ಉದ್ಯಮಿ ಆತ್ಮಹತ್ಯೆ

Posted by JAYAKIRANA Kirana on Tuesday, 1 May 2012 | 0 comments | Leave a comment...

ಪಡುಬಿದ್ರಿ: ವ್ಯಾಪಾರದಲ್ಲಿ ತೀರ ನಷ್ಟ ಮತ್ತು ಸಾಲಗಾರರ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬರು ಶಾಂಭವಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಜಮಾಡಿಯ ಹಳೆ ದಕ್ಕೆ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಮುಂಬೈಯಲ್ಲಿ ಅಂಗಡಿ ವ್ಯವಹಾರ ನಡೆಸುತ್ತಿದ್ದ ಸಚ್ಚೇರಿಪೇಟೆ ಪೇರೂರಿನ ಸಂತೋಷ್ ಕಾಡ್ಯ ಸಫಲಿಗ ಎಂದು ಗುರುತಿಸಲಾಗಿದೆ. ಮುಂಬೈಯ ಬಾಂದ್ರಾದಲ್ಲಿ ಕ್ಯಾಸೆಟ್ ಅಂಗಡಿ ಮತ್ತು ಐಸ್‌ಕ್ರೀಂ ಅಂಗಡಿ ಹೊಂದಿದ್ದ ಸಂತೋಷ್ ಸಫಲಿಗ(೪೩), ಶೇರು ಮಾರುಕಟ್ಟೆ ಹಾಗೂ ಇನ್ನಿತರ ಸಣ್ಣಪುಟ್ಟ ವ್ಯವಹಾರ ಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ವ್ಯಾಪಾರ ದಲ್ಲಿ ತೀವ್ರ ನಷ್ಟ ಉಂಟಾಗಿತ್ತು ಎಂದು ಅವರ ಸಂಬಂಧಿ ಕರು ತಿಳಿಸಿದ್ದಾರೆ. ವ್ಯಾಪಾರದ ನಷ್ಟದ ಜೊತೆಗೆ ಸಾಲಗಾರರು ಪದೇ ಪದೇ ದೂರವಾಣಿ ಮೂಲಕ ಬೆದರಿಕೆಯನ್ನು ಒಡ್ಡುತ್ತಿದ್ದರು ಎಂದೂ ತಿಳಿದು ಬಂದಿದೆ. ರವಿವಾರ ಬೆಳಿಗ್ಗೆ ೯ ಗಂಟೆಗೆ ತಾನು ಮರಳಿ ಮುಂಬೈಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಸಚ್ಚರಿಪೇಟೆಯ ತನ್ನ ಮನೆಯಿಂದ ಸಂತೋಷ್ ಹೊರಟಿದ್ದರು. ಆದರೆ ಮುಂಬೈಗೆ ಹೋಗಬೇಕಾದ ಸಂತೋಷ್ ಶಾಂಭವಿ ಹೊಳೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೆಜಮಾಡಿ ಹಳೆ ದಕ್ಕೆ ಬಳಿ ಸೋಮವಾರ ಬೆಳಿಗ್ಗೆ ಸ್ಥಳೀಯ ಮರಳು ಸಾಗಾಟಗಾರರಿಗೆ ಶಾಂಭವಿ ಹೊಳೆಯ ಸ್ವಾಮಿಲ್ ಕುದ್ರು ಬಳಿ ಅಪರಿಚಿತ ಶವ ತೇಲುತ್ತಿರುವುದು ಕಂಡು ಬಂದಿದ್ದು, ಅವರು ಪಡುಬಿದ್ರಿ ಪೊಲೀಸರಿಗೆ ತಿಳಿಸಿದ್ದಾರೆ.
ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವ ಪರೀಶೀಲಿಸಿದ ಬಳಿಕ ಪರ್ಸ್‌ನಲ್ಲಿದ್ದ ದೂರವಾಣಿ ಸಂಖ್ಯೆಯ ಆಧಾರದಲ್ಲಿ ಶವದ ಗುರುತು ಪತ್ತೆ ಹಚ್ಚಿದ್ದಾರೆ.

ಯುವತಿಯ ಅಪಹರಣ

Posted by JAYAKIRANA Kirana on | 0 comments | Leave a comment...

ಸುಳ್ಯ: ಸಂಬಂಧಿಕರ ಮನೆಗೆ ಬಂದಿದ್ದ ಯುವತಿಯೊಬ್ಬಳನ್ನು ಬೈಕಿನಲ್ಲಿ ಬಂದ ಯುವಕರಿಬ್ಬರು ಅಪಹರಿಸಿದ ಘಟನೆ ಅಮರ ಮೂಡ್ನೂರು ಗ್ರಾಮದ ಕುಕ್ಕುಜಡ್ಕದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಕಾಞಂಗಾಡ್ ತಾಲೂಕು ಪನ ತ್ತಡಿ ಗ್ರಾಮದ ಗುರಗುಂಜದ ವೆಂಕಪ್ಪ ಗೌಡರ ಪುತ್ರಿ ಸಂಧ್ಯಾ(೨೧) ಅಪಹ ರಣಕ್ಕೆ ಒಳಗಾದ ಯುವತಿ. ಭಾನು ವಾರ ಆಕೆ ತನ್ನ ಸಂಬಂಧಿಕರ ಮನೆ ಯಾದ ಕುಕ್ಕುಜಡ್ಕ ಸಮೀಪದ ಮುಂಡ್ರಾಜೆ ಎಂಬಲ್ಲಿಗೆ ಬಂದಿದ್ದಳು. ಸೋಮವಾರ ಮಧ್ಯಾಹ್ನ ವೇಳೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವು ದೆಂದು ಸಂಬಂಧಿ ಮನೆಯವರು ನಿರ್ಧ ರಿಸಿದ್ದು, ಈಕೆಯೂ ಅವರೊಂದಿಗೆ ಹೊರಟು ನಿಂತಿದ್ದಳು. ಈ ವೇಳೆಗೆ ಬೈಕಿನಲ್ಲಿ ಬಂದ ಯುವಕರು ಯುವತಿ ಯನ್ನು ಬಲವಂತವಾಗಿ ಬೈಕಿನಲ್ಲಿ ಕುಳ್ಳಿ ರಿಸಿಕೊಂಡು ಹೋಗಿದ್ದಾರೆ. ಅಪಹರಣ ಸಂದರ್ಭ ಯುವತಿಯನ್ನು ಮನೆ ಯವರು ಹಿಡಿಯಲು ಪ್ರಯತ್ನಿ ಸಿದ್ದು, ಆಕೆಯ ಚೂಡಿದಾರ್‌ನ ವೇಲ್ ಅವರ ಕೈಯಲ್ಲಿ ಉಳಿದಿದೆ.
ಸಂಧ್ಯಾ ಪುತ್ತೂರಿನ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದಳು. ರಜೆ ಸಂದರ್ಭ ಮನೆಗೆ ಬಂದಿದ್ದ ವೇಳೆ ಸಂಬಂಧಿಕರ ಮನೆಗೆ ತೆರಳಿದ್ದಳು. ದೇವಚಳ್ಳ ಗ್ರಾಮದ ಮಾವಿನಕಟ್ಟೆಯ ಸರ್ವೇಶ್ ಎಂಬ ಯುವಕ ಈಕೆಯೊಂದಿಗೆ ಆಗಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದು, ಛಾಯಾಗ್ರಾಹಕನಾಗಿರುವ ಆತ ಸುಳ್ಯದಲ್ಲಿ ಸ್ಟುಡಿಯೋ ನಡೆಸುತ್ತಿದ್ದಾನೆ. ಆತನೇ ಅಪಹರಿಸಿರಬೇಕೆಂದು ಯುವತಿಯ ತಂದೆ ವೆಂಕಪ್ಪ ಗೌಡರು ಸುಳ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಯುವಕನ ಕೊಲೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಯುವಕನನ್ನು ತಲೆಗೆ ಬಡಿದು ಬರ್ಬರವಾಗಿ ಹತ್ಯೆಗೈ ಯ್ಯಲಾಗಿರುವ ಘಟನೆ ತಳಿಪರಂಬ ಪರಶ್ಶಿನಿಕಡವು ಸಮೀಪ ನಿನ್ನೆ ನಡೆದಿದೆ.
ಮೂಲತ: ತಮಿಳ್ನಾಡಿನ ತಿರು ವಳ್ಳೂರು ನಿವಾಸಿ, ಪರಶ್ಶಿನಿಕಡವು ಕೋಲ್ಮೊಟ್ಟ ಎಂಬಲ್ಲಿ ಬಾಡಿಗೆ ಮನೆ ಯಲ್ಲಿ ವಾಸಿಸುವ ಕೋಲ್ಮೊಟ್ಟದ ಸ್ಟೈನ್‌ಲೆಸ್ ಸ್ಟೀಲ್ ಕಂಪೆನಿಯ ನೌಕರ ಶಾಂತಕುಮಾರ್ ಹತ್ಯೆಯಾದವರು. ನಿನ್ನೆ ಮುಂಜಾನೆ ಘಟನೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿ ಸಹೋದ್ಯೋಗಿ ಯಾದ ತಿರುವಳ್ಳೂರು ನಿವಾಸಿ ಬಾಬು ಎಂಬಾತನಿಗಾಗಿ ಶೋಧ ಆರಂಭಿಸ ಲಾಗಿದೆ. ಬಾಬು ಹಾಗೂ ಶಾಂತಕುಮಾರ್ ಒಂದೇ ವಸತಿ ಗೃಹದಲ್ಲಿ ವಾಸಿಸುತ್ತಿದ್ದರು. ಸಮೀಪದ ಇನ್ನೊಂದು ಕೊಠಡಿಯಲ್ಲಿ ತಮಿಳ್ನಾಡು ನಿವಾಸಿಗಳಾದ ಇಬ್ಬರು ವಾಸವಿದ್ದರು. ಮೊನ್ನೆ ರಾತ್ರಿ ಒಟ್ಟಿಗೆ ಮದ್ಯಪಾನಗೈದು ಮನೆಗೆ ಬಂದಿದ್ದ ಬಾಬು ಹಾಗೂ ಶಾಂತಕುಮಾರ್ ಪರಸ್ಪರ ಜಗಳವಾಡಿದ್ದರೆಂದು ನೆರೆಮನೆ ನಿವಾಸಿಗಳು ತಿಳಿಸಿದ್ದಾರೆ. ಬಳಿಕ ಇವರು ನಿದ್ರಿಸಿದ್ದರು. ಆದರೆ, ನಿನ್ನೆ ಮುಂಜಾನೆ ವೇಳೆಗೆ ಮತ್ತೆ ಆರ್ತನಾದ ಕೇಳಿ ತಾವು ಓಡಿ ತೆರಳಿದಾಗ ಶಾಂತಕುಮಾರ್ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಬಾಬು ಪರಾರಿಯಾಗಿದ್ದ.
ತಲೆಯೊಡೆದ ಸ್ಥಿತಿಯಲ್ಲಿದ್ದ ಇವರನ್ನು ತಕ್ಷಣ ಪರಿಯಾರಂ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲೇ ಪ್ರಾಣ ಹೋಗಿತ್ತು. ತಲೆಯ ಹಿಂಭಾಗಕ್ಕೆ ಬಿದ್ದ ಏಟು ಮರಣ ಕಾರಣವೆನ್ನಲಾಗಿದೆ. ತಳಿಪರಂಬ ಇನ್‌ಸ್ಪೆಕ್ಟರ್ ಜಾನ್ ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೃತದೇಹವನ್ನು ಮಹಜರು ಬಳಿಕ ಇಂದು ಊರಿಗೆ ಕೊಂಡೊಯ್ಯಲಾಗುವುದು. ಒಂದು ತಿಂಗಳ ಹಿಂದಷ್ಟೇ ಇವರು ಕೆಲಸಕ್ಕೆಂದು ತಮಿಳುನಾಡಿನಿಂದ ಬಂದಿದ್ದರು.

ಕೊಲೆ ಆರೋಪಿ ರಿಕ್ಷಾಕ್ಕೆ ಬೆಂಕಿ ಹಚ್ಚಲು ಯತ್ನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೊಲೆ ಆರೋಪ ಹೊತ್ತ ರಿಕ್ಷಾ ಚಾಲಕ ನ್ಯಾಯಾಲಯಕ್ಕೆ ಹಾಜರಾಗಿ ಮರಳಿ ಬರುವಾಗ ಆತನ ರಿಕ್ಷಾಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಿನ್ನೆ ಬಿ.ಸಿ.ರೋಡ್ ಸಮೀಪ ನಡೆದಿದೆ.
ಬಿ.ಸಿ.ರೋಡ್ ಕೆಳಗಿನ ಪೇಟೆಯ ರಿಕ್ಷಾ ಚಾಲಕನಾಗಿದ್ದ ಇಕ್ಬಾಲ್ ಎಂಬಾತನ ಹತ್ಯಾ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನುವ ಆರೋಪ ಹೊತ್ತಿರುವ ನಿತಿನ್ ಸಜಿಪ ನಿನ್ನೆ ಇಲ್ಲಿನ ಕೃಷ್ಣಿಮಾ ಹೊಟೇಲ್ ಸಮೀಪ ತನ್ನ ರಿಕ್ಷಾ ಪಾರ್ಕ್ ಮಾಡಿ ನ್ಯಾಯಾಲಯಕ್ಕೆ ಹಾಜರಾಗಿದ್ದ.
ಆಗ ನಿಲ್ಲಿಸಿದ್ದ ರಿಕ್ಷಾಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಲು ಯತ್ನಿಸಿರುವುದು ಮಹಿಳೆಯೊಬ್ಬರ ಗಮನಕ್ಕೆ ಬಂತು. ಕೂಡಲೇ ಆಕೆ ಸ್ಥಳೀಯರ ಗಮನ ಸೆಳೆದು ಬೆಂಕಿಯನ್ನು ನಂದಿಸಿದರು. ಪೇಪರ್‌ಗೆ ಬೆಂಕಿ ಕೊಟ್ಟು ಆನಂತರ ರಿಕ್ಷಾ ಸೀಟಿಗೆ ಬೆಂಕಿ ಹಚ್ಚುವ ಯತ್ನ ನಡೆದಿತ್ತು. ಸಕಾಲದಲ್ಲಿ ಸಾರ್ವಜನಿಕರು ಬೆಂಕಿ ನಂದಿಸಿ ಆಗಬಹುದಾದ ಅನಾಹುತ ತಪ್ಪಿಸಿದ್ದಾರೆ. ನಿತಿನ್ ಸಜಿಪ ಹಿಂದೂ ಸಂಘಟನೆಗಳಲ್ಲಿ ಸಕ್ರಿಯನಾಗಿರುವುದರಿಂದ ಕೂಡಲೇ ಈ ವಿಷಯ ತಿಳಿದ ಹಿಂದೂ ಸಂಘಟನೆ ಕಾರ‍್ಯಕರ್ತರು ಗುಂಪು ಸೇರಿದರು. ದುಷ್ಕರ್ಮಿಗಳ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದರು. ಆದರೆ ಯಾರಿಗೂ ಬೆಂಕಿ ಹಚ್ಚಲು ಯತ್ನಿಸಿರುವವರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರಿಂದ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದರು.

ಎಲ್ಲಾ ಸಮಸ್ಯೆಗಳಿಗೂ ವರದಕ್ಷಿಣೆಯೇ ಮೂಲ ಕಾರಣ: ಶಾಹೀದಾ ಸಾದಿಕ್

Posted by JAYAKIRANA Kirana on | 0 comments | Leave a comment...


ಉಡುಪಿ: ದೇಶದಲ್ಲಿ ವರ್ಷಕ್ಕೆ ೫೦ ಲಕ್ಷ ಭ್ರೂಣ ಹತ್ಯೆ ನಡೆಯುತ್ತಿದೆ. ೭೭ ನಿಮಿಷಕ್ಕೊಂದು ವರದಕ್ಷಿಣೆ ಹತ್ಯೆಯಾ ಗುತ್ತಿದೆ. ಉತ್ತರ ಭಾರತದ ಮರ್ಯಾದಾ ಹತ್ಯೆ ಕರ್ನಾಟಕಕ್ಕೂ ಕಾಲಿಟ್ಟಿದೆ. ಬಾಲ್ಯ ವಿವಾಹ ನಡೆಯುತ್ತಿದ್ದು, ಮರು ವಿವಾಹಕ್ಕೆ ಅವಕಾಶವಿಲ್ಲದಂತಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಲಭಿಸುತ್ತಿಲ್ಲ. ವೇಶ್ಯಾವಾಟಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದೆಲ್ಲಕ್ಕೂ ವರದಕ್ಷಿಣೆ ಸಮಸ್ಯೆಯೇ ಕಾರಣವಾಗಿದೆ ಎಂದು ನ್ಯಾಷನಲ್ ವಿಮೆನ್ಸ್ ಫ್ರೆಂಟ್ (ಎನ್. ಡಬ್ಲ್ಯು.ಎಫ್.) ರಾಜ್ಯಾಧ್ಯಕ್ಷೆ ಶಾಹೀದಾ ಅಸ್ಲಾಂ ಹೇಳಿದ್ದಾರೆ.
ನ್ಯಾಷನಲ್ ವಿಮೆನ್ಸ್ ಫ್ರ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಸಂಜೆ ಉಡುಪಿಯ ಡಾನ್ ಬಾಸ್ಕೋ ಹಾಲ್‌ನಲ್ಲಿ ವರ ದಕ್ಷಿಣೆ ಮೋಹಿಗಳು ಸಮಾಜ ದ್ರೋಹಿ ಗಳು ಎಂಬ ಘೋಷಣೆಯೊಂದಿಗೆ ವರದಕ್ಷಿಣೆ ವಿರೋಧಿ ಜನಜಾಗೃತಿ ಅಭಿಯಾನದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿ ಅವರು ಮಾತ ನಾಡುತ್ತಿದ್ದರು.
ಹೆಣ್ಮಕ್ಕಳ ಆರೈಕೆಯಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಶಿಕ್ಷಣದಿಂದಲೂ ಹೆಣ್ಮಕ್ಕಳನ್ನು ಅರ್ಧಕ್ಕೆ ಮೊಟಕುಗೊ ಳಿಸಲಾಗುತ್ತಿದೆ. ಕುರಾನ್ ಸಹಿತ ಯಾವ ಧರ್ಮಗಳೂ ವರದಕ್ಷಿಣೆಯನ್ನು ಬೆಂಬಲಿಸುವುದಿಲ್ಲ. ಬದಲಾಗಿ ವಿರೋಧಿಸುತ್ತದೆ. ಆದರೆ ಜನರು ಬಹಿರಂಗವಾಗಿ ವರದಕ್ಷಿಣೆ ವಿರುದ್ದ ಮಾತನಾಡುತ್ತಾರೆಯೇ ಹೊರತು, ವೈಯಕ್ತಿಕವಾಗಿ ವರದಕ್ಷಿಣೆಯನ್ನು ಆಚರಿಸುತ್ತಾರೆ. ಇದಕ್ಕೆ ಜನರಲ್ಲಿನ ದ್ವಂಧ್ವ ನಿಲುವೇ ಕಾರಣವಾಗಿದೆ. ಸ್ಥಿತಿವಂತರು ಇನ್ನಾದರೂ ಆಡಂಬರದ ಮದುವೆ ಮಾಡುವುದನ್ನು ನಿಲ್ಲಿಸಬೇಕು ಎಂದು ಶಾಹೀದಾ ಮನವಿ ಮಾಡಿಕೊಂಡರು.
ವರದಕ್ಷಿಣೆ ಪಡೆದುಕೊಂಡವರ ಜೀವನದಲ್ಲಿ ಪ್ರೇಮ, ವಿಶ್ವಾಸ ಇರಲು ಸಾಧ್ಯವಿಲ್ಲ. ಕೇವಲ ಹಣ ಮತ್ತು ದೈಹಿಕ ಆಕರ್ಷಣೆಯಿಂದಷ್ಟೇ ಮದುವೆ ಯಾಗುತ್ತಾರೆ. ಬಳಿಕ ಮಕ್ಕಳನ್ನು ಕರುಣಿಸಿ ಪರಾರಿಯಾಗುತ್ತಾರೆ. ಬೇರೆಡೆ ಹೋಗಿ ಮತ್ತೊಂದು ಮದುವೆಯಾಗುತ್ತಾರೆ. ಮದುವೆ ಪ್ರಾಯವಾದರೂ ಮದುವೆಯಾಗದ ಕಾರಣಕ್ಕೆ ಯುವತಿಯರು ನಾಪತ್ತೆಯಾಗುತ್ತಾರೆ. ವರದ ಕ್ಷಿಣೆಯ ಕಾರಣಕ್ಕೆ ಹೆತ್ತವರು ಮೌನ ವಹಿಸುತ್ತಾರೆ. ವರದಕ್ಷಿಣೆ ಎನ್ನುವುದು ಇಂದು ಮನಸ್ಥಿತಿಯಾಗಿ ಬದಲಾಗಿದೆ. ಎಲ್ಲಾ ಸಮಸ್ಯೆಗಳಿಗೂ ವರದಕ್ಷಿಣೆಯೇ ಮೂಲ ಕಾರಣವಾಗಿದೆ. ಇದು ಜನರ ಆಳದಲ್ಲಿ ಬೇರೂರಿದೆ ಎಂದು ಶಾಹೀದಾ ಅಸ್ಲಾಂ ತಿಳಿಸಿದರು.
ಉಡುಪಿ ನಗರ ಪೊಲೀಸ್ ಠಾಣೆಯ ಪ್ರೊಬೆಷನರಿ ಸಬ್ ಇನ್ಸ್‌ಪೆಕ್ಟರ್ ಕವಿತಾ, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷೆ ಜಯಶ್ರೀ ಕೃಷ್ಣರಾಜ್ ಹಾಗೂ ಸ್ವಾಭಿಮಾನಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದಾ ಅತಿಥಿಗಳಾಗಿ ಭಾಗವಹಿಸಿದ್ದರು. ವಿಮೆನ್ಸ್ ಫ್ರೆಂಟ್‌ನ ಜಿಲ್ಲಾಧ್ಯಕ್ಷೆ ಝಾರೀನಾ ರಜಾಕ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಪದಾಧಿಕಾರಿಗಳಾದ ನಿಲೋಫರ್, ದಿಲ್‌ದರ್ ಅಮ್ಜದ್, ಝೀನತ್ ಸಾದಿಕ್ ಹಾಗೂ ಶಮೀನ ಇಸ್ಮಾಯಿಲ್ ಉಪಸ್ಥಿತರಿದ್ದರು.

ದೇವಲೋಕ ದಂಪತಿಯ ಕೊಲೆ ಆರೋಪಿ ಪೊಲೀಸ್ ಕಸ್ಟಡಿಗೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ದೇವಲೋಕ ದಂ ಪತಿಯ ಕೊಲೆ ಪ್ರಕರಣದ ಆರೋಪಿ ಇಮಾಮ್ ಹುಸೈನ್‌ಗೆ ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಕ್ರೈಂ ಬ್ರಾಂಚ್ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಆರೋಪಿಯನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯದ ಆದೇಶದ ಪ್ರಕಾರ ಸರ್ಕಲ್ ಇನ್‌ಸ್ಪೆಕ್ಟರ್ ವಿ. ಅಚ್ಯುತನ್ ನೇತೃತ್ವದ ತಂಡ ಬಿಗಿ ಭದ್ರತೆಯೊಂದಿಗೆ ಸಶಸ್ತ್ರ ಶಿಬಿರಕ್ಕೆ ಆರೋಪಿಯನ್ನು ಕೊಂಡೊಯ್ದಿದೆ. ಅಲ್ಲಿ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ ಬಳಿಕ ಕೊಲೆ ನಡೆದ ದೇವಲೋಕಕ್ಕೆ ಕರೆದೊಯ್ಯಲಾಗು ವುದು. ಅಗತ್ಯ ಬಿದ್ದರೆ ಸಾಗ, ಪುಣೆ ಮೊದಲಾದ ಇಮಾಮ್ ಹುಸೈನ್‌ನ ಕಾರ್ಯಸ್ಥಾನಗಳಿದ್ದ ಪ್ರದೇಶಗಳಿಗೂ ಕರೆದೊಯ್ದು ಪೊಲೀಸರು ಮಾಹಿತಿ ಸಂಗ್ರಹಿಸಲಿದ್ದಾರೆ.

ಮೂಲ್ಕಿ- ಮೂಡಬಿದ್ರೆ ಕ್ಷೇತ್ರ ಅಭ್ಯರ್ಥಿ ಆಯ್ಕೆ ಹೈಕಮಾಂಡ್‌ಗೆ ಬಿಟ್ಟದ್ದು : ಈಶ್ವರಪ್ಪ

Posted by JAYAKIRANA Kirana on | 0 comments | Leave a comment...

ಮುಲ್ಕಿ: ಮುಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸ ಇದ್ದು, ಅಭ್ಯರ್ಥಿಯ ಆಯ್ಕೆ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು.
ಮುಲ್ಕಿಯಲ್ಲಿ ಸೋಮವಾರ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಸರ್ಕಾರಕ್ಕೆ ಸಾಕಷ್ಟು ಮುಜುಗುರ ಉಂಟು ಮಾಡಿದ ಕೆಲವು ಪ್ರಕರಣದಿಂದ ನಿಜಕ್ಕೂ ಪಕ್ಷಕ್ಕೆ ನಷ್ಟವಾಗಿದ್ದು, ಕಳಂಕಿತರಾಗಿ ಆರೋಪ ಸಾಬೀತಾದಲ್ಲಿ ಅಂತಹವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ, ಸರ್ಕಾರ ರಚನೆಯ ಸಂದರ್ಭ ಬಹುಮತಕ್ಕಾಗಿ ಕೆಲವೊಂದು ತಪ್ಪು ನಿರ್ಧಾರಗಳನ್ನು ಮಾಡಿದ್ದರಿಂದ ಸರ್ಕಾರಕ್ಕೆ ಸ್ವಲ್ಪ ನಷ್ಟ ಉಂಟಾಯಿತು ಹಾಗೂ ಪಕ್ಷದ ಇಮೇಜ್ ಹಾಳಾಯಿತು ಅದನ್ನು ಮನಗಂಡು ಈ ಕ್ರಮಕ್ಕೆ ನಿರ್ಧರಿಸಿದ್ದೇವೆ ಎಂದರು.
ರಾಜ್ಯದಲ್ಲಿ ಬರ ಪರಿಹಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬಿಜೆಪಿ ನಿಯೋಗ ಮುಖ್ಯಮಂತ್ರಿ ಸದಾನಂದ ಗೌಡರ ನೇತೃತ್ವದಲ್ಲಿ ಮೇ ಒಂದರಂದು ದೆಹಲಿಗೆ ತೆರಳಲಿದ್ದು ಕೇಂದ್ರ ಸರ್ಕಾರಕ್ಕೆ ಹಣ ಬಿಡುಗಡೆ ಮಾಡಲು ಒತ್ತಾಯಿಸಲಾಗುವುದು, ರಾಜ್ಯದ ಬರ ಪರಿಸ್ಥಿಯನ್ನು ಕಾಂಗ್ರೆಸ್ ರಾಜಕಾರಣಕ್ಕಾಗಿ ಹೈಜಾಕ್ ಮಾಡಿದ್ದು ಸೋನಿಯಾ ಗಾಂಧಿಯವರನ್ನು ರಾಜ್ಯಕ್ಕೆ ಕರೆತಂದು ವರದಿಯನ್ನು ನೀಡಿ ಮನ ಸೆಳೆದರೂ ಪರಿಹಾರ ನೀಡಿಲ್ಲ ಎಂದು ಹೇಳಿದರು.
ಅನಿರೀಕ್ಷಿತವಾಗಿ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಕಾಂಗ್ರೆಸ್ಸಿಗರು ರಾಜ್ಯದಲ್ಲಿಯೂ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಹಗಲು ಕನಸು ಕಾಣುತ್ತಿದ್ದಾರೆ. ಲಿಂಗಾಯುತ ಸಮುದಾಯವನ್ನು ಒಡೆಯಲು ವಿಫಲ ಯತ್ನವನ್ನು ಸೋನಿಯಾ ಗಾಂಧಿಯವರಿಂದ ಮಾಡಿರುವ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಜನರ ಸವಾಲುಗಳಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯ ನಾಲ್ಕು ವರ್ಷದ ಅಭಿವೃದ್ದಿ ಯೋಜನೆಗಳಿಂದ ಹಿಂದಿಗಿಂತಲೂ ಹೆಚ್ಚು ಸ್ಥಾನಗಳ ಮೂಲಕ ರಾಜ್ಯದ ಜನತೆ ಅಧಿಕಾರಕ್ಕೆ ತರುತ್ತಾರೆ ಎಂದರು.

ದ.ಕ. ಜಿಲ್ಲಾ ಕಾಂಗ್ರೆಸಿಗರ ಮೇಲೆ ಪರಿಣಾಮ ಬೀರದ ರಾಹುಲ್ ಎಚ್ಚರಿಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮೇಲಿಂದ ಮೇಲೆ ಸೋಲನ್ನೇ ಅಪ್ಪಿಕೊಳ್ಳ ಬೇಕಾದ ಅನಿವಾರ್ಯತೆ ಪಕ್ಷಕ್ಕೆ ಇಲ್ಲ. ಆದರೆ ನಾಯಕರು ಸೋಲನ್ನು ಮೇಲೆಳಿದು ಕೊಳ್ಳುತ್ತಲೇ ಇದ್ದಾರೆ. ಇನ್ನು ಮುಂದೆ ಪಕ್ಷದ ಸಂಘಟನೆ ಯಲ್ಲಿ ಯಾರು ತೊಡಗುವುದಿಲ್ಲವೊ ಅವರಿಗೆ ಹುದ್ದೆಯಿಂದ ಕೆಳಗಿಳಿಸಲಾಗ ವುದು ಎಂದು ಎರಡು ವಾರಗಳ ಹಿಂದೆ ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ಹೇಳಿ ದ್ದರು.
ಉತ್ತರಪ್ರದೇಶದಲ್ಲಿ ಆದ ಸೋಲಿನಿಂದ ಕಂಗೆಟ್ಟಿರುವ ರಾಹುಲ್ ಕೆಲಸ ಮಾಡದ ಪಕ್ಷದ ನಾಯಕರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿ ದ್ದರು. ಇಂತಹ ಎಚ್ಚರಿಕೆ ಪರಿಣಾಮ ಗಳು ರಾಜ್ಯದಲ್ಲಿ ಅಲ್ಲಲ್ಲಿ ಕಂಡು ಬರುತ್ತಿದೆಯಾದರೂ ದ.ಕ. ಜಿಲ್ಲೆಯಲ್ಲಿ ಅದರ ಪರಿಣಾಮಗಳು ಗೋಚರಿ ಸುತ್ತಲೇ ಇಲ್ಲ. ವಿನಾ ಕಾರಣ ಹೇಳಿಕೆ ನೀಡಿ, ಪಕ್ಷದಲ್ಲಿ ಗೊಂದಲ ಮೂಡಿಸುವ ಪ್ರಯ ತ್ನಗಳಿಗೆ ಕಡಿವಾಣ ಹಾಕಲಾಗುವುದು. ಅಲ್ಲದೆ ಪಕ್ಷದಲ್ಲಿ ನಾಯಕತ್ವ ವಹಿಸಿ ಕೊಂಡು ಕ್ರಿಯಾಶೀಲರಾಗಿ ಕೆಲಸ ಮಾಡದೇ ಇರುವವರಿಗೆ ತಕ್ಷಣವೇ ಗೇಟ್‌ಪಾಸ್ ನೀಡಲಾಗುವುದು. ನನ್ನ ಕೈಗಳು ಮೃದುವಾಗಿರಬಹುದು, ಆದರೆ ಕಠಿಣ ಕ್ರಮ ತೆಗೆದುಕೊಳ್ಳಲು ಸಶಕ್ತವಾಗಿವೆ ಎಂದು ರಾಹುಲ್ ಹೇಳಿ ದ್ದರು. ಇಷ್ಟು ಮಾತ್ರವಲ್ಲ ಅವರ ಹೇಳಿಕೆ ಕರ್ನಾಟಕದತ್ತ ಬೆರಳು ಮಾಡಿತ್ತು ಎಂಬುದು ಗಮಿನಿಸಬೇ ಕಾದ ಅಂಶ. ನಮ್ಮ ಮುಂದಿನ ಗುರಿ ಕರ್ನಾಟಕ. ಅಲ್ಲಿ ಈಗಿರುವ ರಾಜಕಿಯ ಪರಿಸ್ಥಿತಿ ಕಾಂಗ್ರೆಸ್‌ಗೆ ಎಲ್ಲ ರೀತಿಯಲ್ಲೂ ಅನುಕೂಲವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ಅಲ್ಲಿನ ನಾಯಕರು ಮಂದಾಗಬೇಕು ಎಂದು ರಾಹುಲ್ ಸೂಚಿಸಿದ್ದರು. ರಾಹುಲ್‌ರ ಸೂಚನೆ ರಾಜ್ಯದ ನಾಯಕರ ಮೇಲೆ ಒಂದಿಷ್ಟಾದರೂ ಪರಿಣಾಮ ಬೀರಿರಬಹುದು ಎಂಬುದು ಅವರ ಕ್ರಿಯಾಶೀಲತೆ ತೋರಿಸುತ್ತಿದೆ.
ಆದರೆ ದ.ಕ. ಜಿಲ್ಲೆಯಲ್ಲಿ ಮಾತ್ರ ನಮಗೆ ಉಪದೇಶ ಹೇಳಲು ರಾಹುಲ್ ಯಾರು ಎಂಬಂತಹ ಸ್ಥಿತಿ ಕಾಂಗ್ರೆಸ್‌ನಲ್ಲಿದೆ. ಇಲ್ಲಿ ಗುಂಪುಗಾರಿಕೆ ಬಿಟ್ಟರೆ ಬೇರೇನೂ ಚಟುವಟಿಕೆಗಳು ನಡೆಯುವಂತೆ ಕಾಣುತ್ತಿಲ್ಲ. ಹೀಗಾಗಿ ಮುಂದಿನ ಚುನಾವಣೆಯವರೆಗೆ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸುವ ಶಕ್ತಿವಂತರು ಕಾಣುತ್ತಲೇ ಇಲ್ಲ. ರಾಜ್ಯದಲ್ಲೆಲ್ಲ ಚುನಾವಣೆಯ ತಯಾರಿ ನಡೆದಿದ್ದರೆ ಇಲ್ಲಿ ಇನ್ನು ನಿದ್ದೆಯೇ ಬಿಡದ ಪರಿಸ್ಥಿತಿ ಇದೆ. ಇಂತಹ ಸ್ಥಿತಿ ರಾಜ್ಯ ನಾಯಕರಿಗೆ ತಿಳಿಯದ್ದೇನಲ್ಲ ಆದರೆ ಇವರ‍್ಯಾರು ಇದನ್ನು ಪರಿಹರಿಸಲು ಆಸಕ್ತರಾಗಿಲ್ಲ. ದ.ಕ. ಜಿಲ್ಲೆಯನ್ನು ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಹಾಗೂ ವೀರಪ್ಪ ಮೊಯ್ಲಿಗೆ ಗುತ್ತಿಗೆ ನೀಡಿದಂತೆ ಆರಾಮವಾಗಿದ್ದಾರೆ ರಾಜ್ಯ ನಾಯಕರು. ಆದರೆ ಮುಂದಿನ ವಿಧಾನ ಸಭೆಯ ಟಿಕೆಟ್ ಆಕಾಂಕ್ಷಿಗಳು ಮಾತ್ರ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಾರ್ಯಕರ್ತರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತಿದ್ದಾರೆ ಎಂಬುದು ದ.ಕ. ಜಿಲ್ಲಾ ಕಾಂಗ್ರೆಸ್‌ನಲ್ಲಿಯ ಸದ್ಯದ ಸಮಾಧಾನದ ಸಂಗತಿ.
ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯ ಕಾರ್ಯ ಸದ್ಯಕ್ಕಂತೂ ನಿಂತು ಹೋಗಿದೆ. ಗುಂಪುಗಾರಿಕೆ ಕಾಂಗ್ರೆಸ್‌ಗೆ ಅಂಟಿದ ಕಾಯಿಲೆಯಂತೆ ಮುಂದುವರಿದಿದೆ. ಈ ಕಾಯಿಲೆಗೆ ಮದ್ದು ನೀಡುವ ಕೆಲಸ ರಾಹುಲ್‌ರಿಂದ ಆಗುತ್ತದೆಯೇ ? ಅಥವಾ ರಾಹುಲ್ ಹೇಳಿಕೆಗೆ ಮಾತ್ರ ಸೀಮಿತರೆ ಎಂಬುದು ಭವಿಷ್ಯದಲ್ಲಿ ಗೊತ್ತಾಗಲಿದೆ.

ಜಮೀನಿಗಾಗಿ ಸೈನಿಕನ ಸತಾಯಿಸುವ ತಹಶೀಲ್ದಾರ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ರೈತ ಮತ್ತು ಸೈನಿಕ ಇಬ್ಬರೂ ಪ್ರಪಂಚದಲ್ಲಿ ಗೌರವಾದ ರಣೀಯ ವ್ಯಕ್ತಿಗಳು. ವಿದೇಶವೊಂ ದರಲ್ಲಿ ರೈಲಲ್ಲಿ ಸೈನಿಕನೊಬ್ಬ ಬಂದರೆ ಗರ್ಭೀಣಿಯೂ ಎದ್ದು ಕುಳಿತು ಕೊಳ್ಳಲು ಜಾಗ ಕೊಡುತ್ತಾಳಂತೆ.
ಆದರೆ ನಮ್ಮ ಸರಕಾರಕ್ಕೆ ಇವರಿ ಬ್ಬರೂ ಅಷ್ಟಕಷ್ಟೆ. ಇದಕ್ಕೊಂದು ತಾಜಾ ನಿದರ್ಶನ ಬೆಳ್ತಂಗಡಿ ತಾಲೂ ಕಿನಲ್ಲಿ ಇದೆ. ಸೈನಿಕನೋರ್ವ ಭವಿಷ್ಯ ದಲ್ಲಿ ನೆಲೆಕಂಡುಕೊಳ್ಳಲು ಪಡುತ್ತಿರುವ ಪಾಡು ಇದು. ಕಂದಾಯ ಇಲಾಖೆ ಈತನಿಗೆ ನೆಲೆಗೆ ವ್ಯವಸ್ಥೆ ಮಾಡುವುದು ಬಿಟ್ಟು ಭೂಮಾಲಿಕನೋರ್ವನಿಗೆ ಶರಣಾಗಿ ದೇಶಸೇವಕನನ್ನು ಸತಾಯಿ ಸುತ್ತಿರುವ ವಿದ್ಯಮಾನ ಕಳೆದ ಐದು ವರ್ಷಗಳಿಂದ ನಡೆಯುತ್ತಿದೆ.
ತಾಲೂಕಿನ ಕರಿಮಣೇಲು ಗ್ರಾಮದ ಪಾಡ್ಯಾರು ಮನೆ ನಿವಾಸಿ ಯೋಗೀಶ್ ಕುಮಾರ್(೨೬) ೨೦೦೪ರಲ್ಲಿ ಭೂಸೇನೆಗೆ ಸೇರಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಬಿಹಾರ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಬೆಂಗ ಳೂರಲ್ಲಿನ ಕೋರಮಂಗಲದಲ್ಲಿನ ಆರ್ಮಿ ಸರ್ವೀಸ್ ಕೋರ್ಸ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸು ತ್ತಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸು ವವರಿಗೆ ಮಿಲಿಟರಿ ಕೋಟಾದಡಿಯಲ್ಲಿ ಸರಕಾರ ಒಂದಷ್ಟು ಜಮೀನು ನೀಡುವ ವ್ಯವಸ್ಥೆ ಇದೆ.

ನಕಲಿ ಜಾತಿ ಪ್ರಮಾಣಪತ್ರ ಶಿಕ್ಷಿಸಲು ಕಾಯ್ದೆ ಜ್ಯಾರಿ

Posted by JAYAKIRANA Kirana on | 0 comments | Leave a comment...

ಸಚಿವ ನಾರಾಯಣ ಸ್ವಾಮಿ
ಉಡುಪಿ: ದಲಿತರಲ್ಲದ ಮೂರು ಲಕ್ಷ ಮಂದಿ ಪರಿಶಿಷ್ಟ ಜಾತಿಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ತಯಾರಿಸಿದರು. ೨೦೦೨ರಲ್ಲಿ ರಾಜ್ಯದಲ್ಲಿದ್ದ ಸರಕಾರ ಇವರನ್ನು ಕ್ಷಮಿಸಿತು. ಬಿಜೆಪಿ ಸರಕಾರ ಈ ನಕಲಿ ಜಾತಿ ಪ್ರಮಾಣ ಪತ್ರವನ್ನು ತಯಾರಿಸಿದ ತಹಶೀಲ್ದಾರ್ ಹಾಗೂ ಸಾಕ್ಷಿದಾರರನ್ನು ಶಿಕ್ಷಿಸುವ ಕಾನೂನು ಜಾರಿಗೆ ತರುತ್ತಿದೆ ಎಂದು ಸಮಾಜ ಕಲ್ಯಾಣ ಮತ್ತು ಬಂಧೀಖಾನೆ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಮತ್ತು ಕರ್ನಾಟಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನೌಕರರ ಒಕ್ಕೂಟ ಇವುಗಳ ಜಂಟಿ ಆಶ್ರಯದಲ್ಲಿ ಸೋಮವಾರ ಸಂಜೆ ಬನ್ನಂಜೆಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೨೧ನೇ ಜನ್ಮ ದಿನಾಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡುತ್ತಿದ್ದರು.
ನಕ್ಸಲ್ ಪ್ರದೇಶದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸಚಿವರಾದಿಯಾಗಿ ಇಲಾಖಾಧಿಕಾರಿಗಳು ಸಿದ್ದರಾಗಿದ್ದೇವೆ. ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಜೊತೆಗೂ ಚರ್ಚೆ ನಡೆಸಲಾಗುವುದು. ಒಳಗಿರುವವರು ಮುಖ್ಯ ವಾಹಿನಿಗೆ ಬರುವ ಮೂಲಕ ಮುಂದಿನ ಅಂಬೇಡ್ಕರ್ ಜನ್ಮ ದಿನಾಚರಣೆಯ ವೇಳೆಗೆ ನಕ್ಸಲ್ ಮುಕ್ತ ರಾಜ್ಯವೆಂದು ಘೋಷಿಸಲು ಅವಕಾಶ ಮಾಡಿಕೊಡಬೇಕೆಂದು ಸಚಿವರು ನಕ್ಸಲರಿಗೆ ಬಹಿರಂಗ ಮನವಿ ಮಾಡಿಕೊಂಡರು.
ದಲಿತರ ಮತಗಳನ್ನು ಸೆಳೆಯಲು ಅಂಬೇಡ್ಕರ್ ಜಯಂತಿ ಆಚರಿಸುವಂತಾಗಿದೆ. ಅಂಬೇಡ್ಕರ್ ದಲಿತರಿಗೆ ಮಾತ್ರವೇ ಸೇರಿದವರು ಎಂಬ ಭಾವನೆಯನ್ನು ಮೂಡಿಸಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ನಾರಾಯಣ ಸ್ವಾಮಿ, ಜಾತಿ ವಿನಾಶಕ್ಕಾಗಿ ಹಿಂದೂ ಕೋಡ್ ಬಿಲ್‌ನ್ನು ಮಂಡಿಸಿದ ಅಂಬೇಡ್ಕರ್ ಕೊನೆಗೆ ಜಾತಿ ವಿನಾಶ ಒಪ್ಪದವರಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು. ಇದಕ್ಕೆ ಕಾರಣರು ಯಾರು ಎನ್ನುವುದನ್ನು ಜನ ಆಲೋಚಿಸಬೇಕು ಎಂದು ತಿಳಿಸಿದರು.
ಕೆಲವು ಆದಿವಾಸಿ ಸಮುದಾಯಗಳ ಜನರು ಇಂದಿಗೂ ಬಿದಿರು ಕಡ್ಡಿಯಿಂದ ನಿರ್ಮಿಸಿದ ಮನೆಗಳಲ್ಲಿ ವಾಸ ಮಾಡುವ ಸ್ಥಿತಿಯಿದೆ. ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂ. ವಿದ್ಯಾರ್ಥಿ ವೇತನ ನೀಡುತ್ತಿರುವ ಕೇಂದ್ರ ಸರಕಾರ; ಹೈಸ್ಕೂಲ್‌ವರೆಗಿನ ದಲಿತ ವಿದ್ಯಾರ್ಥಿ ಗಳಿಗೆ ಯಾಕೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಉತ್ತರ ಕರ್ನಾಟಕದವರೇ ಇದುವರೆಗೆ ಅತೀ ಹೆಚ್ಚು ಸಲ ಮುಖ್ಯಮಂತ್ರಿಯಾದವರು. ಆದರೆ, ಗುಲ್ಬರ್ಗ ಸಹಿತ ಉತ್ತರ ಕರ್ನಾಟಕದ ದಲಿತರ ಸ್ಥಿತಿಯನ್ನೊಮ್ಮೆಯಾದರೂ ಇವರು ನೋಡಿದರಾ ಎಂದು ಸಚಿವ ನಾರಾಯಣ ಸ್ವಾಮಿ ಪ್ರಶ್ನಿಸಿದರು.
ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಶಾಸಕ ಕೆ.ರಘುಪತಿ ಭಟ್ ಅವರು, ದಲಿತರಿಗೆ ಸೇರಿದ ಡಿಸಿ ಮನ್ನಾ ಭೂಮಿ ದಲಿತೇರರ ಪಾಲಾಗಿ ದಲಿತರಿಗೆ ಅನ್ಯಾಯವಾಗಿದೆ. ಹಿಂದೆ ಶಾಸಕರು ಅಕ್ರಮ ಸಕ್ರಮ ಸಮಿತಿಗಳ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದಲಿತರ ಭೂಮಿ ಅನ್ಯಾಯವಾಗಿ ಇತರರ ಪಾಲಾಯಿತು. ಶಿರೂರಿನ ಭೂಮಿ ಕೇರಳೀಯರ ಪಾಲಾದುದು, ಹೋರಾಟದ ಬಳಿಕ ಮರಳಿ ಸಿಕ್ಕಿತು. ಇದೊಂದು ಉದಾಹರಣೆ ಮಾತ್ರ. ಡಿಸಿ ಮನ್ನಾ ಭೂಮಿ ಬಗ್ಗೆ ತನಿಖೆ ನಡೆದರೆ ಕೆಲವು ಮಂದಿ ಶಾಸಕರ ಕುತ್ತಿಗೆ ಇದು ಉರುಳಾಗಲಿದೆ ಎಂದು ಹೇಳಿದರು.

ಸೋನಿಯಾ ವಿರುದ್ಧ ಹರಿಹಾಯ್ದ ಶೆಟ್ಟರ್

Posted by JAYAKIRANA Kirana on | 0 comments | Leave a comment...


ಬೆಂಗಳೂರು: ಜನತೆ ನೀಡಿದ ತೆರಿಗೆ ಹಣವನ್ನು ಕೇಂದ್ರ ಸರ್ಕಾರ, ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆ ಗಳಿಗೆ ನೀಡುತ್ತಿದೆಯೇ ಹೊರತು ಕಾಣಿಕೆ ನೀಡುತ್ತಿಲ್ಲ ಎಂದು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು,ಕಳೆದ ಶನಿವಾರ ರಾಜ್ಯಕ್ಕೆ ಭೇಟಿ ನೀಡಿದ್ದ ಸೋನಿಯಾ ಗಾಂಧಿ, ಏಳು ವರ್ಷಗಳಲ್ಲಿ ರಾಜ್ಯಕ್ಕೆ ೯೮ ಸಾವಿರ ಕೋಟಿ ರೂ ನೀಡಿದ್ದೇವೆ. ಅದನ್ನೇ ರಾಜ್ಯ ಸಮರ್ಪಕವಾಗಿ ಬಳಕೆ ಮಾಡಿ ಕೊಂಡಿಲ್ಲ ಎಂದು ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರ ನಮಗೆ ದಾನ ಕೊಟ್ಟಿಲ್ಲ, ನಮ್ಮ ಪಾಲನ್ನು ನಮಗೆ ಕೊಟ್ಟಿದೆ ಅಷ್ಟೇ ಎಂದರು. ಆದಾಯ ತೆರಿಗೆ,ವಾಣಿಜ್ಯ ತೆರಿಗೆ ಸೇರಿದಂತೆ ಹಲವು ಬಾಬ್ತುಗಳ ಮೂಲಕ ರಾಜ್ಯದ ಜನ ಕೇಂದ್ರಕ್ಕೆ ಇದ ಕ್ಕಿಂತ ಹೆಚ್ಚಿನ ಹಣ ಪಾವತಿಸಿದ್ದಾರೆ. ಈ ಹಣದಲ್ಲೇ ಒಂದು ಪಾಲನ್ನು ಕೇಂದ್ರ ಸರ್ಕಾರ ನಮಗೆ ನೀಡಿದೆ. ಇದನ್ನೇ ದಾನ ಎಂದುಕೊಂಡರೆ ಹೇಗೆ ಎಂದು ಪ್ರಶ್ನಿಸಿದರು. ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದೇ ಹನ್ನೆರಡು ನಿಮಿಷ. ಇವರಿಗೆ ರಾಜ್ಯದ ಜನರ ನಿಜವಾದ ಸಂಕಷ್ಟ ಅರಿವಾಗುವುದು ಹೇಗೆ ಎಂದೂ ಅವರು ವ್ಯಂಗ್ಯವಾಡಿದರು.
ಅವರ ಭೇಟಿ ತೋರಿಕೆಗೆ ಮಾತ್ರ ವಾಗಿತ್ತು. ಸ್ಥಳೀಯ ಜನರ ಅಭಿಪ್ರಾಯ ವನ್ನೂ ಕೇಳಿಲ್ಲ್ಲ, ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಿಲ್ಲ. ನಮ್ಮ ಸರ್ಕಾರವನ್ನು ಟೀಕಿಸುವ ಉದ್ದೇಶದಿಂ ದಲೇ ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಖಾರವಾಗಿ ನುಡಿ ದರು. ಕೇವಲ ಟೀಕೆಗಾಗಿ ಟೀಕೆ ಮಾಡ ಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ಏಳು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ೯೮ ಸಾವಿರ ಕೋಟಿ ರೂ ಬಿಡುಗಡೆ ಮಾಡಿದೆ.ಆದರೆ ಅದನ್ನು ಸದುಪಯೋಗ ಮಾಡಿಕೊಳ್ಳು ವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸೋನಿಯಾ ಹೇಳಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು ಮೂರೂ ವರೆ ವರ್ಷಗಳು ಮಾತ್ರ ಕಳೆದಿವೆ.
ಉಳಿದಂತೆ ಇದ್ದುದು ಮೈತ್ರಿಕೂಟ ಸರ್ಕಾರಗಳು ತಾನೇ.ಈ ಮೈತ್ರಿಕೂಟ ಸರ್ಕಾರದಲ್ಲಿ ಕಾಂಗ್ರೆಸ್ ಕೂಡಾ ಒಮ್ಮೆ ಪಾಲುದಾರನಾಗಿ ತ್ತಲ್ಲವೇ?ಅಂದರೆ ಈ ಅವಧಿಯಲ್ಲೂ ಹಣ ದುರುಪ ಯೋಗವಾಗಿದೆ ಎಂದ ರ್ಥವೇ? ಎಂದು ಪ್ರಶ್ನೆ ಮಾಡಿದರು. ಸೋನಿಯಾಗಾಂಧಿ ಟೀಕೆ ಮಾಡುವ ಬದಲು ಮೇ ೨ ರಂದು ರಾಜ್ಯದ ಸರ್ವ ಪಕ್ಷ ನಿಯೋಗ ಪ್ರಧಾನಿ ಯವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಕರ್ನಾಟಕಕ್ಕೆ ಹೆಚ್ಚಿನ ನೆರವು ನೀಡುವಂತೆ ಒತ್ತಾಯ ಹೇರಲಿ ಎಂದು ಅವರು ಸಲಹೆ ನೀಡಿ ದರು. ಕುಡಿಯುವ ನೀರು ಸೇರಿದಂತೆ ಬರ ಪರಿಹಾರ ಯೋಜನೆಗೆ ೪೧೨ ಕೋಟಿ ರೂ. ವೆಚ್ಚ ಮಾಡಿದ್ದೇವೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ೧೨೬ ಕೋಟಿ ರೂ. ಮಾತ್ರ. ಉಳಿದೆಲ್ಲವೂ ರಾಜ್ಯದ ಹಣ. ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ೪೬೦೦ ಕೋಟಿ ರೂಗಳನ್ನು ಬಿಡುಗಡೆ ಮಾಡು ವಂತೆ ಕೋರುವುದಾಗಿ ನುಡಿದ ಅವರು,ಬೆಳೆ ಹಾನಿಗೆ ಪರಿಹಾರ, ಕುಡಿಯುವ ನೀರಿನ ಕೆಲಸಗಳಿಗೆ ಹಣ ಬೇಕು ಎಂದರಲ್ಲದೇ,ಕೇಂದ್ರ ಸರ್ಕಾರ ಹೆಚ್ಚಿನ ನೆರವು ನೀಡಿದರೆ ಅನುಕೂಲವಾಗುತ್ತದೆ ಎಂದು ಸ್ಪಷ್ಟ ಪಡಿಸಿದರು.
ರಾಜ್ಯದ ನಾನೂರು ಹಳ್ಳಿಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡುತ್ತಿದ್ದು,ಈ ಹಿಂದೆ ಎದುರಾದ ಬರಗಾಲದ ಸನ್ನಿವೇಶಗಳಿಗೆ ಹೋಲಿಸಿದರೆ ಈ ಸಲ ಅಷ್ಟೊಂದು ಸಮಸ್ಯೆಯಾಗಿಲ್ಲ ಎಂದು ನುಡಿದರು. ರಾಜ್ಯದ ಕೆರೆಗಳಲ್ಲಿ ಬಹುತೇಕ ಹೂಳು ತುಂಬಿಕೊಂಡಿದ್ದು ಇದನ್ನು ತೆಗೆಸಲು ಸರ್ಕಾರ ಸಮರೋಪಾದಿಯ ಕ್ರಮಕ್ಕೆ ಮುಂದಾಗಿದೆ ಎಂದು ಇದೇ ಸಂದರ್ಭದಲ್ಲಿ ನುಡಿದ ಅವರು,ಕಳೆದ ಸಾಲಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಈ ಕೆಲಸಕ್ಕಾಗಿಯೇ ತಲಾ ಐದು ಕೋಟಿ ರೂ ಒದಗಿಸಲಾಗಿದೆ ಎಂದು ವಿವರಿಸಿದರು.

ಪುರಸಭೆ ನೀರು ಉದ್ಯಮಕ್ಕೆ ಮಾರಾಟ: ಅಧಿಕಾರಿಗಳ ವಿರುದ್ಧ ಆಕ್ರೋಶ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಳ್ಳಾಲ ಪುರಸಭೆ ವತಿಯಿಂದ ಸಾರ್ವಜನಿಕರಿಗಾಗಿ ಸರಬರಾಜು ಮಾಡಲಾಗುತ್ತಿರುವ ನೀರು ಕಟ್ಟಡ, ಹೊಟೇಲುಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದ ರಿಂದಾಗಿ ಜನರು ನೀರಿಗಾಗಿ ತತ್ತರಿಸು ವಂತಾಗಿದೆ. ಈ ದಂಧೆಯ ಹಿಂದೆ ಪುರಸಭೆಯ ಸಿಬ್ಬಂದಿ ಕೈವಾಡ ಇದೆ ಎನ್ನುವ ಗಂಭೀರವಾದ ಆರೋಪ ನಿನ್ನೆ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದಿದೆ.
ಸಭೆಯಲ್ಲಿ ಮಾತನಾಡಿದ ಬಿಜೆಪಿ ಕೌನ್ಸಿಲರ್ ದಯಾನಂದ ಅವರು ಕಟ್ಟಡ ಮತ್ತು ಹೋಟೇಲುಗಳಿಗೆ ನೀರು ಮಾರಾಟ ಮಾಡುತ್ತಿರುವ ಬಗ್ಗೆ ಫೊಟೋ ಪ್ರದರ್ಶಿಸಿದರು. ಪುರಸಭಾ ವ್ಯಾಪ್ತಿಯಲ್ಲಿ ಜನರು ನೀರಿಲ್ಲದೆ ಪರದಾ ಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಲಾರಿಗಳಲ್ಲಿ ಸಾಗಿಸಲಾಗುತ್ತಿರುವ ನೀರನ್ನು ಸಿಬ್ಬಂದಿ ಮಾರಾಟ ಮಾಡು ತ್ತಿದ್ದಾರೆ. ಆದರೂ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಅವರು ಕಿಡಿಕಾರಿದರು.
ನಾಮನಿರ್ದೇಶಿತ ಸದಸ್ಯ ಯಶವಂತ್ ಮಾತನಾಡಿ, ನೀರಿನ ಕಳ್ಳ ವ್ಯವಹಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ಕೌನ್ಸಿಲರ್‌ಗಳಾದ ಇಸ್ಮಾಯಿಲ್ ಮತ್ತು ದಿನಕರ್ ಮಾತ ನಾಡಿ ಉಳ್ಳಾಲ ದರ್ಗಾದವರು ವಿದ್ಯುತ್ ಬಿಲ್ ಕಟ್ಟಿ ಜನರ ಉಪಯೋಗಕ್ಕಾಗಿ ಪುರಸಭೆಗೆ ನೀರು ನೀಡುತ್ತಿದ್ದಾರೆ. ಆದರೆ ಇದು ಕಳ್ಳಮಾರ್ಗದ ಮೂಲಕ ಮಾರಾ ಟವಾಗುತ್ತಿದ್ದು ಈ ಸಂದರ್ಭದಲ್ಲಿ ಅಧಿಕಾರಿಗಳು ಸಿಬ್ಬಂದಿಯ ಸಭೆ ಕರೆದು ತನಿಖೆ ಮಾಡುವ ಬದಲು ನಿರ್ಲಕ್ಷ್ಯ ತಾಳಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ವೇಳೆ ಉತ್ತರಿಸಿದ ಅಧ್ಯಕ್ಷ ಬಾಸಿಲ್ ಡಿ’ಸೋಜ, ಸಾರ್ವಜನಿಕರ ಉಪಯೋಗಕ್ಕಾಗಿ ಮಿನಿಲಾರಿಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದ್ದು ಹೊಟೇಲ್ ಹಾಗೂ ಕಟ್ಟಡಗಳಿಗೆ ಮಾರಾಟವಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಮಂಗಳವಾರದಿಂದಲೇ ಕಟ್ಟಡ ಹಾಗೂ ಹೊಟೇಲ್‌ಗಳಿಗೆ ಅಧಿಕೃತವಾಗಿಯೂ ನೀರು ಸರಬರಾಜು ನಿಲ್ಲಿಸುವುದಾಗಿ ಭರವಸೆ ನೀಡಿದರು.
ಕೌನ್ಸಿಲರ್‌ಗಳು ಚಕ್ಕರ್
ನಿನ್ನೆ ನಡೆದ ಸಭೆಯಲ್ಲಿ ನೀರು ಹಾಗೂ ಇತರ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. ಆದರೆ ಕಾಂಗ್ರೆಸ್‌ನ ಬಹುತೇಕ ಸದಸ್ಯರು ಗೈರು ಹಾಜರಾಗುವ ಮೂಲಕ ತಮ್ಮ ಬೇಜವಾಬ್ದಾರಿತವನ್ನು ಬಹಿರಂಗಪಡಿಸಿದರು. ಇವರ ಜೊತೆ ವಿಪಕ್ಷ ಮುಖಂಡ ಭಗವನ್‌ದಾಸ್ ಅವರ ಗೈರು ಹಾಜರಾತಿಯೂ ಕಂಡು ಬಂತು.
ಅಧ್ಯಕ್ಷರು ಯಾರು, ಮುಖ್ಯಾಧಿಕಾರಿ ಯಾರು?
ಇದೇ ವೇಳೆ ಸಭೆಯಲ್ಲಿ ಕೌನ್ಸಿಲರ್‌ಗಳು ಗಂಭೀರ ಸಮಸ್ಯೆಗಳ ಬಗ್ಗೆ ಹಾಗೂ ನೀರು ಮಾರಾಟದ ಬಗ್ಗೆ ಪುರಸಭೆ ಸಿಬ್ಬಂದಿ ವಿರುದ್ಧ ಪಕ್ಷ-ಭೇದ ಮರೆತು ಗಂಭೀರವಾದ ಆರೋಪ ಮಾಡುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಸಿಬ್ಬಂದಿಯನ್ನು ಕರೆಸಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾಹಿತಿ ಕೇಳಬೇಕಾಗಿದ್ದ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರು ತಮಗೂ ಪುರಸಭೆಗೂ ಯಾವುದೇ ಸಂಬಂಧವಿಲ್ಲದಂತೆ ಮೌನಕ್ಕೆ ಶರಣಾಗಿದ್ದರು.
ಇದರಿಂದ ಕೆರಳಿದ ಬಿಜೆಪಿ ಸದಸ್ಯ ದಯಾನಂದ ಅವರು ಪುರಸಭೆಯಲ್ಲಿ ಇತರ ಅಧಿಕಾರಿಗಳ ದರ್ಬಾರು ನಡೆಯುತ್ತಿದ್ದು ಇಲ್ಲಿ ಮುಖ್ಯಾಧಿಕಾರಿ ಯಾರು ಎಂದೇ ಗೊತ್ತಾಗುತ್ತಿಲ್ಲ ಎಂದರೂ ಅದು ಮುಖ್ಯಾಧಿಕಾರಿಗೆ ಕ್ಯಾರ್ ಆಗಲಿಲ್ಲ. ಇದೇ ವೇಳೆ ಕಾಂಗ್ರೆಸ್ ಕೌನ್ಸಿಲರ್ ದಿನಕರ್ ಪುರಸಭೆಯ ಅಧ್ಯಕ್ಷ ಯಾರು ಎಂದು ಪ್ರಶ್ನಿಸಿದ್ದೂ ನಡೆಯಿತು.

ಗೌಡ, ಶೆಟ್ಟಿ, ಬಿಲ್ಲವ, ಗಟ್ಟಿ ವಧು-ವರರು

Posted by JAYAKIRANA Kirana on | 0 comments | Leave a comment...

ಗಾಣಿಗ
ನಾನು ೨೮ರ ಹರೆಯದ ಪದವೀಧರೆ ಗಾಣಿಗ ಯುವತಿ. ಮದುವೆಯಾಗಿ ಡೈವೋರ್ಸ್ ಆಗಿದೆ. ಮಗು ಇದೆ. ೪೦ರ ಒಳಗಿನ ಗಾಣಿಗ ಅಥವಾ ಬೇರೆ ಜಾತಿಯ ವಿಧುರ, ವಿಚ್ಛೇದಿತ ವರ ಇದ್ದರೆ ತಿಳಿಸಿ.

ವಿಶ್ವಕರ್ಮ
ನಾನು ೨೯ರ ಹರೆಯದ ವಿಶ್ವಕರ್ಮ ಯುವಕ ಸಿವಿಲ್ ಇಂಜಿನಿಯರ್ ಪದವೀಧರ . ಉದ್ಯೋಗ ಇದೆ. ೨೫ರ ಒಳಗಿನ ಯುವತಿಇದ್ದರೆ ತಿಳಿಸಿ.

ಮಲಯಾಳಿ
ನಾನು ೩೩ರ ಹರೆಯದ ಮಲಯಾಳಿ ಬಿಲ್ಲವ ಯುವಕ-ಉದ್ಯೋಗ ಇದೆ. ಪದವೀಧರೆ ಯುವತಿ ಇದ್ದರೆ ತಿಳಿಸಿ.

ಬಿಲ್ಲವ
ನಾನು ೩೦ರ ಹರೆಯದ ಬಿಲ್ಲವ ಯುವಕ. ೨೫ರ ಒಳಗಿನ ಯುವತಿ ಇದ್ದರೆ ತಿಳಿಸಿ.
ನಾನು ೩೦ರ ಹರೆಯದ ಬಿಲ್ಲವ ಯುವತಿ. ಪಿಯುಸಿ ಓದಿದ್ದೇನೆ. ಉದ್ಯೋಗ ಇದೆ. ಮದುವೆ ಆಗಿ ಡ್ರೈವೋರ್ಸ್ ಆಗಿದೆ. ೪೦ರ ಒಳಗಿನ ಯುವಕ ಇದ್ದರೆ ತಿಳಿಸಿ.
೩೨ರ ಹರೆಯದ ಬಿಲ್ಲವ ಯುವತಿ. ಮದುವೆ ಆಗಿ ಡೈವೋರ್ಸ್ ಆಗಿದೆ. ೪೦ರ ಒಳಗಿನ ವರ ಇದ್ದರೆ ತಿಳಿಸಿ.
ನಾನು ೨೬ರ ಹರೆಯದ ಬಿಲ್ಲವ ವಧು. ಎಂ.ಬಿ.ಎ ಪದವಿ ಪಡೆದಿದ್ದೇನೆ. ಬ್ಯಾಂಕ್‌ನಲ್ಲಿ ಉದ್ಯೋಗ. ಒಳ್ಳೆಯ ವೇತನ ಇದೆ. ನನಗೆ ೩೦ರ ಒಳಗಿನ ಬಿಲ್ಲವ ಕೆಲಸ ಇರುವವರು ಇದ್ದರೆ ತಿಳಿಸಿ.

ಗೌಡ
ನಾನು ೨೪ರ ಹರೆಯದ ಗೌಡ ಯುವತಿ. ೩೦ರ ಒಳಗಿನ ವರ ಇದ್ದರೆ ತಿಳಿಸಿ

ಗಟ್ಟಿ
ನಾನು ೩೫ರ ಒಳಗಿನ ಗಟ್ಟಿ ವರ. ೩೦ರ ಒಳಗಿನ ವಧು ಇದ್ದರೆ ತಿಳಿಸಿ
೩೦ರ ಹರೆಯದ ಗಟ್ಟಿ ಯುವತಿ. ಪದವೀಧರೆ ವಿಚ್ಛೇದನ ಹೊಂದಿದ್ದೇನೆ. ನನಗೆ ೩೫ರ ಒಳಗಿನ ವಿಧುರ ವರನಿದ್ದರೆ ತಿಳಿಸಿ.

ಬಂಟ
ಟಿನಾನು ೩೧ರ ಹರೆಯದ ಬಂಟ ಯುವಕ ಉದ್ಯೋಗ ಇದೆ. ೨೮ರ ಒಳಗಿನ ವಧು ಇದ್ದರೆ ತಿಳಿಸಿ.
ನಾನು ೨೬ರ ಹರೆಯದ ಬಂಟ ಯುವಕ. ಉದ್ಯೋಗ ಇದೆ. ೨೪ರ ಒಳಗಿನ ಯುವತಿ ಇದ್ದರೆ ತಿಳಿಸಿ
ನಾನು ೩೦ರ ಹರೆಯದ ಬಂಟ ಯುವತಿ ಉದ್ಯೋಗ ಇದೆ. ೪೦ರೊಳಗಿನ ಯುವಕ ಇದ್ದರೆ ತಿಳಿಸಿ.

ಮಲಯಾಳಿ ಬಿಲ್ಲವ
ನಾನು ೨೦ರ ಹರೆಯದ ಮಲಯಾಳಿ ಬಿಲ್ಲವ ಯುವಕ. ಮದುವೆಯಾಗಿ ವಿಚ್ಚೇದನ ಹೊಂದಿದ್ದೇನೆ. ೩೫ರ ಒಳಗಿನ ವಿಚ್ಛೇದಿತ ಇದ್ದರೆ ತಿಳಿಸಿ.

ಕುಲಾಲ
ನಾನು ೨೨ರ ಹರೆಯದ ಕುಲಾಲ ಯುವತಿ. ಉದ್ಯೋಗ ಇದೆ. ೩೦ರ ಒಳಗಿನ ಯುವಕ ಇದ್ದರೆ ತಿಳಿಸಿ.

ಕ್ರಿಶ್ಚಿಯನ್
ನಾನು ೩೨ರ ಹರೆಯದ ಕ್ರಿಶ್ಚಿಯನ್ ಯುವಕ ನನಗೆ ೨೮ರ ಒಳಗಿನ ಯುವತಿ ಇದ್ದರೆ ತಿಳಿಸಿ.

ಗೊಲ್ಲ
ನಾನು ೨೦ರ ಹರೆಯದ ಗೊಲ್ಲ ಯುವತಿ. ೨೫ರ ಒಳಗಿನ ಹುಡುಗ ಇದ್ದರೆ ತಿಳಿಸಿ.
ನಾನು ೨೬ರ ಹರೆಯದ ಗೊಲ್ಲ ಯುವಕ. ೨೧ರ ಹರೆಯದ ಯುವತಿ ಇದ್ದರೆ ತಿಳಿಸಿ.

ಮಡಿವಾಳ
ನಾನು ೩೨ರ ಹರೆಯದ ವಿಚ್ಛೇದಿತ ಮಡಿವಾಳ ಯುವತಿ. ನನಗೆ ೪೦ರ ಒಳಗಿನ ವಿಚ್ಛೇದಿತ ವರ ಇದ್ದರೆ ತಿಳಿಸಿ.

ಮಲಯಾಳಿ ಬಿಲ್ಲವ
ನಾನು ೩೫ರ ಹರೆಯದ ಮಲಯಾಳಿ ಬಿಲ್ಲವ ಯುವತಿ. ಮದುವೆಯಾಗಿ ಡೈವೋರ್ಸ್ ಆಗಿದೆ. ಎಲ್‌ಎಲ್‌ಬಿ ಓದಿದ್ದೇನೆ. ಉದ್ಯೋಗ ಇದೆ. ೪೦ರ ಒಳಗಿನ ಮಲಯಾಳಿ ಬಿಲ್ಲವ ಅಥವಾ ಬಿಲ್ಲವ ಯುವಕ ಇದ್ದರೆ ತಿಳಿಸಿ.

ಆಚಾರ್ಯ
ನಾನು ೩೫ರ ಹರೆಯದ ಆಚಾರ್ಯ ಯುವತಿ. ಉದ್ಯೋಗ ಇದೆ. ೪೦ರ ಒಳಗಿನ ಯುವಕ ಇದ್ದರೆ ತಿಳಿಸಿ

ಬ್ರಾಹ್ಮಣ
ಬ್ರಾಹ್ಮಣ ವರ. ಎಸ್ ಎಸ್‌ಎಲ್‌ಸಿ ಓದಿದ್ದೇನೆ. ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗ. ೩೫ ರ ಒಳಗಿನ ಯುವತಿ ಇದ್ದರೆ ತಿಳಿಸಿ. ಅನಾಥೆ ಯಾದರೂ ಆಗಬಹುದು. ಬೇರೆ ಜಾತಿಯವರೂ ಆಗಬಹುದು. ವಿಧವೆ, ವಿಚ್ಛೆದಿತೆ ಆಗಬಹುದು.
ನಾನು ೩೭ವರ್ಷ ಪ್ರಾಯದ ಬ್ರಾಹ್ಮಣ ವರ. ಎಸ್ ಎಸ್‌ಎಲ್‌ಸಿ ಓದಿದ್ದೇನೆ. ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗ. ೩೫ ರ ಒಳಗಿನ ಯುವತಿ ಇದ್ದರೆ ತಿಳಿಸಿ. ಅನಾಥೆಯಾದರೂ ಆಗಬಹುದು. ಬೇರೆ ಜಾತಿಯವರೂ ಆಗಬಹುದು. ವಿಧವೆ, ವಿಚ್ಛೆದಿತೆ ಆಗಬಹುದು.

ಬೋವಿ
ನಾನು ೨೭ರ ಹರೆಯದ ಬೋವಿ ವಧು. ನನಗೆ ೩೫ರ ಒಳಗಿನ ಬೋವಿ ವರ ಇದ್ದರೆ ತಿಳಿಸಿ. ಬೇರೆ ಜಾತಿಯ ವರನೂ ಆಗಬಹುದು.

ಮನೆಗೆ ನುಗ್ಗಿದ ಕಳ್ಳರು: ಬರಿಗೈಯಲ್ಲಿ ವಾಪಸ್

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಇಲ್ಲಿಗೆ ಸಮೀಪದ ಉಚ್ಚಿಲ ಬಬ್ಬು ಸ್ವಾಮಿ ದೈವಸ್ಥಾನದ ಬಳಿಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಮನೆ ಎಲ್ಲಾ ಜಾಲಾಡಿ ಬರಿಗೈಯ್ಯಲ್ಲಿ ಮರಳಿದ ಘಟನೆ ರವಿವಾರ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಉಚ್ಚಿಲ ಬಡಾದ ರಾ.ಹೆ೬೬ರ ಝಾಕಿರ್ ಎಂಬವರು ಹಾಗೂ ಅವರ ಪತ್ನಿ ಹದಿನೈದು ದಿನಗಳ ಹಿಂದೆ ಸೌದಿ ಅರೇಬಿಯಾದ ಉಮ್ರಾಕ್ಕೆ ತೆರಳಿದ್ದರು. ಈ ಬಗ್ಗೆ ಮಾಹಿತಿ ಇದ್ದ ಕಳ್ಳರು ಮನೆಯ ಹಿಂಬದಿಯಿಂದ ಪ್ರವೇಶಿಸಿ ಮನೆಪೂರ್ತಿ ಜಾಲಾಡಿದ್ದಾರೆ. ಮನೆಯ ಸಮೀಪದ ಸಂಬಂಧಿಕರ ಪ್ರಕಾರ ಮನೆಯಲ್ಲಿ ಕಳವು ನಡೆದಿಲ್ಲ. ಕಳ್ಳರು ಮನೆಯನ್ನೆಲ್ಲಾ ಜಾಲಾಡಿದ್ದಾರೆ. ಮೇಲಂತಸ್ತಿನಲ್ಲಿದ್ದ ಲ್ಯಾಪ್ ಟಾಪ್, ಟೀವಿ, ಡಿವಿಡಿ ಮತ್ತಿತರ ವಸ್ತುಗಳನ್ನು ಮುಟ್ಟಿಲ್ಲ. ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಬೆರಳಚ್ಚು ತಜ್ಞರನ್ನು ಹಾಗೂ ಶ್ವಾನದಳ ಕರೆಸಿ ತಪಾಸಣೆ ನಡೆಸಿದ್ದಾರೆ.

ಉಡುಪಿ: ಮಹಿಳೆಯ ಅಸ್ವಾಭಾವಿಕ ಸಾವು

Posted by JAYAKIRANA Kirana on | 0 comments | Leave a comment...

ಉಡುಪಿ: ಮಣಿಪಾಲ ಸಮೀಪದ ಲಕ್ಷ್ಮೀಂದ್ರ ನಗರ ಬಳಿಯ ವಿ.ಪಿ.ನಗರ ನಿವಾಸಿ ನೌಶಾದ್ ಕೆ.ಎಂ.ತಾಹಿರ(೫೮) ಎಂಬವರು ಅಸ್ವಾಭಾವಿಕವಾಗಿ ಮೃತ ಪಟ್ಟ ಘಟನೆ ಸೋಮವಾರ ನಡೆದಿದೆ.
ಮೃತರ ತಮ್ಮ ಮುಹಮ್ಮದ್ ಮುಸ್ತಾಕ್ ಕುಂದಾಪುರ ನಿವಾಸಿ ಯಾಗಿದ್ದು, ಸೋಮವಾರ ಸಂಜೆ ಅಕ್ಕನ ಮನೆಗೆ ಬಂದು ನೋಡಿದಾಗ ಬಾಗಿಲು ಹಾಕಿತ್ತು. ಬಳಿಕ ಬಾಗಿಲನ್ನು ಒಡೆದು ಒಳಗೆ ಹೋಗಿ ನೋಡಿದಾಗ ತಾಹಿರ ಅವರ ಬಾಯಿಯಲ್ಲಿ ನೊರೆ ಬರುತ್ತಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ, ವೈದ್ಯರು ಪರಿಶೀಲಿಸಿದಾಗ ಮೃತಪಟ್ಟಿ ದ್ದರು ಎನ್ನಲಾಗಿದೆ. ಈ ಬಗ್ಗೆ ಮುಸ್ತಾಕ್ ನೀಡಿದ ದೂರಿನ ಆಧಾರದಲ್ಲಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇಶ್ಯಾವಾಟಿಕೆ: ಎಂಟು ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉರ್ವ ಪೊಲೀಸರು ಪಿಂಪ್ ಸಹಿತ ಎಂಟು ಮಂದಿಯನ್ನು ಬಂಧಿಸಿ ದ್ದಾರೆ.
ಕೋಡಿಕಲ್ ಕಲ್ಬಾವಿಯ ಪದ್ಮಾವತಿ ಎಂಬವರ ಮನೆಯಲ್ಲಿ ಕಳೆದ ಕೆಲವು ಸಮಯಗಳಿಂದ ವೇಶ್ಯಾವಾಟಿಕೆ ನಡೆಯುತ್ತಿತ್ತು ಎನ್ನಲಾಗಿದೆ.
ಮಹಿಳೆಯರಿಬ್ಬರು ಇಲ್ಲಿಗೆ ಯುವತಿಯರನ್ನು ಸರಬರಾಜು ಮಾಡುತ್ತಿದ್ದು ಅದಕ್ಕೆ ರಿಕ್ಷಾ ಚಾಲಕನೂ ಸಹಕಾರ ನೀಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿಯರಿತ ಪೊಲೀಸರು ನಿನ್ನೆ ಮನೆಗೆ ದಾಳಿ ನಡೆಸಿ ರಿಕ್ಷಾ ಚಾಲಕ ಸೇರಿದಂತೆ ಮೂವರು ಪುರುಷರು ಹಾಗೂ ಇಬ್ಬರು ಪಿಂಪ್ ಸೇರಿದಂತೆ ಐವರು ಮಹಿಳೆಯರನ್ನು ಬಂಧಿಸಿದ್ದಾರೆ. ಇದೇ ವೇಳೆ ದಂಧೆಗೆ ಬಳಸಲಾಗುತ್ತಿದ್ದ ಅಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.

ದಲಿತ ಮಹಿಳೆ ಕೊಲೆ: ಸುಳಿವು ಇನ್ನೂ ಅಲಭ್ಯ

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ: ಬೋರುಗುಡ್ಡೆಯ ದಲಿತ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು ಎರಡು ವಾರ ಆಗುತ್ತಾ ಬಂದರೂ ಯಾವ ಸಣ್ಣ ಸುಳಿವು ಕೂಡಾ ಪೊಲೀಸರಿಗೆ ಸಿಗದೆ ಈ ಪ್ರಕರಣ ಕಗ್ಗಂಟಾಗಿಯೇ ಉಳಿದಿದೆ.
ಈ ನಡುವೆ ಸಂಶಯದ ಮೇರೆಗೆ ಕೊಂಡೊಯ್ದು ಎರಡು ದಿವಸ ಠಾಣೆಯಲ್ಲಿ ಟ್ರೀಟ್‌ಮೆಂಟ್ ನೀಡಿದ ಪೊಲೀಸರು ತನಿಖೆಯ ನೆಪದಲ್ಲಿ ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಿ ದಲಿತ ಸಂಘಟನೆಗಳು ಪ್ರತಿಭಟನೆಗೆ ಸಿದ್ಧರಾಗಿದ್ದರೂ ಕೆಲವರ ರಾಜಕೀಯ ಫಲದಿಂದಾಗಿ ಆ ಪ್ರಯತ್ನ ಕೈಗೊಡಲಿಲ್ಲ ವೆಂದು ತಿಳಿದುಬಂದಿದೆ.
ಎಪ್ರಿಲ್ ೨೧ರ ರಾತ್ರಿ ಬೋರುಗುಡ್ಡೆ ಯುವಕ ಮಂಡಲದವರ ವಾರ್ಷಿ ಕೋತ್ಸವ ಜರುಗಿದ್ದು, ಆ ರಾತ್ರಿ ಬೋರು ಗುಡ್ಡೆಯ ದಲಿತ ಮಹಿಳೆ ಪ್ರೇಮಾ ಎಂಬವರ ಶವವು ಪಕ್ಕದಮನೆಯ ದಯಾನಂದ್ ಎಂಬವರ ಮನೆಯ ತಾರೀಸಿನಲ್ಲಿ ನಗ್ನ ರೀತಿಯಲ್ಲಿ ಪತ್ತೆಯಾ ಗಿತ್ತು.
ಆಕೆಯ ಬಟ್ಟೆ ಬರೆ ಇನ್ನೊಂದೆಡೆ, ಶವ ತಾರೀಸಿನಲ್ಲಿ ಪತ್ತೆಯಾದ ಕಾರಣ ಮತ್ತು ಶವವನ್ನು ಎಳೆದುಕೊಂಡು ಹೋಗಿ ಹಾಕಿದ ಗುರುತುಗಳು ಕಂಡು ಬಂದ ಕಾರಣ ಮಹಿಳೆಯನ್ನು ಅತ್ಯಾಚಾರವೆಸಗಿ ಕೊಲೆಗೈದಿರಬೇಕೆಂದು ಶಂಕಿಸಲಾಗಿತ್ತು. ಕುಡಿದು ಪ್ರತಿದಿನ ಜಗಳವಾಡುತ್ತಿದ್ದ ಕುಟುಂಬವಾಗಿದ್ದರಿಂದ ಪೊಲೀಸರು ಆ ದಿನ ಪ್ರೇಮಾಳ ಗಂಡ ನಾಗಪ್ಪ ಹಾಗೂ ಮಗ ಜಯಕರ ಎಂಬವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಅಲ್ಲದೆ ಪ್ರೇಮಾಳ ಪುತ್ರಿಯ ಪ್ರಿಯಕರನೆನ್ನಲಾದ ಸ್ಥಳೀಯ ಯುವಕ ರಮೇಶ ಎಂಬಾತನನ್ನು ವಿಚಾರಣೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ನಡುವೆ ಸ್ಥಳೀಯ ನಿವಾಸಿ ಸುಂದರ ಎಂಬಾತನನ್ನು ಸಂಶಯ ದಿಂದ ಕೊಂಡೊಯ್ದು ವಿಚಾರಣೆಗೊಳಪಡಿಸಿದ್ದರು. ಸುಂದರನೊಂದಿಗೆ ಪ್ರೇಮಾ ಕೆಲಸಕ್ಕೆ ಹೋಗುತ್ತಿದ್ದು, ಕೆಲಸಕ್ಕೆ ಹೋಗದ ವಿಚಾರದಲ್ಲಿ ಅವರಿಬ್ಬರ ನಡುವೆ ಎರಡು ತಿಂಗಳ ಹಿಂದೆ ಜಗಳ ನಡೆದಿತ್ತೆನ್ನುವ ಒಂದೇ ಸಂಶಯದಲ್ಲಿ ಸುಂದರನನ್ನು ಕರೆದೊಯ್ದ ಪೊಲೀಸರು ಎರಡು ದಿನ ವಿಚಾರಿಸಿದರೂ ಯಾವ ಪ್ರಯೋಜನವು ಆಗಿಲ್ಲ. ಪೊಲೀಸರ ವಿಚಾರಣೆಯಿಂದ ಕೈ ಕಾಲು ಊದಿಸಿಕೊಂಡು ನಡೆದಾಡಲೂ ಸಾಧ್ಯವಾಗದ ಸುಂದರನನ್ನು ದಲಿತ ಸಂಘಟನೆಗಳು ಆಸ್ಪತ್ರೆಗೆ ಸೇರಿಸಿ, ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುವ ಸಿದ್ಧತೆ ನಡೆಸಿತ್ತು.
ಈ ವಿಷಯ ಹೇಗೋ ಕೆಲವರಿಗೆ ತಿಳಿದು ಸುಂದರನಲ್ಲಿ ದಮ್ಮಯ್ಯ- ದಕ್ಕಯ್ಯ ಹಾಕಿದ್ದರಿಂದ ಅಮಾಯಕ ದಲಿತ ವ್ಯಕ್ತಿಯ ನೆರವಿಗೆ ಬಂದಿದ್ದ ಸಂಘಟನೆಗಳು ಮೌನವಹಿಸಬೇಕಾಯಿತು. ಪೊಲೀಸರು ವಿವಿಧ ರೀತಿಯಲ್ಲಿ ತನಿಖೆ ನಡೆಸಿದರೂ ಯಾವ ಪ್ರಗತಿಯೂ ಕಾಣದ ಈ ಪ್ರಕರಣ ಕುತೂಹಲ ಕೆರಳಿಸಿದೆ. ಮೂಡಬಿದ್ರೆ ಪೊಲೀಸರಿಗೆ ಈ ಪ್ರಕರಣದ ರಹಸ್ಯವನ್ನು ಬಯಲಿಗೆಳೆದು ಆರೋಪಿಗಳನ್ನು ಪತ್ತೆ ಹಚ್ಚಲೇಬೇಕಾದ ಅನಿವಾರ್ಯತೆ ಇದೆ.
ದಲಿತ ಸಂಘಟನೆಗಳೂ ಈ ನಿಟ್ಟಿನಲ್ಲಿ ಮಾತಾಡಿಕೊಳ್ಳುತ್ತಿದ್ದು ದಲಿತ ಮಹಿಳೆಗಾದ ಅನ್ಯಾಯವನ್ನು ಖಂಡಿಸಿದ್ದಾರಲ್ಲದೆ, ಆರೋಪಿಗಳು ಯಾರೇ ಆದರೂ ಅವರಿಗೆ ಶಿಕ್ಷೆಯಾಗಬೇಕು. ಆದರೆ ಆಮಾಯಕರಿಗೆ ಮಾತ್ರ ಅನ್ಯಾಯವಾಗದಿರಲಿ ಎಂದು ಒತ್ತಾಯಿಸಿದ್ದಾರೆ.

ಓಮ್ನಿಗೆ ಡಿಕ್ಕಿ ಹೊಡೆದು ಲಾರಿ ಪರಾರಿ

Posted by JAYAKIRANA Kirana on | 0 comments | Leave a comment...

ಉಡುಪಿ: ಮಾರುತಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಲಾರಿಯೊಂದು ಸ್ಥಳದಲ್ಲಿ ನಿಲ್ಲದೆ ಪರಾರಿಯಾದ ಘಟನೆ ಸೋಮವಾರ ಸಂಜೆ ಮಣಿಪಾಲದಲ್ಲಿ ನಡೆದಿದೆ.
ಪೆರ್ಡೂರು ಸಮೀಪದ ಪುತ್ತಿಗೆ ನೀವಾಸಿ ಸುರೇಶ್ ಪೂಜಾರಿ ಎಂಬ ವರು ಓಮ್ನಿ ಕಾರಿಗೆ ಅತೀ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆಯಿತೆನ್ನ ಲಾಗಿದೆ.

ವೃದ್ದೆ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಉಡುಪಿ: ಕಾಲು ನೋವು ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವೃದ್ದೆಯೊಬ್ಬರು ವಾಸದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಪ್ರಕರಣ ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಮೃತ ಮಹಿಳೆಯನ್ನು ಪುಟ್ಟಿ ಶೇರಿಗಾರ್ತಿ(೮೫) ಗುರುತಿಸಲಾಗಿದೆ.

ಬೈಕ್-ಜೀಪ್ ಡಿಕ್ಕಿ

Posted by JAYAKIRANA Kirana on | 0 comments | Leave a comment...

ಪುತ್ತೂರು: ಜೀಪ್ ಮತ್ತು ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಕೆ.ಮಹಮ್ಮದ್ ಮತ್ತು ಸಹಸವಾರ ಅಬ್ದುಲ್ಲ ಎಂಬವರು ಗಾಯಗೊಂ ಡಿದ್ದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಶವ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ವಾಸ್ ಲೇನ್‌ನಲ್ಲಿರುವ ವಾಸ್ತವ್ಯವಿರದ ಮನೆ ಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದ್ದು, ಮನೆಯ ಮಾಲಕ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಐದು ತಿಂಗಳಿನಿಂದ ದೆಹಲಿ ಯಲ್ಲಿ ವಾಸವಾಗಿರುವ ರೊನಾಲ್ಡ್ ಬಿ. ಕೊಲಾಸೊ ಎಂಬವರು ಮೊನ್ನೆ ಮಾವಿನ ಹಣ್ಣು ಕೊಯ್ಯಲೆಂದು ವಾಸ್‌ಲೇನ್‌ನ ಮನೆಗೆ ಬಂದಿದ್ದಾರೆ . ಈ ವೇಳೆ ಮನೆಯ ಒಳಗಡೆಯಿಂದ ವಾಸನೆ ಬರುವುದನ್ನು ಗಮನಿಸಿ ನೋಡಿದಾಗ ಹಿಂಬದಿ ಕೋಣೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆ ಯಾಗಿದೆ. ಈ ಬಗ್ಗೆ ಕದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತ ಶರೀರವು ಹೆಂಗಸಿನ ಶವದಂತಿದ್ದು, ೪೦-೫೦ವರ್ಷ ಪ್ರಾಯವಾಗಿರಬಹುದೆಂದು ಅಂದಾಜಿಸಲಾಗಿದೆ. ಸಂಪೂರ್ಣ ಕೊಳೆತಿರುವುದರಿಂದ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಈ ಶವದ ಬಗ್ಗೆ ಮಾಹಿತಿ ಪಡೆಯಲು ಮಂಗಳೂರು ಪೂರ್ವ ಠಾಣೆ(೦೮೨೪-೨೨೨೦೫೨೦)ಯನ್ನು ಸಂಪರ್ಕಿಸಲು ಕೋರಲಾಗಿದೆ.

೨೮ ಲಕ್ಷ ರೂ. ಚಿನ್ನಾಭರಣ ಕಳವು

Posted by JAYAKIRANA Kirana on | 0 comments | Leave a comment...

ಪ್ರೇಯಸಿಯೊಂದಿಗೆ ಸೇರಿ ಮನೆ ಮಗನೇ ಮಾಡಿದ ಕಳವು
ಮಂಗಳೂರು: ಕಾರವಾರ ನಗರದ ಕುರ್ಸಾಡ ಎಂಬಲ್ಲಿ ನಡೆದಿದೆ ಎನ್ನಲಾದ ಮನೆ ಕಳವು ಪ್ರಕರಣವನ್ನು ಭೇಧಿಸಿದ ಪೊಲೀಸರು ಮನೆ ಮಗನನ್ನೇ ಬಂಧಿಸಿದ್ದಾರೆ. ಮನೆಯ ಮಗನೇ ಕಳವಿನ ರೂವಾರಿಯಾಗಿದ್ದು ಜತೆಗಾತಿಯೊಂದಿಗೆ ಕಂಬಿ ಎಣಿಸುವಂತಾಗಿದೆ.
ಮೇರಿ ಡಯಾಸ್ ಎಂಬವರ ಮನೆಯಲ್ಲಿ ಕಳವು ನಡೆದಿದ್ದು ಮೇರಿ ಅವರ ಪುತ್ರ ರುಬೀನ್‌ಡಯಾಸ್ ಹಾಗೂ ಆತನ ಪ್ರೇಯಸಿ, ಕದ್ರಾದ ಲತಾರಾಜು ರಾವತ್ ಸೇರಿ ಕಳವು ನಡೆಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ರುಬೀನ್ ತಂದೆ ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದು ಕೋಟ್ಯಂತರ ರೂ. ಆದಾಯ ಹೊಂದಿದವರು. ಲತಾ ವಿವಾಹಿತೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಈಕೆಯ ಪಿತ ಧಾರವಾಡದಲ್ಲಿ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲು ಸೇರಿದ್ದಾನೆ. ಈಕೆ ರುಬೀನ್ ಮನೆಯಲ್ಲಿ ಕೆಲಸಕ್ಕಿದ್ದಳು. ಆದರೆ ರುಬೀನ್ ಮತ್ತು ಈಕೆ ಲಿವಿಂಗ್ ಟುಗೆದರ್ ಮಾದರಿಯಲ್ಲಿ ಸಂಬಂಧ ಹೊಂದಿದ್ದಾಗಿ ತನಿಖೆಯ ವೇಳೆ ಒಪ್ಪಿಕೊಂಡಿದ್ದಾರೆ. ತನ್ನೊಂದಿಗೆ ಮದುವೆಯಾಗಲು ಕೇಳಿದರೂ ರುಬೀನ್ ಒಪ್ಪಲಿಲ್ಲ ಎಂದು ತಿಳಿಸಿದ್ದು, ಒನ್ನು ರಾಕರಿಸಿದ ರುಬೀನ್ ನಾವಿಬ್ಬರು ಒಟ್ಟಿಗೆ ಇದ್ದದ್ದು ಹೌದು. ಆದರೆ ಮದುವೆಯ ವಿಚಾರ ನಮ್ಮಲ್ಲಿ ಇರಲಿಲ್ಲ ಎಂದು ತಿಳಿಸಿದ್ದಾನೆ.
ಮೇರಿ ಡಯಾಸ್ ಎ.೨೮ರಂದು ರುಬೀನ್‌ನ ಜತೆ ವಿವಾಹವೊಂದರಲ್ಲಿ ಭಾಗವಹಿಸಲು ಗೋವಾಕ್ಕೆ ಹೋಗಿದ್ದರು. ಅಲ್ಲಿಂದ ಮರಳಿ ಬಂದಾಗ ಮನೆಯಲ್ಲಿ ೨೮ ಲಕ್ಷ ಮೌಲ್ಯದ ಚಿನ್ನ ಮತ್ತು ನಗದು ಕಳವಾಗಿತ್ತು. ಈ ಬಗ್ಗೆ ಮೇರಿ ಡಯಾಸ್ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೆಲವಿ ನಿರ್ದಿಷ್ಟ ಸುಳಿವುಗಳನ್ನಾಧರಿಸಿ ಸಂಶಯಗೊಂಡು ಈ ಬಗ್ಗೆ ಗೊತ್ತಿದ್ದವರೇ ಕಳವು ನಡೆಸಿದ್ದಾರೆಂಬ ಸಂಶಯದ ಮೇಲೆ ರುಬೀನ್‌ನನ್ನೇ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಈತ ನೀಡಿದ ಮಾಹಿತಿಗಳನ್ನು ಆಧರಿಸಿ ತನಿಖೆ ಕೈಗೊಂ ಡಾಗ ಲತಾಳ ಸಹಾಯದಿಂದ ಆಕೆಯ ಪತಿ ರಾಜುವಿನ ಮಿತ್ರ ಪ್ರಕಾಶ ಪಾಟೀಲನ ಮೂಲಕ ಮನೆಯ ಹಿಂಬಾಗಿಲು ಒಡೆದು ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾಗಿ ತಿಳಿದು ಬಂದಿದೆ.

ಉಜಿರೆ ಲಾಡ್ಜ್‌ಗೆ ಪಿಎಫ್‌ಐ ಕಾರ‍್ಯಕರ್ತರ ದಾಳಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಜಿರೆ ಹಳೆಪೇಟೆ ಸಮೀಪದ ಹೊಸ ಲಾಡ್ಜ್‌ಗೆ ಪಿಎಫ್‌ಐ ಕಾರ‍್ಯಕರ್ತರು ದಾಳಿ ಮಾಡಿರುವ ಘಟನೆ ತಡವಾಗಿ ವರದಿಯಾಗಿದೆ.
ಕುತೂಹಲ ಎಂದರೆ ಈ ಹಿಂದೆ ಬೆಳ್ತಂಗಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಿಂದೂ ಜಾಗರಣ ವೇದಿ ಕೆಯ ಸಂಚಾಲಕರಾಗಿದ್ದ ಸಂದರ್ಭ ದಲ್ಲಿ ಈ ಲಾಡ್ಜ್ ನಡೆಸುವ ಮಹಿಳೆ ಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅನೈತಿಕ ವ್ಯವಹಾರಕ್ಕೆ ಪ್ರೋತ್ಸಾಹ ನೀಡುತ್ತಿರುವ ಮಹಿಳೆಯ ವಿರುದ್ಧ ಕೆಂಡ ಕಾರಿದ್ದರು. ಇದೀಗ ನಿನ್ನೆ ಪಿಎಫ್‌ಐ ಕಾರ‍್ಯಕರ್ತರು ಇದೇ ಹೆಂಗಸು ನಡೆಸುತ್ತಿರುವ ಲಾಡ್ಜ್ ಮೇಲೆ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ. ಉಜಿರೆಯ ಹಿಂದೂ ದೇವಾ ಲಯದ ಎದುರೇ ಇರುವ ಈ ಲಾಡ್ಜ್ ಅನೈತಿಕ ದಂಧೆಯನ್ನು ನಡೆಸುತ್ತಾ ಬಂದಿದ್ದು ನಿನ್ನೆ ಪಿಎಫ್‌ಐ ಕಾರ‍್ಯಕರ್ತರು ಇಲ್ಲಿಗೆ ದಾಳಿ ನಡೆಸಲು ಪ್ರಮುಖ ಕಾರಣ. ಈ ದಂಧೆಯಲ್ಲಿ ಮುಸ್ಲಿಂ ಹೆಂಗಸು ಕೂಡಾ ಇದ್ದರೆನ್ನಲಾಗಿದೆ.
ಲಾಡ್ಜ್ ನಡೆಸುತ್ತಿರುವ ಮಹಿಳೆಗೆ ಕೆಲ ವರ್ಷಗಳ ಹಿಂದಿನಿಂದಲೂ ಮುಸ್ಲಿಮ್ ಯುವಕನ ಜೊತೆ ಸಂಪರ್ಕ ವಿದ್ದು ಈತ ರಾತ್ರಿ ಹೊತ್ತು ಇದೇ ಹೆಂಗಸು ನಡೆಸುತ್ತಿದ್ದ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿದ್ದ. ರಾತ್ರಿ ಹೊತ್ತು ಮಾತ್ರ ಇರುತ್ತಿದ್ದ ಮುಸ್ಲಿಂ ಯುವಕ ಕೊನೆಗೆ ಹಿಂದೂ ಸಂಘಟನೆಯ ಎಚ್ಚರಿಕೆಗೆ ಹೆದರಿ ಕೆಲಸ ಬಿಟ್ಟರೂ ಆತನನ್ನು ಬಲವಂತವಾಗಿ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದ ಹೆಂಗಸು ತನ್ನ ದಂಧೆಯನ್ನು ಮುಂದುವರಿಸಿದ್ದಳು ಎನ್ನಲಾಗುತ್ತಿದೆ. ಮಾತ್ರವಲ್ಲ ಈ ದಂಧೆಯಲ್ಲಿ ಮುಸ್ಲಿಮ್ ಹುಡುಗಿ ಯರನ್ನೂ ಸೇರಿಸಿಕೊಂಡಿದ್ದೇ ಪಿಎಫ್‌ಐ ಕೆಂಗಣ್ಣಿಗೆ ಗುರಿಯಾಗಳು ಕಾರಣ ಎನ್ನಲಾಗುತ್ತಿದೆ.
ತಡ ರಾತ್ರಿ ತನಕ ಈ ಹೆಂಗಸು ಹೊಟೇಲ್ ನಡೆಸುತ್ತಿರುವುದನ್ನು ಆಗ ಹಿಂದೂ ಜಾಗರಣ ವೇದಿಕೆಯ ಕಾರ‍್ಯ ಕರ್ತರು ತರಾಟೆಗೆ ತೆಗೆದುಕೊಂಡಿದ್ದು ರಾತ್ರಿ ಹೊತ್ತು ಗಂಡನನ್ನು ಬೇಕಾದರೆ ಕೂರಿಸು, ಹಗಲು ನೀನು ನೋಡಿ ಕೋ ಎಂದು ಬುದ್ದಿವಾದ ಹೇಳಿದ್ದರು. ಆದರೆ ಘಾಟಿ ಹೆಂಗಸು ಹಿಂದೂ ಸಂಘಟನೆಯ ಕಾರ‍್ಯಕರ್ತರ ಮೇಲೆ ಅತ್ಯಾಚಾರ ಯತ್ನದ ಕೇಸು ದಾಖಲಿ ಸಲು ಯತ್ನಿಸಿದ್ದಳು. ಆದರೆ ಆಗಿನ ಇನ್ಸ್‌ಪೆಕ್ಟರ್ ಈಕೆಗೆ ಬುದ್ಧಿವಾದ ಹೇಳಿ ದ್ದರು. ನಿನ್ನೆ ಈಕೆಯ ಲಾಡ್ಜ್‌ನಲ್ಲಿ ಮುಸ್ಲಿಮ್ ಹೆಂಗಸು ಹಿಂದೂ ಯುವಕನೊಂದಿಗೆ ಕಾಣಿಸಿಕೊಂ ಡಿದ್ದನ್ನು ಪತ್ತೆ ಹಚ್ಚಿದ ಪಿಎಫ್‌ಐ ಇದೇ ಹಿನ್ನೆಲೆಯಲ್ಲಿ ಲಾಡ್ಜ್ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ.

ವಿದ್ಯಾರ್ಥಿನಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನರ್ಸಿಂಗ್ ವಿರ್ದ್ಯಾರ್ಥಿನಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೋಟ್ಟಯಂ ಎಂಬಲ್ಲಿ ನಡೆದಿದೆ. ಶಿಕ್ಷಣ ಸಾಲ ಲಭಿಸಲಿಲ್ಲ ಎಂದು ಮನನೊಂದು ಕೊಡಮಾಳೂರು ನಿವಾಸಿ ಶ್ರೀಕಾಂತ್ ಅವರ ಪುತ್ರಿ ಶ್ರುತಿ ಎಂಬಾಕೆ ಆತ್ಮಹತ್ಯೆಗೈದ ವಿದ್ಯಾರ್ಥಿನಿ.

ಮರ ಕತ್ತರಿಸುವ ಯಂತ್ರ ಕದ್ದವರ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮರ ಕತ್ತರಿಸುವ ಯಂತ್ರ ಕದ್ದ ಆರೋಪದಲ್ಲಿ ವೇಣೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಯಾಖೂಬ ಎಂಬವರ ಮನೆಯಿಂದ ಕಡಬದ ಐತೂರಿನ ಅಫಿಲ್ ಯಾನೆ ಮುಹಮ್ಮದ್ ನಾವಾಝ್ (೨೩)ಬೆಳ್ತಂಗಡಿಯ ಇಂದಬೆಟ್ಟು ದೇವನಾರಿ ನಿವಾಸಿ ಮುಹಮ್ಮದ್ ಶರೀಫ್ ಎಂಬವರು ಯಂತ್ರ ಕದ್ದಿರುವರೆನ್ನಲಾಗಿದ್ದು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಯಾಖೂಬರ ಮನೆಗೆ ಕೆಲಸಗಾರನಾಗಿ ಕೆಲವು ದಿನಗಳ ಹಿಂದೆಯಷ್ಟೇ ಸೇರಿದ್ದ ಮುಹಮ್ಮದ್ ನವಾಝ್ ಮನೆಯಲ್ಲಿಯ ಸ್ಥಿತಿಗತಿಯ ವಿವರವನ್ನು ಶರೀಫ್‌ನಿಗೆ ನೀಡಿದ್ದ ಅದರಂತೆ ಯೋಜನೆ ರೂಪಿಸಿ ಇವರು ಯಂತ್ರಗಳನ್ನು ಕದ್ದಿದ್ದರು ಎಂದು ಆರೋಪಿಸಲಾಗಿದೆ.
ವೇಣೂರು ಎಸೈ ಉಮೇಶ್ ಉಪ್ಪಳಿಗೆ ಮತ್ತವರ ತಂಡದವರು ಕಾರ್ಯಾಚರಣೆ ನಡೆಸಿ ಉಪ್ಪಿನಂಗಡಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದರು.
ತೆಕ್ಕಟ್ಟೆ ಜುಗಾರಿ ನಿರತನ ಬಂಧನ: ಬ್ರಹ್ಮಾವರ ಸಮೀಪದ ತೆಕ್ಕಟ್ಟೆ ಎಂಬಲ್ಲಿ ಜುಗಾರಿ ನಿರತ ಬಾಬು ಪೂಜಾರಿ ಎಂಬವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ ಪರಿಕರ, ಮೊಬೈಲ್ ಸೆಟ್ ಮತ್ತು ೪೬೨ರೂ. ನಗದು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಒಂದೇ ಗಂಟೆಯ ಅವಧಿಯಲ್ಲಿ ಪತಿ-ಪತ್ನಿ ಮೃತ್ಯು: ಒಂದೇ ಗಂಟೆಯ ಅವಧಿಯಲ್ಲಿ ಪತಿ ಹಾಗೂ ಪತ್ನಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಬೊಳ್ಳಾಯಿಯಲ್ಲಿ ಸಂಭವಿಸಿದೆ.
ಬೊಳ್ಳಾಯಿ ಕೋಮಾಲಿಯಾದ ಕೃಷಿಕ ಭೋಜ ಕುಲಾಲ್(೬೫)ಎಂಬವರು ಅಸೌಖ್ಯದಿಂದ ಮೃತಪಟ್ಟಿದ್ದರೆ, ಈ ಸುದ್ದಿ ಕೇಳಿದ ಪತ್ನಿ ನಾಗಮ್ಮ(೫೫)ರವರು ಹೃದಯಾಘಾತದಿಂದ ನಿಧನ ಹೊಂದಿದರು. ಮೃತ ದಂಪತಿ ಇಬ್ಬರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ನಕಲಿ ಸಹಿ: ಜಿಲ್ಲಾಧಿಕಾರಿಗೆ ದೂರು

Posted by JAYAKIRANA Kirana on | 0 comments | Leave a comment...

ಮಂಗಳೂರು:ಗ್ರಾಮ ಪಂಚಾ ಯತ್ ಗುಮಾಸ್ತನೋರ್ವ ಅಭಿವೃದ್ಧಿ ಅಧಿಕಾರಿಯ ಸಹಿ ಮಾಡಿ ದಾಖಲೆ ಗಳನ್ನು ತಿದ್ದಿದ್ದಾಗಿ ಸಜೀಪಮೂಡ ಪರ್ವ ನಿವಾಸಿ ಕೋಚಣ್ಣ ಗಾಂಬೀರ ಎಂಬವರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ತನ್ನ ಜಮೀನು ದಾಖಲೆಗೆ ಸಂಬಂಧಿಸಿದಂತೆ ಮೂರು ವರ್ಷಗಳ ಹಿಂದೆ ಪೋರ್ಜರಿ ಸಹಿ ಮಾಡಿದ್ದು, ಪ್ರಸ್ತುತ ವ್ಯಕ್ತಿಯೋರ್ವರ ಮನೆಗೆ ಕಟ್ಟಡ ನಿರಪೇಕ್ಷಣಾ ಪತ್ರ ನೀಡಲು ಹೆಸರು ತಿದ್ದಿ ನೀಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿ ದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೂ ದೂರು ನೀಡಿದ್ದಾಗಿ ಅವರು ತಿಳಿಸಿದ್ದಾರೆ.

ಬೈಕಿಗೆ ಕಾರು ಡಿಕ್ಕಿ: ಸವಾರ ಗಂಭೀರ

Posted by JAYAKIRANA Kirana on | 0 comments | Leave a comment...

ವಿಟ್ಲ: ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿ ಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಸಮೀಪದ ವೀರಕಂಭ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಕಲ್ಲಡ್ಕ ಕಡೆಯಿಂದ ವಿಟ್ಲ ಕಡೆ ತೆರಳುತ್ತಿದ್ದ ಆಲ್ಟೋ ಕಾರು ಹಾಗೂ ವಿಟ್ಲದಿಂದ ಕಲ್ಲಡ್ಕ ಕಡೆ ತೆರಳುತ್ತಿದ್ದ ಬೈಕ್ ವೀರಕಂಭ ಸಮೀಪದ ಎರ್ಮೆ ಮಜಲು ಎಂಬಲ್ಲಿ ಮುಖಾಮುಖಿ ಡಿಕ್ಕಿ ಯಾಗಿತ್ತು. ಬೈಕ್ ಸವಾರ ಗಂಭೀರ ವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಸ್ಥಳೀಯರು ಬಂಟ್ವಾಳ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಕೋವಿಯೊಂದಿಗೆ ಜೀಪಿನಲ್ಲಿ ತಿರುಗಾಡುತ್ತಿದ್ದ ಇಬ್ಬರ ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೇರಳದ ಕಣ್ಣುರು ಎಂಬಲ್ಲಿ ಕೋವಿಯೊಂದಿಗೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ಬಂಧಿಸಿ ಅವರಲ್ಲಿದ್ದ ಕೋವಿ ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಜೋಸೆಫ್(೪೦) ಮತ್ತು ಬೇಬಿ ಥೋಮಸ್(೪೩) ಎಂದು ಹೆಸರಿಸಲಾಗಿದೆ. ಚೀಮೇನಿ ಸಮೀಪದ ವೆಳ್ಳಚ್ಚಂತೋಡಿನಿಂದ ಈ ಇಬ್ಬರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ

ಪತಿಯ ಕಿರುಕುಳ: ಪತ್ನಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಎಕ್ಕಾರು-ದೇವರಗುಡ್ಡೆ ಎಂಬಲ್ಲಿ ಪತಿರಾಯನ ಕಿರುಕುಳ ತಾಳಲಾರದೆ ಪತ್ನಿ ಬೇಬಿ(೩೦) ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈಕೆ ಕಳೆದ ನಾಲ್ಕು ವರ್ಷಗಳ ಹಿಂದೆ ಸತೀಶ ನಾಯ್ಕ ಎಂಬಾತನನ್ನು ಮದುವೆಯಾಗಿದ್ದರು. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸತೀಶ ಕುಡಿದು ಬಂದು ಬೇಬಿ ಅವರಿಗೆ ಹಲ್ಲೆ ಮಾಡುತ್ತಿದ್ದ ಮಾತ್ರವಲ್ಲದೆ ಮಾನಸಿಕ ಹಿಂಸೆ ನೀಡು ತ್ತಿದ್ದ ಎಂದು ತಿಳಿದುಬಂದಿದೆ. ಮೊನ್ನೆ ಸಂಜೆ ಮದ್ಯ ಸೇವಿಸಿ ಬಂದು ಗಲಾಟೆ ಮಾಡಿದ್ದ ಈತ ಪತ್ನಿಯಲ್ಲಿ ಕುಡಿಯಲು ಹಣ ಕೊಡು ಎಂಬುದಾಗಿ ಪೀಡಿಸಿದ್ದ ಎನ್ನಲಾಗಿದೆ. ಆದರೆ ಈ ವೇಳೆ ತನ್ನಲ್ಲಿ ಹಣವಿಲ್ಲ ಎಂದಿದ್ದಕ್ಕೆ ನೀನು ಎಲ್ಲಾ ದರೂ ಹೋಗಿ ಸಾಯಿ ಎಂದು ಹೇಳಿದ್ದರಿಂದ ಮನನೊಂದ ಬೇಬಿ ನೇಣು ಬಿಗಿದುಕೊಂಡಿದ್ದಾರೆ. ಆರೋಪಿ ಸತೀಶ ಪರಾರಿಯಾಗಿದ್ದಾನೆ. ಬಜ್ಪೆ ಠಾಣಾ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಕಾರು ಡಿಕ್ಕಿ: ಬೈಕ್ ಸವಾರರಿಗೆ ಗಾಯ

Posted by JAYAKIRANA Kirana on | 0 comments | Leave a comment...

ಉಡುಪಿ: ಮಲ್ಪೆ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಬೈಕ್‌ಗೆ ಪಂದುಬೆಟ್ಟು ಬಳಿ ಕಾರು ಡಿಕ್ಕಿ ಹೊಡೆದ ಪರಿಣಾಮ ಅಣ್ಣ ಹಾಗೂ ತಂಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣ ಸಂಭವಿಸಿದೆ.
ಕೊಡವೂರು ಗ್ರಾಮದ ಸಸಿತೋಟ ನಿವಾಸಿ ಲವ ಹಾಗೂ ಜಯಶ್ರೀ ಎಂಬ ವರೇ ಅಪಘಾತದಲ್ಲಿ ಗಾಯಗೊಂಡವ ರಾಗಿದ್ದಾರೆ. ಈ ಬಗ್ಗೆ ಗಾಯಾಳು ಲವ(೪೮) ನೀಡಿದ ದೂರಿನಂತೆ ಕಾರು ಚಾಲಕ ಯು.ಚಂದ್ರಶೇಖರ್ ವಿರುದ್ದ ಮಲ್ಪೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಬೈಕ್-ಕಾರು ಡಿಕ್ಕಿ: ಓರ್ವನಿಗೆ ಗಾಯ

Posted by JAYAKIRANA Kirana on | 0 comments | Leave a comment...

ಪುತ್ತೂರು: ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಪುತ್ತೂರು ಹೊರವಲಯದ ನೆಹರೂ ನಗರದಲ್ಲಿ ಸೋಮವಾರ ಸಂಭವಿಸಿದೆ. ಪಡ್ನೂರು ಗ್ರಾಮದ ಪಡ್ಡಾಯೂರು ನಿವಾಸಿ ಸಂತೋಷ್ ಕುಮಾರ್ ಗಾಯಗೊಂಡವರು.

ಮದ್ಯ ಮಾರಾಟ: ಆರೋಪಿ ಖುಲಾಸೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಆರು ವರ್ಷಗಳ ಹಿಂದೆ ಗೂಡಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಆರೋಪ ಎದರುರಿಸುತ್ತಿದ್ದ ಗೂಡಂಗಡಿ ಮಾಲಕ ಪರಮೇಶ್ವರ ನಾಯ್ಕ ದೋಷ ಮುಕ್ತ ಗೊಳಿಸಿ ಪುತ್ತೂರು ನ್ಯಾಯಾಲಯ ತೀರ್ಪು ನೀಡಿದೆ.
೨೦೦೫ ದಶಂಬರ ೧೨ರಂದು ಪರಮೇಶ್ವರ ನಾಯ್ಕ ಅವರು ತನ್ನ ಗೂಡಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಅಬಕಾರಿ ಅಧಿಕಾರಿಗಳು ಅಂಗಡಿಗೆ ದಾಳಿ ನಡೆಸಿ ೨೬ ಪ್ಯಾಕೇಟ್ ಮದ್ಯವನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿ ದ್ದರು. ಆರೋಪಿ ಪರ ನ್ಯಾಯವಾದಿ ಗಳಾದ ಎ.ದಿನಕರ ರೈ, ಅರುಣಾ ದಿನಕರ ರೈ ಮತ್ತು ಲೇಖಾಶ್ರೀ ವಾದಿಸಿದ್ದರು.

ಬೈಕ್ ಸ್ಕಿಡ್: ಹಿಂಬದಿ ಸವಾರ ಗಾಯ

Posted by JAYAKIRANA Kirana on | 0 comments | Leave a comment...

ಉಡುಪಿ: ಕೆಮ್ಮಣ್ಣು ಕಡೆಯಿಂದ ನೇಜಾರು ಕಡೆಗೆ ಸಂಚರಿಸುತ್ತಿದ್ದ ಬೈಕ್ ಹಂಪನಕಟ್ಟೆ ಬಳಿ ಸ್ಕಿಡ್ ಆಗಿ ಬಿದ್ದ ಕಾರಣ ಹಿಂಬದಿ ಸವಾರ ಪಡುಕುದ್ರು ನಿವಾಸಿ ಆರೀಫ್(೧೬) ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಈ ಬಗ್ಗೆ ಗಾಯಾಳು ಆರೀಫ್ ನೀಡಿದ ದೂರಿನ ಪ್ರಕಾರ ಬೈಕ್ ಸವಾರ ಜಯಪಾಲನ್ ವಿರುದ್ದ ಮಲ್ಪೆ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಸೆಹ್ವಾಗ್ ಸಿಡಿಲಬ್ಬರ ಬ್ಯಾಟಿಂಗ್: ಡೆಲ್ಲಿಗೆ ಶರಣಾದ ರಾಯಲ್ಸ್

Posted by JAYAKIRANA Kirana on | 0 comments | Leave a comment...

ಜೈಪುರ: ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸೆಹ್ವಾಗ್ ಕೇವಲ ೩೮ ಎಸೆತಗಳಲ್ಲಿ ಬಾರಿಸಿದ ೭೩ ರನ್ ನೆರವಿನಿಂದ ಡೆಲ್ಲಿ ಡೇರ್‌ಡೇವಿಲ್ಸ್ ನಿನ್ನೆ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆರು ವಿಕೆಟ್‌ಗಳ ಗೆಲುವು ದಾಖಲಿಸಿಕೊಂಡಿದೆ.
೧೪೧ ರನ್‌ಗಳ ಸುಲಭ ಮೊತ್ತವನ್ನು ಬೆನ್ನಟ್ಟುತ್ತಿದ್ದ ಡೆಲ್ಲಿ ಮೊದಲ ವಿಕೆಟನ್ನು ಬೇಗನೆ ಕಳಕೊಂಡರೂ ಸೆಹ್ವಾಗ್ ಮತ್ತು ಪೀಟರ್ಸನ್ ರಾಜಸ್ಥಾನ ಬೌಲರ್‌ಗಳನ್ನು ಮನಬಂದಂತೆ ಚಚ್ಚಿದರು. ೩೬ ರನ್ ಮಾಡಿದ ಪೀಟರ್ಸನ್ ಎರಡನೇ ವಿಕೆಟಿಗೆ ಸೆಹ್ವಾಗ್ ಜತೆಗೂಡಿ ೯೬ ರನ್‌ಗಳ ಪೇರಿಸಿದರು. ೧೫.೨ ಓವರ್‌ಗಳಲ್ಲಿ ಡೆಲ್ಲಿ ಗೆಲುವಿನ ಮೆಟ್ಟಿಲೇರಿತು.
ರಾಜಸ್ಥಾನದ ಆರಂಭ ಕೂಡ ಉತ್ತಮವಾಗಿತ್ತು. ದ್ರಾವಿಡ್ ಮತ್ತು ರಹಾನೆ ತಂಡಕ್ಕೆ ಭರ್ಜರಿ ಆರಂಭ ನೀಡಿದ್ದರು. ಆದರೆ ಡೆಲ್ಲಿ ಬೌಲರ್‌ಗಳು ಅದರಲ್ಲೂ ಪವನ್ ನೇಗಿ ಬೌಲಿಂಗ್‌ಗೆ ಇಳಿದ ಬಳಿಕ ರಾಜಸ್ಥಾನ ಕುಸಿತ ಕಂಡಿತು. ೯ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೭೦ ರನ್ ಮಾಡಿದ್ದ ರಾಜಸ್ಥಾನ ೧೩ ಓವರ್ ಆಗುವಷ್ಟರಲ್ಲಿ ೯೫ ರನ್‌ಗಳಿಗೆ ಐದು ವಿಕೆಟ್ ಕಳಕೊಂಡು ಸಂಕಷ್ಟಕ್ಕೆ ಸಿಲುಕಿತು. ರಹಾನೆ, ವಾಟ್ಸನ್ ಮತ್ತು ಹಾಡ್ಜ್ ವಿಕೆಟ್ ಉರುಳಿಸಿದ ನೇಗಿ ರಾಜಸ್ಥಾನದ ಇನ್ನಿಂಗ್ಸ್‌ಗೆ ಆಘಾತವಿಕ್ಕಿದರು.
ಒಳ್ಳೆಯ ರನ್‌ರೇಟ್ ಇದ್ದರೂ ರಾಜಸ್ಥಾನದ ಬ್ಯಾಟ್ಸ್‌ಮೆನ್‌ಗಳು ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಕಳಕೊಂಡರು. ಮೊದಲ ಪಂದ್ಯವನ್ನು ಆಡುತ್ತಿರುವ ವಾಟ್ಸನ್ ಕೇವಲ ಎಂಟು ರನ್ ಮಾಡಿ ವಿಫಲರಾದರು. ಹಾಡ್ಜ್ ಮತ್ತು ಓವೇಶ್ ಷಾ ಎರಡಂಕೆ ಮೊತ್ತ ತಲುಪಲು ಸಾಧ್ಯವಾಗದಿರುವುದು ರಾಜಸ್ಥಾನದ ದೊಡ್ಡ ಕುಸಿತಕ್ಕೆ ಕಾರಣವಾಯಿತು. ರಾಜಸ್ಥಾನ ಸತತ ನಾಲ್ಕು ಪಂದ್ಯಗಳಲ್ಲಿ ಸೋಲುಂಡು ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.

ಪುಣೆ ವಿರುದ್ಧ ಡೆಕ್ಕನ್‌ಗೆ ಎರಡನೇ ಗೆಲುವು

Posted by JAYAKIRANA Kirana on | 0 comments | Leave a comment...

ಕಟಕ್: ಸೋಲಿನ ಸುಳಿಯಲ್ಲಿಯೇ ಗಿರಕಿ ಹೊಡೆಯುತ್ತಿದ್ದ ಡೆಕ್ಕನ್ ಚಾಜರ‍್ಸ್ ತಂಡ ಎರಡನೇ ಗೆಲುವು ದಾಖಲಿಸಿಕೊಂಡಿದೆ. ಪುಣೆ ವಾರಿಯರ್ಸ್ ವಿರುದ್ಧವೇ ಈ ಎರಡೂ ಗೆಲುವು ಬಂದಿದೆ.
೧೮೭ ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಪುಣೆ ಐದು ವಿಕೆಟ್ ನಷ್ಟಕ್ಕೆ ೧೭೩ ರನ್ ಮಾಡಿ ೧೩ ರನ್‌ಗಳಿಂದ ಸೋಲುಂಡಿತ್ತು. ಮುಂಬೈ ವಿರುದ್ಧ ಗೆಲುವಿನ ಸನಿಹಕ್ಕೆ ಬಂದಿದ್ದ ಡೆಕ್ಕನ್ ಮತ್ತೊಂದು ಗೆಲುವು ದಾಖಲಿಸಿದ್ದು, ಡೆಕ್ಕನ್ ತನ್ನ ಗೆಲುವಿನ ಅಭಿಯಾನವನ್ನು ಮುಂದುವರಿಸಿದರೆ ಅಂಕಪಟ್ಟಿಯಲ್ಲಿ ದೊಡ್ಡ ಬಿರುಗಾಳಿಯೇಳುವ ಸಾಧ್ಯತೆಗಳಿವೆ.
ಐಪಿಎಲ್‌ನಲ್ಲಿ ಮೊದಲ ಪಂದ್ಯವನ್ನು ಆಡುತ್ತಿರುವ ಮೈಕಲ್ ಕ್ಲಾರ್ಕ್ ೪೧ ರನ್ ಮಾಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ೪೫ ರನ್ ಮಾಡಿದ ಗಂಗೂಲಿ ಕೂಡ ಅವರಿಗೆ ಜತೆ ನೀಡಿದರು. ಅಂತ್ಯದಲ್ಲಿ ಸ್ಮಿತ್ ೨೭ ಎಸೆತಗಳಲ್ಲಿ ೪೭ ರನ್ ಮಾಡಿದರೂ ಗೆಲುವು ಅವರ ಕೈಗೆಟುಕಲಿಲ್ಲ. ಡೆಕ್ಕನ್ ಬೌಲರ್‌ಗಳು ಅಂತಿಮ ಓವರ್‌ಗಳಲ್ಲಿ ಪುಣೆ ಬ್ಯಾಟ್ಸ್‌ಮೆನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಮೊದಲು ಬ್ಯಾಟಿಂಗ್ ಮಾಡಿದ ಡೆಕ್ಕನ್ ೨೩ ರನ್ ಮಾಡುವಷ್ಟರಲ್ಲಿ ಎರಡು ವಿಕೆಟ್ ಕಳಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಇದರ ಬಳಿಕ ಕ್ಯಾಮರೂನ್ ವೈಟ್ ಮತ್ತು ಕುಮಾರ್ ಸಂಗಕ್ಕರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ವೈಟ್ ಕೇವಲ ೪೫ ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ಸಹಿತ ೭೪ ರನ್ ಮತ್ತು ಸಂಗಕ್ಕರ ೫೨ ಎಸೆತಗಳಲ್ಲಿ ಹತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿ ೮೨ ರನ್ ಮಾಡಿದರು. ಗಂಗೂಲಿ ೩ ಓವರ್‌ಗಳಲ್ಲಿ ೩೯ ರನ್ ನೀಡಿ ತುಂಬಾ ದುಬಾರಿಯಾದರು.

ನಾನು ರಾಜಕಾರಣಿಯಲ್ಲ: ಸಚಿನ್

Posted by JAYAKIRANA Kirana on | 0 comments | Leave a comment...

ಪುಣೆ: ಅದೊಂದು ಬೌನ್ಸರ್.... ರಾಜ್ಯ ಸಭೆಗೆ ನಾಮನಿರ್ದೇಶನವನ್ನು ಹೇಗೆ ಒಪ್ಪಿಕೊಂಡಿರಿ ಎಂದು ಕೇಳಿದ ಪ್ರಶ್ನೆಗೆ ಸಚಿನ್ ತೆಂಡೂಲ್ಕರ್ ಈ ರೀತಿ ಉತ್ತರಿಸಿದರು.
ಘನವೆತ್ತ ರಾಷ್ಟ್ರಪತಿಗಳು ನನ್ನ ಹೆಸರನ್ನು ರಾಜ್ಯಸಭೆಗೆ ನಾಮ ನಿರ್ದೇಶನಗೊಳಿಸುವುದು ಒಂದು ಗೌರವ. ನನಗಿಂತ ಮೊದಲು ಲತಾ ಮಂಗೇಶ್ಕರ್ ಮತ್ತು ಪೃಥ್ವಿರಾಜ್ ಕಪೂರ್ ಅವರಂತಹ ವ್ಯಕ್ತಿಗಳು ಈ ಗೌರವ ಪಡೆದಿದ್ದರು ಎನ್ನುವುದು ಸಚಿನ್ ಅಭಿಪ್ರಾಯ.
ವೈಯಕ್ತಿಕವಾಗಿ ಯಾವುದೇ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸುತ್ತಾರೆ. ನಾನು ಕಳೆದ ೨೨ ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ನಾನು ರಾಜಕಾರಣಿಯಲ್ಲ, ಕ್ರೀಡಾ ಪಟು. ಯಾವಾಗಲೂ ಕ್ರೀಡಾಪಟು ವಾಗಿಯೇ ಇರುತ್ತೇನೆ ಎಂದು ಸಚಿನ್ ಸ್ಪಷ್ಟಪಡಿಸಿದರು.
ರಾಜ್ಯಸಭೆಗೆ ನಾಮನಿರ್ದೇಶನದಿಂ ದಾಗಿ ನನಗೆ ಇನ್ನಷ್ಟು ಜವಾಬ್ದಾರಿ ಬಂದಿದೆ. ಕ್ರಿಕೆಟಿನಿಂದಾಗಿಯೇ ನಾನು ಇದುವರೆಗಿನ ಎಲ್ಲಾ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಕ್ರಿಕೆಟ್ ನನ್ನ ಜೀವನ ಮತ್ತು ಅದು ಹಾಗೆಯೇ ಉಳಿಯುತ್ತದೆ. ನನ್ನ ಕ್ಷೇತ್ರ ಕ್ರಿಕೆಟ್ ಮತ್ತು ಇದರಲ್ಲಿಯೇ ಸಾಧನೆ ಮಾಡುತ್ತಿರುತ್ತೇನೆ ಎಂದರು.

ಮ್ಯಾಂಚೆಸ್ಟರ್ ಸಿಟಿಗೆ ಗೆಲ್ಲುವ ಅವಕಾಶ: ಫರ್ಗುನ್‌ಸನ್

Posted by JAYAKIRANA Kirana on | 0 comments | Leave a comment...

ಲಂಡನ್: ಈ ಸಲ ಇಂಗ್ಲಿಷ್ ಪ್ರಿಮಿ ಯರ್ ಲೀಗ್ ಗೆಲ್ಲಲು ಮ್ಯಾಂಚೆಸ್ಟರ್ ಸಿಟಿ ಅಗ್ರ ಸ್ಪರ್ಧಿಯಾಗಿದೆ ಎಂದು ಮ್ಯಾಂಚೆಸ್ಟರ್ ಯುನೈಟೆಡ್‌ನ ಮ್ಯಾನೇಜರ್ ಸರ್ ಅಲೆಕ್ಸ್ ಫರ್ಗುನ್ ಸನ್ ಅಭಿಪ್ರಾಯಪಟ್ಟರು.
ಮ್ಯಾಂಚೆಸ್ಟರ್ ಸಿಟಿ ವಿರುದ್ಧ ಯುನೈಟೆಡ್ ೧-೦ಯಿಂದ ಪರಾಭವ ಗೊಂಡ ಬಳಿಕ ಅವರು ಮಾಧ್ಯಮ ದೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಇದು ತುಂಬಾ ಕೆಟ್ಟ ಫಲಿ ತಾಂಶ. ಅವರು ಅಗ್ರ ಸ್ಪರ್ಧಿಯಾಗಿ ದ್ದರು. ನಾವು ಅವರ ವಿರುದ್ಧ ಆಡಿದೆವು. ಇನ್ನು ಎರಡು ಪಂದ್ಯಗಳನ್ನು ಗೆದ್ದುಕೊಂಡರೆ ಅವರು ಚಾಂಪಿಯನ್ಸ್ ಲೀಗ್ ಗೆಲ್ಲುತ್ತಾರೆ ಎಂದು ಫರ್ಗುನ್‌ಸನ್ ತಿಳಿಸಿದರು.
ನಮ್ಮ ತಂಡ ಉತ್ತಮವಾಗಿ ಆಡಿರಲಿಲ್ಲ. ಮ್ಯಾಂಚೆಸ್ಟರ್ ಸಿಟಿ ಗೆಲುವಿಗೆ ಅರ್ಹವಾಗಿತ್ತು. ನಾವು ಅವರ ಗೋಲುಕೀಪರ್‌ನನ್ನು ಹೆಚ್ಚು ಪರೀಕ್ಷಿಸಲಿಲ್ಲ. ನಾವು ಉತ್ತಮ ಆರಂಭ ಪಡೆದಿದ್ದೆವು. ಮೊದಲ ೧೫ ನಿಮಿಷಗಳಲ್ಲಿ ಚೆಂಡು ನಮ್ಮ ಹಿಡಿತದಲ್ಲಿತ್ತು ಎಂದರು.

ನದಿಗೆ ಮಾಂಸ ತ್ಯಾಜ್ಯ: ಸ್ಥಳೀಯರ ಆಕ್ರೋಶ

Posted by JAYAKIRANA Kirana on | 0 comments | Leave a comment...


ಪಡುಬಿದ್ರಿ: ಕಾಪು ಸಮೀಪದ ಇನ್ನಂಜೆ ಗ್ರಾಮದ ಮರ್ಕೋಡಿ ನದಿಯ ಸೇತುವೆಯಲ್ಲಿ ಹಂದಿ, ದನ, ಕೋಳಿ ತ್ಯಾಜ್ಯ ಹಾಕುವುದರಿಂದ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಪರಿಸರದ ಬಾವಿಯ ನೀರು ಕಲುಷಿತ ಗೊಳ್ಳುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ದ್ದಾರೆ.
ಈ ಸಂದರ್ಭ ಇನ್ನಂಜೆ ಗ್ರಾ. ಪಂ. ಅಧ್ಯಕ್ಷೆ ವಸಂತಿ ಆಚಾರ್ಯ ಮಾತನಾಡಿ, ಮರ್ಕೋಡಿ ಹೊಳೆಗೆ ಜನರು ತ್ಯಾಜ್ಯ ಹಾಕುವ ಬಗ್ಗೆ ಗ್ರಾಮ ಪಂಚಾಯತ್‌ಗೆ ದೂರು ಬಂದಿದೆ.
 ಈ ಬಗ್ಗೆ ನಾವು ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ರಾತ್ರಿ ಜನರು ಇಲ್ಲಿಗೆ ತಂದು ಹಾಕು ತ್ತಾರೆ. ತ್ಯಾಜ್ಯ ಹಾಕುವವರು ಸಿಕ್ಕರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮುಂದಿನ ಅಧಿವೇಶನದಲ್ಲಿ ತುಳುವಿನಲ್ಲೇ ಪ್ರಶ್ನೆ

Posted by JAYAKIRANA Kirana on | 0 comments | Leave a comment...

ರಘುಪತಿ ಭಟ್ ಭರವಸೆ
ಉಡುಪಿ: ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ತುಳು ಭಾಷೆಯ ಲ್ಲಿಯೇ ಪ್ರಶ್ನೆ ಕೇಳಿ ಮುಖ್ಯಮಂತ್ರಿಗ ಳಿಂದ ತುಳುವಿನಲ್ಲಿಯೇ ಉತ್ತರ ಕೊಡಿ ಸುವಂತೆ ಮಾಡಿಸುತ್ತೇನೆ ಎಂದು ಶಾಸಕ ಕೆ.ರಘುಪತಿ ಭಟ್ ಭರವಸೆ ನೀಡಿದ್ದಾರೆ.
 ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸಿರಿ ತುಳುವ ಚಾವಡಿ ಇವುಗಳ ಜಂಟಿ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಪೊಣ್ಣು ಪೊಂಜೊಕ್ಲೆನ ಕೂಟೋ ತುಳುವ ಸಿರಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗ ವಹಿಸಿ ಅವರು ಮಾತನಾಡುತ್ತಿದ್ದರು.
 ಸಾಕಷ್ಟು ಹಣ ಖರ್ಚು ಮಾಡಿ ನಡೆಸಿದ ಕಾರ್ಯಕ್ರಮಕ್ಕೆ ಸಂಘಟಕರು ತಮಗೆ ಬೇಕಾದವರಿಗೆ ಮಾತ್ರ ಆಮಂತ್ರಣ ಕಳುಹಿಸಿದ್ದು ಮತ್ತು ಪ್ರತಿಷ್ಟಿತ ಮನೆತನದ ಮಹಿಳೆಯರಿಗೆ ಮಾತ್ರ ಆಮಂತ್ರಣ ನೀಡಿ, ಸಾಮಾನ್ಯ ಮನೆ ತನದ ತುಳು ಮಹಿಳೆಯರಿಗೆ ಆಮಂ ತ್ರಣ ನೀಡದೆ ಕಾರ್ಯಕ್ರಮ ಆಯೋ ಜಿಸಿದ್ದೇ ಕಾರ್ಯಕ್ರಮಕ್ಕೆ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಲು ಕಾರಣವೆಂಬ ಅಭಿಪ್ರಾಯ ವ್ಯಕ್ತವಾಗಿದೆ.
 ಸರಕಾರದ ಅನುದಾನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತಮಗೆ ಬೇಕಾದವರಿಗೆ ಮಾತ್ರ ಆಹ್ವಾನ ನೀಡಿ ಉಳಿದವರನ್ನು ನಿರ್ಲಕ್ಷಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಕೆಲವರದ್ದು. ಕಾರ್ಯ ಕ್ರಮದ ಬಗ್ಗೆ ಸಾಕಷ್ಟು ಪ್ರಚಾರ ನೀಡದೇ ಇದ್ದುದೂ ಇನ್ನೊಂದು ನೀರಸ ಸ್ಪಂದನೆಗೆ ಕಾರಣವೆನ್ನಲಾಗಿದೆ. ಉಡುಪಿಯ ಪತ್ರಕರ್ತರಿಗೂ ಸಂಘಟಕರು ಕಾರ್ಯ ಕ್ರಮದ ಮಾಹಿತಿ ನೀಡಿರಲಿಲ್ಲ. ನೂರಕ್ಕಿಂ ತಲೂ ಕಡಿಮೆ ಜನ ಸೇರಿದ್ದ ಕಾರ್ಯ ಕ್ರಮಕ್ಕೆ ಬೇರೆ ಭಾರೀ ಆಡಂಬರದ ಬ್ಯಾಜ್‌ನ್ನು ಮುದ್ರಣ ಮಾಡುವ ಮೂಲಕ ಸಂಘಟಕರು ಸರಕಾರಿ ಹಣವನ್ನು ದುಂದುವೆಚ್ಚ ಮಾಡಿದ್ದಾರೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ವಿಮೋಚನಾ ಯಾತ್ರೆ ಸಮಾಪ್ತಿ

Posted by JAYAKIRANA Kirana on | 0 comments | Leave a comment...

ತಿರುವನಂತಪುರಂ: ಪ್ರವಾದಿ(ಸ) ಯವರ ಕೇಶ ವಿವಾದದ ಹಿನ್ನೆಲೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಮೋಚನಾ ಯಾತ್ರೆ ಕೇರಳ ತಿರುವನಂತಪುರಂನ ಪುತ್ತರಿಕಂಡಂನಲ್ಲಿ ಸೋಮವಾರ ಸಮಾಪ್ತಿಗೊಂಡಿತು.
ಎಸ್.ಎಸ್.ಎಫ್. ಹಮ್ಮಿಕೊಂಡಿದ್ದ ಮಾನವತಾ ಯಾತ್ರೆಗೆ ಸವಾಲಿನ ಯಾತ್ರೆಯೆಂದೇ ಭಾವಿಸಲಾಗಿದ್ದ ಎಸ್.ಕೆ. ಪ್ರಾಯೋಜಿತ ವಿಮೋಚನಾ ಯಾತ್ರೆಗೆ ಕಳೆದ ತಿಂಗಳು ೧೮ರಂದು ಮಂಗಳೂರಿನಲ್ಲಿ ಚಾಲನೆ ನೀಡಲಾ ಗಿತ್ತು. ಸೋಮವಾರ ನಡೆದ ಸಮಾ ರೋಪದ ಸಮಾರಂಭವನ್ನು ಸುನ್ನೀ ಯುವಜನ ಸಂಘದ ಕೇಂದ್ರ ಕಾರ್ಯ ದರ್ಶಿ ಪ್ರೊ.ಆಲಿಕುಟ್ಟಿ ಮುಸ್ಲಿಯಾರ್ ಉದ್ಘಾಟಿಸಿದರು.
ಎಸ್‌ಕೆಎಸ್‌ಎಸ್‌ಎಫ್‌ನ ಕೇಂದ್ರೀಯ ಅಧ್ಯಕ್ಷ ಸೈಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಶೋಷಣೆಯ ವಿರುದ್ಧ ಪ್ರತಿಜ್ಞೆ ಭೋದಿಸಿದರು. ಇದೇ ಸಂದರ್ಭದಲ್ಲಿ ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ ಅವರು ವಿಶ್ವಾಸ, ಸಾಮುದಾಯಿಕ ಮತ್ತು ಸಾಂಪತ್ತಿಕ ಕ್ಷೇತ್ರದಲ್ಲಿ ವಂಚನೆ ಮಾಡಿದ್ದಾರೆನ್ನುವ ಹತ್ತು ಆರೋಪಗಳನ್ನು ಸಮಾರೋಪದಲ್ಲಿ ಅಂಗೀಕರಿಸಲಾಯಿತು.
ಸಮಸ್ತ ಕಾರ್ಯದರ್ಶಿ ಕೂಟು ಮಲ ಬಾಪು ಮುಸ್ಲಿಯಾರ್, ಸೈಯ್ಯದ್ ಸ್ವಾದಿಕ್ ಅಲಿ ಶಿಹಾಬ್ ತಂಙಳ್, ಡಾ.ಬಹಾಹುದ್ದೀನ್ ನದ್ವಿ ಕೂರಿ ಯಾಡ್, ರಹ್ಮತ್ತುಲ್ಲಾ ಖಾಸಿಂ ಮುತ್ತೇಡಂ, ಮೌಲಾನ ಹಮೀದ್ ಫೈಝಿ ಅಂಬಲಕ್ಕಡವು, ಓಣಂಪಳ್ಳಿ ಫೈಝಿ, ಸಚಿವರಾದ ಪಿ.ಕೆ.ಕುಂಞಲಿ ಕುಟ್ಟಿ, ಕೇರಳ ಚೀಫ್ ವಿಪ್ ಪಿ.ಸಿ. ಜಾರ್ಜ್, ಉಪ ಸಭಾಪತಿ ಎನ್. ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರಿನಲ್ಲೀಗ ಚಿಲ್ಲರೆ ಸಮಸ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹೊಟೇಲ್, ದಿನಸಿ ಅಂಗಡಿ, ಮೀನು ವ್ಯಾಪಾರ, ಔಷಧದ ಅಂಗಡಿ ಎಲ್ಲಿ ನೋಡಿದರೂ ಚಿಲ್ಲರೆ ಸಮಸ್ಯೆ, ಬಸ್‌ಗಳಲ್ಲಿಯ ಪರದಾಟ ವಂತೂ ಕೇಳುವಂತೆಯೇ ಇಲ್ಲ. ಮಂಗಳೂರು ನಗದಲ್ಲೀಗ ಚಿಲ್ಲರೆ ಸಮಸ್ಯೆ ಕಾಡುತ್ತಿದೆ. ಚಿಲ್ಲರೆ ಕಾಸಿಗಾಗಿ ಜಗಳ ವಾಗುವುದೂ ಇದೆ.
ವ್ಯಾಪಾರಿಗಳದ್ದು ನಿತ್ಯದ ಗೋಳು ಚಿಲ್ಲರೆಗಾಗಿ ನಷ್ಟ ಅನುಭವಿಸುವ ಸಂಕಟ. ನಗರದ ಕೆಲವು ಹೊಟೇಲ್ ಗಳವರು ಚಿಲ್ಲರೆ ಸಮಸ್ಯೆ ನಿವಾರಣೆಗೆ ಟೋಕನ್ ಸಿಸ್ಟಮ್ ಮಾಡಿದ್ದಾರೆ. ಒಂದು ಎರಡು, ಐದು. ರೂಪಾಯಿ ಮೌಲ್ಯದ ಟೋಕನ್ ಕೊಡುತ್ತಾರೆ. ನಾಳೆ ಬನ್ನಿ ಎಂದು ಪ್ರಿತಿಯಿಂದ ಹೇಳುತ್ತಾರೆ. ನಾಳೆ ಬಂದರೆ ಮತ್ತದೇ ಸಮಸ್ಯೆ. ಚಿಲ್ಲರೆ ಪಡೆಯಲೋಸುಗ ಇವರದೇ ಹೊಟೇಲ್ ತಿಂಡಿ ತಿನ್ನಬೇಕು(ಇಷ್ಟ ಇಲ್ಲದಿದ್ದರೂ)ಇಲ್ಲದಿದ್ದರೆ ಚಿಲ್ಲರೆ ಹೋಯಿತು.
ಚಿಲ್ಲರೆ ಬೆಲೆಯ ಚಾಕಲೇಟ್‌ನ್ನು ಚಿಲ್ಲರೆಗೆ ಪರ್ಯಾಯವಾಗಿ ಉಪಯೋಗಿಸುವುದಂತೂ ಇದ್ದೇ ಇದೆ. ಇದರಿಂದ ಅಂಗಡಿಕಾರರಿಗೆ ಎರಡು ರೀತಿ ಲಾಭ. ಒಂದು ಚಿಲ್ಲರೆ ಸಮಸ್ಯೆ ನೀಗಿದರೆ ಇನ್ನೊಂದು ಕಡೆ ಚಾಕಲೇಟ್ ಮಾರಿದ ಲಾಭ ದೊರಕುತ್ತದೆ. ಚಾಕಲೇಟ್ ಚಿಲ್ಲರೆಯಿಂದ ರೋಸಿ ಹೋದವರು ನೀವೆ ಇಟ್ಟುಕೊಳ್ಳಿ ಎಂದು ಗದರಿಸಿ ಹೋಗುವುದೂ ಇದೆ.
ದಿನಸಿ ಅಂಗಡಿಗಳಲ್ಲಿ ಚಿಲ್ಲರೆಯ ಬದಲಿಗೆ ಶಾಂಪೂ ಪೌಚ್, ಸೋಪ್ ವಿನಿಮಯ ಆಗುತ್ತಿದೆ. ಅಂಗಡಿಕಾರರು ಚಿಲ್ಲರೆಗೆ ಏನಾದರೂ ಬದಲಿ ಉಪಾಯ ಹುಡುಕ ಬಹುದು. ಚಿಲ್ಲರೆ ಇಲ್ಲ ಎಂದಾದರೆ ವ್ಯವಹಾರವೆ ಮಾಡದೇ ಗ್ರಾಹಕನಿಗೆ ಕಳುಹಿಸಬಹುದು. ಆದರೆ ಬಸ್‌ನಲ್ಲಿ ಚಿಲ್ಲರೆ ಸಮಸ್ಯೆ ಕಾಡಿದರೆ, ಬಸ್‌ನಲ್ಲಿ ಉಂಟಾದ ಚಿಲ್ಲರೆ ಸಮಸ್ಯೆಯ ಜಗಳ ಪೊಲೀಸ್ ಠಾಣೆಯ ವರೆಗೂ ಹೋದ ಘಟನೆ ಪುತ್ತೂರಿನಲ್ಲಿ ನಡೆದಿತ್ತು ಎಂದರೆ ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು. ಚಿಲ್ಲರೆ ಇಲ್ಲದಿದ್ದರೆ ಪ್ರಯಾಣಿಕರನ್ನು ಅರ್ಧದಲ್ಲಿ ಇಳಿಸುವಂತಿಲ್ಲ. ಚಿಲ್ಲರೆ ಹಣ ಕೊಡದೇ ಇದ್ದರೆ ಪ್ರಯಾಣಿಕ ಸುಮ್ಮನಿರುವುದಿಲ್ಲ ಇಂತಹ ಸಂಕಷ್ಟ ನಿರ್ವಾಹಕ ದಿನ ಪೂರ್ತಿ ಅನುಭವಿಸಬೇಕಾಗುತ್ತದೆ. ಚಿಲ್ಲರೆ ಇಲ್ಲ ಎಂಬ ನೆಪದಲ್ಲಿ ಇಡೀ ನೋಟ್‌ನ್ನೆ ಚೀಲದಲ್ಲಿಟ್ಟು ಹುಸಿ ನಗೆ ಬೀರುವ ನಿರ್ವಾಹಕರೂ ಇದ್ದಾರೆ.
ತರಕಾರಿ ವ್ಯಾಪಾರಿಗಳು ಒಗ್ಗರಣೆ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಣಸಿನಲ್ಲಿ ಚಿಲ್ಲರೆ ನಿಭಾಯುತ್ತಾರೆ. ಇದು ಬೇಡದಿದ್ದರೂ ತೆಗೆದುಕೊಳ್ಳಲೇ ಬೇಕಾದ ಅನಿವಾರ್ಯತೆ ಗ್ರಾಹಕರದ್ದು. ಬಿಕ್ಷುಕರೇ ಈಗ ಚಿಲ್ಲರೆ ಸಮಸ್ಯೆ ನಿವಾರಣೆಯ ವಾಹಕರಾಗಿದ್ದಾರೆ. ಒಂಬತ್ತು ರೂ. ಚಿಲ್ಲರೆ ಕೊಟ್ಟು ಒಂದು ರೂ. ಬಿಕ್ಷೆ ತೆಗೆದುಕೊಳ್ಳುವುದೂ ಕೂಡ ಬಿಕ್ಷಾಟನೆಯ ಅನಿವಾರ್ಯ ಎಂಬಂ ತಹ ಸ್ಥಿತಿ ಈಗ ಇದೆ.
ಇಷ್ಟು ಚಿಲ್ಲರೆ ಸಮಸ್ಯೆಗೆ ಕಾರಣಗಳಾದರೂ ಏನು? ಇದರ ಸ್ಪಷ್ಟ ಕಾರಣ ಗೊತ್ತಿಲ್ಲ. ಆದರೆ ಜನರ ಬಾಯಲ್ಲಿ ಓಡಾಡುತ್ತಿರುವ ಮಾತುಗಳನ್ನೇ ನಂಬುವುದಾದರೆ, ನಾಣ್ಯವನ್ನು ಕರಗಿಸಿದರೆ ಅದರಲ್ಲಿ ಸಿಗುವ ಧಾತು ಅದರ ಮುಖ ಬೆಲೆಗಿಂತ ಹೆಚ್ಚಿನದಾಗಿರುತ್ತದೆ ಲೋಹದ ವ್ಯಾಪಾರಿಗಳು ನಾಣ್ಯಗಳನ್ನು ಸಂಗ್ರಹಿಸಿ ಕರಗಿಸುತ್ತಾರೆ, ನಾಣ್ಯ ಕರಗಿಸಿ ಅದರಿಂದ ಕೋವಿಯ ಗುಂಡು ತಯಾರಿಸುತ್ತಾರೆ, ಬ್ಲೇಡ್ ತಯಾರಿಸಲು ಸಿಗುವ ಸುಲಭದ ದಾತು ನಾಣ್ಯ ಎಂದೆಲ್ಲ ಮಾತನಾಡು ವವರಿದ್ದಾರೆ.
ಆದರೆ ಬ್ಯಾಂಕ್ ಅಧಿಕಾರಿಗಳು ಹೇಳುವುದು ಹೀಗೆ. ಚಿಲ್ಲರೆ ವಿತರಣೆಯ ವ್ಯವಸ್ಥೆ ದೇಶಾದ್ಯಂತ ಸಮಾನವಾಗಿಲ್ಲ. ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿಲ್ಲರೆ ಸರಬರಾಜು ಮಾಡಲಾಗುತ್ತದೆ. ಕೆಲವಡೆ ಏನೂ ಇಲ್ಲ. ಚಿಲ್ಲರೆ ಸರಬರಾಜು ಮಾಡುವ ಹಿಡಿತ ಕೆಲವೇ ಬ್ಯಾಂಕ್‌ಗಳ ಕೈಯಲ್ಲಿ ಇರುವುದರಿಂದ ಅವರ ತಮಗೆ ಬೇಕಾದವರಿಗಷ್ಟೇ ಚಿಲ್ಲರೆ ಸರಬರಾಜು ಮಾಡುತ್ತಾರೆ. ಚಿಲ್ಲರೆ ಸಮಸ್ಯೆಯ ಇನ್ನೊಂದು ದೊಡ್ಡ ಸಮಸ್ಯೆ ದೇವಸ್ಥಾನ, ಚರ್ಚ್, ಮಸೀದಿ ದರ್ಗಾಗಳ ಕಾಣಿಕೆ ಡಬ್ಬಿಗಳು. ಕಾಣಿಕೆ ಡಬ್ಬಿಗಳನ್ನು ಅಪರೊಪಕ್ಕೊಮ್ಮೆ ತೆರೆಯುವುದರಿಂದ ಲಕ್ಷ ಲಕ್ಷ ರೂ. ಚಿಲ್ಲರೆ ಹಣ ಡಬ್ಬಿಯಲ್ಲಿ ಕೊಳೆಯು ತ್ತಿರುತ್ತದೆ.

ಮಂಗಳಾದೇವಿ: ಕುಲಾಲ ಭವನಕ್ಕೆ ಶಿಲಾನ್ಯಾಸ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಲಾಲ ಸಮಾಜವು ಸಮಸ್ತಕುಲಕ್ಕೆ ಮಾದರಿ ಯಾಗದ್ದು ನಿಜವಾದ ಅರ್ಥದಲ್ಲಿ ಕುಲದೀಪಕರಾಗಿದ್ದಾರೆ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರು ದೇವಾನಂದ ಸ್ವಾಮೀಜಿಯವರು ಹೇಳಿದರು. ಮಂಗಳಾದೇವಿ ಪರಿಸರ ದಲ್ಲಿ ಮುಂಬಯಿ ಕುಲಾಲ ಸಂಘದ ನೇತೃತ್ವದಲ್ಲಿ ನಿರ್ಮಿಸಲು ಉದ್ದೇಶಿಸಿ ರುವ ಅಂದಾಜು ನಾಲ್ಕು ಕೋಟಿ ರೂಪಾಯಿ ವೆಚ್ಚದ ಬೃಹತ್ ‘ಕುಲಾಲ ಭವನ’ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಆಶೀರ್ವಚನೆ ನೀಡಿದರು.
ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ಪಿ.ಕೆ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮೇಯರ್ ಶ್ರೀಮತಿ ಗುಲ್ಜಾರ್‌ಬಾನು, ಮುಂಬಯಿ ಮಹಾನಗರ ಪಾಲಿಕೆಯ ಹಿರಿಯ ಸದಸ್ಯ ಸಂತೋಷ್ ಶೆಟ್ಟಿ, ಮುಂಬಯಿ ದೇವಾಡಿಗ ಸುಧಾರಕ ಸಂಘದ ಅಧ್ಯಕ್ಷ ಹೆಚ್.ಮೋಹನ್‌ದಾಸ್, ಮೂಡಾ ಮಾಜಿ ಅಧ್ಯಕ್ಷ ಕೆ.ತೇಜೋಮಯ, ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಲಕ್ಷ್ಮಣ ಕುಂದರ್ ಅತಿಥಿಗಳಾಗಿ ಭಾಗವಹಿಸಿದ್ದರು.

ಕಟೀಲು: ಜಾನಪದ ವಸ್ತುಸಂಗ್ರಹಾಲಯ ಉದ್ಘಾಟನೆ

Posted by JAYAKIRANA Kirana on | 0 comments | Leave a comment...

ಬಜ್ಪೆ: ಕಟೀಲು ದುರ್ಗಾಪರ ಮೇಶ್ವರಿ ಪದವಿಪೂರ್ವ ಕಾಲೇಜಿನಲ್ಲಿ ‘ದುರ್ಗಾ ಜಾನಪದ ವಸ್ತುಸಂಗ್ರ ಹಾಲ ಯ’ ವನ್ನು ಇತ್ತೀಚೆಗೆ ಮಂಗಳೂರು ಸಹಾಯಕ ಕಮಿಷನರ್, ಕಾಲೇಜಿನ ಆಡಳಿತಾಧಿಕಾರಿಆಗಿರುವ ಡಾ. ವೆಂಕ ಟೇಶ್.ಎಂ.ವಿ. ಅವರು ಉದ್ಘಾಟಿಸಿ ದರು. ಈ ಸಂದರ್ಭದಲ್ಲಿ ಸುಮಾರು ಐದು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಸುಸಜ್ಜಿತ ಜಾನಪದ ವಸ್ತು ಸಂಗ್ರಹಾಲಯದ ಸ್ಥಾಪಕ ಡಾ.ಸುಧೀರ್ ಶೆಟ್ಟಿ, ಜಿ.ಆರ್.ಉಪಾಧ್ಯಾಯ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವೈ.ಮೋನಪ್ಪ ಶೆಟ್ಟಿ, ಕಾಲೇಜಿನ ಮಾಜಿ ಪ್ರಾಂಶುಪಾಲ ಎಸ್.ಜಯರಾಮ ಶೆಟ್ಟಿ, ಸುರೇಶ್ ಭಟ್, ಉಮೇಶ್ ರಾವ್ ಎಕ್ಕಾರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶು ಪಾಲ ಜಯರಾಮ ಪೂಂಜ ಅತಿಥಿಗಳನ್ನು ಸ್ವಾಗತಿಸಿದರು.
 ಮೈಸೂರಿನ ಲ್ಯಾಬ್‌ಲ್ಯಾಂಡ್ ಬಯೋಟೆಕ್ ಸಮೂಹಸಂಸ್ಥೆ ಇದರ ಅಧ್ಯಕ್ಷರಾಗಿರುವ ಡಾ.ಸುಧೀರ್ ಶೆಟ್ಟಿಯವರು ಉದಾರ ರೂಪದಲ್ಲಿ ಕಟ್ಟಡ ನಿರ್ಮಾಣಕ್ಕೆ ಹಣಕಾಸಿನ ನೆರವು ಒದಗಿಸಿದ್ದು, ಕಾಲೇಜಿನ ಮಕ್ಕಳಿಂದ ಮಾಹಿತಿ ಪಡೆದು ಊರಿನ ಜನರನ್ನು ಸಂಪರ್ಕಿಸಿ ಅವರ ಬಳಿಯಿದ್ದ ಹಳೇಕಾಲದ ವಸ್ತುಗಳನ್ನು ಪಡೆದು ಇಲ್ಲಿ ಸಂಗ್ರಹ ಮಾಡುವ ಕೆಲಸವನ್ನು ಮಾಡಲಾಗಿದೆ. ಕಟೀಲು ದೇವಳಕ್ಕೆ ತೀರಾ ಸಮೀಪವಿರುವ ವಸ್ತು ಸಂಗ್ರಹಾಲಯ ವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಸಂಪುಟ ವಿಸ್ತರಣೆಗೆ ವರಿಷ್ಠರೊಂದಿಗೆ ಡಿವಿ ಮಾತುಕತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸಂಪುಟ ವಿಸ್ತರಣೆಗೆ ಇರುವ ಗೊಂದಲ ನಿವಾರಿಸಲು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಬರ ಪರಿಸ್ಥಿತಿಯ ನಿರ್ವಹಣೆಗೆ ಕೇಂದ್ರದ ಸಹಾಯ ಕೋರಲು ಸರ್ವಪಕ್ಷಗಳ ನಿಯೋಗದೊಂದಿಗೆ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಇಂದು ರಾತ್ರಿ ಪಕ್ಷದ ರಾಷ್ಟ್ರೀಯ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ರಾಜ್ಯ ವಿಧಾನಸಭೆಯ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಉಳಿದಿದ್ದು, ಈ ಅವಧಿಯಲ್ಲಿ ಉತ್ತಮ ಆಡಳಿತ ನೀಡುವ ಉದ್ದೇಶದಿಂದ ಸಂಪುಟ ವಿಸ್ತರಣೆ ಮಾಡುವುದು ಆವಶ್ಯವಾಗಿದೆ. ಪಕ್ಷದ ಜವಾಬ್ದಾರಿಯನ್ನು ಯುವ ನಾಯಕರಿಗೆ ವಹಿಸಿ ಕೊಡಲು ಡಿ.ವಿ. ನಿರ್ಧರಿಸಿದ್ದು ಇದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಸಂಪುಟದಲ್ಲಿರುವ ಕೆಲವು ಭ್ರಷ್ಟರನ್ನು ಕೈ ಬಿಡಲು ಅನುವು ಮಾಡಿಕೊಡಬೇಕು ಎಂದು ಅವರು ಕೋರಲಿದ್ದಾರೆ. ಸಂಪುಟಕ್ಕೆ ಸೇರಿಸಬಹುದಾದ ಹೊಸಬರ ಪಟ್ಟಿಯನ್ನು ವರಿಷ್ಠರಿಗೆ ನೀಡಿ, ಯಾರಿಗೆ ಯಾವ ಖಾತೆ ಎಂಬ ಬಗ್ಗೆ ಸಮಾಲೋಟನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಡಿ.ವಿ.ಗೆ ಈಶ್ವಪ್ಪ ಸಾತ್ ನೀಡಲಿದ್ದಾರೆ.

ಡೈವೋರ್ಸ್‌ಗಾಗಿ ಇಂದು ಗಂಡು-ಹೆಣ್ಣು ಕ್ಯೂ ನಿಲ್ಲುತ್ತಿದ್ದಾರೆ

Posted by JAYAKIRANA Kirana on | 0 comments | Leave a comment...

ಕೇಮಾರು ಸ್ವಾಮಿ
ಮಂಗಳೂರು: ಹಿಂದೆ ಮದುವೆ ಸಂಬಂಧ ಕುದುರಿಸುವ ವೇಳೆ ವೀಳ್ಯದೆಳೆ, ಅಡಕೆಯನ್ನು ವಿಲೇವಾರಿ ಮಾಡಲಾಗುತ್ತಿದ್ದು ಅದಕ್ಕೆ ಭಾರೀ ದೊಡ್ಡ ಘನತೆ, ಗೌರವ, ಮರ್ಯಾದೆ ಇತ್ತು. ಆ ದಿನಗಳಲ್ಲಿ ಮದುವೆಯಾಗಲು ಗಂಡು-ಹೆಣ್ಣು ಸರತಿ ಸಾಲಲ್ಲಿ ನಿಲ್ಲು ತ್ತಿದ್ದರು. ಆದರೆ ಇಂದು ವಿಚ್ಛೇದನಕ್ಕಾಗಿ ಸರತಿ ಸಾಲಲ್ಲಿ ನಿಲ್ಲುತ್ತಿರುವುದು ದುರಂತ ಎಂದು ಸಾಂಧೀಪಿನಿ ಮಠದ ಕೇಮಾರು ಈಶ ವಿಠಲದಾಸ ಸ್ವಾಮೀಜಿ ಮಾರ್ಮಿಕ ವಾಗಿ ನುಡಿದರು.
ನಿನ್ನೆ ಅಖಿಲ ಭಾರತ ಕಾರ್ಮಿಕ ಸಂಘದ ವತಿಯಿಂದ ಕಾರ್ಮಿಕ ದಿನಾಚರಣೆಯ ಅಂಗವಾಗಿ ನಗರದಲ್ಲಿ ನಡೆದ ಮಾಲೀಕರು ಮತ್ತು ಕಾರ್ಮಿಕರ ಸಮಾವೇಶದಲ್ಲಿ ಅವರು ಮಾತನಾಡಿ ದರು.
ಮನುಷ್ಯನಾದವನು ಹಿಂದೂ, ಮುಸ್ಲಿಂ, ಕ್ರೈಸ್ತ ಎಂದು ಜಾತಿಯನ್ನು ನೋಡುವ ಮೊದಲು ನಾವೆಲ್ಲರೂ ತುಳುನಾಡಿನವರು ಎನ್ನುವ ಸತ್ಯವನ್ನು ಅರಿತುಕೊಂಡು ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ಇಂದು ಭ್ರಷ್ಟಾಚಾರ ಎನ್ನುವ ಪಿಡುಗು ಎಲ್ಲಾ ರಂಗಗಳಲ್ಲೂ ಅಂಟಿ ಕೊಂಡಿದೆ. ಇಂತಹ ಸಂದರ್ಭದಲ್ಲಿ ಸಂಘಟನೆಯು ಭ್ರಷ್ಟಾಚಾರದ ವಿರುದ್ಧ ಹಾಗೂ ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಿರುವುದನ್ನು ಶ್ಲಾಘಿಸಿದ ಸ್ವಾಮೀಜಿ, ತಾಯಿ ತನ್ನ ಮಗುವಿಗೆ ತೊಡೆಯಲ್ಲೇ ಭ್ರಷ್ಟಾಚಾರ ವಿರುದ್ಧ ಪಾಠ ಮಾಡಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಮುಸ್ಲಿಂ ಧರ್ಮಗುರು ಅಬೂಸೂಫ್ಯಾನ್ ಮದನಿ, ಕ್ರೈಸ್ತ ಧರ್ಮಗುರು ಆಂಡ್ರೂ ಲಿಯೋ ಡಿಸೋಜ, ಅಜಿತ್ ಕುಮಾರ್ ಮಾಲಾಡಿ, ಕಾರ್ಮಿಕ ಅಧಿಕಾರಿ ನಾಗೇಶ್, ಮತ್ತಿತರರು ಉಪಸ್ಥಿತರಿ ದ್ದರು.

ಕಾರ್ಮಿಕರ ಕಾನೂನುಗಳು ಇನ್ನೂ ಜ್ಯಾರಿಯಾಗಿಲ್ಲ: ವಿಶ್ವನಾಥ ರೈ

Posted by JAYAKIRANA Kirana on | 0 comments | Leave a comment...

ಉಡುಪಿ: ಉದ್ಯೋಗ ಭದ್ರತೆ ಇಲ್ಲದೆ ಕಾರ್ಮಿಕರ ಪರಿಸ್ಥಿತಿ ಡೋಲಾ ಯಮಾನವಾಗಿದೆ. ಕಾರ್ಮಿಕರ ಕಾನೂನುಗಳು ಕೇವಲ ಕಾನೂನು ಗಳಾಗಿ ಉಳಿದಿದೆಯೇ ಹೊರತು ಪರಿಣಾಮಕಾರಿಯಾಗಿ ಅನುಷ್ಟಾನವಾ ಗುತ್ತಿಲ್ಲ. ಆರೋಗ್ಯ ನಿಧಿ, ಭವಿಷ್ಯ ನಿಧಿ ಇತ್ಯಾದಿಗಳನ್ನು ಜ್ಯಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಸಕ್ತಿ ತೋರಿಸುತ್ತಿಲ್ಲ. ಕಾರ್ಮಿಕರ ಕಲ್ಯಾಣ ಮಂಡಳಿ ಏನೋ ಇದೆ. ಆದರೆ ಈ ಮಂಡಳಿ ಸರಿಯಾಗಿ ಸಭೆ ಸೇರುತ್ತಿಲ್ಲ. ೨೪೦ ದಿನಕ್ಕಿಂತ ಹೆಚ್ಚು ದಿನ ದುಡಿದರೆ ಅವರನ್ನು ನೇಮಕ ಮಾಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆಯಾದರೂ ಇದು ಸಹ ಜಾರಿಯಾಗಿಲ್ಲ. ಕಾರ್ಮಿಕರ ಇಂತಹ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಐಕ್ಯ ಹೋರಾಟ ನಡೆಯಬೇಕಾಗಿದೆ ಎಂದು ಸಿಐಟಿಯು ಮುಖಂಡ ಪಿ.ವಿಶ್ವನಾಥ ರೈ ಹೇಳಿದರು.
 ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಿಐಟಿಯು ನೇತೃತ್ವದಲ್ಲಿ ಮಂಗಳವಾರ ಸಂಜೆ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಬಳಿಯ ಗಡಿಯಾರ ಗೋಪುರದ ಮುಂದೆ ನಡೆದ ಕಾರ್ಮಿಕರ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಜಾತಿ ನಿಂದನೆ ಪ್ರಕರಣ ರಾಜಿಯಲ್ಲಿ ಇತ್ಯರ್ಥ

Posted by JAYAKIRANA Kirana on | 0 comments | Leave a comment...

ಪುತ್ತೂರು: ಬಜತ್ತೂರು ಗ್ರಾ.ಪಂ ಅಧ್ಯಕ್ಷೆ ಲಲಿತಾ ಬೆದ್ರೋಡಿ ಎಂಬವರ ಮೇಲೆ ನಡೆದ ಜಾತಿ ನಿಂದನೆ ಆರೋಪ ಪ್ರಕರಣ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ರಾಜಿಯಲ್ಲಿ ಇತ್ಯರ್ಥಗೊಂಡಿದೆ.
ನಳ್ಳಿ ನೀರು ವಿಚಾರಕ್ಕೆ ಸಂಬಂಧಿಸಿ ಲಲಿತಾ ಬೆದ್ರೋಡಿ ಅವರನ್ನು ಸ್ಥಳೀಯ ನಿವಾಸಿ ಗಣಪತಿ ಭಟ್ ಎಂಬವರು ಜಾತಿ ನಿಂದನೆ ಮಾಡಿ ಬೈದಿರುವುದಾಗಿ ಆರೋಪಿಸಲಾಗಿತ್ತು. ಈ ಕುರಿತು ಲಲಿತಾ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ನಡೆದ ಬೆಳವಣಿಗೆಂiಲ್ಲಿ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಲಿಲ್ಲ ಹಾಗೂ ಆರೋಪಿಯ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಗ್ರಾ.ಪಂ. ಸದಸ್ಯರು ಮತ್ತು ದಲಿತ ಸಂಘಟನೆಯ ನಾಯಕರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.
ಎರಡು ಕಡೆಯವರನ್ನು ಎ.೩೦ರಂದು ಪೊಲೀಸ್ ಠಾಣೆಗೆ ಕರೆಸಿ ಮಾತುಕತೆ ನಡೆಸಿದ ಪೊಲೀಸರು ಬಳಿಕ ಗಣಪತಿ ಭಟ್ ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಪ್ರಕರಣವನ್ನು ಇತ್ಯರ್ಥ ಪಡಿಸಿದರು ಎಂದು ತಿಳಿದು ಬಂದಿದೆ. ಮಾತುಕತೆಯ ಸಂಧರ್ಭದಲ್ಲಿ ಜಿ.ಪಂ ಸದಸ್ಯ ಪುಯಿಲ ಕೇಶವ ಗೌಡ, ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

02-05-2012

Posted by JAYAKIRANA Kirana on | 0 comments | Leave a comment...

ತೊಕ್ಕೊಟ್ಟು ವೆಜ್ ರೆಸ್ಟೋರೆಂಟಿಗೆ ಚೈನೀಸ್ ಕುಕ್ ಬೇಕಾಗಿದ್ದಾರೆ. ೯೯೦೧೧೪೩೦೮೯
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ ಬೇಕು. ೯೮೪೫೫೯೬೯೬೦
ಉಡುಪಿ : ಬೇಕರಿ ಕೆಲಸಕ್ಕೆ ಜನ ಬೇಕು ೯೭೪೩೪೯೨೯೧೨
ಕೈಕಂಬ : ಹೆಲ್ಪರ್ ಕೆಲಸಕ್ಕೆ ಹುಡುಗರು, ಹುಡುಗಿಯರು ಬೇಕು.೯೮೪೪೦೦೯೯೦೫
ಕೈಕಂಬ : ಕಬಾಟ್ ಫ್ಯಾಕ್ಟರಿಗೆ ಕೆಲಸಕ್ಕೆ ಹೆಲ್ಪರ್ ಬೇಕು.೯೮೪೫೯೫೬೧೪೦
ಮಂಗಳೂರು :ಸೂಪರ್ ಮಾರ್ಕೆಟ್‌ಗೆ ಮ್ಯಾನೇಜರ್ ಕೆಲಸಕ್ಕೆ ಜನ ಬೇಕು.೯೮೮೦೨೩೯೧೭೦
ಮಂಗಳೂರು :ಸ್ಪೆರ್ ಪಾರ್ಟ್ಸ್ ಅಂಗಡಿಗೆ ಕೆಲಸಕ್ಕೆ ಜನ ಬೇಕು. ೯೩೪೩೩೫೫೮೩೫
ಮಂಗಳೂರು : ಲೇಡಿಸ್ ಟೈಲರ್ ಬೇಕು ೮೦೫೦೧೬೩೨೭೮.
ಮಂಗಳೂರು : ಹೋಟೆಲ್‌ಗೆ ವೇಟರ್, ಕಚನ್ ಹೆಲ್ಪರ್ ಬೇಕು ೯೮೪೫೯೮೨೬೨೫.
ಕದ್ರಿ: ಲಾಂಡ್ರಿಗೆ ಜನ ಬೇಕು ೨೨೨೧೯೪೫.
ಕಾರ್ಕಳ : ಬಾರ್‌ಗೆ ವೇಟರ್, ಕ್ಲೀನ್ ಬೇಕು ೯೮೪೫೮೭೪೦೬೮
ಮಂಗಳೂರು : ಹೋಂ ಪ್ರೊಡಕ್ಟ್‌ಗೆ ಯುವಕ -ಯುವತಿಯರು ಬೇಕು ೯೦೬೦೯೩೨೩೫೧.
ಸ್ಟೇಟ್‌ಬ್ಯಾಂಕ್ : ಕೆಲಸಕ್ಕೆ ಜನ ಬೇಕು ೯೮೪೪೫೨೧೭೪೩.
ಮಂಗಳೂರು : ಪ್ರೆಸ್‌ಗೆ ಬೈಂಡಿಂಗ್ ಕೆಲಸಕ್ಕೆ ಜನ ಬೇಕು ೨೨೧೧೦೫೦.
ಮಂಗಳೂರು : ಎಲೆಕ್ಟ್ರಾನಿಕ್ಸ್ ಅಂಗಡಿಗೆ ಯುವಕರು ಬೇಕು ೪೨೭೪೦೧೦.
ಮಂಗಳೂರು : ಕೊರಿಯರ್ ಸಂಸ್ಥೆಗೆ ಜನ ಬೇಕು ೯೯೦೦೪೩೪೯೪೮.
ಕಂಕನಾಡಿ : ಬಟ್ಟೆ ಅಂಗಡಿಗೆ ಸೇಲ್ಸ್‌ಗೆ ಜನ ಬೇಕು ೯೯೪೫೯೯೬೭೮೭.
ಬಿಕರ್ನಕಟ್ಟೆ ಹೊಟೇಲಿಗೆ ತಿಂಡಿ ಮಾಡುವವರು ಬೇಕು ೯೪೪೯೯೦೩೩೨೩.
ಮಂಗಳೂರು : ಅಫೀಸಿಗೆ ಕಂಪ್ಯೂಟರ್ ತಿಳಿದ ಲೇಡಿ ಸ್ಟಾಫ್ ಬೇಕು ೯೪೮೦೩೬೨೩೦೨.
ಮಂಗಳೂರು : ಬೇಕರಿಯಲ್ಲಿ ತಿಂಡಿ ತಿನಿಸು ಮಾಡಲು ಜನ ಬೇಕು ೯೯೦೧೩೫೦೪೩೧.
ಮಂಗಳೂರು : ಹೊಟೇಲ್‌ಗೆ ಅಡುಗೆ, ತಿಂಡಿ ಮಾಡುವವರು, ವೇಟರ್, ಕ್ಲೀನರ್, ಕೌಂಟರ್‌ಗೆ ಜನ ಬೇಕು ೯೮೮೦೯೦೫೨೫೩.
ಕಂಕನಾಡಿ: ಕಚೇರಿ ಕೆಲಸಕ್ಕೆ ಹಿಂದಿ, ಇಂಗ್ಲಿಷ್ ಮಾತಾಡಲು ಗೊತ್ತಿರುವ ಲೇಡಿ ಬೇಕು ೯೫೩೮೫೫೩೨೧೧.
ಮಂಗಳೂರು: ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕು. ೯೬೮೬೭೧೬೭೦೧.
ಮಂಗಳೂರು : ಇಲೆಕ್ಟ್ರಿಕಲ್ಸ್‌ಗೆ ಲೈಟಿಂಗ್‌ಗೆ ಜನ ಮತ್ತು ಹೆಲ್ಪರ್ ಬೇಕು ೯೮೪೫೦೯೮೨೫೪.
ಮಂಗಳೂರು : ಹೊಟೇಲಿಗೆ ಅಡುಗೆ ಯವರು ಬೇಕು ೯೮೪೪೫೭೩೬೧೫.
ಮಂಗಳೂರು : ಮರೋಳಿಯಲ್ಲಿ ಲೈನ್ ಸೇಲ್‌ಗೆ ಚಾಲಕ ಬೇಕು ೯೩೪೧೭೫೮೫೦೦.
ಕುಲಶೇಖರ: ಕ್ರೈಸ್ತರ ಮನೆಗೆ ಕೆಲಸಕ್ಕೆ ಜನ ಯುವತಿ ಬೇಕು ೮೪೫೩೯೭೨೯೯೪.
ಮಂಗಳೂರು : ಮನೆಕೆಲಸಕ್ಕೆ ಜನ ಬೇಕು ೯೪೪೯೭೨೩೧೩೩.

02-05-2012

Posted by JAYAKIRANA Kirana on | 0 comments | Leave a comment...

ಮೇಷ : ಹಣಕಾಸಿನ ಬಗ್ಗೆ ಚಿಂತೆ ಇರುತ್ತದೆ.
ವೃಷಭ : ಮನೆಯಲ್ಲಿ ನೆಮ್ಮದಿ, ಶಾಂತಿ ಇರುತ್ತದೆ.
ಮಿಥುನ : ತೊಂದರೆಗಳು ಕಡಿಮೆಯಾಗುತ್ತದೆ.
ಕರ್ಕಾಟಕ : ಮನಸ್ಸಿನ ಚಿಂತೆ ದೂರವಾಗುತ್ತದೆ.
ಸಿಂಹ : ಮನೆಯಲ್ಲಿ ಶುಭ ಕೆಲಸಗಳು ನಡೆಯುತ್ತದೆ.
ಕನ್ಯಾ : ಹಣಕಾಸಿನ ಲಾಭ ಇರುತ್ತದೆ.
ತುಲಾ : ನೆಂಟರಿಂದ ಸಹಾಯ ದೊರೆಯುತ್ತದೆ.
ವೃಶ್ಚಿಕ : ಹಲವು ಸಮಸ್ಯೆಗಳು ದೂರವಾಗುತ್ತದೆ.
ಧನು : ಶುಭ ಕೆಲಸದಲ್ಲಿ ಭಾಗವಹಿಸುತ್ತೀರಿ.
ಮಕರ : ಶತ್ರುಗಳಿಂದ ತೊಂದರೆ ಇರುತ್ತದೆ.
ಕುಂಭ : ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗುತ್ತದೆ.
ಮೀನ: ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ.

‘ಮೊರಸೇಸೆ ಮತ್ತು ‘ಕಂಚಿ ದೀಪಿನಿ

Posted by JAYAKIRANA Kirana on | 0 comments | Leave a comment...

೩) ತುಳುವರ ಸಾಮಾಜಿಕ ಆಚರಣೆ ಗಳನ್ನು ಸುಸೂತ್ರವಾಗಿ ನೆರವೇರಿಸಿ ಕೊಡು ವವನು ಮಡ್ಡೆಲ (ಮಡಿವಾಳ). ಇವರಲ್ಲಿ ಮೂರು ವಿಭಾಗಗಳಿವೆ. ೧) ಪರೆಲ್ ಮಡಿ ವಾಳ, ೨) ಮಡಿವಾಳ (ಮಡಿ ಮಾಡುವ ವನು) ೩) ಭಂಡಾರಿ (ಕಿಲೆಸಿ - ಕ್ಷೌರಿಕ), ಮಡಿವಾಳ, ಪರೆಲ್ ಮಡಿವಾಳ ಅಕ್ಕ ತಂಗಿ ಯರ ಮಕ್ಕಳೆಂದು ಅವರಲ್ಲಿ ಪ್ರಾಚೀನ ದಿಂದ ಬಂದ ನಂಬುಗೆ ಇರುವುದು. ಬಿಲ್ಲ ವರ ಎಲ್ಲ ಜಾನಪದ ಆಚರಣೆಗಳಲ್ಲಿ ಮತ್ತು ಬ್ರಹ್ಮ ಬೈದರ್ಕಳ ಗರೋಡಿಗಳಲ್ಲಿ ನಡೆ ಯುವ ಎಲ್ಲಾ ಧಾರ್ಮಿಕ ನಡಾವಳಿಯಲ್ಲಿ ‘ಪರೆಲ್ ಮಡಿವಾಳರ ಪಾತ್ರ ಮಹತ್ವಿಕೆ ಯನ್ನು ಪಡೆದಿರುವುದು. ಬೈದರ್ಕಳ ಗರೋ ಡಿಗಳಲ್ಲಿ ಬ್ರಹ್ಮಗುಂಡ ಪ್ರವೇಶದ ಹಕ್ಕು ಪರೆಲ್ ಮಡಿವಾಳರಿಗೆ ಮಾತ್ರ. ಇದಲ್ಲದೆ ಈ ವರ್ಗದ ಜನ ಇತರ ದೈವಗಳ ಚಾಕ ರಿಗೂ ಹೋಗುವರು. ಅವರ ಹೇಳಿಕೆ ಯಂತೆ ಈ ಎರಡು ಪಂಗಡಗಳ ಮಧ್ಯೆ ವಿವಾಹ ಸಂಬಂಧ ನಡೆಯುವುದಿಲ್ಲ. ಪರೆಲ್ ಮಡಿವಾಳರನ್ನು ತಮ್ಮ ಸೇವೆಗಾಗಿ ‘ಕುಕ್ಕೆಲಿ - ಪರೆಲ್ (ಒಂದುವೂರು)ನಿಂದ ಕರೆಸಿರುವರು.
೪) ಬಂಟರು ಮೊದಲಾದ ಜನಾಂ ಗಗಳಿಗೆ ಕ್ಷೌರದ ಕೆಲಸಕ್ಕೆ ಭಂಡಾರಿಗಳು ಬರುವರು. ಆದರೆ ಇತರ ಶುದ್ದಿ ಮಾಡುವ ಕೆಲಸಕ್ಕೆ ಮಡಿವಾಳರು ಬರುವರು. ಮೇಲಂಟರೆಂ ಬವರು ಮೊಗವೀರ ಸಮಾಜದ ಕ್ಷೌರವೇ ಮೊದಲಾಗಿ ಇತರ ಕಾರ್ಯ ಗಳಲ್ಲಿ ನೆರವಾಗುವರು. ಇವರು ಕೂಡಾ ಮಡಿವಾಳ ವರ್ಗಕ್ಕೆ ಸೇರಿ ರುವರು. ಪರೆಲ್ ಮಡಿವಾಳರು ಮಡಿ ಮಾಡುವ ಕೆಲಸ ಮಾಡು ವುದಿಲ್ಲ.
೫) ಅವಿಭಜಿತ ದಕ್ಷಿಣ ಕನ್ನಡದ ಉತ್ತರ ಭಾಗದಲ್ಲಿ ಕೆಲವೆಡೆ ಮದುಮಕ್ಕಳಿಗೆ ಗುಡಿಗಾರರು ತಯಾರಿಸಿದ ‘ಬೆಗಡಿನ ಜಗಮಗಿ ಸುವ ‘ಬಾಸಿಂಗವನ್ನು ಕಟ್ಟುವ ಪದ್ಧತಿ ಇದೆ. ಮದುವೆಯಾದ ಬಳಿಕ ಕಳಚಿದ ಬಾಸಿಂಗವನ್ನು ಮನೆಯ ಯಜಮಾನರು ಕಂಬಕ್ಕೆ ಕಟ್ಟಿಡು ವರು. ಅಪರಿಚಿತರು ಬಂದರೆ ಆ ಮನೆಯಲ್ಲಿ ಮದುವೆ ನಡೆದಿದೆ ಎಂಬುದನ್ನು ತಿಳಿದುಕೊಳ್ಳುವರು. ಈ ಕ್ರಮ ಮಾತ್ರವಲ್ಲದೇ ಈ ಪ್ರದೇಶದಲ್ಲಿ ಧಾರೆಯ ಸಮಯದಲ್ಲಿ ವಧು ಮತ್ತು ವರರ ನಡುವೆ ಬಿಳಿ ಬಟ್ಟೆಯ ಅಡ್ಡ ಪರದೆಯನ್ನೂ ಹಿಡಿಯುವ ಆಚರಣೆಯೂ ಇರುವುದು. ಇದು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುವುದು.
೬) ಧಾರೆ ಎರೆಯುವ ಸಂಪ್ರದಾಯದಲ್ಲಿ ಮಧ್ಯಕಾಲದಲ್ಲಿ ಅನೇಕ ಬದಲಾವಣೆಗಳು ತೋರಿಬಂದಿವೆ. ಕರಿಮಣಿ ಕಟ್ಟುವ, ವಧುವರರು ಪರಸ್ಪರ ಹಾರ ಹಾಕಿಕೊಳ್ಳುವ ಪರಿಪಾಠಗಳು ಬಳಕೆಯಲ್ಲಿ ಬಂದಿವೆ. ಕೊನೆಗೆ ಎಲ್ಲವೂ ವೈದಿಕ ವಿಧಿ ವಿಧಾನಕ್ಕೆ ಶರಣಾಗುವ ಅನಿವಾರ್ಯ ಪರಿಸ್ಥಿತಿಗೆ ತಲುಪಿದೆ.
೭) ಅತ್ಯಂತ ಸಾಂಪ್ರದಾಯಿಕ ಶೈಲಿಯಲ್ಲಿದ್ದ ‘ಮದಿರಂಗಿ ದೀಪಿನಿ ಯ ಸಮಾರಂಭವು ಇಂದು ಆಧುನಿಕತೆಯ ದಾಳಿಯಿಂದ ‘ದೊಂಪ - ‘ತೊಟ್ಟೆಯ ಹಾವಳಿಯಿಂದಾಗಿ ಸಮಾಜದ ಇತಿಮಿತಿಯನ್ನು ಮತ್ತು ಸಂಯಮವನ್ನು ಪರೀಕ್ಷಿಸುವ ಮಟ್ಟಕ್ಕೆ ಅಧೋಗತಿಗೆ ಇಳಿದಿದೆ. ಈ ಅನಾವಶ್ಯಕವಾದ ದುಂದುವೆಚ್ಚಗಳಿಗೆ ಕೊನೆ ಬೊಟ್ಟಿಡುವುದು ಅತ್ಯಂತ ಅವಶ್ಯಕ, ನಮ್ಮ ಯುವಜನತೆ ಈ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಬೇಕಾ ದುದು ಅಗತ್ಯ. ನಿಶ್ಚಯ, ದೊಂಪ, ನೆಂಟರೂಟದ ವೈಭವೀಕರಣವಿ ಲ್ಲದೆ ಮದುವೆಯನ್ನು ಸರಳಗೊಳಿಸಲು ಸಾಧ್ಯವೇ ಇಲ್ಲವೇ?
೮) ಈ ದೊಂಪದ ದಿನ ಕುಡಿಯುವುದು ಮತ್ತು ಕುಣಿಯುವ ಉದ್ದೇಶದಿಂದ ಎಲ್ಲೆಲ್ಲಿಂದಲೋ ಬಂದು ಸೇರುವ ಪಡ್ಡೆ ಹುಡುಗರಿಂ ದಾಗಿ ಮದುವೆ ಮನೆಗೆ ಬಂದು ಸೇರಿದ ಹೆಣ್ಣು ಮಕ್ಕಳು ಮತ್ತು ಸುತ್ತ ಮುತ್ತಲಿನವರು ಅನೇಕ ಅಹಿತಕರ ಸಮಸ್ಯೆಗಳನ್ನೆದುರಿಸುತ್ತಿರುವುದು ಇತ್ತೀ ಚಿಗೆ ಬೆಳಕಿಗೆ ಬಂದಿದೆ. ರಾತ್ರಿಯ ಕತ್ತಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶಾಂತಿ ಕೆಡಿಸುವ ಇಂತಹ ಘಟನೆಗಳನ್ನು ತಡೆಯುವುದರ ಅವಶ್ಯಕತೆ ಇದೆ.
ಮರಸೇಸೆ (ಮೊರ ಸೇಸೆ)
ಮಡಿವಾಳನು ‘ಮೊರಸೇಸೆ ಮತ್ತು ‘ಕಂಚಿ ದೀಪಿನಿಯ ಕೆಲಸಕ್ಕೆ ತೊಡಗುವರು. ಮೊದಲಿನ ಎಲ್ಲ ಸಾಮಾಗ್ರಿಗಳನ್ನು ತೆಗೆದು ವಠಾರವನ್ನು ನಿರ್ಮಲಗೊಳಿಸಿ ಹೊಸ ಚಾಪೆ ಹಾಸಿ, ಅದರ ಮೇಲೆ ವಧೂವರರಿಗೆ ಕುಳ್ಳಿ ರಲು ಮಂಚವಿಡುವರು. ಮದುಮಗನನ್ನು ಭಾವ ನೆಂಟನೂ, ಮದುಮಗ ಳನ್ನು ಅವಳ ‘ಮೈತಿದಿಯೂ ಹಸೆಗೆ ಕರೆತರುವರು. ಗುರಿಕಾರರು ‘ಬಾರ್ಕೂರು. ಮಂಗಳೂರು ಕರೆದು ವಧೂವರರನ್ನು ಮೊರಸೇಸೆಯ ಮಂಚದಲ್ಲಿ ಕುಳ್ಳಿರಿ ಸುವರು. ವರನ ಸೋದರತ್ತೆ ‘ಸಲಿಗೆ ತಂದು ಇರಿಸಿ ಸೇಸೆ ತಳಿದು ವಧೂ ವರರನ್ನು ಹರಸುವಳು. ಎರಡೂ ಕಡೆಯ ಗುರಿಕಾರರು ‘ಕಂಚಿಯ ಬಳಿ ಬಂದು ಕೂರುವರು. ಈಗ ಗುರಿಕಾರನು ಊರವರನ್ನು ಕರೆದು ‘ಮುಯಿ ಮುಟ್ಟವೆರೆ ಬರೊಡು (ಉಡುಗೊರೆ ಮುಟ್ಟಿಸಲು ಬರಬೇಕು) ಎಂದು ಸಭೆಗೆ ವಿನಂತಿ ಮಾಡುವನು. ನೆರೆದವರಲ್ಲಿ ಒಬ್ಬೊಬ್ಬರಾಗಿ ಬಂದು ‘ಮುಯಿ ಯನ್ನು ‘ಕಂಚಿಯಲ್ಲಿ ಇಟ್ಟು ಮದುಮಕ್ಕಳಿಗೆ ಸೇಸೆ ಹಾಕಿ ಆಶೀರ್ವದಿಸಿ, ಕಾಲ್ದೀಪಕ್ಕೆ ಎರಡು ಅಕ್ಕಿ ಕಾಳನ್ನು ಹಾಕಿ ದೇವರಿಗೂ ಕೈ ಮುಗಿದು ಹೋಗುವರು. ಆಗ ಗುರಿಕಾರನು ‘ಕಂಚಿಯಲ್ಲಿ ಬಂದ ‘ಮುಯಿಯನ್ನು ಸಭೆಯಲ್ಲಿ ಗಟ್ಟಿಯಾಗಿ ಘೋಷಣೆ ಮಾಡುವರು. ಉದಾ : ‘ಮಿತ್ತ ಇಲ್ಲದ ಕೊರಗ ಶೆಟ್ರೆನ ಐನ್ ರೂಪಾಯಿ, ಪುಣ್ಕೆದೊಟ್ಟು ಅಂಗರ ಪೂಜಾರಿನ ಐನ್ ರೂಪಾಯಿ, ಬೆಂಗರೆ ಪೂವ ತಂಡೇಲನ ನಾಲ್ ರೂಪಾಯಿ (ಮೇಲ್ಮನೆ ಕೊರಗ ಶೆಟ್ರು ಐದು ರೂಪಾಯಿ, ಹುಣಸೆಬೆಟ್ಟು ಅಂಗರಪೂಜಾರಿಯದ್ದು ಐದು ರೂಪಾಯಿ, ಬೆಂಗರ ಪೂವ ತಂಡೇಲರದ್ದು ನಾಲ್ಕು ರೂಪಾಯಿ) ಎಂದು ಒಬ್ಬೊಬ್ಬರ ಹೆಸರನ್ನು ಕೂಗಿ ಹೇಳುವರು. ಚಕ್ರ, ಎರಡಾಣೆಗಳವರೆಗೂ ‘ಮುಯಿ ನೀಡುವವರ ಸಂಖ್ಯೆ ಕಡಿಮೆಯಲ್ಲಿರಲಿಲ್ಲ. ಆ ಕಾಲದಲ್ಲಿ ಅಷ್ಟಕ್ಕೂ ಗೌರವವಿರುತ್ತಿತ್ತು. ಹೆಸ ರನ್ನು ಕೂಗಿ ಕರೆದಾಗ ಹೆಮ್ಮೆಯಿಂದ ಬೀಗಿಕೊಳ್ಳುವುದು ಅಂದಿನ ಸಮಾಜ ದಲ್ಲಿ ಸಾಮಾನ್ಯವಾಗಿತ್ತು. ಮದುವೆಯಂತಹ ಘನ ಕಾರ್ಯದಲ್ಲಿ ಮನೆಯ ವರ ಆರ್ಥಿಕ ಬರವನ್ನು ಯಥಾಶಕ್ತಿ ಹಗುರಗೊಳಿಸುವುದೇ ಇದರ ಮೂಲ ಉದ್ದೇಶವಿರಬಹುದು. ಈ ‘ಮುಯಿಯನ್ನು ನೆನಪಿನಲ್ಲಿರಿಸಿಕೊಂಡು ಮತ್ತೆ ಅವರ ಮನೆಯ ಮದುವೆಗಳಲ್ಲಿ ಹಿಂತಿರುಗಿಸುತ್ತಿದ್ದರು. ‘ಮೊರಸೇಸೆಯ ಕೆಲಸ ಪೂರ್ತಿಗೊಳ್ಳುವವರೆಗೂ ಯಾರೂ ಮಧ್ಯೆ ಪ್ರವೇಶಿಸಿ ಹುಡುಗಾಟಿಕೆ ಮಾಡಲಾಗದು, ತಮಾಷೆ, ಮೋಜು ಏನಿದ್ದರೂ ಶಿಸ್ತಿನ ಚೌಕಟ್ಟು ದಾಟಲಾ ರದು. ಎಲ್ಲವೂ ಅಚ್ಚುಕಟ್ಟಾಗಿ ಮುಗಿದ ಬಳಿಕ ಗುರಿಕಾರರು ವಧೂವರರನ್ನು ಕ್ರಮದಂತೆ ಮೊರಸೇಸೆಯಿಂದ ಎಬ್ಬಿಸುವರು.

‘ದೇವಿ ಮಹಾತ್ಮೆ’ ಆಡಂಬರ ಬೇಡ, ಭಕ್ತಿ ಚಿಂತನೆಯೇ ಮುಖ್ಯವಾಗಲಿ

Posted by JAYAKIRANA Kirana on | 0 comments | Leave a comment...


ಆಟದ ಮರುದಿನ ಕೇಳಿಬರುವ ಮಾತುಗಳನ್ನು ಗಮನಿಸಿ ನೋಡಿ ಸಾಲಿಯಾನ್‌ರೆನ, ಕೋಟ್ಯಾನ್‌ರೆನ, ಶೆಟ್ರೆನ ಆಟ ಎಂಚ? ದಾದ ಪನ್ಪರ್ ವನಸ್ಸ ಪಂಡ ಇಜ್ಜಿಂದ್ ಇಜ್ಜಿ. ಪಟಾಕಿದ ಶಬ್ದಡ್ ಕೆಬಿ ಬುಡಿಯೆರೆ ಇಜ್ಜಿ. ಬ್ಯಾಂಡ್‌ದಕ್ಲೆನ ಗೌಜೇ ಗೌಜಿ. ಬಾರಿ ಗೌಜಿದ ಆಟ. ಹೀಗೆ ಹೇಳುತ್ತಾರಲ್ಲದೆ ಮಾತಾಡಿದ ಅರ್ಥದ ಬಗ್ಗೆ ಯಾರೂ ಹೇಳುವುದಿಲ್ಲ. ಪಾತ್ರಗಳು ಹೇಳುವ ಮೌಲ್ಯಗಳು ಯಾರಿಗೂ ಬೇಡ.

ಅಶೋಕ್ ಹಲಾಯಿ, ಬಂಟ್ವಾಳ
ಯಕ್ಷಗಾನ ಪ್ರಸಂಗಗಳಲ್ಲಿ ಭಕ್ತಿ ಪ್ರಧಾನವಾದ ಪ್ರಸಂಗಗಳಿವೆ. ಸಾಮಾ ಜಿಕ, ಪೌರಾಣಿಕ ಪ್ರಸಂಗಗಳಿವೆ. ಮನುಷ್ಯನ ಮನಸ್ಸಿನಲ್ಲಿ ಕ್ಷಣ ಕ್ಷಣಕ್ಕೂ ಉದ್ಭವಿ ಸುವ ನೂರಾರು ಭಾವನೆಗಳ ಸುಂದರ ಅಭಿವ್ಯಕ್ತಿಯೇ ಕಲೆ. ಶಬ್ದ, ರೂಪ, ರಸ, ಗಂಧ ಮತ್ತು ಸ್ಪರ್ಶಗಳೆಂಬ ಐದು ಇಂದ್ರಿಯಗಳ ಮೂಲಕ ಭಾವಾವ್ಯಕ್ತಿ ಯನ್ನು ಮಾಡುವ ಪ್ರತಿಭಾವಂತ ಕಲಾವಿದ ಕವಿ, ಗಾಯಕ, ನಟ, ಶಿಲ್ಪಿ ಮುಂತಾದ ಹೆಸರುಗಳಿಂದ ಗುರುತಿಸಲ್ಪಡುತ್ತಾರೆ. ಐದು ಇಂದ್ರಿಯಗಳನ್ನೂ ತೃಪ್ತಿಪಡಿಸುವ ವಿಶಾಲ ಸರೋವರದಂತೆ ಯಕ್ಷಗಾನವು ಸಾಹಿತ್ಯ, ಸಂಗೀತ, ನೃತ್ಯ ಮತ್ತು ವೇಷ ಭೂಷಣಗಳ ವಿಶಿಷ್ಟ ಚಿತ್ರ ಮತ್ತು ಅಭಿನಯಗಳೆಂಬ ತನ್ನ ಅಂಗಗಳಿಂದ ಏಕಕಾಲದಲ್ಲಿ ಸರ್ವೇಂದ್ರಿಯಗಳಿಗೂ ಸಂತೋಷವನ್ನು ಕೊಡು ತ್ತದೆ. ಯಕ್ಷಗಾನ ಪ್ರಸಂಗಗಳಲ್ಲಿ ಕಥೆಗಳಲ್ಲಿ ಬರುವ ಸಾಹಿತ್ಯ, ಮಾತುಗಾರಿಕೆ ಮೂಲಕ ಪಾತ್ರಗಳು ಚಿತ್ರಿತವಾಗುತ್ತವೆ. ಕಥೆ, ಗೀತ, ನೃತ್ಯ, ವೇಷ, ಅಭಿನಯ, ಮಾತು ಮುಂತಾದ ಎಲ್ಲಾ ವಿಭಾಗಗಳಲ್ಲಿಯೂ ಕಾಲ್ಪನಿಕವಾದ ಒಂದು ಅದ್ಭುತ, ಅಲೌಕಿಕ ಪ್ರಪಂಚವನ್ನೇ ಸೃಷ್ಟಿಸಬಹುದಾದ ಅಸಮಾನ್ಯ ಕಲೆ ಯಕ್ಷಗಾನ.
ಹೆಚ್ಚಿನ ಯಕ್ಷಗಾನ ಮೇಳಗಳೂ ದೇವಸ್ಥಾನದ ಹೆಸರಿನಲ್ಲಿ ನಡೆಸಲ್ಪಡು ತ್ತಿದೆ. ಚೌಕಿಯಲ್ಲಿ ದೇವರ ವಿಗ್ರಹಗಳು, ಗಣಪತಿ ಪೂಜೆ, ರಂಗಸ್ಥಳದಲ್ಲಿ ದೇವರ ಪೂಜೆ, ಒಡ್ಡೋಲಗದ ಪದ್ಯಗಳಲ್ಲಿ ದೇವರ ಸ್ತುತಿ. ಮಂಗಳ ಪದ್ಯಗಳು ಇವೆ. ಆಟ ಆಡಿಸುವ ಹರಕೆ ಹೊತ್ತರೆ, ದೇವರ ಸೇವೆ, ಕಲಾಸೇವೆ ನಡೆಸಿದಂತೆ ಎಂಬ ನಂಬಿಕೆ ಅಗಾಧವಾಗಿರುವ ಕಾರಣ ಹರಕೆ ಬಯಲಾಟದ ಮೇಳಗಳೇ ಹೆಚ್ಚು. ಇವುಗಳಲ್ಲಿ ಪ್ರದರ್ಶಿತ ಪ್ರಸಂಗ ದೇವಿ ಮಹಾತ್ಮೆ ಅತೀ ಹೆಚ್ಚು, ದೇವಿ ಮಹಾತ್ಮೆ ಆಟ ಆಡಿಸುವ ಹರಕೆ ಹೊತ್ತವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವ ಕಾರಣದಿಂದ ದೇವಸ್ಥಾನಗಳಲ್ಲಿ ಮೇಳಗಳ ಸಂಖ್ಯೆಯೂ ಹೆಚ್ಚುತ್ತಲೇ ಇವೆ. ಇವೆಲ್ಲದರ ಹಿಂದೆ ನಂಬಿಕೆ ಮತ್ತು ಭಕ್ತಿ ಈ ಎರಡು ವಿಚಾ ರಗಳೇ ಇವುಗಳ ಆಧಾರ ಸ್ತಂಭಗಳು. ‘ಹರಕೆ’ ಎಂಬ ಮೂರಕ್ಷರದ ಪದ ಬೇಡಿಕೊಳ್ಳುವಿಕೆ ಎಂಬ ಅರ್ಥ ಕೊಡುತ್ತದೆ. ಬೇಡಿದ್ದು ನೆರವೇರಿದರೆ, ಹರಕೆ ಒಪ್ಪಿಸುವುದು ಸಂಪ್ರದಾಯ. ಇಂತಹ ಹರಕೆಯಿಂದಲೇ ಮೇಳದ ಯಜಮಾ ನರಿಗೆ, ದೇವಸ್ಥಾನಕ್ಕೆ, ಕಲಾವಿದರಿಗೆ, ಹಾಗೂ ಹೂವಿನ ವ್ಯಾಪಾರಿಗಳಿಗೆ, ಧ್ವನಿ ವರ್ಧಕ, ಲೈಟಿಂಗ್ಸ್, ಸುಡುಮದ್ದಿನವರಿಗೆ, ವಾಲಗದವರಿಗೆ, ಸಂತೆ ವ್ಯಾಪಾರಿಗ ಳಿಗೆ ಪ್ರಯೋಜನಕಾರಿಯಾಗಿ ಬದುಕಿಗೊಂದು ಆಧಾರವನ್ನು ಕೊಡುತ್ತದೆ. ಹರಕೆ ಒಪ್ಪಿಸಿದವರಿಗೆ ಮಾನಸಿಕ ನೆಮ್ಮದಿ, ಜತೆಗೆ ಅನ್ನದಾನ ಮಾಡಿದ ತೃಪ್ತಿ ದೊರೆಯುತ್ತದೆ. ನೆಂಟರಿಷ್ಟರ, ಬಂಧುಬಳಗ ಮಿತ್ರರ ಒಟ್ಟು ಸೇರುವಿಕೆ ಮೂಲಕ ಮನ, ಮನೆ ಬೆಳಗುತ್ತದೆ. ಒಂದು ರೀತಿಯಲ್ಲಿ ಪಂಚ ಯಜ್ಞಗಳಲ್ಲಿ ಕೊನೆಯ ದಾದ ‘ಮನುಷ್ಯ ಯಜ್ಞ’ ನಡೆಸಿದ ಭಾವನೆ ಇರುತ್ತದೆ.
ದೇವಿಸ್ತುತಿಯೇ ದೇವಿ ಮಹಾತ್ಮೆಯ ಒಟ್ಟು ವಿಷಯ ವಸ್ತು. ದೇವಿಯ ದುಷ್ಟ ದಮನ, ಶಿಷ್ಟ ರಕ್ಷಣೆಯೇ ಕಥಾವಸ್ತು. ರಾಕ್ಷಸ ಮತ್ತು ದೇವಗುಣ ಇರು ವುದು ಸಹಜ. ರಾಕ್ಷಸ ಗುಣದಿಂದ ಲೋಕಕ್ಕೆ ಹಾನಿ, ಲೋಕ ಕಂಟಕವಾದ ಒಟ್ಟು ವ್ಯವಸ್ಥೆಗೆ ಅಥವಾ ಪ್ರಕೃತಿ ಸಹಜ ಪ್ರಕ್ರಿಯೆಗೆ ಮಾರಕ, ಆ ಕಾರಣಕ್ಕಾಗಿ ಪ್ರಕೃತಿಯ ವಿರುದ್ಧ ಹೋಗಿರುವ ಯಾವ ಶಕ್ತಿಯೂ, ಪ್ರಭಾವವೂ, ಅಧಿಕಾರವೂ ದುಡ್ಡಿನ, ಸಂಪತ್ತಿನ ಮದವೂ ಫಲ ನೀಡುವುದಿಲ್ಲವೆಂಬುದೇ ಕಥೆಯ ತಾತ್ಪರ್ಯ.
ಬಯಲಾಟಗಳಲ್ಲಿ ‘ದೇವಿಮಹಾತ್ಮೆ’ ಆಡಿಸುವ ಹರಕೆದಾರರು ಶ್ರೀಮಂತ ರಾದರೆ ಸುಮಾರು ಐದು ಲಕ್ಷಕ್ಕಿಂತಲೂ ಹೆಚ್ಚು ಹಣ ಖರ್ಚು ಮಾಡುವ ಕಾರ ಣದಿಂದ ನೈಜ ಬಯಲಾಟದ ಸ್ಥಿತಿಗತಿಗಳು ಬದಲಾಗಿವೆ. ೭೫ ಸಾವಿರ ಸಾಮಾನ್ಯ ಖರ್ಚು ತಗಲಬಹುದಾದ ವಿಚಾರಕ್ಕೆ ಲಕ್ಷ ಲಕ್ಷ ಸುರಿಯುವ ಅವಶ್ಯಕತೆ ಏನಿದೆ? ಒಂದು ಲಕ್ಷದ ಸುಡುಮದ್ದು, ಒಂದು ಲಕ್ಷದ ಲೈಟಿಂಗ್, ಒಂದು ಲಕ್ಷ ಹೂ ಇತ್ಯಾದಿ ಇತರ ಅನ್ನ ಸಂತರ್ಪನೆ ಮೊದಲಾದ ಖರ್ಚು ಮಾಡುವುದರಲ್ಲಿ ಕತೆ ಯಾರಿಗೂ ಬೇಡ, ವಿಜೃಂಭಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆರಂಭದ ಆದಿ ಮಾಯೆ, ಬ್ರಹ್ಮ, ವಿಷ್ಣು, ಮಹೇಶ್ವರರ ಸಂದರ್ಭದಲ್ಲಿ ಸಿಡಿಯುವ ಸುಡುಮದ್ದು, ವೇಷಧಾರಿ ಮಾತನಾಡಿದ್ದು ಕೇಳದ ಪರಿಸ್ಥಿತಿ ಹೆಚ್ಚಿನ ಕಡೆ ಕಾಣಬಹುದು. ಕಲಾವಿದ ನಿಗೂ ಕಿರಿ ಕಿರಿ ಇದರ ಬದಲು ಸುಡುಮದ್ದು ಸಿಡಿಸುವ ಸಂದರ್ಭಗಳಲ್ಲಿ ಮಾತ್ರ ಸಿಡಿ ಸಿದರೆ ಒಳ್ಳೆಯದು. ಯಕ್ಷಗಾನ ಕಲಾವಿದನಿಗೆ ದಿನಾ ನಿದ್ದೆಗೆಟ್ಟು ಆರೋಗ್ಯ ಸರಿ ಇಲ್ಲ ವಾದಾಗ ಯಾರೂ ಆತನ ಸಹಾಯಕ್ಕಿಲ್ಲ. ಹೆಚ್ಚಿನ ಹಿರಿಯ ಕಲಾವಿದರ ಸ್ಥಿತಿಯೂ ಇದೇ ಆಗಿದೆ. ಸುಡುಮದ್ದು ವಿಜೃಂಭಣೆಗೆ ಬದಲಾಗಿ ಅಂತಹ ಕಲಾವಿದರಿಗೆ ಧನ ಸಹಾಯ ನೀಡಬಹುದು.
ಉಯ್ಯಾಲೆಯ ಅಲಂಕಾರಕ್ಕಾಗಿಯೇ ಒಂದು ಲಕ್ಷ ಖರ್ಚು ಮಾಡಿದ ನೈಜ ಉದಾಹರಣೆಗಳಿವೆ. ಅದಕ್ಕಾಗಿಯೇ ಕಂಟ್ರಾಕ್ಟು ವಹಿಸುವವರಿದ್ದಾರೆ. ವಾಲಗ ದೇವಿ ಮಹಾತ್ಮೆ ಆಟಕ್ಕೆ ಬೇಕು. ರಾಕ್ಷಸರ ಪ್ರವೇಶವಾಗುವ ಸಂದರ್ಭ ಅಬ್ಬರ ಬೇಕು. ಪಾತ್ರದ ಸೃಷ್ಟಿಗೆ ಪೂರಕವೂ ಹೌದು. ಅತೀ ಹೆಚ್ಚಾದರೆ ಕಷ್ಟ.
ಆಟದ ಮರುದಿನ ಕೇಳಿಬರುವ ಮಾತುಗಳನ್ನು ಗಮನಿಸಿ ನೋಡಿ ಸಾಲಿಯಾನ್ ರೆನ, ಕೋಟ್ಯಾನ್‌ರೆನ, ಶೆಟ್ರೆನ ಆಟ ಎಂಚ? ದಾದ ಪನ್ಪರ್ ವನಸ್ಸ ಪಂಡ ಇಜ್ಜಿಂದ್ ಇಜ್ಜಿ. ಪಟಾಕಿದ ಶಬ್ದಡ್ ಕೆಬಿ ಬುಡಿಯೆರೆ ಇಜ್ಜಿ. ಬ್ಯಾಂಡ್‌ದಕ್ಲೆನ, ಕೊಂಬುದಕ್ಲೆನ ಗೌಜೇ ಗೌಜಿ. ಬಾರಿ ಗೌಜಿದ ಆಟ. ಹೀಗೆ ಹೇಳುತ್ತಾರಲ್ಲದೆ ಮಾತಾಡಿದ ಅರ್ಥದ ಬಗ್ಗೆ ಯಾರೂ ಹೇಳುವುದಿಲ್ಲ. ಪಾತ್ರಗಳು ಹೇಳುವ ಮೌಲ್ಯಗಳು ಯಾರಿಗೂ ಬೇಡ. ಉದಾಹರಣೆಗೆ ವಿಷ್ಣು ಪಾತ್ರಧಾರಿಯಾದ ಓರ್ವ ಕಲಾವಿದ ವಿಷ್ಣು ಬ್ರಹ್ಮನ ಉದರ ಪ್ರವೇಶಿಸಿ ಹೇಳುವ ಸಂದರ್ಭದಲ್ಲಿ ಅಹಂ ಏರಿದ ಇವನಲ್ಲಿ ಬಂಗಾರದಂತೆ ಕಾಣವ ವಿಶಿಷ್ಟ ಲೋಕ ಅಥವಾ ಸಂಪತ್ತಿದೆ. ಆದರೆ ಪ್ರತಿಯೊಬ್ಬನಲ್ಲೂ ಸಂಪತ್ತಿದೆ. ಅದು ಹೃದಯದ ಸಂಪತ್ತು ಎಂಬುದನ್ನು ಪರೋಕ್ಷವಾಗಿ ಸೂಚಿಸಿ ಅಹಂ ಸಕಲವನ್ನೂ ಕೆಡಿಸುತ್ತದೆ ಎಂಬ ಕರೆಗಂಟೆ ಬಾರಿಸುವ ಪರಿ ಅರ್ಥಗಾರಿಕೆಯ ಹೆಚ್ಚುಗಾರಿಕೆಯನ್ನು ಕಾಣಿಸುತ್ತದೆ. ಹೀಗೆ ಪ್ರತಿಯೊಂದು ಪಾತ್ರವೂ ಒಂದೊಂದು ಮೌಲ್ಯವನ್ನು ಹೇಳು ತ್ತದೆ. ಇದರ ಚಿಂತನೆಯನ್ನು ಯಾರೂ ಮಾಡುವುದಿಲ್ಲ.
ಯಕ್ಷಗಾನದಲ್ಲಿ ಶೃಂಗಾರ, ಹಾಸ್ಯ, ಕರುಣ, ವೀರ, ರೌದ್ರಾದಿ ಗಂಭೀರ ರಸಗಳ ವರೆಗೆ ಎಲ್ಲವನ್ನು ಆವಿಷ್ಕರಿಸಬೇಕಾದುದರಿಂದ ಕೆಲವು ಸಂದರ್ಭದಲ್ಲಿ ವಿಜೃಂಭ ಣೆಯ ಕಾರಣದಿಂದ ರಸಭಂಗವಾಗುವ ಪ್ರಮೇಯವೇ ಹೆಚ್ಚು. ಬಯಲಾಟದ ಮುಖ್ಯ ಉದ್ದೇಶ ಮನೋರಂಜನೆ, ರಸಾನುಭವ. ಅಲ್ಲಿ ರಸಪುಷ್ಟಿಗೇ ಪ್ರಾಧಾನ್ಯ. ಒಂದು ಮುಖಭಾವ. ಒಂದು ಅಟ್ಟಹಾಸ, ಹೂಂಕಾರ, ಹಸ್ತಚಲನೆ, ಹತ್ತಿಪ್ಪತ್ತು ವಾಕ್ಯ ಮಾತು, ಮಾಡುವ ಕೆಲಸವನ್ನು ಅಲ್ಲಿ ಮಾಡುತ್ತದೆ.
ಹರಕೆ, ಪ್ರತಿಷ್ಠೆ ಮತ್ತು ಐಶ್ವರ್ಯದ ತೋರ್ಪಡಿಕೆಯಾದರೆ ಫಲವಿಲ್ಲ. ಅರ್ಥ ಬದ್ಧವಾದ ಯಕ್ಷಗಾನ ಬಯಲಾಟ ಸರಳ ವಿಧಾನದಲ್ಲಿ ನಡೆಸಿದಲ್ಲಿ ಅರ್ಥಪೂರ್ಣ ಕಾರ್ಯ ಕ್ರಮವಾಗುತ್ತದೆ.

ಕಾಮವಾಂಛೆ ನಿಯಂತ್ರಿಸದಿದ್ದರೆ ಸಮಸ್ಯೆ ತಪ್ಪಿದ್ದಲ್ಲ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೨೧ ವರ್ಷ ಪ್ರಾಯದ ಕಾಲೇಜು ವಿದ್ಯಾರ್ಥಿ. ದ್ವಿತೀಯ ವರ್ಷದ ಪದವಿ ಓದುತ್ತಿದ್ದೇನೆ. ನನ್ನ ಸಮಸ್ಯೆಯೇನೆಂ ದರೆ ನನಗೆ ಸೆಕ್ಸ್ ಬಗ್ಗೆ ಆಸಕ್ತಿ ಹೆಚ್ಚು. ಇದರಿಂದ ನನಗೆ ಓದುವು ದರಲ್ಲಿ ಆಸಕ್ತಿ ಇಲ್ಲವಾಗಿದೆ. ನಾನು ಪ್ರತಿನಿತ್ಯ ಹಸ್ತಮೈಥುನ ಮಾಡಿ ಕೊಳ್ಳುತ್ತೇನೆ. ನನಗೆ ಮೊದಲು ಇದು ತಿಳಿದಿರಲಿಲ್ಲ. ನಾನು ಹೈಸ್ಕೂ ಲ್‌ನಲ್ಲಿ ಓದುತ್ತಿದ್ದ ವೇಳೆ ನನ್ನ ಕ್ಲಾಸ್‌ಮೇಟ್ ಒಬ್ಬ ನನಗೆ ಇದನ್ನು ಕಲಿಸಿದ. ಮೊದಲ ಬಾರಿ ನನ್ನ ಜನನಾಂಗವನ್ನು ಹಿಂದಕ್ಕೆ ಮುಂದಕ್ಕೆ ಆಡಿಸಿ ಸುಖಪಟ್ಟಿದ್ದೆ. ಆನಂತರ ನನಗೆ ಇದನ್ನು ಬಿಡಲು ಮನಸ್ಸಾ ಗಲಿಲ್ಲ. ಆತ ನನಗೆ ಕೆಲವು ಸೆಕ್ಸ್ ಪುಸ್ತಕಗಳನ್ನು ಮನೆಯಿಂದ ತಂದುಕೊಟ್ಟ. ನಾನು ಅದನ್ನು ಮನೆಗೆ ಕೊಂಡುಹೋಗಿ ಯಾರಿಗೂ ತಿಳಿಯದಂತೆ ಓದುತ್ತಿದ್ದೆ. ಆತನಿಗೆ ಸೆಕ್ಸ್ ಬಗ್ಗೆ ಎಲ್ಲ ಜ್ಞಾನವೂ ತಿಳಿದಿತ್ತು. ಆತ ಹಾಸ್ಟೆಲ್‌ನಲ್ಲಿದ್ದು ಕಲಿಯುತ್ತಿದ್ದುದರಿಂದ ಆಂಟಿ ಯೊಬ್ಬರ ಜೊತೆ ಸೆಕ್ಸ್ ಮಾಡಿದ್ದಾಗಿ ನಮ್ಮ ಬಳಿ ಬಂದು ಹೇಳು ತ್ತಿದ್ದ. ನಾನು ಮತ್ತು ಆತ ಕ್ಲೋಸ್ ಫ್ರೆಂಡ್ಸ್ ಆಗಿದ್ದೆವು. ಒಮ್ಮೆ ಅವನು ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಒಮ್ಮೆ ಆಂಟಿಗೆ ಪರಿಚಯ ಮಾಡಿದ. ಅಷ್ಟರವರೆಗೆ ನನಗೆ ಸೆಕ್ಸ್ ಎಂದರೇ ನೆಂದೇ ತಿಳಿದಿರಲಿಲ್ಲ. ನಾನು ಅವರ ಜತೆ ಮಾತಾಡುವಾಗಲೇ ಅವರು ನನ್ನ ಜನನಾಂಗವನ್ನು ಕೈಯಲ್ಲಿ ಹಿಡಿದು ಉದ್ರೇಕಿಸಿದರು. ನಂತರ ಅವರೇ ಮುಂದಾಗಿ ನನ್ನನ್ನು ಬೆತ್ತಲೆ ಮಾಡಿದರು. ಬಳಿಕ ನನ್ನ ಜತೆ ಸೆಕ್ಸ್ ಮಾಡಿದರು. ಕೆಲವು ದಿನ ನನ್ನ ಜನನಾಂಗದ ಕೆಳಭಾಗ ಉರಿಯುತ್ತಿತ್ತು. ನಂತರ ಇನ್ನೊಂದು ಬಾರಿ ನಾನು ಫ್ರೆಂಡ್ ಮನೆಗೆ ಹೋಗಿದ್ದಾಗ ಅವರು ನನ್ನನ್ನು ಸೆಕ್ಸ್ ಮಾಡುವಂತೆ ಕೇಳಿಕೊಂ ಡರು. ನಾನು ಹಾಗೇ ಮಾಡಿದೆ. ಅವರಿಗೆ ೩೫ ವರ್ಷ ದಾಟಿದ್ದರೂ ನೋಡಲು ಚೆನ್ನಾಗಿದ್ದರು. ಅವರನ್ನು ನೋಡುತ್ತಿದ್ದರೆ ನನಗೆ ಕಾಮ ನಿಯಂತ್ರಿಸಲು ಆಗುತ್ತಿರಲಿಲ್ಲ. ಈಗ ನಾನು ಆರೋಗ್ಯವಾಗಿದ್ದೇನೆ. ಅವರು ನನ್ನ ಜೊತೆ ಸೆಕ್ಸ್ ಮಾಡುವಾಗ ನಿರೋಧ್ ಅವರೇ ಕೊಟ್ಟು ಹಾಕುವಂತೆ ಹೇಳಿದ್ದರು. ನಾನು ಅವರನ್ನು ಬಿಟ್ಟು ಬೇರೆ ಯಾರೊಂದಿಗೂ ಸೇರಿಲ್ಲ. ನನಗೆ ಕಾಲೇಜ್‌ನಲ್ಲಿ ಕೆಲವು ಮಂದಿ ಗರ್ಲ್ ಫ್ರೆಂಡ್ಸ್ ಇದ್ದಾರೆ. ನನಗೆ ಹೆಣ್ಣುಮಕ್ಕಳ ಮೇಲೆ ಹೆಚ್ಚಿನ ಆಸಕ್ತಿ ಇದೆ. ಇದಕ್ಕಾಗಿ ನಾನು ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಕೆಲವು ದಿನ ಎರಡು ಬಾರಿ ಕೂಡಾ ಮಾಡು ತ್ತೇನೆ. ನನ್ನ ಈಗಿನ ಸಮಸ್ಯೆಯೆಂದರೆ ಜನನಾಂಗದ ಸುತ್ತ ಕೆಂಪಗಿನ ಗುಳ್ಳೆಗಳು ಬಿದ್ದಿವೆ. ಇವು ಕೆಲವು ದಿನಗಳ ಬಳಿಕ ತನ್ನಿಂತಾನೇ ಮಾಯ ವಾಗುತ್ತದೆ. ಇದಕ್ಕೆ ಪರಿಹಾರವೇನು? ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನೀವಿನ್ನೂ ವಿದ್ಯಾರ್ಥಿ. ನಿಮ್ಮ ಎದುರು ಕಲಿಯಲು ಸಾಕಷ್ಟು ವಿಚಾರಗಳಿವೆ. ಆದರೆ ನೀವು ಈ ಸಮಯದಲ್ಲಿ ಬೇಡದ ಕೆಟ್ಟ ವಿಚಾರಗಳನ್ನೇ ತಲೆಯಲ್ಲಿ ತುಂಬಿಸಿಕೊಂಡು ಸಮಯವನ್ನು ಹಾಳು ಮಾಡುತ್ತಿದ್ದೀರಿ. ಹೆಣ್ಣುಮಕ್ಕಳ ಸಂಗ ಬೆಳೆಸಿಕೊಂಡು ಲೈಂಗಿಕ ಸುಖ ಪಡೆಯಲು ಇನ್ನೂ ಸಾಕಷ್ಟು ಸಮಯವಿದೆ. ಈಗಲೇ ಆ ಬಗ್ಗೆ ಯೋಚಿಸುವುದು ಬೇಡ. ನೀವು ಐದು ವರ್ಷಗಳ ಹಿಂದೆ ಮೊದಲ ಬಾರಿ ಸುಖ ಪಡೆದ ಬಗ್ಗೆ ಬರೆದಿದ್ದೀರಿ. ಆಂಟಿ ನಿಮ್ಮನ್ನು ಸೆಕ್ಸ್‌ಗೆ ಆಹ್ವಾನಿಸಿದ್ದಾರೆ. ನೀವು ತಿಳಿಯದೆ ತಪ್ಪು ಮಾಡಿದ್ದೀರಿ. ಪರವಾಗಿಲ್ಲ, ಆಕೆ ಸೇರುವ ಮುನ್ನ ತನ್ನ ಸುರಕ್ಷೆಗಾಗಿ ನಿರೋಧ್ ಬಳಸಿದ್ದರಿಂದ ನಿಮಗೆ ಯಾವುದೇ ಸಮಸ್ಯೆಯಿಲ್ಲ. ನೀವು ಕಾಮವಾಂಛೆ ತಡೆಯಲಾ ಗದೆ ದಿನಕ್ಕೆ ಕೆಲವು ಬಾರಿ ಹಸ್ತಮೈಥುನ ಮಾಡಿಕೊಳ್ಳುವುದು ಸರಿ ಯಲ್ಲ. ಇದರಿಂದ ಮುಂದೆ ಇದೇ ಗೀಳಾಗಿ ಬೆಳೆಯುವ ಸಾಧ್ಯತೆ ಯಿದೆ. ಲೈಂಗಿಕ ಬಯಕೆ ಕಂಟ್ರೋಲ್ ಮಾಡಲಾಗದಿದ್ದರೆ ವಾರಕ್ಕೆ ಒಂದೋ, ಎರಡೋ ಬಾರಿ ಹಸ್ತಮೈಥುನ ಮಾಡಿಕೊಳ್ಳುವುದು ಒಳ್ಳೆ ಯದು. ಇದು ಒಂದು ಸಾಮಾನ್ಯ ಲೈಂಗಿಕ ಚಟುವಟಿಕೆ. ಇಲ್ಲಿ ಸ್ವಚ್ಛತೆ ಯನ್ನು ಕಾಯ್ದುಕೊಳ್ಳಿ. ಸಣ್ಣ ಸಣ್ಣ ಕೆಂಪಗಿನ ಗುಳ್ಳೆಯ ಬಗ್ಗೆ ಭಯ ಬೇಡ. ಸಾಧ್ಯವಾದಷ್ಟು ಹಸ್ತಮೈಥುನ ಕಡಿಮೆ ಮಾಡಿ. ಪ್ರತಿನಿತ್ಯ ಜನ ನಾಂಗವನ್ನು ನೀರಿನಿಂದ ಸ್ವಚ್ಛಗೊಳಿಸಿ ಶುಭ್ರ ಬಟ್ಟೆಯಿಂದ ಒರೆಸಿ. ಪರಿಣಾಮ ಕಂಡುಬರದಿದ್ದಲ್ಲಿ ವೈದ್ಯರಲ್ಲಿ ಸಮಾಲೋಚನೆ ನಡೆಸಿ.

ಆಟದ ಮೈದಾನಗಳು ಮಾಯವಾಗುತ್ತಿದೆ

Posted by JAYAKIRANA Kirana on | 0 comments | Leave a comment...

ನಗರ ಪ್ರದೇಶಗಳಲ್ಲಿ ಬಹು ಮಹ ಡಿಯ ಕಟ್ಟಡಗಳು ನಿರ್ಮಾಣ ಗೊಳ್ಳು ತ್ತಿರುವ ಕಾರಣ ಅದೆಷ್ಟೋ ಆಟದ ಮೈದಾ ನಗಳು ಕಣ್ಮರೆಯಾಗುತ್ತಿವೆ. ಇತ್ತೀಚೆಗೆ ಇಂಥದ್ದೇ ಪರಿಸ್ಥಿತಿ ಗ್ರಾಮೀಣ ಪ್ರದೇಶ ಗಳಲ್ಲೂ ಇದೆ. ಅಭಿವೃದ್ದಿಯ ಹೆಸರಿನಲ್ಲಿ ಇದ್ದ ಬದ್ದ ಬಯಲು ಜಾಗಗಳು ಅರ್ಥಾತ್ ಮೈದಾನಗಳು ಬಹುಮಹಡಿ ಕಟ್ಟಡಗಳ ತಾಣವಾಗಿ ಮಾರ್ಪಡುತ್ತಿದೆ. ಆಟವಾಡಲು ಕಿಲೋ ಮೀಟರ್‌ಗಟ್ಟಲೇ ಹೋಗಬೇಕಾದ ಪರಿಸ್ಥಿಯಿದೆ. ದಿನನಿತ್ಯದ ಜಂಜಾಟದ ಜೀವನದ ಮಧ್ಯೆ ಸಿಗುವ ಬಿಡುವಿನ ದಿನಗಳನ್ನು ಕಳೆಯಲು ಕ್ರಿಕೆಟ್, ಫುಟ್‌ಬಾಲ್‌ನಂತಹ ಆಟಗಳ ಮೊರೆ ಹೋಗುವುದು ಸಾಮಾನ್ಯ. ಒಂದು ಸ್ವಲ್ಪ ರಿಲ್ಯಾಕ್ಸ್ ಆಗಲು ಇದು ಉತ್ತಮ ಅವಕಾಶ. ಆದರೆ ಇತ್ತೀಚೆಗೆ ಆಟವಾಡಲು ಮೈದಾನಗಳೇ ಇಲ್ಲವಾಗಿದೆ. ಎಲ್ಲೆಂದರಲ್ಲಿ ಕಟ್ಟಡಗಳೇ ತಲೆಯೆತ್ತುತ್ತಿವೆ. ಇನ್ನು ನಗರದ ಕೇಂದ್ರ ಮೈದಾನ ಎನ್ನುವುದು ಶ್ರೀಮಂತರ ಮತ್ತು ಸರ್ಕಾರದ ಸ್ವತ್ತು ಎನ್ನುವಂತಾಗಿದೆ. ಆದ್ದರಿಂದ ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸಿ. ಗ್ರಾಮೀಣ ಪ್ರದೇಶಗಳಲ್ಲಿ ಆಟದ ಮೈದಾನಕ್ಕೆಂದೇ ಜಾಗವನ್ನು ಮೀಸಲಿಡಲಿ.
ರೋವಿನ್ ಡಿ’ಸೋಜಾ, ಗ್ರಾಮಚಾವಡಿ

ಔಷಧಿ ಹಗರಣದ ಸೂಕ್ತ ತನಿಖೆಯಾಗಲಿ
ವೆನ್‌ಲಾಕ್‌ನಲ್ಲಿ ನಡೆಯುತ್ತಿರುವ ಔಷಧಿ ಹಗರಣದ ಬಗ್ಗೆ ನಿರ್ಭೀತ ವರದಿ ಪ್ರಕಟಿಸಿ ಜನರನ್ನು ಎಚ್ಚರಿಸಿದ ಜಯ ಕಿರಣ ಪತ್ರಿಕಾ ಬಳಗಕ್ಕೆ ವಂದನೆಗಳು. ವೆನ್ ಲಾಕ್‌ನಲ್ಲಿ ಹಿಂದಿನಿಂದಲೂ ಹಣ ಕೊಟ್ಟರೆ ಮಾತ್ರ ಎಲ್ಲ ಸೌಲಭ್ಯ ಸಿಗುತ್ತದೆ. ಹೀಗಿ ರುವಾಗ ಸರಕಾರದಿಂದ ಸಿಗುವ ಉಚಿತ ಔಷಧಿಯನ್ನೂ ಮಾರಿ ಹಣ ಮಾಡು ತ್ತಾರೆಂದರೆ ಇದಕ್ಕೆ ಅರ್ಥವೇನು? ವೆನ್‌ಲಾಕ್ ಆಸ್ಪತ್ರೆಯ ಲ್ಯಾಬೊರೇಟರಿ ಸಿಬ್ಬಂದಿಯಿಂದ ಹಿಡಿದು ಇಡೀ ಆಡಳಿತ ವರ್ಗವೇ ಈ ಕೊಳಕು ದಂಧೆಯಲ್ಲಿ ಕೈಜೋಡಿಸಿರುವ ಸಾಧ್ಯತೆಗ ಳಿವೆ.
ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆ ಯಬೇಕು. ವೆನ್‌ಲಾಕ್ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ಲಕ್ಷಾಂತರ ರೂಪಾಯಿ ಸಂಪಾದಿಸಿ ಆಸ್ಪತ್ರೆ ತಮ್ಮ ಖಾಸಗಿ ಸೊತ್ತು ಎಂಬಂತೆ ಮೆರೆಯು ತ್ತಿದ್ದಾರೆ. ಇಡೀ ಆಸ್ಪತ್ರೆಗೆ ಆಸ್ಪತ್ರೆಯೇ ಬಡ ವರ ರಕ್ತ ಹೀರುತ್ತಿದೆ. ಇದಕ್ಕೆ ಕೊನೆಯೆಂದು? ಜಯಕಿರಣ ಪತ್ರಿಕೆ ಇಂಥ ಆಸ್ಪತ್ರೆಗಳ ಬಗ್ಗೆ ನಿರಂತರ ವರದಿ ಪ್ರಕಟಿಸುತ್ತಾ ಸಂಬಂಧಪಟ್ಟ ಇಲಾಖೆ, ಸರಕಾರವನ್ನು ಎಚ್ಚರಿಸಲಿ.
ರೋಹಿತ್, ಕಂಕನಾಡಿ

ದಲಿತರೆಂದು ಗುರುತಿಸಿ ಕೊಳ್ಳುವುದೇಕೆ?
ಒಬ್ಬ ಸಾಮಾನ್ಯ ವ್ಯಕ್ತಿಗೆ ಯಾರಾದರೂ ಹಲ್ಲೆ ನಡೆಸಿದರೆ ಅದು ವ್ಯಕ್ತಿಯೊಬ್ಬನಿಗೆ ಹಲ್ಲೆ ಎಂದೇ ಚಿತ್ರಿತವಾಗುತ್ತದೆ. ಆದರೆ ದಲಿತ ವ್ಯಕ್ತಿಗೆ ಹಲ್ಲೆಯಾದರೆ ಮಾತ್ರ ಯಾಕೆ ಆತನ ಜಾತಿಯ ಹಿನ್ನೆಲೆಯಲ್ಲಿ ಚಿತ್ರಿಸುವುದು? ಇಂತದ್ದೊಂದು ಪ್ರಶ್ನೆಯನ್ನು ಕೇಳಲೇ ಬೇಕಾದ ಅಗತ್ಯತೆ ಖಂಡಿತಾ ಇದೆ. ಮನುಷ್ಯ ಎಂದ ಮೇಲೆ ಆತ ನಿಗೆ ಭಾವನೆ, ನೋವು ಎನ್ನುವುದು ಇರುತ್ತದೆ. ಇದಕ್ಕೆ ಜಾತಿ-ಧರ್ಮ, ಮೇಲು-ಕೀಳು ಎಂಬ ಹಂಗಿರುವುದಿಲ್ಲ. ಹೀಗಿರುವಾಗ ದಲಿತ ವ್ಯಕ್ತಿ ಗಳಿಗೆ ಏನಾದರೂ ಆದರೆ ಅದನ್ನು ಅವರ ಜಾತಿ ಯಲ್ಲಿ ಚಿತ್ರಿಸುವುದು ತಪ್ಪಲ್ಲವೇ? ಈ ಬಗ್ಗೆ ದಲಿತ ರೇಕೆ ಚಿಂತಿಸುತ್ತಿಲ್ಲ? ಮೊದಲು ದಲಿತರು ಎಂಬ ಪದ ಬಳಕೆಯನ್ನೇ ಬಿಡಬೇಕು. ನೀವು ಕೂಡ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವಿಸಿ. ಸಾಮಾನ್ಯ ಮನುಷ್ಯರಂತೆ ಸಮಾಜದ ಬದಲಾ ವಣೆಗೆ ಸ್ಪಂದಿಸಿ. ಸರ್ಕಾರ ನಿಮ್ಮ ಅಭ್ಯುದಯಕ್ಕೆ ಕೆಲವೊಂದು ಯೋಜನೆಗಳನ್ನು ರೂಪಿಸಿಕೊ ಟ್ಟಿದೆ. ಅದನ್ನು ಸಂಪೂರ್ಣವಾಗಿ ಸಧ್ಬಳಕೆ ಮಾಡಿ ಕೊಳ್ಳಿ. ಯಾಕೆಂದರೆ ಅದು ನಿಮ್ಮ ಹಕ್ಕು. ಇದನ್ನು ಬಿಟ್ಟು ಹೋದ ಕಡೆಯಲ್ಲೆಲ್ಲಾ ದಲಿತರು ಎಂದು ಗುರುತಿಸಿ ಕೊಳ್ಳುವುದು ಸರಿಯಲ್ಲ. ಇದು ನಿಮ್ಮ ಮುಂದಿನ ಜನಾಂಗಕ್ಕೆ ಮುಜುಗರ ಉಂಟು ಮಾಡಬಹುದು. ಇಂದಿನ ಈ ಆಧುನಿಕ ಯುಗ ದಲ್ಲಿ ದಲಿತರು ಎನಿಸಿಕೊಂಡವರು ಎಲ್ಲರ ಮಧ್ಯೆ ಸ್ವಚ್ಚಂದ ಜೀವನ ನಡೆಸುತ್ತಿದ್ದಾರೆ. ದಲಿತರು ಎಂದು ಗುರುತಿಸಿಕೊಳ್ಳಲು ಎಲ್ಲೂ ಅವಕಾಶಗಳೇ ಇಲ್ಲ. ಹೀಗಿರುವಾಗ ಮುಂದಿನ ಪೀಳಿಗೆ ಈ ರೀತಿ ಗುರುತಿಸಿಕೊಳ್ಳಲು ಖಂಡಿತಾ ಇಷ್ಟ ಪಡು ವುದಿಲ್ಲ. ಇನ್ನಾದರೂ ಸಂಘಟನೆಗಳು ತನ್ನ ಸಮು ದಾಯದ ಹಕ್ಕುಗಳ ರಕ್ಷಣೆಗೆ ಮಾತ್ರ ಹೋರಾಟ ನಡೆಸಲಿ. ಈ ಬರಹ ಯಾರನ್ನೂ ನೋಯಿಸುವ ಉದ್ದೇಶದಿಂದಲ್ಲ. ಬದಲಾಗಿ ಈ ಭೂಮಿಯ ಮೇಲಿರುವ ಮನುಷ್ಯ ಎಂಬ ಜಾತಿಯ ಮಧ್ಯೆ ಮೇಲು-ಕೀಳು ಎಂಬ ಭಾವನೆ ಬೇಡ ಎಂಬ ಉದ್ದೇಶದಿಂದಷ್ಟೇ. ನನ್ನ ಬರಹದ ಬಗ್ಗೆ ಅಪ ಸ್ವರಗಳಿರಬಹುದು. ಅಂತಹ ಚರ್ಚೆಗೆ ಎಂದಿಗೂ ಸ್ವಾಗತ.
ವಿನ್ಯಾಸ್. ಆರ್, ಜೆಪ್ಪು

ಸಾರಡ್ಕ ರಸ್ತೆ ಅಪಾಯದಲ್ಲಿ
ಕರ್ನಾಟಕ-ಕೇರಳ ಗಡಿ ಪ್ರದೇಶದ ಸಾರಡ್ಕ ಎಂಬಲ್ಲಿ ಹೊಳೆಯ ಪಕ್ಕದ ರಸ್ತೆಯ ತಡೆಗೋಡೆ ಕಳೆದ ಎರಡು ವರ್ಷಗಳ ಹಿಂದೆಯೇ ಕುಸಿದು ಬಿದ್ದಿದ್ದು, ಅದರ ಕಾಮಗಾರಿ ಇನ್ನೂ ಆರಂಭವಾ ಗಿಲ್ಲ. ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನ ಗಳು ಸಂಚರಿಸುತ್ತಿದೆ. ಎರಡು ವರ್ಷಗಳಿಂದ ಕರ್ನಾ ಟಕ ರಾಜ್ಯಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳಾ ಗಲೀ, ಅಧಿಕಾರಿಗಳಾಗಲೀ ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಈ ರಸ್ತೆಯಲ್ಲಿ ಹೆಚ್ಚಾಗಿ ಲಾರಿ, ಟ್ಯಾಂಕರ್‌ನಂತಹ ಘನ ವಾಹನಗಳೇ ಸಂಚ ರಿಸುತ್ತಿವೆ. ಈ ಸಂದರ್ಭ ಪರಸ್ಪರ ವಾಹನಗಳು ಅಡ್ಡಾದಿಡ್ಡಿಯಾಗಿ ರಸ್ತೆಬದಿಗೆ ಚಲಿಸಿ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಮಳೆಗಾಲದಲ್ಲಿ ಇಲ್ಲಿಯೇ ಸಮೀಪದ ನದಿಯೊಂದು ತುಂಬಿ ಹರಿಯುತ್ತಿದ್ದು, ಇದರಿಂದ ವಾಹನ ಚಾಲಕರು, ಪ್ರಯಾಣಿಕರು ರೋಸಿ ಹೋಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ನಮಗೆ ಸಂಬ ಂಧಪಟ್ಟಿದ್ದಲ್ಲ ಎಂದು ಹೇಳಿ ಬಚಾವ್ ಆಗುತ್ತಾರೆ. ಕಳಪೆ ಕಾಮಗಾರಿಯಿಂದಾಗಿ ತಡೆಗೋಡೆ ಕುಸಿದು ಬಿದ್ದಿದ್ದು, ವರ್ಷ ಎರಡು ಕಳೆದರೆ ಮರು ಕಾಮ ಗಾರಿ ಆರಂಭವಾಗಿಲ್ಲ. ಮಳೆಗಾಲ ಆರಂಭವಾಗುವ ಮೊದಲೇ ಪರಿಹಾರ ಕಂಡು ಕೊಳ್ಳದಿದ್ದರೆ ಅಮಾ ಯಕ ವಾಹನ ಸವಾರರ ಪ್ರಾಣಕ್ಕೆ ಅಪಾಯವಾ ದೀತು. ಹಾಗಾಗದಂತೆ ಸಂಬಂಧಪಟ್ಟವರು ಎಚ್ಚೆತ್ತು ಕೊಳ್ಳುವರೇ?
ಸಾರ್ವಜನಿಕರು, ಸಾರಡ್ಕ

ಬೆಳ್ಳಂಬೆಳಗ್ಗೆಯೇ ತೆರೆಯುವ ಮದ್ಯದಂಗಡಿಗಳು!
ಮಂಗಳೂರು ಮಹಾನಗರದಲ್ಲಿ ಮೆಡಿಕಲ್ ಸ್ಟೋರ್‌ಗಳು ತೆರೆಯುವುದು ವಿಳಂಬವಾದರೂ ಮದ್ಯದಂಗಡಿಗಳು ಮಾತ್ರ ಬೆಳ್ಳಂಬೆಳಗ್ಗೆ ಇನ್ನೂ ಬೆಳಕು ಮೂಡುವ ಮುನ್ನವೇ ತೆರೆದಿರುತ್ತವೆ. ಇವುಗಳ ಮುಂದೆ ಹೊರಜಿಲ್ಲೆಗಳ ಕೂಲಿ ಕಾರ್ಮಿಕರು ರೇಷನ್ ಅಂಗಡಿಯಲ್ಲಿ ಕ್ಯೂ ನಿಂತ ಹಾಗೆ ನಿಂತಿರುವ ದೃಶ್ಯ ಕಂಡು ಬರುತ್ತದೆ. ಮದ್ಯ ವನ್ನು ಮಾರಾಟ ಮಾಡುವ ವೈನ್‌ಶಾಪ್, ಬಾರ್‌ಗಳಿಗೆ ಇಂತಿಷ್ಟೇ ಸಮಯದ ಅವಧಿ ಇದ್ದರೂ ಇದನ್ನು ಪಾಲಿಸುವವರು ಮಾತ್ರ ಯಾರೂ ಕಂಡುಬರುವುದಿಲ್ಲ. ಬೆಳಗ್ಗೆ ಬೇಗನೆ ತೆರೆದು ಮಧ್ಯರಾತ್ರಿಯಾದರೂ ಮುಚ್ಚದಿರುವ ಮದ್ಯದಂಗಡಿಗಳ ಮೇಲೆ ಪೊಲೀ ಸರು ರೈಡ್ ಕೂಡಾ ಮಾಡುವುದಿಲ್ಲ. ಇವುಗಳ ಮಾಲಕರು ಕೊಡುವ ಹಣವನ್ನು ಪಡೆದು ಸುಮ್ಮನಿರುತ್ತಾರೆ. ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಇದೂ ಒಂದು ಕಾರಣ. ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರ ಕ್ರಮ ಕೈಗೊಳ್ಳಬೇಕು. ಅವಧಿ ಮೀರಿ ತೆರೆದಿರುವ ವೈನ್‌ಶಾಪ್, ಬಾರ್‌ಗಳ ಮಾಲಕರಿಗೆ ದಂಡ ವಿಧಿಸಬೇಕಾಗಿದೆ.
ಯಶೋಧರ, ಜೆಪ್ಪು

ಹೊಟೇಲ್ ತಿಂಡಿ ದುಬಾರಿ
ಜನರು ಹೊಟೇಲ್‌ಗಳಲ್ಲಿ ತಿಂಡಿ ತಿನ್ನುವಂ ತೆಯೇ ಇಲ್ಲ. ಇದಕ್ಕೆ ಕಾರಣ ಆಕಾಶಕ್ಕೆ ಏರಿರುವ ತಿಂಡಿಗಳ ದರಪಟ್ಟಿ. ಹಿಂದೆ ಹತ್ತು ರೂಪಾಯಿಗೆ ಹೊಟ್ಟೆ ತುಂಬಾ ಊಟ ಸಿಗುತ್ತಿದ್ದರೆ, ಈಗ ಐವತ್ತು ಕೊಟ್ಟರೂ ಸಿಗುವುದಿಲ್ಲ. ತಿಂಡಿ ತಿನ್ನಲು ೩೫ ರೂ. ಕನಿಷ್ಠ ಹೊಂದಿರ ಬೇಕು. ಅಕ್ಕಿ, ಬೇಳೆ, ತರಕಾರಿ ಬೆಲೆ ಏರಿದೆ ಎಂದು ತಿಂಡಿಗೆ ಮನಬಂದಂತೆ ಬೆಲೆ ಏರಿಸುತ್ತಾರೆ. ಇದರಿಂದ ಬಡ, ಮಧ್ಯಮ ವರ್ಗದ ಜನರು ಹೋಟೆಲ್‌ಗಳ ಹೊಸ್ತಿಲು ತುಳಿ ಯುವುದಕ್ಕೂ ಭಯ ಪಡುವಂತಾಗಿದೆ. ಈ ಬಗ್ಗೆ ಹೋಟೆಲ್ ಮಾಲಕರು ಗಮನಿಸಬೇಕು. ಆಹಾರ, ಖಾದ್ಯ ವಸ್ತುಗಳನ್ನು ಮಿತದರದಲ್ಲಿ ಮಾರಾಟ ಮಾಡುವುದು ಒಳ್ಳೆಯದು. ಬೇಕಾಬಿಟ್ಟಿ ಬೆಲೆ ಏರಿ ಕೆಯಾದರೆ ಜನರು ಹೋಟೆಲ್‌ಗೆ ಹೋಗಿ ಆಹಾರ ಸೇವಿಸುವುದಾದರೂ ಹೇಗೆ?
ರಂಜಿತ್, ಕಾಪು

ರಸ್ತೆ ಬದಿ ಟ್ಯಾಟೋ ಹಾಕಿಸಿಕೊಳ್ಳಬೇಡಿ
ಟ್ಯಾಟೋ ಹಾಕಿಸಿಕೊಳ್ಳುವುದು ಇತ್ತೀಚಿನ ಫ್ಯಾಶನ್ ಯುಗದಲ್ಲಿ ಒಂದು ಟ್ರೆಂಡ್ ಆಗಿ ಮಾರ್ಪಟ್ಟಿದೆ. ಇಂದಿನ ಯುವ ಜನಾಂಗ ಈ ವಿದೇಶಿ ಸಂಸ್ಕೃತಿಗೆ ಹೆಚ್ಚಾಗಿ ಮಾರು ಹೋಗುತ್ತಿದ್ದಾರೆ. ದೇಹದ ಎಲ್ಲೆಂದರಲ್ಲಿ ಟ್ಯಾಟೋ ಹಾಕಿಸಿ ಕೊಳ್ಳುವುದು ಕೆಲವರಿಗೆ ಒಂದು ಹುಚ್ಚು ಹವ್ಯಾಸ. ಆದರೆ ಇದರಲ್ಲಿ ಎಚ್ಚರಿಕೆ ಅಗತ್ಯ ಎನ್ನುವುದು ನೆನಪಿರಲಿ.
ಇತ್ತೀಚೆಗೆ ರಸ್ತೆ ಬದಿಯಲ್ಲಿ ಟ್ಯಾಟೋ ಹಾಕುವ ಕೆಲವರು ಹುಟ್ಟಿಕೊಂಡಿದ್ದಾರೆ. ಜಾತ್ರೆಗಳ ಸಂದರ್ಭಗಳಲ್ಲಿ ರಸ್ತೆ ಬದಿಯಲ್ಲಿ ಠಿಕಾಣಿ ಹೂಡುವುದು ಇವರ ಚಾಳಿ. ಅತೀ ಕಡಿಮೆ ವೆಚ್ಚಕ್ಕೆ ಟ್ಯಾಟೋ ಹಾಕಿಸಿಕೊಳ್ಳಬ ಹುದು ಎಂಬ ಆಸೆಯಿಂದ ಕೆಲವರು ಇವರ ಬಳಿ ಹಾಕಿಸಿಕೊಳ್ಳುತ್ತಾರೆ. ಆದರೆ ನೆನಪಿ ರಲಿ, ಇವರ ಬಳಿ ಟ್ಯಾಟೋ ಹಾಕಿಸಿ ಕೊಳ್ಳುವುದು ಸುರಕ್ಷಿತವಲ್ಲ. ಇವರು ಒಂದೇ ಸೂಜಿಯನ್ನು ಹೆಚ್ಚಾಗಿ ಬಳಸುತ್ತಾರೆ. ದೇಹದ ಮೇಲೆ ಹಾಕಿಸಿಕೊಳ್ಳುವ ಕಾರಣ ಇದ ರಿಂದ ಸೋಂಕು ಹರಡುವ ಸಾಧ್ಯತೆಗಳೇ ಹೆಚ್ಚು. ಕೆಲವೊಂದು ಶಾಪ್‌ಗಳಲ್ಲಿ ಸ್ವಚ್ಚ ಮತ್ತು ಜಾಗರೂಕತೆಯಿಂದ ಟ್ಯಾಟೋ ಹಾಕುತ್ತಾರೆ. ಆದರೆ ದೇಹದ ಮೇಲೆ ಹಾಕಿಸಿ ಕೊಳ್ಳುವುದರಿಂದ ಇದೂ ಅಪಾಯಕಾರಿಯೇ ಎನ್ನುವುದು ನೆನಪಿರಲಿ. ಬೀದಿ ಬದಿ ಹಾಕಿಸಿಕೊಳ್ಳುವುದಕ್ಕಿಂತ ಇದು ಸ್ವಲ್ಪ ಒಳ್ಳೆಯದೇ.
ಸಂಕೇತ್ ನಾಯಕ್, ಕಂಕನಾಡಿ

ಪ್ಲಾಸ್ಟಿಕ್ ನಿಷೇಧಿಸಿ
ಪ್ಲಾಸ್ಟಿಕ್ ಬಳಕೆ ಮಿತಿಮೀರಿದಂತೆ ಪರಿಸರಕ್ಕೆ ಬಹಳಷ್ಟು ತೊಂದರೆಯಿದೆ. ದಿನನಿತ್ಯ ಪ್ಲಾಸ್ಟಿಕ್ ವಸ್ತು ಗಳನ್ನು ಬಳಕೆ ಮಾಡುವುದಕ್ಕೂ ಲೆಕ್ಕವಿಲ್ಲ. ರಾಜ್ಯ ದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಎನ್ನುವುದು ಸರಕಾರಿ ದಾಖಲೆಯಲ್ಲಿ ಮಾತ್ರ ಜಾರಿಯಾಗಿದೆ. ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ಆಗುತ್ತಲೇ ಇದೆ. ಪ್ಲಾಸ್ಟಿಕ್ ಚೀಲ ಬಳಸದಂತೆ ತಡೆ ಯುವ ಮತ್ತು ಅರಿವು ಮೂಡಿಸುವ ಕೆಲಸ ನಡೆ ದಿಲ್ಲ. ಪಟ್ಟಣಗಳ ಕೆಲವು ಅಂಗಡಿಗಳಲ್ಲಿ ಮಾತ್ರ ಪೇಪರ್ ಚೀಲಗಳ ಬಳಕೆ ಜಾರಿಗೆ ಬಂದಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೇಪರ್ ಚೀಲಗಳ ಬಳಕೆ ಸಾಧ್ಯ ವಿಲ್ಲವೇಕೆ? ಸ್ಥಳೀಯ ಸಂಘ-ಸಂಸ್ಥೆಗಳು ಈ ನಿಟ್ಟಿ ನಲ್ಲಿ ಹೆಚ್ಚು ಕಾರ್ಯಪ್ರವೃತ್ತರಾಗಬೇಕಿದೆ. ಸರಕಾರ ಅವುಗಳಿಗೆ ಉತ್ತೇಜನ ನೀಡಲು ಮುಂದಾಗಬೇಕು.
ಕಿರಣ್ ಕುಮಾರ್, ಮಂಗಳೂರು

ವೇಣೂರಿಗೆ ಎಟಿಎಂ ಬೇಕು
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂ ಕಿನ ವೇಣೂರು ಅಭಿವೃದ್ಧಿ ಪಥದಲ್ಲಿ ಸಾಗು ತ್ತಿರುವ ಪುಟ್ಟ ಊರು. ಭಗವಾನ್ ಬಾಹುಬಲಿ ಮೂರ್ತಿಯ ದರ್ಶನಕ್ಕಾಗಿ ದೇಶದೆಲ್ಲೆಡೆಯಿಂದ ಯಾತ್ರಿಕರು ಇಲ್ಲಿಗೆ ಬರುತ್ತಾರೆ. ಬಸದಿಗಳು, ವಿದ್ಯಾಸಂಸ್ಥೆಗಳು, ಚರ್ಚ್, ಮಸೀದಿ, ದೈವಸ್ಥಾನ ಗಳು ಇಲ್ಲಿದ್ದು ಸರ್ವಧರ್ಮ ಸಮನ್ವಯದ ಕೇಂದ್ರ ವಾಗಿದೆ. ಇಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನ ಎಟಿಎಂ ಸೇವೆಯನ್ನು ಪ್ರಾರಂಭಿಸ ಬೇಕೆಂಬುದು ಗ್ರಾಹ ಕರ ಬಹುದಿನಗಳ ಬೇಡಿಕೆಯಾಗಿದೆ. ಇನ್ನಾದರೂ ಸಂಬಂಧಪಟ್ಟವರು ಗಮನಿಸಲಿ.
ಪದ್ಮ, ವೇಣೂರು

ಮದುವೆಗೆ ವೃಥಾ ಖರ್ಚು ಯಾಕಾಗಿ?
ಇತ್ತೀಚಿನ ವರ್ಷಗಳಲ್ಲಿ ಮದುವೆ ವಿಚ್ಛೇ ದನ ಪ್ರಮಾಣ ಹೆಚ್ಚಾಗಿದೆ. ಅದ್ಧೂರಿಯಾಗಿ, ಶಾಸ್ತ್ರ ಸಮ್ಮತವಾಗಿ ನಡೆದ ಗಣ್ಯರ ಮನೆಯ ಮದುವೆಗಳೂ ಮುರಿದು ಬೀಳುತ್ತಿವೆ. ಬಹು ತೇಕ ಮದುವೆಗಳು ನ್ಯಾಯಾಲಯದಲ್ಲಿ ವಿಚ್ಛೇ ದನದ ಮೂಲಕ ಅಂತ್ಯ ಕಾಣುತ್ತಿವೆ.
ರಾಜ್ಯದಲ್ಲಿ ೨೦೧೧ರಲ್ಲಿ ೪,೫೦೦ ವಿಚ್ಛೇದನ ಪ್ರಕರಣ ದಾಖಲಾಗಿವೆ. ಯಾರ ಗಮನಕ್ಕೂ ಬಾರದೆ ಮುರಿದ ಮದುವೆಗಳ ಸಂಖ್ಯೆ ಎಷ್ಟು ಸಾವಿರ ಇರಬಹುದು? ಪ್ರತೀದಿನ ೧೮ ಫಿರ್ಯಾ ದಿಗಳು ದಾಖಲಾಗುತ್ತವೆ ಎಂಬ ಮಾಹಿತಿ ಇದೆ. ಇವು ಅಂತ್ಯ ಕಾಣಲು ಎಷ್ಟು ವರ್ಷ ಬೇಕೋ ದೇವರೇ ಬಲ್ಲ. ಅಲ್ಲಿಯವರೆಗೆ ಈ ಗಂಡು-ಹೆಣ್ಣುಗಳ ಗತಿ ಏನು?
ಮದುವೆ ಮುರಿದು ಹೋಗಲಿ ಎಂದು ಯಾರೂ ಬಯಸುವುದಿಲ್ಲ. ಅದಲ್ಲದೆ ಮದು ವೆಗಳಿಗೆ ಅದ್ಧೂರಿತನ ಬೇಕೇ ಎಂಬ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ದುಬಾರಿ ಛತ್ರಗಳು, ವೈಭವ ಮೀರಿಸುವ ದೀಪಾಲಂ ಕಾರ, ಹೂವುಗಳ ಮಂಟಪ, ಭಾರೀ ಭೋಜನ ಎಲ್ಲವೂ ವೃಥಾ ಖರ್ಚು.
ತಮ್ಮ ಐಶ್ವರ್ಯದ ಪ್ರದರ್ಶನ ಮಾಡಲು ಇಂತಹ ಮದುವೆಗಳಿಗೆ ಬರುವ ಜನರ ಪರೋಕ್ಷ ಖರ್ಚುಗಳು ಇನ್ನೆಷ್ಟು? ಮದುವೆ ಗಳಿಗೆ ಇಷ್ಟೆಲ್ಲ ಖರ್ಚು ಮಾಡಬೇಕೆ? ಈ ಬಗ್ಗೆ ಜನರು ಯೋಚಿಸುತ್ತಿಲ್ಲವೇಕೆ? ಕೆಲವ ರಂತೂ ಸಾಲ ಮಾಡಿ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಾರೆ. ಇನ್ನು ಕೆಲ ವರು ಕೂಡಿಟ್ಟ ಒಂದಷ್ಟು ಹಣವನ್ನು ನೀರಿನ ಹಾಗೆ ಖರ್ಚು ಮಾಡುತ್ತಾರೆ. ಈ ರೀತಿ ದುಂದುವೆಚ್ಚದ ಮದುವೆಗಳು ಅಗತ್ಯವಿ ದೆಯೇ? ಆದ್ದರಿಂದ ಪ್ರeವಂತರು ಈ ಕುರಿತು ಮಾರ್ಗದರ್ಶನ ಮಾಡುವರೇ?
ಪ್ರಜಾ, ಮಂಗಳೂರು

ದೇವರ ಹರಕೆಗೂ ಮಿತಿ ಅಗತ್ಯ
ಇಂದಿನ ಸಮಾಜದಲ್ಲಿ ಮನುಷ್ಯ ತಾನು ಮಾಡಿದ್ದ ಪಾಪಗಳೆಲ್ಲ ಪರಿಹಾರವಾಗಲಿ ಎಂಬ ನಿಟ್ಟಿ ನಲ್ಲಿ ದೇವರಿಗೆ ನಗ-ನಗದು ದಾನವಾಗಿ ನೀಡುತ್ತಾನೆ. ಇದಕ್ಕಾಗಿ ಲಕ್ಷ, ಕೋಟಿ ರೂ. ಖರ್ಚು ಮಾಡುವು ದಕ್ಕೂ ಹಿಂದೆ-ಮುಂದೆ ನೋಡಲಾರ. ಆದರೆ ಅದೇ ಮನುಷ್ಯ ತನ್ನ ಸಮಾಜದ ಅಭಿವೃದ್ಧಿಗೆ ಹತ್ತು ಪೈಸೆ ನೀಡುವುದಕ್ಕೂ ಯೋಚಿಸುತ್ತಾನೆ. ಜನರು ಹೊಟ್ಟೆಗೆ ಅನ್ನವಿಲ್ಲದೆ ಸತ್ತರೂ ಆ ಬಗ್ಗೆ ಆತ ಚಿಂತಿಸುವುದಿಲ್ಲ.
ಇಂದಿಗೂ ತುಳುನಾಡಿನ ಅನೇಕ ಕಾರಣಿಕ ಸ್ಥಳ ಗಳಲ್ಲಿ ದಿನಕ್ಕೆ ಹಲವಾರು ‘ಭಾರೀ’ ಹರಕೆ ಅರ್ಪಿಸು ವವರ ಪಟ್ಟಿ ಇರುತ್ತದೆ. ಇವರಲ್ಲಿ ಕಷ್ಟಪಟ್ಟು ದುಡಿ ಯುವವರು ತೀರಾ ವಿರಳ. ಎಲ್ಲೋ, ಯಾರಿಗೋ ಮೋಸ ಮಾಡಿ ಸಂಪಾದಿಸುವ ದುಡ್ಡನ್ನು ದೇವರಿಗೆ ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ. ಇದರಿಂದ ಅವರ ಸಂಪತ್ತು ಇನ್ನಷ್ಟು ಜಾಸ್ತಿಯಾಗುತ್ತಲೇ ಹೋಗು ತ್ತದೆ. ಆದ್ದರಿಂದ ದೇವರ ಹರಕೆಗೂ ಮಿತಿ ಎಂಬುದು ಇರಲೇಬೇಕು. ಸರಕಾರ ಆಸ್ತಿಗೆ ತೆರಿಗೆ ವಿಧಿಸಿದಂತೆ ದೇವರಿಗೆ ಅರ್ಪಿಸುವ ಹರಕೆ, ಸೇವೆಗೂ ತೆರಿಗೆ ವಿಧಿ ಸುವುದು ಒಳ್ಳೆಯದು.
ನಾಗೇಶ್, ಕಟಪಾಡಿ

ಹೊರರಾಜ್ಯದಲ್ಲಾಗುವ ಘಟನೆ ಕರ್ನಾಟಕದಲ್ಲಿಯೂ ನಡೆಯುವಂತಾದರೆ?

Posted by JAYAKIRANA Kirana on | 0 comments | Leave a comment...


ನಕ್ಸಲ್ ಪೀಡಿತ ಪ್ರದೇಶಗಳಿಗೆ ಅಷ್ಟಿಷ್ಟು ಕೋಟಿ ಘೋಷಿಸುತ್ತಾರೆ. ಆದರೆ ಈ ಹಣ ಯಾರದ್ದೋ ಹೊಟ್ಟೆ ಸೇರುತ್ತದೆ. ಇದನ್ನು ಹೇಳುವವರು, ಕೇಳುವವರು ಯಾರೂ ಇಲ್ಲ. ಇವರು ನಕ್ಸಲರಿಗೆ ಪ್ರಚೋದನೆ ಕೊಟ್ಟಷ್ಟು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅವರ ಉಪಟಳ ಹೆಚ್ಚುತ್ತದೆ. ಇಲ್ಲಿ ಬಲಿಯಾಗು ವವರು ಇತ್ತೀಚೆಗೆ ನಕ್ಸಲ್ ಹಣೆ ಪಟ್ಟಿ ಕಟ್ಟಿಕೊಂಡು ಜೈಲು ಸೇರಿರುವ ಮುಗ್ಧ, ಅಮಾಯಕ ವಿಠಲನಂಥವರು ಮಾತ್ರ ಎನ್ನುವುದನ್ನು ಹೇಳಲೇಬೇಕಾಗುತ್ತದೆ.

ಶಶಿಕಾಂತ್, ರಥಬೀದಿ
ಒಡಿಶಾದಲ್ಲಿ ಇತ್ತೀಚೆಗೆ ಅಪರೂಪದ ವಿದ್ಯಮಾನ ವೊಂದು ಜರುಗಿತು. ಅದೇನೆಂದರೆ ಬಿಜೆಡಿ ಪಕ್ಷದ ಶಾಸಕ ನನ್ನು ಅಪಹರಿಸಿದ ನಕ್ಸಲರು ಆತನನ್ನು ಬರೋಬ್ಬರಿ ತಿಂಗಳ ಕಾಲ ಬಂಧನದಲ್ಲಿಟ್ಟು ತಮ್ಮ ಬೇಡಿಕೆಯನ್ನು ಈಡೇರಿಸಲು ಒಪ್ಪಿದ ಮೇಲೆ ಬಿಡುಗಡೆ ಮಾಡಿದರು. ಇದೇ ವೇಳೆ ಛತ್ತೀಸ್‌ಗಢ ಎಂಬಲ್ಲಿಂದ ಜಿಲ್ಲಾಧಿಕಾರಿಯೊಬ್ಬನನ್ನು ನಕ್ಸಲರು ಅನಾಮತ್ತಾಗಿ ಅಪಹರಿಸಿ ಕಾಡಿಗೆ ಕೊಂಡೊಯ್ದರು.
ಈತನಿಗೆ ಅಂಗ ರಕ್ಷಕರಾಗಿದ್ದ ಇಬ್ಬರು ಅಮಾನುಷ ವಾಗಿ ತಮ್ಮ ಪ್ರಾಣ ಕಳೆದು ಕೊಂಡರು. ಇಲ್ಲಿ ಶಾಸಕರನ್ನು ರಾಜೀನಾಮೆ ನೀಡಲೇಬೇಕು ಎಂದು ಎಚ್ಚರಿಸಲಾಗಿದ್ದರೆ, ಜಿಲ್ಲಾಧಿಕಾರಿಯನ್ನು ತಮ್ಮ ಬೇಡಿಕೆ ಈಡೇರಿಕೆಗಾಗಿ ಅಪಹ ರಣಕ್ಕೆ ಗುರಿಪಡಿಸಲಾಗಿದೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇಲ್ಲಿ ನನ್ನ ಪ್ರಶ್ನೆಯೇನೆಂದರೆ, ದೂರದ ಒಡಿಶಾ, ಛತ್ತೀಸ್‌ಗಢದಲ್ಲಿ ನಡೆದಿರುವ ಘಟನೆಗಳು ನಮ್ಮ ರಾಜ್ಯದಲ್ಲೇಕೆ ನಡೆಯುವುದಿಲ್ಲ? ಜನಪರ ಆಡಳಿತ ನಡೆಸದ, ಭ್ರಷ್ಟಾಚಾರವನ್ನೇ ಉಸಿರಾಡುವ, ಚುನಾವಣೆಗೆ ಮುನ್ನ ಕೊಟ್ಟ ಆಶ್ವಾಸನೆಯನ್ನು ಮರೆಯುವ ಜನಪ್ರತಿನಿಧಿಗಳನ್ನು ಅಲ್ಲಿ ನಕ್ಸಲ್ ಹೆಸರಿನ ಜನರೇ ಅಪಹರಿಸಿ ತಮ್ಮ ಬೇಡಿಕೆ ಈಡೇ ರಿಸಿಕೊಳ್ಳುತ್ತಾರೆಂದಾದರೆ ನಮ್ಮಲ್ಲೇಕೆ ಸಾಧ್ಯವಾಗುವುದಿಲ್ಲ?
ನಕ್ಸಲ್ ಸಮಸ್ಯೆ ಎಂದ ಕೂಡಲೇ ಸರಕಾರ, ಜನಪ್ರತಿ ನಿಧಿಗಳು ಬಾಯಿಗೆ ಬಂದಂತೆ ಮಾತಾಡುತ್ತಾರೆ. ಮುಖ್ಯ ಮಂತ್ರಿ, ಅಶೋಕರಂಥ ಮಹಾನ್ ನಾಯಕರು, ‘ಅವರಲ್ಲಿ ತಾಕ ತ್ತಿಲ್ಲ, ೧೫ ಜನ ಮಾತ್ರ ಇರುವುದು, ಶರಣಾದರೆ ಎಲ್ಲವನ್ನೂ ಕೊಡುತ್ತೇವೆ ಇಲ್ಲದೇ ಹೋದಲ್ಲಿ ಪ್ರಾಣ ತೆಗೆಯುತ್ತೇವೆ’ ಎಂದು ಕ್ಷುಲ್ಲಕವಾಗಿ ಮಾತಾಡುತ್ತಾರೆ.
ವಾಸ್ತವವಾಗಿ ನಕ್ಸಲ್ ಎನ್ನುವ ಗಂಭೀರ ಸಮಸ್ಯೆಗೆ ಮಂಗಳ ಹಾಡುವ ಅಗತ್ಯ ಇವರಾರಿಗೂ ಇದ್ದಂತಿಲ್ಲ. ಇವರದೇನಿದ್ದರೂ ಅವರನ್ನು ಇದ್ದ ಹಾಗೆಯೇ ಬೆಳೆಸಿ ಚುನಾವಣೆ ವೇಳೆ ಬೇಳೆ ಬೇಯಿಸುವ ಕಸರತ್ತು ಮಾತ್ರ. ಕೇವಲ ೧೫ ಜನ ನಕ್ಸಲರಿದ್ದಾರೆ ಎಂದು ಕರಾರುವಕ್ಕಾಗಿ ಹೇಳುವ ಗೃಹ ಸಚಿವರಿಗೆ ಅವರನ್ನು ಸದೆಬಡಿಯಲು ಸಾಧ್ಯವಿಲ್ಲವೇಕೆ? ರಾಜ್ಯ ಪೊಲೀಸ್ ಇಲಾಖೆ ಯಲ್ಲಿ ೧೫ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ, ಅತ್ಯಾಧು ನಿಕ ಶಸ್ತ್ರಾಸ್ತ್ರ, ತಂತ್ರeನ ಎಲ್ಲವೂ ಇರುವಾಗ ಇದು ಅಸಾ ಧ್ಯವೆಂದರೆ ನಂಬುವ ಮಾತೇ? ಇವರೆಲ್ಲ ಚುನಾವಣೆ ಹತ್ತಿರ ಬರುವಾಗ, ರಾಜ್ಯದಲ್ಲಿ ಯಾವುದೇ ವಿವಾದ ಇಲ್ಲದೇ ಇರು ವಾಗ ಮಾತ್ರ ನಕ್ಸಲ್ ಸಮಸ್ಯೆ ನೆನಪು ಮಾಡಿ ಕೊಳ್ಳುತ್ತಾರೆ. ನಕ್ಸಲ್ ಪೀಡಿತ ಪ್ರದೇಶಗಳಿಗೆ ಅಷ್ಟಿಷ್ಟು ಕೋಟಿ ಘೋಷಿಸು ತ್ತಾರೆ. ಆದರೆ ಈ ಹಣ ಯಾರದ್ದೋ ಹೊಟ್ಟೆ ಸೇರುತ್ತದೆ. ಇದನ್ನು ಹೇಳುವವರು, ಕೇಳುವವರು ಯಾರೂ ಇಲ್ಲ. ಇವರು ನಕ್ಸಲರಿಗೆ ಪ್ರಚೋದನೆ ಕೊಟ್ಟಷ್ಟು ನಕ್ಸಲ್ ಪೀಡಿತ ಪ್ರದೇಶಗ ಳಲ್ಲಿ ಅವರ ಉಪಟಳ ಹೆಚ್ಚುತ್ತದೆ. ಇಲ್ಲಿ ಬಲಿಯಾಗುವವರು ಇತ್ತೀಚೆಗೆ ನಕ್ಸಲ್ ಹಣೆ ಪಟ್ಟಿ ಕಟ್ಟಿಕೊಂಡು ಜೈಲು ಸೇರಿರುವ ಮುಗ್ಧ, ಅಮಾಯಕ ವಿಠಲನಂಥವರು ಮಾತ್ರ ಎನ್ನುವುದನ್ನು ಹೇಳಲೇಬೇಕಾಗುತ್ತದೆ.
ನಮ್ಮಲ್ಲಿ ಜನರನ್ನೇ ಮರೆತ ಅಸಂಖ್ಯ ಜನ ಪ್ರತಿನಿಧಿಗಳಿ ದ್ದಾರೆ, ಭ್ರಷ್ಟಾಚಾರದ ಕೊಂಪೆಯಲ್ಲೇ ಹೊರಳಾಡುತ್ತಾ ಮತ್ತೆ ಆಡಳಿತದ ಕನಸು ಕಾಣುವ ಮಂತ್ರಿ-ಮಾಗಧರಿದ್ದಾರೆ. ಇವರಿಗೆ ಜನರ ಭಯವೇ ಇಲ್ಲ. ಪ್ರಜೆಗಳು ತಾವು ಮಾಡಿದ್ದನ್ನು ನೋಡಿ ಕೊಂಡು ಸುಮ್ಮನಿರುತ್ತಾರೆ ಎಂದೇ ಭಾವಿಸಿದ್ದಾರೆ. ಆದ್ದರಿಂದ ಒಡಿಶಾ, ಛತ್ತೀಸ್‌ಗಢದಲ್ಲಿ ನಡೆದದ್ದು ಭ್ರಷ್ಟಾಚಾರಿಗಳಿಗೆ ಪಾಠ ವಾಗಬೇಕು. ಭ್ರಷ್ಟರನ್ನು ಜನರೇ ಅಧಿಕಾರದಿಂದ ಕೆಳಗಿಳಿಸು ತಾದರೆ ಮಾತ್ರ ಸ್ವಾಭಿಮಾನದಿಂದ ಬದುಕಲು ಸಾಧ್ಯ.

ಮಣ್ಣು ಕುಸಿದು ಇಬ್ಬರು ಮೃತ್ಯು

Posted by JAYAKIRANA Kirana on | 0 comments | Leave a comment...

ಹಳೆಯಂಗಡಿಯಲ್ಲಿ ಕಾರ್ಮಿಕರು ಮಣ್ಣುಪಾಲು!
ಮುಲ್ಕಿ: ಬಾವಿ ತೋಡುತ್ತಿದ್ದ ಸಂದರ್ಭದಲ್ಲಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಉಸಿರುಗಟ್ಟಿ ಸಾವಿಗೀಡಾಗಿ ರುವ ಘಟನೆ ಮುಲ್ಕಿ ಹಳೆಯಂಗಡಿ ಯಲ್ಲಿ ನಿನ್ನೆ ಜರಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಗೋಳಿಯ ಹನುಮಂತ ಹುನಗುಂದ ಎಂಬವರ ಪುತ್ರ ಮದನಪ್ಪ(೨೨) ಹಾಗೂ ಮುಕ್ಕದ ಸಯ್ಯದ್ ಬ್ಯಾರಿ(೬೫) ಮೃತರು.
ಹಳೆಯಂಗಡಿ ರವಿ ಎಂಬವರ ಜಮೀನಿನಲ್ಲಿ ಕುಡಿಯುವ ನೀರಿನ ಬಾವಿಗಾಗಿ ಎಂಟು ಜನ ಕಾರ್ಮಿಕರು ಕಳೆದ ಒಂದು ವಾರದಿಂದ ಕೆಲಸ ಮಾಡುತ್ತಿದ್ದು ಮುಕ್ಕದ ಪುರಂದರ ಎಂಬವರು ಗುತ್ತಿಗೆ ವಹಿಸಿಕೊಂಡಿದ್ದರು.
ಸುಮಾರು ೨೦ ಅಡಿಯ ಬಾವಿಯನ್ನು ತೋಡಿದ ನಂತರ ಮಂಗಳವಾರದಿಂದ ಕಲ್ಲುಗಳನ್ನು ಕಟ್ಟಲು ಆರಂಭಿಸಿದ್ದರು. ಮೇಸ್ತ್ರಿಯಾಗಿ ಸಯ್ಯದ್ ಬ್ಯಾರಿ ಬೆಳಿಗ್ಗೆ ೯ಕ್ಕೆ ಕಾಮಗಾರಿ ಆರಂಭಿಸಿದ್ದರು. ಬೆಳಿಗ್ಗೆ ೧೦-೩೦ರ ವೇಳೆಗೆ ಮೇಲಿನಿಂದ ಏಕಾಏಕಿ ಮಣ್ಣು ಕುಸಿಯಲು ಆರಂಭವಾದಾಗ ಕೆಳಗೆ ಕೆಲಸ ಮಾಡುತ್ತಿದ್ದ ಆರು ಜನ ಕಾರ್ಮಿಕರಲ್ಲಿ ನಾಲ್ವರು ಮೇಲೆ ಬಂದರು. ಇಬ್ಬರು ಮಣ್ಣಿನಲ್ಲಿ ಸಿಲುಕಿಕೊಂಡರು. ನಮ್ಮ ಕಣ್ಣೆದುರೇ ಮಣ್ಣಿನಲ್ಲಿ ಹೂತು ಹೋದರು ಎಂದು ಪ್ರತ್ಯಕ್ಷದರ್ಶಿ ಹನುಮಂತ ವಿವರಿಸಿದರು.
ಕಾರ್ಮಿಕರಲ್ಲಿ ಮೃತ ಮದನಪ್ಪನ ಸಹೋದರ ಲೋಕೇಶ್, ಹಾಲಪ್ಪ, ಯಮುನಪ್ಪ, ನಾಗಪ್ಪ ಎಂಬವರು ಮಣ್ಣಿನಿಂದ ಮೇಲೆ ಬಂದರೆ ಮದನಪ್ಪ ಮತ್ತು ಸಯ್ಯದ್ ಬ್ಯಾರಿ ಮಣ್ಣಿನಡಿ ಸಿಲುಕಿ ಮೃತಪಟ್ಟರು. ಹನುಮಂತ ಮತ್ತು ಯೋಗಪ್ಪ ಎಂಬವರು ಮೇಲೆ ಕೆಲಸ ಮಾಡುತ್ತಿದ್ದರು.
ಘಟನೆ ನಡೆದ ತಕ್ಷಣ ಮೂಲ್ಕಿ ಪೊಲೀಸರು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಸ್ಥಳೀಯರ ಸಹಕಾರದಿಂದ ಇಬ್ಬರ ಮೃತ ಶರೀರವನ್ನು ಹೊರ ತೆಗೆಯಲಾಯಿತು. ಬಾವಿಯನ್ನು ತೋಡಲು ಸ್ಥಳೀಯ ಗ್ರಾ.ಪಂ.ನಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ತಿಳಿದು ಬಂದಿದೆ.
ಮಳೆಗಾಲದಲ್ಲಿ ಇಂತಹ ಕೆಲಸಗಳು ನಡೆಸುವಾಗ ಕಾರ್ಮಿಕರ ಹಿತಕ್ಕಾಗಿ ಸಾಕಷ್ಟು ಮುಂಜಾಗರೂಕತೆಯನ್ನು ವಹಿಸಿಬೇಕಿತ್ತು ಎಂದು ಸ್ಥಳಕ್ಕೆ ಭೇಟಿ ನೀಡಿದ ಡಿಎಸ್‌ಎಸ್‌ನ ಸಂಘಟನೆಯ ಕೃಷ್ಣಪ್ಪ ವಾದದ ತಾಲೂಕು ಸಂಚಾಲಕ ಇಸುಕುಮಾರ್, ಸುಂದರ ಸಾಲ್ಯಾನ್ ಕೆಮ್ಮಡೆ ಮತ್ತು ಅಂಬೇಡ್ಕರ್ ವಾದದ ಮುಲ್ಕಿ ವಲಯ ಸಂಚಾಲಕ ದಿನಕರ್ ನೆಲಗುಡ್ಡೆ ಎಂಬವರು ಸ್ಥಳಕ್ಕೆ ಭೇಟಿ ನೀಡಿದ ಪಣಂಬೂರು ಎಸಿಪಿ ಪುಟ್ಟಮಾದಯ್ಯರಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಐದು ತಿಂಗಳ ಮಗು ಅನಾಥ...
ಮೃತ ಮದನಪ್ಪ ಒಂದು ವರ್ಷದ ಹಿಂದೆಯಷ್ಟೇ ಮದುವೆ ಆಗಿದ್ದು ತನ್ನ ಗ್ರಾಮದ ದೂರದ ಸಂಬಂಧಿಕಳಾದ ಹೂವಮ್ಮ ಎಂಬವರನ್ನು ಮದುವೆ ಆಗಿದ್ದ. ಐದು ತಿಂಗಳ ಹೆಣ್ಣು ಮಗುವನ್ನು ಇವರ ದಾಂಪತ್ಯ ಜೀವನದಲ್ಲಿ ಪಡೆದಿದ್ದು. ಮೇ ಹತ್ತರಂದು ಊರಿಗೆ ತೆರಳುವವನಿದ್ದ. ಅಲ್ಲಿ ಮಗುವಿನ ನಾಮಕರಣದ ಸಂಭ್ರಮವನ್ನು ಆಚರಿಸುವವನಿದ್ದ ಎಂದು ಆತನ ಸಹೋದರ ಘಟನೆಯನ್ನು ವಿವರಿಸುತ್ತ ತನ್ನ ಕಣ್ಣೆದುರೇ ಅಣ್ಣನ ಸಾವನ್ನು ಕಣ್ಣಾರೆ ಕಂಡಿರುವ ಲೋಕೇಶ ವಿವರಿಸುವಾಗ ಎಂತವರ ಮನಸ್ಸು ತಲ್ಲಣಗೊಳಿಸುವಂತಿತ್ತು.
ಕಾರ್ಮಿಕರ ದಿನದಂದೇ ನಡೆದ ದುರ್ಘಟನೆ...
ಮಂಗಳವಾರ ರಾಜ್ಯದೆಲ್ಲೆಡೆ ಕಾರ್ಮಿಕರ ದಿನಾ ಚರಣೆಯ ಆಚರಣೆ ನಡೆಯುತ್ತಿದ್ದರೆ ಇಲ್ಲಿನ ಹಳೆ ಯಂಗಡಿಯಲ್ಲಿ ಸುಮಾರು ೬೦ ಜನ ಕೂಲಿ ಕಾರ್ಮಿಕರು ತಮ್ಮ ಸಹೋದ್ಯೋಗಿಯ ದಾರುಣ ಮರಣಕ್ಕೆ ಕಂಬನಿ ಮಿಡಿಯುತ್ತಿದ್ದರು.
ಮೃತಪಟ್ಟ ಮದನಪ್ಪ ಸಹಿತ ಸುಮಾರು ೬೦ ಜನ ಕೂಲಿ ಕಾರ್ಮಿಕರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂ ಕಿನ ಅಗೋಲಿಯ ಗ್ರಾಮದಿಂದ ಹಳೆಯಂಗಡಿ ಗ್ರಾಮಕ್ಕೆ ಕೆಲಸಕ್ಕಾಗಿ ವಲಸೆ ಬಂದಿದ್ದು ಕಳೆದ ಐದು ವರ್ಷದಿಂದ ಪ್ರತಿ ಜನವರಿ ತಿಂಗಳಿನಲ್ಲಿ ಊರು ಬಿಡುವ ಇವರು ಅಲ್ಲಿನ ಬರಗಾಲಕ್ಕೆ ಹೆದರಿ ಕೆಲಸಕ್ಕಾಗಿಯೇ ಆರು ತಿಂಗಳು ಕರಾವಳಿ ಜಿಲ್ಲೆಗೆ ಬರುತ್ತಾರೆ.
ಮನೆ ಕೆಲಸ, ಗಾರೆ, ಸೆಂಟ್ರಿಂಗ್, ಪೈಂಟಿಂಗ್, ತೋಟದ ಕೆಲಸ, ಬಾವಿ ಕೆಲಸ, ಒಟ್ಟಾರೆ ಸಿಕ್ಕ ಕೂಲಿ ಕೆಲಸಕ್ಕೆ ಸೈ ಎನ್ನುವ ಇವರು ಭಾನುವಾರವೂ ಕೆಲಸ ಮಾಡುತ್ತಾರೆ. ಕಾರಣ ಊರಿನಲ್ಲಿ ಹೆಂಡತಿ, ಮಕ್ಕಳು, ತಂದೆ, ತಾಯಿಯ ಜವಾಬ್ದಾರಿ ಇವರ ಹೆಗಲ ಮೇಲೆ ಇದೆ ಎಂದು ಕೂಲಿ ಕಾರ್ಮಿಕ ಹನುಮಂತ ಮಾಹಿತಿ ನೀಡು ತ್ತಾರೆ
ಪ್ರತಿ ವರ್ಷ ಮೇ ತಿಂಗಳವರೆಗೆ ಕೆಲಸ ಮಾಡಿ ಊರಿಗೆ ಹೋಗುವಾಗ ಇಲ್ಲಿ ಸಂಪಾದಿಸಿದ ಹಣವನ್ನು ಊರಿನಲ್ಲಿ ಕೃಷಿ ಕೆಲಸಕ್ಕೆ ವಿನಿಯೋಗಿಸುವ ಪರಿಪಾಠ ಇವರದು. ಆದರೆ ಮಂಗಳವಾರ ಹಳೆಯಂಗಡಿಯಲ್ಲಿ ನಡೆದ ದುರ್ಘಟನೆಯಿಂದ ಅತಂತ್ರರಾಗಿರುವ ಇವರು ಇಂತಹ ಘಟನೆ ಇದುವರೆಗೆ ನಮ್ಮಲ್ಲಿ ನಡೆದಿಲ್ಲ ಎಂದು ಕಣ್ಣೀರು ಹಾಕುತ್ತಾ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ. ಮೇ ಒಂದರಂದು ಕಾರ್ಮಿಕರ ದಿನಾಚರಣೆ ಅಲ್ಲವೇ ಎಂದು ಪ್ರಶ್ನಿಸಿದಾಗ ಸಾರ್ ದಿನ ಕೆಲಸ ಮಾಡದಿದ್ದರೇ ಹೊಟ್ಟೆಗೆ ತಣ್ಣೀರೆ ಗತಿ ಅಂತವರಿಗೆ ಯಾವ ರಜೆ ಮತ್ತು ದಿನಾಚರಣೆ ಯಾಕೆ ಎಂದು ಮಾಧ್ಯಮದ ವರನ್ನೇ ಪ್ರಶ್ನಿಸುತ್ತಾರೆ.
ನಿನ್ನೆಯಷ್ಟೇ ಕೆಲಸಕ್ಕೆ ಸೇರಿದ್ದ ಸೈಯ್ಯದ್ ಬ್ಯಾರಿ
ಕಪ್ಪು ಕಲ್ಲು ಮೇಸ್ತ್ರಿ ಯಾಗಿರುವ ಮುಕ್ಕ ನಿವಾಸಿ ಸೈಯ್ಯದ್ ಬ್ಯಾರಿ ನಿನ್ನೆಯಷ್ಟೇ ಕೆಲಸಕ್ಕೆ ಹಾಜರಾಗಿದ್ದರು. ಆದರೆ ಹಲವು ವರ್ಷಗಳಿಂದ ಬಾವಿಯಲ್ಲಿ ಕಾಮಗಾರಿ ನಡೆಸುತ್ತಿರುವ ಸೈಯದ್ ಅವರ ನಿನ್ನೆಯ ಕೆಲಸ ಮಾತ್ರ ಕೊನೆಯದ್ದಾಗಿತ್ತು.

ಗ್ರಾ.ಪಂ. ಅಧ್ಯಕ್ಷನ ಗೂಂಡಾಗಿರಿಗೆ ಬೆಲೆ ತೆತ್ತ ಸಾರ್ವಜನಿಕರು

Posted by JAYAKIRANA Kirana on | 0 comments | Leave a comment...

ಸರ್ವೀಸ್ ಬಸ್ ಬಂದ್
ಉಳ್ಳಾಲ: ತನ್ನ ಕಾರಿಗೆ ದಾರಿ ಬಿಡಲಿಲ್ಲ ಎನ್ನುವ ನೆಪದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ, ಬಸ್ ಚಾಲಕನಿಗೆ ಹಲ್ಲೆ ನಡೆಸಿ ಗೂಂಡಾ ಪ್ರವೃತ್ತಿ ಮೆರೆದ ಪರಿಣಾಮ ನಿನ್ನೆ ಸರ್ವೀಸ್ ಬಸ್ ನೌಕರರು ಮುಷ್ಕರ ನಡೆಸಿದ್ದು ಇದರಿಂದ ಸಾರ್ವಜನಿಕರು ಪರದಾಡುವಂತಾಯಿತು.
ಸೋಮವಾರ ಸಂಜೆ ಬಿ.ಸಿರೋಡಿನಿಂದ ಮಂಗಳೂರಿಗೆ ಹೋಗುತ್ತಿದ್ದ ಶಾರದಾ ಹೆಸರಿನ ಬಸ್ಸನ್ನು ಮಿತ್ತಕೋಡಿ ಎಂಬಲ್ಲಿ ಅಡ್ಡಗಟ್ಟಿದ ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಝೀರ್ ಮೊಯಿದ್ದೀನ್ ಹಾಗೂ ಆತನ ಸ್ನೇಹಿತರಿಬ್ಬರು ಚಾಲಕ ಚಾರ್ಲಿ ಪಿಂಟೋ(೬೫) ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಘಟನೆಗೆ ಸಂಬಂಧಿಸಿ ಸೋಮವಾರ ರಾತ್ರಿಯವರೆಗೂ ಯಾರೂ ಕೂಡ ದೂರು ನೀಡದಿದ್ದ ಕಾರಣ ಎಫ್.ಐ.ಆರ್. ದಾಖಲಾಗಿರಲಿಲ್ಲ.
ಆರೋಪಿಗಳು ರಾಜಕೀಯ ಪ್ರಭಾವ ಹೊಂದಿರುವ ಕಾರಣ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಭಾವಿಸಿದ ಬಸ್ ನೌಕರರು ಆರೋಪಿಗಳ ಬಂಧನಕ್ಕಾಗಿ ಒತ್ತಾಯಿಸುವ ಸಲುವಾಗಿ ಮಂಗಳವಾರ ಬೆಳಗ್ಗೆಯೇ ಮುಡಿಪು ವಿನಲ್ಲಿ ಪ್ರತಿಭಟನೆಗೆ ಮುಂದಾಗಿ ಬಿ.ಸಿ.ರೋಡು, ವಿಟ್ಲ, ಸಾಲೆತ್ತೂರು ಮುಂತಾದ ಕಡೆಗಳಿಂದ ಬಂದ ಬಸ್ಸುಗಳನ್ನು ತಡೆದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಕುರ್ನಾಡು ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ರೈ, ನೌಕರರ ಮುಷ್ಕರಕ್ಕೆ ಬೆಂಬಲ ನೀಡಿದ ಕಾರಣ ಹೋರಾಟಕ್ಕೆ ಇನ್ನಷ್ಟು ಪ್ರೋತ್ಸಾಹ ದೊರಕಿದಂತಾಯಿತು. ೯.೩೦ರ ವೇಳೆಗೆ ಕೊಣಾಜೆ ಠಾಣೆಗೆ ಬಂದ ಮುಷ್ಕರ ನಿರತರು ಇನ್ಸ್‌ಪೆಕ್ಟರ್ ರವೀಶ್ ನಾಯಕ್ ಅವರಿಗೆ ಮನವಿ ಮಾಡಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. ಅವರ ಮನವಿಗೆ ಅಧಿಕಾರಿ ಸ್ಪಂದಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು.
ಮಾತುಕತೆ ಫಲ ನೀಡುವ ಹಂತ ತಲುಪುತ್ತಿದ್ದಂತೆಯೇ ಜಿ.ಪಂ. ಸದಸ್ಯ ಸಂತೋಷ್ ಕುಮಾರ್ ರೈ ಆಗಮಿಸಿ ಆರೋಪಿಗಳನ್ನು ಬಂಧಿಸಲೇಬೇಕು ಎಂದು ಒತ್ತಾಯಿಸಿದಾಗ ನೌಕರರು ಇನ್ನಷ್ಟು ಉತ್ಸಾಹಗೊಂಡು ಅವರ ಮಾತನ್ನು ಬೆಂಬಲಿಸಿದ್ದರಿಂದ ಸಂಜೆಯವರೆಗೂ ಮುಷ್ಕರ ನಡೆಯಿತು.
ಬಸ್ ಮಾಲೀಕರ ಲಾಬಿ
ಚಾಲಕನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಆರೋಪಿ ಪಂಚಾಯಿತಿ ಸದಸ್ಯ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಬಸ್ ನೌಕರರು ಮನವಿ ನೀಡಲೆಂದು ಕೊಣಾಜೆ ಠಾಣೆಗೆ ಆಗಮಿಸಿದ್ದರು. ಈ ಸಂದರ್ಭ ಶಾರದ ಹಾಗೂ ಇನ್ನೊಂದು ಬಸ್ಸಿನ ಮಾಲೀಕ ಠಾಣೆಗೆ ಆಗಮಿಸಿ ಮುಷ್ಕರವನ್ನು ಹಿಂದಕ್ಕೆ ಪಡೆಯುವಂತೆ ನೌಕರರನ್ನು ಒತ್ತಾಯಿಸುತ್ತಿದ್ದುದೂ ಕಂಡು ಬಂತು. ಇದೇ ವೇಳೆ ಬಸ್ ನೌಕರರೋರ್ವರು ಪಾನಮತ್ತರಾಗಿ ಹದ್ದುಮೀರಿ ವರ್ತಿಸುತ್ತಿದ್ದುದು ಕಂಡುಬಂದಿದ್ದು ಮಾಲೀಕರ ಅಸಮಾಧಾನಕ್ಕೆ ಕಾರಣವಾಯಿತು.
ಪರದಾಡಿದ ಪ್ರಯಾಣಿಕರು
ಮಂಗಳವಾರ ಸರಕಾರಿ ನೌಕರರು, ಕಾಲೇಜುಗಳಿಗೆ ರಜೆ ಇದ್ದರೂ ಖಾಸಗಿ ಕಂಪೆನಿಗಳು ಹಾಗೂ ಇತರ ಕಾರ್ಮಿಕರು ಎಂದಿನಂತೆ ಕೆಲಸಕ್ಕೆ ಹೋಗಬೇಕಿತ್ತು. ಆದರೆ ಮುಡಿಪುವಿನಲ್ಲಿ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಗಿದ್ದಲ್ಲದೆ, ಕೆಲಸ ಕಾರ್ಯಗಳಿಗೆ ತೆರಳುವವರೂ ಬಸ್ಸುಗಳಿಗಾಗಿ ಕಾದು ಸುಸ್ತಾದರು.
ವಾಪಸ್ ಊರಿಗೆ ಹೋಗಲೂ ಬಸ್ಸುಗಳಿರದ ಕಾರಣ ಪ್ರಯಾಣಿಕರು ಮುಡಿಪುವಿನಲ್ಲೇ ಬಾಕಿಯಾದರು. ಕೊಣಾಜೆ ಠಾಣೆಗೆ ಮನವಿ ಮಾಡಿದ ಬಸ್ಸು ನೌಕರರು ೧೧ ಗಂಟೆಯ ವೇಳೆಗೆ ಮುಡಿಪುವಿಗೆ ವಾಪಸ್ ಬಂದು ಪ್ರಯಾಣಿಕರನ್ನು ನಿಗದಿತ ಸ್ಥಳಗಳಿಗೆ ಬಿಡುವ ವ್ಯವಸ್ಥೆ ಮಾಡುವವರೆಗೂ ಪ್ರಯಾಣಿಕರು ಬಿಸಿಲಲ್ಲಿ ಒಣಗುವಂತಾಯಿತು.

‘ಕರಾವಳಿ ಕುಲೆಯನ್ನು ಒದ್ದೋಡಿಸೋಣ

Posted by JAYAKIRANA Kirana on | 0 comments | Leave a comment...

ಕೊಡಿಯಾಲ್‌ಬೈಲ್ ಗುಡುಗು

ಅಸಲ್ ಯಶಸ್ಸಿನ ಬಗ್ಗೆ ನನಗೆ 'ಕರಾವಳಿ ಕುಲೆಯೆಂಬ ಪತ್ರಿಕೆಯ ಸರ್ಟಿಫಿಕೇಟ್ ಬೇಕಾಗಿಲ್ಲ. ಸಿನಿಮಾ ವೀಕ್ಷಣೆಗೆ ಸೇರಿರುವ ಅಪಾರ ಜನಸ್ತೋಮವೇ ಸಾಕ್ಷಿ. ಸಾಮಾಜಿಕ ಕ್ಷೇತ್ರದ ಅಭಿವೃದ್ಧಿ ಸಹಿಸದ ಪತ್ರಿಕೆಯ ಸಂಪಾದಕನ ವಿರುದ್ಧ 'ಸೀತಾ... ರಾಮ... ಎನ್ನುವ ನಾಟಕ ರಚಿಸುತ್ತಿದ್ದು, ಅದರ ಅಡಿಬರಹ 'ಇವನದ್ದು ರೋಹಿಣಿ ನಕ್ಷತ್ರ ಎಂಬುದಾಗಿ ಇರುತ್ತದೆ. ವಿಷಕಾರುವ ವಿದೇಶಿ ಕಂಪೆನಿಯ ವಿರುದ್ಧ ಜಾಗೃತಿ ಮೂಡಿಸುವ 'ಕೋಡೆ ಇನಿ ಎಲ್ಲೆ ನಾಟಕ ನೀಡಿದ್ದೆ. ವರದಕ್ಷಿಣೆ ವಿರುದ್ದ ಮದಿಮೆ ರಚಿಸಿದ್ದೆ. ಇದೀಗ ಈತನ ವಿರುದ್ಧವೂ ನಾಟಕ ಪ್ರದರ್ಶನ ಅನಿವಾರ್ಯ

ಮಂಗಳೂರು: 'ಜಿಲ್ಲೆಯ ಅಭಿ ವೃದ್ಧಿಗೆ ತೊಡಕಾಗಿರುವ, ಧರ್ಮ-ಧರ್ಮಗಳ ನಡುವೆ ಗಲಭೆ ಸೃಷ್ಟಿಸುವ, ಸಾಂಸ್ಕೃತಿಕ ರಂಗಕ್ಕೆ ವಿಷ ಜಂತು ವಾಗಿರುವ 'ಕರಾವಳಿ ಕುಲೆ ಪತ್ರಿಕೆ ಯನ್ನು ರಂಗಭೂಮಿಯಲ್ಲಿ ನಿತ್ಯ ನಾಟಕ ಪ್ರದರ್ಶಿಸುವ ಮೂಲಕ ಈ ಜಿಲ್ಲೆಯಿಂದಲೇ ಬಡಿದೋಡಿಸ ಬೇಕಿದೆ. ಈ ಕೆಲಸಕ್ಕೆ ಪ್ರeವಂತ ನಾಗರಿಕರ ಸಹಕಾರ ಬೇಕಾಗಿದೆ ಎಂದು ಖ್ಯಾತ ನಾಟಕಕಾರ, ಸಿನಿಮಾ ನಿರ್ಮಾಪಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಗುಡುಗಿದ್ದಾರೆ.
ಇತ್ತೀಚೆಗೆ ಉರ್ವಾಸ್ಟೋರ್‌ನ ಶ್ರೀರಾಮ ಸೇನೆ ಘಟಕದ ವತಿಯಿಂದ ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿ ಯಾಗಿ ಪಾಲ್ಗೊಂಡು ಮಾತಾಡಿದ ಕೊಡಿಯಾಲ್‌ಬೈಲ್ ಅವರು, 'ಜಿಲ್ಲೆಯ ಅಭಿವೃದ್ಧಿಯನ್ನು ಸಹಿಸದ ವಿಕೃತ ಮನಸ್ಸಿನ, ಕಾಮಾಲೆ ಕಣ್ಣಿನ ರಾಮ ತನ್ನ ಪತ್ರಿಕೆಯಲ್ಲಿ ಕೀಳು ಬರಹಗಳನ್ನು ಪ್ರಕಟಿಸಿ ಬ್ಲ್ಯಾಕ್‌ಮೇಲ್ ಮಾಡುವ ತಂತ್ರವನ್ನು ಎಲ್ಲರೂ ಎಚ್ಚೆತ್ತು ಖಂಡಿಸ ಬೇಕಿದೆ ಎಂದು ಹೇಳಿ ಪ್ರೇಕ್ಷಕರ ಕರಾತಾಡನಕ್ಕೆ ಪಾತ್ರರಾಗಿದ್ದಾರೆ. ತನ್ನ ಮಹತ್ವಾಕಾಂಕ್ಷೆಯ ಚಿತ್ರ 'ಒರಿಯ ರ್ದೊರಿ ಅಸಲ್ ಬಗ್ಗೆ ಪತ್ರಿಕೆಯಲ್ಲಿ ಸತತವಾಗಿ ತೆಗಳಿ ವರದಿ ಪ್ರಕಟಿಸು ತ್ತಿರುವುದರ ವಿರುದ್ಧ ಕ್ರುದ್ಧರಾದ ಕೊಡಿಯಾಲ್‌ಬೈಲ್ ಅವರು, 'ಅಸಲ್ ಯಶಸ್ಸಿನ ಬಗ್ಗೆ ನನಗೆ 'ಕರಾವಳಿ ಕುಲೆಯೆಂಬ ಪತ್ರಿಕೆಯ ಸರ್ಟಿಫಿಕೇಟ್ ಬೇಕಾಗಿಲ್ಲ. ಸಿನಿಮಾ ವೀಕ್ಷಣೆಗೆ ಸೇರಿರುವ ಅಪಾರ ಜನಸ್ತೋಮವೇ ಸಾಕ್ಷಿ. ಸಾಮಾಜಿಕ ಕ್ಷೇತ್ರದ ಅಭಿವೃದ್ಧಿ ಸಹಿಸದ ಪತ್ರಿಕೆಯ ಸಂಪಾದಕನ ವಿರುದ್ಧ 'ಸೀತಾ... ರಾಮ... ಎನ್ನುವ ನಾಟಕ ರಚಿಸುತ್ತಿದ್ದು, ಅದರ ಅಡಿಬರಹ 'ಇವನದ್ದು ರೋಹಿಣಿ ನಕ್ಷತ್ರ ಎಂಬುದಾಗಿ ಇರುತ್ತದೆ. ವಿಷಕಾರುವ ವಿದೇಶಿ ಕಂಪೆನಿಯ ವಿರುದ್ಧ ಜಾಗೃತಿ ಮೂಡಿಸುವ     'ಕೋಡೆ ಇನಿ ಎಲ್ಲೆ ನಾಟಕ ನೀಡಿದ್ದೆ. ವರದಕ್ಷಿಣೆ ವಿರುದ್ದ ಮದಿಮೆ ರಚಿಸಿದ್ದೆ. ಇದೀಗ ಈತನ ವಿರುದ್ಧವೂ ನಾಟಕ ಪ್ರದರ್ಶನ ಅನಿವಾರ್ಯ ಎನ್ನುವುದನ್ನು ಒತ್ತಿ ಹೇಳಿದರು.
ಇದೇ ವೇಳೆ ಉರ್ವಾಸ್ಟೋರ್ ಮೈದಾನದ ಬಯಲು ರಂಗಮಂದಿರದ ಹಿಂಭಾಗದ ಶೌಚಾಲಯ ದುರ್ನಾತ ಬೀರುತ್ತಿದ್ದು, ವೇದಿಕೆಯಲ್ಲಿದ್ದವರಿಗೆ ವಾಕರಿಕೆ ತರಿಸುತ್ತಿತ್ತು. ಇದನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಕೊಡಿಯಾಲ್‌ಬೈಲ್ ಅವರು, 'ಹಲವಾರು ವರ್ಷಗಳಿಂದ ಇಲ್ಲಿ ಕಟೀಲಿನ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯುತ್ತಿದ್ದು, ಇಲ್ಲಿಯೇ ದೇವಿಯನ್ನು ಕುಳ್ಳಿರಿಸಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಇಲ್ಲಿ ಪ್ರೇಕ್ಷಕರೇ ನಿಲ್ಲಲು ಅಸಾಧ್ಯವಾಗಿರುವಾಗ ಕಟೀಲಿನ ತಾಯಿ ಹೇಗೆ ತಾನೇ ಕುಳಿತುಕೊಳ್ಳುತ್ತಾಳೆ ಎಂದರು. 'ಈ ಬಗ್ಗೆ ಶ್ರೀರಾಮ ಸೇನೆ ಘಟಕ ತಕ್ಷಣ ಪಾಲಿಕೆಯ ಗಮನಕ್ಕೆ ತಂದು ಅವ್ಯವಸ್ಥೆಯನ್ನು ಸರಿಪಡಿಸಿ ದೇವಿಯ ಕೃಪೆಗೆ ಪಾತ್ರರಾಗಲಿ ಎಂದು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಶರಣ್ ಪಂಪ್‌ವೆಲ್ ಗಡಿಪಾರಿಗೆ ಒತ್ತಾಯ

Posted by JAYAKIRANA Kirana on | 0 comments | Leave a comment...

ಪಟ್ಟಾಭಿಗೆ ಸೆಗಣಿ ಬಳಿದ ಪ್ರಕರಣ
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕರಾದ ಪಟ್ಟಾಭಿರಾಮ ಸೋಮಯಾಜಿಯವರ ಮುಖಕ್ಕೆ ಸೆಗಣಿ ಬಳಿದ ಹೇಯ ಕೃತ್ಯವನ್ನು ಬಜರಂಗದಳದ ಶರಣ್ ಪಂಪ್‌ವೆಲ್ ಸಮರ್ಥಿಸಿದ್ದಾರೆ. ಇದೊಂದೇ ಕೃತ್ಯವಲ್ಲದೆ ಪಬ್ ದಾಳಿ, ಕೇರಳದ ಶಾಸಕರ ಮಗಳ ಮೇಲೆ ಹಲ್ಲೆ ಮುಂತಾದ ಹತ್ತು ಹಲವಾರು ಕೋಮು ಸಂಬಂಧಿ ಕೃತ್ಯಗಳಲ್ಲಿ ಶರಣ್ ಶಾಮೀಲಾಗಿದ್ದಾರೆ. ಇವರ ಮೇಲೆ ಗೂಂಡಾ ಕಾಯ್ದೆ ಜ್ಯಾರಿಗೊಳಿಸಿ, ಗಡಿಪಾರು ಮಾಡಬೇಕು ಎಂದು ಖ್ಯಾತ ಚಿಂತಕ, ಹಿರಿಯ ಬರಹಗಾರ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಅವರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಚಿಂತಕ ಪಟ್ಟಾಭಿ ಯವರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಮಂಗಳ ವಾರ ಸಂಜೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ನಡೆದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪಟ್ಟಾಭಿರಾಮ ಸೋಮಯಾಜಿಯವರು ಬಜರಂಗ ದಳ ಆರೋಪಿಸಿದಂತೆ ನಕ್ಸಲರ ಬೆಂಬಲಿಗರಲ್ಲ. ಪಟ್ಟಾಭಿಯ ವರು ನಕ್ಸಲರನ್ನು ಬೆಂಬಲಿಸುತ್ತಾರೆ ಎನ್ನುವುದು ಶುದ್ದಾಂಗ ಸುಳ್ಳು. ಅವರು ಗೋಹತ್ಯೆಯನ್ನು ಬೆಂಬಲಿಸಿದ್ದಾರೆ ಎನ್ನುವುದೂ ಸತ್ಯಕ್ಕೆ ದೂರವಾದ ಅಪಾದನೆ. ಪಟ್ಟಾಭಿಯ ವರು ಎಂದೂ ಗೋಹತ್ಯೆಯನ್ನು ಬೆಂಬಲಿಸಿಲ್ಲ. ಅವರು ಗೋ ಸಾಗಾಟಗಾರರ ಮೇಲೆ ಹಲ್ಲೆ ನಡೆಸುವು ದನ್ನು ಖಂಡಿಸಿದ್ದಾರೆ, ಅಷ್ಟೇ ಎಂದು ರಾಜಶೇಖರ್ ಸ್ಪಷ್ಟಪಡಿಸಿದರು.
 ಸಂಘ ಪರಿವಾರದಂತಹ ಸಂಘಟನೆಗಳು ಪ್ರಜಾಪ್ರಭುತ್ವ ದೇಶದಲ್ಲಿದ್ದುಕೊಂಡು, ಪ್ರಜಾಪ್ರಭುತ್ವದ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು, ನಾಗರಿಕ ಸಮಾಜದ ನಡುವೆ ನಾಗರಿಕರ ಮಧ್ಯೆ ಇದ್ದುಕೊಂಡು ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡುತ್ತಿದೆ. ಪಟ್ಟಾಭಿ ಮೇಲೆ ನಡೆದ ಆಕ್ರಮಣ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದು ಕೊಳ್ಳುವ ಭಾಗವಾಗಿ ನಡೆದ ಕೃತ್ಯವೆಂದು ರಾಜಶೇಖರ್ ಆರೋಪಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆ ಅವರು, ಪಟ್ಟಾಭಿಯವರ ಮೇಲೆ ದಾಳಿ ಮಾಡುವ ಮೂಲಕ ತಾನೊಂದು ಪಿಶಾಚಿ ಎಂಬುದನ್ನು ಬಜರಂಗದಳ ಸಾಬೀತುಪಡಿಸಿದೆ ಎಂದು ವ್ಯಂಗ್ಯವಾಡಿದರು.
 ಪ್ರತಿಭಟನಾ ಧರಣಿಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ನಾಯಕರಾದ ಪ್ರೊ.ಕೆ.ಫಣಿರಾಜ್, ದಿನಕರ ಎಸ್.ಬೆಂಗ್ರೆ, ಪ್ರೊ.ಹಯವದನ ಮೂಡುಸಗ್ರಿ, ಸಂವೃತ್ತ, ಮಂದೀಪ್ ಶೆಟ್ಟಿ, ಜಿಲ್ಲಾ ಅಲ್ಪ ಸಂಖ್ಯಾತರ ವೇದಿಕೆಯ ಪ್ರೊ.ಸಿರಿಲ್ ಮಥಾಯಸ್, ಖಾಸೀಂ ಬಾರ್ಕೂರು, ಖತೀಬ್ ಅಬ್ದುಲ್ ರಶೀದ್, ಚಾರ್ಲ್ಸ್ ಅಂಬ್ಲರ್, ಮೊಹಮ್ಮದ್ ಹನೀಫ್, ಜಮಾಅತೆ ಇಸ್ಲಾಮಿ ಹಿಂದ್‌ನ ಮೊಹಮ್ಮದ್ ಇದ್ರೀಸ್, ಯೂತ್ ವಿಂಗ್‌ನ ಹುಸೇನ್ ಕೋಡಿಬೆಂಗ್ರೆ, ಜಿ.ಪಂ.ಮಾಜಿ ಅಧ್ಯಕ್ಷೆ ಡಾ. ವನಜಾಕ್ಷಿ, ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ಸುಂದರಿ ಪುತ್ತೂರು, ಸ್ವಾಭಿಮಾನಿ ಮಹಿಳಾ ವೇದಿಕೆಯ ಶಾರದಾ ಮೂಡುಸಗ್ರಿ ಮೊದಲಾದವರು ಭಾಗವಹಿಸದ್ದರು.
ಧರಣಿಯ ಬಳಿಕ ಎಸ್‌ಪಿಯವರ ಮೂಲಕ ಪಶ್ಚಿಮ ವಲಯದ ಐಜಿಪಿಯವರಿಗೆ ಮನವಿ ಸಲ್ಲಿಸಲಾಯಿತು. ಪಟ್ಟಾಭಿಯವರ ಮೇಲೆ ದಾಳಿ ನಡೆಸಿದ ಕೃತ್ಯದ ಹಿಂದೆ ಇರುವವರನ್ನು ಪತ್ತೆ ಹಚ್ಚಬೇಕು ಮತ್ತು ಶರಣ್ ಪಂಪ್‌ವೆಲ್‌ನನ್ನು ಬಂಧಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)