ಉಡುಪಿ: ಡಬಲ್ ಮರ್ಡರ್

Posted by JAYAKIRANA Kirana on Thursday, 3 May 2012 | 0 comments | Leave a comment...

ಮಗನ ಖರ್ಚಿನ ಹಣಕ್ಕೆ ಬಲಿಯಾದ ಹೆತ್ತವರು!
ಉಡುಪಿ: ಮಾನಸಿಕ ಅಸ್ವಸ್ಥ ಮಗನೋರ್ವ ಖರ್ಚಿಗೆ ಹಣ ಕೊಡಲಿಲ್ಲವೆಂಬ ಏಕೈಕ ಕಾರಣಕ್ಕೆ ಹೆತ್ತವರನ್ನೇ ಮರದ ಸೋಂಟೆಯಿಂದ ಹೊಡೆದು ಕೊಲೆ ಮಾಡಿದ ವಿಲಕ್ಷಣ ಘಟನೆ ಬ್ರಹ್ಮಾವರ ಸಮೀಪದ ಹೆಗ್ಗುಂಜೆ ಎಂಬಲ್ಲಿ ನಡೆದಿದೆ.
ಮಂದಾರ್ತಿ ಸಮೀಪದ ಹೊನ್ನೆ ಕುದ್ರು ಎಂಬಲ್ಲಿನ ನಿವಾಸಿಗಳಾದ ಹೆರಿಯ ಮರಕಲ (೬೫) ಹಾಗೂ ಬಾಬಿ ಮರಕಲ್ತಿ (೬೦) ಎಂಬವರೇ ಮಗನ ಅನಿರೀಕ್ಷಿತ ಅಟ್ಟಹಾಸಕ್ಕೆ ಬಲಿಯಾದ ನತದೃಷ್ಟರಾಗಿದ್ದಾರೆ. ಇವರ ಮರಣಕ್ಕೆ ಕಾರಣನಾದ ಮಗ ಸುರೇಶ್ ಮರಕಲ (೨೬)ನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಘಟನೆ ನಡೆದದ್ದು ಗುರು ವಾರ ಮುಂಜಾನೆ ಗಂಟೆ ೩.೩೦ಕ್ಕೆ. ಮಗ ಸುರೇಶ್ ಬುಧವಾರ ಖರ್ಚಿಗೆ ಸ್ವಲ್ಪ ಹಣ ಬೇಕೆಂದು ಹೆತ್ತವರಲ್ಲಿ ಕೇಳಿದ್ದಾನೆ. ಮಗನ ವಿಷಯ ಹೆತ್ತವರಿಗೆ ಮೊದಲೇ ಗೊತ್ತಿದ್ದ ಕಾರಣ ಕೇಳಿದ ಕೂಡಲೇ ಹಣ ಕೊಡದೆ ನಿರ್ಲಕ್ಷಿಸಿ ದ್ದಾರೆ. ಈ ನಿರ್ಲಕ್ಷ್ಯವೇ ಹೆತ್ತವರಿಗೆ ಮುಳುವಾಗಿ ಪರಿಣಮಿಸಿದೆ.
 ತಂದೆ- ತಾಯಿ ಕೇಳಿದಾಗ ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಕೋಪೋದ್ರಿಕ್ತನಾದ ಸುರೇಶ್ ತಂದೆ-ತಾಯಿ ಇಬ್ಬರ ಮೇಲೂ ಮರದ ಸೋಂಟೆಯಿಂದ ಹೊಡೆದಿದ್ದಾನೆ. ಇಬ್ಬರೂ ಸ್ಥಳದಲ್ಲಿಯೇ ಅಸುನೀಗಿ ದ್ದಾರೆ. ಬಳಿಕ ಹೆತ್ತವರಿಬ್ಬರ ಶವಗಳನ್ನು ಮನೆಯಿಂದ ಹೊರಗಡೆ ಸುಮಾರು ೫೦ ಮೀಟರ್ ದೂರಕ್ಕೆ ಎಳೆದು ಕೊಂಡು ಹೋಗಿ ಇರಿಸಿದ್ದಾನೆ. ಆಶ್ಚರ್ಯವೆಂದರೆ, ಹೆತ್ತವರನ್ನು ಕೊಲೆ ಮಾಡಿದ ಮಗ ಬಳಿಕ ಅಕ್ಕಪಕ್ಕದ ಮನೆಗಳಿಗೆ ಹೋಗಿ ತಾನು ತಂದೆ-ತಾಯಿಯ ಕೊಲೆ ಮಾಡಿರುವುದಾಗಿ ವರದಿ ಒಪ್ಪಿಸಿದ್ದಾನೆ. ಆದರೆ, ಆಗ ಇದನ್ನು ಯಾರೂ ನಂಬಲಿಲ್ಲವೆನ್ನಲಾಗಿದೆ.
 ನೆರೆಮನೆ ನಿವಾಸಿಗಳು ಬೆಳಗ್ಗೆ ಬಂದು ನೋಡಿದಾಗ ಹೆರಿಯ ಹಾಗೂ ಬಾಬಿ ದಂಪತಿಗಳು ಶವವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಸುರೇಶ ತನಗೂ, ಇದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಸ್ನಾನ ಮಾಡಿ, ಎಲೆ ಅಡಿಕೆ ಜಗಿಯುತ್ತಾ ಮನೆಯಲ್ಲೇ ಕುಳಿತಿದ್ದಾನೆ. ಪೊಲೀಸರು ಬಂಧಿಸಿದಾಗಲೂ ಸುರೇಶ ಏನೂ ಆಗದವನಂತೆ ಬಂಧನಕ್ಕೆ ಒಳಗಾಗಿದ್ದಾನೆ. ಹೆರಿಯ-ಬಾಬಿ ದಂಪತಿಗಳಿಗೆ ನಾಲ್ಕು ಮಂದಿ ಗಂಡು ಮಕ್ಕಳು. ಮೂವರು ಬೆಂಗಳೂರಲ್ಲಿ ಸಣ್ಣಪುಟ್ಟ ಉದ್ಯೋಗದಲ್ಲಿದ್ದಾರೆ. ಸುರೇಶ ಈ ಹಿಂದೆ ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಕೆಲಸಕ್ಕಿದ್ದು, ಬಳಿಕ ಹೋಟೆಲ್ ಮಾಲಕರೇ ಈತ ಮಾನಸಿಕ ಅಸ್ವಸ್ಥನೆಂದು ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದರು. ಅನಾ ರೋಗ್ಯಕ್ಕೊಳಗಾಗಿದ್ದ ಪತ್ನಿ ಬಾಬಿ ಯನ್ನು ನೋಡಿಕೊಳ್ಳುವ ಜೊತೆಗೆ ಮಗ ಸುರೇಶನ ಮಾನಸಿಕ ಅಸ್ವಸ್ಥತೆಗೆ ಇತರ ಮಕ್ಕಳ ಸಹಾಯದಿಂದ ಹೆರಿಯ ಚಿಕಿತ್ಸೆಯನ್ನೂ ಕೊಡಿಸುತ್ತಿದ್ದರು ಎನ್ನಲಾಗಿದೆ. ಎಸ್ಪಿ ಡಾ.ಬೋರಲಿಂಗಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆಗೆ ಮಾರ್ಗದರ್ಶನ ಮಾಡಿದ್ದಾರೆ. ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಹಾಗೂ ಇತರ ಅಧಿಕಾರಿ ಗಳು, ಸಿಬ್ಬಂದಿ ಮಹಜರು ನಡೆಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಗುರುವಾರವೇ ಮೃತರ ಕುಟುಂಬಕ್ಕೆ ಬಿಟ್ಟುಕೊಟ್ಟಿದ್ದಾರೆ.
 ಪ್ರಕರಣದ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡಿರುವ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅವರು ಆರೋಪಿ ಸುರೇಶನನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಲ ಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.

ಸೆಝ್ ವಿರುದ್ಧ ಮತ್ತೆ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಎಂಎಸ್ ಇಝಡ್ ಕಾರಿಡಾರ್ ರಸ್ತೆ ವಿರುದ್ಧ ಸಿಡಿದೆದ್ದಿರುವ ಕುಳೂರು, ಮೇಲ್‌ಕೊಪ್ಪಳ, ಸಂತ್ರಸ್ತರು ನಿನ್ನೆ ಮತ್ತೆ ಪ್ರತಿ ಭಟನೆ ನಡೆಸಿದ್ದಾರೆ. ಸೆಝ್ ಕಚೇರಿಗೆ ಮುಂದೆ ಸೆಜ್‌ನ ವ್ಯವ ಸ್ಥಾಪಕ ನಿರ್ದೇಶಕ ಅಧಿಕಾರಿ ರಾಜೀವ ಬಂಗ ಅವರ ಪ್ರತಿಕೃತಿಯ ಮುಖಕ್ಕೆ ಉಗಿದು, ಚಪ್ಪಲಿ ಏಟು ನೀಡಿ ದ್ದಲ್ಲದೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆಯೂ ಘೋಷಣೆ ಕೂಗಿದರು
ಕೂಳೂರು, ಮೇಲ್‌ಕೊಪ್ಪಳ, ಅತ್ರೆಬೈಲ್ ಪ್ರದೇಶಕ್ಕೆ ತಾನು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದರು. ಹೀಗಾಗಿ ಸಂತ್ರಸ್ತರು ಸಂಜೆಯವರೆಗೆ ಜಿಲ್ಲಾಧಿಕಾರಿ ಗಳಿಗಾಗಿ ಕಾದು ಕುಳಿತಿದ್ದರು. ಆದರೆ ಜಿಲ್ಲಾ ಧಿಕಾರಿ ಬಾರದೇ ಇದ್ದಾಗ ಸಂತ್ರ ಸ್ತರು ಸಂಜೆ ವೇಳೆ ಸೆಝ್ ಕಚೇರಿಗೆ ಬಂದಿದ್ದು, ಈ ವೇಳೆ ಇಲ್ಲಿ ಅಧಿಕಾರಿಗಳೂ ಇರಲಿಲ್ಲ. ಇದರಿಂದ ಕ್ರೋಧಗೊಂಡ ಸಂತ್ರಸ್ತರು ಸೆಝ್ ಅಧಿಕಾರಿ ರಾಜೀವ ಬಂಗ ಅವರ ಪ್ರತಿಕೃತಿ ದಹಿಸಿದರಲ್ಲದೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು. ಜಿಲ್ಲಾಧಿಕಾರಿಗಳು ಸೆಝ್ ದಲ್ಲಾಳಿ ಎಂದು ಆರೋಪಿಸಿದರು. ನಮ್ಮ ಸಮಸ್ಯೆಗೆ ಪರಿಹಾರ ದೊರೆಯದೇ ಹೋದರೆ ಜನ ಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕ್ಷುಲ್ಲಕ ಕಾರಣ: ಪೊಲೀಸರಿಗೆ ಅಮಾನವೀಯ ಶಿಕ್ಷೆ

Posted by JAYAKIRANA Kirana on | 0 comments | Leave a comment...

ಉಡುಪಿ: ಉಡುಪಿ ಸರ್ಕಲ್ ಇನ್ಸ್‌ಪೆಕ್ಟರ್ ಗಿರೀಶ್ ಅವರು ಕ್ಷುಲ್ಲಕ ಕಾರಣಕ್ಕೆ ತಮ್ಮ ಕೈ ಕೆಳಗಿನ ಪೊಲೀಸ್ ಸಿಬ್ಬಂದಿಗೆ ಸ್ವಾತಂತ್ರ್ಯಪೂರ್ವ ಕಾಲದ ಅಮಾನವೀಯ ಶಿಕ್ಷೆ ನೀಡಿ ಮಾನಸಿಕ ಹಿಂಸೆ ನೀಡಿದ ಪ್ರಕರಣ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಎ.೨೭ರಂದು ಮಧ್ಯಾಹ್ನ ಮೂರು ಗಂಟೆಗೆ ತಮ್ಮ ಕಚೇರಿಗೆ ಬರುವಂತೆ ಇನ್ಸ್‌ಪೆಕ್ಟರ್ ಗಿರೀಶ್ ಸಿಬ್ಬಂದಿಗೆ ಸೂಚಿಸಿದ್ದರು. ಬೇರೆ ಬೇರೆ ಕಡೆ ಕರ್ತವ್ಯದಲ್ಲಿದ್ದ ಸಿಬ್ಬಂದಿಯಲ್ಲಿ ಕೆಲವರು ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಗೆ ತಲುಪುವಾಗ ಕೇವಲ ಐದೇ ಐದು ನಿಮಿಷ ತಡವಾಗಿದೆ.
ಇಷ್ಟಕ್ಕೇ ಸಿಬ್ಬಂದಿ ಮೇಲೆ ತೀವ್ರ ಆಕ್ರೋಶಿ ತರಾದ ಇನ್ಸ್‌ಪೆಕ್ಟರ್ ಗಿರೀಶ್ ಅವರು, ಶಿಕ್ಷಿಸುವ ಸಲುವಾಗಿ ರೈಫಲ್ ಮೇಲಕ್ಕೆತ್ತಿ ಮೂರು ಸುತ್ತು ಓಡುವಂತೆ ತಡವಾಗಿ ಬಂದ ನಾಲ್ಕು ಮಂದಿ ಸಿಬ್ಬಂದಿಗೆ ಆದೇಶಿಸಿದ್ದಾರೆ. ಪೊಲೀಸ್ ತರಬೇತಿ ಕೇಂದ್ರವಾದ ಚಂದು ಮೈದಾನದಲ್ಲಿ ಬಹಳ ಅಪರೂಪಕ್ಕೆ ಎಂಬಂತೆ ಇಂತಹ ಘಟನೆಗಳು ನಡೆದದ್ದು ಇದೆಯಾದರೂ, ಸಾರ್ವಜನಿಕ ಸ್ಥಳದಲ್ಲಿ ನಾಗರಿಕರ ಸಮಕ್ಷಮ ಈ ರೀತಿ ಸಿಬ್ಬಂದಿಯನ್ನು ಓಡಿಸಿದ್ದು ಇದೇ ಮೊದಲು ಎನ್ನಲಾಗಿದೆ. ಈ ಘಟನೆಯನ್ನು ನೋಡಿದ ಸಾರ್ವಜನಿಕರು ಪೊಲೀಸ್ ಅಧಿಕಾರಿಯ ಕ್ರಮಕ್ಕೆ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಣಂಬೂರು: ಪಲ್ಟಿಯಾದ ರಿಕ್ಷಾದಲ್ಲಿ ಗೋಮಾಂಸ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಗು ಅಡ್ಡ ಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಅಟೋ ರಿಕ್ಷಾವೊಂದು ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಮಗುಚಿಬಿದ್ದಿದ್ದು, ಆ ವೇಳೆ ಅದರಲ್ಲಿ ಗೋಮಾಂಸ ಇತ್ತೆನ್ನಲಾಗಿದೆ. ಅದೇ ವೇಳೆ ಕಾರೊಂದು ಬ್ಯಾರಿಕೇಡಿಗೆ ಡಿಕ್ಕಿ ಹೊಡೆದು ಪಲಾಯನ ಮಾಡಿದ ಘಟನೆ ನಡೆದಿದ್ದು ರಿಕ್ಷಾದಲ್ಲಿ ಮಾಂಸ ವನ್ನು ಕಾರಿಗೆ ಹಾಕಿ ಸಾಗಾಟ ಮಾಡಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.
ನಿನ್ನೆ ಬೆಳಿಗ್ಗೆ ಮಂಗಳೂರು ಕಡೆಗೆ ಬರುತ್ತಿದ್ದ ಅಟೋರಿಕ್ಷಾ ತಣ್ಣೀರುಬಾವಿ ತಲುಪಿದಾಗ ಮಗು ವೊಂದು ರಸ್ತೆಮಧ್ಯೆ ಬಂದಿತ್ತು. ಅನಿರೀ ಕ್ಷಿತವಾಗಿ ನಡೆದ ಘಟನೆಯಿಂದ ಕಂಗಾಲಾದ ಚಾಲಕ ನಿಯಂತ್ರಣ ಕಳೆದುಕೊಂಡ ಕಾರಣ ರಿಕ್ಷಾ ರಸ್ತೆಯಲ್ಲೇ ಪಲ್ಟಿ ಹೊಡೆದಿತ್ತು.
ಸಾರ್ವಜನಿಕರು ಸಹಾಯಕ್ಕೆ ಧಾವಿಸಿ ಬರುವ ವೇಳೆಯೇ ಸ್ಥಳಕ್ಕೆ ಆಲ್ಟೋ ಕಾರೊಂದು ಬಂದು ರಿಕ್ಷಾ ದಲ್ಲಿದ್ದ ಅದೇನನ್ನೋ ತುಂಬಿಕೊಂಡು ಪರಾರಿಯಾಗಿದೆ. ಈ ಮಾಹಿತಿಯು ತಣ್ಣೀರುಬಾವಿಯಲ್ಲೇ ಇದ್ದ ಸಾಗರ್ ರಕ್ಷಾ ಕವಚಕ್ಕೆ ಲಭಿಸಿತ್ತು. ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಇಟ್ಟ ಸಿಬ್ಬಂದಿ ಕಾರನ್ನು ನಿಲ್ಲಿಸುವ ಸೂಚನೆ ನೀಡಿದ್ದರು. ಆದರೆ ಅದಕ್ಕೆ ಕ್ಯಾರ್ ಎನ್ನದ ಚಾಲಕ ಬ್ಯಾರಿಕೇಡ್‌ಗಳಿಗೆ ಗುದ್ದಿ ಪರಾರಿಯಾಗಿದ್ದಾನೆ.
ಘಟನೆಯ ಹಿನ್ನೆಲೆಯಲ್ಲಿ ಬಜರಂಗದಳದ ಕಾರ್ಯಕರ್ತರು ರಿಕ್ಷಾದಲ್ಲಿದ್ದ ಗೋಮಾಂಸವನ್ನು ಕಾರಲ್ಲಿ ಕೊಂಡೊಯ್ದಿರುವುದಾಗಿ ಪಣಂಬೂರು ಠಾಣೆಗೆ ದೂರು ನೀಡಲು ಮುಂದಾಗಿದ್ದು, ಆ ವೇಳೆ ಕಾರಲ್ಲಿ ಮಾಂಸ ಇರಲಿಲ್ಲ ಎಂದು ಪೊಲೀಸರು ಹೇಳಿದ್ದರು. ಆದರೆ ಮಾಂಸವನ್ನು ಕಣ್ಣಾರೆ ಕಂಡಿರುವುದಾಗಿ ಬಜರಂಗದಳದ ಕಾರ್ಯಕರ್ತರು ವಾದಿಸುತ್ತಿದ್ದಾರೆ. ಪೊಲೀಸರ ಹೇಳಿಕೆಯೇ ಸತ್ಯವೆಂದಾದರೆ ಕಾರು ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದೇಕೆ ಎಂದು ಪ್ರಶ್ನಿಸುತ್ತಿರುವ ಬಜರಂಗದಳ, ಘಟನೆಯ ಬಗ್ಗೆ ಕ್ರಮಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲೂ ಅವ್ಯವಹಾರ

Posted by JAYAKIRANA Kirana on | 0 comments | Leave a comment...

ಮಹಾನಗರ ಪಾಲಿಕೆಗಳಿಗೆ ನೀಡಿದ ಅನುದಾನದಲ್ಲಿ ಗೋಲ್‌ಮಾಲ್
ಬೆಂಗಳೂರು: ಮುಖ್ಯಮಂತ್ರಿಗಳ ವಿಶೇಷ ಅನುದಾನ ಪಡೆದ ಮಹಾನಗರ ಪಾಲಿಕೆಗಳಿಗೆ ನೀಡಿದ ೭೦೦ ಕೋಟಿ ರೂ. ಮೊತ್ತದ ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದು ಬಯಲಾಗಿದೆ.
ತುರ್ತು ಕಾಮಗಾರಿಗಳ ಹೆಸರಿನಲ್ಲಿ ಹಣ ಪಡೆದು ಕೆಲಸವೇ ಮಾಡದೆ ಬಿಲ್ ತಯಾರಿಸಿ ಹಣ ಗುಳುಂ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಮೈಸೂರು, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಹಾಗೂ ಗುಲ್ಬರ್ಗ ಮಹಾನಗರ ಪಾಲಿಕೆಗಳಿಗೆ ನೀಡಿದ ಹಣದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.
ತನಿಖೆಗೆಗಾಗಿ ರಾಜ್ಯಮಟ್ಟದ ಉನ್ನತ ಅಧಿಕಾರಿಗಳ ತಂಡ ನೇಮಕ ಮಾಡಿದ್ದು, ಈ ತಂಡ ವಿಶೇಷ ಅನುದಾನದಡಿ ನಡೆದಿರುವ ಕಾಮಗಾರಿ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪಾಲಿಕೆಗಳ ಸಮಗ್ರ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ಉಳಿದ ಪಾಲಿಕೆಗಳಲ್ಲಿ ತಲಾ ೧೦೦ ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು.
ಕುಡಿಯುವ ನೀರು, ರಸ್ತೆ, ನಗರ ನೈರ್ಮಲ್ಯ ಸೇರಿದಂತೆ ಪ್ರಮುಖ ಅವಶ್ಯಕ ಯೋಜನೆಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿತ್ತು. ವಿಶೇಷ ಅನುದಾನದಡಿ ಕೈಗೆತ್ತಿಕೊಂಡ ಕಾಮಗಾರಿಗಳು ಕಳಪೆಯಿಂದ ಕೂಡಿರುವುದಲ್ಲದೆ, ಕಾಮಗಾರಿ ನಡೆಯದೇ ಹಣ ಮಂಜೂರಾಗಿರುವುದು. ಅಧಿಕಾರಿಗಳು ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿ ಬಿಲ್‌ಗಳನ್ನು ಮಂಜೂರು ಮಾಡಿದ್ದಾರೆಂಬ ಆರೋಪಗಳು ಸರ್ಕಾರಕ್ಕೆ ಬಂದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿದ್ದಾರೆ. ಪಾಲಿಕೆಗಳಲ್ಲಿನ ಅವ್ಯವಹಾರದ ಬಗ್ಗೆ ಈಗಾಗಲೇ ಪ್ರಾಥಮಿಕ ಹಂತದ ತನಿಖೆಗಳು ಆರಂಭಗೊಂಡಿವೆ. ಗುಲ್ಬರ್ಗ ನಗರಪಾಲಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಅಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿದ ಒಬ್ಬ ಕೆಎಎಸ್ ಅಧಿಕಾರಿ ಸೇರಿದಂತೆ ೧೪ಮಂದಿ ವಿರುದ್ಧ ಇಲಾಖೆ ತನಿಖೆಗೆ ಆದೇಶಿಸಿದೆ.
ಅಲ್ಲದೆ, ರಾಜ್ಯಮಟ್ಟದ ಉನ್ನತ ಅಧಿಕಾರಿಗಳ ತಂಡ ಮೊದಲ ಹಂತದಲ್ಲಿ ಗುಲ್ಬರ್ಗ ಪಾಲಿಕೆಯ ಎಲ್ಲ ಕಡತ ಮತ್ತು ಕಾಮಗಾರಿಗಳನ್ನು ಖುದ್ದು ಪರಿಶೀಲನೆ ನಡೆಸಿದೆ. ಇದಾದ ನಂತರ ಉಳಿದ ಎಲ್ಲ ಪಾಲಿಕೆಗಳ ವಿಶೇಷ ಅನುದಾನದ ಕಾಮಗಾರಿಗಳ ಬಗ್ಗೆ ಹಣಕಾಸು ವಹಿವಾಟು ಬಗ್ಗೆ ತನಿಖೆ ನಡೆಸಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಕಾರ್ಕಳ: ಮಲ ಹೊರುವ ಪದ್ಧತಿ ಇನ್ನೂ ಜೀವಂತ!

Posted by JAYAKIRANA Kirana on | 0 comments | Leave a comment...

ಆರ್.ಬಿ. ಜಗದೀಶ್
ಕಾರ್ಕಳ: ಸರಕಾರದ ಆದೇಶ ವನ್ನು ಅನುಷ್ಠಾನಕ್ಕೆ ತಾರದಿರುವ ಕಾರ್ಕಳ ಪುರಸಭೆಯು ಮಲಹೊರುವ ಪದ್ಧತಿಯನ್ನು ಜೀವಂತವಾಗಿರಿಸಿ ಇಕ್ಕಟ್ಟಿಗೆ ಸಿಲುಕಿಕೊಂಡಿದೆ.
ಕಳೆದ ಹತ್ತು ದಿನಗಳಿಂದ ಬಂಡೀ ಮಠ ಬಸ್ ನಿಲ್ದಾಣದ ಮುಂಭಾಗದಲ್ಲಿ ರುವ ಪ್ರಮುಖ ರಸ್ತೆಯಲ್ಲಿ ಒಳಚರಂ ಡಿಯಿಂದ ತ್ಯಾಜ್ಯನೀರು ಹೊರಬಂದು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಸ್ಥಳೀಯವಾಗಿ ಗಬ್ಬುನಾತ ಬೀರಲು ಕಾರಣವಾಗಿತ್ತು. ಇಷ್ಟಾದರೂ ಘಟ ನೆಗೂ ತಮಗೂ ಯಾವುದೇ ತರದಲ್ಲಿ ಸಂಬಂಧ ಇಲ್ಲವೆಂಬಂತೆ ಇದ್ದ ಪುರಸಭಾ ಆಡಳಿತ ವರ್ಗದ ಕ್ರಮದ ವಿರುದ್ಧ ಜಯಕಿರಣ ಪತ್ರಿಕೆ ಸಮಗ್ರ ವರದಿ ಪ್ರಕಟಿಸಿ ನಾಗರಿಕರ ಆಕ್ರೋಶದ ಬಗ್ಗೆ ವಿವರಿಸಿತ್ತು.
ವರದಿಗೆ ಸ್ಪಂದಿಸಿ ಪುರಸಭಾ ಆಡ ಳಿತ ವರ್ಗವು ಸಮಸ್ಯೆ ಬಗೆಹರಿಸಲು ಮುಂದಾದರೂ ಅದನ್ನು ಅನುಸರಿಸಿದ ರೀತಿಯ ಬಗ್ಗೆ ವ್ಯಾಪಕವಾಗಿ ದೂರು ಗಳು ಕೇಳಿಬಂದಿದೆ.
ಸರಕಾರದ ಸ್ಪಷ್ಟ ಆದೇಶವೊಂದ ರಲ್ಲಿ ಒಳಚರಂಡಿ ದುರಸ್ಥಿ(ಶುಚಿತ್ವ) ಕಾಮಗಾರಿಗೆ ಯಂತ್ರೋಪಕರಣ ಹೊರತು ಪಡಿಸಿ ಯಾವುದೇ ಕಾರ ಣಕ್ಕೂ ಕಾರ್ಮಿಕರನ್ನು ಅದರೊಳಗೆ ಇಳಿಸಕೂಡದು. ಹಾಗೊಂದು ವೇಳೆ ಕಾರ್ಮಿಕರನ್ನು ಒಳಚರಂಡಿ ಮ್ಯಾನ್‌ಹೋಲ್ ಶುಚಿತ್ವಕ್ಕೆ ಇಳಿಸಿದ್ದು ಕಂಡುಬಂದಲ್ಲಿ ಅದು ಶಿಕ್ಷಾರ್ಹ ಅಪರಾಧ ಎಂದು ತಿಳಿಸಲಾಗಿದೆ.
ನಿನ್ನೆ ಬೆಳಿಗ್ಗೆ ಸುಮಾರು ೯.೩೦ರ ವೇಳೆಗೆ ಬಂಡೀಮಠ ಬಸ್ ನಿಲ್ದಾಣದ ಮುಂಭಾಗದಲ್ಲಿ ಪುರಸಭಾ ಕಾರ್ಮಿಕರು ಒಳಚರಂಡಿ ಶುಚಿತ್ವ ಕಾಮಗಾರಿಗೆ ಮುಂದಾಗಿದ್ದರು. ಕೈ ಚೀಲ, ಕಾಲು ಚೀಲ ಇಲ್ಲದೇ ಇದ್ದ ಕಾರ್ಮಿಕನೊಬ್ಬ ನೇರವಾಗಿ ಮ್ಯಾನ್‌ಹೋಲ್ ಒಳಗೆ ಇಳಿದು ಗುಂಡಿಯಲ್ಲಿ ತುಂಬಿಕೊಂಡಿದ್ದ ತ್ಯಾಜ್ಯವಸ್ತುವನ್ನು ಬಾಕೆಟ್‌ಗೆ ತುಂಬಿಸಿ ಮೇಲಕ್ಕೆತ್ತಿ ಕೊಡುತ್ತಿದ್ದ ದೃಶ್ಯಾವಳಿ ನೋಡುಗರ ಮನಕಲಕುವಂತಿತ್ತು. ಕೆಲ ವೊಂದು ಸಂದರ್ಭದಲ್ಲಿ ಮ್ಯಾನ್ ಹೋಲ್‌ನೊಳಗಿನ ವಿಷಕಾರಿ ಗಾಳಿ ಮಾನವನ ಜೀವಕ್ಕೆ ಸಂಚಕಾರವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಂತಹ ಅನಾಹುತಗಳು ಘಟಿಸಿರು ವುದನ್ನು ನೆನಪಿಸಿಕೊಳ್ಳಬಹುದು. ಪರರ ಮಲ, ಮೂತ್ರ ಮಿಶ್ರಿತ ನೀರು ಒಳ ಗೊಂಡಿರುವ ತ್ಯಾಜ್ಯನೀರನ್ನು ಹೊರು ವುದು ಅಥವಾ ತೆಗೆಯುವ ಕ್ರಮವು ಮಲಹೊರುವ ಪದ್ಧತಿಯಾಗಿರುತ್ತದೆ. ಇಂತಹ ಕ್ರಮವನ್ನು ಸರಕಾರವು ನಿಷೇಧಿಸಿದೆಯಾದರೂ ಕಾರ್ಕಳದಲ್ಲಿ ಇನ್ನೂ ಜೀವಂತ ಇದೆ ಎಂಬುವುದಕ್ಕೆ ಈ ದೃಶ್ಯಾವಳಿ ಮೂಕ ಸಾಕ್ಷಿಯಾಗಿದೆ.
ಮತ್ತೊಂದೆಡೆಯಲ್ಲಿ ಕಾರ್ಕಳ ಪುರಸಭೆಯಲ್ಲಿ ಆರೋಗ್ಯ ಇಲಾಖೆ ಇದ್ದು, ಅಲ್ಲಿ ಶುಚಿತ್ವ ಕಾರ್ಯನಿರ್ವ ಹಿಸುತ್ತಿರುವ ಪೌರ ಕಾರ್ಮಿಕರ ಆರೋಗ್ಯ ದೃಷ್ಟಿಯ ಮೇಲೆ ಕಿಂಚಿತ್ತು ಗಮನ ಹರಿಸುವುದಿಲ್ಲ ಎಂಬುವುದಕ್ಕೆ ಈ ಘಟನೆ ತಾಜ ಉದಾಹರಣೆಯಾ ಗಿದೆ. ಶುಚಿತ್ವ ಪರಿಪಾಲನೆ ಮಾಡುವ ಕಾರ್ಮಿಕರಿಗೆ ಕೈ ಚೀಲ, ಕಾಲು ಚೀಲ, ಮುಖಬಟ್ಟೆ ನೀಡದೇ ಇರುವುದು ಕಂಡುಬಂದಿದೆ. ಪುರಸಭೆಯು ಮೇಲಿನ ಪರಿಕರಗಳಿಗೆ ಪ್ರತಿವರ್ಷ ದುಂದುವೆಚ್ಚ ಮಾಡುತ್ತಿದ್ದರೂ ಪರಿಕರಗಳು ಎಲ್ಲಿಗೆ ತಲುಪುತ್ತಿದೆ ಎಂಬುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

ಮ್ಯಾನ್‌ಹೋಲ್ ಪ್ರಕರಣ, ಇಬ್ಬರ ಸೆರೆ
ಮಂಗಳೂರು: ಸಫಾಯಿ ಕರ್ಮಚಾರಿಗಳನ್ನು ಮ್ಯಾನ್‌ಹೋಲ್‌ಗೆ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಪೊಲೀಸರು ಇಬ್ಬರು ವ್ಯವಸ್ಥಾಪಕರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬಿಹಾರ ಮೂಲದ ಸಂಜಯ್ ಮಿಶ್ರಾ ಮತ್ತು ರವೀಂದ್ರ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದೆ. ಇವರು ಲೇಡಿಗೋಷನ್ ಆಸ್ಪತ್ರೆಯ ಎದುರು ಇರುವ ಸುಲಭ ಶೌಚಾಲಯದ ವ್ಯವಸ್ಥಾಪಕರಾಗಿದ್ದಾರೆ. ಕಳೆದ ಒಂದು ವಾರದಿಂದ ಇಲ್ಲಿನ ಶೌಚಾಲಯ ಬ್ಲಾಕ್ ಆಗಿ ಮ್ಯಾನ್‌ಹೋಲ್ ತುಂಬಿ ತುಳುಕುತ್ತಿತ್ತು.
ಈ ಹಿನ್ನೆಲೆಯಲ್ಲಿ ವ್ಯವಸ್ಥಾಪಕರು ಮಂಗಳವಾರ ಮಧ್ಯಾಹ್ನವೇ ಬಿಹಾರ ಮೂಲದ ಇಬ್ಬರು ಸಫಾಯಿ ಕರ್ಮಚಾರಿಗಳಾದ ರಾಜನ್ ಮತ್ತು ಪುಷ್ಪಠಾಕೂರ್ ಅವರನ್ನು ಕರೆ ತಂದು ಮ್ಯಾನ್‌ಹೋಲ್‌ಗೆ ಇಳಿಸಿದ್ದರು. ಈ ಬಗ್ಗೆ ನಿನ್ನೆಯ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮನಪಾ ಕಾರ್ಯಪಾಲಕ ಅಭಿಯಂತರರಾದ ರಮೇಶ್ ಅವರು ನೀಡಿದ ದೂರಿನಂತೆ ನಿನ್ನೆ ಪಾಂಡೇಶ್ವರ ಪೊಲೀಸರು ಇಬ್ಬರನ್ನು ಬಂಧಿಸಿ ಸೆ.೧೪ರಡಿ ಕೇಸು ದಾಖಲಿಸಿದ್ದಾರೆ. ಮ್ಯಾನ್‌ಹೋಲ್‌ಗೆ ಇಳಿಸುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಈ ಪ್ರಕರಣ ಸಾಬೀತಾದಲ್ಲಿ ಆರೋಪಿಗಳಿಗೆ ಐದು ತಿಂಗಳಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

ಪರಿವಾರಕಾನ ಮೀನು ಮಾರುಕಟ್ಟೆಗೆ ತಡೆ

Posted by JAYAKIRANA Kirana on | 0 comments | Leave a comment...

ತಾ.ಪಂ. ಆದೇಶಕ್ಕೆ ಆಕ್ಷೇಪ
ಸುಳ್ಯ: ಮೀನು ವ್ಯಾಪಾರಿಗಳ ಮಧ್ಯೆ ಘರ್ಷಣೆಗೆ ಕಾರಣವಾಗಿದ್ದ ಆಲೆಟ್ಟಿ ಗ್ರಾಮದ ಪರಿವಾರಕಾನ ಎಂಬ ಲ್ಲಿರುವ ಹಸಿ ಮೀನು ಮಾರಾಟ ಅಂಗಡಿಗೆ ತಾ.ಪಂ. ಅಧ್ಯಕ್ಷರು ತಡೆ ನೀಡಿದ್ದು, ಗುರುವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಆಲೆಟ್ಟಿ ಗ್ರಾ. ಪಂ. ಗ್ರಾಮದ ಜನರಿಗೆ ಅಗತ್ಯ ಎಂಬ ನೆಲೆಯಲ್ಲಿ ಮೀನು ಮಾರಾಟಕ್ಕೆ ಪರವಾನಿಗೆ ನೀಡಿತ್ತು. ಸ್ಥಳೀಯಾಡಳಿತದ ನಿರ್ಧಾರಕ್ಕೆ ವ್ಯತಿರಿಕ್ತವಾಗಿ ತಾ.ಪಂ. ಅಧ್ಯಕ್ಷರು ಆ ಮಳಿಗೆಗೆ ತಡೆ ನೀಡಿದ್ದು ಸರಿಯಲ್ಲ ಎಂದು ಜಿ.ಪಂ.ಸದಸ್ಯೆ ಸರಸ್ವತಿ ಕಾಮತ್ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವ ಜನಿಕರಿಂದ ಬಂದ ದೂರಿನ ಮೇರೆಗೆ ಅದು ತಾ.ಪಂ. ಅಧ್ಯಕ್ಷರ ನ್ಯಾಯಾ ಲಯ ತಡೆ ನೀಡಿದ್ದು, ಅದಕ್ಕೆ ಅಪೀಲು ಮಾಡಲು ಅವಕಾಶವಿದೆ. ಅದನ್ನು ಇಲ್ಲಿ ಪ್ರಸ್ತಾಪಿಸುವುದು ಸರಿಯಲ್ಲ ಎಂದು ತಾ.ಪಂ. ಅಧ್ಯಕ್ಷ ಕೇಶವ ಭಟ್ ಮುಳಿಯ ತಿಳಿಸಿದರು.
ಮರ್ಕಂಜ ಗ್ರಾ. ಪಂ. ಕಾರ್ಯ ದರ್ಶಿಯನ್ನು ಬದಲಾಯಿಸುವಂತೆ ಅಲ್ಲಿನ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ತಾ.ಪಂ.ಗೆ ಕಳುಹಿಸಿದ್ದರೂ, ಇನ್ನೂ ಕ್ರಮ ಕೈಗೊಂಡಿಲ್ಲ. ಆದರೆ ಈ ವಿಚಾರವಾಗಿ ಸಾರ್ವಜನಿಕ ಅರ್ಜಿ ಬಂದ ದಿನವೇ ಸ್ಥಳೀಯ ಗ್ರಾ. ಪಂ. ಅಧ್ಯಕ್ಷರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಡೆಯಾಜ್ಞೆ ನೀಡಲಾಗಿದೆ ಎಂದು ಸರಸ್ವತಿ ಕಾಮತ್ ಅಸಹನೆ ವ್ಯಕ್ತಪಡಿಸಿದರು.
ತಾ.ಪಂ.ಗೆ ಕೇಂದ್ರ ಸರ್ಕಾರದಿಂದ, ರಾಜ್ಯ ಸರ್ಕಾರದಿಂದ ಯಾವ ಯಾವ ಯೋಜನೆಗಳಲ್ಲಿ ಎಷ್ಟೆಷ್ಟು ಅನುದಾನ ಬಂದಿದೆ ಮತ್ತು ಅದರಲ್ಲಿ ಎಷ್ಟು ಖರ್ಚಾ ಗಿದೆ. ಎಷ್ಟು ಹಿಂದಕ್ಕೆ ಹೋಗಿದೆ. ಇದರ ಬಗ್ಗೆ ಮಾಹಿತಿ ಬೇಕು ಎಂದು ಕಾಮತ್ ಬೇಡಿಕೆಗೆ ಇನ್ನೋರ್ವ ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ ನೀವು ಲಿಖಿತವಾಗಿ ಮಾಹಿತಿ ಕೇಳಿ ಎಂದದ್ದು ಕಾಮತ್‌ರನ್ನು ಕೆರಳಿಸಿತು. ಕಾರ್ಯ ನಿರ್ವಹಣಾಧಿಕಾರಿ ಮಲ್ಲೇಸ್ವಾಮಿ ಮಧ್ಯೆ ಪ್ರವೇಶಿಸಿ ಸಭೆಯಲ್ಲಿ ಸದಸ್ಯರು ಕೇಳಿದ ಅಗತ್ಯ ಮಾಹಿತಿ ನೀಡಬೇಕು. ಅದನ್ನು ಲಿಖಿತವಾಗಿ ಕೇಳುವ ಅಗತ್ಯವಿಲ್ಲ ಎಂದು ಸಮಜಾಯಿಸಿ ನೀಡಿದರು.
ಜಿ.ಪಂ. ಎಂಜಿನಿಯರಿಂಗ್ ವಿಭಾ ಗದಿಂದ ಎಷ್ಟು ಕೆಲಸಗಳು ಆಗಿದೆ. ಎಷ್ಟು ಬಾಕಿ ಇದೆ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಅಂಗಾರ ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟ ಉತ್ತರ ನೀಡಲು ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಾಕಾರಿ ಎಂಜಿನಿಯರ್ ನಾರಾಯಣ ನಾಯ್ಕ್ ವಿಫಲರಾದರು. ಇದರಿಂದ ಬೇಸರಗೊಂಡ ಶಾಸಕರು ಸಭೆಗೆ ಬರುವಾಗ ಅಗತ್ಯ ಮಾಹಿತಿ ಹಿಡಿದುಕೊಂಡು ಬರಬೇಕೆನ್ನುವ ಬಗ್ಗೆ ಗೊತ್ತಿಲ್ಲವಾ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಅಂತರ್ಜಲ ಮಟ್ಟ ಕುಸಿತವಾಗಿದೆ ಎಂಬ ಕಾರಣಕ್ಕೆ ೧೯೯೭ರಲ್ಲಿ ಸುಳ್ಯ ತಾಲೂಕನ್ನು ಭೂಗರ್ಭ ವಿಜ್ಞಾನ ಇಲಾಖೆ ಕಪ್ಪು ಪಟ್ಟಿಗೆ ಸೇರಿಸಿತ್ತು. ಆ ಬಳಿಕ ೨೦೦೪ರಲ್ಲಿ ಅದನ್ನು ತೆಗೆದು ಹಾಕಿತ್ತು. ಹಾಗಿದ್ದೂ ಇಲ್ಲಿ ನೀರಾವರಿ ಪಂಪ್ ಸೆಟ್ಟಿಗೆ ಹೊಸ ಸಂಪರ್ಕ ನೀಡುತ್ತಿಲ್ಲ. ಅಕ್ರಮ ಸಕ್ರಮದ ಹೆಸರಿನಲ್ಲಿ ರೈತರಿಂದ ಹಣವನ್ನು ದೋಚಲಾಗುತ್ತಿದೆ ಎಂದು ಸದಸ್ಯರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾ ಅಧಿಕಾರಿ, ಕಪ್ಪುಪಟ್ಟಿಯಿಂದ ಸುಳ್ಯ ತಾಲೂಕನ್ನು ತೆಗೆದು ಹಾಕಿರುವ ಬಗ್ಗೆ ಇಂಧನ ಇಲಾಖೆಯಿಂದ ಮೆಸ್ಕಾಂಗೆ ಯಾವುದೇ ಸುತ್ತೋಲೆ ಬಂದಿಲ್ಲ. ಹಾಗಾಗಿ ಹೊಸ ಪಂಪು ಸೆಟ್ಟುಗಳಿಗೆ ಸಂಪರ್ಕ ನೀಡುತ್ತಿಲ್ಲ ಎಂದರು.
ತಾ.ಪಂ.ನಿಂದ ದಬ್ಬಾಳಿಕೆಗೆ ಖಂಡನೆ
ಕಾಂಗ್ರೆಸ್ ಬೆಂಬಲಿತ ಗ್ರಾ. ಪಂ.ಗಳ ಮೇಲೆ ತಾ.ಪಂ. ಆಡಳಿತ ನಿರಂತರ ದಬ್ಬಾಳಿಕೆ ನಡೆಸುತ್ತದೆ ಎಂದು ಗ್ರಾ. ಪಂ. ಸದಸ್ಯರುಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಮನವಿ ಮಾಡಿದ ಒಕ್ಕೂಟದ ಅಧ್ಯಕ್ಷ ಜಿ.ಕೆ.ಹಮೀದ್, ಮೀನು ಮಾರಾಟದ ಪರವಾನಿಗೆಯನ್ನು ರದ್ದು ಮಾಡುವ ಮೂಲಕ ತಾ.ಪಂ. ಅಧ್ಯಕ್ಷರು ಏಕಪಕ್ಷೀಯವಾಗಿ ನಡೆದು ಕೊಂಡಿದ್ದಾರೆ ಎಂದು ದೂರಿದ್ದಾರೆ. ಪರವಾನಿಗೆಯನ್ನು ರದ್ದು ಮಾಡಿದ್ದು ಸರಿಯಾದ ಕ್ರಮವಲ್ಲ, ಅದನ್ನು ಹಿಂಪಡೆಯಬೇಕೆ ಎಂದು ಆಲೆಟ್ಟಿ ಗ್ರಾ. ಪಂ. ಅಧ್ಯಕ್ಷ ರಾಧಾಕೃಷ್ಣ ಪರಿವಾರಕಾನ ತಾ.ಪಂ. ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಮೀನು ಮಾರಾಟ ವಿವಾದ ಸಾರ್ವಜನಿಕ ಗುಂಪು ಘರ್ಷಣೆಗೆ ಕಾರಣ ವಾಗಿತ್ತು ಹಾಗೂ ಶುಚಿತ್ವದ ಕಡೆಗೆ ಯಾವುದೇ ಗಮನ ನೀಡದೇ ಇರುವುದು ಮೀನು ಮಾರಾಟಕ್ಕೆ ತಡೆ ನೀಡಿದ್ದು ಹೊರತು ಯಾವುದೇ ಏಕಪಕ್ಷೀಯ ನಿರ್ಧಾರವಲ್ಲ ಎಂದು ತಾ.ಪಂ. ಅಧ್ಯಕ್ಷ ಕೇಶವ ಭಟ್ ಮುಳಿಯ ತಿಳಿಸಿದ್ದಾರೆ.

ವಿದ್ಯಾರ್ಥಿಗಳನ್ನು ಸಮಾಜ ಕಂಟಕರನ್ನಾಗಿಸಬೇಡಿ ಪ್ಲೀಸ್

Posted by JAYAKIRANA Kirana on | 0 comments | Leave a comment...

ಗೆಳೆಯರೇ, ಕಳೆದ ವಾರ ನಮ್ಮ ದ.ಕ.ದ ಎಲ್ಲಾ ಸುದ್ದಿ ಪತ್ರಿಕೆಗ ಳಲ್ಲಿ ಒಂದು ಸುದ್ದಿ ಪ್ರಕಟವಾಗಿ ಸಾಕಷ್ಟು ಚರ್ಚೆಗೊಳಪಟ್ಟಿತ್ತು. ಅದು ಮುಸ್ಲಿಂ ಮಹಿಳೆಗೆ ಸಂಬಂಧಿಸಿದ ವಿಷಯ. ಮುಸ್ಲಿಂ ಮಹಿಳೆಯ ಹಕ್ಕಿನ ಮೇಲೆ ನಡೆದ ದಾಳಿ ಎಂದು ವ್ಯಾಖ್ಯಾನಿಸಲಾಗಿತ್ತು. ನಿಜ ಹೇಳಬೇಕಾ ದರೆ ಇಂಥಾ ಪ್ರಕರಣ ಇದು ಮೊದಲು ನಡೆದದ್ದೇನಲ್ಲ. ಹಿಂದೆಯೂ ಬಹಳ ಸಲ ಹಲವು ಕಡೆ ಈ ತರದ ದಾಳಿ ನಡೆದಿತ್ತು. ಆದರೆ ಈ ಸಲ ಸ್ವಲ್ಪ ಬೇರೆಯದ್ದೇ ರೀತಿಯಲ್ಲಿ ಚರ್ಚೆಗೊಳಗಾಯಿತು. ಕಾರಣ ಆ ದಾಳಿ ನಡೆದದ್ದು ಒಂದು ಅನಿರೀಕ್ಷಿತ ಕಡೆಯಿಂದ! ಇಷ್ಟು ಓದುವಾಗ ಇದು ಯಾವ ವಿಷಯಕ್ಕೆ ಸಂಬಂಧಿಸಿದ ಪೀಠಿಕೆ ಎಂಬುವುದು ಚಾಣಾಕ್ಷಮ ತಿಗಳಾದ ನೀವು ಗ್ರಹಿಸಿಕೊಂಡಿರುತ್ತೀರಿ ಅಲ್ಲವೇ?
ಹೌದು. ಅದು ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾದ ಬಗ್ಗೆ ತೆಗೆದ ತಕರಾರು ಮತ್ತು ಆ ತಕರಾರು ತೆಗೆದದ್ದು ತಮ್ಮ ಮೇಲೆ ಯಾವುದೇ ಕಾರಣಕ್ಕೆ ದ್ವೇಷತಾಳಲಾರರು ಎಂದು ಮುಸ್ಲಿಮರು ಭಾವಿಸಿಕೊಂಡಿದ್ದ ಕ್ರಿಶ್ಚಿಯನ್ ಸಮುದಾಯದ ನೇತೃತ್ವದಲ್ಲಿರುವ ಶಿಕ್ಷಣ ಸಂಸ್ಥೆಯ ಕಡೆ ಯಿಂದ.
ಆ ಶಿಕ್ಷಣ ಸಂಸ್ಥೆ ೧೩೨ ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ಸಂಸ್ಥೆ. ಸಾವಿರಾರು ಉದ್ಯಮಿಗಳನ್ನು, ಮೇಧಾವಿಗಳನ್ನು, ವೈದ್ಯರನ್ನು, ಇಂಜಿನಿ ಯರ್‌ಗಳನ್ನು ಸೃಷ್ಟಿಸಿಕೊಟ್ಟ ಸಂಸ್ಥೆ. ಕ್ರಿಶ್ಚಿಯನ್ ಸಮುದಾಯದ ನೇತೃತ್ವ ವಿದ್ದರೂ ಎಲ್ಲೂ ಎಂದೂ ಅದು ಕ್ರಿಶ್ಚಿಯನ್‌ರಿಗೆ ಮಾತ್ರ ಎಂಬ ಭಾವನೆ ಮೂಡಿಸದೆ ಯಶಸ್ಸು ಪಡೆದ ಸಂಸ್ಥೆ. ಎಲ್ಲ ಜಾತಿ ಮತ ಪಂಥದ ವಿದ್ಯಾ ರ್ಥಿಗಳಿಗೆ ಸಮಾನಾವಕಾಶ ಕೊಟ್ಟು ಆ ವಿದ್ಯಾರ್ಥಿಗಳನ್ನು ಬೆಳೆಸಿ ಅವ ರೊಂದಿಗೆ ತಾನೂ ಬೆಳೆದ ಸಂಸ್ಥೆ. ಅಂಥ ಸಂಸ್ಥೆಗೆ ಈ ೧೩೨ ವರ್ಷಗ ಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ಕಾಣದ ಕೊರತೆ ಈ ಸಲ ಕಂಡಿ ತಂತೆ! ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾಧರಿಸಿ ತರಗತಿ ಪ್ರವೇಶಿಸು ವುದು ಅಷ್ಟಾಗಿ ಸರಿ ಕಾಣುವುದಿಲ್ಲ. ಹಾಗಾಗಿ ಮುಸ್ಲಿಂ ವಿದ್ಯಾರ್ಥಿನಿ ಯರು ತರಗತಿಗೆ ಬುರ್ಖಾಧರಿಸಿ ಪ್ರವೇಶಿಸಬಾರದು ಎಂದು ನಿರ್ಧರಿ ಸಿತು. ಈ ವಿಷಯವನ್ನು ತನ್ನ ಪ್ರಾಸ್ಪೆಕ್ಟಸ್‌ನಲ್ಲಿ ನಮೂದಿಸಿತು. ಇದನ್ನು ಕಂಡ ಮುಸ್ಲಿಂ ವಿದ್ಯಾರ್ಥಿನಿಯರು ಇದು ಯಾಕೋ ಹಳಿ ತಪ್ಪುತ್ತಿದೆ ಯೆಂದು ವಿಚಾರವನ್ನು ಹೆತ್ತವರ ಗಮನಕ್ಕೆ ತರುತ್ತಾರೆ. ವಿಷಯ ಬಹಿ ರಂಗವಾಗಿ ಪತ್ರಿಕೆಗಳಲ್ಲೂ ಚರ್ಚೆಗೊಳಗಾಗುತ್ತದೆ. ಮುಸ್ಲಿಂ ವಿರೋಧಿ ಯೆಂದು ಬ್ರಾಂಡ್ ಆಗಿರುವ ಆರೆಸ್ಸೆಸ್ ನೇತೃತ್ವದ ಶಿಕ್ಷಣ ಸಂಸ್ಥೆಗಳಲ್ಲಿ ಇಂಥಾ ವಿಚಾರ ಬಂದರೆ ಅದು ಸಾಮಾನ್ಯ ಎಂಬಂತಿದ್ದ ಮುಸ್ಲಿಂ ಧುರೀಣರಿಗೆ ತಮ್ಮಷ್ಟೇ ಕಷ್ಟ ಸಹಿಷ್ಣುಗಳಾದ ಕ್ರಿಶ್ಚಿಯನ್ ನೇತೃತ್ವದ ಸಂಸ್ಥೆ ಯೊಂದರಲ್ಲೇ ಇಂಥಾ ಅವಸ್ಥೆ ಎದುರಾದಾಗ ಗಂಭೀರವಾಗಿ ಚರ್ಚೆ ಮಾಡತೊಡಗುತ್ತಾರೆ. ತಮ್ಮ ಹೆಣ್ಮಕ್ಕಳನ್ನು ಈ ಸಂಸ್ಥೆಗೆ ಅಥವಾ ಇಂಥದ್ದೇ ಸಂಸ್ಥೆಗೆ ಸೇರ್ಪಡೆಗೊಳಿಸಬೇಕೆಂದು ಸಕಲ ತಯಾರು ಮಾಡಿಟ್ಟಿದ್ದ ಕೆಲ ಹೆತ್ತವರಿಗೆ ಒಮ್ಮೆಗೆ ಏನು ಮಾಡಬೇಕೆಂದು ಗೊತ್ತಾಗದಂತಾಗುತ್ತದೆ.
ಆಗ ಎಚ್ಚೆತ್ತುಕೊಂಡ ಸಂಸ್ಥೆ ಆ ಬಗ್ಗೆ ಸ್ಪಷ್ಟೀಕರಣ ಕೊಡುತ್ತದೆ. ನಮ್ಮ ಸಂಸ್ಥೆ ಎಲ್ಲಾ ಜಾತಿ, ಮತ, ಪಂಥದ ಜನರನ್ನು ಒಂದೇ ಭಾವನೆಯಲ್ಲಿ ನೋಡುತ್ತದೆ. ಯಾರದ್ದೇ ಭಾವನೆಗಳಿಗೆ ಘಾಸಿ ಮಾಡುವ ಕೆಲಸ ನಮ್ಮ ಸಂಸ್ಥೆ ಮಾಡುವುದೇ ಇಲ್ಲ. ನಮಗೆ ಮುಸ್ಲಿಂ ವಿದ್ಯಾರ್ಥಿನಿಯರ ಬುರ್ಖಾದ ಬಗ್ಗೆ ಯಾವುದೇ ಪೂರ್ವಾಗ್ರಹವಿಲ್ಲ. ತರಗತಿಯೊಳಗಡೆಯೂ ಬುರ್ಖಾ ಧರಿಸಿ ಕೂರಲು ನಮಗೆ ಯಾವುದೇ ಆಕ್ಷೇಪ ಇಲ್ಲ. ಆದರೆ ತರಗತಿಯೊ ಳಗಡೆ ಮುಖ ಮುಚ್ಚುವ ಬುರ್ಖಾ ಧರಿಸಿ ಕೂರಲು ಅವಕಾಶವಿಲ್ಲ ಎಂದಷ್ಟೇ ನಮ್ಮ ಕಾಲೇಜು ಪ್ರಾಸ್ಪಕ್ಟಸ್‌ನಲ್ಲಿರುವ ಉಲ್ಲೇಖದ ತಾತ್ಪರ್ಯ ಎಂದಿತು.
ಇಲ್ಲೊಂದು ಪ್ರಶ್ನೆ ಏಳುತ್ತದೆ. ಪ್ರಾಸ್ಪೆಕ್ಟಸ್‌ನಲ್ಲಿ ಇಂಥಾ ಉಲ್ಲೇಖ ಮಾಡಲು ಕಾರಣವೇನು? ಯಾರಾದರೂ ಮುಸ್ಲಿಂ ವಿದ್ಯಾರ್ಥಿನಿ ತನ್ನ ಮುಖದ ಮೇಲಿನ ಪರದೆ ತೆಗೆಯದೇ ಕೂತಿದ್ದಳಾ? ನನ್ನ ಅಂದಾಜಿನ ಪ್ರಕಾರ ಅಂಥಾ ಸಾಧ್ಯತೆ ಇಲ್ಲವೇ ಇಲ್ಲ. ಯಾಕೆಂದರೆ ಕ್ಲಾಸ್‌ರೂಮಿನಲ್ಲಿ ಕುಳಿತ ನಂತರವೂ ಮುಖದ ಮೇಲಿನ ಪರದೆ ತೆಗೆಯಲೇ ಬಾರದು ಎಂದು ನಿರ್ಧರಿಸುವಷ್ಟು ಕರ್ಮಠ ಇಸ್ಲಾಮೀ ಆಚಾರ ಅಳವಡಿಸಿಕೊಂಡಿರುವ ಮುಸ್ಲಿಂ ಹೆಣ್ಮಕ್ಕಳು ಇಂಥಾ (ಕ್ರಿಶ್ಚಿಯನ್ ನೇತೃತ್ವದಲ್ಲಿರುವ) ಶಿಕ್ಷಣ ಸಂಸ್ಥೆಗೆ ಸೇರ್ಪಡೆಯಾಗಲು ಸಾಧ್ಯವೇ ಇಲ್ಲ. ಹಾಗಾದರೆ ಏನೂ ಪ್ರಚೋದನೆಯಿಲ್ಲದೆ ಇಂಥಾ ನಿಯಮ ಶಾಲಾ ಆಡಳಿತ ರೂಪಿಸಲು ಕಾರಣವೇನು?
ಇದೇ ಅರ್ಥವಾಗದ ಪ್ರಶ್ನೆ. ಗೆಳೆಯರೇ, ಹಿಂದೊಮ್ಮೆ ಇದೇ ಜಯ ಕಿರಣ ಪತ್ರಿಕೆಯಲ್ಲಿ ಬರಹಗಾರರೋರ್ವರು ಏನೋ ಕಾರಣ ಮುಂದಿಟ್ಟು ಶಾಲಾ ಕಾಲೇಜುಗಳಲ್ಲಿ ವ್ಯವಸ್ಥೆ ಮಾಡುವ ಟೂರ್ - ಪಿಕ್‌ನಿಕ್ ಮೊದಲಾದ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದರು. ಅದಕ್ಕೆ ಇನ್ನೋರ್ವ ಬರಹಗಾರರು ಅದು ಸರಿಯಲ್ಲ, ಟೂರ್ - ಪಿಕ್ನಿಕ್ ಮೊದ ಲಾದ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಜಾತಿ, ಮತ ಬೇಧ ಇಲ್ಲದೆ ಇನ್ನಷ್ಟು ಹತ್ತಿರವಾಗುತ್ತಾರೆ. ಪರಸ್ಪರ ಹೆಚ್ಚು ಅರ್ಥಮಾಡಿಕೊಳ್ಳಲು ಇಂಥಾ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ. ಆದ್ದರಿಂದ ಶಾಲಾ ಕಾಲೇಜುಗ ಳಲ್ಲಿ ಆಡಳಿತ ಮಂಡಳಿ ಟೂರ್ - ಪಿಕ್‌ನಿಕ್ ಮೊದಲಾದ ಕಾರ್ಯಕ್ರಮಗ ಳನ್ನು ಅವಶ್ಯಕವಾಗಿ ಮಾಡಬೇಕು ಎಂದಿದ್ದರು.
ಇಲ್ಲದಿದ್ದರು ನಿಜವಲ್ವೇ!? ನಾನು ಮುಸ್ಲಿಂ, ನಾನು ಹಿಂದೂ, ನಾನು ಕ್ರಿಶ್ಚಿಯನ್ ಎಂದು ಪರಸ್ಪರ ಹಗೆ ಕಟ್ಟಿಕೊಂಡೇ ಜೀವಿಸುವ 'ದೊಡ್ಡವರೆನಿ ಸಿಕೊಂಡವರೇ' ತುಂಬಿರುವ ಕಲುಷಿತ ವಾತಾವರಣದಲ್ಲಿ ಬೆಳೆಯುತ್ತಿರುವ ಮುಗ್ಧ ಮಕ್ಕಳು ತಾವೂ ಹಾಗಾಗಬೇಕೇ? ಜಾತಿ ಮತ ಪಂಥಗಳ ಆಚೆ ಅವರು ಆಲೋಚಿಸುವುದು ಬೇಡವೇ? ಬೇಕು ಎಂದಾದರೆ ಅಂಥಾ ಮೌಲ್ಯ ಗಳನ್ನು ವ್ಯವಸ್ಥಿತವಾಗಿ ಕಲಿಯಬೇಕಾದದ್ದು, ಮುಂದೆ ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಲು ತರಬೇತಿ ಪಡೆಯುವುದು ಎಲ್ಲಿ? ಶಾಲಾ ಕಾಲೇಜುಗಳ ಲ್ಲಿಯೇ ಅಲ್ಲವೇ? ಇಂಥಾ ಶಾಲಾ ಕಾಲೇಜುಗಳಲ್ಲಿಯೇ ಗೊಂದಲಮಯ ವಾತಾವರಣ ಎದುರಾದರೆ!? ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎದೆಗುಂದಿ ದರೆ? ಆ ಕಾರಣಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಎಂಥಾ ಅವಸ್ಥೆ ಯಲ್ಲೂ ವಿದ್ಯಾರ್ಥಿಗಳಿಗೆ ತಮ್ಮ ಧರ್ಮದ ಬಗೆಗೆ ದುರಾಭಿಮಾನ ಅಥವಾ ಕೀಳರಿಮೆ ಹುಟ್ಟಲೇ ಬಾರದು. ಓರ್ವ ವಿದ್ಯಾರ್ಥಿಗೆ ತನ್ನ ಧರ್ಮದಲ್ಲಿ ಅಭಿಮಾನ ಹೆಚ್ಚಾದರೆ ಅದೂ ಧರ್ಮದ ಬಗೆಗೆ ಅಭಿ ಮಾನ/ಅಭಿಪ್ರಾಯ ಕಡಿಮೆಯಾಗುತ್ತಾ ಹೋಗುತ್ತದೆ. ಹಾಗೆಯೇ ಒಬ್ಬನಿಗೆ ತನ್ನ ಧರ್ಮದ ಬಗೆಗಿನ ಕೆಟ್ಟ ಭಾವನೆ ಸೃಷ್ಟಿಯಾದರೆ ಅನ್ಯ ಧರ್ಮದ ಬಗ್ಗೆ ಅಸೂಯೆ, ಅಸಹನೆ ಬೆಳೆಯುವ ಸಾಧ್ಯತೆ ಇದೆ. ಏನೇ ಆದರೂ ಎರಡೂ ಅಪಾಯಕಾರಿ ಎನ್ನುವುದು ಮಾತ್ರ ಸ್ಪಷ್ಟ. ಆದ್ದರಿಂದ ಶಾಲಾ ಕಾಲೇಜುಗಳು ಯಾವುದೇ ಕಾರಣಕ್ಕೂ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ತಾವು ಹಿಂದೂ ಸಂಸ್ಥೆಗಳಲ್ಲಿ ಅಥವಾ ಮುಸ್ಲಿಂ ಸಂಸ್ಥೆಗಳಲ್ಲಿ ಅಥವಾ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆ ಯುತ್ತಿದ್ದೇವೆ ಎಂಬ ಭಾವನೆ ಮೂಡಲೇ ಬಾರದು. ಹಾಗೇನಾದರೂ ಮೂಡಿದರೆ ಅವರ ಸಹಜ ಕಲಿಕೆಗೆ ಅದು ತೊಡಕಾಗುವ ಸಾಧ್ಯತೆ ಇರುತ್ತದೆ. ವಿದ್ಯಾಭ್ಯಾಸ ನಂತರದ ಜೀವನದಲ್ಲಿ ಹಿಂದೂ ಹಿಂದೂ ವಾಗಿಯೇ (ಹಿಂದೂ ಆಚರಣೆಗಳನ್ನು ಮಾಡಿಕೊಂಡೇ, ಹಿಂದೂ ಚಿಹ್ನೆಗಳನ್ನು ಧರಿಸಿ ಕೊಂಡೇ) ಮುಸ್ಲಿಂ ಮುಸ್ಲಿಮನಾಗಿಯೇ, ಕ್ರಿಶ್ಚಿ ಯನ್ ಕ್ರಿಶ್ಚಿಯನ್ನನಾಗಿಯೇ, ಬೌದ್ದ ಬೌದ್ಧನಾಗಿಯೇ ಯಾವುದೇ ತಂಟೆ ತಕರಾರಿಲ್ಲದೆ ಪರಸ್ಪರ ಬೆರೆತು ಉಸಿರಿಗೆ ಉಸಿರು ತಾಗಿಸಿ ಹೇಗೆ ಜೀವನ ನಡೆಸುವುದೆಂಬುವುದಕ್ಕೆ ಪಕ್ಕಾ ಮಾದರಿಯಾಗಿರ ಬೇಕು ಶಾಲಾ ಕಾಲೇಜುಗಳ ಜೀವನ! ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಲ್ಲಿ ತಾನು ಹಿಂದೂ, ತಾನು, ಮುಸ್ಲಿಂ, ತಾನು ಕ್ರಿಶ್ಚಿಯನ್ ಎಂದೋ ಅಥವಾ ಅವು ಹಿಂದೂ, ಅವನು ಮುಸ್ಲಿಂ, ಅವನು ಕ್ರಿಶ್ಚಿ ಯನ್ ಎಂದೋ ಯಾವ ಭಾವನೆಯೂ ಬರಬಾರದು. ವಿದ್ಯಾರ್ಥಿ ಜೀವನದ ನಂತರವೂ ಬರಬಾರದು.
ಶಿಕ್ಷಣ ಸಂಸ್ಥೆಗಳು ಪ್ರಸಕ್ತ ಕಾಲಘಟ್ಟದಲ್ಲಿ ಇಂಥಾ ಗುರಿಯನ್ನು ಹೊಂದಬೇಕು. ಅಕ್ಷರ ಕಲಿಕೆಯ ಜೊತೆಗೆ ಮೌಲ್ಯಗಳನ್ನೂ ಕಲಿಸಿ ಕೊಡಬೇಕು.

ಸಂಬಂಧಗಳ ಬೆನ್ನತ್ತುವ ಮುನ್ನ ಎಚ್ಚರ ವಹಿಸುವುದೊಳಿತು

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೩೫ ವರ್ಷದ ಯುವತಿ. ನನಗೆ ಇಬ್ಬರು ಮಕ್ಕಳು. ೧೧ ವರ್ಷಗಳ ಹಿಂದೆ ಮದುವೆಯಾಗಿತ್ತು. ನನ್ನ ಗಂಡ ಆಗ ವಿದೇಶದಲ್ಲಿದ್ದರು. ನನ್ನ ಮನೆಯವರೇ ಒಳ್ಳೆಯ ಸಂಬಂಧ ಎಂದುಕೊಂಡು ಮದುವೆ ಮಾಡಿದರು. ಆದರೆ ಬಳಿಕ ಅವರ ಒಂದೊಂದೇ ವಿಚಾರ ನನಗೆ ತಿಳಿಯಿತು. ಅವರು ಬೇರೊಬ್ಬ ರನ್ನು ಮದುವೆಯಾಗಿ ಅವರಿಂದ ದೂರವಿದ್ದರು. ಆಗಲೇ ಅವ ರಿಗೆ ೪೦ರಷ್ಟು ವಯಸ್ಸಾಗಿತ್ತು. ನಾನು ಸಂಸಾರದಲ್ಲಿ ನಿರೀಕ್ಷಿಸಿ ದಷ್ಟು ಸುಖ ನನಗೆ ಸಿಗಲಿಲ್ಲ. ಆದರೂ ನಾನು ಮನೆಯವರ ಮರ್ಯಾದೆಗೆ ಅಂಜಿ ಸಂಸಾರ ಸರಿದೂಗಿಸಿಕೊಂಡು ಹೋಗು ತ್ತಿದ್ದೆ. ಅವರು ಇತ್ತೀಚೆಗೆ ವಿದೇಶವನ್ನು ಬಿಟ್ಟು ಊರಿನಲ್ಲಿಯೇ ನೆಲೆಸಿದ್ದಾರೆ. ನಾನೇ ಅವರಿಗೆ ಆರ್ಥಿಕ ಸಹಾಯ ಮಾಡಿದೆ. ನನ್ನ ತಂದೆ ಸಾಲ ಮಾಡಿ ಹಣದ ವ್ಯವಸ್ಥೆ ಮಾಡಿದರು. ಆದರೆ ಎರಡು ವರ್ಷದ ಹಿಂದೆ ನನ್ನನ್ನು ಬಿಟ್ಟು ಹೋದವರು ಮತ್ತೆ ಬಂದಿಲ್ಲ. ನಾನು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸು ತ್ತಿದ್ದೇನೆ. ನನಗೆ ಯಾವುದಾದರೂ ಕೆಲಸ ಮಾಡಬೇಕೆಂಬ ಮನ ಸ್ಸಿದೆ. ಆದರೆ ಇದಕ್ಕಾಗಿ ನಾನೇನು ಮಾಡಬೇಕೆಂದು ತಿಳಿಯು ತ್ತಿಲ್ಲ. ನನಗೆ ಇತ್ತೀಚೆಗೆ ನೆರೆಮನೆಯ ಯುವಕನೊಬ್ಬ ಪರಿಚಯ ವಾಗಿದ್ದಾನೆ. ನಾನು ಆತನನ್ನು ಇಷ್ಟಪಡುತ್ತಿದ್ದೇನೆ. ಆತನಿಗೆ ೩೧ ವರ್ಷ ವಯಸ್ಸು. ಮದುವೆಯಾಗಿಲ್ಲ. ಆತ ನಾವು ಬೇರೆ ಊರಿಗೆ ಹೋಗಿ ಮದುವೆಯಾಗೋಣ ಎಂದು ಹೇಳುತ್ತಿದ್ದಾನೆ. ಮನೆ ಯಲ್ಲಿ ನಾನೊಬ್ಬಳೇ ಇರುವಾಗ ಬಂದು ನನ್ನನ್ನು ತಬ್ಬಿಕೊಳ್ಳು ವುದು, ಮುದ್ದಿಸುವುದು ಮಾಡುತ್ತಾನೆ. ನನಗೆ ಆತನ ಸಂಗ ಇಷ್ಟವಾಗಿದೆ. ಆತ ನನ್ನ ಜೊತೆ ಸೇರುವ ಆಸೆ ವ್ಯಕ್ತಪಡಿಸುತ್ತಾನೆ. ಆದರೆ ನನಗೆ ಆತನನ್ನು ಸ್ವೀಕರಿಸ ಬೇಕೋ, ಬಿಡಬೇಕೋ ಎನ್ನುವುದು ಗೊತ್ತಾಗುತ್ತಿಲ್ಲ. ಆತ ನನಗೆ ಕಷ್ಟಕಾಲದಲ್ಲಿ ಆರ್ಥಿಕ ಸಹಾಯ ಮಾಡಿದ್ದಾನೆ. ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನಿಮ್ಮ ಹರೆಯದಲ್ಲಿ ಲೈಂಗಿಕ ಬಯಕೆಗಳು ಸಾಮಾನ್ಯ. ನೀವು ಅದನ್ನು ಎಷ್ಟು ಪ್ರಯತ್ನಪಟ್ಟು ಅದುಮಿಟ್ಟರೂ ಅದು ನಿಮ್ಮನ್ನು ಬಿಡಲಾರದು. ನೀವು ಆದಷ್ಟು ಬೇಗ ಬೇರೆ ಮದುವೆಯಾಗಿ. ನಿಮ್ಮ ಪಕ್ಕದ ಮನೆಯ ಪ್ರೇಮಿ ನಿಮ್ಮಿಂದ ಏನನ್ನು ಬಯಸುತ್ತಿದ್ದಾನೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಆತ ನಿಮ್ಮಿಂದ ದೇಹಸುಖ ಮಾತ್ರ ಬಯಸುತ್ತಿದ್ದರೆ ಆತನನ್ನು ವಿವಾಹವಾಗದಿರಿ. ಆತ ನಿಮ್ಮನ್ನು ಮದುವೆ ಯಾಗುತ್ತೇನೆ, ಅಷ್ಟರವರೆಗೆ ಜೊತೆಯಾಗಿರೋಣ ಎಂದರೆ ಒಪ್ಪದಿರಿ. ಇದರಿಂದ ಆತ ನಿಮ್ನನ್ನು ಬ್ಲಾಕ್‌ಮೇಲ್ ಮಾಡಲೂಬಹುದು. ಮದು ವೆಯಾಗಲು ಇಚ್ಛಿಸುವುದಾದರೆ ಆತನ ಜತೆ ವಿವರವಾಗಿ ಚರ್ಚಿಸಿ. ನಿಮ್ಮ ಮಕ್ಕಳ ಮುಂದಿನ ಬದುಕಿನ ಬಗೆಗೂ ಚಿಂತಿಸಿ. ಮಕ್ಕಳಿಗೆ ಯೋಗ್ಯ ಅಪ್ಪನಾಗಿ, ನಿಮಗೆ ಗಂಡನಾಗಿ ಇರುವುದಾದರೆ ಕಾನೂನು ಪ್ರಕಾರ ವಿವಾಹವಾಗಿ. ಆದರೆ ಅದಕ್ಕೂ ಮೊದಲು ಮೊದಲ ಗಂಡ ನಿಂದ ಕಾನೂನು ಪ್ರಕಾರ ಡೈವೋರ್ಸ್ ಪಡೆಯಬೇಕು. ಯಾಕೆಂದರೆ ಇನ್ನೊಂದು ಮದುವೆಯಾದ ಮೇಲೆ ಆತ ಮತ್ತೆ ಬಂದರೆ ಸಮಸ್ಯೆ ಯಾಗಬಾರದಲ್ಲವೇ?
ಆದ್ದರಿಂದ ಈ ಬಗ್ಗೆ ಕಾನೂನು ತಜ್ಞರ ನೆರವು ಪಡೆದು, ನಂತರ ವಿವಾಹವಾಗುವುದು ಒಳ್ಳೆಯದು. ಮದುವೆಯಾಗುವ ಮೊದಲು ಆತನ ಜತೆ ಚಕ್ಕಂದವಾಡುವುದಾಗಲೀ, ದೈಹಿಕ ಸಂಬಂಧ ಬೆಳೆಸುವುದಾಗಲೀ ಬೇಡ. ಇದರಿಂದ ನಿಮ್ಮ ಬಗ್ಗೆ ಜನರು ಕೆಟ್ಟದಾಗಿ ಅರ್ಥೈಸುವ ಸಾಧ್ಯ ತೆಯಿದೆ. ಚೆನ್ನಾಗಿ ಯೋಚಿಸಿ, ಮುಂದಡಿಯಿಡಿ. ಆತ ಓಡಿ ಹೋಗಿ ಬೇರೆ ಊರಿನಲ್ಲಿ ಮದುವೆಯಾಗೋಣ ಎಂದರೆ ಆತನ ಸಿದ್ಧತೆ, ಆತನ ಪೂರ್ವಾಪರ, ಅಲ್ಲಿ ನೀವು ಇರುವ ಸ್ಥಳ ಎಲ್ಲದರ ಬಗ್ಗೆ ಇನ್ನೊಮ್ಮೆ ಚಿಂತಿಸಿ ಮುಂದಡಿಯಿಡಿ.

ಅಕ್ರಮ ಗೋಸಾಗಾಟ ನಿಲ್ಲಿಸುವ ಪ್ರಯತ್ನ ಮಾಡಬೇಕಲ್ಲವೇ?

Posted by JAYAKIRANA Kirana on | 0 comments | Leave a comment...

ಎ.ವೆಂಕಟೇಶ ರಾವ್ ಅಳಪೆ
ಎ. ೨೦ ಹಾಗೂ ೨೭ರ ಪತ್ರಿಕೆಯಲ್ಲಿ ಪ್ರಕಟವಾದ 'ಫರಿಯಾದ್ ಅಂಕ ಣದ 'ಇಖರವರ ಬರಹಗಳನ್ನು ಸಕಾಲಿಕ ಎನ್ನಬಹುದು. ಯಾಕೆಂದರೆ ಪ್ರತಿ ದಿನ ವಾರ್ತಾಪತ್ರಿಕೆಗಳನ್ನು ಬಿಡಿಸಿದರೆ ನಮಗೆ ಮೊದಲು ಕಾಣುವುದು ಅಕ್ರಮ ಜಾನುವಾರುಗಳ ಸಾಗಾಣಿಕೆಗಳ ಸುದ್ದಿ. ಅದನ್ನು ತಡೆಗಟ್ಟಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. 'ಇಖ ರವರು ಬರಹಗಳನ್ನೇನೋ ಬರೆದಿದ್ದಾರೆ. ಆದರೆ ಅವುಗಳಲ್ಲಿ ಪ್ರಾಮಾಣಿಕತೆ ಮತ್ತು ತಾರ್ಕಿಕತೆಯ ಕೊರತೆ ಎದ್ದು ಕಾಣುತ್ತಿದೆ ಎನ್ನಬಹುದು. ಅವರಂದಂತೆ ಈ ತಿಂಗಳ ೭ನೇ ತಾರೀಖಿನಂದು ಕೊಟ್ಟಾರ ಚೌಕಿಯಲ್ಲಿ ನಡೆದ ಜಾನುವಾರು ಸಾಗಾಣಿಕೆಯ ಟೆಂಪೋ ಅಪಘಾತಕ್ಕೀಡಾಗಿ ೧೯ ಜಾನುವಾರುಗಳು ಸತ್ತು ರಸ್ತೆಯಲ್ಲಿ ಬಿದ್ದಿರುವುದನ್ನು ನೋಡುವುದು ಒಂದು ಭೀಕರ ದೃಶ್ಯ ಎನ್ನಲೇ ಬೇಕು. ಅವರಂದಂತೆ ಎಂಥಹಾ ಕಲ್ಲು ಹೃದಯವೂ ಕರಗಲೇ ಬೇಕು. ಆದರೆ 'ಇಖ ರವರೇ ಹೇಳಿದಂತೆ ಇಂಥಹ ಅಪಘಾತಗಳು ಸಾಮಾನ್ಯ ಮತ್ತು ಅವರ ಟಿಪ್ಪಣಿಗಳನ್ನು ಓದಿದಾಗ, ಅವರ ಅನುಕಂಪ ಜೀವ ಕಳೆದುಕೊಂಡ ಆ ಮೂಕಪ್ರಾಣಿಗಳ ಮೇಲಿರದೆ. ಅಪಘಾತದಿಂದ ಸತ್ತ ಪ್ರಾಣಿಗಳ ಕ್ವಿಂಟಾಲು ಗಟ್ಟಲೆ ಮಾಂಸ ವ್ಯರ್ಥವಾಯಿತಲ್ಲಾ ಎನ್ನುವಂತಿದೆ. ಅದೇ ರೀತಿ ಅದರಿಂದ ಆದ ನಷ್ಟದ ಬಗ್ಗೆ ಆ ಅಕ್ರಮ ಸಾಗಾಟ ಮಾಡಿದ ಮಿತ್ರರ ಮೇಲಾಗಿತ್ತು ಎನ್ನ ಬಹುದು. ಅಷ್ಟಕ್ಕೂ ರಸ್ತೆಯಲ್ಲಿ ಬಿದ್ದಿದ್ದ ೧೯ ಜಾನುವಾರುಗಳೂ ಅವಘಡದಲ್ಲಿ ಸತ್ತಿದ್ದವೇ? ಅಥವಾ ಟೆಂಪೋ ಮಗುಚಿಬಿದ್ದಾಗ ಅವುಗಳ ಹೆಣಗಳು ರಸ್ತೆಗೆ ಎಸೆಯಲ್ಪಟ್ಟವೋ? ಎನ್ನುವ ಅನುಮಾನವೂ ನನ್ನಲ್ಲಿದೆ. ಯಾಕೆಂದರೆ ೩೨ ಜಾನುವಾರುಗಳನ್ನು ಸಾಗಿಸಲು ಸಾಮಾನ್ಯವಾಗಿ ಎರಡು ದೊಡ್ಡ ಲಾರಿಗಳು ಬೇಕು. ಕೊನೆಯ ಪಕ್ಷ ಒಂದಾದರೂ ಬೇಕು. ಅಂಥದ್ದರಲ್ಲಿ ಒಂದು ಟೆಂಪೋ ದಲ್ಲಿ ೩೨ ಜಾನುವಾರುಗಳನ್ನು ತುಂಬಿಸುವುದೆಂದರೆ ಬೆಂಕಿ ಪೊಟ್ಟಣದೊಳಗೆ ಸೀರೆ ತುಂಬಿಸಿದ ಹಾಗೆ ಎನ್ನಬಹುದು. 'ಇಖ ರವರು ಬರೆದ ಹಾಗೇ ಅವು ಗಳ ಕೈಕಾಲುಗಳನ್ನು ಕಡಿದು, ಕಳಚಿದ ಯಂತ್ರದಂತೆ, ಸತ್ತರೆ ಹಲಾಲ್ ಆಗಲಿ ಅಂತ 'ಬಿಸ್ಮಿಲ್ಲಾ... ಬಿಸ್ಮಿಲ್ಲಾ ಅಂತ ಜಪ ಮಾಡುತ್ತಾ ಕಡಿದಿರಬೇಕು. ಟೆಂಪೋ ಅಡ್ಡಬಿದ್ದಾಗ ಅವುಗಳ ಹೆಣ ಹೊರ ಚೆಲ್ಲಿರಬೇಕು. ಇಂತಹ ರಾಕ್ಷಸ ಪ್ರವೃ ತ್ತಿಯ ಸಮಾಜಘಾತುಕರನ್ನು ಪರೋಕ್ಷವಾಗಿ ಸಮರ್ಥಿಸುವುದೆಂದರೆ ಅದ ಕ್ಕಿಂತ ಕೀಳು ಬೇರಿಲ್ಲ.
'ಇಖರವರಿಗೆ ನಿಜವಾಗಿಯೂ ಸಮಾಜದ ಮೇಲೆ ಕಾಳಜಿ ಇದ್ದಿದ್ದರೆ ಇಂಥಹ ಸಮಾಜ ದ್ರೋಹಿಗಳನ್ನು ಮಟ್ಟಹಾಕುವಲ್ಲಿ ಅವರ ಪ್ರಯತ್ನವೂ ಇರುತ್ತಿತ್ತು. ಆದರೆ ಅವರು ಮಾಡಿದ್ದೇನು? ಅಂಥಹ ಪ್ರವೃತ್ತಿಯನ್ನು ತಡೆ ಯಲು ಪ್ರಯತ್ನಿಸಿದವರನ್ನು ಖಳನಾಯಕರಂತೆ ಬಿಂಬಿಸಿದ್ದು. ನಿಜ, ಜಾನು ವಾರು ಸಾಗಣೆ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು. ಆದರೆ ಆ ಸಮಯದಲ್ಲಿ ವರ್ತಕರು ಹಳ್ಳಿಗಳಿಗೆ ಹೋಗಿ ಅಲ್ಲಿಂದ ವಯಸ್ಸಾದ ಜಾನುವಾರುಗಳನ್ನು ನ್ಯಾಯವಾದ ಬೆಲೆ ತೆತ್ತು ತರುತ್ತಿದ್ದರು. ಕದಿಯುತ್ತಿರಲಿಲ್ಲ. ಹಾಗಾಗಿಯೇ ಮಂಗಳೂರಿನ ಮುಖ್ಯ ರಸ್ತೆಗಳಲ್ಲಿಯೂ ಜಾನುವಾರುಗಳು ನಿರ್ಭಯವಾಗಿ ಓಡಾಡುತ್ತಿದ್ದವು. ಮಂಗಳೂರು ಹಂಪನಕಟ್ಟೆಯ ರಸ್ತೆಗಳಲ್ಲಿ ರಾತ್ರಿ ಹೊತ್ತು ಅವುಗಳು ಮೆಲುಕು ಹಾಕುತ್ತಾ ಮಲಗಿರುವುದು ಸಾಮಾನ್ಯ ದೃಶ್ಯವಾಗಿತ್ತು. ಅವುಗಳ ಮಾಲಿಕರು ಕೂಡಾ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮುಸ್ಲಿ ಮರನ್ನೂ ಸೇರಿಸಿ ಯಾರೂ ಆ ಜಾನುವಾರುಗಳನ್ನು ಕದಿಯುವ ಪ್ರಯತ್ನ ವನ್ನು ಮಾಡುತ್ತಿರಲಿಲ್ಲ. ಹಳ್ಳಿಗಳಲ್ಲಿ ಕೂಡಾ ಬೆಳಿಗ್ಗೆ ಜಾನುವಾರುಗಳನ್ನು ಹಟ್ಟಿ ಯಿಂದ ಹೊರಗೆ ಬಿಟ್ಟರೆ ಹತ್ತಿರದ ಗುಡ್ಡಗಳಿಗೆ ಅವುಗಳು ತಾವಾಗಿಯೇ ಹೋಗಿ ಮೇದು ಸಾಯಂಕಾಲ ಸೂರ್ಯಾಸ್ತಮಾನದ ಸಮಯಕ್ಕೆ ಸರಿ ಯಾಗಿ ಹಿಂತಿರುಗಿ ಬರುತ್ತಿದ್ದವು. ಆವಾಗ ಮುಸ್ಲಿಮರಿರಲಿಲ್ಲವೇ? ಇದ್ದರು. ಆದರೆ ಅವರಿಗೆ ಅಲ್ಲಾಹನ ಭಯವಿತ್ತು. ತಾನು ಇತರರ ಸೊತ್ತನ್ನು ಕದಿಯ ಬಾರದು ಎನ್ನುವ ಅರಿವು ಕೂಡಾ ಇತ್ತು. ಇದನ್ನು ನಾನು ನನ್ನ ಸ್ವಂತ ಅನು ಭವದಿಂದ ಬರೆಯುತ್ತಿದ್ದೇನೆ. ವರ್ಷಗಳು ಕಳೆದಂತೆ ಮೇಯಲು ಬಿಟ್ಟ ಜಾನು ವಾರುಗಳಲ್ಲಿ ಕೆಲವು ಕಾಣೆಯಾಗುತ್ತ ಬಂದವು. ಮತ್ತೆ ಮತ್ತೆ ಮೇಯಲು ಬಿಟ್ಟ ಜಾನುವಾರುಗಳು ಹಿಂದೆ ಬರುವುದಿಲ್ಲ ಎನ್ನುವ ಸ್ಥಿತಿ ಬಂತು. ಈಗ ನಮ್ಮ ಹಟ್ಟಿಯಿಂದಲೇ ಜಾನುವಾರುಗಳನ್ನು ರಾತ್ರೋರಾತ್ರಿ ಕದಿಯುವ ದಂಧೆ ಶುರುವಾ ಯಿತು. ರಾತ್ರಿ ಹಟ್ಟಿಯಲ್ಲಿ ಸುಖವಾಗಿ ಮಲಗಿದ್ದ ಹಸುಗಳು ಬೆಳಗಾಗಬೇಕಾದರೆ ಮಾಂಸವಾಗಿ ಪರಿವರ್ತನೆಯಾಗ ತೊಡಗಿದವು.
ಉಜಿರೆಯ ಓರ್ವ ದಲಿತವರ್ಗದವಳಾದ ಮುದುಕಿಗೆ ಜೀವನಾಧಾರವಾಗಿ ಒಂದು ದನವಿತ್ತು. ಅದರ ಹಾಲನ್ನು ಮಾರಿ ಅವಳು ಜೀವಿಸುತ್ತಿದ್ದಳು. ಒಂದು ದಿನ ರಾತ್ರಿ ಆ ದನ ಕಳವಾಯಿತು. ಮರುದಿನ ಬೆಳಗಾಗುವುದರೊಳಗೆ ಅದು ಮಾಂಸ ವಾಯಿತು. ಮತ್ತೇನಾಯಿತು ಅಂತ ಹೇಳಬೇಕಾಗಿಲ್ಲ. ಎರಡು ದಿನಗಳ ಬಳಿಕ ಕದ್ದ ವರ ಸುಳಿವು ಸಿಕ್ಕಿತು. ಅ ಮುದುಕಿ ಅಲ್ಲಿಯ ಮಸೀದಿಯ ಧಾರ್ಮಿಕ ಮುಖಂಡ ರಲ್ಲಿ ನ್ಯಾಯ ಕೇಳಿದಳು. ಅವರು ಮುದುಕಿಗೆ ನ್ಯಾಯ ಕೊಡಿಸುವ ಆಶ್ವಾಸನೆ ಕೊಟ್ಟರು ಕೂಡಾ. ಆದರೆ ಅದು ಈಡೇರಲೇ ಇಲ್ಲ. ಕೆಲ ತಿಂಗಳುಗಳಲ್ಲಿ ಆ ಮುದುಕಿ ಇಹಲೋಕದ ಯಾತ್ರೆಯನ್ನು ಮುಗಿಸಿದಳು. ಇಂತಹ ಹಲವಾರು ಪ್ರಸಂಗಗಳು ನಡೆದರೂ 'ಇಖ ರವರ ಕಲ್ಲು ಹೃದಯ ನೀರಾಗುವುದಿಲ್ಲ. ಪಡುಬಿದ್ರೆಯಲ್ಲಿ ಕೆಲ ದಿನಗಳ ಹಿಂದೆ ಓರ್ವ ಯುವಕನ ಕೊಲೆಯಾಯಿತು. ಕಾರಣ ಅವನು ದಿನಾ ರಾತ್ರ್ರಿ ಜಾನುವಾರು ಕದಿಯಲು ಹೋಗುವ ಕೂಟದೊಂದಿಗೆ ಹೋಗುತ್ತಿದ್ದ. ಇದ್ದಕ್ಕಿ ದ್ದಂತೆ ಒಂದು ದಿನ 'ಇನ್ನು ನಾನು ಬರಲ್ಲ ಅಂದ ಅಷ್ಟೆ. ಮಂಗಳೂರಿನ ಹೊರ ವಲಯದಲ್ಲಿರುವ ಕೋಣಾಜೆ ಗ್ರಾಮದಲ್ಲಿರುವ ಕೆಲವೇ ಕೆಲವು ರೈತರು ಜಾನು ವಾರುಗಳನ್ನು ಸಾಕಲು ಹಿಂಜರಿಯುತ್ತಾರೆ. ಕಾರಣ ಇಲ್ಲಿ ರಾತ್ರಿ ಜಾನುವಾರುಗಳ ಕಳವು ನಡೆಯುವುದಲ್ಲ. ಬದಲಾಗಿ ದರೋಡೆ ನಡೆಯುತ್ತದೆ. ತಲವಾರು ಸಮೇತ ಕಳ್ಳರು ಬರುತ್ತಾರೆ. ಯಾರಾದರೂ ದಕ್ಷ ಪೊಲೀಸರು ಅವರನ್ನು ಬಂಧಿಸಿದರೆ ಅದರ ಹಿಂದೆಯೇ ನಮ್ಮ ಜಾತ್ಯತೀತ ಪುಢಾರಿಗಳು ಅವರನ್ನು ಬಿಡಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಭ್ರಷ್ಟಾಚಾರದ ಪರಿಣಾಮ ಇದ್ದೇ ಇದೆ. ಪ್ರಜೆಗಳ ಜೀವಕ್ಕೆ, ಆಸ್ತಿ ಪಾಸ್ತಿಗೆ ಭದ್ರತೆ ಒದಗಿಸಬೇಕಾದವರು ಹಾಗೆ ಮಾಡದಿದ್ದರೆ ಪ್ರಜೆಗಳು ತಮ್ಮ ಹಿತಾ ಸಕ್ತಿಯನ್ನು ತಾವೇ ಕಾಪಾಡಿಕೊಳ್ಳಬೇಕಾಗುವುದು ಅನಿವಾರ್ಯವಾಗುತ್ತದೆ. ಈಗ ನಾಲ್ಕು ದಿನಗಳ ಹಿಂದೆ ಬಜಾಲ್‌ನಲ್ಲಿ ಓರ್ವ ಮುಸ್ಲಿಮರ ಮನೆ ಬದಿಯಲ್ಲಿ ಕಟ್ಟಿ ಹಾಕಿದ್ದ ಕೋಣವನ್ನು ಕದ್ದು ಮಾಂಸ ಮಾಡಲು ಹೊರಟಾಗ, ಅದು ಕಂಬಳದ ಕೋಣವಾದ ಕಾರಣ ಹಂತಕರ ಕೈಯಿಂದ ತಪ್ಪಿಸಿ, ನೋವು ತಡೆಯಲಾರದೆ ಊರಿಡಿ ಓಡಿದಾಗ ಹಂತಕರು ಪರಾರಿಯಾದರು. ಆ ಕೋಣದ ಕುತ್ತಿಗೆ ನಾಳವನ್ನು ಕಾಣುವಂತಿರುವ ಕುತ್ತಿಗೆಯ ಗಾಯವನ್ನು ನೋಡಿದಾಗ ಎಂಥವನಿಗೂ ಪರಿಸ್ಥಿತಿಯ ಗಂಭೀರತೆಯ ಮನದಟ್ಟಾಗದಿರದು. ಇದೇ ರೀತಿ ಮುಂದುವರಿದರೆ ಸಮಾಜದ ಪರಿಸ್ಥಿತಿ ಏನಾಗಬಹುದು? ನಾವೆಲ್ಲರೂ ಗಂಭೀರವಾಗಿ ಯೋಚಿಸಬೇಕಾಗಿದೆ.
ಇಖರವರೇ ಬರೆದಂತೆ ಜಾನುವಾರಗಳು ಸಂಗ್ರಹದಿಂದ ಹಿಡಿದು ಅದರ ವಧೆ ಯಾಗಿ ಭಕ್ಷಣೆಯವರೆಗೂ ಎಲ್ಲೂ ಇಸ್ಲಾಮಿನ 'ಮರ್ಯಾದೆಯನ್ನು ಯಾರೂ ಪಾಲಿಸುತ್ತಿಲ್ಲ. ಅಂದರೆ ಅವರಂದಂತೆ ಅಂಥವರಿಗೆ ಅಲ್ಲಾಹನ ಕಡೆಯಿಂದ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅಂಥಹಾ ಹರಾಂ ಮಾಂಸವನ್ನು ತಿಳಿದೂ ಭಕ್ಷಿಸಿದರೆ ಅಂಥ ವರು ಕೂಡಾ ಶಿಕ್ಷೆಗೆ ಅರ್ಹರಾಗುತ್ತಾರೆ. ಈ ಪರಿಸ್ಥಿತಿಗೆ ಸಾಮಾನ್ಯ ಮುಸ್ಲಿಮರನ್ನು ದೂರಿ ಪ್ರಯೋಜವಿಲ್ಲ. ಈ ಅಕ್ರಮ ಗೋಸಾಗಣೆ ಎನ್ನುವುದು ಮುಸ್ಲಿಮರಲ್ಲಿರುವ ಒಂದು ದುಷ್ಟ ಕೂಟದ ಕೆಲಸದ ಭಾಗ ಮಾತ್ರ. ಅದರ ಹಿಡನ್ ಅಜೆಂಡಾ ಬೇರೇನೇ ಇದೆ. ಭಾರತದಿಂದ ಪಾಕಿಸ್ತಾನಕ್ಕೆ ಆತಂಕವಾದದ ತರಬೇತಿಗೆ ಹೋಗುವವರಲ್ಲಿ ಅಧಿಕ ಮಂದಿ ಕೇರಳಿಗರಾಗಿದ್ದಾರೆ. ಅಂದರೆ ನಮ್ಮ ನೆರೆಕರೆಯವರೇ. ಅಂದರೆ ಅದು ತಾಲಿಬಾನ್ ಸಂಘಟನೆಯ ಭಾರತೀಯ ಚಿಗುರು. ಇದನ್ನು ಈಗಲೇ ಹತ್ತಿಕ್ಕದಿದ್ದರೆ ಮುಂದೊಂದು ದಿನ ನಮ್ಮ ವಠಾರವು ಭಾರತದ ಬಲೂಚಿಸ್ತಾನವಾಗುವುದು ಖಂಡಿತ. ಹಾಗಾಗಿಯೇ 'ಇಖರವರು ಸಾಧ್ಯವಾದರೆ ಜಾನುವಾರು ಸಾಗಾಣೆ ನಿಲ್ಲಿಸಿ ನೋಡಿ ಎನ್ನುವ ಚಿತಾವಣೆಯನ್ನು ಹಾಕಿದ್ದಾರೆ. ಅದು ನಿಲ್ಲದಿದ್ದರೇನಾಯಿತು? ಕದ್ದು ಸಿಕ್ಕಿ ಬಿದ್ದವರನ್ನು ಸಿಕ್ಕಲ್ಲಿ ಬಡಿದು ಪೊಲೀಸರಿಗೆ ಒಪ್ಪಿಸುತ್ತಾರೆ ಊರಿನವರು. ಆದರೆ ಕಳ್ಳತನ ನಿಲ್ಲುತ್ತದೆಯೇ? ವರದಕ್ಷಿಣೆಗಾಗಿ ಪೀಡಿಸುವವರನ್ನು ಪೊಲೀಸರು ದಸ್ತಗಿರಿ ಮಾಡಿ ಒಳಗೆ ಹಾಕುತ್ತಾರೆ. ಆದರೂ ಅದು ನಿಂತಿದೆಯೇ? ಮಹೆರ್ ಕೊಟ್ಟು ಮದು ವೆಯಾಗಬೇಕಿದ್ದ ಮುಸ್ಲಿಮರು ಕೂಡಾ ವರದಕ್ಷಿಣೆಗಾಗಿ ಮಹಿಳೆಯರನ್ನು ಪೀಡಿಸು ತ್ತಾರೆ. ಆದರೆ ಈವರೆಗೆ ಯಾರಿಗೂ ನಿಲ್ಲಿಸಲಾಗಿಲ್ಲ. ಹಾಗಂತ ಪ್ರಯತ್ನ ಮಾಡಲೇ ಬೇಕಲ್ಲವೇ?

04-05-2012

Posted by JAYAKIRANA Kirana on | 0 comments | Leave a comment...

ವೃಷಭ : ವ್ಯಾಪಾರ ವ್ಯವಹಾರದಲ್ಲಿ ಲಾಭ ಕಡಿಮೆ.
ಮಿಥುನ : ಕುಟುಂಬದಲ್ಲಿ ಒಮ್ಮತ ಇರುತ್ತದೆ.
ಕರ್ಕಾಟಕ : ಶುಭ ಕೆಲಸಗಳನ್ನು ನಡೆಸುವ ಯೋಗ ಇದೆ.
ಸಿಂಹ : ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
ಕನ್ಯಾ : ಮಕ್ಕಳಿಂದ ಸಹಕಾರ ದೊರೆಯುವುದು.
ತುಲಾ : ಭೂಮಿ ವ್ಯವಹಾರದಲ್ಲಿ ಪ್ರಗತಿ ಇರುವುದು.
ವೃಶ್ಚಿಕ : ಹಿರಿಯರ ಆರೋಗ್ಯದ ಸಮಸ್ಯೆ ಇರುತ್ತದೆ.
ಧನು : ಅನಾರೋಗ್ಯದಿಂದ ತೊಂದರೆಯನ್ನು ಅನುಭವಿಸುತ್ತೀರಿ.
ಮಕರ : ವ್ಯಾಪಾರ ವ್ಯವಹಾರದಲ್ಲಿ ಲಾಭ ಇರುತ್ತದೆ.
ಕುಂಭ : ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ.
ಮೀನ : ಹಣಕಾಸಿನ ತೊಂದರೆ ಇದೆ.

ಆಹಾರ ಸೇವನೆ ಅವರವರ ಅಭಿರುಚಿಗೆ ಬಿಟ್ಟ ವಿಚಾರ

Posted by JAYAKIRANA Kirana on | 0 comments | Leave a comment...

ತಾ. ೨೬-೪-೨೦೧೨ರ 'ಜಯ ಕಿರಣ' ಪತ್ರಿಕೆಯ ನಿಮ್ಮಿಂದ ವಿಭಾ ಗದಲ್ಲಿ ರಂಜಿತ್ ಸುವರ್ಣ ಅಂಗಡಿ ಗುಡ್ಡೆಯವರ ಬರಹಕ್ಕೆ ಪ್ರತಿಕ್ರಿಯೆ. ನಾವು ಯಾವ ಆಹಾರವನ್ನು ಸೇವಿ ಸಬೇಕು? ಯಾವ ಆಹಾರವನ್ನು ಸೇವಿಸಬಾರದು ಎಂಬುದು ಆಹಾರ ಸೇವಿಸುವವರ ಮೇಲೆ ಅವಲಂಬಿ ತವಾಗಿದೆ. ಇದಕ್ಕೆ ಯಾವ ದೊಣ್ಣೆ ನಾಯಕರ ಅಪ್ಪಣೆಯೂ ಬೇಕಾಗಿಲ್ಲ.
ಈ ಭೂಮಿಯಲ್ಲಿ ಹಲವಾರು ಜಾತಿ-ಮತ ಗಳಿಗೆ ಸೇರಿದ ಜನರಿದ್ದಾರೆ. ಆದರೆ ಅವರೆಲ್ಲರೂ ಮೊದಲು ತಂತಮ್ಮ ಜಾತಿ-ಮತವನ್ನು ನೋಡದೆ ನಾವೆಲ್ಲರೂ ಮಾನವ ಜಾತಿಯೆಂಬುದನ್ನು ತಿಳಿದು ಕೊಳ್ಳಬೇಕು. ಮಾನವ ಜಾತಿಯಲ್ಲಿ ಹಲವರು ಮಾಂಸಹಾರಿಗಳಾಗಿ ರಬಹುದು. ಇನ್ನು ಹಲವರು ಸಸ್ಯಾಹಾರಿಗಳಾಗಿರಬಹುದು. ಈ ಪ್ರಪಂಚದಲ್ಲಿನ ಯಾವುದೇ ಮತ ದವರಲ್ಲಿ ವಿಚಾರಿಸಿದರೂ ಅವ ರೆಲ್ಲರ ಅಭಿಪ್ರಾಯ ಒಂದೇ. 'ದೇವರು ಒಬ್ಬನೇ, ಆತ ಬಡವ-ಬಲ್ಲಿದ, ಮೇಲು-ಕೀಳು ಎಂಬ ಭೇದ-ಭಾವವಿ ಲ್ಲದೆ ಎಲ್ಲರನ್ನೂ ಸಮಾನ ಭಾವದಿಂದ ನೋಡು ತ್ತಾನೆ' ಎಂದು ಹೇಳುತ್ತಾರೆ. ಅಂತಹ ದೇವರು ತನ್ನ ಸೃಷ್ಟಿಯ ಜನರಲ್ಲಿ, 'ನೀವು ಮಾಂಸಾಹಾರ ಸೇವಿಸಿ ನೀವು ಸಸ್ಯಾಹಾರ ಸೇವಿಸಿ' ಎಂದು ಎಂದಿಗೂ ಹೇಳಲಾರ. ಇಂತಹ ಭೇದ-ಭಾವವನ್ನು ಮಾನವರೇ ತಮ್ಮ-ತಮ್ಮ ಸ್ವಪ್ರತಿಷ್ಠೆಗಳಿಗಾಗಿ ತಾವೇ ನಿರ್ಮಿಸಿಕೊಂಡಿರುವುದಾಗಿದೆ. ಆದುದ ರಿಂದ ಬೀಫ್ ಮಾರುವ ಹೊಟೇಲ್‌ಗಳನ್ನು ಮುಚ್ಚಿಸಿ ಎಂದು ಹೇಳುವುದು ಸರಿಯಲ್ಲ. ಅಕ್ರಮವಾಗಿ ಜಾನುವಾರು ಗಳನ್ನು ಕದ್ದುಕೊಂಡು ಹೋಗಿ ಹತ್ಯೆ ಮಾಡುವುದನ್ನು ನಾವೆಲ್ಲರೂ ವಿರೋಧಿಸುತ್ತೇವೆ. ವಿರೋಧಿಸಲೇ ಬೇಕು. ಅದನ್ನು ಬಿಟ್ಟು ಬೀಫ್ ತಿನ್ನುವವರನ್ನು ತಿನ್ನಬೇಡಿ ಎಂದು ಹೇಳುವುದು ಸರಿಯಲ್ಲ. ಅದೇ ರೀತಿ ಮಾಂಸಹಾರಿಗಳು ಇತರರನ್ನು ಸಸ್ಯಾಹಾರ ಸೇವಿಸಬಾರದೆಂದು ಹೇಳಿದರೆ ಜನರು ಕೇಳುತ್ತಾ ರೆಯೇ? ಸಸ್ಯಾಹಾರಿಗಳು ಸಸ್ಯಾಹಾರವನ್ನು ಸೇವಿಸದಿ ರುವರೇ? ಆದ್ದರಿಂದ ಸೇವಿ ಸುವ ಆಹಾರದ ಮೇಲೆ ನಿಷೇಧ ಹೇರುವುದು ಎಷ್ಟು ಸರಿ?      ರಮೇಶ್.ಕೆ., ಯೆಯ್ಯಾಡಿ

ಬಸ್ ಮಾಲಕರೇಕೆ ಪ್ರತಿಭಟಿಸುತ್ತಿಲ್ಲ?
ಇತ್ತೀಚೆಗೆ ಮುಡಿಪುವಿನಲ್ಲಿ ಬಸ್ ಚಾಲಕನ ಮೇಲೆ ಪಂಚಾಯತ್ ಅಧ್ಯಕ್ಷನೋರ್ವ ನಡೆಸಿದ ಹಲ್ಲೆಯು ಖಂಡನೀಯವಾಗಿದೆ. ಇದನ್ನು ಒಬ್ಬ ಬಸ್ ಚಾಲಕನಾಗಿ ನಾನು ಖಂಡಿಸುತ್ತೇನೆ. ಇಷ್ಟೆಲ್ಲಾ ಆದರೂ ಬಸ್ ಮಾಲಕರು ಚಾಲಕರ ಪರವಾಗಿ ಒಂದೇ ಒಂದು ಮಾತೆತ್ತದಿರುವುದು ಮಾತ್ರ ದುರಂತ. ಬಸ್ ಮಾಲ ಕರು ಬಸ್‌ಗಳನ್ನು ಖರೀದಿಸಿ ರಸ್ತೆಗಿಳಿಸುವವರೆಗೆ ಮಾತ್ರ ಇರುತ್ತಾರೆ. ನಂತರ ಪ್ರತೀ ದಿನ ಸಂಜೆ ಬಸ್ಸು ಗಳ ಕಲೆಕ್ಷನ್ ಪಡೆಯುವುದೊಂದೇ ಇವರ ಕೆಲಸ ಎಂಬಂತಾಗಿದೆ. ಅದರ ಮಧ್ಯೆ ಬಸ್ಸಲ್ಲಿ ಏನಾದರೂ ಆದರೆ ಅದು ಇವರಿಗೆ ಬೇಡ.
ಪ್ರತೀ ದಿನ ಬಸ್ಸಿನಲ್ಲಿ ಏನೇ ಸಮಸ್ಯೆ ಇದ್ದರೂ ಪ್ರಯಾಣಿಕರಿಂದ ಉಗಿಸಿಕೊಳ್ಳುವುದು ಚಾಲಕರೇ ಹೊರತು ಮಾಲಕರಲ್ಲ. ಇನ್ನು ಎಷ್ಟೇ ಜಾಗರೂಕ ರಾಗಿ ಸಂಚರಿಸಿದರೂ ಕೆಲ ವಾಹನ ಸವಾರರಿಗೆ ಬಸ್ ಚಾಲಕರನ್ನು ಕಂಡರೆ ಅದೇನೋ ಆವೇಶ. ಇವರ ಈ ಆವೇಶಗಳಿಗೆ ಬಲಿಯಾಗುವುದು ಮಾತ್ರ ನಮ್ಮಂಥ ಬಡಪಾಯಿ ಚಾಲಕರು ಎನ್ನುವುದು ವಿಪರ್ಯಾಸ. ಮೊನ್ನೆಯ ಘಟನೆಯಲ್ಲೂ ನಡೆದದ್ದು ಇದೆ. ಇಲ್ಲಿ ಯಾರ ತಪ್ಪು ಎನ್ನುವುದಕ್ಕಿಂತ ಚಾಲಕನ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ಈ ಬಗ್ಗೆ ಬಸ್ಸಿನ ಮಾಲಕರು ಪೊಲೀಸರಿಗೆ ಸೂಕ್ತ ರೀತಿಯಲ್ಲಿ ಒತ್ತಡ ಹಾಕಿದ್ದರೆ ಆರೋಪಿಗಳ ಬಂಧನ ಕಷ್ಟದ ಕೆಲಸವಲ್ಲ. ಆದರೆ ಬಸ್ ಮಾಲಕರಿಗೆ ಚಾಲಕರ, ಕಂಡಕ್ಟರ್‌ಗಳ ಸುರಕ್ಷತೆಗಿಂತ ಅವರ ವ್ಯವಹಾರವೇ ಹೆಚ್ಚಾಗಿದೆ. ಹೀಗಿರುವಾಗ ನಮ್ಮ ಪರವಾಗಿ ನಿಂತು ಇವರು ಹೇಗೆ ತಾನೆ ಮಾತನಾಡುತ್ತಾರೆ?
ಬಸ್ ಚಾಲಕರಲ್ಲಿ ಕೆಟ್ಟವರೂ ಇದ್ದಾರೆ, ಒಳ್ಳೆ ಯವರೂ ಇದ್ದಾರೆ. ಹಾಗೆಂದು ಎಲ್ಲರನ್ನೂ ಒಂದೇ ದೃಷ್ಟಿ ಕೋನದಿಂದ ನೋಡುವುದು ಸರಿಯಲ್ಲ. ಬಸ್ ಚಾಲಕರ ಮೇಲೆ ದೂರುಗಳು ಬಂದಾಗ ಮಾತ್ರ ಚಾಲಕರನ್ನು ಪ್ರಶ್ನಿಸುವ ಮಾಲಕರು ಇತರೆ ಸಮ ಯಗಳಲ್ಲಿ ಬಸ್‌ನಲ್ಲಿ ನಡೆಯುವ ದಿನದ ಆಗು ಹೋಗುಗಳನ್ನು ಯಾಕೆ ಕೇಳುವುದಿಲ್ಲ? ನಾಲ್ಕೈದು ಬಸ್ ಇರುವ ಮಾಲಕರು ಈ ರೀತಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇನ್ನಾದರೂ ಚಾಲಕರ ಮೇಲಿನ ಹಲ್ಲೆಯನ್ನು ಬಸ್ ಮಾಲಕರು ಖಂಡಿಸಿ, ತಪ್ಪಿತ ಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಲಿ. ಅದೇ ರೀತಿ ತಮ್ಮ ಬಸ್‌ಗಳತ್ತ ಗಮನ ಹರಿಸಲಿ.
 ನೊಂದ ಬಸ್ ಚಾಲಕ, ಮಂಗಳೂರು

ಸಿಮ್‌ಕಾರ್ಡ್‌ಗಳ ಕಾನೂನು ಬಾಹಿರ ಮಾರಾಟವನ್ನು ಕೇಳುವವರಿಲ್ಲ
ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಒಂದು ಸುದ್ದಿ ಓದಿದೆ. ಒಬ್ಬ ವ್ಯಕ್ತಿ ಅಮೆರಿಕ ಅಧ್ಯಕ್ಷ ಒಬಾಮರ ಫೋಟೋ ಕೊಟ್ಟು ತನ್ನ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ ಕೊನೆಗೆ ಸಿಕ್ಕಿ ಬಿದ್ದಿದ್ದಾನೆ. ಬಹುಶಃ ಇಂತಹ ಅದೆಷ್ಟೋ ಘಟನೆಗಳು ನಮ್ಮ ರಾಜ್ಯ ದಲ್ಲಿ, ಅಷ್ಟೇ ಯಾಕೆ ನಮ್ಮದೇ ಜಿಲ್ಲೆಯಲ್ಲಿ ಹುಡುಕಿದರೆ ಸಾಕಷ್ಟಿರಬಹುದು. ನಗರದ ಅಲ್ಲಲ್ಲಿ ಸಣ್ಣ ಸಣ್ಣ ಟೆಂಟ್ ಹಾಕಿಕೊಂಡು ಸಿಮ್ ಕಾರ್ಡ್‌ಗಳನ್ನು ತರಕಾರಿಯಂತೆ ಮಾರಾಟ ಮಾಡುವ ದೃಶ್ಯ ಅಲ್ಲಲ್ಲಿ ಸಾಮಾನ್ಯವಾಗಿದೆ. ಇವರಿಗೆ ಬೇಕಾಗಿರುವುದು ಒಂದು ಫೋಟೋ ಮತ್ತು ಐಡಿ ಪ್ರೂಫ್ ಮಾತ್ರ. ಹಾಗಂತ ನಮ್ಮದೇ ಫೋಟೋ, ಐಡಿ ಪ್ರೂಫ್ ಕೊಡಬೇಕೆನ್ನುವ ಕಡ್ಡಾಯ ನಿಯಮವೂ ಇವರಲ್ಲಿಲ್ಲ. ಫೊಟೋ ಯಾರದ್ದೂ ಆಗಬಹುದು.
ಈ ರೀತಿ ಬೇಕಾಬಿಟ್ಟಿ ನಿಯಮಗಳನ್ನು ಗಾಳಿಗೆ ತೂರಿ ಸಿಮ್ ಕಾರ್ಡ್ ಮಾರಾಟ ಮಾಡುವವರ ವಿರುದ್ದ ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಮೊಬೈಲ್ ನೆಟ್ ವರ್ಕ್ ಕಂಪೆನಿಗಳ ಹುಚ್ಚು ಪೈಪೋಟಿಯ ಮಧ್ಯೆ ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ಗಾಳಿಗೆ ತೂರಲಾಗುತ್ತಿದೆ. ಇಂದಿನ ಯುವಕರಲ್ಲೇ ಹೆಚ್ಚೆಂದರೂ ಹತ್ತಿ ಪ್ಪತ್ತು ಸಿಮ್ ಕಾರ್ಡ್‌ಗಳು ಇರುತ್ತವೆ. ಇವರು ಈ ಸಿಮ್ ಕಾರ್ಡ್ ಬಳಸಿ ಏನು ಮಾಡಿದರೂ ಪೊಲೀಸ್ ಇಲಾಖೆಗೆ ವಿಳಾಸ ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಇಲ್ಲಿರುವ ವಿಳಾಸಗಳೇ ಬೋಗಸ್ ಆಗಿರುತ್ತದೆ. ಇನ್ನು ನಮ್ಮ ಪೊಲೀ ಸರಿಗೆ ಇದು ತಿಳಿದರೂ ಮಾತೆತ್ತುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಕಾನೂನು ಬಾಹಿರ ಮಾರಾಟದ ವಿರುದ್ದ ಕ್ರಮ ಕೈಗೊಳ್ಳುವರೇ?
ಸಂಕೇತ್ ನಾಯಕ್, ಕಂಕನಾಡಿ

ಪಾರ್ಕಿಂಗ್ ಶುಲ್ಕದಲ್ಲಿ ಹೆಚ್ಚುವರಿ ವಸೂಲಿ ಮಾಡುವಂತಿಲ್ಲ
ಪಾರ್ಕಿಂಗ್ ಜಾಗದಲ್ಲಿ ಪಾರ್ಕಿಂಗ್ ಮಾಡುವ ದ್ವಿಚಕ್ರ ವಾಹನಗ ಳಿಗೆ ಮೊದಲ ಎರಡು ಘಂಟೆಗೆ ೩ರೂ. ಮತ್ತು ಪ್ರತೀ ಹೆಚ್ಚುವರಿ ಘಂಟೆಗೆ ಒಂದು ರೂ., ನಾಲ್ಕು ಚಕ್ರದ ವಾಹನಗಳಿಗೆ ಮೊದಲ ಎರಡು ಘಂಟೆಗೆ ೬ ರೂ. ಮತ್ತು ಹೆಚ್ಚುವರಿ ಪ್ರತೀ ಘಂಟೆಗೆ ೨ ರೂ. ಶುಲ್ಕವನ್ನು ಮಾತ್ರ ವಸೂಲಿ ಮಾಡತಕ್ಕದ್ದು. ಈ ನಿಗದಿತ ಶುಲ್ಕಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡಿದಲ್ಲಿ ಅಥವಾ ನಿಗದಿತ ಜಾಗಕ್ಕಿಂತ ಹೊರಗಡೆ ಶುಲ್ಕ ವಸೂಲಿ ಮಾಡಿದಲ್ಲಿ ಗುತ್ತಿಗೆಯನ್ನು ಯಾವುದೇ ನೋಟಿಸು ನೀಡದೆ ರದ್ದು ಪಡಿ ಸುವ ಅಧಿಕಾರವನ್ನು ಮಂಗಳೂರು ನಗರ ಪಾಲಿಕೆಯ ಆಯುಕ್ತರು ಹೊಂದಿರುತ್ತಾರೆ. ಮಂಗಳೂರು ಮಹಾನಗರ ಪಾಲಿಕೆ

ಬಾಲ ಭಿಕ್ಷುಕರಿಗೆ ವ್ಯವಸ್ಥೆ ಕಲ್ಪಿಸಿ

ಉಡುಪಿ ಜಿಲ್ಲೆಯಲ್ಲಿ ಬಾಲ ಭಿಕ್ಷುಕರ ಸಂಖ್ಯೆ ಹೆಚ್ಚುತ್ತಿದೆ. ಉಡುಪಿಯ ಪ್ರಧಾನ ರಸ್ತೆ, ಬಸ್ ನಿಲ್ದಾಣ, ಥಿಯೇಟರ್‌ಗಳ ಎದುರು ಇವರ ಸಂಖ್ಯೆ ಹೆಚ್ಚಿರುತ್ತದೆ. ಇವ ರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡ ಳಿತ, ಸಂಬಂಧಪಟ್ಟ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇನ್ನೂ ಮುಂದಾಗಿಲ್ಲ.
ಬಸ್ ನಿಲ್ದಾಣಕ್ಕೆ ಹೋಗಿ-ಬರುವ ವರ ಹಿಂದೆಯೇ ಬೀಳುವ ಈ ಮಕ್ಕಳಲ್ಲಿ ಹೆಚ್ಚಿನವರು ಹೊರಜಿಲ್ಲೆಯವರು. ಉಡು ಪಿಯ ಬೀಡಿನಗುಡ್ಡೆ, ಅಂಬಲಪಾಡಿ ಬಳಿ ನೆಲೆಸಿರುವ ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳನ್ನು ಭಿಕ್ಷಾಟನೆಗೆ ಇಳಿಸುತ್ತಿದ್ದಾರೆ. ಭಿಕ್ಷೆ ಬೇಡಿ ಸಂಪಾದಿಸಿದ ಹಣವನ್ನು ಹೆತ್ತ ವರೇ ಮದ್ಯ ಸೇವನೆಗೆ ಬಳಸುವ ಸ್ಥಿತಿಯೂ ಇಲ್ಲಿದೆ. ಈ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ಉಡುಪಿ ಅಷ್ಟಮಠ ಗಳ ಆಡಳಿತ ಪ್ರಯತ್ನಿಸಿದರೆ ಒಳ್ಳೆಯದು.
 ಸುರೇಖಾ, ಮಣಿಪಾಲ

ರಹೀಂ ಉಚ್ಚಿಲ ಅನಾಥರಾದರೇ?
ದ.ಕ. ಜಿಲ್ಲಾ ಬ್ಯಾರಿ ಪರಿಷತ್ ಅಧ್ಯಕ್ಷರಾದ ರಹೀಂ ಉಚ್ಚಿಲ್ ಅವರ ಹತ್ಯಾಯತ್ನ ಇತ್ತೀಚೆಗೆ ಅವರ ಕಚೇರಿ ಯಲ್ಲೇ ನಡೆಯಿತು. ಜಿಲ್ಲೆಯ ಜನ ರನ್ನೇ ಬೆಚ್ಚಿ ಬೀಳಿಸಿದ್ದ ಈ ಪ್ರಕರ ಣದ ಬಗ್ಗೆ ಸೂಕ್ತ ತನಿಖೆ ನಡೆಸ ಬೇಕೆಂದು ಕನಿಷ್ಠ ಪಕ್ಷ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ಖಂಡನಾ ಹೇಳಿಕೆ ಕೊಡುವುದಕ್ಕೂ ಬಿಜೆಪಿ ಮತ್ತದರ ಅಂಗಸಂಸ್ಥೆ ಬಜ ರಂಗದಳ ಮುಂದಾಗಿಲ್ಲ ಎನ್ನುವುದೇ ವಿಪರ್ಯಾಸ. ಕೆ.ಹೆಚ್.ಹಾರೀಸ್,      ಗುರುಪುರ


ಜಿಲ್ಲಾಡಳಿತದ ಇಬ್ಬಗೆ ನೀತಿ ಖಂಡನೀಯ
ಮಂಗಳೂರು ನಗರಕ್ಕೆ ಕುಡಿಯುವ ನೀರಿಲ್ಲ ಎಂಬ ನೆಪವೊಡ್ಡಿ ಕಡಬ ಸಮೀಪದ ಹೊಸ್ಮಠ ಎಂಬಲ್ಲಿ ಈ ಭಾಗದ ಜನತೆಯ ಜೀವನಾಡಿಯಾದ ಹೊಳೆಯೊಂದರ ನೀರನ್ನು ಮಂಗಳೂರಿಗೆ ಸರಬರಾಜು ಮಾಡಲಾಗುತ್ತದೆ ಎಂದು ದಿನನಿತ್ಯ ಹೊಳೆಯಲ್ಲಿ ವಾಹನ ತೊಳೆಯುತ್ತಿದ್ದ ವರು ತಮ್ಮ ಕೆಲಸವನ್ನು ನಿಲ್ಲಿಸಿರುತ್ತಾರೆ.
ಇಷ್ಟೇ ಅಲ್ಲದೆ ಸ್ಥಳೀಯ ಪಂಚಾಯತ್ ಕೂಡ ಅಲ್ಲಲ್ಲಿ ಹೊಂಡ ತೆಗೆದು ವಾಹನಗಳ ಪ್ರವೇಶವನ್ನು ನಿಷೇಧಿಸಿ ರುತ್ತಾರೆ. ಆದರೆ ಇದೇ ಹೊಳೆಯ ಪಕ್ಕದಲ್ಲಿರುವ ಪಾಲೆ ಚ್ಚಾರ್ ಎಂಬ ಪ್ರದೇಶದಲ್ಲಿ ಸರಕಾರದ ಉಚಿತ ವಿದ್ಯುತ್ ಅನ್ನು ಬಹಳ ತಂತ್ರದಿಂದ ಬಳಸಿಕೊಂಡು ಹತ್ತಿಪ್ಪತ್ತು ಪಂಪ್ ಹಾಕಿ ಅದರ ನೀರನ್ನು ಭೂಗತವಾಗಿ ಟ್ಯಾಂಕ್ ನಿರ್ಮಿಸಿ ತಮ್ಮ ತೋಟಗಳಿಗೆ ಅವ್ಯಾಹತವಾಗಿ ನೀರು ಬಿಡುತ್ತಿರುವ ಅಣ್ಣ-ತಮ್ಮಂದಿರನ್ನು ಯಾಕೆ ತಾವು ಪ್ರಶ್ನಿಸು ವುದಿಲ್ಲ? ಹತ್ತು ಹೆಚ್‌ಪಿಯಿಂದ ಜಾಸ್ತಿ ಉಪಯೋಗ ಮಾಡುವ ಪಂಪ್‌ಗೆ ಉಚಿತ ವಿದ್ಯುತ್ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಎಂಟು ಹೆಚ್‌ಪಿಗಳ ಇಪತ್ತಕ್ಕೂ ಹೆಚ್ಚು ಪಂಪ್ ಬಳಸಿ ಸಾರ್ವಜನಿಕರ ನೀರು ಮತ್ತು ವಿದ್ಯುತ್ ಅನ್ನು ಬಹಳ ಕುತಂತ್ರದಿಂದ ಉಪಯೋಗಿಸುತ್ತಿರುವಾಗ ಸಂಬಂಧಪಟ್ಟವರಿಗೆ ಅದೇಕೆ ಕಾಣಿಸುತ್ತಿಲ್ಲ? ಇವರೇನು ಸಂಘ ಪರಿವಾರಕ್ಕೆ ನಿಷ್ಠರು ಎಂದು ಸುಮ್ಮನಿದ್ದಾರೆಯೇ? ವಿದ್ಯುತ್ ಇಲಾಖೆ ಹಾಗೂ ಸ್ಥಳೀಯ ಪಂಚಾಯತ್‌ನವರು ಚಿಲ್ಲರೆ ಕಾಸಿಗಾಗಿ ಈ ರೀತಿ ಅಕ್ರಮಗಳನ್ನು ಕಂಡೂ ಕಾಣದಂತೆ ವರ್ತಿಸುವುದೇಕೆ? ಕೇವಲ ಜೀಪ್, ಕಾರು ತೊಳೆಯುವ ಬಡಪಾಯಿಗಳ ವಿರುದ್ಧ ಕ್ರಮ ತೆಗೆದುಕೊಳ್ಳು ವುದು ಮಾತ್ರ ನಿಮ್ಮ ಕೆಲಸವೇ? ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಎಚ್ಚರಿಕೆ! ವಾಹನ ಚಾಲಕರು, ಕಡಬ


ಇದು ನ್ಯಾಯವೇ?
ಫರಂಗಿಪೇಟೆಯ ಕೆನರಾ ಬ್ಯಾಂಕ್ ಎದುರು ತರಕಾರಿ ಮಾರು ತ್ತಿದ್ದವನನ್ನು ಬಲವಂತವಾಗಿ ಬಂಟ್ವಾಳ ಆರಕ್ಷಕ ಠಾಣೆಯ ಪೊಲೀ ಸರು ಹಾಗೂ ಫರಂಗಿಪೇಟೆಯಲ್ಲಿ ಸಮಾಜ ಸೇವಕರೆಂದು ಕೊಂಡ ವರು ತೆರವುಗೊಳಿಸಿದ್ದಾರೆ. ಇದು ಸ್ವಾಗತಾರ್ಹ. ಆದರೆ ಈಗ ಇದೇ ಸ್ಥಳದಲ್ಲಿ ಟೆಂಪೋದಲ್ಲಿ ಗ್ಯಾಸ್ ಸಿಲಿಂ ಡರ್ ಇಟ್ಟು ಫಾಸ್ಟ್‌ಫುಡ್ ವ್ಯಾಪಾರ ಮಾಡುತ್ತಿದ್ದಾರೆ. ಇದಕ್ಕೆ ವ್ಯವಸ್ಥೆ ಕಲ್ಪಿ ಸಲು ಮೊದಲು ತರಕಾರಿ ಮಾರು ವುದನ್ನು ಯಾರು ವಿರೋಧಿಸಿ ದ್ದರೋ ಅವರೇ ಲಾಬಿ ನಡೆಸಿದ್ದಾರೆ. ಈ ತಾರತಮ್ಯದ ವಿರುದ್ಧ ಸಾರ್ವ ಜನಿಕರು ಕೋಮುಬಣ್ಣ ಬಳಿದು ಪರಸ್ಪರ ಚರ್ಚೆ ನಡೆಸುತ್ತಿದ್ದಾರೆ. ಪರಿ ಸ್ಥಿತಿ ಕೈ ಮೀರುವುದಕ್ಕೆ ಮೊದಲು ಪೊಲೀಸ್ ಅಧಿಕಾರಿಗಳು ಈ ಫಾಸ್ಟ್ ಫುಡ್ ಟೆಂಪೋವನ್ನು ಇಲ್ಲಿಂದ ತೆರ ವುಗೊಳಿಸುವುದು ಉತ್ತಮವಾಗಿರು ತ್ತದೆ. ಕೋಮು ಸಾಮರಸ್ಯದಲ್ಲಿರುವ ಫರಂಗಿಪೇಟೆ ನಾಗರಿಕರಿಗೆ ಈ ಅಕ್ರಮ ಗೂಡಂಗಡಿ ಮುಳ್ಳಾಗುವುದು ಬೇಡ ವೆಂಬುವುದೇ ನನ್ನ ಅಭಿಪ್ರಾಯವಾ ಗಿದೆ. ಆದ್ದರಿಂದ ತಕ್ಷಣ ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಪ್ರಕ ರಣಕ್ಕೆ ನಾಂದಿ ಹಾಡಬೇಕಾಗಿದೆ. ಇಲ್ಲವಾದಲ್ಲಿ ಸದ್ಯ ಯಾವುದೇ ಗಲಭೆ ಗಳಿಲ್ಲದೆ ಫರಂಗಿಪೇಟೆ ಮತ್ತೆ ಉದ್ವಿ ಗ್ನಗೊಳ್ಳಬಹುದು.
 ಸಂತು, ಫರಂಗಿಪೇಟೆ

ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿಯೇ ಸಮಸ್ಯೆಗೆ ಪರಿಹಾರ

Posted by JAYAKIRANA Kirana on | 0 comments | Leave a comment...


ಯಾವುದೇ ಸರಕಾರದ ಸವಲತ್ತುಗಳು ನಕ್ಸಲ್ ಪೀಡಿತ ಪ್ರದೇಶದ ಜನರಿಗೆ ಸಿಗುತ್ತಿಲ್ಲ. ಹಲವು ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸಿದರೆ ಮುಂದೆ ನಕ್ಸಲೀಯ ಚಟುವಟಿಕೆ ಕಡಿಮೆಯಾಗಬಹುದು ಹಾಗೂ ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬಹುದು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ದೇಶದಲ್ಲೇ ಅತ್ಯುತ್ತಮ ವನಸಿರಿಯನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರ ವಾಗಿದೆ. ಸದಾ ಹರಿಯುವ ಜಲಪಾತ, ಹಸಿರಿನಿಂದ ಕೂಡಿ ರುವ ಮನಮೋಹಕ ತಾಣ. ಬೃಹತ್ ಮರಗಳು ಔಷ ಧೀಯ ಗುಣಗಳಿಂದ ಕೂಡಿರುವ ಸಸ್ಯರಾಶಿ, ತಣ್ಣನೆಯ ತಂಗಾಳಿ ಬೀಸುತ್ತಿದ್ದರೆ ವಾಹ್! ಅದರ ಅನುಭವವೇ ಬೇರೆ. ಆ ಸಂತೋಷವನ್ನು ಅನುಭವಿಸಿದವರಿಗೇ ಗೊತ್ತು.
ಇಂತಹ ಪ್ರಶಾಂತ ಪರಿಸರದಲ್ಲಿ ನೂರಾರು ವರ್ಷಗ ಳಿಂದ ಕೃಷಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡು ನೆಮ್ಮದಿ ಯಿಂದ ವಾಸಿಸುತ್ತಿದ್ದ ಉದ್ಯಾನವಾಸಿಗಳು ಈಗ ನಿದ್ದೆಯಲ್ಲೂ ಬೆಚ್ಚಿಬೀಳುತ್ತಿದ್ದಾರೆ. ಸದಾ ಜೀವಭಯದಲ್ಲಿ ಬದುಕುವ ಪರಿ ಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಹೊರಹೋದ ಗಂಡ ಸರು ವಾಪಸ್ ಬರುತ್ತಾರೆಂಬ ಗ್ಯಾರಂಟಿಯಿಲ್ಲದ ಜೀವನ.
ಯಾಕೆ ಇಲ್ಲಿನ ನಿವಾಸಿಗಳ ಜೀವನದಲ್ಲಿ ಇಂತಹ ಪರಿ ಸ್ಥಿತಿ ನಿರ್ಮಾಣವಾಗಿವೆ ಎಂದರೆ ೧೦ ವರ್ಷಗಳಿಂದ ನಡೆ ಯುತ್ತಿರುವ ನಿರಂತರ ರಕ್ತದೋಕುಳಿ. ಅರಣ್ಯದಲ್ಲಿ ಪ್ರಾಣಿ-ಪಕ್ಷಿಗಳ ಕಲರವ ಕೇಳುತ್ತಿದ್ದ ಇಲ್ಲಿನ ಜನ ಗುಂಡಿನ ಮೊರೆತ ಕೇಳುವಂತಾಯಿತು. ಎನ್‌ಕೌಂಟರ್‌ಗಳು, ಗುಂಡಿನ ದಾಳಿ ಗಳಿಂದಾಗಿ ಇಲ್ಲಿನ ಪ್ರಶಾಂತ ಪರಿಸರ ಕದಡಿ ಹೋಗಿದೆ. ಇಲ್ಲಿನ ಪರಿಸ್ಥಿತಿ ಇಷ್ಟೊಂದು ಹದೆಗೆಡಲು ಕಾರಣವೇನು?
ತಲೆತಲಾಂತರಗಳಿಂದ, ನೂರಾರು ವರ್ಷಗಳಿಂದ ಇದೇ ಜಾಗದಲ್ಲಿ ಕೃಷಿ ಮಾಡಿಕೊಂಡು ನೆಮ್ಮದಿಯಾಗಿ ಬದುಕು ತ್ತಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನವಾಸಿಗಳಿಗೆ ಸರಕಾ ರದ 'ಒಕ್ಕಲೆಬ್ಬಿಸುವ' ನೀತಿಯು ಬರಸಿಡಿಲು ಬಡಿದಂತೆ ಆಯಿತು. ಇದರ ಪ್ರಕಾರ ರಾಷ್ಟ್ರೀಯ ಉದ್ಯಾನದೊಳಗೆ ವಾಸಿಸುವ ಎಲ್ಲಾ ಕುಟುಂಬಗಳು ತಮ್ಮ ಜಾಗವನ್ನು ಸರಕಾ ರದ ಸುಪರ್ದಿಗೆ ಒಪ್ಪಿಸಬೇಕೆಂದು ಸುತ್ತೋಲೆ ಹೊರಡಿಸ ಲಾಯ್ತು ಹಾಗೂ ಹಲವು ಕುಟುಂಬಗಳಿಗೆ ನೋಟಿಸ್ ಕೂಡಾ ನೀಡಲಾಯ್ತು. ಈ ಸಮಯದಲ್ಲಿ ಬೆದರಿದ ಈ ಕುಟುಂಬಗ ಳಿಗೆ ಹಲವಾರು ಸಂಘ-ಸಂಸ್ಥೆಗಳು ಬೆಂಬಲವಾಗಿ ನಿಂತವು. ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ, ವಿಮೋಚನಾ ರಂಗ ಮುಂತಾದ ಸಂಘಟನೆಗಳು ಈ ಕುಟುಂಬಗಳನ್ನು ಒಗ್ಗೂಡಿಸಿ ರಾಜ್ಯದ ವಿವಿಧ ಕಡೆ ಪ್ರತಿಭಟನೆ, ಮನವಿ, ಅಧಿಕಾರಿಗಳಿಗೆ ದಿಗ್ಭಂದನ ಹೀಗೆ ವಿವಿಧ ರೀತಿಯಲ್ಲಿ ಪ್ರತಿಭ ಟನೆ ನಡೆಸಿ ಸರಕಾರದ ಈ ಯೋಜನೆಗೆ ಅಸಮ್ಮತಿ ಸೂಚಿಸಿ ದರೂ, ಕಣ್ಣೆತ್ತಿಯೂ ನೋಡದ ಸರಕಾರ ಬಲವಂತವಾಗಿ ಒಕ್ಕಲೆಬ್ಬಿಸಲು ಆದೇಶಿಸಿತು.
ಈ ಸಮಯದಲ್ಲಿ ಈ ಕುಟುಂಬಗಳ ಬಿಸಿರಕ್ತದ ಯುವಕರ ರಕ್ತ ಕುದಿಯತೊಡಗಿತು. ಇವರು ಯಾರು ಏನೇ ಹೇಳಿದರೂ ಎಲ್ಲದಕ್ಕೂ ಸಿದ್ಧರಾಗಿದ್ದರು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲವರು ಈ ಯುವಕರ ಹಾದಿ ತಪ್ಪಿಸಿ ಶಸ್ತ್ರಾಸ್ತ್ರ ತರಬೇತಿ ನೀಡಿ ಸರಕಾರದ ವಿರುದ್ಧ ತಿರುಗಿ ಬೀಳುವಂತೆ ಪ್ರಚೋದಿಸಿದರು. ಹೀಗೆ ಇವರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಕೊಟ್ಟು ಜನರನ್ನು ಸಂಘಟಿಸತೊಡಗಿದರು. ೨೦೦೩ರಲ್ಲಿ ಈದು ಬೊಲ್ಯೊಟ್ಟು ಪ್ರದೇಶ ಗಳಲ್ಲಿ ಇಬ್ಬರು ಯುವತಿಯರ ಎನ್‌ಕೌಂಟರ್ ಪ್ರಕರಣದೊಂ ದಿಗೆ ನಕ್ಸಲೀಯರು ಹೊರಜಗತ್ತಿಗೆ ಪರಿಚಯವಾದರು. ಅನಂ ತರ ನಿರಂತರ ರಕ್ತದೋಕುಳಿಯ ಮೂಲಕ ಹಲವಾರು ಪ್ರಾಣ ಗಳು ಬಲಿಯಾದವು.
ನಂತರ ಎಚ್ಚೆತ್ತುಕೊಂಡ ಸರಕಾರ ಬಲವಂತವಾಗಿ ಒಕ್ಕಲೆಬ್ಬಿ ಸುವುದಿಲ್ಲ. ಸ್ವಇಚ್ಛೆಯಿಂದ ಹೊರಹೋಗಬಹುದು ಎಂದು ಇಲ್ಲಿನ ಜನರನ್ನು ಸಮಾಧಾನಿಸಲು ಪ್ರಯತ್ನಿಸಿತು. ಸರಕಾರದ ಈ ಕ್ರಮ ದಿಂದಾಗಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಹತೋಟಿಗೆ ಬಂದೀತೇ ವಿನಃ ನಕ್ಸಲರ ಹಾಗೂ ಪೊಲೀಸರ ಸಂಘರ್ಷ ನಡೆಯುತ್ತಲೇ ಇದೆ. ಇದಕ್ಕೆಲ್ಲಾ ಯಾರು ಹೊಣೆ? ನನ್ನ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರಕಾರವೇ ಇದಕ್ಕೆ ನೇರ ಹೊಣೆ. ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕಾದರೆ ಈ ಪ್ರದೇಶದಲ್ಲಿ ವಾಸಿಸುವ ಜನರ, ಸುತ್ತಮುತ್ತಲಿನ ಪ್ರದೇಶಗಳ ಹಾಗೂ ಇನ್ನಿತರ ಬುದ್ಧಿಜೀವಿ ಗಳ ಹಾಗೂ ಸಂಘಸಂಸ್ಥೆಗಳ ಅಭಿಪ್ರಾಯ ಪಡೆದು ಆ ನಂತರ ಆ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೇ ಹೊರತು ನಾಲ್ಕಾರು ಮಂದಿ ಕುಳಿತು ಈ ಯೋಜನೆಯನ್ನು ಸಿದ್ಧಪಡಿಸುವುದೆಂ ದರೆ ನಾಚಿಕೆಗೇಡಿನ ಸಂಗತಿ.
ವಿದೇಶಿಯರಿಗೆ, ವಿದೇಶಿ ಕಂಪೆನಿಗಳಿಗೆ ಇಲ್ಲಿನ ಫಲವ ತ್ತಾದ ಜಮೀನನ್ನು ಮೊಗೆಮೊಗೆದು ಕೊಡುವ ಸರಕಾರ ಇಲ್ಲೇ ಹುಟ್ಟಿ, ಇಲ್ಲೇ ಬೆಳೆದ ಜನರಿಗೆ ಬದುಕುವ ಹಕ್ಕು ನೀಡುತ್ತಿಲ್ಲ ವೆಂದರೆ, ಭಾರತದ ಪ್ರಜಾಪ್ರಭುತ್ವ ಗ್ರೇಟ್ ಅಲ್ವೇ? ಈದು ಎನ್ ಕೌಂಟರ್ ಪ್ರಕರಣದ ನಂತರ ಎಚ್ಚೆತ್ತುಕೊಂಡ ಸರಕಾರ ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿಗಾಗಿ ನಕ್ಸಲ್ ಪ್ಯಾಕೇಜ್ ಹೆಸರಿ ನಲ್ಲಿ ಕೋಟ್ಯಂತರ ರೂಪಾಯಿ ಹಣ ಬಿಡುಗಡೆ ಮಾಡಿದೆ. ಈ ಹಣವೆಲ್ಲಾ ಎಲ್ಲಿ, ಯಾರ ಜೇಬು ಸೇರುತ್ತಿದೆ ಎನ್ನುವುದು ಈ ವರೆಗೂ ತಿಳಿದುಬಂದಿಲ್ಲ. ಅಭಿವೃದ್ಧಿ ಮಾತ್ರ ಶೂನ್ಯ. ಇಲ್ಲಿ ಅಲ್ಪ ಸ್ವಲ್ಪ ಅಭಿವೃದ್ಧಿಯಾದುದನ್ನು ಬಿಟ್ಟರೆ ಇನ್ಯಾವುದೇ ಪ್ರಯೋಜ ನವಾಗಿಲ್ಲ. ಹಣ ಬಿಡುಗಡೆ ಮಾಡುವಾಗ ಇರುವ ಉತ್ಸಾಹ ಅದು ನಿಗದಿತ ಪ್ರದೇಶಗಳಿಗೆ ಸೂಕ್ತ ರೀತಿಯಲ್ಲಿ ತಲುಪಿದೆಯೇ ಎಂದು ತಿಳಿಯುವ ಇಚ್ಛೆ ಸರಕಾರಕ್ಕೆ ಇಲ್ಲ. ಯಾರದೋ ತಪ್ಪಿಗೆ ಯಾರದೋ ಅಮಾಯಕ ಪ್ರಾಣಗಳು ಬಲಿಯಾಗುತ್ತಿವೆ. ಹಾದಿ ತಪ್ಪಿದ ಯುವಕರು ಹಾಗೂ ಅಮಾಯಕ ಪೊಲೀಸರು ಸರಕಾರದ ದ್ವಂದ್ವ ನೀತಿಯಿಂದಾಗಿ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ.
ಇನ್ನಾದರೂ ರಾಜ್ಯ ಮತ್ತು ಕೇಂದ್ರ ಸರಕಾರ ಎಚ್ಚೆತ್ತು ಕೊಂಡರೆ ಒಳಿತು. ಒಂದು ಲೆಕ್ಕದಲ್ಲಿ ಇದು ಸರಕಾರವೇ ಮಾಡಿ ಕೊಂಡ ಎಡವಟ್ಟು ಎನ್ನಬಹುದು. ಹೆಚ್ಚಾಗಿ ಅರಣ್ಯದಲ್ಲಿ ಮತ್ತು ಅರಣ್ಯದಂಚಿನಲ್ಲಿ ಗಿರಿಜನರು ವಾಸವಾಗಿದ್ದು, ಇವರ ಸಮಗ್ರ ಅಭಿವೃದ್ಧಿಯಾಗಬೇಕಾದ ಅಗತ್ಯವಿದೆ. ಸರಿಯಾದ ವಿದ್ಯುತ್, ರಸ್ತೆ ಸೌಕರ್ಯವಿಲ್ಲದೆ ಮಳೆಗಾಲದಲ್ಲಿ ತುರ್ತುಪರಿಸ್ಥಿತಿಯಲ್ಲಿ ಪರದಾಡುವಂತಹ ಪರಿಸ್ಥಿತಿಯಿದೆ ಹಾಗೂ ಹಲವಾರು ಕುಟುಂ ಬಗಳಿಗೆ ಇನ್ನೂ ಹಕ್ಕುಪತ್ರ ವಿತರಣೆಯಾಗಿಲ್ಲ. ಹೀಗಾಗಿ ಯಾವುದೇ ಸರಕಾರದ ಸವಲತ್ತುಗಳು ಇಲ್ಲಿನ ಜನರಿಗೆ ಸಿಗು ತ್ತಿಲ್ಲ. ಹಲವು ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿ ಸುವ ಭರವಸೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸಿ ದರೆ ನಕ್ಸಲೀಯ ಚಟುವಟಿಕೆ ಕಡಿಮೆಯಾಗಬಹುದು ಹಾಗೂ ಅಮಾಯಕ ಜೀವ ಬಲಿಯಾಗುವುದನ್ನು ತಡೆಯಬಹುದು.

04-05-2012

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ : ದೋಸೆ ಮಾಡುವ ಹೆಂಗಸರು ಬೇಕು. ೯೯೦೨೦೭೧೫೪೯.
ಕಂಕನಾಡಿ : ಟೈಲರಿಂಗ್ ಶಾಪಿಗೆ ಅಲ್‌ಟ್ರೇಶನ್ ಮತ್ತು ಫಿನಿಶಿಂಗ್‌ಗೆ ಜನ ಬೇಕು ೯೮೮೬೪೪೩೯೬೧.
ಮಂಗಳೂರು : ಪ್ಲಂಬರ್ & ಎಲೆಕ್ಟ್ರೀಶಿಯನ್ ಬೇಕು. ೯೮೪೪೬೬೭೦೨೪
ತೊಕ್ಕೊಟ್ಟು : ಬಾರ್ & ರೆಸ್ಟೋರೆಂಟ್‌ಗೆ ಕಿಚನ್ ಹೆಲ್ಪರ್ ಮತ್ತು ವೇಟರ್ (ಪಾರ್ಟ್‌ಟೈಂ) ಬೇಕು. ೯೭೪೨೨೮೫೪೮೫.
ತೊಕ್ಕೊಟ್ಟು ವೆಜ್ ರೆಸ್ಟೋರೆಂಟಿಗೆ ಚೈನೀಸ್ ಕುಕ್ ಬೇಕಾಗಿದ್ದಾರೆ. ೯೯೦೧೧೪೩೦೮೯
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ ಬೇಕು. ೯೮೪೫೫೯೬೯೬೦
ಉಡುಪಿ : ಬೇಕರಿ ಕೆಲಸಕ್ಕೆ ಜನ ಬೇಕು ೯೭೪೩೪೯೨೯೧೨
ಮಂಗಳೂರು: ಮೇಸ್ತ್ರಿಗೆ ಹೆಲ್ಪರ್ ಬೇಕಾಗಿದ್ದಾರೆ. ೯೮೮೬೮೦೦೫೧೦
ಕೈಕಂಬ : ಹೆಲ್ಪರ್ ಕೆಲಸಕ್ಕೆ ಹುಡುಗರು, ಹುಡುಗಿಯರು ಬೇಕು.೯೮೪೪೦೦೯೯೦೫
ಕೈಕಂಬ : ಕವಾಟು ಫ್ಯಾಕ್ಟರಿಗೆ ಕೆಲಸಕ್ಕೆ ಹೆಲ್ಪರ್ ಬೇಕು.೯೮೪೫೯೫೬೧೪೦
ಮಂಗಳೂರು :ಸೂಪರ್ ಮಾರ್ಕೆಟ್‌ಗೆ ಮ್ಯಾನೇಜರ್ ಕೆಲಸಕ್ಕೆ ಜನ ಬೇಕು. ೯೮೮೦೨೩೯೧೭೦
ಮಂಗಳೂರು :ಸ್ಪೇರ್ ಪಾರ್ಟ್ಸ್ ಅಂಗಡಿಗೆ ಕೆಲಸಕ್ಕೆ ಜನ ಬೇಕು. ೯೩೪೩೩೫೫೮೩೫
ಮಂಗಳೂರು : ಲೇಡಿಸ್ ಟೈಲರ್ ಬೇಕು ೮೦೫೦೧೬೩೨೭೮.
ಮಂಗಳೂರು : ಹೋಟೆಲ್‌ಗೆ ವೇಟರ್, ಕಿಚನ್ ಹೆಲ್ಪರ್ ಬೇಕು ೯೮೪೫೯೮೨೬೨೫.
ಕದ್ರಿ: ಲಾಂಡ್ರಿಗೆ ಜನ ಬೇಕು ೨೨೨೧೯೪೫.
ಕಾರ್ಕಳ : ಬಾರ್‌ಗೆ ವೇಟರ್, ಕ್ಲೀನ್ ಬೇಕು ೯೮೪೫೮೭೪೦೬೮
ಮಂಗಳೂರು : ಹೋಂ ಪ್ರೊಡಕ್ಟ್‌ಗೆ ಯುವಕ -ಯುವತಿಯರು ಬೇಕು ೯೦೬೦೯೩೨೩೫೧.
ಸ್ಟೇಟ್‌ಬ್ಯಾಂಕ್ : ಕೆಲಸಕ್ಕೆ ಜನ ಬೇಕು ೯೮೪೪೫೨೧೭೪೩.
ಮಂಗಳೂರು : ಪ್ರೆಸ್‌ಗೆ ಬೈಂಡಿಂಗ್ ಕೆಲಸಕ್ಕೆ ಜನ ಬೇಕು ೨೨೧೧೦೫೦.
ಮಂಗಳೂರು : ಎಲೆಕ್ಟ್ರಾನಿಕ್ಸ್ ಅಂಗಡಿಗೆ ಯುವಕರು ಬೇಕು ೪೨೭೪೦೧೦.
ಮಂಗಳೂರು : ಕೊರಿಯರ್ ಸಂಸ್ಥೆಗೆ ಜನ ಬೇಕು ೯೯೦೦೪೩೪೯೪೮.
ಕಂಕನಾಡಿ : ಬಟ್ಟೆ ಅಂಗಡಿಗೆ ಸೇಲ್ಸ್‌ಗೆ ಜನ ಬೇಕು ೯೯೪೫೯೯೬೭೮೭.
ಬಿಕರ್ನಕಟ್ಟೆ ಹೊಟೇಲಿಗೆ ತಿಂಡಿ ಮಾಡುವವರು ಬೇಕು ೯೪೪೯೯೦೩೩೨೩.
ಮಂಗಳೂರು : ಅಫೀಸಿಗೆ ಕಂಪ್ಯೂಟರ್ ತಿಳಿದ ಲೇಡಿ ಸ್ಟಾಫ್ ಬೇಕು ೯೪೮೦೩೬೨೩೦೨.
ಮಂಗಳೂರು : ಬೇಕರಿಯಲ್ಲಿ ತಿಂಡಿ ತಿನಿಸು ಮಾಡಲು ಜನ ಬೇಕು ೯೯೦೧೩೫೦೪೩೧.
ಮಂಗಳೂರು : ಹೊಟೇಲ್‌ಗೆ ಅಡುಗೆ, ತಿಂಡಿ ಮಾಡುವವರು, ವೇಟರ್, ಕ್ಲೀನರ್, ಕೌಂಟರ್‌ಗೆ ಜನ ಬೇಕು ೯೮೮೦೯೦೫೨೫೩.
ಕಂಕನಾಡಿ: ಕಚೇರಿ ಕೆಲಸಕ್ಕೆ ಹಿಂದಿ, ಇಂಗ್ಲಿಷ್ ಮಾತಾಡಲು ಗೊತ್ತಿರುವ ಲೇಡಿ ಬೇಕು ೯೫೩೮೫೫೩೨೧೧.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4096) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1469) donation (1) dvs (21) election (1) encounter (1) epaper (2542) epapr (2) escape (2) eshwarappa (6) facebook (1) fariyad (8) fea (1) feature (2309) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (39) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (153) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (109) kinnigoli (2) kodihalli (1) kota (1) ksrtc (1) kumaraswamy (1) kundapura (96) kyandi (1) lekhana (263) ln (1) lnews (3715) lokayukta (3) madikeri (1) maleria (1) mangalore (608) mangaloreairport (1) manglore (7) manipal (31) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (153) mlore (717) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (422) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (276) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (814) srinivaspoojary (1) srinivasshetty (1) sslc (2) suicide (2) sulia (4) sullia (210) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (963) tpchandrashekaran (1) traffic (1) train (1) udu (1) udupi (494) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (133) water (4) wenlock (2) yeddi (53) yogishbhat (1)