ರಾಜ್ಯ ಸರಕಾರ ವಿದ್ಯುತ್ ದರವನ್ನು ಏಕಾಏಕಿ ಯೂನಿಟ್‌ಗೆ ೧೩ ಪೈಸೆಯಷ್ಟು ಏರಿಸಿದೆ. ಮೊದಲೇ ವರ್ಷಪೂರ್ತಿ ಹೈವೋ ಲ್ಟೇಜ್ ವಿದ್ಯುತ್ ಕೊಡದೆ ಅನಿ ಯಮಿತ ಲೋಡ್‌ಶೆಡ್ಡಿಂಗ್ ಮಾಡುತ್ತಿರುವ ಸರಕಾರ ಈಗ ಜನರ ಮೇಲೆ ಹೆಚ್ಚುವರಿ ದರದ ಹೊರೆ ಹೊರಿಸಿರುವುದು ಖಂಡ ನೀಯ. ರಾಜ್ಯದ ನಗರ ಪ್ರದೇಶ ಗಳಲ್ಲಿ ಇರುವಷ್ಟು ಹೊತ್ತು ವಿದ್ಯುತ್ ಪೂರೈಕೆ ಗ್ರಾಮೀಣ ಭಾಗಗಳಲ್ಲಿ ಇರುವುದಿಲ್ಲ. ಇದ್ದರೂ ಸಿಂಗಲ್ ಫೇಸ್ ವಿದ್ಯುತ್ ಇರುತ್ತದೆ. ಇದರಲ್ಲಿ ನೀರಾವರಿ ಪಂಪ್ ತಿರುಗುವುದಿಲ್ಲ, ಕೃಷಿ ಕಾರ್ಯ ಗಳಿಗೆ ಹಿನ್ನಡೆಯಾಗುತ್ತಿದೆ. ಇದ ನ್ನೆಲ್ಲ ಗಮನಿಸಿ ವಿದ್ಯುತ್ ಪೂರೈ ಕೆಯ ಗುಣಮಟ್ಟದಲ್ಲಿ ಬದಲಾ ವಣೆ ತರಬೇಕಿದ್ದ ಸರಕಾರ ವಿದ್ಯುತ್ ಬೆಲೆ ಮತ್ತೆ ಏರಿಸಿರುವುದು ನ್ಯಾಯ ಸಮ್ಮತವಲ್ಲ. ಇದನ್ನು ರಾಜ್ಯದ ಸಾಮಾಜಿಕ ಕಾಳಜಿಯ ಸಂಘಟನೆ ಗಳು ಪ್ರತಿಭಟಿಸುವುದಿಲ್ಲವೇಕೆ? ರಾಜ್ಯ ಸರಕಾರ ಜನರಿಗೆ ಬೆಲೆಯೇ ರಿಕೆಯ ಕೊಡುಗೆ ನೀಡುತ್ತಾ ಬಂದಿ ದೆಯೇ ಹೊರತು ಬಜೆಟ್‌ನಲ್ಲಿ ರೈತರು, ಜನಸಾ ಮಾನ್ಯರಿಗೆ ಪೂರಕ ವಾತಾವರಣ ನಿರ್ಮಿಸದೇ ಇರುವುದು ದುರಂತವೇ ಸರಿ.
ರಘುಪತಿ ಕೆ, ಮುದ್ರಾಡಿ
ದೇವರ ಉತ್ಸವಗಳಿಗೆ ಕೋಟ್ಯಂತರ ಖರ್ಚು ಸರಿಯೇ?
ಕರಾವಳಿಯಲ್ಲಿ ಯಕ್ಷಗಾನ, ನಾಗ ಮಂಡಲ, ಬ್ರಹ್ಮಕಲಶೋತ್ಸವ ಕಾರ್ಯ ಕ್ರಮಗಳಿಗೆ ಕೋಟ್ಯಂತರ ರೂಪಾಯಿ ಹಣ ನೀರಿನಂತೆ ಪೋಲು ಮಾಡು ತ್ತಾರೆ. ಇಲ್ಲಿ ಪ್ರತಿಷ್ಠೆಯನ್ನು ಮೆರೆಯಿ ಸಲು ಒಬ್ಬರಿಗಿಂತ ಒಬ್ಬರು ಮಿಗಿಲು ಎನ್ನುವುದನ್ನು ತೋರಿಸಲು ಹಣ ವನ್ನು ಬೇಕಾಬಿಟ್ಟಿ ಖರ್ಚು ಮಾಡು ತ್ತಾರೆ. ಕೆಲವು ಕಡೆ ಇಂಥ ಕಾರ್ಯಕ್ರಮಗ ಳಿಗೆ ದೇಣಿಗೆ ಸಂಗ್ರಹಿಸುವುದೂ ನಡೆಯು ತ್ತದೆ. ಆದರೆ ಇಂಥ ಕಾರ್ಯಕ್ರಮಗಳಿಗೆ ಹಣ ವನ್ನು ದುಂದುವೆಚ್ಚ ಮಾಡುವವರು ಸಮಾ ಜದ ಪ್ರಗತಿಯ ಬಗ್ಗೆ ಚಿಂತಿಸುವುದಿಲ್ಲ. ಇದ ಕ್ಕಾಗಿ ವ್ಯಯಿಸುವ ಕೋಟ್ಯಂತರ ರೂಪಾಯಿ ಹಣದಲ್ಲಿ ಸಮಾಜದಲ್ಲಿನ ನೂರಾರು ಬಡವ ರಿಗೆ ವಸತಿ, ಆಹಾರಕ್ಕೆ ವ್ಯವಸ್ಥೆ ಮಾಡಬಹುದು. ಇದರಿಂದ ಪುಣ್ಯ ಸಂಪಾದನೆಯೂ ಆಗು ತ್ತದೆ. ಆದರೆ ಈ ಬಗ್ಗೆ ಶ್ರೀಮಂತ ವರ್ಗದ ಜನತೆ ಚಿಂತೆ ಮಾಡುವುದಿಲ್ಲ.
ಅವರಿಗೆ ಬೇಕಿರುವುದು ಸ್ವಪ್ರತಿಷ್ಠೆ ಮಾತ್ರ. ಬಡವರ ಕಷ್ಟಗಳಿಗೆ ಕೈಚಾಚಿದರೆ ಪ್ರತಿಷ್ಠೆ ಮೆರೆಯಲು ಆಗುವುದಿಲ್ಲ ಎಂಬ ಯೋಚನೆ ಅವರದ್ದು. ದೇವರ ಉತ್ಸವ ಗಳನ್ನು ಸಾಧ್ಯವಾದಷ್ಟು ಸಿಂಪಲ್ ಆಗಿ ಮಾಡಿದರೆ ಒಳ್ಳೆಯದು. ದೇವರಿಗಿಂತ ಸಮಾ ಜದ ಹಿತವನ್ನು ಗಮನಿಸಿದರೆ ದೇವರು ಪ್ರಸನ್ನ ನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕಿರಣ್ ರಾವ್, ಮಂಗಳೂರು
ಗುತ್ತಿಗೆ ಕೊಡಬೇಡಿ
ನಗರದಲ್ಲಿ ಪಾರ್ಕಿಂಗ್ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿರುವ ಬಗ್ಗೆ ಜಯಕಿರಣ ವರದಿ ಪ್ರಕಟಿಸಿ ಪಾಲಿಕೆಯನ್ನು ಎಚ್ಚರಿಸಿದೆ. ಇಂತಹ ದರೋಡೆ ಇನ್ನೂ ಅನೇಕ ಕಡೆಗಳಲ್ಲಿ ನಡೆಯು ತ್ತಿದೆ. ಹಾಗಾಗಿ ಪಾಲಿಕೆ ಇನ್ನು ಮುಂದೆ ಪಾರ್ಕಿಂಗ್ ಶುಲ್ಕ ವಸೂಲಾತಿಯನ್ನು ಗುತ್ತಿಗೆ ಆಧಾರದಲ್ಲಿ ನಡೆಸುವುದನ್ನು ನಿಲ್ಲಿಸಲಿ. ಉತ್ತಮ ಆದಾಯವಿ ರುವ ಈ ಯೋಜನೆಯನ್ನು ಸ್ವತಃ ಪಾಲಿಕೆಯ ಸಿಬ್ಬಂದಿಯನ್ನಿಟ್ಟು ನಡೆಸಲಿ. ಆಗ ಈ ರೀತಿಯ ಹಗಲು ದರೋಡೆಗೆ ಕಡಿವಾಣ ಬೀಳಬಹುದು. ಅಲ್ಲದೇ ಪಾಲಿಕೆಗೂ ಉತ್ತಮ ಆದಾಯ ಬರಬ ಹುದು. ಈ ಬಗ್ಗೆ ಇನ್ನಾದರೂ ಪಾಲಿಕೆ ಆಡಳಿತ ಚಿಂತನೆ ನಡೆಸಲಿ.
ಶಾಕೀರ್, ಬಂದರ್
ಕಾರ್ಕಳ ಪೇಟೆಯಲ್ಲಿ ದ್ವಿಪಥ ರಸ್ತೆ ನಿರ್ಮಾಣವಾಗಲಿ
ಆನೆಕೆರೆಯಿಂದ ಕಾರ್ಕಳ ಪೇಟೆ ಪ್ರವೇಶಿಸುವ ರಸ್ತೆ, ಬಂಡಿಮಠದಿಂದ ಕಾರ್ಕಳಕ್ಕೆ ಬರುವ ರಸ್ತೆ ಹಾಗೂ ಅನಂತ ಪದ್ಮನಾಭ ದೇವಸ್ಥಾನ ರಸ್ತೆಯಲ್ಲಿ ವಾಹನಗಳ ಒತ್ತಡ ಜಾಸ್ತಿಯಿರುತ್ತದೆ. ಇಲ್ಲಿ ಪಾದಚಾರಿಗಳ ಸಂಚಾರಕ್ಕೆ ಸಾಕಷ್ಟು ಜಾಗವಿರುವುದಿಲ್ಲ.
ಇಲ್ಲಿನ ರಸ್ತೆಯ ಅಗಲ ಕಿರಿದಾಗಿರುವುದೇ ಮುಖ್ಯ ಸಮಸ್ಯೆಯಾಗಿದೆ. ರಸ್ತೆಯ ಅಗಲವನ್ನು ವಿಸ್ತರಿಸಿ ದ್ವಿಪಥ ವನ್ನಾಗಿ ಮಾಡಿದರೆ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಬಂದೀತು. ಕಾರ್ಕಳ ಪೇಟೆಯಲ್ಲಿ ರಸ್ತೆ ಅಗಲೀಕರಣ ಕ್ಕಾಗಿ ಇಕ್ಕೆಲಗಳಲ್ಲಿನ ಅಂಗಡಿ ಮಳಿಗೆಗಳನ್ನು ಒಡೆದು ತೆಗೆಯಲಾಗಿದೆ. ಆದರೆ ರಸ್ತೆಯನ್ನು ವಿಸ್ತರಿಸಲಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ, ಕಾರ್ಕಳ ಪುರಸಭೆ ಕೂಡಲೇ ಕ್ರಮ ಕೈಗೊಳ್ಳಬೇಕು. ಕಾರ್ಕಳ ಪೇಟೆಯ ರಸ್ತೆಯ ಅಭಿವೃದ್ಧಿ ಪಡಿಸುವಲ್ಲಿ ಕ್ಷೇತ್ರ ಶಾಸಕರು ಮುತುವರ್ಜಿ ವಹಿಸಬೇ ಕಾಗಿ ವಿನಂತಿ.
ಕಿಶೋರ್, ಆನೆಕೆರೆ
ಉಳ್ಳಾಲ ಬೀಚ್ ಅನೈತಿಕತೆಯ ಅಡ್ಡೆಯಾಗುತ್ತಿದೆಯೇ?
ಕರಾವಳಿಯ ಪ್ರವಾಸಿ ತಾಣಗಳಲ್ಲಿ ಬೀಚ್‌ಗಳು ಅತೀ ಮುಖ್ಯ ಸ್ಥಳ ಎನ್ನಬಹುದು. ಕರಾವಳಿಗೆ ಹೆಚ್ಚಿನ ಜನರನ್ನು ಆಕರ್ಷಿಸುವುದೇ ಈ ಬೀಚ್ ಗಳು. ಆದರೆ ಇತ್ತೀಚೆಗೆ ಈ ಬೀಚ್‌ಗಳು ಕೂಡ ಅನೈತಿಕತೆಯ ಅಡ್ಡೆಯಾ ಗುವ ಮೂಲಕ ಸುಸಂಸ್ಕೃತರು ವಿಹಾರ ನಡೆಸುವುದೇ ಕಷ್ಟಕರವಾಗಿದೆ. ತಣ್ಣೀರು ಬಾವಿ, ಪಣಂಬೂರು ಬೀಚ್‌ಗಳು ಈಗಾಗಲೇ ಈ ಹಣೆಪಟ್ಟಿ ಕಟ್ಟಿ ಕೊಂಡಿತ್ತು. ಆದರೆ ಉಳ್ಳಾಲ ಬೀಚ್ ಈ ರೀತಿಯ ಅನೈತಿಕತೆಯಲ್ಲಿ ಅಷ್ಟಾಗಿ ಕುಖ್ಯಾತಿ ಗಳಿಸಿರಲಿಲ್ಲ. ಮುಂದೆ ಉಳ್ಳಾಲ ಬೀಚ್‌ಗೂ ಈ ಹಣೆಪಟ್ಟಿ ಬಂದರೆ ಆಶ್ಚರ್ಯ ಪಡಬೇಕಿಲ್ಲ. ಇಷ್ಟು ಹೇಳಲು ಕಾರಣವಿದೆ. ಮೊನ್ನೆ ನಾನು ಮತ್ತು ನನ್ನ ಗೆಳೆಯರು ವಿಹಾರಕ್ಕೆಂದು ಸಂಜೆಯ ವೇಳೆಗೆ ಬೀಚ್‌ಗೆ ಹೋಗಿದ್ದೆವು. ಬೀಚ್‌ನಿಂದ ಇನ್ನೇನು ಹೊರಡೋಣ ಎನ್ನುವಾಗ ಕತ್ತಲು ಕವಿದಿತ್ತು. ಕರೆಂಟ್ ಹೋಗಿದ್ದ ಕಾರಣ ಸಮುದ್ರ ತೀರ ಸಂಪೂರ್ಣವಾಗಿ ಕಗ್ಗತ್ತಲಿನಿಂದ ಕೂಡಿತ್ತು. ಈ ವೇಳೆ ಪೊದೆಯ ಮಧ್ಯೆ ಎರಡು ಜೋಡಿ ಅನೈಕತೆಯಲ್ಲಿ ತೊಡಗಿರು ವುದು ನಮ್ಮ ಗಮನಕ್ಕೆ ಬಂತು. ಆಗ ನಾವು ಅಲ್ಲಿಗೆ ತೆರಳಿ ಅವರನ್ನು ಎಚ್ಚ ರಿಕೆ ನೀಡಿ ಕಳಿಸಿದೆವು. ರಾತ್ರೀ ಏಳರ ಸುಮಾರಿಗೆ ಪೊದೆಯ ಮಧ್ಯೆ ಹದಿ ಹರೆಯದ ಜೋಡಿ ಸಲ್ಲಾಪವಾಡುತ್ತಿದೆ ಎಂದರೆ ಉಳ್ಳಾಲ ಬೀಚ್ ಅನೈತಿಕ ತೆಯ ಅಡ್ಡೆಯಾಗುವುದರಲ್ಲಿ ಸಂಶಯವಿಲ್ಲ. ಸಂಜೆಯ ವೇಳೆಗೆ ಉಳ್ಳಾಲ ಪೊಲೀಸರು ಒಮ್ಮೆ ಇತ್ತ ಒಂದು ರೌಂಡ್ ಹೊಡೆದರೆ ಇಲ್ಲಿನ ಸಮಗ್ರ ಚಿತ್ರಣ ನಿಮಗೆ ಸಿಗಬಹುದು. ಸೋಮನಾಥ ಸ್ವಾಮಿಯ ಸನ್ನಿಧಾನವೂ ಇಲ್ಲೇ ಹತ್ತಿರದಲ್ಲಿರುವುದರಿಂದ ಇಂಥಹ ವ್ಯಭಿಚಾರ ದೇವಸ್ಥಾನದ ಪಾವಿತ್ರ್ಯ ತೆಗೂ ಧಕ್ಕೆ ತರಬಹುದು. ಇನ್ನಾದರೂ ಉಳ್ಳಾಲ ಪೊಲೀಸರು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಲಿ.
ಲೋಕೇಶ್, ಕೊಣಾಜೆ
ಅಂಚೆ ನೌಕರರು ಕಾರ್ಮಿಕರಲ್ಲವೇ?
ಮೊನ್ನೆ ಮೇ ಒಂದನೇ ತಾರೀಖು ಕಾರ್ಮಿಕರ ದಿನ ದಂದು ಎಲ್ಲ ಸರಕಾರಿ ಇಲಾಖೆಗಳ ನೌಕರರಿಗೂ ರಜೆ ನೀಡ ಲಾಗಿತ್ತು. ಆದರೆ ಅಂಚೆ ಇಲಾಖೆಗೆ ಮಾತ್ರ ಇದು ಅನ್ವಯವಾ ಗದೇ ಇದ್ದುದು ಅಚ್ಚರಿಗೆ ಕಾರಣವಾಗಿದೆ. ವರ್ಷಪೂರ್ತಿ ಕೆಲಸ ಮಾಡುವ ಅಂಚೆ ಇಲಾಖೆಯ ನೌಕರರು ಕಾರ್ಮಿಕರ ದಿನ ದಂದೂ ಎಂದಿನಂತೆ ಊರಿಡೀ ಸುತ್ತಾಡಿ ಕೆಲಸ ಮಾಡಿದ್ದಾರೆ. ಇವರೇನು ಕಾರ್ಮಿಕರಲ್ಲವೇ? ಸರಕಾರ ಈ ರೀತಿ ಇಬ್ಬಗೆಯ ನೀತಿ ಅನುಸರಿಸುವುದು ಎಲ್ಲಿಯ ನ್ಯಾಯ? ಅಂಚೆ ಇಲಾಖೆ ಈ ಬಗ್ಗೆ ಇನ್ನಾದರೂ ಸೂಕ್ತ ತಿದ್ದುಪಡಿ ತರಲಿ. ಕಾರ್ಮಿಕರ ದಿನದಂದು ಇಂಥ ತಾರತಮ್ಯ ತಪ್ಪುವಂತಾಗಲಿ.
ಸುಜಿತ್, ಮಣ್ಣಗುಡ್ಡ
ಗೋಹತ್ಯೆ ಮಹಾಪಾಪ
ಭೂಮಿಯಲ್ಲಿ ಗೋಹತ್ಯೆ ಹೆಚ್ಚುತ್ತಿದೆ. ಹಿಂದೆ ಮನುಜರು ದೇವತೆಯೆಂದು ಆರಾಧಿಸುತ್ತಿದ್ದ ಗೋವನ್ನು ಹಣದಾಸೆಗೆ ಕಟುಕರು ಬಲಿ ಕೊಡು ತ್ತಿದ್ದಾರೆ. ಗೋಹತ್ಯೆಯೆಂಬ ಮಹಾಪಾಪದ ಕೆಲ ಸಕ್ಕೆ ಜನರು ಕೈಹಾಕಿದ್ದರಿಂದ ಭೂಮಿಯಲ್ಲಿ ಬರ ಗಾಲ, ಭೂಕಂಪನ ಸಾಮಾನ್ಯವಾಗುತ್ತಿದೆ. ಹೀಗಾಗಿ ಗೋಹತ್ಯೆಯನ್ನು ತಡೆಯಲು ಜನರು ಜಾತಿ-ಧರ್ಮ ಮರೆತು ಒಂದಾಗಬೇಕು. ಗೋಹತ್ಯೆ ನಿಷೇಧ ವಿಧೇ ಯಕ ಜಾರಿಗೆ ಒತ್ತಾಯಿಸಬೇಕು. ಅಲ್ಲದೇ ರಾಜ್ಯ ಸರ್ಕಾರವೂ ಈ ಬಗ್ಗೆ ವಿಶೇಷ ಕಳಜಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ನಂದೀಶ್, ಸಕಲೇಶಪುರ
ದಲಿತ ಮಹಿಳೆಯ ಕೊಲೆ ಆರೋಪಿಗಳನ್ನು ಬಂಧಿಸಿ
ಇತ್ತೀಚೆಗೆ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಧರೆಗುಡ್ಡೆ ಎಂಬಲ್ಲಿ ದಲಿತ ಮಹಿಳೆಯ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಧರೆಗುಡ್ಡೆಯ ಸ್ಥಳೀಯ ಯುವಕ ಮಂಡಲದ ವಾರ್ಷಿಕೋತ್ಸವ ಸಂದರ್ಭ ನಡೆದಿರುವ ಈ ಘಟನೆಯು ಸ್ಥಳೀಯವಾಗಿ ಭಯ ವನ್ನು ಹುಟ್ಟುಹಾಕಿದೆ. ಪರಿಸರವನ್ನು ಚೆನ್ನಾಗಿ ಬಲ್ಲ ಸ್ಥಳೀಯ ಕಾಮುಕರೇ ಕೃತ್ಯವೆಸಗಿರುವುದು ಮೇಲ್ನೋಟಕ್ಕೆ ಗಮನಕ್ಕೆ ಬಂದಿದೆಯಾದರೂ ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಿಲ್ಲ. ದಲಿತ ಮಹಿಳೆಯನ್ನು ಪರಿಚಯಸ್ಥರೇ ಅತ್ಯಾಚಾರ ವೆಸಗಿ ಕೊಲೆಗೈದಿರುವ ಶಂಕೆಯಿದ್ದು, ಪೊಲೀಸರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ದರೆ ಸತ್ಯಾಂತ ಬಯಲಾದೀತು. ಮೂಡಬಿದ್ರೆ ಠಾಣಾಧಿಕಾರಿ, ಹಿರಿಯ ಪೊಲೀಸ್ ಅಧಿಕಾರಿಗಳು ದಲಿತ ಮಹಿಳೆಯ ಹಂತಕರನ್ನು ಬಂಧಿಸಿ ಆಕೆಯ ಸಾವಿಗೆ ನ್ಯಾಯ ಒದಗಿಸಬೇಕಾಗಿ ವಿನಂತಿ.
ಕರುಣಾಕರ, ಶಿರ್ತಾಡಿ
ಜನರ ಕಷ್ಟಗಳಿಗೆ ಸ್ಪಂದಿಸದ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್
ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‌ಗೊ ಳಪಟ್ಟ ಹೆಚ್ಚಿನ ಎಲ್ಲಾ ರಸ್ತೆಗಳು ಸಂಪೂರ್ಣ ಹದಗೆಟ್ಟು ಜನರು ಕಷ್ಟಪಡುತ್ತಿದ್ದರೂ ಯಾವು ದನ್ನೂ ತಿರುಗಿ ನೋಡುವ ಪುರುಸೋತ್ತು ಅವರಿಗಿಲ್ಲವಾಗಿದೆ. ದೇರಾಜೆ ರಸ್ತೆಗೆ ಜಿ.ಪಂ. ನಿಂದ ಎರಡು ಲಕ್ಷ ರೂ. ಬಿಡುಗಡೆಯಾ ಗಿದ್ದರೂ ಹದಗೆಟ್ಟ ರಸ್ತೆಯ ಒಂದು ಭಾಗಕ್ಕೂ ಸಾಲದಾಗಿದೆ. ಈ ಭಾಗಕ್ಕೆ ಇನ್ನೂ ಮೂವರು ಸದಸ್ಯರು ಮೀಟಿಂಗ್‌ಗೂ ಹೋಗದೆ ಸಹಿ ಹಾಕಿ ಭತ್ಯೆ ಹಣವನ್ನು ಕಿಸೆಗೆ ಹಾಕುವುದು ಮಾತ್ರ ತಮ್ಮ ಜವಾ ಬ್ದಾರಿ ಎಂದು ತಿಳಿದಂತಿದೆ. ಯಾರಿಗೂ ಉಪ ಯೋಗವಿಲ್ಲದ ಈ ಪಂಚಾಯತ್ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಜಿ.ಪಂ. ನಿಂದ ದೊರಕಿದ ಅನುದಾನವನ್ನು ಸಮರ್ಪಕವಾಗಿ ಬಳಸಲು ಮುಂದಾಗದ ಇವರು ಮುಂದೆ ಚುನಾವಣೆಗಳಲ್ಲಿ ನಿಂತರೆ ಜನರೇ ತಕ್ಕ ಉತ್ತರ ವನ್ನು ನೀಡಲಿದ್ದಾರೆ. ಅಕ್ರಮವಾಗಿ ಅಧಿಕಾರ ಪಡೆದ ಉಪಾಧ್ಯಕ್ಷರು ಚುನಾವಣೆಯ ಸಂದ ರ್ಭದಲ್ಲಿ ಮನೆ-ಮನೆಗೆ ಭೇಟಿ ಕೊಟ್ಟವರು ನಂತರ ನಾಪತ್ತೆಯಾಗಿದ್ದಾರೆ. ಜನರು ಓಟು ಪಡೆದು ಇನ್ನೊಂದು ಪಕ್ಷದವರ ಎಂಜಲು ಕಾಸಿಗೆ ಕೈಚಾಚಿ ಅಧಿಕಾರ ಸವಿಯುವ ವರಿಗೆ ಧಿಕ್ಕಾರ ವಿರಲಿ.
ಸಮಸ್ತ ನಾಗರಿಕರು, ದೇರಾಜೆ-ಬಲ್ಯ
ರೈಲ್ವೇ ಇಲಾಖೆಯ ಗಮನಕ್ಕೆ
ತುಳುನಾಡಿನ ಕುವರ ಭಾರತದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್‌ರ ಕನ ಸಿನ ಕೂಸಾದ ಕೊಂಕಣ ರೈಲ್ವೆ ಕರಾವಳಿಯ ಭಾಗದ ಜನರಿಗೆ ಬಹಳ ಪ್ರಯೋಜನಕಾರಿಯಾ ಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರೈಲು ಪ್ರಯಾಣ ಅಸಹ್ಯಕರವಾಗಿ ಪರಿಣಮಿಸಿದೆ. ರೈಲು ಬೋಗಿ ಗಳನ್ನು ಮಂಗಳಮುಖಿಯರು (ಲೈಂಗಿಕ ಕಾರ್ಯ ಕರ್ತೆಯರು) ತಮ್ಮ ವಾಸ್ತವ್ಯ ಕುಟೀರವಾಗಿಸಿ ಕೊಂಡಿದ್ದಾರೆ. ಹಣಕ್ಕಾಗಿ ಪೀಡಿಸುವುದು, ಅಶ್ಲೀ ಲವಾಗಿ ವರ್ತಿಸುವುದು ನಡೆಯುತ್ತಿದೆ. ಇವುಗ ಳೆಲ್ಲದರ ಪರಿಣಾಮ ಸಭ್ಯ ಪ್ರಯಾಣಿಕರು ಮುಜು ಗರದಿಂದ ತಲೆತಗ್ಗಿಸುವಂತಾಗಿದೆ. ರೈಲ್ವೇ ಇಲಾಖೆ, ಸಮಸ್ಯೆಯನ್ನು ಅವಲೋಕಿಸಿ ಅಸಭ್ಯತೆಗೆ ಕಡಿ ವಾಣ ಹಾಕಿ ಶಿಸ್ತುಕ್ರಮ ಕೈಗೊಂಡರೆ, ಪ್ರಯಾ ಣಿಕರಿಗೆ ಮುಜುಗರರಹಿತ ಪ್ರಯಾಣಕ್ಕೆ ದಾರಿ ಯಾದೀತು.
ತಾರನಾಥ ಜೆ. ಮೇಸ್ತಿ, ಶಿರೂರು
ಎಸ್‌ಕೋಡಿಗೆ ಹೈಮಾಸ್ಟ್ ದೀಪ ಅಗತ್ಯ
ಕಿನ್ನಿಗೋಳಿ ಬಳಿಯ ಎಸ್. ಕೋಡಿ ಸರ್ಕಲ್ ಬಳಿ ರಸ್ತೆ ಮೂರು ದಿಕ್ಕಿಗೆ ಕವಲಾಗಿ ಸಂಚರಿಸುತ್ತದೆ. ಇಲ್ಲಿ ರಾತ್ರಿಯ ವೇಳೆ ಕತ್ತಲೆ ತುಂಬಿರು ತ್ತದೆ. ವಾಹನಗಳ ಬೆಳಕು ಹೊರತು ಬೇರೇನೂ ಇರುವುದಿಲ್ಲ. ಇಲ್ಲಿ ಪಕ್ಷಿ ಕೆರೆಯಿಂದ ತಿರುವಿನಲ್ಲಿ ಸಾಗಿಬರುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸಿದ ಅನೇಕ ಉದಾಹರಣೆ ಗಳಿವೆ. ಜನಪ್ರತಿನಿಧಿಗಳು ಇಲ್ಲಿನ ಸಮ ಸ್ಯೆಯನ್ನು ಕಣ್ಣಾರೆ ಕಂಡರೂ ಪರಿಹ ರಿಸುವ ಗೋಜಿಗೆ ಮುಂದಾಗಿಲ್ಲ. ಇಲ್ಲಿ ರಸ್ತೆ ಅಪಘಾತದ ಭಯವನ್ನು ಹೋಗಲಾಡಿಸಲು ಆದಷ್ಟು ಬೇಗನೆ ಹೈಮಾಸ್ಟ್ ದೀಪವನ್ನು ಅಳವಡಿಸುವ ಅವಶ್ಯಕತೆಯಿದೆ. ಇದರಿಂದ ರಾತ್ರಿಯ ವೇಳೆ ವಾಹನ ಸವಾರರು, ಪಾದ ಚಾರಿಗಳು ನಿಶ್ಚಿಂತೆ ಯಿಂದ ಸಂಚಾರ ನಡೆಸಲು ಸಾಧ್ಯ. ಸ್ಥಳೀಯ ಪಂಚಾ ಯತ್ ಆಡಳಿತ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಿ.
ರಂಜಿತ್, ಕಿನ್ನಿಗೋಳಿ