11-05-2012

Posted by JAYAKIRANA Kirana on Thursday, 10 May 2012 | 0 comments | Leave a comment...

ಮೇಷ : ಹಣಕಾಸಿನ ತೊಂದರೆಯಿಂದ ಮಾನಸಿಕ ನೆಮ್ಮದಿ ಇರುವುದಿಲ್ಲ.
ವೃಷಭ : ಧಾರ್ಮಿಕ ಕೆಲಸಗಳನ್ನು ಮಾಡುತ್ತೀರಿ.
ಮಿಥುನ : ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇದೆ.
ಕರ್ಕಾಟಕ : ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ಸಿಂಹ : ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚು ಮಾಡುತ್ತೀರಿ.
ಕನ್ಯಾ : ಭೂಮಿ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ.
ತುಲಾ: ಮಕ್ಕಳಿಂದ ನೆಮ್ಮದಿ ಇರುತ್ತದೆ.
ವೃಶ್ಚಿಕ : ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
ಧನು: ಶುಭ ಕೆಲಸಗಳನ್ನು ನಡೆಸುತ್ತೀರಿ.
ಮಕರ : ಕುಟುಂಬದಲ್ಲಿ ನೆಮ್ಮದಿ ಇರುತ್ತದೆ.
ಕುಂಭ: ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯುತ್ತದೆ.
ಮೀನ : ಉದ್ಯೋಗದಲ್ಲಿ ಏರುಪೇರಾಗುತ್ತದೆ.

11-05-2012

Posted by JAYAKIRANA Kirana on | 0 comments | Leave a comment...

ಹೊಟೇಲ್‌ಗೆ ಎಲ್ಲಾ ತರದ ಅಡುಗೆಯ ವರು ಬೇಕಾಗಿದ್ದಾರೆ. ೯೯೦೧೯೫೦೧೦೯
ಮಂಗಳೂರು : ಪೂನಾಕ್ಕೆ ಮನೆ ಕೆಲಸ ಮಹಿಳೆ ಬೇಕಾಗಿಲ್ಲ ೦೯೯೬೦೦೫೩೧೪೧.
ಕಂಕನಾಡಿ : ಆಪ್ಟಿಕಲ್ ಶಾಪ್‌ಗೆ ಯುವತಿ ಬೇಕು ೯೦೩೬೬೦೩೧೨೯.
ಮಂಗಳೂರು : ಕೊಂಚಾಡಿಗೆ ಸೈಬರ್‌ವೊಂದಕ್ಕೆ ಜನ ಬೇಕು ೯೦೦೮೧೨೨೮೨೯.
ಮಂಗಳೂರು : ಕಾಲ್ ಸೆಂಟರ್‌ಗೆ ಹೌಸ್ ಕೀಪರ್ ಬೇಕು ೯೯೧೬೧೧೯೪೬೯.
ಮಂಗಳೂರು : ಸುರತ್ಕಲ್ - ಬೈಕಂಪಾಡಿಗೆ ಕೊರಿಯರ್ ಏಜೆನ್ಸಿ ಬೇಕು ೯೮೪೫೮೦೬೪೮೦.
ಕಾವೂರು : ಹೊಟೇಲ್‌ಗೆ ಕುಕ್ & ಸಪ್ಲಾಯರ್ ಬೇಕು ೯೮೮೦೭೨೫೪೨೨.
ಮಂಗಳೂರು : ಹೊಟೇಲ್‌ಗೆ ಕಿಚನ್ ಹೆಲ್ಪರ್ ಬೇಕು ೯೪೪೮೩೮೩೭೦೫.
ಮಂಗಳೂರು : ಸ್ಟಾಕ್, ಸೇಲ್ಸ್ ಮೇಲ್ವಿ ಚಾರಣೆಗೆ ಮಹಿಳಾ ಕ್ಲರ್ಕ್, ಮಾರ್ಕೆಟಿಂಗ್‌ಗೆ ಯುವಕರು ಬೇಕು ೯೮೪೫೩೫೩೭೮೯.
ಪುತ್ತೂರು : ದ್ವಿಚಕ್ರವಾಹನ ಶೋರೂಮ್‌ಗೆ ಸೇಲ್ಸ್‌ಮ್ಯಾನ್ ಬೇಕು ೮೭೪೮೯೭೦೨೮೬.
ಮಂಗಳೂರು: ಬೇಕರಿ ಮತ್ತು ಜ್ಯೂಸ್ ಅಂಗಡಿಗೆ ಜನ ಬೇಕು ೯೮೪೪೫೨೧೭೪೩.
ಮಂಗಳೂರು : ಒಪ್ಟಿಕಲ್ ಶಾಪಿಗೆ ಯುವತಿ ಬೇಕು ೯೦೩೬೬೨೧೦೭೯.
ಮಂಗಳೂರು: ಸ್ಕ್ರೀನ್‌ಪ್ರಿಂಟಿಂಗ್‌ಗೆ ಜನ ಬೇಕು ೭೭೬೦೬೩೧೪೫೭.
ಮಂಗಳೂರು: ಡಿಟಿಪಿ ಅನುಭವ ಇರುವ ಯುವತಿಯರು ಬೇಕು ೯೮೪೪೪೯೮೦೯೮.
ಮಂಗಳೂರು: ಗ್ರಾಫಿಕ್ಸ್‌ಗೆ ಯುವತಿಯರು ಬೇಕು ೯೦೩೬೪೮೯೦೪೦.
ತೊಕ್ಕೊಟ್ಟು : ಕಚೇರಿ ಕೆಲಸಕ್ಕೆ ಪಿಯುಸಿ ಯಾದ ಯುವತಿ ೭೭೯೫೧೬೯೭೮೭.
ಮಂಗಳೂರು : ಸೇಲ್ಸ್‌ಮ್ಯಾನ್ ಮತ್ತು ಎಕ್ಸಿ ಕ್ಯೂಟಿವ್ ಬೇಕು ೭೨೫೯೩೫೪೮೮೪
ಮಂಗಳೂರು : ಏಜೆನ್ಸಿಯೊಂದಕ್ಕೆ ಸೇಲ್ಸ್‌ಗೆ ಯುವತಿಯರು ಬೇಕು ೨೪೪೩೫೭೬.
ಮಂಗಳೂರು : ಮಂಗಳಾದೇವಿ ಬಳಿ ಆಫೀಸ್ ಕೆಲಸಕ್ಕೆ ಹೆಲ್ಪರ್ ಬೇಕು ೯೮೪೪೦೦೯೯೦೫
ಬೈಕಂಪಾಡಿ : ಹೊಟೇಲಿಗೆ ಮಾಂಸಾಹಾರಿ ಅಡುಗೆಯವರು, ಕಿಚನ್ ಹೆಲ್ಪರ್ ಬೇಕು ೯೯೮೦೨೬೭೮೮೪.
ಪಡೀಲ್ : ಪೆಟ್ರೋಲ್ ಪಂಪ್‌ಗೆ ಯುವಕರು ಬೇಕು ೯೪೪೮೧೩೪೧೨೩.
ಕೋಡಿಕಲ್ : ಮನೆಕಾರಿಗೆ ಡ್ರೈವರ್ ಬೇಕು ೨೪೫೧೮೨೮.
ಮಂಗಳೂರು : ಕಂಪ್ಯೂಟರ್ ತಿಳಿದಿರುವ ಲೇಡಿ ಬೇಕು ೯೮೪೪೪೯೦೯೮.
ಕಂಕನಾಡಿ ಅಟೋ ಮೊಬೈಲ್ ಶಾಪ್‌ಗೆ ಜನಬೇಕು. ೯೪೪೯೪೪೧೨೩೪.
ಉಡುಪಿ : ಕಂಪೆನಿ ಕೆಲಸಕ್ಕೆ ಯುವಕ - ಯುವತಿಯರು ಬೇಕು ೯೯೮೦೪೬೩೬೧೧.
ಮಂಗಳೂರು : ಯೆಯ್ಯಾಡಿಯಲ್ಲಿರುವ ಮುದ್ರಣಾಲಯಕ್ಕೆ ಡಿ.ಟಿ.ಪಿ. ಅಪರೇಟರ್ ಬೇಕು ೨೨೧೧೦೫೦.
ಮಂಗಳೂರು : ತಿಂಡಿ (ಪಪ್ಸ್) ಮಾಡು ವವರು ಬೇಕು ೯೯೦೧೩೫೦೪೩೧

ಎಟಿಎಂ ಒದಗಿಸಿ

Posted by JAYAKIRANA Kirana on | 0 comments | Leave a comment...

ಹಳೆಯಂಗಡಿಯಲ್ಲಿ ಬ್ಯಾಂಕ್ ಸೇವೆ ಲಭ್ಯವಿದ್ದರೂ ಒಂದೇ ಒಂದು ಎಟಿಎಂ ಮೆಷಿನ್ ಇಲ್ಲ. ಇದರಿಂದ ಹಳೆಯಂಗಡಿ ಹಾಗೂ ಸುತ್ತಲಿನ ಪ್ರದೇಶದ ಜನರು ಸಮಸ್ಯೆಗೊಳಗಾಗಿ ದ್ದಾರೆ. ತುರ್ತು ಸಂದರ್ಭದಲ್ಲಿ ಹಣ ಡ್ರಾ ಮಾಡಬೇಕಾದರೆ ಮುಕ್ಕ ಅಥವಾ ಮೂಲ್ಕಿಗೆ ಹೋಗಬೇಕಾಗಿದೆ. ಇಲ್ಲಿ ಗ್ರಾಮೀಣ ಬ್ಯಾಂಕ್‌ಗಳು ಮಾತ್ರವ ಲ್ಲದೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆ ಗಳೂ ಇವೆ. ಎಟಿಎಂ ಮೆಷಿನ್ ಸ್ಥಾಪ ನೆಗೆ ಅಗತ್ಯವಿರುವ ಗ್ರಾಹಕರ ಸಂಖ್ಯೆ ಇಲ್ಲಿದೆ. ಇಲ್ಲಿ ಒಂದಾದರೂ ಎಟಿಎಂ ಮೆಷಿನ್ ಸ್ಥಾಪಿಸಿದರೆ ಒಳ್ಳೆಯದ ಲ್ಲವೇ? ಬ್ಯಾಂಕ್‌ಗಳ ಅಧಿಕಾರಿ ವರ್ಗ ಗಮನಿಸಿ ಕ್ರಮ ಕೈಗೊಳ್ಳಲಿ.
ಗಣೇಶ್, ಹಳೆಯಂಗಡಿ

ದೇವಳ ಪ್ರವೇಶಕ್ಕೆ ವಸ್ತ್ರಸಂಹಿತೆ ಅತ್ಯಗತ್ಯ
ದೇವಸ್ಥಾನವನ್ನು ಪ್ರವೇಶಿಸಲು ಪುರುಷರು ಮತ್ತು ಮಹಿಳೆಯರಿಗೆ ಸೂಕ್ತ ವಸ್ತ್ರಸಂಹಿತೆಯನ್ನು ಅಳವಡಿಸಬೇಕಿರುವುದು ಅತ್ಯಗತ್ಯವಾಗಿದೆ. ಯಾಕೆಂ ದರೆ ಇಂದಿನ ಸನ್ನಿವೇಶದಲ್ಲಿ ಯುವತಿಯರು ಅರೆಬರೆ ಬಟ್ಟೆ ಧರಿಸಿ ದೇವಳವನ್ನು ಪ್ರವೇಶಿಸು ತ್ತಾರೆ. ಇದು ದೇವಳದೊಳಗೆ ಭಕ್ತರ ಚಿತ್ತ ಚಾಂಚ ಲ್ಯಕ್ಕೆ ಕಾರಣವಾಗುತ್ತದೆ.
ಶಾಲೆ-ಕಾಲೇಜ್‌ಗಳಿಗೆ ಹೋಗುವ ಹೆಣ್ಣು ಮಕ್ಕಳು ಇಂಥ ಪ್ರಚೋದಕ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸುತ್ತಿದ್ದು, ಇವರಿಗೆ ಹೆತ್ತವರೇ ಪ್ರೋತ್ಸಾಹ ನೀಡು ತ್ತಾರೆ ಎಂದರೆ ತಪ್ಪಾಗದು. ಇತರರನ್ನು ತಮ್ಮೆಡೆಗೆ ಸೆಳೆಯುವಂತೆ ಬಟ್ಟೆಯನ್ನು ಧರಿಸಿ ಓಡಾಡುವ ಹೆಣ್ಣು ಮಕ್ಕಳು ನೈತಿಕ ಅಧ:ಪತನವನ್ನೂ ಕಾಣುತ್ತಿದ್ದಾರೆ. ಮಿಡಿ-ಸ್ಕರ್ಟ್, ಬಿಗಿಯಾದ ಉಡುಪುಗಳು ಹೆಣ್ಣು ಮಕ್ಕಳ ಸೌಂದರ್ಯಕ್ಕೆ ಪೂರಕ ಆಗಿರುವ ಬದಲು ಅವರನ್ನು ಕಾಮದ ಗೊಂಬೆಗಳನ್ನಾಗಿ ಮಾಡು ತ್ತದೆ. ಕಾಮುಕರು ಬಲು ಸುಲಭವಾಗಿ ಇಂಥವರ ಮೇಲೆ ವಕ್ರದೃಷ್ಟಿ ಬೀಳಲು ಕಾರಣವಾಗುತ್ತದೆ.
ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳ ಹೆತ್ತವರು, ಪೋಷ ಕರು ಅಗತ್ಯ ಗಮನಿಸಬೇಕು. ಹಿಂದೂ ದೇವಾಲ ಯಕ್ಕೆ ಪ್ರವೇಶಿಸಲು ಪುರುಷರು ಮತ್ತು ಮಹಿಳೆ ಯರಿಗೆ ವಸ್ತ್ರಸಂಹಿತೆಯು ಎಲ್ಲೆಡೆ ಜಾರಿಗೆ ಬರು ವಂತಾಗಲಿ.
ರಮೇಶ್ ಕುಮಾರ್, ಮೂಡುಕೊಣಾಜೆ

ಅಭಿನಂದನೆಗಳು
ಕೆಲವು ದಿನಗಳ ಹಿಂದೆ ಜಯ ಕಿರಣ ಪತ್ರಿಕೆಯಲ್ಲಿ ಮುಸ್ಲಿಂ ನೂತನ ವಾದಿ ಸಂಘಟನೆಯೊಂದರ ನಾಯ ಕನ ಅಸಲಿಮುಖವನ್ನು ಬಹಿರಂಗ ಪಡಿಸಿದ್ದಕ್ಕೆ ಧನ್ಯವಾದಗಳು. ತಾನೇ ಸಂಘಟನೆಯೊಂದನ್ನು ಹುಟ್ಟು ಹಾಕಿ ಅದರ ಸ್ವಯಂಘೋಷಿತ ಅಧ್ಯಕ್ಷ ನಾಗಿದ್ದು ಮಾತ್ರವಲ್ಲದೆ, ಲಕ್ಷಾಂತರ ಮಂದಿಯನ್ನು ಮರಳು ಗೊಳಿಸಿದ್ದ ಭೂಪ ಇತ್ತೀಚೆಗೆ ವಿವಾಹಿತ ಮಹಿ ಳೆಯ ಸಂಗ ಮಾಡಿ ಕಾಟಿಪಳ್ಳದಲ್ಲಿ ಒದೆ ತಿಂದಿದ್ದು ಮುಸ್ಲಿಂ ಸಮುದಾ ಯದ ಬಹುತೇಕರಿಗೆ ತಿಳಿದಿತ್ತು. ಆದರೆ ಇದನ್ನು ಯಾರೂ ಚರ್ಚಿಸು ತ್ತಿರಲಿಲ್ಲ. ಆದರೆ ಪತ್ರಿಕೆ ಅಂಥ ಸಾಹ ಸಕ್ಕೆ ಕೈಹಾಕಿ ಭೇಷ್ ಅನ್ನಿಸಿಕೊಂ ಡಿದೆ. ಮುಸ್ಲಿಂ ಮಹಿಳೆಯರನ್ನು ಮಾತಿನಿಂದಲೇ ಮರಳು ಮಾಡಿ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಈತನಿಗೆ ಇನ್ನಾದರೂ ಸಮಾಜದ ಹಿರಿಯರು ಬಹಿಷ್ಕಾರ ಹಾಕಬೇಕಿದೆ. ಪತ್ರಿಕಾ ಬಳ ಗಕ್ಕೆ ನಾವು ಚಿರಋಣಿಯಾಗಿರುತ್ತೇವೆ.
ಎಸ್.ಆರ್., ಬಂದರ್

ಸಂಘ-ಸಂಸ್ಥೆಗಳು ಊರಿನ ಏಳಿಗೆಗಾಗಿ ಶ್ರಮಿಸುವುದೇ?
ರಾಜ್ಯದಲ್ಲಿ ಸಾರಾಯಿ ನಿಷೇಧ ಜಾರಿಯಲ್ಲಿದ್ದರೂ ಕೂಡಾ ನಮ್ಮ ನರಿಕೊಂಬು ಹಾಗೂ ಸುತ್ತಮುತ್ತ ಲಿನ ಕೆಲವು ಮನೆಗಳು ಹಾಗೂ ದಿನಸಿ ಅಂಗಡಿಗಳಲ್ಲಿ ನಿತ್ಯ ನಿರಂತರ ವಾಗಿ ಮಾರಾಟವಾಗುತ್ತಿದೆ. ಇದು ಸಂಬಂಧ ಪಟ್ಟ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಅಧಿಕಾರಿಗಳಿಗೆ ತಿಳಿದೇ ಇದ್ದರೂ ಯಾರು ಕೂಡಾ ಇದರ ಬಗ್ಗೆ ಕ್ರಮ ಕೈಗೊಳ್ಳುವುದು ಕಂಡು ಬರುತ್ತಿಲ್ಲ. ನಮ್ಮ ಊರಿನ ಪೊಲೀಸರು ಅಕ್ರಮ ಸಾರಾಯಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಮಹಾತ್ಮಗಾಂಧಿ ಜನ್ಮ ದಿನದಂದು ಮಾತ್ರ. ಒಬ್ಬ ಕಳ್ಳನನ್ನು ಹಿಡಿದ ನಂತರ ಅವನನ್ನು ತನಿಖೆ ಮಾಡು ವಾಗ ಐದಾರು ಮಂದಿ ಕಳ್ಳರು ಸಿಗು ತ್ತಾರೆ. ಅದೇ ರೀತಿ ಒಬ್ಬ ಕುಡುಕ ನನ್ನು ಹಿಡಿದು ಬಾಯಿ ಬಿಡಿಸಿದರೆ ಅವನಿಂದಲೇ ಎಲ್ಲಿ ಸಾರಾಯಿ ಸಿಗು ತ್ತದೆ ಎನ್ನುವುದನ್ನು ಪತ್ತೆಹಚ್ಚಬ ಹುದು.
ನೊಂದ ಮಹಿಳೆ, ನೆಲ್ಕಡ್ಕ

ಹಿಂದು ಸಂಘಟನೆಗಳು ಗಮನಿಸಲಿ
ಹಿಂದೂ ಸಂಘಟನೆಗಳ ನಾಯಕರು, ಕಾರ್ಯಕರ್ತರು ಮತ್ತೊಬ್ಬರ ಕಡೆ ಕೈತೋರಿಸುವ ಬದಲು ಮೊದಲು ಹಿಂದೂ ಸಮಾಜ ಬಾಂಧವರ ಸಮಸ್ಯೆಯನ್ನು ಬಗೆಹ ರಿಸಲಿ. ಬಡತನ, ವರದಕ್ಷಿಣೆ ಸಮಸ್ಯೆ ಇನ್ನೂ ಜ್ವಲಂತವಾಗಿಯೇ ಇದೆ. ಕುಡಿತ, ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಹಿಂದೂ ಯುವಕರ ಮನಸ್ಸನ್ನು ಬದಲಾಯಿಸಬೇಕು. ಈ ಮೂಲಕ ಹಿಂದೂ ಸಂಘಟನೆಯನ್ನು ಬಲಪಡಿಸಬೇಕಾಗಿದೆ.
ಎ.ಕುಮಾರ್, ಅಜ್ಜಿಯಮಜಲು

ಜ್ಯೋತಿಷಿಗಳು ಕೆಂಪುಗೂಟದ ಕಾರು ಬಳಸಬಹುದೇ?
ತಮ್ಮ ಕಾರುಗಳಲ್ಲಿ ಕೆಂಪು ಗೂಟಗಳನ್ನು ಹಾಕಿ ಕೊಂಡು ತಿರುಗುವುದಕ್ಕೂ ಒಂದು ಕಾನೂನು ಎನ್ನು ವುದು ಇದೆ. ಕೆಲ ಅಧಿಕೃತರಿಗೆ ಮಾತ್ರ ಈ ರೀತಿ ರೆಡ್ ಲೈಟ್ ಬಳಸಲು ಅಧಿಕಾರವಿದೆ ಎಂಬ ಬಗ್ಗೆ ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದೆ. ಆದರೆ ಇತ್ತೀಚೆಗೆ ಜ್ಯೋತಿಷಿ ಯೊಬ್ಬರು ತಮ್ಮ ಕಾರಿನಲ್ಲಿ ರೆಡ್‌ಲೈಟ್ ಹಾಕಿಕೊಂಡು ತಿರುಗುವ ವಿಚಾರ ತಿಳಿದು ನನಗೆ ಆಶ್ಚರ್ಯವಾಯಿತು. ಮಂತ್ರಿಗಳಲ್ಲೂ ಎಲ್ಲರೂ ಈ ಕೆಂಪು ಗೂಟವನ್ನು ಬಳಸು ವಂತಿಲ್ಲ.
ಹೀಗಿರುವಾಗ ಸರ್ಕಾರದ ಯಾವುದೇ ವಿಚಾರಕ್ಕೆ ಸಂಬಂಧಪಡದ ವ್ಯಕ್ತಿಯೊಬ್ಬ ಈ ರೀತಿ ಕೆಂಪು ಗೂಟ ವನ್ನೇರಿಸಿಕೊಂಡು ರಾಜಾರೋಷವಾಗಿ ತಿರುಗಾಡುವುದನ್ನು ಕೇಳುವವರಿಲ್ಲವೇ? ಈ ಹಿಂದೆ ಕನ್ನಡದ ಖ್ಯಾತ ಮಾಧ್ಯಮ ವೊಂದು ಅನಧಿಕೃತರು ರೆಡ್‌ಲೈಟ್ ಹಾಕಿ ಓಡಾಡುವ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿತ್ತು. ಆದರೆ ತಮ್ಮ ವಾಹಿನಿಯ ಆಪ್ತನಾದ ಈ ಜ್ಯೋತಿಷಿಯ ಕೆಂಪು ಗೂಟದ ಗೀಳು ಇವರ ಕಣ್ಣಿಗೆ ಬಿದ್ದಿಲ್ಲವೇ? ತಾನ್ಯಾವ ಸಂಸದನಿಗೂ ಕಮ್ಮಿಯಿಲ್ಲ ಎಂಬಂತೆ ರೆಡ್‌ಲೈಟ್ ಹಾಕಿ ಸುತ್ತಾಡುವ, ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರುವ ಇಂಥವರ ವಿರುದ್ದ ಕ್ರಮ ಕೈಗೊಳ್ಳುವವರು ಯಾರು? ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಲಿ.
ಸಂಕೇತ್ ನಾಯಕ್, ಕಂಕನಾಡಿ

ಬಸ್ ಚಾಲಕರಲ್ಲೇ ಒಗ್ಗಟ್ಟಿಲ್ಲವೇ?
ಮೊನ್ನೆಯಷ್ಟೇ ಖಾಸಗಿ ಬಸ್ ಚಾಲಕನ ಮೇಲೆ ಮುಡಿಪುವಿನಲ್ಲಿ ನಡೆದ ಹಲ್ಲೆಯನ್ನು ಖಂಡಿಸಿ ಮತ್ತು ಆರೋಪಿಯ ಬಂಧನಕ್ಕೆ ಆಗ್ರಹಿಸಿ ಬಸ್ ಮುಷ್ಕರ ನಡೆಯಿತು. ಆದರೆ ಈ ಮುಷ್ಕರದಲ್ಲೂ ಸಿಟಿ, ಸರ್ವೀಸ್ ಎಂಬ ಭೇದಭಾವ ತಾಳಿದ್ದು ಎಷ್ಟು ಸರಿ? ಬಸ್ ಚಾಲಕರೆಂದ ಮೇಲೆ ಅದು ಸರ್ವೀಸ್ ಇರಲಿ ಅಥವಾ ಸಿಟಿ ಬಸ್ ಇರಲಿ. ಎರಡೂ ಒಂದೇ. ಇಲ್ಲಿ ಯಾವ ಬಸ್ಸಿನ ಚಾಲಕನ ಮೇಲೆ ಹಲ್ಲೆ ನಡೆದರೂ ಅದು ಹಲ್ಲೆಯೇ. ಹೀಗಿರುವಾಗ ಮುಷ್ಕ ರದ ದಿನ ಸಿಟಿ ಬಸ್ಸಿನವರು ರಾಜಾರೋಷವಾಗಿ ಬಸ್ ಚಲಾಯಿಸಿದ್ದು, ಎಷ್ಟು ಸರಿ? ಹೀಗಾದರೆ ಆರೋಪಿಗಳ ಬಂಧನ ಖಂಡಿತಾ ಸಾಧ್ಯವಿಲ್ಲ. ನಮ್ಮಲ್ಲೇ ಒಗ್ಗಟ್ಟಿಲ್ಲ ಎನ್ನುವುದು ಇದರಿಂದ ಬಹಿರಂಗಗೊಳ್ಳುತ್ತದೆ. ಮೊನ್ನೆ ನಡೆದ ಬಸ್ ಮುಷ್ಕರದಿಂದ ಯಾವುದೇ ಲಾಭವಾಗಿಲ್ಲ ಎನ್ನಬಹುದು. ಯಾಕೆಂದರೆ ಸಿಟಿ ಬಸ್‌ಗಳು ಎಂದಿನಂತೆ ಈ ಪ್ರದೇಶದಲ್ಲಿ ರಾಜಾರೋಷವಾಗಿ ಸಂಚರಿಸುತ್ತಿ ದ್ದವು. ನಮಗೂ ಘಟನೆಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದರು. ಇನ್ನಾ ದರೂ ಸಿಟಿ ಬಸ್, ಸರ್ವೀಸ್ ಬಸ್ ಎಂಬ ಭೇದಭಾವ ಬೇಡ. ಬಸ್ ಚಾಲಕ ಎಂದ ಮೇಲೆ ಎಲ್ಲರೂ ಒಂದೇ. ಹೀಗಿರುವಾಗ ಸರ್ವೀಸ್ ಬಸ್ ಚಾಲಕನ ಮೇಲೆ ನಡೆದ ಹಲ್ಲೆಯನ್ನು ಎಲ್ಲಾ ಖಾಸಗಿ ಬಸ್ ಚಾಲಕರು ಖಂಡಿಸಲೇ ಬೇಕು. ಆಗ ಮಾತ್ರ ಅಧಿಕಾರದ ಮದದಿಂದ ಬೇಕಾಬಿಟ್ಟಿ ವರ್ತಿಸುವ ಹಲ್ಲೆ ಕೋರರಿಗೆ ಸೂಕ್ತ ಪಾಠ ಕಲಿಸಲು ಸಾಧ್ಯ. ಇನ್ನಾದರೂ ಬಸ್ ಚಾಲಕರು ಈ ರೀತಿಯ ವಿಚಾರಗಳಲ್ಲಿ ಒಗ್ಗಟ್ಟಿನಿಂದಿರಲಿ.
ನೊಂದ ಬಸ್ ಚಾಲಕ, ಮಂಗಳೂರು

ಬಾವಿ ದುರಂತದ ಬಗ್ಗೆ ಎಚ್ಚರಿಕೆ ಅಗತ್ಯ
ಇತ್ತೀಚಿಗೆ ಹಳೆಯಂಗಡಿಯಲ್ಲಿ ಬಾವಿ ತೋಡುತ್ತಿದ್ದ ಇಬ್ಬರು ಕಾರ್ಮಿ ಕರು ಮಣ್ಣು ಕುಸಿದು ಮೃತಪಟ್ಟ ಘಟನೆ ನಡೆದಿದೆ. ಇಂಥ ಘಟನೆ ಅದೆಷ್ಟು ಬಾರಿ ನಡೆದರೂ ಗುತ್ತಿಗೆದಾರರು, ಕಾರ್ಮಿಕರು ಎಚ್ಚರಗೊಳ್ಳುವುದಿಲ್ಲ. ಮಣ್ಣು ತೇವಗೊಂಡಿರುವ ಜಾಗದಲ್ಲಿ ಬಾವಿಯನ್ನು ತೋಡುವಾಗ ಎಚ್ಚರ ವಹಿಸದಿ ದ್ದಲ್ಲಿ ಅಪಾಯ ತಪ್ಪಿದ್ದಲ್ಲ. ಬಾವಿ ತೋಡುವಾಗ ದುರಂತ ನಡೆದರೆ ಕಾರ್ಮಿ ಕರು ಸುರಕ್ಷಿತವಾಗಿ ಪಾರಾಗುವ ಬಗ್ಗೆ ಅವರಿಗೆ ತರಬೇತಿಯನ್ನು ನೀಡು ವುದು ಅವಶ್ಯ. ಗುತ್ತಿಗೆದಾರರು ವಹಿಸಿ ಕೊಂಡ ಕೆಲಸವನ್ನು ಬೇಗನೆ ಮುಗಿ ಸುವ ನಿಟ್ಟಿನಲ್ಲಿ ಹೊರಜಿಲ್ಲೆಗಳ ಕೂಲಿ ಕಾರ್ಮಿಕರನ್ನು ಹೀನಾಯವಾಗಿ ದುಡಿಸಿಕೊಳ್ಳುವುದೂ ಕಂಡುಬರುತ್ತಿದೆ. ಇದೆಲ್ಲದಕ್ಕೆ ಜಿಲ್ಲಾಡಳಿತದ ಸೂಕ್ತ ನಿಯಮಗಳು ಅನ್ವಯಿಸದೇ ಇರುವುದು ಕಾರಣ. ಅಲ್ಲದೇ ಬಾವಿ ದುರಂತ ಗಳು ಸಂಭವಿಸಲು ಅವೈಜ್ಞಾನಿಕ ವಿಧಾನಗಳೂ ಕಾರಣ ಎನ್ನಬಹುದು. ಎಷ್ಟೇ ತಾಂತ್ರಿಕ ವಿಧಾನಗಳು ನಮ್ಮಲ್ಲಿದ್ದರೂ ಬಾವಿಗೆ ಕಾರ್ಮಿಕರನ್ನು ಇಳಿಸುವಾಗ ಎಲ್ಲೂ ಮುನ್ನೆಚ್ಚರಿಕೆಯನ್ನು ವಹಿಸುವುದೇ ಇಲ್ಲ. ಇದರಿಂದ ದುರಂತಗಳು ಸಂಭವಿಸುತ್ತಿವೆ. ಕೂಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಡಳಿತ ಇನ್ನಾದರೂ ಗಮನಹರಿಸಲಿ.
ರಾಕೇಶ್, ಸುರತ್ಕಲ್

ಕೀಳುಮಟ್ಟದಿಂದ ಟೀಕಿಸಿದರೆ ಪ್ರಯೋಜನವಿಲ್ಲ
ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿ ಹುದ್ದೆಯನ್ನು ಏರಿದಾಗಿ ನಿಂದ ಅನಾವಶ್ಯವಾಗಿ ರಾಜ್ಯದ ಕೆಲವು ರಾಜಕಾರಣಿಗಳು ಅಪಸ್ವರ ಎತ್ತುತ್ತಿ ದ್ದಾರೆ. ಆಡಳಿತಕ್ಕೆ ಧಕ್ಕೆ ತರಲು ಇನ್ನಿ ಲ್ಲದ ಸಾಹಸ ಪಡುತ್ತಿದ್ದಾರೆ. ಕೆಲವ ರಂತೂ ಹುದ್ದೆಗಾಗಿ ಕಾನೂನಿನ ಜೊತೆ ಗುದ್ದಾಡಲು ತಯಾರಾಗಿದ್ದಾರೆ. ಇದು ತೀರಾ ನಾಚಿಕೆಗೇಡಿನ ಸಂಗತಿ.
ಒಬ್ಬ ಆಡಳಿತಗಾರನು ತಮ್ಮ ಹುದ್ದೆಯನ್ನು ನಿರ್ವಹಿಸುವಾಗ ಸಣ್ಣ ಪುಟ್ಟ ತಪ್ಪುಗಳು ಕಂಡುಬರುವುದು ಸಹಜ. ಆ ಸಂದರ್ಭದಲ್ಲಿ ಅವನನ್ನು ಟೀಕಿಸುವಾಗ ಸೂಕ್ತ ಸಲಹೆ ನೀಡಲು ವಿರೋಧ ಪಕ್ಷಗಳು ಇರಲೇಬೇಕು. ಆದರೆ ಸುಖಾಸುಮ್ಮನೆ ಮತಿಭ್ರಮೆ ಯಾದಂತೆ ಇಲ್ಲಸಲ್ಲದ ಆರೋಪ ಹೊರಿಸುವುದು ಸರಿಯಲ್ಲ. ವಾಟಾಳ್ ನಾಗರಾಜ್ ಅವರು ಸಿಎಂ ಅವರನ್ನು ಗಂಡಸೇ ಅಲ್ಲ ಎಂದಿರುವುದು ಶೋಭೆ ತರುವ ವಿಚಾರವಲ್ಲ. ಅದೂ ಮುಖ್ಯ ಮಂತ್ರಿಯವರು ಚಾಮರಾಜನಗರಕ್ಕೆ ವಿಶೇಷ ಅಭಿವೃದ್ಧಿ ಪ್ಯಾಕೇಜ್ ನೀಡಿಲ್ಲ ಎಂಬ ವಿಚಾರಕ್ಕೆ. ಎಲ್ಲಾ ಕೆಲಸ ಒಂದೇ ಕ್ಷಣ ಆಗಲು ಸಾಧ್ಯವಿಲ್ಲ. ಪ್ರತಿ ಯೊಂದಕ್ಕೂ ತನ್ನದೇ ಆದ ಸಮ ಯದ ಅಗತ್ಯವಿರುತ್ತದೆ. ಕಾಯುವುದನ್ನು ಬಿಟ್ಟು ಸಾರ್ವಜನಿಕವಾಗಿ ಕೀಳುಮಟ್ಟ ದಲ್ಲಿ ಟೀಕಿಸುವುದು ನಿಷ್ಪ್ರಯೋಜಕ.
ಗಣೇಶ್ ಉಕ್ಕಿನಡ್ಕ, ಪುತ್ತೂರು

ಜನ ಸೇವೆ ಯಾವಾಗ?
ಜನಪ್ರತಿನಿಧಿಗಳೆಲ್ಲ ಪರಸ್ಪರ ಕಚ್ಚಾಡುತ್ತಾ ರಾಜಕೀಯ ಮಾಡು ವುದರಲ್ಲೇ ತೊಡಗಿಕೊಂಡಿದ್ದಾರೆ. ಇವರಿಗೆ ಜನರ ಮೇಲೆ ಎಳ್ಳಷ್ಟೂ ಕಾಳಜಿಯಿಲ್ಲ. ರಾಜ್ಯದಲ್ಲಿ ಬರ ಪರಿ ಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ನೀರು, ಮೇವು ಸಿಗದೆ ಜಾನುವಾರು ಗಳು ಸಾವನ್ನಪ್ಪುತ್ತಿವೆ. ಪರಿಸ್ಥಿತಿ ಹೀಗಿ ದ್ದರೂ ರಾಜ್ಯದ ಜನತೆಯ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸದೆ ತಮ್ಮ ವೈಯಕ್ತಿಕ ಹಿತಸಾಧನೆಯಲ್ಲಿ ತೊಡ ಗಿರುವ ರಾಜಕಾರಣಿಗಳನ್ನು ಜನರೇ ಅಧಿಕಾರದಿಂದ ಕಿತ್ತೊಗೆಯಬೇಕು. ಸದಾ ಅಧಿಕಾರ ವ್ಯಾಮೋಹದಿಂದ ಅಲೆದಾಡುವ ಇಂಥ ಜನಪ್ರತಿನಿಧಿ ಗಳು ಜನರ ಸೇವೆ ಮಾಡುವುದು ಯಾವಾಗ? ಇದೆಲ್ಲ ಜನಸಾಮಾ ನ್ಯರು ಬೇಕಾಬಿಟ್ಟಿ ಮತ ಚಲಾಯಿ ಸಿದ್ದರ ಪರಿಣಾಮ. ಮುಂದಿನ ಚುನಾ ವಣೆಯಲ್ಲಾದರೂ ಜನರ ಯೋಗ ಕ್ಷೇಮ ವಿಚಾರಿಸುವ ಯೋಗ್ಯರನ್ನು ಆರಿಸೋಣ. ಈ ಮೂಲಕ ಜನಪರ ಆಡಳಿತ ನಿರೀಕ್ಷಿಸೋಣ.
ಕೀರ್ತನ್, ನಾರಾವಿ

ಹಾಸ್ಯ ಯಾವತ್ತೂ ಅಪಹಾಸ್ಯವಾಗದಿರಲಿ
ಮನುಷ್ಯ ಜೀವನದಲ್ಲಿ ನಗುವುದು ಹಾಗೂ ಇತರರನ್ನು ನಗಿಸುವುದು ಉತ್ತಮ ಹವ್ಯಾಸ. ಆದರೆ ಹಾಸ್ಯವು ವಿಪರೀತವಾದರೆ ಅದು ಹಾಸ್ಯ ವಾಗುವುದಿಲ್ಲ. ಅದು ಅಪಹಾಸ್ಯವೆಂದಾಗುತ್ತದೆ. ಈಗೀಗ ಕೆಲವೊಂದು ಟಿವಿ ಚಾನೆಲ್‌ಗಳು ಹಾಸ್ಯ ಕ್ಕೆಂದು ನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯ, ಆಚರಣೆಗಳನ್ನು ಬಿಂಬಿಸಿ, ಆ ಮೂಲಕ ವಿಕೃತ ಹಾಸ್ಯವನ್ನು ತೋರ್ಪಡಿಸುತ್ತದೆ. ಆದರೆ ಇದು ಎಷ್ಟರಮಟ್ಟಿಗೆ ಸರಿಯಾದುದು ಎಂದು ಯೋಚಿ ಸಬೇಕಾಗಿದೆ. ಈ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಆಯೋಜಕರ, ಕಾರ್ಯಕ್ರಮ ನಿರೂ ಪಕರ ಮತ್ತು ವಾಹಿನಿಯ ಅಜ್ಞಾನದ ಅಂಧಕಾ ರವೋ ಅಥವಾ ಜ್ಞಾನದ ದುರಹಂಕಾರದ ಪರ ಮಾವಧಿಯೋ ತಿಳಿಯುತ್ತಿಲ್ಲ. ಧರ್ಮದ ಆಚರ ಣೆಯ ಕಟ್ಟುಪಾಡುಗಳನ್ನು ಕೆಲವೊಂದು ಕಾರ್ಯ ಕ್ರಮಗಳಲ್ಲಿ ವಿಡಂಬನೆ ಮಾಡಿ ತೋರಿಸುತ್ತಾರೆ. ನಮ್ಮ ನಾಡಿನ ಮಹಾಪುರುಷರು ನೀಡಿದಂತಹ ಸಾತ್ವಿಕ ಭಜನೆಗಳನ್ನು, ಮಾನವ ಜೀವನಕ್ಕೆ ಪೂರ ಕವಾದ ಜ್ಞಾನ ಸಾಹಿತ್ಯ ಭಂಡಾರಗಳನ್ನು ಮತ್ತು ಕಾಡು ಜನರಲ್ಲಿರುವ ಧರ್ಮಾಭಿಮಾನ, ಜ್ಞಾನ, ಗೌರವ, ದೇಶಪ್ರೇಮ ಇಂತಹ ವಿಚಾರಗಳನ್ನು ನಮ್ಮ ಭಾರತದ ವಾಹಿನಿಗಳು ಗೌರವಿಸುವುದಿಲ್ಲ ಅಥವಾ ಗೌರವಿಸುವುದನ್ನು ಕಂಡರೆ ಅವರಿಗೆ ಆಗುವುದಿ ಲ್ಲವೋ ಏನೋ! ನಮ್ಮ ವಾಹಿನಿಗಳಿಗೆ ಧರ್ಮದ ಮತ್ತು ಭಾರತ ದೇಶದ ಸಂಸ್ಕೃತಿಯ ಆಚರಣೆ ಯನ್ನು ಮೂಢನಂಬಿಕೆ ಎಂದು ಬಿಂಬಿಸದಿದ್ದರೆ ಇವರು ಮಾಡಿದ ಕೆಲಸಕ್ಕೆ ತೃಪ್ತಿ ಸಿಗುವುದಿಲ್ಲವೋ ಅಥವಾ ಇಂತಹ ಆಚರಣೆಗಳನ್ನು ವಿಡಂಬನೆ ಮಾಡಿದರೆ ತಮ್ಮ ವಾಹಿನಿಯ ಪ್ರಚಾರ ಜಾಸ್ತಿಯಾ ಗುತ್ತದೆ ಎಂಬ ಭಾವನೆಯೋ? ಇನ್ನು ಇದನ್ನು ನೋಡುವ ಮಹಾನುಭಾವರು ಇದನ್ನು ನೋಡಿ ತಮ್ಮ ಜೀವನ ಸಾರ್ಥಕವಾಯಿತೆಂಬಂತೆ, ಹಲ್ಲು ಕಿಸಿದುಕೊಂಡು ಅದರ ಬಗ್ಗೆ ಚರ್ಚೆಯಲ್ಲಿ ತೊಡಗಿ ರುತ್ತಾರೆ. ಆದರೆ ನಮ್ಮ ದೇಶದ ಬಗ್ಗೆ ಚರ್ಚಿಸಬೇ ಕೆಂದು ಇವರ ಮನಸ್ಸಿಗೆ ಬರುವುದೇ ಇಲ್ಲ!
 ಕಿಶೋರ್, ಮಂಗಳೂರು

ವಕ್ಫ್ ಆಸ್ತಿ ಕಬಳಿಕೆ ಹಗರಣದ ಬಗ್ಗೆ ಮಾಣಿಪ್ಪಾಡಿ ಹೇಳಿಕೆ ಸರಿ

Posted by JAYAKIRANA Kirana on | 0 comments | Leave a comment...


ಬಿಜೆಪಿಯೇತರ ಸರಕಾರ ಇರುವಾಗ ಯಾವ ಒಬ್ಬ ಒಳ್ಳೆಯ ವ್ಯಕ್ತಿ ಅಥವಾ ಬಡವನನ್ನು ವಕ್ಫ್ ಮಂಡಳಿಗೆ ಸದಸ್ಯರಾಗುವುದಕ್ಕೆ ದೊಡ್ಡ-ದೊಡ್ಡ ಖದೀಮರು ಬಿಡುತ್ತಿರಲಿಲ್ಲ. ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ವಕ್ಫ್ ಮಂಡಳಿಯಲ್ಲಿ ನಡೆಯುತ್ತಿರುವ ಆಸ್ತಿ ಕಬಳಿಕೆ ಹಗರಣ ಬಯಲಾಗಿದೆ.

ಟಿ.ಇಸ್ಮಾಯಿಲ್, ಮಂಗಳೂರು
ವಕ್ಫ್ ಮಂಡಳಿಯ ಆಸ್ತಿ ಕಬಳಿಕೆ ಹಗರಣದ ಬಗ್ಗೆ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಯವರು ಮಾಡಿದ ಆರೋಪವು ಕಾಂಗ್ರೆಸಿಗರಿಗೆ ಬಿಸಿತುಪ್ಪ ನುಂಗಿದಂ ತಾಗಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯೇತರ ಪಕ್ಷಗಳು ಸುಮಾರು ೬೦ ವರ್ಷಕ್ಕಿಂತಲೂ ಮಿಕ್ಕಿ ಆಡಳಿತ ನಡೆಸಿದೆ, ಆದರೆ ರಾಜ್ಯದ ವಕ್ಫ್ ಮಂಡಳಿಯಲ್ಲಿ ನಡೆಯುತ್ತಿದ್ದ ಆಸ್ತಿ ಕಬಳಿಕೆ ಹಗರಣದ ಬಗ್ಗೆ ಯಾರೂ ಧ್ವನಿ ಎತ್ತುತ್ತಿರಲಿಲ್ಲ. ಕಾರಣ ಮುಂಚೆ ವಕ್ಫ್ ಮಂಡಳಿಯಲ್ಲಿ ಇದ್ದವರು ಒಂದೇ ಗೂಡಿನಲ್ಲಿ ಇದ್ದ ಹಕ್ಕಿಯಂತೆ ಇದ್ದರು. ಹಕ್ಕಿಗೆ ಯಾರಾದರೇನು? ದೊಡ್ಡ ಹಕ್ಕಿಗಳು ಗೂಡಿನ ಒಳಗೆ ತರುತ್ತದೆ, ಅವೆಲ್ಲ ಒಟ್ಟುಗೂಡಿ ತಿನ್ನು ತ್ತದೆ. ಇದೇ ರೀತಿ ವಕ್ಫ್ ಮಂಡಳಿಯ ಆಸ್ತಿಯನ್ನು ಕಬಳಿಕೆ ಮಾಡಿ ಹಂಚುತ್ತಿದ್ದ ಕಾಂಗ್ರೆಸ್ಸಿಗರಿಗೆ ಈಗ ಅನ್ವರ್ ಮಾಣಿಪ್ಪಾಡಿ ಯವರು ಮಗ್ಗುಲ ಮುಳ್ಳಾಗಿ ಮಾರ್ಪಟ್ಟಂತಿದೆ.
ಬಿಜೆಪಿಯೇತರ ಸರಕಾರ ಇರುವಾಗ ಯಾವೊಬ್ಬ ಒಳ್ಳೆಯ ವ್ಯಕ್ತಿ ಅಥವಾ ಬಡವನನ್ನು ವಕ್ಫ್ ಮಂಡಳಿಗೆ ಸದಸ್ಯರಾಗುವು ದಕ್ಕೆ ದೊಡ್ಡ-ದೊಡ್ಡ ಖದೀಮರು ಬಿಡುತ್ತಿರಲಿಲ್ಲ. ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ವಕ್ಫ್ ಮಂಡಳಿ ಯಲ್ಲಿ ನಡೆಯುತ್ತಿರುವ ಆಸ್ತಿ ಕಬಳಿಕೆ ಹಗರಣ ಬಯಲಾಗಿದೆ. ಸುಮಾರು ಎರಡು ಲಕ್ಷದ ೫೦ ಕೋಟಿ ರೂ. ವಕ್ಫ್ ಮಂಡ ಳಿಯ ಆಸ್ತಿಯನ್ನು ಕಬಳಿಕೆ ಮಾಡಿ ಈಗ ನಾನು ಒಳ್ಳೆಯ ಜನ ಎಂದು ಮುಸ್ಲಿಮರಿಗೆ ತೃಪ್ತಿಯಾಗುವ ರೂಪದಲ್ಲಿ ಶಾಂತಿನಗರ ಶಾಸಕ ಎನ್.ಎ. ಹ್ಯಾರೀಸ್‌ರವರು ಮಾಣಿಪ್ಪಾಡಿ ಮತ್ತು ಕನ್ನಡ ಪ್ರಭ ಪತ್ರಿಕೆಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಾತ್ರವಲ್ಲ ಮಾಣಿಪ್ಪಾಡಿಯವರನ್ನು ಎನ್.ಎ.ಹ್ಯಾರೀಸ್‌ರವರು ಬಿಜೆಪಿಯ ಕೈಗೊಂಬೆ ಮತ್ತು ಆರ್‌ಎಸ್‌ಎಸ್‌ನ ಬೈಠಕ್‌ನಲ್ಲಿ ಕುಳಿತುಕೊಂಡು ಈ ಆರೋಪ ಮಾಡಿದ್ದು, ಎಂದು ಹೇಳಿದ್ದಾರೆ.
ಎನ್.ಎ.ಹ್ಯಾರೀಸ್‌ನವರೇ ಒಂದು ಮಾತ್ರ ನೆನಪಿಟ್ಟುಕೊಳ್ಳಿ ಸುಮಾರು ೬೦ ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಅಥವಾ ಅಲ್ಪಸಂಖ್ಯಾತರಿಗೆ ಮಾಡಿದ್ದೇನು ಎಂದು ಧೈರ್ಯ ಇದ್ದರೆ ತಾವು ಪತ್ರಿಕೆಯಲ್ಲಿ ವಿವರಣೆಯನ್ನು ಕೊಡಿ.
ಎನ್.ಎ.ಹ್ಯಾರೀಸ್‌ರವರು ಹೇಳಿದ್ದು, ‘ಯಾವನೇ ಒಬ್ಬ ಮುಸ್ಲಿಮನು ವಕ್ಫ್‌ನ ಆಸ್ತಿಯನ್ನು ಕಬಳಿಸಲು ಮುಂದಾಗುವು ದಿಲ್ಲ’ ಎಂದು. ಪಾಪ ಎನ್.ಎ.ಹ್ಯಾರೀಸ್‌ರಿಗೆ ಮರೆತು ಹೋಯಿತೋ ಏನೋ? ಒಂದು ತಿಂಗಳ ಮುಂಚೆ ಬೆಂಗ ಳೂರಿನ ಒಬ್ಬ ಖಾನ್ ಕೋಟಿಗಟ್ಟಲೆ ರೂ. ವಕ್ಫ್‌ನ ಆಸ್ತಿಯನ್ನು ಗುಳುಂ ಮಾಡಿ ಪರಾರಿಯಾಗಿದ್ದ. ನಿಮ್ಮ ಲೆಕ್ಕದಲ್ಲಿ ಖಾನ್ ಮುಸ್ಲಿಮನಲ್ಲವೇ? ಹೇಳಿ. ಎನ್.ಎ.ಹ್ಯಾರೀಸ್‌ರವರು ತಮ್ಮ ಏರಿಯಾದ ಮುಸ್ಲಿಮರನ್ನು ತೃಪ್ತಿಪಡಿಸುವ ಸಲುವಾಗಿ ಪತ್ರಿಕೆ ಯಲ್ಲಿ ಮಾಣಿಪ್ಪಾಡಿಯವರ ಮೇಲೆ ಈ ರೀತಿ ಆರೋಪ ಮಾಡಿದ್ದಾರೆ. ಎಂಟು ಸಾವಿರ ಪುಟಗಳ ವಿಶೇಷ ವರದಿಯನ್ನು ತಯಾರಿಸಿ ಮಾರ್ಚ್ ೨೬ರಂದು ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸಿದ್ದರು. ಇದರಲ್ಲಿ ಎನ್.ಎ.ಹ್ಯಾರೀಸ್‌ರ ಹೆಸರು ಕೂಡಾ ಇದೆ. ಮೇಲೆ ತಿಳಿಸಿದ ಹಾಗೆ ಖಾನ್‌ರವರನ್ನು ರಕ್ಷಣೆ ಮಾಡಲಿಕ್ಕೆ ಹೊರಟ ಎನ್.ಎ.ಹ್ಯಾರೀಸ್‌ರು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವುದಕ್ಕೆ ಇದೂ ಒಂದು ಉತ್ತಮ ಉದಾಹರಣೆಯಾಗಿದೆ.
ವಕ್ಫ್ ಮಂಡಳಿಯ ಆಸ್ತಿಯ ಕಬಳಿಕೆ ಹಗರಣದ ಬಗ್ಗೆ ಯಾವ ರೀತಿ ಬೇಕಾದರೂ ನ್ಯಾಯಾಲಯದಲ್ಲಿ ವಾದಿಸಲು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಸಜ್ಜಾಗಿದ್ದಾರೆ. ಎನ್.ಎ. ಹ್ಯಾರೀಸ್‌ರು ಮಾನಹಾನಿ ಹೂಡಿದ ದಾವೆಯಲ್ಲಿ ಯಾವುದೇ ಹುರುಳಿಲ್ಲ ಎಂಬುವುದನ್ನು ಕರ್ನಾಟಕ ರಾಜ್ಯ ಮುಸ್ಲಿಮರು ಮನವರಿಕೆ ಮಾಡಿಕೊಳ್ಳಬೇಕು. ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಹಗರಣದಲ್ಲಿ ಎರಡು ಲಕ್ಷದ ೫೦ ಸಾವಿರ ಕೋಟಿಯ ಆಸ್ತಿ ಪಾಸ್ತಿ ಮುಸ್ಲಿಮರ ಹಕ್ಕು. ಇದು ಯಾವ ಕಾರಣಕ್ಕೂ ದುರುಪ ಯೋಗವಾಗಬಾರದು. ಆದುದರಿಂದ ರಾಜ್ಯದ ಎಲ್ಲ ಮುಸ್ಲಿ ಮರು ತಮ್ಮ-ತಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ಬಿಟ್ಟು ಈ ವಿಷಯದಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಜೊತೆ ಕೈ ಜೋಡಿಸಬೇಕೆಂದು ವಿನಂತಿಸುವು ದರ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನೇ ಅಧಿಕಾರ ನಡೆಸಲೂ ಕೂಡಾ ಎಲ್ಲರೂ ಜಾತಿ-ಮತ ಬೇಧ ಮರೆತು ಸಹಕರಿಸ ಬೇಕೆಂದು ವಿನಂತಿ.

ಹೌದು ಅನಿಸುತ್ತಿದೆ... ಲೋಕಾಂತ್ಯ ಸನಿಹದಲ್ಲಿದೆ!!

Posted by JAYAKIRANA Kirana on | 0 comments | Leave a comment...


ಅಂತ್ಯದಿನಗಳು ಸಮೀಪಿಸುವ ಸಂದರ್ಭದಲ್ಲಿ ಎಲ್ಲಾ ಧಾರ್ಮಿಕ ಸ್ಥಾನಮಾನಗಳನ್ನು ಧರ್ಮೀಯರ ವೇಷಭೂಷಣದಲ್ಲಿರುವ ಅಧರ್ಮಿಯರೇ ಕೈವಶಮಾಡುವರು, ಧರ್ಮಗುರುಗಳ ದೆಸೆಯಿಂದಲೇ ಧರ್ಮ ಕೆಡುವುದು ಎಂಬ ಉಲ್ಲೇಖ ಅಂತ್ಯದಿನಗಳ ಲಕ್ಷಣಗಳ ಪೈಕಿ ಒಂದು ಪ್ರಮುಖ ಲಕ್ಷಣ. ಈ ಲಕ್ಷಣ ಇಂದು ನಾವು ಬಹಳ ಕಡೆ ಕಾಣುತ್ತಲಿದ್ದೇವೆ ಎಂದರೆ ಯಾರೂ ನಿರಾಕರಿಸಲಿಕ್ಕಿಲ್ಲ ಅಲ್ಲವೇ?

ಗೆಳೆಯರೇ, ಕೆಲ ಸಮಯದ ಹಿಂದೆ ನನ್ನ ಪತ್ರಕರ್ತ ಮಿತ್ರ ರೋರ್ವರು ಇದೇ ಜಯಕಿರಣ ಪತ್ರಿಕೆಯಲ್ಲಿ ಪ್ರಳಯದ ವಿಷಯ ವಾಗಿ ಇಸ್ಲಾಮಿನ ದೃಷ್ಟಿಕೋನದಲ್ಲಿ ವಿಶ್ಲೇಷಣೆ ನಡೆಸಿ ಚೊಕ್ಕದಾದ ಬರಹವೊಂದನ್ನು ಬರೆದಿದ್ದರು. ಅದರಲ್ಲಿ ಪ್ರಳಯದ ಬಗ್ಗೆ ಇಸ್ಲಾಮಿ ನಲ್ಲಿ ಏನು ಹೇಳಲಾಗಿದೆ ಮತ್ತು ಪ್ರಳಯದ ಕುರುಹುಗಳೇನು ಎಂಬು ವುದರ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ತಮ್ಮ ಕಾಲಬುಡದಲ್ಲಿ ಪ್ರಳಯ ಸಂಭವಿಸುತ್ತಿದೆಯೇನೋ ಎಂಬುವಂತೆ ಭಯ ವಿಹ್ವಲಗೊಂಡವ ರಂತೆ ದೃಶ್ಯ ಮಾಧ್ಯಮದ ಉದ್ಯೋಗಿಗಳು ಸಮಾಜದ ಇತರ ಜನ ರೊಂದಿಗೆ ಗಂಭೀರ ಚರ್ಚೆಯಲ್ಲಿ ತೊಡಗಿಕೊಂಡಿದ್ದಂತಹಾ ವಿಶೇಷ ಸಂದರ್ಭದಲ್ಲಾಗಿತ್ತು ಅವರು ಆ ಲೇಖನ ಬರೆದದ್ದು. ಆ ದಿನಗಳಲ್ಲಿ ಮಾಯನ್ ಕ್ಯಾಲೆಂಡರ್ ಎಂಬ ಕ್ಯಾಲೆಂಡರ್ ಒಂದು ಜಗತ್ತಿನೆಲ್ಲೆಡೆ ಅಂಥಹಾ ಚರ್ಚೆಗೆ ನಾಂದಿ ಹಾಡಿತ್ತು. ಆ ಕ್ಯಾಲೆಂಡರ್ ವಿಚಾರ ಬಹಿರಂಗಗೊಂಡ ನಂತರದಿಂದ ಹಿಡಿದು ಇಂದಿನವರೆಗೂ ಪ್ರಳ ಯದ ಬಗ್ಗೆ ಸಾಧ್ಯವಿರುವ ಕಡೆಗಳಲ್ಲೆಲ್ಲ ಬಗೆ ಬಗೆಯ ಚರ್ಚೆಗಳು ನಡೆಯುತ್ತಲೇ ಇದೆ.
ಆದರೆ ನಮ್ಮ ದಕ್ಷಿಣ ಕನ್ನಡ ಅಥವಾ ಕರ್ನಾಟಕ ರಾಜ್ಯದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಪ್ರಳಯದ ಬಗ್ಗೆ ಚರ್ಚೆ ಬಹಳ ಹಿಂದೆಯೇ ಶುರುವಾಗಿತ್ತು. ಮಣಿಪಾಲದಿಂದ ಪ್ರಕಟವಾಗುವ ವಾರ ಪತ್ರಿಕೆಯೊಂದು ಪ್ರಳಯ ಸನ್ನಿಹಿತ ಎಂಬ ಶೀರ್ಷಿಕೆ ಹೊತ್ತು ಸಂಚಿಕೆ ಯನ್ನು ಹೊರತಂದು ನಾಡಿನ ಜನರಲ್ಲಿ ವಿಪರೀತ ಭಯ ಮತ್ತು ಉದ್ವೇಗ ಸೃಷ್ಟಿ ಮಾಡಿ ಭರಪೂರ ‘ಪ್ರಳಯದ ವ್ಯಾಪಾರ’ ಮಾಡಿತ್ತು. ಈಗ ಆ ವಾರಪತ್ರಿಕೆ ಅಂಥದ್ದೇ ವ್ಯಾಪಾರಕ್ಕಿಳಿದಿದೆ. ಈ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಲೋಕಾಂತ್ಯವಾಗಲಿದೆ ಎನ್ನುವ ಆತಂಕ ಸೃಷ್ಟಿಸಿ ಸಂಚಿಕೆ ಬಿಡುಗಡೆ ಮಾಡಿದೆ.
ಪತ್ರಿಕೆಗಳಲ್ಲಿ ಚರ್ಚೆಯಾಗುವಂತೆ ೨೦೧೨ರ ಡಿಸೆಂಬರ್‌ನಲ್ಲಿಯೇ ಪ್ರಳಯ ನಡೆಯುತ್ತದೆ ಎಂಬುವುದನ್ನು ಯಾರೂ ಒಪ್ಪುವುದಿಲ್ಲ. ಅದರಲ್ಲೂ ಮುಸ್ಲಿಮರಂತು ಒಪ್ಪುವುದೇ ಇಲ್ಲ. ಯಾಕೆಂದರೆ ಇಸ್ಲಾ ಮಿನ ಪ್ರಕಾರ ಪ್ರಳಯ ಸಂಭವಿಸಲಿರುವುದು ದಿಟವಾದರು ಅದು ಇಂತಿಂಥಾ ಇಸವಿಯಲ್ಲಿಯೇ ಅಥವಾ ಇಂತಿಂಥಾ ತಾರೀಖಿನ ಲ್ಲಿಯೇ ಎಂದು ಕರಾರುವಕ್ಕಾಗಿ ಹೇಳಲು ಯಾವನಿಗೂ ಸಾಧ್ಯವಿಲ್ಲ. ಅಂಥಾ ಒಂದು ಜ್ಞಾನ ಇರುವುದು ಅಲ್ಲಾಹನಿಗೆ ಮಾತ್ರ ಮತ್ತು ಅದನ್ನವನು ಯಾರಿಗೂ ಹೇಳಿ ಕೊಟ್ಟಿಲ್ಲ. ಕೇವಲ ಕುರುಹುಗಳ ನ್ನಷ್ಟೇ ಅವನು ಹೇಳಿದ್ದಾನೆ ಮತ್ತು ಆ ಕುರುಹುಗಳು ಸಾಕ್ಷಾತ್ಕಾರಗೊ ಳ್ಳದೆ ಪ್ರಳಯ ಸಂಭವಿಸುವುದೇ ಇಲ್ಲ. ಹಾಗಾಗಿ ಇಸ್ಲಾಮನ್ನು ಅಂಗೀ ಕರಿಸಿರುವ ನಂಬಿರುವ ಮುಸ್ಲಿಮರಂತೂ ಪ್ರಳಯದ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಹೊಂದಿದ್ದಾರೆ. ಅವರ ಪ್ರಕಾರ ಪ್ರಳಯ ಸದ್ಯಕ್ಕಂತೂ ಇಲ್ಲವೇ ಇಲ್ಲ. ಯಾಕೆಂದರೆ ಇಸ್ಲಾಮಿನಲ್ಲಿ ಹೇಳಲಾಗಿರುವ ಪ್ರಳ ಯದ ಎಲ್ಲಾ ಲಕ್ಷಣಗಳು ಸಂಭವಿಸಲು ಇನ್ನೂ ಹಲವಾರು ವರ್ಷ ಗಳು ಬೇಕಾಗಬಹುದು!
ಒಂದ್ನಿಮಿಷ. ನಿಜ ಹೇಳಬೇಕೆಂದರೆ ನಾನು ಪ್ರಾರಂಭದಲ್ಲಿ ಹೇಳಿದ ನನ್ನ ಪತ್ರಕರ್ತ ಮಿತ್ರರು ಬರೆದ ಲೇಖನದ ಬಗ್ಗೆಯಾಗಲೀ, ಮಾಯನ್ ಕ್ಯಾಲೆಂಡರ್ ಬಗ್ಗೆಯಾಗಲೀ ಮಣಿಪಾಲದ ವಾರಪತ್ರಿಕೆಯ ಬಗ್ಗೆಯಾಗಲೀ ಈ ಅಂಕಣದಲ್ಲಿ ಬರೆಯುವ ಯಾವ ಉದ್ದೇಶವೂ ನನಗೆ ಇರಲಿಲ್ಲ. ಇಸ್ಲಾಂ ಹೇಳಿದ ಪ್ರಳಯದ ಕುರುಹುಗಳ ಪೈಕಿ ನಿರ್ದಿಷ್ಟ ಒಂದು ಕುರುಹುವಿನ ಬಗ್ಗೆ ಸ್ವಲ್ಪ ಬರೆಯಬೇಕಾಗಿದ್ದು. ಅದಕ್ಕೆ ಸಣ್ಣ ಪೀಠಿಕೆ ಹಾಕಲು ಹೋಗಿ ಇಷ್ಟು ದೊಡ್ಡ ಪೀಠಿಕೆ ಅನುದ್ದೇಶಿತವಾಗಿ ಬರೆದಿದ್ದೇನೆ. ದಯ ಮಾಡಿ ಕ್ಷಮಿಸಿ. ನಾನು ಹೇಳಲು ಹೊರಟಿರುವ ಕುರುಹು ಯಾವುದಪ್ಪಾ ಅಂದ್ರೆ, ಅಂತ್ಯದಿನಗಳು ಸಮೀಪಿಸುವ ಸಂದರ್ಭದಲ್ಲಿ ಎಲ್ಲಾ ಧಾರ್ಮಿಕ ಸ್ಥಾನಮಾನಗಳನ್ನು ಧರ್ಮೀಯರ ವೇಷಭೂಷಣದಲ್ಲಿರುವ ಅಧರ್ಮಿ ಯರೇ ಕೈವಶ ಮಾಡುವರು, ಧರ್ಮಗುರುಗಳ ದೆಸೆಯಿಂದಲೇ ಧರ್ಮ ಕೆಡುವುದು ಎಂಬ ಉಲ್ಲೇಖ ಅಂತ್ಯದಿನಗಳ ಲಕ್ಷಣಗಳ ಪೈಕಿ ಒಂದು ಪ್ರಮುಖ ಲಕ್ಷಣ. ಈ ಲಕ್ಷಣ ಇಂದು ನಾವು ಬಹಳ ಕಡೆ ಕಾಣುತ್ತಲಿ ದ್ದೇವೆ ಎಂದರೆ ಯಾರೂ ನಿರಾಕರಿಸಲಿಕ್ಕಿಲ್ಲ ಅಲ್ಲವೇ?
ನೀವು ನೋಡಿ, ಇಂದು ಧರ್ಮದ ಬಗ್ಗೆ ಸೀಮಿತ ಜ್ಞಾನವಿರುವ ಸಾಮಾನ್ಯ ಜನರು ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಸಮಾ ಜದಲ್ಲಿ ಪರಸ್ಪರ ಹೊಂದಿಕೊಂಡು ಜೀವನ ನಡೆಸಲು ತವಕಿಸುತ್ತಿದ್ದರೆ ಧರ್ಮಗುರುಗಳೆನಿಸಿಕೊಂಡವರು ಧರ್ಮಧರ್ಮದೊಳಗಡೆ ಗೊಂದಲ ಆತಂಕ ಸೃಷ್ಟಿ ಮಾಡುವುದರಲ್ಲಿಯೇ ತಲ್ಲೀನರಾಗಿ ಬಿಟ್ಟಿದ್ದಾರೆ. ಒಂದು ಪಂಗಡ ದವರು ಇನ್ನೊಂದು ಪಂಗಡವನ್ನು ಹೆಣೆಯಲಿಕ್ಕಾಗಿ ವೇದಿಕೆಗಳನ್ನು ಕಟ್ಟಿ ಅಲ್ಲಿ ತಮ್ಮ ಎದುರು ಪಂಗಡವನ್ನು ಎಷ್ಟು ಸಾಧ್ಯವೋ ಅಷ್ಟೂ ತೇಜೋವಧೆ ಮಾಡು ತ್ತಿದ್ದಾರೆ. ಎದುರು ಪಂಗಡದವರು ತಮ್ಮ ಶತ್ರುಗಳೆಂದು ಸಾಮಾನ್ಯ ಜನರು ಭಾವಿಸುವಂತಾಗಲು ಧರ್ಮಗ್ರಂಥಗಳಿಂದಲೇ ಹೇರಳ ‘ಆಧಾರ’ಗಳನ್ನು ಹೆಕ್ಕಿ ತರುತ್ತಿದ್ದಾರೆ. ಬೃಹತ್ ಪರದೆ ಮೂಲಕ ಎದುರು ಪಂಗಡಗಳ ನ್ಯೂನತೆ ಗಳನ್ನು ಸಾದರಪಡಿಸುವ ವೀಡಿಯೋ ಕ್ಲಿಪ್ಪಿಂಗ್ಸ್‌ಗಳನ್ನು ಜನರಿಗೆ ತೋರಿಸಿ ಸ್ವಯಂ ಸಂಭ್ರಮಿಸುತ್ತಿದ್ದಾರೆ. ಕೆಲವು ಕಡೆ ಸಭಿಕರು ಚಪ್ಪಾಳೆ ತಟ್ಟಿ ಭೇಷ್... ಭೇಷ್ ಎಂದು ತಮ್ಮ ಧರ್ಮಗುರುಗಳ ವಾಕ್ಚಾತುರ್ಯಕ್ಕೆ, ಪಾಂಡಿತ್ಯಕ್ಕೆ ಶಹ ಬ್ಬಾಸ್‌ಗಿರಿ ಕೊಟ್ಟು ತಾವೂ ಸಂಭ್ರಮ ಪಟ್ಟುಕೊಳ್ಳುವುದು ನಡೆಯುತ್ತಿದೆ.
ಧರ್ಮದೊಳಗಡೆಯೂ ಧರ್ಮದ ಹೊರಗಡೆಯೂ ಇರಬಹುದಾ ದಂಥ ಅಜ್ಞಾನ, ಅಪನಂಬಿಕೆ ಅಸಹನೆ, ಗೊಂದಲಗಳನ್ನು ನಿವಾರಿಸಿ ಶಾಂತಿ ಸಮಾಧಾನ ನೆಲೆಗೊಳಿಸಬೇಕಾದ ಧರ್ಮಗುರುಗಳೇ ಇಂದು ಅಸಹನೆ, ಅಶಾಂತಿ ಮತ್ತು ಗೊಂದಲ, ಅರಾಜಕತೆಗಳನ್ನು ಸೃಷ್ಟಿ ಮಾಡುವ ಪ್ರಕ್ರಿಯೆಗಳಿಗೆ ನೇತೃತ್ವ ವಹಿಸುತ್ತಿದ್ದಾರೆ. ಇದು ಪ್ರಪಂಚದ ಎಲ್ಲಾ ಕಡೆ, ಎಲ್ಲಾ ಧರ್ಮಗಳಲ್ಲಿ ನಡೆ ಯುತ್ತಿರುವುದನ್ನು ನಾವು ಗಮನಿಸಬಹುದು. ಧರ್ಮಗುರುಗಳೇ ಇಂದು ಅಶಾಂತಿಯ ಮೂಲವಾಗುತ್ತಿದ್ದಾರೆ.
ಇದೆಲ್ಲ ತಾವು ನಿಜವಾಗಿಯು ಧರ್ಮದ ಸೇವೆ ಮಾಡುತ್ತಿದ್ದೇವೆ ಎಂಬ ತಪ್ಪು ಕಲ್ಪನೆಯಲ್ಲಿ ಧರ್ಮವನ್ನು ನಾಶ ಮಾಡುತ್ತಿರುವ ಧರ್ಮಗುರುಗಳ ವಿಷಯವಾದರೆ ಇನ್ನು ಕೆಲವು ಕಡೆ ಸಾತ್ವಿಕರ ವೇಷ ಧರಿಸಿ ಜನರನ್ನು ವಂಚಿ ಸುತ್ತಿರುವ ಸಕಲಕಲಾವಲ್ಲಭರ ವಂಚನೆ ಪ್ರಕರಣಗಳನ್ನೂ ನಾವು ಕಂಡಿದ್ದೇವೆ. ಹಿಂದೂ ಧರ್ಮದಲ್ಲಿ ನಿತ್ಯಾನಂದ ಸ್ವಾಮೀಜಿ ಎಂಬವನದ್ದು ಇತ್ತೀಚಿನ ಉದಾಹರಣೆ. ಕ್ರೈಸ್ತ ಧರ್ಮದಲ್ಲಿ ಹಲವು ಪಾದ್ರಿಗಳ ಮೇಲಿನ ಆರೋಪ ಇಂದಿಗೂ ಸದ್ದು ಮಾಡುತ್ತಿದೆ. ಮುಸ್ಲಿಂ ಸಮುದಾಯದಲ್ಲಂತೂ ಹೇಳು ವುದೇ ಬೇಡ. ಕಳೆದವಾರ ಕೃಷ್ಣಾಪುರದ ಫ್ಲಾಟ್‌ವೊಂದರಲ್ಲಿ ವಾಸ ಮಾಡು ತ್ತಿದ್ದ ಗೃಹಿಣಿಯೋರ್ವರೊಂದಿಗೆ ಪಲ್ಲಂಗದಾಟ ನಡೆಸಲು ಹವಣಿಸಿ ಸಿಕ್ಕಿ ಬಿದ್ದ ಕುದ್ರೋಳಿಯ ‘ಆಧುನಿಕ ಉಸ್ತಾದ್’ ನೋರ್ವನ ಕಥೆಯು ಮುಸ್ಲಿಂ ಸಮುದಾಯದಲ್ಲಿರುವ ಠಕ್ಕರ ಯಾದಿಗೆ ಹೊಸ ಸೇರ್ಪಡೆ.
ಇದೆಲ್ಲಾ ಗಮನಿಸುವಾಗ ಒಂದಂತೂ ಅನಿಸುವುದು ನಿಜ. ಪ್ರಳಯ ದಿನ ತುಂಬಾ ದೂರವಿಲ್ಲ!!

ನಂಬಿಕೆ ಇರದವರು ಪ್ರವೇಶಿಸುವುದು ತಪ್ಪು

Posted by JAYAKIRANA Kirana on | 0 comments | Leave a comment...


ಅನ್ಯ ಧರ್ಮೀಯನು ತಿರುಪತಿ ದೇವಸ್ಥಾನ ಪ್ರವೇಶ ಮಾಡುವುದು ಯಾಕೆ? ಎಂಬುದು ಒಂದು ಪ್ರಶ್ನೆಯಾದರೆ ಹಾಗೆ ಪ್ರವೇಶ ಮಾಡಿದ ಅನ್ಯ ಧರ್ಮೀಯನು ನನಗೆ ತಿರುಪತಿ ತಿಮ್ಮಪ್ಪನ ಮೇಲೆ ನಂಬಿಕೆ ಇದೆ. ಅಪಾರ ಭಕ್ತಿ ಇದೆ ಎಂದು ಬರೆದು ಕೊಡುವುದಕ್ಕೆ ಆತನಿಗೆ ಇರುವ ತೊಂದರೆ ಏನು? ನಂಬಿಕೆ ಇಲ್ಲದ ಆತ ರಾಜಕೀಯ, ವ್ಯಾಪಾರಕ್ಕಾಗಿ ದೇವಸ್ಥಾನಕ್ಕೆ ಬರುತ್ತಾನೆಯೇ?

ದಿನಕರ, ಮಂಗಳೂರು
ಮೇ ೬ರ ಚಾವಡಿ ವಿಭಾಗದಲ್ಲಿ ಧ್ವನಿ ಮಂಗಳೂರು ಎಂಬವರು ಅನ್ಯ ಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕೆಲವು ವಿಚಾರಗಳನ್ನು ಹೇಳಲು ಬಯಸುತ್ತೇನೆ. ಪ್ರತಿಯೊಂದು ಧಾರ್ಮಿಕ ಕೇಂದ್ರಕ್ಕೂ ಅದರದ್ದೇ ಆದ ನೀತಿ ನಿಯಮ ಗಳು ಇವೆ. ಕೆಲವು ಕಡೆಗಳಲ್ಲಿ ಅಂಗಿ ಕಳಚಿ ದೇವಸ್ಥಾನವನ್ನು ಪ್ರವೇಶಿಸ ಬೇಕು, ಕೆಲವು ಕಡೆ ಪಂಚೆ ಧರಿಸಿ, ಮಹಿಳೆಯರು ಸೀರೆ ಉಟ್ಟುಕೊಂಡು, ಲಂಗ ದಾವಣಿ ಹಾಕಿಕೊಂಡು ಪ್ರವೇಶಿಸಬೇಕು ಎಂಬ ನಿಯಮಗಳೂ ಇವೆ. ಈ ನಿಯಮಗಳನ್ನು ಪ್ರಶ್ನಿಸಲು ಆಗುವುದಿಲ್ಲ. ಯಾಕೆಂದರೆ ಇದನ್ನು ಪ್ರಶ್ನಿಸಿದರೆ ನಂಬಿಕೆಯನ್ನು ಪ್ರಶ್ನಿಸಿದಂತೆ ಆಗುತ್ತದೆ. ನಂಬಿಕೆಯನ್ನು ಪ್ರಶ್ನಿ ಸುವುದು ಎಂದರೆ ದೇವರ ಅಸ್ತಿತ್ವವನ್ನೇ ಪ್ರಶ್ನಿಸಿದಂತೆ. ಅಂತವರು ದೇವ ಸ್ಥಾನದೊಳಗೆ ಪ್ರವೇಶಿಸುತ್ತೇನೆ ಎಂಬ ಛಲ ತೊಟ್ಟು ಪ್ರವೇಶಿಸಬೇಕೇ ಹೊರತು ಇನ್ನು ಯಾವುದೇ ಲಾಭ ಅವರಿಗೆ ಆಗಲಾರದು. ದೇವರನ್ನು ನೋಡುವ, ಪೂಜಿಸುವ ಆ ಮೂಲಕ ಮಾನಸಿಕ ಸಮಾಧಾನ ಪಡೆದು ಕೊಳ್ಳುವ ಭಕ್ತರ ಒಂದು ವರ್ಗವಾದರೆ ಕೆಲವೊಂದು ನಿಯಮ ಭಂಗ ಮಾಡಿ ನಾನು ಪ್ರವೇಶಿಸಿದೆ ನನಗೇನಾಯಿತು ಎಂಬ ಸಮಾಧಾನಪಡುವ ವರ್ಗವೂ ಇರುತ್ತದೆ. ನಿಯಮಗಳು ಹಿಂದೂ, ಕ್ರೈಸ್ತ, ಮುಸ್ಲಿಂ ಧಾರ್ಮಿಕ ಕೇಂದ್ರಗಳಲ್ಲೂ ಇವೆ. ತಿರುಪತಿಯಲ್ಲಿ ಮಾತ್ರ ಇರುವುದಲ್ಲ.
ತಿರುಪತಿಯಲ್ಲಿ ಅನ್ಯ ಧರ್ಮೀಯರು ದೇವಸ್ಥಾನ ಪ್ರವೇಶಿಸಬಾರದು ಎಂಬುದಕ್ಕಿಂತ ದೇವರ ಮೇಲೆ ನಂಬಿಕೆ ಇರುವವರು ದೇವಸ್ಥಾನ ಪ್ರವೇಶಿ ಸಬೇಕು ಎಂಬ ನಿಯಮ ಇರುವುದು ಧ್ವನಿಯವರ ಪ್ರಥಮ ಪಾರಾದ ಬರಹದಲ್ಲಿ ವೇದ್ಯವಾಗುತ್ತದೆ. ನಮ್ಮ ಜಾತ್ಯತೀತ ಸರಕಾರದಲ್ಲಿ ಯಾವು ದಾದರೂ ದೇವಸ್ಥಾನಕ್ಕೆ ಮೊಕ್ತೇಸರನಾಗಲು ಅಥವಾ ಪಾಲನಾ ಸಮಿ ತಿಯ ಸದಸ್ಯನಾಗಲು ಆತನಿಗಿರುವ ಮೊದಲ ಅರ್ಹತೆ ಎಂದರೆ ‘ಆತ ಹಿಂದುವಾಗಿರಬೇಕು, ಅವನಿಗೆ ದೇವರ ಮೇಲೆ ನಂಬಿಕೆ ಇರಬೇಕು’ ಆಗಿದೆ. ಹಾಗಿರುವಾಗ ತಿರುಪತಿಯಲ್ಲಿ ‘ನನಗೆ ತಿಮ್ಮಪ್ಪನ ಮೇಲೆ ನಂಬಿಕೆ ಇದೆ. ಅಪಾರ ಭಕ್ತಿ ಇದೆ’ ಎಂದು ಅನ್ಯ ಧರ್ಮೀಯರು ಬರೆದು ಕೊಟ್ಟೇ ಹೋಗಬೇಕು ಎಂದು ಮಾಡಿದ ನಿಯಮ ನೂರಕ್ಕೆ ನೂರು ಸರಿಯಾ ಗಿದೆ. ಯಾಕೆಂದರೆ ಅನ್ಯ ಧರ್ಮೀಯನು ತಿರುಪತಿ ದೇವಸ್ಥಾನ ಪ್ರವೇಶ ಮಾಡುವುದು ಯಾಕೆ? ಎಂಬುದು ಒಂದು ಪ್ರಶ್ನೆಯಾದರೆ ಹಾಗೆ ಪ್ರವೇಶ ಮಾಡಿದ ಅನ್ಯ ಧರ್ಮೀಯನು ನನಗೆ ತಿರುಪತಿ ತಿಮ್ಮಪ್ಪನ ಮೇಲೆ ನಂಬಿಕೆ ಇದೆ. ಅಪಾರ ಭಕ್ತಿ ಇದೆ ಎಂದು ಬರೆದು ಕೊಡುವುದಕ್ಕೆ ಆತನಿಗೆ ಇರುವ ತೊಂದರೆ ಏನು? ನಂಬಿಕೆ ಇಲ್ಲದ ಆತ ವ್ಯಾಪಾರಕ್ಕಾಗಿ ದೇವಸ್ಥಾನಕ್ಕೆ ಬರುತ್ತಾನೆಯೇ? ನಂಬಿಕೆ ಇದೆ ಎಂದು ಬರೆದು ಕೊಟ್ಟರೆ ತಿರುಪತಿ ತಿಮ್ಮ ಪ್ಪನ ದರ್ಶನ ಸಿಗುತ್ತದೆ. ತಾನು ಅನ್ಯ ಧರ್ಮೀಯ ಎಂದು ತೋರಿಸಿ ಕೊಂಡು ಅಲ್ಲಿಗೆ ಪ್ರವೇಶ ಮಾಡುವವನು ತನಗೆ ನಂಬಿಕೆ ಇದೆ ಎಂದು ಬರೆದು ಕೊಡುವುದು ಸ್ವಾಭಾವಿಕವಾಗುತ್ತದೆ. ತಾನು ಬೇರೆ ಅಲ್ಲ ಎಂದು ಭಕ್ತರ ಜೊತೆ ಸಾಮೂಹಿಕವಾಗಿ ಪ್ರವೇಶ ಮಾಡುವವನಿಗೆ ಆತ ಯಾವ ಧರ್ಮದವನು ಎಂದು ಸ್ಕ್ಯಾನ್ ಮಾಡುವ ಯಂತ್ರವನ್ನೇನೂ ಇಟ್ಟಿಲ್ಲ. ಅಥವಾ ಗುರುತು ಪತ್ರ ಇತ್ಯಾದಿಗಳನ್ನು ಯಾರೂ ಕೇಳುವುದಿಲ್ಲ.
ಭಾರತದಲ್ಲಿರುವ ಚರ್ಚ್, ಮಸೀದಿಗಳಿಗೆ ಎಲ್ಲಾ ಕಡೆಗಳಲ್ಲಿ ಹಿಂದು ಗಳಿಗೆ ನೇರವಾಗಿ ಪ್ರವೇಶ ಇದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅತ್ತೂರು, ಉಳ್ಳಾಲ ಮತ್ತಿತರ ದರ್ಗಾಗಳು ಹೆಸರು ಪಡೆಯುವುದಕ್ಕೆ ಹಿಂದೂಗಳ ಅಪಾರ ದೇಣಿಗೆ ಇದೆ. ಹಿಂದುಗಳು ಪ್ರವೇಶ ಮಾಡಿ ಪ್ರಾರ್ಥನೆ ಮಾಡದೆ ಇರುವ ಅನ್ಯಮತೀಯ ಧಾರ್ಮಿಕ ಕೇಂದ್ರಗಳು ಪ್ರಸಿದ್ದಿ ಪಡೆಯುವುದೇ ಇಲ್ಲ. ಕೇವಲ ಮುಸ್ಲಿಮರಿಂದಾಗಿ, ಕ್ರೈಸ್ತರಿಂದಾಗಿ ಮಾತ್ರ ಪ್ರಸಿದ್ದಿ ಪಡೆದ ದರ್ಗಾ, ಚರ್ಚ್ ಭಾರತದಲ್ಲಿ ಇಲ್ಲ. ಹಿಂದುಗಳಿಗೆ ನಂಬಿಕೆ ಇರುವುದರಿಂದ ಇಲ್ಲಿಗೆ ಪ್ರವೇಶ ಪಡೆಯುತ್ತಾರೆ. ಆದುದರಿಂದ ಅತ್ತೂರು ಚರ್ಚ್, ಉಳ್ಳಾಲ ಮತ್ತಿತರ ಕಡೆಗಳಲ್ಲಿರುವ ದರ್ಗಾಗಳು ಹಿಂದೂ ಮುಸ್ಲಿಂ ಆರಾಧ್ಯ ಕೇಂದ್ರಗಳು. ಆದರೆ ಎಲ್ಲಾ ಮಸೀದಿಗಳಲ್ಲಿ ಹಿಂದುಗಳಿಗೆ ಪ್ರವೇಶ ಇದೆ ಎನ್ನುವುದು ಸರಿಯಲ್ಲ. ನಿರ್ಬಂಧವಿದೆ.
ಮುಸ್ಲಿಮರ ಮೆಕ್ಕಾದಲ್ಲಿ ಹಿಂದುಗಳಿಗೆ ಪ್ರವೇಶ ಇಲ್ಲ ಎಂಬ ಕಾನೂನೇ ಇದೆ. ಇತರ ಮುಸ್ಲಿಂ ಯಾತ್ರಿಗಳನ್ನು ಅನುಕರಿಸುತ್ತಾ ಮುಸ್ಲಿಮೇತರರು ಮೆಕ್ಕಾ, ಮದೀನಾ ಪ್ರವೇಶಿಸಿದ್ದು ಗೊತ್ತಾದರೆ ಆತನಿಗೆ ಜೈಲು ಶಿಕ್ಷೆ ಕಾದಿದೆ. ಸಹತೀರ್ಥಯಾತ್ರಿ ಮುಸ್ಲಿಮ ನಲ್ಲ ಎಂದು ಗೊತ್ತಾದರೆ ಅಲ್ಲಿ ಸೇರಿದವರೇ ಒಟ್ಟಾಗಿ ಯಮಪುರಿಗೆ ಅಟ್ಟುತ್ತಾರೆ. ತಿರುಪತಿಯಲ್ಲಿ ತಿಮ್ಮಪ್ಪನ ಮೇಲೆ ನಂಬಿಕೆ ಇದೆ ಎಂದು ಹೇಳಿ, ಬರೆದು ಕೊಟ್ಟಾದರು ಅನ್ಯಮತೀಯರು ಪ್ರವೇಶ ಮಾಡಬಹುದು. ಆದರೆ ಮೆಕ್ಕಾ ಮದೀನಾಕ್ಕೆ ಪ್ರವೇಶಿಸ ಬೇಕಾದರೆ ಮುಸ್ಲಿಮೇತರರಿಗೆ ‘ನನಗೆ ಅಲ್ಲಾನ ಮೇಲೆ ನಂಬಿಕೆ ಇದೆ’ ಬರೆದು ಕೊಟ್ಟರೂ ಸಾಧ್ಯವಿಲ್ಲ. ಅವರು ಇಸ್ಲಾಂ ಧರ್ಮಕ್ಕೆ ಮತಾಂತರವಾಗಲೇ ಬೇಕು. ಇದು ಪರ ಧರ್ಮ ಸಹಿಷ್ಣುತೆಯಲ್ಲಿ ಹಿಂದು ಮತ್ತು ಇತರ ಧರ್ಮಕ್ಕಿರುವ ಪ್ರಮುಖ ವ್ಯತ್ಯಾಸ.
ಉಳಿದಂತೆ ಧ್ವನಿಯವರು ಬರೆದ ಶುದ್ಧಾಚಾರ, ಅಕ್ರಮ, ದೇವಸ್ಥಾನದ ದುಡ್ಡು ದುರುಪಯೋಗಪಡಿಸುವಿಕೆ ಇವೆಲ್ಲದರ ಬಗ್ಗೆ ಎರಡು ಮಾತಿಲ್ಲ. ಆದರೆ ಇದನ್ನು ದೇವಸ್ಥಾನದ ಪ್ರಮುಖ ನಿಯಮಗಳಿಗೆ ಅನ್ವಯಿಸಲು ಆಗುವುದಿಲ್ಲ. ಮುಸ್ಲಿಂ ಮತ್ತು ಕ್ರೈಸ್ತರ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಹಣದ ದುರುಪಯೋಗ, ಅನಾಚಾರ ನಡೆ ಯುವುದಿಲ್ಲ ಎಂದು ಹೇಳುವುದಕ್ಕೆ ಬರುವುದಿಲ್ಲ. ತಿರುಪತಿ ಮತ್ತು ಇತರ ಹಿಂದೂ ಧಾರ್ಮಿಕ ಕ್ಷೇತ್ರಕ್ಕೆ ಬಂದು ಬೀಳುವ ದುಡ್ಡಿನ ಶೇಕಡಾ ೫೦ರಷ್ಟಾದರೂ, ನಮ್ಮ ಜಾತ್ಯ ತೀತ ಸರಕಾರದ ಪಾಲಾಗಿ ಸಾರ್ವಜನಿಕ ಕೆಲಸಕ್ಕೆ ಮಾತ್ರವಲ್ಲ ಚರ್ಚ್, ಮಸೀದಿ ಗಳಿಗೂ ಸಹಾಯ ಧನವಾಗಿ ಸಿಗುತ್ತದೆ. ಆದರೆ ಜಗತ್ತಿನ ಮುಸ್ಲಿಂ ಮತ್ತು ಕ್ರೈಸ್ತರ ಉನ್ನತ ಧಾರ್ಮಿಕ ಕೇಂದ್ರಗಳು ಇರುವುದು ರಾಜರ, ವಂಶಾಡಳಿತದ ಸರ್ವಾಧಿಕಾರಿ ಗಳ ಕೈಯಲ್ಲಿ ಎಂಬುವುದನ್ನು ಮರೆಯುವಂತಿಲ್ಲ. ಇಲ್ಲಿನ ದುಡ್ಡು ಎಲ್ಲಿಗೆ ಹೋಗು ತ್ತದೆ ಎಂದು ಕೇಳುವ ತಾಖತ್ತು ನಮಗಲ್ಲ ಆ ಕೇಂದ್ರಗಳು ಇರುವ ರಾಷ್ಟ್ರದ ಪ್ರಜೆಗ ಳಿಗೂ ಇರುವುದಿಲ್ಲ.
ಹಾಗಿರುವಾಗ ದೇವಸ್ಥಾನಗಳಲ್ಲಿ ತಲೆ ತಲಾಂತರದಿಂದ ಯಾವುದೋ ಕಾರಣಕ್ಕೆ ಮಾಡಲ್ಪಟ್ಟ ನಿಯಮಗಳನ್ನು ಪ್ರಶ್ನಿಸುವ ಅಗತ್ಯ ಇಲ್ಲ. ಅದೃಷ್ಟವಶಾತ್ ಜಾತ್ಯತೀತ ಸರಕಾರದ ಪ್ರಜೆಗಳಾದ ನಾವು ಪ್ರಶ್ನಿಸಬೇಕಾದದ್ದು ಏನೆಂದರೆ ಅಲ್ಲಿಗೆ ಬಂದು ಬೀಳುವ ಜನರ ದುಡ್ಡು ಯಾಕೆ ದುರುಪಯೋಗವಾಗುತ್ತದೆ. ಯಾಕೆ ರಾಜಕಾರಣಿಗಳ, ಪಕ್ಷ ಗಳ ಕೈಸೇರುತ್ತದೆ. ರಾಜಕೀಯ ವ್ಯಕ್ತಿಗಳು ಧಾರ್ಮಿಕ ಕ್ಷೇತ್ರಗಳಿಗೆ ಹೊಕ್ಕು ಯಾಕೆ ತರಲೆ ಮಾಡುತ್ತಾರೆ ಎಂಬುದಾಗಿದೆ.

ಹೊಂದಾಣಿಕೆಯಿದ್ದರೆ ವಯಸ್ಸಿನ ಅಂತರದಿಂದ ಯಾವುದೇ ಸಮಸ್ಯೆಯಾಗದು

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೩೮ ವರ್ಷ ವಯಸ್ಸಿನ ಮಹಿಳೆ. ನನ್ನ ೨೧ನೇ ವಯಸ್ಸಿನಲ್ಲಿ ಮನೆಮಂದಿ ನೋಡಿದ ಹುಡುಗನನ್ನೇ ಮದುವೆಯಾದೆ. ನನ್ನ ಗಂಡನಿಗೆ ಆಗ ೩೨ ವರ್ಷ ವಯಸ್ಸಾ ಗಿತ್ತು. ಅವರಿಗೆ ಯಾವುದೋ ಖಾಯಿಲೆ ಇತ್ತು. ಅದನ್ನು ಬೇಕೆಂದೆ ಮುಚ್ಚಿಟ್ಟಿದ್ದರು. ಮದುವೆಯ ನಂತರ ಸಂಸಾರದಲ್ಲಿ ನನಗೆ ಸುಖ ಸಿಗಲಿಲ್ಲ. ನಾನು ಸುಖಕ್ಕಾಗಿ ಪ್ರತೀದಿನ ಕಾಯು ತ್ತಿದ್ದೆ. ನನ್ನವರಿಗೆ ಪುರುಷತ್ವದ ಕೊರತೆಯೂ ಇತ್ತು. ಸೆಕ್ಸ್ ಮಾಡುವಾಗ ಅವರು ಬೇಗನೆ ಬಲ ಕಳೆದುಕೊಂಡು ಮಲ ಗುತ್ತಿದ್ದರು. ಎರಡು ವರ್ಷದ ಹಿಂದೆ ಅವರು ತೀರಿಕೊಂಡರು. ಈಗ ತಾಯಿಮನೆಯಲ್ಲಿ ಒಂಟಿ ಜೀವನವನ್ನು ಸಾಗಿಸುತ್ತಿದ್ದೆ. ನಾನು ನೋಡಲು ಆಕರ್ಷಣೆ ಹೊಂದಿರುವ ಕಾರಣ ನನ್ನನ್ನು ಅನೇಕ ಮಂದಿ ಗಂಡಸರು ಇಷ್ಟಪಟ್ಟರು. ಆದರೆ ಅದರ ಹಿಂದೆ ಕೇವಲ ಸೆಕ್ಸ್ ಉದ್ದೇಶ ಮಾತ್ರ ಇದ್ದುದರಿಂದ ನಾನು ಅವರನ್ನು ಒಪ್ಪಲಿಲ್ಲ. ಆದರೆ ಕಳೆದ ಒಂದು ವರ್ಷದಿಂದ ಒಬ್ಬ ಹುಡುಗ ನನಗೆ ತುಂಬಾ ಹಿಡಿಸಿದ್ದಾನೆ. ಆತ ನೋಡಲು ಚೆನ್ನಾಗಿ ಆಕರ್ಷ ಕವಾಗಿದ್ದಾನೆ. ಆತ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿ ದ್ದಾನೆ. ಆತ ನನ್ನನ್ನು ಪ್ರೀತಿಸುವುದಾಗಿ ಹೇಳಿದ್ದಾನೆ. ನನಗೆ ಹಣಕಾಸಿನ ಸಮಸ್ಯೆ ಇಲ್ಲ. ಆತ ನನ್ನನ್ನು ಮದುವೆಯಾಗು ತ್ತೇನೆ ಎಂದು ಹೇಳುತ್ತಿದ್ದಾನೆ. ಆದರೆ ಆತನ ವಯಸ್ಸು ೨೩. ನಾವಿಬ್ಬರೂ ಪರಸ್ಪರ ಇಷ್ಟಪಟ್ಟು ಅನೇಕ ಬಾರಿ ಸೆಕ್ಸ್ ಮಾಡಿ ದ್ದೇವೆ. ನಾವು ಸೆಕ್ಸ್ ಮಾಡುವಾಗ ನಿರೋಧ್ ಬಳಸುತ್ತೇವೆ. ನಾವು ಮನೆಯಲ್ಲಿ ಒಪ್ಪಿಗೆ ಪಡೆದು ಇಲ್ಲವೇ ವಿವಾಹ ನೋಂದಣಿ ಕಚೇರಿಯ ಮೂಲಕ ಮದುವೆಯಾಗಲು ಯೋಚನೆ ಮಾಡಿದ್ದೇವೆ. ಆದರೆ ನನಗೂ-ಆತನಿಗೂ ವಯಸ್ಸಿನ ಅಂತರ ಇರುವ ಕಾರಣ ಸಮಾಜ ಒಪ್ಪಿಗೆ ನೀಡು ವುದೇ? ವಯಸ್ಸಿನ ಅಂತರದಿಂದ ಮದುವೆಯಾದ ಬಳಿಕ ಸಮಸ್ಯೆಯಾಗುತ್ತದೆ ಎನ್ನುತ್ತಾರೆ. ಇದು ನಿಜವೇ? ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ಮದುವೆಗೆ ಗಂಡು-ಹೆಣ್ಣಿನ ವಯಸ್ಸಿನ ನಡುವೆ ಅಂತರ ಎಷ್ಟಿರಬೇಕು ಅನ್ನುವುದು ಸಾಮಾನ್ಯ ಪ್ರಶ್ನೆ. ಆದರೆ ಪ್ರೇಮ ವಿವಾಹದ ಸಂದರ್ಭದಲ್ಲಿ ಈ ಬಗ್ಗೆ ಗಮನ ಕೊಡುವುದಿಲ್ಲ. ಆದರೂ ನಿಮ್ಮಿಬ್ಬರ ವಯಸ್ಸಿನ ನಡುವಿನ ಅಂತರ ಬರೋ ಬ್ಬರಿ ೧೪ ವರ್ಷ. ಅಷ್ಟೇ ಅಲ್ಲದೆ ನೀವು ವಿಧವೆ. ಈಗಾಗಲೇ ಒಂದು ಮದುವೆ ಯಾಗಿ ಗಂಡ ತೀರಿಕೊಂಡಿದ್ದಾರೆ. ಇಷ್ಟೆಲ್ಲಾ ನಿಮಗೆ ತಿಳಿದಿದ್ದೂ ಆತನ ಜೊತೆ ಸಂಬಂಧಕ್ಕೆ ಮುಂದಾಗಿದ್ದು ನಿಮ್ಮ ತಪ್ಪಲ್ಲವೇ? ನೀವು ನೋಡಲು ಯುವತಿಯಂತೆ ಕಾಣಬಹುದು. ಆದರೆ ಆತ ನಿಮ್ಮನ್ನು ಯಾವ ಕಾರ ಣಕ್ಕೆ ಇಷ್ಟಪಟ್ಟು ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂಬುದನ್ನಾ ದರೂ ತಿಳಿಯಿರಿ. ಆತನಿಗೆ ನಿಮ್ಮ ಸಹಚಾರವೇ ಇಷ್ಟವಾಗಿದ್ದು, ನಿಮ್ಮ ವಯಸ್ಸು, ಸಾಂಸಾರಿಕ ಹಿನ್ನೆಲೆ ಅಗತ್ಯವಿಲ್ಲದಿದ್ದಲ್ಲಿ ಆತನನ್ನು ಮದುವೆ ಯಾಗಬಹುದು. ಸೆಕ್ಸ್ ಬಗ್ಗೆ ಆಸಕ್ತಿ ಹೆಚ್ಚಾದಲ್ಲಿ, ಅದನ್ನು ನಿಲ್ಲಿಸುವುದು ಸ್ವಲ್ಪ ಕಷ್ಟವಾದರೂ ಅಸಾಧ್ಯವಲ್ಲ. ಹುಚ್ಚು ಮನಸ್ಸಿಗೆ ಕಡಿವಾಣ ಹಾಕದಿ ದ್ದರೆ ಪಶ್ಚಾತ್ತಾಪ ಪಡುವುದು ನಿಶ್ಚಿತ. ಮದುವೆಯ ವೇಳೆ ಸಾಮಾನ್ಯ ವಾಗಿ ಹೆಣ್ಣಿನ ವಯಸ್ಸಿಗಿಂತ ಗಂಡಿನ ವಯಸ್ಸು ಒಂದೆರಡು ವರ್ಷವಾ ದರೂ ಕಡಿಮೆ ಇರಬೇಕು ಎನ್ನುವುದು ವಾಡಿಕೆ. ಇಲ್ಲಿ ಗಂಡನಿಗೆ ಹೆಂಡತಿ ವಯಸ್ಸಿನ ಅಂತರಕ್ಕಾಗಿ ಆದರೂ ಗೌರವ ಕೊಡಲಿ ಎಂಬ ಉದ್ದೇಶವಿ ರುತ್ತದೆ. ಆದರೆ ಸಮ ವಯಸ್ಸಿನ, ಹೆಣ್ಣು ಗಂಡಿಗಿಂತ ವಯಸ್ಸಿನಲ್ಲಿ ಒಂದೆರಡು ವರ್ಷ ದೊಡ್ಡವಳಾದ ಸಂದರ್ಭದಲ್ಲಿಯೂ ಮದುವೆ ನಡೆಯುತ್ತದೆ. ಇಲ್ಲಿ ಪರಸ್ಪರ ದಂಪತಿಯ ನಡುವೆ ಹೊಂದಾಣಿಕೆ ಮುಖ್ಯ. ಸಾಮಾನ್ಯವಾಗಿ ಗಂಡು-ಹೆಣ್ಣಿಗಿಂತ ಏಳೆಂಟು ವರ್ಷಕ್ಕೂ ಹೆಚ್ಚು ವಯಸ್ಸಿನ ಅಂತರ ಹೊಂದಿದ್ದರೂ ಮದುವೆ ಮಾಡಿಸುವುದು ಒಳ್ಳೆಯ ದಲ್ಲ ಎಂದು ಹಿರಿಯರು ಹೇಳುತ್ತಾರೆ. ನಿಮ್ಮ ನಡುವೆ ಇರುವ ಅಂತರ ಅತೀ ಹೆಚ್ಚು ಆಗಿರುವ ಕಾರಣ ಚೆನ್ನಾಗಿ ಯೋಚಿಸಿ. ಇನ್ನು ಹತ್ತು ವರ್ಷ ದಾಟಿದರೆ ನೀವು ಮಧ್ಯವಯಸ್ಸಿಗೆ ಬಂದಿರುತ್ತೀರಿ. ನಿಮ್ಮ ಹುಡುಗ ಆಗಷ್ಟೇ ಯೌವನದ ಸುಖ ಅನುಭವಿಸುತ್ತಿರುತ್ತಾನೆ. ಈ ವೇಳೆ ಆತನಿಗೆ ನೀವು ಬೋರ್ ಹೊಡೆಸಿ ಆತ ದೂರವಾಗುವ ಸಾಧ್ಯತೆಯೂ ಇದೆ. ಜೀವನದಲ್ಲಿ ಸಾಕಷ್ಟು ನೊಂದಿದ್ದೀರಿ. ಇನ್ನೊಮ್ಮೆ ಸಂದಿಗ್ಧ ಪರಿಸ್ಥಿತಿ ಎದುರಿಸುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

ಮನೆಯಲ್ಲಿ ವೇಶ್ಯಾವಾಟಿಕೆ: ಇಬ್ಬರು ಯುವತಿಯರ ಸೆರೆ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು ಇಬ್ಬರು ಯುವತಿಯರನ್ನು ಸೆರೆ ಹಿಡಿದಿದ್ದು, ಈ ವೇಳೆ ಪಿಂಪ್ ಪರಾರಿಯಾಗಿದ್ದಾನೆ.
ಹಾಸನ ಮೂಲದ ಪುಷ್ಪಾ(೨೬) ಹಾಗೂ ಚಿಕ್ಕಮಗಳೂರಿನ ಸೌಮ್ಯಾ(೨೫) ಬಂಧಿತ ಯುವತಿಯರು. ಯುವತಿಯರನ್ನು ಇಟ್ಟುಕೊಂಡು ಮೋಹನ ಎಂಬಾತ ದೊಡ್ಡಣಗುಡ್ಡೆಯಲ್ಲಿರುವ ಬಾಡಿಗೆ ಮನೆಯಲ್ಲಿ ದಿನನಿತ್ಯ ವಿಟಪುರುಷರನ್ನು ಆಹ್ವಾನಿಸುತ್ತಿದ್ದ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದರು. ಅದರಂತೆ ನಿನ್ನೆ ಮಣಿಪಾಲ ಪೊಲೀ ಸರಿಗೆ ಸಿಕ್ಕ ಮಾಹಿತಿಯಂತೆ ಅವರು ದಾಳಿ ನಡೆಸಿದ್ದರು.
ರಾಜ್ಯಾದ್ಯಂತ ಯುವತಿಯರ ಸಂಪರ್ಕವಿಟ್ಟುಕೊಂಡಿರುವ ಪಿಂಪ್ ಮೋಹನ ವೇಶ್ಯಾವಾಟಿಕೆ ನಡೆಸಲೆಂದೇ ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದನೆನ್ನಲಾಗಿದೆ. ವಿಟಪುರುಷರನ್ನೂ ಮೊಬೈಲ್ ಮೂಲಕವೇ ಸಂಪರ್ಕಿಸಿ ರೇಟ್ ಫಿಕ್ಸ್ ಮಾಡಿ ಮನೆಗೆ ಆಹ್ವಾನಿಸುತ್ತಿದ್ದನೆನ್ನಲಾಗಿದೆ. ಬಂಧಿತ ಯುವತಿಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇಬ್ಬರಿಗೂ ಜಾಮೀನು ದೊರೆತಿದೆ.

ಕೇಸ್ ಗೆಲ್ಲಲು ವಕೀಲರ ಮೇಲೆಯೇ ಕೇಸ್!

Posted by JAYAKIRANA Kirana on | 0 comments | Leave a comment...

೧೧ ವರ್ಷಗಳ ಹಳೆ ಪ್ರಕರಣ

ಖಾಜಿಯವರ ಬಗ್ಗೆ ವಕೀಲ ಸಮೂಹದಲ್ಲಿ ಅವರದ್ದೇ ಆದ ಗೌರವವಿದೆ. ವೃತ್ತಿ ಧರ್ಮಕ್ಕಾಗಿ ಎಂದಿಗೂ ಕೀಳು ಮಟ್ಟಕ್ಕಿಳಿ ಯದೇ ಸದಾ ನ್ಯಾಯಾಂಗದ ಘನತೆಯನ್ನು ಕಾಯ್ದು ಕೊಂಡು ಮಾನವೀಯ ಸಂಬಂಧಿ ಪ್ರಕರಣವನ್ನು ಅವರು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದರು.

ಮಂಗಳೂರು: ಕರಾವಳಿ ಅಲೆಯ ರೋಹಿಣಿ ಮತ್ತು ಬಿ.ವಿ.ಸಿಯನ್ನು ಅನೇಕ ಕೇಸುಗಳಲ್ಲಿ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಬೆವರಿಳಿಸಿದ್ದ ನಗರದ ಖ್ಯಾತ ವಕೀಲರಾದ ಎಸ್. ಎಸ್. ಖಾಜಿಯವರ ವಿರುದ್ಧ ೧೧ ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂ ಧಿಸಿ ಖಾಸಗಿ ದೂರು ದಾಖಲಾಗಿದೆ. ವಿಶೇಷ ಎಂದರೆ ಖಾಜಿಯವರ ವಿರುದ್ಧ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಎಫ್‌ಐಆರ್ ದಾಖಲಾಗಿ ಜಾಮೀನು ಕೂಡಾ ಸಿಕ್ಕಿತ್ತು. ಆದರೆ ಈಗ ಅದನ್ನು ನಿನ್ನೆ ಮೊನ್ನೆ ನಡೆದಿದೆ ಎಂದು ಬಿಂಬಿಸುವ ಉದ್ದೇಶ ಖಾಜಿ ಅವರ ವೃತ್ತಿ ಬದುಕಿನ ಮೇಲೆ ಕಪ್ಪು ಚುಕ್ಕಿ ಮೂಡಿಸುವುದು ಮತ್ತು ಅವರ ನೈತಿಕ ಸ್ಥೈರ‍್ಯವನ್ನು ಕುಂದಿಸುವುದು ಆಗಿದೆ.
ಇಷ್ಟಕ್ಕೂ ವಕೀಲರೊಬ್ಬರು ತನ್ನ ವೃತ್ತಿ ಧರ್ಮಕ್ಕೆ ಅನುಗುಣವಾಗಿ ಒಬ್ಬರ ಪರ ವಾದ ಮಂಡಿಸಿ ಯಶಸ್ವಿಯಾದರೆ ಅಂಥ ವಕೀಲರ ವಿರುದ್ಧವೇ ದೂರು ದಾಖಲಿಸಿ ನೈತಿಕ ಸ್ಥೈರ‍್ಯ ಕುಂದಿಸಿ ಕೇಸು ತಮ್ಮ ಪರ ಬರುವಂತೆ ಮಾಡು ವುದು ನ್ಯಾಯಾಂಗದಲ್ಲಿ ಉತ್ತಮ ಬೆಳವಣಿಗೆಯಲ್ಲವಾದರೂ ತಮ್ಮ ವೃತ್ತಿ ಬದುಕಿನಲ್ಲಿ ಅತ್ಯುತ್ತಮ ಗುಣಮಟ್ಟ ವನ್ನು ಕಾಯ್ದುಕೊಂಡಿರುವ ಖಾಜಿ ಅವರ ಬಗ್ಗೆ ತೀರಾ ಕ್ಷುಲ್ಲಕ ಅನ್ನಿಸು ವಂತೆ ಬಿಂಬಿಸಿರುವುದು ನಗರದ ವಕೀಲ ಸಮೂಹದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಎಸ್. ಎಸ್. ಖಾಜಿಯವರ ಮೇಲೆ ಬಂದಿರುವ ಆರೋಪದ ಹಿಂದಿನ ಹಿನ್ನೆಲೆ ಇಲ್ಲಿದೆ.
ಜಮೀಲಾ ಬಾನು ಎಂಬವರ ವಿರುದ್ಧ ಮಹಮ್ಮದ್ ಹನೀಫ್ ಮತ್ತು ಶಹನಾಜ್ ಎಂಬವರು ವಂಚನೆ ಪ್ರಕರಣ ಸೇರಿದಂತೆ ಬೇರೆ ಬೇರೆ ಕಾಯಿದೆಯಡಿ ಕೇಸು ಹಾಕಿದ್ದರು. ಈ ಪ್ರಕರಣದಲ್ಲಿ ಹನೀಫ್-ಶಹನಾಜ್ ಪರ ವಾದ ಮಾಡುತ್ತಿದ್ದವರು ಎಸ್. ಎಸ್. ಖಾಜಿ. ಬಹುತೇಕ ತಾನು ಹಿಡಿದ ಕೇಸನ್ನು ಜಯದ ಹೊಸ್ತಿಲಿನಲ್ಲಿ ತಂದು ನಿಲ್ಲಿಸುವ ಖಾಜಿ ಸೋತ ಪ್ರಕರಣ ತೀರಾ ಕಡಿಮೆ. ಜಮೀಲಾಬಾನು ವಿರುದ್ಧ ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹೂಡಿದ್ದ ನಾಲ್ಕು ಪ್ರಕರಣಗಳಲ್ಲಿ ಖಾಜಿ ಗೆಲುವು ಸಾಧಿಸಿದ್ದರು. ಮಂಗಳೂರಿನಲ್ಲಿ ಕೇಸು ದಾಖಲಿಸಿದರೆ ಯಾವ ಕೇಸು ಕೂಡಾ ಗೆಲ್ಲಲಾಗದು ಎಂದು ಕೊನೆಗೆ ಬೆಂಗಳೂರಿನಲ್ಲೂ ಜಮೀಲಾ ಬಾನು ಹನೀಫ್ ಶಹನಾಜ್ ವಿರುದ್ಧ ಕೇಸು ಹಾಕಿದರು. ಆದರೆ ಖಾಜಿ ಬೆಂಗಳೂರಿಗೂ ಹೋಗಿ ಅಲ್ಲಿಯೂ ತನ್ನ ವಾದದ ವೈಖರಿಯಿಂದ ಕೇಸು ಗೆದ್ದುಕೊಂಡರು. ಈ ನಡುವೆ ಹನೀಫ್-ಶಹನಾಜ್ ಜಮೀಲಾ ವಿರುದ್ಧ ಕೇಸು ದಾಖಲಿಸಿದರು. ಇನ್ನು ಹೀಗೆಯೇ ಬಿಟ್ಟರೆ ಈ ಕೇಸಿನಲ್ಲಿ ತೀರ್ಪು ತನ್ನ ವಿರುದ್ಧ ಬರಬಹುದು ಎಂದುಕೊಂಡು ವಕೀಲರ ಸ್ಥೈರ‍್ಯ ಕುಂದಿಸುವ ಕೆಲಸ ಆರಂಭವಾಯಿತು. ಮೊದಲು ನಡೆದದ್ದೇ ಹನೀಫ್-ಶಹನಾಜ್ ವಿರುದ್ಧ ಕೇಸು. ಈ ದೂರಿನಲ್ಲಿ ಖಾಜಿಯವರನ್ನೂ ಸೇರಿಸಿಕೊಳ್ಳಲಾಯಿತು. ೨೦೦೧ರಲ್ಲಿ ನಡೆದ ಪ್ರಕರಣವನ್ನು ಹಿಡಿದುಕೊಂಡು ಪಾಂಡೇಶ್ವರ ಠಾಣೆಯಲ್ಲಿ ಕೇಸು ದಾಖಲಿಸಲು ಯತ್ನ ನಡೆಯಿತು. ಆದರೆ ೧೧ವರ್ಷ ಹಿಂದಿನ ಪ್ರಕರಣವನ್ನು ಈಗ ದಾಖಲಿಸಿಕೊಳ್ಳುವ ಹಿಂದಿನ ಮರ್ಮವನ್ನು ಅರಿತ ಪೊಲೀಸರು ಕೇಸು ದಾಖಲಿಸಿಕೊಳ್ಳುವುದು ಸಾಧ್ಯವಿಲ್ಲ ಎಂದರು.
ಜಮೀಲಾಬಾನು ಕೊನೆಗೆ ಖಾಸಗಿ ದೂರನ್ನು ಕೋರ್ಟ್ ಮೂಲಕ ಸಲ್ಲಿಸಿದರು. ಕೋರ್ಟ್ ಮೂಲಕ ಯಾವುದೇ ದೂರು ಸಲ್ಲಿಕೆಯಾದರೂ ಅದನ್ನು ಎಫ್‌ಐಆರ್ ಮಾಡಿಕೊಳ್ಳಲೇ ಬೇಕು. ಹಾಗೇ ಹನೀಫ್-ಶಹನಾಜ್ ವಿರುದ್ಧ ದೂರು ದಾಖಲಾಯಿತು. ಇದರೊಂದಿಗೆ ಖಾಜಿಯವರ ವಿರುದ್ಧವೂ ದೂರು ದಾಖಲಾಯಿತು. ಈ ದೂರು ದಾಖಲಾಗಿದ್ದು ಕಳೆದ ವರ್ಷದ ಡಿಸೆಂಬರ್‌ನಲ್ಲಿ! ಕರಾವಳಿ ಅಲೆ ಇದೊಂದು ಸ್ಕೂಪ್ ನ್ಯೂಸ್ ಎಂಬಂತೆ ಖಾಜಿಯವರ ಭಾವಚಿತ್ರ ಬಳಸಿ ವರದಿ ಪ್ರಕಟಿಸಿತು. ಅಸಲಿ ಕಥೆ ಇರುವುದೇ ಇಲ್ಲಿ.
ಮೊನ್ನೆ ಮೊನ್ನೆ ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಅಬೂಬಕ್ಕರ್ ಅವರು ಕರಾವಳಿ ಅಲೆ ವಿರುದ್ಧದ ಮೇಲೆ ಹೂಡಿದ ದಾವೆಯಲ್ಲಿ ಅಬೂಬಕ್ಕರ್ ಪರ ವಾದ ಮಾಡುತ್ತಿರುವವರು ಇದೇ ಎಸ್. ಎಸ್. ಖಾಜಿ ಅವರು. ಅಬೂಬಕ್ಕರ್ ಅವರ ಸೋದರ ಉಸ್ಮಾನ್ ಬಗ್ಗೆ ಅಲೆ ಅವಹೇಳನಕಾರಿಯಾಗಿ ಬರೆದಾಗ ಇದರ ವಿರುದ್ಧ ಉಸ್ಮಾನ್ ಕೋರ್ಟ್ ಮೊರೆ ಹೋಗಿ ತಮ್ಮ ವಿರುದ್ಧ ಮಾನಹಾನಿಕರವಾಗಿ ಬರೆಯಬಾರದು ಎಂದು ನ್ಯಾಯಾಲಯದಲ್ಲಿ ಭಿನ್ನವಿಸಿಕೊಂಡಿದ್ದರು. ಇವರ ಪರ ವಾದ ಮಾಡುತ್ತಿದ್ದ ಖಾಜಿಯವರು ಕರಾವಳಿ ಅಲೆ ಅಬೂಬಕ್ಕರ್ ಮತ್ತು ಅವರ ಸೋದರನ ಬಗ್ಗೆ ಮಾನಹಾನಿಕರ ವರದಿ ಪ್ರಕಟಿಸಬಾರದೆಂದು ಆಜ್ಞೆ ತರುವಲ್ಲಿ ಯಶಸ್ವಿಯಾದರು. ಆದರೂ ಕರಾವಳಿ ಅಲೆ ಕೋರ್ಟ್ ಆಜ್ಞೆ ಉಲ್ಲಂಘಿಸಿತು. ಕೋರ್ಟ್‌ನ ಉಲ್ಲಂಘನೆ ನೋಟಿಸನ್ನು ನೀಡಲು ಸ್ವತ: ಖಾಜಿಯವರೇ ಪೊಲೀಸರೊಂದಿಗೆ ಕರಾವಳಿ ಅಲೆ ಕಚೇರಿಗೆ ಹೋಗಿದ್ದರು. ಆಗ ಕರಾವಳಿ ಅಲೆಯ ಸಿ.ಸಿ ಕ್ಯಾಮರಾದಲ್ಲಿ ಮೂಡಿದ ಖಾಜಿಯವರ ಭಾವ ಚಿತ್ರವನ್ನೇ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
ಈ ಮೂಲಕ ಖಾಜಿಯವರೇ ವಂಚನೆ ಮಾಡಿದ್ದಾರೆನ್ನುವಂತೆ ಹೈಲೈಟ್ ಮಾಡಲಾಯಿತು. ಖಾಜಿಯವರ ಬಗ್ಗೆ ವಕೀಲ ಸಮೂಹದಲ್ಲಿ ಅವರದ್ದೇ ಆದ ಗೌರವವಿದೆ. ವೃತ್ತಿ ಧರ್ಮಕ್ಕಾಗಿ ಎಂದಿಗೂ ಕೀಳು ಮಟ್ಟಕ್ಕಿಳಿಯದೇ ಸದಾ ನ್ಯಾಯಾಂಗದ ಘನತೆಯನ್ನು ಕಾಯ್ದುಕೊಂಡು ಮಾನವೀಯ ಸಂಬಂಧಿ ಪ್ರಕರಣವನ್ನು ಅವರು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದರು. (ಅಮಾಯಕರಿಗೆ ಪೊಲೀಸ್ ಕಿರುಕುಳ, ದೌರ್ಜನ್ಯಗಳಂಥ ಪ್ರಕರಣಗಳಲ್ಲಿ ಖಾಜಿ ಧರ್ಮ ಬೇಧ ಮರೆತು ನೊಂದವರ ಪರ ನ್ಯಾಯಾಲಯದಲ್ಲಿ ಇವತ್ತಿಗೂ ಹೋರಾಟ ಮಾಡುತ್ತಿದ್ದಾರೆ. ಇಂಥ ಹೋರಾಟಕ್ಕೆ ಅವರು ಯಾವುದೇ ಲೇಬಲ್ ಅಂಟಿಸಿಕೊಂಡು ಪತ್ರಿಕೆಗಳಲ್ಲಿ ಪ್ರಚಾರ ಪಡೆಯದೆ ತಮ್ಮ ಪಾಡಿಗೆ ತಾವು ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ)
ಇಂಥ ಖಾಜಿಯವರು ಕೇವಲ ಕಕ್ಷಿದಾರನ ಹಿನ್ನೆಲೆಯಲ್ಲಿ ಕೇಸು ಹಾಕಿಸಿಕೊಂಡಿದ್ದಾರೆ. ಸತ್ಯದ ಮೇಲೆ, ತಾನು ಸದಾ ಗೌರವಿಸುವ ನ್ಯಾಯಾಂಗದ ಬಗ್ಗೆ ನನಗೆ ನಂಬಿಕೆಯಿದೆ. ಸತ್ಯ ಯಾವತ್ತಿಗೂ ಸತ್ಯವೇ ಎಂದು ನಂಬಿಕೊಂಡಿರುವ ಖಾಜಿಯವರು ಸದ್ಯ ಆಸ್ತಿ ಏಲಂ ಸಂಬಂಧಿ ಪ್ರಕರಣವೊಂದರಲ್ಲಿ ಸ್ಟೇಟ್‌ಬ್ಯಾಂಕ್ ವಿರುದ್ಧದ ಅಪರೂಪ ಅನ್ನಿಸುವ ಪ್ರಕರಣದಲ್ಲಿ ವಾದಿಸಿ ಯಶಸ್ವಿಯಾಗಿದ್ದಾರೆ. ಇದೀಗ ಖಾಜಿಯವರ ವಿರುದ್ಧ ಇದ್ದವರು ಸೇರಿಕೊಂಡು ನಡೆಸಿದ ವ್ಯವಸ್ಥಿತ ಪಿತೂರಿಯಲ್ಲಿ ಕರಾವಳಿ ಅಲೆ ಭಾಗಿಯಾಗಿದೆ. ನೈಜತೆ ಮರೆ ಮಾಚಿ ನ್ಯಾಯದ ಪರ ಹೋರಾಡುವ ವಕೀಲನನ್ನೇ ಆರೋಪಿ ಎಂದು ಬಿಂಬಿಸುವ ತಂತ್ರ ನಡೆಸಿದೆ. ನ್ಯಾಯಯುತ ದಾರಿಯಲ್ಲಿ ಕೇಸನ್ನು ಗೆಲ್ಲಲಾಗದವರು ಮಾಡಬಹುದಾದ ಕೊನೆಯ ತಂತ್ರ ಇದೇ ಆಗಿರಬಹುದು. ಆದರೆ ಈ ಮೂಲಕ ವಕೀಲನ ಸ್ಥೈರ‍್ಯವನ್ನು ನೈತಿಕವಾಗಿ ಕುಂದಿಸುವುದು ಸಾಧ್ಯವಿಲ್ಲ ಎಂದು ವಕೀಲ ಎಸ್. ಎಸ್. ಖಾಜಿ ಪತ್ರಿಕೆಗೆ ತಿಳಿಸಿದ್ದಾರೆ.

ತಿಮಿಂಗಿಲ ಅಧಿಕಾರಿಗಳಿಗೆ ಸಿ.ಎಂ. ರಕ್ಷಣೆ: ಜೆಡಿಎಸ್ ಗಂಭೀರ ಆರೋಪ

Posted by JAYAKIRANA Kirana on | 0 comments | Leave a comment...

ಮೀನುಗಾರಿಕಾ ನಿಗಮದಲ್ಲಿ ಭಾರೀ ಅವ್ಯವಹಾರ
ಮಂಗಳೂರು: ದ.ಕ.ಜಿಲ್ಲಾ ಮೀನುಗಾರಿಕಾ ನಿಗಮದಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದ್ದರೂ ಕಳಂಕಿತ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳದೆ ಅವರನ್ನು ಮುಖ್ಯಮಂತ್ರಿಯವರೇ ರಕ್ಷಿಸುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಜನತಾದಳ ದಾಖಲೆಗಳ ಮೂಲಕ ಗಂಭೀರವಾದ ಆರೋಪ ಮಾಡಿದೆ.
ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗ್ಡೆ, ಒಂದೆಡೆ ಮೀನುಗಾರಿಕಾ ಸಂಸ್ಥೆಯು ನಷ್ಟದಲ್ಲಿ ನಡೆಯುತ್ತಿರುವ ಕಾರಣ ಸಿಬ್ಬಂದಿಗೆ ತುಟ್ಟಿಭತ್ಯೆ ನೀಡಲಾಗುತ್ತಿಲ್ಲ ಎಂದು ನಿಗಮದ ಅಧ್ಯಕ್ಷರು ಸರಕಾರಕ್ಕೆ ವರದಿ ಸಲ್ಲಿಸಿದ್ದರೆ, ಮತ್ತೊಂದೆಡೆ ಲಾಭ ವಿದೆಯೆಂದು ತಿಳಿಸಿ ವಾರ್ಷಿಕ ತೆರಿಗೆ ಪಾವತಿಸಿದ್ದಾರೆ. ಇದೇ ವೇಳೆ ಹಿರಿಯ ಅಧಿಕಾರಿಗಳು ತುಟ್ಟಿಭತ್ಯೆಯನ್ನು ನಿಯಮಿತವಾಗಿ ಪಡೆದುಕೊಂಡಿದ್ದಾರೆ ಎಂದು ಅವರು ದಾಖಲೆಗಳ ಮೂಲಕ ಆರೋಪ ಮಾಡಿದ್ದಾರೆ. ಅಧಿಕಾರಿ ವಿ.ಕೆ.ಶೆಟ್ಟಿ ಕಳೆದ ೩೬ ವರ್ಷಗಳಿಂದ ದ.ಕ.ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಏಳು ವರ್ಷಗಳಿಂದ ಮೀನುಗಾರಿಕಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಅವಧಿಯಲ್ಲಿ ಮೂರು ಕೋಟಿಗೂ ಮಿಕ್ಕಿ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಅವರಲ್ಲದೆ ಇಂಜಿನಿಯರ್ ಅಮರನಾಥ ಜೈನ್ ಅವರ ಮೇಲೂ ಜೆಡಿಎಸ್ ದೂರು ಸಲ್ಲಿಸಿತ್ತು.
ಮೀನುಗಾರಿಕಾ ಇಲಾಖೆಯ ಪ್ರಿನ್ಸಿಪಾಲ್ ಕಾರ್ಯದರ್ಶಿ ಅವರ ಆದೇಶದಂತೆ ತನಿಖೆ ನಡೆಸಿದ್ದ ಹಿರಿಯ ಅಧಿಕಾರಿಗಳಾದ ನಾರಾಯಣ ಮೂರ್ತಿ, ಸುರೇಶ್, ಗಂಗಾಧರ ಮುಡಿಗೇರಿ, ರಾಮಚಂದ್ರ, ಮೋಹನ್ ಕೋಡಿಕಲ್ ಅವರನ್ನೊಳಗೊಂಡ ತಂಡ ಅವ್ಯವಹಾರ ಸಾಬೀತುಪಡಿಸಿ ವಿ.ಕೆ.ಶೆಟ್ಟಿಗೆ ವರ್ಗಾವಣೆ ಆದೇಶ ಹೊರಡಿಸಿದ್ದರೂ ಅದಿನ್ನೂ ಜಾರಿಗೆ ಬಂದಿಲ್ಲ. ಇದೇ ತಿಂಗಳ ೪ರಂದು ಇಲಾಖಾ ಕಾರ್ಯದರ್ಶಿ ಮುಂಜುಳಾ ಅವರು ವಿ.ಕೆ.ಶೆಟ್ಟಿಯವರನ್ನು ವರ್ಗ ಮಾಡಿ ಗಣಪತಿ ಭಟ್ ಅವರನ್ನು ನಿರ್ದೇಶಕರ ನ್ನಾಗಿ ಆದೇಶ ಹೊರಡಿಸಿದ್ದರೂ ಅದಕ್ಕೆ ಇನ್ನೊಮ್ಮೆ ತಡೆಹಿಡಿಯಲಾಗಿದೆ ಎಂದು ಹೆಗ್ಡೆ ಕಿಡಿಕಾರಿದರು.
ಹೈದರಾಬಾದ್‌ನ ಶ್ರೀಸಾಯಿ ಅನ್ನಪೂರ್ಣ ಪ್ರೊಡಕ್ಟ್ಸ್ ಇದರ ಮಾಲೀಕರಾದ ರಾಂಪ್ರಸಾದ್ ಅವರು ಕಳೆದ ಮೂರು ವರ್ಷಗಳಿಂದ ಕಾರವಾ ರದ ಫಿಶ್ ಮಿಲ್ ಫ್ಲಾಂಟ್ ಜಾಗವನ್ನು ಗುತ್ತಿಗೆ ಪಡೆದಿದ್ದಾರೆ. ಆದರೆ ಇದುವರೆಗೂ ೪.೫೦ ಕೋಟಿ ಗುತ್ತಿಗೆ ಮೊತ್ತ ನೀಡಿಲ್ಲ. ಆದರೂ ಅದನ್ನು ವಸೂಲಿ ಮಾಡದಿದ್ದು ಇದರಲ್ಲಿ ವಿ.ಕೆ.ಶೆಟ್ಟಿ ಶಾಮೀಲಾಗಿದ್ದೇ ಕಾರಣ ಎಂದು ದೂರಿದ ಎಂ.ಜಿ.ಹೆಗ್ಡೆ, ಬೆಂಗಳೂರು ಐಸ್ ಪ್ಲಾಂಟ್ ಸ್ಪೋಟ ಪ್ರಕರಣ, ಭಟ್ಕಳ ಕಳಪೆ ಕಾಮಗಾರಿ ಪ್ರಕರಣ, ಇದೀಗ ಐದು ಐಸ್ ಪ್ಲಾಂಟ್ ನಿರ್ಮಾಣಕ್ಕೆ ಖರೀದಿಸಿದ ಯಂತ್ರ ತುಕ್ಕು ಹಿಡಿದಿರುವ ಬಗ್ಗೆ ಮಂಜುಳಾ ಅವರು ಶೆಟ್ಟಿಗೆ ಶೋಕಾಸ್ ನೀಡಿದ್ದರು. ಆದರೆ ಮುಖ್ಯಮಂತ್ರಿಯೇ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದೆ ವರ್ಗಾವಣೆ ತಡೆಹಿಡಿದಿದ್ದು ಅವರ ಪಾರದರ್ಶಕ ಆಡಳಿತಕ್ಕೆ ಸಾಕ್ಷಿ ಎಂದು ಲೇವಡಿ ಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಮುಖಂಡರಾದ ಡಿ.ಎಂ. ಅಸ್ಲಂ, ಖಾಸಿಂ ಮತ್ತು ಹಮೀದ್ ಬೆಂಗ್ರೆ ಉಪಸ್ಥಿತರಿದ್ದರು.

ಶೋಭಾ ಮುಖ್ಯಮಂತ್ರಿ ಮಾಡಲು ಯಡ್ಡಿ ತಂತ್ರ

Posted by JAYAKIRANA Kirana on | 0 comments | Leave a comment...


ಬೆಂಗಳೂರು:ಸದಾನಂದ ಗೌಡರನ್ನು ಅಧಿಕಾರದಿಂದ ಕೆಳಗಿಳಿಸಲು ಮುಖ್ಯಮಂತ್ರಿ ಸ್ಥಾನದ ಪಟ್ಟಕ್ಕೇರಲು ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹರ ಸಾಹಸ ನಡೆಸಿದ್ದಾರೆ. ಮಾಜೀ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೋಭಾ ಅವರನ್ನು ಮುಖ್ಯಮಂತ್ರಿಯನ್ನಾಗಿಸಿ ದರೆ ತಾವು ಎಲ್ಲಾ ರಾಜಕೀಯ ತ್ಯಾಗಕ್ಕೂ ಸಿದ್ದ ಎಂದು ವರಿಷ್ಠರಿಗೆ ಸಂದೇಶ ನೀಡಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿರುವ ಶೋಭಾ ಪಕ್ಷದ ಹಿರಿಯ ನಾಯಕರನ್ನು ಈ ಸಂಬಂಧ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸದಾನಂದ ಗೌಡರನ್ನು ಕೆಳಗಿಳಿಸಿ ಯಡಿಯೂರಪ್ಪ ಅವರು ಸೂಚಿಸುವ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ರಾಜ್ಯ ಬಿಜೆಪಿಯ ಗೊಂದಲ ನಿವಾರಣೆಯಾಗುತ್ತದೆ.
ಅಲ್ಲದೆ ಯಡಿಯೂರಪ್ಪ ಸದ್ಯಕ್ಕೆ ಅಧಿಕಾರವನ್ನು ಬಯಸುವುದಿಲ್ಲ. ಪಕ್ಷ ಸಂಘಟಿಸಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಅಲ್ಲದೆ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಶೋಭಾ ವರಿಷ್ಠರ ಗಮನಕ್ಕೆ ತಂದಿದ್ದಾರೆ.ಆದರೆ ಇದಕ್ಕೆ ದೆಹಲಿ ನಾಯಕರ ಬೆಂಬಲ ದೊರೆತಿಲ್ಲ, ವರಿಷ್ಠರ ತೀರ್ಮಾನದಿಂದ ಬೇಸತ್ತ ಯಡಿಯೂರಪ್ಪ ಸದಾನಂದ ಗೌಡರ ವಿರುದ್ಧ ಶಾಸಕರನ್ನು ಎತ್ತಿಕಟ್ಟುವ ಕೆಲಸಕ್ಕೆ ಹೊರಟಿದ್ದಾರೆ. ಕಳೆದ ಎರಡು ದಿನಗಳಿಂದ ಯಡಿಯೂರಪ್ಪ ಬೆಂಬಲಿಗ ಸಚಿವರು ಮತ್ತು ಶಾಸಕರು ಸದಾನಂದ ಗೌಡ ಹಠಾವೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಯಡಿಯೂರಪ್ಪನವರಿಗ ದಕ್ಷಿಣ ಕನ್ನಡದ ಗೌಡರನ್ನು ಕೆಳಗಿಳಿಸಿ ಅದೇ ಜಿಲ್ಲೆಯ ಹೆಣ್ಮಗಳನ್ನು ಅಧಿಕಾರಕ್ಕೆ ತರಲು ನಿರಂತರ ಹೋರಾಟ ನಡೆಸಿದ್ದಾರೆ. ಒಂದೆರಡು ದಿನಗಳಲ್ಲಿ ಅವರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ೭೦ರಿಂದ ೮೦ ಶಾಸಕರನ್ನು ಕಲೆ ಹಾಕುವಲ್ಲಿ ಯಡಿಯೂರಪ್ಪ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಸಂಸದರನ್ನು ಎತ್ತಿಕಟ್ಟುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ಯಡ್ಡಿ ಬಣದ ಸಚಿವರ ಕೈಬಿಟ್ಟು ಸಂಪುಟ ವಿಸ್ತರಣೆಗೆ ಡಿ.ವಿ. ತೀರ್ಮಾನ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಯಡಿಯೂರಪ್ಪ ಬಣದ ಸಚಿವ ರನ್ನು ಸದ್ಯಕ್ಕೆ ಕೈಬಿಡದೇ ತಮ್ಮ ಮಂತ್ರಿಮಂಡಲವನ್ನು ಮೇ ೧೭ರಂದು ವಿಸ್ತರಿಸಲು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತೀರ್ಮಾನಿಸಿದ್ದಾರೆ.
ಕೆಲವು ಸಚಿವರ ವಿರುದ್ಧ ವರಿಷ್ಠರಿಗೆ ದೂರು ನೀಡಿ, ಬರೆದ ಪತ್ರ ಬಹಿರಂಗಗೊಳ್ಳುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಆತಂಕ ಕಲಹ ಉಂಟಾಗಿದ್ದರೂ, ಇದನ್ನು ಲೆಕ್ಕಿಸದೇ ಮುಖ್ಯಮಂತ್ರಿಯವರು ಖಾಲಿ ಇರುವ ೧೧ ಸ್ಥಾನಗಳಲ್ಲಿ ಎರಡನ್ನು ಉಳಿಸಿಕೊಂಡು ಉಳಿದವನ್ನು ಭರ್ತಿ ಮಾಡಲು ನಿರ್ಧರಿಸಿದ್ದಾರೆ. ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಮಂತ್ರಿ ಸ್ಥಾನದಿಂದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಭರ್ತಿ ನೀಡಿ, ಅವರಿಗೆ ಉತ್ತಮ ಖಾತೆ ಕಲ್ಪಿಸುವುದರೊಂದಿಗೆ ಶೆಟ್ಟರನ್ನು ತಮ್ಮಡೆಗೆ ಸೆಳೆದುಕೊಳ್ಳುವುದರ ಜೊತೆಗೆ ವೀರಶೈವರ ಮತಗಳನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಯಡಿಯೂರಪ್ಪ ಬೆಂಬಲಿತ ಸಚಿವರನ್ನು ಕೈಬಿಡದಿದ್ದರೂ ಅವರ ಬಳಿ ಇರುವ ಪ್ರಮುಖ ಖಾತೆಗಳನ್ನು ಕಸಿದುಕೊಂಡು ಅವರು ಸಚಿವರಾಗಿ ಮಾತ್ರ ಮುಂದುವರೆಯುವ ಅವಕಾಶ ಮಾಡಿಕೊಡಲಿದ್ದಾರೆ. ರಾಜ್ಯ ಬಿಜೆಪಿಯಲ್ಲಿನ ಆಂತರಿಕ ವಿಚಾರಗಳನ್ನು ಪ್ರತಿನಿತ್ಯ ಪಕ್ಷದ ವರಿಷ್ಠರೊಂದಿಗೆ ಹಂಚಿಕೊಳ್ಳುತ್ತಿರುವ ಮುಖ್ಯಮಂತ್ರಿಯವರು ಅವರ ಸಲಹೆಯಂತೆ ಇಂತಹ ನಿರ್ಧಾರಕ್ಕೆ ಬಂದಿದ್ದಾರೆ. ಯಡಿಯೂರಪ್ಪ ಬಣದ ಹಲವು ಸಚಿವರ ವಿರುದ್ಧ ಪಕ್ಷ ದ್ರೋಹದ ಆರೋಪ ಹೊರಿಸಿ ಈ ಹಿಂದೆ ಪತ್ರ ಬರೆದಿದ್ದ ಸದಾನಂದಗೌಡ ಇದರ ಬೆನ್ನಲ್ಲೇ ಆ ಬಣದ ಕೆಲ ಸಚಿವರನ್ನು ಕೈ ಬಿಟ್ಟು ಹದಿನೈದಕ್ಕೂ ಹೆಚ್ಚು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಚಿಂತನೆ ನಡೆಸಿದ್ದರು.ಇದಕ್ಕಾಗಿ ರಾಜ್ಯ ಸಚಿವ ಸಂಪುಟ ಪುನರ್ರಚನೆಗೆ ಒಪ್ಪಿಗೆ ಕೊಡುವಂತೆ ಹೈಕಮಾಂಡ್ ವರಿಷ್ಟರ ಮೇಲೆ ಒತ್ತಡ ಹೇರಿದ್ದರು.ಆದರೆ ಇದ್ದಕ್ಕಿದ್ದಂತೆ ಸದಾನಂದಗೌಡ ಬರೆದ ಪತ್ರ ಬಹಿರಂಗಗೊಂಡ ಪರಿಣಾಮವಾಗಿ ಯಡಿಯೂರಪ್ಪ ನೇರಾನೇರವಾಗಿ ಕದನಕ್ಕಿಳಿದಿದ್ದಾರೆ.

ಮಂಗಳೂರು ರಸ್ತೆಯಲ್ಲಿ ಅಲೆಯುತ್ತಿದ್ದ ಯುವತಿ ಮತ್ತೆ ತಾಯಿ ಮಡಿಲಿಗೆ

Posted by JAYAKIRANA Kirana on | 0 comments | Leave a comment...

ಉಡುಪಿ: ಒಂದೂವರೆ ವರ್ಷದ ಹಿಂದೆ ಬೆಂಗಳೂರಿನಿಂದ ಕಾಣೆ ಯಾಗಿ ಮಂಗಳೂರಿನ ರಸ್ತೆಯೊಂ ದರಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಅಲೆದಾಡುತ್ತಿದ್ದು, ಬಳಿಕ ಶಂಕರ ಪುರದ ವಿಶ್ವಾಸದ ಮನೆಗೆ ಸೇರ್ಪ ಡೆಗೊಂಡು ಚೇತರಿಸಿಕೊಂಡಿದ್ದ ಯುವತಿಯೋರ್ವಳು ಇದೀಗ ತಾಯಿ ಮಡಿಲು ಸೇರಿದ್ದು, ಪುನರ್ಜನ್ಮ ಪಡೆದುಕೊಂಡಿದ್ದಾಳೆ.
 ಈಕೆಯ ಹೆಸರು ಕು.ಸೌಮ್ಯಾ, ೨೮ ವರ್ಷ, ತಾಯಿಯ ಹೆಸರು ರೆಬೆಕ್ಕ. ೨೦೧೧ರ ಜನವರಿ ೧೦ರಂದು ಬೆಂಗಳೂರಿನಲ್ಲಿ ತಾನು ಕಲಿಯುತ್ತಿದ್ದ ಸಂಸ್ಥೆಯಿಂದ ಕಾಣೆಯಾಗಿದ್ದ ಈಕೆ, ಅದೇ ತಿಂಗಳ ೧೬ರಂದು ಮಂಗಳೂರು ರೈಲ್ವೆ ನಿಲ್ದಾಣದ ರಸ್ತೆಯೊಂದರಲ್ಲಿ ಮಾನಸಿಕ ಅಸ್ವಸ್ಥತೆಯಂತೆ ಅಲೆದಾ ಡುತ್ತಿದ್ದಾಗ ವಿಶ್ವಾಸದ ಮನೆಯ ಕಾರ್ಯಕರ್ತರ ಕಣ್ಣಿಗೆ ಬಿದ್ದು, ಶಂಕರ ಪುರದ ಅನಾಥಾಶ್ರಮಕ್ಕೆ ಸೇರ್ಪಡೆ ಯಾಗಿದ್ದಳು.
ಬೆಂಗಳೂರಿನಿಂದ ಕಾಣೆಯಾದ ಬೆನ್ನಿಗೆ ಸೌಮ್ಯಾಳ ಹೆತ್ತವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ದ್ದರು. ಪತ್ರಿಕೆಗಳಲ್ಲಿ ಮತ್ತು ಟಿವಿ ಚಾನೆಲ್‌ಗಳಲ್ಲಿ ಈಕೆಯ ಭಾವಚಿತ್ರ ಸಹಿತ ಕಾಣೆಯಾದ ವಿಷಯ ಪ್ರಕಟಿಸಿ, ಕಂಡುಬಂದರೆ ತಿಳಿಸಿಬೇಕೆಂದು ಪ್ರಕ ಟಣೆ ನೀಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.
ಈ ನಡುವೆ, ಸೌಮ್ಯಾ ಶಂಕರ ಪುರದ ವಿಶ್ವಾಸದ ಮನೆಯಲ್ಲಿ ವೈದ್ಯರ ನಿರಂತರ ಚಿಕಿತ್ಸೆ, ಕಾರ್ಯಕರ್ತರ ಪ್ರೀತಿಯ ಆರೈಕೆಗಳಿಂದಾಗಿ ಚೇತರಿಸಿಕೊಳ್ಳುತ್ತಿದ್ದಳು.
ವಿಶ್ವಾಸದ ಮನೆ ಸಂಸ್ಥೆಯಿಂದ ಪ್ರಕಟವಾಗುವ ಮಾಸಿಕ ಪತ್ರಿಕೆ ದೇವರ ಸ್ವರದಲ್ಲಿ ಸೌಮ್ಯಾಳ ಫೋಟೋ ಇತ್ತೀಚೆಗೆ ಪ್ರಕಟವಾಗಿತ್ತು. ಈ ಪತ್ರಿಕೆಯಲ್ಲಿ ಸೌಮ್ಯಾಳ ಫೋಟೋ ಪ್ರಕಟವಾಗಿರುವ ವಿಷಯ ಪಕ್ಕದ ಮನೆಯವರಿಂದ ತಿಳಿದುಕೊಂಡ ಸೌಮ್ಯಾಳ ತಾಯಿ ರೆಬೆಕ್ಕ ಅವರು, ವಿಶ್ವಾಸದ ಮನೆಗೆ ದೂರವಾಣಿ ಕರೆ ಮಾಡಿ ಮಗಳು ಕಾಣೆಯಾದ ವಿಷಯ ತಿಳಿಸಿ, ಆಕೆ ಚೇತರಿಸಿಕೊಂಡಿರುವ ವಿಷಯ ಕೇಳಿ ತಿಳಿದುಕೊಂಡು ಮಗಳನ್ನು ಕರೆದೊಯ್ಯಲು ಬರುವುದಾಗಿ ತಿಳಿಸಿದ್ದಾರೆ.
ಬುಧವಾರ ವಿಶ್ವಾಸದ ಮನೆಗೆ ಆಗಮಿಸಿದ ರೆಬೆಕ್ಕ ಹಾಗೂ ಮನೆಯವರು ಸೌಮ್ಯಾಳನ್ನು ಕಂಡು, ಮಾತನಾಡಿಸಿ ತೃಪ್ತಿ ಹೊಂದಿದರಲ್ಲದೆ, ಮಗಳನ್ನು ಕರೆದೊಯ್ದರು. ಮಗಳ ಪುನರ್ಜನ್ಮಕ್ಕೆ ಕಾರಣರಾದ ವಿಶ್ವಾಸದ ಮನೆಯ ಎಲ್ಲರಿಗೂ ರೆಬೆಕ್ಕ ಹಾಗೂ ಮನೆಯವರು ಕೃತಜ್ಞತೆ ಸಲ್ಲಿಸಲು ಮಾತ್ರ ಮರೆಯಲಿಲ್ಲ.

ಹೋಟೆಲ್ ಮೇಲೆ ದಾಳಿ: ಬಾಲ ಕಾರ್ಮಿಕ ಪತ್ತೆ

Posted by JAYAKIRANA Kirana on | 0 comments | Leave a comment...

ಕುಂದಾಪುರ: ಬಾಲ ಕಾರ್ಮಿಕ ಪತ್ತೆಗಾಗಿ ಬಾಲ ಕಾರ್ಮಿಕ ಇಲಾಖೆ ಜಂಟಿ ದಾಳಿಯನ್ನು ಕುಂದಾಪುರ ದೆಲ್ಲೆಡೆ ನಡೆಸುವುದರ ಮೂಲಕ ಕೋಟೇಶ್ವರದ ಐಸ್ ಕ್ರೀಂ ಪಾರ್ಲ ರೊಂದರಲ್ಲಿ ೧೪ ವರ್ಷದ ಬಾಲಕ ನೊಬ್ಬನ ರಕ್ಷಣೆ ಮಾಡಲಾಯಿತು.
ಸರ್ಕಾರಿ ಪ್ರೌಢ ಶಾಲೆಯಲ್ಲಿ ೮ ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಈ ಬಾಲಕ ರಜೆಯಲ್ಲಿ ಪಾರ್ಲರಿಗೆ ಕೆಲಸಕ್ಕೆ ಬಂದಿರುವುದಾಗಿ ಹೇಳಿದ್ದಾನೆ. ತನ್ನ ತಂದೆ ಅಡುಗೆ ಕೆಲಸ ಮಾಡಿ ಕೊಂಡಿದ್ದು ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿರುವುದಾಗಿ ತಿಳಿಸಿದ ಬಾಲಕ ಮುಂದಿನ ವರ್ಷದ ವಿದ್ಯಾಭ್ಯಾಸಕ್ಕಾಗಿ ಪುಸ್ತಕ ಹಾಗೂ ಇತರ ಖರ್ಚಿಗಾಗಿ ಹಣ ಸಂಗ್ರಹಿಸುವುದಕ್ಕೋಸ್ಕರ ನಾನು ರಜೆಯಲ್ಲಿ ದುಡಿಯಲು ಬರುತ್ತಿರುವು ದಾಗಿಯೂ ಆತ ತಿಳಿಸಿದ್ದಾನೆ. ಹಿಂದಿನ ಅಂಗಡಿಯಲ್ಲಿ ತಿಂಗಳಿಗೆ ೧೦೦೦ ರೂಪಾಯಿ ನೀಡುತ್ತಿದ್ದು ಒಂದು ತಿಂಗಳು ಅಲ್ಲಿ ಕೆಲಸ ಮಾಡಿರುವುದಾಗಿ ತಿಳಿಸಿದ ಬಾಲಕ ಇಲ್ಲಿ ಊಟ ತಿಂಡಿ ನೀಡಿ ದಿನವೊಂದಕ್ಕೆ ೧೦೦ ರೂಪಾ ಯಿಗಳನ್ನು ನೀಡುತ್ತಾರೆ ಎಂದಿದ್ದಾನೆ.
ದಾಳಿ ನಡೆಸಿದ ಇಲಾಖಾಧಿಕಾ ರಿಗಳು ಅಂಗಡಿ ಮಾಲೀಕರಲ್ಲಿ ಅಂಗಡಿಗೆ ಸಂಬಂಧಪಟ್ಟ ಯಾವುದೇ ದಾಖಲೆಗಳು ಇಲ್ಲದಿದ್ದು, ಪಂಚಾ ಯತ್‌ನ ಅನುಮತಿ ಪ್ರಮಾಣ ಪತ್ರ ವನ್ನೂ ನವೀಕರಿಸದಿರುವುದು ಕಂಡು ಬಂದಿತು. ಹುಡುಗನ ಪ್ರಾಯ ನಿಗದಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ದಾಖಲೆಗಳೂ ಮಾಲೀಕರ ಬಳಿ ಲಭ್ಯವಿರಲಿಲ್ಲ. ದಾಳಿ ಸಂದರ್ಭದಲ್ಲಿ ಬಾಲಕನನ್ನು ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ಸರಿಯಾದ ಪ್ರಾಯದ ಪ್ರಮಾಣ ಪತ್ರವನ್ನು ಹಾಜರುಪಡಿ ಸುವಂತೆ ತಿಳಿಸಿ, ಬಾಲಕನ ರಕ್ಷಣೆ ಮಾಡಿದ್ದಾರೆ. ಸದ್ಯ ಬಾಲಕ ಕೆದೂರಿನ ಸ್ಫೂರ್ತಿಧಾಮದಲ್ಲಿ ರಕ್ಷಣೆ ಪಡೆಯು ತ್ತಿದ್ದಾನೆ.
ದಾಳಿ ಸಂದರ್ಭದಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಪ್ರಭಾಕರ ಆಚಾರ್ಯ, ಕುಂದಾಪುರ ವೃತ್ತ ಕಾರ್ಮಿಕ ಉಪನಿರೀಕ್ಷಕ ಜೀವನ್ ಕುಮಾರ್, ಉಡುಪಿ ಪ್ರಥಮ ವೃತ್ತದ ಕಾರ್ಮಿಕ ಉಪನಿರೀಕ್ಷಕ ಆರ್. ರವಿಕುಮಾರ್, ಉಡುಪಿ ಎರಡನೇ ವೃತ್ತದ ಉಪನಿರೀಕ್ಷಕ ಮರ್ಲಿನ್ ಗ್ರೇಸ್ ಡಿಸೋಜಾ, ಬೇಳೂರಿನ ಮಧುಕರ ಶೆಟ್ಟಿ, ಕೆದೂರು ಸ್ಪೂರ್ತಿಧಾಮದ ಕಾರ್ಯನಿರ್ವಾಹಕ ಕೇಶವ ಕೋಟೇಶ್ವರ ಭಾಗವಹಿಸಿದ್ದರು.

ನೀರಿನ ಬರ ಪರಿಸ್ಥಿತಿಗೆ ಕಳಪೆ ಕಾಮಗಾರಿ ಕಾರಣವಾಯಿತೇ?

Posted by JAYAKIRANA Kirana on | 0 comments | Leave a comment...

ಮುಲ್ಕಿ: ಮುಲ್ಕಿಯ ನ. ಪಂ. ವ್ಯಾಪ್ತಿಯಲ್ಲಿ ಕುಡಿ ಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಈ ಸಮಸ್ಯೆಯನ್ನು ನೀಗುವ ಸಲುವಾಗಿ ಓವರ್‌ಹೆಡ್ ಟ್ಯಾಂಕ್‌ನ ನಿರ್ಮಾಣ ಕಾಮಗಾರಿ ಕೆ.ಎಸ್ ರಾವ್ ನಗರ, ಬಪ್ಪನಾಡು, ಚಿತ್ರಾಪು ಈ ಸ್ಥಳಗಳಲ್ಲಿ ನಡೆಸಲಾಯಿತು. ಆದರೆ ಈ ಕಾಮಗಾರಿ ಕಳಪೆಯಾಗಿದ್ದು ನೀರು ಸೋರುತ್ತಿದೆ.
ಒಂದು ಟ್ಯಾಂಕ್‌ಗೆ ೩೩ ಲಕ್ಷ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಯ ಟೆಂಡರು ಪಡೆದ ನಾಗರಾಜು ಎಂಬ ಗುತ್ತಿಗೆದಾರರಿಗೆ ಈ ಕೆಲಸವನ್ನು ನೀಡಿದ್ದು, ಇದೀಗ ಈ ಎರಡು ಟ್ಯಾಂಕ್‌ಗಳು ಸೋರುತ್ತಿದೆ. ಟ್ಯಾಂಕ್ ೧.೫೦ ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಇಂತಹ ಮೂರು ಟ್ಯಾಂಕ್ ನಿರ್ಮಾಣ ಗೊಂಡರೂ ಇದೀಗ ಜನರ ಅಗತ್ಯಕ್ಕೆ ಬಳಸದಂತಾಗಿದೆ. ಇನ್ನೊಂದೆಡೆ ಹೆಚ್ಚಾಗಿ ನೀರಿನ ಕೊರತೆ ಕಂಡು ಬರುವ ಗ್ರಾಮಗಳಾದ ಬಪ್ಪನಾಡು, ಕೊಲಚಿಕಂಬಳ, ಮಾನಂಪಾಡಿ, ಕೆ.ಎಸ್. ರಾವ್ ನಗರ ಇಲ್ಲಿ ನೀರಿನ ಸಮಸ್ಯೆ ಇದ್ದು, ಜಿಲ್ಲಾಧಿಕಾರಿಯವರು ೧೨ ಸಾವಿರ ಲೀಟರ್, ೬ ಸಾವಿರ ಲೀಟರ್‌ನ ಎರಡು ಟ್ಯಾಂಕ್ ಬಳಸುವಂತೆ ತಿಳಿಸಿದ್ದು ಇದೀಗ ಟ್ಯಾಂಕರುಗಳಲ್ಲಿ ನೀರು ನೀಡುವಂತಹ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ತುಂಬೆಯಿಂದ ಎರಡು ದಿನಕ್ಕೆ ಒಂದು ಬಾರಿ ನಾಲ್ಕು ಲಕ್ಷದಿಂದ ಐದು ಲಕ್ಷ ಲೀಟರ್ ನೀರು ಬಿಡುತ್ತಿದ್ದಾರೆ. ಆದರೆ ಇಲ್ಲಿನ ಗ್ರಾಮಸ್ಥರಿಗೆ ದಿನವೊಂದಕ್ಕೆ ಏಳುವರೆ ಲಕ್ಷ ಲೀಟರ್ ನೀರಿನ ಅವಶ್ಯಕತೆ ಇದ್ದು ಸಾರ್ವಜನಿಕರು ಬರದ ಭಯದಿಂದ ಜೀವನ ಸಾಗಿಸುವಂತಾಗಿದೆ. ಇಷ್ಟು ಮಾತ್ರವಲ್ಲದೆ ಇದೀಗ ಹೆಚ್ಚು ನೀರಿನ ಸಮಸ್ಯೆ ಇರುವ ಗ್ರಾಮಕ್ಕೆ ದಿನಕ್ಕೆ ಒಂದು ಬಾರಿ ಎಲ್ಲಾ ಗ್ರಾಮಗಳಲ್ಲಿ ೫೫ ಸಾವಿರ ಲೀಟರ್‌ನಷ್ಟು ನೀರನ್ನು ಟ್ಯಾಂಕರ್ ಮೂಲಕ ಒದಗಿಸಲಾಗುತ್ತ್ತಿದೆ. ಇಲ್ಲಿಗೆ ಅಗತ್ಯಕ್ಕೆ ಬೇಕಾಗುವ ನೀರನ್ನು ಹೆಜಮಾಡಿಯಿಂದ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಇಲ್ಲಿ ಒಟ್ಟು ಸುಮಾರು ೨೫ ಬಾವಿ, ೧೫ ಕೊಳವೆ ಬಾವಿಗಳು ಇದ್ದರೂ ಇವುಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಮಾತ್ರವಲ್ಲದೆ ಉಪ್ಪು ನೀರಿನ ಸಮಸ್ಯೆಯಿಂದ ಕುಡಿಯುವ ನೀರಿಗೆ ತತ್ತರಿಸುವಂತಾಗಿದೆ.
ಇಲ್ಲಿನ ನೀರಿನ ಸಮಸ್ಯೆ ಕಡಿಮೆ ಮಾಡುವ ಸಲುವಾಗಿ ಎರಡೂವರೆ ಲೀಟರ್ ಸಾಮರ್ಥ್ಯದ ಮೂರು ಪಂಪು ಹಾಗೂ ಮೂರು ಓವರ್‌ಹೆಡ್ ಟ್ಯಾಂಕ್ ಒಂದುವರೆ ಲಕ್ಷ ಲೀಟರ್ ನೀರನ್ನು ಶೇಖರಿಸಿಡಲು ಸಾಧ್ಯವಾಗುವ ಟ್ಯಾಂಕ್‌ಗಳ ಕಳಪೆ ಕಾಮಗಾರಿಯ ಎರಡು ಟ್ಯಾಂಕ್ ಗಳು ಒಂದು ಚಿತ್ರಾಪಿನ ಓವರ್‌ಹಡ್ ಟ್ಯಾಂಕ್ ಇನ್ನೊಂದು ಬಪ್ಪನಾಡು ದೇವಸ್ಥಾನದ ಬಳಿ ಇರುವ ಟ್ಯಾಂಕ್ ಇವೆರಡೂ ಟ್ಯಾಂಕ್‌ಗಳು ಸೋರುತ್ತಿದ್ದು ಮಾತ್ರವಲ್ಲದೆ ಜಾತ್ರೆಯ ಸಮಯದಲ್ಲಿ ಸುಡುಮದ್ದು ಗಳ ಸ್ಫೋಟದ ತೀವ್ರತೆಗೆ ಈ ಟ್ಯಾಂಕ್ ಕಂಪನದಿಂದ ಮುಂದಿನ ದಿನಗಳಲ್ಲಿ ನೆಲಕ್ಕೆ ಉರುಳುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ನೀರಿನ ಸಮಸ್ಯೆಗೆ ಸಮರ್ಪಕವಾದ ವ್ಯವಸ್ಥೆ ಆಗಿಲ್ಲ.
ನೀರು ಶೇಖರಿಸಿಡುವ ಟ್ಯಾಂಕ್‌ನ ಕಳಪೆ ಕಾಮಗಾರಿ ಒಂದೆಡೆಯಾದರೆ ಇನ್ನೊಂದೆಡೆ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುವ ಗಾದೆಯು ಇದಕ್ಕೆ ಸೂಕ್ತವಾಗುತ್ತದೆ. ಏಕೆಂದರೆ ನೀರೇ ಇಲ್ಲದ ಸಮಸ್ಯೆ ತಿಳಿದಿದ್ದರೂ ಈ ಟ್ಯಾಂಕ್ ಗಳ ನಿರ್ಮಾಣದ ಅಗತ್ಯವಿತ್ತೆ. ತುಂಬೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಈ ಟ್ಯಾಂಕ್‌ಗಳಿಗೆ ನೀರು ಎಲ್ಲಿಂದ ಬರುತ್ತೆ. ಒಂದು ವೇಳೆ ಸಾರ್ವಜನಿಕರ ಹಿತಾಸಕ್ತಿಯಿಂದ ಮಾಡಿದ್ದರೆ ಮೊದಲಿಗೆ ಇಲ್ಲಿನ ಸಮೀಪದ ನದಿಗಳಿಂದ ಅಥವಾ ಕೆರೆಗಳಿಂದ ನೀರನ್ನು ಬಳಸಿ ಶುದ್ದೀಕರಿಸಿ ಜನಗಳಿಗೆ ನೀರನ್ನು ಕೊಡುವ ವ್ಯವಸ್ಥೆಯನ್ನು ಮಾಡಬಹುದಿತ್ತು. ಆದರೆ ಅವೆಲ್ಲವನ್ನು ಬಿಟ್ಟು ಬಂದ ಅನುದಾನವನ್ನು ವಿನಿಯೋಗಿಸಬೇಕು ಎನ್ನುವ ದೃಷ್ಟಿಯಿಂದ ಈ ಟ್ಯಾಂಕ್‌ಗಳ ನಿರ್ಮಾಣವಾಗಿದೆ ಹೊರತು ಜನಗಳ ನೀರಿನ ಕೊರತೆಯನ್ನು ನೀಗಿಸುವ ಆಲೋಚನೆಯಿಂದ ಮಾಡಿಲ್ಲ ಎನ್ನುವುದು ಸ್ಪಷ್ಟವಾಗುತ್ತೆ. ಈ ಟ್ಯಾಂಕ್‌ಗಳ ನಿರ್ಮಾ ಣವನ್ನು ಬಹು ಮುಖ್ಯವಾಗಿ ತುಂಬೆಯಿಂದ ಬರುವಂತಹ ನೀರನ್ನು ಶೇಖರಿಸಿಡುವ ಸಲುವಾಗಿ ಮಾಡಲಾಗಿದೆ. ಆದರೆ ಇದೀಗ ಅತ್ತ ಕಡೆಯಿಂದ ನೀರೂ ಇಲ್ಲ, ನೀರು ಬಂದರೆ ಇತ್ತ ಕಡೆಯಲ್ಲಿ ಶೇಖರಿಸಿಡಲು ಸೋರುತ್ತಿರುವ ಟ್ಯಾಂಕ್. ಇವೆಲ್ಲದರ ನಡುವೆ ನೀರು ಇಲ್ಲದೆ ಜನರು ಪರದಾಡುವಂತಾಗಿದೆ.
ಕಳಪೆ ಕಾಮಗಾರಿ ಮಾಡುವಂತಹ ವ್ಯಕ್ತಿಗಳಿಗೆ ಇಂತಹ ದೊಡ್ಡ ಮಟ್ಟದ ಟೆಂಡರು ನೀಡದೆ ಇನ್ನಾದರೂ ಉತ್ತಮ ಗುತ್ತಿಗೆದಾರರಿಗೆ ನೀಡಬೇಕು. ಇಲ್ಲವಾದಲ್ಲಿ ಇಂತಹ ಕಳಪೆ ಕಾಮಗಾರಿಯಿಂದ ಜನರಿಗೆ ನಗರ ಪಂಚಾಯತ್‌ನ ಮೇಲಿನ ಭರವಸೆ ಕಮರಿದಂತಾಗುತ್ತದೆ. ಮಾತ್ರವಲ್ಲದೆ ಸರಕಾರದ ಅನುದಾನವನ್ನು ಸರಿಯಾಗಿ ವಿನಿಯೋಗಿಸುವಂತೆ ಆಗಿ ಜನರಿಗೆ ನೀರಿನ ಸಮಸ್ಯೆಯನ್ನು ದೂರ ಮಾಡಲು ಸಾಧ್ಯವಿದೆ ಅನ್ನುವುದನ್ನು ನಗರ ಪಂಚಾಯತಿಯು ಮರೆತಂತೆ ಕಾಣುತ್ತದೆ.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4042) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2496) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (262) ln (1) lnews (3669) lokayukta (3) madikeri (1) maleria (1) mangalore (579) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (411) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (271) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (797) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (949) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (46) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)