ವೆನ್‌ಲಾಕ್ ಹಗರಣ ಸಮಗ್ರ ತನಿಖೆಯಾಗಲಿ

Posted by JAYAKIRANA Kirana on Sunday, 29 April 2012 | 0 comments | Leave a comment...

ವೆನ್‌ಲಾಕ್ ಮೊದಲೇ ಕುಖ್ಯಾತ ಆಸ್ಪತ್ರೆ. ಇಲ್ಲಿ ಗುಟುಕು ಜೀವ ಉಳಿಸಿಕೊಂಡವನನ್ನು ಚಿಕಿತ್ಸೆಗಾಗಿ ಸೇರಿಸಿದರೆ ಆತನ ಮೃತದೇಹವನ್ನೇ ಕೊಂಡೊಯ್ಯಬೇಕು ಎಂಬ ಮಾತೂ ಇದೆ. ಇಲ್ಲಿ ವೈದ್ಯಕೀಯ ಸಿಬ್ಬಂದಿಯಿಂದ ಹಿಡಿದು ಇತರ ಗುಮಾಸ್ತರವರೆಗೂ ಹಣ ಮಾಡುವುದನ್ನೇ ದಂಧೆ ಮಾಡಿ ಕೊಂಡಿದ್ದಾರೆ. ಸರಕಾರದಿಂದ ಉಚಿತವಾಗಿ ಸಿಗುವ ಔಷಧಿ ಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುವಲ್ಲಿ ಎಲ್ಲರ ನಿರತರಾಗಿದ್ದಾರೆ. ಇವರನ್ನು ಹೇಳುವವರು, ಕೇಳುವವರು ಯಾರೂ ಇಲ್ಲ ಎನ್ನುವ ಸ್ಥಿತಿಗೆ ತಲುಪಿದೆ. ಜಿಲ್ಲಾ ಆರೋ ಗ್ಯಾಧಿಕಾರಿ, ಮನಪಾ ಆರೋಗ್ಯಧಿಕಾರಿ, ಆರೋಗ್ಯ ಸಚಿವರು ಇಲ್ಲಿಗೆ ಭೇಟಿ ಕೊಡುವುದೇ ಅಪರೂಪ. ಹೀಗಾಗಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಹೆಗ್ಗಣಗಳೇ ಸೇರಿಕೊಂಡಿವೆ. ಇಲ್ಲಿ ನಡೆಯುತ್ತಿರುವ ಭಾರೀ ಔಷಧಿ ಹಗರಣವನ್ನು ಭೇದಿಸಿ ವರದಿ ಪ್ರಕಟಿಸಿ ದಂಥ ಜಯಕಿರಣ ಪತ್ರಿಕೆ ನಿಜಕ್ಕೂ ಶ್ಲಾಘನೀಯ ಕೆಲಸ ಮಾಡಿದೆ.
ಸರಕಾರ, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತೇವೆ ಎಂದು ಬಾಯಿಮಾತಿನಲ್ಲಿ ಹೇಳಿದರೆ ಸಾಲದು. ಖುದ್ದಾಗಿ ಇಲ್ಲಿಗೊಮ್ಮೆ ಭೇಟಿಕೊಟ್ಟು ಪರಿಶೀಲನೆ ನಡೆಸ ಬೇಕು. ಇಲ್ಲಿಂದ ಔಷಧಿ ಕಳ್ಳದಾರಿಯಲ್ಲಿ ಮೆಡಿಕಲ್ ಸೆಂಟರ್ ಸೇರುವುದನ್ನು ತಪ್ಪಿಸಬೇಕು. ಬಡರೋಗಿಗಳ ಆಶಾಕಿರಣವಾಗಬೇಕಿದ್ದ ಆಸ್ಪತ್ರೆಯೊಂದು ಇಂಥ ದಂಧೆಯಲ್ಲಿ ತೊಡಗಿರುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ಸೂಕ್ತ ತನಿಖೆ ನಡೆಯಲಿ.
ಚಿತ್ರಾ ನಾಯಕ್, ರಥಬೀದಿ

ಸಂಘಟನೆಗಳಿಗೆ ಮಾದರಿ
ಹಿಂದೂ ಸಂಘಟನೆಗಳು ಕೇವಲ ದನ ಹಿಡಿಯಲು, ಮುಸ್ಲಿಮ್ ಹುಡುಗರ ಜೊತೆ ಹಿಂದೂ ಹುಡುಗಿಯರು ಇದ್ದರೆ ಅವರಿಗೆ ಹಲ್ಲೆ ಮಾಡಲು ಮಾತ್ರ ಇರುವುದು ಎಂದು ಹೆಚ್ಚಿನ ಹಿಂದೂಗಳು, ಅನ್ಯ ಧರ್ಮೀಯರು ಹೇಳುತ್ತಾರೆ. ಊರ್ವಾ ಸ್ಟೋರ್‌ನ ಶ್ರೀರಾಮ ಸೇನೆ ಸಂಘಟನೆ ಮಾತ್ರ ದನಗಳ ಹಿಂದೆ ಹೋಗದೆ ಹಿಂದೂ ಸಂಘಟನೆಯೊಂದು ಮಾಡಲೇ ಬೇಕಾದ ಕೆಲಸ ಮಾಡುತ್ತಿದೆ. ಬಡ ಹಿಂದೂ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉಚಿತ ಪುಸ್ತಕ ವಿತರಿಸಿ ಅವರ ಶಿಕ್ಷಣಕ್ಕೆ ನೆರವಾಗುತ್ತಿದೆ. ಸೇನೆ ಇಲ್ಲಿ ಮಾಡು ತ್ತಿರುವುದು ಅಲ್ಪವಾಗಿರಬಹುದು. ಆದರೆ ಹಿಂದೂಗಳಿಗೆ ಅದರಲ್ಲೂ ತೀರಾ ಹಿಂದುಳಿದ ಹಿಂದೂಗಳಿಗೆ ತಮ್ಮವರು ಇದ್ದಾರಲ್ಲ ಎನ್ನುವ ಆತ್ಮವಿಶ್ವಾಸ ಹುಟ್ಟುತ್ತದೆ. ಹಿಂದೂ ಸಂಘಟನೆಗಳು ಸತ್ಯನಾರಾಯಣ ಪೂಜೆ, ಶನಿಪೂಜೆ, ಚಂಡಿಕಾಯಾಗಗಳಿಗೆ ಹಣ ಸುರಿಯುವುದಕ್ಕಿಂತ ಬಡ ಹಿಂದೂ ಹೆಣ್ಣು ಮಕ್ಕಳ ಮದುವೆಯ ಖರ್ಚನ್ನು ವಹಿಸುವುದರ ಮೂಲಕ, ಹಿಂದೂ ಸಂಘಟನೆ ಸದಸ್ಯರು ಸರಳ ವಿವಾಹ ಆಗುವುದರ ಮೂಲಕ ಹಿಂದೂ ಸಂಘಟನೆಯ ಹುಡುಗರು ಪೋಲಿಗಳು ಎನ್ನುವ ಕಳಂಕವನ್ನು ತೊಡೆದು ಹಾಕಲು ಯತ್ನಿಸಬೇಕಿದೆ. ಕಲ್ಲೇಶ್ ಶೆಟ್ಟಿ, ಅಶೋಕ್‌ನಗರ

ಆರೋಗ್ಯ ವಿಮೆ ಎಲ್ಲರಿಗಿರಲಿ
ಆರೋಗ್ಯ ಪ್ರತಿಯೊಬ್ಬರಿಗೂ ಎಷ್ಟೊಂದು ಮಹತ್ವದ್ದು ಎಂದು ತಿಳಿದಿರುವಂಥದ್ದೇ. ಇತ್ತೀಚೆಗೆ ಖಾಸಗಿ ವಿಮಾ ಕಂಪೆನಿಗಳ ಆರೋಗ್ಯ ವಿಮೆ ದುಬಾರಿಯದ್ದಾಗಿದೆ. ದುಬಾರಿ ಹಣ ಕಟ್ಟಿದರೂ ಅದು ತುರ್ತು ಸಂದರ್ಭದಲ್ಲಿ ಸಿಗುತ್ತದೆ ಎನ್ನುವುದಕ್ಕೆ ಗ್ಯಾರಂಟಿಯಿಲ್ಲ. ಶ್ರೀಮಂತರು ಆಸ್ಪತ್ರೆಗೆ ಹೋದರೆ ದುಬಾರಿ ಬಿಲ್ ಭರಿಸಬಹುದು.
ಆದರೆ ಬಡವರು ಏನು ಮಾಡಬೇಕು? ಇತ್ತೀಚೆ ಗಂತೂ ಖಾಸಗಿ ಕಂಪೆನಿ ಗಳಲ್ಲಿ ಕೆಲಸ ಮಾಡು ವರಿಗೂ ಇಎಸ್‌ಐ, ಪಿ.ಎಫ್ ಸಿಗುತ್ತದೆ ಯಾದರೂ ಇದು ದಾಖಲೆಗಳಲ್ಲಿ ಮಾತ್ರ ವಿರುತ್ತದೆ. ಇಎಸ್‌ಐ ಆಸ್ಪತ್ರೆಯಂತೂ ಯಾವುದಕ್ಕೂ ಪ್ರಯೋಜ ನವಿಲ್ಲದಂತಾಗಿದೆ. ಸರಕಾರಕ್ಕೆ ಮಣ್ಣೆರಚಲು ಖಾಸಗಿ ಸಂಸ್ಥೆಗಳಿಗೆ ಹಲವು ದಾರಿಗಳಿವೆ. ಯಾವ ದಾರಿ ಇಲ್ಲದಿದ್ದರೂ ಪಿ.ಎಫ್ ಸಂಸ್ಥೆಯ ಸಿಬ್ಬಂದಿಯೇ ಲಂಚ ಪಡೆದುಕೊಂಡು ಇದಕ್ಕೆಲ್ಲ ವ್ಯವಸ್ಥೆ ಮಾಡಿ ಕೊಡು ವವರು ಇದ್ದಾರೆ. ಹೀಗಿರುವಾಗ ಇಎಸ್‌ಐ ಸುಲಭವಾಗಿ ಬಡವರಿಗೆ ಸಿಗುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ. ಆದುದರಿಂದ ಸರಕಾರವೇ ಕಡಿಮೆ ದರದಲ್ಲಿ ಪ್ರತಿ ಯೊಬ್ಬರಿಗೂ ಆರೋಗ್ಯ ವಿಮೆ ಕಲ್ಪಿಸಿದರೆ ಬಡವರು ನೆಮ್ಮದಿಯ ಉಸಿರು ಬಿಡಬಹುದು.
ಶುಕೂರ್ ಅಹಮ್ಮದ್ ಜೋಕಟ್ಟೆ

ಬುರ್ಖಾಕ್ಕೆ ಅನುಮತಿ ಇರುವ ಶಾಲೆಗಳಿಗೆ ಕಳಿಸಿ!
ನಗರದ ಖ್ಯಾತ ಶಿಕ್ಷಣ ಸಂಸ್ಥೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಬುರ್ಖಾ ಧರಿಸಬಾರದೆಂದು ಫರ್ಮಾನು ಹೊರಡಿಸಲಾಗಿದೆ. ಇಲ್ಲಿ ಕಾಲೇಜಿನಲ್ಲಿ ಎನ್ನುವುದಕ್ಕಿಂತಲೂ ಕ್ಲಾಸಿನಲ್ಲಿ ಎನ್ನುವುದನ್ನು ಕಾಲೇಜಿನ ಆಡಳಿತ ಮಂಡಳಿ ಒತ್ತಿ ಹೇಳಿದೆ.
ಈ ಹಿಂದೆ ಮಹಾವೀರ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿ ನಿಗೆ ಬುರ್ಖಾ ಧರಿಸಲು ಅನುಮತಿ ಕೊಡದ ಕಾರಣಕ್ಕೆ ಮುಸ್ಲಿಂ ಸಂಘಟನೆಗಳು ಬೀದಿ ಗಿಳಿದಿದ್ದವು. ಬಂಟ್ವಾಳದ ಎಸ್‌ವಿಎಸ್ ಕಾಲೇಜು, ಉಪ್ಪಿನಂಗಡಿಯ ಸರಕಾರಿ ಕಾಲೇಜಿನಲ್ಲಿ ಬುರ್ಖಾ ಧರಿಸಲು ಅನಿಮತಿ ನೀಡದ ಹಿನ್ನೆಲೆಯಲ್ಲಿ ಭಾರೀ ವಿವಾದವೇ ಉಂಟಾಗಿತ್ತು. ಮೊನ್ನೆ ಮುಖಕ್ಕೆ ಸೆಗಣಿ ಮೆತ್ತಿಸಿಕೊಂಡ ಉಪನ್ಯಾಸಕ ಸೋಮಯಾಜಿ ಬುರ್ಖಾ ಪರವಾಗಿ ಮಾತನಾಡಿದ್ದರು. ಆದರೆ ಈಗ ಗಮನಿಸಬೇಕಾದ ಅಂಶವೆಂದರೆ ಮಹಾವೀರ ಕಾಲೇಜು, ಸಂತ ಅಲೋಶಿಯಸ್ ಕಾಲೇಜು ಅಲ್ಪಸಂಖ್ಯಾತರಿಗೆ ಸೇರಿದ್ದು. ಅದರಲ್ಲೂ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಸ್ಲಿಮರು ಹೆಚ್ಚಿಸ ಸಂಖ್ಯೆಯಲ್ಲಿ ಬರುತ್ತಾರೆ. ಇದೀಗ ಇಲ್ಲಿಯೇ ಬುರ್ಖಾಕ್ಕೆ ನಿಷೇಧ ಹೇರಲಾಗಿದೆ. ಅದೂ ಸಕಾರಣವಾಗಿ. ಈ ಹಿಂದೆ ಬುರ್ಖಾದ ಬಗ್ಗೆ ವಿವಾದ ಉಂಟಾದಾಗಲೆಲ್ಲಾ ಮುಸ್ಲಿಮರು ಮೊದಲೇ ಕಾಲೇಜಿನ ನೀತಿ ನಿಯಾಮಾವಳಿ ತಿಳಿದುಕೊಂಡು ಪ್ರವೇಶ ಪಡೆಯಲಿ. ಆಗ ಇಂಥ ಸಮಸ್ಯೆಯೇ ಉದ್ಭವವಾಗುವುದಿಲ್ಲ ಎಂದು ಕೆಲ ಹಿರಿಯರು ಬುದ್ಧಿ ಹೇಳಿದ್ದರು. ಮುಸ್ಲಿಮ್ ಹೆಣ್ಣು ಮಕ್ಕಳು ಕಲಿಯುವುದೇ ದೊಡ್ಡದು. ಅವರನ್ನು ನಾಲ್ಕು ಗೋಡೆಯಿಂದ ಆಚೆಗೆ ಕಳಿಸಿ ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ಮಾಡುವ ಅವರ ಹಿರಿಯರು, ಮುಸ್ಲಿಂ ಸಮುದಾಯದ ಬಗ್ಗೆ ಯಾವಾತ್ತೂ ಅನುಮಾನ ಪಡಬಾರದು.
ಹಾಗಂತ ಕಾಲೇಜಿನ ನೀತಿ ನಿಯಾಮಾವಳಿಗಳನ್ನು ಮುರಿಯಲೂ ಬಾರದು. ಇಂದು ಒಬ್ಬರಿಗಾಗಿ ರಿಯಾಯತಿ ತೋರಿಸಿದರೆ ನಾಳೆ ದೊಡ್ಡ ಸಮಸ್ಯೆಯೇ ಎದುರಾಗಬಹುದು. ಈ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಂ ಉದ್ಯಮಿಗಳು ಅಥವಾ ಸರಕಾರವೇ ಮುಸ್ಲಿಮ್ ಹೆಣ್ಣು ಮಕ್ಕಳಿಗಾಗಿಯೇ ಪ್ರತ್ಯೇಕ ಕಾಲೇಜುಗಳನ್ನು ತತ್‌ಕ್ಷಣವೇ ಆರಂಭಿಸಬೇಕು. ಅವರ ಶಿಕ್ಷಣಕ್ಕೆ ಯಾವುದೇ ತೊಡಕು ಉಂಟಾಗಬಾರದು. ಹಿಂದೂ ಹೆಣ್ಣು ಮಕ್ಕಳು ಕ್ರೈಸ್ತ ಶಾಲೆಗಳಿಗೆ ಹೋಗುವಾಗ ಹೆಣೆಯಲ್ಲಿ ಬಿಂದಿ, ಕುಂಕುಮ, ತಲೆಗೆ ಹೂವು ಇಡಬಾರದು ಎನ್ನುವ ನಿಯಮವನ್ನು ಕಡ್ಡಾಯವಾಗಿ ಹೇರಲಾಗುತಿತ್ತು. ಅಲ್ಲದೆ ಕ್ರೈಸ್ತನತ್ತ ಆಸಕ್ತಿ ಹೊರಳಲಿ ಎಂದು ತರಗತಿಯ ಕೆಲ ಗಂಟೆ ಗಳನ್ನು ಬೈಬಲ್ ಪಠಣಕ್ಕೆ, ತರಗತಿಯಲ್ಲಿ ದೊಡ್ಡ ಯೇಸುವಿನ ಮೂರ್ತಿಯನ್ನು ಇಡು ವುದನ್ನು ಮಾಡುತ್ತಿದ್ದರು. ಆಗ ಹಿಂದೂಗಳಿಗೆ ಬೇರೆ ಅವಕಾಶಗಳಿರಲಿಲ್ಲ. ಹಿಂದೂಗಳ ಶಾಲಾ ಕಾಲೇಜುಗಳ ಸಂಖ್ಯೆ ಕಡಿಮೆಯಿತ್ತು. ಮಾತ್ರವಲ್ಲ ತಮ್ಮ ಧರ್ಮಕ್ಕೆ ಅವಮಾನ ವಾದರೂ ಮೌನವಾಗಿ ಅದನ್ನೆಲ್ಲಾ ಸಹಿಸುತ್ತಿದ್ದರು.
ಆದರೆ ಮುಸ್ಲಿಮರು ಇದನ್ನೆಲ್ಲಾ ಸಹಿಸಿಕೊಳ್ಳುವಷ್ಟು ಧರ್ಮಸಹಿಷ್ಣುಗಳೇ? ಅವರು ತಮ್ಮ ಧರ್ಮಕ್ಕೆ ತೊಂದರೆ ಎದುರಾಗಾದ ಬೀದಿಗಿಳಿಯುತ್ತಾರೆ. ಆದರೆ ಹಿಂದೂಗಳು? ಹಿಂದೂಗಳು ಅಲೋಚಿಸಬೇಕಿದೆ.
ರಾಜೇಶ್ ಸಿ.ಎನ್, ಬಳ್ಳಾಲ್‌ಭಾಗ್

ಅರಣ್ಯ ಇಲಾಖೆ ಎನ್ನುವ ಭ್ರಷ್ಟರ ಸ್ವರ್ಗ
ರಾಜ್ಯದಲ್ಲಿ ಅರಣ್ಯ ಇಲಾಖೆಯೊಂದಿದೆ ಎನ್ನುವುದೇ ಸೋಜಿಗದ ವಿಷಯ. ಇತ್ತೀಚೆಗೆ ನಾವು ಚಾರ್ಮಾಡಿ ಘಾಟಿಗೆ ಚಾರಣಕ್ಕೆಂದು ಹೋದಾಗ ಅರಣ್ಯ ಇಲಾಖೆ ಸತ್ತು ಹೋಗಿರುವುದು ಖಚಿತವಾಯಿತು. ಅರಣ್ಯದ ಅಲ್ಲಲ್ಲಿ ಪ್ರಾಕೃತಿಕ ಸಂಪತ್ತು ಲೂಟಿಯಾಗಿ ಹೋಗಿದೆ. ಅಲ್ಲಿನ ಸ್ಥಳೀಯರು ಹೇಳುವಂತೆ ಖಾಸಗಿ ಶ್ರೀಮಂತ ವ್ಯಕ್ತಿಗಳು ಇಲ್ಲಿನ ಕಾಡನ್ನು ತಮ್ಮ ಆಸ್ತಿ ಎಂಬಂತೆ ನೋಡುತ್ತಿದ್ದಾರೆ. ಕೆಲವೆಡೆ ರೆಸಾರ್ಟ್ ಮಾಡಲು ಸಿದ್ದತೆ ನಡೆಯುತ್ತಿದೆ. ಕಾಡಿನ ಹೆಚ್ಚಿನ ಭಾಗದಲ್ಲಿ ಮರಗಿಡಗಳು ನಾಶವಾಗಿದೆ. ಕೊಟ್ಟಿಗೆಹಾರ ಎಂಬಲ್ಲಿ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಇದ್ದರೂ ಇಲ್ಲಿರುವವರು ಪರಮ ಭ್ರಷ್ಟರು. ಇವರಿಗೆ ಹಣ ಕೊಟ್ಟರೆ ಏನೂ ನಡೆಯುತ್ತದೆ ಎಂಬಂತಾಗಿದೆ. ದೂರಲ್ಲಿ ನೋಡಿದರೂ ಸಾಕು, ಚಾರ್ಮಾಡಿ ಘಾಟಿಯ ನೆತ್ತಿ ಬೋಳು ಬೋಳು. ಅಲ್ಲಲ್ಲಿ ಕತ್ತಿಯಿಂದ ಗೀರಿದಂತೆ ಭಾಸವಾಗುತ್ತದೆ ಅರಣ್ಯ ಇಲಾಖೆ ಇಲ್ಲಿ ಮರಗಿಡ ಬೆಳೆಸುವ ಸಾಹಸವನ್ನೂ ಮಾಡಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಿಂದ ಕೊಬ್ಬಿ ಹೋಗಿದ್ದಾರೆ. ಹಿಂದೆ ಅ.ನ ಯಲ್ಲಪ್ಪ ರೆಡ್ಡಿ, ಕೆ.ಎಂ. ಚಿಣ್ಣಪ್ಪ ಅವರಂತಹ ಪರಿಸರಪ್ರೇಮಿ, ಪ್ರಾಮಾಣಿಕ ಅಧಿಕಾರಿಗಳು ಅರಣ್ಯ ಇಲಾಖೆಯಲ್ಲಿದ್ದರು. ಇಲಾಖೆಗೆ ಇದೊಂದು ಘನತೆಯ ವಿಷಯವಾಗಿತ್ತು. ಆದರೆ ಈಗ ಕಳ್ಳರೇ ತುಂಬಿ ಹೋಗಿರುವ ಅರಣ್ಯ ಇಲಾಖೆಯಿಂದ ಮುಂದಿನ ಪೀಳಿಗೆಯಿಂದ ನಮ್ಮ ಅರಣ್ಯವನ್ನು ರಕ್ಷಿಸುವುದು ಹೇಗೆ?
ತ್ಯಾಗು ಸುರತ್ಕಲ್

ರಾಷ್ಟ್ರೀಕೃತ ಬ್ಯಾಂಕ್ ಬೇಕು
ರಾಷ್ಟ್ರೀಯ ಹೆದ್ದಾರಿ೬೬ರಲ್ಲಿರುವ ಹಳೆಯಂಗಡಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರವಾಗಿದೆ. ಇದೇ ಮೊದಲ ಬಾರಿ ಇಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣವಾಗುತ್ತಿದೆ. ಆಸುಪಾಸು ಹಳ್ಳಿಗಳು ಬೆಳವಣಿಗೆ ಕಾಣುತ್ತಿವೆ. ಇಷ್ಟೆಲ್ಲಾ ಆದರೂ ಇಲ್ಲಿರುವುದು ಒಂದೇ ಒಂದು ರಾಷ್ಟ್ರೀಕೃತ ಬ್ಯಾಂಕು. ಅದು ಕೆನರಾ ಬ್ಯಾಂಕು. ಹಳೆಯಂಗಡಿ ಆಸುಪಾಸಿನ ನಾಲ್ಕೈದು ಗ್ರಾಮಗಳು ಇದೇ ಬ್ಯಾಂಕನ್ನು ಅವಲಂಬಿಸಬೇಕಿದೆ. ತೀರಾ ಇಕ್ಕಟ್ಟಾದ ಈ ಬ್ಯಾಂಕಿನಲ್ಲಿ ಸಿಬ್ಬಂದಿ ಸೇವೆಗಳ ಬಗ್ಗೆ ಎರಡು ಮಾತಿಲ್ಲ. ಉತ್ತಮ ಸೇವೆ ಗ್ರಾಹಕರಿಗೆ ಸಿಗುತ್ತಿದೆ. ಎಟಿಎಂ ಬಗ್ಗೆ ವಿಚಾರಿಸಿದರೆ ಬ್ಯಾಂಕ್ ಸಿಬ್ಬಂದಿ ತಮ್ಮ ಅಸಹಾಯಕತೆಯನ್ನು ವ್ಯಕ್ತ ಪಡಿಸುತ್ತಾರೆ. ಕೆನರಾ ಬ್ಯಾಂಕ್‌ನ ಮುಖ್ಯ ಕಚೇರಿಯವರಿಗೆ ಇಲ್ಲಿನ ಗ್ರಾಹಕರ ಬವಣೆ ಅರ್ಥವಾಗಬೇಕಿತ್ತು. ಆದರೆ ಅವರು ಕಿವುಡರಂತೆ ನಮ್ಮ ದೂರುಗಳನ್ನು ಆಲಿಸುತ್ತಿಲ್ಲ. ಹಾಗಾಗಿ ಇಲ್ಲಿನ ಬ್ಯಾಂಕಿನ ಸಿಬ್ಬಂದಿ ವರ್ಗದವರನ್ನು ದೂರಿ ಪ್ರಯೋ ಜನವಿಲ್ಲ. ಇದಕ್ಕೆ ಪರಿಹಾರ ಎಂಬಂತೆ ಇಲ್ಲಿ ಇನ್ನೊಂದು ರಾಷ್ಟ್ರೀಕೃತ ಬ್ಯಾಂಕು ತನ್ನ ಶಾಖಾ ಕಚೇರಿಯನ್ನು ತೆರೆದು ಉತ್ತಮ ಸೇವೆ ಕೊಡಲಿ. ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್ ಆದರೂ ಸರಿ. ಕೂಡಲೇ ಹಳೆಯಂಗಡಿಯಲ್ಲಿ ಎಟಿಎಂ ಸಮೇತ ಕಾರ‍್ಯಾಚರಿಸುವಂತೆ ಮನಸ್ಸು ಮಾಡಲಿ. ಸಂಬಂಧಪಟ್ಟ ಬ್ಯಾಂಕಿನ ಮುಖ್ಯಸ್ಥರು ಇದನ್ನು ಗಮನಿಸುವರೇ?
ಗ್ರಾಹಕ, ಪಡುಪಣಂಬೂರು

ಸರಗಳ್ಳರ ಹಾವಳಿ
ದಿನದಿಂದ ದಿನಕ್ಕೆ ಬಂಗಾರದ ಬೆಲೆ ಏರುತ್ತಿದ್ದಂತೆಯೇ ಸರಗಳ್ಳರ ಹಾವ ಳಿಯೂ ಹೆಚ್ಚಾಗುತ್ತಿವೆ. ಇದರಿಂದ ಜನ ಸಾಮಾನ್ಯರು ಆತಂಕಕ್ಕೀಡಾಗಿದ್ದಾರೆ. ಎಲ್ಲಿ ಯಾವಾಗ ಸರ ಎಳೆದು ಪರಾರಿ ಯಾಗು ತ್ತಾರೋ, ಅಥವಾ ಮೋಸ ಮಾಡಿ ಸರ ಲಪಟಾಯಿಸುತ್ತಾರೋ ಎಂಬ ಆತಂಕ ಜನರಲ್ಲಿ ಉಂಟಾಗಿದೆ. ಪೊಲೀಸರು ಈ ಬಗ್ಗೆ ಯಾಕೆ ನಿರ್ಲಕ್ಷ್ಯ ವಹಿಸುತ್ತಾರೆಂದೇ ತಿಳಿಯುತ್ತಿಲ್ಲ. ಆದ್ದರಿಂದ ಒಂಟಿಯಾಗಿ ಹೋಗುವ ಮಹಿಳೆ ಯರು ತುಂಬಾ ಜಾಗ್ರತೆ ವಹಿಸಬೇಕು. ಹೆಚ್ಚು ಬಂಗಾ ರವನ್ನು ಮೈಮೇಲೆ ಧರಿಸಿಕೊಂಡು ಸುತ್ತಾ ಡುವುದನ್ನು ಕಡಿಮೆ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ನಾವೇ ಮುನ್ನೆ ಚ್ಚರಿಕೆ ವಹಿಸಿದರೆ ಸರಗಳ್ಳತನ ಪ್ರಕರಣಕ್ಕೆ ಕಡಿ ವಾಣ ಹಾಕಬಹುದು. ಮಾಲ್‌ಗಳಲ್ಲಿ, ಜನ ನಿಬಿಡ ಸ್ಥಳಗಳಲ್ಲಿ ಸಿ.ಸಿ ಕ್ಯಾಮರಾ ಇರಿ ಸುವ ಮೂಲಕವೂ ಕ್ರಮಕೈಗೊಳ್ಳ ಬಹುದು.
ಪವಿ, ಮಂಗಳೂರು

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ?
ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಒಳಪಟ್ಟ ನಂತರ ಕಾನೂನು ಸುವ್ಯವಸ್ಥೆ ಹದ ಗೆಟ್ಟಿದೆಯೇ? ಹಾಗೊಂದು ಶಂಕೆ ಜನರನ್ನು ಕಾಡುತ್ತಿದೆ. ಯಾಕೆಂದರೆ ಹಿಂದೆ ರಾತ್ರಿಯಲ್ಲಿ ಗಲಭೆ ನಡೆದು ಹೆಣಗಳು ಉರುಳಿದ್ದರೆ, ಇತ್ತೀಚಿನ ದಿನಗಳಲ್ಲಿ ಹಾಡಹಗಲೇ ಕೊಲೆ, ದರೋಡೆ ಪ್ರಕರಣ ಮಾಮೂಲಾಗಿ ಹೋಗಿದೆ. ದುಷ್ಕರ್ಮಿಗಳು ಯಾರ ಭಯವೂ ಇಲ್ಲದೆ ಹಗಲು ಹೊತ್ತಿನಲ್ಲೇ ತಮಗಾದವರನ್ನು ಕೊಂದು ದ್ವೇಷ ತೀರಿಸಿ ಕೊಳ್ಳುತ್ತಿದ್ದಾರೆ.
ಕೆಲವು ತಿಂಗಳ ಹಿಂದೆ ನಡೆದಿದ್ದ ಟೆಕ್ಸ್‌ಟೈಲ್ಸ್ ಮೆನೇ ಜರ್ ಕೊಲೆ ಪ್ರಕರಣ ಮತ್ತು ಕೆಲದಿನಗಳ ಹಿಂದೆ ನಡೆದ ರೌಡಿ ಗುರುಪ್ರಸಾದ್ ಹತ್ಯೆ ಒಂದೇ ರೀತಿ ನಡೆ ದಿದೆ. ಟೆಕ್ಸ್‌ಟೈಲ್ಸ್ ಮೆನೇಜರ್ ಹಂತಕರು ಸಿಕ್ಕಿಬಿದ್ದಿದ್ದರೂ ಪೊಲೀಸರು ಕೊಲೆಗೆ ಕಾರಣವನ್ನು ಹೇಳಿಲ್ಲ. ಮಂಗಳೂರಿನ ಸ್ಟೇಟ್‌ಬ್ಯಾಂಕ್, ಹಂಪನ ಕಟ್ಟೆ, ಬಂದರಿನಲ್ಲಿ ನಡೆದಾಡು ವವರು ಯಾವಾಗ, ಏನಾಗುತ್ತದೆ ಎನ್ನುವುದನ್ನು ಅರಿಯದೆ ಭಯದಿಂದಲೇ ಸಂಚರಿ ಸುವಂತಾಗಿದೆ. ಪೊಲೀಸ್ ಕಮಿಷನರ್ ಅವರು ಈ ಬಗ್ಗೆ ಗಮನ ಕೊಡಬೇಕು.
ನಿರಂಜನ್ ಶಾಸ್ತ್ರಿ, ಮಂಗಳೂರು

ಇನ್ನೂ ದಲಿತರ ಪರಿಸ್ಥಿತಿ ಸುಧಾರಣೆಯಾಗಿಲ್ಲ!
ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ಇನ್ನೂ ದೇಶದ ದಲಿತರ ಸ್ಥಿತಿ ಸುಧಾರಣೆಯಾಗಿಲ್ಲ ಎಂದರೆ ನಾಚಿಕೆಗೇಡು. ಈಗಲೂ ಕೆಲವೊಂದು ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ದಲಿತರು ತೀರಾ ಕೆಳಮಟ್ಟದ ಜೀವನ ಸಾಗಿ ಸುತ್ತಿದ್ದಾರೆ. ಅವರ ಕಾಲೊನಿಗೆ ನೀರು, ವಿದ್ಯುತ್ ಹಾಗೂ ಇನ್ನಿತರ ಸವಲತ್ತು ಈಗಲೂ ಲಭ್ಯವಾಗಿಲ್ಲ. ಇದಕ್ಕೆ ನಮ್ಮ ಆಡಳಿತವೇ ಕಾರಣ ಹೊರತು ಬೇರಾರೂ ಅಲ್ಲ. ದಲಿತರು ಸಂಘಟನೆ ಮಾಡಿಕೊಂಡು ನಡೆಸುತ್ತಿರುವ ಹೋರಾ ಟವೂ ಪ್ರಯೋಜನಕ್ಕೆ ಬರುತ್ತಿಲ್ಲ. ಇದಕ್ಕೆ ಸಂಘಟನೆಯೊಳಗಿನ ಭಿನ್ನಾಭಿಪ್ರಾಯವೇ ಕಾರಣ. ದಲಿತರ ಸ್ಥಿತಿಯನ್ನು ಉಪಯೋಗಿಸಿಕೊಂಡು ವಂಚಿಸುವ ಕೆಲಸ ಮಾಡಲಾಗುತ್ತಿದೆ. ದಲಿತರು ಇಂದು ಸರಕಾರದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರೂ ಅವರಗೆ ಸೂಕ್ತ ಮರ್ಯಾದೆ ಸಿಗುತ್ತಿಲ್ಲ. ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರಿಗೆ ಯೋಗ್ಯ ವ್ಯವಸ್ಥೆ ಮಾಡಿಕೊಡಬೇಕಾದ ಅನಿವಾರ್ಯತೆ ಸದ್ಯಕ್ಕಿದೆ. ಇದನ್ನು ಜನಪ್ರತಿನಿಧಿಗಳು ಅರಿಯುವುದು ಉತ್ತಮ.
ರಮೇಶ್ ನಾಯ್ಕ, ವರಂಗ

ಮುಲ್ಕಿ ಠಾಣಾಧಿಕಾರಿಯವರೇ ಗಮನಿಸಿ
ಮುಲ್ಕಿಗೆ ನೂತನ ಠಾಣಾಧಿಕಾರಿಯಾಗಿ ಬಂದಿರುವ ಸುನೀಲ್ ಪಾಟೀಲ್ ಅವರ ಮೇಲೆ ಜನರಿಗೆ ಹೆಚ್ಚಿನ ಭರವಸೆಯಿದೆ. ಯಾಕೆಂದರೆ ಹಿಂದೆ ಕೊಣಾಜೆಯಲ್ಲಿ ಕರ್ತವ್ಯ ದಲ್ಲಿದ್ದ ವೇಳೆ ಅಕ್ರಮ ಮರಳು ದಂಧೆಕೋರರ ಹೆಡೆಮುರಿ ಕಟ್ಟಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಹೀಗಾಗಿ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿನ ಅಕ್ರಮ ದಂಧೆಗಳು ನಿಯಂತ್ರಣಕ್ಕೆ ಬರಬಹುದು ಎನ್ನುವುದು ಜನರ ನಂಬಿಕೆ.
ಲಿಂಗಪ್ಪಯ್ಯಕಾಡು, ಕಾರ್ನಾಡು, ಕೆರೆಕಾಡು ಪರಿಸರದಲ್ಲಿ ಅಕ್ರಮ ಜುಗಾರಿ, ಮಟ್ಕಾ, ಕೋಳಿಅಂಕ ಇತ್ಯಾದಿ ನಿರ್ಭೀತಿಯಿಂದ ನಡೆಯುತ್ತಿದೆ, ಇದಕ್ಕೆ ಹಿಂದೆ ಠಾಣೆ ಯಲ್ಲಿದ್ದ ಕೆಲವು ಮಂದಿ ಪೊಲೀಸರು ಸಹಕಾರ ನೀಡುತ್ತಿದ್ದುದೂ ಗುಟ್ಟಾಗಿ ಉಳಿದಿಲ್ಲ. ಲಿಂಗಪ್ಪಯ್ಯಕಾಡಿನಲ್ಲಿ ಇತ್ತೀಚಿನ ವರ್ಷದಲ್ಲಿ ಗಲಾಟೆ, ಘರ್ಷಣೆಯ ವಾತಾವರಣ ಸೃಷ್ಟಿಯಾಗಿದೆ. ಸ್ಥಳೀಯ ಮರಿಪುಡಾರಿಗಳ ಸಹಕಾರದಿಂದ ಇವರು ಇಡೀ ಊರನ್ನೇ ಕೊಳ್ಳೆ ಹೊಡೆಯುತ್ತಿದ್ದಾರೆ. ಅಕ್ರಮ ಮದ್ಯ ದಂಧೆಯ ಜೊತೆ ಇನ್ನಿತರ ದಂಧೆಗಳೂ ನಡೆಯುತ್ತಿವೆ. ಇದು ಪೊಲೀ ಸರಿಗೆ ತಿಳಿದಿಲ್ಲವೆಂದೇನಲ್ಲ. ಊರಿನ ನೇಮೋತ್ಸವ, ಜಾತ್ರೆಯ ದಿನವಂತೂ ದಂಧೆ ನಡೆ ಸುವವರ ಮನೆ ಯಲ್ಲಿ ಪೊಲೀಸರು ಹಾಜರಿರುವುದೂ ಊರಿನ ಜನರಿಗೆ ತಿಳಿದಿದೆ. ಹೀಗಾಗಿ ಖದೀಮರು ತಮ್ಮನ್ನು ಯಾರೂ ಏನೂ ಮಾಡಲಾರರು ಎಂದು ಊರಿನ ಶಾಂತಿ ಹಾಳು ಮಾಡುತ್ತಿದ್ದಾರೆ. ಸ್ಥಳೀಯ ಆಡಳಿತ ಹೊಂದಿರುವ ಕೆಲವರು ಈ ದಂಧೆಯಲ್ಲಿ ಪಾಲು ದಾರರು. ಆದ್ದರಿಂದ ಮಾನ್ಯ ಠಾಣಾಧಿ ಕಾರಿಗಳೇ, ಎಲ್ಲವನ್ನೂ ನೋಡುತ್ತಾ ಸುಮ್ಮನಿರಬೇಡಿ. ನಮ್ಮ ಊರಿನಲ್ಲಿ ಶಾಂತಿ ಕದಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ.
ನೊಂದವರು, ಲಿಂಗಪ್ಪಯ್ಯಕಾಡು

ಸಾರ್ವಜನಿಕ ಶೌಚಾಲಯಕ್ಕೆ ಕಲುಷಿತ ನೀರು ಯಾಕೆ ಬೇಕು?

Posted by JAYAKIRANA Kirana on | 0 comments | Leave a comment...

ನಾಗರಿಕರು, ಉಳ್ಳಾಲ
ತೊಕ್ಕೊಟ್ಟಿನಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಕಲುಷಿತ ನೀರು ಬಳಕೆ ಮಾಡಲಾಗುತ್ತಿದೆ ಎನ್ನುವ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದರೂ ಪುರಸಭೆಯ ಅಧಿಕಾರಿಗಳು ಮಾತ್ರ ಗಾಢ ನಿದ್ದೆಯಲ್ಲಿರುವುದು ಬೇಜ ವಾಬ್ದಾರಿತನಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಉಳ್ಳಾಲ ಪುರಸಭೆ ವ್ಯಾಪ್ತಿಗೊಳಪಟ್ಟ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಹಲವಾರು ವರ್ಷಗಳಿಂದ ಇದ್ದ ಬಾವಿ ಅಂದು ಇಲ್ಲಿದ್ದ ಮನೆಗಳು, ಸಣ್ಣಪುಟ್ಟ ಅಂಗಡಿಗಳ ಪಾಲಿಗೆ ಉಪಯು ಕ್ತವಾಗಿತ್ತು. ಕ್ರಮೇಣ ಈ ಜಾಗವನ್ನು ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಿದ ಉಳ್ಳಾಲ ಪುರಸಭೆ ಆರು ವರ್ಷಗಳ ಹಿಂದೆ ಇಲ್ಲಿ ಬಸ್ಸು ತಂಗುದಾಣ ಹಾಗೂ ವಾಣಿಜ್ಯ ಕಟ್ಟಡವನ್ನು ನಿರ್ಮಿಸಿದ್ದು ಇಂದು ಬಿ.ಸಿ.ರೋಡು, ಉಳ್ಳಾಲ, ಕಾಸರಗೋಡು, ಕೊಣಾಜೆ, ತಲಪಾಡಿ ಹಾಗೂ ಇತರ ಕಡೆಗೆ ಹೋಗುವ ಎಲ್ಲಾ ಬಸ್ಸುಗಳು ತಂಗುದಾಣಕ್ಕೆ ಬರಬೇಕಾಗಿರುವ ಕಾರಣ ಈ ಪ್ರದೇಶ ಜನನಿಬಿಡವಾಗಿ ಪರಿವರ್ತನೆಗೊಂಡಿದೆ.
ಇದನ್ನು ಗಮನದಲ್ಲಿರಿಸಿ ಪುರಸಭೆ ವತಿಯಿಂದ ನೂತನ ಕಟ್ಟಡದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದ್ದು, ೨೦ ವರ್ಷಗಳ ಅವಧಿಗೆ ಕಲಾಪರಿಷತ್ ಎನ್ನುವ ದೆಹಲಿ ಮೂಲದ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಿದ್ದು ಇಲ್ಲಿ ಸ್ನಾನಕ್ಕೆ ಐದು ರೂ., ಶೌಚಕ್ಕೆ ಮೂರು ರೂ. ವಸೂಲಿ ಮಾಡಲಾಗುತ್ತಿದೆ. ಅದರೆ ಶೌಚಾಲಯಕ್ಕೆ ಬಳಸಲಾಗುತ್ತಿರುವ ನೀರು ಮಾತ್ರ ಪಕ್ಕದ ಬಾವಿಯಾಗಿದ್ದಾಗಿದೆ. ಈ ಬಾವಿಯಲ್ಲಿ ಹಲವಾರು ಸಮಯಗಳಿಂದ ಕಸಕಡ್ಡಿಗಳು ತುಂಬಿರುವ ಕಾರಣ ನೀರು ಅತ್ಯಂತ ಕಲುಷಿತವಾಗಿದೆ. ಅಷ್ಟೇ ಅಲ್ಲದೆ ಪಕ್ಕದಲ್ಲಿರುವ ಹೊಟೇಲ್ ಹಾಗೂ ಚರಂಡಿಯಲ್ಲಿ ಹರಿದಾಡುವ ಕಲುಶಿತ ನೀರು ಇದೇ ಬಾವಿಗೆ ಸೇರುತ್ತಿದೆ. ಇದೇ ನೀರನ್ನು ಶೌಚಾಲಯಕ್ಕೆ ಬಳಸಿದರೆ ಮಾರಕ ರೋಗ ವಂತೂ ಗ್ಯಾರಂಟಿ. ಆದರೂ ಪುರ ಸಭೆಯ ಆಡಳಿತಗಾರರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ.
ಅಷ್ಟೇ ಅಲ್ಲದೆ ಪುರಸಭೆಯ ಈಗಿನ ಅಧ್ಯಕ್ಷರು ದಿನದ ಬಹುತೇಕ ಸಮಯವನ್ನು ಇದೇ ಪ್ರದೇಶದಲ್ಲಿ ಕಳೆಯುತ್ತಾರೆ. ಆದರೆ ಅವರಿಗೂ ಈ ಶೌಚಾಲಯದಲ್ಲಿ ಕಲುಶಿತ ನೀರು ಬಳಕೆ ಮಾಡಲಾಗುತ್ತಿರುವ ಬಗ್ಗೆ ಗೊತ್ತೇ ಇಲ್ಲ ಎನ್ನುವುದು ಅವರ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ. ಈ ಬಗ್ಗೆ ಹಲವು ಬಾರಿ ಪುರಸಭೆಯ ಮುಖ್ಯಾಧಿಕಾರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಅಂತೂ ಅಧಿಕಾರಿಗಳು ಹಾಗೂ ಆಡಳಿ ತಗಾರರ ಬೇಜವಾಬ್ದಾರಿಯಿಂದಾಗಿ ಸಾರ್ವ ಜನಿಕರು ರೋಗಿಷ್ಟ ರಾಗುವ ದಿನ ದೂರ ಇಲ್ಲ.

ಆಸಕ್ತಿ ಕಡಿಮೆಯಾಗಲು ಕಾರಣವೇನು

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೪೦ ವರ್ಷ ವಯಸ್ಸು. ನಾನು ಕಲ್ಲಿನ ಕೋರೆಯಲ್ಲಿ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಾನು ಐದು ವರ್ಷಗಳ ಹಿಂದೆ ಮದುವೆಯಾಗಿದ್ದೇನೆ. ನನ್ನ ಆರೋಗ್ಯವೂ ಉತ್ತಮವಾಗಿದೆ. ನನ್ನ ಪತ್ನಿ ಚಿಕ್ಕ ವಯಸ್ಸಿನವಳು. ಆಕೆಗೆ ಈಗ ೨೮ ವರ್ಷ ವಯಸ್ಸು. ಆಕೆ ನೋಡಲು ಚೆನ್ನಾಗಿದ್ದಾಳೆ. ನಮಗೆ ಒಂದು ವರ್ಷದ ಹೆಣ್ಣುಮಗುವೂ ಇದೆ. ನನಗೆ ಹಿಂದೆ ಸೆಕ್ಸ್‌ನಲ್ಲಿ ಹೆಚ್ಚು ಆಸಕ್ತಿ ಇತ್ತು. ನಾವು ಪ್ರತಿನಿತ್ಯ ಸೆಕ್ಸ್ ಮಾಡುತ್ತಿದ್ದೆವು. ಆದರೆ ನನಗೆ ಈಗ ಯಾವುದರಲ್ಲೂ ಆಸಕ್ತಿ ಇಲ್ಲವಾಗಿದೆ. ಆಕೆಗೆ ಬೇಸರ ಬರಬಾರದು ಎಂದು ಎರಡು-ಮೂರು ದಿನಕ್ಕೊಮ್ಮೆ ಸೆಕ್ಸ್ ಮಾಡುತ್ತೇನೆ. ಆಕೆ ನನ್ನ ಜತೆ ಸಹಕರಿಸುತ್ತಾಳೆ. ನನ್ನ ಯಾವ ಆಸೆಗೂ ಆಕೆ ಇಲ್ಲವೆನ್ನುವುದಿಲ್ಲ.
ನನಗೆ ದಿನದಲ್ಲಿ ಕೆಲಸದ ಒತ್ತಡ ಹೆಚ್ಚಿರುವುದರಿಂದ ವಿಪರೀತ ಸುಸ್ತು, ರಾತ್ರಿಯಾದ ಕೂಡಲೇ ನಿದ್ದೆ ಆವರಿಸಿಕೊಳ್ಳುತ್ತದೆ. ಇದರಿಂದ ನನ್ನ ಪತ್ನಿಗೂ ಬೇಸರ. ಇತ್ತೀಚೆಗೆ ನನಗೆ ಉದ್ರೇಕದ ಸಮಸ್ಯೆಯೂ ಕಾಡುತ್ತಿದೆ. ಈ ಬಗ್ಗೆ ನಾನು ಯಾವ ವೈದ್ಯರನ್ನು ಭೇಟಿಯಾಗಲಿ? ನಗರದ ಲೈಂಗಿಕ ವೈದ್ಯರಲ್ಲಿ ಗೆಳೆಯನ ಸಲಹೆಯಂತೆ ಹೋಗಿದ್ದೆ. ಅಲ್ಲಿ ಪರೀಕ್ಷೆ ನಡೆಸಿ ಎರಡು ತಿಂಗಳ ಔಷಧಿ ಸೇವಿಸುವಂತೆ ಹೇಳಿದರು. ಈಗ ಒಂದು ತಿಂಗಳು ಕಳೆದಿದೆ. ಆದರೂ ಯಾವುದೇ ಪರಿಣಾಮ ಬೀರಿಲ್ಲ. ಜನನಾಂಗದ ಭಾಗಕ್ಕೆ ಲೇಪಿಸಲು ತೈಲವನ್ನೂ ನೀಡಿದ್ದಾರೆ. ಇದರಿಂದ ಪರಿಣಾಮ ಕಂಡುಬರುತ್ತಿಲ್ಲ. ನನಗೆ ಜೀವನವೇ ಮುಗಿದು ಹೋಯಿತೇ ಎಂದು ಭಯವಾಗುತ್ತದೆ. ನನಗೆ ಯಾವಾಗಲೋ ಒಮ್ಮೆ ಉದ್ರೇಕವಾಗುತ್ತದೆ, ಇನ್ನುಳಿದಂತೆ ಪತ್ನಿಯ ಜತೆ ಸೇರುವ ವೇಳೆ ಉದ್ರೇಕವಾಗುವುದಿಲ್ಲ. ಹತ್ತು ನಿಮಿಷಕ್ಕೂ ಅಧಿಕ ಸಮಯ ಕಳೆದರೆ ಉದ್ರೇಕವಾಗುತ್ತದೆ. ಆದರೆ ಕೆಲವೇ ನಿಮಿಷಗಳಲ್ಲಿ ಮತ್ತೆ ಜನನಾಂಗ ಹಿಂದಿನ ಸ್ಥಿತಿಯನ್ನೇ ಪಡೆಯುತ್ತದೆ. ಇದಕ್ಕೆ ಕಾರಣಗಳೇನು?
ನನಗೆ ಕುಡಿತದ ಅಭ್ಯಾಸವಿಲ್ಲ. ಹಾಗಿದ್ದೂ ಈ ಸಮಸ್ಯೆಗೆ ಕಾರಣವೇನು? ಹತ್ತು ವರ್ಷಗಳ ಹಿಂದೆ ವಿಪರೀತ ಕುಡಿಯುತ್ತಿದ್ದೆ. ಆದರೆ ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಕುಡಿತವನ್ನು ತ್ಯಜಿಸಿದೆ. ಆಗ ಇರದ ಸಮಸ್ಯೆ ಈಗ ಕಾಣಿಸಿಕೊಳ್ಳಲು ಏನು ಕಾರಣ? ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ಲೈಂಗಿಕ ಕ್ರಿಯೆಯ ವೇಳೆ ಜನನಾಂಗದಲ್ಲಿನ ಉದ್ರೇಕದ ಕೊರತೆಯಿಂದ ಸಮಸ್ಯೆ ಸೃಷ್ಟಿಯಾಗುವುದು ಸಾಮಾನ್ಯ. ನಿಮ್ಮ ವಯಸ್ಸು ೪೦ ದಾಟಿರುವ ಕಾರಣ ಇಂತಹ ಸಣ್ಣಪುಟ್ಟ ಸಮಸ್ಯೆ ಸಾಮಾನ್ಯ ಎನ್ನಬಹುದು. ಆದರೆ ಇದನ್ನೇ ದೊಡ್ಡದಾಗಿ ಭ್ರಮಿಸಿ ಜೀವನವೇ ಮುಗಿಯಿತು ಎಂದುಕೊಳ್ಳದಿರಿ. ವಯಸ್ಸಾದಂತೆ ಲೈಂಗಿಕ ಅಂಗದಲ್ಲಿ ರಕ್ತ ಪರಿಚಲನೆ ಕಡಿಮೆಯಾಗುವ ಕಾರಣ ಉದ್ರೇಕದ ಸಮಸ್ಯೆ ಎದುರಾಗುತ್ತದೆ. ನೀವು ಹೇಳಿದಂತೆ ಸ್ವಲ್ಪ ಹೊತ್ತಿನ ಬಳಿಕವಾದರೂ ಜನನಾಂಗ ಉದ್ರೇಕಗೊಂಡಲ್ಲಿ ಅಂತಹ ಸಮಸ್ಯೆ ಏನಿಲ್ಲ. ಸಂಭೋಗದಲ್ಲಿ ತೊಡಗಿಕೊಳ್ಳುವ ಮುಂಚೆ ಹೆಚ್ಚು ಸಮಯವನ್ನು ರೊಮ್ಯಾನ್ಸ್‌ನಲ್ಲಿ ತೊಡಗಿಕೊಳ್ಳಿ. ಚುಂಬನ, ಆಲಿಂಗನದಿಂದ ಜನನಾಂಗ ಉದ್ರೇಕಗೊಂಡ ಬಳಿಕ ಮುಂದುವರಿಯಿರಿ. ಪ್ರತಿನಿತ್ಯ ಸೆಕ್ಸ್ ಮಾಡಲೇಬೇಕು ಎಂದು ಹಠಕ್ಕೆ ಬೀಳುವುದಕ್ಕಿಂತ ವಾರದಲ್ಲಿ ಒಂದೋ, ಎರಡೋ ಬಾರಿ ಸೆಕ್ಸ್‌ನಲ್ಲಿ ಪರಿಪೂರ್ಣವಾಗಿ ತೊಡಗುವುದು ಒಳಿತು. ಹಿಂದೆ ನಿಮಗಿದ್ದ ಕುಡಿತದ ಚಟದಿಂದಲೂ ಇಂತಹ ಸಮಸ್ಯೆ ಉಂಟಾಗಿರುವ ಸಾಧ್ಯತೆಯಿದೆ. ನೀವು ಗುಪ್ತರೋಗ ತಜ್ಞರು ಎಂದು ಬೋರ್ಡ್ ಅಳವಡಿಸಿಕೊಂಡು ಔಷಧಿ, ಎಣ್ಣೆ ನೀಡುವವರಲ್ಲಿ ಸಮಸ್ಯೆ ಪರಿಹಾರಕ್ಕೆ ಹೋಗದಿರಿ. ಅವರು ನಿಮ್ಮ ಹಣ ಖಾಲಿ ಮಾಡುತ್ತಾರೆಯೇ ಹೊರತು ಸಮಸ್ಯೆ ಬಗೆಹರಿಯದು. ಯಾವುದಾದರೂ ಆಸ್ಪತ್ರೆಯ ತಜ್ಞ ವೈದ್ಯರಲ್ಲಿ ಚಿಕಿತ್ಸೆ ಪಡೆದರೆ ಉತ್ತಮ.

ನನ್ನ ಉಸಿರಲಿ ನಿನ್ನ ಹೆಸರಿದೆ

Posted by JAYAKIRANA Kirana on | 0 comments | Leave a comment...

ಹೂವಿಗೆ ಅರಳೋದು ಮಾತ್ರ ಗೊತ್ತು, ಅಳೋದು ಗೊತ್ತಿಲ್ಲ. ಸೂರ‍್ಯನಿಗೆ ಸುಡೋದು ಮಾತ್ರ ಗೊತ್ತು, ನಂದಿಸೋದು ಗೊತ್ತಿಲ್ಲ. ಅದೇ ತರ ನಂಗೆ ನಿನ್ನನ್ನು ನೆನಪಿಸೋದು ಮಾತ್ರ ಗೊತ್ತು. ಮರೆಯೋಕೆ ಗೊತ್ತಿಲ್ಲ ಕಣೋ...
ನೀನು ನನ್ನ ಜೊತೆ ಎಷ್ಟೊಂದು ಜಗಳ ಆಡ್ತಿಯಾ, ಮತ್ತೆ ಅದೇ ಕ್ಷಣ ನನ್ನತ್ರ ಬರ‍್ತಿಯಾ? ಯಾಕೆಂದರೆ ನನ್ನ ಬಿಟ್ಟು ಇರೋಕೆ ನಿಂಗೆ ಆಗಲ್ಲ ಅಲ್ವಾ... ಆದ್ರೂ ನಿಂಗೆ ನನ್ನನ್ನ ಅಳಿಸೋದೆಂದ್ರೆ ಅಷ್ಟೊಂದು ಇಷ್ಟನಾ...? ನಿ ನಂಜೊತೆ ಜಗಳ ಮಾಡಿದ ದಿನ ನನ್ನ ಮನಸ್ಸು ಕಲ್ಲಾಗಿ ಇರುತ್ತೆ. ಏನೂ ಬೇಡ, ಯಾರೂ ಬೇಡ ಅನ್ಸುತ್ತೆ ಗೊತ್ತಾ... ನಿಂಗೆ ಗೊತ್ತಿದ್ದರು ಈ ತರ ಸುಮ್ ಸುಮ್ಮನೆ ಜಗಳ ಮಾಡ್ತಿಯಾ ಅಲ್ವಾ...! ಇದು ನ್ಯಾಯಾನಾ...!
ಕೋಪ ಬಂದಾಗ ಯಾಕಾಗಿ ಲವ್ ಮಾಡಿದ್ದೀನಿ ಅಂತ ಮನಸ್ಸಿಗೆ ಅನಿಸಿದ್ರೂ ಈ ಪುಟ್ಟ ಹೃದಯ ಹೇಳುತ್ತೆ. ಕೊನೆ ತನಕನೂ ನನ್ನ ಉಸಿರಲಿ ನಿನ್ನದೇ ಹೆಸರಿರೋದು ಅಂತ. ರಿಯಲಿ ಕಣೋ. ನಿನ್ನನ್ನ ದಿನಾ ನೋಡದಿದ್ದರೂ ನಿನ್ನ ಜೊತೆ ಜಗಳ ಆಡಿದಾಗ ಮಾತಾಡದಿದ್ದರೂ, ನಿನ್ನ ಬಿಟ್ಟು ಬದುಕೋ ಶಕ್ತಿ ನನಗಿಲ್ಲ ಕಣೋ. ಕೊನೆ ತನಕನೂ ಈ ಹೃದಯ ಪ್ರೀತಿಯಿಂದ ಹಾಡುವ ಹಾಡು ಅದು. ನಿನ್ನ ಹೆಸರು ದಿನಾ ಕನವರಿಸೋ ಕನಸು ಅದು. ನಿನ್ನ ಹೆಸರು, ನಿನ್ನ ಬಿಟ್ಟು ಈ ಹೃದಯ ಬೇರೆ ಯಾರನ್ನೂ ಇಷ್ಟಪಡಲ್ಲ ಕಣೋ. ನಾ ನಿಂಗೆ ಕೊಟ್ಟ ನಂಬಿಕೇನಾ ಯಾವತ್ತೂ ಸುಳ್ಳು ಮಾಡಲ್ಲ, ನಾನು ನಿನ್ನಿಂದ ಆಸ್ತಿ, ಅಂತಸ್ತು ಬಯಸೊಲ್ಲ, ಈ ಭೂಮೀಲಿ ನನ್ನ ಜೀವ ಇರೋ ತನಕ ನಿನ್ನ ಪ್ರೀತಿ ನನಗೆ ಸಿಗಬೇಕು ಅನ್ನೋದೇ ನನ್ನಾಸೆ. ಇಷ್ಟರತನಕ ನಾ ಆಸೆ ಪಟ್ಟಿದ್ದು ಅಥವಾ ನಾ ಕಟ್ಟಿದ ಕನಸು ಯಾವುದೂ ನಂಗೆ ಸಿಗಲಿಲ್ಲ, ಆದ್ರೂ ಪರವಾಗಿಲ್ಲ. ನೀನು ನಂಜೊತೆ ಇರೋತನಕ ನಾ ಆಸೆ ಪಟ್ಟಿದ್ದು ನಾ ಕಟ್ಟಿದ ಕನಸು ಉಳಿಯುತ್ತೆ ಅನ್ನೋ ನಂಬಿಕೆ ನನಗಿದೆ. ಅದಕ್ಕೆ ಹೇಳ್ತೀನಿ ಕೇಳು, ನೀನೆಷ್ಟೇ ಜಗಳ ಆಡಿದ್ರೂ, ಯಾವತ್ತೂ ನನ್ನಿಂದ ದೂರ ಆಗ್ಬೇಡ ಕಣೋ.. ಪ್ಲೀಸ್. ನೀನು ನನ್ನಿಂದ ದೂರಾದ್ರೆ ಅನಾಥ ಶವ ಆಗಿ ಹೋಗ್ತೀನಿ ಕಣೋ ನಾನು.
ನಿನ್ನ ಪ್ರೀತಿಯ
ಎಚ್. ಎ..

ಕೊಕ್ಕೆಯ ನೆಗೆತ

Posted by JAYAKIRANA Kirana on | 0 comments | Leave a comment...

ಹೊಸ ಜೋಡಿಯಾದ ವಿಠಲ ಶೆಟ್ರ ಕೋಣಗಳು ಹಾಗೂ ಪಾಕಬೆಟ್ಟಿನ ಕೋಣಗಳು ನಿರ್ಣಾಯಕ ಓಟಕ್ಕೆ ಆಯ್ಕೆಯಾದವು. ಪ್ರೇಕ್ಷಕರು ಪಾಕಬೆಟ್ಟಿನ ಕೋಣಗಳೇ ಗೆಲುವಿನ ಅಂಚಿನಲ್ಲಿದೆಯೆಂದು ನಂಬಿದ್ದರು. ಜಾಕಿ ಸಂಜೀವ ಶೆಟ್ಟರು ತರಬೇತಿ ನೀಡಲು ಅವಕಾಶ ಕಡಿಮೆಯಾಗಿದ್ದು, ಕೊಕ್ಕೆ ಮತ್ತು ಬೊಳ್ಳನಿಗೆ ಹೊಂದಿಕೊಂಡು ಓಡುವ ಪರಿಪಾಠ ಕಡಿಮೆಯಿರುವುದರಿಂದ ಪ್ರೇಕ್ಷಕರು ನಿರೀಕ್ಷಿಸಿದ ರೀತಿಯಿದು. ಅಂದಿನ ಕಂಬಳದಲ್ಲಿ ಕಂಕನಾಡಿ ರಾಮಪ್ಪನವರ ಕೋಣಗಳು, ಅಣಾಜೆ ಗಣೇಶ ರೈಗಳ ಕೋಣಗಳು ಬಹಳ ರಭಸದಿಂದ ಓಡಿದವುಗಳಾಗಿದ್ದವು. ಅಂತೂ ಪ್ರಥಮ ಬಹುಮಾನ ಪಾಕಬೆಟ್ಟಿನವುಗಳಿಗೇ ಎಂದು ನಿರ್ಧಾರ ಜನರ ಬಾಯಲ್ಲಿತ್ತು.
ನಿರ್ಣಾಯಕ ಓಟ - ಗಂತಿನ ಕಡೆಗೆ ಪ್ರೇಕ್ಷಕರ ರೆಪ್ಪೆ ಮುಚ್ಚದ ನೋಟ, ಉಭಯ ಕರೆಗಳಲ್ಲಿ ಓಟಕ್ಕೆ ಸಜ್ಜಾಗಿ ನಿಂತ ಕೋಣಗಳಿಗೆ ಹಾ! ಬುಡಿ ಎಂಬುದಷ್ಟೇ ಕೇಳಿಸಿತು. ಒಂದು ಜೊತೆಯನ್ನು ಮೀರಿಸಲು ಛಲ ಇನ್ನೊಂದಕ್ಕೆ. ಪಾಕಬೆಟ್ಟನವು ಮುಂದಾದವು ಎಂದು ತಿಳಿಯುವಷ್ಟರಲ್ಲಿ ಮಂಜೊಟ್ಟಿಗೆ ೧೦ ಮೀಟರಿನ ಅಂತರವಿರಬಹುದು. ತಕ್ಷಣ ಜಾಕಿ ಸಂಜೀವ ಶೆಟ್ಟರು ಬೊಲ್ಲನ ಹಿಂದೆ ಓಡುತ್ತಿದ್ದವರು ಕೊಂಬರ ಬೈಲಿನ ಕೊಕ್ಕೆಯ ಹಿಂದಾದರು. ಇದನ್ನು ಗಮನಿಸಿದ ಕೊಕ್ಕೆಯ ಅಂದಿನ ನೆಗೆತವನ್ನು ನೆನೆಸಿದರೆ ಮೈನವಿರೇಳಿಸುತ್ತದೆ. ಕಾಣುವುದೇನು? ಮಂಜೊಟ್ಟಿಯನ್ನು ಒಂದು ಹೆಜ್ಜೆ ಮುಂದಕ್ಕೆ ಹಾರಿ ಆಶ್ಚರ್ಯದ ಗೆಲುವನ್ನು ಸಂಪಾದಿಸಿತು. ಕಂಬಳ ಮುಗಿಯಿತು. ವಿಠಲ ಶೆಟ್ರ ಕೋಣಗಳನ್ನು ಕೊಂಡಾಡಿದರು.
ಪಾಕಬೆಟ್ಟಿನ ಕೋಣಗಳಲ್ಲಿ ಜಯ ಸಂಪಾದಿಸಿದ ಈ ಕೋಣಗಳು ಕಾಡಬೆಟ್ಟಿನ ಕೋಣಗಳಿಗೆ ಮಿಗಿಲಾಗದು ಎಂಬ ಧ್ವನಿ ಕೇಳತೊಡಗಿತು.
ಬಜಗೋಳಿ ಕಂಬಳಕ್ಕೆ ಕಾಡಬೆಟ್ಟು ಮತ್ತು ಪಾಕಬೆಟ್ಟಿನ ಕೀರ್ತಿ ಪಡೆದ ಕೋಣಗಳು ಬಂದಿದ್ದವು. ಸ್ಪರ್ಧೆಯಲ್ಲಿ ಆಸಕ್ತಿಯುಳ್ಳ ಜನರು ಒಮ್ಮೆ ಕಾಡಬೆಟ್ಟಿನ ಕೋಣಗಳನ್ನು ಕಾಣುವುದು, ತಿರುಗಿ ಪೊಲದ ಕೋಣಗಳಿದ್ದಲ್ಲಿ ಬಂದು ಅವುಗಳನ್ನು ವೀಕ್ಷಿಸುವುದು, ಪೊಲದ ಕೋಣಗಳಿಗೆ ಕಾಡಬೆಟ್ಟಿನವುಗಳನ್ನು ಗೆಲ್ಲುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸುವುದು. ಅಂತೆಯೇ ಪಾಕಬೆಟ್ಟಿನ ಕೋಣಗಳಿದ್ದಲ್ಲಿ ಬಂದು, ಅವುಗಳನ್ನು ಮೆಚ್ಚಿ ಕಾಡಬೆಟ್ಟಿನ ಮತ್ತು ಪೊಲದವರ ಕೋಣಗಳನ್ನು ಇವು ಖಂಡಿತ ಹಿಮ್ಮೆಟ್ಟಿಸುತ್ತದೆಂದು ವಿಶ್ವಾಸ ಪ್ರಕಟಿಸುತ್ತಿದ್ದರು. ಈ ಮಧ್ಯೆ ಕೆಲವರು ಇದಕ್ಕೆ ಸರಿಸಮಾನವಾದ ಓಟದ ಕಂಕನಾಡಿಯ ಕೋಣಗಳಿವೆ. ಯಾವ ಜೊತೆಗೂ ಕಡಿಮೆಯಿಲ್ಲದ ಓಟದವುಗಳು ಎಂದು ಹೇಳುತ್ತಿರುವುದು ಅಲ್ಲಲ್ಲಿ ಕೇಳಬರುತ್ತಿದ್ದ ವಿಚಾರ.
ಹೀಗಾಗುವಾಗ ಕಂಬಳ ಕ್ರೀಡೆ ಪ್ರಾರಂಭವಾಯ್ತು. ಉತ್ಸಾಹಿ ಪ್ರೇಕ್ಷಕ ನಿರ್ಣಾಯಕ ಓಟದ ಕಡೆಗೆ ಗಮನವಿತ್ತಿರುತ್ತಾನೆ. ಕಂಬಳವು ಹಂತಹಂತವಾಗಿ ಪ್ರಾರಂಭವಾಗುತ್ತಿದೆಯಷ್ಟೆ!
ಪಾಕಬೆಟ್ಟಿನ ಲಕ್ಕಣ ಶೆಟ್ರ ಕೋಣಗಳನ್ನು ಕಾಡಬೆಟ್ಟಿನ ‘ಬಿ ಜೊತೆಯು ಸೋಲಿಸಿತು. ಹಾಗಾಗಿ ಕಾಡಬೆಟ್ಟಿನ ಎರಡೂ ಜೊತೆಗಳು ನಿರ್ಣಾಯಕ ಓಟಕ್ಕೆ ಆಯ್ಕೆಯಾದವು.
ಜನರ ಬಾಯಿಲ್ಲ ಮಾತು ನಿಲ್ಲಬೇಕಲ್ಲ. ಈ ದಿನದ ಎರಡೂ ಬಹುಮಾನಗಳು ಕಾಡಬೆಟ್ಟಿನವರಿಗೇ ಸೈ. ಮೆಡಲು ಕೊಂಡು ಹೋಗುವುದು ಕಾಡಬೆಟ್ಟಿನವರೇ ಎಂಬಿತ್ಯಾದಿ ಶ್ಲಾಘನೀಯ ಮಾತುಗಳು ಅಲ್ಲಲ್ಲಿ ಕೇಳಿಸಲ್ಪಟ್ಟವು.
ಕಾಡಬೆಟ್ಟಿನ ‘ಬಿ ಜೊತೆಯೊಂದಿಗೆ ಪೊಲದವರ ಕೋಣಗಳನ್ನು ಉಭಯ ಕರೆಗಳಲ್ಲಿ ನಿಲ್ಲಿಸಿ ಓಟದ ತಯಾರಿಯಾಗುತ್ತಿದೆ.
ಕೆಲವರ ಮನಸ್ಸಿನಲ್ಲಿ ತಳಮಳ ತಮ್ಮ ನಿರೀಕ್ಷೆಯಂತೆ ಕಾಡಬೆಟ್ಟು ಬಾರದಿದ್ದರೆ ಎಂಬ ಕಾರಣಕ್ಕಾಗಿ ಪೊಲದವರು ಗೆಲ್ಲುವುದು ಸುಲಭವಲ್ಲ. ಆದರೂ ಓಟದ ವಿಚಾರದಲ್ಲಿ ಸಿದ್ದವಾಗಿ ನಿಂತ ಜೋಡಿಗಳನ್ನು ಕಾಣುವಾಗ ಜಯ ಯಾರ ಪಾಲಾಗುವುದೆಂದು ಖಚಿತಪಡಿಸುವುದು ಅಸಾಧ್ಯ. ಭವಿಷ್ಯದ ಕಡೆ ನೋಡುತ್ತಿರುವಾಗ ಹಾ! ಬುಡಿ ಎಂಬ ಉದ್ಗಾರದಿಂದ ಕೋಣಗಳು ಓಟಕಿತ್ತವು.
ಓಟದ ಪ್ರಾರಂಭದಲ್ಲಿ ಕಾಡಬೆಟ್ಟಿನ ಕಾಳ ಕೋಣವು ತನ್ನ ಸ್ವಭಾವ ಪ್ರದರ್ಶಿಸಿತು. ಕರೆಯ ಬದಿಗೊತ್ತಿ ಓಡಲು ಸರಿಯಿತು. ಈ ಒಂದು ಸೆಕುಂದದ ಅವಕಾಶವನ್ನು ಪೊಲದ ಕೋಣಗಳು ಉಪಯೋಗಿಸಿಕೊಂಡು ಅಷ್ಟೇ ಅಂತರದಿಂದ ವಿಜಯ ಸಂಪಾದಿಸಿದವು.

ನಕ್ಸಲ್ ಹೆಸರಿನಲ್ಲಿ ಮಲೆಕುಡಿಯರ ದಮನ

Posted by JAYAKIRANA Kirana on | 0 comments | Leave a comment...


ಎಸ್‌ಟಿಎಫ್ ಕಾರ್ಯಪಡೆ ಅನೇಕ ಆದಿವಾಸಿ ಬುಡಕಟ್ಟು ಜನರನ್ನು ಮಾಹಿತಿದಾರರೆಂದು ಬಂಧಿಸಿತ್ತು. ಹಲವಾರು ಮಹಿಳೆಯರ, ಆದಿವಾಸಿ ಬುಡಕಟ್ಟು ಯುವತಿಯರನ್ನು ಅತ್ಯಾಚಾರ ಮಾಡಿದ ಘಟನೆಗಳು ನಡೆದು ಹೋಗಿದೆ. ವಿಠಲ ಮಲೆಕುಡಿಯ (ಬುಡಕಟ್ಟು) ನಕ್ಸಲರಿಗೆ ಮಾಹಿ ತಿದಾರ ಹಾಗೂ ನಕ್ಸಲ್ ಬೆಂಬಲಿತನೆಂಬ ಆರೋಪ ಮಾಡಲಾಗಿರುವ ಸಾಮ್ಯತೆಯು ಒಂದೇ ರೀತಿಯಾಗಿದೆ. ದೇಶವನ್ನು ಛಿದ್ರ ಮಾಡುವ ಉಗ್ರರು ಈ ದೇಶದ ಒಳಗೆ ಇದ್ದರೂ ಸ್ವತಂತ್ರರಾಗಿದ್ದರೆ. ಯಾವುದೇ ದೇಶದ್ರೋಹಿಯಾಗದ ವಿಠಲಮಲೆಕುಡಿಯ ಬಂಧಿತ ನಾಗಿದ್ದಾನೆ.

ಬಿ.ಕೆ.ಭಾಸ್ಕರ, ಬೆಂಡೋಡಿ
ಕರ್ನಾಟಕ ರಾಜ್ಯದ ಕರಾವಳಿ ಭಾಗದಲ್ಲಿ (ಬೆಳ್ತಂಗಡಿ, ಚಿಕ್ಕಮಗಳೂರು, ಮೂಡಿಗೆರೆ) ತಾಲೂಕಿನ ದಟ್ಟ ಅರಣ್ಯ ಭಾಗದಲ್ಲಿ ನಕ್ಸಲರ ಜಾಡು ಹಿಡಿಯುವ ವಿಶೇಷ ಕಾರ್ಯಪಡೆ ಇದುವರೆಗೆ ಸಾಧಿಸಿದ್ದು ಕೇವಲ ಓರ್ವ ಬಡಪಾಯಿ ವಿ.ವಿ. ವಿದ್ಯಾರ್ಥಿಯನ್ನು ಬಂಧಿಸಿ ಪ್ರಚಾರ ಗಿಟ್ಟಿಸಿದ್ದು ಬಿಟ್ಟರೆ ಯಾವನೇ ಒಬ್ಬ ಸಶಸ್ತ್ರ ನಕ್ಸಲನ ಕಾಲಿಗೂ ಬಂದೂಕಿನ ಗುರಿ ಹಿಡಿಯಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ನಕ್ಸಲರು ಎಲ್ಲೆಲ್ಲ ಅಡಗುದಾಣ ಹೊಂದಿದ್ದಾರೆ. ನಕ್ಸಲರೆಂಬವರು ಇದ್ದಾರೆಯೇ? ಇದ್ದರೆ ಅವರನ್ನು ಬಂಧಿಸಲು ವಿಫಲರಾಗುತ್ತಿರುವ ಎ.ಎನ್.ಎಫ್ ಕಾರ್ಯಪಡೆ ಅತ್ಯಾಧುನಿಕ ವಾಹನ ಹೊಂದಿ ರುವ ಶಸ್ತ್ರಾಸ್ತ್ರ ಪಡೆಗಳು ಬುಡಕಟ್ಟು ಜನರನು ಸಂಶಯದ ರೀತಿ ಬಂಧಿಸಿ ಆರೋಪ ಮಾಡಿರುವುದು ಯಾವ ಪುರುಷಾರ್ಥಕ್ಕಾಗಿ? ಆದಿವಾಸಿ ಮಲೆ ಕುಡಿಯರು ತಮ್ಮ ಪಾಡಿಗೆ ತಾವಿದ್ದು ನೆಮ್ಮದಿಯ ಜೀವನ ಮಾಡಲು ಕಾಡಿನ ಸಂಪನ್ಮೂಲದೊಂದಿಗೆ ಬದುಕುತ್ತಿರುವ ಇವರಿಗೇಕೆ ಸ್ವಾತಂತ್ರ್ಯವಿಲ್ಲ? ಇವರನ್ನು ಗನ್ನು ತೋರಿಸಿ ಬೆದರಿಸಿ ಆರೋಪದಡಿ ಬಂಧಿಸಿ ಅಮಾನವೀ ಯತೆಯಿಂದ ನೋಡುತ್ತಿರುವ ಪ್ರಜಾಪ್ರಭುತ್ವ ಭಾರತದಲ್ಲಿ ಈ ವ್ಯವಸ್ಥೆ ಬಂದಿರುವುದಕ್ಕೆ ವಿಷಾದವಾಗುತ್ತಿದೆ.
ದೇಶದ ಉದ್ದಗಲಕ್ಕೂ ವಿವಿಧ ವರ್ಗದ ಬುಡಕಟ್ಟು ಜನರು ಇಂತಹದೇ ಪರಿಸ್ಥಿತಿಯಲ್ಲಿ ದೈನಂದಿನ ಬದುಕು ಸಾಗಿಸುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದ ಸ್ಥಿತಿಯಲ್ಲಿಯೆ ಇಂದಿಗೂ ಆದಿವಾಸಿ ಬುಡಕಟ್ಟು ಜನರ ಜೀವನ ಸಾಗುತ್ತಿರುವುದಕ್ಕೆ ಭಾರತದ ರಾಜಕೀಯ ವ್ಯವಸ್ಥೆಯೇ ಕಾರಣವಾಗಿದೆ.
ಅರಣ್ಯ ವಾಸಿಯಾಗಿ ಬದುಕುತ್ತಿರುವ ಆದಿವಾಸಿ ಮಲೆಕುಡಿಯ ಜನಾಂಗ ಇತ್ತೀಚೆಗಿನ ವರ್ಷಗಳಲ್ಲಿ ಉನ್ನತ ಶಿಕ್ಷಣದತ್ತ ದಾಪುಗಾಲು ಇಡುತ್ತಿರುವಾಗಲೆ ಶಿಕ್ಷಣದ ಮೇಲೆ ದಬ್ಬಾಳಿಕೆ ನಡೆಸಲು ಕಾನೂನಿನ ವ್ಯವಸ್ಥೆ ಸಿದ್ದವಾಗುತ್ತಿದೆ. ಉದಾಹರಣೆಗೆ ವಿ.ವಿ. ವಿದ್ಯಾರ್ಥಿ ವಿಠಲ ಮಲೆಕುಡಿಯನನ್ನು ನಕ್ಸಲ್ ಬೆಂಬಲಿ ತನೆಂದು ಬಂಧಿಸಿ ಜೈಲಿಗೆ ಅಟ್ಟಿರುವ ಸಿದ್ದಾಂತ ರುಜುವಾಗಿದೆ.
ಕುತ್ಲೂರಿನ ಆದಿವಾಸಿ ಮಲೆಕುಡಿಯ ಜನಾಂಗದ ಮೇಲೆ ಎ.ಎನ್.ಎಫ್ ಕಣ್ಗಾವಲು ಇಟ್ಟಿದ್ದು ಇನ್ನಷ್ಟು ಬಂಧನವಾದರೂ ಆಶ್ಚರ್ಯಪಡಬೇಕಾಗಿಲ್ಲ. ಈ ವರ್ಗದ ಜನಾಂಗದ ಅಸಹಾಯಕತೆಯು ಇದಕ್ಕೆ ಕಾರಣವಾಗಿದೆ. ಈಗಾಗಲೆ ಬಂಧಿತ ವಿದ್ಯಾರ್ಥಿ ತನ್ನ ಮುಂದಿನ ಜೀವನದ ಮೊದಲ ಹೆಜ್ಜೆಯಲ್ಲೇ ಮುಗ್ಗರಿಸಿದ್ದಾನೆ. ಇವನ ಬಗ್ಗೆ ಸಹಾನುಭೂತಿ ತೋರುವ ಕಾನೂನುಗಳು ಸ್ವಾತಂತ್ರ್ಯ ಭಾರತದ ಸಂವಿಧಾನದಲ್ಲಿ ಇದ್ದರೂ ಉಪಯೋಗ ಮಾಡಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ. ಈ ಸಮುದಾಯಕ್ಕೆ ಮಾರ್ಗದರ್ಶಕರಿಲ್ಲದ ಕೊರತೆ ಎದ್ದು ಕಾಣುತ್ತಿದೆ. ಒಟ್ಟಿನಲ್ಲಿ ಬುಡಕಟ್ಟು ಜನರ ಜೀವನ ಅತಂತ್ರವಾಗುತ್ತಿದೆ.
ಮಲೆಕುಡಿಯ ಜನಾಂಗ ಶಿಕ್ಷಣದಲ್ಲಿ ತೀರಾ ಹಿಂದುಳಿದ ಪಂಗಡವಾಗಿದೆ. ಇವರಿಗೆ ತುಳು ಕನ್ನಡದ ಹೊರತು ಅನ್ಯಭಾಷೆಗಳ ಪರಿಜ್ಞಾನವಿಲ್ಲ. ಇಂತವರು ನಕ್ಸಲರ ಸಂಪರ್ಕ ಹೊಂದಿರುವುದು ಅಸಾಧ್ಯ. ಇವರಿಗೇಕೆ ನಕ್ಸಲರ ಸಹವಾಸ? ನಕ್ಸಲರನ್ನು ಕಂಡರೆ ಭಯಭೀತರಾಗಿ ಓಡಿ ಹೋಗುತ್ತಿರುವ ಮಲೆಕುಡಿಯವರು ಯಾವುದೇ ವಿಧ್ವಂಸಕ ದೇಶದ್ರೋಹಿಗಳ ಸಂಪರ್ಕ ಹೊಂದುವ ಸಾಧ್ಯತೆಗಳು ಇಲ್ಲ. ಅಂತಹ ಚಾಣಾಕ್ಷತೆ ಭಾಷಾಜ್ಞಾನ ಇವರಿಗಿಲ್ಲ. ಕಾಡಿನಲ್ಲಿ ಸ್ವಾಭಿಮಾನಿಯಾಗಿ ಜೀವನ ಮಾಡುತ್ತಿರುವ ಮಲೆ ಕುಡಿಯ ಜನಾಂವನ್ನು ದೇಶದ್ರೋಹಿಗಳಾಗಿದ್ದಾರೆ ಎಂಬ ಆರೋಪದಡಿ ಬಂಧಿಸುತ್ತಿರುವ ವ್ಯವಸ್ಥೆಯ ಹಿಂದೆ ಕಾಣದ ಶಕ್ತಿ ಅಡಗಿದೆ. ದಮನಿಸುವ ಉದ್ದೇಶದಿಂದ ಷಡ್ಯಂತ್ರ ರೂಪಿಸಿದೆ ಎಂಬುವುದು ಸ್ಪಷ್ಟವಾಗುತ್ತಿದೆ. ದಟ್ಟ ಅರಣ್ಯ ಪ್ರದೇಶಗಳಲ್ಲಿ ವಾಸವಿದ್ದಿರುವ ಮಲೆಕುಡಿಯ ಜನಾಂಗದವರಿಂದ ಕಾನೂನು ಬಾಹಿರವಾದ ಕಾರ್ಯ ನಡೆಯುತ್ತಿಲ್ಲ. ಇಂತಹ ಕಾರ್ಯ ನಡೆಸುವ ಅರಣ್ಯ ಕಳ್ಳರು ಅಕ್ರಮ ಗಾಂಜಾ ಬೆಳೆಯುವ ಉದ್ದೇಶ ಹಿಂದಿರುವ ಹೊರ ರಾಜ್ಯದ ಬೃಹತ್ ಜಾಲದ ತಂಡವೇ ಇಂತಹ ದಟ್ಟಾರಣ್ಯ ಪ್ರದೇಶಗಳಲ್ಲಿ ನಕ್ಸಲರ ವೇಷದಲ್ಲಿ ಕಾರ‍್ಯಾಚರಣೆ ಮಾಡುತ್ತಿರುವ ಸಾಧ್ಯತೆ ಹೆಚ್ಚಾಗಿದೆ ಇಂತಹ ಕುಳಗಳಿಗೆ ಇಲಾಖೆಯ ರಹಸ್ಯ ಸಹಕಾರವೂ ಇರುತ್ತದೆ. ಈ ಉದ್ದೇಶಗಳಿಗೆ ಕಾಡಿನ ಮಲೆಕುಡಿಯರು ಅಡ್ಡಿಯಾಗುತ್ತಾರೆಂದು ಅರಣ್ಯ ಪ್ರದೇಶದಿಂದ ಒದ್ದೋಡಿಸಲು ಒಂದು ತಂತ್ರವಾಗಿ ನಕ್ಸಲರ ಹಣೆಪಟ್ಟಿ ಕಟ್ಟಲಾಗುತ್ತಿದೆ.
ಈ ಪ್ರದೇಶದಲ್ಲಿ ಓಡಾಡುತ್ತಿರುವ ಕೇವಲ ೧೫ ನಕ್ಸಲರನ್ನು ಇದುವರಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದರೆ ಇದೆಂತಹ ಕಾರ್ಯಾಚರಣೆ ಇರಬಹುದು. ರಾಷ್ಟ್ರೀಯ ಉದ್ಯಾನವನದಿಂದ ಮಲೆಕುಡಿಯರನ್ನು ಹೊರದಬ್ಬಲು ಇಂತಹ ಆರೋಪಗಳನ್ನು ಮಾಡಿ ನೈತಿಕ ಬಲ ದಮನಿಸಲು ವ್ಯವಸ್ಥೆಯಾಗಿದ್ದರೂ ಇರಬಹುದು ಎಂಬ ಅನು ಮಾನದ ಹುತ್ತ ಬೆಳೆಯುತ್ತಿದೆ. ಎ.ಎನ್.ಎಫ್ ಕಾರ್ಯ ಪಡೆ ವಶಪಡಿಸಿಕೊಂಡ ಪರಿಕರಗಳು ಕಾಡಿನಲ್ಲಿ ದೊರೆತ ಸ್ಥಿತಿಯಲ್ಲಿ ಕಂಡು ಬರದೆ ಅದ್ಯಾವುದೋ ಮಾರು ಕಟ್ಟೆಯಲ್ಲಿ ಇಟ್ಟಿರುವ ಸ್ಥಿತಿಯಲ್ಲಿ ವ್ಯವಸ್ಥೆ ಮಾಡಿದಂತಿದೆ. ತೆಲುಗು, ತಮಿಳು, ಆಂಗ್ಲ ಭಾಷೆಯಲ್ಲಿರುವ ಈ ಕೃತಿಗಳು ಆದಿವಾಸಿಗಳು (ಮಲೆಕುಡಿಯರಿಗೆ ಕನ್ನಡ ಜ್ಞಾನವೇ ಸರಿಯಾಗಿ ಇಲ್ಲ) ಓದುವುದಕ್ಕೆ ಸಾಧ್ಯವಿಲ್ಲದಿರುವಾಗ ನಕ್ಸಲರ ಸಂಪರ್ಕ ಹೇಗೆ ಸಾಧ್ಯವಾಗುತ್ತದೆ? ಇಂತಹ ವಿಚಾರಗಳನ್ನು ನಂಬಲು ಅಸಾಧ್ಯವಾಗಿದೆ.
ಈ ಹಿಂದೆಯೂ ಆದಿವಾಸಿ ಬುಡಕಟ್ಟು ಜನರನ್ನು ಆರೋಪಿಗಳನ್ನಾಗಿ ಮಾಡಿರುವ ಉದಾಹರಣೆಗಳಿವೆ. ದಂತಚೋರ ವೀರಪ್ಪನ್ ಕಾರ್ಯಾಚರಣೆ ಮಾಡಿರುವ ಬಿದರಿ ತಂಡದ ಎಸ್‌ಟಿಎಫ್ ಕಾರ್ಯಪಡೆ ಅನೇಕ ಆದಿವಾಸಿ ಬುಡಕಟ್ಟು ಜನರನ್ನು ಮಾಹಿತಿದಾರರೆಂದು ಬಂಧಿಸಿತ್ತು. ಹಲವಾರು ಮಹಿಳೆಯರ, ಆದಿವಾಸಿ ಬುಡಕಟ್ಟು ಯುವತಿಯರನ್ನು ಅತ್ಯಾಚಾರ ಮಾಡಿದ ಘಟನೆಗಳು ನಡೆದು ಹೋಗಿದೆ. ವಿಠಲ ಮಲೆಕುಡಿಯ (ಬುಡಕಟ್ಟು) ನಕ್ಸಲರಿಗೆ ಮಾಹಿತಿದಾರ ಹಾಗೂ ನಕ್ಸಲ್ ಬೆಂಬಲಿತನೆಂಬ ಆರೋಪ ಮಾಡಲಾಗಿರುವ ಸಾಮ್ಯತೆಯು ಒಂದೇ ರೀತಿಯಾಗಿದೆ. ದೇಶವನ್ನು ಛಿದ್ರ ಮಾಡುವ ಉಗ್ರರು ಈ ದೇಶದ ಒಳಗೆ ಇದ್ದರೂ ಸ್ವತಂತ್ರರಾಗಿದ್ದರೆ. ಯಾವುದೇ ದೇಶದ್ರೋಹಿಯಾಗದ ವಿಠಲ ಮಲೆಕುಡಿಯ ಬಂಧಿತನಾಗಿದ್ದಾನೆ.
ದೇಶದಲ್ಲಿ ೧೮ ಸಾವಿರದಷ್ಟು ಜನಸಂಖ್ಯೆಯನ್ನು ಮಲೆ ಕುಡಿಯರು ಹೊಂದಿದ್ದಾರೆ. ವಿನಾಶದತ್ತ ಸಾಗುತ್ತಿರುವ ಎರಡನೇ ಸಾಲಿನ ಬುಡಕಟ್ಟು ಜನಾಂಗವಾಗಿದೆ ಇದು. ಈ ಜನಾಂಗವನ್ನು ಇನ್ನಷ್ಟು ವಿನಾಶಕ್ಕೆ ತಳ್ಳುತ್ತಿರುವ ಈ ವ್ಯವಸ್ಥೆ ಆದಿವಾಸಿ ಮಲೆಕುಡಿಯರನ್ನು ಅತಂತ್ರವಾಗಿಸಲು ಹೊರಟಿರುವುದು ಗಂಭೀರ ಪರಿಸ್ಥಿತಿಯಾಗಿದೆ ಹಾಗೂ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಸಚಿನ್ ತೆಂಡೂಲ್ಕರ್ ಬದಲಿಗೆ ದ್ರಾವಿಡ್‌ರನ್ನು ರಾಜ್ಯಸಭೆಗೆ ಆಯ್ಕೆ ಮಾಡಬಹುದಿತ್ತು: ಠಾಕ್ರೆ ಗುಡುಗು

Posted by JAYAKIRANA Kirana on | 0 comments | Leave a comment...

ಮುಂಬೈ: ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿದ ಕಾಂಗ್ರೆಸ್‌ನ ಉದ್ದೇಶವನ್ನು ಪರಿಶೀಲಿಸುವ ಅಗತ್ಯವಿದೆ. ಸಚಿನ್ ಬದಲಿಗೆ ದ್ರಾವಿಡ್ ಅವರನ್ನು ಈ ಸ್ಥಾನಕ್ಕೆ ಪರಿಗಣಿಸಬಹುದಿತ್ತು ಎಂದು ಶಿವಸೇನಾ ಪ್ರಮುಖ ಬಾಳ್ ಠಾಕ್ರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ತನ್ನ ಲಾಭಕ್ಕಾಗಿ ಹೀಗೆ ಮಾಡಿದೆ ಎಂದು ಸ್ಪಷ್ಟವಾಗಿದೆ ಎಂದು ಠಾಕ್ರೆ ಪಕ್ಷದ ಮುಖ ವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದ್ದಾರೆ.
ಭಾರತದ ಕೋಟಿಗಟ್ಟಲೆ ಕ್ರಿಕೆಟ್ ಅಭಿಮಾನಿ ಗಳು ಸಚಿನ್‌ಗೆ ಭಾರತ ರತ್ನ ನೀಡಬೇಕು ಎಂದು ಹೇಳುತ್ತಿದ್ದಾರೆ. ಸಚಿನ್ ತೆಂಡುಲ್ಕರ್ ಕೇವಲ ಎಂ.ಪಿ. ಮಾತ್ರವಾಗಿದ್ದಾರೆ. ಸಚಿನ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮೂಲಕ ಕಾಂಗ್ರೆಸ್ ಕೊಂಚ ಮಟ್ಟಿಗೆ ಜಯ ಗಳಿಸಬಹುದು. ಆದರೆ ಇದು ಆ ಪಕ್ಷದ ಮತ ಬ್ಯಾಂಕ್ ಕನಸುಗಳಿಗೆ ಪ್ರಯೋಜನವಾಗದು ಎಂದು ಠಾಕ್ರೆ ಹೇಳಿದ್ದಾರೆ.
ಕಾಂಗ್ರೆಸ್ ವಿವಿಧ ಸಮಸ್ಯೆಗಳಲ್ಲಿ ಸಿಕ್ಕಿಕೊಂಡಿದೆ. ರಾಜ್ಯಸಭಾ ಸದಸ್ಯರಾಗಿ ಸಚಿನ್ ತೆಂಡುಲ್ಕರ್ ಅವರ ನಾಮನಿರ್ದೇಶನ ಮಾಡುವ ಮೂಲಕ ಮಾಧ್ಯಮದ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ರಾಜ್ಯಸಭೆಯ ನಾಮ ನಿರ್ದೇಶನಕ್ಕಾಗಿ ಸುನೀಲ್ ಗಾವಸ್ಕರ್, ಕಪಿಲ್ ದೇವ್ ಮತ್ತು ರಾಹುಲ್ ಡ್ರಾವಿಡ್ ಅವರ ಹೆಸರನ್ನು ಕಾಂಗ್ರೆಸ್ ಪರಿಶೀಲಿಸಬಹುದಿತ್ತು ಎಂದು ಗುಡುಗಿದ್ದಾರೆ.
ಸಂಸತ್ತಿನ ಮೇಲ್ಮನೆಗೆ ಚಿತ್ರನಟಿ ರೇಖಾ ಅವರನ್ನೂ ನಾಮನಿರ್ದೇಶನ ಮಾಡಿದ ಹಿಂದಿನ ಉದ್ದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೇಖಾ ಸುಂದರವಾಗಿರಬಹುದು. ಆದರೆ ಅವರ ನಾಮನಿರ್ದೇಶನದ ಹಿಂದಿನ ಉದ್ದೇಶ ಸರಿಯಾಗಿಲ್ಲ. ಕಾಂಗ್ರೆಸ್ ಇಲ್ಲಿ ಕೂಡಾ ಕೊಳಕು ರಾಜಕೀಯಯದ ಆಟವಾಡಿದೆ ಎಂದು ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಕಿಡಿಕಾರಿದ್ದಾರೆ.

ಇಮಾಮ್ ಇಂದು ಕ್ರೈಂ ಬ್ರಾಂಚ್ ವಶಕ್ಕೆ

Posted by JAYAKIRANA Kirana on | 0 comments | Leave a comment...

ದೇವಲೋಕ ಕೊಲೆ ಪ್ರಕರಣ
ಮಂಗಳೂರು: ಪೆರ್ಲ ದೇವ ಲೋಕ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಹಂತಕ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಇಮಾಮ್ ಹುಸೇನ್‌ನನ್ನು ಹೆಚ್ಚುವರಿ ವಿಚಾರಣೆಗಾಗಿ ಇಂದು ಕ್ರೈಂ ಬ್ರಾಂಚ್ ವಶಕ್ಕೆ ಒಪ್ಪಿಸುವ ಸಾಧ್ಯತೆಗಳಿವೆ. ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೊಪ್ಪಿಸುವಂತೆ ಕಲ್ಲಿಕೋಟೆ ಕ್ರೈಂ ಬ್ರಾಂಚ್ ಪೊಲೀಸರು ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯ ಆರೋಪಿಯನ್ನು ಇಂದು ನ್ಯಾಯಾ ಲಯಕ್ಕೆ ಹಾಜರುಪಡಿಸುವಂತೆ ಕಾಸರಗೋಡು ಸಬ್‌ಜೈಲ್ ಸುಪರಿಂಟೆಂಡೆಂಟ್‌ಗೆ ಆದೇಶ ನೀಡಿದೆ. ಆರೋಪಿಯ ಗುರುತು ಪತ್ತೆ ಪೆರೇಡ್ ಈಗಾಗಲೇ ನಡೆದಿದ್ದು, ನಾಲ್ಕು ಮಂದಿ ಆರೋಪಿಯ ಗುರುತು ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯಿಂದ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆರೋಪಿಯನ್ನು ಇಂದು ಮತ್ತು ನಾಳೆ ಘಟನೆ ನಡೆದ ಸ್ಥಳ ದೇವಲೋಕಕ್ಕೆ ಕರೆದೊಯ್ದು ಮಾಹಿತಿ ಸಂಗ್ರಹಿಸಲು ತನಿಖಾತಂಡ ಮುಂದಾಗಿದೆ.

ತಿಂಗಳೆಯನ್ನು ಸೋಲಿಸಿದ ನೀಲಾವರ

Posted by JAYAKIRANA Kirana on | 0 comments | Leave a comment...

ಉಡುಪಿ: ಕಸಾಪ ಚುನಾವಣೆ
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆದಿತ್ಯವಾರ ನಡೆದ ಚುನಾವಣೆಯಲ್ಲಿ ನೀಲಾವರ ಸುರೇಂದ್ರ ಅಡಿಗ ಅವರು ಪ್ರತಿಸ್ಪರ್ಧಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಯವರನ್ನು ಅತ್ಯಲ್ಪ ಮೂರು ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾ ಗಿದ್ದಾರೆ.
ಸುರೇಂದ್ರ ಅಡಿಗ ಅವರು ೧೯೮ ಮತಗಳನ್ನು ಪಡೆದು, ೧೯೫ ಮತಗಳನ್ನು ಪಡೆದ ವಿಕ್ರಮಾರ್ಜುನ ಹೆಗ್ಡೆಯವರನ್ನು ಸೋಲಿಸಿದ್ದಾರೆ. ಅಡಿಗರಿಗೆ ಕುಂದಾ ಪುರ ತಾಲೂಕಿನಲ್ಲಿ ೮೭ ಹಾಗೂ ಉಡುಪಿ ಮತ್ತು ಕಾರ್ಕಳ ತಾಲೂಕು ಗಳಿಂದ ೧೧೧ ಮತಗಳು ಲಭಿಸಿವೆ. ವಿಕ್ರ ಮಾರ್ಜುನ ಹೆಗ್ಡೆಯವರಿಗೆ ಕುಂದಾಪುರ ತಾಲೂಕಿನಿಂದ ೧೧೩ ಹಾಗೂ ಉಡುಪಿ ಮತ್ತು ಕಾರ್ಕಳ ತಾಲೂಕುಗಳಿಂದ ೮೨ ಮತಗಳು ಸಿಕ್ಕಿವೆ. ಮೂರು ಮತಗಳು ತಿರಸ್ಕೃತವಾಗಿವೆ.
ಕಸಾಪ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹಾಗೂ ಸಾಹಿತಿ ಮತ್ತು ಸಂಘಟಕ ನೀಲಾವರ ಸುರೇಂದ್ರ ಅಡಿಗ ಇವರ ನಡುವೆ ಜಿಲ್ಲಾಧ್ಯಕ್ಷತೆಗಾಗಿ ಜಿದ್ದಾಜಿದ್ದಿ ನಡೆದಿತ್ತು. ತಿಂಗಳೆಯವರನ್ನು ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ಅಂಬಾತನಯ ಮುದ್ರಾಡಿ ಹಾಗೂ ಬಳಗದವರು ಬೆಂಬಲಿಸಿದ್ದರೆ, ಅಡಿಗರನ್ನು ಕುಂದಾಪುರ ತಾಲೂಕಿನ ಸಾಹಿತಿಗಳು ಹಾಗೂ ಸಂಘಟಕರು ಬೆಂಬಲಿಸಿದ್ದರು.
ತಿಂಗಳೆಯವರನ್ನು ಅವಿರೋಧ ವಾಗಿ ಕಸಾಪ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಅಂಬಾತನಯ ಮುದ್ರಾಡಿ ಹಾಗೂ ಬೆಂಬಲಿಗರು ಸಾಕಷ್ಟು ಪ್ರಯತ್ನ ನಡೆಸಿದ್ದರು. ಈ ಸಂಬಂಧವಾಗಿ ಪತ್ರಿಕಾ ಗೋಷ್ಟಿ ನಡೆಸಿ ಮತದಾರರಿಗೆ ಬಹಿರಂಗ ಮನವಿಯನ್ನೂ ಮಾಡಿದ್ದರು. ಆದರೆ ಅಂಬಾತನಯ ಮುದ್ರಾಡಿಯವರ ನೇತೃತ್ವದಲ್ಲಿದ್ದ ಕಸಾಪದ ಕಾರ್ಯವೈಖರಿ ಬಗ್ಗೆ ಕಸಾಪ ಮತದಾರರಿಗೆ ಸಮಾ ಧಾನವೇನೂ

ಕ.ಸಾ.ಪ.: ಮುಂದುವರಿದ ಕಲ್ಕೂರ ಪ್ರಾಬಲ್ಯ

ಕಲ್ಕೂರ ಇಲ್ಲಿಯ ತನಕ ಸಲೀಸಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್‌ಗೆ ಸುಲಭವಾಗಿ ಆಯ್ಕೆಯಾಗುತ್ತಾ ಬರುತ್ತಿದ್ದರೂ ಇದೇ ಮೊದಲ ಬಾರಿ ಹರಿಕೃಷ್ಣ ಪುನರೂರು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆದು ಕಲ್ಕೂರ ಇಲ್ಲೂ ಪ್ರಾಬಲ್ಯ ಸಾಧಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಲೆಕ್ಕಪತ್ರ ಸರಿಯಾಗಿಲ್ಲ ಎನ್ನುವ ಕಾರಣ ಹಿಡಿದುಕೊಂಡು ಆರಂಭವಾದ ಕಲ್ಕೂರ ವಿರುದ್ಧದ ಚಳುವಳಿ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಮೂರು ಅವಧಿಯಲ್ಲಿ ಸಾಕಷ್ಟು ಬೆಂಬಲಿಗರನ್ನು ಗಳಿಸಿಕೊಂಡಿರುವ ಪ್ರದೀಪ್ ಕಲ್ಕೂರ ಅದನ್ನು ಈ ಚುನಾವಣೆಯಲ್ಲಿ ಸಾಬೀತು ಪಡಿಸಿದ್ದಾರೆ. ಇಲ್ಲಿಯವರೆಗೆ ನೀರಸವಾಗಿ ನಡೆಯುತ್ತಿದ್ದ ಪದಾಧಿಕಾರಿ ಆಯ್ಕೆಯನ್ನು ರೋಚಕ ಘಟ್ಟಕ್ಕೆ ತಲುಪಿಸುವಲ್ಲಿ ಹರಿಕೃಷ್ಣ ಪುನರೂರು ಕೂಡಾ ಯಶಸ್ವಿಯಾಗಿದ್ದಾರೆ.

ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ನಡೆದ ಚುನಾ ವಣೆಯಲ್ಲಿ ಪ್ರದೀಪ್ ಕುಮಾರ್ ಕಲ್ಕೂರ ಅವರು ಜಯಗಳಿಸುವ ಮೂಲಕ ಮತ್ತೊಮ್ಮೆ ಪ್ರಾಬಲ್ಯ ಮೆರೆದಿ ದ್ದಾರೆ.
ಕಸಾಪ ರಾಜ್ಯ ನಿಕಟಪೂರ್ವ ಅಧ್ಯಕ್ಷರಾಗಿರುವ ಹರಿಕೃಷ್ಣ ಪುನರೂರು ತಿರುಗಿಬಿದ್ದ ಕಾರಣ ಕಳೆದ ಮೂರು ಅವಧಿಯಲ್ಲಿ ಕಸಾಪ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾ ಬಂದಿದ್ದ ಕಲ್ಕೂರ ಅವರಿಗೆ ಈ ಬಾರಿಯ ಚುನಾವಣೆ ಕಬ್ಬಿಣದ ಕಡಲೆಯಾಗಿತ್ತು. ಅಲ್ಲದೆ ಚುನಾವಣೆಗೆ ಮುನ್ನ ಎರಡು ಬಣಗಳ ನಡುವೆ ನಡೆದ ಪತ್ರಿಕಾಗೋಷ್ಟಿಗಳು ಆರೋಪ-ಪ್ರತ್ಯಾರೋಪಗಳಿಗೆ ಕಾರಣ ವಾಗಿತ್ತು. ಕಲ್ಕೂರ ಅವರ ಎದುರಾಳಿ ಸರ್ವೋತ್ತಮ್ ಅಂಚನ್ ಪರವಾಗಿ ಕರವೇ ಪದಾಧಿಕಾರಿಗಳೂ ನಿಂತಿದ್ದ ಕಾರಣ ಚುನಾವಣಾ ಫಲಿತಾಂಶ ವಿಶೇಷವಾದ ಕುತೂಹಲ ಕೆರಳಿಸಿತ್ತು.
ದ.ಕ.ಜಿಲ್ಲೆಯಲ್ಲಿ ಕಸಾಪಕ್ಕೆ ೧೯೩೨ ಮತಗಳಿದ್ದು, ನಿನ್ನೆ ನಡೆದ ಚುನಾವಣೆ ಯಲ್ಲಿ ೯೭೭ ಮತಗಳು ಚಲಾವಣೆ ಯಾಗಿದ್ದವು. ಇದರ ಪೈಕಿ ಸರ್ವೋ ತ್ತಮ್ ಅಂಚನ್ ಅವರಿಗೆ ೩೫೮ ಮತಗಳು, ಹರೀಶ್ ಅವರಿಗೆ ೧೪೯ ಮತಗಳು ಬಂದಿದ್ದು ಪ್ರದೀಪ ಕುಮಾರ್ ಕಲ್ಕೂರ ಅವರಿಗೆ ೪೬೪ ಮತಗಳು ಪಡೆಯುವ ಮೂಲಕ ೧೦೬ ಮತಗಳಿಂದ ಜಯ ಸಾಧಿಸಿದ್ದಾರೆ. ಚುನಾವಣಾ ಫಲಿತಾಂಶದ ಮೂಲಕ ಕಲ್ಕೂರ ಅವರು ಈ ಬಾರಿಯೂ ಕೂಡಾ ಎದುರಾಳಿಗಳಿಗೆ ತಕ್ಕ ಉತ್ತರ ನೀಡಿದಂತಾಗಿದೆ.

ದಲಿತ ಮುಖಂಡರಿಗಾಗಿ ಕಾದು ಕುಳಿತ ಅಧಿಕಾರಿಗಳು

Posted by JAYAKIRANA Kirana on | 0 comments | Leave a comment...

ಮಂಗಳೂರು: ಸರಕಾರಿ ಇಲಾ ಖೆಗಳಲ್ಲಿ ನಡೆಯುವ ಯಾವುದೇ ಸಭೆ-ಸಮಾರಂಭಗಳಿದ್ದರೂ ಅಧಿಕಾರಿಗಳ ಆಗಮನಕ್ಕಾಗಿ ಕಾಯು ವುದು ಮಾಮೂಲಿ. ಆದರೆ ನಿನ್ನೆ ನಡೆದ ಎಸ್.ಸಿ.-ಎಸ್.ಟಿ. ಸಭೆಗಾಗಿ ಪೊಲೀಸ್ ಅಧಿಕಾರಿಗಳೇ ದಲಿತರನ್ನು ಕಾಯಬೇಕಾದ ವಿಲಕ್ಷಣ ಪ್ರಸಂಗ ಜರುಗಿತು.
ದಲಿತರ ಕುಂದು-ಕೊರತೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಕಮೀ ಷನರ್ ಕಚೇರಿಯಲ್ಲಿ ಪ್ರತೀ ತಿಂಗ ಳಾಂತ್ಯದಲ್ಲಿ ನಡೆಸಲ್ಪಡುವ ಮಾಸಿಕ ಸಭೆಯನ್ನು ನಿನ್ನೆ ಬೆಳಗ್ಗೆ ೧೦.೩೦ಕ್ಕೆ ಆಯೋಜಿಸಲಾಗಿತ್ತು. ಜಿಂಬಾಬ್ವೆ ತಂಡಕ್ಕೆ ಭದ್ರತೆ ನೀಡುವ ಜಂಜಾಟದ ನಡುವೆಯೂ ಸಮಯಕ್ಕೆ ಸರಿಯಾಗಿಯೇ ಡಿವೈಎಸ್‌ಪಿ ಪುಟ್ಟಮಾಧಯ್ಯ, ಎಸಿಪಿಗಳಾದ ಟಿ.ಆರ್.ಜಗನ್ನಾಥ್, ಸುಬ್ರಮಣ್ಯ, ನಾಗರಿಕ ಜಾರಿ ಹಕ್ಕು ನಿರ್ದೇಶನಾಲಯದ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಸಹಿತ ಎಲ್ಲಾ ಇಲಾಖೆಗಳ ಪೊಲೀಸ್ ಅಧಿಕಾರಿಗಳು ಹಾಗೂ ಪತ್ರಕರ್ತರು ಹಾಜರಾಗಿದ್ದರು. ಡಿಸಿಪಿ ಧರ್ಮಯ್ಯ ಅವರು ೧೦.೪೫ರ ವೇಳೆಗೆ ನಿಗದಿತ ಸ್ಥಳಕ್ಕೆ ಆಗಮಿಸಿದ್ದರು.
ಆದರೂ ದಲಿತ ಸಮುದಾಯದ ಮುಖಂಡರಾಗಲೀ ಅಥವಾ ಇನ್ಯಾರೂ ಇರಲಿಲ್ಲ. ದಲಿತ ಮುಖಂಡರಿಗೆ ಮಾಹಿತಿ ರವಾನಿಸಿರುವ ಬಗ್ಗೆ ಪುಷ್ಟೀಕರಿಸಿದ ಡಿಸಿಪಿ, ಅರ್ಧ ಗಂಟೆ ಕಾದು ಸಭೆಯನ್ನು ರದ್ದುಪಡಿಸುವ ತೀರ್ಮಾನ ಕೈಗೊಂಡರು. ಆದರೆ ೧೦.೫೦ರ ವೇಳೆಗೆ ದಲಿತ ಮುಖಂಡರ ಸಹಿತ ೧೨ ಮಂದಿ ಸಭೆಗೆ ಆಗಮಿಸಿದ ಕಾರಣ ಸಭೆ ರದ್ದಾಗುವುದು ಉಳಿಯಿತು. ಬಳಿಕ ನಡೆದ ಸಭೆಯಲ್ಲಿ ನೂತನ ವಿಚಾರಗಳು ಇಲ್ಲದೆ ಹಿಂದಿನ ವಿಷಯದ ಬಗ್ಗೆ ಒಂದಿಷ್ಟು ಹೊತ್ತು ಚರ್ಚೆ ನಡೆಸಲಾಯಿತು.

ಉರ್ವ ಠಾಣೆಯಲ್ಲಿ ಎಚ್.ಸಿ. ದರ್ಬಾರ್
ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಸದಾಶಿವ, ಕಳೆದ ಎರಡು ವರ್ಷಗಳ ಹಿಂದೆ ಉರ್ವ ಠಾಣೆಗೆ ಬಂದ ಹೆಡ್ ಕಾನ್ಸ್‌ಟೇಬಲ್ ಓಂಕಾರ್ ಅವರು ಠಾಣೆಗೆ ದೂರು ನೀಡಲು ಬರುವವರ ಬಳಿ ದೂರು ಸ್ವೀಕರಿಸಿ ಅದನ್ನು ಹಿರಿಯ ಅಧಿಕಾರಿ ಗಳ ಗಮನಕ್ಕೆ ತಾರದೆ ಆರೋಪಿ ಗಳನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸುವ ಮೂಲಕ ಕೇಸು ಮುಚ್ಚಿ ಹಾಕುತ್ತಿದ್ದಾರೆ. ಸುಂಕದ ಕಟ್ಟೆಯಲ್ಲಿ ಕಳೆದ ಒಂದು ವರ್ಷದಲ್ಲಿ ಐವರು ದಲಿತರ ಮೇಲೆ ಮೇಲ್ವರ್ಗದವರು ಮಾರಣಾಂತಿಕ ವಾಗಿ ಹಲ್ಲೆ ನಡೆಸಿರುವ ಬಗ್ಗೆ ದೂರು ನೀಡ ಲಾಗಿದ್ದರೂ ಅದ್ಯಾವುದನ್ನೂ ಮೇಲ ಧಿಕಾರಿಗಳ ಗಮನಕ್ಕೆ ತಾರದೆ ಮುಚ್ಚಿ ಹಾಕಲಾಗಿದೆ. ಇದ್ದಕ್ಕೆಲ್ಲಾ ಓಂಕಾರ್ ಕಾರಣ ಎಂದು ಆರೋಪಿಸಿದರು.

ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಗೋವುಗಳ ರಕ್ಷಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಗೋವುಗಳನ್ನು ರಕ್ಷಿಸಿರುವ ಉಳ್ಳಾಲ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಪಜೀರು ಗ್ರಾಮದ ಪಾನಿಯಾಲ ನಿವಾಸಿ ಬದ್ರು ಎಂದು ಗುರುತಿಸಲಾಗಿದ್ದು ವಾಹನವೂ ಈತನದ್ದಾಗಿದೆ. ಇನ್ನೋರ್ವ ಆರೋಪಿ ವಾಹನ ಚಾಲಕ ಇಲ್ಯಾಸ್ ಎಂಬಾತ ಪರಾರಿಯಾಗಿದ್ದಾನೆ. ಗೋಸಾಗಾಟಕ್ಕೆ ಬಳಸಲಾಗಿದ್ದ ಪಿಕಪ್ ವಾಹನವನ್ನು ಹಾಗೂ ಅದರಲ್ಲಿದ್ದ ನಾಲ್ಕು ಕರುಗಳು ಹಾಗೂ ಒಂದು ದನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇವುಗಳನ್ನು ಉಪ್ಪಿನಂಗಡಿಯಿಂದ ತರಲಾಗಿದ್ದು ಚೆಂಬುಗುಡ್ಡೆಯಲ್ಲಿರುವ ಮಾಂಸ ವ್ಯಾಪಾರಿ ಎಂ.ಸಿ.ಬಾವ ಎಂಬವರ ಮನೆಗೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿಯರಿತ ಉಳ್ಳಾಲ ಪೊಲೀಸರು ಮಧ್ಯಾಹ್ನ ಚೆಂಬುಗುಡ್ಡೆ ಯಲ್ಲಿ ಕಾರ್ಯಾಚರಣೆ ನಡೆಸಿದ್ದರು.

ಅನಾಹುತ ಆಹ್ವಾನಿಸುತ್ತಿರುವ ಅಪಾಯಕಾರಿ ಹೊಂಡ

Posted by JAYAKIRANA Kirana on | 0 comments | Leave a comment...

ಮಂಗಳೂರು: ತೊಕ್ಕೊಟ್ಟು ವಿನಿಂದ ಮಂಜನಾಡಿಯಾಗಿ ಹಾದು ಹೋಗಿರುವ ರಸ್ತೆ ಡಾಮರೀಕರಣ ಗೊಂಡಿರುವುದು ಸ್ವಾಗತಾರ್ಹ. ಆದರೆ ರಸ್ತೆಯ ಬದಿಯ ತೋಡಿಗೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆ ಕುಸಿದು ಬೀಳುತ್ತಿದೆ.
 ಮಂಜನಾಡಿ ಕಲ್ಕಟ್ಟ ಎಂಬಲ್ಲಿ ರಸ್ತೆಯ ಬದಿ ಇತ್ತೀಚೆಗೆ ತಡೆಗೋಡೆ ಯೊಂದು ನಿರ್ಮಿಸ ಲಾಗಿದೆ. ಆದರೆ ಆ ತಡೆಗೋಡೆ ಕಳಪೆ ಕಾಮಗಾರಿ ಯಿಂದಾಗಿ ಕುಸಿದು ಬಿದ್ದಿದ್ದು ಅಪಾಯ ವನ್ನು ಆಹ್ವಾನಿಸುತ್ತಿವೆ. ಇತ್ತೀಚೆಗೆ ಇದೇ ಹೊಂಡಕ್ಕೆ ಟೆಂಪೊವೊಂದು ಬಿದ್ದು ಟೆಂಪೊದಲ್ಲಿದ್ದವರು ಅಪಾಯದಿಂದ ಪಾರಾಗಿದ್ದರು. ವಾಹನಗಳಿಗೆ ಸೈಡ್ ಕೊಡಲು ಜಾಗವಿಲ್ಲದ ಈ ಸ್ಥಳದಲ್ಲಿ ಹಲವಾರು ಮಂದಿ ಜನಪ್ರತಿನಿಧಿಗಳು ಸಂಚರಿಸುತ್ತಾರೆ. ಆದರೆ ಅವರು ಈ ಅಪಾಯಕಾರಿ ಹೊಂಡವನ್ನು ದುರಸ್ತಿಪಡಿಸುವ ಬಗ್ಗೆ ಗಮನಹರಿ ಸುವುದಿಲ್ಲ. ಎಲ್ಲಿಯಾದರೊಮ್ಮೆ ಈ ಹೊಂಡಕ್ಕೆ ದ್ವಿಚಕ್ರ ವಾಹನ ಬಿದ್ದು ಜೀವವೊಂದು ಹೋದರೆ ಮತ್ತೆ ಅದರ ದುರಸ್ತಿ ಕಾರ‍್ಯ ನಡೆಯ ಬಹುದೋ ಏನೊ?
ಕಾನೂನು ಮತ್ತು ಸುಭದ್ರ ಆಡಳಿತದ ಬಗ್ಗೆ ಡಂಗುರ ಸಾರುವವರು ಈ ಕುಸಿದು ಬಿದ್ದಿರುವ ತಡೆಗೋಡೆ ದುರಸ್ತಿ ಮಾಡುತ್ತಿಲ್ಲ. ಪಂಚಾಯತ್‌ನಲ್ಲಿ ಕೇಳಿದರೆ ಅದು ಪಿಡಬ್ಲ್ಯೂಡಿ ಅವರು ಮಾಡಿದ್ದು, ಅವರೇ ದುರಸ್ತಿ ಮಾಡಲಿ ಎನ್ನುತ್ತಾರೆ. ನಾವು ಬೇಕಾದ ಸೌಕರ್ಯ ಗಳನ್ನು ಮಾಡಿಕೊಡುತ್ತೇವೆ ಎನ್ನುವ ಪಂಚಾಯತ್ ಇಂತಹ ದೊಡ್ಡ ಸಮಸ್ಯೆಗಳನ್ನು ಯಾಕೆ ಪರಿಹರಿಸು ವುದಿಲ್ಲ ಎಂಬುದು ನಾಗರಿಕರ ಪ್ರಶ್ನೆ.

ಮುಸ್ಲಿಮರನ್ನು ಚಿಂತನೆಗೆ ಹಚ್ಚಿದ ಅಲೋಶಿಯಸ್ ಬುರ್ಖಾ ವಿವಾದ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನ ಆಡಳಿತಗಾರರು ತಮ್ಮ ಸಂಸ್ಥೆಯಲ್ಲಿ ಬುರ್ಖಾಧಾರಣೆಗೆ ನಿಷೇಧ ಇಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಸ್ಪಷ್ಟನೆ ನೀಡಲೇಬೇಕಾದ ಅನಿವಾರ್ಯತೆಯನ್ನು ಮಾಧಮಗಳು ಹಾಗೂ ಮುಸ್ಲಿಮರು ಸಷ್ಟಿಸಿದ್ದು ಎಂಬುದು ಗಮನಿಸಬೇಕಾದ ಅಂಶ. ಕ್ಲಾಸ್ ರೂಮ್‌ನಲ್ಲಿ ಬುರ್ಖಾ ಧರಿಸುವಂತೆಯೇ ಇಲ್ಲ ಎಂದು ಸ್ಪಷ್ಟವಾಗಿ ಬರೆದಿರುವ ಪ್ರಾಸ್ಪೆಕ್ಟ್ ಹಂಚಿದ ಅಲೋಶಿಯಸ್ ಕಾಲೇಜಿನ ಆಡಳಿತಗಾರರು ಈಗ ತಮ್ಮ ನಿಲುವು ಬದಲಿಸಿದ ಸ್ಪಷ್ಟನೆ ನೀಡಿರುವರಾದರೂ, ಬುರ್ಖಾದ ವಿಷಯದಲ್ಲಿ ಅಲೋಶಿಯಸ್ ಎತ್ತಿದ ವಿವಾದ ಮುಸ್ಲಿಮರನ್ನು ಚಿಂತನೆಗೆ ಹಚ್ಚಿದೆ.
ಮತಾಂಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಂತಹದ್ದೇ ಸಂಘಟನೆಗಳ ಆಡಳಿತದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾದ ವಿವಾದ ಏಳುತ್ತಲೇ ಇರುತ್ತದೆ ಎಂಬುದು ಸಹಜ. ಆದರೆ ನಾವು ಜಾತ್ಯತೀತರು, ಶಾಂತಿಯ ಧೂತರು ಎಂದು ಹೇಳಿಕೊಳ್ಳುವ ಕ್ರೈಸ್ತ ಶಿಕ್ಷಣ ಸಂಸ್ಥೆಗಳೂ ಬುರ್ಖಾದ ವಿಷಯವನ್ನು ಎತ್ತಿದ್ದಾರೆ ಎಂದಾದರೆ ನಾವು ನಮ್ಮದೇ ಪ್ರತ್ಯೇಕ ಮಹಿಳಾ ಕಾಲೇಜುಗಳನ್ನು ಸ್ಥಾಪಿಸಿಕೊಳ್ಳುವುದು ಒಳಿತು ಎಂಬ ನಿಲುವಿಗೆ ಮುಸ್ಲಿಮರು ಬಂದಿದ್ದು, ಇದಕ್ಕಾಗಿ ಗಂಭೀರ ಚಿಂತನೆ ನಡೆಸುತ್ತಿದ್ದಾರೆ.
ಮೈತುಂಬಾ ಬಟ್ಟೆ ಧರಿಸಬೇಕು ಎಂದು ಯೋಚಿಸುವವರು ಹಿಂದುಗಳಲ್ಲೂ ಇದ್ದಾರೆ. ಕ್ರೈಸ್ತರಲ್ಲೂ ಇದ್ದಾರೆ. ಇಂತಹವರಿಗೆ ಮುಸ್ಲಿಮರು ಸ್ಥಾಪಿಸುವ ಶಿಕ್ಷಣ ಸಂಸ್ಥೆಗಳು ಪೂರಕವಾಗಬಹುದು ಎಂಬ ನಿರ್ಧಾರಕ್ಕೆ ಬಂದಿರುವ ಮುಸ್ಲಿಮ್ ನಾಯಕರು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಮಹಿಳಾ ಕಾಲೇಜು ಸ್ಥಾಪಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ದ.ಕ. ಜಿಲ್ಲೆಯಲ್ಲಿ ಕ್ರೈಸ್ತರ ಮೇಲೆ ದಾಳಿಯಾದಾಗ ಅವರಿಗೆ ಬೆಂಬಲವಾಗಿ ನಿಂತವರು ಮುಸ್ಲಿಮರು. ಮುಸ್ಲಿಮರ ಮೇಲೆ ದಾಳಿ ನಡೆದರೆ ಕ್ರೈಸ್ತರು ಬೆಂಬಲಿಸುವುದು ಇರಲಿ ಸಣ್ಣ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸುವುದಿಲ್ಲ. ಇವರ ಜಾತ್ಯತೀತದ ಮಾತುಗಳೆಲ್ಲ ಬರೀ ಬೊಗಳೆ ಕ್ರೈಸ್ತರಲ್ಲೂ ಮುಸ್ಲಿಂ ವಿರೋಧಿಗಳಿದ್ದಾರೆ. ಅಂತಹ ವಿರೋಧಿ ಗುಂಪಿನಲ್ಲಿ ಸಂತ ಅಲೋಶಿಯಸ್ ಕಾಲೇಜು ಕೂಡ ಸೇರಿದ್ದು ಸ್ಪಷ್ಟವಾಗಿದೆ.
ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಮವಸ್ತ್ರ ಸಂಹಿತೆ ಇಲ್ಲ. ಹಾಗಿದ್ದರೂ ಬುರ್ಖಾದ ವಿಷಯವನ್ನು ಎತ್ತಿದ್ದಾರೆ. ಬೇರೆ ವಿದ್ಯಾರ್ಥಿಗಳು ಯಾವುದೇ ಬಟ್ಟೆ ಧರಿಸಿ ಬರುವುದಾದರೆ ಮುಸ್ಲಿಮರು ನಿಲುವಂಗಿಯಂತಹ ಬುರ್ಖಾಧರಿಸಿ ಬಂದರೆ ಇವರಿಗೇನು ತೊಂದರೆ ಎನ್ನುವ ಮುಸ್ಲಿಮರು ಕ್ರೈಸ್ತ ಸನ್ಯಾಸಿನಿಯರು ಮತ್ತು ಕ್ರೈಸ್ತ ಧರ್ಮಗುರುಗಳು ಧರಿಸುವ ನಿಲುವಂಗಿಯತ್ತ ಬೆರಳು ಮಾಡುತ್ತಾರೆ. ಅಲೋಶಿಯಸ್‌ನಲ್ಲಿ ಕ್ರೈಸ್ತ ಸನ್ಯಾಸಿನಿಯರೂ ವಿದ್ಯಾರ್ಥಿನಿಯರಾಗಿದ್ದಾರೆ. ಸನ್ಯಾಸಿನಿ ಶಿಕ್ಷಕಿಯರೂ ಇದ್ದಾರೆ. ಇವರೆಲ್ಲ ಧಾರ್ಮಿಕ ಸಂಸ್ಕೃತಿಯ ಬಟ್ಟೆ ತೊಟ್ಟು ಕ್ಲಾಸ್‌ಗೆ ಬರಬಹುದು. ಆದರೆ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಬಾರದು ಎಂಬ ನಿಲುವು ಅಲೋಶಿಯಸ್ ಕಾಲೇಜಿನ ಆಡಳಿತಗಾರದ್ದು.
ಮುಸ್ಲಿಂ ಶಿಕ್ಷಕಿಯರೂ ಕೂಡಾ ಸ್ಕಾರ್ಪ್ ಧರಿಸಬಾರದು ಎಂಬುದು ಕೂಡ ಅಲೋಶಿಯಸ್‌ನ ನಿಲುವು ಎಂಬ ಅಂಶವೂ ಈಗ ಬೆಳಕಿಗೆ ಬಂದಿದೆ. ಕಳೆದ ವರ್ಷವಷ್ಟೇ ನಡೆದ ಘಟನೆ. ಅಲೋಶಿಯಸ್ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆನಡೆದಿತ್ತು. ಅದರಲ್ಲಿ ಸಫಿಯಾ ಎಂಬ ಮುಸ್ಲಿಂ ಅಭ್ಯರ್ಥಿಯೂ ಸಂದರ್ಶನಕ್ಕೆ ಹೋಗಿದ್ದರು. ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು. ಸಫಿಯಾ ಆಯ್ಕೆಯಾಗಿದ್ದಾಗಿ ಆಡಳಿತ ಮಂಡಳಿಯವರು ಪ್ರಕಟಿಸಿದರು. ಆದರೆ ಕೊನೆಯಲ್ಲಿ ಒಂದು ನಿಬಂಧನೆ ಇಟ್ಟರು. ಕ್ಲಾಸ್ ರೂಂನಲ್ಲಿ ಬುರ್ಖಾ ಧರಿಸಿ ಹೋಗಬಾರದು ಎಂಬುದಾಗಿತ್ತು ನಿಬಂಧನೆ. ಸರಿ ಬುರ್ಖಾ ಧರಿಸುವುದಿಲ್ಲ ಆದರೆ ಸ್ಕಾರ್ಪ್ ಧರಿಸಬಹುದಲ್ಲ ಎಂದರೆ ಅದಕ್ಕೂ ನಕಾರದ ಉತ್ತರವೇ ಬಂದಿತ್ತು. ಸಫಿಯಾ ಅವರ ಕೆಲಸವನ್ನೇ ನಿರಾಕರಿಸಿ ಅಲ್ಲಿಂದ ಹೊರಟಿದ್ದರು. ಅವರೀಗ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿದ್ದಾರೆ. ಬುರ್ಖಾ ಧರಿಸಿಯೇ ಉಪನ್ಯಾಸ ನೀಡುತ್ತಿದ್ದಾರೆ.
ಕ್ರೈಸ್ತ ಸನ್ಯಾಸಿನಿಯರು ಹಾಗೂ ಧರ್ಮಗುರುಗಳು ಅವರ ನಿಲುವಂಗಿ ಧರಿಸಿ ಬಂದು ಕ್ಲಾಸ್ ರೂಂನಲ್ಲಿ ಉಪನ್ಯಾಸ ನೀಡಬಹುದು. ಆದರೆ ಮುಸ್ಲಿಮ್ ಉಪನ್ಯಾಸಕಿ ಸ್ಕಾರ್ಪ್ ಕೂಡ ಧರಿಸಬಾರದು ಎಂಬ ನಿಲುವಿನ ಅಲೋಶಿಯಸ್ ಕಾಲೇಜಿನ ಆಡಳಿತಗಾರರು ತಾವೆಷ್ಟು ಮುಸ್ಲಿಂ ವಿರೋಧಿಗಳು ಎಂಬುದನ್ನು ತೋರಿಸಿದ್ದಾರೆ.
ಇಂದು ಅಲೋಶಿಯಸ್‌ನಲ್ಲಿ ಕಾಣಿಸಿಕೊಂಡಿದ್ದು ನಾಳೆ ಬೇರೆ ಕ್ರೈಸ್ತ ಸಂಸ್ಥೆಗಳನ್ನು ಕಾಣಬಹುದು. ಆದುದರಿಂದ ಮುಸ್ಲಿಂ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂಬ ಚರ್ಚೆ ಮುಸ್ಲಿಂ ನಾಯಕರಲ್ಲಿ ನಡೆಯುತ್ತಿದೆ.

Page 1

Posted by JAYAKIRANA Kirana on | 0 comments | Leave a comment...


Page 2

Posted by JAYAKIRANA Kirana on | 0 comments | Leave a comment...


Page 3

Posted by JAYAKIRANA Kirana on | 0 comments | Leave a comment...


Page 4

Posted by JAYAKIRANA Kirana on | 0 comments | Leave a comment...


Page 5

Posted by JAYAKIRANA Kirana on | 0 comments | Leave a comment...


Page 6

Posted by JAYAKIRANA Kirana on | 0 comments | Leave a comment...


Page 1

Posted by JAYAKIRANA Kirana on | 0 comments | Leave a comment...


Page 2

Posted by JAYAKIRANA Kirana on | 0 comments | Leave a comment...


Page 3

Posted by JAYAKIRANA Kirana on | 0 comments | Leave a comment...


Page 4

Posted by JAYAKIRANA Kirana on | 0 comments | Leave a comment...


Page 5

Posted by JAYAKIRANA Kirana on | 0 comments | Leave a comment...


Page 6

Posted by JAYAKIRANA Kirana on | 0 comments | Leave a comment...


ಮಹಿಳೆಯರೇ ಇದ್ದ ಮನೆಯ ಆಸ್ತಿಪತ್ರ ಕದ್ದ ಕಳ್ಳರು!

Posted by JAYAKIRANA Kirana on | 0 comments | Leave a comment...

ಕಾರ್ಕಳ: ಇಲ್ಲಿಗೆ ಸಮೀಪದ ಕುಕ್ಕುಂದೂರು ಜಯಂತಿ ನಗರದ ಎರಡನೆಯ ಅಡ್ಡರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಆಸ್ತಿಗೆ ಸಂಬಂಧಪಟ್ಟ ಕಡತ ಹಾಗೂ ನಗ-ನಗದು ಕಳವುಗೈದ ಘಟನೆ ಸಂಭವಿ ಸಿದೆ.
ಜಯಂತಿ ನಗರದ ರಮಾ ಆಚಾರ್ಯ ಹಾಗೂ ಜಯ ಯಾನೆ ಚಂದ್ರಕಲಾ ಆಚಾರ್ಯ ಎಂಬವರು ವಾಸವಾಗಿದ್ದ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಇವರಿಬ್ಬರು ಸಮೀಪ ದಲ್ಲಿರುವ ಅಕ್ಕನ ಮನೆಗೆ ಹೋಗಿದ್ದಾಗ ಕಳ್ಳತನ ನಡೆದಿದೆ.
ಸೀರೆಯಲ್ಲಿ ನಗ ಕಟ್ಟಿ ಇಡುವ ಪರಿಪಾಠ ಮಾಡಿಕೊಂಡಿದ್ದ ಸಹೋ ದರಿಯರು ನಿದ್ರಿಸಲು ಅಕ್ಕನ ಮನೆಗೆ ಹೋಗುವಾಗಲು ಚಿನ್ನಾಭರಣ ಮತ್ತು ನಗದು ಅಲ್ಲಿ ಇಟ್ಟು ಹೋಗುತ್ತಿದ್ದರೆಂಬ ಮಾಹಿತಿ ತಿಳಿದುಕೊಂಡವರೇ ಈ ಕೃತ್ಯ ವೆಸಗಿದ್ದಾರೆ. ಒಟ್ಟು ಒಂದು ಲಕ್ಷ ರೂ. ಮೌಲ್ಯದ ಸೊತ್ತುಗಳು ಕಳವು ಆಗಿದೆ ಎಂದು ತಿಳಿದುಬಂದಿದೆ.
 ಮಹಿಳೆಯರಿಬ್ಬರು ವಾಸವಾಗಿದ್ದ ಜಾಗದ ಅಗತ್ಯ ಕಡತಗಳು ಕಳ್ಳರ ಪಾಲಾ ಗಿದೆ. ಇದನ್ನು ಗಮನಿಸಿದರೆ ಅವರಿಬ್ಬರು ವಾಸವಾಗಿದ್ದ ಮನೆ ಹಾಗೂ ಆಸ್ತಿಯ ಮೇಲೆ ಕಣ್ಣಿಟ್ಟಿರುವ ಮಂದಿ ಆಸ್ತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಫೈನಾನ್ಸ್ ಅಥವಾ ಯಾವುದಾದರೂ ಸೊಸೈಟಿಯಲ್ಲಿ ನಕಲಿ ಸಹಿಯೊಂ ದಿಗೆ ಅಡವಿಟ್ಟು ಸಾಲ ಪಡೆಯುವ ದುರುದ್ದೇಶವನ್ನು ಹೊಂದಿರ ಬಹು ದೆಂಬ ಸಂಶಯ ವ್ಯಕ್ತಗೊಂಡಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಅರ್ಥವಾಗದ ವಯಸ್ಸು; ತಾಯಿಯಾದಳು ಬಾಲೆ!

Posted by JAYAKIRANA Kirana on | 0 comments | Leave a comment...

ಕುಂದಾಪುರ: ಅಪರಿಚತರ‍್ಯಾರು ಆ ಕೋಣೆಯೊಳಕ್ಕೆ ಕಾಲಿಡುತ್ತಿದ್ದ ಹಾಗೆ ಬೆದರಿದ ಹರಿಣಿಯ ಹಾಗೆ ಬೆಚ್ಚಿ ಬೀಳುತ್ತಿದ್ದಳವಳು. ಬಿಕ್ಕಳಿಕೆಯ ನಡುವೆಯೂ ಮುಖದ ಮೇಲೆ ಮುಚ್ಚಿಕೊಂಡ ರಗ್ಗಿನ ಹಿಂದೆ ಒಂದೇ ಸಮನೆ ಕೇಳಿ ಬರುತ್ತಿದೆ ಅವಳ ವಿದ್ರಾವಕ ರೋದನ, ಬದುಕನ್ನೇ ಕಳೆದುಕೊಂಡವರ ಹಾಗೆ ಪಕ್ಕದ ಲ್ಲಿಯೇ ಕುಳಿತ್ತಿದ್ದಾರೆ ಅವಳ ನಿಷ್ಪಾಪಿ ಹೆತ್ತವರು. ಅಂದ ಹಾಗೆ ಅದೊಂದು ಕುಂದಾಪುರದ ಖಾಸಗಿ ಆಸ್ಪತ್ರೆಯ ಪುಟ್ಟ ಕೋಣೆಯ ಬೆಡ್‌ನಲ್ಲಿ ಮುದುಡಿ ರೋದಿಸುತ್ತಿದ್ದವಳು ಹೇಮಾ(ಹೆಸರು ಮರೆಮಾಚಲಾಗಿದೆ). ಹೊತ್ತಲ್ಲದ ಹೊತ್ತಿನಲ್ಲಿ ವಯಸ್ಸಲ್ಲದ ವಯಸ್ಸಿನಲ್ಲಿ ಇನ್ನೂ ಹದಿನೈದರ ಆ ಬಾಲೆ ಎರಡು ಅಂಗೈಯಷ್ಟು ಉದ್ದದ ಪುಟ್ಟ ಗಂಡು ಮಗುವಿನ ತಾಯಿಯಾಗಿದ್ದಾಳೆ! ಕುಂಟೆ ಬಿಲ್ಲೆಯಾಡುವ, ಬದುಕೆಂದರೆ ಏನೆಂದು ಅರ್ಥ ಮಾಡಿಕೊಳ್ಳಲಾಗದ ಪ್ರಾಯ ಅವಳನ್ನು ಅನಾಮತ್ತಾಗಿ ಅಮ್ಮನ ಸ್ಥಾನ ದಲ್ಲಿ ಕುಳ್ಳಿರಿಸಿಬಿಟ್ಟಿದೆ.
ಪಾಪಿ ಸಹೋದರ!: ಅಮಾಸೆ ಬೈಲಿನ ಮೆಚ್ಚಟ್ಟು ಸಮೀಪ ನೆಲೆಸಿರುವ ಕೂಡು ಕುಟುಂಬವದು. ಹೇಳಿ ಕೇಳಿ ಹೇಮಾಳ ಅಜ್ಜಿ ಮನೆ. ಕೂಲಿ ಮಾಡುವ ಅವಳ ತಂದೆತಾಯಿ ಅನತಿ ದೂರದ ಪುಟ್ಟ ಮನೆಯಲ್ಲಿ ಆಗಷ್ಟೇ ೫ನೇ ತರಗತಿಯಲ್ಲಿ ಕಲಿಯುತ್ತಿರುವ ಮಗನೊಂದಿಗೆ ನೆಲೆಸಿದರೆ ಮಚ್ಚಟ್ಟುವಿನ ಹೈಸ್ಕೂಲಿನಲ್ಲಿ ೧೦ನೇ ತರಗತಿಯಲ್ಲಿ ಕಲಿಯುತ್ತಿರುವ ಹೇಮಾ ವಾಸ್ತವ್ಯವಿದ್ದದ್ದು ಅಜ್ಜಿ ಮನೆಯಲ್ಲಿಯೇ. ವಾರಿಗೆಯಲ್ಲಿ ಸಹೋದರನಾಗಬೇಕಾದ ದೊಡ್ಡಮ್ಮಳ ಮಗ ಸುರೇಶ ಯಾನೆ ಸೂರ್ಯ ಇದ್ದದ್ದು ಆ ಮನೆಯಲ್ಲಿಯೇ. ಎಸ್ಸೆಸ್ಸೆಲ್ಸಿಯ ಜತೆಗೆ ಒಂದಷ್ಟು ಐಟಿಐ ಕಲಿತಿರುವ ಸೂರ್ಯ ಈಗ ಆರು ತಿಂಗಳಿಂದ ಕುಂದಾಪುರದ ಬಸ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೆ ಕಿರಾತಕ ಸದ್ದಿಲ್ಲದೆ ಹೇಮಾಳನ್ನು ಬಾರಿಬಾರಿಗೂ ತಿಂದು ಮುಗಿಸಿದ್ದಾನೆ. ಹಾಗೇ ಈ ವಿಷಯವನ್ನು ಯಾರಲ್ಲಾದರೂ ಹೇಳಿದರೆ ಜಾಗ್ರತೆ ಎಂದು ಬೆದರಿಕೆಯನ್ನು ಹಾಕಿದ್ದಾನೆಂದು ಹೇಮಾಳ ಹೆತ್ತವರ ಆರೋಪ.
ಸದ್ದಾಗದ ಬಸಿರು...ಕೆಲವು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಹೇಮಾಳನ್ನು ಪಕ್ಕದ ಕ್ಲಿನಿಕ್‌ಗೆ ಕರೆದುಕೊಂಡು ಹೋದಾಗ ಅದ್ಯಾವುದೋ ಅನುಮಾನದ ಸುಳಿಯೊಂದು ಅಲ್ಲಿನ ವೈದ್ಯರಿಗೆ ಗೋಚರಿಸಿದೆ. ಯಾವುದಕ್ಕೂ ಕುಂದಾಪುರದ ಆಸ್ಪತ್ರೆಗೆ ತೋರಿಸಿ ಎಂದ ಅವರ ಸಲಹೆಗೆ ಹೇಮಾಳ ಹೆತ್ತವರು ಅವಳನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯರು ಅವಳು ಬರೋಬ್ಬರಿ ಏಳು ತಿಂಗಳ ಬಸುರಿ ಎಂದದ್ದೇ ತಡ ನಿಂತ ನೆಲವೇ ಬಿರಿದು ಹೋದಂತಾಗಿದೆ ಹೇಮಾಳ ಹೆತ್ತವರಿಗೆ. ಅವರ ಪ್ರಕಾರ ಅವಳಿನ್ನೂ ಋತುಮತಿಯೇ ಆಗಿಲ್ಲ. ಬಸಿರಾಗುವುದಾದರೂ ಹೇಗೆ?
ಪಾಪಿ ಪರಾರಿ: ಆದರೆ ತನ್ನ ಪ್ರಾಯಕ್ಕೂ ಮೀರಿ ಒಂದಷ್ಟು ಆಕರ್ಷಕ ಅಂಗ ಸೌಷ್ಠವ ಹೊಂದಿರುವ ಹೇಮಾಳ ಒಡನಾಟ ಆಗಷ್ಟೇ ಕಾಮದ ಕುದುರೆಯೇರಿ ಪ್ರಥಮ ಸವಾರಿ ಆರಂಭಿಸಿರುವ ಸೂರ್ಯನಲ್ಲಿ ಕಾಮದ ವಾಂಛೆಗಳನ್ನು ಕೆರಳಿಸಿದೆ. ಹೊತ್ತಲ್ಲದ ಹೊತ್ತಿನಲ್ಲಿ ಅವಳನ್ನು ಸೇರತೊಡಗಿದ ಸಂದರ್ಭದಲ್ಲಿಯೇ ಅವಳು ಋತುಮತಿಯಾಗಿದ್ದಾಳೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳದ ಅವನು, ಪೀರಿಯಡ್ ನಿಂತ ನಂತರ ಮತ್ತೇ ಮತ್ತೇ ವಿಜೃಂಭಿಸಿದ್ದಾನೆ ಸೂರ್ಯ. ಅದಾಗಲೇ ಕುಡಿಯೊಂದು ಅವಳ ಉದರದೊಳಕ್ಕೆ ತಿಣಕಾಡತೊಡಗಿದರೂ ಅದರ ಪರಿವೇ ಇಲ್ಲದೆ ಹೇಮಾ ಎಲ್ಲರಂತಿದ್ದಾಳೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಬಂದಿದ್ದಾಳೆ. ಆದರೆ ಇತ್ತೀಚೆಗೆ ಅವಳನ್ನು ಪರೀಕ್ಷಿಸಿದ ವೈದ್ಯರು ಮಾತ್ರ ಅವಳ ತಾಯ್ತನವನ್ನು ಗುರುತಿಸಿದಾಗ ಮಾತ್ರ ಅಲ್ಲಿ ನಿಟಾರನೆ ಸಿಡಿಲೊಂದು ಅಪ್ಪಳಿಸಿದೆ. ತದನಂತರ ಸೂರ್ಯನ ವಿಚಾರ ತಿಳಿಸಿದಾಗ ಅದನ್ನು ಅಲ್ಲಿಂದಲ್ಲಿಗೆ ಮುಗಿಸಲು ಹೊರಟ ಸೂರ್ಯನ ಮಾವಂದಿರಾದ ತಿಮ್ಮಪ್ಪ, ಬಸವರಾಜ್ ಮುಂತಾದವರು ಬಸಿರಿಗೆ ಬೇರೊಬ್ಬನನ್ನು ಕಾರಣವಾಗಿಸಿ ಮುಂದೆ ಸೂರ್ಯನನ್ನು ಬೇಕಾದರೆ ಮದುವೆ ಮಾಡಿಕೊಡುವ ಎಂಬ ಅಸಡ್ಡೆ ತೋರ್ಪಡಿಸಿದ್ದಾರೆ. ಅಲ್ಲದೆ ಅವರೇ ಹೇಮಾಳನ್ನು ಆಸ್ಪತ್ರೆಗೆ ತೋರಿಸಿ ಹೋದವರು ಈ ತನಕ ಪತ್ತೆಯಾಗಿಲ್ಲವೆಂದು ಹೇಮಾಳ ಹೆತ್ತವರ ಆರೋಪ. ಮರುದಿನವೇ ಸಿಜೇರಿಯನ್ ಮೂಲಕ ಗಂಡು ಶಿಶುವಿಗೆ ಹೇಮಾ ಜನ್ಮವಿತ್ತಿದ್ದಾಳೆ. ಆದದ್ದಾಯಿತು ನನ್ನ ಮಗಳನ್ನು ಮದುವೆ ಮಾಡಿಕೊಂಡು ನನ್ನ ಮಾನ ಉಳಿಸಿ ಎಂಬ ಆಕೆಯ ಹೆತ್ತವರ ಗೋಗರೆತಕ್ಕೆ ಕಿವುಡಾದ ಮಾವಂದಿರು ಸೂರ್ಯನ ರಕ್ಷಣೆಯಲ್ಲಿ ತೊಡಗಿದ್ದರು ಎಂದು ಹೇಳಲಾಗಿದೆ. ಕೊನೆಗೂ ಪ್ರಕರಣ ಪೊಲೀಸ್ ಕಟ್ಟೆಯೇರಿದೆ. ಅಲ್ಲಿಯಾದರೂ ಆ ಪುಟ್ಟ ಬಾಲೆಯ ಮೇಲೆ ಮಾನವೀಯ ದೃಷ್ಟಿಯಿಂದಲಾದರೂ ಒಂದಷ್ಟು ಕಾಂಪ್ರಮೈಸ್ ಮೂಲಕ ಪ್ರಕರಣ ಬಗೆಹರಿಸಬಹುದಾಗಿತ್ತು. ಆದರೆ ಅತ್ಯಾಚಾರದಂತಹ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೇಮಾಳನ್ನು ಸೂರ್ಯ ಮದುವೆಯಾಗ ಬಹುದಾಗಿದ್ದ ಅವಕಾಶಕ್ಕೆ ಕಲ್ಲು ಚಪ್ಪಡಿ ಎಳೆದುಬಿಟ್ಟಿದ್ದಾರೆ. ಹಾಗಾಗಿ ಕಾಮದ ಕುದುರೆಯಿಂದ ಜಾರಿದ ಸೂರ್ಯ ಯಾನೆ ಸುರೇಶ್ ಭೂಗತನಾಗಿದ್ದಾನೆ. ಇತ್ತ ಕಣ್ಣೀರಿನಲ್ಲಿಯೇ ಮಿಂದೇಳುತ್ತಿರುವ ಹೇಮಾಳ ಭವಿಷ್ಯ ಭಯಾನಕವಾಗಿದೆ. ಹಾಗಿದ್ದೂ ಬಿಲ್ಲವ ಸಮಾಜದ ಮುಖಂಡರು ಮನಸ್ಸು ಮಾಡಿದರೆ ಇಬ್ಬರ ಬದುಕು ದಡ ಸೇರುವ ಅವಕಾಶವಿದೆಯೆನ್ನಲಾಗಿದೆ.

‘ಶಾಸಕರು ಗೂಂಡಾಗಿರಿ ಪ್ರವೃತ್ತಿಯನ್ನು ನಿಲ್ಲಿಸಲಿ’

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಕಾಂಗ್ರೆಸ್ ಡಿಸಿಸಿ ಅಧ್ಯಕ್ಷ ಹಾಗೂ ಶಾಸಕ ಬಿ.ರಮಾನಾಥ ರೈ ಮೇಲೆ ಪುರಸಭಾಡಳಿತ ನೇರ ವಾಗ್ದಾಳಿಗೆ ಇಳಿದಿದೆ. ನಿನ್ನೆ ಪುರಸಭಾ ಕಾರ್ಯಾಲಯದಲ್ಲಿ ಸುದ್ದಿ ಗೋಷ್ಠಿ ಕರೆದು ಮಾತನಾಡಿದ ಪುರಸಭಾಧ್ಯಕ್ಷ ಹಾಗೂ ಬುಡಾ ಅಧ್ಯಕ್ಷ, ಬಂಟ್ವಾಳದ ಎಂ.ಎಲ್.ಎ. ಇನ್ನಾದರೂ ತಮ್ಮ ಗೂಂಡಾಗಿರಿ ಸಂಸ್ಕೃತಿಯನ್ನು ನಿಲ್ಲಿಸಲಿ ಎಂದು ತಾಕೀತು ಮಾಡಿದರು.
ಪುರಸಭಾ ಕಾರ್ಯಾಲಯಕ್ಕೆ ಮುತ್ತಿಗೆ ಹಾಕುವಷ್ಟೇನು ಸಮಸ್ಯೆ ಉದ್ಭವಿಸಿರಲಿಲ್ಲ. ಕ್ಷುಲ್ಲಕ ಕಾರಣವನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಗಿದೆ. ಇವು ರಾಜಕೀಯ ಪ್ರೇರಿತ. ಆದ್ದರಿಂದ ಶಾಸಕರು ನೇತೃತ್ವ ವಹಿಸಬಾರದಿತ್ತೆಂದು ಗೋವಿಂದ ಪ್ರಭು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಅವರ ಮಾತಿಗೆ ಧ್ವನಿ ಗೂಡಿಸಿದ ಅಧ್ಯಕ್ಷ ದಿನೇಶ್ ಭಂಡಾರಿ ಪ್ರತಿಭಟನೆ ಜನರ ಹಕ್ಕು. ಆದರೆ ಈ ಕುರಿತು ಯಾವುದೇ ಪೂರ್ವಾ ನುಮತಿ ಇಲ್ಲದೆ ಮುತ್ತಿಗೆ ಹಾಕಲಾಗಿತ್ತು. ಪೊಲೀಸ್ ಪರವಾನಿಗೆ ಕೂಡ ಪಡೆದಿರಲಿಲ್ಲ. ಶಾಸಕರ ನೇತೃತ್ವದಲ್ಲಿ ಮುಖ್ಯಾಧಿಕಾರಿ ಕಚೇರಿಗೆ ನುಗ್ಗಿದ ಗುಂಪು ಕಚೇರಿಯ ಸ್ವತ್ತುಗಳನ್ನು ಹಾನಿಗೊಳಿಸಲಾಗಿದೆ ಎಂದು ದಿನೇಶ್ ಭಂಡಾರಿ ಆರೋಪಿಸಿದರು.
ಪುರಸಭೆಯ ಜುಮಾದಿಗುಡ್ಡೆ ಎಂಬಲ್ಲಿ ಜಿ.ಪಂ. ವತಿಯಿಂದ ಕೊಳವೆ ಬಾವಿ ತೆರೆಯಲಾಗಿದ್ದು, ಈ ಕುರಿತು ಟಾಸ್ಕ್‌ಪೋರ್ಸ್ ಸಮಿತಿಯ ಅಧ್ಯಕ್ಷರೂ, ಶಾಸಕರೂ ಆಗಿರುವ ರಮಾನಾಥ ರೈ ಪುರಸಭಾಡಳಿತಕ್ಕೆ ಯಾವುದೇ ಮಾಹಿತಿ ಯನ್ನು ಕೊಟ್ಟಿರಲಿಲ್ಲ. ಅಲ್ಲದೇ ನಿರ್ಮಿತ ಕೊಳವೆ ಬಾವಿಗೆ ಹಾಲಿ ನಿರ್ವಹಣೆಯಲ್ಲಿರುವ ಕೊಳವೆ ಬಾವಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಲೈನ್‌ಅನ್ನು ಜೋಡಿಸಲಾಗಿತ್ತು. ಈ ಕುರಿತು ಸ್ಥಳೀಯ ನಾಗರಿಕರು ದೂರು ನೀಡಿದಂತೆ ಪುರಸಭಾಡಳಿತ ಅನಧಿಕೃತ ಸಂಪರ್ಕವನ್ನು ಕಡಿತಗೊಳಿಸಿದೆ. ಇದನ್ನೇ ಮುಂದಿಟ್ಟು ಕಾಂಗ್ರೆಸ್ ಕಾರ್ಯಕರ್ತರನ್ನು, ವಿಪಕ್ಷ ಸದಸ್ಯರನ್ನು ಸೇರಿಸಿ ಶಾಸಕರು ಪುರಸಭೆಗೆ ನುಗ್ಗಿದ್ದಾರೆ ಎಂದವರು ಘಟನೆಯ ಹಿನ್ನೆಲೆಯನ್ನು ವಿವರಿಸಿದರು.
 ಠಾಣೆಯಲ್ಲೂ ಬೆದರಿಕೆ ಕರೆ!
 ಕೊಲೆ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಲೋಲಾಕ್ಷ ಹಾಗೂ ಇತರರ ಮೇಲೆ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ತಕ್ಷಣ ದಾಖಲಿಸಿರಲಿಲ್ಲ. ಎ.೨೮ರಂದು ಸಂಜೆ ೬.೩೦ರಿಂದ ಕಾಂಗ್ರೆಸ್ ಕಾರ್ಯಕರ್ತರೆಂದು ಪರಿಚಯಿಸಿಕೊಂಡ ಲೋಲಾಕ್ಷ ಹಾಗೂ ಇತರರು ನನ್ನ ಮೊಬೈಲ್‌ಗೆ ಫೋನಾಯಿಸಿ ಕೊಲೆ ಬೆದರಿಕೆ ಒಡ್ಡಿದ್ದರು. ಈ ಕುರಿತು ನಗರ ಠಾಣೆಯಲ್ಲಿ ದೂರು ನೀಡಲು ಹೋದ ಸಂದರ್ಭದಲ್ಲೂ ಬೆದರಿಕೆ ಕರೆಗಳು ಬಂದಿದ್ದವು. ಮೊಬೈಲನ್ನು ಪೊಲೀಸ್ ಠಾಣಾಧಿಕಾರಿಗೆ ನೀಡಿದ್ದೆ. ಅಧಿಕಾರಿಗೂ ಅವರು ಅವಾಚ್ಯವಾಗಿ ಬೈದಿದ್ದರು. ಆದರೂ ಪೊಲೀಸ್ ಅಧಿಕಾರಿಗಳು ಏನೇನು ಕ್ರಮ ತೆಗೆಯದೇ ಇದ್ದುದು ನಮಗೆ ಬೇಸರ ತಂದಿದೆ. ಪೊಲೀಸ್ ಅಧಿಕಾರಿಗಳ ಮೇಲೆ ಕಾಂಗ್ರೆಸ್ ಮುಖಂಡರು ಒತ್ತಡ ಹಾಕಿರುವ ಸಂಶಯವೂ ಇದ್ದು, ವಿಷಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ದಿನೇಶ್ ಭಂಡಾರಿ ಹೇಳಿದರು. ಮಹಿಳೆಯರನ್ನು ನಮ್ಮ ಸಮಾಜ ಮಾತೃ ಸಮಾನವಾಗಿ ಗೌರವಿಸುತ್ತಿದೆ. ಅವರನ್ನು ನಾವು ಪೂಜ್ಯವಾಗಿಯೇ ಕಾಣಬೇಕು. ಆದರೆ ಕಾಂಗ್ರೆಸ್‌ನವರು ಪುರಸಭೆಯ ಮಹಿಳಾ ಪ್ರತಿನಿಧಿ ಸ್ವರ್ಣಲತಾ ಮಲ್ಲಿ ಅವರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ ಎಂದು ಗೋವಿಂದ ಪ್ರಭು ನುಡಿದಾಗ, ಅಲ್ಲೇ ಕುಳಿತಿದ್ದ ಸ್ವರ್ಣಲತಾ ಮಲ್ಲಿ ನಾನೇನು ಮಾಡಿದ್ದೇನೆ? ನನ್ನ ಮೇಲೆ ಯಾಕೆ ಅವರು ಹಗೆ ತೀರಿಸುತ್ತಾರೆ ಎಂದು ಪ್ರಶ್ನಿಸಿದರು. ಬಿಜೆಪಿ ಮುಖಂಡರಾದ ಸದಾನಂದ ಮಲ್ಲಿ, ಸದಸ್ಯರಾದ ದೇವದಾಸ್ ಶೆಟ್ಟಿ, ಭಾಸ್ಕರ ಟೈಲರ್, ಗೋಪಾಲ ಸುವರ್ಣ ಈ ಸಂದರ್ಭ ಉಪಸ್ಥಿತರಿದ್ದರು.

ಜಿ.ಪಂ. ನಿರುತ್ಸಾಹ: ಕಾಂಗ್ರೆಸ್ ಸದಸ್ಯರ ಆಕ್ರೋಶ

Posted by JAYAKIRANA Kirana on | 0 comments | Leave a comment...

ಉಡುಪಿ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ
ಉಡುಪಿ: ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ತಾಂಡವ ವಾಡುತ್ತಿದ್ದರೂ, ಜಿ. ಪಂ. ವ್ಯವಸ್ಥೆ ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವ ವಿಷಯ ಶನಿವಾರ ನಡೆದ ಉಡುಪಿ ಜಿ.ಪಂ.ನ ೭ನೇ ಸಾಮಾನ್ಯ ಸಭೆಯಲ್ಲಿ ಬಹಿ ರಂಗಕ್ಕೆ ಬಂತು.
ಉಡುಪಿ ಮುಖ್ಯಮಂತ್ರಿಗಳ ಜಿಲ್ಲೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಆದರೆ ಕಳೆದ ಮೂರು ತಿಂಗಳುಗಳಿಂದಲೂ ಕುಡಿ ಯುವ ನೀರಿನ ಸಮಸ್ಯೆ ಪರಿಹರಿಸಲು ಜಿ.ಪಂ.ಏನು ಕ್ರಮ ಕೈಗೊಂಡಿದೆ ಎನ್ನು ವುದು ತಿಳಿದಿಲ್ಲ. ಈ ಹಿಂದೆ ಜನವರಿ-ಫೆಬ್ರವರಿ ತಿಂಗಳಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಡೆದು ಸರಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಲಾಗುತ್ತಿತ್ತು. ಸಮಸ್ಯೆ ಬಗ್ಗೆ ವ್ಯವಸ್ಥೆ ಗಂಭೀರವಾಗಿ ನಡೆದು ಕೊಳ್ಳುತ್ತಿಲ್ಲ ಎಂದು ವಿರೋಧಿ ಕಾಂಗ್ರಸ್ ಸದಸ್ಯರಾದ ಅನಂತ ಮೊವಾಡಿ ಯವರು ಜಿ.ಪಂ.ಅಧ್ಯಕ್ಷರಾದ ಕಟಪಾಡಿ ಶಂಕರ ಪೂಜಾರಿಯವರನ್ನು ಟೀಕಿಸಿ ದರು. ಮಂಜುನಾಥ ಪೂಜಾರಿ, ಮೊವಾಡಿಯವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು.
ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಪೇಂದ್ರ ನಾಯಕ್ ಅವರು ಸ್ಪಷ್ಟನೆ ನೀಡಲು ಪ್ರಯತ್ನಿಸಿ ದರಾದರೂ, ಮೊವಾಡಿಯವರು ತಪ್ಪು ಮಾಹಿತಿ ನೀಡಬೇಡಿ ಎಂದು ಎಚ್ಚ ರಿಸಿದ ಬಳಿಕ ಸುಮ್ಮನಾ ದರು.ಮೆಸ್ಕಾಂ ಬೇಜವಾಬ್ದಾರಿ: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಮಂಜೂರಾದ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಅಂಪಾರು ಗ್ರಾ.ಪಂ. ಎನ್‌ಓಸಿ ನೀಡದೇ ಇರುವ ವಿಷಯ ಸಭೆಯಲ್ಲಿ ಈ ಸಮುದಾಯದವರು ಅವಿದ್ಯಾವಂತ ನಿರುದ್ಯೋಗಿಗಳಾಗಿದ್ದಾರೆ. ನೇಮ ಕಟ್ಟುವ  ಜನ ರಾತ್ರಿ ಕಾರ್ಯಕ್ರಮಕ್ಕೆ ಹೋಗುವಾಗ ಮಕ್ಕಳನ್ನೂ ಕರೆದುಕೊಂಡು ಹೋಗುತ್ತಾರೆ. ಮರುದಿನ ಮಕ್ಕಳು ಶಾಲೆಯಲ್ಲಿ ತೂಕಡಿಸಿ ಶಿಕ್ಷಕರಿಂದ ಪೆಟ್ಟು ತಿಂದು ನಂತರ ಶಾಲೆಗೆ ಹೋಗುವುದಿಲ್ಲ. ಬಳಿಕ ಈ ಮಕ್ಕಳೇ ಅಮಲು ಪದಾರ್ಥದ ದಾಸರಾಗುತ್ತಿದ್ದು ಸಮುದಾಯದಲ್ಲಿರುವ ವಿದ್ಯಾವಂತರಿಗೂ ಮುಜುಗರ ತರಿಸುತ್ತದೆ. ಶಿಕ್ಷಣದ ಬಗ್ಗೆ ಸರಕಾರ ಗಮನಹರಿಸಬೇಕು ಎಂದು ಅಲವತ್ತುಕೊಂಡರು. 
ಇದೇ ರೀತಿ ಮರಾಠಿ ಸಮುದಾಯದ ಪಾಂಡುರಂಗ, ಬಾಕುಡ ಸಮುದಾಯದ ಪದ್ಮನಾಭ ನರಿಂಗಾನ, ಮುಗೇರ ಸಮುದಾಯದ ಸರೋಜಿನಿ, ಮಾಯಿಲ ಸಮುದಾಯದ ಮಾದ ಹೆಗ್ಗಡೆಕೋಡಿ, ಪರವ ಸಮುದಾಯದ ಚೆನ್ನಪ್ಪ ಕುಪ್ಪೆಪದವು, ಆದಿದ್ರಾವಿಡ ಸಮುದಾಯದ ಭಾನುಚಂದ್ರ ಕೃಷ್ಣಾಪುರ, ದಸಂಸ ಮುಖಂಡರಾದ ಕೃಷ್ಣಾನಂದ ಡಿ, ಲಿಂಗಪ್ಪ ನಂತೂರು ಮತ್ತು ಎಸ್‌ಪಿ ಆನಂದ ಮಾತನಾಡಿ ಸಂಬಂಧಪಟ್ಟ ಸಮುದಾಯದ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ.ಉದಯ ಬಾರ್ಕೂರು, ಖ್ಯಾತ ಚಿಂತಕರಾದ ರವಿಕೃಷ್ಣ ರೆಡ್ಡಿ ಮತ್ತು ಕಾರ್ಯನಮಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪಿಬಿ ಹರೀಶ್ ರೈ ಉಪಸ್ಥಿತರಿದ್ದರು.

ಸರಕಾರದ ವಿರುದ್ಧ ದಲಿತ ನಾಯಕರ ಕಿಡಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪತ್ರಕರ್ತರ ಅಧ್ಯಯನ ಕೇಂದ್ರ ಇದರ ವತಿಯಿಂದ ನಿನ್ನೆ ಸಹೋದಯದಲ್ಲಿ ನಡೆದ ತಳ ಸಮುದಾಯಗಳು ಮತ್ತು ಮಾಧ್ಯಮ ಎನ್ನುವ ವಿಚಾರದಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿದ್ದ ಮುಖಂಡರು ಸಮುದಾಯದಲ್ಲಿರುವ ಸಮಸ್ಯೆಗಳ ಬಗ್ಗೆ ಮನಬಿಚ್ಚಿ ಮಾತನಾಡಿ ಸರಕಾರದ ವಿರುದ್ಧ ಹರಿಹಾಯ್ದರು.
ಕೊರಗ ಸಮುದಾಯದ ಮುಖಂಡ ಮುತ್ತಡಿ ಮಾತನಾಡಿ, ತಮ್ಮ ಸಮುದಾಯ ಕೇವಲ ಒಂದು ಸಾವಿರ ಜನಸಂಖ್ಯೆ ಹೊಂದಿದ್ದು, ಈ ಸಮು ದಾಯದಲ್ಲಿ ಕೇವಲ ಐದು ಶೇಕಡಾ ವಿದ್ಯಾವಂತರಿದ್ದಾರೆ. ಸರಕಾರಿ ಕೆಲಸ ಎಂಬುದು ಮರೀಚಿಕೆಯಾಗಿ ಉಳಿದಿದೆ. ಚುನಾವಣೆಯ ವೇಳೆ ರಾಜಕಾರಣಿಗಳು ಹತ್ತಿರ ಬಂದು ಭರವಸೆ ನೀಡಿ ನಂತರ ಅದರ ಬಗ್ಗೆ ಮಾತನಾಡುವುದೇ ಇಲ್ಲ ಎಂದು ಹರಿಹಾಯ್ದರು.
ಮಲೆಕುಡಿಯ ಸಮುದಾಯದ ಸುಧಾಕರ ಮಾತನಾಡಿ, ಈ ಸಮುದಾಯ ತಪ್ಪಲು ಪ್ರದೇಶದಲ್ಲಿ ವಾಸವಿರುತ್ತದೆ. ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದ್ದರೂ ನಕ್ಸಲ್ ಹೆಸರಲ್ಲಿ ಪೊಲೀಸ್ ದೌರ್ಜನ್ಯ ನಿರಂತರವಾಗಿ ಸಾಗಿದೆ ಎಂದು ಕಿಡಿಕಾರಿದರು. ಭೈರ ಸಮುದಾಯದ ಚಂದ್ರಶೇಖರ್ ಮಾತನಾಡಿ, ಈ ಸಮುದಾಯ ಅತ್ಯಂತ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದು, ಮನೆ, ನಿವೇಶನ, ಹಕ್ಕು ಪತ್ರ ಯಾವುದೂ ಇಲ್ಲ. ಈ ಬಗ್ಗೆ ಯಾರೂ ಗಮನಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮನ್ಸ ಸಮುದಾಯದ ಜಗನ್ನಾಥ್ ಪುತ್ತೂರು ಮಾತನಾಡಿ, ಇಂತಹ ಜಾತಿ ಇಲ್ಲ ಎನ್ನುವ ನೆಪ ಹೇಳುತ್ತಿರುವ ಜಿಲ್ಲಾಡಳಿತ ಪ್ರಮಾಣ ಪತ್ರ ನೀಡದ ಕಾರಣ ಸರಕಾರದ ಸವಲತ್ತು ಎಂಬುದೇ ಮರೀಚಿಕೆಯಾಗಿದೆ ಎಂದರು. ಪಂಬದ ಸಮುದಾಯದ ಸರೋಜಿನಿ ಮಾತನಾಡಿ, ಬಯಲಾಯಿತು. ಇದಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಕಾರಣವೆಂದು ಗ್ರಾ.ಪಂ. ಮುಂದಿಡುತ್ತಿದೆ ಎಂಬ ವಿಷಯವೂ ಬೆಳಕಿಗೆ ಬಂತು.
ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ: ನಿಟ್ಟೆಗೆ ಮಂಜೂರಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಬೇಕಾದ ಗುತ್ತಿಗೆದಾರ ಪ್ರಭಾಕರ ಭಟ್ ಅವರು ಕಾಮಗಾರಿ ನಡೆಸುತ್ತಿಲ್ಲವಾದ ಕಾರಣ ಕಪ್ಪು ಪಟ್ಟಿಗೆ ಸೇರಿಸುವ ಬಗ್ಗೆ ಸಭೆಯಲ್ಲಿ ಕೆಲವರು ಸಲಹೆ ನೀಡಿದರು. ಅಧ್ಯಕ್ಷರು ಈ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರಲ್ಲದೆ, ಮುಂದೆ ಹೀಗಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
ತಾ.ಪಂ.ಇಓಗೆ ಹಲ್ಲೆ ಯತ್ನ: ಕುಂದಾಪುರ ತಾ.ಪಂ.ಇಓ ಅವರಿಗೆ ಗ್ರಾ.ಪಂ. ಕಾರ್ಯದರ್ಶಿಯೊಬ್ಬರು ನಿನ್ನೆ ಬೆಳಗ್ಗೆ ತಡೆದು ನಿಲ್ಲಿಸಿ, ಬೆದರಿಕೆ ಹಾಕಿ, ಹಲ್ಲೆ ನಡೆಸುವ ಯತ್ನವೂ ನಡೆಯಿತು ಎಂಬ ವಿಷಯವನ್ನೂ ಶಂಕರ ಶೆಟ್ಟಿ ಬಹಿರಂಗಪಡಿಸಿದರು. ಸಭೆ ಮುಗಿದ ಬಳಿಕ ಬಂದು ಭೇಟಿಯಾಗುವಂತೆಯೂ, ಇದಕ್ಕೇನು ಮಾಡಬೇಕೆಂದು ಸೂಚಿಸುವುದಾಗಿಯೂ ತಾ.ಪಂ. ಇಓ ಅವರಿಗೆ ಜಿ.ಪಂ.ಸಿಇಓ ಅವರು ಸೂಚಿಸಿದರು.
 ಪರಿಸರ ಅಧಿಕಾರಿ ರೈಸ್‌ಮಿಲ್ ಏಜೆಂಟರೇ..?
ತೆಕ್ಕಟ್ಟೆಯಲ್ಲಿ ೪ ರೈಸ್‌ಮಿಲ್ ಇದ್ದು, ಇವುಗಳಿಂದಾಗಿ ಸಾವಿರಾರು ಕುಟುಂಬ ಗಳು ಸಮಸ್ಯೆ ಎದುರಿಸುತ್ತಿವೆ. ಕೆಲವರು ಈಗಾಗಲೇ ಜಾಗ ಮಾರಿ ಬೇರೆಡೆಗೆ ಹೋಗಿದ್ದಾರೆ. ಇನ್ನು ಕೆಲವರು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ೨೮ ವರ್ಷಗಳಿಂದ ಜನರು ರೈಸ್‌ಮಿಲ್ ವಿರುದ್ದ ಹೋರಾಟ ನಡೆಸುತ್ತಿದ್ದಾರೆ. ೯ ಜನರು ಹೋರಾಟ ಮಾಡಿದ ಕಾರಣಕ್ಕೆ ಕೇಸುಗಳನ್ನು ಎದುರಿಸುತ್ತಿದ್ದಾರೆ. ಆದರೆ, ಪರಿಸರ ಇಲಾಖಾಧಿಕಾರಿ ಪುರಾಣಿಕ್ ಮಿಲ್‌ಗಳ ಏಜೆಂಟರಂತೆ, ಸೂಪರ್‌ವೈಸರ್‌ನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಗಣಪತಿ ಶ್ರೀಯಾನ್, ರೈಸ್‌ಮಿಲ್‌ಗಳಿಗೆ ಗ್ರಾ.ಪಂ.ಇದುವರೆಗೆ ಪರವಾನಿಗೆ ನೀಡಿಲ್ಲ. ಈ ಕೂಡಲೇ ಇವುಗಳನ್ನು ಇಲ್ಲಿಂದ ಸ್ಥಳಾಂತರಿಸುವಂತೆ ಆಗ್ರಹಿಸಿದರು.

ಸೋನಿಯಾ ರಾಜ್ಯ ಭೇಟಿಯಿಂದ ಬಿಜೆಪಿ ಮತಬ್ಯಾಂಕ್‌ಗೆ ಧಕ್ಕೆಯಾಗದು: ಡಿವಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಬಿಜೆಪಿಯ ಪಾರಂ ಪರಿಕ ಮತ ಬ್ಯಾಂಕ್‌ಗೆ ಯಾವ ರೀತಿಯಲ್ಲೂ ಧಕ್ಕೆಯಾ ಗುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,ಎ ಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಸಿದ್ಧಗಂಗಾ ಶ್ರೀಗಳ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತ್ರಕ್ಕೆ ಬಿಜೆಪಿಯ ಮತ ಬ್ಯಾಂಕ್‌ಗೆ ಹೊಡೆತ ಬೀಳುತ್ತದೆ ಎಂಬುದು ಸರಿಯಲ್ಲ ಎಂದು ನುಡಿದರು.
ಇದುವರೆಗೂ ಲಿಂಗಾಯತ ಮತಬ್ಯಾಂಕ್ ಬಿಜೆಪಿ ಜತೆ ಗುರುತಿಸಿಕೊಂಡಿದ್ದು ಇದೀಗ ಸೋನಿಯಾಗಾಂಧಿ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿರುವ ಬೆಳವಣಿಗೆ ಬಿಜೆಪಿ ಮತಬ್ಯಾಂಕ್‌ಗೆ ಘಾಸಿ ಮಾಡಲಿದೆ ಎಂಬ ಅಭಿಪ್ರಾಯಗಳನ್ನು ತಿರಸ್ಕರಿಸಿದ ಅವರು, ನಾವು ಕೂಡಾ ಸಿದ್ಧಗಂಗಾ ಮಠದ ಅನನ್ಯ ಭಕ್ತರು. ಆ ಮಠದ ಬಗ್ಗೆ ನಮಗೂ ಗೌರವವಿದೆ. ಹಾಗೆಯೇ ಕಾಂಗ್ರೆಸ್‌ನವರೂ ಗೌರವ ಇಟ್ಟುಕೊಂಡು ಹೋಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಗುರುವಂದನೆ ಕಾರ್ಯಕ್ರಮಕ್ಕಾಗಿ ಮಠಕ್ಕೆ ಯಾರನ್ನು ಕರೆಯಬೇಕು ಎಂಬುದು ಮಠದ ಆಡಳಿತ ಮಂಡಳಿಗೆ ಬಿಟ್ಟ ವಿಚಾರ ಎಂದ ಅವರು, ವಿಷಯದಲ್ಲಿ ನಾವು ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ನುಡಿದರು.
ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ಅವರು ರಾಜ್ಯದ ಬರಪೀಡಿತ ಪ್ರದೇಶಗಳ ಅಧ್ಯಯನಕ್ಕಾಗಿ ಬಂದಿ ರುವುದನ್ನು ನಾನು ಸ್ವಾಗತಿಸುತ್ತೇನೆ. ಅವರೇ ಖುದ್ದಾಗಿ ಇಲ್ಲಿನ ಬರ ಪರಿಸ್ಥಿತಿಯ ಕುರಿತು ವೀಕ್ಷಣೆ ಮಾಡಿದರೆ ಕೇಂದ್ರದಿಂದ ನಮಗೆ ಹೆಚ್ಚಿನ ನೆರವು ದೊರೆಯಬಹುದು ಎಂದು ಹೇಳಿದರು.
ಈಗಾಗಲೇ ನಾವು ಕೇಂದ್ರ ಸರ್ಕಾರಕ್ಕೆ ಮತ್ತು ಯೋಜನಾ ಆಯೋಗಕ್ಕೆ ರಾಜ್ಯದಲ್ಲಿ ಸಂಭವಿಸಿದ ಬರಗಾಲದಿಂದ ಆಗಿರುವ ಹಾನಿಯ ಕುರಿತು ವಿವರ ನೀಡಿದ್ದು, ೨೬೦೫ ಕೋಟಿ ರೂ ನೆರವು ನೀಡುವಂತೆ ಕೇಳಿದ್ದೇವೆ ಎಂದರು.
ಇದೀಗ ಸೋನಿಯಾ ಗಾಂಧಿ ಅವರನ್ನು ಕರೆದುಕೊಂಡು ಬಂದು ಕಾಂಗ್ರೆಸ್ ನಾಯಕರು ಬರಪೀಡಿತ ಪ್ರದೇಶಗಳ ಭೇಟಿ ಮಾಡಿಸಿರುವುದು, ಆ ಮೂಲಕ ವಿಶೇಷ ಪ್ಯಾಕೇಜ್ ಕೊಡಿಸಲು ಯತ್ನಿಸುತ್ತಿರುವುದು ಸ್ವಾಗತಾರ್ಹ. ಇದಕ್ಕಿಂತ ಸಂತೋಷದ ಬೆಳವಣಿಗೆ ಏನಿದೆ? ಅಂತ ಪ್ರಶ್ನೆ ಮಾಡಿದರು.

ಹೂಡೆ ಮುಖ್ಯ ರಸ್ತೆ ದುರಸ್ತಿಗೆ ಸ್ಥಳೀಯರಿಂದ ಮನವಿ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಉಡುಪಿ ಪಡು ತೋನ್ಸೆ ಗ್ರಾಮದ ಹೂಡೆಯ ಉರ್ದು ಶಾಲೆ ಬಳಿ ಇರುವ ಹೊಂಡಮಯ ರಸ್ತೆಯನ್ನು ದುರಸ್ತಿ ಗೊಳಿಸಿ, ಚರಂಡಿ ವ್ಯವಸ್ಥೆ ಕಲ್ಪಿಸು ವಂತೆ ಆಗ್ರಹಿಸಿ ಸ್ಥಳೀಯರು ಇತ್ತೀಚೆಗೆ ಕೆಮ್ಮಣ್ಣು ಗಾ.ಪಂ., ಉಡುಪಿ ಜಿ.ಪಂ. ಹಾಗೂ ತಾ.ಪಂ.ಗೆ ಮನವಿ ಸಲ್ಲಿಸಿ ದ್ದಾರೆ.
ಈ ಮುಖ್ಯರಸ್ತೆಯಲ್ಲಿನ ತಗ್ಗಾದ ಸ್ಥಳದಲ್ಲಿ ಮೊನ್ನೆಯ ಒಂದೇ ಮಳೆಗೆ ನೀರು ಶೇಖರಣೆಯಾಗಿ, ಸಾರ್ವಜ ನಿಕರು, ವಾಹನ ಚಾಲಕರು ತೀರಾ ತೊಂದರೆ ಅನುಭವಿಸುವಂತಾಗಿದೆ. ಇದು ಕಳೆದ ನಾಲ್ಕೈದು ವರ್ಷಗಳ ಸಮಸ್ಯೆಯಾಗಿದ್ದರೂ ಈವರೆಗೆ ಇದಕ್ಕೆ ಪರಿಹಾರ ಕಲ್ಪಿಸಿಲ್ಲ ಎಂದು ಸ್ಥಳೀಯರು ಮನವಿಯಲ್ಲಿ ಆರೋಪಿಸಿದ್ದಾರೆ.
ಈ ಹೊಂಡಮಯ ರಸ್ತೆಯಿಂ ದಾಗಿ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ನಿಂತ ಕೊಳಚೆ ನೀರು ಚರಂಡಿ ಇಲ್ಲದ ಪರಿಣಾಮ ಸಮೀಪದ ಬಾವಿಗಳಿಗೆ ಸೇರುತ್ತಿವೆ. ಇದರಿಂದ ಇಡೀ ಪರಿಸರವು ಮಲೀನಗೊಂಡಿದೆ ಎಂದು ಅವರು ದೂರಿದ್ದಾರೆ. ಈ ತಗ್ಗಾದ ರಸ್ತೆಗೆ ಎರಡೂ ಬದಿ ಚರಂಡಿ ವ್ಯವಸ್ಥೆಯನ್ನು ಮಾಡಿದಲ್ಲಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬಹುದು. ಸಂಬಂಧಪಟ್ಟವರು ಕೂಡಲೇ ಸ್ಥಳ ಪರಿಶೀಲಿಸಿ, ಮಳೆಗಾಲ ಆರಂಭಕ್ಕೆ ಮುನ್ನ ಇದನ್ನು ಸರಿಪಡಿಸಿ ಸಾರ್ವಜನಿ ಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದು ಸ್ಥಳೀಯರು ಮನವಿಯಲ್ಲಿ ಆಗ್ರಹಿಸಿದ್ದಾರೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4047) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2502) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3677) lokayukta (3) madikeri (1) maleria (1) mangalore (585) mangaloreairport (1) manglore (7) manipal (29) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (415) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (272) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (799) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (485) udyoga (60) ullal (7) upcl (2) upi (152) uppinangadi (47) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)