ಮಂಗಳೂರು: ರಾಜ್ಯದಾದ್ಯಂತ ಏಕಕಾಲದಲ್ಲಿ ಬಹುತೇಕ ಕಡೆಗಳಲ್ಲಿ ಬಿಡುಗಡೆಗೊಂಡಿರುವ ಮುನಿರತ್ನ ನಿರ್ದೇಶನ, ಉಪೇಂದ್ರ ನಟನೆಯ ವಿವಾದಿತ ಕನ್ನಡ ಚಲನಚಿತ್ರ ಕಠಾರಿವೀರ ಸುರಸುಂದರಾಂಗದಲ್ಲಿ ಪೌರಾಣಿಕ ಪಾತ್ರಗಳಿಗೆ ಖಳನಾಯಕತ್ವದ ಲೇಪ ನೀಡಿ, ಹಿಂದು ದೇವತೆಗಳ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಮಂಗಳೂರು, ಉಡುಪಿ ಜಿಲ್ಲೆಯಾದ್ಯಂತ ಪ್ರದರ್ಶನಕ್ಕೆ ತಡೆಯೊಡ್ಡಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೇಜಾವರ ಶ್ರೀಗಳು, ಚಲನಚಿತ್ರಗಳಲ್ಲಿ ಹಿಂದು ದೇವತೆಗಳ ಅವಹೇಳನ ಮಾಡಿರುವ ಸರಿಯಲ್ಲ ಎಂದಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಬಲವಾಗಿ ಕಾರ್ಯಾಚರಿಸುತ್ತಿರುವ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಸಂಘಟನೆಗಳು, ಹಿಂದು ಪರ ಕೆಲಸ ಮಾಡುತ್ತಿದ್ದು, ಹಿಂದು ವಿರುದ್ಧದ ಕಠಾರಿವೀರ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿ, ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿದೆ.
ಸುಮಾರು ೧೦೦ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಸಂಘಟನಾ ಕಾರ್ಯಕರ್ತರು, ಕದ್ರಿ ಪಾರ್ಕ್‌ನಲ್ಲಿ ಹಾಕಿರುವ ಬೃಹತ್ ಕಟೌಟನ್ನು ಪುಡಿಗಟ್ಟಿದರು. ಅಲ್ಲದೆ ಆಡ್ ಲ್ಯಾಬ್ಸ್ ಸಮೀಪಿಸುತ್ತಿದ್ದಂತೆ, ಪ್ರಸಾರವನ್ನು ಸ್ಥಗಿತಗೊಳಿಸಿದ್ದರು. ಅದೇ ರೀತಿ ಸುಚಿತ್ರಾ ಟಾಕೀಸು ಬಳಿ ಸೇರಿದ ಕಾರ್ಯಕರ್ತರು, ಟಾಕೀಸಿನ ಮುಂದೆ ಹಾಕಿರುವ ದೊಡ್ಡ ಕಟೌಟ್‌ಗೆ ಬೆಂಕಿ ಇಟ್ಟು, ಚಿತ್ರ ಪ್ರದರ್ಶನ ಮಾಡದಂತೆ ಎಚ್ಚರಿಕೆ ನೀಡಿದರು. ಈ ಎಲ್ಲಾ ಘಟನೆಗಳಿಗೆ ಕಾವಲಿಗೆ ನಿಯೋಜಿಸಿದ್ದ ಪೊಲೀಸರು ಮೂಕ ಸಾಕ್ಷಿಯಾದರು.
Tagged with
dk,
feature,
lnews

ಪುಣೆ ವಿರುದ್ಧವೂ ಮುಂದುವರೆದ 'ಗೇಲ್ ಶೋ
ಪುಣೆ: ಕ್ರಿಸ್ ಗೇಲ್ ಮತ್ತೊಮ್ಮೆ ಆರ್‌ಸಿಬಿಗೆ ಆಪತ್ಪಾಂದವರಾಗಿ ಹೊರಹೊಮ್ಮಿದ್ದಾರೆ. ನಿನ್ನೆ ಜಮೈಕಾದ ಆಟಗಾರ ಪ್ರದರ್ಶಿಸಿದ ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ಹಾಗೂ ಬೌಲರ್‌ಗಳು ಅದಕ್ಕೆ ತಕ್ಕಂತೆ ನಿರ್ವಹಿಸಿದ ಸಮಯೋಚಿತ ದಾಳಿಯ ನೆರವಿನಿಂದ ಇಲ್ಲಿ ಪುಣೆ ವಿರುದ್ಧದ ಪಂದ್ಯವನ್ನು ಆರ್‌ಸಿಬಿ ೩೫ ರನ್‌ಗಳ ಉತ್ತಮ ಅಂತರದಿಂದ ಗೆದ್ದುಕೊಂಡಿದೆ. ಹ್ಯಾಟ್ರಿಕ್ ಜಯದೊಂದಿಗೆ ಬೆಂಗಳೂರು ಈಗ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿಗೆ ಕ್ರಿಸ್ ಗೇಲ್ ಹಾಗೂ ತಿಲಕರತ್ನೆ ದಿಲ್ಶಾನ್ (೫೩) ಜೋಡಿ ೮.೩ ಓವರ್‌ಗಳಲ್ಲಿ ೮೦ ರನ್‌ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅದರಲ್ಲೂ ಗೇಲ್ ಕೇವಲ ೩೧ ಎಸೆತಗಳಲ್ಲಿ ಆರು ಸಿಕ್ಸ್ ಹಾಗೂ ಮೂರು ಬೌಂಡರಿ ನೆರವಿನಿಂದ ಅಮೂಲ್ಯ ೫೭ ರನ್ ಕಲೆಹಾಕಿದರು. ಅಂತಿಮ ಹಂತದಲ್ಲಿ ತಿವಾರಿ ಹಾಗೂ ಡಿವಿಲಿಯರ‍್ಸ್ ಉತ್ತಮ ಆಟ ನೀಡಿದ ಹಿನ್ನೆಲೆಯಲ್ಲಿ ತಂಡ ನಿಗದಿತ ೨೦ ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ ೧೭೩ ರನ್‌ಗಳ ಉತ್ತಮ ಮೊತ್ತವನ್ನು ಪೇರಿಸಿತು. ಗುರಿ ಬೆನ್ನತ್ತಿದ್ದ ಪುಣೆ ಆರ್‌ಸಿಬಿ ವೇಗಿಗಳ ಎದುರು ಕಂಗಾಲಾಯಿತು. ಪರಿಣಾಮ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ ೧೩೮ ರನ್ ಗಳಿಸಲಷ್ಟೇ ಶಕ್ತವಾಯಿತು. ಜಹೀರ್ ಹಾಗೂ ಮುರಳೀಧರನ್ ಅಲ್ಪ ರನ್ ನೀಡಿ ಎರಡು ವಿಕೆಟ್ ಪಡೆದರೆ ವಿನಯ್ ಮೂರು ವಿಕೆಟ್ ಕಬಳಿಸಿದರು. ಗುರಿ ಬೆನ್ನತ್ತಿದ್ದ ಪುಣೆಗೆ ಜಹೀರ್ ಆರಂಭದಲ್ಲೇ ಆಘಾತ ನೀಡಿದರು. ತನ್ನ ಮೊದಲ ಓವರ್‌ನಲ್ಲೇ ಮೊನಿಶ್ (೪) ಹಾಗೂ ಪಾಂಡೆ (೦) ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿಗೆ ಮುನ್ನಡೆ ಒದಗಿಸಿದರು. ಮೈಕಲ್ ಕ್ಲಾರ್ಕ್ ಕೂಡ ತಂಡಕ್ಕೆ ಅಧಾರವಾಗಲಿಲ್ಲ. ಆದರೆ ರಾಬಿನ್ ಉತ್ತಪ್ಪ (೧೩) ಹಾಗೂ ಮಜುಮ್ದಾರ್ (೩೧) ಜೋಡಿ ನಾಲ್ಕನೇ ವಿಕೆಟ್‌ಗೆ ಕೇವಲ ೪.೪ ಓವರ್‌ಗಳಲ್ಲಿ ಬರೊಬ್ಬರಿ ೫೦ ರನ್‌ಗಳ ಜೊತೆಯಾಟ ನಡೆಸಿದಾಗ ಆರ್‌ಸಿಬಿ ಪಾಳಯದಲ್ಲಿ ಕೊಂಚ ಆಘಾತ ಮೂಡಿತು. ಆದರೆ ದಾಳಿಗಿಳಿದ ಮುರಳೀಧರನ್ ಅಪಾಯಕಾರಿ ಉತ್ತಪ್ಪ ವಿಕೆಟ್ ಪಡೆದಾಗ ತಂಡ ನಿರಾಳತೆ ಕಂಡಿತು. ಉತ್ತಪ್ಪ ೨೩ ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸ್ ನೆರವಿನಿಂದ ೩೮ ರನ್ ಗಳಿಸಿದರು. ಸ್ಮಿತ್ ೨೫ ರನ್‌ಗೆ ಅಜೇಯರಾಗುಳಿದರು.
ಈ ಮುನ್ನ ಬ್ಯಾಟಿಂಗ್ ನಡೆಸಿದ್ದ ಆರ್‌ಸಿಬಿ ಪರ ಗೇಲ್ ಆರಂಭದಲ್ಲಿ ಅಬ್ಬರಿಸಿದ್ದು, ತಂಡ ಉತ್ತಮ ಮೊತ್ತ ಪೇರಿಸುವಂತಾಯಿತು. ಯಾಕೆಂದರೆ ಗೇಲ್ ನಿರ್ಗಮನದ ನಂತರ ತಂಡದ ಮಧ್ಯಮ ಕ್ರಮಾಂಕದಲ್ಲಿ ಕೊಂಚ ಎಡವಿದರೂ ದಿಲ್ಶಾನ್ ಅರ್ಧಶತಕ ಸಿಡಿಸಿ ಅಧಾರವಾದರು. ತಿವಾರಿ ಕೂಡ ವೇಗದ ೩೦ ರನ್ ಗಳಿಸಿದರು. ತಿವಾರಿ ಡಿವಿಲಿಯರ‍್ಸ್ ಜೊತೆ ನಾಲ್ಕನೇ ವಿಕೆಟ್‌ಗೆ ೨.೪ ಓವರ್‌ಗಳಲ್ಲಿ ಅಜೇಯ ೩೫ ರನ್‌ಗಳ ಜೊತೆಯಾಟ ನಡೆಸಿದರು.
Tagged with
tnews


ಮ್ಯಾಡ್ರಿಡ್ ಓಪನ್: ನಡಾಲ್‌ಗೆ ಅಚ್ಚರಿಯ ಸೋಲು
ಮ್ಯಾಡ್ರಿಡ್: ವಿಶ್ವದ ನಂಬರ್ ವನ್ ಆಟಗಾರ್ತಿ ಬೆಲರೂಸ್‌ನ ವಿಕ್ಟೋರಿಯಾ ಅಜ್ರೆಂಕಾ ಹಾಗೂ ಅಮೆರಿಕಾದ ಖ್ಯಾತ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಇಲ್ಲಿ ನಡೆ ಯುತ್ತಿರುವ ಪ್ರತಿಷ್ಠಿತ ಮ್ಯಾಡ್ರಿಡ್ ಓಪನ್‌ನ ಮಹಿಳಾ ಸಿಂಗಲ್ಸ್ ಸೆಮಿಫೈನ್‌ಲ್‌ಗೆ ಪ್ರವೇಶ ಪಡೆದಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ರೊಲ್ಯಾಂಡ್ ಗ್ಯಾರೊಸ್ ವಿಜೇತೆ ಚೀನಾದ ಲೀ ನಾ ವಿರುದ್ಧ ಕಠಿಣ ಗೆಲುವು ಸಾಧಿಸುವ ಮೂಲಕ ಅಜ್ರೆಂಕಾ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದರೆ ರಶ್ಯಾದ ಮರಿಯಾ ಶರಪೋವಾ ವಿರುದ್ಧ ೬-೧ ಹಾಗೂ ೬-೩ರ ನೇರ ಅಂತರದ ಜಯ ಸಾಧಿಸಿದ ಸೆರೆನಾ ಕೂಡ ಕೂಟದಲ್ಲಿ ಮುನ್ನಡೆದರು. ಇನ್ನು ಆವೆ ಮಣ್ಣಿನ ಅಂಗಣದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎಂಬ ಹಣೆಪಟ್ಟಿ ಹೊಂದಿದ ಸ್ಪೇಯ್ನ್‌ನ ರಫೆಲ್ ನಡಾಲ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ತನ್ನದೇ ದೇಶದ ಫರ್ನಾಂಡೊ ವೊರ್ಡಾಸ್ಕೊ ವಿರುದ್ಧ ೬-೩, ೩-೬ ಹಾಗೂ ೭-೫ರ ಅಚ್ಚರಿಯ ಅಂತರದಲ್ಲಿ ಸೋಲನ್ನು ಕಾಣುವ ಮೂಲಕ ಮಾಜಿ ನಂಬರ್ ವನ್ ಆಟಗಾರ ಸ್ಪೇಯ್ನ್‌ನ ರಫೆಲ್ ನಡಾಲ್ ಕೂಟದಿಂದ ಹೊರಬಿದ್ದಿದ್ದಾರೆ.
ಪ್ರಥಮ ಸುತ್ತಿನಲ್ಲಿ ಕಳಪೆ ಪ್ರದರ್ಶನ ನೀಡಿದ ಪರಿಣಾಮ ಅಜ್ರೆಂಕಾ ಮೊದಲನೇ ಸುತ್ತನ್ನು ಕಳಕೊಂಡರು. ಆದರೆ ಧೃತಿಗೆಡದ ಬೆಲರೂಸ್‌ನ ಆಟಗಾರ್ತಿ ನಂತರ ದೆರಡು ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಪರಿಣಾಮ ಪಂದ್ಯವನ್ನು ೩-೬, ೬-೩ ಹಾಗೂ ೬-೩ರ ಅಂತರದಲ್ಲಿ ಜಯಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದರು. ಸದ್ಯ ನಡೆಯುತ್ತಿರುವ ಕೂಟದಲ್ಲಿ ಅಜ್ರೆಂಕಾ ಕಳೆದ ಬಾರಿಯ ರನ್ನರ್‌ಅಪ್ ಕೂಡ ಆಗಿದ್ದಾರೆ. ಇನ್ನು ಮುಂದಿನ ಸುತ್ತಿನಲ್ಲಿ ಅಜ್ರೆಂಕಾ ಮೂರನೇ ಶ್ರೇಯಾಂಕದ ಅಗ್ನಿಸ್ಕೆ ರೊಡ್ವಾನ್ಸ್ಕಾ ಅಥವಾ ಅಮೆರಿಕಾದ ವಾರ‍್ವರಾ ಲೆಪ್ಚೆಂಕೊ ವಿರುದ್ಧ ಕಾದಾಡಲಿದ್ದಾರೆ. ಕಳೆದ ೨೩ ಆವೆ ಮಣ್ಣಿನ ಅಂಗಣದ ಹಣಾಹಣಿಯಲ್ಲಿ ನಡಾಲ್‌ರ ಇದು ಮೊದಲನೇ ಸೋಲಾಗಿರುವುದು ಕೂಡ ಅಚ್ಚರಿಯ ವಿಷಯವಾಗಿದೆ.
Tagged with
tnews
ಮಂಗಳೂರು: ರಾಜಸ್ಥಾನದ ಉದಯಪುರ್‌ನಲ್ಲಿ ನಡೆದ ಅಂತಾ ರಾಷ್ಟ್ರೀಯ ಮಟ್ಟದ ಏಶ್ಯನ್ ಪವರ್ ಲಿಫ್ಟಿಂಗ್ ಸ್ಪರ್ಧೆಯ ಜೂನಿಯರ್ ವಿಭಾಗ ದಲ್ಲಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ನೇಹಾ ಹೆಚ್. ಕಂಚಿನ ಪದಕ ಪಡೆದಿದ್ದಾರೆ. ಈವರೆಗೆ ಒಟ್ಟು ೮ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ೫ ಪದಕಗಳನ್ನು ಪಡೆದಿರುವ ನೇಹಾ ಕಲಿಕೆಯಲ್ಲೂ ಶೇ.೯೦ ಅಂಕ ಪಡೆಯುವ ವಿದ್ಯಾರ್ಥಿನಿ.
ಉಷಾ-ನಾರಾಯಣ ದಂಪತಿ ಪುತ್ರಿಯಾದ ಇವರು ಶ್ರೀಧ.ಮಂ. ಕ್ರೀಡಾ ಸಂಘದ ವೇಟ್‌ಲಿಫ್ಟಿಂಗ್ ಕೋಚ್ ರಾಜೇಂದ್ರ ಪ್ರಸಾದ್, ಕ್ರೀಡಾ ನಿರ್ದೇಶಕ ರಮೇಶ್ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
Tagged with
dk,
tnews

ಬೆಂಗಳೂರು: ಗಣಿ ಕಂಪೆನಿಗಳಿಂದ ಅಕ್ರಮವಾಗಿ ಹಣ ಪಡೆದ ಆರೋಪದ ಮೇಲೆ ಯಡಿಯೂರಪ್ಪ ಮತ್ತವರ ಕುಟುಂಬದ ಸದಸ್ಯರ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ನೀಡುತ್ತಿದ್ದಂತೆಯೇ ರಾಜ್ಯ ಬಿಜೆಪಿ ಇಬ್ಭಾಗವಾಗುವ ಸಾಧ್ಯತೆಗಳು ದಟ್ಟವಾ ಗುತ್ತಿವೆ.
ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ, ಗಣಿಗಾರಿಕೆಗೆ ಅನುಮತಿ ನೀಡಲು ಪ್ರವೀಣ್‌ಚಂದ್ರ ಎಂಬವರಿಂದ ಆರು ಕೋಟಿ ರೂ. ಲಂಚ ಪಡೆದ ಆರೋಪವೂ ಸೇರಿದಂತೆ ಮೂರು ಪ್ರಕರಣಗಳ ಕುರಿತು ಸಿಬಿಐ ತನಿಖೆ ನಡೆಸಲಿದ್ದು, ಈ ಬೆಳವಣಿಗೆ ರಾಜ್ಯ ಬಿಜೆಪಿ ಪಾಳೆಯದಲ್ಲಿ ಅಲ್ಲೋಲ ಕಲ್ಲೋಲ ವಾತಾ ವರಣ ಸೃಷ್ಟಿಸುವುದು ಖಚಿತ.
ಉನ್ನತ ರಾಜಕೀಯ ಮೂಲಗಳ ಪ್ರಕಾರ, ಯಡಿ ಯೂರಪ್ಪ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ದಂತೆ ಸಿಇಸಿ ಶಿಫಾರಸನ್ನು ಸುಪ್ರೀಂಕೋರ್ಟ್ ಒಪ್ಪಿರು ವುದರಿಂದ, ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿರು ವುದರಿಂದ ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗುವ ಆಸೆ ಬಿಟ್ಟಂತೆಯೇ ಸರಿ.
ಆದರೆ ಸಿಬಿಐ ಬಲೆಯಿಂದ ಬಚಾವಾಗಲು, ಲಂಚ ಆರೋಪ ಪ್ರಕರಣಗಳಿಂದ ಮುಕ್ತವಾಗಲು ಯಡಿಯೂರಪ್ಪ ಪ್ರಮುಖ ವಿರೋಧ ಪಕ್ಷದ ನಾಯಕರ ಜತೆ ಸಂಧಾನ ಅನಿವಾರ್ಯವಾಗಬಹುದು. ಇದಕ್ಕೂ ಮುನ್ನ ತಮ್ಮನ್ನು ಲಂಚದ ಆರೋಪ ಬಲೆಗೆ ಉದ್ದೇಶ ಪೂರಕವಾಗಿ ಸಿಲುಕಿಸಿದ ಬಿಜೆಪಿ ಪಕ್ಷದ ಕೆಲವು ನಾಯಕರ ಮೇಲೆ ಸೇಡು ತೀರಿಸಿಕೊಳ್ಳಲು ತಮ್ಮ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರವನ್ನು ಉರುಳಿಸುವ ಪ್ರಯತ್ನಕ್ಕೆ ಮುಂದಾಗಲಿದ್ದಾರೆ ಎಂಬುದು ರಾಜಕೀಯ ವಲಯಗಳಲ್ಲಿ ಹರಿದಾಡುತ್ತಿದೆ. ಹೀಗಾಗಿ ತಮ್ಮ ಬಣದ ಸಚಿವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದ ಮುಖ್ಯಮಂತ್ರಿ ಸದಾನಂದಗೌಡರನ್ನು ಅಧಿಕಾರದಿಂದ ಕೆಳಗಿಳಿಸುವ ಹೋರಾಟಕ್ಕೆ ಚಾಲನೆ ನೀಡಿರುವ ಯಡಿಯೂರಪ್ಪ,ಈಗಾಗಲೇ ತಮ್ಮ ಬೆಂಬಲಿಗ ಶಾಸಕರ ಮೂಲಕ ತುರ್ತು ಶಾಸಕಾಂಗ ಸಭೆ ಕರೆಯಲು ಸಿಎಂ ಹಾಗೂ ಪಕ್ಷದ ಕೇಂದ್ರ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಿಜೆಪಿ ಶಾಸಕಾಂಗ ಸಭೆ ನಡೆದರೆ ಅಲ್ಲಿ ಸದಾನಂದಗೌಡರಿಗೆ ಬಹುಮತವಿಲ್ಲ ಎಂಬುದನ್ನು ಸಾಬೀತು ಮಾಡಿ, ಆ ಜಾಗಕ್ಕೆ ತಮ್ಮ ನಂಬಿಕಸ್ಥ ವ್ಯಕ್ತಿಯನ್ನು ಕೂರಿಸುವುದು ಯಡಿಯೂರಪ್ಪ ಅವರ ಲೆಕ್ಕಾಚಾರವಾಗಿದೆ. ಸಿಎಂ ಹುದ್ದೆಯಲ್ಲಿ ತಮ್ಮ ನಂಬಿಕಸ್ಥ ವ್ಯಕ್ತಿಯನ್ನು ಕೂರಿಸಲು ಅಗತ್ಯ ವಾತಾವರಣ ಸೃಷ್ಟಿಯಾಗದಿದ್ದಲ್ಲಿ, ಬೇರೆ ಮಾರ್ಗವಿಲ್ಲದೇ ಸರ್ಕಾರವನ್ನು ಉರುಳಿಸುವುದು ಯಡಿಯೂರಪ್ಪ ಅವರ ಆಲೋಚನೆಯಾಗಿದೆ.
ಉನ್ನತ ಮೂಲಗಳ ಪ್ರಕಾರ, ಸದ್ಯದ ಪರಿಸ್ಥಿತಿಯಲ್ಲಿ ಡಿ.ವಿ. ಸದಾನಂದಗೌಡರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವ ಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಇಲ್ಲ. ಹೀಗಾಗಿ ಯಡಿಯೂರಪ್ಪ ಏಕಕಾಲಕ್ಕೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಮುಂದಾಗುತ್ತಾರೆ. ಒಂದು,ತಮ್ಮಿಚ್ಚೆಯ ವ್ಯಕ್ತಿಯನ್ನು ಸಿಎಂ ಹುದ್ದೆಗೆ ಹೈಕಮಾಂಡ್ ಒಪ್ಪದಿದ್ದಲ್ಲಿ ತಮ್ಮ ಅತೃಪ್ತಿಯನ್ನು ಬಹಿರಂಗವಾಗಿ ಹೊರ ಹಾಕುವ ಸಾಧ್ಯತೆಗಳು ಹೆಚ್ಚಾಗಿವೆ. ಎರಡು,ಇದೇ ನೆಪ ಮುಂದೊಡ್ಡಿ ಸರ್ಕಾರವನ್ನು ಉರುಳಿಸುವುದು. ಸರ್ಕಾರ ಉರುಳಿಸಿದ ನಂತರ ಹೊಸ ಪಕ್ಷ ಕಟ್ಟಲು ಯಡಿಯೂರಪ್ಪ ಸಜ್ಜಾಗಬೇಕಿದ್ದು,ಈ ಎಲ್ಲ ಬೆಳವಣಿಗೆಗಳಿಂದ ತಮ್ಮ ವಿರುದ್ಧದ ಲಂಚದ ಆರೋಪ ಹಾಗೂ ಸಿಬಿಐ ತನಿಖೆ ಆಘಾತದಿಂದ ಬಚಾವಾಗಲು ಸಾಧ್ಯ ಎಂಬುದು ರಾಜಕೀಯ ವಿಶ್ಲೇಷಕರ ವಾದ.
Tagged with
snews

ಮಂಗಳೂರು: ನಗರದ ಕಾವೂರು ಜಂಕ್ಷನ್‌ನಲ್ಲಿರುವ ಪ್ರಸಿದ್ಧ ಬೇಕರಿ ಯೊಂದರಲ್ಲಿ ಮಾರಾಟ ಮಾಡಲ್ಪಟ್ಟ ಹ್ಯಾಂಗ್ಯೋ ಕಂಪೆನಿಯ ಸ್ಟಿಕ್ ಐಸ್ ಕ್ರೀಂನಲ್ಲಿ ಹುಳಗಳು ಕಂಡುಬಂದಿದೆ. ಮಹಿಳೆಯೊಬ್ಬರು ಮೊನ್ನೆ ಕಂಪೆನಿಯ ಹತ್ತು ಸ್ಟಿಕ್‌ಗಳನ್ನು ಖರೀದಿಸಿದ್ದು, ಅದೆಲ್ಲ ದರಲ್ಲೂ ಹುಳಗಳು ಕಂಡುಬಂದ ಹಿನ್ನೆಲೆಯಲ್ಲಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಬ್ರಹ್ಮಾವರ ಸಮೀಪದ ಹೇರೂರಿನ ಹ್ಯಾಂಗ್ಯೋ ಐಸ್‌ಕ್ರೀಂ ಕಂಪೆನಿಯ ಸ್ಟಿಕ್‌ನಲ್ಲಿ ತಯಾರಾದ ದಿನಾಂಕವನ್ನು ನಮೂದಿಸಲಾಗಿಲ್ಲ. ಆದರೆ ತಯಾರಾದ ದಿನಾಂಕದ ೩೦ ದಿವಸಗಳೊಳಗಾಗಿ ಉಪಯೋಗಿಸಬಹುದು ಎಂದಿದೆ. ಹುಳ ಕಂಡುಬಂದ ಮಿಲ್ಕ್ ಸ್ಟಿಕ್ ಐಸ್‌ಕ್ರೀಂನ ಅವಧಿ ಮೀರಿದ ಕಾರಣ ಹುಳ ಆಗಿರಬಹುದು ಎಂದು ಶಂಕಿಸಲಾಗಿದೆ.
ಅವಧಿ ಮೀರಿದ ಆಹಾರ ಪದಾರ್ಥದಲ್ಲಿ ಹುಳ ಕಂಡುಬರುವುದು ಇದೇ ಮೊದಲಲ್ಲ. ಆದರೆ ಹ್ಯಾಂಗ್ಯೋದಂಥ ಗುಣಮಟ್ಟದ ಐಸ್‌ಕ್ರೀಂ ಪೂರೈಕೆ ಮಾಡುವ ಕಂಪೆನಿಯಲ್ಲಿ ಈ ರೀತಿ ಆಗಿರುವುದು ಗ್ರಾಹಕರ ತಲೆನೋವಿಗೆ ಕಾರಣವಾಗಿದೆ. ಮೊನ್ನೆ ಕಂಪೆನಿಯ ಮೇಲೆ ವಿಶ್ವಾಸವಿಟ್ಟು ಸ್ಟಿಕ್ ಐಸ್‌ಕ್ರೀಂ ಖರೀದಿಸಿದ ಮಹಿಳೆಯು ಬಳಿಕ ಅದನ್ನು ಮನೆಗೆ ಕೊಂಡೊಯ್ದು ಮಕ್ಕಳಿಗೆ ನೀಡಿದ್ದು, ಶಾಲೆಗೆ ಹೋಗುವ ಮಗಳು ತಿನ್ನುವಾಗ ಹುಳ ಇರುವುದು ಬೆಳಕಿಗೆ ಬಂದಿದೆ. ಒಂದೊಮ್ಮೆ ಮಕ್ಕಳ ಆರೋಗ್ಯಕ್ಕೆ ಏನಾದರೂ ತೊಂದರೆಯಾಗಿದ್ದಲ್ಲಿ ಜವಾಬ್ದಾರಿ ಯಾರು ಎನ್ನುವ ಪ್ರಶ್ನೆಗೆ ಕಂಪೆನಿಯೇ ಉತ್ತರ ನೀಡಬೇಕಾಗಿದೆ.
Tagged with
dk,
lnews
ಮಂಗಳೂರು: ನಗರದ ಖ್ಯಾತ ವಕೀಲ ಎಸ್. ಎಸ್. ಖಾಜಿಯವರ ಮೇಲೆ ೧೧ ವರ್ಷದ ಹಿಂದಿನ ಪ್ರಕರಣದ ಹಿನ್ನೆಲೆಯಲ್ಲಿ ಖಾಸಗಿ ದೂರು ಸಲ್ಲಿಸಿ ರುವ ಮಸಲತ್ತಿನ ಹಿಂದೆ ಇನ್ನೂ ಕೆಲವು ಸ್ಥಾಪಿತ ಹಿತಾಸಕ್ತಿ ಸೇರಿಕೊಂಡಿರು ವುದು ಬೆಳಕಿಗೆ ಬಂದಿದೆ.
ಈ ಪ್ರಕರಣದ ಪೂರ್ಣ ಪಾಠ ಇಂತಿದೆ.
ಮಹಮ್ಮದ್ ಹನೀಫ್ ಮತ್ತು ಅಬ್ದುಲ್ ಅಜೀಜ್-ಭಾಷಾ ಸೋದರರ ಮಧ್ಯೆ ೧೯೯೭-೯೯ರಲ್ಲಿ ಕಾರ್ ಫೈನಾನ್ಸ್ ವ್ಯವಹಾರವಿತ್ತು. ಕಾರ್ ಸಾಲ ಪಡೆಯುವ ಕಾಲಕ್ಕೆ ತೆಗೆದುಕೊಂಡಿದ್ದ ಸಹಿ ಹಾಕಿರುವ ಖಾಲಿ ಚೆಕ್ಕುಗಳ ದುರುಪಯೋಗದ ಮೂಲಕ ಅಜೀಜ್ ಮತ್ತು ಭಾಷಾ ತಮ್ಮ ಹೆಸರುಗಳಲ್ಲಿ ಮತ್ತು ಮಿತ್ರರಾದ ರವೀಂದ್ರ ಹಾಗೂ ನಂಜಪ್ಪ ಎಂಬವರ ಹೆಸರುಗಳಲ್ಲಿ ಮಂಗಳೂರಿನ ಹಾಗೂ ಬೆಂಗಳೂರಿನ ನ್ಯಾಯಾಲಯಗಳಲ್ಲಿ ಹನೀಫ್ ಮತ್ತು ಶಹನಾಜ್ ವಿರುದ್ಧ ಐದು ಲಕ್ಷ, ಮೂರು ಲಕ್ಷ, ೧೨.೩೦ಲಕ್ಷ ಮತ್ತು ೧.೬೫ಲಕ್ಷ ಚೆಕ್ ಅಮಾನ್ಯ ಕೇಸುಗಳನ್ನು ಹೂಡಿದ್ದರು. ಈ ಎಲ್ಲಾ ಕೇಸುಗಳಲ್ಲಿ ಎಸ್. ಎಸ್. ಖಾಜಿಯವರು ಹನೀಫ್-ಶಹನಾಜ್ ಪರವಾಗಿ ಪ್ರತಿನಿಧಿಸಿ ನಾಲ್ಕು ಕೇಸುಗಳಲ್ಲೂ ಯಶಸ್ಸು ತಂದಿದ್ದರು. ಆನಂತರ ಹನೀಫ್ ಪರವಾಗಿ ಅಜೀಜ್-ಭಾಷಾ ವಿರುದ್ಧ ಫೋರ್ಜರಿ ಚೆಕ್ ದುರುಪಯೋಗ ಮತ್ತು ವಂಚನೆ ನೆಲೆಯಲ್ಲಿ ಅಜೀಜ್-ಭಾಷಾ ಸೋದರರ ವಿರುದ್ಧ ಪ್ರತಿಕೇಸು ಮಾಡಿದ್ದರು. ಸದ್ರಿ ಪ್ರತಿ ಕೇಸು ಇವತ್ತಿಗೂ ಮಂಗಳೂರಿನ ಮೂರನೇ ಚೀಫ್ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಲಿದ್ದು ಸದ್ರಿ ಅಜೀಜ್-ಭಾಷಾರವರು ಸದ್ಯ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅಜೀಜ್-ಭಾಷಾರವರು ಹನೀಫ್-ಶಹನಾಜ್ ವಿರುದ್ಧ ತಮ್ಮ ಪರಿಚಯದ ಜಮೀಲಾ ಎಂಬವರ ಹೆಸರಿನಲ್ಲಿ ಖಾಸಗಿ ಫಿರ್ಯಾದಿಯೊಂದನ್ನು ದಾಖಲು ಮಾಡುವ ಕಾಲಕ್ಕೆ, ಹನೀಫ್-ಶಹನಾಜ್ ಜೊತೆಯಲ್ಲಿ ಅವರ ಬಹಳ ಕಾಲದ ನ್ಯಾಯವಾದಿ ಎಸ್. ಎಸ್. ಖಾಜಿಯವರನ್ನೂ ಸೇರಿಸಿದ್ದಾರೆ. ಅಂದರೆ ಮುಂದಕ್ಕೆ ಹನೀಫ್-ಶಹನಾಜ್ ಅವರಿಗೆ ಎಸ್. ಎಸ್. ಖಾಜಿಯವರ ಸೇವೆ ದೊರೆಯದಂತೆ ಮಾಡುವ ಮತ್ತು ಪ್ರತೀಕಾರದ ಹಿನ್ನೆಲೆಯಲ್ಲಿ ನಡೆದ ಕೇಸು ಇದಾಗಿದೆ.
ಸದ್ರಿ ಖಾಸಗಿ ಫಿರ್ಯಾದಿಯಲ್ಲೇ ಹೇಳಿರುವಂತೆ ಅವರು ಹೇಳುವ ಘಟನೆಗಳಲ್ಲಿ ಏನಾದರೂ ಸತ್ಯಾಂಶವಿದ್ದಿದ್ದರೆ ಜಮೀಲಾ ನ್ಯಾಯಾಲಯಕ್ಕೆ ಅಥವಾ ಪೊಲೀಸರಲ್ಲಿಗೆ ಹೋಗಲು ೧೧ ವರ್ಷ ಕಾಯುತ್ತಿರಲಿಲ್ಲ.
ಇದೇ ವೇಳೆ ವಿವಿಧ ನ್ಯಾಯಾಲಯಗಳಲ್ಲಿ ಜಯಕಿರಣದ ಕೇಸುಗಳಲ್ಲಿ ಎಸ್. ಎಸ್. ಖಾಜಿಯವರ ಕಾನೂನು ಕಾರ‍್ಯಾಚರಣೆಯಿಂದ ಮುಖಭಂಗಗೊಂಡ ಹಾಗೂ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬೂಬಕ್ಕರ್ ಪ್ರಕರಣಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳ ಇಂಜಕ್ಷನ್ ಮತ್ತು ಸಮನ್ಸ್‌ಗೆ ಗುರಿಯಾಗಿರುವ ಬಿ.ವಿ. ಸೀತಾರಾಮ್ ಮತ್ತು ಆತನ ಪತ್ನಿ ರೋಹಿಣಿ ಪ್ರತೀಕಾರದ ಹಾಗೂ ಲಾಭ ಪಡೆಯುವ ಉದ್ದೇಶದಿಂದ ಸುಳ್ಳು ಖಾಸಗಿ ದೂರನ್ನು ಹೊಸ ಪ್ರಕರಣದಂತೆ ಪ್ರಕಟಿಸುತ್ತಿದ್ದಾರೆ.
ಈ ಹಿಂದೆ ಕೇಸು ನಂಬರ್ ೪೫೬/೦೫ ಪ್ರಕರಣಗಳಲ್ಲಿ ಬಿ.ವಿ. ಸೀತಾರಾಂ ಅಡ್ಡ ವಿಚಾರಣೆಯನ್ನು ಎಸ್. ಎಸ್. ಖಾಜಿಯವರು ಮಾನ್ಯ ನ್ಯಾಯಾಲಯದಲ್ಲಿ ಮಾಡುತ್ತಿದ್ದ ವೇಳೆಯಲ್ಲಿ ಬಿ.ವಿ. ಸೀತಾರಾಂ, ಎಸ್. ಎಸ್. ಖಾಜಿಯವರ ವಿರುದ್ಧ ಬಾರ್ ಕೌನ್ಸಿಲ್‌ಗೆ ದೂರು ಎಂಬ ಶಿರೋನಾಮೆಯಲ್ಲಿ ಲೇಖನ ಬರೆದು ಖಾಜಿಯವರು ತನ್ನ ಅಡ್ಡ ವಿಚಾರಣೆಯಿಂದ ಹಿಂದಕ್ಕೆ ಪಡೆಯಲು ವಿಫಲ ಯತ್ನ ಮಾಡಿರುವುದನ್ನು ನೆನಪಿಸಬಹುದು. ಆನಂತರ ಈ ಕೇಸು ಬಿ.ವಿ. ಸೀತಾರಾಮ್ ವಿರುದ್ಧ ಆಯಿತು. ನ್ಯಾಯಾಲಯದಲ್ಲಿ ಕೇಸುಗಳು ತನ್ನ ವಿರುದ್ಧ ಹೋಗುವಂತೆ ಕಂಡುಬಂದಾಗ ಎದುರುದಾರರ ನ್ಯಾಯವಾದಿಗಳ ವಿರುದ್ಧ ಮಾನಹಾನಿಕರ ಲೇಖನಗಳನ್ನು ಕರಾವಳಿ ಅಲೆಯಲ್ಲಿ ಪ್ರಕಟಿಸುವುದು ಬಿ.ವಿ. ಸೀತಾರಾಂ ಮತ್ತು ಆತನ ಪತ್ನಿ ರೋಹಿಣಿಯವರ ಬಹಳ ಹಳೆಯ ಕಾಲದ ಕಾರ‍್ಯವೈಖರಿ ( ಒoಜus oಠಿeಡಿಚಿಟಿಜi) ಆಗಿದೆ ಎಂದು ಖಾಜಿಯವರು ವ್ಯಾಖ್ಯಾನಿಸಿದ್ದಾರೆ.
Tagged with
dk,
lnews
ಮಂಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಅಡ್ಯಾರು ಸಹ್ಯಾದ್ರಿ ಕಾಲೇಜಿನಲ್ಲಿ ಅಯೋಜಿಸಲಾಗಿರುವ ಸೃಷ್ಟಿ-೨೦೧೨ಕ್ಕೆ ಇಂದು ಸಂಜೆ ೪ಗಂಟೆಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಚಾಲನೆ ನೀಡಲಿದ್ದಾರೆ.
Tagged with
dk,
lnews
ಮಂಗಳೂರು: ಗುರುವಾರದಂದು ಉಳ್ಳಾಲದ ಸೋಮೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ರಕ್ಷಿಸಿದ ಪ್ರಕರಣ ಇನ್ನೂ ಜನಮಾಸದಲ್ಲಿ ಇರುವಂತೆಯೇ ಶುಕ್ರವಾರವೂ ಇಂತಹದ್ದೇ ಇನ್ನೊಂದು ಘಟನೆ ನಡೆದಿದೆ. ಇಲ್ಲಿನ ಮೊಗವೀರ ಪಟ್ನಕ್ಕೆ ಸಮುದ್ರ ವಿಹಾರಕ್ಕೆಂದು ಬಂದಿದ್ದ ಪ್ರವಾಸಿಗರ ಪೈಕಿ ನೀರು ಪಾಲಾಗುತ್ತಿದ್ದ ನಾಲ್ವರನ್ನು ಈಜುಗಾರ ರಕ್ಷಕ ಸಂಘದ ಸದಸ್ಯರು ರಕ್ಷಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕಾವಲಕಟ್ಟೆ ನಿವಾಸಿಗಳಾದ ಶಾಹಿದಾ(೪೫) ಅವರ ಮಕ್ಕಳಾದ ರುಮಾನ(೩) ಮುದಸ್ಸರ್(೯) ಮತ್ತು ಅವರ ಸಂಬಂಧಿ ಹಾಸನ ಜಿಲ್ಲೆಯ ಸುಮೇರ(೧೨)ಎಂಬವರು ರಕ್ಷಣೆಗೊಳಗಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀವರಕ್ಷಕ ಈಜುಗಾರ ಸಂಘದ ಸದಸ್ಯರಾದ ಮೋಹನ್ ಪುತ್ರನ್, ಯಶ್‌ಪಾಲ್ ಕಾಂಚನ್, ಮೋಹನ್ ಕೋಟ್ಯಾನ್, ಪ್ರವೀu ಪುತ್ರನ್, ವಾಸುದೇವ ಬಂಗೇರ ಅವರು ಸಮುದ್ರಕ್ಕೆ ಹಾರಿ ಎಲ್ಲರನ್ನೂ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Tagged with
dk,
lnews
ಮಂಗಳೂರು: ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳತ್ತ ಮತದಾರರು ಒಲವು ಹೊಂದಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ ನಿನ್ನೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಬಿಜೆಪಿ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟಿನಿಂದ ರಾಜ್ಯದ ಜನತೆ ರೋಸಿಹೋಗಿದ್ದಾರೆ. ಜನಪ್ರತಿನಿಧಿಗಳು ಜನರ ಕ್ಷೇಮವನ್ನು ಕಡೆಗಣಿಸಿದ್ದಾರೆ ಎಂದವರು ಟೀಕಿಸಿದರು. ಕಾಂಗ್ರೆಸ್ ಪಕ್ಷದಿಂದ ಪದವೀಧರ ಕ್ಷೇತ್ರಕ್ಕೆ ದಿನೇಶ್ ಹಾಗೂ ಶಿಕ್ಷಕರ ಕ್ಷೇತ್ರದಿಂದ ರಮೇಶ್ ಜೋಯಪ್ಪ ಅವರು ಸ್ಪರ್ಧಿಸುತ್ತಿದ್ದಾರೆ, ಅವರ ಗೆಲುವು ನಿಶ್ಚಿತ ಎಂದು ರೈ ಹೇಳಿದರು. ವಿಧಾನಸಭಾ ವಿಪಕ್ಷ ಸಚೇತಕ ಅಭಯಚಂದ್ರ ಜೈನ್, ಮಾಜಿ ಸಂಸದ ವಿನಯ್‌ಕುಮಾರ್ ಸೊರಕೆ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಮೇಯರ್ ಗುಲ್ಜಾರ್ ಬಾನು, ಮಮತಾ ಗಟ್ಟಿ, ಐವನ್ ಡಿಸೋಜಾ, ಶಶಧರ ಹೆಗ್ಡೆ, ಅಶ್ರಫ್, ಸುರೇಶ್ ಬಲ್ಲಾಳ್, ಬೊಂಡಾಲ ಜಗನ್ನಾಥ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಉಪಸ್ಥಿತರಿದ್ದರು.
Tagged with
dk,
lnews

ಪುತ್ತೂರು: ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಸಹಸವಾರ ಮೃತಪಟ್ಟು ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಸಂಜೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ಎಂಬಲ್ಲಿ ನಡೆದಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಕೆಳಗಿನ ಮನೆ ನಿವಾಸಿ ಐತ್ತಪ್ಪ ರೈ ಎಂಬವರ ಪುತ್ರ ಜಗದೀಶ್ ರೈ(೨೬) ಮೃತಪಟ್ಟ ಯುವಕ. ಬೈಕ್ ಸವಾರ ಕರ್ನೂರು ಕೆಳಗಿನ ಮನೆ ನಿವಾಸಿ ಕರಿಯಪ್ಪ ರೈ ಎಂಬವರ ಪುತ್ರ ಜಗದೀಶ್ ರೈ(೨೮) ಗಂಭೀರ ಗಾಯ ಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಲಾಗಿದ್ದಾರೆ.
ಮುಂಬೈಯಲ್ಲಿ ಉದ್ಯೋಗ ದಲ್ಲಿರುವ ಇವರಿಬ್ಬರು ಇತ್ತೀಚೆಗೆ ಊರಿ ಗೆ ಆಗಮಿಸಿದ್ದರು. ಪುತ್ತೂರಿಗೆ ಬೈಕ್‌ನಲ್ಲಿ ಆಗಮಿಸುತ್ತಿದ್ದ ವೇಳೆ ಕಾರಿಗೆ ಸೈಡ್ ಕೊಡುವಾಗ ದುರ್ಘಟನೆ ಸಂಭವಿಸಿದೆ.
Tagged with
cnews
ಬಂಟ್ವಾಳ: ಕುರಿಯಾಳ ಗ್ರಾಮದ ದುರ್ಗಾನಗರ ಎಂಬಲ್ಲಿ ಬಂಟ್ವಾಳ ಪೊಲೀಸರು ಮಹಿಳೆಯೋರ್ವರಿಗೆ ಕಿರುಕುಳ ನೀಡಿದ ಘಟನೆ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿ ಸುಕನ್ಯಾ(೩೧) ಎಂಬವರು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ದಲಿತ ದೌರ್ಜನ್ಯ ಎಸೆದಿದ ಪ್ರಕರಣಕ್ಕೆ ಸಂಬಂಧಿಸಿ ಕುರಿಯಾಳ ನಿವಾಸಿ ಸೀತಾರಾಮ ಬೆಳ್ಚಡ ಎಂಬವರನ್ನು ಬಂಧಿಸಲು ಅವರ ಮನೆಗೆ ದಾಳಿ ನಡೆಸಿದ ಬಂಟ್ವಾಳ ಪೊಲೀಸರು ತನಗೆ ಕಿರುಕುಳ ನೀಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರವೇಶಿಸಿದ್ದು, ಹೆದರಿಸಿದ್ದರೆಂದು ಸುಕನ್ಯಾ ದೂರು ನೀಡಿದ್ದಾರೆ. ಅಮ್ಟಾಡಿ ಗ್ರಾ. ಪಂ. ಟಾಟಾ ಎಂಟ್ರಿ ಸಿಬ್ಬಂದಿ ಗಣೇಶ್ ಕೆ. ಎಂಬವರಿಗೆ ಸೀತಾರಾಮ ಬೆಳ್ಚಡ ಹಾಗೂ ಶಂಕರ ಬೆಳ್ಚಡ ಎಂಬವರು ಜಾತಿ ನಿಂದನೆ ಮಾಡಿರುವುದಾಗಿ ಆರೋಪಿಸಲಾಗಿದ್ದು, ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಅಮ್ಟಾಡಿ ಗ್ರಾ. ಪಂ. ಕಾರ್ಯಾಲಯಕ್ಕೆ ಫೋನಾಯಿಸಿದ ಸೀತಾರಾಮ ಹಾಗೂ ಶಂಕರ ಅಧ್ಯಕ್ಷರಿಗೆ ಫೋನು ಸಂಪರ್ಕ ನೀಡದ ಆರೋಪದಲ್ಲಿ ಬೈದಾಡಿಕೊಂಡಿದ್ದರು. ಬೆದರಿಕೆಯೂ ಹಾಕಿದ್ದಾರೆ ಎಂದು ಗಣೇಶ್ ದೂರಿದ್ದಾರೆ. ದಲಿತ ದೌರ್ಜನ್ಯ ಎಸಗಿದ ಆರೋಪದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸೀತಾರಾಮ ಬೆಳ್ಚಡ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿದ್ದರೆನ್ನಲಾಗಿದೆ.
ಪೊಲೀಸ್ ಕಾರ್ಯಾಚರಣೆ ಸಂದರ್ಭ ಸುಕನ್ಯಾ ಅಸಹಕಾರ ನೀಡಿದ್ದು, ತನಿಖೆಯ ಹಾದಿ ತಪ್ಪಿಸಲೆತ್ನಿಸಿದ್ದರು. ಆರೋಪಿತ ವ್ಯಕ್ತಿ ಮನೆಯಲ್ಲೇ ಇದ್ದರೂ, ಪೊಲೀಸರನ್ನು ಮನೆಗೆ ಪ್ರವೇಶಿಸಲು ಬಿಡಲಿಲ್ಲ. ಕಾನೂನು ಸಂಘರ್ಷದಲ್ಲಿರುವ ಆರೋಪಿಗೆ ರಕ್ಷಣೆ ಕೊಡುವುದು ಕಾನೂನು ಬಾಹಿರವಾಗಿದ್ದರೂ, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಪೊಲೀಸರು ಆರೋಪಿಸಿದ್ದಾರೆ. ಈ ಮಧ್ಯೆ ಪ್ರಕರಣವನ್ನು ಪರಸ್ಪರ ಇತ್ಯರ್ಥಗೊಳಿಸುವ ಪ್ರಯತ್ನಕ್ಕೂ ಪೊಲೀಸ್ ಅಧಿಕಾರಿಗಳು ಮುಂದಾಗಿದ್ದರು.
Tagged with
cnews

ಮಂಗಳೂರು: ಪತ್ನಿ ಮನೆಗೆಂದು ಬೈಕ್‌ನಲ್ಲಿ ಹೊರಟಿದ್ದ ಯುವಕನೋರ್ವ ಟ್ಯಾಂಕರ್‌ಗೆ ಸೈಡ್ ಕೊಡುವ ಭರದಲ್ಲಿ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದು ನಾಪತ್ತೆಯಾದ ಘಟನೆ ಪಣಂ ಬೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಟಿಪಳ್ಳ ಗಣೇಶಪುರ ನಿವಾಸಿ ಶ್ರೀನಿವಾಸ ಪದಕಣ್ಣಾಯ(೨೬) ಎಂಬ ವರೇ ನದಿಪಾಲಾದ ದುರ್ದೈವಿ. ಇವರು ಶುಕ್ರವಾರ ಬೆಳಗ್ಗೆ ೮ ಗಂಟೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಕಾಟಿಪಳ್ಳದಿಂದ ಹೆಂಡತಿ ಮನೆಯಾದ ಕೈಕಂಬಕ್ಕೆ ಹೋಗುತ್ತಿದ್ದರು.
ಕೂಳೂರು ಕಿಸ್ಕೋ ಬಳಿ ಎಂ.ಎಸ್.ಇ.ಝಡ್.ಗೆ ಹೋಗಲು ನಿರ್ಮಿಸಲಾಗಿರುವ ನೂತನ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಟ್ಯಾಂಕರ್ ಬಂದಿತ್ತು. ಸೈಡ್ ಕೊಡುವ ವೇಳೆ ವಾಹನದಿಂದ ನಿಯಂತ್ರಣ ಕಳೆದುಕೊಂಡ ಅವರು ಫಲ್ಗುಣಿ ನದಿಗೆ ಬಿದ್ದಿದ್ದರು. ಸಂಜೆಯವರೆಗೂ ಅವರ ಪತ್ತೆಗಾಗಿ ಹುಡುಕಾಟ ನಡೆಸಲಾಗಿ ದ್ದರೂ ಯಾವುದೇ ಫಲ ನೀಡಿಲ್ಲ. ಮೃತರು ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಪಣಂಬೂರು ಠಾಣೆಯಲ್ಲಿ ನಾಪತ್ತೆ ಕೇಸು ದಾಖಲಿಸಲಾಗಿದೆ.
Tagged with
cnews
ಪಡುಬಿದ್ರಿ: ನವವಿವಾಹಿತನೋರ್ವ ರೈಲ್ವೇ ಹಳಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.
ದುರ್ಗಾನಗರ ಬಂಟಕಲ್ಲು ನಿವಾಸಿ ಜಗದೀಶ(೩೦) ಆತ್ಮಹತ್ಯೆ ಮಾಡಿಕೊಂ ಡವರು. ಮದುವೆಯಾಗಿ ಆರು ತಿಂಗಳಾಗಿರುವ ಇವರು ಮನೆಮಂದಿಯೊಂ ದಿಗಿದ್ದ ವಿರಸದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
Tagged with
cnews
ಮುಲ್ಕಿ: ಮಹಿಳೆಯೊಬ್ಬರಿಗೆ ತಂದೆ-ಮಗಳು ಸೇರಿ ಜಾತಿ ನಿಂದನೆಗೈದು ಹಲ್ಲೆ ಮಾಡಿದ್ದಾರೆ ಎಂದು ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.ಕೆಮ್ರಾಲ್ ಗ್ರಾಮದ ಬಲವಿನ ಗುಡ್ಡೆಯ ಸರೋಜ ಎಂಬವರಿಗೆ ನಾರಾಯಣ ಶೆಟ್ಟಿಗಾರ್ ಮತ್ತು ಅವರ ಮಗಳು ಸೇರಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಸರೋಜಾ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ.
Tagged with
cnews
ಮಂಗಳೂರು: ಮೂಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯ ವೃದ್ಧ ದಂಪತಿಯ ಮನೆಯಲ್ಲಿ ಕೆಲಸಕ್ಕಿದ್ದ ದಂಪತಿ ದಲಿತ ಸಂಘರ್ಷ ಸಮಿತಿಯ ನಾಯಕರು ಹಾಗೂ ಮೂಲ್ಕಿ ಇನ್ಸ್‌ಪೆಕ್ಟರ್ ಸಹಕಾರದೊಂದಿಗೆ ಬೆದರಿಸಿ ಹಣ ವಸೂಲಿ ಮಾಡಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಲಾಗಿದೆ. ಕೆಮ್ರಾಲ್ ಸಮೀಪದ ಕೋಡುಮನೆಯ ನಾರಾಯಣ ಶೆಟ್ಟಿ(೭೩) ಮತ್ತು ಪತ್ನಿ ಸುಧಾ ಎನ್ ಶೆಟ್ಟಿ(೬೩) ಪೊಲೀಸರಿಗೆ ದೂರು ನೀಡಿದವರು. ಕೃಷ್ಣ ಮತ್ತು ಅವರ ಪತ್ನಿ ಸರೋಜ ಇವರ ಮನೆಯಲ್ಲಿ ಕೆಲಸಕ್ಕಿದ್ದು, ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಇವರಿಗೆ ಸಹಕರಿಸಿದ ದಸಂಸ ಮುಖಂಡ ವಿಶುಕುಮಾರ್, ಎಸ್.ಪಿ.ಆನಂದ, ನಾರಾಯಣ ಸಾಲಿಯಾನ್, ಮನೋಹರ ಹಾಗೂ ಮೂಲ್ಕಿ ಠಾಣಾ ಸರ್ಕಲ್ ಇನ್ಸ್‌ಪೆಕ್ಟರ್ ಬಶೀರ್ ಅಹ್ಮದ್ ಹಾಗೂ ಠಾಣೆಯ ಇತರ ಪೊಲೀಸರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ನಾರಾಯಣ ಶೆಟ್ಟಿ ದಂಪತಿಗೆ ಮೂವರು ಮಕ್ಕಳಿದ್ದು, ಮದುವೆಯಾಗಿ ಪ್ರತ್ಯೇಕ ವಾಸವಿದ್ದಾರೆ. ಇವರ ಮನೆಯಲ್ಲಿ ತೋಟದ ಕೆಲಸಕ್ಕೆಂದು ಎರಡು ತಿಂಗಳ ಹಿಂದೆ ಕೃಷ್ಣ ಮತ್ತು ಸರೋಜ ಸೇರಿದ್ದು, ಇವರಿಗೆ ಎಂಟು ಸಾವಿರ ರೂ. ವೇತನ ನಿಗದಿಪಡಿಸಲಾಗಿತ್ತು. ಮೊದಮೊದಲು ಮನೆಯ ಕೆಲಸ ಮಾಡುತ್ತಿದ್ದ ದಂಪತಿ ನಂತರ ಕೆಲಸ ಮಾಡದೆ ಇದ್ದುದರಿಂದ ಮನೆಯನ್ನು ಬಿಟ್ಟುಕೊಡುವಂತೆ ಹೇಳಿದರೂ ಆರೋಪಿಗಳು ಮನೆಯನ್ನು ಬಿಟ್ಟುಕೊಡದೆ ತಾವು ದಲಿತ ಸಮುದಾಯಕ್ಕೆ ಸೇರಿದವರು ಎಂದು ಮೂಲ್ಕಿ ಠಾಣೆಯಲ್ಲಿ ದಲಿತ ನಿಂದನೆ ದೂರು ನೀಡಿದ್ದರು. ಈ ವೇಳೆ ಪ್ರಕರಣ ರಾಜಿಯಲ್ಲಿ ಇತ್ಯರ್ಥ ಮಾಡಲು ದಸಂಸ ಮುಖಂಡ ವಿಶುಕುಮಾರ್ ಮತ್ತಿತರರು ಐದು ಲಕ್ಷ ರೂ. ಬೇಡಿಕೆ ಇರಿಸಿದ್ದರು. ಇದಕ್ಕೆ ಆರೋಪಿಗಳ ಜೊತೆ ಮೂಲ್ಕಿ ಠಾಣಾ ಇನ್ಸ್‌ಪೆಕ್ಟರ್ ಬಶೀರ್ ನೆರವು ನೀಡಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಗಳು ಚೌಕಾಶಿ ಮಾಡಿ ಕೊನೆಗೆ ೧,೪೦,೦೦೦ ರೂ. ಕೊಡುವಂತೆ ಹೇಳಿದ್ದು, ಮೂಲ್ಕಿ ಠಾಣೆಯಲ್ಲಿ ಈ ಹಣವನ್ನು ಕೊಡಲಾಗಿತ್ತು. ಈ ವೇಳೆ ಬಶೀರ್ ಅವರು ಠಾಣೆಯಲ್ಲಿರದೆ ರಜೆಯಲ್ಲಿದ್ದು, ಕೆಲವು ದಿನಗಳ ನಂತರ ತಮಗೆ ಫೋನ್ ಮಾಡಿ, 'ಪ್ರಕರಣ ಇಷ್ಟಕ್ಕೇ ಮುಗಿದಿಲ್ಲ, ನೀವೊಮ್ಮೆ ಬಂದು ನನ್ನನ್ನು ಕಾಣಬೇಕು ಎಂದು ಹೇಳಿರುವುದಾಗಿ ದೂರುದಾರರು ಆರೋಪಿಸಿದ್ದಾರೆ. ಇಷ್ಟೇ ಅಲ್ಲದೆ ಮೂಲ್ಕಿ ಪೊಲೀಸರು ತಮ್ಮನ್ನು ಹಣ ಕೊಡದೇ ಇದ್ದುದಕ್ಕಾಗಿ ಅಕ್ರಮ ಬಂಧನದಲ್ಲಿ ಇರಿಸಿರುವುದಾಗಿ ಎಸ್.ಪಿ. ಅವರಿಗೆ ದೂರಲಾಗಿದೆ. ಎಸ್.ಪಿ. ಅವರು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪಣಂಬೂರು ಎಸಿಪಿ ಪುಟ್ಟಮಾದಯ್ಯ ಅವರಿಗೆ ನಿರ್ದೇಶನ ನೀಡಿದ್ದಾರೆ.
Tagged with
cnews
ಮಂಗಳೂರು: ಕುಂದಾಪುರದ ವಕ್ವಾಡಿ, ಕೋಟೇಶ್ವರ ಪರಿಸರದಲ್ಲಿ ಮಾನಸಿಕ ಅಸ್ವಸ್ಥಳಂತೆ ತಿರಗುತ್ತಿದ್ದ ವಿಟ್ಲ ಮೂಲದ ಯುವತಿಯನ್ನು ಕುಂದಾಪುರ ಮಹಿಳಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಕ್ವಾಡಿ ಹೋಟೆಲ್ ಒಂದರ ಬಳಿ ತಿರಗುತ್ತಿದ್ದ ಯುವತಿ ಒಮ್ಮೆ ಚೆನ್ನಾಗಿ ಮಾತನಾಡುತ್ತಿದ್ದರೆ ಮತ್ತೊಮ್ಮೆ ಬಡಬಡಿಸುತ್ತಿದ್ದಳು. ಇದನ್ನು ಕಂಡ ಸಮಾಜ ಸೇವಕ ವಕ್ವಾಡಿ ಸತೀಶ್ ಶೆಟ್ಟಿ ಕುಂದಾಪುರು ಮಹಿಳಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಯುವತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಆಕೆ ತಾನು ವಿಟ್ಲ ಮೂಲದವಳಾಗಿದ್ದು, ಹೆಸರು ವಸುಂಧರಾ ಎಂದು ತಿಳಸಿದ್ದಳು. ಆಕೆಯ ನೀಡಿದ ಮಾಹಿತಿಯಾಧಾರದಲ್ಲಿ ಪೊಲೀಸರು ಮನೆಯವರನ್ನು ಪತ್ತೆ ಹಚ್ಚಿದ್ದಾರೆ.
ಬುಳೇರಿಕಟ್ಟೆ: ಶಾಲೆ ಮುಖ್ಯ ಶಿಕ್ಷಕ ಆತ್ಮಹತ್ಯೆ: ಪುತ್ತೂರು ತಾಲೂಕು ಬುಳೇರಿಕಟ್ಟೆ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಸದಾಶೀವ ಕಾಮತ್ (೫೬) ಸ್ವಗೃಹದಲ್ಲಿ ವಿಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ಸಂಜೆ ಮಂಚಿ ಗ್ರಾಮದ ಪುಚ್ಚುಕೆರೆಯ ತಮ್ಮ ಮನೆಯಲ್ಲಿ ವಿಷ ಸೇವಿಸಿದ್ದರು. ಅಸ್ವಸ್ಥರಾಗಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Tagged with
cnews
ಮಂಜೇಶ್ವರ: ವಿವಾಹ ದಲ್ಲಾಳಿಯೋರ್ವನನ್ನು ತಂಡವೊಂದು ಮೂರು ದಿನಗಳ ಕಾಲ ಕೊಠಡಿಯೊಂದರಲ್ಲಿ ಕೂಡಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಬಂಟ್ವಾಳದ ಕಲ್ಲಗುಡ್ಡೆ ನಿವಾಸಿ ಮೆಹಮೂದ್(೬೫) ಎಂಬವರನ್ನು ವರ್ಕಾಡಿಯ ಬಾಡಿಗೆ ಕೊಠಡಿಯೊಂದರಲ್ಲಿ ಮೂರುದಿನಗಳ ಕಾಲ ಕೂಡಿ ಹಿಂಸೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ತಿಂಗಳ ಆರರಂದು ಇಬ್ಬರು ವ್ಯಕ್ತಿಗಳು ಮೆಹಮೂದ್‌ರನ್ನು ವರ್ಕಾಡಿಗೆ ಕರೆತಂದಿದ್ದು, ಬಳಿಕ ಅಲ್ಲಿನ ಕೊಠಡಿಯೊಂದರಲ್ಲಿ ಸತತ ಮೂರು ದಿನಗಳ ಕಾಲ ಹಿಂಸೆ ನೀಡಿದ್ದು ಬಿ.ಸಿ.ರೋಡ್‌ಗೆ ಕರೆದೊಯ್ದು ಅಲ್ಲಿ ಉಪೇಕ್ಷಿಸಿದ್ದಾರೆಂದು ದೂರಲಾಗಿದೆ. ಇದರಿಂದ ತೀವ್ರ ಅಸ್ವಸ್ಥರಾದ ಮೆಹಮೂದ್ ಆಸ್ಪತ್ರೆಯಲ್ಲಿ ದಾಖಲಾಗಿದಾರೆನ್ನ ಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳು ನೀಡಿದ ದೂರಿನಂತೆ ಸಾಲೆತ್ತೂರು ನಿವಾಸಿಗಳಾದ ಮೊಯಿದ್ದೀನ್ ಕುನ್ಹಿ ಹಾಗೂ ಸಿದ್ದಿಕ್ ಎಂಬವರ ಮೇಲೆ ಕೇಸು ದಾಖಲಿಸಿರುವ ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Tagged with
cnews
ಮಂಜೇಶ್ವರ: ಕಟ್ಟಡದ ಮೇಲೇರಿ ಪೇರಳೆ ಹಣ್ಣು ಕೊಯ್ಯುತಿದ್ದ ಹದಿನಾಲ್ಕರ ಹರೆಯದ ಬಾಲಕನೊಬ್ಬ ಎಂಬತ್ತು ಅಡಿ ಆಳದ ಬಾವಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಉಪ್ಪಳ ಬಳಿ ನಡೆದಿದೆ.
ಉಪ್ಪಳ ಬಳಿಯ ಪಚ್ಲಂಪಾರೆನಿವಾಸಿ ಜವುರ ಎಂಬವರ ಪುತ್ರ ಆದಿಲ ಭಾಷಾ(೧೪) ಎಂಬಾತನೇ ಮೃತ ದುರ್ದೈವಿ ಬಾಲಕ
ಜವುರ ತನ್ನ ಮಕ್ಕಳ ಜತೆ ಬಪ್ಪಾಯಿ ತೊಟ್ಟಿ ಬಳಿಯ ವ್ಯಕ್ತಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತಿದ್ದಳು. ಜವುರ ಒಳಗೆ ಕೆಲಸ ಮಾಡುತಿದ್ದ ಸಂದರ್ಭದಲ್ಲಿ ಮನೆಗೆ ತಾಗಿಕೊಂಡೇ ಇದ್ದ ಶೆಡ್ ಒಂದರ ಸ್ಲೇಬ್‌ನ ಮೇಲೇರಿದ ಆದಿಲ ಭಾಷಾ ಅದಕ್ಕೆ ತಾಗಿಕೊಂಡಿದ್ದ ಪೇರಳೆ ಮರದಿಂದ ಪೇರಳೆ ಕೊಯ್ಯುತ್ತಿದ್ದ ಸಂದರ್ಭ ಕಾಲುಜಾರಿ ಅಲ್ಲೇ ಪಕ್ಕದಲ್ಲಿದ್ದ ಬಾವಿಯೊಳಕ್ಕೆ ಬಿದ್ದಿದ್ದು ಇದನ್ನು ಕಂಡ ಆತನ ಸಹೋದರ ತಾಯಿ ಮತ್ತು ಸ್ಥಳೀಯರಿಗೆ ವಿಷಯ ತಿಳಿಸಿದ್ದು ಕೂಡಲೇ ಅಲ್ಲಿಗಾಗಮಿಸಿದ ನಾಗರಿಕರು ಬಾಲಕನನ್ನು ಮೇಲಕೆತ್ತಲು ಪ್ರಯತ್ನಿಸಿ ದರಾದರೂ ಅದು ಸಾಧ್ಯವಾಗದಿದ್ದಾಗ ನಾಗರಿಕರು ಉಪ್ಪಳದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ನಾಗರಿಕರೊಂದಿಗೆ ಸೇರಿ ಮೇಲಕೆತ್ತಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ದರಾದರೂ ಅದಾಗಲೇ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಬಾವಿ ಯಲ್ಲಿ ನೀರು ಬತ್ತಿ ಹೋಗಿದ್ದು ಅದರೊಳಗೆ ಅಳವಡಿಸಲಾಗಿದ್ದ ಕೊಳವೆಬಾವಿಯ ಪೈಪ್ ಬಾಲಕನ ತಲೆಗೆ ಬಡಿದುದರಿಂದ ಗಂಭೀರ ಗಾಗೊಳ್ಳಲು ಕಾರಣವಾಗಿದೆ ಎನ್ನಲಾಗಿದೆ.
Tagged with
cnews
ಮಂಗಳೂರು: ರಸ್ತೆಯಲ್ಲಿ ಹರಿದಾಡುತ್ತಿದ್ದ ಹಾವನ್ನು ರಕ್ಷಿಸಲು ಹೋದ ಜೀಪ್ ಚಾಲಕ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಘಟನೆ ನಿನ್ನೆ ನಗರದ ಕುಡುಪುವಿನಲ್ಲಿ ನಡೆದಿದೆ. ಕಾರ್ಕಳದಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸನ್ನು ಕುಡುಪು ಬಳಿ ಜೀಪ್ ಓವರ್‌ಟೇಕ್ ಮಾಡಲು ಯತ್ನಿಸಿತ್ತು. ಈ ವೇಳೆ ರಸ್ತೆಯಲ್ಲಿ ಹಾವು ಹರಿದಾಡುವುದನ್ನು ಕಂಡು ಗಲಿಬಿಲಿಗೊಂಡ ಅದರ ಚಾಲಕ ದಿಢೀರ್ ಬ್ರೇಕ್ ಹಾಕಿದ್ದು, ಬಸ್ ಹಿಂಬದಿಗೆ ಗುದ್ದಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಎರಡೂ ವಾಹನಗಳು ಜಖಂಗೊಂಡಿದ್ದು, ಎರಡೂ ವಾಹನಗಳ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
Tagged with
cnews
ಪಡುಬಿದ್ರಿ: ಇಲ್ಲಿನ ಕಾಪು ಠಾಣಾ ವ್ಯಾಪ್ತಿಯ ಕಟಪಾಡಿ ಪೆಟ್ರೋಲ್ ಪಂಪ್ ಎದುರಿನ ಹೆರಾಲ್ಡ್ ಡಿ'ಸಿಲ್ವಾ ಎಂಬವರ ಮನೆಗೆ ನುಗ್ಗಿರುವ ಕಳ್ಳರು ೨ ಲಕ್ಷಕ್ಕೂ ಅಧಿಕ ಚಿನ್ನಾಭರಣವನ್ನು ಕಳವು ಗೈದಿದ್ದಾರೆ. ಮನೆಮಂದಿ ಮೇ ೫ರಂದು ಮುಂಬೈಗೆ ತೆರಳಿದ್ದರು. ೯ರಂದು ಮನೆಕೆಲಸದಾತ ಕಳವಿನ ಬಗ್ಗೆ ಮಾಹಿತಿ ನೀಡಿದ್ದಾನೆ. ನಿನ್ನೆ ಊರಿಗೆ ಆಗಮಿಸಿರುವ ಮನೆ ಮಾಲೀಕ ಕಳವಿನ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Tagged with
cnews
ಮಂಗಳೂರು: ಮದ್ಯ ವ್ಯಸನದಿಂದ ಮುಕ್ತಗೊಳಿಸಲು ತಳಿಪರಂಬದ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸಾ ಕೇಂದ್ರದಿಂದ ಓಡಿ ಅಲ್ಲೇ ಇದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಏರಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಗಾಯಗೊಂಡ ಘಟನೆ ನಡೆದಿದೆ. ಮದ್ಯ ಮುಕ್ತ ಚಿಕಿತ್ಸಾ ಕೇಂದ್ರದಲ್ಲಿ ಕೆಲವು ದಿನಗಳ ಹಿಂದಷ್ಟೇ ದಾಖಲಾಗಿದ್ದ ಉದ್ಯಾವರದ ಯುವಕ ಸುಟ್ಟ ಗಾಯಗಳೊಂದಿಗೆ ಪರಿಯಾರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Tagged with
cnews
ಮೇಷ : ಹಣಕಾಸಿನ ಬಗ್ಗೆ ಜಾಗ್ರತೆ ಮಾಡಿರಿ.
ವೃಷಭ : ಹಣದ ವಿಷಯದಲ್ಲಿ ಅಸಮಾಧಾನ ಇರುತ್ತದೆ.
ಮಿಥುನ : ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಇರುತ್ತದೆ.
ಕರ್ಕಾಟಕ : ಕೆಲಸ ಕಾರ್ಯಗಳಲ್ಲಿ ಜಯ ಇರುತ್ತದೆ.
ಸಿಂಹ : ಸರಕಾರಿ ನೌಕರರಿಗೆ ಸಂತೋಷದ ದಿನ.
ಕನ್ಯಾ : ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ.
ತುಲಾ : ಧರ್ಮ ಕಾರ್ಯಗಳಿಗೆ ಹಣ ವ್ಯಯವಾಗುತ್ತದೆ.
ವೃಶ್ಚಿಕ : ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ.
ಧನು : ಜಂಟಿ ವ್ಯಾಪಾರವನ್ನು ಮಾಡಬೇಡಿ.
ಮಕರ : ಮಕ್ಕಳಿಂದ ತೊಂದರೆ ಇರುತ್ತದೆ.
ಕುಂಭ : ಬಂಧುಗಳಿಂದ ಸಹಾಯ ದೊರೆಯುತ್ತದೆ.
ಮೀನ : ಮಾನಸಿಕ ನೆಮ್ಮದಿ ಇರುವುದಿಲ್ಲ.
Tagged with
bhavishya
ಮಂಗಳೂರು : ಕೆಲಸಕ್ಕೆ ಜನ ಬೇಕು ೯೪೪೯೭೨೩೧೩೩.
ಪಂಪ್‌ವೆಲ್: ಮನೆಕೆಲಸಕ್ಕೆ ಮಹಿಳೆ ಬೇಕು ೯೯೪೫೭೦೪೦೪೨.
ಕುಂಟಿಕಾನ : ಹೋಂ ಪ್ರೋಡಕ್ಟ್‌ಗೆ ಜನ ಬೇಕು ೯೪೮೦೧೧೭೮೫೪.
ಮಂಗಳೂರು : ಸ್ಟೇಷನರಿ ಶಾಪ್‌ಗೆ ಪಾರ್ಟ್ ಟೈಮ್ ಸೇಲ್ಸ್‌ಮೆನ್ ಬೇಕು ೯೮೮೦೦೬೧೬೫೦.
ಮಂಗಳೂರು : ಆಫೀಸೊಂದಕ್ಕೆ ಮಾರ್ಕೆ ಟಿಂಗ್ ಎಕ್ಸಿಕ್ಯೂಟಿವ್ ಬೇಕು ೯೯೪೫೬೬೯೧೨೮.
ಮಂಗಳೂರು : ಸೇಲ್ಸ್ ಎಕ್ಸಿಕ್ಯೂಟಿವ್ ಬೇಕು ೭೭೬೦೪೭೧೦೬೪.
ಮುಡಿಪು ಬಳಿ ಸಸ್ಯಾಹಾರಿ ಹೊಟೇಲಿಗೆ ವೇಟರ್, ಕ್ಲೀನರ್ ಬೇಕು ೦೯೪೪೬೧೬೯೮೮೪.
ಹೊಟೇಲ್‌ಗೆ ಎಲ್ಲಾ ತರದ ಅಡುಗೆಯ ವರು ಬೇಕಾಗಿದ್ದಾರೆ. ೯೯೦೧೯೫೦೧೦೯
ಮಂಗಳೂರು : ಪೂನಾಕ್ಕೆ ಮನೆ ಕೆಲಸ ಮಹಿಳೆ ಬೇಕಾಗಿಲ್ಲ ೦೯೯೬೦೦೫೩೧೪೧.
ಕಂಕನಾಡಿ : ಆಪ್ಟಿಕಲ್ ಶಾಪ್‌ಗೆ ಯುವತಿ ಬೇಕು ೯೦೩೬೬೦೩೧೨೯.
ಮಂಗಳೂರು : ಕೊಂಚಾಡಿಗೆ ಸೈಬರ್ ವೊಂದಕ್ಕೆ ಜನ ಬೇಕು ೯೦೦೮೧೨೨೮೨೯.
ಮಂಗಳೂರು : ಕಾಲ್ ಸೆಂಟರ್‌ಗೆ ಹೌಸ್ ಕೀಪರ್ ಬೇಕು ೯೯೧೬೧೧೯೪೬೯.
ಮಂಗಳೂರು : ಸುರತ್ಕಲ್ - ಬೈಕಂಪಾಡಿಗೆ ಕೊರಿಯರ್ ಏಜೆನ್ಸಿ ಬೇಕು ೯೮೪೫೮೦೬೪೮೦.
ಕಾವೂರು : ಹೊಟೇಲ್‌ಗೆ ಕುಕ್ & ಸಪ್ಲಾಯರ್ ಬೇಕು ೯೮೮೦೭೨೫೪೨೨.
ಮಂಗಳೂರು : ಹೊಟೇಲ್‌ಗೆ ಕಿಚನ್ ಹೆಲ್ಪರ್ ಬೇಕು ೯೪೪೮೩೮೩೭೦೫.
ಮಂಗಳೂರು : ಸ್ಟಾಕ್, ಸೇಲ್ಸ್ ಮೇಲ್ವಿ ಚಾರಣೆಗೆ ಮಹಿಳಾ ಕ್ಲರ್ಕ್, ಮಾರ್ಕೆಟಿಂಗ್‌ಗೆ ಯುವಕರು ಬೇಕು ೯೮೪೫೩೫೩೭೮೯.
ಪುತ್ತೂರು : ದ್ವಿಚಕ್ರವಾಹನ ಶೋರೂಮ್‌ಗೆ ಸೇಲ್ಸ್‌ಮ್ಯಾನ್ ಬೇಕು ೮೭೪೮೯೭೦೨೮೬.
ಮಂಗಳೂರು: ಬೇಕರಿ ಮತ್ತು ಜ್ಯೂಸ್ ಅಂಗಡಿಗೆ ಜನ ಬೇಕು ೯೮೪೪೫೨೧೭೪೩.
ಮಂಗಳೂರು : ಒಪ್ಟಿಕಲ್ ಶಾಪಿಗೆ ಯುವತಿ ಬೇಕು ೯೦೩೬೬೨೧೦೭೯.
ಮಂಗಳೂರು: ಸ್ಕ್ರೀನ್‌ಪ್ರಿಂಟಿಂಗ್‌ಗೆ ಜನ ಬೇಕು ೭೭೬೦೬೩೧೪೫೭.
ಮಂಗಳೂರು: ಗ್ರಾಫಿಕ್ಸ್‌ಗೆ ಯುವತಿಯರು ಬೇಕು ೯೦೩೬೪೮೯೦೪೦.
ತೊಕ್ಕೊಟ್ಟು : ಕಚೇರಿ ಕೆಲಸಕ್ಕೆ ಪಿಯುಸಿ ಯಾದ ಯುವತಿ ೭೭೯೫೧೬೯೭೮೭.
ಮಂಗಳೂರು : ಸೇಲ್ಸ್‌ಮ್ಯಾನ್ ಮತ್ತು ಎಕ್ಸಿ ಕ್ಯೂಟಿವ್ ಬೇಕು ೭೨೫೯೩೫೪೮೮೪
ಮಂಗಳೂರು : ಏಜೆನ್ಸಿಯೊಂದಕ್ಕೆ ಸೇಲ್ಸ್‌ಗೆ ಯುವತಿಯರು ಬೇಕು ೨೪೪೩೫೭೬.
ಮಂಗಳೂರು : ಮಂಗಳಾದೇವಿ ಬಳಿ ಆಫೀಸ್ ಕೆಲಸಕ್ಕೆ ಹೆಲ್ಪರ್ ಬೇಕು ೯೮೪೪೦೦೯೯೦೫
ಬೈಕಂಪಾಡಿ : ಹೊಟೇಲಿಗೆ ಮಾಂಸಾಹಾರಿ ಅಡುಗೆಯವರು, ಕಿಚನ್ ಹೆಲ್ಪರ್ ಬೇಕು ೯೯೮೦೨೬೭೮೮೪.
ಪಡೀಲ್ : ಪೆಟ್ರೋಲ್ ಪಂಪ್‌ಗೆ ಯುವಕರು ಬೇಕು ೯೪೪೮೧೩೪೧೨೩.
ಕೋಡಿಕಲ್ : ಮನೆಕಾರಿಗೆ ಡ್ರೈವರ್ ಬೇಕು ೨೪೫೧೮೨೮.
Tagged with
udyoga
ಶಿರಾಡಿ ಘಾಟಿ ಸಮೀಪ ಸಿಗುವ ಗುಂಡ್ಯ ಎಂಬಲ್ಲಿ ಚಾರಣ ನಡೆಸಲು ಯೋಗ್ಯವಾದ ಹಲವಾರು ಸ್ಥಳಗಳಿವೆ. ಇಲ್ಲಿಗೆ ಬೆಂಗಳೂರು, ಮಂಗಳೂರು ಹಾಗೂ ರಾಜ್ಯದ ನಾನಾ ಭಾಗಗಳಿಂದ ಪ್ರತಿನಿತ್ಯ ಚಾರಣಿಗರು ಆಗಮಿಸು ತ್ತಾರೆ. ಆದರೆ ಇಲ್ಲಿನ ಸಮಸ್ಯೆಯೆಂದರೆ ಚಾರಣಿ ಗರಿಗೆ ಅಗತ್ಯ ಮಾರ್ಗ ದರ್ಶನದ ಕೊರತೆಯಿದೆ. ಚಾರಣ ಕೈಗೊಳ್ಳಬೇಕಾದ ಸ್ಥಳಗಳ ಮಾಹಿತಿ ಮತ್ತು ಅವುಗಳಿಗೆ ತೆರಳುವ ಮಾರ್ಗದ ಬಗ್ಗೆ ಸೂಕ್ತ ಮಾಹಿತಿ ನೀಡುವವರು ಇಲ್ಲಿ ಯಾರೂ ಇಲ್ಲ. ಇದ ರಿಂದ ಗುಂಡ್ಯ ಚಾರಣದ ಮಧ್ಯೆ ಹಲವಾರು ವಿಘ್ನಗಳು ಎದುರಾಗುತ್ತವೆ.
ಚಾರಣದ ಮಧ್ಯೆ ಚಾರಣಿಗರು ದಾರಿ ತಪ್ಪುವುದು ಮಾಮೂಲಾಗಿದೆ. ಇತ್ತೀಚೆಗೆ ಇಲ್ಲಿಗೆ ಚಾರಣಕ್ಕೆ ಬಂದಿದ್ದ ವಿದ್ಯಾರ್ಥಿಗಳ ತಂಡದಲ್ಲಿ ಓರ್ವ ಗುಂಡ್ಯ ಹೊಳೆ ಪಾಲಾದದ್ದೂ, ನಡೆದಿದೆ. ಇಲ್ಲೇ ಸಮೀಪದಲ್ಲಿ ಹರಿಯುವ ಗುಂಡ್ಯ ಹೊಳೆ ಮಳೆಗಾಲದ ವೇಳೆ ತುಂಬಿ ಹರಿಯುತ್ತಿದ್ದು, ಈ ವೇಳೆ ಸೂಕ್ತ ಮಾರ್ಗದರ್ಶನ ಇರದೇ ಇದ್ದಲ್ಲಿ ಹೊಳೆಯಲ್ಲಿ ಮುಳುಗಿ ನಾಪತ್ತೆಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗುಂಡ್ಯದಲ್ಲಿ ಪ್ರವಾಸಿ ಮಾಹಿತಿ ಕ್ಯಾಂಪ್ ಅನ್ನು ತೆರೆಯಬೇಕು. ಈ ಮೂಲಕ ಚಾರಣ ಕೈಗೊಳ್ಳುವವರಿಗೆ ಅವಶ್ಯ ಮಾಗದರ್ಶನ ನೀಡಲು ಇಲಾಖೆ ಮುಂದಾಗಬೇಕು.
ಚಂದ್ರಶೇಖರ, ಪುತ್ತೂರು
ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ಹಾಕಿ
ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟ್ಯಾಂಕರ್‌ಗಳು ಮತ್ತು ಬೃಹತ್ ವಾಹನಗಳ ಅಪಘಾತಗಳು ಹೆಚ್ಚಾಗುತ್ತಿವೆ. ಹಲವಾರು ಜನರು ಅನ್ಯಾಯವಾಗಿ ಅಮೂಲ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆಗಳ ಗುಣಮಟ್ಟ ಉತ್ತಮವಾಗಿದ್ದರೂ ಅಪಘಾತಗಳು ಕಡಿಮೆ ಯಾಗಿಲ್ಲ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಬೆಳಗಿನ ಜಾವ ಮೂರು ಗಂಟೆಯಿಂದ ಐದರ ವರೆಗೆ ಲಾರಿಗಳು ಮತ್ತು ಟ್ರಕ್‌ಗಳ ಸಂಚಾರವನ್ನು ಕಡ್ಡಾಯವಾಗಿ ಸ್ಥಗಿತಗೊಳಿಸುವಂತೆ ಸರಕಾರ ೧೯೮೫ರಲ್ಲಿಯೇ ಕಾನೂನು ಜಾರಿಗೆ ತಂದಿದೆ. ಆದರೆ ಅದು ಸರಿಯಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ. ಹೆಚ್ಚಿನ ಅಪಘಾತಗಳು ಬೆಳಗಿನ ಜಾವದಲ್ಲೇ ಸಂಭವಿ ಸುತ್ತವೆ. ಆ ಅವಧಿಯಲ್ಲಿ ವಾಹನಗಳ ಓಡಾಟ ನಿಲ್ಲಿಸಿದರೆ ಅಪಘಾತಗಳು ಕಡಿಮೆಯಾಗಬಹುದು. ರಾತ್ರಿ ವೇಳೆ ಸಂಚರಿಸುವ ವಾಹನಗಳನ್ನೂ ತಪಾಸಣೆ ಮಾಡುವ ಅಗತ್ಯವಿದೆ. ನಿಯಮ ಉಲ್ಲಂಘಿಸುವ ವಾಹನಗಳ ಚಾಲಕರು ಮತ್ತು ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಹೆದ್ದಾರಿಗಳಲ್ಲಿ ಪ್ರತೀ ೫೦ ಕಿ.ಮೀ. ಒಂದರಂತೆ ಒಂದು ತುರ್ತು ಅಪಘಾತ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸುವ ಅಗತ್ಯ ವಿದೆ. ಅಪಘಾತ ಸಂಭವಿಸಿದ ಕೂಡಲೇ ಗಾಯಾಳು ಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಆಂಬ್ಯುಲೆನ್ಸ್‌ಗಳ ಅಗತ್ಯವಿದೆ. ಖಾಸಗಿ ಸಂಸ್ಥೆಗಳು ನಿರ್ಮಿಸಿದ ಹೆದ್ದಾರಿ ಗಳಲ್ಲಿ ಅಪಘಾತವಾದರೆ ಗಾಯಾಳುಗಳ ಸ್ಥಿತಿ ಶೋಚ ನೀಯವೇ ಸರಿ.
ಅರುಣ್ ಕುಮಾರ್, ಬೆಳ್ತಂಗಡಿ
ಗಣ್ಯರ ಜಯಂತಿಗೆ ಸರಕಾರಿ ರಜೆ ಅಗತ್ಯವೇ?
ಸರಕಾರವು ಹಲವರು ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಘೋಷಿಸುತ್ತಾ ಬರುತ್ತಿವೆ. ಪ್ರತಿಯೊಬ್ಬರ ಜಯಂತಿಗೆ ಸಾರ್ವಜನಿಕ ರಜೆ ಘೋಷಿಸಿದರೆ, ಮುಂದಿನ ದಿನಗಳಲ್ಲಿ ಕೆಲಸ ಮಾಡುವುದನ್ನು ಬಿಟ್ಟು ವರ್ಷಪೂರ್ತಿ ಜಯಂತಿ ಗಳನ್ನು ಆಚರಿಸುತ್ತಾ ಕೂರಬೇಕಾಗಬಹುದು. ದೇಶಕ್ಕೆ ಈ ಮಹಾನ್ ವ್ಯಕ್ತಿಗಳ ಕೊಡುಗೆ ಅಪಾರ. ಅವರಿಗೆ ಗೌರವ ತೋರುವುದು ನಮ್ಮ ರಾಷ್ಟ್ರದ ಹಾಗೂ ಜನತೆಯ ಕರ್ತವ್ಯವಾಗಿದೆ. ಆದರೆ ಗೌರವದ ಹೆಸರಿನಲ್ಲಿ ರಜೆಗಳನ್ನು ಅನುಭವಿಸು ವುದು ಸಮಂಜಸವೇ?
ದೇಶಕ್ಕಾಗಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಜಯಂತಿಯ ದಿನ ನಿರ್ಧಾರ ಮಾಡಿ ಆಚರಣೆ ಮಾಡುವುದು ತಪ್ಪಲ್ಲ. ಆದರೆ ಸರಕಾರ ಜಯಂತಿ ಗಳನ್ನು ಘೋಷಣೆ ಮಾಡಿ ಜಯಂತಿಯ ಆಚರಣೆಯೊಂದಿಗೆ ಸೇವಾ ದಿನವೂ ಮುಂದು ವರಿಯಬೇಕು. ಕಡ್ಡಾಯವಾಗಿ ಸ್ವಾತಂತ್ರ್ಯ ದಿನ, ಗಣರಾಜ್ಯ ದಿನ, ಗಾಂಧಿ ಜಯಂತಿ ಹೀಗೆ ಹಲವು ಪ್ರಮುಖ ರಾಷ್ಟ್ರೀಯ ಹಬ್ಬಗಳಿಗೆ ರಜೆಗಳಿರುವಂತೆ ವಿವಿಧ ಧರ್ಮಗಳ ಪ್ರಮುಖ ಹಬ್ಬಗಳಿಗೆ ಮಾತ್ರ ರಜೆ ಸಾರಬೇಕು. ಈ ಮಹಾನ್ ವ್ಯಕ್ತಿಗಳ ಹೆಸರಿ ನಲ್ಲಿ ಸರಕಾರ ರಜೆಗಳನ್ನು ಘೋಷಿಸಿ, ನೌಕರರ ವಿಶ್ವಾಸ ಹಾಗೂ ಆಯಾ ಸಮುದಾಯಗಳ ವಿಶ್ವಾಸ ಗಳಿಸಿಕೊಳ್ಳಬಹುದು. ಆದರೆ ಇದು ಪರೋಕ್ಷವಾಗಿ ಇನ್ನಿತರ ಸಮುದಾಯಗಳ ಮೇಲೆ ಆಡಳಿತದ ಮೇಲೆ ಪ್ರಭಾವ ಬಿದ್ದೇ ಬೀಳುತ್ತದೆ. ಸರಕಾರ ಜಯಂತಿಗಳ ರಜೆ ಘೋಷಣೆಯ ಮುಂಚೆ ಸಾಧಕ-ಭಾದಕಗಳ ಬಗ್ಗೆ ವಿಮರ್ಶಿಸ ಬೇಕಾದ ಅಗತ್ಯವಿದೆ.
ಕಿರಣ್ ಕುಮಾರ್, ಸುಳ್ಯ
ಬಿಜೆಪಿ ನಾಯಕನೇ ಬೆಟ್ಟಿಂಗ್‌ನಲ್ಲಿ ತೊಡಗಿದರೆ?
ಐಪಿಎಲ್ ಕ್ರಿಕೆಟ್‌ನಲ್ಲಿ ಕೋಟ್ಯಂ ತರ ರೂ.ಬೆಟ್ಟಿಂಗ್ ನಡೆಯುತ್ತದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಹಲವಾರು ಮಂದಿಯನ್ನು ಪೊಲೀ ಸರು ಬಂಧಿಸಿದರೂ ಇನ್ನೂ ದಂಧೆ ನಿಂತಿಲ್ಲ. ಇತ್ತೀಚೆಗೆ ಕಾರ್ಕಳ ದಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡ ಗಿದ್ದ ಸ್ಥಳೀಯ ಬಿಜೆಪಿ ನಾಯಕನೂ ಪೊಲೀಸ್ ವಶವಾಗಿದ್ದಾನೆ. ಸಮಾಜಕ್ಕೆ ಮಾತ್ರ ತತ್ವ-ಸಿದ್ಧಾಂತ ಎಂದು ಉಪದೇಶವನ್ನು ಬೋಧಿಸುವ ಬಿಜೆಪಿ ಪಕ್ಷದ ಮುಖಂಡರೂ ಇಂಥ ದಂಧೆ ಯಲ್ಲಿ ತೊಡಗಿರುವುದು ನಾಚಿಕೆ ಗೇಡಿನ ಸಂಗತಿ. ಪೊಲೀಸರು ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣ ಮಟ್ಟಹಾಕಲು ಮುಂದಾಗಬೇಕು. ಬಿಜೆಪಿ ಮತ್ತು ಸಂಘಪರಿವಾರಕ್ಕೆ ಸೇರಿದ ಅನೇಕ ಯುವಕರು ಕಾರ್ಕಳ, ಉಡುಪಿಯಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿ ದ್ದಾರೆ. ಪೊಲೀಸ್ ಇಲಾಖೆ ಇವರ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳಲಿ.
ಕಿಶೋರ್ ಕೆ., ಕಾರ್ಕಳ
ಕೊಂಕಣ ರೈಲಿನಲ್ಲಿ ಮಹಿಳೆಯರ ಸುರಕ್ಷತೆಗೆ ಒತ್ತುಕೊಡಿ
ಮಂಗಳೂರಿನಿಂದ ಗೋವಾಕ್ಕೆ ಸಂಚರಿಸುವ ಕೊಂಕಣ ರೈಲಿನಲ್ಲಿ ಮಹಿಳೆಯರ ಸುರಕ್ಷ ತೆಯ ಕಡೆ ಗಮನ ಕೊಡ ಲಾಗುತ್ತಿಲ್ಲ. ಇದರಿಂದ ರೈಲು ಪ್ರಯಾಣದ ವೇಳೆ ಮಾನಸಿಕ ಕಿರಿಕಿರಿ ಉಂಟಾಗುವುದು ಸಹಜ. ಇದನ್ನು ತಪ್ಪಿಸಲು ರೈಲ್ವೇ ಪೊಲೀಸ್ ಇಲಾಖೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಮಂಗಳೂರಿನಿಂದ ಮುಂಜಾನೆ ಹೊರಡುವ ರೈಲಿನಲ್ಲಿ ಕೇರಳ ಮೂಲದ ಪ್ರಯಾಣಿಕರು ಕಿಕ್ಕಿರಿದು ತುಂಬಿರುತ್ತಾರೆ. ರೈಲು ಸುರತ್ಕಲ್, ಮೂಲ್ಕಿ ನಿಲ್ದಾಣ ಪ್ರವೇಶಿಸುವಾಗ ಸೀಟುಗಳು ಭರ್ತಿಯಾಗಿರುತ್ತವೆ. ಕೇರಳಿಗರ ಹಾವಳಿ ರೈಲಿನಲ್ಲಿ ತುಸು ಹೆಚ್ಚೇ ಆಗಿದ್ದು, ಮಹಿಳೆಯರು, ಹೆಣ್ಮಕ್ಕಳಿಗೆ ಚುಡಾಯಿಸುವುದು, ಅಸಭ್ಯವಾಗಿ ವರ್ತಿಸುವುದು ಮಾಮೂಲಾಗಿದೆ. ಇದನ್ನು ಸಹಪ್ರಯಾಣಿಕರು ಪ್ರತಿಭಟಿಸಿದರೆ ಗುಂಪಾಗಿ ಬಂದು ಹಲ್ಲೆ ನಡೆಸು ವುದೂ ನಡೆಯುತ್ತದೆ. ಇದರಿಂದ ರೈಲು ಪ್ರಯಾಣಿ ಕರು ಎಲ್ಲವನ್ನೂ ಎದುರಿಸಿ ಭಯದಿಂದಲೇ ಪ್ರಯಾಣ ಮಾಡಬೇಕು. ರೈಲ್ವೇ ಪೊಲೀಸ್ ಇಲಾಖೆ ರೈಲು ಪ್ರಯಾಣದ ವೇಳೆ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಇನ್ನಾದರೂ ಯೋಗ್ಯ ಕ್ರಮ ಕೈಗೊಳ್ಳಬೇಕು. ರೈಲಿನಲ್ಲಿ ಗಾಂಜಾ, ಸಿಗರೇಟು ಸೇವನೆ, ಮದ್ಯಪಾನ ಮಾಡುವುದು ಇತ್ಯಾದಿ ಯಾರ ಭಯವೂ ಇಲ್ಲದೆ ನಡೆಯುತ್ತದೆ. ಈ ಬಗ್ಗೆ ಸಂಬಂಧ ಪಟ್ಟವರು ಇನ್ನಾದರೂ ಗಮನಿಸಿ ರೈಲಿನಲ್ಲಿ ವಿಕೃತ ವರ್ತನೆ ತೋರುವವರ ವಿರುದ್ಧ ಕ್ರಮ ಕೈಗೊಳ್ಳು ವರೇ?
ರೇಷ್ಮಾ, ಸುರತ್ಕಲ್
ಯಡ್ಡಿ ಹಿಂಬಾಲಕರನ್ನು ಪಕ್ಷದಿಂದ ಉಚ್ಛಾಟಿಸಿ
ಕರ್ನಾಟಕ ರಾಜ್ಯ ರಾಜಕೀ ಯದ ಪ್ರಸ್ತುತ ಸನ್ನಿವೇಶಕ್ಕೆ ಯಡಿ ಯೂರಪ್ಪ ಮತ್ತವರ ಹಿಂಬಾಲಕರೇ ಕಾರಣವಾಗಿದ್ದಾರೆ. ಯಡಿಯೂರಪ್ಪ ಪದೇ ಪದೇ ಸರಕಾರವನ್ನು ಉರುಳಿಸಲು ಮುಂದಾಗಿರುವುದು ಹಿಂಬಾಲಕರ ಕುತಂತ್ರದಿಂದಲೇ ಆಗಿದೆ. ರೇಣು ಕಾಚಾರ್ಯರಂಥ ಅವಿವೇಕಿ ರಾಜ ಕಾರಣಿಗಳು ಸರಕಾರದ ಅಸ್ಥಿರತೆಗೆ ಕಾರಣವಾಗಿದ್ದರೂ ಮುಖ್ಯಮಂತ್ರಿ ಗಳು ಅವರ ವಿರುದ್ಧ ಕ್ರಮ ಕೈಗೊಳ್ಳು ತ್ತಿಲ್ಲವೇಕೆ? ಮುಖ್ಯಮಂತ್ರಿಯಾಗು ವುದು ಹಣ ಮಾಡುವ ಏಕೈಕ ಉದ್ದೇಶಕ್ಕೆ ಎನ್ನುವುದು ಎಲ್ಲರಿಗೂ ಮನವರಿಕೆಯಾದಂತಿದೆ. ‘ಮಾನ ಹೋದರೂ ಕುರ್ಚಿ ಬಿಡೆವು’ ಎಂದು ಕೊಂಡಿರುವ ಸ್ವಾರ್ಥ ರಾಜಕಾರಣಿ ಗಳಿಂದ ರಾಜ್ಯದ ಜನತೆಯ ಉದ್ಧಾರ ವಾಗುವುದು ಅಷ್ಟರಲ್ಲೇ ಇದೆ.
ನಂದೀಶ್, ಸಕಲೇಶಪುರ
ಶ್ರೀಮಂತರಿಗೆ ಸಬ್ಸಿಡಿ ಗ್ಯಾಸ್ ಬೇಡ
ಶ್ರೀಮಂತರು, ಮೇಲ್ಮಧ್ಯಮ ವರ್ಗದವರು ಹಾಗೂ ಐದು ಲಕ್ಷಕ್ಕೂ ಮೇಲ್ಪಟ್ಟ ಆದಾಯ ಇರುವವರಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡುವ ಅಗತ್ಯವಿಲ್ಲ. ಕೇಂದ್ರ ಸರಕಾರ ಈ ಕುರಿತು ಯೋಚನೆ ಮಾಡುತ್ತಿಲ್ಲ. ಆರ್ಥಿಕವಾಗಿ ಸಬಲರಾಗಿರುವ ವ್ಯಕ್ತಿಗಳು ಇಂತಹ ಸೌಲಭ್ಯವನ್ನು ಪಡೆಯಬಾರದು, ಆದರೆ ಅವರೇ ಇಂಥ ಸೌಲಭ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ವರ್ಗಗಳ ಗ್ರಾಹಕರು ಬಹಿರಂಗ ಮಾರುಕಟ್ಟೆ ಯಲ್ಲಿ ಸಿಗುವ ಅಡಿಗೆ ಅನಿಲ ಕೊಂಡು ಬಳಸುವ ಮೂಲಕ ಬಡವರಿಗೆ ನೆರವಾಗಬೇಕಿದೆ.
ವಿಧವೆಯರಿಗೆ ಮತ್ತು ದಿಕ್ಕಿಲ್ಲದ ವೃದ್ಧರಿಗೆ ಸರಕಾರ ತಿಂಗಳಿಗೆ ೫೦೦ ರೂ. ಮಾಶಾಸನ ನೀಡಲು ಹಿಂದೆ-ಮುಂದೆ ನೋಡುತ್ತದೆ. ೨೫ ಕೆ.ಜಿ. ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯುವ ಬಡವರಿಗೆ ಪ್ರತೀ ತಿಂಗಳು ಐದು ಕೆ.ಜಿ. ಗ್ಯಾಸ್ ಉಚಿತವಾಗಿ ನೀಡಬಹುದು. ಸರಕಾರ ಈ ಕುರಿತು ಅಗತ್ಯ ಚಿಂತಿಸಬೇಕು. ದೇಶದಲ್ಲಿ ಶ್ರೀಮಂತರ ಸಂಖ್ಯೆ ಜಾಸ್ತಿ ಆಗುತ್ತಿ ದ್ದರೂ ಬಡವರ ಸಂಖ್ಯೆಗೇನೂ ಕಡಿಮೆಯಾಗಿಲ್ಲ. ಅಸಹಾಯಕರಿಗೆ ಸರಕಾರದ ಸೌಲಭ್ಯಗಳು ಸಿಗು ವಂತೆ ನೋಡಿಕೊಳ್ಳುವ ಉದಾರ ಮನಸ್ಥಿತಿ ಯನ್ನು ಉಳ್ಳವರು ಬೆಳೆಸಿಕೊಳ್ಳುವುದು ಯಾವಾಗ?
ಕರುಣಾಕರ.ಎಸ್., ಮಂಗಳೂರು
ಸರಕಾರಿ ಆಸ್ಪತ್ರೆಗಳು ಕಾಟಾಚಾರಕ್ಕೆ ನಡೆಯುತ್ತಿದೆಯೇ?
ರಾಜ್ಯದ ಆರೋಗ್ಯ ಇಲಾಖೆಯಲ್ಲಿ ವೈದ್ಯರು ಸೇರಿದಂತೆ ವಿವಿಧ ಸಿಬ್ಬಂದಿಯ ಕೊರತೆ ಇದೆ. ಗ್ರಾಮೀಣ ಆಸ್ಪತ್ರೆಗಳು ಸೂಕ್ತ ಸಿಬ್ಬಂದಿ ಇಲ್ಲದೆ ಬಿಕೋ ಎನ್ನುತ್ತಿವೆ. ಆರೋಗ್ಯ ಉಪಕೇಂದ್ರಗಳಲ್ಲಿ ಕಿರಿಯ ಆರೋಗ್ಯ ಸಹಾಯಕರಿಲ್ಲ. ಸರಕಾರ ಆಸ್ಪತ್ರೆಗಳನ್ನು ಮುಚ್ಚುವ ಮನಸ್ಸಿಲ್ಲದೆ ಕಾಟಾಚಾರಕ್ಕೆ ನಡೆಸುತ್ತಿರುವಂತಿದೆ. ಅನಾರೋಗ್ಯ ಪೀಡಿತ ಹಣ ವಂತರು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಹಣ ಇಲ್ಲದ ಬಡವರು, ನಿರ್ಗತಿಕರು ಗ್ರಾಮೀಣ ಆಸ್ಪತ್ರೆಗಳ ಔಷಧ ತಿಂದು ಜೀವ ಉಳಿಸಿ ಕೊಳ್ಳುತ್ತಿದ್ದಾರೆ. ಇಂತಹ ಆಸ್ಪತ್ರೆಗಳು ನಮಗೆ ಬೇಕೆ? ಕಳೆದ ವರ್ಷ ಕಿರಿಯ ಆರೋಗ್ಯ ಸಹಾಯಕ ಹುದ್ದೆಗಳನ್ನು ನೇರ ನೇಮಕಾತಿ ಮಾಡಲು ಸರಕಾರ ಅಧಿಸೂಚನೆ ಪ್ರಕಟ ಮಾಡಿತು. ಆದರೆ ಒಂದು ವರ್ಷ ಕಳೆದರೂ ಇನ್ನೂ ನೇಮಕಾತಿ ಪ್ರಕ್ರಿಯೆ ನಡೆಯುತ್ತಲೇ ಇದೆ. ಸಿಬ್ಬಂದಿ ನೇಮಕ ಮಾಡಲು ಸರಕಾರಕ್ಕೆ ಆಸಕ್ತಿ ಇಲ್ಲವೇ ಎಂಬುದು ತಿಳಿಯುತ್ತಿಲ್ಲ. ಹಿಂದಿನ ಯಾವ ಸರಕಾರದಲ್ಲೂ ಇಂತಹ ನಿರುತ್ಸಾಹದ ವಾತಾವರಣ ಇರಲಿಲ್ಲ. ಮುಖ್ಯಮಂತ್ರಿಯವರು ಒಂದು ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದಾರೆ. ಆಸ್ಪತ್ರೆಗಳ ನಿರ್ವಹಣೆಗೆ ಹಣದ ಕೊರತೆ ಇರಲಾರದು.
ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿ ಕೊಳ್ಳದಿದ್ದರೆ ಆಸ್ಪತ್ರೆಗಳು ನಡೆಯುವುದಾದರೂ ಹೇಗೆ? ಮುಖ್ಯಮಂತ್ರಿಯವರು ಈ ಸಮಸ್ಯೆಯತ್ತ ತಕ್ಷಣ ಗಮನಹರಿಸಬೇಕು. ಆರೋಗ್ಯ ಸೇವೆಯನ್ನು ಖಾಸಗೀಕರಣಗೊಳಿಸುವುದು ಸರಕಾರದ ಉದ್ದೇಶ ವಾಗಿದ್ದರೆ ಅದನ್ನಾದರೂ ಸ್ಪಷ್ಟವಾಗಿ ಹೇಳಲಿ. ಇದ ರಿಂದ ಬಡವರು ಸಮಸ್ಯೆ ಎದುರಿಸುವುದು ತಪ್ಪಿ ಆರೋಗ್ಯ ಸಮಸ್ಯೆಯಿಂದ ಬಳಲುವುದು ತಪ್ಪುತ್ತದೆ.
ಇಕ್ಬಾಲ್, ಮಂಗಳೂರು
Tagged with
nimminda
ಕೇರಳ ಕ್ರೈಸ್ತರ ಆಭರಣ ಮಳಿಗೆಗಳೇ ಹೆಚ್ಚಾಗಿ ಈ ಕಟೀಲು ಅನುಗ್ರಹಿತ ಚಿನ್ನದ ನಾಣ್ಯ ಮಾರಿ ದಂಡಿ ಯಾಗಿ ಲಾಭ ಗಳಿಸಿವೆ.
ಪಿ.ಶಿವರಾಮ ಶೆಟ್ಟಿ, ಮಣ್ಣಗುಡ್ಡ-ಮಂಗಳೂರು
ಸರಕಾರದ ಮುಜರಾಯಿ ಇಲಾಖೆಯಡಿ ಇರುವ ದೇವಸ್ಥಾನ ಗಳು ಹಳೆಯ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋದರೆ ಪರವಾಗಿಲ್ಲ. ಆದರೆ ಹೊಸ ಮೂಢನಂಬಿಕೆಗಳನ್ನು ಹುಟ್ಟು ಹಾಕುವುದು ಅಥವಾ ಸಮಾಜದ ಹೊಸ ಮೌಢ್ಯಕ್ಕೆ ತಮ್ಮ ಪ್ರಸಿದ್ಧ ದೇವಸ್ಥಾನದ ಅಧಿಕೃತ ಮುದ್ರೆ ಒತ್ತುವುದು ಸರಿಯಲ್ಲ. ಅಕ್ಷಯ ತೃತೀಯಾದಂದು ಚಿನ್ನವನ್ನು ಕೊಂಡರೆ ಅದು ಅಕ್ಷಯವಾ ಗುತ್ತದೆ ಎಂಬ ಮೂಢನಂಬಿಕೆಯನ್ನು ಉತ್ತರ ಭಾರತದ ಮಾರ್ವಾಡಿ ಚಿನ್ನದ ವ್ಯಾಪಾರಿಗಳು ಕೇವಲ ತಮ್ಮ ಲಾಭಕ್ಕೋಸ್ಕರ ೬-೭ ವರ್ಷಗಳ ಹಿಂದೆ ಹುಟ್ಟು ಹಾಕಿದರು. ಈಗ ಅದು ಸಮೂಹ ಸನ್ನಿಯಾಗಿದೆ.
ಈ ವರ್ಷ ಪ್ರಥಮ ಬಾರಿಗೆ ಕೆಲವು ದಿನಪತ್ರಿಕೆಗಳು ಇದನ್ನು ಶುದ್ಧ ಮೂಢನಂಬಿಕೆ, ಯಾವುದೇ ಹಿಂದೂ ಶಾಸ್ತ್ರದಲ್ಲೂ ಈ ನಂಬಿಕೆಯನ್ನು ಪುಷ್ಟೀಕರಿಸುವ ಉಲ್ಲೇಖವಿಲ್ಲ ಎಂದು ಒಪ್ಪಿಕೊಂಡು ಲೇಖನ ಬರೆದಿವೆ. ಹಲವಾರು ವೇದ ಪಾರಂಗತರು, ವೇದಾ ಧ್ಯಾಯಿಗಳು, ಇದು ಮೂಢನಂಬಿಕೆಯೆಂದು ಟಿ.ವಿ. ಕಾರ್ಯ ಕ್ರಮಗಳಲ್ಲೇ ಒಪ್ಪಿದ್ದಾರೆ. ಹಾಗಿದ್ದರೂ ಈ ವರ್ಷ ಅನೇಕ ಆಭರಣ ಮಳಿಗೆಗಳು ಕಟೀಲು ದೇವಸ್ಥಾನದಲ್ಲಿ ಪೂಜಿಸಿ ಮಂತ್ರಿಸಿದ ಚಿನ್ನದ ನಾಣ್ಯ ಸಿಗುತ್ತದೆ ಎಂದು ಅಧಿಕೃತ ಬೋರ್ಡ್ ಹಾಕಿದ್ದವು. ಇದಕ್ಕಾಗಿಯೇ ಪ್ರತೀ ಗ್ರಾಂ ಚಿನ್ನಕ್ಕೆ ರೂ. ೧೦೮ ಹೆಚ್ಚು ಚಾರ್ಜ್ ಮಾಡುತ್ತಿದ್ದರು. ಸರಕಾರಿ ಅಧೀನದಲ್ಲಿರುವ ಮುಜರಾಯಿ ದೇವಳಕ್ಕೆ, ಇಂತಹ ಹೊಸ ಕಂದಾಚಾರಕ್ಕೆ ಅಧಿಕೃತೆಯ ಮುದ್ರೆ ಯೊತ್ತಿ ಭಾರೀ ಲಾಭಗಳಿಸಲು ಅಧಿಕಾರ ಕೊಟ್ಟವರ‍್ಯಾರು? ದೇವಸ್ಥಾನಗಳ ಇಂತಹ ಲಾಭ ಅನೈತಿಕವಲ್ಲವೇ? ಸ್ವತಃ ವೇದಮೂರ್ತಿ ಎಂದು ಬಿರುದು ಹೊತ್ತಿರುವ ಕಟೀಲು ಅರ್ಚಕರಿಗೆ ಹಿಂದೂ ವೇದಗ್ರಂಥಗಳಲ್ಲಿ ಇಂಥ ನಂಬಿಕೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲವೆಂಬುದು ಗೊತ್ತಿರದಿದ್ದರೆ ವೇದಮೂರ್ತಿ ಎನಿಸಿಕೊಳ್ಳಲು ಈ ಅರ್ಚಕರು ಯೋಗ್ಯರಲ್ಲ. ವಿಪರ್ಯಾಸವೆಂದರೆ ಕೇರಳ ಕ್ರೈಸ್ತರ ಆಭರಣ ಮಳಿಗೆಗಳೇ ಹೆಚ್ಚಾಗಿ ಈ ಕಟೀಲು ಅನುಗ್ರಹಿತ ಚಿನ್ನದ ನಾಣ್ಯ ಮಾರಿ ದಂಡಿ ಯಾಗಿ ಲಾಭ ಗಳಿಸಿವೆ.
ಜಗಜ್ಯೋತಿ ಬಸವಣ್ಣನವರ ಜನನ ಅಕ್ಷಯ ತೃತೀಯದಂದೇ ಆಗಿದ್ದರಿಂದ ಅಂದು ಕರ್ನಾಟಕದಲ್ಲಿ ಸರಕಾರಿ ಮತ್ತು ಬ್ಯಾಂಕ್ ರಜೆ ಪ್ರತಿ ವರ್ಷ ಇರುತ್ತದೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಈಗ ಚಿನ್ನದ ನಾಣ್ಯ ಮಾರುತ್ತಿದ್ದು, ಬಸವ ಜಯಂತಿಯಂದು ಅಕ್ಷಯ ತೃತೀಯಾದ ಚಿನ್ನ ಮಾರಲು ಮುಂಬೈ ಮೂಲದ ಪಾರ್ಸಿ, ಮರಾಠಿ ಬ್ಯಾಂಕ್‌ಗಳು ಹಾಗೂ ಉತ್ತರ ಭಾರತ ಮೂಲದ ಮಾರ್ವಾಡಿ ಬ್ಯಾಂಕ್‌ಗಳು ತಮ್ಮ ಕರ್ನಾಟಕದ ಶಾಖೆಗಳು ಬಸವೇಶ್ವರ ಜಯಂತಿಯಂದೂ ತೆರೆದಿಡಬೇಕೆಂದು ಅಧಿಕೃತ ಆದೇಶ ಹೊರಡಿಸಿದ್ದವು.
ಅಂದು ಬ್ಯಾಂಕ್‌ನಲ್ಲಿ ಬೇರೆ ಯಾವುದೇ ಸೇವೆಯನ್ನು ಗ್ರಾಹಕರಿಗೆ ಕೊಡದೇ ಕೇವಲ ಅಕ್ಷಯ ತದಿಗೆಯ ಬಗ್ಗೆ ಮೂಢನಂಬಿಕೆಯಿರುವ ಧನಿಕರ ಸೇವೆಗಾಗಿ ಚಿನ್ನ ಮಾರಲು ಬ್ಯಾಂಕ್‌ಗಳನ್ನು ತೆರೆದಿಟ್ಟಿದ್ದು, ಮೂಢನಂಬಿಕೆಗಳ ಪಕ್ಕಾ ವಿರೋಧಿಯಾಗಿದ್ದ ಬಸವೇಶ್ವರರಿಗೆ ಅವಮಾನ ಮಾಡಿದಂತೆ! ಇಡೀ ಜಗತ್ತೇ ಗೌರವಿಸುವ ಕರ್ನಾಟಕದ ಮಹಾಪುರುಷನಿಗೆ ಕರ್ನಾಟಕದಲ್ಲೇ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಅವಮಾನ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸರಕಾರಿ ಸಂಸ್ಥೆಗಳಾಗಿದ್ದು, ಸರಕಾರವು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮೂಢನಂಬಿಕೆಗೆ ಪ್ರೋತ್ಸಾಹ ಕೊಡುವುದು ವರ್ಜ್ಯ. ಹಾಗಾಗಿ ಬಸವೇಶ್ವರ ಜಯಂತಿ ಯಂದು ಕೇವಲ ಚಿನ್ನ ಮಾರಲು ಸರಕಾರಿ ಬ್ಯಾಂಕ್‌ಗಳು ತೆರೆದಿಟ್ಟು ಮೌಢ್ಯಕ್ಕೆ ಪ್ರೋತ್ಸಾಹ ಕೊಟ್ಟಿದ್ದು, ದೇಶದ ಸಂವಿಧಾನಕ್ಕೆ ಸರಕಾರವೇ ಅವಮಾನ ಮಾಡಿದಂತಾಗಲಿಲ್ಲವೇ? ಅದೇ ದಿನ ವಾಹನ ಕೊಂಡರೆ ಶುಭ ಎಂಬ ಮೌಢ್ಯವಿರುವವರು ಆರ್‌ಟಿಓ ತೆರೆದಿಡಬೇಕೆಂದು ಆಗ್ರಹಿಸಿದ್ದರು. ಪುರಾತನ ಕಾಲದಲ್ಲಿ ಮೋಟಾರ್ ವಾಹನಗಳೇ ಇರಲಿಲ್ಲವಲ್ಲ. ಹಾಗಾದರೆ ಈ ಮೌಢ್ಯಕ್ಕೆ ಆಧಾರ ಯಾವ ಹಿಂದೂ ಗ್ರಂಥದಲ್ಲಿದೆ? ಆಟೋ ಡೀಲರ್‌ಗಳೇ? ನಿಮ್ಮ ತಲೆಯಲ್ಲೂ ಈ ಮೌಢ್ಯವನ್ನು ಕಟೀಲಿನ ವೇದಮೂರ್ತಿಗಳು ತುಂಬಿದರೇ? ಆ ದಿನ ತಮ್ಮ ದೇವಳದಲ್ಲಿ ವಾಹನ ಪೂಜೆಯಿಂದ ದಂಡಿಯಾಗಿ ದಕ್ಷಿಣೆ ಕಮಾಯಿಸಬಹುದೆಂಬ ಲೆಕ್ಕಾಚಾರವೇ ವೇದಮೂರ್ತಿ ಗಳೇ?
ಮೂಲದಲ್ಲಿ ಹಿಂದೂ ಧರ್ಮದ ಧರ್ಮಕ್ಕೆ ಮಹತ್ವ ಕೊಡುತ್ತದೆಯೇ ವಿನಹ ಆಡಂಬರದ ಕೃತಕ ಭಕ್ತಿಗಲ್ಲ. ಸನಾತನ ಧರ್ಮವು ನಿಸ್ವಾರ್ಥ ಸೇವೆಗೆ ಮಹತ್ವ ಕೊಡುತ್ತದೆಯೇ ವಿನಹ ಸ್ವಾರ್ಥಕ್ಕಲ್ಲ. ಭಾರತೀಯ ಸಂಸ್ಕೃತಿ ಸಂಪ್ರದಾಯಕ್ಕೆ ಮಹತ್ವ ಕೊಡುತ್ತದೆಯೇ ವಿನಹ ಕಂದಾಚಾರಕ್ಕಲ್ಲ. ಅಕ್ಷಯ ತೃತೀಯ ದಂದು ಕೊಂಡ ಚಿನ್ನ ಕಳುವಾಗಿ ಹೋಗಿರುವುದನ್ನು ಕಂಡಿದ್ದೇನೆ. ಅಂದು ಕೊಂಡ ವಾಹನ ಭೀಕರ ಅಪಘಾತವಾಗಿದ್ದು, ಕಂಡಿದ್ದೇನೆ. ಅಂದು ಕೊಂಡ ಶೇರು ಪಾತಾಳಕ್ಕಿಳಿದಿದೆ. ಅಂದು ಕೊಂಡ ಮನೆ ವಾಸ್ತು ಸರಿಯಿಲ್ಲವೆಂದು ನಷ್ಟಕ್ಕೆ ಮಾರಿಕೊಂಡವರಿದ್ದಾರೆ. ಆದರೂ ಸಂಪತ್ತು ಸಮೃದ್ಧಿಯ ಹಣೆಪಟ್ಟಿ ತಗುಲಿಸಿಕೊಂಡಿರುವ ಮೂಢನಂಬಿಕೆಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ. ಉತ್ತಮ ಆಚಾರ-ವಿಚಾರ ಬೋಧಿಸುವ ನಂಬಿಕೆಗಳಿಗೆ ಗಿರಾಕಿಯೇ ಇಲ್ಲ. ಮೂಲದಲ್ಲಿ ಮಾನವನ ದುರಾಸೆಗಳೇ ಇದಕ್ಕೆಲ್ಲಾ ಕಾರಣ.
Tagged with
bahiranga
ಸಕಾಲ ರೈಲು ಸಿ.ಎಂ. ನಾಡಿಗಿನ್ನೂ ಮುಟ್ಟಿಲ್ಲ
ಕಿನ್ನಿಗೋಳಿಯಂತಹಾ ಗ್ರಾಮಾಂತರ ಪ್ರದೇಶದಿಂದ ಮಂಗಳೂರಿಗೆ ಇರುವ ಬಸ್ಸು ದರ ಇಪ್ಪತ್ತು ರೂಪಾಯಿ. ಒಂದು ಬಾರಿ ಬಂದು ಹೋಗಲು ನಲುವತ್ತು ರೂಪಾಯಿಗಳಾಗುತ್ತದೆ. ಒಂದು ದಾಖಲೆಗಾಗಿ ತಾಲೂಕು ಕಚೇರಿಗೆ ನಿಗದಿ ಪಡಿಸಿದ ಸಮಯದ ನಂತರವೂ ಏಳೆಂಟು ಬಾರಿ ಅಲೆದಾಡಬೇಕು ಎಂದರೆ ಸುಮಾರು ಮುನ್ನೂರ ಇಪ್ಪತ್ತು ರೂಪಾಯಿಗಳಾಗುತ್ತವೆ. ಸಾಮಾನ್ಯ ಪ್ರಜೆಯೋರ್ವ ಇಷ್ಟು ರೂಪಾಯಿ ಖರ್ಚು ಮಾಡಿ ಕೊನೆಗೂ ಆತನಿಗೆ ದಾಖಲೆ ಸಿಗುವುದಿಲ್ಲ. ಇಂತಹಾ ವ್ಯವಸ್ಥೆಗಳಿಗೆ ಕಾಯಕಲ್ಪ ನೀಡುವುದಕ್ಕಾಗಿ ಮಾಡುವ ಯೋಜನೆಗಳ ಜಾಹೀರಾತಿಗೇ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಇದರ ಭಾರ ಬೀಳುವುದು ಪ್ರಜೆಗಳ ಜೇಬಿಗೇ ಆಗಿದೆ. ಆದರೆ ಇವುಗಳಿಂದ ಸಾಮಾನ್ಯ ಪ್ರಜೆಗಳಿಗೆ ನಯಾ ಪೈಸೆಯ ಪ್ರಯೋಜನವೂ ಆಗುವುದಿಲ್ಲ.
‘ಸಕಾಲ ಎಂಬ ರೈಲು ಸದಾನಂದ ಗೌಡರ ಬೆಂಗಳೂರಿನ ಕಚೇರಿಯಿಂದ ಹೊರಟು ಸುಮಾರು ಆರು ತಿಂಗಳು ಕಳೆದಿದೆ.
ಆದರೆ ಅದಿನ್ನೂ ಮಂಗಳೂರಿನ ತಾಲೂಕು ಕಚೇರಿಗೆ ಮುಟ್ಟಿಯೇ ಇಲ್ಲ!
ಪತ್ರಿಕೆ, ಟಿವಿಗಳಲ್ಲಿ ಕೋಟ್ಯಂತರ ರೂಪಾಯಿಗಳ ಜಾಹೀರಾತು ಕೊಟ್ಟು ಸರಕಾರಿ ಕೆಲಸಗಳು ಶೀಘ್ರಗತಿಯಲ್ಲಿ ನಡೆಯುವುದಕ್ಕಾಗಿ ರೂಪಿಸಲಾಗುವ ಯೋಜನೆಗೆ ಒಂದು ಹೆಸರು ಸೂಚಿಸಬೇಕೆಂದು ಹೇಳಲಾಗಿತ್ತು. ಅದಕ್ಕಾಗಿ ಬಂಪರ್ ಬಹುಮಾನವನ್ನೂ ಘೋಷಿ ಸಲಾಗಿತ್ತು. ನಮ್ಮ ನಾಡಿನಲ್ಲಿ ಬುದ್ದಿವಂತರಿಗೇನೂ ಕಡಿಮೆ ಇಲ್ಲ ಪುಣ್ಯಾತ್ಮರೊಬ್ಬರು ‘ಸಕಾಲ, ಇಂದು ನಾಳೆ ಇನ್ನಿಲ್ಲ ಹೇಳಿದ ಸಮಯ (ದಿನ) ತಪ್ಪಲ್ಲ ಎಂಬ ಹೆಸರು ಸೂಚಿಸಿ ಅದಕ್ಕೊಂದು ಚೆಂದದ ಲೋಗೋ ರಚಿಸಿ ಬಂಪರ್ ಬಹುಮಾನವನ್ನು ತನ್ನದಾಗಿಸಿಕೊಂಡರು.
ಹಾಗೂ ಹೀಗೂ ಸಕಾಲ ಎಂಬ ರೈಲು ಅಂದ ಚೆಂದದ ಹೆಸರುಗಳನ್ನು ಬರೆಸಿಕೊಂಡು ವಿವಿಧ ಆಶ್ವಾಸನೆಗಳ, ವಿಭಾಗಗಳ ಭೋಗಿಗಳನ್ನು ಹೊತ್ತುಕೊಂಡು ಬೆಂಗಳೂರಿನಿಂದ ಹೊರಟಿತು. ಆದರೆ ಮಂಗಳೂರಿನ ತಾಲೂಕು ಕಚೇರಿಗೆ ಅದು ಯಾಕೆ ಮುಟ್ಟಿಲ್ಲವೋ ಗೊತ್ತಾಗುತ್ತಿಲ್ಲ. ಬಹುಶಃ ಸಿ.ಎಂ. ನಾಡೆಂಬ ತಾತ್ಸಾರ ಅದಕ್ಕಿರಬಹುದೇ? ಅಥವಾ ಸಿ.ಎಂ. ನಮ್ಮವರು ನಮಗೆ ಯಾವ ‘ಕಾಲವೂ ಲಗಾವಾಗುವುದಿಲ್ಲ ಎಂಬ ಭಂಡ ಧೈರ್ಯವೇ?
ಇಷ್ಟಕ್ಕೂ ನನಗೆ ಈ ಅನುಭವ ಬರಲು ಕಾರಣವೇನು? ನನಗೆ ಮಾತ್ರವಲ್ಲ ಜನ ಸಾಮಾನ್ಯರಾದ ಓದುಗ ಮಹಾಶಯರಾದರೂ ಓರ್ವರು ಒಂದು ಅರ್ಜಿ ಹಿಡಿದು ಮಂಗಳೂರಿನ ತಾಲೂಕು ಕಚೇರಿಗೆ ಹೋದರೂ ಈ ಅನುಭವ ಆಗಲು ಸಾಧ್ಯವಿದೆ. ನನಗೆ ಬೇಕಾಗಿದ್ದದ್ದು ಸುಮಾರು ೪೦ ವರ್ಷಗಳ ಹಿಂದಿನ ಒಂದು ವಿಭಾಗ ಪತ್ರದ ದೃಢೀಕೃತ ಪ್ರತಿ. ಇದಕ್ಕಾಗಿ ಮುಲ್ಕಿ ಹೋಬಳಿಯ ನಡುಗೋಡು ಗ್ರಾಮದ ಗ್ರಾಮಕರಣಿಕರನ್ನು ಸಂಪರ್ಕಿಸಿದಾಗ ಈ ಬಗ್ಗೆ ಸೂಕ್ತ ವಿವರ ಬರೆದು ಮಂಗಳೂರು ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಎಂದರಲ್ಲದೆ ಸ್ವತಃ ಅರ್ಜಿಯೊಂದನ್ನು ಬರೆದೂ ಕೊಟ್ಟರು. ಪಡಸಾಲೆಯಲ್ಲಿ ಇದನ್ನು ಸಲ್ಲಿಸಿ ಸ್ವೀಕೃತ ರಶೀದಿ ಪಡೆದದ್ದೂ ಆಯಿತು. ರಶೀದಿಯಲ್ಲಿ ಅರ್ಜಿ ಸಂಖ್ಯೆ. ಅದನ್ನು ಪಡೆದುಕೊಳ್ಳಬೇಕಾದ ದಿನಾಂಕ, ‘ಏಳು ದಿನಗಳಲ್ಲಿ ದೃಢೀಕೃತ ನಕಲು ನೀಡಲಾಗುವುದು. ಇಲ್ಲವಾದಲ್ಲಿ ತಹಶೀಲ್ದಾರರಿಗೆ ನೇರವಾಗಿ ಸಂಪರ್ಕಿಸತಕ್ಕದ್ದು ಎಂಬ ಆಜ್ಞೆ ಇವೆಲ್ಲವನ್ನೂ ನೋಡಿ ಇಷ್ಟು ಸುಲಭ ಇದೆಯೇ? ಜಿಲ್ಲಾ, ತಾಲೂಕು ಕಚೇರಿಗಳ ಕಂಬ ಕಂಬಗಳೂ ಲಂಚಕ್ಕಾಗಿ ಕೈಚಾಚುತ್ತವೆ ಎಂಬ ಮಾತು ನಮ್ಮ ಸದಾನಂದ ಗೌಡರು ಬಂದ ನಂತರ ಹುಸಿಯಾಗಿ ಹೋಯಿತಲ್ಲಾ. ಸಕಾಲ ಎಂಬ ಎಕ್ಸ್‌ಪ್ರೆಸ್ ರೈಲು ತಾಲೂಕು ಕಚೇರಿಯಲ್ಲಿ ಬಂದು ನಿಂತಾಗಿದೆ ಎಂದು ಸಮಾಧಾನಗೊಂಡು ಏಳು ದಿನಗಳ ನಂತರ ಪಡಸಾಲೆಗೆ ಹೋದರೆ. ‘ನಿಮ್ಮ ದಾಖಲೆ ಬಂದಿಲ್ಲ ಎರಡು ದಿವಸ ಬಿಟ್ಟು ಬನ್ನಿ ಎಂಬ ನನ್ನ ಆತ್ಮವಿಶ್ವಾಸವನ್ನು ಘಾತಿಸುವ ಮಾತು.
ಇರಲಿ ಸಕಾಲ ಎಂಬ ರೈಲಿಗೇನೂ ಬ್ರೇಕ್ ತೊಂದರೆ ಇರಬೇಕು ಎಂದು ಎರಡು ದಿವಸ ಬಿಟ್ಟು ಹೋದರೆ. ‘ನಾಳೆ ಬನ್ನಿ ಎಂಬ ಮಾತು. ‘ಇಂದು... ನಾಳೆ... ಇನ್ನಿಲ್ಲ...? ಎಂದು ಮನಸ್ಸಿನಲ್ಲಿ ಮೆಂದ ಮಂಡಿಗೆ ಇದ್ದಕ್ಕಿದ್ದಂತೆ ಖಾರವಾದಂತಾಗಿತ್ತು. ಮರುದಿನ ಹೋದರೆ ‘ದಾಖಲೆ ಬಂದಿಲ್ಲ ಹಿಂದುಗಡೆ ‘ಅಭಿಲೇಖ ಕಚೇರಿ ಇದೆ ಅಲ್ಲಿ ಹೋಗಿ ಕೇಳಿ. ಎಂದು ಕಳುಹಿಸಲಾಗಿತ್ತು. ಅಭಿಲೇಖ ಕಚೇರಿಯಲ್ಲಿ ‘ಪ್ರವೇಶವಿಲ್ಲ ಎಂಬ ಬಾಗಿಲಿನಲ್ಲಿ ಮೊದಲ ಮಾತೇ ‘ನಿಮಗೆಲ್ಲಾ ಇಲ್ಲಿಗೆ ಬರಲಿಕ್ಕಿಲ್ಲ, ಇಲ್ಲಿ ನಿಲ್ಲಬಾರದು ಎಂಬುದು. ಕೈಯಲ್ಲಿದ್ದ ರಶೀದಿಯನ್ನು ಅವರ ಮುಖಕ್ಕೆ ಹಿಡಿದು ‘ನಿಮ್ಮವರು ಇಲ್ಲಿಗೆ ಕಳಿಸಿದ್ದಾರೆ. ನನ್ನ ದಾಖಲೆ ಏನಾಗಿದೆ ಹೇಳಿ? ಎಂದಾಗ ರಶೀದಿ ಪಡೆದು ಫೈಲು ಮಗುಚಿ ಹಾಕಿ. ‘ಇದು ನಲುವತ್ತು ವರ್ಷದ ಹಿಂದಿನ ದಾಖಲೆ. ಇದು ಸಿಗಲಿಕ್ಕಿಲ್ಲ.. ನೀವು ಸಬ್‌ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಎಂದು ಬಿಟ್ಟರು. ‘ನಾನು ಅಲ್ಲಿಂದಲೇ ಬಂದಿದ್ದೇನೆ. ನೀವು ಪುನಃ ಅಲ್ಲಿಗೆ ಹೋಗಿ ಎನ್ನುತ್ತೀರಲ್ಲಾ ಎಂದಾಗ ‘ಹಾಗಾದರೆ ಎರಡು ದಿವಸ ಬಿಟ್ಟು ಬನ್ನಿ ಹುಡುಕುವ ಎಂಬ ಉತ್ತರ ಜತೆಗೆ ‘ಇಲ್ಲಿ ನಿಲ್ಲಬೇಡಿ.... ನೋಡಿದರೆ ನಮಗೆ ಬೈಯುತ್ತಾರೆ.. ಎಂಬ ವಿನಂತಿ...! ನನ್ನ ದಾಖಲೆ ಸಿಗದಿದ್ದರೆ ಎರಡು ದಿವಸ ಬಿಟ್ಟು ಬನ್ನಿ ಎಂದು ಹೇಳುವುದಾದರೂ ಯಾಕೆ? ಆಗಲೇ ಅರ್ಜಿಯನ್ನು ವಾಪಾಸ್ಸು ಕೊಡಬಹು ದಲ್ಲವೇ? ಇದು ತಲೆ ತಿನ್ನುವ ಪ್ರಶ್ನೆಯಾಗಿತ್ತು. ‘ಇವರಿಗೆ ಹುಡುಕುವುದಕ್ಕೆ ಉದಾಸೀನವಾಗುತ್ತಿದೆಯೇ? ಎಂಬ ಶಂಕೆಯೂ ಮೂಡಿತ್ತು.
ಸದಾನಂದ ಗೌಡರ ಸಕಾಲ ರೈಲಿನಲ್ಲಿ ಏನೋ ಎಡವಟ್ಟಾಗಿರಬೇಕು ಎಂದು ಭಾವಿಸಿ ಮತ್ತೆ ಎರಡು ದಿನಗಳ ನಂತರ ಹೋದರೆ. ‘ಹುಡುಕಿದ್ದೇವೆ. ಸಿಗುವುದಿಲ್ಲ. ಇದನ್ನೆಲ್ಲಾ ಸಿಕ್ಕಿದರೂ ನಿಮಗೆ ಕೊಡಲಿಕ್ಕೆ ಆಗುವುದಿಲ್ಲ ಎನ್ನಬೇಕೇ. ‘ಹಾಗಾದರೆ ಅದು ನನಗೆ ಸಿಗಬೇಕಾದರೆ ನಾನು ಏನು ಮಾಡಬೇಕು ಹೇಳಿ ಎಂಬ ನನ್ನ ಬಿರು ಮಾತಿಗೆ. ‘ನಾಳೆ ಶನಿವಾರ.. ಸೋಮವಾರ ಬನ್ನಿ... ಇನ್ನೊಮ್ಮೆ ಹುಡುಕುತ್ತೇನೆ ಎಂಬ ಉತ್ತರ. ಛಲಬಿಡದ ತ್ರಿವಿಕ್ರಮನಂತೆ ಸೋಮವಾರ ಹೋದರೆ ‘ಅದು ಸಿಗುತ್ತಿಲ್ಲ ಹಿಂಬರಹ ಕೊಡಬೇಕಾಗುತ್ತದೆ ಎಂಬ ನಕಾರಾತ್ಮಕ ಉತ್ತರ. ‘ಹಿಂಬರಹವೋ... ಮುಂಬರಹವೋ ಅದೇನು ಕೊಡುತ್ತೀರೋ ಕೊಡಿ ಸ್ವಾಮೀ. ನನ್ನ ಅರ್ಜಿಗೆ ಏನಾದರೂ ಒಂದು ಉತ್ತರ ಬೇಕಲ್ಲಾ... ಎಂದಾಗ. ಹಾಗಾದರೆ ನೀವು ಸಂಜೆ ಬನ್ನಿ ‘ಇಲ್ಲಿ ನಿಲ್ಲಬೇಡಿ ಎಂಬ ವಿನಂತಿ. ಅದಾಗಲೇ ಏಳು ದಿನವಲ್ಲ ಹದಿನೈದು ದಿನ ಕಳೆದು ಬಿಟ್ಟಿತ್ತು. ‘ಏಳು ದಿನಗಳಲ್ಲಿ ದೃಢೀಕೃತ ನಕಲು ನೀಡಲಾಗುವುದು. ಇಲ್ಲವಾದಲ್ಲಿ ತಹಶೀಲ್ದಾ ರರಿಗೆ ನೇರವಾಗಿ ಸಂಪರ್ಕಿಸತಕ್ಕದ್ದು ಎಂಬ ಆಜ್ಞೆಯನ್ನು ಶಿರಸಾವಹಿಸಲು ತಹಶೀಲ್ದಾರರ ಕೊಠಡಿಯ ಬಳಿಗೆ ಹೋದರೆ ‘ತಹಶೀಲ್ದಾರರು ಇಲ್ಲ ಊಟಕ್ಕೆ ಹೋಗಿದ್ದಾರೆ ಎಂಬ ಉತ್ತರ. ಅವರಿಗಾಗಿ ಸುಮಾರು ಒಂದು ಗಂಟೆ ಕಾದದ್ದೂ ಆಯಿತು...
ತಾಲೂಕು ಕಚೇರಿಯ ವೆಬ್‌ಸೈಟಿನಲ್ಲಿ ಮಂಗಳೂರು ತಹಶೀಲ್ದಾರರ ಈಮೇಲ್ ವಿಳಾಸ ಪಡೆದು ಅದಕ್ಕೆ ನನ್ನ ಸಮಸ್ಯೆಯ ಬಗ್ಗೆ ಈಮೇಲ್ ಮಾಡಿದರೆ ಇಂದಿನವರೆಗೂ ಉತ್ತರವಿಲ್ಲ. ಅತ್ಯಾಧುನಿಕತೆಯ ವಿಧಾನಗಳಿಂದ ತೋಟವನ್ನು ಶೃಂಗಾರ ಮಾಡಿ ಒಳಗೆ ಗೋಳಿಸೊಪ್ಪನ್ನು ಪೇರಿಸಿಡುವ ಪರಿ ಇದು.
ಇರಲಿ ಇವರಿಗೆ ಹಿಂಬರಹ ಬರೆಯಲು ಒಂದೆರಡು ದಿವಸ ಬೇಕಾಗ ಬಹುದು ಎಂದು ಭಾವಿಸಿ ಆನಂತರ ಹೋದರೆ ‘ನಿಮ್ಮ ಅರ್ಜಿಗೆ ಹಿಂಬರಹ ಕೊಡುತ್ತೇವೆ. ನಾಳೆ ಬನ್ನಿ ಎಂದು ಸಾಗ ಹಾಕಲಾಗಿದೆ. ಈಗ ನನ್ನ ಹಿಂಬರಹ ಪಡೆದ ಅರ್ಜಿಯನ್ನು ಪಡೆಯುವುದಕ್ಕಾಗಿ ಹೋಗುವ ಸಿದ್ಧತೆ ಮಾಡಿಕೊಳ್ಳು ತ್ತಿದ್ದೇನೆ. ಅದು ನಿಗದಿತ ದಿನ ಸಿಗದೆ ನನ್ನ ಸಿದ್ಧತೆ ಎಲ್ಲಿ ವ್ಯರ್ಥವಾ ಗುತ್ತದೋ ಎಂಬ ಶಂಕೆ ಕಾಡುತ್ತಿದೆ...!ಇದು ನಮ್ಮ ಸದಾನಂದ ಗೌಡರ ‘ಸಕಾಲ ಇಂದು ನಾಳೆ ಇನ್ನಿಲ್ಲ ಹೇಳಿದ ಸಮಯ (ದಿನ) ತಪ್ಪಲ್ಲ ಎಂಬ ಮಾರುದ್ಧದ ಭೋಗಿಯ ರೈಲಿನ ಕತೆ! ನಮ್ಮ ತೆರಿಗೆಯ ಹಣದಿಂದ ಯೋಜನೆಗಳ ಬಗ್ಗೆ ಮನಸೋಲುವ ಬಣ್ಣ ಬಣ್ಣದ ಅಕ್ಷರ ಮಾತು, ವಿನ್ಯಾಸಗಳಿಂದ ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡಿ ಜಾಹೀರಾತು ನೀಡಿ ಮೋಸಗೊಳಿ ಸುವುದಾದರೂ ಯಾಕೆ? ಈ ಯೋಜ ನೆಗಳ ಒಂದಿಷ್ಟಾದರೂ ‘ಹಿತಾನುಭವ’ ಜನರಿಗೆ ಆಗಬೇಡವೇ?
ನಮ್ಮ ಸರಕಾರಿ ಕಚೇರಿಗಳಿಗೆ ಸಕಾಲ ಎಂಬ ಕಾಯಕಲ್ಪ ಯಾಕೆ ಬೇಕು? ಈ ಮೂಲಕ ಕೋಟಿಗಟ್ಟಲೆ ಹಣ ದುರುಪಯೋಗ ಮಾಡುವುದಾದರೂ ಯಾಕೆ? ಅದು ಹಿಂದಿನಂತೆ ‘ವಿಕಲ’ವಾಗಿಯೇ ಇರಲಿ.
Tagged with
lekhana,
rkdinachari
ದೈಹಿಕ ಆಕರ್ಷಣೆ, ಪ್ರೀತಿ, ಪ್ರೇಮ, ಅಧಿಕಾರ, ಅಂತಸ್ತು ಇತ್ಯಾದಿ ವ್ಯಾವಹಾರಿಕತೆಗಳಿಗೆ ಸಗೋತ್ರ, ಅಥವಾ ಒಂದೇ ಬಳಿಯಲ್ಲಿ ವಿವಾಹ ವಾಗುವುದು ಕಂಡು ಬರುತ್ತದೆ. ಇಂತಹವರು ಅಥವಾ ಇವರ ಸಂಬಂಧಿಕರು ಈ ಕಾರಣಕ್ಕಾಗಿ ನಂಬಿಕೆಯನ್ನೇ ಪ್ರಶ್ನೆ ಮಾಡುವುದು ಸರಿಯಲ್ಲ. ಇವರಲ್ಲಿ ಎಲ್ಲರ ಸಂತಾನಕ್ಕೂ ತೊಂದರೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕಡೆ ಬಂದದ್ದೂ ಇದೆ. ಇದಕ್ಕೆ ವೈಜ್ಞಾನಿಕ ಆಧಾರವು ಇದೆ. ಮದುವೆ, ಮಕ್ಕಳು ಇತ್ಯಾದಿ ಒಂದು ವ್ಯಕ್ತಿಯ ಜೀವಮಾನದಲ್ಲಿ ಒಂದೇ ಸಾರಿ ಆಗುವುದರಿಂದ, ಇದರಿಂದ ಆಗುವ ತೊಂದರೆ ಜೀವಮಾನವಿಡೀ ಬಾಧಿಸುವ ಕಾರಣ ಸಗೋತ್ರ ಅಥವಾ ಒಂದೇ ಬಳಿಯಲ್ಲಿ ಮದುವೆಯಾಗುವುದಕ್ಕೆ ಭಯಪಡುತ್ತಿದ್ದಾರೆ.
ಅನಂತ ಭಟ್, ಉದ್ಯಾವರ
ಇತ್ತೀಚೆಗೆ ನಿಮ್ಮಿಂದ ವಿಭಾಗದಲ್ಲಿ ಪ್ರಾಣೇಶ್ ಸುಳ್ಯ ಎಂಬವರು ಜಾತಕ ಗೋತ್ರಗಳೆಲ್ಲ ಅವೈಜ್ಞಾನಿಕ ನಂಬಿಕೆಗಳು ಎಂಬ ಪತ್ರವನ್ನು ಬರೆದಿದ್ದಾರೆ. ಈ ಬಗ್ಗೆ ನನ್ನ ಪ್ರತಿಕ್ರಿಯೆ.
ಜಾತಕ ಇತ್ಯಾದಿಗಳು ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ರಚಿಸಲಾಗುತ್ತದೆ. ಜ್ಯೋತಿಷ್ಯ ಎನ್ನುವುದು ಸುಳ್ಳಲ್ಲ. ಅದು ವೈಜ್ಞಾನಿಕವು ಆಗಿದೆ. ಆದರೆ ಇದು ಅವೈಜ್ಞಾನಿಕ ಎಂದು ಪರಿಗಣಿಸಲ್ಪಟ್ಟದ್ದು ಯಾಕೆಂದರೆ ಇದರ ದುರುಪ ಯೋಗದಿಂದ ಆಗಿದೆ. ಸರಿಯಾದ ಜ್ಯೋತಿಷ್ಯದ ಲೆಕ್ಕಾಚಾರದ ಜ್ಞಾನ ಇಲ್ಲದ ವ್ಯಕ್ತಿಗಳು ಜ್ಯೋತಿಷ್ಯ ಹೇಳುವ ವೃತ್ತಿಯನ್ನು ಆರಂಭಿಸಿ ಹಣ ಸಂಪಾದಿಸುವ ದಂಧೆಯಲ್ಲಿ ತೊಡಗಿದಾಗ ಮತ್ತು ಈ ಸಂಬಂಧ ಮಾಟ ಮಂತ್ರ, ವಾಮಾಚಾರ ಗಳನ್ನು ಮಾಡತೊಡಗಿದಾಗಿ ಜ್ಯೋತಿಷ್ಯ, ಜಾತಕ ಇತ್ಯಾದಿಗಳು ಸುಳ್ಳು ಅದರಲ್ಲಿ ಯಾವುದೇ ವೈಜ್ಞಾನಿತೆ ಇಲ್ಲ ಎಂಬ ಭಾವನೆ ಬರತೊಡಗಿತು.
ಮಗು ಹುಟ್ಟುವ ಮುಹೂರ್ತದ ಬಗ್ಗೆ ಗೊಂದಲಗಳು ಇರುವುದು ಸರಿ ಆದರೆ ಗೋತ್ರ ಅದನ್ನು ನಮ್ಮ ತುಳುನಾಡಿಗೆ ಅನ್ವಯಿಸುವುದಾದರೆ ಬಳಿ (ಬರಿ) ಇದು ಸುಳ್ಳಲ್ಲ. ಒಂದು ಗೋತ್ರ ಅಥವಾ ಬರಿಯವರು ಪರಸ್ಪರ ರಕ್ತ ಸಂಬಂಧಿಗಳೇ ಆಗುತ್ತಾರೆ. ಗೋತ್ರವನ್ನು ಅನುಸರಿಸುವವರಲ್ಲಿ ಪಿತೃಪ್ರಧಾನವಾಗಿ ಆತನ ಮೂಲ ಪಿತೃವಾದ ಋಷಿಯೊಬ್ಬನ ಹೆಸರು ಇದ್ದರೆ ಬಳಿಯನ್ನು ಅನು ಸರಿಸುವವರು ಮಾತೃಪ್ರಧಾನವಾಗಿ ತಾಯಿ ಮೂಲದ ರಕ್ತಸಂಬಂಧವನ್ನು ಹೊಂದಿರುತ್ತಾರೆ. ರಕ್ತ ಸಂಬಂಧಿಗಳನ್ನು ವಿವಾಹವಾಗುವುದರಿಂದ ವಿಕಲಾಂಗ ಬುದ್ದಿಮಾಂದ್ಯ ಮಕ್ಕಳು ಹುಟ್ಟುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಬಗ್ಗೆ ಕೆಲವು ನಿದರ್ಶನಗಳನ್ನೂ ಕಾಣಬಹುದಾಗಿದೆ.
ಈಗಿನ ಕಾಲದಲ್ಲಿ ಪ್ರೀತಿ, ಪ್ರೇಮ, ಅಧಿಕಾರ, ಅಂತಸ್ತು ಇತ್ಯಾದಿ ವ್ಯಾವಹಾರಿ ಕತೆಗಳಿಗೆ ಸಗೋತ್ರ, ಅಥವಾ ಒಂದೇ ಬಳಿಯಲ್ಲಿ ವಿವಾಹವಾಗುವುದು ಕಂಡು ಬರುತ್ತದೆ. ಇಂತಹವರು ಅಥವಾ ಇವರ ಸಂಬಂಧಿಕರು ಈ ಕಾರಣಕ್ಕಾಗಿ ನಂಬಿಕೆಯನ್ನೇ ಪ್ರಶ್ನೆ ಮಾಡುವುದು ಸರಿಯಲ್ಲ. ಇವರಲ್ಲಿ ಎಲ್ಲರ ಸಂತಾನಕ್ಕೂ ತೊಂದರೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕಡೆ ಬಂದದ್ದೂ ಇದೆ. ಇದಕ್ಕೆ ವೈಜ್ಞಾನಿಕ ಆಧಾರವು ಇದೆ. ಮದುವೆ, ಮಕ್ಕಳು ಇತ್ಯಾದಿ ಒಂದು ವ್ಯಕ್ತಿಯ ಜೀವಮಾನದಲ್ಲಿ ಒಂದೇ ಸಾರಿ ಆಗುವುದರಿಂದ, ಇದರಿಂದ ಆಗುವ ತೊಂದರೆ ಜೀವಮಾನವಿಡೀ ಬಾಧಿಸುವ ಕಾರಣ ಕೆಲವರು ಸಗೋತ್ರ ಅಥವಾ ಒಂದೇ ಬಳಿಯಲ್ಲಿ ಮದುವೆಯಾಗುವುದಕ್ಕೆ ಭಯಪಡುತ್ತಿದ್ದಾರೆ. ವಿಭಿನ್ನ ಗೋತ್ರದ ವಿವಾಹ ಎಲ್ಲಾ ಕಾರಣಗಳಿಗೂ ಒಳ್ಳೆಯದು.
ಜ್ಯೋತಿಷ್ಯವೇ ಇರಲಿ ಅಥವಾ ಇನ್ನಾವುದೇ ನಂಬಿಕೆ ಇರಲಿ ಅದನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ನಂಬುತ್ತಾರಾದರೆ ಅದನ್ನು ಮೂಢನಂಬಿಕೆ ಎಂದು ಹೇಳಲು ಬರುವುದಿಲ್ಲ. ಯಾಕೆಂದರೆ ಸಮಾಜಕ್ಕೆ ಹಾನಿಕಾರಕವಲ್ಲದ ನಂಬಿಕೆಗಳನ್ನು ಬಹು ಸಂಖ್ಯೆಯಲ್ಲಿ ಜನರು ಬೆಳೆಸಿಕೊಂಡರೆ ಅದು ಮೂಢ ನಂಬಿಕೆಯಾಗುವುದಿಲ್ಲ. ಸಮಾಜಕ್ಕೆ ಹಾನಿಯಾಗುವ ಯಾವುದಾದರೂ ಒಂದು ನಂಬಿಕೆ ಅದು ವೈಜ್ಞಾನಿಕವಾಗಿ ಸತ್ಯ ಎಂದು ಅನಿಸಿದರೂ ಅದನ್ನು ನಿರ್ಮೂಲನೆ ಮಾಡಬೇಕಾಗುತ್ತದೆ. ಅದೇ ರೀತಿ ವಿಜ್ಞಾನವು ಯಾವುದನ್ನೂ ಮೂಢನಂಬಿಕೆ ಎಂದು ಹೇಳುವುದೇ ಇಲ್ಲ. ಯಾಕೆಂದರೆ ವಿಜ್ಞಾನಕ್ಕೆ ಯಾವುದೇ ಅಂತ್ಯ ಇಲ್ಲ. ಈ ಕಾರಣದಿಂದ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಗೋತ್ರ, ಬಳಿ ಇತ್ಯಾದಿ ವಿಚಾರಗಳ ಬಗ್ಗೆ ಸಗೋತ್ರ ಮದುವೆಯಿಂದ ಇರುವ ತೊಂದರೆಯ ಬಗ್ಗೆ ವಿಜ್ಞಾನ ಅಲ್ಲಗಳೆದಿಲ್ಲ. ಮುಂದೊಂದು ದಿನ ಈ ಬಗ್ಗೆ ನಿಖರವಾದ ಸಂಶೋಧನ ವರದಿ ಬಂದರೂ ಬರಬಹುದು.
ಸಗೋತ್ರ ಮತ್ತು ಒಂದೇ ಬಳಿಯ ವಿವಾಹದ ಸಮರ್ಥಕರು ಮತ್ತು ಅದರಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳುವವರು ಯಾವುದೋ ಒಂದು ಕಾರಣಕ್ಕೆ ಸಗೋತ್ರ ಮದುವೆಯಾದವರೇ ಆಗಿರುತ್ತಾರೆ. ಮದುವೆಯ ಬಗ್ಗೆ ವ್ಯಾಪಕ ಅವಕಾಶಗಳು ಇರುವುದರಿಂದ ಸಗೋತ್ರಿಗಳನ್ನೇ ಮದುವೆಯಾಗುವ ಅಗತ್ಯವೂ ಕಂಡು ಬರುವುದಿಲ್ಲ.
ನಮ್ಮಲ್ಲಿರುವ ಯಾವುದೇ ನಂಬಿಕೆ ಸುಳ್ಳಾಗುವುದಿಲ್ಲ. ಅದರಲ್ಲಿ ಏನಾದರೂ ಒಂದು ಸತ್ಯ ಅಡಗಿರುವುದು ಕಂಡು ಬರುತ್ತದೆ. ಕೆಲವು ಬಾರಿ ಅದು ಕೆಲವರಿಗೆ ಕಹಿಯಾಗಬಹುದು, ಕೆಲವರಿಗೆ ಸಿಹಿಯಾಗಬಹುದು. ನಂಬಿಕೆಗಳು ಒಂದು ಕಾಲಕ್ಕೆ ಅತೀ ಅನಿವಾರ‍್ಯವೂ ಆಗಬಹುದು. ಇನ್ನೊಂದು ಕಾಲಕ್ಕೆ ಅನಗತ್ಯವೂ ಆಗಬಹುದ. ಆದರೆ ಸಗೋತ್ರ, ಒಂದೇ ಬರಿಯ ಮದುವೆ ಈ ಕಾಲಕ್ಕೆ ಅತೀ ಅಗತ್ಯ ಎಂದು ಎಲ್ಲೂ ಕಂಡು ಬಂದಿಲ್ಲ. ಹಾಗಿರುವಾಗ ಕೆಲವೊಂದು ಕಾರಣಿಗಳಿಗಾಗಿ ಸಗೋತ್ರ, ಅಥವಾ ಒಂದೇ ಬರಿಯ ಬಗ್ಗೆ ಇರುವ ನಂಬಿಕೆಯನ್ನು ಉಳಿಸಿ ಕೊಳ್ಳುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯವಾಗಿದೆ.
Tagged with
chavadi
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನ್ನ ವಯಸ್ಸು ೧೯. ಕಾಲೇಜು ವಿದ್ಯಾರ್ಥಿನಿ. ಹಾಸ್ಟೆಲ್‌ನಲ್ಲಿ ವಾಸವಿದ್ದೇನೆ. ನನ್ನ ಮುಖದ ಪೂರ್ತಿ ದೊಡ್ಡ ಗಾತ್ರದ ಮೊಡವೆಗಳು ಏಳುತ್ತಿವೆ. ಇದರಿಂದ ನಾನು ಚಿಂತಿತಳಾಗಿದ್ದೇನೆ. ನಾನು ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆಗಳಿಲ್ಲ. ಮೊಡವೆಗಳು ಹೆಚ್ಚೆಚ್ಚು ಬೆಳೆಯುವುದರಿಂದ ನನಗೆ ಹೊರಗಡೆ ಹೋಗಿ ಮುಖ ತೋರಿಸಲು ಅಸಹ್ಯವಾಗುತ್ತದೆ. ಈ ಬಗ್ಗೆ ನನ್ನ ಗೆಳತಿಯರಲ್ಲಿ ಕೇಳಿದರೆ ಬೇರೆ, ಬೇರೆ ಕಾರಣ ಹೇಳಿದರು. ಅದು ಸತ್ಯವೇ ಸುಳ್ಳೇ ದಯವಿಟ್ಟು ಉತ್ತರಿಸಿ. ನಾನು ವಾರಕ್ಕೊಮ್ಮೆ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದರಿಂದ ಮುಖದಲ್ಲಿ ಮೊಡವೆ ಬೆಳೆಯುತ್ತದೆಯೇ? ನಾನು ಬಾಯ್‌ಫ್ರೆಂಡ್ ಎಂದು ಯಾರನ್ನೂ ಹೊಂದಿಲ್ಲ. ಮುಖದ ಮೇಲೆ ಬಿದ್ದಿರುವ ಮೊಡವೆಗಳನ್ನು ನಾನು ಕೀಳುತ್ತೇನೆ. ಇದು ತಪ್ಪೇ? ನನಗೆ ಸರಿಯಾದ ಸಲಹೆ ಕೊಡಿ.
ಸಲಹೆ: ನೀವು ಸುಮ್ಮನೆ ಹೆದರಿದ್ದೀರಿ. ಮೊಡವೆ ಹದಿಹರೆಯದವರಿಗೆ ಬೀಳುವುದು ಸಾಮಾನ್ಯ ಸಂಗತಿಯೇ ಹೊರತು ಇದೇನೂ ದೊಡ್ಡ ರೋಗವಲ್ಲ. ನಿಮ್ಮದು ಮೊಡವೆ ಬೀಳುವ ವಯಸ್ಸು. ಇದಕ್ಕೆ ಹಲವಾರು ಕಾರಣಗಳಿವೆ. ಹೆಚ್ಚಾಗಿ ಬಿಸಿಲಿನಲ್ಲಿ ಒಣಗಿದರೆ ಮುಖ ಬೆವರಿ ಅಲ್ಲಿಯೇ ಒಣಗಿ ಮೊಡವೆ ಏಳಬಹುದು. ಮುಖವನ್ನು ಆಗಾಗ್ಗೆ ಶುದ್ಧನೀರಿನಿಂದ ತಿಕ್ಕಿ ತೊಳೆಯಬೇಕು. ಮುಖದ ಆರೋಗ್ಯದ ಕಡೆಗೆ ಗಮನ ಕೊಡದಿದ್ದರೆ ಮೊಡವೆ ಬೀಳುತ್ತದೆ. ಸಾಮಾನ್ಯವಾಗಿ ಜಿಡ್ಡಿನಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮೊಡವೆ ಬೀಳುತ್ತದೆ. ತೈಲದ ಅಂಶ ಹೊಂದಿರುವ ಚರ್ಮ ಹೊಂದಿರುವವರಲ್ಲಿ ಇದರ ಪ್ರಮಾಣ ಹೆಚ್ಚು. ಈ ಬಗ್ಗೆ ಚಿಂತಿಸುವುದು ಮತ್ತು ಮೊಡವೆಗಳನ್ನು ಆಗಾಗ ಚಿವುಟುವುದು ತಪ್ಪು. ಇದರಿಂದ ಮುಖದಲ್ಲಿ ಮೊಡವೆ ಮಾಯವಾದರೂ ಕಲೆ ಹಾಗೆಯೇ ಉಳಿಯುವ ಸಾಧ್ಯತೆಯಿದೆ. ಮೊಡವೆ ಹಣ್ಣಾದಾಗ ಮಾತ್ರ ಅದನ್ನು ಕೀಳಬಹುದಾಗಿದೆ. ಮುಖಕ್ಕೆ ಬಿಸಿನೀರಿನ ಹಬೆ ಹಿಡಿದು ಸ್ವಚ್ಛ ವಸ್ತ್ರದಿಂದ ಮೊಡವೆಯೊಳಗಿದ್ದ ನೀರನ್ನು ಬೇರೆ ಕಡೆ ಪಸರಿಸದಂತೆ ಒರೆಸಿ ತೆಗೆಯಿರಿ. ಬಿಸಿಲಿಗೆ ಹೊರಗಡೆ ಹೋಗಿ ಮನೆಗೆ ಬಂದಾಗ ಶುದ್ಧವಾದ ನೀರಿನಿಂದ ಮುಖ ತೊಳೆಯುವುದನ್ನು ರೂಢಿ ಮಾಡಿಕೊಳ್ಳಿ. ಹೊರಗಡೆ ತೆರಳಿದಾಗ ಮತ್ತು ಮನೆಯಲ್ಲಿದ್ದಾ ಗಲೂ ಸಾಧ್ಯವಾದಷ್ಟು ಬಾರಿ ಮುಖವನ್ನು ಶುದ್ಧ ನೀರಿನಿಂದ ತೊಳೆಯರಿ. ಮುಖಕ್ಕೆ ಸಾಬೂನು ಬಳಸುವುದು ಬೇಡ. ಇದರಿಂದ ಮುಖದ ತ್ವಚೆ ಶುಷ್ಕವಾಗುತ್ತದೆ. ಕಡಲೆ ಹಿಟ್ಟಿನಿಂದ ಮುಖವನ್ನು ತೊಳೆಯಿರಿ, ಪರಿಣಾಮ ಖಂಡಿತಾ ಸಿಗಲಿದೆ. ಹೆಚ್ಚು ಬಿಸಿಲಿನಲ್ಲಿ ನಿಲ್ಲದಿರಿ. ಎಣ್ಣೆಯ ವಸ್ತುಗಳನ್ನು ತ್ಯಜಿಸಿ. ಹಸ್ತ ಮೈಥುನಕ್ಕೂ ಮೊಡವೆಗಳಿಗೂ ಯಾವುದೇ ಸಂಬಂಧವಿಲ್ಲ. ಹಸ್ತಮೈಥುನ ಎನ್ನುವುದು ಸಾಮಾನ್ಯ ಲೈಂಗಿಕ ಚಟುವಟಿಕೆ. ಹದಿಯರೆಯಕ್ಕೆ ಕಾಲಿಟ್ಟ ಗಂಡು-ಹೆಣ್ಣು ತಮ್ಮ ಲೈಂಗಿಕ ಬಯಕೆ ಯನ್ನಿ ನಿಗ್ರಹಿಸಲು ಜನನಾಂಗವನ್ನು ಕೈ, ಬೆರಳಿನ ಮೂಲಕ ಪ್ರಚೋದಿಸುತ್ತಾರೆ. ಇದನ್ನು ತಪ್ಪೆನ್ನಲಾಗದು. ಹಾಗೆಂದು ಇದು ಸರಿ ಎಂದು ಕೂಡಾ ಹೇಳಲಾಗದು. ಇದನ್ನು ಬಿಟ್ಟುಬಿಡುವುದು ಒಳ್ಳೆಯದು. ಇದರಿಂದ ದೇಹಾರೋಗ್ಯಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಕೀಳರಿಮೆ ಉಂಟಾಗುತ್ತದೆ. ಕೀಳರಿಮೆಯೇ ಒಂದು ದೊಡ್ಡ ರೋಗ. ಈಗ ಓದುವುದರ ಕಡೆಗೆ ಗಮನಕೊಡಿ. ಹಾಗೆ ಮಾಡುವುದು ತಪ್ಪು ಎಂದು ಕೊರಗುತ್ತಾ ಕುಳಿತುಕೊಳ್ಳದಿರಿ. ಮುಖದ ಮೊಡವೆಗಳು ವಯಸ್ಸಾದಂತೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತವೆ. ಈ ಬಗ್ಗೆ ಭಯ ಬೇಡ. ವೈದ್ಯರ ಸಲಹೆ ಮೇರೆಗೆ ಔಷಧಿ, ಕ್ರೀಂ ಪಡೆಯಬಹುದಾದರೂ ಇದು ಅಷ್ಟಾಗಿ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ. ಹೀಗಾಗಿ ಈಗ ಹೇಳಿದಷ್ಟು ಮಾಡಿದರೆ ಸಾಕು. ಅನಾವಶ್ಯಕ ಚಿಂತಿಸದಿರಿ.
Tagged with
gupta
ಬೆಂಗಳೂರು: ಗಣಿ ಹಗರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಯಡಿ ಯೂರಪ್ಪ ವಿರುದ್ಧ ಯಾವುದೇ ರೀತಿಯ ಶಿಸ್ತುಕ್ರಮ ಕೈಗೊಳ್ಳದಿರಲು ಬಿಜೆಪಿ ನಿರ್ಧರಿಸಿದೆ. ಸದಾನಂದ ಗೌಡ ನೇತೃತ್ವದ ಸರಕಾರವನ್ನು ಉಳಿಸಿಕೊಳ್ಳಲು ಪ್ರಥಮ ಆದ್ಯತೆ ನೀಡಿದ್ದು ಇದಕ್ಕಾಗಿ ನಿನ್ನೆ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ನಾಯಕರು ಸುಧೀರ್ಘ ಸಮಾಲೋಚನೆ ನಡೆಸಿದ್ದಾರೆ. ಯಡಿಯೂರಪ್ಪ ಕಾಂಗ್ರೆಸ್ ಜತೆ ಕೈಜೋಡಿಸಿ ಗೌಡರ ಸರಕಾರವನ್ನು ಉರುಳಿಸಲು ಮುಂದಾದರೆ ಅದನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆ ನಾಯಕರಲ್ಲಿ ಹುಟ್ಟಿದೆ. ಇದಕ್ಕಾಗಿಯೇ ನಿನ್ನೆ ಇಡೀ ದಿನ ಸಮಾಲೋಚನೆಯಲ್ಲಿ ತೊಡಗಿ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ.
ಮೊದಲಿಗೆ ಶಾಸಕರು ಒಟ್ಟಾಗಿ ಸೇರುವುದನ್ನು ತಡೆಗಟ್ಟಲು ಅವರ ಮೇಲೆ ಪ್ರಭಾವ ಬೀರುವುದು. ಒಂದೊಮ್ಮೆ ಸೇರಿದರೆ ಅಂತವರಿಗೆ ಪರೋಕ್ಷ ಎಚ್ಚರಿಕೆ ನೀಡಲು ತೀರ್ಮಾನಿಸಲಾಗಿದೆ. ಯಡಿಯೂರಪ್ಪ ನವರ ಮುಂದಿನ ನಡೆಯೇ ಬಿಜೆಪಿಗೆ ಯಕ್ಷ ಪ್ರಶ್ನೆಯಾಗಿದೆ.
ಒಂದು ವೇಳೆ ನಾನು ಕಷ್ಟದಲ್ಲಿ ಸಿಲುಕಿದ್ದೇನೆ. ನಾನು ಇಲ್ಲದಿದ್ದರೆ ಸರಕಾರವೂ ಇರಬಾರದೆಂಬ ನಿರ್ಧಾರಕ್ಕೆ ಬಂದರೆ ಅಂತಹ ಸಂದರ್ಭದಲ್ಲಿ ಸಚಿವರು ಶಾಸಕರನ್ನು ಹಿಡಿದಿಟ್ಟುಕೊಳ್ಳುವುದೇ ಮುಖ್ಯ ಗುರಿ. ಅಂತಹ ಸನ್ನಿವೇಶದಲ್ಲಿ ಅಧಿಕಾರ ನೀಡುವ ಆಮಿಷಗಳನ್ನು ತೋರಿಸಲಾಗಿದೆ. ಸರಕಾರದ ಅವಧಿ ಪೂರ್ಣಗೊಳಿಸಲು ಸಂಘ ಮತ್ತು ಪಕ್ಷ ಬೆನ್ನೆಲುಬಾಗಿ ನಿಲ್ಲಲಿದೆ. ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ರಾಜಕೀಯ ನಿರ್ಧಾರ ಗಳನ್ನು ಅವಲೋಕನ ಮಾಡಲಿದ್ದಾರೆ. ಯಾವುದೇ ಕಾರಣಕ್ಕೂ ಸದಾನಂದ ಗೌಡರನ್ನು ಕೆಳಗಿಳಿಸಲು ವರಿಷ್ಠರು ಆಸಕ್ತಿ ಹೊಂದಿಲ್ಲ. ಅವರ ಸರಕಾರವೇ ಮುಂದುವರಿಯಬೇಕು ಎಂಬ ಆದೇಶದ ಹಿನ್ನಲೆಯಲ್ಲಿ ಪಕ್ಷ ಮತ್ತು ಸಂಘ ಇಂತಹ ನಿರ್ಧಾರಕ್ಕೆ ಬಂದಿದೆ.
ಇದನ್ನು ತಡೆಯಲು ಜೆಡಿಎಸ್ ಜತೆ ಕೈಜೋಡಿಸುವ ಕುರಿತು ಕೂಡಾ ಸಮಾಲೋಚನೆ ನಡೆಸಿದೆ ಎಂದು ಬಲ್ಲಮೂಲಗಳು ತಿಳಿಸಿವೆ.
Tagged with
feature,
snews
ಹಿಂದೂ-ಮುಸ್ಲಿಂ ಭಾವೈಕ್ಯತೆ
ಬಂಟ್ವಾಳ: ಪ್ರಾಕೃತಿಕ ವಿಕೋಪಕ್ಕೆ ತತ್ತರಿಸಿ ಹೋಗಿದ್ದ ಸಜೀಪನಡು ಗ್ರಾಮದ ದರ್ಬೆಕೋಡಿ ಎಂಬಲ್ಲಿನ ಬಡ ಬಿಲ್ಲವ ಕುಟುಂಬವೊಂದಕ್ಕೆ ಮಂಗಳೂರಿನ ಮುಸ್ಲಿಂ ಸಮುದಾಯದ ಸಮಾಜ ಸೇವಾ ಕಾರ್ಯ ಸಂಘಟನೆ ಹಿದಾಯ ಫೌಂಡೇಶನ್ ಸಹಾಯ ಹಸ್ತ ನೀಡಿ, ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದೆ.
ನಿನ್ನೆ ಮನೆಗೆ ಭೇಟಿ ನೀಡಿದ ಫೌಂಡೇಶನ್‌ನ ಪದಾಧಿ ಕಾರಿಗಳು ಕುಟುಂಬದ ಮೂರೂ ಮಕ್ಕಳ ಶೈಕ್ಷಣಿಕ ಹೊಣೆಗಾರಿಕೆ, ಕುಟುಂಬಸ್ಥರಿಗೆ ಪಡಿತರ ಸಾಮಗ್ರಿ ಹಾಗೂ ವೈದ್ಯಕೀಯ ನೆರವು ನೀಡಿದ್ದಾರೆ. ದರ್ಬೆಕೋಡಿ ತನಿಯಪ್ಪ ಪೂಜಾರಿ ಎಂಬವರ ಮನೆ ಕಳೆದ ವರ್ಷ ಸಿಡಿಲು ಬಡಿದು ಭಾಗಶಃ ಹಾನಿಗೊಂಡಿದ್ದು, ಮನೆಯ ಗೋಡೆ, ಛಾವಣಿ, ಕೋಣೆಗಳು ಕುಸಿದು ಬಿದ್ದಿದ್ದವು. ಮನೆ ಮಾಲಿಕ ತನಿಯಪ್ಪ ಅನಾರೋಗ್ಯಕ್ಕೆ ತುತ್ತಾಗಿದ್ದು, ಘಟನೆಯ ಪರಿಣಾಮ ಈಗಲೂ ಅವರು ಕಿವುಡರಾಗಿದ್ದಾರೆ. ಅವರ ಪತ್ನಿ ಸರೋಜಿನಿ ಅಸ್ವಸ್ಥರಾಗಿದ್ದರು. ತನಿಯಪ್ಪ ದಂಪತಿಗೆ ಮೂರು ಮಕ್ಕಳಿದ್ದಾರೆ. ಹಿರಿ ಮಗಳು ಶ್ವೇತಾ ೯ನೇ ತರಗತಿ ಓದುತ್ತಿದ್ದರೆ, ಚೇತನ್ ಹಾಗೂ ತಿಲಕ್ ಇನ್ನೂ ಪ್ರೈಮರಿ ತರಗತಿ ಕಲಿಯುತ್ತಿದ್ದಾರೆ. ಪ್ರಾಕೃತಿಕ ವಿಕೋಪಕ್ಕೆ ಗುರಿಯಾದ ತನಿಯಪ್ಪ ಕುಟುಂಬ ಆಮೇಲೆ ಚೇತರಿಸಿಕೊಳ್ಳಲೇ ಇಲ್ಲ. ಅವರ ಮನೆ ವಾಸ್ತವ್ಯಕ್ಕೆ ಇನ್ನೂ ಸಿದ್ಧವಾಗಿಲ್ಲ. ಮೊದಲಿನ ಬಚ್ಚಲು ಕೋಣೆಯೇ ಅವರಿಗೆ ಈಗ ವಾಸ್ತವ್ಯದ ಮನೆಯಾಗಿದೆ. ತನಿಯಪ್ಪ ಅನಾರೋಗ್ಯದ ಸಮಸ್ಯೆಯ ನಡುವೆಯೂ ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಸರೋಜಿನಿ ಬೀಡಿ ಕಟ್ಟುತ್ತಿದ್ದಾರೆ. ಮನೆ ಹಾನಿಗೆ ಕಂದಾಯ ಇಲಾಖೆಯ ಪರಿಹಾರ ಧನವೂ ಒದಗಿಬಂದಿರಲಿಲ್ಲ.
ಕುಟುಂಬದ ಸ್ಥಿತಿ-ಗತಿಯನ್ನು ಅವಲೋಕಿಸಿದ ಹಿದಾಯ ಫೌಂಡೇಶನ್ನ ಪದಾಧಿಕಾರಿಗಳು ಮನೆಗೆ ಭೇಟಿ ನೀಡಿದ್ದು, ವಾಸ್ತವ ವಿಚಾರ ಅವಲೋಕಿಸಿದ್ದರು. ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ಪ್ರತಿ ತಿಂಗಳ ನಿರ್ಧಿಷ್ಟ ರೇಶನ್ ಸಾಮಗ್ರಿ, ಮಕ್ಕಳಿಗೆ ಶೈಕ್ಷಣಿಕ ನೆರವು ಹಾಗೂ ಕುಟುಂಬದ ವೈದ್ಯಕೀಯ ಸೌಲಭ್ಯ ಒದಗಿಸುವುದಾಗಿ ನಿರ್ಧರಿಸಿದ್ದಾರೆ. ನಿಯೋಗದಲ್ಲಿ ಫೌಂಡೇಶನ್ ಸಂಚಾಲಕ ಹಾಜಿ ಮಹಮ್ಮದ್ ಹನೀಫ್ ಗೋಳ್ತಮಜಲು, ಟ್ರಸ್ಟಿಗಳಾದ ಟಿ.ಕೆ.ಬಶೀರ್ ಫರಂಗಿಪೇಟೆ, ದುಬಾ ಡೈಮಂಡ್ ಹೋಮ್‌ನ ಆಡಳಿತ ನಿರ್ದೇಶಕ ಸಲೀಂ ಅಲ್ತಾಫ್ ಫರಂಗಿಪೇಟೆ, ಸದಸ್ಯ ರಝಾಕ್ ಮಾಸ್ಟರ್ ಅನಂತಾಡಿ ಇದ್ದರು.
ನೀವು ನೆರವಾಗುವಿರಾ?
ಮನೆ ಸಿಡಿಲು ಬಡಿದು ಬಿದ್ದದ್ದು, ಕಳೆದ ವರ್ಷ ನವಂಬರ್ ತಿಂಗಳಿಗೆ. ಆಗ ಎಲ್ಲರೂ ಬಂದು ಬೆನ್ನು ಕೊಟ್ಟಿದ್ದರು. ಕೆಲವು ಮಂದಿ ಕಾಸು ಕೊಟ್ಟಿದ್ದರು. ಇಲಾಖೆಯವರೂ ಬಂದು ಹೋಗಿದ್ದಾರೆ. ಏನೇನು ಬರೆದು ಕೊಂಡು ಹೋಗಿದ್ದಾರೆ. ೨೫ ಸಾವಿರ ಬರಬಹುದೆಂದಿದ್ದರು. ಹಣವನ್ನು ನಿಮಗೆ ಚೆಕ್ ಮುಖೇನ ಕಳುಹಿಸುತ್ತಾರೆ ಎಂದಿದ್ದರು. ಆ ಹಣ ಬಂದರೆ, ಉಳಿದದ್ದು ಹೇಗಾದರೂ ಹೊಂದಾಣಿಕೆ ಮಾಡಿ ಮನೆ ಕಟ್ಟಬಹುದೆಂಬ ಆಸೆ ಇತ್ತು. ಆದರೀಗ ಅಧಿಕಾರಿಗಳೂ ಇಲ್ಲ, ಚೆಕ್ಕೂ ಇಲ್ಲ. ನಮ್ಮ ಅವಸ್ಥೆ ಯಾರಿಗೆ ಅರ್ಥವಾಗಲ್ಲ ಸ್ವಾಮೀ ಎಂದು ಹೇಳುತ್ತಿದ್ದ ಆಕೆಯ ಕಣ್ಣಂಚಿನಲ್ಲಿ ನೀರ ಹನಿ ಚಿಮ್ಮುತ್ತಿದ್ದವು. ಅವುಗಳನ್ನು ಸೆರಗಿನ ತುದಿಯಿಂದ ಒರೆಸಿಕೊಳ್ಳುತ್ತಿದ್ದ ಆ ತಾಯಿಗೆ ದೇವರು ಅಳುವ ಹಕ್ಕೂ ಕೊಟ್ಟಿಲ್ಲವೋ ಏನೋ? ಮಾನವೀಯ ತೆಯಿಂದಾದರೂ ಈ ಬಡ ಕುಟುಂಬಕ್ಕೆ ಯಾರಾದರೂ ಸಹಾಯ ಮಾಡುವಿರಾ ಅನ್ನಿಸಿತು. ಇದೀಗ ಕುಟುಂಬಕ್ಕೆ ಅಭಯ ನೀಡಲು ಮುಂದಾದ ಹಿದಾಯ ಫೌಂಡೇಶನ್ ಸೇವಾ ಕಾರ್ಯವನ್ನು ಪ್ರಶಂಸಿಸಲೇ ಬೇಕು. ಅವರ ಸಹಾಯ ಹಸ್ತ ಹಿಂದು-ಮುಸ್ಲಿಂ ಭಾವೈಕ್ಯತೆಗೆ ಬಲಾಢ್ಯ ಸಂದೇಶವೊಂದನ್ನು ಸಾರುವಂತೆ ಮಾಡಿದೆ. ಸಂಪರ್ಕ ವಿಳಾಸ: ತನಿಯಪ್ಪ ಪೂಜಾರಿ, ದರ್ಬೆಕೋಡಿ, ಕಂಚಿಲ, ಸಜೀಪನಡು, ಬಂಟ್ವಾಳ ತಾಲೂಕು, ದ.ಕ.
Tagged with
dk,
feature,
lnews
ಬೆಂಗಳೂರು: ಭ್ರಷ್ಟಾಚಾರ ಹಗರಣಗಳಿಗೆ ಸಂಬಂಧಿಸಿ ರಾಜ್ಯದ ಇಬ್ಬರು ಮಾಜಿ ಮುಖ್ಯ ಮಂತ್ರಿಗಳನ್ನು ಸಿಬಿಐ ತನಿಖೆಗೆ ಒಳಪಡಿಸಿದಂ ತಾಗಿದ್ದು, ವಿಶೇಷವೆಂದರೆ ಇಬ್ಬರೂ ಶಿವಮೊಗ್ಗ ಜಿಲ್ಲೆಯವರೇ.
ಅಧಿಕಾರ ಕಳೆದುಕೊಂಡರೂ ಸಿಬಿಐ ತನಿಖೆ ಎದುರಿಸಬೇಕಾದ ರಾಜ್ಯದ ಎರಡನೇ ಮುಖ್ಯ ಮಂತ್ರಿ ಯಡಿಯೂರಪ್ಪ. ಈ ಮೊದಲು ಕ್ಲಾಸಿಕ್ ಕಂಪ್ಯೂಟರ್ ಹಗರಣಕ್ಕೆ ಸಂಬಂಧಿಸಿದಂತೆ ದಿವಂಗತ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ತನಿಖೆಗೆ ಒಳಪಟ್ಟಿದ್ದರು.
ಬಂಗಾರಪ್ಪ ಅವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿರಲಿಲ್ಲ. ದಶಕದ ನಂತರ ಪ್ರಕರಣದ ಆರೋಪದಿಂದ ಅವರು ಮುಕ್ತಗೊಂಡಿದ್ದರು. ಇದೀಗ ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ತನಿಖೆ ಎಷ್ಟು ತಿಂಗಳೋ ಅಥವಾ ಎಷ್ಟು ವರ್ಷ ನಡೆಯುತ್ತದೆಯೋ ಗೊತ್ತಿಲ್ಲ. ಆದರೆ ತೀರ್ಪು ಹೊರಬರುವುದಕ್ಕಂತೂ ಇನ್ನೂ ಸುಧೀರ್ಘ ಕಾಲ ಕಾಯಲೇಬೇಕು. ಸುಪ್ರೀಂಕೋರ್ಟ್‌ನ ಆದೇಶದ ಪ್ರತಿ ಸಿಬಿಐ ಕೇಂದ್ರ ಕಚೇರಿಗೆ ಇಂದು ಸಂಜೆ ತಲುಪಿದ್ದು, ಈ ಹಿನ್ನೆಲೆಯಲ್ಲಿ ಸಿಇಸಿ ವರದಿಯನ್ನಾಧರಿಸಿ ಸಿಬಿಐ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಎಡಿಜಿಪಿಯೊಬ್ಬರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಿದೆ. ಈ ಅಧಿಕಾರಿ ಬೆಂಗಳೂರು ಸಿಬಿಐ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಬಹುದು. ಮೊದಲಿಗೆ ಪ್ರಕರಣಗಳ ಸಂಬಂಧ ದಾಖಲಾತಿಗಳನ್ನು ರಾಜ್ಯ ಸರ್ಕಾರ, ಲೋಕಾಯುಕ್ತ, ಸಿಐಡಿ ಮೊದಲಾದ ಕಚೇರಿಗಳಿಂದ ಪಡೆದುಕೊಳ್ಳಬಹುದು.
ಇದಕ್ಕೆ ಪೂರಕವಾಗಿ ಯಡಿಯೂರಪ್ಪ ಮತ್ತವರ ಕುಟುಂಬ ಒಡೆತನದ ಕಚೇರಿ, ಸಂಸ್ಥೆ, ನಿವಾಸಗಳ ಮೇಲೆ ದಾಳಿ ಮಾಡಿ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಬಹುದು. ಸೂಕ್ತ ಸಂದರ್ಭದಲ್ಲಿ ಯಡಿಯೂರಪ್ಪ, ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಸೋಹನ್‌ಕುಮಾರ್ ಮತ್ತು ಪ್ರಕರಣದಲ್ಲಿ ಭಾಗಿಯಾದ ಗಣಿ ಕಂಪೆನಿಗಳ ಮುಖ್ಯಸ್ಥರನ್ನು ಬಂಧಿಸಿ ತನಿಖೆಗೆ ಒಳಪಡಿಸಬಹುದಾಗಿದೆ.
Tagged with
feature,
snews
ಸರ್ಕಾರಿ ಜಮೀನು ಅತಿಕ್ರಮಣ ಹಿನ್ನೆಲೆ
ಬಂಟ್ವಾಳ: ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಭೂ ಹಗರಣದಲ್ಲಿ ಪೊಲೀಸ್ ಪ್ರಕರಣ ಎದುರಿಸುತ್ತಿದ್ದ ಬೆನ್ನಿಗೆ ಹಾಲಿ ಅಧ್ಯಕ್ಷ ಇನ್ನೊಂದು ಜಮೀನು ಅತಿಕ್ರಮಣ ವಿವಾದವನ್ನು ಎದುರಿಸುತ್ತಿದ್ದಾರೆ. ಗ್ರಾ.ಪಂ.ಅಧ್ಯಕ್ಷ ರಝಾಕ್ ಕುಕ್ಕಾಜೆ ವಿರುದ್ಧ ತಹಶೀಲ್ದಾರ್ ಆನಂದ ನಾಯಕ್ ನೋಟಿಸ್ ಜಾರಿಗೊಳಿಸಿದ್ದು, ಸರ್ಕಾರಿ ಜಮೀನಿನ ಮೇಲಾದ ಅತಿ ಕ್ರಮಣ ತೆರವುಗೊಳಿಸಬೇಕಾಗಿ ಎಚ್ಚರಿ ಸಿದ್ದಾರೆ.
ಇರಾ ಗ್ರಾಮದಲ್ಲಿ ಸರ್ಕಾರಿ ಜಮೀನು ಅತಿಕ್ರಮಣ ಮಾಡಿರುವಾಗಿ ಅಧ್ಯಕ್ಷ ರಝಾಕ್ ಮೇಲೆ ಸ್ಥಳೀಯ ಕೆಲವರು ಅಂದಿನ ತಹಶೀಲ್ದಾರ್‌ಗೆ ದೂರು ನೀಡಿದ್ದರು. ಆದರೆ ಅತಿಕ್ರಮಣ ತೆರವುಗೊಳಿಸಲು ತಹಶೀಲ್ದಾರ್ ಅಸ ಹಾಯಕರಾಗಿದ್ದರು. ಈ ಹಿನ್ನೆಲೆಯಲ್ಲಿ ದೂರುದಾರರು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದಾವೆ ಹೂಡಿದ್ದು, ನ್ಯಾಯಾಧೀಶರು ಕಂದಾಯ ಇಲಾ ಖಾಧಿಕಾರಿಗಳನ್ನು ನೇರ ಹೊಣೆಗಾರ ರನ್ನಾಗಿ ಮಾಡಿದ್ದು, ತೆರವಿಗೆ ಆದೇಶ ಹೊರಡಿಸಿದ್ದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಆನಂದ ನಾಯಕ್ ಅವರು ಪಂಚಾಯತ್ ಅಧ್ಯಕ್ಷ ಹಾಗೂ ಅತಿಕ್ರಮಣದಾರರಿಗೆ ನೋಟಿಸ್ ನೀಡಿದ್ದು, ಕಂದಾಯ ಇಲಾಖಾ ನಿರ್ದೇಶನಾನುಸಾರ ಕೂಡಲೇ ತೆರವುಗೊಳಿಸಬೇಕಾಗಿ ನೋಟಿಸ್ ಕಳುಹಿಸಿದ್ದಾರೆ. ಜೆಎಂಎಫ್‌ಸಿ ನ್ಯಾಯಾಧೀಶರದ ಕೆ.ಪಿ.ದಿನೇಶ್ ಅವರು ಏ. ೧೬ರಂದು ಸಹಾಯಕ ಆಯುಕ್ತ, ತಹಶೀಲ್ದಾರ್, ಕಂದಾಯ ನಿರೀಕ್ಷಕ ಹಾಗೂ ಲೆಕ್ಕಾಧಿಕಾರಿಗೆ ಆದೇಶ ನೀಡಿದ್ದರೂ, ನ್ಯಾಯಾಲಯ ನಿರ್ದೇಶನ ಪಾಲನೆಯಾಗಿರಲಿಲ್ಲ ಎನ್ನವುದು ಅಫೀಲುದಾರರ ದೂರು. ಈ ಕುರಿತು ತಹಶೀಲ್ದಾರರ ವಿಶೇಷ ಗಮನಕ್ಕೆ ಪ್ರಕರಣದ ಆದೇಶ ನೀಡಿ, ಸಾರ್ವಜನಿಕ ಹಿತಾಸಕ್ತಿಯಲ್ಲಿ ಒತ್ತಾಯಿಸಿದ್ದರೂ, ಅವರು ಕ್ರಮ ಜರುಗಿಲ್ಲ ಎನ್ನುತ್ತಾರೆ. ಅತಿಕ್ರಮಣ ತೆರವಾಗದೇ ಇದ್ದರೆ, ಪಂಚಾಯತ್ ಎದುರು ಪ್ರತಿಭಟಿಸುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದೆ.
Tagged with
dk,
feature,
lnews
ಮಂಗಳೂರು: ಜನರಿಗೆ ಸತ್ಯ ಅಪ್ರಿಯ. ಆದರೆ ಕಥೆಗಾರ ಸಾದತ್ ಹಸನ್ ಮಾಂಟೋ ಸತ್ಯದ ಪ್ರತಿಪಾದ ಕರಾಗಿದ್ದರು. ಅವರ ಪ್ರತಿಯೊಂದು ಕಥೆಯೂ ನೂರಾರು ಅರ್ಥಗಳನ್ನು ಧ್ವನಿಸುವ ಶಕ್ತಿ ಹೊಂದಿತ್ತು. ಗಾಂಧೀಜಿ ರಾಜಕೀಯವಾಗಿ ಸತ್ಯ ಹೇಳುತ್ತಿದ್ದರೆ, ಮಾಂಟೋ ಸಾಹಿತ್ಯದ ಮೂಲಕ ಸತ್ಯ ಅನಾವರಣಗೊಳಿಸುತ್ತಿದ್ದರು. ಸತ್ಯದ ಬಗ್ಗೆ ಇಬ್ಬರ ನಿಷ್ಠೆಯೂ ಒಂದೆ ತೆರನಾಗಿತ್ತು ಎಂದು ಚಿಂತಕ ಜಿ. ರಾಜಶೇಖರ್ ಅಭಿಪ್ರಾಯಪಟ್ಟರು.
ಖ್ಯಾತ ಕಥೆಗಾರ ಸಾದತ್ ಹಸನ್ ಮಾಂಟೋ ಅವರ ೧೦೦ನೆ ಜನ್ಮ ದಿನದ ಪ್ರಯುಕ್ತ ಮಂಗಳೂರಿನ ಪತ್ರಕರ್ತರ ಅಧ್ಯಯನ ಕೇಂದ್ರ ಶುಕ್ರವಾರ ನಗರದ ಸಿಒಡಿಪಿ ಸಭಾಂಗಣದಲ್ಲಿ ಹಮ್ಮಿ ಕೊಂಡ ಮಾಂಟೋ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕೇವಲ ೪೩ ವರ್ಷ ಬದುಕಿದ್ದ ಮಾಂಟೋನಿಗೆ ಸಾಹಿತ್ಯ ಬಿಟ್ಟರೆ ಅತೀ ಹೆಚ್ಚು ಆಕರ್ಷಣೀಯ ಕ್ಷೇತ್ರ ಬಾಲಿವುಡ್ ಆಗಿತ್ತು. ದೇಶ ವಿಭಜನೆ ಹಿನ್ನೆಲೆಯಲ್ಲಿ ಭಾರತದಿಂದ ವಿದಾಯ ಹೇಳುವ ಸಂಕಟಮಯ ಸನ್ನಿವೇಶ ಎದುರಿಸಿದ್ದ ಮಾಂಟೋನಿಗೆ ತನ್ನ ವೃತ್ತಿ ಮತ್ತು ಪ್ರವೃತ್ತಿಯ ಬಗ್ಗೆ ಆಧುನಿಕ ಪ್ರಜ್ಞೆ ಇತ್ತು. ಆದರೆ ನಿರುದ್ಯೋಗ ಹಾಗೂ ಬಡತನದಿಂದ ಕಂಗೆಟ್ಟಿದ್ದ ಎಂದು ರಾಜಶೇಖರ್ ಹೇಳಿದರು.
ಮಾಂಟೋ ನೆನಪುವಿನೊಂದಿಗೆ ಪತ್ರಕರ್ತ ಬಿ.ಎಂ.ಬಶೀರ್‌ರ ಅಂಗೈಯಲ್ಲೇ ಆಕಾಶ ಹನಿಕತೆಗಳ ಜೊತೆ ಒಂದು ಸಂಜೆ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲೇಖಕಿ ಭುವನೇಶ್ವರಿ ಹೆಗಡೆ ಸಮಾಜದ ಸ್ವಾಸ್ಥ ಕಾಪಾಡುವ ಹೊಣೆ ಸಾಹಿತಿಗೆ ಮುಖ್ಯವಾಗಿದೆ. ಲೇಖಕ ಬಶೀರ್ ಮಗು ಮೂಲಕ ಸಮಾಜಮುಖಿ ಕಾಳಜಿ ತೋರಿಸಿದ್ದಾರೆ. ವಯಸ್ಸಿಗೆ ಮೀರಿದ ಪ್ರತಿಭೆಯೊಂದಿಗೆ ಬಡತನದ ಅನುಭೂತಿ ಅವರ ಪ್ರತೀ ಕಥೆಯಲ್ಲೂ ಎದ್ದು ಕಾಣುತ್ತದೆ. ಚಿಕ್ಕ ಚಿಕ್ಕ ಸಂಗತಿಗಳನ್ನೂ ಹೆಣೆದು ಸಾಕಷ್ಟು ಸುಖ ನೀಡಿದ್ದಾರೆ. ಮಾನವೀಯತೆಯ ಮೂರ್ತರೂಪ ಅನಾವರಣಗೊಳಿಸಿದ್ದಾರೆ ಎಂದರು.
ಸೂಕ್ಷ್ಮ ಸಂವೇದನೆಯ ಮನುಷ್ಯ ಮಾತ್ರ ಇಂತಹ ಹನಿಕತೆಗಳನ್ನು ರಚಿಸಬಲ್ಲರು. ಲೇಖಕ ಎಲ್ಲೂ ಉಪದೇಶ ನೀಡದೆ ತನಗೆ ತಾನೇ ಪ್ರಶ್ನೆ ಹಾಕಿಕೊಳ್ಳುವ ಮೂಲಕ ಮನುಷ್ಯನ ಮನಸ್ಸಿಗೆ ನಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಹೇಳಿದರು.
ಮಾಂಟೋ ಕಂಡ ಜಗತ್ತು ದೊಡ್ಡದು. ಆದರೆ, ನಾ ಕಂಡ ಜಗತ್ತು ತೀರಾ ಸಣ್ಣದು. ಒಬ್ಬ ಸಾಹಿತಿಯು ಪತ್ರಕರ್ತನಾದಾಗ ಆತನೊಳಗಿನ ಸಾಹಿತಿ ಹೇಗೆ ಕೆಲಸ ಮಾಡುತ್ತಾನೆ ಮತ್ತು ಆತ ಎದುರಿಸುವ ಸಮಸ್ಯೆ ಏನು ಎಂಬುದಕ್ಕೆ ನಾನು ಸಾಕ್ಷಿಯಾಗಿzನೆ. ಹಾಗೇ ವರದಿಗಾರ ಮತ್ತು ಕಥೆಗಾರಿಕೆಯ ತಿಕ್ಕಾಟದ ಮಧ್ಯೆ ಈ ಹನಿಕತೆಗಳು ಹುಟ್ಟಿಕೊಂಡಿದೆ ಎಂದು ನನಗೆ ಅನಿಸುತ್ತಿದೆ ಎಂದು ಪತ್ರಕರ್ತ ಬಿ.ಎಂ. ಬಶೀರ್ ಅಭಿಪ್ರಾಯಪಟ್ಟರು.
ಬಳಿಕ ಬಶೀರ್ ಜತೆ ಸಂವಾದ ನಡೆಯಿತು. ಉಪನ್ಯಾಸಕಿ ಸಫಿಯಾ ಕಾರ್ಯಕ್ರಮ ನಿರೂಪಿಸಿದರು.
Tagged with
dk,
feature,
lnews
ಮುಲ್ಕಿ: ಸರಕಾರ ಮರಳು ದಂಧೆಗೆ ನಿಷೇಧವೇನೋ ಜಾರಿಗೊಳಿ ಸಿದ್ದರೂ ನಿಷೇಧ ಪೂರ್ತಿಯಾಗಿ ಜಾರಿಬಂದಿಲ್ಲ. ಕೆಲವು ರಾಜಕೀಯ ಪುಢಾರಿಗಳಿಗೆ ಮಣಿದು ನಿರಂ ತರವಾಗಿ ಮರಳು ದಂಧೆ ನಡೆ ಯುತ್ತಿದೆ. ಸರಕಾರ ಕಣ್ಣಿ ದ್ದರೂ ಕುರು ಡಾದಂತೆ ನಟಿಸುತ್ತಿದೆ. ಮರಳು ದಂಧೆ ಭರ್ಜರಿಯಾಗಿ ಈಗ ತೆಂಕ ಎರ್ಮಾಳ್ ಗ್ರಾಮದಲ್ಲಿ ನಡೆ ಯುತ್ತಿದೆ.
ಹಲವಾರು ವರ್ಷದ ಹಿಂದೆ ಮರಳು ದಂಧೆಗೆ ಕೊಟ್ಟಿರುವ ಲೈಸ ನ್ಸನ್ನು ಅನೇಕ ಕಡೆಗಳಲ್ಲಿ ರದ್ದುಗೊ ಳಿಸಿದ್ದಾರೆ. ಶ್ರೀಮಂತ ವ್ಯಕ್ತಿಗಳು ನಿರಂ ತರವಾಗಿ ಮರಳುದಂಧೆ ಮಾಡು ತ್ತಲೇ ಇದ್ದು, ಯಾರು ಕೇಳುವವರೇ ಇಲ್ಲದಂತಾಗಿದೆ. ತೆಂಕ ಎರ್ಮಾಳ್ ಗ್ರಾಮದ ಸಮುದ್ರ ಬದಿಯಿಂದ ನಿರಂತರವಾಗಿ ರಾತ್ರಿ ಹೊತ್ತಿಗೆ ಮರಳು ತೆಗೆದು ಪಕ್ಕದ ಮಾಲಕರ ಜಮೀನಿನಲ್ಲಿ ದಿನಂಪ್ರತಿ ಸಾಧಾರಣ ೧೫೦ ಲೋಡ್ ಮರಳನ್ನು ತೆಗೆದು ರಾತ್ರಿ ಹೊತ್ತಿಗೆ ರಾಶಿ ಹಾಕುತ್ತಾರೆ. ಒಂದು ಬದಿ ಯಿಂದ ಮರಳು ತೆಗೆಯುತ್ತಿದ್ದರೆ, ಇನ್ನೊಂದು ಬದಿಯಿಂದ ಕಡಲಿನ ಅಲೆಗಳ ರಭಸಕ್ಕೆ ಕೊರೆಯುತ್ತಾ ಮಾರ್ಗದ ಪಕ್ಕವನ್ನು ಸಮೀಪಿಸುತ್ತಾ ಬರುತ್ತಿದೆ. ಇಂದಲ್ಲಾ ನಾಳೆ ಈ ಗ್ರಾಮದ ಜನತೆಗೆ ಅಪಾಯ ಕಟ್ಟಿಟ್ಟ ಬುತ್ತಿ.
ಇದೀಗ ಸಾಧಾರಣ ಒಂದು ಸಾವಿರ ಲೋಡ್‌ಗಿಂತಲೂ ಜಾಸ್ತಿ ಮರಳನ್ನು ರಾಶಿ ಹಾಕಿರುತ್ತಾರೆ. ಈ ಮರಳು ದಂಧೆಯಲ್ಲಿ ಶಾಸಕ ಲಾಲಾಜಿ ಮೆಂಡನ್ ಸೋದರ ಭಾಸ್ಕರ್ ಮೆಂಡನ್‌ರವರ ಲೈಸನ್ಸ್‌ನ ಮೇಲೆ ಈ ಮರಳು ದಂಧೆ ನಡೆ ಯುತ್ತಿದ್ದು, ಮಂಗಳೂರಿನ ಪ್ರಭಾವಿ ವ್ಯಕ್ತಿಯೊಬ್ಬರು ಶಾಮೀಲಾಗಿದ್ದಾರೆ ಎಂದು ತಿಳಿದು ಬಂದಿದೆ. ತೆಂಕ ಎರ್ಮಾಳ್ ಗ್ರಾಮದ ಪಂಚಾಯತ್ ಸದಸ್ಯರಾದ ಸತೀಶ್ ಎಂಬವರ ಬಲಗೈ ಬಂಟನಾದ ಗೌಡ ಎಂಬಾತ ಈ ದಂಧೆಯಲ್ಲಿ ಶಾಮೀ ಲಾಗಿದ್ದು, ಪಂಚಾಯತ್ ಸದಸ್ಯನಾ ದುದರಿಂದ ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ದಂಧೆ ನಡೆಯು ತ್ತಿದೆ ಎಂದು ಸ್ಥಳೀಯರು ಆರೋ ಪಿಸಿದ್ದಾರೆ.
ಸ್ಥಳೀಯ ಗ್ರಾ.ಪಂ ಅಧ್ಯಕ್ಷೆಯ ಕೃಪೆಯಿಂದ ಈ ದಂಧೆ ನಡೆಯುತ್ತಿದ್ದು, ಎಲ್ಲರೂ ಬಿ.ಜೆ.ಪಿಗೆ ಸೇರಿದ ವ್ಯಕ್ತಿಗಳಾ ದುದರಿಂದ ಯಾವ ಭಯವೂ ಇಲ್ಲದೆ ನಿರಂತರವಾಗಿ ದಂಧೆ ನಡೆಯುತ್ತಿದೆ. ಗ್ರಾ. ಪಂ. ಅಧ್ಯಕ್ಷೆ ಎಲ್ಲಾ ವಿವರವಾದ ವಿಷಯ ಸಂಗ್ರಹಿಸಿ ಜಿಲ್ಲಾಧಿಕಾರಿಗೆ ವರದಿ ಒಪ್ಪಿಸುವ ಕೆಲಸ ಮಾಡಬೇಕಿತ್ತು. ಅದನ್ನು ಬಿಟ್ಟು ಇಂತಹ ಕೀಳುಮಟ್ಟದ ದಂಧೆಗೆ ಸಹಕಾರ ಕೊಡುವುದನ್ನು ಕೂಡಲೇ ನಿಲ್ಲಿಸಬೇಕು. ಅತ್ತ ಲಾಲಾಜಿ ಮೆಂಡನ್ ನವರ ಸಹಕಾರದಿಂದಲೂ ಈ ಮರಳು ಮಾಫಿಯಾ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ರಾಶಿ ರಾಶಿ ಹಾಕಿದ ಮರಳನ್ನು ದಿನಂಪ್ರತಿ ಬೆಳ್ಳಿಗ್ಗೆ ೬ ಗಂಟೆಯಿಂದ ಸಾಧಾರಣ ಬೆಳ್ಳಿಗ್ಗೆ ೧೦ ಗಂಟೆಯವರೆಗೆ ಮಹಾರಾಷ್ಟ್ರ ರಹದಾರಿ ಇರುವ ಲಾರಿಗಳಿಗೆ ತುಂಬಿಸಿ ಕೊಲ್ಹಾಪುರಕ್ಕೆ ಕಳುಹಿಸಿ ಕೊಡುತ್ತಾರೆ. ದಿನಂಪ್ರತಿ ೨೦-೨೫ ಲಾರಿಗಳಲ್ಲಿ ಮರಳು ತುಂಬಿ ಕೊಲ್ಹಾಪುರದ ಗ್ಲಾಸ್ ಕಂಪೆನಿಗೆ ಗ್ಲಾಸ್ ತಯಾರಿಸಲು ಈ ಮರಳು ಬಳಕೆ ಯಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಮರಳು ದಂಧೆ ಬಗ್ಗೆ ಅನೇಕ ಬಾರಿ ದಿನ ಪತ್ರಿಕೆಯಲ್ಲಿ ವರದಿ ಕೂಡ ಪ್ರಕಟವಾಗಿದ್ದು, ಜಿಲ್ಲಾಧಿಕಾರಿ ಕಣ್ಣಿದ್ದೂ ಕುರುಡರಂತಾಗಿದ್ದಾರೆ. ಇತ್ತ ಈ ಗ್ರಾಮದ ಜನರಿಗೆ ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎಂಬಂತಿದೆ. ಮರಳು ದಂಧೆಯನ್ನು ಕೂಡಲೇ ನಿಲ್ಲಿಸ ಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಯವರಿಗೆ ಪತ್ರಿಕೆಯ ಮೂಲಕ ಆಗ್ರಹಿಸಿ ದ್ದಾರೆ. ಅಂದ ಹಾಗೆ ಮರಳು ದಂಧೆ ಯಲ್ಲಿ ಸಂಪೂರ್ಣವಾಗಿ ಬಿ.ಜೆ.ಪಿ ಯವರೇ ಶಾಮೀಲಾಗಿ ರುವುದರಿಂದ ಈ ದಂಧೆಯನ್ನು ಬಿ.ಜೆ.ಪಿ ಸರಕಾರಕ್ಕೆ ನಿಲ್ಲಿಸಲು ಸಾಧ್ಯವಾದಿತೇ?
Tagged with
dk,
feature,
lnews
ಮಂಜೇಶ್ವರ: ರಾಜ್ಯದಲ್ಲಿ ಶಾಂತಿ- ಸೌಹಾರ್ದ ಕಾಪಾಡಲು ಧರ್ಮ, ಜಾತಿ, ರಾಜಕೀಯ ಮರೆತು ಎಲ್ಲರೂ ಜೊತೆಯಾಗಿ ಕೈ ಜೋಡಿಸುವ ಅಗತ್ಯ ವಿದೆ ಎಂದು ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದ ಹಾಗೂ ಸಹ ಬಾಳ್ವೆಯನ್ನು ಬೆಳೆಸುವ ಗುರಿಯೊಂದಿಗೆ ಕೆಪಿಸಿಸಿ ಅಧ್ಯಕ್ಷ ರಮೇಶ ಚೆನ್ನಿತ್ತಲರ ನಾಯಕತ್ವ ದಲ್ಲಿ ಜಿಲ್ಲಾದ್ಯಂತ ಸಾಗುವ ಸ್ನೇಹ ಸಂದೇಶ ಯಾತ್ರೆಗೆ ಹೊಸಂ ಗಡಿಯಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ರಾಜಕೀಯ ಪಕ್ಷಗಳು ವಿಬಿನ್ನ ತತ್ವ ಸಿದ್ಧಾಂತಗಳನ್ನು ಹೊಂದಿರಬಹುದು, ವಿಭಿನ್ನ ನಿಲುವುಗಳನ್ನೂ ಹೊಂದಿರ ಬಹುದು. ಆದರೆ ತಮ್ಮ ರಾಜಕೀಯ ಲಾಭಕ್ಕಾಗಿ ಇತರ ರಾಜಕೀಯ ಪಕ್ಷವನ್ನು ಧಮನಿಸುವ ಮನೋಭಾವನೆ ಅಷ್ಟ್ಟೊಂದು ಸಮಂಜಸವಲ್ಲ. ಅದನ್ನು ಎಲ್ಲಾ ರಾಜಕೀಯ ಪಕ್ಷಗಳು ಅರಿತು ಕಾರ್ಯವೆಸಗಬೇಕೆಂದು ಅವರು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಪಕ್ಷ ಯಾವತ್ತೂ ದೇಶದಲ್ಲಿ ಸೌಹಾರ್ದವನ್ನು ಕಾಪಾಡುವಲ್ಲಿ ಮುಂಚೂಣಿಯಲ್ಲಿ ನಿಂತಿದೆ ಎಂದ ಅವರು, ಈ ಯಾತ್ರೆ ರಾಜ್ಯದಲ್ಲಿ ಶಾಂತಿ- ಸೌಹಾರ್ದವನ್ನು ಬೆಸೆಯಲಿ ಎಂದು ಹಾರೈಸಿದರು.
ಜಾಥಾ ನಾಯಕ ರಮೇಶ ಚೆನ್ನಿತ್ತಲ ಮಾತನಾಡಿ, ಇದೊಂದು ಐತಿಹಾಸಿಕ ಮುಹೂರ್ತ. ಜಿಲ್ಲೆಯ ಜನತೆ ಯಾವತ್ತೂ ಸೌಹಾರ್ದತೆಗೆ ಧಕ್ಕೆ ಬರವುದನ್ನು ಇಷ್ಟ ಪಡುವುದಿಲ್ಲ. ಈ ಯಾತ್ರೆಯಿಂದ ಜಿಲ್ಲೆಯಲ್ಲಿ ಪದೇ ಪದೇ ನಡೆಯುತ್ತಿರುವ ಅಹಿತಕರ ಘಟನೆಗಳು ಅಂತ್ಯ ಕಾಣುವಂತಾಗಬೇಕು ಎಂದರು. ಅಕ್ರಮ ರಾಜಕೀಯ ಹಾಗೂ ಕೊಲೆ ರಾಜಕೀಯದ ವಿರುದ್ಧ ಇದೇ ತಿಂಗಳ ೧೭ರಂದು ವಡಗರದಲ್ಲಿ ಒಂದು ದಿನದ ಉಪವಾಸ ನಿರಶನ ನಡೆಸಲಾಗುವುದು ಎಂದು ಅವರು ಘೋಷಿಸಿದರು. ಈ ಯಾತ್ರೆಯು ಜಿಲ್ಲಾದ್ಯಂತ ಸಂಚರಿಸಿ ಮೇ ೧೪ರಂದು ತೃಕ್ಕರಿಪುರದಲ್ಲಿ ಸಮಾಪನೆಗೊಳ್ಳಲಿದೆ.
ಗಲಭೆ ಪೀಡಿತ ಪ್ರದೇಶಗಳಲ್ಲಿ ಚೆನ್ನಿತ್ತಲರ ಸ್ನೇಹ ಸಂದೇಶ ಯಾತ್ರೆ
ಗಲಭೆ ಪೀಡಿತ ಪ್ರದೇಶಗಳಲ್ಲಿ ಸ್ನೇಹ ಸಂದೇಶ ದೂತರಾಗಿ ಕೆಪಿಸಿಸಿ ಅಧ್ಯಕ್ಷ ರಮೇಶ ಚೆನ್ನಿತ್ತಲರವರ ನೇತೃತ್ವದ ಜಾತ ಉಪ್ಪಳದಿಂದ ನಿನ್ನೆ ಆರಂಭಗೊಂಡಿತು. ಯಾತ್ರೆಯನ್ನು ರಸ್ತೆಯ ಇಕ್ಕಡೆಗಳಲ್ಲಿ ಸೇರಿದ ಬೃಹತ್ ಜನಸ್ತೋಮ ಸಂಭ್ರ್ರಮದಿಂದ ಸ್ವಾಗತಿ ಸಿತು. ಆಗಾಗ ಜಿಲ್ಲೆಯಲ್ಲಿ ಹಿಂಸೆ ಮರುಕಳಿಸುತ್ತಿದ್ದು ಇವೆಲ್ಲವಕ್ಕೆ ಏನು ತಿಳಿಯದ ಮುಗ್ದ ಯುವಕರನ್ನು ಇದಕ್ಕೆ ಬಳಸ ಲಾಗುತ್ತಿದೆ. ಜನರ ಮಧ್ಯೆ ದ್ವೇಷದ ಬೀಜ ಬಿತ್ತಲಾಗುತಿದ್ದು ಇವೆಲ್ಲವಕ್ಕೆ ಇನ್ನು ಆಸ್ಪದ ನೀಡಬಾರದು. ಇವೆಲ್ಲವನ್ನು ಒಗ್ಗಟ್ಟಿನಿಂದ ಎದುರಿಸಿ ಜಿಲ್ಲೆಯಲ್ಲಿ ಶಾಂತಿ ಸಮಾಧಾನ ನೆಲೆಸುವಂತೆ ಮಾಡಲು ಅವರು ಈ ಸಂದರ್ಭದಲ್ಲಿ ಆಹ್ವಾನವಿತ್ತರು. ಈ ಸಂದರ್ಭದಲ್ಲಿ ಸಂಸದ ಶಾನ್ವಾಸ, ಸಚಿವೆ ಕುಮಾರಿ ಪಿ ಕೆ ಜಯಲಕ್ಷ್ಮಿ ಸಹಿತ ಪಕ್ಷದ ಹಲವಾರು ಮುಖಂಡರು, ಪಕ್ಷದ ನೂರಾರು ಕಾರ್ಯಕರ್ತರು ಜತೆಗಿದ್ದರು.
Tagged with
feature,
kasaragod,
lnews
ಅನಿರುದ್ಧ-ಮೊರ್ಕೆಲ್ ಕೆಚ್ಚೆದೆಯ ಆಟ
ಜೈಪುರ್: ಅಂತಿಮ ಹಂತದಲ್ಲಿ ತಂಡ ಕಠಿಣ ಪರಿಸ್ಥಿತಿಯಲ್ಲಿರುವಾಗ ಶ್ರೀಕಾಂತ್ ಅನಿರುದ್ದ ಹಾಗೂ ಆಲ್ಬಿ ಮೊರ್ಕೆಲ್ ಪ್ರದರ್ಶಿಸಿದ ಸ್ಪೋಟಕ ಆಟದ ನೆರವಿನಿಂದ ಇಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಜಯದೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.
ಆರಂಭದಲ್ಲಿ ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭಗೊಂಡಿತು. ಆದರೆ ನಂತರ ಕೂಡ ವರುಣನ ಉಪಟಲ ಮುಂದುವರೆದಿತ್ತಾದರೂ ಪಂದ್ಯ ನಡೆಯಲು ಅನುವು ಮಾಡಿತು. ಟಾಸ್ ಸೋತು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ನಿಗದಿತ ೨೦ ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ೧೨೬ ರನ್ ಗಳಿಸಲಷ್ಟೇ ಶಕ್ತವಾಯಿತು. ರಾಹುಲ್ ದ್ರಾವಿಡ್ (೪) ಹಾಗೂ ಅಜಿಂಕ್ಯಾ ರಹಾಣೆ (೧೭) ಜೋಡಿ ವಿಫಲಗೊಂಡರೆ ನಂತರ ಬಂದ ಶೇನ್ ವಾಟ್ಸನ್ (೫) ಬ್ಯಾಟ್‌ನಿಂದ ರನ್ ಹರಿದುಬರಲಿಲ್ಲ. ಆದರೆ ಸ್ಟುವರ್ಟ್ ಬಿನ್ನಿ (೨೭) ಹಾಗೂ ಬ್ರಾಡ್ ಹಾಡ್ಜ್ (೨೮) ಕೆಲಹೊತ್ತು ಕ್ರೀಸ್‌ನಲ್ಲಿದ್ದ ಪರಿಣಾಮ ತಂಡದ ಮೊತ್ತ ೧೨೬ರ ವರೆಗೆ ಸಾಗಿತು. ರಾಯಲ್ಸ್ ವಿರುದ್ಧ ಮಾರಕ ದಾಳಿ ನಡೆಸಿದ ಬೆನ್ ಹಿಲ್ಫೆನಾಸ್ ನಾಲ್ಕು ಓವರ್‌ಗಳಲ್ಲಿ ಒಂದು ಮೇಡನ್ ಸಹಿತ ಎರಡು ವಿಕೆಟ್ ಪಡೆದರು. ಯೋ ಮಹೇಶ್ ಕೂಡ ಎರಡು ವಿಕೆಟ್ ಕಬಳಿಸಿದರು.
ಗುರಿ ಬೆನ್ನತ್ತಿದ್ದ ಚೆನ್ನೈ ಇನ್ನೂ ಹನ್ನೊಂದು ಎಸೆತ ಬಾಕಿ ಉಳಿದಿರುವಂತೆ ಆರು ವಿಕೆಟ್ ನಷ್ಟಕ್ಕೆ ೧೨೭ ರನ್ ಗಳಿಸಿ ಜಯದಾಖಲಿಸಿತು. ಒಂದು ಹಂತದಲ್ಲಿ ಸಿದ್ದಾರ್ಥ್ ತ್ರಿವೇದಿ ಹಾಗೂ ಪಂಕಜ್ ಸಿಂಗ್ ಮಾರಕ ಬೌಲಿಂಗ್‌ಗೆ ಸಿಲುಕಿ ಚೆನ್ನೈ ಸಂಕಷ್ಟದಲ್ಲಿರುವಾಗ ಅನಿರುದ್ದ (೧೮) ಹಾಗೂ ಮೊರ್ಕೆಲ್ (೧೮) ಜೋಡಿ ಏಳನೇ ವಿಕೆಟ್‌ಗೆ ಮುರಿಯದ ೧.೫ ಓವರ್‌ಗಳಲ್ಲಿ ಅಜೇಯ ೪೩ ರನ್‌ಗಳು ನಡೆಸಿದ ಜೊತೆಯಾಟವು ಪ್ರಮುಖವಾಯಿತು. ಚೆನ್ನೈಗೆ ಅಂತಿಮ ಮೂರು ಓವರ್‌ಗಳಲ್ಲಿ ೩೦ ರನ್‌ಗಳ ಅಗತ್ಯವಿತ್ತು. ಈ ವೇಳೆ ವಾಟ್ಸನ್‌ರ ಇನ್ನಿಂಗ್ಸ್‌ನ ೧೮ನೇ ಓವರ್‌ನಲ್ಲಿ ಈ ಜೋಡಿ ೧೮ ರನ್ ಸ್ಫೋಟಿಸುವ ಮೂಲಕ ಜಯದಾಖಲಿಸಲು ಸುಲಭವಾಯಿತು. ಇಬ್ಬರೂ ತಲಾ ಆರು ಎಸೆತಗಳಲ್ಲಿ ಎರಡು ಸಿಕ್ಸ್ ಹಾಗೂ ಒಂದು ಬೌಂಡರಿ ಸಿಡಿಸಿದ್ದರು. ಚೆನ್ನೈನ ಆರಂಭಿಕ ಹಂತ ವಿಫಲವಾಯಿತು. ಮುರಳಿ (೦) ಮತ್ತೆ ವೈಫಲ್ಯ ಕಂಡರೆ ಹಸ್ಸಿ (೧೯) ಹಾಗೂ ರೈನಾ (೨೩) ಕೆಲಹೊತ್ತು ಕ್ರೀಸ್‌ನಲ್ಲಿದ್ದರು. ಈ ಜೋಡಿ ಎರಡನೇ ವಿಕೆಟ್‌ಗೆ ಐದು ಓವರ್‌ಗಳಲ್ಲಿ ೩೫ ರನ್‌ಗಳ ಜೊತೆಯಾಟ ನಡೆಸಿದರು. ಧೋನಿ ಹಾಗೂ ಜಡೇಜಾ ಕೂಡ ತಂಡದ ನೆರವಿಗೆ ಬರಲಿಲ್ಲ. ಸಿದ್ದಾರ್ಥ್ ಹಾಗೂ ತ್ರಿವೇದಿ ತಲಾ ಎರಡು ವಿಕೆಟ್ ಪಡೆದರು.
Tagged with
tnews
ಡೆಕ್ಕನ್ ವಿರುದ್ಧದ ‘ವಾರ್ ಗೆದ್ದ ಶತಕವೀರ ವಾರ್ನರ್
ಹೈದರಾಬಾದ್: ಕೆವಿನ್ ಪೀಟರ್ಸನ್ ಬದಲಿ ಆಟಗಾರನಾಗಿ ಡೆಲ್ಲಿ ತಂಡವನ್ನು ಸೇರಿಕೊಂಡಿದ್ದ ಡೇವಿಡ್ ವಾರ್ನರ್ ನಿನ್ನೆ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಡೆಕ್ಕನ್ ಒಡ್ಡಿದ ಬೃಹತ್ ಮೊತ್ತವನ್ನು ವೀರೂ ಪಡೆ ಒಂಬತ್ತು ವಿಕೆಟ್‌ಗಳಿಂದ ಗೆದ್ದು ಕೊಂಡಿದೆ. ಜಯದ ಮೂಲಕ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಡೆಕ್ಕನ್ ಪರ ಶಿಖರ್ ಧವನ್ ಹಾಗೂ ಕ್ಯಾಮರೊನ್ ವೈಟ್ ಪ್ರದರ್ಶಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ತಂಡ ನಿಗದಿತ ೨೦ ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೧೮೭ ರನ್‌ಗಳ ಉತ್ತಮ ಮೊತ್ತವನ್ನು ಪೇರಿಸಿತು. ಧವನ್ ಕೇವಲ ೪೯ ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಐದು ಸಿಕ್ಸ್ ನೆರವಿನಿಂದ ೮೭ ರನ್ ಸಿಡಿಸಿ ಅರ್ಹ ಶತಕದಿಂದ ವಂಚಿ ತರಾದರು. ವೈಟ್ ಕೂಡ ಸ್ಫೋಟಕ ಆಟ ನೀಡಿದರು. ಈ ಜೋಡಿ ಮೂರನೇ ವಿಕೆಟ್‌ಗೆ ೧೧.೪ ಓವರ್‌ಗಳಲ್ಲಿ ೧೨೬ ರನ್‌ಗಳ ಜೊತೆಯಾಟ ನಡೆಸಿದ ಪರಿಣಾಮ ತಂಡ ಉತ್ತಮ ಮೊತ್ತ ಪೇರಿಸುವಂತಾಯಿತು. ಸ್ಫೋಟಕ ಡೆಲ್ಲಿ ಪರ ಆರೋನ್ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಡೆಲ್ಲಿ ಇನ್ನೂ ೨೦ ಎಸೆತ ಬಾಕಿ ಉಳಿದಿರುವಂತೆ ಕೇವಲ ಒಂದು ವಿಕೆಟ್ ನಷ್ಟಕ್ಕೆ ೧೯೩ ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ಉತ್ತಮ ಫಾರ್ಮ್‌ನಲ್ಲಿರುವ ನಾಯಕ ವೀರೇಂದ್ರ ಸೆಹ್ವಾಗ್ (೪) ತನ್ನ ವಿಕೆಟ್ ಅಗ್ಗವಾಗಿ ಕಳಕೊಂಡಾಗ ತಂಡಕ್ಕೆ ಆರಂಭದಲ್ಲೇ ಆಘಾತ. ಆದರೆ ತಂಡ ಭರ್ಜರಿ ಜಯತಂದುಕೊಡುವಲ್ಲಿ ಮುಖ್ಯಪಾತ್ರ ವಹಿಸಿದವರು ಡೇವಿಡ್ ವಾರ್ನರ್. ವಾರ್ನರ್ ಕೇವಲ ೫೪ ಎಸೆತಗಳಲ್ಲಿ ಹತ್ತು ಬೌಂಡರಿ ಹಾಗೂ ಏಳು ಸಿಕ್ಸ್ ನೆರವಿನಿಂದ ಬರೊಬ್ಬರಿ ಅಜೇಯ ೧೦೯ ರನ್‌ಗಳನ್ನು ಪೇರಿಸಿ ದರು. ವಾರ್ನರ್‌ಗೆ ಇನ್ನೊಂದು ಬದಿ ಯಲ್ಲಿ ಸಮರ್ಥ ಸಾಥ್ ನೀಡಿದವರು. ನಮನ್ ಓಜಾ. ಈ ಜೋಡಿ ದ್ವಿತೀಯ ವಿಕೆಟ್‌ಗೆ ೧೬.೨ ಓವರ್‌ಗಳಲ್ಲಿ ಮುರಿಯದ ೧೮೯ ರನ್‌ಗಳ ಜೊತೆಯಾಟ ನಡೆಸಿತು. ಅದರಲ್ಲೂ ವಾರ್ನರ್ ಅಬ್ಬರದ ಮುಂದೆ ಡೆಕ್ಕನ್ ಬೌಲರ್‌ಗಳು ಕಂಗಾಲಾದರು. ಪ್ರತಿಯೊಂದು ಓವರ್‌ನಲ್ಲೂ ಬೌಂಡರಿ-ಸಿಕ್ಸರ್ ಮಳೆಗೆರೆದ ವಾರ್ನರ್-ಓಜಾ ಜೋಡಿ ತಂಡವನ್ನು ಮತ್ತೆ ಅಗ್ರಸ್ಥಾನಕ್ಕೆ ಕೊಂಡುಹೋದರು.
Tagged with
tnews
ಕೊಲ್ಕತ್ತಾ: ಈ ಬಾರಿಯ ಐಪಿಎಲ್ ಟೂರ್ನಿಯನ್ನು ಗೌತಮ್ ಗಂಭೀರ್ ನಾಯಕತ್ವದ ಕೊಲ್ಕತ್ತಾ ನೈಟ್‌ರೈಡರ್ ಗೆದ್ದುಕೊಳ್ಳಲಿದೆ ಎಂದು ಡೆಕ್ಕನ್ ಚಾರ್ಜರ‍್ಸ್ ನಾಯಕ ಕುಮಾರ ಸಂಗಾಕ್ಕರ ಭವಿಷ್ಯ ನುಡಿದಿದ್ದಾರೆ. ಡೆಕ್ಕನ್ ಚಾರ್ಜರ‍್ಸ್ ಈ ಬಾರಿಯ ಕೂಟ ದಲ್ಲಿ ನೀರಸ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ. ಆದರೆ ಗಂಭೀರ್ ನಾಯಕತ್ವದ ಬಗ್ಗೆ ಸಂಗಾಕ್ಕರ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯದ ಫಾರ್ಮ್ ಬಗ್ಗೆ ಗಮನ ಹರಿಸಿದರೆ ಕೊಲ್ಕತ್ತಾ ನೈಟ್‌ರೈಡರ್ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಚೆನ್ನೈ ಹಾಗೂ ಡೆಲ್ಲಿ ತಂಡಗಳು ಉತ್ತಮವಾಗಿದೆಯಾ ದರೂ ಧೋನಿ ಪಡೆಯ ಸರಿಯಾದ ಸಮಯದಲ್ಲ ಪ್ರದರ್ಶನ ಕಾಯ್ದುಕೊಳ್ಳ ದಿರುವುದು ಅದಕ್ಕೆ ಮುಳುವಾಗ ಬಹುದು. ಕೊಲ್ಕತ್ತಾ ನೀಡುತ್ತಿರುವ ಅದ್ಭುತ ಫಾರ್ಮ್‌ನ ಕ್ರೆಡಿಟ್ ಅನ್ನು ನಾಯಕ ಗಂಭೀರ್‌ಗೆ ನೀಡಬೇಕಿದೆ. ಆತ ಇಡೀ ತಂಡವನ್ನು ಹೊಂದಾಣಿಕೆ ಮಾಡಿಕೊಂಡು ಬರುತ್ತಿರುವುದೇ ಇದಕ್ಕೆ ಕಾರಣ ಎಂದು ಸಂಗಾಕ್ಕರ ಐಪಿಎಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.
Tagged with
tnews
ಮ್ಯಾಡ್ರಿಡ್ ಓಪನ್: ಕ್ವಾರ್ಟರ‍್ಸ್
ಮ್ಯಾಡ್ರಿಡ್: ಇಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಮ್ಯಾಡ್ರಿಡ್ ಓಪನ್‌ನ ಡಬಲ್ಸ್ ವಿಭಾಗದಲ್ಲಿ ಭಾರತೀಯ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಹೇಶ್ ಭೂಪತಿ ಹಾಗೂ ರೋಹಣ್ ಬೋಪಣ್ಣ ಜೋಡಿ ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸುವ ಮೂಲಕ ಪ್ರಶಸ್ತಿಯ ನಿರೀಕ್ಸೆ ಮೂಡಿ ಸಿದ್ದಾರೆ. ಎದುರಾಳಿ ಮೆಕ್ಸಿಕನ್-ಜರ್ಮನ್ ಜೋಡಿಯಾದ ಸ್ಯಾಂಟಿಗೊ ಗೊಂನ್ಝಾಲೆಸ್ ಹಾಗೂ ಕ್ರಿಸ್ಟೊಫರ್ ಕಾಸ್ ವಿರುದ್ಧ ೬-೧ ಹಾಗೂ ೭-೨ (೨)ರ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತೀಯ ಜೋಡಿ ಶ್ರೇಷ್ಠ ಸಾಧನೆ ಮೆರೆಯಿತು. ಒಂದು ಘಂಟೆ ಹಾಗೂ ಮೂರು ನಿಮಿಷಗಳ ಕಾಲ ನಡೆದ ಪಂದ್ಯದ ಮೊದಲ ಅವಧಿಯಲ್ಲಿ ಭಾರತೀಯರಿಗೆ ಲಭಿಸಿದ ಎರಡು ಬ್ರೇಕ್ ಪಾಯಿಂಟ್‌ಗಳನ್ನು ಪರಿವರ್ತಿಸಲು ಸಫಲರಾದರು.
Tagged with
tnews
ಕರಾಚಿ: ನಿನ್ನೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮಹತ್ತರವಾದ ನಿರ್ಧಾರವನ್ನು ಪ್ರಕಟಿಸಿದೆ. ಟಿ-ಟ್ವೆಂಟಿಯ ಅಂತಾರಾಷ್ಟ್ರೀಯ ಪಂದ್ಯಗಳಿಗೆ ತಂಡದ ನೂತನ ನಾಯಕನನ್ನಾಗಿ ಮೊಹ್ಮದ್ ಹಫೀಸ್ ಆಯ್ಕೆಗೊಂಡಿದ್ದಾರೆ. ಆದರೆ ಪಿಸಿಬಿಯ ಈ ನಿರ್ಧಾರಕ್ಕೆ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಏಕದಿನ ಹಾಗೂ ಟೆಸ್ಟ್‌ನಲ್ಲಿ ಮಿಸ್ಬಾ ತಂಡವನ್ನು ಮುನ್ನಡೆಸಲಿದ್ದಾರೆ.
ಟಿ-ಟ್ವೆಂಟಿಯ ಬಗ್ಗೆ ತೆಗೆದುಕೊಂಡಿರುವ ನಿರ್ಧಾರವು ಬೋರ್ಡ್ ಹಾಗೂ ಆಯ್ಕೆಗಾರರದ್ದಾಗಿರಬಹುದು. ಆದರೆ ನಾನು ಸ್ಥಳೀಯ ಟಿ-ಟ್ವೆಂಟಿಯಲ್ಲಿ ಆಡುವುದನ್ನು ಮುಂದುವರೆಸುತ್ತೇನೆ. ನನ್ನ ಅಗತ್ಯ ಆಯ್ಕೆಗಾರರಿಗೆ ಯಾವಾಗ ಮನದಟ್ಟಾಗುತ್ತೋ ಆಗ ತಂಡದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ. ಏಕದಿನ ಹಾಗೂ ಟೆಸ್ಟ್ ನಾಯಕತ್ವವು ಒತ್ತಡದಿಂದ ಕೂಡಿದ್ದು, ನಾನು ಅಲ್ಲಿ ಗಮನ ಹರಿಸುವುದನ್ನು ಮುಂದುವರೆಸುತ್ತೇನೆ ಎಂದು ಮಿಸ್ಬಾ ತಿಳಿಸಿದರು. ಏಕದಿನ ಹಾಗೂ ಟೆಸ್ಟ್‌ನಲ್ಲಿ ಮಿಸ್ಬಾ ನಾಯಕನಾಗಿ ಮುಂದುವರೆಯಲಿದ್ದಾರೆ.
Tagged with
tnews
ಪಡುಬಿದ್ರೆ: ಉಡುಪಿ ಸಮೀಪದ ನಿಟ್ಟೂರು ಹನುಮಂತನಗರ ಸರಕಾರಿ ಪ್ರೌಢ ಶಾಲೆಯ ಸಮೀಪ ರಾ. ಹೆ. ೬೬ರಲ್ಲಿ ಎರಡು ಲಾರಿ ಹಾಗೂ ವೇಗ ಧೂತ ಬಸ್‌ಗಳ ಮಧ್ಯೆ ನಡೆದ ಮುಖಾಮುಖಿಯಲ್ಲಿ ಲಾರಿ ಚಾಲಕನ ಸಹಿತ ಐವರು ಗಂಭೀರ ಗಾಯ ಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ.ಗುರುವಾರ ಬೆಳಿಗ್ಗೆ ೭-೩೦ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಲಾರಿ, ಸಮೀಪದ ಮನೆಯೊಂದರ ಅಂಗಣಕ್ಕೆ ನುಗ್ಗಿದೆ. ಆದರೆ ಇದರಿಂದ ಯಾವುದೇ ಹಾನಿಯಾಗಿಲ್ಲ. ಕುಂದಾಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ವೇಗಧೂತ ಬಸ್ ದುರ್ಗಾಪ್ರಸಾದ್‌ಗೆ ಹಿಂಬದಿಯಿಂದ ಬಂದ ಮಹಾರಾಷ್ಟ್ರ ಮೂಲದ ಲಾರಿ ಡಿಕ್ಕಿ ಹೊಡೆಯಿತು. ಇದೇ ವೇಳೆ ಉಡುಪಿ ಕಡೆಯಿಂದ ಬಂದ ತಮಿಳುನಾಡು ಮೂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದು ಲಾರಿ ಪಕ್ಕದ ಮನೆಯ ಆಂಗಣಕ್ಕೆ ಜಾರಿ ತುಳಸಿಕಟ್ಟೆಗೆ ತಾಗಿ ನಿಂತಿದೆ.
ಲಾರಿ ಚಾಲಕ ಸೇರಿ ಐವರು ತೀವ್ರ ಗಾಯಗೊಂಡಿದ್ದು, ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Tagged with
cnews
ಮಲಹೊರುವ ಪದ್ಧತಿ ಪ್ರಕರಣ
ಕಾರ್ಕಳ: ಮಲಹೊರುವ ಪದ್ಧತಿ ಅನುಷ್ಠಾನದಲ್ಲಿಟ್ಟ ಪುರಸಭೆಯ ಕರ್ಮಕಾಂಡವನ್ನು ಜಯಕಿರಣ ಪತ್ರಿಕೆ ಬಯಲಿಗೆಳೆದ ಒಂದು ವಾರದ ಬಳಿಕ ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು ದಲಿತ ಯುವಕ ಸೇರಿದಂತೆ ಕಚೇರಿಯ ಸಿಬ್ಬಂದಿ ವಿರುದ್ಧ ದೂರು ಸಲ್ಲಿಸಿರುವ ಅಂಶ ಬೆಳಕಿಗೆ ಬಂದಿದೆ. ಅದರನ್ವಯ ಆರೋಪಿಗಳಿಬ್ಬರ ವಿರುದ್ಧ ಕೇಸು ದಾಖಲಾಗಿದೆ.
ಆರೋಗ್ಯಾಧಿಕಾರಿ ಸುಂದರ ಪೂಜಾರಿ, ದಲಿತ ದಿನಕೂಲಿ ನೌಕರ ವಿನಯ ಎಂಬವರನ್ನು ಪ್ರಕರಣದ ಆರೋಪಿಗಳೆಂದು ಹೆಸರಿಸಲಾಗಿರುವು ದರಿಂದ ಅವರಿಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಆ ಸಂದರ್ಭ ಘಟನಾಸ್ಥಳದಲ್ಲಿ ಸುಂದರ ಪೂಜಾರಿ ಅವರು ಉಪಸ್ಥಿತರಿರ ಲಿಲ್ಲದಿದ್ದರೂ ಅವರ ವಿರುದ್ಧ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ದೂರು ನೀಡಿರುವ ಹಿನ್ನೆಲೆಯಾದರೂ ಏನೆಂಬುದು ಇಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ ವಿನಯ ತ್ಯಾಜ್ಯ ಸಾಗಾಟ ವಾಹನದ ಚಾಲಕನಾಗಿದ್ದಾನೆ. ಆತನನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದರಿಂದ ಪುರಸಭೆಯಲ್ಲಿ ದಲಿತ ದೌರ್ಜನ್ಯ ನಡೆಯುವುದಿಲ್ಲ ಎಂಬುವುದನ್ನು ಮತ್ತೊಮ್ಮೆ ಸಾಬೀತು ಪಡಿಸಲು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಪ್ರಯತ್ನಿಸುತ್ತಿರುವುದು ಇಲ್ಲಿ ಕಂಡುಬರುತ್ತಿದೆ. ಪುರಸಭೆಯ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದ ಮೊದಲ ದಲಿತ ಮಹಿಳೆ ಪ್ರತಿಮಾ ಮೋಹನ್ ರಾಣೆಯ ಅಧಿಕಾರವಧಿಯಲ್ಲಿಯೇ ದಲಿತದೌರ್ಜನ್ಯ ನಡೆಯುತ್ತಿರುವುದು ಇದು ಪ್ರಥಮ ಬಾರಿಯಾಗಿದೆ. ಮಾತ್ರವಲ್ಲದೇ ಅಧ್ಯಕ್ಷರ ವಾರ್ಡ್‌ಗೆ ಒಳಪಟ್ಟ ದಲಿತ ಯುವಕನನ್ನೇ ಪ್ರಕರಣದಲ್ಲಿ ಸಿಲುಕಿಸಿ ಪೊಲೀಸ್ ಠಾಣೆಗೆ ದೂರು ನೀಡುತ್ತಿರುವುದು ಕೂಡಾ ಪ್ರಥಮ ಬಾರಿಯಾಗಿರುವುದು ಗಮನಾರ್ಹವಾಗಿದೆ.
ಮಲಹೊರುವ ಪದ್ಧತಿ ಕಾರ್ಕಳ ಪುರಸಭೆಯಲ್ಲಿ ಇನ್ನೂ ಜೀವಂತ ಇರುವುದನ್ನು ಜಯಕಿರಣ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿದ ಬೆನ್ನಲ್ಲೇ ಮಂಗಳೂರಿನಲ್ಲಿರುವ ನಾಗರಿಕರ ಹಕ್ಕು ಜಾರಿ ನಿರ್ದೇಶನಾಲಯದಿಂದ ಕಾರಣ ಕೇಳಿ ಪುರಸಭೆಗೆ ನೋಟಿಸ್ ಜಾರಿಗೊಳಿಸಿದೆ. ಈ ನಡುವೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರೀಕ್ಷಣಾ ಜಾಮೀನು ಪಡೆದಿರುವ ಮಾಹಿತಿ ಗುಟ್ಟಾಗಿ ಉಳಿದಿಲ್ಲ. ಇದರ ಬೆನ್ನಲ್ಲೇ ನಿನ್ನೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು ಕಚೇರಿಯ ಇಬ್ಬರು ಸಿಬ್ಬಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿ ಕೈತೊಳೆದುಕೊಂಡಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಕಾರಣ ಕೇಳಿ ಪುರಸಭೆಗೆ ನೋಟಿಸ್ ಜಾರಿಗೊಳಿಸಿರುವ ನಡುವೆ ಮಂಗಳವಾರ ತಡ ರಾತ್ರಿ ವೇಳೆಗೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯ ಉಪಸ್ಥಿತಿಯಲ್ಲಿ ಐವರು ಪೌರ ಕಾರ್ಮಿಕರನ್ನು ಅದೇ ಮ್ಯಾನ್‌ಹೋಲ್‌ಗೆ ಇಳಿಸಿ ತ್ಯಾಜ್ಯ ವಸ್ತುವನ್ನು(ಮಲ,ಮೂತ್ರ ಸಹಿತ) ಮೇಲಕ್ಕೇತ್ತಿರುವ ಘಟನೆ ನಡೆದಿತ್ತು. ಇದರ ಬಗ್ಗೆ ನಿನ್ನೆ ಜಯಕಿರಣ ಸವಿಸ್ತಾರವಾದ ವರದಿ ಪ್ರಕಟಿಸಿತ್ತು.
ಮಲಹೊತ್ತ ಪೌರಕಾರ್ಮಿಕರಿಂದ ಬಲವಂತದ ಹೇಳಿಕೆಯೊಂದನ್ನು ನೀಡುವಂತೆ ಪ್ರಚೋದಿಸಿದ ಪರಿಣಾಮವಾಗಿ ಸ್ವಇಚ್ಛೆಯಂತೆ ನಾವಾಗಿಯೇ ಮ್ಯಾನ್‌ಹೋಲ್‌ಗೆ ಇಳಿದಿದ್ದೇವೆಂದು ಬರೆಸಿಕೊಳ್ಳಲಾಗಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ ಇಚ್ಛೆಯಿಂದ ಪೌರಕಾರ್ಮಿಕರು ಮ್ಯಾನ್‌ಹೋಲ್‌ಗೆ ಇಳಿದರಾದರೂ ಅವರ ಕೈಗೆ ಹೊಸತಾದ ಕಬ್ಬಿಣದ ಬಕೇಟ್ ಮತ್ತು ಸಿಮೆಂಟ್ ಕತ್ತಿ ಎಲ್ಲಿಂದ ಬಂತು. ಅದಕ್ಕೆ ಅವರಿಗೆ ಹಣ ನೀಡಿದವರು ಯಾರೆಂಬುದರ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಈ ನಡುವೆ ಪ್ರಕರಣದಿಂದ ಪಾರಾಗುವ ಭರದಲ್ಲಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು ಕೂಡಾ ಇಲ್ಲಿ ಹರಕೆಗೆ ಕುರಿ ಮಾಡಿರುವುದು ವಿಶೇಷ ಏನಿಲ್ಲ. ಆದರೆ ತನಿಖೆ ಮಾತ್ರ ಸರಿಯಾದ ಮಾರ್ಗದಲ್ಲಿ ನಡೆಯಬೇಕೆಂಬುವುದು ಪತ್ರಿಕೆಯ ಅಶಯವಾಗಿದೆ.
Tagged with
cnews
ಆಡಳಿತ ಮಂಡಳಿ-ಸಿಬ್ಬಂದಿ ಸಂಘರ್ಷ
ಸುಳ್ಯ: ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯ ವಿರೋಧಿಸಿದ ಇಲ್ಲಿನ ಸಹಕಾರಿ ಬ್ಯಾಂಕ್‌ವೊಂದರ ಸಿಬ್ಬಂದಿ ಬ್ಯಾಂಕಿಗೆ ಬೀಗ ಜಡಿದು ತೆರಳಿದ್ದು, ಐದು ದಿನಗಳಿಂದ ಬ್ಯಾಂಕಿನ ವಹಿವಾಟು ಸ್ಥಗಿತವಾಗಿದೆ.
ಅಮ್ಮನ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನ ಆಡಳಿತ ಮಂಡಳಿ ಸಭೆ ಮೇ ೫ರಂದು ನಡೆದಿದ್ದು, ಇಲ್ಲಿ ಕೈಗೊಳ್ಳಲಾದ ನಿರ್ಣಯವನ್ನು ಸಿಬ್ಬಂದಿ ಕಣ್ಣದಾಸ್ ಎಂಬವರು ವಿರೋಧಿಸಿದ್ದರು. ಅಂದು ಸಂಜೆ ಬ್ಯಾಂಕಿಗೆ ಬೀಗ ಹಾಕಿ ಹೋದವರು ಮತ್ತೆ ಬ್ಯಾಂಕಿಗೆ ಬರಲಿಲ್ಲ. ಬೀಗದ ಕೀಲಿ ಕೈ ಅವರಲ್ಲೇ ಇರುವುದರಿಂದ ಕಳೆದ ಐದು ದಿನಗಳಿಂದ ಬ್ಯಾಂಕಿನ ವಹಿವಾಟು ಸ್ಥಗಿತವಾಗಿದೆ. ಈ ಸಂಬಂಧ ಗುರು ವಾರ ಬ್ಯಾಂಕಿನ ಪ್ರಬಂಧಕರು ಪೊಲೀಸರಿಗೆ ದೂರು ನೀಡಿದ್ದಾರೆ.
Tagged with
cnews
ಅಧಿಕಾರಿಗಳ ಬೇಜವಾಬ್ದಾರಿತನ ಆರೋಪ
ವಿಟ್ಲ: ಅರಣ್ಯ ಪ್ರದೇಶಕ್ಕೆ ಗುರುವಾರ ಬೆಂಕಿ ತಗುಲಿದ ಪರಿಣಾಮ ಮರಗಳು ಸಂಪೂರ್ಣವಾಗಿ ನಾಶವಾದ ಘಟನೆ ಕರೋಪ್ಪಾಡಿ ಗ್ರಾಮದ ಗೋರಗುರಿ ಎಂಬಲ್ಲಿ ಗುರುವಾರ ನಡೆದಿದೆ.
ಕರೋಪ್ಪಾಡಿ ಗ್ರಾಮದ ಗೋರಗುರಿ ಎಂಬ ಪ್ರದೇಶದ ಅರಣ್ಯಕ್ಕೆ ಬುಧ ವಾರ ಬೆಳಿಗ್ಗೆ ೧೧.೩೦ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿತು. ವಿಷಯ ತಿಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಅವರು ಸಂಜೆವರೆಗೂ ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದ್ದರು.
ಇದರಿಂದ ಆತಂಕಕ್ಕೀಡಾದ ಸ್ಥಳೀಯರು ಸಂಜೆ ಹೊತ್ತಿಗೆ ಬಂಟ್ವಾಳ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು. ಅವರು ಬಂದು ಬೆಂಕಿಯನ್ನು ನಂದಿಸಿ ದ್ದರೂ ಮರಗಿಡಗಳು ಸಂಪೂರ್ಣವಾಗಿ ನಾಶವಾಗಿದೆ. ಅಗ್ನಿಶಾಮಕ ದಳ ಗುರುವಾರ ರಾತ್ರಿವರೆಗೂ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಈ ಅರಣ್ಯಕ್ಕೆ ಇದೇ ರೀತಿ ಮೂರ‍್ನಾಲ್ಕು ಬಾರಿ ಬೆಂಕಿ ತಗುಲಿತ್ತು. ಆದರೆ ಅರಣ್ಯ ಇಲಾಖೆ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದೆ. ಬೆಂಕಿಯ ಕೆನ್ನಾಲಿಗೆ ಮುರಿದ ಬಿದ್ದ ಮರಗಳನ್ನು ಮರಗಳ್ಳರು ಕದ್ದೊಯ್ಯುತ್ತಿದ್ದಾರೆ ಇದರ ಹಿಂದೆ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಕರಾವಳಿ ಗಡಿ ನೆಲ ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ರಾಮಣ್ಣ ಪಾಲಿಗೆ ಆರೋಪಿಸಿದ್ದಾರೆ.
Tagged with
cnews
ಕಾರ್ಕಳ: ನಿಟ್ಟೆ ಪದವು ಕಲಂಬಾಡಿ ಯಲ್ಲಿ ಏಪ್ರಿಲ್ ೨೩ರಂದು ಸಂದೀಪ್ ಕುಲಾಲ್(೨೪)ಎಂಬಾತನನ್ನು ಬರ್ಬರ ರೀತಿಯಲ್ಲಿ ಕಡಿದು ಕೊಲೆಗೈದ ಪ್ರಕರ ಣದ ಪ್ರಮುಖ ಆರೋಪಿ ವೀರೇಂದ್ರ ಪೂಜಾರಿ(೩೪) ಪೊಲೀಸರಿಗೆ ಶರಣಾ ಗಿದ್ದಾನೆ.
ಕಲಂಬಾಡಿ ಮೂಡುಮನೆಯಲ್ಲಿ ಜರಗಿದ್ದ ಮದರಂಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇವರಿಬ್ಬರು ಕ್ಷುಲ್ಲಕ ಕಾರಣಕ್ಕಾಗಿ ಒಬ್ಬರನೊಬ್ಬರು ದುರು ಗುಟ್ಟಿ ನೋಡಿರುವುದು ಘಟನೆಗೆ ಮೂಲ ಕಾರಣವಾಗಿದೆ ಎಂದು ತಿಳಿದುಬಂ ದಿದೆ. ಇದೇ ವಿಚಾರವನ್ನು ಮುಂದಿಟ್ಟು ಅವರಿಬ್ಬರು ಜಗಳಕ್ಕೆ ಮುಂದಾಗಿ ಕೊಲೆಯೊಂದಿಗೆ ಪರ‍್ಯಾವಸನಗೊಂಡಿದೆ.
ಕುಡಿತದ ಅಮಲಿನಲ್ಲಿದ್ದ ಸಂದೀಪ್ ಕುಲಾಲ್ ಮನೆ ಸಮೀಪದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕುಳಿತಿದ್ದನು. ಅಲ್ಲಿಗೆ ಬಂದಿದ್ದ ವೀರೇಂದ್ರ ಪೂಜಾರಿ ಮದ್ಯದ ನಶೆಯಲ್ಲಿ ಮತ್ತೆ ವಾಗ್ವಾದಕ್ಕೆ ಮುಂದಾಗಿ ನೋಡಿಕೊಳ್ಳುತ್ತೇನೆ ಎಂದು ಧಮ್ಕಿ ಹಾಕಿದ್ದ. ಇದಕ್ಕೆ ಸಂದೀಪ್ ಕುಲಾಲ್ ಪ್ರತಿಕ್ರಿಯೆ ವ್ಯಕ್ತಪಡಿಸಿ ಅಲ್ಲೇ ಕುಳಿತಿದ್ದ. ಮನೆಯಿಂದ ಮಾರಕಾಯುಧ ತಂದಿದ್ದ ವೀರೇಂದ್ರ ಸಂದೀಪ್‌ನ ಕಡೆಗೆ ಬೀಸಲು ಶುರುಮಾಡಿದನು. ಇದನ್ನು ಕಂಡು ಸ್ಥಳೀಯ ಬಿಜೆಪಿ ಮುಖಂ ಡನ ಸಹೋದರರಿಬ್ಬರು ಕಿರುಚಲು ಪ್ರಾರಂಭಿಸುತ್ತಿದ್ದಂತೆ ಆರೋಪಿಯ ಕೈಯಲ್ಲಿದ್ದ ಮಾರಾಕಾಯುಧ ಬಸ್‌ನಿಲ್ದಾಣದ ಗೋಡೆಗೆ ತಾಗಿ ಕೆಳಕ್ಕೆ ಬಿತ್ತೆಂದು ತಿಳಿದುಬಂದಿದೆ. ಆ ಹೊತ್ತಿನಲ್ಲಿ ಒಬ್ಬರನೊಬ್ಬರು ತಳ್ಳಾಟದಲ್ಲಿ ನಿರತರಾಗಿದ್ದಾಗ ಬಸ್‌ನಿಲ್ದಾಣದ ಮುಂಭಾಗದಲ್ಲಿ ಹಾಕಲಾಗಿದ್ದ ಹಾಸುಕಲ್ಲಿನ ಮೇಲೆ ಸಂದೀಪ್‌ನ ತಲೆ ಬಡಿದು ಸ್ಥಳದಲ್ಲಿಯೇ ಕುಸಿದುಬಿದ್ದನು. ಅಲ್ಲಿದ್ದ ಯುವಕರು ಸಮಾಧಾನ ಪಡಿಸಲು ಮುಂದಾದಾಗ ಮನೆಗೆ ಹೋಗುತ್ತೇನೆ. ಯಾವುದೇ ಕುಕೃತ್ಯ ನಡೆಸಲಾರೆ ಎನ್ನುತ್ತಾ ಬಿದ್ದುಕೊಂಡಿದ್ದ ಸಂದೀಪ್ ಕುಲಾಲ್‌ನ ಕೈಗಳನ್ನು ಮೊದಲಿಗೆ ಕಡಿದಿದ್ದಾನೆಂದು ತನಿಖೆ ಮೂಲಗಳಿಂದ ತಿಳಿದುಬಂದಿದೆ. ನಂತರ ಮುಖಕ್ಕೆ ಮೂರು ಸಲ ಕಡಿದು ಮಾರಕಾಯುಧ ಹಿಡಿದುಕೊಂಡು ಪಕ್ಕದಲ್ಲಿರುವ ವಿಜಯ ಎಂಬವರ ಮನೆಗೆ ತೆರಳಿ ನೀರು ಕೇಳಿ ಪಡೆದು ಮಾರಾಕಾಯುಧ ತೊಳೆದು ನಡೆದಿರುವ ವಿಚಾರವನ್ನು ತಿಳಿಸಿದ್ದಾನೆ. ಅಲ್ಲಿಂದ ಮನೆಗೆ ತೆರಳಿದ ಆರೋಪಿ ಮನೆಯಲ್ಲಿ ನಿದ್ರಿಸಿ ನಸುಕಿನ ಜಾವದಲ್ಲಿ ತಲೆಮರೆಸಿಕೊಂಡಿದ್ದನು.
ಆರೋಪಿ ವೀರೇಂದ್ರ ಪೂಜಾರಿಗೂ ಮೃತಪಟ್ಟ ಸಂದೀಪ್‌ನ ಸಹೋದರ ಸಂತೋಷ್‌ನ ನಡುವೆ ಸುಮಾರು ಐದು ವರ್ಷಗಳ ಹಿಂದೆ ಹೊಡೆದಾಟ ನಡೆದಿತ್ತು. ಅದನ್ನು ಬಿಟ್ಟು ಇನ್ಯಾವುದೇ ರೀತಿಯಲ್ಲಿ ಹಗೆತನವಿರಲಿಲ್ಲವೆಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ದುರುಗುಟ್ಟಿ ನೋಡಿರುವ ವಿಚಾರವು ಕೊಲೆಯೊಂದಿಗೆ ಪರ‍್ಯಾವಸನಗೊಂಡಿರುವುದು ದುರಂತವೇ ಸರಿ.
Tagged with
cnews
ಬಂಟ್ವಾಳ: ದೊಡ್ಡ ಮಟ್ಟದ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರಕ್ಕೆ ವಿಶ್ವಾಸ ದ್ರೋಹ ಹಾಗೂ ವಂಚನೆ ಎಸಗಿದ ಆರೋಪದಲ್ಲಿ ಇರಾ ಗ್ರಾ. ಪಂ. ಮಾಜಿ ಅಧ್ಯಕ್ಷ ಕೆ.ಟಿ. ಸುಧಾಕರ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾ. ಪಂ. ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ ದೂರು ನೀಡಿದ್ದರು.
ಗ್ರಾ. ಪಂ.ಗೆ ಜಮೀನು ಖರೀದಿ ಸಂದರ್ಭ ೨೬,೬೬,೩೦೦ ರೂ. ಸರ್ಕಾರಿ ಖಜಾನೆಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಲ್ಲದೇ, ಸಾರ್ವಜನಿಕ ಅನುದಾನವನ್ನು ದುರುಪಯೋಗ ಮಾಡಿರುವ ಬಗ್ಗೆ ಅಂದಿನ ಗ್ರಾ.ಪಂ.ಅಧ್ಯಕ್ಷ ಕೆ.ಟಿ.ಸುಧಾಕರ ಹಾಗೂ ಕಾರ್ಯದರ್ಶಿ ಸುರೇಖಾ ವಿರುದ್ಧ ಕಾಂಗ್ರೆಸ್ ಪಕ್ಷ ಬೆಂಬಲಿತ ಪಂಚಾ ಯತ್ ಸದಸ್ಯರು ಲಿಖಿತ ದೂರು ಸಲ್ಲಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಜಿ. ಪಂ. ಶಿಸ್ತುಪ್ರಾಧಿಕಾರ ಸುರೇಖಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು. ದುರುಪಯೋ ಗಗೊಂಡ ಅನುದಾನವನ್ನು ಮರು ಪಾವತಿಸುವಂತೆ ಅಧ್ಯಕ್ಷಗೆ ಹುಕುಂ ನೀಡಿತ್ತು.
ಇರಾ ಗ್ರಾಮದ ಸರ್ವೇ ಸಂಖ್ಯೆ ೨೫/೨ರಲ್ಲಿ ೨-೯೩ ಎಕರೆ ಖುಷ್ಕಿ ಜಮೀನನ್ನು ೨೯.೩೦ ಲಕ್ಷ ರೂ.ಗಳಿಗೆ ನಾರಾಯಣ ಎಂಬವರಿಂದ ಖರೀ ದಿಸಿದ ಪ್ರಕರಣದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿ ಸಲಾಗಿದ್ದು, ಪಂಚಾಯತ್ ನಿರ್ಣ ಯಗಳಿಗೂ ಮನ್ನಣೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಧಾಕರ ಹಾಗೂ ಸುರೇಖಾ ಜಂಟಿಯಾಗಿ ತಲೆ ದಂಡ ನೀಡಬೇಕಾದ ಪರಿಸ್ಥಿತಿಯೂ ಒದಗಿತ್ತು. ಪ್ರಕರಣ ಇಲಾಖಾ ತನಿಖಾ ಹಂತ ದಲ್ಲಿರುವಾಗಲೇ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ ಇನ್ನೊಂದು ರೀತಿಯ ತಿರುವು ಪಡೆದಿತ್ತು. ಇಲಾಖಾ ತನಿಖೆ ನಡೆಸದಂತೆ ರಾಜಕೀಯ ಒತ್ತಡವೂ ಬಿದ್ದಿತ್ತು. ಪ್ರಕರಣಕ್ಕೆ ಸಂಬಂ ಧಿಸಿ ಜಿ. ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಸಂಬಂಧಿತ ಇಲಾಖಾಧಿಕಾರಿಗಳು ತನಿಖಾ ವರದಿ ಸಲ್ಲಿಸಿದ್ದರೂ, ಅಂದಿನ ಕಾರ್ಯನಿರ್ವಹಣಾಧಿಕಾರಿ ವಸಂತರಾಜ್ ಶೆಟ್ಟಿ ಅವರು ಮುಂದಿನ ತನಿಖೆಗೆ ಮೀನಾಮೇಷ ಹಾಕಿದ್ದರು. ಅವರ ಮೇಲೂ ರಾಜಕೀಯ ಒತ್ತಡ ಇತ್ತೆಂದು ಹೇಳಲಾಗುತ್ತಿದೆ. ಅವರ ವರ್ಗಾವಣೆಯಾದ ಬೆನ್ನಿಗೆ ಹಳ್ಳ ಹಿಡಿದಿದ್ದ ಇರಾ ಭೂ ಹಗರಣ ತನಿಖೆ ಜೀವ ಕಳೆ ಪಡೆದಿದೆ. ಈಗಿನ ಕಾರ್ಯನಿರ್ವಹಕಾಧಿಕಾರಿ ವಿಶ್ವನಾಥ ಪೂಜಾರಿ ಠಾಣಾಧಿಕಾರಿ ಮಹೇಶ್ ಪ್ರಸಾದ್ ಅವರಿಗೆ ದೂರು ನೀಡಿದ್ದಾರೆ. ಅನುದಾನ ದುರುಪಯೋಗವಾದ ಬಗ್ಗೆ ಸಂಬಂಧಿತ ಸರ್ಕಾರಿ ದಾಖಲೆ ಪತ್ರಗಳನ್ನೂ ಪೊಲೀಸ್ ತನಿಖೆಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರದ ನಿರ್ದೇಶನ ಉಲ್ಲಂಘನೆ, ಸಾರ್ವಜನಿಕ ಅನುದಾನ ಅವ್ಯವಹಾರ, ಸರ್ಕಾರಕ್ಕೆ ವಂಚನೆ ಹಾಗೂ ವಿಶ್ವಾಸ ದ್ರೋಹ ಇತ್ಯಾದಿ ಆರೋಪಗಳಿಗೆ ಸಂಬಂಧಿಸಿ ಪೊಲೀಸ್ ಠಾಣಾಧಿಕಾರಿ ಮಹೇಶ್ ಪ್ರಸಾದ್ ಅವರು ಪ್ರಥಮ ವರ್ತಮಾನ ವರದಿ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
Tagged with
cnews
ಪಡುಬಿದ್ರಿ: ಹಲವಾರು ಸಮಯ ದಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾದ ಘಟನೆ ಕಾಪು ಪಡು ಗ್ರಾಮದಲ್ಲಿ ಸಂಭ ವಿಸಿದೆ.
ಮಲ್ಪೆ ಹನುಮಾನ್ ನಗರದ ನಿವಾಸಿ ಮಧುಕರ ಪುತ್ರನ್‌ರವರು ಹಲ ವಾರು ಸಮಯದಿಂದ ಹೊಟ್ಟೆ ನೋವಿ ನಿಂದ ಬಳಲುತ್ತಿದ್ದರು. ಯಾವುದೇ ಔಷಧಿ ಸೇವಿಸಿದರೂ ಹೊಟ್ಟೆ ನೋವು ಗುಣಮುಖವಾಗಿರಲಿಲ್ಲ. ನೋವು ತೀವ್ರತೆ ಪಡೆದಾಗ ತಡೆಯದ ಅವರು ಮೊಬೈಲ್ ಚಾರ್ಜರ್‌ನ ವಯರಿನಿಂದ ಕುತ್ತಿಗೆಗೆ ಸುತ್ತಿ, ಚಾಕುವಿನಿಂದ ಹೊಟ್ಟೆಗೆ ತಿವಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
Tagged with
cnews
ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಶನೀಶ್ವರ ದೇವಸ್ಥಾನದ ಎದುರು ನಿನ್ನೆ ರಾತ್ರಿ ರಿಕ್ಷಾ ಮತ್ತು ಒಮ್ನಿ ಮುಖಾಮುಖಿ ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ರಿಕ್ಷಾ ಚಾಲಕ ದಾರುಣ ಮೃತಪಟ್ಟಿದ್ದಾರೆ. ಮೃತರನ್ನು ಅದ್ಯಪಾಡಿ ನಿವಾಸಿ ಅಬ್ದುಲ್ ಕರೀಂ(೪೫) ಎಂದು ಹೆಸರಿಸಲಾಗಿದೆ. ಬಜ್ಪೆಯಿಂದ ಕಟೀಲು ಕಡೆಗೆ ಸಾಗುತ್ತಿದ್ದ ಒಮ್ನಿ ಕಾರಿಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ರಿಕ್ಷಾ ಡಿಕ್ಕಿ ಹೊಡೆದಿದೆ. ಕರೀಂ ಅವರು ಕುಟುಂಬ ಬಡತನದ ಹಿನ್ನೆಲೆ ಹೊಂದಿದ್ದು, ರಿಕ್ಷಾ ಬಾಡಿಗೆಯಿಂದಲೇ ಸಂಸಾರ ಸಾಗುತ್ತಿತ್ತು. ಅವರ ಸಾವಿನಿಂದ ಮನೆಮಂದಿ ಕಂಗಾಲಾಗಿದ್ದಾರೆ. ಕರೀಂ ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews
ಮಂಗಳೂರು: ಅಶ್ಲೀಲ ಚಿತ್ರವನ್ನು ಬಿಡುಗಡೆ ಮಾಡುತ್ತೇನೆಂದು ಬ್ಲ್ಯಾಕ್‌ಮೇಲ್ ಮಾಡಿಕೊಂಡು ೨೫ ಲಕ್ಷ ರೂ. ಬಲವಂತವಾಗಿ ಪಡೆದಿದ್ದೂ ಅಲ್ಲದೆ ಇದೀಗ ಇನ್ನೂ ಹೆಚ್ಚಿನ ಮೊತ್ತವನ್ನು ಕೊಡಬೇಕೆಂದು ಜೀವ ಬೆದರಿಕೆ ಒಡ್ಡುತ್ತಿರುವುದಾಗಿ ಆರೋಪಿಸಿ ವ್ಯಕ್ತಿಯೊಬ್ಬರು ತಮ್ಮ ಮಿತ್ರನ ವಿರುದ್ಧವೇ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಸಂತೋಷ್ ವಿಜಯ ಮೊಂತೇರೋ ದೂರು ನೀಡಿದ್ದು, ಹರುಷ ಕುಮಾರ್ ಆರೋಪಿಯೆಂದು ಹೆಸರಿಸಲಾಗಿದೆ. ಇಬ್ಬರ ನಡುವೆ ಗೆಳೆತನವಿದ್ದು, ಸಂತೋಷ್ ಅವರು ಹರುಷನಿಗೆ ಆಗಾಗ ಹಣದ ಸಹಾಯ ಮಾಡುತ್ತಿದ್ದರೆನ್ನಲಾಗಿದೆ. ಇತ್ತೀಚೆಗೆ ಹಣ ಕೊಡುವುದನ್ನು ನಿಲ್ಲಿಸಿದ ಕಾರಣ ಆರೋಪಿಯು ಫೋನ್ ಮೂಲಕ ಬೆದರಿಕೆಯೊಡ್ಡಿದ್ದಾಗಿ ಹೇಳಲಾಗಿದೆ. ಕಳೆದ ಜನವರಿ ಐದರಂದು ಬಿಗ್‌ಬಝಾರ್ ಬಳಿ ೨೫ ಲಕ್ಷ ರೂ. ಪಡೆದಿದ್ದರೆ, ಮಾರ್ಚ್ ೨೩ರಂದು ಮತ್ತೆ ಬಜ್ಪೆಯ ಪೊಲೀಸ್ ಠಾಣೆಯ ಸಮೀಪ ಬರಲು ಹೇಳಿ, ನಿನ್ನಂತೆಯೇ ಇರುವ ವ್ಯಕ್ತಿಯ ಬ್ಲೂಫಿಲಂ ನನ್ನ ಬಳಿ ಇದೆ, ಅದನ್ನು ನಿನ್ನ ಪತ್ನಿ, ಸಂಬಂಧಿಕರಿಗೆ ಕೊಡಬಾರದು ಎಂದಿದ್ದರೆ ಮತ್ತೆ ೬೦ ಲಕ್ಷ ರೂ. ನೀಡಬೇಕು ಎಂಬುದಾಗಿ ಬೆದರಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಹರುಷನ ಜೊತೆಗಿದ್ದ ಕಿಶೋರ್ ಎಂಬಾತ, ಪಿಸ್ತೂಲ್‌ನಿಂದ ಶೂಟ್ ಮಾಡಿ ಕೊಲ್ಲುತ್ತೇನೆ ಎಂಬುದಾಗಿ ಬೆದರಿಸಿದ್ದಾಗಿ ಹೇಳಲಾಗಿದೆ. ಉಡುಪಿ ನಗರ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Tagged with
cnews
ಮಂಗಳೂರು: ಸದಸ್ಯತನ ಆಕಾಂಕ್ಷಿತ ಬಿಲ್ಲವರಿಗೆ ಅಖಿಲ ಭಾರತ ಬಿಲ್ಲವರ ಯೂನಿಯನ್ ಸದಸ್ಯತನ ನೀಡಲು ನಿರಾಕರಿಸಿರುವುದನ್ನು ಖಂಡಿ ಸಿದ ಆಕಾಂಕ್ಷಿಗಳು ಈ ಬಗ್ಗೆ ನ್ಯಾಯ ಒದಗಿಸುವಂತೆ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ಮಾಡಿದ್ದಾರೆ.
ನೂರು ವರುಷಕ್ಕೆ ಇನ್ನೂ ಎಂಟು ವರುಷ ಇರುವಾಗಲೇ ಶತಮಾನೋ ತ್ಸವನ್ನು ಆಚರಿಸಿ ವಿವಾದಕ್ಕೆ ಕಾರಣ ವಾಗಿದ್ದ ಅಖಿಲ ಭಾರತ ಬಿಲ್ಲವರ ಯೂನಿಯನ್, ಬಿಲ್ಲವರಿಗೆ ಸದಸ್ಯತನ ನೀಡದೆ ಕೌಟುಂಬಿಕ ಸಂಘಟನೆಯ ಧೋರಣೆ ತಳೆದಿದೆ ಎಂದು ಈ ಹಿಂದೆ ಆರೋಪ ಕೇಳಿ ಬಂದಿತ್ತು.
ಇದಲ್ಲದೆ ಯೂನಿಯನ್ ಮಹಾಸಭೆಗೂ ಬಿಲ್ಲವರು ಮುತ್ತಿಗೆ ಹಾಕಿ ಸದಸ್ಯತನ ನೀಡುವಂತೆ ಆಗ್ರಹಿ ಸಿದ್ದರು. ಈ ವೇಳೆ ಯೂನಿಯನ್ ಅಧ್ಯಕ್ಷರು ಮೂರು ತಿಂಗಳ ಅವಕಾಶ ನೀಡಿದರೆ ಸದಸ್ಯ ತನ ನೀಡುವುದಾಗಿ ತಿಳಿಸಿದ್ದರು. ಆದರೆ ಇದೀಗ ಮೂರು ತಿಂಗಳು ಕಳೆದರೂ ಸದಸ್ಯತನ ನೀಡದೆ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ದೂರಿದ ಸದಸ್ಯತನ ಆಕಾಂಕ್ಷಿ ಬಿಲ್ಲವರು ದ.ಕ ಜಿಲ್ಲಾ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ನೀಡಿ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
Tagged with
cnews
ಮಂಗಳೂರು: ಮನೆಯ ಬಳಿ ಶೇಖರಣೆ ಮಾಡಿಟ್ಟಿದ್ದ ಗ್ರಾನೈಟ್ ಕಲ್ಲು ಹಾಗೂ ಜಲ್ಲಿಕಲ್ಲುಗಳನ್ನು ಕಳವು ಮಾಡಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಡನಿಡುಂಬೂರು ಗ್ರಾಮದ ನಿವಾಸಿ ಬಿ.ಸಂತೋಷ್ ರಾವ್ ದೂರು ನೀಡಿದ್ದು, ನಗರಾಡಳಿತ ತಮ್ಮ ಮನೆಯ ಕಂಪೌಂಡ್ ಅನ್ನು ತಪ್ಪಾಗಿ ಭಾವಿಸಿ ಇತ್ತೀಚೆಗೆ ಕೆಡವಿಹಾಕಿದ್ದು, ತಾನು ಕಲ್ಲುಗಳನ್ನು ಅಲ್ಲಿಯೇ ಶೇಖರಿಸಿ ಇಟ್ಟಿದ್ದೆ. ಆದರೆ ಉತ್ತರ ಭಾರತಕ್ಕೆ ತೀರ್ಥಯಾತ್ರೆಗೆ ಹೋಗಿದ್ದ ಸಂದರ್ಭ ಕಲ್ಲುಗಳನ್ನು ಕಳವು ಮಾಡಿದ್ದಾರೆ ಎಂದು ದೂರಿದ್ದಾರೆ.
Tagged with
cnews
ಮಂಗಳೂರು: ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆದಿದ್ದ ಶೇಂದಿ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರು ಶಂಕಿತರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಕೊಲೆ ಪ್ರಕರಣದ ಕುರಿತು ಮಹತ್ವದ ಸುಳಿವು ಲಭ್ಯವಾಗಿದೆ ಎನ್ನಲಾಗಿದೆ.
ಧರ್ಮಸ್ಥಳ ಸಮೀಪದ ಬೋಳಿಯಾರು ಕುದ್ರಾಯ ಸೇತುವೆ ಸಮೀಪ ಶೇಂದಿ ವ್ಯಾಪಾರಿ ಶಶೀಂದ್ರನ್(೫೨)ರನ್ನು ತಲವಾರಿನಿಂದ ಕಡಿದು ಬಳಿಕ ತಲೆಗೆ ಕಲ್ಲನ್ನು ಎತ್ತಿಹಾಕಿ ಬರ್ಬರವಾಗಿ ಕೊಲೆಗೈಯಲಾಗಿತ್ತು. ಧರ್ಮಸ್ಥಳ ಹೊರಠಾಣೆ ಹಾಗೂ ಬೆಳ್ತಂಗಡಿ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದು, ಮರಳು ಮಾಫಿಯಾ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಿ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
Tagged with
cnews
ಮಂಗಳೂರು: ಕಾರ್‌ಗೆ ಹಂಬದಿಗೆಯಿಂದ ಡಿಕ್ಕಿ ಹೊಡೆದ ರಿಕ್ಷಾ ಚಾಲಕನೆ ಕಾರ್ ಚಾಲಕನ ಮೇಲೆ ಹಲ್ಲೆ ನಡೆಸಿದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಉಡುಪಿ ನಗರದ ಕೋರ್ಟ್ ಎದುರಿನ ರಸ್ತೆಯ ಐಡಿಯಲ್ ಟವರ್ ವಾಸಿ ಸಾದಿಕ್ ಸೌದಾಗರ್ ಎಂಬವರ ಮೇಲೆ ನಝೀರ್ ಅಂಬಾಗಿಲು ಎಂಬಾತ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ.
ಸಾದಿಕ್‌ರ ಕಾರ್‌ಗೆ ಮಂಗಳವಾರ ಗೂಡ್ಸ್ ರಿಕ್ಷಾ ಡಿಕ್ಕಿಯಾಗಿತ್ತು. ರಿಕ್ಷಾ ಚಾಲಕ ನಝೀರ್ ಆಗ ಉಡಾಪೆಯ ಉತ್ತರ ನೀಡಿ ತೆರಳಿದ್ದ. ಬುಧವಾರ ಸಂಜೆ ಮತ್ತೆ ಇವರಿಬ್ಬರು ಸಿಟಿ ಬಸ್ ಲ್ದಾಣದ ಬಳಿಯ ಜಾಮಿಯಾ ಮಸೀದಿಯಲ್ಲಿ ಸಂದಿಸಿದ್ದರು. ಆಗ ಸಾಧಿಕ್ ಅಪಘಾತದ ವಿಷಯದ ಪ್ರಶ್ನೆ ಮಾಡಿದಾಗ ನಝೀರ್ ಹಲ್ಲೆ ನಡೆಸಿದ್ದ. ನಝೀರ್‌ನ ಸ್ನೇಹಿತರಾದ ನವಾಝ್ ಹಾಗೂ ಬಶೀರ್ ಎಂಬವರೂ ಬಂದು ಬೆದರಿಕೆ ಒಡ್ಡಿದ್ದರು. ಅದೇ ದಿನ ರಾತ್ರಿ ಸಾಧಿಕ್ ಸ್ನೇಹಿತ ಮುಹಮ್ಮದ್ ಅಕ್ಕಂದಿರಾದ ರಶೀದಾ ಮತ್ತು ಜಮೀಲಾರೊಂದಿಗೆ ಮಸೀದಿಗೆ ತೆರಳಲು ಶಿರಿಬೀಡು ಫ್ಲ್ಯಾಟ್‌ನ ಪಾಕಿಂಗ್ ಸ್ಥಳಕ್ಕೆ ಬಂದಾಗ ಅಲ್ಲಿಗೆ ಬಂದ ನಝೀರ್, ಬಶೀರ್, ನವಾಝ್ ನಿಟ್ಟೂರು ಮತ್ತು ಮುನೀರ್ ನೇಜಾರುರವರಿದ್ದ ತಂಡ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿ ಹೋಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Tagged with
cnews
ಕಾರವಾರ: ಸಹಾಯಕ ಅರಣ್ಯ ಅಧಿಕಾರಿ ಮದನ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿಯನ್ನು ಬಂಧಿಸಿ ಧಾರವಾಡ ಜೈಲಿಗೆ ಕಳುಹಿಸಲಾಗಿದೆ. ಬಾಗಲಕೋಟೆ-ನವನಗರದ ಆನಂದ್ ರೂಪ್‌ಸಿಂಗ್ ನಾಯ್ಕ್, ಭಾನುಬಾಯಿ ನಾಯ್ಕ್, ಸುರೇಶ್ ಶಂಕ್ರಪ್ಪ ನಾಯ್ಕ್, ದಾಂಡೇಲಿ ಮಾರುತಿನಗರದ ಪ್ರಶಾಂತ್‌ರಾಮ ಲಮಾಣಿ, ದಾಂಡೇಲಿ ನಗರಸಭಾ ಸಮುದಾಯ ಸಂಘಟನಾ ಅಧಿಕಾರಿ ಅರವಿಂದ್ ಕೃಷ್ಣಪ್ಪ ಚೌಹಾನ್ ಮತ್ತವನ ಪತ್ನಿ ಶೈಲಜಾ ಬಂಧಿತ ಆರೋಪಿಗಳು.
Tagged with
cnews
ಸುಳ್ಯ: ಕಾಂತಮಂಗಲದ ಸೇತುವೆ ಬಳಿ ನಿಲ್ಲಿಸಿದ್ದ ಬೈಕ್ ಕಳವಾದ ಬಗ್ಗೆ ಸ್ಥಳೀಯ ನಿವಾಸಿ ಸಂದೀಪ್ ಎಂಬ ವರು ಪೊಲೀಸರಿಗೆ ದೂರು ನೀಡಿ ದ್ದಾರೆ.
ಕಾಂತಮಂಗಲ ಮುಖ್ಯ ರಸ್ತೆಗೆ ಕಾಂಕ್ರೀಟ್ ಹಾಕುವ ಕಾಮಗಾರಿ ನಡೆಯುತ್ತಿರುವುದರಿಂದ ಪಯಸ್ವಿನಿ ನದಿಗೆ ಇಳಿದು ಪರ್ಯಾಯ ರಸ್ತೆಯಲ್ಲಿ ಹೋಗಬೇಕಿದ್ದು, ಎ.೩೦ರಂದು ನೀರು ಹೆಚ್ಚಿದ್ದರಿಂದ ಸೇತುವೆಯ ಈ ಕಡೆ ಕೆ.ಎ೨೧-ಎ ೧೧೭೭ ನೋಂದಣಿ ಸಂಖ್ಯೆ ಹೊಂದಿರುವ ಕೆಂಪು ಬಣ್ಣದ ಬಜಾಜ್ ಪಲ್ಸರ್ ಬೈಕ್ ನಿಲ್ಲಿಸಿ ಹೋಗಿದ್ದು, ಬರು ವಾಗ ಬೈಕನ್ನು ಕಳವು ಮಾಡಲಾಗಿದೆ ಎಂದು ಸಂದೀಪ್ ಗುರುವಾರ ಪೊಲೀಸರಿಗೆ ದೂರು ನೀಡಿದ್ದಾರೆ.
Tagged with
cnews
ಮಂಗಳೂರು: ಪಂಪ್‌ವೆಲ್‌ನಲ್ಲಿ ಇಡಲಾಗಿದ್ದ ಲಾರಿಯೊಂದನ್ನು ಹಾಡಹಗಲೇ ಕಳ್ಳತನ ಮಾಡಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಕೇಸು ದಾಖ ಲಿಸಲಾಗಿದೆ.
ಬುಧವಾರ ಬೆಳಗ್ಗೆ ೧೦.೩೦ರ ವೇಳೆಗೆ ಚಾಲಕ ರಮೇಶ್ ರೈ ಎಂಬ ವರು ಕೆಎ.೧೯.ಬಿ.೯೧೨೮ ನಂಬರಿನ ಲಾರಿಯನ್ನು ಪಂಪ್‌ವೆಲ್ ಕರ್ನಾಟಕ ಬ್ಯಾಂಕ್ ಬಳಿ ಇಟ್ಟು ತೆರಿಗೆ ಕಟ್ಟಲೆಂದು ಆರ್.ಟಿ.ಓ ಕಚೇರಿಗೆ ಹೋಗಿದ್ದರು. ವಾಪಸ್ ಬಂದಾಗ ಲಾರಿ ನಾಪತ್ತೆ ಯಾಗಿದ್ದು ಈ ಬಗ್ಗೆ ಲಾರಿ ಮಾಲಕಿ ಜ್ಯೋತಿ ಯೋಗೀಶ್ ಎಂಬವರು ದೂರು ನೀಡಿದ್ದಾರೆ.
Tagged with
cnews
ಕುಂದಾಪುರ: ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ನಾಲ್ವರು ಮಕ್ಕಳನ್ನು ರಕ್ಷಿಸಲಾಗಿದೆ. ಸಂಗೀತಾ(೯), ಜ್ಯೋತಿ(೧೩), ಅರುಣ(೧೧), ಸೌಭಾಗ್ಯ(೧೦) ಎನ್ನುವವರು ತಮಗೆ ಬಾಯಿ ಬರುವುದಿಲ್ಲ ಎಂಬ ಪ್ರಮಾಣಪತ್ರವನ್ನು ಹಿಡಿದುಕೊಂಡು ಭಿಕ್ಷಾಟನೆಯಲ್ಲಿ ತೊಡಗಿದ್ದರು.
ಕುಂದಾಪುರದ ಅಂಗಡಿ ಮುಂಗಟ್ಟುಗಳ ಎದುರು, ನಾಗರಿಕರ ಎದುರು ಭಿಕ್ಷೆ ಬೇಡುತ್ತಿದ್ದ ಈ ಮಕ್ಕಳನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಮಾತ ನಾಡಿಸಿದಾಗ ತಮಗೆ ಬಾಯಿ ಬರುವುದಿಲ್ಲ ವೆಂದು ಕೈಸನ್ನೆ ಮಾಡಿದರು. ಆದರೂ ಮತ್ತೆ ಮತ್ತೆ ವಿಚಾರಿಸಿದಾಗ ಮಾತನಾಡಲು ಪ್ರಾರಂ ಭಿಸಿದ ಮಕ್ಕಳು ಆಂಧ್ರ ಮೂಲದವರೆಂದು ತಿಳಿದು ಬಂದಿದೆ. ಆಂಧ್ರ ಮೂಲದಿಂದ ಬಂದ ಈ ಮಕ್ಕಳು ತ್ರಾಸಿಯ ಕಾರ್ಮಿಕರ ಟೆಂಟಿನಲ್ಲಿ ವಾಸಿಸುತ್ತಿದ್ದವರೆಂದು ತಿಳಿದು ಬಂದಿದ್ದು, ಬೇರೆಯವರು ಭಿಕ್ಷಾಟನೆಗಾಗಿ ಈ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಮಕ್ಕಳಿಂದ ಮಾಹಿತಿ ಲಭ್ಯವಾಗಿದೆ. ಆದರೆ ಹೀಗೆ ಬಳಸಿಕೊಳ್ಳುತ್ತಿರುವ ದುಷ್ಕರ್ಮಿಗಳು ಯಾರೆಂಬುದು ತಿಳಿದು ಬಂದಿಲ್ಲ. ಅಲ್ಪ ಸ್ವಲ್ಪ ಕನ್ನಡ ಮಾತನಾಡುವ ಮಕ್ಕಳಿಗೆ ತಾತ್ಕಾಲಿಕವಾಗಿ ಕೆದೂರಿನ ಸ್ಪೂರ್ತಿಧಾಮ ರಕ್ಷಣೆ ನೀಡಿದೆ.
ದಾಳಿ ಸಂದರ್ಭದಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಪ್ರಭಾಕರ ಆಚಾರ್ಯ, ಕುಂದಾಪುರ ವೃತ್ತ ಕಾರ್ಮಿಕ ಉಪನಿರೀಕ್ಷಕ ಜೀವನ್ ಕುಮಾರ್, ಉಡುಪಿ ಪ್ರಥಮ ವೃತ್ತದ ಕಾರ್ಮಿಕ ಉಪನಿರೀಕ್ಷಕ ಆರ್. ರವಿಕುಮಾರ್, ಉಡುಪಿ ಎರಡನೇ ವೃತ್ತದ ಉಪನಿರೀಕ್ಷಕ ಮರ್ಲಿನ್ ಗ್ರೇಸ್ ಡಿಸೋಜಾ, ಬೇಳೂರಿನ ಮಧುಕರ ಶೆಟ್ಟಿ, ಕೆದೂರು ಸ್ಪೂರ್ತಿಧಾಮದ ಕಾರ್ಯನಿರ್ವಾಹಕ ಕೇಶವ ಕೋಟೇಶ್ವರ ಭಾಗವಹಿಸಿದ್ದರು.
Tagged with
lnews,
udupi
ಮಂಗಳೂರು: ಪಂಚಾಯತ್ ಸದಸ್ಯರ ಜಾತಿ ರಾಜ ಕೀಯದಿಂದಾಗಿ ಹಲವು ಕುಟುಂಬಗಳು ಕಳೆದೊಂದು ವಾರದಿಂದ ಕುಡಿಯಲು ನೀರಿಲ್ಲದೆ ಪರದಾಡುತ್ತಿರುವ ಘಟನೆ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾನಗರದಲ್ಲಿ ಬೆಳಕಿಗೆ ಬಂದಿದೆ.
ಇಂದಿರಾನಗರ ಗ್ರಾಮಸ್ಥರಿಗೆ ಕುಡಿಯುವ ನೀರಿಗಾಗಿ ಪಂಚಾಯತ್ ಎರಡು ಪೈಪ್ ಲೈನ್ ಅಳವಡಿಸಿ ನೀರು ಪೂರೈಕೆ ಮಾಡಿತ್ತು. ಈ ಪೈಕಿ ಒಂದು ಲೈನಿನಲ್ಲಿ ಕಳೆದ ಒಂದು ವಾರದಿಂದ ನೀರು ಪೂರೈಕೆಯಾಗುತ್ತಿರಲಿಲ್ಲ. ಈ ಬಗ್ಗೆ ಗ್ರಾಮಸ್ಥರು ಪಂಚಾಯತ್ ನೀರು ಸಮಿತಿ ಅಧ್ಯಕ್ಷರ ಗಮನಕ್ಕೆ ತಂದಾಗ ಅವರು ಮುಖ್ಯ ಪೈಪ್ ಲೈನ್ ನೇರ ಸಂಪರ್ಕದ ಮೂಲಕ ನೀರು ಪಡೆಯು ವಂತೆ ಸೂಚಿಸಿದ್ದರು. ಅದರಂತೆ ನೀರಿಲ್ಲದೆ ಅತಂತ್ರ ಗೊಂಡಿದ್ದ ಮನೆಯವರು ನೀರು ಸಂಪರ್ಕಕ್ಕಾಗಿ ಪೈಪ್ ಲೈನ್ ಅಳವಡಿಸಲು ನೆಲ ಅಗೆದಿದ್ದರು. ಆದರೆ ಈಗಾಗಲೇ ಈ ಲೈನ್‌ನಿಂದ ನೀರು ಪಡೆಯುತ್ತಿರುವ ಮನೆಯವರು ಮತ್ತೆ ಸಂಪರ್ಕ ಪಡೆಯುದ್ದಕ್ಕೆ ಆಕ್ಷೇಪಿಸಿ ಜಗಳ ಕಾದಿದ್ದರು. ಇದೇ ಲೈನ್‌ನಿಂದ ಎಲ್ಲ ಮನೆಯವರು ನೀರು ಪಡೆದರೇ ನಮಗೆ ನಿತ್ಯ ನೀರು ಸಿಗುವುದಿಲ್ಲ ಎನ್ನುವ ವಾದ ಅವರದ್ದು. ವಾಸ್ತವಾಗಿ ಈ ಪೈಪ್‌ಲೈನ್ ಮುಖ್ಯ ಪೈಪ್ ಆಗಿರುವ ಕಾರಣ ಎಲ್ಲರಿಗೂ ಸಮನಾಗಿ ನೀರು ಪೂರೈಕೆಯಾಗುತ್ತದೆ. ಆದರೆ ಯಥೇಚ್ಚವಾಗಿ ಸಿಗುವುದಿಲ್ಲ ಎನ್ನುವ ಆರೋಪ ಸ್ಥಳೀಯ ಮುಸ್ಲಿಂ ಮನೆಯವರದ್ದು. ಆದರೆ ಇಲ್ಲಿಂದಲೇ ಸಂಪರ್ಕ ಪಡೆಯಿರಿ ಎಂದು ಮೊದಲು ತಿಳಿಸಿದ್ದ ನೀರು ಸಮಿತಿ ಅಧ್ಯಕ್ಷರರು ಈಗ ತಮ್ಮ ಜಾತಿ ಪ್ರೇಮವನ್ನು ಮರೆದಿದ್ದಾರೆ ಎನ್ನುತ್ತಾರೆ ನೊಂದವರು ಇನ್ನೊಂದು ಕಡೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೀರಿಲ್ಲದ ಕುಟುಂಬಗಳತ್ತ ತಲೆಯನ್ನೇ ಹಾಕುತ್ತಿಲ್ಲ ಎಂದು ನೀರಿಲ್ಲದೆ ಅತಂತ್ರಗೊಂಡ ಕುಟುಂಬ ದೂರಿದೆ. ಮೊದಲು ಪೈಪ್ ಲೈನ್ ಅಳವಡಿಕೆಗೆ ಸೈ ಎಂದ ಪಿಡಿಒ ಬಳಿಕ ವ್ಯವಹಾರ ಕುದುರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ನೀರು ಸಮಿತಿ ಅಧ್ಯಕ್ಷರು ತಮ್ಮ ಸಮುದಾಯದ ಪರ ನಿಂತು ಜಾತಿ ರಾಜಕೀಯ ಮೆರೆದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ನೊಂದ ಗ್ರಾಮಸ್ಥರು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ದೂರುನೀಡಿದ್ದು ಈ ಸಮಸ್ಯೆಯನ್ನು ಕೂಡಲೇ ಸರಿ ಪಡಿಸುವಂತೆ ಆದೇಶಿಸಿ ದ್ದರೂ ಪಿಡಿಒ ಮಾತ್ರ ಕ್ಯಾರೇ ಅನ್ನುತ್ತಿಲ್ಲ. ನನಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿರುವ ಪಿಡಿಒ ಸ್ಥಳ ತನಿಖೆಯನ್ನೂ ನಡೆಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
Tagged with
dk,
lnews
ಮಂಗಳೂರು: ನೀರಿನ ಸಮಸ್ಯೆಯ ಬಗ್ಗೆ ಚರ್ಚಿಸಲು ಅಂಬ್ಲಮೊಗರು ಪಂಚಾಯಿತಿಗೆ ಹೋಗಿ ಪಂಚಾಯಿತಿ ಉಪಾಧ್ಯಕ್ಷೆಯ ಮಾನಭಂಗಕ್ಕೆ ಯತ್ನಿಸಿದ್ದಾರೆಂಬ ಆರೋಪದಲ್ಲಿ ಡಿ.ವೈ.ಎಫ್.ಐ. ಮುಖಂಡರ ಮೇಲೆ ಕೇಸು ದಾಖಲಿಸಿದ ಕ್ರಮವನ್ನು ಖಂಡಿಸಿ ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದೆ ಎನ್ನುವ ಮಾಹಿತಿ ಪತ್ರಿಕೆಗೆ ಲಭಿಸಿದೆ.
ಅಂಬ್ಲಮೊಗರು ಗ್ರಾಮ ಪಂಚಾಯಿತಿ ಆಡಳಿತಗಾರರು ಮತ್ತು ಅಧಿಕಾರಿಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದ ಸಂಘಟನೆಯ ಮುಖಂಡರಾದ ಇಬ್ರಾಹಿಂ ಮತ್ತು ಲತೀಫ್ ನೀರಿನ ಸಮಸ್ಯೆಯ ಬಗ್ಗೆ ಮಾತನಾಡಲು ಬುಧವಾರ ಮಧ್ಯಾಹ್ನ ಅಂಬ್ಲಮೊಗರು ಗ್ರಾ.ಪಂ.ಗೆ ಹೋಗಿ ದ್ದರು. ಅದೇ ವೇಳೆ ಪಂಚಾಯಿತಿ ಉಪಾಧ್ಯಕ್ಷೆ ಇಂದಿರಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ರಟ್ಟೆ ಎಳೆದು ಮಾನಭಂಗಕ್ಕೆ ಯತ್ನಿಸಿದ್ದರು ಎಂದು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಅದೇ ದಿನ ರಾತ್ರಿ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಮಂಗಳೂರಿನ ಮೂರನೇ ಸತ್ರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ಬುಧವಾರ ನಡೆದ ಘಟನೆಯನ್ನು ಡಿ.ವೈ.ಎಫ್.ಐ. ಉಳ್ಳಾಲ ವಲಯ ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಇಂದು ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಯಲಿದೆ. ಕೊಣಾಜೆ ಠಾಣೆಯಲ್ಲಿ ಸಂಘಟನೆಯ ಮುಖಂಡರ ಮೇಲೆ ಸುಳ್ಳು ಆರೋಪ ಹೊರಿಸಿ ಕೇಸು ಹಾಕಿದ್ದು ಇದು ಎರಡನೆಯ ಪ್ರಕರಣವಾಗಿದೆ. ಪೊಲೀಸರ ಕ್ರಮವನ್ನು ಖಂಡಿಸಿ ಹಾಗೂ ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಒತ್ತಾಯಿಸುವ ಸಲುವಾಗಿ ಪ್ರತಿಭಟನೆಗೆ ಸಿದ್ಧತೆ ನಡೆಸಿರುವ ಉಳ್ಳಾಲ ವಲಯ ಸಮಿತಿ ಕೊಣಾಜೆ ಠಾಣೆಯೆದುರು ಅಥವಾ ಅಂಬ್ಲಮೊಗರು ಪಂಚಾಯಿತಿ ಎದುರು ಪ್ರತಿಭಟನೆಗೆ ಸಜ್ಜಾಗಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದೆ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ಪತ್ರಿಕೆಗೆ ಲಭಿಸಿದೆ.
Tagged with
dk,
lnews
ಮಂಗಳೂರು: ವಿಹಾರಕ್ಕೆಂದು ಸೋಮೇಶ್ವರ ಬೀಚಿಗೆ ಬಂದು ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ರಕ್ಷಿಸುವ ಮೂಲಕ ಪುನರ್ಜನ್ಮ ನೀಡಲಾಗಿದೆ.
ನಿನ್ನೆ ಬೆಳಗ್ಗೆ ಪೆರ್ಮನ್ನೂರು ಗ್ರಾಮದ ಸಂತೋಷನಗರ ನಿವಾಸಿ ಸಂತೋಷ್ ಎಂಬವರ ಪತ್ನಿ ಚಂಚಲ(೩೫) ಎಂಬವರು ಸೋಮೇಶ್ವರ ದೇವಸ್ಥಾನಕ್ಕೆ ಬಂದು ಬಳಿಕ ವಿಹಾರಕ್ಕೆಂದು ಬೀಚ್‌ಗೆ ಹೋಗಿ ಸಮುದ್ರದ ನೀರಲ್ಲಿ ನಿಂತಿದ್ದರು. ಅದೇ ವೇಳೆ ಬಂದ ಭಾರೀ ಗಾತ್ರದ ಅಲೆಯೊಂದು ಅವರನ್ನು ಕೊಚ್ಚಿಕೊಂಡು ಹೋಗಿತ್ತು.
ಬೊಬ್ಬೆ ಹಾಕಿದ ಅವರನ್ನು ಕಂಡ ಉಳ್ಳಾಲ ಈಜುಗಾರರ ತಂಡದ ಸದಸ್ಯ ಅಶೋಕ್ ಎಂಬವರು ಸಮುದ್ರದ ಅಲೆಗಳೊಂದಿಗೆ ಹೋರಾಡಿ ಮಹಿಳೆಯನ್ನು ರಕ್ಷಿಸಿದ್ದರು. ಬಳಿಕ ಉಳ್ಳಾಲ ಪೊಲೀಸರ ಸಹಕಾರದೊಂದಿಗೆ ೧೦೮ ಆಂಬುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರು ಚೇತರಿಸುತ್ತಿದ್ದಾರೆ.
ಇದೇ ವೇಳೆ ನಿನ್ನೆ ಮಧ್ಯಾಹ್ನ ಇದೇ ಸ್ಥಳಕ್ಕೆ ಬಂದಿದ್ದ ತಲಪ್ಪಾಡಿ ಸಮೀಪದ ಉಚ್ಚಿಲ ಬಟ್ಟಂತಾಡಿ ನಿವಾಸಿ ಸುರೇಶ್ (೪೫) ಎಂಬವರನ್ನು ಸಮುದ್ರದ ಅಲೆಯೊಂದು ಎಳೆದೊಯ್ದಿತ್ತು. ಈ ಸಂದರ್ಭದಲ್ಲೂ ಆಪತ್ಭಾಂದವನಾಗಿ ಬಂದ ಅಶೋಕ್ ಅವರನ್ನು ರಕ್ಷಿಸಿದ್ದಾರೆ. ಒಂದೇ ದಿನ ಸಮುದ್ರ ಪಾಲಾಗಲಿದ್ದ ಎರಡು ಜೀವಗಳನ್ನು ರಕ್ಷಿಸಿ ಪುಣ್ಯ ಕಟ್ಟಿಕೊಂಡಿರುವ ಅಶೋಕ್ ಅವರಿಗೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.
Tagged with
dk,
lnews

ಬೆಂಗಳೂರು: ಅಧಿಕಾರ ಕೊಟ್ಟರೆ ಮಾತ್ರ ಕಾಂಗ್ರೆಸ್ ಪಕ್ಷ ಇಲ್ಲವಾದರೆ ಇಲ್ಲ ಎಂಬ ಭಾವನೆ ಯಾರಿಗೂ ಬೇಡ. ಪಕ್ಷಕ್ಕಾಗಿ ದುಡಿಯುವುದು ಎಲ್ಲರ ಕರ್ತವ್ಯ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಅವಕಾಶ ಸಿಕ್ಕಿದಾಗ ಕೆಲಸ ಮಾಡ ಬೇಕು. ಸಿಗದಿದ್ದಾಗಲೂ ನಿರಾಶರಾಗದೇ ಪಕ್ಷ ಸಂಘಟಿಸಬೇಕು ಎಂದು ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೊಡ್ಡ ಅವಕಾಶ ಹೊಂದಿರುವ ಪಕ್ಷ ಒಂದಲ್ಲ ಒಂದು ಅವಕಾಶಗಳು ಪಕ್ಷದ ನಿಷ್ಠಾವಂತರಿಗೆ ದೊರೆಯುತ್ತಿದೆ. ಯಾರಿಗಾದರೂ ಅವಕಾಶ ಸಿಕ್ಕಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸಹಿ ಮಾಡಿದ ನಂತರ ಅದನ್ನು ಪ್ರಶ್ನಿಸುವಂತಿಲ್ಲ. ಹಾಗೊಂದು ವೇಳೆ ಮಾಡಿದರೆ ಅದು ನಾಯಕತ್ವವನ್ನು ಪ್ರಶ್ನಿಸಿದಂತೆ ಎಂದರು.
ಕೆಪಿಸಿಸಿ ಪದಾಧಿಕಾರಿಗಳ ೨ನೇ ಪಟ್ಟಿ ಪ್ರಕಟವಾಗಿದೆ. ಅದರಲ್ಲೂ ಹಲವಾರು ಮಂದಿ ಹೊಸಬರು ಇದ್ದಾರೆ. ಆಪಕ್ಷೆಪಣೆಗಳು ಕೇಳಿ ಬಂದಿವೆ. ಆದರೆ, ನೇಮಕವಾಗಿರುವ ವರೆಲ್ಲರೂ ಕಾಂಗ್ರೆಸ್‌ನವರೇ ಈ ಹಿನ್ನೆಲೆಯಲ್ಲಿ ವಿರೋಧ ಅಥವಾ ಟೀಕೆಗಳು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಯಾವುದೇ ಆಕ್ಷೇಪಣೆಗಳಿದ್ದರೂ ಆಲಿಸಲು ಪಕ್ಷ ಸಿದ್ದವಿದೆ ಎಂದು ಅವರು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಂಘಟನೆ ಮಾಡುವಂತೆ ನೂತನ ಅಧ್ಯಕ್ಷರಿಗೆ ಸಲಹೆ ಮಾಡಿದರು. ಬಿಬಿಎಂಪಿಯಲ್ಲಿ ೧೫ ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ. ತಾಕತ್ತಿದ್ದರೆ ಅದನ್ನು ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
Tagged with
snews

ಬೆಂಗಳೂರು: ಪಕ್ಷದ ಆಂತರಿಕ ವಿಷಯ ಚರ್ಚಿಸಲು ಶಾಸಕಾಂಗ ಪಕ್ಷದ ಸಭೆ ಕರೆಯುವ ಅಗತ್ಯವಿಲ್ಲ ಎಂದಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸಭೆಗೆ ಒತ್ತಾಯಿಸಿ ಪತ್ರ ಬರೆದವರ ವಿರುದ್ಧ ಕ್ರಮ ತೆಗೆದು ಕೊಳ್ಳುವಂತೆ ರಾಜ್ಯಾದ್ಯಕ್ಷ ಕೆ.ಎಸ್. ಈಶ್ವರಪ್ಪ ಅವರಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿ ಯೂರಪ್ಪ ಬಣದ ಸಚಿವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರು ಬರೆದಿರುವ ಪತ್ರ ಬಹಿರಂಗಗೊಂಡ ಬೆನ್ನಲ್ಲೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ಮುಖ್ಯಮಂತ್ರಿ ಯವರ ಬೆದರಿಕೆಗೆ ಬಗ್ಗದ ಭಿನ್ನುಮತೀಯ ಸಚಿವ, ಶಾಸಕರು ತುರ್ತು ಆಗಿ ಶಾಸಕಾಂಗ ಸಭೆ ಕರೆಯಬೇಕು. ಮತ್ತೆ ಆಗ್ರಹಪಡಿ ಸಿರುವುದಲ್ಲದೆ, ಪಕ್ಷದ ರಾಜ್ಯದ ೧೨ ಸಂಸದರು ಸಹ ಇವರ ಬೆಂಬಲಕ್ಕೆ ನಿಂತಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿಯವರು ಪಕ್ಷದ ೧೯ ಶಾಸಕರು ಶಾಸಕಾಂಗ ಸಭೆ ಕರೆಯುವಂತೆ ಮನವಿ ಮಾಡಿದ್ದಾರೆ. ತಾವು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಬರೆದ ಪತ್ರದ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳಬೇಕೇ ಹೊರತು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡುವಂತದ್ದಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ನಡೆಯು ತ್ತಿರುವ ಎಲ್ಲಾ ಬೆಳವಣಿಗೆಗಳನ್ನು ವರಿಷ್ಠರ ಗಮನಕ್ಕೆ ತಂದಿರುವುದಲ್ಲದೆ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಅವರು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅವರ ಸಲಹೆ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಪಕ್ಷದ ಅಧ್ಯಕ್ಷರಿಗೆ ಬರೆದ ಪತ್ರ ಬೆಳಕಿಗೆ ಬಂದಾಕ್ಷಣ, ಅದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ವೇದಿಕೆಗಳನ್ನು ಸೃಷ್ಠಿಸಲು ತಾವು ಅನುವು ಮಾಡಿಕೊಡುವುದಿಲ್ಲ. ವರಿಷ್ಠರು ಕೂಡ ಇದಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ರೇರ್ಸ್‌ಕೋರ್ಸ್ ರಸ್ತೆಯ ಯಡಿಯೂರಪ್ಪ ನಿವಾಸದಲ್ಲಿ ಸೇರಿದ್ದ ಅವರ ಬೆಂಬಲಿಗ ಸಚಿವ, ಶಾಸಕರು ಸಭೆ ಸೇರಿ ತುರ್ತಾಗಿ ಶಾಸಕಾಂಗ ಸಭೆ ಕರೆಯುವಂತೆ ಮತ್ತೊಮ್ಮೆ ಆಗ್ರಹಿಸಿದ್ದಾರೆ. ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಹರಿಹರ ಶಾಸಕ ಬಿ.ಪಿ. ಹರೀಶ್ ಹಲವು ಶಾಸಕರು, ಸಚಿವರ ವಿರುದ್ಧ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರು ಕೆಲವು ಆರೋಪ ಮಾಡಿದ್ದಾರೆ. ಆರೋಪಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಚಿವ, ಶಾಸಕರು, ಮುಖ್ಯಮಂತ್ರಿ ಸದಾನಂದಗೌಡರ ಸಮ್ಮುಖದಲ್ಲೇ ವಿವರಣೆ ನೀಡಬೇಕಾಗು ತ್ತದೆ. ಈ ಉದ್ದೇಶದಿಂದ ತಾವು ಸಭೆ ಕರೆಯುವಂತೆ ಆಗ್ರಹಿಸುತ್ತಿದ್ದೇವೆ.
Tagged with
snews