ಮುಂಬಯಿ: ಗೋರೇಗಾಂವ್ ಪರಿಸರದ ೫ರ ಪುಟ್ಟ ಬಾಲಕ ಕಳೆದ ಎರಡು ವಾರಗಳಿಂದ ಕಣ್ಮರೆಯಾಗಿದ್ದು, ಆತನ ಮೃತ ದೇಹ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ನಿನ್ನೆಯಷ್ಟೇಪತ್ತೆಯಾಗಿದೆ. ಚಿರತೆ ಆತನನ್ನು ತಿಂದು ಮುಗಿಸಿರಬೇಕೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ
ಗೋರೆಗಾಂವ್‌ನ ಚರನ್‌ಪಾದಾದ ಆದರ್ಶ ನಗರದಿಂದ ಸನ್ನಿ ಏಪ್ರಿಲ್ ೨೪ರಿಂದ ನಾಪತ್ತೆಯಾಗಿದ್ದ. ಕೇವಲ ಕೂಗಳತೆಯ ದೂರದಲ್ಲಿ ಆತನ ಅಸ್ಥಿಪಂಜರ, ಕಾಲಿನ ಮೂಳೆಗಳು ಹಾಗೂ ರಕ್ತಸಿಕ್ತ ಟಿ-ಶರ್ಟ್ ನಿನ್ನೆ ಪತ್ತೆಯಾಗಿದೆ.
ಶೌಚಕ್ಕೆ ತೆರಳುತ್ತಿದ್ದ ದಾರಿ ಮಧ್ಯೆ ಸುಧಾಕರ್ ಖೇಡೇಕರ್‌ಗೆ ಸನ್ನಿಯ ಮೃತದೇಹ ಗೋಚರಿಸಿದ್ದು, ಭೀತಿಗೊಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. “ಈ ಪರಿಸರದಲ್ಲಿ ಚಿರತೆ ಗೋಚರಿಸುತ್ತಿತ್ತು ಹಾಗೂ ಅದರ ಇರುವಿಕೆಯ ಭೀತಿಯಿಂದ ನಮ್ಮ ಮಕ್ಕಳನ್ನು ರಾತ್ರಿ ವೇಳೆ ಹೊರಗೆ ಹೋಗಲು ಬಿಡುವುದಿಲ್ಲ” ಎಂದು ಪಕ್ಕದ ಮನೆಯೊಬ್ಬರು ತಿಳಿಸಿದ್ದಾರೆ. ಈ ಪರಿಸರದಲ್ಲಿ ಅಭಿವೃದ್ಧಿ ಕೆಲಸ ಪ್ರಾರಂಭವಾದಂದಿನಿಂದ ಚಿರತೆಗಳು ಉಳಿದುಕೊಳ್ಳಲು ಜಾಗವಿಲ್ಲದೆ ಈ ಪರಿಸರದಲ್ಲಿ ಸುತ್ತಾಡುತ್ತಿವೆ ಎನ್ನುವುದು ಹಳ್ಳಿಗರ ಮಾತು.
Tagged with
nnews
ಮೋಗಾ: ಇಂದು ನಸುಕಿನ ವೇಳೆ ಜೀಪು ಹಾಗೂ ಲಾರಿ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಐವರು ಮಹಿಳೆಯರು ಹಾಗೂ ಐದು ಮಕ್ಕಳು ಸೇರಿದಂತೆ ಸುಮಾರು ೧೭ ಜನರು ಮೃತಪಟ್ಟಿ ಬಗ್ಗೆ ವರದಿಯಾಗಿದೆ.
ಈ ದುರ್ಘಟನೆ ಚಂಡೀಗಢದಿಂದ ಸುಮಾರು ೧೭೦ ಕಿ.ಮೀ. ದೂರದ ಪಂಜಾಬಿನ ಮೋಗಾ ನಗರದ ಹಾದು ಹೋಗುವ ಲುಧಿಯಾನಾ-ಫಿರೋಜೇಪುರ್ ಹೆದ್ದಾರಿಯಲ್ಲಿ ಸುಮಾರು ಬೆಳಿಗ್ಗೆ ೨ರ ವೇಳೆ ಸಂಭವಿಸಿದೆ.
ಎಲ್ಲಾ ಯಾತ್ರಾರ್ಥಿಗಳು ಮೋಗಾ ಜಿಲ್ಲೆಯ ದೌಲತಾಪುರದ ಹಳ್ಳಿಯವರಾಗಿದ್ದು, ಜಗ್ರೋವನ್ ನಗರದ ಸಮೀಪದ ನಾನಾಕ್‌ಸರ್ ಪವಿತ್ರ ಸ್ಥಳದಿಂದ ಹಿಂದಿರುಗುತ್ತಿದ್ದರು.
೧೪ ಜನರು ಸ್ಥಳದಲ್ಲಿಯೇ ಮೃತಪಟ್ಟರೆ, ಉಳಿದ ಮೂವರು ಮೋಗಾ ಆಸ್ಪತ್ರೆಯಲ್ಲಿ ಅಸುನೀಗಿದ್ದು, ಎಲ್ಲರೂ ಜೀಪಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವೇಗವಾಗಿ ಬರುತ್ತಿದ್ದ ಲಾರಿ ಮುಂದಿನಿಂದ ಸಾಗುತ್ತಿದ್ದ ವಾಹನವನ್ನು ಹಿಂದುಕ್ಕುವ ರಭಸಕ್ಕೆ ಮುಂದಿನಿಂದ ಬರುತ್ತಿದ್ದ ಜೀಪಿಗೆ ಡಿಕ್ಕಿಯಾಗಿ ಘಟನೆ ಸಂಭವಿಸಿದೆ ಎಂದು ಪೊಲೀಸರು ವಿವರಿಸಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
Tagged with
feature,
nnews
ಕಲೆ ಮನುಷ್ಯನನ್ನು ಸದಾ ಜೀವಂತಿಕೆಯಿಂದ, ಲವಲವಿಕೆ ಯಿಂದ ಇರುವಂತೆ ಮಾಡುವ ಒಂದು ಜೀವದ್ರವ. ಅದೊಂದು ಸಿದ್ಧಿ. ಅದು ದೈವದತ್ತವಾದ ಕೊಡುಗೆ. ಕಲೆ ಎಲ್ಲರಿಗೂ ಒಲಿಯುವಂಥದ್ದಲ್ಲ. ನಾಟಕ ನೃತ್ಯ ಸಂಗೀತ ಯಕ್ಷಗಾನ ಇವುಗಳೆಲ್ಲವೂ ಕಲೆಯ ವಿಭಿನ್ನ ಪ್ರಾಕಾರಗಳು. ಎಲ್ಲಾ ಕಲೆಗಳ ಮೂಲ ಉದ್ದೆಶ ಒಂದೇ. ಆ ಮೂಲಕ ಮನುಷ್ಯ ಸಂತೋಷ ತೃಪ್ತಿಗಳನ್ನು ಅನುಭವಿಸುವುದು ಸಾರ್ಥಕತೆಯನ್ನು ಹೊಂದುವುದು.
ನಮ್ಮಲ್ಲಿ ಎಲ್ಲಾ ಕಲೆಗಳು ಜನಪ್ರಿಯವಾಗಿದ್ದರೂ ಜನರನ್ನು ನಾಟಕಗಳಷ್ಟು ಹತ್ತಿರ ಸೆಳೆದ ಕಲೆ ಇನ್ನೊಂದಿಲ್ಲ ಎನ್ನಬಹುದು. ಬದುಕಿನ ಘಟನೆಗಳನ್ನೇ ಕಥೆಯಾಗಿಸಿ ಅದಕ್ಕೊಂದು ಸಂಭಾ ಷಣೆ ಬರೆದು ರಂಗದಲ್ಲಿ ಬೆಳಕು ಹಿನ್ನೆಲೆ ಸಂಗೀತದೊಂದಿಗೆ ಅಭಿನಯಿಸಿದಾಗ ಅದೊಂದು ಕಲಾತ್ಮಕವಾದ ನಾಟಕ ವೆನಿಸುತ್ತದೆ. ಅದು ನಮ್ಮ ಬದುಕಿಗೆ ತೀರಾ ಹತ್ತಿರವಿರುವು ದರಿಂದ ನಾಟಕ ನಮಗೆ ಆಪ್ತವೆನಿಸುತ್ತದೆ.
ನಾಟಕ ನಮಗೆ ಆಪ್ತವೆನಿಸಲು ಇನ್ನೊಂದು ಕಾರಣ ಅದರಲ್ಲಿ ಅಭಿನಯಿಸುವ ಕಲಾವಿದರಿಂದ ಆ ಕಲಾವಿದರು ಪಾತ್ರವೇ ತಾವಾಗಿ ಪರಕಾಯ ಪ್ರವೇಶ ಮಾಡಿ ಅಭಿನಯಿಸುವ ಅವರ ಪ್ರತಿಭೆಯಿಂದಾಗಿ. ಇಂತಹ ಓರ್ವ ಪ್ರತಿಭಾನ್ವಿತ ನಾಟಕ ಕಲಾವಿದರೇ ಶ್ರೀ ರಾಜೀವ ಶೆಟ್ಟಿ ಅನೆಯಾಲಗುತ್ತು. ಕರೋಪಾಡಿ ಗ್ರಾಮದ ಅನಿಯಾಲಗುತ್ತು ಮಾರಪ್ಪ ಶೆಟ್ಟಿ ಹಾಗೂ ರಾಮಕ್ಕ ದಂಪತಿಗಳ ಜೇಷ್ಠ ಪುತ್ರರಾಗಿ ಜನಿಸಿದ ಇವರಿಗೆ ಬಾಲ್ಯದಿಂದಲೂ ನಾಟಕದಲ್ಲಿ ಒಲವಿತ್ತು. ಶಾಲಾ ದಿನಗಳಿಂದಲೇ ನಾಟಕದಲ್ಲಿ ಅಭಿನಯಿಸುತ್ತಿದ್ದರು.
ನಂತರದ ದಿನಗಳಲ್ಲಿ ಇವರ ಪ್ರತಿಭೆಗೆ ಸೂಕ್ತ ವೇದಿಕೆ ದೊರಕಿದ್ದು ಕರೋಪಾಡಿ ಗ್ರಾಮದ ವಗೆ ನಾಡು ಶ್ರೀ ಸುಬ್ರಾಯ ದೇವ ಸ್ಥಾನದ ಬ್ರಹ್ಮ ಕಲಶೋತ್ಸವದ ಸಂದರ್ಭದ ಗಂಗಾರಾಮ ನಾಟಕದ ರಾಜಣ್ಣನ ಪಾತ್ರ ದಲ್ಲಿ. ಮುಂದೆ ವಿಟ್ಲದ ಜಿ.ಎನ್. ಬಂಗೇರರ ಸೂಕ್ತ ನಿರ್ದೇಶನದಲ್ಲಿ ಪಳಗಿದ ಇವರು ಖಳನಾಯಕನ ಪಾತ್ರದಲ್ಲಿಯೂ ಮಿಂಚತೊಡ ಗಿದರು. ‘ಮದಿಮೆದಾಂತಿ ಮದ್ರೆಂಗಿ’ಯ ಅರ್ಜುನ್ ಬೈಯ ಮಲ್ಲಿಗೆಯ ಸುಂದರ್ ಹಾಗೂ ಬದ್‌ಕೇ ಮೂಜಿ ದಿನದ ಲಕ್ಷ್ಮೀಪತಿ ರಾವ್ ಇವರಿಗೆ ಅಪಾರ ಹೆಸರನ್ನು ತಂದುಕೊಟ್ಟವು. ಹಾಗೇ ನಾಯಕ ನಟನ ಪಾತ್ರದಲ್ಲಿಯೂ ಇವರ ಅಭಿನಯ ಪ್ರತಿಭೆ ಮಿಂಚತೊಡಗಿತು. ‘ಉಡಲೇ ಮೋಕೆದ ಕಡಲ್’ನ ಮೋಹನ್, ಪೋಷಕ ಪಾತ್ರದಲ್ಲಿ ಇದೇ ನಾಟಕದ ದೇವ ಮಾನವನ ಪಾತ್ರದ ಗಫೂರ್, ದೇವತೆ ನಾಟಕದ ಸೋಮ ಶೇಖರ್ ಇವರ ಪ್ರತಿಭೆಯನ್ನು ಇನ್ನಷ್ಟು ಉಜ್ವಲಗೊಳಿಸಿದವು.
ಇವರ ಪ್ರತಿಭೆಗೊಂದು ಗರಿಯೋ ಎನ್ನುವಂತೆ ಇವರಿಗೆ ಬಂಟ್ವಾಳ ತಾಲೂಕು ಮಟ್ಟದ ನಾಟಕ ಸ್ಪರ್ಧೆಯಲ್ಲಿ ‘ಸೈತ್ಂಡನೇ ಸರಿ’ ನಾಟಕದಲ್ಲಿ ಇವರ ಸರ್ವಾಂಗೀಣ ಪ್ರತಿಭೆಯಿಂದ ನಾಟಕಕ್ಕೆ ದ್ವಿತೀಯ ಬಹುಮಾನವೂ ಲಭಿಸಿತು.
ನಾಟಕ ರಂಗದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಕನಸು ಹೊತ್ತ ಇವರು ಸ್ವತಃ ಭಾರತಿ ಕಲಾವಿದೆರ್ ಕುಡ್ಪಲ್ತಡ್ಕ ಎನ್ನುವ ನಾಟಕ ತಂಡವನ್ನು ಕಟ್ಟಿ ಎಲ್ಲೆಡೆ ಪ್ರದರ್ಶನ ನೀಡುತ್ತಿದ್ದಾರೆ.
ನಾಟಕರಂಗದಲ್ಲಿ ಆಧುಕತೆಯ ಗಾಳಿ ಬಲವಾಗಿ ಬೀಸು ತ್ತಿದ್ದರೂ ಇವರು ಮಾತ್ರ ಹಳೆಯ ಸಂಪ್ರದಾಯಿಕ ಶೈಲಿಯ ಪರದೆಯ ನಾಟಕಗಳಿಗೇ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.
ಊರು ಹಾಗೂ ಪರವೂರುಗಳಲ್ಲಿ ನಾಟಕಗಳಲ್ಲಿ ಪಾತ್ರ ಮಾಡಿ ಹೆಸರು ಗಳಿಸಿರುವ ಅವರಲ್ಲಿ ನಿಮ್ಮ ಈ ಕ್ಷೇತ್ರದಲ್ಲಿ ಸ್ಫೂರ್ತಿ ಯಾರೆಂದು ಪ್ರಶ್ನಿಸಿದರೆ ಅವರು ಬೊಟ್ಟು ಮಾಡು ವುದು ಇಬ್ಬರತ್ತ. ಅವರೆಂದರೆ ಕಣಿಯೂರು ಕ್ಷೇತ್ರದ ಶ್ರೀ ಶ್ರೀ ಮಹಾಬಲ ಸ್ವಾಮೀಜಿ ಹಾಗೂ ನಾಟಕರಂಗದಲ್ಲಿ ಸುಪ್ರಸಿದ್ಧ ಹಿನ್ನೆಲೆ ಗಾಯಕರೆಂದೇ ಹೆಸರು ಪಡೆದಿರುವ ಪ್ರಖ್ಯಾತ ಗಾಯಕ ಟಿ.ಕೆ.ಭಟ್ ತೆಂಕಬೈಲು ಅವರತ್ತ.
ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯಬೇಕೆಂಬ ಕನಸು ಹೊತ್ತ ಇವರ ಸರ್ವಕನಸುಗಳೂ ಈಡೇರಲಿ, ಉಸಿರಿರುವ ತನಕವೂ ಕಲಾಮಾತೆಯ ಸೇವೆ ಮಾಡಿ ವಿಖ್ಯಾತರೆನಿಸಿ ದಂತಕತೆಯಾಗಲಿ ಎಂಬುದೇ ಅಭಿಮಾನಿಗಳಾದ ನಮ್ಮೆಲ್ಲರ ಹಾರೈಕೆ.
ಎಸ್.ಎನ್., ತೆಂಕಬೈಲು-ಕರೋಪಾಡಿ
Tagged with
cnnews
ಬಾಲ ಕಾರ್ಮಿಕ ಪದ್ಧತಿಯನ್ನು ಹೋಗ ಲಾಡಿ ಸಲು ಸರಕಾರ ಏನೆಲ್ಲಾ ಕ್ರಮ ವಹಿಸುತ್ತ ಬಂದಿದೆ. ಈ ಕುರಿತು ಪ್ರತ್ಯೇಕ ಕಾನೂನು ಕೂಡ ಇದೆ. ಆದರೂ ಅಲ್ಲಲ್ಲಿ ಬಾಲ ಕಾರ್ಮಿಕರು ಕಾಣಸಿ ಗುತ್ತಿರುವುದು ವಿಪರ್ಯಾಸ. ಸರ್ಕಸ್‌ನಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಬಳಸಿ ಕೊಳ್ಳುವುದು ಅಪರಾಧವಲ್ಲವೇ?
ಕಾಂಚನಾ, ಬೋಂದೆಲ್
ಹೊಟ್ಟೆಪಾಡಿಗಾಗಿ ಜನ ಏನೆಲ್ಲಾ ಕಸರತ್ತು ಮಾಡುವುದನ್ನು ನಾವು ನಿತ್ಯ ಕಾಣುತ್ತೇವೆ. ಆದರೆ ತಾನು ಜೀವಿಸು ವುದಕ್ಕಾಗಿ ಪ್ರಾಣಿಗಳನ್ನು ಹಿಂಸಿಸುವುದು, ಎಳೆಯ ಮಕ್ಕಳನ್ನು ಬಳಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ?
ಕೈಗಾರಿಕಾ ವಸ್ತುಗಳ ಕಲಾ ವೈಭವದಲ್ಲಿ ಮಕ್ಕಳನ್ನು, ಜನರನ್ನು ಆಕರ್ಷಿಸಲು, ಮನರಂಜಿಸಲು ಏನೆಲ್ಲಾ ವಸ್ತುಗಳು, (ಅಮೇಜ್‌ಮೆಂಟ್) ಆಟಿಕೆ ಗಳು ಬಂದಿವೆ. ಇವುಗಳಲ್ಲಿ ಕೇಂದ್ರ ಬಿಂದುವಾಗಿರುವ ಸರ್ಕಸ್ ಕೂಡಾ ಒಂದಾಗಿದೆ. ಈ ಸರ್ಕಸ್‌ನಲ್ಲಿ ಯುವತಿ ಯವರು, ಯುವಕರು ಅನೇಕ ಕಸರತ್ತು ಗಳನ್ನು ಮಾಡಿತೋರಿಸುವ ಮೂಲಕ ನೆರೆದ ಜನರನ್ನು ಆಶ್ಚರ್ಯಚಕಿತರನ್ನಾಗಿಸುತ್ತಾರೆ. ಸುಮಾರು ೨೦ ಮೀಟರ್ ದೂರದಲ್ಲಿ ಬಲೂನೊಂದನ್ನು ಇಟ್ಟು ಬಂದೂಕು (ಏರ್‌ಗನ್) ನಿಂದ ಒಂದೇ ಹೊಡೆತಕ್ಕೆ ಬಲೂನು ಒಡೆಯುವುದು, ಕನ್ನಡಿ ಯಲ್ಲಿ ನೋಡಿ ಬಲೂನು ಒಡೆಯುವುದು ಇತ್ಯಾದಿಯನ್ನು ಓರ್ವರು ಮಾಡಿ ತೋರಿಸಿದರೆ ಯುವತಿಯೋರ್ವಳು ಸೈಕಲ್ ಮೇಲೆ ಬ್ಯಾಲೆನ್ಸಿಂಗ್ ಮಾಡುವುದು, ಸಣ್ಣದಾದ ಕಬ್ಬಿಣದ ಚಕ್ರದ ಮೇಲೆ ವಿವಿಧ ಭಂಗಿಯಲ್ಲಿ ನಿಂತು, ಕುಂತು ತೋರಿಸುವುದು ಮಾಡುತ್ತಾರೆ. ಹೀಗೆ ಅನೇಕರು ವಿವಿಧ ಬಗೆಯ ಕಸರತ್ತುಗಳನ್ನು ಮಾಡಿ ನಮಗೆ ಮನರಂಜನೆ ನೀಡುತ್ತಾರೆ.
ಇದೇ ರೀತಿ ಸರ್ಕಸ್‌ನಲ್ಲಿ ಬಾಲಕಿಯರು ವೇದಿಕೆಯ ಮೇಲೆ ಬಂದು ತಮ್ಮ ದೇಹದ ಪ್ರತಿಯೊಂದು ಭಾಗವನ್ನು ಮಡಚಿ, ಕೈಕಾಲುಗಳನ್ನು ೯೦ ಡಿಗ್ರಿ ಕೋನವಾಗಿರಿಸಿ ತಮ್ಮ ತಲೆಯನ್ನು ಟೇಬಲ್ ಮೇಲೆ ಇಡುವುದು, ಎರಡು ಕೈಗಳನ್ನು ಪರಸ್ಪರ ಹಿಡಿದುಕೊಂಡು ಈ ಕೈಯೊಳಗಿನಿಂದ ತಮ್ಮ ಕಾಲುಗಳನ್ನು ಹಾಕಿ ಇಡೀ ದೇಹವನ್ನೇ ಸೂಟ್‌ಕೇಸ್‌ನಲ್ಲಿ ಕೊಂಡೊಯ್ಯಲು ಸಾಧ್ಯವಾಗುವಂತೆ ಮಡಚಿಕೊಳ್ಳುವುದು, ನೋಡುಗರಿಗೆ ಆಶ್ಚರ್ಯದ ಜೊತೆಗೆ ಆ ಮಕ್ಕಳ ಮುದ್ದು ಮುಖ ನೋಡಿ ಅಯ್ಯೋ ಪಾಪ ಅನ್ನಿಸದೇ ಇರಲಿಕ್ಕಿಲ್ಲ. ಈ ಮುದ್ದು ಮಕ್ಕಳು ಅಡಿ ಕುಣಿದು ಕಾಲ ಕಳೆಯಬೇಕಾದ ದಿನಗಳಲ್ಲಿ ತಮ್ಮನ್ನು ಸಾಕುವವರ ಹೊಟ್ಟೆ ತುಂಬಿಸಲು ಶ್ರಮ ವಹಿಸಬೇಕಾದುದು ಅನಿವಾರ್ಯವಾಗಿದೆ. ಸರ್ಕಸ್‌ನ ಕೊನೆಯಲ್ಲಿ ಬರುವ ಪ್ರಾಣಿಗಳ ಆಟವೂ ಅಷ್ಟೇ. ಮೂರು ನಾಯಿಗಳು ಮಾಸ್ಟರ್ ಕೋಲಿನ ಭಯಕ್ಕೆ ಎರಡು ಕಾಲಲ್ಲಿ ನಡೆಯುತ್ತವೆ. ಈ ಟೇಬಲ್ ನಿಂದ ಆ ಟೇಬಲ್ ಮೇಲೆ ಹಾರುತ್ತವೆ. ಸಣ್ಣದಾದ ಡ್ರಮ್ ಒಳಗೆ ಒಂದು ನಾಯಿ ಸೇರಿಕೊಳ್ಳುತ್ತದೆ. ಅದಕ್ಕೆ ಇನ್ನುಳಿದ ಎರಡು ನಾಯಿಗಳು ತಳ್ಳುತ್ತ ಸಾಗಿ ಸುತ್ತವೆ. ಒಂದು ವೇಳೆ ಈ ನಾಯಿಗಳು ಹೇಳಿ ಕೊಟ್ಟಂತೆ ಮಾಡದೇ ಇದ್ದಲ್ಲಿ ಮಾಸ್ಟರ್ ಕೈಯ ಲ್ಲಿರುವ ಕೋಲಿನ ರುಚಿ ಕಾಣಬೇಕಾಗುತ್ತದೆ. ಕೋಲಿನ ಭಯಕ್ಕೆ ಈ ನಾಯಿಗಳು ಜನರಿಗೆ ರಂಜನೆ ನೀಡುತ್ತವೆ.
ಹಣ ಗಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡ ವರಿಗೆ ದಯೆ, ಕಣಿಕರದ ಅರಿವು ಇರುವುದಿಲ್ಲ ಎಂಬಂತೆ ಸರ್ಕಸ್‌ನಲ್ಲಿ ಪ್ರಾಣಿಗಳನ್ನು ಹಿಂಸಿಸುವುದು. ಮಕ್ಕಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಮಾಡುತ್ತಾರೆ. ಪ್ರಾಣಿಗಳನ್ನು ಹಿಂಸಿಸಿದಲ್ಲಿ ‘ಪ್ರಾಣಿ ದಯಾ ಸಂಘ’ದವರು ಮುಂದಾಗಿ ಆ ಸಂಸ್ಥೆ ಅಥವಾ ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.
ಬಾಲ ಕಾರ್ಮಿಕರ ಪದ್ಧತಿಯನ್ನು ಹೋಗಲಾಡಿಸಲು ಸರಕಾರ ಏನೆಲ್ಲಾ ಕ್ರಮ ವಹಿಸುತ್ತ ಬಂದಿದೆ. ಈ ಕುರಿತು ಪ್ರತ್ಯೇಕ ಕಾನೂನು ಕೂಡ ಇದೆ. ಆದರೂ ಅಲ್ಲಲ್ಲಿ ಬಾಲ ಕಾರ್ಮಿಕರು ಕಾಣಸಿಗುತ್ತಿರುವುದು ವಿಪರ್ಯಾಸವಲ್ಲದೆ ಇನ್ನೇನು? ಸರ್ಕಸ್‌ನಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರನ್ನೂ ಬಳಸಿಕೊಳ್ಳುವುದು ಅಪರಾಧಕ್ಕೆ ಸಮವಲ್ಲವೇ? ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡು ಕ್ರಮ ಕೈಗೊಳ್ಳದಿರುವುದೇಕೆ ಎಂಬುದು ನಾಗರಿಕ ವಲಯ ದಿಂದ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ ಹೇಳು ವವರಾರು?
Tagged with
bahiranga

ಇತ್ತೀಚಿಗೆ ಮಂಗಳೂರಿನಲ್ಲಿ ಈಸಿ ರಿಚಾರ್ಜ್ ಅಂಗಡಿಯಲ್ಲಿ ಮೊಬೈಲ್ ರಿಚಾರ್ಜ್ ಮಾಡಿಸಿದ ಮಹಿಳೆಯ ಮೊಬೈಲ್ ನಂಬರ್ ಅನ್ನು ಉದ್ಯಮಿಯೋರ್ವ ಪಡೆದು ಪೆಟ್ಟು ತಿಂದ ಘಟನೆ ನಡೆದಿದೆ. ಇಂಥ ಘಟನೆ ಮಂಗಳೂರಿನ ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್ ಪರಿಸರದ ಮೊಬೈಲ್ ಅಂಗಡಿಗಳಲ್ಲಿ ನಿತ್ಯ ನಡೆಯುತ್ತವೆ. ಈಸಿ ರಿಚಾರ್ಜ್ ಅಂಗಡಿಯಲ್ಲಿ ಮೊಬೈಲ್ ನಂಬರ್ ಕೊಡಬೇಡಿ ಎಂದು ಎಷ್ಟು ಹೇಳಿದರೂ ಬುದ್ಧಿ ಕಲಿಯದ ಕಾಲೇಜ್ ಹುಡುಗಿಯರು ನಂಬರ್ ಕೊಟ್ಟು ಬರುತ್ತಾರೆ. ಮನೆಗೆ ತಲುಪುವಷ್ಟರಲ್ಲಿ ಮೆಸೇಜ್ ಕಳುಹಿಸಿ ಅಪರಿಚಿತ ಯುವಕರು ಸ್ನೇಹ ಸಂಪಾದಿಸಿ ರುತ್ತಾರೆ. ಇಲ್ಲಿ ಅಂಗಡಿಯಲ್ಲಿರುವವರು ಮಾತ್ರವಲ್ಲದೆ ಅವರ ಸ್ನೇಹಿತರೂ ಮೊಬೈಲ್ ನಂಬರ್ ಅನ್ನು ದುರುಪಯೋಗಪಡಿಸಿಕೊಂಡ ಎಷ್ಟೋ ಉದಾಹರಣೆಗಳಿವೆ. ಇದು ಮಂಗಳೂರು ಎನ್ನುವ ಸಭ್ಯ ನಗರಕ್ಕೆ ಒದಗಿದ ದೊಡ್ಡ ಕಂಟಕವೇ ಸರಿ. ಹಿಂದೂ ಹುಡುಗಿ ಯರು ಎಂದು ತಿಳಿದ ತಕ್ಷಣ ಅನ್ಯಮತೀಯ ಯುವಕರು ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಧರ್ಮವನ್ನೇ ಬದಲಿಸಿ ಯಾರನ್ನೋ ತಂದೆ-ತಾಯಿ ಎಂದು ವಂಚಿಸುವ ಘಟನೆಗಳೂ ನಡೆಯುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವುದು ಅಷ್ಟರಲ್ಲೇ ಇದೆ. ಆದ್ದರಿಂದ ಇಂಥ ದುರ್ವರ್ತನೆಯ ವಿರುದ್ಧ ಹಿಂದೂ ಸಂಘಟನೆಗಳೇ ಯೋಗ್ಯ ಕ್ರಮ ಜರುಗಿಸಬೇಕು. ಮೊಬೈಲ್ ಅಂಗಡಿಗಳಲ್ಲಿ ನಂಬರ್ ಕೊಡದಿರುವಂತೆ ಶಾಲಾ-ಕಾಲೇಜ್‌ಗಳಲ್ಲಿ ಅಭಿಯಾನ ರೂಪಿಸಬೇಕು. ಹೀಗಾದರೆ ಮಾತ್ರ ಮುಗ್ಧ, ಅಮಾಯಕ ಹೆಣ್ಮಕ್ಕಳು ಮಾನ ಕಳೆದುಕೊಳ್ಳುವುದನ್ನು ತಪಿ ಸಲು ಸಾಧ್ಯ.
ಸೃಜನ್ ಶೆಟ್ಟಿ, ಮಂಗಳೂರು
ವಿದ್ಯುತ್ ಬೆಲೆಯೇರಿಕೆ ಪ್ರತಿಭಟನೆ ಅನಿವಾರ್ಯ
ಬರದಿಂದ ಕಂಗೆಟ್ಟ ರಾಜ್ಯದ ಜನರಿಗೆ ವಿದ್ಯುತ್ ಬೆಲೆಯೇರಿಕೆ ಶಾಕ್ ನೀಡಿದೆ. ಏಕಾಏಕಿ ಯೂನಿಟ್‌ಗೆ ೧೩ ಪೈಸೆಯಷ್ಟು ಹೆಚ್ಚಳ ಮಾಡಿ ರುವ ಕಾರಣ ಜನರು ತೊಂದ ರೆಗೆ ಒಳಗಾಗಿದ್ದಾರೆ. ವಿದ್ಯುತ್ ಬೆಲೆಯೇರಿಕೆ ವಿರುದ್ಧ ಪ್ರತಿಭಟಿ ಸಲು ಸಂಘ-ಸಂಸ್ಥೆಗಳು ಮುಂ ದಾಗುತ್ತಿಲ್ಲವೇಕೆ? ರಾಜ್ಯದ ಜನತೆಗೆ ವಿದ್ಯುತ್ ಬೆಲೆಯೇರಿಕೆ ಹೊರೆಯು ಮುಂದೆ ಇನ್ನಷ್ಟು ಸಮಸ್ಯೆಗೆ ಕಾರಣವಾದೀತು. ಆದ್ದರಿಂದ ಈಗಲೇ ಎಚ್ಚೆತ್ತು ಹೋರಾಡಬೇಕಾದುದು ಅನಿವಾರ್ಯ ವಾಗಿದೆ. ಬೆಲೆಯೇರಿಕೆ ವಿರುದ್ಧ ಯಾವುದೋ ಒಂದು ಸಂಘಟನೆ ಹೋರಾಡಿದರೆ ಸಾಲದು. ಇಲ್ಲಿ ಜನರು ಜಾತಿ-ಧರ್ಮ ಮರೆತು ಹೋರಾಡಿದಾಗ ಮಾತ್ರ ಸರಕಾರ ಕಣ್ತೆರೆಯುವ ಸಾಧ್ಯತೆಯಿದೆ.
ಅಬ್ಬು, ಫರಂಗಿಪೇಟೆ
ಬೆಟ್ಟಿಂಗ್ ದಂಧೆ ತಡೆಯಲು ಅಸಾಧ್ಯವೇ?
ಉಡುಪಿ ಜಿಲ್ಲೆಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ. ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಕಾಲೇಜ್ ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು ಈ ದಂಧೆಗೆ ಹಣ ಸುರಿದು ಸಾಲದ ಸುಳಿಗೆ ಸಿಲು ಕುತ್ತಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಬೆಟ್ಟಿಂಗ್ ದಂಧೆಯನ್ನು ತಡೆಯಲು ಯತ್ನಿಸುತ್ತಿಲ್ಲ. ಯಾಕೆಂದರೆ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳೇ ಇಂಥ ದಂಧೆಯಲ್ಲಿ ಶಾಮೀಲಾಗಿದ್ದಾರೆ.
ಇವರು ಪೊಲೀಸ್ ಇಲಾಖೆಗೂ ಇಂತಿಷ್ಟು ಹಣ ಸಂದಾಯ ಮಾಡುವುದರಿಂದ ದಂಧೆ ಸಲೀಸಾಗಿ ನಡೆಯುತ್ತಿದೆ. ಉಡುಪಿ ಜಿಲ್ಲೆಯ ಬಸ್ ತಂಗುದಾಣ, ಕೆಲವು ಕುಖ್ಯಾತ ಲಾಡ್ಜ್‌ಗಳಲ್ಲಿ ಬೆಟ್ಟಿಂಗ್ ದಂಧೆ ನಡೆಯುತ್ತಿರುವ ಬಗ್ಗೆ ಜನರು ಚರ್ಚೆ ಮಾಡುವುದು ಕಂಡುಬರುತ್ತದೆ. ಇನ್ನಾದರೂ ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚೆತ್ತು ಕೊಳ್ಳಬೇಕು. ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರು ವವರನ್ನು ಹಿಡಿದು ಜೈಲಿಗಟ್ಟಬೇಕು.
ಸುಧೀರ್ ಕೆ, ಅಲೆವೂರು
ನಾಪತ್ತೆ ಪ್ರಕರಣಗಳಿಗೆ ಮೊಬೈಲ್ ಕಾರಣ
ದಿನನಿತ್ಯ ಅನೇಕ ಯುವತಿಯರು ನಾಪತ್ತೆಯಾಗುತ್ತಿದ್ದಾರೆ. ಇದೆಲ್ಲದರ ಹಿಂದಿ ರುವ ಕಾರಣ ಒಂದೇ ಮೊಬೈಲ್. ಯಾಕೆಂ ದರೆ ಮನೆಮಂದಿ ಪ್ರೀತಿಯಿಂದ ತೆಗೆಸಿ ಕೊಡುವ ಮೊಬೈಲ್ ಮುಂದೆ ಅವರನ್ನು ಪ್ರೀತಿ-ಪ್ರೇಮ ಎಂದು ಮನೆಬಿಟ್ಟು ನಾಪತ್ತೆ ಯಾಗುವ ಹಾಗೆ ಮಾಡಿಬಿಡುತ್ತದೆ. ಗುರುತು-ಪರಿಚಯವಿಲ್ಲದಿದ್ದರೂ ಮೊಬೈಲ್‌ನಲ್ಲಿ ಪರಿಚಯವಾಗುವವರ ಮಾತಿಗೆ ಕಟ್ಟುಬಿದ್ದು ಮನೆ ತೊರೆಯು ವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಆದರೆ ಇದು ಪ್ರೀತಿಯಲ್ಲ, ಬರೇ ಆಕರ್ಷಣೆ ಎಂದು ತಿಳಿಯುವಷ್ಟರಲ್ಲಿ ಕಾಲ ಮೀರಿರುತ್ತದೆ. ಪ್ರೀತಿ-ಪ್ರೇಮದ ಹೆಸರಲ್ಲಿ ಎಲ್ಲವನ್ನೂ ಕಳೆದುಕೊಂಡಿರುತ್ತಾರೆ. ಹೀಗಾಗಿ ಈ ಬಗ್ಗೆ ಹೆಣ್ಮಕ್ಕಳ ಹೆತ್ತವರೇ ಜಾಗ್ರತೆ ವಹಿಸಬೇಕು. ಮೊಬೈಲ್ ಎನ್ನುವ ಮಾರಿ ಅತ್ಯವಶ್ಯವೇ ಎನ್ನುವುದನ್ನು ತಿಳಿದು ಕೊಂಡರೆ ಒಳ್ಳೆಯದು.
ಸಂಕೇತ್ , ಕಂಕನಾಡಿ
ಕನ್ನಡ ಭಾಷೆಗೆ ಮಾನ್ಯತೆ ಯಾವಾಗ?
ಕರ್ನಾಟಕ ರಾಜ್ಯದಲ್ಲಿ ಕನ್ನಡಿಗರಿಗೇ ಕೆಲಸವಿಲ್ಲ. ಎಲ್ಲಿ ಕೆಲಸ ಕೇಳಲಿಕ್ಕೆ ಹೋದರೂ ಮೊದಲು ಇಂಗ್ಲಿಷ್ ಬರುತ್ತಾ? ಎಂದು ಕೇಳುತ್ತಾರೆ. ಹೀಗೆ ಎಲ್ಲ ಕಂಪನಿಗಳು ಇಂಗ್ಲಿಷ್ ಬಲ್ಲವರನ್ನೆ ಬಯಸಿದರೆ ಕನ್ನಡ ಮಾಧ್ಯಮದಲ್ಲಿ ಓದಿ ಬಂದಿರುವವರ ಗತಿ ಏನು? ಅವರು ಎಲ್ಲಿ ಕೆಲಸ ಕೇಳಲು ಹೋಗಬೇಕು? ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲು ಪ್ರಾಮು ಖ್ಯತೆ ಕೊಡಬೇಕು. ಕರ್ನಾಟಕದ ಎಲ್ಲಾ ಕಂಪೆನಿಗಳಲ್ಲಿ ಮೊದಲು ಕನ್ನಡದ ಬಳಕೆ ಆಗಬೇಕು. ನಂತರ ಬೇರೆ ಭಾಷೆಯನ್ನು ಉಪಯೋಗಿಸಬೇಕು. ಆವಾಗ ನಮ್ಮ ರಾಜ್ಯದ ಎಲ್ಲಾ ವಿದ್ಯಾವಂತರಿಗೂ ಕೆಲಸ ಸಿಗಬಹುದು. ರಾಜ್ಯದ ಯಾವುದೇ ಕಂಪೆನಿಗಳಿಗೆ ಹೋದರೂ ಅಲ್ಲಿ ತಮಿಳುನಾಡಿನವರು, ಆಂಧ್ರಪ್ರದೇಶದವರೇ ತುಂಬಿರುತ್ತಾರೆ. ಕನ್ನಡಿಗರಿಗೆ ಕೆಲಸವೇ ಇರುವುದಿಲ್ಲ. ಅದೇ ನಾವು ತಮಿಳುನಾಡು ಅಥವಾ ಆಂಧ್ರಪ್ರದೇಶಕ್ಕೆ ಹೋದರೆ ಅಲ್ಲಿ ನಮಗೆ ಮೊದಲ ಪ್ರಾಮುಖ್ಯತೆ ಕೊಡುವುದಿಲ್ಲ. ಅಲ್ಲಿ ಅವರಿಗೇ ಪ್ರಮುಖ ಆಧ್ಯತೆ. ಇದೇ ತರಹ ಇತರ ಭಾಷಿಗರು ಕರ್ನಾಟಕದಲ್ಲಿ ತುಂಬಿಹೋದರೆ ಕನ್ನಡ ಅನ್ನುವ ಭಾಷೆಯೇ ಮುಂದೊಂದು ದಿನ ಮಾಯವಾಗುವ ದಿನ ದೂರವಿಲ್ಲ.
ರಂಜಿತ್, ಉಜಿರೆ
ಕ್ರಿಕೆಟ್ ತರಬೇತಿಯಿಂದ ಏನು ಲಾಭ?
ಪ್ರತೀವರ್ಷ ಮಕ್ಕಳ ವಾರ್ಷಿಕ ರಜೆಯ ಸಂದರ್ಭದಲ್ಲಿ ಮಂಗಳೂರಿನ ಮೈದಾನಗಳಲ್ಲಿ ಬಿಳಿ ಪ್ಯಾಂಟ್, ಬಿಳಿ ಟಿ-ಶರ್ಟ್ ಧರಿಸಿದ ಮಕ್ಕಳು ಬ್ಯಾಟ್ ಕೈಯಲ್ಲಿ ಹಿಡಿದು ಕ್ರಿಕೆಟ್ ಆಡುವುದು ಕಂಡುಬರುತ್ತದೆ. ಈ ಮಕ್ಕಳ ಹೆತ್ತವರು, ಪೋಷಕರು ಪ್ರತಿಷ್ಠೆಗಾಗಿ ಇವರನ್ನು ಕ್ರಿಕೆಟ್ ತರಬೇತಿಗೆ ಕಳುಹಿಸುತ್ತಾರೆ. ಆದರೆ ಇಂಥ ತರಬೇತಿ ಪಡೆದು ಇವರು ಏನು ಸಾಧಿಸುತ್ತಾರೆ ಎನ್ನುವುದೇ ಕಾಡುತ್ತಿರುವ ಪ್ರಶ್ನೆ. ಯಾಕೆಂದರೆ ಮಂಗ ಳೂರಿನಲ್ಲಿ ಕಳೆದ ಇಷ್ಟು ವರ್ಷಗಳಿಂದ ಕ್ರಿಕೆಟ್ ತರಬೇತಿ ನಡೆಯುತ್ತಿದ್ದರೂ ಇಲ್ಲಿಂದ ಯಾರೂ ಕೂಡ ರಾಜ್ಯ, ರಾಷ್ಟ್ರಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿಲ್ಲ. ಹೀಗಾದರೆ ತರಬೇತಿ ನೀಡುತ್ತಿರುವುದಕ್ಕೆ ಅರ್ಥವೇನು?
ನಾಸಿರ್, ಮಂಗಳೂರು
ನೈತಿಕ ಪೊಲೀಸ್‌ಗಿರಿಗೆ ಕೊನೆಯೆಂದು?
ಕೆಲವು ಮಂದಿ ಸಂಘಟನೆಗಳ ಹೆಸರನ್ನು ಹೇಳಿಕೊಂಡು ಸಮಾಜದಲ್ಲಿ ಅಶಾಂತಿ, ಭಯದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಪಾರ್ಕ್, ಸಿನಿಮಾ ಥಿಯೇಟರ್‌ಗಳಲ್ಲಿ ಗಂಡು -ಹೆಣ್ಣು ಜೋಡಿಯಾಗಿ ಕುಳಿತುಕೊಳ್ಳು ವಂತಿಲ್ಲ. ಅವರು ಸೋದರ-ಸೋದರಿ ಸಂಬಂಧಿಯೇ ಆಗಿದ್ದರೂ ಸಂಘಟನೆಯ ಯುವಕರು ಶಂಕೆಯಿಂದಲೇ ಕಾಣುತ್ತಾರೆ. ಅವರನ್ನು ಬಗೆ-ಬಗೆಯಾಗಿ ಪರಿಶೀಲನೆ ನಡೆಸುತ್ತಾರೆ. ಇದು ಮಂಗಳೂರಿನ ಪ್ರವಾಸಿ ಸ್ಥಳಗಳಲ್ಲಿ ನಿತ್ಯ ಕಂಡುಬರುವ ದೃಶ್ಯ. ಜಿಲ್ಲೆಯಲ್ಲಿರುವುದೇ ಬೆರಳೆಣಿಕೆಯ ಪ್ರವಾಸಿ ತಾಣಗಳು. ಇಲ್ಲಿ ಯುವಪ್ರೇಮಿಗಳಿಗೆ ಸ್ವಚ್ಛಂದ ವಾಗಿ ವಿಹರಿಸಲು ಸಂಘಟನೆಯ ತಿಳಿಗೇ ಡಿಗಳು ಅವಕಾಶ ನೀಡುವುದಿಲ್ಲ. ಪ್ರಾಯ ಪ್ರಬುದ್ಧ ಜೋಡಿಯನ್ನು ಹಿಡಿದು ಸಂಸ್ಕೃತಿ ಯ ಹೆಸರಿನಲ್ಲಿ ವಿಚಾರಣೆ ನಡೆಸಲು ಇವರಿಗೆ ಜಿಲ್ಲಾ ಪೊಲೀಸ್ ಇಲಾಖೆ ಅನುಮತಿ ನೀಡಿ ದೆಯೇ? ಜಿಲ್ಲೆಯಲ್ಲಿ ಇನ್ನೂ ಸಂಘ ಟನೆಗಳ ನೈತಿಕ ಪೊಲೀಸ್‌ಗಿರಿ ನಿಂತಿಲ್ಲವೆಂದರೆ ಹೊಣೆ ಯಾರು?
ದುರ್ಗಾಪ್ರಸಾದ್, ಪುತ್ತೂರು
ಅಕ್ರಮ ಕಲ್ಲುಕೋರೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ
ಗುರುಪುರ, ಮೂಡಬಿದ್ರೆ ಪರಿಸರದಲ್ಲಿ ಅಕ್ರಮ ಕಲ್ಲುಕೋರೆಗಳು ರಾಜಾರೋಷವಾಗಿ ಕಾರ್ಯಾ ಚರಣೆ ನಡೆಸುತ್ತಿದೆ. ಇವುಗಳ ಮೇಲೆ ಕ್ರಮ ಕೈಗೊಳ್ಳುವ ಗಂಡೆದೆಯ ಅಧಿಕಾರಿಗಳು ಇಲ್ಲಿ ಯಾರೂ ಇಲ್ಲವಾಗಿದ್ದಾರೆ. ದಿನಕ್ಕೆ ಹಲವಾರು ಲೋಡ್ ಕೆಂಪು ಕಲ್ಲುಗಳನ್ನು ಲಾರಿಗಳಲ್ಲಿ ಹೇರಿಕೊಂಡು ಸಾಗಿಸು ತ್ತಾರೆ.
ಇವರು ಯಾವುದೇ ಕಾನೂನು ಕ್ರಮಗಳನ್ನು ಪಾಲಿಸುವುದಿಲ್ಲ. ಕಲ್ಲುಕೋರೆಗಳ ಮಾಲಕರು ಅಕ್ರಮ ವಾಗಿ ಕೋಟ್ಯಂತರ ಮೌಲ್ಯದ ಆಸ್ತಿ ಸಂಪಾದಿಸಿ ಮೆರೆಯುತ್ತಾರೆ. ಪಂಚಾಯತ್ ಆಡಳಿತದಿಂದ ಹಿಡಿದು ಮೇಲ್ಮಟ್ಟದ ಅಧಿಕಾರಿ ಗಳವರೆಗೆ ಎಲ್ಲರೂ ಭ್ರಷ್ಟರೇ ಆಗಿದ್ದಾರೆ. ಲೋಕಾಯುಕ್ತ ಇಲಾಖೆ ಏನೇನೂ ಕೆಲಸ ಮಾಡುತ್ತಿಲ್ಲ. ಅಕ್ರಮ ಗಣಿಗಾರಿಕೆ ಯಿಂದ ಪರಿಸರದ ವಾಸಿಗಳು ಇನ್ನಿಲ್ಲದ ಬವಣೆ ಎದುರಿಸುತ್ತಿದ್ದರೂ ಆಡಳಿತಕ್ಕೆ ಬುದ್ಧಿ ಬಂದಂತಿಲ್ಲ. ಅಕ್ರಮ ಕೋರೆಗಳ ಮೇಲೆ ಕ್ರಮ ಕೈಗೊಳ್ಳುವವ ರಾರು?
ಶ್ರೀಧರ್, ಮೂಡಬಿದ್ರೆ
ವರದಕ್ಷಿಣೆ ವಿರೋಧಿ ಅಭಿಯಾನವೆಂದರೇನು?
ಸಮಾಜದಲ್ಲಿ ವರದಕ್ಷಿಣೆ ಕೊಡುವ, ತೆಗೆದುಕೊಳ್ಳುವ ಸಂಪ್ರದಾಯ ನಶಿಸಿ ಹೋಗು ತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಇಲ್ಲಿ ಒಂದು ಶಂಕೆ ಮೂಡುತ್ತದೆ, ಅದೇನೆಂದರೆ ವರದಕ್ಷಿಣೆ ಎಂದರೆ ಕೇವಲ ಹಣ ಮಾತ್ರವೇ? ಯಾಕೆಂದರೆ ಕೆಲವು ಸಂಘಟನೆಗಳು ವರದಕ್ಷಿಣೆ ವಿರುದ್ಧ ಹೋರಾಟ ನಡೆಸುತ್ತಿವೆ. ಶ್ರೀಮಂತರು ಕೂಡಾ ಇಂಥ ಹೋರಾಟಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಆದರೆ ಇಲ್ಲಿ ಸ್ವಾರಸ್ಯದ ಸಂಗತಿ ಯೆಂದರೆ ಶ್ರೀಮಂತರು ವರದಕ್ಷಿಣೆ ಬೇಡವೆಂದು ಬಡವರ ಮನೆಯ ಹೆಣ್ಣುಮಕ್ಕಳನ್ನು ಮದುವೆ ಯಾಗುವುದಿಲ್ಲ. ಅವರದೇನಿದ್ದರೂ ಅವರಿಗಿಂತ ಶ್ರೀಮಂತರ ಜೊತೆಗೆ ಮಾತ್ರ ಸಂಬಂಧ. ಇವರು ವರದಕ್ಷಿಣೆ ಎಂದು ನಯಾಪೈಸೆ ಹಣ ಪಡೆಯುವುದಿಲ್ಲ. ಆದರೆ ಕೆ.ಜಿ.ಗಟ್ಟಲೆ ಚಿನ್ನಾ ಭರಣ, ಕಾರು, ಮನೆತುಂಬಾ ಬೆಲೆಬಾಳುವ ಸೊತ್ತುಗಳು ಎಲ್ಲ ವನ್ನೂ ಪಡೆದುಕೊಳ್ಳುತ್ತಾರೆ. ಅವರಿಗೆ ವರದಕ್ಷಿಣೆ ಎಂದರೆ ಕೇವಲ ಹಣ ಮಾತ್ರ. ಇವೆಲ್ಲ ಪ್ರೀತಿಯಿಂದ ಕೊಡುವ ವಸ್ತುಗಳು. ಇಂಥವರು ವರದಕ್ಷಿಣೆ ವಿರೋಧಿ ಅಭಿಯಾನದಲ್ಲಿ ತೊಡಗಿಕೊಳ್ಳುವುದು ಎಷ್ಟು ಸರಿ? ಇವರಿಗೆ ಕೇವಲ ಪ್ರಚಾರದ ತೆವಲು ಅಂಟಿದೆಯೇ ಹೊರತು ಸಮಾಜದ ಬಗೆಗಿನ ಎಳ್ಳಷ್ಟೂ ಕಾಳಜಿಯಿಲ್ಲ. ವರದಕ್ಷಿಣೆ ವಿರೋಧಿ ಅಭಿ ಯಾನ ನಡೆಯಲಿ, ಆದರೆ ಅದು ಪ್ರಚಾರದ ಹೊರತಾಗಿರಲಿ. ವರದಕ್ಷಿಣೆ ತೆಗೆದು ಕೊಳ್ಳುವ ಮದುವೆಯನ್ನು ಮಾತ್ರ ನಿಷೇಧಿಸಿದರೆ ಸಾಲದು, ಸಾಧ್ಯವಾದರೆ ವರದಕ್ಷಿಣೆ ವಿರೋಧಿಸಿ ಬಡವರ ಮನೆಯ ಹೆಣ್ಮಕ್ಕಳನ್ನು ಸರಳವಾಗಿ ಮದುವೆಯಾಗಿ. ಅದನ್ನು ಬಿಟ್ಟು ಕೆ.ಜಿ. ಗಟ್ಟಲೆ ಚಿನ್ನ ಕೊಡುವ ಶ್ರೀಮಂತ ಮನೆಯ ಹೆಣ್ಮಕ್ಕಳಿಗೆ ಗಾಳ ಹಾಕು ವುದು ಬೇಡ. ಇದು ನಿಮ್ಮ ನಪುಂಸಕತನ ವನ್ನು ಜಾಹೀರು ಮಾಡಿದಂತೆಯೇ ಸರಿ.
ಅಲ್ತಾಫ್, ಬೀಡಿನಗುಡ್ಡೆ
Tagged with
nimminda
ಮೇಷ : ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಇದೆ.
ವೃಷಭ : ಪ್ರಯಾಣದಲ್ಲಿ ನಷ್ಟ ಉಂಟಾಗಲಿದೆ.
ಮಿಥುನ : ವ್ಯಾಪಾರದಲ್ಲಿ ಪ್ರಗತಿ ಇರುತ್ತದೆ.
ಕರ್ಕಾಟಕ : ಉದ್ಯೋಗದಲ್ಲಿ ಕಿರಿಕಿರಿ ಇರುತ್ತದೆ.
ಸಿಂಹ : ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ಕನ್ಯಾ : ದೂರ ಸಂಚಾರದಿಂದ ತೊಂದರೆ ಇರುತ್ತದೆ.
ತುಲಾ : ನೆರೆ ಹೊರೆಯವರಿಂದ ತೊಂದರೆ ಇರುತ್ತದೆ.
ವೃಶ್ಚಿಕ : ಶುಭ ಕೆಲಸಗಳನ್ನು ಮಾಡುತ್ತೀರಿ.
ಧನು : ಕೆಲವು ಸಮಸ್ಯೆಗಳು ಎದುರಾಗುತ್ತದೆ.
ಮಕರ : ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.
ಕುಂಭ : ಸಾಲದಿಂದ ತೊಂದರೆಯನ್ನು ಅನುಭವಿಸುತ್ತೀರಿ.
ಮೀನ : ಕುಟುಂಬದಲ್ಲಿ ವಾದ ವಿವಾದಗಳು ನಡೆಯುತ್ತದೆ.
Tagged with
bhavishya
ಮಂಗಳೂರು : ಕಂಕನಾಡಿ ಅಟೋಮೊಬೈಲ್ ಶಾಪಿಗೆ ಜನಬೇಕು. ೯೪೪೯೪೪೧೨೩೪.
ಉಡುಪಿ : ಕಂಪೆನಿ ಕೆಲಸಕ್ಕೆ ಯುವಕ - ಯುವತಿಯರು ಬೇಕು ೯೯೮೦೪೬೩೬೧೧.
ಮಂಗಳೂರು : ಯೆಯ್ಯಾಡಿಯಲ್ಲಿರುವ ಮುದ್ರಣಾಯಲಕ್ಕೆ ಡಿ.ಟಿ.ಪಿ. ಅಪರೇಟರ್ ಬೇಕು ೨೨೧೧೦೫೦.
ಮಂಗಳೂರು : ತಿಂಡಿ (ಪಪ್ಸ್) ಮಾಡುವವರು ಬೇಕು ೯೯೦೧೩೫೦೪೩೧.
ಮಂಗಳೂರು : ಹೊಟೇಲಿಗೆ ಅಡುಗೆ ಯವರು ಬೇಕು ೯೯೮೬೬೪೮೧೧೮.
ಸುರತ್ಕಲ್ : ಬಟ್ಟೆ ಅಂಗಡಿಗೆ ಲೇಡಿಸ್ ಕಟ್ಟಿಂಗ್ ಮಾಸ್ಟರ್ ಬೇಕು ೯೮೪೪೫೪೩೧೫೧.
ಉಡುಪಿ : ಎಲೆಕ್ಟ್ರಾನಿಕ್ಸ್ ಶಾಪಿಗೆ ಲೇಡಿಸ್ ಕ್ಯಾಶಿಯರ್ ಬೇಕು ೯೮೮೦೨೧೯೯೪೯.
ಮೂಡಬಿದ್ರೆ : ದೋಸೆ ಮಾಡುವ ಹೆಂಗಸರು ಬೇಕು. ೯೯೦೨೦೭೧೫೪೯.
ಕಂಕನಾಡಿ :ಟೈಲರಿಂಗ್ ಶಾಪಿಗೆ ಅಲ್ ಟ್ರೇಶನ್ ಮತ್ತು ಫಿನಿಶಿಂಗ್‌ಗೆ ಜನ ಬೇಕು ೯೮೮೬೪೪೩೯೬೧.
ಮಂಗಳೂರು : ಪ್ಲಂಬರ್ & ಎಲೆಕ್ಟ್ರಿಶಿಯನ್ ಬೇಕು. ೯೮೪೪೬೬೭೦೨೪
ತೊಕ್ಕೊಟ್ಟು : ಬಾರ್ & ರೆಸ್ಟೋರೆಂಟ್‌ಗೆ ಕಿಚನ್ ಹೆಲ್ಪರ್ ಮತ್ತು ವೇಟರ್ (ಪಾರ್ಟ್‌ಟೈಂ) ಬೇಕು. ೯೭೪೨೨೮೫೪೮೫.
ತೊಕ್ಕೊಟ್ಟು ವೆಜ್ ರೆಸ್ಟೋರೆಂಟಿಗೆ ಚೈನೀಸ್ ಕುಕ್ ಬೇಕಾಗಿದ್ದಾರೆ. ೯೯೦೧೧೪೩೦೮೯
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ ಬೇಕು. ೯೮೪೫೫೯೬೯೬೦
ಉಡುಪಿ : ಬೇಕರಿಗೆ ಜನ ಬೇಕು ೯೭೪೩೪೯೨೯೧೨
ಕೈಕಂಬ : ಹೆಲ್ಪರ್ ಕೆಲಸಕ್ಕೆ ಹುಡುಗರು, ಹುಡುಗಿಯರು ಬೇಕು.೯೮೪೪೦೦೯೯೦೫
ಕೈಕಂಬ : ಕವಾಟು ಫ್ಯಾಕ್ಟರಿಗೆ ಕೆಲಸಕ್ಕೆ ಹೆಲ್ಪರ್ ಬೇಕು.೯೮೪೫೯೫೬೧೪೦
ಮಂಗಳೂರು :ಸೂಪರ್ ಮಾರ್ಕೆಟ್‌ಗೆ ಮ್ಯಾನೇಜರ್ ಬೇಕು. ೯೮೮೦೨೩೯೧೭೦
ಮಂಗಳೂರು :ಸ್ಪೇರ್ ಪಾರ್ಟ್ಸ್ ಅಂಗಡಿಗೆ ಕೆಲಸಕ್ಕೆ ಜನ ಬೇಕು. ೯೩೪೩೩೫೫೮೩೫
ಮಂಗಳೂರು : ಲೇಡಿಸ್ ಟೈಲರ್ ಬೇಕು ೮೦೫೦೧೬೩೨೭೮.
ಮಂಗಳೂರು : ಹೋಟೆಲ್‌ಗೆ ವೇಟರ್, ಕಿಚನ್ ಹೆಲ್ಪರ್ ಬೇಕು ೯೮೫೯೮೨೬೨೫.
ಟಿಕದ್ರಿ: ಲಾಂಡ್ರಿಗೆ ಜನ ಬೇಕು ೨೨೨೧೯೪೫.
ಕಾರ್ಕಳ : ಬಾರ್‌ಗೆ ವೇಟರ್, ಕ್ಲೀನ್ ಬೇಕು ೯೮೪೫೮೭೪೦೬೮
ಮಂಗಳೂರು : ಹೋಂ ಪ್ರೊಡಕ್ಟ್‌ಗೆ ಯುವಕ-ಯುವತಿಯರು ಬೇಕು ೯೦೬೦೯೩೨೩೫೧.
ಮಂಗಳೂರು : ಪ್ರೆಸ್‌ಗೆ ಬೈಂಡಿಂಗ್ ಕೆಲಸಕ್ಕೆ ಜನ ಬೇಕು ೨೨೧೧೦೫೦.
ಮಂಗಳೂರು : ಎಲೆಕ್ಟ್ರಾನಿಕ್ಸ್ ಅಂಗಡಿಗೆ ಯುವಕರು ಬೇಕು ೪೨೭೪೦೧೦.
ಮಂಗಳೂರು : ಕೊರಿಯರ್ ಸಂಸ್ಥೆಗೆ ಜನ ಬೇಕು ೯೯೦೦೪೩೪೯೪೮.
ಕಂಕನಾಡಿ : ಬಟ್ಟೆ ಅಂಗಡಿಗೆ ಸೇಲ್ಸ್‌ಗೆ ಜನ ಬೇಕು ೯೯೪೫೯೯೬೭೮೭.
ಬಿಕರ್ನಕಟ್ಟೆ ಹೊಟೇಲಿಗೆ ತಿಂಡಿ ಮಾಡು ವವರು ಬೇಕು ೯೪೪೯೯೦೩೩೨೩.
Tagged with
udyoga
ಸಭೆ ಸ್ತಬ್ಧ, ಪ್ರೇಕ್ಷಕರು ಮುಖ ಮುಖ ನೋಡಿಕೊಂಡರು ಏನು ಮಾರಾಯ ಮೆಡಲು ಪೊಲದವರಿಗೋ ಎಂಬ ಶಂಕೆ ಪ್ರಾರಂಭವಾಯಿತು, ಆದರೂ ಕಾಡಬೆಟ್ಟಿನ ‘ಎ’ ಜೊತೆಗಳು ಪೊಲದ ಕೋಣಗಳನ್ನು ಕಡಿಮೆಯೆಂದರೆ ಹತ್ತು ಮೀಟರ್‌ನಷ್ಟು ಹಿಂದಕ್ಕೆ ಹಾಕಬಲ್ಲವೆಂಬ ವಿಶ್ವಾಸ ಜನರಲ್ಲಿತ್ತು. ಪೊಲದ ಕೋಣಗಳ ಓಟದ ಮಿತಿಯರಿತ ಕೆಲವರು ಗೆಲುವು ಪೊಲದವುಗಳಿಗಾಗ ಬಹುದು ಎಂಬ ಧೈರ್ಯದಿಂದಿದ್ದರು.
ಕಾಡಬೆಟ್ಟಿನ ‘ಎ’ ಜೊತೆ ಮತ್ತು ಪೊಲದ ಕೋಣಗಳನ್ನು ಗಂತಿನಲ್ಲಿ ಓಟಕ್ಕೆ ಅಣಿಗೊಳಿಸುತ್ತಿದ್ದಾರೆ. ಪ್ರೇಕ್ಷ ರೆಪ್ಪೆ ಮುಚ್ಚದೆ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದಾನೆ. ಬುಡದಿಂದ ತುದಿಯವರೆಗೆ ನೋಟಕರ ಗಮನ ಏಕೀಕೃತವಾಗಿದೆ.
ಹಾಂ! ಬುಡಿ ಎಂಬ ಶಬ್ದದೊಂದಿಗೆ ಕೋಣಗಳ ಕಾಲ ಸಪ್ಪಳ ಪ್ರತಿಧ್ವನಿಸುತ್ತಿದೆ. ಓಟದ ವೇಗದ ಇತಿ ಮಿತಿ ತಿಳಿಯುತ್ತಿಲ್ಲ. ನೆಗತದ ಓಟ! ಕಣ್ಣಿಗೆ ಆನಂದ ತರುವ ಜೊತೆಯೋಟ! ನಿರ್ಣಾಯಕವಾದ ಈ ಕೊನೆ ಓಟದಲ್ಲಿ ಅರ್ಧ ಕಂಬಳ ಕ್ರಮಿಸಿದೆ. ಇಷ್ಟಾಗುವಾಗ ಕಾಡಬೆಟ್ಟಿನ ರಾಜಕೋಣ ತುಸು ಮಾತ್ರ ಬೆನ್ನು ಬಗ್ಗಿಸಿ ಅಲುಗಿದಂತಾಯಿತು. ಸಾಕಾಯಿತು ಈ ಅವಕಾಶ ಪೊಲದ ಕೋಣಗಳಿಗೆ. ಒಂದು ಹೆಜ್ಜೆಗೆ ಮುಂದಾದವು. ಜಯ ಪೊಲದವರ ಪಾಲಾಯಿತು.
೧೯೮೨ರ ಬಜಗೋಳಿ ಕಂಬಳದ ನಿರ್ಣಾಯಕ ಓಟವನ್ನು ಕಂಡವರು ಈ ಸನ್ನಿವೇಶವನ್ನು ಮರೆಯಲಾರರು. ಪೊಲದ ಕೋಣಗಳ ಕೀರ್ತಿ ಹಬ್ಬಿತು. ಪೊಲದ ಕೋಣಗಳು ನಿಂತಲ್ಲಿ ಜನಸಂದಣಿಯಾಯಿತು. ಎಲ್ಲೆಡೆಯಿಂದ ಕೋಣ ನೋಡುವ ತವಕದಿಂದ ಓಡೋಡಿ ಬರುತ್ತಿದ್ದರು. ಕೋಣದ ಯಜಮಾನರಿಗೆ, ಓಡಿಸುವ ಜಾಕಿಗೆ ಕೋಣವನ್ನು ಹಿಡಿದು ತಯಾರುಗೊಳಿಸುವ ವರಿಗೆ, ಎಲ್ಲರಿಗೂ ಶುಭಾಶಂಸನೆಗೈದರು. ಹಣಕೊಟ್ಟು ಕಂಬಳ ನೋಡಿದವರಿಗೆ ಇದರ ಸೊಬಗು ಚಿತ್ತದಲ್ಲಿರುವುದು ಖಂಡಿತ. ೧೯೮೩ರ ತನಕ ಮರೆಯಲಾರದ ಸವಿನೆನಪದು.
ಕೊಂಬರಬೈಲು ಕೊಕ್ಕೆ
ಈ ಕೋಣವು ೧೯೮೧ರಲ್ಲಿ ಕೊಂಬರಬೈಲು ಅಮ್ಮು ಪೂಜಾರಿಯವರಲ್ಲಿದ್ದು ಅವರಿಗೆ ಪವಾಡದಂತೆ ಗೆಲುವನ್ನು ತಂದಿತ್ತು. ಇದಕ್ಕೆ ಪೆಟ್ಟಿನ ಭಯ ಜಾಸ್ತಿ. ಹಾಗೆಂದು ತಾನಾಗಿ ಉತ್ಸಾಹದಿಂದ ಓಡುವುದೂ ಇಲ್ಲ. ತರಬೇತಿಯ ಅಗತ್ಯವಿತ್ತು. ಎಡಬದಿಯ ಕರೆಯಲ್ಲಿ ಓಡುವಾಗ ಬಲ ಬದಿಯ ಕೋಣದಿಂದಲೂ ಮಿಕ್ಕಿದ ಓಟದಿಂದ ಓಡುವ ಛಲ ಇದರದ್ದು. ಹಾಗಂತ ಬಲಬದಿಯ ಕರೆಯಲ್ಲಿ ಓಡುವಾಗ ಎದುರಾಳಿ ಕೋಣದ ಓಟ ತಿಳಿಯದೆ ಛಲದಿಂದ ಓಡದು!
ಎಂತಿದ್ದರೂ ಸ್ಪರ್ಧೆಯಲ್ಲಿ ಹುಮ್ಮಸ್ಸು ಸ್ವಾಭಾವಿಕವಾಗಿ ಈ ಕೋಣಕ್ಕಿದೆ. ನೈಜ ತರ್ಜುಮೆ ದೊರೆತರೆ ಜಿಲ್ಲೆಯಲ್ಲಿ ಪ್ರಸಿದ್ಧ ಕೋಣಗಳಲ್ಲಿ ಇದಕ್ಕೆ ಪ್ರಾಶಸ್ತ್ಯ ಇದ್ದೇ ಇದೆ.
Tagged with
kambula,
lekhana
ಡಿಯರ್ ದೀಪೀ..
ಹೇಗಿದ್ದಿಯಾ ಅಂತ ಕೇಳೋ ಅವಶ್ಯಕತೆ ಇಲ್ಲಾ ಅಂದ್ಕೋತೀನಿ. ಏಕೆಂದರೆ ನನ್ನ ಹುಡುಗಿ ಚೆನ್ನಾಗಿರಬೇಕೆಂದು ದಿನಾಲು ಆ ದೇವರಲ್ಲಿ ಪ್ರಾರ್ಥಿಸೋ ಹುಡುಗಾ ಕಣೇ ನಾನು. ನೀನು ಯಾವತ್ತಿಗೂ ಚೆನ್ನಾಗೇ ಇರ‍್ತಿಯಾ ಚಿನ್ನೂ. ಸಿಕ್ತೀವಿ ಅಂತ ಗೊತ್ತಿದ್ದೂ ಪ್ರೀತಿಸೋ ಪ್ರೇಮಿ ಗಳಿಗಿಂತ ಸಿಗಲ್ಲ ಅಂತ ಗೊತ್ತಿದ್ದರೂ ಪ್ರೀತಿಸೋ ಪ್ರೇಮಿಗಳು ಗ್ರೇಟ್ ಕಣೇ.
ನಾವಿಬ್ರು ಕೂಡಾ ಅದೇ ತರಾ ಅಲ್ವಾ ಗೆಳತಿ. ನಾವಿಬ್ಬರೂ ರೆಕ್ಕೆಗಳೇ ಬಾರದ ಪುಟ್ಟ ಹಕ್ಕಿಗಳು ಕಣೇ. ಈಗಲೇ ನಾವು ಆಕಾಶ ದೆತ್ತರಕ್ಕೆ ಹಾರೋ ಸಾಹಸ ಮಾಡಿದ್ದೇವೆಂದರೆ ನಮ್ಮ ಪ್ರೀತಿ ಎಷ್ಟೊಂದು ನಿಜವಾದದ್ದು ಅಲ್ವಾ ಚಿನ್ನು.
ನಮ್ಮ ಈ ಪ್ರೀತಿಯ ಪಯಣಕ್ಕೆ ಎರಡು ತಿಂಗಳುಗಳಾಗುತ್ತಾ ಬಂತು. ಆ ದಿನಗಳು ಕ್ಷಣಗಳಂತೆ ಕಳೆದು ಹೋದರೂ ನನ್ನ ಮನದಾಳದಲ್ಲಿ ನೀನು ತೋರಿಸಿದ ಪ್ರೀತಿ ನನ್ನ ಮೇಲಿಟ್ಟಿರುವ ವಿಶ್ವಾಸ, ಸಿಹಿ ಮುತ್ತುಗಳು, ಮಧುರ ನೆನಪುಗಳು ನನ್ನ ಹೃದಯದಲ್ಲಿ ಅಳಿಸಲಾಗದ ಶಾಯಿಯಲ್ಲಿ ಬರೆದ ಅಕ್ಷರಗಳಂತೆ ಜೋಪಾ ನವಾಗಿ ಬಂಧಿಸಿಟ್ಟಿದ್ದೇನೆ ಕಣೇ.
ನಿಜವಾದ ಪ್ರೀತಿ ಎಂದರೆ ಈ ರೀತಿ ಇರುತ್ತೆ ಅಂತ ತಿಳಿಸಿಕೊಡೋಳು ಕಣೇ ನೀನು. ನಾನು ಸಾಯೋವರೆಗೂ ನನ್ನ ಮನಸೆಂಬ ಪುಟ್ಟ ಅರ ಮನೆಯಲ್ಲಿ ರಾಜಕುಮಾರಿ ತರ ಸುಖ ವಾಗಿರ‍್ತಿಯಾ.
ನನ್ನ ಉಸಿರು ಎಂದು ನಂಬಿಕೊಂಡಿದ್ದ ಒಂದು ಜೀವನ ನನ್ನ ಉಸಿರಿಗೆ ವಿಷ ತುಂಬಿ ದಾಗ ಪ್ರೀತಿ ಎಂಬ ಅಮೃತವನ್ನು ಕೊಟ್ಟು ನನ್ನ ಉಸಿರಿಗೆ ಸಂಜೀವಿನಿಯಾದವಳು ಕಣೇ ನೀನು. ಅದಕ್ಕಾಗಿ ನನ್ನ ಮೆಚ್ಚಿನ ಪತ್ರಿಕೆಗೆ ನನ್ನ ಪ್ರೇಮ್ ಕಹಾನಿಯನ್ನು ಹನಿ ಹನಿಯಾಗಿ ಬರೆದಿದ್ದೇನೆ.
ನಮ್ಮ ಪ್ರೀತಿ ಹೇಗೆ ಆರಂಭವಾಯಿತು... ಅದರ ಸವಿನೆನಪನ್ನು ಇಲ್ಲಿ ಹರಿಯಬಿಟ್ಟಿದ್ದೇನೆ... ಮುಂದಿನ ವಾರದವರೆಗೆ ಕಾಯು ತ್ತಿಯಾ ಪ್ಲೀಸ್...
ಇತೀ ನಿನ್ನ ಕನಸಿನ ಹುಡುಗ
ಚಂದ್ರ
Tagged with
lekhana,
premakirana
ಒಂದು ವೇಳೆ ಕ್ರೈಸ್ತರಾಗಲಿ, ಮುಸ್ಲಿಮರಾಗಲಿ ಅವರ ಧಾರ್ಮಿಕ ಕೇಂದ್ರವನ್ನು ಪ್ರವೇಶಿಸುವ ಮುನ್ನ ಹಿಂದುಗಳು ಲಿಖಿತವಾಗಿ ‘ನಾನು ಏಸುವನ್ನು ನಂಬುತ್ತೇನೆ, ಅಪಾರ ಭಕ್ತಿಯಿದೆ ‘ನಾನು ಅಲ್ಲಾಹ್‌ನನ್ನು ನಂಬುತ್ತೇನೆ ಎಂದು ಬರೆದು ಕೊಡಿ ಎಂದರೆ ಏನಾಗಬೇಡ? ಒಮ್ಮೆ ಯೋಚಿಸಿ, ನಮ್ಮ ಹಿಂದೂ ಸಂಘಟನೆಗಳು ಇದಕ್ಕೆ ಮತಾಂತರದ ಹಣೆಪಟ್ಟಿ ಕಟ್ಟಿ ಗಲಾಟೆ ಎಬ್ಬಿಸುವುದಂತೂ ಗ್ಯಾರಂಟಿ.
ಧ್ವನಿ, ಮಂಗಳೂರು
ಮೊನ್ನೆಯಷ್ಟೇ ಜಗತ್ತಿನ ಅತೀ ಶ್ರೀಮಂತ ದೇವಸ್ಥಾನ ಎನ್ನಲಾದ ತಿರುಪತಿಯಲ್ಲಿ ವಿವಾದವೊಂದು ಸದ್ದು ಮಾಡಿತು. ಆಂಧ್ರದ ಮಾಜಿ ಮುಖ್ಯ ಮಂತ್ರಿ ವೈ.ಎಸ್ ರಾಜಶೇಖರ ರೆಡ್ಡಿಯ ಪುತ್ರ ರಾಜಕೀಯ ಧುರೀಣ ಜಗನ್‌ಮೋಹನ್ ರೆಡ್ಡಿಯೇ ಈ ವಿವಾದದ ಕೇಂದ್ರ ಬಿಂದು. ಕ್ರೈಸ್ತ ಧರ್ಮೀಯ ಜಗನ್ ತಿರುಪತಿ ದೇವಾಲಯಕ್ಕೆ ಪ್ರವೇಶಿಸುವ ಮುನ್ನ ಕೆಲ ಕಟ್ಟುಕಟ್ಟಲೆಗಳನ್ನು ಪಾಲಿಸಿಲ್ಲ ಎನ್ನುವುದೇ ಈಗಿರುವ ವಿವಾದ. ದೇವಸ್ಥಾನದ ಮೂಲಗಳ ಪ್ರಕಾರ ಅನ್ಯಧರ್ಮೀಯರು ತಿಮ್ಮಪ್ಪನ ದರ್ಶನ ಪಡೆಯುವ ಮುನ್ನ ‘ನನಗೆ ತಿಮ್ಮಪ್ಪನ ಮೇಲೆ ನಂಬಿಕೆಯಿದೆ, ಅಪಾರ ಭಕ್ತಿಯಿದೆ ಎಂದು ಬರೆದುಕೊಟ್ಟು ಹೋಗಬೇಕೆಂತೆ! ಆದರೆ ಈ ಕಟ್ಟುಕಟ್ಟಲೆಗಳನ್ನು ಜಗನ್ ಪಾಲಿಸದೆ ವಿವಾದಕ್ಕೆ ಗುರಿಯಾಗಿದ್ದಾರೆ. ಆದರೆ ಇಲ್ಲಿ ಜಗನ್ ವಿವಾದಕ್ಕಿಂತಲೂ ಹೆಚ್ಚಾಗಿ ಚಿಂತಿಸ ಬೇಕಾದ ವಿಚಾರ ಅನ್ಯಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ ಎನ್ನುವುದು.
ನನ್ನ ಪ್ರಕಾರ ಮುಸ್ಲಿಮರ ಮಕ್ಕಾದಿಂದ ಹಿಡಿದು ಕ್ರೈಸ್ತರ ರೋಮ್ ಚರ್ಚಿನವರೆಗೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಭದ್ರತೆಯ ದೃಷ್ಟಿಯಿಂದ ತಪಾಸಣೆ ನಡೆಸುವುದನ್ನು ಬಿಟ್ಟರೆ ದೇಶದ ಬಹುತೇಕ ಚರ್ಚ್, ಮಸೀದಿಗಳಲ್ಲಿ ಅನ್ಯಧರ್ಮೀಯರ ಪ್ರವೇಶಕ್ಕೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಈ ಮಾತನ್ನು ಆಯಾ ಧರ್ಮಗಳ ಧಾರ್ಮಿಕ ನಾಯಕರುಗಳೇ ಪುಷ್ಠೀಕರಿಸುತ್ತಾರೆ. ಆದರೆ ಹಿಂದುಗಳ ಅತೀ ನಂಬಿಕೆಯ ಕ್ಷೇತ್ರವಾದ ತಿರುಪತಿಯಲ್ಲಿ ಮಾತ್ರ ಯಾಕೆ ಹೀಗೆ? ಅದು ಕೂಡ ಲಿಖಿತವಾಗಿ ಬರೆದುಕೊಟ್ಟ ನಂತರವಷ್ಟೇ ಅನ್ಯಧರ್ಮೀಯರು ತಿಮ್ಮಪ್ಪನ ದರ್ಶನ ಪಡೆಯಬೇಕು ಎನ್ನುವುದು ಎಷ್ಟು ಸರಿ? ಧರ್ಮ ಯಾವುದೇ ಆದರೂ ಕೆಲವರಿಗೆ ಬೇರೆ ಧರ್ಮದ ದೇವರಲ್ಲಿ ಅಪಾರ ನಂಬಿಕೆ. ಈ ವೇಳೆ ಆ ದೇವರ ದರ್ಶನ ಪಡೆಯುವುದು ಸಾಮಾನ್ಯ. ಉದಾಹರಣೆಗೆ ಕ್ರೈಸ್ತರ ಧಾರ್ಮಿಕ ಸ್ಥಳವಾದ ಕಾರ್ಕಳದ ಅತ್ತೂರು ಚರ್ಚ್‌ಗೆ ಭೇಟಿ ನೀಡುವ ಬಹುತೇಕ ಭಕ್ತರಲ್ಲಿ ಹಿಂದುಗಳ ಪಾಲು ಹೆಚ್ಚೇ ಎನ್ನಬಹುದು. ಇನ್ನು ಉಳ್ಳಾಲದ ಇತಿಹಾಸ ಪ್ರಸಿದ್ದ ದರ್ಗಾಕ್ಕೂ ಹಿಂದುಗಳು ಭೇಟಿ ಕೊಡುತ್ತಾರೆ. ಇದೆಲ್ಲಾ ಅವರವರ ನಂಬಿಕೆಗೆ ಬಿಟ್ಟಿದ್ದು. ಹಿಂದುಗಳ ಶಬರಿಮಲೆಗೂ ಲಕ್ಷಾಂತರ ಸಂಖ್ಯೆಯಲ್ಲಿ ಅನ್ಯಧರ್ಮೀಯರು ಭೇಟಿ ಕೊಡುತ್ತಾರೆ. ಇಲ್ಲೂ ಯಾವುದೇ ರೀತಿಯ ನಿರ್ಬಂಧವಿಲ್ಲ. ಆದರೆ ತಿರುಪತಿಯಲ್ಲಿ ಈ ರೀತಿಯ ಕಟ್ಟುಕಟ್ಟಲೆಗಳನ್ನು ರೂಪಿಸಲು ಕಾರಣ ಏನು ಎನ್ನುವುದೇ ತಿಳಿಯುತ್ತಿಲ್ಲ.
ಹಿಂದೂ ಧರ್ಮವನ್ನು ಹೆಚ್ಚು ಹೆಚ್ಚು ಪ್ರಚಾರ ಪಡಿಸಬೇಕು, ನಮ್ಮ ಧರ್ಮ ಜಗತ್ತಿನಲ್ಲೇ ಮಾದರಿ ಧರ್ಮವಾಗಬೇಕು ಎನ್ನುವ ನಮ್ಮಲ್ಲಿ ಇಂತಹ ಆಚರಣೆಗಳಿದ್ದರೆ ಹೇಗೆ ತಾನೆ ಹಿಂದು ಧರ್ಮ ಜಗದ್ವಿಖ್ಯಾತವಾಗಲು ಸಾಧ್ಯ? ಹಿಂದು ಎನ್ನುವುದು ಧರ್ಮವಲ್ಲ, ಇದೊಂದು ಜೀವನ ವಿಧಾನ. ನಮ್ಮ ಆಚರಣೆಗಳು ಕೂಡ ನಮ್ಮ ಜೀವನ ವಿಧಾನಗಳೇ. ಹೀಗಿರುವಾಗ ತಿರುಪತಿಯಲ್ಲಿ ಆಚರಿಸಲ್ಪಡುತ್ತಿರುವ ಈ ಆಚರಣೆ ಹಿಂದೂ ವಿರೋಧಿಯಲ್ಲವೇ? ಈ ಬಗ್ಗೆ ಅಲ್ಲಿನ ಕೆಲವರು ಅದೆಷ್ಟೋ ಕಾರಣಗಳನ್ನು ನೀಡಬಹುದು. ಅನ್ಯಧರ್ಮೀಯರು ನಮ್ಮ ಸಂಸ್ಕೃತಿ ಪಾಲಿಸುವುದಿಲ್ಲ, ಅಶುದ್ದರಾಗಿ ದೇವಸ್ಥಾನ ಪ್ರವೇಶಿಸುತ್ತಾರೆ ಎನ್ನಬಹುದು. ಹಾಗೆಂದು ನಾವು ತಿಮ್ಮಪ್ಪನನ್ನು ನಂಬುತ್ತೇವೆ ಎಂದು ಲಿಖಿತವಾಗಿ ಬರೆದುಕೊಟ್ಟರೆ ಅನ್ಯಧರ್ಮೀಯರು ಸಂಸ್ಕೃತಿ ಕಲಿಯುತ್ತಾರೆಯೇ? ಅಥವಾ ಪರಿಪೂರ್ಣ ಶುದ್ದರಾಗಿಯೇ ದೇವಸ್ಥಾನ ಪ್ರವೇಶಿಸಿದಂತಾ ಗುತ್ತದೆಯೇ? ದೇವರ ಆರಾಧಕ ಕೇಂದ್ರಗಳು ಎಂದಿಗೂ ಇನ್ನೊಬ್ಬರ ಸ್ವತ್ತಲ್ಲ ಎನ್ನುವುದು ನೆನಪಿರಲಿ. ಅನ್ಯಧರ್ಮೀಯರು ಪ್ರವೇಶಿಸಿದ ತಕ್ಷಣ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ ಅನ್ನುವುದಾದರೆ ಇಂದಿಗೂ ನಮ್ಮ ದೇವಸ್ಥಾನಗಳಲ್ಲಿ ಪಾವಿತ್ರ್ಯತೆ ಹಾಳುಗೆಡಹುವ ಅದೆಷ್ಟೋ ವಿದ್ಯಮಾನಗಳು ನಡೆಯುತ್ತಿವೆ. ದೇವರ ಹೆಸರಿನಲ್ಲಿ ಆಡಳಿತ ಮಂಡಳಿಯೇ ಅನಾಚಾರ ನಡೆಸುತ್ತಿದೆ. ದೇವಸ್ಥಾನಗಳ ಜಗಳ ಬೀದಿಗೆ ಬಂದಿವೆ. ಅಷ್ಟೇ ಯಾಕೆ ವಿವಾದದ ಕೇಂದ್ರ ಬಿಂದುವಾದ ತಿರುಪತಿಯಲ್ಲೇ ದೇವರ ದರ್ಶನದ ವಿಚಾರವಾಗಿ ಅದೆಷ್ಟೋ ಬಾರಿ ವಿವಾದಗಳೆದ್ದಿವೆ. ಇಷ್ಟೆಲ್ಲಾ ಅನಾಚಾರಗಳು ದೇವಸ್ಥಾನದ ಅಂಗಳದಲ್ಲೇ ನಡೆದರೆ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಬರುವುದಿಲ್ಲವೇ? ಒಂದು ವೇಳೆ ಇದರಿಂದ ಧಕ್ಕೆಯಾಗುವುದಿಲ್ಲ ಎನ್ನುವುದಾದರೆ ಅನ್ಯಧರ್ಮೀಯರ ಪ್ರವೇಶಕ್ಕೆ ತಿರುಪತಿಯಲ್ಲಿ ಅನುಸರಿಸುವ ನಿಯಮಗಳ ಬಗ್ಗೆ ನನ್ನ ಸಹಮತವಿದೆ.
ಇಂತಹ ಪದ್ದತಿ ತಿರುಪತಿಯಲ್ಲಿ ಮುಂದುವರೆದರೆ ವಿದೇಶಿಗರಿಗೆ ಜಗತ್ತಿನ ಅತೀ ಶ್ರೀಮಂತ ದೇವಾಲಯವನ್ನು ನೋಡುವ ಅವಕಾಶವೇ ತಪ್ಪಿ ಹೋಗಬಹುದು. ಇದರಿಂದ ಮುಂದೆ ನಮ್ಮ ಪ್ರವಾಸೋದ್ಯಮಕ್ಕೂ ಏಟು ಬೀಳಬಹುದು. ಒಂದು ವೇಳೆ ಕ್ರೈಸ್ತರಾಗಲಿ, ಮುಸ್ಲಿಮರಾಗಲಿ ಅವರ ಧಾರ್ಮಿಕ ಕೇಂದ್ರವನ್ನು ಪ್ರವೇಶಿಸುವ ಮುನ್ನ ಹಿಂದುಗಳು ಲಿಖಿತವಾಗಿ ‘ನಾನು ಏಸುವನ್ನು ನಂಬುತ್ತೇನೆ, ಅಪಾರ ಭಕ್ತಿಯಿದೆ ‘ನಾನು ಅಲ್ಲಾಹ್‌ನನ್ನು ನಂಬುತ್ತೇನೆ ಎಂದು ಬರೆದು ಕೊಡಿ ಎಂದರೆ ಏನಾಗಬೇಡ? ಒಮ್ಮೆ ಯೋಚಿಸಿ, ನಮ್ಮ ಹಿಂದೂ ಸಂಘಟನೆಗಳು ಇದಕ್ಕೆ ಮತಾಂತರದ ಹಣೆಪಟ್ಟಿ ಕಟ್ಟಿ ಗಲಾಟೆ ಎಬ್ಬಿಸುವುದಂತೂ ಗ್ಯಾರಂಟಿ. ಆದರೆ ಎಂದೂ ಅನ್ಯಧಮೀಯರ ಪ್ರವೇಶವನ್ನು ಇವರು ನಿರ್ಬಂಧಿಸಿಲ್ಲ. ಬಹುಶಃ ಹೀಗಾಗಿಯೋ ಏನೋ ಜಗತ್ತಿನಲ್ಲೇ ಕ್ರೈಸ್ತ ಧರ್ಮ ಅತೀ ದೊಡ್ಡ ಧರ್ಮವಾಗಿ ಬೆಳೆದಿರುವುದು.
ಹಿಂದೂಗಳಿಗೆ ನಮ್ಮದೇ ಆದ ಕೆಲವೊಂದು ಆಚರಣೆಗಳು, ಧಾರ್ಮಿಕ ನಂಬಿಕೆಗಳು ಇದೇ ಎನ್ನುವುದೇನೋ ಸರಿ. ಆದರೆ ಈ ನಂಬಿಕೆಯ ಹೆಸರಿನಲ್ಲಿ ಇತರೆ ಧರ್ಮೀಯರ ದೇವಸ್ಥಾನ ಪ್ರವೇಶಕ್ಕೆ ಲಿಖಿತ ಕಟ್ಟುಕಟ್ಟಲೆಗಳನ್ನು ವಿಧಿಸುವುದು ಸರಿಯಲ್ಲ. ಈಗಾಗಲೇ ತಿರುಪತಿ ಎನ್ನುವುದು ಹಣದ ಹೊಳೆ ಹರಿಸುವ ಧಾರ್ಮಿಕ ಕೇಂದ್ರವಾಗಿ ಬದಲಾಗಿದೆ. ಇಲ್ಲಿ ನಂಬಿಕೆ, ಭಕ್ತಿ, ಪೂಜೆಗೆ ಜಾಗವಿರುವುದು ಕೆಲವೇ ಸಕೆಂಡ್‌ಗಳಷ್ಟೇ. ಹೀಗಿರುವಾಗ ತಿಮ್ಮಪ್ಪನ ಸನ್ನಿಧಾನದಲ್ಲಿ ಇನ್ನಿಲ್ಲದ ನಿಯಮಗಳನ್ನು ಜಾರಿಗೆ ತಂದು ದೇವರ ಹೆಸರು ಕೆಡಿಸುವುದು ಎಷ್ಟು ಸರಿ?
ಹಿಂದು ಎಂಬ ಜೀವನ ವಿಧಾನವನ್ನು ಅನ್ಯಧರ್ಮಿಯರು ಆಚರಿಸಲಿ ಎಂದು ನಾವು ಹೇಳುವುದಿಲ್ಲ. ಅವರಾಗಿಯೇ ಇಷ್ಟಪಟ್ಟರೆ ವಿರೋಧಿಸುವವರೂ ಹಿಂದುಗಳಲ್ಲ. ಹೀಗಿರುವಾಗ ತಿರುಪತಿಯ ಘಟನೆಯನ್ನು ಹಿಂದುಗಳು ಖಂಡಿಸಲೇ ಬೇಕು. ರಾಮನಿಗೆ ರಾಮಮಂದಿರ ಕಟ್ಟಿ, ಜಗತ್ತಿಗೇ ಹಿಂದೂ ಧರ್ಮದ ಬಗ್ಗೆ ಸಾರಿ ಹೇಳಲು ಹೊರಟ ನಮಗೆ ಇಂಥ ಆಚರಣೆಗಳ ಅವಶ್ಯಕತೆ ಖಂಡಿತಾ ಇಲ್ಲ. ಈ ಬಗ್ಗೆ ಹಿಂದೂ ಧಾರ್ಮಿಕ ವರ್ಗದಲ್ಲಿ ಚರ್ಚೆಯಾಗಲಿ ಎನ್ನುವುದೇ ನನ್ನ ಪತ್ರದ ಉದ್ದೇಶ.
Tagged with
chavadi
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೪೮ ವರ್ಷ ವಯಸ್ಸು. ನಮ್ಮವರಿಗೆ ೫೨ ವರ್ಷ. ಅವರು ಸರಕಾರಿ ಉದ್ಯೋಗದಲ್ಲಿದ್ದು, ಅನಾರೋಗ್ಯ ಕಾರಣದಿಂದ ಕೆಲವು ವರ್ಷಗಳ ಹಿಂದೆ ರಿಟೈರ್‌ಮೆಂಟ್ ತೆಗೆದುಕೊಂಡಿದ್ದಾರೆ. ನಮಗೆ ಇಬ್ಬರಿಗೂ ಈಗಲೂ ಸೆಕ್ಸ್‌ನಲ್ಲಿ ಆಸಕ್ತಿಯಿದೆ. ನಮಗೆ ಒಬ್ಬನೇ ಮಗ. ನನ್ನ ಸಮಸ್ಯೆಯೇನೆಂದರೆ ನನ್ನ ಪತಿಗೆ ವರ್ಷದ ಹಿಂದೆ ಹೃದಯದ ನೋವು ಬಾಧಿಸುತ್ತಿದ್ದುದರಿಂದ ಸಣ್ಣ ಆಪರೇಷನ್ ನಡೆದಿದೆ. ಹೀಗಾಗಿ ಅವರಿಗೆ ಸೆಕ್ಸ್‌ನಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಲು ಕಷ್ಟವಾಗುತ್ತದೆ. ಲೈಂಗಿಕ ಕ್ರಿಯೆಯ ವೇಳೆ ಬೇಗನೆ ಆಯಾಸಕ್ಕೆ ಒಳಗಾಗುತ್ತಾರೆ. ಇದರಿಂದ ನನಗೆ ಅವರನ್ನು ಸೆಕ್ಸ್‌ಗೆ ಒತ್ತಾಯ ಮಾಡಲು ಭಯವಾಗುತ್ತಿದೆ. ನಾವು ಹೇಗೆ ಸೆಕ್ಸ್ ನಡೆಸಬಹುದು? ಸರಿಯಾದ ಸಲಹೆಯನ್ನು ಕೊಡಿ. ಇನ್ನು ಅವರಿಗೆ ಆಗಾಗ ಮಂಡಿನೋವು ಕೂಡಾ ಕಾಡುತ್ತದೆ. ಇದರಿಂದ ಲೈಂಗಿಕ ಜೀವನದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ, ಪರಿಹಾರ ಹೇಗೆ?
ಸಲಹೆ: ನೀವು ಈ ಹರೆಯದಲ್ಲಿ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಲು ಶಕ್ತರಾಗಿದ್ದೀರಿ. ಇಲ್ಲಿ ನಿಮ್ಮ ವಯಸ್ಸು ಮುಖ್ಯವಾಗುವುದಿಲ್ಲ. ಆದರೆ ಆರೋಗ್ಯ ಸಮಸ್ಯೆಗಳ ಬಗೆಗೆ ಎಚ್ಚರಿಕೆ ಅಗತ್ಯ. ನಿಮ್ಮವರಿಗೆ ಎಂತಹ ಖಾಯಿಲೆ, ಮತ್ತು ಅದರ ಸ್ವರೂಪ ಏನು ಎಂದು ತಿಳಿಸಿಲ್ಲ. ಹೃದಯ ನಮ್ಮ ದೇಹದ ಅತಿಮುಖ್ಯವಾದ ಅಂಗ. ಇದು ಸತತವಾಗಿ ಕಾರ್ಯ ನಿರ್ವಹಿಸದೆ ಇದ್ದಲ್ಲಿ ಜೀವಕ್ಕೇ ಅಪಾಯ. ನಿಮ್ಮ ಪತಿ ಅವರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ವೇಳೆ ಎದೆಯಲ್ಲಿ ನೋವು ಕಂಡು ಬರುತ್ತಿರುವುದರಿಂದ ಅಸಡ್ಡೆ ಮಾಡುವುದು ಬೇಡ. ಇದು ಹೃದಯ ಸಂಬಂಧಿ ರೋಗದ ಲಕ್ಷಣವಾಗಿರುವ ಸಾಧ್ಯತೆಯಿದೆ. ಸೆಕ್ಸ್‌ನಲ್ಲಿ ತೊಡಗುವ ವೇಳೆ ಸಂಯಮದಿಂದ ವರ್ತಿಸಿ. ಲೈಂಗಿಕ ಕ್ರಿಯೆಯಲ್ಲಿ ಮುನ್ನಲಿವು(ಸೆಕ್ಸ್ ಮುಂಚಿನ ಆಟ) ಕಡಿಮೆ ಮಾಡಿ. ಯಾಕೆಂದರೆ ಇದರಿಂದ ಆಯಾಸ ಗೊಳ್ಳುವುದು ಜಾಸ್ತಿ. ಎದೆನೋವು ಕಂಡು ಬಂದಲ್ಲಿ ಸ್ವಲ್ಪ ಹೊತ್ತು ವಿರಾಮ ಮಾಡಿ ನಂತರ ಮುಂದುವರಿಯಿರಿ. ಆಯಾಸವಾಗುತ್ತಿದ್ದರೂ ಲೆಕ್ಕಿಸದೆ ಸೆಕ್ಸ್ ನಡೆಸುವುದು ಬೇಡ. ಹೃದಯಾಘಾತದ ಬಗ್ಗೆ ಮಾಹಿತಿ ಕೇಳಿದ್ದೀರಿ. ಹೃದಯಾಘಾತ ಆಗುತ್ತದೆ ಎನ್ನುವುದು ಕೆಲವೊಂದು ಸಾಮಾನ್ಯ ಲಕ್ಷಣಗಳ ಮೂಲಕ ತಿಳಿಯಲು ಸಾಧ್ಯವಿದೆ. ಎದೆಯಲ್ಲಿ ನೋವು ಕಾಣಿಸುವುದು, ಬೆವರುವುದು, ಎದೆ ಬಡಿತದಲ್ಲಿ ವ್ಯತ್ಯಾಸ, ತಲೆಸುತ್ತು ಬರುವುದು, ಪ್ರಜ್ಞೆ ಕಳೆದುಕೊಳ್ಳುವುದು ಇವು ಹೃದಯಾಘಾತವಾಗುವ ಪ್ರಮುಖ ಲಕ್ಷಣಗಳು. ಕೆಲವರಿಗೆ ಎದೆಯ ನಿರ್ದಿಷ್ಟ ಭಾಗದಲ್ಲಿ ನೋವು ಕಂಡುಬಂದರೆ ಕೆಲವರಲ್ಲಿ ಎದೆ ಭಾರವಾದಂತೆ ಅನಿಸಬ ಹುದು, ಎದೆಯಲ್ಲಿ ತಳಮಳ ಆರಂಭವಾಗಬಹುದು ಮತ್ತು ಕೈ, ಕಾಲುಗಳು ತಣ್ಣಗಾಗುವ ಅನುಭವವೂ ಉಂಟಾಗುವ ಸಾಧ್ಯತೆ ಯಿರುತ್ತದೆ. ಇಂತಹ ಲಕ್ಷಣಗಳು ಕಂಡು ಬಂದ ತಕ್ಷಣ ಜತೆಯಲ್ಲಿರು ವವರಿಗೆ ತಿಳಿಸಬೇಕು. ತಡ ಮಾಡದೆ ಕೂಡಲೇ ವೈದ್ಯರ ಬಳಿ ಹೋಗ ಬೇಕಾದ್ದು ಅವಶ್ಯಕ. ವಿಳಂಬವಾದರೆ ಜೀವಕ್ಕೇ ಅಪಾಯ ಬರುವ ಸಾಧ್ಯತೆಯಿದೆ. ಆದರೆ ಈಗ ಅವರು ಅದಕ್ಕೆ ಉಪಯುಕ್ತ ಔಷಧಿ ಸೇವನೆ, ವ್ಯಾಯಾಮ, ಉತ್ತಮ ಆಹಾರ ಸೇವಿಸುತ್ತಿದ್ದರೆ ಈ ಬಗ್ಗೆ ಅನಗತ್ಯ ಗಾಬರಿ ಪಡುವುದು ಬೇಡ. ಹೆಚ್ಚು ಎಣ್ಣೆ ಸೇರಿಸದ ಸಮಯೋಚಿತ ಆಹಾರ ಸೇವನೆ, ಆಯಾಸ ತರಿಸದ ವ್ಯಾಯಾಮದಿಂದ ಹೃದಯದ ಕಾಯಿಲೆಯಿಂದ ದೂರವಿರಲು ಸಾಧ್ಯವಿದೆ. ಆಯಸವಾಗದ ಇನ್ನಿತರ ಸುಲಭ ವಿಧಾನಗಳನ್ನು ಸೆಕ್ಸ್‌ನಲ್ಲಿ ಪರಿಚಯಿಸಿಕೊಂಡರೆ ಸಮಸ್ಯೆಯಿರದು. ಹಸ್ತಮೈಥುನ ಕ್ರಿಯೆ ಯಿಂದಲೂ ನೀವು ಆನಂದ ಪಡೆಯಲು ಸಾಧ್ಯವಿದೆ. ಅಗತ್ಯವೆಂದು ಕಂಡಲ್ಲಿ ಸಂಭೋಗದ ಆಸನವನ್ನು ಬದಲಿಸಿ ಮುನ್ನಡೆಯಿರಿ.
Tagged with
gupta
ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ಬಾಂಬಿಲ ನಿವಾಸಿ, ಇಲ್ಲಿನ ಜುಮ್ಮಾ ಮಸೀದಿಯೊಂದರ ಆಡಳಿತ ಸಮಿತಿ ಯ ಪದಾಧಿಕಾರಿ ವಿವಾಹಿತ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿದ ಘಟನೆ ಪೂಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಾನಭಂಗ ಯತ್ನಿಸಿದ ಆರೋಪದಲ್ಲಿ ಮುಸ್ತಫಾ (೪೩) ಎಂಬಾತನ ಮೇಲೆ ಮಹಿಳೆ ಪೊಲೀಸ್ ಠಾಣಾಧಿಕಾರಿಗೆ ಹೇಳಿಕೆ ನೀಡಿದ್ದು, ಕೊಲೆ ಬೆದರಿಕೆ, ಮನೆ ಅಕ್ರಮ ಪ್ರವೇಶ, ಅಸಭ್ಯ ವರ್ತನೆ ಇತ್ಯಾದಿಗಳ ಅಪವಾದನೆಗಳನ್ನು ಆರೋಪಿ ಮೇಲೆ ಹೊರಿಸಲಾಗಿದೆ. ದೂರಿನ ಸಾರಾಂಶ: ಎ.೨೪ರ ಬೆಳಿಗ್ಗೆ ೯.೩೦ರ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಅಕ್ರಮವಾಗಿ ಪ್ರವೇಶಿಸಿದ ಮುಸ್ತಫಾ, ತನ್ನಲ್ಲಿ ಅಸಭ್ಯವಾಗಿ ವರ್ತಿಸಿದ್ದು, ಮಾನಭಂಗಕ್ಕೆ ಯತ್ನಿಸಿದ್ದಾನೆ. ಅವನಿಂದ ತಪ್ಪಿಸಿದ ನಾನು, ನಿನ್ನ ನಡವಳಿಕೆ ಸರಿಯಲ್ಲ. ನೀನು ನಡೆದುಕೊಂಡ ರೀತಿಯನ್ನು ಗಂಡನಿಗೆ ತಿಳಿಸುತ್ತೇನೆಂದು ಹೇಳಿದಾಗ, ನಿನ್ನ ಗಂಡ ಹಾಗೂ ಯಾರಿಗಾದರೂ ಈ ವಿಚಾರ ತಿಳಿಸಿದರೆ ನಿನ್ನನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದನು ಎಂದು ಮೂಡಪಡುಕೋಡಿ ಗ್ರಾಮದ ಮಹಿಳೆ ದೂರು ನೀಡಿದ್ದಾರೆ.
ಮಾನಭಂಗಕ್ಕೆ ಯತ್ನಿಸಿದ ಆರೋಪಿ ಮುಸ್ತಫಾ ಸ್ಥಳೀಯ ಮಸೀದಿಯ ಆಡಳಿತ ಸಮಿತಿಯ ಜೊತೆ ಕಾರ್ಯದರ್ಶಿಯಾಗಿದ್ದು, ಘಟನೆಯ ಕುರಿತು ಮಹಿಳೆಯ ಗಂಡ ಜಮಾಅತ್ ಮುಖಂಡರಿಗೆ ದೂರು ನೀಡಿದ್ದರು. ಆರೋಪಿ ಮೇಲೆ ಜಮಾಅತ್ ಆಡಳಿತ ಸಮಿತಿ ಯಾವುದೇ ಕ್ರಮ ಜರುಗಿಸಿರಲಿಲ್ಲ. ಪದಾಧಿಕಾರಿ ಸ್ಥಾನದಿಂದ ತೆಗೆದು ಹಾಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಎಎಸ್ಪಿಗೆ ಮಹಿಳೆ ದೂರು: ಮಾನಭಂಗ ಯತ್ನ ಘಟನೆ ಎ. ೨೪ರಂದು ಘಟನೆ ನಡೆದಿದ್ದರೂ, ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣ ಪುತ್ತೂರು ಎಎಸ್ಪಿ ಅವರ ಕಚೇರಿಗೆ ತಲುಪಿದೆ. ಪುತ್ತೂರು ಎಎಸ್ಪಿ ಎಂ.ಎನ್. ಅನುಚೇತ್ ಅವರಿಗೆ ಲಿಖಿತ ದೂರು ನೀಡಿದ ಕಿರುಕುಳಕ್ಕೊಳಗಾದ ಮಹಿಳೆ ನ್ಯಾಯದ ಮೊರೆ ಹೋಗಿದ್ದಾರೆ. ಸಮಸ್ಯೆಗಳನ್ನು ಹೊತ್ತು ದೂರು ನೀಡಲು ಹೋಗುತ್ತಿರುವರನ್ನು ಬಾಯಿಮುಚ್ಚಿಸುವ ಯತ್ನ ಠಾಣೆಯಲ್ಲಿ ಮಾಮೂಲಾಗಿ ನಡೆಯುತ್ತಿದ್ದು, ಇಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ಮಹಿಳಾ ಸಿಬ್ಬಂದಿ ಭಾರತಿ ಮೇಲೆ ಬಾಂಬಿಲದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Tagged with
cnews
ಕಾರ್ಕಳ: ಇಲ್ಲಿಗೆ ಸಮೀಪದ ಈದು ಎಂಬಲ್ಲಿ ಪತ್ನಿಗೆ ಹಲ್ಲೆಗೈದ ಪ್ರಕರ ಣದಲ್ಲಿ ಜೈಲುಪಾಲಾಗಿ ಜಾಮೀನು ಮೇರೆಗೆ ಬಿಡುಗಡೆಗೊಂಡಿದ್ದ ಆರೋಪಿಯ ಶವ ಮನೆ ಸಮೀಪದ ಹಾಡಿಯೊಂದರಲ್ಲಿ ನೇಣುಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈದು ಬಟ್ಟೇಣಿಯ ರಾಜೇಶ್ ಪೂಜಾರಿ(೩೬) ಆತ್ಮಹತ್ಯೆಗೈದವರು. ಕಳೆದ ಕೆಲದಿನಗಳ ಹಿಂದೆ ತನ್ನ ಪತ್ನಿಗೆ ಮಾರಣಾಂತಿಕ ಹಲ್ಲೆಗೈದಿರುವ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿತ್ತು. ಇದೇ ಕಾರಣದಲ್ಲಿ ಜೈಲು ಪಾಲಾಗಿದ್ದ ಆತ ಜಾಮೀನು ಮೇರೆಗೆ ಬಿಡುಗಡೆಗೊಂಡು ಮನೆಗೆ ಬಂದಿದ್ದನು. ಮೇ.೩ರಿಂದ ೫ರ ನಡುವಿನಲ್ಲಿ ರಾಜೇಶ್ ಪೂಜಾರಿ ಮನೆ ಸಮೀಪದ ಅಜಿತ್‌ಕುಮಾರ್ ಎಂಬವರಿಗೆ ಸೇರಿದ ಹಾಡಿಯಲ್ಲಿ ಮರದ ಕೊಂಬೆಗೆ ಧರಿಸಿದ ಪ್ಯಾಂಟ್‌ನಿಂದ ನೇಣುಬಿಗಿದು ಆತ್ಮಹತ್ಯೆಗೈದಿದ್ದಾನೆಂದು ತಿಳಿದುಬಂದಿದೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.
Tagged with
cnews
ಮಂಗಳೂರು: ಬ್ರಹ್ಮಾವರದ ರೋಟರಿ ಸಮಾಜ ಮಂದಿರದಲ್ಲಿ ಅಂಬಾ ಹೇರ್ ಡ್ರೆಸಸ್ ಹೊಂದಿರುವ ಅಚ್ಲಾಡಿ ನಿವಾಸಿ ಮಂಜುನಾಥ ಭಂಡಾರಿ(೫೫) ಎಂಬವರು ನಿನ್ನೆ ಮಧ್ಯಾಹ್ನ ಗ್ರಾಹರೊಬ್ಬರಿಗೆ ಶೇವಿಂಗ್ ಮಾಡುತ್ತಿದ್ದಾಗಲೇ ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿನ್ನೆ ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ಊಟ ಮಾಡಿ ಬಂದು ಕರ್ತವ್ಯ ನಿರತರಾಗಿದ್ದಾಗಲೇ ತೀವ್ರ ಎದೆನೋವಿನಿಂದ ಕುಸಿದುಬಿದ್ದರೆನ್ನಲಾಗಿದೆ. ಮೃತರ ಗೌರವಾರ್ಥ ಇಂದು ಬ್ರಹ್ಮಾವರ ಪರಿಸರದ ಎಲ್ಲ ಸೆಲೂನ್‌ಗಳಿಗೆ ರಜೆ ಸಾರಲಾಗಿದೆ.
Tagged with
cnews
ಮಂಗಳೂರು: ಹೃದಯಾಘಾತದಿಂದ ಮೃತಪಟ್ಟ ಮಗಳ ಶವ ಕಂಡ ತಾಯಿಯೂ ಕುಸಿದು ಬಿದ್ದು ಮೃತಪಟ್ಟ ಘಟನೆ ಕಾಸರಗೋಡಿನ ಬದಿಯಡ್ಕ-ಕರಿಂಬಿಲ ಎಂಬಲ್ಲಿ ನಡೆದಿದೆ. ಕರಂಬಿಲ ನಿವಾಸಿ ಕಮಲಾ(೪೦) ಎಂಬಾಕೆಗೆ ಶನಿವಾರ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಕೆಯ ಮೃತದೇಹ ಮನೆಗೆ ತಂದ ಸಂದರ್ಭ ತಾಯಿ ಗಿರಿಜಾ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
Tagged with
cnews
ಮಂಗಳೂರು: ಹಣ ಗೆದ್ದಿದ್ದೀರಿ ಎಂಬ ಇ-ಮೇಲೆ ಸಂದೇಶವನ್ನೇ ನಂಬಿದ ವ್ಯಕ್ತಿಯೊಬ್ಬರು ಬರೋಬ್ಬರಿ ಎಂಟು ಲಕ್ಷ ಕಳೆದುಕೊಂಡ ಘಟನೆ ಉಡುಪಿ ಸಮೀಪದ ಶಿವಳ್ಳಿ-ಗುಂಡಿಬೈಲು ಎಂಬಲ್ಲಿ ಬೆಳಕಿಗೆ ಬಂದಿದೆ.
ಅಮ್ಮುಂಜೆ ಪಾಂಡುರಂಗ ನಾಯಕ್ ಅವರಿಗೆ ಕೋಕಕೋಲ ಕಂಪೆನಿ ಗ್ರೇಟ್ ಬ್ರಿಟಾನಿಯದಿಂದ ೧೦ ಲಕ್ಷ ಪೌಂಡ್ಸ್ ಗೆದ್ದಿದ್ದೀರಿ ಎಂಬ ಇ-ಮೇಲ್ ಸಂದೇಶ ಬಂದಿತ್ತು. ಇದನ್ನು ನಂಬಿದ ಪಾಂಡುರಂಗ ನಾಯಕ್ ತನ್ನ ವಿವರ ನೀಡಿದ್ದರು. ಮಾ.೨೬ರಂದು ಸ್ಮಿತ್ ಗೋರ್ ಎಂಬಾತ ನಾಯಕ್‌ರ ಮೊಬೈಲ್‌ಗೆ ಕರೆ ಮಾಡಿ ದಿಲ್ಲಿ ಏರ್‌ಪೋರ್ಟ್‌ಗೆ ಹಣ ಡೆಲಿವರಿ ಮಾಡಲು ೨೫ ಸಾವಿರ ರೂ. ಠೇವಣಿ ಇಡುವಂತೆ ಹೇಳಿದ್ದ. ಅದರಂತೆ ಹಣವನ್ನು ಆತ ತಿಳಿಸಿದ ಅಕೌಂಟ್‌ಗೆ ಹಾಕಿದ್ದ. ಬಳಿಕ ಬೇರೆ-ಬೇರೆ ವೆಚ್ಚ ಎಂದು ಅಂದಾಜು ಎಂಟು ಲಕ್ಷ ರೂ.ವನ್ನು ಅಕೌಂಟಿಗೆ ಹಾಕಿದ್ದಾರೆ. ಬಳಿಕ ಮೋಸ ಹೋಗಿದ್ದ ತಿಳಿಯುತ್ತಲೇ ಮಹತರ್ ಕೆಂಟ್, ಸ್ಟಿವ್ ವಾಲ್ಟರ್, ಸ್ಮಿತ್ ಗೋರ್, ರಾಬರ್ಟ್ ಮುಲ್ಲರ್ ವಿರುದ್ಧ ಉಡುಪಿ ನಗರ ಠಾಣೆಗೆ ದೂರಿದ್ದಾರೆ.
Tagged with
cnews
ಮಂಗಳೂರು: ಶನಿವಾರ ತಡರಾತ್ರಿ ಕಾರಿನಲ್ಲಿ ಬಂದ ತಂಡವೊಂದು ಸೌತಡ್ಕ ಕ್ಷೇತ್ರದ ಗೋಶಾಲೆಯ ಆವರಣದೊಳಗೆ ಅಕ್ರಮ ಪ್ರವೇಶಿಸಿ ಗಂಡು ಕರು ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಎರಡು ಗಂಟೆಯ ಸುಮಾರಿಗೆ ಕಾರಿನಲ್ಲಿ ನಾಲ್ಕು ಜನರ ತಂಡ ಬಂದಿದ್ದು, ಗೋಶಾಲೆಯ ಆವರಣದೊಳಗೆ ಕಟ್ಟಿಹಾಕಿದ್ದ ಕರುವನ್ನು ಹೊತ್ತೊಯ್ದಿದೆ. ಇದನ್ನು ಕಾವಲುಗಾರ ಗಮನಿಸಿದ್ದು, ತನ್ನ ಮೇಲೆ ಹಲ್ಲೆ ನಡೆಯುವ ಭೀತಿಯಿಂದ ಸುಮ್ಮನಿದ್ದ ಎಂದು ಹೇಳಲಾಗಿದೆ. ಹಿಂದೆಯೂ ಇಲ್ಲಿ ಇದೇ ಮಾದರಿಯಲ್ಲಿ ಕಳ್ಳತನ ನಡೆದಿತ್ತು. ಆದರೆ ಆರೋಪಿಗಳು ಪತ್ತೆಯಾಗಿಲ್ಲ.
Tagged with
cnews
ಮಂಗಳೂರು: ನಗರದ ಆರ್ಯ ಸಮಾಜ ರಸ್ತೆ ನಿವಾಸಿ ಯುವತಿ ನಾಪತ್ತೆಯಾಗಿರುವ ಬಗ್ಗೆ ಕದ್ರಿ ಠಾಣೆಗೆ ದೂರಲಾಗಿದೆ. ಶೈಲೇಶ್ ಭಾಯಿ ಎಂಬವರ ಮಗಳು ಹಿಮಾದ್ರಿ ಭವಿನ್ ಶುಕ್ಲಾ(೨೬) ಎಂಬವರು ಮೇ ಒಂದರಿಂದ ನಾಪತ್ತೆಯಾಗಿದ್ದಾಳೆ. ಗುಜರಾತ್‌ಗೆ ಹೋಗಲು ರೈಲ್ವೇ ಟಿಕೆಟ್ ತರುತ್ತೇನೆ ಎಂದು ಹೋದಾಕೆ ಮತ್ತೆ ಮನೆಗೆ ವಾಪಸ್ ಆಗಿಲ್ಲ ಎನ್ನಲಾಗಿದೆ.
Tagged with
cnews,
missing
ಮಂಗಳೂರು: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಆರ್‌ಎಂಸಿ ನೇತಾರ ಟಿ.ಪಿ. ಚಂದ್ರಶೇಖರ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ಹಲವು ಕಡೆ ಹುನ್ನಾರ ನಡೆದಿರುವುದಾಗಿ ತನಿಖಾ ತಂಡಕ್ಕೆ ಮಾಹಿತಿ ದೊರೆತಿದೆ. ಇದರ ಪ್ರಧಾನ ಕೇಂದ್ರ ಕಣ್ಣೂರು ಸೆಂಟ್ರಲ್ ಜೈಲಾಗಿದೆ ಎನ್ನುವುದು ತಡವಾಗಿ ದೊರೆತ ಮಾಹಿತಿಯಾಗಿದೆ. ಒಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಸೆಂಟ್ರಲ್ ಜೈಲ್‌ನಲ್ಲಿ ಶಿಕ್ಷೆ ಅನುಭವಿಸುವ ಇಬ್ಬರು ಪ್ರಧಾನ ಆರೋಪಿಗಳೆನ್ನಲಾಗಿದೆ. ಕೆಲವು ದಿನಗಳ ಹಿಂದೆಯೇ ಇವರು ಚಂದ್ರಶೇಖರನ್ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ.ಚಂದ್ರಶೇಖರನ್ ಅವರ ವಿರುದ್ಧ ಯಾವುದೇ ಷಡ್ಯಂತ್ರ ನಡೆಯುತ್ತಿರುವುದಾಗಿ ಜೈಲಿನ ಕೆಲವು ಮಂದಿ ಖೈದಿಗಳಿಗೆ ತಿಳಿದಿತ್ತೆನ್ನಲಾಗಿದೆ. ಚಂದ್ರಶೇಖರನ್ ಅವರ ನಿಕಟವರ್ತಿಯೋರ್ವರು ಈ ಬಗ್ಗೆ ಒಂಜಿಯತ್ತ್‌ನ ಕೆಲವರಿಗೆ ಈ ವಿಷಯ ತಿಳಿಸಿರುವುದಾಗಿ ಮಾಹಿತಿ ಇದೆ.
Tagged with
cnews
ವಿಟ್ಲ: ಕೂಲಿ ಕಾರ್ಮಿಕನೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ತಲವಾರಿನಿಂದ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಸಾಲೆತ್ತೂರು ಸಮೀಪದ ತಾಮಾರಾಜೆ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕೊಳ್ನಾಡು ಗ್ರಾಮದ ಬರ್ಕಳ ನಿವಾಸಿ ಬಾಬು ಗೌಡ ಅವರ ಪುತ್ರ ಜಯರಾಮ ಗೌಡ(೨೭) ಹಲ್ಲೆಗೊಳಗಾ ದವರು. ಇವರು ಭಾನುವಾರ ರಾತ್ರಿ ಮನೆಯಿಂದ ಸಾಲೆತ್ತೂರಿಗೆ ನಡೆದು ಕೊಂಡ ಹೋಗುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಯೊಬ್ಬ ಅವರಿಗೆ ತಲ ವಾರಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾ ಗಿದೆ. ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಸ್ಥಳೀಯರು ಆತನನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ೧೦೮ ಅಂಬು ಲೆನ್ಸ್ ಸಿಬ್ಬಂದಿ ಸಮಯ ಪ್ರಜ್ಞೆ ಹಾಗೂ ಅವರ ತುರ್ತು ಚಿಕಿತ್ಸೆಯ ಪರಿಣಾಮ ಗಾಯಾಳು ಅಪಾಯದಿಂದ ಪಾರಾ ಗಿದ್ದಾನೆ. ವಿಟ್ಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Tagged with
cnews
ವಿಟ್ಲ: ಕೂಲಿ ಕಾರ್ಮಿಕನೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ತಲವಾರಿನಿಂದ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಸಾಲೆತ್ತೂರು ಸಮೀಪದ ತಾಮಾರಾಜೆ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕೊಳ್ನಾಡು ಗ್ರಾಮದ ಬರ್ಕಳ ನಿವಾಸಿ ಬಾಬು ಗೌಡ ಅವರ ಪುತ್ರ ಜಯರಾಮ ಗೌಡ(೨೭) ಹಲ್ಲೆಗೊಳಗಾ ದವರು. ಇವರು ಭಾನುವಾರ ರಾತ್ರಿ ಮನೆಯಿಂದ ಸಾಲೆತ್ತೂರಿಗೆ ನಡೆದು ಕೊಂಡ ಹೋಗುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಯೊಬ್ಬ ಅವರಿಗೆ ತಲ ವಾರಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾ ಗಿದೆ. ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಸ್ಥಳೀಯರು ಆತನನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ೧೦೮ ಅಂಬು ಲೆನ್ಸ್ ಸಿಬ್ಬಂದಿ ಸಮಯ ಪ್ರಜ್ಞೆ ಹಾಗೂ ಅವರ ತುರ್ತು ಚಿಕಿತ್ಸೆಯ ಪರಿಣಾಮ ಗಾಯಾಳು ಅಪಾಯದಿಂದ ಪಾರಾ ಗಿದ್ದಾನೆ. ವಿಟ್ಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Tagged with
cnews
ಕಾರ್ಕಳ: ಇಲ್ಲಿಗೆ ಸಮೀಪದ ಬಜಗೋಳಿ ಅಬ್ಬೆಂಜಾಲು ಎಂಬಲ್ಲಿ ಓಮ್ನಿ ಕಾರೊಂದು ಚಾಲಕನ ನಿಯಂ ತ್ರಣ ತಪ್ಪಿ ಮಗುಚಿಬಿದ್ದಿ ರುವುದರಿಂದ ತುಮಕೂರು ಗೌಡರಹಳ್ಳಿಯ ತಿಮ್ಮಕ್ಕ ಎಂಬವರು ದಾರುಣವಾಗಿ ಮೃತ ಪಟ್ಟಿದ್ದು, ಇತರ ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ಸಂಭವಿಸಿದೆ.
Tagged with
cnews

ಸುರತ್ಕಲ್: ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ನಾಗಾರಾಧನೆಗೆ ಅಪೂರ್ವ ಶಕ್ತಿಯಿದೆ. ನಾಗನ ಶ್ರದ್ದಾ ಭಕ್ತಿಪೂರ್ವಕ ಅರಾಧನೆ ಇಲ್ಲಿನ ಸಮೃದ್ಧಿಗೆ ಪೂರಕ ಮತ್ತು ಅಗತ್ಯ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಇಲ್ಲಿನ ಚೊಕ್ಕಬೆಟ್ಟುವಿನಲ್ಲಿರುವ ಕುಲಾಲ ಬಂಗೇರ ನಾಗಬ್ರಹ್ಮ ಮೂಲಸ್ಥಾನದಲ್ಲಿ ಶನಿವಾರ ನಡೆದ ಅಷ್ಟಪವಿತ್ರ ನಾಗಮಂಡಲೋತ್ಸವ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಅಶೀರ್ವಚನ ನೀಡಿದರು. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಶರವು ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಸದಾಶಿವ ಮಹಾಗಣಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎಸ್, ದಾಸಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಕೃಷ್ಣ ಪಾಲೆಮಾರ್, ಸಂಸದ ನಳಿನ್ ಕುಮಾರ್ ಮಾತನಾಡಿದರು. ವೇದಮೂರ್ತಿ ಸಗ್ರಿ ಶ್ರೀ ಗೋಪಾಲ ಕೃಷ್ಣ ಸಾಮಗ, ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ ಶುಭಾಶಂಸನೆ ಗೈದರು. ವೇದಮೂರ್ತಿ ಸುಬ್ರಹ್ಮಣ್ಯ ಆಚಾರ್ಯ ಕೈಯೂರು, ವೇದ ಮೂರ್ತಿ ವಾಸುದೇವ ಅಚಾರ್ಯ ಕೈಯೂರು, ಧಾರ್ಮಿಕ ಉಪನ್ಯಾಸ ವಿತ್ತರು. ಪಿ.ಕೆ. ಸಾಲ್ಯಾನ್, ಅಧ್ಯಕ್ಷ ಲಕ್ಷ್ಮಣ್ ಕುಂದರ್, ರಜನಿ ದುಗ್ಗಣ್ಣ, ತಿಲಕ್ ರಾಜ್ ಕೃಷ್ಣಾಪುರ, ರಾಜೇಂದ್ರ ಕುಮಾರ್, ಮದಕಾಡಿ ಕರಿಯ ಮಾರ್ಲ, ವಿಶ್ವನಾಥ ಬಂಗೇರ ಮುಂಬಯಿ, ದೊಡ್ದಯ್ಯ ಮೂಲ್ಯ ಕೆರಮ-ಕಟೀಲು ಮೊದಲಾದವರು ಉಪಸ್ಥಿತರಿದ್ದರು.
ಸನ್ಮಾನ: ಈ ಸಂದರ್ಭ ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದವರ ಪೈಕಿ ಗಣೇಶ್ ಭಟ್, ರಾಜಾ ಅಚಾರ್ ಚೊಕ್ಕಬೆಟ್ಟು, ಗಣೇಶ್ ಭಟ್ ಮುಳಿಯ, ಶಿವರಾಮ ಶೇರಿಗಾರ್ ಶಿಬರೂರು, ಕುಸು ಮಾಕರ್ ಚೊಕ್ಕಬೆಟ್ಟು, ಗಣೇಶ್ ರಾವ್, ಶೇಖರ್ ಮುಕ್ಕಾಲ್ದಿ, ಸಂಚಾಲಕ ದೊಡ್ದಯ್ಯ ಮೂಲ್ಯ, ಶಕೀಲ ಡಿ. ದಂಪತಿಯನ್ನು ಸನ್ಮಾನಿ ಸಲಾಯಿತು. ಸತ್ಯಜಿತ್ ಸುರತ್ಕಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ ದಿನೇಶ್ ಕುಲಾಲ್ ಮುಂಬಯಿ ಸ್ವಾಗತಿಸಿದರು. ಎಚ್.ಕೆ.ನಯನಾಡು ಕಾರ್ಯಕ್ರಮ ನಿರ್ವಹಿಸಿದರು. ಪ್ರೇಮಾನಂದ ಕುಲಾಲ್ ವಂದಿಸಿದರು.
Tagged with
dk,
lnews
ಜನಸೇವೆ ಮರೆತ ಪುರಸಭಾ ಸದಸ್ಯೆ
ಬಂಟ್ವಾಳ: ಇಲ್ಲಿನ ಪ್ರತಿಷ್ಠಿತ ಪುರ ಸಭಾ ಕಾರ್ಯಾಲಯದ ತಾಳಿಪಡ್ಪು-ಮಧ್ವ ವಾರ್ಡಿನ ಮುಸ್ಲಿಂ ಲೀಗ್ ಬೆಂಬಲಿತ ಸದಸ್ಯೆ ಆಮೀನಾಬಿ ಶೇಖ್ ವಿರುದ್ಧ ಸ್ವತಃ ಪಕ್ಷದ ಕಾರ್ಯಕರ್ತರೇ ಈಗ ತಿರುಗಿ ಬಿದ್ದಿದ್ದಾರೆ. ಜನರ ಸೇವೆ ಗಾಗಿ ಚುನಾಯಿತರಾಗಿದ್ದ ಸದಸ್ಯೆ ಜನರ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿ ಸುವುದೇ ಇಲ್ಲ ಎಂದು ಆರೋಪಿಸಿರುವ ಬಿ.ಸಿ.ರೋಡು ವಲಯ ಮುಸ್ಲಿಂ ಲೀಗ್ ಉಪಾಧ್ಯಕ್ಷ ಎಸ್.ಎಚ್. ಶಾಹುಲ್ ಹಮೀದ್ ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
ತಾಳಿಪಡ್ಪು-ಮಧ್ವ ವಾರ್ಡಿನ ರಸ್ತೆ, ನೀರು ಇತ್ಯಾದಿ ಅವಶ್ಯಕತೆಗಳಿಗೆ ಸಾರ್ವಜನಿಕ ಅನುದಾನ ಒದಗಿಸಲು ಆಮಿನಾಬಿ ಶೇಖ್ ವಿಫಲರಾಗಿದ್ದಾರೆ. ಮುಸ್ಲಿಂ ಲೀಗ್ ಪಕ್ಷ ಜನರ ಸೇವೆ ಮಾಡಲು ಅವರನ್ನು ಚುನಾವಣೆ ಸ್ಪರ್ಧಿಸಲು ಅವಕಾಶ ನೀಡಿದ್ದು, ಚುನಾ ಯಿತರಾದ ಮೇಲೆ ಅವರು ಜನರ ಪರವಾಗಿ ಚಿಂತಿಸಲೇ ಇಲ್ಲ. ಸದಸ್ಯೆ ಆಮೀನಾಬಿ ಶೇಖ್ ಜನರ ಹಕ್ಕುಗಳಿಗೆ ನ್ಯಾಯ ಒದಗಿಸಲು ಸಂಪೂರ್ಣ ವಿಫಲರಾದ ಕಾರಣ ನಾವು ಸಾಮಾಜಿಕ ಹೊಣೆ ಹೊತ್ತು ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದರು.
ಮುಸ್ಲಿಂ ಲೀಗ್ ಬಿ.ಸಿ.ರೋಡು ವಲಯದ ಉಪಾಧ್ಯಕ್ಷ ಎಸ್.ಎ. ಲತೀಫ್, ಜೊತೆ ಕಾರ್ಯದರ್ಶಿ ಯಾಕೂಬ್, ವಲಯ ಸಮಿತಿ ಸದಸ್ಯರಾದ ಅಬೂಬಕ್ಕರ್, ಕೌಸರ್, ಇಸ್ಮಾಯಿಲ್, ಲತೀಫ್, ಇಕ್ಬಾಲ್, ಅಹ್ಮದ್ ಕುಂಞ ಮೊದಲಾದವರು ಲೀಗ್‌ನ ಪ್ರಾಥಮಿಕ ಸದಸ್ಯತ್ವವನ್ನು ತೊರೆದಿದ್ದಾರೆ ಎಂದವರು ಪತ್ರಿಕಾ ಪ್ರಕಟಣೆಯ ಮುಖೇನ ತಿಳಿಸಿದ್ದಾರೆ.
Tagged with
dk,
lnews
ಮಂಗಳೂರು: ಕಾಸರಗೋಡು ತಾಲೂಕಿನ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರಗಳ ವಾಹನ ಸಂಚಾರಕ್ಕೆ ಮೇ ೮ರ ತನಕ ಯಂತ್ರಣ ಹೇರಲಾಗಿದೆ.
ಇಂದು ಮತ್ತು ನಾಳೆ ರಾತ್ರಿ ಎಂಟು ಗಂಟೆಯಿಂದ ಮರುದಿನ ಬೆಳಗ್ಗೆ ಎಂಟು ಗಂಟೆಯ ತನಕ ದ್ವಿಚಂಕ್ರ ವಾಹನ ಸಂಚಾರ ಷೇಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರನ್ ತಿಳಿಸಿದ್ದಾರೆ. ಕಾಸರಗೋಡು, ವಿದ್ಯಾನಗರ, ಕುಂಬಳೆ ಮತ್ತು ಮಂಜೇಶ್ವರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳಿಗೆ ಯಂತ್ರಣ ಹೇರಲಾಗಿದೆ.
Tagged with
dk,
lnews
ಪುತ್ತೂರು: ಎಂಡೋಸಲ್ಫಾನ್ ಪೀಡಿತರಿಗೆ ಪುನರ್‌ವಸತಿ ಕಲ್ಪಿಸಲು ಸಾಕಷ್ಟು ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.ಅವರು ಭಾನುವಾರ ಪುತ್ತೂರಿಗೆ ಆಗಮಿಸಿದ್ದ ಸಂದರ್ಭ ಸುದ್ದಿಗಾರರೊಂ ದಿಗೆ ಮಾತನಾಡುತ್ತಾ ಪುನರ್‌ವಸತಿ ವ್ಯವಸ್ಥೆಯನ್ನು ನಿರ್ವಹಿಸುವ ಸಂಸ್ಥೆಯು ವೆಚ್ಚದ ಪ್ರಸ್ತಾವನೆಯನ್ನು ಕಳುಹಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಿ ಬೇಕಾದಷ್ಟು ಪರಿಹಾರ ಒದಗಿ ಸಲಾಗುವುದು ಎಂದರು.ಮಾಣಿ ಮಂಗಳೂರು ನಡುವೆ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಬೇಕಾಗಿರುವ ೧೦೦ ಎಕ್ರೆ ಸ್ಥಳಕ್ಕಾಗಿ ಹುಡುಕಾಟ ನಡೆಯುತ್ತಿದೆ. ಸ್ಥಳ ಸಿಕ್ಕಿದ ತಕ್ಷಣವೇ ಕ್ರೀಡಾಂಗಣ ನಿರ್ಮಾ ಣಕ್ಕೆ ಚಾಲನೆ ನೀಡಲಾಗುವುದು ಎಂದರು.
Tagged with
dk,
lnews
ಬೆಂಗಳೂರು: ಲೋಕೋಪ ಯೋಗಿ ಸಚಿವ ಸಿ.ಎಂ.ಉದಾಸಿ, ಕೃಷಿ ಸಚಿವ ಉಮೇಶ್ ಕತ್ತಿ, ಪಶುಸಂಗೋ ಪನಾ ಸಚಿವ, ಅಬಕಾರಿ ಸಚಿವ ರೇಣುಕಾ ಚಾರ್ಯ ಸೇರಿದಂತೆ ಸಂಪುಟದಿಂದ ೭ ಮಂದಿಯನ್ನು ಕೈಬಿಟ್ಟು ಹೊಸದಾಗಿ ೧೬ ಮಂದಿಯನ್ನು ಸೇರಿ ಮಂತ್ರಿಮಂಡಲ ಪುನಾರಚಿಸುವ ಪ್ರಸ್ತಾಪವನ್ನು ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಪಕ್ಷದ ವರಿಷ್ಠರ ಮುಂದೆ ಇಟ್ಟಿದ್ದಾರೆ.
ಹೊಸ ೧೬ ಮಂದಿಯು ಪಕ್ಷದ ನಿಷ್ಠಾವಂತ ಹಿರಿಯ ಸದಸ್ಯರೇ ಆಗಿರುತ್ತಾರೆ ಇವರಿಂದ ಬಹುತೇಕ ಜಿಲ್ಲೆಗಳಿಗೆ ಪ್ರಾತಿನಿಧ್ಯ ಅವಕಾಶ ನೀಡಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಟಿ.ಎಚ್. ಶಂಕರಮೂರ್ತಿ ಯವರನ್ನು ಮಂತ್ರಿಮಂಡಳಕ್ಕೆ ಸೇರಿಸಿ ಶಿವಮೊಗ್ಗಕ್ಕೆ ಪ್ರತಿನಿಧ್ಯ ನೀಡುವ ವಿಷಯ ಮುಂದಿಟ್ಟಿದ್ದಾರೆ.ಅಲ್ಲದೆ ಹಣಕಾಸು, ಡಿ.ಪಿ.ಎ.ಆರ್ ಮತ್ತು ಗುಪ್ತಚರ ವಿಭಾಗ ಇಲಾಖೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಉಳಿದ ಖಾತೆಗಳನ್ನು ಹೊಸಬರಿಗೆ ಹಂಚುವ ವಿಷಯವನ್ನು ವರಿಷ್ಠರ ಮುಂದೆ ಇಟ್ಟಿದ್ದಾರೆ.
ಸಂಪುಟದಲ್ಲಿ ಇರುವ ೩-೪ ಮಂದಿಯನ್ನು ಹೊರತು ಪಡಿಸಿದರೆ ಉಳಿದವರಾರು ತಮ್ಮ ಹೊಣೆಗಾರಿಕೆ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಕೆಲವರಂತೂ ತನ್ನ ಕ್ಷೇತ್ರ ಹಾಗೂ ತಮ್ಮ ವ್ಯವಹಾರಕ್ಕೆ ಸೀಮಿತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಮಂತ್ರಿ ಮಂಡಲ ಹೇಗಿರಬೇಕು ಎಂಬುದರ ಪೂರ್ಣವಿವರವನ್ನು ಧರ್ಮೇಂದ್ರ ಪ್ರದಾನರ ಮುಂದಿಟ್ಟಿದ್ದಾರೆ. ಅರುಣ್ ಜೆಟ್ಲಿ ಗಮನಕ್ಕೆ ತಂದಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ರಾಜಧಾನಿಯಲ್ಲಿ ಇಲ್ಲದ ಕಾರಣ ಉಸ್ತುವಾರಿ ಹೊರೆ ಹೊತ್ತವರಿಗೆ ಪೂರ್ಣ ಮಾಹಿತಿ ನೀಡಿ ನಗರಕ್ಕೆ ಹಿಂದಿ ರುಗಿದ್ದಾರೆ. ಬಹುತೇಕ ಇನ್ನೊಂದು ವಾರದಲ್ಲಿ ದೆಹಲಿ ನಾಯಕರು ಮುಖ್ಯಮಂತ್ರಿಯ ಪ್ರಸ್ತಾಪ ಪರಿಶೀಲಿಸಿ ಮಂತ್ರಿ ಮಂಡಲ ಪುನಾರಚನೆಗೆ ಅನುವು ಮಾಡಿಕೊಡುವ ಸಾಧ್ಯತೆ ಇದೆ.
Tagged with
snews
ಮಂಗಳೂರು: ಇಎಸ್‌ಐ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಅಖಿಲ ಭಾರತ ಕಾರ್ಮಿಕ ಸಂಘ ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದ್ದು. ಸಂಘಟನೆಯ ರಾಜ್ಯ ಉಪಾಧ್ಯಕ್ಷರು ತೀವ್ರ ಅಸ್ವಸ್ಥಗೊಂಡು ನಿನ್ನೆ ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಿ.ಎಂ ಗಾಡ್ಕರ್ ಮೈಸೂರಿನಿಂದ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಿನ್ನೆ ಮುಂಜಾನೆ ವೇಳೆ ಇವರ ಆರೋಗ್ಯ ಹದಗೆಟ್ಟ ಕಾರಣ ತೀವ್ರವಾಗಿ ಅಸ್ವಸ್ಥ ಗೊಂಡಿದ್ದರು. ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಲು ಇವರು ನಿರಾಕರಿಸಿದ ರಾದರೂ ಸಂಘಟನೆಯವರು ಇವರ ಮನವೊಲಿಸಿ ಸಂಜೆ ವೇಳೆ ಆಸ್ಪತ್ರೆಗೆ ದಾಖಲಿಸಿದರು. ಜನರ ಸಹಭಾಗಿತ್ವಕ್ಕೆ ಒತ್ತು ಕೊಡುವ ಬೇಡಿಕೆಯನ್ನು ಮುಂದಿ ಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದರೂ ಇದೇ ದಾರಿಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಮುಖ್ಯಮಂತ್ರಿಗಳು ತಮ್ಮನ್ನು ಗಮನಿಸಲಿಲ್ಲ ಎಂಬ ನೋವನ್ನು ತೋಡಿಕೊಂಡಿರುವ ಕಾರ್ಮಿಕ ಸಂಘ ತಮ್ಮ ಹೋರಾಟ ವನ್ನು ಬಲಗೊಳಿಸಲು ತೀರ್ಮಾನಿಸಿ ದ್ದಾರೆ.
Tagged with
dk,
lnews
ಮಂಗಳೂರು: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು-ಉಡುಪಿ ಜಿಲ್ಲೆ ಇಲ್ಲಿ ಮಂಗಳವಾರ ಮೇ ಎಂಟರಂದು ಕಚ್ಚೂರು ಶ್ರೀನಾಗೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ವಾರ್ಷಿಕ ಕಾಲಮಾನದಂತೆ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವವು ಬ್ರಹ್ಮಶ್ರೀ ವೇದಮೂರ್ತಿ ಬಿ.ಕೃಷ್ಣಮೂರ್ತಿ ಸಾಮಗ ಮತ್ತು ಬಿ.ಆರ್.ವಿಶ್ವನಾಥ ಶಾಸ್ತ್ರಿಯವರ ನೇತೃತ್ವದಲ್ಲಿ ನಡೆಯಲಿದೆ. ಪ್ರ್ರಾತಃಕಾಲ ಗಂಟೆ ಏಳರಿಂದ ಆರಂಭ ಗೊಂಡು ರಾತ್ರಿ ಗಂಟೆ ಎಂಟರ ತನಕ ಧಾರ್ಮಿಕ ವಿಧಿಗಳು ಜರಗಲಿವೆ.
Tagged with
dk,
lnews
ಬಂಟ್ವಾಳ: ಅಜಿಲಮೊಗರು ಜುಮಾ ಮಸೀದಿ ಕೇವಲ ಧಾರ್ಮಿಕ ಕ್ಷೇತ್ರವಾಗಿ ಉಳಿದಿಲ್ಲ. ಹಿಂದು-ಮುಸ್ಲಿಮರ ನಡುವಿನ ಭಾವನಾತ್ಮಕ ಸಂಬಂಧಕ್ಕೆ ವಿಶೇಷ ಅರ್ಥ ಕಲ್ಪಿಸಿದ ಭಾವೈಕ್ಯತೆಯ ಕ್ಷೇತ್ರ ಎಂದು ತಾಲೂಕು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಬಣ್ಣಿಸಿದ್ದಾರೆ.
ಐತಿಹಾಸಿಕ ಪ್ರಸಿದ್ಧ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ಧೀನ್ ಔಲಿಯಾ ಅವರ ೭೩೯ನೇ ಮಾಲಿದಾ ಉರೂಸ್ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಅವರು, ಸಾಮರಸ್ಯ ಹಾಗೂ ಭಾವೈಕ್ಯತೆ ಅಜಿಲಮೊಗರು ಕ್ಷೇತ್ರದ ವಿಶೇಷ ಗುಣ. ಹಿಂದುಗಳು, ಮುಸ್ಲಿಮರು ಹಾಗೂ ಕ್ರೈಸ್ತರು ಎನ್ನುವ ಬೇಧ-ಭಾವಕ್ಕೆ ಇಲ್ಲಿ ಅವಕಾಶ ಇರುವುದಿಲ್ಲ. ಕ್ಷೇತ್ರಕ್ಕೆ ಬರುವವ ರೆಲ್ಲರೂ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದವರು ಹೇಳಿದರು.
ಇಲ್ಲಿನ ಜನರು ಶಾಂತಿಪ್ರಿಯರು. ಸಾಮರಸ್ಯ, ಸಹಬಾಳ್ವೆಯನ್ನು ಬಯಸು ತ್ತಾರೆ. ದ್ವೇಷ, ವೈಷಮ್ಯ ಹಾಗೂ ವಿರಸಕ್ಕೆ ಇಲ್ಲಿ ಅವಕಾಶವೇ ಇರದು. ಆದ್ದರಿಂದ ಹಿರಿಯರ ಆಚರಣೆ ಹಾಗೂ ಸಂಪ್ರದಾ ಯಗಳು ಈಗಿನ ತಲೆಮಾರಿಗೂ ಮಾದರಿ ಯಾಗಿದೆ. ಇಲ್ಲಿನ ಹಿಂದುಗಳು ಹಾಗೂ ಮುಸ್ಲಿಮರು ಗೌರವದಿಂದ ಬದುಕುತ್ತಿ ದ್ದಾರೆ. ಅದು ಈ ನೆಲದ ಮಹಿಮೆ ಎಂದವರು ಶ್ಲಾಘಿಸಿದ್ದು, ಮಸೀದಿಯ ಆಡಳಿತ ಮಂಡಳಿ ಸದಸ್ಯರು ಈ ನಿಟ್ಟಿನಲ್ಲಿ ಶ್ರಮವೂ ಪ್ರಶಂಸಾರ್ಹ ಎಂದರು.
ಶರಬೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ಸುಬ್ಬಣ್ಣ ಶೆಟ್ಟಿ ಸರಪಾಡಿ, ಸರಪಾಡಿ ಗ್ರಾ.ಪಂ. ಉಪಾಧ್ಯಕ್ಷ ಪೂವಪ್ಪ ಪೂಜಾರಿ, ಸದಸ್ಯರಾದ ಪುರುಷೋತ್ತಮ ಪೂಜಾರಿ, ರಾಮಕೃಷ್ಣ ಮಯ್ಯ, ಶಿವಪ್ಪ ಪೂಜಾರಿ, ತಾ.ಪಂ.ಸದಸ್ಯ ಸಂಪತ್ ಕುಮಾರ್ ಶೆಟ್ಟಿ ಮತ್ತಿತರ ಬಿಜೆಪಿ ಮುಖಂಡರು ಭೇಟಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡರ ಭೇಟಿ: ರಮಾನಾಥ ರೈ, ಅಶ್ವನಿ ಕುಮಾರ್ ರೈ, ಮಾಯಿಲಪ್ಪ ಸಾಲ್ಯಾನ್, ಯೂಸುಫ್ ಕರಂದಾಡಿ ಮತ್ತಿತರರು ಕ್ಷೇತ್ರಕ್ಕೆ ಭೇಟಿ ಮಾಡಿ ಪ್ರಾರ್ಥನೆ ಸಲ್ಲಿಸಿದರು.
Tagged with
dk,
lnews
ಕಾಂಗ್ರೆಸ್ ಕಿಸಾನ್ ಘಟಕ ಎಚ್ಚರಿಕೆ
ಉಡುಪಿ: ಮುಂದಿನ ಒಂದು ತಿಂಗಳೊಳಗಾಗಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಕಬ್ಬು ಬೆಳೆಗಾರರಿಗೆ ಪಾವತಿಸಲು ಬಾಕಿ ಇರುವ ಹಣವನ್ನು ಪಾವತಿಸದೇ ಇದ್ದಲ್ಲಿ ಮತ್ತು ಯುಪಿಸಿಎಲ್ ಸಮಸ್ಯೆಯನ್ನು ಪರಿಹರಿಸದೇ ಇದ್ದಲ್ಲಿ ಬಳಿಕ ಜಿಲ್ಲೆಯ ಕೃಷಿಕರ ಸಭೆ ಕರೆದು, ಅವರ ಅಭಿಪ್ರಾಯ ಪಡೆದು ಕೊಂಡು ಬೃಹತ್ ಹೋರಾಟದ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಿರುವುದಾಗಿ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಶಶಿಧರ ಶೆಟ್ಟಿ ಎಲ್ಲೂರು ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾ ಡುತ್ತಿದ್ದರು. ಮೂರು ತಿಂಗಳ ಹಿಂದೆ ತನ್ನನ್ನು ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷನನ್ನಾಗಿ ನೇಮಕ ಮಾಡಲಾ ಗಿದೆ. ತಾನು ನೇಮಕಗೊಂಡ ಬಳಿಕ ವಿವಿಧ ಗ್ರಾಮಗಳಲ್ಲಿ ಘಟಕಾಧ್ಯಕ್ಷರನ್ನು ನೇಮಕಾತಿ ಮಾಡಲಾಗಿದೆ. ಮುಂದೆ ಸಂಘಟನೆಗೆ ಮೊದಲ ಆದ್ಯತೆ ನೀಡಲಾ ಗುವುದು ಎಂದು ಅವರು ಹೇಳಿದರು.
ಅಧಿಕಾರಕ್ಕೆ ಬರುವ ಮೊದಲು ಸಕ್ಕರೆ ಕಾರ್ಖಾನೆ ಆರಂಭಿಸಬೇಕೆಂದು ಒತ್ತಾಯಿಸಿ ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಈಗ ತಮ್ಮ ಪಕ್ಷವೇ ಅಧಿಕಾರದಲ್ಲಿ ರುವಾಗ ಯಾಕೆ ಆರಂಭಿಸಲು ಕ್ರಮ ಕೈಗೊಳ್ಳುತ್ತಿಲ್ಲವೆಂದು ಪ್ರಶ್ನಿಸಿದ ಶಶಿಧರ ಶೆಟ್ಟಿ, ಕಬ್ಬು ಬೆಳೆಗಾರರಿಗೆ ಕೊಡಲು ಬಾಕಿ ಇರುವ ೭,೯೭,೫೧,೭೫೦ ರು. ಗಳನ್ನು ವಿತರಿಸುವಂತೆ ಆಗ್ರಹಿಸಿದರು.
ಕೃಷಿ ಬಜೆಟ್ ಮಂಡಿಸಿದ ತಕ್ಷಣ ಕೃಷಿಕರ ಸಮಸ್ಯೆ ಪರಿಹಾರವಾಗು ವುದಿಲ್ಲ. ಮಠಗಳಿಗೆ ಕೋಟಿ ಕೋಟಿ ಹಣ ನೀಡುವ ಸರಕಾರ ಬೇಕಾದರೆ ಮಠದ ಬಜೆಟ್ ಮಂಡಿಸಲಿ. ಆದರೆ, ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸಿ, ಕಾರ್ಖಾನೆಯನ್ನು ಪುನರಾ ರಂಭಿಸಲು ಬೇಕಾದ ಕ್ರಮಗಳನ್ನು ಕೈಗೊ ಳ್ಳಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿ ಕಾರಿ ಕಚೇರಿ ಎದುರು ಪ್ರತಿಭಟನೆ ಯನ್ನು ಹಮ್ಮಿಕೊಳ್ಳುವುದಾಗಿ ಶಶಿಧರ ಶೆಟ್ಟಿ ಮುನ್ನೆಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ನಾಗಪ್ಪ ಕೊಟ್ಟಾರಿ ವಂಡ್ಸೆ, ಸದಾನಂದ ಶೆಟ್ಟಿ ಶಿರ್ವ, ಮುದ್ದು ಶೆಟ್ಟಿ ಕಟಪಾಡಿ ಹಾಗೂ ವಸಂತ ಶೆಟ್ಟಿ ಉಪಸ್ಥಿತರಿದ್ದರು.
Tagged with
dk,
lnews
ಡಿವಿಲಿಯರ‍್ಸ್ ‘ಸುನಾಮಿಗೆ ಕೊಚ್ಚಿಹೋದ ಡೆಕ್ಕನ್
ಬೆಂಗಳೂರು: ಒಂದು ಹಂತದಲ್ಲಿ ಡೆಕ್ಕನ್ ಚಾರ್ಜರ‍್ಸ್ ಬಹುತೇಕ ಜಯದ ಹೊಸ್ತಿಲಲ್ಲಿದ್ದರೂ ಅಂತಿಮ ಹಂತದಲ್ಲಿ ಸುನಾಮಿಯಂತೆ ಎರಗಿದ ಸ್ಫೋಟಕ ಆಟಗಾರ ಎಬಿಡಿ ವಿಲಿಯರ‍್ಸ್ ನಡೆಸಿದ ಅಚಾನಕಾದ ದಾಳಿಗೆ ಡೆಕ್ಕನ್ ಕಂಗೆಟ್ಟಿದೆ. ಅತ್ತ ಸಂಗಾಕ್ಕರ ಪಡೆಯ ವಿರುದ್ಧ ಬೆಂಗಳೂರು ಐದು ವಿಕೆಟ್‌ಗಳ ಗೆಲುವು ದಾಖಲಿಸಿ ಅಮೂಲ್ಯ ಎರಡಂಕ ಸಂಪಾದಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಡೆಕ್ಕನ್‌ಗೆ ಆರಂಭಿಕರಾದ ಶಿಖರ್ ಧವನ್ ಹಾಗೂ ರ‍್ಯಾನ್ ಹ್ಯಾರಿಸ್ (೪೭) ಜೋಡಿ ಪ್ರದರ್ಶಿಸಿದ ಭರ್ಜರಿ ಮೊದಲು ವಿಕೆಟ್‌ಗೆ ೮೬ ರನ್‌ಗಳ ಜೊತೆಯಾಟ ನಡೆಸಿಕೊಟ್ಟರು. ನಂತರ ಮಧ್ಯಮ ಕ್ರಮಾಂಕದಲ್ಲಿ ಕ್ಯಾಮರೊನ್ ವೈಟ್ ನಡೆಸಿದ ಸ್ಫೋಟಕ ಆಟವು ತಂಡದ ಮೊತ್ತವನ್ನು ೧೮೦ರಲ್ಲಿಗೆ ಕೊಂಡೊಯ್ಯುವಲ್ಲಿ ಸಫಲವಾಯಿತು. ಶಿಖರ್ ಕೇವಲ ೫೨ ಎಸೆತಗಳಲ್ಲಿ ೧೦ ಬೌಂಡರಿ ಹಾಗೂ ಒಂದು ಸಿಕ್ಸ್ ನೆರವಿನಿಂದ ೭೩ ರನ್ ಗಳಿಸಿದರೆ ವೈಟ್ ಕೇವಲ ೨೪ ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸ್ ನೆರವಿನಿಂದ ೪೫ ರನ್ ಸ್ಫೋಟಿಸಿದರು. ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ೧೮೧ರ ಮೊತ್ತವನ್ನು ಪೇರಿಸಿತು.
ಗುರಿ ಬೆನ್ನತ್ತಿದ್ದ ಆರ್‌ಸಿಬಿ ಒಂದು ಹಂತದಲ್ಲಿ ಗೆಲುವು ಕಠಿಣ ಎಂಬ ಹಂತದಲ್ಲಿರುವಾಗ ಆಗಮಿಸಿದ ಡಿವಿಲಿಯರ‍್ಸ್ ನಡೆಸಿದ ಸ್ಫೋಟಕ ಇನ್ನಿಂಗ್ಸ್ ತಂಡದ ಹಣೆಬರಹವನ್ನೇ ಬದಲಾಯಿಸಿತು. ಹಾಗಾಗಿ ತಂಡ ಇನ್ನೂ ಏಳು ಎಸೆತ ಬಾಕಿ ಉಳಿದಿರುವಂತೆ ಐದು ವಿಕೆಟ್ ನಷ್ಟಕ್ಕೆ ೧೮೫ ರನ್ ಗಳಿಸಿ ವಿಜಯಿಯಾಯಿತು. ಡಿವಿಲಿಯರ‍್ಸ್ ಕೇವಲ ೧೭ ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸ್ ನೆರವಿನಿಂದ ಅಜೇಯ ೪೭ ರನ್ ಪೇರಿಸಿ ಅಂತಿಮವಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಡೆಕ್ಕನ್ ಪರ ಮಿಶ್ರಾ ಎರಡು ವಿಕೆಟ್ ಪಡೆದರು. ಅಂತಿಮ ಮೂರು ಓವರ್‌ಗಳಲ್ಲಿ ತಂಡಕ್ಕೆ ೩೯ ರನ್‌ಗಳ ಅವಶ್ಯವಿತ್ತು. ಆದರೆ ಡಿವಿಲಿಯರ‍್ಸ್ ಕಠಿಣ ಸ್ಟೇನ್ ಓವರ್‌ನಲ್ಲಿ ೨೩ ರನ್ ಚಚ್ಚುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿದರು. ಅಂತಿಮ ಎರಡು ಓವರ್‌ಗಳಲ್ಲಿ ೧೬ ರನ್ ಬೇಕಿದ್ದಾಗ ತಂಡ ಅದನ್ನು ಇನ್ನೂ ಏಳು ಎಸೆತ ಬಾಕಿ ಉಳಿದಿರುವಂತೆ ಪೇರಿಸಿತು. ಈ ಮೊದಲು ತಂಡಕ್ಕೆ ಆರಂಭಿಕರಾದ ದಿಲ್ಶಾನ್ ಹಾಗೂ ಗೇಲ್ ಜೋಡಿ ಮೊದಲ ವಿಕೆಟ್‌ಗೆ ೯೧ ರನ್ ಪೇರಿಸಿತು. ಅದರಲ್ಲೂ ದಿಲ್ಶಾನ್ ಅಬ್ಬರಿಸಿದರು. ಆದರೆ ನಂತರ ಗೇಲ್ (೨೬) ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ಕೊಹ್ಲಿ (೯), ಪಠಾಣ್ (೪) ವಿಕೆಟ್ ಕಳೆದುಕೊಂಡರು. ಆದರೆ ಎಂಟು ಬೌಂಡರಿ ಹಾಗೂ ಎರಡು ಸಿಕ್ಸ್ ನೆರವಿನಿಂದ ೭೧ ರನ್ ಗಳಿಸಿದ್ದ ದಿಲ್ಶಾನ್‌ರನ್ನು ಔಟ್ ಮಾಡುವ ಮೂಲಕ ಪ್ರತಾಪ್ ಡೆಕ್ಕನ್‌ಗೆ ಗೆಲುವಿನ ಉತ್ತಮ ಅವಕಾಶ ವೊಂದನ್ನು ನೀಡಿದರು. ಆದರೆ ನಂತರ ಆಗಮಿಸಿದ ಡಿವಿಲಿಯರ‍್ಸ್ ಎಲ್ಲವನ್ನೂ ಬದಲಾಯಿಸಿದರು.
Tagged with
tnews
ಬಂಟ್ವಾಳ: ಮುಸ್ಲಿಮರ ಪವಿತ್ರ ಹಾಗೂ ಪುಣ್ಯ ಕ್ಷೇತ್ರಗಳಾದ ಸೌದಿ ಅರೇಬಿಯಾದ ಮೆಕ್ಕಾ ಹಾಗೂ ಮದೀನಕ್ಕೆ ಮಂಗಳೂರು ಶಾಸಕ ಯು.ಟಿ.ಖಾದರ್ ತೆರಳಿದ್ದಾರೆ. ಎ.೫ರಂದು ಮಂಗಳೂರು ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿದ ಅವರು, ಇಸ್ಲಾಮಿನ ಪ್ರಮುಖ ಧಾರ್ಮಿಕ ಆಚರಣೆಯಲ್ಲೊಂದಾದ ಉಮ್ರಾ ಝಿಯಾರತ್ ನಿರ್ವಹಿಸಲಿದ್ದಾರೆ.
ಪ್ರವಾಸದ ಅವಧಿಯಲ್ಲಿ ಕ್ಷೇತ್ರದ ಸಾರ್ವಜನಿಕರಿಗೆ ದೂರು-ಕುಂದುಕೊರತೆ ಗಳಿಗೆ ಸಂಬಂಧಿಸಿ ಆಪ್ತ ಸಹಾಯಕ ಹಾಗೂ ಕಾರ್ಯದರ್ಶಿಗಳಾದ ಪ್ರವೀಣ್ ಹಾಗೂ ವಿಜಯ್ ಅವರನ್ನು ಸಂಪರ್ಕಿಸಬಹುದೆಂದು ಖಾದರ್ ತಿಳಿಸಿದ್ದಾರೆ.
Tagged with
dk,
lnews
ಮಂಗಳೂರು: ದನದ ಕೊಟ್ಟಿಗೆ ಸುಟ್ಟು ಭಸ್ಮಗೊಂಡ ಘಟನೆ ಶನಿವಾರ ತಡರಾತ್ರಿ ಕುಂದಾಪುರ ತಾಲೂಕಿನ ಬಸ್ರೂರು ಸಮೀಪದ ಮೆರ್ಡಿಯ ಕೋಟೆಗಾರ ಎಂಬಲ್ಲಿ ನಡೆದಿದೆ.
ಸುಬ್ರಾಯ ಎಂಬವರ ಮನೆಯ ದನದ ಕೊಟ್ಟಿಗೆಗೆ ಮಧ್ಯರಾತ್ರಿಯ ಸಂದರ್ಭ ಬೆಂಕಿ ಹತ್ತಿಕೊಂಡಿದ್ದು, ಅಟ್ಟ ದಲ್ಲಿದ್ದ ತೆಂಗಿನಕಾಯಿ, ಬೈಹುಲ್ಲು, ಸೌದೆ ಹಾಗೂ ಕೊಟ್ಟಿಗೆಗೆ ಹೊಂದಿಕೊಂಡಿದ್ದ ಮೂರು ಕೊಠಡಿಗಳು ಸಂಪೂರ್ಣ ಭಸ್ಮಗೊಂಡಿವೆ. ಕೊಟ್ಟಿಗೆಯಲ್ಲಿದ್ದ ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ರಾತ್ರಿಯ ವೇಳೆ ಹತ್ತಿಕೊಂಡ ಬೆಂಕಿ ಯನ್ನು ಸ್ಥಳೀಯರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಶ್ರಮವಹಿಸಿ ಮುಂಜಾನೆಯ ವೇಳೆಯಷ್ಟೇ ತಹಬಂದಿಗೆ ತಂದರು. ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್ ಮೆಂಡನ್, ಬಸ್ರೂರು ಗ್ರಾ.ಪಂ. ಅಧ್ಯಕ್ಷ ವಿಕಾಸ್ ಹೆಗ್ಡೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Tagged with
dk,
lnews
ಸ್ಮಿತ್ ದಾಳಿಗೆ ಕಂಗಾಲಾದ ಚೆನ್ನೈ; ಸಚಿನ್ ಅರ್ಧಶತಕ
ಮುಂಬಯಿ: ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯವು ಅಭಿಮಾನಿಗಳಿಗೆ ವೀಕೆಂಡ್‌ನ ಬರ ಪೂರ ಮನೊರಂಜನೆಯನ್ನು ಒದಗಿಸಿದೆ. ಆರಂಭದಲ್ಲಿ ಸಚಿನ್ ತೆಂಡೂಲ್ಕರ್ ಪ್ರದರ್ಶಿಸಿದ ಅಬ್ಬರದ ಆಟ ಹಾಗೂ ಅಂತಿಮ ಹಂತದಲ್ಲಿ ತಂಡ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಡ್ವೇನ್ ಸ್ಮಿತ್‌ರ ಅಬ್ಬರದ ಆಟದ ನೆರವಿನಿಂದ ಚೆನ್ನೈ ವಿರುದ್ಧದ ಪಂದ್ಯವನ್ನು ಮುಂಬೈ ಇಂಡಿಯನ್ಸ್ ರೋಚಕ ಎರಡು ವಿಕೆಟ್‌ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಪರ ಆರಂಭದಲ್ಲಿ ಮುರುಳಿ ವಿಜಯ್ (೪೧) ಹಾಗೂ ಸುರೇಶ್ ರೈನಾರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿ ಸಿದರು. ರೈನಾ ಕೇವಲ ೨೧ ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸ್ ನೆರವಿನಿಂದ ೩೬ ರನ್ ಗಳಿಸಿ ದರು. ಅಂತಿಮ ಹಂತದಲ್ಲಿ ಧೋನಿ (೨೫) ಕೂಡ ಸ್ಫೋಟಕ ಆಟ ನೀಡಿದ ಹಿನ್ನೆಲೆಯಲ್ಲಿ ತಂಡ ೧೭೦ರ ಮೊತ್ತ ವನ್ನು ದಾಟಿತು. ಬ್ರಾವೊ (೪೦) ಕೂಡ ಉತ್ತಮ ಆಟ ನೀಡಿದರು. ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ೧೭೩ ರನ್‌ಗಳ ಉತ್ತಮ ಮೊತ್ತ ಪೇರಿಸಿತು. ಗುರಿ ಬೆನ್ನತ್ತಿದ್ದ ಮುಂಬೈ ಇನ್ನಿಂಗ್ಸ್‌ನ ಕೊನೆ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಎಂಟು ವಿಕೆಟ್ ನಷ್ಟಕ್ಕೆ ೧೭೪ ರನ್ ಗಳಿಸಿ ರೋಚಕ ಜಯ ಗಳಿಸಿತು. ಡ್ವೇನ್ ಸ್ಮಿತ್ ಕೇವಲ ಒಂಬತ್ತು ಎಸೆತಗಳಲ್ಲಿ ತಲಾ ಎರಡು ಸಿಕ್ಸ್ ಹಾಗೂ ಬೌಂಡರಿ ನೆರವಿನಿಂದ ಅಜೇಯ ೨೬ ರನ್ ಗಳಿಸಿ ತಂಡಕ್ಕೆ ರೋಚಕ ಗೆಲುವು ತರುವಲ್ಲಿ ಸಫಲರಾದರು. ಸಚಿನ್ ಹಾಗೂ ರೋಹಿತ್ ಶರ್ಮಾ ಕೂಡ ಆಕರ್ಷಕ ಅರ್ಧಶತಕ ಸಿಡಿಸಿದರು. ಅದರಲ್ಲೂ ಸಚಿನ್ ಕೇವಲ ೪೪ ಎಸೆತಗಳಲ್ಲಿ ೧೧ ಬೌಂಡರಿ ಹಾಗೂ ಒಂದು ಸಿಕ್ಸ್ ನೆರವಿನಿಂದ ೭೪ ರನ್ ಗಳಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ ೧೩.೩ ಓವರ್‌ಗಳಲ್ಲಿ ೧೨೬ ರನ್‌ಗಳ ಜೊತೆ ಯಾಟ ನಡೆಸಿದ್ದು, ಉತ್ತಮ ಅಡಿ ಪಾಯ ಹಾಕಿಕೊಟ್ಟರು. ಆದರೆ ನಂತ ರದ ಬ್ಯಾಟ್ಸ್‌ಮೆನ್‌ಗಳು ವಿಫಲರಾದರು.
ತಂಡಕ್ಕೆ ಅಂತಿಮ ಹಂತದಲ್ಲಿ ೧೬ ರನ್‌ಗಳ ಅಗತ್ಯವಿತ್ತು. ಹಿಲ್ಫೆನಾಸ್‌ರ ಮೊದಲನೇ ಎಸೆತದಲ್ಲಿ ಸ್ಮಿತ್ ಒಂದು ರನ್ ತೆಗೆದಾಗ ಮುಂಬೈ ಆತಂಕ ಇನ್ನೂ ಹೆಚ್ಚಾಯಿತು. ಎರಡನೇ ಎಸೆತ ದಲ್ಲಿ ಮಲಿಂಗಾ ಕ್ಲೀನ್‌ಬೌಲ್ಡ್ ಆದಾಗ ಮುಂಬೈಯ ಗೆಲುವಿನ ಆಸೆ ಜಟಿಲ ಗೊಂಡಿತು. ಆದರೆ ಆರ್.ಪಿ ಸಿಂಗ್ ಮೂರನೇ ಎಸೆತದಲ್ಲಿ ಸ್ಮಿತ್‌ಗೆ ಸಿಂಗಲ್ ತೆಗೆದುಕೊಟ್ಟರು. ತಂಡಕ್ಕೆ ಅಂತಿಮ ಅಂತಿಮ ಮೂರು ಎಸೆತಗಳಲ್ಲಿ ಮೂರು ರನ್ ಅಗತ್ಯವಿದ್ದಾಗ ಸ್ಮಿತ್ ಒಂದು ಸಿಕ್ಸ್ ಹಾಗೂ ಎರಡು ಬೌಂಡರಿ ಸಿಡಿಸಿದಾಗ ಮುಂಬೈ ಆನಂದಕ್ಕೆ ಪಾರವೇ ಇರದಂತಾಯಿತು. ಒಟ್ಟಿನಲ್ಲಿ ಚೆನ್ನೈ ಹಣೆಬರವೇ ಸರಿಯಾಗಿಲ್ಲ ಎಂದು ಹೇಳಿದರೆ ತಪ್ಪಿಲ್ಲ. ಜಡೇಜಾ ಎರಡು ವಿಕೆಟ್ ಪಡೆದರು.
Tagged with
tnews
ಕುವೈಟ್: ಇಲ್ಲಿ ನಡೆಯುತ್ತಿರುವ ೧೬ನೇ ಏಶ್ಯನ್ ಸ್ಕ್ವಾಷ್ ಟೂರ್ನಿಯಲ್ಲಿ ಭಾರತೀಯ ಮಹಿಳಾ ತಂಡ ಇತಿಹಾಸ ನಿರ್ಮಿಸಿದೆ. ಪ್ರತಿಷ್ಠಿತ ಕೂಟವನ್ನು ಮೊದಲ ಬಾರಿಗೆ ಗೆಲ್ಲುವ ಮೂಲಕ ಉತ್ತಮ ಸಾಧನೆ ಮೆರೆದಿದ್ದಾರೆ. ಆದರೆ ಅತ್ತ ಪುರುಷರ ವಿಭಾಗದಲ್ಲಿ ಭಾರತ ನಿರಾಶೆ ಮೂಡಿಸಿದ್ದು, ಪಾಕ್ ವಿರುದ್ಧದ ಹಣಾಹಣಿಯಲ್ಲಿ ಸೋಲನ್ನು ಕಂಡಿದೆ.
Tagged with
tnews
ಅಂಟಾಲ್ಯ (ಟರ್ಕಿ): ಇಲ್ಲಿ ನಡೆ ಯುತ್ತಿರುವ ವಿಶ್ವಕಪ್ ಬಿಲ್ಲುಗಾರಿಕೆಯಲ್ಲಿ ಭಾರತದ ಪ್ರಮುಖ ಆಟಗಾರ್ತಿ ದೀಪಿಕಾ ಕುಮಾರಿ ಅತ್ಯದ್ಭುತ ಸಾಧನೆ ತೋರಿದ್ದಾರೆ. ಕೂಟದ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಕೊಂಡು ವಿಶ್ವಕಪ್‌ನ್ನು ಮುಡಿ ಗೇರಿಸಿ ಕೊಂಡಿದ್ದಾರೆ.
ಫೈನಲ್‌ನ ಎರಡನೇ ಹಂತದಲ್ಲಿ ಕೊರಿಯಾದ ಲೀ ಸೆಂಗ್ ವಿರುದ್ಧ ಆರು ಸೆಟ್ ಅಂಕಗಳ ಅಂತರದಿಂದ ಕೂಟವನ್ನು ತನ್ನ ಮುಡಿಗೇರಿಸಿಸುವಲ್ಲಿ ಹರೆಯದ ಆಟಗಾರ್ತಿ ದೀಪಿಕಾ ಸಫಲ ರಾಗಿದ್ದಾರೆ.
ದೀಪಿಕಾ ತನ್ನ ಮೊದಲನೇ ಸೆಟ್ ಅನ್ನು ೨೭-೩೦ರ ಅಂತರದಲ್ಲಿ ಕಳೆದುಕೊಂಡರೂ ದ್ವಿತೀಯ (೨೯-೨೭), ತೃತೀಯ (೨೭-೨೬) ಹಾಗೂ ಐದನೇ ಸುತ್ತಿನಲ್ಲಿ (೨೮-೨೭) ಉತ್ತಮ ಸಾಧನೆ ನೀಡಿ ಜಯಗಳಿಸಿದರು. ನಾಲ್ಕನೇ ಸೆಟ್ (೨೭-೨೯) ನಲ್ಲಿ ದೀಪಿಕಾ ಎದುರಾಳಿಗೆ ಶರಣಾಗಿದ್ದರು. ದೀಪಿಕಾ ಈಗಾಗಲೇ ಮುಂಬರುವ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಯನ್ನು ಪಡೆದುಕೊಂಡಿದ್ದಾರೆ.
Tagged with
tnews
ಜೋಕಟ್ಟೆ ಸಮೀಪ ನಡೆದ ಘಟನೆ
ಸುರತ್ಕಲ್: ಸಿಸಿಸಿಎಲ್ ಕಂಪೆನಿಯ ಗುತ್ತಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕಪ್ ವಾಹನದ ಸ್ಟೇರಿಂಗ್ ಎಂಡ್ ತುಂಡಾಗಿ ಕಮರಿಗೆ ಉರುಳಿ ಬಿದ್ದ ಪರಿಣಾಮ ಎಂಟು ಮಂದಿ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ಜೋಕಟ್ಟೆ ಕೆ.ಬಿ ಕ್ರಾಸ್ ಬಳಿ ಸಂಭವಿಸಿದೆ.
ಅಪಘಾತದ ಭೀಕರತೆಗೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೇ ಇಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ೧೧ ಮಂದಿಗೆ ಗಂಭೀರವಾದ ಗಾಯಗಳಾಗಿದ್ದು ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ನತ ದೃಷ್ಟ ಪಿಕಪ್‌ನಲ್ಲಿ ೨೧ ಮಂದಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು.
ಸೆಝ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕಂಪೆನಿಯೊಂದರ ಕಟ್ಟಡ ಗುತ್ತಿಗೆಯನ್ನು ವಹಿಸಿಕೊಂಡಿ ರುವ ಸಿಸಿಸಿಎಲ್ ಸಂಸ್ಥೆಗೆ ಸೇರಿದ ಕಾರ್ಮಿಕರನ್ನು ಇದರ ಉಪಗುತ್ತಿಗೆ ದಾರ ಪಿಕಪ್ ವಾಹನದಲ್ಲಿ ಕರೆದೊ ಯ್ಯುತ್ತಿದ್ದ ವೇಳೆ ಈ ದುರಂತ ಸಂಭವಿ ಸಿದೆ. ಸರಕು ಸಾಗಾಟಕ್ಕೆ ಬಳಸುವ ಪಿಕಪ್ ವಾಹನದಲ್ಲಿ ೨೧ ಮಂದಿ ಕಾರ್ಮಿಕರನ್ನು ತುಂಬಿಕೊಂಡು ಪಿಕಪ್ ಚಾಲಕ ಅತೀವೇಗದಿಂದ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದು ಈ ವೇಳೆ ಸ್ಟೇರಿಂಗ್ ಎಂಡ್ ತುಂಡಾದ ಪರಿಣಾಮ ಪಿಕಪ್ ಚಾಲಕನ ಹತೋಟಿಗೆ ಸಿಲುಕದೆ ಕಮರಿಗೆ ಉರುಳಿ ಬಿದ್ದಿದೆ. ಘಟನೆಯ ತೀವ್ರತೆಗೆ ೬ ಮಂದಿ ಸ್ಥಳದಲ್ಲೇ ಮೃತ ಪಟ್ಟಿದ್ದು ಇವರ ದೇಹ ಛಿದ್ರಗೊಂಡಿದ್ದು ಕೈ ಕಾಲು ದೇಹದಿಂದ ಬೇರ್ಪಟ್ಟಿದೆ. ಉಳಿದ ೧೫ ಮಂದಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.
ಚಂದನ್ ಕುಮಾರ್, ಚಂದ್ರು, ಇರ್ಫಾನ್, ಸಲ್ಮಾನ್, ಮಸೂದ್, ಮೃತಪಟ್ಟವರಾಗಿದ್ದು ಮೃತರಲ್ಲಿ ಮೂವರ ಗುರುತು ಪತ್ತೆಯಾಗಿಲ್ಲ. ಶವ ಜಜ್ಜಿ ಹೋಗಿರುವ ಕಾರಣ ಗುರುತು ಪತ್ತೆ ಸಾಧ್ಯ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದಂತೆ ಸಫಿಯಾನ್ (೧೯), ಅಭಿಷೇಕ್ (೧೮), ಇಂದ್ರಜಿತ್ (೨೫), ಸಾಜಿ (೩೦), ಕಾರ್ತಿಕ್ ಮರಾನ್ (೨೫), ಗುರುಶರಣ್ ಮಾತಿಯಾನ (೩೨), ಕರುಣೇಶ್ವರ ನಾಯರ್ (೪೪), ಶೇಕ್ ಇಮ್ರಾನ್ (೧೯), ಪೂಜಾನಂದ್ ಬೈದಾ(೨೫), ಹೇಮಂತ್ (೨೪) ಬೈಸಂದಲಾಲ್ ತರೋಡಿಯ (೨೪) ಗಾಯಗೊಂಡಿದ್ದಾರೆ. ಈ ಪಕಿ ಇಬ್ಬರ ಹೆಸರು ತಿಳಿದು ಬಂದಿಲ್ಲ. ಚಾಲಕನನ್ನು ಹೊರತು ಪಡಿಸಿ ಉಳಿದ ಕಾರ್ಮಿಕರೆಲ್ಲ ಒರಿಸ್ಸಾ ಮೂಲದವರಾಗಿದ್ದಾರೆ. ಈ ಕಾರ್ಮಿಕರು ಅಬ್ರಾಹಂ ಎಂಬ ಉಪಗುತ್ತಿಗೆದಾರನ ಅಡಿಯಲ್ಲಿ ಕಳೆದ ಒಂದು ವರುಷದಿಂದ ಕೆಲಸ ಮಾಡು ತ್ತಿದ್ದರು. ಭಾನುವಾರ ಕಾರ್ಮಿಕರಿಗೆ ರಜಾ ಇದ್ದರೂ ಅವರನ್ನು ಅರ್ಧ ದಿನದ ಕೆಲಸಕ್ಕಾಗಿ ಒತ್ತಾಯದಿಂದ ಕರೆತರ ಲಾಗಿದೆ ಎಂದು ಸಹ ಕಾರ್ಮಿಕರು ಆರೋಪಿಸಿದ್ದಾರೆ.
ಸುರತ್ಕಲ್‌ನ ನಿರ್ಮಾಣ್ ಎಂಟರ್ ಪ್ರೈಸಸ್‌ನ ಪೌಲೋಸ್ ಮ್ಯಾಥ್ಯೂ ಎಂಬವರು ತನ್ನ ಪಿಕಪ್ ವಾಹನವನ್ನು ಗುತ್ತಿಗೆ ಆಧಾರದಲ್ಲಿ ಅಬ್ರಾಹಂಗೆ ನೀಡಿದ್ದರು. ಪಿಕಪ್ ವಾಹನದಲ್ಲಿ ಸರಕು ಮಾತ್ರ ಸಾಗಾಟ ಮಾಡಬೇಕೆಂಬ ನಿಯಮ ಇದ್ದರೂ ಇಲ್ಲಿ ಲೆಕ್ಕಕ್ಕಿಂತ ಅಧಿಕ ಕಾರ್ಮಿಕರನ್ನು ತುಂಬಿಸಿಕೊಂಡು ಅತೀ ವೇಗದಿಂದ ವಾಹನ ಚಲಾ ಯಿಸಿಕೊಂಡು ಸಾಗಿದ್ದೇ ದುರ್ಘಟನೆಗೆ ಕಾರಣ ಎಂದು ಸ್ಥಳೀ ಯರು ತಿಳಿಸಿ ದ್ದಾರೆ. ಪಿಕಪ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕ ನನ್ನು ಎಳೆದು ಹೊರತೆಗೆಯಲಾಗಿತ್ತು. ಘಟನೆ ನಡೆದ ಬಗ್ಗೆ ಮಾಹಿತಿ ತಿಳಿದು ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸಿದ ಕಾರಣ ಕೆಲ ಹೊತ್ತು ಜೋಕಟ್ಟೆ- ಬಜ್ಪೆ ರಸ್ತೆ ತಡೆ ಉಂಟಾಗಿತ್ತು.
ಪಿಕಪ್‌ನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಪೈಂಟಿಂಗ್ ಕಾರ್ಮಿಕರಾಗಿದ್ದು, ರಜಾದಿನಗಳಲ್ಲಿ ಹೆಚ್ಚುವರಿ ಕೆಲಸ ಮಾಡಿ ಮನೆಗೆ ಹೆಚ್ಚಿನ ಹಣ ಕಳುಹಿಸುವ ಉದ್ದೇಶ ಹೊಂದಿದ್ದರು. ತಮ್ಮ ಊರಿನಲ್ಲಿ ಸಂಬಳ ಕಡಿಮೆ ಇದ್ದು, ಇಲ್ಲಿ ದಿನಕ್ಕೆ ೨೭೫ ರೂ. ಸಂಬಳ ಸಿಗುತ್ತದೆ, ಹೀಗಾಗಿ ಕಳೆದ ಮೂರು ತಿಂಗಳಿಂದ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಸಫಿಯಾನ್ ಎಂಬವರು ಇತರೇ ಕಾರ್ಮಿಕರನ್ನು ಊರಿನಿಂದ ಇಲ್ಲಿಗೆ ಕರೆತಂದಿದ್ದರು. ಒಡಿಶಾ ನಿವಾಸಿ ಕರ್ಣೇಶ್ವರ ಪರಿಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ ಎನ್ನುತ್ತಿವೆ ಆಸ್ಪತ್ರೆ ಮೂಲಗಳು.
ಆಪತ್ಪಾಂಧವನಾದ ಕಾರ್ಮಿಕ
ಘಟನೆ ನಡೆದ ಸಂದರ್ಭ ಅಲ್ಲೇ ಪಕ್ಕದ ಕೋಣೆ ಯಲ್ಲಿದ್ದ ಎಂಆರ್‌ಪಿಎಲ್ ಬಿಗಿನ್ ಇಂಡಿಯಾ ಕಂಪೆನಿಯ ಬಂಗಾಲ ಮೂಲದ ಬಿಪ್ಲಾವ್ ಶಾಹ್ ಕಾರ್ಮಿಕ ಗಾಯಾಳುಗಳ ಪಾಲಿಗೆ ಆಪತ್ಬಾಂಧವ ನಾಗಿದ್ದಾನೆ. ಇಂದು ಕಾರ್ಮಿಕರಿಗೆ ರಜೆ ಇದ್ದ ಕಾರಣ ನಾನು ರೂಮಿ ನಲ್ಲೇ ಇದ್ದು ಊಟ ಮಾಡುತ್ತಿದ್ದೆ. ಆ ಸಂದರ್ಭ ಶಬ್ದ ಕೇಳಿದ್ದು ಸ್ಥಳಕ್ಕೆ ಹೋದಾಗ ಪಿಕಪ್ ಪಲ್ಟಿಯಾಗಿದ್ದು ಕೆಲವು ಜನ ಅದರಡಿ ಸಿಲುಕಿ ಮೃತಪಟ್ಟಿದ್ದರು. ಹೊರಭಾಗ ದಲ್ಲಿ ಕಾಣುತ್ತಿದ್ದವರನ್ನು ನಾನು, ಅಲ್ಲೇ ಇದ್ದ ಸ್ಥಳೀಯರಿಬ್ಬರ ನೆರವಿನಿಂದ ಒಂಬತ್ತು ಮಂದಿ ಗಾಯಾಳುಗಳನ್ನು ಹೊರತೆಗೆದು ರಸ್ತೆಯಲ್ಲಿ ಹೋಗು ತ್ತಿದ್ದ ವಾಹನವನ್ನು ನಿಲ್ಲಿಸಿ ಆಸ್ಪತ್ರೆಗೆ ಕರೆ ತಂದಿದ್ದೇನೆ. ಈ ಸಂದರ್ಭ ಸಹಾಯಕ್ಕೆ ಯಾರೂ ಬರಲಿಲ್ಲ. ಕೆಲವರ ಮುಖ ಜಜ್ಜಿಹೋಗಿದ್ದು ಗುರುತು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ ಎಂದು ಬಿಪ್ಲಾವ್ ಶಾಹ್ ತಿಳಿಸಿದ್ದಾನೆ.
ಬಾರದ ಆಂಬ್ಯುಲೆನ್ಸ್: ಸ್ಥಳೀಯರ ಅಕ್ರೋಶ
ಘಟನೆ ನಡೆದ ತಕ್ಷಣ ಸ್ಥಳೀಯರು ಎಂಆರ್‌ಪಿಎಲ್ ಸಂಸ್ಥೆಯ ಆಂಬುಲೆನ್ಸ್‌ಗಾಗಿ ಕರೆ ಮಾಡಿದರೆ ಅಲ್ಲಿಂದ ಸೂಕ್ತ ಪ್ರತಿಕ್ರಿಯೆ ಲಭ್ಯವಾಗಿಲ್ಲ, ಅಂಬುಲೆನ್ಸ್‌ಗೆ ಚಾಲಕ ಇಲ್ಲ ಎನ್ನುವ ಉತ್ತರ ಸಿದ್ದವಾಗಿತ್ತು. ಬೇರೆ ಯಾವುದೇ ವಾಹನವನ್ನು ಕೂಡಲೇ ಕಳುಹಿಸಿ ಕೊಡಿ ಎಂದರೂ ದೂರವಾಣಿಯನ್ನು ಕಡಿತಗೊಳಿಸಿದ್ದರು ಎಂದು ಸ್ಥಳಿಯರು ದೂರಿದ್ದಾರೆ. ಕೊನೆಗೆ ಈ ದಾರಿಯಲ್ಲಿ ಬರುತ್ತಿದ್ದ ಎಂಆರ್‌ಪಿಎಲ್ ಅಧಿಕಾರಿಗಳ ಕಾರನ್ನು ತಡೆ ಹಿಡಿದು ಅವರನ್ನು ವಾಹನದಿಂದ ಇಳಿಸಿ ಗಾಯಾಳುಗಳನ್ನು ಅದರಲ್ಲಿ ಸಾಗಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅರ್ಧ ತಾಸು ತಡವಾಗಿದ್ದು ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಬಳಿಕ ಬಂದ ಪೊಲೀಸರೂ ಆಂಬುಲೆನ್ಸ್ ತರಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂಬ ದೂರು ಕೇಳಿ ಬಂದಿದೆ. ಘಟನೆ ನಡೆದ ತಾಸು ಬಳಿಕ ಬಂದ ೧೦೮ ಆಂಬುಲೆನ್ಸ್ ಶವ ಸಾಗಾಟಕ್ಕೆ ನಿರಾಕರಿಸಿದ ಕಾರಣ ಶವವನ್ನು ಸರಕು ಸಾಗಿಸುವ ಟೆಂಪೋದಲ್ಲಿ ತುಂಬಿ ಶವಾಗಾರಕ್ಕೆ ಕಳುಹಿಸಿ ಕೊಡ ಲಾಗಿತ್ತು. ಇದು ಅಮಾನವೀಯ ವರ್ತನೆ ಎಂದು ಸ್ಥಳೀಯರು ದೂರಿದ್ದಾರೆ.
೧೦೮ ಅಂಬ್ಯುಲೆನ್ಸ್ ತುರ್ತು ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗಾಗಿ ಇದ್ದರೂ ಈ ವಾಹನ ಪ್ರಾಣ ಹೋಗುವ ಸಂದರ್ಭದಲ್ಲಿ ಬಾರದೆ ಕೈಕೊಟ್ಟಿರುವ ಉದಾಹರಣೆ ಹಲವಾರು. ಎಂಆರ್‌ಪಿಎಲ್ ಸಂಸ್ಥೆಯಂತೂ ಸದಾ ಸುರಕ್ಷತೆಯ ಬಗ್ಗೆ ಕೊಚ್ಚಿಕೊಳ್ಳುತ್ತಿದೆಯಾದರೂ ಇದರ ಅಂಗಳದಲ್ಲಿ ದುರ್ಘಟನೆ ನಡೆದರೂ ಜೀವ ಹಾನಿಯಾಗುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಕನಿಷ್ಠ ನಿನ್ನೆ ಅಂಬ್ಯುಲೆನ್ಸ್ ಕಳಿಸುವುದಕ್ಕೂ ಎಂಆರ್‌ಪಿಎಲ್ ಹಿಂದೇಟು ಹಾಕಿರುವುದು ಈ ಕಂಪೆನಿಯ ಕಾಳಜಿ ಬಗ್ಗೆಯೇ ಶಂಕೆ ಉಂಟಾಗುತ್ತಿದೆ.
Tagged with
cnews,
feature
ಉಡುಪಿ: ಐಪಿಎಲ್ ಪಂದ್ಯಾಟದ ಹೆಸರಲ್ಲಿ ಎರಡು ಪ್ರತ್ಯೇಕ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟವಾಡುತ್ತಿದ್ದ ಮೂವರು ಯುವಕರನ್ನು ಬಂಧಿಸಿ ರುವ ಬ್ರಹ್ಮಾವರ ಠಾಣೆಯ ಪೊಲೀ ಸರು, ಆರೋಪಿಗಳಿಂದ ೮ ಸಾವಿರ ರು. ಗೂ ಅಧಿಕ ನಗದು ಮತ್ತು ಎರಡು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಶನಿವಾರ ಸಂಜೆ ಗಂಟೆ ೪.೫೦ ಕ್ಕೆ ಬ್ರಹ್ಮಾವರದ ಗಾಂಧಿ ಮೈದಾನಕ್ಕೆ ದಾಳಿ ನಡೆಸಿದ ಸಬ್ ಇನ್ಸ್‌ಪೆಕ್ಟರ್ ಗಿರೀಶ್ ಕುಮಾರ್ ಹಾಗೂ ಸಿಬ್ಬಂದಿ ಜೂಜಾಟ ನಿರತ ಇಬ್ಬರನ್ನು ಬಂಧಿಸಿ ದರು. ಕೊಕ್ಕರ್ಣೆ ನಿವಾಸಿ ಸಚಿನ್ ಶೆಟ್ಟಿ (೧೯) ಹಾಗೂ ನೀಲಾವರ ಗ್ರಾಮದ ಎಳ್ಳಂಪಳ್ಳಿ ನಿವಾಸಿ ಸಂತೋಷ್ ಪೂಜಾರಿ (೧೯) ಎಂಬವರೇ ಬಂಧಿ ತರು. ಬಂಧಿತರಿಂದ ೨,೬೦೦ ರು. ಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಇದೇ ದಿನ ರಾತ್ರಿ ಗಂಟೆ ೭.೪೫ ಕ್ಕೆ ಕುಂಜಾಲು ಜಂಕ್ಷನ್‌ಗೆ ದಾಳಿ ನಡೆಸಿದ ಹೆಡ್ ಕಾನ್‌ಸ್ಟೇಬಲ್ ಶೈಲೇಶ್ ಕುಮಾರ್ ಹಾಗೂ ಸಿಬ್ಬಂದಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಸಾರ್ವ ಜನಿಕರಿಂದ ಜೂಜಾಟ ಆಟವಾಡಿಸುತ್ತಿದ್ದ ಯುವಕನನ್ನು ಬಂಧಿಸಿದರು.
ಸಾಸ್ತಾನ ನಿವಾಸಿ ಪುನಿತ್ ಭಂಡಾರಿ (೨೫) ಬಂಧಿತ ವ್ಯಕ್ತಿ. ಈತನಿಂದ ಪೊಲೀಸರು ೫,೭೦೦ ರು. ಮತ್ತು ಎರಡು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಸ್ವಾಧೀನಪಡಿಸಿಕೊಂಡು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
Tagged with
cnews,
feature
ಮಂಗಳೂರು: ಎ.ಟಿ.ಎಂ.ನಿಂದ ಹಣ ತೆಗೆಯುವ ನೆಪದಲ್ಲಿ ಬಂದ ಯುವಕನೋರ್ವ ಬಾಕ್ಸ್ ಮುರಿದು ದರೋಡೆಗೆ ಯತ್ನಿಸಿದ ಘಟನೆಯೊಂದು ನಗರದಲ್ಲಿ ನಡೆದಿದ್ದು ಈ ಸಂದರ್ಭ ಪಹರೇದಾರ ಸ್ಥಳದಲ್ಲಿದ್ದ ಕಾರಣ ದರೋಡೆ ಯತ್ನ ವಿಫಲವಾಗಿದೆ. ಶನಿವಾರ ರಾತ್ರಿ ೧೧.೩೦ರ ವೇಳೆಗೆ ಬಲ್ಮಠದಲ್ಲಿರುವ ಕೆನರಾ ಬ್ಯಾಂಕಿನ ಎ.ಟಿ.ಎಂ.ಗೆ ಬಂದ ಯುವಕನೋರ್ವ ಬಾಕ್ಸಿನ ಸ್ಕ್ರೂ ತೆಗೆಯುತ್ತಿದ್ದ. ಇದನ್ನು ಗಮನಿಸಿದ ಪಹರೇದಾರ ವಿಚಾರಿಸಿದಾಗ ಹಣ ಬರುತ್ತಿಲ್ಲ ಎಂದು ಸಬೂಬು ಹೇಳಿದ್ದು,. ಆ ವೇಳೆ ಇನ್ನೊಂದು ಎ.ಟಿ.ಎಂ.ಗೆ ಹೋಗುವಂತೆ ಪಹರೇದಾರ ಸೂಚಿಸಿದ್ದರು. ಈ ಸಂದರ್ಭ ತಲೆಯಲ್ಲಾಡಿಸಿ ಸ್ಥಳದಿಂದ ಹೋಗಿದ್ದ ಯುವಕ ನಂತರ ನಾಪತ್ತೆಯಾಗಿದ್ದಾನೆ.
ನಿನ್ನೆ ಬೆಳಗ್ಗೆ ಎಟಿಎಂನಿಂದ ಹಣ ತೆಗೆಯಲೆಂದು ಗ್ರಾಹಕರು ಬಂದಾಗ ಎಟಿಎಂ ಬಾಕ್ಸ್ ತೆರೆದ ರೀತಿಯಲ್ಲಿ ಕಂಡು ಬಂದಿತ್ತು. ಈ ಬಗ್ಗೆ ಸಂಬಂಧ ಪಟ್ಟವರ ಗಮನಕ್ಕೆ ತರಲಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಿ ಅಗ್ನಿಶಾಮಕದಳ ಮತ್ತು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಗಿದ್ದು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಲಾಗಿದೆ. ನಿನ್ನೆ ರಾತ್ರಿಯವರೆಗೂ ಬ್ಯಾಂಕಿನವರು ದೂರು ಸಲ್ಲಿಸದಿದ್ದು ವಿಶೇಷವಾಗಿತ್ತು.
Tagged with
cnews,
feature
ಬಿಜೆಪಿ ಮುಖಂಡ ಜೆಡಿಎಸ್ ತೆಕ್ಕೆಗೆ
ವಿಟ್ಲ: ಮುಳುಗುವ ಹಡಗಿನಲ್ಲಿ ನಾನು ಯಾಕೆ ಪ್ರಯಾಣಿಸಲಿ, ಬೇರೆ ಹಡಗಿನಲ್ಲಿ ಪ್ರಯಾಣಿಸುವೆ, ಬಿಜೆಪಿ ಪಕ್ಷ ಸದ್ಯದಲ್ಲಿಯೇ ಮುರಿದು ಬೀಳಲಿದ್ದು, ಬಿಜೆಪಿ ಪಕ್ಷದಿಂದ ನನಗೂ ಹಾಗೂ ನನ್ನ ಆಪ್ತರಿಗೆ ನೋವಾಗಿದೆ ಹೀಗೆಂದು ಹೇಳಿದವರು ಬೇರೆ ಯಾರು ಅಲ್ಲ, ಕಳೆದ ೩೪ ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ದುಡಿದ ಹಾಗೂ ಮುಖ್ಯಮಂತ್ರಿ ಸದಾನಂದ ಗೌಡ ಅವರ ಆಪ್ತ ವಿಟ್ಲ ಚಂದಳಿಕೆ ಸಮೀಪದ ನಿವಾಸಿ ಮಾಡತ್ತಾರು ಸೇಸಪ್ಪ ಗೌಡ ಅವರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ್‌ಸ್ವಾಮಿ ಅವರ ಸಮ್ಮಖದಲ್ಲಿ ಭಾನುವಾರ ತನ್ನ ಮನೆಯಲ್ಲಿ ೨೧ ಆಪ್ತರೊಂದಿಗೆ ಜೆಡಿಎಸ್ ಪಕ್ಷವನ್ನು ಸೇರಿದರು.
ಎಚ್.ಡಿ ಕುಮಾರ್ ಸ್ವಾಮಿ ಅವರು ನನ್ನ ಮನೆಗೆ ಬಂದು ನನ್ನನ್ನು ಪಕ್ಷಕ್ಕೆ ಸೇರಿಸಿದ್ದು, ನನ್ನ ಪುಣ್ಯ, ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ೨೦ ತಿಂಗಳಲ್ಲಿ ರಾಜ್ಯಕ್ಕೆ ಮಾಡಿದ ಅಭಿವೃದ್ಧಿ ಇಡೀ ಕರ್ನಾಟಕಕ್ಕೆ ಗೊತ್ತು ಎಂದರು. ನಾಳೆಯಿಂದಲೇ ನಾನು ಜೆಡಿಎಸ್ ಪಕ್ಷದ ಹಾಗೂ ನಾಡಿನ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ಸೇಸಪ್ಪ ಗೌಡ ಅವರು ಹೇಳಿದರು.
‘ನಾನು ಜೆಡಿಎಸ್ ಸೇರುವ ಬಗ್ಗೆ ಈ ಹಿಂದೆಯೇ ನಿರ್ಣಯ ಕೈಗೊಂಡಿದ್ದೆ. ಬಿಜೆಪಿ ಅವರು ನನಗೆ ಜೀವ ಬೆದರಿಕೆ ಹಾಕಬಹುದು ಎಂಬ ಮುನ್ಸೂಚನೆ ನನಗೆ ಇತ್ತು ಈ ಹಿನ್ನೆಲೆಯಲ್ಲಿ ನಾನು ಇದನ್ನು ಗುಪ್ತವಾಗಿ ಇಟ್ಟಿದ್ದೆ ಎಂದು ಅವರು ತಿಳಿಸಿದರು. ಬಿಜೆಪಿ ಪಕ್ಷದ ಬಗ್ಗೆ ನನಗೆ ಗೌರವವಿದೆ, ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರು ನನ್ನ ಆಪ್ತರಾಗಿದ್ದು, ವಿಟ್ಲಕ್ಕೆ ಬಂದಾಗಲೆಲ್ಲ ಅವರು ನನ್ನ ಮನೆಯಲ್ಲಿ ಊಟ ಮಾಡುತ್ತಿದ್ದರು, ನನಗೆ ಪಕ್ಷದಲ್ಲಿನ ಕೆಲವರಿಂದ ನೋವಾಗಿದೆ ವಿನಹಃ ಬೇರೆ ಯಾರಿಂದಲೂ ಅಲ್ಲ ಎಂದರು.
ತಾ.ಪಂ ಮಾಜಿ ಸದಸ್ಯೆ ಶಾಲಿನಿ ಜೈನ್, ಮಾಜಿ ಅಧ್ಯಕ್ಷ ಬಾಬು ಕೆ, ಸದಸ್ಯೆ ದೇವಕಿ, ಅಳಿಕೆ ಗ್ರಾ.ಪಂ ಮಾಜಿ ಅಧ್ಯಕ್ಷ ರಾಮಯ್ಯ ಬಲ್ಲಾಳ್, ವಿಟ್ಲ ಗ್ರಾ. ಪಂ ಮಾಜಿ ಅಧ್ಯಕ್ಷ ಜಾನ್ ಡಿ,ಸೋಜ, ಯಶವಂತ ಗೌಡ, ವೀರಪ್ಪ ಗೌಡ, ಟಿ.ಎಚ್.ಎಂ.ಎ ಅದ್ದಾ ಉಕ್ಕುಡ, ದಿವಾಕರ ದಾಸ್, ಪೂವಪ್ಪ ಗೌಡ, ವಿಕ್ಟರ್, ಕೃಷ್ಣಪ್ಪ ಪೂಜಾರಿ, ಪುನೀತ್ ಮಾಡತ್ತಾರು, ಈಶ್ವರ, ಗೋಪಾಲ ಸಪಲ್ಯ ಸೇರಿದಂತೆ ಸುಮಾರು ೨೧ಕ್ಕೂ ಅಧಿಕ ಮಂದಿ ಈ ಸಂದರ್ಭ ಜೆಡಿಎಸ್ ಪಕ್ಷವನ್ನು ಸೇರಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾಗಿ ಸೇಸಪ್ಪ ಗೌಡರು
ಸೇಸಪ್ಪ ಗೌಡ ಅವರನ್ನು ನಾವು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಬಿ ಸದಾಶಿವ ಅವರು ತಿಳಿಸಿದರು. ಕೆಲ ತಿಂಗಳಲ್ಲಿ ವಿಟ್ಲದಲ್ಲಿ ಸೇಸಪ್ಪ ಗೌಡ ಅವರ ನೇತೃತ್ವದಲ್ಲಿ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕುಮಾರಸ್ವಾಮಿ ಅವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುಸ್ತಾದ ಕಾರ್ಯಕರ್ತರು:
ಎಚ್.ಡಿ ಕುಮಾರ ಸ್ವಾಮಿ ಅವರು ವಿಟ್ಲದ ಸೇಸಪ್ಪ ಗೌಡರ ಮನೆಗೆ ಬೆಳಿಗ್ಗೆ ೯ ಗಂಟೆಗೆ ಬರುತ್ತೇನೆ ಎಂದಿದ್ದರು. ಈ ಹಿನ್ನೆಲೆ ಜೆಡಿಎಸ್ ಕಾರ್ಯ ಕರ್ತರು ಹಾಗೂ ಪತ್ರಕರ್ತರು ಬೆಳಿಗ್ಗಿನಿಂದಲೇ ಅವರ ಮನೆ ಮುಂದೆ ಬಂದು ಅವರಿಗಾಗಿ ಕಾಯುತ್ತಿದ್ದರು. ಮಧ್ಯಾಹ್ನ ಎರಡು ಗಂಟೆವರೆಗೂ ಅವರು ಬಂದಿರಲ್ಲಿ, ಇದರಿಂದ ಬಿಸಿಲಿ ಸುಸ್ತಾಗಿ ನೀರು ಕುಡಿಯುತ್ತಿರುವುದು. ಇನ್ನೂ ಕೆಲಮಂದಿ ಅರ್ಧಕ್ಕೆ ಹಿಂತಿರುಗಿದ್ದರು.
ಕಾರ್ಯಕ್ರಮ ಮುಗಿಸಿ ಎಚ್.ಡಿ ಕುಮಾರ ಸ್ವಾಮಿ ಅವರು ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು, ಬಳಿಕ ಅಲ್ಲಿಂದ ಬಿಜೆಪಿಯ ಹಿರಿಯ ನಾಯಕ ಹಾಗೂ ಆರ್‌ಎಸ್‌ಎಸ್ ನಾಯಕರಾದ ಮೋಹನ್‌ಶೆಟ್ಟಿ ಅವರ ಮನೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಮಹಾ ಕಾರ್ಯದರ್ಶಿ ವಸಂತಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಮ್‌ಗಣೇಶ್, ಜಿಲ್ಲಾ ಕಾರ್ಯಾಧ್ಯಕ್ಷ ಮೊಹಮ್ಮದ್ ಕುಂಞ್ಞ, ಕೈಲಾಸ್, ಬಾಗೇಗೌಡ, ಹರೀಶ್‌ಬೇಂದ್ರೆ, ರತ್ನಕರ ಸುವರ್ಣ, ವಿಟ್ಲ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಲಕ್ಷ್ಮೀನಾರಾಯಣ್ ಅಡ್ಯಂತಾಯ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ವಿ.ಎಸ್ ಇಬ್ರಾಹಿಂ ಒಕ್ಕೆತ್ತೂರು, ಹನೀಫ್ ಒಕ್ಕೆತ್ತೂರು, ಅಶ್ರಫ್ ಮೊಹಮ್ಮದ್ ಪೊನ್ನೋಟು, ಜಾಫರ್‌ಖಾನ್, ಹಮೀದ್ ಕೊಡಂಗಾಯಿ ಮುಂತಾದವರು ಇದ್ದರು.
Tagged with
dk,
feature,
lnews
ಉಪ್ಪಿನಂಗಡಿ: ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಜೆಡಿಎಸ್‌ಗೆ ಸೇರು ವುದು ಖಚಿತ ಎಂಬ ಮಾತು ನಿನ್ನೆ ಒಕ್ಕಲಿಗರ ಸಮಾವೇಶಕ್ಕೆ ಬಂದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕುಂತೂರಿನಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತು.
ಬಿಜೆಪಿ ಪಕ್ಷಕ್ಕಾಗಿ ಶ್ರಮಿಸಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪಕ್ಷದಲ್ಲಿನ ಅಸಮಾಧಾನದಿಂದ ಪಕ್ಷ ತೊರೆದು ರಾಮ್ ಭಟ್ಟರ ಸ್ವಾಭಿಮಾನಿ ವೇದಿಕೆಯಲ್ಲಿ ಗುರುತಿಸಿಕೊಂಡು ಅದನ್ನು ತಮಗಾಗುವಷ್ಟು ಬೆಳೆಸುವಲ್ಲಿ ಸಕ್ರಿಯರೂ ಆಗಿದ್ದರು. ಆದರೆ ಸ್ವಾಭಿಮಾನಿ ವೇದಿಕೆ ಯಾವುದೇ ಸ್ಥಾನವನ್ನು ಗಳಿಸದಿದ್ದ ಹಿನ್ನೆಲೆಯಲ್ಲಿ ರಾಜಕೀಯ ಜೀವನದಿಂದಲೇ ಶಕುಂತಳಾ ಶೆಟ್ಟಿಯವರು ದೂರ ಉಳಿದಂತೆ ಆಗಿತ್ತು. ಇತ್ತೀಚೆಗಷ್ಟೇ ಅವರು ಜೆಡಿಎಸ್‌ಗೆ ಸೇರುವ ಪ್ರಸ್ತಾವ ಬಲ್ಲ ಮೂಲಗಳಿಂದ ತಿಳಿದುಬಂದಿತ್ತು. ಅದಕ್ಕೆ ಪೂರಕವೆಂಬಂತೆ ನಿನ್ನೆ ಪುತ್ತೂರು ಒಕ್ಕಲಿಗರ ಸಮಾವೇಶಕ್ಕೆ ಆಗಮಿಸಿದ್ದ ಮಾಜಿಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬೆಳಿಗ್ಗೆ ೯.೩೦ ರ ಸುಮಾರಿಗೆ ಕುಂತೂರಿನಲ್ಲಿರುವ ಶಕುಂತಳಾ ಶೆಟ್ಟಿಯವರ ಮನೆಗೆ ಭೇಟಿ ನೀಡಿ ಸುಮಾರು ಮುಕ್ಕಾಲು ಗಂಟೆಗಳ ಕಾಲ ಮಾತುಕತೆ ನಡೆಸಿದರು. ರಾಜಕೀಯದಲ್ಲಿ ಸಕ್ರಿಯವಾಗಿ ಜನಮನ್ನಣೆ ಗಳಿಸಿರುವ ಶಕುಂತಳಾ ಶೆಟ್ಟಿಯವರು ಮತ್ತೆ ರಾಜಕೀಯ ಪ್ರವೇಶಿಸಬೇಕು. ತನ್ನದು ಸೌಹಾರ್ದಯುತ ಭೇಟಿ, ಅವರನ್ನು ಪಕ್ಷದತ್ತ ಸೆಳೆಯಳು ಯಾವುದೇ ಕಸರತ್ತು ನಡೆಸಿಲ್ಲ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
Tagged with
dk,
feature,
lnews
ಮಂಗಳೂರು : ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿ ಸುವಲ್ಲಿ ಪೊಲೀಸರು ಎಡವಿರುವುದನ್ನು ಖಂಡಿಸಿ ಸರ್ವಿಸ್ ಬಸ್ ನೌಕರರು ಇಂದು ಬಂದ್ ನಡೆಸಲಿದ್ದು ವಾರದಲ್ಲಿ ಇದು ಎರಡನೇ ಬಂದ್ ಆಗಲಿದೆ.
ತನ್ನ ಕಾರಿಗೆ ದಾರಿ ಬಿಡಲಿಲ್ಲ ಎನ್ನುವ ನೆಪದಲ್ಲಿ ಪಜೀರು ಗ್ರಾ. ಪಂ ಅಧ್ಯಕ್ಷ ನಝೀರ್ ಮೊದ್ದೀನ್ ಆತನ ಸ್ನೇಹಿತ ನಝರ್ ಮತ್ತು ಅರಾಫತ್ ಬಿ.ಸಿ.ರೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಸರ್ವಿಸ್ ಬಸ್ಸನ್ನು ಮಿತ್ತ ಕೋಡಿಯಲ್ಲಿ ತಡೆದು ಚಾಲಕ ಚಾರ್ಲಿ ಪಿಂಟೋ ಎಂಬವರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯನ್ನು ಖಂಡಿ ಸಿದ್ದ ಖಾಸಗಿ ಬಸ್ ನೌಕರರು ಮರು ದಿನ ಬಸ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.
ಕೊಣಾಜೆ ಠಾಣೆಯಲ್ಲಿ ಎಫ್‌ಐ ಆರ್ ದಾಖಲಾಗಿದ್ದರೂ ಆರೋಪಿ ಗಳನ್ನು ಬಂಧಿಸಲು ವಿಫಲರಾಗಿರುವ ಪೊಲೀಸರ ಕ್ರಮವನ್ನು ಖಂಡಿಸಿದ ಬಸ್ ನೌಕರರು ಶನಿವಾರ ಅಪರ ಜಿಲ್ಲಾಧಿಕಾರಿ ದಯಾನಂದ ಅವರಿಗೆ ಮನವಿ ಸಲ್ಲಿಸಿ ಮೇ.೬ರ ಸಂಜೆಯೊಳಗೆ ಆರೋಪಿಗಳ ಬಂಧನವಾಗದಿದ್ದಲ್ಲಿ ಮೇ.೭ರಂದು (ಇಂದು) ಮುಡಿಪು, ಕೊಣಾಜೆ, ಬಿ.ಸಿ.ರೋಡು ಮತ್ತಿತರರು ಕಡೆಗಳಿಗೆ ಸಂಚರಿಸುವ ಬಸ್ಸುಗಳನ್ನು ತಡೆದು ಮುಷ್ಕರ ನಡೆಸುವುದಾಗಿ ಎಚ್ಚರಿಸಿದ್ದರು. ಆದರೆ ರವಿವಾರ ಸಂಜೆಯವರೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಸಿದ್ಧತೆ ನಡೆಸಿರುವ ಬಸ್ ನೌಕರರು ನಿನ್ನೆಯೇ ನಿಗದಿತ ಪ್ರದೇಶಗಳಿಗೆ ತೆರಳುವ ಎಲ್ಲಾ ಬಸ್ಸುಗಳಿಗೆ ಸೋಮವಾರ ಮುಷ್ಕರ ಎನ್ನುವ ಸ್ಟಿಕ್ಕರ್ ಅಂಟಿಸಿದ್ದಾರೆ. ಆದರೆ ಇಂದಿನ ಮುಷ್ಕರಕ್ಕೆ ಸರ್ವಿಸ್ ಬಸ್ ಮಾಲೀಕರು ಬೆಂಬಲ ನೀಡಿಲ್ಲ.
ಕೆಲವು ಸಿಟಿ ಬಸ್ಸುಗಳಲ್ಲೂ ಬಂದ್ ಬಗ್ಗೆ ಸ್ಟಿಕ್ಕರ್ ಅಂಟಿಸಲಾಗಿದೆ. ಇದನ್ನು ಅಲ್ಲಗಳೆದಿರುವ ದ.ಕ.ಜಿಲ್ಲಾ ಸಿಟಿಬಸ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ ಪುತ್ರನ್, ಸರ್ವೀಸ್ ಬಸ್ ಮತ್ತು ಸಿಟಿ ಬಸ್ಸುಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಸಂಘಟನೆಗಳಿದೆ. ಈ ಕಾರಣದಿಂದ ನಮಗೆ ಸರ್ವೀಸ್ ಬಸ್ ನೌಕರರೊಂದಿಗೆ ಯಾವುದೇ ಸಂಬಂಧವಿಲ್ಲದ ಕಾರಣ ಬಂದ್‌ಗ ನಮ್ಮ ಬೆಂಬಲವಿಲ್ಲ. ಸಿಟಿ ಬಸ್ಸುಗಳು ಎಂದಿನಂತೆ ಸಂಚರಿಸಲಿವೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.
ಆರೋಪಿಗಳು ನ್ಯಾಯಾಲಯಕ್ಕೆ
ಈ ಮಧ್ಯೆ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಪೊಲೀಸ್ ಇಲಾಖೆಯ ಮೇಲೂ ಆರೋಪಿಗಳ ಬಂಧನದ ಒತ್ತಡ ಇದೆ. ಈ ಬಗ್ಗೆ ಮಾಹಿತಿಯರಿತಿರುವ ಆರೋಪಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗಿದ್ದು ನ್ಯಾಯವಾದಿಯ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
Tagged with
dk,
feature,
lnews
ಮಂಗಳೂರು: ಖಾಸಗಿ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಪ್ರಯಾಣಕ್ಕೆ ಸಿದ್ದ ರಾಗುತ್ತಿದ್ದ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ಮತ್ತಾಕೆಯ ಗೆಳೆಯನನ್ನು ಶನಿವಾರ ಹಿಂದೂ ಜಾಗರಣ ವೇದಿಕೆಯ ಕಾರ‍್ಯಕರ್ತರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ತಡವಾಗಿ ವರದಿಯಾಗಿದೆ.
ಮಂಗಳೂರಿನ ಮಾನಸ ಟವರ್ ನಲ್ಲಿರುವ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿರುವ ಹುಡುಗಿ ಉತ್ತರ ಕರ್ನಾಟಕದ ಮೂಲದವಳಾಗಿದ್ದು, ಆಕೆ ಶನಿವಾರ ತನ್ನ ಗೆಳೆಯ ಭಟ್ಕಳದ ಅಶ್ಫಾಕ್ ಎಂಬಾತನೊಂದಿಗೆ ಬೆಂಗಳೂರಿಗೆ ಹೋಗುವ ಸನ್ನಾಹ ದಲ್ಲಿದ್ದಾಗಲೇ ಹಿಂದೂ ಜಾಗರಣ ವೇದಿಕೆಯ ಕಾರ‍್ಯಕರ್ತರೆಂದು ಕರೆಸಿ ಕೊಂಡವರು ಇಬ್ಬರನ್ನು ವಿಚಾರಿಸಿ ನೈತಿಕ ಪೊಲೀಸರಂತೆ ವರ್ತಿಸಿ ತಮ್ಮನ್ನು ಕದ್ರಿ ಪೊಲೀಸರ ಕೈಗೆ ಒಪ್ಪಿಸಿದ್ದಾರೆ ಎಂದು ಹುಡುಗ-ಹುಡುಗಿ ಆರೋಪಿ ಸಿದ್ದಾರೆ.
ಆದರೆ ಹಿಂದೂ ಜಾಗರಣ ವೇದಿಕೆ ಯವರು ಬೇರೆಯೇ ಕಥೆ ಹೇಳುತ್ತಿದ್ದಾರೆ. ಭಟ್ಕಳದ ಯುವಕನೊಂದಿಗೆ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿರುವ ಹುಡುಗಿ ಐದನೇ ಬಾರಿಗೆ ಬೆಂಗಳೂ ರಿಗೆ ಹೋಗುತ್ತಿದ್ದಾರೆ. ಸ್ಲೀಪರ್ ಕೋಚ್‌ನಲ್ಲಿ ಜತೆಯಾಗಿ ಮಲಗಿ ಬೆಂಗಳೂರಿಗೆ ಹೋಗುವ ಅವಶ್ಯಕತೆ ಏನಿದೆ? ಇಷ್ಟಕ್ಕೂ ಈಕೆ ಬೆಂಗಳೂರಿಗೆ ಬಾರಿ-ಬಾರಿಗೆ ಹೋಗುತ್ತಿರುವುದು ಆಕೆಯ ಹೆತ್ತವರಿಗೆ ಗೊತ್ತಾಗಲಿ. ಆನಂತರವಷ್ಟೇ ಇವರನ್ನು ಕಳಿಸಿಕೊಡಿ ಎಂದು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದರು.
ಕಾಲ್ ಸೆಂಟರ್‌ನ ಹುಡುಗಿ ಜೊತೆ ಇದ್ದ ಯುವಕ ತಾನು ಮಂಗಳೂರಿನಲ್ಲೇ ಕಲಿತಿದ್ದು ಯೂನಿ ವರ್ಸಿಟಿಗೆಂದು ಇಲ್ಲಿಗೆ ಬಂದಿದ್ದೆ. ಆಗ ಇಲ್ಲೇ ಕಾಲ್ ಸೆಂಟರಿನಲ್ಲಿ ಕೆಲಸ ಮಾಡು ತ್ತಿದ್ದ ತನ್ನ ಗೆಳತಿ ಸಿಕ್ಕಿದ್ದಳು. ತಾನು ಆಕೆಯನ್ನು ಬೇರೊಂದು ಕೆಲಸಕ್ಕೆ ಸೇರಿಸುವ ಸಲುವಾಗಿ ಬೆಂಗಳೂರಿನ ತನ್ನ ಇನ್ನೊಬ್ಬ ಗೆಳೆಯನ ಬಳಿಗೆ ಕರೆದುಕೊಂಡು ಹೋಗುತ್ತಿದ್ದೆ. ಅಷ್ಟರ ಲ್ಲಾಗಲೇ ಹಿಂದೂ ಸಂಘಟನೆಯವರು ನನ್ನನ್ನು ಮತ್ತು ನನ್ನ ಗೆಳತಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ, ಇದು ನ್ಯಾಯವೇ ಎಂದು ಪ್ರಶ್ನಿಸಿದ್ದಾನೆ.
ಅಪ್ಪನ ನಂಬರ್ ಗೊತ್ತಿಲ್ಲವೆಂದಳು!
ಈ ನಡುವೆ ಪೊಲೀಸರು ಹುಡುಗಿ ಯಲ್ಲಿ ಮಾತನಾಡಿ ತಂದೆಯ ನಂಬರ್ ಕೊಡು, ಮಾತನಾಡುತ್ತೇವೆ ಎಂದಾಗ ಆಕೆ ತನ್ನ ಮೊಬೈಲನ್ನು ಹಿಂದೂ ಸಂಘ ಟನೆಯವರು ಕಸಿದಿದ್ದಾರೆ ಎಂದಳು. ಆಗ ನಿನಗೆ ನಿನ್ನ ಅಪ್ಪನ ಮೊಬೈಲ್ ನಂಬರ್ ನೆನಪಿಲ್ಲವೇ ಎಂದಾಗ ಆಕೆ ತುಟಿ ಕಚ್ಚಿಕೊಂಡಳು. ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಾ ಪಿ.ಜಿಯಲ್ಲಿ ವಾಸಿಸುತ್ತಿರುವ ಈಕೆಗೆ ಭಟ್ಕಳದ ಯುವಕ ಫೇಸ್‌ಬುಕ್ ಇಲ್ಲವೇ ಮೊಬೈಲ್ ಮೂಲಕ ಪರಿಚಯವಾಗಿ ದ್ದಾನೆ ಎಂದು ಹೇಳಲಾಗುತ್ತಿದೆ. ಈಕೆ ಯ ಬಗ್ಗೆ ಮೊದಲೇ ದೂರು ಬಂದಿತ್ತು. ಈಕೆ ಈ ಹಿಂದೆ ಐದು ಬಾರಿ ಬೆಂಗಳೂರಿಗೆ ಸ್ಲೀಪಿಂಗ್ ಕೋಚ್‌ನಲ್ಲಿ ಪ್ರಯಾಣ ಮಾಡಿದ್ದು ಕಾಲ್ ಸೆಂಟರ್‌ಗಳು ಯುವತಿಯರನ್ನು ಅನೈತಿಕತೆಗೆ ಪ್ರೇರೇಪಿಸುತ್ತಿವೆ. ಇಲ್ಲಿಗೆ ಗ್ರಾಮಾಂತರ ಭಾಗದಿಂದ ಬರುವ ಹುಡುಗಿಯರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಇವರನ್ನು ಲೈಂಗಿಕವಾಗಿ ಶೋಷಣೆ ಮಾಡಲಾಗುತ್ತಿದೆ. ಇದಕ್ಕೆ ಹೆಚ್ಚಾಗಿ ಹಿಂದೂ ಹೆಣ್ಣು ಮಕ್ಕಳೇ ಬಲಿಯಾಗುತ್ತಿದ್ದಾರೆಂದು ಇವರನ್ನು ಪೊಲೀಸರಿಗೊಪ್ಪಿಸಿ ಹೆತ್ತವರಿಗೆ ಸುದ್ದಿ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡರು ಹೇಳಿದ್ದಾರೆ.
Tagged with
dk,
feature,
lnews
ಮಂಗಳೂರು: ಜಿಲ್ಲೆಯ ಎಲ್ಲ ರಾಜಕಾರಿಣಿಗಳು ಸೆಝ್ ಪರವಾಗಿ ನಿಂತಿದ್ದಾರೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಎಂಬ ಬೇಧ ಇಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ಸಮಸ್ಯೆ ನೀಗಿ ಸಲು ಹಾಗೂ ನಾಗರಿಕರು ಬೀದಿ ಪಾಲಾಗುವುದನ್ನು ತಪ್ಪಿಸಿಕೊಳ್ಳಲು ಜನರೇ ಹೋರಾಟಕ್ಕೆ ಇಳಿಯ ಬೇಕಾ ಗಿರುವುದು ಅನಿವಾರ್ಯ.
ಸೆಝ್ ವಿರುದ್ಧ ಕಳೆದ ಮೂರು-ನಾಲ್ಕು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಎರಡನೆ ಹಂತದ ಭೂ ಸ್ವಾಧೀನ ಪ್ರಕ್ರಿಯೆಗೆ ತಡೆಯಾದದ್ದೊಂದೇ ದೊಡ್ಡಮಟ್ಟಿನ ಯಶಸ್ಸು. ಅಲ್ಲಿ ಕಳೆದುಕೊಂಡಿದ್ದನ್ನು ಸೆಝ್ ಆಡಳಿತಗಾರರು ಇನ್ನೆಲ್ಲೋ ಪಡೆದುಕೊಳ್ಳಲು ಹೋರಟಿದ್ದಾರೆ. ಸೆಝ್ ವ್ಯಾಪ್ತಿಯನ್ನೂ ಮೀರಿ ಅಕ್ಕ ಪಕ್ಕದ ನದಿ, ಹಳ್ಳಕೊಳ್ಳಗಳನ್ನು ಅತಿ ಕ್ರಮಿಸುತ್ತ ಸಾಗುತ್ತಿದ್ದಾರೆ. ಕಾರಿಡಾರ್ ರಸ್ತೆ ನಿರ್ಮಾಣಕ್ಕಾಗಿ ಕೂಳೂರು, ಮೇಲ್‌ಕೊಪ್ಪಳ ಪ್ರದೇಶದಲ್ಲಿ ಫಲ್ಗುಣಿಗೆ ನದಿಗೆ ಮಣ್ಣು ಸುರಿದು ರಸ್ತೆ ವಿಸ್ತರಿ ಸುತ್ತಿದ್ದರೆ, ನದಿಯ ಇನ್ನೊಂದು ತೀರದ ವಾಸಿಗಳು ಮಳೆಗಾಲದಲ್ಲಿ ತಮ್ಮ ಮನೆ, ತೋಟದಲ್ಲಿ ನೆರೆ ಆವರಿಸುವ ಭೀತಿ ಎದುರಿಸುತ್ತಿದ್ದಾರೆ. ನೆರೆ ಭೀತಿ ಯಲ್ಲಿರುವ ಸಂತ್ರಸ್ತರು ನದಿಗೆ ಹಾಕಿ ರುವ ಮಣ್ಣು ತೆರವುಗೊಳಿಸುವಂತೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ನಿರಂತರ ಹೋರಾಟ ನಡೆಸು ತ್ತಿದ್ದರಾ ದರೂ, ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹೋರಾಟಗಾರರ ಕಣ್ಣಿಗೆ ಮಣ್ಣೆರಚುತ್ತಲೇ ಬರುತ್ತಿದ್ದಾರೆ. ಇತ್ತೀಚೆಗೆ ಹೋರಾಟಗಾರರ ವಿರುದ್ಧ ಪೊಲೀಸ್ ದೂರು ದಾಖಲಿಸಿ ಅವರ ಬಾಯಿ ಮುಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ನದಿ ತೀರದ ವಾಸಿಗಳು ಇಷ್ಟೆಲ್ಲ ಹೋರಾಟ ನಡೆಸುತ್ತಿದ್ದರೂ ಮಂಗಳೂರು ನಗರದ ಇತರೆಡೆಯ ವಾಸಿಗಳು ಅವರ ಬೆಂಬಲಕ್ಕೆ ಈ ವರೆಗೆ ನಿಂತಿಲ್ಲ. ಇದು ತಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬಂತೆ ನಿರಾಳರಾಗಿದ್ದಾರೆ. ಇಂದು ಕೂಳೂರು, ಮೇಲ್‌ಕೊಪ್ಪಳ ಅತಿಕ್ರಮಿ ಸಿದವರು ನಾಳೆ ನಮ್ಮ ಮನೆ ಅಂಗ ಳಕ್ಕೂ ಬಾರದಿರರು ಎಂಬ ಎಚ್ಚ ರಿಕೆ ಮಂಗಳೂರಿಗರಲ್ಲಿ ಮೂಡಿಲ್ಲ. ನಮಗೆ ಆಗಿದ್ದು ಇನ್ನೊಬ್ಬರಿಗೆ ಆಗ ದಿರಲಿ ಎಂಬ ದೂರ ದೃಷ್ಟಿ ಇದ್ದಿದ್ದರೆ ಈಗಾಗಲೇ ಸೆಝ್ ಹಾಗೂ ಎಂಆರ್ ಪಿಎಲ್‌ನಿಂದ ಸಂತ್ರಸ್ತರಾದವ ರಾದವರೆಲ್ಲರೂ ಫಲ್ಗುಣಿ ನದಿ ಉಳಿಸುವ ಹೋರಾಟಕ್ಕೆ ಬೆಂಬಲ ಸೂಚಿಸು ತ್ತಿದ್ದರು. ಆದರೆ ಇಂತಹ ಬೆಳವಣಿಗೆ ಈವರೆಗೆ ಕಂಡಿಲ್ಲ.
ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿದ್ದರೆ. ಕಾಂಗ್ರೆಸ್ಸಿಗರು ವಿಚಿತ್ರ ಮಾತುಗಳನ್ನು ಆಡುತ್ತಿದ್ದಾರೆ. ಕಾಂಗ್ರೆಸ್ ಮಟ್ಟಿನ ರಾಷ್ಟ್ರೀಯ ನಾಯಕ ಆಸ್ಕರ್ ಫೆರ್ನಾಂಡಿಸ್ ನದಿಗೆ ರು ಸುರಿದು ಅತಿಕ್ರಮಣ ಮಾಡಿ ದವರ ಪರವಾಗಿಯೇ ಮಾತನಾಡಿ ಎಷ್ಟೊಂದು ಬಾಲಿಶ ಹೇಳಿಕೆ ನೀಡಿ ದ್ದಾರೆ ಎಂದರೆ ನದಿಗೆ ಮಣ್ಣು ತುಂಬಿದರೆ ನದಿ ರು ಸಿಹಿಯಾಗುತ್ತದೆ. ಮಾತ್ರ ಅಲ್ಲ ಅಕ್ಕಪಕ್ಕದ ಬಾವಿಯ ನೀರುಕೂಡ ಸಿಹಿಯಾಗುತ್ತದೆ ಎಂದಿದ್ದಾರೆ. ಅವರ ಪ್ರಕಾರ ಸೆಝ್‌ನವರು ನದಿಯನ್ನೇ ಅತಿಕ್ರಮಿಸಿ ರಸ್ತೆ ನಿರ್ಮಿಸುತ್ತಿರುವುದು ದೊಡ್ಡ ವಿಷಯವೇ ಅಲ್ಲ. ಅಭಿವೃದ್ದಿ ಕಾರ್ಯಗಳು ನಡೆಯುವಾಗ ಇಂತಹ ದ್ದೆಲ್ಲ ಸಹಜ ಎನ್ನುತ್ತಾರವರು. ಇಂತಹ ರಾಜಕಾರಣಿಗಳು ಜನಪ್ರತಿ ನಿಧಿಗ ಳಾಗಿರುವುದು ನಮ್ಮ ದುರಂತ.
ಇಂತಹ ಸಂದರ್ಭದಲ್ಲಿ ಜನರೆ ಸಹಕಾರಿ ಗಳಾಗಿ ಹೋರಾಟಕ್ಕೆ ಇಳಿಬೇಕಾಗುತ್ತದೆ. ಆದರೆ ದುರಾದೃಷ್ಟವಶಾತ್ ಸೆಝ್ ಅತಿ ಕ್ರಮಣದ ವಿರುದ್ಧ ಆಯಾ ಪ್ರದೇಶಗಳ ಸಂತ್ರಸ್ತರು ಮಾತ್ರ ಹೋರಾ ಡುವಂತಾ ಗುತ್ತದೆ. ಹಣ ಬಲದ ಮುಂದೆ ಹೋರಾಟ ಅಲ್ಪವಾಗಿತ್ತ ಸಾಗಿದೆ.
ಸೆಝ್ ಎಂಬುದು ಬ್ರಿಟಿಷ್ ಆಡಳಿತಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳಲು ತೆರೆದುಕೊಂಡ ಮತ್ತೊಂದು ಅವಕಾಶ. ಬ್ರಿಟಿಷರೂ ಕೂಡ ವ್ಯಾಪಾರಿ ಉದ್ದೇಶ ದಿಂದ ವಸಾಹತು ಸ್ಥಾಪಿಸಿದವರು ಬಳಿಕ ತಮ್ಮ ವಸಾಹತುಗಳ ರಕ್ಷಣೆಗೆ ತಮ್ಮದೇ ಸೈನ್ಯ ತಂದಿಟ್ಟುಕೊಂಡರು. ತಮ್ಮ ವಸಾಹತು ವಿಸ್ತರಣೆಗಾಗಿ ಸೈನ್ಯ ಬಳಸಿ ದವರು ಇಡೀ ದೇಶವನ್ನೇ ಆಳಿದರು. ವಿಶೇಷ ಆರ್ಥಿಕ ವಲಯದಲ್ಲಿ ಬರುವ ಬಂಡವಾಳ ಶಾಹಿಗಳು ಇನ್ನೂ ತಮ್ಮ ವಸಾಹತು ಸ್ಥಾಪಿಸುವ ಮೊದಲೇ ದಬ್ಬಾಳಿಕೆ ಆರಂಭಿಸಿದ್ದಾರೆ.
ಇವರ ದಬ್ಬಾಳಿಕೆ ಮುಂದೆ ಇಡಿ ನಗರವನ್ನು ಆವರಿಸುವ ಮೊದಲು ಇಲ್ಲಿಯ ಮೂಲ ನಿವಾಸಿಗಳು ಎಚ್ಚರಗೊಂಡು ಹೋರಾ ಟಕ್ಕೆ ಇಳಿಯ ಬೇಕಾಗಿದೆ. ಸೆಝ್ ದುರಾ ಕ್ರಮಣದಿಂದ ಆಗುವ ಸಮಸ್ಯೆ ಒಂದು ಪ್ರದೇಶಕ್ಕೆ ಸೀಮಿತಗೊಳಿಸದೇ ಇದು ನಮ್ಮ ಸಮಸ್ಯೆ ಎಂದು ಹೋರಾಟಕ್ಕೆ ಇಳಿಯುವ ಮನೋಭಾವ ಮಂಗಳೂರಿಗರಲ್ಲಿ ಮೂಡಬೇಕಿದೆ.
ಈಗಲೇ ಎಚ್ಚೆತ್ತು ಕೊಳ್ಳದಿದ್ದರೆ ಮುಂದೆ ಉಳಿಗಾಲ ಇರಲಿಕ್ಕಿಲ್ಲ.
Tagged with
dk,
feature,
lnews