ವಿಮಾನ ಅಪಘಾತ: ೧೬ ಭಾರತೀಯ ಸಾವು

Posted by JAYAKIRANA Kirana on Sunday, 13 May 2012 | 0 comments | Leave a comment...

ಕಠ್ಮಂಡು: ಅಗ್ನಿ ಏರ್ ಕಂಪೆನಿಗೆ ಸೇರಿದ ವಿಮಾನವೊಂದು ೨೧ ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದು, ನೇಪಾಳದ ಉತ್ತರಾರ್ಧದ ಹಿಮಾಲಯ ಪರ್ವತಶ್ರೇಣಿ ವಿಮಾನ ತಂಗುದಾಣದಲ್ಲಿ ಇಳಿಸುವ ವೇಳೆ ಅಪಘಾತಕ್ಕೀಡಾಗಿದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಚಿಂತಾಜನಕ ಸ್ಥಿತಿಯಲ್ಲಿದ್ದ ನಾಲ್ವರನ್ನು ಹತ್ತಿರದ ಪೋಖಾರ್‌ಗೆ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಸಾಗಿಸಲಾಗಿದೆ ಎಂದು ಪರಿಸರದ ಮುಖ್ಯ ಸರಕಾರಿ ಅಧೀಕ್ಷಕ ಲಕ್ಷ್ಮಿ ರಾಜ್ ಶರ್ಮಾ ತಿಳಿಸಿದ್ದಾರೆ.
ಪತನವಾದ ಸ್ಥಳದಿಂದ ೯ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ. ವಿಮಾನದಲ್ಲಿ ೧೬ ಮಂದಿ ಭಾರತೀಯರು ಹಾಗೂ ಇಬ್ಬರು ಪಶ್ಚಿಮಭಾಗದವರು ಎಂದು ತಿಳಿದುಬಂದಿದೆ. ಪತ್ತೆಯಾದ ಅವಶೇಷಗಳು ಛಿದ್ರಛಿದ್ರವಾಗಿದ್ದು, ಯಾವೊಂದು ಭಾಗಕ್ಕೂ ಬೆಂಕಿ ತಗಲಿಲ್ಲ.

ಅಕ್ರಮ ದನ ಸಾಗಾಟಗಾರರಿಗೆ ‘ದಾರಿ’ ತೋರಿಸಿದ ಪೊಲೀಸರು!

Posted by JAYAKIRANA Kirana on | 0 comments | Leave a comment...


ಬಜರಂಗಿಗಳು ಅಲ್ಲಲ್ಲಿ ಕಾವಲು ಕಾದು ಜೀವ ಕೊಟ್ಟಾದರೂ ದನದ ವಾಹನ ತಡೆದು ಏನೇನೋ ಅನಾಹುತ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಬಜರಂಗಿಗಳೂ ವಯಸ್ಸಾದ ಪೈಲ್ವಾನರಂತೆ ಏದುಸಿರು ಬಿಡುತ್ತಿದ್ದಾರೆ. ಹೆಚ್ಚಿನವರು ಮದುವೆಯಾಗಿ ಏನೇನೋ ವಹಿವಾಟು ಮಾಡಿಕೊಂಡು ಹಿಂದುತ್ವ ನೆನಪಾದಾಗಲೆಲ್ಲಾ ಸತ್ಯನಾರಾಯಣ ಪೂಜೆಯನ್ನು ಮಾಡಿಕೊಂಡು ಹಾಯಾಗಿದ್ದಾರೆ. ಅಕ್ರಮ ಜಾನುವಾರು ಸಾಗಾಟಗಳನ್ನು ತಡೆಯಬೇಕಾದ ಪೊಲೀಸರು ಇಷ್ಟು ಕೊಡಿ ಎಂದು ಚೌಕಾಶಿಗೆ ಇಳಿದಿದ್ದಾರೆ.

ಮಂಗಳೂರು: ಕೊಟ್ಟಾರ ಚೌಕಿ ಯಲ್ಲಿ ತಿಂಗಳ ಹಿಂದೆ ದನಸಾಗಾಟದ ವಾಹನ ಅಪಘಾತಕ್ಕೀಡಾದ ನಂತರ ಅಕ್ರಮ ದನ ಸಾಗಾಟವನ್ನು ನಿಲ್ಲಿಸಲು ಪೊಲೀಸ್ ಇಲಾಖೆಯೂ ಶತ ಪ್ರಯತ್ನ ನಡೆಯುತ್ತಿದೆ. ಎಲ್ಲಿಯವರೆಗೆ ಎಂದರೆ ಸ್ವಯಂ ಪೊಲೀಸರೇ ಅಕ್ರಮ ದನ ಸಾಗಾಟಕ್ಕೆ ಬೇರೆಯೇ ಆದ ದಾರಿ ತೋರಿಸಿಕೊಟ್ಟು ಕೃತಾರ್ಥ ರಾಗಿದ್ದಾರೆ!
ಕಾರ್ಕಳದಿಂದ ಅಕ್ರಮ ದನ ಸಾಗಾಟ(ಹೆಚ್ಚಾಗಿ ಕಳ್ಳತನಗೈದ ಜಾನು ವಾರುಗಳು)ದ ವಾಹನ ಪಡುಬಿದ್ರಿ ಆಗಿ ನೇರ ರಾಷ್ಟ್ರೀಯ ಹೆದ್ದಾರಿಯಾಗಿ ಕುದ್ರೋಳಿಯ ಕಸಾಯಿಖಾನೆ ತಲುಪು ತಿತ್ತು. ದಾರಿಯಲ್ಲಿ ಸಿಗುವ ಅಷ್ಟೂ ಪೊಲೀಸ್ ಠಾಣೆಗಳಿಗೆ ಕಪ್ಪ ಕಾಣಿಕೆ ಸಿಗುತಿತ್ತು. ಈ ಕಪ್ಪ ಕಾಣಿಕೆಯನ್ನು ನಿರ್ದಿಷ್ಟ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಸಂಗ್ರಹಿಸುವ ಮೂಲಕ ಪ್ರತಿಯೊಂದು ಠಾಣೆಗೂ ಹೋಗಿ ಕಪ್ಪ ಕಾಣಿಕೆ ಸಲ್ಲಿಸುವ ದನ ಕಳ್ಳರ ಕಷ್ಟವನ್ನು ಪೊಲೀಸರೇ ತಪ್ಪಿಸಿ ದ್ದರು. ಈ ವಿಷಯ ಜಯಕಿರಣದಲ್ಲಿ ಪ್ರಕಟವಾಗಿ ಕೆಲ ಕಾಲ ಕಪ್ಪ ನಿಂತು ಹೋಯಿತು. ಕಮೀಷನರ್ ಅವರೇ ಮುತುವರ್ಜಿ ವಹಿಸಿಕೊಂಡು ಹೆಜ ಮಾಡಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್ ಕಾವಲು ಹಾಕಿಸಿದರು. ಪರಿಣಾಮ ಕೆಲ ದಿನಗಳ ಕಾಲ ಜಾನುವಾರು ಸಾಗಾಟ ನಿಂತು ಹೋಗಿದೆ. ಆದರೆ ಈಗ ಅದು ಮತ್ತೆ ಆರಂಭವಾಗಿದೆ. ಅಕ್ರಮ ಜಾನುವಾರು ಸಾಗಾಟ ದಿಂದ ತಿಂಗಳಿಗೆ ಲಕ್ಷದ ಆಸುಪಾಸು ಸಂಪಾದನೆ ನಡೆಸುತ್ತಿದ್ದ ಪೊಲೀಸರು ಈಗ ಜಾನುವಾರು ಕಳ್ಳರಿಗೆ ಹೊಸ ನಕ್ಷೆ ಕೊಟ್ಟಿದ್ದಾರೆ. ಇದರ ಮೂಲಕ ಕಾರ್ಕಳದಿಂದ ಬರುವ ಜಾನುವಾರು ಸಾಗಾಟದ ವಾಹನ ಫಲಿಮಾರಿನಿಂದ ಒಳರಸ್ತೆಯಲ್ಲಿ ತಿರುಗಿ ಮೂರು ಕಾವೇರಿಗೆ ಬಂದು ಅಲ್ಲಿಂದ ಮೂಡಬಿದ್ರೆ ದಾರಿಯಾಗಿ ನಿಡ್ಡೋಡಿ-ಮುಚ್ಚೂರು ಮಾರ್ಗವಾಗಿ ಮಂಗಳೂರನ್ನು ಸೇರಿ ಕೊಳ್ಳುತ್ತದೆ. ಈ ದಾರಿಯಲ್ಲಿ ಬೇರೆ ಪೊಲೀಸ್ ಠಾಣೆಯ ಸರಹದ್ದಾಗಲೀ, ಪೊಲೀಸ್ ಬ್ಯಾರಿಕೇಡ್ ಆಗಲಿ ಇಲ್ಲದೆ ಇರುವುದರಿಂದ ಸದ್ಯದ ಮಟ್ಟಿಗೆ ದನ ಸಾಗಾಟಗಾರರು ನಿರಾತಂಕವಾಗಿ ತಮ್ಮ ವಹಿವಾಟ ನಡೆಸುತ್ತಿದ್ದಾರೆ. ಈ ಹಿಂದೆ ಬಜರಂಗಿಗಳ ಹಿಂದುತ್ವದ ಬಿ.ಪಿಯಂತೆ ಏರುತ್ತಿದ್ದ ಸಂದರ್ಭದಲ್ಲಿ ರಾತ್ರಿ ಹಗಲೆನ್ನದೆ ಬಜರಂಗಿಗಳು ಅಲ್ಲಲ್ಲಿ ಕಾವಲು ಕಾದು ಜೀವ ಕೊಟ್ಟಾದರೂ ದನದ ವಾಹನ ತಡೆದು ಏನೇನೋ ಅನಾಹುತ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಬಜರಂಗಿಗಳೂ ವಯಸ್ಸಾದ ಪೈಲ್ವಾನರಂತೆ ಏದುಸಿರು ಬಿಡುತ್ತಿದ್ದಾರೆ. ಹೆಚ್ಚಿನವರು ಮದುವೆಯಾಗಿ ಏನೇನೋ ವಹಿವಾಟು ಮಾಡಿಕೊಂಡು ಹಿಂದುತ್ವ ನೆನಪಾ ದಾಗಲೆಲ್ಲಾ ಸತ್ಯನಾರಾಯಣ ಪೂಜೆಯನ್ನು ಮಾಡಿಕೊಂಡು ಹಾಯಾಗಿದ್ದಾರೆ. ಅಕ್ರಮ ಜಾನುವಾರು ಸಾಗಾಟಗಳನ್ನು ತಡೆಯಬೇಕಾದ ಪೊಲೀಸರು ಇಷ್ಟು ಕೊಡಿ ಎಂದು ಚೌಕಾಶಿಗೆ ಇಳಿದಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಎಂತೆಂಥ ಪೊಲೀಸ್ ಪ್ರತಿಭೆಗಳು ಇವೆ ಎಂದರೆ ಜಾನುವಾರು ಕಳ್ಳರಿಗೇ ದಾರಿ ತೋರಿಸುವವರಿದ್ದಾರೆ. ಇಂಥ ಪೊಲೀಸರಿಂದಾಗಿ ಇಲ್ಲಿ ಕೆಲಸ ಮಾಡುವ ಬೆರಳೆಣಿಕೆಯ ಪೊಲೀಸರೂ ತಲೆತಗ್ಗಿಸು ತ್ತಿದ್ದಾರೆ. ಸುನಿಲ್ ಪಾಟೀಲರಂಥ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಇದ್ದರೂ ಜಾನುವಾರು ಸಾಗಾಟ ಮಾಡುವವರಿಗೆ ‘ದಾರಿ ತೋರಿಸುವ’ ಕೆಲಸ ನಡೆಯುತ್ತಿದೆ ಎನ್ನುವುದೇ ವಿಶೇಷ!

ಸಮುದ್ರಪಾಲಾಗುತ್ತಿದ್ದ ನಾಲ್ವರ ರಕ್ಷಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸಮುದ್ರಪಾಲಾಗುತ್ತಿದ್ದ ನಾಲ್ವರನ್ನು ಜೀವರಕ್ಷಕ ಸಂಘದ ಸದಸ್ಯರು ರಕ್ಷಿಸಿರುವ ಘಟನೆ ಉಳ್ಳಾಲ ಮೊಗವೀರಪಟ್ಣದಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ. ಬೆಂಗಳೂರಿನ ನೆಲಮಂಗಲದಿಂದ ಸೈಯ್ಯದ್ ಎಂಬವರ ೨೦ ಜನರ ಕುಟುಂಬ ಉಳ್ಳಾಲ ದರ್ಗಾ ಹಾಗೂ ಇನ್ನಿತರ ಪ್ರದೇಶಗಳಿಗೆ ವಿಹಾರಕ್ಕೆಂದು ಆಗಮಿಸಿದ್ದರು. ಮೊಗವೀರಪಟ್ಣ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದ ಸಂದರ್ಭ ಇಸ್ಮಾಯಿಲ್ (೧೭), ಸಾನಿಯಾ(೧೨), ನಗೀನ್‌ತಾಜ್(೩೬) ಹಾಗೂ ಅಂಜುಮನ್ ಭಾನು(೧೪) ಎಂಬವರು ಸಮುದ್ರಪಾಲಾಗುತ್ತಿದ್ದರು. ಕೂಡಲೇ ಸ್ಥಳದಲ್ಲಿದ್ದ ಜೀವರಕ್ಷಕ ಸಂಘ ಸಮುದ್ರಕ್ಕೆ ಹಾರಿ ನಾಲ್ವರನ್ನು ರಕ್ಷಿಸಿತು. ಬಳಿಕ ಉಳ್ಳಾಲ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಟ್ಟುಬಿಟ್ಟಿದ್ದಾರೆ. ಜೀವರಕ್ಷಕ ಸಂಘದ ಪ್ರವೀಣ್ ಕೋಟ್ಯಾನ್, ವಾಸುದೇವ ಬಂಗೇರ, ಮೋಹನ್ ಪುತ್ರನ್, ಚಾಚು, ಸುನಿಲ್ ಬಂಗೇರ, ಹರೀಶ್ ಅಮೀನ್, ಯಕ್ಷಿತ್ ಹಾಗೂ ೧೦೮ ಸಿಬ್ಬಂದಿ ಪೃಥ್ವಿರಾಜ್ ಹಾಗೂ ಮಂಜುನಾಥ್ ರಕ್ಷಿಸಲು ಸಹಕರಿಸಿದ್ದರು.

ನದಿಗೆ ಬಿದ್ದ ಶ್ರೀನಿವಾಸ ಏನಾದ?

Posted by JAYAKIRANA Kirana on | 0 comments | Leave a comment...

ಮಂಗಳೂರು: ಸುರತ್ಕಲ್ ಸಮೀಪದ ಗಣೇಶಪುರ ನಿವಾಸಿ ಶ್ರೀನಿವಾಸ ಪದಕ್ಕಣ್ಣಾಯ ಎಂಬವರು ಸ್ಕೂಟ್‌ರ್‌ನಿಂದ ಜಾರಿ ಕೂಳೂರು ಬಳಿ ಪಲ್ಗುಣಿ ನದಿಗೆ ಬಿದ್ದ ಘಟನೆಯ ದೂರೊಂದನ್ನು ಅವರ ಪತ್ನಿ ನಾಲ್ಕು ದಿನಗಳ ಹಿಂದೆ ಪಣಂಬೂರು ಪೊಲೀಸರಿಗೆ ನೀಡಿದ್ದರು. ಅದರ ಬಳಿಕ ಪೊಲೀಸರು ಹಾಗೂ ಕೋಸ್ಟ್‌ಗಾರ್ಡ್ ಸಿಬ್ಬಂದಿ ಮೂರು ದಿನಗಳವರೆಗೂ ನದಿಯಲ್ಲಿ ಶ್ರೀನಿವಾಸರಿಗಾಗಿ ಹುಡುಕಾಡಿದ್ದಾರೆ. ಆದರೆ ನದಿಯಲ್ಲಿ ಶ್ರೀನಿವಾಸ್ ಸಿಗಲೇ ಇಲ್ಲ. ಮಾತ್ರವಲ್ಲ ಶ್ರೀನಿವಾಸ್ ನದಿಗೆ ಬಿದ್ದ ಕುರುಹುಗಳೂ ಕಂಡಿಲ್ಲ. ಹಾಗಾದರೆ ನದಿಗೆ ಬಿದ್ದ ವ್ಯಕ್ತಿ ಏನಾದ ಎಂಬ ಪ್ರಶ್ನೆ ಮೂಡಿದ್ದು ಅವರ ನಾಪತ್ತೆಯ ಬಗ್ಗೆಯೇ ಶಂಕೆ ಮೂಡಲಾರಂಬಿಸಿದೆ.
ಶುಕ್ರವಾರ ಬೆಳಗ್ಗೆ ಶ್ರೀನಿವಾಸ ಪದಕ್ಕಣ್ಣಾಯರವರು ಸ್ಕೂಟರ್‌ನಲ್ಲಿ ಸಾಗುತ್ತಿದ್ದಾಗ ಸ್ಕೂಟ್‌ರ್ ಸ್ಕಿಡ್ ಆಗಿ ನದಿಗೆ ಜಾರಿ ಬಿದ್ದಿದ್ದಾರೆ ಎಂಬುದು ಅವರ ಪತ್ನಿ ಸ್ವಾತಿಯ ಹೇಳಿಕೆ. ಇವರು ಅದೇ ಸ್ಕೂಟರ್‌ನಲ್ಲಿ ಸಹಸವಾರರಾಗಿದ್ದರು ಎಂಬುದು ಗಮನಿಸಬೇಕಾದ ಅಂಶ. ಸ್ವಾತಿ ಘಟನೆಯ ವಿವರ ನೀಡುವ ಹಂತದಲ್ಲೇ ಪೊಲೀಸರಲ್ಲಿ ಶಂಕೆ ಮೂಡಿಸಿದ್ದ ಹಲವು ಅಂಶಗಳಿದ್ದವು. ಆದರೆ ದೂರು ದಾಖಲಿಸಿಕೊಂಡು ಹುಡುಕುವ ಕಾರ್ಯ ನಡೆಸುವುದು ಪೊಲೀಸರ ತುರ್ತು ಕಾರ್ಯವಾಗಿತ್ತು. ಅದನ್ನವರು ಮಾಡಿದ್ದಾರೆ. ಕೋಸ್ಟ್ ಗಾರ್ಡ್ ಹಾಗೂ ಸ್ಥಳೀಯ ಈಜು ಪಟುಗಳ ಸಹಾಯ ಪಡೆದು ಪಲ್ಗುಣಿ ನದಿಯಲ್ಲಿ ಶ್ರೀನಿವಾಸನನ್ನು ಹುಡುಕುವ ಕಾರ್ಯ ಮುಗಿಸಿದ್ದಾರೆ. ಈಗ ಏನಿದ್ದರೂ ಸತ್ಯ ಹುಡುಕುವ ಕಾರ್ಯ ನಡೆಯಬೇಕಿದೆ.
ಗಣೇಶಪುರ ನಿವಾಸಿ ಶ್ರೀನಿವಾಸ ಅಷ್ಟು ಬೆಳಗ್ಗೆ ಪತ್ನಿ ಸಮೇತನಾಗಿ ಜೋಕಟ್ಟೆ-ಕಿಸ್ಕೋ ರಸ್ತೆಗೆ ನುಗ್ಗುವ ತುರ್ತುಕೆಲಸವಾದರೂ ಏನಿತ್ತು. ಅದೂ ಅಲ್ಲದೆ ರಸ್ತೆ ಎಡಬದಿಗೆ ನಾಲ್ಕು ಬೈಕ್‌ಗಳು ಸಾಗುವಷ್ಟು ಜಾಗ ಇದ್ದರೂ ನದಿ ತೀರದ ಬಲ ಬದಿಗೆ ಹೋಗಿ ಇವರು ಜಾರಿದ್ದೇಕೆ ಎಂಬುದು ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆ. ತಾವು ಸ್ಕೂಟರ್‌ನಲ್ಲಿ ಸಾಗುತ್ತಿದ್ದಾಗ ಎದುರಿನಿಂದ ವೇಗವಾಗಿ ಟಿಪ್ಪರ್ ಬಂದುದರಿಂದ ಬಲಕ್ಕೆ ಹೋಗಬೇಕಾಯಿತು. ನಾನೇ ಚಲಾಯಿ ಸುತ್ತಿದ್ದಿದ್ದರೇ ನೇರವಾಗಿ ಟಿಪ್ಪರ್‌ನ ಅಡಿಯಲ್ಲಿಯೇ ಸಿಲಕುತ್ತಿದ್ದೇವು ಎಂಬುದು ಸ್ವಾತಿಯ ವಿವರ. ೬೦ ಅಡಿಯಷ್ಟು ಅಗಲದ ಡಾಮರು (ರಸ್ತೆಯಂಚಿನ ಮಣ್ಣು ರಸ್ತೆಯೂ ಸೇರಿ) ವಿಶಾಲ ರಸ್ತೆಯಲ್ಲಿ ಸ್ಕೂಟರ್ ಸವಾರರು ನದಿಗೆ ಜಾರುವಂತೆ ಟಿಪ್ಪರ್ ಚಲಿಸಿದ್ದಾದರೂ ಹೇಗೆ? ಇವರನ್ನು ನದಿಗೆ ದೂಡಲೇ ಬೇಕೆಂಬ ವ್ಯಯಕ್ತಿಕ ದುರುದ್ದೇಶ ಏನಾದರೂ ಟಿಪ್ಪರ್ ಚಾಲಕನಿಗೆ ಇತ್ತೆ? ಇಂತಹ ದುರುದ್ದೇಶ ಇಲ್ಲದಿದ್ದರೆ ನದಿಗೆ ಬಿದ್ದವರ ರಕ್ಷಣೆಗೂ ಬಾರದಂತೆ ಪರಾರಿಯಾಗುತ್ತಿದ್ದನೇ ಟಿಪ್ಪರ್ ಚಾಲಕ. ವಿಶೇಷ ಆರ್ಥಿಕ ವಲಯದ ಕಾಮಗಾರಿಗಳು ಭರದಲ್ಲಿ ನಡೆಯುವ ಈ ಸಂದರ್ಭದಲ್ಲಿ ಒಂದರ ಹಿಂದೊಂದರಂತೆ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿರುತ್ತವೆ. ಸ್ಕೂಟರ್‌ನಿಂದ ನದಿಗೆ ಜಾರಿದವನ ರಕ್ಷಣೆಗೆ ಯಾರೂ ಬಾರದಿರುತ್ತಿದ್ದರೇ ಅಥವಾ ಸ್ವಾತಿಯೇ ತನ್ನ ಪತಿಯ ರಕ್ಷಣೆಗೆ ಯಾರಲ್ಲೂ ಬಿನ್ನವಿಸಿಕೊಳ್ಳದೇ ನೇರವಾಗಿ ಪೋಷಕರ ಮನೆಗೆ ಹೋಗಿದ್ದಾದರೂ ಯಾವ ಧೈರ್ಯದಲ್ಲಿ. ಬೊಬ್ಬೆ ಹೊಡೆದು ಜನರನ್ನು ಸೇರಿಸುವ ಇಲ್ಲವೆ, ಪೊಲೀಸರಿಗೆ ಮಾಹಿತಿ ನೀಡಬೇಕು ಎಂಬ ಸಣ್ಣ eನವೂ ಪದವಿಧರೆಯಾದ ಅಕೆಗೆ ಹೊಳೆಯದಿರಲು ಹೇಗೆ ಸಾಧ್ಯ? ಗಮನಿಸಬೇಕಾದ ಇದಕ್ಕಿಂತ ಮಹತ್ವದ ಅಂಶ ಎಂದರೆ ಸ್ಕೂಟರ್‌ಸ್ಕಿಡ್ ಆಗಿ ಪತಿ ನದಿಗೆ ಜಾರಿ ಬೀಳುವಂತಹ ದೊಡ್ಡ ಅವಘಡವಾಗಿದ್ದರೂ ಸ್ವಾತಿಗಾಗಲಿ ಅವರು ಸಾಗುತ್ತಿದ್ದ ಸ್ಕೂಟರ್‌ಗಾಗಲಿ ತರಚಿದ ಕುರುಹುಗಳೂ ಕಂಡುಬರುವುದಿಲ್ಲ. ಇದೆಂತಹ ಅದ್ಭುತ ಸ್ಕಿಡ್ ಎಂದು ಪೊಲೀಸರು ತಲೆಕೆಡಿಸಿಕೊಳ್ಳುತ್ತಿದ್ದಾರೆ.
ಪೊಲೀಸರಿಗೆ ಇಂತಹ ಸಂಶಯಗಳು ಆರಂಭದಲ್ಲೇ ಕಾಡಿವೆ. ಆದರೆ ೪೮ಗಂಟೆಗಳ ಕಾಲ ಹುಡುಕುವ ಕಾರ್ಯ ಮಾಡಲೇ ಬೇಕಿತ್ತು. ಇದು ಪೊಲೀಸ್ ನಿಯಮ. ಅದನ್ನವರು ಮಾಡಿ ಮುಗಿಸಿದ್ದಾರೆ. ೪೮ ಗಂಟೆಯ ಮೊದಲೇ ಶಂಕೆಯ ಮೇಲೆ ಸ್ವಾತಿಯ ಹಿಂದೆ ಬಿದ್ದಿದ್ದರೆ ಸ್ವಾತಿ ಪೊಲೀಸರ ವಿರುದ್ಧವೆ ದೌರ್ಜನ್ಯದಂತಹ ಆರೋಪ ಮಾಡುವ ಸಾಧ್ಯತೆ ಇತ್ತು. ಒಮ್ಮೆ ದೌರ್ಜನ್ಯದ ಆರೋಪ ಬಂದರೆ ಮುಂದೆ ತನಿಖೆಗೆ ಹಿನ್ನಡೆ ಆಗುತ್ತಿತ್ತು. ಆದುದರಿಂದ ಜಾಣ ಕುರುಡು ಪ್ರದಶಿಸಿದ ಪೊಲೀಸರು ಮೌನವಾಗಿಯೇ ಸ್ವಾತಿಯ ಬೆನ್ನತ್ತಿದ್ದಾರೆ. ಶ್ರೀನಿವಾಸ ಹಾಗೂ ಸ್ವಾತಿಯ ಮತ್ತು ಅವರ ಕುಟುಂಬಗಳ ಹಿನ್ನೆಲೆಯನ್ನು ಕೆದಕುವ ಕೆಲಸವನ್ನು ನಗರ ಕ್ರೈಂ ಬ್ರಾಂಚ್ ಪೊಲೀಸರು ಎರಡು ದಿನಗಳ ಹಿಂದಿನಿಂದಲೇ ಆರಂಭಿಸಿದ್ದಾರೆ. ಸ್ವಾತಿಯ ನೇರ ವಿಚಾರಣೆಯ ಕಾರ್ಯ ಇಂದಿನಿಂದ ನಡೆಯಲಿದೆ. ಶ್ರೀನಿವಾಸ ನೀರಿಗೆ ಬಿದ್ದಿದ್ದಾನೆಯೇ ಅಥವಾ ಕಾಣೆಯಾಗಿದ್ದಾನೆಯೇ ಎಂಬುದೂ ಸೇರಿದಂತೆ ಪ್ರಕರಣದ ಹಿಂದಿನ ಸತ್ಯ ಸ್ವಾತಿಯ ಬಾಯಿಯಿಂದಷ್ಟೆ ಹೊರಗೆ ಬರಬೇಕಾಗಿದೆ. ಸತ್ಯ ಹೊರಗೆ ತೆಗೆಯುವ ಕೆಲಸ ಪೊಲೀಸರು ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಸಾರ್ವಜನಿಕರು.

ಡಿ.ವಿ.ಯನ್ನು ಕೆಳಗಿಳಿಸದಿದ್ದರೆ ಯಡ್ಡಿ ಪಕ್ಷ ತೊರೆಯುವ ಬೆದರಿಕೆ

Posted by JAYAKIRANA Kirana on | 0 comments | Leave a comment...


ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಸದಾನಂದ ಗೌಡರನ್ನು ಕೆಳಗಿಳಿಸದಿದ್ದರೆ ಪಕ್ಷ ತೊರೆಯುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆದರಿಕೆ ಒಡ್ಡಿದ್ದಾರೆ. ಅಷ್ಟೇ ಅಲ್ಲದೆ ತಾವು ನೀಡಿರುವ ಗಡುವಿನ ವೇಳೆಗೆ ಮೂರನೇ ವ್ಯಕ್ತಿ ಮುಖ್ಯಮಂತ್ರಿಯಾಗಬೇಕು. ಅವರು ಯಾರೇ ಆಗಿರಬಹುದು. ಗೌಡರನ್ನೇ ಮುಂದುವರಿಸುವ ನಿರ್ಧಾರ ಕೈಗೊಂಡರೆ ನಮ್ಮ ದಾರಿ ನಮಗೆ ನಿಮ್ಮ ದಾರಿ ನಿಮಗೆ ಎಂದು ಪಕ್ಷದ ಸಂಘಟನಾ ಕಾರ್ಯದರ್ಶಿ ಸತೀಶ್ ಅವರ ಮನ ವೊಲಿಸುವ ಸಂದರ್ಭದಲ್ಲಿ ವರಿಷ್ಠರಿಗೆ ಈ ಸಂದೇಶ ನೀಡಿದ್ದಾರೆ.
ಈ ಮಧ್ಯೆ ಯಡಿಯೂರಪ್ಪ ಕಾಂಗ್ರೆಸ್ ಜತೆ ಸಂಪರ್ಕ ಬೆಳೆಸಿದಾ ರೆಂದು ಹೇಳಲಾಗಿದೆ. ತಮ್ಮ ಆಪ್ತ ಸಚಿವರೊಬ್ಬರನ್ನು ನಿನ್ನೆ ದಿಡೀರನೇ ದೆಹಲಿಗೆ ಕಳುಹಿಸಿರುವ ಅವರು ಕೆಲವು ಕಾಂಗ್ರೆಸ್ ಮುಖಂಡರೊಟ್ಟಿಗೆ ಸಮಾಲೋಚನೆ ನಡೆಸಲಿದ್ದಾರೆ.
ಈ ಸಚಿವರು ಪಕ್ಷದ ನಾಯಕರೊಟ್ಟಿಗೆ ಮಾತುಕತೆ ನಡೆಸುವುದಲ್ಲದೆ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಜತೆ ಚರ್ಚೆ ನಡೆಸಲಿದ್ದಾರೆ. ಯಡಿಯೂರಪ್ಪ ಕಾಂಗ್ರೆಸ್ ಸೇರದಿದ್ದರೂ ಬಿಜೆಪಿಯಿಂದ ಹೊರಬಂದು ಹೊಸಪಕ್ಷ ಕಟ್ಟಿ ಕಾಂಗ್ರೆಸ್ ಬೆಂಬಲ ಪಡೆಯುವ ಯೋಚನೆ ಇದಾ ಗಿದೆ. ಇದಕ್ಕೆಂದೇ ಪರೋಕ್ಷವಾಗಿ ಸದಾ ನಂದ ಗೌಡರನ್ನು ತೆಗಳಿರುವ ಯಡಿ ಯೂರಪ್ಪ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಹಾಡಿ ಹೊಗಲಿದ್ದಾರೆ. ಕೆಲವು ಸಚಿವರು ಕೂಡಾ ಸದಾನಂದ ಗೌಡರ ಬದಲಾವಣೆ ಆಗದಿದ್ದರೆ ಪಕ್ಷದಲ್ಲಿ ಮುಂದುವರಿ ಯುವುದು ಬೇಡ ಎಂದು ಪಟ್ಟು ಹಿಡಿದಿದ್ದಾರೆ.ಎಲ್ಲಾ ಬೆಳಣಿಗೆಗಳಿಗೆ ಒಂದೆರಡು ದಿನದಲ್ಲಿ ಅಂತಿಮ ಸ್ವರೂಪ ಸಿಗಲಿದೆ. ರಾಷ್ಟ್ರೀಯ ವರಿ ಷ್ಠರು ಕೂಡಾ ಇಂದು ಇಲ್ಲವೇ ನಾಳೆ ಮಧ್ಯ ಪ್ರವೇಶಿಸುವ ಸಾಧ್ಯತೆ ಇದೆ.

ಕಾರ‍್ಯಕರ್ತರಲ್ಲಿ ಭ್ರಮನಿರಸನ ಮೂಡಿಸಿದ ಕಾಂಗ್ರೆಸ್ ನಡಿಗೆ...

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಹಾಗೂ ಅಧಿಕಾರಕ್ಕೆ ತರುವ ಉದ್ದೇಶ ದಿಂದ ತನ್ನದೆ ಆದ ಪ್ರಯತ್ನದಲ್ಲಿ ತೊಡಗಿದ್ದಾರೆ. ಪಕ್ಷದ ನಾಯಕರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಹುರುಪು ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಲೇ ಬಂದಿದ್ದಾರೆ. ಕಳೆದ ವರ್ಷ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಎಂದು ಹೋಗಿದ್ದರೆ, ಈಗ ಜನರನ್ನೇ ಕಾಂಗ್ರೆಸ್ ಬಳಿಗೆ ಸೆಳೆಯುವ ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ ಎಂದು ಹೊರಟಿದ್ದಾರೆ.
ಇವರ ಈ ಪ್ರಯತ್ನಗಳು ದ.ಕ. ಜಿಲ್ಲೆಯಲ್ಲಿ ಯಾವ ಪರಿಣಾಮ ಬೀರಲಿದೆ ಎಂಬ ಕುತೂಹಲ ಕಾರ್ಯಕರ್ತರಲ್ಲಿ ಮೂಡುತ್ತಲೇ ಇರುತ್ತವೆ. ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ನಡಿಗೆ ನಾಯಕರ ಮನೆಗೆ ಎಂಬಂತಾಗಿ ಕಾರ್ಯಕರ್ತರಲ್ಲಿ ಭ್ರಮನಿರಸನ ಮೂಡಿಸಿದ್ದರೆ, ಈಗಿನ ಕಾರ್ಯಕ್ರಮವಾದರೂ ಪಕ್ಷಕ್ಕೆ ನೆಲೆ ಹಾಗೂ ಬೆಲೆ ಒದಗಿಸುವಂತಾಗಲಿ ಎಂದು ಹಾರೈಸುತ್ತಿದ್ದಾರೆ.
ಕಾಂಗ್ರೆಸ್‌ಗೆ ಬನ್ನಿ, ಬದಲಾವಣೆ ತನ್ನಿ ಎಂದು ರಾಜ್ಯ ದಲ್ಲಿಯ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದರೆ ದ.ಕ. ಜಿಲ್ಲೆಯಲ್ಲಿ ಒಗ್ಗಟ್ಟು ತೋರಿಕೆಗೂ ಕಾಣುತ್ತಿಲ್ಲ. ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಹಾಗೂ ವೀರಪ್ಪ ಮೊಯ್ಲಿ ತ್ರಿಮೂರ್ತಿ ನಾಯಕರಿಂದ ಗುಂಪಾಗಿ ಒಡೆದು ಹೋದ ಕಾಂಗ್ರೆಸ್‌ನ್ನು ದ.ಕ. ಜಿಲ್ಲೆಯಲ್ಲಿ ಒಂದಾಗಹಿಸುವ ಪ್ರಯತ್ನಗಳು ಈ ವರೆಗೂ ಫಲ ಪಡೆದಿಲ್ಲ. ಒಂದಾಗುವ ನಾಟಕಗಳೂ ಕೂಡ ದ.ಕ. ಜಿಲ್ಲೆಯಲ್ಲಿ ನಡೆದಿಲ್ಲ ಎಂಬ ಬೇಸರವನ್ನು ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಒಡಕು ತ್ರಿಮೂರ್ತಿಗಳಿಗೆ ಸೀಮಿತವಾಗಿಲ್ಲ. ಜನಾರ್ದನ ಪೂಜಾರಿ ತನ್ನ ಬಳಗವನ್ನು ಗಟ್ಟಿ ಮಾಡಿಕೊಳ್ಳುವಲ್ಲಿ ವಿಫಲರಾಗಿರುವುದು ಮಾತ್ರವಲ್ಲದೆ ತನ್ನದೇ ಬಳಗದವರನ್ನೇ ನಿಂದಿಸಿ ಇದ್ದ ನೆಲೆ ಬೆಲೆಯನ್ನೂ ಕಳಚಿಕೊಂಡಿದ್ದಾರೆ.
ತಾನೇ ಬೆಳೆಸಿದ ಮಾಜಿ ಮೇಯರ್ ಕೆ. ಅಶ್ರಫ್‌ರ ವಿರುದ್ಧವೇ ಹರಿಹಾಯ್ದು ತನ್ನ ಬಳಗ ಸಣ್ಣದಾಗಿಸಿಕೊಳ್ಳುವ ಪ್ರಕ್ರಿಯೆಗೆ ನಾಂದಿ ಹಾಡಿದ ಜನಾರ್ದನ ಪೂಜಾರಿ, ತಾನೋರ್ವ ಮಾತ್ರ ಪಕ್ಷಕ್ಕೆ ಬೇಕಾದವ ಹಾಗೂ ಪ್ರಾಮಾಣಿಕ ಎಂದು ಬಿಂಬಿಸಿಕೊಳ್ಳುವ ಪ್ರಯತ್ನವಾಗಿ ಐವನ್ ಡಿಸೋಜಾರನ್ನು ಟೀಕಿಸಲು ಹೋಗಿ ಉಗಿಸಿಕೊಂಡಿದ್ದು ಹಳೆಯ ಕತೆ.
ಡಿಸಿಸಿ ಅಧ್ಯಕ್ಷ ರಮಾನಾಥ ರೈ ಇಂತಹವರನ್ನೆಲ್ಲ ತನ್ನ ಬಳಗದಲ್ಲಿ ಸೇರಿಸಿಕೊಂಡು ಪೂಜಾರಿ ವಿರೋಧಿ ಪಡೆಯನ್ನು ಗಟ್ಟಿಗೊಳಿಸಿ ಕೊಂಡಿದ್ದಾರೆ.
ಈ ರೀತಿಯ ರಾಜಕಾರಣ ಪಕ್ಷದ ಕಾರ್ಯಕರ್ತರಲ್ಲಿ ಬೇಸರ ಉಂಟುಮಾಡಿದ್ದರ ಪರಿಣಾವೇ ಪಕ್ಷದಲ್ಲೀಗ ದುಡಿಯುವ ಕಾರ್ಯಕರ್ತರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ.
ರಮಾನಾಥ ರೈ ಕೂಡ ಪಕ್ಷವನ್ನು ಸಂಘಟಿಸುವ ಬದಲು ತಮ್ಮದೇ ಗುಂಪು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಪರಿಣಾಮವಾಗಿ ಸದಾನಂದ ಪೂಂಜಾ, ಅಶ್ವಿನ್‌ಕುಮಾರ್ ರೈಯಂತವರು ಪ್ರತ್ಯೇಕ ಬಳಗದಲ್ಲಿ ಹೋರಾಟ ನಡೆಸುವಂತಾಗಿದೆ. ಇವರೆಲ್ಲ ಸದವೇ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗುವ ಸುಳಿವು ನೀಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಪಕ್ಷದಲ್ಲಿ ಒಗ್ಗಟ್ಟು ಮೂಡಿಸಲು ಸಾಧ್ಯವೇ? ಕಾಂಗ್ರೆಸ್‌ಗೆ ಬನ್ನಿ ಎಂದು ಕರೆದರೆ ಬಂದವರಿಗೆ ಯಾವ ಗುಂಪಿನಲ್ಲಿ ಜಾಗ ಎಂದು ಕೇಳುವ ಪರಿಸ್ಥಿತಿ ದ.ಕ. ಜಿಲ್ಲೆಯಲ್ಲಿದೆ. ಈ ಸ್ಥಿತಿ ಸುಧಾರಣೆಗೆ ಮಂತ್ರದಂಡ ಏನಾದರೂ ಇದ್ದರೆ ಹೇಳಿ ಎಂದು ಕಾರ್ಯಕರ್ತರು ಕೇಳುತ್ತಿದ್ದಾರೆ.

ಪಂಜಾಬ್ ಜಯದೊಂದಿಗೆ ಪ್ಲೇಆಫ್‌ನಲ್ಲಿ ಮತ್ತಷ್ಟು ಟ್ವಿಸ್ಟ್

Posted by JAYAKIRANA Kirana on | 0 comments | Leave a comment...

ಗುರ್‌ಕೀರತ್-ಹಸ್ಸಿ ಸ್ಫೋಟಕ ಆಟಕ್ಕೆ ಬೆಚ್ಚಿಬಿದ್ದ ಡೆಕ್ಕನ್
ಮೊಹಾಲಿ: ಈ ಬಾರಿಯ ಐಪಿಎಲ್ ಅಂತಿಮ ಘಟ್ಟಕ್ಕೆ ಪ್ರವೇಶಿಸಿದ್ದರೂ ಪ್ಲೇ-ಆಫ್‌ಗೆ ಯಾರು ಪ್ರವೇಶಿಸಲಿದ್ದಾರೆ ಎಂಬುದು ಈಗಲೂ ಜಟಿಲಗೊಂಡಿದೆ. ನಿನ್ನೆ ಗುರ್‌ಕೀರತ್ ಸಿಂಗ್ ಹಾಗೂ ಡೇವಿಡ್ ಹಸ್ಸಿ ಪ್ರದರ್ಶಿಸಿದ ಕೆಚ್ಚೆದೆಯ ಆಟದ ನೆರವಿನಿಂದ ಡೆಕ್ಕನ್ ವಿರುದ್ಧದ ಪಂದ್ಯವನ್ನು ಪಂಜಾಬ್ ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಡೆಕ್ಕನ್ ಆರಂಭದಲ್ಲೇ ಪಾರ್ಥಿವ್ (೧೮) ಹಾಗೂ ನಾಯಕ ಸಂಗಾಕ್ಕರ (೧) ವಿಕೆಟ್‌ನ್ನು ಕಳಕೊಂಡಿತು. ಆದರೂ ಮೂರನೇ ವಿಕೆಟ್‌ಗೆ ಶಿಖರ್ ಧವನ್ ಹಾಗೂ ಕ್ಯಾಮರೊನ್ ವೈಟ್ ಜೋಡಿ ಹತ್ತು ಓವರ್‌ಗಳಲ್ಲಿ ೯೬ ರನ್‌ಗಳ ಜೊತೆಯಾಟ ನಡೆಸಿದರು. ಶಿಖರ್ ೫೦ ಎಸೆತಗಳಲ್ಲಿ ಮೂರು ಸಿಕ್ಸ್ ಹಾಗೂ ಬೌಂಡರಿ ನೆರವಿನಿಂದ ೭೧ ರನ್ ಗಳಿಸಿದರು. ನಂತರ ಕ್ರಿಸ್ತಿಯಾನ್‌ರನ್ನು ಜೊತೆಯಾದ ವೈಟ್ (೬೭) ಜೋಡಿ ಕೇವಲ ೧೭ ಎಸೆತಗಳಲ್ಲಿ ಸ್ಫೋಟಕ ೪೪ ರನ್‌ಗಳ ಜೊತೆಯಾಟ ನಡೆಸಿದ ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೧೯೦ ರನ್ ಗಳಿಸಿದರು. ಆದರೆ ಕ್ರಿಸ್ತಿಯಾನ್ ಕೇವಲ ೧೦ ಎಸೆತಗಳಲ್ಲಿ ಎರಡು ಸಿಕ್ಸ್ ಹಾಗೂ ಒಂದು ಬೌಂಡರಿ ನೆರವಿನಿಂದ ೨೮ ರನ್ ಸ್ಫೋಟಿಸಿದ್ದು, ತಂಡ ೧೯೦ರ ಗಡಿ ದಾಟುವಂತಾಯಿತು.
ಗುರಿ ಬೆನ್ನತ್ತಿದ್ದ ಪಂಜಾಬ್ ಒಂದು ಹಂತದಲ್ಲಿ ಸೋಲಿನ ಭೀತಿಗೆ ಸಿಲುಕಿದ್ದರೂ ಅಂತಿಮ ಹಂತದಲ್ಲಿ ಡೇವಿಡ್ ಹಸ್ಸಿ ಹಾಗೂ ಸುರ್‌ಕೀರತ್ ನಡೆಸಿದ ಸ್ಪೋಟಕ ಜೊತೆಯಾಟವು ಅದಕ್ಕೆ ಪಂದ್ಯದ ಕೊನೆ ಎಸೆತದಲ್ಲಿ ಗೆಲುವು ತಂದಿತು. ಪಂಜಾಬ್ ಅರು ವಿಕೆಟ್ ನಷ್ಟಕ್ಕೆ ೧೯೪ ರನ್ ಗಳಿಸಿತು. ಈ ಜೋಡಿ ಏಳನೇ ವಿಕೆಟ್‌ಗೆ ಕೇವಲ ೨೦ ಎಸೆತದಲ್ಲಿ ಅಜೇಯ ೪೫ ರನ್‌ಗಳ ಮಳೆಯನ್ನೇ ಹರಿಸಿತ್ತು. ಅಂತಿಮ ಐದು ಓವರ್‌ನಲ್ಲಿ ತಂಡಕ್ಕೆ ೫೦ ರನ್‌ಗಳ ಅಗತ್ಯವಿತ್ತು. ಅದರಲ್ಲೂ ಅಂತಿಮ ಓವರ್‌ನಲ್ಲಿ ೧೬ ರನ್‌ಗಳು ಬೇಕಿದ್ದಾಗ ಗುರ್‌ಕೀರತ್ ಒಂದು ಸಿಕ್ಸ್ ಹಾಗೂ ಎರಡು ಬೌಂಡರಿ ಸಿಡಿಸಿ ಪಂದ್ಯದ ಹೀರೋ ಆದರು. ಸುರ್‌ಕೀರತ್ ಕೇವಲ ೧೨ ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸ್ ನೆರವಿನಿಂದ ೨೯ ರನ್ ಗಳಿಸಿ ಅಜೇಯರಾಗುಳಿದರು. ಹಸ್ಸಿ ಕೂಡ ೩೫ ಎಸೆತಗಳಲ್ಲಿ ೬೫ ರನ್ ಸಿಡಿಸಿದರು. ಇದರಲ್ಲಿ ಐದು ಸಿಕ್ಸ್ ಹಾಗೂ ನಾಲ್ಕು ಬೌಂಡರಿ ಒಳಗೊಂಡಿತ್ತು. ಇದಕ್ಕೂ ಮುನ್ನ ಮಂದೀಪ್ ಸಿಂಗ್ ಹಾಗೂ ಅಜರ್ ಮೆಹ್ಮೂದ್ ಹೋರಾಟದ ಇನ್ನಿಂಗ್ಸ್ ಪ್ರದರ್ಶಿಸಿದ್ದರು. ಆದರೆ ಶಾನ್ ಮಾರ್ಶ್ ಮತ್ತೆ ನಿರಾಶೆ ಮೂಡಿಸಿದರು. ಡೆಕ್ಕನ್ ಪರ ಸ್ಟೇಯ್ನ್ ಹಾಗೂ ಕ್ರಿಸ್ತಿಯಾನ್ ಎರಡು ವಿಕೆಟ್ ಪಡೆದರೂ ನೆರವಿಗೆ ಬರಲಿಲ್ಲ.

‘ರಾಯಲ್ಸ್ ಆಟಕ್ಕೆ ಮಂಡಿಯೂರಿದ ‘ವಾರಿಯರ‍್ಸ್

Posted by JAYAKIRANA Kirana on | 0 comments | Leave a comment...

ಚಾಂದಿಲಾ ಹ್ಯಾಟ್ರಿಕ್ ದಾಳಿ; ವಾಟ್ಸನ್ ಅರ್ಧಶತಕ
ಜೈಪುರ್: ಸಹಾರ ಪುಣೆ ವಾರಿಯರ‍್ಸ್‌ನ ಸೋಲಿನ ಸರಣಿ ನಿನ್ನೆ ಕೂಡ ಮುಂದುವರೆದಿದೆ. ಅಜಿತ್ ಚಾಂದಿಲಾರ ಮಾರಕ ಹ್ಯಾಟ್ರಿಕ್ ದಾಳಿ ಹಾಗೂ ಶೇನ್ ವಾಟ್ಸನ್ ಪ್ರದರ್ಶಿಸಿದ ಅಬ್ಬರದ ಅರ್ಧಶತಕದ ನೆರವಿನಿಂದ ನಿನ್ನೆಯ ಪುಣೆ ವಿರುದ್ಧದ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ೪೫ ರನ್‌ಗಳಿಂದ ಗೆದ್ದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು. ಅದರಲ್ಲೂ ಅಜಿಂಕ್ಯಾ ರಹಾಣೆ ಹಾಗೂ ಶೇನ್ ವಾಟ್ಸನ್ ದಾಖಲಿಸಿದ ಸ್ಫೋಟಕ ಅರ್ಧಶತಕವು ಅದಕ್ಕೆ ಹೆಚ್ಚಿನ ಮುನ್ನಡೆಯನ್ನು ತಂದುಕೊಟ್ಟಿತು. ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೧೭೦ ರನ್ ಗಳಿಸಿತು. ವಾಟ್ಸನ್ ಕೇವಲ ೩೧ ಎಸೆತಗಳಲ್ಲಿ ನಾಲ್ಕು ಸಿಕ್ಸ್ ಹಾಗೂ ಆರು ಬೌಂಡರಿ ನೆರವಿನಿಂದ ೫೮ ರನ್ ಗಳಿಸಿದರು. ರಹಾಣೆ ಬ್ಯಾಟ್‌ನಿಂದ ೬೧ ರನ್ ಹರಿದು ಬಂತು. ಮೊತ್ತ ಬೆನ್ನತ್ತಿದ್ದ ಪುಣೆ ಯಾವ ಹಂತದಲ್ಲೂ ಗುರಿ ಬೆನ್ನತ್ತುವ ನಿರೀಕ್ಷೆ ಕೂಡ ಮೂಡಿಸಲಿಲ್ಲ. ಅದರಲ್ಲೂ ಚಾಂದಿಲಾ ಹ್ಯಾಟ್ರಿಕ್ ದಾಳಿಗೆ ಕಂಗಾಲಾದ ಪುಣೆ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ ೧೨೫ ರನ್ ಗಳಿಸಲಷ್ಟೇ ಶಕ್ತವಾಯಿತು. ರಾಜಸ್ಥಾನ್ ಪರ ಚಾಂದಿಲಾ ನಾಲ್ಕು ವಿಕೆಟ್ ಪಡೆದು ಮಿಂಚಿದರು.
ಪುಣೆ ಆರಂಭದಲ್ಲೇ ಆಘಾತ ಕಂಡಿತ್ತು. ಮೊತ್ತ ಮೂರು ರನ್ ಆಗಿದ್ದಾಗ ರೈಡರ್ (೧) ಹಾಗೂ ಗಂಗೂಲಿ (೨)ಯನ್ನು ತನ್ನ ಐದು ಹಾಗೂ ಆರನೇ ಎಸೆತದಲ್ಲಿ ಚಾಂದಿಲಾ ಪೆವಿಲಿಯನ್‌ಗೆ ಅಟ್ಟಿದರು. ಚಾಂದಿಲಾ ತನ್ನ ನಂತರದ ಓವರ್‌ನ ಮೊದಲ ಎಸೆತದಲ್ಲೇ ಅಪಾಯಕಾರಿ ಉತ್ತಪ್ಪ (೬) ವಿಕೆಟ್ ಪಡೆಯುವ ಮೂಲಕ ಹ್ಯಾಟ್ರಿಕ್ ಪಡೆಯುವದರೊಂದಿಗೆ ಪುಣೆಯ ಬೆನ್ನುಹುರಿಯನ್ನೇ ಮುರಿದು ಹಾಕಿದರು. ಆ ನಂತರ ತಂಡ ಸಂಪೂರ್ಣವಾಗಿ ಶರಣಾಯಿತು ಎಂದು ಹೇಳಬಹುದು.

ಮಣಿಪಾಲದ ಆನಂದ ಸುವರ್ಣ ‘ಮಿ|| ಕರಾವಳಿ

Posted by JAYAKIRANA Kirana on | 0 comments | Leave a comment...

ಅಂತರ್ ಜಿಲ್ಲಾ ದೇಹದಾರ್ಢ್ಯ ಸ್ಪರ್ಧೆ
ಮಂಗಳೂರು: ಪಡುಬಿದ್ರಿಯ ಫ್ಲೆಕ್ಸ್ ಯುವರ್ ಮಸಲ್ ಜಿಮ್ ಮತ್ತು ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಎಸೋಸಿಯೇಷನ್ ನ ಜಂಟಿ ಸಹಭಾಗಿ ತ್ವದಲ್ಲಿ ನಿನ್ನೆ ನಡೆದ ಉಡುಪಿ , ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಂತರ್ ಜಿಲ್ಲಾ ದೇಹ ದಾರ್ಢ್ಯ ಸ್ಪರ್ಧೆಯಲ್ಲಿ ಮಣಿಪಾಲದ ಸಿಕ್ಸ್ ಪ್ಯಾಕ್ಸ್ ಜಿಮ್ ನ ಆನಂದ ಸುವರ್ಣ‘ ಮಿ|| ಕರಾವಳಿ-೨೦೧೨ ಬಿರುದಿನೊಂದಿಗೆ ಶಾಶ್ವತಫಲಕ ಮತ್ತು ನಗದು ಬಹುಮಾನ ಪಡೆದರು.
ಅಂಬಲಪಾಡಿಯ ರಾಮಾಂಜ ನೇಯ ಜಿಮ್ ನ ಸೌಜನ್ ಶೆಟ್ಟಿ ‘ ಬೆಸ್ಟ್ ಫೋಸರ್ ಪ್ರಶಸ್ತಿ ಗಳಿಸಿದರು. ಮೂರು ಜಿಲ್ಲೆಗಳ ಸುಮಾರು ೧೨೦ ಮಂದಿ ಸ್ಪರ್ಧಿಗಳು ೬೦ ರಿಂದ ೮೫ ಕೆಜಿ ವಿಭಾಗದ ೬ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು.

ಸಚಿನ್ ಬ್ಯಾಟ್ ಹರಾಜು ಹಾಕಿದ ಬ್ರಿಟನ್ ಪ್ರಧಾನಿ

Posted by JAYAKIRANA Kirana on | 0 comments | Leave a comment...

ಲಂಡನ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಹಿ ಮಾಡಿ ಕೊಟ್ಟಿದ್ದ ಬ್ಯಾಟ್‌ನ್ನು ತನ್ನಲ್ಲಿರುವ ಅಮೂಲ್ಯ ಉಡುಗೊರೆ ಎಂದು ಹೇಳಿದ್ದ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೊನ್ ಈಗ ಅದೇ ಅಮೂಲ್ಯ ಗಿಫ್ಟ್‌ನ್ನು ಸದುದ್ದೇಶಕ್ಕಾಗಿ ಹರಾಜು ಹಾಕಿದ್ದಾರೆ. ಹರಾಜ ಪ್ರಕ್ರಿಯೆಯಿಂದ ಬ್ಯಾಟ್ ಸುಮಾರು ಮೂರು ಲಕ್ಷ ರೂ.ನಲ್ಲಿ ಮಾರಾಟಗೊಂಡಿದೆ.
ಆಫ್ರಿಕಾದಲ್ಲಿರುವ ರ‍್ವಾಂಡಾದಲ್ಲಿ ಕ್ರಿಕೆಟ್ ಮೈದಾನ ನಿರ್ಮಿಸುವ ಸಲುವಾಗಿ ಕ್ಯಾಮರೊನ್ ಸಚಿನ್ ಕೊಟ್ಟ ಈ ಬ್ಯಾಟ್‌ನ್ನು ಲಾರ್ಡ್ಸ್‌ನಲ್ಲಿ ಹರಾಜು ಹಾಕಿದ್ದಾರೆ ಎಂದು ‘ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.
ಈ ಹಿಂದೆಯಷ್ಟೇ ಭಾರತದ ಕನ್ಸರ್‌ವೇಟಿವ್ ಗೆಳೆಯರ ಬಳಿ ಮಾತ ನಾಡಿದ್ದ ಕ್ಯಾಮರೊನ್ ಈ ಬ್ಯಾಟ್ ನನ್ನ ಅಮೂಲ್ಯ ಉಡು ಗೋರೆ ಯಾಗಿದೆ ಎಂದು ತಿಳಿಸಿ ದ್ದರು.

ಮ್ಯಾಡ್ರಿಡ್ ಓಪನ್ ಸೆರೆನಾ ಮುಡಿಗೆ

Posted by JAYAKIRANA Kirana on | 0 comments | Leave a comment...

ಮ್ಯಾಡ್ರಿಡ್: ಅಮೆರಿಕಾದ ಮಾಜಿ ನಂಬರ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ತಾನೇಕೆ ಈಗಲೂ ಅಪಾಯಕಾರಿ ಎಂಬುದನ್ನು ನಿನ್ನೆ ತೋರಿಸಿಕೊಟ್ಟಿದ್ದಾರೆ.
ನಿನ್ನೆ ಇಲ್ಲಿ ನಡೆದ ಮ್ಯಾಡ್ರಿಡ್ ಓಪನ್‌ನ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ನಂಬರ್ ವನ್ ಆಟಗಾರ್ತಿ ಬೆಲರೂಸ್‌ನ ವಿಕ್ಟೋ ರಿಯಾ ಅಜ್ರೆಂಕಾಗೆ ಹೀನಾಯ ಸೋಲುಣಿಸುವ ಮೂಲಕ ಸೆರೆನಾ ಕೂಟವನ್ನು ಗೆದ್ದುಕೊಂಡಿದ್ದಾರೆ. ಅಜ್ರೆಂಕಾ ವಿರುದ್ಧ ೬-೧ ಹಾಗೂ ೬-೩ರ ಉತ್ತಮ ಗೆಲುವು ಸಾಧಿಸುವ ಮೂಲಕ ಉತ್ತಮ ಸಾಧನೆ ತೋರಿದ್ದು, ಇದು ಅವರ ಸದ್ಯದ ಋತುವಿನ ಎರಡನೇ ಪ್ರಶಸ್ತಿ ಕೂಡ ಆಗಿದೆ. ಅತ್ತ ಸತತ ನಾಲ್ಕು ಟೂರ್ನಿಗಳನ್ನು ಗೆದ್ದುಕೊಂಡಿದ್ದ ಅಜ್ರೆಂಕಾ ಗೆಲುವಿನ ಸರಣಿ ಸೋಲಿನ ಮೂಲಕ ಅಂತ್ಯಗೊಂಡಿದೆ. ಒಟ್ಟಾರೆ ಯಾಗಿ ಸೆರೆನಾ ತನ್ನ ಜೀವ ಮಾನದ ೪೧ನೇ ಪ್ರಶಸ್ತಿಗೆ ಮುತ್ತಿಟ್ಟರು.

ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ೧೨.೭೭ಕೋ.ಲಾಭ

Posted by JAYAKIRANA Kirana on | 0 comments | Leave a comment...

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತನ್ನ ೯೯ವರ್ಷಗಳ ಪರಂಪರೆಯಲ್ಲಿ ೩೧-೦೩-೨೦೧೨ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಸಾರ್ವಕಾಲಿಕ ಗರಿಷ್ಠವಾದ ೧೨.೭೭ಕೋಟಿ ರೂಪಾಯಿ ಲಾಭಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಪತ್ರಿಕಾಗೋಷ್ಟಿ ಯಲ್ಲಿ ತಿಳಿಸಿದರು.
ರೈತರಿಗೆ ಅತೀ ಕಡಿಮೆ ಬಡ್ಡಿದರದಲ್ಲಿ ಮುಂಗಡ ಸೌಲಭ್ಯ ಒದಗಿಸಿಯೂ ಬ್ಯಾಂಕ್ ಗರಿಷ್ಠ ಲಾಭ ಗಳಿಕೆಯ ಈ ಸಾಧನೆ ಮಾಡಿದೆ. ತನ್ಮೂಲಕ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ. ಶತಮಾನೋತ್ಸವದತ್ತ ಮುನ್ನಡೆದಿರುವ ಬ್ಯಾಂಕ್ ಈ ವರ್ಷ ಒಟ್ಟು ವ್ಯವಹಾರದ ಗುರಿಯಾದ ೨೦೮೫ ಕೋಟಿ ರೂಪಾಯಿಗಳನ್ನು ದಾಟಿ ೨೩೭೪.೬೬ ಕೋಟಿ ರೂಪಾಯಿ ವ್ಯವಹಾರ ಸಾಧಿಸಿರು ವುದು ಬ್ಯಾಂಕಿನ ಅಭಿವೃದ್ಧಿಯ ಸಂಕೇತವಾಗಿದೆ ಎಂದವರು ತಿಳಿಸಿ ದರು.
ಕೃಷಿ ಸಾಲ ವಸೂಲಾತಿಯಲ್ಲಿ ಸಾಧನೆ: ಸಂಪೂರ್ಣ ಗಣಕೀಕೃತ ವಾದ ೫೫ಶಾಖೆಗಳ ಮೂಲಕ ಕೃಷಿಕ್ಷೇತ್ರಕ್ಕೆ ಬೆಂಬಲ ನೀಡಲಾಗುತ್ತಿದೆ. ೧೭೫ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳ ಮೂಲಕ ರೈತರ ಅಗತ್ಯಗಳಿಗೆ ಬ್ಯಾಂಕ್ ಸಕಾಲಿಕವಾಗಿ ಸ್ಪಂದಿಸುತ್ತಿದೆ. ಈ ಮೂಲಕ ಗ್ರಾಮಾ ಭಿವೃದ್ಧಿಯಲ್ಲಿ ಯಶಸ್ವಿ ಯೋಜನೆ ಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ಆದರ್ಶ ಎಂಬ ಗೌರವಕ್ಕೆ ಪಾತ್ರವಾಗಿದೆ. ಜಿಲ್ಲೆಯಲ್ಲಿ ಕೃಷಿ ಕ್ಷೇತ್ರದ ಬೇಡಿಕೆಗೆ ನಿರಂತರವಾಗಿ ಸ್ಪಂದಿಸುತ್ತಿರುವ ಈ ಬ್ಯಾಂಕ್ ಸಾಲ ವಸೂಲಾತಿಗೂ ಅದೇ ಆದ್ಯತೆಯನ್ನು ನೀಡುತ್ತಿದೆ. ಕೃಷಿ ಸಾಲ ವಸೂಲಾತಿಯಲ್ಲಿ ಸತತವಾಗಿ ಕಳೆದ ೧೭ ವರ್ಷಗಳಿಂದ ಶೇ.೧೦೦ ಸಾಧನೆ ಯನ್ನು ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ ಎಂದವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಎಂ.ಎನ್. ರಾಜೇಂದ್ರ ಕುಮಾರ್, ವಿನಯ ಕುಮಾರ್ ಸೂರಿಂಜೆ, ಎಂ.ವಾದಿರಾಜ ಶೆಟ್ಟಿ, ಕೆ.ಎಸ್. ದೇವರಾಜ್, ಬಿ.ರಘು ರಾಮ ಶೆಟ್ಟಿ, ಸದಾಶಿವ ಉಳ್ಳಾಲ್, ರಾಜು ಪ್ರಜಾರಿ, ಪಿ.ಆರ್. ಪಳಂಗಪ್ಪ, ಎಂ.ಗೋಪಾಲ ಕೃಷ್ಣ ಭಟ್ ಉಪಸ್ಥಿತರಿದ್ದರು.

ಅಗ್ರಿಗೋಲ್ಡ್‌ನಲ್ಲಿ ಸುಮತಿ ಹೆಗ್ಡೆಯಿಂದ ದಾಖಲೆ ವ್ಯವಹಾರಕ್ಕೆ ಕಾರು ಬಹುಮಾನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಅಗ್ರಿಗೋಲ್ಡ್ ಸಂಸ್ಥೆ ವಿಜಯವಾಡ ೨೦೧೦-೧೧ನೇ ಸಾಲಿನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಅತೀ ಹೆಚ್ಚು ಬಿಸ್‌ನೆಸ್ ಮಾಡಿದ ಬಗ್ಗೆ ಕಂಪೆನಿಯ ಪ್ರತಿಷ್ಠಿತ ಬಹು ಮಾನದ ‘ಇನೋವ ಕಾರ್’ನ್ನು ಮಂಗಳೂರು ಸೀನಿಯರ್ ಹಾಗೂ ಎಸ್.ಆರ್.ಇ ಆಗಿರುವ ಸುಮತಿ ಎಸ್.ಹೆಗ್ಡೆ ಅವರಿಗೆ ನೀಡಲಾಗಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಕಂಪೆನಿಯ ನಿರ್ದೇಶಕ ಶಿವಾನಂದ ಎಸ್ ಮಾಲಾಗಿ ಅವರು ಸುಮತಿ ಅವರಿಗೆ ಕಾರಿನ ಕೀಯನ್ನು ಹಸ್ತಾಂತರಿಸಿದರು.
ಸುಮತಿ ಹೆಗ್ಡೆ ಯವರು ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಕಳೆದ ೧೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಅವರು ದಾಖಲೆಯ ವ್ಯವಹಾರ ನಡೆಸಿ ಸಂಸ್ಥೆಯ ಮೆಚ್ಚುಗೆಗೆ ಪಾತ್ರರಾಗಿದ್ದರು. ಸುಮತಿ ಹೆಗ್ಡೆಯ ವರು ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ರೆಸಿಡೆನ್ಸಿಯಲ್ ಎಕ್ಸಿ ಕ್ಯೂಟಿವ್ ಆಗಿ ಕರ್ತವ್ಯ ನಿರ್ವ ಹಿಸುತ್ತಿದ್ದಾರೆ.

ಪಾಪ್ಯುಲರ್ ಫ್ರಂಟ್‌ನಿಂದ ಸ್ಕಾಲರ್‌ಶಿಪ್ ವಿತರಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ದ್ವಿತೀಯ ಪಿ.ಯು. ನಂತರದ ಶಿಕ್ಷಣ ಪಡೆಯುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ‘ನ್ಯಾಷನಲ್ ಸ್ಕಾಲರ್‌ಶಿಪ್ ಸ್ಕೀಮ್’ನ ಎರಡನೇ ಕಂತಿನ ವಿತರಣಾ ಕಾರ್ಯಕ್ರಮ ನಡೆಯಿತು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಅಧ್ಯಕ್ಷತೆ ವಹಿಸಿ ದ್ದರು.
ಮುಖ್ಯ ಅತಿಥಿಗಳಾಗಿ ನ್ಯಾಯ ವಾದಿ ಮುಹಮ್ಮದ್ ಹನೀಫ್, ಅಬ್ದುಲ್ ರಶೀದ್ ಮೂಲೂರು, ಮುಹಮ್ಮದ್ ಹನೀಫ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ಇದರ ಅಧ್ಯಕ್ಷ ಶಾಹುಲ್ ಹಮೀದ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಇದರ ಅಧ್ಯಕ್ಷ ನಝೀರ್ ಮರವೂರು, ಅಮಾನುಲ್ಲಾ ಉಡುಪಿ ಮೊದಲಾದವರು ಭಾಗವಹಿಸಿದ್ದರು. ಸುಮಾರು ೧೭ ಮಂದಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಲಾಯಿತು. ಶರೀಫ್ ಬಜ್ಪೆ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸಿರಾಜ್ ಕಾವೂರು ವಂದಿಸಿದರು.

ನಾಪತ್ತೆಯಾದ ವ್ಯಕ್ತಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ವಿಟ್ಲ: ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕೇಪು ಗ್ರಾಮದ ಗುಂಪಲಡ್ಕ ಎಂಬಲ್ಲಿ ಭಾನುವಾರ ಪತ್ತೆಯಾಗಿದ್ದು, ಜೀವನದಲ್ಲಿ ಜಿಗುಪ್ಸೆ ಉಂಟಾಗಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
 ವಿಟ್ಲ ಮೂಡ್ನೂರು ಗ್ರಾಮದ ಪಲ್ಲದ ಮನೆ ನಿವಾಸಿ ಚೋಮ ನಾಯ್ಕ ಅವರ ಪುತ್ರ ಕೃಷ್ಣ ನಾಯ್ಕ(೩೦) ಆತ್ಮಹತ್ಯೆ ಮಾಡಿಕೊಂಡವರು.ಇವರು ಮೇ೧೦ರಂದು ನಾಪತ್ತೆಯಾಗಿದ್ದರು. ಇದರಿಂದ ಅವರ ಸಹೋದರ ಈಶ್ವರ ನಾಯ್ಕ ಹಾಗೂ ಅವರ ಸಂಬಂಧಿಕರು ಎಲ್ಲೆಡೆ ಹುಡುಕಾಡಿದರೂ ಅವರ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಮೇ೧೨ ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೇಪು ಗ್ರಾಮದ ವರಪ್ಪಾದೆ ಸಮೀಪದ ಸೌಪರ್ಣಿಕ ಕೋರೆ ಬಳಿ ಕೃಷ್ಣ ನಾಯ್ಕ ಅವರ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರೇಮ ವೈಫಲ್ಯ ?
ಕೃಷ್ಣ ನಾಯ್ಕ ಅವರು ಎರಡು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯೊಂದಿಗೆ ಮೊಬೈಲ್ ಮೂಲಕ ಮಾತನಾಡುತ್ತಿದ್ದರು. ಆಕೆಯನ್ನೇ ಮದುವೆಯಾಗುವುದಾಗಿ ಮನೆಮಂದಿಯಲ್ಲಿ ತಿಳಿಸಿದ್ದರು. ಹಾಗಿದ್ದ ಕೃಷ್ಣ ನಾಯ್ಕ ದಿಢೀರ್ ಆಗಿ ನಾಪತ್ತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇಮ ವೈಫಲ್ಯವೇ ಕಾರಣವಾಗಿರಬಹುದು ಎಂಬ ಸಂಶಯ ಮನೆಮಂದಿಯದ್ದಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದಲ್ಲಿ ಪಾಕಿಸ್ತಾನಿ ಸರಗಳ್ಳರು?

Posted by JAYAKIRANA Kirana on | 0 comments | Leave a comment...

ಮಂಗಳೂರು: ಭಾರತಕ್ಕೆ ವಲಸೆ ಬಂದಿರುವ ಪಾಕಿ ಸ್ತಾನಿ ಬುಡಕಟ್ಟು ಜನಾಂಗದವರು ಗೋವಾ ರಾಜ್ಯ ದಲ್ಲಿ ಅಪರಾಧ ಕೃತ್ಯದಲ್ಲಿ ತೊಡಗಿದ್ದಾರೆ. ಇಂತಹವರು ನೆರೆಯ ಕರ್ನಾಟಕದಲ್ಲೂ ಕ್ರಿಯಾಶೀಲರಾಗಿದ್ದಾರೆ ಎಂಬ ವಿಷಯವನ್ನು ಇತ್ತೀಚೆಗಷ್ಟೇ ಗೋವಾ ರಾಜ್ಯದ ಪೊಲೀಸ್ ಮಾಹಾ ನಿರ್ದೇಶಕ ರವೀಂದ್ರ ಯಾದವ್ ಹೊರಗೆಡಹಿದ್ದಾರೆ. ಮಂಗಳೂರು ನಗರದಲ್ಲಿ ನಡೆಯು ತ್ತಿರುವ ಸರಗಳ್ಳತನ ಮತ್ತು ಕಾರ್‌ನ ಗ್ಲಾಸ್ ಒಡೆದು ಸೊತ್ತು ಲಪಟಾಯಿಸುವ ಕೃತ್ಯಗಳನ್ನು ಗಮನಿಸಿದಾಗ ಇದರ ಹಿಂದೆ ಇಂತಹದ್ದೇ ತಂಡದ ಕೈವಾಡ ಇರುವುದನ್ನು ಅಲ್ಲಗಳೆಯಲಾಗದು.
ಹಲವು ವರ್ಷಗಳ ಹಿಂದೆ ಬಲೂಚಿಸ್ತಾನದಿಂದ ಬಂದ ಬುಡಕಟ್ಟು ಜನಾಂಗದವರು ದಕ್ಷಿಣ ಭಾರತದಲ್ಲಿ ಕಾಲೋನಿ ಸ್ಥಾಪಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಹಾರಾಷ್ಟ್ರದ ಪುಣೆ, ಔರಂಗಾಬಾದ್, ಅಂಬನಾಥ್ ಕರ್ನಾಟಕದ ಬೀದ ರ್‌ನಲ್ಲಿ ಈ ಜನಾಂಗ ಹೆಚ್ಚಾಗಿ ಕಂಡುಬರುತ್ತದೆ. ಇರಾನಿ ಯನ್ ಗ್ಯಾಂಗ್ ಎಂದು ಗೋವಾದಲ್ಲಿ ಕರೆಯಲ್ಪಡುವ ಪಾತಕಿಗಳು ವೃದ್ಧ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಆಭರಣ ದೋಚುವುದೂ ಇದೆ. ಮೋಟಾರ್ ಬೈಕ್‌ನಲ್ಲಿ ಬರುವ ಈ ಕಳ್ಳರು ಸಾರ್ವಜನಿಕರಲ್ಲಿ ಕಳ್ಳರ ಬಗ್ಗೆ ಎಚ್ಚರ ಮೂಡಿಸುವ ನಾಟಕ ಆಡುತ್ತಾರೆ. ನಿಮ್ಮ ನಗ-ನಗದು ಕರ್ಚಿಫ್‌ನಲ್ಲಿ ಕಟ್ಟಿಡಿ ಎಂದು ಕಟ್ಟಿಡಲು ಸಹಾಯ ಮಾಡುತ್ತ ನಕಲಿ ಅಭರಣ ಕರ್ಚಿಫ್‌ನಲ್ಲಿಟ್ಟು ಅಸಲಿ ಹೊತ್ತೊಯ್ಯುತ್ತಾರೆ, ನೀವು ಬೇರೆ ಮಾರ್ಗದಲ್ಲಿ ಸಾಗಿ ನಾವು ನಿಮ್ಮ ರಕ್ಷಣೆ ಮಾಡುತ್ತೇವೆ ಎಂದು ಹೇಳಿ ದೋಚುವುದೂ ಇದೆ ಎಂದು ಗೋವಾ ಪೊಲೀಸ್ ಮಹಾನಿರ್ದೇಶಕರು ಮಾಹಿತಿ ನೀಡಿ ದ್ದಾರೆ. ಇಂತಹ ಕೃತ್ಯಗಳು ದ.ಕ. ಜಿಲ್ಲೆಯಲ್ಲಿ ಅಲ್ಲಲ್ಲಿ ಬಹಳಷ್ಟು ನಡೆದಿವೆ ಎಂಬುದನ್ನು ನೆನೆಪಿಸಿಕೊಂಡಾಗ ಗೋವಾ ಪೊಲೀಸ್ ಅಧಿಕಾರಿಯ ಮಾತು ಅಲ್ಲಗಳೆಯುವಂತಿಲ್ಲ. ಈ ದಿಸೆಯಲ್ಲಿ ಮಂಗಳೂರು ನಗರ ಮತ್ತು ದ.ಕ. ಜಿಲ್ಲೆಯ ಪೊಲೀಸರು ಜಾಗೃತ ಕಾರ್ಯಾಚರಣೆ ನಡೆಸಬೇಕಿದೆ.
ಕಳವು ಮಾಡುವ ಬಗ್ಗೆ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳೂ ಈ ಗ್ಯಾಂಗ್‌ನಲ್ಲಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಕಳ್ಳರು ಇದ್ದಾರೆ. ದಿನಭತ್ಯೆಯ ಆಧಾರದಲ್ಲಿ ಇವರ ನೇಮಕಾತಿ ನಡೆಯುತ್ತದೆ. ಭತ್ಯೆ ಸಾವಿರಾರು ರೂಪಾಯಿಯಾಗಿರುತ್ತದೆ ಎಂಬುದು ಗಮನಿಸಬೇಕಾದ ಅಂಶ.
ಗೋವಾ ಪೊಲೀಸರಿಗೆ ಇವರದ್ದೇ ತಲೆ ನೋವಾಗಿದೆ. ಸುಲಭದಲ್ಲಿ ಸಿಕ್ಕಿಹಾಕಿಕೊಳ್ಳುವ ಕಳ್ಳರು ಇವರಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡಿರುವ ಗೋವಾ ಪೊಲೀಸ್ ವರಿಷ್ಠ ರವೀಂದ್ರ ಯಾದವ್ ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರ ಸಹಕಾರ ಪಡೆದು ಇರಾನಿಯನ್ ಗ್ಯಾಂಗ್‌ನ ದುಷ್ಕೃತ್ಯದ ಮಟ್ಟ ಹಾಕಲು ಯೋಚಿಸುತ್ತಿದ್ದಾರೆ. ಈ ದಿಸೆಯಲ್ಲಿ ಕರ್ನಾಟಕದ ಪೊಲೀಸರು ಗೋವಾ ಪೊಲೀ ಸರೊಂದಿಗೆ ಕೈ ಜೋಡಿಸಿ ಕಾರ್ಯಾಚರಣೆಗೆ ಇಳಿಯಲು ಲಗುಬಗೆ ತೋರಿಸಿದರೆ ಇಲ್ಲಿ ಇನ್ನಷ್ಟು ದುಷ್ಕೃತ್ಯಗಳು ನಡೆಯುವುದನ್ನು ತಡೆಯಬಹುದು ಎಂದೆನಿಸುತ್ತದೆ.
ಎರಡು ತಿಂಗಳ ಹಿಂದೆ ನಗರದ ಸುತ್ತಮುತ್ತ ಸರಣಿ ಸರಗಳ್ಳತನದ ಪ್ರಕರಣಗಳು ನಡೆದಿದ್ದವು. ಎಟಿಎಂನಿಂದ ಹಣ ದೋಚುವ ವಿಫಲ ಯತ್ನವೂ ನಡೆದಿತ್ತು. ಕಳ್ಳತನದ ಹಲವು ಬಗೆಯ ಕೃತ್ಯಗಳು ನಿತ್ಯ ಎಂಬಂತೆ ನಗರದ ಸುತ್ತಮುತ್ತ ನಡೆಯುತ್ತಲೇ ಇವೆ. ಮಂಗಳೂರಿನಲ್ಲಿ ಇದೀಗ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ, ಸಾರ್ವಜನಿಕ ಕೇಂದ್ರಗಳಲ್ಲಿ ಸಿ.ಸಿ ಕ್ಯಾಮರಾ ಇವೆಯಾದರೂ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ಸೋತಿದೆ. ಸಿ.ಸಿ ಕ್ಯಾಮರಾವನ್ನು ಬಳಸಿಕೊಂಡು ಕಳ್ಳರ ಮೇಲೆ ನಿಗಾ ಇಟ್ಟು ಅಪರಾಧವನ್ನು ಮಟ್ಟಹಾಕುವಲ್ಲಿ ಬಹುದೊಡ್ಡ ಯಶಸ್ಸು ಕಾಣಬಹುದಾದರೂ ಪೊಲೀಸ್ ಇಲಾಖೆ ಇಂಥದ್ದೊಂದು ಸಾಧ್ಯತೆಗೆ ಮಾನಸಿಕವಾಗಿ ಸಿದ್ಧರಾಗಬೇಕೆಂಬ ಮಾತುಗಳು ಕೇಳಿ ಬರುತ್ತಿವೆ.

ಸುಳ್ಯ: ಮಹಿಳೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ

Posted by JAYAKIRANA Kirana on | 0 comments | Leave a comment...

ಸುಳ್ಯ: ಮಹಿಳೆಯೊಬ್ಬರು ಪಯ ಸ್ವಿನಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿ ಸಿದ್ದು, ಸ್ಥಳೀಯರು ಆಕೆಯನ್ನು ರಕ್ಷಿಸಿದ ಘಟನೆ ಕಾಂತಮಂಗಲದಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ದುಗ್ಗಲಡ್ಕ ನಿವಾಸಿ ಕೊರಗ ಮೇರ ಎಂಬವರ ಪತ್ನಿ ಕುಸುಮಾ(೪೦) ಆತ್ಮ ಹತ್ಯೆಗೆ ಯತ್ನಿಸಿದವರು. ಕಾಂತಮಂಗಲ ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿ ನಡೆ ಯುತ್ತಿರುವುದರಿಂದ ಸೇತುವೆಯನ್ನು ಬಂದ್ ಮಾಡಲಾಗಿದೆ. ಪರ್ಯಾಯ ವಾಗಿ ನದಿಗೆ ಇಳಿದೇ ವಾಹನಗಳು ಚಲಿಸಬೇಕಾಗಿದೆ. ಭಾನುವಾರ ಬೆಳಿಗ್ಗೆ ನದಿಯಲ್ಲಿ ಮಹಿಳೆಯೊಬ್ಬರು ಮುಳು ಗುತ್ತಿರುವುದನ್ನು ಗಮನಿಸಿದ ಮೇನಾ ಲದ ಮಹೇಶ್ ಎಂಬವರು ಸ್ನೇಹಿತ ರೊಂದಿಗೆ ಸೇರಿ ಮಹಿಳೆಯನ್ನು ದಡಕ್ಕೆ ತಂದು ರಕ್ಷಿಸಿದ್ದಾರೆ. ಬಳಿಕ ಆಕೆಯನ್ನು ೧೦೮ ವಾಹನದಲ್ಲಿ ಆಸ್ಪತ್ರೆಗೆ ದಾಖಲಿ ಸಲಾಗಿದೆ.

ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ

Posted by JAYAKIRANA Kirana on | 0 comments | Leave a comment...

ವಿಟ್ಲ: ಮನೆಯೊಂದರ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ವಿಟ್ಲದ ಅಡ್ಯನಡ್ಕ ಸಮೀಪದ ಎಣ್ಮಕಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌರ್ಕಾಡು ಎಂಬಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಚೌರ್ಕಾಡು ಕ್ಷೀರೋತ್ಪಾದಕ ಸಂಘದ ಅಧ್ಯಕ್ಷರಾಗಿರುವ ಚೌರ್ಕಾಡು ಗೋಪಾಲಕೃಷ್ಣ ಭಟ್ ಎಂಬವರಿಗೆ ಸೇರಿದ ಕೊಟ್ಟಿಗೆಯಲ್ಲಿ ಭಾನುವಾರ ಬೆಳಿಗ್ಗೆ ಬೆಂಕಿ ಅನಾಹುತ ಸಂಭವಿಸಿದೆ. ಇದನ್ನು ಗಮನಿಸಿ ಮನೆಮಂದಿ ಗಾಬರಿಗೊಂಡು ಮನೆಯ ಹೊರಗೆ ಬಂದು ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಿದರು. ಬೆಂಕಿಯ ಕಿನ್ನಾಲೆಗೆ ಕೊಟ್ಟಿಗೆ ಸಂಪೂರ್ಣ ಬೆಂಕಿ ಗಾಹುತಿಯಾಗಿದೆ ಘಟನೆಗೆ ಕಾರಣವಿನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಎಣ್ಮಕಜೆ ಗ್ರಾಮದ ಸದಸ್ಯ ಐತ್ತಪ್ಪ ಕುಲಾಲ್ ಭೇಟಿ ನೀಡಿದ್ದಾರೆ.

ಆಕ್ಟೀವಾ ಮೇಲೆ ಬಿದ್ದ ರಿಕ್ಷಾ ಸವಾರನಿಗೆ ಗಾಯ

Posted by JAYAKIRANA Kirana on | 0 comments | Leave a comment...

ಪುತ್ತೂರು : ಸಂಚರಿಸುತ್ತಿದ್ದ ಆಕ್ಟೀವಾ ಹೋಂಡಾದ ಮೇಲೆ ರಿಕ್ಷಾವೊಂದು ಮಗುಚಿ ಬಿದ್ದು ಹೋಂಡಾ ಸವಾರೆ ಗಾಯಗೊಂಡ ಘಟನೆ ಶನಿವಾರ ಸಂಜೆ ಪುತ್ತೂರು ಪೇಟೆಯ ಹೊರವಲಯದ ದರ್ಬೆ ಗಿರಿಜಾ ಕ್ಲಿನಿಕ್ ಬಳಿ ಸಂಭವಿಸಿದೆ.
ಪುತ್ತೂರಿನ ತೆಂಕಿಲ ನಿವಾಸಿ,ಕೆಮ್ಮಿಂಜೆಯ ಕರ್ನಾಟಕ ಕ್ಯಾಶ್ಯು ಇಂಡಸ್ಟ್ರೀಸ್ ಉದ್ಯೋಗಿ ವಲೇವಿಯಾ ರೆಬೆಲ್ಲೂ (೩೩) ಗಾಯಗೊಂಡವರು. ಗಾಯಾಳುವನ್ನು ಗಿರಿಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಕಡೆಯಿಂದ ದರ್ಬೆ ಕಡೆಗೆ ಚಲಿಸುತ್ತಿದ್ದ ರಿಕ್ಷಾ ಮತ್ತೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಂಧರ್ಭದಲ್ಲಿ ಆಕ್ಟೀವಾ ಹೋಂಡಾದ ಮೇಲೆ ಮಗುಚಿ ಬಿದ್ದು ಈ ದುರ್ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ.

ಸಿಡಿಲಾಘಾತ ಬಾಲಕಿ ಅಸ್ವಸ್ಥ

Posted by JAYAKIRANA Kirana on | 0 comments | Leave a comment...

ಪುತ್ತೂರು: ಸಿಡಿಲು ಬಡಿದು ಬಾಲಕಿಯೊಬ್ಬಳು ಅಸ್ವಸ್ಥಗೊಂಡ ಘಟನೆ ಶನಿವಾರ ಪುತ್ತೂರು ತಾಲೂಕಿನ ನರಿಮೊಗರಿನಲ್ಲಿ ಸಂಭವಿಸಿದೆ.
ನರಿಮೊಗರು ಗ್ರಾಮದ ಮೋಹನ ಗೌಡ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಅವರ ಮನೆಗೆ ಆಗಮಿಸಿದ್ದ ಸಂಬಂಧಿ ಮರಕಡದ ಪದ್ಮಯ್ಯ ಗೌಡ ಅವರ ಪುತ್ರಿ ದೀಕ್ಷಾ(೮) ಸಿಡಿಲು ಬಡಿದು ಗಾಯಗೊಂಡವರು. ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಬೈಕ್ ಡಿಕ್ಕಿ: ಪಾದಚಾರಿ ಗಾಯ

Posted by JAYAKIRANA Kirana on | 0 comments | Leave a comment...

ಪುತ್ತೂರು: ಬೈಕೊಂದು ಡಿಕ್ಕಿ ಹೊಡೆದು ಪಾದಚಾರಿ ಕಾರ್ಮಿಕರೊಬ್ಬರು ಗಾಯಗೊಂಡ ಘಟನೆ ಪುತ್ತೂರು ಪೇಟೆಯ ಹೊರವಲಯದ ಬನ್ನೂರು ಎಂಬಲ್ಲಿ ಶನಿವಾರ ಸಂಭವಿಸಿದೆ. ಹಾವೇರಿ ನಿವಾಸಿಯಾದ ಕೂಲಿ ಕಾರ್ಮಿಕ ಶಿವರಾಜ್( ೩೮) ಗಾಯಗೊಂಡವರು. ಗಾಯಾಳುವನ್ನು ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಕಿಯಿಂದ ಗಾಯಗೊಂಡಿದ್ದ ಮಹಿಳೆ ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಎರಡು ವಾರಗಳ ಹಿಂದೆ ಬೆಂಕಿ ಆಕಸ್ಮಿಕದಲ್ಲಿ ಗಾಯ ಗೊಂಡಿದ್ದ ಪಡುಬಿದ್ರೆ ಎಲ್ಲೂರು ದೇವಳದ ಬಳಿಯ ನಿವಾಸಿ ಫೆಲೆಕ್ಸ್ ಡಿಸೋಜಾರ ಪುತ್ರಿ ಸರಿತಾ (೩೮)ರವಿವಾರ ಮೃತಪಟ್ಟಿದ್ದಾರೆ. ಎ.೩೦ರಂದು ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಗ್ಯಾಸ್ ಹೊತ್ತಿಸುತ್ತಿದ್ದ ವೇಳೆ ಟಿ ಶರ್ಟ್‌ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಗಾಯಗೊಂಡಿದ್ದ ಇವರನ್ನು ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರವಿವಾರ ಸಂಜೆಯ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪದವಿದರೆಯಾಗಿದ್ದ ಸರಿತಾ ಬೆಂಗಳೂರಿನಲ್ಲಿ ಉದ್ಯೋಗಿ ಯಾಗಿದ್ದರು. ರಜೆಯಲ್ಲಿ ಊರಿಗೆ ಬಂದವರು ಅವಘಡಕ್ಕೆ ಬಲಿಯಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮನೆ ಎದುರು ನಿಲ್ಲಿಸಿದ್ದ ಕಾರ್‌ಗೆ ಬೆಂಕಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮನೆ ಎದುರು ನಿಲ್ಲಿಸಿದ್ದ ಓಮ್ನಿ ಕಾರ್‌ಗೆ ಬೆಂಕಿ ಬಿದ್ದು ಆಪಾರ ಹಾನಿಯಾದ ಘಟನೆ ನಿನ್ನೆ ಕುಂದಾಪುರ ತಾಲೂಕಿನ ಬಾರ್ಕೂರು ಹೊಸಾಳ ಗ್ರಾಮದ ಕೋಟೆ ಬಳಿ ಸಂಭವಿಸಿದೆ. ಬಂಡೀಮಠದ ಐವನ್ ಮಸ್ಕರೆನಸ್ ಎಂಬವರು ಹೊಸಾಳದಲ್ಲಿರುವ ಸ್ನೇಹಿತನ ಮನೆಗೆ ಬಂದವರು ಹಿಂದಿರುಗಲು ಕಾರ್ ಸ್ಟಾರ್ಟ್ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಕಿಯ ಜ್ವಾಲೆಗೆ ಮನೆ ಎದುರಿನ ಮಾಡು ಸಂಪೂರ್ಣ ಸುಟ್ಟುಹೋಗಿದೆ. ಮನೆಯ ಎಲೆಕ್ಟ್ರಿಕ್ ವಯರ್‌ನೊಂದಿಗೆ ಎಲೆಕ್ಟ್ರಿಕ್ ವಸ್ತುಗಳೂ ಸುಟ್ಟಿವೆ. ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಮೂರು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ನಾಪತ್ತೆಯಾಗಿದ್ದ ಬಾಲಕಿ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪುತ್ತೂರು ಹಿರೇಬಂಡಾಡಿ ಗ್ರಾಮದ ತೀರ್ಥಾ(೧೨)ರವಿವಾರ ಬೆಳಗ್ಗೆ ನಾಪತ್ತೆಯಾಗಿದ್ದು, ಸಂಜೆ ವೇಳೆ ಕಣಿಯೂರು ಗ್ರಾಮದಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಈಕೆ ನಾಪತ್ತೆಯಾಗಿದ್ದಾಗಿ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕೃಷ್ಣಾಪುರ: ಸಿಡಿಲು ಬಡಿದು ವ್ಯಕ್ತಿ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಸಿಡಿಲು ಬಡಿದ ವ್ಯಕ್ತಿಯೋರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಕೃಷ್ಣಾಪುರ ಕಾನದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಬಾಬು (೬೦) ಎಂದು ಗುರುತಿಸಲಾಗಿದೆ. ಆತನ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ ಮೃತದೇಹವನ್ನು ಶವಾಗಾರದಲ್ಲಿ ಇಡಲಾಗಿದೆ.
ಬಾಬುರೊಂದಿಗೆ ಮಲಗಿದ್ದ ಮಡಿಕೇರಿಯ ರಮೇಶ್ ಮತ್ತು ಬಾಗಲಕೋಟೆಯ ಮಲ್ಲೇಶ್ ಎಂಬವರಿಗೆ ಗಾಯವಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮಂಗಳೂರು ನೆಹರೂ ಮೈದಾನದ ಆಸುಪಾಸಿನಲ್ಲಿ ಕೆಲಸ ಮಾಡಿಕೊಂಡಿದ್ದ ಬಾಬುರನ್ನು ಕಂಡು ಪರಿಚಯವಾಗಿದ್ದ ರಮೇಶರವರು ತಮ್ಮೊಂದಿಗೆ ಕೆಲಸ ಮಾಡಲು ಕಾನಕ್ಕೆ ಕರೆದುಕೊಂಡು ಬಂದಿದ್ದರು. ಕಾನದಲ್ಲಿ ಆಂತೋನಿಯ ಎಂಬರ ಮನೆ ಗೋಡೆ ಕಟ್ಟಿದ್ದ ಇವರು ಅಲ್ಲಿಯೇ ರಾತ್ರಿ ಮಲಗಿದ್ದರು. ಸಿಡಿಲು ಬಡಿದು ಆಂತೋನಿಯವರ ಮನೆಯ ಶೆಡ್‌ಗೂ ಹಾನಿಯಾಗಿದೆ.
ಸುರತ್ಕಲ್ ಕೃಷ್ಣಾಪುರ ಪರಿಸರದಲ್ಲಿ ಶನಿವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ತಡ ರಾತ್ರಿ ಸಿಡಿಲಿನ ಅರ್ಭಟವಿತ್ತು.

೬.೭ಲಕ್ಷ ಮೌಲ್ಯದ ಸೊತ್ತು ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಲ್ಮಠ ಬಳಿಯ ಕಲ್ಪನಾ ರಸ್ತೆ ನಿವಾಸಿ ಜಯಬಿಪುದ್ದೀನ್ ಎಂಬವರ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಸುಮಾರು ೬,೭೧,೬೫೦ರೂ. ಮೌಲ್ಯದ ಸೊತ್ತನ್ನು ಶನಿವಾರ ರಾತ್ರಿ ಕಳವು ಮಾಡಿದ್ದಾರೆ.
ಕಪಾಟಿನಲ್ಲಿರಿಸಿದ್ದ ೧೯ ಪವನ್ ಚಿನ್ನಾಭರಣ, ಡೈಮಂಡ್ ಸೆಟ್, ಡಿಜಿಟಲ್ ಕ್ಯಾಮೆರಾ, ಹ್ಯಾಂಡ್ ಕ್ಯಾಮೆರಾ, ೩ವಾಚ್, ಲ್ಯಾಪ್‌ಟಾಪ್, ಡಾಟಾ ಕಾರ್ಡ್, ಮೊಬೈಲ್ ಹಾಗೂ ೧ಗ್ರಾಂ ಗೋಲ್ಡ್‌ನ ಆಭರಣ ಕಳವಾಗಿದೆ. ಮನೆಯಲ್ಲಿ ವೃದ್ಧ ತಂದೆ ತಾಯಿ ಮಾತ್ರ ಇದ್ದ ಸಂದರ್ಭ ಕಳವು ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ಕದ್ರಿ ಠಾಣೆಯಲ್ಲಿ ದಾಖಲಾಗಿದೆ.
ಸಾರಾಯಿ ಅಡ್ಡೆಗೆ ದಾಳಿ: ಇಬ್ಬರ ಬಂಧನ: ಸುಳ್ಯ ಪೆರಾಜೆ ಗ್ರಾಮದ ನಾನಾ ಕಡೆಗಳಲ್ಲಿ ಅಕ್ರಮ ಗೇರು ಹಣ್ಣು ಸಾರಾಯಿ ಅಡ್ಡೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು ಎರಡು ಜೀಪ್ ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ. ಈ ಸಂದರ್ಭ ಕೆಲವು ಮಂದಿ ಪರಾರಿಯಾಗಿದ್ದಾರೆ.
ಸುಮಾರು ೧೫ ಮಂದಿ ಇದ್ದ ಅಬಕಾರಿ ಪೊಲೀಸರು ಶನಿವಾರ ಮಧ್ಯ ರಾತ್ರಿ ಗ್ರಾಮದ ನಿಡ್ಯಮಲೆ, ಸಹಿತ ಇತರ ಭಾಗಗಳಿಗೆ ದಾಳಿ ನಡೆಸಿದ್ದಾರೆ. ವಿದ್ಯಾಶ್ರೀ ಜೀಪ್ ಚಾಲಕ ಜನಾರ್ದನ ಮತ್ತು ವಿಷ್ಣು ಪ್ರಸನ್ನ ಜೀಪ್ ಚಾಲಕ ದೇರಣ್ಣ ಅವರನ್ನು ಬಂಧಿಸಿದ್ದಾರೆ. ಸುಮಾರು ೫೦ ಲೀಟರ್ ಸಾರಾಯಿ ಮತ್ತು ಇತರ ಡ್ರಮ್, ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯಕ್ಷಗಾನದಲ್ಲಿ ವಾದನಗಳು

Posted by JAYAKIRANA Kirana on | 0 comments | Leave a comment...

ತಾಳ:
ಬಡಗುತಿಟ್ಟಿನ ಭಾಗವತರು ತಾಳವನ್ನು ಉಪಯೋಗಿಸು ತ್ತಾರೆ. ತಾಳ ಮತ್ತು ಜಾಗಟೆ ಎರಡೂ ಘನವಾದ್ಯಗಳು ತೆಂಕುತಿಟ್ಟಿ ನಲ್ಲಿ ಜಾಗಟೆಯನ್ನು ತಾಳದ ಬದಲಿಗೆ ಉಪಯೋಗಿಸುತ್ತಾರೆ. ತೆಂಕುತಿಟ್ಟಿನ ಹಿಮ್ಮೇಳದಲ್ಲಿ ಚಕ್ರತಾಳವನ್ನು ಉಪಯೋಗಿಸುತ್ತಾರೆ.
ಮದ್ದಳೆ:
ಯಕ್ಷಗಾನದಲ್ಲಿ ಭಾಗವತರ ತಾಳಕ್ಕೆ ತಕ್ಕಂತೆ ಲಯಬದ್ಧವಾಗಿ ವಾದ್ಯವನ್ನು ನುಡಿಸುವವನೇ ಮದ್ದಳೆಗಾರ. ಯಕ್ಷಗಾನ ರಂಗದ ಹಿಮ್ಮೇಳದಲ್ಲಿ ಬಹುಮುಖ್ಯವಾದ ವಾದ್ಯವೇ ಮದ್ದಳೆ. ಮದ್ದಳೆಯನ್ನು ಅಂಗಾರಕ ಮರ ಅಥವಾ ಕದಿರೆ ಮರದಿಂದ ತಯಾರಿಸುತ್ತಾರೆ. ಮತ್ತು ಅದರ ಎರಡೂ ಕಡೆಗೆ ಚರ್ಮದಿಂದ ಮುಚ್ಚಿ ಕಟ್ಟಿರುತ್ತಾರೆ. ಆ ಭಾಗವನ್ನು ಮದ್ದಳೆಯ ತತ್ಕರ(ಬೊಲ್)ಎಂದು ಕರೆಯುತ್ತಾರೆ. ಅದು ದನ, ದನದ ಕರು, ಕುರಿ ಅಥವಾ ಆಡಿನ ಚರ್ಮದಿಂದ ಮುಚ್ಚಿ ಕಟ್ಟಿದ ಭಾಗ, ಅದಕ್ಕೆ ಉಪಯೋಗಿಸುವ ಬಾರವೂ (ಪಟ್ಟಿ) ಚರ್ಮದಿಂದಲೇ ತಯಾರಿಸಿದ್ದಾಗಿದೆ. ಮದ್ದಳೆಯ ಬಲಭಾಗದ ಚರ್ಮದ ಮಧ್ಯ ಭಾಗಕ್ಕೆ ಹಚ್ಚುವ ಕಪ್ಪಗಿನ ಬಣ್ಣದ ವಸ್ತುವನ್ನು ಕರ್ಣ ಎಂದು ಕರೆಯುತ್ತಾರೆ. ಬಲ ಭಾಗದ ಕರ್ಣವನ್ನು ಕಬ್ಬಿಣದ ಕೆಲಸ ಮಾಡುವ ಆಚಾರಿಯ ಶಾಲೆಯಲ್ಲಿ ಸಿಗುವ ಕಬ್ಬಿಣದ ಕಿಟ್ಟಿ (ಕಬ್ಬಿಣ ಕಾಯಿಸಿದ ಮೇಲೆ ಉಳಿಯುವ ಉಂಡೆ)ಯನ್ನು ಅಂಟಿ ನೊಂದಿಗೆ ಬೆರೆಸಿ ತಯಾರಿಸುತ್ತಾರೆ. ಅದಕ್ಕೆ ಅಯಸ್ಕಾಂತತ್ವದ ಗುಣವಿರುತ್ತದೆ. ಎಡಭಾಗದ ಚರ್ಮದ ಮಧ್ಯಭಾಗಕ್ಕೆ ಬೋನವನ್ನು ಅಂಟಿಸುತ್ತಾರೆ. ಈ ಬೋನವನ್ನು ಅನ್ನ, ಬೂದಿಗೆ ಅಂಟನ್ನು ಮಿಶ್ರಮಾಡಿ ತಯಾರಿಸುತ್ತಾರೆ. ರವಾ ಮತ್ತು ಅವಲಕ್ಕಿಯನ್ನೂ ಉಪಯೋಗಿಸುತ್ತಾರೆ. ಇದರಿಂದ ಮದ್ದಳೆಗೆ ವಿಶೇಷವಾದ ನಾದ ಬರುತ್ತದೆ. ತಾಳ ಘನ ವಾದ್ಯವಾದರೆ ಮದ್ದಳೆಯು ಚರ್ಮ ವಾದ್ಯವಾಗಿರುತ್ತದೆ. ಮದ್ದಳೆಗೆ ಇನ್ನೊಂದು ಹೆಸರು ಮೃದಂಗ, ಮದ್ದಳೆಯ ಆಕಾರ, ಮಧ್ಯಭಾಗದ ಸುತ್ತಳತೆ ಸ್ವಲ್ಪ ಜಾಸ್ತಿಯಾಗಿದ್ದು ಎರಡೂ ಬದಿಯು ಒಂದೇ ಸುತ್ತಳತೆಯಲ್ಲಿರುತ್ತದೆ. ಎರಡೂ ಬದಿಯನ್ನು ಸೇರಿಸಿ ಕಟ್ಟಿದ ಬಾರವನ್ನು (ಪಟ್ಟಿ) ಬಿಗಿಗೊಳಿಸಿದರೆ ಶ್ರುತಿಯನ್ನು ಏರಿಸಬಹುದು ಮತ್ತು ಸಡಿಲಗೊಳಿಸಿದರೆ ಇಳಿ ಶ್ರುತಿಗೆ ತರಬಹುದು. ಮೃದಂಗದ ಶ್ರುತಿಯು ಆಧಾರ ಶ್ರುತಿಗೆ ಹೊಂದುವ ಹಾಗೆ ವಾದನವನ್ನು ಸಿದ್ದಗೊಳಿಸಲಾಗುತ್ತದೆ. ಯಕ್ಷಗಾನ ರಂಗಸ್ಥಳದಲ್ಲಿ ಮದ್ದಳೆಗೆ ವಿಶೇಷ ಸ್ಥಾನಮಾನವಿದೆ. ಕಲಾವಿದರ ನೃತ್ಯಕ್ಕೆ ಮದ್ದಳೆಯೇ ಪ್ರಮುಖವಾಗಿರುತ್ತದೆ. ಮದ್ದಳೆಯ ಲಯಕ್ಕೆ ತಕ್ಕಂತೆ ನೃತ್ಯ ಮಾಡುತ್ತಾರೆ. ನೃತ್ಯ ಸಾಗಬೇಕಾದರೆ ಮೃದಂಗವೇ ಮುಖ್ಯ. ಮೃದಂಗದ ಲಯಕ್ಕೆ ಕಲಾವಿದನು ರಸಭಾವನೆಗಳನ್ನು ಅಭಿವ್ಯಕ್ತಗೊಳಿಸಬೇಕಾಗುತ್ತದೆ. ವಾದನ ಯಾವಾಗಲೂ ಭಾವ ಪೋಷಕವಾಗಿರಬೇಕು. ಚೆಂಡೆ ಕಲಾವಿದನಿಗೆ ಉತ್ಸಾಹವನ್ನು ಕೊಟ್ಟರೆ ಮದ್ದಳೆ ಭಾವಾಭಿವ್ಯಕ್ತಿಗೆ ಅನುಗುಣವಾಗಿರುತ್ತದೆ. ಒಬ್ಬ ಮದ್ದಳೆಗಾರನಿಗೆ ಸಂಗೀತದ ಪ್ರಾಥಮಿಕ eನವಿರಬೇಕು. ಯಕ್ಷಗಾನದ ಹಾಡು ಸಾಗುವ ಬಗೆ ಗೊತ್ತಿರಬೇಕು. ನೃತ್ಯದ ಪ್ರಾಥಮಿಕ ನಡೆ ಗೊತ್ತಿದ್ದರೆ ಒಳ್ಳೆಯದು. ತಾಳ eನವಿರಲೇ ಬೇಕು, ಲಯಗಾರಿಕೆ ಬೇಕು. ಮದ್ದಳೆ ಗಾರನಿಗೆ ಚೆಂಡೆಯೂ ಗೊತ್ತಿರಬೇಕು. ಆಮೇಲೆ ಒಬ್ಬ ಕಲಾವಿದನು ಕೇವಲ ಚೆಂಡೆಯಲ್ಲೇ ಪರಿಣತನಾಗುತ್ತಾನೆ ಅಥವಾ ಮದ್ದಳೆಯಲ್ಲಿ ಕೀರ್ತಿಯನ್ನು ಗಳಿಸುತ್ತಾನೆ. ಒಳ್ಳೆಯ ಮದ್ದಳೆಗಾರನಾಗಬೇಕಾದರೆ ಆಸಕ್ತಿ, ಸತತ ಅಭ್ಯಾಸ, ಶ್ರದ್ಧೆ, ಪ್ರತಿಭೆ ಮತ್ತು ಅಧ್ಯಯನ ಶೀಲತೆ ಬೇಕು. ಮದ್ದಳೆಯಲ್ಲಿ ಎರಡು ವಿಧಗಳಿವೆ. ಅದು ಶ್ರುತಿಯನ್ನು ಅವಲಂಬಿಸಿದೆ. ಮೊದಲನೆಯದು ಇಳಿ ಮದ್ದಳೆ. ಎರಡನೆಯದು ಏರು ಮದ್ದಳೆ. ಚುರುಕು ನಡೆಗೆ ಏರು ಮದ್ದಳೆಯನ್ನು ಉಪಯೋಗಿ ಸುವುದು ರೂಢಿ. ಒಂದೇ ಶ್ರುತಿಯಲ್ಲಿ ಒಂದು ವಾದ್ಯವನ್ನು ನುಡಿಸುವುದರ ಬದಲಿಗೆ ಏರು ಶ್ರುತಿಗೆ ಬದಲಾಯಿಸಿ ಏರು ಮದ್ದಳೆಯನ್ನು ಉಪಯೋಗಿಸುವ ರೂಢಿಯೂ ಇದೆ. ಅದು ಬದಲಾವಣೆ ಇರಬೇಕು ಎಂಬ ಕಾರಣಕ್ಕಾಗಿ ಮಾಡುತ್ತಾರೆ. ಇದು ಏಕತಾನತೆಯನ್ನು ಬದಲಾಯಿಸುವ ತಂತ್ರವಾಗಿದೆ. ತೆಂಕುತಿಟ್ಟಿನಲ್ಲಿ ಮದ್ದಳೆಯನ್ನು ನುಡಿಸುವವನೇ ಆಮೇಲೆ ಬಂದು ಚೆಂಡೆಯನ್ನು ಬಾರಿಸುತ್ತಾನೆ. ಚೆಂಡೆಯನ್ನು ಬಾರಿಸಿದವನು ಅನಂತರ ಮದ್ದಳೆಯನ್ನು ನುಡಿಸುತ್ತಾನೆ. ತೆಂಕಿನಲ್ಲಿ ಚೆಂಡೆಯೇ ಪ್ರಧಾನ. ಆದರೆ ಬಡಗಿನಲ್ಲಿ ಚೆಂಡೆಗೆ ಬೇರೆ ಮದ್ದಳೆಗೆ ಬೇರೆ ಕಲಾವಿದರು ಇರುತ್ತಾರೆ. ಚೆಂಡೆ ಒಂದನ್ನೇ ಬಾರಿಸಿದರೆ ಬರುವುದು ಒಂದೇ ಸ್ವರ ಟ.ಟ.ಟ... ಚೆಂಡೆಯ ನಾದವ ನ್ನೊಂದನ್ನೇ ಗಂಟೆಗಟ್ಟಲೆ ಹೊತ್ತು ಕುಳಿತು ಕೇಳಲು ಆಗುವುದಿಲ್ಲ. ಆದರೆ ಮೃದಂಗದಲ್ಲಿ ಬೇರೆ ಬೇರೆ ಸ್ವರಗಳನ್ನು ಹೊರಡಿಸಬಹು ದಾಗಿದ್ದರಿಂದ ಎಷ್ಟು ಹೊತ್ತು ಬೇಕಾದರೂ ಪ್ರೇಕ್ಷಕರನ್ನು ರಂಜಿಸಬಹುದು. ಒಳ್ಳೆಯ ಮೃದಂಗ ವಾದಕನು ಅದರೊಂದಿಗೆ ಮಾತನಾಡಬಲ್ಲನು. ಆದರೆ ಯಕ್ಷಗಾನಕ್ಕೆ ಮದ್ದಳೆ ಮತ್ತು ಚೆಂಡೆ ಒಂದಕ್ಕೊಂದು ಪೂರಕವೇ ಆಗಿದೆ.
ಚೆಂಡೆ
ಯಕ್ಷಗಾನದ ಹಿಮ್ಮೇಳದ ವಾದನಗಳಲ್ಲಿ ಚೆಂಡೆಯೂ ಒಂದು. ಚೆಂಡೆ ಚರ್ಮವಾದ್ಯ. ಇದು ಮದ್ದಳೆಗೆ ಮತ್ತು ಆಧಾರ ಶ್ರುತಿಗೆ ಪೂರಕವಾದ ವಾದನವಾಗಿದೆ. ರಂಗಸ್ಥಳದಲ್ಲಿ ವೀರರಸ, ರೌದ್ರರಸ, ಅದ್ಬುತ ಮತ್ತು ಭಯಾನಕ ರಸೋತ್ಪತ್ತಿಗೆ ಭಾವಾ ಭಿನಯಕ್ಕೆ ಚೆಂಡೆಯ ನಾದಬೇಕು.
ಚೆಂಡೆಯನ್ನು ಬಾರಿಸುವುದರಿಂದ ಬೇರೆ ಬೇರೆ ನಾದಗಳು ಹೊರಹೊಮ್ಮದಿದ್ದರೂ ಭಾಗವತರ ತಾಳ ಮತ್ತು ಮದ್ದಳೆಯ ನಾದದ ಜೊತೆಯಲ್ಲಿ ಇದರ ನಾದವೂ ಸೇರಿದಾಗ ಹಿಮ್ಮೇಳ ವೈಭವ ಸಾಕ್ಷಾತ್ಕಾರ ವಾಗುತ್ತದೆ. ಬಡಗುತಿಟ್ಟಿನಲ್ಲಿ ಕುಳಿತು ಚೆಂಡೆಯನ್ನು ಬಾರಿಸುತ್ತಾರೆ. ತೆಂಕುತಿಟ್ಟಿನಲ್ಲಿ ನಿಂತುಕೊಂಡೇ ಚೆಂಡೆಯನ್ನು ಬಾರಿಸುತ್ತಾರೆ. ಬಡಗುತಿಟ್ಟಿನಲ್ಲಿ ಚೆಂಡೆಯನ್ನು ಬಾರಿಸುವ ಕಲಾವಿದರು ಬೇರೆ ಇರುತ್ತಾರೆ. ತೆಂಕುತಿಟ್ಟಿನಲ್ಲಿ ಮದ್ದಳೆಯನ್ನು ನುಡಿಸುವವನೇ ಚೆಂಡೆಯನ್ನು ನುಡಿಸುತ್ತಾನೆ.
ಕೃಪೆ: ಯಕ್ಷಸಿಂಚನ

14-05-2012

Posted by JAYAKIRANA Kirana on | 0 comments | Leave a comment...

ಮೇಷ : ಕೆಲಸ ಕಾರ್ಯಗಳಲ್ಲಿ ಅಡೆತಡೆಯಾಗುತ್ತದೆ.
ವೃಷಭ : ಪ್ರಯತ್ನಿಸಿದ ಕೆಲಸಗಳಲ್ಲಿ ಜಯ ದೊರೆಯಲಿದೆ.
ಮಿಥುನ : ಹೆಂಡತಿ ಮಕ್ಕಳಿಂದ ಕಿರಿಕಿರಿ ಇರುತ್ತದೆ.
ಕರ್ಕಾಟಕ : ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ಸಿಂಹ : ದೇವತಾ ಕೆಲಸಗಳನ್ನು ಮಾಡುತ್ತೀರಿ.
ಕನ್ಯಾ : ಆರೋಗ್ಯದ ಕಡೆಗೆ ಗಮನ ಡಿರಿ.
ತುಲಾ : ಶತ್ರುಗಳಿಂದ ಆದಷ್ಟು ದೂರ ಇರಬೇಕು.
ವೃಶ್ಚಿಕ : ಮನೆಯಲ್ಲಿ ಶುಭ ಕೆಲಸವನ್ನು ನಡೆಸುತ್ತೀರಿ.
ಧನು : ಹಣಕಾಸಿನ ಲಾಭ ವಿವಿಧ ಮೂಲಗಳಿಂದ ಬರಲಿದೆ.
ಮಕರ : ದೂರ ಸಂಚಾರ ಮಾಡುತ್ತೀರಿ.
ಕುಂಭ : ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ಮೀನ : ಮನೆಯಲ್ಲಿ ಹೆಂಡತಿ ಮಕ್ಕಳಿಂದ ಕಿರಿಕಿರಿ ಇರುತ್ತದೆ.

14-05-2012

Posted by JAYAKIRANA Kirana on | 0 comments | Leave a comment...

ಬಜಪೆ : ಎಲೆಕ್ಟ್ರಿಶಿಯನ್ ಮತ್ತು ಹೆಲ್ಪರ್ ಬೇಕು ೯೩೪೧೦೨೬೯೩೯.
ಮಂಗಳೂರು : ಕೆಲಸಕ್ಕೆ ಜನ ಬೇಕು ೯೪೪೯೭೨೩೧೩೩.
ಪಂಪ್‌ವೆಲ್: ಮನೆಕೆಲಸಕ್ಕೆ ಮಹಿಳೆ ಬೇಕು ೯೯೪೫೭೦೪೦೪೨.
ಕುಂಟಿಕಾನ : ಹೋಂ ಪ್ರೋಡಕ್ಟ್‌ಗೆ ಜನ ಬೇಕು ೯೪೮೦೧೧೭೮೫೪.
ಮಂಗಳೂರು : ಸ್ಟೇಷನರಿ ಶಾಪ್‌ಗೆ ಪಾರ್ಟ್ ಟೈಮ್ ಸೇಲ್ಸ್‌ಮೆನ್ ಬೇಕು ೯೮೮೦೦೬೧೬೫೦.
ಮಂಗಳೂರು : ಆಫೀಸೊಂದಕ್ಕೆ ಮಾರ್ಕೆ ಟಿಂಗ್ ಎಕ್ಸಿಕ್ಯೂಟಿವ್ ಬೇಕು ೯೯೪೫೬೬೯೧೨೮.
ಮಂಗಳೂರು : ಸೇಲ್ಸ್ ಎಕ್ಸಿಕ್ಯೂಟಿವ್ ಬೇಕು ೭೭೬೦೪೭೧೦೬೪.
ಮುಡಿಪು ಬಳಿ ಸಸ್ಯಾಹಾರಿ ಹೊಟೇಲಿಗೆ ವೇಟರ್, ಕ್ಲೀನರ್ ಬೇಕು ೦೯೪೪೬೧೬೯೮೮೪.
ಹೊಟೇಲ್‌ಗೆ ಎಲ್ಲಾ ತರದ ಅಡುಗೆಯ ವರು ಬೇಕಾಗಿದ್ದಾರೆ. ೯೯೦೧೯೫೦೧೦೯
ಮಂಗಳೂರು : ಪೂನಾಕ್ಕೆ ಮನೆ ಕೆಲಸಕ್ಕೆ ಮಹಿಳೆ ಬೇಕು. ೦೯೯೬೦೦೫೩೧೪೧.
ಕಂಕನಾಡಿ : ಆಪ್ಟಿಕಲ್ ಶಾಪ್‌ಗೆ ಯುವತಿ ಬೇಕು ೯೦೩೬೬೦೩೧೨೯.
ಮಂಗಳೂರು : ಕೊಂಚಾಡಿಗೆ ಸೈಬರ್ ವೊಂದಕ್ಕೆ ಜನ ಬೇಕು ೯೦೦೮೧೨೨೮೨೯.
ಮಂಗಳೂರು : ಕಾಲ್ ಸೆಂಟರ್‌ಗೆ ಹೌಸ್ ಕೀಪರ್ ಬೇಕು ೯೯೧೬೧೧೯೪೬೯.
ಮಂಗಳೂರು : ಸುರತ್ಕಲ್ - ಬೈಕಂಪಾಡಿಗೆ ಕೊರಿಯರ್ ಏಜೆನ್ಸಿ ಬೇಕು ೯೮೪೫೮೦೬೪೮೦.
ಕಾವೂರು : ಹೊಟೇಲ್‌ಗೆ ಕುಕ್ & ಸಪ್ಲಾಯರ್ ಬೇಕು ೯೮೮೦೭೨೫೪೨೨.
ಮಂಗಳೂರು : ಹೊಟೇಲ್‌ಗೆ ಕಿಚನ್ ಹೆಲ್ಪರ್ ಬೇಕು ೯೪೪೮೩೮೩೭೦೫.
ಮಂಗಳೂರು : ಸ್ಟಾಕ್, ಸೇಲ್ಸ್ ಮೇಲ್ವಿ ಚಾರಣೆಗೆ ಮಹಿಳಾ ಕ್ಲರ್ಕ್, ಮಾರ್ಕೆಟಿಂಗ್‌ಗೆ ಯುವಕರು ಬೇಕು ೯೮೪೫೩೫೩೭೮೯.
ಪುತ್ತೂರು : ದ್ವಿಚಕ್ರವಾಹನ ಶೋರೂಮ್‌ಗೆ ಸೇಲ್ಸ್‌ಮ್ಯಾನ್ ಬೇಕು ೮೭೪೮೯೭೦೨೮೬.
ಮಂಗಳೂರು: ಬೇಕರಿ ಮತ್ತು ಜ್ಯೂಸ್ ಅಂಗಡಿಗೆ ಜನ ಬೇಕು ೯೮೪೪೫೨೧೭೪೩.
ಮಂಗಳೂರು : ಒಪ್ಟಿಕಲ್ ಶಾಪಿಗೆ ಯುವತಿ ಬೇಕು ೯೦೩೬೬೨೧೦೭೯.
ಮಂಗಳೂರು: ಸ್ಕ್ರೀನ್‌ಪ್ರಿಂಟಿಂಗ್‌ಗೆ ಜನ ಬೇಕು ೭೭೬೦೬೩೧೪೫೭.
ಮಂಗಳೂರು: ಗ್ರಾಫಿಕ್ಸ್‌ಗೆ ಯುವತಿಯರು ಬೇಕು ೯೦೩೬೪೮೯೦೪೦.
ತೊಕ್ಕೊಟ್ಟು : ಕಚೇರಿ ಕೆಲಸಕ್ಕೆ ಪಿಯುಸಿ ಯಾದ ಯುವತಿ ೭೭೯೫೧೬೯೭೮೭.
ಮಂಗಳೂರು : ಸೇಲ್ಸ್‌ಮ್ಯಾನ್ ಮತ್ತು ಎಕ್ಸಿ ಕ್ಯೂಟಿವ್ ಬೇಕು ೭೨೫೯೩೫೪೮೮೪
ಮಂಗಳೂರು : ಏಜೆನ್ಸಿಯೊಂದಕ್ಕೆ ಸೇಲ್ಸ್‌ಗೆ ಯುವತಿಯರು ಬೇಕು ೨೪೪೩೫೭೬.
ಮಂಗಳೂರು : ಮಂಗಳಾದೇವಿ ಬಳಿ ಆಫೀಸ್ ಕೆಲಸಕ್ಕೆ ಹೆಲ್ಪರ್ ಬೇಕು ೯೮೪೪೦೦೯೯೦೫
ಬೈಕಂಪಾಡಿ : ಹೊಟೇಲಿಗೆ ಮಾಂಸಾಹಾರಿ ಅಡುಗೆಯವರು, ಕಿಚನ್ ಹೆಲ್ಪರ್ ಬೇಕು ೯೯೮೦೨೬೭೮೮೪.
ಪಡೀಲ್ : ಪೆಟ್ರೋಲ್ ಪಂಪ್‌ಗೆ ಯುವಕರು ಬೇಕು ೯೪೪೮೧೩೪೧೨೩.
ಕೋಡಿಕಲ್ : ಮನೆಕಾರಿಗೆ ಡ್ರೈವರ್ ಬೇಕು ೨೪೫೧೮೨೮.

ಹಿಂದೂ ಜಾಗತಿಕ ಮೂಲಧರ್ಮವಲ್ಲದೆ ಇನ್ನೇನು?

Posted by JAYAKIRANA Kirana on | 0 comments | Leave a comment...


ಭಾರತವೆಂದರೆ ಹಿಂದೂ ಧರ್ಮ, ಹಿಂದೂ ಧರ್ಮವೆಂದರೆ ಭಾರತ ಎಂದು ಹೇಳುವಾಗ ಭಾರತದಲ್ಲಿ ಬೇರೆ ಧರ್ಮಗಳಿಗೆ ಅವಕಾಶವಿಲ್ಲ ಎಂದಲ್ಲ. ಹಿಂದೂಗಳು ಇತರ ಧರ್ಮಗಳಿಗೆ ಅನಗತ್ಯವಾಗಿ ತೊಂದರೆ ಯಾವತ್ತೂ ಕೊಟ್ಟಿಲ್ಲ. ತಮ್ಮ ಜೀವನಶೈಲಿಗೆ ತಡೆಯುಂಟಾಗಾದ ಇತರರನ್ನು ಎಚ್ಚರಿಸುವ ಕಾರ್ಯ ಮಾಡಿ ದ್ದಾರೆಯೇ ಹೊರತು ಮಾನವೀಯತೆ ಮರೆತು ವರ್ತಿಸಿಲ್ಲ ಎಂಬುದು ನಿಸರ್ಗಸತ್ಯ.

ಎಸ್.ಎಂ.ಬೆಳ್ಳಾರೆ
ಜಾಗತಿಕವಾಗಿ ಇಂದು ಹಲವಾರು ಧರ್ಮ ಜಾತಿಗಳಿವೆ. ಇನ್ನೂರಕ್ಕೂ ಮಿಕ್ಕಿರುವ ದೇಶಗಳಲ್ಲಿ ಅತ್ಯಧಿಕವಾಗಿ ಕ್ರಿಶ್ಚಿಯನ್, ಇಸ್ಲಾಂ ಮತದವರು ಹಬ್ಬಿಕೊಂಡಿದ್ದಾರೆ. ಅಲ್ಲೆಲ್ಲಾ ತರಹೇವಾರಿ ರೀತಿಯ ಸಂಸ್ಕೃತಿ ಜೀವನಶೈಲಿಯಿದೆ. ಮುಸ್ಲಿಂ ರಾಷ್ಟ್ರಗಳಲ್ಲಿ ಅನ್ಯಾಯ, ಅಕ್ರಮ ಹಿಂಸೆಯ ಆರ್ಭಟದಿಂದ ಕೂಡಿದ ಜನಜೀವನ ಕಂಡುಬಂದರೆ, ಕ್ರೈಸ್ತ ರಾಷ್ಟ್ರಗಳಲ್ಲಿ ಅನೈತಿಕತೆ, ಆಶ್ಲೀಲತೆಯಿಂದ ಆವೃತವಾದ ಬದುಕು ಕಣ್ಣ ಮುಂದೆ ಸುಳಿಯುತ್ತದೆ. ಆದರೆ ಎಲ್ಲಾ ಮುಸ್ಲಿಂ ಮತ್ತು ಕ್ರೈಸ್ತ ರಾಷ್ಟ್ರಗಳಲ್ಲಿ ಇಂತಹ ಪರಿಸ್ಥಿತಿ ಇದೆ ಎಂದಲ್ಲ. ಪ್ರಪಂಚದಲ್ಲಿ ಪ್ರಸ್ತುತ ಧರ್ಮಗಳ ಮೇಲಾಟಕ್ಕಾಗಿ ಕಚ್ಚಾಟಗಳು ನಡೆಯುತ್ತಿದೆ. ತಮ್ಮದೇ ಧರ್ಮ ಮೇಲು ಎಂದು ಬಿಂಬಿಸುವ ನಿಟ್ಟಿನಲ್ಲಿ ಕಾರ್ಯಗಳು ಸಾಗಿವೆ. ಅಂತಹ ಮನೋ ಸ್ಥಿತಿಯಿಂದಾಗಿ ಕೋಮುಗಲಭೆಗಳು, ವರ್ಗಸಂಘರ್ಷಗಳು ಜಾತಿ ನಿಂದನೆಗಳು ಅಧಿಕವಾಗುತ್ತಿವೆ.
ಕೆಲವೊಂದು ಧರ್ಮದ ಸಂಸ್ಥಾಪಕರು ಸಾಮಾನ್ಯ ಮನುಷ್ಯರೇ ಆಗಿದ್ದು, ಅವರ ಅನುಯಾಯಿಗಳ ನಂಬಿಕೆಯೇ ಅವರನ್ನು ಅಸಾಮಾನ್ಯ ಪುರುಷರೆಂಬಂತೆ ಬಿಂಬಿಸಿದೆ. ಕೆಲವೊಂದು ಸ್ವಯಂ ಘೋಷಿತ ಮತ್ತು ಕಣ್ಣಿಗೆ ಕಾಣದ ಶಕ್ತಿಗಳನ್ನು ನಾವು ನಂಬುವುದರಲ್ಲಿ ಅರ್ಥವಿಲ್ಲ ಹಾಗೂ ಆ ರೀತಿಯ ನಂಬಿಕೆ ಯಿದ್ದವರು ಸ್ವಾರ್ಥ ಪೂರಿತ ಲಾಭದ ಆಸೆಯಿಂದ ಆ ಹಾದಿಯಲ್ಲಿ ಸಾಗುತ್ತಾರೆ ಎಂದು ತಿಳಿಯಬಹುದು. ಅತಿಯಾದ ನಂಬಿಕೆ ಮೂಢನಂಬಿಕೆ, ಅಂಧ ವಿಶ್ವಾಸವಾಗಿ ಮಾರ್ಪಟ್ಟು ಜೀವನದ ಸರಳ ಹಾಗೂ ಸಹಜ ಪಥದಿಂದ ನಮ್ಮನ್ನು ವಿಮುಖ ಹಾಗೂ ವಿಚಲಿತರನ್ನಾಗಿ ಮಾಡುತ್ತದೆ. ಇದನ್ನು ನಾನು ಧರ್ಮಗಳ ಮೇಲಿನ ದ್ವೇಷದಿಂದ ಬರೆಯುತ್ತಿಲ್ಲ. ಬದುಕಿನ ಸಹಜತೆಗಳನ್ನು ತಿಳಿಸುವ ನಿಟ್ಟಿನಲ್ಲಿ ಬರೆಯುತ್ತಿದ್ದೇನೆ. ಹಲವಾರು ನಂಬಿಕೆಗಳು, ಆಚರಣೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಕಾರಣವೇನು? ಆ ತರಹದ ಆಚ ರಣೆಗಳು ಸರ್ವಕಾಲಕ್ಕೂ ಸಲ್ಲುವುದಿಲ್ಲ.
ದಿನಗಳುರುಳಿದಂತೆ ಜನರಲ್ಲಿ ಜಾಗತಿಕವಾಗಿ ನೈಜತೆಯ ಅರಿವು ಮೂಡುತ್ತದೆ. ಇರುವುದನ್ನು ಹಾಗೆಯೇ ಸ್ವೀಕರಿಸದಿದ್ದರೆ ಅನಾಹುತ ಶತಃಸಿದ್ಧ ಇದರಲ್ಲಿ ಪರಸ್ಪರ ದ್ವೇಷ, ಅಸೂಯೆಗೆ ಅವಕಾಶವಿಲ್ಲ. ಪ್ರಕೃತಿಯಲ್ಲಿ ರುವ ಪ್ರಮುಖ ಜೀವಿ ಮಾನವ ಎಂಬುವುದರಲ್ಲಿ ಎರಡು ಮಾತಿಲ್ಲ. ಆಕಸ್ಮಿಕವಾಗಿ ನಿರ್ಮಿತವಾದ ಧರ್ಮಗಳಿಂದ ಮಾನವರು ಚದುರಿ ಅತ್ತ ಇತ್ತ ಎಂಬಂತಾಗಿರ ಬಹುದು. ಆದರೆ ಮಾನವರೆಲ್ಲಾ ಒಂದೇ ಎಂಬುದನ್ನು ಎಂದೂ ಮರೆಯುವ ಹಾಗಿಲ್ಲ.
ಈಗ ಭಾರತದ ವಿಷಯಕ್ಕೆ ಬರೋಣ. ಪ್ರಪಂಚದ ಸರ್ವ ರಾಷ್ಟ್ರಗಳಿಗೂ ಮಾರ್ಗದರ್ಶಕನಂತಿರುವ ದೇಶ ನಮ್ಮ ಭಾರತ. ಸುಸಂಸ್ಕೃತಿವಾದ ಜೀವನಶೈಲಿ ಹಾಗೂ ಮಾನವೀಯತೆಯ ನೈಜರೂಪ ಇಲ್ಲಿನ ವಿಶೇಷತೆ. ಅನ್ಯ ದೇಶಗಳ ವಿಕೃತ ಕೋಮು ವಾದಿಗಳ ಕುಮ್ಮಕ್ಕಿನಿಂದ ಇಲ್ಲೂ ಗಲಭೆಯಿಂದ ಹಿಂಸೆ, ಸಾವು, ನೋವುಗಳಾಗಿರಬಹುದು. ಆದರೆ ಇಂತಹಾ ಘಟನೆಗಳು ಎಂದೆಂದೂ ಭಾರತದ ಸ್ವಾಭಾವಿಕ ಪ್ರತಿಷ್ಠೆಗೆ ಧಕ್ಕೆ ತರುವುದಿಲ್ಲ. ಬೇರೆ ರಾಷ್ಟ್ರಗಳ ಕೋಮುಜಂತುಗಳ ಪ್ರಭಾವಕ್ಕೂ ಇಲ್ಲಿನ ಕೆಲವು ಯುವಕರು ಒಳಗಾಗಿರಬಹುದು. ಆದರೆ ಆ ಯುವಕರೂ ಸಹಜತೆಗೆ ಮರಳುತ್ತಾರೆ ಎಂಬುದು ದಿಟ. ಕಾಲವೇ ಅವರಲ್ಲಿ ಸಹಜತೆಯ ಅರಿವು ಮೂಡಿಸುತ್ತದೆ ಎಂಬುದು ಖಂಡಿತಾ. ಈಗ ಭಾರತದ ಪುರಾತನ ಧರ್ಮವೊಂದರ ನೆಲೆಯನ್ನು ತಿಳಿ ಯೋಣ.
ಅದು ಭಾರತದ ಮೂಲವಾಗಿರುವ ಹಿಂದೂ ಧರ್ಮ. ಅದು ಧರ್ಮವಲ್ಲ. ಅದು ಜೀವನಶೈಲಿ. ಜಾಗತಿಕ ಜೀವನದ ನೈಜತೆ ಈ ಹಿಂದೂ ಧರ್ಮದಲ್ಲಿ ಅಡಗಿದೆ. ಈ ಸಂಗತಿ ಬರೆ ಯುವಾಗ ಕೆಲವರಿಗೆ ದ್ವೇಷ, ತಳಮಳ, ತಲ್ಲಣ ಉಂಟಾಗ ಬಹುದು ನಿಜ. ಹಿಂದೂ ಧರ್ಮಕ್ಕೆ ಸ್ಥಾಪಕರಿಲ್ಲ. ಅದು ಜಗ ತ್ತಿನ ಸೃಷ್ಟಿಯ ಆದಿಯಿಂದಲೇ ಇದೆ ಎಂಬುದು ತಿಳಿದು ಬರುತ್ತದೆ. ಅದನ್ನು ಒಪ್ಪುವಲ್ಲಿ ಕೋಮುಭಾವನೆ, ಅಸೂಯೆ ಸಲ್ಲದು. ಅದನ್ನು ಒಪ್ಪದಿದ್ದರೂ ಭವಿಷ್ಯ ದಿನಗಳೇ ಹಿಂದೂ ಧರ್ಮದ ನೈಜತೆಯನ್ನು ಸಾರ್ವತ್ರಿಕಗೊಳಿಸುತ್ತದೆ. ಇಲ್ಲಿ ಮತಾಂತರ ಗೊಳ್ಳಬೇಕೆಂಬ ವಿಷಯವನ್ನಲ್ಲ ನಾನು ಹೇಳುವುದು. ಅವರವರ ಧರ್ಮದಲ್ಲೇ ಇದ್ದುಕೊಂಡು ಹಿಂದೂ ಜೀವನಶೈಲಿಯೇ ನೈಜ ಎಂದು ಮನದಲ್ಲೇ ಅರಿತುಕೊಂಡು ಸಾಗಿದರೆ ಸಾಕು.
ಅವರು ಹಂದಿ ತಿನ್ನುತ್ತಾರೆ ಇವರು ಗೋಮಾಂಸ ತಿನ್ನುತ್ತಾರೆ ಎಂಬ ವಿಷಯಗಳೆಲ್ಲಾ ಇಲ್ಲಿ ಕ್ಷುಲ್ಲಕ. ಹಿಂದೂ ಜೀವನಶೈಲಿ ಯವರಿಗೆ ತಾವೇ ಶ್ರೇಷ್ಠ ಎಂಬ ಅಹಂಕಾರ ಎಂದೂ ಬರಲು ಸಾಧ್ಯವಿಲ್ಲ. ಏಕೆಂದರೆ ಸಹಜತೆಯಲ್ಲೇ ಬದುಕುವವರಿಗೆ ಅಹಂ ಕಾರ ಮಿಶ್ರಿತ ಕೋಮುಭಾವನೆಯ ಅಗತ್ಯವೇ ಇಲ್ಲ. ಒಂದು ವೇಳೆ ಆ ಭಾವನೆ ಮೂಡಿದರೂ ಅದು ಅನ್ಯ ಕೋಮುವಾದಿಗಳ ಉಪಟಳದ ಪ್ರಭಾವದಿಂದಾಗಿರಬಹುದು. ಸಹಜ ಹಾಗೂ ಜಗತ್ತಿನ ಮೂಲ ಧರ್ಮದ ಪರವಾಗಿರುತ್ತದೆ. ಮೂಲಧರ್ಮವನ್ನು ಒಪ್ಪಿಕೊಂಡರೆ ಎಲ್ಲಾ ಇತರ ಧರ್ಮಗಳೂ ಶಾಂತಿ ನೆಮ್ಮದಿಯಿಂದ ಸಾಗುತ್ತವೆ. ಇಲ್ಲಾ ಅದು ಬಿಟ್ಟು ಅದರ ವಿರುದ್ಧ ಏರಿ ಹೋಗುವ ಪ್ರಯತ್ನ ಮುಂದುವರಿಸಿದರೆ ಕ್ರಮೇಣ ಅಸ್ತಿತ್ವ ಕಳೆದುಕೊಂಡು ನಾಶವಾಗುತ್ತವೆ.
ಭಾರತವೆಂದರೆ ಹಿಂದೂ ಧರ್ಮ, ಹಿಂದೂ ಧರ್ಮವೆಂದರೆ ಭಾರತ ಎಂದು ಹೇಳುವಾಗ ಭಾರತದಲ್ಲಿ ಬೇರೆ ಧರ್ಮಗಳಿಗೆ ಅವಕಾಶವಿಲ್ಲ ಎಂದಲ್ಲ. ಹಿಂದೂಗಳು ಇತರ ಧರ್ಮಗಳಿಗೆ ಅನಗತ್ಯವಾಗಿ ತೊಂದರೆ ಯಾವತ್ತೂ ಕೊಟ್ಟಿಲ್ಲ. ತಮ್ಮ ಜೀವನ ಶೈಲಿಗೆ ತಡೆಯುಂಟಾಗಾದ ಇತರರನ್ನು ಎಚ್ಚರಿಸುವ ಕಾರ್ಯ ಮಾಡಿದ್ದಾರೆಯೇ ಹೊರತು ಮಾನವೀಯತೆ ಮರೆತು ವರ್ತಿಸಿಲ್ಲ ಎಂಬುದು ನಿಸರ್ಗಸತ್ಯ. ಅಲ್ವಾ ಗೆಳೆಯರೇ ಈಗ ಏನು ಹೇಳು ತ್ತೀರಿ. ನೈಜತೆ ತಿಳಿದುಕೊಂಡು ತಮ್ಮ ತಮ್ಮ ಧರ್ಮಗಳಲ್ಲೇ ಹಾಯಾಗಿರೋಣವೇ?

ಗ್ರಾನೈಟ್, ಟೈಲ್ಸ್ ನೆಲದಿಂದ ಅಪಾಯ

Posted by JAYAKIRANA Kirana on | 0 comments | Leave a comment...

ಈಗ ಗ್ರಾನೈಟ್, ಟೈಲ್ಸ್‌ಗಳನ್ನು ನೆಲಕ್ಕೆ ಹಾಸು ತ್ತಾರೆ. ಇದರಿಂದ ನೆಲವು ತುಂಬಾ ನಯ ವಾಗಿರುತ್ತದೆ. ಇದನ್ನು ಮನೆಗಳಿಗೆ, ಪ್ಲಾಟ್‌ಗಳಿಗೆ ಬಳಸುವುದು ಉತ್ತಮವಾದದ್ದೆ. ಆದರೆ ಈಗೀಗ ಸಾರ್ವಜನಿಕರು ನಡೆದಾಡುವ ಕಚೇರಿ, ಆಸ್ಪತ್ರೆಗಳಿಗೂ ಇದನ್ನೇ ಬಳಸುತ್ತಾರೆ. ಈ ನಯವಾದ ನೆಲದ ಮೇಲೆ ನೀರು ಬಿದ್ದರೆ ಜಾರುವುದರಿಂದ ವಯ ಸ್ಸಾದವರು ಮತ್ತು ಕಾಯಿಲೆಯಿಂದ ನರಳುವವರಿಗೆ ಈ ನೆಲದ ಮೇಲೆ ಓಡಾಡುವುದು ಮತ್ತಷ್ಟು ಅಪಾ ಯವಾಗುತ್ತದೆ. ಮಳೆಗಾಲವಾದ್ದರಿಂದ ನೀರೆಲ್ಲ ಒಳಗೆ ಬರುತ್ತದೆ. ನೀರು ಅಥವಾ ಕಸದ ಮೇಲೆ ಪಾದ ವನ್ನಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಆದುದರಿಂದ ಆಸ್ಪತ್ರೆಗಳನ್ನು ನಿರ್ಮಿಸುವವರು ಹಾಗೂ ಸರಕಾರಿ ಕಚೇರಿಗಳ ಕಟ್ಟಡಗಳನ್ನು ಕಟ್ಟುವವರು ಹಿರಿಯ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ನೆಲವನ್ನು ಸ್ವಲ್ಪ ಮಟ್ಟಿಗೆ ಒರಟಾಗಿ ಸಿದ್ಧಪಡಿಸಿದ್ದರೆ ಇದರಿಂದ ಬಹಳಷ್ಟು ಅಪಾಯಗಳನ್ನು ತಪ್ಪಿಸ ಬಹುದು.
ಅರುಣ್ ಪಿಂಟೋ, ಬಿಜೈ

ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದೆಯೇ?
ನಿಷೇಧದ ನಡುವೆಯೂ ಮಲ ಹೊರುವ ಪದ್ಧತಿ ಪಟ್ಟಣಗಳಲ್ಲಿ ಅಲ್ಲಲ್ಲಿ ಕಂಡುಬರುತ್ತಿದ್ದು, ಇಂತಹ ಪ್ರಕರಣಗಳನ್ನು ತಡೆಯಲು ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದರೆ ತಪ್ಪಾಗ ಲಾರದು. ಮಲ ಹೊರುವ ಪದ್ಧತಿಯನ್ನು ಸರಕಾರ ರಾಜ್ಯಾದ್ಯಂತ ನಿಷೇಧಿಸಿದ್ದರೂ ಕೆಲವು ಪ್ರದೇಶದಲ್ಲಿ ಮಾತ್ರ ಅದು ಬಹಿರಂಗವಾಗಿ ನಡೆಯುತ್ತಿದೆ.
ಮಲ ತೆಗೆಯುವ ಸಕ್ಕಿಂಗ್ ಮಿಶನ್ ವಾಹನವನ್ನು ತರಿಸಿದ್ದರೂ ಮನುಷ್ಯನನ್ನು ಬಳಸಿ ಕೊಳ್ಳುವುದು ಬಹಳ ಬೇಸರದ ಸಂಗತಿಯಾಗಿದೆ. ಆದ್ದರಿಂದ ಸರಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿ ವಿನಂತಿ. ಆರ್ಥಿಕವಾಗಿ ದುರ್ಬಲರಾಗಿರುವ ಕೆಲವೊಂದು ಜನಾಂಗದ ವ್ಯಕ್ತಿಗಳು ಇಂತಹ ಕೆಲಸಗಳಿಗೆ ಮುಂದಾ ಗುತ್ತಿದ್ದು, ಇಂತಹವರಿಗೆ ಸರಕಾರದಿಂದ ಜೀವನ ನಿರ್ವಹಣೆಗೆ ಸೂಕ್ತ ನೆರವು ದೊರತರೆ ಮಾತ್ರ ಈ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ನಿಷೇಧಿ ಸಬಹುದು.
ಅಜಯ್ ಕುಮಾರ್, ಮಂಗಳೂರು

ದಾರಿ ಕೇಳುವ ಅಪರಿಚಿತರ ಬಗ್ಗೆ ಎಚ್ಚರ!
ಮಹಿಳೆಯರೇ, ರಸ್ತೆಯಲ್ಲಿ ನಡೆಯು ತ್ತಿರುವಾಗ ಬೈಕ್‌ನಲ್ಲಿ ಇಲ್ಲವೇ ಹಿಂಬಾಲಿ ಸಿಕೊಂಡು ಬಂದು ಯಾರದ್ದೋ ಹೆಸರು ಹೇಳಿ ಅವರ ಮನೆಯ ದಾರಿ ಯಾವುದೆಂದು ವಿಚಾರಿಸುವ ಅಪರಿಚಿತರ ಬಗ್ಗೆ ಎಚ್ಚರ ದಿಂದಿರಿ. ಯಾಕೆಂದರೆ ಮಂಗಳೂರು ನಗರ ವ್ಯಾಪ್ತಿಯಲ್ಲದೆ ಗ್ರಾಮಾಂತರ ಭಾಗಗಳಲ್ಲೂ ಇದೇ ಮಾದರಿಯಲ್ಲಿ ಮಹಿಳೆಯರ, ಹೆಣ್ಮಕ್ಕಳ ಚಿನ್ನದ ಸರವನ್ನು ಎಗರಿಸಿದ ನೂರಾರು ಪ್ರಕರಣಗಳು ಪತ್ರಿಕೆಗಳಲ್ಲಿ ವರದಿಯಾಗಿವೆ. ಅಪರಿಚಿತರು ಬಂದು ಮಾತಾಡಿದರೆ ಕೆಲವು ಮಹಿಳೆಯರು ಅವಶ್ಯಕ್ಕಿಂತ ಜಾಸ್ತಿಯೇ ಸಲುಗೆ ಕೊಡುತ್ತಾರೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ. ದಾರಿ ಕೇಳಿದ ಕೂಡಲೇ ಅವರ ಚಲನವಲನ ಸಂಶಯ ತಂದರೆ ಕೂಡಲೇ ಬೊಬ್ಬೆ ಹೊಡೆಯುವುದು ಒಳಿತು.
ಇದರಿಂದ ಅವರು ಗಾಬರಿಗೊಳ್ಳುತ್ತಾರೆ. ಒಂದೊಮ್ಮೆ ಗುರುತು-ಪರಿಚಯವಿಲ್ಲದವರಿಗೆ ದಾರಿ ಹೇಳಲು ಮುಂದಾದರೆ ದುಷ್ಕರ್ಮಿ ಗಳು ಕೆಲವೇ ಸೆಕೆಂಡ್‌ಗಳಲ್ಲಿ ತಮ್ಮ ಕೆಲಸ ವನ್ನು ಮುಗಿಸಿ ಪರಾರಿಯಾಗಿರುತ್ತಾರೆ. ಆಮೇಲೆ ಪೊಲೀಸ್, ದೂರು ಎಂದು ಅಲೆ ದಾಡಿ ಪ್ರಯೋಜನವಿಲ್ಲ. ನಮ್ಮ ಎಚ್ಚರಿಕೆ ಯಲ್ಲಿ ನಾವಿದ್ದರೆ ಯಾರೇನೂ ಮಾಡಲು ಸಾಧ್ಯವಿಲ್ಲ ಅಲ್ಲವೇ?
ಸೈಯ್ಯದ್ ಆಲಿ, ಪಂಜಿಮೊಗರು

ಯಕ್ಷಗಾನದ ಅವಧಿ ಕಡಿತಗೊಳ್ಳಲಿ
ತುಳುನಾಡು ಯಕ್ಷಗಾನ ಕಲೆಗೆ ಪ್ರಸಿದ್ಧಿ ಪಡೆದಿದೆ. ಹಲ ವಾರು ಯಕ್ಷಗಾನ ಮೇಳಗಳು ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕರಾವಳಿ ಪ್ರದೇಶದಲ್ಲಿದೆ. ಆದರೆ ಇತ್ತೀ ಚಿನ ದಿನಗಳಲ್ಲಿ ಯಕ್ಷಗಾನ ವೀಕ್ಷಕರ ಸಂಖ್ಯೆ ಕಡಿಮೆ ಯಾಗುತ್ತಿರುವುದು ಮಾತ್ರ ಬೇಸರದ ಸಂಗತಿ. ಹರಕೆ ಯಕ್ಷಗಾನಗಳಿಗಂತೂ ಜನರೇ ಇರುವುದಿಲ್ಲ.
ಒಂದೊಮ್ಮೆ ರಾತ್ರಿ ೧೧ ಗಂಟೆ ಯವರೆಗೆ ಜನರಿದ್ದರೂ ಆ ಬಳಿಕ ಬೆಳಗ್ಗಿನವರೆಗೆ ಯಾರೂ ಇರುವುದಿಲ್ಲ. ಬದುಕಿನ ಜಂಜಾಟದಲ್ಲಿ ಸಿಲುಕಿರುವ ಜನರು ರಾತ್ರಿಯಿಂದ ಬೆಳಗಿ ನವರೆಗೆ ಯಕ್ಷಗಾನ ನೋಡು ವಷ್ಟು ವ್ಯವಧಾನ ಹೊಂದಿರುವು ದಿಲ್ಲ. ಹೀಗಾಗಿ ಯಕ್ಷಗಾನಗಳು ಪ್ರೇಕ್ಷಕರ ಕೊರತೆಯನ್ನು ಎದು ರಿಸುತ್ತವೆ. ಇದನ್ನು ಸರಿಪಡಿಸಲು ಯಕ್ಷ ಗಾನದ ಅವಧಿಯನ್ನು ಕಡಿತ ಗೊಳಿಸ ಬೇಕು. ಗರಿಷ್ಠ ಮೂರು ಗಂಟೆಯೊಳಗೆ ಮುಗಿ ಯುವಂತೆ ಯಕ್ಷಗಾನ ಪ್ರಸಂಗವನ್ನು ವ್ಯವಸ್ಥೆಗೊಳಿ ಸಬೇಕು. ರಾತ್ರಿ ೧೨ ಗಂಟೆ ಯೊಳಗೆ ಯಕ್ಷಗಾನ ಮುಗಿಯುವಂತಾದರೆ ಮತ್ತೆ ಪ್ರೇಕ್ಷಕರ ಸಂಖ್ಯೆ ಹೆಚ್ಚಲಿದೆ.
ಕುಮಾರ್, ಶಿರ್ವ

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಪಣಂಬೂರು ಸರ್ಕಲ್
ರಾ.ಹೆ. ೬೬ರಲ್ಲಿ ಬರುವ ಪಣಂ ಬೂರು ಸರ್ಕಲ್‌ನಲ್ಲಿ ನಡೆದಿರುವ ರಸ್ತೆ ಅಪಘಾತ ಮತ್ತು ಮೃತ ಪಟ್ಟಿ ರುವ ಜನರ ಸಂಖ್ಯೆಯನ್ನು ಲೆಕ್ಕ ಇಟ್ಟವರಿಲ್ಲ. ಹಿಂದೆ ಇಲ್ಲಿ ಸರ್ಕಲ್ ಇದ್ದು, ಅಪಘಾತಗಳು ಕಡಿಮೆ ಜರು ಗುತ್ತಿತ್ತು. ಆದರೆ ಹೆದ್ದಾರಿ ವಿಸ್ತರಣೆಯ ಸಂದರ್ಭ ಸರ್ಕಲ್ ಅನ್ನು ತೆಗೆದು ಹಾಕಲಾಗಿದೆ. ಇದರಿಂದ ವಾಹ ನಗಳು ವೇಗವನ್ನು ನಿಯಂತ್ರಿಸದೆ ಸಾಗುತ್ತಾ ಪಾದಚಾರಿಗಳ ಪ್ರಾಣಕ್ಕೆ ಕಂಟಕವಾಗುತ್ತಿವೆ. ನವ ಮಂಗ ಳೂರು ಬಂದರಿನಿಂದ ಬರುವ ಭೀಮಗಾತ್ರದ ಲಾರಿಗಳು ಪಣಂ ಬೂರು ಸರ್ಕಲ್‌ಗೆ ಬಂದು ಯೂ-ಟರ್ನ್ ಹೊಡೆದು ಮುಂದಕ್ಕೆ ಚಲಿ ಸುತ್ತವೆ. ಇದರಿಂದ ದ್ವಿಚಕ್ರ ಸವಾರರು ಕಕ್ಕಾಬಿಕ್ಕಿಯಾಗುತ್ತಾರೆ. ಇಲ್ಲಿ ಸಂಜೆಯ ವೇಳೆ ಒಬ್ಬ ಹೋಂ ಗಾರ್ಡ್‌ನನ್ನು ಇಲ್ಲಿ ರಸ್ತೆ ಸಂಚಾರ ಸುಗಮ ಗೊಳಿಸಲು ನೇಮಿಸಿದ್ದರೂ ಸವಾರರು, ಲಾರಿ ಚಾಲಕರು ಅವ ರನ್ನು ಗಮನಿಸದೆ ತಮ್ಮದೇ ವೇಗದಲ್ಲಿ ಸಾಗು ತ್ತಿವೆ. ಸಂಬಂಧಪಟ್ಟವರು ಇನ್ನಾದರೂ ಇಲ್ಲಿ ರಸ್ತೆ ಸಂಚಾರ ವ್ಯವಸ್ಥೆಗೊಳಿಸಲು ಕ್ರಮ ಕೈಗೊಳ್ಳಲಿ.
ಸತ್ಯರಾಜ್, ಪಣಂಬೂರು

ದಲಿತ ಮಹಿಳೆಯರ ನಿಗೂಢ ಸಾವು ಪ್ರಕರಣ ತನಿಖೆಯಾಗಲಿ
ಇತ್ತೀಚೆಗೆ ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ದಲಿತ ಮಹಿಳೆಯರು ಅಸ ಹಜ ಸಾವನ್ನಪ್ಪಿದ್ದಾರೆ. ಧರೆಗುಡ್ಡೆ ಎಂಬಲ್ಲಿ ನಾಟಕ ನೋಡಲೆಂದು ತೆರಳಿದ್ದ ದಲಿತ ಮಹಿಳೆಯನ್ನು ಅತ್ಯಾಚಾರಗೈದು ಕೊಲೆಗೈ ಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪತಿ, ಮಗಳು ಮತ್ತಾಕೆಯ ಪ್ರಿಯ ಕರನನ್ನು ವಿಚಾರಣೆ ನಡೆಸಿದರೂ ಸತ್ಯಾಂಶ ಹೊರ ಬಂದಿಲ್ಲ. ಈ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಬೆಳುವಾಯಿ ಪೇಟೆಯ ಸಮೀ ಪದ ಬಾವಿಯೊಂದರಲ್ಲಿ ದಲಿತ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ತಡ ರಾತ್ರಿ ಯವರೆಗೂ ಬೆಳುವಾಯಿ ಪೇಟೆಯಲ್ಲಿ ಯಾರಿಗೋ ಕಾದಿದ್ದ ಮಹಿಳೆ ಬೆಳಗ್ಗೆ ಬಾವಿಯಲ್ಲಿ ವಿವಸ್ತ್ರಳಾಗಿ ಪತ್ತೆಯಾ ಗಿರುವುದು ಅನೇಕ ಸಂಶಯಗಳನ್ನು ಹುಟ್ಟುಹಾಕಿವೆ. ದಲಿತ ಮಹಿಳೆಯರ ಸಾವಿನ ಎರಡೂ ಪ್ರಕರಣ ಗಳಲ್ಲಿ ಕಾಣದ ಕೈಗಳ ಪಾತ್ರವಿದ್ದು, ಪ್ರಕರಣ ಮುಚ್ಚಿ ಹಾಕಲು ಶ್ರಮಿಸುತ್ತಿರುವಂತಿದೆ. ಮಾನ್ಯ ಪೊಲೀಸ್ ಅಧೀಕ್ಷಕರು ಎರಡೂ ಪ್ರಕರಣಗಳ ತನಿಖೆ ನಡೆಸಿ ಆರೋಪಿಗಳನ್ನು ಕಂಬಿಯ ಹಿಂದೆ ತಳ್ಳಲಿ.
ಬಿ.ಎಸ್. ವೇಣೂರು

ಪುತ್ತೂರಿನಲ್ಲಿ ಮಹಿಳಾ ಸಂಘಟನೆಗಳು ಇಲ್ಲವೇ?
ಕೆಲವು ದಿನಗಳ ಹಿಂದೆ ಸಂಶಯಾಸ್ಪದವಾಗಿ ಸಾವ ನ್ನಪ್ಪಿರುವ ಪುತ್ತೂರು ಸಮೀಪದ ಕುಂಬ್ರದ ಯುವತಿ ಮಲ್ಲಿಕಾ ರೈ ಸಾವಿನ ಹಿನ್ನೆಲೆ ಬಯಲಾ ಗಬೇಕಿದೆ. ಹೆತ್ತವರನ್ನು ಕಳೆದುಕೊಂಡು ಅನಾಥವಾಗಿದ್ದ ಯುವತಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಳು. ಸ್ಥಳೀ ಯವಾಗಿ ಸಚ್ಚಾರಿತ್ರ್ಯ ಹೊಂದಿದ್ದ ಯುವತಿ ಏಕಾಏಕಿ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಹೇಳುತ್ತಿರುವುದು ಶಂಕೆಗೆ ಕಾರಣವಾಗಿದೆ. ಆಕೆ ಯನ್ನು ರಾತ್ರಿ ಮನೆಯಿಂದ ಕರೆದುಕೊಂಡು ಬಂದು ವಿಷ ಕುಡಿಸಿ ಕೊಲೆಗೈದಿರುವ ಶಂಕೆ ದಟ್ಟವಾ ಗಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆಯನ್ನು ಮುಂದು ವರಿಸಬೇಕು.
ಸ್ಥಳೀಯರೇ ಈಕೆಯ ಸಾವಿನ ಹಿಂದಿರುವ ಸಾಧ್ಯತೆ ಯಿದ್ದು, ಮಹಿಳಾ ಸಂಘಟನೆಗಳು ಇನ್ನಾದರೂ ಧ್ವನಿಯೆ ತ್ತಬೇಕಿದೆ. ಕಳೆದ ಎರಡು ಅವಧಿಯಿಂದ ಪುತ್ತೂರಿನಲ್ಲಿ ಮಹಿಳಾ ಶಾಸಕಿಯರೇ ಆಳ್ವಿಕೆ ನಡೆಸು ತ್ತಿದ್ದು, ಮಲ್ಲಿಕಾ ರೈ ಸಾವಿನ ಪ್ರಕರಣದ ತನಿಖೆ ಸೂಕ್ತ ದಿಸೆಯಲ್ಲಿ ಸಾಗುವಂತೆ ನೋಡಿಕೊಳ್ಳ ಬೇಕಾದ ಅಗತ್ಯವಿದೆ.
ಗ್ರಾಮಸ್ಥರು, ಕುಂಬ್ರ

ಮೌಲ್ಯಯುತ ಕೋರ್ಟ್ ಆದೇಶಕ್ಕೆ ಸ್ವಾಗತ
ಪವಿತ್ರ ಹಜ್ ಯಾತ್ರೆಗೆ ಕೇಂದ್ರ ಸಬ್ಸಿಡಿ ಕೊಡುವುದನ್ನು ನಿಲ್ಲಿಸುವ ಆದೇಶ ನೀಡಿರುವ ಕೋರ್ಟ್ ಕ್ರಮವನ್ನು ಭಾರತದ ಪ್ರತಿಯೊಬ್ಬ ಮುಸ್ಲಿಮ್ ಪ್ರಜೆ ಸ್ವಾಗತಿಸುತ್ತಾನೆ. ಇಲ್ಲಿಯ ತನಕ ಹಿಂದೂ ಸಮಾಜೋತ್ಸವಗಳಲ್ಲಿ ತೊಗಾಡಿಯಾ, ಕಲ್ಲಡ್ಕರಂಥವರು ಮುಸ್ಲಿಮರಿಗೆ ಹಜ್ ಯಾತ್ರೆಗೆ ಸಬ್ಸಿಡಿ ನೀಡಲಾಗುತ್ತದೆ. ಆದರೆ ಹಿಂದೂಗಳಿಗೆ ಕಾಶಿಗೆ, ರಾಮೇಶ್ವರ ಯಾತ್ರೆಗೆ ಹಣ ನೀಡುತ್ತಾರೆಯೇ? ಮುಸ್ಲಿಮರ ತುಷ್ಟೀಕರಣ ನಿಲ್ಲಿಸಿ ಎಂದು ಉದ್ರೇಕಕಾರಿ ಭಾಷಣ ಮಾಡುತ್ತಿದ್ದರು. ಈ ಮೂಲಕ ಹಿಂದೂಗಳನ್ನು ದಾರಿ ತಪ್ಪಿಸಲಾಗುತಿತ್ತು. ಆದರೆ ಗಮ ನಿಸಬೇಕಾದ ಅಂಶ ಎಂದರೆ ಹಜ್ ಸಬ್ಸಿಡಿ ಸರಕಾರದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಉಳಿಸುವುದೇ ಆಗಿತ್ತು. ಸಬ್ಸಿಡಿಯ ಹೆಚ್ಚಿನ ಹಣ ಈ ಕಂಪೆನಿಗೆ ಹೋಗುತಿತ್ತು. ನ್ಯಾಯಾಲಯ ಕೊನೆಗೂ ಎಚ್ಚೆತ್ತಕೊಂಡಿದೆ. ಇದನ್ನು ಯಾವುದೇ ಸರಕಾರ ಮಾಡಲು ಹಿಂಜರಿ ಯುತಿತ್ತು. ಹಾಗೇನಾದರೂ ಮಾಡಿದರೆ ಎಲ್ಲಿ ಮುಸ್ಲಿಮ್ ಓಟ್ ಬ್ಯಾಂಕಿಗೆ ತೊಂದರೆಯಾಗುತ್ತದೆಯೋ ಎನ್ನುವ ಆತಂಕವಿತ್ತು. ಇನ್ನು ಇಂಥ ಆತಂಕ ಇರುವುದಿಲ್ಲ. ಈ ದೇಶದ ಮುಸ್ಲಿಮನಿಗೆ ಸಬ್ಸಿಡಿ ಬೇಡ, ಅವರಿಗೆ ಶಿಕ್ಷಣ ಮತ್ತು ಉದ್ಯೋಗ ಬೇಕು. ಇದಕ್ಕಾಗಿ ಮುಸ್ಲಿಮ್ ಸಂಘಟನೆಗಳೂ ಪ್ರಯತ್ನಿಸಬೇಕು.
ಸಮದ್ ಬಂದರ್

ಮುಲ್ಕಿಯಲ್ಲಿ ಟಿಂಬರ್ ಮಾಫಿಯಾ ಕಾರುಬಾರು
ಮುಲ್ಕಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಟಿಂಬರ್ ಮಾಫಿಯಾ ಸಕ್ರಿಯವಾಗಿದೆ. ಬೆಲೆಬಾಳುವ ಮರಗಳು ರಾತೋರಾತ್ರಿ ದಂಧೆ ಕೋರರ ಪಾಲಾಗುತ್ತಿದೆ. ಸರಕಾರಿ ನಿಯಮಗಳ ಪ್ರಕಾರ ಯಾವುದೇ ಸೂಚನೆಗಳನ್ನು ಪಾಲಿಸದೆ ಮರಗಳನ್ನು ಕಡಿದು ಹಗಲು-ರಾತ್ರಿಯೆನ್ನದೆ ಸಾಗಾಟ ಮಾಡುವ ತಂಡ ಸಕ್ರಿಯವಾಗಿದೆ. ಮುಲ್ಕಿ ಠಾಣೆಯಲ್ಲಿ ಹಿಂದೆ ಇದ್ದ ಪೊಲೀಸರೂ ದಂಧೆಕೋರರ ಕೈಯಿಂದ ಹಣ ಪಡೆದು ಸುಮ್ಮನಿದ್ದರು. ಈಗ ಹೊಸದಾಗಿ ಬಂದಿರುವ ಎಸ್.ಐ. ಮೇಲೆ ಜನರು ವಿಶ್ವಾಸವಿಟ್ಟಿದ್ದರೂ ದಂಧೆಕೋರರು ನೆಮ್ಮದಿಯಿಂದಿದ್ದಾರೆ. ಇದಕ್ಕೆ ಮುಲ್ಕಿ ಠಾಣೆಯ ಪೊಲೀಸ್ ಅಧಿಕಾರಿ ಯೊಬ್ಬರು ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವುದು ಸ್ಥಳೀಯರಿಗೆ ತಿಳಿದಿದೆ. ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೋಳಿಅಂಕ, ಮಟ್ಕಾ, ಜುಗಾರಿ ಇತ್ಯಾದಿ ಅಕ್ರಮ ದಂಧೆಗಳಿಂದ ತಿಂಗ ಳಿಗೆ ಇಂತಿಷ್ಟು ಪರ್ಸೆಂಟ್ ಹಣ ಪಡೆಯುವ ಇಲ್ಲಿನ ಕೆಲವು ಪೊಲೀಸರಿಂದಾಗಿ ಅಕ್ರಮ ದಂಧೆ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ. ಅರಣ್ಯ ಪಾಲಕರು ಸದಾ ನಿದ್ದೆಯಲ್ಲೇ ಇರುತ್ತಾರೆ. ಇಂಥ ಕಡೆ ಟೆಂಪೋಗಳಲ್ಲಿ ಮರವನ್ನು ಸಾಗಿಸ ಲಾಗುತ್ತದೆ ಎಂದು ಮಾಹಿತಿ ನೀಡಿದರೆ, ನೀಡಿದವನ ಬಗ್ಗೆ ದಂಧೆಕೋರರಿಗೆ ಮಾಹಿತಿ ನೀಡುತ್ತಾರೆ.
ಹೀಗಾಗಿ ಜನರು ತಮಗೇಕೆ ಬೇಡದ ಉಸಾಬರಿ ಎಂದು ಸುಮ್ಮನಿದ್ದಾರೆ. ಟಿಂಬರ್ ಮಾಫಿಯಾದಲ್ಲಿ ತೊಡಗಿರುವವರು ಸಮಾಜ ದಲ್ಲಿ ಹೆಸರು ಪಡೆದುಕೊಂಡಿರುವ ಕಾರಣ ರಾಜಕೀಯ ಪಕ್ಷಗಳು ಈ ಬಗ್ಗೆ ಚಕಾರವೆತ್ತು ತ್ತಿಲ್ಲ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ದಂಧೆಯನ್ನು ಇನ್ನಾದರೂ ಮಟ್ಟ ಹಾಕುವರೇ?
ಎ.ಎಸ್, ಕಾರ್ನಾಡು

ನಿಜವಾದ ಪ್ರೀತಿಗೆ ಯಾವತ್ತೂ ಸಾವಿಲ್ಲ ಕಣೇ

Posted by JAYAKIRANA Kirana on | 0 comments | Leave a comment...


ನಮ್ಮಿಬ್ಬರ ಪ್ರೀತಿ ದಡ ಸೇರುತ್ತೋ ಇಲ್ವೋ ಅಂತ ನನಗಂತೂ ಗೊತ್ತಿಲ್ಲ ಗೆಳತಿ. ನಮ್ಮಿಬ್ಬರ ಮನೆಯವರು ಖಂಡಿತಾ ನಮ್ಮನ್ನು ಒಂದು ಮಾಡಲ್ಲ ಅಂತಾನೂ ಗೊತ್ತಲ್ವಾ. ಆದ್ರೂ ಹುಚ್ಚರಂತೆ ಪ್ರೀತಿಸಿದೋರು ನಾವು.

ಕಳೆದ ವಾರದಿಂದ ಈ ವಾರ ತನಕ ಕಾದು ಕುಳಿತ ನಿನಗೆ ಮೊದ ಲಾಗಿ ಥ್ಯಾಂಕ್ಸ್ ಹೇಳ್ತಾ ಇದ್ದೀಣಿ ಕಣೇ.
ದೀಪೀ... ಐ ಲವ್ ಯೂ ಕಣೇ. ನೀನು ಯಾಕೆ ನಂಗೆ ಇಷ್ಟೊಂದು ಇಷ್ಟವಾಗಿಬಿಟ್ಟಿದ್ದಿಯಾ ಅಂತ ನನ್ನ ಮನಸಾಕ್ಷಿಗೇನೇ ಗೊತ್ತಿಲ್ಲ ಕಣೇ. ಆದರೆ ನಿನ್ನ ಹಾಲ್ಗೆನ್ನೆಯಲ್ಲಿ ಸುಳಿಯುವ ಹಾಲಿನಷ್ಟೆ ಪರಿಶುದ್ಧವಾದ ನಗು, ನಿನ್ನ ಧ್ವನಿ ನನಗಿಷ್ಟ ಅಂತ ಆವತ್ತೇ ನಾನು ಹೇಳಿದ್ದೆ ಅಲ್ವಾ. ಆ ನಿನ್ನ ಮುದ್ದಿನ ಮಾತು ಪ್ರೇಮರಾಗವಾಗಿ ದಿನಾಲು ನನ್ನ ಕಾಡುತ್ತೆ ಗೊತ್ತಾ.
ನಮ್ಮ ಪ್ರೀತಿಯ ಆರಂಭವೇ ಒಂದು ಪವಾಡ ಕಣೇ. ನೆನಪಿದೆಯಾ ಚಿನ್ನು ನಿಂಗೆ. ಆ ದಿನ ನಾನು ನಿನ್ನ ಮೊಬೈಲ್‌ಗೆ ರಾಂಗ್ ಮೆಸೇಜಲ್ಲೇ ನಂಗೆ ಬೈದದ್ದು. ಐ. ಆಮ್ ಮ್ಯಾರೀಡ್ ಅಂತ ಸುಳ್ಳು ಹೇಳಿದ್ದು, ಆ ನಂತರ ಮೂರು ದಿನ ಬಿಟ್ಟು ನೀನೇ ನಂಗೆ ಮೆಸೇಜ್ ಮಾಡಿದ್ದು, ಮಧ್ಯರಾತ್ರಿ ನಾನು ನಿಂಗೆ ಪ್ರಪೋಸ್ ಮಾಡಿದ್ದು, ಎಲ್ಲಾನು ನೆನೆಯುವಾಗ ಎಷ್ಟೊಂದು ಖುಷಿಯಾಗುತ್ತೆ. ಅಲ್ವಾ ಪುಟ್ಟಾ. ಒಬ್ಬರನ್ನೊಬ್ಬರು ನೋಡದೆಯೇ ಪ್ರೀತಿಸಿದೋರು ನಾವು. ನಂತರ ಫೇಸ್ ಬುಕ್‌ನಲ್ಲಿ ಫೋಟೋ ನೋಡಿದ್ದೇವೆ ಹೊರತು ಯಾವತ್ತು ನಾವು ಪರಸ್ಪರ ಭೇಟಿಯಾಗಿಲ್ಲ ಅಲ್ವಾ. ಆ ದಿನ ಆದಷ್ಟು ಬೇಗ ಬರಲಿ ಅಂತ ದೇವರಲ್ಲಿ ಪ್ರಾರ್ಥಿಸು ಚಿನ್ನ.
ನಮ್ಮಿಬ್ಬರ ಪ್ರೀತಿ ದಡ ಸೇರುತ್ತೋ ಇಲ್ವೋ ಅಂತ ನನಗಂತೂ ಗೊತ್ತಿಲ್ಲ ಗೆಳತಿ. ನಮ್ಮಿಬ್ಬರ ಮನೆ ಯವರು ಖಂಡಿತಾ ನಮ್ಮನ್ನು ಒಂದು ಮಾಡಲ್ಲ ಅಂತಾನೂ ಗೊತ್ತಲ್ವಾ. ಆದ್ರೂ ಹುಚ್ಚರಂತೆ ಪ್ರೀತಿಸಿದೋರು ನಾವು. ನಿಜವಾದ ಪ್ರೀತಿಗೆ ಯಾವತ್ತೂ ಸಾವಿಲ್ಲ ಕಣೇ. ನೀನು ನನ್ನವಳು. ಯಾವತ್ತಿದ್ದರೂ ನಂಗೇ ಸೇರಬೇಕಾದವಳು. ಸ್ವರ್ಗ ಸಂಪತ್ತನ್ನೇ ಕೊಡುವೆ ಎಂದು ಹೇಳಲ್ಲ ಕಣೇ. ನಿನ್ನ ದುಃಖದ ಕಣ್ಣೀರು ಹರಿದಾಗ ಅದನ್ನು ಒರೆ ಸುವವನು ಯಾವತ್ತೂ ನಾನಾಗಿರುವೆ. ನಿನ್ನ ನಗುವಲ್ಲಿ ನನ್ನ ಸಂತೋಷ ಕಾಣುವೆ. ನೀನೇ ನನ್ನವಳೆಂದು ಪ್ರತೀ ಕ್ಷಣಾನೂ ಕನವರಿಸುತ್ತಿರುವೆ.
ಬಾನಿಂದ ಬೇರ್ಪ ಡಿಸಲಾಗದ ಚಂದ್ರನಂತೆ ನಮ್ಮಿಬ್ಬರ ಪ್ರೀತಿ ಯಾವತ್ತಿಗೂ ಇರಲಿ. ಮುದೊಂದು ಜನ್ಮ ಅಂತಿದ್ದರೆ ನಿನ್ನ ಮುದ್ದಿನ ಇನಿಯನಾಗಿ ನಿನ್ನ ಜತೆನೇ ಇರುವೆ. ಈ ಜೀವದ ಹೂವು ಯಾವತ್ತಿಗೂ ನಿನಗಾಗೇ ಅರಳುತ್ತೆ ಕಣೇ... ಎಂದೆಂ ದಿಗೂ ನಾನು ನಿನ್ನವನೇ ಎನ್ನುವ.
ಇತೀ ನಿನ್ನ ಕನಸಿನ ಹುಡುಗ
ಚಂದ್ರ

ಮುಂಡ್ಕೂರು ಜಯರಾಮ ಶೆಟ್ರ ರಾಕೆಟ್

Posted by JAYAKIRANA Kirana on | 0 comments | Leave a comment...

ದಿವಂಗತ ಮುದ್ದು ಚೌಟರ ಬೊಳ್ಳ
ಈ ಕೊಣವು ಬಹಳ ಚುರುಕಾದುದು. ಕೊಂಬರಬೈಲು ಕೋಣದೊಂದಿಗೆ ಸರಿಸಮವಾಗಿ ಓಡಬೇಕಾದರೆ ಈ ಕೋಣವು ಇನ್ನಷ್ಟು ಪಳಗಬೇಕು. ನಿರಾಯಾಸದಿಂದ ಜೊತೆ ಹಿಡಿದು ಓಡಬೇಕು. ಈಗ ಜಾಕಿಯು ಬೆನ್ನ ಹಿಂದೆ ಇದ್ದರೆ ಓಟ ಬಿರುಸಾಗುತ್ತದೆ. ೧೯೮೩ರ ಮೆಡಲಿಗಾಗಿ ಉತ್ತಮ ತರಬೇತಿ ಇದಕ್ಕೆ ನೀಡಲಾಗಿತ್ತು.
ಪೊಲ ವಿಠಲ ಶೆಟ್ರು ೧೯೮೨ರಲ್ಲಿ ಕಂಬಳಾಭಿಮಾನಿಗಳ ಆಸಕ್ತಿ ಕೆರಳಿಸಿದ್ದಾರೆ. ಜನರನ್ನು ಕಂಬಳದೆಡೆಗೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದರು.
ಸಾಣೂರು ನಂದ್ರೊಟ್ಟುಗುತ್ತು ಸದಾನಂದ ಕಾಮತ್
ಕಾರ್ಕಳ ದ್ವಾರಕಾ ಹೊಟೇಲಿನ ಮಾಲಕರೂ, ಕಾರ್ಕಳ ಪುರಸಭಾಪತಿಗಳು ಆಗಿದ್ದ ಇವರ ಗಣ್ಯ ವ್ಯಕ್ತಿಗಳು ಬಡಜನರ ಬಂಧುವೆನಿಸಿದ ಇವರು ತನ್ನ ಜೀವನದಲ್ಲಿ ಮಹತ್ಸಾಧನೆ ಗಳನ್ನುಗೈದವರಾಗಿದ್ದರು. ೧೯೮೨ರಲ್ಲಿ ಸದಾನಂದ ಕಾಮತರ ಕೋಣಗಳು ಜ್ಯೂನಿಯರ್ ವಿಭಾಗದಿಂದ ಸೀನಿಯರ್ ವಿಭಾಗಕ್ಕೆ ಬಂದವು. ಜ್ಯೂನಿಯರ್ ಓಟದಲ್ಲಿ ಈ ಕೋಣ ಚೆನ್ನಾಗಿದೆ. ಅನುಭವಿಯದ ಜಾಕಿಯಿಂದ ಪಳಗಿಸಿದರೆ ಗೆಲುವು ಸಾಧಿಸಬಹುದಾಗಿದೆ. ಕಂಬಳ ಕ್ರೀಡೆಗೆ ಇರುವಂತಹ ಉತ್ಸಾಹೀ ಸಾಹಸಿಗರ ಸಹಕಾರ ಅಗತ್ಯ. ವರ್ಷಂಪ್ರತಿ ಬಜಗೋಳಿ ಕಂಬಳ ಕ್ರೀಡಾಂಗಣಕ್ಕೆ ಬಂದು ತನ್ನೂರಿನ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.
ಮುಂಡ್ಕೂರು ಜಯರಾಮ ಶೆಟ್ರು
ಕಂಬಳ ಕ್ರೀಡೆಯ ಅಭಿಮಾನಿ, ಕಂಬಳಾಭಿ ಮಾನಿ ಗಳಿಗೆ ಸಜ್ಜನ ಮಿತ್ರ, ಕ್ರೀಡಾಂಗಣದಲ್ಲಿ ಜೊಡುಕರೆ ನಿರ್ಮಾಣವಾದಂದಿನಿಂದ ಜಿಲ್ಲೆಯಲ್ಲಿ ಪರಿಚಿತವಾದ ಹೆಸರು ಮುಂಡ್ಕೂರು ಜಯರಾಮ ಶೆಟ್ರು. ಇವರಲ್ಲಿ ‘ರಾಕೆಟ್’ ಎಂಬ ಹೆಸರಿ ಕೋಣವೊಂದಿತ್ತು. ಹೆಸರಿಗೆ ತಕ್ಕಂತೆ ಓಡಿ ಜಯರಾಮ ಶೆಟ್ರಿಗೆ ಬಹುಮಾನಗಳ ಜೊತೆಗೆ ಕೀರ್ತಿಯನ್ನೂ ತಂದಿತ್ತು.
ಅಗ್ಗಿದ ಕಳಿಯ ನಾರಾಯಣ ದೇವಾಡಿಗರ ಕೋಣಗಳು ಹೆಸರು ಪಡೆದ ಕಾಲವದು. ಜಯರಾಮ ಶೆಟ್ರ ರಾಕೆಟ್ ಕೋಣಕ್ಕೆ ತಕ್ಕುದಾದ ಜೊತೆಯಿರಲಿಲ್ಲ. ರಾಕೆಟ್ ಕೋಣಕ್ಕೆ ಸರಿಯಾದ ಜೊತೆ ಕೊಯ್ಯೂರು ರವಿರಾಜ ಬಳ್ಳಾಲರಲ್ಲಿತ್ತು. ಈ ಕೊಕ್ಕೆ ಎಂಬ ಕೋಣವನ್ನು ಶೆಟ್ಟರು ತಂದು ರಾಕೆಟ್‌ಗೆ ಜೊತೆ ಹೊಂದಿಸಿದರು. ಈ ಜೋಡಿಗಳು ಪ್ರಥಮ ಸ್ಪರ್ಧೆಯಲ್ಲೇ ನಾರಾಯಣ ದೇವಾಡಿಗರ ಕೋಣಗಳನ್ನು ಹಿಮ್ಮೆಟ್ಟಿಸಿ ಗೆಲುವನ್ನು ಸಂಪಾದಿಸಿದವು.
ಜಯರಾಜ ಶೆಟ್ರ ಕಂಬಳದ ಯಶಸ್ಸಿಗೆ ಕಾರಣವಾದ ಈ ರಾಕೆಟ್ ತನ್ನ ಮುದಿ ವಯಸ್ಸಿನಲ್ಲೂ ಏಕರೀತಿಯ ಓಟವನ್ನು ಪ್ರದರ್ಶಿಸುತ್ತಿತ್ತು. ಶೆಟ್ಟರಿಗೆ ಹೋದೆಡೆಗಳಲ್ಲಿ ಯಶಸ್ಸು ಲಭಿಸುವಂತೆ ಪ್ರಯತ್ನಿಸುತ್ತಿತ್ತು.
ರಾಕೆಟ್ ಕೋಣದ ಬಳಿಕ ಸರಿಯಾದ ಜೊತೆ ಇವರಿಗೆ ಲಭಿಸಲಿಲ್ಲ. ಬೊಳಂತೂರು ವೀರಪ್ಪ ಶೆಟ್ರ ಮಗ ಬಾಬು ಶೆಟ್ರಲ್ಲಿದ್ದ ನೇಗಿಲಿನ ಓಟದ ಪ್ರಸಿದ್ಧ ಕೋಣಗಳನ್ನು ಜಯರಾಮ ಶೆಟ್ರು ಪಡಕೊಂಡು, ತರಬೇತಿ ನೀಡಿ ೧೯೮೨ ರಲ್ಲಿ ಬೊಳಂತೂರು ಒಂದನೇ ಕಂಬಳಕ್ಕೆ ತಂದರು.
ನೋಡಲು ಬಹಳ ಚೆನ್ನಾದ ಈ ಜೋಡಿಗಳು ಓಟದ ಲಕ್ಷಣದಿಂದ ಕೂಡಿತ್ತು. ನೀಲಪ್ಪ ಗೋಪಾಲ ಎಂಬ ಹೆಸರಿನ ಈ ಜೋಡಿ ನೋಡುವವರಿಗೆ ಪಾಕಬೆಟ್ಟು - ಕಾಡಬೆಟ್ಟು ಕೋಣಗಳಿಗೆ ಸರಿಯಾದ ಸ್ಪರ್ಧಾಕೋಣಗಳೆಂಬ ನಂಬಿಕೆ ಮೂಡಿಸಿದವು.

ಏನಿದು ಹಗಲು ಉರೂಸ್, ಶಿಲಾನ್ಯಾಸ!

Posted by JAYAKIRANA Kirana on | 0 comments | Leave a comment...


ಒಬ್ಬರು ಮಾಡಿದರು ಎಂದು ಇನ್ನೊಬ್ಬರೂ ಅದಕ್ಕಿಂತ ಒಂದು ಪಟ್ಟು ಹೆಚ್ಚಾಗಿ ಮಾಡುವುದು ಮನುಷ್ಯನ ಸಹಜ ಗುಣ. ಆದರೆ ಇದು ಸರಿಯಾದ ಕ್ರಮ ಅಲ್ಲ. ಒಂದು ಧರ್ಮದವರು ಮಾಡಿದರು ಎಂದು ಇನ್ನೊಂದು ಧರ್ಮದವರು ಅದಕ್ಕಿಂತ ಒಂದು ಪಟ್ಟು ಹೆಚ್ಚು ಮಾಡುವುದು ಕೆಲವು ಕಡೆ ಅಶಾಂತಿಗೆ ಕಾರಣವಾಗುತ್ತದೆ. ಯಾವುದೇ ಧರ್ಮದವರು ಆಗಲಿ ಅನಗತ್ಯವಾಗಿ ಈ ರೀತಿಯಾಗಿ ದುಡ್ಡು ಪೋಲು ಮಾಡಬಾರದು ಎಂಬುದು ನನ್ನ ಈ ಬರಹದ ಉದ್ದೇಶವಾಗಿದೆ.

ಭಾರತೀಯ, ಮಂಗಳೂರು
ಇತ್ತೀಚೆಗೆ ರಸ್ತೆ ಬದಿಗಳಲ್ಲಿ ಮುಸ್ಲಿಂ ಬಾಂಧವರಿಂದ ಹಾಕಲ್ಪಟ್ಟಿರುವ ಬ್ಯಾನರ್‌ಗಳನ್ನು ಗಮನಿಸಿದಾಗ ಅತ್ಯಾಶ್ಚರ್ಯವಾಗುತ್ತಿದೆ. ಹಿಂದೂ ಬಾಂಧವರು ನಾಗಮಂಡಲ, ಜಾತ್ರೆ, ಕೋಲಗಳಿಗೆ ರಸ್ತೆ ಬದಿಗಳಲ್ಲಿ ಬೃಹದಾಕಾರದ ಬ್ಯಾನರ್ ಗಳನ್ನು ಹಾಕಿ ದುಡ್ಡು ವ್ಯರ್ಥ ಮಾಡುತ್ತಿರುವ ಅಂಟುರೋಗ ಮುಸ್ಲಿಮರಿಗೂ ಅಂಟಿ ಬಿಟ್ಟಿತೇ ಎಂಬ ಸಂಶಯವಾಗುತ್ತಿದೆ. ಈ ರೀತಿ ಆದರೆ ಇಸ್ಲಾಂ ಎಂಬುದು ಸರಳವಾದ ಧರ್ಮ ಎಂದು ಹೇಳುವುದರಲ್ಲಿ ಯಾವುದೇ ಅರ್ಥ ಕಂಡು ಬರುವುದಿಲ್ಲ.
ಹಿಂದುಗಳ ದೇವಸ್ಥಾನಗಳಲ್ಲಿ ಜಾತ್ರೆಗಳು ನಡೆದಾಗ ಹಗಲು ರಥೋತ್ಸವ ನಡೆಯುವುದು ಒಂದು ಪದ್ಧತಿಯಾಗಿದೆ. ಹೆಚ್ಚಿನ ದೇವಸ್ಥಾನಗಳಲ್ಲಿ ಈ ರೀತಿಯ ಕ್ರಮ ಇದೆ. ಈಗ ಇದನ್ನೇ ಮುಸ್ಲಿಂ ಬಾಂಧವರು ತಮ್ಮ ಕಾರ್ಯಕ್ರಮಗಳಲ್ಲಿ ಭಟ್ಟಿ ಇಳಿಸುತ್ತಿದ್ದಾರೋ ಎಂದು ಅನಿಸುತ್ತಿದೆ. ಇತ್ತೀಚೆಗೆ ಮಂಗಳೂರಿನ ಒಂದು ಕಡೆ ‘ಹಗಲು ಉರೂಸ್’ ಎಂಬ ಬ್ಯಾನರ್ ಕಂಡು ಬಂದಿತ್ತು.
ಅದೇ ರೀತಿ ಇಸ್ಲಾಂ ಧರ್ಮದ ಮಸೀದಿ, ಮದರಸಗಳನ್ನು ಕಟ್ಟುವ ಸಂದರ್ಭದಲ್ಲಿ ಆ ಬಗ್ಗೆ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕಲಾಗುತ್ತದೆ. ಇವುಗಳಲ್ಲಿ ಶಿಲಾನ್ಯಾಸ ಎಂಬ ಪದವನ್ನು ಬಳಕೆ ಮಾಡುವುದು ಕಂಡು ಬರುತ್ತದೆ. ಈ ಬಗ್ಗೆ ನನ್ನ ಗೆಳೆಯರಲ್ಲಿ ಚರ್ಚಿಸಿದಾಗ ಶಿಲಾನ್ಯಾಸ ಎಂಬ ಪದವನ್ನು ಬಳಕೆ ಮಾಡಬಾರದು ಎಂದು ಅದಕ್ಕೆ ಯಾರೂ ಕೂಡಾ ಪೇಟೆಂಟ್ ಪಡೆದಿಲ್ಲ ಎಂದು ಕೆಲವರು ಹೇಳಿರುತ್ತಾರೆ. ಆದರೆ ಶಿಲಾನ್ಯಾಸ ಮಾಡುವುದು ಹಿಂದುಗಳ ಪದ್ಧತಿಯಾಗಿದೆ. ನಾನು ಹಿಂದೂಗಳ ಶಿಲಾನ್ಯಾಸ ಕ್ರಮವನ್ನು ನೋಡಿದಂತೆ. ಭೂಮಿಯನ್ನು ಸ್ವಚ್ಛಮಾಡಿ ಎರಡು ಮೂರು ಫೀಟು ಉದ್ದಗಲ, ಆಳಕ್ಕೆ ಅಗೆದು ಅದರಲ್ಲಿ ಬಂಗಾರ, ನಾಣ್ಯ ಇತ್ಯಾದಿ ಕೆಲವು ವಸ್ತುಗಳನ್ನು ಹಾಕಿ ಅದರ ಮೇಲೆ ಪುರೋಹಿತರು ಪೂಜೆ ಮಾಡಿ ಶಿಲೆ ಅಂದರೆ ಕಲ್ಲನ್ನು ಸಂಬಂಧಪಟ್ಟ ಗಣ್ಯರಿಂದ ಇಡಿಸುತ್ತಾರೆ. ನಿಜವಾಗಿ ನೋಡಿದರೆ ಇದಕ್ಕೆ ಶಿಲಾನ್ಯಾಸ ಎಂಬ ಹೆಸರು.
ಆದರೆ ಮುಸ್ಲಿಮರಲ್ಲಿ ಮುಸ್ಲಿಂ ವಿಧಿ ವಿಧಾನದಂತೆ ಶಿಲಾನ್ಯಾಸ ಮಾಡಿದರೂ ಅದು ಹಿಂದೂಗಳ ಕ್ರಮದ ಅಚ್ಚ ಕಾಪಿಯಾಗಿರುತ್ತದೆ. ಇದು ಒಂದು ರೀತಿಯಲ್ಲಿ ಕೊಡುಕೊಳ್ಳುವ ಪದ್ಧತಿ ಎಂದು ಕೆಲವರು ಹೇಳುತ್ತಾರೆ. ಆದರೆ ಇಸ್ಲಾಂ ಧರ್ಮದಲ್ಲಿ ಈ ರೀತಿಯ ಯಾವುದೇ ಪದ್ಧತಿ ಇಲ್ಲ ಎಂದು ನನ್ನ ಭಾವನೆ. ಕಟ್ಟಡ ಕಟ್ಟುವುದಕ್ಕೆ ಮೊದಲು ಮುಸ್ಲಿಮರು ಯಾವ ಕ್ರಮವನ್ನು ಅನು ಸರಿಸ ಬೇಕೆಂದು ಧರ್ಮಗುರುಗಳು ಹೇಳಿಕೊಡಬೇಕು.
ನಾನು ಈ ವಿಚಾರವನ್ನು ಚಾವಡಿಯಲ್ಲಿ ಯಾಕೆ ಬರೆಯುತ್ತಿದ್ದೇನೆ ಎಂದರೆ ಇತ್ತೀಚೆಗೆ ಈ ವಿಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ರಸ್ತೆಯನ್ನು ಶೃಂಗಾರ ಮಾಡುವುದು, ದೊಡ್ಡ ದೊಡ್ಡ ಪ್ಲೆಕ್ಸ್ ಬ್ಯಾನರ್‌ಗಳನ್ನು ಹಾಕುವುದು, ಪತಾಕೆ ಕಟ್ಟುವುದು, ಹತ್ತಾರು ಜನರೇಟರುಗಳನ್ನು ಚಾಲು ಮಾಡಿ ದೀಪಗಳಿಂದ ಅಲಂಕಾರ ಮಾಡುವುದು ನಡೆಯುತ್ತಿರುವುದು ಕಂಡು ಬರುತ್ತದೆ. ಜನರು ಈ ರೀತಿಯಾಗಿ ಹಣವನ್ನು ಪೋಲು ಮಾಡದೆ, ಬಡವರಿಗೆ ಉಪಯೋಗವಾಗುವಂತೆ ದಾನ ಮಾಡುವಂತಾಗಬೇಕು ಎಂಬುದರ ಬಗ್ಗೆ ನನ್ನ ಸಹಮತ ಇದೆ.
ಹಿಂದುಗಳು ಜಾತ್ರೆ, ಕೋಲ ಇತ್ಯಾದಿಗಳನ್ನು ವಿಜೃಂಭಣೆಯಿಂದ ಮಾಡುತ್ತಾರೆ ತಮ್ಮ ದೇವಸ್ಥಾನಗಳನ್ನು ತುಂಬ ಸೊಗಸಾಗಿ ಶೃಂಗಾರ ಮಾಡುತ್ತಾರೆ. ಅವರಿಗೆ ಅದು ಸಮಾಧಾನವನ್ನು ತಂದುಕೊಟ್ಟರೂ ಲಕ್ಷಾಂತರ ರೂಪಾಯಿ ವ್ಯರ್ಥವಾಗಿರುವ ಸತ್ಯವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ ಇದು ಇತ್ತೀಚಿನ ದಿನಗಳಲ್ಲಿ ಮುಸ್ಲಿಮರಲ್ಲೂ ಕಂಡು ಬರುತ್ತಿರುವುದು ಬಹಳ ದುಃಖದ ವಿಚಾರವಾಗಿದೆ.
ಒಬ್ಬರು ಮಾಡಿದರು ಎಂದು ಇನ್ನೊಬ್ಬರೂ ಅದಕ್ಕಿಂತ ಒಂದು ಪಟ್ಟು ಹೆಚ್ಚಾಗಿ ಮಾಡುವುದು ಮನುಷ್ಯನ ಸಹಜ ಗುಣ. ಆದರೆ ಇದು ಸರಿಯಾದ ಕ್ರಮ ಅಲ್ಲ. ಒಂದು ಧರ್ಮದವರು ಮಾಡಿದರು ಎಂದು ಇನ್ನೊಂದು ಧರ್ಮದವರು ಅದಕ್ಕಿಂತ ಒಂದು ಪಟ್ಟು ಹೆಚ್ಚು ಮಾಡುವುದು ಕೆಲವು ಕಡೆ ಅಶಾಂತಿಗೆ ಕಾರಣ ವಾಗುತ್ತದೆ. ಯಾವುದೇ ಧರ್ಮದವರು ಆಗಲಿ ಅನಗತ್ಯವಾಗಿ ಈ ರೀತಿಯಾಗಿ ದುಡ್ಡು ಪೋಲು ಮಾಡಬಾರದು ಎಂಬುದು ನನ್ನ ಈ ಬರಹದ ಉದ್ದೇಶವಾಗಿದೆ. ಅದೇ ರೀತಿ, ಹಗಲು ಉರೂಸ್, ಶಿಲಾನ್ಯಾಸ, ಹರಕೆ ಇತ್ಯಾದಿ ಇತ್ಯಾದಿಗಳನ್ನು ಇಸ್ಲಾಂ ಧರ್ಮವು ಮಾನ್ಯ ಮಾಡಿದೆಯೇ ಎಂಬುದರ ಬಗ್ಗೆಯೂ ಧಾರ್ಮಿಕ ನಾಯಕರು ತಿಳುವಳಿಕೆ ನೀಡಲಿ.

ಇಷ್ಟವಿಲ್ಲದಿದ್ದರೆ ಪ್ರೀತಿಯ ನಾಟಕ ಆಡುವುದು ಸರಿಯಲ್ಲ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೩೦ ವರ್ಷ ವಯಸ್ಸು, ಮದುವೆಯಾಗಿಲ್ಲ. ನಾನು ನೋಡಲು ಚೆನ್ನಾಗಿದ್ದೇನೆ, ಒಳ್ಳೆಯ ಕೆಲಸವೂ ಇದೆ. ಕಾಲೇಜಿಗೆ ಹೋಗುತ್ತಿದ್ದಾಗಲೂ ನನಗೆ ಅನೇಕ ಮಂದಿ ಹುಡುಗಿ ಯರು ಗೆಳತಿಯರಾಗಿದ್ದರು. ಆದರೆ ಯಾರನ್ನೂ ಪ್ರೀತಿಸಿಲ್ಲ. ಅವರೂ ನನ್ನನ್ನು ಪ್ರೀತಿಸುವಂತೆ ಹೇಳಿರಲಿಲ್ಲ. ಆದರೆ ಇತ್ತೀಚೆಗೆ ಕಳೆದ ನಾಲ್ಕು ತಿಂಗಳಿನಿಂದ ನನ್ನನ್ನು ಒಬ್ಬಳು ಪ್ರೀತಿಸಲು ಒತ್ತಾಯಿ ಸುತ್ತಿದ್ದಾಳೆ. ಅವಳ ಜಾತಿ ಬೇರೆ. ನನ್ನ ನೆರೆಮನೆಯಲ್ಲಿ ಆಕೆಯ ಸಂಬಂಧಿಗಳ ಮನೆ ಇರುವುದರಿಂದ ಆಗಾಗ ಅಲ್ಲಿಗೆ ಬರುತ್ತಿದ್ದವಳು ನನ್ನ ಪರಿಚಯವಾಗಿ ಗೆಳೆತನ ಬೆಳೆಸಿದಳು. ಮಾತಾ ಡುತ್ತಾ ಕ್ಲೋಸ್ ಫ್ರೆಂಡ್ ಆಗಿದ್ದು, ಈಗ ನನ್ನನ್ನು ಮದುವೆ ಯಾಗು ಎನ್ನುತ್ತಿದ್ದಾಳೆ. ಆಕೆ ನನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳು ತ್ತಿದ್ದು ನನಗೆ ಕೆಲವೊಮ್ಮೆ ಆಕೆಯ ವರ್ತನೆಯೂ ಹಿಡಿಸುವುದಿಲ್ಲ. ಆಕೆ ತುಂಬಾ ಚೆಲ್ಲು ಚೆಲ್ಲಾಗಿ ವರ್ತಿಸುತ್ತಾಳೆ ಮತ್ತು ಒಮ್ಮೆ ನಕ್ಕರೆ ಸಾಕು ಎಂತಹ ಹುಡುಗರ ಜತೆಯೂ ಸ್ನೇಹ ಬೆಳೆಸುತ್ತಾಳೆ. ಆಕೆಯನ್ನು ನಾನು ಲವ್ ಮಾಡಿ ಮದುವೆ ಯಾದರೆ ನನಗೆ ಸಮಸ್ಯೆಯಾಗುತ್ತದೆ ಎಂದು ಭಯ ಕಾಡುತ್ತದೆ. ಇನ್ನೊಂದು ಸಂಗತಿ ಎಂದರೆ ನನಗೆ ನನ್ನ ತಾಯಿ, ನನ್ನ ಅಕ್ಕ ಅಂದರೆ ಪ್ರಾಣ. ಅವರ ಮನಸ್ಸಿಗೆ ನೋವುಂಟು ಮಾಡಿ ನಾನು ಯಾವುದೇ ಕೆಲಸವನ್ನು ಮಾಡುವುದಿಲ್ಲ. ಆದರೆ ನಾನು ಈ ಹುಡುಗಿಯ ಸ್ನೇಹ ಬೆಳೆಸಿದರೆ ಎಲ್ಲಿ ಅವರನ್ನು ಕಳೆದು ಕೊಳ್ಳು ತ್ತೇನೋ ಎಂದು ಭಯವಾಗುತ್ತದೆ.
ನಾನು ಇಷ್ಟರತನಕ ಯಾರನ್ನೂ ಪ್ರೀತಿಸಿಲ್ಲ. ನನಗೆ ಆಕೆಯ ವರ್ತನೆಯಿಂದ ಏನು ಮಾಡುವುದೆಂದೇ ತಿಳಿಯಲಿಲ್ಲ. ನನ್ನ ಮನಸ್ಸು ನಿಧಾನಕ್ಕೆ ಆಕೆಯ ಕಡೆ ವಾಲುತ್ತದೆ. ಅವಳು ನನ್ನನ್ನು ಒತ್ತಾಯ ಮಾಡಿದ್ದಕ್ಕೆ ನಾನು ಆಕೆಯನ್ನು ಪ್ರೀತಿ ಮಾಡುವುದಾಗಿ ಹೇಳಿದ್ದೇನೆ. ನಾನು ಈಗ ಆಕೆಯನ್ನು ಸ್ವೀಕರಿಸುವುದೋ, ಬಿಡುವುದೋ ಎಂಬ ದ್ವಂದ್ವದಲ್ಲಿ ಬಿದ್ದಿದ್ದೇನೆ. ಆಕೆಯ ಮನಸ್ಸು ತುಂಬಾ ಒಳ್ಳೆಯದು. ಆಕೆಯನ್ನು ನಾನು ಬದಲಾಯಿಸಲು ಸಾಧ್ಯವಿಲ್ಲವೇ? ನನಗೆ ಸರಿಯಾದ ಸಲಹೆ ನೀಡಿ.
ಸಲಹೆ: ನಿಮ್ಮ ಗೊಂದಲ ವಿಚಿತ್ರವಾಗಿದೆ. ಇಷ್ಟವಿಲ್ಲದವರು ಆಕೆಗೆ ಪ್ರೀತಿ ಮಾಡುತ್ತೇನೆ ಎಂದು ಹೇಳಿದ್ದೇಕೆ? ಆಕೆಗೆ ನಿಮ್ಮ ಸ್ವಭಾವ ಇಷ್ಟವಾ ಗಿರಬಹುದು. ಇದೇ ಕಾರಣಕ್ಕೆ ನಿಮ್ಮನ್ನು ಪ್ರೀತಿಸಲು ಮುಂದಾಗಿರುವ ಸಾಧ್ಯತೆಯಿದೆ. ನೀವು ಹುಡುಗಿಯರ ಜತೆ ಫ್ಲರ್ಟ್ ಮಾತ್ರ ಮಾಡುತ್ತಿದ್ದಿರೇ ಹೊರತು ಯಾರನ್ನೂ ಪ್ರೀತಿಸಲು ಸಿದ್ಧರಿಲ್ಲ. ಇದಕ್ಕೆ ನೀವು ಕೊಡುವ ಕಾರಣ ನನ್ನ ಜಾತಿ ಬೇರೆ ಮತ್ತು ನನಗೆ ಅಕ್ಕ, ತಾಯಿ ಎಂದರೆ ತುಂಬಾ ಇಷ್ಟ. ಇದನ್ನು ನಂಬಲು ಸಾಧ್ಯವೇ? ಯಾಕೆಂದರೆ ಎಲ್ಲರಿಗೂ ತಾಯಿ, ಅಕ್ಕ ಅಥವಾ ಮನೆಮಂದಿಯ ಮೇಲೆ ಮಮತೆ, ಪ್ರೀತಿ ಇದ್ದೇ ಇರುತ್ತದೆ. ಇದನ್ನು ನೀವು ಕಾರಣ ಕೊಡಲಾಗದು. ಆಕೆಯ ಜತೆ ಗೆಳೆತನ ಬೆಳೆಸಲು ಮನಸ್ಸಿದೆ, ಆದರೆ ಆಕೆಯ ಪ್ರೀತಿ, ಮದುವೆ ಇದೆಲ್ಲಾ ಬೇಡ. ನೀವು ಬೇರೆ ಯವರ ಜತೆ ಮಾತಾಡುವುದಿಲ್ಲವೇ? ಹಾಗೇ ಆಕೆಯೂ ಗಂಡು-ಹೆಣ್ಣು ಎಂಬ ಬೇಧವಿಲ್ಲದೆ ಮಾತಾಡುತ್ತಾಳೆ. ಇದರಲ್ಲಿ ತಪ್ಪೇನಿದೆ? ನೀವು ಒಂದೋ ಆಕೆಯನ್ನು ಪ್ರೀತಿಸಿ, ಇಲ್ಲವೇ ಬೇರೆ ಯಾರನ್ನಾದರೂ ಮದುವೆಯಾಗಿ. ನಿಮ್ಮ ಈ ಗುಣಗಳಿಂದ ಬೇರೆಯವರು ತಪ್ಪು ಅರ್ಥ ಕಲ್ಪಿಸುವುದು ತಪ್ಪುತ್ತದೆ. ಇನ್ನು ಪ್ರೀತಿಸಿ ಮದುವೆಯಾಗಲು ಜಾತಿಯ ಸಮಸ್ಯೆಯೇನೂ ದೊಡ್ಡದಲ್ಲ.
ತಾಯಿಯು ಯಾವತ್ತೂ ಒಳ್ಳೆಯದನ್ನೇ ಹಾರೈಸುತ್ತಾರೆ. ನಿಮಗೆ ಆಕೆ ಬೇಕೇ, ಬೇಡವೇ ಎಂದು ನಿರ್ಧರಿಸಿ. ಬೇಡವಾದರೆ ಆಕೆಯನ್ನು ಈಗಲೇ ತಿರಸ್ಕರಿಸಿ. ಆಕೆ ಇಷ್ಟವಾದರೆ ಮನೆಯಲ್ಲಿ ತಿಳಿಸಿ ಆಕೆಯನ್ನು ವಿವಾಹವಾಗುವುದೇ ಒಳ್ಳೆಯದು. ಮಗ ಬೇರೆ ಹುಡುಗಿಯನ್ನು ಮದುವೆ ಯಾದ ಮಾತ್ರಕ್ಕೆ ತಾಯಿಯ ಕಣ್ಣಲ್ಲಿ ಕೆಟ್ಟ ವನಾಗುವುದಿಲ್ಲ, ಆದರೆ ಆಕೆ ಯನ್ನು ವಿಶ್ವಾಸಕ್ಕೆ ತಂದುಕೊಳ್ಳಿ. ಯಾವಾಗಲೂ ನಾವು ಇಷ್ಟಪಟ್ಟವರನ್ನು ವಿವಾಹವಾಗುವುದಕ್ಕಿಂತ ನಮ್ಮನ್ನು ಮನಸಾರೆ ಇಷ್ಟಪಟ್ಟು, ಪ್ರೀತಿಸು ತ್ತಿರುವವರನ್ನು ವಿವಾಹವಾಗುವುದೇ ಒಳ್ಳೆಯದು.

ಮದುವೆ ಮುರಿದ ಮದುಮಗಳು!

Posted by JAYAKIRANA Kirana on | 0 comments | Leave a comment...


ಒಲ್ಲದ ಮದುವೆಗೆ ಅಧಿಕಾರಿಗಳ ತಡೆ
ಮಂಗಳೂರು: ಬಾಲ್ಯ ವಿವಾಹ ನಡೆಯುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಉಳ್ಳಾಲದ ವೀರಭದ್ರ ದೇವಸ್ಥಾನದ ಸಭಾಂ ಗಣವೊಂದರಲ್ಲಿ ನಡೆಯುತ್ತಿದ್ದ ಮದುವೆಗೆ ದಾಳಿ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಉಳ್ಳಾಲ ಪೊಲೀಸರು ಮದುವೆಯನ್ನು ನಿಲ್ಲಿಸಿ ಬಾಲಕಿಯನ್ನು ಕಂಕನಾಡಿಯ ಬಾಲಿಕಾಶ್ರಮಕ್ಕೆ ಒಪ್ಪಿಸಿರುವ ಘಟನೆ ನಿನ್ನೆ ನಡೆದಿದೆ.
ಮಾಸ್ತಿಕಟ್ಟೆ ನಿವಾಸಿ ೧೭ ವರ್ಷದ ಬಾಲಕಿಗೆ ಕ್ಯಾಲಿಕಟ್ ಮೂಲದ ಯುವ ಕನೊಂದಿಗೆ ವಿವಾಹ ನಿಶ್ಚಯ ಆರು ತಿಂಗಳ ಹಿಂದೆ ನಡೆದಿತ್ತು. ನಿನ್ನೆ ಉಳ್ಳಾ ಲದಲ್ಲಿ ವಿವಾಹ ಸಮಾರಂಭ ಏರ್ಪ ಡಿಸಲಾಗಿತ್ತು. ಆದರೆ ಮೂಲ ವೊಂದರ ಪ್ರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ಅವರು ನಿನ್ನೆ ಮುಂಜಾನೆಯೇ ಸಭಾಂಗಣಕ್ಕೆ ಬಂದು ಕಾದು ಕುಳಿತಿದ್ದರು. ೧೦ ಗಂಟೆ ಸುಮಾರಿಗೆ ಮದುಮಗಳು ಸಭಾಂ ಗಣಕ್ಕೆ ಆಗಮಿಸುತ್ತಿದ್ದಂತೆ ಅಧಿಕಾರಿ ಗಳು ಮದುಮಗಳನ್ನು ವಿಚಾರಣೆಗೆ ತೆಗೆದುಕೊಂಡರು. ಹೆತ್ತವರಲ್ಲಿ ಆಕೆಯ ಜನ್ಮಪತ್ರವನ್ನು ಪಡೆದು ವಿಚಾರಣೆ ನಡೆಸಿ ಅವರಿಂದ ಹಾಗೂ ಮದುಮಗನ ಕಡೆಯವರಿಂದ ಮುಚ್ಚಳಿಕೆ ಪಡೆದು ಕೊಂಡರು. ಈ ಸಂದರ್ಭ ಮದು ಮಗನ ಕಡೆಯವರಿಂದ ಸಭಾಂಗಣದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾ ಯಿತು. ಉಳ್ಳಾಲ ಪೊಲೀಸರು ಪರಿಸ್ಥಿತಿ ಯನ್ನು ಹತೋಟಿಗೆ ತಂದರು.
ಸಂಭ್ರಮದಿಂದಿದ್ದ ಸಭಾಂಗಣ ಸ್ಮಶಾನ ಮೌನವಾಗಿತ್ತು. ಕ್ಯಾಲಿಕಟ್ ನಿಂದ ಹಿಂದಿನ ದಿನವೇ ರೈಲಿನಿಂದ ಬಂದಿಳಿದ ನೂರಾರು ಜನ ಮದು ಮಗನ ಕುಟುಂಬದವರು ಮದುವೆಯ ಸಂಭ್ರಮದಲ್ಲಿದ್ದರು. ಆದರೆ ಮದುವೆ ನಡೆಯದೇ ಇದ್ದುದರಿಂದ ವಿಚಲಿತ ಗೊಂಡಿದ್ದರು. ಇತ್ತ ಬಾಲಕಿಯ ಹೆತ್ತ ವರು ಆಕೆ ಅಧಿಕಾರಿಗಳೊಂದಿಗೆ ತನಗೂ ಮದುವೆಯಾಗಲು ಇಷ್ಟವಿಲ್ಲ, ಹೆತ್ತವರ ಒತ್ತಾಯಕ್ಕಾಗಿ ನಾನು ವಿವಾಹಕ್ಕೆ ಒಪ್ಪಿದ್ದೇನೆ ಎನ್ನುತ್ತಿದ್ದಂತೆ ಆರು ತಿಂಗ ಳಲ್ಲಿ ಒಮ್ಮೆಯೂ ಆಕೆ ತಮ್ಮಲ್ಲಿ ತಿಳಿಸಿಲ್ಲ. ಮದುವೆ ಸಭಾಂಗಣದಲ್ಲಿ ನಡೆದಿರುವ ಘಟನೆ ಹಾಗೂ ಆಕೆಯ ಏಕಾಏಕಿ ನಿರ್ಧಾರದಿಂದ ಮಾನಹಾನಿಯಾಗಿದೆ ಎಂದು ಮದುವೆಗಾಗಿ ಖರ್ಚು ಮಾಡಿದ್ದ ಆಕೆ ಕುಟುಂಬದವರು ಅಳಲನ್ನು ತೋಡಿಕೊಂಡರು.
‘ನಮ್ಮಲ್ಲಿ ೧೪ ವರ್ಷವಾಗುತ್ತಲೇ ವಿವಾಹ ಮಾಡುತ್ತಾರೆ
ಮದುವೆ ರದ್ದಾದ ಕುರಿತು ಮಾತ ನಾಡಿದ ಬಾಲಕಿ ನಮ್ಮ ಸಮಾಜದಲ್ಲಿ ೧೪ ವರ್ಷ ತುಂಬಿದಾಗಲೇ ವಿವಾಹಕ್ಕೆ ಹೆತ್ತವರು ಪ್ರಯತ್ನಿಸುತ್ತಾರೆ ತಮಗಿಂತ ಹೆಚ್ಚು ಪ್ರಾಯದ ಯುವಕರೊಂದಿಗೆ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿ ಕೊಡುತ್ತಿದ್ದು, ಈ ಘಟನೆಯಿಂದ ನಮ್ಮ ಸಮುದಾಯ ಇನ್ನು ಮುಂದೆ ಯಾದರೂ ಎಚ್ಚೆತ್ತುಕೊಳ್ಳುವಂತಾಗಲಿ. ತಾನು ಮುಂದಿನ ದಿನಗಳಲ್ಲಿ ಶಿಕ್ಷಣ ಪಡೆದು ಸಮುದಾಯದ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದಿ ದ್ದಾಳೆ. ಕಾರ‍್ಯಾಚರಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾSಯ ಉಪ ನಿರ್ದೇಶಕಿ ಶಕುಂತಲಾ , ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆಶಾ ನಾಯಕ್, ಶಿಶು ಸಂರಕ್ಷಣಾಧಿಕಾರಿ ಶ್ಯಾಮಲ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೆಹರುನ್ನೀಸಾ, ಸ್ಥಳೀಯ ಮೇಲ್ವಿಚಾರಕಿ ಶಾರದಾ ನೇತೃತ್ವದ ತಂಡ ಭಾಗವಹಿಸಿತ್ತು.

ಮದುಮಗಳಾಗಿ ಬಂದು ಚೂಡಿದಾರದಲ್ಲಿ ತೆರಳಿದ ಬಾಲಕಿ

ಮದುವೆ ಮಂಟಪಕ್ಕೆ ಬಂದಾಗ ಬಾಲಕಿ ಮದುಮಗಳಾಗಿ ಬಂದಿದ್ದಳು. ಅಧಿಕಾರಿಗಳ ಮಧ್ಯಪ್ರವೇಶದಿಂದ ಮದುವೆ ಸ್ಥಗಿತಗೊಂಡ ಬಳಿಕ ಅಧಿಕಾರಿಗಳ ಎದುರು ಈ ಮದುವೆಗೆ ತಾನು ವಿರೋಧ ವ್ಯಕ್ತಪಡಿಸಿದ್ದೆ. ಮನೆಯವರ ಒತ್ತಡಕ್ಕೆ ಕಟ್ಟುಬಿದ್ದು ಮದುವೆಗೆ ಒಪ್ಪಿದ್ದೆ ಎಂದಾಗ ಈಕೆಯ ಹೆತ್ತವರು ಮತ್ತು ಸಂಬಂಧಿ ಕರು ಬಾಲಕಿಗೆ ಬೈದರು. ಮದುವೆ ರದ್ದಾಗಲು ಸವಿತಾ ಮುಖ್ಯ ಕಾರಣ ಎಂದರಿತ ಹೆತ್ತವರು ಆಕೆ ನಮಗೆ ಬೇಡ ನಮ್ಮ ಪಾಲಿಗೆ ಆಕೆ ಸತ್ತ ಹಾಗೆ ಎಂದು ಅವಳ ಮೈಮೇಲಿದ್ದ ಒಡವೆ, ಸೀರೆಯನ್ನು ವಾಪಾಸ್ಸು ತೆಗೆದುಕೊಂಡು ಕೇವಲ ಒಂದು ಚೂಡಿದಾರ ನೀಡಿ ಆಕೆ ಯನ್ನು ಬಂದಿದ್ದ ಅಧಿಕಾರಿಗಳೊಂದಿಗೆ ತೆರಳು ವಂತೆ ಸೂಚಿಸಿದರು. ಈ ನಿಟ್ಟಿನಲ್ಲಿ ಮಹಿಳೆ ಯರ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಕೆ ಯನ್ನು ಕಂಕನಾಡಿಯ ಬಾಲಿಕಾಶ್ರಮಕ್ಕೆ ಹಸ್ತಾಂತರಿಸಿದ್ದಾರೆ.

ಒಬ್ಬಳು ಮದುವೆ ಮುರಿದಳು ಮತ್ತೊಬ್ಬಳು ಬದುಕು ಕಟ್ಟಿದಳು

ಮದುವೆ ರದ್ದಾದ್ದರಿಂದ ವಿಚಲಿತನಾಗಿದ್ದ ಕ್ಯಾಲಿಕಟ್‌ನಿಂದ ಬಂದಿದ್ದ ವರನಿಗೆ ಮಧ್ಯಾಹ್ನದ ವೇಳೆಗೆ ತೊಕ್ಕೊಟ್ಟು ಮೂಲದ ಅದೇ ಸಮುದಾಯದ ಯುವತಿ ಯೊಬ್ಬಳನ್ನು ಗೊತ್ತುಪಡಿಸಲಾಯಿತು. ಸಂಜೆ ವೇಳೆಗೆ ತೊಕ್ಕೊಟ್ಟಿನ ಮಾರಿ ಯಮ್ಮ ದೇವಸ್ಥಾನದಲ್ಲಿ ವಿವಾಹ ನಡೆಯಿತು.
ಇಷ್ಟೊಂದು ಕಷ್ಟಪಟ್ಟು ಲಕ್ಷಾಂತರ ರುಪಾಯಿ ಖರ್ಚು ಮಾಡಿ ಇಲ್ಲಿಗೆ ಮದುವೆಯಾಗಲು ಬಂದವ. ಈಗ ಮದುವೆಯಾಗದೆ ಹೋದರೆ ಅಲ್ಲಿ ಹೇಗೆ ಮುಖ ತೋರಿಸಲಿ ಎಂದ ವರ ಕೊನೆಗೂ ತನ್ನದೇ ಸಮುದಾಯದ ಯುವತಿ ಯೊಬ್ಬಳಿಗೆ ತಾಳಿ ಕಟ್ಟಿದ. ಆಕೆ ಕಡು ಬಡತನದಿಂದ ಬಂದವಳು ಎನ್ನುವುದಿಲ್ಲಿ ವಿಶೇಷ.

ಮರಳು ಮಾಫಿಯಾ ಹತ್ಯೆ ಹಿನ್ನೆಲೆ: ಇಬ್ಬರ ಸೆರೆ; ಓರ್ವನಿಗೆ ಶೋಧ

Posted by JAYAKIRANA Kirana on | 0 comments | Leave a comment...


ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬೊಳಿಯಾರು ಎಂಬಲ್ಲಿ ಮೇ ೭ ರಂದು ರಾತ್ರಿ ಮರಳು ಮಾಫಿಯಾ ಸಂಬಂಧs ನಡೆದ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನೋರ್ವನ ಹುಡುಕಾಟ ನಡೆದಿದೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪ್ರಭಾಕರ್ ಅವರ ನಿರ್ದೇಶನದಂತೆ ಹಾಗೂ ಪುತ್ತೂರು ಎಎಸ್‌ಪಿ ಅನುಚೇತ್ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಿ.ಪಿ.ಐ ಭಾಸ್ಕರ ರೈ ಮತ್ತು ಪಿಎಸ್‌ಐ ಯೋಗೀಶ್ ಕುಮಾರ್ ಅವರ ನೇತೃತ್ವದಲ್ಲಿ ಎರಡು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಮುಂದು ವರಿಸಿ ಮೇ ೧೨ರಂದು ದೊರೆತ ಖಚಿತ ಮಾಹಿತಿಯಂತೆ ಕೃತ್ಯ ನಡೆಸಿದ ಆರೋಪಿ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಮಾಪಲಾಜೆ ಮನೆಯ ಹರೀಶ್ ಪೂಜಾರಿ ಯಾನೆ ಹರಿಶ್ಚಂದ್ರ (೨೪) ಎಂಬಾತನನ್ನು ದಸ್ತಗಿರಿ ಮಾಡಿ ದ್ದಾರೆ. ಆತನಿಂದ ಕೊಲೆಗೆ ಬಳಸಿದ ಮರದ ಹಿಡಿಯಿರುವ ಒಂದು ಚೂರಿ, ಕೊಲೆಯಾದ ಶಶೀಂದ್ರನ್ ಅವರ ಹಣವಿದ್ದ ಪರ್ಸ್, ೩೦೦೦ ರೂ. ನಗದು ಹಾಗೂ ಬೈಕಿನ ಕೀಯನ್ನು ವಶಪಡಿಸಿ ಕೊಳ್ಳಲಾಗಿದೆ.
ಇನ್ನೋರ್ವ ಆರೋಪಿ ನಿಡ್ಲೆ ಗ್ರಾಮದ ನೂಜಿಲ ಮನೆಯ ರಘು ಚಂದ್ರ(೨೫) ಎಂಬಾತನನ್ನು ಮೇ.೧೩ ರಂದು ಬೆಳಿಗ್ಗೆ ಆತನ ಮನೆಯ ಬಳಿ ದಸ್ತಗಿರಿ ಮಾಡಿ ಕೊಲೆಗೆ ಅನುಕೂಲವಾಗಲೆಂದು ಬಳ ಸಿದ ಮೋಟಾರು ಸೈಕಲ್‌ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕೃತ್ಯದಲ್ಲಿ ಇನ್ನೋರ್ವ ಆರೋಪಿ ಮನೋಜ್ ಎಂಬ ಆರೋಪಿ ಭಾಗಿ ಯಾಗಿದ್ದು ಆತನನ್ನು ಶೀಘ್ರದಲ್ಲಿಯೇ ಬಂಧಿಸಲಾ ಗುವುದು. ಶಶೀಂದ್ರ ಮತ್ತು ಆರೋಪಿ ಹರಿಶ್ಚಂದ್ರ ಇವರೊಳಗೆ ಶೇಂದಿ ಹಾಗೂ ಮದ್ಯದ ಬಾಟಲಿಗಳ ಮಾರಾಟ ವ್ಯವಹಾರದಲ್ಲಾದ ವೈಷಮ್ಯ ಕೊಲೆಯಲ್ಲಿ ಪರ್ಯಾವಸಾನವಾಗಿದೆ ಎಂದು ಪೊಲೀಸರು ತಿಳಿಸಿದರು.
ಈ ಪ್ರಕರಣವನ್ನು ಪತ್ತೆ ಹಚ್ಚಲು ಪುಂಜಾಲಕಟ್ಟೆ ಠಾಣಾ ಪಿಎಸ್‌ಐ ಮಾಧವ ಕೂಡ್ಲು, ವೇಣೂರು ಠಾಣಾ ಪಿಎಸ್‌ಐ ಉಮೇಶ್ ಉಪ್ಪಳಿಕೆ, ಸಿಬ್ಬಂದಿಯವರಾದ ಹೆಚ್‌ಸಿ ಕುಶಾಲಪ್ಪ, ದಯಾನಂದ, ದೇವಪ್ಪ, ಅಶೋಕ್, ಪೌಲೋಸ್ ಸಿ.ಜೆ., ಪಿಸಿಗಳಾದ ಸುಂದರ ಶೆಟ್ಟಿ, ಪ್ರವೀಣ, ಶಶಿಧರ, ಮಹೇಶ,ವೆಂಕಟೇಶ, ನವೀನ, ಕೃಷ್ಣ, ಗಣೇಶ, ಜೀಪು ಚಾಲಕರಾದ ಬಿ.ಎನ್. ಬುಡ್ಕಿ,ಕನಕರಾಜ್, ಆಸೀಫ್,ದಿನೇಶ್ ಸಹಕರಿಸಿದ್ದಾರೆ.
ಈ ಪ್ರಕರಣವನ್ನು ಭೇಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ನಗದು ಬಹುಮಾನವನ್ನು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರು ಘೋಷಿಸಿದ್ದಾರೆ.
ಬೊಳಿಯಾರು ನಿವಾಸಿ ಶಶೀಂದ್ರನ್ (೫೦) ಅವರು ರಾತ್ರಿ ನಿಡ್ಲೆ ಗ್ರಾಮದ ಕುದ್ರಾಯದಲ್ಲಿರುವ ತನ್ನ ಶೇಂದಿ ಅಂಗಡಿಯ ವ್ಯವಹಾರವನ್ನು ಮುಗಿಸಿ ಮನೆಗೆ ಮರಳುತ್ತಿದ್ದಾಗ ಬೊಳಿಯಾರು-ಮುಳಿಕ್ಕಾರು ಬಳಿ ಅವರನ್ನು ಹತ್ಯೆ ಮಾಡಲಾಗಿತ್ತು. ಶಶೀಂದ್ರನ್ ಬೃಹತ್ ಮರಳು ವ್ಯಾಪಾರ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ವ್ಯವಹಾರದಲ್ಲಿ ಮೇಲೇರುವುದನ್ನು ಸಹಿಸದ ಹರಿಶ್ಚಂದ್ರ ಅವರು ಕೊಲೆಗೆ ಸ್ಕೆಚ್ ರೂಪಿಸಿದ್ದರು. ಈತನಿಗೂ ಶೇಂದಿ ಅಂಗಡಿಯಿದ್ದು ಅದು ಒಂದೇ ಸ್ಥಳದಲ್ಲಿ ಎದುರು ಬದುರು ಇದ್ದವು. ಆಗ್ಗಾಗ್ಗೆ ಶೇಂದಿ ವ್ಯಾಪಾರದ ವಿಚಾರದಲ್ಲೂ ಮತ್ತು ಅಕ್ರಮ ಮದ್ಯದ ದಾಸ್ತಾನಿನ ವಿಚಾರದಲ್ಲಿ ಕಲಹವೇರ್ಪಡುತ್ತಿತ್ತು. ಇತ್ತ ಶಶೀಂದ್ರನ್ ಮರಳು ವ್ಯಾಪಾರದಲ್ಲಿ ದಿನೇ ದಿನೇ ವೃದ್ದಿಯಾಗುತ್ತಿರುವುದನ್ನು iತ್ತು ಅದು ಬೃಹತ್ ಮಟ್ಟದಲ್ಲಿ ಬೆಳೆದು ಅದರಲ್ಲಿ ಶಶೀಂದ್ರನ್ ಹಿಡಿತ ಸಾಧಿಸುತ್ತಿರುವುದನ್ನು ಸಹಿಸದ ಹರಿಶ್ಚಂದ್ರ ಸಂಬಂಧಿಕ ಮನೋಜ್ ಹಾಗು ರಘುಚಂದ್ರರೊಡಗೂಡಿ ಮೇ. ೭ ರ ರಾತ್ರಿ ದಿನನಿತ್ಯದ ವ್ಯವಹಾರ ಮುಗಿಸಿ ಹೋಗುತ್ತಿದ್ದ ಶಶೀಂದ್ರನ್ ಮೇಲೆ ದಾಳಿ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಸಂದರ್ಭ ಮನೋಜ್ ಕೈಗೂ ಚಾಕು ತಗುಲಿ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಮನೋಜ್ ಸುರತ್ಕಲ್‌ನ ಚೇಳಾರುಪದವು ನಿವಾಸಿಯಾಗಿದ್ದು, ಮುಂಬಯಿಯಲ್ಲಿದ್ದಾತ ಇತ್ತೀಚೆಗೆ ಹರಿಶ್ಚಂದ್ರ ಅವರ ಮನೆಗೆ ಬಂದಾಗ ಪರಿಚಯವಾಗಿ ಕೊಲೆಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾ ಗಿದೆ. ಪೊಲೀಸರು ಈತನ ಶೋಧ ನಡೆಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಮರಳು ದಂಧೆ ವ್ಯಾಪಕವಾಗಿದ್ದರೂ ದ್ವೇಷಮಯ ವಾತಾವರಣ ಇರಲಿಲ್ಲ. ಆದರೆ ಶಶೀಂದ್ರನ್ ಅವರ ಕೊಲೆಯ ಬಳಿಕ ಇದೀಗ ತಾಲೂಕಿನಲ್ಲೂ ಮರಳು ಮಾಫಿಯಾ ಕಾರ್ಯಾಚರಿಸುತ್ತಿದೆ ಎಂಬುದು ದೃಢಗೊಂಡಿದೆ. ಕಂದಾಯ ಆಧಿಕಾರಿಗಳು ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸುವಲ್ಲಿ ಸೋಲುತ್ತಿದ್ದಾರೆ.

ರಣರಂಗವಾದ ಭೂತದ ಕೋಲ!

Posted by JAYAKIRANA Kirana on | 0 comments | Leave a comment...

ತಾಯಿಗೆ ಊಟ ನೀಡದ ವಿಚಾರ
ಪುತ್ತೂರು: ಭೂತದ ನೇಮದ ಸಂದರ್ಭದಲ್ಲಿ ತಾಯಿಗೆ ಊಟದ ವ್ಯವಸ್ಥೆ ಮಾಡದ ವಿಚಾರದಲ್ಲಿ ಪ್ರಶ್ನಿಸಿದ ಸಹೋದರಿ (ಅಕ್ಕ) ಮತ್ತು ಆಕೆಯ ಪತಿ ಸೇರಿದಂತೆ ಮೂವರಿಗೆ ಸಹೋ ದರ ಮತ್ತು ಆತನ ಕಡೆಯವರು ಸೇರಿ ಹಲ್ಲೆ ನಡೆಸಿದ ಘಟನೆಯಿಂದಾಗಿ ಭೂತದ ಕೋಲ ರಣರಂಗವಾದ ಘಟನೆ ತಾಲೂಕಿನ ಅರಿಯಡ್ಕ ಗ್ರಾಮದ ಬಳ್ಳಿಕಾನ ಎಂಬಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಅಮರ ಮುಡ್ನೂರು ಗ್ರಾಮದ ಮುಂಡಕಜೆ ದೊಡ್ಡ ತೋಟ ನಿವಾಸಿ ಐತಪ್ಪ ನಾಯ್ಕ, ಅವರ ಪತ್ನಿ ಪ್ರೇಮ ಮತ್ತು ಸಂಬಂಧಿ ಲೋಕೇಶ್ ಹಲ್ಲೆಗೊಳಗಾದವರು.
ಪ್ರೇಮ ಅವರ ಸಹೋದರ ಜಗದೀಶ ನಾಯ್ಕ ಆತನ ಕಡೆಯ ವರಾದ ತನಿಯಪ್ಪ ನಾಯ್ಕ, ಚೋಮ ನಾಯ್ಕ, ಮತ್ತು ಸತೀಶ ಸೇರಿಕೊಂಡು ಹಲ್ಲೆ ನಡೆಸಿರುವುದಾಗಿ ಆರೋಪಿಸ ಲಾಗಿದೆ.
ಜಗದೀಶನ ಬಳ್ಳಿಕಾನ ಮನೆಯಲ್ಲಿ ಶನಿವಾರ ರಾತ್ರಿ ಭೂತದ ಕೋಲ ನಡೆ ದಿತ್ತು. ಊಟ ಮುಗಿದ ಬಳಿಕ ಪ್ರೇಮಾ ಅವರ ತಾಯಿಗೆ ಊಟದ ವ್ಯವಸ್ಥೆ ಮಾಡದ ಕುರಿತು ಪ್ರಶ್ನಿಸಿ ‘ತಾಯಿಗೆ ಊಟದ ವ್ಯವಸ್ಥೆ ಮಾಡದ ನೀನು ಭೂತದ ಕೋಲ ನಡೆಸಿ ಏನು ಪ್ರಯೋಜನ ಎಂದು ಕೇಳಿದ್ದು ವಿವಾ ದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.ಪ್ರೇಮ ಮತ್ತು ಆಕೆಯ ಜೊತೆಗಿದ್ದ ಲೋಕೇಶನಿಗೆ ಹಲ್ಲೆ ನಡೆಸಿದ ಆರೋ ಪಿಗಳು , ಕೋವಿ ತೋರಿಸಿ ಅವರನ್ನು ಬೆದರಿಸಿ ಬಳಿಕ ಮನೆಯ ಹೊರಗಡೆ ನಿಂತಿದ್ದ ಪ್ರೇಮ ಅವರ ಪತಿ ಐತಪ್ಪ ನಾಯ್ಕ ಎಂಬವರಿಗೆ ಕೋವಿಯ ಹಿಡಿ ಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಯಿಂದ ಭೂತದ ನೇಮೋ ತ್ಸವ ರಣರಂಗವಾಗಿ ಪರಿಣ ಮಿಸಿತೆಂದು ತಿಳಿದು ಬಂದಿದೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪತ್ನಿ ಮನೆಯಲ್ಲಿ ಸ್ನೇಹಿತೆಯನ್ನು ಮುಚ್ಚಿಟ್ಟ ಮುಸ್ಲಿಂ ಸಂಘಟಕ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಮುಸ್ಲಿಂ ಸಮುದಾಯದ ಸಂಘ ಟನೆಯಲ್ಲಿ ಗುರುತಿಸಿಕೊಂಡಿದ್ದ ಸಂಘಟಕನೋರ್ವ ಪತ್ನಿ ಯನ್ನು ಉಪಾಯದಿಂದ ಹೊರಗೆ ಕಳುಹಿಸಿ ಸ್ನೇಹಿತೆ ಯನ್ನು ಮನೆಯಲ್ಲಿ ಕೂಡಿ ಹಾಕಿ ಸ್ಥಳೀಯ ಯುವಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಪಾಣೆ ಮಂಗಳೂರು, ಆಲಡ್ಕ ಎಂಬಲ್ಲಿ ನಡೆದಿದೆ. ಆಕೆ ಹಿಂದು ಸಮಾಜದ ಯುವತಿಯೆಂದು ಗುರುತಿಸಿದ ಸ್ಥಳೀಯರು ಗೊಂದಲ ಸೃಷ್ಟಿಯಾಗದಂತೆ ಆಕೆಯನ್ನು ಘಟನಾ ಸ್ಥಳದಿಂದ ಕಳುಹಿಸಿದ್ದು, ಆತನನ್ನು ಪೊಲೀಸರಿಗೆ ಒಪ್ಪಿಸದೇ ಬಚಾವು ಮಾಡಿದ್ದಾರೆ.
ಆಲಡ್ಕ ಜುಮಾ ಮಸೀದಿಯೊಂದರ ಹಿಂಬದಿಯ ಮನೆಯೊಂದರಲ್ಲಿ ಘಟನೆ ಸಂಭವಿಸಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಂಘಟಕ ತನ್ನ ಸ್ನೇಹಿತೆಯನ್ನು ಕರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಸಂಘಟಕ ಎಂದು ಪರಿಚಯಿಸಲ್ಪಟ್ಟ ವ್ಯಕ್ತಿ ತನ್ನ ಪತ್ನಿಯ ತವರು ಮನೆಗೆ ಗಲಿಬಿಲಿಯಿಂದ ಹೋಗುವುದನ್ನು ಗಮನಿಸಿದ ಸ್ಥಳೀಯ ಓರ್ವ ಆತನನ್ನೇ ಹಿಂಬಾಲಿಸಿದ್ದು, ಮನೆಯ ಬಳಿ ಯುವತಿ ಯೋರ್ವಳು ನಿಂತಿದ್ದಳು. ಮನೆಯ ಹೆಂಗಸರೆಲ್ಲಾ ಅಂದು ಬೆಳಿಗ್ಗೆಯೇ ಮನೆಯ ಹೊರಗೆ ಹೋಗಿರುವುದನ್ನು ಗಮನಿಸಿದ್ದ ಆತನಿಗೆ, ಈ ದೃಶ್ಯವನ್ನು ನೋಡಿ ಸಂಶಯ ಉಂಟಾಯಿತು.
ಅವನು ಆಲಡ್ಕ ಅಂಗಡಿ ಬಳಿಯಲ್ಲಿ ಕುಳಿತಿದ್ದವರಿಗೆ ವಿಷಯ ತಿಳಿಸಿದ್ದನು. ಅವರು ನಾಲ್ಕೈದು ಮಂದಿ ಸೇರಿ ಮನೆಗೆ ಬಂದು ವಿಚಾರಿಸಿದಾಗ, ಸಂಘಟಕ ಮನೆಯ ಹೊರಗೆ ಬಂದು ಹಾಗೋ-ಹೀಗೋ ಮಾತನಾಡಿಸಿ ಕಳುಹಿಸಿದ್ದ. ಆಲಡ್ಕ ಸೇತುವೆ ತನಕ ಹೋದ ಯುವಕರ ಗುಂಪು ಮತ್ತೆ ಮನೆ ಬಳಿ ಬಂದು, ಪತ್ತೆಗಾರಿಕೆಯನ್ನು ಮುಂದುವರಿಸಿದ್ದು, ಆಗಲೂ ಆತ ಮನೆಗೆ ಹೊರಗೆ ಬಂದು ಯುವಕರಲ್ಲಿ ಮಾತಿಗಿಳಿದಿದ್ದ. ಆತನ ಮೈಮೇಲೆ ಶರ್ಟ್ ಇಲ್ಲದ್ದನ್ನು ಗಮನಿಸಿದ ಯುವಕರು ಸೀದಾ ಮನೆಯ ಒಳಗೆ ಹೋಗಿ ತಲಾಶೆ ಮಾಡಿದ್ದರು. ಮನೆಯ ಎಲ್ಲಾ ಕೋಣೆಗಳನ್ನ ಹುಡುಕಾಡಿದರೂ ಯಾರೂ ಕಣ್ಣಿಗೆ ಬೀಳದೇ ಇದ್ದಾಗ, ಅವರಿಗೆ ಸಂಶಯ ದೂರವಾಗಿತ್ತು. ಇನ್ನೇನು ಹೊರಡುವಷ್ಟರಲ್ಲಿ ಮನೆಯ ಅಡುಗೆ ಕೋಣೆಯ ಪಕ್ಕದಲ್ಲಿ ಫ್ರಿಡ್ಜ್ ಕವರ್ ಸ್ವಲ್ಪ ಅಲುಗಾಡಿದ್ದನ್ನು ಗುಂಪಿನ ಯುವಕ ಓರ್ವ ಗಮನಿಸಿದ್ದು, ಕವರ್ ಒಳಗೆ ಇಣುಕಿ ನೋಡಿದ್ದನು. ಅದರೊಳಗೆ ಯುವತಿ ಓರ್ವಳು ಕುಳಿತಿದ್ದಳು.
ಹೆದರಿಕೊಂಡು ಬೆವರಿ ಹೋಗಿದ್ದ ಆಕೆಯನ್ನು ವಿಚಾ ರಿಸಿದ ಯುವಕರಿಗೆ ಅವಳು ಹಿಂದೂ ಹುಡುಗಿಯೆಂದು ಮನ ವರಿಕೆಯಾಗಿತ್ತು. ಮತೀಯ ಸಂಗತಿಯಾದ್ದರಿಂದ ರಾದ್ಧಾಂ ತವಾಗುವುದು ಬೇಡವೆಂದು ಆಕೆಯನ್ನು ಅಲ್ಲಿಂದ ಮನೆಗೆ ಕಳುಹಿ ಸಲಾಗಿತ್ತು. ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮನೆಯಳಿಯನಿಗೆ ಯುವಕರು ಥಳಿಸಿದ್ದಾರೆ ಎಂದು ತಿಳಿದು ಬಂದಿದೆ. ಯುವತಿ ಜತೆ ಸಿಕ್ಕಿಬಿದ್ದ ಆತ ತುಂಬೆ ಸಮೀಪ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಆಕೆಯೂ ಅದೇ ಸ್ಥಳದಲ್ಲಿ ಇರುವುದಾಗಿ ಒಪ್ಪಿಕೊಂಡಿದ್ದಳು. ಆದರೂ ಪ್ರಕರಣವನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸದೇ ಇದ್ದುದು ಮತ್ತಷ್ಟು ಸಂಶಯಕ್ಕೆ ಎಡೆಯಾಗಿದ್ದು, ಬಂಟ್ವಾಳ ಪೊಲೀಸರೀಗ ಅವರ ಬೆನ್ನ ಹಿಂದೆ ಬಿದ್ದಿದ್ದಾರೆ.
ಯುವತಿಯನ್ನು ಮಚ್ಚಿಟ್ಟ ವಿವಾದದಲ್ಲಿ ಸಿಲುಕಿದ ವ್ಯಕ್ತಿ ಈ ಹಿಂದೆ ಮುಸ್ಲಿಂ ಪ್ರತಿಷ್ಠಿತ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದು, ಹುಡುಗಿಯರ ಹಿಂದೆ ಬೀಳುತ್ತಿದ್ದ ಆರೋಪ ಎದುರಿಸುತ್ತಲೇ ಇದ್ದ. ಆತ ಮೂಲತಃ ಬಂಗ್ಲೆಗುಡ್ಡೆ ನಿವಾಸಿಯಾಗಿದ್ದಾನೆ. ಮೊಲಾರ್‌ಗಳ ಕುಟುಂಬಕ್ಕೆ ಸೇರಿದವನೆಂದು ಪ್ರತ್ಯಕ್ಷದ ರ್ಶಿಗಳು ಮಾಹಿತಿ ನೀಡಿದ್ದಾರೆ. ಘಟನೆ ಕುಟುಂಬಿಕರನ್ನು ಜಮಾಅತಿನಲ್ಲಿ ತಲೆ ತಗ್ಗಿಸುವಂತೆ ಮಾಡಿದ್ದು, ಈ ಕುರಿತು ಜಮಾಅತ್ ಮುಖಂಡರು ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯ ಕೇಳಲಾಗುತ್ತಿದೆ. ಈ ಮಧ್ಯೆ ಪೊಲೀಸರೂ ಘಟನೆಯ ತನಿಖೆಯ ಹಿಂದೆ ಬಿದ್ದಿದ್ದು, ಕುತೂಹಲ ಕೆರಳಿಸಿದೆ. ಯುವತಿಯ ಜತೆಗಿದ್ದ ಪ್ರಸಂಗ ಅತ್ತೆಯ ಮನೆಗೆ ಗೊತ್ತಾಗಿದ್ದು, ಇನ್ನೊಂದು ರಾದ್ಧಾಂತಕ್ಕೆ ಕಾರಣವಾಗಿತ್ತು.

ಇಂಜಿನಿಯರ್‌ನಿಂದ ಅಪ್ರಾಪ್ತಳಿಗೆ ಕಿರುಕುಳ: ಕಾಪು ಠಾಣೆಗೆ ಮುತ್ತಿಗೆ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಕಾಪು ಬಳಿಯ ಪಾದೂರು ಕಚ್ಛಾ ತೈಲ ಸಂಗ್ರಹಣಾ ಗಾರದ ಎಸ್ಕೆ ಈ ಮತ್ತು ಸೀ ಜಾಯಿಂಟ್‌ವೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಓರ್ವ ಸ್ಥಳೀಯ ಅಪ್ರಾಪ್ತ ಯುವತಿ ಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿ ದ್ದಾನೆ ಎಂದು ಆರೋಪಿಸಿದ ಸಾರ್ವ ಜನಿಕರು ಯುವಕನಿಗೆ ಥಳಿಸಿ ಕಾಪು ಠಾಣೆಗೆ ಒಪ್ಪಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ. ಇದೇ ವೇಳೆ ಕಾಪು ಠಾಣೆಗೆ ಸ್ಥಳೀಯರು ಮುತ್ತಿಗೆ ಹಾಕಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಘಟನೆಯ ವಿವರ
ಮಲ್ಲಾರು ರಾಣೆಕೇರಿ ಎಂಬಲ್ಲಿ ಸುನೀಲ್ ಕುಮಾರ್ ಎಂಬವರಿಗೆ ಸೇರಿದ ಮನೆ ಯನ್ನು ಎಸ್ಕೆ ಈ ಮತ್ತು ಸೀ ಜಾಯಿಂಟ್‌ವೆಂಚರ್ ಕಂಪನಿ ಮೂರು ವರ್ಷ ಗುತ್ತಿಗೆ ಪಡೆದುಕೊಂಡಿದೆ. ಇದರಲ್ಲಿ ಈ ಕಂಪನಿಯ ಅಧಿಕಾರಿ ವರ್ಗ ವಾಸಿಸುತ್ತಿದೆ. ಇವರೊಂದಿಗೆ ಸುಮಾರು ಎಂಟು ಜನ ಕಾರ್ಮಿಕರು ಇದ್ದು, ಅವರು ಸ್ಥಳೀಯರಲ್ಲಿ ಅಸಹ್ಯ ರೀತಿಯಲ್ಲಿ ವರ್ತಿಸುತ್ತಿದ್ದರು ಎನ್ನ ಲಾಗಿದೆ.
ಯುವಕರು ವಾಸಿಸುವ ಮನೆ ಪಕ್ಕ ಸ್ಥಳೀಯರ ಹಲವಾರು ಮನೆಗ ಳಿದ್ದು, ಓರ್ವ ಅಪ್ರಾಪ್ತ ಬಾಲಕಿ ಇಲ್ಲಿಯ ಬೆಂಗಳೂರು ಮೂಲದ ಇಂಜಿನಿಯರ್ ಅಶೋಕ್ ಕುಮಾರ್ ಎಂಬ ಯುವಕ ನೊಂದಿಗೆ ಸಲುಗೆಯಿಂದ ವರ್ತಿಸು ತ್ತಿದ್ದಳು. ಆ ಬಾಲಕಿಯ ಮೈ ಮುಟ್ಟಿ ಅಶೋಕ್ ಕುಮಾರ್ ಮಾತನಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ನಿನ್ನೆ ಬೆಳಿಗ್ಗೆ ಬಾಲಕಿ ನಾಪತ್ತೆ ಆಗಿದ್ದು, ಮನೆಯವರು ಹುಡುಕಾಡಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ನಾಪತ್ತೆ ಆದ ಬಾಲಕಿ ಏಕಾಏಕಿ ಪ್ರತ್ಯಕ್ಷಳಾದಾಗ ಮನೆಯವರು ಎಲ್ಲಿದ್ದಿ ಎಂದು ತೀವ್ರವಾಗಿ ವಿಚಾರಿಸಿದಾಗ, ಆಕೆ ಅಶೋಕನೊಂದಿಗಿದ್ದೆ ಎಂದಿದ್ದಾಳೆ. ಇದರಿಂದ ಆಕ್ರೋಶಿತ ಮನೆಯವರು ಹಾಗೂ ಸ್ಥಳೀಯರು ಯುವಕನಿಗೆ ಹಿಗ್ಗಾಮುಗ್ಗ ಥಳಿಸಿ ಕಾಪು ಠಾಣೆಗೆ ತಂದೊಪ್ಪಿಸಿದ್ದಾರೆ.
 ಕಾಪು ಠಾಣೆಗೆ ಯುವಕನನ್ನು ಕರೆ ತಂದಾಗ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಕಂಪೆನಿ ಕಾರ್ಮಿಕರಿಂದ ತಮಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ಅಂತೆಯೇ ಇಲ್ಲಿಯ ಮನೆಗಳಲ್ಲಿ ವಾಸಿಸುವ ಕಾರ್ಮಿಕರು ಅಸಹ್ಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅವರನ್ನು ತುರ್ತಾಗಿ ಖಾಲಿ ಮಾಡಿಸಿ ಎಂದು ಪೊಲೀಸರಲ್ಲಿ ಆಗ್ರಹಿಸಿದ್ದಾರೆ.
 ಈ ಸಂದರ್ಭ ಬೆಳಪು ಗ್ರಾ.ಪಂ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಕಾಪು ಗ್ರಾ.ಪಂ ಅಧ್ಯಕ್ಷ ಯೋಗೀಶ್ ರೈ, ಕಳತ್ತೂರು ಗ್ರಾ.ಪಂ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಜಯಕಿರಣದೊಂದಿಗೆ ಮಾತನಾಡಿದ ಅಶೋಕ್ ಕುಮಾರ್, ಹುಡುಗಿ ನನ್ನೊಂದಿಗೆ ಮಾತನಾಡುತ್ತಿದ್ದುದು ನಿಜ. ನಿನ್ನೆ ಮಾತ್ರ ತಾನು ಸಹೋ ದ್ಯೋಗಿಗಳೊಂದಿಗೆ ರೂಮಿನಲ್ಲಿ ಇದ್ದೆ. ನಾನು ಆಕೆಯನ್ನು ನೋಡಿಯೇ ಇಲ್ಲ್ಲ ಎಂದು ಹೇಳಿದ್ದಾನೆ.
ಸಾರ್ವಜನಿಕರು ನೀಡಿದ ದೂರಿನಂತೆ ಕಾಪು ಪೊಲೀಸರು ಅಶೋಕ್ ಕುಮಾರನ್ನು ವಶಕ್ಕೆ ತೆಗೆದು ಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಸಮಸ್ತವನ್ನು ಮಟ್ಟ ಹಾಕಲು ಯಾರಿಂದಲೂ ಸಾಧ್ಯವಿಲ್ಲ: ಇಬ್ರಾಹಿಂ ಬಾಖವಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸಮಸ್ತ ಎಂಬುದು ಮಹಾನ್ ನಾಯಕರು ಮುನ್ನಡೆಸಿದ ಸಂಘಟನೆಯಾಗಿರುವುದರಿಂದ ಸಮುದ್ರದಷ್ಟು ವಿಸ್ತಾರವಾಗಿ ಬೆಳೆದಿದೆ. ಇಂತಹ ಸಂಘಟನೆಯನ್ನು ಯಾರಿಂ ದಲೂ ಮಟ್ಟ ಹಾಕಲು ಸಾಧ್ಯವಿಲ್ಲ ಎಂದು ಸಮಸ್ತ ಸಂಘಟನೆಯ ಮುಖಂ ಡರಾದ ಇಬ್ರಾಹಿಂ ಬಾಖವಿ ಕೆ.ಸಿ. ರೋಡು ಅವರು ಸವಾಲು ಹಾಕಿದ್ದಾರೆ.
ನಿನ್ನೆ ಎಸ್‌ಕೆಎಸ್‌ಎಸ್‌ಎಫ್ ಉಚ್ಚಿಲ ವಲಯ ಸಮಿತಿಯಿಂದ ನಡೆದ ಸಮಸ್ತ ಸಮ್ಮೇಳನ ಮತ್ತು ಸುನ್ನೀ ಸಮಾ ವೇಶವನ್ನು ಉದ್ಘಾಟಿಸಿ ಅವರು ಮಾತ ನಾಡಿದರು.
ಇತ್ತೀಚೆಗೆ ಸಂಘಟನೆಯೊಂದು ಕೇಶದ ಹೆಸರಲ್ಲಿ ಜನರನ್ನು ವಂಚಿಸಲು ಹೊರಟಿದೆ. ಈ ಬಗ್ಗೆ ಸತ್ಯಾಸತ್ಯತೆ ಯನ್ನು ತಿಳಿಸುವ ಉದ್ದೇಶದಿಂದ ಸಮಸ್ತ ಸಮ್ಮೇಳನವನ್ನು ನಡೆಸಲಾ ಗುತ್ತಿದೆ. ಮಂಗಳೂರಿನಲ್ಲಿ ಸಮ್ಮೇಳನ ನಡೆಯುತ್ತಿದ್ದ ವೇಳೆ ಮಳೆ ಬಂದಿದ್ದು ಅದನ್ನೇ ಬಳಸಿಕೊಂಡ ವಿರೋಧಿ ಸಂಘಟನೆ ಕೇಶ ಅಸಲಿಯಾಗಿದ್ದ ಕಾರಣ ಸಮಸ್ತ ಸಮ್ಮೇಳನಕ್ಕೆ ಮಳೆ ಬಂದಿದ್ದು ಈ ಮೂಲಕ ತಮ್ಮದೇ ಸತ್ಯ ಎನ್ನುವ ಕರಪತ್ರಗಳನ್ನು ಹಂಚಿದೆ.
ಆದರೆ ಮಳೆ ಎಂಬುದು ಅಲ್ಲಾಹನ ಅನುಗ್ರಹವಾಗಿದೆ ಎನ್ನುವ ಸತ್ಯ ಅವರಿಗೆ ತಿಳಿಯದಿರುವುದು ದುರಂತ. ಅದೇ ಬಣ ಕೇರಳ ಯಾತ್ರೆಯ ಹೆಸರಲ್ಲಿ ಮಂಗಳೂರಿನಲ್ಲಿ ಸಮ್ಮೇಳನ ನಡೆಸಿ ದಾಗ ಭಯಾನಕವಾದ ಭೂಕಂಪದ ಅನುಭವವಾಗಿದ್ದನ್ನು ಮರೆತು ಬಿಟ್ಟಿದೆ ಎಂದು ಅವರು ಬೊಟ್ಟು ಮಾಡಿದರು.
ತಲೆತಲಾಂತರಗಳಿಂದಲೂ ಸಮಸ್ತ ಸಂಘಟನೆ ಇದ್ದು ಇಸ್ಲಾಮಿನ ತತ್ವ ಸಿದ್ಧಾಂತಗಳನ್ನು ಯಥಾವತ್ತಾಗಿ ಪ್ರಚಾರ ಮಾಡುತ್ತಾ ಬಂದಿದೆ. ಆದರೆ ಈ ಸಂಘಟನೆಯ ವಿರುದ್ಧ ಅಪಪ್ರಚಾರ ನಡೆಸಿ ಮುಗಿಸಲು ಸಂಚು ರೂಪಿಸಲಾ ಗುತ್ತಿದ್ದು ಈ ಕೆಲಸದಲ್ಲಿ ಯಾರಿಗೂ ಜಯಗಳಿಸಲು ಸಾಧ್ಯವಿಲ್ಲ. ಸಮುದ್ರ ದಿಂದ ತಂಬಿಗೆ ನೀರು ತೆಗೆದರೆ ಅದ ರಿಂದ ಸಮುದ್ರ ಬತ್ತುವುದಿಲ್ಲ. ಅದೇ ರೀತಿ ಸಮಸ್ತ ಸಂಘಟನೆಯೂ ಆಗಿದೆ ವಿಶ್ಲೇಷಿಸಿದರು. ಕಾರ್ಯಕ್ರಮದಲ್ಲಿ ಸೈಯ್ಯದ್ ಅಮೀರ್ ತಂಙಲ್ ಕಿನ್ಯ, ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಸಿರಾಜುದ್ದೀನ್ ಫೈಝಿ ಬಪ್ಪಳಿಕೆ, ಅಬ್ದುಲ್ಲಾ ಅರ್ಶದಿ, ಸ್ವದಕತ್ತುಲ್ಲಾ ಫೈಝಿ, ಮುಸ್ತಫಾ ಕಮಾಲ್, ಅಬ್ಬಾಸ್ ಮಜಾಲ್, ಸಾಹುಲ್ ಹಮೀದ್, ಕೋಟೆಕಾರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಕೆದೂರು-ವಕ್ವಾಡಿ ಗೇರು ಪ್ಲಾಂಟೇಶನ್‌ನಲ್ಲಿ ತ್ಯಾಜ್ಯ: ಸ್ಥಳೀಯ ಕೃಷಿಭೂಮಿಗೆ ಕಲುಷಿತ ಭೀತಿ

Posted by JAYAKIRANA Kirana on | 0 comments | Leave a comment...

ಕುಂದಾಪುರ: ಇಲ್ಲಿಗೆ ಸಮೀಪ ಕೆದೂರು- ವಕ್ವಾಡಿ ಮದ್ಯೆ ಇರುವ ವಿಶಾಲವಾದ ಗೇರು ಪ್ಲಾಂಟೇಶನ್ ಪ್ರದೇಶದಲ್ಲಿ ಅವ್ಯಾಹತವಾಗಿ ತ್ಯಾಜ್ಯ ಎಸೆಯುವುದರಿಂದ ಸ್ಥಳೀಯ ರೈತರ ಕೃಷಿ ಭೂಮಿಗೆ ತ್ಯಾಜ್ಯ ಹರಿದು ಬಂದು ತೊಂದರೆ ಅನುಭವಿಸುವ ಭೀತಿಯಲ್ಲಿದ್ದಾರೆ.
ವಕ್ವಾಡಿ,ಕೆದೂರು, ಹೂವಿನಕೆರೆ, ಚಾರುಕೊಟ್ಟಿಗೆ, ಕುರ‍್ವಾಡಿಗೆ ತಾಗಿಕೊಂ ಡಿರುವ ೯೦ ಹೆಕ್ಟೆರ್ ಗೇರು ಪ್ಲಾಂಟೇ ಶನ್‌ನಲ್ಲಿ ವಕ್ವಾಡಿ- ಕೆದೂರು ಮುಖ್ಯ ರಸ್ತೆಯಂದ ಒಳಗಡೆ ಪ್ರವೇಶಕ್ಕೆ ಎಲ್ಲಿ ದಾರಿ ಇದೆಯೋ ಅಲ್ಲಿ ವಾಹನ ಪ್ರವೇಶ ಮಾಡಿ ಯಾರಿಗೂ ತಿಳಿಯ ದಂತೆ ಆಸ್ಪತ್ರೆ, ಕಾರ್ಖಾನೆ, ಕಲ್ಯಾಣ ಮಂಟಪದ ಎಲೆ ಪ್ಲಾಸ್ಟಿಕ್ ಲೋಟ,     ಕ್ಷೌರದ ಅಂಗಡಿಯ ಕೂದಲು, ಚಪ್ಪಲಿ ಕಟ್ಟಿಂಗ್ಸ್, ಬಾಟ್ಲಿ ಹಾಗೂ ಸತ್ತ ಕೋಳಿ ತ್ಯಾಜ್ಯವನ್ನು ಎಸೆದಿ ದ್ದರಿಂದ ಈ ಪ್ರದೇಶದಲ್ಲಿ ಗಬ್ಬು ನಾರುತ್ತಿದ್ದು ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿ ಬಂದಿದೆ.
ಬೇಲಿಯೇ ಇಲ್ಲ: ಹಿಂದೆ ಮೂರು-ನಾಲ್ಕು ಗ್ರಾಮದ ರೈತರು ತಮ್ಮ ಜಾನುವಾರುಗಳನ್ನು ಮೇಯಿ ಸಲು ಮತ್ತು ಹೊಲ ಗದ್ದೆಗಳಿಗೆ ಬೇಕಾಗುವ ಸೊಪ್ಪು, ದರಲೆ ಹಾಗೂ ಸೌದೆಗಾಗಿ ಇದೇ ಹೊಲವನ್ನು ಆಶ್ರಯಿ ಸಿದ್ದಾರೆ. ಆದರೆ, ಇತ್ತೀಚೆಗೆ ಮರಗಿ ಡಗಳು ನಾಶವಾದ ಮೇಲೆ ಅರಣ್ಯ ಇಲಾಖೆಯವರು ಖಾಲಿ ಬಿದ್ದ ಸ್ಥಳದಲ್ಲಿ ಗೇರು ಪ್ಲಾಂಟೇಶನ್ ಮಾಡಿರುತ್ತಾರೆ. ಆದರೆ ಈ ಪ್ರದೇಶಗಳಿಗೆ ಇಲ್ಲಿಯ ವರೆಗೂ ಬೇಲಿ ಮಾಡದೇ ಇರುವು ದರಿಂದ ಕಳೆದ ಕೆಲವು ವರ್ಷಗಳಿಂದ ತ್ಯಾಜ್ಯ ಹಾಕುತ್ತಾ ಬಂದಿದ್ದು ಯಾರೂ ಕೇಳುವರಿಲ್ಲದ ಕಾರಣ ದೂರದ ನಗರ, ಕಾರ್ಖಾನೆಯಿಂದಲೂ ಅವ್ಯಾಹತವಾಗಿ ತ್ಯಾಜ್ಯ ಎಸೆಯುತ್ತಿದ್ದಾರೆ.ಮಳೆಗಾಲ ಪ್ರಾರಂಭದಲ್ಲಿಯೇ ಇಲ್ಲಿಂದ ತ್ಯಾಜ್ಯ ಕೊಚ್ಚಿಕೊಂಡು ಬಂದು ರೈತರ ಕೃಷಿ ಭೂಮಿಗೆ ಹಾಯ್ದು ಬೇಸಾಯಕ್ಕೆ ತೊಂದರೆ ಅನುಭವಿಸುವ ಬೀತಿಯಲ್ಲಿದ್ದಾರೆ. ಅಲ್ಲದೆ ಇನ್ನೇನು ಮಳೆಗಾಲ ಪ್ರಾರಂಭವಾಗಿ ಹಸಿರು ಹುಲ್ಲು ಬೆಳೆಯುವಾಗ ಜಾನುವಾರುಗಳು ಅರಸಿ ಬಂದು ತಿನ್ನುವುದರಿಂದ ಸಾಂಕ್ರಾ ಮಿಕ ರೋಗ ಹರಡುವ ಆತಂಕಕ್ಕೆ ಒಳಗಾಗಿದ್ದಾರೆ. ಇಲ್ಲಿಯ ವರೆಗೂ ತ್ಯಾಜ್ಯ ಹಾಕುವವರ ವಿರುದ್ದ ಯಾವುದೇ ಕ್ರಮ ಹಾಗೂ ಕಾರ್ಯಾಚರಣೆ ಕೈಗೊ ಳ್ಳದೆ ಇರುವುದರಿಂದ ಇಲ್ಲಿನ ರೈತರು ಆಕ್ರೋಶಗೊಂಡಿದ್ದಾರೆ.
ವಿಷಕಾರಿ ಹಾವು, ಹೆಬ್ಬಾವು, ಕಾಳಿಂಗ ಸರ್ಪಗಳ ವಾಸಸ್ಥಾನ?
ಅಲ್ಲಲ್ಲಿ ಹೆಬ್ಬಾವು ,ವಿಷಕಾರಿ ಹಾವುಗಳನ್ನು ಹಿಡಿದು ದೂರದ ಕಾಡಿಗೆ ಬಿಟ್ಟು ಬರುತ್ತೇವೆ ಎನ್ನುತ್ತಾರೆ. ಆದರೆ, ಇಲ್ಲಿಯೇ ಬಿಟ್ಟಿದ್ದಾರೆ ಎನ್ನುವುದಕ್ಕೆ ರಸ್ತೆಯ ಎರಡೂ ಬದಿಯಲ್ಲಿ ಖಾಲಿ ಮಣ್ಣಿನ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳು ಕಂಡು ಬಂದಿದೆ. ಇಲ್ಲಿಯವರೆಗೆ ಹೆಬ್ಬಾವು, ಕಾಳಿಂಗ ಸರ್ಪ, ಮತ್ತು ವಿಷಕಾರಿ ಹಾವುಗಳನ್ನು ನೋಡದ ಜನರು ಈಗೀಗ ತಮ್ಮ ಮನೆಯ ಸುತ್ತ ಮುತ್ತ ನೋಡುವಂತಾಗಿದ್ದು, ಆಹಾರಕ್ಕಾಗಿ ಮನೆಯ ಸಾಕು ಪ್ರಾಣಿ, ಕೋಳಿಗಳನ್ನು ಹಿಡಿದು ತಿನ್ನಲು ಮನೆಯಲ್ಲಿಯೇ ವಾಸ. ಈ ಪ್ರದೇಶದಲ್ಲಿ ಬೀದಿ ದೀಪ ಇಲ್ಲದೆ ಇರುವುದರಿಂದ ಸಂಜೆಯಾದ ಮೇಲೆ ಜನರು ತಿರುಗಾಡಲು ಹೆದರು ವುದಲ್ಲದೆ ಮನೆಯಿಂದ ಹೊರಗೆ ಬರಲು ಭಯಭೀತರಾಗಿದ್ದಾರೆ. ಇನ್ನಾ ದರೂ ಸ್ಥಳೀಯಾಡಳಿತ ತ್ಯಾಜ್ಯ ಎಸೆ ಯುವವರ, ವಿಷಕಾರಿ
ಹಾವನ್ನು ಬಿಟ್ಟು ಹೋಗುವವರ ಬಗ್ಗೆ ಗಮನ ಹರಿಸಿ ಕಾರ್ಯಾಚರಣೆ ನಡೆಸುದು ಸೂಕ್ತ.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

ಪತ್ನಿ, ಮಕ್ಕಳ ಕೊಂದು ಪತಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಪತ್ನಿ ಹಾಗೂ ಮೂವರು ಮಕ್ಕಳನ್ನು ಬರ್ಬರವಾಗಿ ಕಡಿದು ಕೊಲೆಗೈದ ವ್ಯಕ್ತಿ ತಾನೂ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಮಲಪ್ಪುರಂ ಜಿಲ್ಲೆಯ ವಳಿಕ್ಕಡವು ಎಂಬಲ್ಲಿ ಸಂಭವಿಸಿದೆ.
ವಳಿಕ್ಕಡವು ಪುನತ್ತಿಲ್ ನಿವಾಸಿ ಸೈದ ಅಲವಿ(೪೦) ಎಂಬವರು ತನ್ನ ಪತ್ನಿ ಹಸೀನಾ(೩೫), ಮಕ್ಕಳಾದ ಮೊಹ್ಸೀನಾ(೧೧), ಅನ್ಸಾರ್(೯), ಅಫ್ನಾಸ್(೭) ಎಂಬವರನ್ನು ಕಗ್ಗೊಲೆ ನಡೆಸಿದ ಬಳಿಕ ತಾನೂ ಬದುಕಿಗೆ ವಿದಾಯ ಹಾಡಿದ್ದಾರೆ. ನಿನ್ನೆ ಬೆಳಿಗ್ಗೆ ಮನೆಯ ಕೋಣೆಯಲ್ಲಿ ಇವರೆಲ್ಲರ ಮೃತದೇಹಗಳು ಪತ್ತೆಯಾಗಿವೆ.
ಈ ಪೈಕಿ ಹಸೀನಾ ಹಾಗೂ ಮೂವರು ಮಕ್ಕಳು ಮಾರಕ ಆಯುಧದ ಏಟಿಗೊಳಗಾಗಿ ಮೃತಪಟ್ಟ ಸ್ಥಿತಿಯಲ್ಲಿ ಛಿದ್ರವಿಛಿದ್ರವಾಗಿ ಶವಗಳು ಪತ್ತೆಯಾದರೆ ಮತ್ತೊಂದು ಕೋಣೆಯಲ್ಲಿ ಕೊರಳಿಗೆ ಉರುಳು ಬಿಗಿದ ಸ್ಥಿತಿಯಲ್ಲಿ ಸೈದಲವಿಯ ದೇಹ ಕಾಣಸಿಕ್ಕಿದೆ. ಇದರಿಂದಾಗಿ ಈತ ಪತ್ನಿ, ಮಕ್ಕಳನ್ನು ಕೊಲೆ ನಡೆಸಿದ ಬಳಿಕ ತಾನೂ ಆತ್ಮಹತ್ಯೆ ಮಾಡಿರುವುದಾಗಿ ನಂಬಲಾಗಿದೆ.
ಮೊನ್ನೆ ಮಧ್ಯರಾತ್ರಿ ಅಥವಾ ನಿನ್ನೆ ಮುಂಜಾನೆ ವೇಳೆ ಕೃತ್ಯ ಎಸಗಿರಬೇಕೆನ್ನಲಾಗಿದೆ. ರಾತ್ರಿ ಜಡಿಮಳೆ ಇದ್ದುದರಿಂದ ಕೃತ್ಯದ ಬಗ್ಗೆ ಯಾರಿಗೂ ಅರಿವಾಗಿರಲಿಲ್ಲ. ಕಳೆದೊಂದು ತಿಂಗಳಿನಿಂದ ಸೈದಲವಿ ಮಾನಸಿಕ ರೋಗ ಪೀಡಿತನಾಗಿದ್ದ ಎನ್ನಲಾಗಿದೆ. ಉನ್ನತ ಪೊಲೀಸಧಿಕಾರಿಗಳು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.

ಕುಡಿದು ತೂರಾಡಿದ ಪೇಜಾವರ ಮೊಮ್ಮಗ?

Posted by JAYAKIRANA Kirana on | 0 comments | Leave a comment...

ಮಣಿಪಾಲ: ಮಲ್ಪೆ ಬೀಚ್ ಸಮೀಪ ಕಂಠಪೂರ್ತಿ ಕುಡಿದು ತೂರಾಡುತ್ತಿದ್ದ ಪೇಜಾವರ ಶ್ರೀಗಳ ಮೊಮ್ಮಗನೆಂದು ಹೇಳಿಕೊಂಡಿದ್ದ ವ್ಯಕ್ತಿ ಯೊಬ್ಬನನ್ನು ಪೊಲೀಸರು ಬಂಧಿಸಿ ದ್ದಾರೆ.
ಮಲ್ಪೆ ಬೀಚ್ ಸಮೀಪ ಕುಡಿದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ, ಆತ ತಾನು ಪೇಜಾವರಶ್ರೀ ಮೊಮ್ಮಗನೆಂದು ಹೇಳಿದ್ದು, ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದರು. ೧೯೯೬ರಲ್ಲಿ ಈತ ಪೊಲೀಸ್ ಇಲಾಖೆಗೆ ಪರೀಕ್ಷೆ ಬರೆದಿದ್ದು, ಈತನನ್ನು ಸರಿಯಾಗಿ ವಿಚಾರಣೆ ನಡೆಸಿದಾಗ ಬೆಂಗಳೂರಿನ ವಾಸಿ ಶ್ರೀವಾಸ್ ಎಂದು ತಿಳಿದುಬಂದಿದೆ. ಪೇಜಾವರ ಅವರ ಮೊಮ್ಮಗನೇ ಎಂದು ಕೇಳಿದಾಗ, ಇಲ್ಲ ನಾನು ಅವರನ್ನು ಭೇಟಿಯಾಗಲು ಬಂದಿದ್ದೆ ಎಂದು ಮದ್ಯದ ಅಮಲಿನಲ್ಲಿ ಹೇಳಿರುವುದಾಗಿ ಮಲ್ಪೆ ಪೊಲೀಸರು ತಿಳಿಸಿದ್ದಾರೆ.

ವರದಕ್ಷಿಣೆ ಹಿಂಸೆ: ನಾಲ್ವರ ವಿರುದ್ದ ಕೇಸು

Posted by JAYAKIRANA Kirana on | 0 comments | Leave a comment...

ಉಡುಪಿ: ಗಂಡ ಹಾಗೂ ಗಂಡನ ಮನೆಯವರು ವರದಕ್ಷಿಣೆಗಾಗಿ ಮಾನ ಸಿಕ ಮತ್ತು ದೈಹಿಕ ಹಿಂಸೆ ನೀಡಿದ ಬಗ್ಗೆ ಮಣಿಪಾಲ ಸಮೀಪದ ಪೆರಂ ಳ್ಳಿಯ ಯುವತಿಯೋರ್ವಳು ನ್ಯಾಯಾ ಲಯದ ಮೂಲಕ ಖಾಸಗಿ ದಾವೆ ದಾಖಲಿಸಿದ್ದಾಳೆ.
ನ್ಯಾಯಾಲಯದ ಆದೇಶದ ಪ್ರಕಾರ ಪೆರಂಪಳ್ಳಿ ಬಳಿಯ ಆಚಾರಿ ಬೆಟ್ಟು ನಿವಾಸಿಗಳಾದ ಮೈಕೆಲ್(೩೫), ಜೆಸಿಂತಾ ಮಾರ್ಟಿಸ್(೪೫), ಎವಲಿನ್ ಡಿಸೋಜ ಹಾಗೂ ಜೆವಿತಾ(೩೦) ಇವರ ವಿರುದ್ದ ಮಣಿಪಾಲ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿ ಕೊಂಡಿದ್ದಾರೆ.
ಪೆರಂಪಳ್ಳಿ ಬಳಿಯ ಹಾಡಿಮನೆ ನಿವಾಸಿ ಶಾಲಿನಿ ಶರ್ಮಿಳಾ ಡಿಸೋಜ (೨೮) ಹಾಗೂ ಆಚಾರಿಬೆಟ್ಟು ನಿವಾಸಿ ಮೈಕೆಲ್ ಇವರಿಗೆ ೨೦೦೩ರ ಡಿ. ೧೪ ರಂದು ಪೆರಂಪಳ್ಳಿಯ ಫಾತಿಮಾ ಚರ್ಚ್‌ನಲ್ಲಿ ಮದುವೆಯಾಗಿತ್ತು. ಯುವತಿ ಮನೆಯವರು ಒಟ್ಟು ೧೫ ಪವನ್ ಚಿನ್ನಾಭರಣಗಳು ಮತ್ತು ೫ ಲಕ್ಷ ರೂ. ನಗದು ಹಣವನ್ನು ವರದಕ್ಷಿಣೆ ಯಾಗಿ ನೀಡಿದ್ದಲ್ಲದೆ, ೨ ಲಕ್ಷ ರೂ. ವೆಚ್ಚ ಮಾಡಿ ಶಾಲಿನಿಯನ್ನು ಮೈಕೆಲ್‌ಗೆ ಮದುವೆ ಮಾಡಿಕೊಟ್ಟಿದ್ದರು.
ಮದುವೆಯಾಗಿ ಮೈಕೆಲ್ ವಿದೇ ಶಕ್ಕೆ ಹೋಗಿದ್ದು, ಬಳಿಕ ಗಂಡನ ಮನೆ ಯವರು ಶಾಲಿನಿಗೆ ಮಾನಸಿಕ ಹಿಂಸೆ ನೀಡಲಾರಂಭಿಸಿದ್ದರು. ವಿದೇಶದಿಂದ ಬಂದ ಗಂಡನೂ ಶಾಲಿನಿಗೆ ವರದಕ್ಷಿಣೆ ಗಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾ, ತವರು ಮನೆಯಿಂದ ಹಣ ತರುವಂತೆ ಪೀಡಿಸಿ, ಬಳಿಕ ಬೆದರಿಸಿ ಕಾಗದಕ್ಕೆ ಸಹಿ ಪಡೆದ. ಹಣ ಕೊಡದೇ ಇದ್ದಾಗ ತವರು ಮನೆಗೆ ಕಳುಹಿಸಿದ ನೆಂದು ಶಾಲಿನಿ ಕೋರ್ಟಿಗೆ ನೀಡಿದ ಖಾಸಗಿ ದೂರಿನಲ್ಲಿ ಆರೋಪಿಸಿದ್ದಾಳೆ.

ಫೇಸ್‌ಬುಕ್‌ನಲ್ಲಿ ಮಾನಹಾನಿ: ದೂರು

Posted by JAYAKIRANA Kirana on | 0 comments | Leave a comment...

ಉಡುಪಿ: ವ್ಯಕ್ತಿಯೊಬ್ಬರ ಮುಖ ವನ್ನು ಅಶ್ಲೀಲ ದೇಹಕ್ಕೆ ಜೋಡಿಸಿ ಫೇಸ್‌ಬುಕ್‌ನಲ್ಲಿ ಹಾಕುವ ಮೂಲಕ ಮಾನಸಿಕ ಹಿಂಸೆ ಮತ್ತು ಮಾನಹಾನಿ ಮಾಡಿದ ಪ್ರಕರಣದ ಬಗ್ಗೆ ಅಪರಿಚಿತ ವ್ಯಕ್ತಿಯ ವಿರುದ್ದ ಮಣಿಪಾಲ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿ ಸಿಕೊಂಡಿದ್ದಾರೆ.
 ಕಳೆದ ಒಂದೂವರೆ ವರ್ಷದಿಂದ ಮಣಿಪಾಲ ಸಮೀಪದ ಅನಂತ ನಗರ ದಲ್ಲಿ ವಾಸವಾಗಿರುವ ದೇಬೋ ಪೂರ್ಣ ಘೋಷ್ ಎಂಬವರ ಹೆಸರಲ್ಲಿ ನಕಲಿ ಈ ಮೇಲ್ ಐಡಿ ಸೃಷ್ಟಿಸಿದ್ದ ಅಪರಿಚಿತ ವ್ಯಕ್ತಿಯೋರ್ವ, ೨೦೧೧ರ ಸೆಪ್ಟೆಂಬರ್ ೧೬ರಿಂದ ಘೋಷ್ ಅವರ ಮುಖಕ್ಕೆ ಅಶ್ಲೀಲ ದೇಹವನ್ನು ಜೋಡಿಸಿ ಫೇಸ್‌ಬುಕ್‌ನಲ್ಲಿ ಹಾಕುವ ಮೂಲಕ ಮಾನಹಾನಿ ಮಾಡಿದ್ದಾ ನೆಂದು ದೂರಲಾಗಿದೆ.

ನದಿಯಲ್ಲಿ ಮುಳುಗಿ ಯುವಕ ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ.
ಬೆಳ್ತಂಗಡಿ ತಾಲೂಕಿನ ಕರಿಮ ಣೇಲು ಗ್ರಾಮದ ಗಾಂಧಿನಗರ ನಿವಾಸಿ ಶೇಕರ್ (೨೨)ಮೃತ ವ್ಯಕ್ತಿ. ಅವರು ಮೇ ೧೦ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದರು. ಮೂರ್ಛೆ ರೋಗ ದಿಂದ ಬಳಲುತ್ತಿದ್ದ ಇವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆ ಇದೆ.

ಪ್ರೇಮಿ ಜತೆ ವಿವಾಹಕ್ಕೆ ಅಡ್ಡಿ: ಯುವತಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಪ್ರೇಮ ವೈಫಲ್ಯ ದಿಂದ ಮನನೊಂದ ಕಂಪ್ಯೂಟರ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂ ಡಿದ್ದಾಳೆ.
ಆದೂರು ಠಾಣಾ ವ್ಯಾಪ್ತಿಯ ಬೆಳ್ಳೂರು ಹೋಳಿಕಟ್ಟೆಯಲ್ಲಿ ಘಟನೆ ಸಂಭವಿಸಿದೆ. ಹೋಳಿಕಟ್ಟೆಯ ನಿವಾಸಿ ಕೂಲಿ ಕಾರ್ಮಿಕ, ಚೋಮಪ್ಪ-ರಾಜೀವಿ ದಂಪತಿ ಪುತ್ರಿ ಭವಾನಿ ಕುಮಾರಿ(೨೪) ಎಂಬಾಕೆ ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಮುಳ್ಳೇರಿ ಯದಲ್ಲಿ ಕಂಪ್ಯೂಟರ್ ವಿದ್ಯಾರ್ಥಿನಿ ಯಾಗಿದ್ದಾಳೆ. ಪದವಿ ಹಾಗೂ ಬಿಎಡ್ ಪದವಿ ಹೊಂದಿರುವ ಈಕೆ ಸಂಬಂಧಿಕ ಯುವಕನ ಜತೆಗೆ ಪ್ರೇಮ ಹೊಂದಿ ದ್ದಳೆನ್ನಲಾಗಿದೆ. ಆದರೆ ವಿವಾಹ ನಡೆಯಬಾರದ ಸಂಬಂಧವಾಗಿರುವುದರಿಂದ ಹಿರಿಯರು ಇದನ್ನು ವಿರೋಧಿಸಿದ್ದರು. ಈ ಚಿಂತೆಯೇ ಭವಾನಿಯ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. ಶವವನ್ನು ಉನ್ನತ ಮಹಜರಿಗೆ ಕಳುಹಿಸಲಾಯಿತೆಂದು ಪೊಲೀಸಧಿಕಾರಿಗಳು ತಿಳಿಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ

Posted by JAYAKIRANA Kirana on | 0 comments | Leave a comment...

ಉಡುಪಿ: ದೊಡ್ಡಣಗುಡ್ಡೆ ಸಮೀಪದ ಮಣೋಳಿಗುಜ್ಜಿಯಲ್ಲಿರುವ ಯಶಸ್ವಿನಿ ಕಾಂಪ್ಲೆಕ್ಸ್ ಪಕ್ಕದ ಸಾರ್ವಜನಿಕ ಸ್ಥಳಕ್ಕೆ ದಾಳಿ ನಡೆಸಿದ ಡಿಸಿಐಬಿ ಪೊಲೀಸರು, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ.
ದಿಲೀಪ್ ಕುಮಾರ್ ಪೂಜಾರಿ, ಅಶೋಕ ಕುಮಾರ್ ಹಾಗೂ ಅಶ್ಪಾಕ್ ಎಂಬವರು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದಾರೆ ಎಂದು ಲಭಿಸಿದ ಖಚಿತ ಮಾಹಿತಿಯ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿದ್ದರು.
ಬಂಧಿತ ಆರೋಪಿಗಳ ಕೈನಿಂದ ೧೭,೩೦೦ ರೂ. ನಗದು ಹಣ, ೪ ಮೊಬೈಲ್ ಹ್ಯಾಂಡ್‌ಸೆಟ್, ಒಂದು ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಮತ್ತು ಆಟಕ್ಕೆ ಉಪಯೋಗಿಸಿದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಾಲಕ ಕಾಣೆ

Posted by JAYAKIRANA Kirana on | 0 comments | Leave a comment...

ಉಡುಪಿ: ನಗರದ ಕೋರ್ಟ್ ರಸ್ತೆಯ ಮಂಜುನಾಥ ಟವರ್ಸ್‌ನಲ್ಲಿ ವಾಸವಾಗಿರುವ ದಸ್ತಾವೇಜು ಬರಹ ಗಾರ ಎಂ.ರಾಜೇಂದ್ರ ಶ್ಯಾನ್‌ಭಾಗ್ ಅವರ ಮಗ ಅನಂತರಾಮ (೧೫) ಎಂಬಾತ ಹೊಟೇಲ್‌ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವನು ಮನೆಗೂ ಮರಳದೆ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾದ ಪ್ರಕರಣ ಶುಕ್ರವಾರ ನಡೆದಿದೆ.
ಗೋಧಿ ಮೈ ಬಣ್ಣದ, ದುಂಡು ಮುಖದ ಅನಂತರಾಮ ಕನ್ನಡ ಮಾತ ನಾಡುತ್ತಾನೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಕಂಪೆನಿ ಮಾಲಕನಿಂದ ಯುವತಿ ಅತ್ಯಾಚಾರ

Posted by JAYAKIRANA Kirana on | 0 comments | Leave a comment...

ಜೈಪುರ: ಯುವತಿಯ ಮೇಲೆ ಸ್ಥಳೀಯ ಕಂಪೆನಿಯೊಂದರ ಮಾಲಕ ನಾಲ್ಕು ತಿಂಗಳ ಕಾಲ ಅತ್ಯಾಚಾರ ಮಾಡಿ, ಆಕೆಯನ್ನು ಗರ್ಭಿಣಿಯಾಗಿ ಸಿದ್ದು, ತನ್ನ ಕುಕೃತ್ಯ ಬಯಲಾಗುತ್ತದೆ ಎಂದು ಆತಂಕಕ್ಕೊಳಗಾಗಿ ಆಕೆಗೆ ಗರ್ಭಪಾತವನ್ನೂ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ದೆಹಲಿ ನಿವಾಸಿ, ೨೨ ವರ್ಷದ ಸೀಮಾ ಶರ್ಮಾ ಹೇಳುವಂತೆ ಆಕೆಯ ಬಾಸ್ ಮದುವೆಯಾಗುವುದಾಗಿ ನಂಬಿಸಿ, ಮೋಸ ಮಾಡಿದ್ದಾನೆ. ಈವೆಂಟ ಮ್ಯಾನೇಜ್ಮೆಂಟ್ ಸಂಸ್ಥೆಯೊಂ ದರ ಬಾಸ್ ಸಲ್ಮಾನ್ ಖಾನ್ ವಿರುದ್ಧ ಜೈಪುರದ ಲಾಲ ಕೋಠಿ ಪೊಲೀಸ್ ಠಾಣೆಗೆ ಸೀಮಾ ದೂರು ನೀಡಿದ್ದಾರೆ. ಸಲ್ಮಾನ್‌ನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ವರ್ಷದ ಹಿಂದೆ ಉದ್ಯೋಗಕ್ಕಾಗಿ ಜೈಪುರಕ್ಕೆ ಬಂದಾಗ ಸದರಿ ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ಅಲ್ಲಿ ನಾನು ಸಲ್ಮಾನ್ ಗೆಳೆಯರಾದೆವು. ಒಮ್ಮೆ ಪಾರ್ಟಿಯೊಂದಕ್ಕೆ ಹೋಗಿದ್ದಾಗ ಸಲ್ಮಾನ್ ನನಗೆ ಮತ್ತು ಬರಿಸುವ ಪಾನೀಯ ನೀಡಿ, ಪ್ರಜ್ಞೆ ತಪ್ಪಿಸಿದ. ಆ ವೇಳೆ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ.
ಅತ್ಯಾಚಾರ ಘಟನೆಯ ಬಳಿಕ ಸಲ್ಮಾನ್ ನಾವು ಮದುವೆಯಾಗೋಣ ಎಂದು ಹೇಳಿದ. ನಾವಿಬ್ಬರೂ ಒಂದಾಗಿರೋಣವೆಂದು ಪುಸಲಾಯಿಸಿದ. ಮುಂದೆ ನಮ್ಮಿಬ್ಬರ ನಡುವೆ ಲೈಂಗಿಕ ಸಂಪರ್ಕ ಮುಂದುವರಿಯಿತು. ಮುಂದೆ ಅವನು ನನ್ನನ್ನು ಮದುವೆಯಾಗುತ್ತಾನೆ ಎಂದು ನಂಬಿ, ಅವನ ಜತೆ ಮುಂಬೈ, ಚಂಡೀಗಢ, ಜಮ್ಮು ಅಲ್ಲಿ ಇಲ್ಲಿ ಸುತ್ತಾಡಿದೆ. ೨೦೧೧ರ ನವೆಂಬರಿನಲ್ಲಿ ನಾನು ದೆಹಲಿಯಲ್ಲಿರುವ ನನ್ನ ಮನೆಗೆ ವಾಪಸಾದೆ. ಆದರೆ ಫೋನ್ ಮೂಲಕ ಅವನ ಜತೆ ಸತತವಾಗಿ ಸಂಪರ್ಕದಲ್ಲಿದೆ.
ಈ ಮಧ್ಯೆ, ನಾನು ಗರ್ಭಿ ಣಿಯಾಗಿರುವುದು ಅರಿವಿಗೆ ಬಂದಿತು. ಆಗ ಸಲ್ಮಾನ, ನನ್ನ ಮನೆಯವರನ್ನು ಸಂಪರ್ಕಿಸಿ, ವಿಶ್ವಾಸದ ಮಾತುಗ ಳನ್ನಾಡುತ್ತಾ ನನ್ನ ಗರ್ಭವನ್ನು ತೆಗೆದು ಹಾಕಿಸಿದ. ಆಗ ಅವನು ವಿವಾಹಿ ತನಾಗಿದ್ದು, ಪತ್ನಿಯಿಂದ ವಿಚ್ಛೇದನ ಕೋರಿ ಕೋರ್ಟಿನಲ್ಲಿ ಅರ್ಜಿ ಹಾಕಿರುವುದು ತಿಳಿದುಬಂದಿತು. ಕಾನೂನುಬಾಹಿರವಾಗಿ ಗರ್ಭ ತೆಗೆಸಿರುವುದು ಮತ್ತು ಅತ್ಯಾಚಾರ ಪ್ರಕರಣಗಳಡಿ ಪೊಲೀಸರು ಈಗ ಸಲ್ಮಾನ್ನನ್ನು ಬಂಧಿಸಿದ್ದಾರೆ.

ಎರಡು ಮನೆಯಿಂದ ಲಕ್ಷಾಂತರ ಕಳವು

Posted by JAYAKIRANA Kirana on | 0 comments | Leave a comment...

ವಿಟ್ಲ: ಶುಕ್ರವಾರ ತಡರಾತ್ರಿ ಎರಡು ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ವಿಟ್ಲ ಸಮೀಪದ ಕಂಬಳಬೆಟ್ಟು ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ವಿಟ್ಲ ಸಮೀಪದ ಕಂಬಳಬೆಟ್ಟು ಹಾಜಿ ಮೊದಿನ್ ಶಾಫಿ ಅವರ ಮಗಳ ನಿಶ್ಚಿತಾರ್ಥಕ್ಕೆಂದು ಇರಿಸಿದ್ದ ೧೧ಲಕ್ಷ ರೂ. ಮೌಲ್ಯದ ನಗ-ನಗದು ಹಾಗೂ ಅದೇ ಪರಿಸರ ಕರೀಂ ಅವರ ಮನೆಯಿಂದ ೫೦ ಸಾವಿರ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿದ್ದು, ಇದರ ಒಟ್ಟು ಮೌಲ್ಯ ೧೧ಲಕ್ಷ ೫೦ ಸಾವಿರ ರೂ, ಎಂದು ಅಂದಾಜಿಸಲಾಗಿದೆ. ಚಿನ್ನಾಭರಣದ ಒಟ್ಟು ಮೌಲ್ಯ ೫೦ಸಾವಿರ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕರೀಂ ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ವಿಷಯ ತಿಳಿಯು ತ್ತಿದ್ದಂತೆ ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ ಪ್ರಭಾಕರ್, ಪುತ್ತೂರು ಎ.ಎಸ್.ಪಿ ಅನುಚೇತ್, ಬಂಟ್ವಾಳ ವೃತ್ತ ನಿರೀಕ್ಷಕರಾದ ಅನಿಲ್ ಎಸ್ ಕುಲಕರ್ಣಿ, ವಿಟ್ಲ ಠಾಣಾಧಿಕಾರಿ ರಕ್ಷಿತ್ ಎ.ಕೆ. ಭೇಟಿ ನೀಡಿದ್ದರು. ಮಂಗಳೂರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ತಂದೆ-ಮಗಳಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಉಡುಪಿ: ಜಾಗದ ಗಡಿ ಗುರುತಿಗೆ ಹಾಕಲಾಗಿದ್ದ ಕಲ್ಲು ಕಂಬಗಳನ್ನು ದೂಡಿ ಹಾಕಿದ್ದನ್ನು ಪ್ರಶ್ನಿಸಿದ ತಂದೆ ಹಾಗೂ ಮಗಳ ಮೇಲೆ ಸಹೋದರ ರಿಬ್ಬರು ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿದ ಪ್ರಕರಣ ಕೊಡವೂರು ಗ್ರಾಮದ ಜೇಮ್ಸ್ ಕಂಪೌಂಡ್‌ನಲ್ಲಿ ಶುಕ್ರವಾರ ಬೆಳಗ್ಗೆ ಗಂಟೆ ೮.೪೫ಕ್ಕೆ ನಡೆದಿದೆ.
ಇಲ್ಲಿನ ಡೆನ್ನಿಸ್ ಜೋಸೆಫ್ ಫೆರ್ನಾಂಡಿಸ್(೬೬) ಹಾಗೂ ನೆರೆಮ ನೆಯ ಹಿಲ್ಡಾ ದಾಂತಿಯವರಿಗೂ ಜಾಗದ ವಿಚಾರದಲ್ಲಿ ತಕರಾರು ಇತ್ತೆನ್ನಲಾಗಿದೆ. ಹಿಲ್ಡಾ ಹಾಗೂ ಇವರ ತಮ್ಮ ರೋನಿ ಫೆರ್ನಾಂಡಿಸ್ ಬಂದು ತನಗೆ ಬೈದುದಲ್ಲದೆ, ಗಡಿ ಕಲ್ಲುಗಳನ್ನು ದೂಡಿ ಹಾಕಿದರು. ಇದನ್ನು ಪ್ರಶ್ನಿಸಿದಾಗ ತನಗೆ ಹಾಗೂ ಮಗಳ ಮೇಲೆ ಹಲ್ಲೆಗೆ ಮುಂದಾದುದು ಅಲ್ಲದೆ, ಜೀವ ಬೆದರಿಕೆ ಹಾಕಿದರೆಂದು ಡೆನ್ನಿಸ್ ಆರೋಪಿಸಿದ್ದಾರೆ.

ಓಮ್ನಿ ಡಿಕ್ಕಿ: ಬೈಕ್ ಸವಾರಗೆ ಗಾಯ

Posted by JAYAKIRANA Kirana on | 0 comments | Leave a comment...

ಉಡುಪಿ: ಬೈಕ್‌ನ ಹಿಂಬದಿಗೆ ಮಾರುತಿ ಓಮ್ನಿ ಡಿಕ್ಕಿ ಹೊಡೆದ ಪರಿ ಣಾಮವಾಗಿ ಬೈಕ್ ಸವಾರ ಗಾಯ ಗೊಂಡು ಖಾಸಗಿ ಆಸ್ಪತ್ರೆಗೆ ದಾಖ ಲಾದ ಘಟನೆ ಶುಕ್ರವಾರ ಸಂಜೆ ೬ ಗಂಟೆಗೆ ಉಡುಪಿಯ ಕರಾವಳಿ ಜಂಕ್ಷನ್ ಪಕ್ಕ ಸಂಭವಿಸಿದೆ. ಆದಿ ಉಡುಪಿ ಸಮೀಪದ ಪಂದುಬೆಟ್ಟುವಿ ನ ಪ್ರಸಾದ್ ಎಸ್. ಎಂಬವರೇ ಗಾಯಾಳು.

ಹರಾಜು ನೆಪದಲ್ಲಿ ಭೂಮಿ ಮಾರಾಟ: ಅಧಿಕಾರಿಯ ಸಹಿತ ೮ ಜನರ ವಿರುದ್ದ ಕೇಸು

Posted by JAYAKIRANA Kirana on | 0 comments | Leave a comment...

ಉಡುಪಿ: ಒಂದೂವರೆ ಕೋಟಿ ರೂ. ಮೌಲ್ಯದ ಭೂಮಿಯನ್ನು ಕುಂದಾಪುರ ಕೋ-ಆಪರೇಟಿವ್ ಸೊಸೈಟಿಯ ಸಹಾಯಕ ರಿಜಿಸ್ಟ್ರಾರ್ ಅವರು ಹರಾಜು ನೆಪದಲ್ಲಿ ಮಾರಾಟ ಮಾಡಿ ಮೋಸ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಯೊಂದು ದಾಖಲಾಗಿದ್ದು, ನ್ಯಾಯಾಲ ಯದ ಆದೇಶದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಮೊಕದ್ದಮೆ ದಾಖಲಾಗಿದೆ.
ಮುಂಬೈನ ಅಂಧೇರಿಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಮೋಹನ ವಿ.ಶೆಟ್ಟಿ ಅವರಿಗೆ ಕಿದಿ ಯೂರು ಗ್ರಾಮದ ಸರ್ವೆ ನಂಬ್ರ ೫೩/೬ ರಲ್ಲಿ ೫೦ ಸೆಂಟ್ಸ್ ಮತ್ತು ಸರ್ವೆ ನಂಬ್ರ ೫೩/೧೦ ರಲ್ಲಿ ೧೨ ಸೆಂಟ್ಸ್ ಭೂಮಿ ಇದ್ದು, ೧೯೯೯ರ ಮಾರ್ಚ್ ೧೭ರಂದು ಈ ಭೂಮಿಯನ್ನು ಅಡಮಾನವಾಗಿ ಇರಿಸಿ ಉಡುಪಿಯ ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕಿನಿಂದ ೫ ಲಕ್ಷ ರೂ. ಸಾಲ ಪಡೆದಿದ್ದರು ಎನ್ನಲಾ ಗಿದೆ. ಈ ಸಮಯದಲ್ಲಿ ಭೂಮಿಯ ಮೌಲ್ಯ ೧೦ ಲಕ್ಷ ರೂ. ಆಗಿತ್ತು ಎಂದು ಹೇಳಲಾಗಿದೆ.
ಕುಂದಾಪುರದ ಕೋ-ಆಪರೇ ಟಿವ್ ಸೊಸೈಟಿಯ ಸಹಾಯಕ ರಿಜಿಸ್ಟ್ರಾರ್ ಕೆ.ಜಿ.ಪರಮೇಶ್ ಚಂದ್ರ ಜೈನ್ ಹಾಗೂ ಇತರ ೮ ಜನರು ಸೇರಿ ಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಂಡು ಹರಾಜು ಹಾಕುವ ನೆಪದಲ್ಲಿ ೫೦ ಲಕ್ಷ ರೂ. ಗಳಿಗೆ ಮಾರಾಟ ಮಾಡಿ ತನಗೆ ಮೋಸ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಭೂಮಿ ಮಾರಾಟ ಮಾಡುವ ಸಂದರ್ಭದಲ್ಲಿ ಆರೋಪಿಗಳು ಉಪ ನೋಂದಣಾಧಿಕಾರಿಗಳ ಕಚೇರಿ ಯಿಂದ ಭೂಮಿಯ ಮೌಲ್ಯದ ಬಗೆಗಿನ ಚಾರ್ಟ್‌ನ್ನು ಪಡೆದುಕೊಂಡಿರಲಿಲ್ಲ ವೆಂದೂ ಅವರು ದೂರಿದ್ದಾರೆ.
ಭೂಮಿಯನ್ನು ಹರಾಜು ಹೆಸರಲ್ಲಿ ಪಡೆದುಕೊಂಡ ಆರೋಪಿ ಬಳಿಕ ಹೀಗೆ ಪಡೆದುಕೊಂಡ ಭೂಮಿಯಲ್ಲಿನ ಒಂದು ಭಾಗವನ್ನು ಪ್ರಗತಿ ಯು.ಶೆಟ್ಟಿ ಎಂಬವರಿಗೆ ಗಿಫ್ಟ್ ಡೀಡ್ ಮಾಡಿದ್ದಾನೆ ಎಂದು ದೂರಲಾಗಿದೆ. ಈ ನಡುವೆ ಮೋಹನ್ ಶೆಟ್ಟಿ ಅವರು ರಾಜ್ಯ ಹೈ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.

ಸ್ಕೂಟರ್‌ನಿಂದ ಬಿದ್ದು ಸವಾರ ಸಾವು

Posted by JAYAKIRANA Kirana on | 0 comments | Leave a comment...

 ಮಂಗಳೂರು: ಕಾಪು ಇಲ್ಲಿನ ಕೈಪುಂಜಾಲಿನಿಂದ ಮಲ್ಪೆ ಬಂದರಿಗೆ ಶನಿವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ಕೈನೆಟಿಕ್ ಹೋಂಡಾ ಸ್ಕೂಟರ್ ಉದ್ಯಾವರ ಕನಕೋಡ ಬಳಿ ಸ್ಕಿಡ್ ಆಗಿ ಬಿದ್ದು ಸವಾರ ಮೃತಪಟ್ಟಿ ದ್ದಾರೆ. ಕೈಪುಂಜಾಲು ಮಟ್ಟು ನಿವಾಸಿ ಉದಯಮೆಂಡನ್ (೫೦) ಮೃತ ಪಟ್ಟ ವರು . ಕೈನೆಟಿಕ್‌ಗೆ ನಾಯಿ ಅಡ್ಡ ಬಂದ ಪರಿಣಾಮ ಅಪಘಾತ ಸಂಭವಿಸಿದೆ.

ವಾಹನವೊಂದು ಡಿಕ್ಕಿ: ಮಹಿಳೆಗೆ ಗಾಯ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮುಲ್ಕಿಯ ಪಾವಂಜೆ ಬಳಿ ಬಸ್ ನಿಲ್ದಾಣದಿಂದ ಇಳಿದು ರಸ್ತೆಯ ಬದಿ ನಿಂತಿದ್ದ ಮಹಿ ಳೆಯೊಬ್ಬರಿಗೆ ಪಿಕ್‌ಅಪ್ ವಾಹನ ವೊಂದು ಡಿಕ್ಕಿ ಹೊಡೆದು ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ. ಪಾವಂಜೆಯ ವನಿತಾ ಗಾಯಗೊಂಡವರು. ಅವರನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಂಬ ಏರಿದ್ದ ಲೈನ್‌ಮೆನ್ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ದುರಸ್ಥಿ ಕಾರ್ಯ ಕ್ಕಾಗಿ ವಿದ್ಯುತ್ ಕಂಬಕ್ಕೆ ಏರಿದ್ದ ಲೈನ್ ಮೆನ್ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ವಾಮಂ ಜೂರು ಚರ್ಚ್ ಬಳಿ ಸಂಭವಿಸಿದೆ.
ಕಾವೂರು ನಿವಾಸಿ ಜೇರಾಲ್ಡ್ ವೇಗಸ್ ಮೃತ ವ್ಯಕ್ತಿ. ವಾಮಂಜೂರು ಚರ್ಚ್ ಬಳಿ ನಿನ್ನೆ ರಾತ್ರಿ ವಿದ್ಯುತ್ ಕಡಿತವಾದುದರಿಂದ ಸ್ಥಳೀಯರು ಮೆಸ್ಕಾಂಗೆ ದೂರು ಸಲ್ಲಿಸಿದ್ದರು. ಅದರಂತೆ ದುರಸ್ಥಿ ಕಾರ್ಯಕ್ಕೆ ಬಂದಿದ್ದ ಜೆರಾಲ್ಡ್ ಹತ್ತಿರದ ವಿದ್ಯುತ್ ಕಂಬ ಏರಿ ಪರಿಶೀಲನೆ ನಡೆಸುತ್ತಿದ್ದಾಗ ಅಕಸ್ಮಿಕವಾಗಿ ವಿದ್ಯುತ್ ಹರಿದು ಆಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.
ವಿದ್ಯುತ್ ಆಘಾತಕ್ಕೆ ಒಳಗಾದ ಜೆರಾಲ್ಡ್ ಕಂಬದಲ್ಲಿಯೇ ಸಿಲುಕಿದ್ದರು ಎಂದು ಹೇಳಲಾಗಿದೆ.

ಕೊಲೆ: ಮೂವರು ಆರೋಪಿಗಳು ವಶಕ್ಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಧರ್ಮಸ್ಥಳ ಸಮೀಪ ಕೆಲ ದಿನಗಳ ಹಿಂದೆ ನಡೆದ ಶಶೀಂದ್ರನ್‌ರವರ ಕೊಲೆ ಪ್ರಕರಣದ ಹಂತಕರ ಸುಳಿವು ಪತ್ತೆ ಹಚ್ಚಿರುವ ಪೊಲೀಸರು ಶನಿವಾರ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಮರಳು ಮಾಫಿಯಾ, ಮದ್ಯ ಮಾರಾಟದ ವಿಷಯದಲ್ಲಿ ಈ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಆರೋಪಿಗಳ ವಿಚಾರಣೆಯ ಬಳಿಕವಷ್ಟೇ ಸತ್ಯ ಬಯಲಾಗಲಿದೆ.

ಗಡಿಯಿಂದ ದೂರದಲ್ಲಿ ಮೀನು ಹಿಡಿಯಲು ಅವಕಾಶ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಕನ್ನಡಿಗ ಮೀನುಗಾರರ ಮೇಲೆ ನಡೆಯುತ್ತಿದ್ದ ಹಲ್ಲೆ, ದೌರ್ಜನ್ಯ ಪ್ರಕರಣಗಳಿಗೆ ಅಂತ್ಯ ಹಾಡಲು ನಡೆಸ ಲಾದ ಮಾತುಕತೆ ಫಲ ನೀಡಿದ್ದು, ಸಮುದ್ರ ತೀರದಿಂದ ೧೨ನಾಟಿಕಲ್ ಒಳಗೆ ಮೀನು ಹಿಡಿಯುವಂತಿಲ್ಲ ಎಂಬ ಸರಕಾರದ ನಿಯಮ ಪಾಲಿಸಲು ರತ್ನಾಗಿರಿಯ ಜಿಲ್ಲಾಧಿಕಾರಿ ರಾಜೀವ್ ಜಾಧವ್ ತಿಳಿಸಿದ್ದಾರೆ.

ಕುಸಿದು ಬಿದ್ದು ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಹೊಸಂಗಡಿಯಲ್ಲಿ ಶನಿವಾರ ನಡೆದ ಸ್ನೇಹ ಸಂದೇಶ ಯಾತ್ರೆಯ ಉದ್ಘಾಟನಾ ಸಮಾರಂ ಭದಲ್ಲಿ ಭಾಗವಹಿಸುತ್ತಿದ್ದ ಸಂದರ್ಭ ಕುಸಿದು ಬಿದ್ದು ಗಂಭೀರ ಸ್ಥಿತಿಯಲ್ಲಿ ನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚೌಕಿ ಕುನ್ನಿಲ್ ಕೆ.ಪಿ. ಮಹಮ್ಮದ್(೪೬) ಎಂಬವರು ಚಿಕಿತ್ಸ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ.
ಅಟೊರಿಕ್ಷಾ ಚಾಲಕರಾಗಿದ್ದ ಅವರು ಕಾಂಗ್ರೆಸ್‌ನ ಸಕ್ರಿಯ ಕಾರ್ಯ ಕರ್ತರಾಗಿದ್ದರು. ಪ್ರವಾಸಿ ಕಾಂಗ್ರೆಸ್ ಮಂಡಲ ಸಮಿತಿ ಕಾರ್ಯದರ್ಶಿ ಮತ್ತು ಕಾಂಗ್ರಸ್‌ನ ಮೊಗ್ರಾಲ್ ಪುತ್ತೂರು ೧೨ ನೇ ವಾರ್ಡ್ ಸಮಿತಿ ಅಧ್ಯಕ್ಷರಾಗಿದ್ದರು.
ಇವರು ಹೊಸಂಗಡಿಯಲ್ಲಿ ನಡೆ ಯುತ್ತಿದ್ದ ಸ್ನೇಹ ಸಂದೇಶ ಯಾತ್ರೆಯ ಉದ್ಘಾಟನಾ ಸಮಾ ರಂಭದಲ್ಲಿ ಭಾಗವಹಿಸುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ.

ಪತ್ನಿಗೆ ಹೊಡೆದ ವ್ಯಕ್ತಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪತ್ನಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ಮೇಲೆ ತಂಡವೊಂಡು ಥಳಿಸಿದ ಘಟನೆ ಪುಂಜಾಲಕಟ್ಟೆ ಬಳಿಯ ಹೋಕ್ವಾಡಿಗೋಳಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಮಹಮ್ಮದ್ ಫಾರೂಕ್ (೬೦) ಎಂಬಾತನ ಮೇಲೆ ಸ್ಥಳೀಯರೇ ಆದ ಮೊಹಮ್ಮದ್, ರಫೀಕ್, ನಾಸಿರ್, ರಝಾಕ್ ಮತ್ತಿತರರು ಮನೆಗೆ ನುಗ್ಗಿ ದೊಣ್ಣೆಯಿಂದ ಹಲ್ಲೆ ನಡೆಸಿರುವುದಾಗಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾಯಗೊಂಡಿರುವ ಫಾರೂಕ್ ಮಂಗಳೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಫಾರೂಕ್ ಇತ್ತೀಚೆಗೆ ಪತ್ನಿಗೆ ಹಲ್ಲೆ ನಡೆಸಿದ್ದು, ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಎರಡು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡು ಮನೆಗೆ ಬಂದಾತ ಮತ್ತೆ ಪತ್ನಿಯೊಂದಿಗೆ ಜಗಳವಾಡಿದ್ದ. ಇದರಿಂದ ಕುಪಿತರಾದ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದರು.

ಮನೆಗೆ ನುಗ್ಗಿ ೧೦ ಸಾವಿರ ರೂ. ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ತಣ್ಣೀರುಬಾವಿಯ ಡರ್ಬಿ ಉದಯ ಮ್ಯಾನೇಜರ್ ಅವರ ಮನೆಯಿಂದ ಮೇ ೯ರಿಂದ ೧೧ರ ಮಧ್ಯೆ ೧೦ ಸಾವಿರ ರೂ. ಕಳವಾದ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆಯ ಹಂಚು ತೆಗೆದು ಕಳ್ಳರು ಈ ಕಳವು ನಡೆಸಿದ್ದಾರೆ.

ಮಟ್ಕಾ: ಓರ್ವನ ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ತಾಲೂಕಿನ ಸಿದ್ದಾಪುರ ಜಂಕ್ಷನ್ ಬಳಿ ಗೂಡಂಗಡಿಯೊಂದರಲ್ಲಿ ಮಟ್ಕಾ ಜುಗಾರಿ ನಿರತ ಅಕ್ಕುಂಜೆ ಜನ್ಸಾಲ್ ನಿವಾಸಿ ಉದಯ ಭಂಡಾರಿ ಎಂಬಾತನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ಜುಗಾರಿಗೆ ಉಪಯೋಗಿಸಿದ್ದ ಪರಿಕರಗಳನ್ನು ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಟ್ಟೆ ತರಲೆಂದು ಹೋದಾತ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸುರತ್ಕಲ್ ಕಾಶಿ ಮಠದಲ್ಲಿರುವ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಗಿರೀಶ್ ಕಾಮತ್ (೪೪) ಎಂಬವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ನಾಪತ್ತೆಯಾದ ಗಿರೀಶ್ ಕೆಲವು ಸಮಯಗಳಿಂದ ಸುರತ್ಕಲ್‌ನ ಅಂಗಡಿ ಯೊಂದರಲ್ಲಿ ಕೆಲಸಕ್ಕಿದ್ದರು. ಮೆ.೧೦ ರಂದು ಬಟ್ಟೆ ಅಂಗಡಿಗೆ ಹೋಗಿ ಬಟ್ಟೆ ತರುತ್ತೇನೆ ಎಂದು ಮನೆಮಂದಿಯಲ್ಲಿ ಹೇಳಿ ಹೋದವರು ಮನೆಗೆ ಹಿಂತಿ ರುಗಿ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅವರ ಅಣ್ಣ ಸುರೇಂದ್ರ ಕಾಮತ್ ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಯುವತಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ಸುರತ್ಕಲ್ ಸಮೀಪದ ಕುಳಾಯಿ ಮಾಟೆಗುರಿ ನಿವಾಸಿ ಸುಮಿತ್ರ (೨೬) ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಗ್ಗು ಮೇಸ್ತ್ರಿ ಎಂಬವರ ಪುತ್ರಿಯಾಗಿರುವ ಸುಮಿತ್ರ ನನಗೆ ತಾಯಿ ಬಯ್ಯುತ್ತಾರೆ ಎಂದು ಚೀಟಿಯೊಂದ ರಲ್ಲಿ ಬರೆದಿಟ್ಟು ಮೇ ೧೧ರಂದು ನಾಪತ್ತೆ ಯಾಗಿದ್ದಾಳೆ. ಆಕೆ ಬರೆದಿಟ್ಟ ಚೀಟಿ ಪೊಲೀಸರಿಗೆ ಸಿಕ್ಕಿದೆ. ಎಸ್‌ಎಸ್‌ಎಲ್‌ಸಿ ಮುಗಿಸಿ ಮನೆಯಲ್ಲೇ ಇದ್ದ ಈಕೆಗೆ ತಾಯಿ ದಿನಾ ಕಿರಿಕಿರಿ ಮಾಡುತ್ತಿ ದ್ದರೆನ್ನಲಾಗಿದ್ದು, ಈ ಕಾರಣದಿಂದ ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.

ಭಾರೀ ಸಿಡಿಲು ಮಳೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಪ್ಪಿನಂಗಡಿ, ಕಡಬ, ನೆಲ್ಯಾಡಿ ಪರಿಸರದಲ್ಲಿ ಶನಿವಾರ ಸಂಜೆ ಭಾರೀ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ಸುರಿದ ಮಳೆ ಸುಮಾರು ಒಂದುವರೆ ಗಂಟೆ ತನಕ ನಿರಂತರವಾಗಿ ಸುರಿದು ತಂಪಿನ ವಾತಾವರಣ ಮೂಡಿಸಿತು. ಸಿಡಿಲ ಹೊಡೆತಕ್ಕೆ ಸಿಲುಕಿ ವಿದ್ಯುತ್ ಕೈಕೊಟ್ಟಿದೆ. ಹಲವಾರು ಮನೆಗಳ ವಿದ್ಯುತ್ ಉಪಕರಣಗಳು ಹಾನಿಯಾಗಿದೆ. ಸುಳ್ಯದಲ್ಲಿ ಸಾಧಾರಣ ಮಳೆಯಾಗಿದೆ. ಮಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ.

ಒನ್‌ಟುಫೈವ್ ಸರ್ವೆ: ಜಿಲ್ಲೆಗೆ ವಿನಾಯಿತಿ ನೀಡಲು ಕೆಡಿಪಿ ಸದಸ್ಯರ ಆಗ್ರಹ

Posted by JAYAKIRANA Kirana on | 0 comments | Leave a comment...

ಪುತ್ತೂರು: ಒನ್‌ಟುಫೈವ್ ಸರ್ವೆ ಯಿಂದಾಗಿ ಪ್ಲಾಟಿಂಗ್ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದ್ದು, ಇದರಿಂದಾಗಿ ಬಡಜನತೆಗೆ ಸಮಸ್ಯೆಯಾಗುತ್ತಿದೆ ಎಂದು ಕೆಡಿಪಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿ ಜಿಲ್ಲೆಯ ಮಟ್ಟಿಗಾದರೂ ಇದಕ್ಕೆ ವಿನಾಯಿತಿ ನೀಡುವಂತೆ ಮುಖ್ಯ ಮಂತ್ರಿಗಳಿಗೆ ಮನವಿಮಾಡಬೇಕು ಎಂದು ಅವರು ಆಗ್ರಹಿಸಿದರು.
ಪುತ್ತೂರು ತಾ. ಪಂ. ಸಭಾಂಗಣ ದಲ್ಲಿ ಶುಕ್ರವಾರ ಶಾಸಕಿ ಮಲ್ಲಿಕಾ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪುತ್ತೂರು ತಾಲೂಕು ಕೆಡಿಪಿ ತ್ರೈಮಾ ಸಿಕ ಸಭೆಯಲ್ಲಿ ಸದಸ್ಯರಿಂದ ಈ ಆಗ್ರಹ ವ್ಯಕ್ತವಾಯಿತು.
ಒನ್‌ಟುಫೈವ್ ಸರ್ವೆಯ ಕುರಿತು ಮಾಹಿತಿ ನೀಡಿದ ತಹಸೀಲ್ದಾರ್ ಡಾ| ದಾಸೇ ಗೌಡ ಅವರು ಬೇರೆ ಬೇರೆ ಪೋಡಿ ಕಡತಗಳ ಪ್ಲಾಟಿಂಗ್ ನಡೆ ಯುತ್ತಿದೆ. ವರ್ಗ ಸ್ಥಳ, ದರ್ಕಾಸು ಭೂಮಿಯ ಪ್ಲಾಟಿಂಗ್ ವಿಚಾರದಲ್ಲಿ ಯಾವುದೇ ಸಮಸ್ಯೆಯಲ್ಲಿ. ಆದರೆ ಅಕ್ರಮ-ಸಕ್ರಮ ಯೋಜನೆಯಡಿ ಮಂಜೂರಾದ ಭೂಮಿ ಮಾರಾಟ ಸಂದರ್ಭದಲ್ಲಿ ಮಾತ್ರ ಒನ್‌ಟುಫೈವ್ ನಕ್ಷೆ ಅಗತ್ಯ ಎಂದು ಸರಕಾರದ ಸುತ್ತೋ ಲೆಯಲ್ಲಿ ತಿಳಿಸಲಾಗಿದೆ ಎಂದರು.
ಆಸ್ಪತ್ರೆಯಲ್ಲಿ ಅವ್ಯವಸ್ಥೆ;
ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸೇವೆಗಳು ರೋಗಿಗಳಿಗೆ ಲಭ್ಯವಿಲ್ಲ, ಅಲ್ಲಿನ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ, ಎಂದು ಜಿಲ್ಲಾ ಪಂಚಾಯತ್ ಸದಸ್ಯ ಎಂ.ಪಕೀರ ಆರೋಪಿಸಿದರು. ಆಸ್ಪತ್ರೆಯ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಸಮ ಸ್ಯೆಗೆ ಪರಿಹಾರದ ಕೆಲಸವಾಗಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಕೇಶವ ಗೌಡ ಬಜತ್ತೂರು ಹೇಳಿದರು.

ಪಣಂಬೂರು: ಮುಂದುವರಿದ ಶೋಧ

Posted by JAYAKIRANA Kirana on | 0 comments | Leave a comment...

ಮಂಗಳೂರು: ಫಲ್ಗುಣಿ ನದಿಗೆ ಆಕಸ್ಮಿಕವಾಗಿ ಉರುಳಿಬಿದ್ದು ನಾಪತ್ತೆ ಯಾಗಿರುವ ಗಣೇಶಪುರ ನಿವಾಸಿ ಶ್ರೀನಿವಾಸ ಪಿ. ಅವರ ಪತ್ತೆಗಾಗಿ ಶನಿವಾ ರವೂ ಬಿರುಸಿನ ಕಾರ್ಯಾಚರಣೆ ನಡೆಯಿತು.
ಮುಳುಗುತಜ್ಞರು ನದಿಯ ತಳಭಾ ಗದಲ್ಲೂ ಶೋಧ ಕಾರ್ಯ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಪಣಂಬೂರು ಪೊಲೀಸರು ತಿಳಿಸಿದ್ದಾರೆ. ಕೂಳೂರು-ಕಿಸ್ಕೋ ಮಾರ್ಗದಲ್ಲಿ ಟ್ಯಾಂಕರ್‌ವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ದ್ವಿಚಕ್ರ ವಾಹನದ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆದ ಸಂದರ್ಭ ಶ್ರೀನಿವಾಸ್‌ರವರು ನೀರಿಗೆ ಬಿದ್ದು ಕಾಣೆಯಾಗಿದ್ದರು ಎಂದು ಅವರ ಪತ್ನಿ ದೂರು ನೀಡಿದ್ದು ಅದರಂತೆ ಶೋಧ ಕಾರ್ಯ ನಡೆಯುತ್ತಿದೆ.

ಮೇಜರ್‌ಗಳನ್ನೇ ಥಳಿಸಿದ ಯೋಧರು

Posted by JAYAKIRANA Kirana on | 0 comments | Leave a comment...

ಲೇಹ್: ಸೇನಾ ರೆಜಿಮೆಂಟ್‌ನಲ್ಲಿ ಸೇನಾಧಿಕಾರಿಗಳ ಗುಂಪು ಮತ್ತು ಯೋಧರ ನಡುವೆ ಮಾರಾಮಾರಿ ನಡೆದು, ಬಳಿಕ ಕುಪಿತ ಯೋಧರು ಶಸ್ತ್ರಾಗಾರವನ್ನು ವಶಕ್ಕೆ ತೆಗೆದುಕೊಂ ಡರು. ಘಟನೆ ಬಗ್ಗೆ ಸೇನೆ ಕೋರ್ಟ್ ತನಿಖೆಗೆ ಆದೇಶಿಸಿದೆ.
ಗುರುವಾರ ನ್ಯೋಮಾ ಉಪ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ೨೨೬ ಫೀಲ್ಡ್ ರೆಜಿಮೆಂಟ್‌ನ ಅಧಿಕಾರಿಗಳು ಮತ್ತು ಯೋಧರು ಗುಂಡೆಸೆತ ತರಬೇ ತಿಯನ್ನು ಪಡೆಯುತ್ತಿದ್ದರು. ಓರ್ವ ಆರ್ಡರ್ಲಿ ಮೇಜರ್ ಜತೆ ದುರ್ವರ್ತನೆ ತೋರಿದನು. ಆತನಿಗೆ ಮೇಜರ್ ಥಳಿಸಿದರು. ಆತನಿಗೆ ಯಾವುದೇ ವೈದ್ಯಕೀಯ ಉಪಚಾರ ಒದಗಿಸಲು ಮೇಜರ್ ಇತರ ಯೋಧರಿಗೆ ಅವಕಾಶ ನೀಡಲಿಲ್ಲ. ಇದು ಆತನ ಸಹೋದ್ಯೋ ಗಿಗಳನ್ನು ಕೆರಳಿಸಿತೆಂದು ಮೂಲಗಳು ತಿಳಿಸಿವೆ.
ಅಲ್ಲೇ ಪೊಲೀಸ್ ಅತಿಥಿ ಗೃಹದ ಲ್ಲಿದ್ದ ರೆಜಿಮೆಂಟ್‌ನ ಕಮಾಂಡಿಂಗ್ ಅಧಿಕಾರಿ ಕದಂ ಅವರಿಗೆ ಈ ಸುದ್ದಿ ತಲುಪಿ, ಅವರು ತತ್‌ಕ್ಷಣ ಸ್ಥಳಕ್ಕೆ ಧಾವಿಸಿದರು. ಅಲ್ಲಿನ ಪರಿಸ್ಥಿತಿಯನ್ನು ಮನಗಂಡು ಚಿಕಿತ್ಸೆ ಒದಗಿಸಲು ಒಪ್ಪದ ಮೇಜರ್‌ರತ್ತ ಕೂಗು ಹಾಕಿದರು. ಆದರೆ ಮೇಜರ್ ತನ್ನ ಐವರು ಸಹೋದ್ಯೋಗಿ ಅಧಿಕಾರಿಗಳೊಂದಿಗೆ ಕದಂ ಅವರನ್ನು ಮತ್ತು ಓರ್ವ ಕರ್ನಲ್‌ರನ್ನು ಯೋಧರ ಎದುರಿಗೇ ಥಳಿಸಿದರು. ಇದರಿಂದ ಯೋಧರ ಕೋಪ ಎಲ್ಲೆ ಮೀರಿತು. ಇತರ ಅಧಿಕಾರಿಗಳಿಗೆ ಬೆತ್ತದಿಂದ ಹೊಡೆದರು. ಕದಂ ಅವರನ್ನು ಲೇಹ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಈ ಮೂಲಗಳು ಹೇಳಿವೆ.
ಸುಮಾರು ೪೦ರಿಂದ ೫೦ ಯೋಧರು ಮೇಜರ್ ದರ್ಜೆ ಅಧಿಕಾರಿಗಳನ್ನು ಹುಡುಕಿ ಹೊಡೆಯ ಲಾರಂಭಿಸಿದರು. ಸಮೀಪದ ಶಿಬಿರದಲ್ಲಿ ಇಬ್ಬರು ಅಧಿಕಾರಿಗಳು ಅವರಿಗೆ ಸಿಕ್ಕರು. ಅವರಿಗೆ ಹೊಡೆತಗಳೂ ಬಿದ್ದವು. ಸ್ಥಳೀಯ ಪೊಲೀಸರ ಮಧ್ಯ ಪ್ರವೇಶದಿಂದ ಅವರಿಬ್ಬರು ಬಚಾವಾದರು. ಮೂವರು ಮೇಜರ್‌ಗಳು ಓಡಿ ತಪ್ಪಿಸಿಕೊಂಡಿದ್ದು, ಎಲ್ಲಿರುವರೆಂದು ಇನ್ನೂ ಪತ್ತೆಯಾಗಿಲ್ಲ. ಲೇಹ್‌ನಲ್ಲಿರುವ ೧೪ ಕೋರ್‌ನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಉದ್ವಿಗ್ನ ಪರಿಸ್ಥಿತಿ ಮಧ್ಯಾಹ್ನ ತಣ್ಣಗಾಯಿತು. ತೃತೀಯಯ ಇನ್‌ಫ್ಯಾಂಟ್ರಿ ವಿಭಾಗದ ಜನರಲ್ ಆಫೀಸರ್ ಇನ್ ಕಮಾಂಡ್ ಯೋಧರನ್ನು ಸಮಾಧಾನಗೊ ಳಿಸಿದರು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸೆಮೀಸ್ ಆಸೆ ಜೀವಂತವಾಗಿರಿಸಿದ ಚೆನ್ನೈ

Posted by JAYAKIRANA Kirana on | 0 comments | Leave a comment...

ಡೆಲ್ಲಿಗೆ ಮುಳುವಾದ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ
ಚೆನ್ನೈ: ಆಸ್ಟ್ರೇಲಿಯಾದ ದೈತ್ಯ ವೇಗಿ ಬೆನ್ ಹಿಲ್ಫೆನಾಸ್ ನಡೆಸಿದ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಇಲ್ಲಿ ಬಲಿಷ್ಠ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಒಂಬತ್ತು ವಿಕೆಟ್‌ಗಳ ಭರ್ಜರಿ ಅಂತರದಿಂದ ಕೈವಶ ಮಾಡಿಕೊಂಡಿದೆ. ಗೆಲುವಿನೊಂದಿಗೆ ಅಮೂಲ್ಯ ಎರಡು ಅಂಕ ಸಂಪಾದಿಸಿಕೊಂಡ ಚೆನ್ನೈನ ಪ್ಲೇಆಫ್ ಕನಸು ಇನ್ನೂ ಜೀವಂತಗೊಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಆರಂಭದಲ್ಲೇ ಆಘಾತ ಕಂಡಿತು. ಸ್ಫೋಟಕ ಆಟಗಾರರಾದ ವೀರೇಂದ್ರ ಸೆಹ್ವಾಗ್ (೪), ಡೇವಿಡ್ ವಾರ್ನರ್ (೮) ಹಾಗೂ ನಮನ್ ಓಜಾ (೩) ಮುಂತಾದ ಘಟಾನುಘಟಿಗಳ ವಿಕೆಟ್ ಕಳಕೊಂಡಾಗ ತಂಡ ತೀವ್ರ ಹಿನ್ನೆಡೆ ಕಂಡಿತು. ಈ ಎಲ್ಲಾ ಮೂರು ವಿಕೆಟ್ ಹಿಲ್ಫೆನಾಸ್ ಪಡೆದುಕೊಂಡರು. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಮಹೇಲಾ ಜಯವರ್ಧನೆ (೮) ಕೂಡ ಆಧಾರವಾಗಲಿಲ್ಲ. ಆದರೂ ಕೆಳ ಕ್ರಮಾಂಕದಲ್ಲಿ ವೇಣುಗೋಪಾಲ್ ರಾವ್ (೨೭) ಹಾಗೂ ನಗಾರ್ (೪೭) ಜೋಡಿ ಐದನೇ ವಿಕೆಟ್‌ಗೆ ನಡೆಸಿದ ೪೮ ರನ್‌ಗಳ ಉಪಯುಕ್ತ ಹಾಗೂ ಉತ್ತಮ ಜೊತೆಯಾಟ ನಡೆಸಿತು. ನಂತರ ಪಠಾಣ್ ಜೊತೆ ಸೇರಿದ ನಗಾರ್ ಆರನೇ ವಿಕೆಟ್‌ಗೆ ೪೨ ರನ್‌ಗಳ ಜೊತೆಯಾಟ ನಡೆಸಿ ಮೊತ್ತವನ್ನು ನೂರರ ಗಡಿ ದಾಟಿಸುವಲ್ಲಿ ಸಫಲರಾದರು. ಪರಿಣಾಮ ಡೆಲ್ಲಿ ನಿಗದಿತ ೨೦ ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೧೧೪ ರನ್‌ಗಳ ಮೊತ್ತ ಪೇರಿಸಿತು. ಮಾರಕ ಬೌಲಿಂಗ್ ದಾಳಿ ನಡೆಸಿದ ಹಿಲ್ಫೆನಾಸ್ ಕೇವಲ ೨೭ ರನ್ ನೀಡಿ ಮೂರು ವಿಕೆಟ್ ಪಡೆದುಕೊಂಡರು. ಆಲ್ಬಿ ಮೊರ್ಕೆಲ್ ಒಂದು ವಿಕೆಟ್ ಪಡೆದರು.
ಮೊತ್ತ ಬೆನ್ನತ್ತಿದ್ದ ಚೆನ್ನೈ ಈ ಭಾರಿ ಯಾವುದೇ ಅಪಾಯ ಎದುರಿಸಲಿಲ್ಲ. ಅದರಲ್ಲೂ ಮುರಳಿ ವಿಜಯ್ ಫಾರ್ಮ್‌ಗೆ ಮರಳಿರುವುದು ಅದಕ್ಕೆ ಉತ್ತಮ ಲಕ್ಷಣವಾಗಿದೆ. ಪರಿಣಾಮ ತಂಡ ೧೫.೨ ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ ೧೧೫ ರನ್ ಗಳಿಸಿ ಜಯಸಾಧಿಸಿತು. ವಿಜಯ್ (೪೮) ಹಾಗೂ ಮೈಕ್ ಹಸ್ಸಿ (೩೮) ಮೊದಲ ವಿಕೆಟ್‌ಗೆ ೭೪ ರನ್‌ಗಳ ಜೊತೆಯಾಟ ನಡೆಸಿ ಉತ್ತಮ ಭದ್ರತೆ ಒದಗಿಸಿದರೆ ದ್ವಿತೀಯ ವಿಕೆಟ್‌ಗೆ ಮುರಳಿ ಜೊತೆ ಸೇರಿಕೊಂಡ ರೈನಾ (೨೮) ೫.೧ ಓವರ್‌ಗಳಲ್ಲಿ ಅಜೇಯ ೫೧ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಅಮೂಲ್ಯ ಎರಡು ಅಂಕ ಲಭಿಸುವಲ್ಲಿ ಶ್ರಮಪಟ್ಟರು.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4042) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2496) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (262) ln (1) lnews (3669) lokayukta (3) madikeri (1) maleria (1) mangalore (579) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (411) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (271) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (797) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (949) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (46) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)