ಐಪಿಎಲ್ ಬೆಟ್ಟಿಂಗ್ ದಂಧೆ: ಆರು ಮಂದಿ ಸೆರೆ

Posted by JAYAKIRANA Kirana on Wednesday, 2 May 2012 | 0 comments | Leave a comment...

ಮಂಗಳೂರು: ಕುಂದಾಪುರದ ಗಾಂಧಿ ಮೈದಾನದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರು ಮಂದಿ ಯನ್ನು ಕುಂದಾಪುರ ಠಾಣಾ ಪೊಲೀ ಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆನಗಳ್ಳಿ ಗ್ರಾಮದ ದೂಪದಕಟ್ಟೆ ಮನೆಯ ಜಯಶೀಲ ಶೆಟ್ಟಿ, ಬೇಳೂರು ಗ್ರಾಮದ ರಕ್ಷಣ್ ಶೆಟ್ಟಿ, ಉಪ್ಪುಂದ ಗ್ರಾಮದ ಸುಧೀರ್, ನಾಗೇಶ ದೇವಾಡಿಗ, ಸತ್ಯನಾರಾಯಣ, ಆಲೂರು ಗ್ರಾಮದ ಪ್ರವೀಣ್ ಪೂಜಾರಿ ಬಂಧಿತರು. ಇವರು ಮೊಬೈಲ್ ಬಳಸಿಕೊಂಡು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರೆನ್ನಲಾಗಿದೆ. ಆಟಕ್ಕೆ ಬಳಸಿದ ೧೨,೦೪೦ ರೂ. ನಗದು ಹಾಗೂ ಎಂಟು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಾವಿಯಲ್ಲಿ ಮಹಿಳೆಯ ಶವ: ಪತಿಯ ಬಂಧನ

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ: ಬೆಳುವಾಯಿ ಸಮೀಪದ ನಡಿಗುಡ್ಡೆ ಎಂಬಲ್ಲಿನ ಮಹಿಳೆಯೊಬ್ಬರ ಶವವು ಬೆಳುವಾಯಿಯ ಬಾವಿಯೊಂದರಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದ್ದು, ಇದೊಂದು ಕೊಲೆಯಾಗಿರಬಹುದೆಂದು ಶಂಕೆ ಇತ್ತಾದರೂ ಕುಡುಕ ಪತಿಯ ಕಿರುಕುಳದಿಂದ ಆಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಡಿಗುಡ್ಡೆಯ ಚುಕುಡ ಎಂಬವರ ಪತ್ನಿ ಉಮಾ(೩೮) ಎಂಬವರೇ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು, ಇವರಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಎಪ್ರಿಲ್ ೩೦ರಂದು ಉಮಾ ಮನೆಯಿಂದ ನಾಪತ್ತೆಯಾಗಿದ್ದು ಈ ಸಂಬಂಧ ಮನೆಮಂದಿ ಪೊಲೀಸರಿಗೆ ಮೌಖಿಕ ದೂರು ನೀಡಿದ್ದ ರೆನ್ನಲಾಗಿದೆ. ಮನೆಬಿಟ್ಟು ಎರಡು ದಿನ ಕಳೆದರೂ ಉಮಾ ರವರು ಪತ್ತೆಯಾಗದಿದ್ದ ಕಾರಣ ಮೇ ೨ರಂದು ಮತ್ತೆ ದೂರು ನೀಡಲು ಹೋಗಿದ್ದರು.
ಈ ವೇಳೆ ಬೆಳುವಾಯಿ ಪೇಟೆ ಬಳಿಯ ಬಾವಿಯೊಂದರಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು ಆ ಶವ ಉಮಾರವರದೇ ಆಗಿತ್ತು. ನಡಿಗುಡ್ಡೆಯಿಂದ ಬೆಳುವಾಯಿಗೆ ಎರಡು ಕಿ.ಮೀ. ಅಂತರವಿದೆ. ಹೀಗಾಗಿ ಉಮಾರವರ ಮೇಲೆ ಯಾರೋ ಅತ್ಯಾಚಾರವೆಸಗಿ ಕೊಲೆಗೈದು ಬಾವಿಗೆ ಹಾಕಿರಬೇಕೆಂದು ಶಂಕಿಸಲಾಗಿತ್ತು. ಆದರೆ ಮಧ್ಯಾಹ್ನದ ವೇಳೆ ಉಮಾರವರ ಗಂಡ ಚುಕುಡರವರನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದ ಪೊಲೀಸರು ಆತನ ಕಿರುಕುಳದಿಂದ ಬೇಸತ್ತು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದೆಂದು ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಾಣಿ: ಸರಣಿ ಕಳ್ಳತನ

Posted by JAYAKIRANA Kirana on | 0 comments | Leave a comment...

ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯ ಮಾಣಿ ಜಂಕ್ಷನ್‌ನಲ್ಲಿ ಸುಮಾರು ಎಂಟು ಅಂಗಡಿಗಳಿಗೆ ಮಂಗಳವಾರ ಮಧ್ಯರಾತ್ರಿ ನುಗ್ಗಿದ ಕಳ್ಳರು ಕೈಗೆ ಸಿಕ್ಕ ಚಿಲ್ಲ್ಲರೆ ಹಣ ಹಾಗೂ ಅಂಗಡಿಯೊಳ ಗಿದ್ದ ಕೆಲ ಸೊತ್ತುಗಳನ್ನು ಎಗರಿಸಿ ಪರಾರಿಯಾದ ಘಟನೆ ನಡೆದಿದೆ.
ಇದರ ಒಟ್ಟು ಮೌಲ್ಯ ಸುಮಾರು ಏಳು ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಾಣಿ ಜಂಕ್ಷನ್ ನಲ್ಲಿರುವ ಮಾಣಿ ನಾಗು ಅವರ ಕೋಳಿ ಅಂಗಡಿ, ಮೋಹನ್ ಅವರ ಕಾರ್ತಿಕ್ ಕ್ಯಾಂಟೀನ್, ಅನಂದ ಟೈಲರ್ ಅವರ ಗೂಡಂಗಡಿ, ದಿನೇಶ್ ಜ್ಯೂಸ್ ಅಂಗಡಿ, ವೆಂಕಟೇಶ್ ಅವರ ಗೂಡಂಗಡಿ, ಮದ್ದಣ್ಣ ಅವರ ಅಂಗಡಿ, ರಾಜೇಶ್ ಅವರ ಸಿಡಿ ಅಂಗಡಿಗೆ ನುಗ್ಗಿ ಒಂದು ಮೊಬೈಲ್ ಹಾಗೂ ೧೫೦೦ ರೂ. ಕಳ್ಳತನ ನಡೆಸಿದ್ದಾರೆ. ಅದೇ ರೀತಿಯಾಗಿ ಮೋನಾಕ ಅವರ ತರಕಾರಿ ಅಂಗಡಿಗಳಿಗೆ ನುಗ್ಗಿ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಬಗ್ಗೆ ಸಿಡಿ ಅಂಗಡಿ ಮಾಲೀಕ ರಾಜೇಶ್ ಅವರು ವಿಟ್ಲ ಠಾಣೆ ದೂರು ನೀಡಿದ್ದಾರೆ ಹೊರತು ಇದೂವರೆಗೂ ಬೇರೆ ಯಾರು ಕೂಡ ಈ ಬಗ್ಗೆ ಠಾಣೆಗೆ ದೂರು ನೀಡಲಿಲ್ಲ.

ಡ್ರೈವರ್ ಅಸಹಜ ಸಾವು

Posted by JAYAKIRANA Kirana on | 0 comments | Leave a comment...

ಉಡುಪಿ: ನಗರದ ಪ್ರಭಾ ಮೋಟಾರ್ ಡ್ರೈವಿಂಗ್ ಸ್ಕೂಲಿನಲ್ಲಿ ಡ್ರೈವಿಂಗ್ ತರಬೇತುದಾರರ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ಬುಧವಾರ ಬೆಳಗ್ಗೆ ಅಸ್ವಾಭಾವಿಕವಾಗಿ ಮೃತಪಟ್ಟ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮಾಣಿಲ ನಿವಾಸಿ ಸದಾಶಿವ (೩೦) ಎಂದು ಗುರುತಿಸಲಾಗಿದೆ.
ಸದಾಶಿವ, ಪ್ರಶಾಂತ್ ಹಾಗೂ ವಸಂತ ನಾಯಕ್ ಎಂಬವರು ಡ್ರೈವಿಂಗ್ ತರಬೇತಿ ಕೊಡುವ ಕೆಲಸ ಮಾಡುವವರಾಗಿದ್ದು, ಸಿಟಿ ಬಸ್ ನಿಲ್ದಾ ಣದ ಬಳಿಯ ಶಿವಭಾಗ್ ಎನ್‌ಕ್ಲೇವ್‌ನ ಕಟ್ಟಡದ ನೆಲ ಅಂತಸ್ತಿನಲ್ಲಿ ಜತೆಯಾಗಿ ವಾಸವಾಗಿದ್ದರು ಎನ್ನಲಾಗಿದೆ.
ಬುಧವಾರ ಬೆಳಗ್ಗೆ ಗಂಟೆ ೫.೪೦ಕ್ಕೆ ತಾನು ಸ್ನಾನಕ್ಕೆ ಹೋಗುವ ಸಮಯದಲ್ಲಿ ಸದಾಶಿವ ರೂಮಲ್ಲಿ ಕುರ್ಚಿಯಲ್ಲಿ ಕುಳಿತಿದ್ದ. ಸ್ನಾನ ಮಾಡಿ ಮರಳಿದಾಗ ಸದಾಶಿವ ರೂಮಿನ ಹೊರಗಡೆ ಮಲಗಿದ್ದ. ಎಬ್ಬಿಸಿದಾಗ ಮಾತನಾಡದೇ ಇದ್ದ ಕಾರಣ ಸ್ಕೂಲಿನ ಮಾಲ ಕರಿಗೆ ತಿಳಿಸಿ, ಅಂಬ್ಯೂಲೆನ್ಸ್ ತರಿಸಿ, ಸರಕಾರಿ ಆಸ್ಪತ್ರೆಗೆ ಸಾಗಿಸಿ ವೈದ್ಯರು ಪರಿಶೀಲಿಸಿದಾಗ ಸದಾಶಿವ ಮೃತರಾಗಿರುವುದಾಗಿ ತಿಳಿದುಬಂತು ಎಂದು ವಸಂತ ನಾಯಕ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೃದಯಾಘಾತ ಅಥವಾ ಇತರ ಯಾವುದಾದರೂ ಖಾಯಿಲೆಯಿಂದ ಸದಾಶಿವ ಮೃತರಾಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸರು ಅಸ್ವಾಭಾವಿಕ ಮರಣ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೇಶ್ಯಾವಾಟಿಕೆ ದಂಧೆ: ಬಾಲಿವುಡ್ ಸಹನಟಿ ಸೆರೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಕೋರಮಂಗಲದ ಆರನೇ ಬ್ಲಾಕ್ ರಸ್ತೆಯ ಅನಿಶಾ ಮಿಡೋಸ್ ಅಪಾರ್ಟ್‌ಮೆಂಟ್‌ಗೆ ದಾಳಿ ಮಾಡಿದ ಸಿದ್ದಾಪುರ ಠಾಣಾ ಪೊಲೀಸರು ವೇಶ್ಯಾವಾಟಿಕೆ ನಿರತರಾಗಿದ್ದ ಬಾಲಿವುಡ್ ಸಹನಟಿ ಸನಾ ಖಾನ್(೨೬) ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಸನಾ ಖಾನ್ ಜೊತೆ ಉಜ್ಜೇಕಿಸ್ತಾನದ ಖಾಲಿದಾ(೨೮), ನಿಖಿತಾ ಜೋಸೆಫ್(೨೧), ಮೆನೇಜರ್ ರಶ್ಮಿ(೩೦), ಸಮೀರ್ ಅಲಿಯಾದ್ ನಯಾಝ್(೨೬), ಕವಿರಾಜ್(೨೮) ಹಾಗೂ ವಿನಯ್‌ಕುಮಾರ್(೨೮) ಎಂಬವರು ಸಿಕ್ಕಿಬಿದ್ದಿದ್ದಾರೆ. ದಂಧೆ ನಡೆಸುತ್ತಿದ್ದ ಶಿವಪ್ರಕಾಶ್ ಹಾಗೂ ಉಸ್ಮಾತ್ ದಾಳಿಯ ಸಂದರ್ಭ ಪರಾರಿಯಾಗಿದ್ದಾರೆ. ಬಂಧಿತರಿಂದ ೪೦ ಸಾವಿರ ರೂ. ನಗದು ಹಾಗೂ ೧೨ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಸ್ ಡಿಕ್ಕಿ: ಪಾದಚಾರಿ ಗಂಭೀರ

Posted by JAYAKIRANA Kirana on | 0 comments | Leave a comment...

ಪುತ್ತೂರು: ಪುತ್ತೂರು ಬಸ್ ನಿಲ್ದಾಣದ ಬಳಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಯೊಬ್ಬರು ಗಂಭೀರವಾಗಿ ಗಾಯ ಗೊಂಡಿದ್ದಾರೆ.
ಗಾಯಾಳುವನ್ನು ಆನಂದ ಎಂದು ಗುರುತಿಸಲಾಗಿದೆ. ನಡೆದುಕೊಂಡು ಹೋಗುತ್ತಿದ್ದ ಆನಂದ ಅವರಿಗೆ ಬಸ್ ಡಿಕ್ಕಿಯಾದ ಪರಿಣಾಮ ಅವರ ಎರಡು ಕಾಲುಗಳು ಪುಡಿಯಾಗಿದ್ದು, ಗಂಭೀರವಸ್ಥೆಯಲ್ಲಿದ್ದ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ತಲೆಮರೆಸಿಕೊಂಡಿದ್ದ ರೌಡಿ ಸೆರೆ

Posted by JAYAKIRANA Kirana on | 0 comments | Leave a comment...

ಉಡುಪಿ: ಕಳೆದ ಕೆಲವು ವರ್ಷ ಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿ ಪ್ರಸಾದ್ ಶೆಟ್ಟಿ (೩೦) ಎಂಬಾತನನ್ನು ಮಣಿಪಾಲ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಹೆರ್ಗ ಗ್ರಾಮದ ಸಣ್ಣಕ್ಕಿಬೆಟ್ಟು ನಿವಾಸಿಯಾಗಿರುವ ಈತನ ವಿರುದ್ದ ೨೦೦೬ರಿಂದ ೨೦೦೮ರ ನಡುವೆ ಮಣಿ ಪಾಲ ಪೊಲೀಸ್ ಠಾಣೆಯಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿ ದ್ದವು ಮತ್ತು ಇದೇ ಕಾರಣಕ್ಕೆ ಈತನ ವಿರುದ್ದ ರೌಡಿ ಶೀಟ್ ತೆರೆಯಲಾಗಿತ್ತು.
೨೦೦೮ರ ಮೊಕದ್ದಮೆಯೊಂದಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡ ಹಿನ್ನೆಲೆಯಲ್ಲಿ ಪ್ರಸಾದ್ ಶೆಟ್ಟಿ ವಿರುದ್ದ ನ್ಯಾಯಾಲಯವು ಎಲ್‌ಪಿಸಿ ವಾರೆಂಟ್ ಹೊರಡಿಸಿತ್ತು. ಇದುವರೆಗೆ ಮುಂಬೈನ ಪೂರ್ವ ಬಾಂಡುಪ್‌ನ ದಾಟರ್ ಕಾಲನಿಯಲ್ಲಿ ತಲೆಮರೆಸಿಕೊಂಡಿದ್ದ. ಈತ ಉಡುಪಿಗೆ ಮರಳುತ್ತಿರುವುದಾಗಿ ಲಭಿಸಿದ ಖಚಿತ ಮಾಹಿತಿಯ ಪ್ರಕಾರ ಮಣಿಪಾಲ ಠಾಣೆಯ ಪೊಲೀಸರು ಬಲೆ ಬೀಸಿ ಉಡುಪಿ ಬಸ್ ನಿಲ್ದಾಣದಿಂದ ದಸ್ತಗಿರಿ ಮಾಡಿದರು.
ಆರೋಪಿಯನ್ನು ಪೊಲೀಸರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದರು.

ಚಾಲಕ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮುಲ್ಕಿ: ಸುರತ್ಕಲ್ ಖಾಸಗಿ ಕಂಪೆನಿಯಲ್ಲಿ ಕಂಪ್ರೆಸರ್ ಚಾಲಕನಾಗಿ ದುಡಿಯುತ್ತಿರುವ ರವಿ ಚಂದ್ರ ಆಚಾರ್ಯ(೫೩) ಎಂಬವರು ಕಳೆದ ಎಪ್ರಿಲ್ ೨೯ರಿಂದ ನಾಪತ್ತೆಯಾಗಿದ್ದಾರೆ.
ಭಾನುವಾರ ಕೆಲಸಕ್ಕೆ ಕಾರ್ಮಿ ಕರನ್ನು ಹುಡುಕಲು ಹೋಗುತ್ತೇನೆ ಎಂದು ಮನೆ ಬಿಟ್ಟು ಹೋದವರು ನಾಪತ್ತೆಯಾಗಿರುವರು ಎಂದು ಪತ್ನಿ ಗುಲಾಬಿ ಮುಲ್ಕಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವ್ಯಕ್ತಿಯ ಪತ್ತೆ ಅಥವಾ ಮಾಹಿತಿ ಸಿಕ್ಕಿದ್ದಲ್ಲಿ ಮೂಲ್ಕಿ ಠಾಣೆ ಯನ್ನು ಸಂಪರ್ಕಿಸಲು ಕೋರಲಾಗಿದೆ. ಫೋ:೦೮೨೪೨೨೯೦೫೩೩.

ಪತ್ನಿ ಜತೆ ಅಸಭ್ಯ ವರ್ತನೆ: ಪ್ರಶ್ನಿಸಿದ ಗಂಡನಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಉಡುಪಿ: ವ್ಯಕ್ತಿಯೋರ್ವ ತನ್ನ ನೆರೆಮನೆಯಲ್ಲಿ ವಾಸವಿರುವ ದಂಪ ತಿಗಳ ಮೇಲೆ ಕತ್ತಿ ಮತ್ತು ಮರದ ಸೋಂಟೆಯಿಂದ ಹಲ್ಲೆ ನಡೆಸಿದ ಘಟನೆ ಮಂಗಳವಾರ ರಾತ್ರಿ ಏಳು ಗಂಟೆಗೆ ಪತ್ತೂರು ಗ್ರಾಮದ ನಯಂಪಳ್ಳಿಯಲ್ಲಿ ನಡೆದಿದೆ.
ಜನಾರ್ದನ ಪೂಜಾರಿ ಹಾಗೂ ಶಾರದಾ ಎಂಬವರೇ ಗಾಯಗೊಂಡ ವರಾಗಿದ್ದು, ಆರೋಪಿ ರಾಮಚಂದ್ರ ಯಾನೆ ರಾಮಕೃಷ್ಣ ಎಂಬಾತನ ವಿರುದ್ದ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ರಾಮಚಂದ್ರ ಹಾಗೂ ಶಾರದಾ ಜೊತೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಕೆಲಸದ ಸಮಯದಲ್ಲಿ ಶಾರದಾ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದ ಎನ್ನಲಾಗಿದೆ. ಇದೇ ವಿಷಯದಲ್ಲಿ ರಾಮಚಂದ್ರ ಹಾಗೂ ಜನಾರ್ದನ ಪೂಜಾರಿ ನಡುವೆ ಜಗಳ ನಡೆದಿತ್ತು ಎಂದು ಹೇಳಲಾಗಿದೆ.
ಇದೇ ದ್ವೇಷದಲ್ಲಿ ರಾಮಚಂದ್ರ ಮಂಗಳವಾರ ರಾತ್ರಿ ಕತ್ತಿಯಿಂದ ಕಡಿದು ಗಾಯಗೊಳಿಸಿದ. ಈ ಸಂದರ್ಭದಲ್ಲಿ ಕತ್ತಿಯನ್ನು ಕಸಿದುಕೊಂಡು ಎಸೆದ ಬಳಿಕ ಆರೋಪಿ ಅಲ್ಲಿಯೇ ಇದ್ದ ಮರದ ಸೋಂಟೆಯಿಂದ ಜನಾರ್ದನ ಹಾಗೂ ತಡೆಯಲು ಬಂದ ಶಾರದಾ ಇವರ ಮೇಲೆಯೂ ಹಲ್ಲೆ ನಡೆಸಿ ದನೆಂದೂ ದೂರಲಾಗಿದೆ. ಈ ಪ್ರಕರಣ ನಡೆಯು ತ್ತಿರುವಾಗ ಅಕ್ಕಪಕ್ಕದ ಮನೆ ಯವರು ಸ್ಥಳಕ್ಕೆ ಆಗಮಿಸುತ್ತಿರುವುದನ್ನು ನೋಡಿದ ಆರೋಪಿ, ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವು ದಾಗಿ ಬೆದರಿಕೆ ಹಾಕಿದನೆಂದು ಆರೋಪಿಸಲಾಗಿದೆ.

ಯುವತಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ಸುಳ್ಯ: ಬೆಳ್ಳಾರೆ ಗ್ರಾಮದ ಕಲ್ಲೋಣಿ ನಂಜುಂಡ ಎಂಬವರ ಮಗಳು ಗಜ ಲಕ್ಷ್ಮಿ(೧೯) ಎ.೨೮ರ ಬೆಳಿಗ್ಗೆ ಸೋಣಂ ಗೇರಿಯ ತನ್ನ ಚಿಕ್ಕಮ್ಮನ ಮನೆಗೆ ಎಂದು ಹೋದವಳು ನಾಪತ್ತೆಯಾಗಿ ದ್ದಾಳೆ ಎಂದು ಸುಳ್ಯ ಪೊಲೀಸರಿಗೆ ದೂರು ನೀಡಲಾಗಿದೆ.
ತೊಡಿಕಾನ ಗ್ರಾಮದ ಅಡ್ಯಡ್ಕ ಸದಾಶಿವ ಎಂಬವರ ಮಗ ರಾಮಕೃಷ್ಣ ಎಂಬಾತನೊಂದಿಗೆ ಈಕೆಗೆ ಮೂರು ತಿಂಗಳಿನಿಂದ ಪ್ರೇಮವಿದ್ದು ಆತನೊಂ ದಿಗೆ ಹೋಗಿರಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ. ರಾಮಕೃಷ್ಣ ಮತ್ತು ಗಜ ಲಕ್ಷ್ಮಿ ಪರಸ್ಪರ ಸಂಬಂಧಿಕರೇ ಆಗಿದ್ದಾರೆ. ಆತ ಕೆಲವು ವರ್ಷಗಳ ಕಾಲ ಬೆಂಗ ಳೂರಿನ ಬೇಕರಿಯೊಂದರಲ್ಲಿ ಉದ್ಯೋ ಗಿಯಾಗಿದ್ದ. ಆದರೆ ಮದುವೆಗೆ ಗಜ ಲಕ್ಷ್ಮಿ ಮನೆಯವರು ಒಪ್ಪಿಗೆ ನೀಡಲಿಲ್ಲ. ಇದರಿಂದ ನೊಂದ ಆತ ತಾನು ವಿಷ ಸೇವಿಸಿ ಸಾಯುತ್ತೇನೆ ಎಂದು ಬೆದರಿಕೆ ಕೂಡಾ ಹಾಕಿದ್ದ ಎನ್ನಲಾಗಿದೆ.

ಬಸ್ ಢಿಕ್ಕಿ: ಪಾದಚಾರಿ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು : ಅತೀ ವೇಗ ದಿಂದ ಬಂದ ಎಕ್ಸ್‌ಪ್ರೆಸ್ ಬಸ್ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಸಂಜೆ ಪಣಂಬೂರು ವೃತ್ತದ ಬಳಿ ಸಂಭವಿಸಿದೆ.
ಮೂಲತಃ ಎಲ್ಲೂರು ನಿವಾಸಿ ಪ್ರಸ್ತುತ ಕುಳಾಯಿ ವಿದ್ಯಾನಗರದಲ್ಲಿ ವಾಸವಾಗಿರುವ ರಾಮಚಂದ್ರ ಭಟ್(೬೦) ಎಂಬವರೇ ಮೃತ ಪಟ್ಟ ದುರ್ದೈವಿಯಾಗಿದ್ದಾರೆ. ಪಣಂಬೂರಿನಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಇವರು ಬುಧವಾರ ಸಂಜೆ ಮನೆಗೆ ತೆರಳಲೆಂದು ರಸ್ತೆ ದಾಟುವ ಯತ್ನದಲ್ಲಿರುವಾಗ ಮಂಗಳೂರಿನಿಂದ ಉಡುಪಿಗೆ ತೆರಳುತ್ತಿರುವ ವಿಶಾಲ್ ಹೆಸರಿನ ಎಕ್ಸ್‌ಪ್ರೆಸ್ ಬಸ್ ಅತೀ ವೇಗದಿಂದ ಬಂದು ಢಿಕ್ಕಿ ಹೊಡೆದಿತ್ತು. ಢಿಕ್ಕಿ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ರಾಮಚಂದ್ರ ಭಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ: ಮಹಿಳೆ ನೇಣಿಗೆ ಶರಣು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ನಿವಾಸಿ ಬಬಿತಾ(೩೫) ಎಂಬವರು ಮಲಗುವ ಕೋಣೆಯಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ.
ಇವರಿಗೆ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದು, ಪತಿ ಮುಂಬೈಯಲ್ಲಿ ಕೆಲಸಕ್ಕಿದ್ದಾರೆ. ಮೂರು ವರ್ಷದ ಮಗುವನ್ನು ಹೊಂದಿದ್ದ ಇವರ ಸಾವಿಗೆ ಸಕಾರಣ ತಿಳಿದುಬಂದಿಲ್ಲ.

ಬಂಟ್ವಾಳ: ವ್ಯಕ್ತಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೂಡುನಡುಗೋಡು ಗ್ರಾಮದ ಕೈಲಾರು ನಿವಾಸಿ ತಿಮ್ಮಪ್ಪ ಪೂಜಾರಿ(೪೫) ಎಂಬವರು ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಅನಾರೋಗ್ಯದ ನಿಮಿತ್ತ ಕೃತ್ಯವೆಸಗಿರಬೇಕೆಂದು ಶಂಕಿಸಲಾಗಿದೆ. ಪತ್ನಿ ಸುನಂದ ತವರಿಗೆ ಹೋಗಿದ್ದ ಸಂದರ್ಭದಲ್ಲಿ ಕೃತ್ಯವೆಸಗಿದ್ದಾರೆ.

ಕುಣಿಗಲ್‌ನಲ್ಲಿ ಅಪಘಾತ: ಮಂಗಳೂರಿನ ವೈದ್ಯ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಣಿಗಲ್‌ನಲ್ಲಿ ನಿನ್ನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರು ವೆಲೆನ್ಸಿಯಾದ ‘ಟ್ರಿನಿಟಿ ಸೆಂಟರ್’ನ ವೈದ್ಯ ಡಾ. ರಝ್ವಿನ್ ಪೆರ್ನಾಂಡಿಸ್ (೪೩)ಮೃತಪಟ್ಟಿದ್ದಾರೆ.
ತಂದೆ ರಾಕಿ ಫೆರ್ನಾಂಡಿಸ್‌ರ ಜೊತೆ ಮಂಗಳೂರಿನಿಂದ ಬೆಂಗ ಳೂರಿನತ್ತ ಇವರು ಪ್ರಯಾಣಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಚಾಲಕ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತು. ಅಪಘಾತದಲ್ಲಿ ರಝ್ವಿನ್‌ರ ತಲೆಗೆ ಗಂಭೀರ ಗಾಯವಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಹೇಳಲಾಗಿದೆ. ಮಣಿಪಾಲ ಮೂಲದ ರಝ್ವಿನ್ ವೆಲೆನ್ಸಿಯಾದ ಜೀನಾ ಡಿಸೋಜಾರನ್ನು ಮದುವೆಯಾದ ಬಳಿಕ ಮಂಗಳೂರಿನಲ್ಲಿಯೇ ನೆಲೆಸಿ ದ್ದರು. ಇವರಿಗೆ ಓರ್ವ ಪುತ್ರ ಇದ್ದಾನೆ. ಸುಮಾರು ೧೨ವರ್ಷಗಳಿಂದ ವೈದ್ಯ ವೃತ್ತಿಯಲ್ಲಿ ತೊಡಗಿದ್ದ ಇವರು ಉತ್ತಮ ವೈದ್ಯ ಎಂದು ಗುರುತಿಸಿಕೊಂಡಿದ್ದರು.

ಮೂಡಾಕ್ಕೆ ನುಗ್ಗಿದ ಫಲ್ಗುಣಿ ಮಣ್ಣು ವಿರೋಧಿಗಳು

Posted by JAYAKIRANA Kirana on | 0 comments | Leave a comment...



ಮಂಗಳೂರು: ಕಾರ್‌ಡಾರ್ ರಸ್ತೆಗಾಗಿ ಎಂಎಸ್‌ಇಝಡ್ ಕುಳೂರು, ಮೇಲ್‌ಕೊಪ್ಪಳ, ನದಿ ತೀರದಲ್ಲಿ ಹಾಕಿರುವ ಮಣ್ಣನ್ನು ತೆರವುಗೊಳಿಸುವ ಬಗ್ಗೆ ವಿನಂತಿಸಿಕೊಂಡರೂ ಎಂಎಸ್ ಇಝಡ್ ಆಡಳಿತ ನಿರ್ದೇಶಕ ಸ್ಪಂದಿ ಸದೇ ಇದ್ದ ಕಾರಣ ಅಕ್ರೋಶಗೊಂಡ ಸಂತೃಸ್ತರು ಮೂರು ಗಂಟೆಗೂ ಹೆಚ್ಚು ಕಾಲ ಸೆಝ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಿನ್ನೆ ಸಂಜೆ ನಡೆದಿದೆ.
ಕುಳೂರು, ಮೇಲ್‌ಕೊಪ್ಪಳ, ಅತ್ರೆಬೈಲ್ ಪ್ರದೇಶದ ಸಂತೃಸ್ತರು ಮೊದಲು ಮೌನ ಪ್ರತಿಭಟನೆ ಮೂಲಕ ಸೆಝ್ ಅಧಿಕಾರಿಗೆ ಮನವಿ ಸಲ್ಲಿಸಲು ನಿನ್ನೆ ಮಧ್ಯಾಹ್ನ ಮೂಡಾ ಕಚೇರಿಯ ಎದುರು ಸೇರಿದ್ದರು. ತಮ್ಮ ಮನವಿ ಸ್ವೀಕರಿಸಿ ಪ್ರತಿಕ್ರಿಯೆ ನೀಡುವಂತೆ ಅಧಿಕಾರಿಗಳಿಗೆ ಸಂದೇಶ ಕಳುಹಿಸಿ ದ್ದರು. ಆದರೆ ಅರ್ಧ ಗಂಟೆಯಾದರೂ ಸೆಝ್ ಅಧಿಕಾರಿಗಳು ಪ್ರತಿಕ್ರಿಯ ನೀಡದೆ ಇದ್ದಾಗ ಹೋರಾಟಗಾರರು ಕಚೇರಿಗೆ ಮುತ್ತಿಗೆ ಹಾಕಿದರಲ್ಲದೆ, ಅಧಿಕಾರಿ ರಾಜೀವ್ ಬಂಗ ನಮ್ಮೊಂದಿಗೆ ಬಂದು ಮಾತನಾಡಲಿ ಎಂದು ಅಗ್ರಹಿಸಿದರು. ಆದರೆ ರಾಜೀವ್ ಬಂಗರ ಬದಲಿಗೆ ಅವರ ಆಧೀನ ಅಧಿಕಾರಿಗಳು ಬಂದು ಸಮ ಜಾಯಿಸಿ ನೀಡಲು ಮುಂದಾಗಿದ್ದರಾ ದರೂ ಇದನ್ನು ಒಪ್ಪದ ಸಂತ್ರಸ್ತರು ಘೋಷಣೆ ಕೂಗಿದರು.
ರಾಜೀವ ಬಂಗ ಬಂದು ತಮಗೆ ಸಮಜಾಯಿಸಿ ನೀಡುವಂತೆ ಒತ್ತಾಯಿಸಿ ಸಂಜೆ ೭:೩೦ರವರೆಗೂ ಸಂತ್ರಸ್ತರು ಕಚೇರಿಯ ಎದುರು ಕುಳಿತಿದ್ದರು.
ಪ್ರಕರಣ ನ್ಯಾಯಾಲಯದಲ್ಲಿದೆ ಈಗೇನು ಮಾತನಾಡಲು ಸಾಧ್ಯವಿಲ್ಲ ಎಂದು ಪ್ರತಿಭಟನಕಾರರ ಬಾಯಿ ಮುಚ್ಚಿಸಲು ಸೆಝ್ ಅಧಿಕಾರಿ ಸಂಜೀವ ಕರ್ಕೆರ, ಕಾನೂನು ಸಲಹೆಗಾರ ಪ್ರೇಮಾನಂದ ಕಿಣಿಯ ಮೂಲಕ ನಡೆಸಿದ ಪ್ರಯತ್ನಗಳು ಫಲ ಪಡೆಯಲೇ ಇಲ್ಲ. ಪೊಲೀಸರೇ ಮಧ್ಯಸ್ಥಿಕೆ ವಹಿಸಿ ಸೆಝ್ ಅಧಿಕಾರಿಗಳನ್ನು ಪಲ್ಗುಣಿ ನದಿ ತೀರಕ್ಕೆ ಕರೆತರುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯ ಲಾಯಿತು.

ಜೀವರಕ್ಷಕ ದಳದಿಂದ ಯುವಕನ ರಕ್ಷಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪಣಂಬೂರಿನಲ್ಲಿ ಸಮುದ್ರ ತೀರದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸುಳಿಗೆ ಸಿಲುಕಿದ್ದ ಯುವಕನನ್ನು ಜೀವರಕ್ಷಕ ತಂಡ ರಕ್ಷಿಸಿದೆ. ಮಂಡ್ಯ ನಿವಾಸಿ ಎ.ಸಿ.ಅರುಣ್ ಎಂಬಾತನೇ ನೀರಾಟವಾಡಲು ಹೋಗಿ ಅಪಾಯಕ್ಕೆ ಸಿಲುಕಿ ಮರುಜೀವ ಪಡೆದಾತ, ತನ್ನ ಸ್ನೇಹಿತರ ಜೊತೆ ಬುಧವಾರ ಸಂಜೆ ಪಣಂಬೂರು ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದಾತ ಸ್ಥಳೀಯರ ಎಚ್ಚರಿಕೆ ಮೀರಿ ಸ್ನಾನ ಮಾಡಲು ಸಮುದ್ರಕ್ಕೆ ಇಳಿದು ನೀರಿನ ಸೆಳೆತಕ್ಕೆ ಸಿಲುಕಿದ್ದ. ಈತ ನನ್ನು ಕಂಡ ಜೀವರಕ್ಷಕ ದಳ ಕೂಡಲೇ ಸಮುದ್ರಕ್ಕಿಳಿದು ಈತನನ್ನು ರಕ್ಷಿಸಿದೆ.

ಔಷಧ ಕಳ್ಳ ಸಾಗಣೆ: ತನಿಖೆಗೆ ಸಚಿವರ ಸೂಚನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಜಿಲ್ಲಾ ಸರಕಾರಿ ಆಸ್ಪತ್ರೆ ವೆನ್ಲಾಕ್‌ನಲ್ಲಿ ಅವ್ಯಹತವಾಗಿ ನಡೆಯುತ್ತಿರುವ ಔಷಧ ಕಳ್ಳ ಸಾಗಣೆ ಬಗ್ಗೆ ತನಿಖೆ ನಡೆಸಲು ಕ್ರಮ ಕೈಗೊಳ್ಳುವುದಾಗಿ ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ತಿಳಿಸಿದ್ದಾರೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಔಷಧ ಕಳ್ಳ ಸಾಗಣೆ ಬಗ್ಗೆ ಜಯಕಿರಣ ಪತ್ರಿಕೆ ತನಿಖಾ ವರದಿಯನ್ನು ಪ್ರಕಟಿಸಿದ್ದು, ಇದನ್ನು ಗಮನಿಸಿ ಪತ್ರಿಕೆ ಜೊತೆ ಮಾತನಾಡಿದ ಸಚಿವರು ಹಗರಣದ ಬಗ್ಗೆ ವಿವರವನ್ನು ಪಡೆದುಕೊಂಡಿದ್ದಾ ರಲ್ಲದೆ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬಡ ರೋಗಿಗಳಿಗೆ ಉಚಿತವಾಗಿ ವಿತರಿಸಲೆಂದು ಸರಕಾ ರದಿಂದ ಬರುವ ಔಷಧವನ್ನು ಸಿಬ್ಬಂದಿ ಮಾರಾಟ ಮಾಡು ತ್ತಿರುವ ಬಗ್ಗೆ ಜಯಕಿರಣ ಪತ್ರಿಕೆ, ತನ್ನ ವೆಬ್ ಆವೃತ್ತಿ ಮತ್ತು ಪತ್ರಿಕೆಯಲ್ಲೂ ಪ್ರಕಟಿಸಿ ಜನ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನ ಸೆಳೆದಿತ್ತು. ಈ ವರದಿ ಶಾಸಕರ ಮತ್ತು ಸಚಿವರ ಗಮನಕ್ಕೂ ಬಂದಿದ್ದು ವರದಿಯನ್ನು ಓದಿದ ಸಚಿವರು ಪತ್ರಿಕಾ ಕಚೇರಿಗೆ ಕರೆ ಮಾಡಿ ವಿವರ ಪಡೆದುಕೊಂಡಿದ್ದಾರಲ್ಲದೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶಾಸಕ ಯೋಗೀಶ್ ಭಟ್ ಕೂಡಾ ಪ್ರತಿಕ್ರಿಯೇ ನೀಡಿದ್ದು ಈ ಅವ್ಯವಹಾರದ ಬಗ್ಗೆ ವರದಿ ಪಡೆಯುವುದಾಗಿ ತಿಳಿಸಿದ್ದಾರೆ. ಅದೇ ರೀತಿ ಆಸ್ಪತ್ರೆಯ ಡಿಎಂಒ ಕೂಡಾ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದು ಈ ಕಳ್ಳ ವ್ಯವಹಾರದ ಹಿಂದಿರುವ ಸೂತ್ರಧಾರಿಗಳ ಪತ್ತೆಗೆ ತಂತ್ರ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ. ಜಯಕಿರಣದ ತನಿಖಾ ವರದಿಯನ್ನು ಓದಿರುವ ಹಲವಾರು ಮಂದಿ ಓದುಗರೂ ಕಚೇರಿಗೆ ಕರೆ ಮಾಡಿ ತಾವು ಆಸ್ಪತ್ರೆಯಲ್ಲಿ ಔಷಧಕ್ಕಾಗಿ ಪಟ್ಟ ಕಷ್ಟವನ್ನು, ಔಷಧ ಸಿಗದೆ ತಮ್ಮವರನ್ನು ಕಳೆದುಕೊಂಡ ನೋವನ್ನು ತೆರೆದಿಟ್ಟಿದ್ದಾರೆ. ಇದಲ್ಲದೆ ತಾವು ಹಣ ಕೊಟ್ಟು ಔಷಧ ಪಡೆದಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಓದುಗರ ದೂರನ್ನು ಸಚಿವರಿಗೆ ತಲುಪಿಸುವ ಕೆಲಸವನ್ನು ಪತ್ರಿಕೆ ಮಾಡಿದೆ.

ಕೊಲೆಯಾದ ಮಹಿಳೆಯ ಮನೆಗೆ ಕನ್ಯಾನ ಸ್ವಾಮೀಜಿ ಭೇಟಿ

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ: ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಬೋರುಗುಡ್ಡೆಯ ಪ್ರೇಮಾ ಹಾಗೂ ಬುಧವಾರ ಶವ ಪತ್ತೆಯಾದ ಬೆಳುವಾಯಿ ನಡಿಗುಡ್ಡೆಯ ಉಮಾ ಅವರ ಮನೆಗೆ ಕನ್ಯಾನ ಬಾಳೆ ಕೋಡಿ ಶಿಲಾಂಜನ ಕ್ಷೇತ್ರದ ಶಶಿಕಾಂತ ಮಣಿ ಸ್ವಾಮೀಜಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.
ಪ್ರೇಮಾ ಅವರು ಕೊಲೆಯಾಗಿ ಒಂದು ವಾರ ಕಳೆದರೂ ಈವರೆಗೆ ಯಾವುದೇ ಸುಳಿವು ಲಭ್ಯವಾಗದಿದ್ದು, ದಲಿತ ಮಹಿಳೆಗಾದ ಈ ಅನ್ಯಾಯದ ಬಗ್ಗೆ ಹೋರಾಟ ಮುಂದುವರಿಸುವು ದಾಗಿ ಹೇಳಿದ ಸ್ವಾಮೀಜಿಯವರು, ಆರೋಪಿಗಳು ಯಾರೇ ಆಗಲಿ, ಶೀಘ್ರ ಬಂಧನವಾಗಬೇಕೆಂದರಲ್ಲದೆ ಈ ಸಂಬಂಧ ತಾನು ಮುಖ್ಯಮಂತ್ರಿ, ಗೃಹಸಚಿವರಿಗೆ ಮನವಿ ಮಾಡುವುದಾಗಿ ಹೇಳಿದರು. ದಲಿತ ಮುಖಂಡರುಗ ಳಾದ ಶಿವಾನಂದ ಎಸ್.ಪಾಂಡ್ರು, ಕಿರಣ್ ಕುಮಾರ್, ನಾರಾಯಣ, ಆನಂದ ಶಾಂತಿನಗರ, ಸ್ಥಳೀಯ ಪಂಚಾಯತ್ ಸದಸ್ಯರಾದ ಜಯಂತಿ ಹೆಗ್ಡೆ, ಲಕ್ಷ್ಮಣ ಪೂಜಾರಿ ಹಾಗೂ ಸ್ಥಳೀಯರಾದ ಉದಯ ಪೂಜಾರಿ, ಮೇಘರಾಜ ಹೆಗ್ಡೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಣ್ಣಿಲ್ಲದ ಕುರುಡು ಸರಕಾರ: ನಿತ್ಯಾನಂದ ಸ್ವಾಮಿ

Posted by JAYAKIRANA Kirana on | 0 comments | Leave a comment...

ಉಡುಪಿ: ಬಡ ನಿವೇಶನ ರಹಿ ತರಿಗೆ ಭೂಮಿ ವಿತರಿಸಲು ನಮ್ಮ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಕೃಷಿಕರಿಂದ ಬಲವಂತವಾಗಿ ಕೃಷಿ ಭೂಮಿ ಕಸಿದು ಶ್ರೀಮಂತರಿಗೆ, ಬಂಡವಾಳಶಾಹಿಗಳಿಗೆ, ವಿದೇಶಿ ಕಂಪೆನಿಗಳಿಗೆ, ಗಣಿ ಲೂಟಿಕೋರರಿಗೆ, ರಿಯಲ್ ಎಸ್ಟೇಟ್ ದಂಧೆ ನಡೆಸುವವರಿಗೆ ಭೂಮಿ ವಿತರಿಸಲು ಸಾಧ್ಯವಾಗುತ್ತಿದೆ. ರಾಜ್ಯ ಕಂಡ ಅತೀ ಕೆಟ್ಟ ಮತ್ತು ಲೂಟಿ ಹೊಡೆಯುವ ಕಣ್ಣಿಲ್ಲದ ಕುರುಡು ಸರಕಾರವಿದು. ಭೂಮಿಗಾಗಿ ಸರಕಾರದ ವಿರುದ್ಧ ಸ್ವಾತಂತ್ರ್ಯ ಚಳುವಳಿ ಮಾದ ರಿಯ ಹೋರಾಟ ನಡೆಸಬೇಕಾದ ಪರಿಸ್ಥಿತಿ ಉದ್ಭವಿಸಿದೆ ಎಂದು ಕರ್ನಾ ಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾದ್ಯಕ್ಷ ನಿತ್ಯಾನಂದ ಸ್ವಾಮಿ ಹೇಳಿದ್ದಾರೆ. ಪ್ರಾಂತ ಕೃಷಿಕೂಲಿಕಾರರ ಸಂಘವು ಭೂಮಿಯ ಹಕ್ಕಿಗಾಗಿ ೬೦ ದಿನಗಳ ಕಾಲ ೩೦ ಜಿಲ್ಲೆಗಳಲ್ಲಿ ಹಮ್ಮಿ ಕೊಂಡಿರುವ ಜಾಥಾವು ಉಡುಪಿಗೆ ಆಗಮಿಸಿದ ಸಂದರ್ಭದಲ್ಲಿ ಬುಧವಾರ ಮಧ್ಯಾಹ್ನ ತಾಲೂಕು ಕಚೇರಿ ಮುಂದೆ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾ ಡುತ್ತಿದ್ದರು. ಭೂಮಿಗಾಗಿ, ನಿವೇಶನಕ್ಕಾಗಿ ಮೇ೨೧ರಿಂದ ಬೆಂಗಳೂರಲ್ಲಿ ಮುಖ್ಯ ಮಂತ್ರಿಗಳ ಮನೆ ಮುಂದೆ ರೈತರು ಮತ್ತು ಕೃಷಿಕರು ಅನಿರ್ಧಿಷ್ಟಾವಧಿ ಮಹಾ ಧರಣಿಯನ್ನು ನಡೆಸಲಿದ್ದಾರೆ. ೫೦ ಸಾವಿರ ಮಂದಿ ಈ ಮಹಾ ಧರಣಿ ಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಸಂಘದ ಉತ್ತರ ಕನ್ನಡ ಜಿಲ್ಲಾ ಮುಖಂಡ ಶಾಂತಾರಾಮ ನಾಯಕ ಅವರು ತಿಳಿಸಿದರು. ರಾಜ್ಯದಲ್ಲಿ ೧೨ ಲಕ್ಷ ಎಕ್ರೆ ಭೂಮಿಯನ್ನು ಶ್ರೀಮಂತರು ಅತಿಕ್ರಮಣ ಮಾಡಿದ್ದು, ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇ ಕೆಂದು ಸುಬ್ರಹ್ಮಣ್ಯ ಸ್ವಾಮಿ ಆಯೋಗವು ಸರಕಾರಕ್ಕೆ ವರದಿ ಸಲ್ಲಿಸಿದೆಯಾದರೂ ಈ ವರದಿಯ ಮೇಲೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಕೆ.ಯಾದವ ಶೆಟ್ಟಿ ಯವರು, ಬಡವರು ಬದುಕಿಗಾಗಿ ಸರಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿದರೆ ನೋಟಿಸ್ ನೀಡುವ, ಕಿತ್ತೆಸೆಯುವ ಸರಕಾರದ ಕ್ರಮವನ್ನು ಅವರು ಇದೇ ಸಮಯದಲ್ಲಿ ಟೀಕಿಸಿ ದರು. ಸಾರ್ವಜನಿಕ ಸಭೆಯ ಬಳಿಕ ನಿವೇಶನ ಕೋರಿದ ೨೨೫ ಅರ್ಜಿಗಳನ್ನು ತಹಶೀಲ್ದಾರ್ ಕಚೇರಿಯ ಅಧಿಕಾರಿಗೆ ಸಲ್ಲಿಸಲಾಯಿತು.

ಮಂಜೇಶ್ವರ: ಮನೆ ಬೆಂಕಿಗಾಹುತಿ

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ಇಲ್ಲಿಗೆ ಸಮೀಪದ ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಾ ಲಯದ ಸಮೀಪವಿರುವ ಮನೆ ಯೊಂದು ನಿನ್ನೆ ನಸುಕಿನ ವೇಳೆ ಬೆಂಕಿ ಗಾಹುತಿಯಾಗಿದ್ದು ಇದರಿಂದಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತ ಮೊಕ್ತೇಸರ ಮಧುಸೂದನ್ ಬಳ್ಳಕ್ಕುರಾಯರವರ ಹಂಚಿನ ಮನೆ ಬೆಂಕಿಗಾಹುತಿಯಾ ಗಿದ್ದು. ಮನೆ ಸಂಪೂರ್ಣವಾಗಿ ಉರಿ ದಿದ್ದು ಮನೆಯೊಳಗೇ ದಾಸ್ತಾನಿರಿ ಸಲಾಗಿದ್ದ ಏಳುವರೆ ಕ್ವಿಂಟಾಲ್ ಅಡಿಕೆ ೨೫೦೦ ತೆಂಗಿನ ಕಾಯಿ ಹಾಗೂ ಪೀಟೋಪಕರಣ ಸಹಿತ ಮನೆಯ ಇತರ ಸಾಮಗ್ರಿಗಳು ಬೇಕಿಯ ಕೆನ್ನಾ ಲಗೆಗೆ ತುತ್ತಾಗಿದೆ ಅಲ್ಲದೆ ಮಹಾಲಿಂ ಗೇಶ್ವರ ಕ್ಷೇತ್ರದ ಕೆಲವು ದಾಖಲೆಗಳು ನಾಶವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮಧುಸೂzನ್ ಬಳ್ಳಕ್ಕುರಾಯರ ವರ ಮಂಜೇಶ್ವರ ಸಮೀಪ ಹೊಸ ಮನೆಯೊಂದನ್ನು ನಿರ್ಮಿಸಿದ್ದು ಕೆಲ ದಿನಗಳ ಹಿಂದೆ ಅದರ ಗ್ರಹ ಪ್ರವೇಶ ನಡೆದಿದ್ದು ಇದರಿಂದಾಗಿ ಮನೆ ಮಂದಿ ಯೆಲ್ಲ ಅಲ್ಲಿಗೆ ತೆರಳಿದ್ದರು. ನಿನ್ನೆ ನಸುಕಿನ ವೇಳೆ ಮನೆ ಬೆಂಕಿಗಾಹುತಿಯಾಗಿದ್ದು ಇದನ್ನು ಕಂಡ ಸ್ಥಳೀಯರು ಮಧು ಸೂದನರಿಗೆ ವಿಷಯ ತಿಳಿಸಿದ್ದು ಅವರು ಉಪ್ಪಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ನಾಗರಿಕರೊಂದಿಗೆ ಸೇರಿ ಬೆಂಕಿ ನಂದಿಸುವಲ್ಲಿ ಸಫಲರಾ ದರು. ಬೆಂಕಿ ಇಡಿ ಮನೆಯನ್ನೇ ಭಸ್ಮವಾಗಿಸಿತ್ತು. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇಲ್ಲವಾದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಅಕ್ರಮ ಕಟ್ಟಡದ ತೆರವಿಗೆ ಜಿಲ್ಲಾಧಿಕಾರಿ ಆದೇಶ

Posted by JAYAKIRANA Kirana on | 0 comments | Leave a comment...

ಕಾರಂತ ಸರ್ಕಾರಿ ಪ್ರೌಢಶಾಲೆಯ ಸ್ಥಳ ಅತಿಕ್ರಮಣ
ಪುತ್ತೂರು: ಪುತ್ತೂರಿನ ಡಾ. ಶಿವರಾಮ ಕಾರಂತ ಸರ್ಕಾರಿ ಪ್ರೌಢ ಶಾಲೆಗೆ ಸೇರಿದ ಜಮೀನನ್ನು ಅತಿಕ್ರ ಮಣ ನಡೆಸಿ ನಿರ್ಮಿಸಿರುವುದೆನ್ನಲಾದ ಕಟ್ಟಡವನ್ನು ತೆರುವುಗೊಳಿಸುವ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊ ಳ್ಳುವಂತೆ ಜಿಲ್ಲಾಧಿಕಾರಿಗಳು ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಆದೇಶಿ ಸಿದ್ದಾರೆ.
ಶಾಲೆಗೆ ಸೇರಿದ ೦.೨ಸೆಂಟ್ಸ್ ಅತಿ ಕ್ರಮಣ ಸ್ಥಳದಲ್ಲಿರುವ ಅಕ್ರಮ ಕಟ್ಟಡದಲ್ಲಿ ಅಂಗಡಿ ವ್ಯವಹಾರ ನಡೆಸಿಕೊಂಡು ಬರಲಾಗುತ್ತಿದ್ದು, ವಿದ್ಯಾ ಸಂಸ್ಥೆಗೆ ಸೇರಿದ ಸ್ಥಳದಲ್ಲಿರುವ ಈ ಅಕ್ರಮ ಕಟ್ಟಡವನ್ನು ತೆರವುಗೊಳಿಸಿ ಶಾಲೆಯ ಸ್ವಾಧೀನಕ್ಕೆ ನೀಡಬೇಕು ಎಂದು ಈ ಹಿಂದೆ ಕೆ. ನರಸಿಂಹ ಕುಡ್ವ, ಕೆ, ನಾರಾಯಣ ಕುಡ್ವ ಮತ್ತು ಕೆ.ಶಿವದಾಸ್ ಕುಡ್ವ ಎಂಬವರು ಜಿಲ್ಲಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದರು.

ಇಡ್ಯಾ: ಗಾಯಾಳು ಮೃತ್ಯು: ಪತ್ತೆಗೆ ಮನವಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸುರತ್ಕಲ್ ಜಂಕ್ಷನ್ ಬಳಿ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಅಂದಾಜು ೪೦ ವರ್ಷ ಪ್ರಾಯದ ವ್ಯಕ್ತಿಯು ಕ್ರೀಂ ಕಲರ್ ಅಂಗಿ ಧರಿಸಿದ್ದು, ಎದೆಯ ಎಡಬದಿಯಲ್ಲಿ ಕಪ್ಪು ಮಚ್ಚೆ ಇದ್ದು, ಎಡಕಾಲು ಊನವಾಗಿದೆ. ಇವರು ಎ.೨೯ರಂದು ರಾತ್ರಿ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ಮೂಲ್ಕಿ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ವಾರಿಸುದಾರರು ಇದ್ದಲ್ಲಿ ಸುರತ್ಕಲ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

ಸಾರ್ವಜನಿಕ ರಸ್ತೆ ಮೇಲೆ ತ್ಯಾಜ್ಯ ನೀರು

Posted by JAYAKIRANA Kirana on | 0 comments | Leave a comment...

ಕಾರ್ಕಳ: ಪುರಸಭಾ ಆಡಳಿತಾ ಧಿಕಾರಿ ಮತ್ತು ಜನಪತ್ರಿನಿಧಿಗಳ ನಿರ್ಲಕ್ಷ್ಯ ದಿಂದಾಗಿ ಒಳಚರಂಡಿಯ ನೀರು ಸಾರ್ವಜನಿಕ ರಸ್ತೆಯ ಮೇಲೆ ಹರಿ ಯುತ್ತಿರುವುದರಿಂದ ಇದೀಗ ಬಂಡೀಮಠ ಬಸ್‌ನಿಲ್ದಾಣದ ಪರಿಸರವು ಗಬ್ಬುನಾತ ಬೀರಲು ಕಾರಣವಾಗಿದೆ.
ಕಳೆದ ಹತ್ತು ದಿನಗಳಿಂದ ಬಂಡೀಮಠ ಬಸ್‌ನಿಲ್ದಾಣ ಮುಂಭಾ ಗದ ರಸ್ತೆಯ ಮೇಲೆ ತ್ಯಾಜ್ಯನೀರು ಹರಿಯುತ್ತಿದೆ. ಒಳಚರಂಡಿಯ ದುರಾವಸ್ಥೆ ಇದಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಪರವೂರಿಗೆ ತೆರಳುವ ಹಾಗೂ ಆಗಮಿಸುವ ಪ್ರಯಾಣಿಕರು ಈ ಮಾರ್ಗದ ಮೂಲಕ ಹಾದು ಹೋಗಬೇಕಾಗಿದೆ. ಗಬ್ಬುನಾತ ಬೀರುತ್ತಿರುವ ಪರಿಸರವು ಹಲವು ಸಾಂಕ್ರಾಮಿಕ ರೋಗಗಳ ಆಹ್ವಾನ ಕೇಂದ್ರವಾಗಿ ಮಾರ್ಪಟ್ಟಿದೆ. ಪುರಸಭಾ ಆಡಳಿತ ವರ್ಗಕ್ಕೆ ಈ ಸಮಸ್ಯೆ ಗಮನಕ್ಕೆ ಬಂದಿದೆಯೇ ಎಂಬ ಯಕ್ಷಪ್ರಶ್ನೆ ಇಲ್ಲಿ ಕಾಡುತಿದೆ.
ಬಂಡಿಮಠ ಬಸ್‌ನಿಲ್ದಾಣದ ಪಕ್ಕದಲ್ಲಿ ತಾತ್ಕಾಲಿಕವಾಗಿ ಮೀನು ಮಾರ್ಕೆಟ್ ತೆರೆಯಲು ಪುರಸಭೆಯು ಮುಂದಾಗಿ ಶೆಡ್‌ವೊಂದನ್ನು ನಿರ್ಮಿ ಸಿರುವ ವಿಚಾರವನ್ನೇ ಮುಂದಿಟ್ಟು ಹಿಂದು ಸಂಘಟನೆಯ ಕಾರ್ಯ ಕರ್ತರು ಹಾಗೂ ಪ್ರತಿಪಕ್ಷ ಬಿಜೆಪಿ ಕೌನ್ಸಿಲರು ತೀವ್ರವಾಗಿ ಪ್ರತಿಭಟನೆ ನಡೆಸಿ ಮೂಡುಗಣಪತಿ ದೇವಳದ ಪಾವಿತ್ರತೆಗೆ ಧಕ್ಕೆ ತರುವ ಪ್ರಯತ್ನಕ್ಕೆ ಪುರಸಭೆಯ ಆಡಳಿತ ವರ್ಗ ಮುಂದಾಗಿದೆ ಎಂದು ಆರೋಪಿಸಿದ್ದರು. ಪ್ರಸ್ತುತವಾಗಿ ಒಳ ಚರಂಡಿಯಿಂದ ತ್ಯಾಜ್ಯ ನೀರು ಹರಿ ಯುತ್ತಿರುವ ರಸ್ತೆಯು ಇದೇ ಮೂಡು ಗಣಪತಿ ದೇವಸ್ಥಾನದ ಎದುರು ಗಡೆಯಲ್ಲಿದೆ ಎಂಬುವುದನ್ನು ಇದೀಗ ಹಿಂದು ಸಂಘಟನೆ ಹಾಗೂ ಬಿಜೆಪಿ ಕೌನ್ಸಿಲರಿಗೆ ಮನವರಿಕೆಯಾಗದೇ ಇರುವುದೇಕೆಂಬುವುದು ಮತ್ತೊಂದು ವಿಚಾರವಾಗಿದೆ.

ಗ್ರಾ.ಪಂ. ಅಧ್ಯಕ್ಷರು ಸತ್ಯದ ಕಡೆ ಮುಖ ತಿರುಗಿಸಲಿ: ಭಂಡಾರಿ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಶಿರ್ಲಾಲು ಗ್ರಾ. ಪಂ.ಗೆ ಒಂದು ಚಿಕ್ಕಾಸು ಅನುದಾನ ಬಿಡುಗಡೆಗೊಳಿಸಿಲ್ಲವೆಂದು ಪತ್ರಿಕಾ ಹೇಳಿಕೆ ನೀಡಿರುವ ಶಿರ್ಲಾಲು ಗ್ರಾ. ಪಂ.ನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಇವರು ಸತ್ಯದ ಕಡೆಗೆ ಮುಖ ತಿರುಗಿಸಲಿ ಎಂದು ಶಾಸಕ ಹೆಚ್.ಗೋಪಾಲ ಭಂಡಾರಿ ಅವರು ತಿರುಗೇಟು ನೀಡಿದ್ದಾರೆ. ಈ ಸಾಲಿನ ಶಾಸಕವಧಿಯಲ್ಲಿ ಶಿರ್ಲಾಲು ಗ್ರಾ. ಪಂ.ಗೆ ಎರಡು ಕೋಟಿ ಇಪ್ಪತ್ತು ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದೇನೆಂದು ಬಹಿರಂಗಪಡಿಸಿರುವ ಭಂಡಾರಿ ಅವರು ಅನುದಾನದ ಪಟ್ಟಿಯನ್ನು ಸಿದ್ಧಪಡಿಸಿ ವಿವರಗಳನ್ನು ನೀಡಿದರು.
ಶಕ್ತಿಕೇಂದ್ರದ ಹಿರಿಯ ನಾಯಕರು ಸುಳ್ಳನ್ನೇ ಸತ್ಯವೆಂದು ಸಾಬೀತು ಪಡಿಸಲು ಮುಂದಾಗಿರುವ ಪರಿಣಾಮವಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಗ್ರಾ. ಪಂ.ನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಅದೇ ದಾರಿಯನ್ನು ಅನುಸರಿಸಲು ಮುಂದಾಗಿ ಎಡವಿದ್ದಾರೆಂದು ವ್ಯಂಗ್ಯವಾಡಿದರು. ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ವನ್ನು ಬೆರೆಸದಂತೆ ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಿಗೆ ಭಂಡಾರಿ ಅವರು ಕಿವಿಮಾತು ಹೇಳಿದರು.

ನಗರದಲ್ಲಿ ಇಂದು ನೀರು ಪೂರೈಕೆಯಲ್ಲಿ ವ್ಯತ್ಯಯ

Posted by JAYAKIRANA Kirana on | 0 comments | Leave a comment...

ಮಂಗಳೂರು: ನೇತ್ರಾವತಿ ನದಿಯ ಒಳಹರಿವಿನ ಜೊತೆಯಲ್ಲಿ ಬಂದ ಕಸ, ಕಡ್ಡಿ, ತ್ಯಾಜ್ಯವು ಜಾಕ್‌ವೆಲ್‌ನಲ್ಲಿ ಶೇಖರಣೆಗೊಂಡಿದೆ. ಇದರಿಂದ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿದೆ. ಇದನ್ನು ಸರಿ ಪಡಿಸಲು ಮೇ ಮೂರರಂದು ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಳಿಸಲಾಗು ವುದು ಎಂದು ಮಂಗಳೂರು ಮಹಾ ನಗರ ಪಾಲಿಕೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಈ ಸಮಯಯದಲ್ಲಿ ಜಾಕ್‌ವೆಲ್ ಶುಚಿಗೊಳಿಸಲಾಗುತ್ತದೆ.
ನಿನ್ನೆಯಿಂದ ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಗರ ರಕ್ಷಾ ಕವಚ ಅಣಕು ಕಾರ್ಯಾ ಚರಣೆಯಲ್ಲಿ ಸಸಿಹಿತ್ಲು ಸಮುದ್ರ ಕಿನಾರೆ, ಪಡುಬಿದ್ರಿ ಹಾಗೂ ಗಂಗೊಳ್ಳಿ ಯಲ್ಲಿ 'ನಕಲಿ' ಉಗ್ರರನ್ನು ಪೊಲೀ ಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.

ಇಎಸ್‌ಐ ಅವ್ಯವಸ್ಥೆಯ ವಿರುದ್ಧ ಸತ್ಯಾಗ್ರಹ

Posted by JAYAKIRANA Kirana on | 0 comments | Leave a comment...

ಮಂಗಳೂರು: ಅಖಿಲ ಭಾರತ ಕಾರ್ಮಿಕ ಸಂಘ ಆರಂಭಗೊಂಡ ದಿನ ದಿಂದಲೂ ನಗರದ ಕದ್ರಿ ಶಿವಭಾಗ್ ನಲ್ಲಿರುವ ಇಎಸ್‌ಐ ಆಸ್ಪತ್ರೆಯ ಅವ್ಯ ವಸ್ಥೆಯ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು ನಿನ್ನೆಯಿಂದ ಐದನೇ ಬಾರಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದೆ.
ಇಎಸ್‌ಐ ಆಸ್ಪತ್ರೆ ಕಾರ್ಮಿಕರಿಗಾ ಗಿಯೇ ಇದ್ದರೂ ಇಲ್ಲಿ ಅವ್ಯವಸ್ಥೆ ಗೇನೂ ಕೊರತೆಯಿಲ್ಲ. ಇಲ್ಲಿನ ಸಿಬ್ಬಂ ಯ ವರ್ತನೆ ಮಿತಿಮೀರಿದ್ದು ಚಿಕಿತ್ಸೆಗೆ ಬೇಕಾದ ಅಗತ್ಯ ಸವಲತ್ತುಗಳು ಇಲ್ಲಿಲ್ಲ. ಇದನ್ನೇ ಪ್ರಮುಖ ವಿಷಯವನ್ನಾಗಿ ತೆಗೆದುಕೊಂಡ ಕಾರ್ಮಿಕ ಸಂಘ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿ ಗಳು ಹಾಗೂ ಜನಪ್ರತಿನಿದಿಗಳಿಗೆ ಮನವಿ ಮಾಡಿದ್ದರೂ ಅವರು ಕುಂಭಕರ್ಣ ನಿದ್ದೆಯಿಂದ ಎದ್ದೇಳದಿದ್ದ ಕಾರಣ ೨೦೦೯ರ ಮಾರ್ಚ್ ೧೯ರಿಂದ ಉಪವಾಸ ಸತ್ಯಾಗ್ರಹಕ್ಕೆ ಮೊರೆಹೋಗಿ ಐದು ದಿನಗಳವರೆಗೆ ಸತ್ಯಾಗ್ರಹ ನಡೆಸಿತ್ತು. ಈ ಸಂದರ್ಭ ಸಿಕ್ಕ ಭರವಸೆ ಕೇವಲ ಕಾಲ್ಪನಿಕವಾಗಿದ್ದ ಕಾರಣ ೨೦೦೯ರ ಅಕ್ಟೋಬರ್ ೧೩ರಂದು ಮತ್ತೊಮ್ಮೆ ಸತ್ಯಾಗ್ರಹ ನಡೆಸಿದಾಗ ಬೆಂಗಳೂರಿನಿಂದ ಬಂದ ಆಸ್ಪತ್ರೆಯ ನಿರ್ದೇಶಕರು ಮತ್ತೆ ಹಿಂದಿನ ರಾಗ ಎಳೆದಿದ್ದರು. ಅವರ ಮಾತನ್ನು ನಂಬಿದ ಸಂಘ ೫೪ ಗಂಟೆಗಳಲ್ಲಿ ಸತ್ಯಾಗ್ರಹ ಹಿಂದಕ್ಕೆ ಪಡೆದಿತ್ತು. ಈ ಭರವಸೆಯೂ ನೀರಿನ ಮೇಲೆ ಹೋಮ ಇಟ್ಟಂತಾಗಿ ದ್ದರಿಂದ ಸಂಘ ೨೦೧೦ರ ಡಿಸೆಂಬರ್ ೧೫ರಿಂದ ಸತತ ೬೦ ಗಂಟೆಗಳವರೆಗೆ ಬಳಿಕ ೨೦೧೧ರ ಅಕ್ಟೋಬರ್ ೧೮ರಿಂದ ೨೨ರವರೆಗೆ ಸತ್ಯಾಗ್ರಹ ನಡೆಸಿತ್ತು. ಕಳೆದ ವರ್ಷ ಸತ್ಯಾಗ್ರಹನಿರತ ಸ್ಥಳಕ್ಕೆ ಮತ್ತೆ ಭೇಟಿ ನೀಡಿದ್ದ ಅಧಿ ಕಾರಿಗಳು ಆರು ತಿಂಗಳಲ್ಲಿ ಎಲ್ಲಾ ಅವ್ಯವಸ್ಥೆಗಳನ್ನು ಬಗೆಹರಿಸು ವುದಾಗಿ ನೀಡಿದ ಭರವಸೆಯಲ್ಲಿ ಕೇವಲ ೨೦ಶೇ, ಮಾತ್ರವೇ ಈಡೇರಿತ್ತು. ಈ ಹಿನ್ನೆಲೆ ಯಲ್ಲಿ ಸಂಘವು ನಿನ್ನೆಯಿಂದ ಐದನೇ ಬಾರಿ ಸತ್ಯಾಗ್ರಹ ಆರಂಭಿಸಿದ್ದು ಈ ಬಾರಿ ಭರವಸೆಗೆ ಜಗ್ಗುವುದಿಲ್ಲ. ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ ಬಳಿಕವೇ ಸತ್ಯಾಗ್ರಹ ಹಿಂದಕ್ಕೆ ಪಡೆಯಲಿದ್ದು ಮಾಡು ಇಲ್ಲವೇ ಮಡಿ ಹೋರಾಟವಾ ಗಿದೆ ಎಂದು ಕಾರ್ಯ ದರ್ಶಿ ಸುದತ್ ಜೈನ್ ತಿಳಿಸಿದ್ದಾರೆ.

ಕಾಸರಗೋಡಿಗೆ ತೊಗಾಡಿಯಾ?

Posted by JAYAKIRANA Kirana on | 0 comments | Leave a comment...

ಕಾಸರಗೋಡು: ವಿಶ್ವ ಹಿಂದೂ ಪರಿಷತ್‌ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾ ಡಿಯಾ ಈ ತಿಂಗಳ ಆರರಂದು ಕಾಸರ ಗೋಡಿಗೆ ಆಗಮಿಸಲಿದ್ದಾರೆ. ಆದರೆ ಸದ್ರಿ ಕಾರ್ಯಕ್ರಮಕ್ಕೆ ಪೊಲೀಸು ಇಲಾಖೆ ಇನ್ನೂ ಅಧಿಕೃತವಾಗಿ ಅನುಮತಿ ನೀಡಿಲ್ಲ ಎನ್ನಲಾಗಿದೆ.
ನಗರದ ತಾಳಿಪಡ್ಪು ಮೈದಾನದಲ್ಲಿ ನಡೆಯಲಿರುವ ವಿ.ಹಿಂ.ಪ ಸಮ್ಮೇ ಳನದಲ್ಲಿ ತೊಗಾಡಿಯಾ ಮಾತನಾ ಡಲಿದ್ದಾರೆ. ಆದರೆ, ನಿನ್ನೆ ರಾತ್ರಿ ವರೆಗೂ ತೊಗಾಡಿಯಾ ಕಾರ್ಯಕ್ರಮಕ್ಕೆ ಪೊಲೀಸ್ ಅನುಮತಿ ಸಿಕ್ಕಿಲ್ಲ. ಸದ್ಯದ ಕಾಸರಗೋಡಿನ ಉದ್ರಿಕ್ತ ಸ್ಥಿತಿಯೇ ಅನುಮತಿ ನೀಡದಿರಲು ಕಾರಣ ಎನ್ನ ಲಾಗಿದೆ. ಹಿಂದೂ ಐಕ್ಯ ವೇದಿಕೆ ಸಂಘ ಟಿಸುವ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಈಗಾಗಲೇ ಡಿವೈ ಎಸ್‌ಪಿ ಗೆ ಅರ್ಜಿ ಸಲ್ಲಿಸಲಾಗಿದ್ದರೂ, ಪೊಲೀಸರು ಕೂಲಂಕುಷವಾಗಿ ಅಧ್ಯಯನ ನಡೆಸಿಯಷ್ಟೇ ಅನುಮತಿ ನೀಡಲಿದ್ದಾರೆ ಎನ್ನಲಾಗಿದೆ. ತೊಗಾಡಿಯಾ ಬಹಿರಂಗ ಸಭೆಯಲ್ಲಿ ಮಾತ ನಾಡುವುದಕ್ಕೆ ಯಾವುದೇ ನಿಷೇಧವಿಲ್ಲವೆಂದೂ, ಆದರೆ, ಸದ್ಯದ ಸ್ಥಿತಿಯನ್ನೂ ಪರಿಗಣಿಸಬೇಕಿ ದೆಯೆಂದೂ ಪೊಲೀಸ್ ಮೂಲಗಳು ಹೇಳುತ್ತಿವೆ.
ಈ ಮಧ್ಯೆ, ತೊಗಾಡಿಯಾ ವಿರುದ್ಧ ಕಾಸರಗೋಡಿನ ಹೊಸದುರ್ಗ ನ್ಯಾಯಾಲಯ ಈ ಹಿಂದೆ ಬಂಧನಾಜ್ಞೆ ಹೊರಡಿಸಿರುವುದು ಜಾರಿಯಲ್ಲಿರುವು ದರಿಂದ ಅವರು ಕೇರಳಕ್ಕೆ ಆಗಮಿಸುವ ಬಗ್ಗೆ ಕಾನೂನು ತೊಡಕು ಇರುವುದಾಗಿ ತಿಳಿಯಲಾಗಿದೆ. ಕೋಮು ಸೂಕ್ಷ್ಮ ಪ್ರದೇಶವಾದ ಕಾಸರಗೋಡಿನಲ್ಲಿ ತೊಗಾಡಿಯಾ ಭಾಷಣ ಪ್ರತಿಕೂಲ ಪರಿಣಾಮ ಬೀರುವುದೇ ಎಂದು ಪೊಲೀಸರು ಆತಂಕಿತರಾಗಿದ್ದಾರೆ.

ನಕ್ಸಲ್ ಕೃಷ್ಣ ಶರಣು

Posted by JAYAKIRANA Kirana on | 0 comments | Leave a comment...

ಬೆಂಗಳೂರು: ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಕೋಣನಕುಂಟೆ ಕೃಷ್ಣ ಪೊಲೀಸರಿಗೆ ಶರಣಾಗಿದ್ದಾನೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಎ.ಆರ್.ಇನ್ಫೆಂಟ್ ಎದುರು ಶರಣಾಗಿರುವ ಕೃಷ್ಣನಿಗೆ ರಾಜ್ಯ ಸರಕಾರ ಪ್ರಕಟಿಸಿರುವ ನಕ್ಸಲ್ ಪುನರ್ವಸತಿ ಯೋಜನೆಯಡಿಯಲ್ಲಿ ಒಂದು ಲಕ್ಷ ರೂ. ನಗದು, ವಾಸಕ್ಕೆ ಮನೆ ಹಾಗೂ ಕೃಷಿ ಜಮೀನು ನೀಡಲಾಗಿದೆ. ಈ ವೇಳೆ ಮಾಧ್ಯಮದ ಜೊತೆ ಮಾತಾಡಿರುವ ಪೊಲೀಸ್ ಮಹಾನಿರ್ದೇಶಕರು, ನಕ್ಸಲರು ನಮ್ಮ ಶತ್ರುಗಳಲ್ಲ, ಪರಿಸ್ಥಿತಿಯ ಒತ್ತಡದಿಂದ ಹಿಂಸಾಕೃತ್ಯದಲ್ಲಿ ತೊಡಗಿಕೊಂಡವರು. ಶರಣಾದ ನಕ್ಸಲರಿಗೆ ಪ್ಯಾಕೇಜ್‌ನಡಿಯಲ್ಲಿ ಯೋಗ್ಯ ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ. ರಾಜ್ಯ ದಲ್ಲಿ ಅಂದಾಜು ೪೦ ಮಂದಿ ನಕ್ಸಲರು ಚಟುವಟಿಕೆಯಲ್ಲಿ ತೊಡಗಿರುವುದಾಗಿ ಹೇಳಿದ ಅವರು, ತಮಿಳು ಮೂಲದ ನಕ್ಸಲರು ಇಲ್ಲಿ ಕಾರ್ಯಾಚರಣೆ ನಡೆಸು ತ್ತಿರುವ ಬಗ್ಗೆ ಆಧಾರವಿಲ್ಲ ಎಂದಿದ್ದಾರೆ.

‘ದಲಿತ ಮುಖಂಡರು ಹಣ ಪಡೆದಿರುವುದು ಸಾಬೀತು ಮಾಡಲಿ’

Posted by JAYAKIRANA Kirana on | 0 comments | Leave a comment...

ಪುತ್ತೂರು: ಕಡಬದಲ್ಲಿ ದಲಿತ ಯುವತಿ ಮತ್ತು ಅಲ್ಪಸಂಖ್ಯಾತ ಯುವಕ ಕಾರಿನಲ್ಲಿ ಪ್ರಯಾಣಿಸಿದ ವಿಚಾರದಲ್ಲಿ ಉಂಟಾದ ಗಲಭೆಗೆ ಸಂಬಂಧಿಸಿ ದಲಿತ ಮುಖಂಡರು ಮುಸ್ಲಿಂ ಯುವಕನಿಂದ ಹಣ ಪಡೆದು ಕೊಂಡಿದ್ದಾರೆ ಎಂದು ಆರೋಪಿಸು ತ್ತಿರುವ ಸಂಘಪರಿವಾರದ ನಾಯಕರು ಈ ಬಗ್ಗೆ ದಾಖಲೆ ಸಹಿತ ಬಹಿರಂಗ ಪಡಿಸದಿದ್ದಲ್ಲಿ ದಲಿತ ಸಂಘಟನೆಯ ವತಿಯಿಂದ ಕಡಬದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ದ.ಸಂ. ಸಮಿತಿಯ ಮಾಜಿ ಸಂಚಾಲಕ ಆನಂದ ಮಿತ್ತಬೈಲು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದ.ಸಂ. ಸಮಿತಿಯ ಮಾಜಿ ಸಂಚಾಲಕ ಆನಂದ ಮಿತ್ತಬೈಲು ದಲಿತ ಸಮುದಾ ಯಕ್ಕೆ ಸಂಘಪರಿವಾರಗಳಿಂದ ಆಗುತ್ತಿ ರುವ ಮಾನಹಾನಿ ಇನ್ನಿತರ ಸಮಸ್ಯೆ ಗಳನ್ನು ತಡೆಯಲು ಯುವರಕ್ಷಾ ದಳ ಎಂಬ ಸಂಘಟನೆಯನ್ನು ಆರಂಭಿಸಲಿ ದ್ದೇವೆ. ಈ ಬಗ್ಗೆ ಸಮುದಾಯದ ನಾಯಕರ ಹಾಗೂ ಮಾನವ ಹಕ್ಕು ಹೋರಾಟಗಾರರ ಜೊತೆ ಸಮಾಲೋ ಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ದ.ಸಂ.ಸ ಜಿಲ್ಲಾ ಮುಖಂಡ ಗುರುವಪ್ಪ ಕಲ್ಲುಗುಡ್ಡೆ, ಅಚ್ಚುತ್ತ ಮಲ್ಕಾಜೆ ಮತ್ತು ಅಚ್ಚುತ ಗುತ್ತಿಗಾರು ಉಪಸ್ಥಿತರಿದ್ದರು.

ಅಧಿಕಾರಿಗಳ ವಿರುದ್ಧ ಕಾನೂನುಕ್ರಮಕ್ಕೆ ಒತ್ತಾಯ

Posted by JAYAKIRANA Kirana on | 0 comments | Leave a comment...

ದಲಿತರ ಭೂಮಿ ಅಕ್ರಮ ಪರಭಾರೆಗೆ ಅನುಮತಿ
ಉಡುಪಿ: ಕುಂದಾಪುರ ಕಂದಾಯ ಅಧಿಕಾರಿ ಹಾಗೂ ಬೈಂದೂರಿನ ವಿಶೇಷ ತಹಶೀಲ್ದಾರರು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಹಲವಾರು ಜಮೀನುಗಳನ್ನು ನಕಲಿ ದಾಖಲೆಗಳ ಮೂಲಕ ಪರಭಾರೆ ಮಾಡಲು ಅನುಮತಿ ನೀಡಿದ್ದು, ಇದರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.
ಕುಂದಾಪುರ ತಾಲೂಕಿನ ಶಿರೂರು ಗ್ರಾಮದ ಕುಪ್ಪ ಮರಾಠಿ ಇವರ ಸರ್ವೆ ನಂ. ೩೯೩/೧ಬಿ ಯಲ್ಲಿ ರುವ ಸುಮಾರು ೩.೫೦ ಎಕ್ರೆ ಜಮೀನನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆ ೭೮ರ ಕಲಂ(೨) ರನ್ವಯ ಅಕ್ರಮವಾಗಿ ಆನಂದ ಶೆಟ್ಟಿ ಎಂಬವರಿಗೆ ಪರಭಾರೆ ಮಾಡಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಒಕ್ಕೂಟ ದಾಖಲಾತಿಗಳ ಸಹಿತ ಆರೋಪಿಸಿದೆ.
ಜಮೀನು ಪರಭಾರೆಯ ಷರತ್ತುಗಳ ಪ್ರಕಾರ ಭೂಮಿ ಕೊಳ್ಳು ವವರು ಭೂಸುಧಾರಣಾ ಕಾಯ್ದೆಗೆ ಅರ್ಹರಲ್ಲ. ಜಮೀನು ಮಾರಾಟ ಮಾಡಿ ರುವ ಅರ್ಜಿದಾರ ಜಮೀನು ಕೊಂಡಿ ರುವ ಕ್ರಯ ಪತ್ರ ನಕಲಿಯಾಗಿದೆ. ಸಾಗುವಳಿ ವಿತರಣಾ ವಹಿಯಾಗಲೀ, ದರ್ಖಾಸ್ತು ವಹಿಯಾನ್ನಾಗಲೀ ಪರಿಶೀಲನೆ ಮಾಡಿಲ್ಲ ಎಂದು ಒಕ್ಕೂಟ ಬೊಟ್ಟು ಮಾಡಿ ತೋರಿಸಿದೆ.
ಪರಿಶಿಷ್ಟ ಪಂಗಡದ ಕುಪ್ಪ ಮರಾಠಿ ಅವಿದ್ಯಾವಂತ ಮತ್ತು ಬಡವರಾಗಿದ್ದು, ಇವರಿಗೆ ಆಮಿಷ ಒಡ್ಡಿ ಕೋಟ್ಯಂತರ ರೂ. ಬೆಲೆ ಬಾಳುವ ಜಮೀನನ್ನು ಕವಡೆ ಕಾಸಿಗೆ ಖರೀದಿಸಲು ಆನಂದ ಶೆಟ್ಟಿವರಿಗೆ ಅಧಿಕಾರಿಗಳು ಅಕ್ರಮವಾಗಿ ಪರಭಾರೆ ಮಾಡಲು ಪೂರ್ವಾನುಮತಿ ನೀಡಿದ್ದಾರೆ ಎಂದು ದೂರಲಾಗಿದೆ.

ಜಯದೊಂದಿಗೆ ಪಂಜಾಬ್ ನಾಲ್ಕನೇ ಸ್ಥಾನಕ್ಕೆ

Posted by JAYAKIRANA Kirana on | 0 comments | Leave a comment...

ಸೈನಿ ಅರ್ಧಶತಕ; ಅಂತಿಮ ಓವರ್‌ನಲ್ಲಿ ಆರ್‌ಸಿಬಿಗೆ ಸೋಲು
ಬೆಂಗಳೂರು: ಆರ್‌ಸಿಬಿ ಎರಡನೇ ಬಾರಿಗೆ ಮುಗ್ಗರಿಸಿಬಿಟ್ಟಿದೆ. ಡೇವಿಡ್ ಹಸ್ಸಿ ಹಾಗೂ ಆರ್. ಶೈನಿ ನಡೆಸಿದ ಅತ್ಯುತ್ತಮ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಇಲ್ಲಿ ಬೆಂಗಳೂರು ವಿರುದ್ಧದ ಪಂದ್ಯವನ್ನು ತಂಡ ನಾಲ್ಕು ವಿಕೆಟ್‌ಗಳ ರೋಚಕ ಅಂತರದಿಂದ ಗೆಲ್ಲಲು ಸಫಲವಾಗಿದೆ. ಅಂತಿಮ ಎರಡು ಎಸೆತಗಳಲ್ಲಿ ತಂಡಕ್ಕೆ ಗೆಲ್ಲಲು ಎರಡು ರನ್‌ಗಳ ಅಗತ್ಯವಿದ್ದಾಗ ಪಿಯೂಷ್ ಚಾವ್ಲಾ ಸಿಕ್ಸರ್ (೬) ಬಾರಿಸಿದ ಮೂಲಕ ಪಂಜಾಬ್ ರೋಚಕ ಜಯ ತಂದುಕೊಟ್ಟಿತು. ಜಯದೊಂದಿಗೆ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಚಿನ್ನಸ್ವಾಮಿ ಉತ್ತಮ ಬ್ಯಾಟಿಂಗ್ ವಿಕೆಟ್‌ನಲ್ಲಿ ಆರ್‌ಸಿಬಿ ನಿಗದಿತ ೨೦ ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೧೫೮ ರನ್ ನಿಗದಿಪಡಿಸಿತ್ತು. ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ (೪೫) ದ್ವಿತೀಯ ವಿಕೆಟ್‌ಗೆ ೧೩.೫ ಓವರ್‌ಗಳಲ್ಲಿ ೧೧೯ ರನ್‌ಗಳ ಜೊತೆಯಾಟ ನಡೆಸಿದ್ದರು. ಗೇಲ್ ಕೇವಲ ೪೨ ಎಸೆತಗಳಲ್ಲಿ ೭೧ ರನ್ ಗಳಿಸಿದ್ದು, ಇದರಲ್ಲಿ ನಾಲ್ಕು ಸಿಕ್ಸ್ ಹಾಗೂ ಆರು ಬೌಂಡರಿ ಸೇರಿತ್ತು. ಕೊಹ್ಲಿ ಸ್ಫೋಟಕ ಆಟ ನಡೆಸಲಿಲ್ಲ. ಆದರೆ ಅಂತಿಮ ಹಂತದಲ್ಲಿ ಆರ್‌ಸಿಬಿ ರನ್ ಬರ ಎದುರಿಸಿದ್ದು, ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಬಹುದು. ಮೆಹ್ಮೂದ್ ಮೂರು ವಿಕೆಟ್ ಪಡೆದರು. ಗುರಿ ಬೆನ್ನತ್ತಿದ್ದ ಪಂಜಾಬ್ ಕೇವಲ ಒಂದು ಚೆಂಡು ಉಳಿದಿರುವಂತೆ ಆರು ವಿಕೆಟ್ ನಷ್ಟಕ್ಕೆ ೧೬೩ ರನ್ ಗಳಿಸಿ ವಿಜಯಿ ಸಾಧಿಸಿತು. ಪಂಜಾಬ್‌ಗೆ ಪಂದ್ಯದ ಅಂತಿಮ ಓವರ್‌ನಲ್ಲಿ ಗೆಲ್ಲಲು ಐದು ರನ್‌ಗಳ ಅಗತ್ಯವಿತ್ತು. ಆಗ ಮೊದಲೆರಡು ಎಸೆತಗಳಲ್ಲಿ ವೇಗಿ ವಿನಯ್ ಕುಮಾರ್ ಯಾವುದೇ ರನ್ ನೀಡದಾಗ ಆರ್‌ಸಿಬಿ ಗೆಲ್ಲುವ ವಿಶ್ವಾಸದಲ್ಲಿತ್ತು. ನಂತರ ಎರಡು ಎಸೆತಗಳಲ್ಲಿ ತಂಡ ಮೂರು ರನ್ ಕಲೆಹಾಕಿತು. ಹಾಗೆ ಅಂತಿಮ ಎರಡು ಎಸೆತಗಳಲ್ಲಿ ಎರಡು ರನ್ ಬೇಕಿದ್ದಾಗ ಚಾವ್ಲಾ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದರು. ಹಿಂದೆ ತಂಡಕ್ಕೆ ಶಾನ್ ಮಾರ್ಶ್ (೮) ಹಾಗೂ ಮಂದಿಪ್ (೪೩) ೪.೪ ಓವರ್‌ಗಳಲ್ಲಿ ೩೮ ರನ್‌ಗಳ ಉತ್ತಮ ಆರಂಭ ನೀಡಿದ್ದರು. ಎರಡನೇ ವಿಕೆಟ್‌ಗೆ ಸೈನಿ ಕೂಡ ಮಂದಿಪ್ ಜೊತೆ ವೇಗದ ೩೫ ರನ್ ಜೊತೆಯಾಟ ನಡೆಸಿದ್ದರು. ಆದರೆ ಸೈನಿ ಹಾಗೂ ನಾಯಕ ಡೇವಿಡ್ ಹಸ್ಸಿ ಮೂರನೇ ವಿಕೆಟ್‌ಗೆ ಕೇವಲ ೭.೩ ಓವರ್‌ಗಳಲ್ಲಿ ೭೩ ರನ್‌ಗಳ ಜೊತೆಯಾಟ ನಡೆಸಿದಾಗ ತಂಡ ಬೇಗನೇ ಗುರಿಮುಟ್ಟುವ ವಿಶ್ವಾಸದಲ್ಲಿತ್ತು. ಸೈನಿ (೫೩) ಆಕರ್ಷಕ ಅರ್ಧಶತಕ ಸಿಡಿಸಿದರು. ಹಸ್ಸಿ ೨೯ ಎಸೆತಗಳಲ್ಲಿ ನಾಲ್ಕು ಸಿಕ್ಸ್ ಹಾಗೂ ಎರಡು ಬೌಂಡರಿ ನೆರವಿನಿಂದ ೪೫ ರನ್ ಗಳಿಸಿ ರನೌಟಾದರು. ಆದರೆ ನಂತರ ತಂಡ ನಾಟಕೀಯ ಕುಸಿತ ಕಂಡಿತು. ಮುಂದಿನ ೧೫ ಎಸೆತಗಳಲ್ಲಿ ಕೇವಲ ಎಂಟು ರನ್ ಸೊರಿಹೋಗಿದ್ದಲ್ಲದೆ ಮೂರು ವಿಕೆಟ್ ಕೂಡ ಕಳಕೊಂಡಾಗ ಪಂದ್ಯಕ್ಕೆ ತಿರುವು ಲಭಿಸಿತು. ಹಾಗೆ ಅಂತಿಮ ಓವರ್‌ನಲ್ಲಿ ಜಯ ಗಳಿಸಲು ಪಂಜಾಬ್ ಸಫಲವಾಯಿತು. ಮೆಕ್‌ಡೊನಾಲ್ಡ್ ಎರಡು ವಿಕೆಟ್ ಪಡೆದರು.

ಸೆಹ್ವಾಗ್ ನಾಯಕತ್ವದ ಬಗ್ಗೆ ಜಯವರ್ಧನೆ ಗುಣಗಾನ

Posted by JAYAKIRANA Kirana on | 0 comments | Leave a comment...

ದೆಹಲಿ: ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡಿರುವ ಡೆಲ್ಲಿ ಡೇರ್‌ಡೆವಿಲ್ಸ್‌ನ ಉತ್ತಮ ಪ್ರದರ್ಶನಕ್ಕೆ ತಂಡದ ನಾಯಕ ವೀರೇಂದ್ರ ಸೆಹ್ವಾ ಗ್‌ರ ಕೆಲವೊಂದು ರಣತಂತ್ರಗಳೇ ಕಾರಣ ಎಂದು ಸದಸ್ಯ ಮಹೇಲಾ ಜಯವರ್ಧನೆ ತಿಳಿಸಿದ್ದಾರೆ. ತಂಡ ಸದ್ಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಸೆಹ್ವಾಗ್ ಸದ್ಯ ತಂಡದ ಕಠಿಣ ಪರಿಸ್ಥಿತಿಯ ವೇಳೆ ತೆಗೆದುಕೊಳ್ಳುವ ನಿರ್ಧಾರಗಳು ಅತ್ಯದ್ಭುತ ವಾಗಿದ್ದು, ಇದರಿಂದ ತಂಡಕ್ಕೆ ಈಗಾಗಲೇ ಲಾಭವಾ ಗಿದೆ. ಟಿ-ಟ್ವೆಂಟಿ ಸಣ್ಣ ಪ್ರಮಾಣದ ಕ್ರಿಕೆಟ್ ಆಗಿರು ವುದರಿಂದ ವೇಗದ ನಿರ್ಧಾರಗಳನ್ನು ಇಲ್ಲಿ ತೆಗೆದು ಕೊಳ್ಳಬೇಕಾಗುತ್ತದೆ. ಆದರೆ ಸೆಹ್ವಾಗ್ ಇದನ್ನು ಸಮ ರ್ಥವಾಗಿ ನಿಭಾಯಿಸಿದ್ದು, ಅಲ್ಲದೆ ಕಪ್ತಾನನಾಗಿ ವೇಗದ ಆಟವನ್ನು ಕೂಡ ಅವರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ತವರಿನ ಪ್ರೇಕ್ಷಕರ ಮುಂದೆ ಉತ್ತಮ ಪ್ರದರ್ಶನವನ್ನು ಕಾಯ್ದುಕೊಳ್ಳುವುದು ಕೂಡ ಅಷ್ಟು ಸುಲಭವಲ್ಲ ಎಂದು ಜಯವರ್ಧನೆ ಇದೇ ವೇಳೆ ತಿಳಿಸಿ ಸೆಹ್ವಾಗ್ ಬಗ್ಗೆ ಸಂತುಷ್ಟದ ಮಾತನ್ನಾಡಿದ್ದಾರೆ.

ಹೃದಯಸ್ತಂಭನದಿಂದ ಮೃತಪಟ್ಟ ಈಜುಗಾರ ಡೇಲ್

Posted by JAYAKIRANA Kirana on | 0 comments | Leave a comment...

ಒಸ್ಲೊ: ಹೃದಯ ಸ್ಥಂಭನದ ಕಾರಣ ವಿಶ್ವ ಚಾಂಪಿಯನ್ ಈಜುಗಾರ ನಾರ್ವೆಯ ಡೇಲ್ ಅಲೆಕ್ಸಾಂಡರ್ ತನ್ನ ಬಾತ್‌ರೂಮ್‌ನಲ್ಲೇ ಕುಸಿದು ಬಿದ್ದು ಸಾವಿಗೀಡಾದ ಘಟನೆ ಸೋಮವಾರ ನಡೆ ದಿದ್ದು, ಈ ಬಗ್ಗೆ ನಾರ್ವೆಯ ಸ್ಮಿಮ್ಮಿಂಗ್ ಫೆಡರೇಶನ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಡೇಲ್‌ಗೆ ೨೬ ವರ್ಷ ವಯಸ್ಸಾಗಿತ್ತು. ೨೦೦೮ರ ಬೀಜಿಂಗ್ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಡೇಲ್ ಕಂಚಿನ ಪದಕ ವಿಜೇತರಾಗಿ ದ್ದರು. ಅಲ್ಲದೆ ಕಳೆದ ಜುಲೈನಲ್ಲಿ ಶಾಂಘೈನಲ್ಲಿ ನಡೆದ ವಿಶ್ವಕೂಟವನ್ನು ಕೂಡ ಅವರು ಗೆದ್ದುಕೊಂಡಿದ್ದರು.
ಆರಿಜೋನಾದ ಫ್ಲ್ಯಾಗ್‌ಸ್ಟಾಫ್‌ನಲ್ಲಿ ನಡೆಯು ತ್ತಿದ್ದ ತರಬೇತಿ ಕ್ಯಾಂಪ್‌ನಲ್ಲಿ ಈ ದುರ್ಘಟನೆ ನಡೆದಿದೆ. ಹೃದಯ ಸ್ಥಂಭನಕ್ಕೆ ಒಳಗಾದ ಡೇಲ್ ತನ್ನ ಬಾತ್‌ರೂಮ್‌ನಲ್ಲೇ ಕುಸಿದುಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಕ್ಷಣವೇ ಅವರನ್ನು ಇಲ್ಲಿನ ಮೆಡಿಕಲ್ ಸೆಂಟರ್ ದಾಖಲಿಸಿದರೂ ಅಲ್ಲಿ ಮೃತಪಟ್ಟ ವಿಷಯವನ್ನು ಹೊರಹಾಕಲಾಯಿತು.

ಸ್ನೂಕರ್ ಬದುಕಿಗೆ ನಿವೃತ್ತಿ ಘೋಷಿಸಿದ ಹೆನ್ರಿ

Posted by JAYAKIRANA Kirana on | 0 comments | Leave a comment...

ಶಿಫೀಲ್ಡ್: ವಿಶ್ವ ಬಿಲಿಯಡ್ಸ್ ಆಟದಲ್ಲಿ 'ಸ್ಕೂಕರ್ ಕಿಂಗ್ಸ್ ಎಂದೇ ಕರೆಯಲ್ಪಡುವ ಸ್ಕಾಟ್ಲೆಂಡ್‌ನ ಖ್ಯಾತ ಆಟಗಾರ ಸ್ಟೀಫೆನ್ ಹೆನ್ರಿ ನಿನ್ನೆ ತನ್ನ ೨೭ ವರ್ಷದ ಯಶಸ್ವೀ ಸ್ನೂಕರ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಕ್ರುಸಿಬಲ್ ಥಿಯೇಟರ್‌ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ೧೩-೨ರ ಹೀನಾಯ ಸೋಲುಂಡ ನಂತರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೆನ್ರಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಸ್ಫೀಫೆನ್ ಮೆಗ್ಯುಲರ್ ವಿರುದ್ಧ ೧೩-೨ರ ಸೋಲುಂಡ ನಂತರ ಏಳು ಬಾರಿಯ ವಿಶ್ವಚಾಂಪಿಯನ್ ಹೆನ್ರಿಯ ನಿವೃತ್ತಿ ನಿರ್ಧಾರ ಹೆಚ್ಚಿನವರಿಗೆ ಅಚ್ಚರಿಯನ್ನು ಮೂಡಿಸಿದೆ.
ಇದು ನನ್ನ ತಕ್ಷಣದ ನಿರ್ಧಾರವಾಗಿರಲಿಲ್ಲ. ಇದನ್ನು ಮೂರು ತಿಂಗಳ ಹಿಂದೆಯೇ ತೆಗೆದು ಕೊಂಡಿದ್ದೆ. ಕೇವಲ ಮೂವರಿಗೆ ಬಿಟ್ಟರೆ ಹೆಚ್ಚಿನವರಿಗೆ ಈ ವಿಷಯವನ್ನು ತಿಳಿಸಿರಲಿಲ್ಲ. ಇದು ಸುಲಭದ ನಿರ್ಧಾರವಾಗಿತ್ತು. ಆದರೆ ಇದರ ಕಾರಣವು ನಿಮಗೆ ಬೋರ್ ತರುವ ಕಾರಣ ಇದನ್ನು ತಿಳಿಸಲು ಹೋಗುವುದಿಲ್ಲ. ಆಟದ ವೇಳಾಪಟ್ಟಿ ಕೂಡ ನನ್ನ ಪರವಾಗಿರಲಿಲ್ಲ. ಒಂದು ವೇಳ ನಾನು ಈ ಕೂಟವನ್ನು ಗೆದ್ದುಕೊಂಡಿದ್ದರೆ ನಿವೃತ್ತಿಯು ಅತ್ಯಂತ ಉತ್ತಮ ರೀತಿಯಿಂದ ಕೂಡಿರುತ್ತಿತ್ತು. ಏಳು ಬಾರಿಯ ಚಾಂಪಿಯನ್‌ಶಿಪ್ ಜಯಿಸಿದ ದಾಖಲೆ ನನ್ನ ಹೆಸರಲ್ಲಿದ್ದು, ಅಲ್ಲದೆ ಈ ಸಾಧನೆ ಮಾಡಿದ್ದ ಯುವ ಆಟಗಾರ ಎಂಬ ಹಣೆಪಟ್ಟಿ ಕೂಡ ನನ್ನ ಬಳಿ ಇರುವುದರಿಂದ ಸಾಮಾನ್ಯವಾಗಿ ಸಂತಸ ತಂದಿದೆ ಎಂದು ತಿಳಿಸಿರುವ ಹೆನ್ರಿ ಈ ಬಗ್ಗೆ ಪುಸ್ತಕ ವೊಂದನ್ನು ಹೊರತರುವ ವಿಷಯವನ್ನು ಕೂಡ ಬಹಿರಂಗ ಪಡಿಸಿದರು.

ಒಡಿಯೂರು ಶ್ರೀ-ಅರ್ಚಕರ ನಡುವೆ ವಾಗ್ವಾದ

Posted by JAYAKIRANA Kirana on | 0 comments | Leave a comment...

ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಮಹಿಷಮರ್ಧಿನಿ ದೇವಾಲಯದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಲು ಆಗಮಿಸಿದ್ದ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಅವರು ಸಭಾ ಕಾರ್ಯಕ್ರಮದ ಮೊದಲು ದೇವಸ್ಥಾನಕ್ಕೆ ದೇವಿಯ ದರ್ಶನ ಪಡೆಯಲು ತೆರಳಿದ್ದರು. ಈ ಸಂದರ್ಭ ದಲ್ಲಿ ದೇವಾಲಯದ ಅರ್ಚಕ ಶಿವರಾಮ ಭಟ್ ಎಂಬವರು ದೇವರ ನಡೆಗೆ(ಗರ್ಭಗುಡಿಯ ಪ್ರವೇಶ ದ್ವಾರದ ಮುಂಭಾಗ) ಅಡ್ಡ ನಿಲ್ಲುವುದು ಸರಿಯಲ್ಲ ಎಂದು ಸ್ವಾಮೀಜಿಗೆ ಹೇಳಿದ್ದು ಹಾಗೂ ಸ್ವತ: ಪ್ರಸಾದ ನೀಡದೆ ಇನ್ನೊಬ್ಬ ಅರ್ಚಕರಿಗೆ ಪ್ರಸಾದ ನೀಡುವಂತೆ ಸೂಚಿಸಿದ್ದರು. ಈ ಸಂದರ್ಭ ದಲ್ಲಿ ಸ್ವಾಮೀಜಿ ಮತ್ತು ಅರ್ಚಕರ ನಡುವೆ ವಾಗ್ವಾದ ನಡೆಯಿತು. ಇದು ವಿವಾದಕ್ಕೆ ಕಾರಣವಾಗಿ ಗೊಂದಲ ಸೃಷ್ಠಿಯಾಯಿತು.
ಬ್ರಾಹ್ಮಣೇತರ ಸ್ವಾಮೀಜಿ ಎಂದು ಗುರುದೇವಾನಂದ ಸ್ವಾಮೀಜಿ ಅವರೊಂದಿಗೆ ಅರ್ಚಕರು ಈ ರೀತಿ ನಡೆದುಕೊಂಡರು ಎಂಬ ಆರೋಪ ಸ್ವಾಮೀಜಿ ಭಕ್ತರಿಂದ ವ್ಯಕ್ತವಾಯಿತು. ಇನ್ನೊಂದು ವಿಭಾಗವು ಅರ್ಚಕರು ಕಟ್ಟುನಿಟ್ಟಾಗಿ ಆಚರಣೆಯನ್ನು ಪಾಲಿಸಿದ್ದಾರೆ ಎಂದು ಅವರ ನಿಲುವು ಸರಿಯಾಗಿದೆ ಎಂದು ಸಮರ್ಥಿ ಸಿಕೊಂಡರು. ಇದರಿಂದಾಗಿ ಗೊಂದಲ ಸೃಷ್ಟಿಯಾಯಿತು.
ಬಳಿಕ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ಅಸ್ಪೃಶ್ಯತೆ, ತಾರತಮ್ಯ ನೀತಿ, ಜಾತಿ, ಮತಬೇಧ, ಪಂಕ್ತಿಬೇಧ ಮೊದಲಾದ ಕೆಡುಕುಗಳನ್ನು ನಿರ್ಮೂ ಲನ ಮಾಡುವ ಕೆಲಸ ದೇವಾಲ ಯದಿಂದಲೇ ಆರಂಭವಾಗಬೇಕು, ದೇವರ ಮತ್ತು ಭಕ್ತರ ನಡುವೆ ಬೆಸುಗೆ ಬೆಸೆಯಬೇಕಾದ ಅರ್ಚಕರೇ ಪ್ರಸಾದ ಬಿಸಾಡುವ ಮೂಲಕ ಭಕ್ತರನ್ನು ದೂರವಿಡುವುದು ಸರಿಯಲ್ಲ ಎಂದು ಅರ್ಚಕರ ನಿಲುವನ್ನು ಪರೋಕ್ಷವಾಗಿ ಟೀಕಿಸಿದರು. ಈ ವೇಳೆ ಆಕ್ರೋಶಿತ ರಾದ ಅರ್ಚಕರು ಪೂಜಾ ಸಾಮಗ್ರಿ ಗಳನ್ನು ದೇವಾಲಯದ ವಠಾರದಲ್ಲೇ ಎಸೆದು ಆಕ್ರೋಶ ವ್ಯಕ್ತಪಡಿಸಿ ಸ್ವಾಮೀಜಿ ಎಷ್ಟು ಸರಿಯಿದ್ದಾರೆ ಎಂಬುದು ನಮಗೂ ಗೊತ್ತಿದೆ ಎಂದು ಸ್ವಾಮೀಜಿ ವಿರುದ್ಧ ಕಿಡಿಕಾರುತ್ತಾ ವೇದಿಕೆಗೆ ತೆರಳಿ ದೇವಾಲಯದ ಬೀಗದ ಕೀಲಿಯನ್ನು ಆಡಳಿತ ಮಂಡಳಿಯವರಿಗೆ ಒಪ್ಪಿಸಿ ಹೊರನಡೆದ ಪ್ರಸಂಗವೂ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ದೇವಾಲಯದ ಆಡಳಿತ ಮಂಡಳಿಯವರು ಆರ್ಚಕರನ್ನು ಸಮಾಧಾನಿಸಿದರೆಂದು ತಿಳಿದು ಬಂದಿದೆ. ಒಡಿಯೂರು ಸ್ವಾಮೀಜಿ ವಿರುದ್ಧ ಅರ್ಚಕರು ತೋರಿದ ನಿಲುವಿನ ಕುರಿತು ಅವರ ಭಕ್ತವೃಂದದಿಂದ ಆಕ್ರೋಶದ ಮಾತು ಕೇಳಿಬರುತ್ತಿದೆ. ಆದರೆ ಗುರುದೇವಾ ಸೇವಾಬಳಗದವರು ಮಾತ್ರ ತುಟಿಬಿಚ್ಚದೆ ಮೌನವಹಿಸಿದ್ದಾರೆ.

ನಾಪತ್ತೆಯಾಗಿದ್ದ ಪ್ರೇಮಿಗಳು ಪತ್ತೆ

Posted by JAYAKIRANA Kirana on | 0 comments | Leave a comment...

ಸುಳ್ಯ: ಎ.೧೮ರಂದು ನಾಪತ್ತೆ ಯಾಗಿದ್ದ ಚೆಂಬು ಗ್ರಾಮದ ಗಿರಿಧರ ಗೌಡರ ಪತ್ನಿ ಅಶ್ವಿನಿ(೨೩) ಬುಧವಾರ ಸುಳ್ಯ ಪೊಲೀಸ್ ಠಾಣೆಗೆ ಹಾಜರಾ ಗಿದ್ದಾರೆ.
ಇಲ್ಲಿನ ಆಸ್ಪತ್ರೆಯೊಂದರಲ್ಲಿ ಲ್ಯಾಬ್‌ಟೆಕ್ನೀಶಿಯನ್ ಆಗಿರುವ ಆಕೆಗೆ ೨೦೦೯ರಲ್ಲಿ ಮದುವೆ ಮಾಡಿಕೊಡ ಲಾಗಿತ್ತು. ಗಂಡ ಹೆಂಡತಿ ಅನ್ಯೋನ್ಯ ವಾಗಿದ್ದರು. ತವರಿನಲ್ಲಿ ಇದ್ದುಕೊಂಡೆ ಆಕೆ ಕೆಲಸಕ್ಕೆ ಹೋಗುತ್ತಿದ್ದರು. ಎ.೧೮ರಿಂದ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.
ಪುತ್ತೂರು ತಾಲೂಕು ಪೆರ್ಲಂ ಪಾಡಿ ಗ್ರಾಮದ ತಿಮ್ಮಪ್ಪ ಗೌಡರ ಮಗ ಉಮೇಶ್ ಎಂಬಾತನೊಂದಿಗೆ ಕಳೆದ ಮೂರು ತಿಂಗಳಿಂದ ಆಕೆಗೆ ಪ್ರೇಮ ಚಿಗುರೊಡೆದಿದ್ದು, ಆತನೊಂದಿಗೆ ಬೆಂಗಳೂರು, ಹುಬ್ಬಳ್ಳಿ ಮುಂತಾದೆಡೆ ಸುತ್ತಾಡಿದ್ದಾಗಿ, ಮತ್ತು ತಾನು ಆತ ನನ್ನೇ ಮದುವೆಯಾಗುವುದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ತನ್ನ ಗಂಡ ಗಿರಿಧರ ಗೌಡ ಕುಡುಕನಾಗಿದ್ದು, ತಾನು ಆತನೊಂದಿಗೆ ಬಾಳುವೆ ನಡೆಸಲಾರೆ, ವಿಚ್ಛೇದನ ಪಡೆಯುತ್ತೇನೆ ಎಂದೂ ಆಕೆ ತಿಳಿಸಿದ್ದಾಳೆ.
ಉಮೇಶ್ ಈಕೆಗೆ ದೂರದ ಸಂಬಂಧಿ ಕೂಡಾ ಆಗಿದ್ದಾನೆ ಎನ್ನ ಲಾಗಿದೆ. ಆಕೆ ಬೇರೆ ಮದುವೆ ಆಗು ವುದಿದ್ದರೆ ತಮ್ಮ ಮನೆಗೆ ಬರುವುದು ಬೇಡ ಎಂದು ಆಕೆಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
ಯುವತಿ ಮದುವೆಯಾಗಿ ಪತ್ತೆ
ಅಮರಮೂಡ್ನೂರು ಗ್ರಾಮದ ಮುಂಡ್ರಾಜೆ ಎಂಬಲ್ಲಿ ಸೋಮವಾರ ನಡೆದ ಯುವತಿ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ.
ಕಾಞಂಗಾಡ್ ತಾಲೂಕು ಪನ ತ್ತಡಿ ಗ್ರಾಮದ ಗುರಗುಂಜ ವೆಂಕಪ್ಪ ಗೌಡರ ಪುತ್ರಿ ಸಂಧ್ಯಾ(೨೧)ಳನ್ನು ಬೈಕಿನಲ್ಲಿ ಬಂದ ಯುವಕರಿಬ್ಬರು ಅಪಹರಿಸಿದ್ದಾಗಿ ಸುಳ್ಯ ಪೊಲೀಸರಿಗೆ ದೂರು ನೀಡಲಾಗಿತ್ತು. ಆಕೆಯೊಂದಿಗೆ ಆಗಾಗ ಮೊಬೈಲ್ ಮೂಲಕ ಮಾತ ನಾಡುತ್ತಿದ್ದ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಹೊನ್ನಪ್ಪ ಗೌಡರ ಪುತ್ರ ಸರ್ವೇಶ್ ಈ ಕೃತ್ಯ ಎಸಗಿರಬಹುದು ಎಂದೂ ಶಂಕಿಸಲಾಗಿತ್ತು.
ವಿಡಿಯೋಗ್ರಾಫರ್ ಆಗಿರುವ ಸರ್ವೇಶ್ ಮದುವೆಯೊಂದರಲ್ಲಿ ಸಂಧ್ಯಾಳಿಗೆ ಎರಡು ವರ್ಷಗಳ ಹಿಂದೆ ಪರಿಚಯವಾಗಿದ್ದ. ಈ ಪರಿಚಯ ಬಳಿಕ ಪ್ರೇಮಕ್ಕೆ ತಿರುಗಿತ್ತು. ಆದರೆ ಮನೆಯಲ್ಲಿ ಅನುಕೂಲ ಸ್ಥಿತಿಯ ಲ್ಲಿರುವ ಸಂಧ್ಯಾಳ ಹೆತ್ತವರಿಗೆ ಸರ್ವೇಶ್‌ನೊಂದಿಗೆ ಮದುವೆ ಮಾಡಿಕೊಡಲು ಮನಸ್ಸಿರಲಿಲ್ಲ. ಅಂತಿಮ ಬಿಬಿಎಂ ಓದುತ್ತಿರುವ ಸಂಧ್ಯಾಳ ಓದು ಮುಗಿದ ಬಳಿಕ ಮದುವೆ ವಿಚಾರ ಮಾಡುವುದಾಗಿ ವೆಂಕಪ್ಪ ಗೌಡರು ತಿಳಿಸಿದ್ದರು. ಹಾಗಾಗಿ ಮೊನ್ನೆ ಪರೀಕ್ಷೆ ಮುಗಿಯು ತ್ತಿದ್ದಂತೆ ಮದುವೆ ಪ್ರಸ್ತಾಪವಾದಾಗ ವೆಂಕಪ್ಪ ಗೌಡರು ಈ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ ಎನ್ನಲಾಗಿದೆ. ಸಂಬಂ ಧಿಕರ ಮನೆಯಾದ ಮುಂಡ್ರಾಜೆಗೆ ಸೋಮವಾರ ಬೆಳಿಗ್ಗೆ ತೆರಳಿದ್ದ ಸಂಧ್ಯಾ ಅಲ್ಲಿಂದ ಸರ್ವೇಶ್ ಬೈಕ್‌ನಲ್ಲಿ ಮಡಿ ಕೇರಿಗೆ ತೆರಳಿದ್ದಳು. ಅಲ್ಲಿ ಅವರು ವಿವಾ ಹವಾಗಿ ಬುಧವಾರ ಸುಳ್ಯದ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಮಾತುಕತೆ ವೇಳೆ ಈ ಮದುವೆಗೆ ಎರಡೂ ಕಡೆಯವರು ಒಪ್ಪಿಗೆ ನೀಡಿದ್ದಾರೆ. ಬಳಿಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾವಣೆ ನಡೆಯಿತು.
ಅಪಹರಣವಾಗಿಲ್ಲ: ತನ್ನನ್ನು ಯಾರೂ ಅಪಹರಿಸಿಲ್ಲ, ಮೊದಲು ಮದುವೆಗೆ ಒಪ್ಪಿಗೆ ಸೂಚಿಸಿದ್ದ ಮನೆಯವರು ಬಳಿಕ ನಿರಾಕರಿಸಿದ್ದರು. ಹಾಗಾಗಿ ತಾನೇ ಸರ್ವೇಶ್‌ರೊಂದಿಗೆ ಬೈಕಿನಲ್ಲಿ ತೆರಳಿದ್ದಾಗಿ ಸಂಧ್ಯಾ ತಿಳಿಸಿದ್ದಾರೆ.

ನಗರದಲ್ಲಿ ಪಾರ್ಕಿಂಗ್ ಹೆಸರಲ್ಲಿ ಹಗಲು ದರೋಡೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದಲ್ಲಿ ಪಾರ್ಕಿಂಗ್ ದರವನ್ನು ಏಕಾಏಕಿ ಏರಿಕೆ ಮಾಡುವ ಮೂಲಕ ಗುತ್ತಿಗೆ ದಾರರು ಹಗಲು ದರೋಡೆ ನಡೆಸು ತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಮಂಗಳೂರಿನ ಸ್ಟೇಟ್‌ಬ್ಯಾಂಕ್ ಹಾಗೂ ಹಳೆಯ ಸರ್ವೀಸ್ ಬಸ್ ನಿಲ್ದಾಣದ ಬಳಿಯ ಪಾರ್ಕಿಂಗ್‌ಗೆ ಕಳೆದ ತಿಂಗಳು ೩೦ರಂದು ಟೆಂಡರ್ ಕರೆಯಲಾಗಿತ್ತು. ಈ ಬಾರಿಯ ಗುತ್ತಿ ಗೆಯನ್ನು ೧೧ ತಿಂಗಳಿಗೆ ೫ಲಕ್ಷ ೬೫ ಸಾವಿರಕ್ಕೆ ಕರಾವಳಿ ಎಂಟರ್‌ಪ್ರೈಸಸ್ ಪಡೆದಿದೆ.
ನೂತನ ಗುತ್ತಿಗೆದಾರರು ದರ ವನ್ನು ಏಕಾಏಕಿಯಾಗಿ ಏರಿಸಿದ್ದು ಕಾರ್ ಪಾರ್ಕಿಗ್‌ಗೆ ೧೦ ರೂ. ಮತ್ತು ಬೈಕ್ ಪಾರ್ಕಿಂಗ್‌ಗೆ ಮೂರು ರೂ. ವಸೂಲಿ ಮಾಡಲಾಗುತ್ತಿದೆ. ಕಳೆದ ಬಾರಿ ಆರು ಲಕ್ಷಕ್ಕೆ ಗುತ್ತಿಗೆ ನೀಡಲಾ ಗಿದ್ದರೂ ಪಾರ್ಕಿಂಗ್ ದರ ಕೇವಲ ಐದು ರೂ. ಇತ್ತು. ಗಂಟೆಗೆ ಇಂತಿಷ್ಟು ದರ ವಸೂಲಿ ಮಾಡಬೇಕಿದ್ದರೂ ಇಲ್ಲಿ ನಿಯಮವನ್ನು ಉಲ್ಲಂಘಿಸಿ ಒಂದು ನಿಮಿಷ ವಾಹನ ನಿಂತರೂ ಗರಿಷ್ಟ ಶುಲ್ಕ ವಸೂಲಿ ಮಾಡಲಾಗುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನೂತನ ಗುತ್ತಿಗೆದಾರರು ಹಿಂದೆ ಇದ್ದ ರಶೀದಿಯನ್ನೇ ಬಳಕೆ ಮಾಡುತ್ತಿದ್ದು ಐದು ರೂ. ಮುದ್ರಿತವಾಗಿದ್ದನ್ನು ತಿದ್ದಿ ಹತ್ತು ರೂಪಾಯಿನ ಸೀಲ್ ಹಾಕಲಾಗಿದೆ. ಹಳೆಯ ಸರ್ವೀಸ್ ನಿಲ್ದಾಣದಲ್ಲಿ ಡ್ರೈನೇಜ್ ನೀರು ಹರಿದು ಕಶ್ಮಲದಿಂದ ಕೂಡಿದ್ದರೂ ಸಾರ್ವಜನಿಕರು ಅನಿವಾರ್ಯವಾಗಿ ಈ ಜಾಗದಲ್ಲಿ ಅದೂ ಕೂಡ ದುಬಾರಿ ಶುಲ್ಕ ತೆತ್ತು ವಾಹನಗಳನ್ನು ಪಾರ್ಕ್ ಮಾಡಬೇಕಾದ ಕರ್ಮಕ್ಕೆ ಸಿಲುಕಿದ್ದಾರೆ.
ಬೋರ್ಡ್ ಹಾಕ್ತೇನೆ: ಗುತ್ತಿಗೆದಾರ
ಪಾರ್ಕಿಂಗ್ ಶುಲ್ಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುತ್ತಿಗೆದಾರ ಅಶ್ರಫ್, ಕಾರು ಪಾರ್ಕಿಂಗ್‌ಗೆ ನಾಲ್ಕು ಗಂಟೆ ಆರು ರೂ. ಮತ್ತು ಎಂಟು ಗಂಟೆಗೆ ಹತ್ತು ರೂ. ಎಂದು ಶುಲ್ಕ ನಿಗದಿಪಡಿಸಲಾಗಿದೆ. ಅದೇ ರೀತಿ ದ್ವಿಚಕ್ರ ವಾಹನಕ್ಕೆ ನಾಲ್ಕು ಗಂಟೆಗೆ ಮೂರು ರೂ. ನಿಗದಿಪಡಿಸಲಾಗಿದೆ. ನಮ್ಮ ಹುಡುಗರು ಗೊತ್ತಿಲ್ಲದೆ ಹೆಚ್ಚುವರಿ ದರ ವಸೂಲಿ ಮಾಡಿರಬಹುದು. ಎರಡು ದಿನಗಳಲ್ಲೇ ದರಪಟ್ಟಿಯ ಬೋರ್ಡ್ ಅಳವಡಿಸುತ್ತೇನೆ ಎಂದಿದ್ದಾರೆ. ಮನಪಾ ಕಮೀಷನರ್ ಹರೀಶ್ ಕುಮಾರ್ ಅವರು ಮೈಸೂರು ಪ್ರವಾಸದಲ್ಲಿದ್ದಾರೆನ್ನುವ ಮಾಹಿತಿ ಲಭಿಸಿದ್ದು ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

ಪೌರ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿದ ಗುತ್ತಿಗೆದಾರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮ್ಯಾನ್‌ಹೋಲ್‌ಗೆ ಪೌರಕಾರ್ಮಿಕರನ್ನು ಇಳಿಸಿ ಶುಚಿತ್ವ ಗೊಳಿಸುವುದು ಅಪರಾಧವಾಗಿದ್ದರೂ ಇಂತಹ ಘಟನೆಗಳು ಮುಂದುವರಿ ಯುತ್ತಲೇ ಇದೆ. ನಿನ್ನೆ ನಗರದಲ್ಲಿ ಇನ್ನೊಂದು ಘಟನೆ ನಡೆದಿದ್ದರೂ ಅಧಿಕಾರಿಗಳು ಬೇಜವಾಬ್ದಾರಿತನ ಮೆರೆ ದಿರುವುದು ಅವರ ಕಾರ್ಯವೈಖರಿ ಯನ್ನು ಎತ್ತಿ ತೋರಿಸುತ್ತಿದೆ.
ಕಳೆದ ಒಂದು ವಾರದಿಂದ ಲೇಡಿ ಗೋಷನ್ ಎದುರು ಇರುವ ಸುಲಭ ಶೌಚಾಲಯ ಬ್ಲಾಕ್ ಆಗಿ ಮ್ಯಾನ್ ಹೋಲ್ ತುಂಬಿ ತುಳುಕುತ್ತಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಗುತ್ತಿಗೆದಾರರು ಇಬ್ಬರು ಪೌರ ಕಾರ್ಮಿಕರನ್ನು ಕರೆ ತಂದು ಎರಡು ಮ್ಯಾನ್‌ಹೋಲ್ ನೊಳಗೆ ಇಳಿಸಿದ್ದರು. ಅವರು ಕೈಗಳಿಗೆ ಗ್ಲೌಸ್ ಹಾಕದೆಯೇ ಶುಚಿತ್ವಗೊಳಿಸು ತ್ತಿದ್ದ ಸಂದರ್ಭ ಪತ್ರಿಕಾ ಪ್ರತಿನಿಧಿ ಯೋರ್ವರು ಇವರನ್ನು ಕಂಡು ಚಿತ್ರೀಕರಣ ನಡೆಸಿದರು.
ಈ ಸಂದರ್ಭ ಗುತ್ತಿಗೆದಾರ ತನ್ನ ಹೆಸರು ಹೇಳದ ಕಾರಣ ಮಾಧ್ಯಮ ಪ್ರತಿನಿಧಿ ಅವರನ್ನು ತಡೆದು ನಿಲ್ಲಿಸಿ ಪಾಲಿಕೆಯ ಜೆಇ ಅನಿಲ್ ಕುಮಾರ್‌ಗೆ ಕರೆ ಮಾಡಿದರು. ಆ ವೇಳೆ ಸ್ಥಳಕ್ಕೆ ಕಿರಿಯ ಅಧಿಕಾರಿಗಳನ್ನು ಕಳುಹಿಸು ತ್ತೇನೆ ಎಂದ ಜೆಇ ಸಾಹೇಬರು ನಂತರ ಆ ಸುದ್ಧಿಯನ್ನೇ ಮರೆತುಬಿಟ್ಟರು. ಸುಮಾರು ಮುಕ್ಕಾಲು ಗಂಟೆಯವರೆಗೆ ಕಾದರೂ ಅಧಿಕಾರಿಗಳ ನೆರಳು ಕೂಡಾ ಅತ್ತ ಕಡೆ ಸುಳಿಯಲಿಲ್ಲ. ಮತ್ತೆ ಅನಿಲ್‌ಗೆ ಕರೆ ಮಾಡಿದಾಗ ಶೌಚಾಲಯ ವ್ಯಾಪ್ತಿ ತನ್ನದಲ್ಲ ಎಂದು ಫೋನ್ ಕಟ್ ಮಾಡಿದ್ದರು. ಇದೇ ಸಂದರ್ಭ ಗುತ್ತಿಗೆದಾರರು ಸ್ಥಳದಿಂದ ಪರಾರಿಯಾಗಿದ್ದರು. ಪೌರ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿದವರಿಗೆ ಐದು ತಿಂಗಳಿಂದ ಐದು ವರ್ಷಗಳವರೆಗೆ ಶಿಕ್ಷೆ ಹಾಗೂ ದಂಡ ಕಟ್ಟಬೇಕೆನ್ನುವ ಕಾನೂನು ಇದೆ. ಆದರೆ ಇದು ದ.ಕ.ಜಿಲ್ಲೆಯಲ್ಲಿ ಜಾರಿಗೆ ಬಂದಿಲ್ಲ. ಕಳೆದ ವರ್ಷ ಕಿನ್ನಿಗೋಳಿಯಲ್ಲಿ ಮ್ಯಾನ್‌ಹೋಲ್‌ಗೆ ಇಳಿದಿದ್ದ ಓರ್ವ ಪೌರ ಕಾರ್ಮಿಕ ಸಾವನ್ನಪ್ಪಿದ್ದರು. ಅಲ್ಲದೆ ಮಂಗಳೂರಿನ ಬಲ್ಮಠದಲ್ಲಿ ಹಾಗೂ ಸ್ಟೇಟ್ ಬ್ಯಾಂಕ್ ಬಳಿ ಇಂತಹದ್ದೇ ಪ್ರಕರಣಗಳು ನಡೆದಿದ್ದು, ನಿನ್ನೆಯದ್ದು ಮೂರನೆಯದ್ದಾಗಿದೆ. ಮೂರು ಪ್ರಕರಣಗಳೂ ಎರಡು ತಿಂಗಳ ಅಂತರದಲ್ಲೇ ನಡೆದಿದ್ದರೂ ಅಧಿಕಾರಿಗಳು ಕುಂಭಕರ್ಣ ನಿದ್ದೆಯಲ್ಲಿರುವುದು ದುರಂತವಾಗಿದೆ.

ಕಲ್ಲಡ್ಕ ಭಟ್, ಮಸೂದ್ ನಡುವೆ ರಾಜಿ ಸಂಧಾನ?

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಪ್ಪಿನಂಗಡಿ ಯಲ್ಲಿ ನಡೆದ ಹಿಂದೂ ಸಮಾಜೋ ತ್ಸವಕ್ಕೆ ಸಂಬಂಧಪಟ್ಟ ಕೇಸು ಹಾಗೂ ನಂತರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯ ಕೇಸನ್ನು ಹಿಂದಕ್ಕೆ ಪಡೆಯುವ ಸಲುವಾಗಿ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಮಹಮ್ಮದ್ ಮಸೂದ್ ನಡುವೆ ರಾಜಿ ಸಂಧಾನ ಪ್ರಕ್ರಿಯೆ ನಡೆಯುತ್ತಿದೆ ಎನ್ನುವ ಮಾಹಿತಿಯೊಂದು ಪತ್ರಿಕೆಗೆ ಲಭಿಸಿದೆ.
ಇದೇ ವರ್ಷ ಜನವರಿ ೨೨ರಂದು ಉಪ್ಪಿನಂಗಡಿಯಲ್ಲಿ ಹಿಂದೂ ಸಮಾಜೋತ್ಸವ ನಡೆದಿತ್ತು. ಈ ಸಮಾವೇಶದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮುಸ್ಲಿಂ ಹೆಣ್ಮಕ್ಕಳ ಬಗ್ಗೆ ಕೀಳಾಗಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದ ಸೆಂಟ್ರಲ್ ಮುಸ್ಲಿಂ ಕಮಿಟಿ ೨೪ ರಂದು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿತ್ತು. ಇದರಲ್ಲಿ ಮಾತನಾಡಿದ್ದ ಕಮಿಟಿಯ ಅಧ್ಯಕ್ಷ ಮಸೂದ್, ಭಟ್ ವಿರುದ್ಧ ಆರೋಪಗಳನ್ನು ಮಾಡಿ ಹರಿಹಾಯ್ದಿದ್ದರು.
ಇವೆಲ್ಲದರ ನಡುವೆ ಭಟ್ ವಿರುದ್ಧ ಮುಸ್ತಫ ಎಂಬವರು ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಿಸಿದ್ದರೆ, ಮಸೂದ್ ವಿರುದ್ಧ ಜಗದೀಶ ಶೇಣವ ಅವರು ಬಂದರ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಪ್ರಕರಣದ ಬಗ್ಗೆ ಈಗಾಗಲೇ ಬಂದರ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು ಪತ್ರಕರ್ತರನ್ನೂ ವಿಚಾರಿಸಲಾಗಿದೆ. ಎರಡೂ ಕಡೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮುಖಂಡರು ಕೋರ್ಟ್ ಕಟ್ಲೆ ಎಂದು ಅಲೆದಾಡುವುದು ಗ್ಯಾರಂಟಿಯಾಗಿದೆ.
ಈ ಹಿನ್ನೆಲೆಯಲ್ಲಿ ಎರಡೂ ಕಡೆಯಿಂದ ರಾಜಿ ಸಂಧಾನ ನಡೆಸಿ ಪ್ರಕರಣಗಳಿಗೆ ಬಿ.ರಿಪೋರ್ಟ್ ಹಾಕುವ ಪ್ರಕ್ರಿಯೆ ನಡೆಯುತ್ತಿದ್ದು ಇದಕ್ಕಾಗಿ ಸಂಧಾನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎನ್ನಲಾಗುತ್ತಿದೆ. ಇನ್ನೊಂದು ಮೂಲದ ಪ್ರಕಾರ ಈಗಾಗಲೇ ರಾಜಿ ಸಂಧಾನ ಮುಗಿದಿದ್ದು ಬಿ.ರಿಪೋರ್ಟ್ ಹಾಕಲು ಪೊಲೀಸರು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈ ವಿಷಯ ಈಗಾಗಲೇ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸಭೆಯಲ್ಲೂ ಪ್ರತಿಧ್ವನಿಸಿದೆ ಎಂದು ಹೇಳಲಾಗುತ್ತಿದ್ದು, ಮಸೂದ್ ವಿರುದ್ಧ ಕೆಲವು ಸದಸ್ಯರು ಹಾಗೂ ಪದಾಧಿಕಾರಿಗಳು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

ಯುಪಿಸಿಎಲ್ ವರದಿ ಮುಖ್ಯಮಂತ್ರಿಗೆ: ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ

Posted by JAYAKIRANA Kirana on | 0 comments | Leave a comment...

ಪೇಜಾವರ ಶ್ರೀ ಎಚ್ಚರಿಕೆ
ಮಣಿಪಾಲ: ಯುಪಿಸಿಎಲ್‌ನಿಂ ದಾಗುವ ಸಮಸ್ಯೆ ಬಗ್ಗೆ ತಾನು ರಚಿಸಿ ರುವ ತಜ್ಞರ ತಂಡ ವರದಿ ತಯಾರಿ ಸಿದ್ದು, ಆ ವರದಿಯನ್ನು ಮುಖ್ಯಮಂ ತ್ರಿಗಳಿಗೆ ನೀಡಲಾಗಿದೆ. ಈ ಸಮಸ್ಯೆ ಯನ್ನು ಸರಕಾರ ಮತ್ತು ಕಂಪೆನಿ ಸರಿಪಡಿಸದಿದ್ದರೆ ಇಲ್ಲಿನ ಜನರೊಂದಿಗೆ ಸೇರಿ ತೀವ್ರ ಹೋರಾಟ ನಡೆಸುವು ದಾಗಿ ಪೇಜಾವರ ಶ್ರೀಗಳು ಸರಕಾ ರವನ್ನು ಎಚ್ಚರಿಸಿದ್ದಾರೆ.
ಈ ಮೊದಲು ಸರಕಾರ ತಜ್ಞರ ಸಮಿತಿಯನ್ನು ರಚಿಸಿದ್ದು, ಈ ಸಮಿತಿ ಯಲ್ಲಿ ಪೇಜಾವರ ಶ್ರೀಗಳು ಹೇಳಿದ ಇಬ್ಬರು ತಜ್ಞರು ಒಳಗೊಂಡಿದ್ದರು. ಆದರೆ ಏಕಾಏಕಿ ಈ ಇಬ್ಬರು ತಜ್ಞರನ್ನು ಸರಕಾರ ಸಮಿತಿಯಿಂದ ಹೊರಗಿಟ್ಟಿತ್ತು. ಇದರಿಂದ ಸರಕಾರದೊಂದಿಗೆ ಅಸಮಾಧಾನಗೊಂಡಿರುವ ಪೇಜಾವರ ಶ್ರೀಗಳು ಆರು ಜನರ ತಂಡವನ್ನು ರಚಿಸಿ ವರದಿಯನ್ನು ತಯಾರಿಸಿದ್ದಾರೆ. ಈ ವರದಿಯಲ್ಲಿ ಪ್ರದೇಶದಲ್ಲಿ ಪ್ರಮುಖವಾಗಿ ಉಪ್ಪು ನೀರಿನ ಹಾಗೂ ಹಾರುಬೂದಿಯ ಸಮಸ್ಯೆ ವ್ಯಾಪಕವಾ ಗಿದೆ. ಇದಕ್ಕೆ ಸರಕಾರ ಮತ್ತು ಯುಪಿಸಿಯಲ್ ಕಂಪೆನಿ ನೇರ ಹೊಣೆ ಯಾಗಿದ್ದು, ಮಾತ್ರವಲ್ಲದೆ ಈ ಭಾಗದಲ್ಲಿ ಕಲ್ಲಿದ್ದಲನ್ನು ತೆರೆದ ವಾಹನದಲ್ಲಿ ಸಾಗಿಸುವುದು ಮತ್ತು ಮಳೆಗಾಲ ಸಂದರ್ಭದಲ್ಲಿ ಶೇಖರಿಸಲ್ಪಟ್ಟ ಕಲ್ಲಿದ್ದಲಿನ ನೀರು ನದಿಗೆ ಮತ್ತು ಸುತ್ತಮುತ್ತಲಿನ ಕೃಷಿಭೂಮಿಗೆ ಹೋಗುತ್ತಿದೆ. ಸಮುದ್ರದ ನೀರನ್ನು ಬಿಸಿ ಮಾಡುವ ಸಂದರ್ಭ ವಾತಾವರಣವು ಉಪ್ಪಿನಾಂಶದಿಂದ ಕೂಡಿರುವುದರಿಂದ ಪ್ರದೇಶದ ಹಸಿರು ಹೊದಿಕೆ ತೀವ್ರ ತೊಂದರೆಯಾಗುತ್ತಿದೆ. ಇದರಿಂದ ರೈಲ್ವೇ ಹಳಿ, ಡಿಷ್ ಆಂಟೆನಾ, ಕೃಷಿ ಉಪಕರಣ ಮತ್ತು ವಿದ್ಯುತ್ ತಂತಿಗಳು ತುಕ್ಕು ಹಿಡಿ ಯುತ್ತಿದೆ. ಜಾನುವಾರು ಪಕ್ಷಿ ಸಂಕು ಲಕ್ಕೂ ಕೂಡಾ ಮಾರಕವಾಗಿರುವ ಯುಪಿಸಿಯಲ್ ಕುರಿತ ವರದಿಯನ್ನು ಸರಕಾರಕ್ಕೆ ನೀಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಖಳುವುದಾಗಿ ಭರವಸೆ ನೀಡಿದ್ದಾರೆ. ಸರಕಾರ ಇದರಿಂದಲೂ ನುಣುಚಿಕೊಂಡಲ್ಲಿ ಜನರ ಸಹಕಾ ರದೊಂದಿಗೆ ಉಗ್ರ ಹೋರಾಟ ಮಾಡ ಲಾಗುವುದೆಂದು ಪೇಜಾವರ ಮಠದಲ್ಲಿ ನಿನ್ನೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪೇಜಾವರ ಶ್ರೀಗಳು ಹೇಳಿದರು. ಮೇ.೧೦ರಂದು ಸುಬ್ರಹ್ಮಣ್ಯ ದೇವಸ್ಥಾ ನದಲ್ಲಿ ಮಡೆಸ್ನಾನದ ಬಗ್ಗೆ ಸ್ಥಳೀಯ ರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ ಪೇಜಾವರ ಶ್ರೀಗಳು ಜನರ ಮನ ವೊಲಿಸಿ ಪದ್ಧತಿಯನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಚಿಕ್ಕಮಗಳೂರಿನಿಂದ ಕಣ್ಮರೆಯಾದ ಗೃಹಿಣಿ-ಮಕ್ಕಳು

Posted by JAYAKIRANA Kirana on | 0 comments | Leave a comment...

ಕಾಸರಗೋಡಿನಲ್ಲಿರುವ ಬಗ್ಗೆ ಶಂಕೆ
ಕಾಸರಗೋಡು: ಕರ್ನಾಟಕದ ಚಿಕ್ಕಮಗಳೂರಿನಿಂದ ನಾಪತ್ತೆಯಾ ಗಿರುವ ಗೃಹಿಣಿ ಹಾಗೂ ಮೂವರು ಮಕ್ಕಳನ್ನು ಹುಡುಕಿಕೊಂಡು ಸಂಬಂ ಧಿಕರು ಕಾಸರಗೋಡಿಗೆ ತಲುಪಿದ್ದಾರೆ.
ಚಿಕ್ಕಮಗಳೂರು ಆಲ್ದೂರು ಠಾಣಾ ವ್ಯಾಪ್ತಿಯ ನಿವಾಸಿ ರವಿ ಕುಮಾರ್ ಎಂಬವರ ಪತ್ನಿ ರಾಧಾ(೩೫), ತನ್ನ ಮಕ್ಕಳಾದ ಮನು ಕುಮಾರ್(೧೩), ಮೈನಾ(೧೨), ಮೀನಾ(೯) ಎಂಬವ ರೊಂದಿಗೆ ಇದೇ ಎಪ್ರಿಲ್ ೨೮ರಂದು ನಾಪತ್ತೆಯಾಗಿದ್ದರು. ಅಂದು ಬೆಳಿಗ್ಗೆ ಮಕ್ಕಳನ್ನು ಕೂಡಿಕೊಂಡು ಯಾರಲ್ಲೂ ಏನನ್ನೂ ಹೇಳದೆ ಹೊರಟಿದ್ದ ಈಕೆ ಹಾಗೂ ಮಕ್ಕಳು ಮರಳಿ ಮನೆ ಸೇರಿರಲಿಲ್ಲ.
ಈ ಮಧ್ಯೆ, ಕಾಸರಗೋಡಿನಲ್ಲಿ ಪೈಂಟರ್ ಆಗಿ ದುಡಿಯುತ್ತಿರುವ ಚಿಕ್ಕಮಗಳೂರು ಬೆಟ್ಟದಮನೆ ನಿವಾಸಿ ಸತೀಶ ಎಂಬ ಯುವಕನ ಜೊತೆಗೆ ಗೃಹಿಣಿ ಹಾಗೂ ಮಕ್ಕಳಿರುವುದಾಗಿ ಮಾಹಿತಿ ದೊರೆತ ಮೇರೆಗೆ ಸಂಬಂ ಧಿಕರು ಕಾಸರಗೋಡಿಗೆ ಬಂದಿದ್ದರು. ಮಹಿಳೆ ಈತನ ಜೊತೆಗೆ ಪರಾರಿ ಯಾಗಿರುವುದಾಗಿ ಶಂಕಿಸಲಾಗಿದೆ. ಈಕೆಯ ಸೋದರ ಶಿವ ಕುಮಾರ್ ಹಾಗೂ ಸಂಬಂಧಿಕ ಮಹೇಂದ್ರ ಎಂಬವರು ತಲುಪಿ ಕಾಸರಗೋಡಿನ ವಿವಿಧೆಡೆ ತೆರಳಿ ಶೋಧಿಸಿದರೂ ಪತ್ತೆಯಾಗಲಿಲ್ಲ ಎನ್ನಲಾಗಿದೆ.

‘ಅಮೇಟ್ ಅಸಲ್ ಈಮೇಟ್ ಕುಸಲ್’ ತೆರೆಗೆ

Posted by JAYAKIRANA Kirana on | 0 comments | Leave a comment...

ರಂಜನ್ ರಾಘು ಶೆಟ್ಟಿ ನಿರ್ದೇಶನದ ಮೊಟ್ಟಮೊದಲ ತುಳುಚಿತ್ರ 'ಅಮೇಟ್ ಅಸಲ್ ಈ ಮೇಟ್ ಕುಸಲ್' ಮೇ ೪ರಂದು ಮಂಗಳೂರಿನಲ್ಲಿ ತೆರೆಕಾಣಲಿದೆ. ಹಾಸ್ಯ ಕತೆಯೊಳಗೊಂಡ ಈ ಸಿನಿಮಾದಲ್ಲಿ ಕುಸೆಲ್ದರಸೆ ನವೀನ್ ಪಡೀಲ್ ಮತ್ತು ನಾಟಕ ನಟ ಜ್ಯೋತಿಷ್ ಶೆಟ್ಟಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ.ಮುಂಬಾಯಿ ಮತ್ತು ಮಂಗಳೂರಿನಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಈಗಾಗಲೇ ಬಹಳಷ್ಟು ಪ್ರಚಾರವನ್ನೂ ಪಡೆದಿದೆ. ಆಕಾಶ್ ಪ್ರಜಾಪತಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಲೀಲ್ ಪಾಠಕ್ ಅವರ ಛಾಯಾಗ್ರಹಣ, ಸೂರ್ಯಮೆನನ್ ಮತ್ತು ರಂಜನ್ ಚಿತ್ರವನ್ನು ನಿರ‍್ಮಿಸುತ್ತಿದ್ದಾರೆ. ಚಿತ್ರದಲ್ಲಿ ಭೋಜರಾಜ್, ಸಾಯಿಕೃಷ್ಣ, ಅಕ್ಷತಾ ಮಾರ್ಲ, ಸರಿತಾ ಶೆಟ್ಟಿ ಸುಕನ್ಯಾ ರೈ ಶಿಲ್ಪಾ ಕೋಟ್ಯಾನ್, ಸುಧೀರ್ ಕೋಟ್ಯಾರಿ, ಶಶಿರಾಜ್ ಕಾವೂರು, ಸದಾಶಿವ ಅಮೀನ್, ಗೋಪಾಲ ಸಾಲ್ಯಾನ್ ನವೀನ್ ಶೆಟ್ಟಿ ಮಿಜಾರ್, ಉದಯ ಕುಮಾರ್ ಉಪ್ಪಿನಂಗಡಿ ಅಭಿನಯಿಸುತ್ತಿದ್ದಾರೆ.
ವಿಶ್ವವಿಖ್ಯಾತ ನಾಟಕಕಾರ ಶೇಕ್‌ಸ್ಪಿಯರ್‌ರವರ ಆಂಗ್ಲ ನಾಟಕ 'ದಿ ಕಾಮಿಡಿ ಆಫ್ ಎರರ‍್ಸ್'ನ ಮೂಲ ಕಥೆಯನ್ನು ಆಧಾರವಾಗಿಟ್ಟುಕೊಂಡು ಆಮೇಟ್ ಅಸಲ್ ಈಮೇಟ್ ಕುಸಲ್ ಚಿತ್ರ ಹಾಸ್ಯ ಪ್ರಧಾನವಾಗಿ ಮೂಡಿಬಂದಿದೆ. ಶೇಕ್ಷ್‌ಫಿಯರನ ವಿಶ್ವವಿಖ್ಯಾತ ನಾಟಕದಿಂದ ಪ್ರೇರಿತವಾದ ಕತೆ ತುಳುನಾಡಿಗೆ ಬರುವಾಗ ಹೊಸ ಹೊಳಪು, ಒನಪುಗಳನ್ನು ಪಡೆದಿದೆ. ಹಾಸ್ಯ ಮತ್ತು ಗೊಂದಲಗಳ ಮಿಶ್ರಣ ಚಿತ್ರಕ್ಕೆ ವಿಭಿನ್ನ ಮೆರುಗು ಡಿದೆ ಎಂದು ರಂಜನ್‌ರಾಘು ಶೆಟ್ಟಿ ತಿಳಿಸಿದರು.
ರಂಜನ್ ರಾಘು ಶೆಟ್ಟಿ ಹಿಂದಿ ಚಿತ್ರರಂಗದ ದಿಗ್ಗಜ ಸುಭಾಷ್ ಝಾಯ್‌ರ ಚಿತ್ರಸಂಸ್ಥೆಯಾದ 'ವಿಸ್ಲಿಂಗ್‌ವುಡ್ಸ್'ನಲ್ಲಿ ನಿರ್ದೇಶನದ ಕೋರ್ಸ್ ಮಾಡಿದ್ದಾರೆ. ಜರ್ಮನಿಯಲ್ಲಿ ಡಿಜಿಟಲ್ ಮೀಡಿಯಾ ಕೋರ್ಸ್ ಮುಗಿಸಿ, ನೋಕಿಯಾ ಮೊಬೈಲ್ ಫಿಲಂ ಮೇಕಿಂಗ್ ಸ್ಪರ್ಧೆಯಲ್ಲಿ ಬಂಗಾರದ ಪದಕವನ್ನು ಗಳಿಸಿದ್ದರು. ತುಳು ಸಿನೆಮಾ ಮಾಡಬೇಕೆಂಬ ಹಂಬಲದಿಂದ ತುಳು ಚಿತ್ರರಂಗಕ್ಕೆ ಆಮೇಟ್ ಅಸಲ್ ಈಮೇಟ್ ಕುಸಲ್ ನಿರ್ಮಾಣ ಮತ್ತು ನಿರ್ದೇಶನದ ಮೂಲಕ ಪಾದಾರ್ಪಣೆ ಮಾಡಿದ್ದಾರೆ.
ವಿಜಯಕುಮಾರ್ ಕೊಡಿಯಾಲ್‌ಬೈಲ್ ಮತ್ತು ಎಂ.ಸಾಯಿಕೃಷ್ಣ ಚಿತ್ರದ ಸಂಭಾಷಣೆ ಬರೆದಿದ್ದಾರೆ. 'ಜೋಕುಲಾಟಿಕೆ' ಖ್ಯಾತಿಯ ಸಾಯಿಕೃಷ್ಣ ಚಿತ್ರದ ಸಹನಿರ್ದೇಶನವನ್ನು ಮಾಡಿದ್ದಲ್ಲದೆ ತ್ರಿಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಮಂಗಳೂರಿನ ಫಳ್ನೀರ್, ಢಕ್ಕೆ, ಕೈಕಂಬ, ಬಿಕರ್ನಕಟ್ಟೆಯ ಪದವು ಚೌಟರ ಮನೆ, ಕದ್ರಿ ಪಾರ್ಕ್ ಮತ್ತು ಮುಂಬೈಯ ಕೆಲವಾರು ಕಡೆಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ.
ಶಶಿರಾಜ್ ರಾವ್ ಕಾವೂರ್ ಚಿತ್ರಕ್ಕೆ ಮೂರು ಹಾಡುಗಳನ್ನು ಬರೆದಿದ್ದಾರೆ. ಹಿಂದಿ ಚಿತ್ರರಂಗದ ಹಿನ್ನಲೆಗಾಯಕಿ ಹಂಸಿಕಾ ಅಯ್ಯರ್ ಮತ್ತು ಶಂಕರ್ ಮಹಾದೇವನ್‌ರ ಪುತ್ರ ಸಿದ್ಧಾರ್ಥ್ ಮಹಾದೇವನ್ ಹಾಡುಗಳಿಗೆ ಧ್ವನಿ ನೀಡಿರುವುದು ಚಿತ್ರದ ವಿಶೇಷತೆಯಾಗಿದೆ.

ಕೌಟುಂಬಿಕ ಸಿನಿಮಾ ‘ಬಂಗಾರ‍್ದ ಕುರಲ್’

Posted by JAYAKIRANA Kirana on | 0 comments | Leave a comment...

ಚಂಚಲಾಕ್ಷಿ ರೈ, ಉಡುಪಿ
ಕಳೆದ ವಾರ ಬಿಡುಗಡೆಯಾಗಿ ರುವ ಬಂಗಾರ‍್ದ ಕುರಲ್ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ತುಳುವಿನಲ್ಲಿ ಇದುವರೆಗೆ ಮೂಡಿ ಬರದ ಗುಣಮಟ್ಟದ ಸಿನಿಮಾ ಎಂಬ ಮಾತು ಪ್ರೇಕ್ಷಕರಿಂದ ಕೇಳಿಬಂದಿದೆ. ಬಂಗಾರ‍್ದ ಕುರಲ್ ಮೂಲಕ ತುಳು ಸಿನಿಮಾಕ್ಕೊಂದು ಶ್ರೀಮಂತ ಚಿತ್ರ ಸೇರ್ಪಡೆಯಾದಂತಾಗಿದೆ.
 ಭಕ್ತಿಯ ಲೇಪನದೊಂದಿಗೆ ಉತ್ತಮ ಕೌಟುಂಬಿಕ ಕಥೆಯ ಸುತ್ತ ಹೆಣೆದಿರುವ ಈ ಸಿನಿಮಾ ಪ್ರೇಕ್ಷಕರಲ್ಲಿ ಕಣ್ಣೀರು ಸುರಿಯುವಂತೆ ಮಾಡಿದೆ. ಸಹೋದರರ ನಡುವಿನ ಪ್ರೀತಿ, ಸತ್ಯಕ್ಕೆ ಸಲ್ಲುವ ಜಯ, ಪರಿಶ್ರಮಕ್ಕೆ ಸಿಗುವ ಪ್ರತಿಫಲ ಮುಂತಾದವು ಗಳನ್ನು ಎತ್ತಿ ಹಿಡಿಯುವ ಈ ಸಿನಿಮಾ ಕೋಮು ಸೌಹಾರ್ದತೆಗೂ ವಿಶೇಷ ಕೊಡುಗೆ ನೀಡಲಿದೆ.
ತುಳು ಸಿನಿಮಾ ರಂಗದಲ್ಲಿ ಈವರೆಗೆ ಕಾಣಸಿಗದಂಥ ಬಾಲಿವುಡ್ ಶೈಲಿಯ ಹೊಡೆದಾಟದ ದೃಶ್ಯಗಳು, ಉತ್ಕೃಷ್ಟ ಮಟ್ಟದ ತಂತ್ರಜ್ಞಾನ ಬಳಸಿರುವುದು, ಕಣ್ಣೀರಿಳಿಸುವಂಥ ಉತ್ತಮ ಭಾವನಾತ್ಮಕ ಕೌಟುಂಬಿಕ ಕಥೆ, ನಾಯಕಿ ಪಾಕಿ ಹೆಗ್ಡೆ ಅವರ ಮನಸ್ಪರ್ಶಿ ಅಭಿನಯ, ನಾಯಕ ಶಿವಧ್ವಜ್ ಅವರ ತಲೆದೂಗುವಂಥ ನಟನೆ, ಉತ್ತಮ ಹಾಡುಗಳು, ಮುದ ನೀಡುವ ಸಂಗೀತ, ದೇವಿಯ ಪಾತ್ರಕ್ಕಾಗಿ ಬಳಸಿಕೊಂಡಿರುವ ಗ್ರಾಫಿಕ್ಸ್, ಆಕರ್ಷ ಣೀಯ ಸ್ಥಳಗಳಲ್ಲಿ ಚಿತ್ರೀಕರಿಸಿರುವ ಹಾಡುಗಳ ದೃಶ್ಯ, ಮುಂಬಯಿಯ ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಸೀ ಲಿಂಕ್ ಅನ್ನು ಸೆರೆ ಹಿಡಿದಿರು ವುದು... ಮುಂತಾದವುಗಳು ಸಿನಿಮಾದ ಪ್ರಮುಖ ಹೈಲೈಟ್ಸ್‌ಗಳು. ಉಳಿದಂತೆ ಸಣ್ಣ ಪಾತ್ರವಾದರೂ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿ ಪಾತ್ರಕ್ಕೆ ನ್ಯಾಯ ಒದಗಿಸಿರುವ ನಾಯಕನ ಹಿರಿಯಣ್ಣನ ಪಾತ್ರದಲ್ಲಿದ್ದ ಹರೀಶ್‌ವಾಸು ಶೆಟ್ಟಿ, ಕಿರಿಯಣ್ಣನ ಪಾತ್ರ ಮಾಡಿರುವ ಪ್ರದೀಪ್‌ಚಂದ್ರ ಉಡುಪಿ, ರವಿ ಸುರತ್ಕಲ್, ಅರವಿಂದ ಬೋಳಾರ್, ಕಿಶೋರಿ ಬಳ್ಳಾಲ್, ಶೋಭಾ ರೈ, ಸುರೇಶ್ ಮಂಗಳೂರು, ಪ್ರದೀಪ್ ಆಳ್ವ, ದಿನೇಶ್ ಅತ್ತಾವರ್ ಮುಂತಾದ ವರು ಗಮನ ಸೆಳೆಯುತ್ತಾರೆ.
 ಹಿರಿಯ ರಂಗಭೂಮಿ ಕಲಾವಿದ ತಮ್ಮ ಲಕ್ಷ್ಮಣ ಅವರ ಕಲಾ ನಿರ್ದೇಶನ ಮತ್ತು ನಿರ್ಮಾಪಕ ರಾಮ್ ಶೆಟ್ಟಿ ಅವರ ಸಹೋದರ ಹರೀಶ್ ಶೆಟ್ಟಿ ಅವರ ಸಾಹಸ ನಿರ್ದೇಶನ ಎಲ್ಲರ ಮೆಚ್ಚುಗೆಗಳಿಸಿದೆ. ತುಳು ಸಿನಿಮಾಗಳೆಂದರೆ ನಾಟಕದಂತಿರುತ್ತದೆ ಎಂಬ ಮಾತನ್ನು ಬಂಗಾರ‍್ದ ಕುರಲ್ ಹುಸಿ ಮಾಡಿದೆ. ಬಾಲಿವುಡ್ ಶೈಲಿಯಲ್ಲಿ ಹೊರ ಬಂದಿರುವ ಬಂಗಾರ‍್ದ ಕುರಲ್ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಏಳು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಪ್ರದರ್ಶನ ಕಾಣುವ ಮೂಲಕ ತುಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ವಿ.ಮನೋಹರ್ ಸಂಗೀತದಲ್ಲಿ ಹಾಡುಗಳು ಚೆನ್ನಾಗಿವೆ. ಛಾಯಾಗ್ರಹಣವಂತೂ ಸೂಪರ್. ಜತೆಗೆ ಕಥೆಯನ್ನು ವೇಗವಾಗಿ ಓಡಿಸಲಾಗಿದೆ, ಇನ್ನೂ ಸ್ವಲ್ಪ ರೋಮಾನ್ಸ್ ದೃಶ್ಯಗಳ ಅಗತ್ಯವಿತ್ತು, ಮನೆಯಲ್ಲಿ ನಡೆಯುವ ಬ್ರೀಫ್ ಕೇಸ್ ಕಳವು ಪ್ರಕರಣ, ದೇವಸ್ಥಾನದಲ್ಲಿ ಆಹಾರಕ್ಕೆ ವಿಷ ಬೆರೆಸಿರುವುದು ಮುಂತಾದವುಗಳಲ್ಲಿ ತಪ್ಪಿತಸ್ಥರನ್ನು ಸರಿಯಾಗಿ ಬಿಂಬಿಸಿಲ್ಲ, ಕಥಾನಾಯಕ ಮನೆ ತೊರೆದು ಹೋಗುವಷ್ಟು ಗಂಭೀರ ತಿರುವಿಗೆ ಕಾರಣವಾಗಿರುವ ಬ್ರೀಫ್ ಕೇಸ್ ಕಳವು ಪ್ರಕರಣದ ತಪ್ಪಿತಸ್ಥನ ಬಗ್ಗೆ ಹಿರಿಯಣ್ಣನಿಗೆ ತಿಳಿದು ಬರುವುದಿಲ್ಲ. ಇತ್ಯಾದಿ ಕೆಲವು ಲೋಪಗಳ ಪಟ್ಟಿಯೂ ಜನರಿಂದ ಬರುತ್ತಿದೆ. ಆದರೆ ಒಟ್ಟಾರೆ ಚಿತ್ರದ ಸಾಧನೆ ಶಹಭಾಸ್ ಎನ್ನುವಂತಿದೆ.

ಸೀ.ಯೂ... ಹೇಳಿದ ಅರ್ಪಣಾ ಪ್ರಭು

Posted by JAYAKIRANA Kirana on | 0 comments | Leave a comment...

ಯುವ ನಿರ್ದೇಶಕ ದುರ್ಗ ಪಿ.ಎಸ್. ನಿರ್ದೇಶನದ ಸೀ.ಯೂ... ಚಿತ್ರದ ನಟಿ ಅರ್ಪಣಾ ಪ್ರಭು ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅರ್ಪಣಾಗೆ ಇದು ಮೊದಲ ಚಿತ್ರ. ಈ ಹಿಂದೆ ನಟನೆಯ ಅನುಭವವಿಲ್ಲದಿದ್ದರೂ ಉತ್ತಮ ನೃತ್ಯಪಟುವಾಗಿರುವ ಅರ್ಪಣಾ ಅವರು ಚಿತ್ರದಲ್ಲಿ ತಮಗೆ ಸಿಕ್ಕಿರುವ ಪಾತ್ರವನ್ನು ಚೆನ್ನಾಗಿ ನಿಭಾಯಿಸಿರುವ ಖುಷಿಯಲ್ಲಿದ್ದಾರೆ. ಅರ್ಪಣಾ ಪ್ರಭು ಮೂಲತ: ಮಂಗಳೂರಿನ ಕೊಂಕಣಿ ಸಮುದಾಯಕ್ಕೆ ಸೇರಿದ್ದರೂ ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೇ. ಹೀಗಾಗಿ ಈ ಹಿಂದೆಯೂ ಕನ್ನಡ ಚಿತ್ರಗಳಲ್ಲಿ ನಟನೆಗೆ ಅವಕಾಶಗಳಿದ್ದುವು. ಆದರೆ ಅರ್ಪಣಾ ಸಿನಿಮಾಕ್ಕಿಂತ ಓದು ಮುಖ್ಯ ಎಂದು ತನ್ನ ವ್ಯಾಸಂಗದಲ್ಲಿ ತೊಡಗಿಕೊಂಡಿದ್ದರು. ಆದರೆ ಈಗ ಸೀಯೂ ಚಿತ್ರದ ಕಥೆಯನ್ನು ಕೇಳಿದ ತಕ್ಷಣ ಆಯಿತು ಎಂದು ಒಪ್ಪಿಕೊಂಡು ನಟಿಸುತ್ತಿದ್ದಾರೆ.
ಚಿತ್ರದಲ್ಲಿ ನೇತ್ರದಾನದ ಬಗ್ಗೆ ಸಮಾಜಕ್ಕೆ ಉತ್ತಮ ಸಂದೇಶವಿದ್ದು, ನವಿರಾದ ಪ್ರೇಮಕಥೆಯನ್ನೂ ಹೊಂದಿದೆ. ಆದರೆ ಅಂತಿಮವಾಗಿ ಸಿನಿಮಾದ ನಟ-ನಟಿ ಸಾಯುವುದರಿಂದ ಸಿನಿಮಾ ಟ್ರ್ಯಾಜಿಡಿ ಎಂಡ್ ಕಾಣುತ್ತದೆ ಎನ್ನುತ್ತಾರೆ ಅರ್ಪಣಾ. ಸಿನಿಮಾದಲ್ಲಿ ಇಬ್ಬರು ಕುರುಡ ಪ್ರೇಮಿಗಳ ಆಂತರ್ಯವನ್ನು ತೆರೆದಿಡುವ ಪ್ರಯತ್ನವನ್ನು ದುರ್ಗ ಪಿ.ಎಸ್. ಮಾಡಿದ್ದಾರೆ ಎನ್ನುವುದು ಅರ್ಪಣಾರ ಮಾತುಗಳು. ಸೀ.ಯೂ... ಚಿತ್ರದಲ್ಲಿ ಅರ್ಪಣಾರಿಗೆ ಸಿಟಿ ಹುಡುಗಿಯ ಪಾತ್ರ. ಹಳ್ಳಿಯ ಹುಡುಗನ ಮನೆಯ ಪಕ್ಕದ ಮನೆಗೆ ಈಕೆ ಬಂದಿಳಿಯುತ್ತಾಳೆ. ಆ ಬಳಿಕ ಅದ್ಹೇಗೋ ಹಳ್ಳಿ ಹುಡುಗನಿಗೆ ಮಾರುಹೋಗುವ ಹುಡುಗಿ ಪ್ರೀತಿಯಲ್ಲಿ ಬೀಳುತ್ತಾಳೆ. ಆ ಬಳಿಕ ಪಾರ್ಕ್, ಬೀಚ್ ಸುತ್ತಾಟ, ಹಾಡು ಎಲ್ಲಾ ಮಾಮೂಲಿ. ಈ ನಡುವೆ ಉತ್ತಮ ಫ್ಯಾಮಿಲಿ ಕಥಾಹಂದರವನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನವನ್ನು ದುರ್ಗ ಪಿ.ಎಸ್.ಮಾಡಿದ್ದಾರೆ. ಸಿನಿಮಾದ ಹಾಡುಗಳು ಈಗಾಗಲೇ ಜನಜನಿತವಾಗಿದ್ದು, ಕೇಳುಗರ ಬಾಯಿಯಲ್ಲಿ ಗುನುಗುನಿಸುತ್ತಿದೆ. ಸಿನಿಮಾದ ಚಿತ್ರೀಕರಣ ಮುಕ್ತಾಯ ಕಂಡಿದ್ದು, ಮುಂದಿನ ಅಗಸ್ಟ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ನೇತ್ರದಾನದ ಸಂದೇಶವುಳ್ಳ ಚಿತ್ರವನ್ನು ಕನ್ನಡ ಚಿತ್ರರಸಿಕರು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನಟಿ ಅರ್ಪಣಾ ಹಾಗೂ ನಿರ್ದೇಶಕ ದುರ್ಗ ಪಿ.ಎಸ್.ಅವರದ್ದು. ಹೊಸಬರ ಸಿನಿಮಾಕ್ಕೆ ನಾವೂ ಗುಡ್‌ಲಕ್ ಹೇಳೋಣ.

ಕಿರುತೆರೆಗೆ ಜಿಗಿದ ರಾಘವೇಂದ್ರ ರೈ

Posted by JAYAKIRANA Kirana on | 0 comments | Leave a comment...

ಮೇ ಏಳರಂದು ಏಷಿಯಾ ನೆಟ್ ಸುವರ್ಣವಾಹಿನಿಯಲ್ಲಿ ರಾತ್ರಿ ೧೦.೩೦ಕ್ಕೆ 'ಪಂಚರಂಗಿ ಪೋಂ ಪೋಂ' ಹಾಸ್ಯ ಧಾರಾವಾಹಿ ಪ್ರಸಾರವಾಗಲಿದ್ದು ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ರಾಘವೇಂದ್ರ ರೈ ಕುಂಜತ್ತೂರು ಅಭಿನಯಿಸು ತ್ತಿದ್ದಾರೆ. ನಂದಿಕೇಶ್ವರ ನಾಟಕ ತಂಡದ ಪ್ರಧಾನ ಹಾಸ್ಯ ಕಲಾವಿದ ನಾಗಿ ಮಿಂಚಿದ್ದ ರಾಘು. ವಿಜಯ ಕುಮಾರ್ ಕೊಡಿಯಾಲ್‌ಬೈಲ್‌ರ ಕಲಾಸಂಗಮದಲ್ಲೂ ಪಾತ್ರ ನಿರ್ವಹಿಸಿದ್ದರು. ನಂತರ ಉದ್ಯೋಗ ಅರಸಿ ವಿದೇಶಕ್ಕೆ ತೆರಳಿ ಅಲ್ಲಿ ನಡೆದ ಕಹಿಘಟನೆಯಿಂದ ಮತ್ತೆ ರಂಗಭೂಮಿ ಅಪ್ಪಿಕೊಂಡ ರಾಘವೇಂದ್ರ 'ವೈಷ್ಣವಿ ಕಲಾ ವಿದರು ಮಂಜೇಶ್ವರ' ನಾಟಕ ತಂಡದಲ್ಲಿ ಕಾಣಿಸಿಕೊಂಡರು. ವಿಜಯ ಕುಮಾರ್ ಕೊಡಿಯಾಲ್‌ಬೈಲ್‌ರ 'ಒರಿಯರ್ದೊರಿ ಅಸಲ್' ಸಿನಿಮಾದ ಚಿಕ್ಕಪಾತ್ರದಲ್ಲಿ ಅಭಿ ನಯಿಸುವ ಮೂಲಕ ಬೆಳ್ಳಿತೆರೆಗೂ ಪರಿಚಯವಾದ ರೈ ಈಗ ಕಿರುತೆರೆಗೆ ಕಾಲಿಟ್ಟಿದ್ದಾರೆ.
ಗುರುರಾಜ್ ಕುಲಕರ್ಣಿ ನಿರ್ಮಿಸಿ ಪ್ರಥ್ವಿರಾಜ್ ಕುಲಕರ್ಣಿ ನಿರ್ದೇಶಿಸುತ್ತಿರುವ ಪಂಚರಂಗಿ ಧಾರಾವಾಹಿಯಲ್ಲಿ ನಾಲ್ಕು ಸಂಸಾರದ ಕತೆ ಇದೆ.
ನಾಲ್ಕು ಭಾಷೆ, ನಾಲ್ಕು ದಿಕ್ಕು, ನಾಲ್ಕು ಆಸೆ, ನಾಲ್ಕು ದ್ವೇಷ ಅಂದರೆ ನಾಲ್ಕು ಬೇರೆ-ಬೇರೆ ಪ್ರಾಂತ್ಯದಿಂದ ಬಂದ ಸಂಸಾರ ಗಳು ಒಂದೇ ವಠಾರದಲ್ಲಿ ವಾಸಿಸುತ್ತಾರೆ. ಅವರ ಸುತ್ತ ಸಾಗುವ ಕತೆಯಲ್ಲಿ ಮಂಗಳೂರು ಮೂಲದ ಸಂಸಾರದಲ್ಲಿ ರಾಘ ವೇಂದ್ರ ರೈ ಮತ್ತು ಹರಿಣಿ ಕಾರ್ಕಳ ಅಭಿನಯಿಸುತ್ತಿದ್ದಾರೆ.
ಮಂಗಳೂರಿನ ಕನ್ನಡ ಮತ್ತು ತುಳು ಭಾಷೆಯನ್ನು ಮಿಶ್ರಿತಗೊಳಿಸಿ ಮಾತನಾಡುವ ರಾಘವೇಂದ್ರರದ್ದು ಹಾಸ್ಯ ಪಾತ್ರವಾಗಿದೆ.
ಮೇ ಏಳರಿಂದ ರಾತ್ರಿ ೧೦.೩೦ಕ್ಕೆ ಸುವರ್ಣವಾಹಿನಿ ಚಾನೆಲ್‌ನಲ್ಲಿ 'ಪಂಚರಂಗಿ ಪೋಂ ಪೋಂ' ಧಾರಾವಾಹಿ ಬಿತ್ತರಗೊಳ್ಳಲಿದೆ. ಮರುದಿನ ಬೆಳಿಗ್ಗೆ ೧೦.೩೦ಕ್ಕೆ ಮತ್ತು ಸಂಜೆ ೫.೩೦ಕ್ಕೆ ಮರು ಪ್ರಸಾರ ಗೊಳ್ಳಲಿದೆ.

03-05-2012

Posted by JAYAKIRANA Kirana on | 0 comments | Leave a comment...

ಮೇಷ : ಉದ್ಯೋಗ ಮತ್ತು ಕೆಲಸಗಳಲ್ಲಿ ಪ್ರಗತಿಯಾಗುತ್ತದೆ.
ವೃಷಭ : ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ.
ಮಿಥುನ : ಮನೆಯಲ್ಲಿ ವಾದ ವಿವಾದಗಳು ನಡೆಯುತ್ತದೆ.
ಕರ್ಕಾಟಕ : ಜಂಟಿ ವ್ಯಾಪಾರದಲ್ಲಿ ಪ್ರಗತಿ ಇರುತ್ತದೆ.
ಸಿಂಹ : ಹಿರಿಯರಿಂದ ಸಮಸ್ಯೆಗಳು ದೂರವಾಗುತ್ತದೆ.
ಕನ್ಯಾ : ವಿರೋಧಿಗಳಿಂದಾಗಿ ಕೆಲಸಗಳಲ್ಲಿ ಹಿನ್ನಡೆಯಾಗುವುದು.
ತುಲಾ : ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ವೃಶ್ಚಿಕ : ಮನೆಯಲ್ಲಿ ಶುಭ ಕೆಲಸಗಳನ್ನು ನಡೆಸುತ್ತೀರಿ.
ಧನು : ದೂರ ಪ್ರಯಾಣ ಮಾಡುವ ಸಂಭವ ಇದೆ.
ಮಕರ : ಹಣಕಾಸಿನ ತೊಂದರೆ ದೂರವಾಗುತ್ತದೆ.
ಕುಂಭ : ದೂರದ ನೆಂಟರು ಮನೆಗೆ ಬರುತ್ತಾರೆ.
ಮೀನ: ಮಕ್ಕಳ ಬಗ್ಗೆ ಜಾಗ್ರತೆ ಮಾಡಿರಿ.

03-05-2012

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ : ದೋಸೆ ಮಾಡುವ ಹೆಂಗಸರು ಬೇಕು ೯೯೦೨೦೭೧೫೪೯.
ಕಂಕನಾಡಿ : ಟೈಲರಿಂಗ್ ಶಾಪಿಗೆ ಅಲ್‌ಟ್ರೇಶನ್ ಮತ್ತು ಫಿನಿಶಿಂಗ್‌ಗೆ ಜನ ಬೇಕು ೯೮೮೬೪೪೩೯೬೧.
ಮಂಗಳೂರು : ಪ್ಲಂಬರ್ & ಎಲೆಕ್ಟ್ರೀಶಿಯನ್ ಬೇಕು ೯೮೪೪೬೬೭೦೨೪
ತೊಕ್ಕೊಟ್ಟು : ಬಾರ್ & ರೆಸ್ಟೋರೆಂಟ್‌ಗೆ ಕಿಚನ್ ಹೆಲ್ಪರ್ ಮತ್ತು ವೇಟರ್ (ಪಾರ್ಟ್‌ಟೈಂ) ಬೇಕು ೯೭೪೨೨೮೫೪೮೫.
ತೊಕ್ಕೊಟ್ಟು ವೆಜ್ ರೆಸ್ಟೋರೆಂಟಿಗೆ ಚೈನೀಸ್ ಕುಕ್ ಬೇಕಾಗಿದ್ದಾರೆ. ೯೯೦೧೧೪೩೦೮೯
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ ಬೇಕು. ೯೮೪೫೫೯೬೯೬೦
ಉಡುಪಿ : ಬೇಕರಿ ಕೆಲಸಕ್ಕೆ ಜನ ಬೇಕು ೯೭೪೩೪೯೨೯೧೨
ಮಂಗಳೂರು: ಮೇಸ್ತ್ರಿಗೆ ಹೆಲ್ಪರ್ ಬೇಕಾಗಿದ್ದಾರೆ. ೯೮೮೬೮೦೦೫೧೦
ಕೈಕಂಬ : ಹೆಲ್ಪರ್ ಕೆಲಸಕ್ಕೆ ಹುಡುಗರು, ಹುಡುಗಿಯರು ಬೇಕು.೯೮೪೪೦೦೯೯೦೫
ಕೈಕಂಬ : ಕವಾಟು ಫ್ಯಾಕ್ಟರಿಗೆ ಕೆಲಸಕ್ಕೆ ಹೆಲ್ಪರ್ ಬೇಕು.೯೮೪೫೯೫೬೧೪೦
ಮಂಗಳೂರು :ಸೂಪರ್ ಮಾರ್ಕೆಟ್‌ಗೆ ಮ್ಯಾನೇಜರ್ ಕೆಲಸಕ್ಕೆ ಜನ ಬೇಕು. ೯೮೮೦೨೩೯೧೭೦
ಮಂಗಳೂರು :ಸ್ಪೇರ್ ಪಾರ್ಟ್ಸ್ ಅಂಗಡಿಗೆ ಕೆಲಸಕ್ಕೆ ಜನ ಬೇಕು. ೯೩೪೩೩೫೫೮೩೫
ಮಂಗಳೂರು : ಲೇಡಿಸ್ ಟೈಲರ್ ಬೇಕು ೮೦೫೦೧೬೩೨೭೮.
ಮಂಗಳೂರು : ಹೋಟೆಲ್‌ಗೆ ವೇಟರ್, ಕಚನ್ ಹೆಲ್ಪರ್ ಬೇಕು ೯೮೪೫೯೮೨೬೨೫.
ಕದ್ರಿ: ಲಾಂಡ್ರಿಗೆ ಜನ ಬೇಕು ೨೨೨೧೯೪೫.
ಕಾರ್ಕಳ : ಬಾರ್‌ಗೆ ವೇಟರ್, ಕ್ಲೀನ್ ಬೇಕು ೯೮೪೫೮೭೪೦೬೮
ಮಂಗಳೂರು : ಹೋಂ ಪ್ರೊಡಕ್ಟ್‌ಗೆ ಯುವಕ -ಯುವತಿಯರು ಬೇಕು ೯೦೬೦೯೩೨೩೫೧.
ಸ್ಟೇಟ್‌ಬ್ಯಾಂಕ್ : ಕೆಲಸಕ್ಕೆ ಜನ ಬೇಕು ೯೮೪೪೫೨೧೭೪೩.
ಮಂಗಳೂರು : ಪ್ರೆಸ್‌ಗೆ ಬೈಂಡಿಂಗ್ ಕೆಲಸಕ್ಕೆ ಜನ ಬೇಕು ೨೨೧೧೦೫೦.
ಮಂಗಳೂರು : ಎಲೆಕ್ಟ್ರಾನಿಕ್ಸ್ ಅಂಗಡಿಗೆ ಯುವಕರು ಬೇಕು ೪೨೭೪೦೧೦.
ಮಂಗಳೂರು : ಕೊರಿಯರ್ ಸಂಸ್ಥೆಗೆ ಜನ ಬೇಕು ೯೯೦೦೪೩೪೯೪೮.
ಕಂಕನಾಡಿ : ಬಟ್ಟೆ ಅಂಗಡಿಗೆ ಸೇಲ್ಸ್‌ಗೆ ಜನ ಬೇಕು ೯೯೪೫೯೯೬೭೮೭.
ಬಿಕರ್ನಕಟ್ಟೆ ಹೊಟೇಲಿಗೆ ತಿಂಡಿ ಮಾಡುವವರು ಬೇಕು ೯೪೪೯೯೦೩೩೨೩.
ಮಂಗಳೂರು : ಅಫೀಸಿಗೆ ಕಂಪ್ಯೂಟರ್ ತಿಳಿದ ಲೇಡಿ ಸ್ಟಾಫ್ ಬೇಕು ೯೪೮೦೩೬೨೩೦೨.
ಮಂಗಳೂರು : ಬೇಕರಿಯಲ್ಲಿ ತಿಂಡಿ ತಿನಿಸು ಮಾಡಲು ಜನ ಬೇಕು ೯೯೦೧೩೫೦೪೩೧.
ಮಂಗಳೂರು : ಹೊಟೇಲ್‌ಗೆ ಅಡುಗೆ, ತಿಂಡಿ ಮಾಡುವವರು, ವೇಟರ್, ಕ್ಲೀನರ್, ಕೌಂಟರ್‌ಗೆ ಜನ ಬೇಕು ೯೮೮೦೯೦೫೨೫೩.
ಕಂಕನಾಡಿ: ಕಚೇರಿ ಕೆಲಸಕ್ಕೆ ಹಿಂದಿ, ಇಂಗ್ಲಿಷ್ ಮಾತಾಡಲು ಗೊತ್ತಿರುವ ಲೇಡಿ ಬೇಕು ೯೫೩೮೫೫೩೨೧೧.

ಕಾರ್ಮಿಕ ದಿನವೂ ಐಶಾರಾಮಿ ಜನರ ಆಚರಣೆಯಾಗುತ್ತಿದೆಯೇ?

Posted by JAYAKIRANA Kirana on | 0 comments | Leave a comment...


ಪಿಎಫ್, ಇಎಸ್‌ಐನಂತಹ ಬಡ ಶ್ರಮಿಕ ವರ್ಗದ ಆಸರೆ ಯೋಜನೆಗಳು ಇಂದು ಎಷ್ಟು ಮಂದಿ ಕಾರ್ಮಿಕರಿಗೆ ಸಿಗುತ್ತಿದೆ? ಇಂತಹ ಯೋಜನೆಗಳ ಲಾಭ ಪಡೆಯುವುದು ತಿಂಗಳಿಗೆ ೬೦-೭೦ಸಾವಿರ ಸಂಬಳ ಪಡೆಯುವ ಉದ್ಯೋಗಿಗಳೇ ಹೊರತು ದಿನಪೂರ್ತಿ ಬಿಸಿಲಿನ ಬೇಗೆಗೆ ಬೆವರಿಳಿಸಿ ದುಡಿಯುವ ಕಾರ್ಮಿಕರಲ್ಲ. ಕಾರ್ಮಿಕರ ಹೋರಾಟಕ್ಕೆ ಧ್ವನಿಯಾಗಿ ಅದೆಷ್ಟೋ ಸಂಘಟನೆಗಳಿದ್ದರೂ ಅದು ತನ್ನ ನೈಜ ಉದ್ದೇಶಕ್ಕಾಗಿ ಹೋರಾಡುತ್ತಿಲ್ಲ.

ಧ್ವನಿ, ಮಂಗಳೂರು
ಕಾರ್ಮಿಕರ ಹಕ್ಕುಗಳನ್ನು ಎಚ್ಚರಗೊಳಿಸಿದ, ಕಾರ್ಮಿ ಕರಿಗೂ ಒಂದು ಆಚರಣೆಯನ್ನು ಕಲ್ಪಿಸಿಕೊಟ್ಟ ದಿನವೆಂದರೆ ಅದು ಕಾರ್ಮಿಕ ದಿನ. ಬಹುಶಃ ಜಗತ್ತಿನ ಹೆಚ್ಚಿನ ಎಲ್ಲಾ ರಾಷ್ಟ್ರಗಳಲ್ಲಿ ಕಾರ್ಮಿಕ ದಿನದ ಆಚರಣೆ ನಡೆದೇ ನಡೆಯು ತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಾರ್ಮಿಕ ದಿನವೆಂ ಬುದು ನೈಜ ಶ್ರಮಿಕ ವರ್ಗದಿಂದ ದೂರವಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತದೆ. ಕಾರ್ಮಿಕ ದಿನದಂದು ಇರುವ ಸರ್ಕಾರಿ ರಜಾ ದಿನಗಳ ಬಿಡುವು ಕೂಡ ಮೈ ಬಗ್ಗಿಸಿ ದುಡಿಯುವ ಶ್ರಮಿಕ ವರ್ಗಕ್ಕೆ ಸಿಗುತ್ತಿಲ್ಲ. ಬದಲಾಗಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕಾಲ ಮೇಲೆ ಕಾಲು ಹಾಕಿ ದಿನಕ್ಕೆ ಇಂತಿಷ್ಟೇ ಎಂದು ಕೆಲಸ ಮಾಡುವ ಒಂದು ಐಶಾ ರಾಮಿ ವರ್ಗ ಮೇ ದಿನದ ಮಜಾ ಅನುಭವಿಸುತ್ತಿದೆ. ಇದು ಇಂದು ನಿನ್ನೆಯ ವಿಚಾರವಲ್ಲ. ಸರಿಸುಮಾರು ವರ್ಷಗಳಿಂದ ನೈಜ ಶ್ರಮಿಕ ವರ್ಗ ಮೇ ದಿನದ ಅಂದರೆ ತನ್ನದೇ ದಿನದ ಆಚರಣೆಯಿಂದ ವಂಚಿತವಾಗುತ್ತಿದೆ.
ದಿನಕ್ಕೆ ಎಂಟು ಘಂಟೆ ಕೆಲಸಕ್ಕೆ ಆಗ್ರಹಿಸಿ ಆರಂಭ ವಾದ ಶ್ರಮಿಕ ವರ್ಗದ ಹೋರಾಟಕ್ಕೆ ಮೇ ದಿನ (ಕಾರ್ಮಿಕ ದಿನ) ಒಂದು ದಿನವಷ್ಟೇ. ಈ ದಿನದಲ್ಲಾದರೂ ಕಾರ್ಮಿ ಕರು ತಮ್ಮ ನಿತ್ಯದ ಹೋರಾಟದ ಬದುಕನ್ನು ಬದಿಗಿಟ್ಟು ತನ್ನ ಭವಿಷ್ಯದ ಬಗ್ಗೆ ಚಿಂತಿಸಲಿ ಎನ್ನುವುದೇ ಈ ದಿನದ ಆಶಯ. ಆದರೆ ಈ ಆಶಯಗಳೇ ಇಂದು ಸಾಕಾರಗೊಳ್ಳು ತ್ತಿಲ್ಲ. ವರ್ಷಪೂರ್ತಿ ದುಡಿಯುವ ಕಾರ್ಮಿಕ ವರ್ಗ ಈ ದಿನವೂ ಬೆವರಿಳಿಸಿ ದುಡಿಯಬೇಕಾದ ಅನಿವಾರ್ಯತೆ ಒದ ಗಿದೆ. ಅನ್ನ ಹಾಕುವ ಒಡೆಯನ ಆಜ್ಞೆಗಳನ್ನು ಮೀರಿ ಮೇ ದಿನದ ನೆಪದಲ್ಲಿ ರಜಾ ಹಾಕಿದರೆ ಪ್ರತೀ ದಿನವೂ ಮೇ ದಿನವಾಗುವುದರಲ್ಲ್ಲಿ ಸಂದೇಹವಿಲ್ಲ. ಶ್ರಮಿಕ ವರ್ಗದ ಮೇಲೆ ಇಂತಹ ಅದೆಷ್ಟೋ ದೌರ್ಜನ್ಯಗಳು ಧನಿಕರಿಂದ ನಡೆಯು ತ್ತಲೇ ಇದೆ. ಎಂಟು ಘಂಟೆ ಕೆಲಸ ಮಾಡಬೇಕಾದ ಕಾರ್ಮಿಕ ಹತ್ತರಿಂದ ಹದಿನೈದು ಘಂಟೆ ದುಡಿಯುವುದೂ ಇದೆ. ಇದನ್ನು ವಿರೋಧಿಸಿದರೆ ಮುಂದಿನ ಭವಿಷ್ಯವೇ ಕತ್ತಲಾಗು ವುದು ನಿಶ್ಚಿತ. ಇನ್ನು ಕಾರ್ಮಿಕರಿಗೆ ದೊರಕಬೇಕಾದ ಸವ ಲತ್ತುಗಳು ಎನ್ನುವುದು ಮರೀಚಿಕೆಯೇ ಸರಿ. ಪಿಎಫ್, ಇಎಸ್ ಐನಂತಹ ಬಡ ಶ್ರಮಿಕ ವರ್ಗದ ಆಸರೆ ಯೋಜನೆಗಳು ಇಂದು ಎಷ್ಟು ಮಂದಿ ಕಾರ್ಮಿಕರಿಗೆ ಸಿಗುತ್ತಿದೆ? ಇಂತಹ ಯೋಜನೆಗಳ ಲಾಭ ಪಡೆಯುವುದು ತಿಂಗಳಿಗೆ ೬೦-೭೦ಸಾವಿರ ಸಂಬಳ ಪಡೆಯುವ ಉದ್ಯೋಗಿಗಳೇ ಹೊರತು ದಿನಪೂರ್ತಿ ಬಿಸಿಲಿನ ಬೇಗೆಗೆ ಬೆವರಿಳಿಸಿ ದುಡಿಯುವ ಕಾರ್ಮಿಕರಲ್ಲ. ಮೊನ್ನೆ ಯಷ್ಟೇ ಫೇಸ್‌ಬುಕ್ ಎಂಬ ಸಾಮಾಜಿಕ ತಾಣದಲ್ಲಿ ಇದೇ ಕಾರ್ಮಿಕ ದಿನದ ಶುಭಾಶಯದ ಗ್ರೀಟಿಂಗ್ಸ್ ಒಂದು ನನ್ನನ್ನು ಚಿಂತನೆಗೆ ಹಚ್ಚಿತು. ಸೂಟು-ಬೂಟು ಹಾಕಿಕೊಂಡ ವ್ಯಕ್ತಿಯೊಬ್ಬ ಬಡ ಕಾರ್ಮಿಕನೊಬ್ಬನ ಬೆನ್ನ ಮೇಲೆ ನಿಂತು ಕಾರ್ಮಿಕ ದಿನದ ಶುಭಾಶಯ ಕೋರುವ ಬ್ಯಾನರ್ ಹಾಕುವ ಚಿತ್ರವದು. ಈ ಚಿತ್ರವೇ ಸೂಚಿಸುವಂತೆ ಇಂದಿಗೂ ಕಾರ್ಮಿಕ ವರ್ಗವನ್ನು ಎಷ್ಟು ಕೀಳಾಗಿ ಕಾಣಲಾಗುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಆದರೆ ನಮ್ಮ ಕೆಲ ಫೇಸ್‌ಬುಕ್ ಪ್ರಿಯರಿಗೆ ಇದರ ನೈಜ ಅರ್ಥ ವನ್ನು ತಿಳಿದುಕೊಳ್ಳುವ ಸಾವಧಾನವಂತು ಇಲ್ಲವೇ ಇಲ್ಲ. ಒಂದೇ ಸಮನೆ ಕಮೆಂಟ್ಸ್‌ಗಳ ಮೇಲೆ ಕಮೆಂಟ್ಸ್, ಲೈಕ್‌ಗಳ ಮೇಲೆ ಲೈಕ್! ನಿಜಕ್ಕೂ ವಿಪರ್ಯಾಸ ಅಂದ್ರೆ ಇದೇ ಇರಬೇಕು. ಲವರ‍್ಸ್ ಡೇ, ಫ್ರೆಂಡ್‌ಶಿಪ್ ಡೇ, ಮದರ‍್ಸ್ ಡೇಗಳಂತೆ ಶ್ರಮಿಕ ವರ್ಗದ ಕಾರ್ಮಿಕ ದಿನವೂ ಐಶಾರಾಮಿ ಜನರ ಮಜಾ ಉಡಾಯಿ ಸುವ, ಶುಭಾಶಯ ಕೋರುವ ದಿನವಾಗಿ ಬದಲಾಗುತ್ತಿದೆ. ಯಾವ ಉದ್ದೇಶಗಳ ಈಡೇರಿಕೆಗಾಗಿ ಈ ದಿನವನ್ನು ಆಚರ ಣೆಗೆ ತರಲಾಯಿತೋ ಅದು ಇಂದು ಈಡೇರುತ್ತಿಲ್ಲ. ಈ ದಿನವಾ ದರೂ ಸ್ವಲ್ಪ ಬಿಡುವು ಮಾಡಿಕೊಳ್ಳಬೇಕಾದ ಬಡ ಶ್ರಮಿಕ ವರ್ಗ ಚಾಚೂ ತಪ್ಪದೇ ಬೆವರಿಳಿಸುತ್ತಿದೆ. ಆದರೆ ತಿಂಗಳಿಗೆ ಸಾವಿರಾರು ರುಪಾಯಿ ಎಣಿಸುವ ಉದ್ಯೋಗಿಗಳು ಮಾತ್ರ ಮೇ ದಿನದ ಹೆಸರಿನಲ್ಲಿ ರಜಾದ ಮಜಾ ಅನುಭವಿಸಿ ಪಾರ್ಕ್, ಬೀಚ್ ಸುತ್ತುತ್ತಿದ್ದಾರೆ. ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಮೇ ದಿನ ಐಶಾರಾಮಿ ಜನರ ಸ್ವತ್ತಾಗಿ ಹೋದರೂ ಪರವಾಗಿಲ್ಲ. ಯಾಕೆಂದರೆ ಅಲ್ಲಿನ ಪ್ರತೀ ಶ್ರಮಿಕ ವರ್ಗವು ಒಂದು ಹಂತಕ್ಕೆ ಐಶಾರಾಮಿಗಳೇ. ಆದರೆ ಭಾರತದಲ್ಲಿ ಹಾಗಲ್ಲ. ಇಲ್ಲಿನ ಶ್ರಮಿಕ ವರ್ಗಕ್ಕೆ ಐಶಾರಾಮ ಎನ್ನುವುದು ಕೇವಲ ಕನಸು ಮಾತ್ರ. ಹೀಗಿರುವಾಗ ತಮ್ಮ ಹಕ್ಕುಗಳನ್ನು ಪ್ರತಿಪಾದಿ ಸಲು ಇರುವ ಏಕೈಕ ದಿನವೂ ಕಾರ್ಮಿಕರಿಂದ ಕಳೆದು ಹೋಗು ತ್ತಿರುವುದು ವಿಪರ್ಯಾಸ. ಬಹುಶಃ ಇಂತಹ ವಿದ್ಯಮಾನ ಭಾರ ತದಲ್ಲಿ ಮಾತ್ರ ಘಟಿಸಲು ಸಾಧ್ಯ!
ಕಾರ್ಮಿಕರ ಹೋರಾಟಕ್ಕೆ ಧ್ವನಿಯಾಗಿ ಅದೆಷ್ಟೋ ಸಂಘ ಟನೆಗಳಿದ್ದರೂ ಅದು ತನ್ನ ನೈಜ ಉದ್ದೇಶಕ್ಕಾಗಿ ಹೋರಾಡು ತ್ತಿಲ್ಲ. ಬದಲಾಗಿ ತನ್ನ ಎಡಪಂಥೀಯ ಧೋರಣೆಗಳ ಅನುಷ್ಠಾ ನಕ್ಕಾಗಿಯೇ ಶ್ರಮಿಸುತ್ತಿದೆ. ಈ ಹಿಂದೆ ಕೇರಳ, ಪಶ್ಚಿಮ ಬಂಗಾಳ ದಂತಹ ರಾಜ್ಯಗಳಲ್ಲಿ ಕಾರ್ಮಿಕರ ಹಿತಾಸಕ್ತಿಯ ರಕ್ಷಣೆಗೆ ಹೋರಾಟಗಳು ನಡೆಯುತ್ತಿತ್ತಾದರೂ ಅದು ಸಾಕಾರಗೊಳ್ಳು ತ್ತಿರಲಿಲ್ಲ. ಹೋರಾಟಗಳು ಬಂದ್, ಗಲಾಟೆ, ಪ್ರತಿಭಟನೆಗ ಳಲ್ಲೇ ಕಳೆದು ಹೋಗುತ್ತಿದ್ದವು. ಇಂದಿಗೂ ಕೆಲ ರಾಜ್ಯಗಳಲ್ಲಿ ಈ ಚಿತ್ರಣ ಬದಲಾಗಿಲ್ಲ. ಇನ್ನು ನಮ್ಮ ಸರ್ಕಾರ ಕಾರ್ಮಿಕರಿ ಗಾಗಿ ರೂಪಿಸುವ ಯೋಜನೆಗಳಂತೂ ಹಳ್ಳ ಹಿಡಿಯುತ್ತಿವೆ. ಏನೇ ಮಾಡಿದರೂ ಭಾರತದಂತ ರಾಷ್ಟ್ರದಲ್ಲಿ ಕಾರ್ಮಿಕ ವರ್ಗ ಎನ್ನುವುದು ಮೇಲೆ ಬರುವುದು ಕನಸಿನ ಮಾತೇ ಸರಿ. ತಂತ್ರ ಜ್ಞಾನಗಳು ಕಾರ್ಮಿಕರ ಕೆಲಸವನ್ನು ಕಿತ್ತುಕೊಳ್ಳುವ ಈ ದಿನಗ ಳಲ್ಲಿ ಶ್ರೀಮಂತ ವರ್ಗವೂ ಬಡ ಶ್ರಮಿಕನ ಹಕ್ಕುಗಳ ಮೇಲೆ ಸವಾರಿ ಮಾಡುತ್ತಿದೆ ಎನ್ನುವುದು ಅಷ್ಟೇ ಸತ್ಯ.

ಫೇಸ್‌ಬುಕ್‌ನಲ್ಲಿ ಗುಟ್ಟು ರಟ್ಟಾಗದಿರಲಿ

Posted by JAYAKIRANA Kirana on | 0 comments | Leave a comment...

ಇತ್ತೀಚೆಗೆ ಫೇಸ್‌ಬುಕ್ ಎಂಬ ಸಾಮಾಜಿಕ ತಾಣ ವಿಪರೀತ ಎನಿಸುವಷ್ಟು (ಕು)ಖ್ಯಾತಿ ಗಳಿಸು ತ್ತಿದೆ. ಅದರಲ್ಲೂ ಕೆಲವರು ತಮ್ಮ ಖಾಸಗಿ ವಿಚಾರ ಗಳನ್ನು ಈ ತಾಣದ ಮೂಲಕ ಬಹಿರಂಗ ಹರಾ ಜಿಗಿಡುತ್ತಿದ್ದಾರೆ. ಇದು ಸರಿಯಲ್ಲ. ಫೇಸ್‌ಬುಕ್ ಎಂಬುದು ಗೆಳೆಯರೊಂದಿಗೆ ಮುಕ್ತವಾಗಿ ಚರ್ಚಿ ಸಲು, ಗೆಳೆತನ ಬೆಳೆಸಲು ಇರುವ ಒಂದು ಸಮಾ ಜಿಕ ತಾಣವಷ್ಟೇ. ಅದು ಬಿಟ್ಟು ನಮ್ಮ ಖಾಸಗಿ ವಿಚಾರಗಳನ್ನು, ತೀರಾ ಪರ್ಸನಲ್ ಎನಿಸುವ ಫೋಟೋಗಳನ್ನು ಹಾಕಲು ಕೌಟುಂಬಿಕ ಆಲ್ಬಂ ಅಲ್ಲ ಎನ್ನುವುದು ನೆನಪಿರಲಿ. ಇಲ್ಲಿ ನಾವು ಹಾಕಿದ ಫೋಟೋಗಳನ್ನು ಯಾರು ಬೇಕಾದರೂ ಕಾಪಿ ಮಾಡುವ ಅವಕಾಶವಿದೆ. ಹೀಗಿರುವಾಗ ಫೋಟೋಗಳು ದುರುಪಯೋಗವಾಗುವ ಸಾಧ್ಯ ತೆಗಳೇ ಹೆಚ್ಚು. ಅಲ್ಲದೇ ಕೆಲವರು ಮನೆಯ ವಿಳಾಸ, ಮೊಬೈಲ್ ನಂಬರ್ ಎಲ್ಲವನ್ನೂ ಇಲ್ಲಿ ದಾಖಲಿಸುತ್ತಾರೆ. ಇದು ನಮ್ಮ ಸುರಕ್ಷತೆಯ ದೃಷ್ಟಿ ಯಿಂದ ಸರಿಯಲ್ಲ. ಇನ್ನಾದರೂ ತೀರಾ ಖಾಸಗಿ ಎನ್ನುವ ವಿಚಾರಗಳನ್ನು ಇಲ್ಲಿ ಬಹಿರಂಗಪಡಿ ಸುವ ಮುನ್ನ ಸ್ವಲ್ಪ ಯೋಚಿಸಿ.
ಇಸ್ಮಾಯಿಲ್, ತೊಕ್ಕೊಟ್ಟು

ಸುದ್ದಿ ಮಾಧ್ಯಮದ ಚರ್ಚೆ ಹಾದಿ ತಪ್ಪುತ್ತಿದೆಯೇ?
ಒಂದು ಕಾಲದಲ್ಲಿ ಪತ್ರಿಕೆಗಳನ್ನು ಬಿಟ್ಟರೆ ಸಮಾಜದ ಪರವಾಗಿ ಚಿಂತಿಸುವ ಇನ್ನೊಂದು ಮಾಧ್ಯಮವಿರಲಿಲ್ಲ. ಆದರೆ ಈಗ ಟಿವಿ ಚಾನೆ ಲ್‌ಗಳ ಅಬ್ಬರ ಆರಂಭವಾಗಿದೆ. ಕನ್ನಡದಲ್ಲೇ ಆರಕ್ಕೂ ಹೆಚ್ಚು ಸುದ್ದಿ ವಾಹಿನಿಗಳಿವೆ. ಆದರೆ ಇವುಗಳ ಕಾರ್ಯವೈಖರಿ ಮಾತ್ರ ಚಿಂತನೆಗೆ ಹಚ್ಚುವಂತೆ ಮಾಡುತ್ತಿದೆ.
ಯಾವುದಾದರೂ ಸಮಾಜಮುಖಿ ವಿಚಾ ರವನ್ನು ತೆಗೆದು, ಸಂಬಂಧಪಟ್ಟವರನ್ನು ಸ್ಟುಡಿ ಯೋಗೆ ಕರೆಸಿ ಆ ಬಗ್ಗೆ ಚರ್ಚೆ ನಡೆಸುವುದು ಸುದ್ದಿ ಮಾಧ್ಯಮಗಳಲ್ಲಿ ಸಾಮಾನ್ಯ. ಆದರೆ ಇತ್ತೀ ಚಿನ ದಿನಗಳಲ್ಲಿ ಇಂತಹ ಚರ್ಚೆಗಳು ಹಾದಿ ತಪ್ಪುತ್ತಿದೆಯೇ ಎಂಬ ಅನುಮಾನ ಕಾಡುತ್ತದೆ. ಕೆಲವೊಂದು ಚರ್ಚೆಗಳು ಉದ್ದೇಶಿತ ವಿಚಾರ ವನ್ನು ಬಿಟ್ಟು ಅಲ್ಲಿಗೆ ಬಂದವರ ವೈಯಕ್ತಿಕ ವಿಚಾರಗಳ ಸುತ್ತವೇ ಸುತ್ತುತ್ತಿರುತ್ತದೆ. ಇತ್ತೀ ಚೆಗೆ ಸಿನಿಮಾ ರಂಗದಲ್ಲಿನ ಕೆಲವೊಂದು ವಿಚಾರ ಗಳನ್ನು ಎಳೆದು ತಂದು ಮಾಧ್ಯಮಗಳು ಬೆಳಿ ಗ್ಗಿನಿಂದ ಸಂಜೆಯ ತನಕ ಎಳೆಯುತ್ತದೆ. ನಂತರ ಸಂಜೆಯ ವೇಳೆಗೆ ಒಂದಷ್ಟು ಜನರನ್ನು ತಮ್ಮ ಕಚೇರಿಗೆ ಕರೆಸಿ ಅನಗತ್ಯ ಚರ್ಚೆಗಳನ್ನು ನಡೆಸು ತ್ತವೆ. ಈ ಚರ್ಚೆ ಎಲ್ಲೂ ಆರೋಗ್ಯಕರವಾಗಿ ನಡೆಯುತ್ತಿಲ್ಲ ಎನ್ನುವುದೇ ವಿಪರ್ಯಾಸ. ಇನ್ನು ಕೆಲ ವಾಹಿನಿಗಳಲ್ಲಿ ನಿರೂಪಕರದ್ದೇ ಸಾರ್ವ ಭೌಮತ್ವ ಎನ್ನಬಹುದು. ಇರುವ ಒಂದು ಘಂಟೆಯ ಕಾರ್ಯಕ್ರಮದಲ್ಲಿ ಅರ್ಧ ಘಂಟೆ ಇವರದ್ದೇ ಜಡ್ಜ್‌ಮೆಂಟ್ ಕೇಳಿ ವೀಕ್ಷಕ ಮೆಂಟಲ್ ಆಗುವುದೊಂದೇ ಬಾಕಿ ಎನ್ನುವಂತಾಗಿದೆ.
ತಾವು ಮಾತ್ರ ನೀತಿವಂತರು ಎಂಬ ನೆಲೆ ಯಲ್ಲಿ ಇತರರನ್ನು ದೂಷಿಗಳಂತೆ ಚಿತ್ರಿಸುವುದು ನಿರೂಪಕರಿಗೆ ಸಾಮಾನ್ಯವಾಗಿದೆ. ಇತ್ತೀಚೆಗೆ ಭೀಮಾ ತೀರದಲ್ಲಿ ಚಿತ್ರ ವಿವಾದ ಇದಕ್ಕೆ ಒಂದು ಸ್ಪಷ್ಟ ಉದಾಹರಣೆ. ಇದು ಹೀಗೆಯೇ ಮುಂದು ವರೆದರೆ ಪಾಕಿಸ್ಥಾನದ ವಾಹಿನಿಗಳಲ್ಲಿ ನಡೆದಂತೆ ನಮ್ಮಲ್ಲೂ ಬಹಿರಂಗ ಗುದ್ದಾಟಗಳು ನಡೆಯುವ ದಿನ ದೂರವಿಲ್ಲ. ಕಿರಣ್ ಡಿಸೋಜಾ, ಉರ್ವ


ಕಾರ್ಕಳ-ಶೃಂಗೇರಿ ರಸ್ತೆಯಲ್ಲಿ ಬೆಳಕಿಲ್ಲ
ಶೃಂಗೇರಿಗೆ ಸಂಚರಿಸುವ ಭಕ್ತರು ಕಾರ್ಕಳ-ಎಸ್.ಕೆ.ಬಾರ್ಡರ್ ರಸ್ತೆಯನ್ನೇ ಹೆಚ್ಚಾಗಿ ಸಂಚಾರಕ್ಕೆ ಬಳಸುತ್ತಾರೆ. ಆದರೆ ಇಲ್ಲಿನ ಪ್ರಮುಖ ಸಮಸ್ಯೆಯೆಂದರೆ ರಾತ್ರಿಯ ವೇಳೆ ಇಲ್ಲಿ ಬೀದಿದೀಪಗಳನ್ನು ವ್ಯವಸ್ಥೆ ಮಾಡಿಲ್ಲ. ಇದರಿಂದ ರಾತ್ರಿಯ ವೇಳೆ ಸಂಚರಿಸುವ ವಾಹನ ಸವಾರರು ಭಯಪಡುತ್ತಾರೆ. ರಾಜ್ಯ ಹೆದ್ದಾರಿಯಲ್ಲಿ ಬೀದಿ ದೀಪವನ್ನು ವ್ಯವಸ್ಥೆ ಮಾಡದಿದ್ದರೆ ಅಪಘಾತದ ಸಂಖ್ಯೆಯೂ ಹೆಚ್ಚುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾ ಖೆಗಳು ಇನ್ನಾದರೂ ಕಣ್ತೆರೆಯಬೇಕು. ಮೊದಲೇ ಈ ಪ್ರದೇಶ ನಕ್ಸಲ್ ಪೀಡಿತ ಪ್ರದೇಶ ವೆಂದು ಗುರುತಿಸಲ್ಪಟ್ಟಿದ್ದು, ಇಲ್ಲಿ ಬೀದಿದೀಪಗಳು ಇರದಿದ್ದರೆ ನಕ್ಸಲ್ ಚಟುವಟಿಕೆ ಹೆಚ್ಚುವ ಭೀತಿಯೂ ಇದೆ. ಸ್ಥಳೀಯ ಶಾಸಕ, ಜನಪ್ರತಿನಿಧಿಗಳು ವಾಹನ ಸವಾರರ ಸಮಸ್ಯೆಯನ್ನು ಗಮನದಲ್ಲಿರಿಸಿ ಪರಿಹರಿಸಬೇಕಾಗಿ ವಿನಂತಿ.
ಸತೀಶ್ ಕುಲಾಲ್, ಎಣ್ಣೆಹೊಳೆ

ಕಟೀಲು ದೇವಳ ರಸ್ತೆ ಅಗಲಗೊಳ್ಳಲಿ
ಕಟೀಲು ದೇವಸ್ಥಾನಕ್ಕೆ ವರ್ಷ ಪೂರ್ತಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಶುಭ ದಿನಗಳಲ್ಲಿ ಮದುವೆಗಳೂ ಹೆಚ್ಚೆಚ್ಚು ನಡೆ ಯುತ್ತವೆ. ಈ ವೇಳೆ ಇಲ್ಲಿನ ಪ್ರಧಾನ ರಸ್ತೆ ವಾಹನಗಳ ಸಂಚಾರದಿಂದ ಬ್ಲಾಕ್ ಆಗು ತ್ತದೆ. ಇದರಿಂದ ವಾಹನ ಸವಾರರ ಪಾಡು ಹೇಳಿ ಪ್ರಯೋಜನವಿಲ್ಲ. ದೇವ ಳದ ಮುಖ್ಯ ರಸ್ತೆಯನ್ನು ಶೀಘ್ರವಾಗಿ ಅಭಿ ವೃದ್ಧಿಪಡಿಸುವ ಅಗತ್ಯವಿದೆ. ಕಟೀಲು ಸೇತು ವೆಯಿಂದ ಪದವಿ ಕಾಲೇಜಿನವರೆಗೂ ರಸ್ತೆ ಬ್ಲಾಕ್ ಸಾಮಾನ್ಯ. ಇದನ್ನು ತಪ್ಪಿಸಲು ಸಂಬಂಧಪಟ್ಟವರು ಚಿಂತಿಸುವ ಅಗತ್ಯವಿದೆ. ಕಟೀಲು ದೇವಳ ಆಡಳಿತ ಮಂಡಳಿ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಮತ್ತು ಜನ ಪ್ರತಿನಿಧಿಗಳ ಗಮನ ಸೆಳೆಯಬೇಕಾದ ಅಗತ್ಯವಿದೆ.
ರೇಣುಕಾ, ಕಿನ್ನಿಗೋಳಿ

ಉಪವಾಸದಿಂದ ಸಾಧಿಸಿದ್ದೇನು?
ಇತ್ತೀಚೆಗಷ್ಟೇ ಮಂಗಳೂರು ಪಾಲಿಕೆಯ ಮುಂಭಾಗದಲ್ಲಿ ಸಂಘಪರಿವಾರದವರು ಗೋ ಹತ್ಯೆಯನ್ನು ವಿರೋಧಿಸಿ ಒಂದು ದಿನ ಉಪ ವಾಸ ಸತ್ಯಾಗ್ರಹವನ್ನು ಕೈಗೊಂಡರು. ಈ ಉಪ ವಾಸವೇ ಹಾಸ್ಯಾಸ್ಪದವಾಗಿ ಕಂಡಿತ್ತು. ಇದನ್ನು ಗಮನಿಸಿದವರಿಗೆ ಒಂದು ದಿನದ ಉಪವಾಸ ದಿಂದ ಬಜರಂಗಿಗಳು ಸಾಧಿಸಿದ್ದಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ. ಪಾಲಿಕೆಯ ಮುಂದೆ ಒಂದು ದಿನ ಉಪವಾಸ ಕುಳಿತು ಅಪಹಾಸ್ಯ ಕ್ಕೀಡಾಗುವ ಬದಲು ಬೇರೆ ತರದಲ್ಲಿ ನಮ್ಮದೇ ಹಿಂದೂ ಸಮಾಜಕ್ಕೆ ಗೋವುಗಳ ರಕ್ಷಣೆಯ ಕುರಿತಾಗಿ ಜಾಗೃತಿ ಮೂಡಿಸಬಹುದಿತ್ತು. ಇಲ್ಲವೇ ಬೇರೆ ರೀತಿಯಲ್ಲಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬಹುದಿತ್ತು. ಅದು ಬಿಟ್ಟು ಈ ರೀತಿಯ ತೋರಿಕೆಯ ಉಪವಾಸ ಬೇಕಿತ್ತೆ? ಒಂದು ದಿನ ಉಪವಾಸ ಮಾಡಿ ಸುಮ್ಮನಾದ ಬಜರಂಗಿಗಳು ಈಗ ಎಲ್ಲಿದ್ದಾರೆ? ನಿಮ್ಮ ಕೆಲಸ ಒಳ್ಳೆಯದೇ ಆದರೂ ಪ್ರತೀ ಬಾರಿ ನೀವು ಟೀಕೆಗೆ ಗುರಿಯಾಗುವುದು ಈ ರೀತಿಯ ಹಾಸ್ಯಾಸ್ಪದ ನಡವಳಿಕೆಗಳಿಂದಲೇ ಎನ್ನುವುದು ನೆನಪಿರಲಿ. ಇಂತಹ ತೋರಿಕೆಯನ್ನು ಬಿಟ್ಟು ಗೋವಿನ ಪ್ರಾಮುಖ್ಯತೆಯ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡಿ. ಆಗ ಖಂಡಿತವಾ ಗಿಯೂ ನಿಮ್ಮ ಹೋರಾಟಕ್ಕೆ ಬೆಲೆ ಇರುತ್ತದೆ.
ಓರ್ವ ಹಿಂದು, ಮಂಗಳೂರು

ಮಂಗಳೂರಿನಲ್ಲಿ ರಿಕ್ಷಾದ ಕನಿಷ್ಠ ಬಾಡಿಗೆ ದರ ಎಷ್ಟು?
ಮಂಗಳೂರಿನಲ್ಲಿ ರಿಕ್ಷಾದ ಕನಿಷ್ಠ ಬಾಡಿಗೆ ದರ ಎಷ್ಟೆಂಬುದೇ ತಿಳಿಯುತ್ತಿಲ್ಲ. ಯಾಕೆಂದರೆ ಒಬ್ಬೊಬ್ಬ ರಿಕ್ಷಾ ಚಾಲಕರು ಒಂದೊಂದು ರೀತಿ ದರ ವಸೂಲಿ ಮಾಡುತ್ತಾರೆ.
ರಿಕ್ಷಾದಲ್ಲಿ ಕುಳಿತೊಡನೆ ಚಾಲಕ ಮೀಟರ್ ಆನ್ ಮಾಡುತ್ತಾನೆ. ಅದು ೧೭ ರೂ. ಎಂದು ತೋರಿಸು ತ್ತದೆ. ಆದರೆ ರಿಕ್ಷಾದಿಂದ ಇಳಿಯುವಾಗ ೧೭ ರೂ. ಇದ್ದರೂ ಚಾಲಕ ಹಿಂದೆ-ಮುಂದೆ ನೋಡದೆ ೨೦ ರೂ. ತೆಗೆದುಕೊಳ್ಳುತ್ತಾನೆ. ಕೇಳಿದರೆ ಮಾತ್ರ ಒಂದೆ ರಡು ರೂ. ಹಿಂದಕ್ಕೆ ಸಿಗುತ್ತದೆ. ಇಲ್ಲಿ ರಿಕ್ಷಾದ ಕನಿಷ್ಠ ಬಾಡಿಗೆ ದರ ಏರಿಸಿದ್ದರೆ ಮೀಟರ್‌ನಲ್ಲಿ ಮಾತ್ರ ೧೭ ರೂ. ಎಂದು ತೋರಿಸುವುದೇಕೆ? ಇಲ್ಲಿ ತಪ್ಪು ಆರ್‌ಟಿಒ ಇಲಾಖೆಯದ್ದೇ, ರಿಕ್ಷಾ ಚಾಲಕರದ್ದೇ ಗೊತ್ತಾಗುತ್ತಿಲ್ಲ. ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಪ್ರಯಾ ಣಿಕರಿಗೆ ಸೂಕ್ತ ಮಾಹಿತಿ ಕೊಟ್ಟು ಅನಗತ್ಯ ವಸೂಲಿ ಯಿಂದ ಪಾರು ಮಾಡುವುದೊಳಿತು. ಇಲ್ಲದಿದ್ದರೆ ರಿಕ್ಷಾ ಚಾಲಕರನ್ನು ಪ್ರಯಾಣಿಕರೇ ತರಾಟೆಗೆ ತೆಗೆದು ಕೊಳ್ಳು ವಂತಾದೀತು. ರಾಕೇಶ್, ಬಿಜೈ

ಮಕ್ಕಳಿಗೆ ಪರಿಸರ eನ ಮೂಡಿಸುವ ಕೆಲಸವಾಗಲಿ
ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳು ಜೀವ ವೈವಿಧ್ಯಗಳ ಖಜಾನೆ. ಅಲ್ಲಿ ಸಸ್ಯ ಸಂಪತ್ತಿದೆ, ಪ್ರಾಣಿ ಸಂಕುಲ ಸಮೃದ್ಧವಾ ಗಿದೆ. ಹಲವು ಸಮುದಾಯಗಳಿಗೆ ಕಾಡಿನಲ್ಲಿ ಸಿಗುವ ಸಸ್ಯ ಮತ್ತು ಕಾಡು ಉತ್ಪನ್ನಗಳೇ ಜೀವನಾಧಾರ. ಇದನ್ನು ಬಳಸುವ ಬಗ್ಗೆ ಮಾನವ ಸಂಪ್ರಾದಾಯಿಕ eನವನ್ನು ಪಡೆ ದಿದ್ದಾನೆ.
ಇಂಥ ಕಾಡಿನ ಮಡಿಲಲ್ಲಿ ಹುಳಿಸಿಹಿ ಮಿಶ್ರಿತ ಹಣ್ಣುಗಳದೇ ವಿಶಿಷ್ಟ ರುಚಿ. ಇದಕ್ಕೆ ಯಾವುದೇ ರಾಸಾಯನಿಕ ಸೋಂಕಿಲ್ಲ. ಹಿತ ಮಿತವಾಗಿ ತಿಂದರೆ ಅನಾರೋಗ್ಯದ ಚಿಂತೆಯೂ ಇಲ್ಲ. ಎಲ್ಲಾ ಹಣ್ಣುಗಳಲ್ಲೂ ಅವುಗಳದ್ದೇ ಆದ ರುಚಿ. ಬಣ್ಣ, ಔಷದೀಯ ಗುಣಗಳನ್ನು ಹೊಂದಿರುತ್ತಿತ್ತು. ಅಡವಿ ಹಣ್ಣು ಗಳು ಮಾನವನಿಗಲ್ಲದೆ ಪ್ರಾಣಿ, ಪಕ್ಷಿಗಳಿಗೆ ಆಹಾ ರವಾಗಿರುತ್ತಿತ್ತು. ಬೇಸಿಗೆ ದಿನಗಳಲ್ಲಿ ಕಾಡು ಹಣ್ಣುಗಳು ಹೆಚ್ಚಾಗಿ ಬೆಳೆಯುತ್ತಿತ್ತು. ಇದರಿಂದ ಹೆಚ್ಚಿನ ಎಲ್ಲಾ ಮಕ್ಕಳು ರಜಾದಿನಗಳಲ್ಲಿ ತಮ್ಮ ಅಜ್ಜಿ ಮನೆಯಲ್ಲಿಯೇ ಕಾಡಿನಲ್ಲಿರುವ ಹಣ್ಣು ಹಂಪಲುಗಳನ್ನು ತಿಂದು ರಜಾದಿನವನ್ನು ಕಳೆ ಯುತ್ತಿದ್ದರು. ಆದರೆ ಇಂದಿನ ಮಕ್ಕಳು ರಜಾದಿ ನಗಳಲ್ಲಿ ವಿವಿಧ ರೀತಿಯ ಶಿಬಿರವೆಂದು ಕಳೆ ಯುತ್ತಿದ್ದಾರೆ. ಆದ್ದರಿಂದ ಇಂದಿನ ಮಕ್ಕಳು ಪರಿಸರದ ಪ್ರಜ್ಞೆಯೇ ಕಳೆದುಹೋಗಿದೆ ಎಂದರೆ ತಪ್ಪಾಗಲಾರದು. ಇಂತಹ ಪರಿಸ್ಥಿತಿಯಲ್ಲಿ ಮಕ್ಕ ಳಿಗೆ ಅರಿವು ಮೂಡಿಸಬೇಕಾದ ಹೆತ್ತವರೇ ಎಡ ವಿದರೆ ನಮ್ಮ ಪರಿಸರ ವಿನಾಶಗೊಳ್ಳುವುದರಲ್ಲಿ ಸಂಶಯವಿಲ್ಲ.
ರಾಜೇಶ್.ಕೆ.ಎಂ. ಮಂಗಳೂರು

ನಿರುದ್ಯೋಗಿಗಳಿಗೆ ಅನ್ಯಾಯ
ಎಲ್ಲಿ ನೋಡಿದರೂ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಎಷ್ಟೇ ಕಲಿತರೂ ಒಳ್ಳೆಯ ಉದ್ಯೋಗ ಸಿಗಬೇಕಾದರೆ ಬಹಳ ಕಷ್ಟವಿದೆ. ಸರಕಾರದ ಇಲಾಖೆಗಳಲ್ಲಂತೂ ಭ್ರಷ್ಟಾಚಾರ, ಲಂಚ ತಾಂಡ ವಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ ಕಾರ ನೌಕರರ ನಿವೃತ್ತಿ ವಯಸ್ಸನ್ನು ೫೮ರಿಂದ ೬೦ಕ್ಕೆ ಏರಿಸಿದ್ದು ಬಹಳ ಬೇಸರದ ಸಂಗತಿ ಯಾಗಿದೆ. ನಿವೃತ್ತಿಯ ಅಂಚಿಗೆ ಬಂದಿದ್ದ ನೌಕರ ರಿಗೆ ಮತ್ತೂ ಎರಡು ವರ್ಷ ಹೆಚ್ಚು ಕೆಲಸ ಮಾಡುವ ಅವಕಾಶ ಸಿಕ್ಕಿರುವುದರಿಂದ ನಿರು ದ್ಯೋಗ ಬವಣೆ ಮುಂದುವರಿದಿದೆ. ನಿವೃತ್ತಿ ವಯಸ್ಸು ಏರಿಕೆ ಮಾಡಿದಂತೆ ಸರಕಾರಿ ಕೆಲಸಕ್ಕೆ ಅರ್ಜಿ ಹಾಕಲು ಇರುವ ವಯೋಮಿತಿ ಏರಿಕೆ ಮಾಡುವುದು ಕೂಡಾ ಸರಕಾರದ ಕರ್ತವ್ಯವಾ ಗಿತ್ತು. ಆದರೆ ಹಾಗೆ ಮಾಡಿಲ್ಲ. ಇನ್ನಾದರೂ ನಿರುದ್ಯೋಗಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸರಕಾರ ಸೂಕ್ತ ಕ್ರಮ ತೆಗೆದು ಕೊಳ್ಳಬೇಕಾಗಿ ಈ ಮೂಲಕ ವಿನಂತಿ ಮಾಡು ತ್ತಿದ್ದೇನೆ. ವರುಣ್ ಕುಮಾರ್, ಮಂಗಳೂರು

ಸೂಕ್ಷ್ಮ ವಿಚಾರಗಳ ಬಗ್ಗೆ ಗಂಭೀರವಾಗಿ ಚಿಂತಿಸಲಿ
ಸರಕಾರವು ಅಂಬೇಡ್ಕರ್ ಜಯಂತಿಯನ್ನು ಶಾಲಾ ಕಾಲೇಜುಗಳಲ್ಲಿ ಆಚರಿಸುವುದು ಕಡ್ಡಾ ಯಗೊಳಿಸಿದೆ. ಆದರೆ ಅದರ ಅನುಷ್ಠಾನದಲ್ಲಿ ಮಾತ್ರ ಎಡವಿದೆ ಎಂದು ಹೇಳಬಹುದು. ಅನೇಕ ಶಾಲೆಗಳಲ್ಲಿ ಕಾಟಾಚಾರಕ್ಕೆ ಎಂಬಂತೆ ಹೆಚ್ಚಿನ ಎಲ್ಲಾ ದಿನಾಚರಣೆಗಳನ್ನು ಆಚರಿಸುವುದು ವಾಡಿಕೆಯಾಗಿದೆ. ತಮಗೆ ಅನುಕೂಲವಾಗು ವಂತಹ ರೀತಿಯಲ್ಲಿ ಆಚರಣೆ ಮಾಡುವುದು ಅಪರಾಧ. ಯಾವುದೇ ದಿನಾಚರಣೆಯ ಮುಂಚಿತ ದಿನವೇ ಇಲ್ಲವೇ ಮರುದಿವಸ ಆಚರಿಸುತ್ತಾರೆ. ಆದ್ದರಿಂದ ಇಂತಹ ಪ್ರಸಂಗವನ್ನು ಸರಕಾರ ಗಂಭೀರವಾಗಿ ಚಿಂತಿಸಿ, ಈ ರೀತಿ ಆಚರಣೆ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮಕೈಗೊ ಳ್ಳಬೇಕಾಗಿ ವಿನಂತಿ.
ಪ್ರeವಂತ ನಾಗರಿಕ, ಉಳ್ಳಾಲ

ಮಾಂಸಾಹಾರಿಗಳಿಗೆ ಸಬ್ಸಿಡಿ ಕೊಡ್ತಾರಾ ಧರ್ಮರಕ್ಷಕರು?!

Posted by JAYAKIRANA Kirana on | 0 comments | Leave a comment...


ಬರ ಬಿದ್ದಿರುವ ಉತ್ತರ ಕರ್ನಾಟಕದಲ್ಲಿ ಹಾಲು ಕೊಡುವ ಹಸುಗಳಿಗೇ ಮೇವು ಸಿಗುವುದು ದುಸ್ತರ. ಇನ್ನು ಧರ್ಮ ಸಂರಕ್ಷಣೆಯ ಹೆಸರಿನಲ್ಲಿ ಹಸುಗಳನ್ನು ಮಾರಲೂ ಆಗದೆ ಮೇವು ದೊರಕಿಸಲೂ ಆಗದೆ ದನ ಮತ್ತು ಜನ ಒಟ್ಟಿಗೆ ಉಪವಾಸ ಬೀಳಬೇಕೆ? ಭಾರತದಲ್ಲಿ ಮಾಂಸಕ್ಕಾಗಿ ಯಾರೂ ಹಸುಗಳನ್ನು ಸಾಕಿ ಬೆಳೆಸುವುದಿಲ್ಲ. ವಯಸ್ಸಾದ ದನಗಳನ್ನು ಸಾಕುವುದು ಕಷ್ಟವೆನ್ನಿಸಿದಾಗ ಮಾರುತ್ತಾರಷ್ಟೇ. ಅವರಿಗೂ ತಮ್ಮ ಜಾನುವಾರುಗಳೊಂದಿಗೆ ಭಾವನಾತ್ಮಕ ಸಂಬಂಧಗಳಿದೆ. ಭಾವನೆ ಮತ್ತು ಜೀವನದ ಪ್ರಶ್ನೆ ಬಂದಾಗ ಅವರು ಯಾವುದನ್ನು ಆರಿಸಿಕೊಳ್ಳಬೇಕು?

ಹೈದರಾಬಾದ್‌ನ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಇತ್ತೀ ಚೆಗೆ ಬೀಫ್ ಫೆಸ್ಟಿವಲ್ ಅಂತ ಮಾಡಿದ್ದರು. ದನದ ಮಾಂಸ ಮಾಡಿ ಹಬ್ಬವನ್ನಾಚರಿಸಿದ್ದರು. ಈ ಸಂದರ್ಭದಲ್ಲಿ ಹಬ್ಬದ ಪರ ವಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಚೂರಿ ಇರಿತವಾಗಿರುವ ಸುದ್ದಿ ಬಂದಿದೆ. ದನದ ರಕ್ಷಕರು ಜನರನ್ನು ಭಕ್ಷಿಸುತ್ತಿರುವ ಕಥೆಯಿದು!
ಭಾರತದಲ್ಲಿ ಗೋಮಾಂಸ ಸೇವನೆಯ ಬಗ್ಗೆ ಇರುವ ಇತಿ ಹಾಸ ಆಸಕ್ತಿಕರವಾಗಿದೆ. ಧರ್ಮದ ಇತಿಹಾಸಕಾರರ ಲೇಖನಗಳ ಪ್ರಕಾರ ಸನಾತನ ಹಿಂದೂ ಧರ್ಮದಲ್ಲಿ ಬ್ರಾಹ್ಮಣರಲ್ಲೂ ಮಾಂಸ ಸೇವನೆ ಸಾಮಾನ್ಯವಾಗಿತ್ತು. ಗೋಮಾಂಸವೂ ಅದಕ್ಕೆ ಹೊರತಾ ಗಿರಲಿಲ್ಲ (ಇತ್ತೀಚೆಗೆ ಬಲಪಂಥೀಯತೆಯ ಪಟ್ಟ ಹೊತ್ತಿರುವ ಎಸ್.ಎಲ್. ಭೈರಪ್ಪನವರ ಉತ್ತಮ ಕೃತಿಗಳಲ್ಲೊಂದಾದ ‘ಪರ್ವ ದಲ್ಲೂ ಗೋಮಾಂಸ ಸೇವಿಸುವ ಹಿಂದೂಗಳಿದ್ದಾರೆ). ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆಗೆ ವಿರೋಧ ವ್ಯಕ್ತವಾಗಿ ನಿಷೇಧಕ್ಕೊಳಗಾಗಿದ್ದು ಬುದ್ಧ ಧರ್ಮದಿಂದ! ಅಹಿಂಸಾ ತತ್ವ ವನ್ನು ಭೋದಿಸುವ ಬುದ್ಧ ಧರ್ಮ ಹೆಚ್ಚೆಚ್ಚು ಪ್ರಚಲಿತಗೊಳ್ಳುತ್ತಿ ದ್ದಂತೆ ಗಾಬರಿಗೊಳಗಾದ ಹಿಂದೂ ಪಂಡಿತರು ಮಾಂಸ ಸೇವನೆ ನಿಷೇಧಿಸುವ ತೀರ್ಮಾನ ಕೈಗೊಳ್ಳುತ್ತಾರೆ. ಮಾಂಸದ ಸವಿಯಾದ ರುಚಿಯನ್ನುಂಡವರು ಅಷ್ಟು ಸುಲಭವಾಗಿ ಬಿಟ್ಟಾರೆಯೇ?! ಬ್ರಾಹ್ಮ ಣರು ಎಲ್ಲ ಮಾಂಸ ತೊರೆದು ಉಳಿದ ಕೆಲವರು ಗೋಮಾಂಸ ತೊರೆಯುತ್ತಾರೆ. ಹಿಂದೂ ಧರ್ಮದಿಂದ ಶೋಷಣೆಯನ್ನಷ್ಟೇ ಪಡೆದುಕೊಂಡಿದ್ದ ಬಹಳಷ್ಟು ಸಮುದಾಯಗಳು ಯಾವ ಮಾಂಸ ಸೇವನೆಯನ್ನೂ ತೊರೆಯುವುದಿಲ್ಲ.
ಗೋಸಂತತಿ ಪೂಜ್ಯನೀಯವೇ?
ಹೌದು ಪೂಜ್ಯನೀಯ. ಕೃಷಿಯೇ ಮೂಲಕಸುಬಾಗಿದ್ದ ಭಾರ ತದಲ್ಲಿ ಗೋವು ದೇವರ ಸ್ಥಾನ ಪಡೆದಿದ್ದರಲ್ಲಿ ಅಚ್ಚರಿಯಿಲ್ಲ. ವ್ಯವ ಸಾಯಕ್ಕೆ, ಹಾಲಿಗೆ, ಗೊಬ್ಬರಕ್ಕೆ ಉಪಯೋಗಕ್ಕೆ ಬರುತ್ತಿದ್ದ ಗೋವು ಕಾಮಧೇನುವೇ ಸರಿ. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ಇವುಗಳನ್ನೇ ನೆಪವಾಗಿಟ್ಟುಕೊಂಡು ಇವತ್ತಿನ ಸಾಮಾಜಿಕ ಪರಿ ಸರದ ಅಧ್ಯಯನ ನಡೆಸದೆ ಗೋಹತ್ಯೆ ನಿಷೇಧ ಮಸೂದೆಯನ್ನು ಜಾರಿಗೆ ತರುವಲ್ಲಿ ಬಹಳಷ್ಟು ರಾಜ್ಯ ಸರ್ಕಾರಗಳು ಆಸಕ್ತಿ ತೋರು ತ್ತಿರುವುದು ಎಷ್ಟರಮಟ್ಟಿಗೆ ಸರಿ? ಈ ಮಸೂದೆಯನ್ನು ಬೆಂಬಲಿ ಗರಲ್ಲಿ ವಿದ್ಯಾವಂತರು ಅದರಲ್ಲೂ ನಗರವಾಸಿಗಳು ಮುಂದಿದ್ದಾರೆ. ನಗರಗಳಲ್ಲಿ ಸೆಗಣಿ ಕಂಡರೆ ಮೂಗು ಮುರಿಯುವ, ಹಸುವ ನ್ನೆಂದಿಗೂ ಸಾಕಿ ಅಭ್ಯಾಸವಿಲ್ಲದ, ಪ್ಯಾಕೆಟ್ ಹಾಲನ್ನವಲಂಭಿಸಿದ ನಾವುಗಳು ಗೋಹತ್ಯೆ ನಿಷೇಧದ ಪರವಾಗಿ ಮಾತನಾಡುವುದು ಅಪಹಾಸ್ಯದ ಸಂಗತಿಯಲ್ಲವೇ?
ನಗರೀಕರಣದ ಫಲವಾಗಿ ಹಳ್ಳಿಯಲ್ಲಿರುವವರ ಸಂಖ್ಯೆಯೇ ಕ್ಷೀಣಿಸುತ್ತಿದೆ. ಇನ್ನು ಹಸು, ಎತ್ತು ಸಾಕುವವರ ಸಂಖ್ಯೆಯಂತೂ ಮತ್ತಷ್ಟು ಕಡಿಮೆ. ವ್ಯವಸಾಯಕ್ಕಿಂತ ಹೆಚ್ಚಾಗಿ ಹಾಲಿಗಾಗಿ ಹಸು ವನ್ನು ಸಾಕುವವರ ಸಂಖ್ಯೆ ಹೆಚ್ಚಿದೆ. ಒಂದೆರಡು ಹಸುಗಳನ್ನು ಸಾಕಿ ಹಾಲು ಮಾರಿ ಜೀವನೋಪಾಯ ನಡೆಸುವ ವ್ಯಕ್ತಿಗೆ ಹಸು ವಿಗೆ ವಯಸ್ಸಾದರೂ ಹಾಲು ಕೊಡದಿದ್ದರೂ ನೀನದನ್ನು ಸಾಕಲೇ ಬೇಕು. ಆ ಮೂಲಕ ಹಿಂದೂ ಧರ್ಮದ ಉಳಿವಿಗೆ ಕಾರಣಕರ್ತನಾಗಬೇಕು. ಅಪ್ಪಿತಪ್ಪಿ ಮಾಂಸಕ್ಕೋಸ್ಕರ ದುಡ್ಡಿಗೋಸ್ಕರ ಮಾರಿದರೆ ಜೈಲಿಗಾಗ್ತೀವಿ ನೋಡು ಎಂದು ಹೇಳುವುದು ಕ್ರೌರ್ಯವಲ್ಲವೇ?
ವಯಸ್ಸಾದ ಹಸುಗಳನ್ನು ಮಾಂಸಕ್ಕಾಗಿ ಸಾಯಿಸಿದರೆ ಏನು ತಪ್ಪು? ಎಂದು ಕೇಳಿದಾಕ್ಷಣ ಗೋಹತ್ಯೆ ವಿರೋಧಿಗಳು ಅಕಟಕಟಾ ಎಂದು ಮುರಕೊಂಡು ಬೀಳುತ್ತಾರೆ. ವಯಸ್ಸಾಯಿತು ಅಂತ ನಿಮ್ಮ ತಂದೆತಾಯಿಯನ್ನೂ ಸಾಯಿಸಿ ಬಿಟ್ತೀರೇನ್ರೀ? ಅನ್ನೋ ಅಸಂಬದ್ಧ ಪ್ರಶ್ನೆ ಕೇಳ್ತಾರೆ. ಹಸು ಸಾಕೋದು ವ್ಯವ ಹಾರಿಕ, ತಂದೆ ತಾಯಿ ವ್ಯಾಪಾರದ ವಸ್ತುಗಳಲ್ಲ ಅನ್ನೋದು ಅವರಿಗೆ ತಿಳಿ ಯೋದೇ ಇಲ್ಲವೇ? ಕೃಷಿಯಿಂದ ನಾವೆಲ್ಲ ವಿಮುಖರಾಗಿರುವ ಈ ಹೊತ್ತಿ ನಲ್ಲಿ ಇಂಥ ಕಾಯ್ದೆಗಳಿಂದ ಇರೋ ಚೂರೂ ಪಾರೂ ಕೃಷಿಕರನ್ನೂ ಅಲ್ಲಿಂದ ಓಡಿಸುತ್ತಿದ್ದೀವಷ್ಟೇ.
ಬರ ಬಿದ್ದಿರುವ ಉತ್ತರ ಕರ್ನಾಟಕದಲ್ಲಿ ಹಾಲು ಕೊಡುವ ಹಸುಗಳಿಗೇ ಮೇವು ಸಿಗುವುದು ದುಸ್ತರ. ಇನ್ನು ಧರ್ಮ ಸಂರಕ್ಷಣೆಯ ಹೆಸರಿನಲ್ಲಿ ಹಸು ಗಳನ್ನು ಮಾರಲೂ ಆಗದೆ ಮೇವು ದೊರಕಿಸಲೂ ಆಗದೆ ದನ ಮತ್ತು ಜನ ಒಟ್ಟಿಗೆ ಉಪವಾಸ ಬೀಳಬೇಕೆ? ಭಾರತದಲ್ಲಿ ಮಾಂಸಕ್ಕಾಗಿ ಯಾರೂ ಹಸುಗ ಳನ್ನು ಸಾಕಿ ಬೆಳೆಸುವುದಿಲ್ಲ. ವಯಸ್ಸಾದ ದನಗಳನ್ನು ಸಾಕುವುದು ಕಷ್ಟವೆನ್ನಿಸಿ ದಾಗ ಮಾರುತ್ತಾರಷ್ಟೇ. ಅವರಿಗೂ ತಮ್ಮ ಜಾನುವಾರುಗಳೊಂದಿಗೆ ಭಾವನಾ ತ್ಮಕ ಸಂಬಂಧಗಳಿದೆ. ಭಾವನೆ ಮತ್ತು ಜೀವನದ ಪ್ರಶ್ನೆ ಬಂದಾಗ ಅವರು ಯಾವುದನ್ನು ಆರಿಸಿಕೊಳ್ಳಬೇಕು?
ನಾಳೆ ಒಬ್ಬ ಕಟ್ಟರ್ ಮುಸ್ಲಿಮ್ ಅಧಿಕಾರವಿಡಿದು ಹಂದಿ ಮಾಂಸ ನಿಷೇ ಧಿಸಬಹುದು ಅಥವಾ ಒಬ್ಬ ಕಟ್ಟರ್ ಬ್ರಾಹ್ಮಣನೋ ಲಿಂಗಾಯಿತನೋ ಅಧಿಕಾ ರಕ್ಕೆ ಬಂದು ಎಲ್ಲ್ಲಾ ಮಾಂಸ ನಿಷೇಧಿಸುವ ಕಾನೂನು ಮಾಡಬಹುದು ಅಥವಾ ಕಟ್ಟರ್ ಮಾಂಸಪ್ರಿಯನೊಬ್ಬ ಎಲ್ಲರೂ ಎಲ್ಲ ಮಾಂಸವನ್ನೂ ಸೇವಿಸಲೇಬೇಕು, ಇಲ್ಲವಾದರೆ ಶಿಕ್ಷಿಸುತ್ತೇವೆ ಎಂಬ ಕಾನೂನು ಮಾಡಿಬಿಡಬಹುದು. ಅವುಗಳನ್ನೂ ಒಪ್ಪಿಕೊಳ್ಳಬೇಕಾ?
ಇವೆಲ್ಲ ಅತ್ಲಾಗಿರಲಿ ಬಿಡಿ. ನಮ್ಮ ಮನೆಯಲ್ಲಿ ಕೋಳಿ, ಕುರಿ, ಮೀನು ಮಾತ್ರ ಬೇಯಿಸೋದು. ದನದ ಮಾಂಸದ ನಿಷೇಧದಿಂದಾಗಿ ಕುರಿ ರೇಟು ಮುನ್ನೂರು ರುಪಾಯಿ ದಾಟಿದೆ. ನಮ್ಮಂಥೋರಿಗೇನಾದ್ರೂ ಸಬ್ಸಿಡಿ ಕೊಡ್ತಾರಾ ಈ ಧರ್ಮ ರಕ್ಷಕರು?!!
* ಹಿಂಗ್ಯಾಕೆ

ಅಪನಂಬಿಕೆ ತೊಡೆಯುವಲ್ಲಿ ಕ್ಯಾಥೋಲಿಕರ ಜವಾಬ್ದಾರಿ ಇದೆ

Posted by JAYAKIRANA Kirana on | 0 comments | Leave a comment...


ಕ್ಯಾಥೋಲಿಕೇತರ ಕೆಲವು ಮಿಶಿನರಿ ಕ್ರೈಸ್ತ ಸಂಸ್ಥೆಗಳು ಮತಾಂತರ ಮಾಡುವ ದೃಷ್ಟಿಯಿಂದ ಭಾರತದಲ್ಲಿರುವ ಇತರ ಧರ್ಮಗಳ ವಿಚಾರಗಳಲ್ಲಿ ಕೈಹಾಕುತ್ತಾ ಅಶಾಂತಿ ಸೃಷ್ಟಿಸುತ್ತಿದೆ ಎಂದು ಯಾವುದಾದರೂ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದ ನಾಯಕರು ಹೇಳಿದ್ದು ಇದೆಯೇ? ಮತಾಂತರ ಮಾಡುವ ಕ್ರೈಸ್ತರಿಗಿಂತ ಕ್ಯಾಥೋಲಿಕರಾದ ನಾವು ಭಿನ್ನವಾಗಿದ್ದೇವೆ ಎಂದು ಅಂತಾರಾಷ್ಟ್ರೀಯವಾಗಿ ಮನವರಿಕೆ ಮಾಡಿದ್ದು ಎಲ್ಲಿಯಾದರೂ ಇದೆಯೇ?

ಯೋಗೀಶ್ ಕೆ, ಮಂಗಳೂರು
ಮೇ ೧ ರ ನಿಮ್ಮಿಂದ ವಿಭಾಗದಲ್ಲಿ ಓರ್ವ ಕ್ಯಾಥೋಲಿಕ್ ಕ್ರೈಸ್ತ ಜಪ್ಪು ಎಂಬವರು ಮತಾಂತರ ಮಾಡುವವರು ಕ್ಯಾಥೋಲಿಕ್ ಕ್ರೈಸ್ತರಲ್ಲ ಎಂಬ ವಿಚಾರವನ್ನು ಬರೆದಿದ್ದಾರೆ. ಓರ್ವ ಕ್ಯಾಥೋಲಿಕ್ ಕ್ರೈಸ್ತರಾಗಿ ಇವರು ಹೇಳಿದ್ದು ಸಾಮಾಜಿಕ ಹಿತದೃಷ್ಟಿಯಿಂದ ಪ್ರಶಂಸನೀಯ ವಿಷಯವಾಗಿದೆ. ಆದರೆ ಕ್ರೈಸ್ತ ಎಂದು ಹೇಳುವವರೆಲ್ಲರೂ ಒಂದೇ ಎಂದು ಸಮಾಜ ತಿಳಿದುಕೊಂಡಿರು ವುದು ಒಂದು ವಿಪರ‍್ಯಾಸವಾಗಿದೆ. ಇದರಿಂದಾಗಿ ಕ್ರೈಸ್ತೇತರರು ಕ್ರೈಸ್ತ ಎಂದು ಹೇಳಿದ ಕೂಡಲೇ ಏನೋ ಒಂದು ಸಂಶಯಾತ್ಮಕ ದೃಷ್ಟಿಯಿಂದ ನೋಡು ತ್ತಿರುವುದಕ್ಕೆ ಕಾರಣ ಏನು ಎಂದು ಪ್ರತಿಯೋರ್ವ ದೇಶಭಕ್ತ ಕ್ರೈಸ್ತನೂ ಆತ್ಮಾ ವಲೋಕನವನ್ನು ಮಾಡಿಕೊಳ್ಳುವುದು ಅತೀ ಅವಶ್ಯಕವಾಗಿದೆ.
ಧಾರ್ಮಿಕ ಹೆಸರಿನಲ್ಲಿ ವಂಚನೆಯನ್ನು ಮಾಡುತ್ತಾ ಅಪಾರವಾದ ಹಣ ವನ್ನು ಸಂಗ್ರಹ ಮಾಡಿ ಜನರು ಯಾವುದಕ್ಕಾಗಿ ಹಣವನ್ನು ನೀಡಿದ್ದಾರೆಯೋ ಆ ಉದ್ದೇಶಕ್ಕಾಗಿ ಅದನ್ನು ಸದುಪಯೋಗಪಡಿಸಿಕೊಳ್ಳದೆ ಸ್ವಾರ್ಥಕ್ಕಾಗಿ ಬಳ ಸುತ್ತಿರುವ ಹೇಯ ಕೃತ್ಯವೂ ಎಲ್ಲಾ ಧರ್ಮಗಳಲ್ಲೂ ಕಂಡು ಬರುತ್ತದೆ. ಇಲ್ಲಿ ಹಿಂದುಗಳು ಬಹುಸಂಖ್ಯಾತರಾಗಿರುವುದರಿಂದ ಅವರಲ್ಲಿ ಹೆಚ್ಚಿನ ಸ್ವಾಮಿಗಳು ಹುಟ್ಟಿಕೊಂಡು ಭಕ್ತಿಯ ನೆಲೆಯಲ್ಲಿ ನೀಡಿದ ದುಡ್ಡನ್ನು ದುರುಪಯೋಗ ಪಡಿಸಿಕೊಂಡು ಐಶಾರಾಮದ ಜೀವನ ನಡೆಸುತ್ತಿರುವುದು ಕಂಡು ಬರುತ್ತದೆ. ಆದರೆ ಇತರ ಧರ್ಮಗಳಲ್ಲೂ ಇಂತಹಾ ವ್ಯಕ್ತಿಗಳು ಇದ್ದಾರೆ ಎಂಬುದಕ್ಕೆ ಮೊನ್ನೆ ಕ್ರೈಸ್ತ ಧರ್ಮಗುರು ಒಬ್ಬನ ವಿರುದ್ಧ ಜನರು ತಿರುಗಿ ಬಿದ್ದದ್ದರಿಂದ ಸಾಬೀತಾಗಿದೆ. ಕ್ರೈಸ್ತರ ಧಾರ್ಮಿಕ ವಿಚಾರಗಳಲ್ಲಿ ಮತ್ತು ಜೀವನದಲ್ಲಿ ಕೆಲವು ಸ್ವಾರ್ಥಿ ಧರ್ಮಗುರುಗಳು ಕೈಯಾಡಿಸಿ ಅವರನ್ನು ತಮ್ಮ ಮೂಗಿನ ನೇರಕ್ಕೆ ಕುಣಿಸುವ ಬಗ್ಗೆ ಪ್ರತಿಭಟನೆ ಇತ್ತೀಚೆಗೆ ಕ್ರೈಸ್ತರಿಂದಲೇ ಪತ್ರಿಕೆಗಳ ಮೂಲಕ ವ್ಯಕ್ತವಾಗಿತ್ತು.
ಖಾಸಗಿ ಚಾನೆಲ್‌ಗಳಲ್ಲಿ ಧರ್ಮೋಪದೇಶವನ್ನು ಮಾಡುತ್ತಾ ಭಕ್ತರನ್ನು ಭಕ್ತಿಪರಾಕಾಷ್ಠೆಗೆ ಕೊಂಡೊಯ್ಯುವ ಗುರುವೊಬ್ಬನ ಅಸಲಿಯತ್ತು ಏನೆಂಬುದು ಮೊನ್ನೆ ಪ್ರಕಟವಾಯಿತು ಅಷ್ಟೆ.
ಮನೆ ಮನೆಗೆ ತಿರುಗಿ ಕರಪತ್ರ ಹಂಚಿ ಹಿಂದೂ ಧರ್ಮದ ದೈವ, ದೇವ ರುಗಳು, ಪದ್ಧತಿಗಳನ್ನು ಅವಹೇಳನ ಮಾಡುತ್ತಾ ಮತಾಂತರ ಮಾಡುವ ಕ್ರೈಸ್ತರು ಬಡ, ಮುಗ್ಧ ಹಿಂದುಗಳ ತಲೆ ಕೆಡಿಸಿ ಅವರನ್ನು ಮತಾಂತರಿಸುವಲ್ಲಿ ಕೆಲವು ಕ್ರೈಸ್ತ ಮಿಶಿನರಿ ಸಂಸ್ಥೆಗಳು ಸಕ್ರಿಯವಾಗಿದ್ದು, ಈ ಬಗ್ಗೆ ಕೆಲವು ಕಡೆ ಯಶಸ್ಸನ್ನೂ ಕಂಡದ್ದು ಕಂಡು ಬರುತ್ತದೆ. ಹೊಟೇಲು, ಕೆಲವು ಮನೆಗಳಲ್ಲಿ ವಿಚಿತ್ರವಾಗಿ ಪ್ರಾರ್ಥನೆ ಎಂಬ ಕೂಟವನ್ನು ಮಾಡುತ್ತಾ ಮುಗ್ಧರ ತಲೆ ತಿರು ಗಿಸುತ್ತಿದ್ದಾರೆ. ನಗರದ ಹೊರವಲಯದ ಹಳ್ಳಿಗಳಲ್ಲಿ ಇವರು ಸಕ್ರಿಯರಾಗಿರು ವುದು ಕಂಡು ಬರುತ್ತದೆ. ಇವರ ಬಲೆಗೆ ಬಿದ್ದವರಲ್ಲಿ ಅಸಾಮಾನ್ಯವಾದ ಅಪ ಪ್ರಚಾರವನ್ನು ಇವರು ಮಾಡುತ್ತಿದ್ದಾರೆ. ಇಂಥವರು ತಮ್ಮ ನೆರೆಕರೆಯವ ರೊಂದಿಗೆ ಸಹಬಾಳ್ವೆ ಮಾಡಲೂ ಹಿಂಜರಿಯುತ್ತಿದ್ದಾರೆ.
ಈ ರೀತಿ ಅಕ್ರಮವಾಗಿ ಹಳ್ಳಿ ಹಳ್ಳಿಗೆ ತಿರುಗಿ ಮತಾಂತರ ಮಾಡುವ ಕ್ರೈಸ್ತ ಮಿಶಿನರಿಗಳ ವಿರುದ್ಧ ಹಿಂದೂ ಸಂಘಟನೆಗಳು ಕಾರ್ಯಾಚರಣೆ ಮಾಡಿ ಕೆಲವು ಕಡೆ ಅಶಾಂತಿಯ ವಾತಾವರಣ ಉಂಟಾಗಿದ್ದು, ಎಲ್ಲರಿಗೂ ತಿಳಿದಿದೆ. ಮಿಶಿನರಿಗಳ ಕೂಟವನ್ನು ಭಂಗಗೊಳಿಸಿ ಅಲ್ಲಿ ಸೇರಿದವರನ್ನು ಓಡಿಸಿದ್ದು, ಕೂಡಾ ನಡೆದಿದೆ. ಇಂತಹಾ ಸಂದರ್ಭದಲ್ಲಿ ಕೆಲವು ಅನಾಹುತಗಳು ಸಂಭವಿ ಸಿದ್ದು, ಕೆಲವರು ಗಾಯಾಳುಗಳಾದದ್ದೂ ಇದೆ. ಇಂತಹ ಘಟನೆಗಳು ಅಂತಾ ರಾಷ್ಟ್ರೀಯವಾಗಿ ಸುದ್ದಿಯನ್ನು ಪಡೆದು ಭಾರತದಲ್ಲಿ ಕ್ರೈಸ್ತರ ಮೇಲೆ ದಾಳಿ, ಭಾರತದಲ್ಲಿ ಕ್ರೈಸ್ತರಿಗೆ ಭೀತಿಯ ವಾತಾವರಣ ಇದೆ ಎಂದು ಕೆಲವು ಸರಕಾ ರೇತರ ಸಂಸ್ಥೆಗಳು, ಮಿಶಿನರಿ ಸಂಸ್ಥೆಗಳು ಗುಲ್ಲೆಬ್ಬಿಸಿದ್ದವು. ಆಗ ಜಗತ್ತಿನ ಕ್ರೈಸ್ತರ ರಾಷ್ಟ್ರಗಳು ಭಾರತದ ಬಗ್ಗೆ ಅದರಲ್ಲೂ ಹಿಂದೂಗಳ ಬಗ್ಗೆ ಸಂಶಯಾತ್ಮಕ ದೃಷ್ಟಿಯಿಂದ ನೋಡಲಾರಂಭಿಸಿದವು. ಈ ಬಗ್ಗೆ ಅಂತಾರಾಷ್ಟ್ರೀಯವಾಗಿ ಹೇಳಿಕೆಗಳು ಬರಲು ಆರಂಭಿಸಿದವು. ಇಂತಹಾ ಸಂದರ್ಭದಲ್ಲಿ ಕ್ಯಾಥೋಲಿಕ್ ಕ್ರೈಸ್ತ ಸಮುದಾಯ ಹೇಗೆ ನಡೆದುಕೊಂಡಿತು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ನಾವು ಭಾರತ ದೇಶ ದಲ್ಲಿ ನೂರಾರು ವರ್ಷಗಳಿಂದ ಸಹಬಾಳ್ವೆ ನಡೆಸುತ್ತಿದ್ದೇವೆ. ನಮಗೂ ಹಿಂದುಗಳಿಗೂ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ನಮ್ಮ ಧಾರ್ಮಿಕ ವಿಚಾರಗಳಲ್ಲಿ ಹಿಂದು ಗಳು ಕೈ ಹಾಕುವುದಿಲ್ಲ. ಆದರೆ ಕ್ಯಾಥೋಲಿಕೇತರ ಕೆಲವು ಮಿಶಿನರಿ ಕ್ರೈಸ್ತ ಸಂಸ್ಥೆಗಳು ಮತಾಂತರ ಮಾಡುವ ದೃಷ್ಟಿಯಿಂದ ಭಾರತದಲ್ಲಿರುವ ಇತರ ಧರ್ಮಗಳ ವಿಚಾರ ಗಳಲ್ಲಿ ಕೈಹಾಕುತ್ತಾ ಅಶಾಂತಿ ಸೃಷ್ಟಿಸುತ್ತಿದೆ ಎಂದು ಯಾವುದಾದರೂ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದ ನಾಯಕರು ಹೇಳಿದ್ದು ಇದೆಯೇ? ಮತಾಂತರ ಮಾಡುವ ಕ್ರೈಸ್ತರಿಗಿಂತ ಕ್ಯಾಥೋಲಿಕರಾದ ನಾವು ಭಿನ್ನವಾಗಿದ್ದೇವೆ ಎಂದು ಅಂತಾರಾಷ್ಟ್ರೀಯ ವಾಗಿ ಮನವರಿಕೆ ಮಾಡಿದ್ದು ಎಲ್ಲಿಯಾದರೂ ಇದೆಯೇ? ಒಂದೆರಡು ಕ್ಯಾಥೋಲಿಕ್ ಕ್ರೈಸ್ತ ಕೇಂದ್ರಗಳಿಗೆ ದಾಳಿ ನಡೆದದ್ದು ಕ್ರೈಸ್ತರೆಲ್ಲರೂ ಒಂದೇ ಅವರೆಲ್ಲರೂ ಮತಾಂ ತರ ಮಾಡುವವರು ಎಂಬ ತಪ್ಪು ನಂಬಿಕೆಯಿಂದಲೇ ಆಗಿದೆ. ಇಲ್ಲಿರುವ ವಾಸ್ತವ ವನ್ನು ಕ್ಯಾಥೋಲಿಕ್ ಕ್ರೈಸ್ತರು ತಿಳಿದುಕೊಳ್ಳಬೇಕಾಗಿತ್ತು. ಆದರೆ ಅವರು ಇದನ್ನು ತಿಳಿದುಕೊಳ್ಳದೆ ಮಂಗಳೂರಿನಲ್ಲಿ ನಡೆದ ‘ಕ್ರೈಸ್ತರ ಮೇಲಿನ ದಾಳಿ’ ತಡೆಯುವ ಮೆರ ವಣಿಗೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಆ ಮೂಲಕ ಮತಾಂತರ ಮಾಡುವ ಕ್ರೈಸ್ತ ಗುಂಪುಗಳಿಗೂ ಕ್ಯಾಥೋಲಿಕರಿಗೂ ಯಾವುದೇ ವ್ಯತ್ಯಾಸವಿಲ್ಲ. ನಾವೆಲ್ಲರೂ ಒಂದೇ, ನಾವೆಲ್ಲರೂ ಕ್ರೈಸ್ತರು ಎಂದು ತೋರಿಸಿಕೊಟ್ಟರು.
ಜೆಪ್ಪುವಿನ ಓರ್ವ ಕ್ಯಾಥೋಲಿಕ್ ಕ್ರೈಸ್ತರು ಬರೆದ ಪತ್ರದಲ್ಲಿ ಮತಾಂತರಿ ಕ್ರೈಸ್ತರ ಕೃತ್ಯಗಳನ್ನು ಕ್ರೈಸ್ತರು ಎಂಬ ನೆಲೆಯಲ್ಲಿ ಮಾಡುವವರನ್ನು ಕ್ಯಾಥೋಲಿಕರೇ ನಿಲ್ಲಿಸ ಬೇಕು ಎಂದು ಬರೆದುದರಲ್ಲಿ ಬಹಳಷ್ಟು ಚಿಂತನಾರ್ಹ ವಿಷಯಗಳಿವೆ. ಈ ರೀತಿ ಆದರೆ ಅಕ್ರಮವಾಗಿ ಮತಾಂತರ ಮಾಡುವ, ವಿಕೃತವಾಗಿ ಪ್ರಾರ್ಥನೆ ಮಾಡುವ, ಸಮಾಜದ ಶಾಂತಿ ಕದಡುವ ಮತಾಂತರ ಮಾಡುವ ಮಿಶಿನರಿ ಕ್ರೈಸ್ತ ಪಾದ್ರಿಗಳ ಅಟ್ಟಹಾಸ ನಿಲ್ಲಬಹುದು. ಈ ರೀತಿಯಾಗಿ ಕ್ಯಾಥೋಲಿಕರು ಮಿಶನರಿ ಕ್ರೈಸ್ತರ ಕೃತ್ಯಗ ಳನ್ನು ಕಂಡ ಕಂಡಲ್ಲಿ ಸಾರ್ವಜನಿಕವಾಗಿ ಖಂಡಿಸಿದರೆ, ಅವರ ಪ್ರಾರ್ಥನಾ ಕೇಂದ್ರಗ ಳನ್ನು ಮುಚ್ಚುವಲ್ಲಿ ಕಾರ್ಯಪ್ರವೃತ್ತವಾದರೆ ಭಾರತದಲ್ಲಿ ಅನ್ಯಧರ್ಮೀಯರು ಕ್ರೈಸ್ತ ರನ್ನು ಸಂಶಯ ದೃಷ್ಟಿಯಿಂದ ನೋಡುವುದು ನಿಲ್ಲಬಹುದು.

ಗೆಳೆಯರ ಜತೆ ಹಿಂದಿನ ಸಲುಗೆ ಬೇಡ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ಮದುವೆಯಾಗಿ ಎಂಟು ತಿಂಗಳು ಕಳೆ ದಿದೆ. ನನ್ನ ವಯಸ್ಸು ೨೨ ವರ್ಷ. ನಾನು ನನ್ನ ಕಾಲ ಮೇಲೆ ನಿಂತು ಒಂದೆರಡು ವರ್ಷ ಬಿಟ್ಟು ಮದುವೆಯಾಗಬೇಕೆಂದಿದ್ದೆ. ಆದರೆ ನನಗೆ ಇನ್ನೂ ಇಬ್ಬರು ತಂಗಿಯಂದಿರು ಇರುವ ಕಾರಣ ಮದುವೆಯಾಗುವುದು ಅನಿವಾರ್ಯವಾಯಿತು. ನಾನು ಡಿಗ್ರಿ ಮುಗಿ ಸಿದ್ದೇನೆ. ನನ್ನ ಗಂಡ ಒಳ್ಳೆಯ ಕೆಲಸದಲ್ಲಿದ್ದಾರೆ. ಆದರೆ ಈಗೀಗ ನನ್ನ ಮೇಲೆ ಕಾರಣವಿಲ್ಲದೆ ಜಗಳ ಮಾಡುವುದು, ಶಂಕೆ ಪಡು ವುದು ಮಾಡುತ್ತಾರೆ. ಇದರಿಂದ ನನಗೆ ದಾಂಪತ್ಯದಲ್ಲಿ ಸಂತಸ ಎನ್ನುವುದೇ ಇಲ್ಲ. ನಾನು ಕಾಲೇಜಿನಲ್ಲಿ ಬಹಳಷ್ಟು ಹುಡುಗರ ಜೊತೆ ಫ್ರೆಂಡ್‌ಶಿಪ್ ಮಾಡಿಕೊಂಡಿದ್ದೆ. ಅವರ ಜೊತೆ ಮಾತಾ ಡುತ್ತಾ ಇದ್ದೆ. ಕಾಲೇಜ್ ಬಿಟ್ಟ ಬಳಿಕವೂ ಅವರ ಜೊತೆ ಫ್ರೆಂಡ್ಲಿ ಆಗಿದ್ದೇನೆ. ಅವರು ನನಗೆ ಕಾಲ್, ಮೆಸೇಜ್ ಮಾಡುತ್ತಾರೆ.
ನಾನು ಅವರ ಜೊತೆ ಬೇಕಾದಷ್ಟೇ ಮಾತಾಡುತ್ತೇನೆ. ಅವರು ಯಾವತ್ತೂ ನನ್ನ ಜೊತೆ ಅಸಭ್ಯವಾಗಿ ವರ್ತಿಸಿಲ್ಲ. ಆದರೆ ನನ್ನ ವರು ಇತ್ತೀಚೆಗೆ ನನ್ನನ್ನು ಸಂಶಯದಿಂದ ನೋಡುತ್ತಾರೆ. ಮಾತು ಮಾತಿಗೂ ಪ್ರಶ್ನೆ ಕೇಳುತ್ತಾ ಇರುತ್ತಾರೆ. ನನ್ನ ಮೊಬೈಲ್ ಅನ್ನು ಪದೇ ಪದೇ ಚೆಕ್ ಮಾಡುತ್ತಾರೆ. ಅದರಲ್ಲಿ ಇರುವ ಮೆಸೇಜ್, ಕಾಲ್ ಲಿಸ್ಟ್ ಬಗ್ಗೆ ನೂರಾರು ಪ್ರಶ್ನೆಗಳನ್ನು ಕೇಳುತ್ತಾರೆ. ನಾನು ಎಲ್ಲಿಗಾದರೂ ಹೋದರೆ ಆ ಬಗ್ಗೆ ಏನೇನೋ ಕೇಳುತ್ತಾರೆ. ಗೆಳತಿ ಯರಿಗೆ ಫೋನ್ ಮಾಡಲು ತೊಡಗಿದರೆ ಫೋನ್ ಕದ್ದು ಕೇಳು ತ್ತಾರೆ. ಮದುವೆಯಾಗುವ ವೇಳೆ ಒಳ್ಳೆಯವರಂತೆ ಕಂಡುಬಂದ ಅವರು ದಿನಕಳೆದಂತೆ ಬದಲಾಗಿದ್ದಾರೆ. ನಾನೂ ಅವರೊಂದಿಗೆ ಹಿಂದಿನಂತೆ ಮಾತಾಡುತ್ತಿಲ್ಲ. ನನ್ನ ಎಲ್ಲಾ ಸ್ವಾತಂತ್ರ್ಯಕ್ಕೂ ಇವರಿಂದಾಗಿ ಅಡ್ಡಿಯಾ ಗಿದೆ. ಸರ್, ನನಗೆ ಸೂಕ್ತ ಸಲಹೆ ಕೊಡಿ. ಒಮ್ಮೊಮ್ಮೆ ಇವರಿಂದ ಎಲ್ಲಾದರೂ ದೂರ ಹೋಗಿ ಇದ್ದುಬಿಡೋಣ ಎಂದೆನಿಸುತ್ತದೆ. ನಾನೇನು ಮಾಡಲಿ? ಎಲ್ಲದಕ್ಕೂ ಸಂಶಯ ಪಡುವವರ ಜತೆ ಹೇಗೆ ಬಾಳಲಿ?
ಉತ್ತರ: ನಿಮಗೆ ನಿಮ್ಮ ಫ್ರೆಂಡ್ಸ್‌ಗಳೂ ಬೇಕು. ಗಂಡನೂ ಬೇಕು. ಆದರೆ ನಿಮ್ಮ ಗಂಡನ ದೃಷ್ಟಿಯಲ್ಲಿ ಯಜಮಾನರ ದೃಷ್ಟಿಯಲ್ಲಿ ನೀವು ಅವರೊಂ ದಿಗೆ ಮಾತ್ರ ಮಾತಾಡಬೇಕು. ಇಲ್ಲೇ ಸಮಸ್ಯೆ ಸೃಷ್ಟಿಯಾ ಗಿದೆ. ಇಂತಹ ದೃಷ್ಟಿಕೋನ ಎಲ್ಲಾ ಗಂಡಸರಲ್ಲೂ ಇರುತ್ತದೆ. ಕೆಲ ವರು ಹೇಳಿಕೊಳ್ಳುತ್ತಾರೆ, ಕೆಲವರು ಹೇಳಿಕೊಳ್ಳುವುದಿಲ್ಲ. ಸಮಸ್ಯೆಯ ಬಗ್ಗೆ ಪರಸ್ಪರ ಕೂಡಿಕೊಂಡು ಪರಿಹಾರ ಕಂಡುಕೊಂಡರೆ ಇದನ್ನು ಕ್ಷಣದಲ್ಲೇ ಪರಿ ಹರಿಸಲು ಸಾಧ್ಯ. ಇದನ್ನು ನೀವು ಹೀಗೇ ಬೆಳೆಯಲು ಬಿಟ್ಟರೆ ಮುಂದೆ ಸಮಸ್ಯೆಯೂ ಬೆಳೆಯುತ್ತದೆ. ಅವರಿಗೆ ಮದುವೆಯಾದ ನಂತರವೂ ಗೆಳೆಯ, ಗೆಳತಿಯರ ಜತೆ ಸ್ನೇಹದಿಂದ ಮಾತಾಡುವುದು ಇಷ್ಟವಾಗಿರಲಿಕ್ಕಿಲ್ಲ. ಇದನ್ನು ನೀವೂ ಆದಷ್ಟು ಕಡಿಮೆ ಮಾಡಬಹುದು ತಾನೇ? ದಾಂಪತ್ಯದಲ್ಲಿ ಯಾವತ್ತೂ ಹಠವಿರಬಾರದು. ಇಬ್ಬರೂ ಹಠ ಮಾಡುತ್ತೇವಾದರೆ ಮತ್ತೆ ಸಂಸಾರ ಒಂದಾಗಿರಲು ಹೇಗೆ ಸಾಧ್ಯ? ಯಾರಾದರೊಬ್ಬರು ಹಠ ಬಿಡಲೇಬೇಕಾಗುತ್ತದೆ. ಸಮಸ್ಯೆ ಚಿಕ್ಕದಾಗಿ ರಲಿ, ದೊಡ್ಡದೇ ಆಗಿರಲಿ, ಅದರ ಬಗ್ಗೆ ನಿರ್ಲಕ್ಷ್ಯ ಸಲ್ಲದು.
ನಿಮ್ಮ ಗಂಡನ ಜತೆ ಕಾಲೇಜ್ ಫ್ರೆಂಡ್ಸ್‌ಗಳ ಬಗ್ಗೆ ಮುಕ್ತವಾಗಿ ಮಾತಾಡಿ. ಯಾವುದೇ ಕಾರಣಕ್ಕೂ ಹೊಗಳಲು ಹೋಗಬೇಡಿ. ಅವ ರಿಗೆ ಯಾರಾದರೂ ಏನಾದರೂ ಹೇಳಿದ್ದರೆ, ಆ ಸಂಶಯವನ್ನು ನಿವಾ ರಿಸಲು ಪ್ರಯತ್ನ ಮಾಡಿ. ಗೆಳೆಯರು ಬೇಕಾದಷ್ಟೇ ಇರಲಿ. ಅವರ ಜತೆ ಹಿಂದಿನಂತೆ ಸಲುಗೆ ಬೇಡ. ಅವರು ನಿಮ್ಮ ದಾಂಪತ್ಯದ ನಡುವೆ ನುಸು ಳದಂತೆ ನೋಡಿಕೊಳ್ಳಿ, ಪತಿಗೆ ನಿಮ್ಮ ಮೇಲೆ ನಂಬಿಕೆ ಬರುವಂತೆ ಮಾಡಬೇಕಾದದ್ದು ನಿಮ್ಮ ಕರ್ತವ್ಯ. ಮಾತಾಡದೆ ಮೌನವಿದ್ದು ಪ್ರಯೋ ಜನವೇನೂ ಇಲ್ಲ.

Page 1

Posted by JAYAKIRANA Kirana on | 0 comments | Leave a comment...


Page 2

Posted by JAYAKIRANA Kirana on | 0 comments | Leave a comment...


Page 3

Posted by JAYAKIRANA Kirana on | 0 comments | Leave a comment...


Page 4

Posted by JAYAKIRANA Kirana on | 0 comments | Leave a comment...


Page 5

Posted by JAYAKIRANA Kirana on | 0 comments | Leave a comment...


Page 6

Posted by JAYAKIRANA Kirana on | 0 comments | Leave a comment...

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4047) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2502) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3677) lokayukta (3) madikeri (1) maleria (1) mangalore (585) mangaloreairport (1) manglore (7) manipal (29) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (415) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (272) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (799) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (485) udyoga (60) ullal (7) upcl (2) upi (152) uppinangadi (47) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)