಡಿ ಅಲ್ಲಲ್ಲಿ ಇಟ್ಟ ಕಸದ ತೊಟ್ಟಿಯ ಲ್ಲಿಯೇ ಕಸ ಹಾಕುವಂತೆ ಮನವಿ ಮಾಡಲಾಯಿತು. ಆದರೆ ಇತ್ತೀಚೆಗೆ ಜನರು ತಮಗೆ ಮನಬಂದಂತೆ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಕೋಟೇಶ್ವರ ಸ್ಮಶಾನ, ಕೋಡಿ ಕಿನಾರಕ್ಕೆ ಹೋಗುವ ಮಾರ್ಗ, ಬಸ್ ನಿಲ್ದಾಣ, ಬೀಜಾಡಿ ರಸ್ತೆಯ ಬದಿ, ಕೋಟೇಶ್ವರ ಶಾಲಾ ಸುತ್ತ ಮುತ್ತ, ಅಂಕದ ಕಟ್ಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ದೊಡ್ಡ ದೊಡ್ಡ ಕಸದ ತ್ಯಾಜ್ಯಗಳನ್ನು ಕಟ್ಟಿ ಮನ ಬಂದಂತೆ ಎಸೆಯುತ್ತಿದ್ದು, ಹೆದ್ದಾರಿ ಬದಿಯಲ್ಲಿ ತಿರುಗಾಡುವ ವಾಹನ ಸವಾರರ ಚಕ್ರಕ್ಕೆ ಪ್ಲಾಸ್ಟಿಕ್ ಸುತ್ತಿಕೊಂಡು ಕಿರಿಕಿರಿ ಆಗುದಲ್ಲದೆ ಅನಾಹುತಕ್ಕೆ ಎಡೆಮಾಡಿ ಕೊಡುತ್ತದೆ. ಪಂಚಾಯಿತಿ ಯವರು ತ್ಯಾಜ್ಯ ಹಾಕುವವರ ವಿರುದ್ದ ಕ್ರಮ ಕೈಗೊಳ್ಳುವ ಕುರಿತು ಸೂಚನಾ ಫಲಕಗಳನ್ನು ಹಾಕಿದ್ದಾರೆ. ಆದರೆ, ಅದರ ಸುತ್ತ ಮುತ್ತಲು ಇನ್ನೂ ಹೆಚ್ಚಿನ ಕಸಗಳ ರಾಶಿ ಬಿದ್ದಿದೆ. ಇನ್ನಾದರೂ ತ್ಯಾಜ್ಯ ಎಸೆಯುವವರ ವಿರುದ್ದ ಕ್ರಮ ಕೈಗೊಳ್ಳುವ ಬದಲು ಕಾರ್ಯಾಚರಣೆ ಕೈಗೊಳ್ಳುವುದೆ ಸೂಕ್ತ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.

ಮಂತ್ರಿ ಮಂಡಲ ವಿಸ್ತರಣೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್‌ರಚನೆಗೆ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ. ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಪಕ್ಷ ತೊರೆಯುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಪಕ್ಷ ಈ ನಿರ್ಧಾರ ಕೈಗೊಂಡಿದೆ. ಬಹುತೇಕ ಮುಖ್ಯಮಂತ್ರಿಯವರು ಇದೇ ೧೭ರಂದು ಮಂತ್ರಿ ಮಂಡಲವನ್ನು ಪುನರ್‌ರಚಿಸಿ ಕೆಲವರನ್ನು ಕೈಬಿಟ್ಟು ೧೬ ಮಂದಿಯನ್ನು ಹೊಸದಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ. ಇದಕ್ಕಾಗಿ ಕಸರತ್ತು ನಡೆಸಿರುವ ಮುಖ್ಯ ಮಂತ್ರಿಯವರು ರಾಜ್ಯಾಧ್ಯಕ್ಷ ಈಶ್ವರಪ್ಪ ಅವರೊಂದಿಗೆ ಒಂದೆರಡು ಬಾರಿ ಸಮಾಲೋಚನೆ ನಡೆಸಿದ್ದಾರೆ.
ಖಾತೆಗಳ ಹಂಚಿಕೆ ವಿಚಾರದಲ್ಲೂ ಕೆಲವು ಬದಲಾವಣೆ ಮಾಡಲಿದ್ದು, ಹೆಚ್ಚುವರಿ ಖಾತೆಗಳನ್ನು ಹೊಂದಿರುವವರಿಂದ ಹಿಂದಕ್ಕೆ ಪಡೆದು ಹೊಸಬರಿಗೆ ನೀಡಲಿದ್ದಾರೆ. ಸಂಪುಟ ಪುನರ್‌ರಚನೆ ಮುಗಿಯುತ್ತಿದ್ದಂತೆ ೭೬ ನಿಗಮ ಮಂಡಳಿಗಳಿಗೆ ಪಕ್ಷದ ಕೆಲವು ಹಿರಿಯ ಶಾಸಕರು ಹಾಗೂ ಕಾರ್ಯಕರ್ತರನ್ನು ನೇಮಕ ಮಾಡಲಿದೆ. ಈಗಾಗಲೇ ಈಶ್ವರಪ್ಪ ಪಟ್ಟಿ ಸಿದ್ದ ಪಡಿಸಿದ್ದು, ೧೧ಶಾಸಕರಿಗೆ, ಗಮ ಮಂಡಳಿಯಲ್ಲಿ ಅವಕಾಶ ಮಾಡಿಕೊಡಲಾಗುವುದು. ಉಳಿದ ನಿಗಮಗಳು ಕಾರ್ಯಕರ್ತರಿಗೆ ದೊರೆಯಲಿದೆ.

ಸ್ತನಗಳಲ್ಲಿ ಬಾಂಬ್ ಅಳವಡಿಕೆ: ಅಲ್‌ಖೈದಾ ಹೊಸ ಪ್ಲ್ಯಾನ್!

Posted by JAYAKIRANA Kirana on | 0 comments | Leave a comment...

ಲಂಡನ್: ಆತ್ಮಾಹುತಿ ದಾಳಿಗೆ ಪುರುಷರನ್ನು ಬಳಸಿಕೊಳ್ಳುತ್ತಿದ್ದ ಅಲ್ ಖೈದಾ ಈಗ ಮಹಿಳೆಯರನ್ನು ಈ ಜಾಲದೊಳಗೆ ಸಿಲುಕಿಸಿದ್ದು, ಅವರ ಸ್ತನದಲ್ಲಿ ಬಾಂಬ್ ಅಳವಡಿಸುವಂತೆ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಇಂಗ್ಲೆಂಡ್‌ನ ಗುಪ್ತಚರ ಮೂಲಗಳು ತಿಳಿಸಿವೆ.
ಮಹಿಳೆಯರ ಸ್ತನ ಹಾಗೂ ಪುರು ಷರ ಕಿಬ್ಬೊಟ್ಟೆಯಲ್ಲಿ ಬಾಂಬ್ ಅಳವ ಡಿಸುವುದರಿಂದ ವಿಮಾನ ನಿಲ್ದಾಣದಲ್ಲಿ ಸುಲಭವಾಗಿ ರಕ್ಷಣಾ ವ್ಯೂಹವನ್ನು ಭೇದಿಸಿ ವಿಮಾನದೊಳಗೆ ಪ್ರವೇಶಿಸಬ ಹುದು ಎಂದು ಗುಪ್ತಚರ ಮೂಲಗಳು ಆತಂಕ ವ್ಯಕ್ತಪಡಿಸಿದೆ.
ಈ ಬಾಂಬ್‌ಗಳನ್ನು ಸ್ಕ್ಯಾನರ್‌ಗಳಿಗೆ ಪತ್ತೆ ಹಚ್ಚುವುದು ತುಂಬಾ ಕಷ್ಟವಾ ಗಬಹುದು. ಈ ಬಾಂಬ್‌ಗಳನ್ನು ಸ್ಪೋಟಿಸಲು ಕೆಲವು ಇಂಜೆಕ್ಷನ್‌ಗಳನ್ನು ಬಳಸಲಾಗುತ್ತದೆ ಎಂದು ಗುಪ್ತಚರ ಮೂಲಗಳು ಹೇಳಿರುವುದಾಗಿ ‘ದ ಡೈಲಿ ಮಿರರ್ ಪತ್ರಿಕೆ ವರದಿ ಮಾಡಿದೆ.
ಅಲ್‌ಖೈದಾಕ್ಕಾಗಿ ಕೆಲಸ ಮಾಡುತ್ತಿದ್ದ ವೈದ್ಯನೊಬ್ಬರನ್ನು ಈ ವರ್ಷ ಸಿಐಎ ದ್ರೋನ್ ದಾಳಿ ವೇಳೆ ಎನ್‌ಕೌಂಟರ್ ಮಾಡಲಾಗಿದೆ. ಇಬ್ರಾಹಿಂ ಅಲ್ ಅನ್ಸಾರಿ ಎನ್ನುವ ವೈದ್ಯ ಮಹಿಳಾ ಆತ್ಮಾಹುತಿ ಬಾಂಬರ್‌ಗಳ ಸ್ತನಗಳಲ್ಲಿ ಬಾಂಬ್‌ಗಳನ್ನು ಜೋಡಿಸುತ್ತಿದ್ದ. ಇಂತಹ ಆತ್ಮಾಹುತಿ ಬಾಂಬರ್‌ಗಳು ವಿಶ್ವಕ್ಕೆ ದೊಡ್ಡ ಅಪಾಯ ಎಂದು ಗುಪ್ತಚರ ಮೂಲಗಳು ಎಚ್ಚರಿಸಿದೆ.

ಬಾವಿಗೆ ಬಿದ್ದ ತಾಯಿ ಮಗಳ ರಕ್ಷಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು : ಕಾಸರಗೋಡು ಬೇರ್ಕ ಎಂಬಲ್ಲಿ ಆಯತಪ್ಪಿ ಬಾವಿಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ತಾಯಿಯೂ ಬಾವಿಗೆ ಹಾರಿ ಮೇಲಕ್ಕೇರಲಾಗದೆ ಬಾವಿಯಲ್ಲೇ ಉಳಿದಾಗ ಸಾರ್ವಜನಿಕ ಸಹಾಯದಿಂರ ಅಗ್ನಿಶಾಮಕದಳ ಬಂದು, ಅವರನ್ನು ಮೇಲಕ್ಕೆತ್ತಿ ರಕ್ಷಿಸಿದೆ. ಸ್ಥಳೀಯ ವಾಸಿ ಅಬ್ಬಾಸ್ ಎಂಬವರ ಪುತ್ರಿ ಜಸೀನಾ(೧೬) ಬಾವಿಗೆ ಬಿದ್ದಾಗ ,
ರಕ್ಷಿಸಲು ತಾಯಿ ಮೈಮುನಾ ಎಂಬವರೂ ಬಾವಿಗೆ ಹಾರಿದ್ದರು. ಇವರ ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯ ರಾದ ಹ್ಯಾರಿಸ್, ಇಕ್ಬಾಲ್ ಅವರು ಅಗ್ನಿಶಾಮಕ ದಳವನ್ನು ಕರೆಸಿದ್ದು, ಬಾವಿಗೆ ಬಿದ್ದವರನ್ನು ಮೇಲಕ್ಕೆತ್ತಿ ರಕ್ಷಿಸಲಾಗಿದೆ.

ಮಣಿಪಾಲ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣ: ಮುಚ್ಚಿಹಾಕಲು ಕಾಂಗ್ರೆಸ್ ನಾಯಕರ ಯತ್ನ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಕಳೆದ ಕೆಲವು ದಿನಗಳ ಹಿಂದೆ ಮಲೇಷ್ಯಾ ಮೂಲದ ಮಣಿಪಾದ ವಿದ್ಯಾರ್ಥಿನಿಯನ್ನು ಮಲ್ಪೆ ಸಮುದ್ರ ತೀರದಲ್ಲಿ ಅತ್ಯಾಚಾರವೆಸಗಿದ ಪ್ರಕರಣದ ಆರೋಪಿಗಳನ್ನು ಸ್ಥಳೀಯ ಕಾಂಗ್ರೆಸ್ ನಾಯಕರು ರಕ್ಷಿಸು ತ್ತಿರುವ ಬಗ್ಗೆ ತಿಳಿದುಬಂದಿದೆ.
ಮೆಹಂದಿ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ಮಲ್ಪೆ ಕಾನಂಗಿ ನಿವಾಸಿ ಯುವಕರೆನ್ನಲಾದ ನಾಲ್ವರು ಸಮುದ್ರ ತೀರದಲ್ಲಿದ್ದ ಮಲೇಷ್ಯಾ ಮೂಲದ ಯುವತಿ ಹಾಗೂ ಆಕೆಯ ಪ್ರಿಯಕರನ ಬಳಿ ಆಗಮಿಸಿ ಆತನನ್ನು ಕಟ್ಟಿ ಹಾಕಿದ್ದರೆನ್ನಲಾಗಿದೆ. ಬಳಿಕ ಯುವತಿಯನ್ನು ಅದರ ಲ್ಲಿದ್ದ ಯುವಕನೋರ್ವ ಅತ್ಯಾಚಾರ ನಡೆಸಲು ಮುಂದಾ ಗಿದ್ದರು. ಕಟ್ಟಿದಲ್ಲಿಂದ ಕಷ್ಟಪಟ್ಟು ತಪ್ಪಿಸಿದ ಪ್ರಿಯಕರ ಓಡಿ ಮಲ್ಪೆ ಠಾಣಾ ಪೊಲೀಸರಿಗೆ ದೂರು ನೀಡಿದ್ದನೆನ್ನಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸುವಾಗ ಆರೋಪಿಗಳು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗುತ್ತಿದ್ದರೆನ್ನಲಾಗಿದೆ. ಬಳಿಕ ಸ್ಥಳೀಯರು ಹಾಗೂ ಪೊಲೀಸರು ಸೇರಿ ನಾಲ್ವರಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅದರಲ್ಲಿ ಇಬ್ಬರು ಪರಾರಿಯಾಗಿದ್ದರು. ಇನ್ನಿಬ್ಬರು ಮಲ್ಪೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ ರೆನ್ನಲಾಗಿದೆ. ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರಿಗೆ ಕಾಂಗ್ರೆಸ್ ನಾಯಕರಿಂದ ಬಂದ ಒತ್ತಡದ ಹಿನ್ನೆಲೆಯಲ್ಲಿ ಆಕೆಯನ್ನು ಮನವೊಲಿಸಿ ದೂರು ನೀಡದಂತೆ ಯತ್ನಿಸಿದ್ದಾರೆನ್ನಲಾಗಿದೆ. ಬಳಿಕ ವಶದಲ್ಲಿದ್ದ ಆರೋಪಿಗಳಿಬ್ಬರನ್ನು ಬಿಟ್ಟುಬಿಟ್ಟಿದ್ದರೆನ್ನಲಾಗಿದೆ. ಈ ಕಾರಣಕ್ಕಾಗಿ ಪ್ರಕರಣ ನಡೆದು ಹಲವು ದಿನಗಳಾದರೂ ಆರೋಪಿಗಳನ್ನು ಬಂಧಿಸಲಾಗಿಲ್ಲ ಎಂಬ ಮಾತು ಸ್ಥಳೀಯರಿಂದಲೂ ಕೇಳಿಬರುತ್ತಿದೆ.
ಮಲ್ಪೆಯಲ್ಲಿರುವ ಹೊಟೇಲ್ ಬೀಚ್ ಪ್ಯಾರಡೈಸ್ ಐಲ್ಯಾಂಡ್‌ನಲ್ಲಿ ತಡರಾತ್ರಿವರೆಗೂ ನಂಗಾನಾಚ್ ನಡೆಯುತ್ತಿದ್ದರೂ ಪೊಲೀಸರು ಗಮನಹರಿಸುತ್ತಿಲ್ಲ. ಸ್ಥಳೀಯರು ಧ್ವನಿವರ್ಧಕಗಳಿಂದ ತೊಂದರೆಗೀಡಾಗಿ ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಹೀಗೆ ಎಷ್ಟು ಕಾಲ ಮುಂದುವರಿಸಲು ಸಾಧ್ಯ?

Posted by JAYAKIRANA Kirana on | 0 comments | Leave a comment...

ವಿಶ್ಲೇಷಣೆ
ಕರ್ನಾಟಕದ ಜನತೆ ಮತ್ತೊಂದು ಬಾರಿ ದೊಡ್ಡ ನಾಟಕ ನಿರೀಕ್ಷಿಸಿ ಮೋಸ ಹೋಗಿದ್ದಾರೆ. ರಾಜ್ಯ ಬಿಜೆಪಿಯ ಗುಂಪುಗಾರಿಕೆಯ ನಾಟಕ ಈ ಬಾರಿ ಹೆಚ್ಚು ದಿನ ಪ್ರದರ್ಶನವಾಗಲಿಲ್ಲ. ಹಾಗೆಂದು ನಾಟಕ ಕೊನೆಗೊಂಡಿದೆ ಎಂದರ್ಥವಲ್ಲ. ಮುಂದಿನ ದಿನಗಳಲ್ಲಿ ಮತ್ತೂ ಪ್ರದರ್ಶನವಾಗಲಿದೆ. ಹೈಕಮಾಂಡ್ ಸದ್ಯಕ್ಕೆ ನಾಟಕದ ಸೂತ್ರಧಾರರನ್ನು ನಿಯಂತ್ರಿಸಲು ಸಲವಾಗಿದೆ.
 ಇನ್ನು ಒಂದು ವರ್ಷದೊಳಗೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಕಳೆದ ನಾಲ್ಕು ವರ್ಷದ ಬಿಜೆಪಿಯ ಆಡಳಿತದಲ್ಲಿ ಒಂದು ದಿನವೂ ಸರಕಾರಕ್ಕೆ ನೆಮ್ಮದಿ ಸಿಗಲಿಲ್ಲ. ಎರಡು ಮುಖ್ಯಮಂತ್ರಿಗಳನ್ನು ನೀಡಿರುವ ಬಿಜೆಪಿ ಸರಕಾರ ಮತ್ತೊಂದು ಮುಖ್ಯಮಂತ್ರಿಯನ್ನು ಕೊಡುವ ಸಾಧ್ಯತೆ ಇತ್ತು. ಕೊನೆ ಘಳಿಗೆಯಲ್ಲಿ ಆ ನಿರೀಕ್ಷೆ ಮುಂದೂಡಲ್ಪಟ್ಟಿದೆ. ಏನಿದ್ದರೂ ಸರಕಾರವೆಂಬ ಎತ್ತಿನ ಮೂಗಿನ ಬಳ್ಳಿಯಲ್ಲಿ ಯಡಿಯೂರಪ್ಪನ ಹಿಡಿತ ಬಿಗಿಯಾಗುವಂತೆ ಕಂಡು ಬರುತ್ತಿದೆ.
೮ ಸಚಿವರ ರಾಜೀನಾಮೆ ಪಡೆದು ಕೈಯಲ್ಲಿಟ್ಟುಕೊಂಡು ದೊಡ್ಡ ನಾಟಕಕ್ಕೆ ಯೋಜನೆ ಹಾಕಿದ್ದ ಯಡಿಯೂರಪ್ಪನ ಬಾಯಿ ಮುಚ್ಚಿಸಲು ಬಿಜೆಪಿ ಹೈಕಮಾಂಡ್‌ಗೆ ಈ ಬಾರಿ ತುಂಬಾ ಸುಲಭವಾದಂತೆ ಕಂಡು ಬರುತ್ತಿದೆ. ಹೈಕಮಾಂಡ್ ಯಡಿಯೂರಪ್ಪನವರ ವಿಷಯದಲ್ಲಿ ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸೋತಿದೆ. ಏನೋ ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದೆ. ಆದ್ದರಿಂದಲೇ ನಾಟಕದ ಮುಂದುವರಿದ ಭಾಗ ಮುಂದಿನ ದಿನಗಳಲ್ಲಿ ಕಂಡು ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಯಡಿಯೂರಪ್ಪನವರ ವಿಷಯದಲ್ಲಿ ಹೈಕಮಾಂಡ್ ಈ ಬಾರಿ ರಾಜಿ ಮಾಡಿಕೊಳ್ಳುತ್ತಿದೆ, ಮೃದು ಧೋರಣೆ ಅನುಸರಿಸುತ್ತಿದೆ ಎಂದು ಯಾರೂ ಭಾವಿಸಿರಲಿಲ್ಲ. ಈ ಬಾರಿ ಸರಕಾರ ಪತನಗೊಂಡರೂ ಸರಿ, ಯಡಿಯೂರಪ್ಪನ ಬೇಡಿಕೆಗೆ ಮಣಿಯುವುದಿಲ್ಲ ಎಂಬ ನಿಲುವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಊಹಿಸಿದವರೇ ಹೆಚ್ಚು. ಬಿಜೆಪಿಯ ಈ ಭಿನ್ನಮತದ ಆಟ ಜನರಿಗೆ ಬೇಸರ ಹಿಡಿಸಿದೆ. ಇದೇ ರೀತಿ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೇರುವುದು ಬಿಡಿ, ೫೦ ಸೀಟು ಗೆಲ್ಲುವುದೂ ಕಷ್ಟ. ಬಿಜೆಪಿ ಹೈಕಮಾಂಡ್ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಸಿದ್ಧವಾಗುವ ಧೈರ್ಯ ತೋರಬೇಕಿತ್ತು. ತಾನು ಕಾಂಗ್ರೆಸ್‌ನಂತೆ ಅಲ್ಲ ಎಂಬುದನ್ನು ಅದು ಸಾಬೀತು ಮಾಡಬೇಕಿತ್ತು. ಆದರೆ ಹಾಗಾಗಲಿಲ್ಲ, ಸಮಸ್ಯೆಯನ್ನು ಜೀವಂತವಿರಿಸಿಕೊಂಡು ಅದರ ಅಪಾಯವನ್ನು ಸದ್ಯಕ್ಕೆ ದೂರ ಸರಿಸಿದೆಯಷ್ಟೆ.
ಯಡಿಯೂರಪ್ಪರನ್ನು ಪಕ್ಷದಿಂದ ಉಚ್ಚಾಟಿಸುವ ಧೈರ್ಯ ಬಿಜೆಪಿಗಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಜತೆಗೆ ಅವರಿಗೆ ಅಕಾರ ಕೊಡುವ ಧೈರ್ಯವೂ ಅದಕ್ಕಿಲ್ಲ. ಅವರು ಎಷ್ಟು ಸಮರ್ಥರಿದ್ದರೂ ಭ್ರಷ್ಟಾಚಾರದ ವಿಷಯದಲ್ಲಿ ಮಾತ್ರ ಅವರು ಮೈತುಂಬಾ ಕೆಸರು ಮೆತ್ತಿಸಿಕೊಂಡಿದ್ದಾರೆ. ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ನಾವು ಒಂದು ನಿರೀಕ್ಷೆ ಇರಿಸಬಹುದಾದ ಪಕ್ಷವಾಗಿರುವ ಬಿಜೆಪಿ ಯಡಿಯೂರಪ್ಪನಿಗೆ ಅಧಿಕಾರ ನೀಡುವುದು ಸುಲಭದ ಮಾತಲ್ಲ.
ಯಡಿಯೂರಪ್ಪ ಕೂಡ ಈಗ ಅಧಿಕಾರದ ನಿರೀಕ್ಷೆಯಲ್ಲಿಲ್ಲ. ಆದರೆ ತನಗೆ ಸಿಗದಿದ್ದರೂ ಪರವಾಗಿಲ್ಲ, ಡೀವಿ ಮುಖ್ಯಮಂತ್ರಿಯಾಗಿರಬಾರದು ಎಂಬು ನಿಲುವು ಅವರದ್ದು. ಅದೇ ಕಾರಣಕ್ಕಾಗಿ ಅವರು ಈಗ ರಣರಂಗ ಪ್ರವೇಶಿಸಿರುವುದು. ತಾನು ಸಿಬಿಐ ವಿಚಾರಣೆ ಎದುರಿಸುವ ಸಂದರ್ಭ ಡೀವಿ ಅಧಿಕಾರ ಅನುಭವಿಸಬಾರದು ಎಂಬ ಹಟ ಅವರದ್ದು. ಅದು ಈಡೇರುತ್ತದೋ ಗೊತ್ತಿಲ್ಲ. ಜತೆಗೆ ಈಗ ತಾನು ಸಕ್ರಿಯವಾಗಿದ್ದರೆ ಮಾತ್ರ ಮುಂದಿನ ಚುನಾವ ಣೆಯಲ್ಲಿ ಯಾರದ್ದೋ ದಯೆಯಿಂದ ಬಿಜೆಪಿ ಗೆದ್ದುಬಿಟ್ಟರೆ ತಾನು ಹಕ್ಕು ಮಂಡಿಸಲು ಸಾಧ್ಯ ಎಂದು ಅವರು ಭಾವಿಸಿರಬಹುದು. ಆದರೆ ಬಿಜೆಪಿ ಹೈಕಮಾಂಡ್ ಒಂದು ವಿಷಯವನ್ನಂತು ತಿಳಿದಿರಬೇಕಾದ ಅಗತ್ಯವಿದೆ. ಕರ್ನಾಟಕದ ಬಿಜೆಪಿಯನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗೆ ಒಂದು ಸೂಕ್ತ ಪರಿಹಾರವನ್ನು ಕೂಡಲೇ ಹುಡುಕದಿದ್ದರೆ ಅದು ಮುಂದಿನ ದಿನಗಳಲ್ಲಿ ಪಕ್ಷವನ್ನು ಮುರಿದು ಮುಕ್ಕಿ ತಿಂದೀತು. ಸಮಸ್ಯೆಯನ್ನು ಜೀವಂತವಾಗಿರಿಸಿ ಬೆಳೆಸಿಕೊಳ್ಳುತ್ತಾ ಹೋದರೆ ಅದು ಅಪಾಯಕಾರಿ ತಿರುಗಿ ನಿಲ್ಲಲಿದೆ. ಆದ್ದರಿಂದಲೇ ಕೇಳುತ್ತಿರೋದು- ಹೀಗೆ ಎಷ್ಟು ಕಾಲ ಮುಂದುವರಿಸಲು ಸಾಧ್ಯ?

ಇಂದು ಇರಾ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರ ಅವ್ಯವಹಾರದ ಬಗ್ಗೆ ತನಿಖೆಗೆ ಒತ್ತಾಯಿಸಿ ಇಂದು ಗ್ರಾಮಸ್ಥರು ಪಂಚಾಯತ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಲಿದ್ದಾರೆ.
ಹಾಲಿ ಅಧ್ಯಕ್ಷ ಅಬ್ದುಲ್ ರಝಾಕ್ ಅವರು ಕೋಟ್ಯಂತರ ರೂಪಾಯಿಯ ಅವ್ಯವಹಾರ ನಡೆಸಿದ್ದು ಇದರ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಲು ಬಿಜೆಪಿ ತೀರ್ಮಾನಿಸಿದ್ದು ಇದಕ್ಕೆ ಜೆಡಿಎಸ್ ಸಾಥ್ ನೀಡಿತ್ತು. ಈ ಹಿನ್ನೆಲೆ ಯಲ್ಲಿ ಅಧ್ಯಕ್ಷರ ಮೇಲೆ ೨೧ ಆರೋಪ ಗಳುಳ್ಳ ಕರಪತ್ರವನ್ನೂ ಮುದ್ರಿಸಿ ಕೆಲವು ದಿನಗಳ ಹಿಂದೆಯೇ ಗ್ರಾಮದಲ್ಲಿ ಹಂಚಲಾಗಿತ್ತು.
ಈ ಬಗ್ಗೆ ಮಾಹಿತಿಯರಿತ ಬಂಟ್ವಾಳ ತಾಲೂಕು ಅಧಿಕಾರಿ ನಿನ್ನೆ ಪಂಚಾಯತ್‌ಗೆ ಭೇಟಿ ನೀಡಿ ೧೫ ದಿನಗಳಲ್ಲಿ ತನಿಖೆ ನಡೆಸುವ ಭರವಸೆ ನೀಡಿದ್ದು ದಿನಾಂಕ ನಿಗದಿಗೊಳಿಸದ ಕಾರಣ ಬಿಜೆಪಿ ಮುಖಂಡರು ಆಕ್ರೋ ಶಗೊಂಡು ಇಂದು ಪಂಚಾಯತ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿಯೇ ಸಿದ್ಧ ಎಂದು ಸವಾಲು ಹಾಕಿದ್ದು ಈ ಹಿನ್ನೆಲೆಯಲ್ಲಿ ಇಂದಿನ ಪ್ರತಿಭಟನೆ ಕುತೂಹಲಕ್ಕೆ ಕಾರಣವಾಗಿದೆ.

ಪುರಸಭಾ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಮಲಹೊರುವ ಪ್ರಕರಣ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಮಲಹೊರುವ ಅನಾ ಗರಿಕ ಸಂಸ್ಕೃತಿಯ ಬಗ್ಗೆ ಕಾರ್ಕಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದೆ.
ಮೇ ೩ರಂದು ಬಂಡೀ ಮಠ ಬಸ್ಸು ನಿಲ್ದಾಣದ ಮುಂಭಾಗದ ರಸ್ತೆ ಯಲ್ಲಿ ಪುರಸಭಾ ಪ್ರಾಯೋಜಕತ್ವದಲ್ಲಿ ದಲಿತ ಯುವಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿ ತ್ಯಾಜ್ಯವಸ್ತಗಳು (ಮಲ,ಮೂತ್ರ ಸಹಿತ) ಕಬ್ಬಿಣದ ಬಕೇಟ್ ಮೂಲಕ ಮೇಲಕ್ಕೆ ತೆಗೆಯಲಾಗಿತ್ತು. ಇದು ಮಲ ಹೊರುವ ನಿಷೇಧಿತ ಪದ್ಧತಿಯಾಗಿರುವ ಈ ಬಗ್ಗೆ ಜಯಕಿರಣ ಪತ್ರಿಕೆ ಬಯಲುಗೊಳಿಸಿ ಜಿಲ್ಲಾಡಳಿತವನ್ನು ಎಚ್ಚರಿಸಿತ್ತಾದರೂ, ಯಾವುದೇ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ವ್ಯಾಪಕ ಆರೋಪಗಳು ಕೇಳಿಬಂದಿದೆ. ಈ ನಡುವೆ ಮಂಗಳೂರಿನಲ್ಲಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು ಕಾರ್ಕಳ ಪುರಸಭೆಗೆ ನೋಟಿಸ್ ಜಾರಿಗೊಳಿಸಿತು.
ಈ ಎಲ್ಲಾ ಬೆಳವಣಿಗೆಯ ನಡುವೆ ಪ್ರಕರಣದ ಆರೋಪಿಗಳು ಸಹಿತ ಕೆಲ ಪ್ರಮುಖ ಅಧಿಕಾರಿಗಳು ನಿರೀಕ್ಷಣಾ ಜಾಮೀನು ಪಡೆದ ಬೆನ್ನಲ್ಲೇ ಸರಿ ಸುಮಾರು ಒಂದು ವಾರದ ಬಳಿಕ ಪುರಸಭಾ ಮುಖ್ಯಾಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ ಅವರು ಕಚೇರಿಯ ಇಬ್ಬರು ಸಿಬ್ಬಂದಿ ವಿರುದ್ಧ ನಗರ ಠಾಣೆಯಲ್ಲಿ ದೂರು ಸಲ್ಲಿಸಿರುವ ಬಗ್ಗೆ ಹಲವು ಅನುಮಾನಗಳಿಗೆ ಎಡೆಮಾಡಿದೆ. ಘಟನಾ ಸ್ಥಳದಲ್ಲಿ ಇಲ್ಲದಿದ್ದ ಆರೋ ಗ್ಯಧಿಕಾರಿ ಸುಂದರ ಪೂಜಾರಿ, ದಿನಗೂಲಿಯಾಳುವಾಗಿರುವ ಟ್ರ್ಯಾಕ್ಟರ್ ಚಾಲಕ ದಲಿತ ಯುವಕ ವಿನಯ ಇವರಿಬ್ಬರು ಆರೋಪಿಗಳೆಂದು ಹೆಸರಿ ಸಲಾಗಿತ್ತು. (ಒಟ್ಟಿನಲ್ಲಿ ಹೇಳುವುದಾದರೆ ಪ್ರಕರಣ ಮುಚ್ಚಿಹೋಗುವ ರೀತಿಯಲ್ಲಿ)
 ನಾಮನಿರ್ದೇಶಿತ ಸದಸ್ಯ ಪ್ರಸನ್ನ ಅವರು ನಿನ್ನೆ ನಡೆದ ಸಾಮಾನ್ಯ ಸಭೆ ಯಲ್ಲಿ ಪ್ರಸ್ತಾಪಿಸಿ ಮಲಹೋರುವ ಪದ್ಧತಿ ಜಾರಿಯಲ್ಲಿಟ್ಟ ಪುರಸಭಾ ಆಡಳಿತ ಕ್ರಮದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಇದರ ಬಗ್ಗೆ ಮುಖ್ಯಾ ಧಿಕಾರಿ ಸಮಗ್ರ ಮಾಹಿತಿ ನೀಡಬೇ ಕೆಂದು ಒತ್ತಾಯಿಸಿದರು. ಇದಕ್ಕೆ ಧ್ವನಿ ಗೂಡಿಸಿದ ಪ್ರತಿಪಕ್ಷ ನಾಯಕ ನವೀನ್‌ಚಂದ್ರ ಹೆಗ್ಡೆ ಅವರು ಈ ಘಟನೆಯಿಂದಾಗಿ ಕಾರ್ಕಳ ಪುರಸಭೆಗೆ ಮಸಿಬಳಿಯುವಂತಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಮತ್ತೊಬ್ಬ ನಾಮನಿರ್ದೇಶಿತ ಸದಸ್ಯ ಹರೀಶ್ ಶೆಣೈ ಅವರು ಮಾತನಾಡುತ್ತಾ ಪುರಸಭೆಯ ಕಳಂಕ ತಂದ ಆಡಳಿತದಿಂದ ಇಂತಹ ಘಟನಾವಳಿ ನಡೆದಿದೆ. ೨೦೧೧ ಜೂನ್ ೨೯ರಂದು ಬಂಡೀಮಠ ಬಸ್ ನಿಲ್ದಾ ಣದ ಎದುರುಗಡೆಯಲ್ಲಿರುವ ಮ್ಯಾನ್ ಹೋಲ್ ಹಾಗೂ ಒಳಚರಂಡಿ ಪೈಪ್‌ಲೈನ್ ದುರಸ್ಥಿಗೆ ೬.೨೫ ಲಕ್ಷ ರೂ.ಯನ್ನು ಕ್ರಿಯಾಯೋಜನೆಯಡಿ ಯಲ್ಲಿ ಕಾದಿರಿಸಲಾಗಿತ್ತು. ಅನುಮೋ ದನೆಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಅದನ್ನು ಕಳುಹಿಸಿಕೊಡಲಾಗಿತ್ತಾದರೂ, ನಂತರದ ಬೆಳವಣಿಗೆ ಏನಾಯಿತ್ತೆಂಬುವುದು ಅರಿತುಕೊಳ್ಳುವ ವ್ಯವದಾನಕ್ಕೆ ಪುರಸಭಾ ಆಡಳಿತ ವರ್ಗ ಮುಂದಾಗಿಲ್ಲ. ಒಂದು ವರ್ಷದ ಹಿಂದೆ ಅದೇ ಮ್ಯಾನ್‌ಹೋ ಲ್‌ನ್ನು ಶುಚಿತ್ವಗೊಳಿಸಿದ ರೀತಿಯನ್ನು ಸಭೆಯ ಗಮನಕ್ಕೆ ತಂದರಾದರೂ ಈ ಭಾರೀ ನಡೆದಿರುವ ಘಟನಾವಳಿಯನ್ನು ಬಹಿರಂಗಪಡಿಸಲು ವಿಫಲರಾ ಗಿದ್ದರು. ಪ್ರತಿಭಟನೆಯನ್ನು ಅರಿತುಕೊಂಡು ಮುಖ್ಯಾಧಿಕಾರಿಯವರೇ ತಡರಾತ್ರಿ ವೇಳೆಗೆ ಮತ್ತೇ ಮ್ಯಾನ್‌ಹೋಲ್ ಶುಚಿತ್ವಗೊಳಿಸಿರುವುದನ್ನು ಸಭೆಯ ಗಮನಕ್ಕೆ ತಂದರು. ಪ್ರಕರಣದಲ್ಲಿ ಅಮಾಯಕರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರುವ ಮುಖ್ಯಾಧಿಕಾರಿಯ ನಡತೆಯ ಬಗ್ಗೆ ಇದೇ ಸಂದರ್ಭದಲ್ಲಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಾಜಿ ಪುರಸಭಾ ಅಧ್ಯಕ್ಷ ಎನ್.ಆರ್ ಸುಭೀತ್ ಕುಮಾರ್ ಅವರು ಮಾತನಾಡುತ್ತಾ ಮ್ಯಾನ್‌ಹೋಲ್ ದುಸ್ಥಿತಿ ಇದ್ದುದಕ್ಕೆ ಅದರಲ್ಲಿ ಹುದುಗಿದ ಮರಳು ಕಾರಣವೆಂಬ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಮುಖ್ಯಾಧಿಕಾರಿ ಅವರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಪೊಲೀಸರಿಗೆ ದೂರು ನೀಡಿರುವ ರೀತಿ ಕಂಡರೆ ಅಂತಹ ಪ್ರಕರಣ ನಡೆದಂತಿದೆಯೇ ಎಂಬ ಅನುಮಾನಗಳು ವ್ಯಕ್ತಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಶುಚಿತ್ವ ಕಾರ್ಯ ಸಿಬ್ಬಂದಿ ಕೈಗೊಳ್ಳುವುದಾದರೂ ಹೇಗೆ? ಎಂಬುವುದನ್ನು ಪ್ರಶ್ನಿಸಿದರು. ಅಂತಹ ಸಂದರ್ಭದಲ್ಲಿ ನಾಗರಿಕರ ಹಕ್ಕು ಜಾರಿ ನಿರ್ದೇಶನ ಹಾಗೂ ಪೊಲೀಸರಿಂದ ಸಲಹೆ ಪಡೆಯುವಂತೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ಪಕ್ ಅಹಮ್ಮದ್ ಅವರು ಸಲಹೆ ನೀಡಿದರು. ಒಟ್ಟಿನಲ್ಲಿ ಈ ವಿಚಾರದ ಹೆಸರಿಗಷ್ಟೇ ಚರ್ಚೆ ನಡೆದಿತ್ತಾದರೂ ಯಾವುದೇ ನಿರ್ಧಾರ ಕೈಗೊಳ್ಳಲು ಸಭೆಗೆ ಸಾಧ್ಯವಾಗಲಿಲ್ಲ.

ಪಡುಬಿದ್ರಿ: ಹೋಟೆಲ್, ಕಟ್ಟಡಗಳ ದ್ರವ ತ್ಯಾಜ್ಯ ವಿಲೇವಾರಿ ಮಾಡುವುದು ಕಡ್ಡಾಯ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಪಡುಬಿದ್ರಿಯ ಎಲ್ಲಾ ಹೋಟೆಲ್ ಮಾಲೀಕರು ಮತ್ತು ಸಂಕೀ ರ್ಣಗಳ ಮಾಲಕರು ಶಾಶ್ವತ ಒಳಚ ರಂಡಿ ವ್ಯವಸ್ಥೆ ಜಾರಿಗೊಳ್ಳುವ ತನಕ ತಾತ್ಕಾಲಿಕ ದ್ರವ ತ್ಯಾಜ್ಯ ಸಂಗ್ರಹಣಾ ಗಾರ ನಿರ್ಮಿಸಿ ನಿರ್ವಹಣೆ ಮಾಡ ಬೇಕೆಂದು ಆದೇಶಿಸಲಾಗಿದೆ.
ಜಿಲ್ಲಾಧಿಕಾರಿ ಆದೇಶದಂತೆ ಪಡು ಬಿದ್ರಿ ಗ್ರಾ. ಪಂ. ಸಭಾಭವನದಲ್ಲಿ ಸೋಮವಾರ ಗ್ರಾಮದ ಎಲ್ಲಾ ಹೋಟೆಲ್ ಮಾಲೀಕರ ಸಭೆ ಕರೆದು ಗ್ರಾ. ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಆಚಾರ್ಯ ಹಾಗೂ ಅಭಿವೃದ್ಧಿ ಅಧಿ ಕಾರಿ ಮಮತಾ ಶೆಟ್ಟಿ ಆದೇಶ ಹೊಡಿಸಿದ್ದಾರೆ. ಪಡುಬಿದ್ರಿ ಗ್ರಾ. ಪಂ. ಮಂಗ ಳೂರು-ಉಡುಪಿ ಮಧ್ಯೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಅತೀ ಹೆಚ್ಚು ಹೋಟೆಲ್ ಮತ್ತು ವಸತಿ ಸಮುಚ್ಛಯ ಗಳನ್ನು ಹೊಂದಿರುವ ಪ್ರದೇಶವಾಗಿ ದ್ದರೂ, ಇನ್ನೂ ಒಳಚರಂಡಿ ವ್ಯವಸ್ಥೆ, ದ್ರವ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಯಾಗಿಲ್ಲ. ಹಲವಾರು ವರ್ಷ ಗಳಿಂದ ಗ್ರಾ. ಪಂ. ಪ್ರಯತ್ನಪಟ್ಟರೂ, ಸೂಕ್ತ ಸ್ಥಳಾವಕಾಶ ಕೊರತೆ ಹಾಗೂ ಸಾರ್ವಜನಿಕ ವಿರೋಧದಿಂದ ನೆನೆಗು ದಿಗೆ ಬಿದ್ದಿದೆ. ಹೆದ್ದಾರಿ ಪಕ್ಕದಲ್ಲಿ ನಡೆದಾ ಡುವ ಮಂದಿಗೆ ಇಲ್ಲಿಯ ತ್ಯಾಜ್ಯದ ನೀರು ಅಸಹನೀಯವೆನಿಸಿತ್ತು. ಆದ್ದ ರಿಂದ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಜಿಲ್ಲಾಡಳಿತ ದೂರಿಗೆ ಪೂರಕವಾಗಿ ಸ್ಪಂದಿಸಿ ಪಂಚಾ ಯತಿಗೆ ಸ್ಪಷ್ಟ ನಿರ್ದೇಶನ ನೀಡಿ ಸಮ ರ್ಪಕ ತ್ಯಾಜ್ಯ ನಿರ್ವಹಣೆಗೆ ಸೂಚನೆ ನೀಡಿತ್ತು.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಪಡುಬಿದ್ರಿಗೆ ಆಗಮಿಸಿ ಸಮಗ್ರ ಪರಿಶೀಲನೆ ನಡೆಸಿ ಶಾಶ್ವತ ತ್ಯಾಜ್ಯ ನಿರ್ವಹಣೆ ಇನ್ನೂ ೨ ವರ್ಷ ಆಗುವುದು ಅಸಾಧ್ಯವಾದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಮತ್ತು ವಸತಿ ಸಮುಚ್ಛಯಗಳು ಸ್ವಯಂ ನಿರ್ವಹಣೆ ನಡೆಸುವಂತೆ ಆದೇಶ ನೀಡಿದ್ದರು. ಸೋಮವಾರ ಎಲ್ಲಾ ಹೋಟೆಲ್ ಮಾಲೀಕರು ಪಡುಬಿದ್ರಿ ಗ್ರಾಮ ಪಂಚಾಯತಿ ಕರೆದ ಸಭೆಯಲ್ಲಿ ಉಪಸ್ಥಿತರಿದ್ದು, ಪಂಚಾಯತ್ ನಿರ್ಣಯಕ್ಕೆ ಸಹಮತ ಸೂಚಿಸಿದ್ದಾರೆ. ಸ್ವಯಂ ನಿರ್ವಹಣೆ ವೇಳೆ ತ್ಯಾಜ್ಯ ಗುಂಡಿ ತುಂಬಿದಲ್ಲಿ ಯಂತ್ರಬಳಸಿ ಸ್ವಚ್ಚಗೊಳಿ ಸುವಂತೆಯೂ ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಪಂಚಾಯತ್ ನಿಯಮದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಲಾಗಿದೆ.

ಕೈ ಕೊಟ್ಟ ರೈಲ್ವೆ ಗೇಟ್: ಉದ್ರಿಕ್ತ ಜನರಿಂದ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ರೈಲ್ವೆ ಗೇಟ್ ಕೈ ಕೊಟ್ಟ ಕಾರಣ ಎರಡು ತಾಸಿಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತಗೊಂಡು ರಸ್ತೆ ತಡೆ ಉಂಟಾಗಿರುವ ಘಟನೆ ನಿನ್ನೆ ರಾತ್ರಿ ಪಡೀಲ್‌ನಲ್ಲಿ ನಡೆದಿದೆ.
ಇದರಿಂದ ಆಕ್ರೋಶಗೊಂಡ ಸ್ಥಳೀ ಯರು ರೈಲ್ವೆಗೇಟ್ ಬಳಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಉದ್ರಿಕ್ತಗೊಳ್ಳು ತ್ತಿರುವುದನ್ನು ಗಮನಿಸಿದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿ ಗೊಳಿಸಿದರು.
ಕಂಕನಾಡಿ ಪಡೀಲ್, ಜೆಪ್ಪು ರೈಲ್ವೆ ಗೇಟ್ ಸದಾ ಕೈ ಕೊಡುತ್ತಿದ್ದು ಇದನ್ನು ಸರಿಪಡಿಸುವಂತೆ ಹಲವಾರು ಬಾರಿ ಮನವಿ ನೀಡಲಾಗಿತ್ತು. ಆದರೆ ರೈಲ್ವೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮ ನವೇ ಹರಿಸುತ್ತಿಲ್ಲ. ಇದೇ ಕಾರಣದಿಂ ದಾಗಿ ರೈಲ್ವೆ ಗೇಟ್ ತೆರೆಯಲಾಗದೆ ಜನ ಪರದಾಡುತ್ತಿರುವುದು ಸಾಮಾನ್ಯ ವಾಗಿತ್ತು.
ಆದರೆ ನಿನ್ನೆ ಎಷ್ಟೇ ಪ್ರಯತ್ನ ಪಟ್ಟರೂ ಗೇಟ್ ತೆರೆಯಲಾಗದ ಕಾರಣ ಜನ ತಾಳ್ಮೆ ಕಳೆದುಕೊಂಡಿದ್ದರು. ಸುಮಾರು ಮುನ್ನೂರಕ್ಕೂ ಅಧಿಕ ಮಂದಿ ರೈಲ್ವೆ ಗೇಟ್ ಬಳಿಯೇ ಪ್‌ರತಿಭಟನೆ ನಡೆಸಿದರು.

ಖಂಡಿಗೆಯಲ್ಲಿ ಅಪರೂಪದ ಮೀನು ಜಾತ್ರೆ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಖಂಡಿಗೆ ಉಳ್ಳಾಯ ಧರ್ಮರಸು ದೈವಸ್ಥಾನದ ಮೀನು ಹಿಡಿಯುವ ಜಾತ್ರೆ ಸೋಮವಾರ ನಡೆಯಿತು. ಬೆಳಿಗ್ಗೆ ಖಂಡಿಗೆಯ ಮೊಕ್ತೇಸರ ಆದಿತ್ಯಮುಕ್ಕಾಲ್ದಿ ನಂದಿನಿ ನದಿಗೆ ಪ್ರಸಾದ ಹಾಕಿ ಕದನಿ ಸಿಡಿದಾಗ ನದಿಗೆ ಹಾರಿದ ಭಕ್ತರು ಮೀನು ಹಿಡಿಯುವ ಮೂಲಕ ಜಾತ್ರೆಗೆ ಕಳೆ ಕಟ್ಟಿದರು. ಸುಮಾರು ರೂ.ಒಂದು ಸಾವಿರಕ್ಕೂ ಮೇಲ್ಪಟ್ಟು ಮೀನುಗಳು ಬಿಕರಿಯಾಗಿದೆ. ಜಾತ್ರೆಯಲ್ಲಿ ಮೀನುಗಾರರು ಹಿಡಿದ ಮೀನನ್ನು ಕೊಂಡೊಯ್ಯುವ ಭಕ್ತರು ಅಡುಗೆಮಾಡಿ ದೇವರ ಪ್ರಸಾದ ಎಂಬ ರೀತಿಯಲ್ಲಿ ಭಕ್ತಿಯಿಂದ ಸ್ವೀಕರಿಸುತ್ತಾರೆ. ಕರಾವಳಿಯ ಮೂಲೆ ಮೂಲೆಗಳಿಂದ ಭಕ್ತರು ಈ ಪ್ರದೇಶಕ್ಕೆ ಬಂದು ಮೀನು ಹಿಡಿಯುತ್ತಾರೆ.ಸೋಮವಾರ ರಾತ್ರಿ ಕ್ಷೇತ್ರದಲ್ಲಿ ಧ್ವಜಾರೋಹಣಗೊಂಡು ಮಂಗಳವಾರ ಬೆಳಿಗ್ಗೆ ಉಳ್ಳಾಯ ದೈವದ ನೇಮೋತ್ಸವ ಕುಮಾರ ಸಿರಿಗಳ ದರ್ಶನ ಹಾಗೂ ರಾತ್ರಿ ಪರಿವಾರ ದೈವಗಳ ನೇಮೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತದೆ.

ಯುಪಿಸಿಎಲ್: ಕೆಪಿಟಿಸಿಎಲ್ ಪವರ್‌ಲೈನ್‌ಗೆ ಸಾರ್ವಜನಿಕ ಪ್ರತಿರೋಧ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಡುಪಿ ಜಿಲ್ಲೆಯ ನಂದಿಕೂರು ಸಮೀಪದ ಎಲ್ಲೂರಿನಲ್ಲಿ ಕಾರ್ಯಾರಂಭ ಮಾಡಿರುವ, ವಿವಾದಿತ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದ ಮೊದಲ ಹಂತದಲ್ಲಿ ಉತ್ಪಾದನೆಯಾ ಗುತ್ತಿರುವ ವಿದ್ಯುತ್ತನ್ನು ಹಾಸನ ಜಿಲ್ಲೆಯ ಶಾಂತಿ ಗ್ರಾಮದ ಮೂಲಕ ಬೆಂಗ ಳೂರಿಗೆ ಸರಬರಾಜು ಮಾಡಲು ರಚಿಸಲಾಗುತ್ತಿರುವ ಕೆಪಿಟಿಸಿಎಲ್ ಪ್ರಯೋಜಕತ್ವದ ಹೈಟೆನ್ಶನ್ ಪವರ್ ಲೈನ್‌ನ ಟವರ್ ನಿರ್ಮಾಣ ಕಾಮಗಾರಿಗೆ ಯೋಜನೆಯಿರುವ ಎಲ್ಲೂರು ಗ್ರಾಮ ಪಂಚಾಯತ್, ಸರಕಾರಿ ಆದೇಶದಲ್ಲಿರುವ ತಾಂತ್ರಿಕ ದೋಷಗಳನ್ನು ಮುಂದಿರಿಸಿ ಪ್ರತಿ ರೋಧ ಒಡ್ಡಿದರೂ ಉಡುಪಿ ಜಿಲ್ಲಾ ಧಿಕಾರಿಗಳ ಮಧ್ಯಪ್ರವೇಶದಿಂದ ಕಾಮಗಾರಿ ಮತ್ತೆ ಪ್ರಾರಂಭಗೊಂಡ ವಿದ್ಯಮಾನ ನಿನ್ನೆ ನಡೆಯಿತು.
ನಿನ್ನೆ ಬೆಳಿಗ್ಗೆ ಮೊದಲೇ ಸಾರ್ವ ಜನಿಕರಿಗೆ ತಿಳಿದಿದ್ದಂತೆ ಎಲ್ಲೂರು ಗ್ರಾಮದ ಖಾಸಗಿ ಒಡೆತನದ ಸರಕಾರಿ ಸ್ವಾಧೀನತೆಯ ಜಮೀನಿನಲ್ಲಿ ಭಾರೀ ಪೊಲೀಸ್ ಬಂದೋಬಸ್ತಿನೊಂದಿಗೆ ಕೆಪಿಟಿಸಿಎಲ್ ಅಧಿಕಾರಿಗಳು ಮತ್ತು ಯುಪಿಸಿಎಲ್ (ಲ್ಯಾಂಕೋ) ಸಿಬ್ಬಂದಿ ಬೆಂಗಳೂರಿನ ಗುತ್ತಿಗೆದಾರ ಕಂಪೆನಿ ಯಾದ ದೀಪಕ್ ಕೇಬಲ್ಸ್‌ನ ಕಾರ್ಮಿ ಕರೊಂದಿಗೆ ಕಾಮಗಾರಿಗೆ ತೊಡಗಿತ್ತು ಮತ್ತು ಇದೇ ಸಮಯದಲ್ಲಿ ಸ್ಥಳಕ್ಕಾ ಗಮಿಸಿದ ಯೋಜನಾ ವಿರೋಧಿ ನಂದಿಕೂರು ಜನಜಾಗೃತಿ ಸಮಿತಿ ಎಲ್ಲೂರು ಗ್ರಾಮ ಪಂಚಾಯತ್ ಸದ ಸ್ಯರು ಮತ್ತು ಸ್ಥಳೀಯರಿಂದ ಪ್ರತಿ ರೋಧ ವ್ಯಕ್ತವಾಗಿ ವಿವಾದ ಪ್ರಾರಂಭ ಗೊಂಡಿತು. ಪ್ರತಿಭಟನೆಯ ನೇತೃತ್ವ ವಹಿಸಿದ ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮನ, ಸದಸ್ಯರಾದ ಜಯಂತ್ ಕುಮಾರ್ ಭಟ್, ನಾಗೇಶ ಭಟ್, ವಿಹಿಂಪದ ಜಿಲ್ಲಾ ಉಪಾಧ್ಯಕ್ಷ ಪಾದೆಬೆಟ್ಟು ಪ್ರಕಾಶ್ ಶೆಟ್ಟಿ ಕಾಮಗಾರಿಗೆ ತಡೆ ಒಡ್ಡಿ ಸರಕಾರದ ಆದೇಶವಿರುವುದು ನಂದಿಕೂರು ಗ್ರಾಮದಿಂದ ಹಾಸನದ ಶಾಂತಿ ಗ್ರಾಮದವರೆಗೆ ಮಾತ್ರ. ಈ ವಿದ್ಯುತ್ ಸರಬರಾಜು ಮಾರ್ಗದ ಬಗ್ಗೆಯೂ ಸುಪ್ರೀಂಕೋರ್ಟ್ ಮತ್ತು ನ್ಯಾಶನಲ್ ಗ್ರೀನ್ ಟ್ರಿಬ್ಯೂನಲ್‌ನಲ್ಲಿ ವಿಚಾರಣಾ ಅರ್ಜಿ ಬಾಕಿ ಇರುತ್ತದೆ. ಹಾಗಿರುವಾಗ ಆದೇಶದಲ್ಲಿ ಇರದಿರುವ ಮತ್ತು ವಿದ್ಯುತ್‌ಲೈನ್ ವಿರೋಧಿ ನಿರ್ಣಯವನ್ನು ಕಳೆದ ಡಿಸೆಂಬರ್‌ನಲ್ಲಿಯೇ ತಳೆದಿರುವ ಎಲ್ಲೂರಿನಲ್ಲಿ ನಡೆಸುತ್ತಿರುವ ಈ ಕಾಮಗಾರಿ ಅನಧಿಕೃತ ಎಂದು ವಿವರಿಸಿದರು.
ಕೆಪಿಟಿಸಿಎಲ್‌ಎಲ್ ಸುಪರಿಂಟೆಂಡೆಂಟ್ ಇಂಜಿನಿಯರ್ ಗೋವಿಂದರಾವ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಪಿಡಿಬಿ ರಾವ್, ಎಇ ಕುಮಾರ್ ಮುಂತಾದವರು ಇದಕ್ಕೆ ವಿವರಣೆ ನೀಡಿ, ಈ ನಿಲುವು ಸರಿಯಲ್ಲ. ಅದೊಂದು ತಾಂತ್ರಿಕ ಸಮಸ್ಯೆ ಮಾತ್ರ. ಜಿಲ್ಲಾಧಿಕಾರಿಯವರೇ ತಮಗೆ ತಿಳಿಸಿರುವುದರಿಂದ ನಾವು ಕಾಮಗಾರಿ ಮುಂದುವರಿಸುತ್ತಿದ್ದೇವೆ ಎಂದು ತಿಳಿಸಿದರು.
ಇವಿಷ್ಟು ಮಾತುಕತೆ ನಡೆಯುವ ಮೊದಲೇ ಕಾಮಗಾರಿಗೆ ಬಂದಿದ್ದ ಕೆಲಸಗಾರರು ವಿಶ್ವನಾಥ ಭಟ್, ಸುಬ್ರಹ್ಮಣ್ಯ ಭಟ್, ಹುಸೈನ್ ಬಾವಾ ಮತ್ತು ರಾಘವೇಂದ್ರ ಭಟ್ ಎಂಬವರ ಜಮೀನಿನ ತೆಂಗು, ಬಾಳೆ, ಮರಗಿಡಗಳನ್ನು ಬೇಕಾಬಿಟ್ಟಿ ಕಡಿದುರುಳಿಸಿದ್ದರು. ಸುಮಾರು ೫೦ ಮಂದಿ ಕೆಲಸಗಾರರು ಪೊಲೀಸ್ ಬಂದೋಬಸ್ತಿನಲ್ಲಿ ಕಡಿದುರುಳಿಸುವಿಕೆ ಮುಂದುವರಿಸಿದರು.
ವಿವಾದ ತಾರಕಕ್ಕೇರಿದಾಗ ಅಧಿಕಾರಿಗಳು ಕೆಲಸ ನಿಲ್ಲಿಸಿದ್ದು, ಕೆಲಸಗಾರರು ಸ್ಥಳ ಖಾಲಿ ಮಾಡತೊಡಗಿದರು. ಉಡುಪಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಕೆಪಿಟಿಸಿಎಲ್ ಮಂದಿ ಲಿಖಿತ ಆದೇಶವನ್ನು ಪ್ರತಿಭಟನಾಕಾರರಿಗೆ ನೀಡುವವರೆಗೆ ಕೆಲಸ ಮುಂದುವರಿಸುವುದಿಲ್ಲವೆಂದರು.
ಮಧ್ಯಾಹ್ನದ ಸುಮಾರಿಗೆ ಉಡುಪಿ ಜಿಲ್ಲಾಧಿಕಾರಿ ಡಾ. ಎ.ಟಿ. ರೇಜುರವರು ಆದೇಶ ಕಳುಹಿಸಿದ್ದು, ಎಲ್ಲೂರಿನಿಂದಲೇ ಶಾಂತಿ ಗ್ರಾಮದವರೆಗೆ ವಿದ್ಯುತ್ ಲೈನ್, ಕಾಮಗಾರಿ ನಡೆಯಲಿದೆ ಎಂದೂ, ಇದಕ್ಕೆ ಸಂಬಂಧಿತ ಗ್ರಾಮ ಪಂಚಾಯತ್‌ಗಳು ಸಹಕರಿಸಬೇಕು ಎಂದು ತಿಳಿಸಿದ್ದು ಈ ಆದೇಶವನ್ನು ನ್ಯಾಯಾಲಯದಲ್ಲಿ ಜಿಲ್ಲಾಧಿಕಾರಿಗಳನ್ನು ಪ್ರತಿವಾದಿಯಾಗಿಸಿ ಪ್ರಶ್ನಿಸಲಾಗುವುದೆಂದೂ ಸಮಿತಿಯ ಜಯಂತ್ ಕುಮಾರ್ ತಿಳಿಸಿದರು.
ಕಾರ್ಕಳ ಡಿವೈಎಸ್ಪಿ ಜಯಂತ್ ಶೆಟ್ಟಿ ನೇತೃತ್ವದಲ್ಲಿ ಕಾಪು ವೃತ್ತ ನಿರೀಕ್ಷಕ ವಾಲೇಕರ್ ಉಪಸ್ಥಿತಿಯಲ್ಲಿ ಪಡುಬಿದ್ರಿ ಕಾಪು ಮತ್ತು ಶಿರ್ವ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

ರಕ್ಕಸರಿವರು! ಕೊಲ್ತಾರೆ!

ಪೊಲೀಸ್ ಬಂದೋಬಸ್ತಿನೊಂದಿಗೆ ಕೆಪಿಟಿಸಿಎಲ್ ಅಧಿಕಾರಿಗಳು ತನ್ನ ಜಮೀನಿಗೆ ಬಂದು, ಗರಗಸ, ಕೊಡಲಿಗಳಿಂದ ಕಣ್ಣೆದುರೇ ಬೆಳೆದು ನಿಂತಿದ್ದ ತೆಂಗು, ಗೇರು, ಮರಗಳನ್ನು ಅಮಾನುಷವಾಗಿ ಕತ್ತರಿಸಿ ಹಾಕುವುದನ್ನು ಕಂಡು ಸಹಿಸಲಾಗದ ೮೦ರ ಹರೆಯದ ವಯೋವೃದ್ಧ ವಿಶ್ವನಾಥ ಭಟ್ ಎಂಬವರು ತೆವಳುತ್ತಲೇ ಬಂದು ಕಾಮಗಾರಿಯ ಟ್ರ್ಯಾಕ್ಟರ್ ಒಂದರ ಎದುರು ಅಡ್ಡಮಲಗಿ ’ರಕ್ಕಸರು ಇವರು. ನಮ್ಮನ್ನು ಕೊಲ್ತಾರೆ. ಹಾಳಾಗಿ ಹೋಗ್ತಾರೆ’ ಎಂದು ರಣಬಿಸಿಲಲ್ಲೇ ಶಪಿಸಿ ದರು. ಕೊನೆಗೂ ಅವರನ್ನು ಬಲವಂತದಿಂದ ಸಮೀಪದ ಮನೆಗೆ ಹೊತ್ತೊಯ್ಯಲಾಯಿತು.

ಯಡ್ಡಿಗೆ ಕಾಂಗ್ರೆಸ್ ಅಣತಿ?

Posted by JAYAKIRANA Kirana on | 0 comments | Leave a comment...

ಸರ್ಕಾರ ಉಳಿಸುವತ್ತ ಗಮನಹರಿಸಿ: ರಾಜ್ಯ ನಾಯಕರಿಗೆ ವರಿಷ್ಠರ ಸೂಚನೆ
ಬೆಂಗಳೂರು: ಗಣಿಹಗರಣದ ಕುಣಿಕೆಯಿಂದ ಹೊರಬರಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ಹಿಡಿತಕ್ಕೆ ಸಿಲುಕಿದ್ದು, ಸರ್ಕಾರ ಮತ್ತು ಪಕ್ಷ ಉಳಿಸಿಕೊಳ್ಳುವ ಕಡೆ ಗಮನ ಕೊಡಿ ಎಂದು ಬಿಜೆಪಿಯ ವರಿಷ್ಠರು ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಯಡಿಯೂರಪ್ಪ ಅವರ ಆಪ್ತ ರೆಂದೇ ಗುರುತಿಸಿಕೊಂಡಿರುವ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ನವದೆಹಲಿಯಲ್ಲಿ ನಿನ್ನೆ ಬೆಳಿಗ್ಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ ಬೆನ್ನೆಲ್ಲೇ ಈ ಸಂದೇಶ ರವಾನೆಯಾಗಿದೆ.
ಯಡಿಯೂರಪ್ಪ ಪಕ್ಷ ತೊರೆ ಯಲು ಮುಂದಾಗಿದ್ದಾರೆ ಅವರ ಜೊತೆ ಸಂಧಾನದ ಮಾತುಕತೆಗೆ ಮುಂದಾಗಿ ಎಂದು ರಾಜ್ಯ ನಾಯಕರ ಮನವಿ ಯನ್ನು ತಿರಸ್ಕರಿಸಿದ ವರಿಷ್ಠರು, ಸಿಬಿಐ ಕುಣಿಕೆಯಿಂದ ಹೊರ ಬರಲು ಕಾಂಗ್ರೆಸ್ ಅಣತಿಯಂತೆ ನಡೆದುಕೊ ಳ್ಳಬೇಕಾದ ಸ್ಥಿತಿ ಅವರಿಗೆ ನಿರ್ಮಾಣ ವಾಗಿದೆ ಎಂದಿದ್ದಾರೆ.
ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್, ರಾಜ್ಯ ಉಸ್ತುವಾರಿ ಹೊಣೆ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಅವರನ್ನು ಮಧ್ಯಾಹ್ನ ೧೨ ರ ಸುಮಾರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿದ ಬಿಕ್ಕಟ್ಟು ತಾರಕಕ್ಕೇರುತ್ತಿದೆ. ಇಂತಹ ಸಂದರ್ಭದಲ್ಲಿ ನೀವು ಯಡಿಯೂರಪ್ಪ ಅವರ ಜತೆ ಮಾತನಾಡಿ ಸಮಾಧಾನಪಡಿಸುವ ಕೆಲಸ ಮಾಡಿ. ಆ ಮೂಲಕ ಬಿಕ್ಕಟ್ಟನ್ನು ಬಗೆ ಹರಿಸಿ ಎಂದು ಮನವಿ ಮಾಡಿಕೊಂಡರು.
ತಮ್ಮ ವಿರುದ್ಧ ಸಿಬಿಐ ತನಿಖೆ ನಡೆಸಲು ಸುಪ್ರೀಂಕೋರ್ಟ್ ಆದೇಶ ನೀಡಿದ ನಂತರ ಪಕ್ಷದ ಹೈಕಮಾಂಡ್ ವರಿಷ್ಟರ‍್ಯಾರೂ ತಮ್ಮನ್ನು ಸಂಪರ್ಕಿಸಿಲ್ಲ. ಸಮಾಧಾನ ಪಡಿಸುವ ಕೆಲಸ ಮಾಡಿಲ್ಲ ಎಂದು ಯಡಿಯೂರಪ್ಪ ಬೇಸರ ಮಾಡಿಕೊಂಡಿದ್ದಾರೆ. ಹೀಗಾಗಿ ತಕ್ಷಣವೇ ನೀವು ಹಿರಿಯ ನಾಯಕರು ಬೆಂಗಳೂರಿಗೆ ಬಂದು ಯಡಿಯೂರಪ್ಪ ಅವರನ್ನು ಸಮಾಧಾನಿಸಿ, ಸಂಭವನೀಯ ಒಡಕನ್ನು ತಪ್ಪಿಸಿ ಎಂದು ಮನವಿ ಮಾಡಿಕೊಂಡರು.
ಆದರೆ ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಅವರ ಮನವಿಗೆ ಪ್ರತಿಕ್ರಿಯಿಸಿದ ಹಿರಿಯ ನಾಯಕ ಧರ್ಮೇಂದ್ರ ಪ್ರಧಾನ್, ಇವತ್ತಿನ ಸ್ಥಿತಿಯಲ್ಲಿ ಸಿಬಿಐ ಕುಣಿಕೆಗೆ ಸಿಲುಕಿರುವ ಯಡಿಯೂರಪ್ಪ ನಾವೇನೇ ಮಾಡಿದರೂ ಬಿಜೆಪಿಯಲ್ಲಿ ಉಳಿಯುವುದಿಲ್ಲ. ಬದಲಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸೂಚನೆಯ ಪ್ರಕಾರ ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟುವುದು ಅನಿವಾರ್ಯವಾಗಲಿದೆ. ಹೀಗಾಗಿ ನಾವು ಬಂದು ಸಂಧಾನ ಮಾಡಿದರೂ ದೀರ್ಘ ಕಾಲೀನ ನೆಲೆಯಲ್ಲಿ ಪ್ರಯೋಜನವೇನಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶೋಭಾ ದೆಹಲಿಯಲ್ಲಿದ್ದರೂ ನಮ್ಮನ್ನೂ ಯಾರನ್ನೂ ಸಂಪರ್ಕಿಸಿಯೂ ಇಲ್ಲ. ಭೇಟಿಯೂ ಮಾಡಿಲ್ಲ. ಕಳೆದ ವಾರ ಮೂರು ನಾಲ್ಕು ದಿನ ಇಲ್ಲೇ ಬಿಡಾರ ಹೂಡಿದ ಸಂದರ್ಭದಲ್ಲೂ ನೋಯಿಡಾದ ಹೊಟೇಲ್‌ವೊಂದರಲ್ಲಿ ಕೆಲವು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ ವಿಚಾರ ನಿಮಗೆ ತಿಳಿದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ನೀವು ಯಡಿಯೂರಪ್ಪ ಅವರನ್ನು ಸಮಾಧಾನಿಸಿ ಎಂದು ಹೇಳುತ್ತಿದ್ದೀರಿ. ಆದರೆ ಇಲ್ಲಿ ದೆಹಲಿಯಲ್ಲಿ ಅರ್ಧ ಗಂಟೆಯ ಹಿಂದೆ ಯಡಿಯೂರಪ್ಪ ಅವರ ಪರಮಾಪ್ತರಾದ ಶೋಭಾ ಕರಂದ್ಲಾಜೆ ಅವರು ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಇವತ್ತಿನ ಸ್ಥಿತಿಯಲ್ಲಿ ಸಿಬಿಐ ಬಲೆಯಿಂದ ಬಚಾವಾಗಲು, ಕ್ಲೀನ್ ಚಿಟ್ ಪಡೆಯಲು ಯಡಿಯೂರಪ್ಪ ಅವರು ಕಾಂಗ್ರೆಸ್ ಹೇಳಿದಂತೆ ಕೇಳಲೇಬೇಕು. ಇಂದು ಅಹ್ಮದ್ ಪಟೇಲ್ ಜತೆ ಮಾತನಾಡಿ ಬಂದಿರುವ ಶೋಭಾ ಕರಂದ್ಲಾಜೆ ಕೂಡಾ ಈ ಷರತ್ತಿಗೆ ಒಪ್ಪಿಗೆ ನೀಡಿ ಬಂದಿದ್ದಾರೆ. ಈ ವಿಷಯ ಸ್ವಲ್ಪ ಸಮಯದಲ್ಲೇ ಸುದ್ದಿ ಮಾಧ್ಯಮಗಳಲ್ಲೂ ಪ್ರಕಟಗೊಳ್ಳಬಹುದು. ಇಂದಲ್ಲ, ನಾಳೆ ಯಡಿಯೂರಪ್ಪ ಪಕ್ಷ ತೊರೆಯುವುದು ಖಚಿತ. ಆದ್ದರಿಂದ ಅವರ ವಿಷಯದಲ್ಲಿ ಚಿಂತೆ ಮಾಡುವ ಬದಲು ಅವರ ಪಾಡಿಗೆ ಅವರನ್ನು ಬಿಟ್ಟು ನಿಮ್ಮ ಪಾಡಿಗೆ ಸರ್ಕಾರವನ್ನು ಉಳಿಸಿಕೊಳ್ಳುವ ಕಡೆ ಗಮನ ಹರಿಸಿ,ಪಕ್ಷವನ್ನು ಬಲಿಷ್ಟಪಡಿಸುವ ಕಡೆ ಗಮನ ಕೊಡಿ ಎಂದು ಧರ್ಮೇಂದ್ರ ಪ್ರಧಾನ್ ಕಿವಿ ಮಾತು ಹೇಳಿದರು.

ಯಡ್ಡಿ ಬೆಂಬಲಿಗರು ನಾಟ್‌ರಿಚೆಬಲ್... ಸ್ವಿಚ್ಡ್‌ಆಫ್...
ಯಡಿಯೂರಪ್ಪ ಪಕ್ಷ ತೊರೆಯುತ್ತಾರೆ ಎಂಬ ಖಚಿತ ಮಾಹಿತಿ ದೊರೆಯುತ್ತಿದ್ದಂತೆ ಅವರ ಹಿಂದೆ ಮುಂದೆ ಅಂಟಿಕೊಂಡೇ ಇದ್ದ ಶಾಸಕರು ತಮ್ಮ ದೂರವಾಣಿಗಳನ್ನು ಸ್ವಿಚ್ ಆಫ್ ಮಾಡಿದರೆ ಮತ್ತೆ ಕೆಲಸವು ನಾಟ್ ರೀಚೆಬಲ್ ಮಾಡಿಕೊಂಡಿದ್ದಾರೆ. ತುಮಕೂರಿಗೆ ತೆರಳಿ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದು ತಮ್ಮ ಮುಂದಿನ ರಾಜಕೀಯ ನಿರ್ಣಯವನ್ನು ಸಂಜೆ ಪ್ರಕಟಿಸುವುದಾಗಿ ಹೇಳಿದ್ದರು. ಪತ್ರಿಕಾಗೋಷ್ಠಿ ಸಮಯದಲ್ಲಿ ಸಚಿವರೂ ಸೇರಿದಂತೆ ೪೦ ರಿಂದ ೫೦ ಶಾಸಕರನ್ನು ತಮ್ಮ ಎಡ ಬಲ ಬದಿಯಲ್ಲಿ ಕುಳ್ಳರಿಸಿಕೊಳ್ಳಲು ವೇದಿಕೆ ಸಿದ್ಧಪಡಿಸಿದ್ದರು. ಯಡಿಯೂರಪ್ಪ ಪಕ್ಷ ತೊರೆಯುತ್ತಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ ಕಳೆದ ಮೂರು ದಿನಗಳಿಂದ ರೇಸ್‌ಕೋರ್ಸ್ ನಿವಾಸದಲ್ಲೇ ಬಿಡಾರ ಹೂಡಿದ್ದ ಈ ಶಾಸಕರು ಹುಡಿಕಿದರೂ ಸಿಗಲಿಲ್ಲ. ಆರು ಸಚಿವರು ಸೇರಿದಂತೆ ೧೭ ಶಾಸಕರು ಮಾಡು ಕೊನೆ ಗಳಿಗೆಯಲ್ಲೂ ಯಡಿಯೂರಪ್ಪನವರನ್ನು ಬಿಡದೆ ಅಂಟಿಕೊಂಡಿದ್ದರು.
ಪತ್ರಿಕಾಗೋಷ್ಠಿ ನಡೆಸುತ್ತಾರೆ ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುತ್ತಾರೆ ಎನ್ನುವ ಮಾಹಿತಿ ಅರಿಯುತ್ತಿದ್ದಂತೆ ಗೃಹ ಸಚಿವ ಆರ್. ಅಶೋಕ್ ಹಾಗೂ ಜಗದೀಶ್ ಶೆಟ್ಟರ್ ಕೆಲವು ಶಾಸಕರ ಜೊತೆಗೂಡಿ ಯಡಿಯೂರಪ್ಪನವರ ನಿವಾರಸಕ್ಕೆ ತೆರಳಿ ಮಾತುಕತೆ ನಡೆಸಿದರು.
ಇದರ ನಡುವೆ ಮುಖ್ಯಮಂತ್ರಿ ಸದಾನಂದಗೌಡ ಹಾಗೂ ರಾಜ್ಯಾದ್ಯಕ್ಷ ಈಶ್ವರಪ್ಪ ಅವರನ್ನು ಯಡಿಯೂರಪ್ಪನವರ ಮನೆಗೆ ಕರೆತರಲು ಮಾಜಿ ಶಾಸಕ ಲಕ್ಷ್ಮೀನಾರಾಯಣ ನಡೆಸಿದ ಯತ್ನ ಫಲಪ್ರದವಾಗಲಿಲ್ಲ. ಸಂಜೆ ರಾಜ್ಯ ಬಿಜೆಪಿಯಲ್ಲಿ ಏನೂ ಆಗುತ್ತೆ ಎನ್ನುವ ಸ್ಥಿತಿ ನಿರ್ಮಾಣ ಮಾಡಿದ್ದ ಯಡಿಯೂರಪ್ಪ ತಕ್ಷಣ ತಮ್ಮ ನಿರ್ಧಾರವನ್ನು ಬದಲಿಸಿ, ಪತ್ರಿಕಾಗೋಷ್ಠಿ ರದ್ದುಗೊಳಿಸಿದರು.
ಇದಕ್ಕೆ ಕಾರಣ ಮಾತ್ರ ಸ್ಪಷ್ಟವಾಗಿ ಯಾರಿಗೂ ತಿಳಿಯಲಿಲ್ಲ. ದೆಹಲಿಯಿಂದ ಶೋಭಾ ಅವರ ಸಂದೇಶ ಏನಿತ್ತೋ ತಿಳಿಯದು. ಅಥವಾ ತಮ್ಮ ಅನಿಸಿಕೆಯಂತೆ ತಮ್ಮ ಬೆಂಬಲಿಗರು ಕಡೆ ಗಳಿಗೆಯಲ್ಲಿ ನನ್ನನ್ನು ಕೈಬಿಟ್ಟರೂ ಎಂಬ ಕೋಪವೂ ತಿಳಿದಿಲ್ಲ. ಯಡಿಯೂರಪ್ಪ ವರಿಷ್ಠರಿಗೆ ಎಷ್ಟೇ ಬೆದರಿಕೆಯಾಕಿದ್ದರೂ ಅವರು ಮಾತ್ರ ಮೂರು ದಿನಗಳ ಕಾಲ ಯಾವುದೇ ಹೇಳಿಕೆಗಳನ್ನು ನೀಡಬೇಡಿ ಎಂದು ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರಿಗೆ ಕಟ್ಟಾದೇಶ ಮಾಡಿರುವುದಲ್ಲದೆ ಮುಂದೆ ನಾವೇ ಏನು ಹೇಳಬೇಕು ನಾವು ಹೇಳುತ್ತೇವೆ ಎಂದಿದ್ದಾರೆ.

ಅಕ್ರಮ ದಫನ ಕಾರ್ಯ: ತಾಲೂಕು ಕಚೇರಿಗೆ ಸ್ಥಳೀಯರ ಮುತ್ತಿಗೆ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ಲಾಯಿಲ ಗ್ರಾ. ಪಂ.ಗೆ ಒಳಪಟ್ಟ ಬೆರ್ಕೆ ಎಂಬಲ್ಲಿ  ಮುಸ್ಲಿಂ ಸಮುದಾಯದವರು ಅಕ್ರಮ ದಫನ ಕಾರ್ಯ ಮಾಡಿರುವ ವಿಚಾರದಲ್ಲಿ ವಿವಾದವೇರ್ಪಟ್ಟಿದ್ದು ಅದು ತಾರಕ್ಕೇ ರುವ ಲಕ್ಷಣಗಳು ಗೋಚರಿಸುತ್ತಿದೆ.
ತಾಲೂಕು ಆಡಳಿತವೂ ಇದನ್ನು ತಕ್ಷಣ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆಯಾದರೂ ಯಾವುದೇ ಫಲ ನೀಡುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸೋಮವಾರ ಮಧ್ಯಾಹ್ನ ಬೆರ್ಕೆಯ ನಾಗರಿಕರು ತಾಲೂಕು ಕಚೇರಿ ಬಳಿ ಸೇರಿ ತಹಸೀ ಲ್ದಾರರಿಗೆ ಧಿಕ್ಕಾರ ಕೂಗಿದ ಘಟ ನೆಯೂ ನಡೆದಿದೆ. ತಾಲೂಕು ಕೇಂದ್ರದಿಂದ ಸುಮಾರು ೩ ಕಿ.ಮೀ. ದೂರದಲ್ಲಿ ಮೇ ೭ರಂದು ಬೆರ್ಕೆ ಎಂಬಲ್ಲಿನ ನಡುತೋಪಿನಲ್ಲಿ ಮುಸ್ಲಿಂ ಸಮುದಾಯದವರು ಅಕ್ರಮವಾಗಿ ದಫನ ಮಾಡಿದ್ದರು. ಈ ಜಾಗ ದಫನ ಭೂಮಿಯೆಂದು ಕಂದಾಯ ಇಲಾಖೆ ನಿರ್ಧರಿಸದಿದ್ದರೂ ಮುಸ್ಲಿಂ ಸಮುದಾಯ ಏಕಾಏಕಿ ದಫನ ಕಾರ್ಯ ಮಾಡಿದ್ದು ಪರಿಸರದ ಜನರನ್ನು ಕೆರಳುವಂತೆ ಮಾಡಿದೆ.
ಇತ್ತ ಲಾಯಿಲ ಗಾ. ಪಂ. ಇಬ್ಬಂದಿನತವನ್ನು ತೋರಿಸುತ್ತಿದೆಯೆಂದು ಹೇಳಲಾಗುತ್ತಿದೆ. ಒಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಒಂದೇ ದಫನ ಭೂಮಿಗೆ ಅವಕಾಶವಿರುವುದು. ಅದರಂತೆ ಲಾಯಿಲ ಗ್ರಾ. ಪಂ. ವ್ಯಾಪ್ತಿಯಲ್ಲಿ ಉಜಿರೆ ಬಳಿ ಈಗಾಗಲೇ ದಫನಕ್ಕೆ ಅವಕಾಶ ನೀಡಲಾಗಿದೆ. ಹೀಗಿದ್ದೂ ಬೆರ್ಕೆ ಎಂಬಲ್ಲಿ ದಫನಕ್ಕೆ ಅವಕಾಶ ನೀಡಬಹುದು ಎಂದು ಹಿಂದಿನ ಅಧ್ಯಕ್ಷರು ನಿರ್ಣಯ ಮಾಡಿ ನಿರಪೇಕ್ಷಣ ಪತ್ರವನ್ನು ಕಂದಾಯ ಇಲಾಖೆಗೆ ಕಳುಹಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಸರ್ವೇ ಮಾಡಿದವರದ್ದೂ ತಪ್ಪಿದೆ ಎಂದೂ ಹೇಳಲಾಗುತ್ತಿದೆ.
ಇತ್ತ ಉಜಿರೆ ಜಮಾತ್‌ನವರು ಬೆಳ್ತಂಗಡಿ ಜಮಾತ್‌ನವರಿಗೆ ದಫನ ಮಾಡಲು ಅವಕಾಶ ನೀಡುತ್ತಿಲ್ಲ. ಇದೂ ಆಡಳಿತಕ್ಕೆ ಇನ್ನೂ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಬೆಳ್ತಂಗಡಿ ತಹಸೀಲ್ದಾರರು ಸೋಮವಾರ ಶಾಸಕರ ಸಹಿತ ಎರಡೂ ಜಮಾತ್‌ನ ಸುಮಾರು ೯ ಮಂದಿ ಮುಖಂಡರನ್ನು ಮಧ್ಯಾಹ್ನ ೩ ಗಂಟೆಗೆ ಮಾತುಕತೆಗೆ ಕರೆದಿದ್ದರು. ಆದರೆ ತಹಸೀಲ್ದಾರರಿಗೆ ಜಿಲ್ಲಾಧಿಕಾರಿಯವರ ಬುಲಾವ್ ಬಂದಿದ್ದರಿಂದ ಅವರು ಮಂಗಳೂರಿಗೆ ತೆರಳಿದ್ದರು. ಇಂದು ಮಾತುಕತೆ ಇಲ್ಲ ಎಂಬುದನ್ನು ತಹಸೀಲ್ದಾರ್ ದೂರವಾಣಿ ಮೂಲಕ ಎಲ್ಲರಿಗೂ ಮುಂಚಿತವಾಗಿ ತಿಳಿಸಿದ್ದರು. ಆದರೆ ಅದು ಹೇಗೋ ಕೆಲ ಹಿಂದು ಮುಖಂಡರಿಗೆ ವರ್ತಮಾನ ಹೋಗಿ ಬೆರ್ಕೆಯ ನಾಗರಿಕರು ಸಹಿತ ಸುಮಾರು ೬೦ ಮಂದಿ ತಾಲೂಕು ಕಚೇರಿಯ ಮುಂದೆ ಜಮಾಯಿಸಿದ್ದರು.
ಮಂಗಳೂರಿನಿಂದ ಆಗಮಿಸಿದ ತಹಸೀಲ್ದಾರರ ಮತ್ತು ಸೇರಿದ್ದ ಜನರ ನಡುವೆ ಗಂಟೆಗಳ ಕಾಲ ಬಿರುಸಿನ ಚರ್ಚೆ ಕೂಡ ನಡೆಯಿತು.
ಇನ್ನೊಂದೆಡೆ ವಿವಾದಿತ ಜಾಗವು ತನ್ನದು ಎಂದು ಅರಣ್ಯ ಇಲಾಖೆ ವಾದ ಮಾಡುತ್ತಿದೆ. ಆದರೆ ಆ ರೀತಿ ಬರೆದುಕೊಡಲು ಅದು ಒಪ್ಪುತ್ತಿಲ್ಲ ಮತ್ತು ಆ ಜಾಗಕ್ಕೆ ಬೇಲಿ ಹಾಕುವ ಕೆಲಸವನ್ನೂ ಮಾಡದಿರುವುದು ವ್ಯಾಪಕ ಸಂಶಯಕ್ಕೆ ಎಡೆ ಮಾಡಿದೆ. ಇನ್ನೊಂದೆಡೆ ದಫನ ಮಾಡಿರುವುದ ತಪ್ಪು ಮತ್ತು ಅಕ್ರಮವೆಂದು ಗೊತ್ತಿದ್ದರೂ ಪೋಲಿಸರು ಪ್ರಕರಣ ದಾಖಲಿಸಿ ಕೊಳ್ಳದೆ ಕೈ ಕಟ್ಟಿ ಕೂತಿರುವುದು ಯಾಕೆ ಎಂಬ ಅನುಮಾನವೂ ಇದೆ.

ಕಠಾರಿವೀರನಿಂದ ಕಪ್ಪ ಕಾಣಿಕೆ ಹಾಕಿಸಿ ಜೈ ಅಂದ ಶಿರೂರು ಶ್ರೀ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಕಠಾರಿವೀರ ಸುರಸುಂದರಾಂಗಿ ಚಿತ್ರದಲ್ಲಿ ಹಿಂದೂ ದೇವತೆ ಗಳಿಗೆ ಅವಮಾನಿಸಲಾಗಿದ್ದು, ಚಿತ್ರ ಪ್ರದರ್ಶನ ರದ್ದುಮಾಡಬೇಕು ಎಂದು ಉಡುಪಿಯಲ್ಲಿ ಶಿರೂರು ಶ್ರೀ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಫಲವಾಗಿ ನಿನ್ನೆ ನಟ ಉಪೇಂದ್ರ ಹಾಗೂ ಚಿತ್ರದ ನಿರ್ಮಾಪಕ ಮುನಿರತ್ನ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಮಾಡಿದ ತಪ್ಪಿಗೆ ಕಪ್ಪ ಕಾಣಿಕೆ ಹಾಕಿ ಶಿರೂರು ಶ್ರೀಗಳಿಂದ ಜೈ ಅನ್ನಿಸಿಕೊಂಡರು. ಸೋಮವಾರ ೧೧.೩೦ರ ಹೊತ್ತಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಬೇಕಾಗಿದ್ದ ನಟ ಉಪೇಂದ್ರ ತಡವಾಗಿಯೇ ಮಧ್ಯಾಹ್ನ ೨.೩೦ರ ಹೊತ್ತಿಗೆ ಆಗಮಿಸಿದ್ದರು. ಶ್ರೀಕೃಷ್ಣ ಮಠದಲ್ಲಿರುವ ಕನಕನ ಕಿಂಡಿಯಲ್ಲಿ ಶಿರೂರು ಶ್ರೀಗಳ ನಿರ್ದೇಶನದಂತೆ ದೇವತೆಗಳಿಗೆ ಮಾಡಿದ ಅವಮಾನಕ್ಕೆ ರೂ.೨೦೦೮ ಕಪ್ಪ ಕಾಣಿಕೆಯನ್ನು ಕಿಂಡಿಯಲ್ಲಿ ಹಾಕಿದರು. ಬಳಿಕ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳೊಂ ದಿಗೆ ಮಾತನಾಡಿದ ಉಪೇಂದ್ರ ಹಾಗೂ ಮುನಿರಾಜು ಚಿತ್ರದಲ್ಲಿ ದೇವ-ದೇವತೆಗಳಿಗೆ ಅವಮಾನವಾಗಿರುವ ಸನ್ನಿವೇಶಗಳನ್ನು ಕಡಿತಗೊಳಿಸಿ ಚಿತ್ರವನ್ನು ವಿತರಿಸಲಾಗುವುದು ಎಂದ ಅವರು ಯಥಾವತ್ತಾಗಿ ಹಿಂದೆ ಇದ್ದಂತಹ ಥಿಯೇಟರುಗಳಲ್ಲಿ ಚಿತ್ರ ಪ್ರದರ್ಶನ ನಡೆಸುತ್ತೇವೆ ಎಂದು ರಾಜಿ ಸಂಧಾನ ಮುಗಿಸಿದರು. ಬಹಿರಂಗವಾಗಿ ಒಂದು ಗಂಟೆಯ ಕಾಲ ಮಾಧ್ಯಮ ಹಾಗೂ ಶಿರೂರು ಶ್ರೀಗಳೊಂದಿಗೆ ಮಾತನಾಡಿದ ಉಪೇಂದ್ರ , ಮುನಿರತ್ನ ಬಳಿಕ ಅರ್ಧ ಗಂಟೆಗಳ ಕಾಲ ಶಿರೂರು ಶ್ರೀಗಳೊಂದಿಗೆ ಗುಪ್ತವಾಗಿ ಮಾತುಕತೆ ನಡೆಸಿದರು. ಇದು ನೆರೆದಿದ್ದ ಮಂದಿಯ ಸಂಶಯಕ್ಕೂ ಕಾರಣವಾಯಿತು.
ಮಾತುಕತೆ ಮುಗಿಸಿ ಇಬ್ಬರೂ ಹೊರಡುವಷ್ಟರಲ್ಲಿ ಶಿರೂರು ಶ್ರೀಗಳು ಖುದ್ದು ‘ಉಪೇಂದ್ರನಿಗೆ ಜೈ ಎಂದು ಯಾರೂ ಪ್ರತಿಕ್ರಿಯಿಸಿದ ಘೋಷಣೆಯನ್ನು ಎರಡು ಬಾರಿ ಕೂಗಿದರು.

ಸುಳ್ಯ: ಗ್ಯಾಸ್ ಟ್ರಬಲ್; ಹೋಟೆಲ್‌ಗಳಿಗೆ ಬೀಗ

Posted by JAYAKIRANA Kirana on | 0 comments | Leave a comment...

ಸುಳ್ಯ: ಅಡುಗೆ ಅನಿಲ ಸಮರ್ಪ ಕವಾಗಿ ಪೂರೈಕೆ ಆಗದೇ ಸುಳ್ಯ ನಗರ ದಲ್ಲಿ ಕೆಲವು ಹೋಟೆಲ್‌ಗಳು ಬಾಗಿಲು ಹಾಕಿವೆ. ಈ ಮಧ್ಯೆ ಗ್ಯಾಸ್ ಪೂರೈಕೆ ಯಲ್ಲಿ ಆಗಿರುವ ವ್ಯತ್ಯಯದ ಹಿನ್ನೆಲೆ ಯಲ್ಲಿ ಆಗುವ ನಷ್ಟವನ್ನು ಹೋಟೆಲ್ ನವರು ತಿಂಡಿ-ತಿನಿಸುಗಳ ಬೆಲೆಯನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ. ಅಡುಗೆ ಅನಿಲವು ಬುಕ್ ಮಾಡಿದ ೩೦ ದಿನಗಳ ನಂತರವೇ ಸಿಗುತ್ತದೆ. ಈ ಪರಿಣಾಮ ಗ್ರಾಹಕರ ಮೇಲೆ ಬಿದ್ದಿದೆ.

ಇನ್ನಷ್ಟು ವ್ಯತ್ಯಯ ಸಂಭವ:
ಈಗ ಶಾಲಾ ಮಕ್ಕಳ ರಜಾ ಅವಧಿ. ಪೇಟೆ ಮಂದಿ ಮಕ್ಕಳ ರಜಾ ಸಮಯ ಆಗಿರುವುದರಿಂದ ಸಾಕಷ್ಟು ಮಂದಿ ತಮ್ಮ ಊರಿಗೆ ಹೋಗಿರುತ್ತಾರೆ. ಆದುದರಿಂದ ಗ್ಯಾಸ್ ವ್ಯತ್ಯಯದ ಬಿಸಿ ಕೊಂಚ ಕಡಿಮೆ ಎಂದೇ ಹೇಳಬ ಹುದು. ಇನ್ನು ೧೫ ದಿವಸದಲ್ಲಿ ಮತ್ತೆ ಅವರೆಲ್ಲಾ ಪೇಟೆ ಮನೆಗೆ ಬಂದು ಸೇರುತ್ತಾರೆ. ಆವಾಗ ಇನ್ನಷ್ಟು ಗ್ಯಾಸ್ ಪೂರೈಕೆ ಅಗತ್ಯತೆ ಇರುತ್ತಾರೆ. ಆಗ ಮತ್ತೆ ವ್ಯತ್ಯಯದ ಬಿಸಿ ಪೇಟೆ ಮಂದಿಗೆ ತಟ್ಟಬಹುದು. ಅಲ್ಲದೆ ಪ್ರತಿ ತಿಂಗಳಿಗೆ ೫೧೩ ಸಿಲಿಂಡರ್ ತಾಲೂಕಿನ ಎಲ್ಲಾ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ಬಿಸಿಯೂಟಕ್ಕೆ ಬೇಕಾಗುತ್ತದೆ. ಈಗ ರಜಾ ಆಗಿರುವುದು ಅದರಲ್ಲಿಯೂ ಅಂಗನವಾಡಿ ಕೇಂದ್ರಗಳಿಗೂ ರಜೆ ಆಗಿರುವುದರಿಂದ ಅಷ್ಟು ಪ್ರಮಾಣದಲ್ಲಿ ಗ್ಯಾಸ್ ಪೂರೈಕೆಯಲ್ಲಿ ಬೇಡಿಕೆ ಇಳಿಮುಖವಾಗಿದೆ. ಜೂ.೧ರಿಂದ ಮತ್ತೆ ಶಾಲೆಗಳಿಗೆ ಗ್ಯಾಸ್ ಬೇಕೇ ಬೇಕು. ಆಗ ಇನ್ನಷ್ಟು ಬೇಡಿಕೆ ಗ್ಯಾಸ್‌ಗೆ ಇರುವುದರಿಂದ ಮತ್ತಷ್ಟು ವ್ಯತ್ಯಯ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಗ್ರಾಹಕರು.

ಹೊಸ ಏಜೆನ್ಸಿಯೊಂದೇ ಪರಿಹಾರವೇ?:
ಸುಳ್ಯ ತಾಲೂಕಿನಲ್ಲಿ ಇರುವುದೇ ಒಂದು ಗ್ಯಾಸ್ ಏಜೆನ್ಸಿ. ಆದರೆ ಪುತ್ತೂರು ಬಂಟ್ವಾಳ, ಬೆಳ್ತಂಗಡಿ ಸಹಿತ ಇತರ ಎಲ್ಲಾ ತಾಲೂಕುಗಳಲ್ಲಿ ಎರಡೆರಡು ಏಜೆನ್ಸಿಗಳು ಇದೆ. ಇಲ್ಲಿಯೂ ಇನ್ನೊಂದು ಏಜೆನ್ಸಿ ಬೇಕು ಎನ್ನುವುದು ಗ್ರಾಹಕರ ಒತ್ತಾಸೆ. ಜಿಲ್ಲೆಯಲ್ಲಿ ಒಟ್ಟು ೨೬ ಗ್ಯಾಸ್ ಏಜೆನ್ಸಿಗಳು ಇದೆ. ಇದರಲ್ಲಿ ೧೭ ಮಾತ್ರ ಮಂಗಳೂರು ನಗರದಲ್ಲಿದ್ದರೆ ಉಳಿದ ೯ ಏಜೆನ್ಸಿಗಳು ಇತರ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕಿನಲಿವೆ. ಆದುದರಿಂದ ತಾಲೂಕಿಗೆ ಕನಿಷ್ಟ ಎರಡು ಏಜೆನ್ಸಿಗಳು ಬೇಕೇ ಬೇಕು. ಆಗ ಆರೋಗ್ಯಕರ ಸ್ಪರ್ಧೆ ಏರ್ಪಟ್ಟು ಗ್ರಾಹಕರಿಗೆ ಒಳ್ಳೆಯ ಸೇವೆ ದೊರೆಯಲು ಅವಕಾಶ ಇದೆ ಎನ್ನುತ್ತಾರೆ ನಾಗರಿಕರು.

ಕಾಳಸಂತೆಯಲ್ಲಿ ವ್ಯಾಪಾರ:
ಗ್ಯಾಸ್ ಇಲ್ಲ ಇಲ್ಲ ಎಂದು ಗ್ರಾಹಕರಿಗೆ ಹೇಳುತ್ತಾರೆ. ಆದರೆ ನಿಗದಿತ ಹಣಕ್ಕಿಂತ ಅಂದರೆ ರೂ. ೬೦೦ಕ್ಕಿಂತ ಹೆಚ್ಚು ಹಣ ಕೊಟ್ಟವರಿಗೆ ಆಗಲೇ ಗ್ಯಾಸ್ ರೆಡಿ. ಬುಕ್ಕಿಂಗ್ ಆಗ ತಾನೇ ಮಾಡಿಕೊತ್ತಾರೆ. ಅಲ್ಲದೆ ಈ ವ್ಯವಹಾರಗಳಿಗೂ ಬ್ರೋಕರ್ ಇದ್ದಾರೆ. ಈ ಪರಿಣಾಮ ದುಡ್ಡು ಇದ್ದವರಿಗೆ ಗ್ಯಾಸ್ ಕೊರತೆಯೇ ಇಲ್ಲ! ಅಡುಗೆ ಅನಿಲಗಳನ್ನು ಖರೀದಿಸಿ ವಾಹನಕ್ಕೆ ಬಳಸುವವರು, ಹೋಟೆಲ್‌ಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮಂದಿಯೂ ಇಲ್ಲದೇ ಇಲ್ಲ. ಜಟ್ಟಿಪಳ್ಳದಲ್ಲಿ ದಲ್ಲಾಳಿಯೊಬ್ಬರು ೯೦೦ ನೀಡಿದರೆ ಬೇಕಾದಷ್ಟು ಸಿಲಿಂಡರ್‌ಗಳನ್ನು ಪೂರೈಸುತ್ತಾರೆ ಎಂಬ ಆರೋಪಗಳು ಇವೆ.

ಚಿಂತಕ ಗೋವಿಂದರಾವ್ ಜೈಲಿಗೆ ಭೇಟಿ

Posted by JAYAKIRANA Kirana on | 0 comments | Leave a comment...


ಮಂಗಳೂರು: ಚಲನಚಿತ್ರ ನಟ ಹಾಗೂ ಹಿರಿಯ ಚಿಂತಕ ಪ್ರೊ. ಗೋವಿಂದ ರಾವ್ ನಿನ್ನೆ ಮಂಗ ಳೂರಿನ ಸಬ್‌ಜೈಲಿಗೆ ಭೇಟಿಯಾಗಿ ನಕ್ಸಲ್ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿರುವ ವಿಠಲ ಹಾಗೂ ಲಿಂಗಣ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಇದೇ ವೇಳೆ ಜೈಲಿನಲ್ಲಿ ಹಿಂದಿ ಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತಿ ದ್ದಾರೆ. ಆದರೆ ತನ್ನ ಪುಸ್ತಕಗಳನ್ನು ಪೊಲೀಸರು ಇನ್ನೂ ನೀಡಿಲ್ಲ. ಇದರಿಂದಾಗಿ ಇದೇ ತಿಂಗಳ ೨೧ ರಂದು ಆರಂಭಗೊಳ್ಳಲಿರುವ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಧ್ಯವಾಗಿಲ್ಲ ಎಂದು ವಿಠಲ, ಗೋವಿಂದರಾವ್‌ಗೆ ತಿಳಿಸಿದ್ದಾನೆ.
ನಮಗೆ ಒಂದಿಷ್ಟು ಜಮೀನು ಇದ್ದು, ಅದರಲ್ಲಿ ಕೃಷಿ ಹಾಗೂ ಕಾಡು ಉತ್ಪತ್ತಿಗಳನ್ನು ಬೆಳೆದು ಜೀವನ ನಡೆಸುತ್ತಿದ್ದೆವು. ಆದರೆ ನಮ್ಮ ಮೇಲೆ ನಕ್ಸಲ್ ಆರೋಪ ಹೊರಿಸಿ ಬಂಧಿಸಲಾಗಿದೆ ಎಂದು ವಿಠಲ ತಿಳಿಸಿದನು. ಇದೇ ವೇಳೆ ಆತ ನಿಗೆ ಧೈರ್ಯ ನೀಡಿದ ಗೋವಿಂದ ರಾವ್, ಎರಡೂ ಕಡೆಯಿಂದಲೂ ತಪ್ಪು ನಡೆದಿರಬಹುದು. ಆದರೆ ಅದೆಲ್ಲವನ್ನೂ ತಲೆಗೆ ಹಚ್ಚಿಕೊಂಡು ಕೊರಗದೆ ಸವಾಲುಗಳನ್ನು ಎದುರಿಸಬೇಕು ಎಂದು ಧೈರ್ಯ ತುಂಬಿದರು.
ವಿವಿ ಪರೀಕ್ಷೆಗೆ ಹಾಜರುಪಡಿಸಲು ಕರೆದೊಯ್ಯುವ ವೇಳೆ ಕೈಗಳಿಗೆ ಕೋಳ ಹಾಕಲಾಗಿದ್ದು ಪರೀಕ್ಷಾ ಕೊಠಡಿ ಯಲ್ಲೂ ಕೈಕೋಳ ಹಾಕಿದ್ದರ ಬಗ್ಗೆ ಜೈಲರ್ ವಿಜಯಕುಮಾರ್ ಡಿ.ಧವನ್ ಅವರಲ್ಲಿ ಪ್ರಶ್ನಿಸಿ ಸುಪ್ರೀಂ ಕೋರ್ಟಿನ ಆದೇಶ ಉಲ್ಲಂಘನೆ ಎಂದು ನೆನಪಿ ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಣ್ಣ ಹಾಗೂ ವಿಠಲ ಅವರನ್ನು ಕಾಣುವಾಗ ಅವರು ನಕ್ಸಲ್ ಸಂಪರ್ಕ ಹೊಂದಿ ರುವ ಆರೋಪ ಸುಳ್ಳೆಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ನಮ್ಮಲ್ಲಿರುವ ವ್ಯವಸ್ಥೆ ಹಾಗೂ ಶೋಷಿತರ ವಿರುದ್ಧ ದ್ವನಿ ಎತ್ತಿದವರ ಮೇಲೆ ಆರೋಪಗಳನ್ನು ಹೊರಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಇದರಿಂ ದಾಗಿ ಮುಂದೆ ಅಂತವರೇ ಭಯೋ ತ್ಪಾದಕರಾಗುವುದನ್ನು ಅಲ್ಲಗಳೆಯು ವಂತಿಲ್ಲ ಎಂದು ಕಿಡಿಕಾರಿದರು. ವಿಠಲ ಹಾಗೂ ಲಿಂಗಣ್ಣ ಅವರ ಬಿಡುಗಡೆಗಾಗಿ ಹೋರಾಟ ನಡೆಸಲಾಗುತ್ತದೆ. ಈಗಾಗಲೇ ರಾಜ್ಯಮಟ್ಟದಲ್ಲಿ ಡಿಫೆನ್ಸ್ ಕಮಿಟಿಯನ್ನೂ ರಚಿಸಲಾಗಿದ್ದು ೨೮ರಂದು ಬೃಂದಾ ಕಾರಟ್ ಬೆಂಗ ಳೂರಿಗೆ ಆಗಮಿಸಲಿದ್ದು ಅಂದೇ ಮುಖ್ಯಮಂತ್ರಿಗೆ ಮನವಿ ನೀಡುವ ಜತೆಗೆ ಪ್ರತಿಭಟನೆಯನ್ನೂ ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್ ಮಾತನಾಡಿ, ಸರಕಾರ ಇರುವ ಶಾಲೆಗಳನ್ನು ಮುಚ್ಚಲು ಸಿದ್ಧತೆ ನಡೆಸುತ್ತಿದೆ. ಆದರೆ ಕಾಡುಪ್ರದೇಶಗಳಲ್ಲಿ ಜೀವನ ಸಾಗಿಸುತ್ತಿರುವವರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ. ಈ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯಗಳಿಲ್ಲದೆ, ಜನರ ಸಂಪರ್ಕವೇ ಅವರಿಗಿಲ್ಲ. ಇದು ಯಾವ ನ್ಯಾಯ ಎಂದು ಕಿಡಿಕಾರಿದರು. ನಿಯೋಗದಲ್ಲಿ ಮುನೀರ್ ಕಾಟಿಪಳ್ಳ ಹಾಗೂ ಇತರರು ಉಪಸ್ಥಿತರಿದ್ದರು.

ಸಂಬಳ ಕೇಳಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆದರು

Posted by JAYAKIRANA Kirana on | 0 comments | Leave a comment...

ದಲಿತ ಮಹಿಳೆಯ ಆರೋಪ
ಮಂಗಳೂರು: ಕಳೆದ ನಾಲ್ಕು ತಿಂಗಳಿಂದ ಶೆಟ್ಟರೊಬ್ಬರ ಮನೆಯಲ್ಲಿ ಕೆಲಸ ಮಾಡಿದ್ದರೂ ಸಂಬಳ ನೀಡಿರ ಲಿಲ್ಲ. ಸಂಬಳ ಕೇಳಿದ್ದಕ್ಕೆ ಮನೆಯಲ್ಲಿದ್ದ ಎಲ್ಲರೂ ಸೇರಿ ಚಪ್ಪಲಿಗಳಿಂದ ಹಿಗ್ಗಾ ಮುಗ್ಗಾ ಥಳಿಸಿ ಖಾಲಿ ಕಾಗದಕ್ಕೆ ಸಹಿ ಹಾಕಿಸಿದರು ಎಂದು ದಲಿತ ಮಹಿಳೆ ಯೋರ್ವರು ನಿನ್ನೆ ಪತ್ರಿಕಾಗೋಷ್ಟಿ ಯಲ್ಲಿ ತಮ್ಮ ಅಳಲು ತೋಡಿ ಕೊಂಡರು.
ಕಿನ್ನಿಗೋಳಿಯ ಬಲವಿನಗುಡ್ಡೆ ಕೆಮ್ರಾಲ್ ನಿವಾಸಿ ಸರೋಜ ಎಂಬ ವರೇ ಅಳಲು ತೋಡಿಕೊಂಡವರು. ಇಲ್ಲಿನ ನಾರಾಯಣ ಶೆಟ್ಟಿ ಎಂಬವರ ತೋಟದಲ್ಲಿ ಐದು ತಿಂಗಳಿಂದ ಕೆಲಸ ಮಾಡಿಕೊಂಡಿದ್ದ ಇವರಿಗೆ ಸರಿಯಾಗಿ ಸಂಬಳ ನೀಡದೆ ತಿಂಗಳಿಗೆ ೧೦೦ ಅಥವಾ ೨೦೦ ರೂ. ನೀಡಲಾಗುತ್ತಿತ್ತು. ಸರಿಯಾಗಿ ಸಂಬಳ ನೀಡಿ ಎಂದರೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ ಕೊಂದು ತೋಟದಲ್ಲಿ ಹೂತು ಹಾಕುವುದಾಗಿ ಬೆದರಿಸುತ್ತಿದ್ದರು ಎಂದು ಸರೋಜ ಆರೋಪಿಸಿದ್ದಾರೆ.
ಇದೇ ತಿಂಗಳ ೩ರಂದು ಬೆಳಗ್ಗೆ ಸಂಬಳಕ್ಕಾಗಿ ನಾರಾಯಣ ಶೆಟ್ಟರ ಮನೆಗೆ ಹೋಗಿದ್ದೆ. ಆ ವೇಳೆ ಅವರು ಅವಾಚ್ಯವಾಗಿ ಬೈದು ಮಧ್ಯಾಹ್ನ ಬರ ಹೇಳಿದ್ದ ಕಾರಣ ಅವರು ಹೇಳಿದಂತೆ ಮಾಡಿದ್ದೆ. ಆ ಸಂದರ್ಭ ಮನೆಯಲ್ಲಿದ್ದ ಐವರು ಗಂಡಸರು ಮತ್ತು ನಾಲ್ವರು ಮಹಿಳೆಯರು ಚಪ್ಪಲಿ, ದೊಣ್ಣೆ ಯಿಂದ ಮನಬಂದಂತೆ ಹಲ್ಲೆ ನಡೆಸಿದರು. ಬಳಿಕ ಮಾನಭಂಗಕ್ಕೂ ಯತ್ನಿಸಿ ಗದ್ದೆಯಲ್ಲಿ ಎಸೆದು ಹೋದರು. ಬಳಿಕ ಗಂಡ ಕೃಷ್ಣ ಅವರು ಆಸ್ಪತ್ರೆಗೆ ದಾಖಲಿ ಸಿದರು ಎಂದು ಸರೋಜ ಅಂದಿನ ಘಟನೆಯನ್ನು ವಿವರಿಸಿದರು.
ಈ ಬಗ್ಗೆ ದಲಿತ ಮುಖಂಡರು ಆಸ್ಪತ್ರೆಗೆ ಬಂದು ಮಾಹಿತಿ ಸಂಗ್ರಹಿಸಿ ಠಾಣೆಗೆ ದೂರು ನೀಡಿದ ಕಾರಣ ಕೇಸು ದಾಖಲಾಗಿತ್ತು. ಅಲ್ಲಿಗೆ ಬಂದ ನಾರಾ ಯಣ ಶೆಟ್ಟಿ ಕೇಸನ್ನು ಹಿಂದಕ್ಕೆ ಪಡೆದರೆ ಕೇಸನ್ನು ರಾಜಿಯಲ್ಲಿ ಮುಕ್ತಾಯ ಗೊಳಿಸುವುದಾಗಿ ಹೇಳಿದರು. ಒಪ್ಪದಿದ್ದಾಗ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪ್ಪಾಡಿ ಅವರ ಸಹಾಯಕಿ ನ್ಯಾಯವಾದಿ ಆಸ್ಪತ್ರೆಗೆ ಬಂದು ಬೆದರಿಸಿ ಬಲಾತ್ಕಾರವಾಗಿ ಖಾಲಿ ಕಾಗದಕ್ಕೆ ಸಹಿ ಹಾಕಿಸಿದರು. ಬಳಿಕ ನಾವು ಅವರಿಂದ ೧.೪೦ಲಕ್ಷ ಹಣ ಪಡೆದಿರುವುದಾಗಿ ಪ್ರಚಾರ ಮಾಡುತ್ತಾ ಬಂದರು. ಸಹಾಯಕ್ಕೆ ಬಂದ ದಲಿತ ಮುಖಂಡರ ಮೇಲೂ ಆರೋಪ ಹೊರಿಸಿದರು ಎಂದು ಮಹಿಳೆ ದೂರಿದ್ದಾರೆ. ಸುದ್ದಿಗೋ ಷ್ಟಿಯಲ್ಲಿ ಸರೋಜ ಅವರ ಗಂಡ ಕೃಷ್ಣ ಉಪಸ್ಥಿತರಿದ್ದರು.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4077) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1461) donation (1) dvs (21) election (1) encounter (1) epaper (2528) epapr (2) escape (2) eshwarappa (6) facebook (1) fariyad (8) fea (1) feature (2303) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (39) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (151) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (95) kyandi (1) lekhana (262) ln (1) lnews (3700) lokayukta (3) madikeri (1) maleria (1) mangalore (599) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (153) mlore (713) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (421) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (811) srinivaspoojary (1) srinivasshetty (1) sslc (2) suicide (2) sulia (4) sullia (209) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (959) tpchandrashekaran (1) traffic (1) train (1) udu (1) udupi (491) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)