ಮಲಿಂಗಾ ವೇಗಕ್ಕೆ ಮತ್ತೆ ಮುಗ್ಗರಿಸಿ ಬಿದ್ದ ಡೆಕ್ಕನ್

Posted by JAYAKIRANA Kirana on Monday, 30 April 2012 | 0 comments | Leave a comment...

ಮುಂಬೈ: ಐಪಿಎಲ್‌ನಲ್ಲಿ ಮೊದಲ ಸಲ ಬೌಲರ್‌ಗಳು ಮೇಲುಗೈ ಸಾಧಿಸಿದ್ದು, ವಾಂಖೇಡೆಯ ಹಸಿರು ಹಾಸಿದ ಪಿಚ್‌ನಲ್ಲಿ ವೇಗಿಗಳಾದ ಮಲಿಂಗಾ ಮತ್ತು ಡೇಲ್ ಸ್ಟೇನ್ ಮಿಂಚಿದರೂ ಅಂತಿಮವಾಗಿ ಗೆಲುವು ಮಾತ್ರ ಮುಂಬೈ ಇಂಡಿಯನ್ಸ್ ಪಾಲಾಯಿತು.
ಡೆಕ್ಕನ್ ಚಾರ್ಜರ‍್ಸ್ ಕೇವಲ ೧೦೦ ರನ್‌ಗಳಿಗೆ ಆಲೌಟ್ ಆದ ಬಳಿಕ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಐದು ವಿಕೆಟ್ ನಷ್ಟಕ್ಕೆ ೧೦೧ ರನ್ ಮಾಡಿ ಗೆಲುವು ತನ್ನದಾಗಿಸಿಕೊಂಡಿತು. ಸ್ಟೇನ್ ವೇಗದ ಮುಂದೆ ಕಂಗೆಟ್ಟ ಮುಂಬೈ ಅಲ್ಪ ಮೊತ್ತವನ್ನು ೧೯ನೇ ಓವರ್‌ನಲ್ಲಿ ಗುರಿ ಮುಟ್ಟಿತು. ಸ್ಟೇನ್ ಅವರಿಗೆ ಬೆಂಬಲ ನೀಡುವ ಮತ್ತೊಮ್ಮೆ ವೇಗಿಯಿದ್ದರೆ ನಿನ್ನೆಯ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು. ರೋಹಿತ್ ಶರ್ಮಾ ೪೨ ಮತ್ತು ಅಂಬಾಟಿ ರಾಯುಡು ೧೯ ರನ್ ಮಾಡಿ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ವೇಗಿಗಳಿಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಟಾಸ್ ಗೆದ್ದ ಹರ್ಭಜನ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಡೆಕ್ಕನ್ ಉತ್ತಮ ಆರಂಭವನ್ನೇ ಪಡೆದಿತ್ತು. ಮೊದಲ ಐದು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೩೫ ರನ್ ಮಾಡಿತ್ತು. ಆದರೆ ಇದರ ಬಳಿಕ ಕುಸಿತ ಆರಂಭವಾಗಿ ಡೆಕ್ಕನ್ ಚೇತರಿಸಿಕೊಳ್ಳಲೇ ಇಲ್ಲ. ಡೆಕ್ಕನ್‌ನ ಮಧ್ಯಮ ಸರದಿ ಸಂಪೂರ್ಣವಾಗಿ ವಿಫಲವಾಯಿತು. ಜೆ.ಪಿ. ಡ್ಯುಮಿನಿ ಅಜೇಯ ೨೫ ರನ್ ಮಾಡಿದರೂ ಅಂತ್ಯದಲ್ಲಿ ದೊಡ್ಡ ಹೊಡೆತಗಳನ್ನು ಬಾರಿಸಲು ಸಾಧ್ಯವಾಗಲಿಲ್ಲ. ೩.೪ ಓವರ್‌ಗಳಲ್ಲಿ ೧೬ ರನ್ ನೀಡಿ ನಾಲ್ಕು ವಿಕೆಟ್ ಉರುಳಿಸಿದ ಮಲಿಂಗಾ ಡೆಕ್ಕನ್ ಇನ್ನಿಂಗ್ಸ್‌ಗೆ ಆಘಾತವಿಕ್ಕಿದರು. ಪಾರ್ಥಿವ್ ಪಟೇಲ್ ೧೯, ಶಿಖರ್ ಧವನ್ ೨೯ ಮಾಡಿದರು. ಹರ್ಭಜನ್ ಎರಡು, ಆರ್‌ಪಿ ಸಿಂಗ್ ಮತ್ತು ಮುನಾಫ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

ಸೆಹ್ವಾಗ್ ಬಳಗಕ್ಕೆ ರೋಚಕ ಒಂದು ರನ್ ಗೆಲುವು

Posted by JAYAKIRANA Kirana on | 0 comments | Leave a comment...

ಗೆಲುವಿನ ಹೊಸ್ತಿಲಲ್ಲಿ ಎಡವಿದ ರಾಜಸ್ಥಾನ
ನವದೆಹಲಿ: ಒಂದು ಹಂತದಲ್ಲಿ ಗೆಲುವಿನ ಹೊಸ್ತಿಲಿನಲ್ಲಿದ್ದ ರಾಜಸ್ಥಾನ ರಾಯಲ್ಸ್ ತಂಡ ಅಜಿಂಕ್ಯ ರಹಾನೆ ಮಾಡಿದ ತಪ್ಪಿನಿಂದಾಗಿ ಒಂದು ರನ್‌ನಿಂದ ಡೆಲ್ಲಿ ಡೇರ್‌ಡೇವಿಲ್ಸ್ ವಿರುದ್ಧ ಸೋಲುನ್ನಬೇಕಾಯಿತು.
ಗೆಲುವಿಗೆ ಅಂತಿಮ ಎರಡು ಓವರ್‌ಗಳಲ್ಲಿ ಕೇವಲ ೧೫ ರನ್‌ಗಳ ಅಗತ್ಯವಿತ್ತು. ಒಂದು ವಿಕೆಟ್ ಮಾತ್ರ ಪತನವಾಗಿತ್ತು. ಆದರೆ ೧೯ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್ ತೆಗೆಯಲು ರಹಾನೆ ವಿಫಲರಾದರು. ಈ ಓವರ್‌ನಲ್ಲಿ ಕೇವಲ ಮೂರು ರನ್ ಮಾತ್ರ ಬಂದಿದ್ದು ಅಂತಿಮ ಎಸೆತದಲ್ಲಿ ಹಾಡ್ಜ್ ಔಟ್ ಆಗಿ ನಿರ್ಗಮಿಸಿದ್ದು ರಾಜಸ್ಥಾನ ಪಾಲಿಗೆ ಮುಳುವಾಯಿತು. ಅಂತಿಮ ಓವರ್‌ನಲ್ಲಿ ೧೨ ರನ್‌ಗಳ ಅಗತ್ಯವಿತ್ತು. ಅಂತಿಮ ಮೂರು ಎಸೆತಗಳಲ್ಲಿ ಹತ್ತು ರನ್, ಕ್ರೀಸಿನಲ್ಲಿದ್ದ ರಹಾನೆ ಸಿಕ್ಸರ್ ಸಿಡಿಸಿ ಗೆಲುವಿನ ಆಸೆ ಮೂಡಿಸಿದರು. ಐದನೇ ಎಸೆತದಲ್ಲಿ ಎರಡು ರನ್. ಆದರೆ ಅಂತಿಮ ಎಸೆತದಲ್ಲಿ ಎರಡು ರನ್ ಬೇಕಾಗಿದ್ದಾಗ ರಹಾನೆ ಬ್ಯಾಟ್‌ಗೆ ಸಿಗದ ಚೆಂಡು ವಿಕೆಟ್ ಕೀಪರ್ ಕೈಸೇರಿತ್ತು. ಒಂದು ರನ್‌ಗಾಗಿ ಓಡಿದ ಓವೇಸ್ ಷಾ ರನೌಟ್ ಆದಾಗ ಡೆಲ್ಲಿ ಗೆಲುವಿನ ಸಂಭ್ರಮವನ್ನಾಚರಿಸಿತು. ದೊಡ್ಡ ಇನ್ನಿಂಗ್ಸ್ ಆಡಿದ ರಹಾನೆ ತಂಡಕ್ಕೆ ಗೆಲುವು ತಂದುಕೊಡಲಾರದೆ ನಿರಾಶೆ ಮೂಡಿಸಿದರು.
ದ್ರಾವಿಡ್ ಮತ್ತು ರಹಾನೆ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ದ್ರಾವಿಡ್ ಕೇವಲ ೩೮ ಎಸೆತಗಳಲ್ಲಿ ೪೦ ರನ್ ಬಾರಿಸಿದರು. ರಹಾನೆ ೬೩ ಎಸೆತಗಳಲ್ಲಿ ೯ ಬೌಂಡರಿ ಹಾಗೂ ಒಂದು ಸಿಕ್ಸ್ ಸಿಡಿಸಿ ೮೪ ರನ್ ಮಾಡಿ ತಂಡದ ಗೆಲುವಿನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರೂ ಅಂತ್ಯದಲ್ಲಿ ಎಡವಿದರು. ಸೆಹ್ವಾಗ್ ಡೆಲ್ಲಿಗೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಸೆಹ್ವಾಗ್ ಕೇವಲ ೩೯ ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ನೊಂದಿಗೆ ೬೩ ರನ್ ಬಾರಿಸಿದರು. ರೋಸ್ ಟೇಲರ್ ೨೫ ಮತ್ತು ನಾಗರ್ ೨೭ ರನ್ ಮಾಡಿರುವುದು ಡೆಲ್ಲಿ ಇನ್ನಿಂಗ್ಸ್‌ನ ಇತರ ದೊಡ್ಡ ಮೊತ್ತ. ರಾಜಸ್ಥಾನ ಬೌಲರ್‌ಗಳು ಡೆಲ್ಲಿ ಬ್ಯಾಟ್ಸ್‌ಮೆನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅದರಲ್ಲೂ ಕೂಪರ್ ತನ್ನ ನಾಲ್ಕು ಓವರ್‌ಗಳಲ್ಲಿ ೧೯ ರನ್ ನೀಡಿ ಡೆಲ್ಲಿ ಬ್ಯಾಟ್ಸ್‌ಮೆನ್‌ಗಳು ರನ್‌ಗಾಗಿ ಪರದಾಡುವಂತೆ ಮಾಡಿದರು.

ಕರ್ನಾಟಕ ಇಂಡಿಯನ್ಸ್ ವಿರುದ್ಧ ಜಿಂಬಾಬ್ವೆಗೆ ಸೋಲು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕರ್ನಾಟಕ ಇಂಡಿಯನ್ಸ್‌ನ ರನ್ ಪ್ರವಾಹದ ಮುಂದೆ ಜಿಂಬಾಬ್ವೆ ತಂಡ ೩೭ ರನ್‌ಗಳಿಂದ ಸೋಲುಂಡಿದೆ. ಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಟ್ವೆಂಟಿ-೨೦ ಪಂದ್ಯದಲ್ಲಿ ಕರ್ನಾಟಕ ಇಂಡಿಯನ್ಸ್ ವಿನ್ನರ‍್ಸ್ ಆಗುವ ಮೂಲಕ ಹೊಸ ಇತಿಹಾಸ ಬರೆಯಲ್ಪಟ್ಟಿದೆ.
ಎನ್‌ಎಂಪಿಟಿ ಮೈದಾನದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಪಂದ್ಯ ದಲ್ಲಿ ಕರ್ನಾಟಕ ಇಂಡಿಯನ್ಸ್
 ೧೯೩ ರನ್‌ಗಳ ದೊಡ್ಡ ಮೊತ್ತವನ್ನು ಪೇರಿ ಸಿತು. ಇದಕ್ಕೆ ಉತ್ತರಿಸಿದ ಜಿಂಬಾಬ್ವೆ ೨೦ ಓವರ್‌ಗಳಲ್ಲಿ ಏಳು ವಿಕೆಟ್ ಕಳೆದು ಕೊಂಡು ಕೇವಲ ೧೫೬ ರನ್ ಗಳಿಸಿತು.
ಕರ್ನಾಟಕ ಇಂಡಿಯನ್ಸ್‌ನ ಬೌಲಿಂಗ್ ದಾಳಿಗೆ ತತ್ತರಿಸಿದ ಜಿಂಬಾಬ್ವೆ ಆರಂಭದಲ್ಲಿಯೇ ರನ್‌ಗಾಗಿ ಪರದಾ ಡಿತು. ಹತ್ತು ಓವರ್ ಮುಗಿಯುವ ಮುನ್ನವೇ ತನ್ನ ನಾಲ್ಕು ವಿಕೆಟನ್ನು ಕಳೆದುಕೊಂಡಿತ್ತು. ಪಂದ್ಯಾಟದಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಕರ್ನಾಟಕ ಇಂಡಿಯನ್ಸ್‌ನ ನೌಶಾದ್ ಈ ವಿಭಾಗದ ಪ್ರಶಸ್ತಿ ಗೆದ್ದುಕೊಂಡರೆ, ಅತ್ಯಧಿಕ ಸಿಕ್ಸರ್ ಬಾರಿಸಿದ ಜಿಂಬಾಬ್ವೆ ತಂಡದ ನಾಯಕ ಹಿತ್ ಸ್ಟ್ರೀಕ್ ಸಿಕ್ಸರ್ ಪ್ರಶಸ್ತಿ ಪಡೆದರು. ಉತ್ತಮ ಕ್ಷೇತ್ರ ರಕ್ಷಣೆಗಾಗಿ ಜಿಂಬಾಬ್ವೆ ತಂಡದ ಎಲ್ಟನ್ ಚಿಗುಂಬರ ಪ್ರಶಸ್ತಿ ಪಡೆದರೆ, ಉತ್ತಮ ಬೌಲರ್ ಆಗಿ ಕರ್ನಾಟಕ ಇಂಡಿಯನ್ಸ್‌ನ ಸಂಪತ್ ಕುಮಾರ್ ಪ್ರಶಸ್ತಿ ಪಡೆದರು.
ಆಕರ್ಷಕವಾಗಿ ಬ್ಯಾಟಿಂಗ್ ಮಾಡಿ ಕರ್ನಾಟಕ ಇಂಡಿಯನ್ಸ್‌ಗೆ ಬಲ ತುಂಬಿದ್ದ ಗುರುದೀಪ್ ಮಧ್ಯಸ್ಥ ಬೆಸ್ಟ್ ಬ್ಯಾಟ್ಸ್‌ಮ್ಯಾನ್

ಟೀಂ ಇಂಡಿಯಾವನ್ನು ಹಿಂದಿಕ್ಕಿದ ಆಸೀಸ್

Posted by JAYAKIRANA Kirana on | 0 comments | Leave a comment...

ದುಬೈ: ವೆಸ್ಟ್‌ಇಂಡೀಸ್ ವಿರುದ್ಧ ೨-೦ಯಿಂದ ಟೆಸ್ಟ್ ಸರಣಿಯನ್ನು ಗೆದ್ದುಕೊಂಡ ಆಸ್ಟ್ರೇಲಿಯಾ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದೆ.
ಈ ಸರಣಿಗೆ ಮೊದಲು ಭಾರತ ಮತ್ತು ಆಸೀಸ್ ೧೧೧ ಅಂಕಗಳೊಂದಿಗೆ ಸಮಬಲದಲ್ಲಿದ್ದವು. ಆದರೆ ಸರಣಿಯನ್ನು ಗೆದ್ದುಕೊಂಡ ಆಸೀಸ್ ಒಂದಂಕ ಪಡೆದುಕೊಂಡು ಈಗ ಧೋನಿ ಪಡೆಯನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿಹಾಕಿದೆ. ೧೧೬ ಅಂಕಗಳನ್ನು ಪಡೆದುಕೊಂಡಿದ್ದ ಇಂಗ್ಲೆಂಡ್ ಅಗ್ರ ಸ್ಥಾನದಲ್ಲಿದ್ದರೆ, ದ. ಆಫ್ರಿಕಾ ೧೧೬ ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ಟೆಸ್ಟ್ ಬ್ಯಾಟ್ಸ್‌ಮೆನ್‌ಗಳ ಪಟ್ಟಿಯಲ್ಲಿ ವಿಂಡೀಸ್‌ನ ಶಿವನಾರಾಯಣ್ ಚಂದರ್‌ಪಾಲ್ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅಗ್ರ ೨೦ರಲ್ಲಿ ಭಾರತದ ಯಾವೊಬ್ಬ ಬ್ಯಾಟ್ಸ್‌ಮೆನ್ ಕೂಡ ಇಲ್ಲ. ಆದರೆ ಬೌಲಿಂಗ್‌ನಲ್ಲಿ ಜಹೀರ್ ಮತ್ತು ಪ್ರಗ್ಯಾನ್ ಓಜ್ಹಾ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಚಂದರ್‌ಪಾಲ್ ೧೯ ಅಂಕ ಪಡೆದುಕೊಂಡು ದ. ಆಫ್ರಿಕಾದ ವಿಲಿಯರ್ಸ್ ಮತ್ತು ಕ್ಯಾಲೀಸ್‌ನ್ನು ಹಿಂದಿಕ್ಕಿದರು.

ವಿಟ್ಲ: ಮನೆಯ ಮೇಲ್ಛಾವಣಿ ಕುಸಿತ

Posted by JAYAKIRANA Kirana on | 0 comments | Leave a comment...

ವಿಟ್ಲ: ಶುಕ್ರವಾರ ಸುರಿದ ಭಾರೀ ಮಳೆಗೆ ಮನೆಯೊಂದರ ಮೇಲ್ಛಾವಣಿ ಕುಸಿದ ಬಿದ್ದ ಪರಿಣಾಮ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದ ಘಟನೆ ಕೊಳ್ನಾಡು ಗ್ರಾಮದ ಕರೆಮಜಲು ಎಂಬಲ್ಲಿ ಶನಿವಾರ ನಡೆದಿದೆ.
ಇಲ್ಲಿಯ ನಿವಾಸಿ ಪೊಡಿಯಮ್ಮ ಎಂಬ ವೃದ್ದೆಗೆ ಸೇರಿದ ಈ ಮನೆಯ ಮಹಡಿ ಕುಸಿದು ಬಿದ್ದಿದೆ.
ಶುಕ್ರವಾರ ವಿಟ್ಲದಾದ್ಯಂತ ಧಾರಾಕಾರ ಮಳೆ ಸುರಿದ ಪರಿಣಾಮ ಅವರ ಮನೆ ಬಿರುಕುಬಿಟ್ಟಿತ್ತು. ಶನಿವಾರ ಬೆಳಿಗ್ಗೆ ಅದರ ಮೇಲ್ಛಾವಣಿ ಕುಸಿದಿದೆ. ಅಡಿಕೆ ಮರದ ಮುಚ್ಚಿಗೆ ಇದ್ದಿದ್ದರಿಂದ ಮನೆಯೊಳಗಿದ್ದ ವ್ಯಕ್ತಿಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಅವರಿಗೆ ಅಂದಾಜು ಸುಮಾರು ೭೫ ಸಾವಿರ ರೂಪಾಯಿ ನಷ್ಷ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಮತ್ತು ಪಂಚಾಯತ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಮೃತ ವ್ಯಕ್ತಿಯ ಶವಮಹಜರು: ವೈದ್ಯರ ತಪ್ಪು ಮಾಹಿತಿ ಆರೋಪ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಡಿತದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕ ವಾಗಿ ಬಿದ್ದು ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರೂ ಶವ ಮಹಜರು ನಡೆಸಲಾಗಿದೆ. ಅವರು ಸೇವಿಸಿದ ಆಲ್ಕೋಹಾಲ್‌ನಲ್ಲಿ ವಿಷ ಬೆರೆಸಿದ್ದರು ಎನ್ನುವ ಕಾರಣಕ್ಕೆ ಶವ ಮಹಜರು ನಡೆಸಿದ್ದು ವೈದ್ಯರ ತಪ್ಪು ಮಾಹಿತಿಯೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಉಳ್ಳಾಲಕೋಡಿ ಕೆಳಗಿನ ಬೀದಿ ನಿವಾಸಿ ಇದ್ದಿನಬ್ಬ (೪೮) ಎಂಬವರೇ ಮೃತ ವ್ಯಕ್ತಿ. ಇವರು ಅಮಲು ಪದಾರ್ಥ ಸೇವನೆಯ ಚಟ ಹೊಂದಿದ್ದು ಶುಕ್ರ ವಾರ ರಾತ್ರಿ ಮನೆಯಲ್ಲೇ ಬಿದ್ದು ಗಾಯ ಗೊಂಡಿದ್ದರು. ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾ ಗಿದ್ದು, ಆ ವೇಳೆ ಅವರನ್ನು ಪರೀಕ್ಷಿಸಿದ ವೈದ್ಯರು ಇದ್ದಿನಬ್ಬ ಅವರು ವಿಷ ಪದಾರ್ಥ ಸೇವಿಸಿದ್ದಾರೆ ಎಂದು ವರದಿ ನೀಡಿ ಕಂಕನಾಡಿ ಆಸ್ಪತ್ರೆಗೆ ಕೊಂಡೊ ಯ್ಯುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲ ಕಾರಿಯಾಗದೆ ಶನಿವಾರ ರಾತ್ರಿ ಒಂದು ಗಂಟೆಗೆ ಅವರು ಮೃತಪಟ್ಟಿದ್ದರು. ಆದರೆ ಮೃತರು ವಿಷ ಸೇವಿಸಿದ್ದರು ಎನ್ನುವ ವರದಿಯ ಹಿನ್ನೆಲೆಯಲ್ಲಿ ಶವಮಹಜರು ನಡೆಸಬೇಕೆಂದು ವೈದ್ಯರು ನೀಡಿದ ಸೂಚನೆ ಯಂತೆ ಆ ಕಾರ್ಯ ವನ್ನೂ ಮಾಡಲಾ ಗಿತ್ತು. ಆದರೆ ಶವಮಹಜರು ವರದಿಯಲ್ಲಿ ವಿಷ ಸೇವಿಸಿದ ಬಗ್ಗೆ ಉಲ್ಲೇಖವೇ ಇರದ ಕಾರಣ ಆಕ್ರೋಶಗೊಂಡ ಸ್ಥಳೀಯರು ಆಸ್ಪತ್ರೆಯೆದುರು ಪ್ರತಿಭಟನೆ ನಡೆಸಲು ಮುಂದಾದರೂ ಅವರನ್ನು ಸಮಾಧಾನ ಪಡಿಸಲಾಯಿತು.

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸೋನಿಯಾ ಸಲಹೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು:ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ನಡೆಸಿ ಎಂದು ರಾಜ್ಯ ನಾಯಕರಿಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಸಲಹೆ ಮಾಡಿದ್ದಾರೆ.
ದೆಹಲಿಗೆ ತೆರಳುವ ಮುನ್ನ ರಾಜಭವನದಲ್ಲಿ ಪಕ್ಷದ ಮುಖಂಡರೊಟ್ಟಿಗೆ ಔಪಚಾರಿಕವಾಗಿ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಈ ಸಂದೇಶ ನೀಡಿದ್ದಾರೆ. ಚುನಾವಣೆಗೂ ಮುನ್ನವೇ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಬಿಂಬಿಸುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಎದ್ದಿರುವ ಅಲೆಯನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿ. ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಲು ಸಜ್ಜಾಗಿ. ಅನಗತ್ಯವಾಗಿ ದೆಹಲಿ ದಂಡಯಾತ್ರೆ ಕೈಗೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಇಂದಿಂದಲೇ ಕಾರ್ಯಕರ್ತ ರನ್ನು ಹುರಿದುಂಬಿಸುವ ಕೆಲಸವಾಗಲಿ, ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸ್ಥಳೀಯ ವಾಗಿಯೇ ಹರಿಯಲಿ. ಮೇಲಿಂದ ಏರುವ ಪ್ರಯತ್ನ ಬೇಡ. ಆಯ್ಕೆ ಪ್ರಕ್ರಿಯೆಯಲ್ಲಿ ದೆಹಲಿಗೆ ವರಿಷ್ಠರು ಎಲ್ಲವನ್ನು ಪರಿಶೀಲಿಸುತ್ತಾರೆ. ಒಬ್ಬರೊಬ್ಬರನ್ನು ಕಾಲು ಎಳೆಯುವ ಪ್ರವೃತ್ತಿ ಬಿಡಿ. ನಿಮಗೆ ದೊರೆತಿರುವ ಅವಕಾಶವನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಿ ಎಂದು ಸೋನಿಯಾ ಸಲಹೆ ಮಾಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಪ್ರಚಾರಕ್ಕೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಇಲ್ಲಿಯೇ ಬಿಡಾರ ಹೂಡುತ್ತಿದ್ದಾರೆ. ಅವರಿಗೂ ಹೊಣೆಗಾರಿಕೆ ನೀಡಲಾಗುವುದು. ಬಿಜೆಪಿಯ ವೈಫಲ್ಯಗಳು ಭ್ರಷ್ಟಾಚಾರವನ್ನು ಅಸ್ತ್ರವಾಗಿಟ್ಟುಕೊಂಡು ಹೋರಾಟ ನಡೆಸಿ ಎಂದು ಕಿವಿಮಾತು ಹೇಳಿದ್ದಾರೆ.

ಮಂಗಳೂರು: ಹಿರಿಯ ರಿಕ್ಷಾ ಚಾಲಕರಿಗೆ ಸನ್ಮಾನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸುಮಾರು ನಾಲ್ಕು ದಶಕಗಳ ಕಾಲ ಆಟೋರಿಕ್ಷಾದಲ್ಲಿ ದುಡಿದು ಅಪಘಾತರಹಿತ ಚಾಲನೆ ನಡೆಸಿ ನಿಷ್ಠೆ ಹಾಗೂ ಪ್ರಾಮಾಣಿ ಕತೆಯಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ ಸಾಧನೆ ಮಾಡಿದ ಹಿರಿಯ ರಿಕ್ಷಾ ಚಾಲಕರಾದ ಬಿ.ಗಣಪಣ್ಣ ಹಾಗೂ ಯಶವಂತ ಸಾಲಿಯಾನ್ ಇವರನ್ನು ಇಲ್ಲಿನ ಎನ್.ಜಿ.ಓ. ಹಾಲ್ ಸಭಾಂಗಣದಲ್ಲಿ ಜರಗಿದ ದ.ಕ.ಜಿಲ್ಲಾ ಅಟೋರಿಕ್ಷಾ ಚಾಲಕರ ಸಂಘದ ೩೩ನೇ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿ ಸಲಾಯಿತು. ಮಕರ ಜ್ಯೋತಿ ಚಿಟ್ಸ್ ಮಂಗಳೂರು ಇವರ ನಿರ್ದೇಶಕರಾದ ಲಯನ್ ಜಿ.ಆರ್.ಶೆಟ್ಟಿ ಮಂಗಳೂರು ನಗರ ಸಂಚಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ರಾದ ಗೋಪಾಲಕೃಷ್ಣ ಭಟ್ ಅವರು ಸನ್ಮಾನ ಕಾರ್ಯ ಕ್ರಮವನ್ನು ನೆರವೇರಿಸಿದರು. ಹಿರಿಯ ನ್ಯಾಯವಾದಿ ಯಶವಂತ ಮರೋಳಿ ಜನಶಕ್ತಿ ಸೇವಾ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರಾದ ಎಂ.ದೇವದಾಸ್, ಐಓಸಿಯಲ್‌ನ ಸೇಲ್ಸ್ ಮೆನೇಜರ್ ಗಳಾದ ಸತೀಶ್ ಬಂಗೇರ, ಸೌರವ್ ಬೊಲ, ಸಂಘದ ಪದಾಧಿಕಾರಿಗಳಾದ ಪ್ರಕಾಶ್ ವಿ.ಯನ್, ಅಲ್ಫೋನ್ಸ್ ಡಿಸೋಜ ಉಪಸ್ಥಿತರಿ ದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ವಿಷ್ಣುಮೂರ್ತಿ ವಹಿಸಿದರು.

‘ಇಸ್ಲಾಂ ಧರ್ಮದ ಬೆಳವಣಿಗೆಗೆ ನಮ್ಮೆಲ್ಲರ ಶ್ರಮ ಅಗತ್ಯ’

Posted by JAYAKIRANA Kirana on | 0 comments | Leave a comment...

ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ನಾಟೆಕಲ್ ಇದರ ದಶಮಾನೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಕಾರ‍್ಯಕ್ರಮಗಳ ಸಮಾರೋಪ ಸಮಾರಂಭವು ಮಂಜನಾಡಿ ಉಸ್ತಾದ್ ವೇದಿಕೆ ತಿಬ್ಲಪದವಿನಲ್ಲಿ ನಡೆಯಿತು.ಮುಖ್ಯ ಭಾಷಣಗಾರರಾಗಿ ಆಗಮಿಸಿದ ಅಸೈ ರಹ್ಮಾನಿಯ ಜುಮಾ ಮಸೀದಿಯ ಖತೀಬ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾತನಾಡಿ ಇಸ್ಲಾಂ ಧರ್ಮದ ಬೆಳವಣಿಗೆಗೆ ನಮ್ಮೆಲ್ಲರ ಶ್ರಮ ಅಗತ್ಯ. ಇದರ ಜೊತೆಗೆ ಇಸ್ಲಾಂನ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಬರಬೇಕು. ಹೆಚ್ಚಾಗಿ ದಿಕ್ರ್, ಸ್ವಲಾತ್‌ಗಳಂತಹ ಕಾರ್ಯ ಕ್ರಮಗಳನ್ನು ಇಟ್ಟು ಕೊಳ್ಳಬೇಕೆಂದು ಕರೆ ನೀಡಿದರು.
ಡಾ. ಹಝ್ರತ್ ಮಹಮ್ಮದ್ ಫಾಝಿಲ್ ರಿಝ್ವಿ ಕಾವಲ್‌ಕಟ್ಟೆ ದುವಾ ನೆರವೇರಿಸಿದರು.
ಇಸಾಕ್ ಝುಹ್‌ರಿ, ಶಾಸಕ ಯು.ಟಿ. ಖಾದರ್, ಕೊಣಾಜೆ ಗ್ರಾ.ಪಂ. ಅಧ್ಯಕ್ಷ ಶೌಕತ್ ಅಲಿ, ಜಿಲ್ಲಾ ಪಂಚಾಯತ್ ಸದಸ್ಯ ಎನ್.ಎಸ್. ಕರೀಂ, ತಿಬ್ಲಪದವು ಮದ್ರಸದ ಅಧ್ಯಕ್ಷ ಎ.ಎಸ್. ಮಹಮ್ಮದ್, ಕೊಣಾಜೆ ತಾಲೂಕು ಪಂಚಾಯತ್ ಸದಸ್ಯ ಸುರೇಶ್ ಚೌಟ, ಅಬ್ದುರಹ್ಮಾನ್ ಹರೇಕಳ, ನಾಟೆಕಲ್ ಅರ್ತ್ ಮೂವರ‍್ಸ್‌ನ ಮಾಲಕ ಇಸಾಖ್ ನಾಟೆಕಲ್, ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯ ಸಿ.ಎಂ. ಮಹಮ್ಮದ್, ಕೆ. ಮುಮ್ಮದ್, ಅಬ್ದುಲ್ ಖಾದರ್ ಟಾಸ್ಕೊ ನಾಟೆಕಲ್, ಎಸ್ ಎಸ್ ಎಫ್ ನಾಟೆಕಲ್ ಶಾಖೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ನಾಟೆಕಲ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಸರಗೋಡು ಘರ್ಷಣೆಗೆ ದುಬೈಯಲ್ಲಿ ಪ್ರತೀಕಾರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾಸರಗೋಡಿನಲ್ಲಿ ಸಂಭವಿಸಿರುವ ಘರ್ಷಣೆಗೆ ಪ್ರತಿಯಾಗಿ ದುಬೈಯಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದು ಆರು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಕಾಸರಗೋಡಿನ ಕಡಪ್ಪುರ ನಿವಾಸಿಗಳಾದ ಮನೋಜ್, ಶ್ರೀಧರನ್, ಪ್ರದೀಪನ್, ಸುಧೀಶ್, ಸಾಜು, ಸುಮೇಶ್ ಹಾಗೂ ರವಿ ಎಂಬವರ ಮೇಲೆ ದುಬೈಯಲ್ಲೇ ನೆಲೆಸಿರುವ ನೆಲ್ಲಿಕುಂಜೆ, ತಳಂಗರೆ ಹಾಗೂ ಪಳ್ಳಂ ನಿವಾಸಿಗಳ ತಂಡ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದರ ಪರಿಣಾಮ ಅವರು ಗಾಯಗೊಂಡು ದುಬೈಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ದುಬೈಯ ದೇರಾ ಸಿಟಿಯ ಲುಲೂ ಬಿಲ್ಡಿಂಗ್‌ನಲ್ಲಿರುವ ಮಲಬಾರ್ ಸೂಪರ್ ಮಾರ್ಕೆಟ್ ಕಟ್ಟಡದ ಮೇಲಿರುವ ವಾಸದ ಕೊಠಡಿಯ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿದ ತಂಡ ಹಲ್ಲೆ ನಡೆಸಿದ್ದಾಗಿ ಗಾಯಾಳುಗಳು ದೂರಿದ್ದಾರೆ. ಇಷ್ಟೇ ಅಲ್ಲದೆ ಕೊಠಡಿಯಲ್ಲಿದ್ದ ಬೆಲೆಬಾಳುವ ಸೊತ್ತುಗಳಿಗೂ ಹಾನಿ ಮಾಡಲಾಗಿದೆ. ಕಾಸರಗೋಡಿನಲ್ಲಿ ನಡೆದ ಘರ್ಷಣೆಯ ಬಗ್ಗೆ ಆರೋಪಿಗಳು ಮಾತಾಡಿದ್ದು, ಇದೇ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಗಾಯಾಳುಗಳು ದೂರಿದ್ದಾರೆ.

ಮೂರು ಮಕ್ಕಳ ಕೊಂದ ತಾಯಿ!

Posted by JAYAKIRANA Kirana on | 0 comments | Leave a comment...

ಮೊಬೈಲ್‌ಗೆ ಕರೆನ್ಸಿ ಹಾಕಿಲ್ಲವೆಂದು
ಹೈದರಾಬಾದ್: ಪತಿ-ಪತ್ನಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆಯಲ್ಲಿ ಸ್ವಲ್ಪ ಚೇಂಜ್ ಮಾಡಿ, ಪತಿ-ಪತ್ನಿ ಜಗಳ ಮೊಬೈಲ್ ಕರೆನ್ಸಿ ಖಾಲಿ ಆಗುವ ತನಕ ಎನ್ನಬಹು ದೇನೋ? ಮೊಬೈಲ್‌ನಲ್ಲಿ ಕರೆನ್ಸಿ ಇಲ್ಲವೆಂದು ಪತಿ ಪತ್ನಿಯರ ಜಗಳ ಮೂರು ಮಕ್ಕಳ ಸಾವಿನಲ್ಲಿ ಅಂತ್ಯ ಕಂಡಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಬದುಕುಳಿದಿದ್ದಾಳೆ.
ಮೆಹಬೂಬ್‌ನಗರ ಜಿಲ್ಲೆಯ ಮುನಿಮೋಕ್ಷಂ ಗ್ರಾಮದಲ್ಲಿ ಈ ಸಿನಿಮೀಯ ಘಟನೆ ನಡೆದಿದೆ. ವಿಷ್ಣು(೭), ಈಶ್ವರ(೫), ಬ್ರಹ್ಮ ಅಲಿ ಯಾಸ್ ವಿನಯ(೩) ಮೃತರಾದವರು. ಆತ್ಮಹತ್ಯೆಗೆ ಪ್ರಯತ್ನಿಸಿದ ಕಾರಣಕ್ಕೆ ಪ್ರಮೀಳಾ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಮೊಬೈಲ್‌ಗೆ ಕರೆನ್ಸಿ ಹಾಕಲು ಮೊಗುಲಯ್ಯ ತನ್ನ ಪತ್ನಿ ಪ್ರಮೀಳಾಗೆ ಬೆಳಗ್ಗಿನವರೆಗೆ ಕಾಯಲು ಹೇಳಿದ್ದ. ಇಷ್ಟಕ್ಕೆ ಕುಪಿತಗೊಂಡ ಪ್ರಮೀಳಾ ಮೊಬೈಲ್‌ನಿಂದ ಸಿಮ್ ಕಾರ್ಡ್ ತೆಗೆದು ಅದನ್ನು ಮುರಿದು ಹಾಕಿದ್ದಳು. ಇದಕ್ಕೆ ಪ್ರತಿಯಾಗಿ ಮೊಗುಲಯ್ಯ ಆಕೆಗೆ ಥಳಿಸಿದ್ದ. ಇದರಿಂದಾಗಿ ಪ್ರಮೀಳಾ ಮಧ್ಯರಾತ್ರಿ ಎದ್ದು ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದಾಳೆ. ಮೂವರು ಮಕ್ಕಳನ್ನು ಹಗ್ಗದಲ್ಲಿ ಕಟ್ಟಿ ಬಾವಿಗೆ ಹಾರಿದ್ದೆ. ನೀರು ಕಡಿಮೆ ಇದ್ದರಿಂದ ನಾನು ಬದುಕಿದೆ. ಮಕ್ಕಳ ಜೊತೆ ನಾನೂ ಸಾಯಬೇಕಿತ್ತು ಎಂದು ಪ್ರಮೀಳಾ ಅಳುತ್ತಾ ಪೊಲೀಸರಿಗೆ ಘಟನೆಯನ್ನು ವಿವರಿಸಿದ್ದಾಳೆ.

ಜಮೀನು ವಿವಾದ: ವ್ಯಕ್ತಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಜಮೀನು ವಿವಾದಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಇಬ್ಬರು ಸೇರಿಕೊಂಡು ಹಲ್ಲೆ ನಡೆಸಿದ ಪ್ರಕರಣ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಎಂಬಲ್ಲಿ ಶನಿವಾರ ನಡೆದಿದೆ.
ಕರ್ನೂರು ಸಮೀಪದ ಬಾವ ಎಂಬಲ್ಲಿನ ನಿವಾಸಿ ರತ್ನಾಕರ ರೈ ಎಂಬವರೇ ಹಲ್ಲೆಗೊಳಗಾದ ವ್ಯಕ್ತಿ. ಸ್ಥಳೀಯರಾದ ಧನಂಜಯ ರೈ ಮತ್ತು ಚಂದ್ರಹಾಸ ರೈ ಹಲ್ಲೆ ನಡೆಸಿದ ಆರೋಪಿಗಳು. ತನ್ನ ಪಟ್ಟಾ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪಿಗಳು ತನಗೆ ಕಲ್ಲಿನಿಂದ ಹಲ್ಲೆ ನಡೆಸಿರುವುದಾಗಿ ಗಾಯಾಳು ರತ್ನಾಕರ ರೈ ಆರೋಪಿಸಿದ್ದಾರೆ. ಹಲ್ಲೆಗೊಳಗಾದ ರತ್ನಾಕರ ರೈ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕಂಪಾಡಿ: ಸೇತುವೆಯಿಂದ ದೂಡಿ ಕೊಲೆಗೆ ಯತ್ನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಜಗಳ ತಾರಕಕ್ಕೇರಿ ವ್ಯಕ್ತಿಯೋರ್ವನನ್ನು ರೈಲ್ವೇ ಮೇಲ್ಸೇತುವೆಯಿಂದ ದೂಡಿ ಕೊಲೆಗೆ ಯತ್ನಸಿದ ಘಟನೆ ನಿನ್ನೆ ಬೈಕಂಪಾಡಿಯಲ್ಲಿ ನಡೆದ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾದಾಮಿ ಮೂಲದ ಮಂಜುನಾಥ (೨೨)ಎಂಬವರು ಗಂಭೀರವಾಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇವನ ಮೇಲೆ ಹಲ್ಲೆ ನಡೆಸಿ ಸೇತುವೆಯ ಮೇಲಿನಿಂದ ದೂಡಿದ್ದ ಬಾದಾಮಿ ಮೂಲದ ದೇವಪ್ಪ ಹಾಗೂ ಆತನ ಸಹಚರರಾದ ಮೂವರು ತಲೆಮರೆಸಿಕೊಂಡಿದ್ದಾನೆ.
ಮಂಜುನಾಥ ಮತ್ತು ದೇವಪ್ಪ ಬಾದಾಮಿಯಿಂದ ಮಂಗಳೂರಿಗೆ ಮಿನಿ ಬಸ್‌ನಲ್ಲಿ ಕಾರ್ಮಿಕರನ್ನು ಕರೆದುಕೊಂಡು ಬಂದಿದ್ದರೆನ್ನಲಾಗಿದ್ದು, ನಿನ್ನೆ ಸಂಜೆ ಬಸ್ ಬಾಡಿಗೆ ವಿಚಾರದಲ್ಲಿ ಇವರಿಬ್ಬರ ಮಧ್ಯೆ ತಗಾದೆ ಉಂಟಾಗಿತ್ತು. ಬೈಕಂಪಾಡಿ ಬ್ರಿಡ್ಜ್ ಮೇಲೆ ನಿಂತು ಜಗಳ ಆರಂಭಿಸಿದ್ದು, ಜಗಳ ತಾರಕಕ್ಕೇರಿತ್ತು. ಕೋಪದಲ್ಲಿ ಮಂಜುನಾಥನನ್ನು ಬ್ರಿಡ್ಜ್‌ನಿಂದ ಕೆಳಗೆ ದೂಡಿದ ದೇವಪ್ಪ ಮತ್ತು ಆತನ ಜೊತೆಗಿದ್ದ ಮೂವರು ಅಲ್ಲಿಂದ ಪರಾರಿಯಾಗಿದ್ದಾನೆ. ಎತ್ತರದ ಸೇತುವೆಯಿಂದ ಬಿದ್ದ ಮಂಜುನಾಥನಿಗೆ ಮಾರಣಾಂತಿಕ ಗಾಯವಾಗಿದ್ದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಂಗಳೂರು ವಿಶೇಷ ಆರ್ಥಿಕ ವಲಯದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಕಾಮಗಾರಿಗಾಗಿ ಕಾರ್ಮಿಕರ ಆವಶ್ಯಕತೆ ಇದೆ. ವಿವಿಧ ಸಂಸ್ಥೆಗಳಿಗೆ ಕಾರ್ಮಿಕರನ್ನು ಒದಗಿಸುವುದೇ ಭಾರೀ ಲಾಭದ ವ್ಯವಹಾರವಾಗಿ ನಡೆಯುತ್ತಿದ್ದು ಉತ್ತರ ಕರ್ನಾಟಕದಿಂದ ಕಾರ್ಮಿಕರನ್ನು ತರಲಾಗುತ್ತಿದೆ. ಹೀಗೆ ಕಾರ್ಮಿಕರನ್ನು ತಂದ ವ್ಯವಹಾರದಲ್ಲಿ ಉಂಟಾದ ವೈಮನಸ್ಸೇ ಮಂಜುನಾಥನ ಮೇಲೆ ಹಲ್ಲೆಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ನಾಲ್ವರು ಗಾಯಾಳುಗಳ ಚೇತರಿಕೆ

Posted by JAYAKIRANA Kirana on | 0 comments | Leave a comment...

ನಾರಾವಿ ಕುಕ್ಕಾಜೆ ಕ್ರಾಸ್ ಬಳಿ ಅಪಘಾತ
ಮಂಗಳೂರು: ನಾರಾವಿ ಸಮೀಪದ ಕುಕ್ಕುಜೆ ಕ್ರಾಸ್ ಬಳಿ ಶನಿವಾರ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ಚೇತರಿಸಿಕೊಂಡಿದ್ದಾರೆ. ಕುಕ್ಕುಜೆ ಕ್ರಾಸ್ ಬಳಿ ಪಿಕಪ್ ವಾಹನ ಮತ್ತು ಮಾರುತಿ ಓಮಿನಿ ಪರಸ್ಪರ ಡಿಕ್ಕಿ ಹೊಡೆದು ಓಮಿನಿ ಚಾಲಕ ಕುಂದಾಪುರ ತೆಕ್ಕಟ್ಟೆಯ ಶಂಕರ್ (೧೮)ಮೃತಪಟ್ಟಿದ್ದರು.
ಪಿಕಪ್ ವಾಹನದಲ್ಲಿದ್ದ ಕುಂದಾಪುರದ ಜಗದೀಶ್(೪೮), ಅವರ ಪತ್ನಿ ರುಕ್ಮಿಣಿ (೩೮)ಪುತ್ರ ಮಂಜುನಾಥ(೨೧)ಪುತ್ರಿ ಮಮತಾ (೧೭)ಗಾಯಗೊಂಡು ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಿಕಪ್ ವಾಹನವನ್ನು ಜಗದೀಶ ಪೂಜಾರಿ ಎಂಬವರು ಚಲಾಯಿಸು ತ್ತಿದ್ದರು. ಓಮಿನಿಯಲ್ಲಿದ್ದ ವರು ಕುಂದಾಪುg ದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದರು. ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಟೆಂಪೋದಲ್ಲೇ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ವ್ಯಕ್ತಿಯೊಬ್ಬರು ಪಾರ್ಕ್ ಮಾಡಿದ್ದ ಟೆಂಪೋದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಜನ್ನಾಡಿ ಎಂಬಲ್ಲಿ ನಡೆದಿದೆ. ಮೃತರನ್ನು ಮೇಗರವಳ್ಳಿ ನಿವಾಸಿ ಶ್ರೀನಿವಾಸ್(೩೮) ಎಂದು ಹೆಸರಿಸಲಾಗಿದೆ. ಇವರು ವಾಹನ ಚಾಲಕರಾಗಿ ದುಡಿಯುತ್ತಿದ್ದು, ನಿನ್ನೆ ತೀರ್ಥಹಳ್ಳಿಗೆ ಟೆಂಪೋದಲ್ಲಿ ಹೋಗಿದ್ದ ಅವರು ಹಿಂದಿರುಗಿ ಬರುವಾಗ ಟೆಂಪೋವನ್ನು ಜನ್ನಾಡಿ ರಸ್ತೆ ಬಳಿ ನಿಲ್ಲಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಸಕಾರಣ ತಿಳಿದುಬಂದಿಲ್ಲ. ಕೋಟ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಂಆರ್‌ಪಿಎಲ್ ಟ್ರಾನ್ಸ್‌ಫಾರ‍್ಮರ್ ಸ್ಫೋಟ

Posted by JAYAKIRANA Kirana on | 0 comments | Leave a comment...

ಮಂಗಳೂರು: ಎಂಆರ್‌ಪಿಎಲ್ ಪವರ್ ಪ್ಲಾಂಟ್‌ನ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸುವ ಟ್ರಾನ್ಸ್‌ಫಾರ‍್ಮರ್ ಅಧಿಕ ಒತ್ತಡಕ್ಕೆ ಸಿಲುಕಿ ಸ್ಫೋಟಗೊಂಡ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಟ್ರಾನ್ಸ್‌ಫಾರ‍್ಮರ್ ಸ್ಫೋಟದಿಂದ ಸಿಡಿದ ಚೂರುಗಳು ಹತ್ತಿರ ಕಳವಾರಿನ ನಿರ್ವಸಿತ ಕಾಲನಿಯ ಮತ್ತಿತರ ಸುತ್ತಮುತ್ತಲಿನ ಮನೆಗಳಿಗೆ ಹಾರಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮರ ಕಡಿಯುವ ಯಂತ್ರ ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೆಳ್ತಂಗಡಿಯ ಹಳದಂಗಡಿಯ ಯಾಕೂಬ್ ಎಂಬವರ ಮನೆಯಿಂದ ಮರ ಕಡಿಯುವ ಯಂತ್ರವನ್ನು ಕಳವು ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಈ ಯಂತ್ರದ ಮೌಲ್ಯ ೪೯ ಸಾವಿರ ರೂ. ಎಂದು ಹೇಳಲಾಗಿದೆ. ಈ ಸಂಬಂಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಕ್ಷಿಣೆಗಾಗಿ ಹಲ್ಲೆ: ದೂರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಹೆಚ್ಚುವರಿ ವರದಕ್ಷಿಣೆ ತರುವಂತೆ ಚಿನ್ನಕ್ಕಾಗಿ ಪತಿಯೋರ್ವ ತನ್ನ ಪತಿಯ ಮನೆಗೆ ತೆರಳಿ ಹೆಂಡತಿಗೆ ಮತ್ತು ಆಕೆಯ ಮನೆಯವರಿಗೆ ಹಲ್ಲೆಗೈದು ಜೀವಬೆದರಿಕೆಯೊಡ್ಡಿದ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ತನ್ನ ಗಂಡ ಜಯರಾಮ ಹಲ್ಲೆ ನಡೆಸಿದ್ದಾನೆ ಎಂದು ಗೀತಾ ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ಮದ್ವನಗರ ನಿವಾಸಿ ಗೀತಾ ಅವರ ಮದುವೆ ಮುಲ್ಕಿ ಕಾರ್ನಾಡಿನ ಲಕ್ಷ್ಮಣಪೂಜಾರಿ ಅವರ ಮಗ ಜಯರಾಮ ಎಂಬಾತನ ಜೊತೆ ೨೦೧೧ ಫೆ.೨೩ರಂದು ಬನ್ನಂಜೆ ಸಭಾಭವನದಲ್ಲಿ ನಡೆದಿತ್ತು. ವಿವಾಹದ ಸಂದರ್ಭ ಒಂದೂವರೆ ಲಕ್ಷ ರೂ. ನಗದು ಮತ್ತು ೨೦ ಪವನ್ ಚಿನ್ನಾಭರಣ ವನ್ನು ವರದಕ್ಷಿಣೆ ರೂಪದಲಿ ಹಾಗೂ ವಿವಾಹದ ಖರ್ಚನ್ನು ಹೆಣ್ಣಿನ ತಂದೆ ಭರಿಸಬೇಕೆಂದು ಮಾತುಕತೆಯಾಗಿದ್ದು ಅದರಂತೆ ಮದುವೆ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ.
ವಿವಾಹದ ಬಳಿಕ ತನ್ನ ಪತಿ ತನ್ನ ಮನೆಯಲ್ಲಿ ವಾಸ ಮಾಡದೇ ಭಾಸ್ಕರ ಎಂಬವರ ಮನೆಯಲ್ಲಿ ವಾಸ ಮಾಡಿದ್ದ. ಇದ ಕೇಳಲು ಹೋದ ಸಂದರ್ಭ ತನಗೆ ಭಾಸ್ಕರ ಮತ್ತವರ ಮನೆಯವರು ಅವಾಚ್ಯ ಶಬ್ದಗಳಿಂದ ಬೈದು ನೀನು ಮನೆಯಿಂದ ತಂದ ವರದಕ್ಷಿಣೆ ಕಡಿಮೆಯಾಗಿದ್ದು ಇನ್ನೂ ಹೆಚ್ಚಿನ ಹಣ ಮತ್ತು ಚಿನ್ನ ತಂದರೆ ಮಾತ್ರ ಜಯರಾಮನನ್ನು ನಿನ್ನ ಜೊತೆ ಕಳುಹಿಸುತ್ತೇನೆ ಎಂದು ಬೆದರಿಸಿದ್ದಾರೆ ಎಂದು ಆಕೆ ಮಲ್ಪೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿ ಜಗಳ: ಯುವಕ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾರ್ಕಳ ಸಮೀಪದ ಸಾಣೂರು ಎಂಬಲ್ಲಿನ ಯುವಕನ ಮೃತದೇಹ ನಗರದ ಪದವಿನಂಗಡಿಯ ನಿರ್ಮಾಣ ಹಂತದ ಕಟ್ಟಡದ ಆವರಣದಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮನೆಯಲ್ಲಿ ಜಗಳವಾಡಿ ಬಂದಿದ್ದ ಆತ ಅದೇ ಕಾರಣಕ್ಕೆ ಕೃತ್ಯವೆಸಗಿರಬೇಕೆಂದು ಶಂಕಿಸಲಾಗಿದೆ.
ಮೃತ ಯುವಕನನ್ನು ಸಾಣೂರಿನ ವೆಲೇರಿಯನ್ ಎಂಬವರ ಪುತ್ರ ರೋಶನ್ ಲೋಬೋ(೨೩) ಎಂದು ಗುರುತಿಸಲಾಗಿದೆ. ಈತ ನಿನ್ನೆ ಬೆಳಗ್ಗೆ ಮನೆಮಂದಿಯ ಜೊತೆ ಜಗಳವಾಡಿದ್ದು, ಬಳಿಕ ಮನೆಬಿಟ್ಟು ತೆರಳಿದ್ದಾಗಿ ತಿಳಿದುಬಂದಿದೆ. ನಿನ್ನೆ ಪದವಿನಂಗಡಿಯ ನಿರ್ಮಾಣ ಹಂತದ ಕಟ್ಟಡದ ಆವರಣಕ್ಕೆ ಬಂದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಅಲ್ಲಿಂದ ನಾಲ್ಕನೇ ಮಹಡಿ ಹತ್ತಿದ ಆತ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟೈಲ್ಸ್ ಅಳವಡಿಸುವ ಕಾರ್ಮಿಕರು ಮೇಲಿನ ಅಂತಸ್ತುಗಳಲ್ಲಿ ಇದ್ದರೂ ಘಟನೆ ನಡೆದಿರುವುದು ತಕ್ಷಣ ಅವರ ಗಮನಕ್ಕೆ ಬಂದಿರಲಿಲ್ಲ. ಮೃತನ ಕಿಸೆಯಲ್ಲಿ ಇದ್ದ ವಿಳಾಸದ ಆಧಾರದಲ್ಲಿ ಗುರುತು ಪತ್ತೆ ಮಾಡಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ವರದಕ್ಷಿಣೆ ಬೇಡಿಕೆ: ಮದುವೆಗೆ ಮುಂಚೆಯೇ ಬೆದರಿಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ವರದಕ್ಷಿಣೆಯ ಮೊತ್ತ ಹೆಚ್ಚಿಸುವಂತೆ ಒತ್ತಾಯಿಸಿ ಮದುವೆಗಿಂತ ಮೊದಲೇ ಹೆಣ್ಣಿ ಮನೆಯವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ ಪ್ರಕರಣ ನಡೆದ ಬಗ್ಗೆ ಕುಂದಾಪುರು ತಾಲೂಕಿನ ಆಮಾಸ್ಯೆಬೈಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಡ್ಡಿನ ಗದ್ದೆಯ ಶರತ್ ನಾಯ್ಕ ಎಂಬವರ ಸಹೋದರಿ ಶ್ಯಾಮಲಾ ಎಂಬವರ ವಿವಾಹವು ಶಿವಮೊಗ್ಗ ಜಿಲ್ಲೆಯ ಹೊಸವಗರ ತಾಲೂಕಿನ ಹಿರೆಮನತಿ ಗ್ರಾಮದ ಕಷ್ಣಮೂರ್ತಿ ಎಂಬವರೊಂದಿಗೆ ನಿಗದಿಯಾಗಿತ್ತು. ವಿವಾಹ ರವಿವಾರ ನಡೆಯಲಿತ್ತು. ಆದರೆ ಇದಕ್ಕಿಂತ ಮೊದಲೇ ವರನ ಕಡೆಯವರ ನೈಜ ಮುಖ ಬೆಳಕಿಗೆ ಬಂದಿದೆ.
ಒಂದು ಲಕ್ಷ ರೂ. ನಗದು ಮತ್ತು ೧೦ಪವನ್ ಚಿನ್ನಾಭರಣ ವರದಕ್ಷಿಣೆಯ ರೂಪದಲ್ಲಿ ಕೊಡುವ ಬಗ್ಗೆ ಮಾತುಕತೆಯಲ್ಲಿ ನಿರ್ಧಾರವಾಗಿತ್ತು. ಅದರಂತೆ ವರನ ಕಡೆಯವರು ಎ೨೩ರಂದು ಆಮಂತ್ರಣ ಪತ್ರಿಕೆ ಕೊಡಲು ಬಂದಾಗ ನಗದು ಒಂದು ಲಕ್ಷ ರೂ. ಕೊಡಲಾಗಿತ್ತು.
ಮದುವೆಯ ಶಾಸ್ತ್ರದಂತೆ ವಧುವಿನ ಕಡೆಯವರು ಆಮಂತ್ರಣ ಪತ್ರಿಕೆ ನೀಡಲು ಎ೨೬ರಂದು ಹೊಸದುರ್ಗಕ್ಕೆ ಹೋದಾಗ ವರನ ಕಡೆಯವರ ನೈಜ ಮುಖದ ದರ್ಶನವಾಗಿತ್ತು. ವರನ ಮನೆಯಲ್ಲಿದ್ದ ಕೃಷ್ಣಮೂರ್ತಿ, ಸಂತೋಷ ನಾಯ್ಕ, ರೇವತಿ, ಜಯಶ್ರೀ, ರತ್ನಮ್ಮ ಬಸವ ನಾಯ್ಕ ಎಂಬವರು ಇನ್ನು ಐವತ್ತು ಸಾವಿರ ಹೆಚ್ಚಿನ ವರದಕ್ಷಿಣೆ ನೀಡಬೇಕು. ಕೊಡದೆ ಇದ್ದರೆ ಮದುವೆ ತಿರಸ್ಕರಿಸುವುದಾಗಿ ಹೇಳಿದ್ದಲ್ಲದೆ. ಆಮಂತ್ರಣ ಪತ್ರಿಕೆ ನೀಡಲು ಹೋದವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಶರತ್ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.

ಪುತ್ತೂರು: ಯುವತಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಅವಿವಾಹಿತ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಒಳಮೊಗರು ಗ್ರಾಮದ ಕುಂಬ್ರ sಸಮೀಪ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಕುಂಬ್ರ ಸ.ಪ.ಪೂ. ಕಾಲೇಜಿನಲ್ಲಿ ಕಳೆದ ಒಂದು ವರ್ಷದಿಂದ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಕುಂಬ್ರ ಸಮೀಪದ ಉರ್ವ ನಿವಾಸಿ ಮಲ್ಲಿಕಾ ರೈ(೨೪) ಎಂಬವರು ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರು ಶನಿವಾರ ತಡರಾತ್ರಿ ತನ್ನ ಮನೆಯ ಮುಂಭಾಗದಲ್ಲಿರುವ ಖಾಲಿ ಮನೆಯ ಜಗಲಿಯಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದು, ಭಾನುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ಲಾರಿ ಡಿಕ್ಕಿ: ಪಾದಚಾರಿ ಮೃತ್ಯು

Posted by JAYAKIRANA Kirana on | 0 comments | Leave a comment...

ಪುತ್ತೂರು: ಲಾರಿ ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ೭೫ರ ಕರ್ವೇಲ್ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಅಂಬೆಟ್ಟು ಪೆದಮ್ಮಲೆ ನಿವಾಸಿ ಹಸನಬ್ಬ (೬೯) ಎಂಬವರು ಮೃತಪಟ್ಟ ವ್ಯಕ್ತಿ. ಹಸನಬ್ಬ ಅವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಿಮೆಂಟ್ ಸಾಗಾಟದ ಲಾರಿ ಅವರಿಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಶಾಸಕನ ಕಾರ್ ಗುದ್ದಿ ವೃದ್ಧ ಸಾವು

Posted by JAYAKIRANA Kirana on | 0 comments | Leave a comment...

ನೆಲಮಂಗಲ: ಶಾಸಕ ಸುರೇಶ ಗೌಡ ಅವರ ಕಾರು ಗುದ್ದಿ ತೀವ್ರವಾಗಿ ಗಾಯಗೊಂಡಿದ್ದ ೬೦ ವರ್ಷದ ತಿಮ್ಮ ಹನುಮಯ್ಯ ಚಿಕಿತ್ಸೆ ಫಲಕಾರಿಯಾಗದೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡ ವ್ಯಕ್ತಿಯತ್ತ ತಿರುಗಿ ನೋಡದೆ ಶಾಸಕ ಸುರೇಶ ಅವರು ಮತ್ತೊಂದು ಕಾರು ಹತ್ತಿ ಹೊರಟು ಹೋದರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಪಘಾತ ತಪ್ಪಿಸಲು ಸಾಧ್ಯವಿಲ್ಲ. ನನ್ನದೇನೂ ತಪ್ಪಿಲ್ಲ ಎಂದು ಶಾಸಕ ಸುರೇಶ ಗೌಡರು ಹೇಳಿದ್ದರು. ತಿಮ್ಮ ಹನುಮಯ್ಯ ಅವರು ಭಾನುವಾರ ಬೆಳಗ್ಗೆ ೧೧ ಗಂಟೆ ಸುಮಾ ರಿಗೆ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಶಾಸಕ ಸುರೇಶ ಇದ್ದ ಕಾರು ಬಡಿದಿದೆ. ಈ ಅಪಘಾತದಿಂದ ತಿಮ್ಮ ಹನುಮಯ್ಯ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಕಾಲು ಜಖಂಗೊಂಡಿತ್ತು. ಘಟನೆ ನಡೆದ ಬಳಿಕ ಶಾಸಕ ಸುರೇಶ ಗೌಡ ಅವರು ಸೌಜನ್ಯಕ್ಕೂ ಗಾಯಾಳು ಯೋಗಕ್ಷೇಮ ವಿಚಾರಿಸಿದೆ ತೆರಳಿದರು. ಗಾಯಾಳುವನ್ನು ನಂತರ ಹತ್ತಿರದ ಹರ್ಷ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ತೆಕ್ಕಟ್ಟೆ: ನೇಣು ಬಿಗಿದು ಯುವತಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಂii ತೆಕ್ಕಟ್ಟೆ-ಕುಂಭಾಶಿನಗರ ನಿವಾಸಿ ಪಲ್ಲವಿ(೨೧) ಎಂಬಾಕೆ ಮನೆಯ ಛಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈಕೆ ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯದ ದ್ವಿತೀಯ ವರ್ಷದ ಪದವಿ ಪರೀಕ್ಷೆಗೆ ಕಟ್ಟಿದ್ದು, ನಿನ್ನೆ ಬೆಳಗ್ಗೆ ಮನೆಯಿಂದ ಹೊರಕ್ಕೆ ಹೋಗಿದ್ದರು. ಸಂಜೆ ವಾಪಸ್ ಬಂದವರೇ ಕೃತ್ಯವೆಸಗಿ ದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ರೆನ್ನಲಾಗಿದೆ.

ಬಜ್ಪೆ: ಯುವತಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗ-ಉಳೆಪಾಡಿ ಗ್ರಾಮದ ಮನೇಲ್-ಬಾಕಿಮಾರು ಎಂಬಲ್ಲಿ ವಿವಾಹ ನಿಶ್ಚಿತಾರ್ಥ ನಡೆದಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ಯುವತಿಯನ್ನು ನೇಮು ಕುಲಾಲ್ ಎಂಬವರ ಪುತ್ರಿ ದಯಾವತಿ(೨೬) ಎಂದು ಹೆಸರಿಸಲಾಗಿದೆ. ಈಕೆಗೆ ಮದುವೆ ನಿಶ್ಚಿತಾರ್ಥ ನಡೆದಿದ್ದು, ಮೊನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೂಡಿದಾರದ ವೇಲ್ ಅನ್ನು ಬಳಸಿಕೊಂಡು ಮನೆಯ ಪಕ್ಕಾಸಿಗೆ ನೇಣು ಬಿಗಿದು ಸಾವಿಗೆ ಶರಣಾದರು ಎನ್ನಲಾಗಿದೆ. ಕೆಲವು ಸಮಯದಿಂದ ಈಕೆ ಫಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಮದುವೆಯಾದ ಬಳಿಕ ಖಾಯಿಲೆ ಹೆಚ್ಚಬಹುದೆಂಬ ಭೀತಿಯಲ್ಲಿ ಕೃತ್ಯವೆಸಗಿರಬೇಕೆಂದು ಶಂಕಿಸಲಾಗಿದೆ. ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೈಲಿನಿಂದ ಬಿದ್ದು ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಅಪರಿಚಿತ ವ್ಯಕ್ತಿ ಮೃತಪಟ್ಟ ಘಟನೆ ನೇತ್ರಾವತಿ ಸೇತುವೆ ಬಳಿ ನಡೆದಿದೆ.
ಅಂದಾಜು ೫೫ ವರ್ಷ ಪ್ರಾಯದ ವ್ಯಕ್ತಿಯು ನಿದ್ದೆಯ ಮಂಪರಿನಲ್ಲಿ ಇಲ್ಲವೇ ರೈಲಿನ ಬಾಗಿಲಿನಲ್ಲಿ ಕುಳಿತಿದ್ದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ. ಮೃತದೇಹವನ್ನು ವೆನ್‌ಲಾಕ್ ಶವಾಗಾರದಲ್ಲಿ ಇರಿಸಲಾಗಿದ್ದು, ವಾರಿಸುದಾರರು ಇದ್ದಲ್ಲಿ ರೈಲ್ವೇ ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಅಪರಿಚಿತ ಶವ ಪತ್ತೆ : ಪಣಂಬೂರು ಬೀಚ್ ರಸ್ತೆಯಲ್ಲಿನ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಅಂದಾಜು ೪೫ರಿಂದ ೬೦ ವರ್ಷ ಪ್ರಾಯದ ವ್ಯಕ್ತಿಯ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪಣಂಬೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಟಪಾಡಿಯ ಯುವಕ ದುಬೈಯಲ್ಲಿ ನೀರುಪಾಲು

Posted by JAYAKIRANA Kirana on | 0 comments | Leave a comment...

ಮಂಗಳೂರು:ದುಬೈಯಲ್ಲಿ ಉದ್ಯೋಗದಲ್ಲಿದ್ದ ಉಡುಪಿ ಕಟ್ಪಾಡಿಯ ಕಟ್ಟೆಗುಡ್ಡೆ ನಿವಾಸಿ ದಿ.ಮೋಹನ್‌ದಾಸ್ ಶೆಟ್ಟಿಗಾರ್ ಎಂಬವರ ಪುತ್ರ ಗಣೇಶ್ ಶೆಟ್ಟಿಗಾರ್(೩೧)ಎಂಬಾತ ದುಬೈಯ ದೆಹರಾ ನದಿಯಲ್ಲಿ ಮುಳುಗಿ ಮೃತಪಟಟಿದ್ದಾರೆ.
ಶುಕ್ರವಾರ ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ಹೋಗಿದ್ದ ಗಣೇಶ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಅವಿವಾಹಿತರಾಗಿದ್ದ ಗಣೇಶ್, ಎರಡು ವರ್ಷಗಳಿಂದ ಗಲ್ಫ ಕಂಪ್ಯೂಟರ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ವಾಪಾಸ್ ಹೋಗಿದ್ದರು. ಐವರು ತಂಗಿಯರನ್ನು ಹೊಂದಿರುವ ಗಣೇಶ್ ಮನೆಯ ಹಿರಿಯ ಮಗನಾಗಿ ದುಡಿಯಲು ಹೋದವನು ಅವಘಡಕ್ಕೆ ಒಳಗಾಗಿದ್ದು, ಮನೆಯವರಿಗೆ ಆಘಾತ ನೀಡಿದೆ.

ನಾಪತ್ತೆಯಾಗಿದ್ದ ಮಹಿಳೆ ಪತ್ತೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಎರಡು ದಿನಗಳ ಹಿಂದೆ ಪುತ್ತೂರು ಬಸ್ ನಿಲ್ದಾಣದ ಬಳಿಯಿಂದ ನಾಪತ್ತೆಯಾಗಿದ್ದ ಮಹಿಳೆ ಶನಿವಾರ ಕಡಬ ಸಮೀಪ ಪತ್ತೆಯಾ ಗಿದ್ದಾರೆ.
ಕಳೆದ ಎ.೨೬ರಂದು ಸುಳ್ಯ ತಾಲೂ ಕಿನ ಪಂಜ ಗ್ರಾಮದ ಪಾಲೋಡಿ ಎಂಬಲ್ಲಿನ ನಿವಾಸಿ ಉಕ್ರ ಅಜಿಲ ಎಂಬವರ ಪತ್ನಿ ಚೋಮು(೬೦) ಎಂಬವರು ನಾಪತ್ತೆಯಾಗಿದ್ದರು. ತನ್ನ ಪತಿಯ ಜೊತೆ ಪುತ್ರಿಯ ಮನೆಗೆ ತೆರಳಿ ಹಿಂತಿರುಗುವಾಗ ಪುತ್ತೂರು ಬಸ್ ನಿಲ್ದಾಣದಿಂದ ಕಾಣೆಯಾಗಿದ್ದ ಇವರು ಕಡಬದ ಬಳಿ ಪತ್ತೆಯಾಗಿದ್ದಾರೆ. ಮಾನಸಿಕ ಅಸ್ವಸ್ಥರಾಗಿರುವ ಚೋಮು ಅವರನ್ನು ಪುತ್ತೂರು ಪೊಲೀಸರು ಕುಟುಂಬಸ್ಥರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ.

ಟೈಲರ್ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಮಾಡಿದ ಸಾಲವನ್ನು ತೀರಿಸಲಾಗದೆ ಜೀವನದಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಪಿಲಬೆಟ್ಟು ಗ್ರಾಮದ ನಿವಾಸಿ ಹರೀಶ್(೩೫) ಎಂಬವರೇ ಆತ್ಮಹತ್ಯೆಗೆ ಶರಣಾದವರು. ಇವರು ವಿವಾಹಿತರಾಗಿದ್ದು ಒಂದು ಮಗುವನ್ನೂ ಹೊಂದಿದ್ದರು. ಅಸೈಗೋಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇವರು ಟೈಲರ್ ವೃತ್ತಿ ಮಾಡುತ್ತಿದ್ದರು.

ಎಎಸ್‌ಐ ಹೃದಯಾಘಾತದಿಂದ ಮೃತ್ಯು

Posted by JAYAKIRANA Kirana on | 0 comments | Leave a comment...

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‌ಐ ಕೆ.ಈಶ್ವರ ನಾಯ್ಕ(೫೯) ಎಂಬವರು ಹೃದಯಾಘಾತದಿಂದ ಭಾನುವಾರ ಮಂಗಳೂರಿನ ಆಸ್ಪತ್ರೆ ಯೊಂದರಲ್ಲಿ ನಿಧನ ಹೊಂದಿದರು.
ಮೂಲತಃ ಕಾಸರಗೋಡು ಜಿಲ್ಲೆಯ ಬೇಳ ಗ್ರಾಮದವರಾಗಿರುವ ಈಶ್ವರ ನಾಯ್ಕ ಅವರು ಪ್ರಸ್ತುತ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಮುಕ್ವೆ ಎಂಬಲ್ಲಿ ವಾಸ್ತವ್ಯ ವಿದ್ದರು. ೧೯೭೪ರಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಸೇವೆಯನ್ನು ಆರಂಭಿಸಿದ್ದ ಅವರು ಮಂಗಳೂರು ಸಿಟಿ, ಉಪ್ಪಿನಂಗಡಿ, ಪಾಂಡೇಶ್ವರ, ಸುಬ್ರಹ್ಮಣ್ಯ, ಸುಳ್ಯ ಮತ್ತು ಕಡಬ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ ಒಂದು ವರ್ಷದಿಂದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)