ಕಟೀಲಿನಲ್ಲಿ ವಾಹನ ಪಾರ್ಕಿಂಗ್ ಅವ್ಯವಸ್ಥೆ
Posted by JAYAKIRANA Kirana on Monday, 7 May 2012 | 0 comments | Leave a comment...
ನಿರಂಜನ್, ಕಾಟಿಪಳ್ಳ
ಲಜ್ಜೆಗೇಡಿ ಸರಕಾರ
ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವುದು ಲಜ್ಜೆಗೇಡಿ ಸರಕಾರ ಎನ್ನಲಡ್ಡಿಯಿಲ್ಲ. ಯಾಕೆಂದರೆ ಕೇವಲ ಅಧಿಕಾರಕ್ಕಾಗಿ ಹಾತೊರೆಯುವ ಜನಪ್ರತಿನಿಧಿಗಳೇ ಸರಕಾರದಲ್ಲಿ ತುಂಬಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರಂತೂ ತಾವೇ ರಾಜ್ಯದ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿದ್ದಾರೆ. ಇವರನ್ನು ನಿಯಂತ್ರಿಸಲು ಪಕ್ಷದ ವರಿಷ್ಠರು, ಹೈಕಮಾಂಡ್‌ಗೇ ಸಾಧ್ಯವಾಗುತ್ತಿಲ್ಲ. ರಾಜ್ಯದೆಲ್ಲೆಡೆ ಬರ ಪರಿಸ್ಥಿತಿ ತಾಂಡವವಾಡುತ್ತಿದ್ದರೂ ಮುಖ್ಯಮಂತ್ರಿಗೆ ಇದರ ಚಿಂತೆಯಿಲ್ಲ. ಬರಪೀಡಿತ ಪ್ರದೇಶಗಳಿಗೆ ಭೇಟಿಮಾಡಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆಯೇ ಹೊರತು ಸಮಸ್ಯೆಗೆ ನೆರವಾಗುತ್ತಿಲ್ಲ. ಮೂರೂ ಬಿಟ್ಟವ ಲೋಕಕ್ಕೆ ಹಿರಿಯ ಅನ್ನೋ ಗಾದೆಮಾತಿನಂತೆ ಸರಕಾರ ನಡೆದುಕೊಳ್ಳುತ್ತಿದೆ. ಇದೆಲ್ಲವನ್ನು ನೋಡಿಕೊಂಡು ಸುಮ್ಮನಿರಬೇಕಾದ ಪರಿಸ್ಥಿತಿ ಜನಸಾಮಾನ್ಯರದ್ದಾಗಿದೆ. ಮುಂದಿನ ಬಾರಿ ಚುನಾವಣೆಯಲ್ಲಾದರೂ ನಾಗರಿಕರು ಎಚ್ಚೆತ್ತುಕೊಳ್ಳುವುದು ಒಳಿತು.
ನರೇಂದ್ರ, ಸುಬ್ರಹ್ಮಣ್ಯ
ಕಡಬ ಘಟನೆ ಸತ್ಯಾಂಶವೇನು?
ಇತ್ತೀಚೆಗೆ ಪುತ್ತೂರು ತಾಲೂಕಿನ ಕಡಬದಲ್ಲಿ ಮುಸ್ಲಿಂ ಯುವಕನ ಕಾರಿನಲ್ಲಿ ಸ್ವಯಂಪ್ರೇರಣೆಯಿಂದ ದಲಿತ ಯುವತಿ ಪ್ರಯಾಣಿಸಿದ್ದನ್ನೇ ದೊಡ್ಡ ಸಂಗತಿಯನ್ನಾಗಿ ಮಾಡಿ ಹಿಂದೂ ಸಂಘಟನೆಯ ಯುವಕರು ಸಾಮಾಜಿಕ ಶಾಂತಿಭಂಗ ಮಾಡಿದರು. ಪ್ರಾರಂಭದಲ್ಲಿ ಮುಸ್ಲಿಂ ಯುವಕನ ವಿರುದ್ಧ ಯುವತಿ ದೂರಿದ್ದರೆ, ಬಳಿಕ ಆತನ ಮೇಲಿನ ಪ್ರಕರಣವನ್ನು ಹಿಂಪಡೆದು ಸಂಘಟನೆಯ ಯುವಕರ ವಿರುದ್ಧ ದೂರು ಡಿದ್ದಾಳೆ. ಇಲ್ಲಿ ವಾಸ್ತವಾಂಶ ಏನೆಂದು ಜನರಿಗೆ ತಿಳಿದಿಲ್ಲ. ದಲಿತ ಯುವತಿ ಅತ್ಯಾಚಾರ ದೂರು ನೀಡಿದವಳು ತಿರುಗಿ ಬಿದ್ದಿದ್ದೇಕೆ? ಇಲ್ಲಿ ಯುವತಿ ಯಾರದ್ದೋ ಒತ್ತಡಕ್ಕೆ ಒಳಗಾಗಿ ದೂರು ನೀಡಿರುವ ಸಾಧ್ಯತೆಯೂ ಇದೆ. ಹಿಂದೂ ಸಂಘಟನೆಗಳು ಕೂಡಾ ವಾಸ್ತವಾಂಶ ತಿಳಿಯದೆ ಹೊಡೆದಾಟಕ್ಕೆ ಇಳಿಯುವುದು ಮೂರ್ಖ ತನವಾದೀತು. ಯಾಕೆಂದರೆ ಇಂಥ ಘಟನೆಗಳು ಸಾಮಾಜಿಕ ಅಶಾಂತಿ, ಕೋಮು ಸಾಮರಸ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಸಮಾಜದಲ್ಲಿನ ಒಡಕನ್ನು ಸರಿಪಡಿಸದೆ ಅನ್ಯಕೋಮಿನ ಕಡೆ ಕೈ ತೋರಿಸಿ ಯಾವುದೇ ಪ್ರಯೋಜನವಿರದು.
ನಾಗೇಶ್ ನಾಯ್ಕ, ಪುತ್ತೂರು
‘ಮಡೆಸ್ನಾನ ನಿಷೇಧದಿಂದ ಹಾನಿಯಿಲ್ಲ’ ಎಂದರೇನು?
ಇತ್ತೀಚೆಗೆ ಮಡೆಸ್ನಾನ ವಿವಾದದ ಕುರಿತು ಪ್ರತಿಕ್ರಿಯೆ ನೀಡಿ ರುವ ಪೇಜಾವರ ಮಠದ ಹಿರಿಯ ಯತಿವರ್ಯರು ಮಡೆಸ್ನಾನ ನಿಷೇಧ ದಿಂದ ಹಾನಿಯಿಲ್ಲ ಎಂದಿದ್ದಾರೆ. ಯಾವಾಗಲೂ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುವ ಶ್ರೀಗಳು ಮಡೆಸ್ನಾನದ ವಿಚಾರದಲ್ಲೂ ಸ್ಪಷ್ಟ ನಿಲುವು ತಳೆಯದಿದ್ದುದೇಕೆ? ಮಡೆಸ್ನಾನ ನಾಗರಿಕ ಸಮಾಜದ ಕಳಂಕವೇ ಸರಿ.
ಇಲ್ಲಿ ಜನರನ್ನು ವಿಂಗಡಿಸಿ ಅವರ ಮನಸ್ಸನ್ನು ಒಡೆಯ ಲಾಗುತ್ತದೆ. ಮಡೆಸ್ನಾನದಿಂದ ಆರೋಗ್ಯ ಸಂಬಂಧಿ ಸಮಸ್ಯೆ ಗಳೆಲ್ಲ ಮಾಯವಾಗುತ್ತಿದ್ದರೆ ವೈದ್ಯರಿಗೆ ಬೆಲೆಯೇ ಇರುತ್ತಿರಲಿಲ್ಲ ಅಲ್ಲವೇ? ಶ್ರೀಗಳು ಒಂದೋ ಮಡೆಸ್ನಾನ ನಿಷೇಧಿಸಿ, ಇಲ್ಲವೇ ನಿಷೇಧ ಬೇಡ ಎನ್ನುವುದನ್ನು ಸ್ಪಷ್ಟವಾಗಿ ಹೇಳು ವುದೊಳಿತು.
ಅದನ್ನು ಬಿಟ್ಟು ಮಡೆಸ್ನಾನ ನಿಷೇಧದಿಂದ ಹಾನಿ ಯಿಲ್ಲ, ಅಲ್ಲಿನ ಜನರೊಂದಿಗೆ ಚರ್ಚಿ ಸುತ್ತೇನೆ ಎಂದು ಕಾಲಕ್ಕೆ ತಕ್ಕಂತೆ ಮಾತಾಡುವುದು ಅವರಿಗೆ ಶೋಭೆ ತರುವಂಥದ್ದಲ್ಲ.
ಗಣೇಶ್, ಮೂಡಬಿದ್ರೆ
ಕರ್ನಾಟಕದಲ್ಲಿ ಕನ್ನಡ ಬಲ್ಲವರಿಗೆ ಕೆಲಸವಿಲ್ಲವೇ?
ನಮ್ಮ ರಾಜಕಾರಣಿಗಳು ಕನ್ನಡದ ಬಗ್ಗೆ ಇಷ್ಟೆಲ್ಲ ಮಾತನಾಡುತ್ತಾರೆ. ಆದರೆ ಕರ್ನಾ ಟಕದಲ್ಲಿ ಕನ್ನಡಿಗರಿಗೇ ಕೆಲಸವಿಲ್ಲ. ಎಲ್ಲೇ ಕೆಲಸ ಕೇಳಲಿಕ್ಕೆ ಹೋದರೂ ಮೊದಲು ಇಂಗ್ಲಿಷ್ ಬರುತ್ತಾ ಅಂತ ಕೇಳುತ್ತಾರೆ. ನಾವೋ ಕನ್ನಡ ಮಾಧ್ಯಮದಲ್ಲಿ ಓದಿ ಬಂದವರು. ಎಲ್ಲ ಕಂಪನಿಗಳು ಇಂಗ್ಲಿಷ್ ಬಲ್ಲವರನ್ನೆ ಬಯ ಸಿದರೆ ಕನ್ನಡ ಮಾಧ್ಯಮದಲ್ಲಿ ಓದಿ ಬಂದಿರು ವವರ ಗತಿ ಏನು? ಅವರು ಎಲ್ಲಿ ಕೆಲಸ ಕೇಳಲು ಹೋಗಬೇಕು?
ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲು ಪ್ರಾಮುಖ್ಯತೆ ಕೊಡಬೇಕು. ಕರ್ನಾಟಕದ ಎಲ್ಲಾ ಕಂಪೆಗಳಲ್ಲಿ ಮೊದಲು ಕನ್ನಡದ ಬಳಕೆ ಆಗಬೇಕು. ನಂತರ ಬೇರೆ ಭಾಷೆಯನ್ನು ಉಪ ಯೋಗಿಸಬೇಕು. ಆವಾಗ ನಮ್ಮ ಕರ್ನಾಟಕದ ಎಲ್ಲಾ ವಿದ್ಯಾವಂತರಿಗೂ ಕೆಲಸ ಸಿಗಬಹುದೇ.ಈಗಂತೂ ರಾಜ್ಯದ ಯಾವುದೇ ಕಂಪೆನಿಗಳಿU ಹೋದರೂ ಅಲ್ಲಿ ತಮಿಳುನಾಡಿ-ನವರು, ಆಂಧ್ರಪ್ರದೇಶದವರೇ ತುಂಬಿರುತ್ತಾರೆ. ಕನ್ನಡಿಗರಿಗೆ ಕೆಲಸವೇ ಇರುವುದಿಲ್ಲ. ಅದೇ ನಾವು ತಮಿಳು ನಾಡು ಅಥವಾ ಆಂಧ್ರಪ್ರದೇಶಕ್ಕೆ ಹೋದರೆ ಅಲ್ಲಿ ನಮಗೆ ಮೊದಲ ಪ್ರಾಮುಖ್ಯತೆ ಕೊಡುವುದಿಲ್ಲ. ಅಲ್ಲಿ ಅವರಿಗೇ ಆದ್ಯತೆ. ಇದೇ ತರಹ ಇತರ ಭಾಷಿಕರು ಕರ್ನಾಟಕದಲ್ಲಿ ತುಂಬಿಹೋದರೆ ಕನ್ನಡ ಅನ್ನುವ ಭಾಷೆಯೇ ಇರುವುದಿಲ್ಲ. ನಮ್ಮ ಜನರು ತಮಿಳು ಮತ್ತು ತೆಲುಗು ಮಾತನಾಡಬೇಕಾಗುತ್ತಿದೆ. ಆದ್ದರಿಂದ ಕನ್ನಡ ಉಳಿಯಬೇಕಾದರೆ ಮೊದಲು ಎಲ್ಲಾ ಕಡೆಯೂ ಕನ್ನಡದ ಬಳಕೆ ಆಗಬೇಕು. ಅದಕ್ಕಾಗಿ ಮೊದಲಾಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಬೇಕು. ಕನ್ನಡಪರ ಸಂಘಟನೆಗಳು ಇದಕ್ಕಾಗಿ ಹೋರಾಡಲಿ.
ಆಕಾಶ್ ಎಂ.ಆರ್ , ಮೂಡಬಿದ್ರೆ
ಬಸ್‌ನಲ್ಲಿ ವೃದ್ಧರ ಮೇಲೆ ಸಹಾನುಭೂತಿ ಇರಲಿ
ನಾವು ಪ್ರತಿನಿತ್ಯ ಸಂಚರಿಸುವ ಬಸ್‌ಗಳಲ್ಲಿ ಇಂತಹ ಕೆಲವು ಘಟನೆಗಳನ್ನು ಕಣ್ಣಾರೆ ಕಾಣು ತ್ತೇವೆ. ಅದೇನೆಂದರೆ ವೃದ್ಧರು, ಮಕ್ಕಳನ್ನು ಹಿಡಿದ ಮಹಿಳೆಯರು, ನಿಲ್ಲಲು ಸಾಧ್ಯವಿಲ್ಲದವರು ಬಸ್ ಹತ್ತಿದರೆ ಕನಿಷ್ಟ ಸೌಜನ್ಯಕ್ಕಾಗಿಯಾದರೂ ಕೆಲವರು ಸೀಟ್ ಬಿಟ್ಟುಕೊಡುವುದಿಲ್ಲ. ಇನ್ನು ಮಹಿಳಾ ಪ್ರಯಾಣಿಕರಿಗೆ ಮಹಿಳೆಯರು ಸೀಟ್ ಬಿಟ್ಟು ಕೊಡುವುದಿಲ್ಲ ಎಂಬುದು ನಾಣ್ಣುಡಿಯಷ್ಟೇ ಪ್ರಚಲಿತ. ಮಗುವನ್ನು ಎತ್ತಿಕೊಂಡ ಮಹಿಳೆಯರು, ವೃದ್ಧೆಯರು ಬಸ್ ಹತ್ತಿದರೆ ಮಹಿಳಾ ಸೀಟ್‌ಗಳಲ್ಲಿ ಆರಾಮವಾಗಿ ಕುಳಿತಿರುವ ನಾರಿಯರು ಕಿಟಕಿ ಯಾಚೆ ನೋಡುತ್ತಾ ಪ್ರಕೃತಿಯ ಸೌಂದ ರ್ಯವನ್ನು ಸವಿಯುತ್ತಾರೆ. ತಪ್ಪಿಯೂ ಈ ಕಡೆ ನೋಡಿ ಸೀಟ್ ಬಿಟ್ಟುಕೊಡುವುದಿಲ್ಲ. ಇಲ್ಲಿ ಹೆಚ್ಚಾಗಿ ಸೀಟ್ ಬಿಟ್ಟುಕೊಟ್ಟು ಮಾನವೀಯ ನೆಲೆಯಲ್ಲಿ ಸ್ಪಂದಿಸುವವರು ಗಂಡಸರೇ ಆಗಿ ರುತ್ತಾರೆ. ವಯ ಸ್ಸಾದವರ ಮೇಲೆ, ವೃದ್ಧರ ಮೇಲೆ ಬಸ್‌ಗಳಲ್ಲಿ ಸಹಾನುಭೂತಿ ಯಾಕೆ ವ್ಯಕ್ತವಾಗು ವುದಿಲ್ಲವೋ ತಿಳಿಯದು. ಮುಂದೆ ಪ್ರಾಯ ಬಂದಂತೆ ತಾವೂ ಇದೇ ರೀತಿ ಆಗುತ್ತೇವೆ ಎಂಬ ಪರಿಜ್ಞಾನವೇ ಇವರಲ್ಲಿ ಇರುವುದಿಲ್ಲ. ಈ ಬಗ್ಗೆ ಬಸ್ ಸಿಬ್ಬಂದಿ ಪ್ರಯಾಣಿಕರನ್ನು ಪ್ರಶ್ನಿಸು ವಂತೆಯೂ ಇಲ್ಲ. ಯಾಕೆಂದರೆ ಬಸ್‌ನಲ್ಲಿ ಊರಿಗೆ ಅರಸನಾದರೂ ಆತ ಪ್ರಯಾಣಿಕ ಎಂಬ ಮಾತೇ ರೂಢಿ ಯಲ್ಲಿದೆ. ಇಲ್ಲಿ ಹೆಣ್ಣುಮಕ್ಕಳು, ಮಹಿಳೆಯರೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಕನಿಷ್ಟ ಮಗು ವನ್ನು ಹಿಡಿದಿರುವವರು, ವೃದ್ಧೆಯರು ಬಂದಾಗಲಾ ದರೂ ಸೀಟ್ ಬಿಟ್ಟುಕೊಟ್ಟು ಮರ್ಯಾದೆ ಉಳಿಸಿ ಕೊಳ್ಳುವುದು ಒಳಿತಲ್ಲವೇ?
ನೀತಾ ನರ‍್ಹೋನಾ, ಜೆಪ್ಪು
ಪುರುಷಸಮಾಜದ ಬಲಿಪಶು
ಸಮಾಜದಲ್ಲಿ ದಿನತ್ಯ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಮಿತಿಮೀರುತ್ತಿದೆ. ಉನ್ನತ ಸ್ಥಾನಮಾನ ಪಡೆದಿರುವ ವ್ಯಕ್ತಿಗಳೇ ಇಂಥ ಹೀನ ಕೃತ್ಯದಲ್ಲಿ ಪಾಲ್ಗೊಂಡ ಅನೇಕ ಉದಾಹರಣೆಗಳಿವೆ. ಪುರುಷ ಪ್ರಧಾನ ಸಮಾಜವೆಂದೇ ಕರೆಯಲ್ಪ ಡುವ ಇಲ್ಲಿ ಹೆಣ್ಣನ್ನು ಕೀಳಾಗಿ ನಡೆಸಿಕೊ ಳ್ಳಲಾಗುತ್ತಿದೆ. ಇದು ನಾಗರಿಕ ಸಮಾಜದ ಘೋರ ದುರಂತವೇ ಸರಿ. ಅತ್ಯಾಚಾರ, ಲೈಂಗಿಕ ಕಿರುಕುಳ ಮನೆಯಿಂದ ಕೆಲಸ ಮಾಡುವ ಕಚೇರಿ ಯವರೆಗೂ ಕಾಲಿಟ್ಟಿದೆ. ಹೆಣ್ಣು ಸಾಮಾಜಿಕ, ಆರ್ಥಿಕ ಕ್ಷೇತ್ರದಲ್ಲಿ ಸಬಲೆಯಾಗಿದ್ದರೂ ಅವಳನ್ನು ಅಬಲೆ ಯಂತೆ ಕಾಣುತ್ತಾರೆ. ಹೀಗಾಗಿ ಹೆಣ್ಮಕ್ಕಳು ಇನ್ನಷ್ಟು ಜಾಗೃತರಾಗಬೇಕು. ಪುರುಷರ ಅಡಿಯಾಳಾಗಿ ಜೀವಿಸಲು ಮುಂದಾಗಬಾರದು. ವಿದ್ಯೆ ಕಲಿತು ತಮ್ಮ ಕಾಲ ಮೇಲೆ ನಿಂತರೆ ಮಾತ್ರ ಆಕೆ ಯಶಸ್ಸು ಸಾಧಿಸಬಹುದು.
ಲತಾ ಕುಮಾರಿ, ಸುಳ್ಯ
ರಸ್ತೆಯಲ್ಲೇ ಬಸ್ ನಿಲ್ದಾಣ
ಇದೇ ಅಂಕಣದಲ್ಲಿ ಈ ಹಿಂದೆ ಪಣಂಬೂರು ಬೀಚ್ ರಸ್ತೆ ಎದುರಿನ ಖಾಸಗಿ ಬಸ್‌ಗಳ ಆವಾಂತರಗಳ ಬಗ್ಗೆ ಪತ್ರ ಬಂದಿತ್ತು. ರಜಾದಿನದಂದು ಬೀಚ್‌ಗೆ ಹೋಗಲೆಂದು ಇಲ್ಲಿಗೆ ಸಾಕಷ್ಟು ಮಂದಿ ಬರುತ್ತಾರೆ. ಸಂಜೆ ಆದರೆ ಸಾಕು ಇಲ್ಲಿ ಮಂಗಳೂರಿಗೆ ಹೋಗುವ ಖಾಸಗಿ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿಯ ನಡುವೆಯೇ ಬಸ್ಸು ನಿಲ್ಲಿಸಿ ಬೀಚ್ ಕಡೆಯಿಂದ ಬರುವವರನ್ನು ಕೈ ಬೀಸಿ ಕರೆಯುತ್ತವೆ. ಇದರಿಂದಾಗಿ ರಸ್ತೆ ಬ್ಲಾಕ್ ಆಗುತ್ತದೆ. ಮಾತ್ರವಲ್ಲದೆ ಮಕ್ಕಳು. ಹೆಂಗಸರು ಬಸ್ಸು ಹಿಡಿಯುವ ಧಾವಂತದಲ್ಲಿ ವೇಗವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಾರೆ. ಇದರಿಂದಾಗಿ ವಾಹನದಡಿಗೆ ಬಿದ್ದು ಪ್ರಾಣವನ್ನೂ ಕಳೆದುಕೊಳ್ಳುತ್ತಾರೆ. ಇಲ್ಲಿ ಬಸ್ಸು ನಿಲ್ಲಿಸಲು ಅವಕಾಶ ಕೊಡಲೇ ಕೂಡದು. ಹಾಗೊಂದು ವೇಳೆ ಕೊಟ್ಟರೂ ಸಮೀಪದ ಟ್ರಕ್ ಟರ್ಮಿನಲ್ ಬಳಿ ಪರ‍್ಯಾಯ ವ್ಯವಸ್ಥೆ ಮಾಡಬೇಕಿದೆ. ಪಣಂಬೂರು ಪೊಲೀಸರು ಈ ಬಗ್ಗೆ ಹೆಚ್ಚು ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಸರಕಾರ ಪಿಸಿಆರ್ ವಾಹನ ಕೊಟ್ಟಿದ್ದರೂ ಅದರಲ್ಲಿ ಊರಿಡೀ ತಿರುಗಾಡಿ ಜನರ ತೆರಿಗೆ ಹಣವನ್ನು ಪೋಲು ಮಾಡುವ ಬದಲು ಅವಘಡಗಳನ್ನು ತಡೆಯಲು ಯೋಜನೆ ರೂಪಿಸುವುದು ಒಳಿತಲ್ಲವೇ?
ಶುಕೂರು ಅಹಮ್ಮದ್ ಜೋಕಟ್ಟೆ
ಟೌನ್‌ಹಾಲ್ ಟಾಯ್ಲೆಟ್‌ನಲ್ಲಿ ವಿಕೃತ ಬರಹ
ನಗರದ ಟೌನ್‌ಹಾನ್‌ನಲ್ಲಿ ಇರವ ಶೌಚಾಲಯಗಳ ಒಳಗೆ ಕಾಲಿಟ್ಟರೆ ಸಾಕು ಗೋಡೆ, ನೆಲದ ತುಂಬಾ ವಿಕೃತ ಬರಹಗಳು. ಇಲ್ಲಿ ಬೇಕು ಬೇಕೆಂದೇ ಹೆಣ್ಣುಮಕ್ಕಳ ನಂಬರ್‌ಗಳನ್ನು ಬರೆದು ವಿಕೃತಕಾಮಿಗಳು ವಿಕೃತ ಆನಂದ ಪಡುವ ಸಾಧ್ಯತೆಯಿದೆ. ಆದ್ದರಿಂದ ಈ ಸಮಸ್ಯೆಯನ್ನು ನಿಯಂತ್ರಿಸಲು ಟೌನ್‌ಹಾಲ್ ಆಡಳಿತ ಸಮಿತಿ ಕ್ರಮ ಕೈಗೊಳ್ಳಬೇಕು. ಇಲ್ಲಿನ ಶೌಚಾಲಯಗಳ ಗೋಡೆಗಳಿಗೆ ಟೈಲ್ಸ್ ಅಳವಡಿಸಿದರೆ ಒಳ್ಳೆಯದು. ಇದರಿಂದ ಈ ಸಮಸ್ಯೆ ಯನ್ನು ನಿಯತ್ರಿಸಲು ಸಾಧ್ಯವಿದೆ. ಟೌನ್‌ಹಾನ್ ಹೊರಗಿನ ಆವರಣ, ಹತ್ತಿರದ ಪಾರ್ಕ್ ಅನ್ನು ಸಲಿಂಗಿಗಳು, ವಿಕೃತಕಾಮಿಗಳು ತಮ್ಮ ಕಾರಾ ಸ್ಥಾನವನ್ನಾಗಿ ಮಾಡಿಕೊಂಡಿದ್ದು, ಇಲ್ಲಿ ಸಭ್ಯ ನಾಗರಿಕರು ಸಂಚರಿಸಲು ಮುಜುಗರ ಪಡಬೇಕಾಗುತ್ತದೆ. ಬಗ್ಗೆ ಸಂಬಂಧಪಟ್ಟ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಟೌನ್‌ಹಾಲ್‌ನಲ್ಲಿ ರಾತ್ರಿಯ ವೇಳೆ ನಾಟಕ ಮತ್ತಿತರ ಕಾರ್ಯಕ್ರಮಗಳಿರುವಾಗ ವಿಕೃತರು ಇಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಕಾರ್ಯಕ್ರಮ ನೋಡಲೆಂದು ಬರುವ ಪ್ರೇಕ್ಷಕರನ್ನು ತಮ್ಮ ಬುಟ್ಟಿಗೆ ಬೀಳಿಸಿ ಕೊಳ್ಳುವ ಇವರು ಹಣ ದೋಚುತ್ತಿರುವ ಪ್ರಸಂಗಗಳೂ ನಡೆಯುತ್ತಿದೆ. ನಗರದಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿ ಕಲವು ಕೊಲೆ ಪ್ರಕರಣಗಳೂ ನಡೆದಿದೆ. ಈ ಬಗ್ಗೆ ಇನ್ನಾದರೂ ಇಲಾಖೆ ಗಂಭೀರವಾಗಿ ಚಿಂತಿಸಲಿ.
ಹರೀಶ್, ಮಾಂಟ್ರಾಡಿ






















You can subscribe by e-mail to receive news updates and breaking stories.