ವರ್ಷಕ್ಕೊಂದು ಬಾರಿ ಕಾಪುವಿ ನಲ್ಲಿ ಪಿಲಿಭೂತ ಕೋಲ ವಿಜೃಂಭ ಣೆಯಿಂದ ನಡೆಯುತ್ತದೆ. ಈ ವೇಳೆ ಪಿಲಿಭೂತ ಪಾತ್ರಧಾರಿ ಯಾರನ್ನು ಮುಟ್ಟುತ್ತದೋ ಅವರು ಮುಂದಿನ ಕೋಲದೊಳಗೆ ಸಾಯುತ್ತಾರೆ ಎಂಬ ನಂಬಿಕೆ ಈ ಭಾಗದಲ್ಲಿ ಬಲವಾಗಿ ಬೇರೂರಿದೆ. ಜನರು ಇದನ್ನು ಇಂದಿಗೂ ನಂಬಿಕೊಂಡು ಪಾಲಿಸುತ್ತಾ ಬರುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪಿಲಿಭೂತ ಕೋಲದ ಬಗೆಗಿನ ನಂಬಿಕೆಯನ್ನು ಸುಳ್ಳೆಂದು ಕೆಲವರು ವಾದಿಸುತ್ತಿದ್ದಾರೆ. ಇಷ್ಟವರೆಗೆ ಮುಟ್ಟಿದ ಯಾರೂ ಸಾಯಲಿಲ್ಲ ಎಂದು ಹೇಳುತ್ತಿದ್ದಾರೆ. ಇದು ತುಳು ನಾಡಿನ ಪುರಾತನ ನಂಬಿಕೆಗೆ ಅನ್ಯಾಯ ಮಾಡಿದಂತಲ್ಲವೇ? ಆದಿಕಾಲದಿಂದ ತುಳುವರು ಭಕ್ತಿಯಿಂದ ಆರಾಧಿಸಿ ಕೊಂಡು ಬರುತ್ತಿರುವ ನಂಬಿಕೆಯು ಇನ್ನು ಕೆಲವೇ ಸಮಯದಲ್ಲಿ ಕೊಚ್ಚಿ ಹೋಗಲೂಬಹುದು. ಸಂಸ್ಕೃತಿಯ ಅಧ:ಪತನವಾಗದಂತೆ ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.
ಶ್ರೀಧರ್ ಶೆಟ್ಟಿ, ಕಾಪು
ಹಳೆಯಂಗಡಿ ಯು.ಬಿ.ಎಂ.ಸಿ. ಕನ್ನಡ ಶಾಲೆಯ ಗತಿ ಏನು?
ಹಳೆಯಂಗಡಿಯಲ್ಲಿ ಯು.ಬಿ.ಎಂ.ಸಿ. ಹಿರಿಯ ಪ್ರಾಥಮಿಕ ಶಾಲೆಯ ಹಿಂದಿನ ಸಂಚಾಲಕರು ಇರುವ ಸಂದರ್ಭದಲ್ಲಿ ಶಾಲೆ ಉತ್ತಮವಾಗಿತ್ತು. ಆದರೆ ಸಿ.ಎಸ್.ಐ. ಬಿಷಪರ ಪಿತೂರಿಯಿಂದ ಉತ್ತಮ ಸಂಚಾಲಕರನ್ನು ಅಮಾನತುಗೊಳಿಸಿರುವುದರಿಂದ ಈ ಶಾಲೆಗೆ ಮುಸ್ಲಿಂ ಬಾಂಧವರು, ಹಿಂದೂ ಬಾಂಧವರು ತಮ್ಮ ಮಕ್ಕಳನ್ನು ಕಳುಹಿಸದೆ ಕಾರ್ನಾಡಿನ ಬೇರೆ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೇರಿಸುತ್ತಿದ್ದಾರೆ. ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ಯವರು ವಿದ್ಯಾರ್ಥಿಗಳನ್ನು ಬೆಳಿಗ್ಗೆ ಏಳು ಗಂಟೆಗೆ ಬರಲು ಹೇಳಿ ವಿದ್ಯಾರ್ಥಿಗಳಿಗೆ ಪಾಠ ಹೇಳದೆ ಅವರ ಆರೋಗ್ಯಕ್ಕೆ ತೊಂದರೆ ನೀಡುತ್ತಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯರ ಮೇಲೆ ಹೆತ್ತವರ ಗಂಭೀರ ಆರೋಪ ವ್ಯಕ್ತವಾಗಿದ್ದು ಈಗ ವಿದ್ಯಾರ್ಥಿಗಳನ್ನು ಯುಬಿಎಂಸಿ ಶಾಲೆಗೆ ಕಳುಹಿ ಸಲು ಪೋಷಕರು ಹೆದರುತ್ತಿದ್ದಾರೆ. ಶಾಲೆಯ ಮಕ್ಕಳ ಪುಸ್ತಕ, ಫೀಸ್‌ಗಳ ಹಣ ಗುಳುಂ ಮಾಡಿ, ಪೋಷಕರಿಂದ ವರ್ಗಾವಣೆ ಪ್ರಮಾಣ ಪತ್ರ ನೀಡಲು ದಾನರೂಪದಲ್ಲಿ ಅಪಾರ ಹಣ ಗುಳು ಮಾಡುತ್ತಿದ್ದಾರೆ. ಶಾಲೆಯಲ್ಲಿ ಟಿಸಿಹೆಚ್ ಪರಿಣತಿ ಹೊಂದಿದ ಟೀಚರ್ ಇಲ್ಲ. ಮುಖ್ಯೋಪಾಧ್ಯಾ ಯರು ನೂತನ ಸಿಎಸ್‌ಐ ಕ್ರೈಸ್ತ ಪದ್ಧತಿಯನ್ನು ಶಾಲೆಯಲ್ಲಿ ಅಳವಡಿಸಲು ಪ್ರಯತ್ನ ಪಡುತ್ತಿದ್ದಾರೆ. ಮುಸ್ಲಿಂ ಮಕ್ಕಳಿಗೆ ಶುಕ್ರವಾರ ಮಧ್ಯಾಹ್ನ ಮಸೀದಿಗೆ ಪ್ರಾರ್ಥನೆಗೆಂದು ಹೋಗುವುದಕ್ಕೂ ಬಿಡುವುದಿಲ್ಲ. ಸ್ಕೂಲ್‌ಡೇಗಳಲ್ಲಿ ಕ್ರೈಸ್ತ ಪದ್ಧತಿಯ ನೃತ್ಯಗಳನ್ನು ವಿದ್ಯಾರ್ಥಿಗಳಿಂದ ಮಾಡಿಸುತ್ತಾರೆ. ಹೀಗಿರುವಾಗ ನಾವ್ಯಾಕೆ ನಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸಬೇಕು?
ಗೋಪಾಲಕೃಷ್ಣ ಭಟ್, ಪಾವಂಜೆ, ಮಹಮ್ಮದ್ ತುಬಾಕಿ, ಹಳೆಯಂಗಡಿ
ಬಜರಂಗಿಗಳಿಗೂ ಬೇಕು ದನದ ಮಾಂಸ
ದ.ಕ. ಜಿಲ್ಲೆಯಲ್ಲಿ ಪದೇ ಪದೇ ನಡೆಯುತ್ತಿರುವ ದನದ ವ್ಯಾಪಾರಿಗಳ ಮೇಲಿನ ಹಲ್ಲೆ ಮಿತಿಮೀರಿದೆ. ಹೀಗಿದ್ದರೂ ಪೊಲೀಸರು ಮೂಕಪ್ರೇಕ್ಷಕರಾಗಿ ದ್ದಾರೆ. ಬಜರಂಗಿಗಳು ಗೋ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ ಲೂಟಿ ಮಾಡುವುದು ಗೋವಿನ ಮೇಲಿನ ಭಕ್ತಿಯಿಂದಲ್ಲ. ಬದಲಾಗಿ ಮುಸ್ಲಿಮರ ಮೇಲಿರುವ ದ್ವೇಷದಿಂದ. ಇವರು ಕೂಡಾ ಗೋಭಕ್ಷಕರಾಗಿದ್ದಾರೆ. ಬಜರಂಗಿಗಳಲ್ಲಿ ಹಲವರು ಮುಸ್ಲಿಮರ ಹೋಟೆಲ್‌ಗೆ ಹೋಗಿ ಯಾರಿಗೂ ಕಾಣದ ಹಾಗೆ ಅಡಗಿ ಕುಳಿತು ದನದ ಮಾಂಸ ತಿನ್ನುತ್ತಾರೆ.
ಇತ್ತೀಚೆಗೆ ಸ್ವಾಮೀಜಿಯೊಬ್ಬರು ನಾನು ಬಜರಂಗಿ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ. ನನ್ನ ಪ್ರಶ್ನೆ ಏನೆಂದರೆ, ಹಿಂದೂ ಸಮುದಾಯಕ್ಕೆ ಸಂಸ್ಕಾರವನ್ನು ಕಲಿಸಬೇಕಾದ ನೀವುಗಳು ಬಜರಂಗಿಗಳು ಮಾಡುತ್ತಿರುವ ಹೇಯ ಕೃತ್ಯವನ್ನು ಸಮರ್ಥಿಸುತ್ತೀರಾ? ಇನ್ನೊಂದು ಸಮು ದಾಯಕ್ಕೆ ನೋವುಂಟು ಮಾಡಲು ಬಜರಂಗಿಗಳಿಗೆ ಪ್ರೇರಣೆ ಕೊಡುತ್ತೀರಾ? ಬಜರಂಗಿಗಳು ಮಾಡಿದ ಚರ್ಚ್ ದಾಳಿಯನ್ನು ಸಮರ್ಥಿಸುತ್ತೀರಾ? ಗೋವು ಗಳನ್ನು ದೇವರೆಂದು ನಂಬಿ ಅದನ್ನು ರಕ್ಷಿಸಲು ಮುಂದಾಗುವ ನೀವು ಇಲಿಯನ್ನು ದೇವರ ಅವತಾರ ಎಂದು ನಂಬುವುದಿಲ್ಲವೇ? ಅದನ್ನು ರಕ್ಷಿಸುವ ಹೊಣೆಯನ್ನು ಬಜರಂಗಿಗಳಿಗೆ ಯಾಕೆ ನೀಡುತ್ತಿಲ್ಲ? ಉತ್ತರಿಸುವಿರಾ?
ಇರ್ಫಾನ್, ಫರಂಗಿಪೇಟೆ
ಟ್ರಾಫಿಕ್ ಪೊಲೀಸರ ಅಸಡ್ಡೆ
ಕುಂದಾಪುರ ನಗರದಲ್ಲಿನ ಮುಖ್ಯ ರಸ್ತೆ, ಪುರಸಭೆ ರಸ್ತೆ, ಡಬ್ಬಲ್ ರೋಡ್‌ಗ ಳಲ್ಲಿ ಇತ್ತೀಚಿನ ದಿನಗಳಲ್ಲಿ ರಸ್ತೆ ಅಂಚಿ ನಲ್ಲಿ ಕಟ್ಟಡದ ಎದುರುಗಡೆ, ಫುಟ್ ಪಾತ್, ನೀರು ಹರಿಯುವ ಮೋರಿಯ ಸ್ಲ್ಯಾಬ್‌ಗಳ ಮೇಲೆ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಪಾದ ಚಾರಿಗಳು, ಶಾಲಾ ಮಕ್ಕಳು, ವೃದ್ಧರು ಮತ್ತು ಮಹಿಳೆಯರಿಗೆ ಓಡಾಡಲು ತೊಂದರೆಯಾಗಿ ರಸ್ತೆ ಅಪಘಾತಗಳಿಗೆ ಎಡೆ ಮಾಡಿಕೊಟ್ಟಿದೆ.
ನಗರದ ಪಾರಿಜಾತ ವಸತಿಗೃಹ, ಶ್ರೀವೆಂಕಟರಮಣ ದೇವಸ್ಥಾನ ಬಳಿ ವಾಹನಗಳನ್ನು ನಿಲುಗಡೆ ಮಾಡುತ್ತಿರು ವುದರಿಂದ ಜನರಿಗೆ ನಡೆದಾಡಲೂ ಸ್ಥಳವಿಲ್ಲದೆ ರಸ್ತೆ ಮಧ್ಯೆ ಸಂಚರಿಸಿ ವಾಹನಗಳಿಂದ ರಸ್ತೆ ಅಪಘಾತಕ್ಕೆ ಬಲಿ ಯಾಗಿ ಪ್ರಾಣ ಕಳೆದುಕೊಳ್ಳುವಂತೆ ಮಾಡಿದೆ. ನಗರದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಇದ್ದರೂ ಏನೂ ಉಪಯೋಗವಿಲ್ಲದಂತಾಗಿದೆ, ನಗರ ದಲ್ಲಿ ಎಲ್ಲಾ ರಸ್ತೆಯಲ್ಲೂ ಒನ್‌ವೇ, ನೋ ಎಂಟ್ರಿ, ನೋ ಪಾರ್ಕಿಂಗ್ ಮುಂತಾದ ನಾಮಫಲಕ ಹಾಕಿದ್ದರೂ ಕೂಡಾ ವಾಹನ ಚಾಲಕರು ಸಾರಿಗೆ ನಿಯಮ ಉಲ್ಲಂಘನೆ ಮಾಡುತ್ತಿರುವು ದರಿಂದ ರಸ್ತೆ ಅಪಘಾತ ಸಂಭ ವಿಸುತ್ತಿದೆ. ನಗರ ಪೊಲೀಸರು ಗಂಟೆಗೊಮ್ಮೆ ಅಥವಾ ಎರಡು ಬಾರಿ ತಮ್ಮ ಇಂಟರ್‌ಸೆಪ್ಟರ್ ವಾಹನದ ಮೂಲಕ ತಪಾಸಣೆ ನಡೆಸಿ ದಂಡ ಅಥವಾ ವ್ಹೀಲ್ ಲಾಕ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ಟ್ರಾಫಿಕ್ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಕೂಡಲೇ ಕಠಿಣ ಕ್ರಮ ಕೈಗೊಂಡು ನಗರದ ಪಾದಚಾರಿಗಳ ಪ್ರಾಣವನ್ನು ರಕ್ಷಿಸಬೇಕೆಂದು ವಿನಂತಿಸುತ್ತಿದ್ದೇನೆ.
ಅರುಣ ಶೆಟ್ಟಿ, ಕುಂದಾಪುರ
ಜನಮೆಚ್ಚುಗೆಗೆ ಪಾತ್ರವಾಗಿರುವ ವಿಟ್ಲ ಪೊಲೀಸ್ ಠಾಣೆ
ಬಂಟ್ವಾಳ ತಾಲೂಕಿನ ದೊಡ್ಡ ಪ್ರದೇಶವಾಗಿರುವ ವಿಟ್ಲದಲ್ಲಿ ಈಗಾಗಲೇ ಟ್ರಾಫಿಕ್ ಜಾಮ್‌ನಿಂದ ರಸ್ತೆ ಬ್ಲಾಕ್ ಆಗುತ್ತಿದ್ದ ವಿಟ್ಲ ಪೇಟೆಯ ಜನರ ಸಮಸ್ಯೆ ಗಳನ್ನು ಕೇಳುವವರು ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ವಿಟ್ಲ ಪೊಲೀಸ್ ಠಾಣೆಯ ಪೊಲೀಸರ ಕಾರ್ಯವೈಖರಿ ಶ್ಲಾಘನೀಯವಾಗಿದೆ. ಅಲ್ಲದೆ ವಿಟ್ಲದಲ್ಲಿ ನಡೆದಿರುವ ಹಲವಾರು ಪ್ರಕರಣಗಳನ್ನು ಭೇದಿಸುವಲ್ಲಿ ಕೂಡಾ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೂಡಾ ವಿಟ್ಲ ಪೊಲೀಸ್ ಠಾಣೆ ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ರೀತಿಯ ಕಾರ್ಯ ನಿರ್ವಹಿಸಲಿ ಎಂಬುದೇ ನಮ್ಮೆಲ್ಲರ ಆಶಯ.
ಜಿ.ಎ. ಶಂಸುದ್ದೀನ್, ಅಜ್ಜಿನಡ್ಕ
ಹಿಂಜಾವೇ ಎಂಬ ಮತಾಂಧ ಸಂಘಟನೆ
ಕಡಬದ ಹಿಂ.ಜಾ.ವೇ. ಎಂಬ ಮತಾಂಧ ಸಂಘಟನೆ ಯಿಂದಾಗಿ ಕಡಬದಲ್ಲಿ ಕೋಮುಗಲಭೆ ಸಂಭವಿಸುವ ಸಾಧ್ಯತೆಯಿದೆ. ಸುಳ್ಯದಲ್ಲಿ ಸಂಘಟನೆಯ ಪ್ರಮುಖರು ತಮ್ಮ ಮೂಗಿನ ಕೆಳಗೆ ಪೊಲೀಸರು ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ ಪೊಲೀಸ್ ಸ್ಟೇಷನ್ ಮೇಲೆಯೇ ಕಲ್ಲು ತೂರಾಟ ನಡೆಸಿ ಸರ್ವರಿಂದಲೂ ಛೀಮಾರಿ ಹಾಕಿಸಿಕೊಂಡ ನಂತರ ಇದೀಗ ಕಡಬದಲ್ಲೂ ತಮ್ಮ ಬೇಳೆ ಬೇಯುತ್ತಿಲ್ಲ ಎಂದು ಭಾವಿಸಿ ವಿನಾಕಾರಣ ಇಬ್ಬರು ಪೊಲೀಸರ ಮೇಲೆ ಆರೋಪ ಹೊರಿಸಿದ್ದಾರೆ. ಇವರು ಇನ್ನಾದರೂ ತಾವೆಷ್ಟು ಸಾಚಾಗಳು ಎನ್ನುವುದನ್ನು ವಿಮರ್ಶಿಸಲಿ.
ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಜಾತ್ರೆಗಳಲ್ಲಿ ಮುಸ್ಲಿ ಮರು ವ್ಯಾಪಾರ ನಡೆಸಬಾರದೆಂಬ ವಿನೂತನ ಮೊಂಡು ವಾದ ಮಾಡುವ ಇವರು ನಡೆಸುವ ವ್ಯಾಪಾರದಲ್ಲಿ ಮುಸ್ಲಿ ಮರನ್ನು ಕೆಲಸಕ್ಕಿಟ್ಟುಕೊಂಡಿರುವುದು ಯಾಕೆ? ವ್ಯಾಪಾರ ಹೆಚ್ಚಾಗಲಿ ಎಂಬ ಉದ್ದೇಶವಲ್ಲವೇ? ಕಡಬದಲ್ಲಿ ಉತ್ತಮ ರೀತಿಯ ಸೇವೆಗೈದ ಪೌಲ್ ಪ್ರಿಯಾರನ್ನು ವರ್ಗಾವಣೆ ಮಾಡಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಇವರಿಗೆ ಕಾನೂನು ಕೈಗೆತ್ತಿಕೊಳ್ಳಲು ಅಧಿಕಾರ ನೀಡಿದವರಾರು? ಇದೇ ರೀತಿ ಎಲ್ಲ ಧರ್ಮದವರು ಕಾನೂನು ಕೈಗೆತ್ತಿಕೊಂಡರೆ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವೇ?
ಅಶ್ರಫ್, ಕಡಬ
ಕಾರ್ಮಿಕರ ಬದುಕಿಗೆ ಭದ್ರತೆಯಿಲ್ಲವೇ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊರಜಿಲ್ಲೆ, ರಾಜ್ಯಗಳ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿಕೊಂಡಿ ದ್ದಾರೆ. ಜಿಲ್ಲೆಯಲ್ಲಿ ಪ್ರಾರಂಭವಾಗುತ್ತಿರುವ ಅನೇಕ ಕಂಪೆನಿ ಗಳಲ್ಲಿ ಹಲವು ಸಾವಿರದಷ್ಟು ಮಂದಿ ಕಾರ್ಮಿಕರು ದುಡಿಯು ತ್ತಿದ್ದಾರೆ. ಎಸ್‌ಇಝಡ್ ಒಂದರಲ್ಲೇ ೨೫ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಲದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸಂಬಳ ವೇನೋ ಸಿಗುತ್ತದೆ. ಆದರೆ ಪ್ರಾಣಕ್ಕೆ ಸೂಕ್ತ ಭದ್ರತೆ ಸಿಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಎಂಆರ್‌ಪಿಎಲ್, ಸೆಝ್ ಕಂಪೆನಿಗಳಲ್ಲಿ ಅಸಹಜ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವು ದಿನಗಳ ಹಿಂದೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಮಿನಿ ಟೆಂಪೋ ರಸ್ತೆ ಬದಿಯ ಕಮರಿಗೆ ಉರುಳಿಬಿದ್ದು ಎಂಟು ಮಂದಿ ಕಾರ್ಮಿಕರು ಮೃತಪಟ್ಟಿದ್ದರು. ಇಲ್ಲಿ ಕಾರ್ಮಿ ಕರನ್ನು ಕುರಿಗಳಂತೆ ಟೆಂಪೋದಲ್ಲಿ ತುಂಬಿ ಸಾಗಿಸುತ್ತಿದ್ದುದೇ ಅಪಘಾತಕ್ಕೆ ಕಾರಣವಾಗಿತ್ತು. ಕಾರ್ಮಿಕರೆಂದರೆ ಕೇವಲ ಕೆಲಸ ಮಾಡುವವರು, ಅವರಿಗೆ ಯಾವುದೇ ರಕ್ಷಣೆ ನೀಡುವುದು ತಮ್ಮ ಕರ್ತವ್ಯವಲ್ಲ ಎಂದೇ ಗುತ್ತಿಗೆದಾರರು ತಿಳಿದುಕೊಂಡಿದ್ದಾರೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಸೂಕ್ತ ತನಿಖೆ ನಡೆಸಬೇಕಾದ ಅಗತ್ಯವಿದೆ.
ಕಮಲಾಕ್ಷ, ಮಂಗಳೂರು
ಮಲ್ಲಿಗೆ ಕೃಷಿಗೆ ಪ್ರೋತ್ಸಾಹ ಅಗತ್ಯ
ಉಡುಪಿ ಭಾಗದ ಬಹುತೇಕ ಕೃಷಿಕರು ಮಲ್ಲಿಗೆ ಕೃಷಿಯನ್ನು ಅವಲಂಬಿಸಿ ದ್ದಾರೆ. ಕಲ್ಯಾಣಪುರ, ಕಾರ್ಕಳ ಭಾಗದಲ್ಲಿ ಮಲ್ಲಿಗೆ ಕಟ್ಟಿ ಅದರಿಂದಲೇ ಜೀವನ ಸಾಗಿಸುವ ಅವೆಷ್ಟೋ ಕುಟುಂಬಗಳು ಇವೆ. ಆದರೆ ಮಲ್ಲಿಗೆಯನ್ನೇ ಮುಖ್ಯ ಕೃಷಿಯನ್ನಾಗಿ ಮಾಡಿಕೊಂಡವರು ಬೇಸಿಗೆಯ ಅವಧಿಯಲ್ಲಿ ಸೂಕ್ತ ಇಳುವರಿ ಪಡೆಯದೆ ಆರ್ಥಿಕ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇವರಿಗೆ ಸರಕಾರದಿಂದ ಯಾವುದೇ ಸವಲತ್ತು ಸಿಗದಿರುವುದು ಶೋಚನೀಯವೇ ಸರಿ. ಬೇಸಿಗೆಯಲ್ಲಿ ನೀರು, ಗೊಬ್ಬರ ಎಲ್ಲದರ ಕೊರತೆಯೂ ಕಾಡುತ್ತದೆ. ಈ ವೇಳೆ ಮಲ್ಲಿಗೆ ಬೆಳೆಗಾರರು ಜೀವನ ನಿರ್ವಹಣೆಗೆ ಪರದಾಡುತ್ತಾರೆ. ಈ ಭಾಗದ ಶಾಸಕ, ಸಂಸದರು ಮಲ್ಲಿಗೆ ಬೆಳೆಗಾರರ ಸಮಸ್ಯೆಯನ್ನು ಪರಿಹರಿಸುವತ್ತ ಆಸಕ್ತಿ ತೋರಿಸುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ಮಲ್ಲಿಗೆ ಬೆಳೆಗಾರರ ಮನೆಗೆ ಭೇಟಿಕೊಡುವ ಜನಪ್ರತಿನಿಧಿಗಳು ಸರಕಾರದಿಂದ ಪ್ರೋತ್ಸಾಹ ಧನ, ಸಾಲ ಸೌಲಭ್ಯ ಎಲ್ಲವನ್ನೂ ಒದಗಿಸುತ್ತೇವೆಂದು ಹೇಳುತ್ತಾರೆ. ಆದರೆ ಇಂದಿನವರೆಗೂ ಮಲ್ಲಿಗೆ ಬೆಳೆಗಾರರಿಗೆ ಸೂಕ್ತ ವ್ಯವಸ್ಥೆ ಮಾತ್ರ ಮಾಡಿಲ್ಲ. ಈ ಬಗ್ಗೆ ಮಲ್ಲಿಗೆ ಬೆಳೆಗಾರರ ಸಂಘಟನೆ ಹೋರಾಟಕ್ಕೆ ಮುಂದಾಗಬೇಕು. ಮಲ್ಲಿಗೆ ಕೃಷಿಗೆ ಸೂಕ್ತ ಪೋಧನ, ಬೆಂಬಲ ಬೆಲೆ ನೀಡುವಂತೆ ಸರಕಾರದ ಮನವೊಲಿಸುವ ಪ್ರಕ್ರಿಯೆ ನಡೆಯಬೇಕು.
ಶಾಂತಿ ಪಿರೇರಾ, ಕಾರ್ಕಳ
ಕೇರಳ ಉಗ್ರ ಸಂಘಟನೆಗಳ ತವರೂರು?
ಕೇರಳ ರಾಜ್ಯದ ನಾನಾ ಭಾಗಗಳಲ್ಲಿ ದೇಶವಿರೋಧಿ ಕೃತ್ಯ ನಡೆಯುತ್ತಿದ್ದು, ಇದರಲ್ಲಿ ಉಗ್ರವಾದಿ ಸಂಘಟನೆಗಳು ಶಾಮೀಲಾಗಿರುವುದಾಗಿ ಕೇರಳ ಗೃಹ ಮತ್ತು ಪೊಲೀಸ್ ಇಲಾಖೆ ಹೇಳಿರುವುದು ಅತಂಕಕಾರಿ ಸಂಗತಿ. ಕೇರಳದಲ್ಲಿ ಹಿಂದಿನಿಂದಲೂ ಇದ್ದ ಸಿಮಿ ಉಗ್ರಗಾಮಿ ಸಂಘಟನೆಯನ್ನು ಕೆಲವು ವರ್ಷಗಳ ಹಿಂದೆ ನಿಷೇಧಿಸಲಾಗಿದೆ. ಆದರೆ ಇಂದಿಗೂ ಸಂಘಟನೆ ಬೇರೆ-ಬೇರೆ ಹೆಸರು ಗಳಲ್ಲಿ ಕರ್ನಾಟಕ, ಕೇರಳ ರಾಜ್ಯಾದ್ಯಂತ ಅಸ್ತಿತ್ವದಲ್ಲಿರುವುದನ್ನು ಪೊಲೀಸ್ ಇಲಾಖೆ ವರದಿಯಲ್ಲಿ ಉಲ್ಲೇಖಿಸಿದೆ. ಇದನ್ನೆಲ್ಲ ನೋಡುತ್ತಿದ್ದರೆ ಕೇರಳ ರಾಜ್ಯ ಉಗ್ರ ಸಂಘಟನೆಗಳ ತವರೂರು ಆಗುತ್ತಿದೆಯೇ ಎಂಬ ಶಂಕೆ ಮೂಡುವುದು ಸಹಜ. ಕೇರಳ ರಾಜ್ಯ ಸರಕಾರ, ಪೊಲೀಸ್ ಇಲಾಖೆ ಬೇಜವಾಬ್ದಾರಿಯಿಂದಲೇ ಉಗ್ರ ಸಂಘಟನೆಗಳು ಕೇರಳದಲ್ಲಿ ರುದ್ರತಾಂಡವ ನೃತ್ಯಗೈಯುತ್ತಿವೆ. ದೇಶದ ನಾನಾ ಕಡೆ ನಡೆದಿರುವ ವಿಧ್ವಂಸಕ ಕೃತ್ಯಗಳಲ್ಲಿ ಕೇರಳ ಮೂಲದ ಸಿಮಿ, ಇಂಡಿಯನ್ ಮುಜಾಹಿದೀನ್ ಸಂಘಟನೆ ಸಕ್ರಿಯ ಪಾತ್ರ ವಹಿಸಿರುವುದು ಬೆಳಕಿಗೆ ಬಂದಿದೆ. ಕೇಂದ್ರ ಗುಪ್ತಚರ ಇಲಾಖೆ ಈ ಬಗ್ಗೆ ಜಾಗೃತ ಸ್ಥಿತಿಯಲ್ಲಿ ಇರಬೇಕಾದ ಅಗತ್ಯವಿದೆ.
ಪ್ರಭಾಕರನ್, ಕಾಸರಗೋಡು
Tagged with
nimminda
ನೊಂದ ಶಿಕ್ಷಕ, ಪುತ್ತೂರು
ರಾಜ್ಯದ ವಸತಿ ಶಿಕ್ಷಣ ಸಂಸ್ಥೆಗಳಾದ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಖಾಯಂ ಸಿಬ್ಬಂದಿ ಯನ್ನು ನೇಮಕ ಮಾಡಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮ ಸ್ವಾಗತಾರ್ಹ. ಆದರೆ, ರಾಜ್ಯದಲ್ಲಿ ವಸತಿ ಶಿಕ್ಷಣ ಪ್ರಾರಂಭ ವಾದ ದಿನಗಳಿಂದಲೂ, ವಸತಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಒಂದು ದಶಕದಿಂದ ಸೇವೆ ಸಲ್ಲಿಸುತ್ತಿರುವ ಬೋಧಕ, ಬೋಧಕೇತರ ಮತ್ತು ಅಡುಗೆ ಮತ್ತಿತರ ಕೆಲಸ ನಿರ್ವಹಿಸುತ್ತಿರುವ ಸಹಸ್ರಾರು ನೌಕರರ ಸೇವೆಯನ್ನು ಖಾಯಂಗೊಳಿಸುವ ಮೂಲಕ ಖಾಲಿ ಹುದ್ದೆಗಳನ್ನು ತುಂಬುವ ಬದಲಿಗೆ, ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಸಿಬ್ಬಂದಿಯನ್ನು ಬೀದಿಪಾಲು ಮಾಡುವಂತಹ ನೇರ ನೇಮ ಕಾತಿಗೆ ಮುಂದಾಗಿರುವ ಸರಕಾರದ ಕ್ರಮ ಸರಿಯಾ ದುದಲ್ಲ.
ಕೇಂದ್ರ ಸರಕಾರದ ನವೋದಯ ಶಾಲೆಗಳ ಮಾದರಿ ಯಲ್ಲಿ ರಾಜ್ಯ ಸರಕಾರದಿಂದಲೂ ಒಂದು ದಶಕದ ಹಿಂದೆ ವಸತಿ ಶಾಲೆಗಳನ್ನು ರಾಜ್ಯದ ವಿವಿಧ ಹೋಬಳಿ ಕೇಂದ್ರಗಳಲ್ಲಿ ತೆರೆಯಲು ತೀರ್ಮಾನಿಸಿ, ವಸತಿ ಶಾಲೆಗಳನ್ನು ಪ್ರಾರಂಭಿಸಲಾ ಯಿತು. ಇದೀಗ ೬೦೦ಕ್ಕೂ ಹೆಚ್ಚಿನ ಸಂಖ್ಯೆಯ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮರ ಹೆಸರಿನ ವಸತಿ ಶಾಲೆಗಳು ಮತ್ತು ಕಾಲೇಜುಗಳು ರಾಜ್ಯದ ನೂರಾರು ಹೋಬಳಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶದ ಲಕ್ಷಾಂತರ ಮಕ್ಕಳು ಈ ಸಂಸ್ಥೆಗಳಲ್ಲಿ ವಸತಿ ಸಹಿತ ಶಿಕ್ಷಣ ಪಡೆ ಯುತ್ತಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಬೋಧಕ, ಬೋಧಕೇತರ ಮತ್ತು ಅಡುಗೆ ಸಿಬ್ಬಂದಿ ಸೇವಾ ನಿರತರಾಗಿದ್ದಾರೆ.
ರಾಜ್ಯದಲ್ಲಿ ಇಂತಹ ವಸತಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಬೆಳೆಸಿ ಜನಪ್ರಿಯಗೊಳಿಸಿದ ಕೀರ್ತಿ, ಅತ್ಯಲ್ಪ ವೇತನ, ಸೇವಾ ಅಭದ್ರತೆಯ ನಡುವೆಯೂ ಸೇವೆ ಸಲ್ಲಿಸುತ್ತಿರುವ ಬೋಧಕ, ಬೋಧಕೇತರ ಮತ್ತು ಅಡುಗೆ ಸಿಬ್ಬಂದಿಗೆ ಸಲ್ಲುತ್ತದೆ. ಕನಿಷ್ಟ ಮೂಲ ಸೌಕರ್ಯಗಳೂ ಇಲ್ಲದಂತಹ ಗ್ರಾಮೀಣ ಪ್ರದೇಶದಲ್ಲಿ ಒಂದು ವಸತಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಸುಲಭದ ಕೆಲಸವಾಗಿರಲಿಲ್ಲ. ಸೂಕ್ತ ಶಾಲಾ ಕಟ್ಟಡ, ಪೀಠೋಪಕರಣಗಳು ಮತ್ತು ವಸತಿಗೆ ಸೂಕ್ತವಾದ ಕಟ್ಟಡಗಳ ಅಭಾವ ಒಂದು ಕಡೆ ಯಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಿರುವ ದುಸ್ಥಿತಿಯ ಕಟ್ಟಡಗಳಲ್ಲಿ ಪ್ರಾರಂಭವಾದ ವಸತಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದ ಪಾಲಕರ ಮನವೊಲಿಸಿ ಮಕ್ಕ ಳನ್ನು ಶಾಲೆಗೆ ಕರೆತರುವ ಕಠಿಣ ಜವಾಬ್ದಾರಿಯನ್ನು ಹೆಗಲಿಗೇ ರಿಸಿಕೊಂಡು ಕಳೆದ ಒಂದು ದಶಕದಿಂದ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈ ನೌಕರರು ಬದ್ಧತೆಯಿಂದ ಕಾರ್ಯ ನಿರ್ವಹಿಸಿರುವುದರಿಂದಲೇ ಇಂದು ಮೊರಾರ್ಜಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು ಕಾಲೇಜುಗಳು ಪ್ರತಿಷ್ಠಿತ ವಸತಿ ಶಿಕ್ಷಣ ಸಂಸ್ಥೆಗಳಾಗಿ ರಾಜ್ಯದಲ್ಲಿ ಬೆಳೆದು ನಿಂತಿವೆ.
ಆದರೆ ಇಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಕಟ್ಟಿ, ಬೆಳೆಸಿ, ಜನಪ್ರಿಯಗೊಳಿಸಿದ ಪ್ರತಿಭಾವಂತ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಮತ್ತು ಅತ್ಯಂತ ಕಡು ಬಡತನದ ಕುಟುಂಬಗಳಿಂದ ಬಂದಿರುವ ಅಡುಗೆ ಸಿಬ್ಬಂದಿಯವರ ಕುಟುಂಬಗಳು ಮಾತ್ರ ಸರಕಾರದ ಸತತ ನಿರ್ಲಕ್ಷ್ಯದಿಂದಾಗಿ ದುರ್ಗತಿಗೀಡಾಗಿದೆ. ಈಗಿ ರುವ ಬಿಜೆಪಿ ಸರಕಾರವೂ ಸೇರಿದಂತೆ ಈವರೆಗೆ ಅಧಿಕಾರ ನಡೆ ಸಿದ ಎಲ್ಲಾ ಸರಕಾರಗಳು ಈ ನೌಕರರ ಸಮಸ್ಯೆಗಳ ಕುರಿತು ಮೊಸಳೆ ಕಣ್ಣೀರು ಸುರಿಸಿದವೇ ಹೊರತು ಸಮಸ್ಯೆಗಳನ್ನು ಪರಿ ಹರಿಸಲು ಕ್ರಮ ಕೈಗೊಳ್ಳಲಿಲ್ಲ. ಪರಿಣಾಮವಾಗಿ ಎರಡೆರಡು ಪದವಿಗಳನ್ನು ಹೊಂದಿಯೂ ವೃತ್ತಿ ತರಬೇತಿಯನ್ನೂ ಪೂರೈಸಿದ ಈ ಪ್ರತಿಭಾವಂತ ಶಿಕ್ಷಕರಿಗೆ ಕನಿಷ್ಟ ೨,೦೦೦ದಿಂದ ಗರಿಷ್ಟ ೫,೦೦೦ ರೂ. ಮಾಸಿಕ ವೇತನದಲ್ಲಿ ಹೊರಗುತ್ತಿಗೆ ಸಂಸ್ಥೆ ಮೂಲಕ ರಾಜ್ಯ ಸರಕಾರದ ಇಲಾಖೆಗಳಲ್ಲೇ ಸೇವೆ ಸಲ್ಲಿಸುವ ದುಸ್ಥಿತಿಗೆ ತಳ್ಳಲಾಯಿತು. ಪುಡಿಗಾಸಿನ ವೇತನವೊಂದನ್ನು ಹೊರತು ಪಡಿಸಿ ಇವರ ಎಲ್ಲಾ ಹಕ್ಕು ಬಾಧ್ಯತೆಗಳನ್ನು ಕಿತ್ತುಕೊಂಡ ಸರಕಾರ ಮತ್ತು ಹೊರ ಗುತ್ತಿಗೆ ಸಂಸ್ಥೆಗಳು ಈ ನೌಕರರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿವೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ನೌಕರರಿಗೆ ಕಿರುಕುಳ ನೀಡಿ ಹಿಂಸಿಸಿ ಕೊನೆಗೊಂದು ದಿನ ಕೆಲಸದಿಂದಲೇ ತೆಗೆದು ಹಾಕಲಾಗುತ್ತದೆ. ಇದಕ್ಕೆ ಬೋಧಕೇತರ ಸಿಬ್ಬಂದಿಯೂ ಹೊರತಾಗಿಲ್ಲ. ಅಡುಗೆ ಸಿಬ್ಬಂದಿಯವರ ಪಾಡಂತೂ ಇನ್ನೂ ಶೋಚನೀಯವಾಗಿದೆ. ಸತತ ಹೋರಾಟದಿಂದ ಲಭಿಸಿರುವ ಕನಿಷ್ಟ ವೇತನ ಕಾಯ್ದೆಯ ವೇತನವು ಇಲಾಖೆಗಳು ಮತ್ತು ಹೊರಗುತ್ತಿಗೆ ಸಂಸ್ಥೆಗಳು ಮಾಸಿಕ ಬಿಲ್ಲು ಎತ್ತಲು ಮಾತ್ರ ಬಳಕೆ ಯಾಗುತ್ತಿದೆ. ರಾಜ್ಯದಲ್ಲಿ ಎಲ್ಲಿಯೂ ಈ ನೌಕರರಿಗೆ ಪಿ.ಎಫ್, ಇಎಸ್‌ಐ ಹಣ ತುಂಬಿದ ನಂತರ ಮನೆಗೆ ಕೊಂಡೊಯ್ಯುವ ವೇತನ ದರದಂತೆ ವೇತನ ನೀಡುತ್ತಿಲ್ಲ. ಸೇವಾ ಅಭದ್ರತೆಯ ಕರಿ ನೆರಳಿನಲ್ಲಿ ಜೀವನ ಸಾಗಿಸುವಂತೆ ಮಾಡಲಾಗಿದೆ.
ಈಗ ರಾಜ್ಯ ಸರಕಾರವು ನೇರ ನೇಮಕಾತಿಯ ಮೂಲಕ ಈ ವಸತಿ ಶಾಲೆಗಳಿಗೆ ಖಾಯಂ ಸಿಬ್ಬಂದಿಯನ್ನು ತುಂಬಲು ಮುಂದಾಗಿರುವುದರಿಂದ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಸರಿ ಸುಮಾರು ೧೦ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಬೋಧಕ, ಬೋಧಕೇತರ ಮತ್ತು ಅಡುಗೆ ಸಿಬ್ಬಂದಿ ಕೆಲಸ ಕಳೆದುಕೊಳ್ಳು ವುದರಿಂದ ಅವರ ಕುಟುಂಬಗಳು ಅಕ್ಷರಶಃ ಬೀದಿಗೆ ಬೀಳುತ್ತವೆ.
ನೌಕರರ ಕುಟುಂಬಗಳು ಬೀದಿ ಪಾಲಾಗುವುದನ್ನು ತಪ್ಪಿಸಲು ಸದ್ಯಕ್ಕೆ ನೇರ ನೇಮಕಾತಿಯನ್ನು ಕೈಬಿಡಬೇಕೆಂದು ರಾಜ್ಯದ ಸಮಸ್ತ ನೌಕರರ ಪರವಾಗಿ ನೌಕರರ ಸಂಘವು ಮನವಿ ಮಾಡಿ ದರೂ ಯಾವುದೇ ಖಚಿತ ಭರವಸೆಯನ್ನು ವಸತಿ ಶಿಕ್ಷ ಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ನೀಡಲಿಲ್ಲ. ರಾಜ್ಯದ ಸಮಸ್ತ ನೌಕರರು ಮತ್ತು ಅವರ ಕುಟುಂಬದ ಹಿತ ದೃಷ್ಟಿಯಿಂದ ತಕ್ಷಣವೇ ಸರಕಾರದ ಗಮನ ಸೆಳೆದು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ರಾಜ್ಯದ ಸಮಸ್ತ ನೌಕರರನ್ನು ಬೆಂಗಳೂರಿನಲ್ಲಿ ಸೇರಿಸಿ ಬೃಹತ್ ರ‍್ಯಾಲಿ ನಡೆಸುವ ಅನಿವಾ ರ್ಯತೆಯಿದೆ.
Tagged with
bahiranga
ಕೋಲ ಮದುವೆ ಸಂದರ್ಭದಲ್ಲಿ ಮದುವೆಯ ಚಪ್ಪರಕ್ಕೆ ಅನತಿ ದೂರದಲ್ಲಿ ವಿಶಾಲವಾದ ಗದ್ದೆಯಲ್ಲಿ ದೈವದ ಕೋಲ ನಡೆಸಲು ಶೃಂಗಾರಭರಿತ ಚಪ್ಪರ ಕಟ್ಟುವರು. ಮನೆಯಲ್ಲಿ ಧಾರೆಗೆ ಕುಳಿತುಕೊಳ್ಳುವ ಮೊದಲು ವಿಧಿವತ್ತಾಗಿ ಮನೆದೈವದ ದರ್ಶನ ಮಾಡಿಸಿ ಅಲ್ಲಿಂದ ದೈವದ ಮಣೆಮಂಚದಲ್ಲಿರುವ ಪೂಜಾ ಸಾಮಾಗ್ರಿಗಳನ್ನು ‘ಬಾಲ್ ಬಂಡಾರ ಹೊರಡಿಸಿ ಕೋಲದ ‘ದೊಂಪಕ್ಕೆ ಬರುವರು. ಆ ಬಳಿಕವೇ ಧಾರೆ, ಊಟ ಇತ್ಯಾದಿ ನಡೆಯುವುದು. ಊಟದ ಕೆಲಸ ಮುಗಿದ ಬಳಿಕ ದೈವದ ವೇಷ ಕಟ್ಟಿ ಕುಣಿಯುವ ‘ಪಂಬದರು ಬಣ್ಣೊಗು ಕುಲ್ಲುನಿ ಮಾಡುವರು ತದನಂತರ ರಾತ್ರಿಯಿಡೀ ಕೋಲ ನಡೆಯುವುದು.
ಮದುವಣಿಗನ ಭಾವನೆಂಟನು ವರನ ಕಾಲಿಗೆ ನೀರೆರೆದು ಕಾಲು ತೊಳೆಯವನು. ಅಲ್ಲಿದ್ದವರೆಲ್ಲ ಸೇರಿ ಮದುವಣಿಗನನ್ನು ಲಘು ಹಾಸ್ಯದಿಂದ ಕೀಟಲೆ ಮಾಡುವರು. ಭಾವನೆಂಟನಿಗೆ ಮದುಮಗನು ಉಡುಗೊರೆಯಿತ್ತು ಸತ್ಕರಿಸುವನು. ಮೊರಸೇಸೆಯಾದ ಬಳಿಕ ವರನು ಊರ ಗುರಿಕಾರರನ್ನು ಮುಂದಿರಿಸಿಕೊಂಡು ಮದುಮಗಳಿಗೆ ‘ಸೀರದೆ ವರನ್ ಕಟ್ಟುವನು.
ಅತ್ತ ಅಡುಗೆಯ ಚಪ್ಪರದಲ್ಲಿ ದಾಸ್ತನಿನ ಉಗ್ರಾಣದಲ್ಲಿ ಗಡಿಬಿಡಿ ಯಿಂದ ತಯಾರಿ ನಡೆಯುವುದು. ದೊಡ್ಡ ಚಪ್ಪರದಲ್ಲಿ ಊಟದ ವ್ಯವಸ್ಥೆ ನಡೆಯುವುದು. ಊರಲ್ಲಿಯ ಶಿಸ್ತುಬದ್ಧ ತರುಣರ ಗುಂಪು ಮರದ ಮತ್ತು ಅಡಿಕೆಯ ಮರದ ಉದ್ದನೆಯ ತುಂಡುಗಳನ್ನು ತಂದು ಪಂಕ್ತಿ ಹಾಕಿ ಭೋಜನಕ್ಕೆ ಕೂರುವ ವ್ಯವಸ್ಥೆ ಮಾಡುವರು. ನೆಂಟರಿಗೆ ‘ಚೊಂಬುಗಳಲ್ಲಿ ನೀರು ಕೊಟ್ಟು ಊಟಕ್ಕೆಬ್ಬಿಸುವರು. ತಂಪಾದ ಚಪ್ಪರದ ನೆರಳಿನಲ್ಲಿ ವಿಧ ವಿಧದ ಉಪಚಾರದಲ್ಲಿ ಊಟ ಸಾಗುವುದು. ಎಷ್ಟು ಗಡಿಬಿಡಿಯೇ ಇರಲಿ. ತುಳುನಾಡಿನ ಲಾಗಾಯಿತಿ ಸಂಪ್ರದಾಯ ಮರೆಯುವಂತಿಲ್ಲ. ಮೊದಲು ನೆಂಟರ ದಿಬ್ಬಣಿಗರೆಲ್ಲರ ಊಟವಾಗಬೇಕು. ಆ ಬಳಿಕ ಊರವರು. ಈ ಸಂಪ್ರದಾಯ ಈಗ ಬದಲಾಗುತ್ತಾ ಬಂದಿದೆ.
ಟಿಪ್ಪಣಿ : ಕೋಲ ಮದುವೆ ಸಂದರ್ಭದಲ್ಲಿ ಮದುವೆಯ ಚಪ್ಪರಕ್ಕೆ ಅನತಿ ದೂರದಲ್ಲಿ ವಿಶಾಲವಾದ ಗದ್ದೆಯಲ್ಲಿ ದೈವದ ಕೋಲ ನಡೆಸಲು ಶೃಂಗಾರಭರಿತ ಚಪ್ಪರ ಕಟ್ಟುವರು. ಮನೆಯಲ್ಲಿ ಧಾರೆಗೆ ಕುಳಿತುಕೊಳ್ಳುವ ಮೊದಲು ವಿಧಿವತ್ತಾಗಿ ಮನೆದೈವದ ದರ್ಶನ ಮಾಡಿಸಿ ಅಲ್ಲಿಂದ ದೈವದ ಮಣೆಮಂಚದಲ್ಲಿರುವ ಪೂಜಾ ಸಾಮಾಗ್ರಿಗಳನ್ನು ‘ಬಾಲ್ ಬಂಡಾರ ಹೊರಡಿಸಿ ಕೋಲದ ‘ದೊಂಪಕ್ಕೆ ಬರುವರು. ಆ ಬಳಿಕವೇ ಧಾರೆ, ಊಟ ಇತ್ಯಾದಿ ನಡೆಯುವುದು. ಊಟದ ಕೆಲಸ ಮುಗಿದ ಬಳಿಕ ದೈವದ ವೇಷ ಕಟ್ಟಿ ಕುಣಿಯುವ ‘ಪಂಬದರು ಬಣ್ಣೊಗು ಕುಲ್ಲುನಿ ಮಾಡುವರು ತದನಂತರ ರಾತ್ರಿಯಿಡೀ ಕೋಲ ನಡೆಯುವುದು.
ಪೊಣ್ಣೊಚ್ಚಿದ್ ಕೊರ‍್ಪಿನಿ (ವಧುವನ್ನು ಒಪ್ಪಿಸಿಕೊಡುವುದು)
ಎಲ್ಲರ ಊಟ ಮುಗಿದೊಡನೆ ಹೆಣ್ಣಿನ ಕಡೆಯ ನೆಂಟರನ್ನು ಮರಳಿ ಕಳುಹಿಸುವ ಕೆಲಸ ನಡೆಯುವುದು. ಅದಕ್ಕೆ ಮೊದಲು ಹೆಣ್ಣಿನ ಕಡೆಯವರು ವಧುವನ್ನು ವರನ ತಂದೆ ತಾಯಿಗಳ ವಶಕ್ಕೆ ಒಪ್ಪಿಸುವರು. ವಧು ಮತ್ತು ವರನ ಮಾತಾಪಿತೃಗಳ ಸಮಕ್ಷಮದಲ್ಲಿ ಹೆಣ್ಣಿನ ಸೋದರ ಮಾವನು ಮದುಮಗಳ ಕೈ ಹಿಡಿದು ನಿಲ್ಲುವನು. ಊರ ಗುರಿಕಾರನು ಈ ಮನೆಯಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳನ್ನು ಇಲ್ಲಿಯ ತನಕ ನಾವು ಸಾಕಿ ಸಲಹಿ, ಇಂದು ದೈವ ಸನ್ನಿಧಿಯಲ್ಲಿ ಗುರು ಹಿರಿಯರ ಆಶೀರ್ವಾದ ಪಡೆದು, ನಮ್ಮ ಸಮಾಜ ಕಟ್ಟಳೆ ಮತ್ತು ಕುಲಾಚಾರದಂತೆ ನಿಮ್ಮ ಮಗನಿಗೆ ‘ಧರ್ಮಧಾರೆ ಎರೆದು ಕೊಟ್ಟಿದ್ದೇವೆ. ಹೆತ್ತ ತಾಯಿಯ ಕರುಳು ಕಡಿದುಬಂದ ಈ ಸಂತಾನದ ಕುಡಿಯನ್ನು ಈವರೆಗೆ ಹಾಲನ್ನದ ಮೃಷ್ಟಾನ್ನ ಉಣಿಸಲಾಗದಿದ್ದರೂ ‘ತೆಲಿಗಂಜಿ ಹಾಕಿಯಾದರೂ ಒಡಲ ಪ್ರೀತಿಯನ್ನು ಎರೆದು ಅವಳನ್ನು ಎಲ್ಲಾ ಆಪತ್ತುಗಳಿಂದ ರಕ್ಷಿಸಿ ಬೆಳೆಸಿದ್ದೇವೆ. ಈಗ ಈ ಮಗಳನ್ನು ನಿಮ್ಮ ಕೈಯಲ್ಲಿಡುತ್ತಿದ್ದೇವೆ. ಪಾಪ ಪುಣ್ಯಗಳ, ತಪ್ಪು ಒಪ್ಪುಗಳ, ರೀತಿ ನೀತಿಗಳ ತಾರತಮ್ಯವನ್ನರಿಯದ ಎಳೆಯ ಪ್ರಾಯ. ಇನ್ನೂ ಒಂದು ಕೆನ್ನೆಯಲ್ಲಿ ಹಾಲು. ಒಂದು ಕೆನ್ನೆಯಲ್ಲಿ ರಕ್ತ ಒಸರುವ ಹಸುಳೆ. ಅವಳಿಂದಾಗುವ ಸಣ್ಣಪುಟ್ಟ ತಪ್ಪುಗಳೇನಿದ್ದರೂ ಅವಳು ನಿಮ್ಮ ಮನೆಯ ಮಗಳು ಎಂಬ ಮಮಕಾರದಿಂದ ತಪ್ಪುಗಳನ್ನು ದೊಡ್ಡ ಮನಸ್ಸು ಮಾಡಿ ಕ್ಷಮಿಸಿಬಿಡಿ. ನಮ್ಮ ಮಗಳು ಬಲದ ಕಾಲನ್ನು ಮುಂದಿಟ್ಟುಕೊಂಡು ನಿಮ್ಮ ಮನೆಯ ಹೊಸ್ತಿಲು ದಾಟಿ ಒಳ ಪ್ರವೇಶಿಸುವ ಹೊತ್ತು ಅವಳ ಕಾಲ್ಗುಣದಿಂದ ನಿಮ್ಮ ಮನೆಯಲ್ಲಿ ಸಕಲ ಐಶ್ವರ್ಯಗಳು ಕೂಡಿ ಬರಲಿ. ಅವಳು ತುಂಬಿದ ಮನೆಯಲ್ಲಿ ಅತ್ತೆ ಮಾವಂದಿರ ನಡುವೆ ಅನ್ಯೋನ್ಯತೆಯಿಂದಿದ್ದು, ಎಲ್ಲರ ಮನ ಒಲಿಸಿ ಬಾಳ್ವೆ ನಡೆಸಿ ಕೊಂಡು ಸತಿ ಪತಿಯರ ನಡುವೆ ಹಾಲು - ನೀರು ಒಂದಾದಂತ ಅನ್ಯೋನ್ಯ ದಾಂಪತ್ಯದಿಂದ ಬೆಳಗುವ ಸಂತತಿಯನ್ನು ಪಡೆದು ನೂರುಕಾಲ ಬದುಕಿ, ಸೂರ್ಯ ಚಂದ್ರರಿರುವ ತನಕ ಈ ಹೆಣ್ಣು ಹುಟ್ಟಿದ ಮನೆ ಮತ್ತು ಸೇರಿದ ಮನೆಯ ನಂದಾದೀಪವನ್ನು ಬೆಳುಗುವಂತೆ ಅನುಗ್ರಹಿಸಿ ಎಂದು ಕುಲದೇವರನ್ನು ನೆನೆದು, ಮನೆ ದೈವಗಳನ್ನು ಪ್ರಾರ್ಥಿಸಿ, ಸೇರಿದ ಹಿರಿಯರು ಆಶೀರ್ವದಿಸಿ ಈ ಮಗಳನ್ನು ನಿಮ್ಮ ಉಡಿಯಲ್ಲಿ ಇಡುತ್ತಿದ್ದೇವೆ. ಅವಳನ್ನು ರಕ್ಷಿಸುವ ಸರ್ವಭಾರ ನಿಮ್ಮದು ಎಂದು ವಧುವಿನ ಬಲಗೈಯನ್ನು ಎತ್ತಿ ವರನ ತಂದೆ ತಾಯಿಗಳ ಕೈಗಳಲ್ಲಿಡುವರು. ಹೆಣ್ಣಿನ ಜೀವನದ ಸ್ಥಿತ್ಯಂತರದ ನಿರ್ಣಾಯಕ ಘಟ್ಟದಲ್ಲಿ ತವರನ್ನಗಲುವ ಎಳೆಪ್ರಾಯದ ವಧುವಿನ ಅಗಲುವಿಕೆಯ ನೋವು ಎಲ್ಲರ ಕಣ್ಣುಗಳನ್ನು ತೋಯಿಸುವುದರಲ್ಲಿ ಅಚ್ಚರಿಯಿಲ್ಲ. ಗೋಳೆಂದು ದುಃಖಿಸುವ ಮಗಳನ್ನು ಸಂತೈಸುವ ಹೆತ್ತವ್ವೆಯನ್ನು ಸಾಂತ್ವನಗೊಳಿಸುತ್ತ, ನೆಂಟರ ಕಡೆಯವನು ‘ನೀವೇನೂ ಯೋಚಿಸಬೇಡಿ, ನಾವೂ ಹೆಣ್ಣು ಹೆತ್ತ ಸಂಸಾರ. ಅವಳ ಯೋಗಕ್ಷೇಮ ನಮ್ಮದು ಎಂದು ಅಭಯ ನೀಡುವರು. ಅಷ್ಟಾಗಿ ಪ್ರಪಂಚ ಜ್ಞಾನವಿಲ್ಲದ ಬಾಲಕಿಗೆ ಸಂಗಾತಿಯಾಗಿ ಜೊತೆಗಾರ್ತಿ ಯೊಬ್ಬಳನ್ನು ಪತಿಗ್ರಹಕ್ಕೆ ಕಳುಹಿಸುವ ಸಂಪ್ರದಾಯ ಆ ಕಾಲದಲ್ಲಿ ಇತ್ತು.
ಎರಡು ಕಡೆಗಳಲ್ಲಿ ನೆಂಟರ ಊಟದ ಕ್ರಮಗಳೆಲ್ಲ ಮುಗಿಯುವವರೆಗೆ ಹುಡುಗಿ ಎಲ್ಲಿದ್ದರೂ ಗಂಡನು ಅವಳ ಜೊತೆ ಯಾವ ರೀತಿಯಲ್ಲೂ ಸಂಪರ್ಕವನ್ನು ಹೊಂದುವುದಿಲ್ಲ.
ಕೋಲ - ಮದುವೆ ಇದ್ದರೆ ಬಂದ ನೆಂಟರು ಆ ದಿನ ಅಲ್ಲಿಯೇ ಉಳಿಯುವರು. ಕೋಲ ಮುಗಿದು ಮರುದಿನ ಪ್ರಯಾಣ. ವಿದ್ಯುದ್ದೀಪಗಳ ವ್ಯವಸ್ಥೆ ಇರದ, ವಾಹನ ಸಂಚಾರವು ಪ್ರಚಲಿತವಿಲ್ಲದ ಕಾಲವದು, ಎತ್ತಿನ ಸವಾರಿ ಗಾಡಿಯಲ್ಲಿ ಪ್ರಯಾಣ. ಆದುದರಿಂದ ಬೇಗ ಬೇಗನೆ ಊರು ಸೇರುವ ಕುತೂಹಲ.
ನೆಂಟರ ದಿಬ್ಬನ ಹೊರಡುವ ಮುನ್ನ ಗಂಡಿನ ಊರ ಗುರಿಕಾರ ಒಂದು ‘ಕವುಲೆ ವೀಳ್ಯ, ಒಂದಡಿಕೆ ಹಿಡಿದು ‘ಇಂತಹ ದಿನ ನೀವು ಮದುಮಗನ ಅತ್ತೆಯಂದಿರನ್ನು ಮತ್ತು ಊರು ಕೂಡಿ ‘ಸಟ್ಟುಗ ಪತ್ತವುನಿಗೆ ಬರಬೇಕೆಂದು ವೀಳ್ಯ ಗೌರವ ನೀಡುವರು.
ಟಿಪ್ಪಣಿ :
೧) ಸಾಮಾನ್ಯವಾಗಿ ಗಂಡಿನ ಮನೆಯಲ್ಲಿ ‘ಧಾರೆ ಮದುವೆ ಜರಗಿದರೆ ವಧುವನ್ನು ತಾಯಿ ಮನೆಯವರು ತಮ್ಮ ಜೊತೆ ಕರೆದೊಯ್ಯುವರು. ಆ ಬಳಿಕ ಅವಳನ್ನು ‘ಸಟ್ಟುಗ ಪತ್ತವುನಿ ಕಾರ್ಯಕ್ರಮಕ್ಕೆ ಹೆಣ್ಣಿನ ಕಡೆಯವರು ‘ಬಿನ್ನೆರ್ ಬರುವಾಗ ಕರೆತರುತ್ತಿದ್ದರು. ಈಗ ಪ್ರಚಲಿತದಲ್ಲಿ ಬಂದಂತೆ ಕಲ್ಯಾಣ ಮಂಟಪ ಅಥವಾ ಆರಾಧನಾ ಸ್ಥಳಗಳಲ್ಲಿ ಮದುವೆ ನಡೆಯಲು ಪ್ರಾರಂಭ ಗೊಂಡಾಗ, ಮದುವೆಯಾದ ಬಳಿಕ ವಧುವನ್ನು ಪತಿಗೃಹಕ್ಕೆ ಕರೆದೊಯ್ಯುವುದು ಕೆಲ ಸಮಾಜದಲ್ಲಿ ನಡೆದು ಬಂದಿದೆ. ಕೆಲ ಸಂಸ್ಕೃತಿಯಲ್ಲಿ ಮದುವಣಗಿತ್ತಿಯನ್ನು ವರ ಮನೆ ಪ್ರವೇಶ ಮಾಡಿಸಿ, ಅಲ್ಲಿ ಹಾಲು ಕುಡಿದ ಬಳಿಕ ಪುನಹ ತವರಿಗೆ ಕರೆದೊಯ್ಯುವ ಪರಿಪಾಠ ಮೊದಲಾಯಿತು.
೨) ತುಳುನಾಡಿಲ್ಲಿ ಮೊದಲು ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿದ್ದವು. ಕಡೆಕಾರು ತೋಡುಕಟ್ಟ ಪೂವ ಪೂಜಾರಿಯವರ ಪತ್ನಿ ಅತ್ತುಮು ಪೂಜಾರ‍್ತಿ ಒಂದೂವರೆ ವರ್ಷದವರಿದ್ದಾಗ ‘ತೊಟ್ಟಿಲ ಕೂಸಿಗೆ ಧಾರೆ ಮದುವೆ ನಡೆದಿತ್ತು. ಈಗ ಅವರ ವಯಸ್ಸು ೮೦ ವರ್ಷಗಳು. ಹೀಗಾಗಿ ಇಂತಹ ಬಾಲ್ಯ ವಿವಾಹದ ಸಂದರ್ಭದಲ್ಲಿ ಮದುವೆಯ ಎಲ್ಲಾ ವಿಧಿ ವಿಧಾನಗಳನ್ನು ಪೂರೈಸಿದರು, ಅವಳು ಋತುಮತಿಯಾಗುವವರೆಗೆ ಪತಿಗೃಹದವರು ಮನೆ ತುಂಬಿಸಿಕೊಳ್ಳುತ್ತಿ ರಲಿಲ್ಲ.
೩) ತುಳುನಾಡಿನಲ್ಲಿ ಲಾಗಾಯ್ತಿಯಿಂದ ನಡೆದು ಬಂದ ಆಚಾರದಂತೆ ಮದುವೆಯಾಗಿ ಬಂದ ಹೊಸ ಹೆಣ್ಣನ್ನು ಶುಕ್ರವಾರ ಮತ್ತು ಮಂಗಳವಾರ ಪತಿಗೃಹದಿಂದ ತವರಿಗೆ ಕಳುಹಿಸಿಕೊಡುವುದಿಲ್ಲ. ಮೊದಲಿನ ‘ಕಟ್ಟಿನಂತೆ ಒಂದು ಮಂಗಳವಾರ ಮದುವೆಯಾಗಿ ಪತಿ ಮನೆ ಸೇರಿದವಳು ಮತ್ತೊಂದು ಮಂಗಳವಾರ ತಿರುಗಿ ಹೋದಾಳು - ಮರಳಿ ಗಂಡನ ಮನೆಗೆ ಬಂದು ಸಂಸಾರ ಮಾಡಲಾರಳು. ಅಂದರೆ ಅಲ್ಲಿಗೆ ಋಣ ಕಡಿದು ಹೋಗಬಹುದು ಎಂಬ ನಂಬಿಕೆ ಇದೆ. ಅದೇ ರೀತಿ ಸೊಸೆಯನ್ನು ಶುಕ್ರವಾರ ತಾಯಿ ಮನೆಯಿಂದ ಗಂಡನ ಮನೆಗೆ ಕಳುಹಿಸುವುದಿಲ್ಲ. ಹಾಗೆ ಹೋದರೆ ತಾಯಿಯ ಮನೆಯ ‘ಪೊಲ್ಸು ಹೋಗುವುದೆನ್ನುವರು. ಹೆಣ್ಣು ಮನೆತನದ ಭಾಗ್ಯಲಕ್ಷ್ಮಿ. ‘ತಿಂಗೊಡಿಗೆ ಯಂದು ಕೂಡಾ ಹೆಣ್ಣನ್ನು ಕಳುಹಿಸುವುದಿಲ್ಲ. ತಿಂಗೊಡಿಗೆ ಧಾರ್ಮಿಕ ನಂಬುಗೆಯಂತೆ ‘ಅನಿಷ್ಠ ದಿನ ಆ ದಿನ ಅಭಿವೃದ್ಧಿ ದ್ಯೋತಕವಾದ ನಗದು, ಅಕ್ಕಿ, ಧಾನ್ಯಗಳನ್ನು ಹೊರಗೆ ನೀಡುವುದು ನಿಷಿದ್ಧವಾಗಿದೆ. ಇವೆಲ್ಲವನ್ನು ಮೀರಿದ ಒಂದು ಸತ್ಯವಿದೆ. ಅದೆಂದರೆ ಹೆಣ್ಣು ಮಗಳ ಭವಿತವ್ಯದ ಬಾಳು ಒಳ್ಳೆಯ ದಾಗಬೇಕು. ಅವಳು ಪತಿಗೃಹದಲ್ಲಿ ಸುಖ, ಸಂತೋಷದಿಂದಿರಬೇಕೆಂದು ತಂದೆ ತಾಯಿ ಮದುವೆ ಮಾಡಿ ಕೊಡುವರು. ಹಾಗಿದ್ದರೆ ಹೆಣ್ಣು ಹೊರನಡೆಯು ವುದರಿಂದ ತಾಯಿಯ ಮನೆಯ ‘ಪೊಲ್ಸು ಹೋಗುವುದು ಎಂಬ ಮಾತಿಗೆ ವಿಶೇಷ ಅರ್ಥ ಬರುವುದಿಲ್ಲ. ಶುಕ್ರವಾರ ಮದುವೆ ನಡೆದ ಸಂದರ್ಭದಲ್ಲಿ ಹೆಣ್ಣು ನೇರವಾಗಿ ಗಂಡನ ಮನೆ ಸೇರುವ ಉತ್ತಮ ಪರಿಪಾಠ ಈಗಿನ ದಿನ ಗಳಲ್ಲಿ ಪ್ರಾರಂಭವಾಗಿದೆ.
೪) ನವ ವಧು ಮೊದಲ ಬಾರಿಗೆ ಪತಿಗೃಹ ಪ್ರವೇಶ ಮಾಡುವಾಗ ಹೊಸ್ತಿನಲ್ಲಿ ಒಂದು ಸೇರು ತುಂಬಾ ಅಕ್ಕಿಯನ್ನಿಡುವರು. ಮದುಮಗಳು ಅದನ್ನು ಬಲಗಾಲಿನಿಂದ ಸೇರಿನಲ್ಲಿರುವ ಅಕ್ಕಿಯು ಒಳಮುಖವಾಗಿ ಚೆಲ್ಲುವಂತೆ ಮಾಡಿ ಬಲಗಾಲನ್ನು ಒಳಗಿಟ್ಟು ಪ್ರವೇಶಿಸುವಳು.
ಮಧ್ಯಕಾಲದಲ್ಲಿ ನಮ್ಮ ಸಂಸ್ಕೃತಿಯನ್ನು ಸೇರಿಕೊಂಡ ವೈದಿಕ ಸಂಸ್ಕೃತಿಯ ಪ್ರಭಾವದಿಂದಾಗಿ ಲಕ್ಷ್ಮೀ ಪ್ರವೇಶದ ಶುಭವನ್ನು ಇದು ಸಂಕೇತಿಸುವುದಾದರೂ ಈ ಪದ್ಧತಿಯನ್ನು ವೈದಿಕ ಸಂಸ್ಕೃತಿಗೆ ದ್ರಾವಿಡ ಮೂಲದ ಜನರಿಂದ ಪಡೆದಿರಬಹು ದೆಂಬುದು ವಿಚಾರಾರ್ಹವಾಗಿದೆ.
Tagged with
babuamin,
lekhana
ಪ್ರೊ. ಮಧೂರು ಮೋಹನ ಕಲ್ಲೂರಾಯ
ಈ ಜಗತ್ತಿನಲ್ಲಿ ಸುಳ್ಳು ಪ್ರಚಾರ ಪಡೆದಷ್ಟು ಸತ್ಯ ಪ್ರಚಾರ ಖಂಡಿತಾ ಪಡೆಯುವುದಿಲ್ಲ. ಸುಳ್ಳನ್ನು ನಂಬಿದಷ್ಟು ಸತ್ಯವನ್ನು ನಂಬದ ಜನ ಬಹಳ ಇದ್ದಾರೆ. ದೇಶದಲ್ಲೇ ಸಮಾನತೆ, ಬಡವರ ಶೋಷಣೆ ತಡೆ, ಭ್ರಷ್ಟಾಚಾರದ ನಿರ್ಮೂಲನ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ಇದೆಲ್ಲ ಆಗಲೇ ಬೇಕಾದದ್ದು, ಇರಲೇ ಬೇಕಾದದ್ದು ಎಂಚು ಹೋರಾಟ ನಡೆಸುವ ವಿಚಾರ ಶೀಲರ ಗುಂಪು ದೇಶದ ಆಳ್ವಿಕೆ ಎಂಬ ವ್ಯವಸ್ಥೆಯೊಡನೆ ಕೈಜೋಡಿಸುತ್ತದೆ. ಆದರೆ ಹಿಡಿದ ಕೈ ಬಿಡದ ಹಾಗೆ ಮತ್ತೊಮ್ಮೆ ಯಾವ ಅನಾಹುತ ಆಗದ ಹಾಗೆ ಶಾಂತಿಯ ಮೌನಕ್ರಾಂತಿ ಎಲ್ಲೋ ಆಗುತ್ತಿರುತ್ತದೆ, ತಪ್ಪಲ್ಲ. ಆಗಬೆಕು. ಇತಿಹಾಸದಲ್ಲಿ ಬೇಕಾದಷ್ಟು ದೃಷ್ಟಾಂತಗಳು ಸಿಗುತ್ತವೆ. ಪಟೇಲ್, ಗಾಂಧೀಜಿ, ಅಂಬೇಡ್ಕರರು ಜನತೆಗೆ ಶಾಂತಿ, ಸಹನೆಯನ್ನು ಬೋಧಿಸಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸಿದ್ದಾರೆ ಅಲ್ಲವೇ? ಹೋರಾಟದ ರೂಪುರೇಷೆಯನ್ನು ಮೆಚ್ಚಿಕೊಂಡಷ್ಟೇ ಜನ ಅದನ್ನು ಖಂಡಿಸಿ, ದೇಶದ್ರೋಹಿಗಳೆಂದು ಬೈದವರೂ ಇದ್ದಾರೆ.
ಈಗಿನ ನಕ್ಸಲರಿಗೆ ಸಹಕಾರ ಹಲವು ದಿಕ್ಕುಗಳಿಂದ ಹಲವು ರೀತಿಯಲ್ಲಿ ಬರಬಹುದು. ಕೆಲವರು ಅಂತರಾಳದಿಂದ ಮನತುಂಬಿ ಹರಸಿದವರೂ ಹರಸಬಹುದು. ನಕ್ಸಲರು ಯಾಕೆ ಹೀಗೆ ಮಾಡುತ್ತಾರೆ? ಸರಿಯಾದ ಮಾರ್ಗ ಇಲ್ಲದಿದ್ದಾಗ, ಸತ್ಯದ ಪಥ ಕಾಣದೇ ಇದ್ದಾಗ, ನೊಂದವನಿಗೆ ಬಾಯಿಕಟ್ಟಿ ಹೋದಾಗ ಪೇಟೆಗೆ ಹೋಗುತ್ತಾರೆ. ಅಲ್ಲಿ ಹಲವು ವಿಧಧ ಮಂದಿಗಳು ಸಿಗುತ್ತಾರೆ. ವಿಧ ವಿಧವಾದ ಬೋಧನೆಗಳಿಂದ ಕ್ರೂರಿ ನಾಸ್ತಿಕನೂ ಸಾತ್ವಿಕನಾಗಬಹುದು. ಸಾತ್ವಿಕನೂ ಕ್ರೂರಿಯಾಗಬಹುದು. ಯಾರೂ ಈ ಜಗತ್ತಿನಲ್ಲಿ ಸಾಯಲು ಬಯಸುವುದಿಲ್ಲ. ಅನ್ನ, ನೀರು, ಬೆಂಕಿ ಇಲ್ಲದಿದ್ದರೂ ವರ್ತಮಾನ ಕಾಲದಲ್ಲಿ ಭಿಕ್ಷೆ ಬೇಡಿಯಾದರೂ, ಸಾಧಿಸಿಯಾದರೂ ಬದುಕುತ್ತೇನೆ ಎಂದು ಹೇಳುವವರು ಕಾಣಸಿಗುತ್ತಾರೆ.
ತುಳುವಿನ ‘ಎಂಕು ಪಣಂಬೂರಿಗೆ ಹೋದ ಹಾಗೆ’ ಎಂಬ ರೀತಿಯ ಮಾತಿನ ಬಾಣ ಬಹಳ ಆಶ್ಚರ್ಯಕರವಾಗಿ ಪ್ರಯೋಗಿಸಲ್ಪಡುತ್ತದೆ. ಶ್ರೀರಾಮನ ಭಕ್ತಿ ಕೋಟಿ ಒಮ್ಮೆಗೆ ಝಕ್ಕನೆ ಸ್ತಂಭೀಭೂತವಾಗುತ್ತವೆ.
ಮನೆಮಂದಿ ಯಾವುದೋ ಕಾರಣಕ್ಕೆ ಮೊಂಡುತನ ಮಾಡಿ ಅನಾಥರಂತೆ ಬೆಳೆದ ಮಗನು ಏನೂ ಇಲ್ಲದಿದ್ದರೂ ಕಣ್ಣು ತೆರೆದು ನೋಡ್ತಾನೆ. ವಿದ್ಯಾವಂತ, ಇಂಜಿನಿಯರ್, ದಿನದ ಕನಿಷ್ಠ ವೇತನ ಪಡೆಯುವವ ಸಮಾನವಾಗಿ ನಡೆಸಿಕೊಳ್ಳಬೇಕೆಂದರೆ ಅದು ಕಷ್ಟ. ಹಾಗಿರುವಾಗ ಏನೇನೋ ಕಲ್ಪನೆಗಳನ್ನು ಮಾಡಿಕೊಳ್ಳುವುದು ಬೇಡ ಜಗದ ಜನರ ಮನವ ನೋಯಿಸುವುದು ಬೇಡ. ಕಣ್ಣೀರು ಒರೆಸಬೇಕು. ರಕ್ತ ತರ್ಪಣ ಬೇಡ. ಶಾಂತಿ ಸಹನೆಯನ್ನು ಎಲ್ಲರೂ ಕಲಿಯಬೇಕು.
Tagged with
chavadi
ನೂತನವಾದಿಗಳು ಪ್ರವಾದಿ ಚರ್ಯೆಗೆ ವಿರುದ್ಧವಾಗಿ ಕೆಲವು ಆಚಾರಗಳನ್ನು ಇಸ್ಲಾಮಿನೊಳಗೆ ತುರುಕಲು ಯತ್ನಿಸುತ್ತಿದ್ದಾರೆ. ಇಸ್ಲಾಮಿನ ಪಂಡಿತರಲ್ಲಿ ಇವರ ಬೇಳೆ ಬೇಯುವುದಿಲ್ಲ. ಕುರಾನ್ ಮತ್ತು ಹದೀಸ್‌ಗಳನ್ನು ದುರ್ವ್ಯಖ್ಯಾನ ಮಾಡಿ ಜನ ಸಾಮಾನ್ಯರನ್ನು ಹಾದಿ ತಪ್ಪಿಸುತ್ತಿದ್ದಾರೆ.
ಸಿರಾಜ್‌ಅಹ್ಮದ್, ಪುತ್ತೂರು
ಭೂಮಿಯಲ್ಲಿ ಇಸ್ಲಾಂ ಅನ್ನು ನೆಲೆ ನಿಲ್ಲಿಸಲಿಕ್ಕಾಗಿ, ಸಮಯಕ್ಕೆ ಸರಿಯಾಗಿ ಅಲ್ಲಾಹು ಈ ಭೂಮಿಗೆ ಪ್ರವಾದಿಗಳನ್ನು ಕಳುಹಿಸಿದನು. ಅದರಲ್ಲಿ ಕೊನೆಯ ಅಥವಾ ಅಂತಿಮ ಪ್ರವಾದಿಯಾಗಿದ್ದಾರೆ ಮಹಮ್ಮದ್ ನೆಬಿ (ಸ.ಅ) ಅವರು ತನ್ನ ೪೦ ವರ್ಷದಿಂದ ೬೩ ವರ್ಷದ ತನಕ ತುಂಬಾ ಕಷ್ಟಪಟ್ಟು ನಮಗೆ ಅಗತ್ಯವಿರುವ ಎಲ್ಲಾ ಕಾರ್ಯವನ್ನು ತೋರಿಸಿಕೊಟ್ಟು ಇಸ್ಲಾಂ ದೀನನ್ನು ಪೂರ್ತಿ ಮಾಡಿ ಹೋಗಿದ್ದಾರೆ. ಆದರೆ ಇಲ್ಲಿಯ ನೂತನವಾದಿಗಳು ಪ್ರವಾದಿ ಚರ್ಯೆಗೆ ವಿರುದ್ಧವಾಗಿ ಕೆಲವು ಆಚಾರಗಳನ್ನು ಇಸ್ಲಾಮಿ ನೊಳಗೆ ತುರುಕಲು ಯತ್ನಿಸುತ್ತಿದ್ದಾರೆ. ಇಸ್ಲಾಮಿನ ಪಂಡಿತರಲ್ಲಿ ಇವರ ಬೇಳೆ ಬೇಯು ವುದಿಲ್ಲ. ಕುರಾನ್ ಮತ್ತು ಹದೀಸ್‌ಗಳನ್ನು ದುರ್ವ್ಯಾಖ್ಯಾನ ಮಾಡಿ ಜನ ಸಾಮಾನ್ಯರನ್ನು ಹಾದಿ ತಪ್ಪಿಸುತ್ತಿದ್ದಾರೆ.
ಸಲಫಿ ಪ್ರಸ್ಥಾನದ ಪ್ರಚಾರಕರಾಗಿರುವ ಅಶ್ರಫ್ ಮುಸ್ಲಿಯಾರ್‌ರವರು ಈ ಹಿಂದೆ ಚಾವಡಿಯಲ್ಲಿ ಸುನ್ನತ್ ಜಮಾಅತ್‌ಗೆ ವಿರುದ್ಧವಾಗಿ ಹಲವು ಬಾರಿ ಲೇಖನ ಬರೆದಿದ್ದಾರೆ. ಈ ಬಗ್ಗೆ ಸುನ್ನಿಗಳು ಯಾರಾದರೂ ಇದ್ದರೆ ಪಂಥಾಹ್ವಾನಕ್ಕೆ ಸಿದ್ಧರಾಗಿ ಎಂದು ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ನಾನು ಕೂಡಾ ಹಲವು ಬಾರಿ ಲೇಖನ ಬರೆದಿದ್ದೆ. ಒಂದೆರಡು ಬಾರಿ ಅವರು ಕೂಡಾ ಪ್ರತಿಕ್ರಿಯೆ ನೀಡಿದ್ದರು. ಆದರೆ ನನ್ನ ಕೊನೆಯ ಲೇಖನಕ್ಕೆ (೨.೩.೨೦೧೨) ಪ್ರತಿಕ್ರಿಯೆಯೇ ಇಲ್ಲ. ನನ್ನ ಆ ಲೇಖನದಲ್ಲಿ ಕೆಲ ವೊಂದು ವಿಚಾರಗಳ ಬಗ್ಗೆ ಪ್ರಶ್ನಿಸಿದ್ದೆ. ಆದರೆ ಅಶ್ರಫ್‌ರವರು ಈವರೆಗೆ ಅದಕ್ಕೆ ಉತ್ತ ರಿಸಿಲ್ಲ. ಅಶ್ರಫ್‌ರವರು ಸೈದ್ದಾಂತಿಕವಾಗಿ ಶರಣಾಗುವ ಮೂಲಕ ಸಲಫಿಯಾದ ಸುನ್ನಿಗೆ ತತ್ವಾಂತರ ಹೊಂದಿರಬೇಕೆಂದು ಕಾಣುತ್ತದೆ. ಯಾಕೆಂದರೆ ದೊಣ್ಣೆ ಕೊಟ್ಟು ಪೆಟ್ಟು ತಿಂದಂತಾಗಿದೆ ಅಶ್ರಫ್‌ರವರ ಸ್ಥಿತಿ. ಹೇಗೊ ಈ ವಿದ್ಯಮಾನದಿಂದ ನಾನು ಬರೆದ ಬರಹ ಸಾರ್ಥಕ ಎಂಬುವುದು ಸತ್ಯ.
ಕೊನೆಗೂ ಸುನ್ನಿಯಾದ ಅಶ್ರಫ್ ಮುಸ್ಲಿಯಾರಿಗೆ ನನ್ನ ಅಭಿನಂದನೆಗಳು.
Tagged with
chavadi
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೨೫ ವರ್ಷ ಪ್ರಾಯದ ಯುವತಿ. ನನಗೆ ಎರಡು ವರ್ಷದ ಹಿಂದೆ ಮದುವೆಯಾಗಿದೆ. ನನ್ನ ಪತಿ ವಿದೇಶದಲ್ಲಿರುವ ಕಾರಣ ನಾನು ತಾಯಿ ಮನೆಯಲ್ಲಿ ಉಳಿದಿದ್ದೇನೆ. ನನ್ನ ತಂದೆ ಬಾಲ್ಯದಲ್ಲಿಯೇ ತೀರಿಕೊಂಡಿದ್ದಾರೆ. ಮನೆಯಲ್ಲಿ ನಾನು, ತಾಯಿ ಹಾಗೂ ನನ್ನ ಅಣ್ಣ ಮಾತ್ರ ಇದ್ದೇವೆ. ಅಣ್ಣ ಖಾಸಗಿ ಸಂಸ್ಥೆಯಲ್ಲಿ ಒಳ್ಳೆಯ ಕೆಲಸದಲ್ಲಿದ್ದಾನೆ. ಆತನಿಗೆ ೩೫ ವರ್ಷ ವಯಸ್ಸು. ಆತನ ಮೇಲೆ ನನಗೆ ತುಂಬಾ ಪ್ರೀತಿ. ಆತ ನನಗೆ ಯಾವುದಕ್ಕೂ ಕೊರತೆ ಮಾಡುವುದಿಲ್ಲ.
ನನ್ನ ಸಮಸ್ಯೆಯೇನೆಂದರೆ ಅಣ್ಣ ವಿಪರೀತ ಕುಡಿಯುವುದನ್ನು ಕಲಿತಿದ್ದಾನೆ. ಮನೆಗೆ ಕುಡಿದುಕೊಂಡು ಬರುತ್ತಾನೆ. ಕೆಲವೊಮ್ಮೆ ತನ್ನ ಗೆಳೆಯರನ್ನು ಕರೆದು ಕೊಂಡು ಬಂದು ಪಾರ್ಟಿ ಮಾಡುತ್ತಾನೆ. ಆತನ ಗೆಳೆಯರು ನನಗೆ ತಿಳಿದಂತೆ ಒಳ್ಳೆಯವರಲ್ಲ.
ಹಣಕ್ಕಾಗಿ ಏನು ಬೇಕಾದರೂ ಮಾಡಲು ಹಿಂದೆ-ಮುಂದೆ ನೋಡುವವರಲ್ಲ. ಅವರು ಹಣಕ್ಕಾಗಿ ಅಣ್ಣನ ಜತೆ ಸ್ನೇಹ ಬೆಳೆಸಿದ್ದಾರೆ, ಅವರ ಸ್ನೇಹ ಒಳ್ಳೆಯದಲ್ಲ ಎಂದು ಎಷ್ಟು ಹೇಳಿದರೂ ಅವನು ಕೇಳುವುದಿಲ್ಲ. ಇದರಿಂದ ನಾನು ಏನೂ ಮಾಡಲಾರದೆ ಸುಮ್ಮನಿದ್ದೇನೆ. ತಾಯಿಗೂ ವಯಸ್ಸಾ ಯಿತು. ಮನೆಯಲ್ಲಿ ಮದುವೆ ಯಾಗಲು ಎಷ್ಟು ಒತ್ತಾಯ ಮಾಡಿದರೂ ಕೇಳುತ್ತಿಲ್ಲ. ನಾನೇನು ಮಾಡಲಿ? ನನ್ನ ಅಣ್ಣನನ್ನು ಸರಿದಾರಿಗೆ ತರುವ ಬಗೆ ಹೇಗೆ? ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ಅಣ್ಣನ ವರ್ತನೆಯೇ ನಿಮ್ಮ ಸಮಸ್ಯೆಯಾಗಿದೆ. ಹೇಗಾದರೂ ಸರಿ, ಅಣ್ಣನನ್ನು ಸರಿ ದಾರಿಗೆ ತರಬೇಕು ಎಂದು ನಿಶ್ಚಯಿಸಿರುವಿರಿ. ಈ ಬಗ್ಗೆ ಹೆಚ್ಚು ಚಿಂತಿಸುವುದೇನೂ ಬೇಕಾಗಿಲ್ಲ. ಅಣ್ಣನಿಗೆ ನೀವೆಂದರೆ ಇಷ್ಟ ಅಂದ ಮೇಲೆ ಆತ ನಿಮ್ಮ ಮಾತನ್ನು ಕೇಳದೆ ಇರುತ್ತಾನೆಯೇ?
ಆತನಲ್ಲಿ ಕುಡಿಯದೆ ಇರುವ ಸಮಯ ನೋಡಿಕೊಂಡು ಬುದ್ಧಿವಾದ ಹೇಳಿ. ನೀನು ಮನೆಗೆ ಬರುವಾಗ ಗೆಳೆಯರನ್ನು ಮನೆಗೆ ಕರೆದು ಕೊಂಡು ಬರಬೇಡ. ನಿನ್ನ ಗೆಳೆಯರು ನನಗೇನೂ ಒಳ್ಳೆಯವರಂತೆ ತೋರುವುದಿಲ್ಲ. ಅವರ ಅಸಭ್ಯತನದ ಬಗ್ಗೆ ಸರಿ ಯಾಗಿ ವಿವರಿಸಿ ಹೇಳಿ. ನೇರವಾಗಿ ಆತನಿಗೆ ಮನದಟ್ಟು ಮಾಡುವಂತೆ ಹೇಳಿ. ಪ್ರೀತಿಯಿಂದ ಆತನನ್ನು ತಿದ್ದಿದರೆ ಆತ ಸರಿಯಾಗಬಹುದು. ಆತ ಸಂಪೂರ್ಣವಾಗಿ ಜವಾಬ್ದಾರಿಯನ್ನು ಪಡೆದು ಕೆಟ್ಟ ಗುಣಗಳನ್ನು ಬಿಟ್ಟ ಮೇಲೆ ಆತನಿಗೆ ಮದುವೆ ಯಾಗಬೇಕೆಂದು ಒತ್ತಾಯಿಸಿ. ಅಷ್ಟರವರೆಗೆ ಮದುವೆಯ ವಿಚಾರ ಪ್ರಸ್ತಾಪಿಸದಿರಿ. ಪ್ರೀತಿ, ವಾತ್ಸಲ್ಯದಿಂದ ತುಂಬಿದ ಮಾತುಗಳು, ಆತನನ್ನು ಗಣನೆಗೆ ತೆಗೆದು ಕೊಳ್ಳುತ್ತೀರಿ ಎಂಬ ವಿಶ್ವಾಸವನ್ನು ಆತನಲ್ಲಿ ನೀವು ಮೂಡಿಸುವಲ್ಲಿ ಯಶಸ್ವಿಯಾದರೆ ಅಣ್ಣ ಖಂಡಿತಾ ಬದಲಾಗುತ್ತಾನೆ.
ನಿಮಗಾಗಿ ಎಲ್ಲವನ್ನೂ ಮಾಡುವ ಅಣ್ಣ ನಿಮ್ಮ ಮಾತನ್ನು ನಿರಾಕರಿಸಲು ಸಾಧ್ಯವಿಲ್ಲ. ನೀವು ನಿಶ್ಚಿಂತೆಯಿಂದಿರಿ. ಆತನಿಗೆ ಪರಿ ವರ್ತನೆ ಹೊಂದಲು ಸ್ವಲ್ಪ ಸಮಯ ಕಾಲಾವಕಾಶ ಕೊಡಿ. ಆತ ತಪ್ಪು ಮಾಡಿದಾಗಲೆಲ್ಲಾ ಆತನನ್ನು ಎಚ್ಚರಿಸುವುದನ್ನು ಬಿಡದಿರಿ. ಕುಡಿv ದಿಂದಾಗುವ ಸಮಸ್ಯೆಯನ್ನು ಆತನಿಗೆ ವಿವರಿಸುತ್ತಿರಿ. ಇದರಿಂದ ಆತ ಮುಂದೆ ಒಳ್ಳೆಯವನಾಗಿಯೇ ಆಗುತ್ತಾನೆ.
ಆತನ ಗೆಳೆಯರು ಕೆಟ್ಟವರು ಎಂದು ಅಣ್ಣ ಅವರ ಜತೆ ಇರುವಾಗ ಬೈಯುವುದಾಗಲೀ, ಕೆಟ್ಟದಾಗಿ ನಡೆದುಕೊಳ್ಳುವುದಾಗಲೀ ಮಾಡಬೇಡಿ. ಇದರಿಂದ ಆತನಿಗೆ ನಿಮ್ಮ ಮೇಲೆ ಕೋಪ ಬರುವ ಸಾಧ್ಯತೆಯೂ ಇದೆ. ಆತ ಒಬ್ಬನೇ ಇರುವಾಗ ಒಳ್ಳೆಯ ಗೆಳೆಯರ ಸಹವಾಸ ಮಾಡುವಂತೆ, ಒಳ್ಳೆಯ ಗುಣ-ನಡತೆ ಬೆಳೆಸಿಕೊಳ್ಳುವಂತೆ ಹೇಳಿ. ಕುಡಿತವನ್ನು ಪ್ರೀತಿಯಿಂದ ಬಿಡಿಸಬಹುದು. ಆದರೆ ನಮಗೊಂದಿಷ್ಟು ತಾಳ್ಮೆ ಬೇಕಷ್ಟೇ.
Tagged with
gupta
ಮೇಷ : ಹಣಕಾಸಿನ ಲಾಭ ಇರುತ್ತದೆ.
ವೃಷಭ : ಮಾನಸಿಕವಾಗಿ ನೆಮ್ಮದಿ ಇರುತ್ತದೆ.
ಮಿಥುನ : ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ.
ಕರ್ಕಾಟಕ : ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ.
ಸಿಂಹ : ಜಂಟಿ ವ್ಯಾಪಾರದಲ್ಲಿ ಸಮಸ್ಯೆ ಇರುತ್ತದೆ.
ಕನ್ಯಾ : ಸಹೋದರರಿಂದ ಸಹಕಾರ ದೊರೆಯಲಿದೆ.
ತುಲಾ : ಭೂಮಿ, ವಾಹನ ಖರೀದಿಸುವುದಕ್ಕೆ ಸರಿಯಾದ ಸಮಯ.
ವೃಶ್ಚಿಕ : ಶೃಂಗಾರ ಸಾಧನವನ್ನು ಖರೀದಿ ಮಾಡುತ್ತೀರಿ.
ಧನು : ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಇರುತ್ತದೆ.
ಮಕರ : ಹಣಕಾಸಿನ ವ್ಯವಹಾರದಲ್ಲಿ ಮಿಶ್ರ ಫಲ ಇದೆ.
ಕುಂಭ : ಉದ್ಯೋಗದಲ್ಲಿ ಅಭಿವೃದ್ಧಿಯಾಗುತ್ತದೆ.
ಮೀನ : ನಿಮ್ಮ ತೊಂದರೆಗಳು ದೂರವಾಗುತ್ತದೆ.
Tagged with
bhavishya
ಮಂಗಳೂರು : ಸ್ಟಾಕ್, ಸೇಲ್ಸ್ ಮೇಲ್ವಿ ಚಾರಣೆಗೆ ಮಹಿಳಾ ಕ್ಲರ್ಕ್, ಮಾರ್ಕೆಟಿಂಗ್‌ಗೆ ಯುವಕರು ಬೇಕು ೯೮೪೫೩೫೩೭೮೯.
ಪುತ್ತೂರು : ದ್ವಿಚಕ್ರವಾಹನ ಶೋರೂಮ್‌ಗೆ ಸೇಲ್ಸ್‌ಮ್ಯಾನ್ ಬೇಕು ೮೭೪೮೯೭೦೨೮೬.
ಮಂಗಳೂರು: ಬೇಕರಿ ಮತ್ತು ಜ್ಯೂಸ್ ಅಂಗಡಿಗೆ ಜನ ಬೇಕು ೯೮೪೪೫೨೧೭೪೩.
ಮಂಗಳೂರು : ಒಪ್ಟಿಕಲ್ ಶಾಪಿಗೆ ಯುವತಿ ಬೇಕು ೯೦೩೬೬೨೧೦೭೯.
ಮಂಗಳೂರು: ಸ್ಕ್ರೀನ್‌ಪ್ರಿಂಟಿಂಗ್‌ಗೆ ಜನ ಬೇಕು ೭೭೬೦೬೩೧೪೫೭.
ಮಂಗಳೂರು: ಡಿಟಿಪಿ ಅನುಭವ ಇರುವ ಯುವತಿಯರು ಬೇಕು ೯೮೪೪೪೯೮೦೯೮.
ಮಂಗಳೂರು: ಗ್ರಾಫಿಕ್ಸ್‌ಗೆ ಯುವತಿಯರು ಬೇಕು ೯೦೩೬೪೮೯೦೪೦.
ತೊಕ್ಕೊಟ್ಟು : ಕಚೇರಿ ಕೆಲಸಕ್ಕೆ ಪಿಯುಸಿ ಯಾದ ಯುವತಿ ೭೭೯೫೧೬೯೭೮೭.
ಮಂಗಳೂರು : ಸೇಲ್ಸ್‌ಮ್ಯಾನ್ ಮತ್ತು ಎಕ್ಸಿ ಕ್ಯೂಟಿವ್ ಬೇಕು ೭೨೫೯೩೫೪೮೮೪
ಮಂಗಳೂರು : ಏಜೆನ್ಸಿಯೊಂದಕ್ಕೆ ಸೇಲ್ಸ್‌ಗೆ ಯುವತಿಯರು ಬೇಕು ೨೪೪೩೫೭೬.
ಮಂಗಳೂರು : ಮಂಗಳಾದೇವಿ ಬಳಿ ಆಫೀಸ್ ಕೆಲಸಕ್ಕೆ ಹೆಲ್ಪರ್ ಬೇಕು ೯೮೪೪೦೦೯೯೦೫
ಬೈಕಂಪಾಡಿ : ಹೊಟೇಲಿಗೆ ಮಾಂಸಾಹಾರಿ ಅಡುಗೆಯವರು, ಕಿಚನ್ ಹೆಲ್ಪರ್ ಬೇಕು ೯೯೮೦೨೬೭೮೮೪.
ಪಡೀಲ್ : ಪೆಟ್ರೋಲ್ ಪಂಪ್‌ಗೆ ಯುವಕರು ಬೇಕು ೯೪೪೮೧೩೪೧೨೩.
ಕೋಡಿಕಲ್ : ಮನೆಕಾರಿಗೆ ಡ್ರೈವರ್ ಬೇಕು ೨೪೫೧೮೨೮.
ಮಂಗಳೂರು : ಕಂಪ್ಯೂಟರ್ ತಿಳಿದಿರುವ ಲೇಡಿ ಬೇಕು ೯೮೪೪೪೯೦೯೮.
ಕಂಕನಾಡಿ ಅಟೋ ಮೊಬೈಲ್ ಶಾಪ್‌ಗೆ ಜನಬೇಕು. ೯೪೪೯೪೪೧೨೩೪.
ಉಡುಪಿ : ಕಂಪೆನಿ ಕೆಲಸಕ್ಕೆ ಯುವಕ - ಯುವತಿಯರು ಬೇಕು ೯೯೮೦೪೬೩೬೧೧.
ಮಂಗಳೂರು : ಯೆಯ್ಯಾಡಿಯಲ್ಲಿರುವ ಮುದ್ರಣಾಲಯಕ್ಕೆ ಡಿ.ಟಿ.ಪಿ. ಅಪರೇಟರ್ ಬೇಕು ೨೨೧೧೦೫೦.
ಮಂಗಳೂರು : ತಿಂಡಿ (ಪಪ್ಸ್) ಮಾಡು ವವರು ಬೇಕು ೯೯೦೧೩೫೦೪೩೧
ಮಂಗಳೂರು : ಹೊಟೇಲಿಗೆ ಅಡುಗೆ ಯವರು ಬೇಕು ೯೯೮೬೬೪೮೧೧೮.
ಸುರತ್ಕಲ್ : ಬಟ್ಟೆ ಅಂಗಡಿಗೆ ಲೇಡಿಸ್ ಕಟ್ಟಿಂಗ್ ಮಾಸ್ಟರ್ ಬೇಕು ೯೮೪೪೫೪೩೧೫೧.
ಉಡುಪಿ : ಎಲೆಕ್ಟ್ರಾನಿಕ್ಸ್ ಶಾಪ್‌ಗೆ ಲೇಡಿಸ್ ಕ್ಯಾಶಿಯರ್ ಬೇಕು ೯೮೮೦೨೧೯೯೪೯.
ಮೂಡಬಿದ್ರೆ : ದೋಸೆ ಮಾಡುವ ಹೆಂಗಸರು ಬೇಕು. ೯೯೦೨೦೭೧೫೪೯.
ಕಂಕನಾಡಿ :ಟೈಲರಿಂಗ್ ಶಾಪಿಗೆ ಅಲ್ ಟ್ರೇಶನ್ ಮತ್ತು ಫಿನಿಶಿಂಗ್‌ಗೆ ಜನ ಬೇಕು ೯೮೮೬೪೪೩೯೬೧.
ಮಂಗಳೂರು : ಪ್ಲಂಬರ್ & ಎಲೆಕ್ಟ್ರಿಶಿ ಯನ್ ಬೇಕು. ೯೮೪೪೬೬೭೦೨೪
ತೊಕ್ಕೊಟ್ಟು : ಬಾರ್ & ರೆಸ್ಟೋರೆಂಟ್‌ಗೆ ಕಿಚನ್ ಹೆಲ್ಪರ್ ಮತ್ತು ವೇಟರ್ (ಪಾರ್ಟ್ ಟೈಂ) ಬೇಕು. ೯೭೪೨೨೮೫೪೮೫.
ತೊಕ್ಕೊಟ್ಟು ವೆಜ್ ರೆಸ್ಟೋರೆಂಟಿಗೆ ಚೈನೀಸ್ ಕುಕ್ ಬೇಕಾಗಿದ್ದಾರೆ. ೯೯೦೧೧೪೩೦೮೯
Tagged with
udyoga
ಮಂಗಳೂರು: ಎಕ್ಕಾರು ನಡ್ಯೋಡಿ ಗುತ್ತು ಕುಟುಂಬಿ ಕರು ನೀಡುವ ‘ಧರ್ಮನೇಮ’ ಸೇವೆಯು ಮೇ ೧೮ರಿಂದ ೨೨ರ ತನಕ ಮಂಗಳೂರು ತಾಲೂಕಿನ ಬಡಗ ಎಕ್ಕಾರು ನಡ್ಯೋಡಿಗುತ್ತಿನಲ್ಲಿ ಜರಗಲಿದೆ ಎಂದು ಕದ್ರಿ ನವನೀತ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೊಡಮಂದಾಯ ದೈವವು ಎಕ್ಕಾರಿಗೆ ಬಂದು ನೆಲೆಯಾದ ಚಾರಿತ್ರಿಕ ಘಟನೆ ನಡೆದ ಎಕ್ಕಾರು ನಡ್ಯೋಡಿಗುತ್ತಿನಲ್ಲಿ ಸಾರ ಜುಮಾದಿಯು ವಿಶೇಷ ಅಧಿಕಾರ ಪಡೆದ ದೈವವಾಗಿದೆ. ಎಕ್ಕಾರು ಶ್ರೀ ಗೋಪಾಲಕೃಷ್ಣ ಮಠದ ವೇದಮೂರ್ತಿ ಶ್ರೀ ಹರಿದಾಸ ಉಡುಪರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಧಾರ್ಮಿಕ ಸತ್ಕರ್ಮದಲ್ಲಿ ಎಕ್ಕಾರು ಕೊಡಮಂದಾಯ ದೈವಸ್ಥಾನದ ಆಡಳಿತ ಮೊಕ್ತೇಸರರಾದ ನಿತಿನ್ ಹೆಗ್ಡೆ ಕಾವರ ಮನೆ, ಮೊಕ್ತೇಸರರುಗಳಾದ ನಡ್ಯೋಡಿಗುತ್ತು ರಾಮಮುದ್ದ, ಗೋಪಾಲ ಶೆಟ್ಟಿ ಬಡಕೆರೆ ಬಾಳಿಕೆ, ಬಾಬು ಭಂಡಾರಿ ಮೇಗಿನ ಮನೆ ಹಾಗೂ ಎಕ್ಕಾರು ನಾಲ್ಕುಕರೆ, ಮೂವತ್ತೆರಡು ವರ್ಗ, ಊರ ಪರವೂರ ದೈವಭಕ್ತರು ಪಾಲ್ಗೊಳ್ಳಲಿರುವರು. ಮೇ೧೮ರಂದು ದೈವದರ್ಶನ, ಅನ್ನಸಂತರ್ಪಣೆ, ಮೈಸಂದಾಯ ನೇಮ, ಸತ್ಯದೇವತೆ ಕೋಲ ಹಾಗೂ ಕೊಡಮಂದಾಯ ನೇಮ ಜರಗಲಿದೆ. ಮೇ೧೯ರಂದು ಕಾಂತೇರಿ ಜುಮಾದಿ, ೨೦ರಂದು ಜಾರಂದಾಯ, ೨೧ರಂದು ಸಾರಾಳ ಜುಮಾದಿ, ೨೨ರಂದು ಪಿಲಿಚಾಮುಂಡಿ ನೇಮ ಮತ್ತು ಕಲ್ಲುರ್ಟಿ ಪಂಜುರ್ಲಿ ಕೋಲ ನಡೆಯಲಿದೆ. ದೈವಗಳ ಸಿರಿಬಂಗಾರದ ನರ್ತನ ಸೇವೆಯನ್ನು ಹೆಚ್ಚಿನ ಸಂಖ್ಯೆಯ ಊರ ಪರವೂರ ಬಂಧುಗಳು ವೀಕ್ಷಿಸಲು ಅನುಕೂಲ ಆಗುವ ದೃಷ್ಟಿಯಿಂದ ಪ್ರತಿದಿನ ಸಂಜೆ ಐದು ಗಂಟೆಗೆ ಎಣ್ಣೆ ಬೂಳ್ಯ ನೀಡಿ ಏಳು ಗಂಟೆಗೆ ಗಗ್ಗರ ದೆಚ್ಚಿ ಒಂಬತ್ತು ಗಂಟೆಗೆ ಮಾನ್ಯೆಚ್ಚಿ ಹಾಗೂ ಸುಮಾರು ೧೧ ಗಂಟೆಗೆ ನೇಮದೆಚ್ಚಿ ನಡೆಸಲಾಗುವುದು. ಸುದ್ದಿಗೋಷ್ಠಿಯಲ್ಲಿ ಎಕ್ಕಾರು ನಡ್ಯೋಡಿಗುತ್ತು ರಾಮ ಮುದ್ದ, ಇ.ಟಿ.ಶೆಟ್ಟಿ, ಸುಧಾಕರ ಪೂಂಜ, ಶಿವಾನಂದ ಶೆಟ್ಟಿ ಉಪಸ್ಥಿತರಿದ್ದರು.
Tagged with
briefs
ನವದೆಹಲಿ: ದಿಲ್ಲಿಯಲ್ಲಿ ೨೯ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ‘ದೆಹಲಿ ಕನ್ನಡಿಗ’ ಪತ್ರಿಕೆ ಆಶ್ರಯದಲ್ಲಿ ನಡೆದ ಈ ಸಮ್ಮೇಳನದಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ ಗಳು, ಕವಿಗೋಷ್ಠಿ, ಮಹಿಳಾ ಉತ್ಸವ, ಸಂಗೀತ, ನೃತ್ಯ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪುಸ್ತಕ ಪ್ರದರ್ಶನ ಹಮ್ಮಿ ಕೊಳ್ಳಲಾಗಿತ್ತು. ಸಮ್ಮೇಳನದ ವಿವಿಧ ಕಾರ್ಯಕ್ರಮಗಳನ್ನು ಪ್ರಖ್ಯಾತ ಸಂಗೀತಗಾರ ಡಾ.ಕೆ.ವಾಗೀಶ್, ವಿಜಯಾ ಬ್ಯಾಂಕ್ ಉಪ ಮಹಾ ಪ್ರಬಂಧಕ ಕೆ.ಎಂ. ಶೇಖರ್, ದಿಲ್ಲಿ ವಿ.ವಿ.ಯ ಮಾಜಿ ಹಿರಿಯ ಕನ್ನಡ ಪ್ರಾಧ್ಯಾಪಕಿ ಡಾ.ಕೆ.ವಿನೋದಾ ಬಾಯಿ, ಕವಯಿತ್ರಿ ಶ್ರೀಮತಿ ಡಾ.ಕೆ. ಸರಸ್ವತಿ ಜಿಮ್ಮಲಗಿ, ಲೇಖಕಿ ಶ್ರೀಮತಿ ವಿಜಯ ನಂದೀಶ್ವರ ಅವರು ಉದ್ಘಾ ಟಿಸಿದರು. ಡಾ.ಗೀತಾ ಬಾಲಿ ದೀಪ ಬೆಳಗಿಸಿ ಸಮ್ಮೇಳನ ಉದ್ಘಾಟಿಸಿದರು. ಬಾ.ಸಾಮಗ, ಡಾ.ಕೆ.ವಾಗೀಶ್, ಪ್ರೊ. ಕೆ.ಆರ್.ಕಾಮತ್ ಎಸ್.ಎಂ.ಸ್ವಾತಿ, ಪ್ರದೀಪ್ ಕುಮಾರ್ ಕಲ್ಕೂರ, ಕೆ.ಎಂ.ಶೇಖರ್ ಉಪಸ್ಥಿತರಿದ್ದರು.
Tagged with
briefs
ಮಂಗಳೂರು: ದ.ಕ.ಜಿಲ್ಲಾ ಕಾರ್ಮಿಕ ಪರಿಷತ್(ರಿ) ಬಸ್ ನೌಕರರ ಸಂಘದ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಕಾರ್ಮಿಕ ಸಂಘದ ಅಧ್ಯಕ್ಷ ಐವನ್ ಡಿಸೋಜಾರವರ ನೇತೃತ್ವದಲ್ಲಿ ಆಚರಿಸಲಾಯಿತು. ಕಾರ್ಮಿಕರಿಗೆ ಸಲ್ಲಬೇಕಾದ ಸವಲತ್ತುಗಳನ್ನು ನೀಡಲು ಮಾಲಿಕನು ಹಿಂದೇಟು ಹಾಕುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುತ್ತದೆ. ಮಾಲಿಕ ಬೆಳೆಯಬೇಕಾದರೆ ಕಾರ್ಮಿಕರ ಶ್ರಮ ಬೇಕಾಗುವುದು ಎಂಬುದನ್ನು ಮಾಲಿಕರು ಮರೆತಿರುವುದು ವಿಷಾದನೀಯ ಎಂದು ಐವನ್ ಡಿಸೋಜಾ ತಿಳಿಸಿದರು. ಕಾರ್ಮಿಕರು ಸೇರಿಕೊಂಡು ಮಂಗಳೂರಿನ ಲೇಡಿ ಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ೩೦೦ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು. ಈ ಸಂದರ್ಭದಲ್ಲಿ ಬಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಡಿ.ಅಂಚನ್ ಸ್ವಾಗತ ಭಾಷಣ ಮಾಡಿದರು. ಕೋಶಾಧಿಕಾರಿ ಜೆ.ಡಿ.ಅಪ್ಪುಸ್ವಾಮಿ ವಂದನಾರ್ಪನೆ ಗೈದರು.
ರವಿ ಕುಕ್ಯಾನ್ ಕಾಟಿಪಳ್ಳ, ಅಜೀಜ್ ಕೃಷ್ಣಾಪುರ, ರಿಯಾಜ್ ಕಾಟಿಪಳ್ಳ , ಗೋಪಾಲ ಹೊನ್ನಕಟ್ಟೆ, ಲೋಕೇಶ್ ಜಪ್ಪಿನಮೊಗರು, ಕೀರ್ತಿ ಜೋಕಟ್ಟೆ, ಶೇಖರ್ ಬಳ್ಳಾಲ್‌ಬಾಗ್, ವಾಲ್ಟರ್ ಡಿಸೋಜಾ ಬೋಳಾರ್, ಪ್ರಸಾದ ಕಟ್ಲ, ರಜಾಕ್ ಚೇಳಾgರು, ರಘು ಕುಲಶೇಖರ ಮೊದಲಾದವರು ಈ ವೇಳೆಯಲ್ಲಿ ಉಪಸ್ಥಿತರಿದ್ದರು.
Tagged with
briefs
ಮಂಗಳೂರು: ‘eಪಕ ವೃದ್ಧಿ ಮತ್ತು ಕಲಿಕಾ ತಂತ್ರಗಾರಿಕೆ ಹಾಗೂ ಪರೀಕ್ಷೆಗಳನ್ನು ಎದುರಿಸುವ ಬಗೆ ಹೇಗೆ’ ಎಂಬ ವಿಷಯದ ಬಗ್ಗೆ ಕಾರ್ಯಗಾರ ಬ್ರಿಲಿಯಂಟ್ ಪದವಿಪೂರ್ವ ಕಾಲೇಜ್ ನಲ್ಲಿ ನಡೆಯಿತು. ಕಾರ್ಪೊರೇಶನ್ ಬ್ಯಾಂಕ್‌ನ ಸಿಬಂದಿ ತರಬೇತಿ ಕಾಲೇಜಿನ ತರಬೇತುದಾರರಾದ ಅಡ್ಡೂರು ಕೃಷ್ಣರಾವ್ ಮತ್ತು ಹಿರಿಯ ತರಬೇತುದಾರರಾದ ಹೆಚ್.ಎಸ್ ವಿಶ್ವನಾಥರವರು ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ನಡೆಸಿ ಕೊಟ್ಟರು. ಸುಮಾರು ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು. ಶ್ರೀವಿದ್ಯಾ ಎಜುಕೇಶನ್ ಪೌಂಡೇ ಶನ್‌ನ ಅಧ್ಯಕ್ಷರಾದ ಚಾರ್ಟರ್ಡ್ ಎಕೌಂಟೆಂಟ್ ಟಿ.ರಾಮಮೋಹನ್ ರೈ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ವೈ.ವಿ.ರತ್ನಾಕರ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಉಪನ್ಯಾಸಕಿ ಭೂಮಿಕಾ ಪಟೇಲ್ ಕಾರ್ಯಕ್ರಮ ನಿರೂಪಿಸಿ ವಂದನಾ ರ್ಪಣೆ ಮಾಡಿದರು.
Tagged with
briefs
ಮೂಡುಬಿದಿರೆ: ಕೇವಲ ಹತ್ತು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ನವವಧು ಓರ್ವಳು ತನ್ನ ಪತಿಯ ಸಹೋದರನ ಮದುವೆ ದಿನದಂದೇ ನಾಪತ್ತೆಯಾದ ಪ್ರಕರಣ ಮೂಡುಬಿದಿ ರೆಯಲ್ಲಿ ನಡೆದಿದೆ.
ಈ ರೀತಿ ನಾಪತ್ತೆಯಾದವಳು ಮೈಸೂರಿನ ಹೆಚ್.ಡಿ.ಕೋಟೆಯ ಕನ್ಯಾಕುಮಾರಿ(೧೯). ಕನ್ಯಾಕುಮಾರಿ ಯನ್ನು ಹೊಸಬೆಟ್ಟು ಗುತ್ತು ನಿವಾಸಿ ಬಾಬು ಕಡಂಬರವರ ಪುತ್ರ ಉದಯ ಕುಮಾರ್ ಕಳೆದ ಎಪ್ರಿಲ್ ೨೬ರಂದು ಮದುವೆಯಾಗಿದ್ದರು.
ಮೇ ೬ರಂದು ಉದಯಕುಮಾರ್ ಅವರ ತಮ್ಮನ ಮದುವೆ ಬೆಳುವಾ ಯಿಯ ಕೆಸರಗದ್ದೆ ಹಾಲ್‌ನಲ್ಲಿ ನಡೆ ಯಲಿತ್ತು. ಆದಿನ ಗಂಡನ ಮನೆ ಮಂದಿಯೊಂದಿಗೆ ಮದುವೆಗೆಂದು ಆಗಮಿಸಿದ್ದ ಕನ್ಯಾಕುಮಾರಿ ಆ ಬಳಿಕ ನಾಪತ್ತೆಯಾಗಿದ್ದಾರೆಂದು ಉದಯಕುಮಾರ್ ಅವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.
ಕನ್ಯಾಕುಮಾರಿ ಪ್ರೇಮ ಪ್ರಕರಣದಿಂದ ನಾಪತ್ತೆಯಾಗಿರಬಹುದಾ ಅಥವಾ ಬೇರಾವುದೋ ಕಾರಣದಿಂದ ನಾಪತ್ತೆಯಾಗಿರಬಹುದಾ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಮೂಡುಬಿದಿರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Tagged with
cnews,
missing
ಪಡುಬಿದ್ರಿ: ಹೆಜಮಾಡಿಯಲ್ಲಿರು ಪ್ರಾಥಮಿಕ ಆರೋಗ್ಯ ಉಪಕೇಂದ್ರದ ವಸತಿಗೃಹಕ್ಕೆ ಸೋಮವಾರ ರಾತ್ರಿ ಒಳ ನುಗ್ಗಿದ ಕಳ್ಳರು ಚಿನ್ನಾಭರಣ ಕಳವುಗೈದ ಘಟನೆ ಬಗ್ಗೆ ಮಂಗಳವಾರ ಬೆಳಕಿಗೆ ಬಂದಿದೆ.
ಹೆಜಮಾಡಿ ಗಾ.ಪಂ. ಕಚೇರಿ ಬಳಿ ಇರುವ ಆರೋಗ್ಯ ಕೇಂದ್ರದ ವಸತಿ ಗೃಹದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ನರ್ಸ್ ಗೀತಾ ವಸಂತ್‌ರವರು ವಾಸವಾಗಿದ್ದಾರೆ. ಅವರು ಶುಕ್ರವಾರ ಸಂಜೆ ಮನೆಗೆ ಬೀಗ ಹಾಕಿ ಹೊಸಂಗಡಿಯಲ್ಲಿರುವ ಗಂಡನ ಮನೆಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಮನೆಗೆ ಮರಳಿದಾಗ ಕಳ್ಳತನ ನಡೆಸಿರುವುದು ಗೊತ್ತಾಗಿದೆ. ಈ ಎಲ್ಲಾ ಸೊತ್ತುಗಳ ಮೌಲ್ಯ ೪೭ಸಾವಿರ ರೂ. ಎಂದು ಪೊಲೀಸರು ಅಂದಾಜಿಸಿದ್ದಾರೆ. ವೃತ್ತ ನಿರೀಕ್ಷಕ ಶಿವಾನಂದ ವಾಲೇಕರ್, ಪಡುಬಿದ್ರಿ ಠಾಣಾಧಿಕಾರಿ ಮಹದೇವ ಶೆಟ್ಟಿ ಘಟನಾ ಸ್ಥಳಕ್ಕೆ ಬೇಟಿ ನೀಡಿ, ಬೆರಳಚ್ಚು ತಜ್ಞರನ್ನು ಹಾಗೂ ಶ್ವಾನದಳ ಕರೆಸಿ ಪರೀಶೀಲನೆ ನಡೆಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews
ಸುಳ್ಯ: ಅಮರಪಡ್ನೂರು ಗ್ರಾಮದ ಶೇಣಿ ಎಂಬಲ್ಲಿ ಸೋಮವಾರ ರಾತ್ರಿ ಮ್ಯಾಕ್ಸಿಕ್ಯಾಬ್‌ಗೆ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾರೆ.
ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಕೋನಡ್ಕ ನಿವಾಸಿ ಕೃಷ್ಣಪ್ಪ ಯಾನೆ ರಾಮ ನಾಯ್ಕ(೪೫) ಮೃತಪಟ್ಟ ವರು. ಅವರು ಚಂದ್ರಶೇಖರ ಎಂಬವರ ಬೈಕ್‌ನಲ್ಲಿ ಸಂಬಂಧಿಕರ ಮನೆಯಾದ ಶೇಣಿಗೆ ಬರುತ್ತಿದ್ದಾಗ ಸವಾರನ ನಿಯಂತ್ರಣ ತಪ್ಪಿದ ಬೈಕ್ ಎದುರಿನಿಂದ ಬರುತ್ತಿದ್ದ ಮ್ಯಾಕ್ಸಿಕ್ಯಾಬ್‌ಗೆ ಡಿಕ್ಕಿ ಹೊಡೆದಿದೆ. ರಸ್ತೆಗೆ ಎಸೆಯಲ್ಪಟ್ಟ ಕೃಷ್ಪಪ್ಪರನ್ನು ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಅವರು ಮೃತ ಪಟ್ಟಿದ್ದಾರೆ.
Tagged with
cnews
ಸುರತ್ಕಲ್: ರಸ್ತೆ ಬದಿ ಮಲಗಿದ್ದ ಲಾರಿ ಕ್ಲೀನರ್ ಮೇಲೆ ಜೆಸಿಬಿ ಡೋಜರ್ ಹರಿದ ಪರಿಣಾಮ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಣಂಬೂರು ಕುದುರೆಮುಖ ಕಂಪೆನಿಗೆ ಆಂಧ್ರಪ್ರದೇಶದಿಂದ ಸರಕನ್ನು ಹೊತ್ತು ತಂದಿದ್ದ ಲಾರಿಯನ್ನು ಚಾಲಕ ಸರಕು ಖಾಲಿ ಮಾಡಿದ ಬಳಿಕ ತಣ್ಣೀರು ಬಾವಿಗೆ ಸಾಗುವ ರಸ್ತೆ ಪಕ್ಕ ನಿಲ್ಲಿಸಿ ತಾನು ಲಾರಿ ಕ್ಯಾಬಿನಿನ ಮೇಲೆ ಮಲ ಗಿದ್ದ. ಲಾರಿಯ ಕ್ಲೀನಿಂಗ್ ಕೆಲಸ ಮುಗಿ ಸಿದ ಕ್ಲೀನರ್ ಆಂಧ್ರಮೂಲದ ಅಲ್ಲಾ ಭಕ್ಷಿ ಶೇಖ್ ಎಂಬಾತ ಲಾರಿ ಪಕ್ಕ ರಸ್ತೆ ಬದಿ ಮಲಗಿದ್ದ. ಕೆಲ ಹೊತ್ತ್ತಲ್ಲೇ ಜೆಸಿಬಿ ಡೋಸರ್‌ನ್ನು ಚಲಾಯಿಸಿಕೊಂಡು ಬಂದಿದ್ದ ಆರೋಪಿ ಸಂಗಮೇಶ ಎಂಬಾತ ಶೇಖ್ ಮೇಲೆ ಡೋಸರ್ ಚಲಾಯಿಸಿದ್ದ. ಪರಿಣಾಮ ಗಾಢ ನಿದ್ರೆಯಲ್ಲಿದ್ದ ಭಕ್ಷಿ ಚಿರನಿದ್ರೆಗೆ ಜಾರಿದ್ದಾನೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Tagged with
cnews
ಕಡಬದಲ್ಲೊಂದು ವಿವಾಹಿತರ ಪ್ರೇಮಾಯಣ
ಉಪ್ಪಿನಂಗಡಿ: ಗಂಡ ಹೊಟ್ಟೆ ಪಾಡಿಗಾಗಿ ವಿದೇಶಕ್ಕೆ ಉದ್ಯೋಗವನ್ನ ರಸಿ ಹೋಗಿದ್ದು ಇತ್ತ ಪತ್ನಿ ರಿಕ್ಷಾ ಚಾಲಕನೊಂದಿಗೆ ಪ್ರೇಮಾಯಣ ನಡೆಸಿ ಸ್ಥಳೀಯರಿಗೆ ಸಿಕ್ಕಿಬಿದ್ದು ಕೊನೆಗೆ ಗಂಡನಿಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಡಬ ಸಮೀಪದ ಪೆರಾಬೆ ಗ್ರಾಮದ ಬಂಗ್ಲಗುಡ್ಡೆಯಿಂದ ವರದಿ ಯಾಗಿದೆ.
ಆರೋಪಿ ರಿಕ್ಷಾ ಚಾಲಕ ಆದಂ ಬ್ಯಾರಿಯ ಪುತ್ರ, ಎರಡು ಮಕ್ಕಳ ತಂದೆ ಯಾಗಿರುವ ಇಸುಬು(೩೫) ಎನ್ನಲಾ ಗಿದ್ದು, ಆರೋಪಿತ ಮಹಿಳೆ ವಿದೇಶ ದಲ್ಲಿರುವ ಬಂಗ್ಲಗುಡ್ಡೆಯ ನಿವಾಸಿ ಪತ್ನಿ ಹಾಗೂ ಎರಡು ಮಕ್ಕಳ ತಾಯಿ ಎಂದು ಗುರುತಿಸಲಾಗಿದೆ. ಇವರ ಈ ಅನೈತಿಕ ಸಂಬಂಧವು ಸುಮಾರು ಕಳೆದ ಎರಡು ವರ್ಷಗಳಿಂದ ನಡೆಯುತ್ತಿತ್ತು ಎಂದು ಸಂಶಯಿಸಲಾಗಿದೆ. ಈ ಸಂಬಂಧ ಮಹಿಳೆಯ ಗಂಡನ ಅಣ್ಣನ ಮಕ್ಕಳಿಗೆ ಈ ಮೊದಲೇ ಆಕೆಯ ನಡವಳಿಕೆಯ ಬಗ್ಗೆ ಮೇಲೆ ಸಂಶಯಿತರಾಗಿ ಮೇ ೬ರಂದು ರಾತ್ರಿ ವೇಳೆ ಮಹಿಳೆಯ ಮನೆಗೆ ದಿಢೀರ್ ದಾಳಿ ಮಾಡಿದ್ದರು. ಈ ವೇಳೆ ತನ್ನ ಮೊಬೈಲನ್ನು ಮಂಚದಲ್ಲೇ ಬಿಟ್ಟು ಆರೋಪಿ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದ ಎನ್ನಲಾಗಿದೆ. ಈತನನ್ನು ಮೇ ೭ರಂದು ಹಿಡಿದು ಕಡಬ ಠಾಣೆಗೆ ಹಾಜರು ಪಡಿಸಲಾಗಿತ್ತು. ಆದರೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಮಹಿಳೆಯನ್ನು ಮೇ ೬ ರಂದು ತನ್ನ ತಾಯಿ ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಮಹಿಳೆ ಗಂಡನಿಗೆ ಹೆದರಿ ಮೇ ೭ರಂದು ಆತ್ಮಹತ್ಯೆಗೆ ಯತ್ನಿಸಿ ಇದೀಗ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ ಎಂದು ತಿಳಿದು ಬಂದಿದೆ.
Tagged with
cnews
ಪುತ್ತೂರು: ಕುಂಬ್ರ ಕಾಲೇಜಿನ ಸಿಬ್ಬಂದಿ ಕುಂಬ್ರ ಸಮೀಪದ ಉರುವ ನಿವಾಸಿ ಮಲ್ಲಿಕಾ ರೈ(೨೪) ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಮಂಗಳೂರಿನ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಸ್ಥಳೀಯ ನಿವಾಸಿಯೋರ್ವನನ್ನು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ತಿಳಿದುಬಂದಿದೆ. ಕೆದಂಬಾಡಿ ತಿಂಗಳಾಡಿ ನಿವಾಸಿ ಅಮರನಾಥ್ ರೈ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಿಡುಗಡೆಗೊಳಿಸಿದ್ದಾರೆನ್ನಲಾಗಿದೆ. ಕುಂಬ್ರ ಸ.ಪ.ಪೂ. ಕಾಲೇಜಿನಲ್ಲಿ ಕಳೆದ ಒಂದು ವರ್ಷದಿಂದ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಲ್ಲಿಕಾ ಎ.೨೯ ರಂದು ಭಾನುವಾರ ಮನೆ ಸಮೀಪದ ಖಾಲಿ ಮನೆಯೊಂದರ ಜಗುಲಿಯಲ್ಲಿ ವಿಷ ಸೇವಿಸಿದ ರೀತಿ ಶವ ಪತ್ತೆಯಾಗಿತ್ತು. ಇದೊಂದು ನಿಗೂಢ ಪ್ರಕರಣ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದರು. ಮಲ್ಲಿಕಾ ಅವರು ಮೂಲತ: ಕೆಯ್ಯೂರು ಗ್ರಾಮದ ಕೋಡಂಬಿನಲ್ಲಿ ವಾಸವಾಗಿದ್ದವರು ಕಳೆದ ಒಂದು ವರ್ಷದ ಹಿಂದೆ ಕುಂಬ್ರದಲ್ಲಿದ್ದ ಮನೆಯೊಂದನ್ನು ಖರೀದಿಸಿದ್ದರು. ತಾಯಿ ಮೂರು ವರ್ಷಗಳ ಹಿಂದೆ ಕೆರೆಗೆ ಬಿದ್ದು ಸಾವನ್ನಪ್ಪಿದ್ದರೆ, ತಂದೆ ಮಕ್ಕಳನ್ನು ಬಿಟ್ಟು ತೆರಳಿದವರು ಬಳಿಕ ಪತ್ತೆಯಾಗಿರಲಿಲ್ಲ.
ಉರುವದ ಮನೆಯಲ್ಲಿ ತನ್ನ ಅಜ್ಜಿಯೊಂದಿಗೆ ವಾಸವಾಗಿದ್ದ ಮಲ್ಲಿಕಾ ಅಲ್ಲಿಂದ ಕಾಲೇಜಿಗೆ ತೆರಳುತ್ತಿದ್ದರು. ಸಾವಿನ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದರೂ, ಮನೆಮಂದಿ ದೂರು ದಾಖಲಿಸಿರಲಿಲ್ಲ. ಇದೀಗ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರಿಗೆ ಇಬ್ಬರು ಯುವಕರು ಮಲ್ಲಿಕಾರೊಂದಿಗೆ ಸಂಪರ್ಕ ಹೊಂದಿದ್ದರೆಂಬ ಮಾಹಿತಿಯಿದ್ದ ಹಿನ್ನೆಲೆಯಲ್ಲಿ ತಿಂಗಳಾಡಿ ನಿವಾಸಿ ಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಬಿಟ್ಟುಬಿಟ್ಟಿದ್ದಾರೆನ್ನಲಾಗಿದೆ. ಆದರೆ ಮಲ್ಲಿಕಾ ಶವದ ಬಳಿ ‘ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದ ಡೆತ್ ನೋಟ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.
Tagged with
cnews
ಮಂಗಳೂರು: ನಗರದ ಬಲ್ಮಠ ಪೆಟ್ರೋಲ್ ಬಂಕ್ ಆವರಣದ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕಳ್ಳತನ ನಡೆಸಲು ವಿಫಲಯತ್ನ ನಡೆಸಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರ್ಯಸಮಾಜ ರಸ್ತೆಯ ಖಲಂದರ್ ಶಾ(೨೮) ಬಂಧಿತ ಆರೋಪಿ. ಈತನ ಮುಖಚಹರೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಇದರಿಂದ ಆರೋಪಿಯನ್ನು ಪತ್ತೆಹಚ್ಚಲಾಗಿದೆ.
ಕಾಸರಗೋಡು: ವಿಷ ಸೇವಿಸಿ ಆತ್ಮಹತ್ಯೆ : ಕಾಸರಗೋಡು ಸಮೀಪದ ಮುಳ್ಳೇರಿಯ ನಿವಾಸಿ ಸುರೇಶ್ ರಾವ್(೪೭) ನಿನ್ನೆ ಮನೆಯಲ್ಲೇ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಸಾವಿಗೆ ಸಕಾರಣ ತಿಳಿದುಬಂದಿಲ್ಲ.
Tagged with
cnews
ಮಂಗಳೂರು: ೧೫ ದಿನಗಳ ಹಿಂದೆ ಬಜಾಲ್‌ನಲ್ಲಿ ನಡೆದ ಕೋಣ ಹತ್ಯಾಯತ್ನ ಪ್ರಕರಣಕ್ಕೆ ಸಂಬಂz sಪಟ್ಟು ತಲೆಮರೆಸಿಕೊಂಡಿದ್ದ ಆರೋ ಪಿಯನ್ನು ನಿನ್ನೆ ಕಂಕನಾಡಿ ಪೊಲೀ ಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಬಜಾಲ್ ಜಲ್ಲಿಗುಡ್ಡೆ ನಿವಾಸಿ ಸಲೀಂ ಬಂಧಿತ ಆರೋಪಿ. ಕಳೆದ ತಿಂಗಳು ೨೧ರಂದು ರಾತ್ರಿ ಬಜಾಲ್ ನಿವಾಸಿ ಅಶ್ರಫ್ ಎಂಬವರ ಮನೆಯಂಗಳದಲ್ಲಿ ಕಟ್ಟಿಹಾಕಲಾಗಿದ್ದ ಕಂಬಳದ ಕೋಣವನ್ನು ಆರೋಪಿ ಗಳಾದ ನಾಸಿರ್ ಮತ್ತು ಸಲೀಂ ಕದ್ದುಕೊಂಡು ಹೋಗಿ ಮಾಂಸ ಮಾಡಲು ಯತ್ನಿಸಿದ್ದರು.
ಕುತ್ತಿಗೆಯನ್ನು ಕೊಯ್ಯಲು ಪ್ರಯತ್ನಿಸುತ್ತಿದ್ದಾಗಲೇ ಕೋಣ ಕಟುಕರ ಕೈಯಿಂದ ತಪ್ಪಿಸಿಕೊಂಡು ಬಜಾಲ್‌ಗೆ ಬಂದು ನೋವಿನಿಂದ ಅರಚುತ್ತಾ ತಿರುಗಾಡುತ್ತಿತ್ತು. ಈ ಬಗ್ಗೆ ಮಾಹಿತಿಯರಿತ ಮಾಲೀಕ ಕೋಣ ವನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿ ಸಿದ್ದರು. ಪ್ರಕರಣ ದಾಖಲಿಸಿದ್ದ ಕಂಕನಾಡಿ ಪೊಲೀಸರು ಈಗಾಗಲೇ ಆರೋಪಿ ನಾಸಿರ್‌ನನ್ನು ಬಂಧಿಸಿದ್ದರು.
Tagged with
cnews
ಮಂಗಳೂರು: ಮಹಿಳೆಯೋ ರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಜತ್ತಬೈಲ್ ಜ್ಯೋತಿನಗರದಲ್ಲಿ ಮೇ ೬ರಂದು ಸಂಜೆ ನಡೆದ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳೀಯ ನಿವಾಸಿ ಶಂಕರ ಕುಂಞಿ ನಾಯರ್ ಎಂಬವರ ಪತ್ನಿ ಶಾಂತಮ್ಮ (೪೯)ಮೃತ ಮಹಿಳೆ. ನೆರಮನೆಯ ವರೊಂದಿಗೆ ಜಗಳ ಆಗಿತ್ತೆನ್ನಲಾಗಿದ್ದು ಇದೇ ಕೋಪದಲ್ಲಿ ಕೋಣೆಯೊಳಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Tagged with
cnews
ಮಂಗಳೂರು: ಒಂದು ದಶಕದ ಹಿಂದೆ ನಡೆದಿದ್ದ ಕರ್ನಾಟಕ ಬ್ಯಾಂಕ್ ಅಧಿಕಾರಿಯ ಹತ್ಯಾ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
೨೦೦೧ ನೇ ಎಪ್ರಿಲ್ ೨ರಂದು ಕರ್ನಾಟಕ ಬ್ಯಾಂಕ್ ಕೋಡಿಯಾಲ್ ಬೈಲ್ ಶಾಖೆಯ ಅಧಿಕಾರಿಯನ್ನು ಇಲ್ಲಿನ ಆರ್ಮ್‌ಡ್ ಸೆಕ್ಯೂರಿಟಿ ಗಾರ್ಡ್ ಉದ್ದೇಶ ಪೂರ್ವಕವಾಗಿ ಗುಂಡು ಹಾರಿಸಿ ಹತ್ಯೆಗೈದಿದ್ದ. ಕೆಲಸ ಸರಿಯಾಗಿ ನಿರ್ವಹಿಸದ ತನ್ನನ್ನು ಬೇರೊಂದು ಶಾಖೆಗೆ ಬಂದೂಕು ರಹಿತವಾದ ಗಾರ್ಡ್ ಕೆಲಸಕ್ಕೆ ನಿಯುಕ್ತಿ ಗೊಳಿಸಲು ಚಿಂತನೆ ನಡೆಸಿದ್ದಾರೆ ಎಂಬ ಕಾರಣಕ್ಕೆ ಆರೋಪಿ ಈ ಕೃತ್ಯ ಎಸಗಿದ್ದ.
೨೦೦೧ರಲ್ಲಿ ಕರ್ನಾಟಕ ಬ್ಯಾಂಕ್ ಕೋಡಿಯಾಲ್ ಬೈಲ್ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬ್ಯಾಂಕಿನ ವಿಶೇಷ ಸಹಾಯಕ ಅಧಿಕಾರಿಯಾಗಿದ್ದ ಯು. ರಾಮಕೃಷ್ಣ ಅವರನ್ನು ಇದೇ ಬ್ಯಾಂಕಿನಲ್ಲಿ ಬಂದೂಕು ಸಹಿತ ಸೆಕ್ಯೂರಿಟಿಗಾರ್ಡ್ ಆಗಿದ್ದ ಮಾಜಿ ಸೈನಿಕ ಸುಧಾಕರ್ ಎಂಬಾತ ಹತ್ತಿರದಿಂದ ಗುಂಡು ಹಾರಿಸಿ ಹತ್ಯೆ ನಡೆಸಿದ್ದನಲ್ಲದೆ ಈತನನ್ನು ಹಿಡಿಯಲು ಬಂದವರಿಗೂ ಬಂದೂಕು ತೋರಿಸಿ ಬೆದರಿಕೆ ಒಡ್ಡಿ ಪರಾರಿಯಾಗಿದ್ದ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಮಕೃಷ್ಣ ಅವರು ಸಂಜೆ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಹೀಗಾಗಿ ಬಂದರು ಠಾಣಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಲ್ಲದೆ ಅಂದೇ ಸಂಜೆ ಆತನನ್ನು ಉರ್ವ ಮಾರಿಗುಡಿ ಬಳಿ ಬಂಧಿಸಿದ್ದರು.
೨೦೦೧ರ ಜೂನ್‌ನಲ್ಲೇ ಆರೋಪಿ ವಿರುದ್ಧ ದೋಷಾ ರೋಪಣಾ ಪತ್ರ ಸಲ್ಲಿಸಲಾಗಿತ್ತು. ಘಟನೆಯು ಆರೋಪಿ ಮಾನಸಿಕ ಅಸ್ವಸ್ಥನಾದ ಕಾರಣದಿಂದ ನಡೆದಿದೆ. ಆತನಿಗೆ ತಾನೇನು ಮಾಡುತ್ತಿದ್ದೆನೆಂಬ ಅರಿವಿರಲಿಲ್ಲ ಇದು ಆಕಸ್ಮಿಕ ಘಟನೆ ಎಂದು ಆರೋಪಿ ಪರ ವಕೀಲರು ವಾದಿಸಿದ ಕಾರಣ ವಿಚಾರಣೆ ಸುದೀರ್ಘವಾಗಿ ನಡೆದಿತ್ತು. ಆದರೂ ಸರಕಾರಿ ವಕೀಲರು ಆರೋಪಿ ಸ್ವಸ್ಥ ವ್ಯಕ್ತಿ ಎಂದು ಸಾಕ್ಷಿ ನೀಡಿದ ಕಾರಣ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
Tagged with
cnews
ಉಡುಪಿ: ಹೆರ್ಗಾ ಗ್ರಾಮದ ಸರಳೇಬೆಟ್ಟುವಿನಲ್ಲಿರುವ ಹೈ ಪಾಯಿಂಟ್ ಅಪಾರ್ಟ್‌ಮೆಂಟ್‌ನ ರೂಂ ನಂ. ೧೦೩ ಕ್ಕೆ ಮಂಗಳವಾರ ದಾಳಿ ನಡೆಸಿದ ಮಣಿಪಾಲ ಠಾಣೆಯ ಪೊಲೀಸರು, ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ‍್ಸ್ ನಡುವೆ ನಡೆದ ಐಪಿಎಲ್ ಪಂದ್ಯಾಟದ ಹೆಸರಲ್ಲಿ ಹಣವಿಟ್ಟು ಜೂಜಾಟ ಆಡುತ್ತಿದ್ದ ನಾಲ್ಕು ಯುವಕ ರನ್ನು ಬಂಧಿಸಿದ್ದಾರೆ. ಹೈ ಪಾಯಿಂಟ್ ಅಪಾರ್ಟ್‌ಮೆಂಟ್ ನಿವಾಸಿಗಳಾದ ನಿಶಾಂತ್ ಕುಮಾರ್ (೨೦), ಅಭಿನವ್ ಆನಂದ್ (೧೯), ಸಚಿನ್ ಮಹಾಪಾತ್ರ (೨೦) ಹಾಗೂ ಮಣಿಪಾಲದ ಎಂಐಟಿ ಹಾಸ್ಟೇಲ್ ನಿವಾಸಿ ಗೌರವ್ ಕುಮಾರ್ (೧೯) ಎಂಬವರೇ ಬಂಧಿತರು.
ಬಂಧಿತರಿಂದ ಜೂಜಾಡಲು ಉಪಯೋಗಿಸಿದ ಟಿವಿ, ಲ್ಯಾಪ್‌ಟಾಪ್, ೫ ಮೊಬೈಲ್ ಹ್ಯಾಂಡ್‌ಸೆಟ್, ಪುಸ್ತಕ, ಪೆನ್ ಮತ್ತು ನಗದು ೮,೬೬೦ ರು.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಐಪಿಎಲ್ ಜೂಜಾಟಕ್ಕೆ ಸಂಬಂಧಿಸಿದಂತೆ ದಾಖಲಾದ ನಾಲ್ಕನೇ ಪ್ರಕರಣ ಇದಾಗಿದೆ. ಈ ಹಿಂದೆ ಕಾರ್ಕಳದಲ್ಲಿ ಒಂದು ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿತ್ತು.
Tagged with
cnews
ಮೂಡುಬಿದಿರೆ: ಸೋಂಕಿನಿಂದಾಗಿ ಮೂರು ತಿಂಗಳ ಬಾಣಂತಿಯೊಬ್ಬರು ಸಾವನ್ನಪ್ಪಿದ ಘಟನೆ ಮೂಡುಬಿದಿರೆಯ ಇರುವೈಲಿನಲ್ಲಿ ನಡೆದಿದೆ.
ಮೂಡುಬಿದಿರೆ ಇರುವೈಲಿನ ಐವನ್ ಡಿ’ಕುನ್ಹಾ ಅವರ ಪತ್ನಿ ಮೇರಿ ಕುಟಿನ್ಹೋ ಮೃತಪಟ್ಟ ಮಹಿಳೆ. ಮೂರು ತಿಂಗಳ ಹಿಂದೆ ಇವರ ಹೆರಿಗೆಯಾಗಿದ್ದು, ಇದರ ಬಳಿಕ ಬಾಣಂತಿ ಸೋಂಕು ತಗಲಿತ್ತು ಎಂದು ತಿಳಿದುಬಂದಿದೆ. ಮೇರಿ ಅವರು ಜಿವಿ ಪೈ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ಮಗು ಮಾತ್ರ ಆರೋಗ್ಯವಾಗಿದೆ ಎಂದು ಮನೆಯವರು ತಿಳಿಸಿದ್ದಾರೆ.
Tagged with
cnews
ಮಂಗಳೂರು: ನಗರದ ಜ್ಯೋತಿ ಬಳಿಯ ಕೆಎಂಸಿ ಆಸ್ಪತ್ರೆಯ ನಾಲ್ಕನೆ ಮಹಡಿಯಿಂದ ಬಿದ್ದು ಪೈಂಟಿಂಗ್ ಕಾರ್ಮಿಕ ಮೃತಪಟ್ಟ ಬಗ್ಗೆ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಳಕೆಯ ಕೃಷ್ಣ ಪ್ರಭು ಎಂಬವರಿಗೆ ಸೇರಿದ ವಿನಾಯಕ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಯಲ್ಲಿ ಪೈಂಟಿಂಗ್ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸುಹಾನ್ ಮೃತ ವ್ಯಕ್ತಿ. ಮಧ್ಯಾಹ್ನ ೨:೪೫ರ ಸುಮಾರಿಗೆ ಕೆಎಂಸಿ ನಾಲ್ಕನೆ ಮಹಡಿ ಯಲ್ಲಿ ಬಣ್ಣ ಹಚ್ಚುವ ಕಾರ್ಯದಲ್ಲಿ ನಿರತನಾಗಿದ್ದ ಸುಹಾನ್ ಆತಪ್ಪಿ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದ ಆತನಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ಸಂಜೆ ಕೊನೆಯುಸಿರೆಳೆದ ಎಂದು ಆತನೊಂ ದಿಗೆ ಸಹ ಕಾರ್ಮಿ ಕನಾಗಿದ್ದ ಸುಹಾಸ್ ಎಂಬಾತ ದೂರಿನಲ್ಲಿ ತಿಳಿಸಿದ್ದಾನೆ.
Tagged with
cnews
ಮಂಗಳೂರು: ಉಳ್ಳಾಲ ಸಮೀಪದ ಮಾಸ್ತಿಕಟ್ಟೆ ಬಳಿ ಒಳಚರಂಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣು ಕುಸಿದ ಪರಿಣಾಮ ಯುವಕ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಬಂಟ್ವಾಳ ಗೂಡಿನಬಳಿ ನಿವಾಸಿ ಯೂಸುಫ್(೧೯) ಎಂದು ಹೆಸರಿಸಲಾಗಿದೆ. ಉಳ್ಳಾಲ ಪುರಸಭಾ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯೋಜನೆಯಡಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಮ್ಯಾನ್‌ಹೋಲ್ ನಿರ್ಮಾಣ ಮಾಡಲು ಗುಂಡಿಯಲ್ಲಿ ಕೆಲಸ ಮಾಡುತ್ತಿದ್ದ ಯೂಸುಫ್ ಮೇಲೆ ಮಣ್ಣು ಕುಸಿದು ಅವಘಡ ಸಂಭವಿಸಿದೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews
ಸುಳ್ಯ: ರಸ್ತೆ ಬದಿ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೇರ್ಪಳದಲ್ಲಿ ಮಂಗಳವಾರ ನಡೆದಿದೆ.
ಕೇರ್ಪಳದಲ್ಲಿ ಬಾಡಿಗೆ ಮನೆ ಮಾಡಿಕೊಂಡಿರುವ ಮೂಲತಃ ಅರಂಬೂರಿನ ನಿವಾಸಿಯಾದ ನಿತ್ಯಾನಂದ(೪೫) ವಿಪರೀತ ಅಮಲು ಸೇವಿಸಿ ರಸ್ತೆ ಬದಿ ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿ ತ್ತಾದರೂಅವರು ಮೃತಪಟ್ಟಿದ್ದಾರೆ.
Tagged with
cnews
ಕಾರ್ಕಳ: ಇಲ್ಲಿಗೆ ಸಮೀಪದ ಕುಕ್ಕುಂದೂರು ಜೋಡುರಸ್ತೆ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಸುಮಾರು ೭೫ ವರ್ಷ ವಯಸ್ಸಿನವರ ಶವ ಅದಾಗಿದ್ದು, ಕಳೆದ ಕೆಲ ದಿನಗಳಿಂದ ಇದೇ ಪರಿಸರದಲ್ಲಿ ಬಿಕ್ಷೆ ಬೇಡುತ್ತಿದ್ದರೆಂದು ತಿಳಿದುಬಂದಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
Tagged with
cnews
ಕಾರ್ಕಳ: ಹೆಬ್ರಿ ಸಮೀಪದ ಬಡಾ ಗುಡ್ಡೆ ಎಂಬಲ್ಲಿ ಪತ್ನಿಯಿಂದ ದೂರದ ಪತಿ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.
ಆನಂದ ಎಂಬಾತ ಕಳೆದ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ಕೌಟುಂಬಿಕ ಸಮಸ್ಯೆಯಿಂದಾಗಿ ಕಳೆದ ಒಂದು ವರ್ಷದ ಹಿಂದೆ ಪತ್ನಿಯಿಂದ ದೂರವಾಗಿದ್ದ. ಎರಡು ದಿನಗಳ ಹಿಂದೆ ಈತನ ತಾಯಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿಯೂ ಅವ ರನ್ನು ನೋಡಲಾಗಲಿಲ್ಲ ಎಂಬ ಕೊರಗು ಆನಂದನಲ್ಲಿತ್ತು. ಈ ಎಲ್ಲಾ ಕಾರಣ ದಿಂದಾಗಿ ಮಾನಸಿಕವಾಗಿ ನೊಂದು ಕೊಂಡಿದ್ದ ಆತ ಆತ್ಮಹ್ಯೆಗೈದಿದ್ದಾನೆ.
Tagged with
cnews
ಮಂಗಳೂರು: ಹೊಸದುರ್ಗಕ್ಕೆ ದೇವಳವನ್ನು ಸಂದರ್ಶಿಸಲು ಬಂದಿದ್ದ ಯುವಕನ ಮೃತದೇಹ ರಿಕ್ಷಾದಲ್ಲಿ ಪತ್ತೆಯಾಗಿದೆ. ಸಾವಿನ ಹಿನ್ನೆಲೆ ತಿಳಿದುಬಂದಿಲ್ಲ. ಪಯ್ಯನ್ನೂರು ನಿವಾಸಿ ದಿ.ನಾಮದೇವ ಕಾಮತ್ ಪುತ್ರ ಪ್ರಮೋದ್ ಕಾಮತ್(೨೯) ಮೃತಪಟ್ಟಿರುವಾತ.
Tagged with
cnews
ಮಂಗಳೂರು: ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರ ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ನಗರದ ನೀರ್‌ಮಾರ್ಗ-ಬೊಂಡಂತಿಲ ಪದವು ಎಂಬಲ್ಲಿ ನಡೆದಿದೆ.
ಸಮಯ ನ್ಯೂಸ್ ಚಾನೆಲ್‌ನಲ್ಲಿ ಕೆಲಸದಲ್ಲಿರುವ ಉಳ್ಳಾಲದ ದಿನೇಶ್ ನಾಯ್ಕ್ ಎಂಬವರೇ ಜೀವಬೆದರಿಕೆ ಯೊಡ್ಡಿದ ವ್ಯಕ್ತಿಯಾಗಿದ್ದಾರೆ. ಇವರ ಪತ್ನಿ ಪ್ರಜ್ಞಾ ಎಂಬವರು ಸುಕುಮಾರಿ ಎಂಬವರ ಮನೆಗೆ ಹೋಗಿದ್ದರೆನ್ನ ಲಾಗಿದೆ. ಅವರು ಅಲ್ಲೇ ಉಳಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿ ದಿನೇಶ್ ನಾಯ್ಕ್ ಪದವಿನ ಸುಕುಮಾರಿ ಅವರ ಮನೆಗೆ ಅಕ್ರಮ ಪ್ರವೇಶಗೈದು ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
Tagged with
cnews
ಮಂಗಳೂರು: ಕುಂದಾಪುರ ಸಮೀಪದ ಬೀಜಾಡಿ ಕೆನರಾ ಬ್ಯಾಂಕ್ ಎದುರುಗಡೆ ಸ್ಕೂಟರ್ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಿನ್ನೆ ನಡೆದಿದೆ.
ಬೈಕ್ ಸವಾರರಾದ ನಿವೃತ್ತ ಶಿಕ್ಷಕ ಪುಂಡಲೀಕ ಗಾಣಿಗ ಹಾಗೂ ಸಹಸವಾರ ಮಂಜುನಾಥ ಗಾಣಿಗ ಗಾಯಗೊಂಡವರು. ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಶಿಕ್ಷಕಿ ಶಾಲಿನಿ ವಕ್ವಾಡಿ ಹಾಗೂ ಮಾಲಿನಿ ಅವರಿಗೂ ಗಾಯಗಳಾಗಿದ್ದು, ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Tagged with
cnews
ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆಯಲ್ಲಿ ಭಾನುವಾರ ನಡೆದ ಪಿಕಪ್ ದುರಂತದಲ್ಲಿ ಮೃತಪಟ್ಟ ಎಂಟು ಮಂದಿಯ ಮೃತದೇಹಗಳನ್ನು ಅವರ ಹುಟ್ಟೂರಿಗೆ ಪ್ರತ್ಯೇಕ ಆಂಬ್ಯುಲೆನ್ಸ್‌ಗಳಲ್ಲಿ ಸಾಗಿಸಲಾಯಿತು.
ಮೃತರಲ್ಲಿ ಮೂವರು ಜಾರ್ಖಂಡ್ ಹಾಗೂ ಊವರು ಒಡಿಶಾ ಮೂಲದವರು. ಘಟನೆಯಲ್ಲಿ ಗಾಯಗೊಂಡಿರುವ ೧೨ ಮಂದಿ ಚೇತರಿಸುತ್ತಿದ್ದಾರೆ.
Tagged with
cnews

ಮಂದಿಪ್ ಅರ್ಧಶತಕ; ತವರಿನಲ್ಲಿ ಡೆಕ್ಕನ್‌ಗೆ ಮತ್ತೊಂದು ಸೋಲು
ಹೈದರಾಬಾದ್: ಐಪಿಎಲ್‌ನಲ್ಲಿ ತಂಡಗಳ ನಡುವಿನ ಪ್ಲೇಆಫ್ ಕದನಕ್ಕೆ ಪಂಜಾಬ್ ಮತ್ತಷ್ಟು ರಂಗು ತುಂಬಿದೆ. ನಿನ್ನೆ ಇಲ್ಲಿ ನಡೆದ ಪಂದ್ಯದಲ್ಲಿ ಮಂದೀಪ್ ಸಿಂಗ್ ಹಾಗೂ ಅಂತಿಮ ಹಂತದಲ್ಲಿ ಸ್ಫೋಟಕ ಪ್ರದರ್ಶನ ನೀಡಿದ ಡೇವಿಡ್ ಮಿಲ್ಲರ್‌ರ ಸಾಹಸಿಕ ಅಟದ ನೆರವಿನಿಂದ ಡೆಕ್ಕನ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ೨೫ ರನ್‌ಗಳ ಗೆಲುವು ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಪಂಜಾಬ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು. ಅಲ್ಲದೆ ಶಾನ್ ಮಾರ್ಶ್ (೨೨) ಹಾಗೂ ಮಂದಿಪ್ (೭೫) ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಮಂದಿಪ್ ಕೇವಲ ೪೮ ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ ೭೫ ರನ್ ಸೂರೆಗೈದರು. ಅಂತಿಮ ಹಂತದಲ್ಲಿ ಮಿಲ್ಲರ್ ಕೇವಲ ೧೮ ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಬೌಂಡರಿ ನೆರವಿನಿಂದ ಅಜೇಯ ೨೮ ರನ್ ಸಿಡಿಸಿದರು. ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೧೭೦ ರನ್ ಸಿಡಿಸಿದರು. ಗುರಿ ಬೆನ್ನತ್ತಿದ್ದ ಡೆಕ್ಕನ್ ಡೇವಿಡ್ ಹಸ್ಸಿ ಹಾಗೂ ಪ್ರವೀಣ್ ಕುಮಾರ್ ದಾಳಿಗೆ ಉತ್ತರ ಕೊಡುವಲ್ಲಿ ವಿಫಲವಾಯಿತು. ಅಲ್ಲದೆ ತಂಡ ಕಳಪೆ ಆರಂಭ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮೆನ್ ವಿಫಲತೆಯಿಂದಾಗಿ ನಿಗದಿತ ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ೧೪೫ ಗಳಿಸಲಷ್ಟೇ ಶಕ್ತವಾಯಿತು. ಹಸ್ಸಿ ಹಾಗೂ ಕುಮಾರ್ ತಲಾ ಎರಡು ವಿಕೆಟ್ ಪಡೆದರು.
೩೧ ರನ್ ಗಳಿಸಿದ್ದಾಗ ಡೆಕ್ಕನ್ ಆರಂಭಿಕರಾದ ಧವನ್ (೮) ಹಾಗೂ ಪಟೇಲ್ (೧೭) ವಿಕೆಟ್ ಕಳಕೊಂಡಿತು. ಹ್ಯಾರಿಸ್ (೩೦) ಕೂಡ ತನ್ನ ಕಿರುಇನ್ನಿಂಗ್ಸ್‌ಗೆ ಅಂತ್ಯಹಾಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕ್ಯಾಮರೊನ್ ವೈಟ್ (೮) ಹಾಗೂ ಸಂಗಾಕ್ಕರ (೪) ತಮ್ಮ ವಿಕೆಟ್‌ನ್ನು ಅಗ್ಗವಾಗಿ ಕಳಕೊಂಡಿದ್ದು, ತಂಡದ ಸೋಲಿಗೆ ಪ್ರಮುಖವಾಯಿತು. ಆದರೆ ಅಕ್ಷತ್ ರೆಡ್ಡಿ (೨೪) ಹಾಗೂ ಜುನ್‌ಜುನ್‌ವಾಲಾ (೧೯) ಆರನೇ ವಿಕೆಟ್‌ಗೆ ೫.೧ ಓವರ್‌ಗಳಲ್ಲಿ ೪೩ ರನ್‌ಗಳ ಜೊತೆಯಾಟ ನಡೆಸಿ ಹೋರಾಡಿದರೂ ಅದು ಸಫಲವಾಗಲಿಲ್ಲ.
ಈ ಹಿಂದೆ ಬ್ಯಾಟಿಂಗ್ ನಡೆಸಿದ್ದ ಪಂಜಾಬ್‌ಗೆ ಮಾರ್ಶ್ ಹಾಗೂ ಮಂದಿಪ್ ಮೊದಲ ವಿಕೆಟ್‌ಗೆ ೫೫ ರನ್‌ಗಳ ಜೊತೆಯಾಟ ನಡೆಸಿದ್ದರು. ನಂತರ ಮೂರನೇ ವಿಕೆಟ್‌ಗೆ ಮಂದಿಪ್ ಜೊತೆ ಸೇರಿಕೊಂಡ ಹಸ್ಸಿ (೧೬) ೨೬ ಎಸೆತಗಳಲ್ಲಿ ೩೬ ರನ್ ಪೇರಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಮಿಲ್ಲರ್ ಸ್ಫೋಟಿಸಿದರು. ಕೊನೆ ವಿಕೆಟ್‌ಗೆ ಮೆಹ್ಮೂದ್ (೧೪) ಜೊತೆ ಸೇರಿಕೊಂಡ ಮಿಲ್ಲರ್ ಕೇವಲ ಮೂರು ಓವರ್‌ಗಳಲ್ಲಿ ಅಜೇಯ ೩೨ ರನ್ ಕಲೆಹಾಕಿದ್ದು, ಉತ್ತಮ ಮೊತ್ತಕ್ಕೆ ನೆರವಾಯಿತು. ಆಶೀಶ್ ರೆಡ್ಡಿ ಎರಡು ವಿಕೆಟ್ ಪಡೆದರು.
Tagged with
tnews

ಪುಣೆಯ ಪ್ಲೇಆಫ್ ಕನಸನ್ನು ಕ್ಷೀಣಿಸಿದ ವಾಟ್ಸನ್
ಪುಣೆ: ಪ್ಲೇಆಫ್‌ಗೆ ಪ್ರವೇಶಿಸುವ ಪುಣೆ ವಾರಿಯರ‍್ಸ್ ಕನಸಿಗೆ ರಾಜಸ್ಥಾನ್ ರಾಯಲ್ಸ್ ಮತ್ತಷ್ಟು ಕ್ಷೀಣಿಸಿದೆ. ಶೇನ್ ವಾಟ್ಸನ್ ಪ್ರದರ್ಶಿಸಿದ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಪುಣೆ ವಿರುದ್ಧದ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ಏಳು ವಿಕೆಟ್‌ಗಳ ಭರ್ಜರಿ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮುನ್ನಡೆ ಸಾಧಿಸಿದೆ.
ತವರಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪುಣೆ ವಾರಿಯರ‍್ಸ್ ತೀರಾ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅದರಲ್ಲೂ ಶಾನ್ ಟೇಟ್ ಮಾರಕ ಬೌಲಿಂಗ್ ದಾಳಿಗೆ ತಂಡ ಕುಸಿತ ಕಂಡಿತು. ಪರಿಣಾಮ ಪುಣೆ ನಿಗದಿತ ಓವರ್‌ಗಳಲ್ಲಿ ತಂಡ ಆರು ವಿಕೆಟ್ ನಷ್ಟಕ್ಕೆ ಕೇವಲ ೧೨೫ ರನ್ ಗಳಿಸಲಷ್ಟೇ ಶಕ್ತವಾಯಿತು. ಟೇಟ್ ೧೩ ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದರು. ಗುರಿ ಬೆನ್ನತ್ತಿದ್ದ ರಾಜಸ್ಥಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅದರಲ್ಲೂ ಶೇನ್ ವಾಟ್ಸನ್ ಭರ್ಜರಿ ಅರ್ಧಶತಕಕ್ಕೆ ಉತ್ತರ ಕೊಡಲು ಪುಣೆ ವಿಫಲತೆ ಕಂಡಿತು. ಹಾಗಾಗಿ ರಾಜಸ್ಥಾನ್ ೧೬.೨ ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ೧೨೬ ರನ್ ಗಳಿಸಿ ಜಯಸಾಧಿಸಿತು. ವಾಟ್ಸನ್ ಕೇವಲ ೫೧ ಎಸೆತಗಳಲ್ಲಿ ನಾಲ್ಕು ಸಿಕ್ಸ್ ಹಾಗೂ ಹತ್ತು ಬೌಂಡರಿಗಳ ನೆರವಿನಿಂದ ಅಜೇಯ ೯೧ ರನ್ ಗಳಿಸಿ ಅಜೇಯರಾಗುಳಿದರು. ಗುರಿ ಬೆನ್ನತ್ತುವ ಆರಂಭದಲ್ಲೇ ರಹಾನೆ ಶೂನ್ಯಕ್ಕೆ ತನ್ನ ವಿಕೆಟ್ ಕಳಕೊಂಡರು. ಆದರೆ ಎರಡನೇ ವಿಕೆಟ್‌ಗೆ ವಾಟ್ಸನ್ ಹಾಗೂ ದ್ರಾವಿಡ್ (೧೪) ಜೋಡಿ ೪.೩ ಓವರ್‌ಗಳಲ್ಲಿ ೪೫ ರನ್‌ಗಳ ಜೊತೆಯಾಟ ನಡೆಸಿದರು. ನಂತರ ವಾಟ್ಸನ್ ಅಶೋಕ್ ಮೆನೆರಿಯಾ (೧೮) ಜೊತೆ ಮೂರನೇ ವಿಕೆಟ್‌ಗೆ ೫೬ ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದುನಿಲ್ಲಿಸಿದರು. ಪುಣೆ ಪರ ಭುವನೇಶ್ವರ ಒಂದು ವಿಕೆಟ್ ಪಡೆದರು.
ಈ ಹಿಂದೆ ಬ್ಯಾಟಿಂಗ್ ನಡೆಸಿದ್ದ ಪುಣೆ ತಂಡಕ್ಕೆ ಗಂಗೂಲಿ (೧೪) ಹಾಗೂ ಕ್ಲಾರ್ಕ್ (೧೬) ಜೋಡಿ ಉತ್ತಮ ಆರಂಭ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಉತ್ತಪ್ಪ (೧೩) ವಿಫಲವಾದರೂ ಮಜುಮ್ದೂರ್ ಸ್ಫೋಟಕ ೩೦ ರನ್ ಗಳಿಸಿದರು. ಸ್ಮಿತ್ ಅಜೇಯ ೧೮ ರನ್ ಗಳಿಸಿದರು.
Tagged with
tnews

ಮ್ಯಾಡ್ರಿಡ್: ಒಂದು ಕಾಲದಲ್ಲಿ ಟೆನಿಸ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಅಮೆರಿಕಾದ ಖ್ಯಾತ ಮಾಜಿ ನಂಬರ್ ವನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಪ್ರಸಿದ್ದತೆ ಈಗಲೂ ಕಡಿಮೆಯಾಗಿಲ್ಲ ಎಂಬುದನ್ನು ಸ್ವತಹ ಆಕೆಯೇ ಬಹಿರಂಗ ಪಡಿಸಿದ್ದಾಳೆ. ಅಭಿಮಾನಿಗಳು ನನ್ನ ಆಟವನ್ನು ನೋಡಲು ಈಗಲೂ ಹಿಂದಿನಷ್ಟೇ ಕಾತುರತೆ ಹೊಂದಿರುವುದು ನನಗೆ ಅಚ್ಚರಿ ತರುತ್ತದೆ ಎಂದು ಸೆರೆನಾ ತಿಳಿಸಿದ್ದಾಳೆ. ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್ ಓಪನ್‌ನ ಪ್ರಥಮ ಸುತ್ತಿನಲ್ಲಿ ಸೆರೆನಾ ರಶ್ಯಾದ ಎಲೆನಾ ವೆಸ್ನಿನಾ ವಿರುದ್ಧ ೬-೩ ಹಾಗೂ ೬-೧ರ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಆರಂಭಿಕ ಹಂತದಲ್ಲಿ ನಾನು ಸಂತಸ ಪಡೆದಿರಲಿಲ್ಲ, ಆದರೆ ಪಂದ್ಯ ಜಯಿಸಿದ್ದು, ಉತ್ತಮವಾದುದು. ಆದರೆ ಇದು ಪ್ರಥಮ ಸುತ್ತು, ಇನ್ನೂ ಸಾಗಲು ಬಹಳಷ್ಟಿದೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ಫಾiನ್ನು ಮುಂದುವರೆಸುವ ವಿಶ್ವಾಸವಿದ್ದು, ಅಲ್ಲದೆ ಈ ಹಿಂದಿನಂತೆ ಈಗ ಒತ್ತಡದಲ್ಲಿ ನಾನು ಆಡುತ್ತಿಲ್ಲ. ಪ್ರತೀ ಬಾರಿ ಅಂಗಣ ಪ್ರವೇಶಿಸುವಾಗ ಉತ್ತಮವಾಗಿ ಆಡು ವುದನ್ನೇ ಎದುರು ನೋಡುತ್ತೇನೆ. ಒಂದು ವೇಳೆ ಅದರಲ್ಲಿ ಸಫಲನಾದರೆ ಫಲಿ ತಾಂಶ ಕೂಡ ಉತ್ತಮವಾಗಿರುತ್ತದೆ. ಜನರು ಈಗಲೂ ನನ್ನ ಆಟದ ಬಗ್ಗೆ ಕ್ರೇಜ್ ಹೊಂದಿದ್ದಾರೆ ಎಂದು ಇದೇ ವೇಳೆ ಸೆರೆನಾ ತಿಳಿಸಿದರು.
Tagged with
tnews
ಮಂಗಳೂರು: ಪಡುಬಿದ್ರಿಯ ಸುಪ್ರಸಿದ್ಧ ಫ್ಲೆಕ್ಸ್ ಯುವರ್ ಮಸ್‌ಲ್ ಜಿಮ್ ಮತ್ತು ಉಡುಪಿ ಡಿಸ್ಟ್ರಿಕ್ಟ್ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಇದರ ಜಂಟಿ ಆಶ್ರಯದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಮಿ. ಕರಾವಳಿ' ಮೇ ೧೨ರಂದು ಪಡುಬಿದ್ರಿಯ ಅಮರ್ ಕಾಂಫರ್ಟ್ಸ್ ಹೊಟೇಲಿನ ಸಿರಿ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಗೋವರ್ಧನ ಬಂಗೇರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೂರೂ ಜಿಲ್ಲೆಗಳ ಸುಮಾರು ನೂರು ಮಂದಿ ಸ್ಪರ್ಧಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಸ್ಪರ್ಧೆಯು ೫೫ರಿಂದ ೭೫ ಕೆ.ಜಿ. ವರೆಗಿನ ವಿಭಾಗಗಳಲ್ಲಿ ನಡೆಯಲಿದೆ. ಪ್ರತಿ ಹಂತದಲ್ಲೂ ಐದು ಬಹುಮಾನಗಳಿದ್ದು ಸ್ಪರ್ಧೆಯ ಚಾಂಪಿಯನ್‌ಗೆ 'ಮಿ. ಕರಾವಳಿ' ಬಿರುದು ನೀಡಿ ಪುರಸ್ಕರಿಸ ಲಾಗುವುದು. ಟ್ರೋಫಿಯ ಜತೆಗೆ ೧೫೦೦೦ ರೂ. ನಗದು ಬಹುಮಾನ ಮತ್ತು ರನ್ನರ‍್ಸ್ ಆಫ್ ಪುರಸ್ಕಾರವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಉದ್ಘಾಟನೆಯನ್ನು ಉದ್ಯಮಿ ರವೀಂದ್ರನಾಥ ಜಿ. ಹೆಗ್ಡೆ ನೆರವೇ ರಿಸಲಿದ್ದು, ಕಾರು ಶಾಸಕ ಲಾಲಾಜಿ ಮೆಂಡನ್ ಸಹಿತ ಅವಿಭಜಿತ ಜಿಲ್ಲೆಯ ವಿವಿಧ ರಂಗಗಳ ಗಣ್ಯರು ಉಪಸ್ಥಿ ತರಿರುವರು ಎಂದು ಗೋವರ್ಧನ್ ಬಂಗೇರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಫ್ಲೆಕ್ಸ್ ಜಿಮ್ ಮಾಲಕ ಮ್ಯಾಕ್ಸಿಂ ಡಿಸೋಜ, ಅಧ್ಯಕ್ಷ ಡಾ. ಮನೋಜ್ ಕುಮಾರ್ ಶೆಟ್ಟಿ, ಜಿಮ್ ತರಬೇತುದಾರ ನರೇಶ್ ಕನ್ನಂಗಾರು ಮುಂತಾದವರು ಉಪಸ್ಥಿ ತರಿದ್ದರು.
Tagged with
dk,
lnews,
tnews

ಮುಖ್ಯಮಂತ್ರಿ ಸದಾನಂದ ಗೌಡ
ಬೆಂಗಳೂರು: ಬರಗಾಲದ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರದ ಬರ ಪರಿಸ್ಥಿತಿ ಅಧ್ಯಯನ ತಂಡವು ಮೇ ೧೨ ಮತ್ತು ೧೩ರಂದು ರಾಜ್ಯಕ್ಕೆ ಆಗಮಿಸಲಿದೆ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿ ಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾಗಿರುವ ಬರ ಪರಿ ಸ್ಥಿತಿ ಬಗ್ಗೆ ಸೋಮವಾರ ಕೇಂದ್ರದ ಕೃಷಿ ಸಚಿವ ಶರದ್ ಪವಾರ್ ಜತೆಗೆ ಚರ್ಚಿಸಿದ್ದೇನೆ. ಪರಿಸ್ಥಿತಿ ಅಧ್ಯಯನ ನಡೆಸಲು ಮೇ ೧೨ ಮತ್ತು ೧೩ರಂದು ಪ್ರತ್ಯೇಕ ತಂಡವನ್ನು ರಾಜ್ಯಕ್ಕೆ ಕಳುಹಿಸಿ ಕೊಡುವುದಾಗಿ ಅವರು ಪವಾರ್ ಹೇಳಿರುವುದಾಗಿ ಸದಾನಂದಗೌಡ ತಿಳಿಸಿದರು.
ಕೇಂದ್ರದ ಅಧ್ಯಯನ ತಂಡವು ವರದಿ ನೀಡುವಲ್ಲಿ ಯಾವುದೇ ವಿಳಂಬ ಆಗುವುದಿಲ್ಲ. ಏಕೆಂದರೆ, ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಮೇ ೧೬ರೊಳಗೆ ವರದಿ ನೀಡುವಂತೆಯೂ ಅಧ್ಯಯನ ತಂಡಕ್ಕೆ ಸೂಚಿಸಿ ರುವುದಾಗಿ ಪವಾರ್ ಹೇಳಿದ್ದಾರೆ. ಹೀಗಿರುವಾಗ, ಅಧ್ಯಯನ ತಂಡ ಬಂದು ಹೋದ ಬಳಿಕ ಕೇಂದ್ರದಿಂದ ಸೂಕ್ತ ನೆರವು ಸಿಗುವ ಬಗ್ಗೆ ವಿಶ್ವಾಸವಿದೆ ಎಂದರು.
ಬರದ ವಿಚಾರದಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರದ ಜತೆಗೆ ಜಗಳಕ್ಕೆ ನಿಲ್ಲುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹೆಚ್ಚಿನ ನೆರವು ಕೊಡುವಂತೆ ಪದೇ ಪದೇ ಒತ್ತಡ ಹಾಕಿದರೆ, ಅದರಿಂದ ಮತ್ತಷ್ಟು ವಿಲಂಬವಾಗುತ್ತದೆ. ಈ ಹಿನ್ನೆಯಲ್ಲಿ ಎಲ್ಲ ಸಮಸ್ಯೆಗಳಿಗೂ ಸಮಾಧಾನ ದಿಂದ ಪರಿಹಾರ ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
Tagged with
snews

ಬೆಂಗಳೂರು: ಕರ್ನಾಟಕ ವಿಷಯ ವೆಂದರೆ ಕೇಂದ್ರಕ್ಕೆ ಅಲರ್ಜಿ ಎಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರೂ ಕೂಡ ಇಂತಹದ್ದೇ ಧೋರಣೆ ಅನುಸರಿ ಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ೧೨೩ ತಾಲ್ಲೂಕು ಗಳಲ್ಲಿ ತೀವ್ರ ಬರಗಾಲ ತಲೆದೋರಿ ಜನತೆ ಸಂಕಷ್ಠದಲ್ಲಿದ್ದರೂ ಈ ಸಚಿವರು ಕೇಂದ್ರದ ಕಣ್ತೆರೆಸುವ ಕೆಲಸ ಮಾಡಿಲ್ಲ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ನಾಯಕತ್ವದಲ್ಲಿ ಸರ್ವಪಕ್ಷಗಳ ನಿಯೋಗ ಪ್ರಧಾನಿ ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯವನ್ನು ಪ್ರತಿನಿಧಿಸುವ ನಾಲ್ವರು ಸಚಿವರೂ ಎಲ್ಲಿಯೂ ಯಾರ ಬಳಿಯು ಪ್ರಸ್ತಾವಣೆ ಮಾಡಿಲ್ಲ. ಅವರಿಗೆ ಇಲ್ಲಿನ ಸಂಕಷ್ಠದ ಅರಿವುದ್ದಂತಿಲ್ಲ. ದೆಹಲಿಯಲ್ಲಿ ತಮ್ಮ ಅಧಿಕಾರಕ್ಕೆ ಸೀಮಿತವಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ ಬರ ಪರಿಹಾರ ಸೇರಿದಂತೆ ಎಲ್ಲಾ ವಿಚಾರಗಳು ಕೇಂದ್ರ ಸರ್ಕಾರ ರಾಜ್ಯದ ವಿಷಯದಲ್ಲಿ ಮಲತಾಯಿ ಧೋರಣೆ ತೋರುತ್ತದೆ ಎಂದು ಯಡಿಯೂರಪ್ಪ ಹೇಳಿದರು.
Tagged with
snews

ಬೆಂಗಳೂರು: ಜಯದೇವ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಆತಂಕ ಪಡುವ ಅಗತ್ಯವಿಲ್ಲ.
ತೀವ್ರವಾದ ಬಳಲಿಕೆ, ಆಯಾಸ, ಸುಸ್ತಿನಿಂದಾಗಿ ಆಸ್ಪತ್ರೆಗೆ ಗೌಡರು ಮೊನ್ನೆ ಸಂಜೆ ದಾಖಲಾಗಿದ್ದಾರೆಂದು ಜಯ ದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.
ನಿತ್ರಾಣದಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಯಾವುದೇ ಗಂಭೀರ ಸ್ವರೂಪದ ತೊಂದರೆ ಗೌಡರಲ್ಲಿ ಕಂಡುಬಂದಿಲ್ಲ. ಗಾಬರೀಪಡಬೇಕಾದ ಅಗತ್ಯವಿಲ್ಲ ಎಂದಿರುವ ಅವರು, ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿದುಕೊಂಡು ಗೌಡರು ವಿಶ್ರಾಂತಿ ಪಡೆಯಲಿದ್ದಾರೆ.
Tagged with
snews
ಬೆಂಗಳೂರು: ಮುಖ್ಯಮಂತ್ರಿ ಸದಾನಂದ ಗೌಡರನ್ನು ಬದಲಾವಣೆ ಮಾಡಿ ಅವರ ಸ್ಥಾನಕ್ಕೆ ಮೂರನೇ ವ್ಯಕ್ತಿಯೊಬ್ಬರನ್ನು ನೇಮಿಸಿ ಎಂದು ಮಾಜೀ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದ ಸಚಿವರು ಮತ್ತು ಶಾಸಕರು ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.
ಯಡಿಯೂರಪ್ಪ ಬಣಕ್ಕೆ ಸೇರಿದ್ದ ಸಚಿವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಸದಾನಂದ ಗೌಡರು ವರಿಷ್ಠರಿಗೆ ಬರೆದ ಪತ್ರ ಬಹಿರಂಗ ಗೊಳ್ಳುತ್ತಿದ್ದಂತೆ ಅವರ ಪದಚ್ಯುತಿಗೆ ಕ್ಷಿಪ್ರಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿರುವ ಶೋಭಾಕರಂದ್ಲಾಜೆ ಮತ್ತು ಕೆಲವು ಶಾಸಕರು ಪಕ್ಷ ಮತ್ತು ಸರಕಾರದ ಭವಿಷ್ಯದ ದೃಷ್ಟಿಯಿಂದ ಗೌಡರನ್ನು ಕೆಳಗಿಳಿಸಿ ಮೂರನೇ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ಯಡಿಯೂರಪ್ಪ ಆರೋಪಗಳಿಂದ ಮುಕ್ತರಾಗುವ ವರೆಗೂ ಅಧಿಕಾರ ಬೇಡ.
ಆದರೆ ಸದಾನಂದ ಗೌಡ ಮಾತ್ರ ಮುಖ್ಯ ಮಂತ್ರಿಯಾಗಿ ಮುಂದುವರಿ ಯುವುದು ಬೇಡ ಎಂದು ಹೇಳಿದ್ದಾರೆ. ಇವರ ಸ್ಥಾನಕ್ಕೆ ರಾಜ್ಯಾಧ್ಯಕ್ಷ ಈಶ್ವರಪ್ಪ, ಸಚಿವರಾದ ಜಗದೀಶ್ ಶೆಟ್ಟರ್, ಅನಂತ್‌ಕುಮಾರ್ ಇಲ್ಲವೆ ಆರ್ ಅಶೋಕ್ ಸೇರಿದಂತೆ ಯಾರ ನ್ನಾದರೂ ಮುಖ್ಯ ಮಂತ್ರಿಯನ್ನಾಗಿ ಮಾಡಿ. ಅದು ತಕ್ಷಣವೇ ಆಗಬೇಕೆಂದು ಒತ್ತಡ ಹೇರಿದ್ದಾರೆ.
ತಮ್ಮನ್ನೇ ಪಕ್ಷದಿಂದ ಉಚ್ಚಾಟಿಸಲು ಹೊರಟಿರುವ ಸದಾನಂದ ಗೌಡರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಪಣತೊಟ್ಟಿರುವ ಯಡಿಯೂರಪ್ಪ ಬಣ ತಮ್ಮ ರಾಜಕೀಯ ಉಳಿವಿಗಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಸಿದ್ಧರಿದ್ದಾರೆ.
ಸ್ವತಃ ಸದಾನಂದ ಗೌಡ ಮತ್ತು ಈಶ್ವರಪ್ಪ ವರಿಷ್ಠರಿಗೆ ಬರೆದ ಪತ್ರ ಬಹಿರಂಗಗೊಳ್ಳುತ್ತಿದ್ದಂತೆ ಕಳೆದ ಎರಡು ದಿನಗಳಿಂದ ಗೌಪ್ಯ ಸಭೆಗಳನ್ನು ನಡೆಸುತ್ತಿರುವ ಈ ಬಣ ಗೌಡರನ್ನು ಅಧಿಕಾರದಿಂದ ಕೆಳಗಿಳಿಸಲು ಹತ್ತು ಹಲವು ತಂತ್ರಗಾರಿಕೆಯನ್ನು ನಡೆಸಿದ್ದಾರೆ.
Tagged with
snews
ಬೆಂಗಳೂರು: ವೈದ್ಯಕೀಯ, ತಾಂತ್ರಿಕ ವಿಷಯಗಳ ಕೋರ್ಸ್‌ಗಳಲ್ಲಿ ಶಿಕ್ಷಣ ನೀಡುವುದಾಗಿ ನಕಲಿ ಸಂಸ್ಥೆ ಗಳನ್ನು ಆರಂಭಿಸಿ ಲಕ್ಷಾಂತರ ವಿದ್ಯಾ ರ್ಥಿಗಳಿಗೆ ವಂಚಿಸಲು ಮುಂದಾಗಿರು ವುದನ್ನು ಸರ್ಕಾರ ಪತ್ತೆ ಹಚ್ಚಿದೆ.
ವಿಶೇಷವಾಗಿ ದೇಶಾದ್ಯಂತ ೯೪ ಸಂಸ್ಥೆಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಜತೆ ೨೦೧೦ರಲ್ಲೇ ಒಡಂಬಡಿಕೆ ಮಾಡಿಕೊಂಡಿದ್ದು, ವೈದ್ಯಕೀಯ ವಿಷಯದ ೩೪ ಕೋರ್ಸ್ ಗಳೂ ಸೇರಿದಂತೆ ಒಟ್ಟು ೪೨೨ ಕೋರ್ಸ್‌ಗಳಲ್ಲಿ ಶಿಕ್ಷಣ ನೀಡುವ ಕುರಿತು ಒಡಂಬಡಿಕೆ ಮಾಡಿಕೊಂಡಿದ್ದು, ದೆಹಲಿಯ ಡಿಸ್ಟೆನ್ಸ್ ಎಜುಕೇಷನ್ ಕೌನ್ಸಿಲ್‌ನ ಮಾನ್ಯತೆ ಪಡೆದುಕೊಂಡಿವೆ.
ಇಂತಹ ಸಂಸ್ಥೆಗಳ ಬಗ್ಗೆ ಅನು ಮಾನ ಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಬೆಂಗಳೂರಿನ ಜೆ.ಪಿ. ನಗರದ ವೈಜೆನ್ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಹಾಗೂ ಸದಾಶಿವನಗರದ ಬೆಂಗಳೂರು ಎಜುಕೇಷನ್ ರಿಸೋರ್ಸ್ ಎಂಬ ಎರಡು ಸಂಸ್ಥೆಗಳ ಮೇಲೆ ದಾಳಿ ಮಾಡಿ ದಾಗ ನಕಲಿ ಸಂಸ್ಥೆಗಳ ಬಣ್ಣ ಬಯ ಲಾಗಿದೆ.
ಬೆಂಗಳೂರು ಎಜುಕೇಷನ್ ರಿಸೋರ್ಸ್‌ಸ್ ಸಂಸ್ಥೆ ಏಪ್ರಿಲ್ ೨೦೧೦ರಲ್ಲಿ, ವೈಜೆನ್ ಮ್ಯಾನೆಜ್‌ಮೆಂಟ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಜೂನ್ ೨೬, ೨೦೧೦ರಲ್ಲಿ ಮುಕ್ತ ವಿವಿ ಜತೆ ಒಡಂಬಡಿಕೆ ಮಾಡಿಕೊಂಡಿವೆ. ಈ ಕುರಿತು ಸಚಿವ ರಾಮದಾಸ್ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿ ಈ ಸಂಸ್ಥೆಗಳು ವಿವಿಧ ಕೋರ್ಸ್‌ಗಳನ್ನು ಆರಂಭಿಸಲು ಅಧಿ ವೇಶನ ನಡೆಯುವಾಗ ವಿಧಾನಮಂ ಡಲಗಳು ಒಪ್ಪಿಗೆ ಕೊಡಬೇಕು. ಇದರ ಜತೆಗೆ ರಾಜ್ಯಪಾಲರ ಒಪ್ಪಿಗೆಯನ್ನೂ ಪಡೆದುಕೊಳ್ಳಬೇಕು. ಆದರೆ, ಸರ್ಕಾರ ಹಾಗೂ ರಾಜ್ಯಪಾಲರ ದಾರಿ ತಪ್ಪಿಸಿ ಅನುಮತಿ ನೀಡಲಾಗಿದೆ ಎಂದರು.
Tagged with
snews
ಪಡುಬಿದ್ರಿ: ನೂತನವಾಗಿ ಯಾವುದೇ ಮರಗಳನ್ನು ನೆಡದೆ ಪಡುಬಿದ್ರಿ ರಾಜ್ಯ ಹೆದ್ದಾರಿ ಅಗಲೀಕರಣ ಮಾಡುವ ನಿಟ್ಟಿನಲ್ಲಿ ನೂರಾರು ಹೆಮ್ಮರಗಳನ್ನು ಧರೆಗೆ ಉರುಳಿಸಲಾ ಗುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಈ ಸಂದರ್ಭ ಸ್ಥಳೀಯರಾದ ನವೀನ್ ಚಂದ್ರ ಜೆ ಶೆಟ್ಟಿ ಮಾತನಾಡಿ, ಪಡುಬಿದ್ರಿಯಿಂದ ಕುದುರೆಮುಖದ ವರೆಗೆ ರಾಜ್ಯ ಹೆದ್ದಾರಿ ಇದ್ದು, ಕಾರ್ಕಳ ದವರೆಗೆ ಅಗಲೀಕಣ ಕಾರ್ಯವು ಪ್ರಾರಂಭಗೊಂಡಿದೆ. ಸುಮಾರು ೭ಮೀ. ಅಗಲೀಕರಣ ನಡೆಯುತ್ತಿದೆ. ನೂರಾರು ವರ್ಷ ಇತಿಹಾಸವಿರುವ ಈ ಹೆಮ್ಮರಗಳನ್ನು ಧರೆಗೆ ಉರುಳಿಸುವಾಗ ಅತೀವ ದುಃಖ ಎನಿಸುತ್ತಿದೆ. ಇದರಿಂ ದಾಗಿ ಪರಿಸರ ಶಾಂತವಾಗಿತ್ತು. ಸರಕಾ ರದ ನಿಯಮದಂತೆ ಒಂದು ಮರ ಕಡಿದರೆ ೨ ಮರಗಳನ್ನು ನೆಡಬೇಕೆಂಬ ಕಾನೂನು ಇದೆ. ಆದರೆ ಇದನ್ನು ಯಾರೂ ಪಾಲಿಸುತ್ತಿಲ್ಲ. ಇದೀಗ ಪಡುಬಿದ್ರಿ ಪರಿಸರದಲ್ಲಿ ಅಭಿವೃದ್ಧಿಯ ನೆಪದಲ್ಲಿ ಹಲವಾರು ಕಂಪೆನಿಗಳು ಇಲ್ಲಿಗೆ ವಕ್ಕರಿಸಿದೆ. ಅಭಿವೃದ್ಧಿಯ ಹೆಸರಿನಲ್ಲಿ ಸರಕಾರವು ಜನರ ಮೇಲೆ ಸವಾರಿ ಮಾಡುತ್ತಿದೆ. ಈಗಾಗಲೇ ಈ ಕಂಪೆನಿ ಯಿಂದಾಗಿ ಇಲ್ಲಿಯ ಉಷ್ಣಾಂಶ ಹೆಚ್ಚಾ ಗಿದ್ದನ್ನು ಕಂಡು ಕೊಳ್ಳಬಹುದಾಗಿದೆ.
ನೂರಾರು ವರ್ಷ ಇತಿಹಾಸ ಇರುವ ಮರಗಳನ್ನು ಕಡಿಯುತ್ತಿರುವಾಗ ಯಾವೊಬ್ಬ ಪರಿಸರವಾದಿಯೂ ಇತ್ತ ಗಮನ ಹರಿಸದಿದ್ದುದು ಹಾಗೂ ಜನಪ್ರತಿನಿಧಿಗಳು ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನವೀನ್ ಚಂದ್ರ ಶೆಟ್ಟಿ, ಮರನೆಡುವ ಕ್ರಿಯೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ತುರ್ತು ಕ್ರಮ ಕೈಗೊಳು ವಂತೆ ಆಗ್ರಹಿಸಿದ್ದಾರೆ.
Tagged with
lnews,
udupi
ಹೊಸದಿಲ್ಲಿ: ದೂರಸಂಪರ್ಕ ನಿಯಂತ್ರಣ ವ್ಯವಸ್ಥೆಯ ಟ್ರೈ ಸ್ಟೆಕ್ಟ್ರಂ ನಿಗದಿ ಪಡೆಸಿರುವ ಶಿಪಾರಸು ಒಪ್ಪಿಕೊಂಡರೆ ಮೊಬೈಲ್ ಕರೆ ದರಗಳು ಈಗಿನದಕ್ಕಿಂತ ದುಪ್ಪಟ್ಟು ಆಗಲಿವೆ ಎಂಬ ಆತಂಕವನ್ನು ಮೊಬೈಲ್ ರ್ವಹಣಾ ಕಂಪೆನಿಗಳು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿವೆ.
ಭಾರತಿ ಏರ್‌ಟೆಲ್, ವೊಡಾ-ಫೋನ್, ಇಂಡಿಯಾ ಐಡಿಯಾ ಸೆಲ್ಯೂ ಲರ್, ಯುನಾರ್, ವಿಡಿಯೋಕಾನ್ ಸಂಸ್ಥೆಗಳ ಸಿಇಓಗಳು ಕೇಂದ್ರ ದೂರ ಸಂಪರ್ಕ ಸಚಿವ ಕಪಿಲ್ ಸಿಬಲ್‌ರನ್ನು ಭೇಟಿಯಾಗಿ ಟ್ರೈ ಶಿಫಾರಸುಗಳು ಬೀರಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ. ಮೊಬೈಲ್ ಕರೆ ದರ ಹೆಚ್ಚಾದರೆ ಗ್ರಾಹಕರ ಬಳಕೆಯ ಪ್ರಮಾಣವೂ ಕಡಿಮೆ ಆಗಲಿದೆ. ಆಗ ನಿರ್ವಹಣೆ ಇನ್ನಷ್ಟು ಕಷ್ಟವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಬರುವ ದಿನಗಳಲ್ಲಿ ಕರೆ ದರ ಮುವತ್ತು ಪೈಸೆಯಷ್ಟು ಹೆಚ್ಚುವ ಸಾಧ್ಯತೆ ಇದೆ.
ಜುಗಾರಿ: ಎಂಟು ಮಂದಿಯ ಬಂಧನ: ವೇಣೂರು ಪೊಲೀಸರು ಎರಡು ಪ್ರತ್ಯೇಕ ಕಡೆಗಳಲ್ಲಿ ದಾಳಿ ನಡೆಸಿ ಜುಗಾರಿಯಲ್ಲಿ ನಿರತ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಮೂಡುಕೋಡಿ ಗ್ರಾಮದ ನಡ್ತಿಕಲ್ಲು ಎಂಬಲ್ಲಿ ದಾಳಿ ನಡೆಸಿ ದಯಾನಂದ ಪೂಜಾರಿ, ಕೊರಗಪ್ಪ, ಅಣ್ಣಿ ಪೂಜಾರಿ ಎಂಬವರನ್ನು ಬಂಧಿಸಿದ್ದರೆ, ನಿಟ್ಟಡೆ ಗ್ರಾಮದ ಕೊಡಂಗೆಯಲ್ಲಿ ದಾಳಿ ನಡೆಸಿ ಟ್ಟಡೆ ಮುಹಮ್ಮದ್, ಕುಕ್ಕೇಡಿ ರವಿ ಕನಡ, ಪಡ್ಡಂದಡ್ಕ ಮಹಾಬಲ ಪೂಜಾರಿ, ಟ್ಟಡೆ ಸಂಜೀವ, ಕುಕ್ಕೇಡಿ ಪದ್ಮನಾಭ ಎಂಬವರನ್ನು ಬಂಧಿಸಲಾಗಿದೆ.
Tagged with
nnews
ಸುರತ್ಕಲ್: ಸೆಝ್ ಕಾರಿಡಾರ್ ರಸ್ತೆಗೆ ಕೂಡಲೇ ವೇಗ ತಡೆಯನ್ನು ಅಳವಡಿಸುವಂತೆ ಒತ್ತಾಯಿಸಿ ಜೋಕಟ್ಟೆ ಕೆ.ಬಿ ಕ್ರಾಸ್ ನಿವಾಸಿಗಳು ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಜೋಕಟ್ಟೆಯಿಂದ ಸೆಝ್‌ಗೆ ನೇರವಾದ ರಸ್ತೆಯನ್ನು ನಿರ್ಮಿಸಿರುವ ಕಾರಣ ಸೆಝ್ ಕಾಮಗಾರಿಗೆ ಸಂಬಂ ಧಿಸಿದ ವಾಹನಗಳು ಅತೀವೇಗದಿಂದ ಸಾಗುತ್ತಿರುತ್ತದೆ, ಇದು ಅನಾಹುತಗಳಿಗೂ ಕಾರಣವಾಗಿದೆ. ಹೀಗಾಗಿ ಈ ರಸ್ತೆಗೆ ವೇಗ ತಡೆ ಹಾಕುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಸೆಝ್ ರಸ್ತೆ ನಿರ್ಮಿಸುವ ಅವಧಿಯಲ್ಲೇ ಈ ಬೇಡಿಕೆಯನ್ನು ನೀಡಲಾಗಿತ್ತಾದರೂ ಕಂಪೆನಿ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಈ ಕಾರಣದಿಂದಾಗಿ ಕಳೆದ ಭಾನುವಾರ ೮ ಮಂದಿ ಕಾರ್ಮಿಕರು ಪ್ರಾಣ ಕಳೆದು ಕೊಳ್ಳು ವಂತಾಗಿದೆ. ಇದಲ್ಲದೆ ಈ ಹಿಂದೆ ಸ್ಥಳೀಯ ನಿವಾಸಿಗಳು ಮತ್ತು ಕಾರ್ಮಿ ಕರು ಹಲವಾರು ಬಾರಿ ಅಪಘಾತಕ್ಕೆ ಒಳಗಾಗಿದ್ದಾರೆ. ಇದು ಮುಂದು ವರಿಯದಂತಾಗ ಬೇಕಾದರೆ ರಸ್ತೆಗೆ ವೇಗ ತಡೆ ಅವಶ್ಯಕವಾಗಿದೆ ಎಂದು ಜೋಕಟ್ಟೆ ಪಂಚಾಯತ್ ಉಪಾಧ್ಯಕ್ಷರು ತಿಳಿಸಿದ್ದಾರೆ.
ಭಾನುವಾರ ಘಟನೆಯ ಬಳಿಕವಾದರೂ ಕಂಪೆನಿ ಎಚ್ಚೆತ್ತು ಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸುಳ್ಳು. ಸೆಝ್‌ಗೆ ಈ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಪ್ರತಿಭಟನೆಯಲ್ಲಿ ಆರೋಪ ಕೇಳಿ ಬಂದಿತ್ತು.
ಸೆಝ್ ಕಾರಿಡಾರ್ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಾಗುತ್ತಿದ್ದು ಇದು ನೇರ ರಸ್ತೆಯಾಗಿರುವ ಕಾರಣ ವಾಹನಗಳು ಅಪರಿಮಿತದಲ್ಲಿ ಸಾಗುತ್ತಿರುತ್ತದೆ. ಈ ರಸ್ತೆಯ ತೀರ ಪ್ರದೇಶದಲ್ಲಿ ಮನೆಗಳಿರುವುದಲ್ಲದೆ ರಸ್ತೆ ಬದಿ ಕಾರ್ಮಿಕರೂ ಕೆಲಸ ನಿರ್ವ ಹಿಸುತ್ತಿರುತ್ತಾರೆ. ಹೀಗಾಗಿ ಅನಾಹುತ ನಡೆಯುವ ಸಾಧ್ಯತೆ ಇರುವುದರಿಂದ ಕೂಡಲೇ ವೇಗ ತಡೆ ಹಾಕುವಂತೆ ಪ್ರತಿಭಟನೆ ನಿರತರು ಒತ್ತಾಯಿಸಿದ್ದಾರೆ. ಒಂದು ವೇಳೆ ಈ ಬಗ್ಗೆ ಸೆಝ್ ಕ್ರಮ ಕೈಗೊಳ್ಳದೇ ಹೋದರೆ ರಸ್ತೆ ಅಗೆದು ತಾವೇ ವೇಗ ತಡೆ ನಿರ್ಮಿಸುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಸೆಝ್‌ಗೆ ಎಚ್ಚರಿಕೆ ನೀಡುವ ಸಲುವಾಗಿ ಕೆಲ ಹೊತ್ತು ಈ ಭಾಗದಲ್ಲಿ ಸಾಗುವ ವಾಹನಗಳಿಗೆ ತಡೆ ಉಂಟು ಮಾಡಲಾಯಿತು.
Tagged with
dk,
lnews

ಪಡುಬಿದ್ರಿ: ಹಾಸನದ ನಂದೀ ಗ್ರಾಮದಿಂದ ಪಲಿಮಾರು ಗ್ರಾ. ಪಂ.ವರೆಗೆ ಯುಪಿಸಿಎಲ್ ಕಂಪೆನಿ ಯಿಂದ ವಿದ್ಯುತ್ ಸಾಗಿಸಲು ೪೦೦ಕೆವಿ ತಂತಿಯನ್ನು ಎಳೆಯ ಲಾಗಿದ್ದು, ಎಲ್ಲೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಜನರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಎಲ್ಲೂರು ಗ್ರಾ. ಪಂ.ನ ಸದಸ್ಯ ಜಯಂತ್ ಕುಮಾರ್ ನಮ್ಮ ಟೀವಿಯಿಂದಿಗೆ ಮಾತನಾಡಿ, ಯುಪಿಸಿಎಲ್ ಕಂಪೆನಿಯಿಂದಾಗಿ ಎಲ್ಲೂರು ಗ್ರಾಮ ವ್ಯಾಪ್ತಿಯಲ್ಲಿ ಅಲ್ಲಿಯ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಪರಿಸರದಲ್ಲಿ ಜನರಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನೆಲೆಸಿದೆ. ಇದರಿಂ ದಾಗಿ ಎಲ್ಲೂರಿನ ಗ್ರಾಮಸ್ತರು ಗ್ರಾ. ಪಂ.ಗೆ ಬಂದು ಈ ಬಗ್ಗೆ ದೂರಿಕೊಂಡ ಹಿನ್ನೆಲೆಯಲ್ಲಿ ಗ್ರಾ. ಪಂ.ನಲ್ಲಿ ವಿಶೇಷ ಗ್ರಾಮ ಸಭೆಯೊಂದನ್ನು ಕರೆದು, ಯುಪಿಸಿಎಲ್ ಕಂಪೆನಿಯ ವಿರುದ್ಧ ಸರ್ವಾನುಮತದ ನಿರ್ಣಯ ಕೈಗೊಂಡಿ ದ್ದೇವೆ. ಆಪ್ರಯುಕ್ತ ನಾವು ಕೆಪಿಟಿಸಿಎಲ್ ಎಲ್ಲೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಹಾಕ ಬಯಸಿದ ೪೦೦ಕೆವಿ ವಿದ್ಯುತ್ ತಂತಿ ಹಾಕಲು ನಾವು ಬಿಡುವುದಿಲ್ಲ ಎಂದರು. ನಾವು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಮುಂದೇನಾಗುತ್ತದೋ ಕಾದು ನೋಡುತ್ತೇವೆ ಎಂದೂ ಜಯಂತ್ ಕುಮಾರ್ ಹೇಳಿದ್ದಾರೆ.
Tagged with
lnews,
udupi
ಮಂಗಳೂರು: ನಗರ ಪ್ರದೇಶ ವ್ಯಾಪ್ತಿಯಲ್ಲಿ ಎಳನೀರು ಮಾರಾಟ ಗಾರರು ಚಿಪ್ಪುಗಳನ್ನು ಗೋಣಿಚೀಲ ಗಳಲ್ಲಿ ತುಂಬಿಡಬೇಕು, ತಪ್ಪಿದಲ್ಲಿ ಒಂದು ಸಾವಿರ ರೂ. ದಂಡ ವಿಧಿಸ ಲಾಗುತ್ತದೆ. ಚಿಪ್ಪುಗಳನ್ನು ಸಾರ್ವ ಜನಿಕರಿಗೆ ತೊಂದರೆಯಾಗದಂತೆ ಸಾಗಿಸಿ, ಚಿಪ್ಪಿನಲ್ಲಿ ಮಳೆನೀರು ಸಂಗ್ರಹ ವಾಗದಂತೆ ನೋಡಿಕೊಳ್ಳಬೇಕು. ಅಪಾರ್ಟ್‌ಮೆಂಟ್ ನಿರ್ಮಾಣ ಮಾಲಕರು ಏಳು ದಿನಗಳಿಗಿಂತ ಹೆಚ್ಚು ಕಾಲ ನೀರು ನಿಂತು ಸೊಳ್ಳೆ ಉತ್ಪತ್ತಿ ಯಾಗದಂತೆ ನೋಡಿಕೊಳ್ಳಬೇಕು ಎಂದು ಮನಪಾ ಆರೋಗ್ಯ ಅಧಿಕಾರಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಮನಪಾ ವಿಧಿಸುವ ದಂಡವನ್ನು ತೆರತಕ್ಕದ್ದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
Tagged with
dk,
lnews
ಮೂಡುಬಿದಿರೆ: ಮುಡುಬಿದಿರೆಗ ಸಂಬಂಧಿಸಿ ಹೆಸರು ಬರೆಯುವಾಗ ಮುಡಬಿದಿರೆ,ಮುಡಬಿದ್ರೆ, ಮೂಡುಬಿದ್ರಿ, ಮೂಡಬಿದರೆ ಹೀಗೆ ಬೇರೆ ಬೇರೆ ರೀತಿ ಬರೆಯಲಾಗುತ್ತಿತ್ತು. ಈ ಬಗ್ಗೆ ಪತ್ರಕರ್ತ ಮೂಡುಬಿದಿರೆಗೆ ಗಣೇಶ್ ಕಾಮತ್ ಅವರು ಈ ಹೆಸರು ಬಳಕೆಯ ಗೊಂದಲಗಳ ಬಗ್ಗೆ ಮೂಡುಬಿದಿರೆ ಪುರಸಭೆಗೆ ಮನವಿ ನೀಡಿದ್ದರು.
ಆ ಮನವಿ ವಿಷಯ ಸೋಮವಾರ ನಡೆದ ಪುರಸಭಾಧಿವೇಶನದಲ್ಲಿ ಪ್ರಸ್ತಾಪಗೊಂಡು ಸರ್ವಸದಸ್ಯರೂ ಮೂಡುಬಿದಿರೆ ಎಂಬುದಾಗಿ ಬಳಕೆ ಮಾಡುವಂತೆ ನಿರ್ಣಯ ಮಾಡಿದ್ದಾರೆ. ನಿರ್ಣಯ ಜಿಲ್ಲಾಧಿಕಾರಿ ಯವರಿಗೆ ತಲುಪಬೇಕಿದು ಅವರ ಅಧಿಕೃತ ಒಪ್ಪಿಗೆ ಇನ್ನಷ್ಟೇ ಸಿಗಬೇಕಿದ್ದು, ಎಲ್ಲಗೊಂದಲ ಗಳಿಗೆ ತೆರೆಬಿದ್ದಿದ್ದು ಇನ್ನುಮುಂದೆ ಮೂಡುಬಿದಿರೆ ಎಂದೇ ಬರೆದುಕೊಳ್ಳಬೇಕಿದೆ.
Tagged with
dk,
lnews
ಬೆಳ್ತಂಗಡಿ: ಶೇಂದಿ ವ್ಯಾಪಾರಿಯೋರ್ವರನ್ನು ಅಪರಿಚಿತ ದುಷ್ಕರ್ಮಿಗಳು ಕಡಿದು ಕೊಲೆ ಮಾಡಿರುವ ಘಟನೆ ಧರ್ಮಸ್ಥಳ ಸನಿಹ ಸೋಮವಾರ ತಡರಾತ್ರಿ ನಡೆದಿದೆ.
ಸನಿಹದ ಬೊಳಿಯಾರ್ ಎಂಬಲ್ಲಿ ಅದೇ ಊರಿನ ನಿವಾಸಿ ಶಚೀಂದ್ರನ್ (೪೫) ಎಂಬವರೇ ಹತ್ಯೇಗೀಡಾದವರು. ಇವರು ರಾತ್ರಿ ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿಂದ ತನ್ನ ಮನೆ ಬೊಳಿಯಾರ್‌ಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಮಾರ್ಗ ಮಧ್ಯೆ ಅಪರಿಚಿತರು ತಲವಾರಿನಿಂದ ಕಡಿದಿ ದ್ದಾರೆ. ಶಚೀಂದ್ರನ್ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಇವರು ಮರಳು ಸಾಗಾಟದ ವ್ಯವಹಾರವನ್ನೂ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಧರ್ಮಸ್ಥಳದದಿಂದ ಸುಮಾರು ೩ ಕಿ.ಮೀ.ದೂರವಿದ್ದು ಮುಖ್ಯ ರಸ್ತೆಯಿಂದ ಸುಮಾರು ೨೦೦ ಮೀ.ದೂರದಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೋಲಿಸರು ಭೇಟಿ ನೀಡಿ ದ್ದಾರೆ. ಶ್ವಾನ ದಳದವರೂ ಆಗಮಿಸಿದ್ದು ಶ್ವಾನವು ಕೆಲವು ದೂರದವರೆಗೆ ಹೋಗಿ ವಾಪಸ್ ಬಂದಿದೆ. ಸ್ಥಳದಲ್ಲಿ ತಲವಾರಿನ ಚೂರುಗಳು ಬಿದ್ದಿದ್ದವು.
Tagged with
cnews,
feature
ಪ್ರಿಯತಮನ ಕಟ್ಟಿಹಾಕಿ ಮಾನ ಸೂರೆಗೈದರು!
ಮಂಗಳೂರು: ಮಲೇಷ್ಯಾ ಮೂಲದ ಪ್ರಸ್ತುತ ಮಣಿಪಾಲದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾ ರ್ಥಿನಿಯನ್ನು ಮದ್ಯದ ಅಮಲಿನಲ್ಲಿದ್ದ ಕಾಮುಕರ ತಂಡವೊಂದು ಆಕೆಯ ಪ್ರಿಯತಮನ ಎದುರೇ ಸರಣಿ ಅತ್ಯಾ ಚಾರ ನಡೆಸಿರುವ ಹೇಯಕೃತ್ಯವೊಂದು ಕೆಲವು ದಿನಗಳ ಹಿಂದೆ ಮಲ್ಪೆ ಬೀಚ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ: ಮಣಿ ಪಾಲದ ಪೇಯಿಂಗ್ ಗೆಸ್ಟ್ ಒಂದರಲ್ಲಿ ಉಳಿದುಕೊಂಡಿರುವ ಮಲೇಷ್ಯಾ ಮೂಲದ ವಿದ್ಯಾರ್ಥಿನಿ ಕೆಲವು ದಿನಗಳ ಹಿಂದೆ ರಾತ್ರಿ ಏಳರ ಸುಮಾರಿಗೆ ತನ್ನ ಪ್ರಿಯತಮನ ಜೊತೆ ಮಲ್ಪೆ ಬೀಚ್‌ಗೆ ಬಂದಿದ್ದಳು. ಈ ವೇಳೆ ಬೀಚ್‌ಗೆ ಹತ್ತಿರದ ಮನೆಯೊಂದರಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿತ್ತೆನ್ನಲಾಗಿದೆ. ಮೆಹಂದಿಗೆ ಬಂದಿದ್ದ ಕೆಲವು ಮಂದಿ ಯುವಕರು ಮದ್ಯದ ಬಾಟಲಿಗಳನ್ನು ಹಿಡಿದು ಬೀಚ್‌ನಲ್ಲೇ ಮದ್ಯಾರಾಧನೆ ಯಲ್ಲಿ ತೊಡಗಿದ್ದು, ಅವರ ಕಣ್ಣಿಗೆ ಜೋಡಿ ಬಿದ್ದಿತ್ತು.
ರಾತ್ರಿಯ ವೇಳೆ ಸ್ವಚ್ಛಂದಾಗಿ ವಿಹ ರಿಸುತ್ತಿದ್ದ ಜೋಡಿಯನ್ನು ಹಿಂಬಾ ಲಿಸಿಕೊಂಡು ಹೋದ ಕಾಮುಕರ ತಂಡ ಜೋಡಿಯನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದ್ದು, ಬಳಿಕ ವಿದ್ಯಾರ್ಥಿನಿಯೊಂ ದಿಗಿದ್ದ ಪ್ರಿಯತಮನನ್ನು ಥಳಿಸಿ ಮರಕ್ಕೆ ಕಟ್ಟಿಹಾಕಿ ಆತನ ಕಣ್ಣೆದುರೇ ಸರಣಿ ಅತ್ಯಾಚಾರ ನಡೆಸಿದ್ದಾರೆ ಎಂದು ನಂಬ ಲರ್ಹ ಮೂಲಗಳಿಂದ ತಿಳಿದು ಬಂದಿದೆ. ಐದು ಮಂದಿ ಯುವಕರೂ ಕಂಠಪೂರ್ತಿ ಮದ್ಯ ಸೇವಿಸಿ ಒಬ್ಬರ ಬಳಿಕ ಒಬ್ಬರು ವಿದ್ಯಾರ್ಥಿನಿಯ ಮಾನ ಸೂರೆಗೈದು ತಡರಾತ್ರಿಯ ಬಳಿಕ ಜೋಡಿಯನ್ನು ಬೆದರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಘಟನೆಯ ಬಗ್ಗೆ ಉಡುಪಿ, ಮಲ್ಪೆ ಪರಿಸರದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಘಟನೆಗೆ ಸಂಬಂಧಿಸಿ ಇಬ್ಬರು ಯುವಕರನ್ನು ಮಲ್ಪೆ ಪೊಲೀ ಸರು ವಿಚಾರಣೆಗಾಗಿ ವಶಕ್ಕೆ ಪಡೆದು ಬಿಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಮಲ್ಪೆ ಪೊಲೀಸರು ಮಾತ್ರ ‘ಹಾಗೇನೂ ನಡೆದೇ ಇಲ್ಲ, ‘ನಮಗೆ ಗೊತ್ತೇ ಇಲ್ಲ ಎನ್ನುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ವಿದ್ಯಾ ರ್ಥಿನಿ ಘಟನೆಯಿಂದ ಮಾನಸಿಕ ಆಘಾ ತಕ್ಕೊಳಗಾಗಿದ್ದು, ಭಾರತದಲ್ಲಿರುವ ವಿದೇಶಿ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ದೂರು ನೀಡಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಮಲ್ಪೆ ಬೀಚ್ ಸೌಂದರ್ಯಕ್ಕೆ ಮಾರುಹೋಗಿ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದು, ವಾರಾಂತ್ಯದ ದಿನಗಳಲ್ಲಿ ಇಲ್ಲಿನ ದ್ವೀಪ, ರೆಸಾರ್ಟ್‌ಗೆ ಸಾವಿರಾರು ಪ್ರವಾಸಿಗರು ಭೇಟಿ ಕೊಡುತ್ತಾರೆ.
ಮಣಿಪಾಲ, ಉಡುಪಿ ಮಾತ್ರವಲ್ಲದೆ ಹೊರರಾಜ್ಯ, ದೇಶಗಳ ಪ್ರಣಯ ಪಕ್ಷಿಗಳಿಗೂ ಇಲ್ಲಿನ ಪರಿಸರ ಆಕರ್ಷಣೀಯವಾಗಿದೆ. ಇಲ್ಲಿ ವಾರದ ಹೆಚ್ಚಿನ ದಿನಗಳಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಪುಂಡರ ತಂಡ ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದು, ಜೋಡಿಯನ್ನು ಬೆದರಿಸಿ ಮಾನ ಹರಣಕ್ಕೆ ಯತ್ನಿಸುವ, ನಗ-ನಗದು ದೋಚಿ ಪರಾರಿಯಾಗುವ ಘಟನೆಗಳು ಈ ಹಿಂದೆ ನಡೆದಿದ್ದನ್ನು ಸ್ಮರಿಸಬಹುದಾಗಿದೆ. ಇಷ್ಟೇ ಅಲ್ಲದೆ ಬೈಕ್, ಕಾರುಗಳಲ್ಲಿ ಬೀಚ್ ರಸ್ತೆಯಲ್ಲಿ ಓಡಾಡುತ್ತಾ ಹೆಣ್ಮಕ್ಕಳನ್ನು ಚುಡಾಯಿಸುವ ವಿಕೃತಕಾಮಿಗಳಿಂದ ಬೀಚ್‌ಗೆ ಸಭ್ಯ ಪ್ರವಾಸಿಗರು ಕಾಲಿಡುವುದೇ ಅಸಾಧ್ಯ ಎಂಬ ಆರೋಪಗಳೂ ಕೇಳಿಬರುತ್ತಿದೆ. ಇಲ್ಲಿ ಬೀಚ್‌ಗೆ ತೀರಾ ಸಮೀಪದಲ್ಲೇ ಪೊಲೀಸ್ ಠಾಣೆಯಿದ್ದರೂ, ‘ಇಲ್ಲಿ ನಡೆಯುವ ಕುಕೃತ್ಯಗಳಿಗೂ-ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಪೊಲೀಸರಿದ್ದಾರೆ ಎಂಬ ಆರೋಪ ನಾಗರಿಕ ವಲಯದಿಂದ ಕೇಳಿಬಂದಿದೆ.
ರೇವ್‌ಪಾರ್ಟಿ ಎಫೆಕ್ಟ್!?
ಕೆಲ ತಿಂಗಳ ಹಿಂದೆ ಮಲ್ಪೆ ಬೀಚ್‌ನ ಸೈಂಟ್‌ಮೆರೀಸ್ ದ್ವೀಪದಲ್ಲಿ ‘ಸ್ಟ್ರಿಂಗ್ ಝೂಕ್ ಹೆಸರಿನಲ್ಲಿ ವಿದೇಶಿ ರೇವ್‌ಪಾರ್ಟಿ ನಡೆದಿತ್ತು. ಮೂರು ದಿನ ನಡೆದ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಡಳಿತ ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ಪ್ರಾಯೋಜಿಸಿದ್ದು, ಅಂದಾಜು ಮೂರು ಸಾವಿರಕ್ಕೂ ಅಧಿಕ ವಿದೇಶಿ ಜೋಡಿ ಪಾಲ್ಗೊಂಡು ಮರಳಹಾಸಿನ ಮೇಲೆ ಮನಸೋ ಇಚ್ಛೆ ಹೊರಳಾಡಿ ‘ಸ್ವರ್ಗಕ್ಕೆ ಮೂರೇ ಗೇಣು ಎಂದು ಕುಣಿದು ಕುಪ್ಪಳಿಸಿತ್ತು. ಮದ್ಯ-ಮದಿರೆ-ಮಾನಿನಿಯ ಸಂಗದಲ್ಲಿ ಸಂಸ್ಕೃತಿ ಮರೆತ ಆಡಳಿತ ಪಕ್ಷದ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳೂ ಪಾಲ್ಗೊಂಡು ವಿದೇಶಿಯರ ಎಲ್ಲಾ ಬೇಡಿಕೆಗೂ ‘ಎಸ್ ಅಂದಿದ್ದರು. ಸದ್ಯ ಮಲ್ಪೆ ಬೀಚ್‌ನ ಪರಿಸ್ಥಿತಿ ಹೇಗಿದೆಯೆಂದರೆ, ಹೆಣ್ಮಕ್ಕಳು ಸ್ವಚ್ಛಂದವಾಗಿ ತಿರುಗಾಡುವಂತಿಲ್ಲ. ಬೀಚ್‌ನಲ್ಲಿ ಜೋಡಿ ವಿಹರಿಸುವಂತಿಲ್ಲ. ಇನ್ನೂ ಬಿಳಿ ತೊಗಲಿನ ವಿದೇಶಿ ಮಾನಿನಿಯರ ಭ್ರಮಾಲೋಕದಿಂದ ಹೊರಬರದ ಪುಂಡರು ಬೀಚ್‌ಗೆ ಬರುವ ಎಲ್ಲರನ್ನೂ ‘ಒಂದೇ ದೃಷ್ಟಿಯಿಂದ ನೋಡುವುದು, ಹಿಂಬಾಲಿಸಿಕೊಂಡು ಹೋಗಿ ಪ್ರೇಮ, ಕಾಮಭಿಕ್ಷೆ ಬೇಡುವುದು ಮಾಮೂಲಿಯಾಗಿದೆ ಎನ್ನುತ್ತಾರೆ ಸ್ಥಳೀಯರು. ವಿದೇಶಿ ವಿದ್ಯಾರ್ಥಿನಿಯ ಸರಣಿ ಅತ್ಯಾಚಾರಗೈದವರು ಪ್ರಮುಖ ರಾಜಕೀಯ ಪಕ್ಷದ ಹಿಂಬಾಲಕರು ಮತ್ತು ಅದರ ಪರಿವಾರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಕಾರಣ ಪೊಲೀಸರು ಕಾಣದ ಕೈಗಳ ಒತ್ತಡಕ್ಕೆ ಒಳಗಾಗಿ ತನಿಖೆಯಲ್ಲಿ ನಿರಾಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಮಲ್ಪೆ ಬೀಚ್ ಕಾಮುಕರ ಅಡ್ಡೆಯಾಗುವ ಮುನ್ನ ಉಡುಪಿ ಎಸ್.ಪಿ. ಸಾಹೇಬರು ತುರ್ತು ಗಮನಿಸಲಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
Tagged with
cnews,
feature
ಮೂರುವರೆ ಗಂಟೆ ಬೆನ್ನುಬಿದ್ದು ಹಿಡಿದ ಬಜರಂಗಿಗಳು
ಮಂಗಳೂರು: ಮಧ್ಯವಯಸ್ಕ ಮಹಿಳೆಯೋರ್ವರು ಇನ್ನೊಂದು ಮಹಿಳೆಯನ್ನು ಜತೆಯಲ್ಲಿಟ್ಟುಕೊಂಡು ಆಕೆಯನ್ನು ವೇಶ್ಯಾವಾಟಿಕೆಗಾಗಿ ನೀಡಲು ಓರ್ವ ವ್ಯಕ್ತಿಯನ್ನು ಸೆಟ್ಟಿಂಗ್ ಮಾಡಿದ್ದಳು. ಈ ಬಗ್ಗೆ ಮಾಹಿತಿಯರಿತ ಬಜರಂಗಿಗಳು ಅವರ ಬೆನ್ನು ಬಿದ್ದರು. ಮೂರು ಗಂಟೆಯ ಕಾರ್ಯಾಚರಣೆಯ ಬಳಿಕ ನಾಲ್ಕು ಮಂದಿಯನ್ನೂ ರೆಡ್ ಹ್ಯಾಂಡಾಗಿ ಪೊಲೀಸರಿಗೆ ಒಪ್ಪಿಸಿದರು. ಆದರೆ ಅದಾಗಲೇ ಅವರ ಕೆಲಸವೂ ಫಿನಿಷ್ ಆಗಿತ್ತು. ಸೆರೆಸಿಕ್ಕ ಪುರುಷ ಮಾತ್ರ ಪಿಡಬ್ಲ್ಯುಡಿ ಗುತ್ತಿಗೆದಾರನಾಗಿದ್ದು ವಿಶೇಷವಾಗಿತ್ತು.
ಇದು ನಿನ್ನೆ ನಗರದಲ್ಲಿ ನಡೆದ ಕುತೂಹಲಕಾರಿ ಪ್ರಕರಣ. ಪಾಂಡೇಶ್ವರದ ಮಧ್ಯವಯಸ್ಕ ಮಹಿಳೆಯೋರ್ವರು ಹಿಂದಿನಿಂದಲೂ ವೇಶ್ಯಾವಾಟಿಕೆಯಲ್ಲಿ ಪಿಂಪ್ ಆಗಿ ಕಾರ್ಯನಿರ್ವಸುತ್ತಿದ್ದವರು. ಅದರಂತೆ ನಿನ್ನೆ ಬೆಳಗ್ಗೆಯೇ ಆಕೆಗೆ ಪಿಡಬ್ಲ್ಯುಡಿ ಗುತ್ತಿಗೆದಾರ ದೊಡ್ಡ ಮನುಷ್ಯ ಎನಿಸಿಕೊಂಡಿರುವ ವೆಂಕಟೇಶ್ ಎಂಬಾತ ಕರೆ ಮಾಡಿ ದೇಹಸುಖಕ್ಕೆ ಯಾರಾದರೂ ಇದ್ದರೆ ತಿಳಿಸಿ ಎಂದಿದ್ದ.
ಈ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಮಹಿಳೆ ಎರಡು ಮಕ್ಕಳ ತಾಯಿಯನ್ನು ಗೊತ್ತು ಮಾಡಿ ನಿಗದಿತ ಶುಲ್ಕ ಫಿಕ್ಸ್ ಮಾಡಿದ್ದಳು. ಅದರಂತೆ ಗುತ್ತಿಗೆ ಮನುಷ್ಯ ೧೧ ಗಂಟೆಗೆ ಬಿಜೈಯಲ್ಲಿರುವ ಲಾಡ್ಜೊಂದಕ್ಕೆ ಬರುವಂತೆ ಸೂಚಿಸಿದ್ದ. ಇಬ್ಬರು ಮಹಿಳೆಯರು ಲಾಡ್ಜ್‌ಗೆ ಬರುವ ಮಾಹಿತಿಯರಿತ ಬಜರಂಗಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು ಅದ್ಹೇಗೋ ಲಾಡ್ಜ್‌ನವರಿಗೆ ಗೊತ್ತಾಗಿ ರೂಂ ನೀಡಲು ನಿರಾಕರಿಸಿದರು.
ಅಲ್ಲಿಂದ ಗುಳೇ ಹೊರಟ ಮಹಿಳೆಯರು ಲಾಡ್ಜ್‌ಗಾಗಿ ನಗರವಿಡೀ ತಿರುಗಾಡಿದರು. ಆದರೆ ಅದೇನೋ ಗ್ರಹಚಾರಕ್ಕೆ ಲಾಡ್ಜ್ ಸಿಗಲೇ ಇಲ್ಲ. ಕೊನೆಗೆ ಪಡೀಲ್ ರೈಲ್ವೇ ಗೇಟ್ ಬಳಿಯಿರುವ ಮಹಿಳೆಯೋರ್ವರನ್ನು ಸಂಪರ್ಕಿಸಿ ಅವರ ಮನೆಯ ಕೋಣೆಯೊಂದಕ್ಕೆ ಎರಡು ಸಾವಿರ ಶುಲ್ಕಕ್ಕೆ ಡೀಲಿಂಗ್ ಮಾಡಿ ಗುತ್ತಿಗೆದಾರನಿಗೆ ಫೋನಾಯಿಸಿದ್ದರು. ಮಧ್ಯಾಹ್ನ ೨.೩೦ರ ವೇಳೆಗೆ ತನ್ನ ಸ್ಕಾರ್ಪಿಯೋದಲ್ಲಿ ಬಂದಿದ್ದ ಗುತ್ತಿಗೆದಾರ ಮನೆಯೊಳಗೆ ಪ್ರವೇಶಿಸಿ ಬಾಗಿಲು ಭದ್ರಪಡಿಸಿದ್ದ.
ಆದರೆ ಬಜರಂಗಿಗಳು ಇವರ ಬೆನ್ನು ಹತ್ತಿ ಪಡೀಲ್‌ವರೆಗೂ ಬಂದಿದ್ದರು. ಗುತ್ತಿಗೆದಾರ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಬಜರಂಗಿಗಳು ಕಂಕನಾಡಿ ಇನ್ಸ್‌ಪೆಕ್ಟರ್ ರವೀಶ್ ನಾಯಕ್‌ಗೆ ಕರೆ ಮಾಡಿದ್ದರು. ಮಿಂಚಿನ ವೇಗದಲ್ಲಿ ಸ್ಥಳಕ್ಕೆ ಧಾವಿಸಿದ ಸಾಹೇಬರು ಕೋಣೆಯ ಬಾಗಿಲು ಬಡಿದಾಗ ಗುತ್ತಿಗೆದಾರ ತನ್ನ ಕೆಲಸ ಅರ್ಧದಲ್ಲೇ ನಿಲ್ಲಿಸಿ ಹೊರಗೆ ಬಂದಿದ್ದಾನೆ. ಖಾಕಿಧಾರಿ ಸಾಹೇಬರು ಎಲ್ಲರನ್ನೂ ಗದರಿಸಿ ಅವರ ಜತೆ ಸ್ಕಾರ್ಪಿಯೋವನ್ನೂ ಠಾಣೆಗೆ ಸಾಗಹಾಕಿ ಪಿಟ್ಟಿಕೇಸ್ ಹಾಕಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
Tagged with
cnews,
feature
ಮಂಗಳೂರು: ಕೊಲೆ ಆರೋಪಿಯಾಗಿ ಜೈಲು ಸೇರಿದ್ದ ಮಝರ್ ಎಂಬಾತನಿಗೆ ವಿಚಾರಣಾಧೀನ ಖೈದಿಗಳು ಹಲ್ಲೆ ನಡೆಸಿ ತಲೆ ಒಡೆದ ಘಟನೆ ಸಬ್ ಜೈಲ್‌ನಲ್ಲಿ ನಡೆದಿದ್ದು ಇದಕ್ಕೆ ಪ್ರತಿಕಾರವಾಗಿ ಮಝರ್ ಬೆಂಬಲಿಗ ಖೈದಿಗಳು ಹಲ್ಲೆ ನಡೆಸಿದ್ದಾರೆ. ಮೂಲಕ ಜೈಲು ಸಿಬ್ಬಂದಿಯ ನಿರ್ಲಕ್ಷ್ಯತನ ಇನ್ನೊಮ್ಮೆ ಬಯಲಿಗೆ ಬಂದಂತಾಗಿದೆ.
ಉಳ್ಳಾಲದ ಅಬ್ದುಲ್ ಮಝರ್ ಎಂಬಾತನೇ ಹಲ್ಲೆಗೊಳಗಾದವನು. ಈತ ಫೆಬ್ರವರಿ ೧೪ರಂದು ನಗರದಲ್ಲಿ ನಡೆದಿದ್ದ ಟೆಕ್ಸ್‌ಟೈಲ್ ವ್ಯವಸ್ಥಾಪಕ ದಿನೇಶ್ ರಾಜ್ ಎಂಬಾತನ ಕೊಲೆ ಆರೋಪಿಯಾಗಿದ್ದು, ಕಳೆದ ಒಂದೂವರೆ ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ.
ನಿನ್ನೆ ಬೆಳಗ್ಗೆ ಈತ ಹಾಗೂ ಇತರ ಖೈದಿಗಳಾದ ಪ್ರವೀಣ್ ಕುಲಾಲ್, ವಿಶ್ವನಾಥ ಪೂಜಾರಿ, ಶಿವರಾಜ್ ಮತ್ತು ಸೋಮನಾಥ ಯಾನೆ ಸೋಮು ಇವರ ಮಧ್ಯೆ ಸಣ್ಣ ವಿಷ ಯಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿತ್ತು. ಇದು ವಿಕೋಪಕ್ಕೆ ತಿರು ಗಿದ್ದು ಇದೇ ವೇಳೆ ಆರೋಪಿಗಳು ಮಝರ್‌ಗೆ ತಂಬಿಗೆ ಮತ್ತು ಕೈಯಿಂದ ಹಲ್ಲೆ ನಡೆಸಿದ್ದರು. ಘಟನೆಯಿಂದಾಗಿ ಮಝರ್‌ನ ತಲೆ ಒಡೆದಿದ್ದು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇದಕ್ಕೆ ಪ್ರತಿಕಾರವಾಗಿ ನೀಲಯ್ಯ ಪೂಜಾರಿ, ಪ್ರವೀಣ್, ಪ್ರ ವೀಣ್ ಕುಲಾಲ್, ಅಶೋಕ, ಸೋಮನಾಥ, ಮತ್ತು ಶಿವರಾಜ್ ಮೇಲೆ ಜೈಲಿನಲ್ಲಿ ಹಲ್ಲೆ ನಡೆದಿದೆ.
ಮಝರ್‌ಗೆ ಹಲ್ಲೆ ನಡೆಸಿ ಪೆಟ್ಟು ತಿಂದ ಆರೋಪಿಗಳು ಆರು ತಿಂಗಳ ಹಿಂದೆ ಕಾರ್ಕಳದಲ್ಲಿ ನಡೆದ ರೌಡಿ ಸುಲೈಮಾನ್ ಕೊಲೆ ಆರೋಪಿಗಳಾಗಿದ್ದಾರೆ. ಕಳೆದ ಐದು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಇವರಿಗೆ ನ್ಯಾಯಾಲಯ ಜಾಮೀನು ನೀಡಿದ್ದರೂ ಜಾಮೀನುದಾರನಿಲ್ಲದ ಕಾರಣ ಮತ್ತೆ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು.
ಮುಂದುವರಿದ ಅವ್ಯವಸ್ಥೆ: ಕಳೆದ ಕೆಲವು ವರ್ಷಗಳಿಂದ ಮಂಗಳೂರು ಸಬ್‌ಜೈಲ್ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿರುವ ವಿಚರಣಾಧೀನ ಖೈದಿಗಳಿಗೆ ಮೊಬೈಲ್‌ಗಳು, ಗಾಂಜಾ ಮುಂತಾದ ವಸ್ತುಗಳು ಲೀಲಾಜಾಲವಾಗಿ ಕೈಸೇರುತ್ತಿದೆ ಎನ್ನುವ ಆರೋಪವೂ ಇದೆ. ಅಲ್ಲದೆ ಇಲ್ಲಿ ವಿಚಾರಣಾ ಖೈದಿಗಳ ನಡುವೆ ಮಾರಾಮಾರಿ ಮಾಮೂಲಿ ವಿಷಯವಾಗಿದ್ದರೂ ದೊಡ್ಡ ಪ್ರಕರಣಗಳು ಮಾತ್ರವೇ ಹೊರ ಬರುತ್ತಿದೆ ಎನ್ನುವ ಆರೋಪಗಳಿವೆ. ಖೈದಿಗಳನ್ನು ಮನೆಮಂದಿ ಮಾತನಾಡಿಸಬೇಕಿದ್ದರೂ ಸಿಬ್ಬಂದಿ ಕೈಬಿಸಿ ಮಾಡಬೇಕಾಗಿದೆ ಎನ್ನುವ ದೂರುಗಳೂ ಕೇಳಿ ಬಂದಿದೆ. ನಿನ್ನೆಯ ಘಟನೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಒಂದು ಉದಾಹರಣೆಯಾಗಿದೆ.
Tagged with
cnews,
feature
ಉಡುಪಿ: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಮಂಗಗಳೇ ಮುಂತಾದ ಕಾಡುಪ್ರಾಣಿಗಳ ಹಾವಳಿಯಿಂದಾಗಿ ನಾಶವಾಗುತ್ತಿದೆ. ಇದರಿಂದಾಗಿ ರೈತರು ಕಂಗೆಟ್ಟಿದ್ದು, ರೈತರು ಕೃಷಿಯನ್ನೇ ಮಾಡದಿರುವ ನಿರ್ಧಾರಕ್ಕೆ ಬರುವಂತಾಗಿದೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಸಮಸ್ಯೆಗಳನ್ನು ಪರಿಹರಿ ಸುವಂತೆ ಸರಕಾರವನ್ನು ಒತ್ತಾಯಿಸಲು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಘಟಕವು ಮೇ ೧೬ ರಂದು ಬೃಹತ್ ರ‍್ಯಾಲಿ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
೧೬ರ ಬೆಳಗ್ಗೆ ಗಂಟೆ ೧೦.೩೦ಕ್ಕೆ ಮಣಿಪಾಲ ಬಸ್ ನಿಲ್ದಾಣ ಪಕ್ಕದ ಟೈಗರ್ ಸರ್ಕಲ್‌ನಲ್ಲಿ ಸಭೆ ಸೇರಲಿರುವ ಸುಮಾರು ೪ ರಿಂದ ೫ ಸಾವಿರ ಜನ ರೈತರು, ಬಳಿಕ ಇಲ್ಲಿಂದ ಮೆರವಣಿಗೆಯ ಮೂಲಕ ಎಂಡ್‌ಪಾಯಿಂಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಲಿದ್ದಾರೆ.
ಕಾಡಿನಲ್ಲಿ ಪ್ರಾಣಿ- ಪಕ್ಷಿಗಳಿಗೆ ಸಮರ್ಪಕವಾದ ಆಹಾರ ಲಭಿಸದಿರುವ ಕಾರಣಕ್ಕೆ ಮಂಗ, ಕಾಡುಕೋಣ, ಕಾಡುಹಂದಿ, ಜಿಂಕೆ, ಕಡವೆ, ಚಿರತೆ, ನವಿಲು ಮೊದಲಾ ದವುಗಳು ರೈತರ ಕೃಷಿಭೂಮಿಗಳಿಗೆ ಲಗ್ಗೆಯಿಟ್ಟು ರೈತರು ಬೆಳೆದ ಸುಮಾರು ೮೦ ಶೇಕಡಾ ಬೆಳೆಯನ್ನು ತಿಂದು ಅಥವಾ ಹಾಳು ಮಾಡಿ ಹಾಕುತ್ತಿವೆ. ಈ ಸಮಸ್ಯೆಯ ಪರಿಹಾರಕ್ಕೆ ಒತ್ತಾಯಿಸಿ ಕಳೆದ ೨ ವರ್ಷಗಳಿಂದ ಭಾಕಿಸಂ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ವಿ.ಎಸ್.ಆಚಾರ್ಯ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಪದೇ ಪದೇ ಮನವಿಗಳನ್ನು ನೀಡಿದೆಯಾದರೂ ಯಾರೊಬ್ಬರೂ ಸೂಕ್ತವಾಗಿ ಸ್ಪಂದಿಸಿಲ್ಲ. ಈ ನಿಟ್ಟಿನಲ್ಲಿ ಇದುವರೆಗೆ ಯಾವುದೇ ಪ್ರಯೋಜನವಾಗದ ಕಾರಣ ಪ್ರತಿಭಟನೆ ಸಂಘಟಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಬಿ.ವಿ.ಪೂಜಾರಿ ಪೆರ್ಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಗಗಳ ಹಾವಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಂಘದ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾಗೆ ತೆರಳಿ ಅಲ್ಲಿನ ಸರಕಾರ ಮಂಗಗಳ ಹಾವಳಿಗೆ ಕೈಗೊಂಡ ಕ್ರಮಗಳ ಬಗ್ಗೆ ಸಮೀಕ್ಷೆ ನಡೆಸಿದೆ. ಸಮೀಕ್ಷಾ ವರದಿಯನ್ನು ಸಂಘ ಮತ್ತು ಅರಣ್ಯ ಇಲಾಖೆ ಸರಕಾರಕ್ಕೆ ಸಲ್ಲಿಸಿದೆಯಾದರೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸಂಘ ತಿಳಿಸಿದೆ.
ಕಾಡುಪ್ರಾಣಿಗಳ ಹಾವಳಿಯಿಂದ ರೈತರನ್ನು ರಕ್ಷಿಸಲು ಶಾಶ್ವತ ಪರಿಹಾರೋಪಾಯಗಳನ್ನು ಸರಕಾರ ಕಂಡುಕೊಳ್ಳದೇ ಇದ್ದಲ್ಲಿ ರೈತರು ಕೃಷಿಯಿಂದ ವಿಮುಖರಾಗುವುದು ಖಚಿತ ಎಂದು ಎಂದು ಸ್ಪಷ್ಟಪಡಿಸಿರುವ ಭಾಕಿಸಂ, ಸಮಸ್ಯೆಯ ಪರಿಹಾರಕ್ಕಾಗಿ ೯ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ.
ಘಟನೆಯನ್ನು ಖಂಡಿಸಿದ ಇತರ ಬಸ್ ಸಿಬ್ಬಂದಿ ಕಾವೂರು ಠಾಣೆಯೆದುರು ಬಸ್‌ಗಳನ್ನು ನಿಲ್ಲಿಸಿ ನ್ಯಾಯಕ್ಕಾಗಿ ಒತ್ತಾಯಿಸಿದರು. ಸಂಜೆ ಐದು ಗಂಟೆಗೆ ಹಲ್ಲೆಕೋರ ಹಾಗೂ ಆತನ ಕಡೆಯವರು ಠಾಣೆಗೆ ಬಂದಿದ್ದು ರಾಜಿ ಪಂಚಾಯಿತಿಗೆಯಲ್ಲಿ ಪ್ರಕರಣ ಇತ್ಯರ್ಥಗೊಳಿಸಲಾಯಿತು.
Tagged with
feature,
lnews,
udupi
ಮಂಗಳೂರು: ದಾರಿ ಕೊಡಲಿಲ್ಲ ಎನ್ನುವ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡ ಬೈಕ್ ಸವಾರನೋರ್ವ ಬಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ್ದನ್ನು ಖಂಡಿಸಿದ ಇತರ ಸಿಬ್ಬಂದಿ ಬಸ್‌ಗಳನ್ನು ಕಾವೂರು ಠಾಣೆಯೆದುರು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ನಿನ್ನೆ ಮಧ್ಯಾಹ್ನ ಮಂಗಳೂರಿನಿಂದ ಹೋಗಿದ್ದ ೩೩ ನಂಬರಿನ ಬಸ್ ೩.೩೦ರ ವೇಳೆಗೆ ಆಕಾಶಭವನ ತಲುಪಿತ್ತು. ಅದೇ ವೇಳೆ ಬಸ್ಸಿನ ಹಿಂದಿನಿಂದ ಬಂದ ಬೈಕ್ ಸವಾರ ನಿಶಾಂತ್ ಎಂಬಾತ ಸೈಡ್ ಕೊಡಲಿಲ್ಲ ಎನ್ನುವ ಕ್ಷುಲ್ಲಕ ಕಾರಣವೊಡ್ಡಿ ಬಸ್ ಚಾಲಕ ಅಹ್ಮದ್ ಬಾವ ಮತ್ತು ನಿರ್ವಾಹಕ ಇಸ್ಮಾಯಿಲ್ ಎಂಬವರ ಮೇಲೆ ಹಲ್ಲೆ ನಡೆಸಿದ್ದ.
Tagged with
dk,
feature,
lnews
ಪಡುಬಿದ್ರೆ: ಬೆಳ್ಳೆ ಗ್ರಾಮದ ಪಡುಬೆಳ್ಳೆಯಲ್ಲಿ ನೆರೆ ನೀರು ಹರಿಯುವ ತೋಡಿಗೆ ಅಡ್ಡವಾಗಿ ತರಾತುರಿಯಲ್ಲಿ ನಿರ್ಮಿಸುತ್ತಿದ್ದ ಕಾಲು ಸೇತುವೆಗೆ ಗ್ರಾಮಸ್ಥರು ತಡೆಯೊಡ್ಡಿದ ಘಟನೆ ಸೋಮವಾರ ನಡೆಯಿತು.
ಪರಿಸರದ ಗ್ರಾಮಸ್ಥರ ಗಮನಕ್ಕೆ ತರದೆ ಅತೀ ಅವಸರದಲ್ಲಿ ಪಡುಬೆಳ್ಳೆ ಗರೋಡಿಯ ಹಿಂಭಾಗದಲ್ಲಿ ಬೈಲು ಗದ್ದೆಯ ಬದಿಯಲ್ಲಿ ಇರುವಂತಹ ನೀರು ಹರಿಯುವ ತೋಡಿಗೆ ಅಡ್ಡವಾಗಿ ಕಾಲು ಸೇತುವೆ ಎಂದು ಎರಡು ಸಿಮೆಂಟ್ ಪೈಪುಗಳನ್ನು ಹಾಕಿ, ನೆರೆ ನೀರು ಹರಿಯಲು ತಡೆಯೊಡ್ಡುವಂತೆ ಸೇತುವೆಯನ್ನು ನಿರ್ಮಿಸುತ್ತಿದ್ದರು. ಅಲ್ಲದೆ ಅದಕ್ಕೆ ಖಾಸಗಿ ಸ್ಥಳದಿಂದ ಅವರ ಅನುಮತಿ ಪಡೆಯದೆ ಸಂಪರ್ಕ ಮಾರ್ಗವನ್ನು ನಿರ್ಮಿಸಿದ್ದರು.
ಗ್ರಾ. ಪಂ. ಅಧ್ಯಕ್ಷರು ಅಥವಾ ಜಿ.ಪಂ. ಸದಸ್ಯರ ಗಮನಕ್ಕೆ ಬರದೆ ಈ ಕಾಮಗಾರಿ ನಡೆಯುತ್ತಿತ್ತು ಎಂಬುದು ಇನ್ನೊಂದು ವಿಶೇಷ. ಕೊನೆಗೆ ಈ ಕಾಮಗಾರಿ ತಾ. ಪಂ. ಹಾಗೂ ಜಿ.ಪಂ.ನಿಂದ ಜಂಟಿಯಾಗಿ ನಡೆಯುತ್ತಿದೆ. ಆದರೆ ಈ ಕಾಮಗಾರಿಗೆ ಇಲಾಖೆಯಿಂದ ಇನ್ನಷ್ಟೆ ಅನುಮತಿ ದೊರೆಯಬೇಕಾಗಿದೆ ಎಂಬ ವಿಚಾರವು ಗ್ರಾಮಸ್ಥರನ್ನು ಇನ್ನಷ್ಟು ಕೆರಳಿಸಿತು. ಕೆಲಸವನ್ನು ನಿಲ್ಲಿಸಲು ಮನವಿ ಮಾಡಿದ ಮೇಲೆಯೂ ಗ್ರಾ. ಪಂ.ನ ಕೆಲವು ಸದಸ್ಯರು ಗ್ರಾಮಸ್ಥರು ಗ್ರಾಮ ಅಭಿವೃದ್ದಿಗೆ ತಡೆಯೊಡ್ಡುತ್ತಿದ್ದಾರೆ ಎಂದು ಅವರನ್ನೇ ಬೈದು ಕೆಲಸವನ್ನು ಮುಂದು ವರಿಸಿದರು. ಇದರಿಂದ ಇನ್ನಷ್ಟು ಕೆರಳಿದ ಹಿರಿಯ ನಾಗರಿಕರು ಜಿ.ಪಂ.ಸದಸ್ಯೆ ಐಡಾ ಡಿಸೋಜಾ, ಗ್ರಾ. ಪಂ. ಅಧ್ಯಕ್ಷೆ ಜೆಸಿಂತಾ ಅರಾನ್ಹಾ ಅವರಲ್ಲಿ ಗ್ರಾಮಸ್ಥ ರನ್ನು ನೆರೆ ನೀರಿನಲ್ಲಿ ಮುಳುಗಿ ಸುವಂತಹ ಇಂತಹ ಕಾಮಗಾರಿ ಬೇಡ. ಹಾಗೂ ಕೆಲವೇ ಕೆಲವು ಸದಸ್ಯರು ಈ ಕಾಮಗಾರಿಗೆ ಅಗತ್ಯಕ್ಕಿಂತಲೂ ಜಾಸ್ತಿ ಒಲವು ತೋರಿಸುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ತದನಂತರ ಅವರು ಪಿ.ಡಿ.ಒ ಹಾಗೂ ಇಂಜಿನಿಯರ್ ಇವರೊಂದಿಗೆ ಭೇಟಿ ನೀಡಿ ಈ ಕಾಮಗಾರಿಯಿಂದ ಜನರಿಗೆ ಆಗುವಂತಹ ತೊಂದರೆ ಯನ್ನು ಮನಗಂಡು ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದ ನಂತರ ಗ್ರಾ. ಪಂ. ಸದಸ್ಯರಾದ ಪರಶುರಾಮ ಭಟ್ ಹಾಗೂ ಶಶಿಧರ್ ವಾಗ್ಲೆ ಇವರು ಈ ಕಾಮಗಾರಿಯನ್ನು ಸ್ಥಗಿತಗೊಳಿಸಿ ನೀರು ಹರಿಯುವಿಕೆಗೆ ಅಡ್ದಿಯಾಗದಂತೆ ಮುಂದಿನ ಕ್ರಮ ಕೈಗೊಳ್ಳುವ ಆಶ್ವಾಸನೆಯನ್ನು ಗ್ರಾಮಸ್ಥರಿಗೆ ನೀಡಿ, ಸಮಸ್ಯೆಯನ್ನು ತಿಳಿಗೊಳಿಸಿದರು.
Tagged with
feature,
lnews,
udupi